೧) ನಿಮಗೆ ನೀವು ಒತ್ತಡಕ್ಕೊಳಗಾಗಿದ್ದೇನೆ ಎಂದು ಭಾವಿಸಿದ್ದರೆ, ಪ್ರಶಾಂತವಾದ ಜಾಗಕ್ಕೆ ತೆರಳಿ ರಿಲ್ಯಾಕ್ಸೇಷನ್‌ ವ್ಯಾಯಾಮಗಳನ್ನು ಮಾಡಿರಿ.

೨) ಒಂದು ದಿನದಲ್ಲಿ ಹತ್ತು ಗಂಟೆಗಳಿಗಿಂತಲೂ ಹೆಚ್ಚಾಗಿ ಕೆಲಸದಲ್ಲಿ ತೊಡಗಬೇಡಿ.

೩) ಮಧ್ಯಾಹ್ನದ ಹೊತ್ತು ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ಪಡೆಯಿರಿ.

೪) ವಾರಕ್ಕೊಮ್ಮೆ ಪೂರ್ಣ ವಿಶ್ರಾಂತಿಯನ್ನು ಪಡೆಯಿರಿ.

೫) ಕ್ರಮವಾಗಿ ವ್ಯಾಯಾಮವನ್ನು ಮಾಡಿರಿ. ಪ್ರತಿದಿನ ವ್ಯಾಯಾಮವನ್ನು ಮಾಡಲಾಗದಿದ್ದರೆ, ವಾರದಲ್ಲಿ ಮೂರು ದಿನ ೨೦ ರಿಂದ ೩೦ ನಿಮಿಷಗಳ ಕಾಲ ವ್ಯಾಯಾಮವನ್ನು ಮಾಡಿರಿ.

೬) ನಿಮ್ಮ ಸಮಸ್ಯೆಗಳ ಬಗ್ಗೆ ನ್ಯಾಯಾಬದ್ಧವಾಗಿ ಹಾಗೂ ಪ್ರಾಯೋಗಿಕವಾಗಿ ಆಲೋಚಿಸಿರಿ.

೭) ನಿಮಗೆ ಭಾವನಾತ್ಮಕ ಅಥವಾ ಲೈಂಗಿಕ ಸಮಸ್ಯೆಗಳಿದ್ದರೆ ತಜ್ಞ ವೈದ್ಯರ ಆಪ್ತ ಸಲಹೆ ಪಡೆಯಿರಿ.

೮) ಒತ್ತಡ ನಿವಾರಣೆಗಾಗಿ ಡ್ರಗ್ಸ್‌ ಅಥವಾ ಆಲ್ಕೋಹಾಲ್‌ನ್ನು ಅವಲಂಬಿಸಬೇಡಿ.

೯) ಅವಾಸ್ತವಿಕ ಗುರಿಗಳನ್ನು ಇರಿಸಿಕೊಳ್ಳಬೇಡಿರಿ.

೧೦) ಈ ಹಿಂದೆ ನಡೆದ ಘಟನೆಗಳ ಬಗ್ಗೆ ಚಿಂತಿಸುತ್ತಾ ಕೂಡಬೇಡಿ. ವರ್ತಮಾನದ ಬಗ್ಗೆ ಮಾತ್ರ ಆಲೋಚಿಸಿರಿ.