Skip to content
ದೂರವಾಣಿ : | 22212487|developkanaja@gmail.com
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ-೨೨

Home/ಕನ್ನಡ/ಸಂಪುಟ-೨೨
Previous Next

ಸಂಪುಟ-೨೨

  • ಮುನ್ನುಡಿ
  • ಆಮಂತ್ರಣ
  • ಅಮರ
  • ನಿರಾಕರಣ-ಒಂದು ಸಮೀಕ್ಷೆ
  • ಅಭಿನಯದಾಚೆ
  • ವಿಹ್ವಲ
  • ಲಿಪ್ತ
  • ವೀಣಾ ಎಲಬುರ್ಗಿ-ಸಣ್ಣಕತೆ ಒಂದು ಅಭ್ಯಾಸ
  • ರೋಗಿ
  • ಹಕ್ಕಿಗಳು
  • ಜಡಭರತರ ಆ ಊರು ಈ ಊರು ಒಂದು ವಿವೇಚನೆ
  • ಮಾತು, ಮಾತು, ಮಾತು
  • ನನ್ನ ಮನೆ
  • ಸಮಾಧಿಯ ಮೂಕ ಸಾಕ್ಷಿ
  • ವಂಶವೃಕ್ಷ ಪ್ರತಿಪಾದಿಸುವ ಮೌಲ್ಯ-ಒಂದು ನೋಟ
  • ಉರಿಯುತ್ತಿರುವ ಪೊದೆ
  • ಹಿಲ್ ಸ್ಟೇಷನ್
  • ದಕ್ಷಿಣೆ- ಒಂದು ಮರು ವಿಶ್ಲೇಷಣೆ
  • ಒಂದು ವಿಲಕ್ಷಣ ಊರಿನ ಹೆಸರಿನಲ್ಲಿ ಒಂದು ಅಪೂರ್ವ ಕನ್ನಡಪದ-ಪ್ರತಿಕ್ರಿಯೆ
  • ಗತಿ-ಸ್ಥಿತಿ-ಒಂದು ಅಭ್ಯಾಸ

ಮುನ್ನುಡಿ

ಸಂಪಾದಕೀಯ

ನಮ್ಮಲ್ಲಿ ಉತ್ತಮವಾದ ವಿಮರ್ಶೆ ಆಗಾಗ ಅಲ್ಲಿಲ್ಲಿ ಪ್ರಕಟವಾಗುತ್ತಿರುವುದಾದರೂ ಒಟ್ಟಿನಲ್ಲಿ ನಮ್ಮ ಸಾಹಿತ್ಯಲೋಕದಲ್ಲಿ ವಿಮರ್ಶೆಯ ಎಚ್ಚರ ಇನ್ನೂ ತಕ್ಕಷ್ಟು ಕಂಡು ಬರುತ್ತಿಲ್ಲ. ಇದು ತುಂಬ ಚಿಂತಾಜನಕ ಸಂಗತಿ. ಅತ್ಯುತ್ತಮ ಅಥವಾ ಶ್ರೇಷ್ಠತೆಯ ಸ್ಪಷ್ಟ ಕಲ್ಪನೆಯೊಂದು ಇಲ್ಲದೆ ಉತ್ತಮ ವಿಮರ್ಶೆ ಸಾಧ್ಯವಾಗದು. ಶಿಖರಗಳನ್ನು ಗುರುತಿಸಿದಾಗಲೇ ನಮಗೆ ನಾವು ಯಾವ ಎತ್ತರದಲ್ಲಿದ್ದೇವೆ ಎಂಬ ಅರಿವು ಬರುವುದು ಸಾಧ್ಯ. ಆದರೆ ಈ ಶಿಖರಗಳೂ ಹಲವು ಎಂಬ ಮಾತನ್ನು ನಾವು ಮರೆಯಬಾರದು. ಒಂದು ಇನ್ನೊಂದಕ್ಕಿಂತ ಎತ್ತರವಾಗಿದೆ ಎಂಬ ಕಾರಣಕ್ಕಾಗಿ ಅಷ್ಟು ಎತ್ತರವಲ್ಲದ್ದನ್ನು ಕಡೆಗಣಿಸುವುದು ಬದುಕಿಗೂ ಸಾಹಿತ್ಯ ಸಹಜವಾದ ವೈವಿಧ್ಯವನ್ನೇ ನಿರ್ಲಕ್ಷಿಸಿದಂತೆ ಎಂದು ಅನ್ನಿಸುತ್ತದೆ. ಅತ್ಯುತ್ತಮವಲ್ಲದಿದ್ದರೂ ಉತ್ತಮಾಂಶಗಳನ್ನೊಳಗೊಂಡ ಅನೇಕ ಕೃತಿಗಳು ಪ್ರಕಟಿತವಾಗುತ್ತಿರುವಾಗ ಅವುಗಳ ಕಡೆಗೆ ಕಣ್ಣೆತ್ತಿ ನೋಡದೇ ಇರುವವರ ಸಾಹಿತ್ಯ ಪ್ರೀತಿ ತೀರ ಸಂಕುಚಿತ ದೃಷ್ಟಿಯದೊ, ಸಾಹಿತ್ಯದಲ್ಲಿನ ಫ್ಯಾಶನ್ನುಗಳನ್ನು ಮೀರಲಾರದ ಲಘುಮನಸ್ಕತೆಯೋ ಎಂಬ ಸಂದೇಹವೂ ಹುಟ್ಟಬಹುದು. ಪ್ರಕಟವಾಗುತ್ತಿರುವ ಕೃತಿಗಳಲ್ಲಿ ಅನೇಕ ಕೃತಿಗಳು ನಮ್ಮ ಗಮನಕ್ಕೆ ಯೋಗ್ಯವಲ್ಲ ಎಂಬ ಮಾತು ನಿಜವಾದರೂ ಅವುಗಳಲ್ಲಿ ಕೆಲವಾದರೂ ಉತ್ತಮಾಂಶಗಳಿಂದ ಕೂಡಿ ಕೃತಿಗಳೆನ್ನಿಸಿಕೊಳ್ಳಬಲ್ಲ ಅಂತಃಶಕ್ತಿಯನ್ನು ಹೊಂದಿರುತ್ತವೆ. ಅವುಗಳನ್ನು ಗುರುತಿಸುವುದು ಸಾಹಿತ್ಯದ ಬೆಳವಣಿಗೆಗೆ, ಜನಸಾಮಾನ್ಯರ ಮನಃಸಂಸ್ಕಾರಕ್ಕೆ ಅತ್ಯಗತ್ಯವಾದ ಕೆಲಸವೆಂದು ತೋರುತ್ತದೆ. ಇಂಥ ಕೆಲಸ ನಮ್ಮಲ್ಲಿ ನಡೆಯದೆ ಇರುವುದು ಶೋಚನೀಯ.
ವಿಮರ್ಶೆ ಕೃತಿನಿಷ್ಠವೂ ವಸ್ತುನಿಷ್ಠವೂ ಆಗಬೇಕಾದ್ದು ಸಹಜ. ತಾನು ಯಾವ ಕೃತಿಯ ಬಗ್ಗೆ ಮಾತಾಡುತ್ತಿದ್ದೇನೆ ಎಂಬುದನ್ನು ಮರೆತು ತನ್ನ ಅಭಿಪ್ರಾಯಗಳಿಗೆ ಕೃತಿಯಿಂದಲೇ ತಕ್ಕ ಉದಾಹರಣೆಗಳನ್ನೂ ರುಜುವಾತುಗಳನ್ನೂ ಕೊಡದೆ ಆಡುವ ಮಾತು ಅಪ್ರಾಸಂಗಿಕವಾಗುವುದು, ತಲೆಹರಟೆಯಾಗುವುದು. ಆದರೆ ಇವರ ಅರ್ಥ, ಮಾಡುವ ವಿಮರ್ಶೆಯಲ್ಲಿ ಆ ಕೃತಿಯ ಉತ್ತಮಾಂಶಗಳಿಂದ ಆಗುವ ಸಂತೋಷವನ್ನು ಹತ್ತಿಕ್ಕಿ ಶುಷ್ಕವಾಗಿ ಬರೆಯಬೇಕೆಂದು ಅಲ್ಲ. ಭಾವವಿರಹಿತವಾದ ಬುದ್ದಿಚಾತುರ್ಯ ಭಯಂಕರವಾದುದು. ಒಂದು ಉತ್ತಮವಾದ ಕೃತಿಯನ್ನು ಓದಿದಾಗ ಆಗುವ ಸಂತೋಷ ಅತ್ಯಂತ ಪರಿಶುದ್ಧವಾದುದು, ವ್ಯಕ್ತಿನಿರಪೇಕ್ಷವಾದ ಹಿಗ್ಗು ಅದು. ಅದು ನಮ್ಮ ವಿಮರ್ಶೆಯ ಒಂದಂಶವಾಗದಿದ್ದರೆ ವಿಮರ್ಶೆ ಓದಿದವನ ಮನಸ್ಸಿನ ಮೇಲೆ ಯಾವ ಪರಿಣಾಮವೂ ಆಗದು. ವಿಮರ್ಶೆಯ ಮೂಲೋದ್ದೇಶ ಸಾಹಿತ್ಯ ಕೃತಿಗಳ ಬಗ್ಗೆ ವಿಮರ್ಶಕನಲ್ಲಿ ಹುಟ್ಟಿದ ಪ್ರೀತಿ ಸಾಂಕ್ರಾಮಿಕವಾಗುವಂತೆ ಮಾಡುವುದೇ ಎನ್ನುವುದನ್ನು ಮರೆಯ ಸಲ್ಲದು.
ಕೃತಿವಿಮರ್ಶೆ ವಸ್ತುನಿಷ್ಠ, ಕೃತಿನಿಷ್ಠವಾಗಬೇಕೆನ್ನುವುದರ ಅರ್ಥ ಕೃತಿಕಾರನನ್ನು ಮರೆಯಬೇಕೆಂದು ಅಲ್ಲ. ಉತ್ತಮ ಕೃತಿಯನ್ನು ರಚಿಸಿದ ಸಾಹಿತಿಯ ಬಗ್ಗೆ ಮೆಚ್ಚುಗೆ, ಗೌರವ, ಪ್ರೀತಿ ಹುಟ್ಟುವುದು ಅತ್ಯಂತ ಸ್ವಾಭಾವಿಕವಾದುದು. ಅದನ್ನು ವ್ಯಕ್ತಪಡಿಸುವ ಆಶೆಯೂ ಅಷ್ಟೇ ಸಹಜ. ಅಷ್ಟು ಸಹಜವಾದದ್ದನ್ನು ಸಂಪೂರ್ಣವಾಗಿ ಹತ್ತಿಕ್ಕುವುದು ಸಾಂಸ್ಕೃತಿಕವಾಗಿ ಒಳ್ಳೆಯದಲ್ಲ. ಒಬ್ಬ ಉತ್ತಮ ಸಾಹಿತಿಯನ್ನು ಹೊಗಳದೆ ಇರುವುದಾದರೂ ಹೇಗೆ ? ಪಂಪನನ್ನು, ನಾರಣಪ್ಪನನ್ನು, ವ್ಯಾಸ ವಾಲ್ಮೀಕಿ ಕಾಳಿದಾಸರನ್ನು, ಶೇಕ್ಸ್‌ಪಿಯರ್, ಡಾಂಟೆ, ಕೀಟ್ಸ್ ಮುಂತಾದವರನ್ನು ಓದಿ ಆನಂದಿಸಿ ನಮ್ಮ ಮೆಚ್ಚುಗೆ ಯನ್ನು ವ್ಯಕ್ತಪಡಿಸಿದರೆ “ಹೀರೋ ವರ್ಶಿಪ್” ಆಗುವುದಿಲ್ಲ. ಅವರಿಗೆ ತನ್ನ ಬುದ್ದಿಯನ್ನು ಮಾರಿಕೊಂಡು ಸ್ವತಂತ್ರ ವಿಚಾರವನ್ನು ಕೊಂದರೆ ಮಾತ್ರ ಹಾಗೆ ಆಗುತ್ತದೆ. ಆಧುನಿಕ ಸಾಹಿತಿಗಳ ವಿಚಾರವೂ ಇಷ್ಟೇ. ಸಾಹಿತ್ಯ ಸಂಗೀತ ಮುಂತಾದ ಕಲೆಗಳಲ್ಲಿ, ರಾಜಕೀಯ, ಸಾಮಾಜಿಕ, ನೈತಿಕ ವಲಯಗಳಲ್ಲಿ ಹೀರೋಗಳು ಎಲ್ಲ ಕಾಲಗಳಲ್ಲೂ ಕಾಣಿಸಿಕೊಳುತ್ತಾರೆ. ಅವರನ್ನು ಗುರುತಿಸುವುದು ಸಾಂಸ್ಕೃತಿಕವಾಗಿ ಅತ್ಯಗತ್ಯವಾದ ಕೆಲಸ. ಅವರ ಕೃತಿಗಳನ್ನು ಭಾವಿಸದೆ ಪರಿಶೀಲಿಸದೆ ಅವರನ್ನು ಅತಿಯಾಗಿ ಹೊಗಳುತ್ತ ಹೋಗುವುದು ಮಾತ್ರ ವ್ಯರ್ಥ. ಬೆಳೆಯಬಲ್ಲ ಬದುಕಿಗೆ ಉದಾಹರಣೆಗಳು ಅತ್ಯಗತ್ಯ. ಏರಬಹುದಾದ ಎತ್ತರಗಳ ಅರಿವಿಲ್ಲದೆ ಹೋದರೆ ಬದುಕು ಜಡವೂ, ಯಾಂತ್ರಿಕವೂ ಆಗಿ ಕುಗ್ಗುತ್ತದೆ.
ಈ ಎಚ್ಚರ ನಿಚ್ಚಳವಾದಾಗಲೇ ನಮ್ಮ ವಿಮರ್ಶೆ ಸಫಲವಾಗಬಲ್ಲುದು.

Close

ಆಮಂತ್ರಣ

ಆಮಂತ್ರಣ

ಆರ್ ಮೋಹನ್

ಕಾರಿನಲ್ಲಿ ಕುಳಿತಿದ್ದಂತೆಯೇ ಜೊಂಪು ಹತ್ತಿದಂತಾಗಿ ಅರೆಕನಸು ಸಹ ಪಿಡಿಸಿತು ಅವನನ್ನ. ಕಾರನ್ನ ನಿಲ್ಲಿಸಿದೊಡನೆಯೇ ಇಳಿದು ಅವಳ ಮನೆಗೆ ಹೋಗಿಬಿಡಬೇಕಾಗಿತ್ತು. ಅವಳ ಮನೆಗೆ ಬಹಳ ಹತ್ತಿರ ಹಿಂದಿನ ರಸ್ತೆಯ ಮಗ್ಗುಲಿಗೇ ನಿಲ್ಲಿಸಬೇಕಿತ್ತು ಕಾರನ್ನ ; ಈಗ, ಐನೂರು ಗಜ ದೂರದಲ್ಲಿ ಕಾರಿಗೆ ಸಹ ಹೆಪ್ಪುಗಟ್ಟಿದಂತೆ.
ಕನಸಿನಲ್ಲಿ ಅವನ ಆಫೀಸಿನ ಕೊಠಡಿ ಮೆಲ್ಲಗೆ ಬಿರುಕು ಬಿಟ್ಟಂತೆ. ಎರಡು ತಿಂಗಳೂ ಕಳೆದಿರಲಿಲ್ಲ ಅವನು ಹಾಲ್‌ನ ಅನಾಮಧೇಯ ಚೇರು ಡೆಸ್ಕುಗಳಿಂದ ಹಳದೀ ಗೂಡುಗಳಲ್ಲಿ ಪ್ರವೇಶಿಸಿ. ತನ್ನ ಗೂಡಿನ ಬಾಗಿಲ ಮೇಲೆ ಪ್ಲಾಸ್ಟಿಕ್ ಕರಿ ಪಟ್ಟಿಯ ಮೇಲೆ ಬಿಳಿ ಅಕ್ಷರಗಳಲ್ಲಿ ಹೆಸರು. ಅದನ್ನ ಒಂದೊಂದಾಗಿ ಸ್ಕ್ರೂಡೈವರಿನಿಂದ ವಿಶ್ರಾ ಕೀಳುತಿದ್ದ. ಅವನ ಮುಖದ ಮೇಲೆ ವಿಕೃತ ನಗು. ತಾನು ಕುಳಿತಿದ್ದಂತೆಯೇ ತಿರುಗಣೆ ಚೇರು ನಿಧಾನವಾಗಿ ಮೇಲೆದ್ದು ಉರ್ಗಳಿಸಿದಂತೆ…. ….
ಬಡಾವಣೆಯ ನೀಟು ರಸ್ತೆ ನಿಷ್ಪಂದ ಹಾಸು. ಆದೇ ಹನಿಯೊಡೆದ ಮಳೆಗತ್ತಲಿಗೆ ಕೊಡೆ ಹಿಡಿದು ನಿಂತ ದಾರಿದೀಪಗಳು. ಬಡಾವಣೆಯ ಅಚ್ಚುಕಟ್ಟಿನ ಮನೆಗಳು, ಸಾಲು ಸಾಲಾಗಿ, ಒಪ್ಪ ಓರಣವಾಗಿ, ಪೇಲವ ಕಂದಿನ ಕಲ್ಲು ಕಟ್ಟಡಗಳು. ಕಿಟಿಕಿಯ ಬಿರುಕುಗಳಿಂದ ಅಲ್ಲಲ್ಲಿ ದೀಪಗಳು, ನೆಲವನ್ನು ಭದ್ರವಾಗಿ ಕಚ್ಚಿ, ಸುತ್ತಲೂ ಅರೆ ಬೆಳೆದ ಹದೋಟಗಳು. ತಂತಿ ಬೇಲಿಯ ಪಕ್ಕಕ್ಕೆ ಅಸ್ತವ್ಯಸ್ತ ಪೊದೆಗಳ ಸಾಲು.
ಅಂತಹುದೇ ಮನೆಯಲ್ಲಿ ತನಗಾಗಿ ಕಾದು ಕುಳಿತ ನೀತಾ. ಮಿಶ್ರಾನ ಹೆಂಡತಿ. ಅವನ ಗೆರೆ ಮೀಸೆಯ ಒಂದೊಂದೇ ಕೂದಲನ್ನು ಕಿತ್ತಿದಂತೆ. ಅವನ ಉಬ್ಬುತ್ತಿರುವ ಹೊಟ್ಟೆ ಯನ್ನು ಚೂರಿಯಿಂದ ಕೆಳಗೆ ತಿವಿಯುತ್ತ ಮೇಲ್ಗಡೆ ತಬ್ಬಿದಂತೆ.
ಕಾರಿನ ಗಾಜುಗಳನ್ನೇರಿಸಿದ್ದ. ಹಳೆಯೂರಿನ ಹಳೆಮನೆ. (ಮೇಲ್ಗಡೆ ಹೊಚ್ಚ ಹೊಸ ಬೆಡ್‌ರೂಮಿದೆ. ಅದಕ್ಕೆ ದೊಡ್ಡ ದೊಡ್ಡ ಗಾಜಿನ ಬಾಗಿಲುಗಳು. ದಪ್ಪನೆಯ ಕೆಂಪು ತೆರೆಗಳು. ಸುತ್ತ ಕಿಕ್ಕಿರಿದ ಹೆಂಚಿನ ಹುತ್ತಗಳ ನಡುವೆ ಢಾಳಾಗಿ ಹಾರುವ ಬಾವುಟದಂತೆ ಬೆಡ್ ರೂಮು. ಅದರ ಮೇಲಿಂದ ಬಡಾವಣೆ ಕಾಣಿಸುತ್ತದೆ. ನಾನೂ ನೀನೂ ಒಂದೇ ಎಂದು ಕೈ ಬೀಸುತ್ತದೆ.) ಅದರ ಮೂರಡಿ ಅಗಲದ ಗೋಡೆಗಳ ನಡುವೆ ಓಡಿಯಾಡುವ ಚಾಕಲೆಟ್ ಸೀರೆಯ ವಿಮಲಾ. ಅವಳು ಪತ್ನಿ. ಕೆಳಗಡೆ ಸುಣ್ಣ ಜಾರಿದ ಗೋಡೆಗಳ ಪಕ್ಕದಲ್ಲೂ ಒಪ್ಪುವ ಸೀರೆ. ಮೇಲೆ ಹಾಸಿಗೆಯ ಮೇಲೆ ಕಳಚುವಾಗ ಅಂಟಿಕೊಳ್ಳದ ಬಟ್ಟೆ. ಮದುವೆಯಾದಾಗ ಅವಳ ಭಾರ ಗೊತ್ತಿರಲಿಲ್ಲ. ವಿಮಲಾ ಒಂದು ತಕ್ಕಡಿ. ಸರಿಯಾಗಿ ತೂಗುವ ತಕ್ಕಡಿ. ಕೆಳಗಿನ ಬಾಗು ಕಮಾನುಗಳನ್ನ ಮುಟ್ಟಿ ನಿಂತಾಗ, ಅದೇ ಎರೆದುಕೊಂಡು ತಲೆ ಹರವಿ ನಿಂತಾಗ, ಎದೆಯಲ್ಲಿ ಬಾಯಿ ಬಿಡುವ ಆಶೆ ಅವಳಂ ಬೆಡ್‌ರೂಮಿನ ರೇಡಿಯೋಗ್ರಾಮಿಗೆ ಬಾಗಿದಾಗಲೂ ಲಪ್ ಲಪ್ ಎಂದು ತೆರೆಯುತ್ತದೆ.
ವಿಮಲಳ ಮುಖಕ್ಕೆ ಎರಡು ಪಾರ್ಶ್ವಗಳು. ಅವುಗಳಲ್ಲಿ ಒಂದಾದರೂ ಹೊಂದದು ತನಗೆ. ಅವಳೊಡನೆ ಬೆತ್ತಲೆ ಮಲಗಿದಾಗಲೂ ಸಹ ಮುಖವನ್ನು ನೋಡದೇ ಇರುತ್ತಾನೆ, ಕತ್ತಿನ ಕೆಳಗೆ ವೇಶ್ಯೆಯಂತೆ ಹೊರಳಾಡಬಲ್ಲ ವಿವರಲಾ ಮುಖದ ಮೇಲೆ ಮುತ್ತೈದೆ.
ಈಗ ಬಡಾವಣೆಯಲ್ಲಿ ನಿಂತ ಕಾರಿನ ಕಿಟಿಕಿಗೆ ಮುಖವಿಟ್ಟು ಏನನ್ನೋ ಹೇಳುತ್ತಿದ್ದಾಳೆ. ಕಿಟಿಕೆಯ ಗಾಜಿಗೆ ಒತ್ತಿದ ಮೂಗು ಚಪ್ಪಟೆಯಾಗಿ ವಿಕಾರವಾಗಿದೆ. “ನೀನು ಕೇವಲ ಹೇಡಿ, ನಿನ್ನಲ್ಲಿ ನಿನಗೆ ಆತ್ಮವಿಶ್ವಾಸವಿಲ್ಲ”.
ಗಾಜಿನ ಕಿಟಿಕಿಯನ್ನು ಭದ್ರಪಡಿಸಿ, ನಡಗುವ ಕೈಗಳಿಂದ ಸಿಗರೇಟ್ ಹಚ್ಚಿದ. “ನಿನ್ನ ಮಾತಿಗೆ ಅರ್ಥವಿಲ್ಲ” ಎಂದ ಜೋರಾಗಿ.
“ನಾನು ನಿಚ್ಚಣಿಕೆಯ ಕೆಟ್ಟ ಕೆಳಗಿನ ಹಂತದಿಂದ ಮೇಲೆ ಬಂದಿದ್ದೇನೆ. ನನ್ನಪ್ಪ ಆ ಹುತ್ತವನ್ನ ತಂದೆಯಿಂದ ಪಡೆದು, ಹೆಂಚನ್ನ ಬೀಳಿಸಿ, ಹರಕು ಧೋತರ ಉಟ್ಟು ಸತ್ತ. ಜನಿವಾರಕ್ಕೆ ಕಟ್ಟಿದ ಉಂಗುರವನ್ನೂ ಬಿಚ್ಚಲಿಲ್ಲ. ಅದು ಕರಗಿ ಹೋಯಿತು ಚಿತೆಯಲ್ಲಿ.” “ಮಾರನೆ ದಿನ ನೀವು ಸ್ಮಶಾನಕ್ಕೆ ಹೊರಡಲಿಲ್ಲವೆ, ಹುಡುಕುವುದಕ್ಕೆ ?”
“ಅಂತಹ ತಪ್ಪೇನಿಲ್ಲ. ನೀನು ಬೇಡ ಎಂದೆ ಬಿಟ್ಟೆ.”
“ಅದಕ್ಕೇ ಅತ್ತೆ ಮಂಗಳಸೂತ್ರವನ್ನು ಕೊಟ್ಟಿದ್ದು. ಹರಿದು ಎಸೆದದ್ದು ನಿಮ್ಮ ಕಡೆ.” “ಓಕೇ ! ಆ ಕಬ್ಬಿಣದ ಗುಂಡುಗಳು ಕಾಲಿಗಿದ್ದರೂ ನಾನು ಎಂತಹ ಎತ್ತರಕ್ಕೆ ಹಾರಿದ್ದೇನೆ !” ಕಾರನ್ನ ಹೆಮ್ಮೆಯಿಂದ ನೋಡಿದ, ಮಂದಪ್ರಕಾಶದಲ್ಲಿ ಭದ್ರ ಕೋಟೆಯಂತಿತ್ತು ಕಾರು. ಅದರ ಮೆತ್ತೆಗಳು ಭವಿಷ್ಯಕ್ಕೆ ಕೊಟ್ಟ ಆಸರೆಯಂತೆ. ಆಚೆಯ ಕಿಟಿಕಿಯ ಬಳಿ ನೀತಾ ನಿಂತಂತೆ. ಕರಿಯ ಚರ್ಮವನ್ನ ಅಪ್ಪಿ ಹಿಡಿದ ತೆಳು ಸೈಟರ್‌. ಅದೇ ಬಣ್ಣದ ಜೀನ್ಸ್. ನಸು ನಗುತ್ತ. ನಡುವನ್ನ ಬಳಸಿ ಎಳೆದರೆ ಗಿಮ ಗಿಮನೆ ತಿರುಗುವ ದೇಹ. ಆ ಚಾಂಚಲ್ಯಕ್ಕೆ ದುಂಡ ದುಂಡನೆಯ ತಿರುಗಣೆಗಳನ್ನಿರಿಸಿದಂತೆ ಪುಟ್ಟ ಮೊಲೆಗಳು. ಜೀನ್ಸಿನಲ್ಲಿ ಮಾತ್ರ ಉಬ್ಬಿ, ಸೀರೆಯಲ್ಲಿ ಮುಚ್ಚಿ ಹೋಗುವ ಎಳೆ ನಿತಂಬ. ಸ್ವೆಟರ್‌ನ್ನ ಎಬ್ಬಿಸಿದ ಬಗೆ ಕಂಡರೆ ಮೊಲೆಗಳು ಕಲ್ಲು ಕಲ್ಲಾಗಿರಬೇಕು. ಅವಳ ಪಕ್ಕದಲ್ಲಿ ಗೆರೆ ಮೀಸೆಯ ಕೆಳಗೆ ಕೆಂಜಗೆ ನಗುತ್ತ ನಿಂತ ಮಿಶ್ರಾ. ಅವನ ಗೂಡಿಗೆ ಉಕ್ಕಿನ ಹಿಡಿತ. ಅಷ್ಟು ಕ್ಷೇಮವಾಗಿದೆ ಅವನ ಭವಿಷ್ಯ. ನೀತಾಳ ನಿಲುವು ಅವನ ಇರವಿಗೆ ಸ್ತಂಭವಲ್ಲ. ನೀತಾ ಸರಿದು ಹೋದರೆ ಅವನ ಗೂಡು ಕುಸಿಯದು. “ಅದಕ್ಕೇ ಅವಳು ನಿನ್ನ ಫೋನಿಗೆ ಓ ಕೊಟ್ಟಿದ್ದಾಳೆ. ಕುಪ್ಪುಸ್ವಾಮಿಯ ಮನೆಗೆ ಆಮಂತ್ರಣ ಬಾರದಿದ್ದರೂ.”
ಕಾರಿನ ಕನ್ನಡಿ ಸರಿದಂತಾಗಿ ಅವನು ಬೆಚ್ಚಿದ. ಮಿಶ್ರಾನ ಮೂರ್ತಿ ಕತ್ತಲೆಯಲ್ಲಿ ಬೆರೆತಾಗ ನೀತಾಳ ದೇಹ ಕರಗಿ ನೀರಾದಂತೆ. ರಬ್ಬರ್‌ ಚೀಲಕ್ಕೆ ಬಟ್ಟೆ ಹೊಲೆದಂತೆ. ನೀತಾಳ ಆಕರ್ಷಣೆ ಕಳಚಿ ವಿಮಲಳ ಸ್ವತಂತ್ರವಾದ, ಭಾರವಾದ ತುಂಬು ದೇಹದ ಸುಪರಿಚಿತ, ನವಿರೆಬ್ಬಿಸುವ ಒತ್ತಡವನ್ನ ಅನುಭವಿಸತೊಡಗಿದ ಅವನಿಗೆ ಗಾಬರಿಯಾಯಿತು. ನೀತಾ ಕರಗಿದೊಡನೆಯೇ ಕಂಟ್ರಾಕ್ಟರ್‌ ಕುಪ್ಪುಸ್ವಾಮಿ ಕೈ ಹೊಯ್ದು ನಕ್ಕ, ಬೇಲಿಯಾಚೆ. ಅವನ ಬಂಗಾರದ ಹಲ್ಲು ಹೊಳೆಯಿತು. ಕೆಂಪಡರಿದ ಕಪ್ಪು ಹಲ್ಲುಗಳ ಮಧ್ಯೆ. ವಿಮಲಳ ನಗು ಬೆರೆಯಿತು ಅದರಲ್ಲಿ. ನಿಜವಾಗಿ ಮನಃಪೂರ್ವಕವಾಗಿ, ಆ ಹಳದಿ ಗೂಡು, ಈ ಹಳದಿ ಹಲ್ಲು. ಇವು ತನ್ನ ಜೀವನದಿಂದ ಕಳಚಿ ಹೋದರೆ ವಿಮಲಳ ಕೂಡಿಕೆಗಿಂತ ಹೆಚ್ಚಿನ ಸುಖವಿಲ್ಲ ಎನಿಸುತ್ತದೆ. ಕುಡಿತದ ಅಮಲಿನಲ್ಲಿ, ಥ್ರಿಲ್‌ನ ಅರಸುವಿಕೆಯಲ್ಲಿ, ಎಷ್ಟು ಹಾಸಿಗೆಗಳ ಎಷ್ಟು ದೇಹಗಳನ್ನ ಕೊಂಡುದಿಲ್ಲ ? ವಿಮಲಳ ತಬ್ಬುಗೆಯಲ್ಲಿ ಇಡಿಯ ದೇಹದ ಕಣ ಕಣ ಸೆಳೆದುಕೊಂಡಂತೆ. ಆದರೆ ನೀತಾ ಒಂದು ಕಾಣಿಕೆ. ಅಲ್ಲಿ ಹಣದ ಬಾಬತ್ತಿಲ್ಲ. ಮೇಲಾಗಿ, ಮೇಲಾಗಿ……..
“ಮಿಶ್ರಾನ ಹೆಂಡತಿ, ನನ್ನ ಪಾರ್ಟಿಗೆ ಆಮಂತ್ರಣ ಪಡೆದ, ಎತ್ತರ ನಿಲುವಿನ, ಮೀಸೆ ಗೆರೆಯ ಮಿಶ್ರಾ” ಎಂದ ಕುಪ್ಪುಸ್ವಾಮಿ.
“ಒಂದು ವಾರದಿಂದ ಚಡಪಡಿಸುತ್ತಿದ್ದಾರೆ ನಿಮ್ಮ ಆಮಂತ್ರಣಕ್ಕಾಗಿ, ನೀವೇಕೆ ಕಳಸಲಿಲ್ಲ ? ಜೈನ್, ಮಿಶ್ರಾ, ರಸ್ತೋಗಿ, ಮಲಕಾನಿ, ರಾಮನಾಥನ್‌………ಎಲ್ಲರನ್ನ ಕರೆದಿದ್ದೀರಿ, ಇವರನ್ನೇಕೆ ಮರೆತದ್ದು ?” ಎಂದಳು ನೀತಾ. ಸರಿಯೇ. ಅವಳು ಹಾಗೆ ನಗದೇ ಹೇಳಬೇಕಿತ್ತು. ಇನ್ನೊಂದು ವಾಕ್ಯವನ್ನ ಸೇರಿಸಿದ್ದರೆ ಸೊಗಸಾಗಿರುತ್ತಿತ್ತು. “ಅವರ ಸಾಲಿನ ಹಳದಿ ಬಾಗಿಲಿನ ಅರಿಶಿಣ ಗೂಡುಗಳಲ್ಲಿಯೇ ನಮ್ಮವರದೂ.”
“ಕುಪ್ಪುಸ್ವಾಮಿಯ ಆಮಂತ್ರಣ ಬಾರದಿದ್ದರೆ ಮುಳುಗಿ ಹೋದದ್ದೇನು ? ಹಾಳಾಗಿ ಹೋಗಲಿ, ಅವನ ಕರಿ ಹಲ್ಲಿನ ದಿಬ್ಬಣ ನನಗೆ ಬೇಕಿಲ್ಲ. ನಾನು… ಬಡಾವಣೆಗೆ…”
ಎಂದ ಮೈ ಸೆಟೆಸಿ. ಒಳ್ಳೆಯ ಗತ್ತಿನಿಂದ.
“ಮುಳುಗಿ ಹೋದದ್ದೇನಿಲ್ಲ. ಆದರೆ ನೋಡಿ ಮಿಶ್ರಾ, ನಗುತ್ತಾನೆ.”
“ಆದರೇನಂತೆ ? ಅವನನ್ನು ನೋಡಿ ನಗುವ ಗುಟ್ಟು ನನ್ನಲ್ಲಿ ! ಆದರೆ ಜೈನ್ ನನ್ನ ಬಗ್ಗೆ ಕುಪ್ಪಸ್ವಾಮಿಯನ್ನ ಕೇಳುತ್ತಾನೆ. “ಎಲ್ಲಿದ್ದಾರೆ’ ಎಂದು. ರಸ್ತೋಗಿ ಸಹ….” “ರಸ್ತೋಗಿ ತುಂಬ ಸ್ವಾರ್ಥಿ. ಅವನು ಕೇಳಲಾರ.”
“ಮಲಕಾನಿಗೆ ನಾನು ಒಮ್ಮೆ ‘ಗುಡ್ ಮಾರ್ನಿಂಗ್’ ಎನ್ನಲಿಲ್ಲ. ಆಗಿನಿಂದ ಒಂದು ತರಹಾ”
“ರಾಮನಾಥನ್‌ನೊಡನೆ ಏನೋ ಮನಸ್ತಾಪ ಎಂದಿರಲಿಲ್ಲವೆ ?”
“ಅದು ನನ್ನ, ನನ್ನ ಹುದ್ದೆಯ ಪ್ರಶ್ನೆ ವಿಮಲಾ. ಇತರ ಎಲ್ಲ ಗೂಡಗಳಿಗೆ ಏರ್ ಕೂಲರ್ ಇರುವಾಗ, ನನ್ನ ಆಫೀಸಿಗೆ ಮಂಜೂರಿ ಕೊಡುವುದಿಲ್ಲ ಎನ್ನುತ್ತಾನೆ.”
“ಹಾಗಾದರೆ ಜೈನ್ ಒಬ್ಬನೇ ಕೇಳುವುದು, ನಿಮ್ಮ ಬಗ್ಗೆ.”
“ಮಿ|| ಡೆರೆಕ್ಸ್ ಕೇಳುವುದಿಲ್ಲವೆ ? ಅವರೇ ನನಗೆ ಬಡತಿ ಕೊಟ್ಟುದು.”
ನೀತಾ ಮತ್ತೇ ಆಕಾರವನ್ನ ಪಡೆದಳು. ಹಿತವಾಗಿ, ಬೆಚ್ಚಗೆ ಹೆಗಲಿನ ಮೇಲೆ ತಲೆ ಇಟ್ಟು ಬೆಕ್ಕಿನಂತೆ ಸವರಿದಳು. ಅವನ ತೋಳಿನ ಮೇಲೆ ಅವಳ ಗಟ್ಟಿ ಸ್ತನಗಳ ಸ್ಪರ್ಶ “ಡೆರೆಕ್ಸ್‌ಗೆ ಗೊತ್ತಾಗುತ್ತದೆ. ನೀನು ಆಮಂತ್ರಿತನಲ್ಲ !”
“Forget it ! Darling” ಎಂದಳು ನೀತಾ, ಮುದ್ದಿಗೆ ಮೊಗವೆತ್ತಿ.
“ಏನೋಪ್ಪ, ಪಾರ್ಟಿಯ ರಾತ್ರಿ ಇದು. ಒಂಬತ್ತು ಗಂಟೆಯವರೆಗೆ ಫೋನಿನ ಬಳಿ ಕುಳಿತದ್ದಾಯಿತು…………” ವಿಮಲಾ ಕ್ಷೀಣಸ್ವರದಲ್ಲಿ ಪ್ರಾರಂಭಿಸಿದಳು. ಕುಪ್ಪುಸ್ವಾಮಿಯ ಭೂತ ಕಿವಿ ನಿಮಿರಿಸುತ್ತಿದ್ದಂತೆಯೇ ಅವನು ಲಗುಬಗೆಯಿಂದ ಕಾರಿನಿಂದಿಳಿದು ಲಾಕ್ ಮಾಡಿದ. ಸತ್ಯ ಗೊಂದಲವೆಬ್ಬಿಸಿದ ಆಕೃತಿಗಳನ್ನ ದೂರಕ್ಕೆ ತಳ್ಳಿ ವ್ಹಿಸ್ಕಿಯ ಅಮಲನ್ನ ಹತೋಟಿಗೆ ತಂದ.
ಬಡಾವಣೆಯಲ್ಲಿ ಕೊರಳಪಟ್ಟಿಯಿಲ್ಲದ ಬೀದಿ ನಾಯಿ ಕಾಣಿಸಿ ಅಚ್ಚರಿಯಾಯಿತು. ಹಳೆಯೂರಿನ ಹುಳುಕುಗಳೆಲ್ಲ ಒಂದೊಂದಾಗಿ ಬಡಾವಣೆಯ ನಿರೋಗಿ ಚರ್ಮಕ್ಕೆ ಅಂಟಿಕೊಳ್ಳುತ್ತಿದ್ದಿರಬೇಕು. ಹಾಗಾದರೆ ತಾನು ತಾತ ಮುತ್ತಾತಂದಿರ ಮನೆ ಬಿಟ್ಟು ಇಲ್ಲಿ ಹೊಸತಾಗಿ ಕಟ್ಟಿಸಬೇಕಿಲ್ಲ ಮನೆಯನ್ನ, ಆ ಹಳೆಯ ಗೋಡೆಗಳ ತೇವದಿಂದ ನೆಗಡಿಯಾಗಬೇಕಿಲ್ಲ.
ನಾಯಿ ನಿಧಾನವಾಗಿ ನಡೆದು ಬಂದ ಕಾರಿನ ಚಕ್ರವನ್ನ ಮೂಸಿ ಕಾಲೆತ್ತಿತು.
ಅವನು ಜೋರಾಗಿ ಹೆಜ್ಜೆ ಹಾಕಿದ, ಮಳೆಗತ್ತಲಿಗೆ, ತೀಡುವ ಗಾಳಿಗೆ, ಗೂಳಿಯಂತೆ ಭುಜವೊಡ್ಡಿ. ಆಕೆಯ ಮನೆಯಿದ್ದ ಸಾಲಿನ ಹಿಂದಿನ ಕಿರು ರಸ್ತೆಗೆ ತಿರುಗಿ ಆಚೀಚೆ ಕದ್ದು ನೋಡಿದ. ತೊಯ್ದ ತೋಟಗಳು. ಓರಣವಿಲ್ಲದ ಹುಲ್ಲು. ಅಲ್ಲಲ್ಲಿ ಬೆಳಗುವ ಬಾತ್‌ರೂಮಿನ ದುಂಡು ಕಿಟಿಕಿಗಳು, ಮುರಿದ ಗಾಜಿನ ಹಲಗೆಗಳು.
ಎದೆ ಹೊಡೆದುಕೊಳ್ಳತೊಡಗಿ, ಕುಡಿದ ಅಮಲು ಪೂರ್ತಿ ಇಳಿದಿತ್ತು. ಮತ್ತೇ ಹಳೆ ಮನೆಯ ಗೋಡೆಗಳ ನಡುವೆ ನುಗ್ಗಬೇಕೆನಿಸಿ ನಿಂತ. “ಛಿ’ ಎಂದು ಮುಂದೆ ಸಾಗಿದ. ಕಟ್ಟಡಗಳ ಪೈಪುಗಳು ಅಲ್ಲಲ್ಲಿ ಸೋರಿ ಕಲ್ಲಿನ ಗೋಡೆಗಳ ಮೇಲೆ ನೀರು. ಮನೆಗಳ ಸಾಲನ್ನ ಮೀರಿ ನಿಂತ, ತತಿಯ ನೆಟ್ ಹೊದೆಸಿದ ಪೈಪ್‌ಗಳು ನಿಟ್ಟಿಸುತ್ತಿದ್ದವು.
ಅವಳ ಬೇಲಿಯ ಪುಟ್ಟ ಬಾಗಿಲನ್ನು ತಳ್ಳಿ ಒಳಕ್ಕೆ ಬಂದ. ಬಾಳೆ ಎಲೆ ಒದ್ದೆಯಾಗಿ ಸವರಿತು ಮುಖವನ್ನ. ಒಮ್ಮೆಗೇ ಬೆಚ್ಚಿ ಕಾಲುಗಳು ಕೊರಡಾಗಿ, ಭೀತಿಯಿಂದ ಕಿರುಚುವಂತಾಯಿತು. ಎರಡು ದೊಡ್ಡ ಬೆಕ್ಕುಗಳ ವಿಕೃತ ಕೂಗು, ಸುತ್ತ ಹರಡಿದ ತೇವ ಮೌನವನ್ನು ಭೇದಿಸಿತು. ಬೆನ್ನ ಹುರಿಯ ಮೇಲೆ ಐಸು ತೀಡಿ ಮುಖ ನಿಷ್ಪಂದವಾಗಿ ಕಣ್ಣುಗುಡ್ಡೆ ಉಬ್ಬಿದವು.
ಕಚ್ಚಾಡದೇ, ತಪ್ಪಿಸಿಕೊಂಡು ಓಡದೇ, ಒಂದರ ಮುಂದೆ ಒಂದು ಕುಳಿತು ಕರುಳೇ ಹೆಪ್ಪುಗಟ್ಟುವಂತೆ ಕೂಗುವ ಬೆಕ್ಕುಗಳನ್ನ ನೋಡಿ ಮೈಯಲ್ಲ ಮಿರ ಮಿರ ಎಂದಿತು ಅಂಜಿಕೆಯಿಂದ. ಒಂದು ಬೆಕ್ಕು ಹಾರುವ ಭಂಗಿಯಲ್ಲಿ ಮೈ ಸೆಟೆಸಿ ಕುಳಿತು, ಇನ್ನೊಂದು ಸರಿಯಾಗಿ ಕುಳಿತು, ಬಾಯನ್ನ ಸ್ವಲ್ಪವೇ ತೆರೆದು ಕಿವಿ ಕೀರುವಂತೆ ಅವುಗಳು ಕೂಗುತ್ತಿದ್ದವು. ಒಂದನ್ನೊಂದು ದ್ವೇಷಿಸಿಯೂ ಪರಸ್ಪರರ ಕೊರಗನ್ನು ವಿನಿಮಯ ಮಾಡಿಕೊಂಡಂತೆ.
ಬಡಾವಣೆಯೆಲ್ಲ ಎಚ್ಚರುವ ಮುನ್ನ ಇವುಗಳ ಬಾಯಿ ಮುಚ್ಚಿಸಬೇಕು. ಅಂಜಿಕೆ ಸಾಂದ್ರವಾಗಿ ಒಂದು ನೆಲೆಗೆ ನಿಂತ ಮೇಲೆ “ಹುಶ್ಯ್‌ ಹುಶ್ಯ್‌” ಎಂದ. ಇವನ ಕಡೆ ನೋಡಿ ಮತ್ತೇ……ಅವನು ತನ್ನ ಹಳೆ ಮನೆಯ ಭದ್ರ ಗೋಡೆಗಳನ್ನ ಜ್ಞಾಪಿಸಿಕೊಂಡು ಹೆಜ್ಜೆ ಹಾಕಿ, ಬಲವಾಗಿ ಒದೆದ. ಓಡಿ ಹೋದವು ಬೆಕ್ಕುಗಳು.
ಹಿತ್ತಲ ಬಾಗಿಲನ್ನು ಅವನು ತಟ್ಟುವ ಮುಂಚೆಯೇ ತೆರೆದಳು ನೀತಾ. ಅವನು ಒಳಗೆ ಬರುತ್ತಲೂ ಬಾಗಿಲು ಹಾಕಿದಳು. ಡ್ರಾಯಿಂಗ್’ ರೂಮಿನ ಕ್ಷೀಣ ಬೆಳಕು ಹರಡಿತ್ತು. ಇವರು ನಿಂತೆಡೆಗೆ. ಡ್ರೆಸಿಂಗ್ ಗೌನ್ ಹಾಕಿಕೊಂಡಿದ್ದಳು. ಕೆಳಗೆ ಏನೂ ಇರಲಿಲ್ಲ.
“ಅಬ್ಬಾ ! ಇಷ್ಟು ಲೇಟು”
ಅವಳನ್ನ ಹತ್ತಿರಕ್ಕೆಳೆದು ತಬ್ಬಿದ. ಮಾತನಾಡಿದರೆ ಎಲ್ಲಿ ಮುರಿದು ಬಿಡುವುದೇನೋ ಎಂದು ಭಯ. ಎಷ್ಟು ತೆಳ್ಳನೆಯ ದೇಹ ಎನ್ನಿಸಿತು. ತನ್ನ ದೇಹವನ್ನು ಅರ್ಧವೂ ಮುಚ್ಚದ ಮೈಕಟ್ಟು. ಹರಡಿದ ಅವಳ ಕೂದಲಿಗೆ ಮುತ್ತಿಟ್ಟ. ಗೌನಿನೊಳಗೆ ಕೈ ಹಾಕಿ ಇಷ್ಟು ದಿನದಿಂದ ತನ್ನನ್ನ ಬೆರಗಿಗೀಡು ಮಾಡಿದ ಮೊಲೆಗಳನ್ನ ಸವರಿದ. ಒಂದು ಹಿಡಿಯನ್ನೂ ತುಂಬದ ತಂಪು. ಅದೇ ಸ್ಪರ್ಶಕ್ಕೆ ಜೀವ ಬಂದಂತೆ, ಉಬ್ಬಿದಂತೆ, ಸ್ವತಂತ್ರವಾಗಿ ತಮಗೆ ತಾವೇ ಚಲಿಸಿದಂತೆ.
“ಇಲ್ಲಿ ಬೇಡ.” ಪಿಸುಗುಟ್ಟಿದಳು ಕಿವಿ ಕಚ್ಚಿ.
ಅವಳು ದೂರ ಸರಿದು, ಅವನ ಕೈ ಹಿಡಿದು ನಡೆದಳು. ತನ್ನ ಸೀಳು ವ್ಯಕ್ತಿತ್ವ ಹಿಂದೆಯೇ ನಿಂತು ಕರುಬಿತು ಅವನ ಭಾಗ್ಯಕ್ಕೆ. ಕುಪ್ಪುಸ್ವಾಮಿಯ ಕೊಡಲಿ ಕಡಿದ ಒಂದೊಂದು ತುಂಡೂ ಮತ್ತೆ ಜೋಡಿಸಿಕೊಂಡು ಅವನು ಮರಳಿದ ಉತ್ಸಾಹದಿಂದ ನಡೆದ. ಅವಳ ಎಳೆಯ ಕೈಗಳಿಂದ ತನ್ನ ಅಂಗೈಗೆ ಆತ್ಮವಿಶ್ವಾಸ ಹಿಂತಿರುಗಿದಂತೆ.
ರೂಮಿನಲ್ಲಿ ಅವಳು ಲೈಟ್ ಹಾಕಲು ಹೋದಾಗೆ ಬೆಚ್ಚಿ ಬೇಡವೆಂದ. ಒಡನೆಯೇ ನಾಚಿಕೆಯಾಯಿತು. ಅವಳಿಗಿಲ್ಲದ ಭಯ ತನಗೇಕೆ.
“ಲೈಟು ಹಾಕು ಪರವಾಗಿಲ್ಲ.”
ನಕ್ಕಳು. “ನೋಡಿದರೆ ಚೆನ್ನಾಗಿರುತ್ತದೆ ಅವರು ಬಂದು. ಸೇಡು ತೀರಿದಂತೆ” ಅವನು ಗಡಿಯಾರ ನೋಡಿಕೊಂಡ. ಹನ್ನೆರಡೂವರೆ.
“ ಇನ್ನೂ ಎರಡು ಗಂಟೆ ಇದೆ ಪಾರ್ಟಿ ಮುಗಿಯಬೇಕಾದರೆ. ಕುಪ್ಪುಸ್ವಾಮಿಯ ಪಾರ್ಟಿ ಎಂದರೆ ಅಷ್ಟು ಸಮಯ ಬೇಕು. ಮಿ|| ಡೆರೆಕ್ಸ್ ಸಹ ಎರಡು ಗಂಟೆಗೆ ಮುಂಚೆ ಹೊರಡುವುದಿಲ್ಲ. ಕಂಪೆನಿಯಲ್ಲಿ ಅದೇಕೋ ಕುಪ್ಪುಸ್ವಾಮಿಯ ಪಾರ್ಟಿ ಎಂದರೆ……” ಅವನು ನಾಲಗೆ ಕಚ್ಚಿಕೊಂಡ.
ಅವಳು ಗೌನನ್ನ ಬೀಸಾಡಿ ಬೆತ್ತಲೆಯಾಗಿ, ಸಿನಿಮಾ ಭಂಗಿಯಲ್ಲಿ ನಿಂತಿದ್ದಳು. ತಾನು ಕುಪ್ಪುಸ್ವಾಮಿಯ ಬಗ್ಗೆ ಮಗ್ನನಾಗಿ ಮಾತು ಹಾರಿಸುತ್ತಿದ್ದಾನೆ.
“ಓಹ್ ! ಗಾಡ್ ! ಬ್ಯೂಟಿಫುಲ್” ಎಂದು ಬಳಿಸಾರಿದ.
ಮಿಶ್ರಾನ ಕೋಣೆ. ಅವನ ಶೂಸ್ ಒಂದು ಮೂಲೆಯಲ್ಲಿ. ಗಾಲ್ಫ್ ಚೀಲ ಒಂದು ಕಡೆ. ತಾನೂ ಬೇಗ ಗಾಲ್ಫ್ ಕಲಿಯಬೇಕು. ಡೆರೆಕ್ಸ್‌ರೊಡನೆ ಸ್ನೇಹವನ್ನ ಬೆಳೆಸಬೇಕಾದರೆ ಅದೇ ಆಟ. ಆದರೆ ತನಗೆ ಯಾರು ಕಲಿಸುವುದು.
“ಅವರು ಬಂದು ನೋಡಬೇಕು.”
“ಹೌದು, ಗಾಲ್ಫ್ ಆಟಗಾರನ ಮೀಸೆ ಮುರಿಯಬೇಕು.”
ವಿಶ್ರಾ ಕೋಣೆಯಿಂದ ಹೊರಗೆ ಹೋಗದೇ ತಮ್ಮಿಬ್ಬರ ಪಕ್ಕದಲ್ಲಿಯೇ ನಿಂತುಬಿಟ್ಟ ಎನ್ನಿಸಿತು.
ಅವಳ ನುಣುಪಾದ ಎದೆಯನ್ನ ಚುಂಬಿಸಿ ತುಟಿ ಸವರಿದ. ವಿಮಲಳ ಎದೆಯಂತೆ ಮೆತ್ತನೆಯ ವಕ್ಷವಲ್ಲ. ವಿಮಲಾ ನೋಡಬಾರದು ಈ ದೃಶ್ಯವನ್ನ. ನೀತಾ ಮಾತ್ರ ತನ್ನ ಗಂಡ ನೋಡಬೇಕೆನ್ನುತ್ತಾಳೆ.
“ಏ‌ಯ್‌ ! ಕಡಿಯಬೇಡಿ” ಎಂದಳು ಜೋರಾಗಿ.
“ಉಶ್ಶ್‌ !” ಎಂದ. “ಅಷ್ಟು ಜೋರಾಗಿ ಮಾತನಾಡುತ್ತಾರೆಯೇ ?”
“ಪರವಾಗಿಲ್ಲ, ಕುಪ್ಪು ಸ್ವಾವಿಂದ ಮನೆಗೆ ಕೇಳಿಸಿದರೂ ಪರವಾಗಿಲ್ಲ.”
“ಎಷ್ಟು ಕೂಗಿದಳೂ ಕೇಳಿಸದಂತೆ ಬ್ಯಾಂಡ್ ಇರುತ್ತದೆ. ಅದೂ ಆರ್ಮಿ ಬ್ಯಾಂಡು. ಜನರೆಲ್ಲರ ಪರಿಚಯ ಅವನಿಗೆ. ಅವರೂ ಬಂದಿರುತ್ತಾರೆ. ಆ ನೃತ್ಯ, ಆ ಸಂಗೀತ,…. ಅದರಲ್ಲಿ ಬೇರೆಯವರ ಪರಿವೆಯೇ ಇಲ್ಲ.”
“ನಾನು ಒಂದು ಸಲವೂ ಹೋಗಿಲ್ಲ.” ಅವಳು ಮಂಚದ ಮೇಲೆ ಕುಳಿತಳು, ನಿಸ್ಸಂಕೋಚವಾಗಿ. ಅವನು ಶತಪಥ ಹಾಕಿದ. “ನಾನು ಕನಿಷ್ಠಪಕ್ಷ ಐದು ಸಲ ಹೋಗಿದ್ದೇನೆ. ಒಂದೆರಡು ಬಾರಿ ವಿಮಲಾ ಸಹ. ಊರಿನ ಗಣ್ಯರೆಲ್ಲ…….”
“ನನ್ನನ್ನ ಇವರು ಒಂದು ಸಲವಾದರೂ ಕರೆಯಲಿಲ್ಲ.” ಅವಳ ದನಿಯಲ್ಲಡಗಿದ ಕೊರಗು
ಮಗುವಿನ ಗೋಗರೆತದಂತಿತ್ತು. ಅವಳ ಬಳಿ ಕುಳಿತು ಬಳೆಯಂತಹ ಸೊಂಟವನ್ನ ತಡವಿದ. ಹೆಂಡತಿಯರನ್ನ ಕರೆದೊಯ್ಯುವ ಪಾರ್ಟಿ ಅದಲ್ಲ. ಎಂದರೆ ಹೆಂಡತಿಯನ್ನ ಪ್ರೀತಿಸುತ್ತಿದ್ದರೆ.
“Does it matter ? It is no great matter” ಎಂದ. ಕವಿತೆಯನ್ನೋದಿದಂತೆ. “It matters !” ಎಂದಳು ಘನಿಷ್ಠವಾಗಿ.
“ಬಾ” ಎಂದು ಹಗುರವಾಗಿ ತಬ್ಬಿ ಮುತ್ತಿಟ್ಟ.
ತಂತು ಕಡಿದಂತಾಯಿತು. ಅವನ ಕಾಮಚೇಷ್ಟೆಗಳಿಗೆ ಮೈ ಒಲೆದರೂ ಕಣ್ಣುಗಳಲ್ಲಿ ಕಿಡಿ ಇರಲಿಲ್ಲ. ಅವಳ ನಗ್ನ ದೇಹವನ್ನ ಹೊಡೆದೆಬ್ಬಿಸಿದ ನುರಿತ ರಸಿಕನಾಗಿ. ಆದರ ಕಾವು ಒಂದೆಡೆ ಏರಿದರೆ ಇನ್ನೊಂದೆಡೆ ತಂಪು. ಅವನ ಉತ್ಸಾಹ ಬಳುಕಿತು.
“ವಿಶ್ರಾ ಬಂದು ನೋಡಬೇಕು” ಎಂದ. ಕಿಡಿ ಹೊತ್ತಿಸಿ ಫಕ್ಕನೆ ಕರೆಂಟ್‌ ಹರಿದಂತೆ ಬಿಗಿದಪ್ಪಿದಳು.
“ಯಾಕೆ ಏನಾಯಿತು ?” ಎಂದಳು.
“ಸ್ಸಾರಿ” ಎಂದು ಎದ್ದು ಕುಳಿತ. ಬಟ್ಟೆ ಹಾಕಿಕೊಂಡು ಹೊರಗೆ ಬಂದ, ಹಿಂತಿರುಗಿಯೂ ನೋಡದೇ. ಅವಳೂ ಕರೆಯಲಿಲ್ಲ.
ಕಾರನ್ನ ಪರಿಚಿತ ಗಲ್ಲಿಯ ಹಣದ ಮನೆಯ ಮುಂದೆ ನಿಲ್ಲಿಸಿ ನಿಟ್ಟುಸಿರೆಳೆದ.

Close

ಅಮರ

ಅಮರ

ಬರಗೂರು ರಾಮಚಂದ್ರಪ್ಪ

ಇದು ಹರಿವ ನೀರು
ಮೂಗು ಹಿಡಿದು ಮೂರು ಮುಳುಗು ಗಂಗಾಸ್ನಾನ
ತಿರುಪತಿ ಬ್ರಾಂಡ್ ತಲೆ ಮೇಲ್ಕೋಟೆ ಮೂರ‍್ನಾಮ
-ಎಲ್ಲ ನೋಡುವ ಮೌನ ಮುಗುಳ್ನಗೆಯ ನೀರು.
ದಂಡೆಯಲಿ ಮಂಡಿಯೂರಿ ಮಂತ್ರ ಪಠಿಸುವ
ನೀರಿನ ನಿರಿಗೆಗೆ ಗರಿಗೆದರುವ ಬೆಲೆಗಟ್ಟುವ
ಜೀವರ ಬಳಿ ತೆವಳಿ ತಂಪು ಮಾಡುತ್ತ
ಕಾಲ
ಹಿಡಿದೆಳೆದು ಮುಸಿ ಮುಸಿ
ಮೀಸೆ ಕುಣಿಸುವ ಸಹಜ ಠೀವಿ
ಮಂತ್ರದಂಡ ಬೇಕಿಲ್ಲದ ಮಹಾ ಮಾಯಾವಿ !

ಸಿಟ್ಟು ಬಂದರೆ ಇನ್ನು ಕಟ್ಟುಕಟ್ಟಳೆಯೆಲ್ಲಿ ?
ದಡದ ಮಣ್ಣೆಲ್ಲ ಬೆಳೆತಮಂಡಲ ಕಡಿದ ಮೈ.
ಕ್ಷಣ ಕ್ಷಣಕ್ಕೆ ಬೆಳೆಯುವ ಕೈಬೆರಳು
ಉಗುರು ; ಬೇರಿಗೆ ಉರುಳು

ಬೆಳೆಯುತ್ತ ಬಲಿಯುತ್ತ
ತೊಟ್ಟು ಸಡಿಲಿದ ಫಲಕ್ಕೆ ದುರ್ಬೀನು ಪತ್ತೆ
ರೊಚ್ಚಿಗೆ ಬೆಚ್ಚಿ ಬಿದ್ದವೆಷ್ಟೋ ;
ರಚ್ಚೆ ಹಿಡಿದು ದಡಬಡಿಸಿ ಎದ್ದೆದ್ದು ಬಿದ್ದು ಕೊಚ್ಚಿ ಹೋದವೆಷ್ಟೊ !
ಏನು ಹೇಳುವುದು ಮುಂದೆ ?
ಕಡೆಗೆ ಉಳಿಯುವುದು ಬರೀ ನೆನಪು :
ದೊಕ್ಕರು ಬಿದ್ದ ನೆಲ ; ಅಲ್ಲಲ್ಲಿ ಅಸ್ತಿತ್ವ ಉಗ್ಗಡಿಸುವ ಜಲ;
ಹೊರ ಬಂದ ನೆಣ ; ಮರ ಮಸಣ ;
ಹದ್ದುಗಳಿಗೆ ಹಬ್ಬವೋ ಹಬ್ಬ :
ಗಬ್ಬ ಹತ್ತಿದ ಕಡಸು ತುರುಸು
ಮನದ ತುಂಬೆಲ್ಲ ಬಾಣ ಬಿರುಸು.
ಪಾಪ ! ಯಾವ ದಿಬ್ಬದ ಮೇಲೆ ಕದ್ದು ಹೊಂಚುತ್ತಿದೆಯೊ
ಸಹಜ ಸಂಚಿನ ಚುಂಚು !

ಸುಳ್ಳಲ್ಲ, ದಾರಿಗತ್ತಲಲ್ಲಿ ಹತ್ತಿ ಉರಿಯುತ್ತವೆ ಲಾಂದ್ರ
ಎಣ್ಣೆ ಇದ್ದಷ್ಟು ಬೆಳಕು ಬೀದಿ.
ಸಂತೆ ಹಾದಿಯ ಕಾದ ಕಳ್ಳ ಇದ್ದಕ್ಕಿದ್ದಂತೆ ಅಮರಿ
ಅಡ್ಡಗಟ್ಟುವ ಪರಿ –
ಭೂತ ಭೇತಾಳಗಳ ವಿಜೃಂಭಿತ ಛತ್ರಿ ಚಾಮರ
ನೆಲಕ್ಕಂಟಿ ಬೇರಿಳಿದ ಗಾದಿ.

ಮೂಳೆ ಮೈ
ಗಳ ಕುಣಿತ ಹುಲಿವೇಷ
ಕೊಂಬು ಕಹಳೆ ತಮ್ಮಟೆ ಆರ್ಭಟೆ
ಕತ್ತಿಗೆ ರೋಟಿ ಕೋಲು ಕಟ್ಟಿದ ತೋಟಿ*
ಚಿತ್ತೈಸುವಾಗ ಕುಣಿಯುತ್ತ, ನೆಲಕ್ಕೆ ನಡುಗು ಒಳತೋಟಿ.

ಮೈ ತುಂಬ ಸೆರಗು ಹೊದ್ದು ಬಾಳಿದರೂ ತಪ್ಪಿತೆ
ಸೀತಾ ಸಾಕ್ಷಾತ್ಕಾರ ?
ಹುಟ್ಟಿಗೆ ಸಾವೊಂದೇ ಶಾಶ್ವತ ಪರಿಹಾರ
ಅದೇ ಅಮರ.

ತೋಟಿ-ಎಂಬುದು ಹಳ್ಳಿಯ ಕಡೆ ಹಾಕುವ ಒಂದು ವೇಷ. ಹಬ್ಬ ಹರಿದಿನಗಳಲ್ಲಿ ಭಯಂಕರ ಮೀಸೆಯೊಂದಿಗೆ ಈ ವೇಷ ವಾದ್ಯ ಶಬ್ಬಕ್ಕನುಗುಣವಾಗಿ ಕುಣಿಯುತ್ತ ಬೀದಿಯಲ್ಲಿ ಸಾಗುತ್ತದೆ.
.

Close

ನಿರಾಕರಣ-ಒಂದು ಸಮೀಕ್ಷೆ

ನಿರಾಕರಣ-ಒಂದು ಸಮೀಕ್ಷೆ

ಲಕ್ಯಾ ಸೂರ್ಯನಾರಾಯಣ

ಭೈರಪ್ಪನವರ ಇತ್ತೀಚಿನ ಕಾದಂಬರಿಗಳ ಪೈಕಿ ‘ನಿರಾಕರಣ’ವೊಂದು. ಪ್ರಸ್ತುತ ಕಾದಂಬರಿಯಲ್ಲಿ ಭೈರಪ್ಪನವರು “ವಸ್ತುಪರಿಸ್ಥಿತಿ ಮತ್ತು ಅಂತಶ್ಯಕ್ತಿಗಳ ನಡುವಿನ ತೋಲನದ ಪ್ರಶ್ನೆಯನ್ನು” ಎತ್ತಿಕೊಂಡು ವ್ಯಕ್ತಿವ್ಯಕ್ತಿಗಳಿಗಿರುವ ಸಂಬಂಧ ಅದರ ಜಟಿಲತೆಗಳನ್ನು ಕುರಿತು ವಿಶ್ಲೇಷಿಸುವ ಪ್ರಯತ್ನ ನಡೆಸಿದ್ದಾರೆ. ಪೂರ್ವಕಾಲದ ನೈಜ ವೈರಾಗ್ಯಕ್ಕೂ ಈಗ ಕಾಣಬರುತ್ತಿರುವ ವೈರಾಗ್ಯದ ರೀತಿಗೂ ಇರುವ ವ್ಯತ್ಯಾಸ, ಹಿನ್ನೆಲೆ, ಸಿದ್ದಿ ಸಾಧನೆಗಳು, ಆಧುನಿಕ ಸಮಾಜದ ಮೇಲೆ ಅದರ ಪರಿಣಾಮ ಇತ್ಯಾದಿ ಅಂಶಗಳನ್ನು ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ.
ವಂಶವೃಕ್ಷ, ಗೃಹಭಂಗ ಮೊಲಾದ ಮೇಲ್ಮಟ್ಟದ ಕೃತಿಗಳನ್ನಿತ್ತ ಭೈರಪ್ಪನವರು ನಮ್ಮ ದೇಶದ ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ, ನಮ್ಮ ಬದುಕಿನ ಮೂಲಭೂತ ತತ್ವಗಳ ಬಗ್ಗೆ ಗಾಢವಾದ ಕಳಕಳಿಯನ್ನಿಟ್ಟುಕೊಂಡಿರುವ ಚಿಂತನಶೀಲ ಬರಹಗಾರರು. ತಾವು ಆರಿಸಿಕೊಳ್ಳುವ ವಸ್ತು, ಅದನ್ನು ನಿರ್ವಹಿಸುವ ರೀತಿ, ಕೈಕೊಳ್ಳುವ ನಿರ್ಣಯ ಇತ್ಯಾದಿ ಅಂಶಗಳಿಂದ ನವೀನ ಪೀಳಿಗೆಗೆ ಸೇರುವ ಬರಹಗಾರರಾದರೂ, ಉಳಿದವರಿಗಿಂತ ಭಿನ್ನರಾಗಿ ನಿಂತವರು. ‘ನಿರಾಕರಣ’ ದಲ್ಲೂ ತಾತ್ತ್ವಿಕ ಸಮಸ್ಯೆಯೊಂದನ್ನು ಎತ್ತಿಕೊಂಡು ವಿಶ್ಲೇಷಿಸಿರುವರು. ಅವರ ಉಳಿದ ಕಾದಂಬರಿಗಳಂತೆಯೇ ಇಲ್ಲೂ ಆದರ್ಶ ಮತ್ತು ವಾಸ್ತವಿಕತೆಯ (ಅಥವಾ ಪರಿಸ್ಥಿತಿಯೊಡನೆ) ಘರ್ಷಣೆಯಾಗಿ ವಾಸ್ತವತೆ ಗೆಲ್ಲುವುದು.
ಕಾದಂಬರಿಕಾರರೇನೋ ಹಳೆಯ ಮೌಲ್ಯಗಳನ್ನು ಎತ್ತಿಹಿಡಿದು ಅವುಗಳ ಪರವಾಗಿ ವಕೀಲಿ ನಡೆಸುವರು.
‘ನಿರಾಕರಣ’ ಕಾದಂಬರಿಯ ಹೆಸರೇ ಹೇಳುವಂತೆ ತನ್ನ ಸಂಬಂಧಗಳನ್ನು ಕಳಚಿಕೊಂಡು, ಒಂಟಿತನವನ್ನು ಪಡೆಯಲು ಹಂಬಲಿಸಿ, ಪ್ರಯತ್ನಿಸಿ, ವಿಫಲನಾಗಿ ಕೊನೆಗೆ ಅಂಟಿಕೊಂಡೇ ಉಳಿಯುವ ವ್ಯಕ್ತಿಯೊಬ್ಬನ ಸುತ್ತ ಹೆಣೆದ ಕಥೆಯಾಗಿದೆ. ಸಂಸಾರದಲ್ಲಿ ವ್ಯಕ್ತಿ ವ್ಯಕ್ತಿಗಳಿಗಿರುವ ಸಂಬಂಧವೆಂಥದು? ಅದನ್ನು ಬೇಕೆಂದಾಗ ಕಡಿದುಕೊಳ್ಳಲು ಬರುವಂತಹುದೆ? ಸಂಬಂಧಗಳನ್ನು ಕಳಚಿಕೊಳ್ಳುವುದು ಅಷ್ಟು ಸುಲಭವೆ ? ಸಂಬಂಧಗಳನ್ನು ನಿರಾಕರಿಸಿದ ಮೂಲಕ ಒಬ್ಬ ಒಂಟಿಯಾಗಬಲ್ಲನೆ ? ಅದರಿಂದ ಮೇಲೆ ಮೇಲೆ ಏರಬಲ್ಲನೆ ? ಸಂಬಂಧಗಳನ್ನು ಕಳಚಿಕೊಳ್ಳುವುದರ ಮೂಲಕ ಸಮಾಜದ ಮೇಲಾಗುವ ಪರಿಣಾಮಗಳು ಯಾವ ಸ್ವರೂಪದ್ದು ? ಇತ್ಯಾದಿ ವಲಲಭೂತ ಸಮಸ್ಯೆಗಳನ್ನು ಕೆಣಕಿ ನೋಡುವುದು ‘ನಿರಾಕರಣ’ ದ ಉದ್ದೇಶ.
ಕಾದಂಬರಿಯ ನಾಯಕ ನರಹರಿಯ ಸುತ್ತ ಕಾದಂಬರಿ ಹಬ್ಬಿದೆ. ಉಳಿದ ಪಾತ್ರಗಳಾದ ನರಹರಿಯ ಹೆಂಡಿರು, ಮಕ್ಕಳು, ಶೀಳೇಕರ್‌, ಸಂನ್ಯಾಸಿಗಳು, ಬಾವಾಜಿಗಳು, ನರಹರಿಯ ಸುತ್ತ ತಿರುಗುತ್ತಾರೆ ಅಥವಾ ಇವರ ಸುಳಿಯಲ್ಲಿ ಸಿಕ್ಕಿದ್ದೇನೆಂಬ ಭ್ರಮೆಯಿಂದ ತೊಳಲುತ್ತ, ನರಹರಿ ಇವರಿಂದ ದೂರ ಸರಿದು ಒಂಟಿಯಾಗಲು ಬಯಸುತ್ತಾನೆ.
ಕೃತಿಯ ಬೆಳವಣಿಗೆಯನ್ನು ಪ್ರಧಾನವಾಗಿ ಮೂರು ಘಟ್ಟಗಳಲ್ಲಿ ಗುರುತಿಸಬಹುದು. ಮೊದಲ ಘಟ್ಟದಲ್ಲಿ ನಾಯಕನ ಒಂಟಿಯಾಗುವ ಬಯಕೆ. ಮಕ್ಕಳನ್ನು ದತ್ತು ಕೊಟ್ಟು ಸಂನ್ಯಾಸ ಸ್ವೀಕಾರ ಮಾಡುವುದು, ಎರಡನೆಯ ಘಟ್ಟದಲ್ಲಿ ಸಂನ್ಯಾಸಿಯಾದ ನರಹರಿಯ ಸಾಧನೆ, ಕಾಶಿಯಲ್ಲಿ ಬನ್ಸೀ ಮಹಾರಾಜನೊಡನೆ ಗೆಳೆತನ, ತನ್ಮೂಲಕ ನಿಧಾನವಾಗಿ ಜಾರಿ ಬೀಳುತ್ತಿದ್ದವನ ಪೂರ್ಣಪತನ ; ಕಡೆಯದಾದ ಮೂರನೆಯ ಘಟ್ಟದಲ್ಲಿ ನಾಯಕ ಪುನಃ ಎಚ್ಚೆತ್ತುಕೊಂಡು, ಅನಾಥಾಶ್ರಮಕ್ಕೆ ಸೇರಿ ಮತ್ತೆ ಅಂಟಿಕೊಳುವುದು-ಹೀಗೆ ಈ ಮೂರು ಘಟ್ಟಗಳಲ್ಲಿ ಆದರ್ಶದ ಬಯಕೆ, ಅದನ್ನು ಪಡೆಯಲು ನಡೆಸುವ ವಿಫಲ ಪ್ರಯತ್ನ, ಕಡೆಗೆ ಆದರ್ಶ-ವಸ್ತುಪರಿಸ್ಥಿತಿಗಳ ನಡುವಿನ ಹೋರಾಟದಲ್ಲಿ ವಸ್ತು ಪರಿಸ್ಥಿತಿಯ ಗೆಲುವು-ಇವುಗಳನ್ನು ಚಿತ್ರಿಸಿದ್ದಾರೆ.
ವೇದಾಂತದ ಪುಸ್ತಕಗಳು ಯಾವುದಕ್ಕೂ ಅಂಟಬಾರದು ಎಂಬ ನೀತಿಯನ್ನು ಆತನಿಗೆ ಕಲಿಸಿದ್ದವು. ಅವುಗಳ ಕಡೆಗೆ ಗಮನ ಹರಿಯಲು ಕಾರಣ ಆತನ ಚಿಕ್ಕ ವಯಸ್ಸಿನ
ಅನುಭವ. ಎಳೆಯ ವಯಸ್ಸಿನಲ್ಲಿಯೇ ತಾಯಿತಂದೆಗಳ ಮರಣ, ಅನಾಥಪ್ರವೃತ್ತಿ, ದೊಡ್ಡಪ್ಪನ ಲೋಭ, ಎಳೆಯ ಹುಡುಗನನ್ನು ಆ ಚಿಕ್ಕವಯಸ್ಸಿನಲ್ಲಿಯೇ ಜೀವನದ ಬಗ್ಗೆ
ಜಿಗುಪ್ಪೆಗೊಳ್ಳುವಂತೆ ಮಾಡುತ್ತದೆ. ದೊಡ್ಡಪ್ಪನ ಲೋಭವೇ ಒಂದು ಅರ್ಥದಲ್ಲಿ ಆತನ ಒಂಟಿತನದ ಬಯಕೆಗೆ ಬೀಜಪ್ರಾಯವಾಗುತ್ತದೆ. ತನಗೆ ಮೋಸ ಮಾಡಿ ಆಸ್ತಿಯನ್ನು ಲಪಟಾಯಿಸಿ, ತನ್ನ ಕಷ್ಟ ಸುಖಗಳನ್ನು ಏನೊಂದೂ ವಿಚಾರಿಸದಾಗಲೇ ಆತನ ಸಂಬಂಧದ ಬಗ್ಗೆ ಸಂದೇಹ, ಜಿಗುಪ್ಸೆಗಳು ಹುಟ್ಟುವುದರ ಜೊತೆಗೆ ಸಂಬಂಧದ ಬಗ್ಗೆಯೇ ನಂಬಿಕೆಯನ್ನು ಕಳೆದುಕೊಳ್ಳುವಂತಾಗುತ್ತದೆ. ಮುಂದೆ ಬಾಳಿನಲ್ಲಿ ಒದಗಿಬಂದ ಒಂದೊಂದು ಘಟನೆಗಳೂ ಈ ನಂಬಿಕೆಯ ಅಡಿಗಲ್ಲನ್ನೇ ಅಳ್ಳಾಡಿಸಿ ಬುಡಮೇಲು ಮಾಡುತ್ತವೆ. ಒಬ್ಬರಾದ ಮೇಲೆ ಒಬ್ಬರಾಗಿ ಸತ್ತ ತಂದೆತಾಯಿಗಳು, ಹೆಂಡಿರ ಆಕಾಲ ಮರಣ, ವೇದಾಂತ ಮನೋಭಾವದ ಈತನಿಗೆ ವೈರಾಗ್ಯದ ತೀವ್ರ ಬಯಕೆಯನ್ನು ಹುಟ್ಟಿಸುತ್ತವೆ. ಆದರೆ ಈ ನಿವೃತ್ತಿಧರ್ಮ ಸಹಜವಾಗಿ ಬರದೆ ಕೇವಲ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳಲು ಮಾಡಿದ ಹೊಂಚಿನಂತೆ ಅನೇಕರಿಗೆ ಕಾಣಿಸುತ್ತದೆ. “ವೇದಾಂತಿಕ ಮನೋಭಾವದ ಜನ ಕರ್ತವ್ಯ ತಪ್ಪಿಸಿಕೊಳ್ಳುವುದರಲ್ಲಿ ಯಾವಾಗಲೂ ಮುಂದು” ಎಂದು ಬಸ್ಸಿನಲ್ಲಿ ಕೇಳಿದ ಮಾತು ಮತ್ತೆ ಮತ್ತೆ ನೆನಪಿಗೆ ಬಂದು ತನ್ನನ್ನು ತಾನೇ ಸಂದೇಹದಿಂದ ನೋಡಿಕೊಳ್ಳುತ್ತಾನೆ. ಮಕ್ಕಳ ಅಂಟನ್ನು ಬಿಡಿಸಿಕೊಳ್ಳುವುದು, ಬಿಡಿಸಿಕೊಳ್ಳದೇ ಮತ್ತಷ್ಟು ಅಂಟಿಕೊಳ್ಳುವುದು ಎರಡೂ ಸಾಕಷ್ಟು ಕಾಡುತ್ತವೆ. ಅವು ಒಂದೇ ತೀವ್ರತೆಯ ಯಾತನೆಯ ಎರಡು ವಿಧಿಗಳಾಗಿವೆ ಅವನಿಗೆ.
ಹೆಂಡತಿ ಸತ್ತು ಮಕ್ಕಳ ಪೋಷಣೆ ಪಾಲನೆಯ ಹೊರೆ ನೇರವಾಗಿ ತನ್ನ ಮೇಲೆ ಬೀಳುತ್ತಿದ್ದಂತೆಯೇ ಈ ಒಂಟಿತನದ ಬಯಕೆ ಏಕೆ ಮೂಡಿಬಂದಿತು ? ಎಂದು ಆಶ್ಚರ್ಯವಾಗುತ್ತದೆ. ಆಂತರ್ಯದ ಒಂಟಿತನ ಮತ್ತು ಬಾಹ್ಯದ ಸಂಗಸಂಬಂಧಗಳು ಕ್ರಮಪ್ರಕಾರ ಇಂಬುಗಾಣುತ್ತಿದ್ದವು. ಮೊದಲ ಹೆಂಡತಿಯ ಸಾವಿನೊಡನೆಯೇ ಒಂಟಿತನದ ಬಯಕೆ ಅದಮ್ಯವಾಗುತ್ತದೆ. ಎರಡನೆಯ ಮದುವೆ ಅದಕ್ಕೊಂದು ಸದ್ಯದ ನಿಲುಗಡೆಯನ್ನು ತರುತ್ತದೆ. ಆದರೆ ಪುನಃ ಅವಳ ಸಾವು ಒಂಟಿತನದ ಬಯಕೆಯನ್ನು ಮತ್ತೆ ಜಾಗೃತಗೊಳಿಸುತ್ತದೆ. ಒಂಟಿತನದ ಬಯಕೆ ಇಷ್ಟು ದಿನ ಸುಪ್ತ, ಆದರೆ ಪ್ರಬಲವಾಗಿ ತನ್ನ ಆಲೋಚನೆ, ಕ್ರಿಯೆಗಳನ್ನೆಲ್ಲ ನಿರ್ದೆಶಿಸುತ್ತಿತ್ತು. ಮನದಲ್ಲಿ ಮನೆಮಾಡಿ ಆಧ್ಯಸ್ಥವಾದ ಅದು ಒಂದು ವಿಧವಾದ ಮಾಧುರ್ಯವನ್ನು ಕೊಡುತ್ತಿತ್ತು. ಹೀಗಾಗಿ ಕಡೆಗೆ ತಾನು ಕೈಕೊಳ್ಳುವ ನಿರ್ಧಾರವೇ ಅವನಿಗೆ ವಿವೇಕಪೂರ್ಣವಾಗಿ ತೋರುತ್ತದೆ.
ಮಕ್ಕಳನ್ನು ದತ್ತುಕೊಟ್ಟು ಒಂಟಿಯಾಗಲು ಹವಣಿಸಿ ನರಹರಿ ಸಂನ್ಯಾಸ ಸ್ವೀಕಾರ ಮಾಡಿ ‘ನಿಸ್ಸಂಗಾನಂದ’ನಾಗುತ್ತಾನೆ. ನಿಸ್ಸಂಗನಾಗ ಬಯಸುವ ನರಹರಿಯ ಇಚ್ಛೆಯಂತೆ
ಅವನ ಗುರುಗಳು ಕೊಟ್ಟ ಹೆಸರೋ ಇಲ್ಲಿ ಕಾದಂಬರಿಕಾರರೇ ಈ ಹೆಸರು ಕೊಟ್ಟರೋ ಆ ಸಂನ್ಯಾಸ ಸ್ವೀಕಾರ ಮಾಡಿ, ನರಹರಿ ನಿಸ್ಸಂಗನಂದನಾಗುತ್ತಾನೆ. ಹೆಸರಿನಲ್ಲಿ ಮಾತ್ರವೋ ಅಥವಾ ನಿಜದಲ್ಲೂ ನಿಸ್ಸಂಗಾನಂದನಾದನೋ ಎಂಬುದೇ ಮುಂದಿನ ಪ್ರಶ್ನೆ.
ನರಹರಿಯೇನೋ ಸಂನ್ಯಾಸ ಸ್ವೀಕಾರ ಮಾಡಿದ. ಆದರೆ ಅವನ ಸಂನ್ಯಾಸ ಎಲ್ಲಿಂದ ಬಂದುದು ? ವೈರಾಗ್ಯಮೂಲವಾದುದೋ ಅಥವಾ ಕೇವಲ ಬಯಕೆಯಾಗಿ ಎದ್ದು ಬಂದುದೋ ಎಂದರೆ, ಕಾದಂಬರಿಕಾರರೇ ಹೇಳುವಂತೆ “ಬದುಕಬೇಕು, ಆದರೆ ಅದರಲ್ಲಿ ಆಟಿರಬಾರದು. ಕಟ್ಟುಕಟ್ಟಲೆ ಇರಬಾರದು. ಅದು ಹೇಗೆ ಸಾಧ್ಯ ? ಸಂನ್ಯಾಸವೊಂದೇ ಅಂತಹ ಜೀವನವನ್ನು ಕೊಡಬಲ್ಲದು” ಎಂದು ಸಂನ್ಯಾಸಧರ್ಮವನ್ನು ಅರಸಿ ಬಂದವ ನರಹರಿ. ಹೋಗಲಿ ಅವನಿಗೆ ಸಂನ್ಯಾಸಿಯಾಗುವ ಯೋಗ್ಯತೆಯಾದರೂ ಇದೆಯೆ ? “ಅವನಿಗೆ ಮೇಲೆ ಹತ್ತುವ ಆಕರ್ಷಣೆಯಿತ್ತು. ಆದರೆ ತಾನು ಅದಕ್ಕೆ ತಕ್ಕವನಲ್ಲವೆಂದು ಅಂತರಾಳವು ನುಡಿಯುತ್ತಿತ್ತು.” ಆದರೂ ಒಮ್ಮೆಗೇ ಮೇಲೆ ಮೇಲೆ ಏರಬೇಕು ; ತಾನೂ “ಬಾರಾಮಾಸಿ”ಯಾಗಬೇಕು ಎಂದು ಸಾಧನೆಗೆ ಶುರುಮಾಡುತ್ತಾನೆ. ಮೇಲೆ ಮೇಲೆ ಬೇಗ ಬೇಗ ಹತ್ತಿ, ಜಾರುವ ಬಂಡೆಯಲ್ಲಿ ಮಕ್ಕಳು ಜಾರುವಂತೆ ಒಮ್ಮೆಗೇ ಮೇಲಿನಿಂದ ಜಾರಿಬಿಡುತ್ತಾನೆ. ಈ ಭಾಗದಲ್ಲಿ ಆತ ನಡೆಸುವ ಸಾಧನೆಗಳು ತುಂಬ ಸಾಂಕೇತಿಕವಾಗಿವೆ. “ನೀರು ಹರಿಯದಿದ್ದಾಗಲೂ ಅದನ್ನು ನದಿ ಅನ್ನಬಹುದೆ ?” ಎಂಬ ಸಂದೇಹ ನರಹರಿಗೆ ಉಂಟಾಗುತ್ತದೆ. ಬಾರಾಮಾಸಿ ಮಹಾರಾಜರು ಅರೆಕ್ಷಣ ಚಿಂತಿಸಿ ನಗುತ್ತ ಹೇಳುವ ಮಾತು ತುಂಬ ಮಾರ್ಮಿಕವಾಗಿದೆ. “ಇಲ್ಲಿ ಅದು ಬರೀ ರೂಢಿಯ ಸಂಕೇತ. ಹರಿದರೆ ಮಾತ್ರ ಕಾಲ, ಹೆಪ್ಪುಗಟ್ಟಿದರೆ ಅಲ್ಲ……..ಉಷ್ಣ ಚಂಚಲ, ಶೀತ ಅಚಲ.”
ಹೆಪ್ಪಗೆಟ್ಟಲೇಬೇಕೆಂದು ಬಯಲನ್ನು ನಿರಾಕರಿಸಿ ಬೆಟ್ಟವನ್ನೇರುತ್ತಾನೆ. ಆದರೆ ಅಲ್ಲಿಯ ಶೀತವನ್ನು ಆತ ಸಹಿಸಲಾರ. ಹೆಪ್ಪುಗಟ್ಟಲಾರ.
ಅಚಲನಾಗಿ ನಿಂತು ಕಾಲವನ್ನು ಅತಿಕ್ರಮಿಸಿ ತನ್ನ ಸಿದ್ಧಿಯ ತುತ್ತ ತುದಿಯನ್ನು ಮುಟ್ಟು ವವರೆಗೂ ಜಾಗರೂಕನಾಗಿಯೇ ಇರಬೇಕು. ಒಮ್ಮೆ ಮೈ ಮರೆತರೂ ಸಾಕು, ಪತನಕ್ಕೆ ಹೇತುವಾಗುತ್ತದೆ. ಮನಸ್ಸು ಚಂಚಲವಾಗಲು ಬಿಡಬಾರದು ಎಂದು ಯೋಚಿಸುತ್ತಲೇ ಚಂಚಲಚಿತ್ತನಾಗುತ್ತಾನೆ. ಮಂದಾಕಿಸೀ ನದಿಯಲ್ಲಿ ಈಜುತ್ತ ಈಜುತ್ತಲೇ ಸಮಸ್ಯೆಯೊಂದಕ್ಕೆ ಸಿಕ್ಕಿಕೊಳ್ಳುತ್ತಾನೆ. ಆ ಸಮಸ್ಯೆಯನ್ನು ಅರಿತು ಪರಿಹಾರವನ್ನು ಕಂಡುಕೊಳ್ಳುವುದರಲ್ಲೇ ಪ್ರವಾಹದ ಸೆಳವಿಗೆ ಸಿಕ್ಕಿ ಕೆಳಕ್ಕೆ ಒಯ್ಯಲ್ಪಡುತ್ತಾನೆ. ಈಗ ಅವನಿಗೆ ಸ್ವಲ್ಪ ಸ್ವಲ್ಪವಾಗಿ ತಾನು ಸಂನ್ಯಾಸಿಯಾಗಲು ಅನರ್ಹನೆಂಬ ಅರಿವುಂಟಾಗುತ್ತದೆ. ಆದರೂ ಸನ್ಯಾಸವನ್ನು ಬಿಡಲಾರ. ಕಾಶಿಗೆ ಬಂದು ಬವಾಜನಗಳ ಸಂಗ ಮಾಡಿ ಜೀವನಯಾಪನೆ ಮಾಡುತ್ತಾನೆ. ಯಾವತ್ತು ಬನ್ಸೀ ಮಹಾರಾಜರೊಡನೆ ಸೋಳೆಗೇರಿಗೆ ಹೋದನೋ ಅಂದೇ ಆತನ ಶವನ ಪೂರ್ಣವಾಗುತ್ತದೆ.
ಇನ್ನು ಕಡೆಯ ಘಟ್ಟ. ನಿಸ್ಸಂಗಾನಂದ ಮತ್ತೆ ನರಹರಿಯಾಗಿ ಅಂಟಿಗೆ ಸಿಕ್ಕಿಕೊಳ್ಳುವದು. ಕಾದಂಬರಿಯ ಪೂರ್ವಾರ್ಧದ ಪ್ರಾರಂಭದಲ್ಲಿ ಪತ್ರಿಕೆಯೊಂದರ ಜಾಹಿರಾತಿನೊಂದಿಗೆ ಪ್ರಾರಂಭವಾದ ಕಥೆ ಉತ್ತರಾರ್ಧದಲ್ಲಿ ಮತ್ತೂಂದು ಜಾಹಿರಾತಿನೊಡನೆ ಪ್ರಾರಂಭವಾಗಿ, ನರಹರಿಯ ಬಾಳಿಗೆ ಒಂದು ತಿರುವು ಕೊಡುತ್ತದೆ. ಅಂಟಿನಿಂದ ಬಿಡಿಸಿಕೊಂಡು ಒಂಟಿಯಾಗಲು ಹೆಣಗಿದ ನರಹರಿ ತಾನು ಬಿಟ್ಟ ಸ್ಥಳಕ್ಕೇ-ಬೊಂಬಾಯಿಗೇ-ಬಂದು ಸೇರುವುದು ತುಂಬ ಸಾಂಕೇತಿಕವಾಗಿದೆ. ಆತ ಇಷ್ಟು ದಿನ ಸುಮ್ಮನೆ ಕಾಲಯಾಪನೆ ಮಾಡಿದಂತಾಯಿತೇ ವಿನಾ ಮೇಲೆ ಏರಲಿಲ್ಲ : ಹೋಗಲಿ ಮೊದಲಿನಷ್ಟು ಆತನ ಅಂಟು ಈಗ ಮರ್ಯಾದಿತವಾಗಿಯೂ ಇಲ್ಲ ; ಸಣ್ಣ ಸಂಸಾರವನ್ನು ಬಿಟ್ಟು ದೊಡ್ಡ ಸಂಸಾರದ ಜಂಜಾಟಕ್ಕೆ ಸಿಕ್ಕಿಕೊಳ್ಳುತ್ತಾನೆ. ಆದರೆ ಅದರಲ್ಲಿಯೇ ಆತ ನಿಜವಾದ ತೃಪ್ತಿಯನ್ನು ಪಡೆಯುತ್ತಾನೆ. ಅನಾಥಾಶ್ರಮದ ವಾರ್ಡನ್ ಆಗಿ “ಅಷ್ಟು ಜನ ಅನಾಥ ಮಕ್ಕಳಿಗೆ ತಂದೆ-ತಾಯಿಯಾಗಿದ್ದು ಜೀವನ ಮಾಡುವುದು, ಇದೇ ತಕ್ಕ ಜೀವನ. ಇಲ್ಲಿ ಒಂದು ಅರ್ಥವಿದೆ, ಉದ್ದೇಶವಿದೆ” ಎನಿಸುತ್ತದೆ. ಆದರೆ ರಾಮನ ಆಗಮನದೊಡನೆ ಮನಸ್ಸು ಮತ್ತೆ ವಿಕ್ಷಿಪ್ತಗೊಳ್ಳುತ್ತದೆ. ಅಂಟು ಎಂಬುದು ಕೇವಲ ತನ್ನ ಮಕ್ಕಳನ್ನು ಕುರಿತದ್ದಾಗಿ ಒಂದು ಮಿತಿಯನ್ನು ಹಾಕಿಕೊಳ್ಳುತ್ತದೆ. “ತನ್ನ ರಕ್ತ ಪರರ ರಕ್ತ ಎಂಬುದೇಕೆ ಬೇಕು? ಭಾವನೆಗೂ ರಕ್ತ ಸಂಬಂಧ ಯಾಕೆ ಗಂಟುಹಾಕಬೇಕು?” ಎಂಬ ಯೋಚನೆಯೇನೋ ಮೂಡುತ್ತದೆ. ಆದರೆ ಅದನ್ನು ಉಪಾಯವಾಗಿ ನಿವಾರಿಸಿಕೊಳ್ಳುವ ಯತ್ನ ಮಾಡುತ್ತಾನೆ. “ಸಂನ್ಯಾಸಿ ಅಂದ್ರೆ ಮಮಕಾರದಿಂದ ಮೇಲಕ್ಕೆ ಏರೋದು. ಒಂದು ಸಲ ಅದನ್ನು ಸ್ವೀಕಾರ ಮಾಡಿದ ಮೇಲೆ ಬಿಡಲಾರೆ. ಕಾವಿಬಟ್ಟೆ ಬಿಟ್ಟದೀನಿ ; ಅದರ ಅರ್ಥ ಕೈಬಿಟ್ಟಿಲ್ಲ” ಎಂದು ಮೊಂಡು ಹಿಡಿಯುತ್ತಾನೆ. ಇಲ್ಲಿನ ಇವನ ವರ್ತನೆ ನಮಗೆ ಅರ್ಥವಿಲ್ಲದ್ದಾಗಿ ಕಾಣುತ್ತದೆ. ಒಂದು ಆದರ್ಶ, ಅದಕ್ಕೆ ಬೇಕಾದ ಹಿನ್ನಲೆ, ಸಾಧನೆಗಳಿಲ್ಲದೆ ಕೇವಲ ಬಯಕೆಯಿಂದ ಮೂಡಿದ ಆದರ್ಶಕ್ಕೆ ಬೆನ್ನು ಬಿದ್ದು ನನ್ನ ಮಟ್ಟಿಗೆ ಮಾತ್ರವಲ್ಲದೆ, ಉಳಿದವರಿಗೂ ಸಮಸ್ಯೆಯಾಗುವ ವ್ಯಕ್ತಿಯಾಗುತ್ತಾನೆ.
ಇವನ ಸಂನ್ಯಾಸವಾಗಲಿ, ಒಂಟಿಯಾಗುವ ಬಯಕೆಯಾಗಲಿ ಸ್ವಾಭಾವಿಕವಾಗಿ ಉದ್ಭವಿಸಿದುದಲ್ಲ. ಅನುಭವವಾಗಲಿ, ತೀವ್ರ ಸಂವೇದನೆಯಾಗಲಿ ಸಂನ್ಯಾಸಿಯಾಗಲು ಪ್ರಚೋದಿಸಿಲ್ಲ. ಅನುಭವದ ಅಗ್ನಿಕುಂಡದಲ್ಲಿ ಜೀವಬಿದ್ದು ಪುನೀತವಾಗಿ ಬಂದಿಲ್ಲ. ಕೇವಲ ಆತುರ, ಆತುರ. ಆತುರದ ನಿರ್ಣಯದ ಮೂಲಕ ಮಕ್ಕಳನ್ನು ದತ್ತು ಕೊಡುತ್ತಾನೆ. ಆತುರ
ಆತುರವಾಗಿ ಸನ್ಯಾಸ ಸ್ವೀಕಾರ ಮಾಡುತ್ತಾನೆ. ತಡೆಬಿಡದೆ ಒಮ್ಮೆಗೇ ಮೇಲೆ ಮೇಲೆ ಏರಿ ಬಾರಾಮಾಸಿಯಾಗಲು ಹೆಣಗುತ್ತಾನೆ. ಈ ಎಲ್ಲ ಕ್ರಿಯೆಗಳ ಹಿಂದೆ ಕೇವಲ ಆತುರ ಭಾವವಿದೆಯೇ ವಿನಾ ನಿಂತು ನೋಡಿ, ಯೋಚಿಸಿ, ನಿರ್ಣಯ ಕೈಗೊಳ್ಳುವ ತಾಳ್ಮೆ ಇಲ್ಲ.
ಒಟ್ಟಿನಲ್ಲಿ ಕಾದಂಬರಿಯ ಹೆಸರೇ ಸೂಚಿಸುವಂತೆ ನರಹರಿಯ ಕಾರ್ಯರಂಗವು “ನಿರಾಕರಣ’ ವೇ ಹೊರತು ತ್ಯಾಗರಂಗವಲ್ಲ. ಒಂಟಿತನವೆಂಬುದು ಆಂಟನ್ನು ಕಳಚಿಕೊಳ್ಳಲು ಯತ್ನಿಸುತ್ತಿದ್ದಂತೆಯೇ ಸಿಕ್ಕಿಬಿಡುವುದೆಂಬ ತಪ್ಪು ಗ್ರಹಿಕೆಗೆ ಸಿಕ್ಕಿದ್ದಾನೆ. ಒಂಟಿತನ ಎಂಬಂದು ತಾನಾಗಿಯೇ ಸಿಕ್ಕುವ ವಸ್ತುವಲ್ಲ. ಅದನ್ನು ವಿಶೇಷ ಪರಿಶ್ರಮದಿಂದ ಸಾಧಿಸಬೇಕು. ಹಾಗೆ ಸಾಧಿಸುವ ಶಕ್ತಿ ನರಹರಿಯಂತಹ ದುರ್ಬಲ ವ್ಯಕ್ತಿಗೆ ಎಂದಿಗೂ ಸಾಧ್ಯವಿಲ್ಲ. ಇಂತಹ ದುರ್ಬಲರು ತಮ್ಮ ಕರ್ತವ್ಯಗಳಿಂದ ತಪ್ಪಿಸಿಕೊಳ್ಳಲು ಹಾಕುವ ಸೋಗಾಗಿ ತೋರುತ್ತದೆ ಇವನ ವರ್ತನೆ. ಒಟ್ಟಿನಲ್ಲಿ ಈ ನಿವೃತ್ತಿಧರ್ಮ ಬಹು ವಿಚಿತ್ರವೆನಿಸುತ್ತದೆ.
ಭವಾನಿಯ ಪ್ರವೇಶವು ನರಹರಿಯ ಬಾಳಿಗೆ ಹೊಸದೊಂದು ತಿರುವನ್ನು ಕೊಡುತ್ತದೆ. ನರಹರಿಯ ನಡವಳಿಕೆಗಳೆಲ್ಲವನ್ನೂ ಆಕೆ ಕಠಿಣ ವಿಮರ್ಶೆಗೆ ಗುರಿಮಾಡುತ್ತಾಳೆ. “ನಿಮಗೆ ಬಂಧನ ಬೇಡ, ಹುಡುಗ ಅನಾಥನಾಗಿಯೇ ಬೆಳೆಯಬೇಕೇನು ? ನಾನು ಈಗೆ ಕೇಳ್ತೀನಿ. ಆಗ ನಮ್ಮನ್ನೆಲ್ಲ ಯಾಕೆ ದತ್ತು ಕಟ್ಟಿರಿ? ಆಕಸ್ಮಾತ್ ನೀವೇ ಸತ್ತಿದ್ದು ಅಮ್ಮನೋ, ವೈದೇಹಿ ಚಿಕ್ಕಮ್ಮನೋ ಬದುಕಿದ್ದರೆ ಹೀಗೆ ದತ್ತು ಕೊಟ್ಟು ಸಂನ್ಯಾಸ ತಗೊಂಡು ಹೋಗ್ತಿರಲಿಲ್ಲ. ನಮ್ಮನ್ನೆಲ್ಲ ಹಳ್ಳಿಗೆ ಕರಕೊಂಡು ಹೋಗ್ತಿದ್ಲು. ಕೂಲಿ ಮಾಡಿ ಸಾಕ್ತಿದ್ಲು. ಸಾಕಾಗದಿದ್ದರೆ ನಮ್ಮನ್ನೂ ಕೂಲಿಗೆ ಕಳಿಸ್ತಿದ್ಲು. ನಾವೆಲ್ಲ ಒಟ್ಟಿಗೆ ಸಂತೋಷವಾಗಿ ಬೆಳೀತಿದ್ವು” ಎಂದು ಸವಾಲು ಹಾಕುತ್ತಾಳೆ. ಭವಾನಿಯ ಈ ಮಾತು ಎಷ್ಟು ಸತ್ಯಸ್ಯ ಸತ್ಯ ಎಂಬುದನ್ನು ಸಾಬೀತು ಮಾಡದೆ ಕಾರಂತರ ಸ೦ನ್ಯಾಸಿಯ ಬದುಕಿನಲ್ಲಿ ಬರುವ ರುಕ್ಮಾಯಿಯ ಪ್ರಸಂಗ. ಅಂತೂ ನರಹರಿ ಭವಾನಿಯ ವಾಗ್ಫರಿಗೆ ಸಿಕ್ಕಿ ಮೂಕನಾಗುತ್ತಾನೆ. “ಇದುವರೆಗೂ ನನ್ನದಲ್ಲದ ದಾರಿಯಲ್ಲಿ ನಡೆದೆ. ಈಗಲಾದರೂ ಸರಿಯಾದ ದಾರಿಯನ್ನು ನಾನೇ ಹುಡುಕಿ ನಿಶ್ಚಯಿಸಿ ಗಟ್ಟಿಯಾಗಿ ಹಿಡಿಯಬೇಕು. ಹಾಗಾದರೆ ಸರಿಯಾದ ದಾರಿ ಯಾವುದು ? ಮಗಳಿಗೆ ಸರ್ವಭಾರವನ್ನೂ ವಹಿಸಿಕೊಡುವುದಿಲ್ಲ. ಮಗಳ, ಮಗನ ಹೊಣೆಯನ್ನು ನಾನೇ ಹೊರಬೇಕು. ನಾನೂ ದುಡಿಯಬೇಕು.” ಎಂದು ನಿರ್ಧರಿಸುತ್ತಾನೆ. ಹೀಗೆ ನಾಯಕನ ತಲೆತುಂಬ ಪರಸ್ಪರ ವಿರೋಧ ಉಕ್ತಿಗಳು ಅಷ್ಟಷ್ಟು ವಿಚಾರಗಳು ಆತುರದ ನಿರ್ಣಯಗಳು ತುಂಬಿಕೊಂಡು ಅವನು ಒಬ್ಬ ಎಬಡನಾಗಿ ಕಾಣುತ್ತಾನೆ. ಇಂತಹ ಎಬಡ ಪಾತ್ರದ ಮೂಲಕ ಕಾದಂಬರಿಕಾರರು ಪ್ರತಿಪಾದಿಸುವ ಆಶಯವು ಒಂದು ಮೌಲ್ಯವಾಗಿ ನಿಲ್ಲುವ ಶಕ್ತಿಯನ್ನು ಪಡೆಯುವುದಿಲ್ಲ. ಒಂದು ವೇಳೆ ಸಾಧಿತವಾದರೂ ಭೈರಪ್ಪನವರು ಆರಿಸಿಕೊಂಡ ವಸ್ತು ವ್ಯಕ್ತಿನಿಷ್ಠ ಸಮಸ್ಯೆಯಾಗಿ ಸರ್ವಸಾಮಾನ್ಯ ಮನೋಭೂಮಿಕೆಯ ವಿಶಾಲತೆಯನ್ನು ಪಡೆಯದೆ ಅಷ್ಟರಮಟ್ಟಿಗೆ ಸೀಮಿತವಾಗುತ್ತದೆ.
ಒಟ್ಟಿನಲ್ಲಿ ಹಿರಿಯ ಹೊತ್ತಿಗೆಗಳನ್ನು ಕೊಟ್ಟ ಬರಹಗಾರನ ಒಂದು ಸಾಮಾನ್ಯ ಕೃತಿಯಾಗಿ “ನಿರಾಕರಣ’ ನಮಗೆ ಕಂಡು ಬಂದಿದೆ. ವೈಚಾರಿಕತೆಯ ಅಸ್ಪಷ್ಟತೆ, ವಸ್ತುವಿನ ಮಿತವ್ಯಾಪ್ತಿ, ಸಂವೇದನೆಯ ಮಟ್ಟಕ್ಕೆ ಏರದೆ ಹಾಗೆಯೇ ಹಸಿಹಸಿಯಾಗಿ ಉಳಿಯುವ ಘಟನಾವಳಿ ಈ ತೀರ್ಮಾನಕ್ಕೆ ಬರಲು ಕೆಲಮಟ್ಟಿಗೆ ಕಾರಣವಾಗಿದೆ.

Close

ಅಭಿನಯದಾಚೆ

ಅಭಿನಯದಾಚೆ

ನಾಗಭೂಷಣ ಹೆಗಡೆ

ನಾ ಸತ್ತು-ಸತ್ತು ಬದುಕಿದೆ ಎನ್ನುವುದಕ್ಕಿಂತ
“ಹಿಂದಲ ಕ್ಷಣದಿಂದ ಅಭಿನಯ ನಿಲ್ಲಿಸಿದೆ.”

ನಿನ್ನೆಯವರೆಗೂ ಎರವಲು ಪಡೆದ ವೇಷ,
ಕಿರೀಟವ ತೊಟ್ಟು ಗಳಿಸಿಕೊಂಡ ಪುಟ್ಟ-ಪುಟ್ಟ ಪರಾಕುಗಳು.
ಪರಿಣಯ ಪ್ರಸಂಗಗಳು ಲಗ್ಗೆ ಹತ್ತಿಸಿದ ಮನ
ದಲ್ಲೆಲ್ಲ ಅನುಕರಣೀಯ ಆವೇಶ ; ಕೊನೆಗಂಡಿದ್ದು ಲಕ್ಷಾ ಬಡಿದಾಗಲೇ
ಮೆಟ್ಟಿಲ ತುದಿಯೇರಿದ್ದೂ ಇಲ್ಲೇ, ಬಳಿಕ ಹಾಯಾಗಿ
ಜಾರುಬಂಡೆಯ ಬೆನ್ನಿಗಟ್ಟಿಸಿಕೊಂಡು, “ಧಡಲ್’ನೆ
ಮಂಡಿ ತರಚಿಸಿಕೊಂಡಿದ್ದೂ ಇಲ್ಲೇ ;
ಕಂದಕದ ಇಕ್ಕೆಲಗಳ ಕೂಡಿಸಿದ ಹಗ್ಗದೆಳೆ
ಯ ವೇಲೆ ನಡೆದಾಡುವ ಕಾಯಕ.
ಕೊಂಕು ತಪ್ಪಿದರೂ ಸಾಕು, ಸವರಣ ಕಲ್ಲೆಸೆತ
ಅರಚಿಕೊಳ್ಳುವವರೆಗೂ ;
ಇದರಿಂದಾಗಿ, ಸಾಕಿನ್ನು ಬ್ಯಾಲೆನ್ಸು ಅಭಿನಯ
ವೆಂದರೇ ನನಗೆ ನರ್ತಕ,-ದೂರ…….ರಂಗದಿಂದಲೇ…… ;
ಆದರೂ,
ನಟಿಸಲೇ ಬೇಕು, ನಮ್ಮ ಜನ
ಬಹುಪಾಲು ಕೊಲೆಗಡುಕರು ಸ್ವಾಮೀ, ಗಾಳಿ
ಬಂದಾಗಲೇ ತೂರಿಕೊಳ್ಳಬೇಕು.
“ರಂಗದಲೊಂದು ಮನೆಯ ಮಾಡಿ, ಅಭಿನಯಕಂಜಿದೊಡೆಂತಯ್ಯ.”

Close

ವಿಹ್ವಲ

ವಿಹ್ವಲ

ಎಂ ಎನ್ ಜೈಪ್ರಕಾಶ್

ಮುನಸಿಪಾಲಿಟಿ ನಲ್ಲಿ
ಕಟ್ಟಿದರೂ ತೋಟತೊಟ ತೊಟ್ಟಿಕ್ಕುವಂತೆ ನೆನಪು :

ಅಚ್ಛೋದ ಸರದ ಸ್ಪಟಿಕತೆ ಗಾಳಿರಿಂಗಣಕೆ ಸಿಕ್ಕೀಗ
ಪ್ರತಿಬಿಂಬ ಅಸ್ಪಷ್ಟ. ಕಂಡ ಮಹಾಶ್ವೇತೆ ಒಲಿದ ಕಾದಂಬರಿ
ಎಲ್ಲಿ ಎಲ್ಲವೂ ಸುಳ್ಳೆ…. ?…..ಕನಸೆ ?
ಕಂಡಿದ್ದು ಕನಸಿದ್ದು ಕಾಣಬೇಕೆನಿಸಿದ್ದು ಎಲ್ಲವೂ ಮಂಗಮಾಯ;
ಕವಲೆದ್ದ ದಾರಿಗಳಲಿ ನೆನಪುಗಳೆ ಈಗ ನವಿರಾಗಿ ಬಾಧಿಸುವ
ಬಂಧಿಸುವ ಕೂಡಿಸುವ ಏಕತಂತು.

ಕವಲೊಡೆದು ಬಿದ್ದ ಹಾದಿ ನೂರರ ನಡುವೆ
ಕೈಮರಕೆ ಹೆಸರಿಲ್ಲ. ದಿಕ್ಕೆಟ್ಟು ನಿಂತಿದೆ
ಹರಕು ಚೀಲದಲಿ ನೆನಪನ್ನೆಲ್ಲ ಹೆಡೆಮುರಿ ಕಟ್ಟಿ ಹೊತ್ತು
ದಂಗಾದ ಕಂಗಾಲು ತರುಣ ಜೀವ.

(ಬಿದ್ದ ದಾರಿಗಳಲಿ ಎದ್ದ ದಾರಿಗಳೆಷ್ಟು ?
ಎದ್ದ ದಾರಿಗಳಲಿ ಕೊನೆಗೂ ಬಿದ್ದ ಹಾದಿಗಳೆಷ್ಟು ?

ಯಾವ ಮಾರ್ಗಕೆ ಯಾವ ಪಟ್ಟಣವುಂಟು ?
ಇಚ್ಛೆಯನ್ನೆಲ್ಲ ಭರಿಸುವ ಅರಮನೆ ಯಾವ ಹೆದ್ದಾರಿಯಲುಂಟು ?
-ಪ್ರಶ್ನೆಗಳ ಸರಮಾಲೆಗೆ ಕೊನೆಯೆಂಬುದುಂಟೆ ?)

ತಪ್ಪಿತೋ ಹಾದಿ ಸುತ್ತಲೂ ನಗುವಿನಲೆಗಳ ಗಲ್ಲು ;
ಬೀದಿ ಮರೆತರೆ ಮತ್ತಿಲ್ಲಿ ಬೆದರಿಕೆಯ ಬರಿ ನಾಯಿಬೊಗಳಿನ ಹುಯ್ಲು ;
ಸುತ್ತ ಕದ್ದಿಂಗಳು ಹೆಸರಿಲ್ಲ ಕೈಮರಕೆ ಹೆಸರಿಲ್ಲ ಕೈಮರಕೆ ;

“ಹುಡುಕು ಹುಡುಕು ಹುಡುಕು’-ಎಂಬ
ಜಪಮಂತ್ರವೊಂದೆ ಈಗುಳಿದ ಕಾಯಕ ;
ಅವರಿವರುಳಿಸಿದ ಮೂಲಾಧಾರ.

ಹೌದು, ಕಂಗಾಲು ಜೀವಕ್ಕೆ ದುಂಬಾಲು ಬಿದ್ದ ವಿಶ್ವಾಸವನ್ನೆತ್ತಿ
ಚಪ್ಪರಿಸಬೇಕು :
ತಪ್ಪಿದರೂ ಹಾದಿ ಎದೆಗೆಡದೆ ಬಿದ್ದರೂ ಸಾವರಿಸಿಕೊಂಡದ್ದು
ಸಾವರಿಸಿ ನಡೆದರೆ….ಸಿಗದಿದ್ದೀತೆ ? ಕಂಡೇ ಕಂಡೀತು
ಗುರಿ ಮಿರಗುವ ದಾರಿ, ಹಸಿರು ಹೂರಿಗುಚಿರುವ ತಾಣ !

ಆಗ ಹೆಸರಿಟ್ಟು ತಳ ಊರು. ನೋಡಾಗ ಸುತ್ತೆಲ್ಲ ಜಯದ ಭೇರಿ:
ಜನ್ಮ ಜನ್ಮಾಂತರದ ಕಷ್ಟಗಳಂಚಿಗೆ ಮಂಗಲದ ತುತ್ತೂರಿ.
.

Close

ಲಿಪ್ತ

ಲಿಪ್ತ

ಬಿ ವಿ ವೈಕುಂಠರಾಜು

ಬೆಳಿಗ್ಗೆ ಎಚ್ಚರವಾದಾಗ ಅಪ್ಪ ದೊಡ್ಡಪ್ಪ ಜೋರಾಗಿ ಜಗಳವಾಡುತ್ತಿದ್ದರು. ಒಬ್ಬರಿಗೊಬ್ಬರು ಕೈ ತೋರಿಸಿಕೊಂಡು ಏನೇನೋ ಮಾತನಾಡುತ್ತಿದ್ದರು. ನಾನು ಏಳುವುದರೊಳಗೇ ದೊಡ್ಡಪ್ಪ ಹೊಲಕ್ಕೆ ಹೋಗಬೇಕಾಗಿದ್ದವನು ಈ ದಿನ ಇಷ್ಟು ಹೊತ್ತಾದರೂ ಏಕೆ ಹೋಗಲಿಲ್ಲ ಎಂದುಕೊಂಡು ತಡವಾಗಿ ಎದ್ದದ್ದಕ್ಕೆ ಅಪ್ಪ ಬಯ್ಯುತ್ತಾನೇನೊ? ಎಂದು ಹೆದರಿಕೆಯಾದರೂ ಅವನು ನನ್ನ ಕಡೆ ನೋಡದಿದ್ದುದರಿಂದ ಧೈರ್ಯವಾಗಿ ಹಾಸಿಗೆಯಿಂದ ಎದ್ದು ಹಿತ್ತಲ ಕಡೆಗೆ ಹೋಗಿ ಉಚ್ಚೆ ಹೊಯ್ಯಲು ಪ್ರಾರಂಭಿಸಿದಾಗ ಅಲ್ಲಿಗೂ ಅವರಿಬ್ಬರ ಮಾತುಗಳು ಕೇಳಿಬರುತ್ತಿದ್ದುವು. “ನಿನ್ನಿಂದ್ಲೇ ಮಹಾ ಉದ್ಧಾರ ಆಗಿರೋದು ನೀನಿಲ್ದೆ ಇದ್ರೆ ನಾನು ಊಟಾನೇ ಮಾಡ್ತ ಇರ‍್ಲಿಲ್ಲೇನೋ’ ಎಂದು ಅಪ್ಪ ಅಂದದ್ದಕ್ಕೆ ನಾನೇನು ಹೇಳಿಕೊಂಡ್ನಾ ನನ್ನಿಂದ್ಲೇ ಅಂತ. ಈಗೇನಾಯ್ತು ನೀನಾದರೂ ಮಾಡಿಕೋ, ಯಾರಿದ್ದಾಂದ್ರೂ ಮಾಡಿಸ್ಕೋ, ಈ ಹೊತ್ತಿಗೆ ಕೊನೆ, ನಾಳೆ ಎಲ್ಲಾದ್ರು ಹೊರಟುಹೋಗ್ತೀನಿ’ ಎಂದು ದೊಡ್ಡಪ್ಪ ಹೇಳಿದಾಗ ಅವರ ಮಾತುಗಳು ಅರ್ಥವಾಗದಿದ್ದರೂ ದೊಡ್ಡಪ್ಪ ಎಲ್ಲಿಗೆ ಹೋಗಬಹುದು ಎಂದು ಯೋಚಿಸುವಷ್ಟರಲ್ಲಿ “ಎಲ್ಲಿಗಾದ್ರೂ ಹೋಗು, ನಾವೇನು ನಿನ್ನ ಕಾಲುಕಟ್ಟಿಕೊಂಡು ಇಲ್ಲೇ ಇರಪ್ಪಾ ಅಂತೇನಾ ಬೇಡಿಕೊಂಡಿಲ್ಲ’ ಎಂದು ಅಪ್ಪ ಹೇಳಿದಾಗ, ದೊಡ್ಡಪ್ಪನನ್ನು ಸುಮ್ಮ ಸುಮ್ಮನೆ ಯಾಕಾದರೂ ಬಯ್ಯುತ್ತಾನೊ’ ಎಂದು ನಿಕ್ಕರ್‌ ಸರಿಮಾಡಿಕೊಂಡು ಒಳಗೆ ಬಂದಾಗ ಅಪ್ಪ ನನ್ನನ್ನು ನೋಡಿ ‘ಎಷ್ಟೊತ್ತಿಗೋ ಏಳೋದು ? ಬೇಗ ಎದ್ದು ಓದಿಕೊಳ್ಳೋದು ಬಿಟ್ಟು ದೊರೆ ಮಗನ ಹಾಗೆ ಮಲಗಿದಾನೆ’ ಎಂದು ಬಯ್ಯಲು ಪ್ರಾರಂಭಿಸಿದಾಗ ಅವನ ಕಣ್ಣು ತಪ್ಪಿಸಲು ಅಡಿಗೆ ಮನೆಗೆ ಹೋಗಿ ಕತ್ತಲಿನಲ್ಲಿ ಕುಳಿತುಕೊಂಡಾಗ ಅವನು ಇಲ್ಲಿಗೆ ಬರದೆ ಇರಬಹುದು ಎಂದು ಧೈರ್ಯವಾಯಿತು.
ಅಪ್ಪ ಜಗಳ ನಿಲ್ಲಿಸಿ ಪಡಸಾಲೆಯಲ್ಲಿ ಆ ಕಡೆಯಿಂದ ಈ ಕಡೆಗೆ ತಿರುಗುತ್ತಿದ್ದಾಗ ಮನೆಯಲ್ಲಿ ಒಂದು ಚೂರು ಶಬ್ದವೂ ಕೇಳಿ ಬರುತ್ತಿರಲಿಲ್ಲ. ಅಪ್ಪ ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ಬೀಗದ ಕೈಗೊಂಚಲಿನಲ್ಲಿದ್ದ ಉದ್ದುದ್ದನೆಯ ಬೀಗದ ಕೈಗಳು ಒಂದಕ್ಕೊಂದು ತಾಕಿ ಗಿಲ್, ಗಿಲ್ ಎಂದು ಶಬ್ದ ಮಾಡುತ್ತಿದ್ದುವು. ನಾನು ದೊಡ್ಡವನಾದ ಮೇಲೆ ಅಪ್ಪನಂತೆ ಬೀಗದ ಕೈಗೊಂಚಲನ್ನು ಸಿಕ್ಕಿಸಿಕೊಂಡು ಓಡಾಡಿದರೆ ಚೆನ್ನಾಗಿರುತ್ತದೆ ಎಂದುಕೊಂಡು ಕತ್ತಲಿನ ಮೂಲೆಯಿಂದ ಇಣಿಕಿಹಾಕಿದಾಗ ಅಪ್ಪ ಓಡಾಡುವುದನ್ನು ನಿಲ್ಲಿಸಿ ಅಂಗಿ ಹಾಕಿಕೊಂಡು ರುಮಾಲು ಸುತ್ತುವುದಕ್ಕಾಗಿ ಸರಿಮಾಡಿಕೊಳ್ಳಲು ಪ್ರಾರಂಭಿಸಿದ. ರುಮಾಲು ಸುತ್ತಿಕೊಂಡರೆ ಅಪ್ಪ ಹೊರಗೆ ಹೋಗುತ್ತಾನೆ ಎಂದೇ ಅರ್ಥ. ಅಪ್ಪ ಹೊರಗೆ ಹೋದ ಮೇಲೆ ದೊಡ್ಡಪ್ಪನನ್ನು ಎಲ್ಲಾ ಕೇಳಬೇಕು, “ನೀನು ಎಲ್ಲಿಗೆ ಹೋಗುತ್ತೀಯ, ನನ್ನನ್ನು ಕರೆದುಕೊಂಡು ಹೋಗುತ್ತೀಯಾ’ ಎಂದೆಲ್ಲಾ ಕೇಳಬೇಕು. ದೊಡ್ಡಪ್ಪನಿಗೆ ನನ್ನನ್ನು ಕಂಡು ತುಂಬಾ ಇಷ್ಟ, ನನ್ನನ್ನು ಕರೆದುಕೊಂಡು ಹೋಗಬಹುದು ಎಂದುಕೊಂಡೆ. ಹೋಗುವುದು ಎಂದರೆ ಎಲ್ಲಿಗೆ ? ಹೊಳೆಯದೆ ದೊಡ್ಡಪ್ಪನನ್ನೇ ಕೇಳಿದರಾಯಿತು ಎಂದುಕೊಂಡೆ. ಅಷ್ಟರಲ್ಲಿಯೇ ದೊಡ್ಡಪ್ಪ ನನ್ನನ್ನು ಕೂಗಿ ‘ಸ್ವಾಮಿ ಬೇಗ ರೊಟ್ಟಿ ತಿನ್ನು, ಹೊಲಕ್ಕೆ ಈ ಹೊತ್ತು ಗಾಡಿ ಕಟ್ಟಿಸಿ, ನಿನ್ನನ್ನು ಕರಕೊಂಡು ಹೊಗ್ತೀನಿ’ ಎಂದಾಗ ಅಪ್ಪ “ಅವನ್ನ ಯಾತಕ್ಕೆ ಕರಕೊಂಡು ಹೋಗ್ತಿಯಾ, ಮನೇಲಿದ್ದುಕೊಂಡು ಓದಲಿ’ ಎನ್ನಬೇಕೆ ? ದೊಡ್ಡಪ್ಪನಿಗೆ ಇನ್ನೂ ಕೂಪ ಇರ‍್ಬೇಕು “ನಿನ್ನ ಮಗನ ವಿದ್ಯನೇನೂ ನಾನು ಹಾಳು ಮಾಡೋದಿಲ್ಲ, ಭಾನುವಾರ ಮನೇಲಿ ಏನು ಮಾಡ್ತಾನೆ? ಈ ಹೊತ್ತು ಒಂದಿನ ಕರಕೊಂಡು ಹೋಗ್ತಿನಿ, ನಾಳೆಯಿಂದ ಏನಾದರೂ ಮಾಡಿಕೊ’ ಎಂದಾಗ ಅಪ್ಪ ‘ಏನಾದರೂ ಮಾಡಿಕೋ’ ಎಂದು ಹೇಳಿ ಚಪ್ಪಲಿ ಹಾಕಿಕೊಂಡು ಹೊರಗೆ ಹೊರಟಾಗ, ದೊಡ್ಡಪ್ಪನ ಜೊತೆಯಲ್ಲಿ ಹೊಲಕ್ಕೆ ಹೋಗಬಹುದಲ್ಲಾ ಎಂದು ಖುಷಿಯಾಯಿತು.
ರೊಟ್ಟಿ ತಿಂದು ಬರುವಷ್ಟರಲ್ಲಿ ದೊಡ್ಡಪ್ಪ ಗಾಡಿಗೆ ಎತ್ತುಗಳನ್ನು ಕಟ್ಟುತ್ತಿದ್ದರು. ನನ್ನನ್ನು ಗಾಡಿಯಲ್ಲಿ ಕೂರಿಸಿ `ಕಂಬಳಿ ಹಾಸಿದೀನಿ, ಅದರ ಮೇಲೆ ಕೂತುಕೋ’ ಎಂದು ಹೇಳಿ ತಾನೂ ಗಾಡಿಯೇರಿ ‘ರಾಮಾ, ಲಕ್ಷ್ಮಣಾ’ ಎಂದಾಗ ಎತ್ತುಗಳು ಅಭ್ಯಾಸಬಲದಿಂದ ಹೊಲದ ಕಡೆ ಕಾಲು ಹಾಕಿದವು. ಒಂದು ಸಾರಿ ನನ್ನ ಕಡೆ ತಿರುಗಿ ನೋಡಿ ಮತ್ತೆ ಎತ್ತುಗಳನ್ನು ಗದರಿಸಿದಾಗ, ಅವು ವೇಗವಾಗಿ ಹೆಜ್ಜೆ ಹಾಕಲು ಪ್ರಾರಂಭಿಸಿದುವು.
‘ದೊಡ್ಡಪ್ಪಾ ನೀನು ಅಪ್ಪನ ಜೊತೆ ಯಾತಕ್ಕೆ ಜಗಳ ಮಾಡಿದ್ದು ? ಹೋಗ್ತೀನಿ ಅಂತ ಹೇಳಿದೆಲ್ಲಾ, ಎಲ್ಲಿಗೆ ಹೋಗ್ತಿಯಾ’ ಎಂದು ಕೇಳಬೇಕೆನಿಸಿದರೂ, ಆತ ಸುಮ್ಮನೆ ಇದ್ದುದನ್ನು ನೋಡಿ, ಕೇಳಲು ಹೆದರಿಕೆಯಾಯಿತು. ದೊಡ್ಡಪ್ಪ ಹೀಗೆ ಸುಮ್ಮನೆ ಹೋಗುವವನೇ ಅಲ್ಲ. ಬಯಲಾಟದ ಯಾವುದೇ ಹಾಡನ್ನು ಜೋರಾಗಿ ಹೇಳಿಕೊಂಡು ಹೋಗಬೇಕು. ಆದರೆ ಈ ದಿನ ಸುಮ್ಮನೆ ಇದ್ದಾನೆ. ನನ್ನ ಜೊತೆಯಲ್ಲಿ ಮಾತನಾಡುತ್ತಿಲ್ಲ. ಅಪ್ಪ ಏನೇನೋ ಬೈದಿರಬೇಕು. ದೊಡ್ಡಪ್ಪ ಹೊರಟು ಹೋದ ಮೇಲೆ ನನ್ನನ್ನು ಹೊಲಕ್ಕೆ ಕರೆದುಕೊಂಡು ಹೋಗುವವರು ಯಾರು? ಅಪ್ಪ ಯಾವಾಗಲೂ ಜೊತೆಯಲ್ಲಿ ಕರೆದುಕೊಂಡು ಹೋದದ್ದೇ ಇಲ್ಲ. ದೊಡ್ಡಪ್ಪನ ಹಾಗೆ ಅಪ್ಪ ಎಂದೂ ಹೊಲಕ್ಕೆ ಎತ್ತುಗಳನ್ನು ಹೊಡೆದುಕೊಂಡು ಹೋದದ್ದಿಲ್ಲ. ಯಾವಾಗಲೂ ಎಲ್ಲೆಲ್ಲೋ ಹೋಗಿ ಬರುತ್ತಿರುತ್ತಾನೆ. ನಾಲ್ಕಾರು ಜನ ಅಪ್ಪನ ಹಿಂದೆ ಯಾವಾಗಲೂ ತಿರುಗುತ್ತಿರುತ್ತಾರೆ. ಅಪ್ಪನ್ನ ಕಂಡರೇನೋ ನನಗೆ ಒಂದು ಥರಾ ಹೆದರಿಕೆ. ದೊಡ್ಡಪ್ಪ ಹಾಗಲ್ಲ, ಯಾವಾಗಲೂ ಮಾತನಾಡಿಸುತ್ತಿರುತ್ತಾನೆ. ರಾತ್ರಿ ಪಕ್ಕದಲ್ಲಿ ಮಲಗಿಸಿಕೊಂಡು ಯಾವುದಾದರ ಕತೆ ಹೇಳುತ್ತಿರುತ್ತಾನೆ. ಇಂಥವನನ್ನು ಅಪ್ಪ ಬೈಯಬಹುದೆ ? ಏನೋ ಒಂದೂ ತೋಚಲಿಲ್ಲ.
“ನೋಡಿದ್ಯಾ ಸ್ವಾಮಿ, ನಿಮ್ಮಪ್ಪ ನನ್ನನ್ನು ಅಂದದ್ದು “ಇದ್ದಕ್ಕಿದ್ದಂತೆ ದೊಡ್ಡಪ್ಪ ಮಾತನಾಡಿದಾಗ ಶಾಲೆಗೆ ರಜಾ ಬಂದಷ್ಟೇ ಖುಷಿಯಾಯಿತು. ಇನ್ನು ಎಲ್ಲವನ್ನು ಕೇಳಬಹುದು ಎಂದುಕೊಂಡೆ. “ಅವನು ಅಂದದ್ದು ಸರೀನಾ ನೀನೇ ಹೇಳು. ನಿನಗಿಂತ ಚೆನ್ನಾಗಿ ಅವನನ್ನು ಸಾಕಿದೆ. ನಮ್ಮಪ್ಪ-ಅಮ್ಮ ಸತ್ತು ಹೋದಾಗ ಅವನೆಷ್ಟಿದ್ದ ಅಂದಕ್ಕೊಂಡಿದೀಯಾ, ಎರಡೋ ಮೂರೋ ವರ್ಷ. ನನಗೆ ಹನ್ನೆರಡು, ಹದಿಮೂರು ವರ್ಷ. ನಾನೇ ಸಾಕಿದೆ. ಯಾರ‍್ಯಾರ ಮನೇಲೋ ತಾಬೆದಾರಿ ಮಾಡಿ ಅವನನ್ನ ಬೆಳೆಸಿದೆ. ನಾಲ್ಕು ಕಾಸು ಕೂಡಿಹಾಕಿ ಒಂದು ಹೊಲಾ ತಗೊಂಡೆ. ಅವನ ದೊಡ್ಡೋನಾದ್ರು ಒಂದಿನಾನೂ ಗೇಯೋಕೆ ಕಳುಹಿಸಲಿಲ್ಲ. ನಾನೇ ದೊಡ್ಡೋನಾದ್ರು ಅವನಿಗೇ ಯಜಮಾನಿಕೆ ಕಟ್ಟಿ ಅವನು ಹೇಳಿದ ಹಾಗೆ ನಡಕೊಂಡು ಬಂದೆ. ‘ಒಬ್ಬನೇ ಯಾಕೆ ದುಡೀತೀಯಾ, ಆಳುಗಳನ್ನ ಇಟ್ಟುಕೋ’ ಅಂದ. ಆಳು ಎಷ್ಟೇ ಆದ್ರೂ ಆಳೇ ಅಲ್ವಾ ? ನಾವು ದುಡಿದ ಹಾಗೆ ಅವರು ದುಡೀತಾರ? ಅವನು ಬಲವಂತ ಮಾಡಿದ್ದಕ್ಕೆ ಮೂರು ನಾಲ್ಕು ಸಾರಿ ಆಳುಗಳನ್ನ ಇಟ್ಕೊಂಡ್ರೂ, ಒಬ್ಬನೂ ಸರಿಯಾಗಿ ಕೆಲ್ಸ ಮಾಡ್ದೆ ಓಡಿಹೋದ್ರು. ನನಗಿಷ್ಟ ಇಲ್ಲದೇ ಅವರನ್ನ ಓಡ್ಸಿದೀನಿ ಅಂತ ಹೇಳಿದ. ಅಂದ್ರೆ ಅಂದ್ಕೊಳ್ಳಿ ಅಂತ ಸುಮ್ಮನಾದೆ. ನಾಲ್ಕು ಮೂಲೇಲೂ ಜಮೀನು ಕೊಂಡುಕೊಂಡ. ಒಂದು ಕಡೆ ಇದ್ರೆ ನೋಡ್ಕೋಬಹುದು, ನಾಲ್ಕು ಮೂಲೇಲಿ ನಾಲ್ಕು ಜಮೀನಿದ್ರೆ ಹೇಗೆ ನೋಡಿಕೊಳ್ಲಿ ಅಂತ ಹೇಳಿದ್ದಕ್ಕೆ ಒಂದೆರಡು ಮಾರಿಬಿಟ್ಟ. ಅವನು ಮಾರಿದ್ದಕ್ಕೆ ನಾನೇ ಕಾರಣ ಅಂತೆ. ನಾನು ಸರಿಯಾಗಿ ಕೆಲಸ ಮಾಡಿದ್ದಿದ್ರೆ ಇನ್ನೂ ನಾಲ್ಕು ಜಮೀನು ಕೊಳ್ತಾ ಇದ್ದನಂತೆ – ಹಾಸಿಗೆ ನೋಡಿ ಕಾಲು ಚಾಚಬೇಕು. ಸಿಗುತ್ತೆ ಅಂತ ಕೊಂಡುಕೊಂಡ್ರೆ ಮಾಡೋರು ಯಾರು ಹೇಳು ?” ಎಂದು ಕೇಳಿದಾಗ ನಾನು ಸುಮ್ಮನೆ ದೊಡ್ಡಪ್ಪನ ಮುಖ ನೋಡಿದೆ. “ಅವನಿಗೆ ಆಸೆ ಇದ್ರೆ ನಾಲ್ಕಲ್ಲ ಹತ್ತು ತಗೊಳ್ಲಿ, ನನಗೇನು, ನಾನು ಅವನಿಗೆ ಅಡ್ಡಿ ಆಗಿದೀನಿ ಅಂದ್ಕೊಂಡಿದಾನೆ, ಅವನು ಹಾಗಂದ ಮೇಲೆ ನಾನ್ಯಾಕೆ ಇಲ್ಲಿ ಇರ‍್ಲಿ ? ಹೊರಟು ಹೋಗ್ತೀನಿ, ಏನಾದರೂ ಮಾಡ್ಕೋಳ್ಳಿ’ ಎಂದಾಗ ‘ಎಲ್ಲಿಗೆ ಹೋಗ್ತಿಯಾ ದೊಡ್ಡಪ್ಪ’ ಎಂದು ಕೇಳಿದೆ. ‘ಎಲ್ಲಿಗೆ ಅಂದ್ರೆ ಏನು ಹೇಳ್ಲೊ ಸ್ವಾಮಿ ? ಎಲ್ಲಿಗೋ ಹೋದ್ರೆ ಆಯ್ತು, ನನಗೇನು ಹೆಂಡ್ತೀನೇ ಮಕ್ಕಳೆ ? ಎಲ್ಲಾ ಸತ್ತುಹೋದ್ರು, ನೀವೇ ನನ್ನ ಮಕ್ಳು ಅಂತ ಅಂದ್ಕೊಂಡಿದ್ದೆ. ಇನ್ನು ನನಗೆ ಯಾರಿದಾರೆ ? ಎಲ್ಲಿ ಹೋದ್ರೂ ನಾಲ್ಕು ಜನ ಅನ್ನ ಹಾಕ್ತಾರೆ. ಒಂದು ತುತ್ತು ಅನ್ನಕ್ಕೆ ಇವನ ಹತ್ರ ಯಾಕೆ ಅನ್ಸಿಕೊಳ್ಳಿ’ ಎಂದಾಗ ನನ್ನನ್ನು ಬಿಟ್ಟು ಹೋಗುತ್ತಾನಲ್ಲಾ ಎಂದು ದುಃಖವಾಯಿತು. ಮತ್ತೆ ದೊಡ್ಡಪ್ಪ ಮಾತನಾಡಲಿಲ್ಲ. ಹೊಲಕ್ಕೆ ಹೋದಾಗ ಎತ್ತುಗಳನ್ನು ಬಿಟ್ಟು, ನನ್ನನ್ನು ಮರದ ನೆರಳಿನಲ್ಲಿ ಕುಳಿತುಕೊಳ್ಳಲು ಹೇಳಿ ನೇಗಿಲು ಹೂಡಲು ಸಿದ್ಧನಾದ.
ನೇಗಿಲು ಹೊಡೆಯಲು ಪ್ರಾರಂಭಿಸಿದಾಗ ನಾನು ಹೋದೆ. ‘ಹೋಗು ಸ್ವಾಮಿ, ಮರದ ಹತ್ರ ಕೂತುಕೋ. ಬುತ್ತಿ ಬಂದಾಗ ಬರ‍್ತೀನಿ, ಇಬ್ಬರೂ ತಿನ್ನೋಣ’ ಎಂದಾಗ “ದೊಡ್ಡಪ್ಪಾ ನನ್ನನ್ನು ನಿನ್ನ ಜೊತೆಲೇ ಕರೊಂಡು ಹೋಗು’ ಎಂದೆ. ದೊಡ್ಡಪ್ಪ ಜೋರಾಗಿ ನಕ್ಕ. ಬೆಳಗಿನಿಂದ ಹೀಗೆ ನಕ್ಕೆ ಇರಲಿಲ್ಲ. ‘ಹುಚ್ಚಪ್ಪಾ, ನಿನ್ನನ್ನು ಎಲ್ಲಿಗೆ ಕರಕೊಂಡು ಹೋಗೋದು ? ನಾನೇನು ಜಾತ್ರೆಗೆ ಹೋಗ್ತಿನಿ ಅಂಡ್ಕೊಂಡ್ಯಾ? ದೇಶಾಂತರ ಹೋಗ್ತಿನಿ. ಈ ಹೊತ್ತು ಇಲ್ಲಿ, ನಾಳೆ ಇನ್ನೆಲ್ಲೋ. ನಿನ್ನನ್ನು ಕರಕೊಂಡು ಹೋಗೊದು ಹೇಗೆ ಹೇಳು ?- ನೀನು ಚೆನ್ನಾಗಿ ಓದಿ ದೊಡ್ಡೋನಾಗಬೇಕು. ಆಮೇಲೆ ಮಾತಾಡೋಣ. ಹೋಗಿ ಮರದ ಕೆಳಗೆ ಕೂತುಕೋ’ ಎಂದಾಗ ಒಂದು ಮರದ ಕೆಳಗೆ ಕುಳಿತುಕೊಂಡ.
ಹೊಲಕ್ಕೆ ಬಂದಾಗಲೆಲ್ಲಾ ನಾನು ಕುಳಿತುಕೊಳ್ಳುವುದು ಈ ಮರದ ಕೆಳಗೇ. ಆದರೆ ಈ ದಿನ ಏಕೋ ಕುಳಿತುಕೊಳ್ಳುವುದಕ್ಕೆ ಮನಸ್ಸೇ ಇಲ್ಲ ದೊಡ್ಡಪ್ಪ ಜೀರಂಗಿಗಳನ್ನು ಹಿಡಿದು ಅವುಗಳಿಗೆ ದಾರ ಕಟ್ಟಿ ಕೊಟ್ಟಾಗ ಅವುಗಳ ಜೊತೆಯಲ್ಲಿ ಆಟವಾಡುತ್ತಾ ಎಷ್ಟು ಹೊತ್ತು ಬೇಕಾದರೂ ಕುಳಿತುಕೊಳ್ಳಬಹುದು. ಕೆಂಪು, ಹಸಿರು, ಬಣ್ಣಬಣ್ಣದ ಜೀರಂಗಿಗಳನ್ನು ಎಷ್ಟು ಕೇಳಿದರೂ ಬೆಡ್ಡಪ್ಪ ಹಿಡಿದು ಕೊಡುತ್ತಾನೆ. ಪುಟ್ಟ ಜೀರಂಗಿಗಳನ್ನಿಟ್ಟುಕೊಳ್ಳಲು ಬೆಂಕಿಪೊಟ್ಟಣ ತೆಗೆದುಕೊಂಡು ಅದರಲ್ಲಿ ಒಂದೆರಡು ಚೂರು ಎಲೆಗಳನ್ನು ಹಾಕಿಕೊಡುತ್ತಾನೆ. ಅವು ತಪ್ಪಿಸಿಕೊಂಡಾಗಲೋ, ನಾನಾಗಿ ಹಾರಿಬಿಟ್ಟಾಗಲೋ ಇನ ಒಂದೆರಡನ್ನು ಹಿಡಿದುಕೊಡುತ್ತಾನೆ. ದೊಡ್ಡಪ್ಪ ಹೊರಟುಹೋದರೆ ನನಗೆ ಜೀರಂಗಿಗಳನ್ನು ತಂದು ಕೊಡುವವರು ಯಾರು ? ಮತ್ತೆ ದೊಡ್ಡಪ್ಪನ ಹತ್ತಿರ ಹೋಗಲು ಆಸೆಯಾಯಿತು. ಹಿಂದೆ ಮುಂದೆ ನೋಡದೆ ದೊಡ್ಡಪ್ಪ ಒಂದೇ ಸಮನೆ ನೇಗಿಲು ಹೊಡೆಯುತ್ತಿದ್ದಾನೆ. ಭೂಮಿಯನ್ನು ಸೀಳಿಕೊಂಡು ನೇಗಿಲು ಹೋಗುವಾಗ ಅತ್ತ ಇತ್ತ ಚದುರಿದ ಹಸಿ ಮಣ್ಣಿನ ಮೇಲೆ ನಡೆದುಕೊಂಡು ಹೋಗುವುದೆಂದರೆ ನನಗೆ ಖುಷಿ. ಆದರೆ ಈ ದಿನ ಆದೇಕೋ ಮನಸ್ಸೇ ಇಲ್ಲ. ನನ್ನನ್ನ ನೋಡಿ ದೊಡ್ಡಪ್ಪ ‘ಯಾಕೆ ಸ್ವಾಮಿ, ಬಂದೆ?” ಎಂದು ಕೇಳಿದ. ‘ದೊಡ್ಡಪ್ಪ ನೀನು ನಾಳೇನೇ ಹೋಗ್ತಿಯಾ ?” ಕೇಳಿದೆ. “ಇನ್ನೇನ್ಮಾಡ್ಲಿ ಹೇಳು, ನಿಮ್ಮಪ್ಪನ ಹತ್ತಿರ ಯಾರು ಮಾತು ಕೇಳೋರು ? ಏನೋ ಸಣ್ಣೋನು, ಮಾತಾಡಿದರೆ ಮಾತಾಡ್ತಾನ ಅಂತ ಸುಮ್ಮನೆ ಇದ್ದೆ. ಎಷ್ಟು ದಿನ ಅನ್ನಿಸ್ಕೊಳ್ಳೋದು ? ನನಗೆ ಕೆಲ್ಸ ಮಾಡೋಕೇ ಬರೋದಿಲ್ಲಂತೆ. ಅದು ಹೇಗೆ ಮಾಡತಾನೋ ಮಾಡಿಸ್ಕೊಳ್ಳಿ” ಎಂದು ಸ್ವಲ್ಪ ಹೊತ್ತು ಸುಮ್ಮನಿದ್ದ. “ನಿನ್ನನ್ನ ಬಿಟ್ಟು ಹೋಗೋಕೆ ನನಗೂ ಕಷ್ಟ ಸ್ವಾಮಿ, ನಿನಗೆ ಹೇಗೆ ಹೇಳ್ಲಿ ಹೇಳು. ಎಲ್ಲಾ ಹದಮಾಡಿದ ಮೇಲೆ ಇನ್ನೊಂದು ಮಳೆ ಬಂದ್ಮೇಲೆ ಜೋಳ ಹಾಕಿಸೋಣ ಅಂತಿದ್ದೆ. ಅವ್ನು ಯಾಹೊತ್ತಾದರೂ ನೇಗಿಲು ಹಿಡ್ದೀದಾನಾ ? ಅದೇನು ಬಿತ್ತಸ್ತಾನೋ, ಏನೋ…….ಹೂ ಹೋಗ್ಲಿ ಬಿಡು, ಬಿಟ್ಟುಹೋಗೆನು ನನಗೆ ಯಾಕೆ ಇದೆಲ್ಲಾ ಯೋಚನೆ……..ಸುಮ್ನೆ ನೀನು ಯಾಕೆ ಬಿಸಿಲಲ್ಲಿ ತಿರುಗ್ತೀಯಾ, ಹೋಗಿ ಕೂತ್ಕೋ ಹೋಗು’ ಎಂದಾಗ ದೊಡ್ಡಪ್ಪ ನನ್ನನ್ನು ಬಿಟ್ಟೆ ಹೋಗ್ತಾರಲ್ಲಾ ಎಂದು ಅಳು ಬಂದಿತು. ದೊಡ್ಡಪ್ಪನಿಗೆ ಮುಖ ತೋರಿಸದಂತೆ ಹಿಂದಕ್ಕೆ ತಿರುಗಿಕೊಂಡು ಹೋಗಿ ಮರದ ಕೆಳಗೆ ಕುಳಿತೆ.
ಬುತ್ತಿ ಬಂದಾಗ, ದೊಡ್ಡಪ್ಪನೇ ಇಲ್ಲಿಗೆ ಬರುತ್ತಾನಲ್ಲ ಎಂದುಕೊಂಡು ಬಂದಾಗ “ನೀನು ಹೋದರೆ ನಾನು ಊಟ ಮಾಡೋಲ್ಲ’ ಎಂದು ಹಟಮಾಡಿದರೆ ಆಗ ‘ಆಗ್ಲಿ ಎಲ್ಲೂ ಹೋಗೊಲ್ಲ, ನಿನ್ನ ಜೊತೇಲೇ ಇರ್ತೀನಿ, ಊಟಮಾಡು’ ಎನ್ನಬಹುದು ಎಂದುಕೊಂಡೆ. ಆದರೆ ಎಷ್ಟು ಹೊತ್ತಾದರ ದೊಡ್ಡಪ್ಪ ಊಟಕ್ಕೆ ಬರಲಿಲ್ಲ. ಬುತ್ತಿ ಬಂದ ತಕ್ಷಣ ಮುತ್ತುಗದ ಮರದಿಂದ ಎಲೆಗಳನ್ನು ಕಿತ್ತು ತಂದು, ಎಲೆಕಟ್ಟಿ ತೊಳೆದು ನನಗೊಂದು, ತನಗೊಂದು ಹಾಕಿಕೊಳ್ಳಬೇಕು. ಮನೆಯಲ್ಲಿ ತಟ್ಟೆಯಲ್ಲಿ ಊಟ ಮಾಡುವುದಕ್ಕಿಂತ ದೊಡ್ಡಪ್ಪ ಕಟ್ಟಿದ ಎಲೆಯಲ್ಲಿ ಊಟ ಮಾಡುವುದು ಎಷ್ಟೋ ಚೆನ್ನಾಗಿರುತ್ತದೆ. ಮೆಣಸಿನಕಾಯಿ, ಬದನೆಕಾಯಿ ಬಿಡುವಾಗ ಮನೆಯಿಂದಲೇ ಉಪ್ಪು, ಹುಣಸೆಹಣ್ಣು ತಂದು ಗಿಡಗಳಿಂದ ಕಾಯಿ ಕಿತ್ತು, ಒಣಗಿದ ಕಡ್ಡಿಗಳನ್ನಾಯ್ದು ಗುಡ್ಡೆ ಹಾಕಿ ಬೆಂಕಿ ಹಚ್ಚಿ ಅದರಲ್ಲಿ ಕಾಯಿಗಳನ್ನು ಸುಟ್ಟು ಬಂಡೆ ತೊಳೆದು ಚಟ್ಟಿ ಅರೆದು ನಂಚಿಕೊಳ್ಳಲೂ ಹಾಕುವುದುಂಟು……..ಊಟ ಬೇಡವೆಂದು ಹಠ ಮಾಡಬೇಕಂದರೂ ಹಸಿವಾಗುತ್ತಿದೆ. ದೊಡ್ಡಪ್ಪ ಊಟಕ್ಕೆ ಬರದಿದ್ದರೆ? ಕಾದು ಕಾದು ನಾನೇ ಹೊರಟು ‘ದೊಡ್ಡಪ್ಪಾ, ಬುತ್ತಿ ಬಂದಿದೆ ಎಂದೆ. ‘ಅಯ್ಯೋ ಸ್ವಾಮಿ, ಮರೆತೇ ಬಿಟ್ಟೆ, ಏನೋ ಯೋಚ್ನೆ ಮಾಡ್ತಿದ್ದೆ. ಪಾಪ, ನಿನಗೆ ಹಸಿವಾಗಿರ‍್ಬೇಕು’ ಎಂದವನೇ ಎತ್ತುಗಳ ಕೊರಳಂ ಬಿಚ್ಚಿ, ನನ್ನ ಜೊತೆಯಲ್ಲಿ ಬಂದು ಬತ್ತಿಯ ಬುಟ್ಟಿ ತೆಗೆದುಕೊಂಡು ಬಾವಿಯ ಕಡೆ ಹೊರಟಾಗ, ‘ಹಠ ಮಾಡುವುದು ಹೇಗೆ ?’ ಎಂದು ಯೋಚಿಸುತ್ತಾ ಜೊತೆಯಲ್ಲಿ ಹೆಜ್ಜೆ ಹಾಕಿದೆ. ಬಾವಿಯ ಬಳಿ ಬುತ್ತಿ ಇಟ್ಟವನೇ ಮುತ್ತುಗದ ಮರದ ಹತ್ತಿರ ಹೋಗಿ ಎಲೆ ಕಿತ್ತುಕೊಂಡು ಬಂದು ಸರಸರನೆ ಎಲೆ ಕಟ್ಟ ತೊಳೆದು ಮುಖ ಕೈಕಾಲು ತೊಳೆದುಕೊಂಡು ಬಂದು ‘ನೀನು ಮುಖ ತೊಳೆದುಕೊಂಡು ಬಾ ಹೋಗು’ ಎಂದಾಗ ದೂರದಲ್ಲಿ ಅಪ್ಪ ಬರುತ್ತಿರುವುದು ಕಾಣಿಸಿತು. ಅಪ್ಪನ ಎದುರಿಗೆ ಹಠ ಮಾಡುವಂತೆಯೇ ಇಲ್ಲ. ಹಠ ಮಾಡಿದರೆ ಬೈಗುಳ ತಿನ್ನಬೇಕಾಗುತ್ತದೆ ಎಂದುಕೊಂಡು ಕೈಕಾಲು ತೊಳೆದುಕೊಂಡು ಬರುವ ವೇಳೆಗೆ ದೊಡ್ಡಪ್ಪ ಎರಡೂ ಎಲೆಗಳ ಮೇಲ ಹಿಟ್ಟು, ಅನ್ನ ಇಟ್ಟಿದ್ದ. ಅಪ್ಪ ಬರುತ್ತಿರುವುದನ್ನು ನೋಡಿದದೂ ದಂಡಪ್ಪ ಆ ಕಡೆ ತಿರುಗಿ ನೋಡಲಿಲ್ಲ. ನಾನು ಹಿಟ್ಟು ತಿನ್ನುತ್ತಲೇ ನೋಡುತ್ತಿದ್ದೆ. ಅಪ್ಪ ಹೊಲದಲ್ಲಿ ಒಂದು ಸುತ್ತು ಹಾಕಿ ನಮ್ಮ ಕಡೆಯೇ ಬರುತ್ತಿದ್ದ. ನಾನು ಊಟ ಮುಗಿಸಿ ಏಳುವ ವೇಳೆಗೆ ಅಪ್ಪ ನಮ್ಮ ಹತ್ತಿರ ಬಂದು ‘ಏನಣ್ಣಾ, ಊಟ ಆಯ್ತಾ’ ಎಂದಾಗ ದೊಡ್ಡಪ್ಪ ಮಾತನಾಡಲಿಲ್ಲ. ತಿರುಗಿ ಅಪ್ಪನೇ ‘ಈ ಮಳೆಗೆ ಜೋಳ ಹಾಕ್ಬಹುದಲ್ಲ’ ಎಂದಾಗಲೂ ದೊಡ್ಡಪ್ಪ ಸುಮ್ಮನಿದ್ದ. ಅಪ್ಪನ ಕಡೆಯೂ ನೋಡದೆ ದೊಡ್ಡಪ್ಪ ‘ಬಾ, ಸ್ವಾಮಿ ಹೋಗೋಣ ಹೊತ್ತಾಯ್ತು’ ಎಂದವನೇ ನನ್ನನ್ನು ಕರೆದುಕೊಂಡು ಹೊರಟೇ ಬಿಟ್ಟ. ಸ್ವಲ್ಪ ದೂರದಲ್ಲಿ ನಮ್ಮ ಹಿಂದೆಯೇ ಅಪ್ಪ ಬರುತ್ತಿದ್ದರೂ ದೊಡ್ಡಪ್ಪ ತಿರುಗಿ ನೋಡಲಿಲ್ಲ. ದೊಡ್ಡಪ್ಪ ಮತ್ತೆ ನೇಗಿಲು ಹೂಡುವವರೆಗೂ ಅಪ್ಪ ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದವನು ಊರ ಕಡೆ ಹೊರಟ. ಅಪ್ಪ ದೂರ ಹೊರಟು ಹೋದ ಮೇಲೆ ನೋಡಿದ್ಯಾ ಸ್ವಾಮಿ, ಅನ್ನೋದು ಅಂದು ಬಿಟ್ಟು ಈಗ ಸರಿಮಾಡೋಕೆ ಹೊಲಕ್ಕೆ ಬಂದಿದಾನೆ. ಎಂದೂ ಇಲ್ಲದ ಪ್ರೀತಿ ಈ ಹೊತ್ತು ಹೊಲದ ಮೇಲೆ ಬಂತೇನೋ……ಇನ್ಮೇಲೆ ಬರಲೇಬೇಕಲ್ಲ, ಅಭ್ಯಾಸ ಮಾಡ್ಕೊಳ್ಲಿ’ ಎಂದವನೇ ಎತ್ತುಗಳನ್ನು ಗದರಿಸಿದಾಗ ಅವು ಹೆಜ್ಜೆ ಹಾಕಿದವು.
ಅಪ್ಪ ಬಂದದ್ದರಿಂದ ನಾನು ಹಠಮಾಡಲು ಸಾಧ್ಯವಾಗಲಿಲ್ಲ. ಇಲ್ಲದೆ ಇದ್ದಿದ್ದರೆ ನನ್ನನ್ನು ಬಿಟ್ಟು ಹೋಗೋದಿಲ್ಲ ಎಂದು ದೊಡ್ಡಪ್ಪನ ಕೈಲಿ ಆಣೆ ಮೂಡಿಸಬಹುದಾಗಿತ್ತು. ಬಂದು ಎಲ್ಲ ಕೆಡಿಸಿದ್ದಕ್ಕಾಗಿ ಅಪ್ಪನನ್ನು ಬೈದುಕೊಂಡೆ. ಈಗ ಮತ್ತೆ ಹಠ ಮಾಡುವುದು ಹೇಗೆ ? ರಾತ್ರಿ ಊಟ ಮಾಡುವುದಿಲ್ಲ ಎನ್ನುವುದಕ್ಕೆ ಅಪ್ಪ ಇರುತ್ತಾನೆ. ಬೆಳಗ್ಗೆ ದೊಡ್ಡಪ್ಪ ಹೊರಟೇ ಹೋಗಿರುತ್ತಾನೆ….
ನಾನು ಹಿಂದೆಯೇ ಬರುತ್ತಿರುವುದನ್ನು ನೋಡಿ ದೊಡ್ಡಪ್ಪ “ಸ್ವಾಮಿ, ನಿನಗೆ ಒಂದು ಕಥೆ ಹೇಳಿದ್ನಾ ? ಒಬ್ಳು ಮನೇಲಿ ಎಲ್ಲರ ಹತ್ತಿರ ಜಗಳ ಆಡಿಕೊಂಡು ಓಡಿ ಹೋಗ್ತೀನಿ, ಅಂತ ಹೆದರಿಸ್ತಾ ಇದ್ಲಂತೆ. ಮನೆಯವರಿಗೂ ಕೇಳಿ, ಕೇಳಿ ಸಾಕಾಯಿತು. ಒಂದಿನ ಹೋಗಮ್ಮ, ಎಲ್ಲಿಗೆ ಹೋಗ್ತಿಯೋ ಹೋಗು ಅಂದರಂತೆ. ಆಮೇಲೆ ಅವಳು ಊರಿನಲ್ಲಿ ಎಲ್ಲರ ಮನೆಗೂ ಹೋಗಿ ‘ಮನೇಲಿ ಹೀಗಂದ್ರು, ನಾನು ಯಾಕೆ ಅಂತ ಮನೇಲಿ ಇರ್ಲಿ ? ಹೊರಟೋಗ್ತೀನಿ’ ಅಂತ ಹೇಳಿಕೊಂಡು ತಿರುಗಾಡೋಕೆ ಪ್ರಾರಂಭ ಮಾಡಿದ್ಲಂತೆ. ಹಾಗೇ ಆಯ್ತು ನೋಡು ನನ್ನ ಕಥೆ. ‘ಓಡಿ ಹೋಗೋಳು ಹೇಳಿ ಕೇಳಿ ಓಡಿಹೋಗ್ತಾಳಾ? ನಾಳೆ ಹೋಗ್ತಿನಿ ಅಂತ್ಲೇ ಗೇಯೋಕೆ ಬಂದಿದೀನಿ. ನಾಳೆ ಹೋಗೋನಿಗೆ ಇದೆಲ್ಲ ಯಾಕೆ ಬೇಕಿತ್ತು ? ಮನೆ ಮಠ ಬಿಟ್ಟು ಹೊಗೋದು ಅಷ್ಟು ಸುಲಭ ಆಗಿದ್ದಿದ್ರೆ ಎಲ್ರೂ ಸನ್ಯಾಸಿಗಳು ಆಗಿಬಿಡ್ತಿದ್ದರೇನೋ” ಎಂದು ತನ್ನಷ್ಟಕ್ಕೆ ತಾನೇ ನಗಲು ಪ್ರಾರಂಭಿಸಿದ. ದೊಡ್ಡಪ್ಪ ಚೆನ್ನಾಗಿ ಕಥೆ ಹೇಳುತ್ತಾನೆ. ರಾತ್ರಿ ಅಂಗಳದಲ್ಲಿ ಮಲಗಿಕೊಂಡು ಆಕಾಶದಲ್ಲಿ ನಕ್ಷತ್ರಗಳನ್ನು ಎಣಿಸಲು ಪ್ರಯತ್ನಿಸುತ್ತಿದ್ದಂತೆ ದೊಡ್ಡಪ್ಪ ಕಥೆ ಹೇಳುತ್ತಿದ್ದರೆ ಕೇಳಲು ಚೆನ್ನಾಗಿರುತ್ತದೆ. ರಾಮಾಯಣ, ಮಹಾಭಾರತಗಳ ಕಥೆಗಳನ್ನೆಲ್ಲಾ ಹೇಳಿದ್ದಾನೆ. ನಾನು ಕೇಳುತ್ತಿದ್ದೇನೋ ಇಲ್ಲವೋ ಎಂದು ಪರೀಕ್ಷೆ ಮಾಡುವುದಕ್ಕೆ ಶಾಲೆಯಲ್ಲಿ ಮೇಷ್ಟ್ರು ಪ್ರಶ್ನೆ ಕೇಳುವಂತೆ ಆಗಾಗ ಪ್ರಶ್ನೆ ಕೇಳಿ ನಾನು ಉತ್ತರ ಹೇಳಿದಾಗ ‘ಹಾ, ಜಾಣ… ಆಮೇಲೆ ಏನಾಯ್ತಪ್ಪಾ ಅಂದ್ರೆ’ ಎಂದು ಮತ್ತೆ ಕಥೆ ಹೇಳುತ್ತಾನೆ. ಈ ದಿನವೂ ಅಪ್ಪನ ಹತ್ತಿರ ಜಗಳವಾಡದೇ ಇದ್ದರೆ ಏನಾದರೂ ಕಥೆ ಹೇಳುತ್ತಿದ್ದ. ಈ ದಿನ ಕಥೆ ಎಂದರೂ ನಾಲ್ಕೇ ಸಾಲಿನಲ್ಲಿ ಮುಗಿಸಿದ. ಅದು ಕಥೆಯೇ ಅಲ್ಲ, ಆದರೂ ದೊಡ್ಡಪ್ಪ ಅದನ್ನು ಏಕೆ ಹೇಳಿದ ? ಬಿತ್ತುವಾಗಲೋ, ಕೊಯ್ಲು ಕಾಲದಲ್ಲೋ ಹೊಲಕ್ಕೆ ಬಂದು ಹೋಗುವ ಅಪ್ಪ ಇಂದೇಕೆ ಬಂದು ಹೋದ ? ಅಪ್ಪ ಮಾತನಾಡಿಸಿದರೂ ದೊಡ್ಡಪ್ಪ ಮಾತನಾಡಲಿಲ್ಲ. ದೊಡ್ಡಪ್ಪನಿಗೆ ಬಹಳ ಕೋಪ ಬಂದಿರಬೇಕು. ಅಪ್ಪನಿಗೆ ಹಾಗೇ ಮಾಡಬೇಕು.
“ಏನು ಸ್ವಾಮಿ ಯೋಚ್ನೆ ಮಾಡ್ತಾ ಇದೀಯ; ಆಗ್ಲೇ ನಿನಗೂ ಯೋಚ್ನೇನಾ? ಮಾತಾಡಿಸಿದರೂ ಎಲ್ಲೋ ನೋಡ್ತಾ ಇದೀಯ’ ಎಂದಾಗ ನಾಚಿಕೆಯಾಯಿತು. ‘ಈ ಹೊತ್ತು ನಿನ್ನನ್ನ ಸರಿಯಾಗಿ ಮಾತಾಡಿಸ್ಲೇ ಇಲ್ಲ, ನಾನೂ ಏನೋ ಯೋಚ್ನೆ ಮಾಡ್ತಾ ಇದ್ದೆ ಬಿಡು’ ಎಂದ.
ಇಳಿಹೊತ್ತು ಆದಾಗ ಎತ್ತುಗಳನ್ನು ಬಿಚ್ಚಿ ಆಡ್ಡಾಡಲು ಬಿಟ್ಟು ‘ಇನ್ನು ಸ್ವಲ್ಪ ಹೊತ್ತಿಗೆ ಮನೆಗೆ ಹೋಗೋಣ’ ಎಂದೆ.

Close

ವೀಣಾ ಎಲಬುರ್ಗಿ-ಸಣ್ಣಕತೆ ಒಂದು ಅಭ್ಯಾಸ

ವೀಣಾ ಎಲಬುರ್ಗಿ-ಸಣ್ಣ ಕತೆ :
ಒಂದು ಅಭ್ಯಾಸ

ಕಮಲ ಹೆಮ್ಮಿಗೆ

ಪ್ರಾಯಶಃ ರಾಜಲಕ್ಷ್ಮಿ ಎನ್. ರಾವ್‌ರವರನ್ನು ಬಿಟ್ಟರೆ, ‘ವೀಣಾ ಎಲಬುರ್ಗಿ’ಯವರು ಕತೆಗಾರ್ತಿಯರ ಪೈಕಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ-ಹೊಸ ಧ್ವನಿ ಹೊರಡಿಸಿದ್ದಾರೆ. ‘ತ್ರಿವೇಣಿ’ಯವರ ಹೆಸರು ಈ ಇಬ್ಬರ ನಡುವೆ ಬರುತ್ತದೆ. ಆದರೆ ತಮ್ಮ ಕೆಲವು ಕಾದಂಬರಿಗಳಲ್ಲಿಯಂತೆ-ತ್ರಿವೇಣಿಯವರು – ತಮ್ಮ ಸಣ್ಣಕತೆಗಳಲ್ಲೂ ಭಾವಾತಿರೇಕತೆಯಿಂದ ಮುಕ್ತರಾಗಿಲ್ಲ ಎನಿಸುತ್ತದೆ. ಇದು, ಇವರ ‘ಹೆಂಡತಿಯ ಹೆಸರು’ ಕಥಾ ಸಂಕಲನದ ಕೆಲವು ಕತೆಗಳಿಂದ ವ್ಯಕ್ತವಾಗುತ್ತದೆ.
ರಾಜಲಕ್ಷ್ಮಿ ಎನ್. ರಾವ್‌ರವರ ‘ಫೀಡ್ರಾ’ ಮತ್ತು ‘ಅವೇ ಮರೀಯಾ’ ದಂಥ ಕತೆಗಳು ಮಹಿಳಾ ಲೇಖಕಿಯರು ಜೀವನದ ಮೇಲ್ಪದರದ ವಿವರಗಳನ್ನು ನೀಡಿಯೇ ಕೃತಾರ್ಥರಾಗಬಯಸುವುದಿಲ್ಲ ಎಂಬ ಧೋರಣೆಯನ್ನು ದೃಢೀಕರಿಸಿದರೆ ‘ವೀಣಾ’ ರವರ ‘ಮುಳ್ಳುಗಳು’ ಸಂಕಲನ ಮನಸ್ಸಿನಾಳದಲ್ಲಿ ಅಡಗಿ ಕುಳಿತ ಭಾವನೆಗಳನ್ನು ದಿಟ್ಟವಾಗಿ ನಿರೂಪಿಸುತ್ತದೆ ; ಅ ಮೂಲಕ ಆಧುನಿಕ ಲೇಖಕಿಯರಲ್ಲಿ ಕಂಡುಬರುತ್ತಿರುವ ನಮ್ಮ ಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ. ಇತ್ತೀಚೆಗೆ ಬೆಳಕು ಕಂಡ “ಕೊನೆಯ ದಾರಿ’ ವೀಣಾರವರ ಪ್ರಯೋಗಶೀಲತೆಯನ್ನು ಸೂಚಿಸಂತ್ತದೆ. ಆದರೆ, ಶಾಂತಿನಾಥ ದೇಸಾಯಿಯವರು ತಮ್ಮ ಟಿಪ್ಪಣಿಯಲ್ಲಿ “ವೀಣಾರವರ ಕಥನ ಕಲೆಯ ಬಗ್ಗೆ ನಿರ್ದಿಷ್ಟವಾಗಿ, ಸ್ಪಷ್ಟವಾಗಿ ಏನೂ ಹೇಳಲು ಬರುವುದಿಲ್ಲ ಎಂಬುದೇ ಅವರ ಸದ್ಯದ ಶೈಶಿಷ್ಟ್ಯ. ಎಂದಿದ್ದಾರೆ. ಇದನ್ನು ಒಪ್ಪಲಾಗುವುದಿಲ್ಲ. ಏಕೆಂದರೆ ಏನೂ ಹೇಳಲಾಗದ್ದೇ ವೀಣಾರವರ ವೈಷ್ಟ್ಯತೆಯೇ ? ಖಂಡಿತ ಅಲ್ಲ. ಈಕೆ, ಸ್ವವಿಶ್ಲೇಷಣೆಯಲ್ಲಿ ತೊಡಗಿದ್ದಾರೆ. ಪ್ರಯೋಗಗಳತ್ತ ಮನಸ್ಸು ಹರಿಸಿದ್ದಾರೆ ಹೀಗೆ, ಇದು ಇವರ ಬೆಳವಣಿಗೆಯನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತದೆ.
‘ಮುಳ್ಳುಗಳು’ ಸಂಕಲನ ಹೊರಬಿದ್ದದ್ದು ೧೯೬೮ ರಲ್ಲಿ. ಇದರಲ್ಲಿ ಲೇಖಕಿ ಸರಳೀಕರಣ, ಸಂಕೀರ್ಣತೆ ಮುಂತಾದ ಸಮಸ್ಯೆಗಳನ್ನು ಎದುರಿಸಿದ್ದಾರೆ : ನಿಜ, ಆದರೆ ವಸ್ತುವನ್ನು ಒಳಹೊಕ್ಕು ನೋಡುವ ರೀತಿ, ಪ್ರಾಮಾಣಿಕ ಅಭಿವ್ಯಕ್ತಿ, ಭಾಷೆಯ ಬಳಕೆ ಮುಂತಾದ ಕಾರಣಗಳಿಂದಾಗಿ ಈ ಸಂಕಲನ ವಿಶಿಷ್ಟವಾಗಿ ಕಾಣುತ್ತದೆ.
ಇಲ್ಲಿ ವೀಣಾ ವಿವಾಹಕ್ಕೆ ಮೊದಲಿನ ಹುಡುಗಿಯರ ಮನಸ್ಸನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಇಲ್ಲಿ ಎಲ್ಲ ಕತೆಗಳಲ್ಲೂ ಇರುವ ಸಾಮಾನ್ಯ ಅಂಶ- ವಿವಾಹಕ್ಕೆ ಹಾತೊರೆದು, ಮೈತೆರೆದು ನಿಂತ ಹೆಣ್ಣಿನ ಸ್ಥಿತಿಯೇ ಆಗಿದೆ. ಆದರೆ, ಒಂದೇ ಅನುಭವವನ್ನು ಬೇರೆ ಬೇರೆ ಸ್ತರಗಳಲ್ಲಿ ವಿಶ್ಲೇಷಿಸಿ ನೋಡುವ ಕಲೆಗಾರಿಕೆ ವೀಣಾರವರಿಗೆ ಚೆನ್ನಾಗಿ ಸಾಧಿಸಿದೆ ಎನಿಸುತ್ತದೆ. ಇದು ಕತೆಯಿಂದ ಕತೆಗೆ ಬದಲಾಗುವ ಸಂಕೇತ, ಭಾಷೆಯ ಬಳಕೆ ಮತ್ತು ಘಟನೆಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ. ಉದಾಹರಣೆಗೆ “ಮುಳ್ಳುಗಳು’ ಕತೆಯಲ್ಲಿ ವಿವಾಹಕ್ಕೆ ಕಾತರಿಸಿ ನಿಂತ ಪ್ರೌಢ ಹೆಂಗಸು ನಾಯಕಿ. ಪುರುಷದ್ವೇಷಿಯಾದ ನಾಯಕಿ, ಹುಡುಗರ ಪ್ಯೂನ್ ಮಾದನ, ಕೊನೆಗೆ ನಾಯಿಯ ಕಣ್ಣಲ್ಲಿ ಕೂಡ ಮುಳ್ಳಿನ ಮೊನೆ ಕಾಣುತ್ತಾಳೆ. ಆದರೆ ಮಳ್ಳ ಗಂಡಸು ದೇಸಾಯಿಯ ಬಗೆಗೆ ಆಕೆ ಯೋಚಿಸುವುದನ್ನು ನೋಡಿ: “ಇವನು ಎಲ್ಲರಿಗಿಂತ ಬೇರೆಯಾಗಿ ತೋರಿ ನನಗೆ ಮತ್ತೆ ಮುಳ್ಳುಗಳಿಲ್ಲದ ದ್ವೀಪದ ಬಗ್ಗೆ ವಿಚಾರಿಸ ಹಚ್ಚುತ್ತಾನಲ್ಲ ಇವನ ಕಣ್ಣಲ್ಲೂ ಮುಳ್ಳುಗಳು ಕಂಡರೆ ಎಷ್ಟು ಒಳ್ಳೆಯದು ! ಆಗ ಮುಳ್ಳುಗಳು ಜೀವನದ ಅನಿವಾರ‍್ಯ ಭಾಗವೆಂಬುದನ್ನು ಒಪ್ಪಿಬಿಡುವುದು ಸುಲಭವಾಗುತ್ತಿತ್ತು.”-ಹೀಗೆ ಹೇಳುವಾಗ ಮಾತಿಗೂ ಕೃತಿಗೂ ಇರುವ ಆಸಾಂಗತ್ಯ ಥಟ್ಟನೆ ಹೊಳೆಯುತ್ತದೆ. “ಮುಳ್ಳುಗಳು ಜೀವನದ ಅನಿವಾರ‍್ಯ ಭಾಗ” ಎಂದು ಆಕೆ ತಿಳಿದೇ ದೇಸಾಯಿಯ ಬಗ್ಗೆ ವಿಚಾರಿಸತೊಡಗಿರುವುದು. ಒಂದು ರಿ:ಶಿಯಿಂದ ಇದು ಆಕೆಯ ಸೋಲಿನ ಕ್ಷೀಣ ಕೂಗೂ ಆಗಿದೆ. ‘ಅತಿಥಿ’ ಕತೆಯಲ್ಲೂ ಹೀಗೆಯೇ. ವೃದ್ದ ಕನ್ಯೆ (1) ಲೀಲಾವತಿ, ಕಿಡಕಿಯ ಬಳಿ ಯಾರೂ ಇರದಿದ್ದರೂ ಇರುವಂತೆ ಭ್ರಮಿಸುವುದು–ಹಾಗ ಬಾರದವರಿಗಾಗಿ ಕಾಯುವುದು, ಇವೆಲ್ಲ ಮನಃಶಾಸ್ತ್ರದ ಬೆಂಬಲ ಪಡೆದಂತೆ ಕಾಣುತ್ತವೆ. ನಾಯಕಿ ಗಂಡಸರೆಲ್ಲ ನಾಯಿಗಳ ಹಾಗೆ ಎಂದು ಭಾವಿಸಿ ಸದಾನಂದನ ಪ್ರೀತಿಯನ್ನು ತಿರಸ್ಕರಿಸಿ ಕೊನೆಗೆ ಹಳಹಳಿಸುವುದು “ಮನೆಮಾರಿಲ್ಲದೆ ಸುಡುಗಾಡ ಸಿದ್ಧರ‍್ಹಾಂಗ” ತಿರುಗುವದು-ಕನವರಿಸುವುದು ಗಮನಾರ್ಹ.
ಇಲ್ಲಿ ಇನ್ನೊಂದು ಅಂಶ ಗಮನಾರ್ಹ. ವೀಣಾ, ಸಮಸ್ಯೆಗಳನ್ನು ಅವುಗಳ ಎಲ್ಲ “ಕಾಂಪ್ಲೆಕ್ಸಿಟಿ’ಯೊಡನೆ ಚಿತ್ರಿಸುತ್ತಾರೆ. (ಮೇಲೆ ಉದಾಹರಿಸಿದ ಎರಡು ಕಥೆಗಳೂ ಈ ದೃಷ್ಟಿಯಿಂದ ಮುಖ್ಯವಾಗುತ್ತವೆ.) ವೀಣಾ-ರ ಬಹುಪಾಲು ನಾಯಕಿಯರು ನಿಜದಿಂದ ದೂರ ಓಡುವಂಥವರೇ ಆಗುತ್ತಾರೆ. ಹೀಗಾಗಿ ಕತೆ ಪಡೆದುಕೊಳ್ಳುವ ಅಂತ್ಯ-ಕೇವಲ ಅನಿವಾರ್ಯವಾಗಿರದೆ ಆಕಸ್ಮಿಕವಾಗಿದ್ದರೂ-ಸಹಜವಾಗಿ ಕಾಣುತ್ತದೆ.
ಸಾಧಾರಣಕ್ಕೆ ಇವರ ಕತೆಯ ಕೇಂದ್ರ ಪಾತ್ರವು ಹಿಂದೆ ನಡೆದ ಘಟನೆಯೊಂದನ್ನು ನೆನಪು ಮಾಡಿಕೊಳ್ಳುತ್ತದೆ. ಜೊತೆಗೆ ಭೂತಕಾಲದ ಘಟನೆಗಳ ನೆನಪಿನಿಂದ ಭವಿಷ್ಯವನ್ನು ಅದು ರೂಪಿಸಿಕೊಳ್ಳುತ್ತದೆ, ವರ್ತಮಾನವನ್ನು ನಿಯಂತ್ರಿಸುತ್ತದೆ. ಕೊನೆಯ ದಾರಿ’ ಮತ್ತು ‘ನೆರಳು’ ಕತೆಗಳು ಇದಕ್ಕೆ ಮುಖ್ಯ ಉದಾಹರಣೆಗಳು. ಘಟನೆಯೊಂದನ್ನು ವಿವರಿಸುವುದಕ್ಕಿಂತ ಹೆಚ್ಚಾಗಿ ನೇರವಾಗಿ, ಸರಳವಾಗಿ ಚಿತ್ರಿಸುವ ಅವರ ಧೋರಣೆಯನ್ನು ಈ ಕತೆಗಳಲ್ಲಿ ಗುರ್ತಿಸಬಹುದು. ‘ವೀಣಾ’ರವರ ಕತೆಗಳ ಸಾಧಾರಣವಾಗಿ, ಸಂಭಾಷಣೆ ಮೂಲಕವೇ ಆರಂಭವಾಗುತ್ತವೆ-ಯಾವ ಹಿನ್ನೆಲೆ ಇಲ್ಲದೆ ಹಾಗೂ ಅಕಸ್ಮಿಕ ತಿರುವನ್ನು ಪಡೆದುಕೊಳ್ಳುತ್ತವೆ.
ನೆನಪಿಸಿಕೊಳ್ಳುವುದರ ಮೂಲಕ ಪಾತ್ರಗಳು ಬೆಳೆಯುತ್ತ ಹೋಗುತ್ತವೆ. ಜೊತೆಗೇ ಕತೆ “ಭಾವಗೀತಾತ್ಮಕವಾಗಿ ಬಿಡುವ ಅಪಾಯ ತಲೆದೋರುತ್ತದೆ. “ಕೊನೆಯದಾರಿ’ ಸಂಕಲನದ ‘ಹೊರಟು ಹೋದವನು’, ಮತ್ತು ‘ಮಳೆ ಬಂದಾಗ’ ಕತೆಗಳಲ್ಲಿ ಇದೆ ಅಪಾಯ ತಲೆದೋರಿದೆ, (ಜೀವನದ ಸಣ್ಣ ಎಳೆಯೊಂದರ ಸುತ್ತ ವೀಣಾ ಹೇಗೆ ಕತೆ ಹೆಣೆಯಬಲ್ಲರು ಎಂಬುದಕ್ಕೆ ಇವು ಉತ್ತಮ ನಿದರ್ಶನಗಳಾಗುತ್ತವೆ.) ಪಾತ್ರಗಳು ಹಳಹಳಿಸುವುದೇ ಹೆಚ್ಚಾಗಿ ಬಿಡುತ್ತದೆ.
ವೀಣಾರವರು ಪ್ರತಿಮೆಯೊಂದರ ಸುತ್ತ ಕುಸುರಿಗೆಲಸ ಮಾಡುತ್ತ ಹೋಗುತ್ತಾರೆ. ಒಮ್ಮೊಮ್ಮೆ ಅದು ಕೃತಕವಾಗಿ +,– ಗಳ ಲೆಖ್ಖಾಚಾರವಾಗಿ ಬಿಡುತ್ತದೆ, `ನೀನೇ ತಂತಿ’ ಎಂಬ ಕತೆ ಇದಕ್ಕೆ ನಿದರ್ಶನ. ಇಲ್ಲಿ ಪಂಜರದ ಗಿಣಿ-(ಹಳೆಯ ಪ್ರತೀಕ) ಸರಯೂನ ಹಾಡು, ಎಲ್ಲ ಕತೆಯ ಉದ್ದೇಶವನ್ನು ಧ್ವನಿಸುತ್ತವೆ. ಆದರೆ ಇಲ್ಲಿ ಬಂದಿರುವ ಗಿಳಿಯ ಸಂಕೇತ, ‘ಮುಳ್ಳುಗಳು’ ಕತೆಯ ಸಂಕೇತದಷ್ಟು ಅರ್ಥಪೂರ್ಣವಾಗುವುದಿಲ್ಲ. ಮುಂದೆ ವೀಣಾ ಭಾಷೆಯನ್ನು ಬಳಸಿಕೊಳ್ಳುವ ಬಗೆ ಎಂಥದ್ದು ಎಂಬ ಪ್ರಶ್ನೆ ಏಳುತ್ತದೆ. ಅನುಭವದ ವ್ಯಾಪ್ತಿ ಚಿಕ್ಕದಿರುವುದರಿಂದ ಒಂದು ಅನುಭವವನ್ನು ಬೇರೆ ಬೇರೆ ಸ್ತರದ ಭಾಷೆಯಲ್ಲಿ ಆಗಿಸುವ ಪ್ರಯತ್ನ ಇವರದು-ಎಂಬ ಅಭಿಪ್ರಾಯ ಇದೆ. ‘ಮುಳ್ಳುಗಳು’ ಕತೆಯಲ್ಲಿನ ಭಾಷೆ ‘ಪ್ರಶ್ನೆ’ ಕತೆಯಲ್ಲಿಲ್ಲ.-ಇಲ್ಲಿನ ಭಾಷೆ ಕ್ರಮೇಣ ಕಾವ್ಯಾತ್ಮಕವಾಗತ್ತ ಹೋಗುತ್ತದೆ. ಉದಾ : “ಎಲೆಕ್ಟ್ರಿಕ್‌ ದೀಪದ ಕಂಬಕ್ಕೆ ಬಿಗಿದ ತಂತಿ ಆದರೇನಾಯಿತು? ಪ್ರೇಮಗೀತೆ ಹಾಡಲು ಸಾಧ್ಯವಾಗದಿದ್ದರೂ, ಸ್ಮಶಾನ ಗೀತೆಯನ್ನಾದರೂ ಸತ್ತ ತುಟಿಗಳ ಮೇಲೆ ಗುನುಗುನಿಸಬಹುದು” ಇತ್ಯಾದಿ..ಇತ್ಯಾದಿ. ‘ಅತಿಥಿ’ಯಲ್ಲಿನ ಭಾಷೆ ಬೇರೆಯಾಗಿ ಕಾಣುತ್ತದೆ. ಹುಡುಗಿಯರು ತಮ್ಮ ವಾರ್ಡನ್ ಬಗ್ಗೆ ಹೇಳುವುದನ್ನು ನೋಡಿ: “ಬರೇ ದಿನಾ ಒಂದ ಕಡೇಗೆ ಹೋಗಿ Guest ಆಗಿ ತಿರಗೂದಣರಾಗ ಈಕಿ ಜೀವನ. ಒಂದ ಮನೀ ಇಲ್ಲ, ಮಾರಿಲ್ಲ. ಸುಡಗಾಡ ಸಿದ್ದರ‍್ಹಾಂಗ ಗೆಸ್ಟ್ ಆಗಿ ತಿರಗೂದರಾಗ ಇರ‍್ತಾಳೆ.” -ಹೀಗೆ ‘ವ್ಯಂಗ್ಯ’ವನ್ನು ಭಾಷೆಯಲ್ಲಿ ಸವಂರ್ಥವಾಗಿ ಆಗಿಸುವ ಶಕ್ತಿ ವೀಣಾ-ರಿಗೆ ಇದೆ ಎಂಬುದಕ್ಕೆ ಇದೊಂದು ಉದಾಹರಣೆ. ಕೆಲವೇ ಕೆಲವು ವಾಕ್ಯಗಳಲ್ಲಿ ಅನುಭವದ ತೀವ್ರತೆಯನ್ನೂ, ಸೂಕ್ಷ್ಮವಾದ ಪದರು ಪದರಗಳನ್ನೂ ಚಿತ್ರಿಸುವ ಶಕ್ತಿ ಈಕೆಗಿದೆ ಎಂಬುದು ಮುಖ್ಯ ಸಂಗತಿ. ಮಾತಿನ ಧಾಟಿ-ನೇರ ಹಾಗೂ ಪರಿಣಾಮಕಾರಿ. ಆದರೆ, ವೀಣಾ-ಚಿತ್ರಿಸುವ ನಾಯಕಿಯರಲ್ಲಿ ಸ್ವಲ್ಪ ವೈವಿಧ್ಯ ಕಂಡರೂ ಅವರು ಚಿತ್ರಿಸುವ ಗಂಡು ಪಾತ್ರಗಳು ಕಾರ್ಬನ್ ಪ್ರತಿಗಳ ಹಾಗೆ. ಸಾಮಾನ್ಯವಾಗಿ ನಾಯಕಿಯರ ಗಂಡಂದಿರು ಚಂದ ಇರುತ್ತಾರೆ. ಹಾಗೂ ಮೃದು ಸ್ವಭಾವದ ಕೋಳೂರು ಕೊಡಗೂಸುಗಳಾಗಿರುತ್ತಾರೆ ! ತಮಾಷೆ ಎಂದರೆ, ನಾಯಕಿಯರಿಗೆ- ಗಂಡಂದಿರ ಹಿತವಾದ, ಬೆಚ್ಚನೆಯ ರಕ್ಷಣೆ ಸುಲಭವಾಗಿ ದೊರಕಿಬಿಡುತ್ತದೆ. ಉದಾ: ‘ಹೊರಟು ಹೋದವನು’ ಕತೆಯಲ್ಲಿ ಆಕೆ ಹುಬ್ಬಳ್ಳಿ ಗಾಡಿ ಇಳಿದು, ಪೂನಾ ಎಕ್ಸ್‌ಪ್ರೆಸ್ ಹತ್ತಿ ಅಂದೇ ವಾಪಸು ಬಂದರೂ ಗಂಡನಾದವ ಯಾಕೆ?-ಏನು ? ಒಂದೂ ಕೇಳುವುದಿಲ್ಲ. “ಛಲೋ ಆತು ಬಿಡು” ಎನ್ನುತ್ತ ಸೂಟ್‌ಕೇಸಿಗೆ ಕೈಚಾಚುತ್ತಾನೆ. ‘ಹೆಣ’ ಕತೆಯ ಶ್ರೀನಿವಾಸ ಕಂಡ ಹಾಗೆಯೇ, “ಕವಿತಾ ಬರೆದೇನ ?” ಎಂದು ಕೇಳಿ, ಆಕೆ ‘ಇಲ್ಲ’ ಅಂದ ಕೂಡಲೇ “ಹಾಂಗಾದ್ರೆ ನಾ ನಿನ್ನ ಮಾತಾಡ್ಸೂದಿಲ್ಲ ಇವತ್ತು.” ಎಂದು ಆರಾಮಿದ್ದುಬಿಡುತ್ತಾನೆ. “ನೀನೇ ತಂತಿ” ಕತೆಯ ಹರೀಶನೂ ಹೀಗೇ. ಪಿತ್ಯ ಭಾವದಿಂದ ಆಕೆಗೆ ರಕ್ಷೆಯಾಗಿರುತ್ತಾನೆ. ಈ ಮುನ್ನ ಹೇಳಿದಂತೆ ‘ಹೊರಟು ಹೋದವನು’ ಕತೆಯ ಸತೀಶ-ತನ್ನ ಪತ್ನಿಯ ತಪ್ಪುಗಳನ್ನೆಲ್ಲ ನುಂಗಿ ನೀಲಕಂಠನಾಗಲು ಕಾತರಿಸುತ್ತಾನೆ. ಮದುವೆಯಾದ ತರುಣದಲ್ಲಿ ಆತ ಹೀಗನ್ನುತ್ತಾನೆ. “ನಿನ್ನ ಆಂದಿನ ಜೀವನದಾಗೆ ಏನರೆ ಆಗಿತ್ತೇನು ? ಹಾಂಗೇನರ ಇದ್ದರೆ ನನಗೆ ಹೇಳು, ನಾ ನಿನ್ನ ಕ್ಷಮಾ ಮಾಡತೇನಿ.” ಹೆಚ್ಚೇಕೆ ಆ ತನ್ನ ತಾಯಿ ಸತ್ತಾಗ ಒಂದು ತೊಟ್ಟೂ ಕಣ್ಣೀರು ಹಾಕದಿದ್ದಾಗ “ಆಕೀಗೆ ಷಾಕ್ ಆಗೇದ” ಎಂದು Protect ಮಾಡುತ್ತಾನೆ-ಒಟ್ಟಾರೆ, ಒಂದು ಸೂತ್ರಕ್ಕೆ
ಅಂಟಿಕೊಂಡಂತೆ ಸರಳವಾಗಿ ಬಿಡುತ್ತಾರೆ ವೀಣಾ-ರವರು ಚಿತ್ರಿಸುವ ಗಂಡು (ಪಾತ್ರ)ಗಳು.
ಒಂದೇ ಬಗೆಯ ವಸ್ತು ಬೇರೆ ಬೇರೆ ಲೇಖಕರಲ್ಲಿ ತನ್ನ ಸತ್ವವನ್ನು ಕಂಡುಕೊಳ್ಳುತ್ತದೆ. ಇದಕ್ಕೆ -ಇತ್ತೀಚೆಗೆ ‘ಕಸ್ತೂರಿ’ ಯಲ್ಲಿ ಪ್ರಕಟವಾದ-‘ಮರೀಚಿಕೆ’ ಉತ್ತಮ ಉದಾಹರಣೆ. ಶಾಂತಿನಾಥ ದೇಸಾಯಿ-ಯವರ ‘ಬೇಸರ’ ಕತೆಗೂ ಇದಕ್ಕೂ ವಸ್ತುವಿನ ಆಯ್ಕೆಯ ದೃಷ್ಟಿಯಿಂದ ಹೋಲಿಕೆ ಇದೆ. ಆದರೆ ‘ಭಾವನಾದ್ರವ್ಯ’ (Sentiments) ಬೇರೆ ಆಗಿದೆ. ‘ಬೇಸರ’ ಕತೆಯಲ್ಲಿ ಆಕೆ, ಕಿಡಕಿ ಎದುರಿನ ಕರುಣನನ್ನು ಉತ್ತೇಜಿಸುತ್ತಾಳೆ. ಇಲ್ಲಿ ಈಕೆ ಒಂದು ಸಾಹಸ ಕೈಗೊಳ್ಳಬೇಕೆಂಬ ಹಠದಿಂದ ಬಸ್ಸಿನಲ್ಲಿ ಗ್ರೀಕ್ ಯೋಧನಂte ಕಾಣುತ್ತಿದ್ದವನನ್ನು ಉತ್ತೇಜಿಸುತ್ತಾಳೆ.
ದೇಸಾಯರ ಕತೆಯಲ್ಲಿ ಆಕೆ ಪಲಾಯನ ಮಾಡಿದರೆ, ಈಕೆ ತಾನು ತೀರ “ಸೋಶಿಯಲ್‌’ ಎಂಬುದನ್ನು ಸಮರ್ಥನೆಯಾಗಿ ನೀಡಲು ಸಿದ್ಧಳಿರುತ್ತಾಳೆ.
‘ಮರೀಚಿಕೆ’ ಕತೆಯ ನಾಯಕಿ, Waiting for Godot ಪುಸ್ತಕದಲ್ಲಿ ಇರಿಸಿದ್ದ ಚೀಟಿಯನ್ನ ಅವನ ಪೈಕಿಯ ಆಳು ತಂದು ಕೊಡುವಲ್ಲಿಗೆ ಕತೆ ಮುಗಿಯುತ್ತದೆ. ದೇಸಾಯ -ರ ಕತೆಯಲ್ಲಿ ಕೇವಲ ಸವಯ ಕೊಲ್ಲುವುದಕ್ಕೆ ಆಕೆ ಆಟವಾಡುತ್ತಾಳೆ. ಇಲ್ಲಿಯೋ ಆಕೆಗೆ ತಾನೆಂದು ಸಾಹಸಕಾರ‍್ಯ ಕೈಗೊಳ್ಳುವ ಹಠವೇ ಇರುವಂತಿದೆ. ಘಟನೆ, ಆಕೆಯ ನಿರೀಕ್ಷೆಗಿಂತ ಅನಿರೀಕ್ಷಿತ ತಿರುವು ಪಡೆದುಕೊಳ್ಳುವುದರಿಂದ ಅನನ್ಯ ಪರಿಣಾವಂ ಸಾಧಿತವಾಗಿದೆ. ಜೊತೆಗೆ ಹೆಣ್ಣೊಬ್ಬಳ ಮನಸ್ಸನ್ನು ಲೇಖಕಿಯಾಗಿ- ವೀಣಾ-ಚೆನ್ನಾಗಿ ಚಿತ್ರಿಸಿದ್ದಾರೆ.
ಇಷ್ಟೆಲ್ಲ ವಿಚಾರ ಮಾಡಿದ ಮೇಲೆ-ಶಾಂತಿನಾಥ ದೇಸಾಯಿಯವರ ಹಾಗೆ-ವ್ಯಕ್ತಿವ್ಯಕ್ತಿ ಸಂಬಂಧವನ್ನು ಚಿತ್ರಿಸುವುದು ವೀಣಾ-ರವರ ಮುಖ್ಯ ಧೋರಣೆ ಆಗಿರುವುದನ್ನು ಗುರುತಿಸಬಹುದು. ಸಂಬಂಧಗಳ Complexity ಅಭ್ಯಸಿಸುವ, ಆ ಬಗ್ಗೆ ಆಕಾಂಕ್ಷೆಪೂರಿತ ಆಸ್ಥೆ ತಳೆಯುವ ಧೋರಣೆ ಇವರದಾಗಿದೆ ಎನಿಸುತ್ತದೆ. ಇದು ಇವರ ‘ಮಿತಿ’ ಗೂ ಕಾರಣವಾಗಬಹುದು. ಇವರ ಕತೆಗಳಲ್ಲಿ ವ್ಯಕ್ತಿಯ ವೈಯಕ್ತಿಕ ಅನುಭವ ಮುಖ್ಯದ್ದಾಗಿ ಕಾಣುತ್ತದೆ. ವ್ಯಕ್ತಿ+ಸಮಾಜ- ಈ ಚಿತ್ರ ಸಿಗುವುದಿಲ್ಲ. ಆದರೆ ಯಾವುದನ್ನೂ ನಿರ್ಣಾಯಕವಾಗಿ ಹೇಳುವುದು ಕಷ್ಟ. ಯಾಕೆಂದರೆ, ವೀಣಾ ಪ್ರಯೋಗಗಳ ಸ್ಥಿತಿಯಲ್ಲೇ ಇದ್ದಾರೆ.
ಒಟ್ಟಿನಲ್ಲಿ ‘ಮುಳ್ಳುಗಳು’ ಸಂಕಲನದಿಂದ ಭರವಸೆ ಹುಟ್ಟಿಸಿದ್ದ ವೀಣಾ ಎಲಬುರ್ಗಿ -ಯವರು ‘ಕೊನೆಯದಾರಿ’ಯಲ್ಲಿ ಒಂದು ನೆಲಗಟ್ಟು ಹಾಕಿಕೊಳ್ಳಲಿರುವುದನ್ನು ಕಾಣುತ್ತೇವೆ.
ವೀಣಾ-ರವರ ದಿಟ್ಟತನದ ಬಗ್ಗೆ ಈ ಮೊದಲೇ ಪ್ರಸ್ತಾಪಿಸಿದ್ದೇನೆ. ಆದರೆ, ಕೇವಲ ದಿಟ್ಟತನವೇ ಗುಣವಾಗಲಾರದು- ಈ ಅಂಶ ನನ್ನ ಲಕ್ಷ್ಯ ಮೀರಿ ಹೋಗಿಲ್ಲ. ಈ ಸಂದರ್ಭದಲ್ಲಿ ಒಂದು ಅಂಶ ಗಮನಾರ್ಹ, ‘ಮುಳುಗಳು’-ಸಂಕಲನದ ಕೆಲವು ಕತೆಗಳ ನಾಯಕಿಯರು ಕನವರಿಕೆಯ, ಹಳಹಳಿಕೆಯ ಮಟ್ಟದಲ್ಲೇ ಉಳಿದು ಬಿಡುತ್ತಾರೆ. ನಿಜದಿಂದ ವಸ್ತುಸ್ಥಿತಿಯಿಂದ ಓಡಲು ಯತ್ನಿಸುತ್ತಾರೆ. ಕನವರಿಕೆಯಲ್ಲೇ ಸುಖಿಸುತ್ತಾರೆ. ಯೋಚನೆಗಳು ಕ್ರಿಯೆಯಾಗದೆ ಉಳಿಯುತ್ತವೆ. ‘ಅತಿಥಿ’ ಮತ್ತು ‘ಮುಳುಗಳು’ ಕತೆಗಳ ನಾಯಕಿಯರು ಇದೇ ಜಾತಿಗೆ ಸೇರಿದವರು. ‘ಮುಳ್ಳುಗಳು’ ಕತೆಯ ‘ದೇಸಾಯಿ’- ಆಕೆಯ ಮನಸ್ಸನ್ನು ಪೂರ್ಣವೇ ಆವರಿಸಿಕೊಂಡಿದ್ದರೂ ಆಕೆ “ಏ ಸುಳ್ಳೇ ಕಾಡಬೇಡ ಹೋಗು”…….ಎಂದು ಬಂದ ಅವಕಾಶ ಕಳೆದುಕೊಳ್ಳುತ್ತಾಳೆ. ಆದರೆ ‘ಅತಿಥಿ’ ಕತೆಯ ನಾಯಕಿ, ಈ ಸ್ಥಿತಿಯಲ್ಲಿ ಮೀರಿ ನಿಂತ ಪ್ರೌಢ ಹೆಂಗಸು. ತನ್ನ Ego ದಿಂದ ಅವಕಾಶ ತಪ್ಪಿಸಿಕೊಂಡ ಹೆಂಗಸು-ಹೀಗೆ ಇವರು ನಿರ್ಣಯ ತೆಗೆದುಕೊಳ್ಳಲಾರದೆ ಸೋಲುತ್ತಾರೆ. ಆದರೆ ‘ಕೊನೆಯ ದಾರಿ’ಯ ನಾಯಕಿ ತನಗಿಂತ ತುಂಬವೆ ಹಿರಿಯರಾದ “ಶಂಕರ ಗೌಡ’ರೊಡನೆ ಬದುಕಲು ನಿರ್ಣಯಿಸುವಲ್ಲಿ ವೀಣಾ-ರವರ ದಿಟ್ಟತನದ ಎರಡನೇ ಹೆಜ್ಜೆಯನ್ನು ಗುರುತಿಸಬಹುದು.
ಅನುಭವದ ಸಂದಿಗ್ಧತೆಯನ್ನು ಒಪ್ಪಿಕೊಳ್ಳುವ ಈ ದೃಷ್ಟಿಕೋನ ಹೊಸತಾದ್ದು. ಸಮಸ್ಯೆಯನ್ನು ಸರಳಗೊಳಿಸುವ, ಆದರ್ಶದ ಬಣ್ಣ ಹಚ್ಚುವ, ಉಪದೇಶಗಳ ಮೊಳೆ ಹೊಡೆಯುವ, ವಿಪರೀತ ಮಾತನಾಡುವ-ಅನೇಕ ಮಹಿಳಾ ಲೇಖಕಿಯರ ಪೈಕಿ, ವೀಣಾ ಎಲಬುರ್ಗಿ ತೀರಾ ಭಿನ್ನವಾಗಿ ಕಾಣುತ್ತಾರೆ. ತಮ್ಮ ಪ್ರಾಮಾಣಿಕತೆ, ಭಾಷೆಯ ಸಮರ್ಥ ಬಳಕೆ, ಈ ಕಾರಣಗಳಿಂದ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಎಲ್ಲೆಡೆ “ಹೆಂಗಸು……..ಹೆಂಗಸೇ” ಎಂತ ಮಾತು ಕೇಳುತ್ತಲೇ ಇದೆ. ಸ್ತ್ರೀ ಪಾತ್ರದ ಒಳತೋಟಿ, ಆಕೆಯವೇ ಆದ ಸರ್ವಸ್ಯೆಗಳು, ಪ್ರಸ್ತುತ ಸಾಮಾಜಿಕ ಸ್ಥಿತಿ, ಇವನ್ನು ಹೆಣ್ಣೇ ಚಿತ್ರಿಸಿದರೆ ಚೆನ್ನು. ಆದರೆ ಮಹಿಳಾ ಲೇಖಕಿಯರಿಗೆ ತಮ್ಮವೇ ಮಿತಿಗಳು ಇರುತ್ತವೆ ಎಂಬುದನ್ನು ಕಡೆಗಣಿಸುವಹಾಗಿಲ್ಲ. ಹೀಗಾಗಿ ಅಭಿವ್ಯಕ್ತಿ ಪ್ರಾಮಾಣಿಕವಾಗಿರುವುದೂ ಅಸಾಧ್ಯ. ಆದರೆ, ಹಾಗೆಂದು ಅತಿರಂಜಿತವಾಗಿ ಕತೆಗಳನ್ನು ಬರೆದು ಕೃತಾರ್ಥರಾದೆವೆಂದು ಭಾವಿಸದೆ, ಮಿತಿಗಳನ್ನು ಮೀರುವ ಪ್ರಯತ್ನಕ್ಕಾದರೂ ಮನಸ್ಸು ಕೊಡಬೇಕು.
ಇಂಥ ಸಮಯದಲ್ಲಿ ಈ ಪ್ರಯತ್ನ ನಡೆಸುತ್ತಿರುವುದರಿಂದ ವೀಣಾ-ತಮ್ಮ ಸುತ್ತ ಲೇಖಕಿಯರಿಂದ ಬೇರೆಯಾಗೇ ಕಾಣುತ್ತಾರೆ. ಕುತೂಹಲ ಹುಟ್ಟಿಸುತ್ತಾರೆ.

Close

ರೋಗಿ

ರೋಗಿ

ಎಚ್ ಎಸ್ ಭೀಮನಗೌಡರ

ಮಂದೀ ಮನೆಯಲ್ಲಿ
ತಿನಿಸು ಅಥವಾ ಊಟ ಎಂದರೆ
ನನಗೆ ದೊಡ್ಡ ಉರುಲು.

ತುಪ್ಪ ಸುರಿವಿಬಿಟ್ಟರೆ ?
ಯಾಕೆಂದರೆ, ತುಪ್ಪ ನನಗೆ ಆಗುವುದಿಲ್ಲ.
ಶಿವಶರಣರಿಗೆ ಹೇಗೆ ಮಾಂಸಾಹಾರವೋ
ಹಾಗೆ ನನಗೆ ತುಪ್ಪವು.

ಹೀಗಾಗಿ ಉತ್ಸವ-ಮುಹೂರ್ತಗಳಿಗೆ
ಹೋಗುವುದೇ ಕಡಿಮೆ,
ಹೋದರೂ ಊಟಕ್ಕಿಂತ
ತಾಟಿನಲ್ಲಿ ಕಣ್ಣಿನ ಕಾವಲು,

ತಪ್ಪಿ ಅವಸರದಲ್ಲಿ
ತುಪ್ಪ ಬಿದ್ದರೆ ಆಯಿತು
ಮೈಯೆಲ್ಲ ಜುಮ್ಮೆಂದು
ನನ್ನ ಮುಂದಿನ ಎಡೆಯನ್ನೆ
ಅನ್ಯರಿಗೆ ಸರಿಸಿದ್ದುಂಟು.
ಒಮ್ಮೊಮ್ಮೆ ಕುಡಿದ ಮಂದಿಯಲ್ಲಿ
ಒಂಟಿಯಾಗಲು ಸಂಕೋಚವೆನಿಸಿ
ಗಟ್ಟಿಜೀವ ಮಾಡಿ
ತುಪ್ಪ ಹತ್ತಿದ ತುತ್ತು ತಿಂದು
ವಾಂತಿಯಾದದ್ದೂ ಉಂಟು.

ಎಲ್ಲರೂ ಕೇಳುತ್ತಾರೆ
ನಾನು ಹೀಗೇಕೆ ಎಂದು
ಯಾಕೆಂದರೆ ಅವರು ತುಪ್ಪ ತಿನ್ನುತ್ತಾರೆ.
ನನ್ನ ನಾಲಗೆಯೇ ಹೀಗಿದ್ದಾಗ
ಏನು ಮಾಡುವುದು ಹೇಳಿ.

ಒಮ್ಮೆ ನಮ್ಮ ಸರ್ ಕರೆ ಬಂತು,
ಮನೆಗೆ ಹೋದಾಗ ಬಿಸಿ ಬಿಸಿ ಶಿರಾ!
ನೋಡಿದೆ ಹೇಸಿಕೆಯಾಯಿತು.

ಸರ್, ಇದು ತುಪ್ಪದ್ದೇ ? ಎಂದೆ.
ಯಾಕೆ ? ಎಂದರು.
ನನಗೆ ತುಪ್ಪ ಆಗುವುದಿಲ್ಲ
ತಪ್ಪಿ ತಿಂದರೆ ವಾಂತಿ ಖಂಡಿತ ಎಂದೆ
ಅದಕ್ಕೆ ನೀವು ತೆಳ್ಳಗೆ
ರೋಗಿಯಂತಿದ್ದೀರಿ; ಆಯಿತು
ಮೊದಲು ತಿನ್ನಿರಿ
ವಾಂತಿಯಾದರೆ ಅದು ತುಪ್ಪದು
ಇಲ್ಲವಾದರೆ ಅಲ್ಲ ಎಂದರು.

ನಿರುಪಾಯನಾದೆ.
ತಪ್ಪಿದ್ದಲ್ಲ ಎಂದು ಭಾವಿಸಿದೆ
ತಿಂದೆ, ಮಾತಾಡಿದೆ.
ವಾಂತಿಯ ಸುಳಿವೇ ಇಲ್ಲ.

ಸರ್‌ ಕೊನೆಗೆ ನಕ್ಕು ಹೇಳಿದರು
ನಮ್ಮ ಮನೆಯಲ್ಲಿ ಶಿರಾ ಎಂದಿಗೂ ತುಪ್ಪದು.

ನಾನೂ ತುಪ್ಪ ತಿಂದೆ!
ಹೀಗಾಗಿ ಸೋಜಿಗ, ಸಂತೋಷ, ಹೇಸಿಕೆ
ಮತ್ತೆ ನಗು.

Close

ಹಕ್ಕಿಗಳು

ಹಕ್ಕಿಗಳು

ಸಿದ್ಧಲಿಂಗ ಪಟ್ಟಣಶೆಟ್ಟಿ

ನೆನಪು ನಮ್ಮ ಕರ್ಮ. ನಾವು ಕತ್ತಲೆಯಲ್ಲಿ ಅಡಗಿದರೆ ಸೋತು ಅಪಮಾನಿತಗೊಳ್ಳುವ ನೆರಳು ಮೈಮರೆಸಿಕೊಳ್ಳಬಹುದು. ಆದರೆ ನೆನಪು ಕತ್ತಲೆಯಲ್ಲಿ, ಏಕಾಂತದಲ್ಲಿ ಇನ್ನೂ ತೀವ್ರತರವಾಗಿ ಆಕ್ರಮಣ ಮಾಡುವ ಗಂಡಭೇರುಂಡ. ಕಣ್ಣಿನ ಜ್ವಾಲೆಗಳಿಂದ ಚುಚ್ಚುತ್ತ ಜನ್ಮ ಜನ್ಮಾಂತರದ ಮಾತುಗಳನ್ನು ಮೂಡಿಸಿ ನಯವಾಗಿ ಸಾವಿನ ಸಮೀಪ ನಮ್ಮನ್ನು ಹೊತ್ತೊಯ್ಯುವ ನಯಗಾರಿಕೆ ನೆನಪಿಗೆ ಸಾಧಿಸಿದೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು ಐದಾರು ದಿನಗಳಿಂದ ಈಗ ತಾನೆ ನನ್ನ ಕಣ್ಣೆದುರಿಗೆ ಘಟಿಸಿದಂತೆ ನೆನಪಾಗುತ್ತಿವೆ. ನನ್ನ ಬೇರೆ ನೂರು ಕೆಲಸಗಳಲ್ಲಿ ಮರೆಯಲು, ತಳ್ಳಿ ಹಾಕಲು ಎಷ್ಟು ಯತ್ನಿಸಿದರೆ ಉಪಾಸಿ ನಾಗಪ್ಪ, ದೇವಿ, ಉಳಮ್ಮ ಮತ್ತೆ ಮತೆ ಚಾಟಿ ಹಿಡಿದುಕೊಂಡು ನನ್ನನ್ನು ಬೆದರಿಸಿ ತಮ್ಮ ಹಿಂದೆ ಬರುವಂತೆ ಪ್ರೇರಿಸುತ್ತಿದ್ದಾರೆ. ನಾನು ಮಂತ್ರಮುಗ್ಧನಂತೆ ಅವರ ಕಣ್ಣು ಹೊರಳಿದತ್ತ ತಂಗಾಳಿಯ ತೋಳಿಗೆ ಸಿಕ್ಕ ಹೊಗೆಯಂತೆ ಹೋಗುತ್ತಿರುವೆ.

ಕೆಳಗೇರಿಯ ಉಳಮ್ಮನ ಆಸ್ತಿಗೆ ಮಾವ ಅದೇ ವರ್ಷ ದತ್ತಕ ಹೋಗಿದ್ದ. ಗಂಡ ಸತ್ತ ಮೇಲೆ ೫-೬ ವರ್ಷಗಳವರೆಗೂ ಉಳಮ್ಮ ದತ್ತಕದ ಯೋಚನೆಯನ್ನೇ ಮಾಡಿರಲಿಲ್ಲ. ಊರಿನಲ್ಲಿಯೂ ಯಾರೂ ಅವಳನ್ನು ಒತ್ತಾಯಿಸುವ ಅಥವಾ ಅವಳಿಗೆ ತಿಳಿ ಹೇಳುವಂಥ ಸ್ಥಾನಮಾನ ಹೊಂದಿರಲಿಲ್ಲ. ಆದರೆ ಹೇಗೋ ಉಪಾಸಿ ನಾಗಪ್ಪ ಈ ಕೆಲಸವನ್ನು ತನಗೂ ತಿಳಿಯದಂತೆ ಸಾಧಿಸಿದ್ದ. ಕೆಳಗೇರಿಯಲ್ಲಿ ಓದು ಬರಹ ಬಲ್ಲವರೆಂದರೆ ಶಿವನಗೌಡರು, ನಾಗಪ್ಪ ಇಬ್ಬರೇ. ಹಣದ ದರ್ಪ ಇದ್ದವರೆಂದರೆ ಉಳಮ್ಮ ಒಬ್ಬಳೇ. ಗಂಡ ಸತ್ತರೂ ನಿರಾಶಳಾಗದೇ ಧೈರ್ಯಗುಂದದೇ ಮತ್ತೆ ಕುಟುಕುಟು ತನ್ನ ಕಿರಾಣಿ ಅಂಗಡಿಯನ್ನು ತೆರೆದಿದ್ದಳು. ದಿನಗಳೆದಂತೆ ತನ್ನ ಗಂಡ ಸತ್ತರೂ ಸತ್ತಂತೆ ತನಗೆ ಅನಿಸಿಯೇ ಇಲ್ಲವೆಂದು ಹಣೆಗೆ ಕುಂಕುಮ ಹಚ್ಚತೊಡಗಿದ್ದಳು. ಒಂದೆರಡು ದಿನ ಹೈಗರಲ್ಲಿ ಸ್ವಲ್ಪ ಗೊಂದಲ ಅವರವರ ಮನಸ್ಸಿನಲ್ಲಿಯೇ ಅನಿಸಿದರೂ ಸುಮ್ಮನಾಗಿ ಬಿಟ್ಟಿದ್ದರು. ಎಂದೂ ಮನೆಗೆ ಬರದ ಗೌಡರೂ ಒಂದೆರಡು ಸಲ ಬಂದು ಉಳಮ್ಮನಿಗೆ ಸಮಾಧಾನ ಹೇಳಿ ಹೋಗಿದ್ದರು. ನಾಗಪ್ಪ ದಿನಾ ಸಂಜೆ ೧-೨ ತಾಸು ಬಂದು ಅಂಗಡಿಯ ಮುಂಭಾಗದಲ್ಲಿ ಒಂದು ಅಂಚಿಗೆ ಒರಗಿ ಬರಹೋಗುವವರ ಕೂಡ ಆಗೊಂದು ಈಗೊಂದು ಮಾತಾಡುತ್ತ ಕೂಡುತ್ತಿದ್ದ. ಅಮ್ಮ ಒಂದು ಹಳೆಯ ಬಸಿಯಲ್ಲಿ ಎಲೆ ಅಡಿಕೆ ತಂಬಾಕ ಸುಣ್ಣ ಹಚ್ಚಿ ಇಟ್ಟು ಕೊಡುತ್ತಿದ್ದಳು. ನಾಗಪ್ಪ ಮೆಲ್ಲಗೆ ತಂಬಾಕನ್ನು ಮೆಲುಕು ಹಾಕುತ್ತ ತನ್ನ ಚಂಚಿಯನ್ನೂ ಕೈಯಲ್ಲಿಯೇ ಹಿಡಿದುಕೊಂಡು ಕೆಳಗೆ ಮುಖ ಹಾಕಿಕೊಂಡು ಸುಮ್ಮನೇ ಈಗಾಗಲೇ ಕಳೆದುಹೋಗಿದ್ದ ತನ್ನ ಜೀವನದ ೫೦-೬೦ ವರ್ಷಗಳನ್ನು ಧೇನಿಸುತ್ತಿದ್ದನೇನೋ.

ನಾಗಪ್ಪ, ಗೌಡರು ಸಲಹೆ ಮಾಡಿದ ನಂತರವೂ ಎಷ್ಟೋ ದಿನಗಳವರೆಗೆ ವಿಚಾರ ಮಾಡಿ ನಂತರ ಒಂದು ನಿರ್ಣಯಕ್ಕೆ ಬಂದ ಉಳಮ್ಮ, ನಮ್ಮ ಅಜ್ಜನ ಹತ್ತಿರ ಬಂದು ಅವನ ಒಬ್ಬ ಮಗನನ್ನು ದತ್ತಕ ತೆಗೆದುಕೊಳ್ಳುವ ತನ್ನ ಇಚ್ಛೆಯನ್ನು ವ್ಯಕ್ತಮಾಡಿದ್ದಳು. ಮೊದಲು ಇದಕ್ಕೆ ಸರ್ವಥಾ ಒಪ್ಪದ ನಮ್ಮಜ್ಜ ತನ್ನ ಕುಲ, ವಂಶದ ಸ್ಥಿತಿಗತಿಯೆಲ್ಲ ಸರಿ. ಆದರೆ ತನ್ನದೇ ರಕ್ತಸಂಬಂಧಿಯಾದ ಉಳಮ್ಮನಿಗೆ ಯಾರು ಗತಿಯೆಂದು, ತನ್ನ ನಾಲ್ವರು ಗಂಡು ಮಕ್ಕಳಲ್ಲಿ ಒಬ್ಬನನ್ನು ದತ್ತು ಕೊಟ್ಟರಾಯಿತು ಎಂಬ ನಿರ್ಣಯಕ್ಕೆ ಬಂದಿದ್ದ, ನಂತರ ಉಳಮ್ಮನ ಇಚ್ಛೆಯಂತೆ ಗುರುಪಾದಪ್ಪನನ್ನೆ ಆಯ್ಕೆ ಮಾಡಿ ಆಯ್ಕೆ ಪ್ರಕಾರ ಮಾಡಬೇಕಾದ ಎಲ್ಲ ಕಾಗದ ಪತ್ರಗಳನ್ನೂ ಮಾಡಿ ಮುಗಿಸಿದ್ದರು. ಆ ದಿನ ಎಲ್ಲರೂ ಕೂಡಿ ಒಂದು ಫೋಟೊ ಸಹ ತೆಗೆಸಿದ್ದರು. ಅದರಲ್ಲಿ ಎಲ್ಲಕ್ಕೂ ಹಿಂದೆ ಒಂದು ಸ್ಟೂಲ್‌ ಹಾಕಿ ಅದರ ಮೇಲೆ ನನ್ನನ್ನು ನಿಲ್ಲಿಸಿದ್ದು, ಆ ದಿನ ನನಗೆ ಜ್ವರ ಬಂದಿದ್ದಾದ ಮೈಯೆಲ್ಲ ಬೆವತು ಮುಖ ನಿರ್ವಿಣ್ಣವಾಗಿ ಫೋಟೋದಲ್ಲಿಯಂ ಹಾಗೆಯೇ ಮಾಡಿದ್ದು ನನಗೆ ಈಗಲೂ ನೆನಪಿದೆ.

ಬೆಳವಲದ ನನ್ನ ಸೋದರಮಾವ ಹಳ್ಯಾಳದ ಹತ್ತಿರದ ಸಹ್ಯಾದ್ರಿಯ ಈ ಚುಂಗಿನಲ್ಲಿ ಬಂದಾಗ ಮೊದಮೊದಲು ಖುಷಿಯೆನಿಸಿದರೂ ಮುಂದೆ ಅವನ ಆರೋಗ್ಯ ಈ ಹವಾಮಾನಕ್ಕೆ ಒಗ್ಗದ್ದರಿಂದ ನೊಂದುಕೊಂಡಿದ್ದ. ಮೈಮುರಿ ದುಡಿಯುತ್ತಿದ್ದ. ಹೊಲದ ಎಲ್ಲ ಕೆಲಸದ ದೇಖರೇಖೆಯನ್ನು ಫತ್ತೇಸಾಬನೇ ಮಾಡುತ್ತಿದ್ದರೂ ಮಾವ ಎರಡು ಮೂರು ದಿನಗಳಿಗೊಮ್ಮೆ ಹೊಲದ ಕಡೆ ಸುಮ್ಮನೇ ಹೋಗಿ ಬರುತ್ತಿದ್ದ. ಅದು ಆಳುಗಳ ಮೇಲೆ ಎಷ್ಟೋ ಪ್ರಭಾವ ಬೀರುತ್ತಿತ್ತು. ಉಳಮ್ಮನ ಮುಖದ ಮೇಲಿನ ಗೆಲುವಿನ ಕಳೆ ಈಗ ಇನ್ನೂ ಮದಿರವಾಗಿ ಕುಂಕುಮ ಬಹಳ ಚೆಂದವಾಗಿ ಕಾಣತೊಡಗಿತ್ತು. ಮಾವ ದಾಟನಾಳ ಬಸಪ್ಪನಿಗೆ ಹೊಲದ ಕೆಲಸದ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿ ಕೊಟ್ಟ, ಫತ್ತೇಸಾಬನಿಗೆ ಅಂಗಡಿಯ ಕೆಲಸದ ಬಗ್ಗೆ ನಿಗಾ ಇಡಲು ಕಲಿಸಿಕೊಡತೊಡಗಿದ್ದ, ೧೫ ದಿನಗಳಿಗೊಮ್ಮೆ ಸಂತೆಯಿಂದ ಸಾಮಾನು ತರುತ್ತಿದ್ದ ರೀತಿ ಬದಲಾಗಿ ಈಗ ಮಾವ ಸ್ವತಃ ಫತ್ತೇಸಾಬನನ್ನು ಕರೆದುಕೊಂಡು ವಾರಕ್ಕೊಮ್ಮೆ ಅಥವಾ ಎರಡು ಸಲ ಹೋಗಿ ಹೆಚ್ಚು ಹೆಚ್ಚು ವಿವಿಧ ಸಾಮಾನುಗಳನ್ನು ತರಹತ್ತಿದ. ಅಂಗಡಿಯ ಕಳೆ ಹೆಚ್ಚಿದಂತೆ ಅಮ್ಮನ ಮನಸ್ಸಿನಲ್ಲಿಯೂ ರಸಿಕಶಾಂತಿ ಮೂಡತೊಡಗಿತು. ಏನಾದರೂ ಆಗಲಿ, ಮನಸ್ಸು ರಸಮಯವಾಗಿದ್ದರೇ ಅಲ್ಲವೇ ಈ ಬದುಕಿಗೆ ಒಂದು ಅರ್ಥ. ಒಂದು ಬಣ್ಣ. ಒಂದು ಲಯ ಅನ್ನುವುದನ್ನು ನಾವು ಹಚ್ಚುವುದು ?

ಮನೆಯಲ್ಲಿ ಈಗ ಒಂದಿಬ್ಬರು ಆಳುಗಳೂ ಕೆಲಸಕ್ಕೆ ಬರುತ್ತಿದ್ದರು. ಉಪಾಸಿ ನಾಗಪ್ಪನ ಮಗಳು ದೇವಕಿ ಮತ್ತು ದಾಟನಾಳ ಬಸಪ್ಪನ ಹೆಂಡತಿ ಪಾರವ್ವ ದಿನಾ ಮುಂಜಾನೆ ಮತ್ತು ಸಂಜೆಗೆ ಊರ ಮುಂದಿನ ಹೊಂಡದಿಂದ ನೀರು ತಂದು ಹಾಕುತ್ತಿದ್ದರು. ಅಂಗಡಿಯ ಮುಂಭಾಗದಲ್ಲಿ ನಾಗಪ್ಪನ ಕೂಡ ಮಾತಾಡುತ್ತ ಕೂಡುವವರಿಗೂ ಮಾವನ ಜೊತೆಗೆ ಚುರಮುರಿ, ಮೇಲೆ ಹೆರಚಿದ ಹಸಿ ಕೊಬ್ಬರಿ, ಚಹ ಇತ್ಯಾದಿ ಹೊರಗೇ ಕಳಿಸಲಾಗುತ್ತಿತ್ತು. ಉಳಿದವರಿಗೆ ಅಲ್ಲೇ ತಿನ್ನಲು ಹೇಳಿ ಮಾವ, ನಾಗಪ್ಪ ಇಬ್ಬರೂ ಒಳಗಿನ ಕೋಣೆಗೆ ಬಂದು ತಿನ್ನುತ್ತಿದ್ದರು. ಅಮ್ಮ ಅವರಿಗೆ ಒಂದೊಂದು ಉಂಡಿಯನ ಬಟ್ಟಲದಲ್ಲಿಟ್ಟುಕೊಟ್ಟು ನಾಗಪ್ಪನಿಗೆ ಹಾಲು ಮತ್ತು ಮಾವನಿಗೆ ಚಹ ಹಾಕಿ ಕೊಡುತ್ತಿದ್ದಳು. ಸ್ವಲ್ಪ ಹಾಲು ಹೆಚ್ಚಿಗೆ ಹಾಕಿ ಚಹವನ್ನೇ ಕುಡಿಯುವುದು ಮಾವನಿಗೆ ಪ್ರೀತಿ. ಬರಬರುತ್ತ ಅವನ ರುಚಿ ಅರುಚಿಗಳೆಲ್ಲ ಅಮ್ಮನಿಗೂ ತಿಳಿಯತೊಡಗಿದ್ದವು.

ತಿಂಗಳು ಎರಡು ತಿಂಗಳಿಗೊಮ್ಮೆ ಅಲ್ಲಿ ಬೇಸರವಾದ ಕೂಡಲೇ ಮಾವ ಇಲ್ಲಿ ಯಾದವಾಡಕ್ಕೆ ಬಂದು ನಾಲ್ಕಾರು ದಿನ ಇದ್ದು ತನ್ನ ಸ್ನೇಹಿತರನ್ನೆಲ್ಲ ಭೆಟ್ಟಿಯಾಗಿ ತವರು ಮನೆಯಿಂದ ಹೊರಡುವ ಹೆಣ್ಣಿನಂತೆ ಮತ್ತೆ ಕೈಚೀಲವನ್ನು ಕೈಗೆತ್ತಿಕೊಂಡು ಹೊರಡುತ್ತಿದ್ದ.

ಮಳೆಗಾಲ ಮುಗಿಯುತ್ತ ಬಂದಿತ್ತು. ನಾನು, ಮಾವ ಮಾವಿನಕೊಪ್ಪದಲ್ಲಿ ಬಸ್ಸಿನಿಂದಿಳಿದು ಅತ್ತಿತ್ತ ನೋಡಿದೆವು. ನಮ್ಮನ್ನು ಕರೆದೊಯ್ಯಲು ಯಾರೂ ಬಂದ ಹಾಗೆ ಕಾಣಲಿಲ್ಲ, ಅಲ್ಲೇ ಹತ್ತಿರದ ಗುಡಿಸಲಿನಲ್ಲಿದ್ದ ಚಹದ ಅಂಗಡಿಯಲ್ಲಿ ಕೇಳೋಣವೆಂದು ಹೋದವು. ಅಂಗಡಿಯಲ್ಲಿ ಕುಳಿತ ನಾಲ್ಕಾರು ಜನರು, ಸಾವುಕಾರ ಎಲ್ಲರೂ ಎದ್ದು ನಿಂತರು. ಮಾವ ಅವರ ದೃಷ್ಟಿಯಲ್ಲಿ ಬಹು ದೊಡ್ಡ ಸಾವುಕಾರ. ಒಂದು ಕುಲವನ್ನು, ಕುಟುಂಬವನ್ನು ಮುಳುಗಡೆಯಿಂದ ಉದ್ದರಿಸಲು ಬಂದ ಬೆಳವಲದ ಮಹಾನುಭಾವ. ದೇವರ ಸಮಾನ. ಇದುವರೆಗೆ ನಮ್ಮ ದಾರಿ ನೋಡುತ್ತಿದ್ದ ಪತ್ತೇಸಾಬ ತೋಟದಲ್ಲಿ ಹೋಗಿದ್ದಾನೆ, ಈಗ ಬರುತ್ತಾನೆಂದು ಅಂಗಡಿಯವ ಹೇಳಿದ, ‘ ನಾವಿಬ್ಬರೂ ಹೊರಗೆ ಒಂದು ದಾರಿಯ ಬದಿಯಲ್ಲಿ ಕೊರೆದು ಹಾಕಿದ ತೇಗಿನ ನಾಟುಗಳ ಮೇಲೆ ಕುಳಿತು ಕೊಂಡೆವು. ಅಂಗಡಿಯ ಮಾಲಿಕ ಚಹ ಹಿಡಿದುಕೊಂಡು ಬಂದ. ನಾವು ಗುಟುಕರಿಸುವ ತನಕ ಸ್ವಲ್ಪ ದೂರದಲ್ಲೇ ನಿಂತಿದ್ದು, ಭಾರೀ ಮಳೆ ಸಾವ್ಕಾರ‍್ರೇ, ಇವತ್ತೇ ಯಾಕೋ ಭಾಳಾ ಮಗ್ರಾಗೇತಿ” ಎಂದ. ನನಗೆ ಅವನ ಮಾತುಗಳೆಲ್ಲ ವಿಚಿತ್ರವೆನಿಸಿದ್ದವು, ಮಾವ ರೊಕ್ಕ ತೆಗೆದುಕೊಂಡುವಾಗ ಅತ್ತ ಕಡೆಯಿಂದ ತಲೆ ಮೇಲೆ ಗೊರಬು ಹೊತ್ತುಕೊಂಡು ಬಂದ ಧಡೂತಿ ಆಸಾಮಿಯೇ ಫತ್ತೇಸಾಬನೆಂದು ನನಗೆ ನಂತರ ತಿಳಿಯಿತು. ಮಾವನನ್ನು ನೋಡಿ ಗೊರಬನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡ. ಮಾವ ಬಸ್ಸಿನಿಂದಿಳಿದಾಗ ತಾನು ಅಲ್ಲಿರಲಿಲ್ಲವೆಂಬ ಅಪರಾಧ ಭಾವ ಅವನ ಮುಖದಲ್ಲಿತ್ತು. ಅವನು ಹುಳು ಹುಳು ನನ್ನ ಮುಖ ನೋಡುವಾಗ ಮಾವ ನನ್ನ ಪರಿಚಯ ಹೇಳಿದ. ಫತ್ತೇಸಾಬನ ನನ್ನ ಮುಂಗೈಯಂಥ ಎರಡು ಕಪ್ಪು ತುಟಿಗಳು ಅಲುಗಿದವು. ‘ಸತ್ಯವಾನ ಸಾವಿತ್ರಿ’ಯಲ್ಲಿ ಕೋಣನ ಮೇಲೆ ಕುಳಿತುಕೊಂಡೇ ರಂಗಭೂಮಿಯ ಮೇಲೆ ಬಂದಿದ್ದ ಚಿಕ್ಕಮಠ ಗಂಗಯ್ಯನ ಯಮಧರ್ಮನ ಪಾರ್ಟು ನೆನಪಾಯಿತು. ನಂತರ ಕೆಳಗೇರಿಯಲ್ಲಿ ಫತ್ತೇಸಾಬನ ಮರಿಗಳಂತೆ ಕಾಣುವ ಗುಂಗುರು ಕೂದಲಿನ, ಗಡ್ಡಗ ಮೋರೆಯ, ಆಜಾನುಬಾಹು ದೇಹದ, ಅತ್ಯಂತ ಪ್ರಾಮಾಣಿಕರಾದ ಅನೇಕ ಧಾಂಡಿಗ ಸಿದ್ದೀ ಜನರನ್ನು ಕಂಡಾಗಲೆಲ್ಲ ಒಂದು ಥರದ ಪ್ರೀತಿಮಿಶ್ರಿತ ಭಯ ಮನಸ್ಸಿನಲ್ಲಿ ಮೂಡುತ್ತಿತ್ತು. ಫತ್ತೇಸಾಬ ಅಂಗಡಿಯವನ ಕೂಡ ಹೋಗಿ ಅಲ್ಲಿಂದ ಇನ ಎರಡು ಗೊರಬುಗಳನ್ನು ಹಿಡಿದುಕೊಂಡು ಬಂದ.

ನಾವು ನಡುವಿನ ದಾರಿಯಿಂದ ನಡೆಯುತ್ತ ಹೊರಟೆವು. ನನಗೆ ಆ ದಿಕ್ಕಿನ, ಆ ದಾರಿಯ ಪ್ರತಿಯೊಂದು ವಸ್ತುವೂ ಹೊಸದು, ಸುಂದರವಾದುದು, ಆಶ್ಚರ್ಯಪೂರ್ಣವಾದುದು. ಉತ್ತರ ಕನ್ನಡದ ಪ್ರಕೃತಿಯನ್ನು ಯಾವಾಗ ನೋಡಿದರೂ ಅದು ಸೊಬಗಿನ ಅವತಾರ. ಮಳೆಗಾಲದಲ್ಲಂತೂ ಅಲ್ಲಿಯ ಕಣಕಣವೂ ನೈಗರಾ ಧಬೆಧಬೆ. ಸುಮಾರು ಎರಡು ಫರ್ಲಾಂಗು ಮುಂದೆ ಹೋದೊಡನೆ ೧೦-೨೦ ಗುಡಿಸಲುಗಳು. ಅಡಿಕೆಯ ಸೊಗೆ, ತೆಂಗಿನ ಗರಿಗಳನ್ನು ಹೊದಿಸಿದ ಛಾವಣಿಗಳು, ಮುಂದೆ ದನಗಳು, ಕೋಳಿಗಳು, ಹುಡುಗರು, ಅರೆನಗ್ನ ಬಡಕಾಟಿ ಶರೀರಗಳು, ಅಚ್ಚರಿಯಿಂದ ನಮ್ಮತ್ತ ನೋಡುವ ಬಿರಗಣ್ಣುಗಳು.

ಗುಡಿಸಲುಗಳನ್ನು ದಾಟಿದರೆ ವಿಶಾಲ ಪ್ರದೇಶ, ಗರಿಗಳ ಹೊದಿಕೆಯ ಪ್ರಶಸ್ತ ಹನುಮಂತ ದೇವರ ಗುಡಿ. ಮುಂದೆ ಒಂದು ಓಕುಳಿ ಕುಂಡದಂಥ ತಗ್ಗು. ಆಮೇಲೆ ದೊಡ್ಡದೊಂದು ಹಜಾರದಂಥ ಭಾಗ. ಒಳಗೆ ಚಿಕ್ಕ ಗರ್ಭಗುಡಿ. ಪೂರ್ವಾಭಿಮುಖವಾಗಿ ಎದ್ದು ನಿಂತ ಭಾರೀ ಹನುಮಂತನ ಮೂರ್ತಿ. ಎರಡು ಆಳೆತ್ತರ ಸಹಜವಿದ್ದಿರಬೇಕು. ಇಷ್ಟು ದೊಡ್ಡ ಹನುಮಂತನ ಮೂರ್ತಿ ನಾನು ನೋಡಿರಲೇ ಇಲ್ಲ, ಸದಾ ನಿರಾಡಂಬರ ನಿರಾಲಂಕೃತ ಗುಡಿ. ಮೇಲೆ ದೊಡ್ಡ ದೊಡ್ಡ ತೊಲೆಗಳು. ಕೆಮ್ಮಣ್ಣಿನ ಗೋಡೆಗಳ ನಡುವೆ ಹುರಿಮಂಜು ಹಚ್ಚಿಕೊಂಡ ಹನುಮಂತ. ಇಲ್ಲಿ ನಮಸ್ಕರಿಸಿಯೇ ಮುಂದೆ ಹೋಗಬೇಕು. ಬರುವಾಗಲೂ ಹಾಗೆಯೇ ಇದು ಪದ್ಧತಿ, ಮಾವ ನನಗೆ ಎಲ್ಲ ತೋರಿಸುವಾಗ ಫತ್ತೇಸಾಬ ಮುಂದಿನ ಹಚಾರದಲ್ಲಿ ಕುಳಿತಿದ್ದ. ಏಳೆಂಟು ಬತ್ತಲೆ ಹನುವರು ನಮ್ಮನ್ನು ನೋಡಲು ಬಂದು ನಾವು ಅಸ್ಪೃಶ್ಯರೆನ್ನುವಂತೆ ದೂರ ನಿಂತಿದ್ದರು. ಗುಂಡಿಗೆ ಒಮ್ಮೆ ಪ್ರದಕ್ಷಿಣೆ ಹಾಕಿ ಬಂದು ನಾವೂ ಫತ್ತೇಸಾಬ ಕುಳಿತಲ್ಲೇ ಕೊಡಬೇಕೆಂದಾಗ ಫತ್ತೇಸಾಬ ಅಲ್ಲಿ ಕಂಬಕ್ಕೆ ಕಟ್ಟಿದ ಒಂದು ದೊಡ್ಡ ಮೊರದಲ್ಲಿ ಇಟ್ಟಿದ್ದ ಎರಡು ಚಪ್ಪಲಿಗಳನ್ನು ತೋರಿಸಿದ. ತನ್ನ ಆಜಾನುಬಾಹುಗಳಲ್ಲಿ ನನ್ನನ್ನು ಎತ್ತಿ ಹಿಡಿದಿದ್ದ, ನಾನು ಆ ಚಪ್ಪಲಿಗಳ ಆಕಾರವನ್ನು ನೋಡಿ ದಂಗುಬಡಿದೆ, ಮಾವ ದಣಿದವರಂತೆ ಕಟ್ಟೆಯ ಮೇಲೆ ಕುಳಿತಿದ್ದ, ಫತ್ತೇಸಾಬನ ಚಪ್ಪಲಿಗಳಿಗಿಂತ ಸುಮಾರು ೫-೬ ಪಟ್ಟು ದೊಡ್ಡ, ದಪ್ಪ ಚರ್ಮದ ಚಪ್ಪಲಿಗಳು, ಪ್ರತಿವರ್ಷ ಜಾತ್ರೆಯ ದಿನ ಇಲ್ಲಿ ಇಂಥ ಎರಡು ಹೊಸ ಜೋಡುಗಳನ್ನು ಮಾಡಿ ಇಡುತ್ತಾರಂತೆ. ಪ್ರತಿ ದಿನ ರಾತ್ರಿ ಹನುಮಂತ ಇವನ್ನು ಮೆಟ್ಟಿಕೊಂಡು ಈ ಪ್ರದೇಶದಲ್ಲೆಲ್ಲ ಆಡ್ಡಾಡುತ್ತಾನಂತೆ. ಆಗ ಅವನು ಯಾರ ಕಣ್ಣಿಗೆ ಬೀಳುವುದಿಲ್ಲ, ಯಾವ ಅನಾಹುತ, ದೆವ್ವ ಭೂತಗಳ ಅವನ ಕಣ್ಣಿಗೆ ಬೀಳುವುದಿಲ್ಲ. ಈ ರೀತಿ ಇಲ್ಲಿಯ ಜನರ ಜೀವಾಳ, ರಕ್ಷಕ ಈ ಭಗವಂತ. ನಾನೂ ನೋಡಿದೆ, ಆವು ಹೊಚ್ಚ ಹೊಸ ಜೋಡುಗಳೇ ಆಗಿದ್ದರೂ ಸವೆಯದಂತೆಯೂ ಕಾಣಿಸಿದವು. ನನ್ನ ತಲೆ ತುಂಬ ಹನುಮಂತನ ಜೋಡುಗಳು. ಅವನ್ನು ಮುಟ್ಟಿ ನಮಸ್ಕರಿಸಿದೆ.

ಈ ದಾರಿಯಲ್ಲಿ ಬಂದಾಗಲೆಲ್ಲ ಇಲ್ಲಿ ತಪ್ಪದೇ ಬಂದು ಹೋಗುತ್ತಿದ್ದೆ. ಹನುಮ ಜಯಂತಿಗೆ ಜಾತ್ರೆಯ ದಿನಗಳಲ್ಲಂತೂ ಇಲ್ಲಿ ಸುತ್ತಮುತ್ತಲಿನ ಹಳ್ಳಿಯ ಜನರೆಲ್ಲ ಸೇರುತ್ತಾರೆ. ಮುಂದಿನ ಕುಂಡದ ತುಂಬ ಬಣ್ಣದ ಓಕುಳಿ ಸಿದ್ದಪಡಿಸಿ ಆಡುತ್ತಾರೆ. ಮತ್ತೆ ಮತ್ತೆ ನೀರು, ಬಣ್ಣ ಸೇರಿಸಿ ಅದು ಕಡಿಮೆಯಾಗದಂತೆ ಮಾಡುತ್ತಾರೆ. ಬದಿಯಲ್ಲಿ ಸಂಜೆ ಆರು ಗಂಟೆಯ ಹೊತ್ತಿಗೆ ದೊಡ್ಡ ದೊಡ್ಡ ನಾಟುಗಳನ್ನು ತಂದು ಉರಿ ಹಚ್ಚುತ್ತಾರೆ. ರಾತ್ರಿ ಹತ್ತು ಹತ್ತೂವರೆಯ ಹೊತ್ತಿಗೆ ಅವೆಲ್ಲ ಸುಟ್ಟು ನಿಗಿನಿಗಿ ಕೆಂಡವಾಗುತ್ತವೆ. ಆಗ ಉರಿಗೆ ಪೂಜೆ ಸಲ್ಲಿಸಿ, ಕಾಯಿ ಒಡೆದು, ಮೊದಲು ಪೂಜಾರಿ ಆ ಬೆಂಕಿಯಲ್ಲಿ ಮೂರು ಬಾರಿ ಜಿಗಿಯುತ್ತ ಓಡಿದ ನಂತರ ಅದಕ್ಕಾಗಿಯೇ ಕಾಯುತ್ತ ನಿಂತಿದ್ದ ಜನರು ಹಾಗೆ ಮಾಡತೊಡಗುತ್ತಾರೆ. ಆ ಕಡೆಯಿಂದ ಓಡುತ್ತ ಬಂದು ಕೆಂಡದಲ್ಲಿ ಹಾದು ಓಡಿ, ಜಿಗಿದು ಈಚೆಗೆ ಬರಬೇಕು, ಹೆದರಬಾರದು. ಹೆದರಿದರೆ ಹನವಂತನ ತೇಜಸ್ಸು ಕಾಲನ್ನು ಸುಡುತ್ತದೆ. ಹೀಗೆ ಮೂರು ಸಲ ಮಾಡಿ ಕುಂಡದಲ್ಲಿ ಕಾಲದ್ದಬೇಕು, ಮಾರು ಸಲ ಓಡಿ ಹೀಗೆ ಮಾಡದಿದ್ದರೆ ಮೂರು ವರ್ಷ ಜಾತ್ರೆಯ ಹೊತ್ತಿಗೆ ತಪ್ಪದೇ ಬಂದು ಹೀಗೆ ಮಾಡಬೇಕಾಗುತ್ತದೆಂದು ಫತ್ತೇಸಾಬ ನಾನು ಒಂದು ಸಲ ಮಾತ್ರ ಓಡಿ ಹೆದರಿ ನಿಂತಾಗ ಜಾತ್ರೆಯ ರಾತ್ರಿ ಹೇಳಿದ್ದ. ಈಗ ಫತ್ತೇಸಾಬ, ಮಾವಿನಕೊಪ್ಪ, ಹನುಮಂತ, ಬೆಂಕಿ ಏನು ಇಲ್ಲಿರದಿದ್ದರೂ ನನ್ನ ಒಳಗಣ್ಣೆದುರು ಬೆಂಕಿ ಉರಿಯುತ್ತಿದೆ. ಮುಂದೆ ಒಂದು ಸಲವೂ ನಾನು ಹಾಗೆ ಮಾಡಲಿಲ್ಲವೆಂದು ಆ ಅಗ್ನಿ ಅಲ್ಲಿಂದ ಇಲ್ಲಿ ನಾನಿರುವಲ್ಲಿ ತನಕ ಹೊತ್ತಿ ಉರಿಯುತ್ತಿದೆ. ಹನುಮಂತನ ಚಪ್ಪಲಿಗಳು ಇನ್ನೂ ಉದ್ದ ಅಗಲ ದಪ್ಪವಾಗುತ್ತ ನಾನು ಆ ಚಪ್ಪಲಿಗಳ ಬರೇ ಒಂದು ಉಂಗುಷ್ಠದ ಪಟ್ಟಿಯಾಗ ತೊಡಗಿದ್ದೇನೆ. ಇವೆಲ್ಲ ಇಂದು ನನ್ನನ್ನು ಹೀಗೇಕೆ ಕಾಡುತ್ತಿವೆ?

ಗುಡಿಯಿಂದ ನಾವು ಹರಡುವ ಹೊತ್ತಿಗೆ ಮೊದಲೇ ಕವಿದಿದ್ದ ಮೋಡಗಳು ಇನ್ನೂ ಕಪ್ಪಾಗಿ ಧೋಧೋ ಎಂದು ಸುರಿಯತೊಡಗಿದವು, ಸಾಗವಾನಿ ಎಲೆಗಳ ಮೇಲೆ ಬೀಳುವ ಹನಿಗಳ ರಪರಪ್ಪ ಸಪ್ಪಳ ಭಯತರಿಸುವಂತಿತ್ತು. ಇದೇನು ನಿಲ್ಲುವ ಮಳೆಯಲ್ಲ, ಹೊರಟೇ ಬಿಡೋಣವೆಂದು ಗೊರಬುಗಳನ್ನು ಹೊತ್ತುಕೊಂಡು ನಡೆಯತೊಡಗಿದೆವು. ಮುಂದೆ ದೊಡ್ಡ ಕೆರೆಯ ದಂಡೆಯ ಒಡ್ಡಿನ ಮೇಲೆ ನಡೆಯಬೇಕು. ಕೆರೆಯ ಭವ್ಯತೆ ಮತ್ತು ಮೊಟ್ಟಮೊದಲ ಸಲ ನಾನು ನೋಡಿದ ಅಲ್ಲಿಯ ಕೆಂಪು ಕಮಲಗಳ ಸೌಂದಯ್ಯ ಈಗಲೂ ಅಚ್ಚಳಿಯದಿದೆ. ಎಡಕ್ಕೆ ಕೆರೆ, ಬಲಕ್ಕೆ ಆಳವಾದ ಕೊಳ್ಳದ ಹಾಗೆ ಕಾಣುವ ದಟ್ಟ ಅಡವಿ. ಎತ್ತರೆತ್ತರ ಮರಗಳು, ಜೀಂಯ್‌ ಎಂದು ಸಾವು ನರಳಿದಂತೆ ಸಪ್ಪಳ. ಕಲ್ಲೊಡ್ಡನ್ನು ಮೆಟ್ಟಿಲುಗುಂಟ ಇಳಿದು ಹತ್ತಿ ಮತ್ತೆ ಒಡ್ಡಿನ ಮೇಲೆ ಇನ್ನಷ್ಟು ನಡೆದು ಬಲಕ್ಕೆ ಹೊರಳಿ ಕಾಲುವೆಗುಂಟ ಹೋಗಬೇಕು. ನನಗಂತೂ ವಿಪರೀತ ಹೆದರಿಕೆ. ಮೇಲೆ ಮಳೆಯಿದ್ದರೂ ಫತ್ತೇಸಾಬ ತನ್ನ ಗೊರಬನ್ನು ಬಲಗೈಯಲ್ಲಿ ಹಿಡಿದುಕೊಂಡು ಮಾವನ ಕೈಚೀಲವನ್ನು ಬಗಲಿಗೆ ಜೋತು ಬಿಟ್ಟುಕೊಂಡು, ನನ್ನನ್ನು ಹೆಗಲಮೇಲೆ ಹತ್ತಿಸಿಕೊಂಡು ಈ ‘ಕುತ್ತು’ ಗಳನ್ನು ಪಾರು ಮಾಡಿಸಿದಾಗ, ಶಿವಬಸೂ ನನ್ನ ನೋಟು ಬುಕ್ಕಿನಲ್ಲಿ ತೆಗೆದುಕೊಟ್ಟಿದ್ದ, ಹೆಗಲ ಮೇಲೆ ರಾಮ ಲಕ್ಷ್ಮಣರನ್ನು ಹತ್ತಿಸಿಕೊಂಡು ಹೋಗುವ ಹನುಮಂತನ ಚಿತ್ರ ನೆನಪಾಯಿತು. ಒಡ್ಡಿನಾಚೆಗೆ ಕೋಡಿಯ ಹತ್ತಿರ ಫತ್ತೇಸಾಬ ನನ್ನನ್ನು ಇಳಿಸಿದ. ಕಾಲು ಜಾರದಂತೆ ಸಾವಕಾಶ ಗಟ್ಟಿ ಹೆಜ್ಜೆಯಿಕ್ಕುತ್ತ ನಡೆಯತೊಡಗಿದವು. ಕಾಲುದಾರಿಯ ಬಲಕ್ಕೆ ಕಾಲುವೆಯ ಗುಂಟ ಕೆರೆ ತುಂಬಿ ಹೆಚ್ಚಾಗಿ ಹರಿವ ನೀರು ಗುಡ್ಡದ ನೀರೆಲ್ಲ ಜಮಾ ಆಗಿ ಇನ್ನೂ ಜೋರಾಗಿ ಕುಣಿಯುತ್ತ ಸಾಗುತ್ತಿತ್ತು. ಗಿಡಗಳ ಎಲೆಗಳ ಮೇಲಿಂದ ಬೀಳುವ ಹನಿಗಳೂ ಸೇರಿ ಮಳೆ ಇನ್ನೂ ಜೋರಾದಹಾಗೆ. ಮುಂದೆ ನಮಗೆ ಅಡ್ಡವಾಗಿ ಹರಿದ ಒಂದು ಚಿಕ್ಕ ಹಳ್ಳ. ಫತ್ತೇಸಾಬ ನನ್ನನ್ನೆತಿ ಆಚೆ ದಂಡೆಗಿಳಿಸಿ ಬಂದು ಮಾವನ ಕೈ ಹಿಡಿದುಕೊಂಡು ದಾಟಿಸಿದ. ಅವನ ಮಾತು ಅಷ್ಟಕ್ಕಷ್ಟೆ. ನಾನೇ ಅಲ್ಲಿಯ ಮರ, ಬಳ್ಳಿ, ಕಲ್ಲುಗಳ ಬಗ್ಗೆ ಕೇಳುತ್ತ ಸಾಗಿದ್ದೆ. ಒಂದು ಬೇರೆಯದೇ ಲೋಕವನ್ನು ಹೊಕ್ಕಂತೆ.

ಅಡವಿಯನ್ನು ದಾಟಿದ ಕೂಡಲೇ ಎದುರಿಗೊಂದು ದೊಡ್ಡ ಹೊಂಡ. ಇಲ್ಲಿಯೂ ಕಮಲಗಳಿವೆ, ಆದರೆ ಆ ಕಡೆಯ ಒಂದೇ ಮೂಲೆಯಲ್ಲಿ. ಇದೇ ಕೆಳಗೇರಿಯ ಜನರು ನೀರು ತುಂಬುವ ಹೊಂಡ. ನನಗೆ ಆಶ್ಚರ್ಯ. ಒಮ್ಮೆಲೇ ಜಾದೂ ಮಾಡಿದ ಹಾಗೆ ಅಡವಿಯ ಪರದೆಯನ್ನು ಸರಿಸಿದ ಕೂಡಲೇ ಎದುರಾದ ಈ ಕೆರೆ. ಬಲಬದಿಯ ಗುಡಿಸಲುಗಳು. ಕಚಪಚ ಹುದುಲಿನಲ್ಲಿ ಹುಗಿಯುವ ಕಾಲಂಗಳನ್ನು ಎತ್ತಿ ಇಡುತ್ತ ಮನೆ ತಲುಪಿದೆವು.

೨-೩ ದಿನಗಳಲ್ಲಿ ನಾನು ಮಾವನ ಕೂಡ ಇಡೀ ಊರನ್ನೇ ಸುತ್ತಿಹಾಕಿದೆ. ಒಂದು ದಿನ ಗೌಡರ ಮನೆ, ಮರುದಿನ ಫತ್ತೇಸಾಬನ ಮನೆ, ದಾಟನಾಳ ಬಸಪ್ಪನ ಮನೆ, ಹಾಳು ಬಿದ್ದ ಗರಡೀ ಮನೆಯ ಬದಿಯಲ್ಲಿ ತೊಯ್ಸಿಕೊಳುತ್ತ ನಿಂತಿದ್ದ ಆರ್ಧ ತೇರು. ಯಾವ ದೇವರದೋ ಈಗ ನೆನಪಾಗುತ್ತಿಲ್ಲ. ಊರಲ್ಲಿ ಗೌಡರ ಮನೆ, ಉಳಮ್ಮನ ಮನೆ ಮತ್ತು ಇನ್ನೊಂದೆರಡು ಮನೆಗಳು ಮಾತ್ರ ಮಣ್ಣಿನವು. ಗೌಡರ ಮನೆಯೊಂದೇ ಅಂತಸ್ತಿನದು. ಉಳಿದವೆಲ್ಲ-ಹುಲ್ಲು, ಕರ‍್ಡ ಅಥವಾ ಸೋಗೆ ಹೊದಿಸಿದ ಗುಡಿಸಲುಗಳು. ೩-೪ ಮನೆಗಳು ಮಾತ್ರ ಕರೇ ಹೆಂಚಿನವು.

ನನ್ನ ಕುತೂಹಲ ಇಷ್ಟು ಬೇಗ ಎಲ್ಲರನ್ನೂ ಗುರುತು ಮಾಡಿಕೊಂಡಿತ್ತು. ಹೋದ ಮರುದಿನ ಮುಂಜಾನೆಯೇ ನಾನು ಮೊದಲ ಸಲ ನಾಗಪ್ಪನನ್ನು ಕಂಡಿದ್ದು. ಇವನಬ್ಬ ಜಾಣ, ಬುದ್ಧಿವಂತ, ವ್ಯವಹಾರಸ್ಥ, ಸುಂದರ ಮುದುಕ ಎಂದು ನೋಡಿದರೇ ತಿಳಿಯುತ್ತಿತ್ತು. ಅವನ ದೊಡ್ಡ ದೊಡ್ಡ ಕಣ್ಣುಗಳ ಆಕರ್ಷಣೆ ಅತ್ಯಂತ ಮೋಹಕವಾದುದು. ನನಗೆ ಇನ್ನೂ ಆಶ್ಚರ್ಯವಾದದ್ದು ಅವನ ದೊಡ್ಡ ದೊಡ್ಡ ಉದ್ದ ಕಾಲು, ಪಾದಗಳನ್ನು ನೋಡಿ. ಎಲ್ಲಕ್ಕೂ ಮುಂದಿನ ಹೊಸ್ತಿಲದ ಒಳಬದಿ ಎಡ ಮೂಲೆಯಲ್ಲಿ ಬಿಟ್ಟಿದ್ದ ಅವನ ಮೆಟ್ಟುಗಳ ಆಕಾರ ನೋಡಿ ಮಾವಿನಕೊಪ್ಪದ ಹನುಮಂತನ ಕಾಲ್ಮರಿಗಳೂ ಕ್ಷಣಕಾಲ ಮರೆತು ಹೋಗಿದ್ದವು. ಊರಿನ ಬಗ್ಗೆ. ವ್ಯಾಪಾರದ ಬಗ್ಗೆ ಮಾವನನ್ನು ಅವನು ಸಹಜವಾಗಿ ಪ್ರೀತಿಯಿಂದ ಪ್ರಶ್ನೆ ಕೇಳಿದರೂ ಒಂದು ರೀತಿಯ ದರ್ಪ ಅಥವಾ ಅಧಿಕಾರದ ಗಂಧ ಆ ಮಾತುಗಳಿಂದ ಚಿಮ್ಮುತ್ತಿತ್ತು.

ನಾಗಪ್ಪ-ಉಪಾಸಿ ಅವರ ಮನೆ ಹೆಸರ-ಹೇಗೆ ಯಾವ ಸಂಬಂಧವೂ ಇರದೆ ಊರಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನೆಂಬುದೇ ಅರ್ಥವಾಗುತ್ತಿರಲಿಲ್ಲ. ಆ ಊರಿನಲ್ಲಿ ಅವನ ಮನೆಯೂ ಇರಲಿಲ್ಲ. ಊರನ್ನು ಬಿಟ್ಟು, ಹೊಂಡದ ಎಡಬದಿಯಿಂದ ಹೋದರೆ ದೊಡ್ಡ ದೊಡ್ಡ ಕಲ್ಲುಬಂಡೆಗಳಿಂದ ತುಂಬಿದ ಹುಲ್ಲಗಾವಲನ್ನು ದಾಟಿ ಇಳಿದರೆ ಗದ್ದೆಗಳ ನಡುವೆ ಆರೇಳು ಮನೆಗಳಿವೆ. ನಡುವಿನದೇ ನಾಗಪ್ಪನ ಮನೆ. ದೊಡ್ಡ ಮನೆ. ಕೆಳಗೇರಿಯಿಂದ ಸುಮಾರು ಒಂದು ಮೈಲಿನಷ್ಟು ದೂರ. ಅಲ್ಲಿಯ ತನಕ ನಡೆಯುವುದೇ ಒಂದು ಆನಂದ. ನಮ್ಮ ಮಾವನ ಗದ್ದೆಗಳಿಗೆ ಹೋಗಲೂ ಇದೇ ದಾರಿ. ದಿನಾಲು ಮುಂಜಾನೆ ಹೊರಕಡೆಗೆ ಹೋಗಲು ಸ್ವಲ್ಪ ತಡ ಮಾಡಿ ನಾನು, ಮಾವ ಈ ದಾರಿಯಲ್ಲಿಯೇ ಹೋಗಿ ಕಲ್ಲುಬಂಡೆಗಳನ್ನು ಬಳಸಿ, ಬಣ್ಣ ಬಣ್ಣದ ಹಕ್ಕಿಗಳನ್ನು ನೋಡುತ್ತ ಏನಿಲ್ಲವೆಂದರೂ ಒಂದೆರಡು ತಾಸು ಕಳೆದು ಬರುತ್ತಿದ್ದೆವು. ನಾಗಪ್ಪ ಈಚೆಗೆ ಬರುತ್ತಿದ್ದರೆ ದಾರಿಯಲ್ಲೇ ಸಿಗುತ್ತಿದ್ದ. ಒಂದು ದಿನ ನಾವಿಬ್ಬರ ಅವನ ಮನೆಗೇ ಹೋದೆವು. ನಾವು ಬಂದದ್ದು ಅವನಿಗೆ ಅಚ್ಚರಿಯೆನಿಸಿದರೂ ಅವನ ಕಣ್ಣುಗಳಲ್ಲಿ ಆನಂದ ತೇಲುತ್ತಿತ್ತು.

ನಾಗಪ್ಪ ಹಣವಂತನಲ್ಲದಿದ್ದರೂ ಬಡವನೂ ಅಲ್ಲ, ಮನೆಯಲ್ಲಿ ಅವನ ಹೆಂಡತಿ, ವಿಧವೆ ಮಗಳು ದೇವಕಿ, ಅವಳೇ ಉಳಮ್ಮನ ಮನೆಯಲ್ಲಿ ನೀರು ತುಂಬುತ್ತಿದ್ದಳು. ನೋಡಲು ಮೈ ತುಂಬಿಕೊಂಡಿದ್ದಳು. ನಾಗಪ್ಪನಿಗಿಂತ ಹಣ್ಣಾಗಿದ್ದಳು ಅವನ ಹೆಂಡತಿ. ಭತ್ತದ ಕಣಜ, ಅಟ್ಟದ ಮೇಲೆಯ ಒಂದೆರಡು ಅಕ್ಕಿ ಚೀಲಗಳು. ಹರವಿದ ಅಡಕೆ ಬೆಟ್ಟೆಗಳು ನೆಲವುಗಳಲ್ಲಿ ಮಗ್ಗೆ ಕಾಯಿಗಳು ನೇತಾಡುತ್ತಿವೆ. ೩-೪ ದೊಡ್ಡ ಕುಂಬಳಕಾಯಿಯನ್ನು ಮೂಲೆಯಲ್ಲಿ ಒಟ್ಟಿದ್ದಾರೆ. ಹಿತ್ತಲದಲ್ಲಿ ಅನೇಕ ಹೂ ಗಿಡಗಳು. ಗಜನಿಂಬೆ, ಬಾಳೆ, ಹಲಸು, ಮಾವಿನ ಮರಗಳು, ನಾಗಪ್ಪನ ಹಿತ್ತಲದ ವಿಶಾಲ ತೋಟಕ್ಕೆ ಹೊಂದಿಕೊಂಡೇ ಆಚೆ ಅಂಚಿನಲ್ಲಿ ಹಳ್ಳ, ಮಳೆಗಾಲದ ದಿನಗಳಲ್ಲಿ ಒಮ್ಮೊಮ್ಮೆ ಅರ್ಧ ಹಿತ್ತಲದ ತನಕ ಏರಿ ಬರುವ ಆದರೆ ಯೌವ್ವನ. ಹಿತ್ತಲದ ಮನೆ ಗೋಡೆಗೆ ಹತ್ತಿದ ಒಂದು ಮೂಲೆಯಲ್ಲಿ ವಿವಿಧ ಗಿಡಮೂಲಿಕೆಗಳು. ಅಲ್ಲೇ ಚಪ್ಪರದಲ್ಲಿ ಮೂಲಿಕೆಗಳನ್ನು ಅರೆಯುವ ಕಲ್ಲು, ಹಾರಿ, ಚಾಕು, ಕತ್ತರಿ, ನೀರಿನ ಕಲ್ಲಬಟ್ಟಲ. ಅದರ ಹಿಂದೆಯೇ ಒಣ ಕಟ್ಟಿಗೆಗಳು, ಒಂದು ಸಣ್ಣ ಕುಳ್ಳಬಾನ. ಒಮ್ಮೆ ದೃಷ್ಟಿ ಹಾಸಿದರೂ ಯಾರೂ ಮೆಚ್ಚಬಹುದಾದಂಥ ಓರಣ, ಸ್ವಚ್ಛತೆ ಮನೆಯಲ್ಲಿ, ನಾಗಪ್ಪನ ಮಾತಿನಂತೆಯೇ.

ಮುಂದಿನ ಕೋಣೆಯಲ್ಲಿದ್ದ ನಾಗಪ್ಪ ನಾವು ಹಿತ್ತಲದಲ್ಲೇ ಇರುವಾಗ ಬಂದ. “ಎಲ್ಲಾ ನೋಡಿದ್ರೇನು’ ಎನ್ನುತ್ತ ನಮ್ಮನ್ನು ತನ್ನ ಕೋಣೆಗೆ ಕರೆತಂದ, ಈ ಹಳ್ಳಿ ಗಾಡಿನ ಮನೆಯ ಕೋಣೆಯಲ್ಲಿ ಒಟ್ಟಿದ ಅನೇಕ ಪುಸ್ತಕಗಳನ್ನು ನೋಡಿ ಆನಂದವಾಯಿತು. ಪ್ರೇಮ ವಿವಾಹ, ರತಿಸುಖ, ಸಂಭೋಗಸಾರ, ಗಣಿಕಾ ವಿಚಾರ, ಪಂಚಾಂಗಗಳು, ಸಿದ್ಧಾಂತಪ್ರಶ್ನೆ, ಚೂಡಾಮಣಿ, ವಶೀಕರಣವಿದ್ಯೆ, ಮೋಡಿಲಿಪಿಯಲ್ಲಿ ಬರೆದ ೫-೬ ಪುಸ್ತಕಗಳು, ಅತ್ಯಂತ ತೆಳ್ಳನೆ ಹಾಲು ಕಾಗದಗಳು, ಕೆಲವು ಸಂಗೀತ ನಾಟಕಗಳ ಸಚಿತ್ರ ಪುಸ್ತಕಗಳು ಅಲ್ಲಿದ್ದವು. ಗೋಡೆಯ ಮೇಲೆ ನಟರಾಜ, ದುರ್ಗೆ, ಲಕ್ಷ್ಮಿಯರ ಚಿತ್ರಗಳಿಗೆ ಮಾಲೆ ಹಾಕಿ, ಕುಂಕುಮ ಹಚ್ಚಿ, ಊದಿನಕಡ್ಡಿ ಹಚ್ಚಲಾಗಿತ್ತು. ಅದೇ ಆಗ ಪೂಜೆ ಮುಗಿದ ಹಾಗಿತ್ತು. ದೇವೀ ಚಿತ್ರದ ಕೆಳಗಿನ ಕರಂಡಕದಲ್ಲಿ ಕೆಲವು ತೆಳುವಾದ ದಪ್ಪಗಾದ ತಾಮ್ರದ ತಗಡುಗಳು.

ನಾಗಪ್ಪ ಇವೆಲ್ಲವನ್ನೂ ಓದಿದ. ಇಂಥವನ್ನು ಓದಿ ಇವನ್ನು ಪ್ರಯೋಗಿಸುವ ಜಾಣ್ಮೆಯನ್ನು ಹೊಂದಿದ ಏಕಮಾತ್ರ ಬುದ್ದಿವಂತನೆಂದು ಖ್ಯಾತಿ ಪಡೆದಿದ್ದ. ಸ್ವತಃ ಗೌಡರ ಹೆಂಡತಿಗೆ ಬಡಿದ ದೆವ್ವವನ್ನು ದಿನಾಲು ಅವಳನ್ನು ಏಕಾಂತದಲ್ಲಿ ಗೌಡರ ಮನೆಯಲ್ಲೇ ಸಂಧಿಸಿ ಬಿಡಿಸಿದವನು ನಾಗಪ್ಪನೇ. ಮಲ್ಲಾಡದ ಎಷ್ಟೋ ಭೂತ ಬಿಡಿಸುವವರು ಪ್ರಯತ್ನ ಮಾಡಿದರೂ ಇದು ಸಾಧ್ಯವಾಗಿದ್ದಿಲ್ಲ. ದಾಟನಾಳ ಬಸಪ್ಪನಿಗೆ ಮಕ್ಕಳೇ ಆಗಿರಲಿಲ್ಲವಂತೆ, ಯಾವ ದೇವರಿಗೆ ಹರಕೆ ಹೊತ್ತರೂ ಆಗಿರಲಿಲ್ಲ, ಉಳಮ್ಮನ ಸಲಹೆಯಂತೆ ಬಸಪ್ಪ ನಾಗಪ್ಪನನ್ನು ಕಂಡ ನಂತರವೇ ಅವನು ಮಂತ್ರಿಸಿಕೊಟ್ಟ ತಾಯತವನ್ನು ಕಟ್ಟಿ ಕೊಂಡು, ಹೊಂಡದ ಮೇಲಿನ ಅರಳಿಮರಕ್ಕೆ ಪೂಜೆ ಸಲ್ಲಿಸಿ ದಿನಾಲು ನಸುಕಿನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಐದು ಸಲ ಪ್ರದಕ್ಷಿಣೆ ಹಾಕಿದ ಮೂರು ತಿಂಗಳಲ್ಲೇ ಅವಳ ಮುಟ್ಟು ನಿಂತಿತಂತೆ ಈಗ ಬಸಪ್ಪನಿಗೆ ಒಬ್ಬ ಮಗಳಿದ್ದಾಳೆ. ಫತ್ತೇಸಾಬನ ಮನೆಯಲ್ಲಿ ದನಗಳಿಗೆ ಉಳಿಗಾಲವೇ ಇಲ್ಲವೆಂದು ತಿಳಿಯಲಾಗಿತ್ತು. ನಾಗಪ್ಪ ಮಂತ್ರಿಸಿ ಕೊಟ್ಟ ಕಾಯನ್ನು ಹಕ್ಕೆಯಲ್ಲಿ ಕಟ್ಟಿ, ನಿಂಬೆಕಾಯನ್ನು ಕೊಣನ ಕಾಲಿಂದ ತುಳಿಸಿ, ಮಂತ್ರಿತ ಜಲವನ್ನು ದಿನಾಲು ಇಸಗೊಂಡು ಬಂದು ಮನೆ ತುಂಬೆಲ್ಲ ಸಿಂಪಡಿಸುತ್ತ ಹೋದನಂತೆ. ನಂತರ ಯಾವ ಪ್ರಾಣಿಗಳಿಗೂ ಧಕ್ಕೆ ತಟ್ಟಲಿಲ್ಲ. ಗಪ್ಪತಿ ಹೆಗ್ಗಡೆಯ ಆಕಳ ಹಿಂಡುವುದನ್ನೇ ನಿಲ್ಲಿಸಿತ್ತು, ಅದಕ್ಕೂ ತನ್ನ ಮಾಟದ ಪ್ರಭಾವದಿಂದ ಒಳ್ಳೆಯದಾಗುವಂತೆ ಮಾಡಿದವನು ನಾಗಪ್ಪನೇ. ಅವನು ಇಂಥ ಆನೇಕ ಪವಾಡಗಳಿಂದ ಅಕಸ್ಮಾತ್ತಾಗಿಯೇ ಆ ಊರಿನ ಅನಭಿಷಿಕ್ತ ದೊರೆಯಾಗಿದ್ದ.

ನಾಗಪ್ಪನ ಮಗಳು ಬಾಳೆಕಾಯಿಗಳನ್ನು ಹೆಚ್ಚಿ ಕರಿದ ಗಾಲಿಗಳು, ಅಕ್ಕಿಯ ಹಪ್ಪಳ, ಹಾಲಿನ ಲೋಟಗಳನ್ನು ತಂದಿಟ್ಟು ಸುಮ್ಮನೆ ಒಳಗೆ ನಡೆದುಬಿಟ್ಟಳು. ಮಾವ ಪಿಳಿಪಿಳಿ ಕಣ್ಣು ಬಿಟ್ಟು ನೋಡುತ್ತಿರುವಾಗಲೇ ನಾನು ನೀರು ಬೇಕು ಎಂದೆ. ನಾಗಪ್ಪ ತಾನೇ ಹೋಗಿ ಚರಿಗೆಯಲ್ಲಿ ನೀರು ತಂದ. ಆಮೇಲೆ ನೆನಪಾಯಿತೇನೊ, ದೇವಕಿ ಇನ್ನೊಂದು ಲೋಟದಲ್ಲಿ ಮಾವನಿಗಾಗಿ ಚಹ ತಂದಿಟ್ಟಳು. ನಾವು ಬಾಳೆಗಾಲಿ, ಹಪ್ಪಳ ತಿಂದೆವು. ನಾನೇ ಎರಡು ಲೋಟ ಹಾಲು ಗುಟುಕರಿಸಿದೆ. ಸ್ವಲ್ಪ ತಡೆದು ಏನೋ ವಿಚಾರಿಸಿ ಸುಮ್ಮನೆ ಎದ್ದು ನಿಂತು ಎಲ್ಲ ಪ್ರಸ್ತಕಗಳ ಮೇಲೆ ಹಾಗೆಯೇ ದೃಷ್ಟಿ ಹರಿಸಿ `ವಶೀಕರಣ ವಿದ್ಯೆ’ಯ ಮೇಲೆ ಕೈಯಿಟ್ಟು, ‘ಒಂದ ಪುಸ್ತಕಾ ಓದಾಕ ತೊಗೊಳ್ಳಲ್ಯಾ ?” ಎಂದೆ. ‘ಹಂಗೆಲ್ಲ ಮುಟ್ಬಾರ್ದು. ನೀ ಇನ್ನುs ಸಣ್ಣ ಹುಡಗಾ……..’ ಎಂದು ನಾಗಪ್ಪ ಎದ್ದೇ ನಿಂತ. ನಾನು ಭಯದಿಂದ ಸುಮ್ಮನಾದೆ. ಅವನು ಮತ್ತೆರೆಡು ಊದಿನ ಕಡ್ಡಿಗಳನ್ನು ಹಚ್ಚಿ, ದೇವಿಯ ಚಿತ್ರಕ್ಕೆ ಬೆಳಗಿ, ವಂದಿಸಿ, ‘ಹೋಗೂಣ ಇನ್ನ’ ಎಂದು ನಮ್ಮನ್ನು ಕರೆದುಕೊಂಡು, ಚಂಚಿಯನ್ನು ತನ್ನ ಹರಕು ಕೊಟಿನ ಕಿಸೆಯಲ್ಲಿ ತುರುಕುತ್ತ ದಾಪುಗಾಲು ಹಾಕುತ್ತ ಹೊರಟೇಬಿಟ್ಟ. ನಾವೂ ಹಿಂಬಾಲಿಸಬೇಕಾಯಿತು.

ದಾರಿಯಲ್ಲಿ ತಾನು ಅನೇಕ ದೆವ್ವಗಳನ್ನು ಹೇಗೆ ಬಿಡಿಸಿದನೆಂದು ಹೇಳುತ್ತಾ ಬಂದ. ನನ್ನ ಎದೆಯಲ್ಲಿ ಪುಕುಪುಕು. ಒಂದು ರೀತಿಯ ತಲ್ಲಣತೆ, ನನ್ನ ಪಾಲಿಗೆ ಈ ಮುದುಕ ಪುರಾಣ ಕಾಲದ ಶಕ್ತಿದೇವತೆಯ ಅವತಾರವಾಗಿದ್ದ.

ಅವನ ಮಾತು ಕೇಳುವುದು, ಅವನ ಸೇವೆ ಮಾಡುವುದು, ಅವನ ಕೂಡ ಹೊಂಡದ ತನಕ ಒಮ್ಮೊಮ್ಮೆ ಮನೆತನಕ ಹೋಗಿ ಕಳಿಸಿ ಬರುವುದು ನನಗೆ ಉತ್ಸಾಹದ ರೂಢಿಯಾಗಿಬಿಟ್ಟವು. ಎರಡೂ ಕೈಗಳನ್ನೆತಿ ಹತ್ತೂ ಬೆರಳುಗಳನ್ನು ವಿರಳವಾಗಿರಿಸಿ, “ಒಂದ ಹುಣಸೀ ಗಿಡದಾಗ ಇಷ್ಟು ಕಾಗಿ ಕುಂತಿದ್ವು. ಅದರಾಗ ಒಂದ ಹಾರಿಹೋದ್ರ ಎಷ್ಟು ಉಳದೂ?’ ಎಂದು ರಾಗವಾಗಿ ಕೇಳಿ ನಗುತ್ತ ತಂಬಾಕು ತಿನ್ನುತಿದ್ದ. ಎಷ್ಟು ಹೊತ್ತಾದರೂ ನನಗೆ ಉತ್ತರ ತಿಳಿಯುತ್ತಿರಲಿಲ್ಲ. ಆ ದಿನವೆಲ್ಲ ನನಗೆ ಹೇಳದೆ ಮರು ದಿನ ಇನ್ನೊಂದು ಇಂಥದೇ ಕತೆಯನ್ನು ಪ್ರಶ್ನೆಯನ್ನು ಹೇಳಿ ಹಿಂದಿನ ದಿನದ ಕತೆಗೆ. ಉತ್ತರ ಹೇಳುತ್ತಿದ್ದ. ಹೀಗೆ ದಿನಾಲು ಅವನ ಕೂಡ ಮಾತಾಡುವುದು, ಚರ್ಚಿಸುವುದು
ನಗೆ ಪ್ರಿಯವಾಗತೊಡಗಿದವು.

ದೇವಿ-ಅಮ್ಮ ದೇವಕಿಯನ್ನು ಹಾಗೆ ಕರೆಯುತ್ತಿದ್ದಳು. ಮೊದಮೊದಲು ನನ್ನನ್ನು ಕಂಡರೂ ಕಾಣದಂತೆ ಹೋಗುತ್ತಿದ್ದವಳು ಮುಂದೆ ಹಾಗೆ ಮಾಡಲಿಲ್ಲ. ಅವಳ ನಡಕ್ಕೆ ಬರುತ್ತಿದ್ದ ನನ್ನನ್ನು ತನ್ನ ಎಡಗೈಯಿಂದ ಬಾಚಿ ಹಿಡಿದು ಪ್ರೀತಿಯಿಂದ ಅಮುಕಿ ಒಮ್ಮೆ ನನ್ನ ತಲೆಯನ್ನು ಮೂಸಿ, ಬಲಗೈಯ ಖಾಲಿ ಕೊಡವನ್ನೆತ್ತಿ ಮತ್ತೆ ನೀರಿಗೆ ಹೊರಟರೆ ಕೃಷ್ಣನಿಗೆ ನೀರುಗುತ್ತಿದ್ದ ರಾಧೆಯ ಚಿತ್ರ ನನ್ನ ಕಣ್ಣೆದುರು ನಿಲ್ಲುತ್ತಿತ್ತು. ಅವಳು ನೀರು ತಂದ ಸಲಕ್ಕೊಮ್ಮೆ ನನಗೂ ಒಳಗೆ ಹೋಗಬೇಕೆನ್ನಿಸುತ್ತಿತ್ತು. ಅವಳು ಬರಬರುತ್ತ ಬಹಳ ಗಡಿಬಿಡಿಯಿಂದ ನನ್ನನ್ನು ಅಪ್ಪಿ ಆಚೆ ಈಚೆ ನೋಡುತ್ತ ನನ್ನ ಬೆನ್ನು ಹಣೆ ಗಲ್ಲ ತುಟಿಗೆ ಮುದ್ದಿಡುತ್ತಿದ್ದಳು. ನನಗೆ ಆರಂಭದಲ್ಲಿ ಹೇಗೆ ಹೇಗೆ ಅನಿಸಿದರೆ ಅವಳು ಹಾಗೆ ಮಾಡುವುದು ಬೇಕೆನಿಸುತ್ತಿತ್ತು. ಅಮ್ಮ ಅಥವಾ ಮಾವ ಇಲ್ಲವೇ ಬಸಪ್ಪನ ಹೆಂಡತಿ ಒಳಬರುವಂತೆ ಕಂಡರೆ, ಒಮ್ಮೆಲೇ ನನ್ನನ್ನು ನೂಕಿ ತಳ್ಳಿಬಿಡುತ್ತಿದ್ದಳು. ನನಗೆ ಅವಳ ಇಂಥ ವ್ಯವಹಾರ ಅರ್ಥವಾಗದಿದ್ದರೂ, ಕೆಟ್ಟೆನಿಸುತ್ತಿದ್ದರು ಸಿಟ್ಟು ಬರುತ್ತಿರಲಿಲ್ಲ.

ಆಗಾಗ ಮಧ್ಯಾಹ್ನ ಮಾವನಿಗೆ ತಿಳಿಸದೆ ನಾಗಪ್ಪನ ಮನೆಯ ಕಡೆಗೆ ಹೋಗುತ್ತಿದ್ದೆ. ಅಷ್ಟು ದೂರದ ದಾರಿಯಲಿ ಒಬ್ಬನೇ ಇದ್ದರೂ ಭಯವೆನಿಸಿದರೂ, ದೇವಿಯ ನೆನಪಾದೆ ಕೂಡಲೆ ಮೈ ಬೆಚ್ಚಗಾಗಿ ಅವಳ ಜೊತೆಗಿದ್ದಾಳೆಂದು ಭಾವಿಸಿ ಹಿತವೆನಿಸುವಷ್ಟರಲ್ಲಿ ಅವಳ ಮನೆ ಮುಟ್ಟುತ್ತಿದ್ದೆ. ನಾಗಪ್ಪ ಏನೋ ಓದುತ್ತ, ಕವಳ ತಿನ್ನುತ್ತ ಕುಳಿತಿರುತ್ತದ್ದ ಅಥವಾ ಮಲಗಿರುತ್ತಿದ್ದ, ದೇವಿ ಊಟ ಮಾಡಲು ಕರೆಯುತ್ತಿದ್ದಳು, ನಾನು ಉಂಡಿರುವನೆಂದು ಹೇಳಿದರೆ ಏನಾದರೂ ತಿನ್ನಲು ಕೊಡುತ್ತಿದ್ದಳು. ಹಿತ್ತಲದಲ್ಲಿ ಅಥವಾ ಅಟ್ಟದ ಮೇಲೆ ನನ್ನನ್ನು ಕರೆದುಕೊಂಡು ಹೋಗಿ ನನ್ನ ಮೈ ತುಂಬ ಮುತ್ತಿನ ಮಲ್ಲಿಗೆಯರಳಿಸಿ ನನಗೆ ತಿಂಡಿ ತಿನಿಸುತ್ತಿದ್ದಳು. ಅವಳ ತೊಡೆಸಂದಿಯಲ್ಲಿ ಮುಖವಿಟ್ಟುಕೊಂಡು ಹಾಗೆಯೇ ಇದ್ದು ಬಿಡಬೇಕು. ಊರಿಗೆ ಹೋಗಬಾರದು. ಇಲ್ಲಿಯೇ ಇರಬೇಕು ಅನಿಸುತ್ತಿತ್ತು. ಮೆಲ್ಲಗೆ ಅವಳ ಗಲ್ಲಗಳನ್ನು ಎರಡೂ ಕೈಗಳಿಂದ ನೇವರಿಸುವಾಗ ಮೊಣಕೈಗಳು ಅವಳ ಎದೆಯ ಮೆದುವನ್ನು ಚುಚ್ಚುತ್ತಿದ್ದವು. ಎದೆಯನ್ನೇ ನೋಡುತ್ತ ಒರಗಿರುವಂತೆಯೇ ನಿದ್ದೆ ಬಂದದ್ದೇ ತಿಳಿಯುತ್ತಿರಲಿಲ್ಲ. ನಾಗಪ್ಪ ಹೊರಡುವ ವೇಳೆಗೆ ದೇವಿ ನನ್ನನ್ನು ಎಬ್ಬಿಸಿ ನನಗೂ ಚಹ ಮಾಡಿಕೊಟ್ಟು. ನನ್ನ ಹೆಗಲ ಮೇಲೆ ಕೈಯಿಟ್ಟು ಮುಂಬಾಗಿಲ ತನಕ ಬಂದು ಕಳುಹಿಸುತ್ತಿದ್ದಳು. ನನ್ನ ಮೈ ತುಂಬ ಅವಳ ತುಟಿಯ ಹಾಸಿಗೆ, ಮನಸಿನ ತುಂಬ ಕನಸಿನ ತುಂಬ ಅವಳ ಕಣ್ಣು ಎದೆ ಅಂಗೈ ತೊಡೆಗಳ ದಾರಿ ಸಿಗದ ಅರಣ್ಯ ಮತ್ತೆ ಮರುದಿನ ಬರುವ ಇಚ್ಛೆಯ ಮದಿ ಹೊತ್ತು ನಾಗಪ್ಪನ ಕೂಡ ಬರುತ್ತಿದ್ದೆ. ಉಳಮ್ಮ ನನ್ನನ್ನು ನೋಡಿ ನಗುತ್ತಿದ್ದಳು. ಮಾವ ಮಾತ್ರ ಯಾವ ಪ್ರತಿಕ್ರಿಯೆಯನ್ನು ತೋರದೆ ಸುಮ್ಮನಿರುತ್ತಿದ್ದರೂ ಅವನ ಮನಸ್ಸಿನಲ್ಲಿ ಏನೋ ಗೊಂದಲ ನಡೆದಿದೆಯೆಂದು ಖಾತ್ರಿಯಾಗುತ್ತಿತ್ತು. ನನಗೇ ತಿಳಿಯದೇ ನಾನು ಅವನನ್ನು ಸ್ವಲ್ಪ ಅಂತರದಲ್ಲಿಟ್ಟಂತೆ ಮಾಡಿದ್ದೆ. ‘ನಾಗಪ್ಪನ ಹತ್ತಿರವೇ ಇದ್ದು ಬಿಡು’ ಎಂದು ಅಮ್ಮ ಚೇಷ್ಟೆ ಮಾಡಿದರೆ, ಮಾವ ತಾನು ನಗದಿದ್ದರೆ ಅವರು ತಪ್ಪು ತಿಳಿದಾರೆಂದು ಒಂದು ಬಡಕಲು ನಗೆಯನ್ನು ತನ್ನ ಅಡ್ಡ ಹಲ್ಲುಗಳ ಸಂದಿಯಿಂದ ತೂರಿಬಿಡುತ್ತಿದ್ದ, ಅಷ್ಟೇ.

ಒಮ್ಮೊಮ್ಮೆ ಉಳಮ್ಮ ತನ್ನ ಚಿಕ್ಕ ಚಿಕ್ಕ ಇಲಿಹಲ್ಲುಗಳನ್ನು ಬಿಗಿಹಿಡಿದು, ಕದ್ದು ಸೇಬೂ ಹಣ್ಣು ತಿನ್ನುವವರಂತೆ ನಗುತ್ತ ಅಂಗಡಿಯಲ್ಲಿ ಕೂಡುತ್ತಿದ್ದಳು. ನಾನು, ಮಾವ ನಾಗಪ್ಪನ ಕೂಡ ಹರಟುತ್ತಿದ್ದೆವು. ಮುಂದೆ ೩-೪ ದಿನಗಳಲ್ಲೇ ನಮ್ಮ ಅಂಗಡಿಯಲ್ಲಿ ಗಡಂಚಿಯ ಮೇಲೆ ಕೆಂಪು ಅರಿವೆಯಲ್ಲಿ ಒಂದು ತೆಂಗಿನಕಾಯಿ, ನಿಂಬೆಹಣ್ಣು ನೇತಾಡ ಹತ್ತಿದವು. ಮುಂದಿನ ಬಾಗಿಲದ ಹೊಸ್ತಿಲದ ಮೇಲೆ ಒಂದು ಸಣ್ಣ ನಾಲ್ಕಾರು ಅಡ್ಡ ತಿಡ್ಡ ಗೆರೆಗಳನ್ನು ಕೊರೆದಿದ್ದ ತಾಮ್ರದ ತಗಡನ್ನು ನಾಲ್ಕೂ ಕಡೆಗೆ ಮಳೆ ಜಡಿದು ಬಡಿದಿದ್ದರು. ನಾನೇ ನೋಡಿದೆ. ಒಳಗೆ ಅಡಿಗೆಯಲ್ಲಿದ್ದ ಉಳಮ್ಮನನ್ನು ಕೇಳಬೇಕೆಂದೆ. ಏನೋ ಯೋಚಿಸಿ ಸುಮ್ಮನಾದೆ. ಮಾವ ಹೈಗರ ಹಿತ್ತಲದಲ್ಲಿ ಒಂದಕ್ಕೆ ಹೋದವ ಬಂದ, ಒಂದೆರಡು ಗಿರಾಕಿಗಳು ಬಂದು ನಿಂತಿದ್ದವು, ನಾಗಪ್ಪ ಇನ್ನೂ ಬಂದಿರಲಿಲ್ಲ. ಗಿರಾಕಿಗಳು ಹೋದ ಕೂಡಲೇ ಮಾವನಿಗೆ ತೋರಿಸಿದೆ. ಅವನಿಗ ದಂಗುಬಡಿಯಿತು. ನನಗೆ ಸುಮ್ಮನಿರಲು ಹೇಳಿದನಾದರೂ ಅವನ ಗುಂಗು ಗಂಭೀರವಾಗುತ್ತಲೇ ಹೋಯಿತು.

ಮಧ್ಯಾಹ್ನದ ಹೊತ್ತು ನಮಗಿಬ್ಬರಿಗೂ ಊಟಕ್ಕೆ ನೀಡಿಟ್ಟು ಅಮ್ಮ, “ನೀವು ಊಟ ಮಾಡ್ರಿ. ನಾ ಅಂಗಡೀ ಕಡೆ ನೋಡಕೊಂತ ನೀಡತೇನಿ. ಈಗೇನ ಗಿರಾಕಿನೂ ಭಾಳ ಬರೂದುಲ್ಲ’ ಎಂದಳು. ಮಾವ ಸರಕ್ಕನೇ ‘ಎವ್ವಾ, ಇದೇನಬೇ ?” ಎಂದ. ಬಹುಶಃ ಈ ಪ್ರಶ್ನೆಯನ್ನು ಮೊದಲೇ ನಿರೀಕ್ಷಿಸಿದಂತೆ ಅಮ್ಮ ಅಂಗಡಿಯಲ್ಲಿ ಗಿರಾಕಿಗಳು ಹೆಚ್ಚು ಬರಲೆಂದು ಮಾಡಿಸಿದ್ದು ಎಂದಳು. `ಮತ್ತೆ ಆ ತಾಮ್ರದ ತಗಡು ?” ಅಂದದ್ದಕ್ಕೆ “ಆದೂ ಅದರದೆ’ ಎಂದಳು. ಮಾವನಿಗೆ ಯಾಕೆ ಸಮಾಧಾನವೆನಿಸಲಿಲ್ಲ. ಆ ದಿನ ಅವನು ಊಟವನಕ್ಕೂ ಸಮನಾಗಿ ಮಾಡಲಿಲ್ಲ.

ಮುಂದೆ ಒಂದೆರಡು ದಿನಗಳಲ್ಲೇ ನನ್ನ ಶಾಲೆ ಸುರುವಾಗಲಿದ್ದರಿಂದ ಮಾವ ನನ್ನನ್ನು ಫತ್ತೇಸಾಬನ ಕೂಡ ಕಳಿಸಿಬಿಟ್ಟ. ಅಂದು ಬೆಳಿಗ್ಗೆ ಬೇಗನೆ ಹೊರಟಿದ್ದರಿಂದ ದೇವಿಯನ್ನು ಮತ್ತೆ ನೋಡಲಾಗಲಿಲ್ಲ.

ಮುಂದೆ ೪-೫ ದಿನಗಳಲ್ಲೇ ಮಾವ ಕೆಳಗೇರಿಯಿಂದ ಬಂದು ಬಿಟ್ಟ. ನನಗೆ ಆಶ್ಚಯ್ಯವಾಯಿತು. ಯಾಕೆಂದು ಕೇಳಿದರೆ ಏನೋ ಹಾರಿಕೆ ಉತ್ತರ ಹೇಳಿ, ಏನೂ ಆಗಿಲ್ಲವೆಂಬಂತೆ ಇಲ್ಲಿ ತನ್ನ ಗೆಳೆಯರ ಕೂಡ ಹರಟುತ್ತ, ಹೊಲಕ್ಕೆ ಹೋಗುತ್ತ, ಹಳ್ಳಕ್ಕೆ ದಿನಾ ಮಧ್ಯಾಹ್ನ ಈಸಲು ಹೋಗುತ್ತ ಕಾಲ ಕಳೆಯುತ್ತಿದ್ದ. ಅಜ್ಜ ಒಮ್ಮೆ ಗಟ್ಟಿಗೆ ಹೆಚ್ಚಿ ಕೇಳಿದಾಗ ಬೇಸರವಾಗಿ ಬಂದೆ’ ಎಂದುಬಿಟ್ಟ. ಈ ಮಧ್ಯೆ ಫತ್ತೇಸಾಬ ಮಾವನನ್ನು ಕರೆಯಲೆಂದು ಒಮ್ಮೆ ಬಂದುಹೋದ. ಮಾವ ಬಂದಾಗಿನಿಂದ ಉಳಮ್ಮನಿಗೂ ಮೈಯಲ್ಲಿ ಆರಾಮಿಲ್ಲ. ಅಂಗಡಿಯಲ್ಲಿ ಅನಾನುಕೂಲವಾಗಹತ್ತಿದೆಯೆಂದು ಹೇಳಿದಾಗ ನವರಿಗೆಲ್ಲ ಕೆಟ್ಟೆನಿಸಿತು. ಆಗಲೇ ಹೋಗೋಣವೆಂದರೂ ಕೇಳಲಿಲ್ಲ. ನನಗೆ ನಾತಾಳಿ ಸೂಟಿಯಾದ ಕೂಡಲೇ ಹೋಗೆಂದು ಒತ್ತಾಯಪಡಿಸಿದ್ದರಿಂದ ಹೊರಟ. ಈ ಸಲ ನಾನೇ ಅವನನ್ನು ಕರೆದೊಯ್ಯುವ ಯಜಮಾನನ ಪಾತ್ರವಹಿಸಿದ್ದೆ. ಮಾವನನ್ನು ಕರೆದೊಯ್ಯುವ ಹಂಬಲಕ್ಕಿಂತ ಇನ್ನೊಂದು ತವಕ ನನ್ನ ಮನಸ್ಸಿನಲ್ಲಿ ಕುಣಿಯುತ್ತಿತ್ತು.

ಈ ಬಾರಿ ಮಾವಿನಕೊಪ್ಪದಲ್ಲಿಳಿದಾಗ, ಮೊದಲಿನ ಸಲದಂತೆ ಅಪರಿಚಯದ ಹುದುಲಿನಲ್ಲಿ ನಾನು ಸಿಗಲಿಲ್ಲ. ಮಾವ, ನಾನು ದಾರಿಯ ಅಂಗಡಿಯಲ್ಲಿ ಚಹ ಕುಡಿಯದೇ, ನಡೆದು, ಹನುಮಂತನಿಗೆ ನಮಸ್ಕರಿಸಿ ಹೊರಟುಬಿಟ್ಟೆವು. ಹನುಮಂತನ ಚಪ್ಪಲಿಗಳು ಈಗ ಇನ್ನೂ ಸ್ವಲ್ಪ ಹೆಚ್ಚಿಗೆ ಸವೆದಂತೆ ಕಾಣಿಸಿದವು. ಕೆರೆಯ ಒಂಡಿ, ಕೋಡಿಯ ತಗ್ಗು, ಅಡವಿ ಎಲ್ಲ ಈಗ ಜಳಕ ಮಾಡಿ ಕೂದಲು ಒರೆಸುತ್ತಾ ಎಳೆಬಿಸಿಲಿಗೆ ಕುಳಿತ ತಾರುಣ್ಯದಂತೆ ಶುಭ್ರವಾಗಿದ್ದವು.

ದಾರಿಯಲ್ಲೇ ಸಿಕ್ಕ ಫತ್ತೇಸಾಬ ನಮ್ಮ ಸಂಗಡವೇ ಮನೆಗೆ ಬಂದ. ಅಂಗಡಿಯಲ್ಲಿ ಗಡಂಚಿಯ ಮೇಲೆ ಕುಳಿತಿದ್ದ ಉಳಮ್ಮ ನೋಡಿಯೂ ನೋಡದಂತೆ ಸುಮ್ಮನಿದ್ದಳು. ನಾವೇ ಒಳಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡು ಹೊರಗೆ ಬಂದವು. ಮಾವ ಹೊರಗೆ ಬಂದುದನ್ನು ನೋಡಿ ಉಳಮ್ಮ ಒಳಗೆ ಹೋದಳು. ಮಾವ ಗಡಂಚಿ ಹಿಡಿದ. ಏನೂ ಆಗಿಲ್ಲವೆಂಬಂತೆ ಇಬ್ಬರೂ ತಮ್ಮ ತಮ್ಮ ಮೊದಲಿನ ಎಲ್ಲ ಕೆಲಸಗಳನ್ನು ಮಾಡತೊಡಗಿದರು. ಒಂದೆರಡು ದಿನಗಳಲ್ಲೇ ಮತ್ತೆ ಮೊದಲಿನಂತೆ ಮಾತಾಡತೊಡಗಿದರು. ಆದರೂ ಉಳಮ್ಮ ಇಷ್ಟು ದೊಡ್ಡವಳಾಗಿ ಮಾವನ ಕಂಡ ಸಣ್ಣ ಹುಡುಗರಂತೆ ತಾನೇ ಹಟ ಮಾಡಿ, ಬಿಕ್ಕೊಂಡು, ಮಾತಾಡದೆ ಇದ್ದದ್ದು ನನಗೆ ಸೇರಲಿಲ್ಲ.

ಹೋದ ದಿನ ಸಂಜೆಗೆ ನಾಗಪ್ಪನಿಗಾಗಿ ಕಾದ ನಾನು ಫಸಾಬನನ್ನು ಕೇಳಿದೆ. ‘ಮೈಯಾಗ ಆರಾಮಿಲ್ಲ, ಬರಾಕಿಲ್ಲ’ ಎಂದು ಅವನು ಹೇಳಿದರೂ ನಾಗಪ್ಪ ಬರಬಹುದೆಂದು ನನಗನಿಸಿತ್ತು. ವಂನೆಯ ಗಂಭೀರ ವಾತಾವರಣವನ್ನು ನಿರ್ಲಕ್ಷಿಸಿ ನನಗನಿಸಿದ್ದನ್ನು ಮಾಡುವ ಧೈರ್ಯ ನನಗಾಗಲಿಲ್ಲ. ಮರುದಿನ ಮುಂಜಾನೆ ನಾಗಪ್ಪನ ಮನೆಗೆ ಹೋಗಬೇಕೆಂದು ತೀವ್ರವಾಗಿ ಅನಿಸಿದರೂ ಅಂಗಡಿಯಲ್ಲೇ ಕುಳಿತು ಚಡಪಡಿಸಿದೆ. ಸಂಜೆಗೆ ಗೂರುತ್ಯ, ಕೆಮ್ಮುತ್ತ ಬಂದು ಒಂದೆರಡು ಸಾಮಾನುಗಳನ್ನು ಕೊಂಡು, ಸ್ವಲ್ಪ ಹೊತ್ತು ಮಾತ್ರ ಮೇಲೆಮೇಲೇ ಮಾತಾಡುತ್ತಿದ್ದು ನಾಗಪ್ಪ ಹೊರಟುಬಿಟ್ಟ. ಅಮ್ಮ ಜಾಸ್ತಿ ಹೊರಗೆ ಬರಲಿಲ್ಲ. ತಿಂಡಿಯ ಬದಲು ಎಲ್ಲರಿಗೂ ಬರೇ ಚಹ ನನ್ನ ಕೈಯಲ್ಲೇ ಕಳುಹಿಸಿದಳು. ನನಗೆ ಇದೆಲ್ಲದರಲ್ಲಿ ಏನೂ ಬಹಳಷ್ಟು ಬದಲಾವಣೆ ಎನಿಸಿದರೂ ಏನೆಂದು ಸ್ಪಷ್ಟವಾಗಿ ತಿಳಿಯದಾಗಿದ್ದೆ.

ಅದರ ಮರದಿನ ಮಧ್ಯಾಹ್ನ ನಾಗಪ್ಪನ ಮನೆಗೆ ಹೋದೆ. ಬಾಗಿಲದಲ್ಲಿ ಬಿದ್ದುಕೊಂಡಿದ್ದ ನಾಯಿಮರಿಯೊಂದು ಎದ್ದು ಹಿತ್ತಲದ ಕಡೆ ಹೋಯಿತು. ಒಳಗೆ ಹೋದೆ. ನಾಗಪ್ಪ ಮಲಗಿದ್ದ. ದೇವಿ ನನ್ನನ್ನು ನೋಡಿ ಸುಮ್ಮನೆ ಹೋದರೂ, ಏನು ಮಾಡಬೇಕೆಂದು ತಿಳಿಯದೆ ನಾನು ಗಲಿಬಿಲಿಯಲ್ಲಿ ಬಿದ್ದಾಗಲೇ ಮತ್ತೆ ಹೊರಗೆ ಬಂದು, ಏನೂ ಮಾತಾಡದೇ ನನ್ನನ್ನು ತಬ್ಬಿಕೊಂಡು ಅಟ್ಟದ ಮೇಲೆ ಹತ್ತತೊಡಗಿದಳು. ಅವಳು ಯಂತ್ರಚಾಲಿತಳಂತೆ ಸುಮ್ಮನೆ ಹತ್ತಿದರೂ ಅವಳ ಎದೆ ಬಡಿದುಕೊಳ್ಳುವುದಕ್ಕಿಂತ ತೀವ್ರವಾಗಿ ನನ್ನ ಎದೆಯ ಡವಗುಟ್ಟಲಾರಂಭಿಸಿತು. ತನ್ನ ಮಂಚದ ಮೇಲೆ ನನ್ನನ್ನು ದೊಪ್ಪೆಂದು ಕೆಡವಿ ಹುಚ್ಚು ಹಿಡಿದವರಂತೆ ನನ್ನ ಮೈಯೆಲ್ಲ ಮುತ್ತಿ, ಧಡಧಡ ಮೆಟ್ಟಿಲು ಇಳಿದು ಹೋಗಿಬಿಟ್ಟಳು. ನನಗೆ ಏನೂ ತಿಳಿಯಲಿಲ್ಲ, ಮತ್ತೆ ಬರಬಹುದು, ತಿನ್ನಲು ಏನಾದರ ತರಲು ಹೋಗಿರಬಹುದು ಎಂದು, ಆದದ್ದರ ರೋಮಾಂಚನವನ್ನೇ ಹೊದ್ದುಕೊಂಡು ಮಲಗಿಬಿಟ್ಟೆ.

ನಾಗಪ್ಪ ಕೈಹಿಡಿದು ಏಳು ಎಂದು ಕರೆದಾಗಲೇ ಎಚ್ಚರ. ತಾನು ಆರಾಮಿಲ್ಲ, ಅಂಗಡಿಗೆ ಬರುವುದಿಲ್ಲ, ಚಹ ಕುಡಿದು ಕತ್ತಲಾಗುವುದರೊಳಗಾಗಿ ಹೋಗು ಎಂದ ದೇವಿಯ ಕೂಡ ಏನೂ ಮಾತನಾಡಲಿಲ್ಲ. ಅವಳನ್ನು ನಾನು ಮುತ್ತಲಿಲ್ಲ. ಅಮ್ಮನ ಮನೆಯಲ್ಲಿ ನೀರು ತುಂಬಲು ಬರುವುದಿಲ್ಲವೇಕೆಂದು ಕೇಳಲಿಲ್ಲ. ಮೈಯಲ್ಲಿ ಹುಷಾರಿಲ್ಲವೇ ಎನ್ನಲಿಲ್ಲ. ನಾನೂ ಎಂಥವ, ಸಣ್ಣ ಮೋರೆ ಮಾಡಿಕೊಂಡು ದುಡುದುಡು ಬಂದೆ.

ಯಾಕೋ ಇಲ್ಲಿಂದ ಬೇಗ ಹೋಗಿಬಿಡಬೇಕೆಂದೆನಿಸಿತು. ಆದರೆ ಯಾರಿಗೂ ಹೇಳಲಿಲ್ಲ. ಮುಂಜಾನೆ ಅಮ್ಮನ ಚಿಕ್ಕ ಹಿತ್ತಲದಲ್ಲಿ ಎಳೆಬಿಸಿಲಿಗೆ ಮೈ ಕಾಸುತ್ತ ಕುಳಿತುಬಿಟ್ಟೆ. ಪೇರಲಗಿಡಕ್ಕೆ ದೊಡ್ಡದೊಂದು ಚಪ್ಪಲಿಯನ್ನು ತೂಗುಬಿಟ್ಟಿದ್ದರು. ಮಜಾ ಅನ್ನಿಸಿ ಅಮ್ಮನನ್ನು ಕೇಳಿದೆ, ಅವಳು ಈ ಕಾಯಿ ಬಿಡಲಿ ಅಂತ ಕಟ್ಟಿಸಿದ್ದು ಅಂದರೂ ಅವಳ ಮುಖ ಒಮ್ಮೆಲೇ ಮಾವಿನಕೊಪ್ಪದ ಹನುಮಂತನ ಚಪ್ಪಲಿಯಂತೆ ಸವೆದ ಹಾಗೆ ಕಾಣಿಸಿತು.
ನನಗೇನೋ ತಳಮಳ, ಮಧ್ಯಾಹ್ನ ಊಟದ ಹೊತ್ತಿಗೆ ಮಾವನಿಗೆ ನಾನು ಇಂದೇ ಹೊರಡಬೇಕು, ಬಹಳ ಅಭ್ಯಾಸವಿದೆ ಎಂದೆ. ಅಮ್ಮ ಕೇಳಿಯೂ ಸುಮ್ಮನಿದ್ದಳು. ಆದರೆ ನನ್ನನ್ನು ಬಸ್ಸಿಗೆ ಹತ್ತಿಸಲು ಆಗ ಫತ್ತೇಸಾಬ ಇರದ್ದರಿಂದ ಮರುದಿನ ಮುಂಜಾನೆ ಹೋಗು ಎಂದ ಮಾವ.

ಮತ್ತೊಮ್ಮೆ ಹನುಮಂತನ ಜಾತ್ರೆಗೆ ಬಾ ಎಂದು ಮಾವ ಹೇಳಿಕಳಿಸಿದ್ದರಿಂದ ಕೆಳಗೇರಿಗೆ ಹೋಗಿದ್ದೆ. ಆಗ ಮಾವ ಯಾವಾಗಲೂ ತನ್ನೊಳಗಿನ ಯಾವುದೋ ಭಯದಿಂದಾ’ ಗಿಯೋ ಅಥವಾ ತಿಳಿಯದ ಹೊಟ್ಟೆಕಿಚ್ಚಿಗಾಗಿಯೋ ಅಥವಾ ಆ ಸಮಯದಲ್ಲಾದರೂ ನನ್ನ ಆಸರೆಗಾಗಿ ಹಂಬಲಿಸಿಯೋ ನನ್ನ ನೆರಳಿನಂತೆಯೇ ಬೆನ್ನು ಹತ್ತುತ್ತಿದ್ದುದರಿಂದ ನಾನು ಮೊದಲಿನಂತೆ ಮುಕ್ತವಾಗಿ ಅಲೆಯಲಾಗಲಿಲ್ಲ.

ಮನೆಯಲ್ಲಿಯ ವಾತಾವರಣದಲ್ಲಿ ಹೆಚ್ಚಿನ ಬದಲಾವಣೆಯನ್ನೂ ಕಾಣಿಸದಿದ್ದರೂ ನಾಗಪ್ಪ ನನ್ನ ಎರಡು ಮೂರು ದಿನಗಳ ವಾಸ್ತವದಲ್ಲಿ ಒಮ್ಮೆ ಕಾಣಿಸಿಕೊಂಡಿದ್ದ. ಅದೂ ಸಂಜೆಯ ಇಳಿಹೊತ್ತಿನಲ್ಲಿ, ಅವನ ಮನಸ್ಸನ್ನೆಲ್ಲ ಸಾವಕಾಶ ಹರಡುವ ತೊನ್ನು ಆವರಿಸಿಕೊಂಡ ಹಾಗೆನ್ನಿಸಿತು.

ನಾನು ಹೊರಡುವ ದಿನ ಮಧ್ಯಾಹ್ನ ಊಟ ಮಾಡಿದ ಮೇಲೆ ಮಾವ ಮಾವಿನಕೊಪ್ಪದ ತನಕ ಬಂದ, ದಾಟನಾಳ ಬಸಪ್ಪನೂ ಜೊತೆಗಿದ್ದ. ಬಸ್ ಬರುವುದಕ್ಕಿಂತ ಸ್ವಲ್ಪ ಮೊದಲು ನಾನು ದೇವಿ ಕಾಣಿಸುವುದೇ ಇಲ್ಲವೇಕೆ ಎಂದು ಕೇಳಿದೆ. ಮಾವನೂ ಸಂಕ್ಷಿಪ್ತವಾಗಿ ಅವಳು ೨-೩ ತಿಂಗಳಿಂದ ಬಸಿರಾಗಿದ್ದುದು ಊರಲ್ಲಿ ತಿಳಿಯಿತು. ಈಗ ೧೦-೧೨ ದಿನಗಳ ಹಿಂದೆಯೇ ತಮ್ಮ ಹಿತ್ತಲದ ಬಾವಿಯಲ್ಲಿ ಬಿದ್ದು ಸತ್ತಳು ಎಂದ. ನನ್ನ ತಲೆ ಧಿಮ್ಮೆಂದಿತು. ಮೈಯ ನರನರವೆಲ್ಲ ಬಿಗಿದು ಒಮ್ಮೆಲೇ ಬಾಚಿ ದೇವಿಯನ್ನು ಅಪ್ಪಿ ಹಿಚುಕಿ ಮೊನ್ನೆಯೇ ನಾನು ದಾಟಿದ್ದ ಹನುಮಂತನ ಗುಡಿಯ ಮುಂದಿನ ನಿಗಿನಿಗಿ ಬೆಂಕಿಯಲ್ಲಿ ಚೆಲ್ಲಿದಂತೆ. ಭುಸ್ ಭುಸ್ ಎಂದು ಧೂಳು ಹಾರಿಸಿದ ಬಸ್‌ ನಿಂತದ್ದು, ಮಾವ ನನ್ನನ್ನ ಒಳಗೆ ತೂರಿದ್ದು ಅಷ್ಟೇ ನೆನಪು.

ಆ ಊರು, ಉಪಾಸಿ ನಾಗಪ್ಪ, ಉಳಮ್ಮ, ಆ ಕೆಸರು, ಹೊಂಡ, ಕಮಲ, ದೇವಿಯ ಬಿರುಗಣ್ಣುಗಳ ಮಾಯೆ – ಅವಳು ನನಗಿಂತ ಸುಮಾರು ಏಳೆಂಟು ವರ್ಷ ದೊಡ್ಡವಳಾಗಿದ್ದರೂ ಅವಳು ನನ್ನವಳೇ ಎನ್ನಿಸುವಂಥ ಮಾಯ ….ಛೇ, ಛೇ, ಈ ನೆನಪ ಹಕ್ಕಿಗಳನ್ನು ಬಂಧಿಸುವುದು ಸಾಧ್ಯವೇ ಇಲ್ಲವೆ? ಇವತ್ತು ಇವೆಲ್ಲ ಒಂದೇ ಸವನೆ ನನ್ನನ್ನು ಚೀರಿ, ಕೂಗಿ ಕರೆದು ನಾನು ಎಚ್ಚೆತ್ತಾಗ ದೂರ ನಿಂತು ನನ್ನನ್ನು ಗೇಲಿ ಮಾಡುತ್ತಿವೆಯೇಕೆ?
ಮಾವ ಒಂದೆರಡು ವರ್ಷಗಳಲ್ಲೆ ಬೇಸತ್ತುಬಿಟ್ಟ. ಅಲ್ಲಿಯ ಹವೆಗೆ ತನ್ನ ಪ್ರಕೃತಿ ಒಗ್ಗಲಿಲ್ಲವೆಂದ, ದಾಟನಾಳ ಬಸಪ್ಪನೂ ಒಂದು ಹೊಲ ಕೊಂಡು ತಾನೇ ಸ್ವಂತ ಗಳೇ ಹೂಡಿದ್ದರಿಂದ ಉಳಮ್ಮನ ಹೊಲದ ಮತ್ತು ಅಂಗಡಿಯ ಹೆಚ್ಚಿನ ಜವಾಬ್ದಾರಿ ಫತ್ತೇಸಾಬನ ಮೇಲೆ ಬಿದ್ದಿತಂತೆ. ಫತ್ತೇಸಾಬನೇ ಒಮ್ಮೆ ಸಂತೆಗಾಗಿ ಹಳ್ಯಾಳಕ್ಕೆ ಹೋಗುವಾಗ ಮಾವನಿಗೆ ಆ ತೆಂಗಿನಕಾಯಿ, ನಿಂಬೆಹಣ್ಣು, ತಾಮ್ರದ ತಗಡಿನ ರಹಸ್ಯವನ್ನು ಹೇಳಿದನಂತೆ. ಮಾವ ತನ್ನನ್ನು ಸಂಶಯದಿಂದ ಕಾಣದಿರಲಿ, ನಾಗಪ್ಪನ ಕೂಡ ತನ್ನ ಸಂಬಂಧ ಉಳಿದವರಿಗೆ ಗೊತ್ತಾಗದಿರಲಿ ; ಮಾವ ಕೇವಲ ಅಂಗಡಿ, ಗಿರಾಕಿಗಳಲ್ಲೇ ಮಗ್ನನಾಗಿರಲಿ ಎಂದು ನಾಗಪ್ಪನಿಗೆ ಹೇಳಿ ಅವನ ಗುರುವೊಬ್ಬನಿಂದ ಅವನ್ನು ಮಾಡಿಸಿ ತರಿಸಿದ್ದಳಂತೆ.
ಅದೇಕೋ ಮಾವ ಅವನ್ನು ನೋಡಿದಾಗಿನಿಂದ ತನ್ನ ಮನಸ್ಸನ್ನೇ ತೆಗೆದುಬಿಟ್ಟ. ಅದರ ಮಾಟ ಅವನ ಮೇಲೆ ನಾಟಲಿಲ್ಲವೇನೋ. ಈಚೆಗೆ ಒಮ್ಮೆ ಊರಿಗೆ ಬಂದರೆ ಮೊದಲು 5-6 ದಿನ ಇರುತ್ತಿದ್ದವನು ಈಗ ೧-೨ ತಿಂಗಳ ತನಕ ಇರುತ್ತಿದ್ದ. ಬರ ಬರುತ್ತ ತನಗೆ ಈ ಆಸ್ತಿಯೂ ಬೇಡ, ಅಲ್ಲಿ ಹೋಗುವುದೂ ಬೇಡ ಎನ್ನುತ್ತಿದ್ದ. ಆಳಮ್ಮನ ಅಂಗಡಿಯಲ್ಲಿ ಗಿರಾಕಿಗಳೂ ಕಡಿಮೆಯಾಗಿದ್ದವಂತೆ, ಗೌಡರ ಅಳಿಯ ಬಸನ್ಯಾ ಸುರುಮಾಡಿದ ಅಂಗಡಿಗೆ ಭರದಂಡಾಗಿ ಗಿರಾಕಿಗಳು ಹೋಗತೊಡಗಿದ್ದವಂತೆ. ಒಮ್ಮೆ ಇನ್ನು ತಾನು ಹೋಗುವುದೇ ಇಲ್ಲ ಎಂದು ಮಾವ ಹೇಳಿದಾಗ ನಾನು ಎಲ್ಲವನ್ನೂ ಕೆದಕೆದಕಿ ಕೇಳಿದೆ. ನಾಗಪ್ಪ ಸತ್ತ ದಿನ ಮಾವ ಅಲ್ಲೇ ಇದ್ದನಂತೆ. ಅಮ್ಮ ಸ್ವಲ್ಪವೂ ಆಳಲಿಲ್ಲ. ಆದರೆ ಅವನ ಮಣ್ಣು ಕೊಟ್ಟು ಎಲ್ಲರೂ ಬರುವಾಗ ದೇವರ ಮುಂದೆ ನಿಂತುಕೊಂಡು ತನ್ನ ಕಂಕುಮವನ್ನು ಅಳಿಸಿ ಹಾಕಿದಳೆಂದು ಮಾವ ಹೇಳಿದಾಗ ಅರ್ಥವಾಗದ ಎಷ್ಟೋ ಮಾತುಗಳು ನನಗೆ ಈಗ ನೆನಪಾಗತೊಡಗಿದೆ….ದೇವಿಯ ಕುಣಿಯಲ್ಲೇ ಹುಗಿದುಹೋಗಬೇಕೆನ್ನಿಸತೊಡಗಿದೆ……..

Close

ಜಡಭರತರ ಆ ಊರು ಈ ಊರು ಒಂದು ವಿವೇಚನೆ

ಜಡಭರತರ ಆ ಊರು-ಈ ಊರು
ಒಂದು ವಿವೇಚನೆ

ಶಿವರಾಮಯ್ಯ

ಜಡಭರತರ ‘ಆ ಊರು ಈ ಊರು’, ನಾಟಕ ಒಂದು ಶಕ್ತಿಯುತ ಸಾಂಪ್ರದಾಯಕ ನಾಟಕ : ನಾಯಕನಿಲ್ಲದ ನಾಟಕ; ಅಸಂಗತ ನಾಟಕ ನೋಡಿದ ಪ್ರೇಕ್ಷಕರಿಗೆ ಇದೊಂದು ಸವಾಲು; ಸಾಂಕೇತಿಕ ಅರ್ಥ ತಿಳಿಯದಿದ್ದರೂ ಕೂಡ ನಾಟಕ ತಾನು ಧ್ವನಿಸಬೇಕಾದುದ್ದನ್ನು ಧ್ವನಿಸುತ್ತದೆ-ಮುಂತಾಗಿ ಶ್ರೀ ಮಾಧವ ಕುಲಕರ್ಣಿಯವರು ೮-೧೦-೭೩ರ ‘ಕನ್ನಡ ಪ್ರಭ ಪತ್ರಿಕೆಯಲ್ಲಿ ಸದಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನಿಜ. ‘ಮನೋಹರ ಗ್ರಂಥಮಾಲಾ’ದ ಪ್ರಕಟಣೆಗಳನ್ನು ಕಾದು ಕುಳಿತ ಓದುಗನಿಗೆ ‘ಆ ಊರು-ಈ ಊರು ನಿರಾಶೆಯುಂಟುಮಾಡುವುದಿಲ್ಲ, ಗ್ರಾಮಾಯಣದ ನಂತರ ಬಂದ ‘ತಾಯಿಸಾಹೇಬ’ ದಂತೆ ಇದೂ ಒಂದು ಉತ್ತರ ಕರ್ನಾಟಕದ ಅರ್ಥವತ್ತಾದ ಕೃತಿ.

ಉತ್ತರ ಕರ್ನಾಟಕದ ಒಂದು ನದಿಯ ಎರಡು ದಂಡೆಗಳ ಎರಡು ಊರುಗಳ ಎರಡು ಕುಟುಂಬಗಳ ಸಂಬಂಧವನ್ನು ಕೇಂದ್ರದಲ್ಲಿಟ್ಟುಕೊಂಡು ಈ ನಾಟಕದಲ್ಲಿ ಘಟನೆಗಳು ಮತ್ತೇನನ್ನೊ ಧ್ವನಿಸುತ್ತಾ ಹೋಗುತ್ತವೆ. ಇದೇ ಪ್ರದೇಶದ ೫೦ ವರ್ಷಗಳ ಹಿಂದಿನ ಮಿರ್ಜಿ ಅಣ್ಣಾರಾಯರ “ನಿಸರ್ಗ’ ಕಾದಂಬರಿಯಲ್ಲಿ ತಾರ-ಭರಮರೂ ಚಿಮ್ಮವ್ವನ ರಕ್ಕಸಿತನಕ್ಕೆ ಹೇಸಿ ಮನೆ ಬಿಟ್ಟು ಹೋದರೂ ಸ್ವತಂತ್ರವಾಗಿ ನಿಲ್ಲಲಾರದ ಹಿಂದಿರುಗಿ ಬಂದು ಆಶ್ರಯಕ್ಕೆ ನಿಂತಾಗ ಚಿಮ್ಮವ್ವ ಅತ್ತೆ ತಾರಾನ ಬೀದಿಪಾಲು ಮಾಡಿ ಅವಳ ಬಾಳ ದುರಂತಕ್ಕೆ ನಾಂದಿ ಹಾಡುತ್ತಾಳೆ. ಆದರೆ, ‘ಆ ಊರು-ಈ ಊರು’, ನಾಟಕದ ವಾಸು-ಸುಶೀಲರು ಸ್ವತಂತ್ರವಾಗಿ ಜೀವಿಸಬಲ್ಲರೆಂಬ ಭರವಸೆ ಮೂಡುವುದರಿಂದ ಯುವಜನಾಂಗದ ಸ್ವತಂತ್ರ ಮನೋವೃತ್ತಿಯ ಬಗ್ಗೆ ಅಭಿಮಾನವೆನಿಸುತ್ತದೆ. ಇದು ಪ್ರಗತಿ ಸೂಚಕ ಚಿಹ್ನೆ. ಅಲ್ಲದೆ ವಾಸು-ಸುಶೀಲ ಹಿಂದೆ ಮುಂದೆ ನೋಡದೆ ಹೀಗೆ ಮನೆ ಬಿಟ್ಟು ಹೊರಟುನಿಂತಾಗ ಇವರಲ್ಲವೆ ‘ರೊಮ್ಯಾಂಟಿಕ’ ಪ್ರೇಮಿಗಳು ಅನಿಸುತ್ತದೆ. ಆದರೆ ಜಡವಾದ ಸಂಪ್ರದಾಯನಿಷ್ಠ ಕಾಗೆ ಬಳಗದಿಂದ ರೆಕ್ಕೆ ಬಲಿತ ಕೋಗಿಲೆ ಮರಿಗಳು ವಿಹರಿಸಲು ಬೇರೆ ಪ್ರಪಂಚ ವಿಶಾಲವಾಗಿದೆಯಲ್ಲಾ ಎಂಬ ಸಮಾಧಾನವೂ ಮೂಡುತ್ತವೆ. ಪರಂಪರೆಯ ಗರ್ಭದಿಂದಲೇ ಪ್ರಗತಿಯ ಕುಡಿಯೊಡೆಯುತ್ತದೆ.

“ಆ ಊರು’ ನಾಗರಕೋಟೆಯು ನವನಾಗರಿಕತೆಯನ್ನೂ ಅದರ ಹೃದಯಹೀನತೆಯನ್ನೂ, ವ್ಯಾಪಾರೀ ಮನೋವೃತ್ತಿಯನ್ನೂ ಬಿಂಬಿಸುತ್ತದೆ. ಗೋಪಾಲ ನಾಯಕರ ಮನೆ ಕೆಲವು ಅತ್ಯಾಧುನಿಕ ಉಪಕರಣಗಳಿಂದ, ವಿದ್ಯುದ್ದೀಪಗಳಿಂದ ಅಲಂಕೃತವಾಗಿರುವುದೂ, ನವನಾಗರಿಕ ಶ್ಯಾಮನ ವಸಾಹತು ಸ್ಥಾಪಕ ಸ್ವಭಾವ-ಈ ಮಾತನ್ನು ಸಮರ್ಥಿಸುತ್ತವೆ. ವ್ಯಾಪಾರೀ ಬುದ್ಧಿ ಹೆಚ್ಚಿದಂತೆಲ್ಲಾ ಐಶ್ವರ್ಯ ಕೂಡುತ್ತದೆ, ಹೃದಯ ಬರಡಾಗುತ್ತದೆ, (ಗಂಗಾಬಾಯಿ). ಇದ್ದರೂ ಕುರುಡು ಕಾಂಚಾಣದ ಕುಣಿತಕ್ಕೆ ತಾಳ ಹಾಕುತ್ತದೆ. ಇಲ್ಲವೆ ಬಾಯಿಬಿಟ್ಟು ನೋಡುತ್ತಿರುತ್ತದೆ. (ಗೋಪಾಲ ನಾಯಕ-ನಾನಾ) ಮತ್ತು ಹೃದಯವಿದ್ದೂ ಮೂಕವಾಗುತ್ತದೆ (ಬಂಡಿ). ಒಟ್ಟಿನಲ್ಲಿ ನಾಗರಕೋಟೆಯಲ್ಲಿ ಭಾರತದ ಪ್ರಾಚೀನ ಸಂಸ್ಕೃತಿಯ ನಯ, ನೀತಿ, ಸೂಕ್ಷ್ಮಜ್ಞತೆ, ನ್ಯಾಯ, ನಿಯಮ, ದಯ, ದಾಕ್ಷಿಣ್ಯ, ಪ್ರೀತಿ, ವಿಶ್ವಾಸ ಇತ್ಯಾದಿ ಮಾನವನ ಅಂತಃಕರಣದ ಭಾವನೆಗಳೆಲ್ಲಾ ಬತ್ತಿಹೋಗಿವೆ. ನಾಗರಕೋಟೆಯಲ್ಲಿ ನಡೆದ ಮದುವೆಯಲ್ಲಿ ಜರುಗಿದ ಮಾರಾಮಾರಿ ಜಗಳ-ಕಿತ್ತಾಟವನ್ನೂ ಇಲ್ಲಿ ಸ್ಮರಿಸಬಹುದು. (ಪುಟ-೯೭)

ಆದರೆ ಇತ್ತ ‘ಈ ಊರು’ ಹಾಲಳ್ಳಿ ನದಿಯ ಈಚೆ ದಂಡೆಯಲ್ಲಿ ನಾಗರಕೋಟೆಗೆ ವಿರುದ್ಧವಾಗಿದೆ. ‘ಈ ಊರು’ ಒಂದು ಹಳ್ಳಿ. ಪ್ರಾಚೀನ ಭಾರತದ ರೈತ ಸಂಸ್ಕೃತಿಯ ಒಂದು ದ್ವೀಪದೋಪಾದಿಯಲ್ಲಿ ಉಳಿದಿದೆ. ವಸಾಹತು ಮನೋಭಾವದ ನಾಗರ ಕೋಟೆಯು ದಾಳಿಯನ್ನು ಸಹಿಸಿಕೊಂಡು ಹಾಲಳ್ಳಿ ತನ್ನ ಹೃದಯವಂತಿಕೆಯನ್ನು ಉಳಿಸಿಕೊಂಡು ಬಂದಿದೆ. ಈ ಊರಿನ ನೇಗಿಲಯೋಗಿಗಳ ಮಾತುಕತೆಗಳು ನಮಗೊಂದು ಅಪೂರ್ವ ಭಾವನೆಯನ್ನು ಮಾಡಿಸುತ್ತವೆ.

“ನಾಗರಕೋಟೆ’ ಎಂಬ ಆ ಊರಿನ ಹೆಸರೇ-ಹುತ್ತ. ಅವರಲ್ಲಿ ಒಂದು ಘಟಸರ್ಪ, ಅದರ ಭೋರಾಡುವ ಬಿಚ್ಚಿದ ಹೆಡೆ, ಕವಲು ನಾಲಗೆ, ಸುತ್ತಲಿನ ವಿಷಾನಿಲ…ಈ ಎಲ್ಲದರ ಅನುಭವವನ್ನು ಮೂಡಿಸುತ್ತದೆ. ಹೂತಿಟ್ಟ ಕೊಪ್ಪರಿಗೆ (ಬಂಗಾರದ) ಹಣವನ್ನು ಸರ್ಪ ಕಾವಲು ಕಾಯುತ್ತದೆಯೆಂಬ ನಂಬಿಕೆಯನ್ನು ನೆನೆದಾಗ ಗಂಗ-ಭಯ ಪಾತ್ರ ಹೇಗೆ ಅರ್ಥವತ್ತಾಗುತ್ತದೆ ಎಂಬುದು ತಿಳಿಯುತ್ತದೆ.

ಆದರೆ ‘ಹಾಲಳ್ಳಿ’ ಎನ್ನುವ ಹೆಸರೇ-ಗೋವು, ಅದರ ಸಾಧು ಸ್ವಭಾವ, ದುಡಿಮೆ ಮೂಕ ಸಾಕ್ಷಿ ಇತ್ಯಾದಿ ಭಾವಕೋಶದ ಸುರುಳಿಯನ್ನು ಬಿಚ್ಚಿಸುತ್ತದೆ. ರಾಮಣ್ಣ ಸೀತಕ್ಕ ತಮ್ಮ ಒಡವೆ ವಸ್ತ್ರ, ಹಣಕಾಸು ಎಲ್ಲವನ್ನೂ ನಾಗರಕೋಟೆಯ ಹುತ್ತಕ್ಕೆ ಸುರಿದರೂ ‘ವಾಸು-ಸುಶೀಲ’ರ ಬವಣೆ ತಪ್ಪಲಿಲ್ಲ. ‘ಹಾವಿಗೆ ಹಾಲೆರದಂತೆ ಈಚಲ ಮರಕ್ಕೆ ನೀರು ಹೊಯ್ದಂತೆ.’

ಕೆಲವೊಮ್ಮೆ ‘ಆ ಊರು-ಈ ಊರು’ ನಾಟಕದ ವ್ಯಕ್ತಿನಾಮಗಳೂ ಅನ್ವರ್ಥವಾಗಿ ಪೌರಾಣಿಕ ಪುರುಷರ ನೆನಪು ತರುತ್ತವೆ. ರಾಮಣ್ಣ-ಸೀತಕ್ಕ : ವಾಸು-ಸುಶೀಲ, ಗೋಪಾಲನಾಯಕ, ರುದ್ರಪ್ಪ, ಮೂಕ ಬಂಡಿ, ಶ್ಯಾಮ (ಕಪ್ಪು-ಕಳಂಕ) ಇತ್ಯಾದಿ.

ಈ ನಾಟಕದ ಕೆಲವು ಸಹಜ ವ್ಯಾಪಾರಗಳು, ಸಂಗತಿಗಳು ಬೇರೆ ಅರ್ಥವನ್ನು ಧ್ವನಿಸುತ್ತ ಹೋಗುತ್ತವೆ. ಅದರಲ್ಲಿ ಒಂದೆರಡನ್ನು ಗಮನಿಸಬಹುದು. ವಾಸು ಮೊದಲ ದೃಶ್ಯದಲ್ಲಿ ನಿಂತ ಗಡಿಯಾರದ ಮುಳ್ಳಿನ ಲೆಕ್ಕಕ್ಕೆ ತನ್ನ ವಾಚನ್ನು ಮೊದಲು ಸರಿಪಡಿಸಿಕೊಳ್ಳುವುದು -ಹಿರಿಯರ ಅಂಕೆಯಲ್ಲಿ ಮುದುರಿಕೊಂಡಿರುವುದನ್ನೂ, ಜೀವನ ಸ್ಥಗಿತವಾಗಿರುವುದನ್ನೂ ಸೂಚಿಸಿದರೆ, ಕೊನೆಯ ದೃಶ್ಯದಲ್ಲಿ ತನ್ನ ಕೈ ವಾಚಿನ ಟೈಮಿಗೆ ಗೋಡೆ ಗಡಿಯಾರಕ್ಕೆ ‘ಕೀ’ ಕೊಟ್ಟು ಹೊತ್ತನ್ನು ತಿರುಗಿಸುವುದು ಸ್ಥಗಿತವಾದ ಜೀವನಕ್ಕೆ ಚಲನೆಯನ್ನು ನೀಡಿದಂತೆ ಎಂಬುದನ್ನೂ, ಹಿರಿಯರ ಕಾಲ ಮುಗಿಯಿತು ಇನ್ನು ನಮ್ಮ ಕಾಲವೆಂಬುದನ್ನೂ ಧ್ವನಿಸುತ್ತದೆ. ಅಲ್ಲದೆ ಗಡಿಯಾರ ಹನ್ನೆರಡು ಗಂಟೆ ಹೊಡೆದಾಗ ವಾಸು-ಸುಶೀಲರು ಮನೆಯಿಂದ ಹೊರಡುವುದು ಹೊಸ ಯುಗದ ಹೊಸ ಶಕೆಯ ಆರಂಭವನ್ನು ಧ್ವನಿಸುವುದು.

ಹಾಲಳ್ಳಿಯಲ್ಲಿ ಆಚಾರ‍್ರು ಅವರ ರಾತ್ರಿಸೂಕ್ತ ಪಾರಾಯಣವೂ ಸೀತಕ್ಕನ ಮಗುವಿನ ಸಾವಿನ ಹಿನ್ನಲೆಯಲ್ಲಿ ಅರ್ಥವತ್ತಾಗಿದೆ. ಹುಟ್ಟು-ಸಾವು ಯಾರ ಕೈಯಲ್ಲೂ ಇಲ್ಲ ಎಂಬ ಪರಂಪರಾನುಗತವಾದ ನಂಬಿಕೆಯ ಗಟ್ಟಿ ನೆಲದ ಮೇಲೆ ಈ ಸಂಗತಿ ನಿಂತಿದೆ.

ಮಲ್ಲನಿಗೆ ಕನಸಿನಲ್ಲಿ ಚಿರ್ಚ ಕಾಣುವುದು, ಹಸುವಿನ ಕರುವನ್ನು ಹಿಡಿಯಲು ಬಂದ ಚಿರ್ಚವನ್ನು ಎರಡು ಹಸುಗಳು ಓಡಿಸುವುದು. “ಆ ಊರು ಈ ಊರು’ಗಳ ನಡುವೆ ಬರುವ ಹೊಳೆ, ಸೆಕೆ, ಗುಡುಗು, ಸಿಡಿಲು, ಮಳೆ ಮುಂತಾದ ಸಂಕೇತಗಳು ಅರ್ಥವತ್ತಾಗಿವೆ: ಸುಖ-ದುಃಖಕ್ಕೆ ಸಂಕೇತಗಳಾಗಿ ನಮ್ಮ ಸಂವೇದನೆಯನ್ನು ತೀವ್ರಗೊಳಿಸುತ್ತವೆ. ಹೀಗೆ ಅನೇಕ ಬಗೆಯಿಂದ ಈ ನಾಟಕ ವಿವೇಚನೆಗೆ ಅರ್ಹವಾಗಿದೆ.

‘ಆ ಊರು ಈ ಊರಿ’ನ ಭಾಷೆ ಉತ್ತರ ಕರ್ನಾಟಕ ಭಾಷೆಯಾದರೂ ಇತ್ತೀಚಿನ ಆ ಕಡೆಯು ನಾಟಕಗಳಂತೆ ಭಾಷೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿಲ್ಲವೆಂಬುದನ್ನು ಈಗಾಗಲೇ ಶ್ರೀ ಮಾಧವ ಕುಲಕರ್ಣಿಯವರು ಗುರ್ತಿಸಿದ್ದಾರೆ. ಆದರೆ ದಕ್ಷಿಣ ಮೈಸೂರು ಭಾಷೆಗೆ ಈ ನಾಟಕವನ್ನು ಅನುವಾದ ಮಾಡಿದರೂ ಅದರ ಅಂತಃಸತ್ವಕ್ಕೆ ಕುಂದುಂಟಾಗುವುದಿಲ್ಲವೆಂಬುದನ್ನು ಅನುವಾದಿಸಿ ಓದಿನೋಡಬಹುದು. ಸತ್ವಯುತವಾದ ಕೃತಿಯ ಲಕ್ಷಣಗಳಲ್ಲಿ ಇದೂ ಒಂದಲ್ಲವೆ?

“ಆ ಊರು – ಈ ಊರು’ ನಾಯಕನಿಲ್ಲದ ನಾಟಕ, ವಾಸು ನಾಯಕ ಸ್ಥಾನದಲ್ಲಿದ್ದರೂ ನಾಯಕನ ಗುಣ ಲಕ್ಷಣಗಳಿಲ್ಲ, ನಿಜ. ಆದರೆ ನಾಯಕಿ ಪ್ರಧಾನವಾಗಿದ್ದಾಳೆ. ಸುಶೀಲ ನಾಯಕಿಯ ಸ್ಥಾನದಲ್ಲಿದ್ದಾಳೆ ಮತ್ತು ಅಂಥ ಲಕ್ಷಣಗಳನ್ನೂ ಹೊಂದಿದ್ದಾಳೆ. ಅವಳಿಗೆ ಪ್ರಮುಖವಾದ ಸ್ಥಾನ ಸಿಕ್ಕಿದೆ. ಭಾಸನ ‘ಸ್ವಪ್ನವಾಸವದತ್ತ’ ನಾಟಕದಲ್ಲಿ ವಾಸವದತ್ತೆಗೆ ನಾಯಕಿಯ ಪಟ್ಟ ಸಿಕ್ಕಿದಂತೆ. ಸುಶೀಲಳಿಲ್ಲದ ಯಾವ ದೃಶ್ಯವೂ ಇಲ್ಲ. ಅವಳ ಆಗಮನ-ನಿರ್ಗಮನಗಳಿಂದ ದೃಶ್ಯಗಳು ತೆರೆಯುತ್ತವೆ. ಇಲ್ಲವೆ ಮುಗಿಯುತ್ತವೆ. ಅವಳೊಟ್ಟಿಗೆ ನಾಟಕ ಲಂಬಕ ಚಲನೆಯಲ್ಲಿ ತೊಡಗುತ್ತದೆ. ಆದರೆ ಮೂರನೆಯ ದೃಶ್ಯದಲ್ಲಿ ಅವಳಿಲ್ಲ. ಅವಳಿಲ್ಲದಿದ್ದರೂ ರಾಮಣ್ಣ ನಾಗರಕೋಟೆಗೆ ಮಗಳನ್ನು ಕರೆಯುವುದಕ್ಕಾಗಿ ಅಲ್ಲಿರುವಳೆಂದೇ ಹೋಗಿದ್ದಾನೆ. ಸುಶೀಲ ರಂಗದ ಮೇಲೆ ಕಾಣದಿದ್ದರೂ ಪ್ರೇಕ್ಷಕರ ಮನಸ್ಸಿನಲ್ಲಿ ಎರಡನೆಯ ದೃಶ್ಯದ ಕೊನೆಯ ಅವಳ ಮಳೆಯಲ್ಲಿ ತೋಯ್ದ, ಪ್ರಟ್ಟ ತಮ್ಮನ ನೋಡಲು ಹೊಳೆಯನ್ನೂ ದಾಟಿದ, ಒಲವಿನ ಜೀಮಿಯ ಕರುಣಾ ಜನಕ ಚಿತ್ರ ಹಾಗೆಯೆ. ಇರುತ್ತದೆ. ಅಥವಾ ಮಾರನೆಯ ದೃಶ್ಯವಿಲ್ಲದಿದ್ದರೂ ನಾಟಕದ ಐಕ್ಯದ ಸೂತ್ರಕ್ಕೆ, ಸಂಕೀರ್ಣತೆಗೆ, ತೀವ್ರತೆಗೆ ಯಾವ ಧಕ್ಕೆಯೂ ಬರುವುದಿಲ್ಲ. ಅಂದರೆ ನಾಯಕಿಯ ಗಂಡನಾದ್ದರಿಂದ ವಾಸುವಿಗೆ ನಾಯಕ ಪಟ್ಟವೆಂದಾಯಿತು. ಆದರೆ ಆತನೇನು ‘ಅಮ್ಮವ ಗಂಡ’ನಲ್ಲ: ಏಳನೆಯ ಅಂಕದ ಕೊನೆಯಲ್ಲಿ ಒಮ್ಮೆಲೆ ನಾಯಕನ ಸಿಂಹಾಸನದ ಮೇಲೆ ವಾಸು ಕುಳಿತು ನಾಯಕಿಯನ್ನು ಹಿಂದೆ ಸರಿಸಿದಾಗ ನಾಯಕನಿಲ್ಲದ ನಾಟಕದವೆಂದವರಿಗೆ ಕಕ್ಕಾವಿಕ್ಕಿಯಾಗಬಹುದು.

ಆ ಊರು – ಈ ಊರಿನ ಅತ್ತೆ ಮನೆ-ತೌರು ಮನೆಗಳು ನಮ್ಮ ದೇಶದ ಎಲ್ಲ ಕಾಲದ ಅತ್ತೆ ಮನೆ-ತೌರಮನೆಗಳೆ ಆಗಿವೆ. ಈ ಮೂಲ (Stock) ಅತ್ತೆಮನೆ-ತೌರುಮನೆಗಳು ಜನಪದ ಕವಿಗಳಿಂದ ಕವಿಕುಲಗುರು ಕಾಳಿದಾಸನವರೆಗೆ ಕಂಡ ಅತ್ತೆಮನೆ-ತೌರುಮನೆಗಳನ್ನೇ ನೆನಪಿಗೆ ತರುತ್ತವೆ. ಈ ನಾಟಕವು ಶಾಕುಂತಲ ನಾಟಕದ ನಾಲ್ಕನೆಯ ಅಂಕದ ನೆನಪು ತಂದುಕೊಡುವುದು: ಶಕುಂತಲೆಯನ್ನು ಗಂಡನ ಮನೆಗೆ ಬೀಳ್ಕೊಡುವಾಗ “ಸಾಕು ತಂದೆಯಾದ ನನಗೇ ಇಂಥ ದುಃಖವಾದರೆ ನಿಜವಾದ ತನೂಭವೆಯರನ್ನು ಪತಿ ಸದನಕ್ಕೆ ಬೀಳ್ಕೊಡುವ ಲೋಕದ ಮಾತಾಪಿತೃಗಳ ದುಃಖ ಇನ್ನೆಷ್ಟಿರಬೇಕು”-ಎಂ ಕಣ್ವ ಋಷಿಗಳ ಮಾತಿಗೆ ಇಲ್ಲಿ ನಿಜವಾದ ತಂದೆಯಾದ ರಾಮಣ್ಣನ ದುಃಖಿ ಸಮರ್ಥನೆಯನ್ನು ನೀಡಿ ಕಾಳಿದಾಸನ ಪ್ರತಿಭೆಯ ದರ್ಶನ ಮಾಡಿಸುತ್ತದೆ.

ಕೊನೆಯ ನಾಲ್ಕು ಅನುಮಾನಗಳು :

೧ ಮೂರನೆ ದೃಶ್ಯವನ್ನು ಕೈಬಿಡಬಹುದು,
೨ ಆರು ಮತ್ತು ಏಳನೆ ದೃಶ್ಯಗಳ ಮಧ್ಯದ ವರ್ಷಗಳ ಅಂತರ,
೩ ಐದನೆ ದೃಶ್ಯದೊಂದಿಗೆ ನಾಟಕ ಮುಕ್ತಾಯಗೊಂಡಿದ್ದರೆ?
೪ ಅಥವಾ ಸಿಂಹಾವಲೋಕನ (Flash-back) ಕ್ರಮದಲ್ಲಿ ನಾಟಕ ರಚನೆಯಾಗಿದ್ದರೆ?

೧ ಈ ಮೊದಲೇ ಸೂಚಿಸಿರುವಂತೆ ವರನ ದೃಶ್ಯವಿಲ್ಲದಿದ್ದರೂ ನಾಟಕ ಒಪ್ಪುತಿತ್ತು. ಮೂರನೆಯ ಅಂಕದಲ್ಲಿ ಸುಶೀಲಳ ಪ್ರವೇಶವಿಲ್ಲ: ರಾಮಣ್ಣ ಮಗಳನ್ನು ಕರೆಯನ್ನು ಬೀಗರ ಮನೆಗೆ ಹೋಗಿ ಬೀಗಿತಿಯಿಂದ ಮುಚ್ಚಂಜೆಯ ಮಂಗಳಾರತಿಯನ್ನೆತ್ತಿಸಿಕೊಂಡು ಬರುತ್ತಾನೆ. ಇಷ್ಟೇ ಈ ದೃಶ್ಯದ ಉಪಯೋಗ. ಆದರೆ ನಾಲ್ಕನೆಯ ದೃಶ್ಯದಲ್ಲಿ (ಪುಟ ೧೫೨ ರಲ್ಲಿ) ರಾಮಣ್ಣನ ಮಾತಿನಿಂದ ಅವನು ನಾಗರಕೋಟೆಗೆ ಹೋಗಿಬಂದ ಮೂರನೆ ದೃಶ್ಯದ ಸಾರಾಂಶವನ್ನು ಪಡೆಯಬಹುದು, ಮತ್ತು ರಿಪೇರಿ ಶೀವಪ್ಪನಂತೆಯೇ ಈತನಿಗೆ ಮರ‍್ಯಾದೆಯಾಗಿದೆ ಎಂದು ಊಹಿಸಬಹುದು ಎಂದು ಶೀನಪ್ಪನೂ ಗೋಪಾಲ ನಾಯಕರ ಮನೆಯಲ್ಲಿ ಸುಶೀಲಳನ್ನು ಕರೆಯಲು ಹೋದ ದೃಶ್ಯ ವಾಸ್ತವವಾಗಿ ಇಲ್ಲ. ಹೀಗೆ ಮಾಡಿದ್ದರೆ ಗಗಾಬಾಯಿಯ ಬಗ್ಗೆ ಸ್ವಲ್ಪ ಚುನು ಭಂತಿ ತೋರಿಸಿದಂತಾಗುತ್ತಿತ್ತು, ಪ್ರಾಯಶಃ ರಾಮಣ್ಣ ಮಗಳನ್ನು ಬರೆಯ ಹೋದರೆ ಬೀಗಿತಿ ಹೀಗೇ ಮರ‍್ಯಾದೆ ಮಾಡುವಳೆಂಬ ಕಲ್ಪನೆ ನಮಗೆ ಮೊದಲೇ ಬರುವುದರಿಂದ ಮಾರನೆ ದೃಶ್ಯದ ಅಗತ್ಯ ಏನು ಎಂಬ ಪ್ರಶ್ನೆ ಬರತ್ತದೆ. ಮೂರನೆ ದೃಶ್ಯವನ್ನು ಬಿಟ್ಟರೆ ಎರಡನೇ ದೃಶ್ಯವೇ ಬೆಳೆದು ಈಗಿರುವ ನಾಲ್ಕನೆಯ ದೃಶ್ಯವನ್ನೂ ಒಳಕೊಂಡು ದೀರ್ಘವಾಗುತ್ತದೆ. ಹೀಗಾದರೆ ನಾಟಕ ಒಟ್ಟು ಐದು ದೃಶ್ಯಗಳ ನಾಟಕವಾಗುತ್ತದೆ. ೩೦ ಪುಟಗಳಷ್ಟು ಗಾತ್ರ ಕುಗ್ಗುತ್ತದೆ.

೨ ಈ ಅಂಶ ಮುದ್ರಣ ದೋಷವೋ ಅಥವಾ ಲೇಖಕರ ಕಣ್ಣು ತಪ್ಪೋ ಗೊತ್ತಾಗುವುದಿಲ್ಲ. ಏಕೆಂದರೆ ಐದರ ನಂತರ ಆರನೆಯ ದೃಶ್ಯ ನಾಲ್ಕು ವರ್ಷವಾದ ಮೇಲೆ ಮುಂದುವರಿಯುತ್ತದೆ. ಸುಶೀಲ ಅತ್ತೆಯ ಮನೆಗೆ ಹೊರಟಿದ್ದಾಳೆ. ಆದರೆ ಏಳನೆಯ ದೃಶ್ಯದ ಆರಂಭಕ್ಕೆ ಮೂರು ವರ್ಷದ ನಂತರ ಎಂದು ಸೂಚಿಸಿದೆ. ಸುಶೀಲ ಅತ್ತೆ ಮನೆಯನ್ನು ಅದೇ ದಿನ ಬೆಳಿಗ್ಗೆ ಸೇರುತ್ತಾಳೆ. ಆದ್ದರಿಂದ ಈ ನಾಲ್ಕು-ಮೂರು ವರ್ಷದ ಆಂತರಕ್ಕೆ ಸಮಾಧಾನ ಅಗತ್ಯ. ಬಹುಶಃ ಏಳನೆ ದೃಶ್ಯದ ಆರಂಭಕ್ಕೆ ನಾಲ್ಕಕ್ಕೆ ಬದಲು ಮೂರು ಅಂತ ತಪ್ಪು ಬಿದ್ದಿರಬೇಕು.

೩ ಐದನೆ ದೃಶ್ಯದೊಂದಿಗೆ ನಾಟಕ ಸಹಜವಾಗಿಯೇ ಮುಕ್ತಾಯಗೊಳ್ಳುವಂತಿದೆ. ಹಾಗೆ ಮಾಡಿದ್ದರೆ ಸ್ಟೇಜಿಗೆ ತರುವ ದೃಷ್ಟಿಯಿಂದ ನಾಟಕದ ೪೬ ಪುಟಗಳಷ್ಟು ಗಾತ್ರ ಕುಗ್ಗುತ್ತಿತ್ತು. ಮತ್ತು ಐದನೆ ದೃಶ್ಯದ ಕೊನೆಯ ಶೀನಪ್ಪನ, “ಕಾಯಿ ಹಣ್ಣಾಗಬೇಕಾದರೆ ಕಾವು ಉಣಬೇಕು” ಎಂಬ ಮಾತೂ, ವಾಸುವು “ಎಷ್ಟು ಕಾಯಬೇಕು ?” ಎಂಬ ಪ್ರಶ್ನೆಯ ಭವಿಷ್ಯ ಆಶಾದಾಯಕವಾಗುತ್ತದೆ, ಪ್ರಗತಿಶೀಲವಾಗುತ್ತದೆ – ಎಂಬಂಥ ಸೂಚನೆಯನ್ನು ಕೊಡುವುದರಿಂದ ಐದನೆ ದೃಶ್ಯದ ಮುಕ್ತಾಯವೂ ಸಹಜವೇ ಆಗುತ್ತಿತ್ತು.

(ಆದರೆ ಇದು ಲೇಖಕರ ಇಚ್ಚೆಗೆ ಬಿಟ್ಟಿದ್ದು, ಪ್ರಶ್ನಿಸುವಂತಿಲ್ಲ.)

೪ ಆ ಊರು ಈ ಊರು Flash-back ಮಾದರಿಯಲ್ಲಿ ಚಲನಚಿತ್ರ, ಮಾಧ್ಯಮದಲ್ಲಿ ಪರಿಣಾಮಕಾರಿಯಾಗಿ ಮೂಡಿಬರಬಹುದು. ಆರು ಮತ್ತು ಏಳನೆಯ ದೃಶ್ಯಗಳಲ್ಲಿ ಮೊದಲ ಐದು ದೃಶ್ಯಗಳನ್ನೂ ತಂದು ಅಳವಡಿಸಬಹುದು, (ಅಂದರೆ ನವ್ಯದ ಅಸಂಗತ ನಾಟಕ ಮಾಡಬೇಕೆಂದು ಅರ್ಥವಲ್ಲ.)

ಇನ್ನು ಜಡಭರತರ ಸಂಯಮ ಅಸಾಧಾರಣವಾದದ್ದು. ಅದಕ್ಕೆ ಒಂದೆರಡು ನಿದರ್ಶನಗಳು: ಒಂದು: ಪ್ರೇಕ್ಷಕರು ‘ಇನ್ನೇನು ಶ್ಯಾಮನಿಂದ ಸುಶೀಲಳ ಶೀಲಭಂಗವಾಗಬಹುದು’ ಎಂದು ಅನಿಸುವುದರಿಂದ ತಪ್ಪಿಸಿಕೊಳ್ಳಲಾರದ ಉತ್ಕಟತೆಯಲ್ಲಿದ್ದೂ ಅಂಥ ಪ್ರಯತ್ನ ಆಗದೆ ಇರುವುದು.

ಎರಡು: ಆರನೆಯ ದೃಶ್ಯದ ಸುಶೀಲಳ ಬೀಳ್ಕೊಡಿಗೆಯನ್ನೂ, ಮತ್ತು ರಂದ್ರನ ಕೊನೆಯ ಹಾಡನ್ನೂ ಪರಿಭಾವಿಸಿದವರಿಗೆ ಸುಶೀಲ ದೋಣಿ ದುರಂತಕ್ಕೆ ಎಲ್ಲಿ ಈಡಾಗುವಳೋ ಎಂಬ ಆತಂಕಕ್ಕೆ ಎಡೆಯಾಗಿ ಅಂಥ ದುರಂತವಿಲ್ಲದ ಏಳನೆಯ ದೃಶ್ಯ ತೆರೆದುಕೊಳ್ಳುವುದು. ಈ ಸಿನಿಮೀಯವಾಗದ ಸಂಯಮ ಮೆಚ್ಚಬೇಕಾದ್ದು.

ಹೀಗೆ ಒಟ್ಟಿನಲ್ಲಿ ಜಡಭರತರ ‘ಆ ಊರು-ಈ ಊರು’ ಒಂದು ಶಕ್ತಿಯುತ ಸಂಪ್ರದಾಯ ನಾಟಕವೆನ್ನಲಡ್ಡಿಯಿಲ್ಲ.

Close

ಮಾತು, ಮಾತು, ಮಾತು

ಮಾತು, ಮಾತು, ಮಾತು

ವಿ ಕೆ ಜನಾರ್ದನ್

ಹೊಚ್ಚಹೊಸ ಮಗುದಾರವನ್ನೇ ಹಿಗ್ಗಾಮುಗ್ಗಾ ಜಗ್ಗಿ
ಗೊಂತನ್ನೇ ಭಡ್ಡೆಂದು ಕಿತ್ತೊಗೆದು, ಹೂಂಕರಿಸಿ ಹೊರಸಿಡಿದು
ಗಾಡಿಗಾಡಿ ಕೆಮ್ಮಣ್ಣನ್ನೇ ಗುಮ್ಮಿಗುಮ್ಮ ಸುಮ್ಮನಾಗುವ
ಹಿಂಡು ಹಿಂಡು ಹೋರಿ-ಮಾತುಗಳು
ಮೌನದ ಬಸಿರಲ್ಲಿ
ಗೊರಸೊರಸಿ ಗುಟುರು ಹಾಕುತ್ತಾ ನಿಮಿರಿ ನಿಂತಿವೆ.
*****
ಪದರಪದರವಾಗಿ ಪಸರಿಸಿರುವ
ಮಾತಿನ ಸ್ತರಗಳೆಲ್ಲಾ
ಅರೆಬರೆ ಬೆಳಕಲ್ಲಿ, ಕುಲಬೆರಕೆ ಕಲರವದ ದಭದಭೆಗೆ
ಅಮಲೇರಿ ಆಯತಪ್ಪಿ ಅಬ್ಬರಿಸಿ ಕ್ಯಾಬರಿಸಿ
ವಿಲಾಯತಿ ವೀಣೆಯು ಅಪಸ್ವರಕ್ಕೆ ಸರಿಯಾಗಿ
ಹಂತಹಂತವಾಗಿ ಸ್ಟ್ರಿಪ್-ಟೀಸ್ ಮಾಡಿ
ಅಂತಿಮ ನೂಲೆಳೆಗೆ ಕೈ ಸೋಂಕಿದಾಗ
ಗರ್ಭಗುಡಿಯ ಗಂಟೆಯ ಗಾಂಗಿನ
ಬ್ಯಾಂಗ್ ಬ್ಯಾಂಗ್ ಬ್ಯಾಂಗ್
ಕಿವಿದೊಗಲು ತತ್ತರಿಸಿ ಕತ್ತರಿಸಿ ಸಿಡಿದು ಸೀಳಿದಾಗ
ಫಳಾರನ ವಿಂಚಿ ಕಣ್ಣು ಕುಕ್ಕುವ
ಕಗ್ಗತ್ತಲು.
***

ಅಳಿದುಳಿದ ಅನೀಮಿಕ್ ಮಾತುಗಳಿಗೆಲ್ಲಾ
ಆಸ್ಪತ್ರೆ ಅಭಿಸಾರಿಕೆಗಳ, ಅಬಾರ್ಷನ್ ಸುದ್ದಿಯ
– ರಕ್ತದಾನ ಮಾಡಿ
ನೆಗೆದುಬಿದ್ದ ನಾಲಗೆಯಲ್ಲೇ
ಹಾಗೂ ಹೀಗೂ ಹಲವಾರು ನಿಮಿಷ ಹೆಣ
ಗಾಡಿಕೊಂಡು
ಸಭಿಕರ ಕೈಯಲ್ಲಿ ಪ್ರಚಂಡ ಚಪ್ಪಾಳೆ ತಟ್ಟಿಸಿಕೊಂಡು
ರಾಷ್ಟ್ರಗೀತೆ ಕೇಳಿಸಿಕೊಂಡು
ಕತ್ತಲಲ್ಲೆಲ್ಲೋ ಕರಗಿಹೋಗುತ್ತೇನೆ.

Close

ನನ್ನ ಮನೆ

ನನ್ನ ಮನೆ

ರಘುರಾಮರಾವ್ ಬೈಕಂಪಾಡಿ

ಜಿನುಗು ಮಳೆ ; ಮುಚ್ಚಂಜೆ ; ತೆರೆದ ಬಾಗಿಲು; ಒಳಗೆ
ಹನಿಗಣ್ಣು, ತೊಯ್ದ ಬಟ್ಟೆಯಲೆ ಬಂದೆ.
ಹಾಲುಣಿಸಿ ಹೊದೆಸಿ ಇರು, ಮಲಗೆಂದವರೆ ಮತ್ತೆ
ಕೀಲಿ ಕೈ ಕೆಡಲು ಕಳೆದಿತ್ತು ಬೆಳಗೆ.

ಓಣಿ ಊರೆಲ್ಲಲೆದು ಕೊನೆಗು ದಕ್ಕಿದ್ದೆನಗೆ
ಬಯಲು ಸೀಮೆಯ ಹಳೇ ಮಹಡಿ ಮಹಲು.
ಸುತ್ತ ಹೊಚ್ಚಿದ ಹಸಿರು ; ಹಳೆ ಮಣ್ಣ ಮುಚ್ಚಿ ಹೂ
ಬಳ್ಳಿ ಬಿಚ್ಚುವ ಹರಯದರಳು ಮರುಳು.

ಬಲಕೆ ಚಾಚಿದ ಬೆಟ್ಟ ನೀಲದಾಚೆಗೆ ಬೆಳಕು
ಬಂಗಾರದಂಗಳಕೆ ಮಜಲು ಮಜಲು.
ಬಿದ್ದ ತಾರಗೆ ತಲೆಯ ಕರುಳ ಕೊಚ್ಚೆಯೊಳಿಟ್ಟು
ಮುದುಡಿ ಮಲಗಿದ ಕಣಿವೆ ಮಂಜಿನೊಡಲು.

ಹೇಗೊ ನೆಲಕಾನಿಸಿದ ನೀಲ ಡೇರೆಯ ಕೆಳಗೆ
ದಿನರಾತ್ರಿ ಋತುಗತಿಯ ರಾಸಮೇಳ
ಮಣ್ಣಿನಂಗಳಕೊಡ್ಡಿ ಇಂದ್ರಚಾಪದ ಮೋಡಿ
ರಿಂಗಣಕ್ಕೆಳೆಯುವುದು ನನ್ನ ಕಾಲ.

ಗೋಡೆಗೊತ್ತಿಯೆ ನಿಂತ ಕಪ್ಪು ಕಣ್ಣಿನ ಹುತ್ತ
ಆಗೀಗ ಮೇಲೆತ್ತಿ ಹಡ ಸವಾಲು
ಜಗ್ಗಿ ನಿಲ್ಲಿಸಿ ನನ್ನ ಮೆಲ್ಲನೆಸೆವುದು ಬಳಿಗೆ
ಬಳ್ಳಿ ಜಡೆಯಿಂದೆರೆಡು ಹಿಗ್ಗಿದರಳು.

ಇರುಳು-ಕಿಟಕಿಯ ಹೊರಗೆ ಹೋದ್ದು ಕಪ್ಪಗೆ ಸೆರಗು
ಕದ್ದು ನೋಡುವ ಕಣ್ಣು, ಕಾಣದುರುಳು.
ಹಗಲೆ ಸುಡುಸುಡು ಪಂಜು ಹಿಡಿದೆ ಓಡಾಡಿದರು
ಕಣ್ಣು ತಪ್ಪಿಸಿ ಸರಿವ ಕರುಡು ನೆರಳು.

ಹಕ್ಕಿ ಹಾಡಿಂದುಗುವ ಹಸಿರಿನಕ್ಕರೆ: ನೆಕ್ಕಿ
ನೀರನಾಲಗೆಯಾದೆ ನೆಲದ ಸವಿಗೆ.
ಹುಲ್ಲು ಹೂವಿಂದೆತ್ತಿ ಗಾಳಿಯಿತ್ತ ಸರಾಯಿ
ಹೀರಿ ಹಾರಿದೆ ಮೇಲೆ ಮುಗಿಲ ಜತೆಗೆ.
೨
ನನ್ನವರೆ ಅನಿಸಿದರು ಹೊಸಿಲು ಹಾಯುವರೆಲ್ಲ
ಉಂಡ ಮನೆಗೆರಡಿಲ್ಲಿ ಬಗೆವರುಂಟು.
ಕೊಂದು ಮೂಳೆಯ ಹೂಳಿ, ಬೆಟ್ಟವೆದ್ದರು ಮೇಳೆ
ಬಗಿದೆದ್ದು ಬಿಗಿದಪ್ಪುವಂಥ ನಂಟು.

ಬೆನ್ನ ನೆಳಲಲೆ ನಿಂತು ಕಣ್ಣಮುಚ್ಚಲೆಯಾಡಿ
ಕದ್ದು ಕಾಡುವ ಮಣ್ಣ ಬಳಗ ನೂರು;
ಹೆಜ್ಜೆ ಹೆಜ್ಜೆಗು ಹುದಿಲು ಕಾಲ ತೊಡರುವ ಬಿಳಲು
ಒಲವು ನಲವಿನ ನವುರು ನಾರುಬೇರು.

ಮಬ್ಬು ಬರಲೆದ್ದು ಕಣ್ಮುಖಕೆ ರಪ್ಪನೆ ಬಡಿದು
ತಲೆಮರೆಸಿ ಮೆರೆವ ಗಬ್ಬಿಲದ ಹಲ್ಲೆ.
ತಪ್ಪಿಲ್ಲ ನನಗು ಈ ಮೊದಲೆ ಇದ್ದವರಿಲ್ಲಿ
ಬಿಟ್ಟ ತಲೆತಿರುಕ ತಬ್ಬಲಿಯ ತರಲೆ !

ಮಲಗಿದ್ದ ಹಾಗೆಯೇ ಮಂಚದಡಿಯಿಂದೆದ್ದು
ಬೆನ್ನ ಪರಚುವ ತಗಣೆ ತೊಗಲ ತುರಿಕೆ.
ಇರುಳು ಮೇಲಟ್ಟದಲಿ ಸದ್ದು ಗದ್ದಲ ! ಕೆಳಗೆ
ಮೂಲೆ ವಾಡಿಕೆಯೊಳೆಲ್ಲ ಹೀಚು ಹಿಕ್ಕೆ.

ಧ್ಯಾನ ಮಧ್ಯಾಹ್ನದಲು ಲೊಚಗುಟ್ಟುವವು ಹಲ್ಲಿ
ಕಗ್ಗತ್ತಲಲ್ಲಿ ಕೆಂಗಣ್ಣ ಪಿಳಿಕು;
ಮುಚು ಬಾಗಿಲಿನಾಚೆ ನೆನಪು ನಾಲಗೆ ಮೆಲುಕು.
ಹಾದಿ ಮೂಸುತ ಬರುವ ಕಾಳಬೆಕ್ಕು.

ಕೆಳೆಯನುಸುರುವ ಮಾತ ಕತ್ತ ಹಿಚುಕುವ ಕಿರಿಚು ;
ಮಾತು ವಂಗಿದರು ಮುಗಿಯದಿರುವ ಕಿರಿಕು.
ಕಣ್ಣು ಕಣ್ಣಿಗು ನಡುವೆ ಬೆಳೆವ ರೇಶಿಮೆಯ ಬಲೆ.
ಅಡಿಗೆ ಗೆದ್ದಲು ಗಿಡಿವ ಚಳಿ ನೆಲಕು !

ಕೊಂದು ಮಂದಿಯನಿವರ ಕಾಣೆ ಬಾಳುವ ಬಗೆಯ !
ಗಾಳಿನೂಲಿನ ಜೇಡ ಪಡೆಗೆ ಸಾವೆ ?
ಗುದ್ದಿ ಗೆದ್ದಲ ಮುಗಿಸೆ ಮಣ್ಣೆ ಮಸೆಯುತಿಹುದು;
ಮೀಸೆ ತುರುಕುವ ಆಸೆಗೆಲ್ಲು ಠಾವೆ !
೩
ನನಗೆ ಇದು ಯಾವುದೋ ಮಯನ ಮಾಯಕದ ಮನೆ ;
ಮೂಲೆ ಮೂಲಕ್ಕಿಲ್ಲ ಹೊಕ್ಕು ಬಳಕೆ.
ವ್ಯರ್ಥ ತಿಣುತಿಣುಕಿ ಈ ಮಿಣಕು ಬಂದ್ದಿಯ ಟಾರ್ಚು
ಬಿರುಕು ಬಿಲಗಳ ಹುಡುಕಿ ಜಡಿವ ಬಯಕೆ.

ಮೇಲೆ ಮಹಡಿಗು ಮಹಡಿ ಕೆಳಗು ಮಾಳಿಗೆ ಮಳಿಗೆ
ಬರಲು ಹೋಗಲು ನೂರು ಬಾಗಿಲು ಬಗೆ.
ಮಣ್ಣ ದಿಣ್ಣೆಗು ಬಿಡದ ಬಾನ ಕಾವಲುಗಣ್ಣು
ಬಿಗಿವ ಗಬ್ಬದ ಮಬ್ಬು-ಮಗ್ಗುಲೊಳಗೆ.

ನನಗಾದರೇಕಿಷ್ಟು ಕೊಠಡಿ ಗಿಠಡಿಯ ವರಸೆ !
ಕಸವನೊಟ್ಟುವ ಒಗೆವ ನಿತ್ಯ ಜೀತ !
ಏನೆ ಬಾಡಿಗೆಗಿಲ್ಲಿ ಬೀಡು ಬಿಟ್ಟೊಬ್ಬಂಟಿ
ಕೋಣೆಯೆರಡರೊಳೆಲ್ಲ ನನ್ನ ಜಿಗಿತ.

ಯಾವ ತಾತನ ತಾತ ಇದನು ಕಟ್ಟಿಸಿ ಹೋದ
ಗೌಡರೈವರು ಸುತರಿಗಿಲ್ಲ ನೆನಪು.
ಬರುವ ಬಾಡಿಗೆಗಿಷ್ಟು ಸುಣ್ಣ ಸಾರಣೆ ಮೆತ್ತಿ
ಕಾದು ಕೊಂಡವರಷ್ಟೆ ತಮ್ಮ ಹಕ್ಕು.

ಹೇಗಿದ್ದರೂ ಸರಿಯೆ ! ನನಗು ಬೇರಿಲ್ಲ ನೆಲೆ
ಎಲ್ಲಿಗಲೆದರು ಇಲ್ಲಿ ಕೀಲಿ ಹೊತ್ತು,
ನೆಲದ ಒಡೆಯರಿಗಂತು ಕಾಲಕೊಪ್ಪಿಸಬೇಕು
ತೆತ್ತು ನೆತ್ತರಿನುಪ್ಪ ಬೆವರ ಕಂತು.

ಇದ್ದ ಕದ ತೆರೆದಿಟ್ಟು ಈ ಮಣ್ಣಗುಂಡಿಗೆಗೆ
ಬಯಲು ಬಾನಿನ ತಿದಿಯ ಬೆಸೆವ ತನಕ
ಮಿಡಿಯಲೊಲ್ಲದು ಮುಗ್ಗಿ ಮುದಿವ ಪದಪದರದಲಿ
ನಿಜದ ನೆಮ್ಮದಿಯ ಸಮಶೀತಶಾಖ!

ಗಳಿಗೆ ಬಟ್ಟಲೊಳಿಟ್ಟು ಉರಿವ ಹರಣದ ಬತ್ತಿ
ನಡುಮನೆಯೊಳೇ ಕಾದು ನೋಡಬೇಕು
ಬೆನ್ನು ಬಿಡದೀ ಪಹರೆ ಕಣ್ಣಪಟ್ಟಿಯ ಕುಣಿಕೆ
ಸುಟ್ಟು ತೆರೆದೀತೆ ನಿಚ್ಚಳದ ಬದುಕು !

Close

ಸಮಾಧಿಯ ಮೂಕ ಸಾಕ್ಷಿ

ಸಮಾಧಿಯ ಮೂಕ ಸಾಕ್ಷಿ

ಕ ವೆಂ ರಾಜಗೋಪಾಲ

ನಾನು ಬೇಸಿಗೆ ರಜಕ್ಕೆ ನಮ್ಮ ಊರಿಗೆ ಹೋದಾಗ ಒಮ್ಮೆ ನನ್ನ ಗಳೆಯ ‘ಸಾಬು’ವಿನ ಸಮಾಧಿಯನ್ನು ನೋಡಿ ಬರುತ್ತೇನೆ: ಒಂದು ಫರ್ಲಾಂಗ್ ಡೌನಿನಲ್ಲಿ ‘ಕಾವೇರಿ’ ಮೌನವಾಗಿ ಇದ್ದೂ ಇಲ್ಲದಂತೆ ಹರಿಯುತ್ತದೆ. ದೊಡ್ಡ ಆಲದ ಮರದ ನೆರಳಲ್ಲಿ ಆ ಸಮಾಧಿ ಸ್ವಲ್ಪ ದೂರಕ್ಕೇ ಕಾಣುತ್ತದೆ. ಮರದ ದಟ್ಟವಾದ ನೆರಳಲ್ಲಿ ಪಶ್ಚಿಮಕ್ಕೆ ಮುಖ ಮಾಡಿದಂತೆ ಅಲಂಕಾರರಹಿತ ಕಲ್ಲೊಂದು ಏನನ್ನೋ ಬಚ್ಚಿಸಿಕೊಂಡು ನನ್ನ ಕಣ್ಣಿಗೆ ಬೀಳುತ್ತದೆ. ಅದರ ಸುತ್ತಮುತ್ತ ಇರುವ ಅನೇಕ ಕಲ್ಲುಗಳಿಗಿಂತ ಇದೊಂದೇ ನನ್ನನ್ನು ನುಡಿಸುವಂತಾಗುತ್ತದೆ. ಮರದ ನೆರಳಿನಲ್ಲಿ ತಂಪು ಕೂಡ ಘನೀಭೂತವಾದಂತೆ ಇರುತ್ತದೆ. ಆದರೆ ಅದರ ಮುಂದೆ ನಿಂತಾಗ ಒಂದು ಕ್ಷಣದಲ್ಲಿ ನನ್ನ ಮೈ ಬೆವರುತ್ತದೆ. ಆಗ ತಲೆ ಬಾಗಿ ನಿಲ್ಲುತ್ತೇನೆ. ಅದು ಆರುತ್ತಿದೆಯೆಂದು ಮನಸ್ಸಿಗೆ ಹೊಳೆದಾಗ ಹಣೆಯನ್ನು ಕರ್ಚಿಫಿನಿಂದ ಒರೆಸಿಕೊಂಡು ಹಿಂದಿರುಗುತ್ತೇನೆ. ಆಗಲೂ ಗೆಳಯ ‘ಸಾಬು’ ಬದುಕಿದ್ದಾನೆಂದು ಅನ್ನಿಸುತ್ತದೆ.

ಹದಿನೈದು ವರ್ಷಗಳ ಹಿಂದೆ ಹೀಗೆಯೇ ಒಂದು ಚಳಿಗಾಲ. ನದಿಯಲ್ಲಿ ನೀರಿತ್ತು : ಹರಿಯುತ್ತಿತ್ತು. ಮಂಜಾನೆ ಹೊತ್ತು ಹುಟ್ಟಿದರೂ ಅವನು ತನ್ನ ಚಾಪೆಯ ಮೇಲೆ ಗೋಣಿಯ ತಾಟು ಹೊದ್ದವನು ಎಚ್ಚರಾಗಲಿಲ್ಲ. ಎದ್ದು ನದಿಯ ಕಡೆ ಹೊರಟು ಮಾಮೂಲು ಕ್ರಮ ನಡೆಸಿ ಮುಖ ತೊಳೆದು ಬರುವಾಗ ಮಸೀದಿಗೆ ಭೇಟಿ ಕೊಟ್ಟು ಮನೆಗೆ ಬಂದು ರೊಟ್ಟಿ ತಿಂದು ದನಗಳನ್ನು ನೋಡಿ ಹಾಲು ಕರದದ್ದಾಗಿದೆಯೆಂದು ಕೇಳಿ ತಿಳಿದು, ಅವುಗಳನ್ನು ಬಿಚ್ಚಿ ಹೆಗಲ ಮೇಲೆ ಒಂದು ಟವೆಲ್ ಹಾಕಿ ಕೈಲಿ ಮೀನಿನ ಗಾಳ ಮತ್ತು ಸಣ್ಣ ಚೀಲ ಹಿಡಿದು, ದನಗಳನ್ನೂ ಹೊಡೆದುಕೊಂಡು ಕಾಡಿನ ಕಡೆ ಹೋಗಬೇಕಾದವನು, ಇನ್ನೂ ಮಲಗಿಯೇ ಇದ್ದಾನೆ ! ಮನೆಯ ಯಜಮಾನಿ ಹಯಾಭಿ ಬಂದು ಕೂಗಿದಳು. ಇಲ್ಲ, ಉತ್ತರವಿಲ್ಲ. ಕೊಂಚ ಸಿಟ್ಟು ಬಂದು ಮುಖದ ಮೇಲಿನ ಹೊದಿಕೆಯನ್ನು ಎಳೆದಳು, ಗಾಬರಿಯಾಯಿತು. ಅಳಿಯನನ್ನು ಕರೆದಳು ತೋರಿಸಿದಳು. ಜ್ವರವಿರಬಹುದೆಂದು ಆತ ಕೂಗಿದ; ಉತ್ತರವಿಲ್ಲ. ಹತ್ತಿರ ಕುಳಿತು ಹಣೆ ಮುಟ್ಟಿ ನೋಡಿದ-ಚಳಿಯಿಂದ ಕೊರೆಯುವ ಕಲ್ಲು ಮುಟ್ಟಿದಂತಾಯ್ತು. ಕಣ್ಣುಗಳು ಬಲಕ್ಕೆ ಸಿಕ್ಕಿಕೊಂಡಿದ್ದವು, ಅವನು ಕೊಂಚ ಮಾಲನಿದ್ದ ಕಾರಣ ಹಾಗಿರಬಹುದೆನ್ನಿಸಿತು. ಹಣೆಯ ಬಳಿ ಹಿಡಿದು ಅಲುಗಿಸಿದ. ಕುತ್ತಿಗೆ ಕಳಚಿದಂತೆ ತೋರಿತು. ಆಡು ಸತ್ತಾಗ ಗೋಣು ಸಡಿಲಾದಂತೆ ಅನ್ನಿಸಿತು, ಯಾ ಅಲ್ಲಾ, ಎಂದು ಹೊದಿಕೆ ಸರಿಸಿ ಎದೆ ಮುಟ್ಟಿದ ಹೊಟ್ಟೆ ಮುಟ್ಟಿದೆ, ಎಲ್ಲವೂ ತಣ್ಣಗೆ, ನದಿಯ ಹೊಸ ನೀರಿನಲ್ಲಿ ಕೈಯಿಟ್ಟ ಹಾಗೆ ! ಅವನ ಗಾಬರಿಯಿಂದ ಹಯಾಬಿಗೆ ಜೀವ ತಣ್ಣಗಾಗಿದೆಯೆಂದು ಅನ್ನಿಸಿ ಬಾಗಿಲು ದಾಟಿ ನಿಂತು ಕೂಗಿಕೊಂಡಳು. ಪಕ್ಕದ ಮನೆಯ ಸಾಬ್ಜಾನ್ ಸೇದುತ್ತಿದ್ದ ಬೀಡಿ ಹಿಡಿದೇ ಬಂದ, ಕೇರಿಯ ಗೋಣಿಮರದ ಕಟ್ಟೆಯಲ್ಲಿ ಕುಳಿತಿದ್ದ ಇನ್ನಿಬ್ಬರೂ ಬಂದರು. ಆಕೆ ಕೂಡಲೆ ನಡುಮನೆಯೊಳಕ್ಕೆ ಹೋದಳು.

ಎರಡು ಮೂರು ಮಂದಿ ಬಂದು ನೋಡಿದರು. ಅಳಿಯ ಷರೀಫನ ಮೋರೆ ಕಳೆಗಟ್ಟಿತ್ತು. ಅದನ್ನು ಅರ್ಥ ಮಾಡಿಕೊಂಡೇ ಅಮೀರ್ ನೆರವಾದ. ಕೂಡಲೇ ಅಲ್ಲಾ ಹೆಸರು ಹೇಳುತ್ತಾ ಚಾಪೆ ಸಹಿತವಾಗಿ ಸಾಬವನ್ನು ಮಕ್ಕಾ ಕಡೆಗೆ ತಲೆಯಾಡಿಸಿದರು. ಮತ್ತೊಬ್ಬ ಇಮಾಮ್‌ ಅಲ್ಲಿಂದ ಹೊರಟು ಮಸೀದಿಗೆ ಮುಟ್ಟಿ ಖಾಜಿ ಸಾಹೇಬರನ್ನು ಕಂಡುಬಂದ ಅಳಿಯ ಅದನ್ನೇ ಕಾಯುತ್ತ ಕುಳಿತರೂ ತಲೆಯ ಮೇಲೆ ಕೈ ಹೊತ್ತಿದ್ದವನು ಎದ್ದು ಒಳಮನೆಯ ಬಾಗಿಲಲ್ಲಿ ನಿಂತ ನೀರು ಕಾಯಿಸಬೇಕೆಂದ. ಹಯಾಬಿಯೂ ಅಲ್ಲಾ, ಯಾ ಖುದಾ ಎಂದು ಮುಂತಾಗಿ ಗೋಳಿಡುತ್ತಾ ನೀರು ಕಾಯಿಸಲು ಸಿದ್ಧಳಾದಳು. ಮತ್ತು “ಸಾಲು’ನ ಅಕ್ಕ-ನೂರುನ್ನೀಸಾಗೆ ಹೇಳಿಕಳಿಸಬೇಕೆಂದು ಹೇಳಿದಳು. ಹಾಗೆಯೇ ಆಗಲೆಂದು ಆತ ಹೊರಬಂದು ಪಕ್ಕದ ಮನೆಯ ಕಾಸಿಂನನ್ನು ಕೂಗಿ ಕರೆದು ನಾಲ್ಕು ಮೈಲಿಯಾಚೆಯ ಹೊಡೇನೂರಿಗೆ ಹೋಗಿಬರಬೇಕೆಂದು ಕೇಳಿಕೊಂಡ. ಕಾಸಿಂ ಕೂಡ ದಿನಗೂಲಿಗೆ ಹೋಗುತ್ತಿದ್ದವನು, ಕೊಂಚ ಗೊಣಗಿದರೂ ಷರೀಫನ ಮೋರೆ ನೋಡಿ “ಆಗಲಿ, ನೋಡುತ್ತೇನೆ’ ಎಂದಾಗ ‘ಹಾಗನ್ನಬೇಡ……ಆಕೆಗೆ ಮೋರೆ ಸಿಕ್ಕಬೇಕು’ ಎಂದು ಕೇಳಿಕೊಂಡಾಗ ‘ಸರಿ’ ಎಂದು ಹೊರಟ.

ಕಾಸಿ ಅಲ್ಲಿಂದ ಹೊರಟು, ಅಂದು ಬೆಳಗಿನ ಕೆಲಸಕ್ಕೆ ಸಾಧ್ಯವಿಲ್ಲೆಂದು ನಿಶ್ಚಯಿಸಿ ಕೆಲಸದ ಮೇಸ್ತ್ರಿಗೆ ಹೇಳಿಬಂದು, ಹೊಡೇನೂರಿನ ಹಾದಿ ಹಿಡಿದು, ನದಿಯ ದಂಡೆಯ ಮೇಲೆ ಕಾಲುಹಾದಿ ತುಳಿದಾಗ ಖಾಜಿ ಸಾಹೇಬರು ಮಸೀದಿಯಿಂದ ಬೊರಾನ್ ಹಿಡಿದು ಹೊರ ಇರುತ್ತಾ ಬಾಗಿಲಲ್ಲಿ ನಿಂತು ತಮ್ಮ ಪೇಟವನ್ನು ಸರಿಯಾಗಿ ಸುತ್ತುತ್ತಿದ್ದರು, ಅವರಿಗೆ ಸಲಾಂ ಹೇಳಿ ಮಾತಿಗೆ ನಿಲ್ಲದೆ (ಅವನು) ಮುಂದೆ ಹೊರಟೇಬಿಟ್ಟ.

ಖಾಜಿ ಸಾಹೇಬರು ಬಂದು ನೋಡಿದಾಗ ಮಕ್ಕಾ ಕಡೆ ತಲೆ ಮಾಡಿ ಮಲಗಿಸಿದ್ದನ್ನು ಕಂಡು ಸಮಾಧಾನ ತಾಳಿದರು. ತಲೆಯ ಕಡೆ ಕುಳಿತು ಖೊರಾನ್ ತೆಗೆದು ಮಂತ್ರವನ್ನು ಜಪಿಸುವಂತೆ ಒಂದು ಪುಟದಲ್ಲಿ ಓದತೊಡಗಿದರು. ಗ್ರಂಥವಾದರ ಅವರಿಗೆ ನೆಪಕ್ಕೆ ಮಾತ್ರ, ಗಡ್ಡ ದಟ್ಟವಾಗಿ ಬೆಳ್ಳಗಾಗಿದ್ದರೂ ಮೈಕೈ ತುಂಬಿಕೊಂಡಿದ್ದು ಒಳ್ಳೆ ಸೈಜು ಆಳೆಂದು ಯಾರಿಗೂ ಅನ್ನಿಸುತ್ತಿತ್ತು. ಕೊಂಚ ಹೊತ್ತಾದ ಮೇಲೆ ಅಲ್ಲಾ ಹೆಸರು ಹೇಳಿದವರೇ ಷರೀಫ್ ಕಡೆ ತಿರುಗಿದರು…….ಹೊದ್ದಿಕೆಯನ್ನು ತೆಗೆದುಹಾಕುವಂತೆ ಹೇಳಿ ಮುಖದ ಮೇಲೆ ಕೈ ಆಡಿಸಿದಂತೆ ರೆಪ್ಪೆಗಳನ್ನು ಮುಚ್ಚಿದರು, ನೀರು ಕಾದಿದೆಯೋ-ಎಂದು ಕೇಳಿ ಒಳಗಿನಿಂದ ಇನ್ನೂ ಕೊಂಚ ಗರಮ್ ಆಗಬೇಕೆಂದು ಹೇಳಿದ ಉತ್ತರದಿಂದ ಮತ್ತೆ ಖೊರಾನ್ ಓದತೊಡಗಿದರು.

ಹಯಾಬಿ ಒಳಗೊಳಗೇ ಅಳುತ್ತಿದ್ದಳು. ತನ್ನ ಅಳು ಖಾಜಿ ಸಾಹೇಬರಿಗೆ ಕೇಳಕಂಡದೆಂದು ಅದನ್ನು ನುಂಗಿಕೊಳ್ಳುತ್ತಾ ಸೆರಗಿನಿಂದ ಒರೆಸಿಕೊಳ್ಳುತ್ತಿದ್ದಳು. ಅವಳ ಮಗಳು ಮೂರು ತಿಂಗಳ ಬಾಣಂತಿಯ ಸ್ಥಿತಿಯೂ ಹೀಗೆಯೇ. ಮಗುವೆಲ್ಲಿ ಅತ್ತೀತೋ ಎಂಬ
ಭಯದಿಂದ ಕೂಸನ್ನು ತೊಡೆಯ ಮೇಲೆರಿಸಿಕೊಂಡು ಆಡಿಸುತ್ತಾ ಅದರ ಎದೆಯಮೇಲೆ ವಾತ್ಸಲ್ಯದಿಂದ ತಟ್ಟುತ್ತಾ ಸಾಬುವಿನ ನೆನಪುಗಳನ್ನು ಕಾಣತೊಡಗಿದ್ದಳು-ಹೌದು ಮೂರು ವರುಷಗಳಿಂದ ಅವನು ಮನೆಯ ಜೀತದಾಳಾಗಿ ಅವನ ಅಪ್ಪನ ಸಾಲ ತೀರಿಸಲು ಬಂದವನು. ಕಾಡಿನಲ್ಲಿ ಅವನಿಗೆ ತಿಳಿಯದ ವಿಷಯವೇ ಇಲ್ಲ. ಒಮ್ಮೊಮ್ಮೆ ಬೇಟೆಯಾಡುವವರ ಗುಂಪಿನಲ್ಲಿ ಸೇರಿ ಪಾಲಿನ ಮೊಲವನ್ನೊ ಹುಲ್ಲೇಕರುವನ್ನೂ ತಂದು ಕೊಡುತ್ತಿದ್ದ. ಸೀಬೆ, ನೇರಿಳೆ, ಮಾವು (ಹಣ್ಣಿನ ಕಾಲದಲ್ಲಾದರೆ), ಕಾಡುಮಲ್ಲಿಗೆ, ಪಾದರಿ ಮೊದಲಾದ ಹೂವುಗಳನ್ನೂ ತರುತ್ತಿದ್ದ. ತನ್ನನ್ನು ಅಕ್ಕನೆನ್ನುವಂತೆ ಕಾಣುತ್ತಿದ್ದ. ಈ ಹುಡುಗ ಮೀನು ಹಿಡಿಯುವುದರಲ್ಲೂ ಜಾಣ. ಮನೆಯ ದನಗಳನ್ನು ಸುರಕ್ಷಿತವಾಗಿ ತರುತ್ತಿದ್ದವನು……ಅವರ ಒಂದು ಕಳ್ಳ ಹಸು ಆಗಾಗ ತಪ್ಪಿಸಿಕೊಳ್ಳುತ್ತಿದ್ದರು ಅದರ ಮೈವಾಸನೆಯನ್ನು ಹಿಡಿದಂತೆ ಅದರ ಕಾಲಿನ ಗೊರಸು ಮೂಡಿಸುವ ಗುರುತಿನಿಂದಲೇ ಅದರ ಜಾಡನ್ನು ಹಿಡಿದು ತರುತ್ತಿದ್ದವನು. ಹಯಾಬಿಗಾಗಲಿ ಷರೀಫನಿಗಾಗಲಿ ಅವನ ಬಹು ಒಳ್ಳೆಯ ವಂಶಸ್ಥನೆಂಬ ನಂಬಿಕೆಯಲ್ಲದೆ ‘ಸಾಚಾ ಬೇಟಾ’ ಅನ್ನುವಂತಾಗಿದ್ದನು. ಇಂಥವನು ಈಗ ಕಣ್ಣು ಮುಚ್ಚಿಕೊಂಡಿದ್ದಾನೆ. ಇನ್ನು ಇಂಥ ಆಳು ಸಿಕ್ಕುವುದಾದರೂ ಹೇಗೆ ಸಾಧ್ಯ……..ಪಾಪ! ದೇವರಿಗೆ ಕರುಣೆಯಿಲ್ಲವೇ ? ಎಂದುಕೊಂಡರು.

ಷರೀಫ್‌ಗೆ ಹೊಳೆಯಿತು-ಇನ್ನು ಶವಸಂಸ್ಕಾರಕ್ಕೆ ಸಿದ್ಧತೆಯಾಗಬೇಕು. ಅದಕ್ಕಾಗಿ ಒಳಗೆ ಹೋಗಿ ಹೊರಗಡೆ ಬಂದು ನಿಂತು ಸನ್ನೆಯಿಂದ ಮನೆಯ ಅಂಗಳಕ್ಕೆ ಅಮೀರನನ್ನು ಕರೆದು ಜೇಬಿನಿಂದ ಹತ್ತು ರೂಪಾಯಿಗಳ ಎರಡು ನೋಟುಗಳನ್ನು ಕೊಡುತ್ತಾ ಶವಕ್ಕೆ ಅರಿವೆ, ಅತ್ತರು ಮುಂತಾದುವನ್ನು ತರಲು ಹೇಳಿಕಳಿಸಿದನು. ಖಾಜೀ ಸಾಹೇಬರಿಗೆ ಇದೆಲ್ಲಾ ಮಾಮೂಲು ನೋಟ. ಅವರು ಖೊರಾನನ್ನು ನಂಬಿದ ನೋಟದಿಂದ ಅದನ್ನು ಓದುತ್ತಲೇ ಇದ್ದರು.

ಅಮೀರ್ ಬರಲು ಅರ್ಧ ಘಂಟೆಯಾಗಿರಬಹುದು. ಅಷ್ಟರಲ್ಲಿ ಒಳಗೆ ನೀರು ಬಿಸಿಯೇರಿತ್ತು. ಆದುದರಿಂದ ಉರಿಯುತ್ತಿದ್ದ ಸೋಗೆಯನ್ನೂ ಕಟ್ಟಿಗೆಯನ್ನೂ ನೊಂದಿಸಿ ಖಾಜಿ ಸಾಹೇಬರ ಕರೆಗಾಗಿಯೇ ಹಯೂಬಿ ಕಾದಿದ್ದಳು. – ಆದರೆ ಅವರು ಕುಳಿತಂತೆಯೇ ಅರ್ಧಘಂಟೆಗೂ ಹೆಚ್ಚು ಕಳೆದುಹೋಗಿತ್ತು. ಕೇರಿಯ ಹಿರಿಯರು ಕಿರಿಯರು ಮೊದಲಾಗಿ ಬಂದು ಸಾಬುವನ್ನು ನೋಡಿ ಮುಖವನ್ನು ಚಿಕ್ಕದು ಮಾಡಿಕೊಂಡು ನಿಂತರು. ಖಾಜಿಸಾಹೇಬರ ಗಂಭೀರ ಬಗೆಯಲ್ಲಿ ಅವರು ಯಾರೂ ಕಣ್ಣೀರು ಸುರಿಸುವಂತಿಲ್ಲ. ಕಣ್ಣು ಕರಗುವಂತಾದವರು ಹೊರಗೆ ಅಂಗಳಕ್ಕೆ ಬಂದು ಮತ್ತಿಬ್ಬರ ಮಸೀದಿಗೆ ಹೋಗಿ ಅಲ್ಲಾನ ಹೆಸರು ಹೇಳುತ್ತಾ ಡೋಲಿಯನ್ನು ತಂದು ಬಾಗಿಲ ಮುಂದೆ ಇರಿಸಿದಾಗ ಖಾಜಿ ಸಾಹೇಬರು ಒಮ್ಮೆ ಕಣ್ಣು ಹಾಯಿಸಿ ನೋಡಿ ಅವರು ಇರಿಸಿದ ರೀತಿಯು ಸಂಪ್ರದಾಯಕ್ಕೆ ಸರಿಯಾದುದೆಂದುಕೊಂಡು ಕೈಸನ್ನೆ ಮಾಡಿದರು. ಇದರಿಂದ ಅದನ್ನು ತಂದವರಿಗೆ ಒಂದು ಬಗೆಯ ಧಾರ್ಮಿಕ ಹೆಮ್ಮೆಯುಂಟಾಯಿತು. ತಮ್ಮ ಹೆಗಲಿನ ಮೇಲೆ ಟವಲ್ಲನ್ನು ಎಳೆದು ಸರಿಯಾಗಿ ಹಾಕಿಕೊಂಡು ಮುಂದೆ ಜರುಗಿ ಪಕ್ಕದಲ್ಲೇ ತೆರವಾಗಿದ್ದ ಬೀದಿಯ ಅಡ್ಡಲಾಗಿದ್ದ ಸಣ್ಣ ಸೇತುವೆಯ ಜಗಲಿಯ ಮೇಲೆ ಕುಳಿತು ನಿಧಾನವಾಗಿ ಬೀಡಿಯನ್ನು ತೆಗೆದು ಬಾಯಲ್ಲಿ ಕಚ್ಚಿಕೊಂಡರು : ಕಡ್ಡಿ ಗೀರಿ ಹಚ್ಚಿ ಸೇದತೊಡಗಿದರು.

ಅಲ್ಲಿದ್ದವರಲ್ಲಿ ಒಂದಿಬ್ಬರು ನೂರುನ್ನೀಸಾಳ ಬಡತನವನ್ನು ಕುರಿತು ಮರುಕದ ಮಾತಾಡಿದರು-ಆಕೆಯೂ ಬಡವೆ, ಗಂಡ ಬಿಟ್ಟು ಎಲ್ಲಿಯೋ ಕಾಫಿ ತೋಟದಲ್ಲಿ ಮತ್ತೊಬ್ಬಳನ್ನು ಕೂಡಿಕೊಂಡು ಇದ್ದು ಬಿಟ್ಟಿದ್ದಾನೆ. ಅವನ ಸುದ್ದಿಯೇ ಈ ಕಡೆಗೆ ಇಲ್ಲ. ಆದರೂ ಅಪ್ಪನ ಸಾಲ ತೀರಿಸುವ ಹೊಣೆಗಾರಿಕೆ ಮತ್ತು ತನ್ನ ಹೊಟ್ಟೆಯನ್ನು ಕೂಲಿ ಮಾಡಿ ಹೊರೆಯುವವಳು-ಅವಳು ಅಂದವಾಗಿದ್ದಿದ್ದರೆ, ಹಣಕಾಸಿದ್ದಿದ್ದರೆ ಆ ಕತೆಯೇ ಬೇರೆಗುತ್ತಿತ್ತು……..ಆದರೆ ಈಗ ಸಾಲದ ಹೊರೆ ಹೊತ್ತ ತಮ್ಮ ಕೂಡ ಕಣ್ಣು ಮುಚ್ಚಿದ……..ಇಂಥ ಬಡವರನ್ನು ಅಲ್ಲಾನೇ ಕಾಪಾಡಬೇಕು, ಇಲ್ಲದಿದ್ದರೆ ಮಾನದಿಂದ ಬದುಕುವುದು ಅಸಾಧ್ಯ……ಹೀಗೆಯೇ ಅಭಿಪ್ರಾಯ ಬೆಳೆಯುತ್ತಿತ್ತು.

ಖಾಜಿ ಸಾಹೇಬರ ಮಂತ್ರ ನಿಲ್ಲುವುದಕ್ಕೂ ಅಮೀರ್ ಬಟ್ಟೆಬರಿ, ಧೂಪ ಮೊದಲಾದುವನ್ನು ತರುವುದಕ್ಕೂ ತಾಳೆಯಾಯಿತು…….ಒಳಗಿನಿಂದ ಮಡಕೆಯಲ್ಲಿ ಕಾದಿದ್ದ ನೀರನ್ನು ತರಿಸಿದರು, ಆಗ ಇಬ್ಬರು ಮಧ್ಯವಯಸ್ಸಿನವರು ನೆರವಾದರು. ಸಾಬುವಿನ ಬಟ್ಟೆ ತೆಗೆದು ಜಗುಲಿಯ ಸಮೀಪದಲ್ಲಿದ್ದ (ಅಂಗಳದ ಒಳಗಡೆ ಒಂದು ಕೊನೆಯಲ್ಲಿ) ಸ್ನಾನದ ಚಪ್ಪಡಿಯ ಮೇಲೆ ಕೂಡಿಸಿದಂತೆ ಮಾಡಿ ಮೈತೊಳೆದರು. ನಂತರ ಹೊಸ ವಸ್ತ್ರದಿಂದ ಮುಚ್ಚಿ ಡೋಲಿಗೆ ಒಯ್ದು ಮಲಗಿಸಿದರು. ಅತ್ತರನ್ನು ಚುಮುಕಿಸಿ ಡೋಲಿಯನ್ನೂ ಗಮಗುಟ್ಟುವಂತೆ ಹತ್ತಿರದಲ್ಲೆ ಮಸೀದಿಯಿಂದ ತಂದ ಧೂಪದ ಪಾತ್ರೆಯಲ್ಲಿ ಕೆಂಡ ಹಾಕಿ ಸಾಂಬ್ರಾಣಿ ಪುಡಿಯಿಟ್ಟು ಹೊಗೆ ಮಾಡಿದರು. ಹಿಂದಿನ ದಿನ ಮನೆಗೆ ತಂದಿದ್ದ ಮಲ್ಲಿಗೆ ಮೊಗ್ಗು ಅರಳಿದ್ದರಿಂದ ಅಮೀರನು ಅದನ್ನೇ ತಂದು `ಸಾಬು’ವಿನ ದೇಹದ ಮೇಲೆ ಮೆಲ್ಲಗೆ ಉದುರಿಸಿದನು……ಈ ಸಮಯದಲ್ಲಿ ಖಾಜಿ ಸಾಹೇಬರು ಖೊರಾನ್ ಮಂತ್ರವನ್ನು ಪಠಿಸುತ್ತಲೇ ಇದ್ದರು.

ಷರೀಫ್….ಶವಕ್ಕೆ ಹಾಕಿರುವ ಪರಿಮಳವನ್ನು ಪರಿಶೀಲಿಸುವಂತೆ ತಲೆಯ ಭಾಗದಲ್ಲಿ ಬಾಗಿದಂತೆ ಎಲ್ಲರಿಗೂ ತೋರಿತು. ಆದರೆ ಅವನು ಕೂಡಲೆ ಯಾ ಅಲ್ಲಾ-ಎಂದು ಖಾಜಿಯವರ ಮುಖ ನೋಡಿದ. ಅದರ ಅರ್ಥವೇ ಬೇರೆಯಾಯಿತು. ಕಟ್ಟೆಯ ಮೇಲೆ, ಜಗುಲಿಯ ಮೇಲೆ, ಬೀದಿಯ ಪಕ್ಕದಲ್ಲಿ, ಅಲ್ಲಿ ಇಲ್ಲಿ ಕುಳಿತಿದ್ದವರಲ್ಲನೇಕರ ಜಗ್ಗನೆದ್ದು ಬಂದರು. ಎಲ್ಲರೂ ಶವದ ಕಡೆಗೆ ನಡೆದರು. ಖಾಜಿ ಸಾಹೇಬರೂ ಮಂತ್ರವನ್ನು ನಿಲ್ಲಿಸಿ ನೋಡಿದರು……..ಅವರ ತುಟಿ ಅಲುಗುತ್ತಿತ್ತು. ಶವದ ಮುಖವಲ್ಲಿ ಸಾವಿನ ಬಣ್ಣ ಬದಲಾಗಿರಲಿಲ್ಲ ನಿಜ. ಆದರೆ ಅದರ ಹಣೆಯ ಮೇಲೆ ಮೂರು ನಾಲ್ಕು ದಪ್ಪ ಹನಿಗಳು ಮೂಡಿದ್ದವು. ಹತ್ತಿರ ಬಂದವರು ಒಬ್ಬರ ಮುಖವನ್ನೊಬ್ಬರು ನೋಡಿದರು. ಖಾಜಿ ಸಾಹೇಬರನ್ನು ಕುರಿತು ನೋಡಿದರು ಇದರ ಅರ್ಥವೇನು ?……ಅಲ್ಲಾ ! ಎನ್ನುವಂತೆ ಅವರೆಲ್ಲರ ಸ್ಥಿತಿಯ ಆಗಿದ್ದಿತು. ಷರೀಫ್’ ಆ ಬೆವರು ಹನಿಗಳನ್ನು ಬೆರಳುಮಾಡಿ ತೋರಿಸಿದ. ‘ಒರಸು’ ಎಂದರು ಖಾಜಿ ಸಾಹೇಬರು. ತನ್ನ ಹೆಗಲ ಮೇಲಿದ್ದ ಟವೆಲ್ಲಿನಿಂದ ಮೆಲ್ಲಗೆ ಒರೆಸಿದ……ನೋಡಿ, ಖಾಜಿ ಸಾಹೇಬರೂ ದಿಟ್ಟಿಸಿ ನೋಡಿದರು. ಅದು ಮತ್ತೆ ಕಾಣಬಹುದೇನೋ-ಎಂದು ಇನ್ನು ಕೆಲವರು ಅವರಂತೆಯೇ ನೋಡಿದರು. ಪರೀಫ್ ಮೆಲ್ಲಗೆ ಶವದ ಮೂಗಿನ ಬಳಿ ಬೆರಳಿಟ್ಟು ಉಸಿರಾಡೀತೇನೋ ಎಂದು ನೋಡಿದ, ಗಾಳಿಗೆ ಸೆರಗು ಜರುಗಿದ್ದರಿಂದ ಆ ಸ್ಥಿತಿಯಲ್ಲಿ ಅವನಿಗೆ ಅರಿವಿಲ್ಲದೇ ಎದೆಯ ಮೇಲೆ ಕಿವಿಯಿರಿಸಿ ತಲೆಯೆತ್ತಿದ. ಅವನ ನಿರಾಶೆಯು ಸ್ಪಷ್ಟವಾಗಿತ್ತು. ಖಾಜಿ ಸಾಹೇಬರನ್ನೂ ನೋಡಿದ. ಅವರು ಈವರೆಗೂ ವಿಸ್ಮಯಕ್ಕೆ ಒಳಗಾಗಿದ್ದವರು ಅಲ್ಲಾ••••••ಖುದಾ……ಎಂದುಕೊಂಡು ಮುಗುಳು ನಕ್ಕರು. ಬೆವರಿನ ಹನಿಗಳು ಬದುಕಿನ ಗುರುತುಗಳಲ್ಲವೇ……ಎನ್ನಿಸಿರಲೂಬಹುದು. ಆದರೂ ಅವರಿಗೆ ಹಾಗನ್ನಿಸಿದಂತೆ ಯಾರಿಗೂ ತಿಳಿಯಲಿಲ್ಲ, ಶವವು ಅಲುಗಾಡದೇ ಬಣ್ಣ ಬಿಟ್ಟುಕೊಡದೇ ಹಾಗೆಯೇ ಇತ್ತು. ಅದಕ್ಕೂ ಪರಿಮಳದ ಗಮನ ಹಿಡಿದಂತೆ ಧೂಪದ ಬಟ್ಟಲಿನಲ್ಲಿ ಸಾಂಬ್ರಾಣಿಯ ಪರಿಮಳೆಯಂತೆ ಹೊಗೆಯು ಎಲ್ಲರ ಮೂಗನ್ನೂ ಮುಟ್ಟುತ್ತಿತ್ತು.

ಬಾಗಿಲ ತೆರೆಯನ್ನು ಕೊಂಚ ಸರಿಸಿ ಇಣಿಕಿನೋಡುತ್ತಿದ್ದ ಹಯಾಬಿ ತನ್ನನ್ನು ಯಾರೋ ಹಿರಿಯರು ನೋಡಿದಂತಾಗಿ ತೆರೆಯನ್ನು ಹಿಡಿದಿದ್ದ ಬಲಗೈಯನ್ನು ಬಿಟ್ಟು ‘ಯಾ…..ಖುದಾ……ನಮ್ಮ ಸಾಬುವನ್ನು ಬಚಾವ್ ಮಾಡು’ ಎಂದಳು. ಹಾಗೆಯೇ ಕೋಣೆಯ ಒಳಗಡೆಗೆ ಮೆಲ್ಲಗೆ ನುಸುಳಿಕೊಂಡಂತೆ ಮುಸುಕು ಹಾಕಿಕೊಂಡು ಹೋಗಿ ಮಗಳಿಗೆ `ಸಾಬು ಬದುಕಿರಬಹುದು’ ಎಂದು ಹೇಳಿದಳು. ಬಾಣಂತಿಯ ತೊಡೆಯ ಮೇಲಿನ ಕೂಸು ಈಗ ಕೊಂಚ ಅತ್ತಿತ್ತು. ಬಾಯಿ ಮಾಡಕೂಡದೆನ್ನುವಂತ ಬಲಗೈಯಿಂದ ಅದರ ಬಾಯನ್ನು ಮೃದುವಾಗಿ ಮುಚ್ಚಿದಳು. ಅದು ಅಳುವುದು ಜೋರಾಯಿತು ಎಂದು ಕೂಡಲೇ ಅದರ ಬಾಯಿಗೆ ಮೊಲೆಯಿಟ್ಟಳು, ತಾಯಿಯ ಮುಖ ನೋಡಿದಳು, ಗಂಡನನ್ನು ‘ಕೊಂಚ ಬನ್ನಿ’ ಎಂದು ಕರೆದಳು. ಷರೀಫ್ ಒಂದು ನಿಮಿಷ ತಡಮಾಡಿರಬಹುದು. ಅಷ್ಟೇ ಬಹಳ ಕಾಲವಾದಂತೆ ಅನ್ನಿಸಿ ಮಗುವಿಗೆ ಮತ್ತೊಂದು ಮೊಲೆಯನ್ನು ಊಡಿಸಿದಳು. ಷರೀಫ್ ಬಂದು ನಡೆದುದನ್ನು ಹೇಳಿದ `ಯಾ ಅಲ್ಲಾ’ ಎಂದು ಅವಳು ಕಣ್ಣು ಬಾಯಿ ತೆರೆದಳು. ಅಷ್ಟರಲ್ಲಿ ಖಾಜಿ ಸಾಹೇಬರು ಷರೀಫನನ್ನು ಕರೆದರು. ಅವನು ಕೂಡಲೆ ಅವರ ಕಡೆಗೆ ಬಂದುನಿಂತ.-

ಅವರು ಶವವನ್ನೇ ನೋಡುತ್ತಿದ್ದು……ಇದು ಏನೋ ಭೂತ (ಸೈತಾನ್) ಚೇಷ್ಟೆ. ಆದರೆ ನೀನು ಶವದ ಮೈ ಚೆನ್ನಾಗಿ ಒರೆಸಿದ್ದೆಯಾ? ಎಂದರು. ‘ಹಾ ಸಾಬ್…. ಜರೂರ್….ಅಲ್ಲಾ ಹೆಸರಿನಲ್ಲಿ’ ಎಂದ. ಅವರಂತೂ ಕೊಂಚ ವಿಚಾರ ಮಾಡಿದಂತೆ ಕಂಡಿತ್ತು. ಅವರು ಹಾಗೆಯೇ ಮತ್ತೆ ಖೊರಾನ್ ತೆಗೆದು ಮಂತ್ರ ಪಠಿಸತೊಡಗಿದರು. ಈ ವೇಳೆಗೆ ಮತ್ತೆರಡು ಮುತ್ತಿನಂಥ ಹನಿಗಳು ಶವದ ಮೂಗಿನ ಮೇಲೆ ಮೂಡಿದುವು. ಫರೀಫ್ ಅದನ್ನು ಕಂಡು ಚಕಿತನಾಗಿ ಮೆಲ್ಲಗೆ ಅರಿಯದ ಹಸುಳೆಯಂತೆ ತನ್ನ ಟವಲ್ಲಿನ ತುದಿಯಿಂದ ಒರೆಸಿದ, ಹತ್ತಿರವಿದ್ದವರ ಮುಖಗಳನ್ನ ನೋಡಿದ, ಅವರು ಖಾಜಿ ಸಾಹೇಬರನ್ನು ನೋಡುತ್ತಿದ್ದರು, ಒಂದಿಬ್ಬರು ಹಿಂದಕ್ಕೆ ಸರಿದು ಸೇತುವೆಯ ಕಟ್ಟೆಯ ಮೇಲೆ ತಳವೂರಿ ನಡುತ್ತಾ ಕುಳಿತರು. ಹಿರಿಯರಾದ ಅವರೇ ಉದಾಸೀನರಾದಂತೆ ತೋರಿತು. ಖಾಜಿ ಸಾಹೇಬರು ಮಾತ್ರ ಮಂತ್ರ ಪಠನದಲ್ಲಿ ನಿರತರಾಗಿದ್ದರು…..

ಆಷ್ಟರಲ್ಲಿ ಕಾಸಿಂ ಧಾವಿಸುತ್ತಾ, ಒಂದುನಿಂತ……..ನೂರುನ್ನೀಸಾ ಬೆಳಗಿನಲ್ಲೇ ಸಂಗರ ಸೆಟ್ಟರ ಹಳ್ಳಿಗೆ ಹೋಗಿದ್ದಳೆಂದೂ ಕಣಗಾಲಿಗೂ ಹೋಗಿ ಅಲ್ಲಿಂದ ಮುಂದಕ್ಕೆ ಅವಳ ಮೇಸ್ತ್ರಿಯ ಕೈಲಿ ಹೇಳಿ ಕಳುಹಿಸಿದುದಾಗಿಯೂ ತಿಳಿಸಿದ. ಈ ವೇಳೆಗೆ ಖಾಜಿ ಸಾಹೇಬರು ತಮ್ಮ ಶಾಸ್ತ್ರ ಮುಗಿಯಿತೆಂದೂ ಇನ್ನು ಶವವನ್ನು ಇರಿಸಿಕೊಳ್ಳಕೂಡದೆಂದೂ ನಿಂತರು. ಸರಿ, ನಾಲ್ಕು ಜನ ಅಲ್ಲಾ ಹೆಸರು ಹೇಳಿ ಡೋಲಿಯನ್ನು ಎತ್ತಲು ಸಿದ್ದರಾದರು. ಷರೀಫ್, ಇನ್ನೇನೂ ತೋಚದವನಂತೆ ಆದ. ಹಯಾಬಿ ಮನೆಯೊಳಗೆ ಯಾ ಖುದಾ …….’ ಎಂದು ಅತ್ತಳು, ಮಗುವು ಏಕೋ ಏನೋ ಎನ್ನುವಂತೆ ಆಳತೊಡಗಿತು. ಮೊಲೆಯುಣ್ಣುವದನ್ನೂ ಬಿಟ್ಟು ಆಳತೊಡಗಿತು. ಇನ್ನೆಲ್ಲಿ ಖಾಜಿ ಸಾಹೇಬರು ಸಿಟ್ಟಾದಾರೆಂಬ ಭಯದಿಂದ ಅದನ್ನು ತೋಳಿನಲ್ಲಿ ಎತ್ತಿ ತೂಗುತ್ತಾ ಸಮಾಧಾನಿಸಲು ತೊಡಗಿದಳು…….

‘ಅಲ್ಲಾ’ ಹೆಸರು ಹೇಳಿ ಡೋಲಿಯನ್ನು ಎತ್ತಿದಂತೆ ತೋರಿತು–ನಿಜಕ್ಕೂ ಖಾಜಿ ಸಾಹೇಬರ ಮುಂದಾಳುತನದಲ್ಲಿ ಶವದ ಯಾತ್ರೆ ಹೊರಟೇಬಿಟ್ಟಿತು. ಹರೆಯದವರು ಮೊದಲಾಗಿ ಎಲ್ಲರೂ ಹೆಗಲು ಕೊಡಲು ಬಂದರು……..ಅಮೀರ್ ತಾನು ತಂದಿದ್ದ ಪುರಿಯನ್ನು ಶವದ ಮೇಲೆ ಎರಚುತ್ತಾ ಹೊರಟ………..ಆಲದ ಮರದ ಕೆಳಗಿನ ಸ್ಮಶಾನಕ್ಕೆ ಅರ್ಧ ಮೈಲಿಯ ದಾರಿ…………ಕೇರಿಯನ್ನು ದಾಟಿದ್ದಾಯಿತು. ಅಲ್ಲಿಯವರೆಗೂ ಹೆಂಗಸರು ಮನೆಯೊಳಗಿನಿಂದ ಕಿಟಕಿಯ ಮಲಕ ಇಣಿಕಿ ನೋಡಿದರು. ಮಕ್ಕಳು ಬಾಗಿಲಲ್ಲಿ ಭಯಭೀತರಾಗಿ ನಿಂತರು. ಯಾತ್ರೆಯಂತೂ ನಡೆದೇ ಬಿಟ್ಟಿತು.

ಪರೀಫ್‌ಗೆ ಮನಸ್ಸು ಕುದಿಯುತ್ತಲೇ ಇತ್ತು. ಅಮೀರನಿಗೂ ಹೇಳಿಕೊಂಡ. ಅವನು ಖಾಜಿ ಸಾಹೇಬರ ಕಡೆ ತೋರಿಸಿದ. ಅವರ ಕಾಲು ಕಟ್ಟಿಕೊಳ್ಳುವಂತೆ ಮುಂದೆ ಹೋಗಿ ಕೇಳಿಕೊಂಡ. ‘ಅಲ್ಲಾ ಕರುಣೆ’ಯೆಂಬ ಡೋಲಿಯನ್ನು ಕೊಂಚ ನಿಲ್ಲಿಸಿ ನೋಡಬೇಕೆಂದು ಕೇಳಿಕೊಂಡ. ಇದನ್ನು ಕಂಡ, ಡೋಲಿ ಹೊತ್ತಿದ್ದ ಮಂದಿನ ಇಬ್ಬರು ನಿಂತರು, ಹಿಂದಿನವರಿಗೂ ನಿಲ್ಲುವಂತೆ ಹೇಳಿದರು. ಕೊಂಚ ತಗ್ಗಿಸಿ ಬಗ್ಗಿ ನೋಡಲು ಅವಕಾಶವಾಗುವಂತೆ ಮಾಡಿದರು. ಷರೀಫ, ಕೂಡಲೆ ಒಂದು ಕಡೆಯಿಂದ ಶವದ ಮುಖವನ್ನು ಮುಚ್ಚಿದ್ದ ಬಟ್ಟೆಯನ್ನು ಸರಿಸಿನೋಡಿದ. ಅದರ ಮುಖದ ತುಂಬೆಲ್ಲ ಮುತ್ತುಗಳಂತೆ ಹನಿಗಳು ಹೊಳೆದುವು. ಅಮೀರನೂ ನೋಡಿದ, “ಯಾ ಅಲ್ಲಾ…ಕಾಪಾಡು’ ಎಂದು, “ಖಾಜಿ ಸಾಬ್…. ನೋಡಿರಿ……. ಅವನು ಬದುಕಿರಬಹುದು’ ಎಂದು ಅಂಗಲಾಚಿದ.

ಖಾಜಿ ಸಾಹೇಬರು ಮುಂದುವರಿಯಲೂ ಆರದೆ ಅವನನ್ನು ಗದ್ದರಿಸಲೂ ಸಮರ್ಥರಾಗದೆ ತಮ್ಮ ನಂಬಿಕೆಯ ಒಂದಿಬ್ಬರನ್ನು ನೋಡಿದರು. ಅವರೂ ಷರೀಫನನ್ನೇ ನೋಡುತ್ತಿದ್ದರು-ಆದುದರಿಂದ ನಿಧಾನವಾಗಿ ಡೋಲಿಯ ಬಳಿ ಬಂದು ನೋಡಿದರು. ತಮ್ಮ ಕೈವಸ್ತ್ರದಿಂದ ಮೃದುವಾಗಿ ಶವದ ಮುಖವನ್ನು ಒರೆಸಿದರು. ಹಾಗೆಯೇ ಎದೆಯ ಪ್ರವೇಶವನ್ನೂ ನೋಡಿ-ಏನೋ ಆಚಾತುರ್ಯವೆನ್ನುವಂತೆ ನಕ್ಕು ಸುತ್ತ ನೋಡಿದರು. ಇದರಿಂದ ಅಲ್ಲಿಯ ಹಿರಿಯ ಕಾಸಿಂ ಸಾಹೇಬ್ ಬಂದು ನೋಡಿ-ಶವದ ದೇಹವನ್ನು ಮುಟ್ಟಿನೋಡಿದ. ಅನೇಕ ಸಾವುಗಳನ್ನು ನೋಡಿದ್ದವನು-ಅವನ ನಾಲ್ಕು ಮಕ್ಕಳು ಕಳೆದ ನಾಲೈದು ವರ್ಷಗಳಲ್ಲಿ ಒಂದಲ್ಲ ಒಂದು ಖಾಯಿಲೆಗೆ ಬಲಿಯಾಗಿದ್ದರು.- ಆದುದರಿಂದ ಶವದ ನಿಜವಾದ ಅನುಭವ ಅವನಿಗೆ ಉಂಟೆಂದು ಹೇಳುವ ವಿಷಯದಲ್ಲಿ ಎಂಥವರ ಅನುಮಾನಿಸುತ್ತಿರಲಿಲ್ಲ. ಅವನೇ ಹೇಳಿದ ‘ಇಲ್ಲ, ಹುಡುಗ ಬದುಕಿಲ್ಲ ……ಬದುಕಲೂ ಆರೆ’ ಎಂದು ಹೇಳಿದಾಗ ಷರೀಫ್ ಬಿಟ್ಟು ಉಳಿದವರೆಲ್ಲಾ ಒಪ್ಪಿದರು. ತಗ್ಗಿಸಿದ ಡೋಲಿಯನ್ನು ಹೆಗಲಿಗೇರಿಸಿದರು. ಯಾತ್ರೆ ಮುಂದುವರಿಯಿತು. ಅಮೀರ್ ಪುರಿಯನ್ನು ಎರಚುತ್ತಲೇ ಇದ್ದರೂ ಷರೀಫ್‌ನ ವಿಷಯವನ್ನು ಮರುಕದಿಂದ ಯೋಚಿಸತೊಡಗಿದ್ದ. ಖಾಜಿ ಸಾಹೇಬರನ್ನೂ ಒಂದೆರಡು ಬಾರಿ ನೋಡಿದ. ಅವರು ಖೊರಾನ್ ಪಠನವನ್ನು ನಿರಾತಂಕವಾಗಿ ಮಾಡುತ್ತಾ ಎಲ್ಲರಿಗೂ ಅಲ್ಲಾನ ಧ್ಯಾನವಾಗುವಂತೆ ನಡೆದಿದ್ದರು.

ಧೂಪದ ಪಾತ್ರೆಯಲ್ಲಿ ಸಾಂಬ್ರಾಣಿಯ ಹೊಗೆ ಸಣ್ಣಗೆ ಏರುತ್ತಿದ್ದುದು ಒಮ್ಮೆಗೆ ಭುಗ್ ಎಂದಿತು: ಮೂರು ನಾಲ್ಕು ಕಿಡಿಗಳೂ ಹಾರಿದವು. ಅದರ ಗಮನದಲ್ಲಿ ಅಲ್ಲಾನ ಧ್ಯಾನ ತೀಕ್ಷ್ಣವೂ ಆದಂತಿತ್ತು. ಯಾತ್ರೆಯಾಗಲೆ ದೊಡ್ಡಾಲದ ಮರದ ನೇರಕ್ಕೆ ಕಾಲು ದಾರಿಯಲ್ಲಿ ನಡೆದಿತ್ತು.

ಅದರ ನೆರಳಿಗೆ ಬರುವವರೆಗೂ ಧ್ಯಾನದಲ್ಲಿ ಮುಳುಗಿದಂತೆ ನಡೆದರು. ಒಬ್ಬರಾದರೂ ನುಡಿಯೆತ್ತಲಿಲ್ಲ. ಖಾಜಿ ಸಾಹೇಬರು ನಿಂತಾಗಲೇ ಡೋಲಿಯನ್ನು ಹೊತ್ತಿದ್ದವರ – ಈ ವೇಳೆಗೆ ನಾಲ್ಕಾರು ಕೈ ಬದಲಾಗಿತ್ತು-ನಿಂತರು: ಧರ್ಮಗುರು ನಿಂತಡೆ ನಿಲ್ಲುವುದು ಮತಧರ್ಮ- ನಿಂತರು. ಅವರು ತೋರಿದ ಸ್ಥಳದಲ್ಲಿ ಡೋಲಿಯನ್ನಿಳಿಸಿದರು. ಅವರು ಕೈನೀಡಿ ತೋರಿಸಿದಂತೆ ಶವವನ್ನು ಡೋಲಿ ಸಹಿತ ಮಕ್ಕಾ ಕಡೆಗೆ ತಲೆ ಮಾಡಿ ಇರಿಸಿದರು.

ಗುದ್ದನ್ನು ಅಗೆಯುವುದರಲ್ಲಿ ನಿಸ್ಸೀಮನಾದ ಜಮಾಲ್ ತನ್ನ ಹೆಗಲಿನ ಗುದ್ದಲಿಯನ್ನು ತೆಗೆದು ಧರ್ಮ ಗುರು ತೋರಿಸಿದ ಕಡೆ ನೆಲವನ್ನು ಅಗೆಯತೊಡಗಿದ. ನಂತರ ಒಂದಿಬ್ಬರು ಕೈ ಬದಲಿಸಿ ಅಗೆದರು. ಡೋಲಿಯ ಆಕಾರದ ಗುಂಡಿ ಸಿದ್ಧವಾಯಿತು. ಷರೀಫ್ ದಿಕ್ಕು ತೋಚದೆ ನೋಡುತ್ತಲೇ ಕುಳಿತಿದ್ದ, ಅಗೆದದ್ದು ಮುಗಿದುದನ್ನೂ ಕಂಡ. ಇನ್ನು ಖೊರಾನ್ ಪಠನದೊಡನೆ ಡೋಲಿಯಿಂದ ಶವವನ್ನು ನಾಲ್ಕಾರು ಮಂದಿ ಹಿಡಿದು ಎತ್ತಿ ಇಳಿಸಿದರು. ಪರಿಮಳದ ವಸ್ತುಗಳನ್ನು ಎಲ್ಲ ಸಂಸ್ಕಾರಗಳಲ್ಲಿ ಬಳಸುವಂತೆಯೇ ಬಳಸಲಾಯಿತು. ಅತ್ತರನ್ನು ಸಿಂಪಡಿಸಿದರು. ಕರ್ಪೂರ, ಗಂಧದ ಕಡ್ಡಿಗಳನ್ನು ಹಚ್ಚಿದರು……..ಷರೀಫ್‌ಗೆ ತಡೆಯಲಾಗಲಿಲ್ಲ. ಜೋರಾಗಿ ಅಳತೊಡಗಿದ. ಅಮೀರ್ ಮೊದಲಾಗಿ ಮೂರು ನಾಲ್ಕು ಮಂದಿ ಅವನನ್ನು ಹಿಡಿದುಕೊಂಡರು; ಇಲ್ಲದಿದ್ದರೆ ಅವನು ಶವದ ಮೇಲೆ ಬೀಳುವಂತೆ ತೋರಿತು. ಪಕ್ಕಕ್ಕೆ ಎಳೆದುಕೊಂಡು ಬೆನ್ನು ಸವರಿ ಕೂಡಿಸಿ ಸಮಾಧಾನಪಡಿಸತೊಡಗಿದರು………’ಸಾಬು ಸತ್ತಿಲ್ಲ…..ಯಾ ಅಲ್ಲಾ, ಖುದಾ’ ಎಂಬ ಅವನ ಉದ್ಗಾರಕ್ಕೆ ಅನೇಕರು ದಂಗುಬಡಿದಿದ್ದರೂ ಖಾಜಿ ಸಾಹೇಬರು ಧಾರ್ಮಿಕವಾದ ಸಂಸ್ಕಾರಕ್ಕೆ ಇಂಥ ಅಡ್ಡಿ ಬಂದಿತೆಂದು ನೊಂದುಕೊಂಡವರಂತೆ ನೋಡಿದರು, ಅವರ ಇಂಗಿತ ಸ್ಪಷ್ಟವಾಗಿಯೇ ಇತ್ತು. ಖೊರಾನ್‌ ತೆಗೆದು ಪೀಡೆಯ ಪರಿಹಾರಕೆನ್ನುವಂತೆ ಕೊಂಚ ಗಟ್ಟಿಯಾಗಿ ಪಠಿಸತೊಡಗಿದರು. ಅವರ ದನಿಯಿಂದ ಮಾಂತ್ರಿಕ ಜಾಲಕ್ಕೆ ಸಿಕ್ಕಿದವರಂತೆ ಹಿರಿಯರು ಮೊದಲು ತಲೆಬಾಗಿದರು. ಉಳಿದವರು ಅನುಸರಿಸಿದರು. ಹಿಡಿಯಲ್ಲಿ ಮಣ್ಣು ತೆಗೆದು ಮೂರು ಮೂರು ಬಾರಿ ದೇಹದ ಮೇಲೆ ಹಾಕಿದರು ಷರೀಫ್‌ ಅಳುತ್ತಲೇ ಇದ್ದ: ಅವನ ಕೈಲೂ ಮಣ್ಣು ಹಾಕಿಸಬೇಕೆಂದರು- ಅದರಂತೆ ಅಮೀರ್‌ ಮತ್ತೂ ಒಬ್ಬರು (ಹಿರಿಯರು) ಅವನ ಕಂಕುಳಿಗೆ ಕೈಕೊಟ್ಟು ಎತ್ತಿ ಶವದ ಬಳಿ ನಿಲ್ಲಿಸಿದರು. ಕೈಗೆ ತಾವೇ ಮಣ್ಣು ತೆಗೆದುಕೊಟ್ಟರು. ಅದು ಅವನ ಕೈ ಮುಟ್ಟಿ ಸುರಿದುದು ಮಾತ್ರ ಕಂಡಿತು ; ಮರು ಬಾರಿಯ ಆಯಿತು.

ಸರಿ, ಇನ್ನು ಗುದ್ದಲಿಯಿಂದ ದೇಹದ ಮೇಲೆ ಮೊದಲು ಅಗೆದ ಮಣ್ಣನ್ನೇ ಎಳೆಯಬೇಕು. ಜಮಾಲ್ ನಿಶ್ಚಿಂತನಾಗಿ ಖಾಜಿ ಸಾಹೇಬರ ಸೂಚನೆಗೆ ಕಾದಿದ್ದ………ಆಗ ಅವರೇ ಕೊಂಚ ಬಾಗಿ ದಿಟ್ಟಿಸಿ ನೋಡಿದರು. ಶವದ ಮುಖವೆಲ್ಲ ಬೆವರಿನ ಹನಿಗಳಿಂದ ತುಂಬಿಹೋಗಿತ್ತು. ಹಾಗೆಯೇ ಬಾಗಿ ಮಂಡಿಯೂರಿ ಕುಳಿತು ತಮ್ಮ ಕೆಂಪು ಚೌಕಳಿಯ ಕರವಸ್ತ್ರದಿಂದ ಒರೆಸಿದರು…..ಮೂರು ಬಾರಿ ‘ಅಲ್ಲಾ’ ಹೆಸರು ಹೇಳಿದರು……..ಆಯಿತು. ಗುದ್ದಲಿಯಿಂದ ಮಣ್ಣು ಶವವನ್ನು ಎರಡು ನಿಮಿಷದಲ್ಲಿ ಮುಚ್ಚಿ ಬಿಟ್ಟಿತು. ಒಂದು ಮೊನಚಾದ ಕಲ್ಲನ್ನು ಶವದ ತಲೆಯ ಬಳಿ ಖಾಜಿ ಸಾಹೇಬರೇ ನಿಲ್ಲಿಸಿದರು. ಜಮಾಲ್ ಅದು ಅಲುಗಾಡದಂತೆ ನಿಲ್ಲುವ ಹಾಗೆ ಮಣ್ಣು ಹಾಕಿ ಗುದ್ದಲಿಯ ಹಿಂಭಾಗದಿಂದ (ಬೆನ್ನಿನಿಂದ) ತಟ್ಟಿದನು. ಕ್ರಮವಾಗಿ ಸಮಾಧಿಯ ಆಕಾರವೊಂದೇ ಕಾಣಿಸಿತು…….ಅದರ ಹೊಸ ಮಣ್ಣು ; ಅದರ ಸುತ್ತಲೂ ಬೆಳೆದ ಹಸಿರು ಸಸಿಗಳು, ಕಾಡು ಸಸಿಗಳು !
ಕೆಲವರು ಡೌನಿನಲ್ಲಿ ಹರಿಯುತ್ತಿದ್ದ ಕಾವೇರಿ ನದಿಯ ಕಡೆ ನಡೆದರು. ಉಳಿದವರು ಊರಿನ ಹಾದಿ ಹಿಡಿದರು. ಆ ವೇಳೆಗೆ ಸೂರ್ಯ ನಡುನೆತ್ತಿಯಿಂದ ಸರಿಯುತ್ತಿದ್ದ.
*
*
ಮಧ್ಯಾಹ್ನ ದಾಟಿ ನಾಲ್ಕು ಗಂಟೆಯ ಸುಮಾರಿಗೆ ನೂರುನ್ನೀಸಾ ತಮ್ಮನ ಹೆಸರು ಕೂಗುತ್ತಾ ಗೋಳಿಡುತ್ತಾ ಬಂದಾಗ ಹಯಾಬಿ ಸಮಾಧಾನಪಡಿಸಲು ಪ್ರಯತ್ನಿಸಿದಳಷ್ಟೆ. ಅವಳ ಸಂಕಟ ಎಲ್ಲರಿಗೂ ಅರ್ಥವಾಗುವಂತಿತ್ತು. ಮೂರು ನಾಲ್ಕು ಮಂದಿ ಹೆಂಗಸರು, ಹಿರಿಯರು, ಬಂದು ಗದರಿಸಿಯೇ ನುಡಿದರು–ಹೀಗೆ ಬೀದಿಯಲ್ಲಿ ಅಳಬಾರದೆಂದು ಒಳಕ್ಕೆ ಕರೆದೊಯ್ದರು.

ಅವಳ ದುಃಖ ಎರಡು ದಿನವಾದರೂ ಇಂಗಿರಲಿಲ್ಲ. ಯಾರು ನುಡಿಸಲು ಬಂದರೂ ತನ್ನ ತಮ್ಮನನ್ನು ತಂದುಕೊಡಿರೆಂದು ಯಾಚಿಸುತ್ತಿದ್ದಳು. ಊಟವಿಲ್ಲ, ನಿದ್ರೆಯಿಲ್ಲ, ಅವಳಿಗೆ ಬೇಕಿಲ್ಲ, ಸತ್ತಂತೆ ಒಂದು ದಿನವೆಲ್ಲಾ ಬಿದ್ದಿದ್ದಳು – ಎಂದು ಹಯಾಬಿ ತನ್ನನ್ನು ಕೇಳಿದವರಿಗೆ ಹೇಳುತ್ತಿದ್ದಳು- ಷರೀಫ್ ತನ್ನ ದುಃಖದಲ್ಲಿಯೇ ಮುಳುಗಿದ್ದರೂ ಮನೆಯ ಕೆಲಸ ಕಾರ್ಯದಲ್ಲಿದ್ದನು.

ಅಷ್ಟೇ ಅಲ್ಲ, ಮೂರನೆಯ ದಿನ ತನ್ನ ಊರಿಗೆ ಹೋಗುವುದಕ್ಕೆ ಮುಂಚೆ ತಮ್ಮನ ಸಮಾಧಿಯ ಬಳಿ ನೂರುನ್ನೀಸಾ ಹೋಗಿ ಅದರ ಮೇಲೆ ಬಿದ್ದು ಹೊರಳಾಡಿದುದನ್ನು ಯಾರೋ ದನಕಾಯುವವರು ಕಂಡರಂತೆ ನಾನು ಬೇಸಿಗೆಯಲ್ಲಿ ಊರಿಗೆ ಹೋದಾಗ ಇದನ್ನೆಲ್ಲಾ ಕೇಳಿ ದೊಡ್ಡಾಲದ ಮರದ ಕೆಳಗಿದ್ದ ಅವನ ಸಮಾಧಿಯನ್ನು ಹುಡುಕಿ ದನ ಕಾಯುವವರ ನೆರವಿನಿಂದ ತಿಳಿದು, ಅದರ ಮುಂದೆ ನಿಂತೆ. ಅವನು ನನಗೂ ಬಾಲ್ಯ ಸ್ನೇಹಿತನಾಗಿದ್ದ. ಅದು ಒಂದೇ ವರ್ಷ ಕಾಲವಾಗಿದ್ದರೂ ಆಳವಾಗಿದ್ದಿತು.., ನಾನು ಅಲ್ಲಿ ಅವನ ಚಿಂತನೆಯಲ್ಲಿ ನಿಂತಂತೆಯೇ ಮೈ ಬೆವರಿತು, ಆದರೆ ಹೆದರಿಕೆಯಾಗಲಿಲ್ಲ, ಅವನ ಚಿಂತನೆ ನನಗೆ ಇನ್ನಷ್ಟು ಆಳಕ್ಕೆ ಇಳಿಯಿತು, ಅಷ್ಟೆ.

Close

ವಂಶವೃಕ್ಷ ಪ್ರತಿಪಾದಿಸುವ ಮೌಲ್ಯ-ಒಂದು ನೋಟ

ವಂಶವೃಕ್ಷ ಪ್ರತಿಪಾದಿಸುವ ಮೌಲ್ಯ-ಒಂದು ನೋಟ

ಬರಗೂರು ರಾಮಚಂದ್ರಪ್ಪ

ಕಲಾತ್ಮಕತೆ ಮತ್ತು ಬೌದ್ಧಿಕತೆಗಳ ಸುಮಧುರ ಸಮ್ಮಿಲನವಾಗದಿದ್ದರೆ ಒಂದು ಕೃತಿ ತನ್ನ ಆಶಯ ಮತ್ತು ಅಭಿವ್ಯಕ್ತಿಗಳಲ್ಲಿ ಅಂತರ ಪಡೆಯುತ್ತದೆ. ಹೀಗಾಗಿ ವೈಚಾರಿಕತೆಯನ್ನು ಸಾಹಿತ್ಯಕಲೆಯಲ್ಲಿ ಸಮೇಳಗೊಳಿಸುವ ಸಾಹಿತಿ ಕೆಲವು ಅಪಾಯಗಳನ್ನು ಎದುರಿಸ ಬೇಕಾಗುತ್ತದೆ. ಈ ದೃಷ್ಟಿಯಿಂದ ‘ವಂಶವೃಕ್ಷ’ವನ್ನು ನೋಡುವುದು ಲಾಭಪ್ರದವಾದುದು.

“ಜೀವನದ ವಿಮೌಲ್ಯಗಳನ್ನು ಅರಿಯುವುದು ಮಾತ್ರವಲ್ಲದೆ ಸುಮೌಲ್ಯಗಳ ಬಗೆಗೆ ನಮ್ಮ ಅಂತಃಕರಣದ ಆಕರ್ಷಣೆಯನ್ನು ಪರೋಕ್ಷವಾಗಿ ಹೆಚ್ಚಿಸುವ ಕೆಲಸವನ್ನು ಸಾಹಿತ್ಯವು ಮಾಡುತ್ತದೆ”1 ಎಂದು ನಂಬುವ ಡಾ॥ ಭೈರಪ್ಪನವರು “ನೀತಿ ಅನೀತಿಗಳನ್ನು ಮೀರಿದ ಜೀವನದ ಮೂಲಭೂತ ಮೌಲ್ಯಗಳನ್ನು ಅವುಗಳ ಶುದ್ಧ ಅವ್ಯಕ್ತ ಭಾವದಲ್ಲಿ ನಮ್ಮ ಸಂವೇದನೆಗೆ ತಂದುಕೊಡುವುದು ಸಾಹಿತ್ಯದ ಗುರಿಯಾಗಬೇಕು” ಎಂದು ಸೂಚಿಸಿದ್ದಾರೆ. ಸಾಹಿತಿಯೊಬ್ಬ ಇಂಥ ಅಭಿಪ್ರಾಯಗಳನ್ನು ಹೊಂದಿರುವಾಗ ಆ ಸಾಹಿತಿಯ ಕೃತಿಗಳನ್ನು ವಿವೇಚಿಸುವ ಸಂದರ್ಭದಲ್ಲಿ ಆತನ ಅಭಿಪ್ರಾಯಗಳನ್ನು ಮರೆಯುವುದು ಸಾಧ್ಯವಿಲ್ಲ. ಆದ್ದರಿಂದ ‘ವಂಶವೃಕ್ಷ’ವು ಅದರ ಕರ್ತೃವಿನ ಮಾತಿನಂತೆಯೇ ಹೇಳುವುದಾದರೆ `ಸುಮೌಲ್ಯಗಳ ಬಗೆಗೆ ನಮ್ಮ ಅಂತಃಕರಣದ ಆಕರ್ಷಣೆಯನ್ನು ಪರೋಕ್ಷವಾಗಿ ಹೆಚ್ಚಿಸುವ’ ದೀಕ್ಷೆ ತೊಟ್ಟಿರಬೇಕಲ್ಲವೆ ?

ಧಾರ್ಮಿಕ ಶ್ರದ್ಧೆಯುಳ್ಳ, ವಂಶಬದ್ಧರಾದ ಶ್ರೀನಿವಾಸ ಶ್ರೋತ್ರಿಯರು, ಆಧುನಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ರಾಜಾರಾವ್‌ ಮತ್ತು ಕಾತ್ಯಾಯಿನಿ, ದ್ವಿಪತ್ನಿತ್ವದ ಅಂಗವಾಗಿ ತಂದಿರುವಂತೆ ತೋರುವ ಡಾ|| ಸದಾಶಿವರಾವ್ ಮತ್ತು ಕರುಣಾರತ್ನಇವರ ಬದುಕಿನ ಅನುಭವದ ಒರೆಗಲ್ಲಿನಿಂದ ಹೊರಬೀಳುವ ಮೌಲ್ಯ-ಕಾದಂಬರಿಯಲ್ಲಿ ಅಡಕವಾಗಿದೆಯೆಂದು ಹೇಳಬಹುದು.

‘ಶ್ರೀನಿವಾಸಶ್ರೋತ್ರಿಯವರು ಪಕ್ಕಾ ವಂಶನಿಷ್ಟರು. ಅಗೆಯುತ್ತ ಹೋದರೆ ಕೊನೆಯೇ ಇಲ್ಲದ ಆಳದಲ್ಲಿ ಹುದುಗಿರುವ ಜೀವಂತ ಪವಿತ್ರ ಬೇರು ಅದೆಂದು ನಂಬಿದ್ದರು.’ ಕಾದಂಬರಿಯ ಮೊದಲ ಪುಟದಲ್ಲಿ ಇವರ ವಂಶಬದ್ಧ ವ್ಯಕ್ತಿತ್ವದ ಸೂಚನೆ ದೊರೆಯುತ್ತದೆ. ಕಪಿಲೆಯ ಪ್ರವಾಹ ಬಂದು ಊರ ಜನರೆಲ್ಲ ಹೊರಾಶ್ರಯಕ್ಕೆ ಹೋದರೂ, ಮನೆಯಲ್ಲಿ ಮೊಣಕಾಲುದ್ದ ನೀರು ನಿಂತಿದ್ದರೂ ಶ್ರೋತ್ರಿಯವರಿಗೆ ತಮ್ಮ ವಂಶದತ್ತವಾದ ಮನೆಯಿಂದ ಸ್ವಲ್ಪಕಾಲವಾದರೂ ದೂರ ಹೋಗಿ ವಾಸ್ತವ ಅಪಾಯದಿಂದ ತಪ್ಪಿಸಿಕೊಳ್ಳುವ ಪರಿ ಒಗುವುದಿಲ್ಲ: ತಮ್ಮ ನಂಬಿಕೆಗಳ ಪಾಶ ಅವರನ್ನು ಬಿಡುವುದಿಲ್ಲ. ಶ್ರೋತ್ರಿಯವರ ಇಂಥ ದೃಷ್ಟಿ ಈ ಪ್ರವಾಹದ ಸಂದರ್ಭದಲ್ಲಂತೂ ಮೊಂಡುತನದ್ದೆಂದು ಹೇಳಬಹುದು. ಅಷ್ಟು ಪ್ರವಾಹವಿದ್ದಾಗ ವಂಶಪಾರಂಪರ‍್ಯದ ಮನೆಯೆಂಬ ಕಾರಣಕ್ಕೆ ಅಪಾಯದಿಂದ ಪಾರಾಗುವ ಬದಲು ಮಂತ್ರ ಜಪಿಸುವುದು ತಮಾಷೆಯಾಗಿ ಕಾಣುತ್ತದೆ. ಈ ಸಂದರ್ಭ ಅವರ ಸ್ವಭಾವ ಸೂಚಿಸುವುದರಲ್ಲಿ ಸಫಲವಾಗುತ್ತದೆ.

ಶ್ರೋತ್ರಿಯವರ ಗುಣ ಸ್ವಭಾವಗಳು ಕಾದಂಬರಿಯಲ್ಲೇ ಉಕ್ತವಾಗಿವೆ. “ಮದುವೆಯಾಗುವುದೇ ಗೃಹಸ್ಥ ಧರ್ಮಗಳ ನಿರ್ವಹಣೆ ಮತ್ತು ವಂಶೋದ್ಧಾರಕ್ಕೆ’ ಎಂದು ನಂಬಿದ ಶ್ರೋತ್ರಿಯವರ ಬಾಳಿನಲ್ಲಿ ತಾವು ನಂಬಿದ ಜೀವನಾದರ್ಶಗಳಿಗೂ ಅದಮ್ಯ ಶಕ್ತಿಯ ಪ್ರಕೃತಿ ಗುಣಗಳಿಗೂ ಹೋರಾಟ ನಡೆದೇ ಇತ್ತು’.’ಪ್ರಕೃತಿಯ ಹಿಡಿತದಿಂದ ಮುಕ್ತಿ ಹೊಂದದೆ ಮನುಷ್ಯನಿಗೆ ಬಿಡುಗಡೆ ಇಲ್ಲ’ ಎಂಬ ಅವರ ತಿಳುವಳಿಕೆಯು ಈಗಿನ ವಾಸ್ತವ ಜೀವನದ ಅನುಷ್ಠಾನದಲ್ಲಿ ಬಂದು ಪ್ರಕೃತಿಯ ಪ್ರಭಾವವನ್ನು ಗೆಲ್ಲಬೇಕಾಗಿತ್ತು. ಅದಕ್ಕಾಗಿ ತಮ್ಮ ಶಕ್ತಿಮೀರಿ ಹೆಣಗುತ್ತಿದ್ದರು.” ಅಂದಮೇಲೆ ಶ್ರೋತ್ರಿಯವರು ಬದುಕಿನ ಅನುಭವದಿಂದ ಪಾಠ ಕಲಿಯುವ ಬದಲು ಅಧ್ಯಯನದಿಂದ ಗಳಿಸಿದ ಅರಿವಿನ ಬಲದಿಂದ ಸಹಜ ಶಕ್ತಿಗಳನ್ನು ಮೆಟ್ಟಲು ಹೆಣಗುವುದು ಸ್ಪಷ್ಟವಾಗುತ್ತದೆ. ಈ ಹೆಣಗಾಟವನ್ನು ಉದ್ದಕ್ಕೂ ನೋಡಿದಾಗ ಸುಮೌಲ್ಯ ಸ್ಥಾಪನೆಯ ಬಗ್ಗೆ ಕಾದಂಬರಿಕಾರರು ಮತ್ತು ಶ್ರೋತ್ರಿಯವರ ನಡುವೆ ಮೊದಲೇ ಒಪ್ಪಂದವಾಗಿರುವಂತೆ ಗುಮಾನಿ ಬರುತ್ತದೆ. ಮುಂದಿನ ನನ್ನ ವಿವೇಚನೆ ಇದನ್ನು ವಿಶದಪಡಿಸಿ ಸಮರ್ಥಿಸುತ್ತದೆ.

ಶೈತ್ರಿಯವರು ನಂಬಿದ ಮೌಲ್ಯಗಳಿಗೆ ಸವಾಲಾಗುವವಳು ಅವರ ‘ಮನೆ ಮಗಳಾಗಿಯೇ ಬಂದಿದ್ದ’ ಕಾತ್ಯಾಯಿನಿ ಎಂಬುದು ತುಂಬ ಗಮನಾರ್ಹವಾದುದು. “ಮಲ್ಲಿಗೆಯಮರದ ಸಂಗಡ ಸುರುಟಿ ಹೋಗುವುದೆಂದು……….ಅಕಾರಣವಾಗಿ ಯೋಚಿಸಿದ್ದ’ ಕಾತ್ಯಾಯಿನಿಗೆ ‘ಹಳೆಯ ಮರ ಸತ್ತ ಮೇಲೂ ಹೂಸ ಮರಕ್ಕೆ ಹಬ್ಬಿಕೊಂಡು ಮಲ್ಲಿಗೆಯು ಮೊದಲಿನಂತೆಯೇ ಒಂದು ರಾಶಿ ಹೂ ಬಿಡುವುದನ್ನು ಕಂಡು’ ಆಶ್ಚರ್ಯವಾಗಿತ್ತು. ಈ ಸಂದರ್ಭದಲ್ಲಿ ನಿಜವಾದ ನಿಶ್ಚಲತೆಯನ್ನು ಪಡೆದ ಅವಳು ಆಮೇಲೆ ಮತ್ತೆಮತ್ತೆ ದ್ವಂದ್ವಕ್ಕೆ ಸಿಕ್ಕಿಯೂ ಕಡೆಗೊಮ್ಮೆ ಗಟ್ಟಿ ನಿರ್ಧಾರ ಮಾಡಿ ವಿಧವಾವಿವಾಹಕ್ಕೆ ಒಪ್ಪುತ್ತಾಳೆ; ತನ್ಮೂಲಕ ಹೊಸ ಮೌಲ್ಯವನ್ನು ಸ್ವೀಕರಿಸುತ್ತಾಳೆ. ಅಷ್ಟೊಂದು ಅಗಾಧ ತುಮುಲದ ನಂತರ ತಳವೂರಿದ ಕಾಲಧರ್ಮಕ್ಕನುಗುಣವಾದ ಸಾಮಾಜಿಕ ಪ್ರಜ್ಞೆ ಮತ್ತೆ ಮಗ ಚೀನಿಯ ನೆನಪಿನಿಂದ ಮತ್ತು ಗರ್ಭಪಾತ ಪರಂಪರೆಯಿಂದ ಸಡಿಲವಾಗುವುದು-ಅದೂ ಜೀವಕ್ಕೇ ಅಪಾಯ ತರುವಷ್ಟು ಸಡಿಲವಾಗುವುದು ಅವಳನ್ನು ದುರ್ಬಲ ವ್ಯಕ್ತಿಯನ್ನಾಗಿ ಮಾಡುವ ಪೂರ್ವಕಲ್ಪಿತ ಪ್ರಯತ್ನವೆನ್ನಿಸುತ್ತದೆ. ಏಕೆಂದರೆ ಇದರಿಂದ ಶ್ರೋತ್ರಿಯವರ ಮೌಲ್ಯಶ್ರೇಷ್ಠತೆಯ ಪ್ರತಿಷ್ಠಾಪನೆಗೆ ಕಾದಂಬರಿಕಾರರ ದಾರಿ ಸುಗಮವಾಗುತ್ತದೆ.

ರಾಜಾರಾಯನ ಪಾತ್ರನಿರೂಪಣೆಯಲ್ಲಿ ಇದು ಇನ್ನೂ ಸ್ಪಷ್ಟವಾಗುತ್ತದೆ. ‘ಮಾನವ ಕಲ್ಪಿತವಾದ ಸಮಾಜ, ಶಾಸ್ತ್ರಗಳು, ಕಟ್ಟುಕಟ್ಟಳೆ, ನೀತಿ, ನಿಯಮಗಳೆಲ್ಲವೂ ಜೀವನದ ಮೂಲಭೂತ ಶಕ್ತಿಯನ್ನು ಸುರುಟಿಸುವ ಕೋಟಲೆಗಳು’ ಎಂದು ಭಾವಿಸಿದ್ದ ರಾಜಾರಾವ್ ‘ಈ ಕೋಟಲೆಗಳನ್ನು ಕತ್ತರಿಸಿಹಾಕಿ ಜೀವನದ ಮೂಲ ಚೇತನದ ಅನುಭವ ಮಾಡಿಸುವುದೇ ನಿಜವಾದ ತಿಳಿವು’ ಎಂದು ನಂಬಿದ್ದ. ಈ ನಂಬಿಕೆ ಅವನಿಂದಲೇ ರಚಿತವಾದ “The Primordial’ ನಾಟಕದಲ್ಲಿ ಸ್ಥಿರಗೊಂಡಿತು: ‘ನನ್ನ ಮೂಲಗುಣವನ್ನು ಕೃತಕವಾಗಿ ತಡೆಹಿಡಿಯುವ ಧರ್ಮ, ನೀತಿ, ರಾಜಶಾಸನ, ಸಮಾಜ ನಿಯಮ, ಜನತೆಯ ಆರೋಪ ಇವೆಲ್ಲವೂ ಆಸತ್ಯದ ಮುಖಗಳು, ಪ್ರಕೃತಿ ಚಿರಯೌವನೆ. ಅವಳ ಸುಂದರ ಸ್ವರೂಪವನ್ನು ತುಳಿಯಲೆತ್ನಿಸುವ ಧರ್ಮವು ತನಗೆ ತಾನೇ ನಾಶವಾಗುತ್ತದೆ ಎಂದು ಹೇಳುವ ಪ್ರಕೃತಿಯು ಮಂದೆ ದೇವರಾಜ ಮತ್ತು ದೇವಗುರು ಹೆಳವರಾಗಿ ಬಿದ್ದು ಒದ್ದಾಡುತ್ತಾರೆ. ಇವರ ಹೆಳವತನ ಹೋಗುವುದೇ ಪ್ರಕೃತಿಯ ಕೃಪೆಯಿಂದ. ಇಂಥ ನಾಟಕದ ಕರ್ತೃ ರಾಜಾರಾವ್‌ ನಂಬಿದ ಮೌಲ್ಯ ಯಾವುದೆಂಬುದು ಸ್ಪಷ್ಟ. ಹೆಳವ ಧಾರ್ಮಿಕತೆಗೆ ಪ್ರಕೃತಿ ಚೈತನ್ಯ ತುಂಬುವುದನ್ನು ಪ್ರತಿಪಾದಿಸಿದ, ನೆಣವುಳ್ಳ ನಂಬಿಕೆಯ ನೆಲಗಟ್ಟಿನ ಮೇಲೆ ನಿಂತಿದ್ದ ರಾಜಾರಾವ್, ತನ್ನ ನಂಬಿಕೆಯ ಅಸ್ತಿತ್ವವನ್ನು ಅಲ್ಲಾಡಿಸುವ ಪ್ರಬಲ ಅಲೆಗಳ ಹೊಡೆತಕ್ಕೆ ಸಿಕ್ಕದೆ ಇದ್ದರೂ ಕಡೆಯಲ್ಲಿ ಶ್ರೋತ್ರಿಯವರನ್ನು ಕಂಡಾಗ “ನಿಮ್ಮ ಪರಿಚಯವಿದ್ದು ನಿಮ್ಮ ವ್ಯಕ್ತಿತ್ವ ತಿಳಿದಿದ್ದರೆ ನಾನು ಅವಳನ್ನು ಮದುವೆಯಾಗ್ತಿರಲಿಲ್ಲ ಎಂದೇ ಹೇಳುವಷ್ಟರ ಮಟ್ಟಿಗೆ ಧಿಡೀರ್‌ ಪರಿವರ್ತನೆಗೊಳ್ಳುವುದು ಆಶ್ಚರ್ಯಕರವಾಗಿ ಪರಿಣವಿಸುತ್ತದೆ; ಇದರ ಉದ್ದೇಶ ಸ್ಪಷ್ಟವಾಗುತ್ತದೆ.

ಕಾತ್ಯಾಯಿನಿ ಮತ್ತು ರಾಜಾರಾವ್ ತಮ್ಮ ಬದುಕಿನ ಕ್ರಿಯೆಗೆ ಪ್ರತಿಕ್ರಿಯಿಸುತ್ತ ಮೇಲೆ ವಿವೇಚಿಸಿದ ಘಟ್ಟಕ್ಕೆ ಬಂದು ತಲುಪುತ್ತಾರೆ. ಆದರೆ ಶ್ರೋತ್ರಿಯವರು ಅನೇಕ ಆಘಾತಗಳಿಗೆ ಈಡಾದರೂ ಅಪ್ಪನ ಆಲದ ಮರದ ಕಡೆಗೇ ಕಣ್ಣಿಟ್ಟುಕೊಂಡು ತಮ್ಮ ಧರ್ಮಗ್ರಂಥಗಳ ಸಾಲುಗಳ ಸಬಲತೆಯಿಂದ ಎಂದಿನಂತೆಯೇ ಉಳಿಯುತ್ತಾರೆ; ಬೆಳೆಯುತ್ತಾರೆ ಎಂದು ಹೇಳುವಂತಿಲ್ಲ.

ಶ್ರೀನಿವಾಸ ಶ್ರೋತ್ರಿಯವರೊಂದಿಗೆ ಕೆಲವು ಕಾರಣಗಳಿಗಾಗಿ ‘ಸಂಸ್ಕಾರ’ದ ಪ್ರಾಣೇಶಾಚಾರ‍್ಯರು ಮತ್ತು ಗ್ರಾಮಾಯಣದ ಬಾಳಾಚಾರ‍್ಯರು ನೆನಪಿಗೆ ಬರುತ್ತಾರೆ.

ಶ್ರೋತ್ರಿಯವರಂತೆ ಸನಾತನ ಧರ್ಮದ ನೆಲಗಟ್ಟನ್ನು ನಮ್ಮ ಬದುಕುತ್ತಿದ್ದ ಪ್ರಾಣೇಶಾಚಾರ‍್ಯರಿಗೆ ಕಾದಂಬರಿಕಾರರ ಇಚ್ಛೆಯಂತೆ ಧಡಕ್ಕನೆ ಆಗುವ ಚಂದ್ರಿಯ ಸಮಾಗಮದ ಮೂಲಕ ಬದುಕಿನ ಬೇರೊಂದು ಮುಖದ ಶಾಕ್ ತಗುಲಿದಾಗ ಗೊಂದಲಕ್ಕೆ ಬಿದ್ದು ಹಳೆಯ ಮೌಲ್ಯಗಳನ್ನು ಮೂಲೆಗೊತ್ತಿ ತಮಗೆ ಪ್ರಾಮಾಣಿಕವೆನ್ನಿಸಿದ ಅರಿವು ಪಡೆಯುತ್ತಾರೆ. ಆದರೆ ಶ್ರೋತ್ರಿಯವರು ಬೇರೊಂದು ಕೊಠಡಿಯಲ್ಲಿ ಲಕ್ಷ್ಮಿ ತಮಗಾಗಿ ಕಾಯುತ್ತಿದ್ದಾಗ, ಇಂದ್ರಿಯಶಕ್ತಿ ಜಾಗೃತವಾಗಿ ತವಕದ ತವರುಮನೆಯಾಗಿದ್ದಾಗ ಅದನ್ನು ಮೆಟ್ಟಲು ಹೆಣಗುತ್ತ ‘ಸಾಂಖ್ಯಕಾರಿಕ’ದ ಮೊರೆ ಹೋಗುತ್ತಾರೆ. ಕಾತ್ಯಾಯಿನಿ ರಾಜಾರಾಯನನ್ನು ಮದುವೆಯಾಗುವ ನಿರ್ಧಾರವನ್ನು ಹೊರಗೆಡಹಿದಾಗ ಅದ್ಭುತ ಸಂಯಮಿಗಳಾಗಿ ಅವಳನ್ನು ಅವಳ ದಾರಿಗೇ ಬಿಡುತ್ತಾರೆ. “ಮತ್ತೊಬ್ಬರ ಪಾಪ ಪುಣ್ಯಗಳನ್ನು ನಿರ್ಣಯಿಸೋಕೆ ನಮಗೆ ಅಧಿಕಾರವಿಲ್ಲ. ನಮ್ಮ ಕರ್ಮಗಳನ್ನು ಮಾಡೋದು ಮಾತ್ರ ನಮ್ಮ ಕರ್ತವ್ಯ’ ಎಂಬ ಬಂಜೆ ನಂಬಿಕೆಯೇ ಇಂಥ ಸಯಮಕ್ಕೆ ಕಾರಣವಿರಬೇಕು. ಆದರೆ ಚೀನಿಯನ್ನು ಕರೆದೊಯ್ಯಲು ಕಾತ್ಯಾಯಿನಿ ಬಂದಾಗ ಇವರ ವಂಶಪ್ರಜ್ಞೆ ಜಾಗೃತವಾಗುತ್ತದೆ. ಇದರ ಪರಿಣಾಮವಾಗಿ ತಾಯಿ ಮತ್ತು ಮಗುವಿನ ನಡುವೆ ಇರುವ ಮಾನವೀಯ ಸಂಬಂಧದ ಮಿಡಿತವನ್ನು ಅರಿತು ನಡೆಯುವದರಲ್ಲಿ ಅವರು ವಿಫಲರಾಗುತ್ತಾರೆ. ವಂಶದ ಬಗ್ಗೆ ತಾವು ಕಲಿತ ಮಾತುಗಳನ್ನು ಹೇಳುವುದರಲ್ಲಿ ಸಫಲರಾಗುತ್ತಾರೆ. ಈ ಸಂದರ್ಭದಲ್ಲಿ ಶ್ರೋತ್ರಿಯವರು ಹೇಳುವ ಮಾತುಗಳು ಕಾತ್ಯಾಯಿನಿಯನ್ನು ಕೊರೆದು ಸೊರಗಿಸುತ್ತವೆ; ಕಡೆಗೆ ಸಾಯಿಸುತ್ತವೆ.

ಇಲ್ಲಿ ಒಂದು ಪ್ರಶ್ನೆ: ರಾಜಾರಾಯನನ್ನು ಮದುವೆಯಾಗುತ್ತೇನೆಂದಾಗ ದೊಡ್ಡ ಮನುಷ್ಯರಂತೆ ವರ್ತಿಸುವ ಶ್ರೋತ್ರಿಯವರು ಈ ಸಂದರ್ಭದಲ್ಲಿ ಹೀಗಾದದ್ದೇಕೆ ? ಕಾತ್ಯಾಯಿನಿಯ ಬಗ್ಗೆ ಪ್ರಾಮಾಣಿಕ ಕಾಳಜಿಯಿದ್ದರೆ ಚೀನಿಯನ್ನೇಕೆ ಸಲೀಸಾಗಿ ಒಪ್ಪಿಸುತ್ತಿರಲಿಲ್ಲ? ಶ್ರೋತ್ರಿಯರಿಗೆ ಪ್ರಿಯವಾದ್ದು ಧರ್ಮಸೂತ್ರಗಳ ಸುತ್ತ ವಿನೀತಭಾವದಿಂದ ಪ್ರದಕ್ಷಿಣೆ ಹಾಕುವ ಕೆಲಸ. ಕಾತ್ಯಾಯಿನಿ ವಿಧವಾವಿವಾಹ ಮಾಡಿಕೊಳ್ಳುವುದರಿಂದ ಇವರ ವಂಶೋದ್ದಾರಕ್ಕೇನೂ ಧಕ್ಕೆಯಿಲ್ಲವಲ್ಲ! ಆದರೆ ಚೀನಿಯನ್ನು ಬಿಟ್ಟುಕೊಟ್ಟರೆ ಧಕ್ಕೆ! ಕಾತ್ಯಾಯಿನಿಯಿಲ್ಲದೆಯ ವಂಶಪಾರಂಪರ್ಯ ಕರ್ಮಗಳನ್ನು ಮಾಡಬಹುದು. ಆದರೆ ಚೀನಿಯಿಲ್ಲದೆ ಅದು ಸಾಧ್ಯವೆ? ಯಾವ್ಯಾವುದಕ್ಕೂ ವಂಶಶ್ರದ್ಧೆಯುಳ್ಳ ಇವರು ಕಾತ್ಯಾಯಿನಿಯ ಕ್ರಮದಿಂದ ತಮ್ಮ ವಂಶಪ್ರತಿಷ್ಠೆಗೆ ಧಕ್ಕೆಯೆಂದು ತಿಳಿದು ಪ್ರತಿಭಟಿಸದೆ ಇದ್ದದು ಆಶ್ಚರ್ಯ! ಮನಸ್ಸಿನ ಮಿಡಿತವನ್ನು ಅರ್ಥಮಾಡಿಕೊಳ್ಳದ ವ್ಯಕ್ತಿ ಕಾತ್ಯಾಯಿನಿಯನ್ನು ಪ್ರತಿಭಟಿಸದೆ ಇದ್ದದ್ದು ದಡ್ಡತನದ ಪ್ರತೀಕವೆಂದು ಹೇಗೆ ಹೇಳುವುದು? ಇದು ಪರಿಸ್ಥಿತಿಯನ್ನು ಮೇಲೆಳೆದುಕೊಳ್ಳದ ಸಾಂದರ್ಭಿಕ ಸ್ಪೂರ್ತಿಯ ಜಾಣ ರಾಯಭಾರವಲ್ಲವೆ ? ಆದ್ದರಿಂದಲೇ ಹೇಳುವುದನ್ನೆಲ್ಲ ಹೇಳಿದ್ದಾದ ಮೇಲೆ ಇಷ್ಟವಿದ್ದರೆ ಕರೆದುಕೊಂಡು ಹೋಗಬಹುದೆಂದು ಹೇಳಿ ಬಾಗಿಲು ಹಾಕಿಕೊಳುತ್ತಾರೆ: ಇಂಥ ಕ್ರಿಯೆಯಿಂದ ಕಾತ್ಯಾಯಿನಿಯನ್ನು ಕಲಕುತ್ತಾರೆ.

“ಗ್ರಾಮಾಯಣ’ದ ಬಾಳಾಚಾರ‍್ಯರೂ ಶ್ರೋತ್ರಿಯವರಂತೆಯೇ ಧರ್ಮಸೂಕ್ಷ್ಮವನ್ನು ಅರಿತವರು. ಸಂಪ್ರದಾಯ ನಿಷ್ಠರು. ಆದರೆ ಒಳಿತಿಗಾಗಿ ದಾದಾನಂಥವನನ್ನು ತಮ್ಮ ದೇವರಕೋಣೆಯಲ್ಲಿ ಬಚ್ಚಿಡುವುದಕ್ಕೆ ಹೇಸುವ ಕರ್ಮಠರಲ್ಲ. ಪಾದಳ್ಳಿಯಲ್ಲಿ ನಡೆಯುವೆ ಅನ್ಯಾಯಗಳ ವಿರುದ್ಧ ಅಥವಾ ಬದುಕಿನ ಪರಿಸರದಲ್ಲಿ ಪ್ರವೇಶ ಮಾಡಿ ಶಾಂತಿ ಸುವ್ಯವಸ್ಥೆಗಳನ್ನು ಕದಡುವ ಅನಾರೋಗ್ಯಕರ ಬದಲಾವಣೆಯ ವಿರುದ್ಧ ಸಾಧ್ಯವಾದಷ್ಟ ಸೆಣಸುತ್ತಾರೆ. ಅವರ ಈ ಸೆಣಸು ಪುಸ್ತಕದ ಬದನೆಕಾಯಿಯಿಂದ ಪ್ರೇರಿತವಾದದ್ದಲ್ಲ. ಬದುಕಿನ ಅನುಭವದಿಂದ ಬಂದದ್ದು. ಆದರೆ ಶ್ರೋತ್ರಿಯವರು ಹಾಗಲ್ಲ. ಹೆಜ್ಜೆಹೆಜ್ಜೆಗೆ ಧರ್ಮಗ್ರಂಥಗಳ ತಾತ್ವಿಕತೆಗೆ ತಂಪು ತಾಣವಾಗುತ್ತಾರೆ. ಆದ್ದರಿಂದಲೇ ಚೀನಿಯನ್ನು ತಮ್ಮ ವಂಶದವನೆಂಬ ಕಾರಣಕ್ಕಾಗಿ ಕಾತ್ಯಾಯಿನಿಯೊಂದಿಗೆ ಕಳಿಸಲು ಸಲೀಸಾಗಿ ಒಪ್ಪದ ಅವರಿಗೆ ತಾವೇ ಶ್ರೋತ್ರಿಯ ವಂಶದವರಲ್ಲವೆಂಬ ಸತ್ಯಸಂಗತಿ ತಿಳಿದಾಗ, ಆ ವಂಶದ ಹೊಲವನ್ನು ಚೀನಿಗೆ ಕೊಡಲು ಮನಸ್ಸು ನಿರಾಕರಿಸುತ್ತದೆ.

ಶ್ರೀನಿವಾಸ ಶ್ರೋತ್ರಿಗಳು ಅನೈತಿಕ ಹೂಡಿಕೆಯ ಫಲವೇ ಹೊರತು ಚೀನಿಯಲ್ಲ. ಚೀನಿಯನ್ನು ತಾಯಿಗೆ ಒಪ್ಪಿಸದೆ ತಾವೇ ಇಟ್ಟುಕೊಳ್ಳಬಯಸಿದಾಗಲೇ ಅವನ ಬಾಳ ಹೊಣೆ ಹೊತ್ತು ಜೀವನ ಸೌಲಭ್ಯ ಕಲ್ಪಿಸುವುದು ಶ್ರೋತ್ರಿಗಳ ನೈತಿಕ ಜವಾಬ್ದಾರಿ. ಆದರೆ
ಇಲ್ಲಿ ತೋಳ-ಕುರಿಮರಿಯ ಕತೆ ನೆನಪಿಗೆ ಬರುವಂತೆ ಸನ್ನಿವೇಶ ಸೃಷ್ಟಿಯಾಗಿದೆ. ಚೀನಿ ಅನೈತಿಕ ಹೂಡಿಕೆಯ ಕೂಸಲ್ಲದಿದ್ದರೇನಂತೆ, ಅವನ ತಾತ ಅಂಥವರಲ್ಲವೆ ? ಅಂದಮೇಲೆ ಅವನಿಗೇಕೆ ಆಸ್ತಿ?-ಇದರಿಂದ ಶ್ರೋತ್ರಿಯವರು ನಂಬಿ ನಡೆಯುವ ಮೌಲ್ಯಗಳು ಎಷ್ಟು ಹಾಸ್ಯಾಸ್ಪದ ಎನ್ನಿಸುತ್ತದೆ. ಕಡೆಯಲ್ಲಿ ಅವರು ವರ್ಣಾಶ್ರಮ ಧರ್ಮದಂತೆ ಸನ್ಯಾಸಾಶ್ರಮ ಸ್ವೀಕಾರಕ್ಕೆ ಸಿದ್ದರಾಗಿ ಹೊರಡುತ್ತಾರೆ. ಬಾಳಾಚಾರ‍್ಯರಾದರೆ ತಮ್ಮ ಮೂಲಸತ್ವವನು ಕೆಣಕಿದ ಸವಾಲುಗಳೊಂದಿಗೆ ಜೀವಂತ ಸೆಣಸಿನಲಿ ನಿರತರಾಗಿ ನಮ್ಮ ಸಮಾಜದಲ್ಲೇ ಬದುಕುವ, ಅದರ ಅರ್ಥಪೂರ್ಣತೆಯನ್ನು ಹುಡುಕುವ ವ್ಯಕ್ತಿಯಾಗುತ್ತಾರೆ. ಶ್ರೋತ್ರಿಗಳಿಗೆ ಸಾಮಾಜಿಕ ಸಂವೇದನೆಗೆ ಸ್ಪಂದಿಸುವ ಭಾವವಿಲ್ಲ, ಹೀಗಾಗಿ ಬಾಳಹೊಳೆಯಲ್ಲಿ ಈಜುತ್ತ ಹೋದಂತೆಲ್ಲ ಬಾಳಾಚಾರರು ಬೆಳೆಯುತ್ತಾರೆ: ಶ್ರೋತ್ರಿಗಳು ಧರ್ಮಸೂತ್ರದಿಂದ ತಮ್ಮನ್ನು ತಾವೇ ಕಟ್ಟಿಕೊಳ್ಳುತ್ತಾರೆ. ಯಾವುದೇ ಧರ್ಮಸೂತ್ರವನ್ನು ಸ್ವತಂತ್ರ ನಿಕಷಕ್ಕೊಡ್ಡದೆ ಅಂಧಾನುಸಾಧಕರಾದರೆ ಆಭಾಸ ವಿಪರ್ಯಾಸಗಳಿಗೆ ಕಾರಣವಾಗುತ್ತದೆ.

ಆದರೆ ಶ್ರೋತ್ರಿಗಳ ಮನೆಯಲ್ಲೇ ಇದ್ದ ಲಕ್ಷ್ಮಿ ಸಾಧ್ಯವಾದಷ್ಟು ನೇರವಾಗಿ ಯೋಚಿಸುತ್ತಾಳೆಂಬುದು ಗಮನಾರ್ಹ. ಏಕೆಂದರೆ ಅವಳು ಧರ್ಮ ನಿಯಮ ಇತ್ಯಾದಿ ಕಟ್ಟು ಪಾಡುಗಳಿಂದ ನಿಯಂತ್ರಿತಳಾಗಿ ಸಿದ್ಧಾಂತ ಶ್ರದ್ದೆ ಹೊಂದಿದವಳಲ್ಲ. ಆದುದರಿಂದಲೇ ಶ್ರೋತ್ರಿಯರು ಮತ್ತು ತನ್ನ ನಡುವಿನ ಸಂಬಂಧದಲ್ಲಿ ಲಕ್ಷ್ಮಿಗೆ ಅನೀತಿಯ ಪ್ರಶ್ನೆಯೇ ಕಾಣಲಿಲ್ಲ. ತಾವಿಬ್ಬರ ಒಪ್ಪಿ ಶೀನಪ್ಪನ ಹೆಂಡತಿ ಒಪ್ಪಿ ಡಾಕ್ಟರೇ ಅವರನ್ನು ದೂರವಿರಬೇಕೆಂದು ಹೇಳಿರುವಾಗ ಇದು ಲೋಕರೂಢಿ’ ಎನ್ನಿಸಿದ ಅವಳಿಗೆ ‘ಶೀನಪ್ಪನ ಚರ್ಯೆ ವಿಚಿತ್ರವಾಗಿ ಕಾಣುತ್ತಿತ್ತು,’ ಲಕ್ಷ್ಮಿ ತನಗೆ ಬಂದ ಸಮಸ್ಯೆಯನ್ನು ತನ್ನ ಸ್ಥಾನದಲ್ಲಿ ನಿಂತು ನಿರ್ಲಿಪ್ತಳಾಗಿ ನೇರವಾಗಿ ನೋಡುತ್ತಾಳೆ. ‘ಇದ್ದುದರಲ್ಲಿ ಅನಾಸಕ್ಕೆ ಭಾವದಿಂದ ಇದ್ದವಳೆಂದರೆ ಅವಳೊಬ್ಬಳೇ.’ ಇನ್ನು ಸದಾಶಿವರಾಯರು ಅಧ್ಯಯನ ತಲ್ಲೀನರಾಗಿ ಅದಕ್ಕಾಗಿಯೇ ಕರುಣಾರತ್ನೆಯ ಕೈಹಿಡಿದು ವಿಚಿತ್ರ ಸಂಸಾರ ನಡೆಸುವ ಭೂಪರಾಗಿ ಯಾವ ಸಾಮಾಜಿಕ ಮೌಲ್ಯವನ್ನೂ ಪ್ರತಿನಿಧಿಸದೆ, ಪ್ರತಿಕ್ರಿಯೆಯನ್ನೂ ತೋರಿಸದೆ ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ.

ಈ ಪ್ರಬಂಧದ ಮೊದಲಲ್ಲಿ ಉಲ್ಲೇಖಿಸಿದ ಭೈರಪ್ಪನವರ ಹೇಳಿಕೆಗಳ ಒರೆಗಲ್ಲಿಗೆ ‘ವಂಶವೃಕ್ಷ’ವನ್ನೊಡ್ಡಿ ನೋಡಿದಾಗ ‘ನಮ್ಮ ಅಂತಃಕರಣದ ಆಕರ್ಷಣೆಯನ್ನು ಪರೋಕ್ಷವಾಗಿ ಹೆಚ್ಚಿಸುವ ಕೆಲಸವನ್ನು’ ಮಾಡುವುದು ಶೋತ್ರಿಯವರು ಪ್ರತಿನಿಧಿಸುವ ಮೌಲ್ಯವೆಂದು ಗೊತ್ತಾಗುತ್ತದೆ. ಇಂಥ ಮೌಲ್ಯಗಳ ಬಗ್ಗೆ ವಿಚಾರ ಮಾಡುವುದು ಅಗತ್ಯ. ಕಾದಂಬರಿಕಾರರು ಹೊಸ ಮೌಲ್ಯವನ್ನು ಪ್ರತಿನಿಧಿಸುವ ರಾಜಾರಾವ್‌ ಮತ್ತು ಕಾತ್ಯಾಯಿನಿಯರನ್ನು ಉದ್ದೇಶಪೂರ್ವಕವಾಗಿ ಸೋಲಿನತ್ತ ಕೊಂಡೊಯ್ಯುತ್ತಾರೆಂಬ ಅನುಮಾನಕ್ಕೆ ಮೇಲಿನ ಅಂಶಗಳಲ್ಲಿ ಆಧಾರವಿದೆ. ಒಟ್ಟಾರೆ ಕಾದಂಬರಿ ಎತ್ತಿ ಹಿಡಿಯುವ ಮೌಲ್ಯ ಇಂದಿನ ಸಾಮಾಜಿಕ ಸಂದರ್ಭದಲ್ಲಿ ಪ್ರತಿಗಾಮಿಯೆಂದು ಹೇಳಬೇಕಾಗುತ್ತದೆ. ಬದುಕಿನ ಒಂದೊಂದು ಪ್ರಸಂಗಕ್ಕೂ ಅನುಭವದ ಆವರಣದಲ್ಲಿ ಬೆಳಕು ಕಾಣುವ ಬದಲು ಶ್ರೋತ್ರಿಗಳಂತೆ ಎಲ್ಲದಕ್ಕೂ ಧರ್ಮಗ್ರಂಥಗಳ ಹಳಿಯ ಮೇಲೆ ಬದುಕಿನ ಬಂಡಿ ಬಿಡುವ ತೀವ್ರತೆ ಅರ್ಥಹೀನವೆನ್ನಿಸುತ್ತೆ. ಅಂಧಶ್ರದ್ದೆಯ ಅಡಿಗಲ್ಲ ಮೇಲೆ ನಿಂತು ಬದುಕಿನ ಅರ್ಥಪೂರ್ಣ ಅನುಭವದಿಂದ ಬೆಳೆಯದೆ ಹೋಗುವ, ಅದಕ್ಕಾಗಿಯೇ ಮನಸ್ಸು ಮೆದುಳುಗಳನ್ನು ಹುರಿಗೊಳಿಸಿಕೊಳ್ಳುವ ಶ್ರಮ ಶೋಚನೀಯ. ಹಾಗೇ ‘ಚಂದ್ರಿಯ ಸಮಾಗಮ ಹೊಸ ಬದುಕಿನ ತೀವ್ರಾನುಭವವನ್ನೆಲ್ಲ ತೆರೆಯುತ್ತದೆಯೆಂಬ ಭಾವನೆಗೂ ನನ್ನ ಅನುಕಂಪವಿದೆ.

ಒಟ್ಟಿನಲ್ಲಿ ತಾವು ನಂಬಿದ ಸನಾತನ ಧರ್ಮದ ಸುಳಿಯಲ್ಲೇ ಸುತ್ತುವ ‘ಸಾಹಸಿ’ಯಾಗುವ ಶೋತ್ರಿಯವರು ಮತ್ತು ಸನಾತನ ಧರ್ಮವೇ ಹಸಿರು ಎಂದುಕೊಂಡಿದ್ದು ಮಾರುತಿ ಗುಡಿಯ ಬಳಿ ಹಸಿ ಹಸಿರುಂಡು ಹಳೆಯ ಅಗ್ರಹಾರಕ್ಕೆ ಬೆನ್ನು ತಿರುಗಿಸಿ ಕಾದಂಬರಿಕಾರರು ದಾರಿ ತೋರಿದತ್ತ ಓಡುವ ಪ್ರಾಣೇಶಾಚಾರ‍್ಯರಿಗಿಂತ, ಬದುಕು ಬಂದಂತೆ ಎದುರಿಸುತ್ತ ಅದರ ಅನುಭವದಿಂದ ಬೆಳೆಯುತ್ತ ಹೋಗುವ ಬಾಳಾಚಾರ‍್ಯರು ಅರ್ಥಪೂರ್ಣವಾಗಿ ಕಾಣುತ್ತಾರೆ. ಅಂದರೆ ‘ಗ್ರಾಮಾಯಣ’ದ ಕರ್ತೃ ರಾವ ಬಹದ್ದೂರರಲ್ಲಿ ಸಿದ್ದಾಂತವೊಂದರ ಸುತ್ತಲೇ ಸಾಹಿತ್ಯ ನಿರ್ಮಾಣ ಮಾಡುವ ಹಟ ಕಾಣುವುದಿಲ್ಲ.

ಈ ಎಲ್ಲ ವಿವೇಚನೆ ಒಂದು ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ. ಸಾಹಿತಿ ಒಂದು ಸಿದ್ಧಾಂತಕ್ಕೆ ಬದ್ಧನಾಗಿ ಅದಕ್ಕೆ ತಕ್ಕಂತೆ ಕೃತಿ ರಚನೆ ಮಾಡಲು ಉತ್ಕಟನಾದಾಗ ಪಾತ್ರಗಳು ತಾವಾಗಿಯೇ ಯೋಚಿಸದೆ ಕೃತಿಕಾರನ ಕಡಿವಾಣದ ಕುದುರೆಗಳಾಗುವ ಅಪಾಯ ಎದುರಾಗುತ್ತದೆ. ಆದ್ದರಿಂದಲೇ ಚೀನಿ ಖಾಯಿಲೆ ಬಿದ್ದಾಗ ಚಿತ್ತಶಾಂತಿಯನ್ನು ಕಳೆದು ಕೊಳ್ಳುವ ಶ್ರೋತ್ರಿಯರು, ಮನೆ ಮಗಳಾಗಿ ಬಂದಿದ್ದ ಕಾತ್ಯಾಯಿನಿ ತಮ್ಮ ನಂಬಿಕೆ ನಿಷ್ಟೆಗಳಿಗೆ ತೀರ ವಿರುದ್ಧವಾಗಿ ವರ್ತಿಸಿ ಸವಾಲಾಗಿ ಪರಿಣಮಿಸಿದಾಗ ಸಂಯಮ ತೋರಿಸಲು ಸಾಧ್ಯವಾಗುತ್ತದೆ ಮತ್ತು ತಾವು ದ್ವಿಪತ್ನಿತ್ವಕ್ಕೆ ಒಳಗಾಗಬೇಕೆಂಬ ಬೇಡಿಕೆ ಬಂದಾಗ ತೀವ್ರವಾಗಿ ತಿರಸ್ಕರಿಸಿದವರಿಗೆ ಸದಾಶಿವರಾಯರು ದ್ವಿಪತ್ನಿತ್ವಕ್ಕೆ ಒಳಗಾದಾಗ ಅಂಥ ತೀವ್ರ ಪ್ರತಿಕ್ರಿಯೆ ಕೊಡಲು ಸಾಧ್ಯವಾಗದೆ ಹೋಗುತ್ತದೆ.

ಸಾಹಿತಿ ಮೌಲ್ಯಗಳನ್ನು ಶೋಧಿಸಿ ಒಪ್ಪಿತ ಸಿದ್ಧಾಂತದ ಬಗ್ಗೆ ಒಲವು ತೋರುವದು ತಪ್ಪಲ್ಲ. ಸೈದ್ದಾಂತಿಕ ನಿಲವು ಸಾಹಿತ್ಯಕೃತಿಯಲ್ಲಿ ಪಡಿಮೂಡುವಾಗ ಎದುರಾಗುವ ಅಪಾಯಗಳನ್ನು ಗೆಲ್ಲುವ ಶಕ್ತಿ ಬೇಕು. ಸಿದ್ದಾಂತಗಳೇ ಸಾಹಿತ್ಯಸರ್ವಸ್ವವಾಗದೆ ಬದುಕಿನ ಅರ್ಥಪೂರ್ಣತೆಯಲ್ಲಿ ಬೆಸೆದುಕೊಂಡು ಅಭಿವ್ಯಕ್ತವಾಗುವ ವೈಚಾರಿಕತೆ ಗ್ರಾಹ್ಯವಾದದ್ದು. ಯಾವುದೇ ಸಿದ್ದಾಂತವನ್ನು ಅಭ್ಯಾಸ ಮಾಡದ, ಆದರೆ ನಮ್ಮ ನೆಲದ ಅನುಭವ ಜ್ಞಾನವುಳ್ಳ ನೈಜ ಸಹೃದಯನೊಬ್ಬ ನಮ್ಮ ಒಂದು ಕೃತಿಯನ್ನು ಓದಿದಾಗ, ಆ ಕೃತಿಯ ಒಡಲೇ ಎಲ್ಲ ವಿಚಾರವನ್ನು ಅನುಭವವೇದ್ಯ ಮಾಡುವ ಶಕ್ತಿಯನ್ನು ಪಡೆದಿರಬೇಕು. ಅದು ಸಾಹಿತ್ಯದಲ್ಲಿ ವೈಚಾರಿಕತೆಯ ಸ್ಥಾನಕ್ಕೆ ಒಳ್ಳೆಯ ನಿದರ್ಶನವಾಗುತ್ತದೆ. ‘ವಂಶವೃಕ್ಷ’ ದಂಥ ಕೃತಿಗಳಲ್ಲಿ ನಮ್ಮ ನೆಲದ ಮಗ್ಗಿದ ಮೌಲ್ಯಗಳ ಪ್ರತಿಪಾದನೆ ಒಂದು ಆಭಾಸವಾದರೆ, ಕೆಲವು ನವ್ಯ ಸಾಹಿತಿಗಳ ಕೃತಿಗಳನ್ನು ಪಾಶ್ಚಾತ್ಯ ಸಿದ್ದಾಂತಗಳ ಮುಖೇನ ಅರ್ಥೈಸಹೊರಟು ನಮ್ಮ ಜನವನ್ನು ಮೋಸಗೊಳಿಸುವುದು ಮತ್ತೊಂದು ಆಭಾಸ, ಒಂದು ಕೃತಿ ತನ್ನ ಒಡಲಿನಿಂದಲೇ ಅದರ ಎಲ್ಲ ಅರ್ಥಗಳನ್ನು ಹೊರಡಿಸದೇ ಹೋದರೆ ನಿಸ್ಸಂದೇಹವಾಗಿ ಅದು ಅಷ್ಟರ ಮಟ್ಟಿನ ಸೋಲು.

‘ವಂಶವೃಕ್ಷ ತನ್ನ ಒಡಲಿನಿಂದೇನೂ ವಿಚಾರಗಳನ್ನು ಹೊರಡಿಸುತ್ತದೆ. (ಅದರ ಅಭಿವ್ಯಕ್ತಿಯ ರೀತಿ ಈ ಪ್ರಬಂಧದ ವ್ಯಾಪ್ತಿಗೆ ಹೊರತಾದದ್ದೆಂದು ಭಾವಿಸುತ್ತೇನೆ.) ಆದರೆ ತಾನು ಪ್ರತಿಪಾದಿಸುವ ಮೌಲ್ಯದ ದೃಷ್ಟಿಯಿಂದ ಪ್ರತಿಗಾಮಿಯಾಗುತ್ತದೆ.
________________

ನಿರ್ಮಲ ವರ್ಮಾ ಅವರ
ಎರಡು ಹಿಂದಿ ಸಣ್ಣ ಕಥೆಗಳು

ಅನು : ಎ ಎನ್ ಪ್ರಸನ್ನ

ನಿರ್ಮಲ ವರ್ಮಾ ಹಿಂದಿಯಲ್ಲಿ ಅತ್ಯುತ್ತಮವಾದ ಕೆಲವು ಸಣ್ಣ ಕಥೆಗಳನ್ನು ಬರೆದಿರುವ, ಅಗ್ರ, ಪಂಕ್ತಿಗೆ ಸೇರುವ ಆಧುನಿಕ ಸಾಹಿತಿ. ಇವರು ದೆಹಲಿಯ ಸೆಯಿಂಟ್ ಸ್ಟೀವ್‌ನ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಸುಪ್ರಸಿದ್ಧ ಆಂಗ್ಲ ದೈನಿಕವೊಂದರಲ್ಲಿ ಕೆಲವು ಕಾಲ ಕೆಲಸ ಮಾಡಿದರು. ಅನಂತರ ಜೆಕೊಸೊವಾಕಿಯಾದಲ್ಲಿ ಅನೇಕ ವರ್ಷಗಳನ್ನು ಕಳೆದರು. ಇವರ ಒಂದು ಹಿಂದಿ ಕಾದಂಬರಿ ‘Days of Longing’ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದವಾಗಿ ಪ್ರಕಟಗೊಂಡಿದೆ. ಇವರ ಒಂಭತ್ತು ಹಿಂದಿ ಕತೆಗಳ ಇಂಗ್ಲಿಷ್ ಅನುವಾದ ಇತ್ತೀಚೆಗೆ “The Hil Station and Other Stories’ ಎಂಬ ಹೆಸರಿನಲ್ಲಿ ಕಲ್ಕತ್ತಾದ Writer’s Worksthop ಮಲತೆ ಇತ್ತೀಚೆಗೆ ಪ್ರಕಟವಾಗಿದೆ.

ಆ ಕಥಾ ಸಂಕಲನದ ಎರಡು ಸಣ್ಣ ಕತೆಗಳನ್ನು ಕನ್ನಡದ ಸಣ್ಣ ಕಥೆಗಾರರಾದ ಶ್ರೀ ಎ. ಎನ್‌. ಪ್ರಸನ್ನ ಇಲ್ಲಿ ಅನುವಾದ ಮಾಡಿಕೊಟ್ಟಿದ್ದಾರೆ. ಅತ್ಯಂತ ಸೂಕ್ಷ್ಮವಾದ ಭಾವನೆಗಳನ್ನು ಸರಳವಾದ ರೀತಿಯಲ್ಲಿ ಹೇಳುತ್ತ ಧ್ವನಿತರಂಗಗಳನ್ನು ಎಬ್ಬಿಸಬಲ್ಲ ಇವರ ಕಲೆಗಾರಿಕೆ ತನ್ನ ಸಂಕೀರ್ಣ ಪರಿಣಾಮದ ಮೂಲಕವಾಗಿ ಮನಸ್ಸಿನಲ್ಲಿ ನಿಲ್ಲುತ್ತದೆ. ಸದ್ಯ ಇವರು ಸಿಮ್ಲಾದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಆಡ್ವಾನ್ಸ್ಡ್‌ ಸ್ಟಡೀಯಲ್ಲಿ ಫೆಲೋ ಆಗಿ ಇದ್ದಾರೆ. ತಮ್ಮ ಈ ಎರಡು ಕಥೆಗಳ ಅನುವಾದವನ್ನು ಪ್ರಕಟಿಸಲು ಅನುಮತಿ ನೀಡಿ ಶ್ರೀ ವರ್ಮಾ ತುಂಬ ಉಪಕಾರ ಮಾಡಿದ್ದಾರೆ. ‘ಸಾಕ್ಷಿ’ ಅವರಿಗೆ ಕೃತಜ್ಞವಾಗಿದೆ.

Close

ಉರಿಯುತ್ತಿರುವ ಪೊದೆ

೧ ಉರಿಯುತ್ತಿರುವ ಪೊದೆ

ನಾನು ಆ ಸಿಟಿಗೆ ಹೋದದ್ದು ಅದೆ ಮೊದಲನೆಯ ಸಲ. ಕೇವಲ ಒಂದೆರಡು ದಿನ ಮಾತ್ರ ಇರಬೇಕೆಂದುಕೊಂಡಿದ್ದರೂ ಆನಿರೀಕ್ಷಿತ ಕಾರಣಗಳಿಂದ ಮುಂದಕ್ಕೆ ಹಾಕಿದ್ದೆ. ದಿನದ ಹೆಚ್ಚಿನ ಸಮಯವೆಲ್ಲ ರೂಮಿನಲ್ಲೆ ಇರುತ್ತಿದ್ದೆ. ಆಗೀಗ ಸುತ್ತಾಡಿ ಬರಲು ಹೊರಟರೆ ಕಾಲುಗಳು ತಮ್ಮಷ್ಟಕ್ಕೆ ತಾವು ಆ ಅದೇ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದವು. ಅಪರಿಚಿತ ಊರುಗಳಲ್ಲಿ ಪ್ರವಾಸ ಮಾಡುವವರೂ ಕೂಡ ತಮ್ಮಿಷ್ಟದ ಸ್ಥಳಗಳನ್ನು ಕಂಡುಕೊಳ್ಳಲು ಸಾಧ್ಯ,
ಹಿಂದೆ ಅನೇಕ ವೇಳೆ ನಾನಿಲ್ಲಿಗೆ ಬರಬೇಕೆಂದಿದ್ದೆ. ಸಾಯಂಕಾಲ ಅಗ್ಗದ ಹೋಟೆಲ್ ಹುಡುಕುವಾಗ ನನ್ನ ದೃಷ್ಟಿ ಈ ಕಡೆ ತಿರುಗುತ್ತಿತ್ತು ಅಥವಾ ಟ್ರಾಮ್‌ನಲ್ಲಿ ಕುಳಿತು ಸೇತುವೆ ದಾಟುವಾಗ ಇಲ್ಲಿ ಇಳಿಯಬೇಕೆಂಬ ತೀವ್ರಾಪೇಕ್ಷೆ ಉಂಟಾಗುತ್ತಿತ್ತು. ಪ್ರತಿ ಬಾರಿಯೂ ಹಿಂದೇಟು ಹಾಕಿ ಅಪೇಕ್ಷೆಯನ್ನು ಹತ್ತಿಕ್ಕಿದ್ದೆ.
ಆ ದಿನ ಇತರ ದಿನಗಳಿಗಿಂತ ಬೇರೆಯಂತೆ ಕಾಣುತ್ತಿತ್ತು. ದಿನವಿಡಿ ಮಲಗಿ ಸಾಯಂಕಾಲ ಒಂಡೆರಡು ಕಾಗದ ಬರೆದು ಪೋಸ್ಟ್ ಮಾಡಲು ಹೋದೆ.
ವಾಪಸು ಬರುವಾಗ ಬೇಕೆಂದೇ ಬೇರೆ ರಸ್ತೆಯನ್ನು ಹಿಡಿದೆ. ಬಹುಶಃ ನಾನು ನನ್ನ ಅರಿವಿಲ್ಲದೆಯೇ ಸುಪ್ತ ಆಕಾಂಕ್ಷೆಗೆ ಶರಣಾದೆನೆಂದು ಕಾಣುತ್ತದೆ. ಅನೇಕ ಬಾರಿ, ಅದರಲ್ಲಿಯೂ ಯಾರೂ ಪರಿಚಯವಿರದ ಊರುಗಳಲ್ಲಿ ನನಗೆ ಸಾಮಾನ್ಯವಾಗಿ ಹೀಗೆಯೇ ಆಗುತ್ತದೆ. ಆಗ ಒಂದು ಕ್ಷಣವೂ ಯೋಚಿಸದೆ ಹೊಸ ರಸ್ತೆಗೆ ತಿರುಗಲು ನನ್ನನ್ನು ನಾನು ಬಿಟ್ಟು ಬಿಡುತ್ತೇನೆ.
ಅದು ಮಾಗಿ ಕಾಲದ ದಿನ. ಊರಿಂದಾಚೆ ಬೆಟ್ಟಗಳು ಪ್ರಾರಂಭವಾಗುವ ಸ್ಥಳದ ಹತ್ತಿರವಿದ್ದ ಸಣ್ಣ ದ್ವೀಪಕ್ಕೆ ಬಂದೆ. ಕತ್ತರಿ ಚೂಪಿನ ಎರಡು ತೊರೆಗಳು ದ್ವೀಪವನ್ನು ಎರಡು ಭಾಗ ಮಾಡಿದ್ದವು. ಬ್ರಿಡ್ಜ್ ಕೆಳಗೆ ನೀರಿನಲ್ಲಿ ಮುಳುಗಿದ ಹುಲ್ಲು ; ದಡದಲ್ಲಿ ಸಾಲಾಗಿ ಚುಕ್ಕೆಯಿಟ್ಟ ಕೆಂಪು ಬೆಂಚುಗಳು. ಆ ದಿನಗಳಲ್ಲಿ ಬೆಂಚುಗಳೆಲ್ಲ ಖಾಲಿ ಖಾಲಿ ಅಂದರೆ, ಯಾವಾಗಲೂ ಅವುಗಳ ಮೇಲೆ ಬೀಳುತ್ತಿದ್ದ ಎಲೆಗಳನ್ನು ಬಿಟ್ಟು ಗಾಳಿ
ಒತ್ತರಿಸಿ ಬಂದು ಒಂದಷ್ಟನ್ನು ಸೆಳೆದುಕೊಂಡು ಹೋದರೆ ಉಳಿದವು ಕೆಳಗೆ ಬೀಳುತ್ತವೆ. ತೊರೆಯ ತೆಳು ಅಲೆಗಳ ನೀರು ಮೆಲುದನಿ ಮಾಡುತ್ತ ಹರಿಯುತ್ತಿತ್ತು. ನನ್ನೊಳಗಿನ ದನಿಯೊಂದು ಅದನ್ನು ಪ್ರತಿಧ್ವನಿಸಿ ಒಂದು ದಿನ ನಾನಿಲ್ಲಿಗೆ ಬರುತ್ತೇನೆಂದು ಹೇಳುತ್ತಿತ್ತು.
ನಾನಿಲ್ಲಿ ಮಂಕಾದ ಮಾಗಿ ಕಾಲದ ದಿನ ಬಂದೆ. ಹಾಗೆಯೇ ದಡದಲ್ಲಿ ನಡೆಯುತ್ತ ಕೆಲವು ಹುಡುಗರು ಆಟವಾಡುವುದನ್ನು ಕಂಡೆ. ಅವರು ಆಟದಲ್ಲಿ ಮಗ್ನರಾಗಿ ನನ್ನನ್ನು ಗಮನಿಸಲಿಲ್ಲ. ಅವರೆಲ್ಲ ಎಲೆಗಳನ್ನು ಕಲೆಹಾಕಿ ಒಂದು ದೊಡ್ಡ ಗುಂಪು ಮಾಡಿ ಬೆಂಕಿ ಹಚ್ಚಿದರು. ಆದು ಉರಿಯತೊಡಗಿದಾಗ ಅಲ್ಲಿಂದ ಓಟ ಕಿತ್ತರು. ಆ ಹಿತವಾದ ಸಾಯಂಕಾಲದ ಬೆಳಕಿನಲ್ಲಿ ಸುರುಳಿಸುತ್ತುತ್ತ ಎದ್ದ ಹೊಗೆ ಗಾಳಿಯಲ್ಲಿ ಒಂದು ವಿಚಿತ್ರ ವಾಸನೆ ಬೆರಸಿತ್ತು.
ಬ್ರಿಡ್ಜ್‌ನ್ನು ಬಹಳ ಹಿಂದೆ ಬಿಟ್ಟು ಕೊಂಬೆಗಳು ತಮ್ಮ ಅಸ್ತಿಪಂಜರದ ಕೈಗಳನ್ನು ನೀರಿನಲ್ಲಿ ಇಳಿಬಿಟ್ಟಿದ್ದ ಜಾಗಕ್ಕೆ ಬಂದೆ. ದಡದಿಂದ ಚಾಚಿದ ಆ ತುಂಡು ಪ್ರದೇಶ ಹಸಿಯಿಂದ ತುಂಬಿತ್ತು. ಇದ್ದಕ್ಕಿದ್ದಂತೆ ನನ್ನ ದೃಷ್ಟಿ ಅವನ ಮೇಲೆ ಬಿದ್ದು ಗಕ್ಕನೆ ನಿಂತೆ.
ಅವನೊಬ್ಬ ಮುದುಕ. ಅಲ್ಲಾಡದೆ ಮೌನವಾಗಿ ಆರಾಮು ಕುರ್ಚಿಯಲ್ಲಿ ಕುಳಿತಿದ್ದ. ಅವನ ಬಾಯಲ್ಲಿದ್ದ ಪೈಪ್ ಯಾವಾಗಲೂ ಆರಿಹೋಗಿತ್ತು. ಅವನು ಕೈಯಲ್ಲೊಂದು ಮೀನು ಹಿಡಿಯುವ ಗಾಳ ಹಿಡಿದಿದ್ದ. ಅದರ ಕೊನೆ ಆ ರಾಡಿ ನೀರಿನಲ್ಲಿ ಮುಳುಗಿತ್ತು. ಅವನ ಗಮನ ಹಿಡಿದುಕೊಂಡಿದ್ದ ಗಾಳದ ಮೇಲಿರಲಿಲ್ಲ. ಯಾವುದೋ ಧ್ಯಾನದಲ್ಲಿದ್ದ ಅವನ ದೃಷ್ಟಿ ದ್ವೀಪದಿಂದಾಚೆ ನಗರದ ಬ್ರಿಡ್ಜ್ ಮೇಲಿತ್ತು. ಆತನ ಬಾಯಲ್ಲಿದ್ದ ಪೈಪ್ ಕೆಲವು ಸಲ ಮೆಲ್ಲನೆ ಕಂಪಿಸುತ್ತಿತ್ತು.
ದ್ವೀಪದಲ್ಲಿ ಅದೊಂದು ಯಾರೂ ಕಾಲಿಡದ ಮೂಲೆ. ಗೊತ್ತು ಗುರಿಯಿಲ್ಲದ ನನ್ನ ಅಲೆದಾಟ ನನ್ನನ್ನು ಸುಸ್ತು ಮಾಡಿತ್ತು. ಲೆದರ್‌ ಬ್ಯಾಗನ್ನು ಹುಲ್ಲಿನ ಮೇಲಿಟ್ಟು ಅದರ ಪಕ್ಕದಲ್ಲಿ ಕುಳಿತೆ.
ನನ್ನೆದುರು ನೀರಿನಲ್ಲಿ ತೊಯ್ದು ಶಾಖ ಹೊಮ್ಮಿಸುವ ಒಂದು ಬೋಳು ಮರ. ಅದರ ಒದ್ದೆ ಶಾಖ ನನ್ನೊಳಗೆ ತೂರಿತು. ಹೋದ ವಾರ ಪ್ರತಿದಿನವೂ ಮಳೆ, ಕುಳಿತ ಹುಲ್ಲಿನೊಳಗೆ ನನ್ನ ಕಾಲು ಹೂತುಹೋಗಿತ್ತು.
ಇವತ್ತು ಮಳೆಯಿರಲಿಲ್ಲ. ಆದರೂ ದ್ವೀಪದ ಮೇಲೆ ಬೆಟ್ಟಗಳ ಮೇಲೆ ದಟ್ಟವಾದ
ಮೋಡ.
ನಾನು ಬಹಳ ಹೊತ್ತು ಕೂತಿದ್ದೆ. ಅಷ್ಟು ಸಮಯದಲ್ಲಿ ಅವನಿಗೆ ಒಂದು ಮೀನನ್ನೂ ಹಿಡಿಯಲಾಗಲಿಲ್ಲ. ಒಂದು ಸಲ ಮಾತ್ರ ಗಾಳ ಅಲುಗಾಡಿ ಅವನದನ್ನು ಬೇಗ ಬೇಗ ಎಳೆದ. ನಾನು ಒದ್ದಾಡುವ ಜೀವಂತ ಮಾಂಸರಾಶಿಯನ್ನು ನೋಡುವ ತವಕದಿಂದ ಕತ್ತು ಚಾಚಿದೆ. ಆದರೇನೂ ಆಗಲಿಲ್ಲ. ಅವನು ಗಾಳದ ಕೊಂಡಿಯನ್ನು ನೋಡಿ ನನ್ನ ಕಡೆ ತಿರುಗಿ ನಗು ಬೀರಿದ. ಮೀನು ಗಾಳದಿಂದ ತಪ್ಪಿಸಿಕೊಂಡಿತ್ತು.
ಆ ಮುದುಕ ಮತ್ತೆ ಕೊಂಡಿಗೆ ಹುಳು ಸೇರಿಸಿ ಗಾಳವನ್ನು ಹರಿಯುವ ನೀರಿಗೆಸೆದ. ಅದು ಬಿದ್ದ ಜಾಗದಲ್ಲಿ ವೃತ್ತಾಕಾರದ ಸಣ್ಣ ಅಲೆಗಳೆದ್ದು, ಕ್ಷಣಕಾಲ ಹೊಳೆದು ಮಾಯವಾದವು.
ಮತ್ತೆ ಪೈಪ್ ಹಚ್ಚಿಕೊಂಡು ಆ ಮುದುಕ ಕಿವಿಯ ಮೇಲೆ ಕೋಟಿನ ಕಾಲರ್ ಎಳೆದುಕೊಂಡ. ಸೂರ್ಯನ ಬೆಳಕು ಹರವಿದ ನೀರಿನ ತೆರೆಗಳ ಮೇಲೆ ಬಿದ್ದು, ಮತ್ತೆ ದಡಕ್ಕೆ ಬಡಿದು, ನಲುಗಿ ಅಡಗುತ್ತಿದ್ದವು. ಆದರೆ ಅವನ ಮನಸ್ಸು ಯಾವ ಕಡೆಗೋ ಇತ್ತು. ನಾನು ಗಮನವಿಟ್ಟು ಅವನನ್ನೇ ನೋಡಿದೆ. ಆದರೆ ಅವನು ಯಾವ ವಸ್ತುವನ್ನು ನೋಡುತ್ತಿದ್ದನೆಂದು ಹೇಳುವುದು ಸಾಧ್ಯವಿಲ್ಲ. ಅವನ ಕಣ್ಣುಗಳು ತೆರೆದಿತ್ತೊ ಮುಚ್ಚಿತ್ತೊ ಹೇಳುವುದು ಇನ್ನೂ ಕಷ್ಟ.
ಕ್ರಮೇಣ ನನಗಿದ್ದ ಅನುಮಾನ ಬಲಿಯಿತು. ಆದರೆ ಅನುಮಾನವೇನೆಂಬುದೇ ನನಗೆ ಅರ್ಥವಾಗಲಿಲ್ಲ. ನನಗೆ ತಿಳಿದದ್ದು ಅವನು ನನ್ನ ಕಡೆ ನೋಡಿ ನಕ್ಕಿದ್ದು ಮಾತ್ರ. ಆದರೆ ಅವನು ನಿಜಕ್ಕೂ ನನ್ನನ್ನು ನೋಡಿದನೇ ? ಇಲ್ಲದಿದ್ದರೆ ನನ್ನ ಕಡೆ ನೋಡಿ ನಕ್ಕಿದ್ದೇಕೆ ?
ನನಗೆ ಗೊಂದಲವಾಯಿತು : ಇಲ್ಲೊಬ್ಬ ಹತ್ತಿರವೇ ಕುಳಿತಿದ್ದರೂ ನಾನಿರುವುದನ್ನೆ ಗಮನಿಸಿಲ್ಲ. ಅದು ವಿಲಕ್ಷಣವೆನಿಸಿತು. ಇಲ್ಲಿಯವರೆಗೆ ನನಗೆ ಅಪರಿಚಿತ ಪಟ್ಟಣದಲ್ಲಿ ಸಂಪರ್ಕ ಕಲ್ಪಿಸಿಕೊಳ್ಳುವ ತವಕದ ತೀವ್ರತೆ ಅರ್ಥವಾಗಿರಲಿಲ್ಲ. ಅವನು ಯಾವುದೋ ಒಂದು ವಸ್ತುವಿನ ಮೇಲೆ ದೃಷ್ಟಿಯಿಟ್ಟಿದ್ದರ ಬಗ್ಗೆ ಅನುಮಾನವೇ ಇಲ್ಲ. ಆ ವಸ್ತು ನಾನು ಗ್ರಹಿಸಬಹುದಾದ ಅಂತರದಲ್ಲಿದ್ದರೂ ನನಗೆ ಮೀರಿತ್ತು.
ಅವನ ದೃಷ್ಟಿಯ ವಿಸ್ತಾರದಲ್ಲಿದ್ದದ್ದು ಇಷ್ಟು : ಹಳೆಯ ಬ್ರಿಡ್ಜ್‌, ಅದರಾಚೆ ವಿಕೃತ ಗೋಡೆಗಳ ನ್ಯಾಷನಲ್ ಥಿಯೇಟರ್, ಬ್ರಿಡ್ಜ್‌ನ ಗೋಪುರಗಳ ಮಧ್ಯೆ ಕರಗುತ್ತಿದ್ದ ಸೂರ್ಯ. ಆದರೆ ಇವೆಲ್ಲ ಆ ಪ್ರದೇಶದ ಭಾಗಗಳಾಗಿ ಹೊಸತನವನ್ನು ಕಳೆದುಕೊಂಡಿದ್ದವು. ಕೊನೆಯ ಪಕ್ಷ ಅನೇಕ ವರ್ಷದಿಂದ ಆ ಪಟ್ಟಣದಲ್ಲಿ ವಾಸಿಸಿದ್ದ ಆ ಮುದುಕನಿಗಂತೂ ಹಾಗನಿಸಿರಬೇಕು. ಮತ್ತೊಂದು ಅನುಮಾನ ನನ್ನನ್ನು ಮುತ್ತಿತು. ಹೊರಗಿನ ಈ ವಿವರಣೆಯನ್ನು ಮೀರಿದ ಇವೆಲ್ಲದರಿಂದ ಹೊರತಾದ ತಳದಿಂದ ನಿಗೂಢವೊಂದು ನನ್ನ ಅನುಮಾನದ ಕಿಡಿಗೆ ಕಾರಣವಾಗಿರಬೇಕು.
ಈ ಮನುಷ್ಯನಿಗೆ ಕಣ್ಣಿದಯೆ ? ವಿಲಕ್ಷಣ ಯೋಚನೆಯೊಂದು ಇದ್ದಕ್ಕಿದ್ದಂತೆ ನನ್ನಲ್ಲಿ ಹರಿಯಿತು. ಅವನೆಷ್ಟು ಮುದುಕನಂತೆ ಕಂಡನೆಂದರೆ…….
ಗಾಳಿಯ ರಭಸ ಆಳಿದುಳಿದ ಬೆಳಕನ್ನು ಹೊಡೆದುಕೊಂಡು ಹೋಯಿತು. ಮೆಲ್ಲನೆ ಹೆದರಿಕೆ ಹುಟ್ಟಿಸುವಂಥ ಮೌನ ದ್ವೀಪದ ಮೇಲೆ ಇಳಿಯಿತು. ಪಟಗುಟ್ಟು ತ್ತ ಬಿದ್ದ ಎಲೆಗಳನ್ನು ತೊರೆಯ ನೀರು ಸೆಳೆದುಕೊಂಡು ಹೋಯಿತು. ಸೂರ್ಯನ ಬೆಳಕಿನ ಕೆಲವು ಪಟ್ಟಿಗಳು ಮಾತ್ರ ಕೊಂಬೆ ಮತ್ತು ಬಂಡೆಗಳಿಗೆ ಅಂಟಿಕೊಂಡಿದ್ದವು. ಶೀಘ್ರಗತಿಯಲ್ಲಿ ಆವರಿಸುತ್ತಿದ್ದ ಕತ್ತಲು ಅದನ್ನೂ ಕರಗಿಸಿ ನಮ್ಮಿಬ್ಬರನ್ನು ಒಂಟಿತನ ಹಂಚಿಕೊಳ್ಳಲು ಬಿಟ್ಟಿತು. ನಾನು ತಲೆಯೆತ್ತಿದೆ.
ಇಲ್ಲ, ಅವನಾಗಲೆ ಹೊರಡಲು ತಯಾರಾಗುತ್ತಿದ್ದ. ಗಾಳವನ್ನು ಮೇಲೆಳೆದು ಕ್ಯಾನ್ ವಾಸ್‌ ಕುರ್ಚಿಯನ್ನು ಮಡಚಿ ಬಗಲಲ್ಲಿಟ್ಟುಕೊಂಡು ಧೂಳು ತುಂಬಿದ ಹಳೆಯ ಹ್ಯಾಟನ್ನು ಹಾಕಿಕೊಂಡು ಸರಿಪಡಿಸಿಕೊಂಡ ಪೈಪ್‌ನಿಂದ ಬೂದಿ ಕೊಡವಿ ಜೇಬಿನಲ್ಲಿಟ್ಟು ಕೊಂಡ. ಮೀನು ತುಂಬಿಕೊಳ್ಳಲು ತಂದಿದ್ದ ಖಾಲಿ ಬ್ಯಾಗನ್ನು ಗಾಳದ ಹುಕ್ಕಿಗೆ ನೇತು ಹಾಕಿದ.
ವಿಚಿತ್ರ ಭಾವನೆ ನನ್ನೂಳಗೆ ನುಗ್ಗಿತು. ನಿಗೂಢವಾದೊಂದು ರೀತಿಯಲ್ಲಿ ನಾನವನನ್ನು ಆವಲಂಬಿಸಿದ್ದೇನೆ ಅನ್ನಿಸಿತು. ಅವನು ಹೊರಡುವುದರಿಂದ ನಾನು ವರ್ಷಗಟ್ಟಲೆಯಿಂದಿದ್ದ ಆಮೂಲ್ಯವಾದೊಂದು ವಸ್ತುವನ್ನು ಕಳೆದುಕೊಳ್ಳುತ್ತೇನೆ. ಆವನು ಎದ್ದು ನಿಂತ. ಇದ್ದಕ್ಕಿದ್ದಂತೆ ಮರದ ಎಲೆ ನೀರಿಗೆ ಬಿದ್ದ ಸದ್ದಾಗಿರಬೇಕು. ಅವನು ಹಿಂತಿರುಗಿ ಕೇವಲ ಒಂದು ಸಲ ನೋಡಿ ಲಗುಬಗೆಯಿಂದ ಹೆಜ್ಜೆ ಹಾಕಿ ನನ್ನನ್ನು ದಾಟಿ ಹೋದ.
ಅವನು ನನ್ನ ಕಡೆ ಒಂದು ಬಾರಿಯೂ ನೋಡಲಿಲ್ಲ. ಅವನ ಕಾಲಕೆಳಗೆ ಸಿಕ್ಕ ಒಣಗಿದೆಲೆಗಳ ಶಬ್ದ ಕ್ರಮೇಣ ಕರಗಿ ಮೊದಲಿನಂತೆ ಎಲ್ಲವೂ ಮೌನದಲ್ಲಿ ಮುಳುಗಿತು.
ಕೆಲವು ನಿಮಿಷ ಕಳೆಯಿತು. ನಾನು ಕುಳಿತಲ್ಲಿಂದ ಎದ್ದು ಆ ಮುದುಕ ಕುಳಿತಿದ್ದ ಜಾಗಕ್ಕೆ ಹೋದೆ. ಆ ಮೆದು ನೆಲದಲ್ಲಿ ಅಗಲವಾದ, ತುದಿಗಾಲ ಬಳಿ ಮಿಲಕ್ಷಣವಾದ ಅವನ
ಹೆಜ್ಜೆ ಗುರುತು ಕಾಣಿಸಿತು.
ಇನ್ನಷ್ಟು ಸಮಯ ಕಳೆಯಿತು. ಅಲ್ಲಿ ನಿಂತ ಮೇಲೆ ನಾನು ಕೂಡ ಅವನು ನೆಟ್ಟ ದೃಷ್ಟಿ ಯಿಂದ ನೋಡುತಿದ್ದ ಕಡೆಗೇ ನೋಡುತ್ತಿದ್ದೆ. ಆಶ್ಚರ್ಯವಾಯಿತು. ಒಂದೆರಡು ಪಕ್ಷಿಗಳು ಪೊದೆಯಿಂದ ಹಾರಿದವು. ದಡದಾಚೆ, ದೂರದ ಹಳೆಯ ಚರ್ಚಿನ ಕಿಟಕಿಯ ಮೇಲೆ ಕರಗುತ್ತಿದ್ದ ಸೂರ್ಯನ ಬೆಳಕಿನ ತುಂಡು ಅಂಟಿಕೊಂಡಿತ್ತು. ಅದು ನೀರಿನಲ್ಲಿ ಪ್ರತಿಬಿಂಬಿಸಿ ಮುದುಕನೊಬ್ಬನ ಕೆಂಪಾದ, ಕಣ್ಣೀರಿನಿಂದ ಮಂಜಾದ ಕಣ್ಣುಗಳಂತೆ ಹೊಳೆಯಿತು.
ಯಾರಿಗೂ ಗೊತ್ತಾಗುವುದಿಲ್ಲ. ಈ ಜಾಗದಲ್ಲಿ ಮುದುಕ ಕುಳಿತಿದ್ದನೆಂದು ಯಾವ ಪ್ರಾಣಿಗೂ ತಿಳಿಯುವುದಿಲ್ಲ. ಅವನ ಕಾಟ ತಪ್ಪಿದ್ದು ಒಳ್ಳೆಯದೇ ಆಯಿತು. ಆ ಯೋಚನೆಯಿಂದ ಒಂದಿಷ್ಟು ಸಮಾಧಾನವಾಯಿತು. ಅವನೊಂದು ನನ್ನ ಮನಸ್ಸಿನಲ್ಲಿ ಹಾದು ಹೋದ ಕಲ್ಪನೆ ; ಆಥವಾ ಅಪರಿಚಿತ ಪಟ್ಟಣದಲ್ಲಿ ವ್ಯಕ್ತಿಯೊಬ್ಬ ಸುಲಭವಾಗಿ ಒಳಗಾಗಬಹುದಾದ ಒಂದು ಚಿತ್ತವೃತ್ತಿ. ಹೋಟೆಲ್ ರೂಮಿನಲ್ಲಿ ಒಬ್ಬನೇ ಕುಳಿತಾಗ ನನ್ನ ಮನಸ್ಸು ಮತ್ತೆ ಸ್ತಿಮಿತಕ್ಕೆ ಬಂದು ಎಲ್ಲವೂ ಸರಿ ಹೋಗುವುದೆಂದು ಯೋಚಿಸಿದೆ.
ಬ್ರಿಡ್ಜ್‌ ಮೇಲೆ ಟ್ರಾಮೊಂದು ಸಾಗಿ ನೀರಿನ ಮೇಲೆ ರಿಬ್ಬನ್ನಿನ ರೀತಿಯ ಪ್ರತಿಬಿಂಬ ಮೂಡಿ ಸರಿಯಿತು. ಟ್ರಾಮ್‌ನಲ್ಲಿ ಕುಳಿತ ಕೆಲವರು ಕಿಟಕಿಯ ಮಾಲಕ ದ್ವೀಪದ ಕಡೆ ನಾನು ಬ್ರಿಡ್ಜ್‌ ದಾಟುವಾಗ ನೀರಸವಾಗಿ ನೋಡಿದ ರೀತಿಯಲ್ಲಿ ನೋಡಿದರು. ಈಗ ಅವರನ್ನು ಕಂಡು ತಪ್ಪೊಂದು ನೆನಪಾದಂತಾಗಿ ಮುಜುಗರವಾಯಿತು. ನಾನು ಕೂಡ ಅವರ ಹಾಗೆಯೆ ಯಾವ ಅನುಮಾನಗಳ ಗೋಜಿಗೂ ಸಿಕ್ಕಿಹಾಕಿಕೊಳ್ಳದೆ ಬ್ರಿಡ್ಜ್ ದಾಟಿರಬೇಕು.
ಬಹುಶಃ ಈಗ ಪ್ರಯತ್ನಿಸಿದರೂ ಹಾಗೆಯೆ. ಆದರೆ……..
ನನ್ನ ಹಿಂದೆ ಹೆಜ್ಜೆಯ ಧ್ವನಿ ಕೇಳಿಸಿತು. ಇಬ್ಬರು ಹುಡುಗರು ನನ್ನ ಕಡೆ ಬರುತ್ತಿದ್ದರು : ಪಟ್ಟಣದ ಇತರ ಹುಡುಗರ ಹಾಗೆ ನೀಲಿ ಟೋಪಿ ಹಾಕಿಕೊಂಡಿದ್ದರು. ಅವರಿಬ್ಬರಲ್ಲಿ ಚಿಕ್ಕವನು ಬಣ್ಣ ಬಣ್ಣದ ಕೈವಸ್ತ್ರದಲ್ಲಿ ಉದುರಿ ಬಿದ್ದ ಎಲೆಗಳನ್ನು ತುಂಬಿಕೊಳ್ಳುತ್ತಿದ್ದ. ತನ್ನ ವಯಸ್ಸಿಗೆ ಕೊಂಚ ಹೆಚ್ಚಿಗೆ ಬೆಳೆದಿದ್ದ ದೊಡ್ಡವನು ಗಾಳಿಯಲ್ಲಿ ರೆಂಬೆ ತುಂಡೊಂದನ್ನು ತಿರುಗಿಸುತ್ತಿದ್ದ. ಅವರು ಶೀಘ್ರವಾಗಿ ನಡೆಯುತ್ತ ದ್ವೀಪದ ಕೊನೆಯಲ್ಲಿ ಮರದ ಕೊಂಬೆಗಳು ನೀರಿನಲ್ಲಿ ಮುಳುಗಿದ ಜಾಗವನ್ನು ತಲುಪಿದರು.
ಚಿಕ್ಕವನು ಜಾಗರೂಕತೆಯಿಂದ ಇಳಿಜಾರಿನಲ್ಲಿಳಿದು ಕರವಸ್ತ್ರದಲ್ಲಿದ್ದ ಎಲೆಗಳನ್ನು ನೀರಿಗೆಸೆದ. ಅವನು ಜೇಬಿನಿಂದ ಕೆಸರಂಟಿದ ಕೆಲವು ಎಲೆಗಳನ್ನು ತೆಗೆದು ಅವುಗಳನ್ನೂ ನೀರಿಗೆಸೆದ. ಇನ್ನೊಬ್ಬ ನನ್ನ ಕಡೆ ನೋಡುತ್ತಿದ್ದ. ಅವನಿನ್ನೂ ರೆಂಬೆ ತುಂಡನ್ನು ತಿರುಗಿಸುತ್ತಲೇ ಇದ್ದ. ಅವನು ಹಲ್ಲುಗಳ ಮಧ್ಯೆ ಕೆಲವು ಹುಲ್ಲಿನ ಎಳೆಗಳನ್ನು ಇಟ್ಟುಕೊಂಡು ಸ್ವಲ್ಪ ಸ್ವಲ್ಪವಾಗಿ ಕಡಿದು ಹಾಕುತ್ತಿದ್ದ. ಅಷ್ಟು ಹೊತ್ತಿಗೆ ಚಿಕ್ಕವನೂ ಸೇರಿಕೊಂಡ. ಒಬ್ಬರ ಪಕ್ಕದಲ್ಲೊಬ್ಬರು ನಿಂತು ನನ್ನ ಕಡೆ ನೋಡಿದರು.
ಒಂದು ರೀತಿಯ ನೋಟವಿರುತ್ತದೆ. ಅದರ ತೀಕ್ಷ್ಣತೆ ನಮ್ಮನ್ನು ಹಿಡಿದು ಹಾಕುತ್ತದೆ. ನಾನದಕ್ಕೆ ಅನೇಕ ಸಲ ಸಿಕ್ಕಿ ಸೂಜಿಯ ಕೆಳಗೆ ಸಿಕ್ಕ ಹುಳುವಿನಂತೆ ಒದ್ದಾಡಿದ್ದೇನೆ.
ದೊಡ್ಡ ಹುಡುಗ ನನ್ನ ಕಡೆ ಜರುಗಿದ. ಇದಕ್ಕಾಗಿ ನಾನು ಕಾಯುತ್ತಿದ್ದೆ.
“ಹೇಗಿದ್ದೀರ ?” ಅವನು ಕೇಳಿದ.
ನಾನು ಉತ್ತರ ಕೊಡುವುದಕ್ಕೆ ಮುಂಚೆ ಚಿಕ್ಕ ಹುಡುಗ ನನ್ನ ಹಿಂದೆ ನಕ್ಕಂತಾಯಿತು. “ಇವತ್ತೂ ನೀವು ಬರಿ ಕೈ ?”
“ಬರಿ ಕೈ ?” ನನ್ನ ಕೈ ನೋಡಿಕೊಂಡೆ. ನಿಜ, ನಾನೇನನ್ನೂ ಹಿಡಿದುಕೊಂಡಿರಲಿಲ್ಲ.
“ನಾನು ಹೇಳಿದ್ದು ನಿಮ್ಮ ಕೈಯಲ್ಲ” ಅವನು ಹೇಳಿದ. “ನೀವು ಒಂದು ಮೀನೂ ಹಿಡಿಯಲಿಲ್ಲ ಅಂತ ನಾನು ಹೇಳಿದ್ದು.”
“ನೀವು ತಪ್ಪು ತಿಳಿದುಕೊಂಡಿದ್ದೀರಿ. ನೀವು ಅಂದುಕೊಂಡದ್ದು ನಾನಲ್ಲ. ಅವನಾಗಲೇ ಹೊರಟು ಹೋಗಿದ್ದಾನೆ”.
“ಹೊರಟು ಹೋಗಿದ್ದಾನೆ ?”
ಸಾಯಂಕಾಲದ, ಮುಳುಗುವ ಸೂರ್ಯನ ಮಂದಕಾಂತಿ ದ್ವೀಪವನ್ನು ಆವರಿಸಿತ್ತು. ದೂರದಲ್ಲಿ, ಬ್ರಿಡ್ಜ್ ಹತ್ತಿರ ಉರಿಯುತ್ತಿದ್ದ ಎಲೆಗಳಿಂದ ಸುರುಳಿ ಸುರುಳಿ ಹೊಗೆ ಮೇಲೇಳುತ್ತಿತ್ತು. ಇನ್ನಷ್ಟು ಎಲೆಗಳುದುರಿ ಮರದ ಬೆಂಚುಗಳ ಮೇಲೆ ಬಿದ್ದು ಆನಂತರ ಗಾಳಿಯ ರಭಸಕ್ಕೆ ನೆಲದ ಮೇಲೆಲ್ಲ ಹರಡಿದವು.
“ಅವನಿಲ್ಲಿಲ್ಲ” ಸುತ್ತ ನೋಡುತ್ತ ಹೇಳಿದೆ. ನನ್ನ ಧ್ವನಿ ಸ್ವಲ್ಪ ದೃಢತೆಯನ್ನು ಕಳೆದುಕೊಂಡಿದ್ದೇಕೆಂದು ಅರ್ಥವಾಗಲಿಲ್ಲ.
“ಆದರೆ ಪ್ರತಿದಿನ ನೀವಿಲ್ಲಿಗೆ ಬರುತ್ತೀರಿ” ಚಿಕ್ಕವನು ಹೇಳಿದ. “ನೋಡಿ, ನಿಮ್ಮ ಹೆಜ್ಜೆ ಗುರುತು ಇನ್ನೂ ಇದೆ !”
ಹೌದು, ಅಲ್ಲೊಂದು ಆಗಲವಾದ, ತುದಿಗಾಲಿನ ಬಳಿ ವಿಲಕ್ಷಣವಾದ, ಹೆಜ್ಜೆ ಗುರುತಿತ್ತು. ಅದು ದೇಹದಿಂದ ಬೇರ್ಪಟ್ಟು ತೊಯ್ದು ನೆಲಕ್ಕಂಟಿದಂತಿತ್ತು.
“ಅದರದು ನನ್ನದಲ್ಲ” ನಾನು ಕ್ಷೀಣವಾಗಿ ಪ್ರತಿಭಟಿಸಿದೆ.
ಅವರು ಮೌನವಾಗಿ ನಿಂತು ನಾನು ಕಾಲೆತ್ತಿ ಅದನ್ನು ಸಮರ್ಥಿಸುವುದನ್ನು ಕಾಯುವಂತೆ ನಿಂತಿದ್ದರು. ನಾನೇನಾದರೂ ಹಾಗೆ ಮಾಡಿದ್ದರೆ ಅದಕ್ಕಿಂತ ವಿಲಕ್ಷಣವಾದದ್ದು ಬೇರೆ ಇರಲಿಲ್ಲ. ನನ್ನೊಳಗಿನ ಭಾವನೆಯೊಂದು ಅದನ್ನು ತಡೆ ಹಿಡಿಯಿತು. ನಾನು ಗಟ್ಟಿ ಮನಸ್ಸು ಮಾಡಿ ಕಾಲನ್ನು ಹುಲ್ಲಿನೊಳಗೆ ನೆಟ್ಟಿದ್ದೆ.
ಇದ್ದಕ್ಕಿದ್ದಂತೆ ಅವರಿಗೆ ನನ್ನ ಮೇಲಿನ ಆಸಕ್ತಿ ಹೋದಂತೆನಿಸಿತು. ಚಿಕ್ಕ ಹುಡುಗನಾಗಲೆ ಒಣಗಿದೆಲೆಗಳನ್ನು ಕರ್ಚಿಫ್‌ನಲ್ಲಿ ತುಂಬುತ್ತ ಮುಂದೆ ಹೋಗಿದ್ದ. ದೊಡ್ಡವನು ತನ್ನಲ್ಲೇ ಲೀನವಾಗಿ ತುಂಡು ರೆಂಬೆಯನ್ನು ತಿರುಗಿಸುತ್ತಿದ್ದ.
ನಾನು ಚಕಿತಗೊಂಡೆ. ಅವನು ಆ ಮುದುಕ ಹೊಗುತ್ತ ಥಟ್ಟನೆ ನಿಂತು ದೂರಕ್ಕೆ ದೃಷ್ಟಿ ನೆಟ್ಟು ಅಷ್ಟು ಹೊತ್ತು ನಿಂತ ಜಾಗದಲ್ಲೆ ನಿಂತು ಅವನು ನೋಡಿದ ಕಡೆಗೇ ನೋಡುತ್ತಿದ್ದ.
ಅದೊಂದು ಕೇವಲ ಆಕಸ್ಮಿಕವಾಗಿರಬೇಕು, ಅಷ್ಟೆ. ಮರುಕ್ಷಣ ಅವನು ಕಲ್ಲಿನ ಚೂರೊಂದನ್ನು ನೀರಿಗೆ ಬೀಳುವಂತೆ ಒದ್ದ. ನೀರಿನಲ್ಲಿ ಅಲೆಗಳೆದ್ದು ಆಳದಲ್ಲಿ ಅನೇಕ ಪದರುಗಳು ನುಗ್ಗಿದವು. ಪೊದೆಯ ಹತ್ತಿರ ತೊಯ್ದ ನೆಲದ ಮೇಲೆ ಇರುವೆ ಸಾಲೊಂದು ಗಕ್ಕನೆ ನಿಂತು ಮುಂದೆ ಹೊರಟಿತು. ಅವನು ಬಾಯಲ್ಲಿದ್ದ ಹುಲ್ಲಿನ ಎಳೆಗಳನ್ನು ನೀರಿಗೆ ಬೀಳುವಂತೆ ಉಗಿದ. ಹಾಕಿಕೊಂಡಿದ್ದ ಟೋಪಿ ತೆಗದು, ಗಾಳಿಯಲ್ಲಿ ಬೀಸಿ, ಮತ್ತೆ ಹಾಕಿಕೊಂಡು, ಸುಮ್ಮನೆ ಚಿಕ್ಕವನ ಹಿಂದೆ ಹೊರಟ.
ಅಷ್ಟೆ. ನನ್ನೊಬ್ಬನನ್ನೇ ಬಿಟ್ಟು ಅವರು ಹೊರಟು ಹೋದರು. ನಾನೊಬ್ಬನೇ ಇದ್ದೆ. ಆದರೆ ಒಬ್ಬಂಟಿಯಲ್ಲ. ಒಂಟಿತನ ಜೊತೆಗಿದ್ದರೆ ಯಾರೂ ಇಲ್ಲದಿರುವ ಭಾವನೆ ಬರುವುದಿಲ್ಲ. ಇದುವರೆಗೂ ನನ್ನಲ್ಲಿದ್ದ ನನ್ನ ಯಾವುದೋ ಒಂದನ್ನು ಅವರು ಆವರಿಸಿದ್ದಂತೆ ಅನ್ನಿಸಿತ್ತು.
ನನಗಲ್ಲಿ ಕುಳಿತುಕೊಳ್ಳಲಾಗಲಿಲ್ಲ. ಮರದ ಹತ್ತಿರ ಲೆದರ್ ಬ್ಯಾಗ್ ಇಟ್ಟಿದ್ದ ಹಳೆ ಜಾಗಕ್ಕೆ ಬಂದೆ.
ಕತ್ತಲೆ ಬೆಟ್ಟಗಳನ್ನು ವಿರೂಪಗೊಳಿಸಿತ್ತು. ಆದರೆ ಅವುಗಳ ಮೇಲೆ ಆರೆಮರೆತ ಕನಸಿನಂತೆ ಚರ್ಚಿನ ಗೋಪುರ ತೇಲುತ್ತಿತ್ತು.
ಹಳೆಯ ಬ್ರಿಡ್ಜ್ ಮೇಲಿನ ದೀಪಗಳು ಸಂಕೋಚದಿಂದ ಮಿನುಗಿದವು. ಹರಿವ ನೀರಿನಲ್ಲಿ ಮೇಣದ ಬತ್ತಿಯಂತೆ ನಲುಗಾಡಿದವು.
ಹರಿಯುವ ನೀರನ್ನು ನೋಡುವುದೆಂದರೆ ಒಂದು ತಮಾಷೆ. ನೋಡುತ್ತಿದ್ದಂತೆ ನಿಧಾನವಾಗಿ ದೇಹದ ಒಂದೊಂದೇ ಭಾಗ ನೀರಿಗೆ ಬಿದ್ದು ಹರಿದಂತಾಗುತ್ತದೆ. ನಿದ್ದೆಯಲ್ಲಿ ಒಳ ಮನಸ್ಸಿನ ಕತ್ತಲ ಪ್ರಪಂಚದ ಮೂಲಕ ತೊಳೆದು ಹೋದ ಸುಪ್ತವಾಗಿರುವ ನಮ್ಮಂತ ರಂಗದ ಅಂಶಗಳು ಹರಿಯುವ ಕಪ್ಪು ನೀರಿನ ಮೂಲಕ ನಮ್ಮ ಕಡೆ ಇಣಕುತ್ತವೆ.
ಈ ಸ್ವಲ್ಪ ಹೊತ್ತಿನ ಮುಂಚೆ ಇದ್ದ ಆ ಹುಡುಗರನ್ನು ಈ ಮೊದಲು ನೋಡಿದ್ದನೇ ಅನ್ನಿಸಿತು. ಈ ಊರಿಗೆ ನಾನು ಅಪರಿಚಿತ. ಇದ್ದಕ್ಕಿದ್ದಂತೆ ಹೊರಟು ಹೋದರೆ ಪೋಲೀಸಿನವನು ಮತ್ತು ಹೊಟೆಲ್ ಮ್ಯಾನೇಜರ್ ಇಬ್ಬರನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಾಗುವುದಿಲ್ಲ. ಬಹುಶಃ ನಾನು ಅದನ್ನು ಮಾಡುತ್ತಿದ್ದೇನೋ ಏನೊ. ಹೊರಗಿನವರಿಗೆ ತಮಾಷೆ ಮಾಡಲು ಹುಡುಗರಿಗೆ ತಮ್ಮದೇ ಆದ ರೀತಿಯಿದೆ.
ನನಗುಂಟಾದ ಸಮಾಧಾನವನ್ನು ಹತ್ತಿಕ್ಕಲು ಉದ್ದೇಶಪಟ್ಟು ಪ್ರಯತ್ನಿಸುತ್ತಿದ್ದರೂ ಆ ಹುಡುಗರು ಹೊರಟು ಹೋದದ್ದರಿಂದ ಖುಷಿಯಾಗಿತ್ತು. ಇನ್ನೂ ಹೊತ್ತುರಿಯುತಿದ್ದ ಎಲೆಗಳ ಗುಪ್ಪೆಯಿಂದ ಕೇವು ಬೆಂಕಿಯಲೆಗಳು ಚಾಚುತ್ತಿದ್ದವು. ಹುಡುಗರು ಹೊರಟುಹೋಗಿ ಬಹಳ ಸಮಯ ಕಳೆದು, ನಿರಂತರವಾಗಿ ಹರಿಯುವ ನೀರಿನ ಮರ್ಮರದಂತೆ ಮೌನ ಇಡಿ ದ್ವೀಪವನ್ನು ಆವರಿಸಿತ್ತು. ಮುತ್ತುತ್ತಿರುವ ಕತ್ತಲೆಯಲ್ಲಿ ಹರಿಯುವ ತೊರೆ ಮತ್ತು ದ್ವೀಪ ಒಂದರಲ್ಲೊಂದು ಬೆರೆತಹಾಗಿತ್ತು. ಕೊನೆಯ ಪಕ್ಷ ಅವುಗಳನ್ನು ಬೇರ್ಪಡಿಸುವ ರೇಖೆಯನ್ನು ಗುರುತಿಸುವುದು ಕಷ್ಟವಾಗಿತ್ತು.
ಚಳಿ ಹೆಚ್ಚಾಯಿತು. ಇನ್ನೇನು ನಾನು ಹೊರಡುವುದರಲ್ಲಿದ್ದಾಗ ನಾನೊಬ್ಬನೇ ಇಲ್ಲವೆಂದು ಅನ್ನಿಸಿತು. ನನ್ನ ಬಲಗಡೆ ಪೊದೆಯ ಹತ್ತಿರ ಮೆದು ಶಬ್ದ ಕೇಳಿಸಿತು. ಅನಂತರ ಕತ್ತಲಲ್ಲಿ ನೆರಳಿನ ರೂಪದ ಎರಡು ಆಕೃತಿಗಳು ಕಂಡು ಕ್ರಮೇಣ ಹೆಚ್ಚು ಸ್ಪಷ್ಟವಾದವು. ಹುಡುಗಿಯ ಸ್ಕರ್ಟಿನ ಮುಂಭಾಗ ಪೊದೆಗೆ ಸಿಕ್ಕು ಅವಳದನ್ನು ಬಿಡಿಸಿಕೊಳ್ಳಲು ಬಗ್ಗಿದಳು. ಅವಳ ಹಿಂದಿದ್ದ ವ್ಯಕ್ತಿಯನ್ನು ನಾನು ಮೊದಲು ಗಮನಿಸಿರಲಿಲ್ಲ. ಬಹುಶಃ ಅವನು ಅಲ್ಲಾಡದೆ ನಿಂತದ್ದು ಅಥವಾ ಕತ್ತಲೊಂದಿಗೆ ಮಿಳಿತಗೊಂಡ ಅವನ ಓವರ್ ಕೋಟ್ ಕಾರಣವಾಗಿರಬೇಕು.
ಯಾರಿಗೂ ಕಾಣದಂತೆ ನಾನು ಅಲ್ಲಿಂದ ನುಸುಳಿ ಹೋಗಬೇಕಾಗಿತ್ತು. ಕತ್ತಲಾದಾಗ ಪ್ರೇಮಿಗಳು ಈ ಜಾಗಕ್ಕೆ ಅನೇಕ ವೇಳೆ ಬರುತ್ತಾರೆಂದು ನನಗೆ ಗೊತ್ತು. ಬೇರೊಬ್ಬ ತಮ್ಮನ್ನು ನೋಡುತ್ತಿದ್ದಾನೆಂದು ಗೊತ್ತಾಗಿದ್ದರೆ ಅವರಿಗೆ ಕಸಿವಿಸಿಯಾಗುತ್ತಿತ್ತು. ಆದರೆ ನಾನು ಏಳುವುದಕ್ಕೆ ಮುಂಚೆಯೇ ಅವರು ಪೊದೆಯ ಹಿಂದೆ ಕಾಣದಾದರು.
ಸ್ವಲ್ಪ ಪಿಸುಗುಟ್ಟಿದ್ದರೂ ಕೇಳಿಸುವಂಥ ಮೌನ. ಪೊದೆ ನನ್ನಿಂದ ಕೇವಲ ಮೂರು ಗಜ ದೂರದಲ್ಲಿತ್ತು. ಅವರ ದೀರ್ಘ ಉಸಿರಾಟ ಕೇಳಲು ನನಗೆ ಸಾಧ್ಯವಿತ್ತು. ಬೆಚ್ಚನೆಯ ಭಾವನೆಯೊಂದು ನನ್ನನ್ನು ಹಾವಿನಂತೆ ಸುತ್ತಿಕೊಂಡಿತು. ಆಗೀಗ ಪೊದ ನಲುಗಿ ಒಣಗಿದೆಲೆಗಳು ಅವರ ದೇಹದಡಿ ಸಿಕ್ಕು ಪುಡಿಪುಡಿಯಾದವು.
ಒಂದು ಸಣ್ಣ ಚೀತ್ಕಾರ, ಒಂದು ದೀರ್ಘ ಮುಲಗುಟ್ಟುವಿಕೆ. ಅನಂತರ ಮತ್ತೇನೂ ಇಲ್ಲ. ಮೌನ ಶಬ್ದವನ್ನು ಕಬಳಿಸಿತ್ತು.
ಇಂದಿನವರೆಗೂ ನನಗೆ ಆ ಸ್ಥಳದಿಂದೇಕೆ ಹೊರಡಲಿಲ್ಲವೆಂದು ಆಶ್ಚರ್ಯವಾಗಿದೆ. ಪೊದೆಯ ಹಿಂದೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಆಸಕ್ತಿಯಿರಲಿಲ್ಲ.
ಆದರೂ ನಿಂತಿದ್ದೆ.
ಸ್ವಲ್ಪ ಸಮಯ ಕಳೆದ ಮೇಲೆ ಅವರು ಪೊದೆಯಿಂದೀಚೆ ಬಂದರು. ನನಗೆ ಹುಡುಗಿಯೊಬ್ಬಳು ಕಂಡರೆ ಅವರಿಬ್ಬರ ಇದ್ದರೆಂದುಕೊಳ್ಳುತ್ತೇನೆ. ಅವಳು ಕೂದಲು ಸರಿಪಡಿಸಿಕೊಂಡು ಸ್ಕರ್ಟಿಗಂಟಿದ ಎಲೆಗಳನ್ನು ಕೊಡವಿದಳು. ಅವಳು, ಆ ಮುದುಕ ಹಾಗೂ ಅನಂತರ ನಾನು ಕುಳಿತಿದ್ದ ಜಾಗದಲ್ಲಿಯೇ ಕುಳಿತಾಗ ನನಗೆ ಉದ್ಯೋಗ ತಡೆದುಕೊಳ್ಳಲಾಗಲಿಲ್ಲ.
ಅವಳು ಸಿಗರೇಟ್ ಹಚ್ಚಿದಳು. ಕೂದಲನ್ನು ಅವಳು ಹುಡುಗರಂತೆ ಸಣ್ಣಗೆ ಮಾಡಿಸಿಕೊಂಡಿದ್ದಳು. ಗುಂಡಿ ಬಿಚ್ಚಿದ್ದ ಮಳೆಕೋಟನ್ನು ಅವಳು ತೊಟ್ಟಿದ್ದಳು. ಮಂಡಿಯ ಹತ್ತಿರ ಅವಳ ಸ್ಕರ್ಟ್ ಮುದುಡಿದ್ದನ್ನು ಕಾಣಬಹುದಿತ್ತು. ಕಣ್ಣುಗಳನ್ನು ಅರ್ಧ ಮುಚ್ಚಿಕೊಂಡು ನಿಧಾನವಾಗಿ ಸಿಗರೇಟನ್ನು ಎಳೆಯುತ್ತ ಹೊಗೆ ಬಿಡುತ್ತಿದ್ದಳು.
“ಆಂ….ನೋಡಿ…… …..” ಅವಳು ಗುಣುಗುಟ್ಟಿದಳು.
ತನ್ನಷ್ಟಕ್ಕೆ ತಾನು ಮಾತಾಡಿಕೊಳ್ಳುತ್ತಿದ್ದಾಳೆಂದು ಸುಮ್ಮನಿದ್ದೆ.
“ನೀವು ಹೊರಟು ಹೋಗಿದ್ದೀರ, ಅಂದುಕೊಂಡಿದ್ದೆ ?”
“ನನಗೇನು ನೀವು ಹೇಳಿದ್ದು ?”
ಅವಳು ನಗಲು ಪ್ರಾರಂಭಿಸಿದಳು. “ಬೇರೆ ಯಾರಿದ್ದಾರೆ ಇಲ್ಲಿ” ಅಂದಳು.
ಅವಳು ನನ್ನ ಕಡೆ ನೋಡುತ್ತಿಲ್ಲವೆಂದು ಅನ್ನಿಸಿತು. ಅವಳು ನಿಜಕ್ಕೂ ನದಿಯ ಕಡೆ, ಆ ಮುದುಕ ನೋಡುತ್ತಿದ್ದ ಬ್ರಿಡ್ಜ್‌ನಾಚೆ ದೀಪಗಳು ಕೊನೆಯಾಗಿ ಕತ್ತಲು ಹರಡಿದ ಸ್ಥಳದ ಕಡೆ ನೋಡುತ್ತಿದ್ದಳು.
“ನೀವು ಮುಂಚಿತವಾಗಿಯೇ ಬಂದಿದ್ದೀರಿ ?” ಅಂದಳು.
“ನಾನು….ನಾನು…… ನಾನು ಅಷ್ಟು ಹೊತ್ತಿನಿಂದ ಇಲ್ಲೇ ಇದ್ದೇನೆ.” ಪ್ರಶ್ನೆಯನ್ನು ನನ್ನ ಕುರಿತು ಕೇಳಿದ್ದರ ಬಗ್ಗೆ ಅಪನಂಬಿಕೆ ಇರದಿದ್ದರೂ ಅವಳು ಮೊದಲ ಬಾರಿ ಪ್ರಶ್ನೆ ಕೇಳಿದಾಗ ಹೇಗೋ ಹಾಗೆ ಗಲಿಬಿಲಿಗೊಂಡೆ.
“ಮತ್ತಲ್ಲಿ……..?” ಅವಳು ತಿರುಗಿ ಪೊದೆಯ ಕಡೆ ತೋರಿಸಿದಳು.
ಅವಳು ಹೇಳಿದ್ದು ತಿಳಿಯಲಿಲ್ಲ. ತಬ್ಬಿಬ್ಬಾಗಿ ಅವಳ ಕಡೆ ನೋಡಿದೆ.
“ಅಲ್ಲಿಗೆ ನಾನೊಬ್ಬಳೇ ಹೋಗಲಿಲ್ಲ” ಅವಳು ಮತ್ತೆ ನಕ್ಕಳು, ಆದರದು ಬೇರೆ ರೀತಿ ಕೇಳಿಸಿತು. ನನಗೆ ಬಲೆಯೊಳಗೆ ಸಿಕ್ಕಿಬಿದ್ದಂತಾಯಿತು. ಯಾವುದೇ ತಪ್ಪು ಬಾಗಿಲು ಬಡಿದು ಹಿಂದಕ್ಕೆ ಸರಿಯುವ ಮುಂಚೆಯೆ ಯಾರೋ ಒಳಗೆಳೆದುಕೊಂಡ ಹಾಗೆ.
“ಆದರೆ ನಿನ್ನ ಜೊತೆ ಇದ್ದವನು….” ನನ್ನ ದೃಷ್ಟಿ ಪೊದೆಯ ಕಡೆ ತಿರುಗಿ ಒಮ್ಮೆಲೇ ಹೆದರಿಕೆಯಾಯಿತು. ತಂಗಾಳಿಗೆ ಸಿಕ್ಕು ಅದರ ಕೊಂಬೆಗಳು ಹರಡಿ ಈಗ ಅವಳಿಗೆ ತಾನೆಂದುಕೊಂಡವನು ನಾನಲ್ಲವೆಂದು ಗೊತ್ತಾಗುವುದೆಂದುಕೊಂಡೆ.
“ಅವನಲ್ಲಿದ್ದಾನೆ-ಅದೆ ನಿಮ್ಮ ಜೊತೆ ಬಂದವನು” ನಾನು ಹೇಳಿದೆ.
“ಅವನನ್ನು ನೀವೆಲ್ಲಿ ನೋಡಿದಿರಿ ?” ಅವಳ ಹಣೆಬರಹ ನನ್ನ ಉತ್ತರವನ್ನು ಅವಲಂಬಿ ಸಿದಂತೆ ಆತುರದಿಂದ ಕೆಳಿದಳು. “ಅವನನ್ನು ನೀವೆಲ್ಲಿ ನೋಡಿದಿರಿ ?” ವಂತೆ ಕೇಳಿದಳು.
“ಅದೆ ಪೊದೆಯಲ್ಲಿ, ಇನ್ನೂ ಅವನಲ್ಲೆ ಇದ್ದಾನೆ.”
ಪೊದೆ ಅಲುಗಾಡಿತು. ಅವಳು ನನ್ನ ಹತ್ತಿರಕ್ಕೆ ಸರಿದಳು. ಪುಟ ಮಗುಚಿದ ಹಾಗೆ ಸದ್ದಾಯಿತು- ನನ್ನ ಬಾಳಿನ ಕೊನೆಯ ಪುಟ. ಅದರಾಚೆ ವಿಸ್ತಾರವಾಗಿ ಹರವಿದ
ಶೂನ್ಯ.
ನಾನು ನಿಜವಾಗಿಯೂ ಅಲ್ಲಿದ್ದೆನೇ ಎಂಬ ಪ್ರಶ್ನೆಗೆ ಸಮರ್ಥನೆ ಕೊಡಬೇಕಾಗಿ ಬಂದದ್ದು ಎರಡನೆಯ ಬಾರಿ ಎಂದು ನನ್ನ ಗಮನಕ್ಕೆ ಬಂತು. ಪೊದೆಯಿದ್ದದ್ದು ನನ್ನಿಂದ ಮೂರು ಹೆಜ್ಜೆ ದೂರ ಅಥವಾ ಅದಕ್ಕಿಂತ ಕಡಿಮೆ. ನಾನು ಒಂದು ಹೆಜ್ಜೆ ಆನಂತರ ಮತ್ತೊಂದು ಹೆಜ್ಜೆ ಇಡಬೇಕಾಗಿತ್ತು. ಪ್ರತಿ ಹೆಜ್ಜೆಯೂ ಪೊದೆಯ ಹತ್ತಿರ ಕೊಂಡೊಯ್ಯುತ್ತದೆ. ಅಲ್ಲಿ ಅವನನ್ನು ಕಾಣಬಹುದು!
ಅದು ಸುಲಭದ ಕೆಲಸ, ಯಾವ ಅಪಾಯವೂ ಇಲ್ಲ. ಎಷ್ಟು ಸುಲಭವೆಂದರೆ ಅದರ ಯೋಚನೆಯೇ ನನ್ನನ್ನು ಅಸ್ಥಿರನನ್ನಾಗಿ ಮಾಡಿತು. ನಾನೊಂದು ಹೆಜ್ಜೆಯಿಡುತ್ತೇನೆ ಅಂದುಕೊಂಡೆ. ಹಾಗೆ ಮಾಡುವುದರಿಂದ ಸಲೀಸಾಗಿ ನೆರವೇರುವ ಸಾಹಸಕೃತ್ಯದ ಕಲ್ಪನೆಯಿಂದ ಖುಷಿಯಾಯಿತು. ಇನ್ನೊಂದು ಹೆಜ್ಜೆಗೆ ಇನ್ನೂ ಕಡಿಮೆ ಸಮಯ. ಅನಂತರ ಅತ್ಯಲ್ಪ ಸಮಯವೂ ತನ್ನೆಲ್ಲ ಅರ್ಥವನ್ನೂ ಕಳೆದುಕೊಳ್ಳುವ ಪ್ರಪಂಚದಲ್ಲಿರುತ್ತೇನೆ.
ನಾನೆದ್ದು ಪೊದೆಯ ಕಡೆ ಒಂದು ಹೆಜ್ಜೆಯಿಟ್ಟೆ. ಅವಳ ಮಂಕಾದ ಗಲಿಬಿಲಿಗೊಂಡ ಕಣ್ಣು ನನ್ನ ಮೇಲಿತ್ತು. ಯಾರನ್ನಾದರೂ ಕಟ್ಟಿ ಹಾಕುವಂಥ ನೋಟವೊಂದಿರುತ್ತದೆ. ಆದರೆ ಅವಳದು ಅಂಥ ನೋಟವಾಗಿರಲಿಲ್ಲ. ಅವಳು ನೋಡುತ್ತಿದ್ದಂತೆ ನಾನು ತುಂಡು ತುಂಡಾಗಿ ಕಳಚಿ ಬೀಳುತ್ತಿರುವಂತೆ ಅನ್ನಿಸಿತು. ತೀರ ಅನಿರೀಕ್ಷಿತವಾಗಿ ಲೆಕ್ಕವೊಪ್ಪಿಸುವ ವೇಳೆ ಒದಗುತ್ತದೆ. ಅದು ನಮಗೆ ಸಂಬಂಧಿಸಿದ್ದಲ್ಲ, ಪಕ್ಕದವನಿಗೆ, ಮೂರನೆಯವನಿಗೆ ಅಥವಾ ನಾಲ್ಕನೆಯವನಿಗೆ ಅಂದುಕೊಳ್ಳುತ್ತೇವೆ. ಆದರೆ ಆ ಕ್ಷಣ ನಮ್ಮನ್ನು ಕ್ರೂರವಾಗಿ ಹಿಡಿದಿರುತ್ತೆ. ಕೆಟ್ಟ ಕನಸಿನಂತೆ ಅದು ಕಳೆಯುತ್ತದೆ ಎಂದು ಪರಿಗಣಿಸಿ, ಅದನ್ನು ಸುಮ್ಮಗೆ ಕೊಡವಿಬಿಡಬೇಕು. ನಾವು ಯಾರಿಗೂ ಉತ್ತರಿಸಬೇಕಿಲ್ಲ ಎಂದುಕೊಂಡು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ.
ನಾನು ಒಂದು ಸಲವೂ ತಿರುಗಿ ನೋಡದೆ ಹುಚ್ಚು ಹಿಡಿದಂತೆ ಓಡಿದೆ. ಪೊದೆ ಹಿಂದೆ ಉಳಿಯಿತು. ಆದರೆ ಅವಳ ನಗು ಅಷ್ಟು ದೂರದವರೆಗೂ ಬೇಟೆಗೆ ಸಿಕ್ಕಿದ ಪ್ರಾಣಿಯ ಕಾಲಿನಿಂದ ಸೋರುವ ರಕ್ತದ ಹನಿಯಂತೆ ನನ್ನನ್ನು ಅಟ್ಟಿಸಿಕೊಂಡು ಬಂತು.
ಆ ರಾತ್ರಿ ನನಗೆ ಹೋಟೆಲ್‌ಗೆ ಹೋಗಲಾಗಲಿಲ್ಲ. ನಾನು ಒಂದು ಪಾನಗೃಹದಿಂದ ಇನ್ನೊಂದು ಕಡೆಗೆ ಹೋಗುತ್ತ ಕುಡುಕರ ಸಹವಾಸದಲ್ಲಿದ್ದು ಅವರ ಹುಚ್ಚು ನಗುವಿಗೆ ಹಾಡಿಗೆ ದನಿಗೂಡಿಸಿದ್ದೆ. ಯಾವುದಾದರೊಂದು ಪಾನಗೃಹದಲ್ಲಿ ನಿದ್ದೆ ಹೋದರೆ ಅವರು ನನ್ನನ್ನು ಹೊರಗೆ ದಬ್ಬುತ್ತಿದ್ದರು. ಅನಂತರ ನಾನು ಮತ್ತೊಂದು ಕಡೆ ಹೋಗುತ್ತಿದ್ದೆ. ಇಡಿ ರಾತ್ರಿ ನಾನು ಕತ್ತಲ ಓಣಿಗಳಲ್ಲಿ ಬಾಗಿಲು ಬಡಿಯುತ್ತ ಕಳೆದೆ.
ನನ್ನನ್ನು ನಂಬಿ, ನನಗೆ ಆತ್ಮಹತ್ಯೆಯ ಯೋಚನೆ ಬರಲಿಲ್ಲ. ಅದು ವೈಯಕ್ತಿಕ ಸಮಸ್ಯೆಯಾಗದ ಚರ್ಚೆಯ ವಿಷಯವಾಗಿ ನನಗೆ ಆಸಕ್ತಿಯಿತ್ತು. ಮನಸ್ಸು ಮಾಡಿದ್ದರೆ ಆ ರಾತ್ರಿ ನನ್ನ ಜೀವನವನ್ನು ಕೊನೆಗಾಣಿಸಬಹುದಿತ್ತು.
ಆದರೆ ಆ ರಾತ್ರಿ ಮತ್ತು ಅನಂತರವೂ ನಾನು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಆ ಸಾಯಂಕಾಲದಿಂದ ಮನುಷ್ಯನೊಬ್ಬ ಸತ್ತರೂ ಬದುಕಿರುವುದರ ಬಗ್ಗೆ ನಂಬಿಕೆ ರೂಪಿಸಿಕೊಂಡೆ. ಆತ್ಮಹತ್ಯೆ ಮಾಡಿಕೊಳ್ಳದಿದ್ದರೂ ಸತ್ತಂತಿರಬಹುದು.
ಮರುದಿನ ಬೆಳಿಗ್ಗೆ ಆ ಊರು ಬಿಟ್ಟು ಮುಂದೆ ಹೊರಟೆ.

Close

ಹಿಲ್ ಸ್ಟೇಷನ್

೨ ಹಿಲ್ ಸ್ಟೇಷನ್

“ಈ ವರ್ಷ ನಾವು ಬೆಟ್ಟಕ್ಕೆ ಹೋಗುತ್ತೀವಾ ?”
ರಾತ್ರಿ ಮಲಗುವುದಕ್ಕಿಂತ ಮುಂಚೆ ಪ್ರತಿದಿನ ಅವನು ಈ ಪ್ರಶ್ನೆ ಕೇಳುತ್ತಿದ್ದ. ಅವನ ತಾಯಿ ಆಗ ಕಿಟಕಿಯಾಚೆಯ ಕತ್ತಲ ಕಡೆ ನೋಡುತ್ತಿದ್ದಳು. ಅವನ ತಂದೆ ಬರೆಯುತ್ತಿದ್ದ ಪೆನ್ಸಿಲ್‌ ನಿಲ್ಲುತ್ತಿತ್ತು: ಅವನು ಮಾಡುತ್ತಿದ್ದುದು ಅಕೌಂಟೆಂಟ್ ಕೆಲಸ.
ಇಬ್ಬರೂ ನಿರ್ಧರಿಸಿರಲಿಲ್ಲ. ಪ್ರತಿ ವರ್ಷ ಮಾಗಿ ಕಾಲ ಬರುತ್ತಿದ್ದಂತೆ ಮಗುವಿನ ವಯಸ್ಸಿಗೆ ಒಂದು ವರ್ಷ ಸೇರುತ್ತಿತ್ತು. ಅವನ ತಂದೆ ಯುವಕ. ಅವನ ತಾಯಿಯಾದರೊ……ಆತನನ್ನಿನ್ನೂ ಪ್ರೇಮಿಸುತ್ತಿದ್ದಳು.
ನನಗೆ ಯುವ ದಂಪತಿಗಳನ್ನು ನೋಡಲು ಎದೆ ಹಿಗ್ಗುತ್ತದೆ. ಅದರಲ್ಲೂ ಒಬ್ಬರ ಬಗ್ಗೆ ಮತ್ತೊಬ್ಬರು ಅನುರಾಗ ಹೊಂದಿರುವಾಗ, ಅದೊಂದು ರೀತಿ ಪವಾಡ ; ವಿವರಿಸಲು
ಯಾರಿಗೂ ಸಾಧ್ಯವಿಲ್ಲ.
ಇಬ್ಬರೂ ಬದುಕುತ್ತಿದ್ದುದು ನೆನಪಿನ ಪ್ರಭೆಯಲ್ಲಿ. ಪ್ರತಿಯೊಂದು ನೆನಪೂ ನೆಲೆಯೂರಿ, ಕಾಲದ ಕಗ್ಗಂಟಿನೊಳಗೆ ಒಂದು ಬಗೆಯ ಸೂಕ್ಷ್ಮವಾದ ಇಸ್ಪೀಟ್ ಕಾರ್ಡಿನ ಕಟ್ಟಡ ರೂಪ ಪಡೆದು, ಒಂದು ಮತ್ತೊಂದರ ಆಸರೆ ಹೊಂದಿ ಆವರ ಜೀವನೋತ್ಸಾಹಕ್ಕೆ ಸಾಕ್ಷಿಯಾಗಿತ್ತು. ಇದಕ್ಕೆ ಯಾರು ಏನನ್ನು ಒದಗಿಸಿದ್ದಾರೆಂದು ಹೇಳುವುದು ಕಷ್ಟ. ಅನಂತರ ಮಗುವಾಯಿತು.
ಆನೇಕ ಸಲ ಒಂದು ಮಗುವಾದ ಮೇಲೆ ಗಂಡ ಮತ್ತು ಹಂಡತಿ ಒಬ್ಬರಿಂದೊಬ್ಬರು ದೂರ ಸರಿಯುತ್ತಾರೆ. ಆಗಲೂ ಅವರು ಪರಸ್ಪರ ಪ್ರೇಮಿಸುತ್ತಾರಾದರೂ ಅವರ ಪ್ರೇಮ ನಿಜವಾದ ಸಾರ್ಥಕತೆ ಪಡೆಯುವುದು ಮಗುವಿನಲ್ಲಿ. ಆಗ ಅಂತ್ಯದ ಆರಂಭ.
ನಿಜ, ಈ ದಂಪತಿಗಳ ರೀತಿ ಆದಲ್ಲ. ಅವರ ಒಳ ಪ್ರಪಂಚದ ಮೂಲೆಗಳನ್ನು ಅತಿಕ್ರಮಿಸದೆ ಮಗು ಆಗಲೆ ಬೆಳೆದಿತ್ತು. ತಂದೆ ಮತ್ತು ತಾಯಿ ಮಗುವನ್ನು ಮೆಲುವಾದ ಆಶ್ಚರ್ಯದ ಲಘು ಆಘಾತದಿಂದ ಕಂಡಿದ್ದರು; ಹಳೆಯ ಆಲ್ಬಮ್ ಮಗುಚಿ ಹಾಕುತ್ತ ತಾವು ಪರಸ್ಪರ ಪರಿಚಯವಿರದೆ ತೀರ ಚಿಕ್ಕವರಾಗಿದ್ದಾಗ ತಮ್ಮನ್ನೇ ಹೋಲುವ ಮುಖವೊಂದು ಕಂಡ ರೀತಿಯಲ್ಲಿ. ಹಿಂದೆ ತಾವು ಬೇರೆ ಬೇರೆ ದಿಕ್ಕಿನಲ್ಲಿ ಚಲಿಸುತ್ತ ಹೋಗಿ ಪರಸ್ಪರ ನೆನಪಿನಿಂದ ಜೀವಿಸದೆ ಇದ್ದ ಕಾಲವೊಂದಿತ್ತೆಂದು ಯೋಚಿಸಲು ಅವರಿಗೆ ತೊಡಕಾಗುತ್ತಿತ್ತು. ವಿಚಿತ್ರ ರೀತಿಯಲ್ಲಿ ಪ್ರತಿಧ್ವನಿಸುತ್ತಿದ್ದ ಆ ಕಾಲದ ಘಟನೆಗಳನ್ನು ಮೆಲುಕು ಹಾಕುವ ಗೋಜಿಗೆ ಅವರು ಹೋಗಲಿಲ್ಲ. ನಿಜವಾದ ನೆನಪುಗಳೆಂದರೆ ಅವರಿಬ್ಬರೂ ಭಾಗಿಯಾಗಿದ್ದ ಮತ್ತು ಅವರ ಬಾಳಿಗೆ ಅರ್ಥವನ್ನು ತಂದು ಕೊಟ್ಟಂಥವು ಮಾತ್ರ. ಅದರಿಂದಾಚೆ ದೃಷ್ಟಿಸಲು ಅವರು ಆಪೇಕ್ಷಿಸಲಿಲ್ಲ.
ಇಂತಹ ನೆನಪುಗಳಲ್ಲಿ ಬೆಟ್ಟಗಳು ಒಂದು ವಿಶಿಷ್ಟ ಸ್ಥಾನ ಪಡೆದಿದ್ದವು.
“ಈ ವರ್ಷ ನಾವು ಬೆಟ್ಟಕ್ಕೆ ಹೋಗುತ್ತೀವಾ?” ಮಲಗುವುದಕ್ಕೆ ಮುಂಚೆ ಪ್ರತಿ ರಾತ್ರಿ ಮಗು ಕೇಳುತ್ತಿತ್ತು.
ಅವರು ವಿವರಿಸಲು ಯತ್ನಿಸಿದಾಗ ಮಗು ಕಣ್ಣರಳಿಸಿ ನೋಡುತ್ತಿತ್ತು.
ಹೀಗೆಯೆ ವರ್ಷಗಳು ಕಳೆಯಿತು, ಒಂದರ ಮೇಲೊಂದು, ಅನಂತರ ಒಂದು ಆಕ್ಟೋಬರ್‌ನಲ್ಲಿ ಅವರು ಹಿಲ್ ಸ್ಟೇಷನ್‌ಗೆ ಬಂದರು. ಇದು ಅವರಿಗೆ ತುಂಬ ಪ್ರಿಯವಾಗಿದ್ದ ಸ್ಥಳ. ಅಲ್ಲದೆ ಮದುವೆಯಾದ ನಂತರ ಅವರಿಲ್ಲಿ ಕೆಲವು ಕಾಲ ಕಳೆದಿದ್ದರು. ರಿಜ್ಜಿನ ಮೇಲಿದ್ದ ಒಂದು ಬೆಂಚು, ಕೆಳಪೇಟೆಗೆ ಹೋಗುವ ಫುಟ್‌ಪಾತ್. ತಾವು ಧೀರ್ಘ ಗಂಟೆಗಳ ಅನೇಕ ಬಾರಿ ಕೇಳಿದ್ದ ಚರ್ಚಿನ ಅಂಗಳದ ಮೂಲೆ. ಅದೇ ಹಳೆಯ ಪರಿಚಿತ ಹೋಟೆಲ್……..ಈ ವರ್ಷ ಮಾಗಿ ಕಾಲದಲ್ಲಿ ಹೆಚ್ಚಿಗೆ ಪ್ರವಾಸಿಗರು ಇರದಿದ್ದರಿಂದ ಹೋಟೆಲ್‌ನಲ್ಲಿ ಅನೇಕ ರೂಮುಗಳು ಖಾಲಿ. ಇನ್ನೂ ಸ್ಪಷ್ಟವಾಗಿ ನೆನಪಿನಲ್ಲುಳಿದಿರುವ
ಆ ಸುಮಧುರ ರಾತ್ರಿಗಳನ್ನು ಅನೇಕ ವರ್ಷಗಳ ಹಿಂದೆ ಕಳೆದಿದ್ದ ಅದೇ ರೂಮು ಮತ್ತೀಗ ಲಭಿಸಿತು.
ಪ್ರಯಾಣದ ಆಯಾಸದಿಂದ ದಿನವಿಡಿ ರೂಮಿನಲ್ಲೆ ಕಳೆದರು. ಬಹಳಷ್ಟು ಕಾಲ ಮಗು ನಿದ್ದೆ ಮಾಡಿತ್ತು. ಉಳಿದೆಲ್ಲಕ್ಕೂ ಹೊರತಾಗಿ ಸಂತೋಷದ ವಿಭ್ರಮಸ್ಥಿತಿಯಲ್ಲಿ ಪರಸ್ಪರ ತೋಳೆಕ್ಕೆಯಲ್ಲಿ ಮಲಗಿದ್ದರವರು. “ಕೊನೆಗೂ ನಾವಿಲ್ಲಿಗೆ ಬಂದೆವು” ಗಂಡ ಮತ್ತೆ ಮತ್ತೆ ಹೇಳಿದ.
ಹೊರಗೆ ಮಾಗಿಕಾಲದ ಹಸುರಿನ ವೈಭವ. ಉದುರಿದೆಲೆಗಳ ವಾಸನೆ ಗಾಳಿಯಲ್ಲಿ ತೂಗುತಿತ್ತು.
ಮಗು ಎಚ್ಚರಗೊಂಡು ಸುಮ್ಮನೆ ತಂದೆ ತಾಯಿಗಳ ಕಡೆ ದಿಟ್ಟಿಸಿ ನೋಡಿತು. ಹೆಚ್ಚು ಆಳವಾಗಿ ದೊಡ್ಡದಾಗಿ ಕಂಡ ಅವನ ಕಣ್ಣುಗಳು ಅವನ ಮೈಯಿನ ಭಾಗದಂತೆ ತೋರುತ್ತಿರಲಿಲ್ಲ.
“ಎಚ್ಚರವಾಯಿತೆ, ಮಗು” ಕೂದಲಲ್ಲಿ ಕೈ ಆಡಿಸುತ್ತ ತಾಯಿ ಕೇಳಿದಳು. ಮಗು ಕಣ್ಣು ಮಿಟುಕಿಸದೆ ಸುಂದರವಾದ ಬೊಂಬೆಯನ್ನು ನೋಡುವಂತೆ ತಾಯಿಯನ್ನು ನೋಡಿತು. “ಇವತ್ತು, ಅಲ್ಲಿಗೆ ಹೋಗೋಣವೇ ?” ಅವನು ಕೇಳಿದ.
“ಎಲ್ಲಿಗೆ ?”
“ಬೆಟ್ಟಕ್ಕೆ, ಇನ್ನೆಲ್ಲಿಗೆ ?”
“ಆದರೆ ಮಗು ನಾವಾಗಲೇ ಬೆಟ್ಟಕ್ಕೆ ಬಂದಿದ್ದೇವೆ” ಅವಳು ಹೇಳಿದಳು, “ನಮ್ಮ ಸುತ್ತಲೂ ಬೆಟ್ಟಗಳಿವೆ.” ಮಗು ತಂದೆಯ ಕಡೆಗೊಮ್ಮೆ ತಾಯಿಯ ಕಡೆಗೊಮ್ಮೆ ಕಕ್ಕಾವಿಕ್ಕಿಯಾಗಿ ನೋಡಿತು. “ಸಾಯಂಕಾಲ ನಾವು ರಿಜ್ಜಿಗೆ (Ridge) ಹೋಗೋಣ. ಅಲ್ಲಿಂದ ನಿನಗೆ ಪರ್ವತಗಳ ಸಾಲು ನೋಡಲು ಸಿಗುತ್ತೆ.”
ಸಾಯಂಕಾಲ ಕವಿಯುವುದಕ್ಕೆ ಮುಂಚೆ ಅವರು ಮೇಲಕ್ಕೆ ಹತ್ತಿದರು. ಎತ್ತಿಸಿಕೊಳ್ಳುವುದಕ್ಕೆ ಒಪ್ಪದೆ ಮಗು ಮಧ್ಯೆ ನಡೆಯುತ್ತ ಅವರಿಬ್ಬರ ಬೆರಳುಗಳನ್ನು ಹಿಡಿದುಕೊಂಡು ಹತ್ತಿತು. ಪ್ರಾರಂಭವಾಗುತ್ತಿದ್ದ ಮಾಗಿಕಾಲದ ಆಕಾಶದಲ್ಲಿ ಕಂತೆಕಂತೆ ಮೋಡಗಳು ಕಣ್ಕುಕ್ಕುವಷ್ಟು ಬೆಳ್ಳಗೆ ಕಂಡವು. ಪೈನ್ ಮರಗಳ ಮೇಲೆ ಬಂಗಾರದುಂಗುರದೆ ಬೆಳಕು, ಗಾಳಿಯ ಉಸಿರಿಲ್ಲ.
“ಇದೆ ಸ್ಥಳವೇ ?”
ತಾಯಿ ಮಗುವಿನ ಕಡೆ ನೋಡಿ ನಕ್ಕಳು. ಮಾಲ್‌ನಲ್ಲಿ ಮುನ್ನಡೆಯುತ್ತ ಕೆಥಡ್ರಲ್ ಎದುರಿನ ಲೈಬ್ರರಿಗೆ ಬಂದರು. ಲೈಬ್ರರಿ ಕಿಟಕಿಯ ಮೇಲೆ ಹಬ್ಬಿದ ಬಳ್ಳಿಗಳು ಗಾಳಿ ಬೀಸಿದಾಗ ಸೂಕ್ಷ್ಮವಾದ ಕುಸುರಿ ಕೆಲಸದ ವಸ್ತುವಿನಂತೆ ನಲುಗಾಡಿದವು. ಎಲ್ಲವೂ ಹಿಂದಿನಂತೆಯೆ.
“ನಾವಲ್ಲಿದ್ದೀವಾ ?” ಮಗು ಮತ್ತೆ ಉದ್ವೇಗ ತಡೆಯಲಾರದೆ ಕೇಳಿತು. ಮೇಲೆ ಹತ್ತಿ ಬಂದದ್ದರಿಂದ ಅವನ ಕಣ್ಣುಗಳು ಜ್ವರ ಬಂದಂತೆ ಹೊಳೆಯುತ್ತಿದ್ದವು.
“ಅಲ್ಲಿ ನೋಡು !” ತಂದೆ ಹೇಳಿದ.
ಮಗು ತಂದೆ ಕೈ ತೋರಿಸಿದ ಕಡೆ ನೋಡಿತು.
ಅವರ ಹತ್ತಿರದಲ್ಲಿ ನೀಲಿ ಮುಸುಕು ಹಾಕಿದ ಮರಗಳ ಗುಂಪು. ಮೇಲೆ ಸೂರ್ಯ ಕಿರಣಗಳು ಎಳೆದ ಪಾದರಸದ ಗೆರೆ. ಇವೆಲ್ಲವನ್ನು ಮೀರುವಂತೆ ಮಂಜು ಮುಸುಕಿದ, ಗಂಭೀರವಾಗಿ ತಮ್ಮದೇ ಆದ ಮೌನದಲ್ಲಡಗಿದ ಪರ್ವತ ಶ್ರೇಣಿ.
ಮಗುವಿನ ಕಣ್ಣುಗಳು ಖುಷಿಯಿಂದ ಹೊಳೆದವು.
“ನಾವು ಅಲ್ಲಿಗೆ ಹೋಗುವುದು ಸಾಧ್ಯವೇ ?”
ತಾಯಿ ನಗಲಿಲ್ಲ. ಮಗುವಿನ ಧ್ವನಿಯಲ್ಲಿದ್ದ ಸೋಜಿಗದ ಸ್ಪರಿತವನ್ನು ತಂದೆ ತಾಯಿಗಳು ಗಮನಿಸದಿರಲಿಲ್ಲ.
“ಒಳ್ಳೆ ತಮಾಷೆ !” ತಂದೆ ಹೇಳಿದ “ನಾವು ಬರಬೇಕಾಗಿದ್ದದ್ದು ಈ ಸ್ಥಳಕ್ಕೆ” ಹೇಳುತ್ತಿದ್ದಂತೆ ಸಿಟ್ಟು ಬಂದದ್ದರಿಂದ ಮುಜುಗರಗೊಂಡು ಮುಖ ಬೇರೆ ತಿರುಗಿಸಿದ.
“ಇಲ್ಲಿಯವರೆಗೆ ನಾವು ಬರಬೇಕಾಗಿತ್ತು” ನಿದ್ದೆಯಲ್ಲಿ ಮಾತಾಡುವಂತೆ ತಾಯಿ ಸಮರ್ಥಿಸಿದಳು.
ಇಲ್ಲಿಯವರೆಗೆ ಮಾತ್ರ……..ಆಚೆಗೆ ಬಂಗಾರ ಸೂರ್ಯನ ರಾಗ ತಾಗಿ ಅಲ್ಲಾಡದೆ ಮೌನವಾಗಿ ಹಬ್ಬಿದ ಪರ್ವತಗಳಂ.
ಹಳೆಯ ಚರ್ಚ್ ಹತ್ತಿರ ರಿಜ್ಜಿನ ಮೇಲೆ ಅವರು ನಿಂತಿದ್ದರು. ಸೂರ್ಯಕಿರಣವೊಂದು ಕಿಟಕಿಯ ಗಾಜಿನ ಮೇಲೆ ಬಿದ್ದುದಕ್ಕೆ ಗಾಜು ಸೀಳಿದಂತೆ ಕಾಣುತ್ತಿತ್ತು.
“ನಿನಗೆ ಚಳಿಯಾಗುತ್ತದೆಯೇ ?”
“ಇಲ್ಲ, ಏನೂ ಇಲ್ಲ” ಅವಳು ಕೊಂಚ ನಡುಗಿದಳು. ಅವನು ಅದನ್ನು ಗಮನಿಸಿದ. ಮೂಲೆಯಲ್ಲಿ ಮರದ ಕಂಬಿ ಬೇಲಿಯ ಪಕ್ಕದ ಬೆಂಚಿನ ಹತ್ತಿರ ನಿಂತಿದ್ದರು. ಕೆಳಗೆ ಹಸುರಿನ ಇಳಿಜಾರಿನ ಮೇಲೆ ಮಿಣುಕು ಹುಳುಗಳು ಕಣ್ಣು ಮಿಟುಕಿಸಿದವು. ಖಾಲಿಯಿದ್ದ ಬೆಂಚಿನ ಮೇಲೆ ಒಣಗಿದ ಎಲೆಗಳು. ಅದೊಂದು ಸಾಮಾನ್ಯವಾದ ಮರದ ಬೆಂಚು. ಶತಮಾನಗಳಿಂದ ಅದರ ಮೇಲೆ ಯಾರೂ ಕುಳಿತಂತಿರಲಿಲ್ಲ.
ಅವರಿಬ್ಬರೂ ಅದರ ಕಡೆ ಹಳೆಯ ಪರಿಚಿತ ವಸ್ತುವನ್ನು ಗುರುತಿಸುವಂತೆ ನೋಡಿದರು. ಒಬ್ಬರನ್ನೊಬ್ಬರು ಸ್ಪರ್ಶಿಸಲು ತೀವ್ರ ಅಪೇಕ್ಷೆಯಿದ್ದರೂ ನೆರವೇರಿಸಲಾಗಲಿಲ್ಲ.
ವಂಗು ಬೆಂಚಿನ ಮೇಲೆ ನಿದ್ರಿಸಿತ್ತು. ಆ ವೇಳೆಗಾಗಲೇ ಪರ್ವತ ಶ್ರೇಣಿ ಮಾಗಿಯ ಮಬ್ಬಿನೊಳಗೆ ಸೇರಿಹೋಗಿತ್ತು.
ಗಂಡ ಮೃದುವಾಗಿ ಆಕೆಯ ಭುಜದ ಮೇಲೆ ಕೈಯಿಟ್ಟ. ಆಕೆ ಅರಿವಾಗದಂತೆ ನಡುಗಿ ದೂರ ಸರಿದಳು.
“ಏನಾಯ್ತು ?” ಗಂಡ ಸಂದಿಗ್ಧಗೊಂಡು ಕೇಳಿದ
“ನಾವು ಅವನನ್ನು ಇಲ್ಲಿಗೆ ಕರೆದುಕೊಂಡು ಬರಬಾರದಿತ್ತು” ಮಲಗಿದ್ದ ಮಗುವನ್ನು ನೋಡುತ್ತ ಹೇಳಿದಳು. ಆನಂತರ ಆಕೆಯ ಕಣ್ಣು ಎದುರಿನ ಕತ್ತಲಿನ ಮೊತ್ತದ ಕಡೆ
ತಿರುಗಿತು. ಸ್ವಲ್ಪ ಹೊತ್ತಿಗೆ ಮೊದಲ ಪರ್ವತಗಳಿದ್ದುವು. ಈಗ ಏನೂ ಇಲ್ಲ.
“ನಾವು ಅವನನ್ನು ಇಲ್ಲಿಗೆ ಕರೆದುಕೊಂಡು ಬರಬಾರದಿತ್ತು.” ಆಕೆ ಮತ್ತೆ ಹೇಳಿದಳು.
“ಓ…..ಯೋಚಿಸಬೇಡ. ನಾವು ಹೋಟೆಲಿಗೆ ಹೋದ ಕೂಡಲೆ ಎಲ್ಲ ಮರೆತು ಬಿಡುತ್ತಾನೆ”.
“ಹೌದು, ಪ್ರತಿಯೊಂದನ್ನೂ”.
ಆದರೆ ಅವನು ಆಕೆಯ ಮಾತು ಕೇಳಿಸಿಕೊಂಡಂತಿರಲಿಲ್ಲ. ಅವನು ಸುಮಧುರವಾಗಿ ಹಲವು ರಾತ್ರಿಗಳನ್ನು ಜೊತೆಯಾಗಿ ಕಳೆದ ರೂಮನ್ನು ಕುರಿತು ಯೋಚಿಸುತ್ತಿದ್ದ. ಇದ್ದಕ್ಕಿದ್ದಂತೆ ಸಂತೋಷಭರಿತವಾದ ಪರವಶತೆಯ ಅನುಭವವಾಯಿತು.
“ನೋಡು, ಏನೂ ಬದಲಾಗಿಲ್ಲ. ಪ್ರತಿಯೊಂದು ಹಾಗೆಯೇ ಇದೆ” ಅವನು ಕೂಗಿದ. ನಿದ್ದೆಯಿಂದ ಎಚ್ಚತ್ತವಳಂತೆ ಆಕೆ ಹೇಳಿದಳು. “ಹೌದು, ಪ್ರತಿಯೊಂದೂ ಹಾಗೆಯೇ ಇದೆ”.
ಗಂಡ ಆಕೆಯ ಕಡೆ ನೋಡಿದ.
“ನಿನಗೆ ಚಳಿಯಾಗುತ್ತಿದೆಯೇ ?”
“ಇಲ್ಲ, ಏನೂ ಇಲ್ಲ”.
ಅವನು ಆಕೆಯನ್ನು ಹತ್ತಿರ ಸೆಳೆದು ದೀರ್ಘವಾಗಿ ಉಸಿರೆಳೆದು ಮೃದುವಾಗಿ ಮುತ್ತಿಟ್ಟ.
.
.
.
ಯುವದಂಪತಿಗಳನ್ನು ನೋಡುವುದು ನನ್ನ ಹೃದಯಕ್ಕೆ ಪಥ್ಯ. ಅದರಲ್ಲೂ ಒಬ್ಬರ ಬಗ್ಗೆ ಮತ್ತೊಬ್ಬರು ಅನುರಾಗ ಹೊಂದಿರುವಾಗ. ಅದೊಂದು ರೀತಿ ಪವಾಡ ; ವಿವರಿಸಲು ಯಾರಿಗೂ ಸಾಧ್ಯವಿಲ್ಲ.

Close

ದಕ್ಷಿಣೆ- ಒಂದು ಮರು ವಿಶ್ಲೇಷಣೆ

ಮತ-ಭಿನ್ನಮತ
ದಕ್ಷಿಣೆ-ಒಂದು ಮರುವಿಶ್ಲೇಷಣೆ

ಸುಬ್ರಹ್ಮಣ್ಯ ಕೆದ್ಲಾಯ

ಸಾಕ್ಷಿ-೧೮ ರಲ್ಲಿ ಪ್ರಕಟವಾದ ‘ದಕ್ಷಿಣೆ-ಒಂದು ವಿಶ್ಲೇಷಣೆ’ ಎಂಬ ಲೇಖನದಲ್ಲಿರುವ ತಪ್ಪು ಅಭಿಪ್ರಾಯಗಳನ್ನೂ, ವಿರೋಧಾಭಾಸಗಳನ್ನೂ ತೋರಿಸುವುದು ಈ ಲೇಖನದ ಉದ್ದೇಶ. “ದಕ್ಷಿಣೆ- ಒಂದು ವಿಶ್ಲೇಷಣೆ’ ಎಂಬ ಲೇಖನವನ್ನು ಮುಖ್ಯವಾಗಿ ಎರಡು ವಿಭಾಗಗಳನ್ನಾಗಿ ಮಾಡಬಹುದು.
೧ ಲೇಖನದ ತಲೆಬರೆಹಕ್ಕೆ ನೇರವಾಗಿ ಹೊಂದಿಕೆ ಇರದ ವಿಚಾರಗಳು
೨ ತಲೆಬರೆಹಕ್ಕೆ ಸಂಬಂಧವಿರುವ ವಿಚಾರಗಳು.
ಮೊದಲಾಗಿ ತಲೆಬರೆಹಕ್ಕೆ ಹೊಂದಿಕೆ ಇರದ ವಿಚಾರಗಳನ್ನು ನೋಡುವ :
“ಬ್ರಾಹ್ಮಣನಿಗೆ ಕೊಡುವ ದಕ್ಷಿಣೆ…………….ಧಾರ್ಮಿಕ-ಪುಣ್ಯದಾಯಿ ಎನ್ನುವುದು ಎಷ್ಟರಮಟ್ಟಿನ ಸತ್ಯ ಹಾಗೂ ಇದರಲ್ಲಿ ಬಡತನದ ಪಾಲು ಎಷ್ಟು ಎಂದು ವಿಶ್ಲೇಷಿಸುವುದೇ ಈ ಲೇಖನದ ಉದ್ದೇಶ” ಎಂದು ಲೇಖಕರು ಮೊದಲಾಗಿ ಹೇಳುತ್ತಾರೆ. ಇಲ್ಲಿ ‘ಧರ್ಮ’ ಎಂಬ ಶಬ್ದವನ್ನು ‘ಮತ’ ಎಂಬ ಶಬ್ದಕ್ಕೆ ಸಂವಾದಿಯಾಗಿ ಬಳಸಿರಬೇಕು.
ಆದರೆ ಮುಂದೆ ಪುಟ ೫೧ ರಲ್ಲಿ ‘ಧರ್ಮಪ್ರಚಾರ ಎನ್ನುವುದೇ rotten thing…… ತನ್ನ ಧರ್ಮವನ್ನು ತತ್ವವನ್ನು ಪ್ರತಿಯೊಬ್ಬನೂ ತಾನಾಗಿಯೇ ಮನಗಾಣಬೇಕಾಗುತ್ತದೆ’ ಎಂದಿದ್ದಾರೆ. ಇಲ್ಲಿ ಧರ್ಮವೆಂಬ ಶಬ್ದವನ್ನು ‘ಜೀವನ ಮೌಲ್ಯಗಳಂ’ (Human Va’ues) ಎಂಬರ್ಥದಲ್ಲಿ ಬಳಸಿರಬೇಕು ಎಂಬುದು ಸ್ಪಷ್ಟ. ಯಾವ ವ್ಯಕ್ತಿಯೇ ಆಗಲಿ ಅವನ ಜೊತೆಗೆ ಧರ್ಮ-ಹಿಂದೂ, ಕ್ರಿಶ್ಚಿಯನ್ ಮೊದಲಾದವು-ಬೆಳೆದು ಬರಲು ಸಾಧ್ಯವೇ ? ‘ಮತ’ ಎಂಬರ್ಥದಲ್ಲಿ ಧರ್ಮದ ಕುರಿತು ತನ್ನ ನಿಲುವನ್ನು ಬೇರೊಬ್ಬರ ಪ್ರಚಾರವಿಲ್ಲದೇ ತಾನೇ ಕಂಡುಕೊಳ್ಳುವುದು ಸಾಧ್ಯವೇ ? ಆದ್ದರಿಂದ ಇಲ್ಲಿಯಮಟ್ಟಿಗೆ ಧರ್ವ ಎಂಬ ಶಬ್ದದ ಅರ್ಥ ಜೀವನ ಮೌಲ್ಯಗಳೆಂದು ಮಾತ್ರ ತಿಳಿದುಕೊಳ್ಳಬೇಕಾಗುತ್ತದೆ. ‘ಮತ’ಕ್ಕೂ ‘ಜೀವನ ಮೌಲ್ಯ’ಕ್ಕೂ ಸಂಬಂಧ-ಸಾಮ್ಯ ಇದೆಯಾದರೂ ಅವು ಗಳೊಳಗೆ ವಾಸ್ತವವಾಗಿ ಬಹಳಷ್ಟು ವ್ಯತ್ಯಾಸವಿದೆ. ಈ ವ್ಯತ್ಯಾಸ ಗಮನಿಸದಿದ್ದುದರಿಂದಲೇ ಧರ್ಮಪ್ರಚಾರವನ್ನು rotten thing ಎಂಬ hasty Conclusionಗೆ ಲೇಖಿಕರು ಬಂದರು.
ಜೀವನ ಮೌಲ್ಯಗಳೆಂಬ ಅರ್ಥದಲ್ಲಿ ವಿವೇಚಿಸಿದರೂ ಕೂಡ ಅದು ಪ್ರಚಾರವಿಲ್ಲದೆ ಅರಿಯಲು ಅಸಾಧ್ಯ. ಮೂಲತಃ ಪ್ರಾಣಿಯಾದ ಮನುಷ್ಯನಿಗೆ ಕಲಿಯುವಿಕೆಯಿಂದಲೇ ಎಲ್ಲ ಮೌಲ್ಯಗಳೂ ಹಸ್ತಗತವಾಗುತ್ತದೆ. ಈ ಕಲಿಯುವಿಕೆ, ಕಲಿಸುವಿಕೆಯ ಹಿಂದೆ ಒಂದು ಬಗೆಯ ಪ್ರಚಾರವಿದ್ದೇ ಇರುತ್ತದೆ. ಆದ್ದರಿಂದ ಯಾವ ಅರ್ಥದಲ್ಲೇ ತೆಗೆದುಕೊಂಡರೂ ಪ್ರಚಾರವಿಲ್ಲದೆ ಧರ್ಮ ಮನುಷ್ಯನ ಮನಸ್ಸು ಹೋಗದು.
“ಪಾಪ-ಪುಣ್ಯಗಳ ಕುರಿತು ಮಾತಾಡುವ ಜನ……ಬಡತನಕ್ಕಿಂತ ಹೀನವಾದ ಪಾಪ ಬೇರೊಂದಿಲ್ಲ ಎನ್ನುವುದು ಮನಗಾಣುವುದೊಳ್ಳೆಯದು.’ (ಪುಟ ೫೦) ಎಂದಿದ್ದಾರೆ. ಇಲ್ಲಿ ‘ಪಾಪ’ ಎಂಬ ಶಬ್ದವನ್ನು ಯಾವ ಅರ್ಥದಲ್ಲಿ ಬಳಸಿದ್ದಾರೋ ತಿಳಿಯದು. ಅಲ್ಲದೇ ಇಲ್ಲಿ ಬಡತನಕ್ಕೂ ಧಾರ್ಮಿಕ ಕ್ರಿಯೆಗೂ ಬಹಳ ಹತ್ತಿರದ-ಅದರಲ್ಲೂ “ಜನಕ ಜನ್ಮ-ಸಂಬಂಧ ಇದೆಯೆಂದು ವಾದಿಸುತ್ತಾರೆ. ‘ಧಾರ್ಮಿಕ ವ್ಯಕ್ತಿಗಳು ಬಡತನ ನಿರ್ಮೂಲನದ ಬಗ್ಗೆ ಏಕೆ ಯೋಚಿಸುತ್ತಿಲ್ಲ’ ಎಂಬ ವಿಲಕ್ಷಣ ಪ್ರಶ್ನೆ ಹಾಕುತ್ತಾರೆ. “ಗರೀಬೀ ಹಠಾವೋ’ ಎಂಬುದು ಈಗಿನ ಒಂದು ‘Fashion slogan’ ಹಲವು ವ್ಯಕ್ತಿಗಳು ಈ solganನ ಮುಖವಾಡ ಧರಿಸಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ. ಈ ಮುಖವಾಡವನ್ನು ಧರ್ಮಪ್ರಚಾರಕರೂ ತೊಟ್ಟುಕೊಳ್ಳಬೇಕೇ ? ಮಾನವನಿಗೆ ಹೊಟ್ಟೆಯ ಸಮಸ್ಯೆಗೆ ಮಿಕ್ಕಿ ಬೇರೆ ಸಮಸ್ಯೆಗಳೂ ಇರುವ ಸಾಧ್ಯತೆಗಳಿವೆ ಎಂಬುದನ್ನು ಬಡತನದ ಬಗ್ಗೆ ಉದ್ದುದ್ದ ಮಾತನ್ನಾಡುವ ಜನ ತಿಳಿಯುವುದೊಳ್ಳೆಯದಲ್ಲವೇ ? ಧರ್ಮಪ್ರಚಾರದ ಉದ್ದೇಶ ಲೌಕಿಕ ಬಡತನ ನಿವಾರಣೆಯಲ್ಲ : ಮಾನಸಿಕ ಬಡತನದ ನಿರ್ಮೂಲನ. ಈ ಕಾರ‍್ಯದಲ್ಲಿ ಅವರು ಎಷ್ಟು ಪ್ರಾಮಾಣಿಕರಾಗಿದ್ದಾರೆ ಎಂದು ವಿವೇಚಿಸಿದರೆ ಅದು ಸತಾರ್ಕಿಕವಾದೀತು.
ಧರ್ಮ, ಧರ್ಮಪ್ರಚಾರಕರು, ಧಾತ್ಮಿಕ ಸಂಘ ಸಂಸ್ಥೆಗಳ ಅಸ್ತಿತ್ವ ಸಮಾಜದ ಆರ್ಥಿಕ ಅಭಾವವನ್ನೇ ಅವಲಂಬಿಸಿದೆ ಎಂಬ ತೀರ್ಮಾನಕ್ಕೆ ಲೇಖಕರೂ ಬಂದಿದಾರೆ. ಆರ್ಥಿಕವಾಗಿ ಮುಂದುವರಿದ ಅಮೆರಿಕಾ, ಇಂಗ್ಲೆಂಡ್‌ಗಳಲ್ಲಿ ‘ಹರೇರಾಮ್ ಹರೇಕೃಷ್ಣ ‘ದಂತಹ ಪಂಥಗಳು ತಲೆ ಎತ್ತಿವೆ. ನಮ್ಮಲ್ಲಿ ಹಲವು ಜನ ಹಣವಂತರು ಸಾಯಿಬಾಬಾ, ನೀಲಕಂಠ ತಾತಾಜಿ, ಬಾಲಯೋಗೀಶ್ವರರನ್ನು ಪೂಜಿಸುತ್ತಿದ್ದಾರೆ. ಇದರಿಂದ ಧರ್ಮವನ್ನು ನಂಬಿ ನಡೆಯಲು ಬಡತನ (ಮಾತ್ರ)ವಲ್ಲದೆ ಮಾನಸಿಕ ಅಸ್ವಾಸ್ಥ್ಯವೋ ನಂಬುಗೆಯೋ ಕಾರಣ ಎಂದು ಸ್ಪಷ್ಟವಾಗುತ್ತದೆ.
ಕೆಲವು Hostel ಗಳಲ್ಲಿ ಧರ್ವ ಶಿಕ್ಷಣ ಕೊಡುತ್ತಿರುವುದನ್ನು ಲೇಖಕರು ಟೀಕಿಸಿದ್ದಾರೆ : ಹಣವಂತನು ಆಧ್ಯಾತ್ಮವನ್ನು ಬಯಸನು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. Hostel ಗಳ ಧರ್ಮಪ್ರಚಾರ ವ್ಯರ್ಥವಾಗಲು ಪಾಠಕ್ರಮದ ದೋಷ, ನಂಬುಗೆ ಹಾಗೂ ಶ್ರದ್ಧೆ ಇಲ್ಲದವನಿಗೆ ಕಲಿಸುವ ಪ್ರಯತ್ನ, ಯುಗದ ನಂಬುಗೆಯಾಗಿ ವಿದ್ಯಾರ್ಥಿಗಳಲ್ಲಿ ನೆಲಸಿದ ಧರ್ವನಿರ್ಲಕ್ಷ್ಯ-ಇವುಗಳೇ ಮುಖ್ಯಕಾರಣ. ಆದರೆ ಇದೇ ಆಧಾರದಿಂದ ಬಡತನವೇ ಆಧ್ಯಾತ್ಮಾಭ್ಯಾಸಕ್ಕೆ ಮೂಲ ಎಂಬುದು ಸರಿಯಲ್ಲ.
“ಪೀಠಾಧಿಪತಿ ತಾನು ಧರಿಸಿದ ಕಾವಿಬಟ್ಟೆ ಸ್ವರ್ಗದಿಂದ ಇಲ್ಲಿಗೆ ಆಮದಾದದ್ದಲ್ಲ’ ಎಂದು ಅರಿಯಬೇಕೆಂದು ತಿಳಿಸಿ ಹರಿಜನ ಕಾಲೋನಿಗೆ ಹೋದ ಸಂನ್ಯಾಸಿಯು ತಾನು ದೊಡ್ಡ ಸಾಮಾಜಿಕ ಕ್ರಾಂತಿಯನ್ನು ಸಾಧಿಸಿದಂತಾಯ್ತು ಎನ್ನುವ ಭ್ರಮೆ ಕಳೆಯಬೇಕೆಂದಿದ್ದಾರೆ. ಅಂತಹ ಸಂನ್ಯಾಸಿಗಳಿಗೆ ಭ್ರಮೆ ಇದೆ ಎಂದು ಲೇಖಕರಿಗೆ ಹೇಗೆ ತಿಳಿಯಿತೋ ಕಾಣೆ ! ಧರ್ಮಗುರುವಾದ ತಾನು ಹರಿಜನರನ್ನು ಸ್ಪರ್ಶಿಸಿದರೆ ತನ್ನ ಅನುಯಾಯಿಗಳಲ್ಲಿ ಹೊಸ ಎಚ್ಚರ ಬಂದೀತೆಂದು ಭಾವಿಸಿ ಹರಿಜನ ಕಾಲೋನಿಗೆ ಹೋಗಿರಬಹುದು. ಅವರ ಸಾಧನೆ ಬಹು ದೊಡ್ಡದಲ್ಲದಿದ್ದರೂ ಸ್ಮರಣಿಯವಾದದ್ದು ಎಂಬುದು ನಿಸ್ಸಂದೇಹ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಒಂದು ಶಿಷ್ಯವರ್ಗವನ್ನು ಪ್ರತಿನಿಧಿಸುವ ಸ್ಥಾನದಲ್ಲಿ ನಿಂತಿರುವ ವ್ಯಕ್ತಿ ಆಂತಹ ಕಾರ‍್ಯ ಮಾಡುವುದೂ ದೊಡ್ಡದೇ. ಅಲ್ಲಿ ಪ್ರಚಾರದ ಆಸೆ ಇವೆಯೋ ಇಲ್ಲವೋ ಎಂದು ನಿರ್ಧರಿಸುವುದು ಕಷ್ಟ. ಸ್ವಲ್ಪವೂ ಫಲಾಪೇಕ್ಷೆ ಇಲ್ಲದ ಕಾಯಕವನ್ನು ಸಮಾಜದಲ್ಲಿ ಕಾಣುವುದು ಸಾಧ್ಯವೇ ?
ಇಂಗ್ಲಿಷ್‌ ಅರಿಯದಾತನಿಗೆ ಒತ್ತಾಯದ ಸಂನ್ಯಾಸ ದೀಕ್ಷೆ ಕೊಡುವುದು ಸರಿಯಲ್ಲ ಎನ್ನುತ್ತಾರೆ. ಲೇಖಕರು, ಇಂಗ್ಲಿಷ್ ವಿದ್ಯಾಭ್ಯಾಸದಿಂದ ಜನತೆಯಲ್ಲಿ ಹೊಸ ಎಚ್ಚರ ಮೂಡಬಲ್ಲದು ಎಂಬುದರಲ್ಲಿ ಸತ್ಯಾಂಶವಿದೆ. ಆದರೆ ಇಂಗ್ಲಿಷ್ ಕಲಿತುದರಿಂದಲೇ ಎಚ್ಚರ ಮೂಡುತ್ತದೆ ಎನ್ನುವುದು ಎಷ್ಟೋ ಜನ ಇಂಗ್ಲಿಷ್ ಕಲಿತವರ ಭ್ರಮೆ. ಧರ್ಮ, ಮಠ, ಕಂದಾಚಾರಗಳ ಬಗ್ಗೆ ನಮಗಿಂತಲೂ ಹೆಚ್ಚು ಮೂಢರಾಗಿ, ಮೂರ್ಖರಾಗಿ ಪಾಶ್ಚಾತ್ಯರು ವರ್ತಿಸುತ್ತಿರುವುದನ್ನು ನಾವು ಕಾಣುತ್ತೇವೆ. ಈ ಮೂರ್ಖತನ, ಅಂಧತನ ಮಾನವನಿಗೆ ನಿಸರ್ಗದತ್ತವಾದದ್ದು. ಅಂತೂ ದೀಕ್ಷೆ ಕೊಡುವಾಗ ವಿಶಾಲವಾದ ಜ್ಞಾನವುಳ್ಳ, (ಇಂಗ್ಲಿಷ್ ಹಾಗೂ ಭಾರತೀಯ ಗ್ರಂಥ ಹಾಗೂ ಸಂಸ್ಕೃತಿಗಳ) ಹಾಗೂ ತಾನು ಅನುಸರಿಸುತ್ತಿರುವ ಪಂಥದಲ್ಲಿ ನಂಬುಗೆ, ಶ್ರದ್ಧೆ ಉಳ್ಳವನನ್ನು ಆರಿಸುವುದು ಸೂಕ್ತ.
ವಂಂಂದೆ ಅವರು ತಲೆಬರಹಕ್ಕೆ ಹೊಂದಿಕೆ ಇರುವ ‘ದಕ್ಷಿಣೆ’ಯ ವಿಶ್ಲೇಷಣೆಯತ್ತ ಬರುತ್ತಾರೆ.
‘ಬ್ರಾಹ್ಮಣನಿಗೆ ಕೊಡುವ ದಕ್ಷಿಣೆ ಧಾರ್ಮಿಕ ಕ್ರಿಯೆ……….ಈ ಲೇಖನದ ಉದ್ದೇಶ’ ಎಂದು ಆರಂಭದಲ್ಲೇ ಹೇಳಿದ್ದರೂ, ಲೇಖನದಲ್ಲೆಲ್ಲೂ ದಕ್ಷಿಣೆಯ ಸಂಪ್ರದಾಯ ಎಷ್ಟರ ಮಟ್ಟಿಗೆ ಧಾರ್ಮಿಕ ಪುಣ್ಯದಾಯಿ ಎಂದು ವಿವೇಚಿಸಿಲ್ಲ. ದಕ್ಷಿಣೆಯ ಮುಖ್ಯ ಹಾಗೂ ಮೂಲಭೂತವಾದ ಧಾರ್ಮಿಕ ಹಿನ್ನೆಲೆ ಹಾಗೂ ಮಹತ್ವವನ್ನು ನಿರ್ಲಕ್ಷಿಸಿ ಕೇವಲ ಸಾಮಾಜಿಕವಾಗಿ ಮಾತ್ರ ಅದನ್ನು ವಿವೇಚಿಸಹೊರಟಿರುವುದು ಸರಿಯೇ ?
ಆದ್ದರಿಂದ ದಕ್ಷಿಣೆಯ ಧಾರ್ಮಿಕ ಹಿನ್ನೆಲೆಯನು ಸ್ಥೂಲವಾಗಿ ನೋಡುವ :
ವೇದ, ಉಪನಿಷತ್ತುಗಳಲ್ಲಿ ದಕ್ಷಿಣೆಯ ಉಲ್ಲೇಖವಿದೆ. ಯಾವ್ಯಾವ ಯಜ್ಞಕ್ಕೆ ಎಷ್ಟೆಷ್ಟು ದಕ್ಷಿಣೆ ಕೊಡಬೇಕು ಎಂದೂ ಹೇಳಿದೆ. ಋತ್ವಿಜನಿಗೆ ಕೊಡುವ ಪ್ರತಿಫಲವೇ ದಕ್ಷಿಣೆಯೆಂದು ಇದರಿಂದ ತಿಳಿಯುತ್ತದೆ. (ದೇವಸ್ಥಾನದಲ್ಲಿ ಹಣ್ಣು ಕಾಯಿ ಮಾಡಿಸಿದಾಗ, ಪಾರಾಯಣ ಮಾಡಿಸಿದಾಗ, ಹೋಮ, ಹವನ ಮಾಡಿಸಿದಾಗ ಕೊಡುವ ದಕ್ಷಿಣೆ ಈ ಬಗೆಯದು.) ದಕ್ಷಿಣೆಯನ್ನು ಕೊಡುವಾಗ ಪಾತ್ರಾಪಾತ್ರ ವಿವೇಚನೆ ಅಗತ್ಯವೆಂದೂ (“ದಾನಂ ಧ್ರುವಂ ಫಲತಿ ಪಾತ್ರಗುಣಾನುಕೂಲ್ಯಾತ್”: ಮಧ್ವವಿಜಯ) ದರಿದ್ರನಾದವನಿಗೆ ದಾನಕೊಡಬೇಕೆಂದೂ (‘ದರಿದ್ರೇ ದೀಯತೇ ದಾನಂ) ಎಂದೂ ದಾನ, ದಕ್ಷಿಣೆಯನ್ನು ಕೊಟ್ಟರೆ ಪುಣ್ಯ ಬರುತ್ತದೆಂದು ಗ್ರಂಥಗಳಲ್ಲಿ ಹೇಳಿದೆ. (ದಾನಕ್ಕೂ ದಕ್ಷಿಣೆಗೂ ಹೆಚ್ಚಿನ ವ್ಯತ್ಯಾಸವಿಲ್ಲದ ಪ್ರಯುಕ್ತ ಸದ್ಯಕ್ಕೆ ಅವೆರಡನ್ನೂ ಒಂದೇ ಎಂದು ಭಾವಿಸಬಹುದು.) ದಾನಕೊಡುವುದು ಹಣವಂತನ ಕರ್ತವ್ಯ.
ಚತ್ವಾರೋ ವಿತ್ತದಾಯಾದಾಃ
ಧರ್ಮಾಗ್ನಿನೃಪತಸ್ಕರಾಃ
ಜ್ಯೇಷ್ಠಭ್ರಾತ್ರವಮಾನೇನ
ತ್ರಯಃ ಕುಪ್ಯಂತಿ ಸೋದರಾಃ
ಎಂದೂ,
ದಾನಂ ಭೋಗೋ ನಾಶಸ್ತಿಸ್ರೋ ಗತಿಃ ಭವಂತಿ ವಿತ್ತಸ್ಯ
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತಿಯಾ ಗತಿರ್ಭವತಿ |
ಎಂದೂ ಸುಭಾಷಿತಗಳಲ್ಲಿ ಹೇಳಿದೆ. ಈ ಎರಡು ಶ್ಲೋಕಗಳಿಂದ ಪರರಿಗೆ ದಾನ, ದಕ್ಷಿಣೆ ಕೊಡುವುದು ಎಷ್ಟು ಅಗತ್ಯ ಎಂದು ತಿಳಿಯುತ್ತದೆ. ಆದರೆ ಎಲ್ಲೂ ದಾನ ಕೊಡುವಾತ ಮೇಲು, ಪಡೆದಾತ ಕೀಳು ಎಂದು ಹೇಳಿಲ್ಲ. ದಾನಿಯಲ್ಲಿ ಆಡಂಬರ ಸಲ್ಲದು : (ಪ್ರದಾನಂ ಪ್ರಚ್ಛನಂ…., ‘ಧರ್ಮಃ ಕ್ಷರತಿ ಕೀರ್ತನಾತ್’) ವಿನೀತಭಾವ ಅಗತ್ಯ ಎಂದು ಹೇಳಿದೆ.
ಭಾಸ್ಕರ ರಾಯರು ತಮ್ಮ ಲೇಖನದಲ್ಲಿ ‘ದಕ್ಷಿಣೆ ಚಾರಿಟಿ ರೂಪದ್ದು ಎಂದಿದ್ದಾರೆ. ‘ಒಬ್ಬ ಬ್ರಾಹ್ಮಣನ…… ಕಾಲು ತೊಳೆಸಿಕೊಳ್ಳುವವನ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತದೆ’ ಎಂದಿದ್ದಾರೆ. ಇಲ್ಲಿ ಕಾಲು ತೊಳೆಸಿಕೊಳ್ಳುವವನ ವ್ಯಕ್ತಿತ್ವಕ್ಕೆ ಧಕ್ಕೆ ಹೇಗೆ ಬರುತ್ತದೋ ತಿಳಿಯದು. ಕಾಲು ತೊಳೆಯುವವನಾದರೂ ಒಂದು ವೇಳೆ ಚಿಕ್ಕವನಾದಾನು. ಅದಕ್ಕಾಗಿಯೇ ಲೋಹಿಯಾ ಅವರು ಅದನ್ನು ಬ್ರಾಹ್ಮಣನ ನೀಚ ಸೌಲಭ್ಯ ಎಂದಿದ್ದಾರೆ.
ಲೇಖಕರು ಮುಂದೆ ದಕ್ಷಿಣೆಯನ್ನು ಭಿಕ್ಷೆಗೆ ಹೋಲಿಸುತ್ತಾರೆ. ಎರಡೂ ಕ್ರಿಯೆಗಳಲ್ಲೂ ಹಣಕೊಡುವ ಹಾಗೂ ಹಣ ಪಡೆಯುವ Common factor ಗಳು ಇರುವುದೇ ಇದಕ್ಕೆ ಕಾರಣ. ಭಿಕ್ಷೆ, ಸಂಭಾವನ, ಸಂಬಳ, ಗೌರವ ನಿಧಿ (Remuneration) ಕೂಲಿ, Donation ಗಳಲ್ಲೆಲ್ಲಾ ಈ Common factor ಗಳು ಇರುವುದಾದರೂ ಆ ಎಲ್ಲ ಕ್ರಿಯೆಗಳ ಮಟ್ಟ, ಯೋಗ್ಯತೆ, ಬೆಲೆ ಒಂದೇ ಅಲ್ಲ. ಭಿಕ್ಷೆ ಪಡೆದಾತನ ವ್ಯಕ್ತಿತ್ವಕ್ಕೆ ಧಕ್ಕೆ
ಬರುವಂತೆಯೇ ಉಳಿದ ಕ್ರಿಯೆಗಳಲ್ಲಿ ಹಣ ಪಡೆದಾತನ ವ್ಯಕ್ತಿತ್ವಕ್ಕೆ ಧಕ್ಕೆ ಬರುವುದಾದಲ್ಲಿ, ಯಾವುದೇ ಬಗೆಯ ಸಾಮಾಜಿಕ ಕೊಡುಕೊಳೆ ವ್ಯವಸ್ಥೆ ಅಸಾಧ್ಯವಾಗುತ್ತದೆ.
ಭಾಸ್ಕರ ರಾಯರು ಭಿಕ್ಷೆಗೂ ದಕ್ಷಿಣೆಗೂ ‘ತಾಳೆ’ಹಾಕಲು ಕಾರಣ ಅವರು ಲಕ್ಷಿಸಿದ್ದು ಯಾವುದೋ ಹೋಟೆಲ್ ಉದ್ಯಮಿ ಧರ್ಮ ಕ್ಷೇತ್ರದಲ್ಲಿ ಸೇವೆ ಕೊಟ್ಟು ಬ್ರಾಹ್ಮಣರಿಗೆ ಚೆಲ್ಲುವ ದಕ್ಷಿಣೆ ಮಾತ್ರ. ಆದರೆ ಇದು ಗೌಣವಾದದ್ದು. ಇದು ದಕ್ಷಿಣೆಯ ವಿಕೃತ ರೂಪ. ಶುದ್ಧರೂಪದಲ್ಲಿ ಇನ್ನೂ ಹೆಚ್ಚಿನ ಸಂದರ್ಭಗಳಲ್ಲಿ ದಕ್ಷಿಣೆ ಕಾಣಸಿಗುತ್ತದೆ :
ಬ್ರಾಹ್ಮಣನಾಗಿ ಜನಿಸಿದ ಅತ್ಯಂತ ಬಡವನೂ ತನ್ನ ಮನೆಯಲ್ಲಿ ನಡೆಯುವ ಧಾರ್ಮಿಕ ಸಮಾರಂಭಗಳಲ್ಲೆಲ್ಲಾ ದಕ್ಷಿಣೆ ಕೊಟ್ಟೇ ಕೊಡುತ್ತಾನೆ. ಇಂದು ದಕ್ಷಿಣೆ ಸ್ವೀಕರಿಸಿದವ ನಾಳೆ ಕೊಡುವವನಾಗುತ್ತಾನೆ ; ಇಂದು ಕೊಟ್ಟವನು ನಾಳೆ ಕೈಯೊಡ್ಡಬೇಕಾಗುತ್ತದೆ. ತ್ರಿಕರ್ಮಿಗಳನ್ನು ಬಿಟ್ಟುಳಿದ ಎಲ್ಲಾ ಷಟ್ಕರ್ಮಿಗಳಿಗೂ ಇದು ಅನಿವಾರ್ಯ. ಇಲ್ಲಿ ಪಡೆದ ವ್ಯಕ್ತಿ ಬಡವ, ಕೊಟ್ಟವ ಹಣವಂತ ; ಪಡೆದಾತನ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಮಾತಿಗೆ ಆಸ್ಪದವಿಲ್ಲ. ಪಡೆದಾತನ ವ್ಯಕ್ತಿತ್ವ safe’ ಆಗಿರುತ್ತದೆ.
ಸಾಮಾಜಿಕ ದೃಷ್ಟಿಯಲ್ಲಷ್ಟೇ ಕಂಡರೂ ಇಲ್ಲಿ ಕಾಣುವುದು ಸಾಮಾಜಿಕ ಕೊಡು ಕೊಳೆ, ಹೊಂದಾಣಿಕೆ, understanding ಮಾತ್ರ. ದಕ್ಷಿಣೆಯ ಹಿಂದಿನ spirit, signifi-Cance ಗಳನ್ನು ತಿಳಿದೋ ತಿಳಿಯದೆಯೋ ಈ ಹೊಂದಾಣಿಕೆಯ ಕಾರ‍್ಯವನ್ನು ಬ್ರಾಹ್ಮಣವರ್ಗ ನಡೆಸುತ್ತಿದೆ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಅಂಥ ದೋಷ ಕಾಣದು.
ಈ ಸಂಪ್ರದಾಯದಲ್ಲಿ ಅಪೂರ್ಣತೆ ಇದೆ. ಆದರೆ ಅಪೂರ್ಣತೆ, ದೋಷ ಇದೆ ಎಂದು ಒಂದು ಧಾರ್ಮಿಕ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಹಗುರಾಗಿ ಕಾಣುವುದು ಸರಿಯಲ್ಲ.
“ಎಷ್ಟೋ ಜನ ವಿದ್ವಾಂಸರು, ಪುರೋಹಿತರು, ಹರಿಕಥೆದಾಸರು……..ಆ ಜನಕ್ಕೆ ದಕ್ಷಿಣೆಗಾಗಿ ಕೈ ಚಾಚುವುದು ಅವಮಾನ ಅನ್ನಿಸಿದೆ’ ಎಂದಿದ್ದಾರೆ ಲೇಖಕರು.
ಧಾರ್ಮಿಕ ವಿಚಾರಗಳಲ್ಲಿ, ಕ್ರಿಯೆಗಳಲ್ಲಿ ಜನಕ್ಕೆ ನಂಬುಗೆ ಸಡಿಲವಾಗುತ್ತಿರುವ ಈ ಕಾಲದಲ್ಲಿ ಪುರೋಹಿತನ ಸಂಪಾದನೆ ಕಡಿಮೆಯಾಗಿ ಜೀವನಭರಣೆ ಕಷ್ಟವಾದಾಗ ಹಾಗೆ ಹೇಳುವುದು ಸಹಜ. ಅಲ್ಲದೆ ಈ ಕೆಲಸವೂ ಪರಾವಲಂಬಿ ಕೆಲಸ. (ಪುರೋಹಿತ ಮಾತ್ರವಲ್ಲ, Hotel ಉದ್ಯಮಿ, Business ಮಾಡುವವರೂ ತನ್ನ ಮಕ್ಕಳು ಕಲಿತು Bank ಗೆ ಸೇರಲಿ ಎಂದು ಆಶಿಸುತ್ತಾರೆ. ಇದಕ್ಕೆ ಕಾರಣ ಕೆಲಸದಲ್ಲಿರುವ Security, ಸೌಖ್ಯ, ಆ ಕೆಲಸಕ್ಕೆ ಇರುವ ಗೌರವ.) ಜುಟ್ಟು ಬಿಟ್ಟು ಸಾಂಪ್ರದಾಯಿಕನಾಗಿ ಬಾಳುವ ಮಡಿವಂತ ಬ್ರಾಹ್ಮಣ ಸಮಾಜದ ಹಾಸ್ಯಕ್ಕೆ ಪಕ್ಕಾಗುತ್ತಾನೆ. ಹೀಗೆ ನೋವು ಅನುಭವಿಸಿದ ವ್ಯಕ್ತಿ ತನ್ನ ಮಗನೂ ಹೀಗೆ ಹಾಸ್ಯಕ್ಕೆ ಗುರಿಯಾಗದಿರಲಿ ಎಂದು ಹಾರೈಸುವುದು ಸಾಮಾನ್ಯ. ನಾವೆಲ್ಲರೂ ಹೇಗೆ ಪಾಶ್ಚಾತ್ಯ ನಡೆ, ನುಡಿ, ಆಚಾರ, ವಿಚಾರ, ನಾಗರಿಕತೆಯನ್ನೇ ಶ್ರೇಷ್ಟವೆಂದು ಭಾವಿಸುತ್ತಿದ್ದೇವೋ ಹಾಗೆಯೇ ಮುಗ್ಧ ಪುರೋಹಿತನೂ ತಿಳಿದಿರುತ್ತಾನೆ.
ಜನತೆಯಲ್ಲಿರುವ ಈ ಎಲ್ಲಾ ಬಗೆಯ ನಂಬುಗೆಗಳು, ದೌರ್ಬಲ್ಯಗಳು ‘ದಕ್ಷಿಣೆ’ ಸಂಪ್ರದಾಯದ ದೋಷವನ್ನು ನಿರ್ದೇಶಿಸಲಾರವು.
ಒಟ್ಟಿನಲ್ಲಿ ‘ದಕ್ಷಿಣೆ-ಒಂದು ವಿಶ್ಲೇಷಣೆ’ ಎಂಬ ಲೇಖನದ ಬಗ್ಗೆ ನನ್ನ ಆಕ್ಷೇಪಣೆಗಳಿವು;
೧ ದಕ್ಷಿಣೆ ಸಂಪ್ರದಾಯದ ಸ್ಪಷ್ಟ ಹಿನ್ನೆಲೆ, ವ್ಯಾಪ್ತಿ, ವೈವಿಧ್ಯತೆ, ಮಹತ್ವವನ್ನು ಲೇಖಕರು ಲೇಖನದಲ್ಲಿ ವ್ಯಕ್ತಪಡಿಸಿಲ್ಲ.
೨ ಲೇಖನದಲ್ಲಿ ಮುಖ್ಯ ವಿಚಾರವನ್ನು ಪ್ರತಿಪಾದಿಸುವುದನ್ನು ಬಿಟ್ಟು ಹಿಂದೆ ಹೇಳಿದ ಎಷ್ಟೋ ಅನಗತ್ಯ ವಿಚಾರಗಳ ವಿವೇಚನೆ ನಡೆದದ್ದರಿಂದ ಲೇಖನ ಸಮಗ್ರತೆಯನ್ನೂ, ಬಂಧವನ್ನೂ ಕಳೆದುಕೊಂಡಿದೆ.

Close

ಒಂದು ವಿಲಕ್ಷಣ ಊರಿನ ಹೆಸರಿನಲ್ಲಿ ಒಂದು ಅಪೂರ್ವ ಕನ್ನಡಪದ-ಪ್ರತಿಕ್ರಿಯೆ

‘ಒಂದು ವಿಲಕ್ಷಣ ಊರಿನ ಹೆಸರಿನಲ್ಲಿ ಅಪೂರ್ವ ಕನ್ನಡ ಪದ ‘- ಪ್ರತಿಕ್ರಿಯೆ

ಬಿ ಬಿ ರಾಜಪುರೋಹಿತ

ಸಾಕ್ಷಿ-೧೯ ರಲ್ಲಿ ಡಾ|| ಚಿದಾನಂದ ಮೂರ್ತಿಯವರ ಲೇಖನವನ್ನೋದಿದಾಗ ಒಪ್ಪಿಗೆ ಯಾಗುವಂಥ ಕೆಲವು ವಿಷಯಗಳು, ಒಪ್ಪಿಗೆಯಾಗದಂಥ ಹಲವು ವಿಷಯಗಳು ಕಂಡು ಬಂದವು, ಅವನ್ನಿಲ್ಲಿ ಪ್ರಾಜ್ಞರ ಅವಗಾಹನೆಗಾಗಿ ಟಿಪ್ಪಣಿಸುತ್ತೇನೆ.

೧ ‘ಸಂದ್ರ’ ಎಂಬುದರ ಮೂಲ ಸಮುದ್ರವೇ ಇರಬೇಕೆಂದು ತೋರುತ್ತದೆ. ಗದುಗಿನ ಹತ್ತಿರ ಇರುವ ‘ಮಲ್ಲ ಸಮುದ್ರ’ ಎಂಬ ಊರಿಗೂ ‘ಮಲ್ಲ ಸಂದ್ರ’ ಊರಿಗೂ ಹೆಸರಿನ ಸಾಮ್ಯವನ್ನು ಕಲ್ಪಿಸಬಹುದು, ಮಲ ಸಮುದ್ರ (ಬಳಕೆಯಲ್ಲಿ ಹೀಗೆ) ದಲ್ಲೂ ಒಂದು ದೊಡ್ಡ ಕೆರೆ ಇದೆ, ಯಾವ ಮಲ್ಲ ಕಟ್ಟಿಸಿದ ಎಂಬುದನ್ನು ನೋಡಬೇಕು ಅಷ್ಟೆ.

೨ ಕೊಳತೂರು ಕೊಳೆತ+ಊರು ಖಂಡಿತ ಅಲ್ಲ. ಆದರೆ ಕೊಳತ ಎಂಬುದಕ್ಕೆ ಹೊಸ ಎಂಬ ಅರ್ಥ ಮಾಡುವದೂ ಅಷ್ಟೇ ಕಷ್ಟವಾಗುತ್ತದೆ. ವ್ಯಾಕರಣದ ದೃಷ್ಟಿಯಿಂದ ಕೊಲಿತ – ಕೊಳತ ಎಂಬುದು ವಿಶೇಷಣವೆಂದಂತಾಯಿತು, ಹಾಗಾದರೆ ಅದು ಎಂಥ ವಿಶೇಷಣ ? ಕೃದಂತ ವಿಶೇಷಣವೇ ? ಧಾತು ಯಾವುದು ? ಕೊಲಿ ? ಕೊಳ? ಕೊಳ ? ಕೊಳಿ ? ಇನ್ನು ಅದು ಅವ್ಯುತ್ಪನ್ನ ಪ್ರಾಚೀನ ಕನ್ನಡದ ವಿಶೇಷಣವಾಗಿದ್ದಲ್ಲಿ ಇತರ ದ್ರಾವಿಡ ಭಾಷೆಗಳಲ್ಲಿ ಜ್ಞಾತಿ ಪದಗಳನ್ನು (cognates) ತೋರಿಸಬೇಕು, ಅಲ್ಲಿಯವರೇಗೆ ಕೊಲಿತ-‘ಹೊಸ’ ಸ್ವೀಕಾರ್ಯವಾಗಲಾರದು.

ಇನ್ನು ತಮಿಳಿನ ಕುಲಿ young,tender’ನ್ನು ಆಧರಿಸಿ ಆಗಿರಬಹುದಾದ ಕೊಲುಂದು, ಕುಲಿಂದೈ ಮೊದಲಾದ ರೂಪಗಳೊಡನೆಯೇ ಕುಲಿತ ಎಂಬ ರೂಪವನ್ನೂ ಸೇರಿಸಿಕೊಳ್ಳಬಹುದಾದರೆ ಕುಲಿ ಎಂಬ ವಿಶೇಷಣದ ಮೇಲೆ ತ ಎಂಬ ಪ್ರತ್ಯಯ (?). ಸೇರಿ ಕುಲಿತ ಎಂಬ ವಿಶಷಣವಾಯಿತೆನ್ನಬೇಕೇ ? -ತ ಎಂಬ ಕೃತಪ್ರತ್ಯಯ ಧಾತುಗಳ ಮೇಲೆ ಸೇರಿ ಕೃದಂತ ವಿಶೇಷಣಗಳನ್ನು (Relative Participles) ಮಾಡುತ್ತದೆ. ಆ ಪ್ರತ್ಯಯದ ಇನ್ನೊಂದು ರೂಪ-ದ, ಅದು ವಿಶೇಷಣದ ಮೇಲೆ ಹೇಗೆ ಸೇರಿತು ? ಕುಲಿತವನ್ನು ಕುಲಿದಿಂದ ನಿಷ್ಪದಿಸುವದು ಹೇಗೆ ? (ತ್, ದ್ ಗಳು ಭೂತಕಾಲ ವಾಚಕ ಪ್ರತ್ಯಯಗಳೆಂದೂ-ಆ ಮಾತ್ರ ಕೃತ್-ಪ್ರತ್ಯಯ ಎಂದೊಂದು ವಿಶ್ಲೇಷಣೆಯೂ ಇದೆ.)

೩ ಸುಗಂಧ ದ್ರವ್ಯವಾಚಿ ಕೊಳತ ಎಂಬ ಪದ ಸಂಸ್ಕೃತದ ಕುಲತ್ಥಕ್ಕೆ ಸಮಾನವಾದುದೆಂಬದು ಸಂಶಯಾಸ್ಪದ, ಮೊನೆಯ‌ರ್ ವಿಲಿಯಮ್ಸನ ಸಂಸ್ಕತ ಕೋಶವು ಕುಲತ್ಥ ಎಂಬ ಪದಕ್ಕೆ ‘ಹುರಳೆ ಕಾಳು’ ಅರ್ಥದೊಡನೆ ಬೇರೆ ಕೆಲವು ಅರ್ಥಗಳನ್ನು ಕೊಡುತದೆ. ಅಲ್ಲಿ ಸಗಂಧದ್ರವ್ಯ ಎಂಬ ಅರ್ಥ ಕಾಣಲಿಲ್ಲ. ಕುಲತ್ಥ ಎಂಬುದಕ್ಕೆ ರೂಢಿಯಲ್ಲಿರುವ ಆರ್ಥವೂ ‘ಹುರುಳಿ ಕಾಳು’ ಎಂದೇ.

೪ ತಿರುವನಂತಪುರದ ಹತ್ತಿರ ಇಂಜಿನಿಯರಿಂಗ್ ಕಾಲೇಜು ಇರುವ ಸ್ಥಳದ ಹೆಸರೂ ‘ ಕಳತ್ತೂರು , ಅಲ್ಲಿ ಅದಕ್ಕೆ “ಕೊಳದ ಊರು, ಕೊಳದ ಹತ್ತಿರ ಇರುವ ಊರು’ ಎಂಬ ಅರ್ಥವಿದೆ. ‘ಕುಳತ್ತೂರ, ಕೊಳತ್ತೂರ’ ಎಂಬ ಹೆಸರಿನ ಅನೇಕ ಗ್ರಾಮಗಳು ತಮಿಳು ನಾಡಿನಲ್ಲಿವೆ. ಅಲ್ಲೆಲ್ಲ ‘ಕೊಳದ ಊರು’ ಎಂದೇ ಅರ್ಥ, ಆ ಹೆಸರಿನ ಊರಿನಲ್ಲೆಲ್ಲ ಕೆರೆಗಳು ಇವೆ. ಈ ವಿಷಯವನ್ನು ಖಚಿತಪಡಿಸಿಕೊಳ್ಳಬಹುದು, ಕೊಳ ಅರ್ಥದ ಶಬ್ದ ಅಲ್ಲಿ ಯಾವಾಗಲೂ ಕುಳವಾಗಿಯೇ ಇದೆ, ಲ ಲ ವಲ್ಲ, ಅಂದಮೇಲೆ ಗಂಗರ ತಾಮ್ರಪಟದಲ್ಲಿಯ ಕೊಳತ್ತೂರ್ ಯಾವ ಪ್ರಶ್ನೆಯನ್ನೂ ಒಡ್ಡುವದಿಲ್ಲ. ಅದೇ ರೀತಿ ಕ್ರಿ.ಶ. ಸು. ೮೦೦ ರ ಶಾಸನದಲ್ಲಿಯ ‘ಕೊಳತ್ತೂರ್ ‘ ಎಂಬ ಪದವೇ ಸಾಧು. ಅವನ್ನು ಮೂಲವಾಗಿ ಹಿಡಿದೇ ಪ್ರಶ್ನೆಯನ್ನು ಬಿಡಿಸಲೆತ್ನಿಸಬೇಕು.

೫ ‘ಕೊಳತ್ತೂರ’ನ್ನು ‘ಕೊಳದ ಊರು’ ಎಂದು ನಿಷ್ಪದಿಸಬಹುದಾದರೆ ‘ಕೊಳ’ ದ ನಂತರ ಬರುತ-ತ್ತ್-ಏನು ಎಂಬ ಪ್ರಶ್ನೆ ಉದ್ಭವಿಸಬಹುದು, ದ್ರಾವಿಡ ಭಾಷೆಯಲ್ಲಿ -ಮ್ ದಿಂದ ಕೊನೆಗೊಳ್ಳುವ ನಾವುಗಳು ವಿಭಕ್ತಿ ಪ್ರತ್ಯಯ ಪೂರ್ವದಲ್ಲಿ–ಎಂಬ ಕೊಂಡಿಯನ್ನು (Link morph) ತೆಗೆಕೊಳ್ಳುತ್ತವೆ. ಮಲೆಯಾಳದಲ್ಲಿಯ ಈ ಉದಾಹರಣೆಯನ್ನು ನೋಡಿ. ಮರಮ್+ಇಲ್ (ಸಪ್ತಮಿ) >ಮರತ್+ಇಲ್> ವರತ್ತಿಲ್ ‘ಮರದಲ್ಲಿ, ಆ ಪ್ರಕಾರ ದ್ರಾವಿಡದಲ್ಲಿ ಕೊಳಮ್+ಆ (ಷಷ್ಠಿ) >ಕೊಳತ್ತ್+ಆ> ಕೊಳೆತ್ತ ‘ಕೊಳದ’, ಕೊಳತ್ತ+ಊರು >ಕಳತ್ತೂರು ‘ಕೊಳದ ಊರು,’ ಬೆಟ್ಟದ+ಊರು ಬೆಟ್ಟದೂರು> ಬೆಟದೂರು (ಧಾರವಾಡ ಚಿಲ್ಲಿ) ಆಹ ಹಾಗೆ ಬೆಟ್ಟದೂರು >ಬೆಟದೂರು ಆದಂತೆ ಕೊಳತ್ತೂರು> ಕೊಳತೂರು ಆಗಿರಬೇಕಷ್ಟೆ.

೬ ಹಳಗನ್ನಡದ ಕೊಲಿತವನ್ನು ಕುಲಿ young, tender’ ದಿಂದ ನಿಷ್ಟದಿಸುವದು ಸಾಧುವೆನಿಸುವದಿಲ್ಲವೆಂದ ಮೇಲೆ (೨ ನೆಯ ಕಲವನ್ನು ನೋಡಿ) ಕೊಲಿತದಿಂದ ತೆಲುಗಿನ ಕೂತ್ರವನ್ನು ನಿಷ್ಪದಿಸುವ ಪ್ರಶ್ನೆಯೇ ಉದ್ಭವಿಸುವದಿಲ್ಲ, ವಿಶೇಷಣಗಳ ಜ್ಞಾತಿಗಳಲ್ಲಿ ಕುಲಿ), ಕೊಲಿತ (6), ಕ್ರೊತ್ತ (ತೆ) ‘young, tender, also new’ ಹೀಗೆ ಹೇಳಲು ಮೇಲಿನ ಕಾರಣಗಳಿಂದಾಗಿ ತುಂಬಾ ಆತಂಕವಾಗುತ್ತದೆ.

೭ ಆದಿಪುರಾಣದ ೧-೪೩ ರಲ್ಲಿ ಬಂದ ಕನ್ನಡದ ಏಕೈಕ ಪ್ರಯೋಗ ‘ಕೊಲಿತ’ವು ಅಪಪ್ರಯೋಗವೆಂದೆನಿಸಿ ಕುಂದಣಗಾರರ ‘ಊಹೆಯ ಪಾಠ’ ‘ಕೆಳದ’ಕ್ಕೆ ಭಾಷಾ ಶಾಸ್ತ್ರೀಯ ಬೆಂಬಲ ಸಿಗುತ್ತದೆ. ಲಿಲಿ ಯುಕ್ತವಾದ ಪದವೇ ಕಲ್ಪಿತವಾದದ್ದು, ಭಾಷಾ ಭ್ಯಾಸದಲ್ಲಿ ತಾಮ್ರಪಟ, ಶಿಲಾಶಾಸನಗಳು ತಾಳೆಗರಿಗಳಿಗಿಂತ ವಿಶ್ವಸನೀಯವಾದ ಆಕರಗಳು,

Close

ಗತಿ-ಸ್ಥಿತಿ-ಒಂದು ಅಭ್ಯಾಸ

ಗತಿ-ಸಿತಿ : ಒಂದು ಅಭ್ಯಾಸ

ಮಹಮ್ಮದ್ ಅಹಮ್ಮದ್

“ಗತಿ-ಸ್ಥಿತಿ’ ಕನ್ನಡಕ್ಕೆ ಒಂದು ಹೊಸ ಚಿಕಿತ್ಸೆ ಮಾಡಿದೆ ಅನ್ನುವುದು ಅದು ಕೊಟ್ಟಿರುವ ಒಂದು ಹೊಸ ಅರ್ಥಕ್ಕೆ ; ಅಂದರೆ-ಸಾಂಪ್ರದಾಯಕವಾಗಿ ಬಂದಿರುವ ನಡವಳಿಕೆಗಳಿಗೆ ಅರ್ಥ ಕಂಡುಕೊಳ್ಳುವ ಒಂದು ಹೊಸ ರೀತಿಗೆ, ಹೊರತು, ಅಲ್ಲಿಯ ಭಾಷೆಗೆ ಮಾತ್ರವಲ್ಲ, ವಿವರಣೆಯೇ ಇದರ ಮುಖ್ಯ ಲಕ್ಷಣ ಎಂಬ ಹೇಳಿಕೆ ಹೊಸದೇನಲ್ಲದಿದ್ದರೂ ಇದರ ಪ್ರಾಮುಖ್ಯತೆ ಗಿರಿ ಹೇಗೆ ಕಂಡುಕೊಂಡಿದ್ದಾರೆ ಎಂಬ ಪ್ರಶ್ನೆಗೆ ಬರುವ ಉತ್ತರ ಮುಖ್ಯವಾದುದು.

ಇಲ್ಲಿನ ನಾಯಕ ‘ಆತ’ (ಅಥವ ‘ಈತ’ ಅನ್ನಿ) ಯಾವಾಗಲೂ ಉದ್ವಿಗ್ನ ; ಚಂಚಲತೆಯ ಪ್ರಜ್ಞೆಯ ಸ್ತರದಲ್ಲಿಯೇ ಇರುವ ವ್ಯಕ್ತಿ, ತಾನು ಕಂಡ ಪರಿಸರವನ್ನು ತನ್ನ ಮನಸ್ಥಿತಿ ಗನುಗುಣವಾಗಿ ಎರಕ ಹೊಯ್ಯುತ್ತ, ತನ್ನ ಅನುಭವಗಳನ್ನೇ ಪ್ರಯೋಗಸಿದ್ಧ ಮಾಡಿ ನೋಡಲು ಪ್ರಯತ್ನಿಸುತ್ತಿರುತ್ತಾನೆ, ಯಾವಾಗಲೂ ಚಂಚಲ, ಅಸಹಿಷ್ಣು ಆಗಿ ವರ್ತಿಸುತ, ಪರಿಸರವನ್ನು ತನ್ನ ಮೂಗಿನ ನೇರಕ್ಕೇನೆ ನೋಡುತ್ತಾನೆ ಎಂಬುದನ್ನು ಸಮರ್ಥಿಸಲು ‘ಆಕೆ’ ಸಹಾಯಕಳಾಗುತ್ತಾಳೆ ಎನ್ನಬಹುದು, ಆತನ ತಾಳ್ಮೆಗೇಡಿತನದಿಂದಾಗಿ ಅವನ ಮತ್ತು ಅಲ್ಲಿನ ಪರಿಸರದ ಮಧ್ಯೆ ಕಂದಕ ಬೆಳೆಯುತ್ತದೆ. ಪರಿಸರದ ವಿರುದ್ಧ ಸಿಡಿದೇಳುವ ವ್ಯಕ್ತಿತ್ವವಿಲ್ಲದೆ, ಪರಿಸರಕ್ಕೆ ಹೊಂದಿಕೊಳ್ಳಲೂ ಆಗದೆ ಒದ್ದಾಡುವ ವ್ಯಕ್ತಿ. ಅಲ್ಲಿನ ಪರಿಸರದ ಬಗ್ಗೆ ಅಲ್ಲಿನ ವ್ಯಕ್ತಿಗಳನ್ನು ವಿಚಾರಿಸಿದಾಗ ಅದು ಅವರಿಗೆ ರೂಢಿಯಾಗಿರುತ್ತೆ, ದಪ್ಪ ತೊಗಲಿನ ಜನ ಎಂದು ತಿಳಿಯುತ್ತಾನೆ ‘ಆಕೆ’ ಆ ಪರಿಸರಕ್ಕೆ ಹೊಸಬಳೇ ಆದರೂ ಕೂಡ ಇವನಲ್ಲಿ ಬರುವ ಉದ್ವಿಗ್ನತೆ, ಡೋಲಾಯಮಾನ ಸ್ಥಿತಿ ಏಕಿಲ್ಲ ?

ಆತನ ಪ್ರತಿ ನಿಮಿಷದ ಅನುಭವ : ಸೆಖೆ, ಬಿಸಿಲು, ಬೆವರು, ಡಂಜನ್ನಿನ ವಾಸ, ಕಳವಳ, ಭಯ-ಅಚೇತನದಲ್ಲಿ ‘ಮುಂದೇನು ?”ಎಂಬ ಪ್ರಶ್ನೆ, ಕೆಲಸ ಈಗ ಸಿಗಬಹುದು ಅಥವಾ ಇನ್ನೊಂದು ಕ್ಷಣದಲ್ಲಿ-ಸೂ, ಈಗ ಬರಬಹುದು ಬಂದರು, ಡೈರೆಕ್ಟರು-ಬರಬೇಕು-ಕಾಯುವುದು-ಹೋಗುವುದು-ಬರುವುದು: ಒಣ’ ಓಡಾಟ-ಸೆಖೆ. ಓಡಿ ಹೋಗಬೇಕು!-ಹಣ ಖಾಲಿ-ಎಂ.ಓ.-ವಿಚಾರಣೆ-ಭರವಸೆ. ಇಲ್ಲಿ ನಾನು ಮುಖ್ಯವಾಗಿ ಸೂಚಿಸುವುದು ‘ಭರವಸೆ’, ಇದು ಆತನಲ್ಲಿ Internal Inhibitionಗೆ ಕಾರಣವಾಗುತ್ತದೆ, ಭರವಸೆಯ ಉದ್ದೇಶ ಸಾಮಾನ್ಯವಾಗಿ ‘ಫಲ’ದ ಕಾಯುವಿಕೆ, ಫಲ ತಡವಾದಾಗ ಪ್ರಯತ್ನ ಸಡಿಲ, ಭರವಸೆಯಲ್ಲಿ ನಿರಾಶೆ ಹುಟ್ಟುತ್ತದೆ. ಇದರ ಪರಿಣಾಮ ವ್ಯಕ್ತಿಯಲ್ಲಿ Inbibition, ಇಲ್ಲಿ ಟೆಲಿಗ್ರಾಂ ಹೇಗೆ ಉಪಯುಕ್ತವಾಗುತ್ತೆ ನೋಡಿ: ಅವನ ಭರವಸೆಗೂ ಉದ್ವಿಗ್ನತೆಗೆ ; ನಂತರ ನಿರಾಶೆಗೆ ಕಾರಣವಾದಾಗ ಅದೇನಿತ್ತೆಂಬುದು ತಿಳಿಯುವ ಸಹನೆ ಅವನು ಕಳೆದುಕೊಂಡ : ಅದು ನಮಗೆ suspense ಆಗಿಯೇ ಉಳಿದಿದೆ. ಆತನ ಕಾತರತೆಯು ಪರಾಕಾಷ್ಟೆಗೆ ಏರುತ್ತಿರುವಾಗ ತಾಪ, ಬೇಸರವನ್ನು ತಡೆಯಲಾರದೆ ಲಾಡ್ಜ್‌ನಲ್ಲಿಯೂ ಇರಲಾರ, ಹೊರಗೂ ಹೋಗಲಾರ. ಹೊರಗೆ ಬಂದ; ಮತ್ತೆ ಲಾಡ್ಜಿಗೆ ಸೇರಿದ, ಬಂದ-ಹೋದ, ಇವು ಚಂಚಲತೆಯ ಚಿಹ್ನಗಳು-ಅಪ್ರಬುದ್ಧ ಮನಸ್ಸಿನ ಅಸ್ತವ್ಯಸ್ತತ್ತೆ, ದುರ್ಬಲ ಸಂಕಲ್ಪ, ಇನೂ ಗುರುತಿಸಬೇಕೆಂದರೆ ನ್ಯೂರೊಸಿಸ್ಸಿನ ಲಕ್ಷಣಗಳು ಹೀಗಿರುವಾಗ ಆತ ಭ್ರಾಂತಿ ಚಿತ್ರಗಳನ್ನು ಕಾಣುತ್ತಾನೆ-ಅಂದರೆ ಆ ಊರಿನ ಒಗಟಿನಿಂದ ಓಡಿ ಹೋಗುವ ಪರದಾಟ, ದಾರಿಕಾಣದೆ ವಿಫಲರಾಗಿ ಹಿಂದಿರುಗುತ್ತಾರೆ.

ಲಾಡ್ಜ್‌‌ನ ಬಾತ್‌ಗೆ ಬಂದಾಗ ಕಿಟಕಿ ಆಚೆ ಕಾಣುವುದು ದೊಡ್ಡ ಬೆಟ್ಟ, ಒಣ ಮರಗಳು- ಇಲ್ಲಿನ ಸೆಖೆಗೆ ಇದೇ ಕಾರಣ : ಒಂದು ದಿನ ಬಿಸಲಿಗೆ ಈ ಬಂಡೆಗಳು ಸಿಡಿದು ಬೆಟ್ಟ ಒಡೆದು ಈ ಲಾಡ್ಜ್ ಉರುಳುತ್ತದೆ, ಈ ಊರು ನೆಲಸಮ ಆಗುತ್ತದೆ, ಆಗ ಇಲ್ಲಿ ಗಾಳಿ ತಡೆಯಿಲ್ಲದೆ ಹತ್ತಿರವಾಗಿ (Fresh: ಸುಯ್ಯುತ್ತದೆ ಎಂಬ ಊಹೆಯ ಜೊತೆ-ಸಿಟ್ಟು. ಅಲ್ಲದೆ ಲಾಡ್ಜ್ ಗಾಗಿ ತಿರುತಿರುಗಿ ಕೊನೆಗೊಂದು ಸಿಕ್ಕಾಗ ಅಲ್ಲಿ ಎಲ್ಲ ಮಂಚಗಳು ಬಿಳಿ ವಸ್ತ್ರಗಳಿಂದ ಭರ್ತಿ-ಎರಡು ಮಂಚಗಳನ್ನುಳಿದು, ಅವು ಇವರನ್ನು ಆಹ್ವಾನಿಸುತ್ತವೆ. ಇವರಿಗೆ ಬದುಕುವ ಆಸೆ, ಇದು ಸಾವಿನ ಭ್ರಾಂತಿ ಚಿತ್ರವಲ್ಲವೆ ?-ನಿರಾಶೆ-ಉದ್ವಿಗ್ನದಲ್ಲಿದ್ದಾಗ ವ್ಯಕ್ತಿ ಕಾಣುವ ದುಃಸ್ವಪ್ನಗಳು, ಮೂಕ ಹೆದರಿಕೆಗಳು, ಹೀಗಿದ್ದಾಗ ಒಂದು ಸ್ಥಿರತೆ ಬರುವುದಿಲ್ಲ. ಆದ್ದರಿಂದಲೇ ಆತ ಅಲ್ಲಿಂದ ಹಿಂದಿರುಗಿ ಬೆಂಗಳೂರಿಗೆ ಬಂದ : ಕೆಲದಿನ ಗುಂಡಿನ ಸುಖ, ನಂತರ ಬೋರ್‌, ಮೈಸೂರಿಗೆ ಬಂದ-ಪೊಫೆಸರಿಗೆ ಭೇಟಿ ಆದ-ಏನೂ ಆಗಲಿಲ್ಲ ಮತ್ತೆ ಅದೇ ತರಹದ ಬೋರ್‌, ತನ್ನ ಊರಿಗೆ ಬಂದ ಹಿಡಿಸಲಿಲ್ಲ, ಸಂತೋಷ-ಸುಖಸಿಗದೇ ಇರುವ ಕಾರಣಕ್ಕೆ ಆತನಲ್ಲಿ ಬೆಳೆಯುತ್ತಿರುವ Fugue ಆಗಿರಬೇಕು ! ಕೆಲವೊಮ್ಮೆ ‘ಆತ’ ಗಿರಿಯವರ Puppet ಆಗಿದ್ದಾನೆ. ಆತನ ನೈಜ ಸ್ವರೂಪದಿಂದ ಅವನನ್ನು ಅಡಗಿಸಿ, ದೂರಾಗಿಸಿ, ಆತನ ಮನಸ್ಸು ಮತ್ತು ಸ್ವಭಾವಗಳಲ್ಲಿ ಬಿರುಕು ತಂದು ತಮ್ಮ ಚಿಂತನೆಗೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತಾರೆ. ಅವನುಫಿಲ್ಮಗೆ ಹೋದಾಗ ಕೆಲಗಂಟೆ ಅಲ್ಲಿ ಕಳೆದದ್ದೇ ಆಗಲಿ ಅಥವಾ ಹೊರಬಂದ ಮೇಲೆತ್ತಿದ ಪರಿಣಾಮವಾಗಲಿ ಸೂಚಿತಗೊಂಡಿಲ್ಲ, ಪರಿಸರದಲ್ಲಿ ಪಡೆದ ಪ್ರತಿ ಕ್ಷಣದ ಅನುಭವ, ವರ್ತನೆ ತಿಳಿಸುವ ಗಿರಿಯವರು ಅಲ್ಲಿ ಅವನ ಪ್ರತಿಕ್ರಿಯೆ, ಏನೂ ಇಲ್ಲದಂತಾ ಗಿಸಿದ್ದಾರೆ. ಇಲ್ಲೇಕೆ ಆತ ತನ್ನ ಅಭ್ಯಾಸಗತವಾದ ನಡವಳಿಕೆಯಿಂದ ಭಿನ್ನನಾದ ?

ಜೋಗಿಗೆ ಬಂದ, ಜೋಗು ನಮಗೆ ಸಾಂಕೇತಿಕವಾಗಿಯೇ ಇದೆ. ಅಲ್ಲಿನ ನೀರಿನ ಗಟ್ಟಿತನ ಮತ್ತು ಅದರ ಸಿಡಿಯುವಿಕೆ-ಅವನ ಮನಸ್ಸಿನ ಗುಣವನ್ನೇ ಸಂಕೇತಿಸಿದೆ, ಜೋಗಿನ ತಳದಲ್ಲಿ ಆತ ಬಯಸಿದ್ದು ಕಲ್ಲು ಬಂಡೆಯ ಮೇಲೆ ಉರುಳುವುದು, ಪ್ರವಾಹದ ಬಯಕೆ -ಇದು ಆತನ ಸಾವಿನ ನಿರೀಕ್ಷಣೆ. ಹೀಗಿದ್ದರೂ ಮೇಲೇರಿ ಬರುತ್ತಿರುವಾಗ ಜಾರಿ ಬೀಳುವ ಹೆದರಿಕೆ : ಸಾವು-ಬದುಕು, ನಿರ್ಣಯ ಕಠಿಣ, ಇವೆಲ್ಲ Neuroses ನ ಪೂರ್ವ ಸಿದ್ಧತೆಗಳು.

ಅವನು ಇಡೀ ಜೀವನದಲ್ಲಿ ಅನುಭವಿಸಿದ್ದೇ ಅನುಭವಿಸುತ್ತಿರುತ್ತಾನೆ-ಬೇರೆ ಬೇರೆ ಪರಿಸರಗಳಲ್ಲೂ ಸಹ, ಅಂದರೆ ತಟಸ್ಥ “ನೋಡುವಿಕೆ” (Perpetual visualising). ಎಲ್ಲ ಕಡೆಗಳಲ್ಲಿ ಮೊದಲು ಕಂಡಿದ್ದನ್ನೇ ಕಂಡುಕೊಳ್ಳುವುದು, ಮತ್ತೆ ಅದೇ-ಅಲ್ಲೇ ಅಷ್ಟೇ, ಕೊನೆಗೂ ಅದೇ….ಅದು, ಆದ್ದರಿಂದಲೇ ಇಲ್ಲಿ ನಾಯಕ ಸಾಯುವುದಿಲ್ಲ, ಪ್ರಯೋಜನವೂ ಇಲ್ಲ, ಇದರ ಅರ್ಥ ಇಷ್ಟು ಎಂದೆನಿಸುತ್ತ-Fugue ನ ಇಷ್ಟ, Neuroses ನ Victim, ನಾಯಕನಿಗೆ ಸಾವಿಲ್ಲ, ಅಂದರೆ ಗತಿ ಇಲ್ಲ. ಮತ್ತ ಮತ್ತೆ ಅದೇ ಸ್ಥಿತಿಯಲ್ಲಿರುತ್ತಾನೆ. ಇವನು ಜೀವನದುದ್ದಕ್ಕೂ Utter failure ನ್ನ ಎದುರಿಸುತಿರುತ್ತಾನೆ. ಇದು ತಾದಾತ್ಮಕ್ಕೆ ಕಾರಣವಾಗುತ್ತದೆ. ಟಾಕೀ ಒಂದರ ಹತ್ತಿರ ಬೀಡಿ ಸಿಗರೇಟು ಕಡ್ಲೆಕಾಯಿ ಮಾರುವವರನ್ನು ಕಂಡು ಅವರ ಜೀವನವನ್ನೇ ಮೆಚ್ಚಿ, ತಾನು ಸಹ ಹೀಗೆ ಇದ್ದಿದ್ದರೆ ಎಂದುಕೊಳ್ಳುತ್ತಾನೆ. ಈ ಅನಿಸಿಕೆಗೆ ಕಾರಣ ತನ್ನ ಸ್ಥಿತಿಯಲ್ಲಿ *ಗತಿ’ ಇಲ್ಲದ್ದಕ್ಕೆ ಆಥವ ತನ್ನ ‘ಗತಿ’ (Fate, Progress) ಒಂದು ಸ್ಥಿತಿ’ (Order, Descipline) ಗೆ ಬರದೆ ಅಸಫಲತೆಕಂಡು ಕೊಂಡಿದ್ದಕ್ಕೆ ಈ ಮನೊ (ಬೇನೆ) ಭಾವನೆ ಬರುತ್ತದೆ.

ವ್ಯಕ್ತಿ ತನ್ನ ಗತಿಸ್ಥಿತಿಗಳನ್ನು ಕಡೆಗಣಿಸಿ ಅತೃಪ್ತಿ ಪಡೆದಾಗ ಹೀಗೆ identity ಆಗುತ್ತಾನೆ. ಅತನ ಸ್ಥಿತಿ’ ಒಂದು ‘ ಗತಿಗೆ ‘ ಬರಲಿಲ್ಲ ಅಥವಾ ಅವನ ‘ಗತಿ’ ಒಂದು ‘ಸ್ಥಿತಿ’ಗೆ ಬಂದಿಲ್ಲ.

ಇದೇ ಅವನ tragedy ಎಂದು ಅವನ ಬಗ್ಗೆ ನನ್ನ sympathy ಉಂಟು, ಸ್ಥಿತಿ-ಗತಿ ಗಳ ಅಸ್ತವ್ಯಸ್ತ ವರ್ತನೆಗಳ image ನ್ನು ಪುಸ್ತಕದ ಮುಖಪುಟ ಪ್ರದರ್ಶಿಸುತ್ತದೆ.

ಪರಿಶಿಷ್ಟ

“ಆತ’ ಬೆಂಗಳೂರಿನಲ್ಲಿ ಕ್ಯಾಬರೆಗೆ ಭೇಟಿ ಕೊಟ್ಟಾಗ ಮೂರ್ತಿ ತನ್ನ ಮಿತ್ರನ ಪರಿಚಯ
ವಾಡಿಸುತ್ತಾನೆ. ಅವನ ಕಥೆ ‘ಆಪಿರದಿಕೆ’ (impotency) ಸಂಬಂಧಿಸಿರುತ್ತದೆ. ಇದು ‘ಆತ’ನಲ್ಲಿ ಬಹುಶಃ ಇಲ್ಲವೆಂದು ಕಾರಣಗಳು ಸಿಗುತ್ತವೆ. ಆತ ಕರೆದಾಗ ಆಕೆ ಎದೆ ಮೇಲೆ ಬಂದು ಬೀಳುವುದು, ಕೆಲವು ದಿನ ಒಂದೇ ಬೆಡ್‌ನಲ್ಲಿ ಮಲಗುವುದು – ಅವರ ಲೈಂಗಿಕ ಸಂಬಂಧಗಳಿಗೆ ಕಾರಣಗಳಾಗಬಹುದು, ಆದರೂ (ಈ ವಿಷಯ ಏಕೆ ಎತ್ತಿದೆನೆಂದರೆ ಮೂರ್ತಿಯ ಮಿತ್ರನ ಕಥೆ ಗಿರಿ ಯಾತಕ್ಕಾಗಿ ತಂದಿದ್ದಾರೆ ಎಂದು ಯೋಚಿಸಿದಾಗ) ಉದ್ವಿಗ್ನತೆ ಇದ್ದಾಗ ಸಾಮಾನ್ಯವಾಗಿ emotions ಸೃಬ್ದವಾಗಿ. importency ಬರುತ್ತದೆ, ‘ಆತ’ನಲ್ಲಿ ಈ complexity ಇತ್ತೇ ಎಂದು ತಿಳಿಯುವುದು ಆರೋಗ್ಯಕರವಲ್ಲವೆ ? ಮತು ‘ಆಕೆ’ ಯನ್ನು ತಂದಿರುವ ಉದ್ದೇಶ ಇದಿರಬಹುದು, ಆದರೂ ‘ಆಕೆ’ ಕಾದಂಬರಿಯಲ್ಲಿ mystery ಯಾಗಿಯೇ ಉಳಿಯುತ್ತಾಳೆ,

Close
By kanaja|2021-01-06T19:31:27+05:30April 27, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೧

    ಸಂಪುಟ-೩೧

Leave A Comment Cancel reply

ವಿಭಾಗಗಳು

ಹೊಸ ಅಂಕಣಗಳು

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕನ್ನಡ ಭಾಷೆ,ಸಾಹಿತ್ಯ

  • ಸಂಪುಟ-೩೪
  • ಸಂಪುಟ-೩೩
  • ಸಂಪುಟ-೩೨
  • ಸಂಪುಟ-೩೧
  • ಸಂಪುಟ-೩೦

ಕಲೆ,ಸಂಗೀತ

  • ರಂಗ ವಿಮರ್ಶೆಯ ಬೆನ್ನು ಹತ್ತಿ..
  • ರಂಗಭೂಮಿಯೊಂದೇ ಸಮತಾವಾದದ ಪ್ರತೀಕ
  • ರಂಗಭೂಮಿಯ ನಡಿಗೆ
  • ರಂಗ ಪರದೆಗಳು : ಶಬ್ದಪಾರಮಾರ್ಗಮಶಕ್ಯಂ
  • ರಂಗ ಪರದೆಗಳು : ರಂಗ ಪರದೆಗಳ ಹಿನ್ನೆಲೆ

ವಿಜ್ಞಾನ , ತಂತ್ರಜ್ಞಾನ

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕೃಷಿ ,ರೈತರ ಅನುಭವ

  • ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016
  • ಪದವಿನ್ಯಾಸ: ೧೨. ಸನಿಕೆ
  • ಪದವಿನ್ಯಾಸ: ೧೩. ಈಚು
  • ಪದವಿನ್ಯಾಸ: ೧೪. ಕಣಜ
  • ಪದವಿನ್ಯಾಸ: ೯. ಬೆಳೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2017 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - developkanaja@gmail.com

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top

ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ
ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ.