ಏರೋಬಿಕ್ಸ್ವ್ಯಾಯಾಮವೆಂದರೆ, ಸಂಗೀತ ವಾದ್ಯದ ತಾಳಕ್ಕೆನುಸಾರವಾಗಿ ಮಾಡುವ ಶಾರೀರಿಕ ವ್ಯಾಯಾಮ.

ಆಸ್ಟಿಯೋಆಥ್ರೈಟಿಸ್‌ ಅಥವಾ ಕೀಲುರಿತದಿಂದ ನರಳುತ್ತಿದ್ದಾಗ ವ್ಯಾಯಾಮ ಮಾಡುವುದನ್ನು ಕಡಿಮೆ ಮಾಡುತ್ತೇವೆ ಅಥವಾ ನಿಲ್ಲಿಸಿ ಬಿಡುತ್ತೇವೆ.  ಅತಿಯಾದ ಚಟುವಟಿಕೆ ಅಥವಾ ತರಬೇತಿಯ ನಂತರ, ನಮ್ಮ ಶರೀರ ಚೇತರಿಸಿಕೊಳ್ಳಬೇಕಾಗುತ್ತದೆ. ಆದರೆ, ದೀರ್ಘಕಾಲ ಚಟುವಟಿಕೆಯಲ್ಲಿ ತೊಡಗದಿದ್ದರೆ (ಒಂದು ವಾರ ಅಥವಾ ಎರಡು ವಾರಗಳಿಗೂ ಮೇಲ್ಪಟ್ಟು) ಅದರಿಂದ, ನಿಮಗೆ ತೊಡಕಾಗುತ್ತದೆ. ಬಹಳ ದಿನಗಳ ನಂತರ , ದ್ವಿತೀಯ ಸಮಸ್ಯೆ (ಸೆಕೆಂಡರಿ ಪ್ರಾಬ್ಲಮ್ಸ್) ಗಳನ್ನುಂಟು ಮಾಡುತ್ತದೆ. ಮಾಂಸಖಂಡಗಳ ಟೋನ್‌ ನಷ್ಟಗೊಳ್ಳುತ್ತದೆ. ಮಾಂಸಖಂಡಗಳು ನಿಶ್ಯಕ್ತಗೊಳ್ಳುತ್ತವೆ, ಕೀಲುಗಳು ಆಕುಂಚನಗೊಳ್ಳುತ್ತವೆ. ಸಹನಾಶಕ್ತಿಯ ಕೊರತೆಯುಂಟಾಗುತ್ತದೆ. ಶರೀರದ ದೃಢತೆ ಕಡಿಮೆಯಾಗುತ್ತದೆ. ನಿಮ್ಮ ಮಾಂಸಖಂಡಗಳು (ಮಸಲ್ಸ್‌) ಮತ್ತು ಕೀಲುಗಳು ಮುದುಡು (ಶ್ರಿಂಕ್‌)ಗೊಳ್ಳುತ್ತವೆ ಮತ್ತು ಬಿಗಿತಗೊಳ್ಳುತ್ತವೆ. ನಾರ್ಮಲ್‌ ಆಗಿ ಚಲಿಸಲು ಸಹ ಕಷ್ಟವಾಗುತ್ತದೆ. ಒತ್ತಾಯಪೂರ್ವಕವಾಗಿ ಚಟುವಟಿಕೆಯಲ್ಲಿ ತೊಡಗಿದಾಗ ಹೆಚ್ಚಾಗಿ ನೋವು ಉಂಟಾಗುತ್ತದೆ.

ಆಸ್ಟಿಯೋ ಆಥ್ರೈಟಿಸ್ಅಥವಾ ಕೀಲುರಿತ:

ನೀವು ಕಿಲುರಿತಕ್ಕೊಳಗಾಗಿದ್ದರೆ, ನೀವು ಉತ್ತಮಗೊಳ್ಳಬೇಕಾದರೆ, ನೀವು ಸುಧಾರಿತ ವ್ಯಾಯಾಮವನ್ನು ಮಾಡಲೇಬೇಕು. ಅಂದರೆ, ನಿಮ್ಮ ವಯಸ್ಸಿಗೆ ಅನುಗುಣವಾಗಿ ಹಾಗೂ ಶಕ್ತಿ-ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮದ ಪ್ಲಾನ್‌ನನ್ನು ಮಾಡಿಕೊಳ್ಳಬೇಕು. ವ್ಯಾಯಾಮವನ್ನು ನಿಧಾನವಾಗಿ ಮತ್ತು ಕ್ರಮವಾಗಿ ಮಾಡಬೇಕು. ಸುಧಾರಿತ ವ್ಯಾಯಾಮವನ್ನು ನಿಧಾನವಾಗಿ, ಕ್ರಮಬದ್ಧವಾಗಿ ಮಾಡುವುದರಿಂದ, ನೋವೇನು  ಉಂಟಾಗುವುದಿಲ್ಲ.

ಸುಧಾರಿತ ವ್ಯಾಯಾಮವನ್ನು ಮಾಡುವುದರಿಂದ, ನಿಮ್ಮಲ್ಲಿ ಉತ್ತಮ ಭಾವನೆ ಮೂಡುತ್ತದೆ. ಕೀಲುಗಳನ್ನು ಕ್ರಮವಾಗಿ ಭಾಗಿಸಲು ಸಹಾಯಕವಾಗುತ್ತದೆ. ಅಲ್ಲದೆ, ಕೀಲುಗಳಲ್ಲಿ ಸೈನೋವಿಲೊ‌ಪ್ಯೂಯಿಡ್‌ ಚಲನೆಗೊಳ್ಳುವುದರಿಂದ ನಿಮ್ಮ ಮಾಂಸಖಂಡಗಳು ಬಲಗೊಳ್ಳುತ್ತವೆ. ನಿಮ್ಮಲ್ಲಿ ಶಕ್ತಿಯನ್ನು ಅಭಿವೃದ್ಧಿಗೊಳಿಸುತ್ತದೆ.

ವ್ಯಾಯಾಮ ಒಂದರಿಂದಲೇ, ಆಸ್ಟಿಯೋ ಆರ್ಥ್ರೈಟಿಸ್‌ ಗುಣವಾಗುವುದಿಲ್ಲ. ಆದರೆ, ಕಾಯಿಲೆಯ ಸೆಕೆಂಡರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಕೀಲುಗಳ ಸುತ್ತಲಿನ ಮಾಂಸಖಂಡಗಳು ದೃಢಗೊಂಡಾಗ ಮತ್ತು ಬಲಗೊಂಡಾಗ ನಿಮ್ಮ ಕೀಲುಗಳು ದೃಢತೆ ಉತ್ತಮಗೊಳ್ಳುತ್ತವೆ.

ಅಲ್ಲದೆ, ಕೀಲುಗಳನ್ನು ಚಲಿಸಿದಾಗ, ಉಂಟಾಗುವ ಒತ್ತಡದಿಂದ ಬಹಳ ಕಡಿಮೆ ಹಾನಿಉಂಟಾಗುತ್ತದೆ. ಆದುದರಿಂದ, ಶಾರೀರಿಕ ವ್ಯಾಯಾಮದಿಂದ, ದೀರ್ಘಕಾಲದ ನೋವು ಮಹತ್ವ ಪೂರ್ಣವಾಗಿ ಕಡಿಮೆಯಾಗುತ್ತದೆ. ನಿಮ್ಮ ಸಾಮಾನ್ಯ ಆರೋಗ್ಯ ಅಭಿವೃದ್ಧಿಗೊಳ್ಳುತ್ತದೆ. ಜೊತೆಗೆ, ನಿಮ್ಮ ದೈನಂದಿನ ಕೆಲಸಗಳನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ನೀವು ಪುನಃ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ, ನಿಮ್ಮಲ್ಲಿ ಸಂತೋಷ-ಸಮಾಧಾನ ಉಂಟಾಗುತ್ತದೆ. ಜೀವನದ ಬಗ್ಗೆ ನಿಮ್ಮ ದೃಷ್ಟಿ ಅಭಿವೃದ್ಧಿಗೊಳ್ಳುತ್ತದೆ.

ಚಲನೆಯನ್ನು ನಿಲ್ಲಿಸಬೇಡಿ:

ಮನುಷ್ಯನ ಶರೀರ ಚಲಿಸಲು ನಿರ್ಮಾಣಗೊಂಡಿದೆ. ನಾವು, ಚಲಿಸುವುದನ್ನು ನಿಲ್ಲಿಸಿದಾಗ, ಹೃದ್ರೋಗದ ರಿಸ್ಕ್‌ ಅಭಿವೃದ್ಧಿಗೊಳ್ಳುವುದು ಅಧಿಕಗೊಳ್ಳುತ್ತದೆ. ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ ಮೊದಲಾದ ತೊಂದರೆಗಳು ಕಾಣಿಸಿಕೊಳ್ಳಬಹುದು.

ವ್ಯಾಯಾಮದಿಂದ, ನಿಮ್ಮ ಮನಸ್ಸು – ದೇಹಕ್ಕೆ ಹೊಸ ಆಯಾಮ ಲಭಿಸುತ್ತದೆ . ನಿಮಗೆ, ಉತ್ತಮ ವ್ಯಾಯಾಮ ಯಾವುದು ಎಂಬುದನ್ನು ನೀವು ಕಂಡುಕೊಳ್ಳಬೇಕಾದ್ದು ನಿಮ್ಮ ಕರ್ತವ್ಯ.