೧) ಯಾರು ಕ್ರಮವಾಗಿ ವ್ಯಾಯಾಮ ಕಾರ್ಯಕ್ರಮದಲ್ಲಿ ತೊಡಗುತ್ತಾರೋ, ಅವರು ನೋಡಲು ಚೆನ್ನಾಗಿರುತ್ತಾರೆ ಮತ್ತು ಉತ್ತಮ ಭಾವನೆಯನ್ನು ಹೊಂದಿರುತ್ತಾರೆ.  ಅಲ್ಲದೆ, ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತಾರೆ ಮತ್ತು ಹೆಚ್ಚಿನ ಆತ್ಮವಿಶ್ವಾಸದ ಭಾವನೆಯನ್ನು ಹೊಂದಿರುತ್ತಾರೆ.

೨) ಯಾರು ಕ್ರಮವಾಗಿ ವ್ಯಾಯಾಮವನ್ನು ಮಾಡುವುದಿಲ್ಲವೊ, ಅವರು ಒಳ್ಳೆಯ ಭಾವನೆಗಳ ಸ್ಪರ್ಶವನ್ನು ಕಳೆದುಕೊಳ್ಳುತ್ತಾರೆ.

೩) ಯಾರು ವ್ಯಾಯಾಮವನ್ನು ಮಾಡುತ್ತಾರೊ ಅವರು, ದೇಹದ ತೂಕವನ್ನು ನಿಯಂತ್ರಿಸಿಕೊಂಡಿರುತ್ತಾರೆ ಮತ್ತು ಅನೇಕರು ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುತ್ತಾರೆ. ಅವುಗಳೆಂದರೆ,

  • ಉತ್ತಮವಾದ ಆಹಾರವನ್ನು ಸೇವಿಸುತ್ತಾರೆ.
  • ಧೂಮಪಾನ – ಮದ್ಯಪಾನ ಮಾಡುವುದಿಲ್ಲ.
  • ಸಕಾರಾತ್ಮಕವಾಗಿ ವರ್ತಿಸುತ್ತಾರೆ.
  • ಹೆಚ್ಚಿನ ಶಕ್ತಿ ಇರುತ್ತದೆ.
  • ಆರೋಗ್ಯ ಪ್ರಜ್ಞೆ ಉಳ್ಳವರಾಗಿರುತ್ತಾರೆ.

ಕ್ರಮವಾಗಿ ವ್ಯಾಯಾಮವನ್ನು ಮಾಡುವುದರಿಂದ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ಅಧ್ಯನಗಳು ತಿಳಿಸಿವೆ. ಶಾರೀರಿಕ ಚಟುವಟಿಕೆಯಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಅಲ್ಲದೆ, ಸ್ನಾಯುಗಳು (ಮಾಂಸ ಖಂಡಗಳು) ಮತ್ತು ಮೂಳೆಗಳ ವ್ಯೂಹ, ಆಟೋನೊಮಿಕ್‌ ನರ್ವಸ್‌ ಸಿಸ್ಟಮ್‌ ಮತ್ತು ಮನಸ್ಸನ್ನು ಸಂರಕ್ಷಣೆ ಮಾಡಿಕೊಳ್ಳಲು ಸಹಾಯಕವಾಗುತ್ತದೆ.

ಕ್ರಮಬದ್ಧವಾಗಿ ಮಾಡುವ ವ್ಯಾಯಾಮದಿಂದ ಕರೋನರಿ ಹೃದ್ರೋಗ ಮತ್ತು ಕ್ಷಿಪ್ರವಾಗಿ ಉಂಟಾಗುವ ತೊಂದರೆ ಕಡಿಮೆಯಾಗುತ್ತದೆ. ಡಯಾಬಿಟೀಸ್‌ , ಅಧಿಕ ರಕ್ತದೊತ್ತಡ ಮತ್ತು ಟೊಳ್ಳು ಮೂಳೆ ರೋಗವನ್ನು ಕಡಿಮೆಗೊಳಿಸುತ್ತದೆ. ಅಲ್ಲದೆ, ಸ್ಟ್ರೆಸ್‌ ಅಥವಾ ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯಕವಾಗುತ್ತದೆ ಮತ್ತು ಡಿಪ್ರೆಷನ್‌ (ಖಿನ್ನತೆ), ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ದೀರ್ಘಕಾಲ ಆರೋಗ್ಯ ಚೆನ್ನಾಗಿರಬೇಕಾದರೆ, ಕ್ರಮವಾಗಿ ವ್ಯಾಯಾಮವನ್ನು ಮಾಡುವುದು ಅತ್ಯಗತ್ಯವೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ವ್ಯಾಯಾಮವನ್ನು ಮಾಡುವುದರಿಂದ, ಮೂಳೆ ಸವೆತವನ್ನು ತಡೆಗಟ್ಟಿಕೊಳ್ಳಬಹುದು. ಸಂಧಿವಾತ ಮತ್ತು ಕೆಳ ಬೆನ್ನು ನೋವನ್ನು ಕಡಿಮೆಮಾಡುತ್ತದೆ:

ವ್ಯಾಯಾಮದಿಂದಾಗುವ ಪರಿಣಾಮ: ವ್ಯಾಯಾಮದಿಂದ ಎಚ್‌.ಡಿ.ಎಲ್‌. ಹಂತ (ಅಂದರೆ, ಹೈಲೆವೆಲ್‌ – ಡೆನ್ಸಿಟಿಲಿಪೊಪ್ರೋಟೀನ್ಸ್‌) ಹೆಚ್ಚಾಗುತ್ತದೆ. ಅಲ್ಲದೆ, ಎಲ್‌.ಡಿ.ಎಲ್‌. (ಲೋ ಡೆನ್ಸಿಟಿಪೊಪ್ರೋಟೀನ್ಸ್‌) ಹಂತವನ್ನು ಕಡಿಮೆ ಮಾಡುತ್ತದೆ. ಅಂದರೆ, ರಕ್ತದಲ್ಲಿ ಎರಡು ಕೊಲಾಸ್ಟ್ರಾಲ್‌ಗಳು ಸಂಚರಿಸುತ್ತವೆ. ಅವುಗಳಲ್ಲಿ ಎಲ್‌.ಡಿ.ಅಲ್‌. ಅಂಗಾಂಶಗಳಿಂದ ಹೊರಗಡೆಗೆ ಕೊಲೆಸ್ಟ್ರಾಲ್‌ನ್ನು ಕೊಂಡೊಯುತ್ತದೆ. ಎಚ್‌.ಡಿ.ಎಲ್‌. ಲಿವರ್ ಗೆ ಕೊಲಾಸ್ಟ್ರಾಲ್‌ನ್ನು ಹಿಂದಕ್ಕೆ ತಂದು ಪ್ರಕ್ರಿಯೆಗೆ ಒಳಪಡಿಸುತ್ತದೆ.

ಎಚ್‌.ಡಿ.ಎಲ್‌. ಹೃದಯದ ಮೇಲೆ ರಕ್ಷಣಾತ್ಮಕ ಪರಿಣಾಮವನ್ನು ಬೀರುತ್ತದೆ. ಅಂದರೆ, ಆರ್ಟರೀಸ್‌ದಲ್ಲಿನ ಕೊಬ್ಬಿನಾಂಶ ಕರಗಲು ಸಹಾಯ ಮಾಡುತ್ತದೆ. ವ್ಯಾಯಾಮ ಟ್ರೈಗ್ಲೈಸ್‌ರೈಡ್‌ ಹಂತಗಳನ್ನು ಅಂದರೆ, ಕೊಬ್ಬಿನ (ಫ್ಯಾಟ್‌) ಹಂತವನ್ನು ಕಡಿಮೆ ಮಾಡುತ್ತದೆ.

ವ್ಯಾಯಾಮ ಮತ್ತು ಮಾನಸಿಕ ಆರೋಗ್ಯ: ಕ್ರಮಬದ್ಧವಾದ ವ್ಯಾಯಾಮ, ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ. ವ್ಯಾಯಾಮದಿಂದ, ಆತಂಕ ಮತ್ತು ಖಿನ್ನತೆ (ಡಿಪ್ರೆಷನ್‌) ಯ ಲಕ್ಷಣಗಳು ಕಡಿಮೆಯಾಗುತ್ತವೆ. ಅಲ್ಲದೆ, ವ್ಯಾಯಾಮದ ಅನುಭವದಿಂದ,  ಆತ್ಮವಿಶ್ವಾಸ ಅಭಿವೃದ್ಧಿಗೊಳ್ಳುತ್ತದೆ. ಅಷ್ಟೇ ಅಲ್ಲದೆ, ಶಾರೀರಿಕ ಮಾನಸಿಕ ಆರೋಗ್ಯವು ವಿಕಾಸಗೊಳ್ಳುತ್ತದೆ.