ಒತ್ತಡವನ್ನು ನಿಭಾಯಿಸುವ ಕೌಶಲ್ಯಗಳನ್ನು ಕಲಿಯುವುದು ಕಷ್ಟವೇನಲ್ಲ . ಒತ್ತಡವನ್ನು ನಿಭಾಯಿಸುವ ಮೂರು ಹಂತಗಳು:

೧) ನಿಮ್ಮ ಜೀವನದಲ್ಲಿ ಒತ್ತಡಗಳನ್ನುಂಟು ಮಾಡುವ ಹೊರಗಿನ ಪರಿಸರ ಸಮಾಧಾನವಾಗಿರುವಂತೆ ಗಮನ ಹರಿಸಿದರೆ ಒತ್ತಡ ಕಡಿಮೆಯಾಗುತ್ತದೆ.

೨) ಅಂತರಂಗದ ಪರಿಸರ ಪ್ರಶಾಂತವಾಗಿರುವಂತೆ ಗಮನಹರಿಸಿದರೆ ನರಗಳ ವ್ಯೂಹ ಶಾಂತವಾಗಿರುತ್ತದೆ. ಒತ್ತಡ ಕಡಿಮೆಯಾಗುತ್ತದೆ.

೩) ನಿಮ್ಮ ಮನಸ್ಸಿನ್ಲಲಿ ಒತ್ತಡ ಉಂಟು ಮಾಡುವ ಆಲೋಚನೆಗಳನ್ನು ಕಡಿಮೆ ಮಾಡಿಕೊಂಡರೆ, ಒತ್ತಡ ಕಡಿಮೆಯಾಗುತ್ತದೆ.

ಚಟುವಟಿಕೆ: ಮಾರ್ಪಾಡು ಮಾಡಿಕೊಳ್ಳುವುದು

೧) ದೈನಂದಿನ ಚಟುವಟಿಕೆಗಳಲ್ಲಿ ಕ್ರಮಬದ್ಧತೆ ಇಲ್ಲದಿದ್ದರೆ, ಕ್ರಮಬದ್ಧವಾಗಿರುವಂತೆ ಮಾರ್ಪಾಡು  ಮಾಡಿಕೊಳ್ಳಿರಿ. ಸಮಯಕ್ಕೆ ಸರಿಯಾಗಿ ಉಪಾಹಾರ ಹಾಗೂ ಭೋಜನವನ್ನು ಮಾಡಿರಿ. ದೇಹ-ಮನಸ್ಸಿಗೆ ಆಯಾಸವಾಗಿದ್ದಾಗ ಒತ್ತಾಯ ಪೂರ್ವಕವಾಗಿ ಕೆಲಸ-ಕಾರ್ಯಗಳನ್ನು ಮಾಡಲು ಮುಂದಾಗಬೇಡಿ. ಅರ್ಧಗಂಟೆ ರಿಲ್ಯಾಕ್ಸ್‌ ಮಾಡಿಕೊಂಡರೆ, ನವಚೈತನ್ಯ ಮೂಡುತ್ತದೆ. ಕೆಲಸವನ್ನು ಮುಂದುವರೆಸಲು ಆಸಕ್ತಿಯು ಉಂಟಾಗುತ್ತದೆ. ನಿಜವಾದ ರಿಲ್ಯಾಕ್ಸ್‌ ವರ್ತನೆಯಿಂದ ಬೇಸರ-ಆಯಾಸ ನಿವಾರಣೆಯಾಗುತ್ತದೆ.

) ಬದಲಾವಣೆಗಾಗಿ ಪ್ಲಾನ್ಮಾಡಿಕೊಳ್ಳಿರಿ: ಜೀವನದಲ್ಲಿ ನಿರಂತರವಾಗಿ ಬದಲಾವಣೆಗಳಾಗುತ್ತಿರುತ್ತವೆ. ಕೆಲವು ಬದಲಾವಣೆಗಳು ಸಕಾರಾತ್ಮಕವಾಗಿರುತ್ತವೆ. ಅವುಗಳೆಂದರೆ, ಹೊಸ ಸ್ನೇಹಿತರನ್ನು ಭೇಟಿಯಾಗುವುದು ಅಥವಾ ಹೊಸ ಹವ್ಯಾಸ ಅಥವಾ ಹೊಸ ಸಂಬಂಧವನ್ನು ಹೊಂದುವುದು. ನಕಾರಾತ್ಮಕ ಬದಲಾವಣೆಯೆಂದರೆ, ಅನಿರೀಕ್ಷಿತ ಸಾವು. ಸ್ವಾಭಾವಿಕ ಬದಲಾವಣೆಗಳು ನಿರಂತರವಾಗಿ ಉಂಟಾಗುತ್ತಿರುತ್ತವೆ.  ಯಾವುದಾದರೂ ಮುಖ್ಯವಾದ ಕೆಲಸ-ಕಾರ್ಯಗಳನ್ನು ಕೈಗೊಳ್ಳುವ ಮೊದಲು ಪ್ಲಾನ್‌ ಮಾಡಿಕೊಳ್ಳಬೇಕು.

ಎ) ನಿಮ್ಮ ಜೀವನದಲ್ಲಿ ಒತ್ತಡ ಉಂಟು ಮಾಡುವ ಪ್ರಸ್ತುತ ಸನ್ನಿವೇಶದ ಬಗ್ಗೆ ಸ್ಪಷ್ಟವಾದ ಚಿತ್ರವನ್ನು ಪಡೆಯಿರಿ. ಅದನ್ನು ಒಂದು ಬಿಳಿ ಹಾಳೆಯಲ್ಲಿ ಬರೆದುಕೊಳ್ಳಿರಿ.

ಬಿ) ನೀವು ಇಷ್ಟಪಡುವ ಒಳ್ಳೆಯ ಸನ್ನಿವೇಶದ ಬಗ್ಗೆ ಸ್ಪಷ್ಟ ಚಿತ್ರವನ್ನು ಹೊಂದಿರಿ. ನಿಜವಾದ ಚಿತ್ರಣ ನಿಮ್ಮ ಮನಸ್ಸಿನಲ್ಲಿ ಮೂಡಿದಾಗ ಅದನ್ನು ಬಿಳಿಯ ಹಾಳೆಯಲ್ಲಿ ಬರೆದಿಟ್ಟುಕೊಳ್ಳಿರಿ.

ಸಿ) ಪ್ರಸ್ತುತ ಸನ್ನವೇಶದ ಬಗ್ಗೆ ವಿವರವಗಿ ಸಿದ್ಧವಾಗಿರಿ. ಕ್ರಮವಾದ ಯೋಜನೆಯನ್ನು ರೂಪಿಸಿಕೊಳ್ಳಿರಿ.  ಅದು, ಆದರ್ಶಕವಾದ ಸನ್ನಿವೇಶವಾಗಿರಲಿ.