ಈ ಕೆಳಗಿನದ್ದು ಮಾದರಿಯಾದ ಪ್ರತಿದಿನದ ಆಹಾರ.

ದೇಹ ತನ್ನಿಂದ ಹೊರಕೆ ವಿಷ ಹಾಕಲು ಇವು ಸಹಕಾರಿಯಾಗಿವೆ.

ಬೆಳಿಗ್ಗೆ ಎದ್ದಾಗ: ಒಂದು ಗ್ಲಾಸ್‌ ನೀರು ಸೇರಿಸಿ ಸಾರಗುಂದಿಸಿದ ಹಣ್ಣಿನ ರಸ, ಅಥವಾ ಮಲಬದ್ಧತೆಯಿದ್ದರೆ, ನಿಂಬೆಹಣ್ಣಿನ ರಸ (ಒಣದ್ರಾಕ್ಷಿ ಸೇರಿದ್ದು)

ಬೆಳಗಿನ ತಿಂಡಿ: ೨ ಕಚ್ಚಾ ಸೇಬು ಅಥವಾ ಪಿಯರ್ ಹಣ್ಣುಗಳು ಅಥವಾ ತುರಿದ ಕಚ್ಚಾ ಸೇಬು ಅಥವಾ ಪಿಯರ್ ಹಣ್ಣು ಮತ್ತು ೨ ಸ್ಪೂನಿನಷ್ಟು ಬ್ಯ್ರಾನ್‌ – ತವುಡು ಮತ್ತು ಗೋಧಿ ಅಂಕುರದ ಉತ್ಪನ್ನ, ಒಂದು ಟೀ ಚಮಚೆ (ಅಥವಾ ಇಷ್ಟಪಟ್ಟರೆ ೨ ಟೀ ಚಮಚೆ) ಜೇನುತುಪ್ಪ ಅಥವಾ ಸಂಸ್ಕರಿಸಿದ ಕರಿ ಕಾಕಂಬಿ ಮತ್ತು ತೆಳು ಮಾಡಿದ ಹಣ್ಣಿನ ರಸ.

ಬೆಳಿಗ್ಗೆ ಮತ್ತು ಮಧ್ಯಾಹ್ನದ ಮಧ್ಯಕಾಲದಲ್ಲಿ: ಒಂದು ಕಪ್‌ ಪೊಟ್ಯಾಷಿಯಂ ಎಸರು ‘ಡ್ಯಾಂಡೆಲಿಯನ್‌ ಕಾಫಿ’ (ಸೇವಂತಿಗೆ ಕಾಫಿ ಅಥವಾ ಕಷಾಯ; ಒಣಗಿಸಿದ ಡ್ಯಾಂಡೆಲಿಯನ್‌ ಬೇರುಗಳಿಂದ ಮಾಡಿದ ಕಷಾಯ) ಅಥವಾ ಹರ್ಬ್ ಟೀ.

ಮಧ್ಯಾಹ್ನದ ಊಟ: ಚೆನ್ನಾಗಿ ಮಿಶ್ರ ಮಾಡಿದ ಕೋಸಂಬರಿ (ಈ ಹಿಂದೆ ವಿವರಿಸಿದ್ದು); ತವುಡು ತೆಗೆಯದ ಗೋಧಿಯಿಂದ ತಯಾರಿಸಿದ ಬಿಸ್ಕತ್‌ (ವೋಲ್‌ವ್ಹೀಟ್‌ ಬಿಸ್ಕೆಟ್‌) ಅಥವಾ ಒಂದು ತೆಳು ಚೂರು ತವುಡು ತೆಗೆಯದ ಗೋಧಿಯಿಂದ ತಯಾರಿಸಿದ ಬ್ರೆಡ್‌, ಬೆಣ್ಣೆ ಬಳಿದದ್ದು; ಅಥವಾ ಸಸ್ಯಾಹಾರಿ ಮಾರ್ಗರೀನ್‌. ಇದನ್ನು ಸೇವಿಸಿದ ನಂತರ ತಾಜಾ ಹಣ್ಣು ಅಥವಾ ಒಂದಷ್ಟು ಖರ್ಜೂರಗಳು, ಒಣ ದ್ರಾಕ್ಷಿಗಳು, ಸುಲ್ತಾನಾ ದ್ರಾಕ್ಷಿಗಳು (ರೊಟ್ಟಿ ಮೊದಲಾದವುಗಳಿಗೆ ಹಾಕುವ, ಸ್ಪರ್ನ್ ದೇಶದಲ್ಲಿ ಬೆಳೆಯುವ ಬೀಜವಿಲ್ಲದ ದ್ರಾಕ್ಷಿ) ಅಥವಾ ಒಂದು ಜಂಕೆಟ್‌ ಸಿಹಿ ಮಾಡಿದ ಅಥವಾ ರುಚಿಗಟ್ಟಿಸಿದ ಮೊಸರಿನಿಂದ ತಯಾರಿಸಿ, ಮೇಲೆ ಕೆನೆ ಸವರಿ ಹಣ್ಣುಗಳನ್ನು ಹಾಕಿ, ಕೆಂಪಾಗಿಸಿದ ಒಂದು ಖಾದ್ಯ ಅಥವಾ ಮೊಸರು ಸೇವಿಸಬಹುದು. (Margarine: ಕೃತಕ ಬೆಣ್ಣೆ; ಬೆಣ್ಣೆಯ ಬದಲಿಗೆ ಖಾದ್ಯ ತೈಲಗಳು ಮತ್ತು ಮಾಂಸದ ಕೊಬ್ಬನ್ನು ನೀರಿನಲ್ಲಿ ಅಥವಾ ಹಾಲಿನ ಕೆನೆಯಲ್ಲಿ ಸೇರಿಸಿ ತಯಾರಿಸಿದ ರೊಟ್ಟಿ ಮೊದಲಾದುವಕ್ಕೆ ಸವರುವ ಅಥವಾ ಅಡಿಗೆಗೆ ಬಳಸುವ ಜಿಡ್ಡು ಪದಾರ್ಥ.)

ಟೀ ಟೈಮ್‌: ಒಂದು ಕಪ್‌ ಹರ್ಬ್ ಟೀ.

ಸಂಜೆ ಊಟ: ಒಂದು ಕಪ್ ಪೊಟ್ಯಾಷಿಯಂ ಎಸರು ಅಥವಾ ಯಾವುದಾದರೂ ತರಕಾರಿ ಸಾರು; ನಂತರ ರಸವತ್ತಾದ ತರಕಾರಿ ಭಕ್ಷ್ಯ. (ಅದರಲ್ಲಿ ಎರಡು ಅಥವಾ ಮೂರು, ಹಬೆಯಲ್ಲಿ ಬೇಯಿಸಿದ ಹಸಿರು ತರಕಾರಿಗಳು, ಕ್ಯಾರೆಟ್‌ ಅಥವಾ ಸಿಪ್ಪೆಯುಕ್ತ ಆಲೂಗಡ್ಡೆಗಳಿರಬೇಕು.) ಮಾಂಸಾಹಾರಿಯಾದರೆ ಸ್ವಲ್ಪ ಕುರಿ ಮಾಂಸ, ಕೋಳಿ ಅಥವಾ ಮೀನನ್ನು (ಎಣ್ಣೆ ಬಳಸಬಾರದು) ಸೇವಿಸಬಹುದು.

ಸಿಹಿ ಭಕ್ಷ್ಯ ತಯಾರಿಸಲು, ಬೇಯಿಸಿದ ಸೇಬಿಗೆ ಸ್ವಲ್ಪ ಜೇನು ಸೇರಿಸಬಹುದು. ಬೇಯಿಸಿದ ಸೇಬಿಗೆ ಸ್ವಲ್ಪ ಜೇನು ಸೇರಿಸಬಹುದು; ಬೇಯಿಸಿದ ಸೇಬುಗಳ ಕೇಂದ್ರಭಾಗದಲ್ಲಿ ಒಣದ್ರಾಕ್ಷಿ, ಸುಲ್ತಾನಾ ದ್ರಾಕ್ಷಿಗಳು ಅಥವಾ ಕರಟಕಾಯಿಗಳು ಇತ್ಯಾದಿಗಳನ್ನು ಸೇರಿಸಬಹುದು. ಒಂದೊಮ್ಮೆ ಒಂದು ಮೊಟ್ಟೆ ಭಕ್ಷ್ಯ (ಕಸ್ಟರ್) ಅಥವಾ ಒಂದಷ್ಟು ಮೊಸರು ಬಳಸಬಹುದು.

(Custard: ಮೊಟ್ಟೆ ಭಕ್ಷ್ಯ; ಮೊಟ್ಟೆಯ ಲೋಳೆಯನ್ನು ಹಾಲಿನೊಡನೆ ಕಡೆದು ಸಿಹಿ ಹಾಕಿ ಬೇಯಿಸಿ ಮಾಡಿದ ಖಾದ್ಯ. ಮೊಟ್ಟೆ ಪಾಯಸ, ಸಿಹಿ ಹಾಕಿದ ಹಾಲು ಮತ್ತು ಮೊಟ್ಟೆ ಅಥವಾ ಮುಸುಕಿನ ಜೋಳದ ಹಿಟ್ಟು ಮೊದಲಾದವುಗಳ ಮಿಶ್ರಣವನ್ನು ಬೇಯಿಸಿ ತಯಾರಿಸಿದ ಪದಾರ್ಥ.)

ಮಲಗುವಾಗ ಪಾನೀಯ: ಒಂದು ಕಪ್‌ ಹರ್ಬ್‌ಲ್‌ ಟೀ.

ಬಿಸಿ ಯೀಸ್ಟ್‌ ಸಾರದ ಪಾನೀಯ ಅಥವಾ ಸ್ಟ್ರಾಂಗ್‌ ಅಲ್ಲದ ಡ್ಯಾಂಡೆಲಿಯನ್‌ ಕಾಫಿ (ಸ್ವಲ್ಪ ಹಾಲು ಸೇರಿದುದು)

ಮಧ್ಯಾಹ್ನ ಮತ್ತು ಸಂಜೆ ಆಹಾರವನ್ನು ಅನುಕೂಲ ಇದ್ದರೆ ಬದಲಾಯಿಸಬಹುದು. ಇನ್ನೊಂದು ಆಹಾರವಿದೆ – ಇದು ಒಂದು ರೀತಿಯ ಹವ್ಯಾಸ ಹೊಂದಿದ್ದು ಕುತೂಹಲಕಾರಿಯದ್ದಾಗಿದೆ. ಇದು ಡಾ . ಡಾಂಗ್‌ರವರು ಸೂಚಿಸಿದ್ದು. ಇವರು ಹಾಲಿನುತ್ಪನ್ನಗಳು ಮತ್ತು ಮಾಂಸಾಹಾರವನ್ನು ನಿಷೇಧಿಸಿದ್ದಾರೆ.

ಇವರು ಹೆಚ್ಚಿನಂಶದ ಮೀನು ಮತ್ತು ಸ್ವಲ್ಪ ಪ್ರಮಾಣದ ಕೋಳಿ ಮಾಂಸವನ್ನು ತಿನ್ನಲು ಉತ್ತೇಜನ ನೀಡುತ್ತಾರೆ. ಟೊಮ್ಯಾಟೋಗಳನ್ನು ಬಿಟ್ಟು ಉಳಿದೆಲ್ಲ ತರಕಾರಿಗಳನ್ನು ಇವರು ಶಿಫಾರಸ್ಸು ಮಾಡುತ್ತಾರೆ. ಅವರ ಆಹಾರ ಕ್ರಮದಿಂದ ಅನೇಕ ಮಂದಿಗೆ ಅನುಕೂಲವಾಗಿದೆಯಂತೆ.