ರಿಲ್ಯಾಕ್ಸೇಷನ್‌ (ವಿರಮಿಸಿಕೊಳ್ಳುವುದು) ವ್ಯಾಯಾಮಗಳನ್ನು ಮಾಡುವುದರಿಂದ ಶರೀರದ ಉದ್ವೇಗ ನಿವಾರಣೆಯಾಗುತ್ತದೆ. ಸ್ನಾಯುಗಳನ್ನು ಸಡಿಲ ಮಾಡುತ್ತಾ ಬರುವುದರಿಂದ ಅವು ಕೆಲವೇ ಸೆಕೆಂಡುಗಳಲ್ಲಿ ವಿರಮಿಸಿಕೊಳ್ಳುತ್ತವೆ.

) ಭುಜಗಳಿಗೆ ಮತ್ತು ಬೆನ್ನಿನ ಮೇಲ್ಭಾಗಕೋಸ್ಕರ:

ಕುರ್ಚಿಯಲ್ಲಿ ನೆಟ್ಟಗೆ ಕೂತುಕೊಳ್ಳಿರಿ. ಭುಜವನ್ನು ಕೆಳಕ್ಕೆ ಇಳಿಸಿರಿ . ಸಾಧ್ಯವಾದಷ್ಟು ಮಟ್ಟಿಗೆ ಭುಜಗಳನ್ನು  ನಿಧಾನವಾಗಿ ಮೇಲಕ್ಕೆ ಎತ್ತಿರಿ. ಅಂದರೆ ನಿಮ್ಮ ಕಿವಿಗಳ ಕಡೆಗೆ ಎತ್ತರಿಸಿರಿ. ಹಿಂದಕ್ಕೆ, ಮುಂದಕ್ಕೆ ನಿಮ್ಮ ಭುಜವನ್ನು ತಿರುಗಿಸಿರಿ. ಇದನ್ನು ಹತ್ತು ಸಾರಿ ಪುನರಾವರ್ತನೆ ಮಾಡಿರಿ.

) ಕತ್ತು ಮತ್ತು ಭುಜಗಳಿಗೋಸ್ಕರ:

ಮರದ ಕಲುರ್ಚಿಯಲ್ಲಿ ಕುಳಿತು, ನಿಮ್ಮ ತಲೆಯನ್ನು  ನಿಧಾನವಾಗಿ ನಿಮ್ಮ ಭುಜದ ಕಡೆಗೆ ತಿರುಗಿಸಿರಿ. ಅನಂತರ, ಮಧ್ಯಭಾಗಕ್ಕೆ ಬರಲಿ. ಅನಂತರ ಎಡಭಾಗಕ್ಕೆ ನೋಡಿರಿ. ಇದನ್ನು ಹತ್ತು ಸಾರಿ ಪುನರಾವರ್ತನೆ ಮಾಡಿರಿ.

) ಕತ್ತು ಮತ್ತು ಭುಜಗಳಿಗೋಸ್ಕರ:

ಅನುಕೂಲಕರವಾಗಿ ಕುಳಿತುಕೊಳ್ಳಿರಿ. ಹಿಂದಕ್ಕೆ ಭಾಗಿ ಕುಳಿತರೆ ಹೆಚ್ಚು ರಿಲ್ಯಾಕ್ಸ್‌ ಉಂಟಾಗುತ್ತದೆ. ಚಿತ್ರದಲ್ಲಿ ತೋರಿಸಿರುವಂತೆ ತಲೆ ಹಿಂಭಾಗದಲ್ಲಿ ಕೈಗಳನ್ನು ಜೋಡಿಸಿ, ತಲೆ ಹಿಂಭಾಗವನ್ನು ಒತ್ತಿಡಿರಿ. ಇದನ್ನು ಹತ್ತು ಸಾರಿ ಮಾಡಬೇಕು.

) ಉಸಿರಾಟ:

ನೇರವಾಗಿ ನಿಂತು ಪಾದಗಳನ್ನು ಅಗಲಿಸಿರಿ. ನಿಮ್ಮ ಕೈಗಳು ಚಿತ್ರದಲ್ಲಿ ತೋರಿಸಿರುವಂತೆ ಪಕ್ಕಕ್ಕೆ ಚಾಚಿರಲಿ. ಮೂಗಿನ ಮೂಲಕ ನಿಧಾನವಾಗಿ ಉಸಿರಾಡುತ್ತಾ ನಾಲ್ಕು ಎಂದು ಎಣಿಸಿರಿ. ಪಕ್ಕಕ್ಕೆ ಚಾಚಿದ ಕೈಗಳನ್ನು ಮೇಲಕ್ಕೆ ಎತ್ತಿಕೊಂಡು ಜೋಡಿಸಿರಿ. ಉಸಿರನ್ನು ನಿಧಾನವಾಗಿ ಹೊರಕ್ಕೆ ಬಿಡಿರಿ. ಉಸಿರನ್ನು ಹೊರಕ್ಕೆ ಬಿಡುತ್ತಿದ್ದಂತೆ ನಿಮ್ಮ ತೋಳುಗಳನ್ನು ಕೆಳಕ್ಕೆ ಇಳಿಸಿರಿ. ಇದನ್ನು ನಾಲ್ಕು ಸಾರಿ ಪುನರಾವರ್ತನೆ ಮಾಡಿರಿ.