ನೀವು, ಆಸ್ಟಿಯೋ ಆರ್ಥ್ರೈಟಿಸ್‌ನ್ನು ಹೊಂದಿದ್ದರೆ, ನಿಮ್ಮ ಸ್ಥಿತಿಯ ನಿವಾರಣೆಗೆ ಪರಿಹಾರವನ್ನು ಹುಡುಕುತ್ತಿದ್ದರೆ, ನಿರಾಶರಾಗುತ್ತೀರಿ . ಕ್ಷೀಣಗೊಳಿಸುವ ಈ ಕಾಯಿಲೆ ರಕ್ಷಣಾತ್ಮಕ ಕಾರ್ಟಿಲೇಜ್‌ನಲ್ಲಿ ಒಡಕನ್ನು ಮೂಡಿಸುತ್ತದೆ. ಅಂದರೆ, ನಿಮ್ಮ ಕೀಲುಗಳ ನಡುವೆ ಇರುವ ಕಾರ್ಟಿಲೇಜ್‌ನಲ್ಲಿ ಬಿರುಕನ್ನುಂಟು ಮಾಡುತ್ತದೆ. ಅದರಿಂದಾಗಿ, ನೋವು ಮತ್ತು ಬಿಗಿತ ಮತ್ತು ಮಿತ ಪ್ರಮಾಣದ ಚಲನೆಯನ್ನುಂಟು ಮಾಡುತ್ತದೆ. ಮಾರ್ಕೆಟ್ಟಿನಲ್ಲಿ ಒಂದು ಡಜನ್‌ ಸಹಜವಾದ ಸಂಧಿವಾತದ ಸಪ್ಲಿಮೆಂಟ್ಸ್‌ಗಳು ದೊರೆಯುತ್ತವ. ಆದರೆ ಅವುಗಳಲ್ಲಿ ಉತ್ತಮವಾದವು ಯಾವುವು ಎಂದು ನೀವು ತಿಳಿಯುವುದಾದರೂ ಹೇಗೆ? ನ್ಯಾಚುರಲ್‌ ಹೆಲ್ತ್‌ ಮ್ಯಾಗ್‌ಝಿನ್‌ ನಡೆಸಿದ ಸಮೀಕ್ಷೆಯ ಪ್ರಕಾರ ಕೆಳಕಂಡ ಸಪ್ಲಿಮೆಂಟ್‌ಗಳು ಬೆಂಬಲಿಸುತ್ತವೆ . ಕೆಲವು ಸಹಜವಾದ ರೆಮಿಡೀಸ್‌ನಂತೆ, ಇವು ಸಹ ಕಾರ್ಯವನ್ನು ನಿರ್ವಹಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತವೆ.  ಅಂದರೆ, ಒಂದು ವಾರದಿಂದ ಎರಡು ತಿಂಗಳಿ ನಂತರ ನೋವು ಕಡಿಮೆಯಾಗುತ್ತದೆ ಮತ್ತು ಬಿಗಿತವನ್ನು ನಿವಾರಿಸುತ್ತದೆ. ಅಲ್ಲದೆ, ಕೆಲವು ಮುಂದೆ ಆಗಬಹುದಾದ ಕ್ಷೀಣತೆಯನ್ನು ತಡೆಗಟ್ಟುತ್ತದೆ ಅಥವಾ ಕಾಟಿಲೇಜ್‌ನ ಪುನರ್ ನಿರ್ಮಾಣವನ್ನು ಮಾಡುತ್ತದೆ. ಇಲ್ಲಿ ಈ ಚಿಕಿತ್ಸೆಯ ಬಗ್ಗೆ ತಿಳಿಸಲಾಗಿದೆ.

ಗ್ಲೂಕೋ ಸಮೈನ್ಸಲ್ಫೆಟ್ಮತ್ತು ಕಾಂಡ್ರಾಯಿಟಿನ್

ಈ ಎರಡು ಸಪ್ಲಿಮೆಂಟುಗಳು ಒಟ್ಟಾಗಿ ಕಾರ್ಯವನ್ನು ನಿರ್ವಹಿಸುತ್ತವೆ. ಇದರಿಂದ, ಆಸ್ಟಿಯೋ ಆಥ್ರೈಟಿಸ್‌ನ್ನು ಶಕ್ತಿಯುತವಾಗಿ ನಿವಾರಿಸುತ್ತದೆ . ಅವು ಕಾಯಿಲೆ ಜಾಸ್ತಿಯಾಗುವುದನ್ನು ತಡೆಯುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಸೌಮ್ಯವಾದ ಅಥವಾ ತೀವ್ರವಾದ ನೋವನ್ನು ನಿವಾರಿಸುತ್ತದೆ. ಈ ಸಪ್ಲಿಮೆಂಟ್‌ಗಳು ಔಷಧಿ ಅಂಗಡಿಗಳಲ್ಲಿ ಮಾರಾಟಕ್ಕೆ ದೊರೆಯುತ್ತವೆ.

ಗ್ಲೂಕೋಸ್‌ಸಮೈನ್‌ ಸಲ್ಫೆಟ್‌ ಸಹಜವಾದ ವಸ್ತುವಾಗಿದೆ . ಅದು ಕಾರ್ಟಿಲೇಜ್‌ (ಮೃದುವಾದ ಎಲುಬು) ಹಾಳಾಗದಂತೆ ಸಂರಕ್ಷಿಸುತ್ತದೆ ಮತ್ತು ಹೆಚ್ಚಿನ ಮೃದು ಎಲುಬು ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಡಾ. ಜಾಸನ್‌ ಥಿಯೋಡೋಸಕ್ಸಿ ಎಂ.ಡಿ.ರವರು. ಗ್ಲೂಕೋಸಮೈನ್‌, ನೋವು ಮತ್ತು ಉರಿಯೂತವನ್ನು ನಿವಾರಿಸುತ್ತದೆ. ಆದರೆ ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ಬಗ್ಗೆ ಇನ್ನೂ ಗೊತ್ತಾಗಿಲ್ಲ . ಕಾಂಡ್ರಾಯಿಟಿನ್‌ ಸಹಜವಾದ ವಸ್ತುವಾಗಿದೆ. ಅದು ಕಾರ್ಟಿಲೇಜ್‌ನಲ್ಲಿ ಕಂಡು ಬರುತ್ತದೆ . ಅಲ್ಲದೆ, ಕಾರ್ಟಿಲೇಜ್‌ (ಮೃದು ಎಲುಬು) ನಲ್ಲಿ ಬಿರುಕು ಆಗುವುದನ್ನು ನಿಧಾನಿಸುತ್ತದೆ. ಇದರಿಂದ ಚಲಿಸುವಾಗ ನೋವು ಕಡಿಮೆಯಿರುತ್ತದೆ ಎನ್ನುತ್ತಾರೆ ಪ್ರಕೃತಿ ಚಿಕಿತ್ಸಾ ವೈದ್ಯರಾದ ಹಾನ್ಹಬ್ಸ್ರವರು.

ಗ್ಲೂಕೋಸಮೈನ್‌ ಮತ್ತು ಕಾಂಡ್ರಾಯಿಟಿನ್‌ ಬಗ್ಗೆ ನಡೆದಿರುವ ಸಂಶೋಧನೆ ಪ್ರಕಾರ , ಇವುಗಳ ಸೇವನೆಯಿಂದ ಆಸ್ಟಿಯೋಆಥ್ರೈಟಿಸ್‌ ಹೆಚ್ಚಾಗುವುದನ್ನು ನಿಲ್ಲಿಸುತ್ತದೆ ಎಂದು ತಿಳಿದು ಬಂದಿದೆ.

೨೦೦೧ ರಲ್ಲಿ ನಡೆದ ಸಂಶೋಧನೆಯಲ್ಲಿ ಮಂಡಿನೋವು (ಆಸ್ಟಿಯೋ ಆರ್ಥ್ರೈಟಿಸ್‌) ತೊಂದರೆಯಿಂದ ಕೂಡಿದ್ದ ೨೧೨ ಮಂದಿ ೧,೫೦೦ ಮಿಲಿಗ್ರಾಂ ಗ್ಲೂಕೋಸಮೈನ್‌ನನ್ನು ಸತತವಾಗಿ ಮೂರು ವರ್ಷಗಳ ಕಾಲ ಸೇವಿಸಿದರು. ಅನಂತರ ಪಡೆದ ಅಧ್ಯಯನದಿಂದ ಗ್ಲೂಕೋಸಮೈನ್‌ ಮತ್ತು ಕಾಂಡ್ರಾಯಿಟಿನ್‌ ಸೇವಿಸಿದ್ದವರಲ್ಲಿ ಉರಿಯೂತ ಮತ್ತು ನೋವು ನಿವಾರಣೆಯಾಗಿತ್ತು.

ನೀವು, ಈ ಎರಡನ್ನು ಪ್ರತ್ಯೇಕವಾಗಿ ಕೊಂಡುಕೊಳ್ಳಬಹುದು. ಆದರೆ ಡಾ. ಥಿಯೋಡೋಸಕ್ಸಿರವರು ಇವೆರೆಡನ್ನು ಒಟ್ಟಾಗಿ ಸೇವಿಸುವುದರಿಂದ, ಹೆಚ್ಚು ಲಾಭ ಉಂಟಾಗುತ್ತದೆಂದು ತಿಳಿಸಿದ್ದಾರೆ.

ಅರಿಸಿನದ ಪುಡಿಯನ್ನು ಔಷಧ ಪ್ರಮಾಣದಲ್ಲಿ ಅಂದರೆ, ಬೆಳಿಗ್ಗೆ ಉಪಾಹಾರದ ನಂತರ, ರಾತ್ರಿ ಊಟದ ನಂತರ ಒಂದೊಂದು ಚಮಚೆಯಷ್ಟು ಸೇವಿಸಿದರೆ ಸೌಮ್ಯ ರೂಪದ ಆಸ್ಟಿಯೋ ಆರ್ಥ್ರೈಟಿಸ್‌ ನೋವು ಮತ್ತು ಉರಿಯೂತ ಕಡಿಮೆಯಾಗುತ್ತದೆ ಎನ್ನುತ್ತಾರೆ ಪ್ರಕೃತಿ ಚಿಕಿತ್ಸಾತಜ್ಞ ವೈದ್ಯರು.

ವೈದ್ಯರು ಮತ್ತು ಸಂಶೋಧಕರು, ಅರಿಸಿನ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ, ಅರಿಸಿನ ಪುಡಿಯ ಸೇವನೆಯಿಂದ, ಉರಿಯೂತವನ್ನುಂಟು ಮಾಡುವ ರಾಸಾಯನಿಕಗಳಾದ ಪ್ರಾಸ್ಟಾಗ್ಲಾಂಡಿನ್ಸ್‌ ಮತ್ತು ಲುಕೋಟ್ರೈನೆಸ್‌ಗಳ ಉತ್ಪತ್ತಿಗೆ ತಡೆಯೊಡ್ಡುತ್ತದೆಂದು ತಿಳಿದು ಬಂದಿದೆ.

ವಿಟಮಿನ್‌ ‘ಡಿ’ ನೋವನ್ನು ತಡೆಗಟ್ಟುತ್ತದೆ .

ಕೆಲವು ಅಧ್ಯಯನಗಳು ವಿಟಮಿನ್‌ ‘ಡಿ’ ಸೇವನೆಯಿಂದ, ಮೃದು ಎಲುಬು ಅಥವಾ ಕಾರ್ಟಿಲೆಜ್‌ ಆರೋಗ್ಯವಾಗಿರುತ್ತದೆಂದು ಫಿಸಿಷಿಯನ್‌ ಜಾಸನ್‌ ಥಿಯೋಡೋಸಕ್ಸಿರವರು ತಿಳಿಸಿದ್ದಾರೆ. ನಿಮಗೆ ಆಸ್ಟಿಯೋ ಆಥ್ರೈಟಿಸ್‌ ಇದ್ದರೆ, ವಿಟಮಿನ್‌ ‘ಡಿ’ ಕೊರತೆ ಇದ್ದರೆ, ವೈದ್ಯರ ಸಲಹೆಯ ಮೇರೆಗೆ ವಿಟಮಿನ್‌ ‘ಡಿ’ಯನ್ನು ಸೇವಿಸುವುದರಿಂದ ಕೀಲುನೋವು ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.

ವಿ.ಸೂ: ಗ್ಲೂಕೋಸಮೈನ್ಮತ್ತು ಕಾಂಡ್ರಾಯಿಟಿನ್ನನ್ನು ಸಂಧಿವಾತದವರು ಹಾಗೂ ಮಧುಮೇಹ ಮತ್ತು ಹೃದ್ರೋಗಿಗಳು ವೈದ್ಯರ ಸಲಹೆಯನ್ನು ಪಡೆಯದೆ ಸೇವಿಸಬಾರದು .