೧.ಪ್ಲೀಟರು ಸಂಗ್ರಹಿಸಿದ ಲಾವಣಿಗಳು, ಸಂ : ಕ್ಯಾತನಹಳ್ಳಿ ರಾಮಣ್ಣ
ಪ್ರ : ಮೈಸೂರು ವಿಶ್ವವಿದ್ಯಾಲಯ, ಮೈಸೂರು.
೨.ಜೀವನ ಸಂಗೀತ, ಸಂ : ಸಿಂಪಿ ಲಿಂಗಣ್ಣ ಮತ್ತು ಪಿ. ಧೂಲಾ
ಪ್ರ : ಸಮಾಜ ಪುಸ್ತಕಾಲಯ, ಧಾರವಾಡ
೩.ಸರ್ವೋದಯ ಗ್ರಾಮೀಣ ಜನಪದ ಗೀತೆಗಳು : ಹುಲಕುಂದ ಭೀಮಕವಿ
ಪ್ರ : ಕರ್ನಾಟಕ ಸರ್ವೋದಯ ಸಾಹಿತ್ಯ ಮಂದಿರ, ಬೆಂಗಳೂರು.
೪.ಕವಿ ಬಾಳಗೋಪಾಲನ ಲಾವಣಿಗಳು, ಸಂ : ನಿಂಗಣ್ಣ ಸಣ್ಣಕ್ಕಿ
ಪ್ರ : ಸಮಾಜ ಪುಸ್ತಕಾಲಯ ಧಾರವಾಡ
೫.ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ, ಸಂ : ನಿಂಗಣ್ಣ ಸಣ್ಣಕ್ಕಿ
ಪ್ರ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಜಯೋತ್ಸವ ಸಮಿತಿ, ಬೆಳಗಾವಿ.
೬.ಲಿಂಗರಾಜ ವಿಜಯ ಕಾವ್ಯ ಹಾಗೂ ಕೆಲವು ಲಾವಣಿಗಳು, ಸಂ : ಲಕ್ಕ್ ಅ.ಶಿರಹಟ್ಟಿ
ಪ್ರ : ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಧಾರವಾಡ
೭.ಚಾಪ ಹಾಕತೀವಿ ಡಪ್ಪಿನ ಮ್ಯಾಲ : ಡಾ.ಸಂಗಮೇಶ ಬಿರಾದಾರ
ಪ್ರ : ಗೆಳೆಯರ ಬಳಗ, ತುಂಗಳ ತಾ. ಜಮಖಂಡಿ
೮.ಜಾನಪದ ಝೇಂಕಾರ, ಸಂ : ಎ.ಜಿ. ನೀಲಗಾರ
ಪ್ರ : ಜಾಗೃತ ಭಾರತ, ಧಾರವಾಡ
೯.ಕ್ರಾಂತಿವೀರ ಬಾಬಾಸಾಹೇಬ ಸಂ : ಎ.ಎಸ್. ಹೂಗಾರ
ಪ್ರ : ಬಾಬಾಸಾಹೇಬ ಗ್ರಂಥ ಪ್ರಕಾಶನ, ನರಗುಂದ
೧೦.ರಾಷ್ಟ್ರ ಗೀತಾವಳಿ : ನಲವಡಿ ಶ್ರೀಕಂಠಶಾಸ್ತ್ರಿ
ಪ್ರ : ಪಿ.ಸಿ. ಶಾಬಾದಿಮಠ ಬುಕ್ ಡಿಪೋ, ಗದಗ
೧೧.ಹೈದ್ರಾಬಾದ್ ರಜಾಕಾರ ಲಾವಣಿ : ನಲವಡಿ ಶ್ರೀಕಂಠಶಾಸ್ತ್ರಿ
ಪ್ರ : ಕನ್ನಡ ವಿಶ್ವವಿದ್ಯಾಲಯ, ಹಂಪಿ
೧೨.ಧರ್ಮದ್ರೋಹ : ನಲವಡಿ ಶ್ರೀಕಂಠಶಾಸ್ತ್ರಿ
ಪ್ರ : ಪಿ.ಸಿ. ಶಾಬಾದಿಮಠ ಬುಕ್ ಡಿಪೋ, ಗದಗ
೧೩.ಮರಿಕಲ್ಲ ಕವಿಯ ಗೀಗೀ ಪದಗಳು, ಸಂ : ಡಾ. ಬಸವರಾಜ ಮಲಶೆಟ್ಟಿ
ಪ್ರ : ಬಸವೇಶ್ವರ ಪ್ರಕಾಶನ, ತಿಗಡೊಳ್ಳಿ, ಜಿ. ಬೆಳಗಾವಿ
೧೪.ಶರಣ ಸ್ಮೃತಿ, ಸಂ : ಡಾ. ಎಂ.ಎನ್.ವಾಲಿ
ಪ್ರ : ಭುವನೇಶ್ವರಿ ಪ್ರಕಾಶನ, ಬಿಜಾಪುರ
೧೫.ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ : ಡಾ.ಶಿವಾನಂದ ಗುಬ್ಬಣ್ಣವರ
ಪ್ರ : ಅಕ್ಷಯ ಪ್ರಕಾಶನ, ಧಾರವಾಡ
೧೬.ಜಾನಪದ ವ್ಯಾಸಂಗ : ಸೋಮಶೇಖರ ಇಮ್ರಾಪುರ
೧೭.ಜಾನಪದ ಸಾಹಿತ್ಯ ದರ್ಶನ : ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
೧೮.ಲಾವಣಿ – ಡಾ. ಶ್ರೀರಾಮ ಇಟ್ಟಣ್ಣವರ
೧೯.‘ಲಾವಣಿ ಸಾಹಿತ್ಯ’ – ಡಾ. ಶ್ರೀಕಂಠ ಕೂಡಿಗೆ.

 


ಅಂದಿನ : ಆ ದಿವಸ
ಅಕಲ : ಉಪಾಯ, ಬುದ್ಧಿ
ಅಕರಕ : ಅಂತಿಮ
ಅಕರತಿ : ಪ್ರೀತಿಯಿಂದ
ಅಕರಾತಿ : ಅತ್ಯಾನಂದ
ಅಕ್ರಾಂತ : ಆಕ್ರಂದನ
ಅಗಟಿನಿಲ್ಲು : ಆತುಕೊಂಡು ನಿಲ್ಲು
ಅಗದಿ : ಬಹಳ
ಅಗ್ಗ : ಕಡಿಮೆ
ಅರ್ಜಿ : ವಿನಂತಿ
ಅಡಗಾಸಿ : ಸಿಕ್ಕಿಸಿಕೊಂಡು
ಅಡರಾಸಿ : ಆತುರದಿಂದ
ಅಡ್ರಾಸಿ : ಗಡಬಡಿಸಿ
ಅಣಿಮೆ : ಸೂಕ್ಷ್ಮತ್ವ
ಅದರ : ತುಟಿ
ಅದಾವತಿ : ಹಗೆತನ
ಅದ್ದನ : ಒಂದು ಅಳತೆಯ ಮಾಪ
ಅನಗಾಲ : ಯಾವಾಗಲೂ
ಅನು : ಯೋಗ್ಯ
ಅನ್ನೇವು : ಅನ್ಯಾಯ
ಅಬಟ : ಕೆಟ್ಟ
ಅಬರು : ಮರ್ಯಾದೆ
ಅಬಸುಬ : ಅಪಶಕುನ, ಅಶುಭ
ಅರ್ಬುದ : ಒಂದು ರೋಗ
ಅಮಚಿಕೊಳ್ಳು : ಅಪ್ಪಿಕೊಳ್ಳು
ಅಮಲ : ಅಧಿಕಾರ, ದರ್ಪ
ಅಯತಾರ : ಆದಿತ್ಯವಾರ
ಅರಬಿ : ಬಟ್ಟೆ
ಅರಸುಕಿ : ಅರಸೊತ್ತಿಗೆ
ಅರಾಯುಷ್ಯ : ಅಲ್ಪಾಯುಷಿ
ಅರುವ : ಅರಿವು
ಅಲ್ಲದ್ದು : ಬೇಡವಾದದ್ದು
ಅವಳಿ : ಜೋಡಿ
ಅಷ್ಟೂರ ಮಾತು : ಕರೆಮಾತು
ಅಳಿ : ಒಂದು ಅಳತೆಯ ಮಾಪು
ಅಳಿಗಾಲ : ವಿನಾಶ
ಅಳಿಸ್ಯಾರೋ : ಇಲ್ಲದಂತೆ ಮಾಡಿದರು

ಆಗಸೂದ : ಆಗುವಂತೆ ಮಾಡು
ಆಯವಾದ : ಅನುಕೂಲವಾದ
ಆರಾಸ : ಆರಾಮ, ವೈಭವ
ಆರ‍್ಯಾಣ : ಅರಣ್ಯ
ಆಲೋಚ್ನಿ : ಆಲೋಚನೆ
ಆಶಿ : ಆಸೆ

ಇಂಬಾಗಿ : ಆರಾಮವಾಗಿ, ದೂರದಲ್ಲಿ
ಇಕಾಯಿ : ಸಹಕಾರ ತತ್ವ-ಗ್ರಾಮೋದ್ಯೋಗ
ಇಜಾರದವರ : ಚೊಣ್ಣದವರ
ಇನಾಮು : ಬಹುಮಾನ
ಇರಸೇದವ : ದ್ವೇಷದವ
ಇಸಮಿ : ವ್ಯಕ್ತಿ
ಇಳಿವ್ಯಾರ : ಇಳುಹಿದ್ದಾರೆ

ಉಪರಾಟಿ : ತಿರುವು, ಮರುವು
ಉಮೇದ್ವಾರ : ಉಲ್ಲಾಸ, ಹುರುಪು
ಉಲವ : ಮಾತಿನ ಧ್ವನಿ

ಊಟಾಬೈಟ : ಸಾಮು, ಬಸ್ಕಿ

ಎಣಿ : ಸಮ
ಎತ್ತಾರ : ಹೇಗೇಗೊ
ಎರವು : ಅಗಲಿಕೆ, ದೊರೆ

ಏಕಂದರ : ಒಂದಾಗಿ
ಏಕ್‌ದಂ : ಒಮ್ಮೆಲೆ
ಏಟು : ಎಷ್ಟು
ಏದಸವರು : ಒದಗಿಸುವವರು

ಒಟ್ಟಮುಕ್ತಾರ : ಪೂರ್ಣ ಅಧಿಕಾರ
ಒಣಪು : ವಯ್ಯಾರ
ಒತ್ತಿ : ಗಿರವಿ

ಓದ : ಒಯ್ದಾ

ಕಂಗಾಲ : ಅನ್ನಾನ್ನಗತಿಕ
ಕಂಚನಾಭ : ವಿಷ್ಣು
ಕಂಚುಕ : ಕುಪ್ಪಸ
ಕುಂಚ : ಗೊಂಚಲು
ಕಟಿಪಿಟಿ : ಪ್ರಯತ್ನ
ಕಂಡಾಪಟ್ಟಿ : ಬಹಳಷ್ಟು
ಕಡಕ್ : ಜೋರು
ಕಡಿ : ಕಡೆಗೆ, ಕೊನೆಯ
ಕಡಿದಾಂಗ : ಕಡಿಯದಂತೆ
ಕಡ್ಡ : ಒಂದು ಜಾತಿಯ ಹುಲ್ಲು
ಕಡ್ನಾ : ಕೈಗಡ
ಕದ್ದಲೆ : ಕಳ್ಳತನದಿಂದ
ಕಣಾಕಟ್ಟು : ವೃತ್ತಾಕಾರದಲ್ಲಿ ಸುತ್ತುವರೆ
ಕುಂತು : ಈಶ್ವರ
ಕಂತ್ಯಾಕ : ಕಂತೆ, ಹಾಳು ಹರಟೆ
ಕರ್ಣಿ : ಲೆಕ್ಕಣಿಕೆ
ಕಪ್ಪಸು : ಜೀರ್ಣಿಸು
ಕಬರ‍್ಹಾರಿ : ಸುದ್ದಿತಪ್ಪಿ
ಕಬುಲ : ಒಪ್ಪಿಗೆ
ಕರ್ಬಲ : ರಣರಂಗ, ಯುದ್ಧಸ್ಥಳ
ಕಮ್ಮ : ಕಡಿಮೆ
ಕರ್ಮ : ಪಾಪ
ಕರವೊಗ : ಕರಕೊಂಡು ಹೋಗ
ಕರೆ : ಸತ್ಯ, ಖರೆ
ಕಲಂ : ಕಾನೂನು
ಕವೆಸುರ : ಕವಿಶೂರ
ಕಸಕ : ಹೊಲಸು, ದೋಷ
ಕಸಗೊಂತ : ಕಸಿದುಕೊಳ್ಳುತ್ತಾ
ಕಸಬಿ : ಸೂಳೆ
ಕಳವ್ಯಾರೊ : ಕಳುಹಿದ್ದಾರೆ
ಕಳಾಲಾ : ಹಸುಗೂಸು
ಕಳಿ : ಆಯಕಟ್ಟು
ಕಾಟ : ಉಪಟಳ
ಕಾಪಿನ : ಸಂರಕ್ಷಣೆಯ
ಕಾಲಮಡಿ : ಮೂತ್ರ ವಿಸರ್ಜನೆ
ಕಾವಾಡಿ : ತಕ್ಕಡಿಯಂತಿರುವ ವಾಹಕ  ಸಾಧನ
ಕಾಸ : ಮುದ್ದಾಮು, ಉದ್ದೇಶ  ಪೂರ್ವಕ
ಕಾಳಗವಿ : ಕತ್ತಲು ಆವರಿಸು
ಕ್ವಾಟಿ : ಕೋಟೆ
ಕೀಟಕ್ : ಕೀಟಲೆ
ಕೀಲಾ : ರಹಸ್ಯ
ಕುಂಪನಿ : ಕಂಪನಿ
ಕುಡ್ರಿ : ಕೊಡಿರಿ
ಕುಣಸ್ಯಾರ : ಕೂಡ್ರಿಸಿದ್ದಾರೆ
ಕುಣಸಿ : ಕೂಡ್ರಿಸಿ
ಕುತ್ತ : ಆಪತ್ತು
ಕುಬ್ಬಿ : ಭರಪೂರ
ಕುಮಕ : ಗರ್ವ, ಸಹಾಯ
ಕುಲುಪ : ಕೀಲಿ
ಕುಶಿಯಾಲ : ಸಂತೋಷ
ಕುಸಿ : ಸಂತೋಷ
ಕೂದ : ಕೇಡು, ತೊಂದರೆ
ಕೂನ : ಗುರುತು
ಕೂರ್ಮ : ಆಮೆ
ಕೂಳ : ಆಹಾರ
ಕೃಷ್ಣಾಜನ : ಚಿಗರಿ ಚರ್ಮ
ಕೆಟ್ಟಕ್ಯಾರಿ : ಕೆಟ್ಟುಹೋಗಿ
ಕೆನಾಲ್ : ಕಾಲುವೆ
ಕೇಶವ : ಆಕಾಶ
ಕೈದು : ಆಯುಧ
ಕೈಲಾರ : ಬಹಳ ?
ಕೊರಡ : ಪೋಲಿಸರ ಚಾವಟಿ
ಕೊರವಿ : ಶಕುನ ಹೇಳುವವಳು
ಕೋಲಿ : ಕೋಣೆ
ಕೌತುಕ : ಆಶ್ಚರ್ಯ

ಖಂಗ : ಖಡ್ಗ, ಸೈನಿಕ
ಖಬರ : ಎಚ್ಚರ
ಖಲಿ : ಹೊಲಸು
ಖಾತ್ರಿ : ಸತ್ಯ, ನಿಶ್ಚಿತ
ಖಾಲಿ : ಪೊಳ್ಳು, ಸುಳ್ಳು
ಖ್ಯಾಲ : ಗಮನ
ಖಾವಂದ : ಒಡೆಯ
ಖಿನ್ನ : ನೊಂದುಕೊಂಡ, ಬಳಲಿದ
ಖೂನ : ಗುರುತು, ಪರಿಚಯ
ಖೂಳ : ಮೂರ್ಖ
ಖೋಡಿ : ಕೆಟ್ಟ

ಗಚ್ಚಿ : ಗಟ್ಟಿ
ಗಜ್ : ಹೊಡೆತ
ಗರ್ಜ : ಅವಶ್ಯಕತೆ
ಗಡದಿಂದ : ಬೇಗನೆ
ಗಣ್ಣ : ಗಣ (ಮರಾಠಿ ಗಣ)
ಗಣಪತಿ ಸ್ತುತಿ
ಗದಗಲಿಸು : ಕೋಲಾಹಲಮಾಡು
ಗದ್ನಿ : ಗುಡುಗು, ಗುಟುರು
ಗಮಜು : ಸೊಕ್ಕು
ಗಲಬಲಾ : ಗದ್ದಲ
ಗವದೀತ : ಕವಿದಿತು
ಗವಿ : ವ್ಯಾಪಿಸು
ಗಳಿಗೆ : ದಾನ್ಯ ಸಂಗ್ರಹದ ಬುಟ್ಟಿ
ಗಾದಿ : ಸಿಂಹಾಸನ
ಗಾಬ : ಗಾಬರಿ
ಗಾಬರಿ : ವಿಸ್ಮಯ
ಗಾಳಿಮಟ್ಟ : ಟೊಳ್ಳು
ಗಾವನ : ಹಳ್ಳಿಯವ
ಗಾಲಮೇಲ : ಉಲ್ಟಾಪಲ್ಟಾ
ಗಿಂಡಿ : ನೀರಿನ ಸಣ್ಣ ತಂಬಿಗೆ
ಗುಂಡಗರಗಿ : ಲಿಂಗದಕಾಯಿ
ಗಿಡಮೂಲಿಕಿ : ಔಷಧ
ಗಿಣ್ಣ : ವನಸ್ಪತಿ ತುಪ್ಪ
ಗುಂಗ : ಭ್ರಮೆ
ಗುದಮರಿಗೆ : ಗುದ್ದಾಡು
ಗುಂಬೆ : ಭ್ರಮರ ನಿನಾದ
ಗುಮ್ಮ : ಆಳ
ಗುರ‍್ತಾ : ಗುರುತು
ಗುಲಾಮಿ : ಚತುರ
ಗುಲ್ಲಿ : ಸಪ್ಪಳ, ಪೊಳ್ಳು
ಗುಳದಾಳಿ : ಮಂಗಳ ಸೂತ್ರ
ಗೆಣ್ಯಾ : ಗೆಳೆಯ
ಗೋಮ : ಕಲಂಕ
ಗೋರ : ಕಷ್ಟ, ಕಠಿಣ ಪ್ರಯತ್ನ

ಘನ್ನ : ಗನ್ನ, ಸಖಿ
ಘಡಾಸು : ಸಂಭವಿಸು
ಘಾತ : ಆಪತ್ತು
ಘೋಳಸ್ಯಾಡು : ಹೊಯ್ದಾಡಿಸು, ತೊಂದರೆ   ಕೊಡು

ಚಕ್ಕರಾ : ಚಕ್ರ
ಚಟಕ್ : ಲಟಿಕೆ
ಚಮತ್ : ಅವಸರ
ಚರಿ : ಸಣ್ಣಹಗ್ಗ
ಚಾಕರಿ : ಸೇವೆ
ಚಾಲೂವು : ಆರಂಭ
ಚಿಂತಾಲ : ತಕ್ಕಡಿ
ಚೀಟ : ಪೊಟ್ಟಣ
ಚುಂಗಾಣಿ : ಮೂದಲಿನ
ಚೇಳಿನಾಗ : ಚೇಳಿನೊಳಗೆ
ಚೈನ : ಉಲ್ಲಾಸ
ಚೈನೀ : ವಿಲಾಸ, ದುಂದುವೆಚ್ಚ
ಚೌಕಾಶಿ : ವಿಚಾರಣೆ
ಚೌಕಿ : ಕೂಟ
ಚೌತಾಯಿ : ಕರ, ತೆರಿಗೆ
ಚೌರ‍್ಯಾಅಂಸಿ : ಎಂಬತ್ತನಾಲ್ಕು

ಛಪ್ಪನ್ನ : ಅಯ್ವತ್ತಾರು

ಜಕಮ : ಗಾಯ
ಜಂಗ : ಮೊಳಕಾಲು, ತುಕ್ಕು
ಜಗ್ಗಿ : ಸಾಕಷ್ಟು
ಜಟಾಪಟಿ : ಅವಸರ, ಗದ್ದಲ
ಜಡಜಿ : ಜಡ್ಜ್, ನ್ಯಾಯಧೀಶ
ಜಡದು : ಹೊಡೆದು
ಜಡಾ : ಆತಂಕ, ತೊಂದರೆ
ಜಪಟ್ಯಾಗ : ಗದ್ದಲದಾಗ
ಜಬರ : ಚೋರು
ಜರಾ : ಸ್ವಲ್ಪ
ಜಲದಿ : ಬೇಗನೆ
ಜಲ್ಮ : ಜನ್ಮ
ಜಲ್ಲ : ಅಂಜಿಕೆ
ಜವಾ : ಉತ್ತರ
ಜಾತ : ಮೇಲ್ಮಟ್ಟದ, ಉತ್ತಮ
ಜಾಣೋಸಿ : ನಿಶ್ಚಯ ಮಾಡಿಕೊಂಡು
ಜಾಹೀರ : ಪ್ರಚಾರ
ಜಿಂದಗಾಣಿ : ಸಂಪತ್ತು
ಜಿಕ್ಕೋತ : ಕುಣಿಯುತ್ತ
ಜುಲುಮಿ : ಒತ್ತಾಯ
ಜೇರ : ಜಡ್ಡು, ಸಾಯುವಂತಾಗು
ಜೋರ : ಬಲ

ಝರಿ : ಸುಳುವು
ಝೇಂಡಾ : ಧ್ವಜ

ಟಿಕಾಣಿ : ಸ್ಥಳ
ಟೀಕ : ಒಳ್ಳೆಯದು
ಟೋಳಿ : ಗುಂಪು. ತಂಡ

ಠರಾವ : ನಿರ್ಣಯ
ಠಳಕ : ಸ್ವಲ್ಪ, ತುಸು
ಠಾವಕಿ : ವಿನಂತಿ

ಡಂಕ್ : ನಗಾರಿ, ಡೊಳ್ಳು
ಡಾಕ : ಒಂದು ವಿವಿಧ ಪೇಚು
ಡಾಗ : ಕಲೆ
ಡೋಲಿ : ಪಲ್ಲಕ್ಕಿ
ಡೌಲ : ಆಡಂಬರ

ಢಾಲ : ಗುರಾಣಿ
ಢಿಗಾರಿ : ರಾಶಿ

ತಂಡಿ : ಚಳಿ
ತಗಿಬಿಗಿ : ತಳಮಳ
ತಟ್ಟ : ಬಾರಿಸು
ತಪ್ತ : ಸಿಟ್ಟು
ತರ್ಪ : ಸುತ್ತು
ತಬಕ : ಭಾಗ, ಪಾತ್ರೆ
ತಯ್ಯಾರ : ಸಿದ್ಧ
ತರಬು : ನಿಲ್ಲಿಸು, ತಡೆ
ತರಳ : ಮಗ
ತರಿ : ಕೊಲ್ಲು
ತಲವಾರ : ಖಡ್ಗ
ತವಕ : ಉತ್ಸುಕತೆ, ತೀವ್ರ
ತ್ವರ : ಬೇಗ
ತಾಬಾ : ಆಧೀನ, ಹತ್ತಿರ
ತಾಬಡತೋಬಡ : ಅತ್ಯಂತ ಅವಸರ
ತಾರೀಪ : ವೈಭವ, ಹೊಗಳು
ತ್ಯಾಕ್ಕಿ : ಎರಡು ಕೈಗಳಿಂದ ಅಪ್ಪಿಕೊಳ್ಳು
ತ್ವಾಳಾಗಿ : ತೊಲಗಿ
ತಾಲಿಪಟ್ : ದಪ್ಪರೊಟ್ಟಿ
ತಿಂಬುತಾರ : ತಿನ್ನುತ್ತಾರೆ
ತಿತಿಮತಿ : ಹಬ್ಬಹುಣ್ಣಿವಿ
ತಿಳೀದ : ತಿಳಿಯಲಾರದೆ
ತ್ರಿಷಷ್ಟಿ : ಅರವತ್ತು ಮೂರು
ತುರಂಗ : ಜೈಲು
ತುರುತ : ಬೇಗ, ಅವಸರ
ತೆತ್ತೀಸ : ಮೂವತ್ತು ಮೂರು
ತೊಡಿಗಿ : ತೊಡೆಗೆ
ತೊರುದು : ಬಿಡುವುದು
ತೋಡ : ಸಮಾನ

ಥೇಟಾಗಿ : ನೇರವಾಗಿ
ಥೇರಿ : ತೆರೆ

ದಂಗವರದ : ಗಾಬರಿಯಾದ
ದಡ : ದರ್ಪ
ದಪ್ತರ : ಖಾತೆ, ಪುಸ್ತಕ
ದರ್ಬಲ : ದರಬಾರು
ದರ್ಭಿಲೆ : ಹುಲ್ಲಿನಿಂದ
ದಮ್ಮ : ಧರ್ಮ, ತಾಳ್ಮೆ
ದರಕಾರ : ಹೆದರಿಕೆ, ಸಂಕೋಚ, ಲಕ್ಷ್ಯ
ದರಜ : ಹೆದರಿಕೆ
ದರಬಿಲ್ಲಾ : ಅಂಜಿಕೆಯಿಲ್ಲಾ
ದರವೊಂದು : ಪ್ರತಿಯೊಂದು
ದವಡಸಿ : ಅವಸರಿಸಿ
ದರ್ವಾಜ : ಬಾಗಿಲು
ದಸಿಯಿಂದ : ದೆಶೆಯಿಂದ
ದಾಖಲ : ಮೂಡಿಸು, ಬರೆ
ದಾಡಿ : ತ್ರಾಸು, ತೊಂದರೆ
ದಾದ : ಲಕ್ಷಿಸು
ದಾರು : ಯಾರು
ದ್ವಾಪಾರ : ಮೂರನೆ ಯುಗ
ದಿಂಗ : ದಿಗ್‌ಭ್ರಮೆ
ದಿಂಗವರದ : ಭ್ರಷ್ಟನಾಗಿ
ದಿಗಡ : ಬೇಗನೆ
ದಿಲಗೀರ :  ಉದಾಸೀನ
ದೀಡನೂರ : ಒಂದುವರೆನೂರ
ದುಂದ : ಭರಾಟೆ, ಅಬ್ಬರ
ದುಂಬಾಲ : ಬೆನ್ನುಬೀಳು
ದುರದೇಶಾ : ಕೆಟ್ಟಸ್ಥಿತಿ
ದುಷ್ಕಾಶ : ಬರಗಾಲ
ದೂತಿ : ಕುಂಟಲಗಿತ್ತಿ
ದೈವಾನ : ಹಣೆಬರಹ
ದೋಮ್ಯಾ : ದೋಮಾರಿ ಸೊಳ್ಳೆ
ದ್ರೋಣಾಕಾಂಡಸನ  :  ದಂಡಕಾರಣ್ಯ ?
ದೌಲಕ : ಐಶ್ವರ್ಯ

ಧರುಪ : ದರ್ಪ
ಧಾರಣೆ : ಬೆಲೆ
ಧ್ಯಾಸ : ಲಕ್ಷ್ಯ
ಧುಸೇನ : ಹಾಹಾಕಾರ

ನಂಜಿನ : ವಿಷ, ದ್ವೇಷದ
ನಂಬೂಗಿ : ವಿಶ್ವಾಸ
ನಕರಿ : ತಾರೀಪ
ನಗ್ಗೇಡ : ನಗೆಗೇಡು, ಅಪಹಾಸ್ಯ
ನಜರ : ಕಣ್ಣಿಡು
ನಡೀನ : ಟೊಂಕದ
ನಲ್ಲಾಡು : ಪ್ರೀತಿಯಿಂದ ಮಾತನಾಡು
ನವಲಗ್ಯಾಂವಿ : ನಸುಕಾವಿ ಬಣ್ಣದ
ನಸಲಾ : ಕುಂಕುಮ
ನಸೀಬ : ದೈವ
ನಾಕ : ಸ್ವರ್ಗ
ನಾಸ : ನಾಶ
ನ್ಯಾಳ್ಳ : ನರಳು, ಬಡಬಡಿಸು
ನಿಕರ : ನಿಗದಿ, ಗಟ್ಟಿ
ನಿಕಾಲ್ : ಖಾಲಿ
ನಿಗರಿ : ನಿಮಿರಿ, ಸೆಟೆದು
ನಿಪ್ಪತಗಿ : ದಿಕ್ಕಿಲ್ಲದೆ
ನಿರತ : ನೇರ, ಗುರಿಯೊಡಿ
ನಿವಳ : ಚೆನ್ನಾಗಿ
ನಿರ್ವಯಿಲ್ಲಾ : ಅನಿವಾರ್ಯ
ನಿಷಾದ : ಬೇಡ
ನುಗ್ಗಮಾಡು : ಹಾಳುಮಾಡು
ನೆಗವಿ : ಎತ್ತಿ
ನೇಟಾ : ನೆಟ್ಟಗೆ
ನೊರಲಿ : ಬುರಂಗು

ಪಂಟ : ಮೋಸ, ಹರಟೆ
ಪಂಜಿ : ದೋತರ
ಪಡಪೋಟ : ತೊಂದರೆ
ಪಡಿ : ಒಂದು ಅಳತೆ, ರತ್ನದ   ಒಂದು ತೂಕ
ಪರ್ಣಶಾಲೆ : ಗುಡಿಸಲು, ಎಲೆವನ
ಪಣತೊಡು : ಪ್ರತಿಜ್ಞೆ ಮಾಡು
ಪಣಾ : ಪಂಥ, ಪ್ರತಿಜ್ಞೆ
ಪತಿಹತಿಯಾರ : ಗಂಡನ ಖಡ್ಗ
ಪರಂಗೇರ : ಬ್ರಿಟಿಷರು
ಪದರ : ಪರದೆ
ಪರಾರಿ : ತಲೆಮರಿಸಿಕೊಳ್ಳು
ಪರ‍್ಯಾಣ : ಅಗಲವಾದ ತಟ್ಟೆ
ಪಸಂದ : ಹಿಡಿಸು
ಪಹಿಲೆ : ಮೊದಲಿಗೆ
ಪಳಂಕಾರ : ನಿಂದಾತ್ಮಕ ವ್ಯಕ್ತಿ
ಪಾಟ್ಗೋಣ : ಚಣ್ಣ, ನಿಕ್ಕರ್
ಪಾಡ : ಗತಿ, ಒಳ್ಳೆಯದು
ಪಾಣೇಕ : ನೇಣ
ಪಾರಾ : ಪಹರೆ, ಕಾವಲು
ಪಾರೆ : ಕಾವಲು
ಪ್ಯಾಟಿ : ಪೇಟೆ
ಪಾಳೇ : ಕಂದಾಯ, ಭೂತೆರಿಗೆ
ಪಿಂಜರದಾಗ : ಪಂಜರದಲ್ಲಿ
ಪೀಕ : ಬೆಳೆ
ಪುಂಡ : ವೀರಾಗ್ರಣಿ
ಪುಕಾರು : ಸುದ್ದಿ
ಪುಕ್ಕರು : ಅಂಜುಬುರುಕರು
ಪುತ್ರವಗೆ : ಪುತ್ರನಿಗೆ, ಮಗನಿಗೆ
ಪುರೋಸಂ : ಸಾಕಾಗುವುದು
ಪೇನಸೇನ : ಪಿಂಚಣಿ
ಪ್ರೇತ : ಹೆಣ, ಶವ
ಪೋರ : ಹುಡುಗ
ಪೋರಿ : ಹುಡುಗಿ
ಪೋಲಿಮಿ : ಒಳ್ಳೆಯದು
ಪ್ರಬಲ್ಲ : ಪ್ರಖ್ಯಾತ

ಫಣಿ : ಶಿವ
ಫರ್ಮಾನ : ಆಜ್ಞೆ
ಫರಕ : ಅಂತರ
ಫರಾಳ : ತಿಂಡಿ
ಫಸಾಸಿ : ತಪ್ಪಿಸಿಕೊಂಡು
ಫಳಿಗಟ್ಟಿ : ಸಾಲುಗಟ್ಟಿ
ಫಾಯ್ದೆ : ಲಾಭ
ಫಾಸಿ : ಗಲ್ಲು
ಫಿರ್ಯಾದೆ : ದೂರು
ಫೇರಾ : ಸುಳ್ಳು

ಬಂದಿನ್ಯಾಗ : ಬಂಧನದಲ್ಲಿ
ಬಗಟಿ : ಕೆದರಿ
ಬಗಳಿ : ತೊಂದರೆ
ಬಗಿ : ರೀತಿ, ಉಪಾಯ
ಬಗಿಹರಿ : ತೀರ್ಮಾನಗೊಳ್ಳು
ಬಡಿವಾರ : ಜಂಬ
ಬಡೇಜನ : ದೊಡ್ಡಸ್ತಿಕೆ
ಬತಗೆಡು : ಭ್ರಷ್ಟನಾಗು
ಬದಿಲೆ : ಹತ್ತಿರ
ಬರಿಷ್ಟ : ಅಲರ್ಜಿ ಪದಾರ್ಥಗಳು
ಬಲಿಮಿ : ಜೋರು
ಬವರ : ಯುದ್ಧ
ಬಸವಂತಿ : ಗರ್ಭಿಣಿ
ಬಳಿಗಿ : ಬಲಿರಾಜನ ಬಳಿ
ಬಾಗಿಣ : ಬಾಗಿನ, ಆಮಂತ್ರಣ
ಬಾಜಿ : ಪಲ್ಲೆ
ಬಾಜೂಟಾಂಗ : ಕುಸ್ತಿಯ ಒಂದು ಪೇಚು
ಬಾಡಿಕ್ಯಾರಿ : ಬಾಡಿಹೋಗು
ಬಾಡುಗಳ್ಳರು : ಅನೀತಿವಂತರು
ಬಾದ : ನಿರುಪಯುಕ್ತ
ಬಾತಮಿ : ಸುದ್ದಿ
ಬಾಯಿಬಡಿ : ಅಳು, ಬಯ್ಯು
ಬಾರಿಗಿ : ಕಸಪೊರಕೆ
ಬಾರಾ : ಹನ್ನೆರಡು
ಬಾಹು : ಭುಜ
ಬಾಳ : ಕೂಸು, ಕಂದ
ಬಾಳಾ : ಬಹಳ
ಬ್ಯಾಸರಕಿ : ಬೇಸರ
ಬಿಡುದು : ಬಿಡುವುದು
ಬಿರಾಡ : ಹಪ್ತೆ, ಕಂದಾಯ
ಬಿಸಾಟ : ತುಚ್ಛ
ಬಿಲ್ವರ : ಬಿಲವಾರ ಬಳಿ
ಬೀರದ : ಬಿರುದು, ಪರಿಚಯ
ಬುರುಜು : ಕೋಟೆಯ ಕೊತ್ತಳ
ಬೆಂಕಿಕಾರಿ : ಸಿಟ್ಟಿಗೇರಿ
ಬೆಂಡಲ : ಬೆರಕಿ, ಜಾಣ
ಬೆಂಡ್ಲ : ಹಾದರಗಿತ್ತಿ
ಬೆರತಾಳು : ಕೂಡಿಕೊಂಡಿಹಳು
ಬೇಗು : ಸಾಯಂಕಾಲ
ಬೇಚ್ಯಾಳಿಸ : ನಲವತ್ತೆರಡು
ಬೇಟಾ : ಉಪಾಯ
ಬೇತ : ಭೂತ, ಪಿಶಾಚಿ
ಬೇತು : ವಿಚಾರ
ಬೇನಿ : ರೋಗ
ಬೇಬಾಣ : ದಿಕ್ಕು ತೋಚದಂತಾಗು
ಬೇಶಕ್ಕ : ತಕರಾರವಿಲ್ಲದೆ, ಸ್ಪಷ್ಟ
ಬೋಧ : ಶಾಸ್ತ್ರ, ಶಕುನ, ಭವಿಷ್ಯ

ಭಂಡಿಸು : ಮೋಸಗೊಳಿಸು
ಭರತಿ : ಭರ್ತಿ
ಭಾಲೆ : ಭರ್ಚಿ, ಈಟಿ
ಭಾಳ : ಬಹಳ
ಭ್ರಾಂತಿ : ಮೋಹ
ಭುಲಾಸಿ : ಕೈವಶ

ಮಂಜಾನ : ಪೊದೆ
ಮಜಕೂರ : ಸುದ್ದಿ, ವಿಷಯ, ವಿವರ
ಮಡಾ : ಸಣ್ಣಕೊಳ
ಮದತ್ತ : ಸಹಾಯ
ಮದ್ದ : ಔಷಧ
ಮದಿ : ಒಂದು ಜಾತಿಯ ಹುಲ್ಲು
ಮರ್ದುಮುಕಿ : ಗಂಡಸುತನ, ಶೂರತನ
ಮನಗಂಡ : ಬಹಳಷ್ಟು
ಮಫಲಾರ : ತಲೆಗೆ ಸುತ್ತುವ ವಸ್ತ್ರ
ಮರಿ : ಮರೆ
ಮರಿಗೆ : ಮರೆಯಲ್ಲಿ
ಮಲು : ಕತ್ತರಿ, ತಿರುವು
ಮಸ್ತ : ಚೆನ್ನಾಗಿ
ಮಳಲು : ದುಃಖಿಸು
ಮಾಸದಂಗ : ಅಳಿಸಿ ಹೋಗದಂತೆ
ಮಾಪ : ಕ್ಷಮಾ
ಮಾರ್ಬೋಲಾ : ಮಾರ್ಬಲ, ಎದುರಿಸುವ ಸೈನ್ಯ
ಮಾರಿ : ಮುಖ
ಮಾಲ : ಅರಮನೆ
ಮ್ಯಾಲಿನ : ಮೇಲಿನ
ಮುಚ್ಚೆ : ಮೂರ್ಛೆ
ಮುಜರಿ : ನಮಸ್ಕಾರ
ಮುರಕ : ಬಡಿವಾರ
ಮುಸಲ : ಮುಸ್ಲಿಂ
ಮೂಲ : ವಿಘ್ನ, ಕಂಟಕ
ಮೆಚ್ಚಮದ್ದ : ವಶೀಕರಣ ಔಷಧ
ಮೆಯ್ಯು : ತಿನ್ನು
ಮೈಮೆಯ : ಮಹಿಮೆ
ಮೊಟ್ಟ : ಗರಿ

ಯಾಹೊತ್ತ : ಯಾವಾಗಲೂ

ರಂಡಿ : ಗಂಡ ಸತ್ತ ಹೆಂಗಸು
ರಂಮೋಶಿ : ರಮಿಸು
ರಣ : ಯುದ್ಧ
ರವಾನಿ : ಕಳಿಸು, ತೀವ್ರ
ರಾಕ್ಷಿ : ರಾಕ್ಷಸ
ರಿಕ್ಕ : ಬಿಗು
ರಿಕ್ಕಮುಕ್ಕ : ಭದ್ರವಾಗಿ
ರಿಪು : ವೈರಿ
ರೂಕಾ : ರೂಪ
ರೊಳ್ಳಿಗಂವಿ : ನಿಶ್ಯಕ್ತನಾಗು

ಲಂಪಟ : ಕಿಡಗೇಡಿ
ಲಕ್ಕಾಟಿ : ಒಮ್ಮೆಲೆ
ಲಗುಮಾಡಿ : ಅವಸರ ಮಾಡಿ
ಲಗ್ಗ : ಬೇಗನೆ
ಲಢಾಯಿ : ಯುದ್ಧ
ಲಯ : ನಾಶ
ಲಾತ್ತಿ : ಹೊಡೆದ
ಲಾಲಸಬೇಕ : ಆಲಿಸಬೇಕು, ಕೇಳಬೇಕು

ವಗತನ : ದಾಂಪತ್ಯದ ಸಂಬಂಧ
ವಟ್ಟ : ಪರಟ, ಕಠಿಣ
ವಡವಲಿಕೆ : ಸೌದೆ, ಕಟ್ಟಿಗೆ ತುಂಡು
ವಡ್ಯಾಣ : ನಡಪಟ್ಟಿ
ವದಹರವವರು : ಒದಗಿಸುವವರು
ವನದೇಶ : ವನವಾಸ, ತೊಂದರೆ
ವರ್ಮ : ವೈರತ್ವ, ಪ್ರಸಿದ್ಧಿ
ವಾರ್ತಿ : ವಾರ್ತೆ
ವಾರಣ : ಆನೆ
ವಾಯಿ : ಬಾವಿ
ವ್ಯಾಧ : ಬೇಡ
ವ್ಯಾಪ : ನಕಾಶ, Pಟಚಿಟಿ
ವ್ಯಾಳೆದಾಗ : ವೇಳೆಯಲ್ಲಿ
ವಿಚಿಯಾರ : ಆಲೋಚನೆ

ಶಮನಾ : ಚುಂಗು
ಶಮರಂತ : ಸಮರ್ಥ
ಶರ : ಬಾಣ
ಶರತ : ಪ್ರತಿಜ್ಞೆ, ಜಿದ್ದು
ಶರ್‌ಸುರಿ : ಪೂರ್ಣಲೂಟಿ
ಶಾರ : ನಗರ, ಪಟ್ಟಣ
ಶಾಲಿ : ಭತ್ತ, ನೆಲ್ಲು
ಶೇತ್ಕಿ : ರೈತಾಪಿ

ಸಂದು : ದಂಡು
ಸಕಲಿ : ಜೀಪದ
ಸಗತಿ : ಶಕ್ತಿ
ಸಜ : ಸಹಜ
ಸದರು : ಓಲಗ, ಸಭೆ
ಸತ್ತರ : ತೀರಿದರೆ
ಸನ್ಮಂತ : ಸಮಾಧಾನ
ಸನೀಕ : ಸಮೀಪ
ಸನೆ : ಸಮೀಪ
ಸಪನಿದ್ದೆ : ಸ್ವಪ್ನ ನಿದ್ದೆ, ಕನಸಿನ ನಿದ್ದೆ
ಸಮರ : ಯುದ್ಧ
ಸರಳಾ : ಬಾಣ
ಸರಾಪ : ಶಾಪ
ಸಲವಕ್ಕಿ : ಸಲಹುವವಳು
ಸಲ್ಲ : ಸದ್ದ, ಧ್ವನಿ
ಸಲ್ಲಾ : ಸಲಹೆ
ಸವಜಗಳ : ಸಮ ಯುದ್ಧ
ಸವನಾ : ಸಮನಾಗಿ
ಸವಾರಿ : ಕುಸ್ತಿಯ ಒಂದು ಪೇಚು
ಸವ್ವಾಯಿ : ಒಂದೂಕಾಲು ?
ಸವಿಕಂಡ : ಅನುಭವ ಪಡೆದ
ಸ್ವನ : ಧ್ವನಿ
ಸ್ಥಬ್ದಾಗಿ : ಶಾಂತರಾಗಿ
ಸಾಗು : ಪೂರೈಸು, ನಡೆ
ಸಾಪ : ಸಪಾಟು, ಶಾಪ, ನಿಶ್ಚಯ
ಸಾಬ : ಸಾಹೇಬ, ಅಧಿಕಾರಿ
ಸಾರು : ಹೇಳು
ಸಾಮಿ : ಯೋಗ್ಯತೆ, ಅನುಕೂಲ
ಸಾಸ : ಸಾಹಸ, ಯೋಚನೆ
ಸಾಕ್ಷಾಂತ : ಸಾಕ್ಷಾತ್
ಸ್ವಾರನಾಗಿ : ಸವಾರನಾಗಿ ಕುದುರೆಯನ್ನು ಹತ್ತಿ
ಸ್ವಾರಿ : ದೊಡ್ಡ ಗಡಗಿ
ಸ್ಯಾರಿಮುಕ್ಕ : ಅರ್ಧಬೊಗಸೆ
ಸಿಲ್ಕು : ಉಳಿದದ್ದು
ಸೀಟು : ಹೀರು, ಹಿಂಡು
ಸೀಮ್ಯಾಗ : ಸೀಮೆಯಲ್ಲಿ
ಸುದ್ಧ : ಸಹಿತ
ಸುರವ : ಆರಂಭ
ಸುರವ್ವೆ : ಸರಾಯಿ
ಸುಸುರು : ಸಾಧನ
ಸುಳ್ಳಬುರುಕಿ : ಸುಳ್ಳುಹೇಳುವವಳು
ಸೂರೆಮಾಡ್ಯಿರೊ : ಲೂಟಿ ಮಾಡಿದರು,
ಹಾಳು ಮಾಡಿದರು
ಸೆಟವಿ : ವಿಧಿ
ಸೆಣಸಾಟ : ಹೋರಾಟ
ಸೆರಿ : ಬೇಡಿ, ಜೇಲು
ಸೆಳಿಮಂಟ : ತೂಗುವ ಮಂಚ
ಸೇವಚೇದ : ಕೊನೆಯ
ಸೈಲು : ಸಡಿಲು
ಸೊನ್ನಿಲೆ : ಸನ್ನೆಮಾಡಿ
ಸೊಲ್ಲು : ಮಾತು
ಸೋಕ : ವಿಚಾರ
ಸೋಳಾ : ಹದಿನಾರು

ಹಂಕಾರ : ಅಹಂಕಾರ
ಹಂಗ : ಉಪಕಾರ
ಹಂತೇಕ : ಹತ್ತಿರ
ಹಂಬಲ : ಆಸೆ
ಹಂತೇಲಿ : ಹತ್ತಿರ
ಹಕನಕ : ಸುಮ್ಮಸುಮ್ಮನೆ
ಹಕ್ಕೀಕಾಲಾಗ : ಹಕ್ಕಿಯ ಸಲುವಾಗಿ
ಹಚಿಗುಡು : ಕಳುಹಿಸು
ಹಟಕ್ : ಹಟಕ್ಕೆ
ಹದ್ದ : ಮೇರೆ, ಗಡಿ
ಹತಾರ : ಶಸ್ತ್ರ, ಆಯುಧ
ಹತ್ತಂಗಡಿ : ಅಂಟಿಕೊಳ್ಳುವುದು
ಹತ್ರ : ಹತ್ತಿರ
ಹತಿಯಾರ : ಖಡ್ಗ
ಹರಿ : ಪ್ರಾಯ
ಹರಿದ್ಯಾರವರ : ಮುತ್ತೈದೆಯರ
ಹಬಶರ‍್ನಾ : ಕಪ್ಪುಜನರು
ಹಮ್ಮುಚಾರ : ಚೌರಸ
ಹಲಬು : ಚಿಂತಿಸು, ದುಃಖಿಸು
ಹಲಾಕು : ಕಾಟ, ತೊಂದರೆ
ಹಲ್ಲಣ : ಪ್ರಾಯ
ಹಲ್ಲಾ : ಮುತ್ತಿಗೆ, ಲಗ್ಗೆ, ದಾಳಿಮಾಡು
ಹವಣಿಸು : ಆಸೆಪಡು
ಹಸಗೇಡಿ : ಅನೀತಿವಂತ
ಹಕ್ಯಾಡಿಕೊಂಡು : ಜಗಳಾಡುತ್ತಾ
ಹಾತವರದ : ತಡಮಾಡದೆ
ಹಾತೋರಿ : ಅಪೇಕ್ಷಿಸು
ಹಾತ್ವಾರಿ : ಹೌಹಾರಿ
ಹಾಲ್ಹಾಕ : ಹಾಲು ಹಾಕುವ
ಹ್ವಾಂಡ : ಒರಟು
ಹ್ವಾರೆ : ಉದ್ಯೋಗ
ಹಿಂದಿಗಡೆ : ಹಿಂದಿನಿಂದ
ಹಿಂಬಾಲ : ಜೊತೆಯಲ್ಲಿ
ಹಿರಸ : ಬಿರಸು
ಹುಂಡೆ : ಭಾರೀ ಸಂಪತ್ತು
ಹುಕುಮು : ಪರವಾನಿಗೆ
ಹುರಿ : ಹಗ್ಗದ ಒಂದು ಎಳೆ
ಹೆಣೋಲ : ಹೆಳಲು
ಹೇಮ : ಚಿನ್ನ
ಹೇವ : ಲಜ್ಜಿ
ಹೈರಾಣ : ಬಳಲು
ಹೊಂಕಳ : ಹೊಕ್ಕಳ
ಹೊಂಡಿಸು  :  ಹೊರಡಿಸು
ಹೊಕ್ಕ : ನುಸುಳಿದ
ಹೋತ್ಗಿ : ಪಂಚಾಂಗ
ಹೊಯ್ಕ : ತಂತ್ರ, ಮುರುಕ
ಹೊರಕಡಿಗಿ : ಬಯಲು ಕಡೆಗೆ
ಹೊಳವ : ಹೊರಪು, ಮಳೆಗಾಲದ   ಬಿಸಿಲು
ಹೌನ : ಹಂಬಲ