ಬಹಳಷ್ಟು ಜನ ಯೋಚಿಸುವುದೇ ಬೇರೆಯಾದರೂ, ಸರಿಯಾದ ಸಮತೋಲನ ಆಹಾರ ಸೇವನೆ ರ‍್ಯಮಾಟಿಸಂ (ಕೀಲುವಾತ ಜ್ವರ, ಮೈಕೈ ನೋವು; ಕೀಲುವಾತ) ಮತ್ತು ಆರ್ಥ್ರೈಟಿಸ್‌ (ಕೀಲುರಿತ) ಕಾಯಿಲೆಗಳನ್ನು ಹದ್ದು ಬಸ್ತಿನಲ್ಲಿಡಲು ಅವಶ್ಯಕ.

ತವುಡು ತೆಗೆಯದ ಆಹಾರ ಪದಾರ್ಥ (ವೋಟಾಮೀಲ್‌ ಫುಡ್‌)ಗಳನ್ನು ತಿನ್ನುವುದರ ಪ್ರಾಮುಖ್ಯತೆಯನ್ನು ಬಹಳಷ್ಟು ಜನ ಕಂಡು ಕೊಂಡಿದ್ದಾರೆ. ಆದಾಗ್ಯೂ ಪ್ಯಾಕ್‌ ಮಾಡಿದ, ಟಿನ್ ನಲ್ಲಿ ತುಂಬಿದ, ಎಣ್ಣೆಯಲ್ಲಿ ಕರಿದ, ‘ಜಂಕ್‌ಫುಡ್‌’ಗಳನ್ನು (ಕಡಿಮೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳು) ತಿನ್ನುವ ಜನವೇನೂ ಕಡಿಮೆ ಇಲ್ಲ. ಈ ಪದಾರ್ಥಗಳ ಜೊತೆಗೆ ಸ್ಟ್ರಾಂಗ್‌ ಆದ ಹೆಚ್ಚಿನ ಪ್ರಮಾಣದ ಟೀ ಅಥವಾ ಕಾಫಿಗಳನ್ನು ಬಳಸಿ, ಈ ಜನ ಗಂಟಲೊಳಕ್ಕೆ, ಅಲ್ಲಿಂದ ಹೊಟ್ಟೆಗೆ ವಾಷ್‌ ಮಾಡಿಕೊಳ್ಳುತ್ತಿರುತ್ತಾರೆ! ಇದರ ಜೊತೆಗೆ ಬಿಳಿ ಸಕ್ಕರೆಯನ್ನು ಟೀ-ಕಾಫಿಗಳಿಗೆ ಬೆರೆಸಿ ಸೇವಿಸುತ್ತಿರುತ್ತಾರೆ.

ಆಹಾರ ಸೇವನೆಯ ವಿಚಾರದಲ್ಲಿ ನಾವು ತುಂಬ ತಪ್ಪುಗಳನ್ನು ಮಾಡುತ್ತಿದ್ದೇವೆ.  ನಾವು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರ ಪದಾರ್ಥಗಳನ್ನು ಸೇವಿಸುತ್ತಿರಬಹುದು. ದೇಹದ ಅಂಗಾಂಶಗಳನ್ನು ಬೆಳೆಸುವ, ಅಂಗಾಂಗಳನ್ನು ದೃಢಪಡಿಸುವ, ಅವನ್ನು ಸುಸ್ಥಿತಿಯಲ್ಲಿಡುವ, ಪೌಷ್ಟಿಕಾಂಶ ಮೌಲ್ಯ. ಈ ಆಹಾರ ಪದಾರ್ಥಗಳಲ್ಲಿವೆಯೇ ಎಂದು ಯಾರಾದರೂ ಯೋಚಿಸುವುದೂ ಇಲ್ಲ.

ನಾವು ಬಳಸುವ ಹೆಚ್ಚಿನಂಶದ ಆಹಾರ ಪದಾರ್ಥಗಳಲ್ಲಿ ಸತ್ತ್ವವಿಲ್ಲದಂತೆ ಅವನ್ನು ಮಾಡುತ್ತಿರುತ್ತೇವೆ. ಈ ಆಹಾರ ಪದಾರ್ಥಗಳನ್ನು ಕೃತಕ ಗೊಬ್ಬರ ಹಾಕಿ ಬೆಳೆಸುತ್ತಿರುತ್ತೇವೆ. ಇವನ್ನು ಸಂಸ್ಕರಿಸಿ, ಬಣ್ಣ ಹಚ್ಚಿ, ಟಿನ್‌ಗಳಲ್ಲಿ ಸಂಗ್ರಹಿಸುತ್ತೇವೆ. ಕರುಳಿಗೆ ಅತ್ಯವಶ್ಯಕ ಹಾಗೂ ಒಳ್ಳೆಯ ನಾರುನಾರಾದ ಒರಟು ಪದಾರ್ಥಗಳು (ನಾರು ಪದಾರ್ಥಗಳು: ಕರುಳಿನ ಚಲನೆಗೆ, ಜೀರ್ಣಶಕ್ತಿಗೆ ಉತ್ತೇಜನ ನೀಡುವ ಧಾನ್ಯದ ತವುಡು, ಕಾಯಿಪಲ್ಯದ ನಾರು, ಸೊಪ್ಪು ಮೊದಲಾದವು) ಈ ಆಹಾರ ಪದಾರ್ಥಗಳಲ್ಲಿ ಇಲ್ಲದಂತೆ ಮಾಡುತ್ತೇವೆ. ಅಡಿಗೆ ಮಾಡುವಾಗ ಆಹಾರ ಪದಾರ್ಥಗಳಲ್ಲಿರುವ ಖನಿಜ ಲವಣಗಳನ್ನು ಕುದಿಸಿ ಹಾಳು ಮಾಡುತ್ತೇವೆ ಅಥವಾ ಅವನ್ನು ಹೆಚ್ಚು ಸಕ್ಕರೆ ಮತ್ತು ಉಪ್ಪು ಸೇರಿಸಿ ಹಾಳು ಮಾಡಿಬಿಡುತ್ತೇವೆ.

ಎಲ್ಲ ರೀಫೈನ್ಡ್‌ ಹಿಟ್ಟು ಪದಾರ್ಥಗಳು ಇಲ್ಲವಾಗಬೇಕು; ಏಕೆಂದರೆ ನಮ್ಮ ಆರೋಗ್ಯಕ್ಕೆ ಅತ್ಯವಶ್ಯಕವಾದ ಶಕ್ತಿಯುತವಾದ ವಸ್ತುಗಳು ಮತ್ತು ಖನಿಜ ಲವಣಗಳು ಗೋಧಿಯ ಮೊಳಕೆಯಲ್ಲಿರದಂತೆ (ವ್ಹೀಟ್‌ ಜೆರ್ಮ್ಸ್‌) ಅವನ್ನು ಹಿಟ್ಟು ಮಾಡುವ ವಿಧಾನದಲ್ಲಿ ಸಂಸ್ಕರಿಸಿ (ರೀಫೈನ್‌ ಮಾಡಿ) ಹಾಳು ಮಾಡಿಬಿಟ್ಟಿರುತ್ತೇವೆ. ಹಾಗಾಗಿ ಗೋಧಿಯ ಪೂರ್ಣ ಶಿಕ್ತಾಹಾರ ಪದಾರ್ಥ ಆಗುವುದಿಲ್ಲ. ಆದುದರಿಂದ ರೀಫೈನ್ಡ್‌ ಹಿಟ್ಟಿನಿಂದ ತಯಾರಿಸಿದ ಎಲ್ಲ ಬ್ರೆಡ್‌ಗಳು, ಪೇಸ್ಟ್ರೀಗಳು (ಪಿಷ್ಟ ಭಕ್ಷ್ಯಗಳು – ಪೂರ್ತಿಯಾಗಿ ಅಥವಾ ಸ್ವಲ್ಪ ಮಟ್ಟಿಗೆ ಹಿಟ್ಟಿನಿಂದ ಮಾಡಿದ ಭಕ್ಷ್ಯಗಳು). ಕೇಕ್‌ಗಳು, ಬನ್‌ಗಳು, ಕಾವಲಿಯ ಮೇಲೆ ಹೊಯ್ದ ಗೋಧಿ ದೋಸೆಗಳು ಮತ್ತು  ಬಿಸ್ಕತ್ ಗಳನ್ನು ನಾವು ದೂರ ಇಡಬೇಕು.

ಬದಲಿಗೆ ಶೇಕಡಾ ೧೦೦ ರಷ್ಟರ ತವುಡು ತೆಗೆಯದ ಗೋಧಿ ಹಿಟ್ಟಿನಿಂದ ತಯಾರಿಸಿದ ಬ್ರೆಡ್ಡನ್ನು ತಿನ್ನಬೇಕು. ಇದು ರುಚಿಯಾಗಿರುವುದರ ಜೊತೆಗೆ ಕಂಪನ್ನು (ನಟ್ಟೀಫ್ಲೇವರ್) ಹೊಂದಿರುತ್ತದೆ.

ಹೊಟ್ಟೆಗೆ ಇದು ಹೆಚ್ಚು ತೃಪ್ತಿಕರವಾಗಿರುತ್ತವೆ. ತವುಡು ತೆಗೆಯದ ಗೋಧಿ ಹಿಟ್ಟಿನಲ್ಲಿ ಗೋಧಿಯ ಅಂಕುರ ಇರುತ್ತದೆ. ಈ ಗೋಧಿಯ ಅಂಕುರದಲ್ಲಿ ‘ಬಿ’ ಜೀವಸತ್ತ್ವ’ ‘ಇ’ ಜೀವಸತ್ತ್ವ ಮತ್ತು ಕಬ್ಬಿಣ ರಂಜಕದಂಶಗಳು ಸಮೃದ್ಧವಾಗಿವೆ.  ಈ ಹಿಟ್ಟಿನಲ್ಲಿ ನಾರುನಾರಾದ ಒರಟು ಪದಾರ್ಥ ಕೂಡ ಇದೆ; ಇದು ಕರುಳಿಗೆ ಒಳ್ಳೆಯದು.

ಸಕ್ಕರೆಯನ್ನು ಆದಷ್ಟು ಕಡಿಮೆ ಬಳಸಬೇಕು. ಬಿಳಿಸ ಸಕ್ಕರೆಯನ್ನು ಬಳಸಲೇಬಾರದು . ಏಕೆಂದರೆ ಈ ಸಕ್ಕರೆಯನ್ನು ಸಂಸ್ಕರಿಸುವ ವಿಧಾನದಲ್ಲಿ ಎಲ್ಲ ಜೀವನಾಧಾರವಾದ ಖನಿಜಲವಣಗಳು ಮತ್ತು ಅಲ್ಪಮಾತ್ರದಲ್ಲಿರುವ ಘಟಕಾಂಶಗಳು (ಟ್ರೇಸ್‌ ಎಲಿಮೆಂಟ್ಸ್‌) ತೆಗೆಯಲ್ಪಡುತ್ತವೆ; ಉಳಿಯುವುದು ಸಿಹಿ ಕೊಡುವ ಪದಾರ್ಥವಷ್ಟೆ (ಸ್ವೀಟ್‌ನರ್); ಇದು ಆಮ್ಲಕಾರಿಯಾಗಿರುತ್ತದೆ.

ಆರ್ಥ್ರೈಟಿಸ್‌ ಮತ್ತು ರುಮ್ಯಾಟಿಕ್‌ ರೋಗಿಗಳು ಈ ಸಲಹೆಯನ್ನು ಸ್ವೀಕರಿಸುವುದು ತುಂಬ ಪ್ರಮುಖ ವಿಚಾರ. ಈ ವಿಚಾರದಲ್ಲಿ ಅನೇಕ ಸಾಂಪ್ರದಾಯಿಕ ವೈದ್ಯರು ಸಹಮತ ವ್ಯಕ್ತಪಡಿಸುತ್ತಾರೆ.

 • ಜೇನು ಸ್ವಾಭಾವಿಕವಾದ ಅತಿ ಒಳ್ಳೆಯ ಸಿಹಿ ನೀಡುವ ಪದಾರ್ಥ. ಇದನ್ನು ಕೂಡ ಬೇಕೇ ಬೇಕೆಂದಾಗ ಅಲ್ಪಸ್ವಲ್ಪ ಬಳಸಬಹುದು.
 • ಹಸಿರು ತರಕಾರಿ, ಸೊಪ್ಪು, ಪುದೀನ, ಬೀಟ್‌ರೂಟ್‌,  ಮೂಲಂಗಿ, ಟೊಮ್ಯಾಟೋ, ಈರುಳ್ಳಿ ಇವುಗಳ ಕೋಸಂಬರಿ, ಸಲಾಡ್‌ ಉತ್ತಮ.
 • ನಿಂಬೇಹಣ್ಣಿನ ರಸ, ಸೇಬು, ಕಿತ್ತಳೆ ಮುಂತಾದವುಗಳನ್ನು ಸೇವಿಸಬಹುದು. ನೀವು ಸಸ್ಯಹಾರಿಯಾಗಿಲ್ಲದಿದ್ದರೆ, ಸ್ವಲ್ಪ ರೋಸ್ಟ್‌ ಮಾಡಿದ ಕುರಿ ಮಾಂಸ,

ಕೋಳಿ ಮಾಂಸ ಅಥವಾ ಮೀನುಗಳನ್ನು ಸೇವಿಸಬಹುದು. ಆಲೂಗಡ್ಡೆಗಳನ್ನು ಅವುಗಳ ಸಿಪ್ಪೆ ಸಹಿತ ಬೇಯಿಸಿ ತಿನ್ನಬೇಕು ಅಥವಾ ಅವನ್ನು ಸಿಪ್ಪೆ ಸುಲಿಯದೆ ಹಬೆಯಲ್ಲಿ ಬೇಯಿಸಿ ತಿನ್ನಬಹುದು. ಸಿಪ್ಪೆ ತೆಗೆಯದೆ ಆಲೂಗಡ್ಡೆಗಳನ್ನು ಬೇಯಿಸಿದರೆ, ಅವುಗಳ ಸಿಪ್ಪೆಯನ್ನು ಸುಲಭವಾಗಿ ಬೇಯಿಸಿದ ನಂತರ ತೆಗೆಯಲೂಬಹುದು. ಜೊತೆಗೆ ಆಲೂಗಡ್ಡೆಗಳೊಳಗೇ ಜೀವಸತ್ತ್ವಗಳು, ಖನಿಜ ಲವಣಗಳು ಉಳಿದು ಕೊಂಡಿರುತ್ತವೆ. ಒಂದು ಹಸಿ ತರಕಾರಿ ಮತ್ತು ಒಂದಷ್ಟು ಕ್ಯಾರೆಟ್‌ಗಳನ್ನು ಬಳಸುವುದರಿಂದ ಅಡಿಗೆ ಪೂರ್ಣಗೊಳ್ಳುತ್ತದೆ. ಬೇಯಿಸಿದ ಸಸ್ಯಾಹಾರಿ ತಿನಿಸನ್ನು ಮಾಂಸ ಮತ್ತು ಮೀನುಗಳು ಸ್ಥಾನಾಂತರಗೊಳಿಸಬಹುದು.

ಒಂದೇ ಊಟದಲ್ಲಿ ಪಿಷ್ಠಗಳು ಮತ್ತು ಪ್ರೋಟೀನ್‌ಗಳನ್ನು ಜೊತೆಯಾಗಿ ಬಳಸಬಾರದು.

ಆಹಾರದಲ್ಲಿ ಟೀ, ಕಾಫಿ, ಕೋಕೋ ಮತ್ತು ಆಲ್ಕೋಹಾಲ್‌ ಇರಬಾರದು. ಹೀಗೆ ಮಾಡುವುದಂತೂ ಆರ್ಥ್ರೈಟಿಸ್‌ ಮತ್ತು ರುಮ್ಯಾಟಿಸಂ ರೋಗಿಗಳಿಗೆ ಮೊದಲೊ ಮೂರು ತಿಂಗಳಿಗೆ ಅತ್ಯವಶ್ಯಕ; ಅನಂತರ ಒಂದು ಕಪ್ಪು ಅಷ್ಟು ತೀಕ್ಷ್ಣವಲ್ಲದ ಚೈನಾ ಟೀಯನ್ನು ಆಗೊಮ್ಮೆ ಈಗೊಮ್ಮೆ ಬಳಸಬಹುದು; ಒಂದು ಕಪ್ಪು ಕಾಫಿಯನ್ನು ಇದೇ ರೀತಿ ಬಳಸಬೇಕಾಗುತ್ತದೆ. ಆಲ್ಕೋಹಾಲನ್ನು ಅಪರೂಪಕ್ಕೊಮ್ಮೆ ಬಳಸಬೇಕಾಗುತ್ತದೆ. ಇದಕ್ಕೆ ಬದಲಾಗಿ ‘ಹರ್ಬಲ್‌ ಟೀ’ (ಮೂಲಿಕೆ ಕಷಾಯದ ಚಹಾ; ಮೂಲಿಕೆಗಳನ್ನು ಹಾಕಿ ಮಾಡಿದ ಚಹಾ) ಒಳ್ಳೆಯದು. ಹಣ್ಣಿನ ರಸಗಳು, ಸ್ವಚ್ಛಕಾರಿಗಳು ಚಳಿಗಾಲದಲ್ಲಿ ಬಿಸಿ ಪಾನೀಯಗಳು ಬೇಕೆಂದರೆ, ‘ಯೀಸ್ಟ್‌’ ಸಾರವನ್ನು ಬಳಸಬಹುದು. (ಯೀಸ್ಟ್‌ಮಂಡ, ಕಿಣ್ವಿ, ಹುದುಗು). ಹಾಲು ರಕ್ತದ ಪರಿಚಲನೆಗೆ ಅಡಚಣೆ ಉಂಟುಮಾಡುವ, ಲೋಳೆ ತಯಾರಿಸುವ ಆಹಾರ ಯಾವುದೇ ಪ್ರಮಾಣದಲ್ಲಿ ಇದನ್ನು ಬಳಸಬಾರದು. ಮಲಗುವಾಗ ಹಾಲು ಸೇರಿಸಿದ ಪಾನೀಯಗಳನ್ನು ಸೇವಿಸುವುದು ಒಳ್ಳೆಯದಲ್ಲ. ಸ್ವಲ್ಪ ಜೇನು ಸೇರಿಸಿದ ಬೆಚ್ಚನೆಯ ನಿಂಬೆರಸ ಅಥವಾ ‘ಹರ್ಬಲ್‌ ಟೀ’ಯನ್ನು ಮೇಲಿನ ಪಾನೀಯಕ್ಕೆ ಬದಲಾಗಿ ಬಳಸಬಹುದು.

ಸಾಧ್ಯವಾದಾಗಲೆಲ್ಲ ಪೊಟ್ಯಾಷಿಯಂ ಯುಕ್ತ ಆಹಾರವನ್ನು ತೆಗೆದುಕೊಳ್ಳಬೇಕಲು. ಏಕೆಂದರೆ ಆರ್ಥ್ರೈಟಿಸ್‌ ಮತ್ತು ರುಮ್ಯಾಟಿಸಂ ರೋಗಗಳಿಂದ ನರಳುವ ವ್ಯಕ್ತಿಗಳಲ್ಲಿ ಈ ಲವಣಾಂಶ ಕಡಿಮೆಯಿರುತ್ತದೆ.

ಈ ಕೆಳಗಿನವು ಪೊಟ್ಯಾಷಿಯಂ ಇರುವ ಆಹಾರ ಪದಾರ್ಥಗಳು.

 • ಸೆಲೆರಿ
 • ಅವೋಕೆಡೋ ಪಿಯರ್ಸ್ ಇವೆರಡು ವಿದೇಶಿ ಹಣ್ಣುಗಳು
 • ಸೇಬು
 • ಬಾಳೆಹಣ್ಣು
 • ಚೆರ್ರಿ‍
 • ಖರ್ಜೂರ
 • ಒಣಗಿದ ಅಂಜೂರ
 • ಸಿಪ್ಪೆ ಸಹಿತ ಬೇಯಿಸಿದ ಆಲೂಗಡ್ಡೆಗಳು
 • ಪೂರ್ಣಗೋಧಿ
 • ಬಾದಾಮಿ
 • ಕಾಟೇಜ್‌ ಚೀಚ್‌ (ಮೃದು ಚೀಸು; ಮೊಸರನ್ನು ಒತ್ತದೆಯೆ ಮಾಡಿದ ಮೆತ್ತಗಿರುವ ಬಿಳಿ ಚೀಸು)
 • ವಾಟರ್ ಕ್ರೆಸ್‌ (ತಿನ್ನಲಾಗುವ ಕಟುರುಚಿಯ ಎಲೆಗಳುಳ್ಳ ಜಲಸಸ್ಯ ಜಾತಿ)
 • ‘ಲೆಂಟಿಲ್ಸ್‌’ (ಲೆನ್ಸ್‌ ಕ್ಯುಲಿನರಿಸ್‌) ಕುಲಕ್ಕೆ ಸೇರಿದ, ತಿನ್ನಬಹುದಾದ ಬೀಜಗಳನ್ನು ಬಿಡುವ, ಅವರೇಕಾಳಿನ ಬಳಗದ ಸಸ್ಯ, ಇದರ ಸಿಪ್ಪೆ ತೆಗೆದು ಆಹಾರವಾಗಿ ಬಳಸಬಹುದಾದ ಬೀಜಗಳು.)
 • ದ್ರಾಕ್ಷಿಗಳು
 • ಉಪ್ಪನ್ನು ಬಳಸಬಾರದು. ಬಹಳಷ್ಟು ಜನ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಉಪ್ಪನ್ನು ಬಳಸುತ್ತಿರುತ್ತಾರೆ.

ದೇಹದ ಅಗತ್ಯಕ್ಕಿಂತ ಹೆಚ್ಚಿನಂಶದ ಉಪ್ಪು ಬಳಸಿದರೆ ಮೂತ್ರಜನಕಾಂಗಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಏಕೆಂದರೆ ಈ ಹೆಚ್ಚಿನ ಉಪ್ಪಿನಂಶವನ್ನು ಹೊರಹಾಕಲು ಅದು ಹೆಚ್ಚು ಕೆಲಸ ಮಾಡಬೇಕಾಗುತ್ತಿರುತ್ತದೆ.

ದೇಹಕ್ಕೆ ಅಗತ್ಯವಾದಷ್ಟು ಉಪ್ಪಿನಂಶ ಈಗಾಗಲೇ ಆಹಾರ ಪದಾರ್ಥಗಳಲ್ಲಿರುತ್ತದೆ. ಆದುದರಿಂದ, ಇದಕ್ಕೂ ಮೀರಿ ಉಪ್ಪು ಸೇರಿಸುವುದು ಕ್ಷೇಮವಲ್ಲ.

ವಿಶ್ವನಾಥ, ಮಂಡ್ಯ