Skip to content
ದೂರವಾಣಿ : | 22212487|developkanaja@gmail.com
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ-೧೭

Home/ಕನ್ನಡ/ಸಂಪುಟ-೧೭
Previous Next

ಸಂಪುಟ-೧೭

  • ದೆಹಲಿಯಲ್ಲಿ
  • ನನ್ನ ಎಲ್. ಎಸ್. ಡಿ. ಟ್ರಿಪ್
  • ರಾಷ್ಟ್ರೀಯ ಉದ್ದೇಶಗಳಿಗೆ ಅನುವಾಗುವ ಶಿಕ್ಷಣ ನೀತಿ
  • ಕ್ಷಣಗಳು
  • ಸಮುದ್ರಕ್ಕೆ ಸವಾರರು
  • ಖುಶಿ
  • ಕನ್ನಡ ವಿಶ್ವಕೋಶಃ ಕೆಲವು ಲೋಪ-ದೋಷಗಳು
  • ವಿದಾಯ
  • ಸಾವಿತ್ರಿ
  • ಮಲೆಗಳಲ್ಲಿ ಮದುಮಗಳು (ಒಂದು ಸಾಂಕೇತಿಕ ಕ್ರಿಯೆ)
  • ಏಳು-ಬೀಳು
  • ಕಂದ
  • ಸಂಧ್ಯಾ-ರಾಗ
  • “ಗತಿ,ಸ್ಥಿತಿ” (ಒಂದು ವಿಮರ್ಶೆ)
  • ಕಾಲ
  • ಘಟನೆಗಳ ನಿಷ್ಠುರತೆ ಮತ್ತು ಮಾಡಿದ್ದುಣ್ಣೊ ಮಹಾರಾಯ
  • ಒಂದು ಪದ್ಯ
  • ಕಾರ್ನಾಡರ ಹಯವದನ
  • ಮತ್ತೂಂದು ಕವನ
  • ತಿಮಿಂಗಿಲ
  • ಹಯವದನ ಓದಿ, ನೋಡಿ-
  • ನನ್ನ ಕವನ

ದೆಹಲಿಯಲ್ಲಿ

ದೆಹಲಿಯಲ್ಲಿ

-ಗೋಪಾಲಕೃಷ್ಣ ಅಡಿಗ

೧
ಹೊಸ್ತಿಲಾಚೆಗೆ ನಿಂತು ಹಿಂದೆಮುಂದೆ ನೋಡುವಗತ್ಯ
ಇಲ್ಲ. ಇದು ಹೊಸ್ತಿಲೇ ಅಲ್ಲ ; ಒಳಗು ಹೊರಗುಗಳೆಂಬ
ವ್ಯತ್ಯಾಸವೇ ತುಂಡು. ಹಾಗಾಗಿ ಇದು ಬರಿ ಹೊಸ್ತಿಲೇ
ಎಂದರೂ ಸರಿಯೆ. ಭೂಗತಚರಂಡಿಕೊಳೆ ಮಸಲತ್ತುಗಳ ಮೇಲೆ
ಸಿಮೆಂಟು ದಾರಿಗಳ ಚಕ್ರವ್ಯೂಹದೊಳಹೊಕ್ಕು
ಹೊರಡಲಾರದೆ ಸದಾ ಹೊರುಡುತ್ತಲೇ ಇರುವ
ನಿರಭಿಮನ್ಯುಗಳ ನಿಷ್ಫಲ ತೀಟೆಗಳ ಹೊರಸು.
ಹಾಸು, ಹಾಸು, ಬರಿ ಬೀಸು; ಉಸಿರುಕಟ್ಟಿಸುವಂತೆ
ಸಮತಟ್ಟುಗಳ ಸೀಳಿ ಹೊರಬರುವ ಕಾಂಕ್ರೀಟು
ಗೋರಿಗಳ ತುಂಬ ಅಪಮೃತ್ಯು ಪಥಕಗಳ ಕೊನೆ
ಪಾನಗೋಷ್ಠಿ.

ದಿಳ್ಳಿಯೆಂದರೂ ಒಂದೆ; ಕಲ್ಕತ್ತ, ಮದರಾಸು.
ಬೆಂಗಳೂರೆಂದರೂ ಒಂದೆ, ಭಾವೈಕ್ಯಕ್ಕೆ
ಒಳ್ಳೆಯ ಉದಾಹರಣೆ. ಅಲ್ಲಿ ಗೋಳಾಕಾರ,
ಇಲ್ಲಿ ಜಡೆ ಶಂಕರ. ಊಹಿಸಿದ್ದಕ್ಕೆ ಅಲ್ಲಲ್ಲಿ
ಕುಂಟು ಪಂತಿ, ಶರಾ, ತಿದ್ದುಪಡಿ, ಕಾಟು
ಅಷ್ಟೇನೆ. ಮನಸ್ಸು ಸಾಯುತ್ತಿದ್ದು
ಬರಿತೊಗಲ ತೆವಲು, ಕೊಂಬಿನ ತುರಿಕೆ ಇದ್ದಾಗ್ಗೆ
ಭಾಷೆಯ ತೊಡಕು ಲೆಕ್ಕಕ್ಕಿಲ್ಲ. ಕಾಯಸ್ಥ ಬದುಕಿಗೆ ಬರೀ
ಕೈಸನ್ನೆ ಬಾಯ್ಸನ್ನೆ ಸಾಕು:
ಅಕ್ಕಿ ಗೋಧುವೆ ಬೇಳೆ ಬೆಲ್ಲ ತರಕಾರಿಗಳ
ತಕರಾರು :
ಪರಮಾರ್ಥ ಕಃ ಪದಾರ್ಥ?
೨
ದಿಳ್ಳೀಶ್ವರೋ ವಾ ಜಗದೀಶ್ವರೋ ವಾ ದರಬಾರಿ ಕವಿವಾಕ್ಯ:
ಸುಳ್ಳಲ್ಲ. ಜಗತ್ತೆಂದರೇನು ಬಿಡಿ, ನಾವಿರುವ ಈ ಹಾಳು
ಬಾವಿಯಲ್ಲವೆ? ಇದಕ್ಕೆ ಬೇಕಾದವರು
ವಿಶ್ವವಿಶಾಲ ವೈಶಂಪಾಯನಾಖ್ಯ ಪಂಕಸಮೃದ್ದ, ಮಂಡೂಕಸಮ್ಮರ್ದ
ಸಾಗರವೆಂದರೂ ಸರಿಯೆ. ಹಾಗೆ ನೋಡಿದರೆ
ಬೇಕಾದ್ದು ಸರಿಯಾದ ಹೆಸರು. ನಮ್ಮ ನಿಮ್ಮ ಹಿತ್ತಲ ಕಡೆಯ
ನೀರೆಲ್ಲವೂ ಪುಣ್ಯತೀರ್ಥಗಳೆ. ಆ ಎಲ್ಲವಕ್ಕೂ ದಿಳ್ಳಿಯ ಕಡೆಯೆ
“ಕೇಶವಂ ಪ್ರತಿ”, ಇಷ್ಟಿಷ್ಟುದ್ದ ಗಡ್ಡ ಕಟ್ಟಿಕೊಂಡರೆ ಋಷಿ ; ಹತ್ತಾರು
ಹೊತ್ತಗೆಯ ತಿಣಿಕಿದರೆ ಸಾಹಿತ್ಯ ; ನಾಲ್ಕಾರು ಭೇತಾಳಗಳ
ಬೆನ್ನಲ್ಲಿ ಹೊತ್ತು ಕಂಬಳಗದ್ದೆಗಿಳಿದವನೆ
ರಾಜಕಾರಣಿ ; ಜೈಲುದಾಖಲೆ ಮೆರೆದ
ಪ್ರತಿಯೊಬ್ಬನೂ ದೇಶಭಕ್ತ ; ನಮ್ಮ ನಿಮ್ಮ ಕಿಸೆ ಕತ್ತರಿಸಿ ಖುಷಿಯಾಗಿ
ವೇದಿಕೆಯ ಮೇಲೆ ಸಮಾಜವಾದ ರಿಕಾರ್ಡು
ಹಚ್ಚಿದರೆ ದೀನದಳಿತೋದ್ದಾರ; ಕಾಲಕಾಲಕ್ಕೆ ಸರಿಯಾದ
ವೇಷ ಮಾತ್ರ ಅಗತ್ಯ.
ಸಾಹಿತ್ಯದಲ್ಲೂ ಈಗ ನಾಟಕಕ್ಕೆ ಬಹಳ ಪ್ರಾಶಸ್ತ್ಯ : ಇಪ್ಪತ್ನಾಲ್ಕು
ಗಂಟೆಗಳ ಸಖತ್ ದೇಖಾವೆ. ಬರೀ: ರಾಜಾಪಾರ್ಟುಗಳೆ ರಂಗ
ಮಂಟಪದಲ್ಲಿ ; ತಾಲೀಮು ನಡಸದೆ ಖಾಲಿ ರೋಫು ಹಾಕುವ ಚಂಗೆ

ಭರ್ತಿಯವನೂ ಇಲ್ಲಿ ದಿಗ್ದರ್ಶಕನೆ. ಪಾತ್ರವಹಿಸುವ ಹಕ್ಕು
ಸರ್ವಸಾಮಾನ್ಯ ; ಪ್ರೇಕ್ಷಕ ಸ್ಥಾನ ಶೂನ್ಯ; ಪಾತ್ರಧಾರಣ ಮಹತ್ವಾಕಾಂಕ್ಷೆ
ಪ್ರೇಕ್ಷಕರಿಗೆಲ್ಲರಿಗು. ನೂಕು ನುಗ್ಗಲು ರಂಗಮಂಟಪದ ಮೇಲೆ,
ಸುತ್ತಲೂ ಕೆಳಗೆ : ಕೈಕೈಮಿಲಾವಣೆ, ಹಣಾಹಣಿ, ಕೇಶಾಕೇಶಿ, –
ನಾಟಕ ಬಹಳ ಯಶಸ್ವಿ: ಅಲ್ಲ ಇಲ್ಲೆಂಬ ಪಡಪೋಸಿ
ಸಲ್ಲ ಸಲ್ಲ.

ಒಂದೇ ಒಂದೇ–ನಾವೆಲ್ಲರು ಒಂದೇ ;
ಅದಕ್ಕಾಗಿಯೇ ನುಗ್ಗೋ ಮುಂದೆ.
ಎಲ್ಲ ಕೂಡಿ ಬ್ಯಾ ಎಂದರೆ ಮಂದೆ ;
ಹೊಟ್ಟು ತುಂಬಿದ ಗಿಲೀಟುಮಂಡೆ,
ಮುಂದೆ ಕಾದಿದೆ ಹೆಂಡದ ಹಂಡೆ;
ಹೊಂಡವೆಲ್ಲವೂ ಹೋಯಿತು ಹಿಂದೆ,
ನಾಟಕ ನಡೆಸುವುದೊಂದೇ ಧಂಧೆ:
ಬಾ, ಬಾ, ಬಾ ;
ಬ್ಯಾ, ಬ್ಯಾ, ಬ್ಯಾ.
೩

ಹದಿನೆಂಟರಲ್ಲಿ ಹೊತ್ತನ್ನು ಕುಕ್ಕಿ ರೆಕ್ಕೆ ಸುಟ್ಟ ರಣಹದ್ದು ಗಿಳಿ ಗುಬ್ಬಚ್ಚಿ
ಕಾಗೆ ಡೇಗೆಗಳೆಲ್ಲ ಆಫೀಸಿನಲ್ಲಿ. ದಾರಿ ತಪ್ಪಿ ಹೊಕ್ಕಿರುವ ಕೋಗಿಲೆ ಮರಿಗೆ
ಪಕ್ಷ ವೃಷಣಚ್ಛೇದ. ದಫ್ತರಿನಲ್ಲಿ
ಕಾಫಿ ಟೀ ಸರಸ ಸಲ್ಲಾಪ ಕೆಲಸದ ನಡುವೆ
ಕಂಭಸುತ್ತುತ್ತವೆ ಕೆಲವು ; ಏಣಿಯನಿಟ್ಟು
ಕಾಣದುಪ್ಪರಿಗೆ ಕಡೆ ಏರುತ್ತಲೇ ಇರುವ
ಖದೀಮಕುಳ ಹಲವಾರು. ಒಂದು
ಮುಗಿದರಿನ್ನೊಂದೇಣಿ.
ಜೀ ಜೀ ಜೀ:
ಏರುವವನಿಗೆ ಚಿರಸ್ಫೂರ್ತಿದಾಯಕ ಮೂಲ ಬೀಜಾಕ್ಷರ.
ಮೂರು ಕಾಸಿಗೆ ಬೆನ್ನುಮೂಳೆ ಮಾರಿದ ನಟುವ
ನೆಲ ಮುಟ್ಟಿ ಮುಟ್ಟಿ ಸಾಷ್ಟಾಂಗ ಹೊಡೆವ,
ತುಕ್ಕು ಮುಕ್ಕಾಗಿರುವ ದುರ್ನಾತದೊಳಮೈಗೆ
ಪುನುಗು, ಜವ್ವಾಜಿ, ಕಸ್ತೂರಿ, ಗೋರೋಚನದ ದಪ್ಪನೆ ಮುಲಾಮು;
ಭರ್ಜರೀ ಸೂಟುಟೈಗಳ ಗರಡಿ ಮನೆಯೊಳಗೆ ಹಸಿ ಹಸೀ ಹೆಣದ ಸಾಮು.

ಛಪ್ಪನ್ನ ರಾಜ್ಯ ರಸ ಹೀರಿ, ಜೋಂಗೊಡವಾಗಿ ಬೀಗಿ
ಪಟ್ಟಿರುವ ಪಟ್ಟದ ರಾಣಿ; ಸುತ್ತ ಅಸ್ತವ್ಯಸ್ತ
ಗುಂಡು ಬಿದ್ದಿರುವ ಗಂಡುಗಳ ಗಂಡಾಗುಂಡಿ ;
ದಿನಕ್ಕೆರಡು ಹನಿ ಕದ್ದು ಕುಡಿದು ಕಕ್ಕುತ್ತಿರುವ
ಕರ್ಮಚಾರಿಗಳ ನೈಷ್ಕರ್ಮ್ಯಸಿದ್ದಿಯ ಮುಗ್ಧ
ಬೀಡಿ ಹಾಸ,
ಮಾಸ್ಕೊ ವಾಶಿಂಗ್ಟನ್ನು ಬಾನ್ ಟೋಕಿಯೋದಿಂದ ಹರಿವ ಕೊಳಾಯಿ,
ಟನ್ನುಗಟ್ಟಲೆ ಜೇನುತುಪ್ಪದ ಸರಬರಾಯಿ,
ಕೆಸರು ಮೆತ್ತಗೆ ಕೈಗೆ ಮೊಸರು ಮೆತ್ತುವ ಬಾಯಿ,
ದಿಗ್ದಿಗಂತಕ್ಕೆ ಹಾ, ಹಾಯಿ, ಹಾಯಿ !
ಉರುಟುರುಟು ಬೊಜ್ಜಿನೊಳಗಡೆ ಮುರುಟುವುದು ಮೊಳಕೆ;
ಜೇನೊದ್ದೆ ನೆಲದಲ್ಲಿ ನಾಯಿ ಛತ್ರರಿಕೇಕೆ ;
ಖಾನಿಖಾನಿಗಳಲ್ಲಿ ಅರೆ ಹೊರೆದ ಮೊಟ್ಟೆಗಳ ಹೊಟ್ಟೆ ಬಾಕು,
ಭೋ ಪರಾಕು.

ಯಾರಿಲ್ಲಿ ಇವರು, ಕಾರಕೂನಗಿರಿಶಿಖರದಡಿ ನಿಂತವರು,
ಉದ್ದುದ್ದಾನೆ ಕತ್ತವರು, ಬೇರು ಕಿತ್ತವರು, ಕಾಗದಗದ್ದೆ
ಉತ್ತವರು, ಜಿಗಳೆ ತಿಗಣೆ ಬಂದಳಿಕೆಗಳ
ಹೆತ್ತವರು, ಅಟ್ಟೆಯಲ್ಲೇ ಶವದ ಪೆಟ್ಟಿಗೆಯ ಹೊತ್ತವರು,
ಜೇನಿನಾಸೆಗೆ ಪ್ರಾಣಬಿಟ್ಟು ಉಳಿದದ್ದೆಲ್ಲ
ತೆತ್ತವರು, ರಾಜ್ಯರಾಜ್ಯಗಳಿಂದ ಬಂದಿಲ್ಲಿ ಸತ್ತವರು?
ಜಂಬೂಕ ಬಾಬು, ಭಲ್ಲೂಕ ಸಿಂಹ, ಮಂಡೂಕ ಋಷಿ,
ವಕ್ರಪುಚ್ಛ, ತೊಂಡಂಗಿಯಪ್ಪನ್, ವೃಕೋದರಾಚಾರ್ಯ,
ಬಾಲ ಹೊತ್ತಿರುವ ಕವಿರಾಯ, ಮೀಸೆ ಹೊತ್ತ ಲಂಕಿಣಿ ಬಾಯಿ :
ಒಗ್ಗಾಲ ತಪ, ಭಗೀರಥ ಮುದ್ರೆ ; ತೊಟ್ಟಿನಲ್ಲೇ
ಸೃಷ್ಟಿಯೆಲ್ಲ ತೊರುವ ದಭದಭೆ ಜೇನು
ತನ್ನ ಹೆಬ್ಬಾಯಿಗೆ ಸುರಿವ ತಂಪುಳಿವ –
ಸುರಾಸ್ವಪ್ನರಂಜಿತರು, ಪಕ್ಷಭಂಜಿತರು,
ಜಂತು ಹುಳದೋಪಾದಿ ವಾಂತಿಭೇದಿಗೆ ನಾಡ ತೊಳಸುವವರು.

ನೀರಿಲ್ಲದರೆಗಳಲ್ಲಿ ಜೇನುಗುವ ಕೆಂಪಗಳು
ನೆರಳ ಚೆಲ್ಲುತ್ತಲಿದೆ : ಸೈಬೇರಿಯಾ ಚಳಕು
ದಿಳ್ಳಿಯಲ್ಲೂರಿ ಹಬ್ಬುತ್ತಲಿದೆ ಹಳ್ಳಿಗೂ,
ಮಾಸ್ಕೋದ ತರ್ಜನಿ
ಕಾಶ್ಮೀರದಿಂದ ರಾಮೇಶ್ವರದ ವರೆಗುರಿವ ಕಂಗಾಲರಿಗೆ
ಪಂಗನಾಮದ ಮಂತ್ರ ಹಾಕಿ ಮಿಡಿಯುತ್ತಿದೆ.

ಭಿಲಾಯಿ ಕುದುರೆಗಳೊಳಗೆ ಹಂಗಿಗರ ಹಗಲು ಫಿತೂರಿ;
ಹೊಟ್ಟೆ ಮೆದುಳಾದವರ ತಲೆಗೆ ಕೆಂಪು ಕಲಾಯಿ;
ಗಡಂಗಿನಲ್ಲಿ ಗಡಿದಾಟಿದಬ್ಬೇಪಾರಿ
ಮೇಲು ಮಾಳಿಗೆಯಿಂದ ಮುಗಿಲ ಕಡೆಗೆ ಸವಾರಿ
ಮಾಡಿ, ಬಲ ಮುರಿದೆದ್ದ ವಾಮಾಚಾರಿ.

ಹುರಿದರಳ ಬಿತ್ತಿ ಹೊರೆ ಹೊರೆ ಫಸಲ ಕರೆವವರು,
ಹಗಲುಗನಸಿನ ಭಂಗಿ ಹತ್ತಿ ನೆಲ ಹಿಡಿದವರು,
ಹುಲಿತೊಗಲ ಹೊದೆದು ನರಭಕ್ಷಣೆಗೆ ನಿಂತವರು,
ಕಾಯಕವ ಬಿಟ್ಟು ಕೈಲಾಸಕ್ಕೆ ಕುದಿವವರು-

ಮೈಬಗ್ಗಿಸದೆ ಕೈಯನೊಡ್ಡಿ ಗಿಂಜುವ ದೇಶ
ಹದಿನೆಂಟು ಜಾತಿ ದುರ್ನಾತಕ್ಕೆ ಮೇಲ್ಪಟ್ಟು
ದೇಶಾವರಿ ಹಾರುವನ ಮಟ್ಟ ಸಮತಟ್ಟು –
ಹೆಣಗಳ ಹಣಾಹಣಿಯ ಭಾರಿ ಬಿಕ್ಕಟ್ಟು.
೪
ಅಗೊಗೊ ಹೋಹೊ ಬಂತು ಬಂತು
ನವೇಂದ್ರ ನಹುಷನ ದಂಡಿಗೆ:
ಜನಪಥರಾಜಪಥ ರಸ್ತೆ ಪುಲಕಿತ,
ಅಧಿಕಾರದಹಂಕಾರ ಭಾರಕ್ಕೆ ತಾನೇ ಚಕಿತ;
ನೋಡಣ್ಣ, ಹಗಲು ದೀವಟಿಗೆ.

ಸಪ್ತರ್ಷಿಗಳ ಆಗಬೇಕು ಬೋಯಿಗಳು
ವೇಗ ವರ್ಧಿಸಬೇಕು ಗಾಳಿಗೂ ಮಿಗಿಲು;
ಗಾಳಿದಿನಿಗಳಿಗೇಕೆ ಇಷ್ಟೊಂದು ಸೊಕ್ಕು?
“ಸರ್ವ, ಸರ್ಪ’ ಎಂಬೆಡಗಾಲಿನಿಂದಗಸ್ತ್ಯರ ಹೆಗಲ
ತಿವಿಯಬೇಕು ;
ಇಲ್ಲವಾದರೆ ಇಂದ್ರಪದವೇಕೆ ಬೇಕು ?
ಶಚಿಯ ಶುಚಿ ಕೆಡಿಸಿದರೆ ಆಗ ಇದೆ ಮೋಜು,
ಜನ್ಮಜನ್ಮದ ಪುಣ್ಯ ಫಲದ ಬೇರೀಜು.

ಮಟಮಟ ಮಧ್ಯಾಹ್ನದಲ್ಲಿ ಕುದಿ ಮರಳಲ್ಲಿ
ಸರ್ಪವಾಗುರಿವ ದಿನ ಬಹಳ ದೂರ ;
ಗರ್ಭದೊಳಗೇನಿದೆಯೊ ಕಂಡವರು ಯಾರು ?
ತೊಡೆ ಇನ್ನು ಮುರಿದಿಲ್ಲ ಏಕೆ ತಕರಾರು ?

ಒಳಗೊರಗಿ ಗೋರಿ ಕಟ್ಟಿಸಿಕೊಂಡವರೆ ಈಗ
ಹೊರಬಿದ್ದು ವಿವಿಧಾಕೃತಿಗಳಲ್ಲಿ ಹೊರಟಿದ್ದಾರೆ:
ರಾಜರು, ಮಹಾರಾಜರು, ಬಾದಶಾಹರು, ನವಾಬರು,
ಸುಳಿಯುತ್ತಲಿದ್ದಾರೆ ಹಾಡು ಹಗಲೇ.
ತಕ್ಕ ತಕ್ಕ ಕೊರಡುಗಳಲ್ಲಿ ಮೈ
ಪಟ್ಟು ನೆರೆದಿದ್ದಾರೆ ದಿಳ್ಳಿ ತುಂಬ, ಏ ಹುಂಬ,
ಆ ಊರ ಬೇಹಿನವರಿಲ್ಲೆ ಗುಂಭ.

ಗೋಡೆಯೊಳಗಡೆ ಜೀವ ಸಹಿತ ಹೂಳಿಸಿ ಮೇಲೆ
ಗಾರೆ ಹಾಕಿಸಿದವರು;
ಅಂಗುಲಂಗುಲವಾಗಿ ಅಂಗಾಂಗ ಕತ್ತರಿಸಿ
ಗಾಯಕ್ಕೆ ಮೆಣಸುಪ್ಪು ತುಂಬಿದವರು;
ಕಣ್ಣು ಕೀಳಿಸಿ ಚರ್ಮ ಸುಲಿಸಿ ಸುಖಪಟ್ಟವರು,
ಅಯ್ಯಾ, ಈಗೇಕೆ ನೀವಿಲ್ಲಿ, ಕದ್ದಿಂಗಳಲ್ಲಿ?
ಈ ಅರಾಜಕದೊಂಬಿ ಕುಣಿತದಲ್ಲಿ ?

ಯುಗ ತೆರೆದು, ಯುಗ ಮಗುಚಿ,
ಬರ್ಬರತೆ ಮರುಕೊಳಿಸಿ, ಈಗ ಬಂದಿದ್ದೇವೆ
ನಿರಂಕುಶರ ನಿಶ್ಯಂಕ ಎಣ್ಣೆಕೊಪ್ಪರಿಗೆಗೆ,
ಕಲ್ಲುಗಾಣಕ್ಕೆ, ಮೊಳೆಯ ಮಂಚಕ್ಕೆ.

ಬಲು ನವುರು, ಬಲು ಸೂಕ್ಷ್ಮ ಆಧುನಿಕ ಹಿಂಸೆ:
ಪ್ರಹ್ಲಾದನಿಗೆ ಆತ್ಮಹತ್ಯೆಯ ಚಿಕಿತ್ಸೆ;
ಧ್ರುವನಿಗರಮನೆಯಲ್ಲಿ ಜನ್ಮ ಟಾಪು:
ಋಷಿಗೆ ಹುಚ್ಚಾಸ್ಪತ್ರೆ, ಕವಿಗೆ ಸಾಪಾಟು;

ಆಸ್ಥಾನ ಬಿಟ್ಟವಗೆ ಜಾಪಾಳ ಮಾತ್ರೆ,
ಪ್ರತಿಪಕ್ಷನಾಯಕರು ಹೇಗೊ ನಾಪತ್ತೆ.
ವಿಜ್ಞಾನಿಗಳಿಗೆ ಗರ ಕೆಲಸವಿರದ ಪಗಾರ,
ಧೀಮಂತರಿಗೆ ಹೃದಯ ಮಾಂದ್ಯ ತರುವುತ್ತಾರ;
ಬಡಬಗ್ಗರಿಗೆ ಹೊಟ್ಟೆಕಿಚ್ಚಿನಕ್ಕಚ್ಚು,
ಎಂಥೆಂಥವೋ ಸೂಜಿಮದ್ದುಗಳ ಚುಚ್ಚು.
ಕೈಯಲ್ಲಿ ಇಷ್ಟುದ್ದ ಪ್ರಾಮಿಸರಿ ನೋಟು,
ಸಂಚಕಾರಕ್ಕೆ ಈ ನಿರೋಧಗಳ ಕಟ್ಟು,
ಗುಟುಕು ಹೆಂಡಕ್ಕಾಗಿ ಮಿಕ್ಕುದೊಂದೋಟು.

ನೋಡಲಿಕ್ಕೊಳೊಳ್ಳೆ ಹಗಲು ವೇಷಕ್ಕೇನು
ಯಾವಾಗಲೂ ನಮಗೆ ಕೊರತೆಯಿಲ್ಲ;
ಬುದ್ಧ ಬೇಕೇ ಬುದ್ಧ, ಗಾಂಧಿ ಬೇಕೇ ಗಾಂಧಿ,
ಧರ್ಮರಾಯನೇ, ಕೃಷ್ಣ ಪರಮಾತ್ಮನೇ?
ಬೇಗಡೆಯಲಂಕಾರ, ಗಡ್ಡ, ಮೀಸೆ, ಬಿಲ್ಲು, ಬಾಣ, ರಾಕ್ಷಸ ಪಗಡೆ
ದಿಳ್ಳಿಯೇ ಮಾರುವೇಷಗಳೊಂದು ಮಳಿಗೆ,
ಸಾರಿಗೆ ನಿರಾತಂಕ ಹಳ್ಳಿಗಳ ವರೆಗೆ,
ಪಕ್ಷ ಪಕ್ಷಾಂತರದ ಗೋಸುಂಬೆಗಳಿಗೆ.
೫
ನಡೆಯಲಾರದ ದೂರ, ಹಿಡಿಯಲಾರವ ಬಸ್ಸು
ಕೈಮೀರಿರುವ ಟ್ಯಾಕ್ಸಿ ಆಟೊರಿಕ್ಷಾ;
ಬಿಲದಲ್ಲಿ ಸಿಂಬಿಸುತ್ತಿರುವುದಾದರೆ ಹಳ್ಳಿ,
ದಿಳ್ಳಿಗಳ ವ್ಯತ್ಯಾಸ ತೀರ ಅಲ್ಪ.

ಹಾಗಂತ ಹೊರಟರೆ ಅಲ್ಲಿ ಇಲ್ಲಿ ಕಾಲಾಡುತ್ತ
ನೆಲವನೊದ್ದೊದ್ದು ಮೇಲೆದ್ದು ಹೆಡೆಯೆತ್ತಿದ್ದಾವೆ
ಮಹಲುಗಳು, ಪಂಚತಾರಖಚಿತ ಭವನಗಳು; ಅಂತಸ್ತುಗಳ
ಅರೆ, ಖಾನಿ, ಪೊಟ್ಟರೆಗಳಿಂದ ಕಿಚಕಿಚ ಸದ್ದು; ರಸ್ತೆಯ ತುಂಬ
ಭಾರತೀಯ ಹೆಣಕ್ಕೆ ಪಾಶ್ಚಾತ್ಯ ಸಮವಸ್ತ್ರ
ತೊಡಿಸಿ ತೊಳಲುತ್ತಿರುವ ತರಳೆ ತಂಡ.
ಎತ್ತ ಹೋದರು ಅತ್ತ ತರಟುಮುರುಟು ನುಜ್ಜುಗುಜ್ಜು ಗುಜ್ಜಾರಿ
ಝಗ್ಗಿ ಜೋಪಡಿಗಳುರಿಬೊಕ್ಕೆತಳಕು.
ಸೆಗಣಿ ಗಂಜಳ ತೆಗೆಯದಂಥ ಕೊಟ್ಟಿಗೆಯೊಳಗೆ
ಎಷ್ಟೆಷ್ಟು ಕಾಲ್ನಡೆಗಳಯ್ಯ, ಬರೀ ಕರುಗಳು.
ಕೀವು ತುಂಬಿ ಬಿಗಿವ ಕುರುಗಳು, ಕುರುಕ್ಷೇತ್ರಕ್ಕೆ
ಹಾತೊರೆದು ತಿಣಕುವ ತುಪಾಕಿತುತ್ತುಗಳು.
ಕೊಳೆತು ನಾರುವೆ ಜಳ್ಳು ಮೊಟ್ಟೆ, ಬರಿ ಬಿಜವೇ
ತುಂಬಿರುವ ದೊಣ್ಣೆ ಮೆಣಸುಗಳು, ಮರಬದನೆಗಳು;
ತತ್ತಿಯೊಡೆಹೊತ್ತಿ ಮುತ್ತುವ ಮೊಸಳೆ ಮರಿಗಳು.
ಹಿಂದಿ, ಪಂಜಾಬಿ, ಕನ್ನಡ, ತಮಿಳು, ಬಂಗಾಳಿ,
ಒರಚ್ಚಾಗಿ: ಒಚ್ಚತವಾಗಿ ಪೈಶಾಚಿ
ಯಲ್ಲಿ ಮಾರುವ, ಕಲಿವ, ಕದಿವ, ತಿನ್ನುವ, ತಿಂದು ಮಲಗುವ
ಮಲಗಿ ಮುಲುಕುವ ಲಕ್ಷಲಕ್ಷ ಕುಕ್ಷಿಗಳು.

ಶವದಪೆಟ್ಟಿಗೆ ರಾಜಧಾನಿ, ಎಕ್ಸ್‌ಪ್ರೆಸ್ಸಲ್ಲಿ
ಬರುತ್ತವೆ, ಹೋಗುತ್ತವೆ;
ಗೋರಿಯಲ್ಲಿ ಮಲಗುತ್ತವೆ. ಏಳುತ್ತವೆ:
ಬಸ್ಸು ತುಂಬುತ್ತವೆ, “ಇಳಿಯುತ್ತವೆ.
ಉರುಳುತ್ತವೆ
ಆಳ ಪಾತಾಳಕ್ಕೆ: ಬೀಳುತ್ತವೆ
ಅಂಧಂತಮಸ್ಸಿನಿತಿಹಾಸ ಪೂರ್ವ ತಳಕ್ಕೆ
೬
ಹಸ್ತಿನಾಪುರದ ದೀವಾನಖಾಸದಲ್ಲಿ ಪ್ರತಿನಿತ್ಯ
ಕ್ರಾಂತಿ. ನಿನ್ನೆ ಮಾಡುತ್ತಿದ್ದ ಗೊಂಬೆಗಳು ಈಗ ಅಸಹ್ಯ.
ಮೂಲೆಗುಂಪಾಗಿ ಬಿದ್ದಿದ್ದ ಪುತ್ಥಳಿಗಳಿಗೆ
ಇಂದು ಹೊಸ ಹೊಸ ಅಲಂಕಾರ, ಶಕುನಿಮಾಮನ ಕಿವಿಗೆ
ಬಡಾಭಾಯಿ ತುಟಿ. ಹೊಸ ಗೊಂಬೆಗಳ ಹುಟ್ಟು
ಸಮಯಾನುಸಾರ. ದೇಖಾವೆ ದೇಶಾದ್ಯಂತ
ರೇಡಿಯೋ ಟೆಲಿವಿಶನ್ ವೃತ್ತಪತ್ರಗಳಲ್ಲಿ ಮುಖರಿತ.
ಮನೋರಂಜನೆ, ಮೂಲಶಿಕ್ಷಣ, ಮಾರ್ಗದರ್ಶನ-ಇಂತು
ಕಂಪಣಿಯ ಜಾಹೀರು ಮಾತು.

ಅದೋ ನೋಡಿ ಅಲ್ಲಿ ಅಲ್ಲಿ ಇಳಿದಿದ್ದಾನೆ,
ಬಡತನದ ಪೆಡಂಭೂತ–ಅಕರಾಳ ವಿಕರಾಳ:
ಪಾತಾಳಕ್ಕಿಳಿದ ಹೊಟ್ಟೆ, ಮೂಳೆಗೀರುವ ಅಟ್ಟೆ,
ಕೊಳ್ಳಿದೆವ್ವವ ಹಾಗೆ ಉರಿವ ಕಣ್ಣು;
ಮಾರುದ್ದ ನಾಲಗೆ, ಗೇಣುದ್ದ ಹಲ್ಲು :
ನಮ್ಮ ವಾಸನೆ ಹಿಡಿದೊ ಮೈಯೆಲ್ಲ ಜೊಲ್ಲು.
ಅಯ್ಯೋ ಅಸಹ್ಯ, ಭೀಕರ, ನೋಡಲಾರೆ,
ಹೆದರದಿರಿ ನೀಗುವುದು ಎಲ್ಲ ಪರಭಾರೆ.
ಇಳಿದಿದ್ದಾರೆ ನೋಡಿ ಶವವಾಹಕರು ನಾಲ್ಕು ಜನ
ಧಾಂಡಿಗರು:
ಖಂಡಿ ಖಡಿ ಮಾಂಸದ ಖಂಡ ಕುಣಿವ ಮೈಯವರು;
ನೋಡಿ, ನೋಡಿ :
ಪೆಡಂಭೂತವನ್ನೆತಿ ಹೇಗೆ ಕುಕ್ಕುತ್ತಾರೆ, ಚುಚ್ಚುತ್ತಾರೆ.
ತಿವಿಯುತ್ತಾರೆ, ತದಕುತ್ತಾರೆ, ತವಕಿ ಕುಣಿಯುತ್ತಾರೆ.
ಅಬ್ಬಬ್ಬ. ಉಸ್ಸಪ್ಪ : ಕಂಡು ಕಂಡೇ ಸುಸ್ತು.
ಈಗ ಬರಿ ಅಪ್ಪಚ್ಚಿ: ಆಯ್ಕೆ ವಾಕರಿಕೆ ; ಸಭಾಂಗಣದಲ್ಲಿ
ಚಪ್ಪಾಳೆ, ಕೇಕೆ ; ವಿಜಯೋತ್ಸವದ ಏರಾಟ, ಚೀರಾಟ, ಟೋಪಿ ತೂರಾಟ
ಮತ್ತೆ, ಮತ್ತೆ.
ಹರಕಂಗಿಯವರು, ಗುಳಿಗಣ್ಣನವರು, ಹಂಚಿಕಡ್ಡಿ
ಕೈಯವರು, ಕಚ್ಚೆ ಹರಕರು, ಹರಕು ತುಟಿಯವರು,
ತೆಂಗಿನಕಾಯಿ ಜುಟ್ಟವರು, ಎದೆ ತೂಬು
ಕಿತ್ತವರು, ಮಂಕು ಬೂದಿಗೆ ಸಿಕ್ಕಿ
ವಾಲುವವರು, ಮಾಲುವವರು, ತೇಲುವವರು, ಯೋಜನಗಂಧ
ಬಿಟ್ಟವರು, ಸುಟ್ಟವರು, ಸುಡುಗಾಡವರು :
ರೇಗಿದರು, ರೋಸಿದರು, ಹೇಸಿದರು, ಮೂಸಿದರು,
ಹಾಹಾ ಎಂದು ಹೋಹೋ ಎಂದು ಚಪ್ಪಾಳೆ
ಕುಟ್ಟಿ ಬಿದ್ದರು, ಬಿದ್ದೆದ್ದು ನಕ್ಕರು, ಸುಸ್ತಾಗಿ
ಅತ್ತರು; ಅತ್ತತ್ತು ಸುಸ್ತಾಗಿ ಮತ್ತೆ ನಕ್ಕರು, ಉಸಿರು
ಸಿಕ್ಕಿಕೊಂಡಂತಾಗಿ ಸೀತರು, ಕೆಮ್ಮಿ ಕ್ಯಾಕರಿಸಿದರು.
ಗೊಂಬೆಯಾಟದ ಭಾವರೇಚಕದಶೌಚಕ್ಕೆ
ರಂಗಮಂದಿರ ಗಲೀಜು : ಪರವಾ ಇಲ್ಲ,
ಮಾನವತೆಯುಚ್ಚಿಷ್ಟ ಪತಿತಪಾವನನಿಷ್ಟ.
ಜಮಾಯಿಸಿ ನಿಂತ ಭಾವಗಳ ಜವುಗಿನಲ್ಲೀಜಾಡಿ
ಶಾಂತ ಇಂದಿನ ಕ್ರಾಂತಿ ನಾಳೆ ? ಕಾದು ನೋಡಿ.

ಯಾರ ಕಣ್ಣಿಗು ಬೀಳದಂತೆ ಎಲ್ಲೋ ಕುಳಿತು
ಸೂತ್ರವಾಡಿಸಿದನು ಬಡಾಭಾಯಿ, ನೆಣಮೊಗದ
ಕಿವಿಯಿಂದ ಕಿವಿವರೆಗೆ ಹೆಣನಗೆಯ ಹಿಗ್ಗಲಿಸಿ
ಮಗ್ಗುಲಾದನು ಬೇರೆ ಸೂತ್ರಕ್ಕೆ ಕೈ ಚಾಚಿ.

ನಟ್ಟಿರುಳಿನಲ್ಲಿ ಟೆಲಿಫೋನಿನಿಂದಾದೇಶ;ದೇಶದ ಹತ್ತು
ದಿಕ್ಕಿನಲ್ಲೂ ಹೊಂಚಿ ಕುಳಿತ ದೇಶೋದ್ದಾರಿ ಸರಕಾರಿ
ಗ್ಯಾಂಗುಗಳ ಚಚ್ಚರ ; ಆಮದಾವ ಗ್ಯಾರಂಟಿ ಟ್ರಕ್ಕುಗಳಲ್ಲಿ
ಮೆದುಳ ಕರಗಿಸಿ ಎದೆಯ ತುರಿವ ಗರಳ ಕರಾಳ ಮೂಟೆ ಮೂಟೆ:
ಮಬ್ಬು ಬೆಳಕಲ್ಲಿ ಸದ್ದಿರದ ವಿಷ ಸಂಚರಣ
ನಾಳ ನಾಳಗಳಲ್ಲಿ : ಹೊಳೆ ಹೊನಲುಗಳ ಮೂಲ
ಚಿಲುಮೆಗಳ ಚುಂಚಕ್ಕೆ ಮೃತ್ಯು ತುಟಿಗಳ ಛಾಪು.

ಹೊತ್ತಾರೆ ವೃತ್ತಪತ್ರಿಕೆ ರೇಡಿಯೋ ವಾರ್ತೆ: “ಪರದೇಶಿ
ಗೂಢಚಾರರ ಗುಂಪಿನೊಡನೆ ಶಾಮೀಲಾಗಿ
ಸುತ್ತುತ್ತಿದ್ದಾರೆ ಪ್ರತಿಪಕ್ಷದವರು, ಸಮಸ್ತ
ನದಿಗಳಿಗೆ ವಿಷವ ಬೆರಸುವಪಾಯದಂದಾಜು
ಉಂಟು – ಎಚ್ಚರ” ಎಂದು. ಸತ್ಯಕ್ಕೆ ಜಯವೆಂಬ
ಮಾತು ಕೂಡಾ ಉಂಟು.
ಅದಕ್ಕೂ ನಮಗೂ ಪುರಾತನದ ನಂಟು.
೭
ಹಸ್ತಿನಾಪುರವೆಲ್ಲಿ? ಇಂದ್ರಪ್ರಸ್ಥವೆತ್ತಕಡೆ?
ಕುರುಕ್ಷೇತ್ರವೊಂದೇ ಸದಾ ಕಾದಿದೆ.
ಅಕ್ಷೌಹಿಣಿಯ ಮೇಲೆ ಅಕ್ಷೌಹಿಣಿಗಳೊತ್ತುತಿವೆ
ತಕ್ಕಡಿಯ ಕಪ್ಪೆಗಳ ಭಾರಿ ಫೌಜು,
ಕೌರವರ ಪಾಳೆಯವೊ ಭಾರಿ ಮೋಜು.

ಶತ್ರುಸೇನೆಯ ಸದ್ದೂ ಸುಳಿವು ಕೂಡಾ ಇರದೆ
ತಡೆಯಲಾರದ ಮಸ್ತಿ ಯೋದ್ಧೃಗಣಕೆ;
ಕೊಲೆ ಸುಲಿಗೆ ಕೊಳ್ಳೆ ಅತ್ಯಾಚಾರದತ್ಯಾಶೆ
ಸ್ಫೋಟಿಸುತ್ತಿದೆ ಸ್ವಂತ ಶಿಬಿರದೊಳಗೆ

ಧರ್ಮನಾಮರನೆಲ್ಲ ಹಿಡಿದು ಹೆಡೆಮುರಿಗಟ್ಟಿ
ತಳ್ಳಿದರು ಶಿಬಿರಗಳ ಬಾವಿಗಳಿಗೆ :
ಹಾದಿಹೋಕರ ಹಿಡಿದು ಜಡಿದು ಹೂಂಕರಿಸಿದರು:
ನೀ ಯುಧಿಷ್ಠಿರನೆ ಅಥವಾ ಭೀಮನೆ ?

ಗೋಗ್ರಹಣ, ಭೂಗ್ರಹಣ, ಶಿಖಾಗ್ರಹಣ ನಡೆದರೂ
ಪಾಂಡವಗ್ರಹಣಕ್ಕೆ ಮುಕ್ತಿ ಇಲ್ಲ.
ಅಜ್ಞಾತವಾಸ ಗಡುಕಳೆದಿದ್ದರೂ ಧರ್ಮ
ರಾಯನಿರವಿನ ಪತ್ತೆ ಹತ್ತಲಿಲ್ಲ.

ಒಗ್ಗಿತೇ ಕಂಕನಿಗೆ ಕಳ್ಳ ಪೂಜಾರಿತನ.
ಬೃಹನ್ನಳೆಗೆ ಹೆಂಕುಳಿಯ ವೇಷ?
ವಲಲ ಮರೆತನೆ ಗದೆಯ? ಸೈರಂಧ್ರಿಗೂ ಸರಿಯೆ
ಕೀಚಕನ ಹೆಡೆಯಡಿಯ ತೊತ್ತುಗೆಲಸ?

ತನ್ನ ಪಂಚಪ್ರಾಣ ಹುಡುಕಿ ಹೊರಟನೆ ಕೃಷ್ಣ?
ಶೋಕಗದ್ಗದ ಮೂಕ ಪಾಂಚಜನ್ಯ;
ಕೆಳಸರಿದ ಚಕ್ರ ಮೂಲಾಧಾರದವ್ಯಕ್ತ
ಆದಿ ಕೆಸರಿಗೆ ಬಿದ್ದು ರುಗ್ಣ, ಭಗ್ನ.

ಒಂದು ಇನ್ನೊಂದನ್ನು ಕುಕ್ಕಿ ಸೊಕ್ಕಿ ಇಕ್ಕಿ ಮುಕ್ಕುತ್ತಿರುವ
ಹೆಣದ ಬಣಬೆಯ ಕೆಳಗೆ ಬಿದ್ದ ಮಗುವೇ,
ದಟ್ಟ ಕತ್ತಲಿನಲ್ಲಿ ಪುಟ್ಟಡಿಗೆ ಎಲ್ಲಿದೆ ಅಭಯ?
ಸಣ್ಣ ದೀಪಕ್ಕಾವ ರಕ್ಷೆ, ನಿಗಮ?

ಕಂಭವೊಡೆಯುವ ವರೆಗೆ, ಕುಂಭ ತುಂಬುವ ವರೆಗೆ,
ಲೆಕ್ಕ ನೂರಕ್ಕೆ ಭರ್ತಿಯಾಗುವತನಕ,
ಬಿರ್ನಮ್ ಅರಣ್ಯವೇ ಎದ್ದು ಹೊರಡುವ ತನಕ
ಮೋಹಿನಿಯ ಕೈ ತಲೆಯ ಮುಟ್ಟುವನಕ |

ಮಾರು ವೇಷಕ್ಕೆ ಹುಡುಕಿರಿ ತೊಗಟೆ ತೊಗಲುಗಳ:
ಆಮೆಯೋಡೋ, ಕಪ್ಪೆಚಿpfp, ಹಾವಿನ ಪೊರೆಯೊ
ಹುಲಿ ಚರ್ಮವೋ ಕುರಿಯ ತುಪ್ಪಟವೋ ಕಾಗೆಗು
ಬ್ಬಚ್ಚಿಗಳ ದಗಲೆಯೋ-ನುಸುಳಿಕೊಳ್ಳಿ.
೮
ಮಾಡಬೇಕಾದ್ದೆಷ್ಟೊ ಇದೆ : ಮೂಲ ಕತ್ತಲಿನಲ್ಲಿ
ಮುಳುಗಿ ಹೋಗುತ್ತಿರುವ ಪರಂಪರಾಗತ ತಿಳಿವ
ನೆತ್ತುವುದು; ಎತ್ತಿ ಪುರಾತನ ಮಗುವ
ಇತ್ತ ಕಡೆ ಕರೆತಂದು ಅಂತರಂಗದಲ್ಲಿಟ್ಟು ಕಾಪಿಟ್ಟು

ಹೊಸಗಾಳಿಯಲ್ಲುಸುರು ಬಿಟ್ಟು ನಡೆಯುವ ಹಾಗೆ
ಆಧುನಿಕಗೊಳಿಸುವುದು ; ಆರಾಧಿಸುವುದು ದೀಪ ಹಚ್ಚಿಟ್ಟು
ಮರೆಯಾದವರ ; ತನ್ನ ತನ್ನ ಕಿರು ಹಣತೆಗಳ
ಬೀಸುಗಾಳಿಗೆ ಮರೆಯೊಳಿಟ್ಟು ಆರಯ್ಯುವುದು.
ಬದುಕ ಬಯಸುವ ಮೊಳಕೆ ಹೀಚು ಮರಿಗಳ ಸುತ್ತ
ಮುಳ್ಳು ಕಂಟೆಯ ಬೇಲಿ ಕಟ್ಟಿ ಹಾಲೆರೆಯುವುದು:
ಮಂಜು ಮಬ್ಬಿನ ಮಧ್ಯೆ ಬಿದ್ದ ಕಣ್ಣನ್ನೆತ್ತಿ
ಶಿಖರಗಳ ಮತ್ತೊಮ್ಮೆ ಗುರುತಿಸುವುದು,
ನಿಕರವಾದದ್ದನ್ನು ಮುಖರಗೊಳಿಸುವುದು ;
ದೇಶದಾದ್ಯಂತ ಕುರ್ಚಿಗಳಲ್ಲಿ ಕುಕ್ಕರಿಸಿ
ಹೆಣಗಲೀಜಾದವರ ಸಂಸ್ಕಾರದೇರ್ಪಾಟು
ನಡಸುವುದು ; ಮನೆಮಳಿಗೆ ಕಾರ್ಖಾನೆ ದಫ್ತರುಗಳೆಲ್ಲ ಕಡೆ
ಡೀಡೀಟಿ ಹೊಡೆದು ಹೊಸ ಕಸಬರಿಕೆಯಾಗುವುದು.
ಉದ್ದಕ್ಕು ಹೃದಯ ಕಮಲದ ಮಧ್ಯಗಂಧ ಹಬ್ಬಿಸುವುದು ;
ಸೂರ್ಯಬಿಂಬಾಸನಸ್ಥದ ಶಾಖದಲೆಗಳ ಶ್ರುತಿಗೆ
ಸಂಬದ್ಧವಾಗಿ ಒಳ ಅಲೆಗಳುರುಳುವ ಹಾಗೆ
ಆಯಾಮಗೊಳಿಸುವುದು ಪ್ರಾಣನೌಕೆಯ ಗತಿಯ ; ಹೊಮಾಗ್ನಿ
ಕುಂಡಕ್ಕೆ ಹವಿಬಿದ್ದು ಪಿಕವಾಗಿ, ಶುಕವಾಗಿ
ಸತ್ತು ಹುಟ್ಟುವುದು, ಸ್ವಂತಿಕೆಯ ಗರಿ ಹೊಡೆಯುವುದು.

ಹೆಣದ ವಾಸನೆ ತಡೆಯದಾದೆನಯ್ಯೋ, ದಮ್ಮು
ಕಟ್ಟಿ ಧುಮುಕಿದನಿತ್ತ ದಿಳ್ಳಿಯ ಕಡೆ;
ತುತ್ತು ಕಸಿಯುವ ಹೆಣದ ಕೈಗೆ ಕನ್ನಡದ ತೊಡ
ಇತ್ತು ; ಬದುಕುವ ಆಸೆಗೆಷ್ಟೋ ಎಡೆ.

ನಾನೆ ತಂದದ್ದೇನು ಈ ಹೆಣದ ವಾಸನೆಯ?
ಇಲ್ಲಿ ಕೂಡಾ ನಡಿಗೆ ಸಾವಿನ ಕಡೆ;
ಆತ್ಮಹತ್ಯೆಯ ಪಾನಗೋಷ್ಠಿ ಪಥಕಗಳಾಚೆ
ಕುಟುಕುಜೀವವ ಹಿಡಿದು ಕುಹರಕಿಳಿದೆ.

ಸದ್ಯಕ್ಕೆ ನನಗಿಲ್ಲಿ ಬದುಕಿ ಉಳಿವುದೆ ಕೆಲಸ;
ಪ್ರಾಣಾಯಾಮ ಬಲವೆಷ್ಟೊ ಅಷ್ಟೆ ಬದುಕು;
ಜೀವ ಬೀಜಾಕ್ಷರಗಳೆಷ್ಟೋ ಅಷ್ಟರ ಮೆಲುಕು;
ಇರುಳಿಡೀ ಜಾಗರಣ ನೆನಪುಕೆದಕು.

ಹೊಸನಸುಕಿನೋಂಕಾರ ಒಡೆದು ಚೆಲ್ಲಲು, ಬೆಳಕು
ಬಿತ್ತುಗಳನಾರಿಸಲು ತಕ್ಕ ತ್ರಾಣ;
ಸೂರ್ಯಶಂಖಧ್ವಾನ ಹಿಡಿಯ ಬಲ್ಲಂಥ ಎದೆ,
ಇರಲಿ ಅಂಗೈಯಲ್ಲಿ ತ್ರಸ್ತ ಪ್ರಾಣ.

೧೦-೧೦-೧೯೭೨

Close

ನನ್ನ ಎಲ್. ಎಸ್. ಡಿ. ಟ್ರಿಪ್

ನನ್ನ ಎಲ್. ಎಸ್. ಡಿ. ಟ್ರಿಪ್
(ಒಂದು ಪತ್ರ)

ಎಚ್. ಎಸ್. ಬಿಳಿಗಿರಿ

[ಸುಮಾರು ಎರಡು ಎರಡೂವರೆ ವರ್ಷಗಳ ಹಿಂದಿನ ಮಾತು. ಟಿಮೊತಿ ಲಿಯರಿ ಬರೆದ The Politics of Ecstasy ಎಂಬ ಪುಸ್ತಕದಲ್ಲಿ ಕೆಲವು ಲೇಖನಗಳನ್ನು ಓದಿದೆ. ಅಂದಿನಿಂದಲೂ ಎಲ್‌. ಎಸ್. ಡಿ. ಯನ್ನು ಸೇವಿಸಿ ಅದರ ಅನುಭವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಆಸೆ ನನಗೆ. ಆದರೆ ಸರಿಯಾದ ಅವಕಾಶ ಸಿಕ್ಕಿರಲಿಲ್ಲ; ಅಲ್ಲದೆ ನನ್ನ ಪರಿಚಯದ ವ್ಯಕ್ತಿಯೊಬ್ಬ ಲಘುವಾದ ಮನೋರೋಗಕ್ಕೆ ತುತ್ತಾಗಿರುವ ಸಂಗತಿಗೂ, ಅವನು ಹಿಂದೆ ಎಲ್. ಎಸ್. ಡಿ ಸೇವಿಸುತ್ತಿದ್ದುದಕ್ಕೂ ಗಂಟುಹಾಕಿ ಜನರು ಮಾತನಾಡುತ್ತಿದ್ದುದನ್ನು ಕೇಳಿ ಸ್ವಲ್ಪ ಹೆದರಿಕೆಯೂ ಆಗುತ್ತಿತ್ತು. ಇತ್ತೀಚೆಗೆ ನನ್ನ ಆಸೆ ಫಲಿಸುವ ಅವಕಾಶ ಸಿಕ್ಕಿತು ; ಅಲ್ಲದೆ ಎಲ್. ಎಸ್. ಡಿ ಯನ್ನು ಅನೇಕ ಬಾರಿ ಸೇವಿಸಿದ್ದರೂ ಅತ್ಯಂತ ಲವಲವಿಕೆಯಿಂದ ಕೂಡಿ, ಸಾಂಕ್ರಾಮಿಕ ಉತ್ಸಾಹದಿಂದ ಸದಾ ತುಂಬಿದ್ದ ವ್ಯಕ್ತಿಯೊಬ್ಬನನ್ನು ನೋಡಿ ನನಗಿದ್ದ ಅಲ್ಪ ಸ್ವಲ್ಪ ಹೆದರಿಕೆಯೂ ಮಾಯವಾಯಿತು. ಈ ವ್ಯಕ್ತಿಯೇ ನನ್ನ ಮೊದಲನೇ ಟ್ರಿಪ್ಪಿನ ಗೈಡು, ಮೊದಲನೇ ಟ್ರಿಪ್ಪಿನ ಆ ಅನುಭವವನ್ನು ಕುರಿತು ನನ್ನ ಮೂವರು ಆತ್ಮೀಯ ಮಿತ್ರರಿಗೆ ಒಂದೇ ಪತ್ರದ ಮೂರು ಪ್ರತಿಗಳನ್ನು ಕಳಿಸಿದ್ದೆ. ಆ ಪತ್ರವನ್ನು ಉಪಯೋಗಿಸಿಕೊಂಡು ಒಂದು ಲೇಖನ ಬರೆಯಬೇಕೆಂದೂ ಇದ್ದೆ. ಆದರೆ ಆ ಪತ್ರದಲ್ಲಿ ಗಾಢವಾಗಿದ್ದ ದಟ್ಟವಾಗಿದ್ದ ನಿರೂಪಣೆ ಲೇಖನದಲ್ಲಿ ಹಿಂಜಿ ಹಿಂಜಿ ಹೋಗುತ್ತದೆ ಎನಿಸಿತು : ಅಲ್ಲದೆ ತೀರಾ ವೈಯಕ್ತಿಕವಾದ ಹಾಗೂ ತೀವ್ರವಾದ ಅನುಭವವನ್ನು-ಆತ್ಮೀಯ ಮಿತ್ರರಿಗೆ ಮಾತ್ರ ಅರ್ಥವಾಗಬಹುದಾದುದನು- ಹೇಳಿಕೊಳುವಾಗ ಕಂಡುಬರುವ ಒಂದು ರೀತಿಯಾದ ಸಮರ್ಪಣ ಮನೋಭಾವವನ್ನು ಅದೇ ವಿಷಯವಾಗಿ ಬರೆದ ಲೇಖನದಲ್ಲಿ ತರಲು ಅಸಾಧ್ಯ ಎಂದೂ ತೋರಿತು. ಆದ್ದರಿಂದ ಆ ಪತ್ರವನ್ನೇ ಕೆಳಗೆ ಕೊಟ್ಟಿದ್ದೇನೆ.
ಈ ಪತ್ರ ನನ್ನ ಆತ್ಮೀಯ ಮಿತ್ರರ ಮೇಲೆ ಏನು ಪರಿಣಾಮ ಉಂಟುಮಾಡಿರಬಹುದೋ ಅದೇ ಪರಿಣಾಮವನ್ನು ‘ಸಾಕ್ಷಿ’ಯ ವಾಚಕರೆಲ್ಲರ ಮೇಲೂ ಉಂಟುಮಾಡುತ್ತದೆ ಎಂಬ ಭ್ರಾಂತಿ ನನಗಿಲ್ಲ. ಎಲ್. ಎಸ್. ಡಿ ಯನ್ನು ಸೇವಿಸಿದರೆ, ನನಗಾದ ಅನುಭವವೇ ಇತರರಿಗೂ ಆಗುತ್ತದೆ ಎಂದೂ ಹೇಳಲಾರೆ. ಕುತೂಹಲವಿದ್ದವರು, ಸರಿಯಾದ ಅವಕಾಶ ಹಾಗೂ ಸರಿಯಾದ ಗೈಡು ಸಿಕ್ಕಿದರೆ ಸೇವಿಸಿ ನೋಡಬಹುದು. ನಾನು ಮಾತ್ರ ಯಾರಿಗೂ “ಸೇವಿಸಿ ನೋಡಿ” ಎಂದು ಪ್ರಚಾರ ಮಾಡುವುದಿಲ್ಲ.] ಪುಣೆ
7-8-1972
ಇದೊಂದು ಅಕಾಲದ ಹೂವು. (ತನ್ನ ಕಾಗದವನ್ನು ತಾನೇ ಹೂವಿಗೆ ಹೋಲಿಸಿಕೊಂಡಿದ್ದಾನೆ, ಎಷ್ಟು ಜಂಭ ಇವನಿಗೆ! ಎಂದುಕೊಳ್ಳಬೇಡಿ. The emphasis is on the Word ‘ಆಕಾಲದ”.) ಇದಕ್ಕೆ ಕಾರಣ ನಿಮಗೇ ಗೊತ್ತಾಗುತ್ತದೆ. ಓದಿ ನೋಡಿ.
ನಾನು ನೆನ್ನೆ (6-8-72) ಸುಮಾರು ಹದಿನೈದು ಗಂಟೆಗಳಷ್ಟು ಕಾಲ (ನಮ್ಮ ಈ ಜಗತ್ತಿನ ಗಡಿಯಾರಗಳ ಪ್ರಕಾರ) ಎಲ್. ಎಸ್. ಡಿ. ಟ್ರಿಪ್ ಮೇಲೆ ಹೋಗಿದ್ದೆ. ನನಗಾದ ಅನುಭವವನ್ನು ನಿಮಗೆ ಹೇಗೆ ತಾನೇ ತಿಳಿಸಲಿ ? Man ! This is the H-bomb of the mind. ಬೇಕಾದಷ್ಟು ಶಬ್ದಗಳನ್ನು ಉಪಯೋಗಿಸಬಲ್ಲೆ, ಹೋಲಿಕೆಗಳನ್ನು ಕೊಡಬಲ್ಲೆ. ಆದರೆ ಆ ಅನುಭವವನ್ನು ನಿಮಗೆ ತಿಳಿಸಲಾರೆ. ಒಂದೇ ಶಬ್ದದಲ್ಲಿ ಹೇಳುವುದಾದರೆ, ಈ ಪ್ರಪಂಚವನ್ನೇ ಈ ಮನಸ್ಸನ್ನೇ (ಎರಡೂ ಒಂದೇ) ಚೂರು ಚೂರು ಮಾಡಿ ಒಂದು eternal flux ನಲ್ಲಿ ತೇಲಿಹೋದೆ. ಅನುಭವಿಸುತ್ತಿರುವವರು, ಅನುಭವವಾಗುತ್ತಿರುವುದು-ಎರಡಕ್ಕೂ ವ್ಯತ್ಯಾಸವಿಲ್ಲದ ಒಂದು ನಿರ್ವಿಕಾರ ಸ್ಥಿತಿಯನ್ನು ಮುಟ್ಟಿದೆ. ಈ ಸ್ಥಿತಿ ಹೇಗೆ ಬಂತು ಎಂಬುದನ್ನು ಈಗ ಬಹಳ ಸ್ಫೂಲವಾಗಿ ಊಹಿಸಬಲ್ಲೆ.- ಈ ಎಲ್. ಎಸ್. ಡಿ. ಡ್ರಗ್ ಇದೆಯಲ್ಲಾ ಅದು ಉಂಟುಮಾಡುವ hallucinations ಅನ್ನು ಗಮನಿಸಿದರೆ ಗೊತ್ತಾಗುತ್ತದೆ. cinema-
tography ಯ ಪ್ರಪಂಚದಿಂದ ಒಂದು ಹೋಲಿಕೆ ಕೊಟ್ಟರೆ, ನಾನು ನಿಮಗೆ ಹೇಳಬೇಕೆಂದಿರುವ ಆದರೆ ಹೇಳಲಾಗದ ಲಕ್ಷದಲ್ಲಿ ಒಂದು ಅಂಶ ನಿಮಗೆ ಹೊಳೆಯಬಹುದು. ಸಿನಿಮಾದಲ್ಲಿ slow motion ನೋಡುತ್ತೇವೆ, quick motion ನೋಡುತ್ತೇವೆ : Vigorous activity ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಯಾವುದೋ ಒಂದು ಭಂಗಿಯ still ಅನ್ನು ನೋಡುತ್ತೇವೆ ; close-up ನೋಡುತ್ತೇವೆ, panoramic view ನೋಡುತ್ತೇವೆ ; ಒಂದು ಚಿತ್ರ ಹಿಂದಕ್ಕೆ ಸರಿಯುತ್ತಾ ಸಣ್ಣಗಾಗುವುದನ್ನು ನೋಡುತ್ತೇವೆ, ಅದೇ ಚಿತ್ರ ಮುಂದಕ್ಕೆ ಸರಿಯುತ್ತಾ ದಪ್ಪಗಾಗುವುದನ್ನು ನೋಡುತ್ತೇವೆ ; ಎಲ್ಲಿಂದಲೋ ದೂರದಿಂದ ಸದ್ದು ಬಂದಂತೆ ಕೇಳುತ್ತದೆ. ಹತ್ತಿರದಲ್ಲೇ ಕಿವಿ ಕಿವುಡಾಗುವಂತೆ ಸದ್ದು ಕೇಳುತ್ತದೆ. ಇವೆಲ್ಲವನ್ನೂ ಒಟ್ಟಿಗೆ ಅನುಭವಿಸಿದರೆ ಹೇಗಾಗುತ್ತದೆ ? ಸಣ್ಣಗೆ ಅಥವಾ ದಪ್ಪಗೆ ಕಂಡ ಪ್ರಪಂಚಕ್ಕೆ ಒಗ್ಗಿಕೊಳ್ಳುವಷ್ಟರಲ್ಲಿ ಇನ್ನೇನೋ ಕಾಣುತ್ತದೆ. ಯಾವುದೊಂದೂ ಸ್ಥಿರವಾಗಿಲ್ಲದೆ, climax ತಲಪಿದಾಗ, ಪ್ರಪಂಚವೇ ಸಿಡಿದು ಹೋಗುತ್ತದೆ. ಅದ್ಭುತವಾದ ಅನುಭವಾ ರೀ, ಅದ್ಭುತವಾದ ಅನುಭವ.
ಯಾವ drink ಊ ಈ ಅನುಭವವನ್ನು ತಂದುಕೊಡಲಾರದು.
ಮತ್ತೂ ಒಂದು ಹೋಲಿಕೆ. ಯಾರಾದರೂ magic lantern ನಲ್ಲಿ slide ಗಳನ್ನು ತೋರಿಸುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಕೆಲವು ಸಲ ತೆರೆಯ ಮಧ್ಯಭಾಗದಲ್ಲಿ ಚೆನ್ನಾಗಿ focus ಆಗಿರುವ ಚಿತ್ರ ಕಾಣಿಸುತ್ತದೆ. ಕೆಲವು ಸಲ ಓರೆಯಾಗಿ ಕಾಣಿಸುತ್ತದೆ. ತಲೆಯ ಮಧ್ಯದಲ್ಲಿ ಸ್ಪಷ್ಟವಾಗಿ ಕಾಣುವ ಚಿತ್ರದಂತೆ ಈ ಪ್ರಪಂಚ ಎಂಬ ಭಾವನೆ ನಮಗೆ. ಆದರೆ ಇದೊಂದೇ ಅಲ್ಲ ಪ್ರಪಂಚ. ಕೋಟ್ಯಂತರ ಪ್ರಪಂಚಗಳಲ್ಲಿ ಇದೂ ಒಂದು. ಆ ಕೋಟ್ಯಂತರ ಪ್ರಪಂಚಗಳು, ಈ ಪ್ರಪಂಚದ ದೃಷ್ಟಿಯಿಂದ, ಹೇಗೆ ಕ್ಷಣಿಕವೋ ಭ್ರಾಂತಿಯೋ, ಹಾಗೆಯೇ ಈ ಪ್ರಪಂಚವೂ ಕ್ಷಣಿಕ, ಭ್ರಾಂತಿ. The Whole thing is a flux. But our blinkers prevent us from Seeing that it is a flux ಎನಿಸಿತು. ನನಗಾದ ಅನುಭವಗಳನ್ನು ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲ. ಶಬ್ದಾತೀತವಾದ, ಅನಿರ್ವಚನೀಯವಾದ ಅನುಭವ ನನಗಾದ ಅನುಭವವನ್ನು ಒಂದು ಕಾಳ್ಗಿಚ್ಚಿಗೆ ಹೋಲಿಸಬಹುದಾದರೆ, ನಿಮಗೆ ನಾನು ಹೇಳಿರುವುದು ಒಂದು ಚಿಟಿಕೆ ಬೂದಿಯಷ್ಟು.
” I used to recite (the text-book which begins With the Words),
‘Let there be Success’
But I drank the elixir and forgot it.
There is but one word I know now
And of that, my friend, I know not the name’
-Saraha.
ಈಗ ನನ್ನ ಮನಸ್ಸು ತಿಳಿಯಾಗಿದೆ. ನೆನ್ನೆ ನನಗಾದ ಅನುಭವವನ್ನು ಇನ್ನೂ ಮೆಲುಕು ಹಾಕುತ್ತಿದ್ದೇನೆ. ನಿಮಗೆ ನನಗಾದ ಅನುಭವವನ್ನು ತಿಳಿಸಬೇಕು (!) ಎನಿಸಿತು. ಆದ್ದರಿಂದ ಬರೆದಿದ್ದೇನೆ.
ಇಂತು
ಬಿಳಿಗಿರಿ[ಮೇಲಿನ ಪತ್ರವನ್ನೂ ಅದಕ್ಕೆ ಪೀಠಿಕೆಯ ರೂಪದಲ್ಲಿ ಬರೆದ ಮಾತುಗಳನ್ನೂ ಓದಿ ಗೆಳೆಯರಾದ ಶ್ರೀ ಸುಬ್ಬಣ್ಣನವರು “ಅನುಭವಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿವರಗಳನ್ನು ಕೊಡಬಹುದಿತ್ತಲ್ಲ” ಎಂಬ ತಮ್ಮ ಎನಿಸಿಕೆಯನ್ನು ತಿಳಿಸಿದರು. ಆ ವಿವರಗಳು ಎಂಥವು ಎಂಬುದರ ಬಗ್ಗೆಯೂ ಸೂಚನೆ ಕೊಟ್ಟರು. ಪೀಠಿಕೆಯಲ್ಲಿ ಹೇಳಿರುವ ಮೂವರು ಆತ್ಮೀಯ ಮಿತ್ರರಲ್ಲಿ ಒಬ್ಬರು ಇದೇ ವಿಷಯವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಆದ್ದರಿಂದ ಪ್ರಶೋತ್ತರಗಳ ರೂಪದಲ್ಲಿ ಕೆಳಗಿನ ಮಾತುಗಳನ್ನು ಬರೆದಿದ್ದೇನೆ.
ಪ್ರಶ್ನೆ : ನೀವು ಎಲ್. ಎಸ್. ಡಿ ಯನ್ನು ತೆಗೆದುಕೊಳ್ಳುವಾಗ ಗೈಡ್ ಇದ್ದರೆ ? ಮುನ್ಸೂಚನೆ ಏನಾದರೂ ಪಡೆದಿರಾ ?
ಉತ್ತರ: ಹೌದು, ಗೈಡ್ ಇದ್ದರು. ಎಲ್. ಎಸ್. ಡಿ ಅನುಭವವನ್ನು ಪಡೆದಿರುವ ಹಾಗೂ ನಮ್ಮ ವಿಶ್ವಾಸಕ್ಕೆ ಪಾತ್ರನಾಗಬಲ್ಲ ವ್ಯಕ್ತಿಯೇ ಗೈಡು. ಅಂಥವರು ನನಗೆ ಸಿಕ್ಕಿದ್ದರು. ಅವರು ಉದ್ದಕ್ಕೂ ನನ್ನ ಜೊತೆಯಲ್ಲಿದ್ದರು. ಎಲ್‌. ಎಸ್. ಡಿ ಸೇವಿಸುವ ಮುನ್ನ ಅವರು ನನಗೇನೂ ಸೂಚನೆಗಳನ್ನು ಕೊಡಲಿಲ್ಲ. ಆದರೆ ಎಲ್. ಎಸ್. ಡಿ ಅನುಭವದ ಬಗ್ಗೆ ಅನೇಕ ಬಾರಿ ಅವರೊಡನೆ ಮಾತನಾಡಿದ್ದುಂಟು. ಎಲ್. ಎಸ್. ಡಿಯನ್ನು ಸೇವಿಸುವ ಮುನ್ನ ಅದರ ಅನುಭವದ ಬಗ್ಗೆ ನನಗೆ ಬಹಳ ಸ್ಫೂಲವಾದ ಒಂದು ಕಲ್ಪನೆ ಇತ್ತು, ಅಷ್ಟೇ.
ಪ್ರಶ್ನೆ : ಟ್ರಿಪ್ಪಿನ ಮೇಲಿದ್ದಾಗ ಎಚ್ಚರಿದ್ದಿರೋ ಇಲ್ಲವೋ, ಮಲಗಿದ್ದಿರೊ, ಕೂತಿದ್ದಿರೋ ?
ಉತ್ತರ : ಪೂರ್ಣ ಎಚ್ಚರವಾಗಿದ್ದೆ, ಹಿಂದಿನ ರಾತ್ರಿ ಯಾವುದೋ ಸಂಗೀತ ಕೇಳಲು ಹೋಗಿ ನಿದ್ದೆ ಕೆಟ್ಟಿದ್ದೆ, ಆಕಳಿಸುತ್ತಿದ್ದೆ. ಆದರೂ ಅನುಭವದ ಉದ್ದಕ್ಕೂ ಎಚ್ಚರವಾಗಿದ್ದೆ. ಎಲ್‌. ಎಸ್. ಡಿ ತೆಗೆದುಕೊಂಡು ಸ್ವಲ್ಪ ಹೊತ್ತಿನವರೆಗೆ ಕೂತಿದ್ದೆ. Climax ತಲಪುವುದಕ್ಕೆ ಸ್ವಲ್ಪ ಮುನ್ನ ನನ್ನ ಗೈಡಿನ ಮೋಟಾರ್ ಸೈಕಲ್ಲಿನ ಹಿಂದೆ ಕುಳಿತು ನಮ್ಮ ಮನೆಗೆ ಹೋದೆ. Climax ತಲಪಿದಾಗ ಕಣ್ಣು ಮುಚ್ಚಿ ಕುಳಿತಿದ್ದೆ. ನಿರ್ವಿಕಾರ ಸ್ಥಿತಿಯನ್ನು ಮುಟ್ಟಿದಾಗಿನ ಆ ಒಂದು ಗನ್ (ಅಥವಾ ಒಂದು ಯುಗವೋ ?) ಎಚ್ಚರಿದ್ದೆನೋ, ಮಲಗಿದ್ದೆನೋ ತಿಳಿಯದು. ಮತ್ತೆ ಮೋಟಾರ್‌ ಸೈಕಲ್ಲಿನಲ್ಲಿ ನನ್ನ ಗೈಡಿನ ಮನೆಗೆ ಬಂದೆ. ಕೂತಿರಬೇಕು ಎನಿಸಿದರೆ ಕೂತಿರುತ್ತಿದ್ದೆ. ಒರಗಿರಬೇಕು ಎನಿಸಿದರೆ ಒರಗಿರುತ್ತಿದ್ದೆ. ಮತ್ತೆ ರಾತ್ರಿ ಸುಮಾರು ಎಂಟುಗಂಟೆಯ ವೇಳೆಗೆ ಮನೆಗೆ ನಡೆದು ಹೋದೆ. ನನ್ನ ಕಾಲಿನಲ್ಲಿ ಆಣಿಗಳು, ಮೆತ್ತಗಿರುವ ಷೂಗಳನ್ನು ಹಾಕಿಕೊಂಡಿದ್ದರೂ ಬಾಧಿಸುತ್ತವೆ. ಆದರೂ ರೋಡು ರಿಪೇರಿಗೆಂದು ಹಾಕಿದ ಚೂಪು ಕಲ್ಲುಗಳ ಮೇಲೆ ಏನೂ ಬಾಧೆಯಿಲ್ಲದೆ ನಡೆದೆ. ನನ್ನ ಮಗಳಿಗೆ “The advantages of touring’ ಎಂಬ ವಿಷಯವಾಗಿ ಕಾಂಪೊಸಿಷನ್ ಬರೆಯಲು ಸಹಾಯ ಮಾಡಿದೆ. ಊಟ ಮಾಡಿದೆ. ಅನಂತರ ಸುಮಾರು ಒಂದು ಗಂಟೆಯ ಕಾಲ ನನ್ನ ಹೆಂಡತಿ ಲಕ್ಷ್ಮೀ ಜಾರಿಸಿದ ವೀಣೆ ಕೇಳಿದೆ. “ಕೇಳಿದೆ” ಎಂದನೇ ? ಎಂಥ ಸಪ್ಪೆಯಾದ ಮಾತು!
ಪ್ರಶ್ನೆ: ಆಹಾರಾದಿಗಳ ವಿಷಯ ಹೇಗೆ ?
ಉತ್ತರ : ಟ್ರಿಪ್‌ ಮೇಲಿದ್ದಾಗ ಏನೂ ಬೇಕಾಗುವುದಿಲ್ಲ. ನನಗೆ ಹೊಟ್ಟೆ ಹಸಿವೇ ಆಗಲಿಲ್ಲ. Climax ತಲಪುವ ಮುನ್ನ ತಟ್ಟೆಯ ಮುಂದೇನೋ ಕುಳಿತೆ. ಏನೂ ಬೇಕಾಗಲಿಲ್ಲ. ತಟ್ಟೆಯನ್ನು ತಳ್ಳಿ ಬೇರೊಂದು ರೂಮಿಗೆ ಹೋಗಿ ಕಣ್ಣು ಮುಚ್ಚಿ ಕುಳಿತೆ. ಆದರೆ ರಾತ್ರಿಯ ಊಟ ಮಾಡುವಾಗ ನಾನು ಅನುಭವಿಸಿದ ಸುಖ ಹೇಗೆ ತಾನೇ ತಿಳಿಸಲಿ ? ಬಾಯಲ್ಲಿದ್ದ taste-bud ಗಳೆಲ್ಲಾ ಅರಳಿದ ಹಾಗೆ ನನಗೆ ತೋರಿತು !
ಪ್ರಶ್ನೆ : ಟ್ರಿಪ್‌ ಮೇಲಿದ್ದಾಗ ವಾಸ್ತವ ಪ್ರಪಂಚದ ಆಗು-ಹೋಗುಗಳ ಆರಿವಿರುತ್ತದೆಯೇ ? ಅಂದರೆ, ನಿಮ್ಮ ಎದುರು ಯಾರಾದರೂ ನಿಂತಿದ್ದರೆ ಅವರ ಗುರುತು ಹಿಡಿಯಲು ಆಗುತ್ತಿತ್ತೇ ?
ಉತ್ತರ: ಗುರುತು ಖಂಡಿತವಾಗಿ ಸಿಕ್ಕುತ್ತಿತ್ತು, ಸಿಕ್ಕಿತು. ಆದರೆ ಎಲ್ಲವೂ ಒಂದು ರೀತಿಯಾದ out-of-focus ನಲ್ಲಿ ಕಾಣುತ್ತದೆ. ತೀರಾ ಸಣ್ಣಗೆ, ಇಲ್ಲವೇ ತೀರಾ ದೊಡ್ಡಗೆ -ಚರ್ಮದಲ್ಲಿರುವ ಪ್ರತಿಯೊಂದು ರಂಧ್ರವೂ ಎದ್ದು ಕಾಣುವಷ್ಟು ದೊಡ್ಡಗೆ–ಆ ವ್ಯಕ್ತಿ ಕಾಣಿಸುತ್ತಿದ್ದರೂ, ಗುರುತು ಸಿಕ್ಕದೆ ಹೋಗುವುದಿಲ್ಲ.
ಒಬ್ಬನಂತೂ ಚಪ್ಪಟೆಯಾಗಿ ಹಪ್ಪಳದಂತೆ ಕಂಡ : ಒಂದು dimension ಏ missing ! ಆದರೂ ಅವನು ಯಾರು ಎಂಬುದು ಗೊತ್ತಾಯಿತು.
ಪ್ರಶ್ನೆ : ಜಾಸ್ತಿ ವಿಸ್ಕಿ ಕುಡಿದ ಮಾರನೆಯ ದಿನ hang-over ಇರುವಂತೆ, ಎಲ್. ಎಸ್. ಡಿ ಸೇವಿಸಿದ ಬಳಿಕ ಏನಾದರೂ after-effects ಇರುತ್ತವೆಯೇ ?
ಉತ್ತರ : ನನ್ನ ಕಾಗದದಲ್ಲೇ ಬರೆದಿದ್ದೆನಲ್ಲಾ, “ಈಗ ನನ್ನ ಮನಸ್ಸು ತಿಳಿಯಾಗಿದೆ” ಎಂದು. Hang-over ಮುಂತಾದುವುಗಳು ಏನೂ ಇರುವುದಿಲ್ಲ. ಬಿಯರು, ವಿಸ್ಕಿಗಳನ್ನು ಕುಡಿದರೆ ಮತ್ತು ಬರುತ್ತದೆ, ನಿದ್ರೆ ಬರುತ್ತದೆ: ಎಲ್. ಎಸ್. ಡಿ ಸೇವಿಸಿದರೆ ಎಚ್ಚರ-ಅದೂ ಎಂಥ ಎಚ್ಚರ ಬರುತ್ತದೆ.
ಪ್ರಶ್ನೆ : ಟ್ರಿಪ್ಪಿನ ಮೇಲಿದ್ದಾಗ ಆಗುವ ಅನುಭವಗಳು ಸಾಧಾರಣವಾಗಿ pleasant ಆಗಿರುತ್ತವೆಯೋ ಅಥವಾ ಮಾನಸಿಕ ದೈಹಿಕ ಮಟ್ಟಗಳೆರಡರಲ್ಲಿಯೂ painful ಆಗಿರುತ್ತವೆಯೋ ?
ಉತ್ತರ : ನನ್ನ ಅನುಭವದ ಪ್ರಕಾರ ಹೇಳುವುದಾದರೆ, climax ತಲಪುವವರೆಗೂ ಬಹಳ unpleasant ಆಗಿತ್ತು. ಹೀಗೇ ಇದ್ದು ಬಿಟ್ಟರೆ ಏನು ಗತಿ ಎಂಬ ಹೆದರಿಕೆ ಆತಂಕಗಳು ಇದ್ದವು. ಆದರೆ ಈ ಪ್ರಪಂಚಕ್ಕೆ ಮತ್ತೆ ವಾಪಸ್ಸು ಬರುವಾಗ ಆದ ಅನುಭವಗಳು ಮಾತ್ರ ಅತ್ಯಂತ pleasant ಆಗಿದ್ದವು. ಏಕೆ ನಗುತ್ತಿದ್ದೇನೆ ಎಂಬುದು ತಿಳಿಯದೆ ನಗುತ್ತಿದ್ದೆ. ಏನಾದರೂ ಹೇಳಲು ಹೊರಟರೆ ಮಾತೇ ಬರುತ್ತಿರಲಿಲ್ಲ-ಶಬ್ದಾತೀತ ಎಂದರೆ ಇದು ! ದೈಹಿಕ ಮಟ್ಟದಲ್ಲಿ ಏನೂ ಆಗಲಿಲ್ಲ. ಕುಡಿದಾಗ ಅಂಗಾಂಗಗಳ ಸ್ವಾಧೀನ ತಪ್ಪುವಂತೆ ಎಲ್. ಎಸ್. ಡಿ ಸೇವಿಸಿದಾಗ ಆಗಲಿಲ್ಲ.
ಪ್ರಶ್ನೆ : ಶ್ರೀಮತಿ ಬಿಳಿಗಿರಿಯವರು ಇದನ್ನು ಹೇಗೆ ತಾನೆ: ಸಹಿಸಿಕೊಂಡರು ?
ಉತ್ತರ : ನನ್ನ ಹೆಂಡತಿಯ ಪರಿಚಯ ನಿಮಗೆ ಸಾಕಷ್ಟಾಗಿದೆ ಎಂದುಕೊಂಡಿದ್ದೆ ! ಆದರೂ ಆಕೆ ಇದನ್ನು ಹೇಗೆ ಸಹಿಸಿಕೊಂಡಳು ಎಂದು ಕೇಳಿದ್ದೀರಿ ! There were Some moments when she was embaressed, ಅಷ್ಟೆ.]

Close

ರಾಷ್ಟ್ರೀಯ ಉದ್ದೇಶಗಳಿಗೆ ಅನುವಾಗುವ ಶಿಕ್ಷಣ ನೀತಿ

ರಾಷ್ಟ್ರೀಯ ಉದ್ದೇಶಗಳಿಗೆ ಅನುವಾಗುವ ಶಿಕ್ಷಣನೀತಿ

-ಪಿ. ಶ್ರೀಪತಿ ತಂತ್ರಿ

೧೯೬೪ ನೆಯ ಇಸವಿಯಲ್ಲಿ ಭಾರತದ ಸರಕಾರವು ನಮ್ಮ ರಾಷ್ಟ್ರೀಯ ಶಿಕ್ಷಣಪದ್ಧತಿಯನ್ನು ರೂಪಿಸಲು ಸಲಹೆಯನ್ನು ನೀಡಲು, ಖ್ಯಾತ ಶಿಕ್ಷಣತಜ್ಞ ಡಾ. ಕೊಠಾರಿಯವರ ನೇತೃತ್ವದ ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿಯು ಸುಮಾರು. ಎರಡು ವರ್ಷಗಳ ಅವಧಿಯಲ್ಲಿ ಶಿಕ್ಷಣಕ್ಷೇತ್ರದ ನಾನಾ ಅಂಗಗಳಲ್ಲಿರುವ ಸಮಸ್ಯೆಗಳು, ಶಿಕ್ಷಣದ ಉದ್ದೇಶಗಳು, ಆಗಿನ ಕಾಲದಲ್ಲಿದ್ದ ಶಿಕ್ಷಣದ ಗುಣ ಮತ್ತು ಪ್ರಮಾಣದ ಪರಿಸ್ಥಿತಿ ಇವುಗಳ ಸೂಕ್ಷ್ಮವಾದ ಪರಿಶೀಲನೆ ನಡೆಸಿ, ಅತ್ಯಂತ ವ್ಯಾಪಕವೂ ೭೦೦ ಪುಟಗಳಷ್ಟು ಸುದೀರ್ಘವೂ ಆದ ವರದಿಯೊಂದನ್ನು ೧೯೬೬ ನೇ ಜೂನ್ ತಿಂಗಳಲ್ಲಿ, ಆಗಿನ ಭಾರತ ಸರಕಾರದ ಶಿಕ್ಷಣ ಸಚಿವ ಶ್ರೀ ಎಮ್. ಸಿ. ಚಾಗ್ಲಾರವರಿಗೆ ಒಪ್ಪಿಸಿತು. ಈ ವರದಿಯಲ್ಲಿ ಸೂಚಿಸಿದ ಶೈಕ್ಷಣಿಕ ಪುನರ‍್ರಚನೆಯ ಕಾರ್ಯಕ್ರಮಗಳು ಮುಖ್ಯತಃ ಈ ಮೂರು ವರ್ಗಗಳಿಗೆ ಸೇರುತ್ತವೆ :
(ಅ) ರಾಷ್ಟ್ರದ ಜೀವನ, ಆವಶ್ಯಕತೆಗಳು ಮತ್ತು ಆಶಯಗಳಿಗೆ ಅನ್ವಯಿಸಿ ಶಿಕ್ಷಣದ ವ್ಯವಸ್ಥೆಯ ಆಂತರ‍್ಯದಲ್ಲೇ ಬದಲಾವಣೆಯನ್ನು ತಂದುಕೊಳ್ಳುವುದು.
(ಆ) ನಮ್ಮ ರಾಷ್ಟ್ರದ ಶಿಕ್ಷಣವು ಸಮರ್ಥವೂ, ಪ್ರಗತಿಶೀಲವೂ ಹಾಗೂ ಕನಿಷ್ಠ ಕೆಲವು ವಿಭಾಗಗಳಲ್ಲಾದರೂ ಸಮಕಾಲೀನ ಅಂತಾರಾಷ್ಟ್ರೀಯ ಮಟ್ಟಕ್ಕೆ ಸಮಾನವಾಗುವಂತೆ, ಗುಣಮಟ್ಟದಲ್ಲಿ ಸುಧಾರಣೆಯನ್ನು ಮಾಡುವುದು.
(ಇ) ರಾಷ್ಟ್ರಜೀವನದ ನಾನಾ ಅಂಗಗಳಿಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ದೊರಕಿಸಿಕೊಡಲು ಹಾಗೂ ಶೈಕ್ಷಣಿಕ ಅವಕಾಶಗಳು ಸಾರ್ವತ್ರಿಕವಾಗಿ ಸಮಾನವಾಗುವಂತೆ ಮಾಡಲು ಶೈಕ್ಷಣಿಕ ಅವಕಾಶದ ವಿಸ್ತರಣೆ.

ಆಹಾರದಲ್ಲಿ ಸ್ವಯಂಪೂರ್ಣತೆ, ಆರ್ಥಿಕಸುಧಾರಣೆ ಮತ್ತು ನಿರುದ್ಯೋಗ ನಿವಾರಣೆ, ಸಾಮಾಜಿಕ ಮತ್ತು ರಾಷ್ಟ್ರೀಯ ಅಖಂಡತೆ ಹಾಗೂ ರಾಜಕೀಯ ಪ್ರಜ್ಞೆಯ ಬೆಳವಣಿಗೆ – ಈ ಸಮಸ್ಯೆಗಳ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಣ ನೀತಿಯಲ್ಲಿ ರೂಪಿತಗೊಂಡು, ಭಾರತದ ಒಟ್ಟು ಜನಸಂಖ್ಯೆಯ ಅರ್ಧಾಂಶಕ್ಕಿಂತಲೂ ಮಿಗಿಲಾಗಿರುವ ೧೮ ವರ್ಷಕ್ಕಿಂತ ಕೆಳಗಿನ ವಯಸ್ಸಿನ ಜನಶಕ್ತಿಯನ್ನು ರಾಷ್ಟ್ರೀಯ ಜೀವನ ಮತ್ತು ಬೆಳವಣಿಗೆಗೆ ಅನುವಾಗಿ ರೂಪಿಸುವ ಮಹತ್ತರ ಜವಾಬ್ದಾರಿಯನ್ನಿದು ಹೊತ್ತು ನಿಂತಿದೆ. ಸ್ವದೇಶದ ಮತ್ತು ಪರದೇಶದ ಆಯ್ಕೆಯ ಶಿಕ್ಷಣ ತಜ್ಞರು ಒಟ್ಟಾಗಿ ಅಧ್ಯಯನ ನಡೆಸಿ ರೂಪಿಸಿದ ವರದಿಯಿದು. ಶಿಕ್ಷಣಕ್ಷೇತ್ರದ ಮಹತ್ವವನ್ನರಿತು, ಅದರ ಪ್ರಗತಿ ಮತ್ತು ಅರ್ಥಪೂರ್ಣತೆಯನ್ನು ಸಾಧಿಸಲೇಬೇಕೆನ್ನುವ ಪ್ರಾಮಾಣಿಕವಾದ ಉದ್ದೇಶ ಮತ್ತು ಕಳಕಳಿಯಿದ್ದ ಆಗಿನ ಶಿಕ್ಷಣ ತಜ್ಞ ಚಾಗ್ಲಾರವರು, ಈ ವರದಿಯಲ್ಲಿ ಸೂಚಿಸಿದ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲು ಮನಸಾ ಪ್ರಯತ್ನಿಸಿದರು. ಆದರೆ ಇವನ್ನು ಆರಂಭಿಸುವಷ್ಟರಲ್ಲೇ ಅವರು ತಮ್ಮ ಮಂತ್ರಿ ಸ್ಥಾನವನ್ನು ಬಿಟ್ಟು ಹೊರಗೆ ಬರಬೇಕಾಯಿತು ಮುಂದಕ್ಕೆ ಡಾ. ವಿ. ಕೆ. ಆರ್. ವಿ. ರಾಯರೂ ಸ್ವಲ್ಪ ಸಮಯ ಇದರ ಬಗ್ಗೆ ಸಾಕಷ್ಟು ಪ್ರಯತ್ನಿಸಿದರು. ರಾಜ್ಯ ಸರಕಾರಗಳ ಔದಾಸೀನ್ಯದ ವಾತಾವರಣದಲ್ಲಿ ಅವರಿಗೂ ಹೆಚ್ಚೇನೂ ಮಾಡಲಾಗಲಿಲ್ಲ. ಮುಂದಕ್ಕೆ ಸಿದ್ದಾರ್ಥ ಶಂಕರ ರೇ ಯವರು ಏನೂ ಮಾಡಲಿಲ್ಲ, ಮಾಡುವಷ್ಟು ಕಾಲಾವಕಾಶವೂ ಅವರಿಗಿರಲಿಲ್ಲ. ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಚುನಾವಣೆಯಲ್ಲೇ ತಮ್ಮ ಸಂಪೂರ್ಣ ಗಮನ ಮತ್ತು ಕುತೂಹಲವನ್ನು ತಿರುಗಿಸಿದ್ದ ಸಮಯವದು. ಇದೀಗ ಪ್ರೊ. ನೂರುಲ್ ಹಸನ್‌ರವರು, ಶಿಕ್ಷಣದ ಬಗ್ಗೆ ಒಂದು ಸಮಗ್ರವಾದ ಕಾರ್ಯಕ್ರಮವನ್ನು ಐದನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಕೈಗೆತ್ತಿಕೊಳ್ಳುವ ಸಲುವಾಗಿ, ಅದರ ರೂಪರೇಷೆಗಳನ್ನು ಸೂಚಿಸಲು ಒಂದು ಸಮಿತಿಯನ್ನು
ರಚಿಸಿದ್ದಾರೆ. ಅದರ ಕಾರ್ಯಕ್ರಮಗಳನ್ನು ೧೯೭೪ ರಂದು ಕೈಗೆತ್ತಿಕೊಳ್ಳಲಾಗುವುದೆಂದು ಹೇಳುತ್ತಿದ್ದಾರೆ. ಇದೀಗ ಮೂರನೆಯ ವರದಿ. ಮೊದಲನೆಯದು, ೧೯೫೮ ರಲ್ಲಿ ನೇಮಿಸಿದ ಡಾ. ರಾಧಾಕೃಷ್ಣನ್ ಸಮಿತಿಯ ವರದಿ. ಮತ್ತೆ ೧೯೬೪ ರಲ್ಲಿ ನೇಮಿಸಿದ ಕೊಠಾರಿ ಸಮಿತಿಯ ವರದಿ. ಈಗ ೧೯೭೪ರ ನಂತರ ಕಾರ್ಯಕ್ರಮಗಳಿಗೆ ಅನ್ವಯಿಸುವ ಮೂರನೆಯ ವರದಿ. ಮೊದಲ ಎರಡು ವರದಿಗಳಿಗಾದ ಪರಿಣಾಮವೇ ಈ ಮೂರನೆಯದಕ್ಕೂ ಆಗಬಾರದು-ಎಂದು ಆಶಿಸಬಹುದೆ? ಈ ರೀತಿಯಲ್ಲಿ ನಮ್ಮ ರಾಷ್ಟ್ರೀಯ ಜೀವನದ ದಶಕಗಳು ಮಾತ್ರ ನಮಗರಿವಿಲ್ಲದಂತೆಯೇ, ಇದ್ದ ಸಮಸ್ಯೆಗಳೆಲ್ಲವನ್ನೂ ಹಾಗೆಯೇ ಹೊತ್ತುಕೊಂಡು, ಒಡನೆ ಹೊಸಹೊಸತಾಗಿ ಹುಟ್ಟುವವುಗಳನ್ನು ಗಂಟುಕಟ್ಟಿ ಕೊಂಡು, ಒಂದೊಂದಾಗಿ ಉರುಳುತ್ತಲೇ ಇವೆ. ಉರುಳಲೇಬೇಕೆನ್ನುವುದು ಪ್ರಕೃತಿ ನಿಯಮ ; ಬದುಕಿನ ಆಶಯ.

ಕೊಠಾರಿ ಸಮಿತಿಯು ವರದಿಯನ್ನೊಪ್ಪಿಸಿ, ಏಳು ವರ್ಷಗಳು ಗತಿಸಿದ ಬಳಿಕ, ಇದೀಗ ಮೊನ್ನೆ ಸಪ್ಟಂಬರ ತಾ, ೧೮-೧೯ ನೇ ದಿನಾಂಕಗಳಂದು ನಡೆದ ಶಿಕ್ಷಣ ಮಂತ್ರಿಗಳ ಮತ್ತು ಸಲಹಾಮಂಡಳಿಯ ಅಧಿವೇಶನದಲ್ಲಿ ನಮ್ಮ ಕೇಂದ್ರ ಶಿಕ್ಷಣ ಸಚಿವರು, ಆ ಕೊಠಾರಿಯ ಸಮಿತಿಯ ಮೇಲೆ ಹೇಳಿದ ಶಿಕ್ಷಣ ನೀತಿಯ ಮೂರು ಕಾರ್ಯಕ್ರಮಗಳನ್ನೇ ಮತ್ತೆ ಐದನೆಯ ಪಂಚವಾರ್ಷಿಕ ಯೋಜನೆಯಲ್ಲಿ ಕೈಗೆತ್ತಿಕೊಳ್ಳಬೇಕೆಂದೂ, ಅದಕ್ಕೆ ರೂ. ೩೨೦೦ ಕೋಟಿ ಮೊತ್ತದ ವ್ಯಾಪಕ ಯೋಜನೆಯನ್ನು ಸಿದ್ಧಗೊಳಿಸಬೇಕೆಂದೂ ಘೋಷಿಸಿದ್ದಾರೆ. ಇದಕ್ಕೆ ಯೋಜನಾ ಸಮಿತಿಯವರಲ್ಲೊಬ್ಬರಾದ ಶ್ರೀ ಚಕ್ರವರ್ತಿಯವರು ವೆಚ್ಚದ ಗಾತ್ರವನ್ನು ಮಾತ್ರ ಕಡಿಮೆಗೊಳಿಸಬೇಕೆಂಬ ಆಕ್ಷೇಪವನ್ನು ಆಗಲೇ ಎತ್ತಿಬಿಟ್ಟಿದ್ದಾರೆ. ಈ ದಿಸೆಯಲ್ಲಿ ಆಯಾಯ ರಾಜ್ಯದ ಶಿಕ್ಷಣ ಸಚಿವರೂ, ಶಿಕ್ಷಣವನ್ನು ಹಿಂದಿನಂತೆಯೇ ರಾಜ್ಯಗಳ ಅಧೀನದಲ್ಲೇ ಒಂದಲ್ಲ ಒಂದು ರೀತಿಯಲ್ಲಿಟ್ಟು ಕೊಳ್ಳುವ ಯತ್ನ ನಡೆಸಿ, ಉದ್ದೇಶದ ಸಾಫಲ್ಯಕ್ಕೆ ತೊಡರನ್ನುಂಟುಮಾಡಿದರೂ ಆಶ್ಚರ್ಯವಿಲ್ಲ. ಒಂದೆಡೆ ಈ ರಾಜ್ಯಗಳ ನೇತಾರರುಗಳೂ ಶಿಕ್ಷಣದ ಬಗ್ಗೆ ಗಂಭೀರವಾದ ರೀತಿಯಲ್ಲಿ ಯೋಚಿಸಿ, ಸಮರ್ಥವಾದ ಕಾರ್ಯವೆಸಗಲು ಮನಸಾ ಪ್ರಯತ್ನಿಸುತ್ತಿಲ್ಲ. ಇನ್ನೊಂದೆಡೆ ಇದನ್ನು ಸಂಪೂರ್ಣ ರಾಷ್ಟ್ರೀಯ ಮಟ್ಟಕ್ಕೆಯೂ ಬಿಟ್ಟುಕೊಡಲು ಸಿದ್ಧರಿಲ್ಲ. ಅಂತು ಸದ್ಯದ ಪರಿಸ್ಥಿತಿಯಲ್ಲಿ, ಶಿಕ್ಷಣ ಕ್ಷೇತ್ರವೆನ್ನುವುದೊಂದು ಇವತ್ತಿನ ಸಾರ್ವಜನಿಕ ಭಾಷಣಕಾರರಿಗೆ, ರಾಜಕೀಯ ಪುಢಾರಿಗಳಿಗೆ, “ವಿದ್ಯ”, “ವಿದ್ಯಾರ್ಥಿ”. “ಗುರು” “ಶಿಕ್ಷಕ”, “ಅಶಿಸ್ತು”-ಎನ್ನುವ ವಿಷಯಮಾಲಿಕೆಗಳನ್ನು ಸುರಕ್ಷಿತವಾಗಿ ಆರಿಸಿಕೊಂಡು ಮಾತನಾಡಲು ಸಾಧ್ಯವಾಗುವ ಆಸ್ತಿಯಾಗಿಯೇ ಇನ್ನೂ ಉಳಿದಿದೆ. ದೇಶದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಮಿಗಿಲಾದ ಸಂಖ್ಯೆಯಲ್ಲಿರುವ ನಮ್ಮ ತರುಣಪೀಳಿಗೆಯನ್ನು ರಾಷ್ಟ್ರೀಯ ಉದ್ದೇಶಗಳಿಗೆ ಉಚಿತವಾಗುವ ಪ್ರಯೋಜನಕಾರೀ ಜನಶಕ್ತಿಯನ್ನಾಗಿ ರೂಪಿಸಿ, ಆ ಮುಖೇನ ಮುಂದಿನ ೩-೪ ದಶಕಗಳ ರಾಷ್ಟ್ರದ ಬದುಕುವಿಕೆ ಮತ್ತು ಬೆಳವಣಿಗೆಗೆ ಇದನ್ನು ಸಾಧನವಾಗಿ ಬಳಸಿಕೊಳ್ಳಬೇಕಾದ ಧ್ಯೇಯದ ಶಿಕ್ಷಣ ಕಾರ್ಯಕ್ರಮವು, ಶ್ರೀ ಚಕ್ರವರ್ತಿಯವರಂತಹ ನಮ್ಮ ದೇಶದ ಯೋಜನಾಕರ್ತರಿಗೆ ಅಮುಖ್ಯವಾಗಿ ಕಾಣುವುದು. ಅದಕ್ಕೆ ರಾಷ್ಟ್ರದ ಯೋಜನೆಯ ಹತ್ತನೆಯ ಒಂದಂಶದ ಮೊತ್ತವೂ ತೀರ ಹೆಚ್ಚೆಂದು ಶಾಣುವುದು ತೀರ ವಿಷಾದಕರ.
ಈ ರೀತಿಯ ಶಿಕ್ಷಣಕ್ಷೇತ್ರದಲ್ಲಿ ತೋರುತ್ತಿದ್ದ ನಿರಾಸಕ್ತಿ ಮತ್ತು ಕರ್ತವ್ಯಲೋಪದಿಂದಾಗಿ, ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಮ್ಮ ತರುಣ ಪೀಳಿಗೆಯ ಜನಶಕ್ತಿಯೆ ಸಮರ್ಪಕವಾದ ಉಪಯೋಗವನ್ನು ನಾವು ಪಡೆಯಲು ವಿಫಲರಾದೆವು. ರಾಷ್ಟ್ರೀಯ ಉದ್ದೇಶಕ್ಕೆ ಅನುವಾಗುವ ಒಂದು ಸ್ಪಷ್ಟವಾದ ಶಿಕ್ಷಣನೀತಿಯೂ ಇಲ್ಲದಿರುವುದರಿಂದ ನಮ್ಮ ಕಾರ್ಯಕ್ರಮಗಳೂ ದೇಶದ ಸಮಸ್ಯೆಗಳನ್ನು ನಿವಾರಿಸುವ ಬದಲು, ನಿರುದ್ಯೋಗಿತನ ಬುದ್ದಿ ಜೀವಿಗಳು ದೇಶ ಬಿಟ್ಟು ಹೋಗುವುದು ಮುಂತಾದ ಹೊಸ ಸಮಸ್ಯೆಗಳನ್ನೆ: ಹುಟ್ಟಿಸಿದೆ.
ಪ್ರಾಥಮಿಕ ಮತ್ತು ಮಾಧ್ಯಮಿಕ ಮಟ್ಟವನ್ನೇ ಗಮನಕ್ಕೆ ತೆಗೆದುಕೊಂಡರೆ, ಮೊದಲನೆಯದಾಗಿ ನಾವಿನ್ನೂ ಸಾರ್ವತ್ರಿಕ ಶಿಕ್ಷಣವನ್ನು ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ. ಎರಡನೆಯದಾಗಿ, ಈ ಮಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧದಲ್ಲಿ
ನಿಲ್ಲಿಸುವುದರಿಂದ. ಹೆಚ್ಚಿನ ಸಂಖ್ಯೆಯಲ್ಲಿ ನಪಾಸಾಗುವುದರಿಂದ. ನಮ್ಮ ತರುಣ ಪೀಳಿಗೆಯ ಬೌದ್ಧಿಕ ನಷ್ಟ. ಮತ್ತೀ ಮಕ್ಕಳಿಗೆ ಖರ್ಚು ಮಾಡುವುದರಿಂದಾಗಿ ರಾಷ್ಟ್ರಕ್ಕಾಗುವ ಆರ್ಥಿಕ ನಷ್ಟವನ್ನು ಕಡಿತಗೊಳಿಸುವಲ್ಲಿಯೂ ಯಾವ ಸಾಧನೆಯೂ ಆಗಿಲ್ಲ. ಮೊನ್ನೆ ತಾನೇ ಯುನೆಸ್ಕೋ ತಜ್ಞರ ಶಿಕ್ಷಣ ವರದಿಯು ಭಾರತದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಈ ರೀತಿಯ “ಸೈಲನ”ವು ಅಸಾಮಾನ್ಯ ಪ್ರಮಾಣದಲ್ಲಿ ಆಗುತ್ತಿದೆ-ಎಂಬುದನ್ನು ಮತ್ತೂಮ್ಮೆ ನಮ್ಮ ಎಚ್ಚರಿಕೆಗೆ ತಂದರೂ ನಾವದಕ್ಕೆ ಹೆಚ್ಚಿನ ಮಹತ್ವವನ್ನು ಕೂಡುವ ಲಕ್ಷಣವು ತೋರುತ್ತಿಲ್ಲ.
ಇನ್ನು ಉಚ್ಚಶಿಕ್ಷಣದ ಸಮಸ್ಯೆಯು ಇನ್ನೊಂದು ರೀತಿಯಿಂದ ಜಟಿಲಗೊಳ್ಳುತ್ತಿದೆ. ಸರಿಯಾಗಿ ಗಮನಿಸಿದಾಗ, ಕೊಠಾರಿ ಸಮಿತಿಯಂತಹ ಅಥವಾ ಸದ್ಯಕ್ಕೆ ಕೇಂದ್ರ ಶಿಕ್ಷಣ ಶಾಖೆಯು ಉದ್ದೇಶಿಸಿದ ಐದನೆಯ ಪಂಚವಾರ್ಷಿಕ ಯೋಜನಾವಧಿಯ ರಾಷ್ಟ್ರೀಯ ಮಟ್ಟದ ಏಕರೂವಾದ ಶೈಕ್ಷಣಿಕ ನೀತಿ, ಕಾರ್ಯಕ್ರಮಗಳು ವಾಸ್ತವ್ಯದಲ್ಲಿ ಪರಿಣಮಿಸುವುದು ತುಂಬ ಕಠಿನವಾಗಿಯೇ ತೋರುತ್ತದೆ. ಏಕರೂಪವಾದ ರಾಷ್ಟ್ರೀಯ ಧೋರಣೆಯೊಂದಕ್ಕೆ ಖಂಡಿತವಾಗಿಯೂ ಪ್ರತಿಭಟನೆಯು ಬಂದೇ ತೀರಬೇಕು. ಶಿಕ್ಷಣ ಕ್ಷೇತ್ರದ ಮೇಲಿನ ಹತೋಟಿಯನ್ನು ಸಮಾಜದ ಅನೇಕ ವರ್ಗಗಳು ಬೇರೆಬೇರೆ ಕಾರಣಗಳಿಗಾಗಿ ತಮ್ಮಿಂದ ಬಿಟ್ಟುಕೊಡಲಿಕ್ಕೆ ತಯಾರಾಗಿರಲಿಕ್ಕಿಲ್ಲವೆನ್ನುವುದರಲ್ಲಿ ಸಂದೇಹವಿಲ್ಲ. ಶಿಕ್ಷಣವು ರಾಷ್ಟ್ರೀಯ ಮಟ್ಟದ, ಕೇಂದ್ರ ಸರಕಾರದ ವ್ಯಾಪ್ತಿಯೊಳಗೆ ಸೇರುವುದಂತೂ ಹಾಗಿರಲಿ, ರಾಜ್ಯಸರಕಾರಗಳಿಗೂ, ಇದು ಮಣಿಯದ ರೀತಿಯಲ್ಲಿ, ಸಮಾಜದ ವರ್ಗಗಳು ಪ್ರಯತ್ನ ನಡೆಸಿಯಾವು-ಅದಕ್ಕೆ ಬೇಕಾದ ಸಮರ್ಥನೆಯ ಅನುಕೂಲ ಸಿದ್ದಾಂತವನ್ನು “ಪ್ರಜಾಪ್ರಭುತ್ವದ”, “ಸ್ವಾತಂತ್ರ್ಯದ ವಿಚಾರಪ್ರಣಾಲಿಯಲ್ಲೆ ಸಿದ್ದಗೊಳಿಸಿಕೊಂಡಾವು-ಎನ್ನುವುದೂ ಖಚಿತ. ಅಲ್ಪಸಂಖ್ಯಾತರ ಹಕ್ಕಿನ ಹೆಸರಿನಲ್ಲಿ ಕೇರಳದಲ್ಲಿ ಕೋಮುವಾರು ಸಂಸ್ಥೆಗಳು ಶೈಕ್ಷಣಿಕ ಸ್ವಾತಂತ್ರ್ಯದ ಹೋರಾಟ ನಡೆಸಲಿಲ್ಲವೆ ?
ರಾಷ್ಟ್ರದ ಜೀವನ, ಆವಶ್ಯಕತೆ ಮತ್ತು ಆಶಯಗಳಿಗೆ ಅನ್ವಯಿಸಿ ನಮ್ಮ ಶಿಕ್ಷಣದ ಆಂತರಿಕ ಬದಲಾವಣೆಗಳನ್ನು ಮಾಡಿಕೊಳ್ಳಲು ನಮ್ಮ ಸಮಾಜದ ಬೇರೆಬೇರೆ ವರ್ಗಗಳ ಹಿತಾಸಕ್ತಿಗಳ ಭಿನ್ನತೆಯು ಅಡ್ಡವಾಗಿ ನಿಲ್ಲುವುದು ಖಚಿತ. ಬಡಜನತೆ, ಶ್ರೀಮಂತ ಮತ್ತು ಮಧ್ಯಮವರ್ಗಗಳ ಹಿತಾಸಕ್ತಿಗಳು ಒಂದಾಗಿರಲು ಸಾಧ್ಯವಿಲ್ಲ. ಇವನ್ನವಲಂಬಿಸಿ ಇವುಗಳಲ್ಲಿ ಪ್ರತಿಯೊಂದು ವರ್ಗವೂ ತನಗೆ ಅನುಕೂಲವಾದ ಒಂದು ತಾತ್ವಿಕ ನಿಲುವನ್ನು ತಳೆಯುತ್ತದೆ. ರಾಷ್ಟ್ರದ ಶಿಕ್ಷಣ ನೀತಿಯು ಹೆಚ್ಚಿನಂಶ ತನಗೆಯೇ ಅನುಕೂಲವಾಗಿರಬೇಕು, ತನ್ನ ವರ್ಗದ ಮಕ್ಕಳಿಗೆಯೇ ಇದರ ಬಹುತೇಕ ಪ್ರಯೋಜನವು ಲಭಿಸುವಂತಾಗಬೇಕು ಎಂದದು ಬಯಸುತ್ತದೆ. ಉಚ್ಚ ಶಿಕ್ಷಣದ ವೆಚ್ಚವನ್ನು ಸರಕಾರವು ಕೈಬಿಟ್ಟು, ಅದನ್ನು ಹೆತ್ತವರೇ ಹೊರಬೇಕೆನ್ನುವ ತಾತ್ವಿಕ ನಿಲುವು ಶ್ರೀಮಂತರ ಹಿತಾಸಕ್ತಿಯನ್ನು ಎತ್ತಿಹಿಡಿಯುವಂತಹುದು. ಬೌದ್ಧಿಕವಾಗಿ ಅರ್ಹತೆಯಿಲ್ಲದಿದ್ದರೂ ಉಚ್ಚ ಶಿಕ್ಷಣಕ್ಕೆ ಎಲ್ಲ ತರುಣ ತರುಣಿಯರೂ ಅರ್ಹರಾಗುವ ನೀತಿಯಿರಬೇಕು-ಎನ್ನುವುದು ಇಂತಹದೇ ಇನ್ನೊಂದು ವರ್ಗದವರ ಹಿತಾಸಕ್ತಿಯಲ್ಲಿ ಬೇರೂರಿದೆ. ಶಿಕ್ಷಣದ ವೆಚ್ಚವೆಲ್ಲ ಸರಕಾರವೇ ವಹಿಸಬೇಕೆನ್ನುವುದು ಮತ್ತೊಂದು ವರ್ಗ. ಈ ಮೂರು ನೀತಿಗಳೂ ರಾಷ್ಟ್ರೀಯ ಶಿಕ್ಷಣ ನೀತಿಗೆ ಅಸಂಗತ ಅಥವಾ ಕೆಲವೊಮ್ಮೆ ವಿರೋಧ ಪರಿಣಾಮ ಒಡ್ಡಿಯಾವು.
ಈ ತಾರ್ಕಿಕ ಭಿನ್ನತೆಯ ಒಂದು ಸ್ಪಷ್ಟ ಪರಿಣಾಮ. ಶಿಕ್ಷಣದ ಗುಣಮಟ್ಟದ ಇಳಿಮುಖ. ಉಚ್ಚಶಿಕ್ಷಣಕ್ಕೆ ಎಲ್ಲರಿಗೂ ಮುಕ್ತದ್ವಾರವಿರುವುದು. ದುಡ್ಡಿನ ಬಲದಿಂದ ಪ್ರವೇಶವೀಯುವ ನೀತಿ-ಇವು ಶಿಕ್ಷಣದ ಗುಣಮಟ್ಟ ಮತ್ತು ಶಿಕ್ಷಕನ ಸ್ಥಾನಕ್ಕೆ ಬುಡದಲ್ಲೇ ಕೊರತವನ್ನು ತಂದೊಡ್ಡಿದೆ. ಪ್ರಾಮಾಣಿಕವಾಗಿ ಶ್ರದ್ಧೆ ಮತ್ತು ಆಸಕ್ತಿಯಿಲ್ಲದ ತರುಣ-ತರುಣಿಯರು ಕಾಲೇಜು, ವಿಶ್ವವಿದ್ಯಾಲಯದ ಕ್ಲಾಸುಗಳಲ್ಲಿ ಬಂದು ಕುಳಿತು ತಮ್ಮ ವಯೋಧರ್ಮದ ಪ್ರದರ್ಶನದಲ್ಲಿ ಮಗ್ನರಾಗಿ ಶಿಕ್ಷಣದ ವಾತಾವರಣವನ್ನೇ ಗೊಂದಲದ ಪರಿಸ್ಥಿತಿಗೆ ತಂದೊಡ್ಡಿದ್ದಾರೆ. ಅನೇಕವೇಳೆ ಇಂದಿನ ಕಾಲೇಜುಗಳು ಹದಿನಾರರಿಂದ ಇಪ್ಪತ್ತು-ಇಪ್ಪತ್ತೆರಡು ವಯಸ್ಸಿನ ಪೀಳಿಗೆಗೆ ಜೀವನವನ್ನು ಕಳೆಯಲೆಂದು ಈ ಮೂಲಕ ಅವರನ್ನು ಹೆತ್ತವರ ಹೊಣೆಗಾರಿಕೆಯನ್ನು ತಪ್ಪಿಸಲೆಂದು ತೆರೆದ ಒಂದು ರೀತಿಯ ಸಾಮೂಹಿಕ ಆಶ್ರಯಸ್ಥಾನಗಳೇ (asylum) ಎಂದೂ ಅನ್ನಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಅಧ್ಯಾಪಕರ ಪಾತ್ರವು ಅಮೆರಿಕದ *Baby Sitters” ಇವರದಕ್ಕಿಂತ ಹೆಚ್ಚೇನೂ ಭಿನ್ನವಾಗಿ ತೋರುತ್ತಿಲ್ಲ ! ಇತರ ವಿದ್ಯಾರ್ಥಿಗಳಿಗೆ ಕ್ಲಾಸುರೂಮುಗಳು ಸಿನೇಮಾ ಮಂದಿರಕ್ಕಿಂತ ತಾತ್ವಿಕವಾಗಿ ಭಿನ್ನವಲ್ಲ. ಅಧ್ಯಾಪಕರುಗಳು ಹೇಳುವ ವಿಷಯಗಳು ಮನೋರಂಜನೆಯ ಮಟ್ಟಕ್ಕಿಂತ ಹೆಚ್ಚು ಗಂಭೀರವಾಗಿ ಗ್ರಹಿಸಬೇಕೆಂಬ ಯಾವ ಆಗ್ರಹವೂ ಇವರಿಗಿರಬಾರದು. ಅಧ್ಯಾಪಕನೊಬ್ಬ ಐಂದ್ರಜಾಲಿಕವಾಗಿ ಮನೋರಂಜನೆಗೆ ನಿಂತ ವ್ಯಕ್ತಿಯೆಂಬುದಾಗಿ ಇವರು ಪರಿಗಣಿಸುತ್ತಾರೆಂದರೂ ತಪ್ಪಿಲ್ಲ. ಜ್ಞಾನವನ್ನು ಸಂಪಾದಿಸದಿದ್ದರೂ ಡಿಗ್ರಿಯು ಇವರಿಗೆ ಸಿಗಬೇಕು ! ಓದದ ಇವರಿಗೆ ಪರೀಕ್ಷೆಯು ಕಷ್ಟವಾಗಿದ್ದರೆ ಅಧ್ಯಾಪಕನ ತಪ್ಪು ಅದು ; ಪಠ್ಯವಿಷಯಗಳ ತಪ್ಪು. ಇದನ್ನು ಅನುಮೋದಿಸುವವರು ಸಮಾಜದಲ್ಲಿ ಅನೇಕ ವರ್ಗ. ಈ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಕೊಟ್ಟ ಕಾಲೇಜಿನ ಆಡಳಿತವರ್ಗದಿಂದ ಹಿಡಿದು, ಇವರ ತಂದೆತಾಯಿಗಳ ವರ್ಗ ಹಾಗೂ ಈ ಯುವಕರ ಬೆಂಬಲವನ್ನು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳಬಹುದೆಂದು ಎಣಿಕೆ ಹಾಕುತ್ತಿರುವ ರಾಜಕೀಯ ಪುಢಾರಿಗಳ ವರ್ಗ–ಇವರೆಲ್ಲರೂ ಅನುಮೋದಿಸುವವರೇ. ಕಾಲೇಜಿನಲ್ಲಿ ಒಂದು ವರ್ಷ ಪರೀಕ್ಷೆಯ ಫಲಿತಾಂಶವು ಕಡಿಮೆಯಾದಲ್ಲಿ ಸಂಬಂಧಪಟ್ಟ ಅಧ್ಯಾಪಕರುಗಳಿಗೆ, ಕಾಲೇಜಿನ ಆಡಳಿತ ವರ್ಗದವರ ಹಿತವಚನ ವಿದ್ಯಾರ್ಥಿಯ ತಂದೆತಾಯಂದಿರಿಂದ ದೂರು. ತೀರ ಯೋಗ್ಯನೂ, ಉತ್ತಮ ಶಿಕ್ಷಕನೂ, ತಾನು ಕಲಿಸುವ ವಿಷಯದಲ್ಲಿ ಚೆನ್ನಾಗಿ ಕೃಷಿಮಾಡಿದವನೂ ಆಗಿರುವ ಶಿಕ್ಷಕನೂ ಆಗಾಗ್ಗೆ ಇಂತಹ ಪ್ರಸಂಗಗಳ ಹಿನ್ನೆಲೆಯಲ್ಲಿ ಇಂದಿಗೆ ಬದುಕಬೇಕಾಗಿದೆ. ಅನೇಕ ವೇಳೆ ಇಂತಹ ಅಧ್ಯಾಪಕರು ತಮಗಿಂತ ಉತ್ತಮ ಶಿಕ್ಷಕರೂ ಜ್ಞಾನಿಗಳೂ ಅಲ್ಲದೆ. ಆದರೆ ಆಡಳಿತದ ಅಧಿಕಾರದಂಡವನ್ನು ಧರಿಸಿದಂತೆ ಉಪಕುಲಪತಿಗಳು. ಪ್ರಿನ್ಸಿಪಾಲರುಗಳ ಹಿತೋಪದೇಶಗಳನ್ನು ಕೇಳಿಕೊಂಡು ಬದುಕುವುದಂತೂ ತೀರ ಆಸಹನೀಯ.
ಉಚ್ಚಶಿಕ್ಷಣದ ಗುಣಮಟ್ಟವನ್ನು ಸುಧಾರಿಸಿ ಅದನ್ನು ಅಂತಾರಾಷ್ಟ್ರೀಯ ಮಟ್ಟದ ಸಮಾನತಗೆ ತಂದುಕೊಳ್ಳುವಲ್ಲಿ. ಒಂದುಕಡೆ ವಿದ್ಯಾರ್ಥಿಯ ಮೇಲೆ ವಿವರಿಸಿದ ರೀತಿಯ ಇರ್ವತ್ರಿಕ ಪ್ರವೇಶ ನೀತಿಯು ತಡೆಯನ್ನುಂಟುಮಾಡಿದರೆ, ಇನ್ನೊಂದೆಡೆ ಅಧ್ಯಾಪಕರಲ್ಲಿರುವ ವಿದ್ವತ್ತಿನ ಅಭಾವ, ಅದರೊಡನೆ ಸಮರ್ಪಕವಾದ ರೀತಿಯಿಲ್ಲದೆ ಪ್ರಾದೇಶಿಕ ಮಾಧ್ಯಮವನ್ನು ಜಾರಿಗೊಳಿಸಿದುದು-ಇವೂ ಕಾರಣಗಳಾಗಿವೆ. ಅರ್ಹತೆಯ ಮಟ್ಟವು ತೀರ ಕಡಿಮೆಯಾಗಿರುವ ವಿದ್ಯಾರ್ಥಿಗಳಿಗೆ ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಪ್ರವೇಶವಿತ್ತ ಮೇಲೆ ಅವರ ಮಟ್ಟಕ್ಕೆ ಶಿಕ್ಷಣವನ್ನು ಇಳಿಸಬೇಕಾದುದೂ ಅನಿವಾರ್ಯ.
ಆಕಸ್ಮಾತ್ ಒಂದು ವರ್ಷ ಹೆಚ್ಚಿನ ವಿದ್ಯಾರ್ಥಿಗಳು ಎಲ್ಲರೂ ಓದದವರೇ : ಅವರಲ್ಲಿ ಪರೀಕ್ಷೆಯಲ್ಲಿ ಎಲ್ಲರೂ ಸರಿಯಾಗಿ ಉತ್ತರಿಸಲೇಇಲ್ಲ ಎಂದಿಟ್ಟುಕೊಳ್ಳಿ. ಆದರೂ ಅವರಲ್ಲಿ ಒಂದು ನಿರ್ದಿಷ್ಟ ಪ್ರಮಾಣದವರನ್ನಾದರೂ ಪಾಸುಮಾಡಲೇಬೇಕಲ್ಲವೆ ? ಉತ್ತರದ ಮೌಲ್ಯಮಾಪನದ ಇಂದಿನ ನೀತಿಯು, ಆಯಾಯ ವರ್ಷದ ವಿದ್ಯಾರ್ಥಿಗಳ ಉತ್ತರದ ಗುಣಮಟ್ಟಕ್ಕೆ ಅನ್ವಯಿಸಿಕೊಂಡು ಬದಲಾಯಿಸಿಕೊಳ್ಳುವುದುದು-ಎನ್ನುವುದು ಇಂದಿನ ಅಧ್ಯಾಪಕರ ಅನುಭವ.
ಇನ್ನೊಂದುಕಡೆ ಇಂದಿನ ಅನೇಕ ಶಿಕ್ಷಕರಲ್ಲಿಯೂ ಸಾಕಷ್ಟು ವಿದ್ವತ್ತಿನ ಕೊರತೆಯಿದೆ. ನೌಕರಿಯು ಸಿಕ್ಕಿದ ಅನಂತರದಲ್ಲಿ ನಿರಂತರ ಅಧ್ಯಯನ, ತನ್ನ ಕ್ಷೇತ್ರದಲ್ಲಿ ವರ್ಷೇ ವರ್ಷೇ ಆಗುತ್ತಿರುವ ವ್ಯವಸಾಯ -ಸಂಶೋಧನೆಗಳ ಪ್ರಗತಿ-ಇವುಗಳ ಕಡೆಗೇ ಸುತರಾಂ ಗಮನವನ್ನೇ ಹರಿಸದೆ. ಕೇವಲ ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಕಲಿತುದನ್ನಸ್ಟೇ ಸಮಗ್ರ ಭಂಡವಾಳವಾಗಿರಿಸಿಕೊಂಡು ದಶಕಗಳು ಎರಡು ಮೂರು ಗತಿಸಿದರೂ ತಮ್ಮಲ್ಲಿ ಜ್ಞಾನವಿಸ್ತಾರವನ್ನು ತಂದುಕೊಳ್ಳದೆ ಇರುವ ನಿರ್ಲಿಪ್ತಮತಿಗಳಾದ ಶಿಕ್ಷಕರು ನಮಗಿಂದು ಹೇರಳವಾಗಿ ದೊರಕುತ್ತಾರೆ. ಇದೇ ಶಿಕ್ಷಕರು ಒಂದು ಕಡೆ ತಾವು ಹಳತಾಗುತ್ತಿರುವ… ಅವರ ಸುದೀರ್ಘವಾದ “ಸರ್ವಿಸು” ಮತ್ತು ವಯಸ್ಸಿನ ಮೇಲೆ “ಜ್ಞಾನವೃದ್ಧ “ರೆಂದೆನಿಸಿಕೊಳ್ಳುತ್ತಾರೆ. ಇದರ ಆಧಾರದ ಮೇಲೆ ಅವರ ಸೇವೆಯ ಕ್ಷೇತ್ರದಲ್ಲಿ “ಸೀನಿಯರ್ ಗ್ರೇಡಿ”ಗೆ ಏರುತ್ತಾರೆ. ಆ ಮುಖೇನ ಶಿಕ್ಷಣದ ಧೈಯ-ಧೋರಣೆಗಳನ್ನು ರೂಪಿಸುವಲ್ಲಿ, ತಂತಮ್ಮ ಕ್ಷೇತ್ರದ ಮುಖ್ಯಸ್ಥ ಪದವಿಯನ್ನು ಕಾಲೇಜು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಗಿಟ್ಟಿಸಿಕೊಳ್ಳುವುದರಲ್ಲಿ ಅರ್ಹತೆಯನ್ನು ಪಡೆಯುತ್ತಾರೆ. ಮುಂದಕ್ಕೆ ಇಂಥವರೇ ಕಾಲಕಾಲಕ್ಕೆ ಬದಲಾಗಬೇಕಾದ ಪಾಠಪಟ್ಟಿಯನ್ನು ಸಿದ್ಧಗೊಳಿಸುವವರು ! ಹೊಸ ವಿಚಾರಗಳನ್ನು ಪಾಠಪಟ್ಟಿಯಲ್ಲಿ ಸೇರಿಸಲು ಇವರೆಂದಿಗೂ ತಯಾರಾಗಿರಲು ಸಾಧ್ಯವಿಲ್ಲ. ಕಾರಣ, ಅವು ಅವರಿಗೆ ತಿಳಿದಿಲ್ಲ ಅಥವಾ ಬೋಧಿಸಲು ಬಹಳ ಕಷ್ಟ ಅವರಿಗೆ. ಇಂತಹ ಬೌದ್ಧಿಕವಾದ ಸಮಕಾಲೀನ ಬದುಕಿನಲ್ಲಿ ಪರಾಜಿತರಾದ ಶಿಕ್ಷಕರ ಪಾಠವೆಂಬ ಶುಷ್ಕ “ಪುರಾಣ” (ಹಳೆಯದ್ದು) ವನ್ನು ಕಲಿಯಬೇಕಾಗಿರುವ ಪ್ರಸಂಗದಲ್ಲಿ ಬುದ್ಧಿವಂತ ಹುಡುಗರಿಗೂ ಅನ್ಯಾಯವಾಗುತ್ತಿದೆಯೆನ್ನುವುದರಲ್ಲಿ ಏನೂ ಸಂಶಯವಿಲ್ಲ. ಇಂತಹ ಶಿಕ್ಷಕರ ರಕ್ಷಾಕವಚವೆಂದರೆ ಅವರ “ಸರ್ವಿಸು”-ವಿದ್ಯಾರ್ಥಿಗಳಲ್ಲಿ ಅವರು ಇರಬೇಕೆಂದು ಸಾರಿ ಹೇಳುವ “ಶಿಸ್ತು,”, “ಗುರುಭಕ್ತಿ” ಮತ್ತು “ವಿಧೆಯತೆಗಳು ಮಾತ್ರ.
ಮೇಲಿನ ಕಾರಣಗಳಿಗೆ ಪೂರಕವಾಗಿ ಇಂದಿನ ಪ್ರಾದೇಶಿಕ ಮಾಧ್ಯಮದ ನೀತಿಯೂ ಒಂದಡೆ ಗಮನಾರ್ಹವಾದ ಗುಣಮಟ್ಟದ ಇಳಿಮುಖವನ್ನು ತಂದೊಡ್ಡಿದೆ. ಪ್ರಾದೇಶಿಕ ಮಾಧ್ಯಮವು ಕಲಿಯುವಿಕೆಯ ದೃಷ್ಟಿಯಿಂದ ಅತ್ಯಂತ ಸಮರ್ಥವಾದ ಮಾಧ್ಯಮವೆನ್ನುವುದರಲ್ಲಿ ಸಂದೇಹವಿಲ್ಲ ನಿಜ. ಆದರೆ ಯಾವಾಗ ? ಈ ಮಾಧ್ಯಮದಲ್ಲಿ ಒಳ್ಳೆಯ ಗುಣಮಟ್ಟದ ಸಾಹಿತ್ಯವನ್ನು ತುಂಬಿದ ಅನಂತರ. ಆದರೆ, ಅದಾಗಲೇ ಅವಸರದಲ್ಲಿ. ಯಾವ ಸಿದ್ಧತೆಗಳೂ ಇಲ್ಲದೆ ಉಚ್ಚ ಶಿಕ್ಷಣಮಟ್ಟದಲ್ಲಿ ಮಾಧ್ಯಮದ ಬದಲಾವಣೆಯನ್ನು ಅನೇಕ ಕಾಲೇಜುಗಳಲ್ಲಿ ತಂದುಕೊಂಡಾಯಿತು. ಇದರಿಂದಾಗಿ ಕನ್ನಡದ ಪಾಠಪುಸ್ತಕಗಳಿಗೆ ಒಂದು ಹೊಸ ಮಾರುಕಟ್ಟೆಯು ಉತ್ಪನ್ನವಾಯಿತು. ಬೇಡಿಕೆಯಿದ್ದಲ್ಲಿ ಮಾರಾಟಕ್ಕೆ ತಯಾರಾಗಲು ನಾವು ಅತ್ಯಂತ ನಿಪುಣರು. “ವಿಷಯಗಳ ಆಳವಾದ ಅಧ್ಯಯನ ಮಾಡದಿದ್ದರೂ ಚಿಂತಿಲ್ಲ. ಕನ್ನಡದಲ್ಲಿ ಪುಸ್ತಕಗಳನ್ನು ಬರೆದು ಹಣ ಸಂಪಾದಿಸಬಹುದಲ್ಲವೆ ?”-ಎನ್ನುವ ಯೋಚನೆಯಿಂದ ಅವಸರದಲ್ಲಿ ಪುಸ್ತಕಗಳನ್ನು ಗೀಚಿ, ಅವಸರದಲ್ಲೇ ಆಚ್ಚು ಮಾಡಿ, ಬೇಡಿಕೆಯಿದ್ದಲ್ಲೆಲ್ಲಾ ಹಂಚಿ, ಬೇಡಿಕೆಯಿಲ್ಲದಲ್ಲಿ ಹೊಸ ಬೇಡಿಕೆಯನ್ನು ಸೃಷ್ಟಿಸಿದ ಇವರು ‘ಕನ್ನಡಮ್ಮ’ನ ಸೇವಕರೇ. ಎಲ್ಲರಿಗಿಂತಲೂ ಮೊದಲು ಕನ್ನಡದಲ್ಲಿ ಬರೆದು ಅಚ್ಚು ಮಾಡಿದವನು ಈ ಕನ್ನಡೀಕರಣ ಚಳುವಳಿಯಲ್ಲಿ ಅಗ್ರ ಪೂಜೆಗೆ ಅರ್ಹನಾದವ ! ಯಥಾರ್ಥವಾಗಿ ಗ್ರಹಿಸಿದಾಗ ಅನ್ನಿಸುತ್ತದೆ-ಇಂದಿಗೆ ಈ ಮಾಧ್ಯಮದ ಸೋಗಿನಲ್ಲಿ ಬೌದ್ಧಿಕ ಸಾಹಿತ್ಯದ, ವಿದ್ವತ್ತಿನ ವಂಚನೆಯಾಗಿ ಪರಿಣಮಿಸಲಿಕ್ಕಿಲ್ಲವೇ ನಮ್ಮ ಮಕ್ಕಳಿಗೆ ಎಂದು. ಇಂದಿಗೆ ಬರೆದು ಆಚ್ಚಾಗುತ್ತಿರುವ ಪುಸ್ತಕಗಳನ್ನು ನೋಡಿದಾಗ ಇದರ ಸ್ಪಷ್ಟ ಅರಿವಾಗುವುದು ನಮಗೆ. ಇಂತಹ ಗುಣಮಟ್ಟವಿಲ್ಲದ ಅಪ್ರಯೋಜಕ ಗ್ರಂಥಗಳನ್ನು ಸಿದ್ಧಗೊಳಿಸಲು, ಆಚ್ಚು ಮಾಡಲು ಸರಕಾರವು ಈಯುತ್ತಿರುವ ಹಣವು ರಾಷ್ಟ್ರೀಯ ದುರುಪಯೋಗವಲ್ಲದೆ ಮತ್ತೇನು ? ಇದನ್ನು ಸಂಶೋಧನೆಗಳಿಗಾದರೂ ವ್ಯಯಿಸಬಹುದಲ್ಲ ? ಇನ್ನೊಂದು ಕಡೆ ಪ್ರಗತಿಯನ್ನು ಕ್ಷಿಪ್ರಗತಿಯಲ್ಲಿ ನಮ್ಮದಾಗಿಸಿಕೊಂಡು ಬೌದ್ಧಿಕವಾಗಿ ಸಮಕಾಲೀನತೆಯನ್ನು ಕಾಪಾಡಿಕೊಂಡು ಬರುವಲ್ಲಿ ನಿರತರಾಗಿರಬೇಕಾಗಿದ್ದ ನಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಎಲ್ಲಾ ಶಕ್ತಿ, ಗಮನವನ್ನೂ ಈ ಮಾಧ್ಯಮದ ಕಡೆಗೆ ಬದಲಿಸಬೇಕಾಗಿದೆ ಇಂದು. ಈ ವಿಚಾರದಲ್ಲಿ ತರ್ಕಕ್ಕಿಂತಲೂ ವಿಚಾರಸ್ಥಿತಿಯನ್ನು ಪರೀಕ್ಷಿಸಿ ತಿಳಿದುಕೊಳ್ಳುವುದು ಮುಖ್ಯ. ಇದನ್ನೆಲ್ಲ ನೋಡುವಾಗ ನಮ್ಮ ಭಾಷಾ ಮಾಧ್ಯಮವನ್ನು ಬದಲಾಯಿಸಿಕೊಳ್ಳುವ ನೀತಿಯು ಅತ್ಯಂತ ಸ್ವಾಗತಾರ್ಹವಾದರೂ, ಅದನ್ನು ತರಲು ಹೊರಟ ವಿಧಾನ ಮತ್ತು ಇದರ ಹಿನ್ನೆಲೆಯಲ್ಲಿರುವ ಕೆಲವು ವೈಯಕ್ತಿಕ ಸ್ವಾರ್ಥದ ಅಂಶಗಳು-ಇವು ಈ ಉದ್ದೇಶವನ್ನು ವಂಚಿಸುವುದು ಖಂಡಿತವೆಂದು ನನಗನಿಸುತ್ತದೆ.
ನಮ್ಮ ಇಂದಿನ ಶಿಕ್ಷಣನೀತಿಯನ್ನು ರೂಪಿಸುವಾಗ ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇವುಗಳಿಂದ ನಾವು ಉದ್ದೇಶಿಸಿದ ಪ್ರಗತಿಯ ಸಾಧನೆಗೆ ಭಂಗ ಉಂಟಾಗದಂತೆ ಜಾಗ್ರತೆ ವಹಿಸುವುದು ತೀರ ಅವಶ್ಯ. ಶಿಕ್ಷಣವು ರಾಷ್ಟ್ರದ ಉಪಯೋಗಿತೆಯ ದೃಷ್ಟಿ ಯಿಂದ ರೂಪಿತವಾಗಬೇಕೇ ಹೊರತು, ಅದು ಯಾವುದೇ ಗುಂಪಿನವರ ಅಥವಾ ವರ್ಗದವರ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಗುಣವಾಗಿ ಸಿಲುಕಿಕೊಳ್ಳದಂತೆ ಎಚ್ಚರದಿಂದ ಮುನ್ನಡೆಯಬೇಕಾಗಿದೆ. ವೃತ್ತಿಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ಬೌದ್ಧಿಕ ಶಿಕ್ಷಣ-ಇವುಗಳೆಲ್ಲಕ್ಕೂ ಏಕಮೇವವಾದ ಧೋರಣೆಯನ್ನೂ ಅನುಸರಿಸಬಾರದು. ಅಂತೆಯೇ ಉಚ್ಚಶಿಕ್ಷಣವು ಬೌದ್ದಿಕ ಅರ್ಹತೆಯಿರುವ ಅಧಿಕ ಸಂಖ್ಯೆ ತರುಣ ಪೀಳಿಗೆಗೆ ದೊರಕಬೇಕು. ಆದರೆ ಅದು ಅವರನ್ನು ಹೆತ್ತವರ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಬಾರದು.
ಮಾಧ್ಯಮಿಕಮಟ್ಟದ ಕೊನೆಯವರೆಗೆ ಪ್ರತಿಯೊಬ್ಬ ಪ್ರಜೆಯೂ ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕೆನ್ನುವ ಉದ್ದೇಶವನ್ನು ನಿಜವಾಗಿಸುವಲ್ಲಿ ನಾವು ಇನ್ನೂ ವಿಳಂಬ ಮಾಡಬಾರದು. ಅಂತೆಯೇ ಮಾಧ್ಯಮಿಕ ಮಟ್ಟದ ಅನಂತರ ಪ್ರಿ-ಯೂನಿವರ್ಸಿಟಿಯ ಮಟ್ಟದಲ್ಲಿ ನೇರವಾಗಿ ವೃತ್ತಿಶಿಕ್ಷಣ, ವಿಜ್ಞಾನ ಮತ್ತು ಮಾನವಿಕ ವಿಷಯಗಳ ಸಮರ್ಪಕವಾದ ಆಯ್ಕೆಯನ್ನು ಈ ವಿದ್ಯಾರ್ಥಿಗಳು ಮಾಡಿಕೊಳ್ಳುವ ಸಾರ್ವತ್ರಿಕ ಅವಕಾಶವೂ ಲಭ್ಯವಾಗಬೇಕು. ಇಲ್ಲಿ ಯೋಗ್ಯ ವಿದ್ಯಾರ್ಥಿಯು ದೇಶದ ಯಾವ ಮೂಲೆಯಲ್ಲೇ ಇರಲಿ, ಕಾಲೇಜಿನ ಅಭಾವದಿಂದಾಗಿ ಅವನಿದರಿಂದ ವಂಚಿತವಾಗಬಾರದು -ಎನ್ನುವ ನೀತಿಯೊಡನೆ ಕಾರ್ಯವೆಸಗಬೇಕು. ಸಮಾಜದ ಆರ್ಥಿಕ ತಾರತಮ್ಯ ವ್ಯವಸ್ಥೆಯೂ ಸಮಾನಾವಕಾಶವನ್ನು ನೀಡುವಲ್ಲಿ ಅಡ್ಡಿಯಾಗಬಾರದು. ವೃತ್ತಿಪರವಾದ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ವೈವಿಧ್ಯವನ್ನು ತಂದುಕೊಳ್ಳುವುದೂ ಅಗತ್ಯ. ಅಲ್ಲದೆ ರಾಷ್ಟ್ರದ ವಿವಿಧ ಅಂಗಗಳಲ್ಲಿ ದುಡಿಯಲು ಬೇಕಾದಷ್ಟು ಯೋಗ್ಯ ಪ್ರಮಾಣದ ಮಾನವ ಶಕ್ತಿಯು ದೊರಕುವಂತೆ ಈ ಪಿ. ಯು. ಸಿ ಯ ಮಟ್ಟದಿಂದ ಆಯ್ಕೆ ಮಾಡಲು ಸಾಧ್ಯವಾಗಬೇಕು. ವೃತ್ತಿಪರವಾದ ಶಿಕ್ಷಣಗಳಲ್ಲಿ ವೈದ್ಯಕೀಯ, ಯಂತ್ರಶಾಸ್ತ್ರದಂತಹವುಗಳಲ್ಲಿ ಬಳಿಕ ದೀರ್ಘಕಾಲದ ಅಧ್ಯಯನವು ಅಗತ್ಯವಾದುದಾದರೂ, ಉಳಿದ ಕೈಚಳಕದ ವೃತ್ತಿಗಳಿಗೆ ಅಲ್ಪ ಕಾಲದ ತರಬೇತಿಯು ಸಾಕಾಗುವುದು. ಇಂಥವುಗಳನ್ನು ಪರಿಶೀಲಿಸಿ, ದೇಶದಲ್ಲಿ ಸಾಕಷ್ಟು ಸಂಖ್ಯೆಯ ತರುಣ ಶಕ್ತಿಯನ್ನು ಆದಷ್ಟು ಕಡಿಮೆ ಸಮಯದಲ್ಲಿ ತಜ್ಞರಾಗಿ ಮಾಡಿ, ಮುಂದಕ್ಕೆ ಅವರು ರಾಷ್ಟ್ರದ ಬೇಡಿಕೆಗಳನ್ನು ಪೂರೈಸಲು ಬಳಸಿಕೊಳ್ಳಬೇಕು. ಇಲ್ಲಿಯೂ ಇಂತಹ ತರಬೇತಿ ಹೊಂದಿದವರಲ್ಲಿ ದುರ್ವ್ಯಯವಾಗದಂತೆ ನೋಡಿಕೊಳ್ಳಬೇಕು. ಈ ರೀತಿಯ ಬೇರೆಬೇರೆ ಕಸಬುಗಳಲ್ಲಿ ನೇರವಾಗಿ ತರಬೇತಿ ನೀಡುವ ಕಾಲೇಜುಗಳನ್ನು ಆದಷ್ಟು ಅಧಿಕ ಸಂಖ್ಯೆಯಲ್ಲಿ ತೆರೆಯಬೇಕು. ದೇಶದ ಜನತೆಯು ಕಾಲೇಜೆಂದರೆ ಕೇವಲ ವಿಜ್ಞಾನ, ಮಾನವಿಕ ವಿಷಯಗಳ ಪಾಠಹೇಳುವ ಸಂಸ್ಥೆಗಳಲ್ಲ, ಜೀವನ ವೃತ್ತಿಯ ತರಬೇತಿ ಕೇಂದ್ರಗಳೂ ಕಾಲೇಜುಗಳಾಗಬಲ್ಲವು- ಎಂಬುದನ್ನು ಅರಿಯುವಂತೆ ಮಾಡಬೇಕು. ಅನುವಂಶಿಕವಾಗಿ, ಹಿಂದಿನ ಜಾತಿಪದ್ಧತಿಯಲ್ಲಿ ಲಭ್ಯವಾಗುತ್ತಿದ್ದ ಎಲ್ಲ ಕಸುಬುಗಳೂ ಇಂದಿಗೆ ಶಾಸ್ತ್ರೀಯವಾಗಿ, ವೈಜ್ಞಾನಿಕವಾಗಿ ಲಭಿಸುವಂತೆ ಮಾಡುವ ಸಂಸ್ಥೆಗಳ ಆವಶ್ಯಕತೆಯು ಈಗಿನ ಕಾಲೇಜುಗಳ ಆವಶ್ಯಕತೆಗಿಂತ ಹೆಚ್ಚಿನದಾಗಿರುವುದನ್ನು ಗ್ರಹಿಸಬೇಕು.
ವಿಜ್ಞಾನದ ವಿಷಯಗಳನ್ನು ಕಲಿಸಲು ಕೇವಲ ಆಯ್ಕೆಯ, ಅಭಿರುಚಿಯುಳ್ಳ ಬುದ್ದಿವಂತ ಹುಡುಗರನ್ನೇ ಕಾಲೇಜಿನಲ್ಲಿ ತೆಗೆದುಕೊಳ್ಳಬೇಕು. ಈ ಕ್ಷೇತ್ರದಲ್ಲಿ ಇವರಿಗೆ ಪ್ರವೇಶ ಕೊಡಬೇಕಾದರೆ, ಮುಂದಕ್ಕೆ ಅವರು ಅದೇ ಕ್ಷೇತ್ರದಲ್ಲಿ ದೇಶಕ್ಕೆ ಸೇವೆ ಸಲ್ಲಿಸಬೇಕೆನ್ನುವ ಉದ್ದೇಶದಿಂದ ಅವರ ಪ್ರವೇಶಾತಿಯನ್ನು ರೂಪಿಸಿಕೊಳ್ಳಬೇಕು. ಒಂದೆಡೆ ನಮ್ಮ ದೇಶದಲ್ಲಿ ಯೋಗ್ಯ ವಿಜ್ಞಾನಿಗಳಿಗೆ ಸಂಶೋಧನೆಯನ್ನು ಮುಂದುವರಿಸಲು ಕನಿಷ್ಠ ಅವಕಾಶವೂ ಇಲ್ಲದಿರುವಾಗ ಕಾಲೇಜು ಮಟ್ಟದಲ್ಲಿ ದೇಶದಾದ್ಯಂತ ಮಿಲಿಯಗಟ್ಟಳೆ ವಿದ್ಯಾರ್ಥಿಗಳು ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಇವರಲ್ಲಿ ಪ್ರಾಯಃ ಶೇಕಡಾ ೫ ರಷ್ಟು ವಿದ್ಯಾರ್ಥಿಗಳೂ ಪದವಿ ಮಟ್ಟಕ್ಕಿಂತ ಮುಂದೆ ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಯನವನ್ನು ಮುಂದರಿಸುವುದಿಲ್ಲ. ಹೆಚ್ಚಿನವರು ಆ ಬಳಿಕ ಸೇರುವುದು ಯಾವುದೋ ಒಂದು ವಿಜ್ಞಾನಕ್ಕೆ ಯಾವ ಸಂಬಂಧವೂ ಇಲ್ಲದ ಬ್ಯಾಂಕಿಂಗ್, ರೇಲ್ವೆ, ವ್ಯಾಪಾರ ಅಥವಾ ಇನ್ನಿತರ ಕಾರಖೂನನ ಕಸುಬಿಗೆ. ರಾಷ್ಟ್ರೀಯ ದೃಷ್ಟಿಯಿಂದ ಇಂತಹ ವಿದ್ಯಾರ್ಥಿಗಳಿಗೆ ಕಾಲೇಜು ಮಟ್ಟದಲ್ಲಿ ವ್ಯಯಿಸುವ ಕೋಟಿಗಟ್ಟಲೆ ರೂಪಾಯಿಗಳು. ದುರ್ವ್ಯಯವಲ್ಲದೆ ಮತ್ತೇನು ? ಈ ಹಣವನ್ನು ಯೋಗ್ಯ ವಿಜ್ಞಾನಿಗಳ ಸಂಶೋಧನೆಯ ಕ್ಷೇತ್ರಕ್ಕೆ ಬಳಸಬಹುದಲ್ಲವೇ ? ಹತ್ತು ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗಷ್ಟೇ ವಿಜ್ಞಾನವನ್ನು ಕಲಿತು ಮತ್ತೆ ಮರೆತುಬಿಡುವುದಕ್ಕಿಂತ, ಆ ದುಡ್ಡನ್ನು, ಹತ್ತು ಯೋಗ್ಯ ವಿಜ್ಞಾನಿಗಳ ಸಂಶೋಧನೆಗೆ ಬಳಸಿದರೆ ದೇಶಕ್ಕೆ ಪ್ರಯೋಜನವಾಗಲಿಕ್ಕಿಲ್ಲವೇ ? ಬ್ಯಾಂಕಿನಲ್ಲಿ ಗುಮಾಸ್ತೆಯಾಗಿ ಸೇರಲು ವಿಜ್ಞಾನದ ಪದವಿಯೇಕೆ ಬೇಕು ? ಆದರೆ ಇಂದಿನ ಬ್ಯಾಂಕಿನ ಅಧಿಕಾರಿಗಳೂ ಇಂತಹ ನಿಯಮಗಳನ್ನೇ: ಪುರಸ್ಕರಿಸುತ್ತಾ ಸಮಸ್ಯೆಯನ್ನು ಮತ್ತೂ ಜಟಿಲಗೊಳಿಸುತ್ತಿದ್ದಾರೆ.
ಇನ್ನು ಮಾನವಿಕ ವಿಷಯಗಳ ಅಧ್ಯಯನದಲ್ಲಿ ಇಂದಿನ ಸಾರ್ವತ್ರಿಕ ಪ್ರವೇಶ ನೀತಿಯನ್ನು ನಿಲ್ಲಿಸಬೇಕು. ವಿಜ್ಞಾನದ ಪ್ರವೇಶನೀತಿಯನ್ನೇ ಇದಕ್ಕೂ ಅನ್ವಯಿಸಬೇಕು. ಯೋಗ್ಯತೆ ಮತ್ತು ಆಭಿರುಚಿಯಿರುವ ವಿದ್ಯಾರ್ಥಿಗಳು ಮಾತ್ರ ಈ ಕ್ಷೇತ್ರವನ್ನು ಆರಿಸಿಕೊಳ್ಳುವಂತಾಗಬೇಕು. ಆಯ್ಕೆಯ ಯಾವ ತತ್ವವನ್ನೂ ಅನುಸರಿಸದೆ, ಎಲ್ಲರಿಗೂ
ಇದರಲ್ಲಿ ಪ್ರವೇಶವೀಯುವ ಉದ್ದೇಶದಿಂದ ಎಲ್ಲೆಡೆಗಳಲ್ಲೂ ಇದರ ಕಾಲೇಜುಗಳನ್ನು ತೆರೆಯುವ ಬದಲು, ಇದನ್ನು ಆಯ್ಕೆಯ ಪ್ರಮಾಣಕ್ಕೆ ಮಾತ್ರ ಸೀಮಿತಗೊಳಿಸುವುದು ಹೆಚ್ಚು ಪ್ರಯೋಜನಕಾರಿ, ಇನ್ನೊಂದೆಡೆ, ಇದನ್ನು ಅದಾಗಲೇ ಒಂದಲ್ಲ ಒಂದು ನೌಕರಿಯಲ್ಲಿ ಸೇರಿ. ಆದರೆ ವಿಷಯಗಳನ್ನು ತಿಳಿದುಕೊಳ್ಳುವ ಗಂಭೀರವಾದ ಅಸಕ್ತಿಯಿರುವವರಿಗೆಲ್ಲ ಅನುಕೂಲವಾಗುವಂತೆ ಸಂಧ್ಯಾಕಾಲೇಜುಗಳು, ಅಂಚೆ ಮುಖೇನ ಶಿಕ್ಷಣವನ್ನು ಲಭ್ಯಗೊಳಿಸುವ ಹೆಚ್ಚಿನ ಅವಕಾಶವನ್ನು ಕಲ್ಪಿಸಬೇಕು. ಮಾನವಿಕ ವಿಚಾರಗಳನ್ನೂ ಅಭ್ಯಸಿಸಿ ತಿಳಿದುಕೊಳ್ಳಬೇಕಾದರೆ, ವಿಶೇಷವಾದ ಪ್ರಬುದ್ಧಗ್ರಹಣಶಕ್ತಿ, ಬೌದ್ದಿಕ ಮನೋಧರ್ಮದ ಆವಶ್ಯಕತೆಯಿದೆಯೆನ್ನುವುದನ್ನು ನಾವು ಇನ್ನಾದರೂ ಮನಸ್ಸಿಗೆ ತಂದುಕೊಳ್ಳಬೇಕು. ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಮನಶ್ಯಾಸ್ತ್ರ, ದರ್ಶನ ಶಾಸ್ತ್ರಗಳಂಥ ವಿಷಯಗಳನ್ನು ಸರಿಯಾಗಿ ಗ್ರಹಿಸಬೇಕಾದಲ್ಲಿ ಸಾಕಷ್ಟು ಬುದ್ಧಿಶಕ್ತಿಯೂ ಬೇಕು. ಆದರೆ ದುರದೃಷ್ಟವಶಾತ್ ಇಂದಿಗೆ ಈ ವಿಷಯಗಳ ವಿಭಾಗ ಉಳಿದ ಎಲ್ಲ ಕ್ಷೇತ್ರಗಳಲ್ಲೂ ಅನರ್ಹರು ಎಂದು ತಿರಸ್ಕೃತರಾದ, ಕೇಮ ಮೂರನೆಯ ದರ್ಜೆಯಲ್ಲಿ
ಪಾಸೆಂದೆನಿಸಿಕೊಂಡವರೆಲ್ಲರೂ ಕೊನೆಗೆ ಸೇರಬಹುದಾದ ಆಶ್ರಯ ಸ್ಥಾನವಾಗಿರುವುದು (Asylum). ಇಂಥವರ ಒಟ್ಟು ಮೊತ್ತದಲ್ಲಿ ಕೆಲವರಾದರೂ ಬಿ. ಎ., ಆಗಲೇ ಬೇಕಷ್ಟೆ ? ಮತ್ತೀ ಕೆಲವರಲ್ಲಿ ಸ್ವಲ್ಪ ಮಂದಿಯಾದರೂ ಎಂ. ಎ., ಆಗಲೇಬೇಕಷ್ಟೆ? ಈ ಪರಿಸ್ಥಿತಿಯು ವಿದ್ಯಾರ್ಥಿ ಮತ್ತು ಅಧ್ಯಾಪಕ ಇವರಿಬ್ಬರ ಗುಣಮಟ್ಟವನ್ನೂ ಕೆಳಗಿಳಿಸಿ, ಮಾನವಿಕ ವಿಷಯಗಳ ಅತಸ್ಸತ್ವವನ್ನೇ ಆರಿಸಿಬಿಟ್ಟಿದೆ. ಇದಕ್ಕೆ ಯೋಗ್ಯ ರೀತಿಯ ಬೌದ್ಧಿಕ ಸಂಸ್ಕಾರವನ್ನು ತುಂಬಬೇಕಾದರೆ, ಯೋಗ್ಯ, ಸಮರ್ಥ ವಿದ್ಯಾರ್ಥಿ ಶಕ್ತಿಯನ್ನು ಈ ಕಡೆಗೆ ಸೆಳೆಯಬೇಕು. ಇದಾಗದೇ ಹೋದರೆ, ಮೂರನೆಯ ವರ್ಗದ ವಿದ್ಯಾರ್ಥಿಗಳ ಕೈಯಲ್ಲೇ ಇವು ಉಳಿದರೆ, ಮುಂದಕ್ಕೆ ಈ ವಿಷಯಗಳೆಲ್ಲಾ ನಿರ್ವೀರ್ಯವಾಗಿ ಹೋದರೆ ಆಶ್ಚರ್ಯವಲ್ಲ. ಪರಿಸ್ಥಿತಿ ಹೀಗಿರುವಾಗ ಇನ್ನೊಂದೆಡೆ ಪ್ರಬದ್ಧವಾದ ಜನರ ಅಂಗವೊಂದು ಇವನ್ನು ಶಾಸ್ತ್ರೀಯವಾಗಿ ತಿಳಿದುಕೊಳ್ಳಬೇಕೆಂಬ ಆಸ್ಥೆಯಿದ್ದರೂ, ಅವರಿಗಿದನ್ನು ಲಭ್ಯವಾಗಿಸುವ ಯೋಗ್ಯ ವ್ಯವಸ್ಥೆಯಿಲ್ಲ ಇಂದಿಗೆ. ಮಾನವಿಕ ವಿಷಯಗಳನ್ನು ಯಾವೊಂದೂ ಆಸ್ಥೆಯಿಲ್ಲದೆ, ತಮ್ಮ ವಯೋಧರ್ಮದ ಒಂದು ಹಂತವೆಂದಷ್ಟೇ ತಿಳಿದು ಕಾಲೇಜಿನಲ್ಲಿ ಸಮಯಗಳೆಯಲು ಬರುವ “ಹಿಪ್ಪಿ” -“ಬೀಟ್” ತೋರಿಕೆಯ ವೇಷಭೂಷಣಗಳೇ ತಮ್ಮ ಧ್ಯೇಯವೆಂದಂದುಕೊಂಡ ಯಥಾರ್ಥ ಹಿಪ್ಪಿಗಳೂ ಅಲ್ಲದ, “ಬೌದ್ದಿಕತಾ ವಿರೋಧ-ಸಿದ್ಧಾಂತ” (anti-intellectualism) “ಯಾವುದನ್ನೂ ತಿಳಿಯಬೇಡ”-ಸಿದ್ಧಾಂತ (know-nothinagism) ವನ್ನೇ ಹರಡಬಯಸುವ ತರುಣ-ತರುಣಿಯರಿಗೆ ಕಲಿಸುವ ನೀತಿಗಿಂತ ಸಮಾಜದ ನೌಕರಿಯಲ್ಲಿರುವ ವಯಸ್ಕರ ಇನ್ನೊಂದು ವರ್ಗಕ್ಕೆ ಇದು ಪ್ರಯೋಜನವನ್ನು ತಲುಪಿಸುವುದು ಹೆಚ್ಚು ಅರ್ಥಪೂರ್ಣವೆಂದು ನನ್ನ ಅಭಿಪ್ರಾಯ. “ಬಿ. ಎ.,” ಡಿಗ್ರಿಗಾಗಿ ಬರುವವರಿಗೆ ಇದರಲ್ಲಿ ಪ್ರವೇಶ ಕೊಡುವ ನೀತಿಯನ್ನು ನಿಲ್ಲಿಸಿ “ಆಥಾಶಾಸ್ತ್ರವನ್ನು ಕಲಿಯಬೇಕು”, “ಸಮಾಜಶಾಸ್ತ್ರವನ್ನು ಕಲಿಯಬೇಕು”- ಎಂಬ ಉದ್ದೇಶದಿದ ಬರುವವರಿಗೆ ಇಲ್ಲಿ ಪ್ರವೇಶ ನೀಡುವ ವ್ಯವಸ್ಥೆಯು ರೂಪಿತವಾಗತಕ್ಕದ್ದು.”

Close

ಕ್ಷಣಗಳು

ಕ್ಷಣಗಳು

-ಎನ್. ಸಿ. ಪ್ರಸನ್ನ ಕುಮಾರ್

ಜಳಕವಾಡಿದ ಗಾಳಿ ಹಸಿ ಮೈಯ್ಯ ದುರ್ಗಂಧ ಹೊತ್ತು ಊರೂರ ಸುತ್ತಾಡಿ
ಯಾರ‍್ಯಾರ ಮೈ ಮುತ್ತಿ ಬಂತು ಇಲ್ಲಿ.
ಹಗುರಾಗಿ ಬಂದದ್ದು ಹೊತ್ತು ಹೊತ್ತಿಗೆ ಘನಿಸಿ ಹೆಜ್ಜೆ ಏಳದೆ ಮೇಲೆ
ಎದೆ ಮೇಳಕೆಲ್ಲ ತಾಳ ಹಾಕದೆ ನಿಂತು
ಇದ್ದೆಡೆಯೆ ಮೈಲಿಗೆ ಕಳೆದು
ಸುಳ್ಳೆ ನನ್ನೆತ್ತಿ ಕುಣಿಸಿ

ಜಾರಿಸಿ
ಬೆತ್ತಲೆ ಕ್ಷಣ ಮೊತ್ತಗಳ ಹುತ್ತ ಬಾಯ್ಬಿಟ್ಟು
ನಾಗ ಕನ್ನಿಕೆಯ ಮೈ ಮಾಟ ಮೋಡಿ
ಅಪ್ಪಿ ಅಪ್ಪಿ
ಹರ್ಷೋದ್ಗರದ ಕಾವೋತ್ಸವದ ಶಿಖರ ತುದಿಯಲ್ಲಿ
ನಂಜು ಉಸಿರಾಗಿ ಬಯಕೆ ಹೆಬ್ಬಾವ ಬಾಯ್‌ತುತ್ತು
ಸೂಳೆ ಕ್ಷಣಕಿಲ್ಲ ಮಿತಿ ಇಲ್ಲಿ.

ಹೇಗೊ ಮೈಯ್ಯೊಳಗೆ ಹೊಕ್ಕು ಸ್ವಾರ್ಥ ಸಾಧಿಸಿ ಹರಿದು
ಕೊಳ್ಳಿ ಹತ್ತುವ ಮೊದಲೇ ಕಳಚಿ ಹಗುರಾಗಿ ಮತ್ಯಾವ ಭ್ರೂಣದ ತೊಗಲೋ
ತಗುಲಿ, ಕುಣಿದ
ಸುದ್ಧಿ ಸಾಲದ ಶಕುನಿಗಾಳಿಯ ನಂಬಿ
ಮಾಧ್ಯಾನ್ಣಿಕೆ, ಶಾಸ್ತ್ರ ವಂಶವೃಕ್ಷಕ್ಕೆ ನೀರೆರೆದರೂ
ಸಂತತದ ನಿರ್ವೀರ್ಯ ತಪ್ಪಿಲ್ಲ ಇಲ್ಲಿ.

Close

ಸಮುದ್ರಕ್ಕೆ ಸವಾರರು

ಸಮುದ್ರಕ್ಕೆ ಸವಾರರು

ಮೂಲ : ಜೆ ಎಮ್‌. ಸಿಂಗ್ ಅನುವಾದ : ಅಶೋಕ ಕುಲಕರ್ಣಿ

ಪಾತ್ರಗಳು :
ಮಾರಿಯಾ : ಒಬ್ಬ ಮುದುಕಿ
ಬಾರ್ಟ್ಲೆ : ಅವಳ ಮಗ.
ಕ್ಯಾಟಲಿನ್ : ಅವಳ ಮಗಳು
ನೋರಾ : ಅವಳ ಕೊನೆಯ ಮಗಳು
ಕೆಲವು ಜನರು ಮತ್ತು ಹೆಣ್ಣು ಮಕ್ಕಳು
ದೃಶ್ಯ : ದಕ್ಷಿಣ ಅಯರಲಂಡಿನ ಒಂದು ನಡುಗಡ್ಡೆ[ಗುಡುಸಿಲಿನಲ್ಲಿಯ ಅಡುಗೆಯ ಮನೆ. ಅಲ್ಲಿ ಮೀನದ ಬಲೆಗಳು, ನೊಣಗಳು, ರಾಟಿಯ ಚಕ್ರಗಳು. ಕೆಲವು ಕಟ್ಟಿಗೆಯ ಫಳಿಗಳು ಗೋಡೆಗೆ ನಿಂತಿವೆ. ಕ್ಯಾಟಲಿನ್ ಸುಮಾರು ಇಪ್ಪತ್ತು ವಯಸ್ಸಿನ ಹುಡುಗಿ ಕೇಕನ್ನು ಬೇಯಿಸುತ್ತಿದ್ದಾಳೆ. ನಂತರ ತನ್ನ ಕೈಗಳನ್ನು ಝಾಡಿಸಿಕೊಳ್ಳುತ್ತಾಳೆ. ಆಮೇಲೆ ನೂಲು ತೆಗೆಯತೊಡಗುತ್ತಾಳೆ. ಇದೇ ಸಮಯಕ್ಕೆ ನೋರಾ ತನ್ನ ತಲೆಯನ್ನು ಬಾಗಿಲಲ್ಲಿ ಇಣಕುತ್ತಾಳೆ.] ನೋರಾ : (ಸಣ್ಣಗಿನ ಧ್ವನಿಯಲ್ಲಿ) ಎಲ್ಲಿದ್ದಾಳ ಅಕಿ ?
ಕ್ಯಾಟಲಿನ್: ಒಳಗ ಮಲಗಿಕೊಂಡಿರಬಹುದು. ದೇವರs ಸಹಾಯ ಮಾಡಬೇಕು ಅಕಿಗೆ. ಅಕಿಗೆ ಶಕ್ಯವಿದ್ದರ ಮಲಕೊಂಡಿರಬಹುದು.
(ನೋರಾ ಒಳಗಡೆ ಬರುತ್ತ ತನ್ನಲ್ಲಿ ಮುಚ್ಚಿಟ್ಟುಕೊಂಡಿದ್ದ ಗಂಟನ್ನು ಹೊದೆದ ಶಾಲಿನೊಳಗಿಂದ ತೆಗೆಯುತ್ತಾಳೆ)
ಕ್ಯಾಟಲಿನ್ : (ರಾಟಿಯನ್ನು ಜೋರಾಗಿ ತಿರುಗಿಸುತ್ತ) ಏನದು ನಿನ್ನ ಕಡೆ ಇದ್ದದ್ದು ?
ನೋರಾ : ಆ ಪಾದ್ರಿ ತಂದಿದ್ದಂತ. ಕೊಟ್ಟಾ. ಡೊನೆಗಾಲದಲ್ಲಿ ಮುಳುಗಿದ್ದ ಮನಷ್ಯಾನ ಒಂದು ಆಂಗಿ ಮತ್ತು ಕಾಲಚೀಲಂತ ಕಾಣಸ್ತದ. (ಕ್ಯಾಟಲಿನ್ ತಾನು ನೂಲುವುದನ್ನು ನಿಲ್ಲಿಸಿ, ಮುಂದೆ ನೋರಾ ಹೇಳುವುದನ್ನು ಕೇಳಲು ಬಾಗುತ್ತಾಳೆ)
ಅವು ಮೈಕೆಲ್‌ನವು ಹೌದೋ ಅಲ್ಲೋ ಅಂತ ನೋಡಬೇಕು. ಯಾಕಂದರ ಇಂದು ಅವಳು ಭಾಳ ಹೊತ್ತಿನತನಕಾ ಸಮುದ್ರದ ಕಡೇನs ಮುಖಾ
ಮಾಡಿಕೊಂಡು ನಿಂತಿದ್ದು.
ಕ್ಯಾಟಲಿನ್ : ಅವು ಮೈಕೆಲ್‌ನವು ಇರಲಿಕ್ಕೆ ಸಾಧ್ಯದ ಏನು ನೋರಾ ? ಅಂವಾ ಅಷ್ಟುದೂರ ಉತ್ತರದ ಕಡೆ ಹೋಗಿರಲಿಕ್ಕೆ ಹ್ಯಾಂಗ ಸಾಧ್ಯದ ?
ನೋರಾ : ಆ ಪಾದ್ರಿಗೂ ಇದರ ವಿಷಯದಾಗ ಅಷ್ಟು ಸರಿಯಾಗಿ ಗೊತ್ತಿದ್ಧಂಗ ಕಾಣಲಿಲ್ಲ. “ಒಂದ ವ್ಯಾಳ್ಯಾ ಅವು ಮೈಕೆಲ್‌ನವಿದ್ದರ ನೀ ಆಕಿಗೆ ಹೇಳಿಬಿಡು ಏನಂದರ ದೇವರ ದಯೆಯಿಂದ ಅವನಿಗೆ ಒಳ್ಳೇ ಗೋರಿ ಸಿಕ್ಕಿತು ಅಂತ. ಒಂದ ವ್ಯಾಳ್ಯಾ ಅವು ಅವನವಿರಲಿಕ್ಕರ ನೀ ಅದರ ಬಗ್ಗೆ ಚಕಾರ ಶಬ್ದಾನೂ ಎತ್ತಬ್ಯಾಡಾ. ಯಾಕಂದರ ಸುಮ್ಮನs ಅತಗೋತ ಆ ಮುದುಕಿಗೆ ಸಾವು ಬಂದೀತು” ಅಂತ ಹೇಳಿದಾ.
(ನೋರಾ ಮುಚ್ಚಿದ ಅರ್ಧಬಾಗಿಲು ಗಾಳಿಯಿಂದ ಪೂರ್ತಿಯಾಗಿ ತೆರೆಯುತ್ತದೆ)
ಕ್ಯಾಟಲಿನ್: (ಉದ್ವೇಗದಿಂದ ನೋಡುತ್ತ) ಗಾಲವೇ ಜಾತ್ರಿಗೆ ಕುದರಿ ತಗೊಂಡ ಹೋಗೋ ಬಾರ್ಟ್ಲೆನ್ನ ಅಂವಾ ತಡೀಬಹುದೇನಂತ ಕೇಳಿದೇನು ?
ನೋರಾ : ನಾ ಏನು ಅವನ್ನ ತಡಿಯುದಿಲ್ಲಾ ; ಆದರ ನೀವೇನ ಅಂಜಬೇಕಾದ ಕಾರಣ ಇಲ್ಲ. ಯಾಕಂದರ ಈ ಸಲದ ಆ ಮುದುಕಿ ಪ್ರಾರ್ಥನೆಗೆ ದೇವರು ಹುಂ ಅಂದಾನು, ಎಲ್ಲಾ ಹುಡುಗರನ್ನ ಕಳಕೊಳ್ಳಧಂಗ ನೋಡಿಕೊಂಡಾನು” ಅಂದ.
ಕ್ಯಾಟಲಿನ್ : ಆ ಬಿಳೆ ಬಂಡೆಗಲ್ಲುಗಳ ಅತ್ಲಾಗ ಸಮುದ್ರಾ ಭಾಳ ಜೋರದ ಏನು ನೋರಾ ?
ನೋರಾ : ಎಲ್ಲಾಕ್ಕಿಂತ ನಡುವ ಭಾಳ ಜೋರದ. ದೇವರs ಸಹಾಯ ಮಾಡಬೇಕು ನಮಗ. ದಕ್ಷಿಣದಕಡೆ ಭಾಳ ಜೋರಲೆ ಆರ್ಭಟ ನಡದದ. ಗಾಳಿಗುಂಟ ತೆರಿ ಎದ್ಧಂಗ ಇದು ಇನ್ನೂ ಜೋರಾಗಬಹುದು ಅಂತ ಅನಸ್ತದ.
(ಟೇಬಲ್ಲಿನ ಕಡೆಗೆ ಗಂಟಿನೊಂದಿಗೆ ಹೋಗುತ್ತಾಳೆ) ಈಗ ಉಚ್ಚಲೇನು ?
ಕ್ಯಾಟಲಿನ್‌ : ನಾವು ಮಾತಾಡೋದು ಕೇಳಿಸಿ, ಎಚ್ಚರಾಗಿ, ನಾವು ಬಿಚ್ಚೋದಕ್ಕಿಂತ. ಮೊದಲs ಆಕಿ ಇಲ್ಲಿ ಬಂದು ಬಿಡಬಹುದು (ಟೇಬಲ್ಲಿನ ಹತ್ತಿರ ಬರುತ್ತ) ಮ್ಯಾಲೆ ನಾವಿಬ್ಬರೂ ಇಲ್ಲಿ ನಿಂತು ಜೋರಾಗಿ ಮಾತಾಡಲಿಕ್ಕೆ ಹತ್ತಿ ಭಾಳ ಹೊತ್ತಾತು.
ನೋರಾ : (ಒಳಗಿನ ಕೋಣೆಗೆ ಹೋಗಿ ಆಲಿಸುತ್ತ) ಕ್ಯಾಟಲಿನ್, ಅಕಿ ತನ್ನ ಹಾಸಗೀ ಮ್ಯಾಲೆ ಸರಿದಾಡಲಿಕ್ಕೆ ಹತ್ತ್ಯಾಳ. ಇನ್ನೊಂದು ನಿಮಿಷದಾಗ ಹೊರಗೆ ಬರಬಹುದು.
ಕ್ಯಾಟಲಿನ್ : ಆ ನಿಚ್ಚಣಿಕಿ ತಾ ಇಲ್ಲೆ. ಆ ಮ್ಯಾಲಿದ್ದ ಹುಲ್ಲಿನಾಗ ಮುಚ್ಚಿಟ್ಟಿಬಿಡತೇನಿ.
ಅಂದ್ರ ಅಕಿಗೆ ಇದರ ಬಗ್ಗೆ ಏನೂ ತಿಳಿಲಿಕ್ಕಿಲ್ಲಾ…ತೆರಿ ಮತ್ತ ಏರಲಿಕ್ಕೆ ಹತ್ತಿಧಂಗ ಅವ್ವಾ ಸಮುದ್ರದ ಕಡೇನs ಹೋಗಿ ಅಂವಾ ಪೂರ್ವದ ಕಡೆಂದ ತೇಲಿಕ್ಕೆ ಹತ್ಯಾನೇನಂತ ನೋಡಬಹುದು.
(ಹೊಗೆಮಾಡದ ಮೂಲೆಯಲ್ಲಿ ನಿಚ್ಚಣಿಕೆ ಇಡುತ್ತಾರೆ. ಕ್ಯಾಟಲಿನ್ ಕೆಲವು ಹಲ್ಲುಗಳನ್ನು ಹತ್ತಿ ಮೇಲಿದ್ದ ಒಣಗಿದ ಹುಲ್ಲಿನಲ್ಲಿ ಗಂಟನ್ನು ಮುಚ್ಚಿಡುತ್ತಾಳೆ. ಮಾರಿಯಾ ಒಳಗಿನಿಂದ ಬರುತ್ತಾಳೆ)
ಮಾರಿಯಾ : (ಕ್ಯಾಟಲಿನ್‌ಳ ಕಡೆಗೆ ನೋಡುತ್ತ ಜಗಳವಾಡುವ ಧ್ವನಿಯಲ್ಲಿ) ಇವತ್ತ ಮುಂಜಾನೆ ಮತ್ತ ರಾತ್ರಿಗೆ ಸಾಕಾಗೋ ಅಷ್ಟು ಹುಲ್ಲದಿಲ್ಲೊ
ಮನ್ಯಾಗ ?
ಕ್ಯಾಟಲಿನ್ : ಸ್ವಲ್ಪ ಹೊತ್ತಿನಿಂದ ಆ ಬೆಂಕ್ಯಾಗ ಕೇಕ್ ಬೇಯಿಸಲಿಕ್ಕೆ ಇಟ್ಟಿದ್ದೆ.
(ಮೇಲಿನಿಂದ ಹುಲ್ಲಿನ ಪೆಂಡಿ ಒಗೆಯುತ್ತ) ತೆರಿ ಇಳದ ಮ್ಯಾಲೆ ಕೊನ್ನೆ ಮಾರಾಕ್ಕ ಹೋಗೋ ಮುಂದ ಬಾರ್ಟ್ಲೆಗ ಬೇಕಾಗತದ ಅದು.
(ಕ್ಯಾಟಲಿನ್ ಒಗೆದ ಹುಲ್ಲನ್ನು ನೋರಾ ಒಲೆಯ ಮುಂದೆ ಹರಡುತ್ತಾಳೆ)
ಮಾರಿಯಾ : (ಬೆಂಕಿಯ ಮುಂದಿದ್ದ ಸ್ಟೂಲಿನ ಮೇಲೆ ಕೂಡ್ರುತ್ವ) ಇವತ್ತೇನ ಬಾರ್ಟ್ಲೆ ಹೋಗಲಿಕ್ಕಿಲ್ಲಾ, ಯಾಕಂದರ ಉತ್ತರಾ ಮತ್ತ ದಕ್ಷಿಣದ ಕಡೆಯಿಂದ ಗಾಳಿ ಒಂದಸವನ ಏರಲಿಕ್ಕೆ ಹತ್ತೇದ. ಅಂವಾ ಇವತ್ತ ಹೋಗೂದಿಲ್ಲಾ. ಯಾಕಂದರ ಆ ಪಾದ್ರಿ ಎಲ್ಲಿದ್ರೂ ಇಂವನ್ನ ಹಿಡಿದು ನಿಲ್ಲಸಾನ.
ನೋರಾ : ಅವ್ವಾ, ಅಂವಾ ಏನ ಇವನ್ನ ತಡಿಹಿಡಿಯೂದಿಲ್ಲಾಂತ ಹೇಳಿದ ಮ್ಯಾಲೆ
ಎಮನ್, ಸಿಮನ್, ಸ್ಟೀಫನ್, ಪೆಟ್ಟಿ, ಮತ್ತ ಕೋಲಮ್ ಶಾನ್
ಎಲ್ಲಾರೂ ಇಂವಾ ಹೊಗತಾನಂತ ಮಾತಾಡೋದನ್ನ ಕೇಳಿದ್ದೆ.
ಮಾರಿಯಾ : ಬಾರ್ಟ್ಲೆ ಇದ್ಯಾನರ ಎಲ್ಲಿ ?
ನೋರಾ : ಈ ವಾರದಾಗ ಸಮುದ್ರದ ನಡುವ ಯಾವರ ಹಡಗಾ ತೇಲತಾವೇನಂತ ನೋಡಲಿಕ್ಕೆ ಹೋಗ್ಯಾನ.
ಕ್ಯಾಟಲಿನ್ : ಆ ದೊಡ್ಡ ಕಲ್ಲಿನ ಮ್ಯಾಲಿಂದ ಯಾರೋ ನಡೆದ ಬರೋಹಂಗ ಕೇಳಸ್ತದ ನನಗ.
ನೋರಾ : (ಹೊರಗೆ ನೋಡಿ) ಬಾರ್ಟ್ಲೆನ ಬರಲಿಕ್ಕೆ ಹತ್ತ್ಯಾನ. ಗಡಿಬಿಡಿ ಒಳಗ ಇದ್ದಂಗ ಕಾಣಸ್ತಾನ.
ಬಾರಟ್ಲೆ : (ಒಳಗೆ ಬಂದು ಕೋಣೆಯಲ್ಲೆಲ್ಲಾ ನೋಡಿ ಖಿನ್ನ ಹಾಗೂ ಶಾಂತವಾಗಿ)
ಆ ಕೊನ್ನೆಮಾರಾದೊಳಗಿಂದ ತಂದ ತುಂಡ ಹಗ್ಗ ಎಲ್ಲೆದ ನೋಡಿ ಏನು ಕ್ಯಾಟಲಿನ್‌ ?
ಕ್ಯಾಟಲಿನ್ : (ಕೆಳಗೆ ಬರುತ್ತ) ಏ ಮೇರಾ ಆ ಬಿಳೆ ಬಣ್ಣದ ಬೋರ್ಡಿನ ಮಳಿಗೆ ಸಿಕ್ಕೊಂಡದ ನೋಡು. ಕೊಡು ಅವಂಗ ಅದ್ನ. ಇವತ್ತ ಮುಂಜಾನೆ ನಾನs ಜೋತಬಿಟ್ಟಿದ್ದೆ. ಯಾಕಂದರ ಕರೆ ಕಾಲಿನ ಹಂದಿ ಅದನ್ನ ತಿನಲಿಕ್ಕೆ ಹತ್ತಿತ್ತು.
ನೋರಾ : (ಹಗ್ಗ ಕೊಡುತ್ತ) ಇದೂ ಹೌದಿಲ್ಲೊ ನಿನಗ ಬೇಕಾಗಿದ್ದು ಬಾರಟ್ಲೆ ?
ಮಾರಿಯಾ : ಆ ಬೋರ್ಡಿಗೆ ತೂಗ ಬಿಟ್ಟಿದ್ದ ಹಗ್ಗಾ ಬಿಟ್ಟ ಹೋದರು ನಿನಗೇನ
ತ್ರಾಸಿಲ್ಲ ಬಾರಟ್ಲೆ. (ಭಾರಟ್ಲೆ ಹಗ್ಗವನ್ನು ತೆಗೆದುಕೊಳ್ಳುತ್ತಾನೆ.) ಇಲ್ಲಿ ಅದರ ಜರೂರು ಬೀಳಬಹುದು. ನಾ ನಿನಗೆ ಹೇಳಬೇಕಂದರ : ಒಂದ ವ್ಯಾಳ್ಯಾ ಮೈಕೇಲ್‌ನ ದೇಹಾ ಸಮುದ್ರದಾಗಿಂದ ತೊಯಿಸಿಕೊಂಡು, ಇವತ್ತ ಮುಂಜಾನ್ಯಾಗಲಿ ನಾಳಿದ್ದಾಗಲಿ ಅಥವಾ ಈ ವಾರದಾಗಿನ ಯಾವದರ ಮುಂಜಾನ್ಯಾಗಲಿ ಬಂದರ ನಾನು ದೇವರ ದಯದಿಂದ ಅವಗೊಂದ ದೊಡ್ಡ ಗೋರಿ ತೋಡರ್ಬೇಕಾಗೇದ.
ಬಾರಟ್ಲೆ : (ಹಗ್ಗದೊಂದಿಗೆ ಕೆಲಸ ಮಾಡುತ್ತ) ನಾ ಏನ ರಸ್ತೆದ ಮ್ಯಾಲೆ ಎಲ್ಲೂ ನಿಲ್ಲಬೇಕಾಗಿಲ್ಲ. ಯಾಕಂದರ ಈ ಹೆಣ್ಣ ಕುದರಿ ಮ್ಯಾಲೆ ಸವಾರಿ ಮಾಡೋವಿದ್ದೇನಿ. ಲಗೂನ ಹೊಗಬೇಕಾಗದ ನನಗ. ಈ ಎರಡು ವಾರದಾಗ ಒಂದೂ ಒಂದು ಬೋಟು ಹೋಗೂಹಂಗದ. ಈ ಸಲದ ಜಾತ್ರಿ ಕುದುರಿಗಳಿಗೆ ಒಳ್ಳೆದಂತ ಕೆಳಗಡೆ ಜನಾ ಮಾತಾಡತಿದ್ರು.
ಮಾರಿಯಾ : ನೀನೂ ಒಬ್ಬಾವಾ, ಆ ಸಮುದ್ರದೊಳಗ ತೋಯಿಸಿಗೊಂಡಿ ಅಂದರs. ಕಾಫಿನ್ ಮಾಡಲಿಕ್ಕೆ ಯಾರಿಲ್ಲಂತಾರ ಆ ಕೆಳಗಿನ ಜನಾ. ಮ್ಯಾಲೆ ನನಗಂತ
ಕೊನ್ನೆಮಾರಾದಿಂದ ತರಸಿದ ಬಿಳೆಫಳಿ ಹೆಂಗ ನಿಂಶಾವ ನೋಡು. (ಫಲಗಳತ್ತ ನೋಡುವಳು).
ಬಾರಟ್ಲೆ : ಈ ಸಮುದ್ರಾ, ನನ್ನ ಎಳಕೊಂಡ ಹೋಗಲಿಕ್ಕೆ ಹೆಂಗ ಸಾಧ್ಯದ. ಈ ಒಂಬತ್ತ ದಿನದಿಂದ ನಾಮಾ ನೋಡಿಲ್ಲ. ಅಷ್ಟೇನ ಜೋರದಂತ ಅನಸುದಿಲ್ಲಾ. ಈಗ, ಉತ್ತರ-ದಕ್ಷಿಣದ ಗಾಳಿಗೆ ಜೋರಾಧಂಗ ಕಾಣಸ್ತದ.
ಮಾರಿಯಾ : ಅದು ಒಂದ ಸಲಕ್ಕ ಕಾಣದಿದ್ದರೂ, ಗಾಳಿ, ಸಮುದ್ರದಾಗಿಂದ ಉಕ್ಕೇರಲಿಕ್ಕೆ ಹತ್ತಿದ್ದಂತೀ ಸುಳ್ಳಲ್ಲ. ಬಾರಟ್ಲೆ ನೀ ಹೋಗೊ ಜಾತ್ರಿಗೆ ನೂರು ಕುದರಿ ಬರಬಹುದು, ಸಾವಿರ ಬರಬಹುದು, ಆದರೆ ಒಬ್ಬ ಜೀವಂತ ಇರೋ ಮಗನ ಮುಂದ ಸಾವಿರ ಕುದರಿ ಕಿಮ್ಮತ್ತು ಎಷ್ಟಾದೀತು?
ಬಾರಟ್ಲೆ : (ಕ್ಯಾಟಿಲಿನ್‌ಳಿಗೆ) ಪ್ರತಿದಿನಾ ಬಾರ್ಲಿ ಬೆಳದ ಕಡೆ ತುಡುಗು ದನಗೊಳು ಹೊಕೊಳ್ಳಧಂಗ ನೋಡಿಕೊ. ಮತ್ತ ಒಳ್ಳೆ ರೊಕ್ಕಕ್ಕ ಆ ಕರೆ ಕಾಲಿನ
ಹಂದಿ ಮಾರಾಟಾಗತ್ತಿದ್ದರ ಮಾರಾಟಾ ಮಾಡಿಬಿಡು.
ಮಾರಿಯಾ : ಆ ಹಂದಿಗೆ ಎಷ್ಟ ರೊಕ್ಕ ಸಿಕ್ಕಿತೊ ?
(ಅಳುವ ಧ್ವನಿಯಲ್ಲಿ) ನೀನೂ ಉಳದವರಹಂಗ ಮುಳುಗಿ ಹೋದೆಂದರೆ ಎಷ್ಟs, ತ್ರಾಸದ ನೋಡು ಬಾರಟ್ಲೆ., ಗೋರಿ ಹಾದಿ ಕಾಯಲಿಕ್ಕೆ ಹತ್ತಿದ ನನಗ, ಈ ಸಣ್ಣ ಹೆಣ್ಣ ಮಕ್ಕಳ ಸಂಗತಿ ಇರೋ ಕಾಲ ಎಲ್ಲಿ ಬರತರೋ ಏನೋ ?
(ಭಾರಟ್ಲೆ ಹಗ್ಗವನ್ನು ಕೆಳಗಿಡುತ್ತ ತನ್ನ ಹಳೆಯ ಕೋಟನ್ನು ಬಿಚ್ಚಿ
ಇನ್ನೊಂದು ಹೊಸದನ್ನು ಹಾಕಿಕೊಳ್ಳುವನು.)
ಬಾರಟ್ಲೆ : (ತನ್ನ ಪಾಕೀಟು ಹಾಗೂ ತಂಬಾಕ ತೆಗೆದುಕೊಳ್ಳುತ್ತ) ನನಗ ಹೋಗಲಿಕ್ಕೆ ಇನ್ನs ಆರ್ಧಾ ತಾಸು ಅಷ್ಟs ಉಳದದ. ನಾ ಬರೋದನ್ನ ನೀವೆನೂ ಅಷ್ಟು ಕಾದು ನೋಡಬೇಕಾಗಿಲ್ಲ. ಯಾಕಂದರ ನಾ ಬರೋದು ಬಹಾಳಂದ್ರ ಎರಡ ದಿನಾ ಅಥವಾ ಮೂರ ದಿನಾ ಗಾಳಿ
ಭಾಳ ಜೋರಿತ್ತಂದರ ನಾಲ್ಕು ದಿನಾ ಆಗಬಹುದು.
ಮಾರಿಯಾ : (ಬೆಂಕಿಯ ಕಡೆ ತಿರಗುತ್ತ ತನ್ನ ಕೈಯಲ್ಲಿಯ ಶಾಲನ್ನು ತಲೆಯ ಮೇಲೆ ಹೊದೆಯುತ್ತಾಳೆ) ಇಂವ, ಒಬ್ಬ ಕ್ರೂರ ಮನುಷ್ಯಾ ಅಲ್ಲ…ನನ್ನಂಥಾ ಮುದುಕಿ ಮಾತು ಕೇಳ್ಳಿಕ್ಕೇ ತಯಾರಿಲ್ಲಾ. ಸಮುದ್ರದಿಂದ ದೂರ ಸರಸಬೇಕಂದರು ಸರಿವಲ್ಲ.
ಕ್ಯಾಟಲಿನ್ : ಅವ್ವಾ, ಅದು ಸಮುದ್ರದ ಮ್ಯಾಲೆ ಸವಾರಿ ಮಾಡೋ ಒಂದ ಜೀವ ಅದ. ಹಿಂಗಿದ್ದಾಗ, ಯಾರು ಒಬ್ಬ ಮುದುಕಿ ಮಾತ ಕೇಳಿಕ್ಕೇ, ಅಕಿ ಅದರ ಬಗ್ಗೆ ಎಷ್ಟ ಹೇಳಿದರು ತಯಾರಿರತಾರ ?
ಬಾರಟ್ಲೆ : (ಹಗ್ಗವನ್ನು ತೆಗೆದುಕೊಳ್ಳುತ್ತ) ನನಗ ಭಾಳ ಲಗು ಹೋಗಬೇಕಾಗದ. ಆ ಕೆಂಪ ಕುದರಿ ಮ್ಯಾಲೆ ಹತ್ತಿ ಹೊಗತಿನಿ. ಅದರ ಹಿಂದಿಂದ ಆ ಕರೆ ಕುದರಿಮರಿ ಬರತಿರತದ. ಆ ದೇವರ ದಯಾ ನಿಮ್ಯಾಲಿರಲಿ. ನಾ ಇನ್ನ ಬರತಿನಿ, (ಹೋಗುವನು)
ಮಾರಿಯಾ : (ಅವನು ಬಾಗಿಲಲ್ಲಿ ಇರುವಾಗಲೇ ಜೋರಾಗಿ ಅಳುತ್ತ) ಅಂವಾ ಹೋದಾ. ಅವನ್ನ ಇನ್ನೊಮ್ಮೆ ನನ್ನ ಕಡೆಂದ ನೋಡಲಿಕ್ಕೆ ಸಾಧ್ಯನs ಇಲ್ಲಾ. ದೂರ ಹೋದ ಆಂವಾ, ಈ ಕತ್ತಲ ರಾತ್ರಿ ಬಿಳೋದರಾಗ ಈ ಜಗತ್ತಿನ್ಯಾಗ ನನ್ನ ಗಂಡಸ ಮಕ್ಕಳು ಯಾವೂ ಇರೋದಿಲ್ಲಾ.
ಕ್ಯಾಟಲಿನ್ : ಅವ್ವಾ, ನೀನು ಅವಗ ಇಂಥಾ ಅಪಶಕುನದ ಮಾತಾಡೋದರ ಬದಲಿ’ ಆಶೀರ್ವಾದ ಮಾಡಿದ್ದರಾಗಿತ್ತು. ಇದರ ಬಗ್ಗೆ ಬಾರಟ್ಲೆಗೆಷ್ಟು ತ್ರಾಸಾಗಿರಬಹುದು ವಿಚಾರ ಮಾಡು.
(ಮಾರಿಯಾ ಇಕ್ಕಳವನ್ನು ಒಲೆಯಲ್ಲಿಯ ಕೆಂಡದಲ್ಲಿ ಯಾವ ಉದ್ದೇಶವಿಲ್ಲದೆ ಆಡಿಸುತ್ತಾಳೆ).
ನೋರಾ : (ಅವಳ ಕಡೆ ತಿರುಗುತ್ತ) ಆ ಜೆಯಿಸಲಿಕ್ಕಿಟ್ಟ ಕೇಕಿನ ಮ್ಯಾಲಿನ ಹುಲ್ಲೆಲ್ಲಾ ಯಾಕ ಕೆಡಸತಿದಿ ?
ಕ್ಯಾಟಲಿನ್ : (ದೊಡ್ಡದಾದ ಧನಿಯಲ್ಲಿ) ದೇವರ ನಮ್ಮನ್ನು ಕ್ಷಮಸಪಾ, ನೋರಾ, ನಾಮ ಬಾರಟ್ಟೆಗ ಕೊಡೊ ಬ್ರೆಡ್ಡು ಇಲ್ಲೆ ಉಳದದ. (ಬೆಂಕಿಯ
ಹತ್ತಿರ ಬರುತ್ತಾಳೆ).
ಮೊರಾ : ಬೆಳಗುಮುಂಜಾನೆಯಿಂದನ ಏನೂ ತಿಂದಿಲ್ಲ ಆಂವಾ. ಅವನ ರಾತ್ರಿಯ ಈ ಪ್ರಯಾಣದಾಗ ಈ ಕೇಕು ಹಳಸಿಬಿಡಬಹುದು.
ಕ್ಯಾಟಲಿನ್ : (ಕೇಕನ್ನು ಒಲೆಯೊಳಗಿಂದ ತೆಗೆಯುತ್ತ) ಈ ಮುದುಕಿ, ಮಾತಾಡೊ ಮಾತಿನೊಳಗ ಮನ್ಯಾಗಿನವರ ಲಕ್ಷ್ಯಾನ ಕಳಧಾಂಗಾಗೇದ. ನೋರಾ ಕೇಕು ಹೊತ್ತಿ ಹೋಗೆದ. (ಮಾರಿಯಾ ತಾನು ಕುಳಿತ ಸ್ಟೂಲಿನ ಮೇಲೆಯೇ ಸರಿದಾಡುತ್ತಾಳೆ. ಕ್ಯಾಟಲಿನ್ ಬ್ರೆಡ್ಡಿನ ಕೆಲವು ಭಾಗವನ್ನು ಕೊಯ್ದು ಅರಿವೆಯಲ್ಲಿ ಸುತ್ತಿ ಮಾರಿಯಾಳಿಗೆ ಕೊಡುತ್ತ) ಕೆಳಗಡೆ ಭಾವಿ ಹತ್ತರ ಹೋಗತಿರಬೇಕು. ಲಗೂನ ಹೋಗಿ ಇದನ್ನ ಕೊಟ್ಟು, ಈ ಮೊದಲೆಕ್ಕ ಆಡಿದ ಮಾತು ಮರತು ದೇವರ ಆಶೀರ್ವಾದ ನನ್ನ ಮ್ಯಾಲೆ ಇರಲಿ ಅಂತ ಹೇಳಿಬಾ.
ಮಾರಿಯಾ : (ಬ್ರೆಡ್ಡನ್ನು ತೆಗೆದುಕೊಳ್ಳುತ್ತ) ಅವನಷ್ಟs ಲಗೂನ ನನ್ನ ಕಡೆಂದ ಹೋಗಲಿಕ್ಕೆ ಸಾಧ್ಯ ಆದಿತ ?
ಕ್ಯಾಟಲನ್ : ಸಟ್, ಸಟ್ ಹೆಜ್ಜಿ ಹಾಕಿದರ ಸಾಧ್ಯದ.
ಮಾರಿಯಾ : (ಅಸ್ತವ್ಯಸ್ತ ರೀತಿಯಲ್ಲಿ ನಿಲ್ಲುತ್ತ) ಇಂಥಾ ಮುದಕಿಗೆ ಹಂಗ ನಡಿಲಿಕ್ಕೆ ಕಠಿಣಾಗತದ ಕ್ಯಾಟಲಿನ್.
ಕ್ಯಾಟಲಿನ್ : (ಉದ್ವೇಗದಿಂದ) ನೋರಾ, ಅಕಿಗೆ ಕೈಯ್ಯಾಗ ಹಿಡಿಲಿಕ್ಕೆ ಬಡಿಗಿ ಕೊಡು ಇಲ್ಲಿಕ್ಕರ, ದೊಡ್ಡ ಕಲ್ಲಮ್ಯಾಲೆ ಜಾರಕೊಂಡು ಬಿದ್ದಾಳು.
ನೋರಾ : ಯಾವ ಬಡಿಗ್ಯ… ?
ಕ್ಯಾಟಲಿನ್ : ಅದನು ಮೈಕೆಲ್, ಕೊನ್ನೆಮಾರಾದಿಂದ ತಂದದ್ದು.
ಮಾರಿಯಾ : (ನೋರಾಳಿಂದ ಬಡಿಗೆ ಇಸಿದುಕೊಳ್ಳುತ್ತ) ಈ ಜಗತ್ತಿನ್ಯಾಗ ಮುದುಕರು ತಮ್ಮ ಮಕ್ಕಳು ಮರಿಗಳಿಗೆ ಕೆಲವೊಂದನ್ನ ಬಿಟ್ಟ ಹೋಗತಿರತಾರ ; ಆದರೆ ಈ ಜಗದಾಗ ಹರೆದವರ ಮುದುಕರಿಗೆ ಸಾಮಾನಾ ಬಿಟ್ಟ ಹೋಗ್ಯಾರ. ಎಲ್ಲಾ ವಿರುದ್ಧ ನ.
(ಮಾರಿಯಾ ಸಾವಕಾಶವಾಗಿ ಹೊರಗೆ ಹೋಗುತ್ತಾಳೆ. ನೋರಾ ನಿಚ್ಚಣಿಕೆ ಕಡೆಗೆ ಹೋಗುತ್ತಾಳೆ.)
ಕ್ಯಾಟಲಿನ್ : ಸ್ವಲ್ಪ ತಡಿ, ಈಗ ಮತ್ತ ಹೊಳ್ಳಿ ಬಂದಾಳು. ಅಕಿನ್ನ ನೋಡಿದರs ಕೆಟ್ಟನಸ್ತದ. ದೇವರ ನೋಡಕೊಬೇಕಕಿನ್ನ. ನೀನಗರ ಅಕಿ ಸ್ಥಿತಿ
ಅರ್ಥವಾಗವಲ್ಲತು.
ನೋರಾ : ಆ ಬೇಲಿ ದಾಟಿ ಹೋಗ್ಯಾಳೆನು ?
ಕ್ಯಾಟಲಿನ್’ : (ಹೊರಗೆ ನೋಡುತ್ತ) ಲುಗುನ ಕೆಳಗ ಒಗಿ ಅದನ. ದೇವರಿಗೆ ಗೊತ್ತು.
ಈ ಸಂಕಟದಾಗಿಂದ ಆಕಿ ಯಾವಾಗ ಪಾರಾಗತಾಳಂತ.
ನೋರಾ : (ಹುಲ್ಲಿನೊಳಗೆ ಮುಚ್ಚಿದ್ದ ಗಂಟನ್ನು ತೆಗೆಯುತ್ತ) ಆ ಪಾದ್ರಿ, ನಾಳೆ ಇಲ್ಲೆ ಹಾದು ಹೋಗತಿರತಾನಂತ ; ಒಂದವ್ಯಾಳ್ಯಾ ಇವು ಮೈಕೆಲ್ಲನವs ಇದ್ದರ, ಅವೆಗಷ್ಟು ತಿಳಸಬೇಕಂತ.
ಕ್ಯಾಟಲಿನ್ : (ಗಂಟನ್ನು ಕೈಗೆ ತೆಗೆದುಕೊಳ್ಳುತ್ತ) ಇದು ಹಂಗ ಸಿಕ್ಕಿತು ಅಂತ ಏನರ ಹೇಳಿದರೇನು ?
ನೋರಾ : (ಕೆಳಗಿಳಿಯುತ್ತ) ಉತ್ತರದ ಕಡೆ ಇರೋ ಬಂಡಿಗಲ್ಲ ಹತ್ತರ ಸಣ್ಣ ಡೋಣ್ಯಾಗ ಕೂತು ಇಬ್ಬರು ಹುಟ್ಟಾಡಸ್ತಿದ್ದರಂತ, ಮುಂಜಾನೆ ಹುಂಜಾ ಒದರೊ ಹೊತ್ತಿಗೆ ಒಂದ ಹುಟ್ಟಿಗೆ ಈ ಗಂಟು ಹತ್ತಿತಂತ ಹೇಳಿದಾ.
ಕ್ಯಾಟಲಿನ್ : (ಬಿಚ್ಚಲು ಪ್ರಯತ್ನಿಸುತ್ತ) ಏ ನೋರಾ ಒಂದು ಚಾಕು ಇದ್ದರ ಕೊಡು. ಒಂದು ವಾರದ ತನಕಾ ಉಪ್ಪಿನನೀರು ಬಡಿಸಿಕೊಂಡ ಈ ಹಗ್ಗಾ ಕಟಿಗಿ ಆಧಂಗ ಆಗೇದ. ಮ್ಯಾಲೆ ಬ್ಯಾರೆ, ಒಂದ ವಾರ ಪ್ರಯತ್ನಬಟ್ಟರೂ ಉಚ್ಚಲಿಕ್ಕೆ ಬಾರದಂತಾ ಕರೆ ಗಂಟ ಹಾಕ್ಯಾರ.
ನೋರಾ : (ಚಾಕು ಕೊಡುತ್ತ) ಡೊನೆಗಾಲಗೆ ಹೋಗಲಿಕ್ಕೆ ಹಾದಿ ಭಾಳ ದೂರದ್ದಂತೆ ಕೇಳೆನಿ, ಹೌದೆನು ಕ್ಯಾಟಲಿನ್‌ ?
ಕ್ಯಾಟಲಿನ್ : (ಹಗ್ಗವನ್ನು ಕತ್ತರಿಸುತ್ತ) ಹೌದು, ಭಾಳ ದೂರದ. ಈಗ ಸ್ವಲ್ಪ ವ್ಯಾಳ್ಯಾದ ಹಿಂದ ಚಾಕು ಮಾರಲಿಕ್ಕೆ ಬಂದವಾ ಹೇಳತಿದ್ದ. ಆ ದೊಡ್ಡ
ಬಂಡಿಗಲ್ಲಗಳಿರೊ ಹಾದಿಲೇ ನಡದರ ಒಂದ ವಾರ ಬೇಕಂತ.
ನೋರಾ : ಯಾವ ಮನಷ್ಯಾಗ ಎಷ್ಟ ವ್ಯಾಳ್ಯಾ ತಗೊಬೇಕಾಗೆದ. ಆಗಳೆ ಅಂವಾ ತೇಲಿಕ್ಕೆ ಹತ್ತಿದ್ದಾನು.
(ಕ್ಯಾಟಲಿನ್ ಆ ಗಂಟನ್ನು ಉಚ್ಚುತ್ತ ಒಂದು ಶರ್ಟು ಹಾಗೂ ಕಾಲಚೀಲವನ್ನು ಹೊರಗೆ ತೆಗೆಯುತ್ತಾಳೆ. ಇಬ್ಬರು ಆತುರದಿಂದ ನೋಡುತ್ತಾರೆ).
ಕ್ಯಾಟಲಿನ್ : (ಸಣ್ಣ ಧ್ವನಿಯಲ್ಲಿ) ಏ ನೋರಾ ನೋಡಿಲ್ಲೆ. ದೇವರೂ ದಯ ತೋರಿಸಬೇಕು ನಮಗ. ಇವು ಮೈಕೆಲ್‌ನವಂತ ಕಾಣಸ್ತದ. ಹಂಗಿತ್ತೆಂದರs
ನಾವುಹಂಗ ಹೇಳಬೇಕು ಅಕಿಗೆ.
ನೋರಾ : ಸ್ವಲ್ಪ ತಡಿ, ಅಂವಾ ಆ ದಿವಸ ಹಕ್ಕೊಂಡ ಅಂಗಿ ಇದ್ದರ ಹೋಲಿಸಿ ನೋಡಬಹುದು. (ಮೂಲೆಯಲ್ಲಿ ಜೋತುಬಿಟ್ಟಿದ್ದ ಅರಿವೆಗಳಲ್ಲಿ ಹುಡುಕುತ್ತ) ಕ್ಯಾಟಲಿನ್, ಇವುಗಳ ಸಂಗತಿ ಎಲ್ಲೂ ಕಾಣಸವಲ್ತಿದು.
ಕ್ಯಾಟಲಿನ್ : ಇವತ್ತ ಮುಂಜಾನೆ ಬಾರಟ್ಲೆ, ತನ್ನ ಅಂಗಿ ಉಪ್ಪಿನ ನೀರಿನಿಂದ ಒಜ್ಜಾ ಆಗಿದ್ದಕ್ಕೆ ಅದನ್ನ ಹಾಕ್ಕೊಂಡಿದ್ದಾ (ಮೂಲೆಯ ಕಡೆಗೆ ಕೈ ಮಾಡುತ್ತ) ಆ ಇನ್ನೊಂದ ಅಂಗಿ ತೋಳ ನೋಡೋಣ ತಾ ಇಲ್ಲೆ. ಅದರದು, ಇದರದು ಒಂದs ಅದ.
(ನೋರಾ ಕೊಡುತ್ತಾಳೆ. ಅವರು ಹೋಲಿಸಿ ನೋಡುತ್ತಾರೆ) ಅದನs ಇದು ನೋರಾ. ಆದರ ಗಾಲವೇದೊಳಗಿನ ಅಂಗಡ್ಯಾಗ ಕೊಂಡ ಬ್ಯಾರೇದವರ ಅಂಗಿ ಹಿಂಗಿರಲಿಕ್ಕಿಲ್ಲೇನು ?
ನೋರಾ : (ಕಾಲಚೀಲವನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನ ಹೆಣಿಕೆಗಳನ್ನು ಎಣಿಸಿ ಆಳುವ ಧ್ವನಿಯಲ್ಲಿ) ಕ್ಯಾಟಲಿನ್ ಇವೆಲ್ಲಾ ಮೈಕೆಲ್ಲನವ. ದೇವರು ಅವನ ಆತ್ಮಾಕ್ಕೆ ಶಾಂತಿ ಸಿಗಲಿ, ಆದರೆ ಇದನ್ನು ಕೇಳಿದ ಮ್ಯಾಲೆ ಅವ್ವನ ಸ್ಥಿತಿ ಏನಾಗಬಹುದು ? ಅಥವಾ ಸಮುದ್ರದ ಮ್ಯಾಲಿನ ಬಾರಟ್ಲೆಗೆ ಏನನಸಬಹುದು ?
ಕ್ಯಾಟಲಿನ್ : (ತನ್ನ ಕೈಯಲ್ಲಿ ತೆಗೆದುಕೊಳ್ಳುತ್ತ) ಇದು ಬರಿ, ಸಾದಾ ಕಾಲಚೀಲಂತ ಕಾಣಸ್ತದ.
ನೋರಾ : ನಾನು ಮೂರು ಜತಿ ಹೆಣದಿದ್ದರಾಗ, ಇದು ಎರಡನೆದ್ದು. ನಾನು ಇದಕ್ಕ ಇಪ್ಪತ್ತು ಹೆಣಕಿ ಹಾಕಿದ್ದೆ. ಆದರಾಗ ನಾಲ್ಕು ತಪ್ಪಿದ್ದವು.
ಕ್ಯಾಟಲಿನ್ : (ಎಣಿಸುತ್ತ) ಅವs ಹೆಣಿಕಿ ಅವ ಅಲ್ಲಾ ಇದರಾಗ. (ಅಳುತ್ತ) ಮೈಕೆಲ್ಲ -ಉತ್ತರದ ಅಂಚಿನ್ಯಾಗ ತೇಲಲಿಕ್ಕೆ ಹತ್ತ್ಯಾನಂತ ನೆನಿಸಿಕೊಂಡರ ಕಸಿವಿಸಿ ಆಗತದ. ಅವನ್ನ ನೋಡೆರ ಅಳಬೇಕೆಂದರರೂ ಇರಿಲ್ಲಾ. ಬರೇ ಸಮುದ್ರದ ಮ್ಯಾಲೆ ಹಾರಾಡೊ ಹದ್ದುಗಳಿರಬಹುದು.
ನೋರಾ : (ಅರಿವೆಗಳನೆಲ್ಲಾ ಸುತ್ತಿ, ಅಮುಕಿ ಹಿಡಿಯುತ್ತಾಳೆ) ಅಂಥಾ, ಒಬ್ಬ ನಾವಿಕಾ ಮತ್ತ ಮೀನಗಾರಿದ್ದವಾ ಬರೇ ಒಂದು ಹರಕ ಅಂಗಿ ಮತ್ತ ಕಾಲಚೀಲಾ ಬಿಟ್ಟಹೋಗ್ಯಾನಂದರ ಕೆಟ್ಟನಸ್ತದ.
ಕ್ಯಾಟಲಿನ್ : (ಸ್ವಲ್ಪ ಸಮಯದ ನಂತರ) ಯಾರೋ ಹಾದಿ ಮ್ಯಾಲೆ ನಡದ ಬರೋದು ಕೇಳಸ್ತದ ನನಗ. ಅವ್ವಾ ಬರಲಿಕ್ಕೆ ಹತ್ತ್ಯಾಳೇನು ನೋಡು ನೋರಾ.
ನೋರಾ : (ನೋಡುತ್ತ) ಅವಳs ಬರಲಿಕ್ಕೆ ಹತ್ಯಾಳ. ಈಗ ಬಾಗದ ಹತ್ತರ ಬಂದಾಳ.
ಕ್ಯಾಟಲಿನ್ : ಅಕಿ ಬರೋಕು ಮುಂಚೆ ಇವನ್ನ ತಗದಿಟ್ಟು ಬಿಡು. ಬಾರಟ್ಲೇಗ್ ಆಶೀರ್ವಾದ ಮಾಡಿದ ಮ್ಯಾಲೆ ಹಗುರಾಗಿರಬೇಕು ಅಕಿ ಮನಸ್ಸು. ಆದರ ಅಕಿ ಹೊರಗ ಹೋದಾಗ ಇಲ್ಲಿ ನಡದದ್ದು ಮಾತ್ರ ಅಕಿಗೆ ತಿಳಿಬಾರದು.
ನೋರಾ : (ಕ್ಯಾಟಲಿನ್‌ಗೆ ಅರಿವೆ ಗಂಟನ್ನು ಕಟ್ಟಲು ಸಹಾಯ ಮಾಡುತ್ತ) ನಾವು
ಅದನ್ನ ಮೂಲ್ಯಾಗ ಮುಚ್ಚಿಟ್ಟರಾತು.
(ಗಂಟನ್ನು ಮೇಲಿನ ಹುಲ್ಲಿನಲ್ಲಿ ಮುಚ್ಚಿಡುತ್ತಾರೆ. ಕ್ಯಾಟಲಿನ್ ರಾಟಿಯ ಕಡೆಗೆ ಹೋಗುತ್ತಾಳೆ) ಅಕಿಗೆ ನಾ ಅಳತಿದ್ದೆ ಅಂತ ಗೊತ್ತಾಗಬಹುದೇನು
ಕ್ಯಾಟಲಿನ್‌ ?
ಕ್ಯಾಟಲಿನ್ : ನೀ ನಿನ್ನ ಬೆನ್ನು ಬಾಗಲಕಡೆ ಮಾಡಿ ನಿಂತಿರು. ಅಂದ್ರ ನಿನ್ನ ಮಾರಿ ಮ್ಯಾಲೆ ಬೆಳಕು ಬೀಳೂದಿಲ್ಲ.
(ನೋರಾ ಒಲೆಯ ಮುಂದೆ ತನ್ನ ಬೆನ್ನನ್ನು ಬಾಗಿಲ ಕಡೆಗೆ ಮಾಡಿ ಕೂಡುತ್ತಾಳೆ. ಮಾರಿಯಾ ಸಾವಕಾಶವಾಗಿ ಒಳಗೆ ಬರುತ್ತಾಳೆ. ಅವಳ ಲಕ್ಷ ಈ ಇಬ್ಬರ ಮೇಲಿಲ್ಲ. ಬೆಂಕಿಯ ಮುಂದಿರುವ ಸ್ಟೂಲಿನ ಮೇಲೆ ಕೂಡ್ರುತ್ತಾಳೆ. ಅರಿವೆಯಲ್ಲಿ ಸುತ್ತಿದ ಬ್ರೆಡ್ಡು ಕೈಯಲ್ಲಿ ಹಾಗೇ ಇದೆ. ನೋರಾ ಹಾಗೂ ಕ್ಯಾಟಲೀನ್ ಒಬ್ಬರೊಬ್ಬರೆಡೆಗೆ ನೋಡುತ್ತಾರೆ.
ನೋರಾ ಬ್ರೆಡ್ಡಿನೆಡೆಗೆ ಕೈಮಾಡುತ್ತಾಳೆ.)
ಕ್ಯಾಟಲಿನ್ : (ಸ್ವಲ್ಪ ಹೊತ್ತು ನೂಲುತ್ತಿದ್ದು) ನೀನು ಬಾರಟ್ಲೇಗ ಕೊಡೋ ಬ್ರೆಡ್ಡು ತಿರುಗ್ಯಾಕ ತಂದಿ ? (ಮಾರಿಯಾ ಇದ್ದ ಸ್ಥಳದಲ್ಲಿಯೇ
ಬಿಕ್ಕಳಿಸುತ್ತಾಳೆ) ಅಂವಾ ಕೆಳಗ ಕುದರಿ ಮ್ಯಾಲೆ ಹೋಗೋದನ್ನರ ನೋಡಿದನು ?
(ಮಾರಿಯಾನ ಅಳು ಇನ್ನೂ ಹೆಚ್ಚಾಗುತ್ತಿದ್ದಂತೆ ಸ್ವಲ್ಪ ಸ್ಥೈರ‍್ಯ ಕಳೆದುಕೊಂಡು) ಸ್ವಲ್ಪ ಧ್ವನಿ ಎತ್ತರಿಸಿ ಏನರ ಆಗೇದನ್ನೋದರ ಹೇಳಬಾರದ. ಹಿಂಗ ಆತಗೋತ ಕೂತರ ಹೋದದ್ದೇನು ಬರತದ ?…ಬಾರಟ್ಲೆನ್ನ ನೋಡಿದೇನು ಅಂತ ಕೇಳಿದೆ ನಾನು.
ಮಾರಿಯಾ : (ಸೋತ ಧ್ವನಿಯಲ್ಲಿ) ಇವತ್ನಿಂದ ನನ್ನ ಎದೆ ಒಡದದ.
ಕ್ಯಾಟಲಿನ್ : (ಮೊದಲಿನಂತೆ) ಬಾರಟ್ಲೆನ್ನ ನೋಡಿದೇನು ?
ಮಾರಿಯಾ : ಭಾಳ ಅಂಜಿಕಿ ಬರೋ ಹಂತಾದ್ದು ನೋಡಿದೆ. ಹಿಂದಕ ಡಾರಾ ನೋಡಿದ್ದಕ್ಕಿಂತಾ ಭಯಾನಕ ಇತ್ತು.
ಕ್ಯಾಟಲಿನ್ }: ಆಂ ! (ಇಬ್ಬರೂ ಬಂದು ಮಾರಿಯಾನ ಎದುರು ಕುಳಿತುಕೊಳ್ಳುವರು).
ನೋರಾ. }: ಆಂ ! (ಇಬ್ಬರೂ ಬಂದು ಮಾರಿಯಾನ ಎದುರು ಕುಳಿತುಕೊಳ್ಳುವರು).
ಸೋರಾ : ನೀ ನೋಡಿದ್ದು ನಮಗಷ್ಟು ಹೇಳು.
ಮಾರಿಯಾ : ಆ ಭಾವಿ ಹತ್ತರ ಹೋದೆ. ಅಲ್ಲೇ ಒಂದು ಸಣ್ಣ ಪ್ರಾರ್ಥನಾ ಮಾಡಿದೆ ಮನಸಿನ್ಯಾಗ. ಮುಂದ ಬಾರಟ್ಲೆ ಬಂದ. ಅಂವಾ ಕೆಂಪು ಕುದರಿ ಮ್ಯಾಲೆ ಕೂತಿದ್ದಾ. ಅವನ ಹಿಂದ ಆ ಕಂದಬಣ್ಣದ ಮರಿ ನಡದಿತ್ತು. (ತನ್ನ ಕಣ್ಣುಗಳಿಂದ ಏನನ್ನೋ ಮುಚ್ಚಿಕೊಳ್ಳುವಂತೆ ಕಣ್ಣುಗಳನ್ನು ಮುಚ್ಚಿ ಕೊಳ್ಳುತ್ತಾಳೆ) ಆ ದೇವರು ಕಾಪಾಡಬೇಕು ನಮ್ಮನ್ನು ನೋರಾ !
ಕ್ಯಾಟಲಿನ್‌ : ಏನರ ನೋಡಿದಿ ನೀ ಅಲ್ಲೆ ?
ಮಾರಿಯಾ: ಸ್ವಥಾ ಮೈಕೆಲ್ಲನ್ನ ನೋಡಿದೆ.
ಕ್ಯಾಟಲಿನ್: (ಮೃದುವಾಗಿ ಮಾತನಾಡುತ್ತ) ಅವ್ವಾ ನೀ ಮೈಕೆಲ್ಲನ್ನ ನೋಡಿರಲಿಕ್ಕಿಲ್ಲಾ : ಯಾಕಂದರ ಉತ್ತರದ ಕಡೆ ಅವನ ದೇಹಾ ಸಿಕ್ಕ ಮ್ಯಾಲೆ
ದೇವರ ದಯದಿಂದ ಗೋರಿ ಕಂಡಾನ ಅಂವಾ.
ಮಾರಿಯಾ : ಇವತ್ತ ನಾ ಅವನ್ನ ನೋಡಿದಾಗ ಕುದರಿ ಮ್ಯಾಲೆ ಕೂತಿದ್ದ ಕುದರಿ ಓಡತಿತ್ತು. ಬಾರೆಟ್ಲೆ ಮೊದಲ ಕೆಂಪು ಕುದರಿ ಮ್ಯಾಲೆ ಬಂದ. ನಾನು ಅವಗ, “ದೇವರು ಇನ್ನಷ್ಟು ಶಕ್ತಿಕೊಡಲಿ ನಿನಗೆ” ಅಂತ ಹೇಳೋ ಮುಂದ ಏನೋ ಗಂಟಲದಾಗ ಹಿಚಕಿಧಂಗಾತು. ಅಂವಾ ನನ್ನ ಮಗ್ಗುಲದಾಗಿಂದ ನಡೆದಿದ್ದ. “ದೇವರ ಆಶೀರ್ವಾದದ ನಿಮ್ಮ ಮ್ಯಾಲೆ” ಅಂದಾ. ತಿರುಗಿ ಹೇಳೊದಕ್ಕಂತ ನನ್ನ ಕಡೆ ಮಾತ ಉಳಿದಿದ್ದಿಲ್ಲಾ. ಆ ಕಂದ ಬಣ್ಣದ ಕುದರಿ ಮ್ಯಾಲೆ ಮೈಕೆಲ್ ಮೈಯ್ಯಾಗ ಹೊಸಾ ಅರವಿ ಹಾಕ್ಕೊಂಡು ಕಾಲಾಗ ಹೊಸಾ ಬೂಟು ಹಕ್ಕೊಂಡು ಕೂತಿದ್ದಾ.
ಕ್ಯಾಟಲಿನ್ : (ದುಃಖದಿಂದ) ಇವತ್ತಿಗೆ ಎಲ್ಲಾ ಮುಗಧಂಗಾತು.
ನೋರಾ : ಈ ದೇವರು, ಅಕಿ ಇಚ್ಛಾಪೂರ್ತಿ ಮಾಡಲಿಕ್ಕಿಲ್ಲಾ ಅಂತ ಆ ಪಾದ್ರಿ ಹೇಳಿದ್ದಿಲ್ಲ ?
ಮಾರಿಯಾ : (ಸಣ್ಣನೆಯ ಧ್ವನಿಯಲ್ಲಿ ಕೇಳಿಸುವಂತೆ) ಸಣ್ಣಂದಿರ್ತನ್ಯ ಸಮುದ್ರದ ಗಳೆತನ ಬೆಳೆಸಿದವರು…ಈ ಹೊತ್ತಿಗೆ ಬಾರಟ್ಲೆನ್ನು ಕಳಕೊಂಡಿರಬಹುದು. ಎಮನ್ನನ ಕರದು, ಒಂದು ಛಲೋ ಕಾಫಿನ್ ಮಾಡಿಕೊಡು ಅಂತ ಹೇಳಬೇಕು. ಈ ಬಿಳೆ ಫಳಿ ನೋಡಿಕೋತ ಪ್ರತಿ ದಿನಾ ಹ್ಯಾಂಗ ಜೀವಸಲಿ. ನನಗೊಬ್ಬ ಗಂಡಿದ್ದಾ, ಗಂಡನ ತುದಿ, ಆರು ಮುತ್ತಿನಂಥಾ ಗಂಡು ಹುಡುಗರಿದ್ದರು. ನನಗ ಹಡಿಯೊ ಮುಂದ ತ್ರಾಸಾಗಿದ್ದರು. ಅವರ‍್ನ ಈ ಜಗತ್ತಿನ್ಯಾಗ ತಂದಿದ್ದೆ. ಹೊರಗ ಬಂದ ಮ್ಯಾಲೆ ಕೆಲವರು ಉಳದರು ಕೆಲವರು ಸತ್ತರು. ಆದರ ಈಗ ಎಲ್ಲಾ ಬರೇದಾಗೆದಂತನಸ್ತದ. ಬಿರುಗಾಳಿ ಒಳಗಸಿಕ್ಕ ಸ್ಟಿಫೆನ್ ಮತ್ತು ಶಾನ್ ಗ್ರೆಗರಿ ಒಳಗ ಸಿಕ್ಕಾಗ, ಇಬ್ಬರು ಅವರ‍್ನ ಇದ್ಯ ಬಾಗಲದಾಗಿಂದ ಹೊತಗೊಂಡು ಬಂದಿದ್ದರು.
(ಕೆಲವು ಕ್ಷಣ ಸುಮ್ಮನಾಗುತ್ತಾಳೆ. ನೋರಾ ಹಾಗೂ ಕ್ಯಾಟಲಿನ ಹಿಂದೆ ಆರೆ ತೆಗೆದ ಬಾಗಿಲಿನಿಂದ ಏನನ್ನೋ ಕೇಳಿಸಿಕೊಳ್ಳುವಂತೆ ಮುಖ ಮಾಡುತ್ತಾರೆ).
ನೋರಾ : (ಪಿಸು ಮಾತಿನಲ್ಲಿ) ಕೇಳಸ್ತದೇನು ಕ್ಯಾಟಲಿನ್ ನಿನಗ ಆ ಉತ್ತರ ದಿಕ್ಕಿನ್ಯಾಗಿನ ಗದ್ದಲಾ ?
ಕ್ಯಾಟಲಿನ್ : (ಪಿಸು ಮಾತಿನಲ್ಲಿ) ಆ ಸಮುದ್ರದ ದಂಡ್ಯಾಗಿಂದ ಯಾರೋ ಒದರಿಧಂಗ ಕೇಳಸ್ತದ.
ಮಾರಿಯಾ : (ಸುತ್ತಲಿನ ಪರಿವೆ ಇಲ್ಲದೆ ಮುಂದುವರೆಸುತ್ತಾಳೆ)
ಶ್ರೆಮಸ್ ಇದ್ದಾ, ಅವನಪ್ಪಿದ್ದಾ, ಅಪ್ಪನ ಅಪ್ಪ ಇದ್ದಾ. ಎಲ್ಲಾರ‍್ನು ಒಂದು ಕಗ್ಗತ್ತಲಿ ಒಳಗ ಕಳಕೊಂಡ ಬಟ್ಟೆ. ಅವರ ಯಾವ ಸುಳಿವು ಸೂರ್ಯಾ ಏರಿದ ಮ್ಯಾಲೆ ಸಹಿತ ಸಿಗದ ಹೊತು. ಬಾರಟ್ಲೆ ಕೂತಿದ್ದಾಗ ಅವನ್ನ ನನ್ನ ತೊಡಿ ಮ್ಯಾಲೆ ಕೂಡಿಸಿಕೊಂಡು ಇಲ್ಲೆ ಕೂತಿದ್ದೆ. ಒಂದ ಮೂರು ನಾಲ್ಕು ಮಂದಿ ಹೆಂಗಸರು ಬಂದರು. ಚಕಾರ ಶಾಬ್ದಾ ತಗಿಲಿಲ್ಲ. ಹೊರಗ ನೋಡಿದೆ ಕೆಲವು ಮಂದಿ ಅವರ ಹಿಂದಿದ್ದರು ಅವರು ಕೆಂಪು ಶಾಲಿನ್ಯಾಗ ಏನೋ ಕಟ್ಟಿಧಂಗಿತ್ತು. ಅದರಾಗಿಂದ ನೀರು ಸೋರತಿತ್ತು. ಅವತ್ತಿನ ದಿನಾನ ಯಾಕೊ ಹುರು, ಹುರು ಇತ್ತು ನೋರಾ. ಸಾಲಾಗಿ ನಿಂತಿದ್ದರು.
(ಮತ್ತೆ ಕೆಲವು ಹೊತ್ತು ಸ್ತಬ್ಧ. ಬಾಗಿಲದೆಡೆಗೆ ಕೈಗಳನ್ನು ಚಾಚಿದ್ದಾಳೆ. ಆ ಬಾಗಿಲವನ್ನು ತೆಗೆದು ಕೆಲವು ಮುದುಕಿಯರು ಒಳಗೆ ಬಂದು ರಂಗದ ಮೇಲೆ ಮೊಣಕಾಲೂರಿ ಕೂಡುತ್ತಾರೆ. ತಲೆಗೆ ಕೆಂಪುವಸ್ತ್ರ ಕಟ್ಟಿಕೊಂಡಿದ್ದಾರೆ).
(ಕನಸಿನಲ್ಲಿದ್ದವಳಂತೆ ಕ್ಯಾಟಲಿನ್‌ಳಿಗೆ) ಅಂವಾ ಪ್ಯಾಚನೋ ಅಥವಾ ಮೈಕೆಲ್‌ನೋ ? ಇಲ್ಲಾಂದರ ಏನಿದು ನಡದದ್ದೆಲ್ಲಾ ?
ಕ್ಯಾಟಲಿಸ್ : ಮೈಕಲ್ ಉತ್ತರದ ತೀರದಾಗ ಸಿಕ್ಕ ಮ್ಯಾಲೂ ಹೆಂಗ ಅಂವಾ ನಿನ್ನ ಕಣ್ಣ ಮುಂದೆ ಬಂದಿರಲಿಕ್ಕೆ ಸಾಧ್ಯದ ?
ಮಾರಿಯಾ : ಅವನಂಥಾವನ ಇನ್ನೊಬ್ಬವಾ ಇರಲಿಕ್ಕಿಲ್ಲೇನು ?
ಕ್ಯಾಟಲಿನ್ : ಇಬ್ಬರು ಮೈಕೆಲ್ ಇರಲಿಕ್ಕೆ ಹೆಂಗ ಸಾಧ್ಯದ ಆವ್ಯಾ. ಆಂವಾ ಅವತ್ತ ಹಾಕ್ಕೊಂಡಿದ್ದ ಅರಬಿ ಸಹಿತ ಸಿಕ್ಕಾವ. ಇಲ್ಲೆವ ನೋಡು.
(ಮೈಕೆಲ್‌ನ ಅರಿವೆಗಳನ್ನು ಮಾರಿಯಾಳಿಗೆ ಕೊಡುತ್ತಾಳೆ. ಮಾರಿಯಾ ಸಾವಕಾಶವಾಗಿ ಎದ್ದು ನಿಲ್ಲುತ್ತಾಳೆ. ನೋರಾ ನೋಡುತ್ತಾಳೆ).
ನೋರಾ : ಅವರೇನೋ ಹೊತ್ತಗೊಂಡ ಬರಲಿಕ್ಕೆ ಹತ್ತಿಧಂಗದ. ಆದರಾಗಿಂದ ನೀರು ತಟಗಿಕ್ಕಲಿಕ್ಕೆ ಹತ್ತೆದ.
ಕ್ಯಾಟಲಿಸ್ : (ಒಳಗೆ ಬಂದ ಹೆಣ್ಣುಮಕ್ಕಳಿಗೆ ಪಿಸುಮಾತಿನಲ್ಲಿ) ಆ ದೇಹಾ ಬಾರಟ್ಲೆಂದ ಹೌದಿಲ್ಲೋ ? ಹೌದಂತ ಕಾಣಸ್ತದ.
ಒಬ್ಬ ಮಹಿಳೆ : ಹೌದು ಬಾರಟ್ಲೆಂದು.
(ನೋರಾ ಹಾಗೂ ಕ್ಯಾಟಲಿನ್ ಟೇಬಲ್ಲನ್ನೆಳೆದು ಮಧ್ಯದಲ್ಲಿಡುತ್ತಾರೆ.
ಅದರ ಮೇಲೆ ಹೊತ್ತು ತಂದ ದೇಹವಿಡುತ್ತಾರೆ)
ಕ್ಯಾಟಲಿನ್ : (ಮೇಲಿನ ಕ್ರಿಯೆ ನಡೆದಾಗ) ಬಾರಟ್ಲೆ ಹೆಂಗ ಮುಣಗಿದಾ ಅಂತ ಏನರ ಗೊತ್ತದೇನು ?
ಇನ್ನೊಬ್ಬ ಮಹಿಳೆ : ಆ ಬಿಳೆ ಬಂಡಿಗಲ್ಲಿನ ಜಗವಾಗ ಆ ಕಂದ ಬಣ್ಣದ ಸಣ್ಣ ಕುದರಿ ಬಾರಟ್ಲೆನ್ ನೀರಾಗ ಮುಳಗಿಸ್ತು.
(ಮಾರಿಯಾ ಟೇಬಲ್ಲಿನ ಮುಂದೆ ಮೊಣಕಾಲೂರಿದ್ದಾಳೆ. ನೆರೆದವರೆಲ್ಲಾ ಸಣ್ಣಾಗಿ ಅಳುತ್ತಿದ್ದಾರೆ. ನೋರಾ ಹಾಗೂ ಕ್ಯಾಟಲಿನ್ ಟೇಬಲ್ಲಿನ ಇನ್ನೊಂದು ಕಡೆ ಮೊಣಕಾಲೂರಿದ್ದಾರೆ. ಗಂಡಸರೆಲ್ಲಾ ಬಾಗಿಲಿನ ಹತ್ತಿರ ಮೊಣಕಾಲೂರಿದ್ದಾರೆ).
ಮಾರಿಯಾ : (ಪರಿವೆ ಇಲ್ಲದೆ) ಆವರೆಲ್ಲಾ ದೂರ ಹೋದರಿಗ. ಒಂದು ಸಮುದ್ರಾ ಇದಕ್ಕಿಂತಾ ಹೆಚ್ಚಗಿ ಇನ್ನೇನು ಮಾಡಿತು ?
(ನೋರಾ ಅವಳ ಕೈಯಲ್ಲಿ ನೀರನ್ನು ಕೊಡುತ್ತಾಳೆ. ಮೈಕೆಲ್ಲಿನ ಅರಿವೆಗಳನ್ನು ಬಾರಟ್ಲೆನ ಕಾಲುಗಳ ಅಡಿಯಲ್ಲಿ ಇಡುತ್ತಾಳೆ. ನೀರನ್ನು ಬಾರಟ್ಲೆನ ದೇಹದ ಮೇಲೆ ಸಿಂಪಡಿಸುತ್ತಾಳೆ.) ದೇವರಿಗೆಲ್ಲಾ ನಾ ಇದ್ನs ಪ್ರಾರ್ಥಿಸಿಕೊಂಡಿದ್ದಿಲ್ಲಾ. ಬಾರಟ್ಲೆ ನಾನು ರಾತ್ರಿ ದೇವರಿಗೆ ಭಾಳಹೊತ್ತಿನತನಕಾ ಬೇಡೊದು ಇದಾಗಿದ್ದಿಲ್ಲಾ. ಆದರ ಇದು ನನಗ ಕೊನೆಯ ಸುಖಾ ತರೋ ಹಂತಾದ್ದs.
(ಮತ್ತೆ ಮೌನವಾಗಿ ಪ್ರಾರ್ಥಿಸುತ್ತಾಳೆ)
ಕ್ಯಾಟಲಿನ್ : (ಒಬ್ಬ ಮುದುಕನಿಗೆ) ಸೂರ್ಯಾ ಏರಿದ ಮ್ಯಾಲೆ ನೀನು ಮತ್ತು ಎಮನ್ ಕೂಡಿ ಕಾಫಿನ್ ಮಾಡಬಹುದು. ಅಕಿಗೆಂತs, ತಂದಿದ್ದವ ಬಿಳೆ ಫಳಿ ಆವ. ದೇವರ ಸಹಾಯ ಮಾಡಬೇಕು ಅಕಿಗೆ. ಯಾಕಂದರ ಮೈಕೆಲ್ಲ ಸಿಗತಾನಂತ ತಿಳದಾಳ. ಮತ್ತs ಕೇಕ್ ಬೇಯಿಸಿಟ್ಟಿನಿ. ನೀ
ಕೇಲಸಾ ಮಾಡೋ ಮುಂದ ಕೋಡತಿನಿ.
ಮುದುಕ : (ಫಳಿಗಳ ಕಡೆಗೆ ನೋಡಿ) ಅದರ ಸಂಗತಿ ಮಳಿನೂ ಅಂವ ಏನು ?
ಕ್ಯಾಟಲಿನ್ : ಇಲ್ಲಲ್ಲಾ ಕೊಲಮ್. ನಾವು ಮಳಿಗಳ ಬಗ್ಗೆ ವಿಚಾರಾನ ಮಾಡಿಲ್ಲಾ.
ಇನ್ನೊಬ್ಬ ಮನುಷ್ಯ : ಇಕಿ ಮಳಿಗಳ ಬಗ್ಗೆ ವಿಚಾರ ಮಾಡಿಲ್ಲವರ, ಆಶ್ಚರ‍್ಯ ಅನಸ್ತದ. ಕಾಫಿನ್, ಎಲ್ಲಾ ತಯಾರಮಾಡಿದ್ದವ ನೋಡಿಧಂಗದ.
ನೋರಾ : (ಪಿಸುಮಾತಿನಲ್ಲಿ ಕ್ಯಾಟಲಿನ್‌ಳಿಗೆ) ಈಗ ಅಮ್ಮಾ ಸ್ವಲ್ಪ ಶಾಂತ ಮತ್ತ ಹಗುರಂತ ಅನಸುದಿಲ್ಲ. ಆದರ ಮೈಕೆಲ್‌ ಮುಣಗಿದ್ದ ದಿನಾ ಅಕಿ ಆಳೋದು ಇಲ್ಲಿಂದ ಆ ಭಾವಿ ತನಕಾ ಕೇಳಸ್ತಿದ್ದಿಲ್ಲಾ. ಮೈಕೆಲ್‌ನ ಮ್ಯಾಲೆ ಅಕಿಗಿಷ್ಟು ಪ್ರೀತಿ ಇತ್ತು ಅನ್ನೋದು ಕನಸಮನಸಿನ್ಯಾಗ ಇದ್ದಿಲ್ಲಾ.
ಕ್ಯಾಟಲಿನ್‌ : ಈ ಒಂಬತ್ತ ದಿನದಾಗ ಅತ್ತಿದ್ದಕ್ಕ ಶಾಂತ ಆಗೇದ ಅಕಿ ಮುಖಾ.
ಮಾರಿಯಾ : (ನಿರ್ಲಿಪ್ತವಾಗಿ) ಈ ಹೊತ್ತಿಗೆ ಅವರದೆಲ್ಲಾ ಒಂದಕಡೆ ಭಟ್ಟಿಯಾಗಿರಬೇಕು. ಅಂತೂ ಕೊನೆಗೊಮ್ಮೆ ಅಂತ್ಯ ಬಂತು. ಬಾರಟ್ಲೆಗೆ ಮತ್ತ ಮೈಕೆಲ್ಲಗ ದೇವರ ದಯದಿಂದ ಶಾಂತಿ ಸಿಗಲಿ.
(ಹಿಂದಿದ್ದ ಮಹಿಳೆಯ ಅಳುವ ಧ್ವನಿ ಹೆಚ್ಚಿಗೆಯಾಗಿ ಕಡಿಮೆಯಾಗುತ್ತದೆ.)
ಮೈಕೆಲ್ಲಾ ಉತ್ತರದ ಕಡೆ ಗೋರಿ ಕಂಡಾ. ಬಾರಟ್ಲೆಗೆ ಬಿಳೆಫಳಿ ಕಾಫಿನ್‌ ಕಾದದ. ಇದಕ್ಕಿಂತಾ ಹೆಚ್ಚಗಿ ಏನು ಬೇಕಾಗಿತ್ತು. ಈ ಜಗತ್ತಿನ್ಯಾಗ ಯಾಮನಷ್ಯಾನೂ ಕಡೆತನಕಾ ಇರತೇನಿ ಅಂತ ಎಲ್ಲಿ ಬಂದಿರತಾನ ? ಅಷ್ಟಕ್ಕ ಸಮಾಧಾನಾ ಪಟ್ಟಕೊಂಡರಾತು.
(ಅವಳು ಮತ್ತೊಮ್ಮೆ ಮೊಣಕಾಲೂರುತ್ತಿದ್ದಂತೆ)
ತೆರೆ

Close

ಖುಶಿ

ಖುಷಿ

ಜಿ. ಎಸ್. ಸದಾಶಿವ

ಮೂಸಿಯಮ್ಮಿನಿಂದ ಕಾರ್ಪೊರೇಷನ್ ಕಡೆಗೆ ಮೆಲ್ಲಗೆ ನಡೆದೆ ಮೋಡದ ಹಾಗೆ. ಆಕಾಶದಲ್ಲಿ ಆಷಾಢದ ಮೋಡ. ಬಲಕ್ಕೆ ಪಾರ್ಕಿನ ಹಚ್ಚ ಹಸಿರು ಹುಲ್ಲು ನಯವಾದ ಕಾರ್ಪೆಟ್ಟಿನಂತೆ. ದೂರ ದೂರಕ್ಕೆ ಒಂದೊಂದು ಮರ, ಚಿತ್ರ ಬರೆದಂತೆ. ಮನಸ್ಸೆಲ್ಲಾ ಋಷಿ. ನನಗೆ ಖುಷಿಯಾಗುವುದೇ ಒಂದು ಅನುಭವ. ಯೂರೊಪ್, ಮಿಡ್ ಈಸ್ಟ್ ಸುತ್ತಿ ಬಂದ ಗೆಳೆಯ ಪರೇಡ್‌ ಕಫೆಯಲ್ಲಿ ಬಾಯಲ್ಲಿ ಭೂಗೋಳ ಬಿಚ್ಚುತ್ತಾ ಹೋದಂತೆ ನನಗೆ ಕನಸು ಸುತ್ತಿಕೊಂಡಿತು. ಗರಿ, ಗರಿ ಕನಸು. ಹುಲ್ಲಿನ ಹಾಗೆ ಸುಂದರ ಕನಸು. ಅಲ್ಲೇ ನಿಂತೆ. Nothing happens here. ಆತ ಎದುರು ಕುರ್ಚಿಯಲ್ಲಿ ಕೂತು ಕಣ್ಣನ್ನು ಮಾದಕಗೊಳಿಸಿ, ಸುಂದರವಾದ ಮಾತುಗಳಲ್ಲಿ ಸಿಗರೇಟಿನ ಹೊಗೆ ಹಾಯಿಸುತ್ತಾನೆ. ಎಲ್ಲಾದರೂ ಒಂದು ದಿನ ಪಯಣ ಹೊರಟು ಬಿಡಬೇಕು.
ಸಂಜೆಯ ರಷ್ಷಿನ ಕಾರು, ಸ್ಕೂಟರು, ಬಸ್ಸು, ಸೈಕಲ್ ಸೊಯ್ಯನೆ ಪಕ್ಕದಿಂದ ಹಾದು ಹೋಗುವಾಗ ಇದೂ ಒಂದು ಬಗೆಯ ಎಕ್ಸೈಟ್‌ಮೆಂಟ್ ಅನಿಸಿತು. ಕಾರ್ಪೊರೇಷನ್ನಿಗೆ ಬರುವ ಹೊತ್ತಿಗೆ ದೀಪ ಬೆಳಗಿತು. ಕ್ಷಣ ಒಂದು ಹೊಸ ಲೋಕ. It is afterall not that drab. ಹೆಜ್ಜೆ ಇನ್ನೂ ಹಗುರ. ಸರ್ಕಲ್ ಬಳಿ ಲಾರಿಯ ಅಡಿಗೆ ಸ್ಕೂಟರ್ ಸಿಕ್ಕಿ `ಅಜ್ಜಿಬಜ್ಜಿಯಾಗಿತ್ತು. ವ್ಯಕ್ತಿ ಫನ, ಕಾಲುಗಳು ಎಳೆದವು. ತುಸು ಆಯಾಸವೆನಿಸಿತು. ಟೌನ್‌ಹಾಲ್ ಮುಂದೆ ಥೂ ಎನ್ನಿಸುವಷ್ಟು ವಾಹನ. ಮೋರಿ, ಒಳ ಚರಂಡಿಯ ಗಬ್ಬುನಾತ. ಶಿವಾಜಿ ಟಾಕೀಸಿನ ಎದುರು ತಮಿಳು ಸಿನಿಮಾಕ್ಕೆ ಕ್ಯೂ ನಿಂತ ಜನರು. ಬೇಸರಕ್ಕೆ ಕಾಲು ಭಾರವಾಯಿತು. ಎಲ್ಲಿಗಾದರೂ-ಕೇದಾರ, ಬದರಿ ಅಥವಾ ಬೈರೂತ್-ಹೋಗುವುದು ಸಾಧ್ಯವೆ ? ಕಿಸೆಗೆ ಕೈಹಾಕಿದೆ. ಚಾರ್‌ಮಿನಾರ್‌ಗಾಗುವಷ್ಟು ಸಿಕ್ಕಿತು.
ಮತ್ತೆ ಹಿಂದೆ ಹೋದರೆ ಹ್ಯಾಗೆ ಎಂದು ಮಿನರ್ವ ಬಳಿ ಯೋಚಿಸಿದೆ. ಗೆಳೆಯ ಪರೇಡ್ ಕೆಫೆಯಿಂದ ಶ್ರೀಏಸಸ್‌ಗೆ ವರ್ಗವಾಗುವ ಸೂಚನೆ ಇತ್ತು. ಗುಂಡು, ಕ್ಯಾಬರೆ–ಎಕ್ಸೈಟ್‌ಮೆಂಟ್. ಬಸಸ್ಟಾಪಿನ ಬಳಿ ಜನಸ್ಪೋಟ. ಕತ್ತು ಚಾಚಿ, ಚಾಚಿ ಬಸ್ಸು ಬಯ್ಯುತ್ತ ನಿಂತ ನನ್ನಂಥ ಗೃಹಸ್ಥರು. ತರಕಾರಿ ಬುಟ್ಟಿ. ಆಫೀಸ್ ಫೈಲ್. ನಿಧಾನಕ್ಕೆ ನಡೆದೆ. ನಡೆದ ಆಯಾಸ ಹೆಚ್ಚಿದಂತೆಲ್ಲ ಕನಸು ಕರಗುತ್ತಾ ಬಂತು.
ಬಾಗಿಲು ತಟ್ಟಿ, ಒಳ ಹೊಕ್ಕಾಗ ತರಕಾರಿ ಚೀಲ ಕೈಗಿತ್ತು. ತರಕಾರಿ ತನ್ನಿ ಎಂದಳು.
.

Close

ಕನ್ನಡ ವಿಶ್ವಕೋಶಃ ಕೆಲವು ಲೋಪ-ದೋಷಗಳು

ಕನ್ನಡ ವಿಶ್ವಕೋಶ : ಕೆಲವು ಲೋಪ-ದೋಷಗಳು

-ಶ್ರೀಹರ್ಷ

ಕನ್ನಡಕ್ಕೊಂದು ವಿಶ್ವಕೋಶ ಬೇಕು ಎಂದು ಬಹುಕಾಲದಿಂದ ಹಂಬಲಿಸುತ್ತಿದ್ದವರಿಗೆ, ಈಗ ಮೈಸೂರು ವಿಶ್ವವಿದ್ಯಾನಿಲಯ ಈ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡಿರುವುದು ತೀರ ಸಂತಸದ ವಿಷಯ. ಜ್ಞಾನಾಸಕ್ತರಿಗೆ ಈ ವಿಶ್ವಕೋಶ ಉಪಯೋಗವಾಗುವುದು ಮಾತ್ರವಲ್ಲದೆ, ಮುಂದಿನ ಪೀಳಿಗೆಗಳಿಗೆ ಹೊಸ ವಿಶ್ವಕೋಶ ತಯಾರಿಸಿಕೊಳ್ಳಲು ತಕ್ಕ ಅಡಿಪಾಯವೂ ಆಗುವುದು.
ಆದರೆ ಈ ಸಂದರ್ಭದಲ್ಲಿ ಈ ವಿಶ್ವಕೋಶಗಳಲ್ಲಿನ ಕುಂದು ಕೊರತೆ, ಲೋಪದೋಷಗಳ ಬಗ್ಗೆ ಮಾತನಾಡುವುದೂ ಸೂಕ್ತವೆನಿಸುತ್ತದೆ.
ವಿಶ್ವಕೋಶದ ಮೂಲ ಉದ್ದೇಶವೇನು ಎಂಬ ಬಗ್ಗೆ ಯೋಚಿಸಿದವರಿಗೆ ಕನ್ನಡ ವಿಶ್ವಕೋಶದ ನಾಲ್ಕನೇ ಸಂಪುಟದ ಮೇಲೆ ಕಣ್ಣು ಹಾಯಿಸಿದಾಗ ತೀರ ಬೇಸರದ ಕೆಲವು ಅಂಶಗಳು ಕಂಡು ಬರುತ್ತವೆ. ವಿಶ್ವಕೋಶದ ಸಂಪಾದಕರಿಗೆ ಈ ಮೂಲ ಉದ್ದೇಶದ ಬಗ್ಗೆ ಉಚಿತ ಅರಿವು ಇದೆಯೇ ಎಂಬ ಸಂದೇಹ ಬಂದರೂ ಅಚ್ಚರಿ ಇಲ್ಲ. ನಾವು ಯಾವುದಾದರೊಂದು ವಿಷಯದ ಬಗ್ಗೆ ವಿಶ್ವಕೋಶದಲ್ಲಿ ನೋಡಿದಾಗ, ನಾವು ನಿರೀಕ್ಷಿಸುವುದು ಆ ವಿಷಯವನ್ನು ಮಾತ್ರ ಕುರಿತ ಒಂದು ಸಮಗ್ರ ಲೇಖನವನ್ನು, ಆ ವಿಷಯಕ್ಕೆ ಸಂಬಂಧಿಸಿದ ಇತರ ಲೇಖನಗಳನ್ನು ಅಲ್ಲಿ ಸೂಚಿಸುವುದರಿಂದ ನಮಗೆ ಸೂಕ್ತ ಮಾರ್ಗದರ್ಶನ ಮಾಡಿದಂತಾಗುತ್ತದೆ. ಆದರೆ ಎರಡು ಬೇರೆ ಬೇರೆ ವಿಷಯಗಳ ಬಗ್ಗೆ ತೌಲನಿಕ ಅಧ್ಯಯನ ನಡೆಸುವ ಲೇಖನಗಳು ವಿಶ್ವಕೋಶದಲ್ಲಿ ಬೇಕೆ ?
ಉದಾಹರಣೆಗೆ “ಕಲೆ” ಎಂಬ ಬಗ್ಗೆ ವಿಶ್ವಕೋಶದ ನಾಲ್ಕನೇ ಸಂಪುಟದಲ್ಲಿ ಒಂದು ಲೇಖನವಿದೆ. ಇದರಲ್ಲಿ “ಕಲೆ”ಯ ಬಗ್ಗೆ ಒಂದು ಸ್ಥೂಲ ಪರಿಚಯ ಮಾಡಿಸಿಕೊಡಲು ಪ್ರಯತ್ನ ಮಾಡಲಾಗಿದೆ ಸರಿ. ಆದರೆ ಅದರ ಮುಂದಿನ ಲೇಖನಗಳು ಹೀಗಿವೆ : ಕಲೆ ಮತ್ತು ಜೀವನ ; ಕಲೆ ಮತ್ತು ನೀತಿ ; ಕಲೆ ಮತ್ತು ನೀತಿ ; ಕಲೆ ಮತ್ತು ಪ್ರಕೃತಿ ; ಕಲೆ ಮತ್ತು ಸತ್ಯ ; ಕಲೆ ಮತ್ತು ಸಮಾಜ.
-ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ವಿಶ್ವಕೋಶಗಳಲ್ಲಿ ಬಹುಶಃ ನಡೆಯಲಾರದು. ಕಲೆ ಮತ್ತು ಮೇಲೆ ಹೇಳಿದ ವಿಷಯಗಳ ಅಂತಸ್ಸಂಬಂಧದ ಬಗ್ಗೆ ‘ಕಲೆ’ ಎಂಬ ಲೇಖನದಲ್ಲೇ ಸಮಗ್ರವಾಗಿ ಸ್ಥೂಲವಾಗಿ ಹೇಳಬೇಕಲ್ಲದೆ ಪ್ರತ್ಯೇಕ ಲೇಖನಗಳು ವಿಶ್ವಕೋಶದಲ್ಲಿ ಬರುವುದು ಉಚಿತವಲ್ಲ. ಈ ವಿವರಗಳ ಬಗ್ಗೆ ಆಸಕ್ತಿ ಇರುವವರು ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನೋದುತ್ತಾರೆ. ಪತ್ರಿಕೆ, ನಿಯತಕಾಲಿಕೆಗಳಲ್ಲಿ ಬರುವ ಲೇಖನಗಳನ್ನು ಹೋಲುವ ಈ ಲೇಖನಗಳಿಗೆ ವಿಶ್ವಕೋಶದಂಥ reference ಪುಸ್ತಕದಲ್ಲಿ ಸ್ಥಾನ ಉಂಟೆ ? ಅಕಸ್ಮಾತ್ ಬಂದರೂ ಕಲೆಯನ್ನು ಮಾತ್ರ ಕುರಿತ ವಿಶ್ವಕೋಶದಲ್ಲೋ ಅಥವಾ ವಸ್ತುಕೋಶದಲ್ಲೋ ಇಂಥ ಲೇಖನಗಳಿಗೆ ಸ್ಥಾನ ಉಂಟೇ ಹೊರತು ಕನ್ನಡ ವಿಶ್ವಕೋಶದಂಥ General Encyclopaedia ದಲ್ಲಿ ಅಲ್ಲ. ಇಂಥದೇ ಹಲವಾರು ಲೇಖನಗಳನ್ನು ಬರೆಯಬಹುದಿತ್ತೆಂದು ತಮಾಷೆಗೆ ಅನಿಸುತ್ತದೆ-ಉದಾ : ಕಲೆ ಮತ್ತು ಹಣ ; ಕಲೆ ಮತ್ತು ಜನಪ್ರಿಯತೆ ; ಕಲೆ ಮತ್ತು ರಾಜಕೀಯ ; ಕಲೆ ಮತ್ತು ಭಾರತ ; ಕಲೆ ಮತ್ತು ಇಂದಿರಾಗಾಂಧಿ ! ಒಂದು ಫ್ರೆಂಚ್‌ ಫಿಲ್ಮ್‌ನಲ್ಲಿ ಒಂದು ಸನ್ನಿವೇಶ ಬರುತ್ತದೆ. ಒಬ್ಬ ಸಾಹಿತ್ಯಪತ್ರಿಕೆಯ ಸಂಪಾದಕ ‘ಬಾಲ್ಜಾಕ್ ಮತ್ತು ಹಣ’ ಎಂಬ ಬಗ್ಗೆ ಒಂದು ಸುದೀರ್ಘ ನಿಬಂಧ ಬರೆದು ಅತ್ಯಂತ ಜನಪ್ರಿಯನಾಗಿರುತ್ತಾನೆ. ಆಗ ಅವನನ್ನು ಸಂದರ್ಶನ ಮಾಡಿದವನೊಬ್ಬ ಪ್ರಶ್ನಿಸುತ್ತಾನೆ- “ನೀವು ಬಾಲ್ಜಾಕ್ ಮತ್ತು ಹಣದಂಥ ಎರಡು ಸಂಬಂಧವಿಲ್ಲದ ವಿಷಯಗಳ ಬಗ್ಗೆ ಪುಸ್ತಕ ಏಕೆ ಬರೆದಿರಿ ?” ಎಂದು. ಅದಕ್ಕೆ ಲೇಖಕನ ಉತ್ತರ-‘ಏಕೆಂದರೆ, ನಾನು ಬಾಲ್ಜಾಕನನ್ನು ಮೆಚ್ಚುತ್ತೇನೆ ಮತ್ತು ಹಣವನ್ನು ಪ್ರೀತಿಸುತ್ತೇನೆ !” ಬಹುಶಃ ವಿಶ್ವಕೋಶದ ಸಂಪಾದಕರು ಇಂಥವರೇ ಇರಬಹುದು ! ಆದರೆ ಆ ಸಂಪಾದಕ ಸ್ವತಂತ್ರ ಪುಸ್ತಕ ಬರೆದು ಬುದ್ದಿವಂತನಾದ. ಇವರು ವಿಶ್ವಕೋಶದಂಥ Reference ಪುಸ್ತಕದಲ್ಲಿ ಸೇರಿಸಿ ಬುದ್ದಿವಂತರಾಗಲಿಲ್ಲ.
ಎರಡನೆಯದಾಗಿ ವಿಶ್ವಕೋಶದಲ್ಲಿ ಇಂಗ್ಲಿಷ್ ವಿಶ್ವಕೋಶಗಳ ಭಾಷಾಂತರ ಇರುವುದು. ಮೊದಲು ಉದಾಹರಣೆ ಕೊಡುತ್ತೇನೆ-
ವಿಶ್ವಕೋಶದ ಮೊದಲ ಸಂಪುಟದ 75-76 ನೆ ಪುಟಗಳಲ್ಲಿ “ಅಂತರ್ಜಲ” ಎಂಬ ಲೇಖನವಿದೆ. ಇದರ ಮೊದಲ ಪ್ಯಾರ ಹೀಗಿದೆ :
ಅಂತರ್ಜಲ: ನೆಲಮಟ್ಟದ ಕೆಳಗೆ ಆಳದಲ್ಲಿನ ಮಣ್ಣು ಮತ್ತು ಶಿಲೆಗಳಲ್ಲಿನ ರಂಧ್ರಗಳಲ್ಲಿ ಹುದುಗಿರುತ್ತದೆ. ಭೂಮಿಯ ಮೇಲೆ ಬಿದ್ದ ಮಳೆಯ ನೀರಿನ ಬಹುಭಾಗ ಹರಿದುಹೋಗುತ್ತದೆ. ಇನ್ನು ಕೊಂಚ ಭಾಗವನ್ನು ಸಸ್ಯವರ್ಗಗಳು ಹೀರಿಕೊಳ್ಳುತ್ತವೆ. ಹೀಗಾಗಿ ಉಳಿದ ನೀರು ಭೂಮಿಯ ಮೇಲ್ಪದರದಲ್ಲಿರುವ ಶಿಲೆ ಮತ್ತು ಮಣ್ಣಿನ ಮೂಲಕ ಜಿನುಗಿ ಅವುಗಳಲ್ಲಿನ ರಂಧ್ರದಲ್ಲಿ ಶೇಖರವಾಗುತ್ತದೆ. ಹೀಗೆ ಶೇಖರಗೊಳ್ಳುವ ನೀರಿನ ಪ್ರಮಾಣವನ್ನು ಹಲವಾರು ಅಂಶಗಳು ನಿರ್ಧರಿಸುತ್ತವೆ. ಉದಾ: ಹುಡಿಮಣ್ಣಿನ ನೀರಿನಿಂದ ಬಿದ್ದ ಮಳೆಯ ನೀರು ಬಹು ಬೇಗನೆ ಇಮರುತ್ತದೆ…..
ಇಂಗ್ಲಿಷಿನಲ್ಲಿ “The International Encyclopaedia of Science” ಎಂಬ ವಿಶ್ವಕೋಶವೊಂದುಂಟು. ಇದರ ಸಂಪಾದಕ ಜೇಮ್ಸ್ ಆ‌ರ್‌. ನ್ಯೂಮನ್: ಪ್ರಕಾಶಕರು-
ಥಾಮಸ್ ನೆಲ್ಸನ್ ಅಂಡ್ ಸನ್ಸ್ ಲಿಮಿಟೆಡ್. ಈ ವಿಶ್ವಕೋಶದ ಎರಡನೇ ಸಂಪುಟದ 530-31 ನೇ ಪುಟಗಳಲ್ಲಿ “Ground Water” ಎಂಬ ಲೇಖನ ಉಂಟು. ಅದು ಪ್ರಾರಂಭವಾಗುವುದು ಹೀಗೆ :
Ground Water : Water contained underground in the interstices of soil and rock. When rain falls on the earth some evaporates, some is absorbed by plants, some runs off in streams, and the remainder sinks into the earth to become ground water. The amount that enters the ground depends on various factors: rain falling on loose soil sinks immediately.
ಕನ್ನಡ ವಿಶ್ವಕೋಶದ ಮೇಲೆ ಹೇಳಿದ ವಿಷಯದ ಎರಡನೇ ಪ್ಯಾರ ಹೀಗೆ ಪ್ರಾರಂಭವಾಗುತ್ತದೆ:
ಶಿಲೆಯಲ್ಲಿನ ಅಂತರ್ಜಲದ ಪ್ರಮಾಣ ಒಂದೇ ಸಮನಾಗಿರದೆ ನೂರಕ್ಕೆ ಒಂದರಿಂದ 50 ರಷ್ಟು ಏರುಪೇರನ್ನು ತೋರಿಸುತ್ತದೆ. ಇದು ಬಹುಮಟ್ಟಿಗೆ ಶಿಲೆಗಳ ರಂಧ್ರತ್ವವನ್ನು ಅವಲಂಭಿಸಿದೆ.
ಇಂಗ್ಲಿಷ್ ವಿಶ್ವಕೋಶದ ಲೇಖನದ ಎರಡನೇ ಪ್ಯಾರದ ಆರಂಭ ಹೀಗೆ :
The quantity of water held in rock depends on the poracity of the rock 1 to 50% depending on the type.
ಮುಂದೆ, ಕನ್ನಡ ವಿಶ್ವಕೋಶದ ಲೇಖನದ ಮೂರನೇ ಪ್ಯಾರದ ಆರಂಭ :
ಭೂಮಿಯ ಮೇಲ್ತೊಗಟೆಯಲ್ಲಿ ಅಂತರ್ಜಲವಿರುವ ಮಟ್ಟವನ್ನು ಸಂತೃಪ್ತವಲಯ (ಸ್ಯಾಚುರೇಟೆಡ್) ಎನ್ನಲಾಗಿದೆ.
ಇಗ್ಲಿಷ್‌ನಲ್ಲಿ ;
The zone in the earth’s crust in which ground water is held is called the saturated zone.
ಒಂದು ಒಳ್ಳೆಯ ಇಂಗ್ಲಿಷ್ ಲೇಖನವನ್ನು ಓದಿ ಕನ್ನಡದಲ್ಲಿ ಲೇಖನ ಬರೆಯಬೇಕೆಂದಿದ್ದಾಗ ಭಾಷಾಂತರದ ಆಸೆಗೆ ಬಹುಬೇಗ ತುತ್ತಾಗುತ್ತೇವೆ. ಇದರಲ್ಲಿ ತಪ್ಪೇನಿಲ್ಲ. ಭಾಷಾಂತರವೇ ಓದುಗರಿಗೆ ಅರ್ಥವಾಗುವಂತಿದ್ದರೆ ಅಷ್ಟೇ ಸಾಕು. ಆದರೆ ಕನ್ನಡ ವಿಶ್ವಕೋಶಕ್ಕೆ ಲೇಖನ ಬರೆದು ಅದರ ಕೊನೆಯಲ್ಲಿ ತಮ್ಮ ಹೆಸರಿನ ಅಂಕಿತವನ್ನು ಹಾಕಿಕೊಂಡು ಈ ಕೆಲಸ ಮಾಡುವುದು ಕೃತಿಚೌರ್ಯದ ಅಪರಾಧಕ್ಕೆ ಸಮನಾಗುತ್ತದೆ. ಇದೇ ಲೇಖನಕ್ಕಾಗಿ ಇನ್ನೊಂದೆರಡು ವಿಶ್ವಕೋಶಗಳನ್ನಾದರೂ ಲೇಖಕರು ತಿರುವಿದ್ದರೆ ಇಂಥ ಆಭಾಸವಾಗುತ್ತಿರಲಿಲ್ಲವೇನೋ. ಕನ್ನಡ ವಿಶ್ವಕೋಶಕ್ಕೆ ಲೇಖನ ಬರೆಯುವುದು ಇಷ್ಟು ಸುಲಭದ ಕೆಲಸವಾದರೆ ಆ ಕಾರ್ಯಕ್ಕೆ ಪಂಡಿತರು ಬೇಕಿಲ್ಲ. ಭಾಷಾಂತರಕಾರರು ಸಾಕು.
ಕನ್ನಡ ವಿಶ್ವಕೋಶದ ಇನ್ನೂ ಅನೇಕ ಲೇಖನಗಳು ಶುದ್ಧ ಭಾಷಾಂತರಗಳಲ್ಲದಿದ್ದರೂ ಒಂದೇ ಒಂದು ಇಂಗ್ಲಿಷ್ ವಿಶ್ವಕೋಶವನ್ನು ನೋಡಿ ಬರೆದದ್ದು. ಹೆಚ್ಚಿನ ಪುಸ್ತಕ-ಲೇಖನಗಳನ್ನು ಓದುವ ಗೋಜಿಗೆ ಹೋಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕನ್ನಡ ವಿಶ್ವಕೋಶದ “ಅಣಕುವಾಡು”, “ಅಸ್ತಿತ್ವವಾದ” ಲೇಖನಗಳಿಗೂ Encyclopaedia Britannlca ದ “Parody” “Existentialism”ಲೇಖನಗಳಿಗೂ ಇರುವ ಸಾಮೀಪ್ಯವನ್ನು ಈ ದೃಷ್ಟಿಯಿಂದ ನೋಡಬಹುದು.
ಕೆಲವು ಲೇಖನಗಳು, ಆ ವಿಷಯದ ಬಗ್ಗೆ ಏನೂ ತಿಳಿಯದವರು ಬರೆದಂತೆ ಕಾಣುತ್ತದೆ. ನಾಲ್ಕನೇ ಸಂಪುಟದ “ಕಾನ್ರಾಡ್, ಯೋಸೆಫ್” ಎಂಬ ಲೇಖನ ಹೀಗಿದೆ:
ಕಾನ್ರಾಡ್, ಯೋಸೆಫ್ : ಸಮುದ್ರಯಾನಕ್ಕೆ ಸಂಬಂಧಿಸಿದ ಸಾಹಸಕಥೆಗಳಿಂದ ಪ್ರಸಿದ್ಧನಾದ ಕಾದಂಬರಿಕಾರ. ಇವುಗಳಲ್ಲಿ ಒಂಟಿಜೀವನದ ಕಷ್ಟ ನಷ್ಟಗಳು, ಪ್ರಕೃತಿಯನ್ನು ಎದುರಿಸಿ ಹೋರಾಡುವ ಸಾಹಸಮಯ ಜೀವನ ಚಿತ್ರಿತಗೊಂಡಿದೆ. ಸಮುದ್ರಯಾನಕ್ಕೆ ಸಂಬಂಧಿಸಿದ ಕಥೆಗಳನ್ನಲ್ಲದೆ ಅನೇಕ ಕಾದಂಬರಿಗಳನ್ನೂ ಈತ ಬರೆದಿದ್ದಾನೆ…
(ಮುಂದೆ ಈ ಕಾದಂಬರಿಗಳನ್ನು ಹೆಸರಿಸಲಾಗಿದೆ).
ಜೋಸೆಫ್ ಕಾನ್ರಾಡ್ ಇಪ್ಪತ್ತನೇ ಶತಮಾನದ ಅತಿ ಪ್ರಮುಖ ಕಾದಂಬರಿಕಾರರಲ್ಲೊಬ್ಬನೆಂದು ಏಕೆ ಪರಿಗಣಿಸಲಾಗಿದೆ ಎಂದು ಈ ಲೇಖನ ಓದಿದರೆ ಏನೂ ತಿಳಿಯುವುದಿಲ್ಲ, ಇಂದಿನ ವಿಮರ್ಶಕರು ಇವನ ಕೃತಿಗಳನ್ನು ಯಾವ ದೃಷ್ಟಿಯಿಂದ ಮಹತ್ವವೆನ್ನುತ್ತಾರೆಂಬುದೂ ತಿಳಿಯುವುದಿಲ್ಲ. ಬುದ್ದಿವಂತ ಓದುಗನಿಗೆ ಇಂಥ ಲೇಖನಗಳು ತಮಾಷೆಯಾಗಿ ಕಾಣುತ್ತವೆ. ಇದು ವಿಶ್ವಕೋಶದಂಥ ಸೀರಿಯಸ್‌ ಆಕರ ಗ್ರಂಥಗಳಿಗೆ ಸಲ್ಲ.
ಇನ್ನು ಈ ಸಂಪುಟದಲ್ಲಿ ಜಪಾನಿ ನೊಬೆಲ್ ಪ್ರಶಸ್ತಿ ವಿಜೇತ ಕವಾಬಾಟನ ಬಗೆಗಾಗಲೀ ಫ್ರೆಂಚ್ ಲೇಖಕ ಅಲ್ಬರ್ಟ್ ಕಾಮು ಬಗೆಗಾಗಲಿ ಲೇಖನಗಳಿಲ್ಲ. ಶಿವರಾಮ ಕಾರಂತರ ಬಗ್ಗೆ ಲೇಖನವಿಲ್ಲದೆ ದ. ಬಾ. ಕುಲಕರ್ಣಿ, ಮುಲ್ಕರಾಜ್ ಆನಂದ್ (ಸಂಪುಟ 1) ರ ಬಗೆಗೆ ಲೇಖನವಿರುವುದು ನೋಡಿದರೆ ಅಚ್ಚರಿಯಾಗುತ್ತದೆ. ಆಂಗ್ಲ ಸಾಹಿತ್ಯ ಅಥವಾ ಭಾರತೀಯ ಸಾಹಿತ್ಯದಲ್ಲಿ ಮುಲ್ಕ್‌ರಾಜ್ ಆನಂದರ ಸ್ಥಾನ ಮತ್ತು ಕನ್ನಡ ಸಾಹಿತ್ಯದಲ್ಲಿ ಕಾರಂತರ ಸ್ಥಾನ ಗಮನಿಸಿದರೂ ಈ ಆಯ್ಕೆ ತೀರ ಅಸಮರ್ಪಕ. ಬದುಕಿರುವ ಕನ್ನಡ ಲೇಖಕರ ಬಗ್ಗೆ ಲೇಖನ ಬೇಡವೆಂಬ ಧೋರಣೆ ಈ ವಿಶ್ವಕೋಶಕ್ಕಿದ್ದರೆ ಅದು “ಸತ್ತ ವಿಶ್ವಕೋಶ” ವಾಗುತ್ತದೆ. ವಿಶ್ವಕೋಶ ಜೀವಂತವಾಗಿದ್ದರೇನೇ ಬದುಕುವುದು ಕಷ್ಟ! ಇಂಥ ನಿರ್ಜೀವ ಧೋರಣೆ ವಿಶ್ವಕೋಶದ ಆರೋಗ್ಯಕ್ಕೆ ಒಳ್ಳೆಯದಲ್ಲ.
ವಿಶ್ವಕೋಶದ ಸಂಪಾದಕ ವರ್ಗದವರು ಇನ್ನೂ ಕೊಂಚ ಹುಷಾರಾಗಿದ್ದರೆ ಕೆಲವು ತೀರ ಎದ್ದು ಕಾಣುವ ತಪ್ಪುಗಳನ್ನು ನಿವಾರಿಸಬಹುದು. ಸಂಪುಟ ಒಂದರ 822 ನೇ ಪುಟದ “ಆಭರಣ” ಲೇಖನದಲ್ಲಿ-
“.ಹತ್ತನೇ ಜನವರಿ 1963 ರಲ್ಲಿ ಚಿನ್ನ ನಿಯಂತ್ರಣ ಆಜ್ಞೆಯನ್ನು (ಸರಕಾರ) ಹೊರಡಿಸಿತು. (ಇದು)…ಅಕ್ಕಸಾಲಿಗರ ಆರ್ಥಿಕ ಸ್ಥಿತಿಯ ಮೇಲೆ ಭಾರಿ ಪರಿಣಾಮ ಮಾಡಿತು…ಪರಿಣಾಮವಾಗಿ 3 ನೇ ಸೆಪ್ಟೆಂಬರ್ 1966 ರಂದು ಈ ಚಿನ್ನ ನಿಯಂತ್ರಣ ಕಾನೂನನ್ನು ಸರಕಾರ ಹಿಂತೆಗೆದುಕೊಳ್ಳಬೇಕಾಯಿತು”.
-ಎಂದಿದೆ. ಇಂಥ ತಪ್ಪುಗಳನ್ನು ನಿವಾರಿಸಬಹುದು. ಜೊತೆಗೆ ಯಾವ ಲೇಖನ ಎಷ್ಟು ದೊಡ್ಡದಿರಬೇಕೆಂಬ ಬಗ್ಗೆಯೂ ಸ್ಪಷ್ಟ ಕಲ್ಪನೆ ಇದ್ದಂತಿಲ್ಲ. ಅನವಶ್ಯಕ ವಿಷಯಗಳು 2-3 ಕಾಲಂಗಳಷ್ಟು ಅನೇಕ ಕಡೆ ಇದ್ದರೆ “ಅಕ್ಕಮಹಾದೇವಿ” ಯಂಥ ಪ್ರಭಾವಶಾಲಿ ವ್ಯಕ್ತಿಯ ಬಗ್ಗೆ ಕೇವಲ ಅರ್ಧ ಕಾಲಮಿನಷ್ಟು ಲೇಖನವಿದೆ. ಇನ್ನು ರೇಖಾಚಿತ್ರ, ಫೋಟೋಗಳ ಬಗೆಗೂ ಹೆಚ್ಚು ಗಮನ ತೆಗೆದುಕೊಂಡರೆ ಒಳ್ಳೆಯದು. ವ್ಯಕ್ತಿಗಳ ಫೋಟೊ ಕೊಡುವಾಗ ಮುಕ್ಕಾಲು ಕಾಲು ಅಗಲದ ಫೋಟೋ ಕೊಟ್ಟು ಪುಟವನ್ನು ವಿಕಾರಗೊಳಿಸುವುದಕ್ಕಿಂತ ಬ್ರಿಟಾನಿಕದವರಂತೆ ಅರ್ಧ ಕಾಲಂನ “ಸ್ಟಾಂಡರ್ಡ್‌ ಸೈಜ್” ಇಟ್ಟುಕೊಳ್ಳುವುದೇ ಒಳ್ಳೆಯದೆನಿಸುತ್ತದೆ. ಪ್ರತಿ ಸಂಪುಟದ ಕೊನೆಯ ವಿಚಿತ್ರ ‘ಅರ್ಥ-ವಿಷಯಸೂಚಿ’ ಅಷ್ಟೇನೂ ಸಹಾಯ ಮಾಡುವುದಿಲ್ಲ.
ಕೊನೆಯದಾಗಿ, ಇದನ್ನು ಪೂರ್ವಗ್ರಹಪೀಡಿತ ವೈಯಕ್ತಿಕ ಆರೋಪ ಎಂದೆಣಿಸದಿದ್ದಲ್ಲಿ, ಮತ್ತೊಂದು ಸಂದೇಹವನ್ನು ವ್ಯಕ್ತಪಡಿಸಲಿಚ್ಛಿಸುತ್ತೇನೆ. ಕನ್ನಡ ಸಾಹಿತ್ಯಕ್ಕೆ. ಸಂಬಂಧಿಸಿದ ಒಂದು ಲೇಖನದಲ್ಲಿ (ಸಂಪುಟ 3 ಪುಟ 725) ಕನ್ನಡದಲ್ಲಿ ಜೀವನ ಚರಿತ್ರೆಗಳ ಬಗ್ಗೆ ಬರೆಯುತ್ತ ಲೇಖಕರು “ದೇಜಗೌ ಅವರು ಕುವೆಂಪು, ತೀನಂಶ್ರೀ ಅವರ ಬಗ್ಗೆ ಬರೆದಿರುವ ಗ್ರಂಥಗಳು ಈ ಪ್ರಕಾರದ ಸಾಹಿತ್ಯಕ್ಕೆ ಮಾದರಿಯಾಗಿವೆ” ಎಂದು ತೀರ್ಪಿತ್ತಿದ್ದಾರೆ. ಕನ್ನಡದಲ್ಲಿ ಆತ್ಮಕಥೆಗಳ ಬಗ್ಗೆ ಬರೆಯುತ್ತ ದೇಜಗೌ ಅವರ “ಹೋರಾಟದ ಬದುಕು” ಬಗ್ಗೆ ಅತಿ ಹೆಚ್ಚು [13-14] ಸಾಲುಗಳನ್ನು ಬರೆಯಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಹಾಗೂ ಕನ್ನಡ ವಿಶ್ವಕೋಶದ ಗೌರವ ಪ್ರಧಾನ ಸಂಪಾದಕರೂ ಆಗಿರುವ ದೇಜಗೌ ಬಗ್ಗೆ ಹೀಗೆ ಬರೆಯುವುದು ಅಷ್ಟೊಂದು ಉಚಿತವಾಗಿ ಕಾಣುವುದಿಲ್ಲ.
ವಿಶ್ವಕೋಶದ ಸಂಪುಟಗಳನ್ನು ತಿರುವಿದಾಗ ಇಂಥ ಲೋಪದೋಷಗಳು ಕಂಡರೂ ಅನೇಕ ವಿದ್ವತ್ತೂರ್ಣ ಲೇಖನಗಳೂ ಇವೆ ಎಂಬುದನ್ನು ಮರೆಯಲಾಗುವುದಿಲ್ಲ. ಆದರೂ ಇಂಥ ತಪ್ಪುಗಳನ್ನು ಸರಿಪಡಿಸಿಕೊಂಡರೆ ವಿಶ್ವಕೋಶ ಮತ್ತಷ್ಟು ಅಮೂಲ್ಯವಾಗುತ್ತದೆ.
.

Close

ವಿದಾಯ

ವಿದಾಯ

-ಸುಬ್ರಾಯ ಚೊಕ್ಕಾಡಿ

ಇಸ್ಪೀಟಿನ ಭರಾಟೆಯ ಕೇಕೆಯ ಶೋಕಿಯ ಆಮೋದ ಪ್ರಮೋದಗಳ ಹರ್ಷೋಲ್ಲಾಸದ ನಡುವೆ ಸ್ವರ ಕೇಳಿ ಬಂತು:
ಹೋಗೋಣವೇ ?
ಒಂದು ಕ್ಷಣ ಕಾಯಿ ಹಕ್ಕುವುದೂ ಕೇಳಿಸುವ ಅಸಹಜ ಮೌನ, ಅಸಹನೆ…
ಇದೇನೂ ಮೊದಲ ಸಲವಲ್ಲ ಇವರಿಗೆ
ಸಂದರ್ಭ ಸಿಕ್ಕಾಗಲೆಲ್ಲ ಹೀಗೆ ಪ್ರಶ್ನಿಸಿ ಒತ್ತಾಯಿಸಿದ್ದು ನಿಜ.
ಬರುತ್ತೇವೆ ಎಂದು ಉತ್ತರಿಸಿದ್ದೂ ನಿಜ.
ಒಳಗೆ ಕರೆದಾಗ ಬಾರದೇ ಉಳಿದಾಗ
ಇವರೂ ಹೊರನಡೆಯದಾಗ ನಡುವಿನಂತರ
ಬೆಳೆದರೂ ಮತ್ತೆ ಮತ್ತೆ ಒತ್ತಾಯಿಸಿದ್ದು, ಹ್ಞೂ ಅಂದು
ಹೋಗದೇ ಇದ್ದದ್ದು ನಿಜ.

ಆದರೆ ಈಗ ಉತ್ತರಕ್ಕಾಗಿ ತಡಕಾಟ
ಉತ್ತರ ಕ್ಷಣದಲ್ಲಿ :
ನಾಳೆ ಬರುತ್ತೇವೆ
ಸ್ವಾಮೀ, ತಾವು ಮುಂದರಿಯಿರಿ….

ಮೆಟ್ಟಿಲಿಳಿಯುವ ಸದ್ದು, ಆಶೆಗಳೆಲ್ಲ ಕಳಚಿ ನಿರಾಶೆಯೇ ಮೈ ತಳೆದಂತೆ
ನಡಿಗೆ ಮುನ್ನಡೆದಂತೆ
ಹಿಂಬಾಲಿಸಿದ ಪಾದರಕ್ಷೆಯ ಸದ್ದು ಕರಗುತ್ತ ಹೋದಂತೆ
ಶೂನ್ಯ ವಾತಾವರಣ ತುಂಬುತ್ತಲೇ ಬಂತು : ಕೈಯಿಂದ ಕೈಗೆ ಸರಿವ
ವ್ಹಿಸ್ಕಿ ಬಾಟಲ ಸದ್ದು ಲೋಟಕ್ಕಿಳಿವ ಸದ್ದು
ಹಲ್ಲಿಗೆ ತಗುಲಿ ಕಳಕ್ಕೆನ್ನುವ ಸದ್ದು…

ಮತ್ತೆ ಸುರು ಸ್ಥಗಿತ ಚಿತ್ರಕ್ಕೆ ಹಠಾತ್ ಚಲನೆ ಬಂದಂತೆ
ಮುಕ್ತತೆಯಲ್ಲಿ ಮಾತುಕತೆ, ಜಾಸ್ ಸಂಗೀತ
ಉನ್ಮತ್ತ ನಗೆ, ಕುಣಿತ-ಗಂಡುಗಳ, ಹೆಣ್ಣುಗಳ :
ಹೊರಗೆ ತಲೆ ಬಗ್ಗಿಸಿ ಕಣ್ಣುಗಳ ಸಂಕೋಚಿಸಿ
ಹುಬ್ಬುಗಂಟಿಕ್ಕಿ ಮೂಗನ್ನೆತ್ತಿ ನಡೆದವರ
ಚಹರೆ ಪಟ್ಟಿಯ ನೆನಪಿಸಿ ನೆನಪಿಸಿ ನಕ್ಕರೋ ನಕ್ಕರು.
ಮೂಗನ್ನರಳಿಸಿ ಸಂಕೋಚ ಕಿತ್ತು ಕಿತ್ತು ಎಲ್ಲರೂ
ಆಘ್ರಾಣಿಸಿ, ರಕ್ತಗತ ಮಾಡುತ್ತ ಖುಷಿಪಟ್ಟರೋ ಪಟ್ಟರು.
ಇಸ್ಪೀಟಿನೆಲೆಗಳನ್ನೊಂದೊಂದೆ ಚೆಲ್ಲುತ್ತ
ವ್ಹಿಸ್ಕಿ ಮುಕ್ಕಳಿಸುತ್ತ, ಖುಷಿಯಲ್ಲಿ ಗಾಂಭೀರ್ಯದಲ್ಲಿ
ರಾಜಕೀಯ ಅಥವ ಸಾಹಿತ್ಯ ಅಥವ ತತ್ವಚಿಂತನೆಯನ್ನು
ನಡೆಸಿದರೋ ನಡೆಸಿದರು.

ಸಮಯ ಕಳೆಯುತ್ತಾ ಹೋದಂತೆ ಕಳೆಯಲೇ ಉಳಿಯದೇ
ನಿಂತು ಹೋದಂತಾಗಿ
ವಿವಿಧ ಆಸಕ್ತಿಗಳು ಬೆರೆಯುತ್ತಾ ಸಮರಸವಾಗುತ್ತಾ
ಏಕರಸವೇ ಆಗಿ
ನಿನ್ನೆ ಇಂದು ನಾಳೆಗಳೆಲ್ಲಾ ಒಂದಾಗಿ, ಅದೇ ಇವರಾಗಿ
ಇವರೇ ಅದಾಗಿ, ಸ್ಥಿತಿಯಾಗಿ
ಗಂಡಂದಿರು ಹೆಂಡಂದಿರು ಬದಲಾಗಿ, ಆದರೂ
ಒಂದೇ ಆದರು.
ಬೇರೆ ಬೇರೆ ಕೋಣೆಗಳೂ ಒಂದೇ ಆಗಿ
ಅಲ್ಲೇ ಉಳಿದರು.
ನಿಂತ ಕ್ಷಣದಲ್ಲಿ ಸ್ಥಳದಲ್ಲಿ ಕ್ರಿಯೆಯಲ್ಲಿ
ನಿಂತ ಸೃಷ್ಟಿಯೂ, ನಿರಂತರವೂ ಆದಾಗ
ಇದೇ ಚಟವಾಗಿ, ಆದದ್ದಕ್ಕೆ ಬೇಜಾರಾಗಿ
ಸ್ಥಿತಿಯ ಪರಿಸ್ಥಿತಿಯ ವ್ಯೂಹದ ಹೊರಗೆ
ಬಿಡುಗಡೆಗಾಗಿ ಹೊರಹಾಯ್ದರು.

ಅಡ್ಡಾದಿಡ್ಡಿ ಬಿದ್ದ ರಾಜ ರಾಣಿ ಗುಲಾಮ ಬಾಟಲು ಲೋಟ
ವ್ಯಾನಿಟಿ ಬ್ಯಾಗು ಕೋಟು ಪ್ಯಾಂಟು ಸೀರೆ ಸ್ಕರ್ಟು
ಅನಾಥ ಶವಗಳಂತೆ, ಸಂಸ್ಕಾರದಿಂದ ವಂಚಿತರಂತೆ
ಬಿದ್ದರೂ, ಲಕ್ಷಿಸದೆ ಅಪರಿಚಿತರಂತೆ ಅನಾಸಕ್ತರಂತೆ
ನಿದ್ರಾಮಗ್ನ ಜೀವಿಗಳಂತೆ ನಡೆದುಹೋದರು :
ಬಾಗಿಲು ತೆರೆದು ಹೊರಟೇ ಹೋದರು.
೨

ನಡೆಯುತ್ತಾ ಹೋದರೊಬ್ಬೊಬ್ಬರಾಗಿ ಏಕಾಂತ ಸ್ಥಿತಿಯಲ್ಲಿ
ಚಪ್ಪಲಿಯೇಕತಾನದ ಹಿಮ್ಮೇಳದಲ್ಲಿ ನಡೆಯುತ್ತಾ ಹೋದಂತೆ
ಅವರವರ ಕಣ್ಣ ದೃಷ್ಟಿಗೆ ನೇರ ಹಾದಿ ಸವೆಸುತ್ತಾ ಹೋದಂತೆ
ಹಿಂದುಳಿದ ಕೋಣೆಯ ಅನಾಥ ವಸ್ತುಗಳೆಲ್ಲನಾಮತ್ತು ಜೀವ ತಳೆದಂತೆ
ತಳೆದು, ನಿಂತ ನೆಲೆ ಅರಿವಾದಂತೆ ಆಸರೆ ಕಳೆದು
ಕಂಗೆಟ್ಟವು. ಕಂಗೆಟ್ಟು
ವ್ಹಿಸ್ಕಿಯ ವಾಸನೆ ಮೈಯ ವಾಸನೆ ಎಲೆಗಳ ವಾಸನೆ ವೀರ್ಯದ ವಾಸನೆ
ಬಾಗಿಲು ತೆರೆದು ಹೊರಗೋಡಿ ವಾಸನೆ ಹಿಡಿದು ಹಿಂಬಾಲಿಸಿದವು
ಹಿಂಬಾಲಿಸಿ ಕಂಗೆಟ್ಟವು.

ಅನಿಮಿಷ ಸ್ಪಿಯಲ್ಲಿ ನಡೆದಂತೆ
ಪರಿಚಯ ಮರೆತ ಅನಾಥ ಸ್ಥಿತಿಯಲ್ಲಿ ಒಂದೊಂದೆ ಒಂದೊಂದೆ
ಮುಗ್ಗರಿಸಿ ಬಿದ್ದಂತೆ
ಮುನ್ನಡೆದರು. ಮುನ್ನಡೆದು
ಕಣ್ಣಿಗೆ ಬಿದ್ದ ದೃಶ್ಯವನ್ನರ್ಥೈಸುತ್ತ ಕ್ಷಣ ನಿಂತರು.

ತಲೆಬಗ್ಗಿಸಿದ ಕಣ್ಣುಗಳ ಸಂಕೋಚಿಸಿದ ಹುಬ್ಬುಗಂಟಿಕ್ಕಿದ
ಅದೆ ಭಂಗಿ-
ಆಯಾಸದ ನೋವಿನ ಸೋಲಿನ ಗೆರೆಗಳಿಗೆ ಹಂಚಿಹೋದ ತೊಗಲಿನಾಕೃತಿಗಳು
ತುಂಡು ಬಟ್ಟೆಗಳು ಯಾತ್ರೆಯ ಚೊಂಬುಗಳು
ಗತಿಗೆಟ್ಟು ಸದ್ದಿರದೆ ಕುಳಿತ ಪಾದರಕ್ಷೆಗಳ ನಡುವೆ
ಶವಾಸನದಲ್ಲಿ ನಿದ್ರೆಗೆ ಸಂದ ಆಕೃತಿಗಳು.
ಒಂದು ಕ್ಷಣ ನಿಂತರು :
ಪ್ರತಿಕ್ರಿಯೆಗಾಗಿ ಕಾದರು, ಚೇತರಿಕೆ ಬಗ್ಗೆ ಚಿಂತಿಸಿದರು
ಒಂದು ಕ್ಷಣ
ಒಂದೇ ಕ್ಷಣ-

ಮರುಕ್ಷಣದಲ್ಲೇ ಭಂಗಿ ಬದಲಾಯಿಸಿದರು
ಪಯಣಕ್ಕೆ ತಯಾರಾಗಿ ನಿಂತರು.

ಹೊರಡುವ ಮುನ್ನ
ಬರುತ್ತೇವೆ ಸ್ವಾಮೀ ಅಂದು
ವಿದಾಯ ಹೇಳಿಕೊಂಡರು ಮನಸ್ಸಿನಲ್ಲಿ.
ಸಂಬಂಧಗಳ ಮರೆತರು ಅಪರಿಚಿತರಾದರು
ಮುನ್ನಡೆದರು ಅವರವರದೇ ದಾರಿಯಲ್ಲಿ.

Close

ಸಾವಿತ್ರಿ

ಸಾವಿತ್ರಿ

-ಬುದ್ದಣ್ಣ ಹಿಂಗಮಿರೆ

ನಿನ್ನ ಹೆಸರೆತ್ತಲು ಮತ್ತೆ
ಕಾಡು
ಹೂ ಮುಡಿದದ್ದು :
ನಿದ್ರೆಯಿಂದೆಚ್ಚತ್ತ ಹಾಗೆ ಎದ್ದು
ಕಾಡಿಗೆ ಹೊರಡುವ ಸತ್ಯವಾನ.
ಆಕಾಶ ಮಾರ್ಗದಲ್ಲಿ
ತೆಪ್ಪದ ಹಾಗೆ ತೇಲುವ
ಕೋಣವಾಹನ : ಕಪ್ಪು
ಕ್ವಾರಿಮೀಸಿ ಹಾಗೂ ಹಗ್ಗ.
ಹುಟ್ಟಿನ ಹುಟ್ಟು ಕಡೆಯುವ ಸಾವಿತ್ರ
ಮಂತ್ರದಡಿ-

ತಲೆಮೇಲೆ ಜೀವಕೊಡ ಹೊತ್ತುನಿಂತು
ಏಳು ಕೊಳ್ಳದಾಳದಲ್ಲಿ ಬಿದ್ದ ಬೆಳಕಿಗೆ
ಉಧೊ ಎನ್ನುವ ಪ್ರಾಚೀನ
ನೆರಳುಗಳು.
ಪ್ರಶೋತ್ತರ ಸಂಭಾಷಣೆ ಬುದ್ದಿವಂತಿಕೆಗೆ
ಬೆಚ್ಚಿ ಬಿದ್ದವನು ನಿಯತಿ ನಿರ್ಬಂಧ ತಿದ್ದಿದ್ದು :
ಕುರುಡು ಕಣ್ಣಲ್ಲಿ ಮತ್ತೆ ಬೆಳಕಿನ ಸೆಲೆಯೊಡೆದದ್ದು
ಮರಳಿ ರಾಜ್ಯ ಲಭ್ಯವಾದದ್ದು, ಸಂತಾನಾಭಿವೃದ್ಧಿ –
ಇತ್ಯಾದಿ ಇತ್ಯಾದಿ
ಇತ್ಯಾದಿ.

Close

ಮಲೆಗಳಲ್ಲಿ ಮದುಮಗಳು (ಒಂದು ಸಾಂಕೇತಿಕ ಕ್ರಿಯೆ)

ಮಲೆಗಳಲ್ಲಿ ಮದುಮಗಳು
(ಒಂದು ಸಾಂಕೇತಿಕ ಕ್ರಿಯೆ)

-ಶ್ರೀಕೃಷ್ಣ ಆಲನಹಳ್ತಿ

ಮನಸ್ಸಿನ ವಿಚಾರವನ್ನು ಯಾವ ರೀತಿಯ ಭಾಷೆಯಲ್ಲಾದರೂ ಹೇಳಿಬಿಡುವುದು ಸಾಮಾನ್ಯರಿಗೆ ಸುಲಭವಿರಬಹುದು. ಶ್ರೇಷ್ಠ ಕಲಾವಿದನಿಗಂತು ಅದು ಸಾಧ್ಯವಿಲ್ಲ. ತನ್ನ ಕೃತಿಯಲ್ಲಿ ಅವನು ಆಡುವ ಭಾಷೆ, ವಿಚಾರ ಮತ್ತು ಭಾವದಲ್ಲಿ ಸಂಯೋಜಿತವಾಗಿ ಮೂಡಿಬರುತ್ತದೆ. ಇಂಥ ಭಾಷೆಯಿಂದ ಮಾತ್ರ ಸೃಷ್ಟಿಯ ಸೂಕ್ಷ್ಮಗಳನ್ನು ಬಿಚ್ಚುತ್ತ, ಕಾಲಕಾಲಕ್ಕೆ ಬದಲಾಗುವ ಜೀವನದ ಅಂತಃಸತ್ವವನ್ನು ಶೋಧಿಸುತ್ತ, ಆ ಮೂಲಕ ಮಾನವನ ತಿಳುವಳಿಕೆಯನ್ನು ಮಹತ್ವದ್ದಾಗಿಸಲು ಸಾಧ್ಯ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರುವ ಸಾಂಕೇತಿಕ ಕ್ರಿಯೆಯೊಂದರ ಅಭ್ಯಾಸದ ಮೂಲಕ ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಯಾಕೆ ಮಹತ್ವದ್ದಾಗಿದೆ ಅನ್ನುವುದನ್ನು ತೋರಿಸುವುದೆ ಈ ಲೇಖನದ ಉದ್ದೇಶ.
ದೇವಯ್ಯ ಈ ಕಾದಂಬರಿಯಲ್ಲಿ ಯುಗ ಸಂಧಿಕಾಲದ ಮೌಲ್ಯಗಳ ಸಂಘರ್ಷವನ್ನು ಸಂಕೇತಿಸುವ ಮುಖ್ಯಪಾತ್ರ. ದ್ವಂದ್ವದಲ್ಲಿ ಸಿಕ್ಕ ಏಕಮಾತ್ರ ಪಾತ್ರವೂ ಈ ಕಾದಂಬರಿಯಲ್ಲಿ ಇವನೇ. ಈ ದೊಡ್ಡ ಕಾದಂಬರಿಯಲ್ಲಿ ಬರುವ ಬಹುಮಟ್ಟಿನ ಪಾತ್ರಗಳೆಲ್ಲ ಯಾವ ದ್ವಂದ್ವವೂ ಇಲ್ಲದೆ ತಲತಲಾಂತರದಿಂದ ಬಂದ ಮೌಲ್ಯಗಳನ್ನು ಕಣ್ಣುಮುಚ್ಚಿಕೊಂಡು ಕೆಂಡವಾದರೂ ಸರಿಯೆ ನುಂಗಿಬಿಡುವಷ್ಟು ತೀವ್ರ ನಿಷ್ಠೆಯ ಪಾತ್ರಗಳು. ಇಂಥ ಪರಿಸರದಲ್ಲಿ ದೇವಯ್ಯ ಪರಕೀಯನಾಗಿ ಕಾಣುತ್ತಾನೆ. ಪಾದ್ರಿಯ ಉಪದೇಶದ ಹೊಸ ದನಿ ದೇವಯ್ಯನಿಗೆ ಎಂದೂ ಕೇಳಿರದಿದ್ದ ದನಿಯಾಗುತ್ತದೆ. ಹೊಸ ಬಗೆಯ ಅರಿವನ್ನೂ ತಂದುಕೊಡುತ್ತದೆ. ಈ ದನಿ ಮತ್ತು ಅರಿವುಗಳಿಗೆ ಒಳಗಾದ ದೇವಯ್ಯ ತನ್ನವರ ಬದುಕಿನಲ್ಲಿ ಅಪಶ್ರುತಿಯನ್ನು ಕೇಳುತ್ತಾನೆ.
ದುರಂತವೆಂದರೆ ದೇವಯ್ಯನ ಪಾಲಿಗೆ ಅಪಶ್ರುತಿಯಾಗಿರುವ ಅವನ ಆ ಪರಿಸರದ “ಜೀವನ ಪದ್ಧತಿ’, ಉಳಿದೆಲ್ಲ ಪಾತ್ರಗಳ ಪಾಲಿಗೆ ನಿರಂತರ ಲಯಬದ್ಧವಾಗಿಯೇ ಸೃಷ್ಟಿ ಯೊಡನೆ ಮೇಳವಿಸಿದ ಶ್ರುತಿಯಾಗಿದೆ. ಅಂದರೆ ಅವರೆಂದೂ ಒಪ್ಪಿಕೊಂಡು ಬಂದಿದ್ದ ಸಾಮಾಜಿಕ ಮೌಲ್ಯಗಳನ್ನು ಅನುಮಾನದಿಂದ ಕಂಡವರೇ ಅಲ್ಲ. ಇಂಥ ಸಾಮಾಜಿಕ ಪರಿಸರದಿಂದ ದೇವಯ್ಯನ ವೈಯಕ್ತಿಕ ಪ್ರಜ್ಞೆ ಸರಿದು ನಿಲ್ಲುತ್ತದೆ. ಅವನು ತನಗೆ ಸವಾಲಾದ ಸಾಮಾಜಿಕ ಪರಿಸರದಲ್ಲಿ ಬಿರುಕನ್ನೂ ಲಯವಿಹೀನತೆಯನ್ನೂ ಕಾಣುತ್ತಾನೆ. ಆ ಪರಿಸರಕ್ಕೂ ದೇವಯ್ಯನ ಹೊಸ ಮಾತುಗಳು, ಕ್ರಿಯೆಗಳು ಅಷ್ಟೇ ತೀವ್ರವಾಗಿ ಅಪಶ್ರುತಿಯಾಗಿ ಕೇಳಿಸುತ್ತವೆ.
ದೇವಯ್ಯನ ಹೆಂಡತಿ ದೇವಮ್ಮನೆ ಅಲ್ಲಿನ ಪರಂಪರಾನುಗತ, ರೂಢಿಗ್ರಸ್ತ ಮೌಲ್ಯಗಳ ಪರಿಸರದ ಪ್ರತಿನಿಧಿ. ತನ್ನವರು ನಂಬಿ ಬದುಕಿದ ಮೌಲ್ಯಗಳಲ್ಲಿ ತನ್ನ ಬದುಕಿನ ಸಾರ್ಥಕತೆಯನ್ನು ಕಾಣಲು ಹೊರಟವಳು. ಒಟ್ಟಿನಲ್ಲಿ ಹೇಳುವುದಾದರೆ ಅವಳದು ಸಾಮಾಜಿಕ ವ್ಯಕ್ತಿತ್ವ. ಅವಳಾಡುವ ಮಾತೆಲ್ಲ ಅವಳ ಸಮಾಜದ್ದೆ. ಆದರೆ ದೇವಯ್ಯನದು ವೈಯಕ್ತಿಕತ್ವ. ಈ ಎರಡು ಪಾತ್ರಗಳ ಸಂಘರ್ಷ ಈ ಎರಡೂ ಮೌಲ್ಯಗಳ ಸಂಘರ್ಷ ಕೂಡ.
ಈ ಸಂಘರ್ಷ ಅರ್ಥಪೂರ್ಣವಾಗುವ ಘಟನೆಯೆ ನಾನು ಮೊದಲು ವಿವೇಚಿಸುತ್ತೇನೆಂದು ಹೇಳಿದ ಸಾಂಕೇತಿಕ ಕ್ರಿಯೆ. ಈ ಕ್ರಿಯೆಯ ಪ್ರಾರಂಭಕ್ಕೆ ಬರುವ ಮನೆಯ ವಾತಾವರಣವೆ ಅರ್ಥಪೂರ್ಣವಾಗಿದೆ. ಅದು ಕತ್ತಲು ತುಂಬಿದ ಬಾಣಂತಿಯ ಕೋಣೆ. ದೇವಮ್ಮ ಐದು ತಿಂಗಳ ಮಗುವಿನ ತಾಯಿ. ಆ ಕೋಣೆಗೆ ಎರಡು ಬೆಳಕಿಂಡಿಗಳಿದ್ದರೂ ಮುಚ್ಚಿವೆ. ಅವಳಿಗೆ ಅವನ್ನು ತೆಗೆಯುವುದು ಬೇಕಿಲ್ಲ. ಆದರೆ ಅವಳ ಪಾಲಿಗೆ ‘ಬೆಳಕು’ ಬೇಡ. “ಅವಳ ಕಣ್ಣಿಗೆ ತಂಪಾಗಿತ್ತು ಒಳಗಿದ್ದ ಕತ್ತಲೆ”. ಅದೇ ಕತ್ತಲ ಕೋಣೆಯಲ್ಲಿ ಅದೆಷ್ಟೋ ತೊಟ್ಟಿಲು ತೂಗಿವೆ. ಇವತ್ತೂ ತೂಗುವ ತೊಟ್ಟಿಲಿನ ಲಯಕ್ಕೆ ಒಂದಾಗಿ ದೇವಮ್ಮ ಹಾಡುತ್ತಿದ್ದಾಳೆ. ಈ ವಾತಾವರಣದ ಚಿತ್ರಣವೆ ಒಂದಾಗಿ ಅಲ್ಲಿನ ಜೀವನ ವಿಧಾನ ನಡೆಯುತ್ತಿರುವ ರೀತಿಯನ್ನೂ ತೋರಿಸುತ್ತದೆ.
ತೊಟ್ಟಿಲನ್ನು ತೂಗುತ್ತಾ, ತೂಗುತ್ತಾ ತನ್ನೆಲ್ಲ ಕಷ್ಟ ಸಂಕಟಗಳನ್ನೆಲ್ಲ ಮರೆತು ಮಗು ಮಲಗಿದ್ದೆ ತಾನೂ ಮಲಗಲು ತೊಟ್ಟಿಲ ಪಕ್ಕದ ನೆಲದ ಮೇಲೆ ಮಗ್ಗಲಾಗುತ್ತಿದ್ದ ಹಾಗೇ-
ಗಿರಕ್ಕನೆ ಸದ್ದಾಗಿ ಬಾಗಿಲು ತೆರೆಯಿತು. ದೇವಯ್ಯ ಮೆಲ್ಲನೆ ಒಳಗೆ ಬಂದನು. ಬಂದವನು, ಕೋಣೆಯ ಒಳಗೆ ಇದ್ದ ನಿಶ್ಯಬ್ದತೆಯನ್ನೂ ಹಗಲುಗತ್ತಲೆಯನ್ನೂ ಧೂಪದ ಪರಿಮಳವನ್ನೂ ನಿಷ್ಕ್ರಿಯ ಪ್ರಶಾಂತಿಯನ್ನೂ ಆಸ್ವಾದಿಸುವಂತೆ ಬಾಗಿಲ ಬಳಿ ನಿಂತು ಮೆಲ್ಲನೆ ಬಾಗಿಲು ಹಾಕಿದನು. ಬೆಳಕಿನಿಂದ ಬಂದಿದ್ದ ಅವನಿಗೆ ಸ್ವಲ್ಪ ಹೊತ್ತು ಒಳಗೆ ಏನೂ ಕಾಣಿಸಿರಲಿಲ್ಲ. ಕಣ್ಣು ಒಳಗಿನ ಬೆಳಕಿಗೆ ಹೊಂದಿಕೊಂಡ ಮೇಲೆ ತೊಟ್ಟಿಲು, ಅದರ ಪಕ್ಕದಲ್ಲಿ ಹಾಸುಗೆಯಲ್ಲಿ ಕುಳಿತಿದ್ದ ಅವನ ಕೃಶಾಂಗಿ, ಆದಕ್ಕೆ ತುಸುದೂರದಲ್ಲಿಯೇ ಮೂಲೆಯಲ್ಲಿದ್ದ ಮಂಚ-ಎಲ್ಲ ಕ್ರಮೇಣ ದೃಷ್ಟಿಗೆ ಸ್ವಪ್ನವಾಗಿ ಮೂಡಿದ್ದುವು.
“ಯಾಕೆ ? ಬೆಳಕ೦ಡಿ ಬಾಗಿಲನ್ನೆಲ್ಲ ಹಾಕಿ ಬಿಟ್ಟೀಯಾ ? ಒಂದು ಚೂರು ಗಾಳಿ ಬೆಳಕು ಓಡ್ಯಾಡಬಾರದೇನೇ ?” ಎಂದು ಕಿಟಕಿ ಬಾಗಿಲುಗಳನ್ನು ತೆರೆಯತೊಡಗಿದನು.
“ಬಾಲೆಗೆ ಗಾಳಿ ಸೋಂಕು ಆಗ್ತದಂತೆ, ತೆಗೀಬ್ಯಾಡಿ. ರಣಬಿಸಿಲು ಬೇರೆ. ಕೆಟ್ಟ ಕೆಟ್ಟ ದೆಯ್ಯಗಿಯ್ಯ ಓಡಾಡ್ತಾವಂತೆ…ಥ್ಚು” ಹೇಳಿದೊಂದೂ ಗೊತ್ತಾಗಾದಿಲ್ಲ ನಿಮಗೆ. ಮಲಗಿದ್ದ ಬಾಲೇನೂ ಎಬ್ಬಿಸ್ತೀರಿ ಈಗ…ನಿಮಗೆ ಹಿಡಿದಿದ್ದೇ ಹಟ” ಎಂದು ತೊಟ್ಟಿಲ ಹಗ್ಗಕ್ಕೆ ಒಂದು ಅರಿವೆ ತುಂಡನ್ನು ಅಡ್ಡ ಕಟ್ಟಿದಳು. ಮಗುವಿಗೆ ಬೆಳಕಿನ ಝಳ ಬೀಳದ ಹಾಗೆ.
ಇಲ್ಲಿ ದೇವಯ್ಯ ಕಿಟಕಿಯನ್ನು ತೆರೆಯುವ. ದೇವಮ್ಮ ಅದನ್ನು ಪ್ರತಿಭಟಿಸುವ ಕ್ರಿಯೆ ವಿಶಿಷ್ಟವಾದದ್ದನ್ನು ಧ್ವನಿಸುವ ಕ್ರಿಯೆ. ದೇವಯ್ಯನಿಗೆ ಕತ್ತಲು ತುಂಬಿದ ಕೋಣೆಯೋಳಕ್ಕೆ ಬೆಳಕು ತರುವ ಆಸೆ. ದೇವಮ್ಮನಿಗದು ಭಯದ, ಅನಿಷ್ಟದ ದೆವ್ವ ಬೆರೆತ ವಸ್ತು. ಅದು ಒಳಗೆ ಬರಬಾರದು. ಬಂದರೆ ತನ್ನ ಮಗುವಿಗೆ ಅದು ಕೇಡು ತರುವಂಥದ್ದು. ದೇವಯ್ಯನಿಗೆ ಕತ್ತಲು ತುಂಬಿದ್ದ ಕೋಣೆ ಬೇಡವಾದರೆ ಅವಳಿಗೆ ಅದೇ ಬೇಕಾದ್ದು. ಇಲ್ಲಿ ನಾವು ಗಮನಿಸಬೇಕಾದ್ದು-ದೇವಮ್ಮನ ಈ ಬಗೆಯ ಅನ್ನಿಸಿಕೆಯ ಹಿಂದಿರುವ ಅಂದರೆ ಅವಳವರ ಬದುಕಿಗೆ ಅಂಟಿಕೊಂಡ ನಂಬಿಕೆಗಳು. ಅವರಿಗೆ ಅಂದರೆ ಆ ಸಾಮಾಜಿಕ ತಿಳುವಳಿಕೆಗೆ ಬೆಳಕು ಅನಿಷ್ಟ. ಅಂದರೆ ಅರಿವೂ ಕೂಡ ಅನಿಷ್ಟವೆ.
ಹಾಗೆಯೇ ದೇವಯ್ಯನ ಮುಂದಿನ ಕ್ರಿಯೆಯನ್ನು ನೋಡುವ-ಅವನು ತಟ್ಟನೆ ಬೆಳಕಿಂಡಿಗಳನ್ನು ತೆರದೊಡನೆ ಹೊರಗಿನ ಬೆಳಕು ಒಳಕ್ಕೆ ನುಗ್ಗಿ ಬರುತ್ತದೆ. ದೇವಮ್ಮ ಭಯದಿಂದ ನಡುಗುತ್ತಿದ್ದ ಬದುಕು ಗೋಚರವಾಗುತ್ತದೆ. ದೇವಮ್ಮ ಭಯದಿಂದ ನಡುಗುತ್ತಿದ್ದಾಳೆ. ಆಗಬಾರದ್ದು ಆಗಿಬಿಟ್ಟಿದೆ. ತಟ್ಟನೆ ತನ್ನ ಕರುಳ ಕುಡಿಗೆ ಕೇಡಾಗದಿರಲೆಂದು ಬೆಳಕಿಗೆ ಅಡ್ಡವಾಗೇ ತೊಟ್ಟಿಲ ಸುತ್ತ ಅರಿವತುಂಡನ್ನು ಕಟ್ಟುತ್ತಾಳೆ. ದೇವಯ್ಯನಿಗೆ ಬೆಳಕಿನಲ್ಲಿ ಬಯಲಾದ ತನ್ನವರ ಕತ್ತಲ ಬದುಕನ್ನು ಕಂಡು ಅವನ ಮಾತುಗಳಿಗೆ ಇದ್ದಕ್ಕಿದ್ದಹಾಗೇ ವ್ಯಂಗ್ಯ, ತಿರಸ್ಕಾರ, ರೋಷ ಎಲ್ಲಾ ತುಂಬಿಕೊಳ್ಳುತ್ತವೆ.
“ಬೆಳಕಿಂಡಿಯ ಬಾಗಿಲುಗಳನ್ನೆಲ್ಲ ತೆರೆದು ತಿರುಗಿದವನು ತೊಟ್ಟಿಲ ಹಗ್ಗ ಕಟ್ಟಿದ್ದ ಗಳುವಿಗೆ ಬಟ್ಟೆ ಸುತ್ತಿ ನೇತುಹಾಕಿದ್ದ ಕುಂಕುಮಾಂಕಿತವಾದ ತೆಂಗಿನಕಾಯನ್ನು ನೋಡಿ “ಇದೇನು ಇದು ?” ಎಂದು ತಿರಸ್ಕಾರ ಪೂರ್ವಕವಾಗಿ ಕೇಳಿದನು.
ಅದೇನು ಎಂಬುದು ಅವನಿಗೂ ಗೊತ್ತಿದ್ದ ವಿಚಾರವೆ ಆಗಿತ್ತು. ಆದರೆ ಅವನು ನಿನ್ನೆ ತಾನೆ ತೀರ್ಥಹಳ್ಳಿಯಿಂದ ಹಿಂದಿರುಗಿದ್ದನು. ಪಾದ್ರಿಯ ಉಪದೇಶದ ಆವೇಶ ಇನ್ನೂ ಬಿಸಿಬಿಸಿಯಾಗಿಯೆ ಇತ್ತು. ಜೀವರತ್ನಯ್ಯ ಗೌಡಜನಾಂಗದಲ್ಲಿದ್ದ ಮೂಢಾಚಾರ ಮತ್ತು ಮೂಢನಂಬಿಕೆಗಳನ್ನು ಅಪಹಾಸ್ಯವಾಡಿ ಖಂಡಿಸಿದ್ದ ಗಾಯದ ನೆತ್ತರು ಇನ್ನೂ ಹಸಿಯಾಗಿಯೆ ಇತ್ತು. ಅದಕ್ಕಾಗಿ ತನ್ನ ಮತ್ತು ತನ್ನ ಜಾತಿಯವರ ವಿಚಾರವಾಗಿ ದೇವಯ್ಯನಿಗೆ ಜುಗುಪ್ಪೆ ಹುಟ್ಟಿತ್ತು. ತುಂಬ ಅವಮಾನಕ್ಕೆ ಗುರಿಯಾಗಿತ್ತು ಅವನ ಮನಸ್ಸು. ಅದರ ಪ್ರಭಾವ ಆ ಪ್ರಶ್ನೆಯ ಧ್ವನಿಗೂ ಅದರ ಕರ್ಕಶಕ್ಕೂ ಕಾರಣವಾಗಿತ್ತು.
“ಕಲ್ಲೂರು ದೋಯಿಸರು ಹೆಸರು ಇಟ್ಟುಕೊಡಾಕೆ ಬಂದಿದ್ದಾಗ, ಬಾಲೆಗೆ ಜಕಣಿ ಪಂಚ್ರೊಳ್ಳಿ ಕಾಟ ಕೊಟ್ಟಾವು ಅಂತಾ, ಮಂತ್ರಿಸಿ ಕೊಟ್ಟಿದ್ರು…” ದೇವಮ್ಮ ಪೂರೈಸಿರಲಿಲ್ಲ.
“ಇದು ?” ತೊಟ್ಟಿಲಿನ ಹಗ್ಗಕ್ಕೆ ನೇತುಬಿದ್ದಿದ್ದ ಮತ್ತೆರಡು ವಸ್ತುವಿನೆಡೆಗೆ ಕೈ ತೋರಿ ಕೇಳಿದನು.
“ಕಣ್ಣಾ ಪಂಡಿತರ ಅಂತ್ರ”
“ಇವೆಲ್ಲ ಏನು ?” ಇನ್ನೂ ಕೆಲವು ಚಿಕ್ಕ ಚಿಕ್ಕ ಗಂಟುಗಳ ಕಡೆ ಕೈ ಮಾಡಿ ಪ್ರಶ್ನೆಸಿದನು.
“ದೇವರು ದಿಂಡರಿಗೆ ಹೇಳಿಕೊಂಡು ಕಾಣಿಕೆ ಕಟ್ಟಿದ್ದು……”
“ನಿನಗೇನು ಬೇರೆ ಕಸುಬಿಲ್ಲೇನು ?……..”
“ಅವೆಲ್ಲ ನಿಮಗ್ಯಾಕೆ ? ಗಂಡಸ್ರಿಗೆ ?……”
ದೇವಯ್ಯನ ರೀತಿಯಿಂದಲೂ ಧ್ವನಿಯಿಂದಲೂ ತನ್ನ ಗಂಡನ ಉದ್ದೇಶ ಒಳ್ಳೆಯದಲ್ಲ ಎಂಬುದೇನೋ ದೇವಮ್ಮಗೆ ಗೊತ್ತಾಗಿತ್ತು. ಆದರೆ ಮುಂದೆ ನಡೆದದ್ದಕ್ಕೆ ಅವಳ ಚೇತನ ಸಿದ್ಧವಾಗಿರಲಿಲ್ಲ. ಹಿಂದೆಲ್ಲ ಮೂದಲಿಸುತ್ತಿದ್ದಂತೆಯೋ ಬೈಯುತ್ತಿದ್ದಂತೆಯೋ ಇವತ್ತೂ ಮಾಡಬಹುದೆಂದು ಬಗೆದಿದ್ದಳು. ಆದರೆ ದೇವಯ್ಯ ಮೈಮೇಲೆ ಬಂದವನಂತೆ ಸರಸರನೆ ತೆಂಗಿನಕಾಯಿ ಅಂತ್ರ ಕಾಣಿಕೆಗಳನ್ನೆಲ್ಲ ಕಿತ್ತು ಕಸದ ಮೂಲೆಗೆ ಎಸೆದು ಬಿಟ್ಟನು; “ಅಯ್ಯೋ” ಎಂದು ತತ್ತರಿಸುತ್ತ ತಡೆಯಲು ಎದ್ದಿದ್ದ ಬಾಣಂತಿ ಅವನ ಕೈಯ್ಯ ನೂಕಿಗೆ ಸಿಕ್ಕಿ ಹಾಸಗೆಯಮೇಲೆ ಕುಸಿದು ಬಿಕ್ಕಿಬಿಕ್ಕಿ ಅಳತೊಡಗಿದಳು. ದೇವಯ್ಯ ರಭಸವಾಗಿ ಉಸಿರುಬಿಡುತ್ತಾ ಬಾಯಲ್ಲಿ ಏನನ್ನೊ ಗೊಣಗಿಕೊಳ್ಳುತ್ತಾ ಹೋಗಿ ಮಂಚದ ಮೇಲೆ ಮಲಗಿಕೊಂಡನು…
ಇಲ್ಲಿ ದೇವಯ್ಯ ಕಿತ್ತೆಸೆಯುವುದು ತೆಂಗಿನಕಾಯಿ, ಅಂತ್ರ, ಕಾಣಿಕೆಗಳನ್ನು ಮಾತ್ರವಲ್ಲ, ಮೌಢ್ಯಗಳನ್ನು. ಅವನಿಗೆ ತನ್ನ ಪರಿಸರದ ಇಂಥ ನಂಬಿಕೆಗಳು ಪರಮ ಮೌಢ್ಯಗಳು. “ರಭಸವಾಗಿ ಉಸಿರು ಬಿಡುತ್ತಾ’ ಅನ್ನುವ ಮಾತು ದೇವಯ್ಯನಿಗೆ ಉಂಟಾದ ರೋಷ, ತಪ್ತತೆಯನ್ನು ಧ್ವನಿಸುತ್ತದೆ. ಬೆಳಕಿರದ ಉಸಿರು ಕಟ್ಟಿಸುವ ಕತ್ತಲಕೋಣೆಯ ತೊಟ್ಟಿ ಲಿಗೆ ಬಿಗಿದಿದ್ದ ಆ ವಸ್ತುಗಳು ಅವನವರ ಬದುಕಿನ ಕೊರಳಿಗೇ ಬೀರಿಕೊಂಡಿದ್ದ ಅರಿಷ್ಟ ಗಳು ಅನ್ನಿಸುತ್ತವೆ. ಅಲ್ಲದಿದ್ದರೆ ಅವನು ತಪ್ತಗೊಳ್ಳುತ್ತಿರಲಿಲ್ಲ. ದೇವಮ್ಮನಿಗೂ ಈ ಘಟನೆಯಿಂದ ಅಷ್ಟೇ ಗಾಢವಾದ ಯಾತನೆ ಆಗುತ್ತದೆ. ಅವರ “ಅಯ್ಯೋ” ಎಂಬ ದನಿ ಅವಳಿಗಾದ ನೋವು ಮತ್ತು ನಿಸ್ಸಹಾಯಕತೆಯನ್ನು ಸೂಚಿಸುತ್ತದೆ. ಬಿಕ್ಕಿಬಿಕ್ಕಿ ಅಳುತ್ತಾಳೆ.
ಮುಂದೆ ಈ ಕ್ರಿಯೆಗೆ ಒಂದು ಹೊಸ ಆಯಾಮ ಬರುತ್ತದೆ. ದೇವಯ್ಯನ ಒಳತೋಟಿಯ ಮೂಲಕ. ಪಾದ್ರಿಯಿಂದ ಅವನು ಪಡೆದ ವಿಚಾರಕ್ಕು’ ಅವನೊಳಗಿನ
ಸಹಜವಾದ ‘ಅಂತಃಕರಣಕ್ಕೂ’ ಘರ್ಷಣೆ ಉಂಟಾಗುತ್ತದೆ.
“ಮಂಚದ ಮೇಲೆ ಮಲಗಿಕೊಂಡ ದೇವಯ್ಯನ ಕಿವಿಗೆ,–ಆ ಕೋಣೆ ಅಷ್ಟು ನಿಶ್ಯಬ್ದವಾಗಿತ್ತು,- ತನ್ನ ಹೆಂಡತಿ ಬಿಕ್ಕಿಬಿಕ್ಕಿ ಸುಯ್ದು ಅಳುವ ಸದ್ದು, ತನ್ನ ಅಂತಃಪ್ರಜ್ಞೆಯ ಭರ್ತ್ಸನೆಯೋ ಅನ್ನುವಂತೆ, ಕೇಳಿಸತೊಡಗಿ ಅವನ ಮನಸ್ಸನ್ನು ಕಲಕಿತು. ಶುದ್ಧ ವಿಚಾರ ದೃಷ್ಟಿಯಿಂದ ತಾನು ಮಾಡಿದುದು ತಪ್ಪಲ್ಲ ಎಂದು ಬುದ್ಧಿ ವಾದಿಸುತ್ತಿದ್ದರೂ ಅವನ ಹೃದಯದಲ್ಲಿ ಏನೋ ಮರುಕ ತಲೆಹಾಕಿತ್ತು. ಚೆಲುವೆಯಾಗಿದ್ದ ತನ್ನ ಹೆಂಡತಿಯನ್ನು ಅವನು ಮದುವೆಯಾದಂದಿನಿಂದಲೂ ತುಂಬ ಮೋಹದಿಂದ ಪ್ರೀತಿಸುತ್ತಿದ್ದನು. ಅವಳೂ ತನ್ನ ಗಂಡನನ್ನು ಇನ್ನಿಲ್ಲ ವೆಂಬಂತೆ ಮುದ್ದಿಸಿದ್ದಳು ; ದೇವರೆಂಬಂತೆ ಗೌರವಿಸಿದ್ದಳು. ಪಾದ್ರಿಯ ಪ್ರಭಾವಕ್ಕೆ ತಾನು ಒಳಗಾಗುವವರೆಗೂ ಅವರಿಬ್ಬರಲ್ಲಿ ಎಷ್ಟು ಹೊಂದಾಣಿಕೆ ಯಿತ್ತೆಂದರೆ ಅದನ್ನು ಕಂಡು ಅತ್ತೆಗೂ ಒಮ್ಮೊಮ್ಮೆ ಕರುಬು ಮೂಡಿತ್ತು. ಈಗ ಈ ಸ್ಥಿತಿಗೆ ಬಂದಿದೆಯಲ್ಲಾ? ತನ್ನದಾದರೂ ಏನು ತಪ್ಪು? ಮಗುವಿನ ಜ್ವರಕ್ಕೆ ಔಷಧಿ ಕೊಟ್ಟು ಗುಣಪಡಿಸುವುದಕ್ಕೆ ಬದಲು ತಾಯಿತಿ ಕಟ್ಟಿದ್ದನ್ನು ಕಿತ್ತುಹಾಕಿದ್ದು ತಪ್ಪೆ ? ದೃಷ್ಟಿಮಣಿಯ ಹೆಸರಿನಲ್ಲಿ ಕೂಸಿನ ಕೊರಳಿಗೆ ನಾಣ್ಯ ರೂಪಾಯಿಗಳ ಭಾರವಾದ ಸರವನ್ನು ಹಾಕಿ, ಅದಕ್ಕೆ ಜೊಲ್ಲಿನ ವಾಸನೆ, ಕಕ್ಕು, ಹೇಲು, ಉಚ್ಚೆ, ಮಣ್ಣು, ಕೊಳೆ ಎಲ್ಲಾ ಹಿಡಿದು ಅಸಹ್ಯವಾಗಿದ್ದುದನ್ನು ತೆಗೆದೆಸೆದದ್ದು ತಪ್ಪೇ ? ಧರ್ಮದ ಹೆಸರಿನಲ್ಲಿ ಆರೋಗ್ಯ ಮತ್ತು ನೈರ್ಮಲ್ಯಗಳನ್ನು ನಿರ್ಲಕ್ಷಿಸಿದ್ದನ್ನು ಖಂಡಿಸಿದ್ದು ತಪ್ಪೇ ?
ಹೀಗೆ ವಿಚಾರ ಮತ್ತು ಅಂತಃಕರಣಗಳ ಇಕ್ಕಳಕ್ಕೆ ಸಿಕ್ಕ ದೇವಯ್ಯನ ಮಾನಸಿಕ ಹೋರಾಟ ಒಂದು ತತ್ವದ ಸಲುವಿನ ಹೋರಾಟವಾಗಿದೆ. ಒಂದು ಉಚ್ಚವರ್ಗದ ಶೋಷಣೆಗೆ ಒಳಗಾದ, ಶತಶತಮಾನದಿಂದ ಮೌಢ್ಯಗಳನ್ನು ಮೌಲ್ಯಗಳೆಂದು ನಂಬಿದ ಕತ್ತಲ ಬದುಕಿಗೇ ಜಡ್ಡಾಗಿ ಹೋದ ತನ್ನವರ ಬದುಕಿಗೆ ಹೊಸ ಬೆಳಕನ್ನು ತರಬಯಸುವ ಆ ಮೂಲಕ ಅವರ ಬದುಕನ್ನು ಹೊಸ ಬದುಕಾಗಿಸುವ ಅವನ ತೀವ್ರ ಅಭಿಲಾಷೆ, ಉತ್ಕಟತೆ, ಜೀವಂತವಾಗಿ ಇಲ್ಲಿ ಕೇಳಿಸುತ್ತದೆ.
ದೇವಯ್ಯ ಹೀಗೆ ಬೆಳಕಿಗೆ ತುಡಿಯುವಂತೆ ದೇವಮ್ಮ ಒಗ್ಗಿದ ಕತ್ತಲ ಬದುಕನ್ನು ಬಿಡಲು ಸಾಧ್ಯವಿಲ್ಲದೆ ಅಲ್ಲೇ ಸಾರ್ಥಕತೆಯನ್ನು ಕಾಣಲು ತುಡಿಯತ್ತಾಳೆ:
“ಆಲೋಚನೆಗಳ ಪೀಡನೆಗೆ ಸಿಕ್ಕಿದ ದೇವಯ್ಯ ಮಲ್ಲಗೆ ಹೆಂಡತಿಯ ಕಡೆಗೆ ನೋಡಿದನು. ಅವಳು ಮಲಗಿರಲಿಲ್ಲ. ಆದರೆ ಅಳುವುದನ್ನು ನಿಲ್ಲಿಸಿದ್ದಂತ ತೋರಿತು. ತೊಟ್ಟಿಲಲ್ಲಿ ಮಲಗಿದ್ದ ‘ಚೆಲುವಯ್ಯ’ ನನ್ನ ನೋಡುತ್ತಿದ್ದಳು, ಆ ಸಂತೋಷದಲ್ಲಿ ಈ ದುಃಖವೆಲ್ಲ ಕೊಚ್ಚಿಹೋಯಿತೋ ಎನ್ನುವಂತೆ ! ಹಾಗೆಯ ಮೆಲ್ಲನೆ ಎದ್ದು, ಬಾಗಿಲು ಸಂದಿಯ ಕಸದ ಮೂಲೆಗೆ ನಡೆದು, ಬಾಗಿ, ತನ್ನ ಗಂಡ ಎಸೆದಿದ್ದ ತೆಂಗಿನಕಾಯಿ, ಅಂತ್ರ, ಕಾಣಿಕೆಗಳನ್ನೆಲ್ಲ ಎತ್ತಿ ಹಣೆಗೆ ಮುಟ್ಟಿಸಿಕೊಂಡು, ಅವನ್ನೆಲ್ಲ ಗೋಡೆಯ ಗೂಡಿನಲ್ಲಿಟ್ಟು ಬಾಗಿಲು ಮುಚ್ಚಿ ಮತ್ತೆ ಬಂದು ಹಾಸಿಗೆಯ ಮೇಲೆ ಕುಳಿತಳು.”
ಗಂಡ ಎಷ್ಟೇ ಉಗ್ರವಾಗಿ ನಡೆದುಕೊಂಡರೂ ಪ್ರತಿಭಟಿಸಲಾಗದ ಅಸಹಾಯಕ ಹೆಣ್ಣಾದ ದೇವಮ್ಮ ಆದದ್ದನ್ನೆಲ್ಲ ನುಂಗಿಕೊಳ್ಳುತ್ತಾಳೆ. ತನ್ನ ಮಗುವನ್ನೇ ನೋಡುತ್ತ ಅದರ ಒಳ್ಳೆಯದರ ಸಲುವಾಗಿಯೇ ಗಂಡ ಎಷ್ಟು ಜಿಗುಪ್ಪೆ ರೋಷಗಳಿಂದ ಕಿತ್ತೆಸೆದಿದ್ದನೋ ಅಷ್ಟೇ ಭಕ್ತಿಯಿಂದ ಅವನ್ನು ಎತ್ತಿಕೊಳ್ಳುತ್ತಾಳೆ. ನಾನು ಮೊದಲೇ ಹೇಳಿದ ಹಾಗೆ ಆ ವಸ್ತುಗಳಲ್ಲಿ ಅವಳಿಗೆ ಪವಿತ್ರ : ಅವರ ನಂಬಿಕೆಯ, ಶುಭದ ಸಂಕೇತಗಳು. ಹೀಗೆ ಇವಳು ಆ ವಸ್ತುಗಳನ್ನು ಎತ್ತಿಕೊಳ್ಳುವಾಗ ತನ್ನೊಳಗಿನ ನೋವು, ನಿಸ್ಸಹಾಯಕತೆಗಳನ್ನು ಭಕ್ತಿಯ ಮೂಲಕ ತೋಡಿಕೊಳ್ಳುತ್ತಾಳೆ. ಹಾಗೆಯೇ ಮೇಲೆ ದೇವಯ್ಯ ಅವೆಲ್ಲವನ್ನು ಕಿತ್ತೆಸೆದ ಮೂಲಕ ತನ್ನ ರೋಷವನ್ನು ವ್ಯಕ್ತಪಡಿಸುತ್ತಾನೆ.
೪
ವಿಚಾರ ಮತ್ತು ಅಂತಃಕರಣಗಳ ಗುದುಮುರಿಗೆಯಿಂದಾಗಿ ದೇವಯ್ಯ ಹಣ್ಣುಗಾಯಿಯಾಗುತ್ತಾನೆ. ಮೌಲ್ಯ ಮೌಢ್ಯಗಳ ಸಂಘರ್ಷವಾಗಿ ಪ್ರಾರಂಭವಾದ ಈ ಕ್ರಿಯೆ “ವಿಚಾರ” “ಅಂತಃಕರಣ’ಗಳ ಸಂಘರ್ಷವಾಗಿ ಎರಡನೆಯ ಆಯಾಮವನ್ನು ಪಡೆದುಕೊಳ್ಳುತ್ತದೆ. ದೇವಯ್ಯನ ಮನಸ್ಸು ಎಷ್ಟೇ ತಪ್ತವಾದರೂ ,ರೋಷಗೊಂಡರೂ, ಅವನ ಹೃದಯದಿಂದ ಪ್ರೀತಿಯ ಹೆಂಡತಿಯ ಬಗ್ಗೆ ಅನುಕಂಪ ಸದ್ದಿಲ್ಲದೇ ಜಿನುಗತೊಡಗುತ್ತದೆ. ಕ್ಷುಬ್ದ ಮನಸ್ಸು ಹೃದಯದ ಆರ್ದ್ರತೆಗೆ ಮೆಲ್ಲಗೆ ತಣ್ಣಗಾಗತೊಡಗುತ್ತದೆ. ಅಂದರೆ ವಿಚಾರ ಅಂತಃಕರಣಕ್ಕೆ ಅಧೀನವಾಗುತ್ತದೆ.
“ಮಲಕ್ಕೊಳ್ಳೊದಿಲ್ಲೇನೆ ?” ದೇವಯ್ಯನ ಧ್ವನಿ ಮೃದುವಾಗಿತ್ತು. ದೇವಮ್ಮ ಮಗುವಿನ ಕಡೆ ನೋಡುತ್ತಿದ್ದವಳು ತುಸು ತಿರುಗಿ ತಲೆಬಾಗಿದಳು:
“ಏನು? ಬಿಸಿಲು ಝಳ ಹೆಚ್ಚಾಯಿತೆ?” ಮತ್ತೆ ಉಪಚರಿಸುವ ಕೆಳದನಿಯಲ್ಲಿ ಪ್ರಶ್ನೆ ಹಾಕಿದ ದೇವಯ್ಯ ಮಂಚದಿಂದೆದ್ದು ಬೆಳಕಿಂಡಿಗಳ ಬಳಿಗೆ ಹೋಗಿ, ತಾನೆ ಸ್ವಲ್ಪ ಹೊತ್ತಿಗೆ ಮೊದಲು ತೆರೆದಿದ್ದ ಗವಾಕ್ಷದ ರೆಕ್ಕೆಗಳನ್ನು ಮುಚ್ಚಿದನು. ಕೋಣೆಯಲ್ಲಿ ಮೊದಲು ಇದ್ದಂತಹ ತಂಪಾದ ಕರ್ವೆಳಗು ಕವಿದು ಕಣ್ಣಿಗೆ ಹಿತವಾಯತು.
ವಿಚಾರಗಳಿಗೆ ಒಳಗಾಗಿ ರೋಷ ತಿರಸ್ಕಾರದಿಂದ ಬೆಳಕಿಂಡಿಗಳನ್ನು ಬಿಚ್ಚಿ ಕತ್ತಲೆಯ ಕೋಣೆಗೆ ಬೆಳಕು ತುಂಬಿದ್ದ ದೇವಯ್ಯ ಈಗ ತಾನೇ ಬೆಳಕಿಂಡಿಗಳನ್ನು ಮುಚ್ಚಿಬಿಡುತ್ತಾನೆ. ಕತ್ತಲೆ ಮತ್ತೆ ತುಂಬಿಕೊಳ್ಳುತ್ತದೆ. ಹಿಂದೆ ದೇವಮ್ಮನ ಕಣ್ಣಿಗೆ ತಂಪಾಗಿದ್ದ ಈ ಒಳಗಿನ ಕತ್ತಲೆ ಈಗ ಕಣ್ಣಿಗೂ ಹಿತವಾಗುತ್ತದೆ. ಅಂತಃಕರಣದ ಮಾರ್ದವತೆ ಪಾದ್ರಿ ಕಲಿಸಿದ್ದ ವಿಚಾರಗಳನ್ನೆಲ್ಲ ನುಂಗಿ ನೊಣೆದುಬಿಡುತ್ತದೆ. ಇಬ್ಬರೂ ಎರಡು ಧ್ರುವವಾಗಿದ್ದವರು ಒಂದಾಗುತ್ತಾರೆ. ಅವರಿಬ್ಬರ ನಂಬಿಕೆ ಮತ್ತು ವಿಚಾರಗಳೆರಡೂ ಆ ಕ್ಷಣ ಇಲ್ಲವಾಗಿ ಒಂದಾದ ಅಂತಃಕರಣವೊಂದೇ ಉಳಿಯುತ್ತದೆ.
ಹೀಗೆ ಅಂತಃಕರಣದ ಮೂಲಕ ಒಂದಾಗಿಬಿಟ್ಟನಂತರ ಈ ಘಟನೆಯ ಪ್ರಾರಂಭಕ್ಕೆ ಹೇಳಿದ್ದ ಇನ್ನೊಂದು ಮಾತು “ಅದೇ ಕತ್ತಲ ಕೋಣೆಯಲ್ಲೇ ಅದೆಷ್ಟೋ ತೊಟ್ಟಿಲು ತೂಗಿವೆ. ಇವತ್ತೂ ತೂಗುವ ತೊಟ್ಟಿಲಿನ ಲಯಕ್ಕೆ ಒಂದಾಗಿ ದೇವಮ್ಮ ಹಾಡುತ್ತಿದ್ದಾಳೆ.” ಮಗ ಇನ್ನೊಂದು ಹೊಸ ಸೃಷ್ಟಿಯ ಕರೆಗೆ ದೇವಯ್ಯ ಧ್ವನಿಪೂರ್ಣವಾಗಿ ಆಹ್ವಾನಿಸುತ್ತಾನೆ-
“ಇನ್ನೆಷ್ಟು ದಿವಸ ನೆಲದ ಮೇಲೆ ಹಾಸಿಗೆ ?” ಮತ್ತೆ ದೇವಯ್ಯ ಅಕ್ಕರೆಯ ದನಿಯಲ್ಲಿ ಕೇಳಿದನು.
ಕೋಣೆಯಲ್ಲಿ ಮೊದಲಿನ ಬೆಳಕು ಇದ್ದಿದ್ದರೆ, ದೇವಯ್ಯನಿಗೆ ಕಾಣಿಸುತ್ತಿತ್ತು. ಬಿಳಿಚಿದ್ದ ಹೆಂಡತಿಯ ಮುಖಕ್ಕೆ ನಸುಗೆಂಪೇರಿ ತುಟಿಯ ತುದಿಗಳಲ್ಲಿ ಕಿರುನಗೆಯ ಮೊಗ್ಗೆ ಮಲರುತ್ತಿದ್ದುದು. ಆದರೂ ಅದನ್ನು ಗಂಡನಿಗೆ ತೋರಗೊಡಲು ನಾಚಿ ‘ಚಲುವಯ್ಯ’ನ ತಾಯಿ ಮೊಗದಿರುಹಿದ್ದಳು. ಅವಳಿಗೆ ಆ ಪ್ರಶ್ನೆಯ ಅರ್ಥ, ಧ್ವನಿ, ಉದ್ದೇಶ ಎಲ್ಲ ಚೆನ್ನಾಗಿ ಗೊತ್ತಾಗಿತ್ತು…
ಹೀಗೆ ಅಂತಃಕರಣದ ವಿಜಯದೊಡನೆಯೆ ಸೃಷ್ಟಿ ಕ್ರಿಯೆಯ ಬಳ್ಳಿ ಕುಡಿಯೊಡೆಯುವ ಸೂಚನೆ ಕಂಡುಬರುತ್ತದೆ. ದೇವಯ್ಯನ ವಿಚಾರಗಳು ಮತ್ತು ದೇವಮ್ಮನ ನಂಬಿಕೆಗಳು ಆ ರಸನಿಮಿಷದ ಹೊಸತಿಲೊಳಗೆ ಇಣಕದೆ ಹೊರಗೇ ನಿಂತುಬಿಡುತ್ತವೆ. ಅವರು ಪೂರ್ಣಮಾನವರಾಗಿ ಆ ಉತ್ಕಟ ಕ್ಷಣದಲ್ಲಿ ಧನ್ಯತೆಯನ್ನು ಪಡೆಯುತ್ತಾರೆ.
ಹೀಗೆ ಮಾನವನ ಅಸ್ತಿತ್ವದ ಅರ್ಥಪೂರ್ಣ ಅಂಶವೊಂದು ಈ ಧ್ವನಿಪೂರ್ಣ ಸಾಂಕೇತಿಕ ಕ್ರಿಯೆಯ ಮೂಲಕ ಇಲ್ಲಿ ಅಭಿವ್ಯಕ್ತವಾಗಿದೆ. ನಿರಂತರವಾಗಿ ಬದಲಾಗುವ ಜೀವನ ಪ್ರವಾಹದ ಆಳಕ್ಕೆ ಮುಳುಗಿ ಇಂಥ ಅರ್ಥಪೂರ್ಣ ಆಕೃತಿಗಳನ್ನು ಸೃಷ್ಟಿಸುವುದೇ ಶ್ರೇಷ್ಠ ಕಲೆ ಎಂದು ನಾನು ತಿಳಿದಿದ್ದೇನೆ.

Close

ಏಳು-ಬೀಳು

ಏಳು-ಬೀಳು

ದೊಡ್ಡರಂಗೇಗೌಡ

ನೀನು ಕನಸಲ್ಲ ಕಣೇ…
ಪರಿಚಯದ ದಿನ ಕನಸಾಗಿ, ಆ ಅನುಮಾನ ಸೊಗಸಾಗಿ ನನಸಾಗಿ,
ಒಳಗೊಳಗೇ ಕಾರಂಜಿ ಚಿಮ್ಮಿ ಖುಷಿ ಸರೋವರವಾಗಿ ಬೆರಗಾದೆ ;
ಬಯಕೆ ಕೂಡಿಕೆಗೆ ಹರಿಯುವ ಹೊಳೆಯಾಗಿ ಮಿರುಗುವ ಮಿನುಗಾದೆ,
ಥಳ ಥಳ ಹೊಳೆಯುತ್ತಾ ಹೋದೆ.
ಸಂಗ ಬೆಳೆಸಿ ಮಣ್ಣಿನ ಅಂಗಾಂಗ ಬಳಸಿ ತುಟಿ ಕಟಿಗೆ
ಪ್ರಬಲ ರಾಗವಾಗಿ ನಗ್ನ ಜಲಪಾತವಾಗಿಳಿದೆ ಆಳಗಳಿಗೆ ;-
ಹಾದಿ ಬದಿ ಅಕ್ಕ ಪಕ್ಕ-ಕಣ್ಣು ಮಾತಿನ ಮೈಗೆ ಬಿದ್ದು.
ಸಿಕ್ಕಿ- ತಪ್ಪಿಸಿಕೊಂಡೆ, ಬಾಗಿ… ಬೀಗಿ…ಮುಂದಿನ ಬಯಲಿಗೆ
ಮುಂದುವರೆದೆ ; ಕೊನೆಗೆ ಜನ ಜಗತ್ತಿನೆದುರು ಲೋಳೆಯಾಗಿ
ಸುತ್ತ ಎರಗುವ ಧೂಳಿಗೆ ಬಣ್ಣವಾಗಿ ಸೆರೆಯಾದೆ,
ಹುತ್ತದ ಮುತ್ತಿಗೆ ಮೈಯಾದೆ.
ಮೆರುಗು ಮೀರಿ ಸದಾ ಹೊಳೆಯುವ ಸೆರಗಾಗಿ ಕರೆಯುವ,
ಏದುತ್ತಾ ಹರಿಯುವ ನೊರೆ-ಪೊರೆ ಬಿಡುವ. ಬಿಟ್ಟು ಧರೆ
ಕೋರೈಸುವ ಧಣಧಣ ಮಿನುಗಾಗಿ ಬದುಕಿನ ಬಿಸಿಲಾದೆ.
ಕ್ಷಣ ಕ್ಷಣದ ಆಸೆಗೆ ಆಕರ್ಷಕ ಹಾವಾಗಿ
ಹದ್ದು ಮೀರಿ ಹರಿದೆ-ಸಿಕ್ಕ ಕಡೆಗೆ ;
ಆ ಅನೂಹ್ಯ ತಪ್ಪಿನ ಕಾರ್ಯ ಕಾರಣಗಳಿಗೆ
ಹಾವಾಗಿ ಹಗ್ಗವಾಗಿ ಸುತ್ತಿಕೊಂಡೆ ನನ್ನ ಕುತ್ತಿಗೆಗೆ.
ಈಗ ಹೊರಗಿನ ಎಚ್ಚರಿಕೆ, ಸದ್ದು ಕೇಳುತ್ತ ಹಗಲು ಇರುಳು
ಸರಿದ ಹಾಗೆ ಘಳಿಗೆ ಘಳಿಗೆಗೆ ಘಟಿತವಾಗುತ್ತಿದೆ ಬಾಳು ;
ಉಳಿದದ್ದು ಕನಸಲ್ಲ ಕಣೇ…
ಏಳು- ಬೀಳು.

Close

ಕಂದ

ಕಂದ

ಎಲ್‌. ಎಂ. ಎಲ್‌. ಶಾಸ್ತ್ರಿ

ಲೌಕಿಕ ಮತ್ತು ವೈದಿಕ ಛಂದಸ್ಸುಗಳನ್ನು ಪರಿಭಾವಿಸುವಾಗ ಶ್ಲೋಕ ವೃತ್ತವು ನಮ್ಮ ಗಮನ ಸೆಳೆಯುವಂತೆ, ಕನ್ನಡದ ಛಂದಸ್ಸುಗಳನ್ನು ಅಧ್ಯಯನ ಮಾಡುವಾಗ ಮೊದಲು ನಮ್ಮ ಲಕ್ಷ್ಯವನ್ನು ಸೆಳೆಯುವ, ಕುತೂಹಲವನ್ನು ಕೆರಳಿಸುವ ಛಂದಸ್ಸು ‘ಕಂದ’ ವಾಗಿರುತ್ತದೆ. ಚಂಪೂ ಕವಿಗಳ ಬಹುವಾದ ಮಾನ್ಯತೆ ಪಡೆದು, ಚಂಪೂ ಗ್ರಂಥಗಳಲ್ಲಿ ವಿಪುಲವಾಗಿ ಬಳಸಲ್ಪಟ್ಟುದು ಇದಕ್ಕೆ ಒಂದು ಕಾರಣವಾದರೆ, ಅತಿ ಚಿಕ್ಕ ವೃತ್ತವಾದರೂ ವಿಷಯ ಪ್ರತಿಪಾದನೆಗೆ, ಕಥೆಯ ಓಟಕ್ಕೆ, ಸುಲಭ ಪಠಣ-ಗ್ರಹಣಕ್ಕೆ ಸಹಕಾರಿಯಾ ಗಿರುವುದು ಮತ್ತೊಂದು ಕಾರಣವಾಗುತ್ತದೆ.
ಪ್ರಾಕೃತ 1 ಛಂದಸ್ಸುಗಳನ್ನು ಕುರಿತ ವಿವರಣೆಯು ಮೊದಲಿಗೆ ದೊರಕುವುದು ಭರತನ ನಾಟ್ಯಶಾಸ್ತ್ರದಲ್ಲಿ ಅತಿ ಪ್ರಾಚೀನವಾದ ಛಂದಸ್ಸು ‘ಗಾಥಾ’, ಇದನ್ನೇ ಸಂಸ್ಕೃತದಲ್ಲಿ ಆರ್ಯಾ’ ಎನ್ನುತ್ತಾರೆ. ಕಂದಕ್ಕೆ ಮೂಲವಾದ ಆರ್ಯಾದ ಮೂರು ಭೇದಗಳೊಡನೆ ಭರತನು ವಿವರಣೆ ಕೊಟ್ಟಿದ್ದಾನೆ. ಇದರಿಂದ ಹುಟ್ಟಿದ ಗೀತೆ, ಗೀತಿಕೆ, ಸ್ಕಂಧಕ ಮೊದಲಾದ ಭೇದಗಳನ್ನು ಆತ ಹೇಳಲಿಲ್ಲ.
ಬಹು ಪ್ರಾಚೀನವಾಗಿ ಬಳಕೆಯಲ್ಲಿದ್ದುದು ಚತುರ್ಮಾತ್ರಾಗಣ. ಅಕ್ಷರ ವೃತ್ತಗಳಿಗಿಂತ ಮಾತ್ರಾ ವೃತ್ತಗಳಲ್ಲಿ ಕವಿಗೆ ಸ್ವಾತಂತ್ರ್ಯ ಜಾಸ್ತಿ. ಪ್ರಾಚೀನವಾದ ಆರ್ಯಾವೃತ್ತವು
ನಾಟಕಗಳ ಪ್ರಾರಂಭದಲ್ಲಿ ನಟಿಯಿಂದ ಹಾಡಲು ಬಳಸಲ್ಪಡುತ್ತಿದ್ದಿತು. ಪ್ರಾಕೃತ ಪೈಂಗಳದಲ್ಲಿ ಹೇಳಿರುವ ಮುಖ್ಯವಾದ ನಲವತ್ತು ವೃತ್ತಗಳಲ್ಲಿ ಮೊದಲನೆಯದು ಗಾಥಾ.
ಆರ್ಯಾ ಛಂದಸ್ಸಿನಲ್ಲಿ ಗಣಪರಿವೃತ್ತಿಗೆ ಹೆಚ್ಚು ಅವಕಾಶವಿಲ್ಲ. ಇದರಲ್ಲಿ ಬಹಳವಾಗಿ ನಿಬಂಧನೆಗಳಿಲ್ಲವಾದ್ದರಿಂದ, ಕಥೆಯ ಓಟಕ್ಕೆ ಸಹಾಯಕವಾದ್ದರಿಂದ ಮಹಾಕಾವ್ಯಗಳ ಕಾಲದ ಹೊತ್ತಿಗೆ ಕವಿಗಳ ವಿಶೇಷವಾದ ಆದರವನ್ನು ಪಡೆಯಿತು. ಜ್ಞಾಪಕ ಇಟ್ಟು ಕೊಳ್ಳಬೇಕಾದ ಶಾಸ್ತ್ರ, ತತ್ವ ಮತ್ತು ನೀತಿ ಗ್ರಂಥಗಳಲ್ಲಿ ಹೆಚ್ಚು ಬಳಕೆಯಾಯಿತು. ಈ ಗುಣವನ್ನು ಗಮನಿಸಿಯೇ ಕನ್ನಡ ಕವಿಗಳು ಇದರಿಂದ ಹುಟ್ಟಿದ ಕಂದವನ್ನು ವಿಶೇಷವಾಗಿ ಬಳಸಿದರು. ಆರ್ಯಾದ ನಿಯಮಗಳ ಜೊತೆಗೆ ಆದಿಪ್ರಾಸ ಮತ್ತು ಆದ್ಯಕ್ಷರವು ಎಲ್ಲ ಪಾದಗಳಲ್ಲಿ ಲಘು ಅಥವಾ ಗುರುವೇ ಆಗಿರಬೇಕೆಂಬ ನಿಯಮವನ್ನು ಕನ್ನಡದಲ್ಲಿ ದ್ರಾವಿಡ ಛಂದಸ್ಸಿನ ಸಂಪ್ರದಾಯಾನುಗುಣವಾಗಿ ಬಳಸಿದರು. ತೆಲುಗಿನಲ್ಲಿ ಈ ನಿಯಮಗಳ ಜೊತೆಗೆ ವಡಿಯನ್ನೂ ರೂಢಿಯಲ್ಲಿಟ್ಟುಕೊಂಡಿರುವುದರಿಂದ ಕಂದದ ರಚನೆ ‘ಕಷ್ಟಸಾಧ್ಯ’ ಎಂದು ವಿದ್ವಾಂಸರ ಅಭಿಪ್ರಾಯವಾಗಿದೆ. ಆದರೆ ಅದರ ಇತರ ಗುಣಗಳಿಂದ ತೆಲುಗಿನಲ್ಲಿಯೂ ಸಮಾನ ಪ್ರಾಚುರ‍್ಯ ಪಡೆದಿದೆ.
“ಕನ್ನಡ ಮತ್ತು ತೆಲುಗಿನಲ್ಲಿ ಆರ್ಯಾದ ಎಲ್ಲ ಭೇದಗಳೂ ಬಳಕೆಯಲ್ಲಿಲ್ಲ. ಲಕ್ಷಣ ಗ್ರಂಥಗಳಲ್ಲಿ ಮಾತ್ರ ಎಲ್ಲಾ ಇವೆ. ಆರ್ಯಾ ಭೇದವಾದ ಆರ್ಯಾಗೀತಿ ಅಥವಾ ಪ್ರಾಕೃತದ ಖಂದನೀ ಎಂಬ ವೃತ್ತವೊಂದು ಈ ಭಾಷೆಗಳಲ್ಲಿ ಕಂದ ಎಂಬ ಹೆಸರಿನಲ್ಲಿ ರೂಢಿಯಲ್ಲಿದೆ”-ಎನ್ನುತ್ತಾರೆ ತೆಲುಗಿನ ವಿದ್ವಾಂಸರಾದ ಚಿಲಕೂರಿ ನಾರಾಯಣರಾಯರು.
ಗೋವಿಂದ ಪೈರ ಅಭಿಪ್ರಾಯದಂತೆ 2 “ಕಂದವು ಕನ್ನಡದಲ್ಲಿ ಗ್ರಾಂಥಿಕ ಸಾಹಿತ್ಯ ಮೊದಲಾಗುವುದಕ್ಕೆ ಮುಂಚಿನಿಂದಲೂ ಬಳಕೆಯಲ್ಲಿದೆ”. ಇಮ್ಮಡಿ ಪುಲಿಕೇಶಿಯ ಐಹೊಳೆ ಶಾಸನದಲ್ಲಿ ಒಂದು ಕಂದವಿದೆ. ಭಾಷೆ ಸಂಸ್ಕೃತ. ಆ ಪದ್ಯ ಹೀಗಿದೆ :
ಯೇನಾ ಯೋಜಿ ನವೇಶ್ಮ
ಸ್ಥಿರಮರ್ಥವಿದೌ ವಿವೇಕಿನಾ ಜಿನವೇಶ್ಮ |
ಸ ವಿಜಯತಾಂ ರವಿಕೀರ್ತಿಃ
ಕವಿತಾಶ್ರಿತ ಕಾಳಿದಾಸ ಭಾರವಿ ಕೀರ್ತಿಃ ||
ಇಲ್ಲಿ ವಿಷಮದಲ್ಲಿ ಜಗಣವಿಲ್ಲ. ೬ ನೆಯ ಸ್ಥಾನದಲ್ಲಿ ನಿಯಮಾನುಗುಣವಾಗಿ ಜಗಣ ಬಂದಿದೆ. ಆರ್ಯಾ ನಿಯಮದಂತೆ ಪಾದಾಂತದ ಲಘುವನ್ನು ಗುರುವಾಗಿ ತಿಳಿಯಬೇಕು. ಆದರೆ ಇಲ್ಲಿ ಆದಿಪ್ರಾಸ ಮತ್ತು ಸಿಂಹ, ಗಜಾದಿ ಪ್ರಾಸ ನಿಯಮವನ್ನು ಅನುಸರಿಸಿಲ್ಲ.
ಕಂದದ ಬಗ್ಗೆ ಕವಿರಾಜಮಾರ್ಗಕಾರನ ಹೇಳಿಕೆ ಗಮನಾರ್ಹವಾದದ್ದು. ದೇಸಿ ಕಾವ್ಯಗಳಲ್ಲಿ ಕಂದಗಳ ಪ್ರಾಚುರ್ಯವಿತ್ತೆಂದವನು ಹೇಳಿದ್ದಾನೆ. ‘ಕಂದವೂ ದೋಷರಹಿತವಾದ, ವೃತ್ತವೂ ಒಂದೊಂದು ಎಡೆಗೊಂದರಂತೆ ಕೂಡಿ ದೇಸಿಗೆ ವಿಶಿಷ್ಟವಾದ ಕೌಶಲದಿಂದ, ಬೆಡಗಿನಿಂದ ಸೇರಿಕೊಂಡಿದ್ದರೆ ಬೆದಂಡೆ ಕಾವ್ಯವೆನ್ನಿಸುವುದು. ಕಂದಗಳು ಹಲವಾಗಿದ್ದು ಚೆಲುವಾದ ವೃತ್ತ, ಅಕ್ಕರ, ಚೌಪದಿ, ಗೀತಿಕೆ, ತ್ರಿಪದಿ ಇವು ಸೊಗಸುಪಡೆದು ಮೆರೆಯುತ್ತಿದ್ದರೆ ಅದು ಚತ್ತಾಣ ! 3
ಕಾವ್ಯಾವಲೋಕನದಲ್ಲಿ ‘ದೇಸಿ ಕಾವ್ಯಗಳಲ್ಲಿ ಕಂದಗಳ ಬಳಕೆ’ಯ ಬಗ್ಗೆ ವಿವರಣೆಯಿದೆ. ಅಲ್ಲಿನ ಸೂತ್ರಗಳ ವಿವರಣೆ ಹೀಗಿದೆ : 4 ಪದಂ: ಒಂದು ಕಂದ+ಒಂದು ವೃತ್ತ (ಅಕ್ಷರ ಇತ್ಯಾದಿ).
ಮೇಲ್ವಾಡು : ೧೨ ಪದಗಳು.
ಪಾಡು : ೧೫ ಅಥವಾ ೨೫ ಪದಗಳು.
ಪಾಡುಗಬ್ಬ : ಅನೇಕ ಪದಗಳ ಕೂಟ.
ಬೆದಂಡೆ : ಪಾಡುಗಬ್ಬಗಳಿಂದ ಮತ್ತು ಮೇಲ್ವಾಡುಗಳಿಂದ ರೂಪಿಸಿದ್ದು.
ಹೀಗೆ ಕಂದವನ್ನು ದೇಸಿಯೆಂದು ಗ್ರಹಿಸಿದೆ. ದೇಸಿ ಕಾವ್ಯಗಳು ಚೆಲ್ವಾಗಿ ಜನ ಸಾಮಾನ್ಯವಾಗಿದ್ದಿರಬೇಕು. ಪಂಪ ಕೂಡ, ‘ದೇಸಿಯೊಳ್ ಪುಗುವುದು’ ಇತ್ಯಾದಿಯಾಗಿ ಹೇಳಿದ್ದಾನೆ. ಆತ ಕಂದಾದಿ ಕನ್ನಡ ವೃತ್ತಗಳ ಚೆಲ್ವನ್ನು ಗಮನಿಸಿದ್ದಾನೆ. ಇದರಿಂದ ಮಾರ್ಗಕಾವ್ಯದ ಬಿಗುವು ಕಡಿಮೆಯಾಗಿ ಸರಸವಾಗಬಲ್ಲುದೆಂದು ಪಂಪನ ಆಸೆ.
ಕನ್ನಡದ ಕವಿಗಳು ಕಂದ ಛಂದಸ್ಸನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಹರಿಹರನು, “ಅಮೃತದ ಬಳ್ಳಿಯು ಹುಟ್ಟಿಬಂದ ಗೆಡ್ಡೆಯಂತೆ ಕಂದಗಳಿವೆ’ ಎಂದರೆ ಸುರಂಗ ಕವಿಯು :
ಕಂದಂಗಳ್ ವಾಗ್ವನಿತೆಯ
ಕಂದಂಗಳ್‌ ಸಭ್ಯ ನವ್ಯ ಕಾವ್ಯ ಲಸನ್ಮಾ!
ಕಂದಂಗಳ್‌ ನವರಸದು
ಕಂದಂಗಳ್ ಎನಲ್ಕೆ ಕವಿ ಸುರಂಗಂ ಪೇಯ್ದಿಂ !-ಎಂದಿದ್ದಾನೆ. 4
ನವರಸದ ಚಿಲುಮೆ ಎಂಬಲ್ಲಿ ಕವಿಗಿರುವ ಅಭಿಮಾನವನ್ನು ಗುರ್ತಿಸಬಹುದಾಗಿದೆ. ಕಂದಗಳನ್ನೇ ವಿಶೇಷವಾಗಿ ಬಳಸಿದ ತಿರುಮಲಾರ‍್ಯನು :

‘ಕಂದಂ ಕವಿಕೋಕಿಲಂ ಆ
ಕಂದಂ ಕೋಮಲ ವಿಲಾಸಿ ಕೃತಿ ಕಲ್ಪಲತಾ।
ಕಂದಂ…………ರಸದು
ಕ್ಕಂದಂ ಚಿಕ್ಕದೇವರಾಯ ಚಂದನ ಚಂದಂ’-ಎಂದಿದ್ದಾನೆ. 5

ಚಂಪೂಕಾವ್ಯಗಳಲ್ಲಿ ಅಂಶಗಣಗಳಿಗಿಂತ ಮಾತ್ರಾಗಣಗಳಿಗೇ ಹಿರಿದಾದ ಸ್ಥಾನ ಸಿಕ್ಕಿದೆ. ಕವಿರಾಜಮಾರ್ಗ, ಛಂದೋಂಬುಧಿ, ಶಬ್ದಮಣಿದರ್ಪಣ, ಕಾವ್ಯಾವಲೋಕನ, ಯಶೋಧರ ಚರಿತೆ ಇತ್ಯಾದಿ ಗ್ರಂಥಗಳು ಬಹುತೇಕ ಕಂದಗಳಿಂದಲೇ ರಚಿಸಲ್ಪಟ್ಟಿವೆ. ವಾಸ್ತವವಾಗಿ ಮಾತ್ರಾಗಣದ ಕಲ್ಪನೆ ಕನ್ನಡಕ್ಕೆ ಅಷ್ಟು ನಿಕಟವಾದುದಲ್ಲ. ತ್ರಿಪದಿ, ಸಾಂಗತ್ಯ, ಪಿರಿಯಕ್ಕರ ಮೊದಲಾದ ತಿರುಳನ್ನಡ ಮಟ್ಟುಗಳಲ್ಲಿ ಖಚಿತ ಸಂಖ್ಯೆಯ ಮಾತ್ರೆಗಳನ್ನು ಒಳಗೊಂಡ ಗಣಗಳು ಹೊರಡುವುದಿಲ್ಲ. ಕನ್ನಡ ಮಟ್ಟುಗಳಲ್ಲಿ ಕಾಣುವ ರಾಗ, ಲಯವನ್ನು ಮಾತ್ರಾಗಣಗಳ ಮೂಲಕ ಪಡೆಯಲಾರೆವು. ಮೇಲೆ ಹೆಸರಿಸಿದ ಗ್ರಂಥಗಳಲ್ಲದೆ ಉಳಿದ ಕಾವ್ಯಗಳಲ್ಲಿ ಕೂಡ ಬಳಸಲ್ಪಟ್ಟ ಕಂದಗಳ ಸಂಖ್ಯೆ ವಿಪುಲವಾಗಿದೆ. ಉದಾಹರಣೆಗೆ : ಪಂಪ ಭಾರತದ ೧೬೦o ಪದ್ಯಗಳಲ್ಲಿ ಸುಮಾರು ೭೫೦ ಕಂದ ಪದ್ಯಗಳಿವೆ. ೯೪೫ ರಷ್ಟು ಕಂದ ಬಳಸಿದ ರುದ್ರಭಟ್ಟನ ಜಗನ್ನಾಥವಿಜಯವಲ್ಲಿ ಕಂದಗಳ ಸಂಖ್ಯೆ ಅರ್ಧಕ್ಕಿಂತ ಹೆಚ್ಚಾಗಿದೆ. ೨೭೨ ಪದ್ಯಗಳುಳ್ಳ ಚಿಕ್ಕ ಕಾವ್ಯವಾದ ಅಂಡಯ್ಯನ `ಕಬ್ಬಿಗರ ಕಾವ’ದಲ್ಲಿ ಶೇ. ೫೭ ಭಾಗ ಕಂದಗಳಿವೆ. ಷಡಕ್ಷರಿಯು ತನ್ನ “ರಾಜಶೇಖರವಿಳಾಸ’ ದಲ್ಲಿ ಒಟ್ಟು ಸುಮಾರು ೧೮೯೧ ಪದ್ಯಗಳಲ್ಲಿ ೯೫೦ ಕಂದಗಳನ್ನು, ಅಂದರೆ ಸುಮಾರು ಅರ್ಧದಷ್ಟು ಕಂದಗಳನ್ನು ಬಳಸಿದ್ದಾನೆ. ವಿಷ್ಣು ಪುರಾಣದ ಕರ್ತೃ ಚಿಕ್ಕುಪಾಧ್ಯಾಯನು ತನ್ನ ಸುಮಾರು ೨೫೦೦ ಪದ್ಯಗಳಲ್ಲಿ ಸುಮಾರು ೧೬೦೦ ಕಂದಗಳನ್ನು ಬಳಸಿದ್ದಾನೆ. ಅಂದರೆ ಅರ್ಧದಷ್ಟು ಕಂದಗಳ ಬಳಕೆಯಿದೆ. ಹೀಗೆ ಕಂದಗಳ ಬಳಕೆ ಬೇರೆ ಯಾವುದೇ ಛಂದದ ಬಳಕೆಗಿಂತ ಹೆಚ್ಚಾಗಿದೆ. ಇದಕ್ಕೆ ಕಾರಣವಾದ ಕಂದದ ಕೆಲವು ಗುಣಗಳನ್ನು ಡಿ. ಎಸ್‌. ಕರ್ಕಿಯವರು ಶ್ಲಾಘ್ಯವಾದ ರೀತಿಯಲ್ಲಿ ಹೀಗೆ ಸಂಗ್ರಹಿಸಿದ್ದಾರೆ: ‘ತ್ವರಿತ ಗತಿಯಲ್ಲಿ ಕಥೆ ಓಡುತ್ತದೆ. ರಚನೆ ಸುಲಭ, ಗಾತ್ರ ಕಿರಿದು, ನಾದ ಕಿವಿಯಲ್ಲಿ ಬೇಗ ಬೀಳುತ್ತದೆ. ಸೂತ್ರ ರಚನೆಗೆ ಬಹಳ ಅನುಕೂಲ ಗಂಭೀರ ಲಯವಲ್ಲ. ಚಿಲುಮೆಯಂತೆ ಚಿಮ್ಮುವ ಲಯ. ಚಿಕ್ಕ ಭಾವವನ್ನು ಜೊಕ್ಕನಾಗಿ ನಿರೂಪಿಸಬಹುದು. ಉಪಮ ದೃಷ್ಟಾಂತಗಳಿಂದ ಭಾವವನ್ನು ಬೆಳಗಿಸಲು ಅನುಕೂಲಕರ ಛಂದಸ್ಸು, ತ್ರಿಪದಿಯಂತೆ ಸಂಭಾಷಣೆಯ ಹಂತಕ್ಕೆ ಸಹಾಯಕ.’
ಹೊಸಗನ್ನಡಕಾಲದಲ್ಲಿ ಕಂದದ ಪ್ರಾಚುರ್ಯ ಕಡಿಮೆ. ಇದಕ್ಕೆ ಕಾರಣಗಳನ್ನು ಕುರಿತು ವಿವೇಚಿಸಿರುವ ಆಚಾರ್ಯ ತೀ. ನಂ. ಶ್ರೀಯವರ ಮಾತು ನೋಡಿ : “ಕಂದ ಪದ್ಯಗಳು ನಮಗೆ ಹತ್ತಿರವಾಗಿದ್ದರೂ ಅವು ಹಳಗನ್ನಡ ಮರ್ಯಾದೆಯನ್ನು ಹೆಚ್ಚು ನಿರೀಕ್ಷಿಸತಕ್ಕವು. ಅವುಗಳಲ್ಲಿ ೨ ಮತ್ತು ೪ ನೆಯ ಪಾದಗಳ ಅಂತ್ಯಾಕ್ಷರ ಗುರುವಾಗಿರಬೇಕು. ಇದನ್ನು ಲಘುವಿನಲ್ಲಿ ನಿಲ್ಲಿಸುವ ಪ್ರಯತ್ನ ಹಳಗನ್ನಡದಲ್ಲಿಯೇ ಅಲ್ಲಲ್ಲಿ ತೋರಿದೆ. ಉದಾಹರಣೆ : ವೀರಭದ್ರ ವಿಜಯ ೯-೨೦ ; ೯-೨೧ : ಜಗನ್ನಾಥ ವಿಜಯ ೨-೨೮, ೩೦, ೩೧ : ಆದಿಪುರಾಣ ೧-೧೨೪ : ಇತ್ಯಾದಿ. ಆದರೆ ಪದ್ಯವು ಅದರಿಂದ ಶಿಥಿಲವಾಗುವ ಈ ಪದ್ಧತಿಗೆ ಪುರಸ್ಕಾರ ದೊರೆಯದೆ ಹೋಗಿರಬೇಕು. ಹೊಸಗನ್ನಡ ಭಾಷೆಯನ್ನು ಬಳಸಿ ಕಂದ ಬರೆಯಲು ಮಾಡಿದ ಪ್ರಯತ್ನಗಳು ಸಮರ್ಪಕವಾಗಿಲ್ಲ. ಹಾಗಾದರೆ ಕಂದ-ವೃತ್ತಗಳ ಸೊಲ್ಲು ಅಡಗಿ ಹೋಗುತ್ತದೆಯೆ ? ಎಂದು ಅವುಗಳ ಸ್ವಾರಸ್ಯಕ್ಕೆ ಮನಸೋತವರು ಮರುಗಬಹುದು. ಈ ವಿಷಯ ಕುರಿತು ಹಲುಬುವುದು ವ್ಯರ್ಥ. ವೈದಿಕ ಛಂದಸ್ಸು ಕೂಡ ಹೀಗೆಯೆ ಅಳಿದಿದೆ”. 6
ಇನ್ನು ಕಂದದ ಲಯ, ನಡೆಯನ್ನು ಕುರಿತು ಕೆಲವು ಮಾತುಗಳನ್ನು ಹೇಳಬಹುದು. ಭಾವದ ವಿಸ್ತರಣೆಗೆ ಹೆಚ್ಚು ಅವಕಾಶವಿಲ್ಲದ ಈ ಕಿರಿ ವೃತ್ತದಲ್ಲಿ ನಡೆದಷ್ಟು ನಡೆ, ವೈವಿಧ್ಯ ಬೇರಾವ ಬಂಧದಲ್ಲೂ ನಡೆದಿಲ್ಲ. ಶ್ರೀ ಶಿವರಾಮ ಐತಾಳರು ಕ್ರೌಂಚಪದ? ಮೊದಲಾದ ವೃತ್ತಗಳ ಲಯದೊಡನೆ ಕಂದದ ಲಯ ಹೊಂದುತ್ತದೆ ಎನ್ನುತ್ತಾರೆ. ನಿಯತವಾದ ಜಾಗಗಳಲ್ಲಿ ನಿಯತವಾಗಿ ಲಘು, ಗುರುಗಳು ಬರುವ ಈ ವೃತ್ತಗಳ ನಡೆಯೊಂದಿಗೆ ಕಂದದ ನಡೆಯನ್ನು ಹೋಲಿಸುವುದು ಸಲ್ಲ. ನಾಲ್ಕು ಮಾತ್ರಾ ಲಯವಿದ್ದೆಡೆಯಲ್ಲೆಲ್ಲಾ ಕಂದದ ಲಯವನ್ನು ಗುರ್ತಿಸುವುದು ಸಾಧುವಾಗಲಾರದು.
ಕಂದದಲ್ಲಿ ಬರುವ ೧೬ ಚತುರ್ಮಾತ್ರಾ ಗಣಗಳಲ್ಲಿ ೬ ನೆಯ ಮತ್ತು ೧೪ ನೆಯ ಗಣವು ಜಗಣ ಅಥವಾ ನಾಲ್ಕು ಲಘುವುಳ್ಳ ಗಣವಾಗಿರುತ್ತದೆ. ಹೀಗೆ ಬಂದಾಗ ಮೊದಲ ಲಘುವಿನ ನಂತರ ಯತಿ ಬರುತ್ತದೆ ಎಂಬುದಾಗಿ ತಿಳಿದು ಉದಾಹರಣೆಗಳನ್ನು ಅದೇ ಜಾಡಿನಲ್ಲಿ ಕೊಟ್ಟು ಶ್ರೀ ಐತಾಳರು ಲಯವನ್ನು ಗುರುತಿಸಲು ಹೆಣಗಿದ್ದಾರೆ.8 ಹೀಗೆ ಯತಿ ಬರುವ ವಿಚಾರವನ್ನು ಆಚಾರ್ಯ ತೀ. ನಂ. ಶ್ರೀ ಯವರಿಂದ ತಿಳಿದುದಾಗಿ ಹೇಳಿಕೊಂಡಿದ್ದಾರೆ. ಆದರೆ ಜಗಣ ಬಂದಾಗ ಯತಿಯು ನಿಯತವಾಗಿ ಬರಬೇಕಾಗಿಲ್ಲ. ಕನ್ನಡ ಕಾವ್ಯಗಳಲ್ಲಿ ಬಂದಿಲ್ಲ. ಉದಾಹರಣೆಗೆ ಆದಿಪುರಾಣ ಸಂಗ್ರಹದ ಪದ್ಯ ೧೬೬ ರಲ್ಲಿ ೬ ನೆಯ ಗಣವಾದ ‘ಪುರಾಣ’ ಎಂಬಲ್ಲಿ ಯತಿ ಎಲ್ಲಿದೆ ? ಹಾಗೆಯೆ ಪದ್ಯ ೩೨೧ ರ ‘ಬರಲ್ಕೆ’ ಎಂಬ ಗಣ, ಪದ್ಯ ೪೯೭ ರ ಚತು’ರ್ದಶೀದಿ’ಎಂಬ ಗಣಗಳಲ್ಲಿ ಯತಿ ಇರುವುದಿಲ್ಲ. ಇಂತಹ ನೂರಾರು ಉದಾಹರಣೆಗಳನ್ನು ಎಲ್ಲ ಕಾವ್ಯಗಳಿಂದಲೂ ಎತ್ತಿಕೊಡಬಹುದಾಗಿದೆ.
ಮೊದಲ ಲಘು ಬೇರೆಯಾಗಿ ನಿಂತು, ಹಿಂದಿನ ಗಣದೊಡನೆ ಸೇರಿ ೫, ೬ನೆಯ ಗಣಗಳು ೨+೩+೩ ಮಾತ್ರೆಗಳಾಗಿ ಆಂತರಿಕವಾಗಿ ವಿಂಗಡಿಸಿಕೊಂಡು ನೂತನತೆಯನ್ನು ಸಾಧಿಸಿದೆ ಎಂದು ತೋರಿಸಲು ಶ್ರೀ ಐತಾಳರು ಶ್ರಮಿಸಿದ್ದಾರೆ. ಯತಿ ನಿಯಮವನ್ನು ಸರಿಯಾಗಿ ಗ್ರಹಿಸದ ಕಾರಣ ಅವರ ವಾದ ನಿರರ್ಥಕವಾದದ್ದು. ನಿಯತವಾಗಿ ಎಲ್ಲೆಡೆ ಬರುವ ರೀತಿಯನ್ನು ಗಮನಿಸಿ ಲಯವನ್ನು ಗುರ್ತಿಸುವುದು ಸಾಧುವಾದ ಕ್ರಮ.
“ಕಿವಿಗೆ ಹಿತವಾಗುವಲ್ಲಿ ಎಲ್ಲಿ ಬೇಕಾದರೂ ಜಗಣ ಬರಲಂತೆ. ಅದರಿಂದ ಗತಿಗೆ ಕುಂದಾಗದಿದ್ದರೆ ಸರಿ, ಕಂದದಲ್ಲೂ ಅಷ್ಟೆ’ ಎಂದಿದ್ದಾರೆ ಶ್ರೀ ಐತಾಳರು. ‘ಶೃತಿ ಪ್ರಮಾಣ’ ವೆಂಬುದು ನಿಜವಾದರೂ ಆರ್ಯಾ ಅಥವಾ ಕಂದದಲ್ಲಿ ಜಗಣ ನಿಷಿದ್ಧವಾಗಿರಲು ಗೊತ್ತಾದ ಕಾರಣವಿರಬೇಕೆನ್ನಿಸುತ್ತದೆ. ಬಹುಶಃ ಕೇಳುವಿಕೆಗೆ ಅಹಿತಕರ ಎಂಬ ಕಾರಣವೂ ಇರಬಹುದು. ಕೆಲವು ಸಂದರ್ಭದಲ್ಲಿ ಜಗಣ ಬಂದೂ ಹಿತಕರವಾಗಿರುವುದಕ್ಕೆ ಪ್ರೊ. ಡಿ. ಎಲ್. ಎನ್. ರವರು ಹರಿಹರನ ರಗಳೆಯಿಂದ ಉದಾಹರಣೆ ಕೊಟ್ಟಿದ್ದಾರೆ. ಆದರೆ ಕಂದದಲ್ಲಿ ಹಾಗೆ ಪ್ರಯೋಗಮಾಡಿದವರಿಲ್ಲ. ವ್ಯತ್ಯಾಸ ಮಾಡಿದರೂ ಅಹಿತವಾಗದು ಎಂದು ತೋರಿಸಲು ಶ್ರೀ ಐತಾಳರು ಶ್ರಮಿಸಿದ್ದಾರೆ. ‘ನಾಲ್ಕರಂತೆಯೇ ಗಣವನ್ನು ಒಡೆಯಬೇಕು. ೩+೩+೨ ಆಥವಾ ೨+೩+೩ ರಂತೆ ಒಡೆಯಬಾರದು ಎಂಬ ಹಟ ಹಿಂದಿನ ಛಂದೋವಿಚಾರಿಗಳಿಗಿದೆ’-ಎಂದು ನಿಂದಿಸುತ್ತಾರೆ. ‘ಅಂತಹ ಹಟ ಹಿಡಿದವರಿಗೆ ಏನೆನ್ನಲಾಗುತ್ತದೆ ?” ಎಂದು ಪ್ರಶ್ನಿಸುತ್ತಾರೆ. ಹಾಗೆ ಎರಡು ಮಾತ್ರೆಗಳಿಗೆ ನಿಲ್ಲಿಸುವಾಗ ನನಗೇನೋ ಲಯವು ಕುಂಠಿತವಾದಂತೆನಿಸುತ್ತದೆ. ಈ ಜಗಣ ನಿರ್ಬಂಧದಿಂದ ಕವಿಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಬಂತೆಂದು ಕೊರಗಿದ್ದಾರೆ. ವೈವಿಧ್ಯವನ್ನು ತಂದಿರುವ ಕೆಳದಿ ನೃಪವಿಜಯ, ವೀರಭದ್ರ ವಿಜಯಗಳಿಂದ ಉದಾಹರಣೆ ಕೊಟ್ಟಿದ್ದಾರೆ. ಅಲ್ಲಿ ೩+೩+೨ ಅಥವಾ ೩+೨+೩ ರಗಣಗಳಿವೆ ಎಂಬುದಕ್ಕಿಂತ ೫+೩ರ ಲಯವಿದೆ ಎಂಬುದು
ಹೆಚ್ಚು ಸೂಕ್ತವಾಗಿ ತೋರುತ್ತದೆ. ಆದರೆ ಈ ಉದಾಹರಣೆಗಳಲ್ಲಿ ಜಗಣ ಬಂದಿಲ್ಲ.
ಈ ವಿಚಾರಗಳನ್ನು ಕುರಿತು ನಾನು ಪ್ರೊ. ಡಿ. ಎಲ್. ಎನ್. ರಲ್ಲಿ ಚರ್ಚಿಸಿದಾಗ ಅವರು ಹೇಳುವ ‘ಮಾತ್ರಾಗಣ ನಿಬದ್ಧವಾದ ವೃತ್ತಗಳಲ್ಲಿ ಗೊತ್ತಾದ ಲಯವನ್ನು ಗುರ್ತಿಸುವ ಪ್ರಯತ್ನ ಸಾಧುವಾಗಲಾರದು’ ಎಂಬ ಮಾತೂ ಕೂಡ ವಿವೇಚನಾಯುತ ಎನ್ನಿಸಿತು. ಕಂದದ ನಡೆಯು ಯಾವ ರೀತಿಯ ತಾಳಕ್ಕೂ ಸಿಗದೆ ಇದ್ದು ಗಮಕಿಗಳ ಸೌಲಭ್ಯ ಹಾಗೂ ಅಭ್ಯಾಸಾನುಗುಣವಾಗಿ ಬೇರೆ ಬೇರೆ ಕಂದಗಳು ವಿಭಿನ್ನ ರೀತಿಯಲ್ಲಿ ಹಾಡಲು ಬರುವಂತಿವೆ.
ಕಂದವನ್ನು ಕುರಿತ ಮೇವುಂಡಿ ಮಲ್ಲಾರಿಯವರ ವಿಚಾರಸರಣಿಯನ್ನು ಇಲ್ಲಿ ಪ್ರಸ್ತಾಪಿಸಬಹುದಾಗಿದೆ. “ದೇಸಿಯ ಮಾತ್ರಾ ಛಂದವಾದರೂ ಷಟ್ಪದಿಗಳಲ್ಲಿ ಒಗ್ಗಿಕೊಳ್ಳದೆ ಅಕ್ಷರ ವೃತ್ತಗಳೊಂದಿಗೆ ಸುಸಂಗತಿ ಪಡೆಯುವುದು ಈ ಬಂಧದ ಗುಣ ವಿಶೇಷ. ಎಂತಲೇ ಇದು ಪಟ್ಪದಿ ಕಾವ್ಯಗಳ ಮಧ್ಯೆ ಬಾರದೆ ಚಂಪೂ ಕಾವ್ಯಗಳಲ್ಲಿ ಧಾರಾಳವಾಗಿ ಬರುತ್ತದೆ” ಎಂದು ಅವರು ಹೇಳುತ್ತಾರೆ.9 ಷಟ್ಪದಿಗಳೊಂದಿಗೆ ಕಂದ ಹೊಂದದು ಎಂದು ಹೇಗೆ ಹೇಳುವುದು ? ಪ್ರಯೋಗ ಮಾಡಿರುವವರು ಯಾರು ? ಷಟ್ಪದಿ ಕಾವ್ಯಗಳಲ್ಲಿ ಏಕೆ ಬಳಸಲಿಲ್ಲಿ ಎಂಬ ಪ್ರಶ್ನೆಗೆ ಯಾರು ಉತ್ತರ ಹೇಳಬಲ್ಲರು ? ಷಟ್ಪದಿ ಕಾವ್ಯಗಳಲ್ಲಿ ಬೇರೆ ಯಾವುದೇ ಛಂದಸ್ಸನ್ನು ಬಳಸದಿದ್ದುದು ಕವಿಗಳ ರೂಢಿ ಅಷ್ಟೆ.
ಜಗಣದ ಬಗ್ಗೆ ಅವರು ಹೀಗೆ ಹೇಳುತ್ತಾರೆ : “ಜಗಣದ ಸ್ಥಾಯಿತ್ವದಿಂದ ಉಂಟಾಗುವ ಲಯ ವಿಶೇಷವು ಪದ್ಯದ ಗಮಕಕ್ಕೆ ಒಂದು ವಿಧವಾದ ಅಂದವನ್ನು ತಂದಿದೆ-ಎಂಬುದನ್ನು ಗಮನಿಸಬೇಕು.
ಉದಾಹರಣೆಗೆ :
ತಡವಾದಪ್ಪುದು ಪೌರರ್
ಕುಡವೇಳ್ಪುದು ಪಲವು ಜೀವರಾಶಿಯ ಬಲಿಯಂ
ನಡೆಯೆನೆ ಹಸದಮದಾಗಳೆ
ಪಿಡಿತಾರದೆ ಮಾಣರೆನ್ನ ಕಿಂಕರರನತುಂ

ಇಲ್ಲಿ ಜಗಣ ನಿಯಮದಿಂದಾಗಿ ದೀರ್ಘ ಚರಣಗಳಲ್ಲಿ ಲಯವು ಗಣಗಳನ್ನನುಸರಿಸಿ ನಾಲ್ಕು ನಾಲ್ಕು ಮಾತ್ರೆಗಳಿಗೇ ಇರುವುದಿಲ್ಲವೆಂಬುದನ್ನು ಗಮನಿಸಬೇಕು. ಜಗಣದ ಆದಿ ಲಘುವಿಗೆ ಯತಿಯು ಇರುವುದೆಂದು ಶಾಸ್ತ್ರದಲ್ಲಿ ಹೇಳಿಯೇ ಇದೆ…” 11 ಮಾನ್ಯರು ತಮ್ಮ ಲೇಖನದಲ್ಲಿ ಕಂದದಲ್ಲಿ ಬರುವ ಗಣಪರಿವೃತ್ತಿಯ ಬಗೆಗೆ ವಿಶೇಷವಾಗಿ ನಮ್ಮ ಲಕ್ಷ್ಯ ಸೆಳೆದಿದ್ದಾರೆ. ಶ್ರೀ ಶಿವರಾಮ ಐತಾಳರಂತೆ ಇವರು ಕೂಡ ಜಗಣದಲ್ಲಿ ಯತಿ ನಿಯತವೆಂದು ತಿಳಿಯಲು ಕಾರಣವೇನೋ ತಿಳಿಯದು.
“ಷಟ್ಪದಿಯಲ್ಲಿ ಕುಂದಾಗಿ ಪರಿಣಮಿಸುವ ಜಗಣವು ಕಂದದಲ್ಲಿ ಚೆಲುವನ್ನು ಹೆಚ್ಚಿಸುವ ಕುಂದಣವಾಗಿದೆ’-ಎಂದಿದ್ದಾರೆ. ಆದರೆ ಜಗಣವು ೬ ನೆಯ ಸ್ಥಾನ ಬಿಟ್ಟು ಬೇರೆಡೆ ಬಹಳ ಕ್ವಚಿತ್ ಆಗಿ ಬರುತ್ತದೆ. ನಿಯಮಬಾಹಿರವಾಗದೆಂದು ಸೌಲಭ್ಯಕ್ಕಾಗಿ ಕವಿ ಬಳಸಿದನೇ ಹೊರತು ಆದು ಬಾರದಿರುವೆಡೆಯಲ್ಲಿ ಕಂದವು ಸುಂದರವೆಂದು ನನಗೆ ತೋರುತ್ತದೆ.
“ಕಂದಪದ್ಯವು ಕಂದನಂತೆ’ ಎಂಬ ಶ್ರೀ ಮಲ್ಲಾರಿಯವರ ಮಾತು ನಿಜಕ್ಕೂ ಮನೋಜ್ಞವಾದುದು. ಈ ಮಾತಿಗೆ ಅವರೇ ಕೊಡುವ ವಿವರಣೆ ನೋಡಿ : ‘ನಡೆವ ಮಗುವಿನ ಸರಲಗತಿ ಚಂದ. ಆಗಾಗ ತಪ್ಪು ಹೆಜ್ಜೆ ಇಡುತ್ತದೆ. ಅದರಲ್ಲಿಯೂ ಒಂದು ಅಂದ. ಒಮ್ಮೊಮ್ಮೆ ಮುಗ್ಗರಿಸುತ್ತದೆ. ಕೈಯಿಕ್ಕಿ ಚಪ್ಪಾಳೆಯಿಕ್ಕಿ ಜೋಲಿ ಹೊಡೆಯುತ್ತದೆ. ಅದೂ ಒಂದು ಅಂದವೇ. ವಿವಿಧ ಗತಿಯಲ್ಲಿ ಮುದ್ದಾಗಿ ನಡೆದಾಡುವ ಕಂದನ ಸ್ವಚ್ಛಂದವಾದ ನಡೆ ನೋಡುವ ಮನಕ್ಕೆ ಚಕ್ಕಂದವಾಗಿರುತ್ತದೆ. ಕಂದದ ಇಂತಹ ಚಕ್ಕಂದವನ್ನು ಜನ್ನ ಕವಿಯು ಬಗೆಬಗೆಯಾಗಿ ತೋರಿದ್ದಾನೆ. ಉದಾಹರಣೆಗೆ:
ಆಗಳ್ ಬಾಲ್ ನಿಮಿರ್ದುದು, ತೋಳ್
ತೂಗಿದುದು ಮನಂ ಕನಲ್ದು ದಿರ್ವರುಮನೆರರು35

ಇಲ್ಲಿ ಎರಡನೆಯ ಪಾದದಲ್ಲಿನ ೪ ಮತ್ತು ೬ ನೆಯ ಗಣದಲ್ಲಿ ಲಯ ಯತಿ ಇಲ್ಲ. ೫ ನೆಯ ಗಣಾಂತಕ್ಕೆ ಇದೆ. ನಿಯಮ ಪ್ರಕಾರ ೬ ನೆಯ ಸ್ಥಾನದಲ್ಲಿ ಯತಿ ಇಲ್ಲ. ಅಲ್ಲಿನ ಜಗಣದ ಮಧ್ಯಾಕ್ಕರದ ಬೆನ್ನು ತಟ್ಟಿ ಕಂದದ ಗಮಕ ಯಮಕಿನಿಂದ ಮುಂದುವರೆದಿದೆ’.
ಗಾಥಾ (ಸಂಸ್ಕೃತದಲ್ಲಿ ಆರ್ಯಾ) ಮತ್ತಿತರ ಭೇದಗಳ ನಡೆಯನ್ನು ಕುರಿತು ಪ್ರಾಕೃತ ಪೈಂಗಳದಲ್ಲಿ ಹೀಗೆ ಹೇಳಿದೆ : “ಮೊದಲ ಚರಣ ಹಂಸಗತಿಯಂತೆ ಮವವಾಗಿ, ದ್ವಿತೀಯ ಚರಣ ಸಿಂಹದ ವಿಕ್ರಮವಂತೆ ಶೀಘ್ರವಾಗಿ, ತೃತೀಯ ಚರಣ ಆನೆಯ ನಡಿಗೆಯಂತೆ ಸಲೀಲವಾಗಿ ಮತ್ತು ಚತುರ್ಥ ಚರಣ ಸರ್ಪಗತಿಯಂತೆ ನಡೆಯುತ್ತದೆ (೧, ೬೧)”. ಲಘು ಗುರುಗಳ ಸಂಖ್ಯೆಯಿಂದ ಪದ್ಯದ ಹಿತ ಅಹಿತಗಳನ್ನು ಕುರಿತು ಹೀಗೆ ಹೇಳಿದೆ : ‘ಒಂದು ಗಾಥಾ ಪದ್ಯದಲ್ಲಿ ಒಂದು ಜಗಣವಿದ್ದರೆ ಕುಲವತಿ, ೨ ಜಗಣವಿದ್ದರೆ ಸಖಾಪೇಕ್ಷಿ, ಜಗಣವಿಲ್ಲವಾದರೆ ರಂಡೆ, ಅನೇಕ ಜಗಣವಿದ್ದರೆ ವೇಶ್ಯಾ, ೧೩ ಲಘು ಇದ್ದರೆ ಬ್ರಾಹ್ಮಣೀ, ೨೧ ಲಘುವಿದ್ದರೆ ಕ್ಷತ್ರಿಯಾ, ೧೭ ಲಘು ಇದ್ದರೆ ವೈಶ್ಯಾ, ಉಳಿದವು ಶೂದ್ರಾ”.
ಇನ್ನು ಕಂದ ಪದ್ಯದ ಸೊಗಸಿನ ಬಗ್ಗೆ ಕೆಲವು ಉದಾಹರಣೆ ಕೊಡಬಹುದು. “ಪಂಡಿತ ಕವಿಯಾದ ಷಡಕ್ಷರಿಯ ಕಂದಗಳು ಕನ್ನಡದ ಅಮೃತ ಬಿಂದುಗಳು. ಸ್ಫುಟಿತೆ, ಕಾವ್ಯ ಶಕ್ತಿ, ಕನ್ನಡದ ಬೆಡಗು ಇವನ ಕಂದಗಳ ಗುಣ” ಎನ್ನುತ್ತಾರೆ ಡಾ. ಆ‌ರ್‌. ಸಿ ಹಿರೇಮಠ್‌ರು. 12 ಈ ಮಾತುಗಳ ಸತ್ಯತೆಯನ್ನು ಇವನ ಕಾವ್ಯದುದ್ದಕ್ಕೂ ಕಾಣಬಹುದು.
ಆಂಡಯ್ಯನ `ಕಬ್ಬಿಗರ ಕಾವ’ದ ಕಂದಗಳಲ್ಲಿ ದೇಸಿಯ ಚೆಲ್ವು, ಮನೋಜ್ಞವಾಗಿದೆ. ಉದಾ :
ತಡಿಮೀರಿ ಬಂದು ತೆಂಕಣ
ಬಡಗಣ ಕಡಲೊಂದನೊಂದು ತಾಗುವ ತೆರೆದಿ
ಬಿಡೆ ಗಜರೆ ಮಿಕ್ಕುಂ ತಕ್ಕಿಂ
ಪಡೆಯೆರಡುಂ ದೆಸೆಗೆ ಮಸಗಿ ತಾಗಿದುದೆತ್ತಂ ||
ಎಲೆ ತೀಡುವ ತಂಗಾಳಿಯೆ
ನಲವಿಂ ಕಾಲ್ವಿಡಿದು ತಿಳಿಪು ತಳ್ವಿಲ್ಲದೆ ಕಾ
ದಲನಂ ತಂದೊಡೆ ನರುಸು ಜೈಲರಿಂದ ನಿನ್ನನಾಗಳುಂ ನೆರೈ ಪೊರೆವೆಂ|||

ಕಂದಗಳನ್ನು ಸಾರ್ಥಕವಾಗಿ ಬಳಸಿದ, ಕಂದಗಳಲ್ಲಿ ಪರಿಪೂರ್ಣತೆ ಸಾಧಿಸಿದ ಕೀರ್ತಿ ಯಶೋಧರಚರಿತಕಾರನಾದ ಜನ್ನನದು. ಈ ದಿಶೆಯಲ್ಲಿ ಅಗ್ರಮಾನ್ಯತೆ ಜನ್ನನಿಗೆ ಸಲ್ಲುತ್ತದೆ. ಆತನ ಕಂದಗಳಲ್ಲಿ ಕಾಣುವ ದೇಸಿಯ ಚೆಲ್ವಿಗೆ, ಸರಳ ಸುಂದರತೆಗೆ ಒಂದು ಪದ್ಯವನ್ನು ಉದಾಹರಿಸಬಹುದು.
ಆ ಗಂಡನನಪ್ಪಿದ ತೋಳ್
ಪೋ ಗಂಡನನಪ್ಪುವಂತೆ ಮಾಡಿದ ಬಿದಿಯಂ
ಮೂಗಂ ಕೊಯ್ದಿಟ್ಟಿಗೆಯೊಳ್
ಪೋಗರಸದೆ ಕಂಡೆವಾದೊಡೇಂ ಬಿಟ್ಟಪೆವೇ (೨. ೪೧)

ಕನ್ನಡದಲ್ಲಿ ಒಳ್ಳೆಯ ಕಂದ ರಚನೆಗೆ ತಡಕ್ಷರಿ ಜನ್ನರನ್ನು ಹೆಸರಿಸುವಂತೆ ತೆಲುಗಿನಲ್ಲಿ ತಿಕ್ಕನ ಸೋಮಯಾಜಿ ಮತ್ತು ಕವಿ ತೋಡಪ್ಪರನ್ನು ಹೆಸರಿಸುತ್ತಾರೆ.
ತ್ರಿಷಷ್ಠಿ ಪುರಾತನ ಚರಿನವೆಂಬ ಬೃಹತ್ಕಾವ್ಯದಲ್ಲಿ ಸುರಂಗ ಕವಿಯು ವಿವಿಧ ಭಾವ ಬಂಧಗಳಿಗೆ ಕಂದವನ್ನು ಸಾರ್ಥಕವಾಗಿ ಬಳಸಿದ್ದಾನೆ. ಈ ಮಾತನ್ನು ಕೆಲವು ಉದಾಹರಣೆಗಳ ಮೂಲಕ ಗುರುತಿಸಬಹುದು.
ಗಹನವಾದ ತತ್ವಗಳು : ತನ್ನೋಳ್ ತನ್ನಂ ತಿಳಿದಿರೆ
ತನ್ನೊಳ್ ತಾನಿಂದು ತನ್ನೊಳೊಗದತಿ ಸೌಖ್ಯಂ
ತನ್ನಂ ಛೇದಿಸುತಿರಲ
ತ್ಯುನ್ನತಿಯಿಂ ಮುನಿಪನಾತ್ಮ ಚಿಂತೆಯೊಳಿರ್ದಂ (I-72)

ಪ್ರಾರ್ಥನೆ : ಪಿತ್ತನೆ ಪೆರೈಸೂಡಿದ ದೇ Iವೋತ್ತಮನೇ ಭಕ್ತವತ್ಸಲನೆ ತಮದಳನೇ |
ಚಿತ್ತಜ ಸಂಹಾರಕನೇ 1 ಸತ್ಯನೆ ಜಯವೆಂದು ನಂಬಿ ಪಾಡಿದನಾಗಳ್ | (2. 100)
ವರ್ಣನೆ : ಮೆರೆವ ನೊರೆ ಬುದ್ಭುದಂ ಪೆ | ರ್ಗುರಿವಂ ಸುಳಿಗುಣ್ಪು ಪೆರ್ಚು
ಕುಂದಭ್ರಮನ | ಳ್ಳಿರುವ ತೆರೆ ವಡಬಶಿಖಿಯಿನಿ 1 ತುರು ತನ್ನೊಳ್ ಮರೆಯಲೊಪ್ಪಿದತ್ತು ಸಮುದ್ರಂ ಹರಿಯ ನೆಲೆ ಸಿರಿಯ ತಾಯ್ವನೆ 1 ಸುರ ಕುಜದೆಡೆ ಪವಳದೇಳ್ಗೆ ಮುತ್ತಿನ ತಾಣಂ| 2. 18
ವರಶಂಖದಿಕ್ಕೆ ರತ್ನದ 1 ಹರವರಿಯೆನಿಸಿತ್ತು ಬಹುಳ ಪಾರಾವಾರಂ || (2-20)
ಕಥೆಯ ಓಟ : ಹರಳನಿಳಯದೊಳು ತಾಂ ಮುನಿ| ಕೆರಹುಂಗಾಲಲ್ಲಿ ಪುಗಲು ಮತಿ ಕೋಪಿಸಿ ಸೌಂ | ದರನೆಟ್ಟಿ ಕೊಲುವೆನೆನುತಿರೆ | ವರಲಿಂಗದೊಳಡಗಿ ಮಾಯವಾದನದಾಗಳ್ || (2. 107)
ಶೃಂಗಾರ : ಧರೆಯ ಜನ ಪಂಕಜವೆಂ | ಬರೆಸುತ್ತಂ ಖೇದದಿಂದೆ ಸರಸಿಜಯುಗಳಂ |
ಕರುಣೆಯ ಕುಚಮಂ ತಾಳ್ದಂ| ತಿರೆ ಕುಚಕುಟ್ಟಳಗಳೇಂ ಮಂನಂಗೊಳಿ
ಸಿದವೋ ||(2, 152) (ಪರವೆಯ ವರ್ಣನೆ)
ಇನ್ನು ನಾವು ಕಂದದ ಲಕ್ಷಣದ ಬಗ್ಗೆ ಲಾಕ್ಷಣಿಕರ ಮಾತುಗಳನ್ನು ನೋಡೋಣ. ಕಂದಕ್ಕೆ ಮೂಲವಾದ ಆರ್ಯಾ ಮತ್ತು ಆರ್ಯಾ ಗೀತಗಳ ಲಕ್ಷಣಗಳನ್ನು ಮೊದಲ ಗಮನಿಸಬೇಕು. ಆರ‍್ಯಾದ ಲಕ್ಷಣದ ಬಗ್ಗೆ ಪಿಂಗಳನ ಛಂದಶ್ಯಾಸ್ತ್ರದಲ್ಲಿ ಹೀಗೆ ಹೇಳಿದೆ :
೧ ಪ್ರತಿ ಅರ್ಧ ಪದ್ಯದಲ್ಲಿ 4 ಮಾತ್ರೆಯ 7 ಗಣ ಮತ್ತು ಒಂದು ಗುರು. 13
೨ ದ್ವಿತೀಯಾರ್ಧದಲ್ಲಿ 6 ನೆಯ ಸ್ಥಾನದಲ್ಲಿ (ವಿಕಲ್ಪವಾಗಿ 7 ನೆಯ ಸ್ಥಾನದಲ್ಲಿ) ಒಂದು ಲಘು ಮಾತ್ರ. 14
೩ ವಿಷಮದಲ್ಲಿ ಜಗಣ ಬರಬಾರದು. 15
೪ 6 ನೆಯ ಸ್ಥಾನದಲ್ಲಿ ಜಗಣ ಅಥವಾ ಸರ್ವಲಘು ಬರಬೇಕು.16
೫ 6 ನೆಯ ಸ್ಥಾನದಲ್ಲಿ ಸರ್ವಲಘು ಬಂದಾಗ ಒಂದು ಲಘುವಾದ ನಂತರ ಹೊಸಪದ ಪ್ರಾರಂಭವಾಗಬೇಕು.17
೬ 7 ನೆಯ ಗಣದಲ್ಲಿ ಸರ್ವಲಘು ಬಂದಾಗ ಪ್ರಥಮಾಕ್ಷರದಿಂದ ಪದವು ಪ್ರಾರಂಭವಾಗುತ್ತದೆ.18
೭ ದ್ವಿತೀಯಾರ್ಧದ ೫ ನೆಯ ಗಣವು ಸರ್ವಲಘುವಾದಾಗ ಪ್ರಥಮಾಕ್ಷರದಿಂದ ಪದವು ಪ್ರಾರಂಭವಾಗುತ್ತದೆ.19
೮ ದ್ವಿತೀಯಾರ್ಧದ ೬ ನೆಯ ಗಣದಲ್ಲಿ ಸರ್ವಲಘು ಅಥವಾ ಜಗಣಕ್ಕೆ ಅಪವಾದವಾಗಿ ‘ಲ’ ಬರುವುದುಂಟು.
೯ ಒಟ್ಟು ಆರ್ಯಾ ಭೇದಗಳು ೮೦ ಕ್ಕೆ ಮಿಕ್ಕಿ ಇವೆ. (ಪ್ರಾಕೃತ ಪಿಂಗಳದಲ್ಲಿ) `ಲಘು ಗುರುಗಳ ಸಂಖ್ಯೆ ಎಷ್ಟು ಬರಬೇಕೆಂಬ ನಿಯಮವನ್ನನುಸರಿಸಿ’ ಗಾಥಾ ಛಂದದಲ್ಲಿ ೨೭ ಭೇದಗಳನ್ನು ಹೇಳಿದೆ. ಅವುಗಳಲ್ಲಿ ಪ್ರಸಿದ್ಧವಾದದ್ದು ಲಕ್ಷ್ಮೀ ಗಾಥಾ. (=27 ಗುರು+3 ಲಘು.)
ಆರ್ಯಾದಿಂದ ಹುಟ್ಟಿದ ಮುಖ್ಯವಾದ ಛಂದಗಳಲ್ಲಿ ಅರ್ಯಾಗೀತಿಯೂ ಒಂದು.
ಅದರ ಲಕ್ಷಣ ಹೀಗಿದೆ : ಪ್ರತಿ ಅರ್ಧ ಪದ್ಯದಲ್ಲಿ 4 ಮಾತ್ರೆಯ 8 ಗಣಗಳು ಬರುತ್ತವೆ. 6 ಫೆಯ ಸ್ಥಾನದಲ್ಲಿ “ಲ” ಬರುವ ನಿಯಮ ಇದಕ್ಕಿಲ್ಲ. ಉಳಿದ ನಿಯಮಗಳು
ಆರ್ಯಾದಂತೆ : ಮಾತ್ರಾ ಸಂಖ್ಯೆಯಲ್ಲಿ ಮಾತ್ರ ವ್ಯತ್ಯಾಸ :
ಆರ್ಯಾ : ಆರ್ಯಾಗೀತಿ :
4+1+4=12 4+4+4=12
4+4+4+4+2=18 4+4+4+4+4=20
4+4+4=12 4+4+4=12
4+4+1+4+2=15 4+4+4+4+4=20

ಆರ್ಯಾದಂತೆ ಪೂರ್ವಾರ್ಧವೂ, ಆ ಪೂರ್ವಾರ್ಧದಂತೆಯೇ ಉತ್ತರಾರ್ಧವೂ ಇದ್ದರೆ “ಗೀತಿ” (ಅಂದರೆ ಎರಡೂ ಅರ್ಧಗಳಲ್ಲಿ 12+18 ಮಾತ್ರೆಗಳು). ಆರ್ಯೆಯ ಉತ್ತರಾರ್ಧದಂತೆ ಪೂರ್ವಾರ್ಧವೂ ಇದ್ದರೆ ಉಪಗೀತಿ (12+15) ಅಥವಾ ಪ್ರಾಕೃತದಲ್ಲಿ ‘ಗಾಹೂ’ ಛಂದ.
ವೇಲಂಕರ್‌ರವರು “ಕೆಲವೊಮ್ಮೆ ಆರ್ಯಾವನ್ನು ಚತುಷ್ಪಾದಿಯಾಗಿ ತಿಳಿಯಲಾಗಿದೆ” 20- ಎನ್ನುತ್ತಾರೆ. ಆದರೆ ಪ್ರಾಕೃತದ ಆಥವಾ ಕನ್ನಡದ ಪ್ರಭೇದಗಳೆಲ್ಲವೂ ನಾಲ್ಕು ಪಾದಗಳಂತೆಯೇ ವ್ಯವಹರಿಸಲ್ಪಟ್ಟಿವೆ.
ಗುಣವರ್ಮನ ಛಂದಸ್ಸಾರದಲ್ಲಿ ಆರ್ಯಾಗೀತಿಯ ಲಕ್ಷಣ ಹೀಗೆ ಹೇಳಿದೆ:
“ಆರ್ಯಾಗೀತಾಖ್ಯಂ ಗುರು ಶಿರದಲೊಪ್ಪಿರೆಯಾರ್ಯೆಯ ಸುಪೂರ್ವಾರ್ಧಂ ||
ಪರಿಶೇಷಂ ಗೀತಿನಿಭಂ | ಗುರೂಪಗತಮಿಂತು ಪೇಳ್ವಿರ್‌ ಧೀರರ್ ||

ಚಾವಲಿ ರಾಮಸ್ವಾಮಿ ಶಾಸ್ತ್ರಿಗಳು ತಮ್ಮ ಛಂದಸ್ಸಂಗ್ರಹದಲ್ಲಿ ವಿಪುಲಾರ್ಯೆಯ ಪೂರ್ವಾರ್ಧವು ಉತ್ತರಾರ್ಧಕ್ಕೂ ಬರುತ್ತದೆ ಎನ್ನುತ್ತಾರೆ. ಅದು ಮೇಲಿನ ಲಕ್ಷಣಕ್ಕೆ ಸಮ.
ಆರ್ಯಾದ ಪಾದಗಳಿಗೆ ಒಂದು ಗುರು ಸೇರಿದರೆ ಆರ್ಯಾಗೀತಿ ಆಗುವುದೆಂದು ವಿದ್ವಾನ್ ವಿಷ್ಣುಮೂರ್ತಿಭಟ್ಟರು ಹೇಳುತ್ತಾರೆ. ಹಾಗಾದಲ್ಲಿ ಉತ್ತರಾರ್ಧದಲ್ಲಿ 29 ಮಾತ್ರೆಗಳು ಆಗುತ್ತವೆ. ಆದ್ದರಿಂದ ಅವರ ಮಾತು ಸರಿಯಾಗದು.
ಆರ್ಯಾದ ಪೂರ್ವಾರ್ಧಕ್ಕೆ ಒಂದು ಗುಲು ಸೇರಿದರೆ ಆರ್ಯಾಗೀತಿ. ಹೀಗೆಯೇ ಉತ್ತರಾರ್ಧ ಕೂಡ ಇರಬೇಕೆಂಬುದಾಗಿ ಕರ್ನಾಟಕ ಛಂದೋರಾಜದಲ್ಲಿ ಹೇಳಿದೆ. ಈ ಮಾತನ್ನೊಪ್ಪಿದರೆ ಉತ್ತರಾರ್ಧದ 5 ನೆಯ ಗಣದಲ್ಲಿ ಯತಿ ಬರಬೇಕಾಗುವುದಿಲ್ಲ. ಇದು ಅಕ್ಷಣ ದೃಷ್ಟಿಯಿಂದ ಆರ್ಯಾಗೀತಿಯು ಸರಿಯಾದ ನಿಯಮವಾಗುತ್ತದೆ. ಆದರೆ ಈ ಮಾತಿಗೆ ಪುಷ್ಟಿ ಕೊಡುವ ಅಂಶಗಳು ಪ್ರಾಚಿ:ನ ಲಕ್ಷಣಗ್ರಂಥಗಳಲ್ಲಿ ಕಾಣಿಸದು.
ಕಂದ ಮತ್ತು ಸ್ಕಂಧಕ ಅಥವಾ ‘ಖಂದ ಆ’ 21 ದ ಲಕ್ಷಣವು ಆರ‍್ಯಾಗೀತಿಗೆ ಸಮನಾದುದು. ಪ್ರಾಕೃತದಲ್ಲಿ ‘ಖಂದ ಆ’ ದ ವರೆಗಿನ ಬೆಳವಣಿಗೆಯ ಹಂತವನ್ನು ಹೀಗೆ ಗುರ್ತಿಸಬಹುದು :
ಮಾತ್ರೆಗಳ ಸಂಖ್ಯೆ :
ಛಂದೋನಾಮ ಪೂರ್ವಾರ್ಧ ಉತ್ತರಾರ್ಧ ಪ್ರಾಕೃತ ಸಂಸ್ಕೃತ ಕನ್ನಡ
ಗಾಹಾ 30 27 ಗಾಥಾ ಆರ್ಯಾ ಆರ್ಯಾ
ಉಗ್ಗಾಹಾ 30 30 ಉದ್ಗಾಥಾ ಗೀತಿ ಸಂಕೀರ್ಣ
ಗಾಹೀಣೀ 39 32
ಖಂದ ಆ 32 32 ಸ್ಕಂಧಕ ಆರ್ಯಾಗೀತಿ ಕಂದ

ಕಂದ ಪದ್ಯದ ಲಕ್ಷಣವನ್ನು ನಾಗವರ್ಮ ಹೀಗೆ ಹೇಳಿದ್ದಾನೆ : “೩. ೫. ೩. ೫. ಗಣಗಳು ಬರುವಂತೆ ನಾಲ್ಕು ಪಾದಗಳು. ಕ್ರಮವಾಗಿ ೧೨+೨೦+೧೨+೨೦ ಮಾತ್ರೆಗಳು” ಹೆಚ್ಚಿನ ವಿವರಣೆಯಿಲ್ಲ.
ಗುಣವರ್ಮನ ಛಂದಸ್ಸಾರದಲ್ಲಿ ಜಗಣದ ವಿಚಾರ ಹೇಳಿದೆ: “ಒಂದನೆ ಮೂರನೆ ಯಯ್ದನೆ 1 ಸಂದೇಳಿನೆ ಗಣದೆ ಜಗಣ ಬರುವುಮ ಕಿಡುಗುಂ||”
ಚಾವಲಿ ರಾಮಸ್ವಾಮಿ ಶಾಸ್ತ್ರಿಗಳು ಕಂದದ ಬಗ್ಗೆ ಹೀಗೆ ಹೇಳುತ್ತಾರೆ:
“ಆರ್ಯಾವೃತ್ತ ಜಾತಿಯೇ ಕಂದವಾಗಿರುವುದು. ಕನ್ನಡದಲ್ಲಿ ಪಿಂಗಳನಾಗ, ನಾಗವರ್ಮ, ಕವಿ ಸರ್ಪಗಾರುಡ ಮುಂತಾದವರ ಗ್ರಂಥದಲ್ಲಿ ಹಲವು ಬಗೆ ಹೇಳಲ್ಪಟ್ಟಾಗ್ಯೂ ಆರ್ಯಾ ಜಾತಿಯನ್ನೇ ಹೋಲುತ್ತದೆ”. ಈ ಹಲವು ಬಗೆ ಯಾವುದೆಂಬುದರ ಬಗ್ಗೆ ವಿವರಣೆ ತಿಳಿಯದು.
*************************************************************************

ಬಂಧಿಸಲ್ಪಟ್ಟಿವೆ. ಬಾಯಿಗೆ ಬಿಳಿಯ ಪಟ್ಟಿಯನ್ನು ಬಿಗಿಯಲಾಗಿದೆ. ಹೊಳಪುಳ್ಳ ಆಕೆಯ ಕಣ್ಣುಗಳು ಮಾತ್ರ ಭಯದಿಂದ ಮಿನುಗುತ್ತಿದ್ದು ಆಕೆ ಜೀವಂತವಿರುವುದನ್ನು ಸೂಚಿಸುತ್ತಿದೆ.
ತೆರೆ ಮೇಲೆದ್ದಾಗ ರಂಗದಲ್ಲಿ ಯುವತಿ ಮಾತ್ರ ಇದ್ದಾಳೆ. ಒಂದು ನಿಮಿಷ ಎಲ್ಲವೂ ಸ್ತಬ್ಧ. ಅನಂತರ ಆಕೆ ತಲೆಯನ್ನು ಅತ್ತಿತ್ತ ಹೊರಳಿಸುತ್ತಾ ನರಳುವುದಕ್ಕೆ ಪ್ರಯತ್ನಿಸುತ್ತಾಳೆ. ಆದರೆ ಹೆಚ್ಚೇನು ಶಬ್ದ ಕೇಳಿಬರುವುದಿಲ್ಲ. ಆಕೆ ಬೀರನ್ನೊಮ್ಮೆ ಮೇಲಿಂದ ಕೆಳಗಿನವರೆಗೆ ನೋಡಿ ಅನಂತರ ಕುರ್ಚಿಯತ್ತ ದೃಷ್ಟಿ ಹಾಯಿಸಿ ಮೆಲ್ಲನೆ ಏಳುತ್ತಾಳೆ. ಆದರೆ ನಡೆಯಲಾಗುವುದಿಲ್ಲವೆಂದು ಅರಿತಾಗ ಪುನಃ ಕೂರುತ್ತಾಳೆ. ಆರ್ತತೆಯಿಂದ ಗ್ರೂಪ್ ಫೋಟೋದತ್ತ ನೋಡಿ ಕಣ್ಣನ್ನು ಮುಚ್ಚಿಕೊಳ್ಳುತ್ತಾಳೆ. ಒಂದೆರಡು ಹನಿ ಕಣ್ಣೀರ ನೆಲಕ್ಕುದುರುತ್ತದೆ.
ಸ್ವಲ್ಪ ಸಮಯ ಕಳೆದು ಮುದುಕನೊಬ್ಬ ಕೋಲೂರಿಕೊಂಡು ಪ್ರವೇಶಿಸುತ್ತಾನೆ. ಆತನ ಬೆನ್ನು ಬಾಗಿದೆ. ಕಣ್ಣೂ ಮಂಜಾಗಿದೆ. ತಾರಣ್ಯದಲ್ಲಿ ಸಾಕಷ್ಟು ಗಟ್ಟಿಮುಟ್ಟಾಗಿದ್ದನೆಂದು ಮೇಲು ನೋಟಕ್ಕೇ ತಿಳಿಯುವಂತಿದೆ. ಅವನು ಕೇವಲ ಕಚ್ಚೆ ಮಾತ್ರ ಧರಿಸಿದ್ದಾನೆ. ಹೆಗಲಿಗೊಂದು ಸಣ್ಣ ಶಾಲು. ಆತ ಮೆಲ್ಲನೆ ರಂಗಭೂಮಿಯ ಮಧ್ಯಕ್ಕೆ ಬಂದು ಸುತ್ತಲ ನೋಡಿ ಗ್ರೂಪ್‌ ಫೋಟೋದತ್ತ ಹೋಗುತ್ತಾನೆ. ಅದರ ಬದಿಯಲ್ಲಿ ನಿಂತು ಅದನ್ನೇ ನೆಟ್ಟದೃಷ್ಟಿಯಿಂದ ನೋಡಿ ಮೆಲ್ಲನೆ ಮುಟ್ಟುತ್ತಾನೆ. ಕೈಯಿಂದ ಒರಸುವುದಕ್ಕೆ ಯತ್ನಿಸಿ ವಿಫಲನಾಗುತ್ತಾನೆ. ಕಣ್ಣೀರು ಹರಿಯುತ್ತದೆ. ಆಮೇಲೆ ತನ್ನ ಹೆಗಲಿನಲ್ಲಿನ ಧೋತರದಿಂದ ಫೋಟೋವನ್ನೊರಸುತ್ತಾನೆ. ಆಗಲೂ ಧೊಳು ಹೋಗುವುದಿಲ್ಲ. ಅನಂತರ ಧೋತರದಿಂದ ತನ್ನ ಕಣ್ಣೀರನ್ನೊರಸಿ ಆಮೇಲೆ ಫೋಟೋವನ್ನುಜ್ಜುತ್ತಾನೆ. ಆದರೂ ಅದರಲ್ಲಿನ ಕೊಳೆ ಹಾಗೇ ಇರುತ್ತದೆ.
ಮುದುಕ ಹತಾಶನಂತೆ ಮೆಲ್ಲನೆ ತಿರುಗಿ ಯುವತಿಯತ್ತ ನೋಡುತ್ತ ಅವಳ ಸಮೀಪ ಬರುತ್ತಾನೆ. ಆಕೆಯ ಕಣ್ಣುಗಳೂ ಸ್ನೇಹವನ್ನು ಸೂಚಿಸುತ್ತವೆ. ಆತ ಅವಳ ಹತ್ತಿರ ಹೋದಂತೆ ಹಿನ್ನೆಲೆಯಿಂದ ನಿಧಾನವಾಗಿ ಕೇಳತೊಡಗಿದ ತಬಲಾದ ಶಬ್ದ ತೀವ್ರವಾಗುತ್ತ ಹೋಗುತ್ತದೆ. ಅವಳನ್ನು ಮುಟ್ಟುವುದಕ್ಕೆ ಹೋದ ಆತ ಆ ಶಬ್ದಕ್ಕೆ ಹೆದರಿದಂತೆ ವೆಲ್ಲನೆ ಹಿಮ್ಮೆಟ್ಟಿ ಪುನಃ ರಂಗದ ಮಧ್ಯಕ್ಕೆ ಬಂದು ನಿಟ್ಟುಸಿರು ಬಿಡುತ್ತಾನೆ. ತಬಲಾದ ಸದ್ದು ನಿಲ್ಲುತ್ತದೆ.
ಅಲ್ಲಿಂದ ನಿಧಾನವಾಗಿ ಬೀರುವಿನತ್ತ ಹೋಗಿ ಅದನ್ನು ಕೈಯಿಂದ ಸ್ಪರ್ಶಿಸುತ್ತಾನೆ ಆರ್ದ್ರವಾದ ಅವನ ಕಣ್ಣುಗಳಲ್ಲಿ ಸಂತೋಷ ಮೂಡುತ್ತದೆ. ಆತ ಪ್ರೀತಿಯಿಂದ ಅದನ್ನಿಡೀ ಕೈಯಿಂದ ಸವರಿ ಬೀಗದ ತೂತನ್ನು ಕಂಡು ಹಿಡಿದು ಅದು ಭದ್ರವಿರುವುದನ್ನು ಖಚಿತಪಡಿಸಿಕೊಂಡು ವೇದನೆಯ ನಡುವಿನಲ್ಲೂ ನಗುತ್ತಾನೆ.
ಆ ಮೇಲೆ ಕುರ್ಚಿಯ ಸಮೀಪ ಹೋಗಿ ಕುಳಿತುಕೊಳ್ಳುವುದಕ್ಕೆ ಯತ್ನಿಸುತ್ತಾನೆ. ಹಿನ್ನಲೆಯಿಂದ ಪುನಃ ತಬಲಾದ ಶಬ್ದ ಕೇಳಿಬರುತ್ತದೆ. ಆತ ಗಾಬರಿಯಿಂದ ಬೇಗನೆ ಮಂಚದ ಬಳಿಗೆ ಬಂದು ಅದರಲ್ಲಿ ಕುಳಿತುಬಿಡುತ್ತಾನೆ. ತಬಲಾದ ಸದ್ದಡುಗುತ್ತದೆ.
ಅವನು ಮತ್ತೊಮ್ಮೆ ಯುವತಿಯತ್ತ ನೋಡುತ್ತಾನೆ. ಆದರೆ ಆ ದೃಶ್ಯವನ್ನು ನೋಡಲಾಗದೆ ಕೈಗಳಿಂದ ಕಣ್ಮುಚ್ಚಿಕೊಂಡು ವಂಚದಲ್ಲಿ ಫಕ್ಕನೆ ಮಲಗಿಬಿಟ್ಟು ಮುಸುಕೆಳೆಯುತ್ತಾನೆ.
ಹರಕು ಸೀರೆಯನ್ನುಟ್ಟ ಮುದುಕಿಯೊಬ್ಬಳು ಮುದುಕ ಬಂದೆಡೆಯಿಂದಲೇ ಪ್ರವೇಶಿಸುತ್ತಾಳೆ. ತಲೆ ನರೆತು ಹೋಗಿದ್ದರೂ ಆಕೆಯ ಬೆನ್ನು ಬಾಗಿಲ್ಲ, ಗತಕಾಲದ ಸೌಂದರ್ಯದ ಕುರುಹುಗಳು ಆಕೆಯ ಮುಖದಲ್ಲಿ ವ್ಯಕ್ತವಾಗುತ್ತಿವೆ. ಆಕೆ ನೇರವಾಗಿ ಯುವತಿಯತ್ತ ಸಾಗುತ್ತಾಳೆ. ತಬಲಾದ ಸದ್ದು ಕೇಳಿಸುತ್ತಿದೆ. ಆ ಶಬ್ದ ಬರುವತ್ತ ನೋಡಿ ನೆಟಿಕೆ ಮುರಿಯುತ್ತಾಳೆ. ಅವಳು ಹಿಂತಿರುಗುತ್ತಾ ಕುರ್ಚಿಯೆಡೆಗೆ ಶೂನ್ಯ ದೃಷ್ಟಿಯನ್ನು ಬೀರಿ ವಂಚದ ಬಳಿಗೆ ಬಂದು ಒಂದು ಕ್ಷಣ ಮಲಗಿರುವ ವಂದುಕನನ್ನು ನೋಡಿ ಅವನನ್ನು ತಟ್ಟಿ ಎಬ್ಬಿಸುವುದಕ್ಕೆ ಪ್ರಯತ್ನಿಸುತ್ತಾಳೆ.] ಮುದುಕ : (ಮುಸುಕಿನೊಳಗಿಂದಲೇ “ಊಂ’ ಅನ್ನುತ್ತಾ ನರಳುವನು)
ಮುದುಕಿ : ಏಳಿ.
ಮುದುಕ : (ತಲೆಯನ್ನು ಮಾತ್ರ ಮುಸುಕಿನಿಂದ ಹೊರ ತೂರಿಸಿ) ನನ್ನನ್ನೆಬ್ಬಿಸಬೇಡ (ಮಂಸುಕು ಹಾಕಿಕೊಳ್ಳುವನು).
ಮುದುಕಿ : (ಅನುನಯದಿಂದ) ಏಳಿ ಅಂದರೆ… ……… ……..
ಮುದುಕ : (ಮೊದಲಿನಂತೆಯೇ ನನ್ನನ್ನೆಬ್ಬಿಸ್ಬೇಡ ಅಂತಲ್ಲಾ ಹೇಳಿದ್ದು. (ಪುನಃ ಮುಸುಕೆಳೆಯುವುದಕ್ಕೆ ಪ್ರಯತ್ನಿಸುವನು. ಆದರೆ ಮುದುಕಿ ಬಿಡುವುದಿಲ್ಲ)
ಮುದುಕಿ : ಹೀಗೆ ಮಲಗಿದರೆ ಹೇಗೆ ?
ಮುದುಕ : (ದೀನವಾಗಿ) ಪೃಥ್ವಿ, ನಾನೇನು ಮಾಡಲಿ ಹೇಳು ?
ಮುದುಕಿ : ಏನಾದರೂ ಮಾಡ್ಬೇಕು.

*****************************************************************************************
ಗಣದಲ್ಲಿ ಸಮಲಘುವಿದ್ದಾಗ ಮೊದಲ ಲಘುವಿನ ನಂತರ ಯತಿಯು ಬರಬೇಕೆಂಬ ನಿಯಮವನ್ನು ಕೆಲಮಟ್ಟಿಗೆ ಗಮನಿಸಿದ್ದಾರೆ. ಆದರೆ ಆರ್ಯಾದ ನಿಯಮವನ್ನನುಸರಿಸಿ ಏಳನೆಯ ಗಣದಲ್ಲಿ ಸರ್ವಲಘುವಿದ್ದಾಗ ಆದ್ಯಕ್ಷರದಿಂದ ಹೊಸಪದ ಪ್ರಾರಂಭವಾಗಿರಬೇಕೆಂಬ ನಿಯಮವನ್ನು ಪ್ರಾಚೀನ ಕವಿಗಳು ಪಾಲಿಸಿದ್ದು, ಈ ನಿಯಮವು ಲಾಕ್ಷಣಿಕರ ಗಮನಕ್ಕೆ ಬೀಳದೇ ಹೋಗಿದೆ. ಕಡ್ಡಾಯವಾಗಿ ಈ ನಿಯಮವನ್ನು ಪ್ರಾಚೀನ ಗ್ರಂಥಕಾರರು ಪಾಲಿಸಿದ್ದಾರೆ. ಈ ಮುತಿನ ಪುಷ್ಟೀಕರಣಕ್ಕಾಗಿ ಬೇರೆ ಬೇರೆ ಕಾವ್ಯಗಳ ಅಧ್ಯಯನದಿಂದ ಹೊರಪಟ್ಟ ಅಂಕಿ ಅಂಶಗಳನ್ನು ಅಪವಾದಗಳೊಂದಿಗೆ ಇಲ್ಲಿ ಸಂಗ್ರಹಿಸಿ ಕೊಟ್ಟಿದೆ. ಈ ಅಂಶವು ಕಂದ ಪದ್ಯವು ಸುಸ್ಕೃತದಿಂದ ಬಂದದ್ದೇ ಅಥವಾ ಪ್ರಾಕೃತದಿಂದ ಬಂದದ್ದೆ ? ಎಂಬ ಸಂಶಯವನ್ನು ಹೋಗಲಾಡಿಸಿ ಸರಿಯಾದ ತೀರ್ಮಾನಕ್ಕೆ ಬರಲು ಬಹುಮಟ್ಟಿಗೆ ಸಹಾಯಕವಾಗಿದೆ.
ಏಳನೆಜು ಸ್ಥಾನದಲ್ಲಿ ಸರ್ವಲಘುವಲ್ಲದ ಗಣ ಬಂದಾಗಲೂ ಸುಮಾರು ಅರ್ಧದಷ್ಟು ಕಡೆಗಳಲ್ಲಿ ಯತಿ ಬಂದಿರುವುದುಂಟು. ಸರ್ವಲಘು ಬಳಸುವ ರೂಢಿ ಕಡಿಮೆ ಎಂದೇ ಹೇಳಬೇಕು. ಬಹಳ ಕಡಿಮೆ ಪದ್ಯಗಳಲ್ಲಿ ಏಳನೆಯ ಗಣವು ಪ್ರತ್ಯಯದಿಂದ ಪ್ರಾರಂಭವಾದ ಸರ್ವಲಘು ಗಣವಾಗಿರುವುದು ಉಂಟು.
ಪ್ರಾಚೀನ ಗ್ರಂಥಗಳಲ್ಲಿ ಎಷ್ಟು ಮಟ್ಟಿಗೆ ಯತಿಯು ಪಾಲಿತವಾಗಿದೆ ಎಂಬುದನ್ನು ೯೪ ನೇಪುಟದಲ್ಲಿ ಕೊಟ್ಟಿರುವ ಪಟ್ಟಿಯನ್ನು ನೋಡಿ ತಿಳಿಯಬಹುದಾಗಿದೆ.
ಕನ್ನಡದ ಉಪಲಬ್ಬ ಗ್ರಂಥಗಳಲ್ಲಿ ಮೊದಲನೆಯದಾದ ಕವಿರಾಜಮಾರ್ಗದಲ್ಲಿ 4/5ಭಾಗದಷ್ಟು ಕಂದಗಳ ಬಳಕೆಯಿದ್ದು 77 ಕಡೆಗಳಲ್ಲಿ 7 ನೆಯ ಗಣದಲ್ಲಿ ಸರ್ವಲಘು ಬಂದಿದ್ದು ಒಳ್ಳೆಯ ಯತಿಯು ಪಾಲಿತವಾಗಿದೆ. ಪಂಪನ ಆದಿಪುರಾಣದಲ್ಲಿ 83 ಕಂದ ಪದ್ಯಗಳಲ್ಲಿ ಸರ್ವಲಘು ಬಳಸಿದ್ದು (ಸ್ಥಾನ 7) ಆ ಎಲ್ಲ ಗಣವೂ ಯತಿಯ ನಂತರವೇ ಬಂದಿವೆ. ಪಂಪ ಭಾರತದಲ್ಲಿ ಸುಮಾರು ಅರ್ಧದಷ್ಟುಕಂದಗಳನ್ನು ಬಳಸಿದ್ದು (ಒಟ್ಟು 1578 ಪದ್ಯಗಳಲ್ಲಿ ಕಂದಗಳ ಸಂಖ್ಯೆ 753) ಅವುಗಳಲ್ಲಿ 218 ಕಡೆ ಸಪ್ತಮ ಗಣವು ‘ನೆಲ’ ವಾಗಿದ್ದು ಆ ಎಲ್ಲ ಗಣವೂ ಹೊಸ ಪದದಿಂದಲೇ ಆರಂಭವಾಗಿದೆ. ಪೊನ್ನನ
ಶಾಂತಿ ಪುರಾಣದಲ್ಲಿ 386 ಕಡೆಗಳಲ್ಲಿ 7 ನೆಯ ಗಣದಲ್ಲಿ ಸರ್ವಲಘು ಬಳಸಿದ್ದು ಒಂದು ಕಡೆ ಮಾತ್ರ ಯತಿಯ ಪಾಲಿತವಾಗಿಲ್ಲ (5-93 ಸಾಲ 2) ಉಳಿದ ಗ್ರಂಥಗಳ ವಿವರಣೆಯನ್ನೂ ಈ ಹಿಂದೆಯೇ ನೋಡಿದ್ದೀರಿ.
ಆರ್ಯಾದ ನಿಯಮದಂತೆ ದ್ವಿತೀಯಾರ್ಧದ ಪಂಚಮ ಗಣದಲ್ಲಿ ಸರ್ವಲಘುವಿದ್ದಾಗ ಆ ಗಣವು ಹೊಸ ಪದದಿಂದಲೇ ಪ್ರಾರಂಭವಾಗಬೇಕಾಗುತ್ತದೆ. ಆದರೆ ಆರ್ಯಾಗೀತಿಗೆ ಈ ನಿಯಮ ಅನ್ವಿತವಾಗುವ ಬಗ್ಗೆ ಸ್ಪಷ್ಟ ಸೂಚನೆಗಳು ಇಲ್ಲ. ಕಂದದಲ್ಲಿ ಈ ನಿಯಮವನ್ನು ಪಂಪನ ಕಾಲಕ್ಕೇ ಮೀರಿರುವುದನ್ನು ಕಾಣಬಹುದು. ಕವಿರಾಜಮಾರ್ಗದಲ್ಲಿ ಕೇವಲ 35 ಕಡೆಗಳಲ್ಲಿ ನಲ ಬಂದಿದ್ದು 13 ಪದ್ಯಗಳಲ್ಲಿ ಯತಿ ನಿಯಮವು ತೋರಿದೆ. ಪಾಲಿತವಾಗಿರುವುದೂ ಕೇವಲ ಆಕಸ್ಮಿಕ ಎಂಬ ಭಾವನೆಗೆ ಅವಕಾಶವಿದೆ. ಪಂಪನ ಆದಿಪುರಾಣದಲ್ಲಿ ಕೇವಲ 26 ಕಡೆಗಳಲ್ಲಿ ಸರ್ವಲಘು ಬಂದಿದ್ದು ಒಂದು ಕಡೆ ಮಾತ್ರ. ಆ ಗಣವು ಹೊಸ ಪದದಿಂದ ಪ್ರಾರಂಭವಾಗಿಲ್ಲ. 3 ಪದ್ಯಗಳಲ್ಲಿ ಪ್ರತ್ಯಯಕ್ಕೆ ಮುನ್ನ ಯತಿ ಬಂದಿದೆ. ಅಂದರೆ 5ನೆಯ ಗಣವು ಹಿಂದಿನ ಪದದ ಪ್ರತ್ಯಯದಿಂದ ಪ್ರಾರಂಭವಾಗಿದೆ. ಆದರೆ ಪಂಪ ಭಾರತದಲ್ಲಿ ಇನ್ನೂ ನಿಯತವಾಗಿ ಪಾಲಿತವಾಗಿಲ್ಲ, ಅಲ್ಲಿ ಸುಮಾರು 95 ಪದ್ಯಗಳಲ್ಲಿ ಸರ್ವಲಘು ಬಳಸಿದ್ದು 35 ಸ್ಥಾನಗಳಲ್ಲಿ ಯತಿಯು ಬಳಕೆಯಲ್ಲಿ, 6 ಮತ್ತು 7ನೆಯ ಗಣದಲ್ಲಿ ನೂರಕ್ಕೆ ನೂರರಷ್ಟು ನಿಯತವಾಗಿ ಯತಿನಿಯಮ ಪಾಲಿಸಿದ ಪಂಪ 5ನೆಯ ಗಣದಲ್ಲಿ ಮಾತ್ರ ಉಲ್ಲಂಘಿಸಿದ್ದಾನೆ. ಈ ನಿಯಮದ ಕಡೆ ಕವಿರಾಜಮಾರ್ಗಕಾರನಿಗೆ ಗಮನವೇ ಹರಿದಿಲ್ಲ. ಪಂಪನಿಗೆ ಈ ಕಡೆ ಲಕ್ಷ ಹರಿದಿದ್ದೂ ಪಾಲಿಸದೆ ಬಿಟ್ಟಿದ್ದಾನೆ. ಮುಂದಿನ ಕವಿಗಳು ಕ್ರಮವಾಗಿ ಬಿಡುತ್ತಾ ಬಂದಿದ್ದಾರೆ. ಹದನರಿತು ಮನೋಜ್ಞವಾಗಿ ಕಂದಗಳನ್ನು ಬಳಸಿ ಹೆಸರು ಪಡೆದ ಜನ್ನ ತನ್ನ ಪುಟ್ಟ ಕಾವ್ಯದಲ್ಲಿ 21 ಪದ್ಯಗಳಲ್ಲಿ 5ನೆಯ ಗಣದಲ್ಲಿ ಸರ್ವಲಘು ಬಳಸಿದ್ದು 9 ಕಡೆ ಯತಿ ಪಾಲಿಸಿಲ್ಲ. ‘ಲೀಲಾವತಿ’ ಕರ್ತೃ ನೇಮಿಚಂದ್ರ ಯತಿ ಪಾಲಿಸಿಲ್ಲ. ಕಾವ್ಯಾವಲೋಕನದಲ್ಲಿ ಬಹು ಕಡಿಮೆ ಸ್ಥಳಗಳಲ್ಲಿ ಸರ್ವಲಘು ಬಳಸಿದ್ದು ಅಲ್ಲಿಯೂ ಯತಿ ಪಾಲಿಸಿಲ್ಲ. ಆಂಡಯ್ಯನ `ಕಬ್ಬಿಗರ ಕಾವ’ ದಲ್ಲಿ 24 ಕಡೆ ಸರ್ವಲಘು ಬಂದಿದ್ದು 14 ಕಡೆ ಯತಿ ವಿಲಂಘನೆಯಾಗಿದೆ. ಹೆಚ್ಚಿನ ವಿವರಣೆಗೆ ಅಂಕಿ ಅಂಶಗಳ ಪಟ್ಟಿ ನೋಡಬಹುದಾಗಿದೆ.
ಮುಂದಿನ ಪಟ್ಟಿಯಲ್ಲಿನ ಗ್ರಂಥಗಳಲ್ಲಿ 7 ನೆಯ ಗಣದಲ್ಲಿ ಯಶೋಧರಚರಿತೆ, ಶಾಂತಿ ಪುರಾಣ, ಶಬ್ದಮಣಿದರ್ಪಣ, ಮದನ ತಿಲಕ ಶಾಕುಂತಲಗಳಲ್ಲಿ ಒಂದೊಂದು ಕಡೆ ಮಾತ್ರ ಯತಿ ಪಾಲಿಸಿಲ್ಲ. ಲೀಲಾವತಿ, ಭರ್ತೃಹರಿ ಸುಛಾಷಿತಗಳಲ್ಲಿ ಎರಡುಕಡೆ ಮಾತ್ರ ಮೀರಿದೆ. ಇದಕ್ಕೆ ಕಾರಣ ಏನಿರಬಹುದು ? ಪಾಠಾಂತರ ಕ್ಲೇಶ ಮುಖ್ಯ ಕಾರಣವಿರಬಹುದೆ? ಆದರೆ ಪ್ರಕಟಿತ ಗ್ರಂಥಗಳಲ್ಲಿ ಈ ಎಡೆಗಳಲ್ಲಿ ಪಾಠಾಂತರ ಸೂಚಿಸಿಲ್ಲ. ರಾಜಶೇಖರ ವಿಳಾಸದಲ್ಲಿ 300 ಸ್ಥಳಗಳಲ್ಲಿ ಸರ್ವಲಘು ಬಳಸಿದ್ದು ಮೂರು ಕಡೆ ಮಾತ್ರ ಯತಿ
ಪಾಲಿತವಾಗಿಲ್ಲ. ಅತಿ ಹೆಚ್ಚು ಸಂಖ್ಯೆಯಲ್ಲಿ ಯತಿ ವಿಲಂಘನೆಯನ್ನು ನಾವು ಗಮನಿಸಬಹುದಾದದ್ದು 17 ನೆಯ ಶತಮಾನದ ವಿಷ್ಣು ಪುರಾಣದಲ್ಲಿ. 600 ಕಂದಗಳಲ್ಲಿ ಕೇವಲ 250 ಕಡೆ ಸರ್ವಲಘು ಬಳಸಿ 30 ಕಡೆ ಯತಿ ಪಾಲಿಸಿಲ್ಲ! ಶತಮಾನ 17 ರ ಹೊತ್ತಿಗೆ ಈ ನಿಯಮ ಸಡಿಲವಾಗಿತ್ತೆನ್ನಲು ಅವಕಾಶವಿಲ್ಲ. ಬಸವಪ್ಪಶಾಸ್ತ್ರಿಗಳವರೆಗೂ ಉಳಿದ ಗ್ರಂಥಕಾರರು ನಿಯತವಾಗಿ ಪಾಲಿಸಿದ್ದಾರೆ. ಈ ರೀತಿಯ ಅಪವಾದಗಳಿಗೆ ಕವಿಯ ಉದಾಸೀನವೇ ಕಾರಣವೆಂದು ಹೇಳಬಹುದೇನೋ ?
ಇನ್ನು ಕಂದಪದ್ಯದ ಮೂಲವನ್ನು ಕುರಿತು ವಿವೇಚಿಸಬಹುದು. ವೇಲಂಕರ್‌ರವರು “ಗಾಥಾ ಮತ್ತು ವೈತಾಳೀಯಗಳು ಅನುಷ್ಟುಬ್‌ (ವರ್ಣವೃತ್ತ) ಅನ್ನು ಹೋಲುವುವಾದರೂ ಮಾತ್ರಾವೃತ್ತಗಳ ಮೂಲ ವೈದಿಕ ವೃತ್ತಗಳಲ್ಲಿಲ್ಲ. ಅಲ್ಲಿನಂತೆ ಸಂಗೀತದ ದೃಷ್ಟಿಯೂ ಇಲ್ಲ. ಅಲ್ಲಿನಂತೆ ಗಣಗಳ ವಿಭಜನಯೇ ಅಥವಾ ಲಘು ಗುರು ವಿನ್ಯಾಸವೇ ಪ್ರಧಾನವಾಗಿ ಉಳ್ಳುದೂ ಅಲ್ಲ” -24 ಎಂದು ಹೇಳುತ್ತಾ ಆರ್ಯಾವೃತ್ರದ ಬಗ್ಗೆ ಹೀಗೆ ಹೇಳುತ್ತಾರೆ: “The origin of Arya is uncertain’ ‘ಮೂಲವನ್ನು ಅನುಷ್ಟುಬ್‌ನಲ್ಲಿ ಹುಡುಕಬಹುದಾದರೂ ಬಹಳಷ್ಟು ಅಂತರವಿರುವುದರಿಂದ ಸರಿ ಕಾಣದು’- ಎನ್ನುತ್ತಾರೆ. ತಮ್ಮ ಸಂದೇಹವನ್ನು ಬೇರೊಂದು ರೂಪದಲ್ಲಿ ಹೀಗೆ ಹೇಳುತ್ತಾರೆ. ‘ಆರ್ಯಾವು ವೈದಿಕ ಛಂದವಾದ ಅನುಷ್ಟುಬ್‌ನ ಶಿಥಿಲರೂಪಸಾಗಿದೆ” 25
ವೇಲಂಕರ್‌ರವರು ಛಂದೋನುಶಾಸನದ ಉಪೋದ್ಭಾತದಲ್ಲಿ ಕೊಡುವ ಒಂದು ಸೂಚನೆಯು ಗಮನಾರ್ಹವಾಗಿದೆ : “Gatha was the only metre barrowed by Sanskrita from Prakrits”. ಇದರ ರಚನೆ ಸಂಸ್ಕೃತ ವೃತ್ತಗಳಿಗೆ ಭಿನ್ನವಾದದ್ದು. ವೇದಗಳ ಅಥವಾ ಕಾವ್ಯಗಳ ವರ್ಣವೃತ್ತವನ್ನು ಇದು ಹೋಲದು. ಆರ್ಯಾವು ಪ್ರಾಕೃತದಿಂದ ಸಂಸ್ಕೃತಕ್ಕೆ ಬಂದದ್ದು ಎಂಬುದು ವೇಲಂಕರರ ಅಭಿಪ್ರಾಯ. ಅವರು ಮತ್ತೊಂದೆಡೆ ೧, ೩ ನೆಯ ಪಾದಗಳು ಮಹಾಕಾವ್ಯಗಳ ಅನುಷ್ಟುಬ್‌ ಛಂದದಿಂದ ಹುಟ್ಟಿದ್ದಾಗಿರಬಹುದೆಂದು ಸಂದೇಹವನ್ನು ವ್ಯಕ್ತಪಡಿಸಿದ್ದಾರೆ. (ಅನುಷ್ಟುಬ್‌ ಎಂಬುದು ನಾಲ್ಕು ಲಘು ಮತ್ತು ನಾಲ್ಕು ಗುರು ಬರುವ ವ್ಯತ್ತ). ಒಟ್ಟಿನಲ್ಲಿ ಅವರಿಗೆ ಯಾವ ಖಚಿತ ನಿರ್ಧಾರಕ್ಕೂ ಬರಲು ಸಾಧ್ಯವಾಗಿಲ್ಲವೆಂದು ಹೇಳಬಹುದು.
‘ಸ್ವಯಂ ಭೂ’ವು ಸ್ಕಂಧಕವನ್ನೇ ಮೂಲವಾಗಿಟ್ಟುಕೊಂಡು ಅದರಿಂದ ಗೀತಿ ಮತ್ತು
ಗಾಥಾಗಳು ಹುಟ್ಟಿದ್ದೆನ್ನುತ್ತಾನೆ. ಇದೇ ರೀತಿ ತೆಲುಗಿನ ಅಪ್ಪಕವಿಯೂ ಆರ್ಯಾಭೇದಗಳನ್ನೆಲ್ಲಾ ಕಂದದ ಭೇದಗಳನ್ನಾಗಿ ಹೇಳಿದ್ದಾನೆ. ಉದಾಹರಣೆಗೆ, ಪಥ್ಯಾರ್ಯಾಗೆ ಅವನ ಪಥ್ಯಾಕಂದ ಎನ್ನುತ್ತಾರೆ. 26 ಇವನ ದೃಷ್ಟಿಯಲ್ಲಿ ಕಂದವೇ ಆರ್ಯಾಕ್ಕೆ ಮೂಲ ಎಂದಿರಬಹುದೇನೋ. ಆದರೆ ಅದು ಸಾಧುವಾದುದಲ್ಲ. ಕವಿಜನಾಶ್ರಯದಲ್ಲಿ ಕೂಡ ಕಂದದ ಲಕ್ಷಣ ಮೊದಲು ಹೇಳಿ ನಂತರ ಆರ್ಯಾದ ಲಕ್ಷಣ ಹೇಳಿದೆ : ‘ಕಂದದ ಮೊದಲರ್ಧದಲ್ಲಿ ಒಂದು ಗರು ಕಡಿಮೆ ಮಾಡಿ…’ ಇತ್ಯಾದಿ.
ವಿದ್ವಾನ್ ದೊರೆಸ್ವಾಮಿ ಶರ್ಮರವರು ಹೀಗೆ ಹೇಳುತ್ತಾರೆ: “ಕನ್ನಡ ಮತ್ತು ತೆಲುಗಿನ ಕಂದವು ಪ್ರಾಕೃತದ ಸ್ಕಂಧಕದಿಂದ ಬಂದದ್ದು ಎಂದು ವಿದ್ವಾಂಸರ ಆಳಿ ಪ್ರಾಯವಿದೆ, ಸಂಸ್ಕೃತದ ಆರ್ಯಾಗೀತೆಯೇ ಇದರಡಕ್ಕೂ ಮೂಲ ಎಂದು ಜಯ ಶಾಸ್ತ್ರಜ್ಞರ ಮತ, ಒಟ್ಟಿನಲ್ಲಿ ಇದಮಿತ್ಥಂ ಎಂದು ಏನನ್ನೂ ಹೇಳಲು ಸಾಧ್ಯವಿಲ್ಲ.” ಕನ್ನಡದ ‘ಛಂದೋಂಬುಧಿಯ’ ಸಂಪಾದಕರಾದ ಕಿಟ್ಟಲ್‌ರು ಕಂದವು ‘ದೇಶೀಯ’ ಎಂದಿದ್ದಾರೆ. 27
“ಆರ್ಯಾಗೀತೆಯನ್ನೇ ತೆಲುಗು, ಕನ್ನಡದಲ್ಲಿ ಕಂದವೆನ್ನುತ್ತಾರೆ ಎಂದಿದ್ದಾರೆ ‘ಕರ್ನಾಟಕ ಛಂದೋ ರಾಜ’ ದ ಕರ್ತೃಗಳಾದ ರಘುಪತ್ಕಾಚಾರ‍್ಯರು (ಕಾಲ ೧೯೨೬).”
ಶ್ರೀ ಡಿ. ಎಸ್‌. ಕರ್ಕಿ ಅವರ ಅಭಿಪ್ರಾಯ ಹೀಗಿದೆ: “ಕಂದವು ಸಂಸ್ಕೃತ ಮಾತ್ರಾ ವೃತ್ತಗಳಲ್ಲಿ ಆರ್ಯಾವನ್ನು ಸಮೀಪಿಸುತ್ತದೆ. ಆರ್ಯೆಯನ್ನನು ಸರಿಸಿ ಪ್ರಾಕೃತದಲ್ಲಿ ‘ಸ್ಕಂಧಕ’ ಎಂಬ ಛಂದೋಬಂಧ ರೂಪಗೊಂಡು ಖಂದಯ ಎಂಬ ಅಪಭ್ರಂಶ ರೂಪದಲ್ಲಿ ಕಣ್ಣಿಗೆ ಬೀಳುತ್ತದೆ. ಪ್ರಾಕೃತದ ಮಾರ್ಗವಾಗಿ ಸ್ಕಂದಕವು ಕನ್ನಡ ಮತ್ತು ತೆಲುಗುಗಳಿಗೆ ಕಂದ ಎಂಬ ಹೆಸರಿನಿಂದ ಬಂದಿರಲು ಸಾಕು.” ಇದೇ ಅಭಿಪ್ರಾಯವು ಕನ್ನಡ ಕೈಪಿಡಿಯ್ಲಲಿ ವ್ಯಕ್ತವಾಗಿದೆ. ಇದೇ ಮಾತನ್ನು ನನಗೆ ಛಂದಶಾಸ್ತ್ರವನ್ನು ಕಲಿಸಿದ ಗುರುಗಳೊಬ್ಬರು ಸಮರ್ಥಿಸುತ್ತಾರೆ. ಕಂದವು ಸಂಸ್ಕೃತದಿಂದ ನೇರವಾಗಿ ಬಂದದ್ದು ಎಂಬ ನನ್ನ ವಿಚಾರಗಳಿಗೆ ಆಕ್ಷೇಪಣೆಯನ್ನೆತ್ತಿ ನನಗೆ ಬರೆದ ಒಂದು ಕಾಗದದಲ್ಲಿ ಅವರು ಹೀಗೆಂದಿದ್ದಾರೆ: ‘ಮೊದಲನೆಯದಾಗಿ ಎಲ್ಲ ರೀತಿಯಿಂದ ‘ಖಂದ ಆ’ ವನ್ನು ಹೋಲುತ್ತಿರುವುದೂ 2ನೆಯದಾಗಿ. ಖಂದ ಅ-ಕಂದ ಎಂಬಲ್ಲಿ ಶಬ್ದರೂಪ ಸಾಮ್ಯ ಸ್ಪಷ್ಟವಾಗಿ ಇರಲು ಪ್ರಾಕೃತ ಮೂಲವಲ್ಲ ಎನ್ನುವುದು ಸರಿಯಲ್ಲ’, ಆಂತರಿಕವಾದ ಬಲವತ್ತರವಾದ ಕಾರಣಗಳಿಲ್ಲದೆ ಶಬ್ದರೂಪ ಸಾಮ್ಯದಿಂದ ನಿರ್ಣಯಕ್ಕೆ ಬರುವುದು ಸರಿಯಲ್ಲವೆಂದು ತೋರುತ್ತದೆ. ಒಂದು ಲಕ್ಷಣವನ್ನು ಸಂಸ್ಕೃತದಿಂದ ತೆಗೆದುಕೊಂಡರೂ ಪ್ರಾಕೃತವು ಕನ್ನಡಕ್ಕೆ ಕೇವಲ ಹತ್ತಿರದ ಭಾಷೆಯೇ ಆಗಿದ್ದುದರಿಂದ ಹೆಸರನ್ನು ಪ್ರಾಕೃತದಿಂದ ಪಡೆದಿರುವ ಸಾಧ್ಯತೆಯಿದೆ. ಇದಕ್ಕೆ `ಖಂದ ಆ’ ವು ಆರ್ಯಾಗೀತೆಯಿಂದ ಜನ್ಯವಾದ್ದೆಂಬ ಸೋದರ ವಾತ್ಸಲ್ಯವೂ ಕಾರಣವಾಗಿರಲು ಸಾಕು.
ಚಿಲಕೂರಿ ನಾರಾಯಣರಾವ್‌ರವರು ತಮ್ಮ ತೆಲುಗು ಭಾಷೆಯ ಲೇಖನದಲ್ಲಿ ಮೂಲವನ್ನು ಗುರ್ತಿಸಲು ಸಹಾಯಕವಾಗುವ ಒಂದಂಶ ನೀಡಿದ್ದಾರೆ. ಅವರು ಕನ್ನಡದ ಸಕೀರ್ಣಕವೆಂಬ ಆಯಾ ಭೇದವಲ್ಲಿ ಪೂರ್ವಾರ್ಧ ಕಂದ ಲಕ್ಷಣವನ್ನೂ, ಉತ್ತರಾರ್ಧವು ಆರ್ಯಾ ಲಕ್ಷಣವನ್ನೂ ಹೊಂದಿದೆ. ಇದು ಸಂಸ್ಕೃತ, ಪ್ರಾಕೃತ, ತೆಲಗು ಭಾಷೆಗಳಲ್ಲಿಲ್ಲ’- ಎಂದಿದ್ದಾರೆ. 28 ಈ ಮಾತು ನಿಜವಾದರೆ ಕಂದದ ಹಿಂದಿನ ಹಂತ ಸಂಕೀರ್ಣಕ ಎನ್ನಬಹುದು. ಆದರೆ ಅವರ ಹೇಳಿಕೆಗೆ ಆಧಾರ ಎಲ್ಲಿದೆಯೋ ತಿಳಿಯದು. ನಾಗವರ್ಮನು ಹೇಳುವ ಸಂಕೀರ್ಣಕದಲ್ಲಿ ಪೂರ್ವೋತ್ತರಾರ್ಧಗಳಲ್ಲಿ ಮೂವತ್ತು ಮಾತ್ರೆಗಳಿರುತ್ತವೆ. ಇದು ಸಂಸ್ಕೃತದ ಗೀತಿ ಮತ್ತು ಪ್ರಾಕೃತದ ಉದ್ಘಾಥಾ ವೃತ್ತಗಳ ಲಕ್ಷಣಕ್ಕೆ ಸಮನಾಗಿದೆ.
ಕಂದದ ಮೂಲವನ್ನು ಕುರಿತು ಶ್ರೀ ಶಿವರಾಮ ಐತಾಳರ ವಿಚಾರ ಹೀಗಿದೆ : ‘ಆರ್ಯೆಯ ಉತ್ತರಾರ್ಧದಲ್ಲಿ ೬ನೆಯ ಸ್ಥಾನದಲ್ಲಿ ಒಂದು ಲಘು ಏಕಿದೆ ? ಇಲ್ಲಿ ಉಳಿದ ಮೂರು ಮಾತ್ರೆಗಳನ್ನು ಮೌನದಿಂದ ತುಂಬಿಕೊಳ್ಳಬೇಕಾಗಿದೆ. ಆದ್ದರಿಂದ ಕಂದದ ಮೂಲಕ್ಕೆ ನಾವು ಮಾತ್ರಾವೃತ್ತವನ್ನು ಆಶ್ರಯಿಸಬೇಕಾಗಿಲ್ಲ. ಸಂಸ್ಕೃತ ಜನ್ಯವೆನ್ನುವ ಅವಶ್ಯಕತೆಯೂ ಇಲ್ಲ. ಆರ್ಯೆಯಲ್ಲಿ ಮೌನದ ಮೂರು ಮಾತ್ರೆಗಳನ್ನು ಒಪ್ಪುವುದಾದರೆ ಅಂಶಲಯಕ್ಕೇ ಇದನ್ನು ಸೇರಿಸಬೇಕಾಗುತ್ತದೆ. ಕಂದವೂ ಪೂರ್ವತಃ ಆಂಶಲಯಕ್ಕೇ ಸೇರಿದ್ದಿರಬೇಕು. ಇದು ಊಹೆ’-ಎಂದಿದ್ದಾರೆ. ಇಷ್ಟು ಚಿಕ್ಕ ಪ್ರಮಾಣದ ಮೂಲವನ್ನು ನಿರ್ಣಯಿಸುವುದು ಸರಿಯಾಗದೆನ್ನಿಸುತ್ತದೆ. ಹಾಗೆಯೇ ಎಲ್ಲ ಮಾತ್ರಾ ಬದ್ಧ ಛಂದಕ್ಕೂ, ಮಾತ್ರಾಲಯಕ್ಕೂ ಅಂಶಲಯವೇ ಮೂಲ ಎಂಬ ಅವರ ವಾದವೂ ವಿಚಾರಣೀಯವಾಗಿದೆ.
ಮೇಲಿನ ವಾದಗಳಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಎರಡು:
೧ ಎಚ್. ಡಿ. ವೇಲುಕರ್‌ರಿಗೆ ಈ ವಿಷಯದಲ್ಲಿ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಮತ್ತು ಮೂಲವನ್ನು ಗುರ್ತಿಸುವ ಪ್ರಯತ್ನ ಇನ್ನೂ ಅಪೂರ್ಣವಾಗಿಯೇ ಉಳಿದಿದೆ.
೨ ಕಂದವು ಪ್ರಾಕೃತ ಮಾರ್ಗವಾಗಿ ಸಂಸ್ಕೃತದಿಂದ ಬಂದ ವೃತ್ತ,
ನನ್ನ ಅಭಿಪ್ರಾಯದಲ್ಲಿ ಕಂದವು ನೇರವಾಗಿ ಸಂಸ್ಕೃತದಿಂದ, ಆರ್ಯಾಗೀತಿ ವೃತ್ತದಿಂದ ಬಂದದ್ದು. ಹೀಗೆ ಹೇಳಲು ಇರುವ ಮುಖ್ಯವಾದ ಆಧಾರವೆಂದರೆ ಕಂದದಲ್ಲಿ ನಿಯಮವಾಗಿ ಪಾಲಿತವಾಗಿರುವ ಯತಿ. ಪ್ರಾಕೃತ ಮೂಲವಾಗಿದ್ದರೆ ಅಲ್ಲಿನಂತೆಯೇ ಇಲ್ಲಿಯೂ ಯತಿ ನಿಯಮವು ಪಾಲಿಸಲ್ಪಡದೇ ಇರಬೇಕಿತ್ತು. ವರ್ಣವೃತ್ತಗಳಲ್ಲಿ ಯತಿ ನಿಯತ ಮೀರಿದ ಕನ್ನಡ ಕವಿಗಳು ಕಂದವನ್ನು ಪ್ರಾಕೃತದಿಂದ ಪಡೆದಿದ್ದರೆ ಖಂಡಿತಕ್ಕೂ ಯತಿ ನಿಯಮವನ್ನು ಇಟ್ಟುಕೊಳ್ಳುತ್ತಿರಲಿಲ್ಲ.
೧೦ ನೆಯ ಶತಮಾನದ ಪ್ರಾರಂಭದ ಹೊತ್ತಿಗೆ ದ್ವಿತೀಯಾರ್ಧದ ೫ ನೆಯ ಗಣದಲ್ಲಿನ ಯತಿ ನಿಯಮ ಮೀರಿದ ಕನ್ನಡದ ಕವಿಗಳು ಇಲ್ಲಿಯವರೆಗೂ ೬ ಮತ್ತು ೭ ನೆಯ ಗಣದಲ್ಲಿ ಯತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಛಂದಶ್ಯಾಸ್ತ್ರ ದೃಷ್ಟಿಯಿಂದ ಕನ್ನಡಕ್ಕೆ ಕೇವಲ ಸಂವಾದಿಯಾದ ತೆಲುಗಿನಲ್ಲಿ ಕೂಡ ಕಂದ ಲಕ್ಷಣವು ಪ್ರಾಕೃತ ಭಿನ್ನವಾಗಿ ಕನ್ನಡದ ಕಂದದೊಡನೆ ಹೊಂದಿಕೆಯಾಗಿ ಉಳಿದು ಬಂದಿದೆ. ತೆಲುಗಿನಲ್ಲಿ ಕೂಡ ೬ ಮತ್ತು ೭ ನೆಯ ಗಣದಲ್ಲಿ ಯತಿ ನಿಯಮ ಪಾಲಿತವಾಗಿದ್ದು ಉತ್ತರಾರ್ಧದ ೫ ನೆಯ ಗಣದಲ್ಲಿ ಯತಿ ನಿಯಮವನ್ನು ಇಟ್ಟುಕೊಂಡಿರುವುದಿಲ್ಲ. ಹೀಗೆ ಕಂದಪದ್ಯವು ಅನೇಕ ವಿಷಯಗಳಲ್ಲಿ ತನ್ನದೇ ಆದ ವೈಶಿಷ್ಟ್ಯಗಳಿಂದ ಮೆರೆದಿರುವಂತೆ ಉಳಿದ ಮಾತ್ರಾ ಮತ್ತು ವರ್ಣವೃತ್ತಗಳಲ್ಲಿ ಇಲ್ಲದ ಯತಿ ನಿಯಮವನ್ನು ಉಳಿಸಿಕೊಳ್ಳುವುದರ ಮೂಲಕ ಕೂಡ ತನ್ನತನವನ್ನು ಮೆರೆದಿದೆ.[ಸೂಚನೆ : ಮುಂದಿನ ಎರಡು ಪುಟಗಳಲ್ಲಿ ಸಮಗ್ರದರ್ಶಕ ಪಟ್ಟಿಯನ್ನೂ ಅದಕ್ಕೆ ಮುಂದೆ ಅಡಿಟಿಪ್ಪಣಿಗಳನ್ನೂ ಕೊಟ್ಟಿದೆ.] ಕೃತಿಕಾರ

ಜಗನ್ನಾಥ ವಿಜಯ ರುದ್ರಭಟ್ಟ12 – 945 50% 214 ಇಲ್ಲ 3 – – –
ಧರ್ಮಾಮೃತ ನಯಸೇನ 12 – – 50% – ಇಲ್ಲ – – – – –
ಸಮಯ ಪರೀಕ್ಷೆ ಬ್ರಹ್ಮಶಿವ 11 – – 85% ಕಡಿಮೆ ಇಲ್ಲ – – – – –
ಗಣಗಳು
ಮದನತಿಲಕ ಚಂದ್ರರಾಜ 11 – – – – 1* – – ಇಲ್ಲ – – *1.27
ಒಡ್ಡಾರಾಧನೆ ಶಿವಕೋಟ್ಯಾಚಾರ‍್ಯ 10 – 5 – 3 ಇಲ್ಲ – 5 ಇಲ್ಲ – –
ಕವಿರಾಜಮಾರ್ಗ ಶ್ರೀವಿಜಯ 9 – 418 80% 77 ಇಲ್ಲ – 112 ಇಲ್ಲ 35 13
ಆದಿಪುರಾಣ ಪಂಪ 10 – – – 83 ಇಲ್ಲ – – ಪದ್ಯ 26 1* *3 ಕಡೆ ಪ್ರತ್ಯಯದಿಂದ ಪ್ರಾರಂಭ
(ಸಂಗ್ರಹ) 85
ವಿಕ್ರಮಾರ್ಜುನ ವಿಜಯ ಪಂಪ 10 1578 753 50% 218 ಇಲ್ಲ – – ಇಲ್ಲ 95 35
ಶಾಂತಿ ಪುರಾಣ ಪೊನ್ನ 10 1636 1169 75% 386 1* – – ಇಲ್ಲ – -*5.93. ಸಾಲು 2
ಲೀಲಾವತಿ ನೇಮಿಚಂದ್ರ 12 – – – 278 2* 4 – ಇಲ್ಲ – – *9.80, 11.53
ಕಾವ್ಯಾವಲೋಕನ ನಾಗವರ್ಮ11 12 248 248 100% 31 ಇಲ್ಲ – 29 ಇಲ್ಲ 16 5
ಪಾರ್ಶ್ವನಾಥಪುರಾಣ ಪಾರ್ಶ್ವನಾಥ 13 – – 65% – 1* – – – – – *11.113
ಯಶೋಧರಚರಿತೆ ಜನ್ಮ 13 241 – – 56 1* – 99 ಇಲ್ಲ 21 9 *2.2
ಮಸ್ತ| ಕದೆ ನಿಜ| 7ನೆಯ ಗಣ
ಕಬ್ಬಿಗರ ಕಾವ ಅಂಡಯ್ಯ 14 272 157 57% 26 1* 1 85 ಇಲ್ಲ+ 24 14 *ಪದ್ಯ77
+ಒಂದೆಡೆ ಪ್ರತ್ಯೆಯ ಬೇರೆಯಾಗಿ ನಿಂತಿದೆ ಪಂಪಾಸ್ಥಾನವರ್ಣನು ಚಂದ್ರಶೇಖರ 15 61 28 48% 8 ಇಲ್ಲ 1 15 ಇಲ್ಲ – –
ಕವಿಜಿಹ್ವಾಬಂಧನ ಈಶ್ವರ 16 – – – 38 ಇಲ್ಲ 1 – – – –
ವಿಷ್ಣು ಪುರಾಣ ಚಿಕ್ಕುಪಾಧ್ಯಾಯ 17 2500 1600 65% 250 30 – – ಇಲ್ಲ – –
ರಾಜಶೇಖರವಿಳಾಸ ಷಡಕ್ಷರಿ 17 1861 950 50% 300 3* 11 – ಇಲ್ಲ – – *7.33. 7.98
10.88
ಕನ್ನಡ ಭರ್ತೃಹರಿ ಬಸವಪ್ಪಶಾಸ್ತ್ರಿ 19 305 124 41% ಕಡಿಮೆ 2* – – ಇಲ್ಲ *ಪದ್ಯ 27. 39
ಸುಭಾಷಿತ (ಶತಕತ್ರಯ)
ಕರ್ಣಾಟಕ ಶಾಕುಂತಲ 19 – – – – 1* – – 3+ – – *5.107+1.3.
6.152. 2.35
ಶಬ್ದಮಣಿದರ್ಪಣ ಕೇಶಿರಾಜ 13 342 341 – 58 1* 1 – – 20 8 *ಪದ್ಯ 177

ಟಿಪ್ಪಣಿ
1 ಎಚ್.ಡಿ.ವೇಲಂಕರ್‌ರ ‘ಛಂದೋನುಶಾಸನ’ವಾಕ್ಯ ಬೃಂದ 12-13,
2 ಗೋವಿಂದ ಪೈ : ಮೂರು ಉಪನ್ಯಾಸಗಳು.
3 ಕವಿರಾಜಮಾರ್ಗ 1. 34, 1.35.
4 ಕಾವ್ಯಾವಲೋಕನ : ಸೂತ್ರ 243 ರಿಂದ 246.
5 ಅಪ್ರತಿಮವೀರ ಚರಿತೆ : 2. 15.
6 ಸಮಾಲೋಕನ : ಪುಟ 173
7 ಕ್ರೌಂಚಪದವು “ಅಭಿಕೃತಿ’ ಎಂಬ ಛಂದಸ್ಸಿನ ಪ್ರಕಾರಗಳಲ್ಲಿ ಒಂದು. ಪ್ರತಿ ಪಾದದಲ್ಲಿ ಭ. ಮ. ಸ. ಭ. ನ. ನ. ನ. ನ. + ಗುರು ಬರಬೇಕು, ಈ ಗಣಗಳನ್ನು ಹೀಗೆ ನಾಲ್ಕು ಮಾತ್ರೆಯ ಗಣಗಳಾಗಿ ವಿಂಗಡಿಸಬಹುದು: – — — 1 -1
8 ಶಿವರಾಮ ಐತಾಳ : *ಕಂದದ ಲಯ-ನಡೆ’ : ಕ. ಸಾ. ಪ. ಪ. ಸಂ : 42.2, ಡಿಸೆಂಬರ್ 1960
9 ಜಯಂತಿ 26.9. ಮಾರ್ಚ್ 1964: ‘ಕಂದದ ಚಕ್ಕಂದ’.
10 ಯಶೋಧರ ಚರಿತೆ 1.15
11 ಯತಿ ಬಾರದ ಉದಾಹರಣೆಗಳನ್ನು ಕೂಡ ಲೇಖಕರು ಗಮನಿಸಿದ್ದಾರೆ. ಉದಾ : ಯಶೋಧರ ಚರಿತೆ 1.35
12 ಬಸವರಾಜ ವಿಜಯದ ಪ್ರಸ್ತಾವನೆ.
13 ಪ್ರಾಕೃತ ಪಿಂಗಳದಲ್ಲಿ ಹೇಳಿರುವ ಗಾಥಾ ಇದಕ್ಕೆ ಸಂವಾದಿಯಾದದ್ದು. ಉದಾಹರಣೆಯ ಪದ್ಯ ಹೀಗಿದೆ.
ಜೇಣ ವಿ | ಣಾ ಣ ಜ 1 ವಿಜ್ಙ ಇ | ಅಣುಣಿ 1 ಜ್ಙ ಇ ಸೋ |ಕ ಆ ವ ರಾಹೋ | ವಿ ||
ಪತ್ತೇ 1 ವಿಣ ಆರ | ಡಾ ಹೇ | ಭಣ ಕ | ಸ್ಸಣವ |ಲ್ಲ ! ಹೋ ಆ | ಗ್ಗೀ|
ಪ್ರಾಕೃತ ಛಂದದಂತೆ ಪಾದಾಂತದ ಅಕ್ಷರ ಗುರುವಾಗಬೇಕು. ಆದ್ದರಿಂದ ಪೂರ್ವಾರ್ಧದ ಅಂತಿಮಾಕ್ಷರ ವ ಕಾರವು ಗುರು. ಈ ನಿಯಮವು ಕನ್ನಡದಲ್ಲಿ ಷಟ್ಪದಿಗಳಲ್ಲಿದೆ. ವಿದ್ವಾನ್ ವಿಷ್ಣುಮೂರ್ತಿಭಟ್ಟರ “ವೃತ್ತರತ್ನಾಕರ ಭಾಷಾಂತರ” ಗ್ರಂಥದಲ್ಲಿ ಪಾದಾಂತದ ಲಘುವು
ಸಂಸ್ಕೃತದಲ್ಲಿ ವಿಕಲ್ಪವಾಗಿ ಗುರುವಾಗುತ್ತದೆ ಎಂದಿದ್ದಾರೆ. (ಪುಟ 9)
14 ಲಘುವೊಂದೆ ಬರ್ಕೆ ಗಡ ರಸದೆಡೆಯೊಳ ನಾಗವರ್ಮ.
15 ವಿಷ್ಣುಮೂರ್ತಿಭಟ್ಟರು ಈ ವಿಚಾರ ಹೇಳಿಲ್ಲ.
16 ಚಾವಲಿ ರಾಮಸ್ವಾಮಿ ಶಾಸ್ತ್ರಿಗಳ ಛಂದಸ್ಸಂಗ್ರಹದಲ್ಲಿ ಈ ನಿಯಮಗಳ ವಿವರಣೆಯಿದೆ.
17 ಪ್ರಾಕೃತ ಪೈಂಗಳದಲ್ಲಿ ಆರ್ಯಾದ ಎಲ್ಲ ಲಕ್ಷಣ ಹೇಳಿದೆ. ಆದರೆ ಯತಿ ವಿಚಾರ ಮಾತ್ರ ಹೇಳಿಲ್ಲ. ಸಂಸ್ಕೃತದ ‘ಛಂದಶ್ಯಾಸ್ತ್ರ’ದಲ್ಲಿ ಈ ನಿಯಮ ಹೀಗೆ ಹೇಳಿದೆ :
`ನ್ಲೌ ಚೇತ್ ಪದಂ ದ್ವಿತೀಯಾದಿ’ (4.18)
18 ಸೂತ್ರ : ಸಪ್ತಮಃ ಪ್ರಥಮಾದಿ (4.19)
19 ಅನ್ತ್ಯೇ ಪಂಚಮಃ (4.20) : ಅನ್ತೈ ದ್ವಿತೀಯಾರ್ಧೇ ಪಂಚಮಶ್ಚೇದ್ಗಣ : ಸರ್ವಲಘುರ್ಭವತಿ ತದಾ ಪ್ರಥಮಾದಿ ಪದಂ ಪ್ರವರ್ತತೇ.
ಗುಣವರ್ಮನ ಛಂದಸ್ಸಾರದಲ್ಲಿ ಆರ್ಯಾ ಲಕ್ಷಣ ಹೇಳುವಾಗ ವೃತ್ತರತ್ನಾಕರದ ಸೂತ್ರ 2.1ರ ಭಾಷಾಂತರವನ್ನು ಕೊಟ್ಟಿದೆ. 20 ಛಂದೋನುಶಾಸನ
21 ಪ್ರಾಕೃತ ಪೈಂಗಳದಲ್ಲಿ ‘ಖಂದ ಆ’ ಕೈ ಕೊಟ್ಟಿರುವ ಉದಾಹರಣೆ :
ಜಂಬಂ|| ಆಣೇ | ಇ ಗಿ ರಿಂ |
ರಹ ರಹ ಚಕ್ಕಪ | ರಿಘಟ್ಟ | ಣಸಹಂ | ಹಣು ಆ ||
ತಂತಂ | ಲೀಲಾ | ಇ ಣ ಲೋ |
ವಾಮಕ | ರತ್ಧಂ | ಹಿಅಂರ | ಏ ಇ ಸ | ಮುದ್ದೇ (1.74)
22 1.72 ರಲ್ಲಿ ಯತಿಭಂಗಕ್ಕೆ ‘ಬರ್ದುಂಕ | ಲ್ಕ ಮರಿವ |ರಾರ್’ ಎಂಬ ಪ್ರಯೋಗವನ್ನು ಯತಿ ಪಾಲಿಸುವುದಕ್ಕೆ ಆದನ್ನೇ ತಿದ್ದಿ 1.74 ರಲ್ಲಿ ‘ಬರ್ದುಂಕ | ಲ್ಕೆ ಕಲ್ತ ! ರಾರ್‌’ ಎಂದೂ ಪ್ರಯೋಗಿಸುವುದನ್ನು ನೋಡಿದರೆ ಕವಿರಾಜಮಾರ್ಗಕಾರನಿಗೆ ಜಗಣದಲ್ಲಿ ಯತಿ ಇರಬೇಕೆಂಬ ಭಾವನೆ ಇದ್ದಿತೆಂಬ ಭ್ರಾಂತಿಗೆ ಅವಕಾಶವಿದೆ. ಆದರೆ ಅವನ ಕಾವ್ಯದಲ್ಲಿ ಆತ ಜಗಣದಲ್ಲಿ ಯತಿಯನ್ನು ಪಾಲಿಸಿಲ್ಲ. ತನ್ನ ಕೃತಿಯ ಮೊದಲ ಪರಿಚ್ಛೇದ ಒಂದರಲ್ಲೇ 50 ಕಡೆ ಯತಿ ಪಾಲಿಸಿಲ್ಲ |
23 “ಕವಿಜಿಹ್ವಾಬಂಧನ’ : ಪ್ರಬುದ್ಧ ಕರ್ಣಾಟಕ.
24 ಜಯದಾಮನ್ : ಉಪೋದ್ಘಾತ, ಪುಟ 24 25
25 ಜಯದಾಮನ್ : ವಾಕ್ಯ ಬೃಂದ: 12.
26 ತೆಲುಗು ಭಾಷಾಲೋ ಛಂದೋರೀತಿಲು-ವಿದ್ಯಾನ್ ದೊರೆಸ್ವಾಮಿಶರ್ಮ : ಪುಟ 148
28 ತೆಲುಗು ಭಾಷಾಲೋ ಛಂದೋರೀತಿಲು-ವಿದ್ವಾನ್ ದೊರೆಸ್ವಾಮಿಶರ್ಮ : ಪುಟ 152
28 ಕ. ಸಾ. ಪ. 44-1,2
ಲೇಖನ-ಗ್ರಂಥ ಋಣ
ತ್ರಿಷಷ್ಠಿ ಪುರಾತನ ಚರಿತ್ರೆ -ಸುರಂಗ, ಕನ್ನಡ ಛಂದೋವಿಕಾಸ-ಕರ್ಕಿ, ಕನ್ನಡ ಕೈಪಿಡಿ, ನೃತ್ಯರತ್ನಾಕರ-ಕೇದಾರಭಟ್ಟ, ಕನ್ನಡ ವೃತರತ್ನಾಕರ-ವಿಷ್ಣುಮೂರ್ತಿಭಟ್ಟ, ಕನ್ನಡ ಶಾಸನಸಂಪದ, ಛಂದಸ್ಸಾರ-ಗುಣವರ್ಮ (1650, pub.by Mariyappa Bhatt)
ಛಂದೋಲಂಕಾರ ಲಕ್ಷ್ಮಣ ಸಂಗ್ರಹ-ಚಾವಲಿ ರಾಮಸ್ವಾಮಿಶಾಸ್ತ್ರೀ, ಅಪ್ರತಿಮ ವೀರಚರಿತೆ -ತಿರುಮಲಾರ‍್ಯ, ಕವಿರಾಜಮಾರ್ಗ.-ಶ್ರೀವಿಜಯ, ಕವಿಜಿಹ್ವಾಬಂಧನ- ಈಶ್ವರ ಕವಿ, ಪ್ರಾಕೃತ ಪೈಂಗಳ (1310 Edit by Bholashankar Vyas) ಕಾವ್ಯಾವಲೋಕನ–ನಾಗವರ್ಮ 11. ಸಮಾಲೋಕನ-ಶ್ರೀನಂಶ್ರೀ, ಕವಿಜನಾಶ್ರಯಮು-ಭೀಮ ಕವಿ. ಛಂದಶ್ಯಾಸ್ತ್ರಂ-ಪಿಂಗಳ, ಜಯದಾಮನ್
-ಎಚ್. ಡಿ. ವೇಲಂಕರ್‌, ಛಂದೋನುಶಾಸನ -ಎಚ್. ಡಿ. ವೇಲಂಕರ್‌, ಛಂದೋರಾಜ -ರಘುಪತ್ಕಾಚಾರ್ಯ. ತೆಲುಗು ಭಾಷಾಲೋ ಛಂದೋರೀತಿಲು-ವಿದ್ವಾನ್ ರಾವೂರಿ ದೊರೆಸ್ವಾಮಿಶರ್ಮ, ಬಸವರಾಜವಿಜಯ-(ಪ್ರಸ್ತಾವನೆ) ಆ‌ರ್‌. ಸಿ. ಹಿರೇಮಠ್‌, ವಡ್ಡಾರಾಧನೆ-ಡಿ. ಎಲ್‌. ಎನ್‌. (ದ್ವಿತೀಯ ಮುದ್ರಣ). ಛಂದೋಂಬುಧಿ-ನಾಗವರ್ಮ 1, ಕಬ್ಬಿಗರ ಕಾವ-ಆಂಡಯ್ಯ, ಯಶೋಧರ ಚರಿತೆ-ಜನ್ನ, Samskrita and prakrita metres-journal of oriental research (Mds) 17 1947. ಚಾವುಂಡರಾಯ ಪುರಾಣದ ಕಂದಗಳು-
ಸಾ. ಪ. ಪ. 1928. ಕಂದದ ಚಕ್ಕಂದ-ಮೇವುಂಡಿ ಮಲ್ಲಾರಿ ಜಯಂತಿ 26-9 March 64, ಮೂರು ಉಪನ್ಯಾಸಗಳು (ರವಿಕೀರ್ತಿಯ ಶಾಸನ)-ಗೊವಿಂದ ಪೈ ಚತ್ತಾಣ ಬೆದಂಡೆ- ಪ್ರ. ಕ. 44.4 1963–ತೀ ನಂ ಶ್ರೀ. ಕನ್ನಡನಾಡೂ, ದೇಸಿ ಸಾಹಿತ್ಯವೂ-ಮುಳಿಯ ತಿಮ್ಮಪ್ಪಯ್ಯ, ಮಾತ್ರಾಛಂದಸ್ಸುಗಳು-ಚಿಲಕೂರಿ ನಾರಾಯಣರಾವ್-ಭಾಷಾಂತರ ಟಿ. ವಿ.ವಿ. ಎಸ್, Tala vrittas and matra Vrittas-poona orientarics, ವಡ್ಡಾರಾಧನೆಯ ನಾಲ್ಕು ಕಂದಗಳು-ಕ. ಸಾ. ಪ, ಪತ್ರಿಕೆ ಸಂ. 16 ಪುಟ 173-231. Apabramsa metre-H. D.V. ಕಂದದ ಲಯ-ನಡೆ : ಶಿವರಾಮ ಐತಾಳ. ಕ. ಸಾ. ಪ. ಪ. Dec 60 ಸಂ. 42.2 ಕವಿಜಿಹ್ವಾಬಂಧನ-ಟಿ. ವಿ. ವಿ. ಎಸ್. ಪ್ರ, ಕ., ನಾಗವರ್ಮನ ಪದ್ಯಗಳು-ಮುಳಿಯ ತಿಮ್ಮಪ್ಪಯ್ಯ, ಮೂಡಬಿದರೆಯ ಶಾಸನದ ಕಂದಗಳು (1429), ಗಂಗಾಧರ ಶಾಸನದ ತೆಲುಗಿನ ಮೂರು ಕಂದಗಳು (ಶತಂ 10). ಕಳಸದ ಶಾಸನ (930). ಅರಸಿಕೆರೆ ಶಾಸನದ ಕಂದಗಳು-k. u journal 1966 vol.x-s, ಶೆಟ್ಟರ್
ಆದಿಪರಾಣ, ಪಂಪಭಾರತ ಧರ್ಮಾಮೃತ ಕೆ. ಭರ್ತೃಹರಿಶತಕ
ಶಾಂತಿಪುರಾಣ ಲೀಲಾವತಿ ಶಾಕುಂತಲ
ಮದನತಿಲಕ ವಿಶ್ವನಾಥ ಪುರಾಣ ಪಂಚತಂತ್ರ
ಸಮಯ ಪರೀಕ್ಷೆ ಪಂಪಾಸ್ಥಾನವರ್ಣನಂ
ಜಗನ್ನಾಥ ವಿಜಯ ವಿಷ್ಣು ಪುರಾಣ ರಾಜಶೇಖರ ವಿಳಾಸ
.

Close

ಸಂಧ್ಯಾ-ರಾಗ

ಸಂಧ್ಯಾ – ರಾಗ

ವಿ. ಕೆ.ಜನಾರ್ದನ್

ತೆರೆದ ಕಿಟಕಿಯ
ಸರಳ ಸಂದಿಯಿಂದ
ರೂಮಿನೊಳಗೆ ಧುಮುಕಿ
ನನ್ನ ಡಬ್ಬಲ್-ಬೆಡ್ ಹತ್ತಿ
ಸಿಲ್ಕ್- ಹತ್ತಿ ದಿಂಬುಗಳ ತಬ್ಬಿ
ಹೊರಳಾಡುತ್ತಾ ಬಿದ್ದಿದ್ದ
ಸಂಜೆ ಸೂರ್ಯ.
ಮತ್ತೊಂದು ಕಿಟಿಕಿ ಬಳಿ
ಸಂಚು ಹೂಡಿ, ಹೊಂಚು ಹಾಕುತ್ತಾ
ನಿಂತಿತ್ತು –
ನನ್ನ ಕಂಚು ದೇಹ.
ಎದುರು ಮನೆಯಂಗಳದ
ಮಾಲೆಘಟ್ಟ ಸೋಪಾನವೇರಿ
ಆ ಏರಿಳಿತದ ಕಾವಿನಲ್ಲೇ,
ತಂಪಾಗಿ ತಲೆಯಿಟ್ಟು
ಸೊಂಪಾದ ಆ ಸುಪ್ಪತ್ತಿಗೆಯಲ್ಲೇ
ಐಕ್ಯವಾಗಿರುವ ಐಡಿಯ ಹಾಕಿ
ಸಂಜೆಗತ್ತಲಲಿ ನಿಂತು ನಿಂತು
ನಿಂತೇ ಇತ್ತು.
ಗಿಡಗಳಿಗೆ ನೀರೆರೆಯುತ್ತಿದ್ದ ಆ ನೀರೆ
(ಅವಳುಟ್ಟಿದ್ದು-ರೆಡ್‌ರ‍್ಯಾಗ್ ಸೀರೆ)
ಅಡಿಗಡಿಗೂ ಕಾಲಡಿಗೆ ಸಿಕ್ಕಿ ಕಿರಿಕಿರಿಯಾದಾಗ,
ಮುದುರಿ ಮೇಲೆತ್ತಿ
ಹೊಕ್ಕುಳಸಂದಿಯಲ್ಲಿ ತುರುಕಿ ಸಿಕ್ಕಿಸಿವಳು
ನನ್ನ ಕೀಚಕ ಮೈಯನ್ನ
ಪಟ ಪಟ ಬಡಿದು ಚಡಪಡಿಸುವ
ಸರಗಂಚಿನಿಂದ
ಸೊಂಟ ಬಳಸಿ ಬಿಗಿದು ಬಂದುಮಾಡಿದಳು
ನನ್ನನ್ನ
ಆ ಕತ್ತಲು ಸೆರೆಮನೆಯಲ್ಲಿ
(ಆ ಅರಮನೆಯಲ್ಲಿ)
ಎಳನೀರ ಗಂಜಿ-ನುಣುಪಿನ
ಆ ಸ್ಯಾಂಡಲ್-ಸೋಪ್ ಕನ್ಯೆಯ
ಉದಾರವಾದ ಉದರದಿಳಿಜಾರಿನಲ್ಲೇ
ಜಾರುಗುಪ್ಪೆಯಾಡುತ್ತಾ
ಬಟ್ಟಲಗಣ್ಣ ಬಿಟ್ಟು ನೋಡುತ್ತಾ,
ಕೊಡಕ್ಕಲರ್ ಕನಸ ಕಾಣುತ್ತಾ
ಇನ್ನೂ ಏನೇನೋ ಮಾಡುತ್ತಾ
ಕುಲು ಕಣಿವೆಯ ಕುಳಿರ್ಗಾಳಿ
ಕುಡಿದು ಕುಡಿದು
ಆಲೆ-ದಾಡುತ್ತಲೇ ಇದ್ದೆ.
ನೀರೆರೆದು ಮುಗಿಸಿ,
ಸೆರಗಂಚ ಹೊರಗೆಳೆದು
ಸೀರೆ ನೆರಿಗೆಗಳ ಝಾಡಿಸಿ ಕೆಡವಿ ಕೈ
ಬಿಟ್ಟಾಗ
ಬಿರಬಿರನೆ ಬಂದು ಬಿಲ ಸೇಕೊಂಡೆ
ಸಹಸ್ರಾಕ್ಷ ದೇವೇಂದ್ರನಂತೆ.

Close

“ಗತಿ, ಸ್ಥಿತಿ”(ಒಂದು ವಿಮರ್ಶೆ)

-ಜಾ.ಗೋ

ಗಿರಿ ಅವರ “ಗತಿ, ಸ್ಥಿತಿ” (ಅಕ್ಷರ ಪ್ರಕಾಶನ, ಸಾಗರ, ನವಂಬರ ೧೯೭೧) ಈಗಾಗಲೇ ಕೆಲವು ವಿಮರ್ಶಕರಿಂದ ವಿಶೇಷವಾಗಿ ಪ್ರಶಂಸಿಸಲ್ಪಟ್ಟು ಓದುಗರ ಕುತೂಹಲವನ್ನು ಕೆರಳಿಸಿದಂಥ ಕೃತಿ. ನಾನು ರ್ಶ್ರೀ ಯು. ಆರ್. ಅನಂತಮೂರ್ತಿ (ಸಾಕ್ಷಿ-೧೩) ಮತ್ತು ಶ್ರೀ ಜಿ. ಎನ್. ರಂಗನಾಥರಾವ್‌ (ಸಂಕ್ರಮಣ-೪೯) ಇವರುಗಳ ಪ್ರಶಂಸನಾತ್ಮಕ ಲೇಖನಗಳ ಹಿನ್ನೆಲೆಯಲ್ಲಿ ಈ ಕಾದಂಬರಿಯನ್ನು ಇತ್ತೀಚೆಗೆ ಓದಿದೆ : ಆದರೆ ನಿರಾಶೆಯಾಯ್ತು. ಗಿರಿ ಒಬ್ಬ ಪ್ರಬುದ್ಧ ವಿಮರ್ಶಕ (ಉದಾ: ‘ಸ್ವರೂಪ’ ಮತ್ತು ‘ಹಳದಿ ಮೀನು’ ಕುರಿತ ಅವರ ವಿಮರ್ಶೆಗಳು) ಮತ್ತು ಮನೋವಿಜ್ಞಾನಿ ಆಗಿರುವುದರಿಂದ ಅವರು ಬಹುಶಃ ಒಬ್ಬ ಪ್ರಬುದ್ದ ಕಾದಂಬರಿಕಾರರೂ ಆಗಿರಬಹುದೆಂದು (ಹೀಗೆ ಆಗಿರಲೇಬೇಕೆಂದು ಯಾವ ನಿಯಮವೂ ಇರದಿದ್ದರೂ) ಭಾವಿಸಿದ್ದೆ ಮತ್ತು ಶ್ರೀ ಅನಂತಮೂರ್ತಿ ಹಾಗೂ ಶ್ರೀ ರಂಗನಾಥ ರಾವ್ ಇವರುಗಳ ಲೇಖನಗಳು ನನ್ನ ಈ ಭಾವನೆಯನ್ನು ಇನ್ನೂ ದೃಢಪಡಿಸಿದ್ದವು. ಆದರೆ ಕಾದಂಬರಿಯನ್ನು ಓದಿ ಮುಗಿಸಿ ಅದನ್ನು ಕುರಿತು ಮುಕ್ತ ಮನಸ್ಸಿನಿಂದ ಆಲೋಚಿಸಿದಾಗ ನನಗೆ (ಈ ಮೊದಲೇ ಹೇಳಿದಂತೆ) ನಿಜವಾಗಿ ತುಂಬ ನಿರಾಶೆಯಾಯ್ತು. ಪಕ್ಷ ಮನಸ್ಸಿನ ಲೇಖಕನೊಬ್ಬನ ಲೇಖನಿಯಿಂದ ಹೊರಬಂದ ಒಂದು ಅಪಕ್ವ ಕೃತಿ ಅನ್ನಿಸಿತು ಗಿರಿ ಅವರ “ಗತಿ, ಸ್ಥಿತಿ”.

ಈ ಕೃತಿಯ ಭಾಷೆ, ಈಗಾಗಲೇ ವಿಮರ್ಶಕರು ಗುರುತಿಸಿರುವಂತೆ, ನೇರವೂ, ಪಾರದರ್ಶಕವೂ, ವ್ಯಂಜಕವೂ ಆಗಿದ್ದು (‘ಇಲ್ಲಿನ ಭಾಷೆ ಕನ್ನಡ ಭಾಷೆಗೇ ನಡಿಸಿದ ಚಿಕಿತ್ಸೆ’ ಅನ್ನುವ ಶ್ರೀ ಅನಂತಮೂರ್ತಿಯವರ ಮಾತನ್ನು ನಾನು ಒಪ್ಪುವದಿಲ್ಲ. ಈ ಉತ್ತೇಕ್ಷೆಯ ಹೇಳಿಕೆ ‘ಗತಿ, ಸ್ಥಿತಿ’ ಗಿಂತ ‘ಹಳದಿ ಮೀನು’ ವಿನ ಭಾಷೆಗೆ ಬಹುಶಃ ಹೆಚ್ಚು ಒಪ್ಪುತ್ತದೆ. ‘ಗತಿ, ಸ್ಥಿತಿ’ ಯ ಭಾಷೆ ತುಂಬ ನೇರ, ಹರಿತ ಮತ್ತು ಪಾರದರ್ಶಕವಾಗಿದ್ದು ಬುದ್ದಿ – ಸ್ಪರ್ಶಿಯಾಗಿದೆ ಎಂಬುದು ನಿಜ. ಆದರೆ ಅದಕ್ಕೆ “ಹಳದಿ ಮಿಾನು’ ವಿನ ಭಾಷೆಯ ಸಂಗ್ರಹ-ಗುಣ, ಸೂಚ್ಯತೆ, ಧ್ವನಿತ್ವ ಮುಂತಾದ ಕಾವ್ಯ-ಗುಣಗಳಾಗಲೀ, ಆಳವಾಗಲೀ ಇಲ್ಲ. ‘ಹಳದಿ ಮೀನು’ವಿನ ಭಾಷೆಗೆ ‘ಗತಿ, ಸ್ಥಿತಿ’ಯ ಭಾಷೆಯ ಒಳ್ಳೆಯ ಗುಣಗಳಿರುವುದರ ಜೊತೆಗೇ ತನ್ನದೇ ಆದ ಈ ಮೇಲೆ ಹೇಳಿದ ಕಾವ್ಯಗುಣಗಳಿವೆ.) ಒಂದು ವಿಶಿಷ್ಟ ‘ಪಕ್ವತೆಯನ್ನು ಪಡೆದಿದೆಯೆಂಬುದು ನಿಜ. ಆದರೆ ಒಂದು ಸಾಹಿತ್ಯ- ಕೃತಿಯು ಕೇವಲ ಅದರಲ್ಲಿ ಬಳಸಿದ ಭಾಷೆಯ ಪಕ್ವತೆಯೊಂದರಿಂದಲೇ ‘ಪಕ್ಷ’ ಎಂದು ಪರಿಗಣಿಸಲ್ಪಡಲಾರದು. ‘ಗತಿ, ಸ್ಥಿತಿ’ಯಲ್ಲಿ ನಮ್ಮ ಬಹುತೇಕ ಕಾದಂಬರಿಗಳಲ್ಲಿ ಕಾಣದಂಥ ಹಲವಾರು ಒಳ್ಳೆಯ ಮತ್ತು ವಿಶಿಷ್ಟ ಗುಣಗಳಿದ್ದರೂ ಅನೇಕ ಮಹತ್ವದ ನ್ಯೂನತೆಗಳಿವೆ. ಈ ನ್ಯೂನತೆಗಳು ಸಾಕಷ್ಟು ಸ್ಟುಟವಾಗಿಯೇ ಕಾಣುವಂತಿದ್ದರೂ ಅದು ಏಕೋ ಈ ಕೃತಿಯನ್ನು ಇದುವರೆಗೆ ಪ್ರಶಂಸಿಸಿದ ವಿಮರ್ಶಕರ ದೃಷ್ಟಿಗೆ ಅವು ಬಿದ್ದಂತಿಲ್ಲ. ಹೀಗಾಗುವುದಕ್ಕೆ (ಈ ವಿಮರ್ಶಕರಿಗೂ “ಗತಿ, ಸ್ಥಿತಿ’ ಯ ಲೇಖಕರಿಗೂ ಇದ್ದಿರಬಹುದಾದ ವೈಯಕ್ತಿಕ ಅಥವಾ ಸಾಂಘಿಕ ಸಂಬಂಧವನ್ನುಳಿದು) ನಮ್ಮ ನವ್ಯ- ವಿಮರ್ಶೆಯು ಇತ್ತೀಚೆಗೆ ಕೇವಲ ಭಾಷೆ ಮತ್ತು ತಂತ್ರ ಇವುಗಳಿಗೇ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಿರುವುದು ಕಾರಣವಾಗಿದ್ದರೂ ಆಗಿರಬಹುದು. ೧೯೩೯ ನೆಯ ವರ್ಷದ ನವಂಬರದಲ್ಲಿ ಉಡುಪಿಯಲ್ಲಿ ಶ್ರೀ ಶಿವರಾಮ ಕಾರಂತರನ್ನು ಸನ್ಮಾನಿಸುವ ಸಮಾರಂಭದ ಅಂಗವಾಗಿ ಸಾಹಿತ್ಯಕ ಸೆಮಿನಾರುಗಳು ನಡೆದಾಗ ಅವುಗಳಲ್ಲಿ ನಡೆದ ‘ಕಾದಂಬರಿ-ಚಿಕಿತ್ಸೆ’ಯನ್ನು ಗಮನಿಸಿದ ಕಾರಂತರು ಆಮೇಲೆ ಪ್ರೊ. ಕು. ಶಿ. ಹರಿದಾಸಭಟ್ಟರಿಗೆ ಬರೆದ ಕಾಗದ (ಅಭಿವಂದನ”, ಪುಟ ೧೯೮ : ಭರತವಾಕ್ಯ) ದಲ್ಲಿ “………ಕಾದಂಬರೀ ತಂತ್ರಕ್ಕಾಗಿ ನಾವು ಬಲು ಸಂಕಟಪಡುವಂತೆ ಕಾಣುತ್ತದೆ” ಎಂದು ಅಂದದ್ದು ಮಾರ್ಮಿಕವೂ ಸಾಮಯಿಕವೂ ಆಗಿದೆ.

ಗಿರಿ ಅವರ “ಗತಿ, ಸ್ಥಿತಿ” ತನ್ನ ಸಫಲತೆಗಾಗಿ ಮುಖ್ಯವಾಗಿ ಭಾಷೆ ಮತ್ತು ಪ್ರಜ್ಞಾಪ್ರವಾಹ-ತಂತ್ರಗಳನ್ನು ಅವಲಂಬಿಸಿದಂಥ ಮತ್ತು ಅವುಗಳ ಮಟ್ಟದಲ್ಲಿಯಷ್ಟೇ ತನ್ನ ಸಾರ್ಥಕ್ಯವನ್ನು ಕಂಡುಕೊಂಡಂಥ ಒಂದು ಅಲ್ಪ-ತೃಪ್ತ ಕೃತಿ. ಈ ಕೃತಿಯ ವಸ್ತು ಮನೋವಿಶ್ಲೇಷಣೆಗೆ ವಿಶೇಷವಾಗಿ ಅನುಕೂಲವಾಗಿದ್ದರೂ ಮತ್ತು ಪ್ರಸ್ತುತ ಕಾದಂಬರಿಕಾರರು ಅಂಥ ಮನೋವಿಶ್ಲೇಷಣೆ ನಡೆಸುವುದಕ್ಕೆ ಸಾಕಷ್ಟು ಸಮರ್ಥರಿದ್ದರೂ, ಕಾದಂಬರಿಯಲ್ಲಿ ನಾಯಕನ ಮನಸ್ಸಿನ (ನಾಯಕನ ಮನಸ್ಥಿತಿಯೇ ಇಲ್ಲಿನ ಕೇಂದ್ರ ವಸ್ತು) ಗತಿ-ಸ್ಥಿತಿಗಳಿಗೆ ಸಂಬಂಧಿಸಿದಂತೆ ನಿಜವಾದ ಮನೋವಿಶ್ಲೇಷಣೆ ನಡೆಯುವುದೇ ಇಲ್ಲ. ಪ್ರಜ್ಞಾ ಪ್ರವಾಹದ ತಂತ್ರವನ್ನು ಬಳಸಿರುವುದರಿಂದ ಮನೋವಿಶ್ಲೇಷಣೆಯ ಆಭಾಸ ಉಂಟಾಗುತ್ತದೆ ಅಷ್ಟೆ. ಕಾದಂಬರಿಯ ನಾಯಕನಾದ ‘ಆತ’ನ ಮನಸ್ಸು ಬಾಹ್ಯ ಘಟನೆಗಳ ಸ್ಥಿತಿ-ಗತಿಗಳನ್ನೆಲ್ಲ ಒಳ್ಳೇ ಸೂಕ್ಷ್ಮಗ್ರಾಹಿಯಾದ ಕ್ಯಾಮರಾದಂತೆ ಚಿತ್ರಿಸುತ್ತದೆಂಬುದು ನಿಜ. ಆದರೆ ಆತನ ಮನಸ್ಸು ತನ್ನ ಮನಸ್ಸಿನ ಸ್ಥಿತಿ-ಗತಿಗಳನ್ನು ಸೂಕ್ಷ್ಮವಾಗಿ ಚಿತ್ರಿಸುವಲ್ಲಿ ಮಾತ್ರ ಅಸಮರ್ಥವಾಗುತ್ತದೆ. ಕಾದಂಬರಿಯಲ್ಲಿ ಬಾಹ್ಯಘಟನೆಗಳ ಮತ್ತು ಇತರ ವ್ಯಕ್ತಿಗಳ ಅಂತರಂಗದ ಚಿತ್ರಣದಲ್ಲಿ ನಮಗೆ ಕಂಡು ಬರುವ ವಸ್ತುನಿಷ್ಠತೆ, ವ್ಯಂಗ್ಯ, ಮತ್ತು ಸೂಕ್ಷ್ಮ ನಿರೀಕ್ಷಣೆ ಇವು ‘ಆತ’ನದೇ ಮನಸ್ಸಿನ ಸ್ಥಿತಿ-ಗತಿಗಳ ಚಿತ್ರಣದಲ್ಲಿ ನಮಗೆ ಅಷ್ಟೊಂದಾಗಿ ಕಂಡುಬರುವುದಿಲ್ಲ. ಇದು ಈ ಕಾದಂಬರಿಯಲ್ಲಿನ ಒಂದು ಮುಖ್ಯ ದೋಷ. ಉದಾಹರಣಾರ್ಥವಾಗಿ, ‘ಆತ’ ತಾನು ಕೆಲಸ ಮಾಡಲು ಹೋದ ಊರಿನಿಂದ ಕೆಲಸ ಸಿಗದೇ ವಾಪಸು ಬೆಂಗಳೂರಿಗೆ ಬಂದನಂತರ ಆತನ ಗೆಳೆಯ ಮೂರ್ತಿ ಕೇಳುತ್ತಾನೆ, “ಲೋ, ನಿನಗೆ ಆ ಊರಲ್ಲಿ ನಡೆದದ್ದನ್ನ ನೆನಸಿಕೊಂಡರೆ ಏನನ್ನಿಸುತ್ತೆ ?” (ಪುಟ ೬೨.) ಅದಕ್ಕೆ ಆತ ಹೀಗೆ ಉತ್ತರಿಸುತ್ತಾನೆ: “ಏನೂ ಅನ್ನಿಸಲ್ಲ. ಹೀಗಾಯಿತು, ಹೀಗಾಯಿತು ಅಂತ ಮತ್ತೆ ಘಟನೆಗಳೇ ಮರುಕಳಿಸುತ್ತವೆ ಅನ್ನಿಸುವುದು ಮಾತ್ರ ಏನೂ ಇಲ್ಲ, ಅಥವಾ ಹೀಗೂ ಹೇಳಬಹುದು: ಇದು ಹೀಗಿದೆ ಅನ್ನಿಸುತ್ತೆ, ಮೆಣಸಿನಕಾಯಿ ಕಾರವಾಗಿದೆ. ಅಂದ ಹಾಗೆ.” ಈ ಉತ್ತರ ನಮಗೆ ಮೇಲೆ ನೋಡಲು ಭಾಷೆಯ ಮತ್ತು ಸಂವೇದನೆಯ ವಸುನಿಷ್ಠತೆಯ ಒಂದು ಅತ್ಯುತ್ತಮ ಉದಾಹರಣೆಯಾಗಿ ತೋರಬಹುದು. (ಶ್ರೀ ಅನಂತಮೂರ್ತಿಯವರಿಗೆ ಇದು ಹಾಗೆಯೇ ತೋರಿದೆ). ಆದರೆ ಇದು ಆತನ ಆಗಿನ ಮನಸ್ಥಿತಿಯ ನಿಜವಾದ, ಪ್ರಾಮಾಣಿಕವಾದ ನಿರೂಪಣೆ ಅಲ್ಲ. ಯಾಕೆಂದರೆ ‘ಆತ’ ಮತ್ತು ‘ಆಕೆ’ ಇಬ್ಬರೂ ಆ ಊರಿನಲ್ಲಿರುವಷ್ಟೂ ಕಾಲ ಅಲ್ಲಿನ ಉಸಿರುಗಟ್ಟಿಸುವ ವಾತಾವರಣ, ಮಾನವೀಯತೆಯೇ ಇಲ್ಲದ `ಆಫೀಸು-ಗಿರಿ’ಯ ದಬ್ಬಾಳಿಕೆ ಇವುಗಳಿಂದ ಬೇಸತ್ತು, ತತ್ತರಿಸಿ, ಹೇಗಾದರೂ ಅಲ್ಲಿಂದ ಒಮ್ಮೆ ಪಾರಾಗಿ ಹೋದರೆ ಸಾಕು ಎಂದು ತಮಗೆ ಅಲ್ಲಿ ಸಿಕ್ಕ ಮತ್ತು ಸಿಗಬಹುದಾಗಿದ್ದ ಕೆಲಸಗಳನ್ನೂ ಬಿಟ್ಟು, ಆ ಊರನ್ನು ಬಿಟ್ಟು ಬಂದಿರುತ್ತಾರೆ. ಅವರ ಆ ಎಲ್ಲ ಬೇಸರ, ಕಷ್ಟ ಮತ್ತು ತತ್ತರಿಕೆಗಳ ವಿಸ್ತಾರವಾದ (ಕಾದಂಬರಿಯ ಮುಕ್ಕಾಲು ಭಾಗದಷ್ಟು) ಮತ್ತು ಕೂಲಂಕಷವಾದ ಸೂಕ್ಷ್ಮ- ಚಿತ್ರಣ ಇನ್ನೂ ನಮ್ಮ ಕಣ್ಮುಂದೆ ಕಟ್ಟಿದಂತಿರುವಾಗ ಆತ ಹೀಗೆ ನಿರ್ವಿಕಾರವಾಗಿ ಸ್ಥಿತ ಪ್ರಜ್ಞನಂತೆ ಉತ್ತರಿಸುವುದು ಮನೋವೈಜ್ಞಾನಿಕವಾಗಿ ಪ್ರಾಮಾಣಿಕವಾದ ಉತ್ತರ ಅನ್ನಿಸುವುದಿಲ್ಲ. ಅದಕ್ಕೆ ಬದಲು ಆತ “ನನಗೆ ಅದನ್ನೆಲ್ಲ ನೆನಸಿಕೊಂಡರೆ ವಾಕರಿಕೆ ಬರುತ್ತದೆ” ಎಂದಿದ್ದರೆ ಹೆಚ್ಚು ಪ್ರಾಮಾಣಿಕವಾದ ಮತ್ತು ಯಥಾರ್ಥವಾದ ಉತ್ತರವಾಗುತ್ತಿತ್ತು. ಇಲ್ಲಿ ಮತ್ತು ಇನ್ನೂ ಕೆಲವೆಡೆ ಗಿರಿ ಅವರ ನಿರೂಪಣೆ “Psychologism’ ದ ದೋಷಕ್ಕೆ ಒಳಗಾಗಿರುವಂತೆ ಕಾಣುತ್ತದೆ.

ಈ ಕಾದಂಬರಿಯ ಥೀಮಿನ (Theme) ಬಗ್ಗೆ ಬರೆಯುತ್ತ ಶ್ರೀ ಯು. ಆರ್. ಅನಂತಮೂರ್ತಿ (“ಸಾಕ್ಷಿ-೧೩”, ಪುಟ ೧೧೩.) “ನೋಡುವುದು’ ಎಂತಹ ಕ್ರಿಯೆ ಎನ್ನುವುದರ ಬಗ್ಗೆಯೇ ಈ ಕಾದಂಬರಿ. ಯಾವ ಮನಸ್ಥಿತಿಯಲ್ಲಿದ್ದಾಗ ನಾವು ಹೇಗೆ ನೋಡುತ್ತೇವೆ; ಈ ಗ್ರಹಣಕ್ರಿಯೆ ಪ್ರಜ್ಞೆಗೂ ಆವರಣಕ್ಕೂ ಇರುವ ಸಂಬಂಧದ ಬಗ್ಗೆ, ಜೀವನದ ಬಗ್ಗೆ ತಾತ್ವಿಕವಾಗಿ ಏನು ಹೇಳುತ್ತದೆ ಇದು ಕಾದಂಬರಿಯ ಉದ್ದೇಶವೆಂದು ತಿಳಿದು ಕೃತಿ ವಿಶ್ಲೇಷಣೆ ಮಾಡಬಹುದು” ಎನ್ನುತ್ತಾರೆ. ನಾವು ನಿಜವಾಗಿಯೂ ಹೀಗೆಯೇ ತಿಳಿದು ಈ ಕೃತಿಯನ್ನು ವಿಶ್ಲೇಷಿಸಿದರೇನೇ ಈ ಕೃತಿಯು ನಮಗೆ ಸ್ವಲ್ಪ ಮಟ್ಟಿಗಾದರೂ ಅರ್ಥ-ಪೂರ್ಣವೆನಿಸುತ್ತದೆ. ಇದಲ್ಲದೇ ಈ ಕೃತಿಗೆ ಇನ್ನಾವ ಅರ್ಥ ಅಥವಾ ಉದ್ದೇಶ ಇದೆ ಅನ್ನುವುದೇ ಸ್ಪಷ್ಟವಾಗುವುದಿಲ್ಲ. ಇಲ್ಲಿ ಕಥೆಯಂತೂ, ಶ್ರೀ ಅನಂತಮೂರ್ತಿಯವರು ಹೇಳಿರುವಂತೆ, ಬಹಳ ಗೌಣ, ಇನ್ನು ಪಾತ್ರಗಳ ಬೆಳವಣಿಗೆಯೂ ಈ ಕೃತಿಯಲ್ಲಿ ಕಂಡುಬರುವದಿಲ್ಲ. ‘ಆತ’ ಮತ್ತು ‘ಆಕೆ’ ಇಬ್ಬರೂ ಕಾದಂಬರಿಯ ಪ್ರಾರಂಭದಲ್ಲಿ ಎಲ್ಲಿರುವರೋ ಮತ್ತು ಹೇಗಿರುವರೋ ಕಾದಂಬರಿಯ ಕೊನೆಯಲ್ಲಿಯೂ ಅಲ್ಲಿಯೇ ಮತ್ತು ಹಾಗೆಯೇ ಉಳಿಯುವರು. ಕಾದಂಬರಿಯಲ್ಲಿ ನಡೆಯುವ ಯಾವ ಘಟನೆಗಳೂ ಅವರಿಬ್ಬರ ಮೇಲೆ ವಿಶೇಷ ಪರಿಣಾಮ ಉಂಟುಮಾಡಿದಂತೆ ಕಾಣುವದಿಲ್ಲ. ಕಾದಂಬರಿಯಲ್ಲಿ ‘ಆತ’ ನಂತೂ ಕೇವಲ ಒಬ್ಬ ‘Running Commentator’ ನಂತೆಯೋ ಅಥವಾ ಒಬ್ಬ ಮಾನಸಿಕ ಫೋಟೋಗ್ರಾಫರನಂತೆಯೋ ನಮಗೆ ಕಂಡುಬರುತ್ತಾನೆ. ಬಾಹ್ಯ ಘಟನೆಗಳನ್ನು ಮತ್ತು ಇತರ ವ್ಯಕ್ತಿಗಳ ನಡವಳಿಯನ್ನು ತನ್ನ ಸಾಕ್ಷಿಪ್ರಜ್ಞೆಯಲ್ಲಿ ಹಿಡಿದು ಬರೆದಿಡುವುದೊಂದನ್ನುಳಿದು ಆತನಿಗೆ ತನ್ನ ಸ್ವಂತದ್ದು ಅನ್ನಬಹುದಾದ ವ್ಯಕ್ತಿತ್ವ ಅಥವಾ ಉದ್ದೇಶ ಯಾವುದೂ ಇರುವಂತೆ ತೋರುವುದಿಲ್ಲ. ಆತನ ಮತ್ತು ಆಕೆಯ ಸಂಬಂಧವು ಸಹ ನಮಗೆ ಆತನ ಬಗ್ಗೆಯಾಗಲೀ, ಆಕೆಯ ಬಗ್ಗೆಯಾಗಲೀ ಅಥವಾ ಅವರಿಬ್ಬರ ಬಗ್ಗೆಯಾಗಲೀ ವಿಶೇಷವಾಗಿ ಏನನ್ನೂ ಹೇಳುವದಿಲ್ಲ. ಕಾದಂಬರಿಯುದ್ದಕ್ಕೂ ಅವರಿಬ್ಬರ ಸಂಬಂಧ ಲಗ್ನವಾಗಿ ಬಹಳ ವರ್ಷಗಳಾದ ಗಂಡ-ಹೆಂಡಿರಿಬ್ಬರ ಮಾಮೂಲು ಉತ್ಸಾಹ-ರಹಿತ ಸಂಬಂಧದಂತೆ ಕಂಡುಬರುತ್ತದೆ. [ಕಾದಂಬರಿಯ ಪ್ರಾರಂಭದಲ್ಲಿ ಬರುವ ಅವರಿಬ್ಬರ ಪ್ರಯಾಣ ಹೊರಡುವುದರ ವರ್ಣನೆಯು ಅವರಿಬ್ಬರೂ ಬೆಂಗಳೂರಿನಲ್ಲಿದ್ದು ತಮ್ಮ ‘ಜಂಟೀ-ಮನೆ” (Common Conjugal house’ ಎಂಬ ಅರ್ಥದಲ್ಲಿ) ಯಿಂದ ಅವಸರವಸರಾಗಿ ಅಟೋರಿಕ್ಷಾದಲ್ಲಿ ತಮ್ಮ ಸಾಮಾನುಗಳನ್ನೇರಿಸಿ ಪ್ರಯಾಣ ಹೊರಟ ನವದಂಪತಿಗಳೆನ್ನುವ ಭಾವನೆಯನ್ನೇ ಹುಟ್ಟಿಸುತ್ತದೆ. ನಾನಂತೂ ಮುಂದೆ ಕಾದಂಬರಿಯಲ್ಲಿ ಆಕೆಯ ಹಾಸ್ಪಿಟಲ್ಲಿನ ಡೀನ್‌ – ಮೊದಲು ಗಂಡಾಗಿದ್ದು ಕೆಲ ಪುಟಗಳ ನಂತರ ಒಮ್ಮೆಲೇ ಹೆಣ್ಣಾದ ಡೀನ್ ಆಕೆ ಹಾಸ್ಟೆಲಿನಲ್ಲಿರದೇ ಬೇರೆಲ್ಲೂ ಒಬ್ಬಳೇ ಒಂದು ಗಂಡಸಿನೊಂದಿಗೆ ಹೋಟೆಲ್ಲಿನಲ್ಲಿರುವುದಕ್ಕೆ ಆಕ್ಷೇಪಿಸಿದನಂತರವೇ ‘ಆತ’ ಮತ್ತು ‘ಆಕೆ’ ಗಂಡ-ಹೆಂಡಿರಲ್ಲ ಎಂಬುದನ್ನು ಕಂಡುಕೊಂಡೆ.] ಕಾದಂಬರಿಯಲ್ಲಿ ಅವರಿಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಂಡಿದ್ದಾರೆ-ಅದರಲ್ಲೂ ‘ಆಕೆ’ ಗೆ ‘ಆತ’ ನ ಸ್ವಭಾವದ ಲೋಪ-ದೋಷಗಳೆಲ್ಲವುಗಳ ಅರಿವೂ ಇದೆ ಅನ್ನುವುದು ಮಾತ್ರ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಇಷ್ಟನ್ನು ಬಿಟ್ಟರೆ ಅವರಿಬ್ಬರ ಸಂಬಂಧವು ಅವರಿಬ್ಬರ ವ್ಯಕ್ತಿತ್ವದ ಇನ್ನಾವ ಅಂಶ (aspect) ದ ಮೇಲೂ ಬೆಳಕನ್ನು ಚೆಲ್ಲುವದಿಲ್ಲ. ಹಾಗೆ ನೋಡಿದರೆ ‘ಆತ’ ಮತ್ತು ‘ಮೂರ್ತಿ’ ಇವರ ನಡುವೆಯೇ ಹೆಚ್ಚು ಹಾರ್ದಿಕವಾದ ಮತ್ತು ಹೆಚ್ಚು ನಿಕಟವಾದ ಸಂಬಂಧ ಇರುವಂತೆ ತೋರುತ್ತದೆ. ಅಂತೂ, ಒಟ್ಟಿನ ಮೇಲೆ ಈ ಕಾದಂಬರಿಯ ನಾಯಕನಾದ ‘ಆತ’ ಒಬ್ಬ ಬಹಳ ಜಾಣನಾದ ಮತ್ತು ತೀಕ್ಷ್ಣದೃಷ್ಟಿಯುಳ್ಳ ಆದರೆ ತನ್ನ, ‘ಆಕೆ’ ಯ ಮತ್ತು ಮೂರ್ತಿಯ ವ್ಯಕ್ತಿತ್ವ ಮತ್ತು ಪರಸ್ಪರ ಸಂಬಂಧಗಳನ್ನು ಮಾತ್ರ ತನ್ನ ವಸ್ತು-ನಿಷ್ಟ ತೀಕ್ಷ್ಯ-ದೃಷ್ಟಿಯ ಕ್ಷ-ಕಿರಣದ ಪರೀಕ್ಷೆಗೆ ಒಳಪಡಿಸ ಲೋಲ್ಲದ ವ್ಯಕ್ತಿಯಾಗಿ ಕಂಡುಬರುತ್ತಾನೆ, ಅಥವಾ ಇದನ್ನೇ ಹೀಗೂ ಹೇಳಬಹುದು : ಆತ ತನ್ನ ಪರಿಸರವನ್ನು ಬಾಹ್ಯಘಟನೆಗಳು ಮತ್ತು ಇತರ ವ್ಯಕ್ತಿಗಳನ್ನು ತೀಕ್ಷ ದೃಷ್ಟಿಯಿಂದ ನೋಡಿ ಅವನ್ನು ತನ್ನ ಕ್ಷ-ಕಿರಣದ ಪರೀಕ್ಷೆಗೊಳಪಡಿಸುವುದರಲ್ಲಿ ಇಷ್ಟೊಂದು ಮಗ್ನನಾಗಿರುತ್ತಾನಲ್ಲ-ಆತನಿಗೆ ತನ್ನನ್ನು ಮತ್ತು ತನ್ನವರನ್ನು ಆ ಬಗೆಯ ಪರೀಕ್ಷೆಗೊಳಪಡಿಸಲು ಸಮಯವೇ ಸಿಕ್ಕುವದಿಲ್ಲ ! ಒಂದರ್ಥದಲ್ಲಿ ‘ಆತ’ ಬಾಹ್ಯಘಟನೆಗಳ ಸ್ಥಿತಿ-ಗತಿಗಳನ್ನು ವಸ್ತುನಿಷ್ಠವಾಗಿ ಹಿಡಿದಿಡುವ ಮತ್ತು ತೋರಿಸುವ ಸಾಕ್ಷಿಪ್ರಜ್ಞೆಯ ಪ್ರತೀಕ (an archetype of the principle of the witness) ವಾಗಿ ಮಾತ್ರ ಕಾದಂಬರಿಯಲ್ಲಿ ಬರುತ್ತಾನೆ ಎಂದರೆ ತಪ್ಪಾಗಲಾರದು.

ಹೀಗಾಗಿ ಅವನ ಸ್ವಂತ ವ್ಯಕ್ತಿತ್ವ ಕಾದಂಬರಿಯಲ್ಲಿ ಯಾವ ಸ್ಥಿತ್ಯಂತರಗಳಿಗೂ ಒಳಗಾಗುವುದಿಲ್ಲ; ಅದಕ್ಕೆ ಕಾದಂಬರಿಯಲ್ಲಿ ಕೇವಲ ಸ್ಥಿತಿ ಇದೆ, ಗತಿ ಇಲ್ಲ, ಅರ್ಥಾತ್ ಈ ಕೃತಿಯಲ್ಲಿ ಕಥೆಯಷ್ಟೇ ಪಾತ್ರರಚನೆಯೂ ಗೌಣ ವಿಷಯವಾಗಿಬಿಟ್ಟಿದೆ. (ಇಂಥದೇ ಪ್ರಜ್ಞಾ ಪ್ರವಾಹ ತಂತ್ರವನ್ನು ಬಳಸಿಕೊಂಡಂಥ ಕನ್ನಡದ ಇತ್ತೀಚಿನ ಮಹತ್ವದ ಕಾದಂಬರಿಯಾದ “ಹಳದಿ ಮೀನು’ವಿನಲ್ಲಿ ಹೀಗಾಗಿಲ್ಲ; ಅಲ್ಲಿ ಕಥೆಗಿಲ್ಲದಿದ್ದರೂ ಪಾತ್ರ ರಚನೆಗೆ ಪ್ರಧಾನ ಸ್ಥಾನವಿದೆ ಎನ್ನುವುದನ್ನು ನಾವು ಇಲ್ಲಿ ಗಮನಿಸಬಹುದು.) ಹೀಗಾಗಿ ಈ ಕಾದಂಬರಿಯ ವಿಷಯ ಮತ್ತು ಉದ್ದೇಶ ಇವೆರಡೂ, ಶ್ರೀ ಅನಂತ ಮೂರ್ತಿಯವರು ಹೇಳಿದಂತೆ, “ನೋಡುವುದು’ ಎಂತಹ ಕ್ರಿಯೆ ಹಾಗೂ ನಾವು ಯಾವ ಮನಸ್ಥಿತಿಯಲ್ಲಿದ್ದಾಗ ಹೇಗೆ ನೋಡುತ್ತೇವೆ ಎನ್ನುವುದನ್ನು ತಿಳಿಸುವಷ್ಟಕ್ಕೇ ಸೀಮಿತವಾಗಿರುವಂತೆ ತೋರುತ್ತದೆ. ಇನ್ನು ಈ ಕಾದಂಬರಿಯ ಉದ್ದೇಶ ನಿಜವಾಗಿಯೂ ಇಷ್ಟಕ್ಕೇ ಸೀಮಿತವಾದಂಥದಾಗಿದ್ದರೆ, ಅಷ್ಟನ್ನು ಮಾತ್ರ ನಿರೂಪಿಸಲು ಕಾದಂಬರಿಯನ್ನೇ ಯಾಕೆ ಈ ಲೇಖಕರು ಬರೆಯಬೇಕಿತ್ತು ? ಬೇಕಾದರೆ ಆ ಬಗ್ಗೆ ಒಂದು ಇನ್ನೂ ಪ್ರೌಢವಾದ ಮನೋವೈಜ್ಞಾನಿಕ ಪ್ರಬಂಧವನ್ನು ಬರೆದಿದ್ದರೆ ಆಗುತ್ತಿರಲಿಲ್ಲವೇ ? ಎಂಬ ಪ್ರಶ್ನೆಗಳೇಳುತ್ತವೆ. ಆದರೆ ಈ ಕಾದಂಬರಿಯ ರಚನೆಯನ್ನು ನಾವು ಹೆಚ್ಚು ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಆತನ ವ್ಯಕ್ತಿತ್ವ, ಸಮಸ್ಯೆಗಳು ಮತ್ತು ಅವನ ಜೀವನ – ದೃಷ್ಟಿ ಇವುಗಳನ್ನು ಕುರಿತು (ವಸ್ತು-ನಿಷ್ಠವಾಗಿ ಘಟನೆಗಳನ್ನು ನಿರೂಪಿಸುತ್ತ ಅವುಗಳಿಗೆ ಅವನ ಪ್ರತಿಕ್ರಿಯೆಯನ್ನು ತೋರಿಸುತ್ತ ಹೋಗುವುದರ ಮೂಲಕ) ಹೇಳುವುದೇ ಇಲ್ಲಿ ಲೇಖಕರ ನಿಜವಾದ ಉದ್ದೇಶವಾಗಿದೆ ಎಂಬುದು ನಮಗೆ ಗೊತ್ತಾಗದಿರದು. ಆದರೆ ಕಾದಂಬರಿಕಾರರ ಹೆಚ್ಚಿನ ಸಮಯ, ಶ್ರಮ, ಜಾಣ್ಮೆ ಮತ್ತು ಅವಕಾಶಗಳೆಲ್ಲ ಬಾಹ್ಯ ಘಟನೆಗಳ ಕೂಲಂಕಷವಾದ ವಸ್ತು-ನಿಷ್ಠ ನಿರೂಪಣೆಯಲ್ಲಿಯೇ ವೆಚ್ಚವಾಗಿವೆಯಾದ್ದರಿಂದ ‘ಆತ’ನ ವ್ಯಕ್ತಿತ್ವದ, ಆತನ ಸಮಸ್ಯೆಗಳ ಮತ್ತು ಆತನ ಜೀವನದೃಷ್ಟಿಯ (ಇದು ಕೆಲಮಟ್ಟಿಗೆ ಆತನು ಬಾಹ್ಯ ಘಟನೆಗಳ ಹಾಗೂ ಜನಗಳ ವರ್ತನೆಯ ಮೇಲೆ ಮಾಡುವ ವ್ಯಾಖ್ಯಾನ (Comments) ಗಳಿಂದ ನಮಗೆ ಗೊತ್ತಾಗುತ್ತದಾದರೂ) ನಿರೂಪಣೆಗೆ ಕಾದಂಬರಿಯಲ್ಲಿ ಸಾಕಷ್ಟು ಅವಕಾಶವಿರದಂತಾಗಿದೆ. ಇದೇ ಈ ಮನೋವೈಜ್ಞಾನಿಕ ಕಾದಂಬರಿಯ ಮುಖ್ಯ ದೋಷ.

ಕಾದಂಬರಿಯ ಕೊನೆಯ ಭಾಗದಲ್ಲಿ ‘ಆತ’ ತನ್ನ ಹಳ್ಳಿಗೆ ಹೋಗಿ ಅಲ್ಲಿ ಕೆಲ ದಿನ ಇದ್ದು, ಬೇಜಾರುಗೊಂಡು, ಜೋಗದ ಜಲಪಾತಕ್ಕೆ ಭೇಟಿಕೊಡುವ ಸಂದರ್ಭದಲ್ಲಿ ಮಾತ್ರ ಆತ ತನ್ನ ಜೀವನದ ಮತ್ತು ತನ್ನ ವ್ಯಕ್ತಿತ್ವದ ಗೊತ್ತು-ಗುರಿಗಳನ್ನು ಕುರಿತು ಹಾಗೂ ಅವುಗಳ ಸಾಫಲ್ಯ-ವೈಫಲ್ಯಗಳನ್ನು ಕುರಿತು ಕೊಂಚ ಚಿಂತಿಸುವಂತೆ ಕಾಣುತ್ತದೆ. ಆದರೆ ಕಾದಂಬರಿಯಲ್ಲಿ ಮೊದಲಿನಿಂದ ಅಲ್ಲಿಯವರೆಗೆ ಆತ ಈ ಬಗೆಯ ‘ಸ್ವ-ಚಿಂತನೆ’ (ತನ್ನನ್ನು ಕುರಿತು ಚಿಂತನೆ ಎಂಬ ಅರ್ಥದಲ್ಲಿ) ಯನ್ನು ಮಾಡದೇ ಇದ್ದುದರಿಂದ (ಆತ ಅದುವರೆಗೆ ಮಾಡಿದ್ದು, ಮುಖ್ಯವಾಗಿ, ಬಾಹ್ಯಘಟನೆಗಳ ಮತ್ತು ವ್ಯಕ್ತಿಗಳ ಸೂಕ್ಷ್ಮವಾದ ಅವಲೋಕನ ಮಾತ್ರ) ಆತನ ಈ ಕೊನೆಯ ಪ್ರಯತ್ನ (ಇದು ಅವನು ತನ್ನ ಬಗ್ಗೆ ತುಸು ಆಳವಾಗಿ ಆಲೋಚಿಸುವ ಮೊದಲ ಪ್ರಯತ್ನ ಸಹ) ಆತನ ವ್ಯಕ್ತಿತ್ವವನ್ನಾಗಲಿ ಅಥವಾ ಕಾದಂಬರಿಯ ಪಾತ್ರ-ಸತ್ವವನ್ನಾಗಲೀ ಹೇಳಿಕೊಳ್ಳುವಂಥ ಯಾವ ರೀತಿಯಲ್ಲೂ ಬೆಳೆಸುವುದಿಲ್ಲ, ನಿಜವಾಗಿ ಹೇಳಬೇಕೆಂದರೆ, ಇಲ್ಲಿ ಲೇಖಕರು ಚಿತ್ರಿಸಿದ ‘ಆತ’ನ ವ್ಯಕ್ತಿತ್ವ ಬಲು ವಿಕ್ಷಿಪ್ತವಾದದ್ದು. ಬಹುಶಃ ಈ ಬಗೆಯ ವಿಕ್ಷಿಪ್ತವ್ಯಕ್ತಿತ್ವ (Alienated Personalities)-ಗಳ ಚಿತ್ರಣ ಇತ್ತೀಚಿನ ಸಾಹಿತ್ಯದಲ್ಲಿ ಒಂದು ಗ್ರಹೀತ ಸಂಪ್ರದಾಯ (An accepted tradition) ವಾಗಿರುವಂತೆ ಕಾಣುತ್ತದೆ. ಇದಕ್ಕೆ ಪ್ರೇರಣೆಯೆಂದರೆ ಕಾಮೂ, ಕಾಫ್ಕಾ ಮುಂತಾದವರ ಕೃತಿಗಳಲ್ಲಿನ ನಾಯಕರು, ನಮ್ಮ ವ್ಯಕ್ತಿತ್ವದಲ್ಲಿ ಅತಿ ಸೂಕ್ಷ್ಮವಾದ, ಅತಿ ವೈಯಕ್ತಿಕವಾದ ಮತ್ತು ಅ-ಸಾಮಾಜಿಕವಾದ ಸಂವೇದಿತ್ವವನ್ನು ಬೆಳೆಸಿಕೊಂಡು ನಮ್ಮ ಹೊರಜಗತ್ತನ್ನು ಅದರಲ್ಲೂ ಸಮಾಜವನ್ನು ಬೋ‌ರ್, ಅರ್ಥವಿಹೀನ, ನಿರ್ದಯಿ ಅಥವಾ ಕ್ರೂರ ಎಂದು ಹೀಗಳೆಯುವುದು ಯಾರಿಗೂ (ಅದರಲ್ಲೂ ಬಿಸಿರಕ್ತದ ಯುವಕರಿಗೆ) ಕಷ್ಟವಲ್ಲ. ಆದರೆ ಈ ಬಗೆಯ ತೀರ ವೈಯಕ್ತಿಕವೂ, ಅ-ಸಾಮಾಜಿಕವೂ ಆದ ದೃಷ್ಟಿಕೋನದಿಂದಲೇ ಮತ್ತು ಮಾನದಂಡದಿಂದಲೇ ಸಮಾಜದ ಸಂಸ್ಥೆಗಳನ್ನು, ಸಮಸ್ಯೆಗಳನ್ನು ಮತ್ತು ವ್ಯಕ್ತಿಗಳನ್ನು ನೋಡುವುದು ಮತ್ತು ಅಳೆಯುವುದು ವಸ್ತು-ನಿಷ್ಠ ಎನಿಸಬಹುದೇ ಮತ್ತು ಯೋಗ್ಯವಾಗಬಹುದೇ ಎನ್ನುವುದನ್ನು ನಮ್ಮ ನವ್ಯಪ್ರಜ್ಞಾವಂತರು ಆಳವಾಗಿ ಯೋಚಿಸಬೇಕು (ಇದರರ್ಥ ನಾನು ವ್ಯಕ್ತಿನಿಷ್ಠ ಮೌಲ್ಯಗಳನ್ನು ಅಲ್ಲಗಳೆಯುತ್ತೇನೆ ಅಥವಾ ಕುರುಡ ಮತ್ತು ಯಾಂತ್ರಿಕ ಸಾಮಾಜಿಕ ಸಂಪ್ರದಾಯಿಕತೆಯನ್ನು ಎತ್ತಿ ಕಟ್ಟುತ್ತೇನೆ ಎಂದಲ್ಲ.) ಕಾದಂಬರಿಯಲ್ಲಿ ‘ಆತ’ ನ ವ್ಯಕ್ತಿತ್ವ ಬಲು ವಿಕ್ಷಿಪ್ತವಾದದ್ದು ಎಂದು ಹೇಳಿದೆನಷ್ಟೇ. ಈ ಮಾತನ್ನು ಈ ಕೆಲವು ಉದಾಹರಣೆಗಳಿಂದ ಪುಷ್ಟಿಕರಿಸಬಹುದು: ‘ಆತ’ ತನ್ನ, ನಗರದ ಸಮಾಜದಿಂದ ಮಾನಸಿಕವಾಗಿ ದೂರವಾಗಿರುವನಷ್ಟೇ ಅಲ್ಲ, ಹಳ್ಳಿಯಲ್ಲಿಯ ತನ್ನ ಮನೆಯ ಜನ ಮತ್ತು ಸಮಾಜ ಇವುಗಳಿಂದ ಸಹ ದೂರವಾಗಿರುವಂತೆ ತೋರುತ್ತದೆ. ಆತ ಕಾದಂಬರಿಯ ಕೊನೆಯ ಭಾಗದಲ್ಲಿ ಹಳ್ಳಿಯಲ್ಲಿ ಕಳೆಯುವ ನಾಲ್ಕು ದಿನಗಳಲ್ಲಿ ಒಮ್ಮೆ ಕೂಡ ತನ್ನ ಮನೆಯ ಜನರ ಬಗ್ಗೆ ಮತ್ತು ತನ್ನ ಮನೆಯ ಹಾಗೂ ಅವರ ಸಂಬಂಧದ (ಆಥವಾ ಸಂಬಂಧ ಇಲ್ಲದಿರುವಿಕೆಯ) ಬಗ್ಗೆ ವಿಚಾರ ಮಾಡುವದಿಲ್ಲ. ಅಲ್ಲಿ ಹಳ್ಳಿಯಲ್ಲಿಯ ತನ್ನ ಮನೆಯಲ್ಲಿ ಆತ ನಗರದ ಹೋಟೆಲ್ಲಿಗಿಂತ ಹೆಚ್ಚು ಯಾಂತ್ರಿಕವಾಗಿ ಸ್ನಾನ, ತಿಂಡಿ, ಊಟ ಮತ್ತು ನಿದ್ರೆಗಳಲ್ಲಿ ಕಾಲಕಳೆಯುತ್ತಾನೆ. ಈತ ಹೋಟಲಿನಲ್ಲಿ ತಂಗಿದ್ದ ‘Co-lodgers’ ಬಗ್ಗೆ ಯೋಚಿಸಿದ ಅರ್ಧದಷ್ಟು ಸಹ ತನ್ನ ಮನೆಯ ಜನರ ಬಗ್ಗೆ ಯೋಚಿಸುವುದಿಲ್ಲ. ಆತನ ಮನೆಯಲ್ಲಿನ ಈ ವರ್ತನೆಯ ಅಥವಾ ಮನೋವೃತ್ತಿಯ ಮುಖಾಂತರ ಲೇಖಕರು ನಮಗೆ ಸೂಚಿಸ ಬಯಸುವುದೇನನ್ನು? ಆತ ತನ್ನ ಮನೆಯಲ್ಲಿ ಹೋಟಲಿನಲ್ಲಿಗಿಂತ ಹೆಚ್ಚು ಪರಕೀಯನಾಗಿದ್ದಾನೆ ಅನ್ನುವುದನ್ನೇ? ಅಥವಾ ಮನೆಯ ಜನರ ಬಗ್ಗೆ ಆತನ ಮನಸ್ಸನ್ನು ಯಾವ ರೀತಿಯಲ್ಲಾದರೂ ಹರಿಯ ಬಿಟ್ಟರೆ ತಮಗೆಲ್ಲಿ ಆಗ ಆತನ ವ್ಯಕ್ತಿತ್ವದಲ್ಲಿ ಕಂಡು ಬರುವ ಇನ್ನೂ ಹಲವಾರು ಎಳೆಗಳನ್ನು ಜೋಡಿಸಬೇಕಾಗುತ್ತೋ ಅಥವಾ ಜೋಡಿಸದೇ ಹಾಗೇ ಇಡಬೇಕಾಗುತ್ತೋ ಎಂದು ಲೇಖಕರಿಗೆ ಭಯವೋ ? ಅಂತೂ ಆತನ ವ್ಯಕ್ತಿತ್ವ ಚಿತ್ರಣ ನಾವು ಯಾವ ದೃಷ್ಟಿಯಿಂದ ನೋಡಿದರೂ ಅಸಮಂಜಸವೆನ್ನಿಸುತ್ತದೆ. ಬಹುಶಃ ಅದು ಈ ಕಾದಂಬರಿಯ ನಿರೂಪಣೆಯಲ್ಲಿ ಲೇಖಕರು ತೋರುವ ‘ಅತಿ-ವಸ್ತುನಿಷ್ಟತೆ’ ಯ ಒಂದು ಅನಿಷ್ಟ ಪರಿಣಾಮವಾಗಿದ್ದರೂ ಆಗಿರಬಹುದು. ಹಿಟ್ಟಿನ ಮೇಲೆ ಒಳ್ಳೆಯ ಮನೋವೈಜ್ಞಾನಿಕ ಕಾದಂಬರಿಗಳ ನಾಯಕರುಗಳ ವ್ಯಕ್ತಿತ್ವಗಳಲ್ಲಿ ನಮಗೆ ಕಂಡುಬರುವ ಆಳ ಮತ್ತು ಸ್ವ-ಮನೋವಿಶ್ಲೇಷಣೆಗಳು ಇಲ್ಲಿನ ನಾಯಕವ ವ್ಯಕ್ತಿತ್ವದಲ್ಲಿ ನಮಗೆ ಕಂಡುಬರುವುದಿಲ್ಲ. ಹೀಗಾಗಿ ‘ಆತ’ ಕಾದಂಬರಿಯಲ್ಲಿ ಮೊದಲಿನಿಂದ ಕೊನೆಯವರೆಗೆ ಕೇವಲ ತನ್ನ ಪರಿಸರದ-ಬಾಹ್ಯಘಟನೆಗಳ ಮತ್ತು ಜನರ-ಒಬ್ಬ ತೀಕ್ಷ್ಣ ಫೋಟೋಗ್ರಾಫರನಾಗಿ ಉಳಿದುಬಿಡುತ್ತಾನೆ.

ಈ ಕಾದಂಬರಿಯು ‘significant’ ಆಗಿ ಏನನ್ನೂ ಹೇಳುವದಿಲ್ಲ ಎಂದು ಕೆಲವರ ಟೀಕೆ ಇದೆ ಎಂದು ಶ್ರೀ: ಜಿ. ಎನ್. ರಂಗನಾಥರಾವ್ (ಸಂಕ್ರಮಣ-೪೯) ಹೇಳಿ, ಈ ಕಾದಂಬರಿಯ ನಾಯಕನಿಗೆ ಆತನ ‘ವಿಲಕ್ಷಣ ಮನಸ್ಥಿತಿಯಿಂದಾಗಿ ಆತನ ಜೀವನದಲ್ಲಿ ಯಾವುದೂ ‘significant’ ಎಂದು ಅನ್ನಿಸದಿರುವುದನ್ನೇ ಇಲ್ಲಿ ಕಾದಂಬರಿ ಹೇಳುತ್ತದೆ ಎನ್ನುತ್ತಾರೆ. ಕಾದಂಬರಿ ಅದನ್ನು ಕುರಿತೇ ಇದೆ ಅನ್ನುವುದು ನಿಜ. ಆದರೆ ತನ್ನ ಪರಿಸರ, ಸಾಮಾಜಿಕ ವ್ಯವಸ್ಥೆ ಮತ್ತು ಜನರು ಇವೆಲ್ಲ ‘Non-significant’ ಅಥವಾ “Meaningless’ ಎಂದು ನಮಗೆ ಖಚಿತಮಾಡಿಕೊಡುವಷ್ಟು ತೀವ್ರವಾಗಿ ಮತ್ತು ಉತ್ಕಟವಾಗಿ “ಆತನ ವ್ಯಕ್ತಿತ್ವ ಮತ್ತು ಭಾವನೆಗಳು ಕಾದಂಬರಿಯಲ್ಲಿ ಬೆಳೆಯುವದಿಲ್ಲ. ಇಲ್ಲಿ ಪರಿಸರ ಮತ್ತು ಸಾಮಾಜಿಕವ್ಯವಸ್ಥೆ ಇವು ‘Non-significant’ ಅಥವಾ ‘Meaningless’ ಎಂದು ನಾವು ತಿಳಿಯುವುದಕ್ಕೆ ‘ಆತ’ ನಿಗೆ ಉದ್ಯೋಗ ದೊರೆಯದೇ ಹೋಗುವುದು ಮತ್ತು ಆಫೀಸುಗಳಲ್ಲಿನ ಕುರುಡು ಯಾಂತ್ರಿಕತೆ ಇವಿಷ್ಟೇ ನಮಗೆ ಆಧಾರವಾಗಿ ಸಿಗುತ್ತವೆ. ನಿರುದ್ಯೋಗಿಯಾದ ಯುವಕನೊಬ್ಬನಿಗೆ ನೌಕರಿ ಸಿಗುವವರೆಗೆ ಈ ಜಗತ್ತಿನಲ್ಲಿ ಎಲ್ಲವೂ ನಿರರ್ಥಕ, Non-significant’ ಅಥವಾ ‘Meaningless’ ಎಂಬ ತೀರ್ಮಾನ ತಾತ್ವಿಕವಾಗಿ ಹೊರಡುವುದಿಲ್ಲ. ಕಾದಂಬರಿಯ ‘ಆತ’ನ ಮಾತಿನಲ್ಲೇ ಹೇಳಬೇಕೆಂದರೆ: “…ಕೆಲವು ಸಾರಿ ನಾವು ಬಹಳ Philosophical ಅಂತ ನಮ್ಮನ್ನೇ: ನಾವು ನಂಬಿಸಿಕೊಳ್ಳಲು ಪ್ರಯತ್ನಿಸುವ ಸಮಸ್ಯೆಯ ಮೂಲ ಸುಮ್ಮನೆ ಖಾಲೀ ಜೇಬಾಗಿರುತ್ತೆ.”

ಹಾಗಾದರೆ ಈ ಕಾದಂಬರಿಯು, ನನ್ನ ಪ್ರಕಾರ, ‘Significant’ ಆಗಿ ಏನನ್ನೂ ಹೇಳುವುದಿಲ್ಲವೆ ಎಂದು ನೀವು ಕೇಳಬಹುದು. ಈ ಕಾದಂಬರಿಯನ್ನು ಕುರಿತು ನನ್ನ ತೀರ್ಮಾನ ಅಷ್ಟೇನು ಕನಿಷ್ಠಮಟ್ಟದ್ದಾಗಿಲ್ಲ. ಇಷ್ಟೊಂದು ಆಳವಾಗಿ ಮತ್ತು ಸೂಕ್ಷ್ಮವಾಗಿ ಇವು ನಾವು ವಿಮರ್ಶಿಸಬೇಕಾಗಿರುವ ಈ ಕಾದಂಬರಿ ಸಾಮಾನ್ಯ ಕಾದಂಬರಿ ಅಲ್ಲವೆಂಬುದು ಸ್ಪಷ್ಟ. ಕನ್ನಡದ ಇತ್ತೀಚಿನ ಅಸಾಮಾನ್ಯ ಕಾದಂಬರಿಗಳಲ್ಲೂಂದಾದ ಈ ಕಾದಂಬರಿಯಲ್ಲಿ ನಿಮಗೆ “Significant’ ಅನ್ನಿಸುವ ಅನೇಕ ವಿಷಯಗಳಿವೆ, ವಿಚಾರಗಳಿವೆ ಮತ್ತು ವಾಕ್ಯಗಳಿವೆ. ಈ ಕೃತಿಯಲ್ಲಿ ಲೇಖಕರ ಭಾಷೆ (ಇದು ಅಚ್ಚರಿಪಡಿಸುವಷ್ಟು ನೇರ ಮತ್ತು ವಸ್ತು ಪ್ರತಿರೂಪವಾಗಿದೆ), ಬೌದ್ಧಿಕತೆ ಮತ್ತು ವ್ಯಂಗ್ಯ ಇವು ನಾವು ತಲೆದೂಗುವಷ್ಟು ಪರಿಣಾಮಕಾರಿಯಾಗಿವೆ. ಕಾದಂಬರಿಯ ತಂತ್ರ-ವಿಧಾನ ಕಾಮೂ-ಕಾಫ್ಕಾರನ್ನು ವಿಶೇಷವಾಗಿ ನೆನಪಿಗೆ ತರುವಂತಿದೆ. ಭಾಷೆ ಮತ್ತು ವಿಧಾನಗಳು ಬಹುಮಟ್ಟಿಗೆ ವಸ್ತುನಿಷ್ಟವಾಗಿದ್ದರೂ ಒಂದೆರಡು ಕಡೆ (ಉದಾ : ಆತ ಮತ್ತು ಆಕೆ ಊರು ಬಿಟ್ಟೋಡುವದು) ಫ್ಯಾಂಟಸಿ (Fantacy) ಯ ಉಚಿತವಾದ ಬಳಕೆಯಾಗಿದೆ. ಆದರೆ ಪಾತ್ರಸೃಷ್ಟಿಯಲ್ಲಿ (‘ಆತ’ನ ಪಾತ್ರ ಸೇರಿ) ಮಾತ್ರ ಕಾದಂಬರಿ, ನಾನು ಈ ಮೊದಲು ವಿವರಿಸಿದಂತೆ, ಅಯಶಸ್ವಿಯಾಗಿದೆಯೆಂದೇ ಹೇಳಬೇಕು. ಕಥೆಯು ಗೌಣವಾಗಿರುವ ಕೃತಿಗಳಲ್ಲಿ ಪಾತ್ರ ಸೃಷ್ಟಿಗೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಬರುತ್ತದೆ. (ಇದನ್ನು ನಾವು ‘ಹಳದಿ ಮಿನು’ ಅಥವಾ `ಸ್ವರೂಪ’ ದಂಥ ಕಾದಂಬರಿಗಳಲ್ಲಿ ಕಾಣಬಹುದು.) ಆದರೆ ಈ ಕಾದಂಬರಿಯಲ್ಲಿ ಕಥೆ ಮತ್ತು ಪಾತ್ರ-ಸೃಷ್ಟಿ ಇವೆರಡೂ ಗೌಣವಾಗಿ ಬಿಟ್ಟಿವೆ. ಹೀಗಾಗಿ ಇಡೀ ಕಾದಂಬರಿ ಬರೀ ಒಂದು ಮನೋವೈಜ್ಞಾನಿಕ ವೇಧಶಾಲೆ (Psychological Observatory) ಯಾಗಿ ಪರಿಣಮಿಸಿದೆ.

Close

ಕಾಲ

ಕಾಲ

ಎಂ. ಪಿ. ಮನೋಹರಚಂದ್ರನ್

ಹೇಳಿದುದನೆಲ್ಲ ಮರೆತಿರಲಿಲ್ಲ.
ಮನೆಯ ಮುಂದೆ ಮಲ್ಲಿಗೆ ಬಳ್ಳಿ ಚಿಗುರಿದ ಸಮಯ
ಮೆಲ್ಲನೆ ಬಳಿ ಸಾರಿ, ಕೈಯೂರಿ
ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ದೆ ; ಮರೆತಿರಲಿಲ್ಲ.

ಮನೆಯ ಮುಂದೆ ಮಲ್ಲಿಗೆ ಚಪ್ಪರದ ನೆರಳಲ್ಲಿ ಮಲ್ಲಿಗೆ
ಭಾರದ ಮಗ ನಗೆಮಲ್ಲಿಗೆ ಹೂ ಚೆಲ್ಲುವಾಗ
ಲುಟ ಲುಟು ಮುದ್ದಿಸಿ ಹೇಳಿದ್ದೆ ; ಮರೆತಿರಲಿಲ್ಲ.

ಈಗ
ಮಲ್ಲಿಗೆ ಚಪ್ಪರವಿದ್ದಲ್ಲಿ ನಿಂತ ಉಪ್ಪರಿಗೆ ಗೃಹದ
ಪ್ರವೇಶದಂದು ಮಗ ಗೋಡೆಗೆ ಬೆರಳು ತೋರಿ
ಹೇಳುತ್ತಾನೆ, ಅಪ್ಪಗೆ ಅಣ್ಣ ಎನ್ನುವ ಮಗ;
‘ಅಣ್ಣ, ಅಲ್ಲಿ ಅಮ್ಮನ ಫೋಟೋ ಹಾಕಿದರೆ ಚೆನ್ನ’
ಹೌದು, ಕಾಲ ಕೂಡಿ ಬಂದಿತ್ತು. ಆದರೆ
ನೀನೇಕೆ ಕಾಯಬಾರದಿತ್ತು ?

Close

ಘಟನೆಗಳ ನಿಷ್ಠುರತೆ ಮತ್ತು ಮಾಡಿದ್ದುಣ್ಣೊ ಮಹಾರಾಯ

ಘಟನೆಗಳ ನಿಷ್ಠುರತೆ ಮತ್ತು ಮಾಡಿದ್ದುಣ್ಣೊ ಮಹಾರಾಯ

-ಕೆ. ವಿ. ನಾರಾಯಣ

ಕೃತಿ : ಮಾಡಿದ್ದುಣೋ ಮಹಾರಾಯ
ಕರ್ತೃ: ಎಂ. ಎಸ್. ಪುಟ್ಟಣ್ಣ
ಪ್ರಕಾರ: ಕಾದಂಬರಿ, ಸ್ವತಂತ್ರ
ಕಾಲ : ೧೯೧೫

ಕೃತಿಯ ಹೆಸರು ಅದರ ಒಂದು ಉದ್ದೇಶವನ್ನು ನೇರವಾಗಿ ಹೇಳುತ್ತದೆ. ಮಾಡಿದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಲೇಬೇಕೆನ್ನುವ ನಂಬಿಕೆ ತೀರಾ ಹಳೆಯದೇ. ತಪ್ಪುಗಳನ್ನು ಕಡಿಮೆ ಆಗಿಸುವ ಇರಾದೆಯಿಂದ ಈ ನಂಬಿಕೆ ಚಲಾವಣೆಗೆ ಬಂದಿರಬೇಕು. ಆದರೆ ಈ ಸೂತ್ರವನ್ನು ಮೀರಿದ ಉದಾಹರಣೆಗಳನ್ನು ಜನ್ಮದ ಆಚೆಗೆ ಎಳೆದು ತಾರ್ಕಿಕವಾಗಿ ‘ಕರ್ಮತತ್ತ್ವ’ಕ್ಕೆ ಸಿಕ್ಕಿಸಿ ಒಟ್ಟಾರೆ ಗೊಂದಲವೊಂದು ಸೃಷ್ಟಿಯಾಯಿತು. ಕಾದಂಬರಿ ಮೊದಲ ನೋಟಕ್ಕೆ ಇವೆಲ್ಲವನ್ನೂ ಒಪ್ಪವ ಧಾಟಿಯಲ್ಲೇ ಇದೆ. ಇಲ್ಲಿ ಹೆಸರಾಗಿರುವ ಗಾದೆ ಇನ್ನೊಂದು ಅರ್ಥವನ್ನು ಪಡೆಯಬಲ್ಲುದು, ಸಾಧ್ಯ (end) ಮತ್ತು ಸಾಧನ (means) ಗಳ ಸಂಬಂಧದಲ್ಲಿ ಸಾಧ್ಯಗಳಿಂದ ಸಾಧನಗಳ ಸ್ವರೂಪ ನಿರ್ಧಾರವಾಗುವುದೆಂಬುದು ಒಂದು ನಿಲುವು ; ಸಾಧನಗಳು ಸಾಧ್ಯಗಳ ಸ್ವರೂಪವನ್ನು ನಿರ್ಧರಿಸುತ್ತವೆ ಎಂಬುದು ಇನ್ನೊಂದು ನಿಲುವು. ಒಳ್ಳೆಯ ಸಾಧನಗಳ ಮತ್ತು ಕೆಟ್ಟ ಸಾಧ್ಯಗಳ ಸಂಬಂಧ ಇಲ್ಲ. ಈ ನಿಲುವು ಕಾದಂಬರಿಯದು : ತನ್ನ ಘಟನೆಗಳಿಂದ ಇದನ್ನು ಸಮರ್ಥಿಸುತ್ತದೆ. ಮಾರಮಣರಾಯನ ಭ್ರಷ್ಠ ನಡತೆಗಳು, ನಾರಪ್ಪಯ್ಯನ ಶಿಕ್ಷಣ ಕ್ರಮದ ಉಗ್ರತೆಗಳು. ಸಂಜವಾಡಿಯ ಕಳ್ಳರಹುತ್ತದ ಸಮಾಜ ವಿರೋಧಿ ಚಟುವಟಿಕೆಗಳು ಇವೆಲ್ಲವೂ ಶಿಕ್ಷೆಗೆ ಒಳಗಾಗುತ್ತವೆ. ಇದಕ್ಕೆ ವಿರೋಧವಾಗಿ ಸೀತೆಯ ನಿಷ್ಠಾವಂತ ಬದುಕು ಆಕೆಯನ್ನು ರಕ್ಷಿಸುತ್ತದೆ. ನೀತಿಕತೆಗಳ ರಚನೆಯಲ್ಲಿ ಕಾಣುವ ಈ ಸರಳಗ್ರಹಿಕೆ ಕಾದಂಬರಿಯ ಉದ್ದೇಶವಾಗಿರುವಂತೆ ಕಾದಂಬರಿಕಾರರ ಉದ್ದೇಶವೂ ಆಗಿದೆ. ಮುನ್ನುಡಿಯ ಈ ಮಾತುಗಳು:

“ಪುರಾಣಪ್ರಸಿದ್ಧರು ವ್ಯಾಕರಣದ ಸೂತ್ರಗಳಾಗಿದ್ದಾರೆ. ಮನುಷ್ಯ ಸಾಮಾನ್ಯರಲ್ಲಿ ಸಿಕ್ಕುವ ಧೀರರು ಉದಾಹರಣೆಗಳಾಗಿದಾರೆ”. ಈ ಹೋಲಿಕೆ ಸೂತ್ರಗಳಿಂದ ಉದಾಹರಣೆ ಎನ್ನುವ ಆನುಪೂರ್ವಿಯನ್ನೂ ನಂಬಿದೆ. ಈ ನಿಗಮನ (Deductive) ಪದ್ದತಿಯ ಗ್ರಹಿಕೆ ಕಾದಂಬರಿಕಾರರ ದೃಷ್ಟಿಯನ್ನು ನಿರ್ದಿಷ್ಟಗೊಳಿಸಿರುವಂತೆ ಸೀಮಿತವನ್ನಾಗಿಸಿದೆ. (ಹರು ಮತ್ತೆ ಅವರ ಈ ಹೇಳಿಕೆಯನ್ನು ಸಮರ್ಥಿಸುತ್ತದೆ.) ಆಸೀಮಿತ ಬದುಕಿನ ಅಂತರಂಗ-ಬಹಿರಂಗಗಳನ್ನು ಸೂತ್ರಕ್ಕೆ ಅಳವಡಿಸಿ ನೋಡಬಹುದೆನ್ನುವುದು ವಸ್ತುವಿನ ಆಯ್ಕೆಯನ್ನು ನಿರ್ಧರಿಸುವುದರ ಜತೆಗೆ ಕಾದಂಬರಿಯ ವಿಶ್ಲೇಷಣೆಗೂ ಒಂದು ದಾರಿಯನ್ನು ಸೂಚಿಸುತ್ತದೆ.

ತಮ್ಮ ಹಿಂದಿನ ಸಾಹಿತ್ಯ ಪರಂಪರೆಗೆ ಪರಿಚಿತವಲ್ಲದ ಪ್ರಕಾರವಾದ ಕಾದಂಬರಿ ಮೊದಲ ಹಂತದಲ್ಲಿ ಜಗದ ದೃಷ್ಟಿಯಿಂದ ಮಹತ್ತರವಾದ ಬದಲಾವಣೆಗಳನ್ನು ಮೈಗೂಡಿಸಿಕೊಳ್ಳಲಿಲ್ಲವೆನ್ನುವದಕ್ಕೆ ಈ ಕೃತಿಯ ಉದ್ದೇಶವೂ ನಿದರ್ಶನ. ಇದು ಸಹಜ. ಸಾಮಾಜಿಕವಾಗಿ ಬೆಲೆಯುಳ್ಳ ನೀತಿಸಂಹಿತೆಯನ್ನು ತನ್ನ ಓದುಗರಿಗೆ ಅನ್ಯೋಕ್ತಿಯಿಂದ ಹೇಳುವುದು ಅದುವರೆಗಿನ ಸಾಹಿತ್ಯದ (ಬಹುಮಟ್ಟಿಗೆ ಸಾಹಿತ್ಯದ) ಮೂಲ ಉದ್ದೇಶವಾಗಿದ್ದಂತೆ ಮೊದಮೊದಲ ಕಾದಂಬರಿಗಳ ಉದ್ದೇಶವೂ ಆಗಿತ್ತು. ಇದಿಷ್ಟೇ ಆಗಿದ್ದರೆ ಈ ಕೃತಿಯನ್ನು ಚಾರಿತ್ರಿಕವಲ್ಲದ ಕಾರಣಗಳಿಗಾಗಿ ವಿಶ್ಲೇಷಿಸುವುದು ಅನವಶ್ಯಕವಾಗಿತ್ತು. ಆದರೆ ಕೃತಿಯು ಘಟನೆಗಳು ಮತ್ತು ಅವುಗಳ ಸಂಬಂಧ ಇನ್ನಷ್ಟು ಮಹತ್ವದ ಸಂಗತಿಗಳನ್ನು ಹೊರಚೆಲ್ಲುತ್ತವೆ.

–ಕಾದಂಬರಿಯ ವಸ್ತುವನ್ನು ಮುನ್ನುಡಿಯಲ್ಲಿ ಕಾದಂಬರಿಕಾರರು ಹೇಳಿದ್ದಾರೆ. “ಲಂಚಕೋರರು ಆವರಿಂದ ಉಂಟಾಗುವ ಪ್ರಮಾದಗಳು : ಗ್ರಾಮಗಳಲ್ಲಿ ಕಕ್ಷಿ ಅದರ ದೋಷಗಳು: ಮೈಸೂರ ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನ ಅವರ ಮಹತ್ತರವಾದ ಔದಾರ‍್ಯ: ಆಸ್ಥಾನದ ನಕಲಿ: ಹೇಳಿದ್ದನ್ನೆಲ್ಲಾ ನಂಬುವ ಗ್ರಾಮವಾಸಿಗಳು. ಪತಿವ್ರತಾ ಚರಿತ್ರೆ : ಸಹಗಮನ : ಗ್ರಾಮಗಳ ಕೊಳಚೆ ; ಅತ್ತೆ ಸೊಸೆಯರ ಕಿರುಕುಳ: ಮಠದ ಉಪಾಧ್ಯಾಯ, ಅವನ ಕ್ರೌರ‍್ಯ. ಬಾಲಕರಿಗೆ ಅವನು ಕೊಡುವ ಶಿಕ್ಷೆ. ಅದರ ಧರ್ಮಸೂಕ್ಷ್ಮ: ಕಾಪಟ್ಯ, ಅದರ ನೀಚಕೃತ್ಯಗಳು: ನಿಜವಾದ ಸೌಂದರ‍್ಯವನ್ನು ಸೌಂದಯ್ಯವಲ್ಲವೆಂದು ಮಾಡುವ ವರ್ಣನೆ ; ಪಾತಿವ್ರತ್ಯವನ್ನು ಭಂಗಪಡಿಸಲು ನಡೆಸಿದ ಅತಿ ಹೇಯವಾದ ಪ್ರಯತ್ನ; ಶಾಬರ ಪ್ರಯೋಗದ ನೀಚಕೃತ್ಯ : ಒಬ್ಬ ಐಲುಮನುಷ್ಯನ ಹರಟೆಯಿಂದ ಹುಟ್ಟುವ ಹಾಸ್ಯ ; ಒಬ್ಬ ಹುಟ್ಟುಕಳ್ಳ ಹೇಳಿಕೊಳ್ಳುವ ಸ್ವವಿಚಾರದ ಕತೆ: ಶ್ಮಶಾನದಲ್ಲಿ ನಡೆದ ಅತಿಭಯಂಕರ ಘಟನೆ. ಒಬ್ಬ ಮಹಾಮಂತ್ರವಾದಿ ಮಾಡಿದ ಅದ್ಭುತವಾದ ಕಾರ‍್ಯ, ಅವನ ಪಾರಮಾರ್ಥಿಕತೆ.” ಹೀಗೆ ಹರಡಿರುವ ವಸ್ತು ಕಾದಂಬರಿಯಲ್ಲಿ ಒಂದು ಕೇಂದ್ರಾಗಮಶಕ್ತಿಗೆ ಒಳಗಾಗಿಲ್ಲವೆನ್ನುವುದು ಇತ್ಯಾತ್ಮಕವಾದ ನಿಲುವು ಮಾತ್ರ. ತೆಳುವಾದ ಕತೆಯ ಹಂದರವೊಂದು ಇದ್ದಂತಿದೆ. ಸಂಜವಾಡಿಯ ಸದಾಶಿವ ದೀಕ್ಷಿತನ ಸಂಸಾರದ ಕತೆಯನ್ನು ಗಮನದಲ್ಲಿಟ್ಟಂತೆ ಭಾಸವಾದರೂ ಕೊನೆಗೆ ಸಂಜವಾಡಿಯ ದುರಂತವೇ ಮುಖ್ಯವಾಗಿ ಬಿಡುತ್ತದೆ. ಪುಟ್ಟಣ್ಣನವೇ ಇನ್ನೊಂದು ಕಾದಂಬರಿ ‘ಮುಸುಕು ತೆಗೆಯೇ ಮಾಯಾಂಗನೆ” ಯಲ್ಲಿ ಒಂದು ಕೇಂದ್ರಕತೆಯಿದ್ದು ಎಲ್ಲ ವಿವರಗಳೂ ಪೂರಕವಾಗಿ ಕೆಲಸ ಮಾಡುತ್ತವೆ. ಆದರೆ ಇಲ್ಲಿ ಘಟನೆಗಳೆಲ್ಲಾ ಹಲವು ಚಿಟ್ಟೆ ಕತೆಗಳಂತೆ (Anecdotes) ಇವೆ. ಕಾಲದ ಏಕತೆಯೂ ಭಂಗವಾದಂತೆ ತೋರುವುದರಿಂದ ಓಟವೂ ನಿಯಂತ್ರಿತವಾದಂತಿಲ್ಲ. ಅರುಂದಮ್ಮನ ಸಹಗಮನ, ಅವಳ ಪಾತಿವ್ರತ್ಯದ ಮಹಾತ್ಮೆ, ಅಮಾಸೆಯ ಇತಿವೃತ್ತ ಇವೆಲ್ಲಾ ಇದಕ್ಕೆ ಉದಾಹರಣೆಗಳು. “ಅಸಂಬದ್ಧವೆಂದು ತೋರುವ ಸಂದರ್ಭಗಳೆಲ್ಲಾ ಮುಖ್ಯವಾಗಿ ಕಥೆಯ ಅಂಗಗಳೇ ಆಗಿವೆ’ ಎನ್ನುವ ಮಾತಿನಿಂದ ಕಾದಂಬರಿಕಾರರಿಗೂ ತಮ್ಮ ಕಾದಂಬರಿಯ ಹಲವು ಘಟನೆಗಳ ಔಚಿತ್ಯದ ಬಗೆಗೆ ಸಂಶಯವಿರುವುದು ತಿಳಿಯುತ್ತದೆ. ‘ಕಥೆಯೊಳಗೆ ಕತೆ ಹೇಳುವ’ ಸಂಪ್ರದಾಯಕ್ಕೆ ಅನುಗುಣವಾಗಿ ಈ ಕೃತಿಯ ರಚನೆ ಆಗಿರುವುದರಿಂದ ಎಲ್ಲ ಘಟನೆಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿದೆ.

ಮಾರಮಣರಾಯನ ಆಡಳಿತ ಅವ್ಯವಸ್ಥೆಯ ನಿರೂಪಣೆಯಿಂದ ಕಾದಂಬರಿ ಪ್ರಾರಂಭವಾಗುತ್ತದೆ. ಇದರಿಂದ ಕೃತಿಯ ನೆಲೆಯನ್ನು ಸಿದ್ಧಗೊಳಿಸಲಾಗಿದೆ. ಮುಂದುವರೆದಂತೆ ನಿರೂಪಣೆ ಹರಿಕತೆಯ ಧಾಟಿಯಲ್ಲಿ ಸಾಗುತ್ತದೆ. ಇಲ್ಲಿ ಹರಿಕತೆ ಎನ್ನುವಾಗ ಆ ಶಬ್ದಕ್ಕೆ ಇರುವ ಕೀಳು ಅರ್ಥ (Derogetory) ನನ್ನ ವಿವಕ್ಷೆಯಲ್ಲಿಲ್ಲ. ಒಂದು ಕತೆಯನ್ನು ಹೇಳುತ್ತಾ ಹೋಗುವಾಗ ವ್ಯಕ್ತಿಗಳ ನಡುವೆ ಸಂಭಾಷಣೆ ಬಂದಾಗ ಕ್ಷಿಪ್ರಗತಿಯ ನಿರೂಪಣೆಯಲ್ಲಿ ಘಟನೆಗಳು ಜರುಗುವಾಗ ಮಂದಗತಿಯೂ ಸಹಜ. ಇಲ್ಲೂ ಹಾಹೇ ಆಗುತ್ತದೆ. ಅಲ್ಲಲ್ಲಿ ಕಾದಂಬರಿಕಾರರು ಹರಿಕತೆಯಂತೆ-ತಮ್ಮ ವಿವರಣೆಯನ್ನು ಕೊಡುತ್ತಾರೆ. ವಸ್ತುವನ್ನು ಘಟನೆಗಳ ಆನುಪೂರ್ವಿಯಿಂದ ನಿರ್ವಹಿಸುವ ಶಕ್ತಿ ಕಾದಂಬರಿಕಾರರಿಗೆ ಇದ್ದರೂ ಈ ರೂಪವನ್ನು ಕಾದಂಬರಿಗೆ ನೀಡಿರುವುದನ್ನು ನೋಡಿದರೆ ಒಂದು ಮಾತು ಸ್ಪಷ್ಟವಾಗುತ್ತದೆ. ರೂಪ (Form) ದ ದೃಷ್ಟಿಯಿಂದ ಇನ್ನೂ ಕಾದಂಬರಿಗೆ ಸಂಪ್ರದಾಯದ ಸಾಹಿತ್ಯದಿಂದ ಬೇರೆಯಾಗಲು ಸಾಧ್ಯವಾಗಿರಲಿಲ್ಲ ಮತ್ತು ಈ ಪ್ರಕಾರದ ತಾಂತ್ರಿಕ-ಮುಖ್ಯವಾಗಿ ನಿರೂಪಣೆ – ಸಾಧ್ಯತೆಗಳ ಸಂಪೂರ್ಣ ಆವಿಷ್ಕಾರಕ್ಕೆ ತಕ್ಕ ಹಿನ್ನೆಲೆ ಸಾಹಿತ್ಯಕವಾಗಿ ಇನ್ನೂ ಸಿದ್ಧವಾಗಿರಲಿಲ್ಲ.

-ಸಂಜವಾಡಿ ಮೈಸೂರು ಆಸ್ಥಾನಕ್ಕೆ ಸೇರಿದ ಗ್ರಾಮ. ರಾಜಾಡಳಿತ ಪದ್ಧತಿಯಂತೆ ಲೌಕಿಕನ್ಯಾಯದ ಅನುದಾನಕೇಂದ್ರ ಆಸ್ಥಾನ. ಈ ಆಸ್ಥಾನದ ಕೃಪೆಗೆ ಪಾತ್ರನಾದ ಸದಾಶಿವ ದೀಕ್ಷಿತನ ಸಂಸಾರದ ಕತೆ ಕಾದಂಬರಿಯ ಬಹುಪಾಲನ್ನು ಪಡೆದಿದೆ. ದೀಕ್ಷಿತನ ಮಾವನ ಮನೆಯು ಅರಾಜಕವಾಗದಂತೆ ನೋಡಿಕೊಳ್ಳಲು ಆಸ್ಥಾನದ ಆದೇಶದಂತೆ ಸಂಜವಾಡಿಗೆ ಬಂದು ನೆಲಸಿದವನು. ಅವನು, ಅವನ ತಾಯಿ, ಅವನ ಹೆಂಡತಿ, ಮಗು ಮಗಳು, ಸೊಸೆ, ಮೊಮ್ಮಗ ಮತ್ತು ಅವನ ಭಾವಮೈದುನ ಇವಿಷ್ಟು ಜನರು ಸಂಸಾರದ ಘಟಕಗಳು, ಮನೆಯ ಸೊಸೆ ಸೀತೆ ಮತ್ತು ಅತ್ತೆ ತಿಮ್ಮಮ್ಮ ಇವರ ನಡುವೆ ಏಕಪಕ್ಷೀಯ ಕದನದ ವಾತಾವರಣ ಏರ್ಪಡುತ್ತದೆ. ಹಿಂದೂ ಕುಟುಂಬಕ್ಕೆ ಸಹಜವಾದ ರೀತಿಯಲ್ಲಿ ಅತ್ತೆ ತನ್ನ ಸೊಸೆಯ ಮೇಲೆ ದಬ್ಬಾಳಿಕೆ ನಡೆಸುತ್ತಾಳೆ. ಅಧಿಕಾರ ಮತ್ತು ಸ್ವಂತಿಕೆಯ ಗುರುತಿಗಾಗಿ ಅತ್ತೆ, ಹೀಗೆ ಮಾಡುವಳೆಂಬುದು ಇದಕ್ಕೆ ಒಂದು ವಿವರಣೆ. ತಿಮ್ಮಮ್ಮ ತನ್ನ ಸೊಸೆಗೆ ಕೊಡುತ್ತಿದ್ದ ಕಷ್ಟಗಳನ್ನು ನಿರೂಪಿಸಿ ಓದುಗರಲ್ಲಿ ಅವಳ ಬಗ್ಗೆ ಕ್ರೋಧ ವನ್ನೂ ಮತ್ತು ಸೊಸೆಯ ಬಗ್ಗೆ ಅನುಕಂಪವನ್ನೂ ಮೂಡಿಸಬೇಕೆಂದು ಮಾತ್ರ ಆಲೋಚಿಸುವ ಕಾದಂಬರಿ ದ್ವಿತೀಯ ದರ್ಜೆಯದಾಗುತ್ತದೆ. ಆದರೆ ಇಲ್ಲಿ ಅದು ಮುಖ್ಯವಾಗುವುದಿಲ್ಲ. ಈ ಗೃಹಚ್ಚಿದ್ರದಿಂದ ಉಂಟಾದ ಆಶಾಂತಿಯನ್ನು ಕಡಿಮೆ ಮಾಡುವಲ್ಲಿ ಮತ್ತು ನ್ಯಾಯವನ್ನು ಗುರುತಿಸುವಲ್ಲಿ ದೀಕ್ಷಿತನು ಸೋಲುತ್ತಾನೆ. ಈ ಸೋಲು ಸಾಂಕೇತಿಕವಾಗಿದೆ.

ಈ ಸೋಲು ಕಾದಂಬರಿಯ ಪ್ರಬಲವಾದ ಧ್ವನಿಯಾಗಿ ನಿಲ್ಲುತ್ತದೆ. ಮಹಾದೇವ ಮತ್ತು ಸೀತೆ ಇವರಿಬ್ಬರ ಮದುವೆಗೆ ಆಸ್ಥಾನದ ಆಶೀರ್ವಾದದ ಜತೆಗೆ ಖುದ್ದು ಸವಾರಿಯೇ ಚಿತ್ತೈಸಿ ಆಶೀರ್ವದಿಸಿದೆ.

ಈ ಮದುವೆಯ ಸುಗಮತೆಯನ್ನು ಕಾಯ್ದು ಕೊಳ್ಳುವಲ್ಲಿ ಮಹಾದೇವ, ದೀಕ್ಷಿತ ಇಬ್ಬರೂ ಸಫಲರಾಗುವುದಿಲ್ಲ. ನಿಧಾನವಾಗಿ ಈ ಸೋಲು-ಆಸ್ಥಾನದ ಸೋಲು – ದೊಡ್ಡದಾಗುತ್ತದೆ. ದೀಕ್ಷಿತರ ಸಂಸಾರದ ಈ ವಸ್ತುಸ್ಥಿತಿ ಇಡೀ ಹಳ್ಳಿಯ ಸ್ಥಿತಿಯನ್ನೂ ಪ್ರತಿನಿಧಿಸುತ್ತದೆ.

ಸೀತೆಯ ಮೇಲೆ ನಡೆಯುವ ದಬ್ಬಾಳಿಕೆ ಮತ್ತು ಅದಕ್ಕೆ ಅವಳು ವ್ಯಕ್ತಪಡಿಸುವ ಅಸಹನೀಯ ಮೌನ ಇವುಗಳನ್ನು ಪಾರಂಪರಿಕ ಸೌಶೀಲ್ಯ, ಸೌಜನ್ಯಗಳ ಮೇಲೆ ನಡೆದ ದಬ್ಬಾಳಿಕೆ ಮತ್ತು ಮೌನದ ದುರುಪಯೋಗವೆಂದು ಭಾವಿಸಿದರೆ ಕಾದಂಬರಿಕಾರರ ದೃಷ್ಟಿಯಲ್ಲಿ ಇದು ‘ಪಾಪ’ವಾಗಿರಬೇಕು. ಇದನ್ನು ನಿರ್ಣಯಿಸಿ ಶಿಕ್ಷಿಸುವ ಪರಮಾಧಿಕಾರ ಆಸ್ಥಾನಕ್ಕೆ ಇರುತ್ತದೆ ಎಂಬುದು ಕಾದಂಬರಿಯ ನಿಲುವು. ಕೃತಿಯ ಈ ಸಾಮಾಜಿಕ ದೃಷ್ಟಿಕೋನದಿಂದಾಗಿ ಘಟನೆಗಳ ಸಂಬಂಧ ವಿನ್ಯಾಸಗೊಳ್ಳುವ ಕ್ರಮವನ್ನು ಗಮನಿಸಿ.

ಮಾರಮಣರಾಯನ ಭ್ರಷ್ಠ ಆಡಳಿತಕ್ಕೆ, ಕಳ್ಳರ ಹುತ್ತಕ್ಕೆ ಶಿಕ್ಷೆ ಕೊಡುವ ಕ್ರಿಯೆ ಕಾದಂಬರಿಯ ಕೊನೆಗೆ ಜರುಗುತ್ತದೆ. ನಿಜವಾಗಿ ಇವೆರಡೂ ದುಷ್ಟ ಶಕ್ತಿಗಳಲ್ಲಿ ಒಂದು ಆಸ್ಥಾನವನ್ನು ಆಶ್ರಯಿಸಿದ್ದರೆ ಇನ್ನೊಂದು ಧಾರ್ಮಿಕ ಸಂಸ್ಥೆ (ದೇವಾಲಯ) ಯನ್ನು ಆಶ್ರಯಿಸಿರುತ್ತದೆ. ಮಾರಮಣರಾಯ ಜನರ ಮಾತ್ತು ಆಸ್ಥಾನದ ನಡುವಣ ಪ್ರತಿನಿಧಿಯಾಗಿದ್ದು ಜನರಿಂದ ಹಣವನ್ನು ಸೆಳೆದರೂ ಆಸ್ಥಾನದ ಕೃಪೆಗೆ ಪಾತ್ರನಾಗಿರುತ್ತಾನೆ. ಒಂದರ್ಥದಲ್ಲಿ ಆಸ್ಥಾನಕ್ಕೆ ತನ್ನ ಬೆನ್ನುಬಿದ್ದ ದೋಷದ ಅರಿವು ಇಲ್ಲದೆ ಅದನ್ನು ರಕ್ಷಿಸುತ್ತಿರುತ್ತಿದೆ. ಸಂಜವಾಡಿಯ ಕಳ್ಳರ ಹುತ್ತಕ್ಕೆ ದೇವಸ್ಥಾನದ ರಕ್ಷೆಯಿದೆ. ಈ ಕಳ್ಳರ ನಾಯಕ ದೇವಸ್ಥಾನದ ಅರ್ಚಕನಾಗಿರುತ್ತಾನೆ. ಇವನೂ ಸಂಜವಾಡಿಗೆ ಹೊಸಬ, ಪಾಳು ಬಿದ್ದಿದ್ದ ದೇವಸ್ಥಾನದಲ್ಲಿ ಬಂದು ನೆಲಸಿ ನಿಧಾನವಾಗಿ ಅಲ್ಲಿ ಬೇರೂರುತ್ತಾನೆ. ಕಳ್ಳರ ಗುಂಪಿನ ನಾಯಕನಾಗುತ್ತಾನೆ. ಸನ್ಯಾಸಿಯ ವೇಷ ಅವನನ್ನು ರಕ್ಷಿಸುತ್ತದೆ. ಅಥವಾ ಆಸ್ಥಾನ ಸತ್ಯ ಮತ್ತು ಸೋಗುಗಳನ್ನು ನಿಷ್ಕರ್ಷೆ ಮಾಡುವಲ್ಲಿ ಸೋಲುತ್ತದೆ. ಇವರಿಬ್ಬರಿಗೂ ಕೊನೆಗೆ ಶಿಕ್ಷೆ ಆದರೂ ಇವರನ್ನು ಗುರುತಿಸಲು ಆಸ್ಥಾನಕ್ಕೆ ಸಾಧ್ಯವಾದದ್ದು ಈ ಕಳ್ಳರ ಹುತ್ತದಲ್ಲೇ ಇದ್ದ ವ್ಯಕ್ತಿಯೊಬ್ಬನಿಂದ ಎನ್ನುವುದು ಆಸ್ಥಾನದ ಮಿತಿಗಳನ್ನು ಸೂಚಿಸುತ್ತದೆ.

ಸಂಜವಾಡಿಯ ಕಳ್ಳರಿಗೆ ದೇವಸ್ಥಾನವೊಂದು ರಕ್ಷೆಯಾಗಿದೆ ಮತ್ತು ಅದು ಊರ್ಜಿತಗೊಂಡ ಗ್ರಾಮ ದೇವತೆಯ ಗುಡಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಸಾಂಸ್ಕೃತಿಕ ಚಟುವಟಿಕೆಗಳ ಅಂಗವಾಗಿ ಹೊಸ ದೇವಸ್ಥಾನಗಳನ್ನು ಕಟ್ಟಿಸುತ್ತಿದ್ದ ಮತ್ತು ಹಳೆಯ ದೇವಸ್ಥಾನಗಳನ್ನು ರಿಪೇರಿ ಮಾಡಿಸುತ್ತಿದ್ದ ವಿವರಗಳು (3 ನೇ ಅಧ್ಯಾಯ ಪುಟ 26-30 : 1967) ಅರ್ಥಪೂರ್ಣವಾಗುತ್ತವೆ. ಈ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ಸ್ವತಃ ರಾಜನೇ ನೋಡಿಕೊಳ್ಳುತ್ತಿದ್ದನಂತೆ. ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಕಾದಂಬರಿ ಕೊಡುವ ವಿವರಗಳು ತಮ್ಮಲ್ಲೇ ರಚಿಸಿಕೊಳ್ಳುವ ಈ ವೈದೃಶ್ಯ ಗಮನಾರ್ಹ. ಈ ಮೇಲ್ವಿಚಾರಣೆ ನಡೆಸಿ ಅರಮನೆಗೆ ಹಿಂತಿರುಗುತ್ತಿದ್ದಾಗ ಒಮ್ಮೆ ಗಾಡಿಯ ಕಡಾಣಿ ಕಳಚಿ ಚಕ್ರ ಉರುಳುತ್ತಿದ್ದ ಅಪಾಯದಿಂದ ರಾಜ ಪಾರಾದ ಘಟನೆಯೊಂದು ಕಾದಂಬರಿಯಲ್ಲಿದೆ. ಕೊನೆಗೆ ನಾವು ತಲುಪುವ ನಿರ್ಣಯದಿಂದ ಈ ಘಟನೆಯೂ ಅರ್ಥ ಪಡೆಯುತ್ತದೆ. ಏಕೆಂದರೆ ರಾಜನನ್ನು ರಕ್ಷಿಸಿದವನು ಗಾಡಿ ಹೊಡೆಯುತ್ತಿದ್ದ ಸೇವಕ. ಈತನೂ ಹೊರಗಿನವನು, ಹೆಸರು ರ್ಬ್ರೌ.

ಶಿಕ್ಷೆಗೆ ಶಿಕ್ಷೆ ಇದೆ ಎಂದು ಕಾದಂಬರಿ ಹೇಳಿದ್ದನ್ನು ಒಪ್ಪಿಕೊಂಡರೆ ತಪ್ಪು ಸರಿಗಳನ್ನು, ಪಾಪ ಪುಣ್ಯಗಳನ್ನು ನಿರ್ಣಯಿಸುವ ಕೇಂದ್ರದ ನಿಷ್ಕ್ರಿಯತೆ ಅಥವಾ ಸೋಲನ್ನು ಕಾದಂಬರಿಯ ಘಟನೆಗಳು ಹೇಳುತ್ತವೆ. ಆದ್ದರಿಂದ ತಪ್ಪಿಗೆ ಶಿಕ್ಷೆ ಎನ್ನುವ ಸೂತ್ರವೇ ಅರ್ಥಹೀನವಾಗಿ ಬಿಡುತ್ತದೆ. ಇದಿಷ್ಟಕ್ಕೆ ಕಾದಂಬರಿಯ ಬೆಳವಣಿಗೆ ನಿಲ್ಲುವುದಿಲ್ಲ. ಲೌಕಿಕ ಶಕ್ತಿಯನ್ನು ಮೀರುವ ಅಲೌಕಿಕ ಶಕ್ತಿಯನ್ನು ನಿರ್ಣಯದ ಕೇಂದ್ರವನ್ನಾಗಿ ಕಾದಂಬರಿ ಸ್ವೀಕರಿಸುತ್ತದೆ. ದೇವಸ್ಥಾನದ ಗುರು ಅಪ್ಪಾಜಿ ದೀಕ್ಷಿತನ ಸೊಸೆಯನ್ನು ವಶಪಡಿಸಿಕೊಳ್ಳಲು ವಾಮಾಚಾರವನ್ನು ಆಶ್ರಯಿಸುತ್ತಾನೆ. ಅದರಿಂದಾಗಿ ಆಕೆ ಸಾಯುತ್ತಾಳೆ. ವಾಮಾಚಾರಕ್ಕೆ ಸಿಕ್ಕಿ ಆಕೆ ನರಳುವಾಗ ದೀಕ್ಷಿತ ಆಸ್ಥಾನದಲ್ಲಿರುತ್ತಾನೆ. ಅಲ್ಲಿದ್ದ ಒಬ್ಬ ವಾಮಾಚಾರ ನಿಪುಣನೊಬ್ಬನನ್ನು ಸೀತೆಯನ್ನು ರಕ್ಷಿಸಲು ರಾಜ ಕಳುಹಿಸಲು ಒಪ್ಪುತ್ತಾನೆ. ಆದರೆ ಆತ ಬರುವುದೇ ಇಲ್ಲ. ಸೀತೆಯನ್ನು ಸುಟ್ಟುಬಿಡುತ್ತಾರೆ. ಆ ರಾತ್ರಿ ಸಂಜವಾಡಿಯ ಮೂಲಕ ಹೋಗುತ್ತಿದ್ದ ಭಟಜಿ ಮತ್ತು ಗಿರಿಯಂಣ ಎಂಬುವವರು ಆಕೆಯನ್ನು ಮತ್ತೆ ಬದುಕಿಸುತ್ತಾರೆ. ಅಪ್ಪಾಜಿಗೆ ಶಿಕ್ಷೆಯಾಗುತ್ತದೆ. ಇದರ ಸತ್ಯಾಸತ್ಯತೆ ದೂರವಿರಲಿ. ಪರಕೀಯರಾದ ಭಟಜಿ ಮತ್ತು ಗಿರಿಯಂಣ ಇವರು ಸಂಜವಾಡಿಯ ಸೀತೆಯನ್ನು ಉಳಿಸಬೇಕಾಗಿ ಬಂದುದು ಮತ್ತು ಅದಕ್ಕಾಗಿ ಅವರು ಬಳಸಿದ್ದು ಲೌಕಿಕವಲ್ಲದ ಶಕ್ತಿಯನ್ನು ಎಂಬುದು ಆಸ್ಥಾನದ ಸೋಲನ್ನು ಎತ್ತಿಹಿಡಿಯುತ್ತದೆ. ಅಲ್ಲದೆ ಹಲವಾರು ವಾಮಾಚಾರಿಗಳನ್ನು ಸೋಲಿಸಿ ಆಸ್ಥಾನದ ಆಶ್ರಯದಲ್ಲೆ ಇದ್ದ ಅಲೌಕಿಕ ಶಕ್ತಿಯೊಂದು ಸೀತೆಯ ವಿಷಯದಲ್ಲಿ ನಿಷ್ಕ್ರಿಯವಾಗುತ್ತದೆ.

ಸೀತೆಯ ಬಗೆಗೆ ನಡೆದ ಈ ವಿಚಾರವನ್ನು ಕೇಳಿದ ಆಸ್ಥಾನ ಭಟಜಿ ಮತ್ತು ಗಿರಿಯಂಣ ಇವರಿಬ್ಬರನ್ನೂ ಆಸ್ಥಾನದಲ್ಲಿ ಬಂದಿರಲು, ಸನ್ಮಾನಗೊಳ್ಳಲು ಆಹ್ವಾನ ನೀಡಿದರೂ, ಅವರು ಬದ್ಧರಾಗದೇ ಬದಂತೆ ಹೊರಟು ಹೋಗುತ್ತಾರೆ. ಈ ಘಟನೆ ಕಾದಂಬರಿಯ ಕೊನೆಯಲ್ಲಿದೆ. ಆಮೇಲೆ ಸಂಜವಾಡಿ ಹಾಳುಬಿದ್ದದ್ದು ತಿಳಿಯುತ್ತದೆ. ಸರಿತಪ್ಪುಗಳ ನಿಷ್ಕರ್ಷೆ ಮಾಡಿ ತಪ್ಪನ್ನು ಶಿಕ್ಷಿಸುವ ಕೆಲಸದಲ್ಲಿ ಚ್ಯುತಗೊಂಡ ಆಸ್ಥಾನ, ಆ ಕೆಲಸವನ್ನು ಮಾಡಿದ ಮತ್ತೊಂದು ಕೇಂದ್ರವನ್ನು ಪರಸ್ಕರಿಸಿದರೂ, ಕೊನೆಯಪಕ್ಷ ಅದನ್ನು ತನ್ನೊಳಗೆ ಅಳವಡಿಸಿಕೊಳ್ಳಲಾರದೇ ಹೋಗುವುದು ಅದರ ಸೋಲಿನ ಪರಮಾವಧಿ. ಸಾಮಾಜಿಕ ವಸ್ತುಸ್ಥಿತಿಯನ್ನು ಕಾದಂಬರಿಯ ಘಟನೆಗಳು ತಮ್ಮಲ್ಲಿ ಹಿಡಿದಿಡುವ ಈ ಬಗೆ ಸೋಜಿಗ ತರುತ್ತದೆ.

ಸದಾಶಿವ ದೀಕ್ಷಿತ, ಉಪಾಧ್ಯಾಯ ಮತ್ತು ದೇವಸ್ಥಾನದ ಅಪ್ಪಾಜಿ ಇವರು ಮೂವರೂ ಸಂಜವಾಡಿಗೆ ಹೊರಗಿನವರು. ದೀಕ್ಷಿತ ಆಸ್ಥಾನಕ್ಕೆ ಪರಿಚಿತ. ತನ್ನ ಕೆಲಸದಲ್ಲಿ ಆತ ನಿಷ್ಕ್ರಿಯ. ಸಂಸಾರವನ್ನು ತಹಬಂದಿಗೆ ತರುವುದರಲ್ಲಿ ಆತ ವಿಫಲ. ಅವನ ಭಾವಮೈದುನನೇ ತನ್ನ ಹುಚ್ಚು ಹರಟೆಯಿಂದ ಅಪ್ಪಾಜಿಗೆ ಸಹಾಯಕನಾಗುತ್ತಾನೆ. ಉಪಾಧ್ಯಾಯನ ಶಿಕ್ಷಣಪದ್ಧತಿ ಮತ್ತು ಅದಕ್ಕಾಗಿ ಅವನು ಪಟ್ಟ ಪಾಡು ವಿವರವಾಗಿ ಬಂದಿದೆ. ಆತ ದೀಕ್ಷಿತನಲ್ಲಿ ಆಶ್ರಯ ಪಡೆಯುತ್ತಾನೆ. ಅವನಿಗೂ ದೀಕ್ಷಿತನಿಗೂ ಶಿಕ್ಷಣದ ವಿಚಾರದಲ್ಲಿ ದೀರ್ಘ ಚರ್ಚೆ ನಡೆಯುತ್ತದೆ. ದೀಕ್ಷಿತನ ಮನೆಯಲ್ಲೇ ಉಳಿದು ಆಪಾಧ್ಯಾಯ ಅಪ್ಪಾಜಿಗೆ ನೆರವಾಗುತ್ತಾನೆ. ಇದೂ ದೀಕ್ಷಿತನ ಸೋಲು. ಅಲ್ಲದೆ ತಾನು ಒಪ್ಪಿದ ಶಿಕ್ಷಣಕ್ರಮವನ್ನು ಮಗನಿಗೆ ನೀಡುತ್ತಾನೆ. ಆದರೆ ಮಹಾದೇವನೂ ಅವನ ಮಗ -ಸೀತೆಯನ್ನು ರಕ್ಷಿಸಲಾರ. ಕುಟುಂಬದ ರಚನೆಯ ದೃಷ್ಟಿಯಿಂದ ಮಹಾದೇವನ ನಿಷ್ಕ್ರಿಯತೆ ಸಮರ್ಥನೀಯವಾಗಿ ಕಂಡರೂ ಅದು ದೀಕ್ಷಿತನ ಸೋಲಿನ ಒಂದು ಮುಖವೆಂದು ಪರಿಗಣಿಸಬಹುದು. ಈ ದೀಕ್ಷಿತ ತನ್ನ ತರ್ಕ ಮತ್ತು ಜ್ಞಾನಕ್ಕಾಗಿ ಆಸ್ಥಾನದಲ್ಲಿ ಸನ್ಮಾನಿತನಾದವನೆಂಬುದು ಇಲ್ಲಿ ಗಮನಾರ್ಹ.

ಅಪ್ಪಾಜಿ ಮತ್ತು ಭಟಜಿ ಇಬ್ಬರೂ ಸಂಜವಾಡಿಗೆ ಹೊಸಬರು. ಭಟಜಿಗೆ ಸಿಕ್ಕ ಗೆಲುವು ಅಪ್ಪಾಜಿಗೆ ಸಿಗಲಿಲ್ಲ. ಅಥವಾ ಅಂತ್ಯದಲ್ಲಿ ಆತ ಸೋತ. ಇದಕ್ಕೆ ಕಾದಂಬರಿಯ ಉದ್ದೇಶವೇ ಕಾರಣ. ಅವನು ಸಮಾಜದ ದುಷ್ಟಶಕ್ತಿಗಳ ಸುಘಟನೆಗೆ ಕಾರಣನಾದ ಅಲ್ಲದೆ ಪಾರಂಪರಿಕ ಸೌಶೀಲ್ಯದ ಮೇಲೆ ದೌರ್ಜನ್ಯ ನಡೆಸಿದ. ಇದಕ್ಕಾಗಿ ಭಟಜಿಗೆ ಸೋತ. ಸಾಧ್ಯಸಾಧನಗಳ ಸಂಬಂಧದಲ್ಲಿ ಕಾದಂಬರಿ ತಳೆದ ನಿಲುವು ಇಲ್ಲಿ ಪ್ರವೃತ್ತವಾಗಿದೆ. ಭಟಜಿಯ ನಿರಪೇಕ್ಷ ಮನೋಭಾವ ಅಥವಾ ಕಾದಂಬರಿಕಾರರು ಹೇಳುವಂತೆ ಅವನ “ಪಾರಮಾರ್ಥಿಕತೆ’ ಅವನಿಗೆ ಗೆಲುವು ತರುತ್ತದೆ. ಮಾರಮಣರಾಯನ ವಿಚಾರವೂ ಹೀಗೆ. ಆತನು ಹೊರಗಿನವನೇ, ನಾಡಿಗೆ ಹೊಸಬ. ಭ್ರಷ್ಟತೆ ಅವನಿಗೆ ಶಿಕ್ಷೆ ತುದಿತು. ಹೀಗೆ ಕಾದಂಬರಿ ತನ್ನ ಮಾರ್ಗ ಕಂಡುಕೊಂಡಿದೆ. ಆದರೆ ಇದಕ್ಕಾಗಿ ನಿರೂಪಿಸಲಾದ ಘಟನೆಗಳು ಇಷ್ಟು ಸರಳವಾದ ಸತ್ಯವನ್ನು ಹೇಳುವುದಿಲ್ಲ.

-ಕಾದಂಬರಿಯಲ್ಲಿ ಹೆಚ್ಚು ಮಾತನ್ನೇ ಆಡದಿರುವ ಸೀತೆಯನ್ನು ಗಮನಿಸಿ. ಮನೆಯೊಳಗೆ ಈಕೆ ತಿಮ್ಮಮ್ಮನ ದರ್ಪ ಮತ್ತು ಗಂಡಸರ ನಿಷ್ಕ್ರಿಯತೆ ಇವೆರಡರಲ್ಲಿ ಸಿಕ್ಕಿದ್ದಾಳೆ. ಮನೆಯ ಹೊರಗೆ ದೇವಸ್ಥಾನದ ಮೈಗಳ್ಳರ ಚರ್ಚೆಗೆ ವಸ್ತುವಾಗಿದ್ದಾಳೆ. ಅಪ್ಪಾಜಿಯ ದುಷ್ಟಮಾರ್ಗಗಳಿಗೆ ಗುರಿಯಾಗಿದ್ದಾಳೆ. ಸ್ವತಃ ಆಕೆಗೆ ಪರಂಪರೆ, ಸಂಪ್ರದಾಯಗಳಲ್ಲಿ ನಂಬಿಕೆಯಿದೆ. ಅರುಂದಮ್ಮನ ಕತೆ ಕೇಳಿ ಅವಳು ಋಜು ಮಾರ್ಗದ ತನ್ನ ನಿಷ್ಠೆಯನ್ನು ಇನ್ನೂ ಗಾಢವಾಗಿಸಿಕೊಳ್ಳುತ್ತಾಳೆ. ಸೀತೆಗೆ ಸಿಕ್ಕ ರಕ್ಷೆಗೆ ಅವಳ ನಿಷ್ಠೆಗಳೇ ಕಾರಣವೆನ್ನುವ ಕಾದಂಬರಿಯ ವಾಚ್ಯಾರ್ಥ ಒತ್ತಟ್ಟಿಗಿರಲಿ. ಆಸ್ಥಾನ ಮತ್ತು ಅಪ್ಪಾಜಿ ಎರಡು ಪರಸ್ಪರ ವಿರೋಧಿ ಶಕ್ತಿಗಳು. ಒಂದು ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಯತ್ನಿಸಿದರೆ ಇನ್ನೊಂದು ವ್ಯವಸ್ಥೆಯನ್ನು ಮುರಿಯಲು ಯತ್ನಿಸುತ್ತದೆ. ಸೀತೆ ಇವೆರಡರ ನಡುವಣ ಪಣ. ಲೌಕಿಕಶಕ್ತಿ ಮತ್ತು ಅಲೌಕಿಕಶಕ್ತಿ (ಅತಿಮಾನುಷವೆನ್ನುವ ಅರ್ಥ ಮಾತ್ರ ವಿವಕ್ಷಿತ) ಇವೆರಡೂ ರಂಗಗಳಲ್ಲಿ ಹೋರಾಟ ನಡೆಯುತ್ತದೆ. ಲೌಕಿಕವಾಗಿ ಆಸ್ಥಾನ ಸೇನೆಯನ್ನು, ಅಧಿಕಾರವನ್ನು ಬಳಸಿದರೆ ಅಪ್ಪಾಜಿ ಕಳ್ಳರ ಹುತ್ತವನ್ನು ಬಳಸುತ್ತಾನೆ. ಅತಿಮಾನುಷ ಶಕ್ತಿಗಳು ಎರಡೂ ರಂಗದಲ್ಲಿ ಇದ್ದರೂ ಒಂದಕ್ಕೊಂದು ಮುಖಾಮುಖಿಯಾಗಿ ನಿಲ್ಲುವುದಿಲ್ಲ. ಮೂರನೆಯ ಬಣದ (ಪರಕೀಯ) ಪ್ರವೇಶದಿಂದ ಅಪ್ಪಾಜಿ ಸೋಲುತ್ತಾನೆ. ಸೀತೆಯ ವೈಯಕ್ತಿಕ ಗೆಲುವು ನಮಗೆ ಇದರಿಂದಾಗಿ ಮುಖ್ಯವಾಗುವುದಿಲ್ಲ. ಲೌಕಿಕ ಶಕ್ತಿಗಳ ಮುಖಾಮುಖಿಯಲ್ಲಿ ಅಪ್ಪಾಜಿ ಸೋಲುವುದು ಈ ಮೊದಲೇ ಹೇಳಿದ ನಂಬಿಕೆಗೆ (ತಪ್ಪ-ಶಿಕ್ಷೆ) ಅನುಗುಣವಾಗಿ ಮಾತ್ರ. ನಿಜವಾಗಿ ಅಂತಹ ಅಧಿಕಾರವನ್ನು ಬಳಸುವುದು ಆಸ್ಥಾನಕ್ಕೆ ಸಾಧ್ಯವಿಲ್ಲ. ಏಕೆಂದರೆ ಶಿಕ್ಷೆ ನೀಡುವ ‘ರಾಜದಂಡ’ ಮಾತ್ರ ಅಲ್ಲಿ ಉಳಿದದ್ದು, ತಪ್ಪನ್ನು ನಿರ್ಣಯಿಸುವ ತಕ್ಕಡಿ-ವಿಚಕ್ಷಣಾಶಕ್ತಿ-ಗೈರುಹಾಜರಾಗಿದೆ. ಇದು ಆಸ್ಥಾನದ ಕೊರತೆಯಾಗಿದೆ. ಆದ್ದರಿಂದ ಪಾಪ, ಪುಣ್ಯಗಳ ಸೋಲು ಗೆಲುವುಗಳು ಮಾತ್ರ ಕಾದಂಬರಿಯ ಸ್ತರವಲ್ಲ.

ಸೀತೆಯ ಪಾತ್ರ ಒಂದು ಹಂತದಲ್ಲಿ ವಾಚ್ಯವಾಗಿದ್ದುಕೊಂಡು ಇನ್ನೊಂದು ಹಂತದಲ್ಲಿ ಧ್ವನಿಗೆ ಪೋಷಕವಾಗುತ್ತದೆ. ಈ ಸಂಕೀರ್ಣತೆ ಅಥವಾ ಸಾವಯವತೆಯನ್ನು ನಾವು ಒಟ್ಟು ಕಾದಂಬರಿಯ ಸಾವಯವತೆಯ ಜೀವಂತಬಿಂದುವೆಂದು ತಿಳಿಯಬಹುದಾಗಿದೆ.

-ಸಂಜವಾಡಿ ಒಂದು ಸಾಮಾಜಿಕ ಘಟಕ; ಹಾಗಾಗಿ ಒಂದು ವ್ಯವಸ್ಥೆ. ಪರಕೀಯ ವ್ಯಕ್ತಿಗಳ ಪ್ರವೇಶ ಮತ್ತು ವ್ಯವಸ್ಥೆಯೊಡನೆ ಅವರು ನಡೆಸುವ ಘರ್ಷಣೆ ಮತ್ತು ಆಸ್ಥಾನದ ಹಂತದಲ್ಲಿ ಸಂಜವಾಡಿಯೇ ಒಂದು ದುಷ್ಟಶಕ್ಕೆ ಆಗುವುದು, ಕುಟುಂಬದ ಹಂತದಲ್ಲಿ ದೀಕ್ಷಿತನ ಕುಟುಂಬದ ವಿರುದ್ದ ಸಂಜವಾಡಿ ಕ್ರಿಯಾಶೀಲವಾಗುವುದು ಇವೆಲ್ಲವನ್ನು ನಿರ್ಮಮತೆಯಿಂದ ಕಾದಂಬರಿಯ ಘಟನೆಗಳು ಹೊರಚೆಲ್ಲುವುದನ್ನು ಗಮನಿಸಿದರೆ ಕೆಲವು ನಿರ್ಣಯಗಳು ಸಾಧ್ಯ. ಸಂಪ್ರದಾಯದ ಕಾವ್ಯದ ಹಲವು ನಿಯೋಗಗಳಿಗಾಗಿ ಭಾಷೆ, ನಿರೂಪಣೆ, ವಸ್ತು ಮುಂತಾದ ವಿಷಯಗಳಲ್ಲಿ ಕಾದಂಬರಿಯ ಪ್ರಕಾರ ನಮನ ಶೀಲವಾದರೂ ಘಟನೆಗಳ ನಿಷ್ಠುರ ಆನುಪೂರ್ವಿಯಿಂದಾಗಿ ಗಹನವಾದ ಸತ್ಯಗಳನ್ನು ಹೊರಚೆಲ್ಲುತ್ತದೆ; ಇದು ಈ ಪ್ರಕಾರದ ಸಾಧ್ಯತೆಗಳನ್ನೂ ಸೂಚಿಸುತ್ತದೆ. ಕನ್ನಡದ ಮೊದಲ ಕೆಲವು ಕಾದಂಬರಿಗಳಲ್ಲಿ ಒಂದಾದ ಈ ಕೃತಿಯಲ್ಲಿಯೇ ಈ ಸಾಧ್ಯತೆಗಳನ್ನು ಮುಚ್ಚಿಡಲು ಸಾಧ್ಯವಾಗದೇ ಇರುವುದು ಈ ಪ್ರಕಾರದ ಸೂಕ್ತತೆಯನ್ನು ಸೂಚಿಸುತ್ತದೆ, ಆದರೆ ಈ ಕಾದಂಬರಿ ಬಂದ ಕಾಲದಲ್ಲೇ ವಿಮರ್ಶೆಯೂ ಬೆಳೆಯದೇ ಇದ್ದುದರಿಂದ ಕಾದಂಬರಿಯ ಸಾಧ್ಯತೆಗಳನ್ನು ಮತ್ತೆ ಕಂಡುಕೊಳ್ಳಲು ಮತ್ತೆ ಮೂರು ನಾಲ್ಕು ದಶಕಗಳೇ ಬೇಕಾದುವು.

ಶ್ರೀ ಎಂ. ಎಸ್. ಪುಟ್ಟಣ್ಣನವರ ಜೀವನ ನಿರೀಕ್ಷಣಾಶಕ್ತಿ, ಭಾಷೆಯ ಬಳಕೆ, ಸನ್ನಿವೇಶ ನಿರ್ಮಾಣ ಪ್ರತಿಭೆ ಮುಂತಾದುವುಗಳ ಬಗೆಗೆ ಇಲ್ಲಿ ಏನನ್ನೂ ಹೇಳಿಲ್ಲ. ಈಗಿನ ಕಾಲಕ್ಕೆ ಒರಟಾಗಿ ಕಾಣುವ ಅವರ ತಂತ್ರದ ಬಗ್ಗೆಯೂ ಹೆಚ್ಚು ವಿವರವಿಲ್ಲ. ಹೆಚ್ಚೆಂದರೆ ರೋಚಕವಾಗಿ ಕಥೆ ಹೇಳುವುದು ಅವರ ಉದ್ದೇಶವಿರಬೇಕೆಂದು ಅವರು ಕಾದಂಬರಿಗಳಿಗೆ ಇಟ್ಟ ಹೆಸರುಗಳಿಂದ ಸೂಚಿತವಾಗುತ್ತದೆ. ಇವೆಲ್ಲದರ ವಿಶ್ಲೇಷಣೆಯಿಂದ ಪುಟ್ಟಣ್ಣನವರ ಕಲೆಗಾರಿಕೆಯ ಬಗ್ಗೆ ಹೆಚ್ಚು ವಿವರಗಳನ್ನು ಪಡೆಯಬಹುದಾಗಿದೆ. ನನ್ನ ಉದ್ದೇಶ ಬೇರೆಯದೇ ಆಗಿದ್ದರಿಂದ ಇದನ್ನು ನಾನಿಲ್ಲಿ ಗಮನಿಸಿಲ್ಲ. ಕಾದಂಬರಿ ಒಂದು ಪ್ರಕಾರವಾಗಿ ತನ್ನ ಕರ್ತೃವನ್ನು ಮೀರಿ ನಿಂತ ಉದಾಹರಣೆಯನ್ನಾಗಿ ಮಾತ್ರ ಈ ಕೃತಿಯನ್ನು ನೋಡುವುದು ಇಲ್ಲಿ ನನ್ನ ಗುರಿಯಾಗಿತ್ತು. ಕೃತಿಕಾರನನ್ನು ಕೃತಿ ಮೀರಿನಿಲ್ಲುವ ಸಂದರ್ಭದಲ್ಲಿ ಅದನ್ನು ಆ ಕೃತಿಯ ಪ್ರಕಾರದ ಯಶಸ್ಸು ಎಂದು ಪರಿಗಣಿಸಬೇಕೆಂಬುದು ನನ್ನ ನಿಲುವು, ‘ಮಾಡಿದ್ದುಣೋ ಮಹಾರಾಯ’ದ ಈ ವಿಶ್ಲೇಷಣೆಯಿಂದ ಈ ನಿಲುವನ್ನು ನಾನು ಸ್ಪಷ್ಟಪಡಿಸಿಕೊಂಡಿದ್ದೇನೆ.

Close

ಒಂದು ಪದ್ಯ

ಒಂದು ಪದ್ಯ

ಎಂ. ಎನ್‌. ಜೈಪ್ರಕಾಶ್

ಹಸಿರೆಲ್ಲ ಕೊರಗಿ
ಗರಿಕೆಬೇರೂ ಸುಟ್ಟು
ಭೂತದ ಕುರುಹೇ ಕಾಣದ
ವರ್ತಮಾನಸ್ಥ ಒಣನೆಲದ ಮೇಲೆ
ನಾನೂ
ಕಳೆದದ್ದನ್ನೆಲ್ಲ ಕಳೆದು
ಹೊಸದಾರಿಗುಂಟ, ನಿಶ್ಚಿಂತ, ನಡೆಯುತ್ತಿರುವಾಗ –

ಋತುಚಕ್ರ ತಿರುಗಿ
ನಾಲ್ಕು ಮಳೆಯಾದದ್ದೆ ತಡ
ಹಸಿರು
ಚಿಗುರಾಗಿ
ಕೊನರಿದ್ದು
ಕಂಡೊಡನೆ
ಹೊಸದಾರಿ, ಹೊಸಬ ಎಂದುಕೊಂಡಿದ್ದ ನಾನು
ತಟ್ಟನೆ ಹಳಬನಾಗುತ್ತೇನೆ.

Close

ಕಾರ್ನಾಡರ ಹಯವದನ

ಕಾರ್ನಾಡರ ‘ಹಯವದನ’

ಮಾಧವ ಕುಲಕರ್ಣಿ

೧
ನಾಟಕ ಗಜವದನನ ಸ್ತುತಿಯೊಂದಿಗೆ ಆರಂಭವಾಗುತ್ತದೆ. ಮುಂದೆ ಬರುವ ಮುನ್ನ ಗಣಪತಿಯ ಅಪೂರ್ಣತೆಯ ಬಗ್ಗೆ ಮಾತನಾಡುತ್ತ ಭಾಗವತ-ಬಹುಶಃ ದೇವರ ಪೂರ್ಣತ್ವ ಮನುಷ್ಯನ ಕಲ್ಪನೆಗೇ ಒಗ್ಗಲಾರದಂಥದ್ದು ಎಂಬುದನ್ನೇ ಆ ಮಂಗಳ ಮೂರ್ತಿಯ ರೂಪ ಸಂಕೇತಿಸುತ್ತಿರಬೇಕು’ ಎನ್ನುತ್ತಾನೆ. ನಾಟಕಕಾರರು ಪುರಾಣ ಕಥೆಯ ವಿಶ್ಲೇಷಣೆಯೊಂದರ ಯೋಚನೆಯೊಂದಿಗೆ ನಾಟಕವನ್ನು ಪ್ರಾರಂಭಿಸುತ್ತಿದ್ದಾರೆ ಎನ್ನುವದು ಸ್ಪಷ್ಟವಾಗುತ್ತದೆ ಭಾಗವತನ ಪ್ರಾರಂಭದ ಮಾತುಗಳೇ ಅವನು ನಮ್ಮ ಕಾಲಕ್ಕೆ ಸೇರಿದವನೆಂಬುದು ಸೂಚಿಸುತ್ತವೆ. ಈ ಭಾಗವತನಿಗೆ ತಾನು ಬಳಸುತ್ತಿರುವ ಭಾಷೆಯ ಬಗ್ಗೆ ಮೋಹವಿರುವುದರ ಜೊತೆಗೇ ನವಿರಾದ ಹಾಸ್ಯವನ್ನು ತರುವ ಸ್ವಭಾವವೂ ಇದೆ. ಕಪಿಲ ದೇವದತ್ತರನ್ನು ವರ್ಣಿಸುವ ಅವನ ಭಾಷೆಯನ್ನು ಹಾಗೂ ರಸಿಕ ಸಮಾಜ ನಾಟಕ ನಡೆದಾಗ ನಿದ್ರೆ ಹೋಗುವುದನ್ನು ಅವನು ವರ್ಣಿಸುವದನ್ನು ಇದಕ್ಕೆ ಉದಾಹರಣೆ ಎಂದು ನೋಡಬಹುದು. ಭಾಗವತನ ಮಾತು ಮುಗಿಯುವ ಹೊತ್ತಿಗೆ ‘ನಟ ರಂಗವನ್ನು ಪ್ರವೇಶಿಸಿ ಹಯವದನನ ಆಗಮನವನ್ನು ಸೂಚಿಸುವುದರ ಜೊತೆಗೇ ಆ ಪಾತ್ರದ ಒಂದು ಮಗ್ಗುಲಿನ ಪರಿಚಯವನ್ನೂ ನೀಡುತ್ತಾನೆ. ಈ ಪರಿಚಯದಲ್ಲಿ ಹಯವದನನ ನಿಜವಾದ ಕತೆ ಗೊತ್ತಿರದವರು ಆತನನ್ನು ನೋಡುವ ರೀತಿ ವ್ಯಕ್ತವಾಗಿದೆ. ಹಯವದನ ರಂಗವನ್ನು ಪ್ರವೇಶಿಸಿದ ಮೇಲೆ ಅವನು ಕರ್ನಾಟಕ ದೇಶದ ರಾಜಪುತ್ರಿಯ ಮಗನೆಂಬುದೂ ಅವನ ತಾಯಿ ಕುದುರೆಯನ್ನು ಮದುವೆಯಾಗಿ ಹಯವದನನಿಗೆ ಜನ್ಮವಿತ್ತಿದ್ದಾಳೆಂದೂ ಗೊತ್ತಾಗುತ್ತದೆ. ರಾಜಪುತ್ರಿ ಮದುವೆಯಾದ ಕುದುರೆಯ ವರ್ಣನೆ ಇಲ್ಲಿ ಬಹಳ ಮಹತ್ವದ್ದು. ‘ಬಿಳಿಯ ಕುದುರೆ’ಯೊಡನೆ ಮದುವೆಯಾಗಿದ್ದು ಹದಿನೈದು ವರುಷ ಬಾಳುವೆ ಸಾಗಿಸಿದ ಕರ್ನಾಟಕ ದೇಶದ ರಾಜಪುತ್ರಿಯ ಕಾಮುಕತೆ ಇಲ್ಲಿ ಸೂಚಿತವಾಗಿದೆ. ಭಾಗವತನು ಜೀವಂತವಾಗಿರುವ ವರ್ತಮಾನವನ್ನು ಗಂಧರ್ವರಿದ್ದ ಪುರಾಣ ಕಾಲದ ಕತೆಯೊಂದಕ್ಕೆ ಜೋಡಿಸುವ ಪ್ರಯತ್ನದಲ್ಲಿ ನಾಟಕ ಇಲ್ಲಿ ತೊಡಗುತ್ತದೆ. ಕರ್ನಾಟಕ ದೇಶದ ರಾಜಪುತ್ರಿಯ ಮಗ ಹಯವದನನಾಗಿರುವದರಿಂದ ಅವನು ಈ ನಾಡಿನ ಜನರ ಪ್ರತಿನಿಧಿ ಕೂಡ ಎಂಬುದು ಇಲ್ಲಿ ಸೂಚಿತವಾಗಿದೆ. ಅಂದರೆ ಪುರಾಣಕಾಲದ ಫಲವಾಗಿ ನಮ್ಮೆಲ್ಲರ ಪ್ರತಿನಿಧಿಯಾಗಿರಬಹುದಾದ ಹಯವದನ ಇಲ್ಲಿ ರೂಪುಗೊಳ್ಳುತ್ತಾನೆ. ರಾಜಕುಮಾರಿ ಗಂಧರ್ವನೊಡನೆ ಹೋಗಲು ಒಪ್ಪದೇ ಗಂಡನನ್ನು ಕುದುರೆಯ ರೂಪದಲ್ಲಿಯೇ ನೋಡಬಯಸುವದು ಪ್ರಾಯಶಃ ನಾಡಿನ ಜನರ ಹುಟ್ಟಿನ ಹಿಂದಿರುವ ಧೋರಣೆಯನ್ನೇ ತೋರಿಸುತ್ತದೆ.

ಚಿತ್ರಕೂಟ ಪರ್ವತಕ್ಕೆ ಹಯವದನ ತೆರಳಿದ ನಂತರ ನಾಟಕದ ಇನ್ನೊಂದು ಕತೆ ದೇವದತ್ತ ಕಪಿಲರ ಪ್ರವೇಶದೊಂದಿಗೆ ಪ್ರಾರಂಭವಾಗುತ್ತದೆ. ದೇವದತ್ತ ಒಬ್ಬ ಕವಿ, ಕಪಿಲ ದೈಹಿಕ ಸಾಮರ್ಥ್ಯವನ್ನು ಪಡೆದ ಪಾತ್ರ. ಪದ್ಮನಿ ಎಂಬ ಹುಡುಗಿಯನ್ನು ದೇವದತ್ತ ಪ್ರೀತಿಸಿದ್ದಾನೆ. ಆದರೆ ಇದು ಅವನ ಹದಿನಾರನೇಯ ಪ್ರಣಯ ಪ್ರಸಂಗ. ಪದ್ಮನಿಯ ಮನೆ ಹುಡುಕಿಕೊಂಡು ಕಪಿಲ ಹೊರಡುತ್ತಾನೆ. ಕಪಿಲ ಪದ್ಮಿನಿಯರ ನಡುವೆ ನಡೆವ ಸಂಭಾಷಣೆ ಪದ್ಮಿನಿ ಒಬ್ಬ ಜಾಣ ಚೆಲ್ಲುಹುಡುಗಿ ಎಂಬುದನ್ನು ಸೂಚಿಸುತ್ತದೆ. ಈ ಮೊದಲು ಕಪಿಲ ದೇವದತ್ತರ ನಡುವೆ ನಡೆವ ಸಂಭಾಷಣೆಯಲ್ಲಿ `ರಕ್ತಪಾತ’ದ ಮಾತು ಬರುತ್ತದೆ. ಕಪಿಲ ಮುಂದೆ ನಡೆಯುವದನ್ನು ಸೂಚಿಸುವಂತೆ ‘ಪರಿಸ್ಥಿತಿ ಗಂಭೀರವಾಗಿದೆ’ ಎನ್ನುತ್ತಾನೆ.

ಭಾಗವತನ ಕತೆ ಹೇಳುವಿಕೆಯಲ್ಲಿ ಪದ್ಮಿನಿ ದೇವದತ್ತರ ಮದುವೆ ನಡೆದ ನಂತರ, ದೇವದತ್ತ ಹೆಂಗರುಳಿನವ ಎಂಬುದನ್ನು ಪದ್ಮಿನಿ ತಿಳಿಯುತ್ತಾಳೆ; ಕಪಿಲ ತನ್ನ ಮನಸ್ಸು ಪದ್ಮಿನಿಯ ಕಡೆ ಒಲಿಯುತ್ತಿದೆ ಎಂಬುದನ್ನು ಅರಿಯುತ್ತಾನೆ; ದೇವದತ್ತ ಈ ಎರಡೂ ಧೋರಣೆಗಳನ್ನು ಅಲ್ಲಲ್ಲಿ ಕಂಡುಕೊಳ್ಳುತ್ತಾನೆ, ಉಜ್ಜಯಿನಿಯ ದಾರಿಯಲ್ಲಿ ಹೂವುಗಳನ್ನು ಕಿತ್ತುಕೊಡುವ ರೀತಿಯಲ್ಲಿ, ಕಪಿಲನ ದೈಹಿಕ ಶಕ್ತಿಯ ಕಡೆಗೆ ಪದ್ಮಿನಿಯ ಆಕರ್ಷಣೆ ತೀವ್ರಗೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ. ನಾಟಕ ಈ ಪ್ರಸಂಗಗಳಲ್ಲಿ ಮಾನವೀಯ ಸಂದರ್ಭಗಳಲ್ಲಿ ಪ್ರಥಮ ಸಲ ತನ್ನನ್ನೇ ಗಟ್ಟಿಗಳಿಸಿಕೊಳ್ಳುವ ಪ್ರಯತ್ನ ನಡೆಸುತ್ತದೆ. ಮುಖ್ಯವಾಗಿ ಅಸಂಭವವಾದ ಹಯವದನನ ಕತೆಯಿಂದ ಆರಂಭವಾಗಿ ಆ ಲೋಕದಿಂದ ಕಪಿಲ-ದೇವದತ್ತ-ಪದ್ಮನಿಯರ ಪ್ರಸಂಗದತ್ತ ತಿರುಗುವ ವೇಳೆಗೆ ಈ ಮಾನವೀಯ ಪ್ರಸಂಗದ ಅರಿವು ನಾಟಕದಲ್ಲಿ ಮೂಡಲು ಪ್ರಾರಂಭವಾಗುತ್ತದೆಂಬುದನ್ನು ಗಮನಿಸಬಹುದು. ಆದರೆ ಚಿತ್ರಕೂಟದ ಕಾಲಿಯ ಪ್ರಸಂಗ ಈಗ ಕೂಡಲೇ ಬರುವದರಿಂದ ಮತ್ತೆ ಅಸಂಭವ ಲೋಕದತ್ತ ನಾಟಕ ತಿರುಗುತ್ತದೆ. ಕಾಲಿಯ ಪ್ರಸಂಗದಲ್ಲಿ ಪದ್ಮನಿಯ ಇಡೀ ಪ್ರಸಂಗವನ್ನು ಅದರ ಸೂಕ್ಷತೆ ಹೊಯ್ದಾಟಗಳಿಂದ ಬೇರ್ಪಡಿಸಿ ಬತ್ತಲೆಯ ಸತ್ಯವನ್ನಾಗಿ ಮಾಡಿ ನೋಡುವ ಧೋರಣೆ ಸ್ಪಷ್ಟವಾಗಿದೆ. ಕಾಲಿಗೆ ಪದ್ಮನಿಯ ಸ್ವಾರ್ಥದ ಅರಿವಿದೆ, ಆದರೆ ದೈಹಿಕ ಶಕ್ತಿಯಿದ್ದ ಬುದ್ದಿವಂತ ಮಾನವನನ್ನು ಬೇಡುವ ಅವಳ ಅಂತರಾಳದ ಕರೆಯ ಪ್ರಜ್ಞೆ ಇಲ್ಲ. ಕಾಲಿದೇವಿ ಬಹಳ ಹಾಸ್ಯಪ್ರವೃತ್ತಿಯವಳು. ಆಕಳಿಸುತ್ತ ಎದ್ದ ಅವಳು ದೊಡ್ಡಾಟದ ಮಾತುಗಳನ್ನು ನೆನಪಿಗೆ ತರುವಂತಹ ಕೆಲ ಮಾತುಗಳನ್ನು ಹೇಳುತ್ತಾಳೆ. ಪದ್ಮನಿ ತಲೆಗಳನ್ನು ಅದಲು ಬದಲು ಮಾಡಿ ಕೈಜೋಡಿಸಿ ದೇವಿಯ ಎದುರಿಗೆ ನಿಂತಾಗ-‘ಮಗಳೇ’ ಸತ್ಯದಿಂದ ನಡೆಯೋದಕ್ಕೂ ಒಂದು ಮಿತಿ ಇರಬೇಕು……ಏನು ಹೇಳೋದು ? ಸರಿ! ತಥಾಸ್ತು…’ ಎನ್ನುತ್ತಾಳೆ. ಕಾಲಿದೇವಿಯ ಈ ಪ್ರಸಂಗದಲ್ಲಿ ಇಡೀ ಸನ್ನಿವೇಶವನ್ನು ಪದ್ಮನಿಯ ತುಯ್ತಗಳಿಂದ ಬಿಡಿಸಿ ನೋಡಿದರೆ ಪದ್ಮಿನಿಯ ಪ್ರಸಂಗ ಒಂದು ಸ್ವಾರ್ಥದ ಪ್ರಸಂಗದ ಹಾಗೆ ಕಾಣುತ್ತದೆ ಎಂದು ತೋರಿಸಲಾಗಿದೆ. ಕಪಿಲ ದೇವದತ್ತರು ಅದಲು ಬದಲಾದ ತಲೆಗಳನ್ನು ಹೊತ್ತು ನಿಂತಾಗ ಕಪಿಲ ಒಂದು ಪ್ರಶ್ನೆಯನ್ನು ಕೇಳುತ್ತಾನೆ: “…ಪದ್ಮಿನಿಗೆ ಈ ಒಂದು ಕ್ಷಣಕ್ಕೆ ಅನಿಸಿದ್ದು ಸಮಸ್ಯೆಗೆ ಉತ್ತರ ಹೇಗಾದೀತು ?”. ಪ್ರಥಮ ಸಲವಾಗಿ ನಾಟಕ ಪುರಾಣದ ವ್ಯಕ್ತಿಚಿತ್ರಗಳಿಂದ ಬಿಡಿಸಿಕೊಂಡು ಇಲ್ಲಿ ನೈತಿಕ ಪ್ರಶ್ನೆಯನ್ನು ಎತ್ತುತ್ತದೆ.

ಪೂರ್ವಾರ್ಧ ಇಲ್ಲಿಗೆ ಮುಗಿಯುತ್ತದೆ. ಉತ್ತರಾರ್ಧದಲ್ಲಿ ಭಾಗವತ ಮಾತನ್ನು ಸಮಸ್ಯೆಯಿಂದಲೇ ಪ್ರಾರಂಭಿಸುತ್ತಾನೆ. ‘ನರಗಳಡಿಯಲ್ಲಿ ಹರಿಯುತಿಹ ಸುಪ್ತ ಕೊಳ್ಳದ ಗುಪ್ತ ಒಡಲಿನ ಆಳ’ವನ್ನು ಅರಿಯಬೇಕೆಂಬ ಭಾಗವತನ ಮಾತು, ನಾಟಕದ ಪ್ರಾರಂಭದಲ್ಲಿ `ಪುರಾಣ ವಿಶ್ಲೇಷಣೆ’ ಸೂಚಿತವಾದಂತೆ ಇಲ್ಲಿ ಸುಪ್ತಪ್ರಜ್ಞೆಯ ಸೂಚನೆಯೊಂದಿಗೆ ಆರಂಭವಾಗುತ್ತದೆ. ಕಪಿಲನ ದೇಹವನ್ನು ಹೊಂದಿದ ದೇವದತ್ತನಿಗೆ ಪದ್ಮ ದಕ್ಕಿದ ಮೇಲೆ ನಾಟಕ ಮತ್ತೆ ಮೊದಲಿನ ಓಘದಲ್ಲಿಯೇ ಮುಂದುವರೆಯುತ್ತದೆ. ಈ ಭಾಗದಲ್ಲಿ ಬರುವ ಗೊಂಬೆಗಳು ಪದ್ಮಿನಿಯ ಮನಸ್ಸನ್ನು ರಂಗದ ಮೇಲೆ ಅಭಿನಯಿಸಿ ತೋರಿಸುವಾಗ ನಾಟಕ ಮತ್ತೆ ಮಾನವೀಯ ಸಂದರ್ಭದಿಂದ ‘ಅಸಂಭವ ಲೋಕ’ದತ್ತ ನಡೆಯುತ್ತದೆ. ಮಗು ಹುಟ್ಟಿದ ಮೇಲೆ ಪದ್ಮನಿ ಮತ್ತೆ ಕನಸು ಕಾಣುತ್ತ ಹಾಡುತ್ತಾಳೆ:

ಬಂದಾನೋ ಸವಾರ
ಯಾವೂರಿನ ಸರದಾರ ?
ರತ್ನದ ಕುಚ್ಚಿನ ಪಾವುಡ
ಕೊರಳಿಗೆ ಮಲ್ಲಿಗೆ ಹಾರ.

ಮುತ್ತಿನ ಹಿಡಿಕೆಯ ಕತ್ತಿ
ಸೊಕ್ಕಿನ ಮುಷ್ಟಿಯಲೆತ್ತಿ
ಬಿಳಿಯ ಅಂಗಿಯ ವೀರ
ಬಿಳಿಯ ಕುದುರೆಯ ಹತ್ತಿ.

ಇಲ್ಲಿ ಬರುವ ರತ್ನ, ಪಾವುಡ, ಮಲ್ಲಿಗೆ ಹಾರ, ಮುತ್ತಿನ ಹಿಡಿಕೆ, ಅಂಗಿ, ಕುದುರೆ,- ಇವೆಲ್ಲವೂ ಬಿಳಿಯ ಬಣ್ಣದಲ್ಲಿಯೇ ಇವೆ ಎಂಬುದನ್ನು ಗಮನಿಸಬೇಕು. ಇಲ್ಲಿಯ ಬಿಳಿಯ ಕುದುರೆ ಹಯವದನನ ತಂದೆಯ ಮೊದಲಿನ ರೂಪವನ್ನು ನೆನಪಿಗೆ ತರುವದರ ಜೊತೆಗೆ ಪದ್ಮನಿ ಹಾಗೂ ಕರ್ನಾಟಕ ದೇಶದ ರಾಜಪುತ್ರಿಯ ನಡುವಿರಬಹುದಾದ ಒಂದು ಸಾಮ್ಯವನ್ನು ಎತ್ತಿ ತೋರಿಸುತ್ತದೆ: ದೈಹಿಕ ಆಕರ್ಷಣೆ ಈ ಹಾಡಿನ ಹಿಂದಿರಬಹುದಾದ ಕನಸಿನ ಬಗ್ಗೆ ಪದ್ಮನಿಯ ಮನಸ್ಸಿನ ಆ ಸ್ಥಿತಿಗೆ ಪ್ರತಿಮೆಗಳಂತಿರುವ ಗೊಂಬೆಗಳು ಸಂಭಾಷಣೆಯಲ್ಲಿ ಆಡಿ ತೋರಿಸುತ್ತದೆ. ಈಗ ದೇವದತ್ತ ಬಂದು ಪದ್ಮನಿಯನ್ನು ಮುಟ್ಟಿದಾಗ ಅವನಲ್ಲಾದ ಬದಲಾವಣೆಯನ್ನು ಗುರುತಿಸುವ ಅವಳ ಮನಸ್ಸಿನ ತಳಮಳವನ್ನೂ ಗೊಂಬೆಗಳು ಮಾತಿನಲ್ಲಿ ತೋರಿಸುತ್ತವೆ. ಗೊಂಬೆಗಳನ್ನು ಎತ್ತಿ ಹೊರಗೆಸೆಯುವದು, ಪದ್ಮಿನಿ ಮನಸ್ಸಿನ ಚಂಚಲತೆಗೆ ಪೂರ್ಣವಿರಾಮ ನೀಡಿ ಒಂದು ನಿರ್ಧಾರಕ್ಕೆ ಬಂದಿರುವಳೆಂಬುದಕ್ಕೆ ಸಾಕ್ಷಿ. ಈ ಪ್ರಸಂಗ ನಡೆದೊಡನೆ ನಾಟಕದಲ್ಲಿ ಮತ್ತೆ ಮುತ್ತೆದೆಯ ಹೂವಿನ ಗಿಡದ ಮಾತು ಪದ್ಮಿನಿಯಿಂದ ಬರುತ್ತದೆ: ತನ್ನ ಮಗುವಿಗೆ ಹಳೆಯ ಗುರುತಿನ ಆ ಗಿಡವನ್ನು ತೋರಿಸ ಬಯಸುತ್ತಾಳೆ. ದೇವದತ್ತನಲ್ಲಾಗುತ್ತಿರುವ ದೈಹಿಕ ಬದಲಾವಣೆ ಆವಳು ಮತ್ತೆ ಕಪಿಲನ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಪದ್ಮಿನಿ ಈಗ ರಂಗವನ್ನು ಬಿಟ್ಟು ಹೋದ ಮೇಲೆ ರಂಗವು ಕೆಲ ನಿಮಿಷ ಬರಿದಾಗಿದ್ದು ನಾಟಕ ಮತ್ತೆ ಭಾಗವತನತ್ತ ತಿರುಗುವದನ್ನು ನೋಡಿದರೆ ದೇವದತ್ತ-ಪದ್ಮಿನಿ ಹಾಗೂ ಕಪಿಲನ ದೇಹವನ್ನು ಹೊಂದಿದ ದೇವದತ್ತ-ಪದ್ಮನಿಯರ ಪ್ರಸಂಗಗಳೆಲ್ಲ ಮಾಯವಾಗಿ ನಾಟಕ ಮತ್ತೆ ಪ್ರಾರಂಭದ ಸ್ಥಿತಿಗೆ ಮರಳುತ್ತದೆ ಎಂಬುದನ್ನು ಗಮನಿಸಬೇಕು. ಪದ್ಮನಿ-ದೇವದತ್ತ-ಕಪಿಲರ ಮಾನವೀಯ ಪ್ರಸಂಗಗಳಲ್ಲಿ ಭಾಗವಹಿಸದಿದ್ದ ಭಾಗವತ ಈಗ ಮತ್ತೆ ಚುರುಕಾಗುತ್ತಾನೆ. ಪದ್ಮಿನಿ ಕಪಿಲನನ್ನು ಭೆಟ್ಟಿಯಾದೊಡನೆ. ತಾನು ನಿಜವಾದ ಕಪಿಲ ಎಂಬುದನ್ನು ಅವನು ಒಪ್ಪಿಕೊಳ್ಳುತ್ತಾನೆ. ಪದ್ಮಿನಿ
“ಹೇಗಿದ್ದಾನೆ ಕಪಿಲ ?” ಎಂದು ಕೇಳುತ್ತಾಳೆ. ಈಗ ಭಾಗವತ ಹೇಳುವ ಒಂದು ಹಾಡು ಇಡೀ ಪ್ರಸಂಗಕ್ಕೆ ಒಂದು ವ್ಯಾಖ್ಯೆಯನ್ನು ಒದಗಿಸುತ್ತದೆ:
ನಿನ್ನ ಎದೆಗೆ ಮಗು ತೊಡೆಗೆ ಗಂಡ
ಕಣ್ಣಿನಲ್ಲಿ ಪಂಜು
ತಡೆದು ಬಾಯಿಬಿಟ್ಟ ಮೈಗೆ
ಮುತ್ತೈದೆಯ ನಂಜು
ಎಂದು
ಅಲ್ಲಿಯೊಂದು ಪತ್ರ, ಇಲ್ಲಿ
ಹಣೆಬರಹದ ಚಿತ್ರ ಹೆಕ್ಕಿ
ಕಾಳು ನುಂಗಿ ಕುಟುಕುತ್ತಿರುವೆ
ಜೋಯಿಸರ ಹಕ್ಕಿ.

ಈ ಹಾಡು ಪದ್ಮಿನಿಯ ನೈತಿಕತೆಯನ್ನೂ ಮೀರಿದ `ಹಣೆಯ ಬರಹ’ ಒಂದಿದೆ ಎಂದು ಸೂಚಿಸುವುದರ ಜೊತೆಗೇ ಅವಳ ಮುತ್ತೈದೆತನವೇ ಅವಳಿಗೆ ಸದ್ಯದ ಪರಿಸ್ಥಿತಿಯಲ್ಲಿ ನಂಜಾಗಿದೆ ಎಂಬುದನ್ನು ತೋರಿಸುತ್ತದೆ. ಕಪಿಲ ಪದ್ಮಿನಿಯನ್ನು ಎತ್ತಿ ಒಳಗೆ ಕರೆದೊಯ್ದ ಮೇಲೆ ಭಾಗವತ ಹೇಳುತ್ತಾನೆ:

ನೀರಿನ ಮೇಲೆ
ಚಿತ್ರ ಕೆತ್ತಲಿಕ್ಕಾಗೋದಿಲ್ಲ
ಕತ್ತಿಯು ಗಾಯ ಮಾಡಲಿಕ್ಕಾಗೋದಿಲ್ಲ
ಅದಕ್ಕೇ ನದಿಗೆ
ನೆನಪಿನ ಹಂಗಿಲ್ಲ.

ಪ್ರಕೃತಿಯ ಪ್ರತಿರೂಪದಂತಿರುವ ಪದ್ಮಿನಿಯ ಮೇಲೆ ನೈತಿಕತೆಯನ್ನು ಹೇರಲಾಗುವದಿಲ್ಲ : ಅವಳು ನದಿಯಂತೆ ಘಾಸಿಗೊಳ್ಳದೇ ಇರಬಲ್ಲವಳು. ಆದರೆ ನದಿಯ ದಂಡೆಯ “ಬೆದರು ಗೊಂಬೆಗೆ’ ಮಾತ್ರ :
ತಲೆಯ ಗಡಿಯ ತುಂಬ
ಮಾಸಿದ ಮುಖ
ಮೈತುಂಬ ನೆನಪಿನ ಗಾಯ.

ನಾಟಕದಲ್ಲಿ ಬರುವ ಮುಖವಾಡಗಳು ನಮ್ಮ ಜೀವದಲ್ಲಿಯ ಸುಪ್ತಪ್ರಜ್ಞೆಯ ನದಿಯ ಮೇಲಿರುವ ಮುಖವಾಡಗಳು: ಬೆದರು ಗೊಂಬೆಯ ಗಡಿಗೆಗಳು : ಅಲ್ಲಿ ಮಾತ್ರ ನೆನಪಿನ ಗಾಯ. ಇದರ ಹಿಂದಿರುವದು ಬಗೆಯಲಾಗದ ಆಪ್ಯಾಯಮಾನವಾದ ಜೀವನದ ನದಿ.

ಈಗ ಪ್ರವೇಶಿಸುವ ದೇವದತ್ತ ಕಪಿಲನನ್ನು ಗುರುತಿಸುತ್ತಾನೆ; ತಮ್ಮಲ್ಲಾದ ಬದಲಾವಣೆಗಳನ್ನು ಗುರುತಿಸಿಕೊಳ್ಳುತ್ತಾರೆ. ಇಬ್ಬರೂ ಯುದ್ಧದಲ್ಲಿ ತೊಡಗುತ್ತಾರೆ; ಮಡಿಯುತ್ತಾರೆ. ಈ ಸಂದರ್ಭದಲ್ಲಿ ದೇವದತ್ತ ಕಪಿಲರು ಆಡುವ ಮಾತುಗಳು ಅವರಿಬ್ಬರೂ ಪದ್ಮನಿಯಿಂದ ಭಿನ್ನರಾದವರೆಂಬುದನ್ನು ತೋರಿಸುತ್ತವೆ. ಪದ್ಮಿನಿಗೆ ನೆನಪಿನ ಕೊಳ್ಳಿಗಳು ಕಾಡುವದಿಲ್ಲ; ಆದರೆ ಕಪಿಲ ದೇವದತ್ತರಿಗೆ ಹಿಂದೆ ನಡೆದದ್ದೆಲ್ಲವೂ ಮನಸ್ಸಿನಲ್ಲಿ ಇನ್ನೂ ನಿಚ್ಚಳವಾಗಿದೆ; ತಮ್ಮ ಕುಂದಿದ ಆತ್ಮವಿಶ್ವಾಸದ ಬಗೆಗೆ ಅರಿವಿದೆ. ಆದರೆ ಪದ್ಮಿನಿಯ ಪಾತ್ರಕ್ಕೆ ನಿಜವಾದ ವ್ಯಾಖ್ಯೆ ದೊರೆಯುವದು ಹೆಣ್ಣು ಮೇಳದ ಈ ಹಾಡಿನಲ್ಲಿ :

ಪ್ರೀತಿಯೇಕೆ ಅಂಟಬೇಕು
ಒಂದೆ ಮೈಯ ಅಂಟಿಗೆ ?
ಹೇಸಿ ಹೂವ ಪಡೆಯ ಬಲ್ಲ
ಮರ್ಪ ಮದದ ದಂಟಿಗೆ.
ಸವರಿ ಗಂಟು ಹಾಕಬೇಕೆ?
ಒಂದೆ ಹೂವ ನಂಟಿಗೆ ?

ಒಂದು ಮೊಲೆಗೆ ಒಂದು ತಲೆ
ಗೊಂಬೆಯೊಂದು ಕಣ್ಣಿಗೆ
ತೋಳಿಗೊಂದು ತೆಕ್ಕೆ……ನನಗೆ
ಏಕೆ ಕೊರಗು ನಾಚಿಕೆ?
ಬಸಿವ ತೊರೆಯ ಬಸಿಗೆ ಬರಿದು
ಹಾಡೊದಿದೆ ಮಣ್ಣಿಗೆ.

ನಾಟಕ ಈಗ ಮತ್ತೆ ಪ್ರಾರಂಭದ ಅವಸ್ಥೆಯತ್ತ ಹೊರಳುತ್ತದೆ. ನಟ-೨ ಕುದುರೆಯೊಂದು ಮಾತನಾಡುವುದನ್ನು ಕಂಡು ಹೆದರಿ ಓಡಿ ಬರುತ್ತಾನೆ; ನಟ-೧ ಹುಡುಗನೊಬ್ಬನ ಜೊತೆ ರಂಗವನ್ನು ಪ್ರವೇಶಿಸುತ್ತಾನೆ ; ಮಾತನಾಡುವ ಕುದುರೆಯೂ ಪ್ರವೇಶಿಸುತ್ತದೆ. ಹುಡುಗ ಪದ್ಮಿನಿಯ ಮಗ ಎಂಬುದನ್ನು ಸಾಬೀತು ಮಾಡುತ್ತಾನೆ ಭಾಗವತ. ನದಿಯಂತೆ ಹರಿದ ಪದ್ಮಿನಿಯ ಒಳಚಿಗುರಾಗಿ ಬೆಳೆದ ಈ ಹುಡುಗ ತುಂಬ ಗಂಭೀರ. ಪದ್ಮಿನಿಯ ಒಳತೋಟಿಯ ಪ್ರತಿನಿಧಿಯಾದ ಗೊಂಬೆಯೊಂದನ್ನು ಕೈಯಲ್ಲಿ ಹಿಡಿದಿದ್ದಾನೆ. ನಮ್ಮೆಲ್ಲರ ಪ್ರತಿನಿಧಿಯಂತಿರುವ ಹಯವದನ ಚಿತ್ರಕೂಟದ ಕಾಲಿಯ ಪ್ರಭಾವದಿಂದಾಗಿ ಪೂರ್ಣಕುದುರೆಯ ರೂಪವನ್ನು ಪಡೆದಿದ್ದರೂ ಸಂವಹನ ಕ್ರಿಯೆಗೆ ಪ್ರಮುಖವಾಗಿ ಬೇಕಾದ ಮನುಷ್ಯವಾಣಿಯೊಂದು ತನಗಿದೆಯಲ್ಲ ಎಂದು ದುಃಖಿಸುತಿದ್ದಾನೆ. ಭಾಗವತ ಮಗುವಿನ ನಗೆಯ ಪವಿತ್ರತೆಯ ಬಗ್ಗೆ ಹೇಳಿದಾಗ ಹಯವದನ ನಮ್ಮ ಕೆಲ ಸಾಹಿತಿಗಳ ಮಾತನ್ನೇ ಉಚ್ಚರಿಸುತ್ತಿದ್ದಾನೆಂಬುದನ್ನು ಗಮನಿಸಬೇಕು: ‘ಇಂಥ ಭಾವನಾ ವಿವಶತೆಯಿಂದಲೇ ನಮ್ಮ ಸಾಹಿತ್ಯ ಕೆಟ್ಟುಹೋಗಿದೆ. ನಮ್ಮ ಜನ ಜೀವನ ಲಡ್ಡಾಗಿದೆ ಅಂತ ನನ್ನ ಅಭಿಪ್ರಾಯ.’ ಹಯವದನ ಪದ್ಮಿನಿಯ ಕುಡಿಯ ಸ್ಪರ್ಶವನ್ನು ಪಡೆದ ತಕ್ಷಣ ಧ್ವನಿಯನ್ನು ಕಳೆದುಕೊಂಡು ಪ್ರಾಣಿವರ್ಗಕ್ಕೆ ಸೇರುತ್ತಾನೆ. ಮಾತುಗಳನ್ನೇ ಕಳೆದುಕೊಂಡ ಹಯವದನ ಸ್ವಚ್ಛಂದ ಜೀವನದ ಕುಡಿಯೊಂದನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು, ಪೂರ್ಣಾಂಗನಾದೆ ಎಂಬ ಹುರುಪಿನಿಂದ ಆ ಕುಡಿಯ ಅಜ್ಜನ ಮನೆಯ ಕಡೆ ನಡೆಯುವದರೊಂದಿಗೆ ನಾಟಕ ಮುಕ್ತಾಯದತ್ತ ಹೊರಡುತ್ತದೆ.
೨
ಈ ನಾಟಕದಲ್ಲಿ ಬರುವ ಕಪಿಲ-ದೇವದತ್ತ-ಪದ್ಮಿನಿಯರ ಪ್ರಸಂಗಕ್ಕೆ ‘ವೇತಾಲ ಪಂಚವಿಂಶತಿ ಕಥಾ’ ದಲ್ಲಿಯ ಆರನೆಯ ಕತೆ ಮೂಲ ಎಂದು ನಾಟಕಕಾರರೇ ಹೇಳಿದ್ದಾರೆ. ಅದಕ್ಕಾಗಿಯೇ ಇಲ್ಲಿ ನಿರೂಪಿತವಾಗಿರುವ ಈ ಪ್ರಸಂಗ ಪುರಾಣಕತೆಯ ರೂಪದಲ್ಲಿದೆ. ಭಾಗವತ ಈ ಪಾತ್ರಗಳನ್ನು ಪುರಾಣಕಾಲದ ಪಾತ್ರಗಳೆಂಬಂತೆಯೇ ವರ್ಣಿಸುತ್ತಾನೆ. ಕಪಿಲ ದೇವದತ್ತರು ಮುಖವಾಡಗಳನ್ನು ತೊಟ್ಟಿದ್ದರೆ ಪ್ರಕೃತಿಯ ಪ್ರತಿರೂಪವಾದ ಪದ್ಮಿನಿ ಅಂಥ ಮುಖವಾಡವನ್ನು ಹೊಂದಿಲ್ಲ. ಪುರಾಣಕತೆಯನ್ನು ಉಪಯೋಗಿಸಿದ ಈ ನಾಟಕದಲ್ಲಿಯ ಮುಖವಾಡಗಳ ಬಳಕೆ ಗೊಂಬೆಯ ಬಳಕೆಯ ಬಗ್ಗೆ ಸಾಕಷ್ಟು ವಾದ ವಿವಾದಗಳಿದ್ದರೂ ಪುರಾಣಕತೆಯ ವಿಶ್ಲೇಷಣೆಯ ಬಗ್ಗೆ ಬೆಳಕು ಚೆಲ್ಲುವ ಯಾವ ಮಾಹಿತಿಯೂ ದೊರೆಯಲಿಲ್ಲ. ಈ ಸಂದರ್ಭದಲ್ಲಿ ಪುರಾಣಕತೆಗಳ ವಿಶ್ಲೇಷಣೆಗೆ ಸಹಾಯಕವಾಗಬಹುದಾದ ಕೆಲವು ಮಾಹಿತಿಗಳನ್ನು ನೀಡಿ ನಾಟಕದ ಮತಿತಾರ್ಥದತ್ತ ತಿರುಗುತ್ತೇನೆ:

ಡಾರ್ವಿನನ ಸಮಕಾಲೀನನಾದ ಜೆ. ಜೆ. ಬೇಕೊಫೆನ್ (J. J. Bachofen) ಈ ಪುರಾಣ ಕತೆಗಳ ವಿಶ್ಲೇಷಣೆಯ ಬಗ್ಗೆ ಆಳವಾಗಿ ಯೋಚಿಸಿದವರಲ್ಲಿ ಮೊದಲಿಗ. ಈ ಲೇಖಕ ಇಂಥ ಕತೆಗಳ ಬಗ್ಗೆ ಬರೆಯುತ್ತಾ ಹೀಗೆನ್ನುತ್ತಾನೆ:

“We must distinguish between the form of the tale and its content or idea. The form lies in the fiction of a single definite event, which takes its course and moves towards its conclusion through a concantenation of circumstances and the intervention of a number of persons. This formal element must be discarded as a fabrication, a fable, a fairy tale or whatever we may term such products of free fancy, and excluded from the realm of historical truth. But in respect of the guiding thought, we must apply a different standard. This retains its significance even though the garment in which it is shrouded may merit little regard. In fact, when dissociated from this single incident. it takes on the greater dimension of a general historicity, not bound by specific localities or persons.”

ಬೇಕೊಫೆನ್‌ ಈ ವಿಚಾರದ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತ ಜ್ಯೋಸೆಫ್‌ ಕ್ಯಾಂಪಬೆಲ್‌(Joseph Campbell) ಈ ವಿಚಾರ ನಮ್ಮನ್ನು ಕಾರ್ಲ್‌ ಯುಂಗನ ‘ಸಮುದಾಯ ಸುಪ್ತಪ್ರಜ್ಞೆ (Collective unconsciousness)ಯತ್ತ ಕರೆದೋಯ್ಯತ್ತದೆ ಎನ್ನುತ್ತಾನೆ. ಇದೇ ಸಂದರ್ಭದಲ್ಲಿ ಬೇಕೊಫೆನ್ ಹೇಳುವ ಇನ್ನೊಂದು ಮಹತ್ವದ ವಿಚಾರವನ್ನೂ ಗಮನಿಸಬಹುದು:
“It has been said that myth, like quicksand, can never provide a firm foothold. This reproach applies not to myth it-self, but only to the way it has been handled. Multiform and shifting in its out word manifestation, myth nevertheless follows, fixed laws, and can provide as definite and secure results as any other source of historical knowledge. Product of a cultural period in which life had not yet broken away from the harmony of nature. it shares with nature that unconscious lawfulness which is always lacking in the works of free reflection. Every where there is system, every where co-hension; in every detail the expression of a fundamental law whose abundant manifestations demonstrate its inner truth and natural necessity”.

ಈ ಪುರಾಣ ಕಥೆಗಳನ್ನು ಅರಿಯುವ ವಿಧಾನವನ್ನು ಕುರಿತು ಕ್ಯಾಂಪ್‌ಬೆಲ್ ಹೀಗೆ ಹೇಳುತ್ತಾನೆ:

“…mythologies arise from and are governed by the psychological laws that control our own profoundest sentiments, the surest way to interpret them is not through intellectual ratiocination but the exercise of our psychologically congnate imagination…..”
ಈ ಎಲ್ಲ ಮಾಹಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ದೇವದತ್ತ-ಕಪಿಲ-ಪದ್ಮಿನಿಯರ ಪ್ರಸಂಗದತ್ತ ನೋಡಿದರೆ ಕೆಲ ಸಂಗತಿಗಳು ಸ್ಪಷ್ಟವಾಗುತ್ತವೆ i) ಈ ಪ್ರಸಂಗದಲ್ಲಿ ಮೂರು ಪಾತ್ರಗಳ ಹೊರತಾಗಿ ಬೇರೆ ಪಾತ್ರಗಳು ಬರುವದಿಲ್ಲ. ii) ಪದ್ಮಿನಿಯ ಪಾತ್ರದಲ್ಲಿ ಸುಪ್ತಪ್ರಜ್ಞೆಯ ನಿಯಮ (Unconscious lawfulnese) ವೊಂದು ಶಕ್ತಿಯುತವಾಗಿ ನಾಟಕದಲ್ಲಿ ಮೂಡಿಬಂದಿದೆ. iii) ಕಪಿಲ ದೇವದತ್ತರು ಈ ನಿಯಮದಲ್ಲಿ ಆ ನಿಯಮದ ಅರಿವಿನೊಡನೆಯೇ ಸಿಕ್ಕಿಹಾಕಿಕೊಂಡ ಎರಡು ದೂರುಗಳನ್ನು ಬಿಂಬಿಸುತ್ತಾರೆ. ಆದರೆ ಈ ಪ್ರಸಂಗದ ಅರ್ಥ ಇಷ್ಟಕ್ಕೇ ಮುಕ್ತಾಯಗೊಳ್ಳುವದಿಲ್ಲ. ದೇವದತ್ತ ಪೂರ್ಣತ್ವವನ್ನು ಮುಟ್ಟುವದು ಕಪಿಲನ ಸೋಲಿನ ಆಧಾರದ ಮೇಲೆಯೆ. ಈ ಸೋಲಿಗೆ ಸುಪ್ತಪ್ರಜ್ಞೆಯ ನಿಯಮದ ಪ್ರತಿನಿಧಿಯಂತಿರುವ ಪದ್ಮಿನಿ ಹಾಗೂ ಅತಿ ಮಾನವ ಶಕ್ತಿಯಾಗಿರುವ ಕಾಲಿದೇವಿಯ ಕೈವಾಡಗಳೂ ಕಾರಣ. ಆದರೆ ದೇವದತ್ತನ ಪೂರ್ಣತ್ವ ಅಲ್ಪಕಾಲದ್ದು, ದೇವದತ್ತನ ಪೂರ್ಣತ್ವದ ಅಂಶ ಕಡಿಮೆಯಾದೊಡನೆ ಪದ್ಮನಿ ಮತ್ತೆ ಕಪಿಲನ ದೈಹಿಕ ಆಕರ್ಷಣೆಗೆ ಒಳಗಾಗುತ್ತಾಳೆ. ಬಯಸದೇ ಬಂದ ಪೂರ್ಣತ್ವ ಕೂಡ ದುರಂತದಲ್ಲಿಯೇ ಕೊನೆಗೊಳ್ಳುತ್ತದೆ.

ದೇವದತ್ತ-ಕಪಿಲ-ಪದ್ಮನಿಯರ ಪ್ರಸಂಗವನ್ನು ನಾಟ್ಯೀಕರಿಸಿ ಅದರ ಅರ್ಥವನ್ನು ಈ ಯುವ ಧೀಮಂತ ಪ್ರಯತ್ನವೊಂದು ನಾಟಕದಲ್ಲಿ ನಡೆದಿದೆ. ಚೆಲ್ಲುಹುಡುಗಿಯಂತೆ ಚಿತ್ರಿತವಾಗಿರುವ ಪದ್ಮನಿ ಪುರಾಣಕತೆಯ ಹಿಂದಿರುವ ಸುಪ್ತಪ್ರಜ್ಞೆಯ ಅರಿವನ್ನು ಆ ನಾಟಕದಲ್ಲಿ ಆಳವಾಗಿ ಮೂಡಿಸುತ್ತಾಳೆ. ಈ ಪ್ರಸಂಗದ ಮೊದಲ ಭಾಗದಲ್ಲಿ – ಪದಿನಿಯ ಪಾತ್ರ ಅದರ ನಿಜವಾದ ಅರ್ಥದಲ್ಲಿ ರೂಪುಗೊಳ್ಳುತ್ತಿರುವಾಗ -ಭಾಗವತ ಕೇವಲ ಒಬ್ಬ ಕತೆಗಾರನ ಕ್ರಿಯೆಯಲ್ಲಿ ಮಾತ್ರ ತೊಡಗುತ್ತಾನೆ. ಪದ್ಮಿನಿಯು ಕಪಿಲ ದೇವದತ್ತರಿಗಿಂತ ಭಿನ್ನವಾಗಿದ್ದಾಳೆ. ಅವಳು ಉಪಯೋಗಿಸುವ ಪ್ರತಿಮೆ, ಉಪಮೆಗಳೆಲ್ಲ ಹೊರಗಿನ ಪ್ರಕೃತಿಗೆ ಸಂಬಂಧಿಸಿದ್ದಾಗಿದ್ದರೆ, ದೇವದತ್ತ ಉಪಯೋಗಿಸುವ ಪ್ರತಿಮೆಗಳೆಲ್ಲ ಹೆಚ್ಚಾಗಿ ಭೌತಿಕ ಜಗತ್ತಿಗೆ ಸೇರಿದವೆಂಬುದನ್ನು ಗಮನಿಸಬೇಕು. ಕಪಿಲ ಮುತ್ತೈದೆ ಹೂವನ್ನು ಕಿತ್ತಲು ಹೋದಾಗ ಪದ್ಮಿನಿ ತನ್ನ ಸ್ವಗತದಲ್ಲಿ ಉಪಯೋಗಿಸುವ ಭಾಷೆ ಇದು : ‘……ಅಂಗಿ ತಗೆದು ಹಾಕಿ, ಧೋತರ ಎತ್ತಿಕಟ್ಟಿ ಕೊಂಬೆಗೆ ಜಿಗಿದೇ ಬಿಟ್ಟ. ಚೈತನ್ಯದ ಜಲಪಾತ ! ಮೈ ಮಾತ್ರ ಎಂಥ ಮೈ. ಬೆನ್ನಲ್ಲಿ ಸರೋವರದ ತರಂಗಗಳ ಹಾಗೆ ಸ್ನಾಯುಗಳು ಕುಣೀತವ……. ‘ ಇದೇ ಸಂದರ್ಭದಲ್ಲಿ ದೇವದತ್ತನ ಸ್ವಗತದಲ್ಲಿ ಬರುವ ಭಾಷೆ ಹೀಗಿದೆ: …….ಅಲ್ಲಿ ಏಳೋ ಅರಿಷಣ, ನೇರಿಲ ಜ್ವಾಲೆ ನೋಡು. ತನ್ನ ಇಡಿಯ ಅಂತರಂಗ ಕರಗಿಸಿ ಅವನ ಮುಸಿಯಲ್ಲಿ ಎರಕ ಹೊಯ್ದು ಪುಟ ಇಡುತ್ತಿದ್ದಾಳೆ.’

ಭಾಗವತ ತೋರಿಕೆಗೆ ಕೇವಲ ವ್ಯಾಖ್ಯಾನಕಾರನಂತೆಯೋ ಅಥವಾ ಕತೆಗಾರನಂತೆಯೋ ಕಂಡರೂ ಅವನು ಸಮಸ್ಯೆಯ ರೂಪದಲ್ಲಿ ಎಲ್ಲವನ್ನೂ ನೋಡುವದನ್ನು ವೀಕ್ಷಿಸಿದರೆ ಅವನು ನಾಟಕ ಆಡಿಸುತ್ತಿರುವ ಕ್ರಿಯೆಯು ಬೇಕೊಫನ್ ಹೇಳಿದ ‘free reflection’ ದ ಸಾಲಿಗೆ ಸೇರಿದಂತಹದೆಂಬುದನ್ನು ಮರೆಯಬಾರದು. ಅವನು ಆಡಿಸುವ ಆಟದಲ್ಲಿ -ನಟ ಬರುವದು ಹೋಗುವದು, ಹಯವದನನ ಪ್ರವೇಶ, ಕಪಿಲ-ದೇವದತ್ತ -ಪದ್ಮಿನಿಯರ ಪ್ರಸಂಗ ಒಂದು ರೀತಿಯ ಸುಸಂಬದ್ಧ ಜೀವನದ ತರ್ಕವಿದೆ, ಯಕ್ಷಗಾನದ ಚೌಕಟ್ಟಿದೆ. ಆದರೆ ಅವನೇ ಆಡಿಸುವ ದೇವದತ್ತ-ಕಪಿಲ-ಪದ್ಮನಿಯರ ಪ್ರಸಂಗವನ್ನು ಇದೇ ತರ್ಕದ ಸಹಾಯದಿಂದ ಅರ್ಥೈಸಲಾಗುವದಿಲ್ಲ. ಪುರಾಣಕತೆ ಎಂದು ತಿಳಿದೇ ಇದನ್ನು ಅರ್ಥೈಸಿದರೆ ನಾಟಕದ ಒಳಪದರಗಳು ಬಿಚ್ಚಿಕೊಳ್ಳುತ್ತವೆ.

ಹಯವದನನ ಕತೆಗೂ ಪದ್ಮನಿಯ ಪ್ರಸಂಗಕ್ಕೂ ಕೊಂಡಿಯಂತಿರುವವರು ಕಾಲಿದೇವಿ ಮತ್ತು ಭಾಗವತ, ಕಾಲಿದೇವಿ ಅತಿಮಾನವಶಕ್ತಿಯನ್ನು ಹೊಂದಿಯೂ ಒಂದು ರೀತಿಯಲ್ಲಿ ಹಾಸ್ಯಪ್ರವೃತ್ತಿ ಉಳ್ಳವಳು, ಪದ್ಮಿನಿಯ ಇಷ್ಟಾರ್ಥವನ್ನು ಪೂರ್ತಿಗೊಳಿಸುತ್ತಾಳೆ, ಹಯವದನನನ್ನು ಪೂರ್ಣಾಂಗನನ್ನಾಗಿ ಮಾಡುತ್ತಾಳೆ. ಎಲ್ಲವನ್ನೂ ಸ್ವಾರ್ಥ-ನಿಸ್ವಾರ್ಥ, ಕಪ್ಪು-ಬಿಳಿ ಎಂದೇ ನೋಡುವ ಇವಳು ಜೀವನದ ತಿರುವುಗಳನ್ನು ನಿರ್ಧರಿಸುವ ಶಕ್ತಿಯನ್ನೂ ಪಡೆದಿದ್ದಾಳೆ; ಭಾಗವತ ಸೂಚಿಸುವ ‘ಹಣೆ ಬರಹ’ವನ್ನು ನಿರ್ಧರಿಸುತ್ತಾಳೆ.

ಸಂಸ್ಕೃತಿ ಪೂರ್ವಕಾಲಕ್ಕೆ ಸೇರಿದ ಪದ್ಮಿನಿಯ ಕುಡಿ-ಪುರಾಣಕಾಲದ ಸುಪ್ತಪ್ರಜ್ಞೆಯ ನಿಯಮದ ಕುಡಿ–ಅದೇ ಕಾಲದೊಡನೆ ಸಂಬಂಧ ಹೊಂದಿದ ಹಯವದನನನ್ನು ಮುಟ್ಟಿದ ತಕ್ಷಣ ಆತ ತಾನು ಬಯಸಿದ ಪ್ರಾಣಿವರ್ಗಕ್ಕೆ ಸೇರುತ್ತಾನೆಂಬ ಅರ್ಥವನ್ನು ನಾಟಕದ ಕೊನೆ ಧ್ವನಿಸುತ್ತದೆ. ಆಧುನಿಕ ಕಾಲದ ಪ್ರತಿನಿಧಿಯಂತಿರುವ, ಕೇವಲ ಕಾಮದ ಪ್ರತಿಫಲವಾಗಿರುವ ಹಯವದನ ಕಾಲಿದೇವಿಯ ಹತ್ತಿರ ‘ಮನುಷ್ಯನನ್ನಾಗಿಸು’ ಎಂದು ಕೇಳುವದನ್ನೇ ಮರೆತು ಈಗ ಪ್ರಾಣಿವರ್ಗಕ್ಕೆ ಸೇರುವ ತವಕದಲ್ಲಿರುವದನ್ನು ನೋಡಿದರೆ, ನಾಟಕಕಾರರು ಇದೇ ಸಮಾಜದ ನಡತೆಯ ಬಗ್ಗೆಯೇ ಸೂಕ್ಷ್ಮವಾದ ವ್ಯಂಗ್ಯವನ್ನು ನಾಟಕದಿಂದ ಧ್ವನಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ನಿಜವಾದ ಅರ್ಥದಲ್ಲಿ ಪೂರ್ಣಾಂಗನಾದ ದೇವದತ್ತ ಕೂಡ ಶಿರಸ್ಸಿನ ಶಕ್ತಿಗೆ ತಲೆಬಾಗಿ ದುರಂತವನ್ನೆದುರಿಸಬೇಕಾಗುತ್ತದೆ. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ ದುರಂತ ಇದಾದರೆ ಹಯವದನನದು ಪ್ರಾಣಿರೂಪದಲ್ಲಿ ಪೂರ್ಣಾಂಗನಾದೆ ಎಂದು ಭ್ರಮಿಸಿ ಜೀವಿಸುವದು ಆಧುನಿಕ ಜೀವನದ ಐರನಿ. ಕಪಿಲ-ದೇವದತ್ತ-ಪದ್ಮಿನಿಯರ ಪ್ರಸಂಗದಲ್ಲಿ ಕಪಿಲ ಮತ್ತೆ ಶಕ್ತಿಯನ್ನು ಪಡೆಯುವಾಗ ಪ್ರಯತ್ನ, ಪ್ರಯಾಸಗಳ ಅಂಶವಿದೆ: ಶಿರಸ್ಸಿಗೆ ತಲೆಬಾಗಿ ತನ್ನ ಪೂರ್ಣತ್ವವನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ದೇವದತ್ತನಿಗೆ ಅನ್ನಿಸಿದಾಗಲೆಲ್ಲ ದುಃಖದ ಛಾಯೆ ಇದೆ. ಆದರೆ ಹಯವದನ ಮೊದಲು ಮನುಷ್ಯರೂಪಕ್ಕಾಗಿ ದೇವರು ದಿಂಡಿರನ್ನು ಮೊರೆ ಹೊಕ್ಕರೆ, ನಂತರ ವಾಣಿಯಿಂದ ಮುಕ್ತಿ ಪಡೆಯಲು ರಾಷ್ಟ್ರಗೀತೆಯ ಮೊರೆ ಹೋಗುತ್ತಾನೆ. ಕಪಿಲ-ದೇವದತ್ತ-ಪದ್ಮಿನಿಯರ ಪ್ರಸಂಗದಲ್ಲಿರುವ ಒಳಪದರುಗಳೆಲ್ಲ, ಕೊನೆಯಲ್ಲಿ ಬರುವ ಹಯವದನನ ಪ್ರಸಂಗಕ್ಕೆ ಹೊಸ ಅರ್ಥದ ಭಾಷ್ಯವನ್ನು ಬರೆಯುತ್ತದೆ. ಪದ್ಮಿನಿಯ ಕುಡಿಯಿಂದ ಪೂರ್ಣತ್ವ ಲಭಿಸುವದೆಂಬ ನಿರೀಕ್ಷೆ ಇಲ್ಲದಾಗ ಪೂರ್ಣಾಂಗನಾಗುತ್ತಾನೆ ಹಯವದನ. ಪೂರ್ಣಮನುಷ್ಯನಾಗುತ್ತೇನೆಂದು ಬಯಸಿ ಕಾಲಿದೇವಿಯ ಹತ್ತಿರ ಹೋದಾಗ ಮನುಷ್ಯವಾಣಿಯುಳ್ಳ ಕುದುರೆಯಾಗಿ ಮರಳುತ್ತಾನೆ.
೩
ಕಾರ್ನಾಡರ ಗ್ರಾಂಥಿಕ ಭಾಷೆಯ ಉಪಯೋಗದ ಬಗ್ಗೆ ಆಡುಮಾತಿನ ತಪ್ಪು ಕಲ್ಪನೆಯೊಡನೆ, ‘ಅನುಭವ’ ವೆಂಬ ಕ್ಲೀಷೆಯ ಉಪಯೋಗದೊಡನೆ ಸಾಕಷ್ಟು ಗೊಂದಲ ಹುಟ್ಟಿಕೊಂಡಿದೆ. ‘ಹಯವದನ’ ನಾಟಕದಲ್ಲಿ ಉಪಯೋಗವಾದ ಭಾಷೆಯ ಬಗ್ಗೆ ನನ್ನ ಆಕ್ಷೇಪಣೆ ಇರದಿದ್ದರೂ, ನಾಟಕದ ಓಘಕ್ಕೆ ತಕ್ಕಂತಹ ಭಾಷೆಯನ್ನು ಉಪಯೊಗಿಸುವಲ್ಲಿ ಕಾರ್ನಾಡರು ಯಶಸ್ವಿಯಾಗಿಲ್ಲ ಎಂಬುದನ್ನು ಒಪ್ಪುತ್ತೇನೆ. ನಾಟಕದ ಭಾಷೆ ಜಾನಪದವಾಗಿರಬೇಕೊ, ಗ್ರಾಂಥಿಕವಾಗಿರಬೇಕೋ, ದಿನ ಬಳಕೆಯ ಮಾತಾಗಿರಬೇಕೊ ಎನ್ನುವದು ಮುಖ್ಯವಲ್ಲ. ಆದರೆ ಪಾತ್ರಗಳು ಒಂದು ಮಾನವೀಯ ಸಂದರ್ಭದ ತುಮುಲಕ್ಕೆ ಒಳಗಾದಾಗ ಉಪಯೋಗಿಸುವ ಭಾಷೆಯ ಧ್ವನಿಯ ಬಗ್ಗೆ ಮಾತ್ರ ನಾಟಕಕಾರನಿಗೆ ಅರಿವಿರಬೇಕು. ದೇವದತ್ತ, ಕಪಿಲ ಹಾಗೂ ಪದ್ಮಿನಿಯರು ತಮ್ಮ ಮಾನಸಿಕ ಹಾಗೂ ದೈಹಿಕ ಪದರುಗಳೊಡನೆ (round charecters) ನಾಟಕದಲ್ಲಿ ಮೂಡಿಬರುತ್ತಾರೆ. ಪದ್ಮಿನಿಯನ್ನು ಕೇಂದ್ರವಾಗಿಟ್ಟುಕೊಂಡು ಈ ಪ್ರಸಂಗವನ್ನು ಒಂದು ಮಾನವ ಸಂದರ್ಭದಲ್ಲಿ ಅರ್ಥೈಸಬೇಕೆಂಬ ಪ್ರಯತ್ನ ನಾಟಕದಲ್ಲಿರುವಾಗ, ಈ ಎಲ್ಲ ಪಾತ್ರಗಳೂ ತಮ್ಮದೇ ಆದ ಭಾಷೆಯನ್ನು ಬೇಡಿ ಬಯಸುತ್ತವೆ. ಆದರೆ ನಾಟಕದಲ್ಲಿ ಕೆಲವೆಡೆ ನಾಟಕಕಾರು ಈ ಬೇಡಿಕೆಯ ಬಗ್ಗೆ ನಿರ್ಲಕ್ಷವನ್ನು ತೋರಿಸಿದ್ದಾರೆ. ಕಪಿಲ, ಪದ್ಮಿನಿಯ ಮನೆ ಹುಡುಕಿಕೊಂಡು ಹೊರಟನಂತರ ಆಡುವ ಮಾತು (ಪು. ೨೫) ಹಾಗೂ ಭಾಗವತನ ಮಾತುಗಳ ನಡುವೆ ಯಾವ ವ್ಯತ್ಯಾಸವೂ ಕಾಣುವದಿಲ್ಲ. ಇಂಥ ಸಂದರ್ಭಗಳಲ್ಲಿ ಗ್ರಾಂಥಿಕ ಹಾಗೂ ಜಾನಪದ ಭಾಷೆ ಎಂದು ಚರ್ಚಿಸಿ ಭಾಷೆಯನ್ನು ಉಪಯೋಗಿಸುವದಕ್ಕಿಂತ ದೇವದತ್ತನ ದುಗುಡವನ್ನು ವ್ಯಕ್ತಪಡಿಸುವ ಹೊಸ ಭಾಷೆಯೊಂದನ್ನು ನಿರ್ಮಿಸಬೇಕಾಗುತ್ತದೆಂಬುದನ್ನು ಗಮನಿಸಬೇಕು. ಇದೇ ರೀತಿಯಾಗಿ ಕಪಿಲ ಮುತ್ತೈದೆಯ ಹೂವುಗಳನ್ನು ತರಲು ಹೋದಾಗ ಪದ್ಮಿನಿ ಹಾಗೂ ದೇವದತ್ತರ ಸ್ವಗತಗಳೆಲ್ಲ ಸಂದರ್ಭಕ್ಕೆ ಅನುಗುಣವಾಗಿರದ ಉಚ್ಚಸ್ವರದ ಶಬ್ದ (loud words) ಗಳಲ್ಲಿಯೇ ಇವೆ ; ಹತೋಟಿಯಲ್ಲಿಡಲಾಗದ ಮನದ ಹರಿದಾಟವನ್ನು ಸ್ವಗತಗಳಲ್ಲಿ ಸೂಚಿಸುವ ನಿಶ್ಯಬ್ದವಾದ (mute words) ವಾಕ್ಯಪುಂಜಗಳ ಸುಳಿವೇ ಇಲ್ಲ. ಪದ್ಮಿನಿ ಹಾಗೂ ದೇವದತ್ತರು ನಿಜವಾದ ಮಾನವರಾಗಿ ಮೂಡಿ ಬರಬೇಕಾದರೆ ; ನಮ್ಮ ಅಂತರಂಗವನ್ನು ಇನ್ನೂ ಆಳವಾಗಿ ಬಗೆಯಬೇಕಾದರೆ; ಅವರು ಈ ಸಂದರ್ಭದಲ್ಲಿ ಎದುರಿಸುತ್ತಿರುವ ದ್ವಂದ್ವ, ಸಂಕಟ ಮುಂತಾದವನ್ನು ಪಾತ್ರಗಳ ಭಾಷೆಯಲ್ಲಿ ಒಡ ಮೂಡಿಸಬೇಕಾಗುತ್ತದೆ. (ಆ ಭಾಷೆ ಎಂಥದಿರಬೇಕೆಂಬ ನಿರ್ಧಾರ ಕೈಗೊಳ್ಳುವವನು ಕೊನೆಗೂ ನಾಟಕಕಾರನೆ.) ಈ ಅರಿವು ಇಲ್ಲದಿದ್ದರೆ ನಾಟಕ ತನಗಿರುವ ಒಂದು ದೊಡ್ಡ ಅನುಕೂಲತೆಯುತ್ತ ನಿರ್ಲಿಪ್ತವಾಗಿ ಉಳಿದು, ಪಾತ್ರಗಳ ಸೂಕ್ಷ್ಮತೆ ಎಲ್ಲ ಮಾಯವಾಗಿ ಕೇವಲ ಘಟನೆಗಳಲ್ಲಿ ಆಶ್ರಯ ಪಡೆಯಬೇಕಾಗುತ್ತದೆ. ಈ ದೃಷ್ಟಿ ಯಿಂದ ‘ಹಯವದನ’ ‘ತುಘಲಕ’ ನಾಟಕಕ್ಕಿಂತ ಹೆಚ್ಚು ಯಶಸ್ವಿ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಪುರಾಣದ ವ್ಯಕ್ತಿಗಳನ್ನು ಭಾಗವತನ ಹಾಗೂ ಪಾತ್ರಗಳ ಭಾವಗೀತಾತ್ಮಕ ಮಾತುಗಳಲ್ಲಿ ಕಡೆದಿರುವದು. ಹೆಣ್ಣು ಮೇಳದ ಹಾಡುಗಳೂ ಇದಕ್ಕೆ ಸಹಾಯಕವಾಗಿವೆ. ಇದೆಲ್ಲವೂ ನಾಟಕದ ಶಿಲ್ಪದ ಅವಿಭಾಜ್ಯ ಅಂಗವೆಂಬಂತೆ ಬೆಳೆದು ಬಂದಿವೆ. ಪದ್ಮಿನಿಯ ಮನಸ್ಸಿನ ತುಮುಲವನ್ನು ಚಿತ್ರಿಸುವಲ್ಲಿ ಗೊಂಬೆಗಳನ್ನು ಉಪಯೋಗಿಸಿಕೊಂಡದ್ದು ಭಾಷೆಯ ಬಗ್ಗೆ ಇರಬಹುದಾದ ಬೇಡಿಕೆಯನ್ನು ಸಾಕಷ್ಟು ತಗ್ಗಿಸಿದೆ. ನಾಟಕ ಸಂಭವನೀಯ ಹಾಗೂ ಆಸಂಭವನೀಯ ಲೋಕಗಳಲ್ಲಿ ತುಯ್ಯುತ್ತಿರುವದರಿಂದ ನಾಟಕದ ಚಲನೆಯಲ್ಲಿಯೇ ಕೇಂದ್ರಸ್ಥಾನದಲ್ಲಿರುವ ಪದ್ಮನಿಯ ಮನಸ್ಸಿನ ಸ್ಥಿತಿಗಳು ಮೂಡಿಬಂದಿವೆ, ಆದರೆ ‘ತುಘಲಕ’ ದಂತಹ ನಾಟಕದಲ್ಲಿ ಭಾಷೆಯನ್ನು ಗಟ್ಟಿಯಾಗಿ ಹೇಳಿದಾಗ ಬರಬಹುದಾದ ಧ್ವನಿಗಳ ಸಂಪೂರ್ಣ ಅರಿವು ನಾಟಕಕಾರರಿಗೆ ಇಲ್ಲದ್ದರಿಂದ ಎಷ್ಟೋ ಸಲ ಆಭಾಸ ಉಂಟಾಗುತ್ತದೆ, ಆದರೆ ಈ ಎರಡೂ ನಾಟಕಗಳಲ್ಲಿ ಈ ಮೇಲೆ ವಿವರಿಸಿದ ಭಾಷೆಯ ಅರಿವು ಇಲ್ಲವೇ ಇಲ್ಲವೆಂದು ಹೇಳುವುದು ಮಾತ್ರ ಸಾಧ್ಯವಿಲ್ಲ. ಈ ಕ್ರಿಯೆಯ ಅರಿವಿನೊಡನೆ ಕಾರ್ನಾಡರು ಕೆಲವೆಡೆ ಅದ್ಭುತವಾದ ಪರಿಣಾಮವನ್ನು ಒದಗಿಸಿದ್ದಾರೆ ಎನ್ನುವದು ಅಷ್ಟೇ ಸತ್ಯ. ಈ ಕ್ರಿಯ ಹಂತ ಹಂತವಾಗಿ ಹಿಡಿತಕ್ಕೆ ಸಿಕ್ಕುವಂಥದು. ನಿಜವಾದ ನಾಟಕಕಾರನ ಈ ಕಾಯಕದಲ್ಲಿ ಕಾರ್ನಾಡ ಹಾಗೂ ಕಂಬಾರರನ್ನುಳಿದು ಬೇರೆ ಯಾವ ನಾಟಕಕಾರರೂ ತೊಡಗಿಲ್ಲವೆಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಕಾರ್ನಾಡರ ಭಾಷೆಯ ಬಗ್ಗೆ ಎದ್ದಿರುವ ಗೊಂದಲದ ಪರಿಚಯವಾಗುತ್ತದೆ. ‘ತುಘಲಕ’ದ ನಂತರ ನಿಜವಾದ ನಾಟಕವನ್ನು ಬರೆದವರು ಮತ್ತೆ ಕಾರ್ನಾಡರೇ ಎನ್ನುವ ಸತ್ಯ ಈ ನನ್ನ ಮಾತಿಗೆ ಇನ್ನಷ್ಟು ಪುಷ್ಟಿಯನ್ನು ಕೊಡುತ್ತದೆ.

ಪುರಾಣಕಾಲದ ಕತೆಯೊಂದನ್ನು ನಾಟ್ಯೀಕರಿಸಿ ಅದರ ಸೂಕ್ಷ್ಮ ಸತ್ಯವನ್ನು ಸಮಕಾಲೀನ ಜೀವನದ ಅನಾರೋಗ್ಯಕರ ಬೆಳವಣಿಗೆಯನ್ನು ಗುರುತಿಸಲಿಕ್ಕೆ, ವ್ಯಾಖ್ಯಾನಿಸಲಿಕ್ಕೆ ಉಪಯೋಗಿಸಿಕೊಂಡ ‘ಹಯವದನ’ ಕನ್ನಡ ಸಾಹಿತ್ಯಕ್ಕೆ ಒಂದು ಅರ್ಥಪೂರ್ಣ ಕೊಡುಗೆ.

ಟಿಪ್ಪಣಿ :
1, “Mortuary Symbolism’ by J. J, Bachofen.
– Section on India
2. “Mother Right’ by J. J, Bachofen.
– Introduction,
3, Myth Religion And Mother Right.
– Introduction,

Close

ಮತ್ತೂಂದು ಕವನ

ಮತ್ತೂಂದು ಕವನ

ಎಂ. ಎಸ್. ಜಯಪ್ರಕಾಶ್‌

ರಣ ರಣ
ಬೇಸಿಗೆಯ
ಬಿರುಬಿಸಲಿಗೆ ಬರಡಾದ ನೆಲಕ್ಕೆ
ಓಂದುದಿನ ಇದ್ದಕ್ಕಿದ್ದಂತೆ
ಬಂಜೆಗಟ್ಟಿದ್ದ ಆಕಾಶ ಫಲವತಿಯಾಗಿ
ಒಂದು ಹದ ಮಳೆ ಸುರಿಸಿ, ದಡದಡಾ
ಚರಂಡಿ ಗಲ್ಲಿ ಓಣಿಗಳಲ್ಲೆಲ್ಲ
ನೀರಾಗಿ ಹರಿದು
ಮಣ್ಣಾಗಿ ತುಂಬಿ
ಮರ್ತ್ಯದ ಕಂಪಿನೊಡನೆ
ಕೆನ್ನೀರಾಗಿ ಗಡಿದಾಟಿ ರಸ್ತೆಗೆ ಹರಿದು ಕ್ಷಣದಲ್ಲೇ, ಮಾಯವಾಯಿತು!

ನಾನು ನೋಡಿದೆ

ಮರುದಿನ,
ಸಿಕ್ಕಷ್ಟನ್ನೆ ಹೀರಿ
ತಂಪಿನ ಸ್ಪರ್ಶಕ್ಕೇ ಪುಟಿದು ಪುಲಕಿತವಾದ
ಬರಡು ನೆಲದ
ಗೇಣು ಗೇಣಳತೆಯಲ್ಲೂ
ನೋಡಿದರೆ
ಹಸಿರು ಕೊನರುವ ಸಂಭ್ರಮ!

‘ಅದೇ’ ನಾನು ನೋಡಿದೆ

Close

ತಿಮಿಂಗಿಲ

ತಿಮಿಂಗಿಲ

ಎಂ. ಎನ್. ವ್ಯಾಸರಾವ್‌

ಎಂಟರವನಿದ್ದಾಗ
ಬಿಟ್ಟ
ಕೆಲವು ಹಸಿ ಹಸಿ ಬಯಕೆಗಳನ್ನು
ಅಪ್ಪ
ಕಿತ್ತೆಸೆದು
ಮಣ್ಣಾಳದಲ್ಲಿ ಹೂತುಬಿಟ್ಟಾಗ
ಯಾರು ಇರದ
ವೇಳೆಯಲ್ಲಿ ತಡಕಿ
ಎಬ್ಬಿ
ಗುಟ್ಟಾಗಿ ನೀರಿಟ್ಟು
ಗಾಳಿ ಊದಿ
ಬೆಳೆಸಿದ್ದಕ್ಕೆ
ಕೈ ಕಾಲು ತುಂಬಿಕೊಂಡು
ನಿಂತದ್ದು
ಮೊನ್ನೆ ನೋಡಿದಾಗ
ಕುಶಿಪಡಬೇಕೆನಿಸುತ್ತೆ
* * * *
ನೀರಲ್ಲಿ ನೆಂದು
ಗಾಳಿ ನುಂಗಿ
ನನ್ನುದ್ದಕ್ಕೂ ಮೂತಿ ಚಾಚುವುದು
ಕಂಡಾಗ
ಒಮ್ಮೊಮ್ಮೆ ನನಗೇ ದಿಗಿಲಾಗುತ್ತೆ:
ಮಣ್ಣು ಮಾಂಸ
ಕೊಡದಿದ್ದರೂ
ಆಗ, ತಾನೇ ಒಂದಕ್ಕೆರಡಾಗಿ ಬೆಳೆಯುತ್ತೆ;
ಸುತ್ತ ಬಿಗಿದ ಬೇಲಿಯನ್ನೇ
ನುಂಗುತ್ತ
ಹತ್ತಿರ ಬಂದು
ನಾಲಿಗೆ ಚಾಚತ್ತೆ
ಬಾಯಿ ಹಾಕತ್ತೆ
ನೋಡ ನೋಡುತ್ತಿದ್ದಂತೆ
ಅಮೀಬವಾಗಿದ್ದು
ತಿಮಿಂಗಲ ವಾಗುತ್ತಾ
ಬಾಯ್ದೆರೆಯುತ್ತಾ
ಇಂಚು ಇಂಚಾಗಿ
ನನ್ನನ್ನೇ
ಒಳಕ್ಕೆಳೆದುಕೊಳ್ಳತ್ತೆ.

Close

ಹಯವದನ ಓದಿ, ನೋಡಿ-

ಹಯವದನ ಓದಿ, ನೋಡಿ –

-ಯು. ಆರ್. ಅನಂತಮೂರ್ತಿ

ಕಾರ್ನಾಡರ ಹಯವದನದ ವಿಷಯ ಗಂಭೀರವಾದ್ದು; ಧಾಟಿ ಲಘುವಾದ್ದು ; ತಂತ್ರ ವಾಸ್ತವತೆಯ ಅಪೇಕ್ಷೆಗಳಿಂದ ನಾಟಕವನ್ನು ಸ್ವತಂತ್ರಗೊಳಿಸುವ ಶೈಲೀಕರಣದ್ದು. ಆದ್ದರಿಂದ ನಾಟಕವನ್ನು ವಿಮರ್ಶಿಸುವಾಗ ಒಂದು ಪ್ರಶ್ನೆ ಏಳುತ್ತದೆ. ಎಷ್ಟು ಸೀರಿಯಸ್ಸಾಗಿ ಈ ನಾಟಕವನ್ನು ಚರ್ಚಿಸುವುದು ನಾವು ನಾಟಕವನ್ನು ಸ್ವೀಕರಿಸಿದ ಕ್ರಮಕ್ಕೆ ಸರಿಹೋಗುತ್ತದೆ ? ಗಂಭೀರವಾದ ಅಪೂರ್ಣತೆಯಂಥ ಸಮಸ್ಯೆಯೊಂದನ್ನು ನಗಿಸುತ್ತ, ರಂಜಿಸುತ್ತ, ಆರಾಮಾಗಿ ಯೋಚಿಸಲು ಪ್ರಚೋದಿಸುತ್ತ ಲೇಖಕ ನಮ್ಮೆದುರು ಇಡುವುದರಿಂದ ನಾವು ಎಷ್ಟು ತಲೆ ಕೆಡಿಸಿಕೊಂಡು ಹಯವದನ ಓದಬೇಕು ? ನೋಡಬೇಕು ?

ಓದಿದಾಗ, ಮತ್ತೆ ಕಾರಂತರ ಪ್ರಯೋಗ ನೋಡಿದಾಗ ನನಗೆ ಆಗಿರುವ ಖುಷಿಯನ್ನು ಅಲ್ಲಗಳೆಯದೆ ಹಯವದನದಿಂದ ನನಗೆ ತೃಪ್ತಿಯಾಗಲಿಲ್ಲ, ಯಾಕೆ – ಎನ್ನುವ ಪ್ರಶ್ನೆಯನ್ನು ನಾಟಕದ ಆಕರ್ಷಕವಾದ ಲಘುಧಾಟಿಗೆ ಅಪಚಾರವಾಗದಂತೆ ಕೇಳುವುದೇ ಈ ನನ್ನ ಲೇಖನದ ಉದ್ದೇಶ. ನನ್ನ ಅತೃಪ್ತಿಗೆ ಮುಖ್ಯ ಕಾರಣವನ್ನು ಹೀಗೆ ಹೇಳಬಹುದು: ಕಪಿಲ ದೇಹದ ಪ್ರತಿನಿಧಿಯಾದಂತೆ ದೇವದತ್ತ ಬುದ್ದಿಯ ಪ್ರತಿನಿಧಿಯಾಗುವುದಿಲ್ಲ. ದೇಹದ ವೀರ‍್ಯವಂತಿಕೆ ಸಹಜವಾಗಿ ಮೂರ್ತವಾದ್ದು : ಕಪಿಲನ ಆಂಗಿಕ ಅಭಿನಯದಲ್ಲಿ ಸುಲಭವಾಗಿ ವ್ಯಕ್ತವಾಗುವಂಥದ್ದು : ನಿರ್ದೇಶಕನ ಕೌಶಲಕ್ಕೆ ಸೇರಿದ್ದು. ಹಾಗೆಯೇ ಮನಸ್ಸಿನ ವೀರ‍್ಯವಂತಿಕೆ ಅಮೂರ್ತವಾದ್ದು ; ಆಂಗಿಕ ಅಭಿನಯವಲ್ಲದೆ, ಮಾತಿನ ಶಕ್ತಿಯ (ವಾಚಿಕ)ಲ್ಲೂ ವ್ಯಕ್ತವಾಗಬೇಕಾದ್ದು ; ಕಪಿಲನ ದೇಹದ ಚುರುಕಿಗೆ ಸರಿಸಾಟಿಯಾದ ದೇವದತ್ತನ ಬುದ್ದಿಯ ಚುರುಕಾಗಿ ಮೂಡಬೇಕಾದ್ದು: ಅಂದರೆ ಅಮೂರ್ತವಾದ್ದನ್ನು ಮೂರ್ತವಾಗಿಸಬಲ್ಲ ನಾಟಕಕಾರನ ಕೌಶಲಕ್ಕೆ ಸೇರಿದ್ದು. ದೇಹದಷ್ಟೇ ಬುದ್ದಿಯೂ ವೀರ‍್ಯವತ್ತಾಗಿರುವುದು ಸಾಧ್ಯವೆಂದು ನಮಗನ್ನಿಸಿದರೆ ಮಾತ್ರ ಪದ್ಮಿನಿಯ ಆಯ್ಕೆಯ ಸಂಕಟ ಅರ್ಥಪೂರ್ಣವಾಗುತ್ತದೆ. ಆದರೆ ನಾಟಕ ಸೋತಿರುವುದು ಇಲ್ಲೆ : ಕಪಿಲ ನಿಜವಾಗುವಷ್ಟು ದೇವದತ್ತ ಆಗುವುದಿಲ್ಲ : ದೇವದತ್ತನಿಗೆ ದೇಹದ ವೀರ‍್ಯವಂತಿಕೆ ಇಲ್ಲ ಮಾತ್ರವಲ್ಲ- ಮನಸ್ಸಿನ ವೀರ‍್ಯವಂತಿಕೆಯೂ ಇಲ್ಲ. ದೇಹದಲ್ಲಿ ಚುರಕಾದ ಕಪಿಲ, ಬುದ್ಧಿಶಕ್ತಿಯಲ್ಲೂ ದೇವದತ್ತನಿಗಿಂತ ಹೆಚ್ಚು ಚುರುಕಾದವ. ಕಪಿಲ ಮತ್ತು ಪದ್ಮಿನಿಗೆ ಹೋಲಿಸಿದರೆ ದೇವದತ್ತ ಒಬ್ಬ ‘ಹ್ಯಾಪ’ ಮನುಷ್ಯ.

ಆದರೂ ನಾಟಕ ಮೇಲ್ನೋಟಕ್ಕೆ ಕಪಿಲನ ದೈಹಿಕ ಚುರುಕಿಗೆ ಸರಿಸಾಟಿಯಾದ ಬೌದ್ಧಿಕ ವೀರ‍್ಯವಂತಿಕೆಯನ್ನು ದೇವದತ್ತನಲ್ಲಿ ಕಾಣಬಹುದೆಂಬ ಭ್ರಮೆಯನ್ನು ಹುಟ್ಟಿಸುತ್ತದೆ. ಇದು ಯಾಕೆ ನೋಡೋಣ. ದೇವದತ್ತ ವಿಪ್ರ: ಕಪಿಲ ಕಮ್ಮಾರ. (ಕಾರಂತರು ಈ ಬ್ರಾಹ್ಮಣ-ಶೂದ್ರ ಅಂತರವನ್ನು ಇಬ್ಬರ ಉಡಿಗೆ ತೊಡಿಗೆಯಲ್ಲಿ ಚೆನ್ನಾಗಿ ಸೂಚಿಸಿದರು.) ಪ್ರಾರಂಭದಲ್ಲಿ ಭಾಗವತ ದೇವದತ್ತನನ್ನು ಹೊಗಳುವ ಈ ಮಾತುಗಳನ್ನು ನೋಡಿ:

“ರೂಪದಲ್ಲಿ ಸುಂದರನಾಗಿಯೂ, ಶರೀರಯಷ್ಟಿಯಲ್ಲಿ ತೆಳ್ಳಗಾಗಿಯೂ, ವಿದ್ಯೆಯಲ್ಲಿ ನಿಸೀಮನಾಗಿಯೂ ಇರುವ ಈ ಯುವಕ ವಿಪ್ರವರ್ಯನಾದ ವಿದ್ಯಾಸಾಗರನ ಏಕಮೇವ ಪುತ್ರ. ತರ್ಕದಲ್ಲಿ ಪ್ರಕಾಂಡ ಪಂಡಿತರನ್ನೂ ಕಾವ್ಯ ಸ್ಪರ್ಧೆಯಲ್ಲಿ ಕಲಾಪಂಡಿತರನ್ನೂ ಎದುರಿಸಿ ದಿಂಡುಗೆಡೆದ ಇವನಂಥ ಇನ್ನೋರ್ವನನ್ನು ರಾಜ್ಯದಲ್ಲಿ ಯಾರೂ ಕಂಡರಿಯರು.” (ಪುಟ 4)

ಭಾಗವತನ ಮಾತಿನ ಧಾಟಿಗೆ ಈ ಹೊಗಳಿಕೆ ಸಹಜವಾಗಿದೆ. ಜೊತೆಗೇ ಪರಂಪರಾನುಗತ ಕಲ್ಪನೆಯಲ್ಲಿ ಎರಕ ಹೊಯ್ದ ವಿದ್ಯಾವಂತ ಯುವಕನ ಚಿತ್ರವನ್ನು ನಾವು ದೇವದತ್ತನಲ್ಲಿ ಅಪೇಕ್ಷಿಸುವಂತ ಈ ಮಾತುಗಳು ಮಾಡುತ್ತವೆ. ಆದರೆ ಕಪಿಲನ ದೈಹಿಕ ಚುರುಕಿಗೆ ಸರಿಸಾಟಿಯಾಗಲು ದೇವದತ್ತ, ಗೊಡ್ಡು ಪಂಡಿತ ಮಾತ್ರನಾಗಿದ್ದರೆ ಸಾಲದು ; ಬೇರೆಯವರ ಮನಸ್ಸನ್ನು ಸೂರೆಮಾಡಬಲ್ಲ ಬುದ್ಧಿಶಕ್ತಿ ಅವನಲ್ಲಿರುವುದು ಅಗತ್ಯ ಇದೆ ಎಂದು ನಾಟಕ ಮತ್ತೆ ಮತ್ತೆ ಸಾರುತ್ತದೆ. ಕಪಿಲ ಹೇಳುತ್ತಾನೆ:

‘ಯಾವ ಹೊಲದಲ್ಲೋ ಕಮ್ಮಾರ ಸಾಲೆಯಲ್ಲೋ ದನಾ ಆಗಿ ಸರಗಾಡ್ತಾ ಇರ‍್ತಿದ್ದೆ, ನಿನ್ನ ಗೆಳೆತನದ ಪುಣ್ಯದಿಂದ ವಿದ್ಯೆ, ಕಾವ್ಯ, ಪಾಂಡಿತ್ಯ ಅಂದರೇನು ಗೊತ್ತಾಯ್ತು, ಮನುಷ್ಯ ಆದೆ’
(ಪು. 20)
ಕಪಿಲನನ್ನು ಮನುಷ್ಯ ಮಾಡಿದವ ದೇವದತ್ತ, ಕಪಿಲ ಎಲ್ಲದರಲ್ಲೂ ದೇವದತ್ತನನ್ನು ಅನುಸರಿಸಲು, ಅವನ ಬಗ್ಗೆ ದೈನ್ಯದಿಂದ ವರ್ತಿಸಲು ಅವರಲ್ಲಿರುವ ಜಾತಿಯ ಅಂತರ ವಲ್ಲದೆ ಕಪಿಲನನ್ನು ಚಕಿತಗೊಳಿಸುವ ಬುದ್ಧಿಶಕ್ತಿ ದೇವದತ್ತನಲ್ಲಿದೆ ಎಂದು ನಾಟಕ ಹೇಳಲು ಅನೇಕ ಕಡೆ ಪ್ರಯತ್ನಿಸುತ್ತದೆ. ಸಂದರ್ಭ ವಿನೋದ ಪೂರ್ಣವಾದ್ದೆಂಬುದನ್ನು ಮರೆಯದೆ ಪದ್ಮಿನಿಯ ಬಳಿ ದೇವದತ್ತನ ಪರವಾಗಿ ಕಪಿಲ ವಹಿಸುವ ಈ ವಕೀಲಿ ನೋಡಿ:

“ಪಿತನಿಗೆ ಮೀರಿದ ಪಂಡಿತ, ಮಹಾಕವಿ ಕಾವ್ಯ ಶಾಸ್ತ್ರ ವಿನೋದ ಪರಿಣತ (ಪ. 29)

ಗಂಭೀರವಾದ ಪರಿಸ್ಥಿತಿಯಲ್ಲಿ ಇಂತಹ ಮಾತು ಬರುತ್ತದೆ. ಮುಂದೆ ತಲೆ ಅದಲು ಬದಲಿದ ನಂತರ ಕಪಿಲ ಹೀಗೆ ಪದ್ಮಿನಿಯನ್ನು ಜರಿಯುತ್ತಾನೆ:

“ನಿನಗೆ ದೇವದತ್ತನ ಬುದ್ಧಿವಂತ ತಲೆ ಬೇಕು. ಕಪಿಲನ ಶಕ್ತಿವಂತ ಮೈ ಬೇಕು.”
(ಪು, 58)
ಕಪಿಲನ ದೇಹದ ಜೊತೆ ದೇವದತ್ತನ ತಲೆ ಪಡೆದ ಪದ್ಮಿನಿ ಹೀಗೆ ಸುಖಿಸುತ್ತಾಳೆ:

“ಅಪ್ರತಿಮ ಮೈ…ಅಪ್ರತಿಮ ಮೆದುಳು…ಅಪ್ರತಿಮ ದೇವದತ್ತ”
(ಪು, 67)

ಹೀಗೆ ಬೇರೆ ಬೇರೆ ಪಾತ್ರಗಳ ಮೂಲಕ ಹೊಗಳಿಸಿಕೊಂಡ ದೇವದತ್ತ ಈ ಹೊಗಳಿಕೆಗೆ ನಾಟಕದಲ್ಲಿ ಎಲ್ಲಾದರೂ ಬಾಧ್ಯನಾಗಿ ಕಾಣುತ್ತಾನೆಯೇ ನೋಡಿದಾಗ ನಮಗೆ ನೀರಾಸೆಯಾಗುತ್ತದೆ. ಮಾತುಗಳಲ್ಲಿ ಕೇಳಿದ್ದು ಕ್ರಿಯೆಯಲ್ಲಿ ಎಲ್ಲೂ ಮೂಡುವುದಿಲ್ಲವಾದ್ದರಿಂದ ಕಾರ್ನಾಡರು ಗೊತ್ತಿದ್ದೋ, ಗೊತ್ತಿಲ್ಲದೆಯೊ ನಾಟಕದ ಉದ್ದಕ್ಕೂ ಹೇಳಿಕೆಗಳ ಮೂಲಕ ಈ ಕೊರತೆಯನ್ನು ತುಂಬಲು ಯತ್ನಿಸಿದ್ದಾರೆ ಎನ್ನಿಸುತ್ತದೆ.

ಇಷ್ಟು ಹೊಗಳಿಸಿಕೊಂಡ ದೇವದತ್ತ ನಿಜವಾಗಿ ನಾಟಕದಲ್ಲಿ ಏನಾಗಿ ನಮಗೆ ವ್ಯಕ್ತವಾಗುತ್ತಾನೆ ನೋಡೋಣ. ಹೇಳಿಕೆಗೂ ನಿಜಕ್ಕೂ ಇರುವ ವ್ಯತ್ಯಾಸ ನಾಟಕದ ಐರನಿಗೆ ಸೇರಿದ್ದಲ್ಲ: ಹೇಳಿದ್ದನ್ನು ಕ್ರಿಯೆ ಮಾಡಲಾರದ ನಾಟಕದ ದೌರ್ಬಲ್ಯಕ್ಕೆ ಸಂಬಂಧಿಸಿದ್ದು. ನಮಗೆ ಕಾಣುವ ದೇವದತ್ತ ಸಾಂಪ್ರದಾಯಿಕ ಕವಿ; ಅದರಲ್ಲೂ ಸವಕಲು ಮಾತಿನ ಕವಿಸಮಯದ ಕವಿ. ತಮ್ಮಲ್ಲೇ ಹೆಚ್ಚು ಅನುರಕ್ತನಾದ ದೇವದತ್ತನಿಗೆ ನಿಜವಾದ ಪ್ರೀತಿಯೇನೆಂದು ತಿಳಿಯುವುದು ಪದ್ಮಿನಿಯ ಜೀವಂತ ಹೆಣ್ಣುತನ ಎದುರಾದಾಗ. ಆಗಲೂ ಅವನ ಕಾವ್ಯಶಕ್ತಿ ಅರಳುವುದಿಲ್ಲ. ವಿರಹ ವೇದನೆಯಲ್ಲಿ ಕಂಡ ದೇವರು ಮತ್ತೆ ನಮಗೆ ಕಾಣುವುದು ಅಸೂಯೆಯಲ್ಲಿ. ಆದರೆ ದೇವದತ್ತನಿಗಿಂತ ಕಪಿಲನಲ್ಲೇ ಸುಪ್ತವಾದ ಹೆಚ್ಚು ಕಾವ್ಯಶಕ್ತಿ ಇರುವುದು. ಕಪಿಲನ ದೈಹಿಕ ವೀರ‍್ಯವಂತಿಕೆಯನ್ನು ಅಭಿನಯಿಸುವ ಘಟನೆಯಲ್ಲೆ ಅವನ ಮನಸ್ಸಿನ ಚುರುಕೂ ನಮಗೆ ತಟ್ಟುತ್ತದೆಂಬುದು ಗಮನಾರ್ಹ.ಪದ್ಮಿನಿಗಾಗಿ ಮರಹತ್ತಿ ಮಯತ್ತೈದೆಯ ಹೂವನ್ನು ಕೊಯ್ದು ತಂದು ಕಪಿಲ ವರ್ಣಿಸುವ ಬಗೆಯಲ್ಲಿ ಅವನ ದೇಹ ಮತ್ತು ಮನಸ್ಸುಗಳ ಉತ್ಕಟತ ಒಟ್ಟಾಗಿ ಎಷ್ಟು ಚೆನ್ನಾಗಿ ಮೂಡುತ್ತದೆ ನೋಡಿ:

“ಇಲ್ಲಿ ನೋಡು ಅರಿಶಿನ ಪಕಳೆ, ಅಲ್ಲಿ ಒಳಗೆ ಪಕಳೆಗಳ ತಳಕ್ಕೆ ಓದು ದೊಡ್ಡ ಕಂಪು ವರ್ತುಳ……ಕುಂಕುಮದ ಹಾಗೆ. ಇಲ್ಲಿ ಪುಂಕೇಸರ ಎರಡಾದಲ್ಲಿ ಬೈತಲೆಯಲ್ಲಿಯ ಸಿಂಧೂರ. ಇಲ್ಲಿ ದುಟಿನ ಹತ್ತಿರ ಕರಿಯ ಮಣಿಗಳ ಹಾಗೆ…’
(ಪುಟ 41)
ಅಸೂಯೆಯಲ್ಲಿ ಮಾತ್ರ ದೇವದತ್ತ ಉತ್ಕಟನಾಗುತ್ತಾನೆ. ಆದರೆ ಪದ್ಮಿನಿಯ ಪ್ರೇಮದಲ್ಲಿ ಕಪಿಲನ ದೇಹ ಮನಸ್ಸುಗಳೆರಡೂ ಬಹಳ ಸಂಭ್ರಮದಿಂದ ಅರಳುತ್ತವೆ. ಅವನೇ ನಿಜವಾದ ಕವಿಯಾಗುತ್ತಾನೆ: ಮನಸ್ಸಿನಲ್ಲೂ ಸೂಕ್ಷ್ಮನಾಗುತ್ತಾನೆ. ವಿಪ್ರನಿಗೆ ಸಹಜವಾದ ಶುಷ್ಕ ಪಾಂಡಿತ್ಯ ಮಾತ್ರ ದೇವದತ್ತನಲ್ಲಿದೆ: ಜಾತಿ ಬಿಟ್ಟರೆ ಕಪಿಲನನ್ನು ಸೂರೆ ಮಾಡಬಲ್ಲ ಬೇರೆ ಕೌಶಲ ಅವನಲ್ಲಿಲ್ಲ ‘ಧರ್ಮಸಿಂಧುವಿನ ಪ್ರತಿ ಎಲ್ಲಿದೆ ?” ಎಂದು ಅವನು ಪದ್ಮಿನಿಯನ್ನು ಕೇಳುತ್ತಾನೆ; ಪಂಡಿತರೊಬ್ಬರಿಗೆ ಸೂತ್ರದ ಅರ್ಥ ತಾನು ಹೇಳಬೇಕು ಅನ್ನುತ್ತಾನೆ. ತಲೆ ಅದಲು ಬದಲಾದಾಗ ಪದ್ಮಿನಿಯ ಹೆಣ್ಣುತನದ ಜಾಣ್ಮೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಬಲ್ಲ ‘ಘಾಟಿ’ ಮನುಷ್ಯನಾಗಿ ಕಾಣಿಸಿಕೊಳ್ಳುತ್ತಾನೆ. ಇವು ಬಿಟ್ಟರೆ ನಾಟಕದಲ್ಲೆಲ್ಲೂ ಅವನ ಬುದ್ದಿಯ ನೈಪುಣ್ಯಕ್ಕೆ ನಿದರ್ಶನಗಳಿಲ್ಲ. ಇನ್ನೊಬ್ಬರ ಮನಸ್ಸನ್ನು ಹೊಗಬಲ್ಲ, ಅಥವಾ ತನ್ನ ಮನಸ್ಸನ್ನ ಸೂಕ್ಷ್ಮವಾಗಿ ತಿಳಿಯಬಲ್ಲ ಕಲ್ಪನಾಶಕ್ತಿ ಅವನಿಗಿಲ್ಲ. “ನನಗೋ ಮರ ಅಂದರೆ ಮರ, ಆಕಾಶ ಅಂದರೆ ಆಕಾಶ” ಎಂದು ತನ್ನ ಕಲ್ಪನಾಹೀನತೆಯ ಬಗ್ಗೆ ಹೇಳಿಕೊಳ್ಳೂವ ಕಪಿಲನಿಗೆ ಕಲ್ಪನಾಶಕ್ತಿಯೂ ಇದೆ; ತನ್ನ ಮನಸ್ಸಿನೊಳಗೆ ನಡೆಯುವುದನ್ನು ಗುರುತಿಸಿಕೊಳ್ಳುವ ಸಾಮರ್ಥ್ಯವೂ ಇದೆ. ಪದ್ಮಿನಿಯನ್ನು ನೋಡಿದ ಕೂಡಲೇ ಆವಳು ‘ಮಿಂಚಿನ ಬುಗ್ಗೆ’: ದೇವದತ್ತನಂಥ ಸುಕುಮಾರನಿಗೆ ಹೇಳಿದವಳಲ್ಲ’: ‘ಇವಳಿಗೆ ಉಕ್ಕಿನ ಗಂಡೇ ಬೇಕು’ ಎಂದು (ಪು. 30) ತಿಳಿಯಬಲ್ಲ ಕಪಿಲ ಬರಿ ‘ಅಪ್ರತಿಮ ಮೈ’ಗೆ ಮಾತ್ರ ಸಂಕೇತವಲ್ಲ. ಇಂತಹ ಮನೋಸೂಕ್ಷ್ಮ ದೇವದತ್ತನಿಗೆ ಮೀರಿದ್ದು. ನಾಟಕಕಾರರ ಆಶಯ ಮೀರಿ ಅವನು ನಾಟಕದಲ್ಲಿ ಅರಳುತ್ತಾನೆ. ಗಾಡಿ ಪ್ರವಾಸ ರದ್ದಾಗಿದೆ ಎಂದು ತಿಳಿದ ಕ್ಷಣ ಅವನು ತನ್ನ ಮನಸ್ಸಿನ ಸಂಕಟವನ್ನು ಗುರುತಿಸಿಕೊಳ್ಳುವ ಬಗೆ ನೋಡಿ:

ಪ್ರವಾಸ ರದ್ದಾಯ್ತು !…ಇನ್ನು ಎಂಟು ದಿನ ಏನು ಮಾಡಲಿ ? ದೇವದತ್ತನ ಮಾತು ಕೇಳಿದ ಕೂಡಲೆ ನನ್ನ ಬಾಳಿನಿಂದ ಎಂಟು ದಿನ ಒರಿಸಿಬಿಟ್ಟ ಹಾಗೆ ಯಾಕೆ ಆಗಬೇಕು ? ನನ್ನಲ್ಲಿ ಈ ಪೊಳ್ಳು ಯಾಕೆ ತುಂಬಬೇಕು?…. ಕಪಿಲ, ಕಪಿಲ, ನಿನ್ನನ್ನು ಹಿಡಿತದಲ್ಲಿಟ್ಟುಕೋ. ಜಾರತಿದ್ದೀ. ಹಿಡಿತ ಬಿಡ ಬೇಡ…
(ಪು. 86)
ಕಪಿಲ ವಿಪ್ರನಾದ ದೇವದತ್ತನಿಗೆ ಯಾಕೆ ಇಷ್ಟು ನಮ್ರನಾಗಿದ್ದಾನೆನ್ನುವುದು ನಾಟಕದಲ್ಲಿ ಗಂಟಿನ ಪ್ರಶ್ನೆಯಾಗುತ್ತದೆ. ಏಕೆಂದರೆ ನಾನು ಮೇಲೆ ಸೂಚಿಸಿರುವಂತೆ ಜಾತಿ ಮತ್ತು ಮನೆತನದ ಹಿರಿಮೆ ಬಿಟ್ಟರೆ ಕಪಿಲನನ್ನಾಗಲೀ: ಪದ್ಮಿನಿಯಾನ್ನಾಗಲೀ ಆಕರ್ಷಿಸಬಲ್ಲ ಬೇರೆ ಯಾವ ಗುಣವೂ ದೇವದತ್ತನ ಕ್ರಿಯೆಯಲ್ಲಿ ವ್ಯಕ್ತವಾಗುವುದಿಲ್ಲ. ಕಪಿಲ ಮರ ಹತ್ತುವುದನ್ನು ಮೋಹಿತಳಾಗಿ ಪದ್ಮಿನಿ ನೋಡುವಾಗ ದೇವದತ್ತ ತನ್ನ ಮನಸ್ಸಿನ
ಯಾತನೆಯನ್ನು ಗುರುತಿಸಿಕೊಳ್ಳುವ ಆತ್ಮಜ್ಞಾನ (?) (ಯಾಕೆಂದರೆ ಇಲ್ಲಿ ತಾನು ಹೀನನೆಂಬ ಸಂಕಟವೇ ಹೆಚ್ಚು) ಕಪಿಲನನ್ನು ಮೀರಿಸುವಂಥದಲ್ಲ :

ಯಾವ ಹೆಣ್ಣಾದರೂ ಮಾರು ಹೋಗಬೇಕು, ಕುಮಾರಿಯಾದರೇನು? ಮುತ್ತೈದೆಯಾದರೇನು ? ಎಂಥ ಮೂರ್ಖ ನಾನು !……ನಿನ್ನ ದ್ವೇಷ ಗಂಟಲಲ್ಲೇ ಹಿಚುಕಿಬಿಡು, ನಿನ್ನ ಕಳವಳದ ನಾಲಗೇನೇ ಕಿತ್ತು ಒಗೆ… ಈಗ ಪುಕ್ಕ ಆಗಬೇಡ.
(ಪುಟ 40)
ನಾಟಕದ ಅತ್ಯಂತ ಸುಂದರ ಭಾಗವಾದ ಈ ಗಾಡಿ ಪ್ರಯಾಣದ ಸಂದರ್ಭದಲ್ಲಿ ಕಪಿಲ ದೇವದತ್ತರ ಮಾನಸಿಕ ಹೊಯ್ದಾಟವನ್ನೂ, ಇಬ್ಬರು ತಮ್ಮನ್ನು ಬಲಿಕೊಟ್ಟುಕೊಳ್ಳುವ ಕ್ರಮವನ್ನೂ ಹೋಲಿಸಿದಾಗ ಕಪಿಲ ಗಟ್ಟಿಯೆಂದೂ, ದೇವದತ್ತ ಮೈಮನಸ್ಸುಗಳೆರಡರಲ್ಲೂ ದುರ್ಬಲನೆಂಬುದೂ ಸಿದ್ದವಾಗುತ್ತದೆ. ಅಂದರೆ ಹೀಗೆ ನಾನು ದೇವದತ್ತನ ಪಾತ್ರ ವಿಶ್ಲೇಷಿಸುತ್ತಿರುವುದರ ಉದ್ದೇಶ ನಾಟಕಕಾರರು ಬಯಸುವಂತೆ ಕಪಿಲನ ಅಪೂರ್ಣತೆಯನ್ನಾಗಲೀ, ‘ಮಿಂಚಿನ ಬುಗ್ಗೆ’ಯಾದ ಪದ್ಮಿನಿಯ ಆಪೂರ್ಣತೆಯನ್ನಾಗಲೀ ತುಂಬಬಲ್ಲ ಯಾವ ಅಂಶವೂ ದೇವದತ್ತನಲ್ಲಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿ, ಪದ್ಮಿನಿಗೆ ದೇವದತ್ತನ ಅಪ್ರತಿಮ ಮೆದುಳುಬೇಕೆನ್ನಿಸಿ, ಆದರೆ ಅದರ ಜೊತೆ ಬಾಳುವುದು ಸುಸ್ತೆನಿಸುವುದರಿಂದ ಕಪಿಲನ ನಿಷ್ಕಪಟ ದೇಹದ ಸುಖದಲ್ಲಿ ಮೈಮರೆ ಯುವುದು ಬಾಳಿನ ಸಫಲತೆಗೆ ಅಗತ್ಯವೆನ್ನಿಸಿ, ಆದರೆ ಕೊನೆಯಲ್ಲಿ ಅದೂ ಸಾಲದೆನ್ನಿಸುವ ಮೈಮನಸ್ಸಿನ ದ್ವಂದ್ವದ ನಾಟಕವೇ ಕೃತಿಯ ಜೀವಾಳವಾಗಬೇಕೆಂಬುದು ಕಾರ್ನಾಡರ ‘ಆಶಯವೆಂಬುದರಲ್ಲಿ ಅನುಮಾನವಿಲ್ಲ. ಉದಾಹರಣೆಗೆ: ಭಾಗವತ ಪದ್ಮಿನಿಯ ಅಂತರವನ್ನು ಹೀಗೆ ಅರಿತು ನಮಗೆ ಹೇಳುತ್ತಾನೆ; ಪದ್ಮಿನಿ ತಾನಾಗಿ ಕಪಿಲನಿಗೆ ಹೇಳಿಕೊಳ್ಳಲಾರದ ಮಾತನ್ನು ಭಾಗವತನಿಂದ ನುಡಿಸುವ ನಾಟಕಕಾರರ ತಂತ್ರ ಕೌಶಲ ಯಾಕೆ ಸಫಲವಾಗುವುದಿಲ್ಲವೆಂಬುದನ್ನು ಮುಖ್ಯವಾಗಿ ಗಮನಿಸಬೇಕು :

“ಹೇಗೆ ಹೇಳಿದರೆ ನಿನಗೆ ತಿಳಿದೀತು ? ನೋಡು. ದೇವದತ್ತ ಒಂದೇ ರಾತ್ರಿಯಲ್ಲಿ ಬದಲಾಗಿ ಮೊದಲಿನ ಹಾಗೆ ಆಗಿಬಿಟ್ಟಿದ್ದರೆ ನಾನು ನಿನ್ನನ್ನು ಪೂರಾ ಮರೀತಿದ್ದೆ. ಆದರೆ ಹಾಗೆ ಆಗಲಿಲ್ಲ. ಅವನು ದಿನದಿನಕ್ಕೆ ಬದಲಾಗುತ್ತಿದ್ದ. ಅಂಗುಲಂಗುಲ ಬದಲಾಗುತ್ತಿದ್ದ. ರಂಧ್ರ ರಂಧ್ರ ಬದಲಾಗುತ್ತಿದ್ದ. ಉಸುಕು ಸುರಿದ ಹಾಗೆ, ನೀರು ತುಂಬಿ ಬಂದ ಹಾಗೆ, ಅವನು ಬದಲಾಗುತ್ತಾ ಹೋದ ಹಾಗೆ ನಿನ್ನ ನೆನಪು ತೀವ್ರವಾಗುತಿತ್ತು. ಕೊನೆಗೆ ತಡೆಯಲಿಕ್ಕಾಗದೆ ಓಡಿ ಬಂದೆ”, ಪದ್ಮಿನಿ ಹೀಗೆ ಹೇಳಬೇಕು. ಪದ್ಮಿನಿ ಇನ್ನೂ ಹೆಚ್ಚು ಹೇಳಬೇಕು. ಏನೂ ಮುಚ್ಚಿಡದೆ ಕೇಳಬೇಕು : “ಕಪಿಲ, ಆ ಖುಷಿ ನನ್ನನ್ನು ನಿನ್ನ ಪಾಲಿಗೆ ಕೊಟ್ಟಿದ್ದರೆ, ಕೊನೆಗೆ ಹೀಗೇ ನಿನ್ನನ್ನು ಬಿಟ್ಟು ನಾನು ದೇವದತ್ತನ ಕಡೆಗೆ
ಹೋಗಬೇಕಾಗತಿತ್ತೇನು ?” ಆದರೆ ಪದ್ಮಿನಿ ಒಪ್ಪಿಕೊಳ್ಳೋದಿಲ್ಲ, ಬಿಚ್ಚಿ ಮಾತಾಡೋದಿಲ್ಲ.
(ಪು. 87)

“ಪದ್ಮಿನಿ ಇನ್ನೂ ಹೆಚ್ಚು ಹೇಳಬೇಕು” ಎಂದು ಭಾಗವತ ಹೇಳಿ ಮುಂದಾಡುವ ಮಾತುಗಳು ಯಾಕೆ ಇಡೀ ನಾಟಕದ ಹೊರಗುಳಿಯುತ್ತವೆ ಎಂಬುದು ನನ್ನ ಈ ತನಕದ ವಾದದಿಂದ ಸ್ಪಷ್ಟವಾಗಿದ್ದೀತು. ಆದರೆ ಹೊರಗುಳಿಯದಂತೆ ಭಾಗವತನ ಈ ಮಾತುಗಳು ಪಾತ್ರಗಳಿಗೂ ದಕ್ಕದ ಆಳಕ್ಕೆ ನಮ್ಮನ್ನು ನಾಟಕದಲ್ಲಿ ಕೊಂಡೊಯ್ಯುವುದು ಸಾಧ್ಯವಿತ್ತು: ವಾಸ್ತವ ಚಿತ್ರಣಕ್ಕೆ ಅಸಾಧ್ಯವಾದ ಆಯಾಮವನ್ನು ಶೈಲೀಕರಣ ಸಾಧಿಸಬಹುದಿತ್ತು. ಆದರೆ ಭಾಗವತನ ಮೂಲಕ ಸೃಷ್ಟಿಸುವ ಈ ತಾತ್ವಿಕ ಗೂಢಗಳು ನಮಗೆ ನಿಜವೆನ್ನಿಸಬೇಕಿದ್ದರೆ ದೇವದತ್ತನೂ ತಾನು ಸಂಕೇತಿಸಬೇಕಾದ್ದನ್ನು ಹೊರುವ ಸಾಮರ್ಥ್ಯ ಉಳ್ಳವನಾಗಿರಬೇಕಿತ್ತು.

ಕಪಿಲನ ದಡ್ಡತನವಿರುವುದು ಇಂತಹ ದೇವದತ್ತನನ್ನು ಬುದ್ದಿವಂತ ಎಂದು ತಿಳಿಯುವುದರಲ್ಲಿ. ಈ ಮಾತು ಕೃತಿ ವಿಮರ್ಶೆಯ ಗಡಿಮೀರಿದ ತುಂಟತನವೆನ್ನಿಸಿದಲ್ಲಿ ಈ ರೀತಿ ನಮ್ಮ ಪ್ರಶ್ನೆಯನ್ನು ಕೇಳುವುದು ಸರಿಯೇನೊ : ದೇವದತ್ತ ತನಗಿಂತಲೂ ಹೆಚ್ಚು ಜ್ಞಾನಿಯೆಂದು ಕಪಿಲ ತಿಳಿಯಲು ಕಾರಣ ಸಾರ್ತ್ರ್‌ ವ್ಯಾಖ್ಯಾನಿಸುವ ರೀತಿಯ “ಆತ್ಮವಂಚನೆ’ಯೋ? ಅಥವಾ ಪಾತ್ರಗಳಲ್ಲಿ ಮೈಪಡೆಯದ ತಾತ್ವಿಕ ಗೂಢದ ಸಾಧನೆಗಾಗಿ ನಾಟಕಕಾರರು ಕಪಿಲನ ಮೇಲೆ ಹೇರುವ ಭಾವನೆಯೊ? ಹೀಗೆ ನಾಟಕದ ಘೋಷಿತ ಆಶಯದ ಹಿಂದೆ ಹೋಗಿ ಕಾರಣಗಳನ್ನು ಹುಡುಕಬೇಕೆನ್ನಿಸುವ ವಿಮರ್ಶಕನ ಪ್ರಯತ್ನಕ್ಕೆ ನಾಟಕದ ಚಿಂತನಾಂಶವನ್ನು ಧ್ವನಿಸಬಲ್ಲ ಕ್ರಿಯೆಯಿಲ್ಲದಿರುವುದೇ ಕಾರಣವೆನ್ನಬಹುದು. ನಾಟಕ ಬಿಗಿಯಾಗಿದ್ದಿದ್ದರೆ, ತುಂಬಬೇಕಾದ ಕಡೆಯಲ್ಲಿ ತುಂಬಿಕೊಂಡಿದ್ದರೆ, ಹೀಗೆ ಕೃತಿಯ ಆಚೆ ಈಚೆ ಪ್ರೇಕ್ಷಕನ ಮನಸ್ಸು ಹರಿದಾಡಗೊಡದಂತೆ ನಾಟಕ ನಮ್ಮನ್ನು ನೋಡಿಸಿಕೊಳ್ಳುತ್ತಿತ್ತು. ಹಾಗೆ ನೋಡಿದರೆ ಕಪಿಲನಂತೆ ಪದ್ಮಿನಿಯೂ ದೇವದತ್ತನನ್ನು ಮೀರಿಸುವ ಕಾವ್ಯಶಕ್ತಿಯುಳ್ಳ ಮಾತುಗಳನ್ನು ನಾಟಕದಲ್ಲಿ ಆಡುತ್ತಾಳೆ. ಮಗುವಿಗೆ ಅವಳು ಕಾಡನ್ನು ಹೇಗೆ ವರ್ಣಿಸುತ್ತಾಳೆ ನೋಡಿ:

“ದಟ್ಟಡವಿಯ ನಟ್ಟನಡುವೆ ಸಂಕೇಶ್ವರ ಹೂವಿನ ತೇರು ನಿಂತಿರತದೆ. ಬಂಗಾರದ ತೇರದು…ಅದನ್ನು ಸಾಲು ಸಾಲು ಹಕ್ಕಿ ಎಳೀತವೆ, ಎದುರಿಗೆ ಸಾಲು ಸಾಲು ಮುತ್ತುಗ ಹಗಲು ದೀವಟಿಗೆಯ ಸಲಾಮು ಹೊಡೀತದೆ. ರಾತ್ರಿಯಾಯಿತು, ಕಂದಮ್ಮನಿಗೆ ನಿದ್ದೆ ಬಂತು, ‘ಫೊ’ ಎಂದರೆ ಹಾರಿ ಹೋಗುತ್ತಾನೆ ಚಂದ್ರ…” (ಪು. ೮೧)
* * * * *
ಪದ್ಮಿನಿಯ ಅಪೂರ್ಣತೆಯ ನೋವು, ಆಯ್ಕೆಯ ಕಷ್ಟ ನಮಗೆ ನಾಟಕದಲ್ಲಿ ನಿಜವಾಗಬೇಕಾದರೆ ದೇವದತ್ತ ‘ಅಪ್ರತಿಮ ಮಿದುಳಿಗೂ ಕಪಿಲ ‘ಅಪ್ರತಿಮ ಮೈ’ಗೂ ಸಮರ್ಥ ಸಂಕೇತಗಳಾಗಿರಬೇಕಿತ್ತು ; ಆದರೆ ನಾಟಕದ ಈ ಘೋಷಿತ ಉದ್ದೇಶದಂತೆ ಆಗುವುದಿಲ್ಲ; ಬದಲಾಗಿ ಕಪಿಲ ಮಾತ್ರ ಮೈ ಮನಸ್ಸುಗಳೆರಡೂ ತುಂಬಿಕೊಂಡ ಪಾತ್ರವಾಗಿ ಬಿಡುತ್ತಾನೆ; ಅಂದರೆ ಕೃತಿಕಾರ ಮಾಡ ಹೊರಟಿದ್ದೇ ಒಂದು ಮಾಡಿದ್ದೇ ಬೇರೊಂದು ಆಗಿ, ಹೀಗೆ ಹಿಡಿತ ತಪ್ಪಿದ್ದು ಐರನಿಯೂ ಆಗದೆ ನಾಟಕ ಸೋಲುತ್ತದೆ ಎಂದು ಈ ತನಕ ನಾವು ವಾದಿಸಿದ ಹಾಗಾಯ್ತು. ಹಾಗಾದರೆ ನಾಟಕದಲ್ಲಿ ನಿಜವಾಗಿ ಆಗುವುದೇನು ? ಪದ್ಮನಿ ಮೊದಲಿನಿಂದ ಕೊನೆಯ ತನಕ ಹುಡುಕುವುದು, ಬಯಸುವುದು ಅವಳು ಶಾಸ್ತ್ರೋಕ್ತವಾಗಿ ಕೂಡಲಾರದ ಕಪಿಲನ ಮೈಯನ್ನು ಮಾತ್ರ. ದೇವದತ್ತನ `ಮಿದುಳು’ ಅವಳಿಗೆ ನಿಜವಾಗಿಯೂ ಬೇಕಿಲ್ಲ ; ಯಾಕೆಂದರೆ ದೇವದತ್ತನಲ್ಲಿ ಅವಳ ಅನುಭವಕ್ಕೆ ಬರುವಂತೆ ಅದಿಲ್ಲ. ಕಪಿಲ ಮೈಮನಸ್ಸುಗಳೆರಡೂ ಉಜ್ವಲವಾಗಿ ಅವಳಿಗೂ ನಮಗೂ ತಟ್ಟುವಂತಹ ಕ್ರಿಯೆಗಳು ನಾಟಕದಲ್ಲಿ ಇವೆ: ಆದರೆ ಶಾಸ್ತ್ರಬದ್ಧವಾಗಿ ಪದ್ಮಿನಿ ಕೈಹಿಡಿದ (ಯಾಕೆಂದರೆ, ಅವಳು ಶಾಸ್ತ್ರೋಕ್ತವಾಗಿ ಮದುವೆಯಾಗಲು ಸಮಾಜ ಒಪ್ಪುವ) ಅವಳ ಜಾತಿಯವನಾದ ದೇವದತ್ತ ಮೈಯಲ್ಲಷ್ಟೇ: ಮನಸ್ಸಿನಲ್ಲೂ ‘ಸುಕುಮಾರ.’

ಅಂದರೆ, ಪದ್ಮಿನಿ ಮೊದಲು ದೇವದತ್ತನನ್ನು ಆಯಲು ಕಾರಣ ಅವನು ಮಾತ್ರವೇ ತನ್ನ ಹಾಗೆ ಮೇಲು ವರ್ಗಕ್ಕೆ ಸೇರಿದವನು. ಸಾಮಾಜಿಕ ರೂಢಿಗೆ ಒಪ್ಪತಕ್ಕವನು ಎಂದ ಹಾಗಾಯಿತು. ಇನ್ನೂ ನಾಟಕದ ಹಿಂದೆ ಹೋಗಿ ಕಾರಣ ಹುಡುಕುವುದಾದರೆ, ಪದ್ಮಿನಿಯಲ್ಲಿ, ‘ಆತ್ಮವಂಚನೆ’ (ಸಾರ್ತ್ರ್‌ ಅರ್ಥದಲ್ಲಿ) ಯನ್ನೂ ಸಾಮಾಜಿಕ ಭಯವನ್ನೂ ಗುರುತಿಸುವುದು ತಪ್ಪಾಗಲಾರದು. ಪಂಡಿತನಾದ ದೇವದತ್ತನಿಗೆ ಅಪ್ರತಿಮ ಮೆದುಳಿದೆ ಎಂಬ ಆತ್ಮವಂಚನೆ, ಕಪಿಲವನ್ನು ಬಯಸಿಯೂ ಕೂಡಲಾರದ ಸಾಮಾಜಿಕ ಭಯಗಳೇ ಅವಳ ನಾಟಕದಲ್ಲಿ ಹೀಗೆ ವರ್ತಿಸುವುದಕ್ಕೆ ಕಾರಣ – ಎಂದು ನಾಟಕಕಾರನ ಆಶದಕ್ಕಿಂತ ಭಿನ್ನವಾಗಿ ನಾವು ಪದ್ಮಿನಿಯನ್ನು ವಿಶ್ಲೇಷಿಸಬೇಕೆನ್ನಿಸುವುದಕ್ಕೆ ಕಾರಣ, ನಾಟಕದಲ್ಲಿ ತಿರುಳಿಲ್ಲದ ದೇವದತ್ತನನ್ನು ಸೃಷ್ಟಿಸಿದ್ದೇ ಆಗಿದೆ.

ತಲೆ ಅದಲು ಬದಲಾದ ಮೇಲೆ ಕಪಿಲನ ದೇಹವನ್ನೂ ದೇವದತ್ತನ ತಲೆಯನ್ನೂ ಯಾಕೆ, ಹಾಗಾದರೆ, ಅವಳು ಆಯ್ಕೆ ಮಾಡುತ್ತಾಳೆ? ಇದು ವಿಮರ್ಶಕನ ತಲೆಹರಟೆ ಎನ್ನಿಸಿದರೂ ನನಗೆ ಹೊಳೆಯುವ ಉತ್ತರ, ಸಮಾಜಕ್ಕೆ ಕಾಣುವ ದೇವದತ್ತನ ಮುಖವನ್ನು (ತಲೆಯನ್ನಲ್ಲ, ಯಾಕೆಂದರೆ ಅದು ಖಾಲಿ) ಅವಳು ಆಯ್ಕೆ ಮಾಡುತ್ತಾಳೆಂಬುದು. ಅವಳಿಗೆ ಬೇಕಾಗಿದ್ದ ಕಪಿಲನ ಮೈ ಹೇಗೂ ಸಿಕ್ಕಿತು, ಸಮಾಜಕ್ಕೆ ಅದು ತಿಳಿಯದಂತೆ ದೇವದತ್ತನ ಮುಖವೂ ಅದಕ್ಕಿದೆ ಎಂಬ ಮೋಸಗಾರಿಕೆ ಅವಳ ಮಾತಿನಲ್ಲೇ ಇದೆ ನೋಡಿ. ಕಪಿಲನ ಬೆದರಿಕೆಯನ್ನು ಅಲ್ಲಗಳೆದು ಅವಳು ಹೇಳುವ ಈ ಮಾತು ಮುಖ್ಯ ;

“ಎಲ್ಲವರೂ ಮುಖ ನೋಡಿ ನೀವೇ ದೇವದತ್ತ ಎನ್ನುತ್ತಾರೆ”. (ಪ. 58).

ಊರಿನಲ್ಲಿ ಬಾಳುವುದು ದೇವದತ್ತನ ಜೊತೆ ಮಾತ್ರ ಸಾಧ್ಯ. ಶೂದ್ರನಾದ ಕಪಿಲನ ಜೊತೆ ಬಾಳಲು ಅವಳು ಕೊನೆಗೂ ಕಾಡಿಗೆ ಹೋಗಬೇಕಾಯಿತೆಂಬದು ನಾಟಕವಲ್ಲಿ ತುಂಬ ಅರ್ಥಪೂರ್ಣವಾದ ಘಟನೆ.

ಮೇಲಿನ ನನ್ನ ಮಾತುಗಳು ನಾಟಕದ ಆಶಯಕ್ಕೆ ಮೀರಿದವು ಎಂಬ ಭಯ ನನಗಿದೆ. ಆದರೆ ಬ್ರಾಹ್ಮಣ-ಶೂದ್ರ ದ್ವಂದ್ವವೇ ಮುಖ್ಯವಾಗಿ ಮನಸ್ಸು-ಮೈಗಳ ದ್ವಂದ್ವ ಮೇಲ್ನೋಟಕ್ಕೆ ಸಿಗುವ ಭ್ರಮೆಯಾಗಿ ಬಿಡುವಂತಹ ದೌರ್ಬಲ್ಯ ನಾಟಕದಲ್ಲಿದೆ ಎಂಬುದನ್ನು ಉತ್ಪ್ರೇಕ್ಷಿಸಲು ನಾನು ಈ ವಾದವನ್ನು ಇಷ್ಟು ಮುಂದುವರಿಸಿದ್ದೇನೆ-ಅಷ್ಟೆ. ಯಾಕೆಂದರೆ ನಾವು ತಿಳಿಯದಂತೆ ಈ ಜಾತಿಯ ದ್ವಂದ್ವ ನಮ್ಮ ಕೃತಿಗಳ ಒಳಗೆ ನುಸುಳಿ ಬಿಡುವ ಸಾಧ್ಯತೆ ಇದೆ.

ಮನುಷ್ಯನ ಬುದ್ಧಿಶಕ್ತಿಗೆ ಸಾಧ್ಯವಾದ ಕನಸು, ದ್ರೋಹ, ಕೃತ್ರಿಮ. ಈವಿಲ್, ಕಾವ್ಯ, ಇಬ್ಬಂದಿತನದ ಸಂಕಟಗಳನ್ನೆಲ್ಲ ಮನೋಜ್ಞವಾಗಿ ಕನ್ನಡದ ಅತ್ಯುತ್ತಮ ನಾಟಕವಾದ ತುಘಲಕ್ ನಲ್ಲಿ ಚಿತ್ರಿಸಿದ ಕಾರ್ನಾಡರು ಈ ನಾಟಕದಲ್ಲಿ ದೇವದತ್ತನ ಬುದ್ದಿಯ ಚುರುಕನ್ನು ಚಿತ್ರಿಸಲು ಯಾಕೆ ಸೋತರು ಎಂಬುದು ಯೋಚಿಸಬೇಕಾದ್ದು. ನಾಟಕದ ಶೈಲೀಕರಣದ ತಂತ್ರದಿಂದಾಗಿ ತಾನು ಮಾಡದಿರುವುದನ್ನೂ ಮಾಡಿದ್ದೇನೆಂಬ ಭ್ರಮೆಗೆ ಕಾರ್ನಾಡರು ಒಳಗಾಗಿರುವುದು ಸಾಧ್ಯವೆ? ನಾಟಕದ ಫ್ಯಾಂಟಸಿಯನ್ನು ನಿಭಾಯಿಸಲು ಈ ಶೈಲೀಕರಣ ಅಗತ್ಯ. ತಲೆ ಅದಲು ಬದಲಾಗುವುದು ಸಾಧ್ಯವೇ ಎಂಬ ವಾಸ್ತವಿಕತೆಯ ಪ್ರಶ್ನೆಯನ್ನು ನಾವು ಕೇಳದಿರುವುದಕ್ಕೆ ಕಾರಣ ಈ ಶೈಲೀಕರಣದ ತಂತ್ರ ನಮ್ಮಲ್ಲಿ ವಾಸ್ತವಾತೀತವಾದ ಘಟನೆಗಳನ್ನು ಒಪ್ಪಿಕೊಳ್ಳುವುದನ್ನು ಸಾಧ್ಯವಾಗಿಸುತ್ತದೆ ಎಂಬುದು. ಹೀಗೆ ನಮ್ಮ ಅಪೇಕ್ಷೆಯನ್ನು ತನ್ನ ಉದ್ದೇಶಕ್ಕೆ ಬೇಕಾದಂತೆ ಕಟ್ಟಲೋಸುಗ ಕೃತಿಕಾರ “ಕೃತಕ”ವಾದ ಚೌಕಟ್ಟಿನಲ್ಲಿ ನಾಟಕದ ಘಟನೆಗಳನ್ನಿಟ್ಟು, ನಾವು ನೋಡುತ್ತಿರುವುದು ನಾಟಕ ಎಂಬುದನ್ನು ಎಲ್ಲೂ ಮರೆಸದಂತೆ ಆಟದ ಪ್ರಪಂಚಕ್ಕೆ ನಮ್ಮನ್ನು ಆಹ್ವಾನಿಸುತ್ತಾರೆ. ಆದ್ದರಿಂದ ದೇವದತ್ತ ಪರಂಪರಾನುಗತ ದೃಷ್ಟಿಯಲ್ಲಿ ಅಪ್ರತಿಮ ಬುದ್ಧಿಶಾಲಿಯೆಂಬುದನ್ನೂ ಒಪ್ಪಿಕೊಂಡು ಹೊರಟು ನಾಟಕ ನೋಡಿ ಎಂದು ಕೆಲವರು ವಾದಿಸಬಹುದು. ಆದರೆ ಪದ್ಮಿನಿ ಕಪಿಲರು ಹೇಳಿಕೆಗಳಲ್ಲಿ ಮಾತ್ರ ಬರದೆ ಕ್ರಿಯೆಯಲ್ಲೂ ಮೈತುಂಬಿ ನಿಲ್ಲುತ್ತಾರಲ್ಲ. ದೇವದತ್ತನೂ ಯಾಕೆ ಹಾಗೆ ನಿಲ್ಲಬಾರದು ಎಂದು ನಾವು ಕೇಳಬೇಕಾಗುತ್ತದೆ.

ಆಂಗಿಕ ಅಭಿನಯದ ಮೂಲಕ ಕಪಿಲನ ದೇಹವ ಸೌಂದರ‍್ಯವನ್ನೆಲ್ಲ ವ್ಯಕ್ತಮಾಡಬಹುದು. ಆದರೆ ದೇವದತ್ತನ ಬುದ್ಧಿಶಕ್ತಿ, ನಿಜವಾಗಬೇಕಾದರೆ ಮಾತು ಬೇಕು ; ಕ್ರಿಯೆಯಾಗುವಷ್ಟು ಶಕ್ತಿಯಿರುವ ಮಾತು ಬೇಕು. ದೇವದತ್ತನ ಮನಸ್ಸಿನ ಗೂಢಗಳಲ್ಲೆಲ್ಲ ತಿರುಗಾಡಿ ಅವನ ಮನಸ್ಸಿನ ಆಕರ್ಷಕ ಪದರುಗಳನ್ನೆಲ್ಲ ಬಿಚ್ಚಬಲ್ಲ ಮಾತಿಗೆ ಕಾವ್ಯಶಕ್ತಿ, ಅಂದರೆ ಧ್ವನಿಶಕ್ತಿಯಿರಬೇಕು. ಹೀಗೆ ಧ್ವನಿಶಕ್ತಿಯಿರುವ ಕಾವ್ಯ ಮಾತ್ರ ಕ್ರಿಯೆಯಾಗುತ್ತದೆ. ಕಪಿಲ ಮರ ಹತ್ತಿ ಮುತ್ತೈದೆ ಹೂ ಕೊಯ್ಯುವಂತೆಯೇ, ಕಾವ್ಯಶಕ್ತಿಯುಳ್ಳ ಮಾತು ಕೂಡ ಉಜ್ವಲ ಕ್ರಿಯೆಯಾಗಬಹುದು. ಆದರೆ ಕಾರ್ನಾಡರ ದೇವದತ್ತನ ಬಾಯಲ್ಲಿ ಇಂತಹ ಮಾತುಗಳೇ ಬರುವುದಿಲ್ಲ. ಹೆಚ್ಚೆಂದರೆ ಆತ್ಮರತನಾದ ದೇವದತ್ತನು ಆಡಬಲ್ಲ ಮಾತು ಇಂಥವು. ಇನ್ನೂ ಸಿಗದ ಪದ್ಮಿನಿಯ ಬಗ್ಗೆ ಅವನು ಸಂಕಟ ತೋಡಿಕೊಳ್ಳುವ ಕ್ರಮ ನೋಡಿ:

ಅವಳಿಲ್ಲದೆ ಯಾಕೆ ಈ ಹಸ್ತ, ಯಾಕೆ ಈ ಶಿರ ? ಅವಳ ಹೊರತು ನನ್ನ ಕಾವ್ಯ ಬದುಕೋದಿಲ್ಲ. ‘ಶಾಕುಂತಲ’ ಮೀರಿಸುವ ಕಾವ್ಯ ಹುಟ್ಟೋದಿಲ್ಲ. ಆದರೆ ಇದನ್ನೆಲ್ಲ ಅವಳಿಗೆ ಹೇಗೆ ತಿಳಿಸಿ ಹೇಳಲಿ ? (ಪ್ರಟ. 23)

ಅವಳು ಸಿಕ್ಕ ಮೇಲೂ ಅಂತಹ ಕಾವ್ಯ ಅವನಿಂದ ಹುಟ್ಟುವುದಿಲ್ಲ. ಅಸೂಯೆಯಲ್ಲಿ ಜೀವಂತನಾಗಿ ಅವನು ಆಡುವ ಮಾತಿನ ಕಾವು ಕೂಡ ಭಾವಪರವಶವಾದ್ದು : ಮನೋಸೂಕ್ಷ್ಮವನ್ನು ಹೊಳೆಯಿಸುವಂಥದಲ್ಲ. ಪದ್ಮಿನಿ ಮರ ಹತ್ತುವ ಕಪಿಲನನ್ನು ಮೈಮರೆತು ನೋಡುವಾಗ ದೇವದತ್ತ ಹಲಬುವ ಬಗೆ ನೋಡಿ:

ಇಷ್ಟುದಿನ ಕಪಿಲನ ಕಣ್ಣಿಂದ ಕೈಚಾಚೋ ದೈನ್ಯ ಕಂಡೆ. ಅವಳ ಕಣ್ಣಲ್ಲಿ ನೋಡಲಿಲ್ಲ…ಸರಿಯಾಗಿ ನೋಡು. ಅಲ್ಲಿ ಏಳೋ ಅರಿಷಿಣ, ನೇರಿಲ ಜ್ವಾಲೆ ನೋಡು…ನಿನ್ನ ಕರುಳು ಸುಡಲಿ…ಪಪ್ಪುಸ ಬೂದಿಯಾಗಲಿ… (ಇತ್ಯಾದಿ) (ಪುಟ 40)

ದೇವದತ್ತನಿಗಿರುವ ತಾನು ಹೀನನೆಂಬ ಭಾವನೆಯನ್ನು ಈ ಮಾತುಗಳು ಚೆನ್ನಾಗಿ ವ್ಯಕ್ತಪಡಿಸುತ್ತವೆ. ಕಪಿಲನ ಸೌಷ್ಠವದಲ್ಲಿ ಪದ್ಮಿನಿ ಮೋಹಿತವಾದಂತೆ ದೇವದತ್ತನ ಬುದ್ಧಿಯ ಚುರುಕಿಗೆ ಪದ್ಮಿನಿ ಮನಸೋಲಬಲ್ಲಳೆಂಬುದು ನಾಟಕದಲ್ಲೆಲ್ಲೂ ವ್ಯಕ್ತವಾಗಿದ್ದರಿಂದ ಅವಳಿಗೆ ಬೇಕಿರುವದು ಕಪಿಲನ ಮೈ ಮಾತ್ರ, ಮೈಮನಸ್ಸಿನ ದ್ವಂದ್ವ ನಾಟಕಕಾರರ ಸಮಸ್ಯೆಯೇ ಹೊರತು ಪದ್ಮಿನಿಯದ್ದಲ್ಲ ಎಂಬ ನಮ್ಮ ಅನುಮಾನ ಪ್ರಬಲವಾಗುತ್ತದೆ.

ಅಲ್ಲದೇ ಇಡೀ ನಾಟಕದಲ್ಲಿ ಬರುವ ಪದ್ಯಗಳಲ್ಲಿ ಕೂಡ ಕಾವ್ಯಶಕ್ತಿ ಬಹಳ ಕಡಿಮೆಯಿದೆ ಎನ್ನಿಸುತ್ತದೆ. ಕಪಿಲ, ಪದ್ಮಿನಿಯರ ಆನುಷಂಗಿಕವಾಗಿ ಬರುವ ಕಾವ್ಯ ಬಿಟ್ಟರೆ ಕಾರ್ನಾಡರೇ ಬರೆಯುವ ಕಾವ್ಯ ನಾಟಕದುದ್ದಕ್ಕೂ ಕೃತಕವಾಗಿದೆ. ಉದಾಹರಣೆಗೆ ಈ ಸಾಲುಗಳು ಎಲ್ಲೂ ನಾಟಕಕ್ರಿಯೆಯಾಗಲಾರದೆ ಮಸುಕಾದ ಅರ್ಥದಲ್ಲಿ ಹೇಗೆ ಕುಂಟುತ್ತವೆ ನೋಡಿ:

ಭಾಗವತ :
ರೆಕ್ಕೆ ಬಿಚ್ಚಿ ಸೊಕ್ಕಿನಿಂದ
ಭೂಮಿ ಒದ್ದು ಎದ್ದೆ ನಾನು
ಅಲೆದು ಬಂದ ಹತ್ತು ದಂಡೆ
ಏಳು ಖಂಡ…ಅಳೆದೆ ಬಾನು
………………………..
ಅಲ್ಲಿಯೊಂದು ಪತ್ರ, ಇಲ್ಲಿ
ಹಣೆಬರಹದ ಚಿತ್ರ ಹೆಕ್ಕಿ
ಕಾಳು ನುಂಗಿ ಕುಟುಕುತ್ತಿರುವೆ
ಜೋಯಿಸರ ಹಕ್ಕಿ
(ಪುಟ 84)
ಆಂಗಿಕ ಅಭಿನಯಕ್ಕೆ ಅವಕಾಶವಿರುವಷ್ಟು ನಾಟಕದ ಮಾತಿನ ಶಕ್ತಿಯನ್ನು ದೋಚಲು ಹಯವದನದಲ್ಲಿ ಅವಕಾಶವಿಲ್ಲವೆಂದಾಯ್ತು. ಇದರಿಂದಾಗಿ ದೇವದತ್ತ ಕಳೆಯಿಲ್ಲದ ಪಾತ್ರನಾಗುವುದು ಮಾತ್ರವಲ್ಲ, ನಿರ್ದೆಶಕನಿಗೆ ತನಗಿಷ್ಟಬಂದಂತೆ ನಾಟಕದೊಳಗೆ ಹಬ್ಬುವುದಕ್ಕೆ ಅವಕಾಶವಾಗುತ್ತದೆ. ಕಪಿಲ ದೇವದತ್ತರು ಸರಿಸಾಟಿಯಾಗಿದ್ದರೆ, ಅಂದರೆ ಕ್ರಿಯೆಯಾಗುವ ಮಾತಿನ ಶಕ್ತಿಯೂ ನಾಟಕದಲ್ಲಿದ್ದಿದ್ದರೆ ಆಗ ನಿರ್ದೇಶಕನಿಗೆ ನಾಟಕ ಸವಾಲಾಗುತ್ತಿತ್ತು. ಅಂದರೆ ಕಪಿಲನ ದೇಹದ ಕೌಶಲವನ್ನು ಎತ್ತಿ ತೋರಿಸುವ ಕ್ರಿಯೆಗಳೇ ನಾಟಕದಲ್ಲಿ ಹೆಚ್ಚಿರುವುದರಿಂದ ಕಾರಂತರು ತಮ್ಮ ಪ್ರಯೋಗದಲ್ಲಿ ಆಂಗಿಕ ಅಭಿನಯದ ಎಲ್ಲ ಲಯಗಳನ್ನೂ ಸೂರೆ ಮಾಡಿ ನಾಟಕವನ್ನು ಒಂದು ಉತ್ಸವದಂತೆ ಮಾಡಿಬಿಡುವುದು ಸಾಧ್ಯವಾಯಿತು. ನಾಟಕ ತಾತ್ವಿಕವಾಗಿ ಎತ್ತುವ ಸಮಸ್ಯೆ – ಅಪೂರ್ಣತೆಯ ಸಮಸ್ಯೆ – ನಾಟಕದ ಮೂರು ಪಾತ್ರಗಳ ಜೀವನದಿಂದ ಹೊರಗುಳಿಯುವುದು ಎಂಬುದು ಕಾರಂತರನ್ನು ಬಾಧಿಸಿದಂತೆ ಕಾಣಲಿಲ್ಲ.

ಕಾರ್ನಾಡರ ನಾಟಕವನ್ನು ವಿಶ್ಲೇಷಿಸಿದವರಾಗಲೀ, ಹಾಗೆಯೇ ಕಾರಂತರ ಪ್ರಯೋಗವನ್ನು ಹೊಗಳಿದವರಾಗಲೀ ತೆಗಳಿದವರಾಗಲೀ ನಾನು ಎತ್ತಿರುವ ಪ್ರಶ್ನೆಯನ್ನು ಗಮನಿಸಿದಂತಿಲ್ಲ. ಗಮನಿಸಿದ್ದೇ ಆದಲ್ಲಿ ಕೃತಿ ಮತ್ತು ಪ್ರಯೋಗಗಳ ವಿಮರ್ಶೆಗೆ ಹೊಸ ಆಯಾಮ ದೊರೆಯಬಹುದುದು ನನ್ನ ಭರವಸೆ.

Close

ನನ್ನ ಕವನ

ನನ್ನ ಕವನ

ಎಂ.ಎನ್‌. ಜೈಪ್ರಕಾಶ್‌

ನಾನು
ಲಾರಿ ಆಫೀಸಿನ ಅಸ್ತವ್ಯಸ್ತ ಉಗ್ರಾಣ:

ಅಲ್ಲಿ ಕಂಡಿದ್ದು ಇಲ್ಲಿ ಕೇಳಿದ್ದು ಅನುಭವಕ್ಕೆ ಆಳಾಗಿದ್ದು
ಪಂಪನಿಂದ ಲಾರೆನ್ಸನವರೆಗೆ ಅಷ್ಟಿಷ್ಟು ಕುರಿತೋದಿದ್ದು
ಒಮ್ಮೊಮ್ಮೆ ಅನುಭಾವಿಸಿದ್ದು
ಸಂತೆ-ಸಮಾಜದಲಿ ಗಜಆಜಗಳೊಡನೆ ಕೊಂಡಿದ್ದು ಮಾರಿದ್ದು
ಮಂದಿರದಲ್ಲಿ ಗೋಪಿಕಾವಲ್ಲಭನ ಲೀಲೆಗಳಿಗೆ ಕಿವಿಯಗಲಿಸಿದ್ದು
ರಾಜಿಯೊಡನೆ ಕಣ್ಣನ್ನೆಯಲೇ ಸುಖಿಸಿದ್ದು –

ಈ ‘ದ್ದು’ಗಳ ಸಮಸ್ತವೂ ವ್ಯವಸ್ಥಿತ ಮೂಸೆಯಲಿ
ತಾಳ್ಮೆಯಿಂದ ಕಾಯುತಿರುವಾಗಲೇ
ಭುಗಿಲೆದ್ದ ಕ್ಷಣಿಕ ಜ್ವಾಲೆಗೆ
ಮೇಲೆದ್ದು ಬರತೊಡಗಿ
ದಾಗ, ಅದರೊಡಲಲ್ಲೇ ಅಲ್ಲಲ್ಲಿ ಕಾಳಿಕೆ ಕಂಡು
ಪ್ರತಿಬಂಧಕದ ಹನಿಹನಿ ಸರಸರ ತೊಟ್ಟಿಕ್ಕಿ
ಮೇಲುಕ್ಕತೊಡಗಿದ್ದು ಹಾಗೆ ಹಾಗೇ
ಕುಗ್ಗೀ
ತಗ್ಗೀ
ತಗದಲ್ಲೇ ತಟಸ್ಥವಾಗಿ ಚಡಪಡಿಸುತ್ತೆ
ನನ್ನ ಕವನ
ಪುಷ್ಟಿ ಸಾಲದ ಮಣ್ಣಲ್ಲೆ ಹೂತ ಬೀಜದಂತೆ,
ವಸಂತಕ್ಕೂ ವಸಂತಿಸಲಾಗದ ಕುಮಾರಿಯಂತೆ !

ನೋಡಿ,
ಹೀಗಾಗಿ –
ಈ ಕಾಳಿಕೆಯೆಲ್ಲ ಹಿಂಗಿ
ನಿದಾನ ಒಲಿಸಿ ಪುಷ್ಟಿಸಿ ಪುಟಿದೆದ್ದು
ಹದನಾಗಿ ಕಾದು ಕಡೆಗಟ್ಟಿ ಮೇಲುಕ್ಕಿ ಬರಲು
ಉರಿಯೊಟ್ಟುತ್ತ ಗಾಳಿಯೂದತ್ತ ಒಲೆಗೆ
ಹೊಗೆಗೆ ಕಣ್ಣಮೂಗನೂರೆಸುತ್ತ
ಇಲ್ಲೇ ಉರಿಯೊಲೆಯ ಮುಂದೇ ತಹತಹಿಸುತ್ತ
ತಲೆಗೆ ಕೈಯಾಗಿ ಕುಕ್ಕರಿಸಿದ್ದೇನೆ
ಕಾದು.

Close
By kanaja|2021-01-06T19:35:47+05:30April 27, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೧

    ಸಂಪುಟ-೩೧

Leave A Comment Cancel reply

ವಿಭಾಗಗಳು

ಹೊಸ ಅಂಕಣಗಳು

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕನ್ನಡ ಭಾಷೆ,ಸಾಹಿತ್ಯ

  • ಸಂಪುಟ-೩೪
  • ಸಂಪುಟ-೩೩
  • ಸಂಪುಟ-೩೨
  • ಸಂಪುಟ-೩೧
  • ಸಂಪುಟ-೩೦

ಕಲೆ,ಸಂಗೀತ

  • ರಂಗ ವಿಮರ್ಶೆಯ ಬೆನ್ನು ಹತ್ತಿ..
  • ರಂಗಭೂಮಿಯೊಂದೇ ಸಮತಾವಾದದ ಪ್ರತೀಕ
  • ರಂಗಭೂಮಿಯ ನಡಿಗೆ
  • ರಂಗ ಪರದೆಗಳು : ಶಬ್ದಪಾರಮಾರ್ಗಮಶಕ್ಯಂ
  • ರಂಗ ಪರದೆಗಳು : ರಂಗ ಪರದೆಗಳ ಹಿನ್ನೆಲೆ

ವಿಜ್ಞಾನ , ತಂತ್ರಜ್ಞಾನ

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕೃಷಿ ,ರೈತರ ಅನುಭವ

  • ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016
  • ಪದವಿನ್ಯಾಸ: ೧೨. ಸನಿಕೆ
  • ಪದವಿನ್ಯಾಸ: ೧೩. ಈಚು
  • ಪದವಿನ್ಯಾಸ: ೧೪. ಕಣಜ
  • ಪದವಿನ್ಯಾಸ: ೯. ಬೆಳೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2017 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - developkanaja@gmail.com

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top