Skip to content
ದೂರವಾಣಿ : | 22212487|kanaja@karnataka.gov.in
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ-೨೩

Home/ಕನ್ನಡ/ಸಂಪುಟ-೨೩
Previous Next

ಸಂಪುಟ-೨೩

  • ಎರಡು ಕವಿತೆಗಳು
  • ಮಾತ್ರಿಯೋನಾ (ಅನುವಾದ)
  • ಹನಿಗತೆಗಳು (ಅನುವಾದ)
  • ಪಲಾಯನ (ಅನುವಾದ)
  • ಸಮೂಹ ಸಂಸ್ಕೃತಿ
  • ಎರಡು ಕವನಗಳು
  • ನಾನು, ಭಾಗ್ಯ ಮತ್ತು ಇತರರು
  • ಪ್ರಾರ್ಥನೆ(ಅನುವಾದ)
  • ಉನ್ಮತ್ತ ಉಲ್ಲಾಸ (ಅನುವಾದ)
  • ಬಾವಲಿ
  • ಹೇಡಿಗಳು (ನಾಟಕ)
  • ರಾಯ್ ಅವರ ಅಶನಿ ಸಂಕೇತ್
  • ಮಕ್ಕಳ ನಾಟಕ-ಪ್ರಯೋಗ

ಎರಡು ಕವಿತೆಗಳು

ಎರಡು ಕವಿತೆಗಳು

ಗೋಪಾಲಕೃಷ್ಣ ಅಡಿಗ

೧ ಸ್ನಾನ
ಕೊಳೆ ಕಸಗಲೀಜು ಅಮೇಧ್ಯ ಎಂದತರ ಬಹಳ
ಇಷ್ಟ ಮಕ್ಕಳಿಗೆ : ಉಚ್ಚೆಯಲ್ಲೀಜಾಡಿ, ಹತ್ತ ಮಲದಲ್ಲಿ
ಕಿವಚುಂಡೆ ಕಟ್ಟಿದರೆ ನವ್ಯ ಸೃಷ್ಟಿ ನಡೆಸಿದ ಹೆಮ್ಮೆ. ನೋಡೀ ಇವನ :
ಗಡ್ಡಮೀಸೆ ಪೊಗದಸ್ತಾಗಿರುವ ಹುಟ್ಟಾ ಡೊಂಕು
ಬಾಲ ; ನಿಂತಿದ್ದಾನೆ ಕೆಸರಲ್ಲಿ ಕೋವಣಮಾತ್ರ
ಮಾನಪಟ: ಕೈಯಲ್ಲಿ ಕೆಸರಕಲಸುಂಡೆ
ಹಿಡಿದದುಮಿ, ತಿಕ್ಕಿ ತೀಡಿ, ತನ್ನ ಮನಸ್ಸಿ
ನಂಕುಡೊಂಕುಗಳೆಲ್ಲ ಹೊಳೆಯುವ ಹಾಗೆ ಮುಖ, ಮೂಗು, ಕಣ್ಣು, ಕಣ್ಣಿನಪಾಪೆ
ಬರಿಸುತ್ತಲಿದ್ದ ನಾನಾರೂಪ. ನೋಡಿ ಭೇಷೆಂದದ್ದೆ
ತಪ್ಪಾಯಿತೀಗ ನೋಡಿರಿ ಮತ್ತೆ : ಕೆಸರುಂಡೆ ಕಟ್ಟಿಕಟ್ಟಿ
ಗುರಿ ಹೂಡಿ ಎಸೆಯುತ್ತಾನೆ ಬಿಳಿಬಟ್ಟೆ
ತೊಟ್ಟವರನೊಬ್ಬರನ್ನೂ ಬಿಡದೆ : ಕರುಳಿನ ಹಗ್ಗ
ಕತ್ತಿಗೊತ್ತಿ ಗಿಂಜುತ್ತಾನೆ ಹಾದಿಹೋಕರ ಗಮನ ;
ರೇಗುತ್ತಾನೆ, ಚಪ್ಪಾಳೆ ತಟ್ಟಿ ಹಾಕುತ್ತಾನೆ
ಕೇಕೆ ; ಕೆಲವು ಸಲ ಮುಸುಮುಸು ಎಂದು
ಆತ್ತೂ ಬಿಡುತ್ತಾನೆ; ಎದ ಕರಗಿ ಹರಿದಿರೊ ಜಾಲ
ದ ಸಮೀಪ ಒಳಕೊಂಡು ಅಮುಕುತ್ತಾನೆ ಗುಂಡಿಗೆಯ :
ಕೆಸರ ತಿನ್ನಿಸಿ ಕೆಸರ ಕಕ್ಕಿಸುತ್ತಾನೆ. ಕೆಸರುಂಡೆ
ಕಟ್ಟುವುದೆ ಕೃತಿ, ಅದನ್ನೆ ಸೆವುದೇ ಹಿಂದುಳಿದ
ವರ ಸೇವೆ ಎನ್ನುತ್ತಾನೆ. ರಾಮನ್ ರಾಘವನ ಮೂಲ
ಕಾನೂನೆ ಇವನಿಗೂ. ತನ್ನ ತುರಿಕೆಗೆ ನಿನ್ನ
ಮೂಗು ಕಚ್ಚಿ ತಿಂದರು ಕೂಡ ತೀರಲಾರದ ತುರಿಕೆ-
ನಾತದಿಂದಲೆ ಜಗದ್ವಿಖ್ಯಾತನಾಗುತ್ತಿರುವನಾಥ ಪ್ರೇತ.
.
.
.
ನೋಡೀ ಒರಟು ಹುಡುಗ, ಗೊಣ್ಣೇಸಿದ್ದ : ಗದರಿಸಿದ್ದಕ್ಕೆ ಪ್ರತಿಯಾಗಿ
ತನ್ನ ಹಾಸಿಗೆಯಲ್ಲೆ ಒಂದ ಮಾಡುವ ಒಡಕ : ಕಾಲ ಪ್ರವೃತ್ತಿ
ಚಡ್ಡಿಯಲ್ಲಾದರೂ ಸರಿಯೆ-ಹತ್ತಿರಕ್ಕೆ ಬಂದವರ ಮೂಗು
ಕಳಚಿ ಬಿದ್ದರೆ ಸಾಕು. ನೀರೆಂದರೇ ನಡುಕ ಪ್ರಾರಬ್ಧಕ್ಕೆ : ಸ್ನಾನದ ಮಾತು
ಎತ್ತಿದರೆ ಸಾಕು ಹುಡುಕುತ್ತಾನೆ ಕತ್ತಲ ಕೋಣೆ, ತೆಂಗಿನ ಮರದ ತುದಿ,
ಹುಲ್ಲ ಮೆದೆ ಅಥವಾ ಗೊಬ್ಬರದ ಗುಂಡಿ.
ಹೊರಗೆಳೆದು ತಂದು, ಮುಂದಲೆ ಜಗ್ಗಿ, ಹೊರಕಂಭಕ್ಕೆ
ಕಟ್ಟಿ ಹರಳೆಣ್ಣೆ ರಪರಪ ತೀಡಿ ಬಿಸಿ ಬಿಸೀ
ನೀರ ಕೊಡಕೊಡ ಸುರಿದು, ತಿಕ್ಕಿ ಗಸಗಸ ಸೀಗೆ, ಈಚೆಗೆಳೆದೆರಡು ತಪರಾಕೆ
ಕೊಟ್ಟಾಚೆಗಟ್ಟಿದರೆ ಕೆಲವು ದಿನ, ಕ್ರಮೇಣ ಕಲಿಯುತ್ತಾನೆ
ಮಾರ್ಜನದ ಶ್ರೀಕಾರ ತನಗಾಗಿ, ಮುಖ್ಯವಾಗಿ ಅನ್ಯರಿಗಾಗಿ.
.
.
.
ಎಂಟಕ್ಕೆ ದಂಟು ಈ ಮಗ ; ಹದಿನೆಂಟಕ್ಕೆ ಗಂಟು ;
ಮೂವತ್ತೆಂಟಕ್ಕೆ ನೋಡಿ ಕಗ್ಗಂಟು.
ಕೊನೆತನಕವೂ ಆದೇ ಸೆಂಟು ; ವಾರಂಟು
ಬರುವ ವರೆಗೂ ಹೀಗೆ ಇರುವುದುಂಟು.
ಸ್ವತಂತ್ರ ಸಮಾಜದ ಸಂದಿಗೊಂದಿ ಗಲ್ಲಿಗಳಲ್ಲಿ
ಚಾಕುಚೂರಿಯ ಹಿರಿದು ಅಲೆವ ಠೋಳಿ ;
ತುರಿಕಜ್ಜಿ, ಹಸಿಬೊಕ್ಕೆ, ಇಸುಬು: ತಂಬಿದ ಕೀವು ;
ಶಸ್ತ್ರಕ್ರಿಯೆಗೆ ಇಲ್ಲಿ ಯಾವ ಶೈಲಿ?
ಗಾಳಿ ನೀರ್ಮನೆಯ ಜಲತರಂಗ ತೊಳೆಯದ ಕೊಳಕು,
ಪ್ರಖರ ಬಿಸಿಲೂ ಸುಟ್ಟು ಸುಡದ ಕಿಟ್ಟ :
ಆವಿಯಾದರು ತಳಕ್ಕುಳಿವ ಗಷ್ಟುರವಷ್ಟು
ಮೂಲ ವಿಷದ ಬೃಹತ್ತು ಬೆಳೆವ ಬಿತ್ತು.
ಕ್ಯಾಲಿಬನ್ ಇರುವಲ್ಲಿ ಪ್ರಾಸ್ಪರೋ ಕಡ್ಡಾಯ
ಉಚ್ಛ್ವಾಸ ನಿಃಶ್ವಾಸದಷ್ಟೆ ಸಹಜ.
ಇಲ್ಲವಾದರೆ ಹೊಲದ ತುಂಬ ಕಳೆ: ಹಳ್ಳ
ಕೊಳ್ಳ ಬಾವಿಗಳಲ್ಲಿ ಗಡ್ಡೆಪಾಚಿ ;
ಕಾಲನಿಟ್ಟಲ್ಲೆಲ್ಲ ಕೆಸರು : ಕೈಮೈ ಕೊಂಚ
ಆಡಿದರೇ ಸುತ್ತ ತುರಚಿ, ತೊಣಚಿ.
.
.
.
ಆದ ಕಾರಣ ಒಡ್ಡುಗಳ ಕಟ್ಟಿ, ಆಣೆಕಟ್ಟುಗಳ
ನಿರ್ಮಾಣ ಮಾಡಿ ಇಟ್ಟ ನೀರು ನಿರಂತರವಾಗಿ
ಕೆರೆಕೊಳ ಬಾವಿ ನಾಲೆ ನಲ್ಲಿಗಳಿಂದ ಸರಭರ ಹರಿದು
ಎಲ್ಲವನ್ನೂ ತೊಳೆಯುವಂತೆ ಮಾಡುವ ಕೆಲಸ ಗರೀಬೀ ಹಟಾನಾಕ್ಕೆ
ಮೊದಲ ಹೆಜ್ಜೆ.
ಆಗಲೇ ಮಡುವುವು ಗೆಜ್ಜೆ, ಆಗಸದಲ್ಲಿ;
ಒಜ್ಜೆ ಕಳೆದ ಮನಸ್ಸೆ ಏರಿಯಲ್ಲಿನ ಸಜ್ಜೆ ;
ಮಿರಾಂಡ ಫರ್ಡಿನಂಡರ ಸಮಶ್ರುತಿ ಫಸಲು
– ಅಂಗಳಕ್ಕೆ.
ಪ್ರತಿನಿತ್ಯ ಚೆನ್ನಾಗಿ ಮೈತೊಳೆದುಕೊಳ್ಳುವುದು
ಆದ್ಯದ ಅಗತ್ಯ. ಏಕಂತೀರೊ
ನಾರುವುದು ಸೇಂದ್ರಿಯದ ಧರ್ಮ: ಅದನ್ನು ಸದಾ ಕಾಲವೂ
ತೊಳೆದೊರಸಿ ಗಂಧ ಹಚ್ಚಿ ಪರಿವಳಗೊಳಿಸಿ
ಮಂದಾಸನದ ಮೇಲೆ ಇಟ್ಟು ಲೋಭಾನ ಊದಿನ ಕಡ್ಡಿ
ಹಚ್ಚಿ, ಕರ್ಪೂರದಾರತಿ ಬೆಳಗಿ, ಪ್ರತಿನಿತ್ಯ ಬೆಳಕುಗಳ
ಕರೆದಿಟ್ಟು ಪೂಜಿಸುವುದು ಅತೀಂದ್ರಿಯದ ಕರ್ಮ, ಈ ಕರ್ಮ
ಧರ್ಮ ಸಂಯೋಗವೇ ಬದುಕು, ನೆನಪಿರಲಿ :
ಸ್ನಾನ ಮಾಡುವುದು ಮಾಡಿಸುವುದು ಇದಕ್ಕಿಂತ ಹೆಚ್ಚಿನ ಧರ್ಮ
ಬೇರೆ ಇಲ್ಲ.
(ಕೃಪೆ ತುಷಾರ)
.
೨ ಮನೆಯಿಲ್ಲದವರು
ಮನೆಯಿಲ್ಲದವರು :
ಫುಟ್‌ಪಾತಿನಲ್ಲಿ ಸಂಸಾರ ಮಾಡಿ ಬೆಳಗಾಗುತ್ತಲೇ
ಗಂಟು ಮೂಟೆಗಳನ್ನು ಕಟ್ಟಿ ಕೊಂಬೆಗಳಲ್ಲಿ
ನೇತಾಡುವಂಥವರು : ಹಠಾತ್ತನೆ ಮೂಡಿ ಬಂದ ಕಾಮನ ಬಿಲ್ಲು
ಹಿಡಿದು ಕೆಡಗಿ, ಆಂಗಡಿ ಕಟ್ಟೆ, ಪಾರ್ಕಿನ ಕಲ್ಲು
ಬೆಂಚುಗಳ ಸಂದಿ, ಪಾಳುಗಳ ಅಭುಕ್ತ ಮೂಲೆಯ ಮುಳ್ಳು
ಕಂಟಿ ಗಿಡಗಂಟೆಗಳ ನಡುವೆ ಹೆದೆಯೇರಿಸುತ್ತ ಗುರಿ
ಹೂಡಿ ಬಾಣವ ಹೊಡೆದು ಬಾಣದ ಹಾಗೆ
ನೆಟ್ಟು ಬೀಜವ ಬಿಟ್ಟು ಬೇರ್ಪಟ್ಟು ಧಾರಾಕಾರ ಮಳೆಯಲ್ಲಿ
ಎತ್ತಲೋ ಕೊಚ್ಚಿ ಹೋದಂಥವರು ; ಆಕಸ್ಮಿಕದ ಆಕಾಶದಲ್ಲಿ ಉಲ್ಕಾಪಾತ
ಪಾತ್ರಧಾರಿಗಳಾಗಿ ಹಿಂಜಿಹೋದಂಥವರು ; ಚರಂಡಿಯಲ್ಲಿ ಚೆಲ್ಲಿದ
ಎಂಜ
ಲೆಲೆ
ಗಾಗಿ ನಾಯಿಗಳ ಹೆಗಲೆಣೆ ಹಣಾಹಣಿಗೆ ನಿಂತವರು : ಕೊಳೆಹತ್ತಿ
ಕೊಳೆಮೆತ್ತಿ
ಒಳಗೆಲ್ಲ ಹುಳು ಹತ್ತಿ
ಕೊಂಬೆ ರೆಂಬೆಗಳೆಲ್ಲ ಒಣಗಿ ಬೇಸಿಗೆಯುರಿಗೆ
ಕಂಕಾಲದಂತೆ ದುಷ್ಕಾಲಕ್ಕೆ ಸರ್ವದಾ ಸಂಕೇತ ನಿಂತವರು ;
ಒಡೆಯ, ಧಣಿ, ಜೀಯ ಎನ್ನುತ್ತಲೇ ಬಗ್ಗಿ ಕುಗ್ಗಿ ಮುರುಟ ಸುರುಟಿ
ಉದ್ದುದ್ದ ನೆಗೆಯ ಬೇಕಾಗಿದ್ದ ನೆಗೆಯುತ್ತಿದ್ದ ಜ್ವಾಲೆಯನ್ನ ಮುಕಿ
ಕಿಡಿಮಾಡಿ, ಕಿಡಿ
ಚೂರಿದ್ದಲಂತಾಗಿ ನಂದಿಯೇ ಹೊದವರು ;
ಕಾರ್ಖಾನೆ ಕತ್ತಲ ಕೋಣೆಯಲ್ಲಿ ಬಿದ್ದೊದ್ದಾಡಿ,
ತಿರುಗುಗಾಲಿಯ ಸಣ್ಣ ಗೊಣಸಾಗಿ, ಅರೆದು ಮೆಣಸಾಗಿ
ಹೊಗೆಗೊಳವೆಯಂತೆ ವಾತಾವರಣಕ್ಕೆ ಬರೀ ವಿಷವ
ಬೆರೆಸುತ್ತ, ಅರಸುತ್ತ ದಂಗೆ ಹಿಂಸೆ ಗಲಾಟೆ ಬಿರುಗಾಳಿಯಲ್ಲಿ
ತಲ್ಲೀನತೆಯ
ಪಡೆವವರು, ಸತ್ತು ನಡೆವವರು; ದುಡಿವವರು,
ಭವಿಷ್ಯವೇ ಇಲ್ಲದಸ್ತಿತ್ವಕ್ಕೆ ಗೊಬ್ಬರವಾಗಿ
ಕೆಡೆವವರು, ಕಂತೆ ಕೌದಿ ಕೌಪೀನಗಳ
ಆವರಣ ಪಡೆದವರು : ಹಡೆದವರು
ಹೆಡಿಗೆ ಹೆಡಿಗೆಗಳಲ್ಲಿ ಕಲ್ಲು ಮಣ್ಣು ಕಾಂಕ್ರೀಟುಗಳ
ಹೊತ್ತು ಹೊತ್ತು ಹತ್ತು ನೆಲೆಯುಪ್ಪರಿಗೆಯಾಕಾಶ ಚುಂಬಿಗಳನ್ನು.
ನೋಡಿವರ.
ನೋಡಿದೆಯ ? ಮತ್ತೆ ಆಲಿಸು ನಿನ್ನ
ಸಮ ಶೀತೋಷ್ಣಕರಣ ಯಂತ್ರದ ಸ್ವಗತ ಮರ್ಮರವ.
(ಕನ್ನಡ ಪ್ರಭದ ಕೃಪೆಯಿಂದ).

Close

ಮಾತ್ರಿಯೋನಾ (ಅನುವಾದ)

ಮಾತ್ರಿಯೋನಾ

ಮೂಲ : ಅಲೆಕ್ಸಾಂಡರ್‌ ಸೋಲ್ಜೆನಿಟ್ಸಿನ್‌
ಅನುವಾದ: ಎಸ್ ದಿವಾಕರ್

ಮಾಸ್ಕೋದಿಂದ ನೂರೆಂಭತ್ನಾಲ್ಕು ಕಿಲೋಮೀಟರು ಸಾಗಿದ ಮೇಲೆ ರೈಲುಗಳ ವೇಗ ಇದ್ದಕ್ಕಿದ್ದಂತೆ ಕಡಮೆಯಾಯಿತು. ಆ ಸಂಗತಿ ನಡೆದು ಆರು ತಿಂಗಳಾದ ಮೇಲೂ ಸಹ ಆ ಸ್ಥಳದಲ್ಲಿ ರೈಲುಗಳ ವೇಗ ಒಂದೇ ಸಲಕ್ಕೆ ಕುಗ್ಗಿಬಿಡುತ್ತಿತ್ತು. ಪ್ರಯಾಣಿಕರು ಕಿಟಕಿಗಳ ಹೊರಗೆ ತಲೆ ಹಾಕಿ ನೋಡಿದರು : ಬಾಗಿಲುಗಳ ಬಳಿ ಬಂದು ನಿಂತರು. ರೈಲು ಮಾರ್ಗವೇನು ರಿಪೇರಿಯಾಗುತ್ತಿದೆಯೆ ? ರೈಲು ತಡವಾಗಿ ಸೇರುವುದೋ ಹೇಗೆ ?
ಹಾಗೇನಾಗಲಿಲ್ಲ. ಕ್ರಾಸಿಂಗ್ ದಾಟಿದ ಮೇಲೆ ರೈಲು ಮತ್ತೆ ವೇಗವಾಗಿ ಓಡತೊಡಗಿತು. ಪ್ರಯಾಣಿಕರು ತಮ್ಮ ತಮ್ಮ ಜಾಗಗಳಲ್ಲಿ ಬಂದು ಕುಳಿತರು.
ಆ ಸಂಗತಿ ಇಂಜಿನ್‌ ಡ್ರೈವರ್‌ಗಳಿಗೆ ಮಾತ್ರ ಗೊತ್ತಿತ್ತು.
ಇಂಜಿನ್ ಡ್ರೈವರುಗಳಿಗೆ ಮತ್ತು ನನಗೆ.
.
.
.
೧೯೫೩ ರ ಬೇಸಿಗೆಯಲ್ಲಿ ಬಿಸಿಲಿನಿಂದ ಬೆಂದುಹೋದ, ಧೂಳು ತುಂಬಿದ ಮರುಭೂಮಿಯಿಂದ ನಾನು ವಾಪಸು ಬರುತ್ತಿದ್ದೆ. ಯಾವ ದಾರಿಯಾದರೂ ಸರಿ, ರಷ್ಯವನ್ನು, ಸೇರಿದರೆ ಸಾಕು ಎನ್ನಿಸಿತ್ತು. ಯಾವುದೇ ನಿಗದಿಯಾದ ಸ್ಥಳದಲ್ಲಿ ಯಾರೊಬ್ಬರೂ ನನಗಾಗಿ ಕಾದಿರಲಿಲ್ಲ ಅಥವಾ ನನ್ನಿಂದ ಯಾರಿಗೂ ಏನೂ ಆಗಬೇಕಿರಲಿಲ್ಲ. ಯಾಕೆಂದರೆ ನಾನು ಹತ್ತು ವರ್ಷಕ್ಕೆ ಮೊದಲೇ ಬರಬೇಕಾಗಿದ್ದವನು. ಮತ್ತೆ ಮೈ ತುಂಬ ಬೆವರು ಚಿಮ್ಮಿಸುವ ಆ ಬೇಗೆಯಿಂದ ತಪ್ಪಿಸಿಕೊಂಡು ಕಾಡುಗಳ ಎಲೆ ಎಲೆಗಳ ಮರ್ಮರಕ್ಕೆ ಹತ್ತಿರವಾಗಲು ನಾನು ಆಸೆಪಡುತ್ತಿದ್ದೆ. ನನ್ನನ್ನೇ ನಾನು ಆಳಿಸಿಕೊಳ್ಳಲು, ರಷ್ಯವನು ಸೇರಿ ನನ್ನತನವನ್ನು ಕಳೆದುಕೊಳ್ಳಲು ತವಕಪಡುತ್ತಿದ್ದೆ.
ಒಂದು ವರ್ಷಕ್ಕೆ ಮೊದಲು ಉರಾಲ್ಸಿನಲ್ಲಿ ಕಟ್ಟಡಗಾರರಿಗೆ ಗಾರೆ ಎತ್ತಿಕೊಡುವ ಕೆಲಸ ನನಗೆ ಸಿಕ್ಕಿರುತ್ತಿತ್ತು. ಅಷ್ಟೆತೆ ನನ್ನನ್ನು ಎಲೆಕ್ಟ್ರಿಷಿಯನ್‌ ಆಗಿ ನೇಮಿಸಿಕೊಂಡಿದ್ದರೆ ಆಶ್ಚರ್ಯವಿಲ್ಲ. ಆದರೆ ನನಗೆ ಉಪಾಧ್ಯಾಯ ವೃತ್ತಿ ಕೈಗೊಳ್ಳುವ ಆಸೆಯಿತ್ತು. ತಿಳಿದವರು ಸುಮ್ಮನೆ ಹಣ ಖರ್ಚು ಮಾಡಿ ಹೋಗಿಬರುವುದರಿಂದ ಏನೂ ಲಾಭವಿಲ್ಲ ಎಂದಿದ್ದರು.
ಆದರೂ ಸ್ಥಿತಿ ಬದಲಾಗತೊಡಗಿತು. ಓಬ್ಲಾಸ್ಟ್‌ ವಿದ್ಯಾ ಇಲಾಖೆಗೆ ಹೋಗಿ ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದೆ : “ಸ್ವಾಮಿ, ರೈಲುಮಾರ್ಗವಿಲ್ಲದ ಯಾವುದಾದರೂ ಒಂದು ಕೊಂಪೆಯಲ್ಲಿ ಗಣಿತ ಅಧ್ಯಾಪಕರ ಕೆಲಸ ಖಾಲಿ ಇದೆಯೆ ? ಅಂಥ ಕಡೆಗೆ ಹೋಗಲು ನಾನು ಸಿದ್ದ.”
ಅಲ್ಲಿನ ಜನ ನನ್ನ ಅರ್ಹತಾ ಪತ್ರಗಳನ್ನೆಲ್ಲ ಒಂದಕ್ಷರ ಬಿಡದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ಒಂದು ರೂಮಿನಿಂದ ಇನ್ನೊಂದು ರೂಮಿಗೆ ತಿರುಗಾಡಿದರು. ಯಾರು ಯಾರಿಗೋ ಟೆಲಿಫೋನ್ ಮಾಡಿದರು. ಅವರಿಗೆ ಅಸಾಮಾನ್ಯವೆನಿಸಿರಬೇಕು. ಯಾಕೆಂದರೆ ಅರ್ಜಿದಾರರೆಲ್ಲ ದೊಡ್ಡ ದೊಡ್ಡ ಪಟ್ಟಣಗಳಿಗೆ, ನಗರಗಳಿಗೆ ಹೋಗಲು ಇಷ್ಟಪಡುತ್ತಿದ್ದರು. ಅಂತೂ ನನಗೊಂದು ಸ್ಥಳ ಸೂಚಿಸಿದರು-ಪೆನ್ನಿನಲ್ಲಿ ಏನೇನೋ ಕೊರೆದ ಮೇಲೆ : ‘ತೋರ್‌ಫೊ’ ಪ್ರೊಡಕ್ಟ್”.
ತೋ‌ರ್‌ಫೋ ಪ್ರೊಡಕ್ಟ್ ? ರಷ್ಯನ್ ಭಾಷೆಯಲ್ಲಿ ಇಂಥ ಪದಬಂಧ ಸಾಧ್ಯವೆಂದು ಮಹಾ ಸಾಹಿತಿ ಟರ್ಗೆನೀವ್‌ಗೆ ಸಹ ಅನ್ನಿಸಿರಲಿಕ್ಕಿಲ್ಲ.
ತೋರ್‌ಫೋ: ಪ್ರೊಡಕ್ಟಿನ ರೈಲು ನಿಲ್ದಾಣದಲ್ಲಿ ವಾರದಿಂದ ನಿರ್ಮಿಸಲಾದ ಒಂದು ಹಳೆಯ ಕಟ್ಟಡ. ಮುಂಭಾಗದಲ್ಲಿ “ಪ್ರಯಾಣಿಕರು ಪ್ಲಾಟ್‌ಫಾರಂನಿಂದ ಮಾತ್ರ ರೈಲು ಹತ್ತತಕ್ಕದ್ದು” ಎಂಬ ಬೋರ್ಡ್‌. ಅದರ ಕೆಳಗೆ ಯಾರೋ ಕೀಟಲೆಗಾಗಿ “ಟೊಲೆಟ್ಟೊ;;ದೆ” ಎಂದೂ ಸೇರಿಸಿದ್ದರು. ಬುಕಿಂಗ್ ಆಫೀಸಿನ ಬಳಿ “ಟಿಕೆಟ್ಟುಗಳಿಲ್ಲ” ಎಂದು ಅಡ್ಡಾದಿಡ್ಡಿಯಾಗಿ ಕೊರೆಯಲಾಗಿತ್ತು. ಯಾರೋ ಖುಷಿಗಾಗಿ ಬರೆದಿರಬೇಕು. ತೋರ್‌‌ಪೋ ಪ್ರೊಡಕ್ಟಿಗೆ ಬಂದು ಸೇರುವುದಂತೂ ಸುಲಭ. ಅಲ್ಲಿಂದ ಕಳಚಿಕೊಳ್ಳುವುದು ಮಾತ್ರ ಅಷ್ಟು ಸುಲಭವಲ್ಲ.
ಇಲ್ಲಿಯೂ ಒಂದು ಕಾಲದಲ್ಲಿ ಒತ್ತಾಗಿ ಬೆಳೆದ, ದಾರಿ ಕಾಣದ ಕಾಡುಗಳು ಬೆಳೆದುನಿಂತಿದ್ದವು. ನೆರೆಯ ಕೃಷಿಕ್ಷೇತ್ರದ ರೈತರು ಇದ್ದಲಿಗಾಗಿ ಅವುಗಳನ್ನು ಕಡಿದುಹಾಕಿದ್ದರು.
ಕೆಲಸಗಾರರ ಮನೆಗಳು ಇದ್ದಲು ಗುಂಡಿಗಳ ನಡುವೆ ಅಲ್ಲಲ್ಲಿ ಓರಣವಿಲ್ಲದೆ ಹರಡಿಕೊಂಡಿದ್ದುವು. ಇನ್ನು ಕೆಲವು ಮೂವತ್ತು ವರ್ಷಗಳ ಹಿಂದೆ ಕಟ್ಟಿದ ಗುಡಿಸಲುಗಳು ; ಇನ್ನು ಕೆಲವು ಹತ್ತು ವರ್ಷಗಳಷ್ಟು ಹಳೆಯ ಸಣ್ಣ ಸಣ್ಣ ಮನೆಗಳು. ಅವುಗಳಿಗೆ ಗಾಜಿನ ವರಾಂಡಗಳೂ ಇದ್ದುವು. ಆದರೆ ಈ ಮನೆಗಳಲ್ಲಿ ಛಾವಣಿಯವರೆಗೂ ಎದ್ದ ಗೋಡೆಗಳುಳ್ಳ ಒಂದು ಕೋಣೆಯೂ ಇರಲಿಲ್ಲ. ಅಂದಮೇಲೆ ನಿಜವಾದ ನಾಲ್ಕು ಗೋಡೆಗಳಿರುವ ಒಂದು ರೂಮು ಬಾಡಿಗೆಗೆ ಸಿಕ್ಕುವ ಸಂಭವವಿಲ್ಲ.
ಫ್ಯಾಕ್ಟರಿಯ ಚಿಮಣಿಯಿಂದ ಹೊರಟ ಹೊಗೆ ಈಗ ಮನೆಗಳ ಮೇಲೆ ಮಾಲೆಕಟ್ಟಿತ್ತು. ನ್ಯಾರೊಗೇಜ್ ಲೈನಿನ ಮೇಲೆ ಆಗೀಗ ರೈಲುಗಳು ಇನ್ನಷ್ಟು ಕಪ್ಪು ಹೊಗೆ ಉಗುಳುತ್ತಾ, ಕಿವಿ ಗಡಚಿಕ್ಕುವಂತೆ ಕೂಗುತ್ತಾ ಇದ್ದಿಲು ಮೂಟೆ ಹೊತ್ತು ಓಡಾಡುತ್ತಿದ್ದುವು. ಸಂಜೆಯ ಹೊತ್ತು, ಕ್ಲಬ್ಬಿನಿಂದ ಧ್ವನಿವರ್ಧಕವೊಂದು ಅರಚಿಕೊಳ್ಳುವುದರಲ್ಲಿ ನನಗೆ ಸಂಶಯವಿರಲಿಲ್ಲ. ಬೀದಿಗಳ ತುಂಬೆಲ್ಲ ಕುಡುಕರು ತೂರಾಡುತ್ತ ಒಬ್ಬರ ವಿರುದ್ಧ ಒಬ್ಬರು ಕತ್ತಿ ಮಸೆಯುವುದರಲ್ಲಿಯೂ ಸಂಶಯವಿರಲಿಲ್ಲ.
ರಷ್ಯದ ಪ್ರಶಾಂತ ಮೂಲೆಯೊಂದನ್ನು ತಲಪಬೇಕೆಂಬ ಕನಸು ನನ್ನನ್ನು ಇಲ್ಲಿಗೆ ತಂದಿತ್ತು.
ಸ್ಟೇಷನ್ನಿನ ಬೆಂಚಿನ ಮೇಲೆ ನನಗೆ ನಿದ್ದೆ ಬರುವಂತಿರಲಿಲ್ಲ. ಸ್ವಲ್ಪ ಬೆಳಕಾಗತೊಡಗಿದಾಗ ನಾನು ಇನ್ನೊಂದು ಬಾರಿ ಆ ಮನೆಗಳ ಕಡೆ ಸುತ್ತಾಡಲು ಹೊರಟೆ. ಈ ಸಲ ಒಂದು ಸಣ್ಣ ಮಾರ್ಕೆಟ್ಟು ನನ್ನ ಕಣ್ಣಿಗೆ ಬಿತ್ತು. ಒಬ್ಬಳೇ ಒಬ್ಬ ಹೆಂಗಸು ಮೂಲೆಯೊಂದರಲ್ಲಿ ನಿಂತು ಹಾಲು ಮಾರುತ್ತಿದ್ದಳು. ನಾನೊಂದು ಬಾಟಲ್ ಹಾಲು ಕೊಂಡುಕೊಂಡು ಅಲ್ಲೇ ಕುಡಿಯತೊಡಗಿದೆ.
ಆಕೆ ಮಾತನಾಡಿದ ರೀತಿಯಿಂದ ನನಗೆ ಆಶ್ಚರ್ಯವಾಯಿತು. ಅಂಥ ಮಾತುಗಳನ್ನು ಕೇಳಲು ನಾನು ತವಕಪಡುತ್ತಿದ್ದೆ.
“ಕುಡೀರಿ….ನಿಧಾನವಾಗಿ ಕುಡೀರಿ. ಈ ಸ್ಥಳಕ್ಕೆ ನೀವು ಹೊಸಬರು ಅಂತ ಕಾಣುತ್ತೆ ?”
“ನಿಮ್ಮದು ಯಾವೂರು ?” ಎಂದೆ. ಈಗ ಹೆಚ್ಚು ಲವಲವಿಕೆಯಿಂದಿದ್ದೆ.
ಅಲ್ಲಿ ಇದ್ದಲು ತಯಾರಿಸುವ ಉದ್ಯವುವೊಂದೇ ಇರಲಿಲ್ಲ. ರೈಲ್ವೇ ಲೈನನ್ನು ದಾಟಿದ ಮೇಲೆ ಒಂದು ಗುಡ್ಡ ಸಿಕ್ಕುತ್ತಿತ್ತು. ಗುಡ್ಡದ ಮೇಲೆ ತಾಲ್ನೊವೊ ಹಳ್ಳಿ. ಶತಮಾನಗಳಷ್ಟು ಹಿಂದೆ ಜಿಪ್ಸಿ ಹೆಣ್ಣೊಬ್ಬಳು ಘೋರ ಕಾಡುಗಳ ಮಧ್ಯೆ ದೊಡ್ಡ ಮನೆ ಕಟ್ಟಿ ಕಂಡು ವಾಸಮಾಡುತ್ತಿದ್ದಳಂತೆ. ಆಗಲೂ ಈ ಹಳ್ಳಿ ಇತ್ತಂತೆ. ಈ ಹಳ್ಳಿ ದಾಟಿಕೊಂಡು ಮುಂದೆ ಮುಂದೆ ಹೋದ ಹಾಗೆಲ್ಲ ಕಾಡುಗಳು, ಸರೋವರಗಳು. ಅಲ್ಲಲ್ಲಿ ಮುದುರಿ ಕುಳಿತ ಎಷ್ಟೆಷ್ಟೋ ಹಳ್ಳಿಗಳು.
ಆ ಹಳ್ಳಿಗಳ ಹೆಸರು ಕೇಳಿಯೇ ನನಗೆ ಹಾಯೆನಿಸುವ ಗಾಳಿ ಬೀಸಿದಂತಾಯಿತು. ನಾನು ಕನಸುತ್ತಿದ್ದ ಕಗ್ಗಾಡು ರಷ್ಯ ಈ ಹಳ್ಳಿಗಳಲ್ಲಿ ಅಡಗಿಕೊಂಡಿರುವಂತೆ ಭಾಸವಾಯಿತು. ಮಾರ್ಕೆಟ್ಟಿನ ಕೆಲಸ ಮುಗಿದ ಮೇಲೆ ನನ್ನನ್ನು ತಾಲ್ನೊವೊ ಹಳ್ಳಿಗೆ ಕರೆದೊಯ್ಯಬೇಕೆಂದು ಆಕೆಯನ್ನು ಕೇಳಿಕೊಂಡೆ. ಉಳಿದುಕೊಳ್ಳಲು ನನಗಾಗಿ ಒಂದು ಮನೆಯನ್ನೂ ಆಕೆ ಹುಡುಕಿಕೊಡಬೇಕಿತ್ತು.
ನನಗೆ ಮನೆ ಕೊಟ್ಟು ಊಟ ಹಾಕುವುದರಿಂದ ಲಾಭವೂ ಇತ್ತು. ಯಾರು ಮನೆ ಕೊಟ್ಟರೂ ಸರಿ. ಅವರಿಗೆ ನಾನು ಕೊಡಲಿದ್ದ ಬಾಡಿಗೆಯ ಜತೆಗೆ, ಚಳಿಗಾಲದ ಉಪಯೋಗಕ್ಕೆಂದು ಶಾಲೆ ಒದಗಿಸುತ್ತಿದ್ದ ಒಂದು ಲಾರಿ ಇದ್ದಲೂ ದೊರೆಯುತ್ತಿತ್ತು. ಆಕೆಯ ಮುಗುಳ್ನಗೆ ಮಾಯವಾಗಿ ಏನೋ ಯೋಚನೆಯಿಂದ ಹುಬ್ಬು ಗಂಟಿಕ್ಕಿತು. ಅವಳ ಮನೆಯಲ್ಲಿ ರೂಮಿರಲಿಲ್ಲ. ತಾನು, ತನ್ನ ಗಂಡ. ಅಲ್ಲದೆ ದಿಕ್ಕಿಲ್ಲದ್ದಿದ್ದ ಇಳಿವಯಸ್ಸಿನ ತನ್ನ ತಾಯಿಯನ್ನೂ ಮನೆಗೇ ಕರೆಸಿಕೊಂಡಿದ್ದಳು. ಹಾಗಾಗಿ ನನ್ನನ್ನು ತನ್ನ ಹತ್ತಾರು ಸಂಬಂಧಿಗಳ ಮನೆಗಳಿಗೆ ಕರೆದುಕೊಂಡು ಹೋದಳು. ಅಲ್ಲೆಲ್ಲಿಯೂ ಪ್ರತ್ಯೇಕ ರೂಮು ಸಿಕ್ಕಲಿಲ್ಲ. ಎಲ್ಲ ಜನಜಂಗುಳಿ : ಗದ್ದಲ.
ಈಗ ನಾವಿಬ್ಬರೂ ಒಂದು ದೊಡ್ಡ ಕಾಲುವೆಯ ಹತ್ತಿರ ಬಂದಿದ್ದೆವು. ಅಷ್ಟೇನೂ ಹೆಚ್ಚು ನೀರಿರಲಿಲ್ಲ. ಬಳಿಯಲ್ಲೇ ಒಂದು ಸಣ್ಣ ಸೇತುವೆ ಇತ್ತು. ಈ ಜಾಗದಷ್ಟು ಆ ಹಳ್ಳಿಯ ಇನ್ನಾವ ಜಾಗವೂ ನನ್ನನ್ನು ಸೆರೆಹಿಡಿಯಲಿಲ್ಲ : ನಾಲ್ಕೈದು ಕುರುಚಲು ಗಿಡಗಳು, ಒಂದು ಹಳೆಯ ಮನೆ, ಅದರ ಒಂದು ಬದಿಯ ಗೋಡೆ ಎತ್ತರವಾಗಿದ್ದರೆ ಇನ್ನೊಂದು ತಗ್ಗು, ಆದ್ದರಿಂದ ದೂರಕ್ಕೆ ಅದರ ಛಾವಣಿ ಜಾರುಬಂಡೆಯ ಹಾಗೆ ಕಾಣುತ್ತಿತ್ತು. ಹತ್ತಿರದ ಹೊಂಡದಲ್ಲಿ ಈಜುವ ಬಾತುಗಳು. ದಡಕ್ಕೆ ಬಂದ ಒಂದೆರಡು ಬಾತುಗಳೇ ಪಟಪಟ ಮೈಕೊಡವಿಕೊಂಡುವು.
ಇಷ್ಟು ಹೊತ್ತಿಗೆ ನನ್ನಿಂದಾಗಿ ಬೇಸತ್ತ ಆಕೆ ಅಂದಳು: “ಮಾತ್ರಿಯೋನಾಳ ಮನೆಯಲ್ಲಿ ವಿಚಾರಿಸೋಣ. ಅವಳ ಮನೆ ಅಷ್ಟೇನೂ ನೀಟಾಗಿಲ್ಲ. ಆದರೂ ಬೆಚ್ಚಗಿದ್ದೀತು. ಅವಳು ಏನನ್ನೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಖಾಯಿಲೆ ಬೇರೆ.”
ಮಾತ್ರಿಯೋನಾಳ ಮನೆ ಹತ್ತಿರದಲ್ಲೇ ನಿಂತಿತ್ತು. ಆದರೆ ನಾಲ್ಕು ಕಿಟಕಿಗಳು ಆಕಳಿಸುತ್ತಿದ್ದವು. ಹೆಂಚಿನ ಛಾವಣಿ. ಹಳೆಯ ರಷ್ಯನ್ ಶೈಲಿಯ ಬಾಗಿಲು. ಅದರ ಹೆಂಚುಗಳು ಒಡೆಯತೊಡಗಿದ್ದವು. ತೊಲೆಗಳ ಅಂಚುಗಳಿಗೆ, ಒಂದು ಕಾಲದಲ್ಲಿ ಪ್ರಚಂಡವಾಗಿದ್ದ ಗೇಟಿಗೆ ಬೂದುಬಣ್ಣ ಹಿಡಿದಿತ್ತು.
ಕಾಂಪೌಂಡಿನ ಸಣ್ಣ ಬಾಗಿಲನ್ನು ಮುಚ್ಚಿ ದಾರ ಕಟ್ಟಿದ್ದರು. ನನ್ನ ಜೊತೆಯ ಹೆಂಗಸು ಬಾಗಿಲಮೇಲೆ ಬಡಿಯದೆ ಸುಮ್ಮನೆ ದಾರ ಬಿಚ್ಚಿದಳು. ಅಂಗಳದ ಬಾಗಿಲು ಹಾಕಿರಲಿಲ್ಲ. ಹೊರ ಬಾಗಿಲು ದಾಟಿ ಹೋದರೆ ಎದುರಿಗೇ ಉಪ್ಪರಿಗೆಗೆ ಕರೆದುಕೊಂಡು ಹೋಗುವ ಮೆಟ್ಟಿಲು. ಎಡಕ್ಕೆ ರೂಮಿಗೆ ಹೋಗಲು ಮೆಟ್ಟಿಲು. ಈ ರೂಮಿನಲ್ಲಿ ಗೂಡೊಲೆ ಇರಲಿಲ್ಲ. ಬಲಕ್ಕೆ ನಿಜವಾದ ವಾಸದ ಮನೆ. ಒಳಗೆ ಅಟ್ಟ, ಉಗ್ರಾಣ.
ಎಷ್ಟೋ ವರ್ಷಗಳ ಹಿಂದ ಕಟ್ಟಿದ ಮಜಭೂತಾದ ಕಟ್ಟಡ. ದೊಡ್ಡ ಸಂಸಾರಕ್ಕೆಂದೇ ಅದನ್ನು ಕಟ್ಟಿರಬೇಕು. ಈಗ ಮಾತ್ರ ಅಲ್ಲಿ 60 ವರ್ಷದ ಮುದುಕಿಯೊಬ್ಬಳು ಒಬ್ಬೊಂಟಿಯಾಗಿದ್ದಳು.
ನಾನು ಒಳಕ್ಕೆ ಹೋದಾಗ ಆಕೆ ಗೂಡೊಲೆಯ ಹತ್ತಿರ, ಊಹಿಸಲಾಗದಷ್ಟು ಕೊಳಕಾದ ಚಿಂದಿಯ ಮೇಲೆ ಮಲಗಿದ್ದಳು. ಇಂಥ ಚಿಂದಿ ದುಡಿಯುವವರಿಗೆ ಅಮೂಲ್ಯವೇ ಸರಿ.
ವಿಶಾಲವಾದ ಕೋಣೆಯಲ್ಲಿ, ಅದರಲ್ಲೂ ಕಿಟಕಿಗಳ ಬಳಿಯಲ್ಲಿ ಅನೇಕ ಸ್ಟೂಲುಗಳು, ಬೆಂಚುಗಳು. ಅವುಗಳ ಮೇಲೆಲ್ಲ ಬಳ್ಳಿಗಳು ಬೆಳೆದ ಪಾಟ್ಲಿಗಳು, ಬಕೆಟ್ಟುಗಳು, ಮಾತಿಲ್ಲದ ಜೀವಂತ ಮಂದಿಯಂತೆ ಅವು ಮನೆಯೊಡತಿಯ ಏಕಾಂತವನ್ನು ಅಮರಿಕೊಂಡಿದ್ದವು. ಹುಚ್ಚಾಪಟ್ಟೆ ಬೆಳೆಯಲು ಅವುಗಳಿಗೆ ಯಾವ ಅಡ್ಡಿಯೂ ಇರಲಿಲ್ಲ. ಉತ್ತರ ದಿಕ್ಕಿನ ಬರಲೋ ಬೇಡವೋ ಎನ್ನುತ್ತಿದ್ದ ಬೆಳಕನ್ನೆಲ್ಲ ಅವು ಕಬಳಿಸುತ್ತಿದ್ದುವು ಹಾಗೂ ಹೀಗೂ ತಪ್ಪಿಸಿಕೊಂಡು ಬಂದ ಒಂದಿಷ್ಟು ಬೆಳಕಿನಲ್ಲಿ ಮನೆಯೊಡತಿಯ ಕ್ಷೀಣವಾದ, ಹಳದಿಗಟ್ಟಿದ ಮುಖ. ಅವಳ ಮಂಕು ಮಂಕಾದ ಕಣ್ಣುಗಳನ್ನು ನೋಡಿದರೇ ಸಾಕು, ಖಾಯಿಲೆ ಅವಳ ಶಕ್ತಿಯನ್ನೆಲ್ಲ ಹೀರಿಬಿಟ್ಟಿದೆ ಎಂದು ಹೇಳಬಹುದಿತ್ತು.
ನಾವು ಮಾತಾಡತೊಡಗಿದಾಗ ಆಕೆ ಗಡೊಲೆಯ ಹತ್ತಿರ ಕೆಳಗೆ ಮುಖ ಹಾಕಿ, ಬಾಗಿಲ ಕಡೆ ತಲೆ ಮಾಡಿಕೊಂಡು ಮಲಗಿದ್ದಳು. ತಲೆ ಕೆಳಗೆ ದಿಂಬಿರಲಿಲ್ಲ. ನಾನು ಅವಳನ್ನು ನೋಡುತ್ತಲೇ ನಿಂತೆ. ಬಾಡಿಗೆಗೆ ಒಬ್ಬರನ್ನು ಬರಮಾಡಿಕೊಳ್ಳಲು ಆಕೆ ಅಷ್ಟೇನೂ ಸಂತೋಷ ತೊರಲಿಲ್ಲ. ಸುಮ್ಮನೆ ತನ್ನ ಕೆಟ್ಟ ಖಾಯಿಲೆ ಬಗೆಗೆ ಹೇಳಿಕೊಂಡಳು. ಅದೇ ತಾನೇ ಚೇತರಿಸಿಕೊಳ್ಳುತ್ತಿದ್ದ ಆಕೆಗೆ ಈ ಖಾಯಿಲೆಯೇನೂ ಪ್ರತಿ ತಿಂಗಳೂ ಬರುತ್ತಿರಲಿಲ್ಲ. ಆದರೆ ಅದೇನಾದರೂ ಬಂದಾಗ, “ಎರಡು ಮೂರು ದಿನ ಮಲಗಿಸಿ ಬಿಡುತ್ತೆ. ಆಗ ಯಾವುದರ ಪರಿವೆಯೇ ಇರೊಲ್ಲ. ಬಾಡಿಗೆಗೆ ರೂಮೇನೋ ಕೊಡಬಲ್ಲೆ. ನಿನಗೆ ಇಷ್ಟವಿದ್ದರೆ ಇರಬಹುದು.”
ಆಮೇಲೆ ಬೇರೆ ಬೇರೆ ಮನೆಯೊಡತಿಯರ ಒಂದು ದೊಡ್ಡ ಪಟ್ಟಿಯನ್ನೇ ಆಕೆ ಬಿಚ್ಚಿದಳು. ಅಲ್ಲೆಲ್ಲಾದರೂ ನಾನು ಪ್ರಶಾಂತ ವಾತಾವರಣದಲ್ಲಿ ಹಾಯಾಗಿರಬಹುದೆಂದೂ, ಅಲ್ಲೆಲ್ಲಾ ವಿಚಾರಿಸಿ ನೋಡಬೇಕೆಂದೂ ಹೇಳಿದಳು. ಆದರೆ ನಾನಂತೂ ಆ ಅರೆಮಬ್ಬು ಕವಿದ ಮನೆಯಲ್ಲಿಯೇ ಠಿಕಾಣಿ ಹಾಕಲು ನಿರ್ಧರಿಸಿದ್ದೆ. ನನ್ನನ್ನು ನಾನೇ ನೋಡಿಕೊಳ್ಳಬಹುದಾದಂಥ ಒಂದು ಮಾಸಲು ಕನ್ನಡಿ. ಗೋಡೆಯ ಮೇಲೆ ಹಚ್ಚಿದ್ದ, ಕಣ್ಣು ಕುಕ್ಕುವ ಎರಡು ಭಿತ್ತಿ ಪತ್ರಗಳು (ಒಂದು ಪುಸ್ತಕಗಳ ಜಾಹೀರಾತಾದರೆ, ಇನ್ನೊಂದು ಸುಗ್ಗಿಯನ್ನು ಕುರಿತದ್ದು). ಇಂಥ ಮನೆಯೇ ನನಗೆ ಲಾಯಕ್ಕು.
ಮಾತ್ರಿಯೋನಾ ವಾಸಿಲ್ಯೇವ್ನಾ ಹಳ್ಳಿಯಲ್ಲಿ ಇನ್ನೊಂದು ಸುತ್ತು ವಿಚಾರಿಸಿ ಬರಲು ನನ್ನನ್ನು ಅಟ್ಟಿದಳು. ಎರಡನೇ ಬಾರಿ ಆಕೆಯನ್ನು ಹೋಗಿ ನೋಡಿದಾಗ, ನನ್ನನ್ನು ಹಾಗೆಯೇ ವಾಪಸು ಕಳಿಸಲು ಪ್ರಯತ್ನಿಸಿದಳು : “ನಾವೇನೂ ಅಂಥ ಬುದ್ಧಿವಂತರಲ್ಲ; ನಮಗೆ ಅಡಿಗೆ ಮಾಡುವುದಕ್ಕೂ ಬರುವುದಿಲ್ಲ. ನೀನು ಹೇಗೆ ಹೊಂದಿಕೊಳ್ಳುತ್ತೀಯೋ …. ……” ಆದರೆ ಈ ಬಾರಿ ಆಕೆ ಮಲಗಿಕೊಂಡಿರಲಿಲ್ಲ. ನನ್ನ ಆಗಮನದಿಂದ ಆಕೆಯ ಕಣ್ಣಂಚಿನಲ್ಲಿ ಸಂತೋಷ ಮಿಂಚಿದಂತೆ ನನಗೆ ಅನ್ನಿಸಿತು. ಬಾಡಿಗೆಯ ಬಗೆಗೆ, ಶಾಲೆ ಒದಗಿಸಲಿದ್ದ ಒಂದು ಲಾರಿ ಇದ್ದಿಲಿನ ಬಗೆಗೆ ನಾವು ಒಮ್ಮತಕ್ಕೆ ಬಂದೆವು.
.
.
.
ಎಷ್ಟೋ ದಿನಗಳಾದ ಮೇಲೆ ನನಗೆ ತಿಳಿಯಿತು: ಮಾತ್ರಿಯೋನಾ ವ್ಯಾಸಿಲ್ಯೇವ್ನಾ ಒಂದೇ ಒಂದು ರೂಬಲು ಸಂಪಾದಿಸಿಯೇ ಎಷ್ಟೋ ದಿನಗಳಾಗಿತ್ತು. ಆಕೆಗೆ ಪಿಂಚಣಿ ಬರುತ್ತಿರಲಿಲ್ಲ. ನೆಂಟರಿಷ್ಟರು ಮಾಡುತ್ತಿದ್ದ ಸಹಾಯವೂ ಅಷ್ಟಕ್ಕಷ್ಟೆ. ಕೃಷಿಕ್ಷೇತ್ರದಲ್ಲಿ ಆಕೆ ಕೆಲಸ ಮಾಡಿದ್ದು ಹಣಕ್ಕಲ್ಲ, ಸಾಲಕ್ಕಾಗಿ.
ಅಂತೂ ನಾನು ಮಾತ್ರಿಯೋನಾ ವಾಸಿಲ್ಯೇವ್ನಾಳ ಮನೆ ಸೇರಿದೆ. ಇದ್ದ ಕೋಣೆಯನ್ನು ನಾವು ಹಂಚಿಕೊಳ್ಳಲಿಲ್ಲ. ಬಾಗಿಲಿಗೆ ಮತ್ತು ಗಡೊಲೆಗೆ ಮಧ್ಯೆ ಅವಳ ಹಾಸಿಗೆ. ನಾನು ಕಿಟಕಿಯೊಂದರ ಹತ್ತಿರ ಹಾಸಿಗೆ ಬಿಡಿಸಿದೆ. ಪೊದೆಯಾಗಿ ಬೆಳೆದಿದ್ದ ಮಾತ್ರಿಯೋನಾಳ ಪ್ರೀತಿಯ ಬಳ್ಳಿಗಳನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ಇನ್ನೊಂದು ಕಿಟಕಿಯ ಹತ್ತಿರ ಸಣ್ಣ ಟೇಬಲ್ಲಿಗೆ ಜಾಗ ಮಾಡಿದೆ. ಮೂರನೇ ದಶಕದ ಹೊತ್ತಿಗೇ ಹಳ್ಳಿಗೆ ವಿದ್ಯುಚ್ಛಕ್ತಿ ಬಂದಿತ್ತು. “ಲೆನಿನ್ ದೀಪ” ಎಂದು ಪತ್ರಿಕೆಗಳಲ್ಲಿ ಬರೆದದ್ದೂ ಬರೆದದ್ದೇ. ಆದರೆ ರೈತರು ಇಷ್ಟಗಲ ಕಣ್ಣುಬಿಟ್ಟುಕೊಂಡು “ಜಾರ್ ಜ್ವಾಲೆ”ಯ ಬಗ್ಗೆ ಮಾತಾಡುತ್ತಿದ್ದರು.
ಹಳ್ಳಿಯ ಕೆಲವು ಅನುಕೂಲಸ್ಥರ ಮಾತ್ರಿಯೋನಾಳ ಮನೆಯನ್ನು ಅಂಥ ಒಳ್ಳೆಯ ಮನೆಯೆಂದು ಲೆಕ್ಕಕ್ಕೆ ತೆಗೆದುಕೊಂಡಿರಲಿಕ್ಕಿಲ್ಲ. ಆದರೆ ಆ ಸಲದ ಶರತ್ಕಾಲ ಮತ್ತು ಚಳಿಗಾಲಗಳಲ್ಲಿ ಈ ಮನೆಯೇ ನಮ್ಮನ್ನು ಬೆಚ್ಚಗಿಟ್ಟಿತ್ತು. ಛಾವಣಿ ಇನ್ನೂ ಮಳೆಯನ್ನು ತಡೆದುಕೊಳ್ಳುವಂತಿತ್ತು. ಮತ್ತೆ ಚಳಿಗಾಳಿಗಳ ಗೂಡೊಲೆಯನ್ನು ಒಂದೇಟಿಗೇ ಆರಿಸುವ ಹಾಗಿರಲಿಲ್ಲ. ಬೆಳಗಿನ ಹೊತ್ತು ಸ್ವಲ್ಪ ಚಳಿಯಾದರೂ ತಡೆದುಕೊಳ್ಳಬಹುದಾಗಿತ್ತು.
ನಾನು ಮತ್ತು ಮಾತ್ರಿಯೋನಾಳೇ ಅಲ್ಲದೆ ಮನೆಯಲ್ಲಿ ಒಂದು ಬೆಕ್ಕು, ಒಂದಷ್ಟು ಇಲಿಗಳು, ಇನ್ನಷ್ಟು ಜಿರಲೆಗಳು ವಾಸವಾಗಿದ್ದುವು.
ಬೆಕ್ಕೇನೂ ಎಳೆಯದಲ್ಲ. ಕುಂಟಗಾಲು ಬೇರೆ. ಮಾತ್ರಿಯೋನಾ ಕೇವಲ ಕನಿಕರದಿಂದ ಅದನ್ನು ಸಾಕಿದ್ದಳು. ಒಂದು ಕಾಲಿನಲ್ಲಿ ಗಾಯವಾಗಿದ್ದರಿಂದ ಅದು ಕುಂಟುತ್ತಿತ್ತು. ಗೂಡೊಲೆಯ ಮೇಲಿಂದ ಅದು ಧುಮುಕಿದಾಗ ಸಾಮಾನ್ಯವಾಗಿ ಬೆಕ್ಕುಗಳು ಧುಮುಕಿದಾಗ ಆಗುವಂತೆ ಮೆತ್ತಗೆ ಸದ್ದಾಗುತ್ತಿರಲಿಲ್ಲ: ಮೂರು ಕಾಲುಗಳು ಒಟ್ಟಿಗೇ ನೆಲಕ್ಕೆ ಬಡಿದು ದೊಪ್ಪೆನ್ನುತ್ತಿತ್ತು. ಮೊದಮೊದಲು ಅಂಥ ಸಮಯದಲ್ಲಿ ನಾನು ಬೆಚ್ಚಿಬೀಳುತ್ತಿದ್ದೆ. ಗಾಯಗೊಂಡ ಕಾಲನ್ನು ರಕ್ಷಿಸಿಕೊಳ್ಳಲು ಬೆಕ್ಕು ಉಳಿದ ಮೂರು ಕಾಲುಗಳನ್ನು ಒಟ್ಟಿಗೇ ನೆಲಕ್ಕೆ ಒಗೆಯುತ್ತಿತ್ತು ಅಷ್ಟೇ.
ಮನೆಯಲ್ಲಿ ಇಲಿಗಳಿಗೆ ಬರವಿರವಿಲ್ಲ. ಬೆಕ್ಕು ದಡಕ್ಕನೆ ಮೂಲೆಯೊಂದಕ್ಕೆ ಜಿಗಿದು, ಹಲ್ಲಿನಲ್ಲಿ ಇಲಿಯೊಂದನ್ನು ಕಚ್ಚಿಕೊಂಡು ಬರುತ್ತಿತ್ತು. ಆದರೆ ಬಹುಮಟ್ಟಿಗೆ ಇಲಿಗಳೂ ತಪ್ಪಿಸಿಕೊಳ್ಳುತ್ತಿದ್ದುವು. ಮುಖ್ಯ ಕಾರಣ, ಯಾರೋ ಏನೋ, ಹಿಂದೆ ಯಾವುದೊ ಕಾಲದಲ್ಲಿ ಗೋಡೆಗಳ ಮೇಲೆಲ್ಲ ಹಸಿರು ಬಣ್ಣದ ಕಾಗದಗಳನ್ನು ಅಂಟಿಸಿದ್ದರು. ಇದು ಒಂದಲ್ಲ, ಎರಡಲ್ಲ ಐದು ಪದರುಗಳಲ್ಲಿತ್ತು. ಕಾಗದವೇನೋ ಭದ್ರವಾಗಿ ಗೋಡೆ ಹಿಡಿದುಕೊಂಡಿದ್ದರೂ, ಅಲ್ಲಲ್ಲಿ ಹರಿದುಹೋಗಿ ಇಲಿಗಳು ಅದರ ಹಿಂದೆ ಛಾವಣಿಯವರೆಗೂ ಸುಳಿದಾಡಲು ಅನುಕೂಲವಿತ್ತು. ಅವುಗಳ ವಾಸನೆ ಹಿಡಿದ ತಕ್ಷಣ ಬೆಕ್ಕು ಹೊಂಚು ಹಾಕಿ ನೆಗೆಯುತ್ತಿತ್ತು.
ಕೆಲವು ಸಲ ಬೆಕ್ಕು ಜಿರಲೆಗಳನ್ನೂ ತಿನ್ನುತ್ತಿತ್ತು. ಆದರೆ ಮೃಗಾಗುತ್ತಿರಲಿಲ್ಲ ಅಷ್ಟೆ. ಅಡಿಗೆ ಮನೆ ಜಿರಲೆಗಳ ಕಾಲೋನಿಯೇ ಆಗಿತ್ತು. ರೂಮಿನಲ್ಲಿ ಅಷ್ಟಾಗಿ ಅವು ಸುಳಿಯುತ್ತಿರಲಿಲ್ಲ. ರಾತ್ರಿಯ ಹೊತ್ತು ನೀರು ಕುಡಿಯುವುದಕ್ಕಾಗಿ ಅಡಿಗೆ ಮನೆಗೆ ಹೋಗಿ ದೀಪ ಹಾಕಿದರೆ, ಅಲ್ಲಿನ ಊಟದ ಮೇಜು, ಗೋಡೆಗಳು ಎಲ್ಲಿ ಜಿರಲೆಗಳಿಂದ ತುಂಬಿ ಹೋಗಿ, ಸರಗುಟ್ಟುವ ಕಂದುಬಣ್ಣದ ರಾಶಿಯಂತೆ ಕಾಣಿಸುತ್ತಿತ್ತು. ಆಗಾಗ ಶಾಲೆಯ ಲ್ಯಾಬೊರೆಟರಿಯಿಂದ ನಾನು ಒಂದಿಷ್ಟು ‘ಬೋರಾಕ್ಸ್’ ತರುತ್ತಿದ್ದೆ. ಹಿಟ್ಟಿನಲ್ಲಿ ಅದನ್ನು ಬೆರೆಸಿ ಜಿರಲೆಗಳನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದೆವು. ಸ್ವಲ್ಪ ಕಾಲದವರೆಗೆ ಕೆಲವೇ ಕೆಲವು ಜಿರಲೆಗಳಿರುತ್ತಿದ್ದವು. ಈ ಮಧ್ಯೆ ಮಾತ್ರಿಯೋನಾ, ಅದನ್ನು ತಿಂದು ತನ್ನ ಬೆಕ್ಕು ಸಾಯಬಹುದೆಂದು ಹೆದರಿದಳು. ಹೀಗಾಗಿ ಜಿರಲೆಯ ಸಂತತಿ ಬೆಳೆಯಿತು.
ರಾತ್ರಿಯ ಹೊತ್ತಿನಲ್ಲಿ ಮಾತ್ರಿಯೋನ ನಿದ್ದೆ ಹೋದ ಮೇಲೆ ನಾನಿನ್ನೂ ಮೇಜಿನ ಎದುರಿಗೆ ಕೂತು ಕೆಲಸ ಮಾಡುತ್ತಿರುವಾಗ, ನಿರಂತರವಾಗಿರುತ್ತಿದ್ದ ಜಿರಲೆಗಳ ಸರಸರ ಸದ್ದು ದೂರ ಸಮುದ್ರದ ಮೊರೆತದಂತೆ ಕೇಳಿಸುತ್ತಿತ್ತು. ನಾನು ಈ ಸದ್ದಿಗೆ ಹೊಂದಿಕೊಂಡುಬಿಟ್ಟೆ. ಅದರಲ್ಲಿ ಯಾವ ಕೆಡುಕೂ ಇರಲಿಲ್ಲ; ಅಪ್ರಾಮಾಣಿಕತೆಯೂ ಇರಲಿಲ್ಲ. ಸರಸರವೆನ್ನುವುದೇ ಅವುಗಳ ಜೀವಾಳ.
.
.
.
ಮಾತ್ರಿಯೋನಾ ಬೆಳಗಿನ ಜಾವ ನಾಲ್ಕು ಅಥವಾ ಐದು ಗಂಟೆಗೆ ಏಳುತ್ತಿದ್ದಳು. ಇಪ್ಪತ್ತೇಳು ವರ್ಷ ತುಂಬಿದ್ದ ಆಕೆಯ ಗೋಡೆ ಗಡಿಯಾರ ಯಾವಾಗಲೂ ಮುಂದಿರುತ್ತಿತ್ತು. ಆದರೆ ಮಾತ್ರಿಯೋನಾ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. ತಾನು ಮಾತ್ರ ಬೆಳಿಗ್ಗೆ ತಡವಾಗಿ ಏಳದಿದ್ದರೆ ಸರಿ. ಎದ್ದವಳೆ ಸಾಧ್ಯವಾದಷ್ಟೂ ಸದ್ದು
ಮಾಡದಂತೆ ಆಡಿಗೆ ಮನೆಗೆ ನುಸುಳಿ ಒಲೆ ಹಚ್ಚುತ್ತಿದ್ದಳು. ಅನಂತರ ಮೇಕೆ ಹಾಲು ಕರೆಯುವುದು. (ಅವಳಲ್ಲಿದ್ದ ಜಾನುವಾರೆಂದರೆ ಎರಡು ತಿರುಚಿದ ಕೊಂಬುಗಳುಳ್ಳ ಈ ಮಾಸಲು ಬಿಳಿಯ ಮೇಕೆ ಮಾತ್ರ.) ನೀರು ತಂದು ಎಂದು ಪಾತ್ರೆಗಳಲ್ಲಿ ಕಾಯಿಸುತ್ತಿದ್ದಳು-ಒಂದು ನನಗೆ, ಇನ್ನೊಂದು ಅವಳಿಗೆ, ಮತ್ತೊಂದು ಮೇಕೆಗೆ. ಉಗ್ರಾಣದಿಂದ ಒಂದಷ್ಟು ಆಲೂಗಡ್ಡೆ ಬರುತ್ತಿತ್ತು. ಅವುಗಳಲ್ಲಿ ಅತ್ಯಂತ ಚಿಕ್ಕವು ಮೇಕೆಗೆ, ಸ್ವಲ್ಪ ದೊಡ್ಡವು ಅವಳಿಗೆ, ಇನ್ನೂ ದೊಡ್ಡವು-ಅಂದರೆ ಮೊಟ್ಟೆಯಷ್ಟು ಗಾತ್ರದವು ನನಗೆ. ದೊಡ್ಡ ದೊಡ್ಡ ಆಲೂಗಡ್ಡೆಗಳೇನೂ ಇರಲಿಲ್ಲ. ಬರೀ ಮರಳು ಮರಳಾಗಿದ್ದ ಆಕೆಯ ಕೈತೋಟ ಯುದ್ಧ ಮುಗಿದಮೇಲಂತೂ ಗೊಬ್ಬರ ಕಂಡಿರಲಿಲ್ಲ. ಅಲ್ಲದೆ ಅದರಲ್ಲಿ ಬೆಳೆಸುತ್ತಿದ್ದುದು ಬರೀ ಆಲೂಗೆಡ್ಡೆಗಳು, ಅಲೂಗೆಡ್ಡೆಗಳು ! ಸಾರ ವಿಲ್ಲದ ನೆಲದಲ್ಲಿ ದಪ್ಪ ಗೆಡ್ಡೆ ಬಿಡುವಂತಿರಲಿಲ್ಲ.
ಆಕೆಯ ಬೆಳಗಿನ ಕೆಲಸಗಳ ಸದ್ದು ಗದ್ದಲ ನನಗೆ ಕೇಳಿಸುತ್ತಲೇ ಇರಲಿಲ್ಲ. ರಾತ್ರಿ ಬಹಳ ಹೊತ್ತಿನ ಮೇಲೆ ಮಲಗಿ ಹೊತ್ತು ಮೂಡಿದ ಮೇಲೆ ಎಚ್ಚರಗೊಳ್ಳುತ್ತಿದ್ದೆ. ಸ್ವಲ್ಪ ಹೊರಳಾಡಿ ಮುಖದ ಮೇಲಿಂದ ಹೊದಿಕೆ ಸರಿಸುತ್ತಿದ್ದೆ. ಹೊದ್ದುಕೊಂಡ ರಗ್ಗಿನಡಿಯಲ್ಲಿ ಕುರಿಚರ್ಮದ ಹೊದಿಕೆ. ತೊಟ್ಟುಕೊಂಡ ಜರ್ಕಿನ್. ಕೆಳಗೆ ಹಾಸಿಗೆಯಾಗಿದ್ದದ್ದು ಹುಲ್ಲು ತುಂಬಿದ ಚೀಲ. ಉತ್ತರ ದಿಕ್ಕಿನ ಚಳಿಗಾಳಿಗೆ ರಾತ್ರಿಯೆಲ್ಲ ನಮ್ಮ ಕಿಟಕಿಗಳು ಪಟಪಟಗುಟ್ಟುತ್ತಿದ್ದುವು. ನಾನು ಮಾತ್ರ ಬೆಚ್ಚಗಿರುತ್ತಿದ್ದೆ. ಅಡ್ಡಗೋಡೆಯಾಚೆಗಿದ್ದ ಅಡಿಗೆ ಮನೆಯಲ್ಲಿ ಪಾತ್ರೆ ಪದಾರ್ಥಗಳ ಸದ್ದು ಕೇಳಿಸಿದೊಡನೆ ನಾನು ನಿಧಾನವಾಗಿ ಮಾತು ಆರಂಭಿಸುತ್ತಿದ್ದೆ.
“ಗುಡ್‌ಮಾಲ್ಟಿಂಗ್ ಮಾತ್ರಿಯೋನಾ ವಾಸಿಲ್ಯೇವ್ನಾ….”
ಅಡ್ಡಗೋಡೆಯ ಆ ಕಡೆಯಿಂದ ಪ್ರತಿಸಲವೂ ಬರುತ್ತಿದ್ದ ಸೌಜನ್ಯದ ಮಾತು : ಮಕ್ಕಳ ಕಥೆಗಳಲ್ಲಿ ಅಜ್ಜಿಯರು ಹೊಮ್ಮಿಸುವಂಥ ಧ್ವನಿ :
“ಊಂ…….ಗುಡ್ ಮಾರ‍್ನಿಂಗ್ !”
ಸ್ವಲ್ಪ ಹೊತ್ತಾದ ಮೇಲೆ, “ನಿನ್ನ ಬೆಳಗಿನ ತಿಂಡಿ ಸಿದ್ದವಾಗಿದೆ !”
ಸಿದ್ಧವಾದ ತಿಂಡಿ ಏನೆಂದು ಆಕೆ ವಿವರಿಸುತ್ತಿರಲಿಲ್ಲ ; ಸುಲಭವಾಗಿ ಊಹಿಸಿಕೊಳ್ಳಬಹುದಾಗಿತ್ತು : ಬಾರ‍್ಲಿಯ ಗಂಜಿ. ಆ ವರ್ಷ ತೋರ್‌ಫೋ ಪ್ರೊಡಕ್ಟಿನಲ್ಲಿ ಬೇರೆ ಯಾವ ಧಾನ್ಯವೂ ಸಿಕ್ಕುವಂತಿರಲಿಲ್ಲ. ಬಾರ‍್ಲಿ ಕೂಡ ಸಿಕ್ಕುವುದು ಸುಲಭವಾಗಿರಲಿಲ್ಲ. ಅದೇ ಅತ್ಯಂತ ಅಗ್ಗವಾಗಿದದರಿಂದ, ಹಂದಿಗಳಿಗೆ ಹಾಕಿ ಕೊಬ್ಬಿಸಲು ಜನ ಅದನ್ನು ಮೂಟೆಗಟ್ಟಲೆ ಕೊಂಡುಬಿಡುತ್ತಿದ್ದರು. ಮತ್ತೆ ಗಂಜಿಗೆ ಹಾಕಿದ ಉಪ್ಪೂ ಸಹ ಸಮವಾಗಿರುತ್ತಿರಲಿಲ್ಲ. ಕೆಲವೊಮ್ಮೆ ಸರಿಯಾಗಿ ಬೇಯದ ಗಂಜಿ ವಸಡುಗಳಿಗೆ ಕಚ್ಚಿಕೊಳ್ಳುತ್ತಿತ್ತು. ಮೊದಮೊದಲು ನನಗಂತೂ ಹೊಟ್ಟೆ ಉರಿಯುತ್ತಿತ್ತು.
ಆದರೆ ಮಾತ್ರಿಯೋನಾಳನ್ನು ಬಯ್ಯುವ ಕಾರಣವಿಲಿಲ್ಲ. ತೋರ್‌ಫೋ ಪ್ರೊಡಕ್ಟಿನಲ್ಲಿ ಬೆಣ್ಣೆಯೂ ಸಿಕ್ಕುವಂತಿರಲಿಲ್ಲ. ಯಾವ ತಕರಾರೂ ಇಲ್ಲದೆ ನನಗಾಗಿ ಮಾಡಿಟ್ಟಿದ್ದುದನ್ನು ತಿನ್ನುತ್ತಿದ್ದೆ-ನಡುನಡುವೆ ಸಿಕ್ಕುತ್ತಿದ್ದ ಕೂದಲು, ಇದ್ದಲು ಚೂರು, ಜಿರಲೆಯ ಕಾಲು ಮೊದಲಾದವನ್ನು ಪಕ್ಕಕ್ಕಿಡುತ್ತಾ, ಮಾತ್ರಿಯೋನಾಳದೇನು ತಪ್ಪು? ಮೊದಲೇ ಹೇಳಿದ್ದಳಲ್ಲ :
“ನಾವೇನೂ ಬುದ್ಧಿವಂತರಲ್ಲ. ನಮಗೆ ಅಡಿಗೆ ಮಾಡುವುದಕ್ಕೂ ಬರೊಲ್ಲ. ನೀನು ಹೇಗೆ ಹೊಂದಿಕೊಳ್ಳುತ್ತೀಯೋ….”
ಪ್ರಾಮಾಣಿಕವಾಗಿ ನನ್ನ ಮೆಚ್ಚುಗೆ ಸೂಚಿಸುತ್ತಿದ್ದೆ. ಅನ್ನದಲ್ಲಿ ಜೀವನದ ಅರ್ಥ ಹುಡುಕಬಾರವೆಂದು ಕಲಿತುಕೊಂಡಿದ್ದೆ. ನನಗೆ ಮುಖ್ಯವಾಗಿದ್ದುದು ಆಕೆಯ ಗುಂಡು ಮುಖದಲ್ಲಿ ಮೂಡುತ್ತಿದ್ದ ಮುಗುಳ್ನಗೆ. ಸಾಕಷ್ಟು ಹಣ ಸಂಪಾದಿಸಿ ಒಂದು ಕ್ಯಾಮೆರಾ ಕೊಂಡುಕೊಂಡ ಮೇಲೆ ಆ ಮುಗುಳ್ನಗೆಯನ್ನು ಸೆರೆಹಿಡಿಯಲು ನಾನು ನಿಷ್ಪಲವಾಗಿ ಪ್ರಯತ್ನಿಸಿದೆ. ತನ್ನ ಕಡೆಗೇ ದೃಷ್ಟಿಸುವ ಲೆನ್ಸಿನ ಕಣ್ಣನ್ನು ನೋಡಿದ ತಕ್ಷಣ ಮಾತ್ರಿಯೋನಾ ಒಂದು ರೀತಿಯ ಬಿಗಿಮುಖ ಮಾಡುತ್ತಿದ್ದಳು ಇಲ್ಲವೆ ಅತಿಯಾದ ಗಾಂಭೀರ್ಯ ತಾಳುತ್ತಿದ್ದಳು.
ಒಮ್ಮೆ ಮಾತ್ರ ನನ್ನ ಶ್ರಮ ಸಾರ್ಥಕವಾಯಿತು. ಕಿಟಕಿಯಿಂದ ಬೀದಿಯ ಕಡೆ ನೋಡುತ್ತಾ ಆಕೆ ಮುಗುಳ್ನಗುತ್ತಿದ್ದಾಗ ನನ್ನ ಕ್ಯಾಮೆರಾ ಕ್ಕಿಕ್ಕೆಂದಿತು.
.
.
.
ಆ ಚಳಿಗಾಲದಲ್ಲಿ ಮಾತ್ರಿಯೋನಾಳಿಗೆ ಎಷ್ಟೆಷ್ಟೋ ಯೋಚನಗಳು. ಆಕೆಯ ನೆರೆಹೊರೆಯವರು ಪಿಂಚಣಿಗಾಗಿ ಪ್ರಯತ್ನಿಸಬೇಕೆಂದು ಹೇಳಿಟ್ಟಿದ್ದರು. ಇಡೀ ಪ್ರಪಂಚದಲ್ಲೇ ಆಕೆ ಒಬ್ಬೊಂಟಿ. ಅವಳಿಗಾದ ಅನ್ಯಾಯಗಳಿಗೆ ಲೆಕ್ಕವಿಲ್ಲ. ಖಾಯಿಲೆ ಬಿದ್ದಿದ್ದರೂ
ಅವಳನ್ನು ಅಶಕ್ತಳೆಂದು ಪರಿಗಣಿಸಿರಲಿಲ್ಲ. ಕಾಲು ಶತಮಾನಕ್ಕೂ ಹೆಚ್ಚು ಕಾಲ ಆ ಕೃಷಿಕ್ಷೇತ್ರದಲ್ಲಿ ದುಡಿದಿದ್ದಳು. ಆದರೆ ಅದು ಕೃಷಿಕ್ಷೇತ್ರ : ಕಾರ್ಖಾನೆಯಲ್ಲ. ಆದ್ದರಿಂಡ ಪಿಂಚಣಿಯಿಲ್ಲ. ತನ್ನ ಗಂಡನ ಹೆಸರಿನಲ್ಲಿ ಪಿಂಚಣಿ ಪಡೆಯಬಹುದಿತ್ತು. ಆದರೆ ಹನ್ನೆರಡು ವರ್ಷಗಳಿಂದ, ಅಂದರೆ ಯುದ್ಧ ಆರಂಭವಾದಂದಿನಿಂದ ಅವಳಿಗೆ ಗಂಡನಿಲ್ಲ. ಮತ್ತೆ ಅವನ ಸರ್ವೀಸಿನ ಕಾಲ, ಅವನು ಪಡೆಯುತ್ತಿದ್ದ ವೇತನ ಮೊದಲಾದವುಗಳ ಬಗೆಗೆ ಎಲ್ಲ ವಿವರಗಳನ್ನೂ ಪಡೆಯುವುದು ಸುಲಭವಾಗಿರಲಿಲ್ಲ. ಅದಕ್ಕಾಗಿ ದಾಖಲೆ ಪತ್ರಗಳನ್ನು ತಯಾರಿಸುವದೂ ಆಷ್ಟೆ. ಆತ ತಿಂಗಳಿಗೆ ೩೦೦ ರೂಪಾಯಿ ಪಡೆಯುತ್ತಿದ್ದನೆಂದೂ, ಆಕೆ ಈಗ ಒಬ್ಬಂಟಿಯೆಂದೂ, ಸಹಾಯ ಮಾಡುವವರು ಯಾರೂ ಇಲ್ಲವೆಂದೂ, ಆಕೆ ಇಂಥ ವರ್ಷದಲ್ಲಿ ಹುಟ್ಟಿದವಳೆಂದೂ ಸಮರ್ಥಿಸುವ ಯಾರಾದರೊಬ್ಬರನ್ನು ಹುಡುಕುವುದೂ ಸುಲಭದ ಕೆಲಸವಲ್ಲ. ಆಮೇಲೆ ಇವೆಲ್ಲವನ್ನೂ ಪಿಂಚಿಣಿ ಕಚೇರಿಗೆ ಕೊಂಡೊಯ್ಯಬೇಕು. ನಂತರ ಎಲ್ಲ ತಪ್ಪುಗಳನ್ನೂ ತಿದ್ದಿಸಿಕೊಳ್ಳಲು ಇನ್ನೆಲ್ಲಿಗೆ ಹೋಗಬೇಕು. ಮತ್ತೆ ಒಂದಿಷ್ಟು ಅಲೆದಾಟ. ಕೊನೆಗೆ ಪಿಂಚಣಿ ಬರುವುದೋ ಇಲ್ಲವೋ ಎಂದು ತಿಳಿದುಕೊಳ್ಳಬೇಕು.
ಪಿಂಚಿಣಿಯ ಕಚೇರಿ ಇದ್ದದು ಇಪ್ಪತ್ತು ಮೈಲಿ ದೂರದಲ್ಲಿ. ಗ್ರಾಮಸಮಿತಿಯ ಕಚೇರಿ ಹತ್ತು ಮೈಲಿ ದೂರದಲ್ಲಿ. ಕಾರ್ಖಾನೆಯ ಜಿಲ್ಲಾ ಕಚೇರಿಗೆ ಹೋಗಲು ಒಂದು ಗಂಟೆಯ ನಡಿಗೆ, ಎರಡು ತಿಂಗಳ ಕಾಲ ಆಕೆಯನ್ನು ಕಚೇರಿಯಿಂದ ಕಚೇರಿಗೆ ಓಡಾಡಿಸಿದರು. ಆದೂ “ಕ” ಅಕ್ಷರಕ್ಕೆ ತಲೆಕೆಟ್ಟು ಸರಿಯಾಗಿ ಕೊಡಲು ಅಥವಾ “ಘ” ಕ್ಕೆ ಸರಿಯಾಗಿ ಹೊಟ್ಟೆ ಸೀಳಲು. ಒಂದು ಕಡೆ ಹೋಗಿಬರಲು ಒಂದು ದಿನ ಆಗಿಬಿಡುತ್ತಿತ್ತು. ಆತ ಗ್ರಾಮ ಸಮಿತಿಯ ಕಚೇರಿಗೆ ಹೋದರೆ, ಆ ದಿನ ಕಾರ್ಯದರ್ಶಿ ಇರುತ್ತಿರಲಿಲ್ಲ. ಇನ್ನೊಂದು ದಿನ ಕಾರ್ಯದರ್ಶಿ ಇದ್ದರೂ ಅವನ ಬಳಿ ರಬ್ಬರ್ ಸ್ಟಾಂಪ್ ಇಲ್ಲ. ಮತ್ತೊಂದು ದಿನ ಆಕೆ ಮತ್ತೆ ಹೋಗಬೇಕು. ಯಾಕೆಂದರೆ ಆಕೆಯ ದಾಖಲೆ ಪತ್ರಗಳು ಒಟ್ಟಿಗೇ ಇದ್ದುದರಿಂದ ಯಾರೋ ಒಬ್ಬ ಮೆಳ್ಳೆಗಣ್ಣಿನ ಕ್ಲಾರ್ಕು ಯಾವುದಕ್ಕೋ ಮಾಡಬೇಕಾಗಿದ್ದ ಸಹಿಯನ್ನು ಇನ್ನಾವುದಕ್ಕೋ ಮಾಡಿರುತ್ತಿದ್ದ.
“ನನ್ನನ್ನು ಸುಮ್ಮನೇ ಅಲೆಸ್ತಾರೆ, ಇಗ್ನಾತಿಚ್, ಅಲೀತಾ ಅಲೀತಾನೇ ಪ್ರಾಣ ಬಿಡಬೇಕು ನಾನು” ಎಂದು ನನ್ನಲ್ಲಿ ಹೇಳಿಕೊಳ್ಳುತ್ತಿದ್ದಳು.
.
.
.
ಆದರೆ ಬಹುಬೇಗ ಆಕೆ ಉತ್ಸಾಹಗೊಳ್ಳುತ್ತಿದ್ದಳು. ಉತ್ಸಾಹ ತಂದುಕೊಳ್ಳುವ ಮಾರ್ಗ ಆಕೆಗಿತ್ತೆಂದು ನಾನು ತಿಳಿದುಕೊಂಡೆ. ಆಕೆ ಕೆಲಸ ಮಾಡುತ್ತಿದ್ದಳು. ಸನಿಕೆಯೊಂದನ್ನು
ಎತ್ತಿಕೊಂಡು ಹೋಗಿ ಆಲೂಗೆಡ್ಡೆ ಅಗೆಯುತ್ತಿದ್ದಳು ಅಥವಾ ಕಂಕುಳಲ್ಲಿ ಒಂದು ಚೀಲ ಇಟ್ಟುಕೊಂಡು, ಇದ್ದಲು ಬೇಟೆಗಾಗಿ ಹೊರಡುತ್ತಿದ್ದಳು ಅಥವಾ ನಿಬಿಡವಾದ ಕಾಡುಗಳೊಳಗೆ ಬೆರಿ ಹಣ್ಣುಗಳನ್ನು ಹುಡುಕಲು ಒಂದು ಬುಟ್ಟಿ ಎತ್ತಿಕೊಂಡು ಹೋಗುತ್ತಿದ್ದಳು. ಆಫೀಸ್‌ ಡೆಕ್ಕುಗಳ ಮುಂದೆ ಬಾಗಿ ನಿಲ್ಲುವುದಕ್ಕೆ ಬದಲಾಗಿ, ಕಾಡು ಪೊದೆಗಳ ಮುಂದೆ ಬಾಗಿ ನಿಂತು, ಹೊರೆಯ ಭಾರದಿಂದ ಹೆಗಲು ನೋಯತೊಡಗಿದಾಗ ಮಾತ್ರಿಯೋನಾ ಲವಲವಿಕೆಯಿಂದ ಮುಂಗುಳ್ನಗುತ್ತ ಮನೆಗೆ ಬರುತ್ತಿದ್ದಳು.
“ಈಗ ನಾನೊಂದು ಒಳ್ಳೆಯ ಕೆಲಸ ಹಿಡಿದಿದ್ದೇನೆ, ಇಗ್ನಾತಿಚ್. ಅದಕ್ಕಾಗಿ ಎಲ್ಲಿಗೆ ಹೋಗಬೇಕೆಂದು ನನಗೆ ಗೊತ್ತು. (ಅದು ಎಂದರೆ ಇದ್ದಲು). ಎಷ್ಟು ಒಳ್ಳೆಯ ಜಾಗ ಅಂತೀಯ !”
“ನನ್ನ ಪಾಲಿನ ಇದ್ದಿಲು ಸಾಲದೆ, ಮಾತ್ರಿಯೋನಾ ವಾಸಿಲ್ಯೇವ್ನಾ ? ಒಂದು ಇಡೀ ಲಾರೀ ಲೋಡೇ ಇದೆಯಲ್ಲ ?”
“ಹೂಂ ! ನಿನ್ನ ಪಾಲಿನ ಇದ್ದಿಲು ! ಇನ್ನಷ್ಟು, ಮತ್ತಷ್ಟು ಆದರೆ ಸಾಕಾದೀತು. ಚಳಿಗಾಲ ನಿಜಕ್ಕೂ ಜೋರಾದಾಗ, ಗಾಳಿ ಕಿಟಕಿಗಳನ್ನು ಬಡಿಯತೊಡಗಿದಾಗ ಮನೆಯ ಶಾಖವೆಲ್ಲ ಬಹು ಬೇಗ ಮಾಯವಾಗುತ್ತೆ. ಹೋದ ವರ್ಷ ನಾವು ರಾಶಿಗಟ್ಟಲೆ ತಂದು ಹಾಕಿದ್ದೆವು. ಇಷ್ಟು ಹೊತ್ತಿಗೆ ನಾನು ಮೂರು ಲಾರಿಗಳಷ್ಟು ಇದ್ದಿಲು ತಂದು ಹಾಕಿರುತ್ತಿದ್ದೆ. ಈಗ ನಮ್ಮನ್ನು ಹಿಡಿಯಲು ಕಾವಲು ಕಾಯುತ್ತಿದ್ದಾರೆ. ನಮ್ಮ ಹಳ್ಳಿಯಿಂದ ಈಗಾಗಲೇ ಒಬ್ಬಳನ್ನು ಹಿಡಿದುಕೊಂಡು ಹೋಗಿದ್ದಾರೆ.”
ಮಾತ್ರಿಯೋನಾಳ ಮನೆಯಲ್ಲಿ ನಾನು ಇನ್ನಷ್ಟು ಹೊಂದಿಕೊಂಡ ಮೇಲೆ, ಅವಳಿಗೆ ಅಡಿಗೆ ಮಾಡುವ ಮತ್ತು ಮನೆ ನೋಡಿಕೊಳ್ಳುವ ಕೆಲಸದ ಜತೆಗೆ, ಪ್ರತಿನಿತ್ಯವೂ ಮಾಡಬೇಕಿದ್ದ ಬಹಳಷ್ಟು ಕೆಲಸಗಳಿವೆಯೆಂಬುದನ್ನು ಗಮನಿಸಿದೆ. ಆಕೆ ಎಲ್ಲ ಕೆಲಸಗಳನ್ನೂ ಬಿಡದೆ ಮಾಡುತ್ತಿದ್ದಳು ; ಮನಸ್ಸಿನಲ್ಲಿ ಪ್ರತಿಯೊಂದು ಕೆಲಸಕ್ಕೂ ನಿಗದಿಯಾದ ಸಮಯವನ್ನು ಗೊತ್ತು ಮಾಡಿಕೊಂಡಿರುತ್ತಿದ್ದಳು. ತಾನು ಎಷ್ಟು ಹೊತ್ತಿಗೆ ಏಳುತ್ತೇನೆ, ತನ್ನ ದಿನನಿತ್ಯದ ಕೆಲಸಗಳೇನು ಎಂಬ ಬಗೆಗೆ ಅವಳಿಗೆ ಸಂಪೂರ್ಣ ತಿಳಿವಳಿಕೆಯಿತ್ತು. ತನ್ನಲ್ಲಿದ್ದ ಏಕಮಾತ್ರ ಮಾಸಲು ಬಿಳಿಯ ಮೇಕೆಗೆ ಎಲ್ಲಿಂದಾದರೂ ಹುಲ್ಲು ತರುವುದೂ ಆಕೆಯ ಕೆಲಸಗಳಲ್ಲೊಂದು.
“ಒಂದು ಹಸುವನ್ನೇಕೆ ಇಟ್ಟುಕೊಳ್ಳಬಾರದು, ಮಾತ್ರಿಯೋನಾ ?”
ಅಡಿಗೆಯ ವಂನೆ ಬಾಗಿಲಲ್ಲಿ ತನ್ನ ಕೊಳಕು ಮೇಲಂಗಿ ತೊಟ್ಟು ನಿಂತ ಮಾತ್ರಿಯೋನಾ
ಹೇಳಿದಳು :
“ಓಹ್, ಇಗ್ನಾತಿಚ್, ನನ್ನ ಮೇಕೆಯೇ ಸಾಕಷ್ಟು ಹಾಲು ಕೊಡುತ್ತದಲ್ಲ. ಹಸು ಇಟ್ಟುಕೊಂಡು ನಾನು ಬದುಕು ಮಾಡಿದಂತೆಯೇ ಇದೆ. ರೈಲ್ವೇ ಮಾರ್ಗದ ಬದಿಯಲ್ಲಿ ನಾನು ಹುಲ್ಲು ಹೆರೆಯುವ ಹಾಗಿಲ್ಲ. ಯಾಕೆಂದರೆ ಅದು ರೈಲ್ವೇ ಇಲಾಖೆಗೆ ಸೇರಿದ್ದು. ಕಾಡಿನಲ್ಲೂ ಅಷ್ಟೆ. ಅದು ಅರಣ್ಯ ಇಲಾಖೆಗೆ ಸೇರಿದೆ. ಸಾಮೂಹಿಕ ಕೃಷಿಕ್ಷೇತ್ರದಲ್ಲೂ ನನಗೆ ಹುಲ್ಲು ಕೊಡುವುದಿಲ್ಲ. ಕಾರಣ ನಾನು “ಕೋಲ್‌ಖೋಚ್”ನ ಸದಸ್ಯಳಲ್ಲವೆನ್ನುತ್ತಾರೆ ಅವರು.”
ಅಂದರೆ ಒಂದು ಬಡಕಲು ಮೇಕೆಗಾಗಿ ಹುಲ್ಲು ಸಂಗ್ರಹಿಸಲು ಮಾತ್ರಿಯೋನಾ ಬಹಳಷ್ಟು ಹೆಣಗಾಡಬೇಕಿತ್ತು. ಒಂದು ಕುಡುಗೋಲು ಮತ್ತು ಗೋಣಿಚೀಲ ತೆಗೆದುಕೊಂಡು ಹುಲ್ಲು ಎಲ್ಲೆಲ್ಲಿ ಬೆಳೆಯುತ್ತಿತ್ತೋ ಅಲ್ಲಿಗೆಲ್ಲಾ, ಬೆಳಗ್ಗೆ ಬಹುಬೇಗ ಹೋಗಿಬರುತ್ತಿದ್ದಳು. ಒಂದು ಮೂಟೆ ಹಸಿರು ಹುಲ್ಲನ್ನು ದಾರಿಯುದ್ದಕ್ಕೂ ಎಳೆದುಕೊಂಡು ಬಂದು, ಅಂಗಳದಲ್ಲಿ ಒಣ ಹಾಕುತ್ತಿದ್ದಳು.
ಈ ಮಧ್ಯೆ ಕೃಷಿಕ್ಷೇತ್ರದಲ್ಲಿ ಕೆಲಸಗಾರರು ಸಾಲದಿದ್ದಾಗ ಮಾತ್ರಿಯೋನಾಳಿಗೆ ಕರೆ ಬರತ್ತಿತ್ತು, “ನನಗೆ ಮೈ ಹುಷಾರಿಲ್ಲ, ಅಲ್ಲದೆ ಕೃಷಿಕ್ಷೇತ್ರದೊಡನೆ ನನಗೆ ಸಂಬಂಧವೂ ಇಲ್ಲವಲ್ಲ” ಎಂದ ಮಾತ್ರಿಯೋನಾ, ಮರುಕ್ಷಣದಲ್ಲಿ “ಎಷ್ಟು ಹೊತ್ತಿಗೆ ಕೆಲಸಕ್ಕೆ ಬರಲಿ ?” ಎಂದು ಕೇಳುತ್ತಿದ್ದಳು.
ಕೃಷಿಕ್ಷೇತ್ರವಷ್ಟೇ ಅಲ್ಲ,’ ಯಾರಾದರೂ ದೂರದ ನೆಂಟರು ಅಥವಾ ನೆರೆಮನೆಯವರು ಎಂದಾದರೊಂದು ಸಂಜೆ ಮಾತ್ರಿಯೋನಾಳ ಮನೆಗೆ ಬಂದು, “ನಾಳೆ ನಮಗೆ ಸ್ವಲ್ಪ ಸಹಾಯ ಮಾಡು ಮಾತ್ರಿಯೋನಾ ; ಆಲೂಗಡ್ಡೆಯನ್ನೆಲ್ಲ ಅಗೆದು ತೆಗೆಯಬೇಕು” ಎನ್ನುತ್ತಿದ್ದರು.
ಮಾತ್ರಿಯೋನಾ ಇಲ್ಲವೆನ್ನುತ್ತಿರಲಿಲ್ಲ. ತಾನು ಮಾಡಬೇಕಿದ್ದ ಕೆಲಸವನ್ನು ಬಿಟ್ಟು, ನೆರೆಮನೆಯವರಿಗೆ ಸಹಾಯಮಾಡಲು ಹೋಗುತ್ತಿದ್ದಳು. ಮನೆಗೆ ವಾಪಸು ಬಂದಾಗ, ಒಂದಿಷ್ಟೂ ಮಾತ್ಸರ್ಯವಿಲ್ಲದೆ, “ಆಕೆಯ ಕೈತೋಟದ ಆಲೂಗಡ್ಡೆಗಳನ್ನು ನೋಡಬೇಕು, ಇಗ್ನಾತಿಚ್ ! ಅವನ್ನು ಅಗೆದು ತೆಗೆಯುವುದೇ ಒಂದು ಸಂತೋಷ. ನನಗಂತೂ ಆ ಜಾಗ ಬಿಟ್ಟು ಬರುವುದಕ್ಕೆ ಮನಸ್ಸಾಗಲಿಲ್ಲ” ಎಂದು ನನಗೆ ಹೇಳುತ್ತಿದ್ದಳು.
ಬಗೆಬಗೆಯ ತೊಂದರೆಗಳಿಂದ ಜರ್ಜರಿತವಾಗಿದ್ದ ಈ ಜೀವದ ಮೇಲೆ ಆಗಾಗ ವಿಪರೀತ ಖಾಯಿಲೆ ದಾಳಿ ಮಾಡುತ್ತಿತ್ತು. ಮಾತ್ರಿಯೋನಾ ಒಂದೆರಡು ದಿನ ಗೂಡೊಲೆಯ ಬಳಿ ಮಲಗಿಬಿಡುತ್ತಿದ್ದಳು. ಒಂದು ಅಸಮಾಧಾನ ಸೂಚನೆಯಿಲ್ಲ : ಒಂದು ನರಳಾಟವಿಲ್ಲ. ಹೋಗಲಿ, ಸ್ವಲ್ಪ ಅಲುಗಾಡುತ್ತಲೂ ಇರಲಿಲ್ಲ. ಇಂಥ ದಿನಗಳಲ್ಲಿ ಮಾತ್ರಿಯೋನಾಳ ಬಾಲ್ಯದ ನಿಕಟ ಸ್ನೇಹಿತ ಮಾಷಾ ಬರುತ್ತಿದ್ದಳು. ಬಂದು ಮೇಕೆಯನ್ನು ನೋಡಿಕೊಳ್ಳುತ್ತಿದ್ದಳು; ಒಲೆ ಹಚ್ಚುತ್ತಿದ್ದಳು. ಮಾತ್ರಿಯೋನಾ ಏನನ್ನೂ ತಿನ್ನುತ್ತಿರಲಿಲ್ಲ, ಕುಡಿಯುತ್ತಿರಲಿಲ್ಲ. ಮತ್ತೆ ಏನೂ ಕೇಳುತ್ತಿರಲಿಲ್ಲ. ಆಸ್ಪತ್ರೆಯಿಂದ ಡಾಕ್ಟರನ್ನು ಕರೆಯುವುದೆಂದರೆ ತಾಲ್ನೋವೋದಲ್ಲಿ ಆಶ್ಚರ್ಯಕರ ಸಂಗತಿಯೇ ಸರಿ. ಸುಮ್ಮನೆ ಆಡಿಕೊಳ್ಳಲು ನೆರೆಯವರಿಗೆ ವಿಷಯ ಸಿಕ್ಕಿದಂತಾಗುತ್ತಿತ್ತು.
ಆದರೆ ಮಾಡಬೇಕಾದ ಕೆಲಸ ಹಾಗೆ ಇರುತ್ತಿತ್ತು. ಮಾತ್ರಿಯೋನಾ ಸ್ವಲ್ಪ ಚೇತರಿಸಿಕೊಂಡೊಡನೆ ಓಡಾಟ ಪ್ರಾರಂಭವಾಗುತ್ತಿತ್ತು.
.
.
.
ಚಳಿಗಾಲ ಪ್ರಾರಂಭವಾಗುವುದಕ್ಕೆ ಮುನ್ನ ಮಾತ್ರಿಯೋನಾಳ ವ್ಯವಹಾರಗಳು ಹಿಂದೆಂದಿಗಿಂತಲೂ ಸ್ವಲ್ಪ ಉತ್ತಮಗೊಂಡವು. ಅಂತೂ ಕಡೆಗೆ ಅವಳಿಗೆ ಎಂಭತ್ತು ರೂಬಲಂಗಳಷ್ಟು ಪಿಂಚಿಣಿ ಕೊಡಲಾರಂಭಿಸಿದರು. ಇದರ ಜತೆಗೆ ಶಾಲೆಯಿಂದ ಮತ್ತು ನನ್ನಿಂದ ಆಕೆ ನೂರಕ್ಕೂ ಹೆಚ್ಚು ರೂಬಲುಗಳನ್ನು ಪಡೆಯುತ್ತಿದ್ದಳು.
ಅವಳ ನೆರೆಯವರಲ್ಲಿ ಕೆಲವರಿಗೆ ಮಾತ್ಸರ್ಯ.
“ಹೂಂ ……… ……… ಮಾತ್ರಿಯೋನಾ ಈಗ ಸುಖವಾಗಿ ಜೀವನ ನಡೆಸಬಹುದು. ಅವಳಿಗೆ ಇನ್ನಷ್ಟು ಹಣವೇನಾದರೂ ಬಂದರೆ, ಈ ವಯಸ್ಸಿನಲ್ಲಿ ಆದನ್ನು ಏನು ಮಾಡಬೇಕೆಂದೇ ತಿಳಿಯುವುದಿಲ್ಲ.”
ಮಾತ್ರಿಯೋನಾ ಹೊಸ ಬೂಟುಗಳನ್ನು ಮಾಡಿಸಿಕೊಂಡಳು. ಹೊಸ ಜರ್ಕಿನ್‌ ಕೊಂಡುಕೊಂಡಳು. ಆಕೆಯ ಸಾಕು ಮಗಳು ತೀರಾಳನ್ನು ಚೆರೂಸ್ತಿಯ ಇಂಜಿನ್ ಡ್ರೈವರ್‌ ಮದುವೆಯಾಗಿದ್ದ. ಆತ ತನಗೆ ಕೊಟ್ಟಿದ್ದ ಹರಿದ ರೈಲ್ವೇ ನೋಟಿನಿಂದ ಒಂದು ಓವರ್‌ಕೋಟ್‌ ಹೊಲಿಸಿಕೊಂಡಳು. ಹಳ್ಳಿಯ ಗೂನುಬೆನ್ನಿನ ದರ್ಜಿಯವನು ಒಳಗಡೆ ಬಟ್ಟೆ ಕೊಟ್ಟು ಹೊಲಿದಿದ್ದ. ಮಾತ್ರಿಯೋನಾ ತನ್ನ ಇಡೀ ಅರವತ್ತು ವರ್ಷಗಳಲ್ಲಿ ತೊಟ್ಟುಕೊಂಡಿರದ ಅತ್ಯುತ್ತಮ ಕೋಟು ಇದು.
ಚಳಿಗಾಲದ ಮಧ್ಯದ ಹೊತ್ತಿಗೆ ಮಾತ್ರಿಯೋನಾ ತನ್ನ ಉತ್ತರ ಕ್ರಿಯೆಗಳಿಗೆಂದು ಇನ್ನೂರು ರೂಬಲುಗಳನ್ನು ಈ ಕೋಟಿನೊಳಗೆ ಹೊಲಿದಿಟ್ಟಿದ್ದಳು. ಇದರಿಂದ ಅವಳಿಗೊಂದು ರೀತಿಯ ಸಂತೋಷ, ನೆಮ್ಮದಿ.
“ಈಗ ನನ್ನ ಮನಸ್ಸಿಗೊಂದಿಷ್ಟು ಸಮಾಧಾನ, ಇಗ್ನಾತಿಚ್.”
ಡಿಸೆಂಬರ್, ಜನವರಿ ಕಳೆಯಿತು. ಆ ಎರಡು ತಿಂಗಳುಗಳಲ್ಲಿ ಮಾತ್ರಿಯೋನಾಳ ಕಾಯಿಲೆ ತೆಪ್ಪಗಿತ್ತು. ಸಂಜೆಯ ಹೊತ್ತು ಆಕೆ ಮೇಲಿಂದ ಮೇಲೆ ಮಾಷಾಳ ಮನೆಗೆ ಹೋಗಿ ಬರಲಾರಂಭಿಸಿದಳು. ನನ್ನ ಕೆಲಸಕ್ಕೆ ತೊಂದರೆಯಾದೀತೆಂದು ಆಕೆ ಸಂಜೆಯ ಹೊತ್ತು ಅತಿಥಿಗಳನ್ನು ಮನೆಗೆ ಕರೆಯುತ್ತಿರಲಿಲ್ಲ. ಒಮ್ಮೆ ಎಪಿಫೆನಿ ಹಬ್ಬದಂದು ನಾನು ಶಾಲೆ ಮುಗಿಸಿಕೊಂಡು ಮನೆಗೆ ಬಂದಾಗ, ಒಂದು ಔತಣ ಕೂಟವೇ ನಡೆಯುತ್ತಿತ್ತು. ಮಾತ್ರಿಯೋನಾ ತನ್ನ ಮೂವರು ಸಹೋದರಿಯರಿಗೆ ನನ್ನ ಪರಿಚಯ ಮಾಡಿಕೊಟ್ಟಳು. ಅಂದಿನವರೆಗೂ ಈ ಸಹೋದರಿಯರ ಬಗೆಗೆ ಹೆಚ್ಚೇನೂ ತಿಳಿದಿರಲಿಲ್ಲ. ಮಾಯೋನಾ ಏನಾದರೂ ಸಹಾಯ ಕೇಳಬಹುದೆಂದು ಅವರು ಬರುತ್ತಿರಲಿಲ್ಲವೋ ಏನೋ.
.
.
.
ಮಾತ್ರಿಯೋನಾ ಮತ್ತು ನಾನು ಪರಸ್ಪರ ಹೊಂದಿಕೊಂಡುಬಿಟ್ಟೆವು. ನನ್ನ ಬಗೆಗೆ ಆಕೆ ಯಾವ ಪ್ರಶ್ನೆಗಳನ್ನೂ ಕೇಳುತ್ತಿರಲಿಲ್ಲ. ಸ್ತ್ರೀ ಸಹಜವಾದ ಕುತೂಹಲ ಆಥವಾ ಸಮಯೋಪಾಯ ಆಕೆಗೆ ತಿಳಿದಿತ್ತೋ ಇಲ್ಲವೋ. ನನ್ನನ್ನಂತೂ ಮದುವೆಯಾಗಿದೆಯೇ ಇಲ್ಲವೇ ಎಂದು ಒಮ್ಮೆಯಾದರೂ ಕೇಳಲಿಲ್ಲ. ತಾಲ್ನೊವೋದ ಎಲ್ಲ ಹೆಂಗಸರೂ ನನ್ನ ಬಗ್ಗೆ ತಿಳಿದುಕೊಳ್ಳಲು ಹಾತೊರೆಯುತ್ತಿದ್ದರು. ಈ ಬಗ್ಗೆ ಅವರು ಮಾತ್ರಿಯೋನಾಳನ್ನು ಪೀಡಿಸಿದ್ದೂ ಉಂಟು. ಮಾತ್ರಿಯೋನಾ ಕೊಡುತ್ತಿದ್ದ ಉತ್ತರ : “ನೀವು ತಿಳಿದುಕೊಳ್ಳಬೇಕಲ್ಲವೇ ? ನೀವೇ ಅವರನ್ನು ಕೇಳಿ. ಆತ ದೂರ ಪ್ರಾಂತ್ಯದವರೆಂದು ಮಾತ್ರ ನನಗೆ ಗೊತ್ತು.”
ನಾನು ಬಹಳಷ್ಟು ಕಾಲ ಜೈಲಿನಲ್ಲಿ ಕಳೆದವನೆಂದು ಹೇಳತೊಡಗಿದಾಗ ಮಾತ್ರಿಯೋನ ಒಂದೂ ಮಾತಾಡಲಿಲ್ಲ. ಮೊದಲೇ ಊಹಿಸಿಕೊಂಡಿದ್ದವಳಂತೆ ಸುಮ್ಮನೆ ತಲೆ ಕೊಡವಿದಳು ಅಷ್ಟೇ.
ಮಾತ್ರಿಯೋನಾ ಕೇವಲ ಒಬ್ಬ ಅಸಹಾಯಕ ಮುದುಕಿಯೆಂದು ನಾನು ಭಾವಿಸಿದ್ದೆ. ಆಕೆಯ ಗತಕಾಲವನ್ನು ಕೆದಕಿ ತೆಗೆಯಲು ನಾನು ಪ್ರಯತ್ನಿಸಲಿಲ್ಲ. ಹಾಗೆ ಮಾಡುವುದರಿಂದ ಏನಾದರೂ ವಿಷಯ ಸಿಕ್ಕಿತೆಂದು ಕೂಡ ನನಗೆ ಅನ್ನಿಸಲಿಲ್ಲ.
ಒಂದು ದಿನ ಶಾಲೆ ಮುಗಿಸಿಕೊಂಡು ಬಂದಾಗ ಮನೆಗೊಬ್ಬ ಅತಿಥಿ ಬಂದಿದ್ದರು. ಕೋಣೆಯ ನಡುಭಾಗದಲ್ಲಿ ಮಾತ್ರಿಯೋನಾ ಹಾಕಿದ್ದ ಕುರ್ಚಿಯಲ್ಲಿ ಆತ ಕುಳಿತಿದ್ದ. ಸಾಕಷ್ಟು ಉದ್ದನೆಯ ವ್ಯಕ್ತಿ. ಅವನ ಹ್ಯಾಟು ತೊಡೆಯ ಮೇಲೆ ಮಲಗಿತ್ತು. ಮುಖದ ತುಂಬ ಪೊದೆಗಟ್ಟಿದ ಕೂದಲು. ಒತ್ತಾಗಿ ಬೆಳೆದಿದ್ದ ಕಪ್ಪು ಮೀಸೆ ತುಂಬು ಗಡ್ಡದೊಡನೆ ಕೂಡಿಕೊಂಡಿದ್ದು ಅವನ ಬಾಯಿ ಸ್ವಲ್ಪವೂ ಕಾಣಿಸುತ್ತಿರಲಿಲ್ಲ. ಒಂದು ಬಗೆಯ ವಿವೇಕಪೂರ್ಣ ಘನತೆ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು.
ನಾನು ಒಳಗೆ ಹೋದೊಡನೆ ಆತ ನನ್ನ ಕಡೆ ತಿರುಗಿ ಹೇಳಿದ : “ಮೇಷ್ಟ್ರೇ, ನನಗೆ ಸರಿಯಾಗಿ ಕಣ್ಣು ಕಾಣಿಸುವುದಿಲ್ಲ. ನನ್ನ ಮಗ ನಿಮ್ಮ ಶಾಲೆಗೆ ಹೋಗುತ್ತಾನೆ. ಆಂತೋಷ್ಕಾ ಗ್ರಿಗೊರಿಯೇವ್…….”
ಆತ ಇನ್ನೇನನ್ನೂ ಹೇಳುವ ಅಗತ್ಯವಿರಲಿಲ್ಲ. ನಾನು ಊಹಿಸಿಕೊಳ್ಳಬಹುದಾಗಿತ್ತು. ಆಂತೋಷ್ಕಾ ಗ್ರಿಗೊರಿಯೇವ್ ಚೆನ್ನಾಗಿ ಮೈತುಂಬಿಕೊಂಡ, ಕೆಂಪು ಮುಖದ ಹುಡುಗ. ಎಂಟನೇ ತರಗತಿಯಲ್ಲಿ ಓದುತ್ತಿದ್ದ. ಕೇವಲ ವಿಶ್ರಾಂತಿಗಾಗಿ ಶಾಲೆಗೆ ಬರುತ್ತಿರುವಂತೆ ಅವನು ಭಾವಿಸಿಕೊಂಡಿರಬೇಕು. ದಡ್ಡ ವಿದ್ಯಾರ್ಥಿ.
ಆಂತೋಷ್ಕಾ ಸೋಮಾರಿಯೆಂದೂ, ಶಾಲೆಯಲ್ಲಿ ಹಾಗೂ ಮನೆಯಲ್ಲಿ ಸುಳ್ಳು ಹೇಳುತ್ತಾನೆಂದೂ, ಅವನ ಪ್ರಗತಿಯನ್ನು ಪದೇ ಪದೇ ಪರಿಶೀಲಿಸುತ್ತಿರಬೇಕೆಂದೂ ನಾನು
ಸಾಕಷ್ಟು ಸಹನೆಯಿಂದ ವಿವರಿಸಿದೆ.
“ನಿಮ್ಮಂತೆಯೇ ನಾನೂ ತುಂಬಾ ಬಿಗಿ, ಮೇಷ್ಟ್ರೇ. ವಾರಕ್ಕೊಮ್ಮೆ ನಾನು ಅವನನ್ನು ಹೊಡೆಯುತ್ತೇನೆ” ಎಂದ ಆತ. ಅವನ ಹೆಸರು ಫದೇಮ್ ಮಿರೊನೋವಿಚ್. ಮತ್ತೆ ಭೇಟಿ ಮಾಡುತ್ತೇನೆಂದು ಆತ ಹೊರಟುಹೋದ ಮೇಲೆ ನಾನು ಮಾತ್ರಿಯೋನಾಳನ್ನು ಕೇಳಿದೆ :
“ಈ ಆಂತೋಷ್ಕಾನಿಗೂ ನಿನಗೂ ಯಾವ ಸಂಬಂಧ, ಮಾತ್ರಿಯೋನಾ ವಾಸಿಲ್ಯೇವ್ನಾ ?” “ನನ್ನ ಭಾವನ ಮಗ” ಎಂದು ಒಂದೇ ಮಾತಿನಲ್ಲಿ ಹೇಳಿದ ಮಾತ್ರಿಯೋನಾ ಮೇಕೆ ಹಾಲು ಕರೆಯುವುದಕ್ಕೆ ಹೋದಳು. ಪೊದೆಗಟ್ಟಿದ ಕಪ್ಪುಗೂದಲಿನ ಈ ಮುದುಕ ಮಾತ್ರೆಯೋನಾಳ ತಪ್ಪಿಸಿಕೊಂಡ ಗಂಡನ ಅಣ್ಣ ಎಂದು ನನಗೆ ಆಮೇಲೆ ತಿಳಿಯಿತು.
ಆ ಸಂಜೆ ಕಳೆದುಹೋಯಿತು. ಮಾತ್ರಿಯೊನಾ ಮತ್ತೆ ಈ ವಿಷಯವನ್ನು ಪ್ರಸ್ತಾಪಿಸಲಿಲ್ಲ. ಆದರೆ ರಾತ್ರಿ ಬಹು ಹೊತ್ತಿನ ಮೇಲೆ, ನಾನು ಈ ಮುದುಕನ ಬಗೆಗೆ ಯೋಚಿಸುವುದನ್ನು ಬಿಟ್ಟು ಕೆಲಸಮಾಡತೊಡಗಿದೆ. ಜಿರಲೆಗಳ ಸರಸರ ಸದ್ದು ಹಾಗೂ ಗಡಿಯಾರದ ಟಿಕ್ ಟಿಕ್‌ ಬಿಟ್ಟರೆ ಮನೆ ತುಂಬ ನಿಶ್ಯಬ್ದ. ಮಾತ್ರಿಯೊನಾ ಇದ್ದಕ್ಕಿದ್ದಂತೆ ತನ್ನ ಮೂಲೆಯಿಂದ ಮಾತನಾಡಿದಳು : “ನಿನಗೆ ಗೊತ್ತೆ, ಇಗ್ನಾತಿಚ್ ? ಒಮ್ಮೆ ಅವನನ್ನು ನಾನು ಮದುವೆಯಾಗಬೇಕೆಂದಿದ್ದೆ.”
ಆ ಇಡೀ ಸಂಜೆ ಮಾತ್ರಿಯೋನಾ ಬೇರೇನನ್ನೂ ಯೋಚಿಸದ ಹಾಗೆ ಕಾಣಲಿಲ್ಲ. ಚಿಂದಿ ಚಿಂದಿಯಾದ ಹಾಸಿಗೆಯಿಂದ ಎದ್ದವಳೇ, ಮಾತ್ರಿಯೋನಾ ತನ್ನ ಮಾತುಗಳನ್ನೇ ಅನುಸರಿಸಿ ಬರುತ್ತಿರುವಂತೆ ನನ್ನೆಡೆಗೆ ಮೆಲ್ಲನೆ ನಡೆದು ಬಂದಳು. ನಾನು ಕುರ್ಚಿಗೊರಗಿಕೊಂಡು ತೀರಾ ಬೇರೆಯೇ ಆದ ಮಾತ್ರಿಯೋನಾಳನ್ನು ಗಮನಿಸಿದೆ.
“ಯಫಿಮ್‌ಗಿಂತ ಮೊದಲೇ ಈತ ನನ್ನನ್ನು ವರಿಸಲು ಬಂದಿದ್ದ…….ಈತ ಯೆಫಿಮ್‌ನ ಅಣ್ಣ…….ನನಗೆ ಹತ್ತೊಂಬತ್ತು ವರ್ಷ, ಫದೇಯ್‌ಗೆ ಇಪ್ಪತ್ಮೂರು……ಅವರಿಬ್ಬರೂ ಅವರ ತಂದೆ ಕಟ್ಟಿದ ಮನೆಯಲ್ಲಿ ವಾಸವಾಗಿದ್ದರು.”
“ಆಮೇಲೇನಾಯಿತು ?”
“ನಾನು ಇನ್ನೇನು ಫದೇಯ್‌ಯನ್ನು ಮದುವೆಯಾಗಬೇಕು, ಜರ್ಮನ್ ಯುದ್ಧ ಆರಂಭವಾಯಿತು. ಫದೇಯ್‌ಯನ್ನು ಸೈನ್ಯಕ್ಕೆ ಸೇರಿಸಿಕೊಂಡರು. ಮೂರು ವರ್ಷಗಳ ಕಾಲ ಅವನ ಸುಳಿವಿಲ್ಲ. ಈ ಮಧ್ಯೆ ಅವರ ತಾಯಿ ಸತ್ತಳು. ಯೆಫಿಮ್ ನನ್ನನ್ನು ವರಿಸಲು ಬಂದ. ‘ಹೇಗಿದ್ದರೂ ನೀನು ನಮ್ಮ ಮನೆಗೇ ಬರಬೇಕಾದವಳು’ ಎಂದ. ಯೆಫಿಮ್ ನನಗಿಂತ ವಯಸ್ಸಿನಲ್ಲಿ ಚಿಕ್ಕವನು. ಸೇಂಟ್ ಪೀಟರನ ಹಬ್ಬದಂದು ನಮ್ಮಿಬ್ಬರ ಮದುವೆಯಾಯಿತು……..ಹಂಗೆರಿಯಲ್ಲಿ ಯುದ್ಧ ಕೈದಿಯಾಗಿದ್ದ ಫದೇಯ್‌ ಸೇಂಟ್ ನಿಕೊಲಾಸ್ ಹಬ್ಬದಂದು ಪ್ರತ್ಯಕ್ಷನಾದ.”
ಮಾತ್ರಿಯೋನಾ ಮುಖ ಮುಚ್ಚಿಕೊಂಡಳು.
ನಾನು ಮಾತಾಡಲಿಲ್ಲ.
ಬಾಗಿಲ ಕಡೆ ತಿರುಗಿದವಳೇ ಆಕೆ, “ಇದೇ ಬಾಗಿಲಲ್ಲಿ ಬಂದು ನಿಂತ. ನಾನು ಕಿರಿಚಿಕೊಂಡೆ ! ಅವನ ಕಾಲಿಗೆ ಬೀಳಬೇಕೆನಿಸಿತು. ಆದರೆ ಸಾಧ್ಯವಾಗಲಿಲ್ಲ. ‘ಯೆಫಿಮ್ ನನ್ನ ತಮ್ಮನಾಗಿರದಿದ್ದಿದ್ದರೆ ನಿಮ್ಮಿಬ್ಬರನ್ನೂ ಕೊಡಲಿಯಿಂದ ಕೊಂದುಬಿಡುತ್ತಿದ್ದೆ’ ಎಂದ.”
ಮಾತ್ರಿಯೋನಾ ಸ್ವಲ್ಪ ಸಮಾಧಾನ ತಾಳಿ ಮತ್ತೆ ಮಾತು ಆರಂಭಿಸಿದಳು : “ಹಳ್ಳಿಯಲ್ಲಿ ಬಹಳಷ್ಟು ಮಂದಿ ಯುವತಿಯರಿದ್ದರು. ಆದರೆ ಆತ ಯಾರನ್ನು ಮದುವೆಯಾಗಲು ಸಿದ್ಧವಾಗಿರಲಿಲ್ಲ. “ನಿನ್ನ ಹೆಸರಿನ, ಇನ್ನೊಬ್ಬ ಮಾತ್ರಿಯೋನಾಳನ್ನೇ ನಾನು ಹುಡುಕುತ್ತೇನೆ ಎಂದ. ಅವನು ಮಾಡಿದ್ದೂ ಅದೇ. ಲಿಪೋವ್ಕಾ ಹಳ್ಳಿಯಿಂದ ಇನ್ನೊಬ್ಬ ಮಾತ್ರಿಯೋನಾಳನ್ನು ಕರೆತಂದ. ಅವರೊಂದು ಸ್ವಂತ ಮನೆ ಕಟ್ಟಿಕೊಂಡು ಈಗಲೂ ವಾಸವಾಗಿದ್ದಾರೆ. ನೀನು ಶಾಲೆಗೆ ಹೋಗುವ ದಾರಿಯಲ್ಲೇ ಅವರ ಮನೆ.
ಆ ಇನ್ನೊಬ್ಬ ಮಾತ್ರಿಯೋನಳನ್ನೂ ನಾನು ಆಗಾಗ ನೋಡುತ್ತಿದ್ದುದುಂಟು. ಅವಳನ್ನು ಕಂಡರೆ ನನಗಾಗುತ್ತಿರಲಿಲ್ಲ. ಆಕೆ ಯಾವಾಗಲೂ ನನ್ನ ಮಾಶ್ರಿಯೋನಾಳ ಮನೆಗೆ ಬಂದು ತನ್ನ ಗಂಡನ ಬಗೆಗೆ ದೂರಿಕೊಳ್ಳುತ್ತಿದ್ದಳು. ಆತ ಅವಳನ್ನು ಹೊಡೆಯುತ್ತಿದ್ದ : ತುಂಬಾ ಜಿಪುಣ; ಮೈಮುರಿಯುವಂತೆ ಅವಳನ್ನು ದುಡಿಸುತ್ತಿದ್ದ. ಆದ್ದರಿಂದ ಅವಳಿಗೆ ಯಾವಾಗಲೂ ಆಳು.
ಫದೇಯ್‌ಗೆ ಪಶ್ಚಾತ್ತಾಪ ಪಡಲು ಯಾವ ಕಾರಣವೂ ಇರಲಿಲ್ಲ. ಇನ್ನೊಬ್ಬ ಮಾತ್ರಿಯೋನಾ ಅವಳಿಗೆ ಆರು ಮಕ್ಕಳನ್ನು ಹೆತ್ತು ಕೊಟ್ಟಿದ್ದಳು. (ಆಂತೋಷ್ಕಾನೂ ಆ ಮಕ್ಕಳಲ್ಲಿ ಒಬ್ಬ). ಅವರೆಲ್ಲರೂ ಜೀವಂತವಾಗಿದ್ದರು. ಆದರೆ ಮಾತ್ರಿಯೋನಾ ಮತ್ತು ಯೆಫಿಮ್‌ರ ಮಕ್ಕಳು ಪ್ರತಿಯೊಬ್ಬರೂ ಹುಟ್ಟಿದ ಮೂರು ತಿಂಗಳೊಳಗೆ, ಯಾವ ಖಾಯಿಲೆಯೂ ಇಲ್ಲದೆ ಸತ್ತುಹೋಗಿದ್ದರು.
ಮಾತ್ರಿನಾ ಶಾಪಗ್ರಸ್ತಳೆಂದು ಇಡಿ ಹಳ್ಳಿ ತೀರ್ಮಾನಿಸಿತು.
ಹರಿಯುವ ನೀರಿನಂತೆ ವರ್ಷಗಳುರುಳಿದವು…………೧೯೪೧ ರಲ್ಲಿ ಸರಿಯಾಗಿ ಕಣ್ಣು ಕಾಣದೆಂಬ ಕಾರಣದಿಂದ ಫದೇಯ್‌ಯನ್ನು ಬಿಟ್ಟು ಅವನ ತಮ್ಮ ಯೆಫಿಮ್‌ನನ್ನು ಯುದ್ಧಕ್ಕೆ ಸೇರಿಸಿಕೊಂಡರು. ಆತ ಯಾವ ಗುರುತೂ ಇಲ್ಲದೆ ನಿರ್ನಾಮವಾದ. ಒಮ್ಮೆ ಸದ್ದು ಗದ್ದಲದಿಂದ ತುಂಬಿದ್ದ ಮನೆ ಈಗ ನಿರ್ಜನವಾಯಿತು. ಮಾತ್ರಿಯೋನಾ ಒಬ್ಬಳೇ ಒಬ್ಬೊಂಟಿಯಾಗಿ ಆ ಮನೆಯಲ್ಲಿ ವಯಸ್ಸಾಗತೊಡಗಿದಳು.
ಆದ್ದರಿಂದ ಆಕೆ ಇನ್ನೊಬ್ಬ ಮಾತ್ರಿಯೋನಾಳ ಒಬ್ಬ ಮಗಳನ್ನು (ಅಥವಾ ಫದೇಯ್‌ಯ ಒಂದು ರಕ್ತದ ಹನಿಯನ್ನು ದತ್ತು ತೆಗೆದುಕೊಂಡಳು. ಈ ಮಗಳೇ ಕೀರಾ.
ಸುಮಾರು ಹತ್ತು ವರ್ಷಗಳ ಕಾಲ ಮಾತ್ರಿಯೊನಾ ತನ್ನ ಮಕ್ಕಳಿಲ್ಲದ ಮನೆಯಲ್ಲಿ ಈ ಹುಡುಗಿಯನ್ನು ಸಾಕಿದಳು. ಆಮೇಲೆ, ನಾನಿಲ್ಲಿಗೆ ಬರುವ ಮುಂಚೆ, ಅವಳನ್ನು ಚೆರೂಸ್ತಿಯ ಇಂಜಿನ್ ಡ್ರೈವರೊಬ್ಬನಿಗೆ ಕೊಟ್ಟು ಮದುವೆ ಮಾಡಿದಳು. ಆಕೆಗೆ ಏನಾದರೂ ಕಿಂಚಿತ್ ಸಹಾಯ ದೊರೆಯುತ್ತಿತ್ತೆಂದರೆ ಅದು ಚೆರೂಷ್ಮಿಯಿಂದಲೇ ಬರುತ್ತಿತ್ತು : ಆಗಾಗ ಸ್ವಲ್ಪ ಸಕ್ಕರೆ ಅಥವಾ ಹಂದಿಯೊಂದನ್ನು ಕೊಂದಾಗ ಒಂದಿಷ್ಟು ಕೊಬ್ಬು.
.
.
.
ದೇಹವನ್ನು ಕಿತ್ತು ತಿನ್ನುವ ಖಾಯಿಲೆ ಒಂದು ಕಡೆ, ಇನ್ನೇನು ಸಾವು ಬಹುದೂರವಿಲ್ಲವೆಂಬ ಪರಿಜ್ಞಾನ ಇನ್ನೊಂದು ಕಡೆ. ಮಾತ್ರಿಯೋನಾ ತನ್ನ ಅಂತಿಮ ತೀರ್ಮಾನವನ್ನು ತಿಳಿಸಿದಳು : ತಾನು ಸತ್ತಮೇಲೆ ಮಹಡಿಯ ಮೇಲಿನ ಕೋಣೆ ಕೀರಾಳಿಗೆ ಸೇರಬೇಕು. ಉಳಿದ ಮನೆಯ ಬಗೆಗೆ ಆಕೆ ಏನೂ ಹೇಳಲಿಲ್ಲ. ಅವಳ ಸಹೋದರಿಯರಿಗೆ ಮಾತ್ರ ಅದರ ಮೇಲೆ ಕಣ್ಣಿತ್ತು.
ಚೆರೂಸ್ತಿಯಿಂದ ಕೀರಾ ಬಂದಳು. ಮುದುಕ ಫದೇಯ್‌ಗೆ ಕಳವಳ. ಚೆರೂಸ್ತಿಯಲ್ಲಿ ಸ್ವಲ್ಪ ಜಮೀನು ಇಟ್ಟುಕೊಳ್ಳಬೇಕೆಂದರೆ, ಯುವ ದಂಪತಿಗಳು ಅಲ್ಲಿ ಯಾವುದಾದರೊಂದು ಬಗೆಯ ಕಟ್ಟಡ ಕಟ್ಟಿಕೊಳ್ಳಬೇಕು. ಮಾತ್ರಿಯೋನಾಳ ಮಹಡಿಯ ಕೋಣೆ ತುಂಬಾ ಉಪಯೋಗಕ್ಕೆ ಬಂದೀತು. ಯಾಕೆಂದರೆ ಕಟ್ಟಡಕ್ಕೆ ಬೇಕಾದ ಮರಮುಟ್ಟು ಎಲ್ಲೂ ದೊರೆಯುತ್ತಿರಲಿಲ್ಲ. ಕೀರಾ ಹಾಗೂ ಅವಳ ಗಂಡನಿಗಿಂತ ಮಿಗಿಲಾಗಿ ಮುದುಕ ಫದೇಯ್‌‌ಗೆ ಅವರು ಚೆರೂಸ್ತಿಯಲ್ಲಿ ಜಮೀನು ಮಾಡಿಕೊಳ್ಳಬೇಕೆಂಬ ಹಂಬಲ.
ಆತ ಮೇಲಿಂದ ಮೇಲೆ ಬಂದು ಮಾತ್ರಿಯೋನಾಳನ್ನು ಪೀಡಿಸತೊಡಗಿದ ; ಈಗಲೇ ಮಹಡಿಯ ಕೋಣೆಯನ್ನು ಕೊಟ್ಟುಬಿಡಬೇಕೆಂದು ಅವಳಿಗೆ ದುಂಬಾಲು ಬಿದ್ದ. ಮಾತ್ರಿಯೋನಾ ಎರಡು ದಿನ ನಿದ್ದೆ ಮಾಡಲಿಲ್ಲ. ನಲವತ್ತು ವರ್ಷ ಕಾಲ ತಾನು ಜೀವಿಸಿದ್ದ ಮನೆಯನ್ನು ತಾನು ಬದುಕಿರುವಾಗಲೇ ಒಡೆಮ ಹಾಕುವುದೆಂದರೆ ! ಮಾತ್ರಿಯೋನಾಳಿಗೆ ತುಂಬಾ ಸಂಕಟವಾಗುತ್ತಿದೆಯೆಂದು ನನಗೆ ತಿಳಿಯಿತು.
ಫೆಬ್ರವರಿ ತಿಂಗಳ ಒಂದು ಬೆಳಗ್ಗೆ ಫದೇಯ್‌, ಅವನ ಮಕ್ಕಳು ಮತ್ತು ಅವನ ಅಳಿಯಂದಿರು ಬಂದರು. ಮಹಡಿಯ ಮೇಲೆ ಐದು ಹಾರೆಗಳ ಸದ್ದು. ಛಾವಣಿಯ ಮರ ಮುಟ್ಟುಗಳ ಕಿರ ಕಿರ : ಗೋಡೆಯುರುಳಿದ ಶಬ್ದ. ತೊಲೆಗಳನ್ನು, ಛಾವಣಿಯ ಹಲಗೆಗಳನ್ನು ಕಿತ್ತ ಮೇಲೆ ಇಡೀ ಕೋಣೆ ನೆಲಸಮವಾಯಿತು. ಈಗ ಮಾತ್ರಿಯೋನಾಳ ಉಳಿದ ಮನೆ ಅಲ್ಲಲ್ಲಿ ಬಿರುಕುಬಿಟ್ಟಿತ್ತು. ಅವರೆಲ್ಲ ಮನೆ ಕೆಡವುವವರೇ ವಿನಾ ಕಟ್ಟುವವರಾಗಿರಲಿಲ್ಲ. ಮಾತ್ರಿಯೋನಾ ಆ ಮನೆಯಲ್ಲಿ ಬಹಳ ದಿನಗಳ ಕಾಲ ಇರುತ್ತಾಳೆಂಬ ನಂಬುಗೆಯೂ ಅವರಿಗಿರಲಿಲ್ಲ, ಮರಮುಟ್ಟುಗಳನ್ನು ಗೇಟಿನ ಬಳಿ ರಾಶಿ ಹಾಕಿದರು ಇಂಜಿನ್-ಡ್ರೈವ‌ರ್‌ ಅಳಿಯ ಟ್ರಾಕ್ಟರ್ ತರಲು ಚೆರೂಸ್ತಿಗೆ ಹೊರಟ.
ಟ್ರಾಕ್ಟರ್ ಬಂದು ಕಳಚಲಾದ ಇಡೀ ಕೋಣೆಯ ಸಾಮಾನುಗಳನ್ನು ಕೊಂಡೊಯ್ಯಲು ಎರಡು ತಿಂಗಳೇ ಹಿಡಿಯಿತು. ಮಾತ್ರಿಯೋನಾ ಏನೋ ಕಳೆದುಕೊಂಡವಳಂತೆ ಚಡಪಡಿಸಿದಳು. ಮಹಡಿಯ ಕೋಣೆಯನ್ನು ಕಟ್ಟುಬಿಟ್ಟದ್ದಕ್ಕಾಗಿ ಅವಳ ಮೂವರು ಸಹೋದರಿಯರೂ ಮೂದಲಿಸಿದ್ದರು ; ಇನ್ನೆಂದೂ ಮಾತ್ರಿಯೋನಾಳ ಮುಖ ನೋಡುವುದಿಲ್ಲವೆಂದು ಹೇಳಿ ಹೋಗಿದ್ದರು. ಇದೇ ಸಮಯಕ್ಕೆ ಸರಿಯಾಗಿ ಮಾತ್ರಿಯೋನಾಳ ಕುಂಟ ಬೆಕ್ಕು ಎಲ್ಲೋ ತಪ್ಪಿಸಿಕೊಂಡಿತು. ಅವಳಿಗಾದ ಆಘಾತ ಅಷ್ಟಿಷ್ಟಲ್ಲ.
ಅಂದು ಶಾಲೆಯಿಂದ ನಾನು ಮರಳಿ ಬರುತ್ತಿರುವಾಗ ಮನೆಯ ಮುಂದೆ ಸಾಕಷ್ಟು ಚಟು ವಟಿಕೆ ನಡೆದಿತ್ತು. ಎರಡು ಸ್ಲೆಜ್ ಗಾಡಿಗಳ ತುಂಬ ಮನೆ ಸಾಮಾನನ್ನು ತುಂಬಿದ್ದರು. ಆ ಗಾಡಿಗಳನ್ನು ಎಳೆದುಕೊಂಡು ಹೋಗಲು ಒಂದು ಹೊಸ ಟ್ರಾಕ್ಟರ್‌ ಸಿದ್ಧವಾಗಿ ನಿಂತಿತ್ತು. ಹುಚ್ಚರಂತೆ ಕೆಲಸ ಮಾಡುತ್ತಿದ್ದ ಅವರೆಲ್ಲ ಕೂಗುತ್ತಿದ್ದರು ; ವಾದಿಸುತ್ತಿದ್ದರು.
ಮಾತ್ರಿಯೋನಾ ಆ ಜನರ ನಡುವೆ ಗಡಿಬಿಡಿಯಿಂದ ಓಡಾಡುತ್ತಿದ್ದಳು. ಆಕೆ ನನ್ನ ಜರ್ಕಿನ್ ತೊಟ್ಟುಕೊಂಡಿದ್ದನ್ನು ಗಮನಿಸಿದೆ. ಆಗಲೇ ಅದನ್ನು ಸಾಕಷ್ಟು ಕೊಳೆ ಮಾಡಿದ್ದಳು. ನನಗಂತೂ ತುಂಬ ಕೋಪ ಬಂತು. ಅದು ನನ್ನ ನೆನಪಿನ ವಸ್ತುವಾಗಿತ್ತು; ಎಷ್ಟೋ ವರ್ಷಗಳ ಕಾಲ ನನ್ನನ್ನು ಬೆಚ್ಚಗಿಟ್ಟಿತ್ತು.
ಮಾತ್ರಿಯೋನಾ ವಾಸಿಲ್ಯೇವ್ನಾ ಬಗೆಗೆ ನಾನು ಕೋಪಗೊಂಡದ್ದು ಇದೇ ಮೊದಲ ಸಲ. ಮಾತ್ರಿಯೋನಾ ತಲ್ಲಣಿಸಿ ಹೋದಳು. “ಕ್ಷಮಿಸು. ಆಯ್ಯೋ ನನ್ನ ಹಾಳು ಬುದ್ಧಿಗೆ ! ಅವಸರದಲ್ಲಿ ನಾನು ಅದನ್ನು ಹಾಕಿಕೊಂಡೆ. ಅದು ನಿನ್ನದೆಂದು ನನಗೆ ಗೊತ್ತೇ ಆಗಲಿಲ್ಲ. ಇಗ್ನಾತಿಚ್. ದಯವಿಟ್ಟು ಕ್ಷಮಿಸು” ಎಂದಳಂ. ತಕ್ಷಣವೇ ಅದನ್ನು ಬಿಚ್ಚಿ ಬಿಸಿಲಿಗೆ ಹಾಕಿದಳು.
ಗಾಡಿಗಳಿಗೆ ತುಂಬುವ ಕೆಲಸ ಮುಗಿಯಿತು. ಕೆಲಸ ಮಾಡುತ್ತಿದ್ದ ಸುಮಾರು ಹತ್ತು ಮಂದಿಯೂ ನನ್ನ ಟೇಬಲ್ಲನ್ನು ಹಾದು ಅಡಿಗೆ ಮನೆಯಲ್ಲಿ ನುಸುಳಿಕೊಂಡರು. ಗ್ಲಾಸಗಳ ಹಾಗೂ ಬಾಟಲಗಳ ಸದ್ದು. ಅಸ್ಪಷ್ಟ ಮಾತುಗಳು, ಜೋರಾದ ನಗು. ಹೂಚ್ ಮದ್ಯದ ದುರ್ಗಂಧ ನನ್ನ ಮೂಗಿಗೆ ಬಡಿಯುತ್ತಿತ್ತು. ಅವರು ಬಹಳ ಹೊತ್ತು ಕುಡಿಯಲಿಲ್ಲ, ಆಗಲೇ ಕತ್ತಲಾಗತೊಡಗಿತ್ತು. ಒಬ್ಬೊಬ್ಬರಾಗಿ ಹೊರ ನಡೆದರು. ಎಂಜಿನ್ -ಡ್ರೈವರ್ ಅಳಿಯ, ಫದೇಯ್‌ಯ ಕುಂಟ ಮಗ ಮತ್ತು ಅವನ ಸೋದರಳಿಯ -ಇಷ್ಟು ಜನ ಚೆರೂಸ್ತಿಗೆ ಹೋಗಲಿದ್ದರು. ಉಳಿದವರೆಲ್ಲ ಮನೆಗಳಿಗೆ ಹೊರಟರು. ಹೊರಗಡೆ ಟ್ರಾಕ್ಟರ್ ಘರ್ಜಿಸಿತು.
ಎಲ್ಲರೂ ಹೊರಟ ಮೇಲೆ ಮಾತ್ರಿಯೋನಾ ಅಡಿಗೆ ಮನೆಯಿಂದ ನುಸುಳಿಬಂದಳು. ಅಕೆ ತನ್ನ ಜರ್ಕಿನ್ ತೊಟ್ಟುಕೊಂಡಿದ್ದಳು ; ತಲೆಗೆ ಬಟ್ಟೆ ಸುತ್ತಿದ್ದಳು. “ಇನ್ನೂ ಒಂದು ಟ್ರಾಕ್ಟರ್‌ ಯಾಕೆ ಬಾಡಿಗೆಗೆ ತರಲಿಲ್ಲವೊ? ಒಂದು ಕೆಟ್ಟುಹೋದರೆ ಇನ್ನೊಂದು ಈ ಗಾಡಿಗಳನ್ನು ಎಳೆಯಬಹುದಾಗಿತ್ತು. ಈಗ ಏನಾಗುತ್ತದೊ, ದೇವರಿಗೇ ಗೊತ್ತು !” ಎಂದು ನನಗೆ ಹೇಳಿ, ಹೊರಗೋಡಿದಳು.
.
.
.
ಸದ್ದುಗದ್ದಲವೆಲ್ಲ ನಿಂತ ಮೇಲೆ ಮನೆಯಲ್ಲಿ ಮೌನ ಕವಿಯಿತು. ಅನೇಕ ಬಾರಿ ಹೊರ ಬಾಗಿಲನ್ನು ತೆರೆದದ್ದರಿಂದ ಒಳಗೆ ಸಾಕಷ್ಟು ಚಳಿಯಾಗುತ್ತಿತ್ತು. ಜರ್ಕಿನ್ ತೊಟ್ಟುಕೊಂಡು ನಾನು ಎಕ್ಸರ್‌ಸೈಸ್ ಪುಸ್ತಕಗಳನ್ನು ನೋಡುತ್ತಾ ಕುಳಿತೆ. ಟ್ರಾಕ್ಟರಿನ ಸದ್ದು ಎಲ್ಲೋ ಅಡಗಿಹೋಗಿತ್ತು.
ಒಂದು ಗಂಟೆಯಾಯಿತು. ಎರಡಾಯಿತು. ಮತ್ತೆ ಮೂರಾಯಿತು. ಮಾತ್ರಿಯೋನಾಳ ಸುಳಿವಿಲ್ಲ. ಆಕೆ ತನ್ನ ಸ್ನೇಹಿತೆ ಮಾಷಾಳ ಮನೆಗೆ ಹೋಗಿರಬಹುದೆಂದು ಭಾವಿಸಿದೆ. ಇನ್ನೂ ಎರಡುಗಂಟೆಗಳು ಕಳೆದವು. ಕತ್ತಲು. ಅದರ ಜತೆಯಲ್ಲಿ ಒಂದು ಬಗೆಯ ನೀರವತೆ ಇಡೀ ಹಳ್ಳಿಯನ್ನು ಅಮರಿಕೊಂಡಿತ್ತು.
ನನಗೆ ಎಚ್ಚರವಾದಾಗ ಮುಂಜಾನೆ ಒಂದು ಗಂಟೆ, ಮಾತ್ರಿಯೋನಾ ಇನ್ನೂ ಮನೆಗೆ ಬಂದಿರಲಿಲ್ಲ.
ಇದ್ದಕ್ಕಿದ್ದಂತೆ ಅನೇಕ ಮಂದಿ ಜೋರಾಗಿ ಮಾತಾಡುತ್ತಿರುವುದು ಕೇಳಿಸಿತು. ಅವರು ಸಾಕಷ್ಟು ದೂರದಲ್ಲಿದ್ದುದಂತೂ ನಿಜ. ಆದರೆ ಅವರು ನಮ್ಮ ಮನೆಯ ಕಡೆಗೆ ಬರುತ್ತಿದ್ದಾರೆಂದು ನನಗೇಕೊ ಅನ್ನಿಸಿತು. ಅದು ಸುಳ್ಳಾಗಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ ನಮ್ಮ ಗೇಟನ್ನು ಯಾರೋ ಜೋರಾಗಿ ಬಡಿದ ಸದ್ದು ಕೇಳಿಸಿತು. ನನಗೆ ಪರಿಚಿತವಲ್ಲದ ಒಂದು ನಿಷ್ಠುರ ಧ್ವನಿ ಬಾಗಿಲು ತೆರೆಯುವಂತೆ ಅಪ್ಪಣೆ ಮಾಡಿತು. ಒಂದು ಟಾರ್ಚ್ ಹಿಡಿದುಕೊಂಡು ನಾನು ಕವಿದ ಕತ್ತಲೆಯನ್ನು ಪ್ರವೇಶಿಸಿದೆ. ಗೇಟನ್ನು ತೆರೆದಾಗ ನಾಲ್ಕು ಮಂದಿ ಉದ್ದ ನಿಲುವಂಗಿ ತೊಟ್ಟವರು ಒಳಗೆ ಬಂದರು. ಅವರಲ್ಲಿ ಇಬ್ಬರು ರೈಲ್ವೇ ಸಮವಸ್ತ್ರಗಳನ್ನು ಧರಿಸಿದ್ದರು. ಅವರಲ್ಲಿ ಹೆಚ್ಚು ವಯಸ್ಸಾದ ವ್ಯಕ್ತಿಯೊಬ್ಬ
ನನ್ನನ್ನು ಕೇಳಿದ: “ಈ ಮನೆಯ ಯಜಮಾನಿ ಎಲ್ಲಿ ?”
“ನನಗೆ ಗೊತ್ತಿಲ್ಲ.”
“ಸ್ಲೆಜ್‌ ಗಾಡಿಗಳನ್ನು ಎಳೆದುಕೊಂಡು ಬಂದ ಟ್ರಾಕ್ಟರ್ ಇಲ್ಲಿಂದಲೇ ಅಲ್ಲವೆ ಹೊರಟದ್ದು ?”
“ಏನಾಯಿತು ?”
“ಪ್ರಶ್ನೆಗೆ ಉತ್ತರ ಕೊಡಿ.”
“ಆದರೆ…..”
“ಇಲ್ಲಿ ಅವರು ಸಾಕಷ್ಟು ಕುಡಿದಿದ್ದರೆ ?”
ಅಡಿಗೆ ಮನೆ ಬಾಗಿಲಿಗೂ ಅವರಿಗೂ ನಡುವೆ ನಾನು ನಿಂತಿದ್ದೆ. “ಸತ್ಯವಾಗಿಯೂ ನನಗೇನೂ ಗೊತ್ತಿಲ್ಲ” ಎಂದೆ. ಅವರು ಸ್ವಲ್ಪ ಕಾಲ ಕೋಣೆಯಲ್ಲಿದ್ದ ವಸ್ತುಗಳನ್ನು ಪರೀಕ್ಷಿಸಿ, ಹೊರಡಲನುವಾದರು. ಗೇಟು ದಾಟಿದ ಮೇಲೆ ಅವರಲ್ಲೊಬ್ಬ ಹೇಳಿದ; “ಅವರೆಲ್ಲ ರೈಲಿಗೆ ಸಿಕ್ಕಿ ಪುಡಿಪುಡಿಯಾದರು.”
ನಾನು ತಲ್ಲಣಿಸಿಹೋದೆ. “ಅವರೆಲ್ಲ” ಯಾರು ? ಮಾತ್ರಿಯೋನಾ ಎಲ್ಲಿ ?
ನಾನು ಅಡಿಗೆಮನೆ ಪ್ರವೇಶಿಸಿದಾಗ ಹೂಚ್ ಮದ್ಯದ ದುರ್ಗಂಧ ನನ್ನನ್ನು ಅಪ್ಪಳಿಸಿತು. ಅದೊಂದು ನಿರ್ಜನ ಯುದ್ಧರಂಗವೇ ಆಗಿತ್ತು. ಅಸ್ತವ್ಯಸ್ತವಾದ ಸ್ಟೂಲುಗಳು, ಬೆಂಚುಗಳು, ಅಲ್ಲಲ್ಲಿ ಬಿದ್ದಿದ್ದ ಖಾಲಿ ಬಾಟಲುಗಳು, ಗ್ಲಾಸುಗಳು : ಹಂದಿಮಾಂಸದ ಚೂರುಗಳು, ಒಂದೆರಡು ಈರುಳ್ಳಿ. ಇವೆಲ್ಲವೂ ತೆಪ್ಪಗೆ ಬಿದ್ದಿದ್ದುವು. ಕೇವಲ ಜಿರಳೆಗಳು ಮಾತ್ರ ಯಾವ ಆತಂಕವೂ ಇಲ್ಲದೆ ಓಡಾಡುತ್ತಿದ್ದವು.
.
ರೈಲಿಗೆ ಸಿಕ್ಕಿ ಸತ್ತಿದ್ದವರು ಇಬ್ಬರೇ. ಒಬ್ಬಳು ಮಾತ್ರಿಯೋನಾ, ಇನ್ನೊಬ್ಬನ ಫದೇಯ್‌ಯ ಕುಂಟ ಮಗ. ಬೆಳಗಾದೊಡನೆ ಹಳ್ಳಿಯ ಹೆಂಗಸರು ರೈಲ್ವೆ ಕ್ರಾಸಿಂಗ್‌ಗೆ ಹೋಗಿ, ಮಾತ್ರಿಯೋನಾಳ ಅಳಿದುಳಿದ ಅವಶೇಷಗಳನ್ನು ತಳ್ಳುಗಾಡಿಯಲ್ಲಿ ಶೇಖರಿಸಿಕೊಂಡು ಬಂದರು. ಎಲ್ಲ ಅಸ್ತವ್ಯಸ್ತ….ಪಾದಗಳಿಲ್ಲ. ಕೇವಲ ಅರ್ಧದೇಹ…ಎಡಗೈಯಿಲ್ಲ. “ದೇವರು ಅವಳ ಬಲಗೈಯನ್ನು ಕಸಿದುಕೊಳ್ಳಲಿಲ್ಲ. ಈಗ ಅವಳು ಎಲ್ಲಿಗೆ ಹೊಗುತ್ತಾಳೋ ಅಲ್ಲಿ ದೇವರನ್ನು ಪ್ರಾರ್ಥಿಸಬಹುದು” ಎಂದು ನೆರೆದ ಹೆಂಗಸರಲ್ಲಿ ಒಬ್ಬಳು ನುಡಿದಳು.
ಮಾತ್ರಿಯೋನಾಳನ್ನು ಶವಸಂಪುಟದಲ್ಲಿಟ್ಟರು. ತುಂಡು ತುಂಡಾದ ಅವಳ ನಿರ್ಜೀವ ದೇಹದ ಮೇಲೆ ಒಂದು ಶುಭ್ರ ಹೊದಿಕೆಯನ್ನು ಹೊದಿಸಿದರು. ಅವಳ ಮುಖ ಮಾತ್ರ ಏನೂ ವಿರೂಪಗೊಳ್ಳದೆ ಹೆಚ್ಚು ಜೀವಂತವಾಗಿ ಕಾಣುತ್ತಿತ್ತು.
ಹಳ್ಳಿಯವರೆಲ್ಲರೂ ತಮ್ಮ ಅಂತಿಮ ಗೌರವ ಸಲ್ಲಿಸಲು ಗುಂಪುಗೂಡಿ ಬಂದರು. ಹಂಗಸರು ಸತ್ತವಳನ್ನು ನೋಡಲೆಂದು ತಮ್ಮ ಮಕ್ಕಳನ್ನು ಕರೆದು ತಂದರು. ಯಾರಾದರೊಬ್ಬರು ಅಯ್ಯೋ ಎಂದರೆ ಸಾಕು. ಉಳಿದವರೆಲ್ಲ ದನಿಗೂಡಿಸುತ್ತಿದ್ದರು. ಆ ದಿನವೆಲ್ಲ ಬರೀ ಗೋಳಾಟ.
.
.
.
ಮಾತ್ರಿಯೋನಾಳ ಜತೆ ನಾವೆಲ್ಲರೂ ಜೀವಿಸಿದವರೇ. ಆದರೆ ಒಬ್ಬರೂ ಅವಳನ್ನು ಅರ್ಥ ಮಾಡಿಕೊಳ್ಳಲಿಲ್ಲ. ಆಂಥ ಧರ್ಮಶೀಲ ಹೆಂಗಸು ಅವಳು.
(ಸಂಕ್ಷೇಪಿತ)

Close

ಹನಿಗತೆಗಳು (ಅನುವಾದ)

ಹನಿಗತೆಗಳು

ಮೂಲ : ಅಲೆಕ್ಸಾಂಡರ್‌ ಸೋಲ್ಜೆ ನಿಟ್ಸನ್
ಅನು : ಎಸ್ ದಿವಾಕರ್

ನಾವು ಚಿರಂಜೀವಿಗಳು
ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಸಾವಿನ ಭಯ ; ಸತ್ತವರ ಭಯ.
ಯಾರಾದರೂ ಸಾಯುತ್ತಿರುವುದನ್ನು ಕೇಳಿದರೆ ಸಾಕು. ನಾವು ಆ ಕ೦ಟುಂಬದವರಿಗೆ ಬರೆಯದೆ ಅಥವಾ ಅವರನ್ನು ಭೇಟಿಮಾಡದೆ ತಪ್ಪಿಸಿಕೊಳ್ಳುತ್ತೇವೆ. ಸಾವಿನ ಬಗೆಗೆ ಏನು ಹೇಳಬೇಕೋ ನಮಗೆ ಗೊತ್ತಿಲ್ಲ. ಮತ್ತೆ ಗಂಭೀರವಾಗಿ ಮಸಣಗಟ್ಟೆ ಎಂದು ಹೇಳಲೂ ನವಗೆ ನಾಚಿಕೆ. “ಭಾನುವಾರ ನಾನು ಬರೆಲಾರೆ. ಮಸಣಗಟ್ಟೆಯಲ್ಲಿ ನನ್ನ ಆತ್ಮೀಯರನ್ನು ಸಂದರ್ಶಿಸಬೇಕು” ಎಂದು ಯಾರಿಗಾದರೂ ಹೇಳುವಂತಿಲ್ಲ. ಎಂಥ ಅಸಂಬದ್ದ ! ನಮ್ಮ ಜತೆ ಕೂತು ಊಟಮಾಡಲಾಗದವರನ್ನು ಭೇಟಿಮಾಡುವುದು !
ಸತ್ತ ಮನುಷ್ಯನನ್ನು ನೀವು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸಬೇಕೆ ? ನಿಮಗೆ ಬುದ್ದಿ ಕೆಟ್ಟಿರಬೇಕು. ರೈಲಿನಲ್ಲಿ ಅದಕ್ಕೆ ಯಾರೂ ಜಾಗ ಕೊಡುವುದಿಲ್ಲ. ಸತ್ತವರನ್ನು ಬಾಜಾಭಜಂತ್ರಿಗಳೊಡನೆ ನಗರದ ಮೂಲಕ ಕೊಂಡೊಯ್ಯುವ ಕಾಲವೂ ಹೊಯಿತು. ಅವರೇನಾದರೂ ದಿಕ್ಕಿಲ್ಲದವರಾಗಿದ್ದರೆ ಲಾರಿಗಳಲ್ಲಿ ಹೊತ್ತುಹಾಕಿ ಬಿಡುತ್ತಾರೆ.
ಒಂದು ಕಾಲದಲ್ಲಿ ಜನ ಸಂತೋಷದಿಂದ ಹಾಡುತ್ತ, ಸುವಾಸನೆಯ ಧೂಪ ಹಾಕುತ್ತ ಮಸಣಗಟ್ಟೆಯನ್ನು ಸುತ್ತುತ್ತಿದ್ದರು. ಮನಸ್ಸಿಗೆ ನೆಮ್ಮದಿ ಇರುತ್ತಿತ್ತು. ಸಾವಿನಿಂದ ಉಂಟಾದ ಗಾಯ ಅಷ್ಟಾಗಿ ನೋವು ಕೊಡುತ್ತಿರಲಿಲ್ಲ. ಸಾವೇ ನಮ್ಮ ಕಡೆ ಮುಗುಳ್ನಗುತ್ತ “ಯೋಚನೆ ಮಾಡಬೇಡಿ” ಎಂದು ಹೇಳುವಂತೆ ತೋರುತ್ತಿತ್ತು.
ಆದರೆ ಈ ಕಾಲದಲ್ಲಿ ಹಾಗೇನಾದರೂ ಮಸಣಗೆಟ್ಟಿ ಇದ್ದರೆ, ಅಲ್ಲಿ ನೋಟೀಸ್ ಬೋರ್ಡುಗಳು ಹೇಳುತ್ತವೆ : “ಸಮಾಧಿಯ ಸಂಬಂಧಿಕರಿಗೆ- ಕಳೆದ ವರ್ಷದ ಕಸಕಡ್ಡಿ ತೆಗೆಯದೇ ಹೋದರೆ ನೀವು ದಂಡ ತೆರಬೇಕು !” ಅನೇಕ ವೇಳೆ ಬುಲ್‌ಡೋಜರುಗಳು ವಂಸಣಗಟ್ಟೆಯನ್ನು ನೆಲಸಮ ಮಾಡಿಬಿಡುತ್ತವೆ. ಅದೇ ಜಾಗದಲ್ಲಿ ಸ್ಟೇಡಿಯಮ್ಮೋ ಪಾರ್ಕೋ ಹುಟ್ಟಿಕೊಳ್ಳುತ್ತದೆ.
ಅಲ್ಲದೆ ನಾನು, ನೀವು ಇನ್ನೂ ಸಾಯಬೇಕಾಗಿರುವಂತೆ, ತಮ್ಮ ನಾಡಿಗಾಗಿ ಮಡಿದವರು ಎಷ್ಟೋ ಜನ. ನಮ್ಮ ಚರ್ಚ್ ಅಂಥವರಿಗೆ ಒಂದು ದಿನವನ್ನು ಗೊತ್ತುಮಾಡುತ್ತಿತ್ತು -ಯುದ್ಧರಂಗದಲ್ಲಿ ಮಡಿದ ಯೋಧರನ್ನು ನೆನಪಿಸಿಕೊಳ್ಳುವುದಕ್ಕಾಗಿ. ಬ್ರಿಟನ್ “ಪಾಪಿ ಡೇ” (Poppy Day) ಯೆಂದು ಅಂಥವರನ್ನು ಸ್ಮರಿಸಿಕೊಳ್ಳುತ್ತದೆ. ಇತರರಿಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದವರನ್ನು ಗೌರವಿಸಲು ಪ್ರತಿಯೊಂದು ದೇಶವೂ ಹೀಗೆಯೇ ಮಾಡುತ್ತದೆ. ಈ ದೇಶದಲ್ಲಿ ಹಾಗೆ ಮಾಡಿದವರ ಸಂಖ್ಯೆ ಬೇರೆಲ್ಲಿಗಿಂತಲೂ ಹೆಚ್ಚು. ಆದರೂ ನಮ್ಮ ದೇಶದಲ್ಲಿ ಅಂಥ ದಿನಾಚಾರಣೆ ಇಲ್ಲ.
ತಮ್ಮ ಪ್ರಾಣಗಳನ್ನು ಕಳೆದುಕೊಂಡ ಎಲ್ಲರ ಕಡೆಗೆ ನಾವು ನೋಡುತ್ತ ಹೋದರೆ…… …… ಇಟ್ಟಿಗೆಯ ಮೇಲೆ ಇಟ್ಟಿಗೆ ಇಟ್ಟು ಕೆಲಸ ಮಾಡುವವರು ಯಾರು? ಮೂರು ಯುದ್ಧಗಳಲ್ಲಿ ನಾವು ಗಂಡಂದಿರನ್ನು, ಹೆಂಡತಿಯರನ್ನು, ಪುತ್ರರನ್ನು ಕಳೆದುಕೊಂಡಿದ್ದೇವೆ…… ……ಇರುವವರ ಜತೆ ಬದುಕು ಮಾಡೋಣ.
ಯಾಕೆಂದರೆ ನಾವು ಎಂದೆಂದಿಗೂ ಬದುಕಿರುತ್ತೇವೆ.
ಇದೇ ೨೦ ನೇ ಶತಮಾನದ ತತ್ವಶಾಸ್ತ್ರದ ಶೃಂಗ !

ಭ್ರಮೆ
ಹೊತ್ತು ಮೂಡಿದಾಗ ಸುಮಾರು ಮೂವತ್ತು ಮಂದಿ ಯುವಕರು ಮೈದಾನವೊಂದರ ಕಡೆಗೆ ಓಡಿದರು. ಅಲ್ಲಿ ಸೂರ್ಯನಿಗೆದುರಾಗಿ ಸಾಲಾಗಿ ನಿಂತರು. ಬಾಗುವುದು, ಚಕ್ಕಳ ಮುಕ್ಕಳೆ ಕೊಡುವುದು, ತಲೆ ಬಾಗಿಸುವುದು, ಮುಖ ಕೆಳಗೆ ಮಾಡಿ ಮಲಗುವುದು, ಉದ್ದಕ್ಕೆ ಕೈ ಚಾಚುವುದು, ತಲೆಯಮೇಲೆ ತೋಳೆತ್ತಿ ನಿಲ್ಲುವುದು, ಹಿಂದೆ ಮುಂದೆ ಕೈ ಬೀಸುವುದು -ಹೀಗೆಲ್ಲ ಅವರು ಕ್ರಮವಾಗಿ ಮಾಡತೊಡಗಿದರು. ಇದು ಕಾಲು ಗಂಟೆಯಕಾಲ ನಡೆಯಿತು.
ದೂರದಿಂದ ನೋಡಿದಾಗ ಅವರು ಪ್ರಾರ್ಥಿಸುತ್ತಿರುವ ಹಾಗೆ ತೋರುತ್ತಿತ್ತು.
ನಮ್ಮ ಕಾಲದಲ್ಲಿ ಯಾವನಾದರೊಬ್ಬ ತನ್ನ ದೇಹದ ಬಗೆಗೆ ತಾಳ್ಮೆಯಿಂದ ವಿಶೇಷ ಕಾಳಜಿ ವಹಿಸಿದರೆ ಯಾರಿಗೂ ಆಶ್ಚರ್ಯವಾಗುವುದಿಲ್ಲ. ಆದರೆ ಇದೇ ಕಾಳಜಿಯನ್ನು ಆತ ತನ್ನ ಆತ್ಮಕ್ಕೆ ತೋರಿಸಿದರೆ ಜನರಿಗೆ ಎಲ್ಲಿಲ್ಲದ ಕೋಪ.
ಇಲ್ಲ, ಅವರು ಪ್ರಾರ್ಥಿಸುತ್ತಿರಲಿಲ್ಲ. ಬೆಳಗಿನ ವ್ಯಾಯಾಮ ಮಾಡುತ್ತಿದ್ದರು ಅಷ್ಟೆ.
.
ಇರುವೆಗಳು ಮತ್ತು ಬೆಂಕಿ
ಗೆದ್ದಲು ಹಿಡಿದ ದಿಮ್ಮಿಯನ್ನು ಬೆಂಕಿಗೆ ಹಾಕಿದೆ. ಅದರಲ್ಲಿ ಇರುವೆಗಳ ಒಂದು ದೊಡ್ಡ ಕಾಲೋನಿಯೇ ಇರುವುದನ್ನು ನಾನು ಗಮನಿಸಲಿಲ್ಲ. ಬೆಂಕಿಯಲ್ಲಿ ಮರ ಚಟ ಚಟವೆನ್ನತೊಡಗಿದಾಗ ಇರುವೆಗಳೆಲ್ಲ ಹೊರಗೆ ಬಂದು ಹತಾಶೆಯಿಂದ ಸುತ್ತಮುತ್ತ ಓಡತೊಡಗಿದವು. ಕೆಲವು ದಿಮ್ಮಿಯ ಮೇಲೆಲ್ಲ ಓಡಿ, ಬೆಂಕಿಯಲ್ಲಿ ಸುರುಟಿ ಬಂದಿಯಾದುವು. ನಾನು ದಿಮ್ಮಿಯನ್ನು ಒಂದು ಪಕ್ಕಕ್ಕೆ ತಿರುಗಿಸಿದೆ. ಈಗ ಅನೇಕ ಇರುವೆಗಳು ವರಳಿನ ಮೇಲೆ ಬಿದ್ದು ಓಡುತ್ತಾ ಬೆಂಕಿಯಿಂದ ತಪ್ಪಿಸಿಕೊಂಡುವು.
ಆದರೆ ಆಶ್ಚರ್ಯ ! ಬೆಂಕಿಯನ್ನು ಬಿಟ್ಟು ಅವು ಓಡಿಹೋಗಲಿಲ್ಲ.
ಭಯಭೀತಿಯನ್ನು ಜಯಿಸಿದ ತಕ್ಷಣವೇ ಅವು ಹಿಂತಿರುಗಿದವು. ಯಾವುದೋ ಶಕ್ತಿ ತಮ್ಮನ್ನು ಮತ್ತೆ ಮತ್ತೆ ಬಿಚ್ಚಿ ಮನೆಯ ಕಡೆ ಎಳೆಯುತ್ತಿರುವುದೋ ಎಂಬಂತೆ ಅವು ಸುತ್ತು ತಿರುಗತೊಡಗಿದವು. ಅನೇಕ ಇರುವೆಗಳು ಉರಿಯುತ್ತಿದ್ದ ದಿಮ್ಮಿಯ ಕಡೆಗೆ ನುಗ್ಗಿ ಸಾಯುವವರೆಗೂ ಓಡಾಡಿದುವು.
.
ಪ್ರತಿಬಿಂಬ
ಸರಸರನೆ ಹರಿಯುತ್ತಿರುವ ನೀರಿನಲ್ಲಿ ಹತ್ತಿರದ ಅಥವಾ ದೂರದ ವಸ್ತುಗಳ ಪ್ರತಿಬಿಂಬ ಚೆನ್ನಾಗಿ ಕಾಣಿಸುವುದಿಲ್ಲ. ನೀರು ಬಗ್ಗಡವಾಗಿದ್ದರೂ ಅಷ್ಟೆ: ನೊರೆಯಿಲ್ಲದಿದ್ದರೂ ಅಷ್ಟೆ. ನಿರಂತರವಾಗಿ ಮೂಡುತ್ತಿರುವ ಅಲೆಗಳಲ್ಲಿ, ಭೋರ್ಗರೆಯುತ್ತ ಹರಿಯುವ ತೊರೆಯಲ್ಲಿ ಪ್ರತಿಬಿಂಬಗಳು ತುಂಬ ಮಸುಕಾಗುತ್ತವೆ. ಸರಿಯಾಗಿ ತಿಳಿಯುವುದಿಲ್ಲ.
ತೊರೆಯಿಂದ ತೊರೆಗೆ ಹರಿದು ಶಾಂತವಾದ ಅಳಿವೆ ಸೇರಿದ ನೀರಿನಲ್ಲಿ ಅಥವಾ ಒಂದೇ ಒಂದು ಸಣ್ಣ ಅಲೆಯೂ ಇಲ್ಲದ ಸಣ್ಣ ಸರೋವರಗಳಲ್ಲಿ ಮಾತ್ರ ಕನ್ನಡಿಯ ಹಾಗಿರುವ ನಯವಾದ ನೀರ ಹಾಳೆಯ ಮೇಲೆ ದಡದಲ್ಲಿ ಬಿದ್ದಿರುವ ಒಂದು ಮರದ ಎಲೆಯನ್ನು ಕೂಡ ಕಾಣಬಹುದು; ಮೋಡಗಳ ಪ್ರತಿಯೊಂದು ಎಳೆಯನ್ನೂ, ಆಳವಾಗಿ ನೀಲಿ
ಗಟ್ಟಿದ ಆಕಾಶವನ್ನೂ ಸ್ಪಷ್ಟವಾಗಿ ಕಾಣಬಹುದು.
ಮತ್ತೆ ನಾನು ನೀವೂ ಹೀಗೆಯೇ ಅಲ್ಲವೆ ? ನಾವು ಎಷ್ಟೇ ಪ್ರಯತ್ನಿಸುತ್ತಿದ್ದರೂ ಕೂಡ ಶಾಶ್ವತವಾದ ಸ್ಪಷ್ಟ ಸತ್ಯವನ್ನು ಪ್ರತಿಬಿಂಬಿಸಲಾಗಿಲ್ಲ : ಪ್ರತಿಬಿಂಬಿಸಲಾಗುವುದೂ ಇಲ್ಲ. ಇದಕ್ಕೆ ಮುಖ್ಯ ಕಾರಣ ನಾವಿನ್ನೂ ಚಲಿಸುತ್ತಿದ್ದೇವೆ, ಇನ್ನೂ ಜೀವಿಸಿದ್ದೇವೆ ಅಲ್ಲವೆ ?
.
ಶರೀಕ್
ನಮ್ಮ ಅಂಗಳದಲ್ಲಿ ಒಬ್ಬ ಹುಡುಗ ಪ್ರೀತಿಯಿಂದ ನಾಯಿಯೊಂದನ್ನು ಕಟ್ಟಿಹಾಕಿಕೊಂಡಿದ್ದಾನೆ. ಅದರ ಹೆಸರು ಶರೀಕ್. ಇನ್ನೂ ಮರಿಯಾಗಿದ್ದಾಗಲೇ ಅದನ್ನು ಸರಪಳಿಯಿಂದ ಕಟ್ಟಿಹಾಕಿದರು.
ಒಂದು ದಿನ ನಾನು ಘಮಘಮಿಸುತ್ತಿದ್ದ ಬೆಚ್ಚಗಿನ ಕೋಳಿಯ ಮೂಳೆಗಳನ್ನು ಅದಕ್ಕೆ ಹಾಕಿದೆ. ಹುಡುಗ ಆಗ ತಾನೆ ಸ್ವಲ್ಪ ಅಡ್ಡಾಡಲೆಂದು ಅದರ ಸರಪಳಿ ಕಳಚಿದ. ಅಂಗಳದಲ್ಲಿ ಹಿಮ ದಟ್ಟವಾಗಿ ಬಿಳಿಯ ತುಪ್ಪಳಿನ ಹಾಗೆ ಬಿದ್ದಿತ್ತು. ಶರೀಕ್ ಮೊಲದ ಹಾಗೆ ಒಂದು ನಿಮಿಷ ಹಿಂಗಾಲುಗಳ ಮೇಲೆ, ಅನಂತರ ಮುಂಗಾಲುಗಳ ಮೇಲೆ ನೆಗೆಯುತ್ತ ಅಂಗಳದಲ್ಲಿ ಮೂಲೆಯಿಂದ ಮೂಲೆಗೆ ಓಡತೊಡಗಿತು. ಅದರ ಮೂತಿಯ ಮೇಲೆಲ್ಲ ಹಿಮ !
ಆ ಪೊದೆಗೂದಲಿನ ಪ್ರಾಣಿ ನನ್ನ ಬಳಿ ಬಂದು ಮೇಲೆಲ್ಲ ನೆಗೆದಾಡತೊಡಗಿತು. ಮೂಳೆಗಳನ್ನು ಮೂಸಿನೋಡಿದ ತಕ್ಷಣವೇ ಓಡಿತು ; ತನ್ನ ಹೊಟ್ಟೆಯವರೆಗೂ ಬರುತ್ತಿದ್ದ ಹಿಮದಲ್ಲಿ ನಾಗಾಲೋಟದಿಂದ ಓಡಿತು.
“ನನಗೆ ನಿನ್ನ ಮೂಳೆಗಳ ಆತಿಥ್ಯ ಬೇಡ. ನನ್ನ ಸ್ವಾತಂತ್ರ್ಯವನ್ನು ಮಾತ್ರ ನನಗೆ ಕೊಡು” ಎಂದು ಅದು ಹೇಳುತ್ತಿರುವ ಹಾಗೆ ತೋರಿತು.
.
ಉಸಿರಾಟ
ಮಳೆ ಬೀಳುತ್ತಿರುವ ರಾತ್ರಿ. ಮೋಡಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೇಲಿಹೋಗುತ್ತಿವೆ. ಮಳೆ ಸಂಪೂರ್ಣ ನಿಂತಂತೆ ಕಾಣಿಸುತ್ತಿಲ್ಲ. ಆಗೀಗ ತುಂತುರು ಹನಿಯುತ್ತಲೇ ಇದೆ. ಸೇಬು ಮರದ ಕೆಳಗೆ ನಿಂತು ನಾನು ಜೋರಾಗಿ ಉಸಿರೆಳೆದುಕೊಳ್ಳುತ್ತಿದ್ದೇನೆ. ಮಳೆಯಲ್ಲಿ ತೋಯ್ದು ಈಗ ಒಣಗುತ್ತಿರುವ ಸೇಬು ಮರ. ಅದರ
ಸುತ್ತಲಿನ ಹುಲ್ಲು. ಗಾಳಿಯ ತುಂಬ ಮತ್ತೇರಿಸುವ ಸುವಾಸನೆ. ನಾನು ದೀರ್ಘವಾಗಿ ಉಸಿರಾಡುತ್ತ ಈ ಸುವಾಸನೆಯನ್ನು ಶ್ವಾಸಕೋಶದ ತುಂಬ ತುಂಬಿಕೊಳ್ಳುತ್ತೇನೆ, ಸುವಾಸನೆಯಿಂದ ನನ್ನ ಎದೆ ಜುಮ್ಮೆನ್ನುತ್ತಿದೆ. ಕಣ್ಣುಗಳನ್ನು ಮುಚ್ಚಿಕೊಳ್ಳುತ್ತ, ತೆರೆಯುತ್ತ ನಾನು ಮತ್ತೆ ಮತ್ತೆ ಉಸಿರೆಳೆದುಕೊಳ್ಳುತ್ತಿದ್ದೇನೆ-ಹೇಗೆ ಉಸಿರೆಳೆದುಕೊಳ್ಳಬೇಕೋ ತಿಳಿಯದೆ.
ಇದೇ ಸ್ವಾತಂತ್ರವಿರಬೇಕು. ಸೆರೆಮನೆ ನಮಗೆ ಇಲ್ಲದಂತೆ ಮಾಡುವ ಸ್ವಾತಂತ್ರ್ಯ ಗಳಲ್ಲೆಲ್ಲ ಅಮೂಲ್ಯವಾದ ಏಕಮಾತ್ರ ಸ್ವಾತಂತ್ರ್ಯ ಇದೇ ಇರಬೇಕು. ಈ ರೀತಿ ಉಸಿರಾಡುವ ಸ್ವಾತಂತ್ರ; ಈ ಸ್ಥಳದಲ್ಲಿ ಉಸಿರಾಡುವ ಸ್ವಾತಂತ್ರ, ವತ್ತೇರಿಸುವ, ಹೂವಿನ ಸುವಾಸನೆಯ, ಮಳೆಬಿದ್ದ ನಂತರದ ಗಾಳಿಗಿಂತ ಪ್ರಪಂಚದ ಯಾವ ಭೋಜನವೂ ಮಧುರವಾಗಿಲ್ಲ, ಯಾವ ದ್ರಾಕ್ಷಾರಸವೂ ಮಧುರವಾಗಿಲ್ಲ. ಹೆಣ್ಣಿನ ಚುಂಬನ ಕೂಡ ಮಧುರವಲ್ಲ. ಮೋಟಾರ್ ಸೈಕಲ್‌ಗಳ ಸದ್ದಾಗಲೀ, ರೇಡಿಯೋಗ್ರಾಮುಗಳ ಅರಚಾಟವಾಗಲೀ, ಧ್ವನಿವರ್ಧಕದ ಘರ್ಜನೆಯಾಗಲೀ ನನಗೆ ಕೇಳಿಸುತ್ತಿಲ್ಲ. ಮಳೆ ಬಿದ್ದ ಮೇಲೆ ಸೇಬು ಮರದ ಕೆಳಗೆ ನಿಂತು ಉಸಿರಾಡುವಷ್ಟು ಕಾಲವೂ ನಾನು ಜೀವಿಸಿರಬಲ್ಲೆ.

Close

ಪಲಾಯನ (ಅನುವಾದ)

ಪಲಾಯನ

ಇಂಗ್ಲಿಷಿನಲ್ಲಿ : L B HATHAWAY
ಕನ್ನಡಕ್ಕೆ : ಬಿ ಆರ್ ಲಕ್ಷ್ಮಣರಾವ್

ನಿತ್ಯ ಹರಿದ್ವರ್ಣ ಪರ್ವತಗಳಲ್ಲೊಂದು ತೋಳ
ಹೆಸರು ಟೆಂಬರ್ ತೋಳ ಅದು ಬೇಟೆಗಾಗಿ
ಅಲೆದಾಡುತ್ತಾ ವಿಲಕ್ಷಣವಾಗಿ ಊಳಿಡುವ ಸದ್ದು
ರಾತ್ರಿಯ ನಿದ್ದೆಯಲ್ಲಿನ ನಮ್ಮ ಸವಿಗನಸುಗಳನ್ನು
ಒಡೆದರೂ ಅದರ ಬಗ್ಗೆ ಏಕೋ ಗೌರವ ಮೂಡುತ್ತೆ

ಆದರೂ ಇದೇ ತೋಳ ಗಾಯಗೊಂಡಾಗ
ತನ್ನ ಹಿಂಡನ್ನಗಲಿ ಎಲ್ಲೋ ದೂರ ಒಬ್ಬಂಟಿ
ಓಡಿ ಹೋಗುತ್ತೆ ಹೊಸ ಸೋಲಿನ ಭಯದಲ್ಲಿ
ಗುರುಗುಟ್ಟುತ್ತಾ ತಲೆ ಮರೆಸಿ ತಿರುಗಾಡುತ್ತೆ
ತನ್ನ ಸೋಲಿನ ಗಾಯಗಳ ನೆಕ್ಕುತ್ತಾ ಬಿಕ್ಕುತ್ತೆ

ಈ ತೋಳ ತನ್ನ ಹಿಂಡನ್ನಗಲಿ ಈ ರೀತಿ
ಒಬ್ಬಂಟಿ ಪಡುವ ಪಾಡು ನಮಗೆ ಅರ್ಥವಾದೀತು
ಆದರೆ ಒಮೊಮ್ಮೆ ನಮ್ಮಲ್ಲೇ ಒಬ್ಬರು ಇದೇ ರೀತಿ
ಮನಸ್ಸು ಕಹಿಯಾಗಿ ತಲೆ ಮರೆಸಿ ತಿರುಗಿದರೆ
ಅದನ್ನು ಒಪ್ಪಿಕೊಳ್ಳುವುದು ಎಷ್ಟು ಕಷ್ಟವಲ್ಲವೇ.

Close

ಸಮೂಹ ಸಂಸ್ಕೃತಿ

ಸಮೂಹ ಸಂಸ್ಕೃತಿ

ಬಿ ಎಸ್ ಚಂದ್ರಶೇಖರ

ಇಂದಿನ ಜನರ ಸಾಂಸ್ಕೃತಿಕ ವಸ್ತುಗಳ ಸೇವನೆ ಸ್ಪಷ್ಟವಾಗಿ ಎರಡು ಹಂತಗಳಲ್ಲಿ ಗೋಚರವಾಗುತ್ತದೆ. ಉತ್ತಮ ಕತೆ, ಕಾದಂಬರಿ, ನಾಟಕ, ಕಾವ್ಯ, ಸಂಗೀತ, ಚಿತ್ರ, ಶಿಲ್ಪ ಮೊದಲಾದ ಕಲಾಪ್ರಕಾರಗಳಲ್ಲಿ, ಸಾಮಾಜಿಕ, ಆರ್ಥಿಕ, ರಾಜಕೀಯ ವಿಷಯಗಳ ಮೀಮಾಂಸೆಗಳಲ್ಲಿ, ಆಧುನಿಕ ವಿಜ್ಞಾನದ ಸಾಧನೆಗಳಲ್ಲಿ ಆಸಕ್ತಿ ತೋರಿಸುವವರು ಕೆಲವರಿದ್ದರೂ, ಹೆಚ್ಚಿನ ಜನ ಓದಲು ಬಯಸುವುದು-‘ಸುಧಾ’ ‘ಮಲ್ಲಿಗೆ’ ‘ಚಂದಮಾಮ’ಗಳನ್ನು, ದೈನಂದಿನ ಧಾರಾವಾಹಿ ಕಾದಂಬರಿಗಳನ್ನು, ಯಾವುದೇ ಮಹತ್ವದ ವಿಷಯವನ್ನಾಗಲಿ ಮರು ಪುಟಕ್ಕೆ ಸಂಗ್ರಹಿಸುವ ‘ಡೈಜಸ್ಟ್’ ಲೇಖನಗಳನ್ನು, ವಿನೋದ ಚಿತ್ರಕತೆಗಳನ್ನು, ಕೇಳಬಯಸುವುದು – ವಿವಿಧ ಭಾರತಿ, ರೇಡಿಯೋ ಸಿಲೋನ್ ಚಿತ್ರಸಂಗೀತವನ್ನು : ನೋಡಬಯಸುವುದು ಅದ್ದೂರಿ ದೃಶ್ಯ, ಅಬ್ಬರದ ಸಂಗೀತ ಕ್ಲೀಷೆಯ ಸಂಭಾಷಣೆ ತುಂಬಿರುವ ಚಲನ ಚಿತ್ರಗಳನ್ನು, ಹಿಂದೆ ಸಂಗೀತ, ಸಾಹಿತ್ಯ, ಕಲೆಗಳಲ್ಲಿ ಸಮಾಜದ ಕೆಲವೇ ಜನ ಆಸಕ್ತಿವಹಿಸುತ್ತಿದ್ದರೆ ಇಂದು ಸಮಾಜದ ಎಲ್ಲಾ ವರ್ಗಗಳ ಜನ ಕೆಲವು ರೀತಿಯ ಸಾಂಸ್ಕೃತಿಕ ವಸ್ತುಗಳನ್ನು ಬಯಸುತ್ತಿದ್ದಾರೆ. ‘ಬಂಗಾರದ ಮನುಷ್ಯ’ ದಂತಹ ಚಿತ್ರವನ್ನು ಕಾಲೇಜಿನಲ್ಲಿ ಕಲಿತವರು ನೋಡುತ್ತಾರೆ. ಅನಕ್ಷರಸ್ಥರೂ ನೋಡುತ್ತಾರೆ. ಹಳ್ಳಿಯವರೂ, ಪಟ್ಟಣದವರೂ, ಉನ್ನತ ಹುದ್ದೆಯಲ್ಲಿರುವವರೂ, ಗುಮಾಸ್ತರೂ, ಕಾರ್ಖಾನೆಯ ಕಾರ್ಮಿಕರೂ, ಮಕ್ಕಳೂ, ದೊಡ್ಡವರೂ, ಹಣವಂತರೂ, ಬಡವರು, ಎಲ್ಲಾ ರೀತಿಯ ಜನರಿಗೂ ಈ ಸಿನಿಮಾ ರುಚಿಸುತ್ತದೆ. ಹೀಗೆ ಸಮಾಜದ ಎಲ್ಲಾ ವರ್ಗದ ಜನ ಒಂದು ಸಾಂಸ್ಕೃತಿಕ ವಸ್ತುವಿನಲ್ಲಿ ಆಸಕ್ತಿ ತೋರಿಸುವುದು ಚರಿತ್ರೆಯಲ್ಲಿ ಹಿಂದೆ ಯಾವಾಗಲೂ ಇಲ್ಲದಂತಹದು. ಇಂತಹ ಒಂದು ಅಪೂರ್ವ ಪರಿಸ್ಥಿತಿಗೆ ಕಾರಣಗಳನ್ನು ಇದರಿಂದಾಗಿರುವ ಪರಿಣಾಮಗಳನ್ನು ಚರ್ಚಿಸುವುದಕ್ಕೆ ಮುಂಚೆ, ಸಂಸ್ಕೃತಿ ಮತ್ತು ಅದು ಅಭಿವ್ಯಕ್ತಿಯಾಗುವ ರೀತಿಯ ಬಗೆಗೆ ಕೊಂಚ ತಿಳಿಯುವುದು ಅಗತ್ಯ.

ಸುತ್ತಲಿನ ಪರಿಸರವನ್ನು ಅರಿತುಕೊಳ್ಳಲು ಮಾಡುತ್ತಿರುವ ಪ್ರಯತ್ನ, ನಡೆಯುತ್ತಿರುವ ಘಟನೆಗಳಿಗೆ ಅರ್ಥವನ್ನು ಕೊಡುವುದು, ಪರಮಸತ್ಯದೊಂದಿಗೆ ಸಂಬಂಧ ಹೊಂದುವುದು ಅಥವಾ ಅದನ್ನು ನಿರಾಕರಿಸುವುದು. ನೀತಿನಿಯಮಗಳನ್ನು ರೂಪಿಸುವುದು ಅಥವಾ ಮುರಿಯುವುದು, ಅಧಿಕಾರವನ್ನು ಎತ್ತಿಹಿಡಿಯುವುದು ಅಥವಾ ಅಲ್ಲಗಳೆಯುವುದು. ಪದ, ಶಬ್ದ, ರೂಪ, ಬಣ್ಣಗಳಿಂದ ಭಾವನೆಗಳನ್ನು ಪ್ರಚೋದಿಸುವುದು ಮತ್ತು ನಿಯಂತ್ರಿಸುವುದು ಇವುಗಳ ಮೂಲಕ ಸಮಾಜದಲ್ಲಿ ಸಂಸ್ಕೃತಿ ಅಭಿವ್ಯಕ್ತವಾಗುತ್ತದೆ ಎಂದು ಎಡ್ವರ್ಡ ಹಿಲ್ಸ್ ಹೇಳುತ್ತಾನೆ, “ಭಾರತೀಯ ಸಂಸ್ಕೃತಿ’ ‘ಕರ್ನಾಟಕ ಸಂಸ್ಕೃತಿ’ ‘ಹನ್ನೆರಡನೇ ಶತಮಾನದ ಸಂಸ್ಕೃತಿ’ ಎಂದು ಮುಂತಾಗಿ ಕರೆದರೂ ಯಾವುದೇ ಸಮಾಜದಲ್ಲಿ, ಯಾವುದೇ ಕಾಲದಲ್ಲಿ ಸಂಸ್ಕೃತಿ ಹಲವು ಮಟ್ಟಗಳಲ್ಲಿ, ಹಲವು ಸ್ತರಗಳಲ್ಲಿ ಪ್ರಕಟವಾಗುತ್ತದೆ ಎನ್ನುವುದು ಸ್ವಯಂವೇದ್ಯ. ಸಂಸ್ಕೃತಿ ಅಭಿವ್ಯಕ್ತವಾಗುವ ಸ್ಥೂಲವಾದ ಮೂರು ಮಟ್ಟಗಳನ್ನು ಗುರುತಿಸಬಹುದು. ಒಂದು High brow-ಉನ್ನತ ಸಂಸ್ಕೃತಿ
ಸಾಂಪ್ರದಾಯಿಕವಾಗಿ ಯಾವುದನ್ನು ನಾವು ಸಂಸ್ಕೃತಿ ಎಂದು ಕರೆಯುತ್ತೇವೆಯೋ ಅದು. ಎರಡು Middle brow-ಹೆಚ್ಚಿನ ಜನ ಇಷ್ಟಪಡುವ ಕಲಾ ಪ್ರಕಾರಗಳು ಮತ್ತು ಮೂರನೆಯದು Low brow – ಕೆಲವು ರೀತಿಯ ಜನ ಮೆಚ್ಚುವ ಅಸಭ್ಯ ಪುಸ್ತಕಗಳು, ಕುದುರೆಪಂದ್ಯ, ಪೋಲಿಹಾಕು ಇತ್ಯಾದಿ. ಎಡ್ವರ್ಡ್ ಷಿಲ್ಸ್ ಈ ಮೂರು ಮಟ್ಟಗಳನ್ನು ಉನ್ನತ ಸಂಸ್ಕೃತಿ, ಎರಡನೆ ದರ್ಜೆ ಸಂಸ್ಕೃತಿ, ಪಾಶವೀಸಂಸ್ಕೃತಿ ಎಂದು ಕರೆಯುತ್ತಾನೆ.

ಉನ್ನತ ಸಂಸ್ಕೃತಿ ಸೌಂದರ್ಯ, ಸಾಹಿತ್ಯ, ವಿಜ್ಞಾನ ಕ್ಷೇತ್ರಗಳಲ್ಲಿನ ಗಣ್ಯರಿಂದ ಅವರ ಮೇಲ್ವಿಚಾರಣೆಯಲ್ಲಿ ಸೃಷ್ಟಿಸಲ್ಪಡುತ್ತದೆ. ಇಲ್ಲಿ ನಿರ್ದಿಷ್ಟ ವಿಮರ್ಶಾಮಾನಗಳಿದ್ದು, ಕಲಾಕೃತಿಗಳನ್ನು ಅವುಗಳನ್ನು ಉಪಯೋಗಿಸುವವರ ಅವಶ್ಯಕತೆಗಳಿಂದ ಮಾತ್ರ ಅಳೆಯುವುದಿಲ್ಲ. ಇದರಲ್ಲಿ ಕಾವ್ಯ, ನಾಟಕ, ಕತೆ, ಕಾದಂಬರಿ ಮೊದಲಾದ ಸಾಹಿತ್ಯ ಪ್ರಕಾರದಲ್ಲಿನ ಉತ್ತಮ ಕೃತಿಗಳೂ, ವಿಜ್ಞಾನದ ಮಹತ್ಸಾಧನೆಗಳೂ, ದರ್ಶನ, ಇತಿಹಾಸ, ಅರ್ಥಶಾಸ್ತ್ರ, ಸಮಾಜ ವಿಜ್ಞಾನಗಳಲ್ಲಿನ ಗಹನವಾದ ಮೀಮಾಂಸೆಗಳೂ, ಸಂಗೀತ, ನೃತ್ಯ, ಶಿಲ್ಪ ಮೊದಲಾದ ಕಲಾಪ್ರಕಾರಗಳಲ್ಲಿನ ಉನ್ನತ ರಚನೆಗಳೂ ಸೇರಿರುತ್ತವೆ. ಸಮಕಾಲೀನವಷ್ಟೆ ಅಲ್ಲದೇ ಇಲ್ಲಿಯವರೆಗಿನ ಎಲ್ಲ ಮಹಾಕೃತಿಗಳೂ ಉನ್ನತ ಸಂಸ್ಕೃತಿಯಲ್ಲಿ ಸೇರಿರುತ್ತವೆ. ಎರಡನೆ ದರ್ಜೆ ಸಂಸ್ಕೃತಿಯಲ್ಲಿ ಮೇಲೆ ಹೇಳಿದ ವಿಮರ್ಶೆಯ ಮಾಪನಗಳಲ್ಲಿ ತೇರ್ಗಡೆ ಹೊಂದದ ಕೃತಿಗಳು ಸೇರುತ್ತವೆ. ಸೃಷ್ಟಿಸುವವರ ಆಶಯಗಳೇನೇ ಇರಲಿ ಇವು ಉನ್ನತ ಸಂಸ್ಕೃತಿಯ ಕೃತಿಗಳ ದರ್ಜೆಗೆ ಏರಲಾರವು. ಇಲ್ಲಿ ಸ್ವಂತಿಕೆ ಕಡಿಮೆ, ಹೆಚ್ಚಿನವು ನಕಲೀ ಮಾಲು. ಆದರೆ ಅಪರೂಪವಾಗಿ ಇಲ್ಲಿಯ ಪ್ರತಿಭೆ ಮಿಂಚುವುದು. ಚರ್ಲಿ ಚಾಪ್ಲಿನ್‌ನಂತಹ ಕಲಾವಿದರಿರುವುದು ಸಾಧ್ಯ. ಇಲ್ಲಿನ ಕೃತಿಗಳ ಆಯುರ್ಮಾನದಿಂದಾದಿ ಇಂದು ಚೆನ್ನ ಎನಿಸಿದ್ದು ನಾಳೆ ಬೋರ್ ಆಗುವುದರಿಂದ ಯಾವುದೇ ಸಮಯದಲ್ಲಿ ಇಲ್ಲಿರುವ ಒಟ್ಟು ಸರಕು ಕಡಿಮೆಯೇ. ಪಾಶವೀ ಸಂಸ್ಕೃತಿಯಲ್ಲಿ ಆಟಗಳು ನೋಟಗಳು ಮೊದಲಾಗಿ ಸಾಂಕೇತಿಕತೆ ತೀರಾ ಕಡಿಮೆಯಿರುವ ವಸ್ತುಗಳು ಸೇರುತ್ತವೆ ಇಲ್ಲಿನ ಕೃತಿಗಳು ತುಂಬಾ ಒರಟು. ಹೆಚ್ಚಿನ ಸಂದರ್ಭಗಳಲ್ಲಿ ಮನುಷ್ಯನ ಹೀನಪ್ರವೃತ್ತಿಗಳನ್ನು ತಣಿಸುವಂತಹುವು.

ಈ ವಿಭಾಗದಂತೆ ನೂರಿನ್ನೂರು ವರ್ಷಗಳ ಹಿಂದಿನ ಮತ್ತು ಈಗಿನ ಸಂಸ್ಕೃತಿಯನ್ನು ಪರಿಶೀಲಿಸಿದಾಗ, ಹಿಂದೆ ಉನ್ನತಸಂಸ್ಕೃತಿ ಕೆಲವೇ ವಿಚಾರವಂತರ, ಅನುಕೂಲವಂತರ, ಸಾಮಾಜಿಕವಾಗಿ ಗಣ್ಯರಾಗಿದ್ದವರ ಆಸ್ತಿಯಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಆಸ್ಥಾನ ವಿದ್ವಾಂಸರ ಸಂಗೀತದಲ್ಲಿ ರಾಜರು, ಅವರ ನಿಕಟವರ್ತಿಗಳು ಮಾತ್ರ ಆಸಕ್ತಿ ತೋರಿಸುತ್ತಿದ್ದರು. ಕಾವ್ಯ, ನಾಟಕ, ನೃತ್ಯ, ಚಿತ್ರ ಮೊದಲಾದ ಪ್ರಕಾರಗಳೂ ಸಹ ಕೆಲವೇ ಜನರ-ಹೆಚ್ಚಾಗಿ ಆಳುವವರ, ಅಧಿಕಾರಸ್ಥರ, ಧರ್ಮಗುರುಗಳ ಆಶ್ರಯವನ್ನು ಅವಲಂಬಿಸಬೇಕಾಗಿತ್ತು. ಈ ಜನ ಇಂತಹ ಸಾಂಸ್ಕೃತಿಕ ವಸ್ತುಗಳ ಬಗೆಗೆ ತುಂಬಾ ಎಚ್ಚರಿಕೆ ವಹಿಸಿ, ಸಾಮಾಜಿಕವಾಗಿ ಕೆಳಗಿರುವವರಿಗೆ ಇವು ಸಿಗದಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಸಾಮಾನ್ಯ ಜನರಿಗೆ ದಿನದ ವೇಳೆಯನ್ನೆಲ್ಲಾ ಅವರು ಮಾಡುತ್ತಿದ್ದ ಕೆಲಸಗಳೇ ನುಂಗುತ್ತಿದ್ದುದರಿಂದ ಇಂತಹ ಸಂಸ್ಕೃತಿಯ ಅಗತ್ಯವೂ ಅಷ್ಟಾಗಿರಲಿಲ್ಲ. ಹಬ್ಬದ್ದಲ್ಲಿ, ಸುಗ್ಗಿಯಲ್ಲಿ, ತುಂಬ ಸಂತೋಷವಾದಾಗ, ತುಂಬ ದುಃಖವಾದಾಗ ಭಾವನೆಗಳನ್ನು ಆ ಜನ ಜಾನಪದಗೀತೆಯಂತಹ ಕಲಾಪ್ರಕಾರಗಳಲ್ಲಿ ವ್ಯಕ್ತಪಡಿಸುತ್ತಿದ್ದರು. ಪಾಶವೀ ಪ್ರವೃತ್ತಿಗಳನ್ನು ತಣಿಸಲು ಬೇಟೆ, ಕಂಬಳ, ಕೋಳಿಕಾಳಗದಂತಹ ಆಟಗಳಿದ್ದವು. ಆಗ ವಿದ್ಯಾವಂತ, ಸುಸಂಸ್ಕೃತ ಎಂದರೆ ಉನ್ನತ ಸಂಸ್ಕೃತಿಯ ವಸ್ತುಗಳನ್ನು ಅರ್ಥಮಾಡಿಕೊಳ್ಳಬಲ್ಲವ, ಬಯಸುವವ ಎನ್ನುವ ಭಾವನೆಯಿತ್ತು. ಕೆಲವೇ ವರ್ಷಗಳ ಹಿಂದೆ ನಮ್ಮಲ್ಲಿ ಒಬ್ಬ ವಿದ್ಯಾವಂತ ಎನಿಸಿಕೊಳ್ಳಬೇಕಾದರೆ ಅವನಿಗೆ ಜೈಮಿನಿ ಓದಲು, ತಿಳಿಯಲು ಬರುತ್ತದೆ ಎನ್ನುವ ನಂಬಿಕೆಯಿತ್ತು ಎನ್ನುವುದನ್ನು ಇಲ್ಲಿ ನೆನೆಯಬಹುದು.

ಇಂದು ಉನ್ನತ ಸಂಸ್ಕೃತಿಯ ವಸ್ತುವಿನಲ್ಲಿ ಆಸಕ್ತಿಯಿರುವವರು ಕೆಲವರಿದ್ದರೂ ಹೆಚ್ಚಿನ ಜನ ಬಯಸುವುದು ಸುಲಭ ಮನರಂಜನೆಯ ವಸ್ತುಗಳನ್ನು. ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿನ ಒಂದೇ ಫಾರ್ಮುಲಾದ, ಮಧ್ಯಮ ವರ್ಗದ ಸೀಮಿತ ಅನುಭವವನ್ನು ಮಾತ್ರ ಚಿತ್ರಿಸುವ ಯಾವ ಕಲಾವಂತಿಕೆಯ ಇಲ್ಲದ ಅತಿ ಸಾಧಾರಣ ಕತೆಗಳು. ಇಂತಹುವೇ ಕಾದಂಬರಿಗಳು ಎಲ್ಲವನ್ನೂ ಸರಳೀಕರಿಸುವ ಡೈಜಸ್ಟ್ ಲೇಖನಗಳು, ವಿಲಿಯನ್ ಗಟ್ಟಲೆ ಮಾರಾಟವಾಗುವ ಪತ್ತೇದಾರಿ ಕಾದಂಬರಿಗಳು. ಐದರಿಂದ ನೂರು ವರ್ಷ ವಯಸ್ಸಿನ ಮಕ್ಕಳೂ, ಓದುವ ಟಾರ್ಜಾನ್, ಮಾಂಡ್ರೇಕ್‌ ಶ್ರೀರಾಮನ್ ಮೊದಲಾದ ಚಿತ್ರಕತೆಗಳೂ, ಕೆಲ ಕ್ಷಣ ಉದ್ರೇಕಿಸುವ, ಕೆಲವು ದಿನಗಳು ಎಲ್ಲರ ಬಾಯಲ್ಲೂ ಇರುವ ಅಷ್ಟೇ ಬೇಗ ಎಲ್ಲರೂ ಮರೆಯುವ ಚಿತ್ರಗೀತೆಗಳು. ಲೈಂಗಿಕತೆ, ಪಾಪ ಯಶಸ್ಸುಗಳ ತ್ರಿಕೋನದಲ್ಲಿ ನಿರಂತರವಾಗಿ ಸುತ್ತುವ ಚಲನಚಿತ್ರಗಳೂ, ಇದೇ ರೀತಿಯ ರೇಡಿಯೋ, ಟೆಲಿವಿಷನ್ ಕಾರ್ಯಕ್ರಮಗಳೂ ಇಂತಹ ಸಾಂಸ್ಕೃತಿಕ ಪ್ರಕಾರಗಳು, ಸಮಾಜದ ಎಲ್ಲಾ ವರ್ಗಗಳ ಜನರನ್ನು ಆಕರ್ಷಿಸುವುವು. ಇಂತಹವನ್ನು ಒಟ್ಟು ಸೇರಿಸಿ ‘ಸಮೂಹ ಸಂಸ್ಕೃತಿ’ (Mass culture) ಅಥವಾ ಜರ್ಮನ್ ಭಾಷೆಯ KITSCH ಎಂದು ಕರೆಯಬಹುದು.

ಸಮೂಹ ಸಂಸ್ಕೃತಿಯ ಮುಖ್ಯ ಲಕ್ಷಣವೆಂದರೆ ಇಲ್ಲಿನ ವಸ್ತುಗಳು ಸಮೂಹ ಮಾರುಕಟ್ಟೆಗಾಗಿ ತಯಾರಾದುವು ಮತ್ತು ಈ ಸಂಸ್ಕೃತಿ ಪ್ರಸಾರವಾಗುವುದು ಸಮೂಹ ಸಂಪರ್ಕ ಮಾಧ್ಯಮಗಳ ಮೂಲಕ. ಬೇರೆ ವಿಧದಲ್ಲಿ ಯಾವ ಸಾಮಾನ್ಯ ಅಂಶಗಳನ್ನು ಹೊಂದಿಲ್ಲದ ಸಮೂಹ ಸಮಾಜವನ್ನು ಏಕೀಕರಿಸುವ ಒಂದು ಶಕ್ತಿ ಸಮೂಹ ಸಂಸ್ಕೃತಿ. ಇದು ತನ್ನ ಶೋತೃಗಳ ಅಭಿರುಚಿಯು ಲಘುತ್ತಮ ಸಾಮಾನ್ಯ ಅಂಶಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಎಲ್ಲರಿಗೂ ಆಕಲುಷಿತ ಸುಲಭವಾಗಿ ಅರ್ಥವಾಗುವಂತಹುದು. ಜನಪ್ರಿಯ ಪತ್ರಿಕೆ, ವಾಣಿಜ್ಯ, ರೇಡಿಯೋ, ಟೆಲಿವಿಷನ್‌ ಮತ್ತು ಚಲನಚಿತ್ರಗಳಲ್ಲಿ ಸಮೂಹ ಸಂಸ್ಕೃತಿಯ ಆಕಲುಷಿತ ರೂಪಗಳನ್ನು ನೋಡಬಹುದು. ಸಮೂಹ ಸಂಸ್ಕೃತಿಗೆ ದೇಶ, ಭಾಷೆ, ರಾಜ್ಯಗಳ ಗಡಿಯಿಲ್ಲ. ಭಾರತದಂತಹ ವಿವಿಧ ಭಾಷಾ ರಾಷ್ಟ್ರದಲ್ಲಿ ಲತಾ ಮಂಗೇಶ್ಕರ್‌, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಅತ್ಯಂತ ಜನಪ್ರಿಯ ಗಾಯಕಿ, ‘ಚಂದಮಾಮ’ ಭಾರತದ ಎಲ್ಲಾ ಭಾಷೆಗಳಲ್ಲೂ ಒಂದೇ ರೀತಿಯ ಕತೆಗಳನ್ನು ಪ್ರಕಟಿಸುತ್ತದೆ. ಭಾಷೆ ರೂಪ ಬೇರೆ ಇದ್ದರೂ `ಸುಧಾ’ ‘ಸಾರಿಕಾ’ “ಆಂದ್ರಪ್ರಭ’ ‘ಕುಮುದಂ’ ಗಳಲ್ಲಿನ ಕತೆ, ಲೇಖನಗಳಲ್ಲಿ ಅಂತಹ ವ್ಯತ್ಯಾಸವಿರುವುದಿಲ್ಲ. ಒಂದರಲ್ಲಿ ಜನಪ್ರಿಯವಾದದ್ದು ಇನ್ನೊಂದರಲ್ಲೂ ಅಷ್ಟೆ ಜನಪ್ರಿಯವಾಗುತ್ತದೆ. ಇನ್ನೂ ಸ್ವಲ್ಪ ದೂರದೃಷ್ಟಿ ಹಾಯಿಸಿದರೆ ಹಿಂದಿ ಸಿನಿಮಾ ಹಾಡುಗಳಿಗೆ (ಹಾಗೂ ಇತರ ಭಾಷಾ ಚಿತ್ರ ಗೀತೆಗಳಿಗೆ) ಪ್ರೇರಣೆ ಪಾಶ್ಚಿಮಾತ್ಯ ಟ್ಯೂನ್‌ಗಳು, ಇಂಗ್ಲಂಡ್, ಅಮೆರಿಕಾದಲ್ಲಿ
ಜನಪ್ರಿಯವಾದ ಮಟ್ಟು ಇಲ್ಲೂ ಸಣ್ಣ ವ್ಯತ್ಯಾಸಗಳೊಂದಿಗೆ ಆಥವಾ ಯಾವ ವ್ಯತ್ಯಾಸವೂ ಇಲ್ಲದೆ ಜನಪ್ರಿಯವಾಗುತ್ತದೆ. ಅಮೆರಿಕದ ಬ್ಲಾಂಕಿ, ಡೆನ್ನಿಸ್, ಟಾರ್ಜಸ್ ವಿಶ್ವದಲ್ಲಿ ಎಲ್ಲಾ ಕಡೆಯಲ್ಲಿಯೂ ಪರಿಚಿತವಾಗಿರುವ ಪಾತ್ರಗಳು. ಈ ರೀತಿ ಸಮೂಹ ಸಂಸ್ಕೃತಿ ಆಧುನಿಕ ವಿಶ್ವದ ಸಂಸ್ಕೃತಿಯಾಗುತ್ತಿದೆ.

ಕಳೆದ ನೂರಿನ್ನೂರು ವರ್ಷಗಳಲ್ಲಿ ಸಮೂಹ ಸಂಸ್ಕೃತಿ ಬೆಳೆಯುತ್ತಿರುವುದಕ್ಕೆ ಕಾರಣಗಳನ್ನು ನೋಡಿದಾಗ ಎರಡು ಮುಖ್ಯ ಸಂಗತಿಗಳು ಗೋಚರವಾಗುತ್ತವೆ. ಒಂದು ತಾಂತ್ರಿಕ ಕ್ಷೇತ್ರದಲ್ಲಿನ ಪ್ರಗತಿ, ಎರಡು-ಹೆಚ್ಚುತ್ತಿರುವ ಅಕ್ಷರತೆ, ಮುದ್ರಣ ಯಂತ್ರ ಬಂದಮೇಲೆ ಸಂಸ್ಕೃತಿಯ ವಸ್ತುಗಳು ಕೆಲವೇ ಜನರ ಗುತ್ತಿಗೆಯಾಗುವುದು ತಪ್ಪಲೇಬೇಕಾಯಿತು. ಹೆಚ್ಚು ಜನ ಪುಸ್ತಕದಲ್ಲಿನ ಜ್ಞಾನವನ್ನು ನಿಲುಕಿಸಿಕೊಳ್ಳುವುದು ಸಾಧ್ಯವಾಯಿತು. ಇದೇ ಸಮಯದಲ್ಲಿ ಹರಡಲಾರಂಭಿಸಿದ ಸಮೂಹ ಶಿಕ್ಷಣ ಪದ್ಧತಿಯಿಂದ ಇಂತಹ ಮುದ್ರಿತ ಪುಸ್ತಕಗಳಿಗೆ ಬೇಡಿಕೆ ಹೆಚ್ಚಾಗುತ್ತಾ ಬಂದಿತು. ಆಗ ಪ್ರಾರಂಭವಾದ ಪತ್ರಿಕೆಗಳು ಈ ಹೆಚ್ಚಿನ ಸಾಂಸ್ಕೃತಿಕ ಬೇಡಿಕೆಗಳನ್ನು ಪೂರೈಸತೊಡಗಿದವು. ಮುಂದೆ ಚಲನಚಿತ್ರ, ರೇಡಿಯೋ, ಟೆಲಿವಿಷನ್‌ ಮಾಧ್ಯಮಗಳ ಮೂಲಕ ಏಕಕಾಲದಲ್ಲಿ ಅಸಂಖ್ಯಾತ ಜನರ ಅವಶ್ಯಕತೆಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಸಾಧ್ಯವಾಗುವಂತಾಯಿತು. ಈ ಮಾಧ್ಯಮಗಳು ವ್ಯವಸ್ಥಿತವಾದ ರೀತಿಯಲ್ಲಿ ಇಂತಹ ಬೇಡಿಕೆಗಳನ್ನು ಇನ್ನೂ ತೀವ್ರವಾಗಿ ಹೆಚ್ಚಿಸುವುದು ಅಗತ್ಯವಾಗುವಂತೆ ಮಾಡಿತು. ಉದಾಹರಣೆ ಒಂದು ಪತ್ರಿಕೆ ಆರ್ಥಿಕವಾಗಿ ಭದ್ರವಾಗಿರಬೇಕಾದರೆ ಅದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಜಾಹೀರಾತು ಬರಬೇಕು. ಇಂತಹ ಜಾಹಿರಾತಿಗಾಗಿ ಪ್ರಸಾರವನ್ನು ಹೆಚ್ಚಿಸಿಕೊಳ್ಳವುದು ಪತ್ರಿಕೆಗೆ ಅನಿವಾರ್ಯವಾಗುತ್ತದೆ. ಪ್ರಸಾರವನ್ನು ಹೆಚ್ಚಿಸಿಕೊಳ್ಳಲು ವೈವಿಧ್ಯಮಯ ಅಭಿರುಚಿಗಳನ್ನು ತಣಿಸುವುದು ಅಥವಾ ಅಭಿರುಚಿಯನ್ನು ಏಕರೂಪಕ್ಕೆ ತರುವುದು ಅಗತ್ಯವಾಗುತ್ತದೆ.

ಹೆಚ್ಚಿನ ಅಕ್ಷರತೆ, ಸಾಂಸ್ಕೃತಿಕ ವಸ್ತುಗಳಿಗೆ ಬೇಡಿಕೆ ಹೆಚ್ಚಿಸಿದ್ದು ಮತ್ತು ಹೊಸ ಮಾಧ್ಯಮಗಳು ಈ ಬೇಡಿಕೆಯನ್ನು ಪೂರೈಸಲು ಮಾರ್ಗಗಳನ್ನು ಕೊಟ್ಟಿದುದು ಸಮೂಹ ಸಂಸ್ಕೃತಿ ಬೆಳೆಯುವುದಕ್ಕೆ ಮುಖ್ಯ ಕಾರಣಗಳಾದರೆ, ಸಮೂಹ ಸಂಸ್ಕೃತಿಗೆ ಪೋಷಕವಾಗಿರುವ ಇನ್ನೂ ಕೆಲವು ಅಂಶಗಳನ್ನು ಗಮನಿಸಬೇಕು. ವೈಜ್ಞಾನಿಕ ಪ್ರಗತಿಯಿಂದಾಗಿ ಜನ ಕಷ್ಟ ಕೆಲಸಗಳಲ್ಲಿ ಹೆಚ್ಚು ಸಮಯ ತೊಡಗಿಸುವುದು ಬಹುಮಟ್ಟಿಗೆ ಕಡಿಮೆಯಾಗಿದೆ. ಮನುಷ್ಯ ಮಾಡುತ್ತಿದ್ದ ಶ್ರಮದಾಯಕ ಕೆಲಸಗಳನ್ನು ಯಂತ್ರಗಳು ಮಾಡಲಾರಂಭಿಸಿದಂತೆ ಜನರಿಗೆ ವಿರಾಮ ವೇಳೆ ಹೆಚ್ಚಾಗುತ್ತಾ ಬರುತ್ತಿದೆ. ವಾರಕ್ಕೆ ಒಂದು ಎರಡು ದಿನ ರಜ. ದಿನಕ್ಕೆ ಹೆಚ್ಚೆಂದರೆ ಎಂಟುಗಂಟೆಗಳ ಕೆಲಸ, ಮನೆಗಳಲ್ಲಿ ನಲ್ಲಿ, ವಿದ್ಯುಚ್ಛಕ್ತಿ, ಗ್ಯಾಸ್‌, ಪ್ರೆಶರ್ ಕುಕ್ಕರ್‌ ಹೀಗೆ ಬಿಡುವು ಹೆಚ್ಚಿ, ಈ ಕಾಲವನ್ನು ತುಂಬಲು ಸಾಂಸ್ಕೃತಿಕ ವಸ್ತುಗಳ ಅವಶ್ಯಕತೆ ಹೆಚ್ಚುತ್ತಾ ಬಂದಿದೆ. ಹಾಗೆಯೇ ಕೆಲಸ ಸುಲಭವಾದಂತೆ ಬೇಜಾರಿನದೂ ಆಗುತ್ತದೆ. ಕಾರ್ಖಾನೆಯ ಕೆಲಸದಲ್ಲಿನ ಏಕತಾನತೆ, ಆವೈಯ್ಯಕ್ತಿಕತೆ ಕೆಲವು ಸಮಯ ಹುಚ್ಚು ಹಿಡಿಸುವಂತಹದು. ಇಂತಹ ಕೆಲಸದ ಬೇಸರದಿಂದ ಬಿಡುಗಡೆ ಹೊಂದಲು ವಿನೋದ, ಮನರಂಜನೆ ಅಗತ್ಯ ಹೆಚ್ಚಾಗುತ್ತದೆ. ಆಧುನಿಕ ಸಮಾಜಗಳಲ್ಲಿನ ರಾಜಕೀಯ ವ್ಯವಸ್ಥೆ ಸಹ ತನ್ನ ನೀತಿನಿಯಮಗಳು, ಅಭಿಪ್ರಾಯ ಧೋರಣೆಗಳು ಹೆಚ್ಚು ಹೆಚ್ಚು ಜನರಿಗೆ ತಿಳಿಯಬೇಕೆಂದು ಬಯಸುತ್ತದೆ. ಆ ದೇಶ ಪ್ರಜಾಪ್ರಭುತ್ವ ಪದ್ಧತಿ ಅನುಸರಿಸಲಿ, ಕಮೂನಿಸ್ಟ್ ಆಡಳಿತವಾಗಿರಲಿ, ಅಲ್ಲಿ ಹೆಚ್ಚು ಜನ ಸರಕಾರದ ಚಟುವಟಿಕೆಗಳಲ್ಲಿ ಸೇರಬೇಕು-ಜನ ಕುಟುಂಬಯೋಜನೆ ಅನುಸರಿಸಬೇಕು, ಉಳಿತಾಯ ಪತ್ರಕೊಳ್ಳಬೇಕು, ಹೊಸ ಕೃಷಿವಿಧಾನ ಒಪ್ಪಿಕೊಳ್ಳ ಬೇಕು, ತಮ್ಮ ಹಳ್ಳಿಗಳನ್ನು ಚೊಕ್ಕಟವಾಗಿಟ್ಟುಕೊಳ್ಳಬೇಕು ಇತ್ಯಾದಿ ಹಲವು ರೀತಿಯಲ್ಲಿ ಜನರ ಮನಸ್ಸನ್ನು ಒಲಿಸಲು, ಹೆಚ್ಚು ಜನ ಮಾಧ್ಯಮಗಳ ವ್ಯಾಪ್ತಿಯಲ್ಲಿ ಬರಬೇಕೆಂದು ಬಯಸುತ್ತದೆ. ಹಳ್ಳಿಯಲ್ಲಿ ರೇಡಿಯೋ ಇಲ್ಲದಿದ್ದಲ್ಲಿ ಸರ್ಕಾರವೇ ಒಂದನ್ನು ಸ್ಥಾಪಿಸುತ್ತದೆ. ಪತ್ರಿಕೆಗಳನ್ನು ಹಂಚುತ್ತದೆ. ಇಲ್ಲಿ ಮುಖ್ಯ ಉದ್ದೇಶ ಜನ ಕೃಷಿ ಕಾರ್ಯಕ್ರಮ ಕೇಳಲಿ, ಅಭಿವೃದ್ಧಿ ಯೋಜನೆಗಳ ಬಗೆಗೆ ಸಮಾಚಾರ ತಿಳಿಯಲಿ ಎಂದಿದ್ದರೂ, ಜನ ಕೃಷಿಕಾರ್ಯಕ್ರಮದೊಂದಿಗೆ ಚಿತ್ರಗೀತೆ ಕೇಳುತ್ತಾರೆ ಅಥವಾ ಚಿತ್ರಗೀತೆಯನ್ನು ಮಾತ್ರ ಕೇಳುತ್ತಾರೆ. ಇದೇ ಸಮಯದಲ್ಲಿ ಸಾಂಸ್ಕೃತಿಕ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುವುದಕ್ಕೆ ಇನ್ನೊಂದು ಮುಖ್ಯ ಕಾರಣ. ಜನರ ಅದರಲ್ಲೂ ಯುವಜನರ ಆದಾಯದಲ್ಲಿ ಆಗುತ್ತಿರುವ ಹೆಚ್ಚಳ, ಮಧ್ಯಮವರ್ಗ, ಕೆಳಮಧ್ಯಮವರ್ಗಗಳ ಜನ ಸಹ ಪತ್ರಿಕೆಕೊಳ್ಳಬಲ್ಲರು ರೇಡಿಯೋ ಖರೀದಿ ಮಾಡಬಲ್ಲರು, ಸಿನಿಮಾ ನೋಡಲು ಹಣವಿದೆ.

ಸಮೂಹ ಸಂಸ್ಕೃತಿ ಉನ್ನತ, ಚಾನಪದ ಸಂಸ್ಕೃತಿಯಿಂದ ಹೇಗೆ ಭಿನ್ನವಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಬಹಳ ಹಿಂದಿನ ಕಾಲದಲ್ಲಿ ಪಂಡಿತರು ಕಾಳಿದಾಸನ ನಾಟಕಗಳನ್ನು ಓದಿ ಸಂತೋಷಪಡುತ್ತಿದ್ದಾಗ, ಪಾಮರರು ತಮ್ಮದೇ ರೀತಿಯಲ್ಲಿ ಹಾಡಿ, ಕುಣಿದು, ನರ್ತಿಸುತ್ತಿದ್ದರು, ತಮ್ಮದೇ ಆದ ಜಾನಪದ ಸಂಸ್ಕೃತಿಯನ್ನು ಸೃಷ್ಟಿಸಿಕೊಂಡಿದ್ದರು. ಈ ಜನಪದ ಸಂಸ್ಕೃತಿಯ ಎರಡು ಮುಖ್ಯ ಲಕ್ಷಣಗಳನ್ನು ಹೀಗೆ ಗುರುತಿಸಬಹುದು: ಒಂದು ಇಲ್ಲಿ ಚಿತ್ರಿತವಾಗುವುದು ಶ್ರೋತೃವಿಗೆ ತುಂಬಾ ಪರಿಚಯವಿರುವ ಪ್ರಪಂಚ. ಸಾಮಾನ್ಯ ಜನರ ನಿತ್ಯ ಜೀವನದ ಘಟನೆಗಳು ಮಾತ್ರ ಜಾನಪದ ಸಂಸ್ಕೃತಿಯಲ್ಲಿ ಅಭಿವ್ಯಕ್ತವಾಗುತ್ತದೆ. ಎರಡನೆಯದಾಗಿ ಇಲ್ಲಿ ಕಲಾವಿದ, ಶ್ರೋತೃ ತುಂಬಾ ನಿಕಟವಾಗಿರುತ್ತಾರೆ. ಇಲ್ಲಿನ ಕಲೆಯಲ್ಲಿ ಶ್ರೋತೃ ತೀವ್ರವಾಗಿ ಸಹಭಾಗಿಯಾಗುತ್ತಾನೆ. ಜನಪದ ಕಲೆ ಉನ್ನತ ಕಲೆಗಳ ನಡುವೆ ಬಿಗಿಯಾಗಿದ್ದ ಬೇಲಿ ಆಗಿನ ಶ್ರೀಮಂತ ಬಡವರ ನಡುವಿನ ಕಂದರದಂತೆಯೇ ಅಗಮ್ಯವಾಗಿತ್ತು. ಸಾಮಾನ್ಯ ಜನರ ಸ್ವಯಂಪ್ರೇರಣೆಯಿಂದ ಉನ್ನತ ಸಂಸ್ಕೃತಿಯ ಸಂಪರ್ಕವಿಲ್ಲದೆ ಬೆಳೆದು ಬಂದ ಸಂಸ್ಥೆ ಜಾನಪದ ಸಂಸ್ಕೃತಿ. ಆದರೆ ಸಮೂಹ ಸಂಸ್ಕೃತಿ ಹೀಗೆ ಕೆಳಗಿನಿಂದ ಬೆಳೆಯುವುದಿಲ್ಲ. ಅದು ಮೇಲಿನಿಂದ ಹೇರಲ್ಪಡುತ್ತದೆ. ಸಮೂಹ ಸಂಸ್ಕೃತಿಯನ್ನು ನಿರ್ಮಿಸುವವರು ಮಾಧ್ಯಮಗಳು ನಿಯಮಿಸಿರುವ ತಂತ್ರಜ್ಞರು, ಇಲ್ಲಿನ ಶ್ರೋತೃಗಳು ಈ ಕಲಾಪ್ರಕಾರಗಳೊಂದಿಗೆ ಯಾವ ಸಂಬಂಧವೂ ಇಲ್ಲದ ನಿಷ್ಕ್ರಿಯ ಜನ.

ಉನ್ನತ ಕಲೆಯಲ್ಲಿ ಮೊದಲೇ ಹೇಳಿದಂತೆ, ನಿಷ್ಕೃಷ್ಟ ವಿಮರ್ಶಾಮಾನಗಳಿರುತ್ತವೆ. ಇಲ್ಲಿನ ವಸ್ತುಗಳನ್ನು ಅವುಗಳ ಶ್ರೋತೃಗಳ ಅವಶ್ಯಕತೆಯಿಂದಲೇ ಅಳೆಯುವುದಿಲ್ಲ. ಆದರೆ ಸಮೂಹ ಸಂಸ್ಕೃತಿ ಇರುವುದೇ ಶ್ರೋತೃಗಳ ತಕ್ಷಣದ ಅವಶ್ಯಕತೆಗಳನ್ನು ಪೂರೈಸಲು, ನಿಜವಾದ ಕಲಾವಿದ ತನ್ನ ಶ್ರೋತೃಗಳನ್ನೇ ಯಾವಾಗಲೂ ನೋಡುತ್ತಿರುವುದಿಲ್ಲ. ಅವರಿಗೆ ಏನು ಬೇಕು ಏನು ಬೇಡ ಎನ್ನುವುದನ್ನೇ ಗಮನದಲ್ಲಿಟ್ಟುಕೊಂಡಿರುವುದಿಲ್ಲ. ಆದರೆ ಸಮೂಹ ಸಂಸ್ಕೃತಿಯ ನಿರ್ಮಾತೃ ತನ್ನ ಶ್ರೋತೃವನು ಒಂದು ಕ್ಷಣವೂ ಮರೆಯಲಾರ. ಹೀಗೆ ಬರೆದರೆ ಎಷ್ಟು ಜನರು ಮೆಚ್ಚುತ್ತಾರೆ. ಹೀಗೆ ಬದಲಾಯಿಸಿದರೆ ಇನ್ನು ಎಷ್ಟು ಜನರನ್ನು ಆಕರ್ಷಿಸಬಹುದು ಎನ್ನುವುದೇ ಅವನ ಲಕ್ಷ್ಯ. ಸ್ವಾಯತ್ತ ವಿಮರ್ಶಾ ಸೂತ್ರಗಳು ಉನ್ನತ ಸಂಸ್ಕೃತಿಯನ್ನು ರೂಪಿಸಿದರೆ, ಜನರ ಲಘುತ್ತವು ಸಾಮಾನ್ಯ ಅಭಿರುಚಿ ಸಮೂಹ ಸಂಸ್ಕೃತಿಯನ್ನು ನಿರ್ಮಿಸುತ್ತದೆ. ಸಮೂಹ ಸಂಸ್ಕೃತಿಯ ಇರುವಿಕೆಗೆ ಹತ್ತಿರದಲ್ಲಿ ಪೂರ್ಣವಾಗಿ ಅಭಿವೃದ್ಧಿಯಾದ ಒಂದು ಉನ್ನತ ಸಾಂಸ್ಕೃತಿಕ ಪರಂಪರೆ ಅಗತ್ಯ ಎಂದು ಗ್ರೀನ್‌ಬರ್ಗ್‌ ಹೇಳುತ್ತಾನೆ. ಸಮೂಹ ಸಂಸ್ಕೃತಿ ಹುಟ್ಟಿದ್ದು, ಈಗಲೂ ಬದುಕುವುದು ಉನ್ನತ ಸಂಸ್ಕೃತಿಯ ಮೇಲೆ ಅವಲಂಬಿಸಿ ಉನ್ನತ ಸಂಸ್ಕೃತಿಯನ್ನು ಸಮೂಹ ಸಂಸ್ಕೃತಿ ಅಗೆಯುತ್ತದೆ, ತಿನ್ನುತ್ತದೆ ಬದಲಿಗೆ ಏನನ್ನೂ ಕೊಡುವುದಿಲ್ಲ. ಸಮೂಹ ಸಂಸ್ಕೃತಿ, ಉನ್ನತ ಸಂಸ್ಕೃತಿಯ ಎಲ್ಲಾ ರೀತಿಗಳನ್ನು, ಶೈಲಿಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಅದರ ಅರ್ಥ ಮತ್ತು ಭಾವಗಳನ್ನು ಮಾತ್ರ ಬಿಡುತ್ತದೆ. ಉನ್ನತ ಕಲೆಯ ನಿರ್ಜೀವವಾದ ರೂಪ ಸಮೂಹ ಕಲೆ. ನಿಜವಾದ ಕಲೆ ಜೀವನಕ್ಕೆ ಒಂದು ಹೊಸ ದೃಷ್ಟಿ, ಒಂದು ಹೊಸ ಅನುಭವವನ್ನು ಕೊಡುತ್ತದೆ. ಆದರೆ ಸಮೂಹ ಮಾಧ್ಯಮಗಳ ಗುರಿ ಈಗಾಗಲೇ ಸ್ವಯಂವೇದ್ಯವಾದುದನ್ನು ಮತ್ತೆ ಹೇಳುವುದು. ಇದರಿಂದಾಗಿ ಸಮೂಹ ಸಂಸ್ಕೃತಿಯಲ್ಲಿ ಕ್ಲೀಷೆ, ಪುನರುಕ್ತಿಗಳು ಮುಖ್ಯವಾಗುತ್ತದೆ.

ಸಮೂಹ ಸಂಸ್ಕೃತಿಯ ವಸ್ತುಗಳನ್ನು ಲೇಖಕ, ಕವಿ, ಕಲಾವಿದ, ಕಲಾವಿಮರ್ಶಕ, ಸಮಾಜವಿಜ್ಞಾನಿ, ಮನೋವಿಜ್ಞಾನಿ, ಶಿಕ್ಷಣತಜ್ಞ, ಶಿಕ್ಷಕ ಹೀಗೆ ಹಲವು ದೃಷ್ಟಿಕೋನದ ವಿಚಾರವಂತರು ತೀವ್ರವಾಗಿ ಟೀಕಿಸಿದ್ದಾರೆ. ಸಮೂಹ ಸಂಸ್ಕೃತಿಯಿಂದಾಗುತ್ತಿರುವ ಆಗಬಹುದಾದ ಕೆಟ್ಟ ಪರಿಣಾಮಗಳನ್ನು ವರ್ಣಿಸಿದ್ದಾರೆ. ಈ ಟೀಕಾಕಾರರಲ್ಲಿ ಟಿ. ಎಸ್. ಏಲಿಯಟ್, ಲೀವೀಸ್, ಗಾಸೆಟ್, ಮ್ಯಾಕ್ಡೊನಾಲ್ಡ್, ಗ್ರೀನ್ ಬರ್ಗೆ, ವ್ಯಾನ್‌ದಾನ್ ಹಾಗ್, ರೈಟ್‌ಮಿಲ್ಸ್ ಮೊದಲಾದವರ ಹೆಸರುಗಳನ್ನು ಉಲ್ಲೇಖಿಸಬಹುದು. ಸಮೂಹ ಸಂಸ್ಕೃತಿಯ ವಿರುದ್ಧದ ಆರೋಪಗಳನ್ನೆಲ್ಲಾ ಇಲ್ಲಿ ಹೇಳಲು ಸಾಧ್ಯವಿಲ್ಲದಿದ್ದರೂ ಕೆಲವು ಮುಖ್ಯ ವಾದಗಳನ್ನು ಗಮನಿಸಬಹುದು.

ಸಮೂಹ ಸಂಸ್ಕೃತಿ “ಸರಾಸರಿ’ ಅಭಿರುಚಿಯನ್ನು ಉದ್ದೇಶಿಸುವುದರಿಂದ ಇದು ಯಾರಿಗೂ ತೃಪ್ತಿ ಕೊಡುವುದಿಲ್ಲ. ಸರಾಸರಿ ಅಭಿರುಚಿ ಎನ್ನುವುದು ಒಂದು ರೀತಿಯ ಭ್ರಮೆ. ಸಾಮಾನ್ಯ ಜನ ಎಂದು ನಾವು ಹೇಳುವುದು ನಮ್ಮನ್ನು ಬಿಟ್ಟು – ಉಳಿದೆಲ್ಲರಿಗೂ ಅನ್ವಯಿಸುವಂತೆ. ಯಾವುದೇ ಸಂಸ್ಕೃತಿ ವಿಶೇಷದಿಂದ ಸಂತೋಷ ಸಿಗುವುದು, ಅದು ಕೆಲವು ವೈಯಕ್ತಿಕ ಆಶಯಗಳನ್ನು ಪೂರೈಸಿದಾಗ, ಸಮೂಹ ಸಂಸ್ಕೃತಿಯಲ್ಲಿ ಇದು ಸಾಧ್ಯವಿಲ್ಲ. ಇಲ್ಲಿ ಸಂಸ್ಕೃತಿ ಒಂದು ಪ್ರೇಕ್ಷಕ ಕ್ರೀಡೆ ಆಗುತ್ತದೆ. ಜೀವನ ಮತ್ತು ಅನುಭವ ಇದರಿಂದ ಪೂರ್ಣವಾಗಿ ಪ್ರತ್ಯೇಕಗೊಂಡಂತಾಗುತ್ತದೆ. ಎಲ್ಲಾ ಅಭಿರುಚಿಗಳನ್ನು ತಣಿಸಲು ಪ್ರಯತ್ನಿಸುವ ಸಮೂಹ ಸಂಸ್ಕೃತಿ ಯಾರಿಗೂ ತೃಪ್ತಿಮಾಡುವುದಿಲ್ಲ ಎನ್ನುವುದು ಒಂದು ಮುಖ್ಯ ವಾದ.

ಸಮೂಹ ಸಂಸ್ಕೃತಿಯ ಏಕಮೇವ ಗುರಿ ಹೆಚ್ಚು ಜನರ ಮೆಚ್ಚುಗೆ ಪಡೆಯುವುದಾದುದರಿಂದ ಇಲ್ಲಿನ ವಸ್ತುಗಳನ್ನು ಸೇವಿಸಲು ಯಾವ ಪೂರ್ವ ಸಿದ್ಧತೆಯ ಬೇಕಾಗದಂತೆ ಅರ್ಥಮಾಡಿಕೊಳ್ಳಲು ಸ್ವಲ್ಪವೂ ಕಷ್ಟವಾಗದಂತೆ ನೋಡಿಕೊಳ್ಳಲಾಗುತ್ತದೆ. ಒಂದು ರೀತಿಯಲ್ಲಿ ಸಮೂಹ ಕಲೆ, ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಸಹ ವಸ್ತುವಿನಲ್ಲೇ ಅಡಕವಾಗುವಂತೆ ನಿರ್ಮಿತವಾಗಿರುತ್ತದೆ. ಅಡಿಗರ ಕವನ ಅರ್ಥವಾಗಬೇಕಾದರೆ ಓದುಗ ಅಲ್ಲಿನ ಕಾವ್ಯ ಗುಣವನ್ನು ತಾನೇ ಕಂಡುಕೊಳ್ಳಬೇಕು. ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡಬೇಕು. ಆದರೆ ಸಿನಿಮಾ ಹಾಡಿನ ಕಾವ್ಯಗುಣ ಶ್ರೋತೃವಿನ ಕಿವಿಗೆ ಹೊಡೆಯುವಂತಿರುತ್ತದೆ. ಚಿತ್ರ ಸಂಗೀತಕ್ಕೆ ಯಾರು ಬೇಕಾದರೂ ತಾಳ ಹಾಕಬಹುದು. ಒಂದೆರಡು ಸಲ ಆ ಹಾಡು ಕೇಳಿದ ನಂತರ ಅದರ ಜೊತೆಗೆ ಧ್ವನಿಗೂಡಿಸಬಹುದು. ಆದರೆ ಒಂದು ಉತ್ತಮ ಸಂಗೀತ ರಚನೆಯಲ್ಲಿನ ತಾಳ ಶ್ರೋತೃವಿಗೆ ಅಷ್ಟು ಸುಲಭವಾಗಿ ಸಿಗಲಾರದು. ಅದನ್ನು ಕಂಡುಕೊಳ್ಳಲು ಆತ ಪ್ರಯತ್ನಿಸಬೇಕಾಗುತ್ತದೆ. ಕ್ರಮ ಕೊಡದ ವಸ್ತುವನ್ನು ಸೇವಿಸಿ ಅಭ್ಯಾಸವಾಗಿರುವವರಿಗೆ ಮುಂದೆ ನಿಜವಾದ ಕಲೆಯನ್ನು ಅನುಭವಿಸುವುದು ಅಸಾಧ್ಯವಾಗುತ್ತದೆ. ಒಳ್ಳೆಯ ಕಾದಂಬರಿ ಓದುವ ಬದಲು ಅದು ಸಿನೆಮಾ ಆಗಿ ಬರಲಿ ಅಥವಾ ಜನಪ್ರಿಯ ಪತ್ರಿಕೆಯಲ್ಲಿ ಅದರ ಸಂಗ್ರಹ ರೂಪ ಬರಲಿ ಎಂದು ಕಾಯುವಂತಾಗುತ್ತದೆ. ಸಮೂಹ ಕಲೆ ಅನುಭವವನ್ನು ವಿಕಾರಗೊಳಿಸಿ ಒಂದು ಬದಲೀ ಸಮಾಧಾನ (Substitute gratification) ಮಾತ್ರ ಕೊಡುತ್ತದೆ. ಶ್ರೋತೃವನ್ನು ಒಂದು ರೀತಿಯ ಅನಿಶ್ಚಯತೆಯಲ್ಲಿ ಬಿಡುತ್ತದೆ. ನಿಜವಾದ ತೃಪ್ತಿ ಪಡೆಯವುದು ಸಾಧ್ಯವಿಲ್ಲದಂತೆ ಮಾಡುತ್ತದೆ.

ಇದು ಶ್ರೋತೃವಿಗೆ ಸಿಗುವ ತೃಪ್ತಿಯಾದರೆ, ಇಲ್ಲಿನ ಕಲಾವಿದರಿಗೆ ಸಿಗುವ ತೃಪ್ತಿ ಎಂತಹುದು ನೋಡಬೇಕು, ಇಲ್ಲಿನ ತಯಾರಿಕೆಯಲ್ಲಿ ಕಾರ್ಖಾನೆಯಂತೆ ಕೆಲಸದ ಹಂಚಿಕೆಯಿದೆ, ಒಬ್ಬ ‘ಐಡಿಯಾ’ ಕೊಡುತ್ತಾನೆ, ಇನ್ನೊಬ್ಬ ರೇಖೆಗಳನ್ನು ಬರೆಯುತ್ತಾನೆ, ಇನ್ನೊಬ್ಬ ಬಣ್ಣ ಹಾಕುತ್ತಾನೆ, ಮತ್ತೊಬ್ಬ ಮಾತುಗಳನ್ನು ಬರೆಯುತ್ತಾನೆ, ಇದರಿಂದಾಗಿ ಇಲ್ಲಿನ ಕಲಾವಿದರು ತಮ್ಮ ಸೃಜನಾತ್ಮಕ ಕೆಲಸದಿಂದ, ಇಂದಿನ ಕಾರ್ಮಿಕ ತನ್ನ ದೈಹಿಕ ಶ್ರಮದಿಂದ ಬರುವ ವಸ್ತುವಿನಿಂದ ಪ್ರತ್ಯೇಕಿಸಲ್ಪಡುವಂತೆಯೇ, ದೂರವಾಗುತ್ತಾರೆ. ಕೊನೆಗೆ ರೂಪುಗೊಂಡ ಕೃತಿಯಲ್ಲಿ ತಮ್ಮ ಪಾಲೇನು ಎನ್ನುವುದೇ ಅವರಿಗೆ ತಿಳಿಯದಂತಾಗುತ್ತದೆ. ಈ ಪರಿಸ್ಥಿತಿಯಲ್ಲಿ ಸಿಗುವ ತೃಪ್ತಿ ಎಂತಹುದು ಎಂದು ಕಲ್ಪಿಸಿಕೊಳ್ಳಬಹುದು. ಇಲ್ಲಿ ಸಮೂಹ ಸಂಸ್ಕೃತಿ ಆಧುನಿಕ ಕೈಗಾರಿಕೆಯಂತೆ ಕೆಲಸ ಮಾಡುವುದರಿಂದ ಆಗುವ ಇನ್ನೊಂದು ಪರಿಣಾಮವನ್ನು ಗಮನಿಸಬೇಕು. ಇಂದು ಯಾವುದೇ ಕೈಗಾರಿಕೆ ಹೆಚ್ಚು ಲಾಭಗಳಿಸಬೇಕಾದರೆ, ಹೆಚ್ಚು ಹೆಚ್ಚು ದೊಡ್ಡದಾಗುತ್ತಿರಬೇಕು. ಕೇಂದ್ರೀಕೃತ ಉತ್ಪಾದನೆಯನ್ನು ಉದ್ದೇಶಿಸಬೇಕು. ಇಂತಹ ದೊಡ್ಡ ಪ್ರಮಾಣದಲ್ಲಿ ಮಾತ್ರ ತಯಾರಿಕೆಯ ಖರ್ಚನ್ನು ಕಡಿಮೆ ಮಾಡಿ ವಸ್ತುಗಳನ್ನು ಕಡಿಮೆಬೆಲೆಯಲ್ಲಿ ಮಾರಬಹುದು. ಹೆಚ್ಚು ಲಾಭ ಗಳಿಸಬಹುದು. ಇಂತಹ ಕೇಂದ್ರೀಕರಣ, ಕಾರು, ಸಾಬೂನುಗಳಂತಹ ವಸ್ತುಗಳಲ್ಲಿ ಗ್ರಾಹಕರಿಗೆ ಅನುಕೂಲವಾಗಿ ಪರಿಣಮಿಸಬಹುದು. ಆದರೆ ಸೃಜನಾತ್ಮಕ ಕಲೆಯಲ್ಲಿ ಇದರಿಂದ ಹಾನಿಯೇ ಜಾಸ್ತಿ. ಕೆಲವು ಉತ್ತಮ ಕೃತಿಗಳನ್ನು ಪಾಕೆಟ್ ಬುಕ್, ಪೇಪರ್ ಬ್ಯಾಕ್ ಆವೃತ್ತಿಯಿಂದ ಹೆಚ್ಚು ಜನ ಓದುವಂತೆ ಮಾಡಲು ಸಾಧ್ಯವಿದ್ದರೂ, ಇದು ಇರುವ ವಸ್ತುವಿನ ಮಾರಾಟಕ್ಕೆ ಮಾತ್ರ ಸೀಮಿತವಾಗದೆ, ಹೊಸ ವಸ್ತುವನ್ನೂ ನಿರ್ಧರಿಸುತ್ತದೆ. ಯಾವ ಯಾವ ಪುಸ್ತಕಗಳನ್ನು ಪ್ರಕಟಿಸಬಹುದು, ಬಾರದು ಎನ್ನುವುದನ್ನೂ ಇದೇ ಲೆಕ್ಕಾಚಾರ ನಿರ್ಧರಿಸುವಂತಾಗುತ್ತದೆ. ಅಗ್ಗ, ವೇಗ ಮತ್ತು ಹೊರಗಿನ ಸೊಗಸು ನಿಜವಾದ ಕಲೆಗೆ ಅಪ್ರಸ್ತುತ.

ಸಮೂಹ ಸಂಸ್ಕೃತಿ, ಉನ್ನತ ಸಂಸ್ಕೃತಿಗೆ ಹಲವು ರೀತಿಯಲ್ಲಿ ಮಾರಕವಾಗುತ್ತದೆ. ಒಂದು ಕತೆ ಅದರ ಕಲಾವಿದರನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತದೆ. ಇನ್ನೊಂದು ಕಡೆ ಅದರ ಶ್ರೋತೃಗಳನ್ನು ಕಿತ್ತುಕೊಳ್ಳುತ್ತದೆ. ಸಮೂಹ ಸಂಸ್ಕೃತಿ, ಹೆಚ್ಚು ಹಣದ, ಜನಪ್ರಿಯತೆಯ ಪ್ರಲೋಭನೆಯಿಂದ ಉತ್ತಮ ಸೃಜನಶೀಲ ವ್ಯಕ್ತಿಗಳನ್ನು ತನ್ನತ್ತ ಎಳೆದುಕೊಳ್ಳುತ್ತದೆ. ನಿಜವಾದ ಸ್ವಂತಿಕೆ ಇದ್ದು ಅದನ್ನು ಅಗ್ಗದ ಜನಪ್ರಿಯತೆಗೆ ಹಾಳು ಮಾಡಿಕೊಂಡಿರುವವರ ಹಲವು ಉದಾಹರಣೆಗಳನ್ನು ಸಾಹಿತ್ಯ, ಸಂಗೀತ, ವಿಜ್ಞಾನ ಕ್ಷೇತ್ರಗಳಿಂದ ಕೊಡಬಹುದು. ಇದಕ್ಕಿಂತ ಮುಖ್ಯವಾಗಿ ಉನ್ನತ ಸಂಸ್ಕೃತಿಗೆ ಸಮೂಹ ಸಂಸ್ಕೃತಿಯಿಂದ ಶ್ರೋತೃಗಳ ದೃಷ್ಟಿಯಿಂದ ಭಾರೀ ನಷ್ಟವಾಗುತ್ತದೆ. ಜನಸಂಖ್ಯೆಯ ಒಂದು ಗಣನೀಯ ಭಾಗ ಕಾರಂತರ ಕಾದಂಬರಿ ಓದಿ ಪತ್ರಿಕೆಯಲ್ಲಿನ ಧಾರಾವಾಹಿ ಓದಲೋ, ಸಂಗೀತ ಕಛೇರಿಗೆ ಹೋಗಿ ಸಿನಿಮಾಕ್ಕೆ ಹೋಗಲೋ ಎನ್ನುವ ಅನಿರ್ಧಾರದಲ್ಲಿರುತ್ತದೆ. ಇಂತಹ ಸಂದರ್ಭಗಳಲ್ಲೆಲ್ಲಾ ಲಾಭ ಸಮೂಹ ಕಲೆಗೆ. ನಾಣ್ಯದ ಚಲಾವಣೆಯನ್ನು ತಿಳಿಸುವ ‘ಗ್ರಷ್ಠಾನಿಯಮ’ ಇಲ್ಲಿಯೂ ಅನ್ವಯವಾಗುತ್ತದೆ. ಕೆಟ್ಟ ನಾಣ್ಯ ಒಳ್ಳೆಯ ನಾಣ್ಯವನ್ನು ಚಲಾವಣೆಯಿಂದ ಓಡಿಸುವಂತೆ, ಕೆಟ್ಟ ಕಲೆ
ಒಳ್ಳೆಯ ಕಲೆಯ ಚಲಾವಣೆ ನಡೆಯದಂತೆ ಮಾಡುತ್ತದೆ.

ಅರ್ನೆಸ್ಟ್‌ ವ್ಯಾನ್‌ದಾನ್ ಹಾಗ್‌ನ ಅಭಿಪ್ರಾಯದಲ್ಲಿ ಎಲ್ಲಾ ಮಾಧ್ಯಮಗಳೂ ಅತಿಮವಾಗಿ ಜನರನ್ನು ವೈಯಕ್ತಿಕ ಅನುಭವದಿಂದ ಪರಕೀಯರನ್ನಾಗಿ ಮಾಡುತ್ತವೆ. ನೈತಿಕವಾಗಿ ಏಕಾಕಿಯಾಗುವಂತೆ ಮಾಡುತ್ತವೆ. ಜೀವನವನ್ನು ನೇರವಾಗಿ ಎದುರಿಸುವುದು ಅಸಾಧ್ಯವಾಗುವಂತೆ ಮಾಡುತ್ತವೆ. ಯಾರಾದರೂ ಬೇಜಾರಾದಾಗ, ಒಬ್ಬರೇ ಇದ್ದಾಗ ಮಾಧ್ಯಮಗಳತ್ತ ತಿರುಗಬಹುದು. ಆದರೆ ಅದೇ ನಡತೆಯ ರೀತಿಯಾದಾಗ ಒಂದು ದುಶ್ಚಟವಾಗಿ ಪರಿಣಮಿಸುತ್ತದೆ. ಇಂದು ಹೆಚ್ಚು ಜನ ತಮ್ಮೊಂದಿಗೆ ತಾವು ಕಾಲವನ್ನು ಕಳೆಯಲಾರರು, ರೇಡಿಯೋ, ಟೆಲಿವಿಷನ್ ಪತ್ರಿಕೆಗಳಿಂದ ತಮ್ಮನ್ನು ಮುಚ್ಚಿಕೊಳ್ಳುತ್ತಾರೆ. ಟ್ರಾನ್ಸಿಸ್ಟರ್ ಎಲ್ಲಾ ಕಡೆಯಲ್ಲಿಯೂ ಇರುತ್ತದೆ. ಎಲ್ಲಿ ಹೋದರ ಮಾಲೀಕನನ್ನು ಹೊರ ಪರಿಸರದಿಂದ ಪ್ರತ್ಯೇಕಿಸುತ್ತದೆ. ಇಲ್ಲಿ ನಮ್ಮ ಜನ ಎಲ್ಲಾದರೂ ಪ್ರವಾಸ ಹೊರಟಾಗ, ಅದು ತಿರುಪತಿಗೆ ‘ದೇವರ ಕೆಲಸ’ಕ್ಕಿರಬಹುದು, ನಂದಿಗೆ `ಪ್ರಕೃತಿ ಸೌಂದರ್ಯ’ ನೋಡಿಲಿರಬಹುದು. ಮೊದಲು ಬಯಸುವುದು ಟ್ರಾನ್ಸಿಸ್ಟರ್ ಎನ್ನುವುದನ್ನು ಗಮನಿಸಿರಬಹುದು. ನಂದಿಯ ಪ್ರಶಾಂತ ವಾತಾವರಣದಲ್ಲಿ ಸಹ ಇವರಿಗೆ ರೇಡಿಯೋ ಸಿಲೋನಿನ ನಿರಂತರ ಪ್ರಕಟಣೆಗಳು, ಜಾಹಿರಾತುಗಳು ಅಲ್ಲಿನ ಅಬ್ಬರ ಕಿರುಚಾಟಬೇಕು. ಜನ ಒಬ್ಬರೇ ಇದ್ದಾಗಲಿ ಎಲ್ಲೋ ದೂರದ ಗುಂಪಿನಲ್ಲಿ ಒಬ್ಬರಾಗುತ್ತದೆ, ಗುಂಪಿನಲ್ಲಿದ್ದಾಗಲೂ ಒಂಟಿಯಾಗುತ್ತಾರೆ.

ಸಮೂಹ ಸಂಸ್ಕೃತಿಯ ವಸ್ತುವಿನಲ್ಲಿ ಏಕರೂಪತೆ ಮಕ್ಕಳು ವಯಸ್ಕರ ನಡುವಿನ ಅಂತರವನ್ನು ಅಳಿಸುತ್ತದೆ. ಮಕ್ಕಳ ಸಾಹಿತ್ಯ ಎನ್ನುವ ವಿನೋದ ಚಿತ್ರಕತೆಗಳನ್ನು ಐದರಿಂದ ನೂರರವರೆಗಿನ ಎಲ್ಲಾ ವಯಸ್ಸಿನವರೂ ಓದುತ್ತಾರೆ. ಚಂದಮಾಮ ಹಲವು ವಯಸ್ಕರ ಅತಿ ಮೆಚ್ಚಿನ ಪತ್ರಿಕೆ. ಇನ್ನೊಂದು ಕಡೆ ವಯಸ್ಕರಿಗಾಗಿರುವ ಸಿನಿಮಾಗಳೂ, ಕತೆಗಳೂ, ಕಾರ್ಯಕ್ರಮಗಳೂ ಮಕ್ಕಳಿಗೂ ಸಿಗುವಂತಾಗಿದೆ. ಇದರಿಂದಾಗಿ ಎರಡೂ ರೀತಿಯ ಪರಿಣಾಮ ಸಾಧ್ಯ. ದೊಡ್ಡವರು ಮಕ್ಕಳಂತೆಯೇ ಉಳಿಯುತ್ತಾರೆ. ಜೀವನದ ಕಠಿಣ ಸಮಸ್ಯೆಗಳಿಗೆ ಸುಲಭ ಪಲಾಯನ ಕಂಡುಕೊಳ್ಳುತ್ತಾರೆ. ಇನ್ನೊಂದು ಕಡೆ ಮಕ್ಕಳು ಬೇಗ ದೊಡ್ಡವರಾಗುತ್ತಾರೆ. ಬೆಳವಣಿಗೆ ಅನ್ನುವುದೇ ಇಲ್ಲವಾಗುತ್ತದೆ. ಸಿನಿಮಾ ತಾರೆಯರ ವೈಯಕ್ತಿಕ ಜೀವನ, ಪ್ರಣಯದಲ್ಲಿನ ಅಪಾರ ಆಸಕ್ತಿಗಳು ಜನರಿಗೆ ತಮ್ಮ ಜೀವನದಲ್ಲಿ ಆಸಕ್ತಿ ಕಡಿಮೆಯಾಗಿರುವುದರ ದ್ಯೋತಕ. ನಮ್ಮ ಸುತ್ತಮುತ್ತಲಿನ ಬದುಕಿನಲ್ಲಿ ಆಸಕ್ತಿ ಇಲ್ಲದಾಗ, ಸಿನಿಮಾ ನಟರ ಪ್ರಣಯ, ಅವರ ಮದುವೆ ವಿಚ್ಛೇದನ ಯಾವ ನಟಿಯ ಹತ್ತಿರ ಎಷ್ಟು ಕಾರಿದೆ, ಅವಳು ಎಂತಹ ಬಂಗಲೆಯಲ್ಲಿ ವಾಸಿಸುತ್ತಾಳೆ, ಅವಳ ಜನ್ಮನಕ್ಷತ್ರ ಯಾವುದು, ಅವಳಿಗೆ ಯಾವ ಬಣ್ಣದ ಸೀರೆ ಇಷ್ಟ ಎನ್ನುವ ವಿಚಾರಗಳಲ್ಲಿ ಕುತೂಹಲ ಹೆಚ್ಚುತ್ತದೆ.

ಇದೇ ರೀತಿ ಸವಂತಹ ಸಂಸ್ಕೃತಿಯ ವಸ್ತುಗಳಲ್ಲಿ ಜನಪ್ರಿಯತೆಗಾಗಿ ತುಂಬುವ ಹಿಂಸೆ, ಅಪರಾಧ, ಅಲ್ಲಿನ ಬೆಡಗು, ವೈಭವ, ಇಲ್ಲಿ ಚಿತ್ರಿತವಾಗುವ ಮೌಲ್ಯಗಳು ಇವುಗಳಿಂದಾಗುವ ಪರಿಣಾಮಗಳ ಬಗೆಗೆ ಹಲವು ಜನ ಹಲವು ರೀತಿಯ ಶಂಕೆಗಳನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ರೆಸೆನ್ ಬರ್ಗ್ ಹೇಳುವಂತೆ ಮನುಷ್ಯ ಹುಟ್ಟಿದಂದಿನಿಂದ ಸಾಯುವವರೆಗೂ ಹಸಿವು ಕಾಯಿಲೆಗಳೊಡನೆ ನಡೆಸಬೇಕಾಗಿದ್ದ ಸತತ ಹೋರಾಟದಿಂದ ವಿಮುಕ್ತನಾದಂತೆ ಹೆಚ್ಚು ಸುಸಂಸ್ಕೃತನಾಗುತ್ತಾನೆ. ತನ್ನ ಸಂವೇದನಾಶಕ್ತಿಯನ್ನು ಉತ್ತಮ ಪಡಿಸಿಕೊಳ್ಳುತ್ತಾನೆ. ತನ್ನ ಅರಿವಿನ ಆಳ ಮತ್ತು ಅಗಲಗಳನ್ನು ವಿಸ್ತರಿಸಿಕೊಳ್ಳುತ್ತಾನೆ ಎಂದು ವಿಚಾರವಂತರು ಭಾವಿಸಿದ್ದರು. ಭೌತಿಕ ಪರಿಸರ ಅಂಕಿಗೆ ಬಂದಂತೆ, ಗಾಣದೆತ್ತಿನ ದುಡಿತ ಕಡಿಮೆಯಾದಂತೆ ಜನ ಹೆಚ್ಚು ಸೂಕ್ಷ್ಮಜೀವಿಗಳಾಗಬಹುದೆನ್ನುವ ನಿರೀಕ್ಷೆ ಇತ್ತು. ಆದರೆ ಸಮೂಹ ಸಂಸ್ಕೃತಿಯಿಂದಾಗಿ ಈ ನಿರೀಕ್ಷೆ ಸುಳ್ಳಾಗಿದೆ. ಮನುಷ್ಯ ತನ್ನನ್ನು ತಾನು ಮೀರುವ ಮೊದಲೇ ಅವನ ಮಾನವತೆಯನ್ನೇ ಕಳೆದುಕೊಳ್ಳುತ್ತಿದ್ದಾನೆ. ಸಂವೇದನಾ ಶಕ್ತಿಯನ್ನು ಉತ್ತಮಪಡಿಸಿಕೊಳ್ಳುವ ಮುಂಚೆಯೇ ಅದನ್ನು ನಿರ್ಜಿವಗೊಳಿಸಲಾಗುತ್ತಿದೆ. ಅವನು ಬಾಳಬಹುದಾಗಿದ್ದ ಶ್ರೀಮಂತ, ವೈವಿಧ್ಯಮಯ ಜೀವನ ಇಂದು ಒಂದೇ ಪ್ರಮಾಣಕ್ಕೆ ಬರುತ್ತಿದೆ. ಅವನು ವರ್ಣರಂಜಿತ ಜೀವನವನ್ನು ಅನುಭವಿಸುವುದು ಸಾಧ್ಯವೆನಿಸಿದಾಗಲೇ ಇಂದು ಕಾಣುತ್ತಿರುವುಮ ಬಣ್ಣಗೆಟ್ಟ ನೀರಸ ಜೀವನ. ಕಲೆಯಿಂದ ಅವನ ಬದುಕು ಶ್ರೀಮಂತಗೊಳ್ಳುವ ಬದಲು, ಸಮೂಹಕಲೆಯಿಂದ ಅದು ದರಿದ್ರವಾಗುತ್ತಿದೆ ಎನ್ನುವುದು ಸಮೂಹ ಸಂಸ್ಕೃತಿಯ ವಿರುದ್ಧ ಮಾಡುತ್ತಿರುವ ಮುಖ್ಯ ಆರೋಪ.

ವಿಚಾರವಂತರಲ್ಲಿ ಸಮೂಹ ಸಂಸ್ಕೃತಿಯ ವಿರುದ್ಧ ಹೆಚ್ಚಿನ ರೋಷವಿದ್ದರೂ, ಇದನ್ನು ಸಮರ್ಥಿಸುವವರು ಇದರಿಂದ ಒಳ್ಳೆಯದಾಗುತ್ತಿದೆ ಎನ್ನುವವರೂ ಹಲವರಿದ್ದಾರೆ. ಇವರ ಕೆಲವು ವಾದಗಳನ್ನು ಗಮನಿಸಬೇಕು. ಸಮೂಹ ಸಂಸ್ಕೃತಿಯನ್ನು ಸೃಷ್ಟಿಸುತ್ತಿರುವವರು ಪ್ರಸಾರ ಮಾಡುತ್ತಿರುವವರು ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ವಸ್ತುವನ್ನು ಜನ ಬಯಸುವುದು ಎಂದು ಸಮರ್ಥಿಸಿಕೊಳ್ಳುತ್ತಾರೆ. ಹೆಚ್ಚು ಜನ ಪಲಾಯನವಾದಿ ಸಿನಿಮಾಗಳನ್ನು ನೋಡಲು ಇಷ್ಟಪಟ್ಟರೆ, ಸ್ವಾಭಾವಿಕವಾಗಿಯೇ ಅಂತಹ ಸಿನಿಮಾಗಳನ್ನ: ತಯಾರಿಸಬೇಕು, ಇಲ್ಲದಿದ್ದಲ್ಲಿ ಈ ಕ್ಷೇತ್ರದಲ್ಲಿ ಉಳಿಯುವುದು ಸಾಧ್ಯವಿಲ್ಲ ಎನ್ನುವುದು ಇವರ ವಾದ. ಸಮೂಹ ಜನತೆಗೆ ಮೊದಲಿನಿಂದಲೂ ವಿದ್ಯೆ, ಕಲೆಯ ಮಲೆ ಅನಾದರಣೆಯಿದೆ. ಅದು ಜೀವನದಿಂದ ವಿಮುಖವಾಗಬಯಸುತ್ತದೆ. ಜನ ಗಹನ ವಿಷಯಗಳಿಗಿಂತ ಕ್ಷುಲ್ಲಕ ವಿಷಯಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆ. ವಾಸ್ತ್ರವಿಕತೆಯ ಬದಲು ಪಲಾಯನವನ್ನು, ಸತ್ಯದ ಜಾಗದಲ್ಲಿ ಕಲ್ಪನೆಯನ್ನು, ಅರ್ಥಪೂರ್ಣ ವಿಷಯದ ಬದಲು ವಿನೋದವನ್ನು ಬಯಸುತ್ತಾರೆ. ಸಮಾಜದಲ್ಲಿ ಒಳ್ಳೆಯ ಅಭಿರುಚಿಯಿರುವವರು ಕೇವಲ ಕೆಲವೇ ಜನ. ಮಾಧ್ಯಮಗಳು ಹೆಚ್ಚು ಹೆಚ್ಚು ಉನ್ನತ ದರ್ಜೆಯ ವಸ್ತುಗಳನ್ನು ಬಿಟ್ಟರೆ ಜನ ಅವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ. ಮಾಧ್ಯಮಗಳು ಜನರ ಅಭಿರುಚಿಯನ್ನು ಸ್ವಲ್ಪ ಉತ್ತಮಪಡಿಸಬಹುದಾದರೂ, ಸಮೂಹ ಸಂಸ್ಕೃತಿಯ ಟೀಕಾಕಾರರು ತಿಳಿದಿರುವಷ್ಟು ಸುಲಭವಾಗಿ, ಶೀಘ್ರವಾಗಿ ಜನರ ಅಭಿರುಚಿಯನ್ನು ಬದಲಾಯಿಸುವುದು ಸಾಧ್ಯವಿಲ್ಲ. ಮಾಧ್ಯಮಗಳು ಸಾಮಾನ್ಯ ಜನರಿಗಿಂತ ತುಂಬಾ ಮುಂದೆ ಇರಲು ಆಗುವುದಿಲ್ಲ. ಹಾಗೇನಾದರೂ ಮಾಡಲು ಯತ್ನಿಸಿದರೆ ತಮ್ಮ ‘ಸಮೂಹ’ ಲಕ್ಷಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇನ್ನೂ ಜನಪ್ರಿಯ ಮಾಧ್ಯಮದೆದುರು ಸೋಲಬೇಕಾಗುತ್ತದೆ. ಆಧುನಿಕ ಮಾಧ್ಯಮಗಳು ಉತ್ತಮ ಕಲೆಗೆ ಹಿಂದೆಂದೂ ಇರದಿದ್ದಷ್ಟು ಶ್ರೋತೃಗಳನ್ನು ಒದಗಿಸಿವೆ. ಇಂದಿನ ಜೀವನದ ಸಾಂಸ್ಕೃತಿಕ ವೈವಿಧ್ಯವನ್ನು ಗಮನಿಸಿದಾಗ, ಯಾರು ಯಾರ ಮೇಲೆ ಏನನ್ನೂ ಹೇರುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಲತಾಮಂಗೇಶ್ವರ್ ಶ್ರೋತೃಗಳು ಕೋಟ್ಯಾಂತರ ಇದ್ದರೆ ರವಿಶಂಕರ್‌, ಸುಬ್ಬಲಕ್ಷ್ಮಿ ಸಹ ಹಿಂದೆ ಯಾವ ಕಾಲದಲ್ಲಿ ಉತ್ತಮ ಸಂಗೀತಗಾರ ಕಂಡಿಲ್ಲದಷ್ಟು ಸಂಖ್ಯೆಯ ಶ್ರೋತೃಗಳನ್ನು ಹೊಂದಿದ್ದಾರೆ. ಉನ್ನತ ಕಲೆಯಲ್ಲಿ ತೊಡಗಿರುವವರಿಗೆ ಇಂದು ಇತಿಹಾಸದಲ್ಲಿ ಎಂದೂ ಇರದಿದ್ದ ಅನುಕೂಲಗಳೂ, ಪ್ರೋತ್ಸಾಹವೂ ಇದೆ ಎನ್ನುವದು ಒಂದು ಮುಖ್ಯ ವಾದ.

ಸಮೂಹ ಸಂಸ್ಕೃತಿಯನ್ನು ಸಮರ್ಥಿಸುವವರ ಇನ್ನೊಂದು ವಾದ ಹೀಗಿದೆ : ಸಮೂಹ ಕಲೆಯನ್ನು ಟೀಕಿಸುವವರ ವಾದದಲ್ಲಿ ಅಂತರ್ಗತವಾಗಿರುವ ಒಂದಿನ ಪರಿಸ್ಥಿತಿ ಮನೋಹರವಾಗಿತ್ತು. ಆಗ ಕೃಷಿಕರು ಸಂತೋಷದಿಂದ ಜನಪದ ಗೀತೆಗಳನ್ನು ಹಾಡುತ್ತಾ-
ಕುಣಿಯುತ್ತಾ ತುಂಬು ಜೀವನ ನಡೆಸುತ್ತಿದ್ದರು. ಇಂದಿನ ಕೈಗಾರಿಕಾ ಕಾರ್ಮಿಕ ಕೆಟ್ಟ ಸಿನಿಮಾ ನೋಡುತ್ತಾ, ಕೆಟ್ಟ ಹಾಡು ಕೇಳುತ್ತಾ, ಪತ್ತೇದಾರಿ ಕಾದಂಬರಿಗಳಲ್ಲಿ ಮನಸ್ಸು ತೊಡಗಿಸಿರುತ್ತಾನೆ ಎನ್ನುವ ಚಿತ್ರಗಳ ಅವಾಸ್ತವವಾದದ ಹಿಂದಿನ ಹಳ್ಳಿಯ ಜೀವನ ದರಿದ್ರವಾಗಿತ್ತು, ಅಸಹ್ಯವಾಗಿತ್ತು ಮತ್ತು ವಗೀಯವಾಗಿತ್ತು. ಅಂದಿನ ಕೋಳಿಕಾಳಗ, ಹುಲಿಕಲ್ಲು ಆಟಗಳಿಗಿಂತ ಇಂದಿನ ಮಾಧ್ಯಮದ ವಸ್ತು ತುಂಬಾ ಉತ್ತಮವಾದುದು. ಹಿಂದೆ ಸಮಾಜವೆಂದರೆ ಕೆಲವು ಜನ ಗಣ್ಯರು, ಹಣವಂತರೂ, ಉತ್ತಮ ಜಾತಿಯವರು ಎನ್ನುವ ಭಾವನೆಯಿಂದ ಸಂಸ್ಕೃತಿ ಇವರ ಗುತ್ತೇದಾರಿಯಾಗಿದ್ದಿತು. ಇಂದು ಅದು ತಪ್ಪಿದೆ. ಇಂದು ಜನಸಂಖ್ಯೆಯ ಬಹುಪಾಲು ಸಮಾಜದ ಕೇಂದ್ರಕ್ಕೆ ಹತ್ತಿರವಾಗಿದ್ದಾರೆ. ಸಮೂಹ ಸಮಾಜದಲ್ಲಿ ಒಡನಾಟ ಹೆಚ್ಚು ವ್ಯಾಪಕವಾಗಿದೆ. ವೈಚಾರಿಕತೆ ಹೆಚ್ಚಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕುರುಡು ನಂಬಿಕೆ, ಅಜ್ಜ ಹಾಕಿದ ಆಲದಮರವನ್ನು ಮಾತ್ರ ನೆಚ್ಚಿಕೊಳ್ಳುವದು ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಸಮೂಹ ಸಂಸ್ಕೃತಿ ಮತ್ತು ಸಮೂಹ ಮಾಧ್ಯಮಗಳು, ಹಾಗೆಯ ಸಮೂಹ ಸಂಸ್ಕೃತಿಯನ್ನು ಟೀಕಿಸುವವರು ಅಲ್ಲಿನ ವಸ್ತು ವಿಶ್ಲೇಷಣೆಯಿಂದ ಪರಿಣಾಮದ ಬಗೆಗೆ ತೀರ್ಮಾನಕ್ಕೆ ಬರುತ್ತಾರೆ. ಇದಕ್ಕೆ ವೈಜ್ಞಾನಿಕ ಸಮರ್ಥನೆಯಿಲ್ಲ. ಹೆಚ್ಚಿನ ಜನರ ಜೀವನದಲ್ಲಿ ಕಲೆ, ಸಂಸ್ಕೃತಿಗೆ ಅಂತಹ ಮುಖ್ಯ ಸ್ಥಾನವಿರುವುದಿಲ್ಲ. ಕತೆ, ಕಾದಂಬರಿ, ಸಿನೆಮಾಗಳಲ್ಲಿನ ಸುಪ್ತ ಮೌಲ್ಯಗಳು ಜನರನ್ನು ಪ್ರಭಾವಿಸುತ್ತವೆ. ಅವರ ನಡತೆಯನ್ನು ನಿಯಂತ್ರಿಸುತ್ತವೆ ಎನ್ನುವುದು ಬರೀ ಊಹೆ. ಹೆಚ್ಚಿನ ಜನ ಇಂತಹ ವಸ್ತುವಿಗೆ ತೋರಿಸುವ ಪ್ರತಿಕ್ರಿಯೆ ಕ್ಷಣಿಕವಾದುದು. ಆಳವಾಗಿ ಅದು ಹೋಗುವುದಿಲ್ಲ ಎನ್ನುವುದು ಒಂದು ದೃಷ್ಟಿಕೋನ.

ಸಮೂಹ ಸಂಸ್ಕೃತಿಯನ್ನು ತೀವ್ರವಾಗಿ ವಿರೋಧಿಸುವವರ ವಾದವನ್ನು ಒಪ್ಪಿಕೊಳ್ಳವ ಕೆಲವರು, ಸಮೂಹ ಸಮಾಜದಲ್ಲಿನ ಚಟುವಟಿಕೆಗಳಲ್ಲಿ ಹೆಚ್ಚಿನ ಜನ ಭಾಗವಹಿಸುವುದನ್ನು ಸ್ವಾಗತಿಸುತ್ತಾ, ಸಾಮಾನ್ಯ ಜನರ ‘ಸಾಂಸ್ಕೃತಿಕ ಅನನುಭವ’ವನ್ನು ಮಾಧ್ಯಮಗಳನ್ನು ಆಳುತ್ತಿರುವವರು ತಮ್ಮ ಸ್ವಾರ್ಥಕ್ಕಾಗಿ ದುಡಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯ ಜನ ಬಯಸುವುದು ಎಂದು ಹೇಳಿಕೊಂಡು ತಮ್ಮ ಹಿತವನ್ನು ರಕ್ಷಿಸುವಂತಹ ವಸ್ತುಗಳನ್ನು ಜನರ ಮೇಲೆ ಹೇರುತ್ತಿದ್ದಾರೆ. ಇಂದಿನ ಸಮೂಹ ಪತ್ರಿಕೆ ಸಾಮಾನ್ಯ ಜನರ ಅಭಿಲಾಷೆ, ಆಕಾಂಕ್ಷೆಗಳನ್ನು ಪ್ರತಿಬಿಂಬಿಸಲು ಹುಟ್ಟಿದ್ದಲ್ಲ, ಹೊಸದಾರಿ ಅಕ್ಷರ ಕಲಿತವರ ಅನಿಶ್ಚಯತೆಯ ಲಾಭ ಪಡೆಯಲು ಮಾಧ್ಯಮಗಳ ಮಾಲೀಕರು ಸೃಷ್ಟಿಸಿರುವ ಒಂದು ಪ್ರಕಾರ. ಹಿಂದೆ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಶೋಷಣೆ ನಡೆದಂತೆ ಇಂದು ಸಾಂಸ್ಕೃತಿಕ ಕ್ಷೇತ್ರದಲ್ಲಿ ನಡೆಯುತ್ತಿದೆ ಪ್ರಜಾಪ್ರಭುತ್ವ ಮತ್ತು ವಾಣಿಜ್ಯ ಹಿತಗಳ ನಡುವಿನ ಈ ಘರ್ಷಣೆಯಲ್ಲಿ ಹೆಚ್ಚಿನ ಸಾಮಾಜಿಕ ನಿಯಂತ್ರಣ ಒಂದೇ ಮಾರ್ಗ ಎಂದು ವಾದಿಸುತ್ತಾರೆ.

ಈ ಕೆಲವು ವಾದಗಳಲ್ಲಿ ಸಾಕಷ್ಟು ಹುರುಳಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಇಂದಿನ ಕಲಾಭಿರುಚಿಯಲ್ಲಿನ ಅವನತಿಗೆ ಮಾಧ್ಯಮಗಳ ಜೊತೆಗೆ ಬೇರೆ ಕಾರಣಗಳೂ ಇವೆ. ಈಗ ಎರಡುನೂರು ವರ್ಷಗಳ ಹಿಂದೆ ಮತ್ತು ಈಗ ಕಲೆಗಿರುವ ಶ್ರೋತೃಗಳ ಸಂಖ್ಯೆಯಲ್ಲಿ, ಅವರ ಸಾಮಾಜಿಕ ಪರಿಸ್ಥಿತಿಯಲ್ಲಿ ಮೂಲಭೂತ ಪರಿವರ್ತನೆಯಾಗಿದೆ. ಜನಪ್ರಿಯ ಶಿಕ್ಷಣ ಪಸರಿಸಿದಂತೆ ಅಭಿರುಚಿಯಲ್ಲಿ ಇಳಿತವಾದಂತೆ ಕಾಣುತ್ತದೆ. ಜನಸಂಖ್ಯೆಯು ಒಂದು ದೊಡ್ಡ ಭಾಗ ಇಂದು ಓದಲು, ಬರೆಯಲು, ವೇಲುಮೇಲಿನ ಅರ್ಥವನ್ನು ಅರಿಯಲು ಶಕ್ತವಾಗಿದೆ. ಆದರೆ ಈ ಜನ ಓದಿದ್ದನ್ನೆಲ್ಲಾ ತಿಳಿಯುವಷ್ಟು ಬುದ್ಧಿವಂತರಾಗಿಲ್ಲ. ಓದುವುದು ಹೆಚ್ಚಿರುವ ಪ್ರಮಾಣದಲ್ಲಿಯೇ ಅರ್ಥಮಾಡಿಕೊಳ್ಳುವುದೂ ಹೆಚ್ಚಿಲ್ಲ. ಇಂದಿನ ಶ್ರೋತೃ ವರ್ಗದಲ್ಲಿ ಒಳ್ಳೆಯ ಅಭಿರುಚಿಯವರು, ಯಾವುದೇ ವಿಷಯವನ್ನು ವಿಮರ್ಶಾತ್ಮಕವಾಗಿ ನೋಡಬಲ್ಲವರು ಮೊದಲಿಗಿಂತ ಹೆಚ್ಚು ಜನರಿದ್ದಾರೆ. ಆದರೆ ಸಮೂಹ ಶೋತೃವರ್ಗದಲ್ಲಿ ಅವರು ಅಲ್ಪಸಂಖ್ಯಾತರು, ಇವರ ಅಭಿರುಚಿಗಳೂ ಈ ಸಮುದ್ರದಲ್ಲಿ ಮುಚ್ಚಿ ಹೋಗುತ್ತವೆ. ಇದರಿಂದಾಗಿ ಸೌಂದರ್ಯ ಪ್ರಜ್ಞೆಯ ಸರಾಸರಿ ಮಟ್ಟ ಇಳಿದಿದೆ. ಅದೇ ಸಮಯದಲ್ಲಿ ಕೆಲವು ವರ್ಗಗಳವರ ಅಭಿರುಚಿಯ ಮಟ್ಟ ಸಾಕಷ್ಟು ಉತ್ತಮಗೊಂಡಿರುವುದೂ ನಿಜ.

ಇಂದು ಬುದ್ದಿಜೀವಿಗಳಲ್ಲಿ ಸಾಮಾನ್ಯಜನರ ಕಲಾಭಿರುಚಿಯ ಅವನತಿಯ ಬಗೆಗಿನ ನಿರಾಶೆಗೆ ಮಾಧ್ಯಮಗಳು ನೇರವಾಗಿ ಕಾರಣವಲ್ಲದ ಒಂದೆರಡು ಸಂಗತಿಗಳನ್ನು ಗಮನಿಸಬೇಕು. ಇಂದಿನ ಸಮಾಜ ಉನ್ನತ ಕೃತಿಗಳನ್ನು ರಚಿಸುತ್ತಿರುವವರಿಗೆ ಹಿಂದಿನ ಸಮಾಜಗಳಷ್ಟೇ ಗೌರವ ತೋರಿಸುತ್ತಿರಬಹುದಾದರೂ, ಜನಪ್ರಿಯ ಕಲಾವಿದರಿಗೆ, ಚಲನಚಿತ್ರ ಮೊದಲಾದ ಸಮೂಹ ಮಾಧ್ಯಮಗಳಲ್ಲಿ ಕೆಲಸಮಾಡುತ್ತಿರುವವರಿಗೆ ಇಂದು ಅತಿ ಹೆಚ್ಚಿನ ಮರ್ಯಾದೆ ಇದೆ. ಅವರಿಗೆ ಸಿಗುವ ಪ್ರಚಾರ ಮತ್ತು ಅವರ ಸಂಪಾದನೆ ಉನ್ನತ ಕಲೆಯಲ್ಲಿರುವವರಿಗೆ ಸಿಗುವುದರ ಹತ್ತು ಪಟ್ಟು, ನೂರುಪಟ್ಟು ಇದೆ. ಇದರಿಂದ ತಮಗೆ ಸಿಗಬೇಕಾದ ಮರ್ಯಾದೆ ಸಿಗುತ್ತಿಲ್ಲ. ನಮ್ಮ ಶ್ರೋತೃಗಳಿಂದ ನಾವು ಬೇರ್ಪಟ್ಟಿದ್ದೇವೆ. ಸಮಾಜ ನಮಗೆ ಸರಿಯಾದ ಪ್ರತಿಫಲ ಕೊಡುತ್ತಿಲ್ಲ ಎಂದು ಕಲಾವಿದರು ಭಾವಿಸುವುದು ಸಹಜ. ಇಂದು ಉನ್ನತ ಕಲೆಯಲ್ಲಿ ತೊಡಗಿರುವವರಿಗೆ ನಿರಾಶೆಯ ಮನೋಭಾವ ಬೆಳೆಯಲು, ಭವಿಷ್ಯ ಕರಾಳ ಎನಿಸಲು ಇನ್ನೊಂದು ಮುಖ್ಯ ಕಾರಣ ಯುವಜನರ ಆಸಕ್ತಿ ಅಭಿರುಚಿಗಳು, ಜನಪ್ರಿಯ ಸಂಗೀತ, ಸಮೂಹ ಪತ್ರಿಕೆ, ಸಿನೆಮಾಗಳು ಮುಖ್ಯವಾಗಿ ಅವಲಂಬಿಸುವುದು ಯುವಜನರ ಪ್ರೋತ್ಸಾಹವನ್ನು, ಸಮೂಹ ಕಲೆಯಲ್ಲಿ ಆಸಕ್ತಿ ವಹಿಸುವುದು ಯುವಜನರ ಒಂದು ಫ್ಯಾಷನ್. ಈ ರೀತಿಯ ಅಭಿರುಚಿ ತೋರಿಸದವರು ಸಮವಯಸ್ಕರಲ್ಲಿ ‘ಕರಿಕುರಿ’ ಗಳಾಗುತ್ತಾರೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿನ ಪರಿಣಿತಿ Specialisationನಿಂದಾಗಿ ವಿಶ್ವವಿದ್ಯಾನಿಲಯಗಳ ಪದವೀಧರರ ಸಾಂಸ್ಕೃತಿಕ ಅರಿವು ಆಶ್ಚರ್ಯವೆನ್ನಿಸುವಷ್ಟು ಕೆಳಮಟ್ಟದಲ್ಲಿರುತ್ತದೆ. ಬಹುಪಾಲು ವಿದ್ಯಾರ್ಥಿಗಳಿಗೆ (ಹಾಗೂ ಅನೇಕ ಅಧ್ಯಾಪಕರಿಗೆ) ತಮ್ಮ ವಿಭಾಗ, ತಮ್ಮ ವಿಷಯಗಳನ್ನು ಬಿಟ್ಟರೆ ಉನ್ನತ ಸಂಸ್ಕೃತಿಯ ಬಗೆಗೆ ಅನಕ್ಷರಸ್ಥರಿಗಿಂತ ಹೆಚ್ಚೇನೂ ತಿಳಿದಿರುವುದಿಲ್ಲ.

ಸಮೂಹ ಸಂಸ್ಕೃತಿಯಿಂದ ಹಲವು ರೀತಿಯಲ್ಲಿ ಹಾನಿಯಾಗುತ್ತಿದೆ. ಇನ್ನೂ ಹೆಚ್ಚಿನ ಹಾನಿಯಾಗಬಹುದು ಎಂದು ಒಪ್ಪಿಕೊಂಡರೂ ಇದನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಮೇಲೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಜನರ ಅಧಿಕಾರವನ್ನು, ತಮಗೆ ಯಾವುದು ಬೇಕು, ಯಾವುದು ಬೇಡ ಎನ್ನುವುದನ್ನು ನಿರ್ಧರಿಸಲು ಅವರಿಗಿರುವ ಸ್ವಾತಂತ್ರ್ಯವನ್ನು ಮಾನ್ಯಮಾಡಬೇಕಾಗುತ್ತದೆ. ಕೆಲವೇ ಬುದ್ದಿಜೀವಿಗಳು ತಮ್ಮ ಆದರ್ಶಗಳನ್ನು, ಅಭಿರುಚಿಗಳನ್ನು ಎಲ್ಲರಮೇಲೂ ಹೇರುವುದು ಆಗುವುದಿಲ್ಲ, ಟಿ. ಎಸ್. ಏಲಿಯಟ್, ಲೀವೀಸ್, ಗಾಸೆಟ್ ಮೊದಲಾದವರು ಹೇಳುವ ಎಲ್ಲಾ ಜನರಿಗೂ ಸಂಸ್ಕೃತಿ ಸಿಗುವಂತಾದರೆ ಅದು ಸಡಿಲವಾಗುತ್ತದೆ. ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಸಂಸ್ಕೃತಿಯ ವಸ್ತುಗಳು ಯೋಗ್ಯರಿಗೆ ಮಾತ್ರ ಸಿಗುವಂತಿರಬೇಕು. ಎಲ್ಲರೂ ಅವುಗಳನ್ನು ಬಯಸದಂತೆ ಮಾಡಬೇಕು ಎನ್ನುವ ವಾದ ತೀರಾ ಆವಾಸ್ತವಾದುದೆನಿಸುತ್ತದೆ. ಇದೇ ರೀತಿ ಜನ ಒಳ್ಳೆಯವರೇ, ಮಾಧ್ಯಮಗಳು ಕೇವಲ ಲಾಭ ಗಳಿಸಲು, ತಮ್ಮ ಅಧಿಕಾರವನ್ನು ಮುಂದುವರಿಸಿಕೊಂಡು ಬರಲು ಜನರ ಸಾಂಸ್ಕೃತಿಕ ಅನನುಭವದ ಅನುಕೂಲತೆ ಪಡೆಯುತ್ತಿವೆ. ಸಾಮಾಜಿಕ ನಿಯಂತ್ರಣದಿಂದ ಇದನ್ನು ತಡೆಗಟ್ಟಬಹುದು ಎನ್ನುವ ತರ್ಕಸರಣಿ ಸಹ ಕೇವಲ ಭ್ರಮೆ. ಅಮೇರಿಕಾದಲ್ಲಿ ಕೈಗಾರಿಕಾಹಿತಗಳು ಒಂದು ರೀತಿಯ ಸಮೂಹ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದ್ದರೆ, ರಷಿಯಾದಲ್ಲಿ ರಾಜಕೀಯ ಹಿತಗಳು, ಸಾಮಾಜಿಕ ನಿಯಂತ್ರಣದ ಹೆಸರಿನಲ್ಲಿ ಇನ್ನೊಂದು ಬಗೆಯ ಸಮೂಹ ಸಂಸ್ಕೃತಿಗೆ ಉತ್ತೇಜನ ಕೊಡುತ್ತಿವೆ. ಒಟ್ಟಿನಪರಿಣಾಮವನ್ನು ನೋಡಿದಾಗ ಇವೆರಡು ರೀತಿಯ ನಡುವೆ ಯಾವ ವ್ಯತ್ಯಾಸವೂ ಇರುವುದಿಲ್ಲ.

ಸಮೂಹ ಸಂಸ್ಕೃತಿಯ ಅಪಾಯವನ್ನು ತೀವ್ರವಾಗಿ ಎದುರಿಸಬೇಕಾಗಿರುವುದು. ಇದರ ಬಗೆಗೆ ಹೆಚ್ಚಿನ ಚಿಂತನೆ ನಡೆದಿರುವುದು ಅಮೇರಿಕಾದಲ್ಲಿ, ಇತರ ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ. ಆದರೆ ಸಮೂಹ ಸಂಸ್ಕೃತಿ ಈ ದೇಶಗಳ ವೈಶಿಷ್ಟ್ಯವೇನಲ್ಲ. ಮಾಧ್ಯಮಗಳು ಪ್ರಬಲವಾಗಿ ಬೆಳೆದಂತೆ, ಅಕ್ಷರತೆ ಹೆಚ್ಚಿದಂತೆ ಸಮೂಹ ಸಂಸ್ಕೃತಿಯ ಅಪಾಯವನ್ನು ನಮ್ಮ ದೇಶದಲ್ಲಿ ಎದುರಿಸಬೇಕಾಗುತ್ತದೆ. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಇದರಿಂದ ಸಾಕಷ್ಟು ಅಪಾಯವಾಗುತ್ತಿದೆ ಎನ್ನುವುದು ಗಮನಿಸಬೇಕಾದ ಸಂಗತಿ ಭಾರತದಲ್ಲಿ ಸಮೂಹ ಸಂಸ್ಕೃತಿಯಿಂದ ಆಗುತ್ತಿರುವ, ಆಗಬಹುದಾದ ಪರಿಣಾಮಗಳನ್ನು ಗಮನಿಸುವಾಗ ಇಲ್ಲಿನ ಒಂದೆರಡು ವಿಶಿಷ್ಟ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ಮೊದಲನೆಯದಾಗಿ ನಮ್ಮ ಸಮೂಹ ಸಂಪರ್ಕ ಮಾಧ್ಯಮಗಳು, ಇಲ್ಲಿನ ಆರ್ಥಿಕ ಸಾಮಾಜಿಕ ಪರಿಸ್ಥಿತಿಯಿಂದಾಗಿ ಇನ್ನೂ ಶೈಶವಾವಸ್ಥೆಯಲ್ಲಿವೆ. ಇವು ಸಮಾಜದ ಎಲ್ಲಾ ವರ್ಗಗಳ ಜನರನ್ನು ಇನ್ನೂ ಮುಟ್ಟುತ್ತಿಲ್ಲ. ಕನ್ನಡ ಮಾತನಾಡುವವರು ಮೂರು ಕೋಟಿ ಜನರಿದ್ದರೂ ಕನ್ನಡದ ಅತ್ಯಂತ ಜನಪ್ರಿಯ ಪತ್ರಿಕೆ ಈಗತಾನೇ ಒಂದು ಲಕ್ಷದ ಪ್ರಸಾರವನ್ನು ಕಂಡಿದೆ. ಆದರೆ, ಪತ್ರಿಕೆಗಳ ಪ್ರಸಾರ ಹೆಚ್ಚುತ್ತಿರುವಂತೆ ಅವುಗಳ ವಸ್ತು ಸಮೂಹ ಅಭಿರುಚಿಯತ್ತ ವಾಲುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಒಂದೇ ಒಂದು ಉದಾಹರಣೆ ಕೊಡುವುದಾದರೆ, ಈಗ ನವ ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ವಿನೋದ ಚಿತ್ರಕತೆಗಳ ಮೂರು, ನಾಲ್ಕು ಸರಣಿಗಳಿರುತ್ತವೆ. ಈಗ ಕೇವಲ ೩-೪ ವರ್ಷಗಳ ಹಿಂದೆ ಹೆಚ್ಚೆಂದರೆ ಒಂದು ಸರಣಿಯಿರುತ್ತಿತ್ತು.

ನಮ್ಮ ದೇಶದಲ್ಲಿ ಟೆಲಿವಿಷನ್‌ ವ್ಯಾಪಕವಾಗಿಲ್ಲದಿರುವುದು, ರೇಡಿಯೋ ಸರ್ಕಾರೀ ಸ್ವಾಮ್ಯದಲ್ಲಿದ್ದು, ಅದರಲ್ಲಿನ ಕಾರ್ಯಕ್ರಮಗಳನ್ನು ‘ರೇಟಿಂಗ್’ ನಿಂದ-ಜನಪ್ರಿಯತೆಯೊಂದರಿಂದಲೇ ನಿರ್ಧರಿಸದಿರುವುದು, ಸಮೂಹ ಸಂಸ್ಕೃತಿ ಅಷ್ಟು ಪ್ರಬಲವಾಗಿಲ್ಲದಿರುವುದಕ್ಕೆ ಇನ್ನು ಕೆಲವು ಕಾರಣಗಳು.

ಸಮೂಹ ಸಂಸ್ಕೃತಿಯ ಪ್ರಸಾರದಲ್ಲಿ ನಮ್ಮಲ್ಲಿ ಅತಿ ಪ್ರಭಾವಶಾಲಿಯಾದ ಮಾಧ್ಯಮ ಚಲನಚಿತ್ರ, ಸಿನೆಮಾ ಸಂಸ್ಕೃತಿ ಪಟ್ಟಣಗಳಿಂದ ಹಳ್ಳಿಗಳಿಗೂ ವ್ಯಾಪಿಸಿದೆ. ಯಾವ ಊರಿನಲ್ಲಿ ಎಂತಹ ಸಮಾರಂಭವಾದರೂ-ರಾಮನವಮಿ, ಗಣಪತಿ ಪೂಜೆ, ಮದುವೆ, ಮುಂಜಿ, ಸಂಘ ಸಂಸ್ಥೆಗಳ ವಾರ್ಷಿಕೋತ್ಸವ ಅಥವಾ ಶಾಲಾ ಕಾಲೇಜುಗಳಲ್ಲಿನ ‘ಪ್ರತಿಭಾ ಪ್ರದರ್ಶನ’ ಯಾವದೇ ಇರಲಿ ಅದರಲ್ಲಿ ಸಿನೆಮಾ ಸಂಗೀತ ಅನಿವಾರ್ಯವಾಗಿದೆ. ಹೆಚ್ಚಿನ ಜನರ ಕಲಾಭಿರುಚಿ ಸಿನೆಮಾದಲ್ಲಿನ Stereotype ಗಳಿಗೆ, ಅಲ್ಲಿನ ಕ್ಲೀಷೆ, ಅಬ್ಬರಗಳಿಗೆ ಮಾತ್ರ ಮಿತವಾಗಿದೆ. ಸಿನೆಮಾ ನಟ ನಟಿಯರು ಜನರ ಆರಾಧ್ಯ ದೈವಗಳಾಗಿದ್ದಾರೆ, ಸಿನೆಮಾ ಸಂಗೀತ ಶಾಸ್ತ್ರೀಯ ಹಾಗೂ ಜಾನಪದ ಸಂಗೀತಕ್ಕೆ ಒಂದು ದೊಡ್ಡ ಬೆದರಿಕೆಯಾಗಿದೆ. ಕತೆ, ಕಾದಂಬರಿಗಳು ಸಿನೆಮಾ ಆಗಲಿ ಎಂದೇ ಬರೆಯುತ್ತಿರುವಂತಿದೆ. ನೃತ್ಯ, ಶಿಲ್ಪ ಮೊದಲಾದ ಉನ್ನತ ಸಂಸ್ಕೃತಿಯ ಪ್ರಕಾರಗಳ ಮೇಲೂ ಸಿನೆಮಾ ತನ್ನ ಅಧಿಕಾರವನ್ನು ಹೇರಲು ಪ್ರಯತ್ನಿಸುತ್ತಿದೆ.

ಭಾರತದಲ್ಲಿ ಸಮೂಹ ಸಂಸ್ಕೃತಿಯ ಬಗೆಗೆ, ನಮ್ಮ ಮಾಧ್ಯಮಗಳಲ್ಲಿನ ವಸ್ತು ವಿಶೇಷಗಳು, ಅವುಗಳು ಚಿತ್ರಿಸುವ ಮೌಲ್ಯಗಳು ಇವುಗಳಿಂದಾಗಬಹುದಾದ ತಕ್ಷಣದ ಅಥವಾ ದೀರ್ಘಕಾಲೀನ ಪರಿಣಾಮಗಳ ಬಗೆಗೆ ಯಾವ ಅಧ್ಯಯನವೂ ನಡೆದಂತೆ ಕಂಡುಬರುವುದಿಲ್ಲ. ಸಮೂಹ ಸಂಸ್ಕೃತಿಯ ಬಗ್ಗೆ ವಿಚಾರವಂತರೂ ಅಷ್ಟೆ ಕಾಳಜಿ ತೋರಿಸದಿರುವುದಕ್ಕೆ ಮೇಲೆ ಹೇಳಿದ ಕಾರಣಗಳಲ್ಲದೆ ಇನ್ನೊಂದು ಮುಖ್ಯ ಕಾರಣ, ನಮ್ಮ ಭಾಷೆ ಸಾಹಿತ್ಯ (ಮತ್ತಿತರ ಕಲಾ ಪ್ರಕಾರ) ಗಳಲ್ಲಿ ಈಗಷ್ಟೆ ಚುರುಕಾದ ಚಟುವಟಿಕೆ ಆರಂಭವಾಗಿದೆ ಎನ್ನುವುದು ಇಂದಿನ ಕತೆ, ಕಾದಂಬರಿಗಳನ್ನು ಹೋಲಿಸಲು ಇವುಗಳು ಹೇಗೆ ಕೆಳಮಟ್ಟಕ್ಕೆ ಬರುತ್ತಿವೆ ಎನ್ನುವುದನ್ನು ಗುರುತಿಸಲು ಅಂತಹ ಉನ್ನತ ಪರಂಪರೆ ಇನ್ನೂ ಬೆಳೆದಿಲ್ಲ ಎನ್ನುವುದಿರಬೇಕು.

ಆದರೆ ಪತ್ರಿಕೆಗಳು ಬೆಳೆದಂತೆ. ಅವುಗಳ ಬೃಹದುದ್ಯಮಗಳಾದಂತೆ ಟೆಲಿವಿಷನ್‌ ಹರಡಿದಂತೆ ರೇಡಿಯೊದಲ್ಲಿ ವಾಣಿಜ್ಯ ಕಾರ್ಯಕ್ರಮಗಳು ಹೆಚ್ಚಾದಂತೆ, ನಮ್ಮ ದೇಶದಲ್ಲಿ ಸಮೂಹ ಸಂಸ್ಕೃತಿಯ ಪರಿಣಾಮಗಳ ಬಗೆಗೆ ತೀವ್ರವಾದ ಆಲೋಚನೆ ಅಗತ್ಯವಾಗುತ್ತದೆ.

ಹೆಚ್ಚಿನ ಅಧ್ಯಯನಕ್ಕಾಗಿ :
RosENBERG B, and WHITE D• M• Mass culture-the popular arts in America
NORMAN JACOBS Culture for Millions ?
CASTY A. Mass media and mass man.
HALLS and WHANNEL P. The popular arts.

Close

ಎರಡು ಕವನಗಳು

ಎರಡು ಕವನಗಳು

ಹಾ ಮು ಪಟೇಲ

೧ ಮಾತಾಜಿ 74

ಕಾನ್.ಕಾನ್….ಉತ್ತುತ್ತಿ
ಎಲ್ಲಿಗೆ ಬಂತೋ ಸಂಗಯ್ಯ……..

ಇನ್ನೆಲ್ಲಿಯ ತನಕ ಬಂದೀತು
ಈ ಭಾರತವ್ವನ ರಣಗರ್ಭ
ಗುಣಗುಣಿಸಿದರು ರಕ್ತ ಬೀಜಾಸುರರು.
ಏಕಾ ಏಕು ನೆಲವನ್ನೆಲ್ಲ ಮುಚ್ಚಿ
ಹಾಸಿದ್ದ ದಿಲ್ಲಿಯಂ ಭರವಸೆಯ ನಾಲಿಗೆಯಲ್ಲಿ
ನೆತ್ತರು ಹರಿವ ಶತಕೋಟಿ ರಂಧ್ರಗಳು.

ಕಲಕತ್ತೆಯಲ್ಲಿ ಅಹಮದಾಬಾದಿನಲ್ಲಿ
ಕಡೆಗೆ ಸದಾಸತ್ತ ಕರ್ನಾಟಕದಲ್ಲಿ
ಅವ್ವಾ-ನೀನು ತೋಡಿದ ಬಾವಿಗೆ
ವಿಷನೀರಡರಿ ಕುಡಿದು ಸತ್ಯವು
ನಾಡ ಬಡಕಲೆಮ್ಮೆಗಳು.
ಹಾಲನ್ನಷ್ಟೇ ಕುಡಿದ ನಿನ್ನ ಆತ್ಮೀಯ
ಮೊಳ ಬೆಕ್ಕುಗಳು ಮೈಬೆಳೆಸಿಕೊಂಡವು.

ಮೊನ್ನೆ ಮೊನ್ನೆ ಗೋದೀ ಹೊಲದ ಸುತ್ತ
ನೀ ನೆಟ್ಟ ಖುಷಿಪಟ್ಟಿದ್ದ ಕಳ್ಳಿ
ರಾಕ್ಷಸಾಕಾರ ಬೆಳೆದು ಫಸಲನ್ನೇ ಕಬಳಿಸಿದೆ.
ನಿನ್ನ ಆಕಳು ಕೂಡ ಫೋಲು ಬಿದ್ದು
ಹಾಡೇ ಹಗಲಿನಲ್ಲಿ ಕಾಡು ಮಿಕಗಳು
ಗುರುಗುಟ್ಟುತ್ತಿವೆ.
ಮತ್ತಿನ್ನೇನು ತಾಯಿ ಹೊಸ ಸುದ್ದಿ
ಹಸ್ತಿನಾವತಿಯಿಂದ.

ಕಪ್ಪುಕೊಡೆ ಅಂಜೂರದಂಗಿಯ
ಲಾಟೇನಪ್ಪನ ಕಾಲಜ್ಞಾನ ನಿಜವಾಗಿ
ಕಲ್ಲು ಕೋಳಿ ಕೂಗಿ, ಕಲ್ಯಾಣ ದಣ್ಣ
ಮತ್ತೆ ಹುಟ್ಟುವ ಮೊದಲು-
ಬಾರ ಬಾತಾಯಿ ಗಾಡ ಬಾರೇ
ಹರಿದ ಆಕಾಶಕ್ಕೆ ತ್ಯಾಪೆ ಹಚ್ಚಿದ
ನಿಮ್ಮಪ್ಪನ ತಂಬೂರಿ ಎತ್ತಿ ತಾರೇ
ಹೊಸದೊಂದು ಗಾನ ನುಡಿಸುತ್ತಬಾರೇ
ಅನ್ನಾ…ಎನುವ ಜನವನ್ನೆಲ್ಲ
ಕಲ್ಲು ಬಾರೇ………

೨ ಕೀನಾಶನಗರಿ

ಇಲ್ಲಿ ಘೀಳಿಡುವ ನಾಯಿಗಳು.
ಊಳಿಡುವ ಮದ್ದಾನೆಗಳು.
ತಿಂದು ಅಡ್ಡಾಗಿರುವ ಸ್ವಪ್ನಸ್ಥ
ಸಾಧು ಸರ್ಪಗಳು,
ಬೆಳೆದ ಬತ್ತಕ್ಕೆ ಬೆಂಕಿ ರೋಗ ಹತ್ತಿ
ದಿನಾ ಇಲ್ಲಿ ಫ್ರಾಂಕೋ ಹುಟ್ಟುತ್ತಾನೆ.
ಅಲೆಂಡೆ ಸಾಯುತ್ತಾನೆ.
ಹೋಶಿಯಾರ್ ! ಜಿವಾರಿಯಾದ ರಾಕ್ಷಸರು
ಹತ್ತಿರಕ್ಕೆ ಬರುತ್ತಾರೆ, ಕಿವಿ-ಕಿವಿ ಕಚ್ಚಿ
ಕುತ್ತಿಗೆಗೆ ಕುಡುಗೋಲು ಹಚ್ಚುತ್ತಾರೆ.

ಮಂಡೀಪೇಟೆಯ ದಿನಸಿಯಂಗಡಿಗಳೆಲ್ಲ
ಹಠಾತ್ತನೆ ಬತ್ತಲಾಗುತ್ತವೆ.
ಸುರಂಗಗಳು ಮುಲುಕುತ್ತವೆ.
ನಟ್ಟನಡೋ ರಾತ್ರಿ ಸೈರನ್ ಒದರಿ
ಊರ ಗರ್ಭದಲ್ಲಿ ಹೋಳಿಕಾಮನ ಬೆಂಕಿ
ಮುಗಿಲಮಟಾ ಉರಿಯುತ್ತದೆ.
ಹಾಕತ್ತಾವೆ ಕೇಕೆ, ನ್ಯೂಗಿನಿಯ
ನರ ಭಕ್ಷಕರು, ಮನುಷ್ಯಪ್ರಜ್ಞೆಯ
ಮುರುಕು ಸಂಕೇತಗಳು.

ನಗರವಾಲ ಸತ್ತಾಗ, ಮಾತಾಜಿ ಅತ್ತಾಗ,
ಹಸಿದು ಕಂಗಾಲಾಗಿ ಕಲಬುರ್ಗಿಯ ಮಂದಿ
ಅನ್ನಕ್ಕಾಗಿ ಇಲ್ಲಿಗೇ ಧಾಳಿ ಇಟ್ಟಾಗ,
ಮಂಡೀಪೇಟೆ ಅರಳುತ್ತಲೇ ಇತ್ತು.
ಕುದುರೇ ಪೇಟೆ ಕೆರಳುತ್ತಲೇ ಇತ್ತು.

ಕಪ್ಪುನೆಲ-ಠಕ್ಕ ಜನ
ಟ್ಟಾರೆ, ಮೆಟ್ಟಿ ನಡೆಯುವ ಎಕ್ಕಡಕ್ಕೂ
ಈ ಊರಲ್ಲಿ ಒಂದಿಂಚು ಎರೆ ಮಣ್ಣು.
ಮುಟ್ಟಾಗ ದಾಕಾಶದ ಕೆಳಗೆ
ಹೆಣ್ಣು-ಕೀವಿಳಿಯುತ್ತಿರುವ ಹಣ್ಣು.

Close

ನಾನು, ಭಾಗ್ಯ ಮತ್ತು ಇತರರು

ನಾನು, ಭಾಗ್ಯ ಮತ್ತು ಇತರರು

ಬಾಲಸುಬ್ರಹ್ಮಣ್ಯ

ನಾವು ಕಾರಿಗಾಗಿ ಕಾಯುತ್ತ ನಿಂತಾಗ ಹತ್ತೆಂಟು ಕಣ್ಣುಗಳು ನಮ್ಮನ್ನೇ ನೋಡಿದವು. ಇವರೆಲ್ಲ ಏನು ಯೋಚಿಸುತ್ತಾರೆಂದು ನನಗೆ ಮನದಟ್ಟಾಯಿತು. ಒಬ್ಬ ಯುವಕ, ಒಬ್ಬಳು ಯುವತಿ ಜೊತೆಯಲ್ಲಿದ್ದರೆ ಮಂದಿಯ ಕಲ್ಪನೆಯ ಕುದುರೆ ಗಾಳಿಯಲ್ಲಿ ಹಾರುತ್ತದೆಂಬುದು ನನಗೆ ತಿಳಿದ ಮಾತು. ಭಾಗ್ಯಳಿಗೆ ಇದರ ಅರಿವಿಲ್ಲ. “ಬಸ್ಸು ಸಿಕ್ಕುವುದಿಲ್ಲವೇನೋ” ಎಂದು ಆತಂಕಪಟ್ಟು ಕೇಳಿದಳು, “ಸಿಕ್ಕದಿದ್ದರೇನಾಯಿತು? ಬೇಕಾದಷ್ಟು ಕಾರಿಗಳು ಈ ಮಾರ್ಗದಲ್ಲಿ ಓಡುತ್ತವೆ” ಎಂದೆ.

ಕೊನೆಗೂ ಬಸ್ಸು ಬರಲಿಲ್ಲ. ಒಂದು ಕಾರು ಬಂದಿತು. “ನಾಲ್ಕೂರಿಗೆ ಹೋಗುತ್ತದ?” ಎಂದು ಕೇಳಿದೆ. ತಲೆಯಾಡಿಸಿದ. ಕಾರಿನಲ್ಲಿ ನಾಲ್ಕೈದು ಜನ ಗಂಡಸರೇ ಇದ್ದರು. ನಾವಿಬ್ಬರ ಕುಳಿತೆವು. ಬದಿಯಲ್ಲಿ ಭಾಗ್ಯ, ಅವಳಿಂದೀಚೆಗೆ ನಾನು ಖುಷಿ ಪಟ್ಟೆ. ಆ ಹತ್ತೆಂಟು ಕಣ್ಣುಗಳು ಅಸೂಯೆಯಿಂದ, ಅಸಹನೆಯಿಂದ ಕುಣಿದುವು. ನನ್ನ ಪಕ್ಕದವರು ನನ್ನನ್ನು ಒಂದಿಷ್ಟು ಒತ್ತಿದಾಗ ನಾನು ಭಾಗ್ಯಳನ್ನು ಮತ್ತಷ್ಟು ಒತ್ತಿ ಕುಳಿತೆ. ಸಣ್ಣ ಸ್ವರದಲ್ಲಿ ಹೇಳಿದೆ. “ಭಾಗ್ಯ, ಪಾಪ, ಈ ಜನಕ್ಕೆ ನಮ್ಮನ್ನು ನೋಡಿ ಹೇಗಾಗುತ್ತದೆ ನೋಡು ! ನಾಳೆ ಕತೆ ಕಟ್ಟಲಿಕ್ಕೂ ಹೇಸುವವರಲ್ಲ ಇವರು” ಅವಳು ನಕ್ಕು ಆ ಕಡೆ ನೋಡಿದಳು. ಅವರ ದೃಷ್ಟಿಯನ್ನೆದುರಿಸಲಾರದೆ ತಲೆತಗ್ಗಿಸಿದಳು,

ಹೋಟೇಲಿನ ಸೀತಾರಾವು ಮೆಲ್ಲನೆ ಕಾರಿನ ಬಳಿಗೆ ಬಂದ. “ನೀವಿಬ್ರೇಯಾ” ಎಂದ. ತಲೆಯಾಡಿಸಿದೆ. “ಮನೆಯಲ್ಲಿ ಸೌಖ್ಯವಾ?” ಎಂದ. “ತಕ್ಕಮಟ್ಟಿಗೆ” ಎಂದುತ್ತರಿಸಿದೆ. `ಹಾ’ ಎಂದು ಉದ್ಗರಿಸಿ ನಿಂತ. ಒಮ್ಮೆ ಅವಳನ್ನು ಒಮ್ಮೆ ನನ್ನನ್ನು ನೋಡಿದ. ಮತ್ತೆ “ಹೊಗ್ತೇನೆ’ ಎಂದು ಹೇಳಿ ತಿರುಗಿ ತಿರುಗಿ ನೋಡುತ್ತಾ, ಹಾಟೇಲಿಗೆ ಹೋದ.

“ಭಾಗ್ಯ” “ಊಂ” ಹುಬ್ಬೇರಿಸಿ ಮುಗುಳ್ನಕ್ಕಳು. “ಇಷ್ಟು ಚಂದದ ಹುಡುಗಿ ಇವನ ಬಳಿ ಕುಳಿತಿದ್ದಾಳಲ್ಲ : ಎಂದಚೆಂಡಿರಬಹುದು ಅಲ್ವ ?” ಹೌದೆಂಬಂತೆ ರೆಪ್ಪೆಯನ್ನೊಮ್ಮೆ ಮುಚ್ಚಿ ತೆರೆದು ಬಳೆಗಳೊಡನೆ ಆಡಲಾರಂಭಿಸಿದಳು. ಮುದ್ದು ಹುಡುಗಿ, ಅನ್ನಿಸಿತು.

ಇನ್ನೂ ಒಂದೆರಡು ಜನಕ್ಕಾಗಿ ಡ್ರೈವರ್ ಕಾಯುತ್ತಿದ್ದ, “ಹೋ, ರಾಮಚಂದ್ರನಾ?” ಅತ್ತ ತಿರುಗಿದೆ. ನನ್ನ ದೂರದ ಸಂಬಂಧಿಕ, ಜೋಯಿಸ ಕಾರಿನ ಹತ್ತಿರ ಬರುತ್ತಿದ್ದ. “ಹೌದು” ಎಂದೆ. “ಇವಳ್ಯಾರು ?” ಎಂದ. ಭಾಗ್ಯ ತಲೆಯೆತ್ತಿದಳು, “ಹೋ, ಭಾಗ್ಯ, ಇವನೊಟ್ಟಿಗೆ ಒಬ್ಬಳೇ ಎಲ್ಲಿಗೆ ಹೋಗುವುದು? ಅವರಲ್ಲಿಗೋ ? ಆ ಸರಿ ಸರಿ” ಎಂದು ಜುಟ್ಟಿನ ಮಲ್ಲಿಗೆಯನ್ನು ಸರಿಪಡಿಸಿಕೊಂಡ. “ಅಪ್ಪ ಏನು ಮಾಡ್ತಾರೆ?” “ಚೆನ್ನಾಗಿದ್ದಾರೆ” ಎಂದೆ. “ಆಯಿತು ಕಾಣುವಾ” ಎಂದು ಹೇಳಿ ಹೋಟೇಲಿನತ್ತ ನಡೆದ. ಭಾಗ್ಯಳ ಹತ್ತಿರ ಬಾಗಿ ಹೇಳಿದೆ: “ಇವ ಬಂದದ್ದು ಇಷ್ಟಕ್ಕೇ ಅಲ್ವ ?”
ಭಾಗ್ಯ ಕೇಳಿದಳು, “ಇನ್ನು ಯಾರೆಲ್ಲ ಬರಲಿಕ್ಕಿದ್ದಾರೆ ?” “ಬರ‍್ಲಿ, ನಮಗೇನಂತೆ” ಅವಳಿಗೂ ಒಪ್ಪಿಗೆಯಾಗಿರಬೇಕು, ನಕ್ಕಳು. ಮತ್ತಷ್ಟು ಹತ್ತಿರ ಸರಿದಳು. ನನ್ನ ಪಕ್ಕಕ್ಕೆ ಕುಳಿತವರ ಕಣ್ಣುಗಳು ಅರಳಿದವು.

ಚೀಲಕ್ಕೆ ಏನೆನೋ ತುಂಬಿಸುತ್ತ ಗೋವಿಂದಯ್ಯ ಬಂದ. “ಏನು ಭಾಗ್ಯ?” ಎಂದ. ನಾನು ಮಾತಾಡಲಿಲ್ಲ. ಭಾಗ್ಯ “ಒಳ್ಳೇದು” ಎಂದಳು. “ಇಂವ ಯಾರು, ನಮ್ಮ…” ಎಂದಾಗ ಭಾಗ್ಯ ”ನನ್ನ ದೊಡ್ಡ ಮಗ ರಾಮಚಂದ್ರ” ಎಂದಳು, “ಅವಗ ಒಳ್ಳೆಯದೇ ಆಯಿತಲ್ಲ” ಎಂದ, ಏನೆಂದು ಕೇಳಿದೆ, ಬೆಪ್ಪರಂತ ಮುಖ ಮಾಡಿದೆ, ಅವನನ್ನು ಅಣಕಿಸಿದೆನೆಂದು ತಿಳಿದನೋ ಏನೋ: ಮುಖ ಚೆಪ್ಪಮಾಡಿಕೊಂಡು ಹೋಟೆಲ್ಲಿಗೆ ನಡೆದ.

“ಇನ್ನು ಹೋಗುವನಾ?” ಎಂದೆ. ಡ್ರೈವರ್ ತಲೆಯಾಡಿಸಿದ. ಹೋಟೆಲಿನಲ್ಲಿದ್ದವರ ಕಣ್ಣುಗಳ ದೃಷ್ಟಿಗಳ ಗುರಿಯಾಗುತ್ತ ಕಾರು, ಕಾರಿನಲ್ಲಿದ್ದ ನಾವು, ಚಲಿಸಿದೆವು.
ಅಲ್ಲಲ್ಲಿ ಸಿಕ್ಕಿದ ಜನಗಳನ್ನು ಡ್ರೈವರ್ ಹತ್ತಿಸಿಕೊಂಡ. ಅವನಿಗೆ ಮನಸ್ಸಿನಲ್ಲೇ ಕೃತಜ್ಞತೆ ಹೇಳಿದರೂ “ಎಷ್ಟು ಜನ ತುಂಬಿಸುವುದು?” ಎಂದು ಕೇಳಿದೆ. ಹೊಸ ದಂಪತಿಗಳು ಅಂತ ತಿಳ್ಕೊಂಡಿರಬೇಕು: “ಆಯ್ತು, ಇನ್ನು ಜನ ಹಾಕುವುದಿಲ್ಲ ರಾಯ್ರೆ” ಎಂದ. “ಅವ್ರಿಗೆ ತೊಂದರೆಯಾಗ್ತದ?” ಎಂದೂ ಕೇಳಿದ. “ಇಲ್ಲ” ಎಂದೆ. ಅವಳಿಗೆ ತೀರ ಹತ್ತಿರವಾಗಿ ನನ್ನ ಬಿಸಿಯುಸಿರು ಅವಳ ಕೆನ್ನೆಯನ್ನು ಮುಟ್ಟುವಷ್ಟು ಹತ್ತಿರ ಕುಳಿತೆ. ಕೈಯನ್ನು ಹಿಂದಿನಿಂದ ಬಳಸಿ ಅವಳ ಭುಜದ ಮೇಲಿಟ್ಟೆ, ಅವಳು ಪ್ರತಿರೋಧಿಸಲಿಲ್ಲ: ಮಾತಾಡಲಿಲ್ಲ.
೨
ಕಾರಿನಿಂದಿಳಿದಾಗ ಸಂಜೆ ನಾಲ್ಕು ಘಂಟೆ. “ಇನ್ನು ನಾಲ್ಕೈದು ಮೈಲು ನಡೀಬೇಕು” ಎಂದೆ, “ಜೊತೆಗೆ ನೀನಿದ್ದಿಯಲ್ಲ,” ಎಂದಳು, “ಯಾಕೆ ?” ಎಂದೆ. “ಬೇಕಾದಷ್ಟು ವಾತಾಡೋಣ, ನಾವಿಬ್ರೇ ಅಲ್ವ?” ಅಂದಳು. ಮನಸ್ಸಿನಲ್ಲಿ ಅಳುಕಿದೆ. ನಡೆಯುತ್ತ ಮಾತಾಡಿದೆವು.

ಭಾಗ್ಯ “ಆ ಜೋಯಿಸ ಬರೇ ಮಂಗ” ಎಂದಳು. ಹೌದೆಂದೆ. ಅವನ ಬಗ್ಗೆ ಒಂದಷ್ಟು ವಿಷಯ ಹೇಳಿದಳು, ಆತ ಸುದ್ದಿಗಳನ್ನು ಹಬ್ಬಿಸುವುದರಲ್ಲಿ ನಿಷ್ಣಾತನೆಂದೂ, ತುಂಬ ಅಧಿಕಪ್ರಸಂಗಿಯೆಂದೂ ಹೇಳಿದಳು. “ನನಗೆ ಗೊತ್ತಿದೆ” ಎಂದೆ. ಅವಳು ಹೇಳಿದಳು “ಒಮ್ಮೆ ಏನಾಯಿತು ಗೊತ್ತ? ನಮ್ಮ ಮನೆ ಹತ್ತಿರ ಒಂದು ಮದುವೆಗೆ ಹೋಗಿದ್ದೆ ಅಲ್ಲಿ ಅಣ್ಣನ ಗೆಳೆಯ ಒಬ್ಬ ನನ್ನತ್ರ ಮಾತಾಡಿದ. ನಾವು ನಗುತ್ತ ಮಾತನಾಡಿಕೊಂಡಿ ರುವುದನ್ನು ಈ ಜೋಯಿಸ ಕಂಡ. ಎತ್ತಿಕೊಂಡಿದ್ದ ಮಗುವನ್ನು ಹೆಂಡತಿಯ ಕೈಗೆ ಕೊಟ್ಟು ನಾವಿದ್ದಲ್ಲಿಗೆ ಬಂದ ನಮ್ಮನ್ನು ನೋಡಿವ್ಯಂಗ್ಯವಾಗಿ “ಆಹಹಾ” ಎಂದು ನಕ್ಕ. ಅಣ್ಣನ ಗೆಳೆಯನ ಹತ್ತಿರ ‘ನೀವು ಈ ಊರಿನಿಂದಲೇ ಒಂದು ಹುಡುಗಿ ಹೊಡೆದುಕೊಂಡು ಹೋಗಿ’ ಎಂದ. ಅವನಿಗೆ ಕೋಪ ಬಂದಿರಬೇಕು; ‘ನನ್ನಪ್ಪ ಅಮ್ಮ ಇದ್ದಾರೆ’ ಎಂದ ‘ಹೆಹೆಹೇ’ ಎನ್ನುತ್ತ ಒಳಗೆ ನಡೆದ, ಈ ಜೋಯಿಸ. ಮತ್ತೆ ಅವ ಮಾತಾಡಲಿಲ್ಲ. ಪಾಪ, ಹೆದರಿಹೋಗಿರಬೇಕು ಎಂದಳು. “ಓಹೋ ಹಾಗೋ” ಎಂದೆ. “ಮರುದಿನ ಇನ್ನೊಂದು ತಮಾಷಿಯಾಯ್ತು” ಎಂದಳು. ಅದನ್ನೂ ಸರಿಯಾಗಿ ವಿವರಿಸಿದಳು. ಆ ಜೋಯಿಸ ಭಾಗ್ಯಳನ್ನು ಆ ಹುಡುಗ ಮಾತಾಡಿಸಿದ್ದು ಕಂಡು ತನ್ನ ಮಗಳು ಇಂದುಮತಿಯನ್ನು ಅವನೆದುರೇ ಹಾವಭಾವ ಸಹಿತ ಅಡ್ಡಾಡಲು ಹೇಳಿದನಂತೆ. ಎರಡು-ಮೂರು ಬಾರಿ ಕಾಫಿ ಕೊಟ್ಟು ಕಳುಹಿಸಿದನಂತೆ.

“ಭಾಗ್ಯ”, ಆ ಹುಡುಗ ಏನು ಮಾಡ್ತಿದ್ದಾನೆ?” ಎಂದು ಕೇಳಿದೆ, “ಅದೆಲ್ಲ ನಾನು ಕೇಳ್ಲಿಲ್ಲ” ಎಂದಳು. “ನಿನ್ನಷ್ಟು ಉದ್ದವೂ ಇಲ್ಲ, ಬಿಳಿಯೂ ಇಲ್ಲ ಅವ ಎಂದು ನಕ್ಕಳು.

ದಾರಿಯಲ್ಲಿ ಊರಿನ ವಿಷಯ ವಿಶೇಷಗಳನ್ನೆಲ್ಲ ಮಾತಾಡಿದೆವು. “ನೀನವತ್ತು ಹೇಳಿದ್ದೀಯಲ್ಲ, ಒಳ್ಳೆ ಕೋಗಿಲೆ ಸ್ವರದ ಹುಡುಗಿ ಆಗ್ಬೇಕು ಅಂತ” ಹೌದೆಂದು ಹೇಳಿದೆ. “ಎಷ್ಟು ಚೆನ್ನಾಗಿ ನೆನಪಿದೆ ನಿನಗೆ” ಎಂದು ಅವಳನ್ನು ಹೊಗಳಿದೆ.

“ಊರಿನವರಿಗೆಲ್ಲ ಎಷ್ಟು ಕಣ್ಣು ” ಎಂದಳು, “ಯಾಕೆ ?” ನನಗೆ ಆಶ್ಚರ್ಯವಾಯಿತು. “ಅಲ್ಲ, ನೀನೂ ನಾನು ಬರ‍್ತಿರಬೇಕಾದ್ರೆ ಎಷ್ಟು ಜನ ಕಣ್ಣರಳಿಸಿ ನೋಡಿದ್ರು ಅಲ್ವ?” ಎಂದಳು, “ಅದಕ್ಕಾ ಹೇಳಿದ್ದು ? ಅದಿರುವುದೇ, ಅಣ್ಣ-ತಂಗಿ ಹೋದ್ರೂ ಅವರು ಹೇಳುವುದು ಹೀಗೇ” ಎಂದೆ. ಈ ಸಂಬಂಧ ಅವಳಿಗೆ ಇಷ್ಟವಾದಂತೆ ತೋರಲಿಲ್ಲ; ಯಾಕೆಂದರೆ ಅವಳು ಮೌನತಾಳಿದಳು.

ಯಾವುದೇ ಒಂದು ಕನ್ನಡ ಕಾದಂಬರಿಯ ಹೆಸರು ಹೇಳಿದಳು. “ಅದು ನನಗೆ ಖುಷಿಯಾಯಿತು” ಎಂದಳು. ಅದೊಂದು ಪ್ರಣಯ ಕಾದಂಬರಿ. ನಾನು ಏನು ಹೇಳಬೇಕೆಂದು ತೋಚದ ಅವಳ ಮುಖ ನೋಡಿದೆ. ಆ ಕಾದಂಬರಿ ನೆನಪಾಯಿತು. ಅವಳ ಮುಖಕ್ಕೆ ಮುತ್ತಿಡೋಣ ಅನ್ನಿಸಿತು. “ನಿನಗೆ ಖುಷಿಯಾಗಲಿಲ್ವ ?” ಎಂದು ನಗುತ್ತ ಕೇಳಿದಳು. “ಒಳ್ಳೆಯದಿದೆ” ಎಂದೆ. “ನಾನೆರಡು ಬಾರಿ ಓದಿದೆ” ಎಂದಳು.

“ರವಿ ಮಾವನ ಹೆಂಡತಿ ಅನುಸೂಯನನ್ನು ನೋಡಿದ್ದೀಯ?” ಎಂದು ಕೇಳಿದಳು. “ನೋಡಿದ್ದೇನೆ, ಸುಮಾರು ನಿನ್ನ ಪ್ರಾಯವೇ ಆಗಬಹುದಷ್ಟೇ” ಎಂದೆ. “ಹೌದು, ಚೆಂದ ಇದ್ದಾಳೆ ಅಲ್ವ ?” ‘ಹೂಂ’ ಎಂದೆ. “ಅನುಸೂಯನ ತಂಗಿ ಇದ್ದಾಳೆ, ಚೆನ್ನಾಗಿ ಹಾಡ್ತಾಳೆ ; ಅವಳ ಹಾಗೇ ಇದ್ದಾಳೆ : ನೋಡು ಆಯ್ತಾ” ಎಂದಳು.

ಮಾತನಾಡುತ್ತ ದಾರಿ ಕಳೆದೆವು. ಒಂದೇ ದಾರಿಯಲ್ಲಿ ವಿಷಯ ಬದಲಿಸುತ್ತ ನಡೆದೆವು. ಕೆಲವೊಮ್ಮೆ ತುಂಬ ಹತ್ತಿರವಾಗುತ್ತ, ಇನ್ನು ಕೆಲವೊಮ್ಮೆ ತುಂಬ ದೂರವಾಗುತ್ತ ನಡೆದೆವು. ಹಲವು ಬಾರಿ ಸಮಾನಾಂತರವಾಗಿ ನಡೆದವು.

“ನಿಮ್ಮಲ್ಲಿಗೆ ಬರಬೇಕೂಂತ ತುಂಬ ಸಮಯದಿಂದ ಗ್ರಹಿಸಿದ್ದೆ” ಎಂದಳು. ನಕ್ಕೆ. “ಕಳೆದ ತಿಂಗಳು ಬರ‍್ತಿದ್ದೆ ; ನನಗೆ ಸೌಖ್ಯವಿರಲಿಲ್ಲ” ಎಂದಳು. “ಏನಾಗಿತ್ತು ?” ಆತಂಕ ಮಿಶ್ರಿತ ದನಿಯಿಂದ ಕೇಳಿದೆ. “ಅದೆಲ್ಲ ನಿಮಗೆ, ಗಂಡಸರಿಗೆ ಹೇಳುವಂತಹದ್ದಲ್ಲ” ಎಂದಳು.

ನಾಚಿದೆ. ಮೌನವಾಗಿ ಅವಳು ಏನು ಮುಂದುವರಿಸುತ್ತಾಳೆಂದು ಕಾದೆ. “ಮುಟ್ಟು ದ್ವೇಷದ ಕಾಹಿಲೆ” ಎಂದಳು. “ಈಗ ನೀನೇ ಹೇಳಿದೆ ಮತ್ತೆ” ಎಂದು ಪ್ರಶ್ನಿಸಿದೆ. “ನಿನ್ನನ್ನು ಕಾಣುವಾಗ ಇನ್ನೊಬ್ಬನನ್ನು ಕಂಡಂತೆ ಅನ್ನಿಸುವುದಿಲ್ಲ” ಎಂದಳು. “ತುಂಬ close ಆದವರ ಹಾಗೆ ಆಗುತ್ತದೆ” ಎಂದೂ ಹೇಳಿದಳು.

“ಒಂದೇ ಥರದ ಮನಸ್ಸಿನ, ಪ್ರಾಯದ, ಭಾವನೆಯುಳ್ಳವರು ಸಿಕ್ಕಿದರೆ ಮಾತಾಡಲಿಕ್ಕೆ ತುಂಬ ಮಜವಾಗುತ್ತದೆ” ಎಂದಾಗ “ನನಗೂ ಹಾಗೆಯೇ” ಎಂದ. “ನಮ್ಮ ಮನೆಯಲ್ಲಿ ನಾನಿಷ್ಟು ಮಾತಾಡುವುದು ನೋಡಿದ್ದೀಯ ಅಥವ ಕೇಳಿದ್ದೀಯ?” ಎಂದು ಕೇಳಿ ಒಂದು ಕ್ಷಣ ನಿಂತಳು, “ಇಲ್ಲ, ಅದೇನು ?” ಎಂದು ಕೇಳಿದೆ. “ನಮ್ಮಪ್ಪ, ಅಮ್ಮ ಸ್ವಲ್ಪ ಸ್ಟ್ರಿಕ್ಟ್‌” ಎಂದಳು ಮತ್ತು ಮುಂದುವರಿಸಿ “ಹೀಗೆಲ್ಲ ಮಾತಾಡಿದ್ರೆ ಯಾವಾಗ ಓಡಿಸ್ತಿದ್ರು” ಎಂದಳು.

“ಕಾಲೇಜು ತುಂಬ ಮಜ; ನೀನ್ಯಾಕೆ ಬಿಟ್ಟೆ?” ಎಂದು ಕೇಳಿದೆ. “ಬೇಡವೆನ್ನಿಸಿತು; ಈಗ ನೀವೆಲ್ಲ ಹೋಗುವುದು ನೋಡಿ ನನಗೂ ಹೋಗಬೇಕೆಂದು ಅನ್ನಿಸುತ್ತದೆ; ಆದರೆ, ಮಿಂಚಿ ಹೋದ ಕಾರ‍್ಯಕ್ಕೆ ಚಿಂತಿಸಿ ಫಲವೇನು ?” ಎಂದು ನಿರಾಸಕ್ತಳಂತೆ ವರ್ತಿಸಿದಳು. “ಒಳ್ಳೆ ಗಾದೆ ಮಾತು” ಎಂದೆ.

ನಡೆಯುತ್ತಾ ಹೋದಂತೆ ಮಾತಾಡುತ್ತಾ ಹೋದೆವು. ಮಾತನಾಡುತ್ತಾ ಹೋದಂತ ತುಂಬ ವಿಷಯಗಳನ್ನು ತಿಳಿದೆವು. ಅವಳು ತುಂಬ ಸಂಟಿಮೆಂಟಲ್ ಆಗಿ ಮಾತಾಡ್ತಾಳೆ. ಅಂದುಕೊಂಡೆ. ಆದರೆ ಬಾಯಿ ಬಿಟ್ಟು ಹಾಗೆ ಹೇಳಲಿಲ್ಲ.

ಅವಳು ನನ್ನ ಭಾವನೆಗಳನ್ನು ಅರ್ಥಮಾಡಿಕೊಂಡವಳಂತೆ ವರ್ತಿಸಿದಳು:

“ನಾನೂ, ನೀನೂ ಮಾತಾಡುವಾಗ ತುಂಬ understanding ಇದ್ದವರ ಹಾಗೆ ಮಾತಾಡ್ತೇವೆ ಅಲ್ವ?” ಅಂದಳು. ಭಾಗ್ಯ ಒಂದು ಒಳ್ಳೆಯ ಕವನಕ್ಕೆ ವಸ್ತುವಾದಾಳು ಅನ್ನಿಸಿತು.

ಸ್ವಲ್ಪ ಫಿಲಾಸಫಿ ಮಾತಾಡೋಣ ಅನ್ನಿಸಿತು. ನನ್ನ ಒಳತೋಟಿಯನ್ನು, ಮನಸ್ಸಿನಲ್ಲಿ ಅಂತರಂಗದ ತರಂಗಗಳ ಕಂಪನವನ್ನು ಮುಚ್ಚಿಟ್ಟು ಹೇಳಿದೆ -“ನಾವು ಎಷ್ಟು ಮನ ಬಿಚ್ಚಿ ಮಾತಾಡ್ತೇವೋ ಅಷ್ಟೂ ಫ್ರೀಯಾಗಿ ಇತರರು ನಮ್ಮ ಬಳಿ ಮಾತಾಡ್ತಾರೆ. ನಾವೇನಾದ್ರೂ ಬಚ್ಚಿಟ್ರೆ ಇತರರ ಬಚ್ಚಿಡ್ತಾರೆ. ನನಗಂತೂ ಇತರರು ಏನಾದರೂ ಬಚ್ಚಿಟ್ರೆ ಕೂಡಲೇ ಗೊತ್ತಾಗುತ್ತದೆ” ಎಂದು ಹೇಳಿ ಅವಳ ಭಾವನೆಗಳನ್ನು ಕೆದಕಿದೆ.

ಅವಳು ಹೇಳಿದಳು “ನಿಮ್ಮಲ್ಲಿ ನಿನ್ನಷ್ಟು ಹತ್ತಿರ ನನಗೆ ಮತ್ಯಾರನ್ನೂ ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ.” “ಬಹುಶಃ ನಾನು ‘ಜಾಲ್ಲಿ’ಯಾಗಿರುವುದೇ ಕಾರಣ ಇರ‍್ಬೇಕು” ಎಂದೆ. ಅವಳಿಗೆ ತೃಪ್ತಿಯಾಯಿತು. “ನಿನಗೆ ಎಲ್ಲ ವಿಷಯದಲ್ಲಿ ಇಂಟರೆಸ್ಟ್ ಇದೆ” ಎಂದಳು. “ನಿನ್ನ ನೋಡುವಾಗ ಇನ್ಯಾರದೋ ನೆನಪಾಗುತ್ತದೆ” ಎಂದು ಹೇಳಿ ನಕ್ಕಳು; “ಯಾರನ್ನು ?” ಎಂದು ಕೇಳಿದೆ. “ಇನ್ಯಾರನ್ನು, ನಿನ್ನನ್ನೇ” ಎನ್ನುತ್ತ ಹಣೆಯ ಬದಿಯಿಂದ ತನ್ನ ಕೂದಲನ್ನು ಹಿಂದಕ್ಕೆ ಸರಿಸಿದಳು.

“ಹಳ್ಳಿಯಾದ್ರೆ ಒಂದು ಒಳ್ಳೆಯದು” ಎಂದಳು. ಒಂದು ಕ್ಷಣ ನಿಂತು ಅವಳನ್ನೇ ದಿಟ್ಟಿಸಿದೆ, “ಏನು ?” ಎಂದಳು. “ನೀನು ಹೇಗಿದ್ದೀ ಅಂತ ಈವರೆಗೆ ನಾನು ಗಮನಿಸಿದ್ದೇ ಇಲ್ಲ” ಎಂದೆ “ಯಾವತ್ತಿನ ಹಾಗೇ ಇದ್ದೇನೆ” ಎಂದಳು. “ಇಲ್ಲ. ಸ್ವಲ್ಪ ಸಪೂರವಾಗಿದ್ದಿ” ಎಂದೆ. ನಿಜಕ್ಕೂ ಅವಳು ತುಂಬ ಮೋಹಕಳಾಗಿ ಕಂಡಳು.

“ಹಳ್ಳಿಯಾದ್ರೆ ಒಳ್ಳೆಯದು ಅಂದಿಯಲ್ಲ, ಯಾಕೆ ?” ಎಂದೆ. “ಯಾಕೂ ಇಲ್ಲ, ಎಷ್ಟು ನಿರ್ಜನ ನೋಡು ಈ ದಾರಿ, ಎಷ್ಟು ಹೊತ್ತಿನಿಂದ ನಾವಿಬ್ಬರೇ ಈ ದಾರಿಯಲ್ಲಿ ನಡಿತಾ ಇದ್ದೇವೆ” “ಅದಕ್ಕೂ ?” ಎಂದೆ.

ಅವಳ ಕೈಯಲ್ಲಿ ಪುಟ್ಟ ಕೈಚೀಲವೊಂದಿತ್ತು, ಅದನ್ನು ನನ್ನ ಕೈಗಿತ್ತಳು, “ನಾನು ಹಿಡೋಳ್ಬೇಕಾ ?” ಎಂದು ಅವಳನ್ನು ಪ್ರಶ್ನಿಸಿದೆ. “ನೀನು ನಿಧಾನ ಹೋಗ್ತಿದ್ರೆ ಹೋಗು, ಇಲ್ದಿದ್ರೆ ನಿಲ್ಲು, ಈಗೆ ಒಂದೇ ನಿಮಿಷದಲ್ಲಿ ಬರ್ತೆನೆ” ಎಂದಳು, ಮಾರ್ಗ ಬಿಟ್ಟು ಪೊದರಿನಡ್ಡಕ್ಕೆ ಹೋದಳು. ಅವಳಿಗಾಗಿ ಕಾದೆ, ಸ್ವಲ್ಪ ಹೊತ್ತಿನಲ್ಲಿ ಮರಳಿ ಬಂದವಳು, “Thanks” ಎಂದಳು, “ಆಯ್ತು” , mention not ಅನ್ನುವುದಿಲ್ಲ. ಇನ್ನೊಂದು ಮೈಲಿದೆ, ಅಷ್ಟು ಕಳೆದರೆ ಸಾಕು, ಮತ್ತೆ ಮನೆ ಸಿಕ್ತದೆ” ಎಂದೆ. “ಆಯಾಸ ವಾಗ್ತದೆ” ಎಂದಳು. “ಇನ್ನೆಂತಹ ಆಯಾಸ, ಒಂದು ಮೈಲಿ ಇರುವಾಗ?” ಎಂದು ಪ್ರಶ್ನಿಸಿದೆ. “ಮಾತಾಡ್ತಾ ಇದ್ರೆ ದಾರಿ ಸಾಗುವುದೇ ಗೊತ್ತಾಗುವುದಿಲ್ಲ. ಹಾಗೆಯೇ ದಾರಿ ಮುಗಿಯುವುದೇ ಬೇಡ ಅನ್ನಿಸ್ತದೆ” ಎಂದು ಹೇಳಿ ನಕ್ಕಳು.

“ನಿಮಗೆ ಹುಡುಗರಿಗಾದ್ರೆ ಒಂದು ಒಳ್ಳೆಯದು” ಎಂದಳು. ಹುಬ್ಬೇರಿಸಿ ಅವಳನ್ನು ನೋಡಿದೆ. “ಹೀಗಿರುವ ಹುಡುಗಿ ಆಗ್ಬೇಕು ಅಂತ ಹೇಳಬಹುದಲ್ವ ?” ಅಂದಳು. ಹುಡುಗಿ ಬಹಳ innocent ಅಂದುಕೊಂಡೆ. “ನಮ್ಗೆ ಆ ಸ್ವಾತಂತ್ರ‍್ಯ ಇಲ್ವಲ್ಲ” ಎಂದು ಪೇಚಾಡಿಕೊಂಡಳು. ಪಾಪ, ಅನ್ನಿಸಿತು.

“ನಿನ್ನಷ್ಟು ಶುದ್ಧವಾಗಿ, ನಿರ್ಮಲವಾಗಿ ಹೀಗೆ ಮಾತಾಡುವವರು ನೋರಕ್ಕೊಬ್ರು ಸಿಗಲಿಕ್ಕಿಲ್ಲ” ಎಂದೆ. ಒಂದು ಅಂದವಾದ ನಗೆಯನ್ನು ಅವಳು ಬಿಚ್ಚಿದಳು.

“ನಮ್ಮಣ್ಣ ಹಾಸ್ಟೇಲಲ್ಲಿರುವಾಗ ‘ಹುಡುಗಿಯರ ಬಗ್ಗೆ ತುಂಬ ಮಾತಾಡ್ತಿದ್ದೆ’ ಎಂದು ಹೇಳಿದ್ದ” ಎಂದಳು. “ನೀನು ಹಾಗಿಲ್ವ?” ಎಂದಳು.
“ಇಲ್ಲ ಅಂತ ಸುಳ್ಳು ಹೇಳಲಾ ?” ಎಂದೆ.
” ಇನ್ನು ಬರೇ ಅರ್ಧಮೈಲ್ ಎಂದೆ, “ನಿಧಾನ ಹೋಗೋಣ ಅಲ್ವ ?” ಎಂದೆ, ಒಪ್ಪಿದಳು.
೩
ಸ್ವಲ್ಪ ಕಾಡುದಾರಿಯಲ್ಲಿ ಇಬ್ರೂ ನಡೆದೆವು. ದೊಡ್ಡ ದೊಡ್ಡ ಮರಗಳು. “ಚಂದ ಮಾಮ ಓದುತ್ತೀಯಾ ?” ಭಾಗ್ಯ ನಗುತ್ತ ಹೇಳಿದಳು. “ಯಾವಾಗ್ಲೋ ಓದುತ್ತಿದ್ದೆ” ಎಂದೆ. “ಈ ಮರಗಳನ್ನೆಲ್ಲ ನೋಡುವಾಗ ಚಂದಮಾಮದ ಚಿತ್ರ ನೆನಪಾಯಿತು” ಎಂದಳು, “ಹೌದು” ಎಂದೆ.

“ದಾರಿಯ ಪಕ್ಕದಲ್ಲಿ ಒಂದಷ್ಟು ದೂರದಲ್ಲಿ ಒಂದು ಭೂತದ ಗುಡಿ ಇದೆ ಎಂದ” ಅವಳು ಅತ್ತ ನೋಡಿದಳು. “ಅಲ್ಲಿಗೆ ಹೋಗೋಣವಾ?” ಎಂದು ಕೇಳಿದೆ. ಬೇಡವೆಂದಳು. ಕತೆಗಳಲ್ಲೆಲ್ಲ ನಡೆಯುವ ಘಟನೆಗಳ ಸಂದರ್ಭ ನೆನಪಾಯಿತು, ಯಾವುದೇ ರೀತಿಯ ಕೆಟ್ಟ ಯೋಚನೆಯ ಸೈತಾನ ನನ್ನಲ್ಲಿದ್ದುದು ಅವಳ ಮುಗ್ಧ ಮನಸ್ಸಿಗೆ ಹೊಳೆದಿರಲಿಕ್ಕಿಲ್ಲವೆಂದು ಭಾವಿಸಿದೆ. ನೀನು ನೋಡಲಿಲ್ಲ ಅಲ್ವ ? ಅದನ್ನು ನೋಡಿಕೊಂಡು ಹೋಗೊಣ ಎಂದೆ. ಬಹಳ ಕಾರ್ಣಿಕದ ಭೂತ ಅದು ; ಯಾವನೋ ಒಬ್ಬ ಕದಿಯಲಿಕ್ಕೆ ಬಂದಾಗ ಏನನ್ನೊ ಕಂಡು ಹೆದರಿ ಜ್ವರ ಬಂದು ಮೂರು ದಿನದಲ್ಲಿ ಸತ್ತುಹೋಗಿದ್ದಾನೆ” ಎಂದೆ. “ಹಾಗೆಲ್ಲ ನನಗೆ ಹೆದರಿಕೆಯಿಲ್ಲ ; ಈಗ ಭೂತ ಪ್ರೇತಕ್ಕೆ ಎಷ್ಟು ಜನ ಬೆಲೆಕೊಡ್ತಾರೆ ?” ಎಂದಳು, “ಮತ್ತೇನು ? ಹೋಗಿ ಬರೋಣವೆಂದೆ. “ಬೇಡಪ್ಪ, ಬೆಚ್ಚುತ್ತದೆ. ನೀನು ಯುವಕ, ಎಷ್ಟು ದೂರವೂ ಹೋಗುವಿ, ನಮಗೆ ಹಾಗಲ್ಲ” ಎಂದು ತಲೆಯಾಡಿಸಿದಳು.

ಹಿಂದೆ ಮುಂದೆ ಯಾರೂ ಕಾಣಲಿಲ್ಲ. ಯಾರೂ ಬರುವ ಸಂಭವವೂ ಇರಲಿಲ್ಲ. ಕಾಡು ದಾರಿ. ಭಾಗ್ಯಳ ಹತ್ತಿರ ಹೋದೆ. ಅವಳು ನಿಂತಳು. ಮುಖವನ್ನು ಹತ್ತಿರಕ್ಕೆಳೆದು ಒತ್ತಿ ಮುತ್ತಿಟ್ಟೆ. ಅವರ ಪ್ರತಿಭಟಿಸಲಿಲ್ಲ. ನನ್ನ ಮುಖವನ್ನು ನೋಡಿದಳು. ಉತ್ತೇಜಿತನಾಗಿ ಅವಳ ತುಟಿಗಳಿಗೆ ಬಲವಾಗಿ ಚುಂಬಿಸಿದೆ. ನನ್ನ ಅಪ್ಪುಗೆಯ ಹಿಡಿತದಿಂದ ಅವಳು ಬಿಡಿಸಿಕೊಳ್ಳಲಿಲ್ಲ.

ಸ್ವಲ್ಪ ಹೊತ್ತು. “ಭಾಗ್ಯ” ಎಂದೆ. ಅವಳು ಮುಖವೆತ್ತಿ ನೋಡಿದಳು. ನಾನು ಅಪ್ಪುಗೆಯನ್ನು ಸಡಿಲಿಸಲಿಲ್ಲ. ನಾನು ನಾಲಗೆಯಿಂದ ತುಟಿಗಳನ್ನು ಚಪ್ಪರಿಸುತ್ತ ಹೇಳಿದೆ “ತಪ್ಪು ತಿಳಿಯಬೇಡ, ಕ್ಷಮಿಸು”, ಅವಳು ಮೌನವಾಗಿರುವುದನ್ನು ಕಂಡು “ನನಗಿದು ಪ್ರಥಮ ಅನುಭವ” ಎಂದು ಸಣ್ಣ ಸ್ವರದಲ್ಲಿ ಹೇಳಿದೆ. ಅವಳ ಕಣ್ಣುಗಳಲ್ಲಿ ಒಂದು ಹೊಳಪಿತ್ತು, “ಇದು ದೊಡ್ಡ ತಪ್ಪು ಅಂತ ಭಾವಿಸುತ್ತೀಯ?” ಎಂದು ಕೇಳಿದೆ. “ಇಲ್ಲ” ಎಂದಳು.

ಅವಳನ್ನು ಬಿಗಿಯಾಗಿ ಹಿಡಿದು ಸ್ವಲ್ಪ ಹೊತ್ತು ನಿಂತೆ. ಅವಳ ಎದೆಯ ಏರಿಳಿತವನ್ನು ಸರಿಯಾಗಿ ಗ್ರಹಿಸಿದೆ. ನನ್ನೆದೆ ಮಾತ್ರ ಡವಡವ ಎನ್ನುತ್ತಿತ್ತು. “ಅದೇನು ನಿನ್ನೆದೆ ಅಷ್ಟು ಶಬ್ದ ಮಾಡುತ್ತಿದೆ?” ಎಂದಳು ನನಗೆ ನಾಚಿಕೆಯಾಯಿತು. ಕೈಗಳನ್ನು ಬಿಟ್ಟು ಸುಮ್ಮನೆ ನಿಂತೆ. ನನಗೇನೋ ತಪ್ಪಿದೆ ಅನ್ನಿಸಿತು. ಅವಳ ಮುಖದಲ್ಲಿ ಅಂತಹದ್ದೇನೂ ವಿಶೇಷ ಗಾಬರಿ ಕಾಣಿಸಲಿಲ್ಲ.

ಮಾತನಾಡದೆ ನಡೆದೆವು. ಮನೆ ಹತ್ತಿರ ಬಂದಾಗ ಭಾಗ್ಯ ಕಣ್ಣುಗಳಲ್ಲಿ ನನ್ನ ಕರೆದಳು ನನಗೇಕೋ ಧೈರ್ಯ ಬರಲಿಲ್ಲ. “ಮತ್ತೆ” ಎಂದೆ, ಅವಳು ನನ್ನ ಹಿಂಬಾಲಿಸಿದಳು.

Close

ಪ್ರಾರ್ಥನೆ(ಅನುವಾದ)

ಪ್ರಾರ್ಥನೆ

ತೆಲುಗಿನಲ್ಲಿ : ತಿಲಕ್
ಕನ್ನಡಕ್ಕೆ : ಬಿ. ಆರ್. ಲಕ್ಷಣರಾವ್‌

ದೇವರೇ
ರಕ್ಷಿಸು ನನ್ನ ದೇಶವನ್ನು
ಪವಿತ್ರರಿಂದ ಪತಿವ್ರತೆಯರಿಂದ
ಪ್ರತಿಷ್ಠಿತರಿಂದ ಬಲಿಷ್ಠ ವ್ಯಾಘ್ರಗಳಿಂದ
ನೀತಿಯ ಸೀಳು ನಾಲಗೆ ಚಾಚಿ ಬುಸುಗುಟ್ಟುವ
ನಿಷ್ಪಯೋಜಕ ಧರ್ಮ ಸರ್ಪಗಳಿಂದ
ಲಕ್ಷಾಂತರ ದೇವರುಗಳಿಂದ ಅವರ ಪೂಜಾರಿಗಳಿಂದ
ಅವರವರ ಪ್ರತಿನಿಧಿಗಳಿಂದ
ಸಿದ್ಧಾಂತ ಕೇಸರಿಗಳಿಂದ ಸಿದ್ದರುಗಳಿಂದ
ಶ್ರೀಮಜ್ಜಗದ್ಗುರುಗಳಿಂದ

ದೇವರೇ
ಐವತ್ತೂ ಚಿಲ್ಲರೆ ಕೋಟಿ ಮನುಷ್ಯರಿಂದ ನಿಜವಾದ ಪ್ರಾಣವುಳ್ಳ
ಮನುಷ್ಯರಿಂದ ತಂಬಿದ ದೇಶ ನನ್ನದು
ಹಸಿವು ನೋವು ಕ್ರಾಂತಿ ಭ್ರಾಂತಿ ಸಮಸ್ಯೆಗಳು
ಸಮೃದ್ಧಿಯಾಗಿರುವ ಸೌಧ ನನ್ನದು

ಹೊಟ್ಟೆ ತುಂಬ ಅನ್ನ ಹೃದಯದ ತುಂಬ ಪ್ರೀತಿ
ಬಾಳಿನುದ್ದಕ್ಕೂ ಸ್ವಾತಂತ್ರ್ಯ
ಕೊಂಚ ಪುಣ್ಯ ಕಿಂಚಿತ್ ಪಾಪ
ಒಂದಿಷ್ಟು ಕಣ್ಣೀರು ಮತ್ತೊಂದಿಷ್ಟು ಸಂತೋಷದ ಪನ್ನೀರು
ಇಷ್ಟು ಸಾಕು ತಂದೆ
ಆರಾಮವಾಗಿ ನಿಷ್ಠೆಯಿಂದ ಅನುಕಂಪೆಯಿಂದ
ಹಾಯಿಹಾಯಾಗಿ ಬದುಕಿಕೊಳ್ಳುತ್ತೇವೆ.
ನಮಗೆ ನಟನೆಗಳು ಬೇಡ ನಮ್ಮ ಸುತ್ತ ಕಟಕಟ್ಟೆಗಳು ಬೇಡ
ಘನತೆಯ ಮಂಕು ಬೂದಿ ಬೇಡ ನಮಗೆ

ದೇವರೇ
ಕತ್ರಿಯೇಟಿಗೆ ಕಚಕ್ಕೆಂದು ತುಂಡರಿದು ಬಿದ್ದ ಕಂಠದಲ್ಲಿ
ಹಟಾತ್ತನೆ ಸ್ವಬ್ದವಾದ ಸಂಗೀತವನ್ನು ಮತ್ತೆ ಕೇಳಿಸು
ಮಾನವ ಚರಿತ್ರೆಯ ಪುಟಗಳ ಮೇಲೆ ರಕ್ತ ಚೆಲ್ಲಿ
ಮಾಸಿ ಹೋದ ಅಕ್ಷರಗಳನ್ನು ನಮಗೆ ವಿವರಿಸು
ನಿಗೂಢ ಸೃಷ್ಟಿ ಸಾನುಗಳಿಂದ ಧುಮ್ಮಿಕ್ಕುವ
ಕಾಂತಿ ಜಲಪಾತಗಳನ್ನು ತೋರಿಸು
ನಮ್ಮನ್ನು ಕನಿಕರಿಸು.
ಹುಟ್ಟು ಸಾವಿನ ನಡುವೆ ಸಂದೇಹದೆಳೆಯಂತಿರುವ

ಈ ಬಾಳಿನ ನಾಲ್ದೆಸೆಗಳಲ್ಲೂ ಕತ್ತಲೋ ಕಗ್ಗತ್ತಲು
ಹೂವಿನಂತೆ ಮುಗ್ಧವಾಗಿ ಮಗಮಗಿಸುವ ಮಾನವತ್ವ
ಇದೆಂದೇ ನಮಗೆ ಉಳಿದಿರುವ ಒಡವೆ ತೊಡವು
ಮಜಲು ಮಜಲಿಗೂ ದಣಿಯುತ್ತಿದ್ದೇವೆ
ತಿರುವು ತಿರುವಿಗೂ ಕುಸಿಯುತ್ತಿದ್ದೇವೆ.
ಆಸೆಗಳ ಬೆಚ್ಚನೆ ಹಾಸಿಗೆಯ ಮೇಲೆ
ಕನಸುಗಳ ಹೂಗಳನ್ನು ಹರಡಿಕೊಂಡು
ಮೈ ಮರೆತು ಕೊಂಚ ಹೊತ್ತು ವಿಶ್ರಮಿಸಿಕೊಳ್ಳಲು
ಅನುಮತಿ ಕೊಡು ತಂದೆ.

Close

ಉನ್ಮತ್ತ ಉಲ್ಲಾಸ (ಅನುವಾದ)

ಉನ್ಮತ್ತ ಉಲ್ಲಾಸ

(ಮಾತಿಲ್ಲದ ನಾಟಕ)

ಮೂಲ : ಮೋಹನ್ ರಾಕೇಶ್
ಅನು : ಕು ಶಿ ಹರಿದಾಸಭಟ್ಟ

ಧ್ವನಿ : ಇದೋ ನೋಡಿ ಯುಗದ ಸಂಕಟ ಜಗದ ಸಂಕಟ. ಈ ಸಂಕಟದಲ್ಲಿ ಅವಿತುಕೊಂಡಿದೆ ಯುಗಾಂತರದ ಮೌಲ್ಯ. ಆ ಮೌಲ್ಯದ ಗರ್ಭದಲ್ಲಿ ಅಡಗಿದ ತತ್ವಗಳ ಸಾಂಕ್ರಾಮಿಕ ಜಾಡ್ಯ, ಜಾಡ್ಯ ಹಿಡಿದ ತತ್ವಗಳ ದಸೆಯಿಂದ ಹಿಮ್ಮೆಟ್ಟಿದೆ ಮನುಷ್ಯನ ಮಾನುಷ್ಯ, ಅದೇ ಮಾನುಷ್ಯದ ಮರ್ಮದಲ್ಲಿ…….

(ರಂಗದ ಮೇಲೊಬ್ಬ ಮನುಷ್ಯನನ್ನು ಯಾರೋ ಒದ್ದು ಅಟ್ಟಿದ್ದಾರೆ, ಕೊಡೆಗಳು ಮೇಲೇಳುತ್ತವೆ, ನಾನಾ ಗಾತ್ರ ಮತ್ತು ವರ್ಣದಲ್ಲಿ. ಆ ಮನುಷ್ಯ ಒದೆಯಿಂದ ಸಮತಲ ಪಡೆದು ಮಂಗನಂತೆ ಆಚೆ ಈಚೆ ದೃಷ್ಟಿ ಹಾಕುತ್ತಾನೆ.)

ಹೌದು, ಮಾನುಷ್ಯದ ಮರ್ಮದಲ್ಲಿರುವ ರಸಸ್ಥಾನಗಳನ್ನು ನಾವು ಹುಡುಕಬೇಕು, ಶೋಧಿಸಬೇಕು, ದೀರ್ಘವಾಗಿ, ದೂರ ದೂರ ದೂರ ಕಲ್ಪನೆಯ ಗಾಳಿಗುದುರೆಯ ಮೇಲೇರಿ ‘ಹಾರಿ ಕೂತು ಸ್ವಾರರ‍್ಹಾಂಗ ಅಲೆಯಬೇಕು; ಅಲೆದರೆ ಹುಡುಕಿದರೆ, ಸಿಕ್ಕೀತು ಅದರ ಮರ್ಮ, ಅಥವಾ ಚರ್ಮ – ‘ಮಾನವನ ಹಕ್ಕುಗಳ ಘೋಷಣಾ ಪತ್ರದಲ್ಲಿ, ಅಖಿಲ ಭಾರತದ ಗ್ರಾಮೋದ್ಯೋಗ ಮಂಡಳಿಯ ಖಾದಿ ಭಂಡಾರದಲ್ಲಿ, ಸೂಕ್ಷ್ಮ ವಿಶ್ವವಿಸ್ತರಣಾ ಸಂಶೋಧನಾ ಕೇಂದ್ರದಲ್ಲಿ, ವಿದ್ಯುಚ್ಚಾಲಿತ ಇಸ್ತ್ರಿಪೆಟ್ಟಿಗೆಯೊಳಗಡೆ, ಭೂಗರ್ಭದ ಕಲ್ಲಿದ್ದಲ ಗಣಿಯ ಆಳದಲ್ಲಿ, ನರರೋಗದ ಸೆಡೆತ ಸಿಡಿತಗಳಲ್ಲಿ. ಪ್ರಜಾತಂತ್ರಾತ್ಮಕವಾದ ನಿರ್ಣಯಗಳಲ್ಲಿ, ನಿರ್ಧಾರಗಳಲ್ಲಿ ಉದಾ :-
(ಕೊಡೆಗಳ ಗುಂಪಿನ ಹತ್ತಿರ ಹೋಗುತ್ತಾನೆ ಮನುಷ್ಯ. ಸುತ್ತು ಸುತ್ತುತ್ತಾನೆ. ವ್ಯಕ್ತಿ ದೊಡ್ಡ ಕೊಡೆಗೆ ಕೈಕೊಡುತ್ತಾನೆ,
ಆತ ಕೊಡೆ ಮುಟ್ಟಿದಂತೆ ಒಂದು ಸ್ಟೆನ್‌ಗನ್ ಹಾರುವ ಸದ್ದು.
ಕೊಂಚ ಕಾಲ ಆತ ದೂರ ಸರಿಯುತ್ತಾನೆ; ಮತ್ತೆ ಹತ್ತಿರ ಸರಿಯುತ್ತಾನೆ.
ಬೆನ್ನು ಬೆನ್ನಲ್ಲೇ ಗುಂಡು ಹಾರಾಟ.
ಆತ ಮತ್ತೆ ಹಿಂದೆ ಸರಿಯುತ್ತಾನೆ: ಮತ್ತೆ ಕೆಲವು ಪರೀಕ್ಷಾರ್ಥ ಮುಟ್ಟುವ ಆಟ ಹೂಡುತ್ತಾನೆ.
ಆತ ಪ್ರತೀ ಸಲ ಮುಟ್ಟಿದಾಗಲೂ ಒಂದು ಗುಂಡು ಹಾರುತ್ತದೆ.
ಬೇರೆ ಕೆಲವು ಕಡೆ ಮುಟ್ಟುತ್ತಾನೆ.
ಸದ್ದಿಲ್ಲ.
ಧೈರ‍್ಯಹಿಡಿದು ಮೆಲುಮೆಲ್ಲನೆ ಅತಿ ದೊಡ್ಡ ಕೊಡೆ ಮುಟ್ಟುತ್ತಾನೆ.
ನಿರಂತರ ಗುಂಡು ಹಾರಾಟ.
ಹೇಗಾದರೂ ಅದನ್ನು ಸಂಪಾದಿಸಲೇಬೇಕೆಂದು ಯತ್ನಿಸುತ್ತಾನೆ,
ಗುಂಡಿನ ಸುರಿಮಳೆ ಸದ್ದು.
ಮನುಷ್ಯ ಮತ್ತಷ್ಟು ಉದ್ವಿಗ್ನತೆಯಿಂದ ಕೊಡೆ ಎಳೆಯ ತೊಡಗುತ್ತಾನೆ.
ಗುಂಡಿನ ಸುರಿಮಳೆ.
ಮನುಷ್ಯ ಸ್ತಬ್ದ, ಸ್ತಂಭಿತ.
ಕೆಲ ಕ್ಷಣ ಮೌನ.
ಸರಿ, ಎಲ್ಲ ಸರಿಯಾಗಿದೆ ಎಂಬ ಧೈಯ್ಯದಿಂದ ಮತ್ತೆ ಮುಂದೆ ಬರುತ್ತಾನೆ; ನಿಧಾನವಾಗಿ, ತಾಳಬದ್ಧವಾಗಿ ನಡೆಯುತ್ತಾನೆ.
ಆ ಕಡೆ ಮುಟ್ಟುತ್ತಾನೆ.)
ಒಳ ದನಿಯಲೆಂದು ಬೈ-ಬೋಳೀಮಗನೆ | (ತಾಳಬದ್ಧವಾಗಿ ನಡೆಯುತ್ತ ಮತ್ತೆ ಕೊಡೆಗೆ ಕೈಮಾಡುತ್ತಾನೆ.)

ಅವನ ತಾಳಕ್ಕೆ ಬೈಗುಳ ಮೇಳ-ಬೋಳೀಮಗ, ಸೂಳೇಮಗ, ಬೋಳೀಮಗ, ಸೂಳೇಮಗ ಮಗಾ, ಮಗಾ ಗಮಗಾ, ಮಗಾ, ಅದೇ ಮಗಾ, ಮಗನೆ, ಹುಚ್ಮುಂಡೇ ಮಗನೇ, ಹುಚ್ಮುಂಡೇ
(ಆತ ಸೋಲುತ್ತಾನೆ, ನಿಲ್ಲುತ್ತಾನೆ, ಸಿಡುಕುತ್ತಾನೆ, ಲಾಲಿಸುತ್ತಾನೆ,
ಇಲ್ಲ ಧ್ವನಿ ಇಲ್ಲ.
ಆತನ ಚಲನೆ ತೀವ್ರವಾಗುತ್ತದೆ. ಮೈಕೈ ಜೋರ್ದಾರ್ ಚಟುವಟಿಕೆ ತೋರುತ್ತವೆ. ಗೇಲಿ ಮಾಡುವ ದನಿ, ಹಲ್ಕ ಮಾಡುವ ರೀತಿ, ವಾಕ್ಯ-) ಸೂತಪುತ್ರಾ, ವಾತಪುತ್ರಾ, ನಾತಪುತ್ತಾ
(ಆತನ ಚಲನೆಯ ಭಂಗಿಗಳು ಬದಲಾಗುತ್ತವೆ-ತೀವ್ರವಾಗಿ. ಮತ್ತೆ ಬೈಗಳ ತರಂಗಕ್ಕೆ ವಿರುದ್ಧವಾಗಿ, ಖುಶಿಬಂದಂತೆ ಚಲಿಸುತ್ತಾನೆ.

ಬೈಗುಳದ ಭಾಷೆ ನಡದೇ ಇದೆ 🙂
ಮಗನೇ ಮನೆಗೆ ಹೋಗಿ ನೋಡಯ್ಯಾ, ಮನೆಯಲ್ಲಿ ಮನೆಯೊಡತಿ ಇದ್ದಾಳೋ ಇಲ್ಲವೋ, ನೋಡಯ್ಯಾ ನೋಡು. ನೋಡಿದೆಯಾ, ಗಿಳಿಯು ಪಂಜರದೊಳಿಲ್ಲಾ ಅಂದೆಯಾ, ಮಗನೇ ಎಲ್ಲಿ ಮಲಗಿದ್ದೆ, ನೀನೆಲ್ಲಿದ್ದೆ. ‘ಅಣ್ಣ ನಿಲ್ಲದ ವೇಳೆಯಲ್ಲಿ ಬೆಕ್ಕು ಕೊಂಡು ಹೋಯಿತಯ್ಯೋ, ಗಿಳಿಯು ಪಂಜರದೊಳಿಲ್ಲಾ? ಇಲ್ಲಾ, ಇಲ್ಲಾ, ಇಲ್ಲಾ, ಇದ್ದಾಗ ಇದ್ದಾಂಗ ಅನಿಸಲೇ ಇಲ್ಲಾ, ಮಗನೆ ನೀನಾರಿಗಾದೆಯೋ ಎಲೆ ಮಾನವಾ,

(ಆತ ದಡಬಡನೆ ಪ್ರತಿಯಾಗಿ ಬಯ್ಯುವ ಮನಸ್ಸು ಮಾಡುವಾಗ, ಅದೃಶ್ಯ ವ್ಯಕ್ತಿಯ ಕಡೆ ತಿರುಗಿ.)
ಮುಚ್ಚುಬಾಯಿ, ಹಲ್ಕಾ ಬಾಯಿ.
(ಮಾತು ಮುಗಿಯುವ ವೇಳೆಗೆ ಕೊಡೆ ಅವನ ಕೈಗೆ ಬಂದಿರುತ್ತದೆ. ಅವನಿಗಚ್ಚರಿ, ಗ್ರಾಮಾಫೋನ್ ನುಡಿವಂತೆ ಕೊನೆಯ ನುಡಿ.) ನೀನಾರಿಗಾದೆಯೋ, ನಾರಿಗಾದೆಯೋ, ಗಾದೆಯೋ, ಆದೆಯೋ, ಆದೆಯೋ, ಆದೆಯೋ.
(ಆತನಿಗೆ ಚಿಟ್ಟಿ ಹಿಡಿಯುತ್ತದೆ. ಕೊಡೆ ಕೆಳಕ್ಕೆಸೆಯುತ್ತಾನೆ-ಜಿಗುಪ್ಪೆಯಿಂದ.
ಶಬ್ದ ನಿಶ್ಯಬ್ದ.
ತಾನು ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುವವನಂತೆ ಕೂತುಬಿಡುತ್ತಾನೆ, ಕೂತು ಕೊಡೆಯನ್ನು ಮುದ್ದು ಮಾಡುತ್ತಾನೆ, ಲಲ್ಲೆಯಾಡುತ್ತಾನೆ.

ಹೆಜ್ಜೆಯ ದನಿ ಎಲ್ಲಾ ಕಡೆಯಿಂದ,
ಜಾಗ್ರತೆಯಿಂದ ಆತ ಏಳುತ್ತಾನೆ.
ಹೆಜ್ಜೆ ದನಿ ಎಲ್ಲಮೆಲ್ಲನೆ ಮಾಯವಾಗುತ್ತದೆ.
ಕೊಡೆ ಕಸುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ಅತ್ತ ಇತ್ತ ಕಣ್ಣು
ಹಾಕಿ, ಒಮ್ಮಿಂದೊಮ್ಮೆ ಓಟ ಕೀಳುತ್ತಾನೆ. ಆತ ಓಡಿದ ಕಡೆಯಿಂದ ಕುಲು
ಕುಲು ನಗು-ಸಾಮೂಹಿಕ ನಗು.
ಇನ್ನೊಂದು ದಿಕ್ಕಿಗೆ ಓಟ-ಅಲ್ಲಿ ನಗು.
ಮತ್ತೊಂದು-ನಗು.
ಎಲ್ಲೆಲ್ಲೂ ನಗು, ನಗು, ನಗು.
ರಂಗದ ನಟ್ಟ ನಡುವೆ ನಿಂತು ಬಿಡುತ್ತಾನೆ. ಕೊಡೆಯನ್ನು ಬಲವಾಗಿ ಅಪ್ಪಿಕೊಂಡು)

ಧ್ವನಿ: ಮಾನವನ ಸಿದ್ಧಿಯ ಮೂಲದಲ್ಲಿರುವುದು ಮನುಷ್ಯನ ವೈಯಕ್ತಿಕ ಸಾಧನೆಯ ಇತಿಹಾಸ, ಆ ಇತಿಹಾಸದ ಹೃದಯದಂತೆ ಕಂಗೊಳಿಸುತ್ತಿದೆ -ಪ್ರಕಟನೆ ಹೊತ್ತಿಗೆ, ಪೋಸ್ಟರ್. ನೋಟೀಸ್, ಶಿರೋನಾಮ, ಪತ್ರಿಕೆಗಳ ತಲೆಬರಹ. ಈ ದಪ್ಪನ್ನ ತಲೆಬರಹದಲ್ಲಿ ಸರ್ವವೂ ಅಡಗಿದೆ ಸ್ವಾಮೀ. ಮನುಷ್ಯ ಜೀವನ, ಯಂತ್ರ ಜೀವನ ಎರಡೂ ರಹಸ್ಯವನ್ನು ಹೇಳುವುದು ತಲೆಬರಹ. ಪತ್ರಿಕಾ ಶಿರೋನಾಮೆ, ರಾಜಕೀಯ ದೊಂಬಿ. ಕ್ರಾಂತಿ, ಕಲೆಯ ಅನ್ವೇಷಣೆ, ಆರ್ಥಿಕ ಆಕ್ರಮಣ, ಧಾರ್ಮಿಕ ಉತ್ಸವ, ಸಭೆ ಸಮಾರಂಭ, ಸಮ್ಮೇಳನ, ಗೋಷ್ಠಿ, ಸಂಕೀರ್ಣ, ಸೆಮಿನಾರ್, ಮೆರವಣಿಗೆ, ಪ್ರತಿಭಟನೆ, ಸಂಪು, ಮುಷ್ಕರ, ಧರಣಿ, ಸತ್ಯಾಗ್ರಹ, ದುರಾಗ್ರಹ, ಘೆರಾವೋ, ಇದರಲ್ಲಿ ಮುಖ್ಯವಾದ ವಿಷಯ ಏನೆಂದರೆ, ಏನು ಅಂದರೆ, ಏನೂಂತಂದರೆ ಒಬ್ಬ ಮನುಷ್ಯ, ಒಬ್ಬನೇ; ಒಬ್ಬ ವ್ಯಕ್ತಿಯ ಸಂಕಲ್ಪ, ಆ ಸಂಕಲ್ಪವನ್ನು ಗಟ್ಟಿಯಾಗಿ ಹಿಡಿದಿಡುವ ದಾರ್ಢ್ಯ ಇಚ್ಛಾಶಕ್ತಿ-ಎಲ್ಲದಕ್ಕೂ ಇದಿರಾಗಿ, ಇದಿರಾಗುವ ಎಲ್ಲದಕ್ಕೂ ಸಡ್ಡು ಹೊಡೆದು, ಸೆಟೆದು, ನೀಟವಾಗಿ ಎತ್ತರಕ್ಕೆ, ಉತ್ತರಕ್ಕೆ ಉತ್ತರೋತ್ತರಕ್ಕೆ ಎದ್ದು ನಿಲ್ಲುವ ಮನುಷ್ಯನ ಇಚ್ಛಾಶಕ್ತಿ, ಸಂಕಲ್ಪಶಕ್ತಿ, ‘ಬಲಂ ಬಲಂ ಇಚ್ಛಾ ಬಲಂ’.
(ಕೊಡೆ ಅವನ ಕೈಯಿಂದ ತಪ್ಪಿಸಿಕೊಂಡು ಹೋದಂತೆ ಅನಿಸುತ್ತದೆ. ಆತ ಅದನ್ನು ಹೋಗಗೊಡದೆ ಹಿಡಿದಿರುತ್ತಾನೆ.
ಒಂದು ಮಗುವಿನ ಕುಲು ಕುಲು ನಗು-ತಾಯ ಕೈಯಿಂದ ತಪ್ಪಿಸಿಕೊಂಡು
ಓಡಲೆಳಸುವ ಮಗುವಿನ ನಗು.
ಅಂಥದೇಹೋಯ್ದಾಟ ಕೊಡೆಗೂ, ಮನುಷ್ಯನಿಗೂ.
ನಗು ಇನ್ನಷ್ಟು ತೀವ್ರವಾಗುತ್ತದೆ. ಹಾಸ್ಯ ಮಾಡುತ್ತದೆ.
ಕೊಡೆಯನ್ನು ಅವನು ಸ್ವಾಧೀನಕ್ಕೆ ತರುತ್ತಾನೆ.
ನಗು ಅದಕ್ಕೆ ವಿರೋಧ ಸೂಚಿಸುತ್ತದೆ.
ಆತ ಕೊಡೆಗೆ ಒಂದೇಟು ಬಿಗಿಯುತ್ತಾನೆ.
ಅಳು – ಮಗು ಅಳತೊಡಗುತ್ತದೆ.
ಅಸಹಾಯನಾದ ಮನುಷ್ಯ ಕೊಡೆಯೇ ಮಗುವೆಂಬಂತೆ ಸಮಧಾನ ಮಾಡು
ತ್ತಾನೆ, ಮುದ್ದು ಕರೆಯುತ್ತಾನೆ.
ಸ್ವಲ್ಪ ಹೊತ್ತು ಸಂತೋಷದಿಂದಿರುತ್ತಾನೆ; ಮತ್ತೆ ಒಮ್ಮಿಂದೊಮ್ಮೆ
ಕೊಡೆಯೇ ಕಡಿದಂತೆ ಹೌಹಾರುತ್ತಾನೆ.
ಸರ್ಕಸ್ ಸಂಗೀತದ ದನಿ.
ಈ ಕೊಡೆಯನ್ನು ಕೈಬಿಡಬೇಕೆಂದು ಆತ ನಿರ್ಧರಿಸುತ್ತಾನೆ. ಆದರೆ ಕೊಡೆ ಅವನನ್ನು ಬಿಡುವುದಿಲ್ಲ. ಸರ್ಕಸ್‌ನ ವಿದೂಷಕನಂತ ಆತ ನಟಿಸುತ್ತಾನೆ ಸ್ವಲ್ಪ ಹೊತ್ತು ಈ ಹೋರಾಟ ನಡೆದ ಮೇಲೆ ಕೊಡೆ ಧೊಪ್ಪನೆ ಕೆಳಗೆ ನೆಲಕ್ಕೆ ಬೀಳುತ್ತದೆ. ಸಂತೋಷದಿಂದ ಆತ ಅದನ್ನು ನೋಡುತ್ತಾನೆ.

ಕೊಡೆಯ ಮೇಲೆ ಅವನಿಗೆ ಸಂಶಯ, ಕೂಡಲೇ ಅದನ್ನು ದೂರ ಹಿಡಿಯತ್ತಾನೆ. ಇಬ್ಬರ ನಡುವೆ ಘೋರ ಸಂಗ್ರಾಮ.
ಹುಲಿಯ ನಾದ ಇನ್ನಷ್ಟು ಗಟ್ಟಿಯಾಗುತ್ತದೆ: ಭಯಂಕರವಾಗುತ್ತದೆ.
ಅವನಿಗೆ ಬವಳಿ ಬರುತ್ತದೆ, ಆಯಾಸವಾಗಿದೆ. ಸೋತ, ಮಣ್ಣಿನಲ್ಲಿ ಮಲಗಿದ : ಕಡೆ ಅವನ ಮೇಲೆ ಎರಗುತ್ತದೆ.)

ಧ್ವನಿ : ಜ್ಞಾತಾಜ್ಞಾತಾ, ವ್ಯಕಾವ್ಯಕ್ತ ಭೂತ ವರ್ತಮಾನ ಭವಿಷ್ಯತ್ಕಾಲಗಳ ನಡುವೆ ನಡೆಯತಕ್ಕಂಥಾ ದಾವ ವರಮಾನ ಆಸೆ ಆಕಾಂಕ್ಷೆ ಅಭೀಷ್ಟ ಸಾಧನೆಗಳಿರುತ್ತವೆಯೋ, ದಾವನ ಅಂತರಾತ್ಮದಲ್ಲಿ ಅಗಾಧವಾದ ಸರ್ವಾಂತರ್ಯಾಮಿಯ ಚೇತನಾಚೇತನ, ವೃದ್ಧಿ ಕ್ಷಯಗಳಿಗೆ ಹೇಳುವಾಗಿ, ಕಾರಣೀಭೂತವಾರಿ ಭೂತಕಾರಣವಾಗಿ, ರಣವಾಗಿ, ಋಣವಾಗಿ, ಕಣವಾಗಿ, ತೃಣವಾಗಿ, ಪೃಥವೀ ತನಕೆ ವ್ಯಾಪಿಸಿಕೊಂಡಿರುತ್ತದೋ, ದಾವ ಕಾರಣದಿಂದ ಹಿಂದಿನಿಂದ ಮುಂದಕ್ಕೆ, ಮುಂದಿನಿಂದ ಹಿಂದಕ್ಕೆ ಈ ಕ್ಷುದ್ರ ಮಾನವ ಜೀವ ತಳ್ಳಲ್ಪಡುವಂಥದಾಗುತ್ತದೆ. ಎದುರಾಗಿನ, ಬದುರಾಗಿನ, ಎಡದಲ್ಲಿ ಮೂಡಿ, ಬಲದಲ್ಲಿ ಕಾಡಿ, ಎಡದಿಂದ ಬಲಕ್ಕೂ ಬಲದಿಂದ ಎಡಕ್ಕೂ, ಎಡ-ಬಲ, ಬಲ ಎಡ ಎಂದು ಮೇಲೆ ಕೆಳಗೆ, ಕೆಳಗೆ ಮೇಲೆಂದು, ನಾ ಮೇಲು ನೀ ಮೇಲೆಂದು ಎಡೆಬಿಡದೆ ಒತ್ತುವಂಥಾ ಶಕ್ತಿಗಳಿಂದಾಘಾತಗಳಿಂದಾ, ಆಘಾತಗಳಿಂದಾ (ಹಲವಾರು ಮಂದಿ ರಂಗವನ್ನು ದಾಟುತ್ತಾರೆ. ಕೊಡೆಗಳ ಮೇಲೆ ಎರಗುತ್ತಾರೆ, ಗುಂಪಾಗಿ,
ಮಾನವ ತಬ್ಬಿಬ್ಬಾಗಿರುತ್ತಾನೆ.
ಅವರು ಕಡೆಗೆ ಕೈಕೊಡುತ್ತಿದ್ದಂತೆ, ನೃತ್ಯದ ಸಂಗೀತ ಕೇಳಿಸುತ್ತದೆ.
ಎಲ್ಲ ಕೊಡೆ ಕೈಗೆ ಸೇರುತ್ತದೆ. ಅವರೆಲ್ಲ ನರ್ತಿಸುತ್ತಿದ್ದಾರೆ ಕಂಡ ಹಿಡಿದು. ಅವನು ಏಳುತ್ತಾನೆ, ತನ್ನ ಕೊಡೆಗೂ ಅವರ ಕೊಡೆಗೂ ಹೋಲಿಸುತ್ತ ಎದ್ದೇಳುತ್ತಾನೆ. ಅವರ ಕೊಡೆ, ಅವನದರಕ್ಕಿಂತ ಚೆನ್ನು. ಎಲ್ಲರ ಹತ್ತಿರವೂ ಹೋ ನನ್ನದು ನಿಮಗೆ, ನಿಮ್ಮದು ನನಗೆ ಎನ್ನುತ್ತಾನೆ. ಯಾರೂ ಒಪ್ಪುವುದಿಲ್ಲ.

ನೃತ್ಯ ಸಂಗೀತ ಹಠಾತ್ತನೆ ನಿಲ್ಲುತ್ತದೆ. ವಿಮಾನ ದಾಳಿಯ ಸೈರನ್ ಕೂಗುತ್ತದೆ.
ಅಲ್ಲಿ ಇಲ್ಲಿ ಜನ ಕೊಡೆಗಳಡಿಯಲ್ಲಿ ಅವಿತುಕೊಳ್ಳುತ್ತಾರೆ. ದೊಡ್ಡ ಸ್ಫೋಟ-ವಿಮಾನದಾಳಿ.
ಅವನೂ ಅಡಗಲು ಮರೆ ಹುಡುಕುತ್ತಾನೆ – ಸಿಗುವುದಿಲ್ಲ.
ಚಂಗನೆ ಹಾರುತ್ತಾನ-ಸ್ಫೋಟ ಅವನ ಕಾಲಡಿಯೇ ನಡೆದಂತೆ.)
ಧ್ವನಿ: ಮುಖ್ಯ ವಿಷಯ ಏನೆಂದರೆ, ಏನೂ ಅಂದರೆ, ಏನೂಂತಂದರೆ ಅಂತರಂಗದಲ್ಲಿ ಮೌನವಾಗಿ ಸಾಧನೆ ಮಾಡುವುದು, ಮೌನಸಂಧಾನ. ಮೌನದಿಂದಲೆ ಶಾಂತಿ, ಸಮನ್ವಯ, ಸಾಂಗತ್ಯ. ಒಡೆದದ್ದನ್ನು ಇಡಿಯಾಗಿ ಮಾಡಲುಬೇಕಾದ ಸ್ನೇಹಬಂಧನವೇ ಶಾಂತಿ, ಸಮನ್ವಯ, ಸಾಂಗತ್ಯ, ಅದೋ ನೋಡಿ, ಮರೆತೆ, ರಾಷ್ಟ್ರಾಧ್ಯಕ್ಷರ ಭಾಷಣಕ್ಕೆ ಹೊತ್ತಾಯಿತು. ನಮ್ಮ ರಾಷ್ಟಾಧ್ಯಕ್ಷರು, ರಾಷ್ಟ್ರದ ಸರ್ವಾಧ್ಯಕ್ಷರು, ನಮ್ಮ ಸಕಲ ದಂಡ ಶಕ್ತಿಯ ಸಮಾಹರ್ತರು, ಕಾರ‍್ಯಕರ್ತರೂ ಆಗಿರುವ, ಎಲ್ಲ ಶಕ್ತಿಗೂ ಮೂಲ ಶಕ್ತಿಯಾಗಿರುವಂಥ, ಎಲ್ಲ ಪ್ರಗತಿಶೀಲ ಯಾಂತ್ರಿಕ ತಾಂತ್ರಿಕ ಅನ್ವೇಷಣೆಗ ಚೇತನ ಸ್ವರೂಪಿಗಳಾಗಿರುವಂಥಾ, ಈ ನಮ್ಮ ಒಣಕಲು ಆತ್ಮಗಳ ಮರುಭೂಮಿಯಲ್ಲಿ ಏಕಮೇವಾದ್ವಿತೀಯ ಮತದ ಸತ್ಯದ ಮಾಲ ಸೂತ್ರರಾಗಿರುವಂಥ ನಮ್ಮ ರಾಷ್ಟ್ರಾಧ್ಯಕ್ಷರು ಸ್ವತಃ ಖುದ್ದಾಗಿ, ಮುದ್ದಾಂ ಸಕಲ ಪ್ರಜಾ ಜನರ ಉದ್ಧಾರಕ್ಕಾಗಿ ಭಾಷಣ ಮಾಡುತ್ತಾರೆ. ಲಾಲಿಸಿರಿ, ಲಾಲಿಸಿರಿ, ಇದು ಆಕಾಶವಾಣಿ…….
ಎಲ್ಲರೂ ಲಾಲಿಸುವಂತೆ ನಿಲ್ಲುತ್ತಾರೆ. ಮನುಷ್ಯನೊಬ್ಬನಿಗೆ ಮಾತ್ರ ಸರಿಯಾದ ಲಾಲಿಸುವ ಭಂಗಿ ಸಿಗುವುದಿಲ್ಲ.)
ಧ್ವನಿ: ಒಂದು ಮುಖ್ಯ ಆಕಾಶವಾಣಿ ಪ್ರಸಾರವನ್ನು ಲಾಲಿಸಿ.
(ಮನುಷ್ಯ ತನ್ನ ಭಂಗಿಯನ್ನು ಸರಿಮಾಡುತ್ತಾ ಇದಾನೆ.)

ಧ್ವನಿ : ಸರಿ ಇದೀಗ ನಮ್ಮ ಒಂದು ಮುಖ್ಯ ಪ್ರಸಾರ ಆಕಾಶವಾಣಿಯ ಮೂಲಕ ನಿಮಗೆ ಬರುತ್ತದೆ.
(ಮನುಷ್ಯನಿಗೆ ಸರಿಯಾದ ಭಂಗಿ ಸಿಕ್ಕಿತು.)
ಧ್ವನಿ: ಒಂದು ಮುಖ್ಯ ಪ್ರಸಾರ ನಿಮಗೆ ಆಕಾಶವಾಣಿಯ ಮೂಲಕ ಬರುವುದರಲ್ಲಿದೆ.
(ಜನರು ಚಡಪಡಿಸುತ್ತಾರೆ.)
ಧ್ವನಿ : ಇನ್ನೊಮ್ಮೆ ಹೇಳುತ್ತೇನೆ, ನಮ್ಮ ಒಂದು ಮುಖ್ಯ ಪ್ರಸಾರ-ಆಕಾಶವಾಣಿ ಮೂಲಕ–
(ಜನ ಮತ್ತೆ ಧ್ಯಾನ ಕೊಡುತ್ತಾರೆ. ಒಂದು ಮಿನಿಟನ ಪ್ರಸಾರ ನಡೆಯುತ್ತದೆ. ಬರೇ ಟೇಪ್ ರಿಕಾರ್ಡರಿನಿಂದ ಧ್ವನಿಗಳು ಹೊರಡುತ್ತವೆ. ಧ್ವನಿಗಳು ತಮ್ಮ ಸಹಜವಾದ ಚಲನೆ ಪಡೆಯುತ್ತವೆ. ಆಕಾಶವಾಣಿಯ ಪ್ರಸಾರ ಮುಂದುವರಿಯುತ್ತದೆ.)

ಇದನ್ನು ಕೈವಶ ಮಾಡಿಕೊಳ್ಳಬಹುದು ಎಂತಲು, ಬಾರದು ಎಂತಲು ನಮಗೆ ವಿದಿತವಾಗುತ್ತದೆ. ನಮಗೀಗ ಬೇಕಾದದ್ದು ಸಂಧಾನ ಅಥವ ರಾಜಿ ಪಂಚಾತಿಕೆ ಅಲ್ಲ. ಯಾಕೆಂದರೆ ಎಲ್ಲ ಸಂಧಾನಗಳನ್ನೂ ಮುರಿಯುವುದು ಸಾಧ್ಯ. ನಮಗೆ ನಿಜವಾಗಿ ಬೇಕಾದದ್ದು ಆಯುಧ, ನೇರವಾಗಿ ನಮಗೆ ಮುಟ್ಟಿದರೂ ಸರಿಯೇ, ಅಥವಾ ಸುತ್ತಿಕೊಂಡು ಯಾರ ಮೂಲಕವಾಗಿ ಮುಟ್ಟಿದರೂ ಸರಿ. ಒಂದು ದೃಷ್ಟಿಯಲ್ಲಿ ನೇರಕ್ಕಿಂತ ಬಳಸು ದಾರಿ ಒಳ್ಳೆಯದು-ಯಾಕೆಂದರೆ ಅದು ಅಭಂಗದ ದಾರಿ. ಅಹಿಂಸೆಗಿಂತ ಉತ್ತಮವಾದದ್ದು. ಯುದ್ದದಲ್ಲೂ, ಶಾಂತಿ ಕಾಲದಲ್ಲಿ ಅಭಂಗ ಅಹಿಂಸೆಗಿಂತ ಶ್ರೇಷ್ಠ, ರಾಯಭಾರಿ ಕಚೇರಿಗಳ ನೇಪಥ್ಯದಲ್ಲಿಯೂ, ಯುನೈಟೆಡ್ ನೇಶನ್ಸ್ ಘೋಷಣೆಯಲ್ಲಿಯೂ…ಇತ್ಯಾದಿ ಇತ್ಯಾದಿ, ಇತ್ಯಾದಿ.
(ಜನ ಸ್ವಚ್ಛೆಯಿಂದ ರಂಗದ ಮೇಲೆ ಅಲೆದಾಡುತ್ತಾರೆ, ಭಾಷಣವನ್ನು ಲಾಲಿಸುವುದಿಲ್ಲ.
ಆಗಿಂದಾಗ ಗುಂಪಾಗಿ ಏಕಕಂಠದಿಂದ ಗೊಣಗುತ್ತಾರೆ.
ಪ್ರಸಾರ ಭಾಷಣ ಮುಂದುವರಿಯುತ್ತಲೇ ಇದೆ. ಈಗದು ಅರ್ಥರಹಿತವಾದ ಪದಸಮುಚ್ಚಯ, ದನಿಗಳಾಗುತ್ತದೆ.
ಮನುಷ್ಯ ಆಲಿಸಬೇಕೆಂದು ಒದ್ದಾಡುತ್ತಾನೆ; ಆದರೆ ಜನ ಗುಂಪು ಗೊಣಗಾಟದಿಂದ
ಅವನಿಗೆ ಸಾಧ್ಯವಾಗುವುದಿಲ್ಲ.
ಆತ ಗಟ್ಟಿಯಾಗಿ ಒದರುತ್ತಾನೆ.
ಯಾರ ಅವನ ನಿಗಾ ತೆಗೆದುಕೊಳ್ಳರು,
ಇನ್ನಷ್ಟು ಗಟ್ಟಿಯಾದ ಒದರು.
ಅದಕ್ಕೆ ಅವರು ಗೇಲಿ ಮಾಡುತ್ತಾರೆ.

ಇಲ್ಲಿ ಒಂದು ಜಗಳ ಸೇರಿಸಬಹುದು, ಆಕಾಶವಾಣಿ ಪ್ರಸಾರಕ್ಕೆ ಸಮಾನಾಂತರದಲ್ಲಿ ಅದು ನಡೆಯಲಿ. ಅದು ನಿಂತ ಮೌನ ಕ್ಷಣಗಳಲ್ಲಿ. ಭಾಷಣ ಸ್ವಷ್ಟವಾಗಿ ಕೇಳಿಸುತ್ತದೆ-ಆತನ ವಾದ, ಅನುನಯ, ವಿನಯ ಎಲ್ಲವೂ ಮುಗಿದ ಮೇಲೆ, ಇನ್ನೇನು ಎಲ್ಲ ರೊಟ್ಟಾಗಿ ಅವನನ್ನು ವಾದದಿಂದ ಆಕ್ರಮಿಸುವ ವೇಳೆ, ಆತ ಸಿಟ್ಟಿಗೆದ್ದು ಕೊಡೆಯಿಂದ ಒಬ್ಬನನ್ನು ಹೊಡೆಯುತ್ತಾನೆ.)

ಆಕಾಶವಾಣಿ ಪ್ರಸಾರ: ರಘುಪತಿರಾಘವ ರಾಜಾರಾಮ್
ಪತಿತಪಾವನ ಸೀತಾರಾವಮ್
ಈಶ್ವರ ಅಲ್ಲಾ ತೇರೇನಾಮ್‌
ಸಬ್‌ಕೋ ಸನ್ಮತಿ ದೇಭಗವಾನ್
(ರಂಗದ ಮೇಲೆ ಹೊಡೆದಾಟ, ಕೊಡೆಯ ಪೆಟ್ಟಿಗೂ ಸಿಕ್ಕಾಪಟ್ಟೆ ಬಡಿದಾಟ.
ರಘುಪತಿ ರಾಘವ ರಾಜಾರಾಮ್ ಜೋರಾಗುತ್ತದೆ, ಹೊಡೆದಾಟವೂ ತ್ವರಿತವಾಗುತ್ತದೆ, ಎರಡನ್ನೂ ಮೇಳಯಿಸಬೇಕು,

ಭಜನೆ ಒಬ್ಬ ಹುಚ್ಚನ ಅಸ್ಪಷ್ಟ ಮಾತುಗಳಾಗುತ್ತದೆ. ಹೊಡೆದಾಟ ಸಿನೇಮಾದ ‘ಮಂದಗತಿ’ ಸ್ಲೋ ಮೋಷನ್ ಆಗುತ್ತದೆ.)
ಹುಚ್ಚು ಮಾತು-ಹಹ್ಹ ಹ್ಹಾ ಸಿಗಡಿ ಯಾಕ ಒಣಗಲಿಲ್ಲ. ತಟಪಟ ಹನಿಯಪ್ಪಾ, ಅಪ್ಪಾ.
ವಿಜ್ಞಾನಕ್ಕೂ ವಿನಯಕ್ಕೂ ಏನು ಸಂಬಂಧ ಸ್ವಾಮಿ ನೀರೊಳಗಿದ್ದರೂ ಬೆವರುವುದೇಕೆ ಸ್ವಾಮಿ

ಹ ಹ ಹ್ಹಾ ವಿಜ್ಞಾನ ಮತ್ತು ವಿನಯ ವಿಜ್ಞಾನ ಮತ್ತು ವಿನಯ……. (ಹೊಡೆದಾಟ ನಿಧಾನ ಗತಿಯಲ್ಲಿ ನಡೆಯುತ್ತದೆ. ಒಂದು ಛಡಿಯ ಸದ್ದು. ರಂಗದ ಮೇಲಿನ ಎಲ್ಲ ಕ್ರಿಯೆ ಸ್ತಬ್ದ, ಮನುಷ್ಯನೊಬ್ಬನೇ ಚಲನೆಯಲ್ಲಿದ್ದಾನೆ.
ಛಡಿಯೇಟಿನ ಸದ್ದು ಮೇಲಿಂದ ಮೇಲೆ ಕೇಳುತ್ತದೆ.
ಹುಚ್ಚನ ಮಾತು ಅರ್ಥರಹಿತವಾದ ರೀತಿಯಲ್ಲಿ,
ಅದೇ ಮಾತು, ಅದೇ ಮಾತು ನಡೆಯುತ್ತದೆ.
ಮನುಷ್ಯನಿಗೇ ಪೆಟ್ಟು ಬಿದ್ದಂತೆ ನಟಿಸುತ್ತಾನೆ.
ಆದರೂ ಕೊಡೆಯನ್ನು ಬಿಡಲಾಗದಂತೆ ನಟಿಸುತ್ತಾನೆ.)
ಏನೇ ಬರಲಿ ಒಗ್ಗಟ್ಟಿರಲಿ, ಇಂಕಿಲಾಬ್ ಜಿಂದಾಬಾದ್.
(ಮನುಷ್ಯ ತನ್ನ ನಿಲುಮೆ ಕಂಡುಕೊಳ್ಳುತ್ತಾನೆ. ಸುತ್ತಲೂ ನೋಡುತ್ತಾನೆ.
ಮುಷ್ಕರಗಾರರ ಸ್ಫೋಗನ್ ಗುಲ್ಲು, ಹೆಜ್ಜೆ, ಮೆರವಣಿಗೆ,
ಸ್ತಬ್ಧರಾದವವರನ್ನು ಚಲಿಸುವ ಪ್ರಯತ್ನ ಮಾಡುತ್ತಾನೆ.
ಆದರೆ ವಿಫಲ, ಕೈಕಾಲು ಎತ್ತಿ ಇಳಿಸಿದರೂ ಅವು ಇದ್ದಲ್ಲೇ ಇರುತ್ತವೆ. ಆದರೆ ಯಾರ ಕೊಡೆಯನ್ನು ಮಾತ್ರ ಬಿಡುವುದಿಲ್ಲ.
ಸುತ್ತೆಲ್ಲ ಪೋಲಿಸ್ ಬಿಗಿಲು
ಎಲ್ಲರೂ ಹಠಾತ್‌ ಚಲಿಸಿ, ಮನುಷ್ಯನ ಬಳಿಸಾರಿ ಗುಂಪುಕಟ್ಟುತ್ತಾರೆ.
ಮನುಷ್ಯನಿಗೆ ಆಯಾಸ ; ಮೈಕ್ರೋಫೋನ್ ಟೆಸ್ಟಿಂಗ್ ನಡೆದಿದೆ.)
“ವನ್ ಟೂ ಥ್ರೀ ಟೆಸ್ಟಿಂಗ್, ಟೆಸ್ಸಿಂಗ್, ಟೆಸ್ಟಿಂಗ್, (ಜತೆಗೆ ಅಶಾಂತ ಗುಂಪಿನ ದನಿ. ಗುಂಪಿನಿಂದ ಮನುಷ್ಯ ಸೀಳಿ ಹೊರಗೆ ಬರಲು ಯತ್ನಿಸುತ್ತಾನೆ. ಆಗುವುದಿಲ್ಲ.
ಒಬ್ಬ ಯೂನಿಯನ್‌ ಲೀಡ‌ರ್‌ ಭಾಷಣ ಮೈಕ್ರೊಫೋನ್ ನಲ್ಲಿ)
ಜೋಕ್ಲು ಬಾಕ್ಲು ಮಾತ ಸೊಸ್ತ ಕುಳ್ಳೊಡು. ಅಣ್ಣನಗುಳೇ ಅಕ್ಕನಗುಳೇ ಈತ್ ವರ್ಷ ನಮ್ಮ ಒದ್ದಾಟೊಡಂ, ಗುದ್ದಾಟೊಡು ಕಳೆದ್ ನಮ್ಮ ಸೋತುದೊ, ನನ್ನ ಸೋಪುಣ್ ಅಗತ್ಯ ಇಜ್ಜಿ. ನಮ ದೇಶನಿ ನ್ಯಾಯದ ತಾದಿಗೆ ಕೊಂಡಾರೊಡ್ದಾ ಸುರೂಟ್‌‌ ನಾವು ಸ್ವಲ್ಪ ಅನ್ಯಾಯಗು ಜೆಪ್ಲೋಡು, ಶಾಂತಿ ಊರಂಡು ಸ್ಥಾಪನೆ ಆವೊಡ್ಡಾ ಜನಕ್ಕು ಸ್ವಲ್ಪ ಭಂಗ ಬರಡು. ಏರೆಗ್ ಭಂಗಾಪುಂಡು, ಏತಾಪುಂಡು, ದಾಯೆಗಾಪುಂಡೂಡ್ ತೂಪಿನೋ ಕಾಲ ಉಂದತ್ತಾ. ಇಡಿ ಊರುನೇ ಇಡೀ ದೇಸೋನೇ ಬಂದ್ ಮಲ್ತದ್‌ ಕೀಲ್‌ ಹೆಟ್ಟೊಡು, ಮುಚಿದ್ ಬೀಗ ಲಗಾಯ್ಸೊಡು, ಮಾತೆರೆಗ್ಲಾ ತ್ರಾಸಾ ಪೂಂಡೂಂದ್ ಪಿರ ಪೋವೆರೆ ಬಲ್ಲಿ. ತ್ರಾಸ್‌ಗೆ ನಮ್ ಜವಾಬ್ದಾರಿ ಇಜ್ಜಿ,
ಟೆಸ್ಟಿಂಗ್, ಟೆಸ್ಟಿಂಗ್, ಟೆಸ್ಟಿಂಗ್.
ನಂಕು ಇಸ್ಥೆ ಬೆಡಾಯಿನ ಅರಿ ಅತ್: ಸೊದಿಲಾ ಆತ್ತ್‌, ದುಡ್ಡತ್ತ್‌, ಕಾಸತ್ತ್‌-ಕ್ರಾಂತಿ ಕ್ರಾಂತಿ ಒಟ್ಟಾರೆ ಕ್ರಾಂತಿ.
ಟೆಸ್ಟಿಂಗ್, ಟೆಸ್ಟಿಂಗ್, ಟೆಸ್ಟಿಂಗ್.
ಮಲ್ಲೋ ಕ್ರಾಂತಿ, ನ್ಯಾಲೋ ಕೆಕ ಕ್ರಾಂತಿ, ಅಲ್ಲಾಯಿನ, ಮುಲ್ಲಾಯಿನೋ, ಎಡಪುಡನೋ ಮಾಡ್ಯಾಪಡ್ಡಾ ಬರ್ಪಿನೋ ಮುಲ್ಲುಲಾ, ಅವರ್ ಇತ್ತಿನೂವೇ. ಇಡಿ ದೇಸೊದೋ ಜನನಮ್ಮ ಬೆರಿಟ್‌ಇಪ್ಪುನಾಸೆಡ್.

ನಾವು ದಾಯೆ ಪೊಡೊಡಂದ್ ಯಾನ್ ಕೇನುವೆ, ಏರಗ್‌ ಪೊಡ್ಯೊ ಡೂಂದ್ ಯಾನ್ ಕೇನುವೆ, ಉಂದವುವೇ ಸರ್ವನಾಶದೋ ತಾದೀಂದ ಕೆಲಜನ ನಮನಿ ಪೊಡ್ಯಾಯರ್ಡ್ ಆಗಲೆ ಎದ್‌ರ್‌ ತೆಗಲೆ ಮಾರತದ್ ನಮ ಉಂತೊಡು, ಉಂತುದ್ ಕೇನೊಡು ಧೈರ‍್ಯೊಡ್ ಸವಾಲ್ ಮಲ್ಪೊಡ್ ಸರ್ವನಾಶದ ಬೊಕನೇ ಗೋಳೀ ಇರೆತ್ ಮಿತ್ತ್‌ದ ಲೀಲೆ ಮಲ್ಪುನ್ ದೇವರ್ ಪುಟಿದಿನತ್ತಾ?…..
ಸರ್ವನಾಶದ ಸಮಯಡೇ ಈಶ್ವರ್‌ದೇವರ್ ತಾಂಡವ ನೃತ್ಯ ನೊಲ್ತಿದ್‌ ತೊಜಾಯಿನತ್ತಾ?…

ಮಾತೆರ್ಲಾ ಎಂಕೋಳ ಬೆರಿಟೆ ಬರೊಡು, ಮನಸ್ಸ್‌ಡ್‌ ವಾ ಸಂಕೋಚಲಾ ದರಾತೆ ಸಂತೊಸಡು ಸಾದಿಗ ಬರೊಡು ನಮ ಒಂಜಿ ಮಲ್ಲೊ ಮೆರವಣಿಗೆ ದೆಪ್ಪೊಡು, ಗಾಂಧಿ ಮೈದಾನಗತ್ತ್‌, ಭಾಷಣ ಮಲ್ಪರೆ ಅತ್ತ್‌. ಈ ಮೆರವಣಿಗೆ ಸೀದಾ ಪೊವೊಡು ನಮೊ ಪಾರ್ಲಿಮೆಂಟ್‌ಗ್. ಸೈಯರ್‌ ತಯಾರಾಯಿ ಸಂಸ್ಥೆಳೆಗ್ ಜೀವ ಕರುಡಂದು, ನಮನಿ ಅಂಚಿಡ್ ಸೈಯರೆಗ್ಲಾ ಇಂಚಿಡ್ ಬದ್ಕರೆಗ್ಲಾ ಬುಡಂದಿ ಪಾರ್ಲಿಮೆಂಟ್‌ದ ಮಿತ್ತೇ ನಮ
ಒನ್ ಟ ಫ್ರೀ ಟೆಸ್ಟಿಂಗ್, ಟೆಸ್ಟಿಂಗ್, ಟೆಸ್ಟಿಂಗ್

[ಅನುವಾದ : ಹುಡುಗರು, ಮಕ್ಕಳು ಎಲ್ಲರೂ ಸುಮ್ಮನೆ ಕುಳಿತುಕೊಳ್ಳಬೇಕು. ಅಣ್ಣಂದಿರೇ, ಅಕ್ಕಂದಿರೇ, ಇಷ್ಟು ವರ್ಷ ನಾವು ಒದ್ದಾಟದಲ್ಲಿ, ಗುದ್ದಾಟದಲ್ಲಿ ಕಳೆದು ಸೋತುಹೋದೆವು. ಇನ್ನು ಶೋಷಣೆ ಅಗತ್ಯ ಇಲ್ಲ. ನಮ್ಮ ದೇಶವನ್ನು ನ್ಯಾಯದ ಹಾದಿಗೆ ಕೊಂಡುಹೋಗಬೇಕಾದರೆ ಶುರುವಿಗೇ ನಾವು ಸ್ವಲ್ಪ ಅನ್ಯಾಯಕ್ಕಿಳಿಯಬೇಕು. ಊರಿನಲ್ಲಿ ಶಾಂತಿ ಸ್ಥಾಪನೆ ಆಗಬೇಕಾದ್ರೆ ಜನರು ಸ್ವಲ್ಪ ಕಷ್ಟಪಡ್ಬೇಕು. ಯಾರಿಗೆ ಕಷ್ಟ ಆಗ್ತದೆ, ಎಷ್ಟಾಗ್ತದೆ, ಯಾಕಾಗ್ತದೆ ಅಂತ ನೋಡೋ ಕಾಲ ಇದಲ್ಲ, ಇಡೀ ಊರನ್ನೇ ಇಡೀ ದೇಶವನ್ನೇ ಬಂದ್‌ ಮಾಡಿಯೇ ಕೀಲಿ ಹಾಕ್ಬೇಕು, ಮುಚ್ಚಿಗೆ ಹಾಕಿ ಬೀಗ ಲಗಾಯ್ಸಬೇಕು. ಎಲ್ಲರಿಗೂ ತೊಂದ್ರೆ ಆಗ್ತದೆ ಅಂತ ಹಿಂದೆ ಸರ‍್ಕೋಳ್‌ ಬಾರ‍್ದು. ತೊಂದ್ರೆಗೆ ನಮ್ಮ ಜವಾಬ್ದಾರಿ ಇಲ್ಲ. ಟೆಸ್ಟಿಂಗ್, ಟೆಸ್ಟಿಂಗ್, ಟೆಸ್ಟಿಂಗ್,
ನಮಗೆ ಈಗ ಬೇಕಾದ್ದು ಅಕ್ಕಿ ಅಲ್ಲ, ಗೋಧಿಯೂ ಅಲ್ಲ, ದುಡ್ಡಲ್ಲ ಕಾಸಲ್ಲ
ಕ್ರಾಂತಿ ಕ್ರಾಂತಿ, ಒಟ್ಟಾರೆ ಕ್ರಾಂತಿ.
ಟೆಸ್ಟಿಂಗ್, ಟೆಸ್ಟಿಂಗ್, ಟೆಸ್ಟಿಂಗ್.
ಮಾಡೋ ಕ್ರಾಂತಿ, ನ್ಯಾಯಕ್ಕಾಗಿ, ಕ್ರಾಂತಿ, ಅಲ್ಲಾದದ್ದು, ಇಲ್ಲಾದದ್ದು, ಎಡಬದಿಯಲ್ಲಾದ್ದು, ಬಲಬದಿಯಲ್ಲಾದ್ದು, ಪೂರ್ವಪಶ್ಚಿಮ ಉತ್ತರ ದಕ್ಷಿಣದಲ್ಲಾದ್ದು, ಇಲ್ಲಿಯ ಅಗಲು ಉಳಿದದ್ದು, ಇಡೀ ದೇಶದ ಜನ ನಮ್ಮ ಬೆನ್ನ ಹಿಂದೆ ಇದ್ದಾರೆಂಬ ಆಶೆಯಿಂದ.
ಟೆಸ್ಟಿಂಗ್, ಟೆಸ್ಟಿಂಗ್, ಟೆಸ್ಟಿಂಗ್,
ನಾವು ಯಾಕೆ ಹೆದರಬೇಕೆಂದು ನಾನು ಕೇಳ್ತೇನೆ. ಯಾರಿಗೆ ಹೆದರ‍್ಬೇಕೆಂದು ನಾನು ಕೇಳ್ತೇನೆ. ಅದೇ ಸರ್ವ ನಾಶದ ಹಾದಿಯೆಂದು ಕೆಲವು ಜನ ನಮಗೆ ಹೆದರಿಸಬಹುದು. ಅವರ ವಿರುದ್ಧ ನಾವು ಎದೆ ಸೆಟೆದು ನಿಂತ್ಕೊಳ್ಬೇಕು. ನಿಂತು ಕೇಳ್ಬೇಕು, ಧೈರ್ಯದಿಂದ ಸವಾಲ್‌ ಮಾಡ್ಬೇಕು. ಏಕೆಂದರೆ ಸರ್ವ ನಾಶದ ಬಳಿಕವೇ ಅಲ್ಲವೇ ಲೀಲಾಮಯನಾದ ದೇವರು ಅಶ್ವಥ್ಥದ ಎಲೆಯ ಮೇಲೆ ಹುಟ್ಟಿದ್ದು, ಸರ್ವನಾಶದ ಸಮಯದಲ್ಲೇ ಅಲ್ಲವೇ ಈಶ್ವರದೇವರು ತಾಂಡವ ನೃತ್ಯ ತೋರಿಸಿದ್ದು ? ಎಲ್ಲರೂ ನನ್ನ ಹಿಂದೆ ಬನ್ನಿ, ಮನಸ್ಸಿನಲ್ಲಿ ಯಾ ಸಂಕೋಚವೂ ಇಡದೆ ಸಂತೋಷದಿಂದ ಜತೆ ಬರಬೇಕು. ನಾವು ಒಂದಾಗಿ ಮೆರವಣಿಗೆ ತೆಗೀಬೇಕು, ಗಾಂಧಿ ಮೈದಾನಿನಲ್ಲಿ ಭಾಷಣ ಮಾಡಲಿಕ್ಕೆ ಅಲ್ಲ. ಈ ಮೆರವಣಿಗೆ ಸೀದಾ ನಮ್ಮ ಪಾರ್ಲಿಮೆಂಟಿಗೇ ಹೋಗಬೇಕು, ಸಾಯಲು ತಯಾರಾಗಿರುವ ಸಂಸ್ಥೆಗಳಿಗೆ ಜೀವಕೊಟ್ಟು, ನಮ್ಮನ್ನು ಅತ್ತ ಸಾಯಲ ಬಿಡದೆ ಇತ್ತ ಬದುಕಲೂ ಬಿಡದ ಪಾರ್ಲಿಮೆಂಟಿನ ಮೇಲೆಯೇ ಸಾಗಬೇಕು.] (ಭಾಷಣ ಆಗುತ್ತಿದ್ದಂತೆ ಗುಂಪು ಮನುಷ್ಯನನ್ನು ಸುತ್ತು ಕಟ್ಟದೆ, ಆತ ಅಸಹಾಯವಾಗುತ್ತಾನೆ. ಆದರೂ ಅವನಿಗೆ ಉಸಿರು ಕಟ್ಟುತ್ತದೆ.
ಶಾಲೆಯ ಗಂಟೆ ಬಡಿಯುತ್ತದೆ. ಭಾಷಣ ನಿಲ್ಲುತ್ತದೆ.
ಗುಂಪಿನವರು ಸ್ವತಂತ್ರರಾಗುತ್ತಾರೆ-ಶಾಲೆ ಬಿಟ್ಟ ಮಕ್ಕಳಂತ-ಸಾಲು ಹಿಡಿಯುತ್ತಾರೆ. ವರನುಷ್ಯನೂ ಅವರನ್ನು ಸೇರಿಕೊಳ್ಳುತ್ತಾನೆ.
ಗಂಡು ದನಿ ಹಾಜರಿ ಕರೆಯುತ್ತದೆ, ಬೇರೆ ಬೇರೆ ಹೆಸರು ಕೂಗುತ್ತದೆ.
ಮನುಷ್ಯನ ಸರದಿ ಮಾತ್ರ ಬರುವುದಿಲ್ಲ.
ಗಂಡು ದನಿಯ ಆರ್ಡರ-ಸ್ಕೂಲ್….ಡಿಸ್ಪರ್ಸ್, ಸಾಲು ಮುರಿಯಿತು. ಜನ ಸಿಕ್ಕಾಪಟ್ಟೆ ಓಡುತ್ತಿದ್ದಾರೆ -ಕೂಡೇ ಬಿಚ್ಚಿ, ಬಿಟ್ಟ ಕೊಡೆಗಳನ್ನು ವೀಕ್ಷಿಸುತ್ತಾ, ತನ್ನ ಕೊಡೆ ಗಟ್ಟಿಯಾಗಿ ಹಿಡಿದು ಮನುಷ್ಯನಂತೆ ಒಬ್ಬಂಟಿಯಾಗುತ್ತಾನೆ.)
ಹೆಣ್ಣುದನಿ :- ಮಹಿಳೆಯರೇ, ಮಹನೀಯರೆ, ವಂದನಾರ್ಪಣೆಯ ಸೌಭಾಗ್ಯಕ್ಕಾಗಿ ಇಲ್ಲಿ ನಿಂತಿದ್ದೇನೆ. ಇಂದಿನ ಈ ಕಾಠ್ಯಕ್ರಮವಲ್ಲಿ ನಮಗೆ. ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಸಹಾಯಮಾಡಿದ ನಟವರ್ಗದವರಿಗೂ, ಕೂಗಿದವರಿಗೂ, ಕೇಕೆ ಹಾಕಿದವರಿಗೂ, ಸಿಳ್ಳು ಹಾಕಿದವರಿಗೂ, ಚಪ್ಪಾಳೆ ತಟ್ಟಿ ನಮ್ಮನ್ನು ಹುರಿದುಂಬಿಸಿದ ಮಹಾತ್ಮರಿಗೂ ನಮ್ಮ ಸಂಸ್ಥೆಯ ಪರವಾಗಿ ವಂದನೆ ಸಲ್ಲಿಸುತ್ತೇನೆ. ಮುಖ್ಯವಾಗಿ ನಮ್ಮ ಸಂಸ್ಥೆಯ ಮೇಲಿನ ಅಭಿಮಾನದಿಂದ ತಮ್ಮ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ತಮ್ಮ ಕಾರ್ಖಾನೆಯಲ್ಲಿ ತಯಾರಿಸಿದ ಇಷ್ಟೊಂದು ಕೊಡೆಗಳನ್ನು ಸಂತೋಷದಿಂದ ನಮಗೆ ಕಡಕೊಟ್ಟು ಕಾರ‍್ಯಕ್ರಮವನ್ನು ಚಂದಗಾಣಿಸಿದ ಶ್ರೀ ಇಬ್ರಾಹಿಂ ಕರೀಂ ಕೊಡೆ ಕಂಪೆನಿಯ ಈಗಿನ ಮಾಲಿಕರು, ಅವರ ಮಕ್ಕಳು ಮರಿಗಳು’ ಆವನ್ನು ಇಲ್ಲಿಯವರೆಗೆ ತಂದ ಕೂಕ್ರುಪೂಜಾರಿಗೂ ನಮ್ಮ ಕೃತಜ್ಞತೆ ಸಲ್ಲಲೇಬೇಕು. ಕೊಡೆಗಳನ್ನು ನಾವು ಹೇಗೆ ಬಳಸಬಹುದೆಂಬುದನ್ನು ತಿಳಿದೂ ತಿಳಿಯದಂತೆ ಅವರು ಕೊಟ್ಟಿದ್ದಾರೆ, ಇಂಥ ಕೋಮಲವಾದ ಕೊಡೆಗಳನ್ನು ಹೇಗೆ ಹಿಡಿಯಬೇಕೆಂಬುದನ್ನು ಅರಿಯದ ನಮ್ಮ ಹಸುನಟರ ಕೈಯಲ್ಲಿ ಅವುಗಳಿಗಾದ ಗತಿಯನ್ನು ನೋಡಿದರೆ ಅವರಿಗೆ ಮತ್ತೊಮ್ಮೆ ಕೃತಜ್ಞತೆ
ಅರ್ಪಿಸಬೇಕಾಗುತ್ತದೆ. ನಮ್ಮ ಕಾರ‍್ಯಕ್ರಮಗಳಿಗೆ ಬೇಕಾದ ವಿದ್ಯುದ್ದೀಪಗಳನ್ನೂ, ಪರದೆಗಳನ್ನೂ ನಮಗೆ ಬಾಡಿಗೆಗೆ ಕೊಟ್ಟಂಥಾ…….. ಅವರಿಗೂ ಹಾರ್ಮೊನಿಯಮ್ ಬಾರಿಸಿದ….ಇವರಿಗೂ ಬಂದವರಿಗೂ, ಕೂತವರಿಗೂ, ತಡೆಯಲಾರದೆ ಹೋದವರಿಗೂ ನಮ್ಮ ಅನಂತಾನಂತ ವಂದನೆಗಳು.
(ಮನುಷ್ಯ ಕೊಡೆ ಸಂಗ್ರಹ ಕಾರ‍್ಯದಲ್ಲಿ ಬಿದ್ದಿದ್ದಾನೆ. ಅವನಿಗೆ ಎಲ್ಲವನ್ನೂ ಹಿಡಿದುಕೊಳ್ಳಲು ಆಗುತ್ತಿಲ್ಲ. ಅಷ್ಟನ್ನೂ ಕಂಕುಳಲ್ಲಿ ಸೇರಿಸಿಕೊಳ್ಳುತ್ತಿದ್ದಾನೆ. ರಾಷ್ಟ್ರಗೀತೆ.
ಮನುಷ್ಯ ಕೊಡೆಗಳ ರಾಶಿ ಹೊತ್ತು ಸ್ತಬ್ಧನಾಗುತ್ತಾನೆ. ರಾಷ್ಟ್ರಗೀತೆ ಮುಗಿಯಿತೋ, ವಿಶ್ರಾಂತಿಯಲ್ಲಿದ್ದಾನೆ. ಒಂದೊಂದೇ ಕೊಡೆ ಅವನ ಕೈಯಿಂದ ಉರುಳುತ್ತದೆ.

(ಈ ನಾಟಕವನ್ನು ಉಡುಪಿಯಲ್ಲಿ ತಾ 10-2-74 ರಂದು ಎಂ. ಜಿ. ಎಂ. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಆಡಿಸಲಾಯಿತು, ನಿರ್ದೆಶಕರು: ಬಿ. ವಿ. ಕಾರಂತ)

Close

ಬಾವಲಿ

ಬಾವಲಿ

ಬಾಲಕೃಷ್ಣ ಕೋಳಾರಿ

ಹನಿಮಳೆ ; ಮಳೆಗೊಡ್ಡಿ ಆಕಾಶಕ್ಕೆ ತಲೆ ತೂರಿಸುವ ಮನೆಗಳು. ಗೀರು ಗೀರಾದ ರಸ್ತೆಗಳು. ಹೊರಗೆ ತಲೆ ಇಟ್ಟರೆ ಕೆಟ್ಟು ಹೋಗುವ ಜನಗಳು. ಮಂತ್ರಗಳನ್ನು ಅರಚುವ ಕಾರು. ಬಸ್ಸು ಆಟೋಗಳು. ಬೋಗಾರ ವೇಸದ ಸಿಟಿ ಬಸ್ ಸ್ಟಾಂಡಲ್ಲಿ ನಿಂತು ತಿಲಕವಾಡಿಗೆ ಹೋಗುವ ೨ ಅಥವಾ ೨ಎ ನಂಬರಿನ ಬಸ್ಸನ್ನು ನಿರೀಕ್ಷಿಸುತ್ತಿದ್ದ ಕ್ಷಣಗಳು. ಬೆಟ್ಟದಷ್ಟು ಬೇಸರವನ್ನು ಹೇರಿಕೊಂಡು ನಿಂತಿದ್ದೆ. ಒಂದು ಮಾತು : ಈ ಬೆಳಗಾಂ ಇಷ್ಟುದ್ದಕ್ಕೆ ಅತ್ತ ಇತ್ತ ವೈಚಾಚಿ ಬೆಳೆದಿದೆ. ಇಲ್ಲಿ ಸಾಕಷ್ಟು ಸಿಟಿ ಬಸ್ಸುಗಳಿಲ್ಲವೆಂದರೇನು ? ಇಲ್ಲಿನ ಮರಾಠಿ ಜನ ಅವರ ಮಾತು, ಚಿಲ್ಲರೆ ಮಾತಿನ ಕಾದಾಟಗಳು, ಸೈಕಲ್ಲುಗಳು. ಮೆರವಣಿಗೆಗಳು, ಘೋಷಣೆಗಳು-ಒಟ್ಟಿನಲ್ಲಿ ವಿಚಿತ್ರವಾಗಿದೆ.
ಎದುರಿನ ಆ ದೊಡ್ಡ ಆಲದ ಮರದ ತುಂಬಾ ಬಾವಲಿಗಳು. ಸಂಜೆ ಕೀಚ್ ಕೀಚ್ ಎನ್ನುತ್ತಾ ಕಿತ್ತಾಡಿ ಅತ್ತಿತ್ತ ಹಾರಾಡಿ, ಮಳೆಯಿಂದಾಗಿ ಗೊಂದಲಗೊಂಡಿದ್ದವು. ಈ ಇವುಗಳ ಗಲಭೆ, ಮಳೆಯ ಶಬ್ದದೊಂದಿಗೆ ಮೇಳೈಸಿ ಭಯ ಹುಟ್ಟಿಸುವ ವಾತಾವರಣವನ್ನು ಕಲ್ಪಿಸಿದವು.
ಇಂದು ಸುಮ್ಮನೆ ತಿರುಗಾಡಿದುದೇ ಆಯಿತು. ಥೇಟ್ ಕತ್ತೆಯ ಹಾಗೆ, ಆಸಕ್ತಿ ಸತ್ತು ಹೋದಂತಿದೆ. ಹಾಗೆಯೇ ಕೆಲಸ ಮುಗಿದೊಡನೆಯೇ ರೂಮಿಗೆ ಹೋಗುವುದೊಳ್ಳೆಯದಿತ್ತು. ಹಾಗೆ ನೋಡಿದರೆ ನಳಿನಿಯೊಡನೆ ಮಾತುಕತೆ ನಿಲ್ಲಿಸಿಬಿಟ್ಟಂದಿನಿಂದ ಸುರುವಾಗಿದೆ ಈ ಸ್ಥಿತಿ. ಒಂದೆರಡು ಸಲ ಖಡೇಬಜಾರದಲ್ಲೋ ಗಣಪತಗಲ್ಲಿಯಲ್ಲೋ ಎದುರೆದುರಾದರೂ ನಾನೇ ಮಾತಾಡಿಸಿಲ್ಲ. ನಿನ್ನೆಯಂತೂ ಸುವರ್ಣ ಮಂದಿರದೆದುರು ನಿಂತಿದ್ದವಳು ನನ್ನೆಡೆ ನೋಡಿ ನಕ್ಕಂತಿತ್ತು. ನಾನೇ ನೋಡಿಯೂ ನೋಡದಂತೆ ನಡೆದೆ. ಅವಳ ಚಿಲ್ಲರೆತನ, ಅವಕಾಶಕ್ಕಾಗಿ ಯಾರನ್ನೂ ತಬ್ಬಿಕೊಳ್ಳುವ ರೀತಿ ಹೇಸಿಗೆ ಹುಟ್ಟ ಸುತ್ತದೆ.
ಬಸ್ಸೊಂದು CBT ಕಡೆಯಿಂದ ಬಂತು. ಜನ ನುಗ್ಗುವುದಕ್ಕೆ ಸುರು ಮಾಡಿದರು. ಖಾಕಿ ಸಮವಸ್ತ್ರದ ಕಂಟ್ರೋಲರನೂ ಹೊರಬಂದ. ಆದರೆ ಅದು ೫ ನೇ ನಂಬರು. ಗೋವಾವೇಸ್‌ಗಾಗಿ ಶಹಾಪುರಕ್ಕೆ ಹೋಗುವ ಬಸ್ಸು. ಅದರೂ ಜನ ಇಲ್ಲಿಂದ ಒಮ್ಮೆ ಬಿಡುಗಡೆಯಾದರೆ ಸಾಕೆಂದು ನುಗ್ಗುತ್ತಿದ್ದರು, ಗೋವಾ ವೇಸ್‌ನಲ್ಲಿಳಿದು ಎರಡು ಫರ್ಲಾಂಗು ನಡೆದರೆ ಸೋಮವಾರ ಪೇಟೆಯ ಹಾಸ್ಟೇಲು ಸಿಗುತ್ತದೆ-ಹೋಗಿಯೇ ಬಿಡೋಣ ಎಂದುಕೊಂಡೆ. ಆದರೆ ಜನ ತುಂಬಿ ಆಗಿತ್ತು. ಅದೇ ಖಾಕಿ ಸಮವಸ್ತ್ರದ ವ್ಯಕ್ತಿ ರೈಟ್ ಕೊಟ್ಟ. ಬಸ್ಸು ನಡುಗುತ್ತಾ ಹೊರಟು ಹೋಯಿತು.
ದೂರದ ರಸ್ತೆಯತ್ತ ದಿಟ್ಟಿ ಹಾಯಿಸಿದರೆ ಆಟೋಗಳು ಮುಸುಗಿಕ್ಕಿಕೊಂಡು, ಗುರು ಗುಟ್ಟುತ್ತಾ, ಮನುಷ್ಯರು ಕೊಡೆಯಡಿ ದೇಹವನ್ನು ಮುದುಡಿಕೊಂಡು, ಪ್ರವಹಿಸುತ್ತಲೇ ಇದ್ದುದು ಕಾಣಿಸುತ್ತದೆ. ಎತ್ತ ನೋಡಿದರೂ ಕೊಡೆ, ಆಟೋ, ಜಟ್ಕಾ, ಮನುಷ್ಯರು, ಸೈಕಲ್ಲುಗಳು, ಕಾರುಗಳು, ಲಾರಿಗಳು.
ಊರಿನಿಂದ ಒಂದು ವಾರಕ್ಕೆ ಮೊದಲು ಬಂದ ತಮ್ಮನ ಕಾಗದದಲ್ಲಿ ಅಮ್ಮನ ರೋಗ ಹೆಚ್ಚಾಗಿದೆ ; ಶಾಸ್ತ್ರಿ ಡಾಕ್ಟರು ಬಂದು ನೋಡಿ ಔಷಧ ಕೊಟ್ಟು ಹೋಗಿದ್ದಾರೆ. ನೀನೊಮ್ಮೆ ಬರಬೇಕು ಎಂದು ಬರೆದಿದ್ದ. ವಿನಾಕಾರಣ ಅಮ್ಮನೊಡನೆ ಜಗಳವಾಡಿ ಬಂದ ನನಗೆ, ನನ್ನ ಪ್ರತಿಷ್ಠೆ ಹೋಗದಂತೆ ತಡೆದಿತ್ತು.
ಬಸ್ಸು, ಬಸ್ಸು, ಹೌದು ! ೨A, ತಿಲಕವಾಡಿಗೆ ; ಹತ್ತಿ ಕುಳಿತಾಯಿತು. ಬಸ್ಸು ಹೊರಟು Camp ನಲ್ಲಿ ಗ್ಲೋಬ್ ಟಾಕೀಸಿನ ಎದುರು ಬಂದಾಗ ಕೆಲವು ಜನ ಆಂಧ್ರದ ಸ್ಟೂಡೆಂಟ್ಸ್ ಬಸ್ಸು ಹತ್ತಿದರು. ಇಂಗ್ಲಿಷ್ ಚಿತ್ರ ನೋಡಿ ಬಂದವರೆಂದು ಕಾಣುತ್ತದೆ. ಆ ಚಿತ್ರದಲ್ಲಿ ಯಾರೋ ಒಬ್ಬ ನಟಿಯ ಪಾತ್ರದ ಬಗ್ಗೆ ಕೊರೆಯುತ್ತಿದ್ದರು. ಎಲ್ಲರೂ ಅಸಂಬದ್ಧ ಇಂಗ್ಲಿಷನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದರು. ಬೋರು ಹೊಡೆಯುತ್ತಿದ್ದ ಇವರು ಮಳೆ, ಬಸ್ಸಿನೊಳಗಿನ ಸಿಗರೇಟಿನ ಕಮಟು, ಹೊರಗಿನ ಚಳಿಗಾಳಿ, ಇವೆಲ್ಲ
ಒಟ್ಟಾಗಿ ಸಾಕಪ್ಪಾ ಒಮ್ಮೆ ತಿಲಕವಾಡಿಗೆ ತಲುಪಿಬಿಟ್ಟರೆ ಎಂಬಂತಾಯಿತು. ಅಂತೂ ಕೊನೆಗೊಮ್ಮೆ ಮರಾಠಿ ಹೆಂಗಸರ ಕಿಚ ಕಿಚಕ್ಕೆ, ದೊಡ್ಡ ದನಿಯ ಗುಜರಾತಿಯನ್ನರ ಬಾಯಿಗೆ ಹೆದರಿಕೊಂಡು, ತೆವಳಿಕೊಂಡು ಬಸ್ಸು ಕಾಂಗ್ರೆಸ್ ರೋಡು ದಾಟಿ, ತಿಲಕವಾಡಿ ಸರ್ಕಲ್‌ನಲ್ಲಿ ನಿಂತಿತು. ಇಳಿದು ರೈಲ್ವೆ ಹಳಿ ದಾಟಿ ಕಾಲೇಜು ರೋಡ್ ಸೇರಿದೆ. ಮಳೆ ಹನಿ ಹನಿಯಾಗಿ ಬೀಳುತ್ತಿದ್ದುದು ಸುಜಾತಕ್ಕೆ ತಲಪುವಾಗ ಜೋರಾಯಿತು. ಓಡುತ್ತಾ ಒಳಹೊಕ್ಕೆ. ಶ್ರೀಧರ ಗಲ್ಲಾದಲ್ಲಿ ಕುಳಿತು ರೇಡಿಯೋ ತಿರುಗಿಸುತ್ತಿದ್ದ. ಒಳಗೆ ಹೆದೊಡನೆಯೇ ಫಕ್ಕನ ಕಂಡುದು ಅಲ್ಲಿಟ್ಟ ಶೆಟ್ಟಿಯ ಓವರ್ ಕೋಟು. ಶೆಟ್ಟಿ ಎಲ್ಲೆಂದು ಶ್ರೀಧರನನ್ನು ಕೇಳಿದೆ. ಎಲ್ಲೋ “ಸಿವಿಲ್ ಹಾಸ್ಪಿಟಲ್‌ಗೆ ಮೆನನ್‌ನನ್ನು ಕಾಣಬೇಕೆಂದು ಹೋದವ ಇನ್ನೂ ಬಂದಿಲ್ಲ’ ಎಂದು ಹೇಳಿದ.
ಟೀ ಕುಡಿದು ಓವರ್‌ಕೋಟು ತೊಟ್ಟುಕೊಂಡು ಹೊರಬಿದ್ದೆ. ಬೆಳಗಾಂಕರ್‌ರಲ್ಲಿಗೆ ತೇಪುವಾಗ ಫಕ್ಕನೆ ರೂಮಲ್ಲಿ ಲೈಟಿಲ್ಲದುದು ನೆನಪಾಯಿತು. ಬಲ್ಬು ನಿನ್ನೆಯೇ ಬರ್ನಾಗಿತ್ತು. ಬೆಳಗಾಂಕರ್‌ರಲ್ಲಿಂದ ಒಂದು ೬೦ ವಾಟ್ಸ್ ಮಿಲ್ಕ್‌ ಬಲ್ಬ್‌‌ ತೆಗೆದುಕೊಂಡು ಹೊರಟೆ. ಪೋಸ್ಟ್ ಆಫೀಸಿನ ಎದುರು ಹೋಗುವಾಗ ಈ ದಿನ ಒಂದು ಕಾಗದ ಮನೆಗೆ ಬರೆದು ಹಾಕಿ ಬಿಡಬೇಕು ಎಂದುಕೊಂಡೆ. ಬಸ್ಸೊಂದು ಎದುರಿನಿಂದ ಬಂದು ಮೋಹನ ವಿಲಾಸದೆದುರು ನಿಂತಾಗ ಶೆಟ್ಟಿ ಬರುತ್ತಾನೋ ಎಂದು ಸ್ವಲ್ಪ ನಿಂತುಕೊಂಡೆ. ಇಲ್ಲ, ಬಸ್ಸು ಹೊರಟು ಸುಜಾತದ ಬದಿಯಲ್ಲಿ ಒಮ್ಮೆ ನಿಂತು ಯಾರೂ ಇಳಿಯದಿದ್ದಾಗ ತಿರುಗಿ ಆಜಾದ್ ಟಾಕೀಸಿನತ್ತ ಹೋಯಿತು. ಹೊರಟೆ, ಶೆಟ್ಟಿ ಬಹುಶಃ ಕೃಷ್ಣಾದಲ್ಲಿ ಜೀನೇ ಕಿ ರಾಣೆ ನೋಡಲು ಹೋಗಿರಬೇಕು……..ಎಂದುಕೊಂಡು ರಾಡಿಯಲ್ಲಿ ಕೆಸರಲ್ಲಿ ಕಾಲ೦ ಹಾಕುತ್ತಾ ಹಾಸ್ಟೆಲನ್ನು ತಲುಪಿದೆ. ನಾನು ರೂಮಿನ ಬಾಗಿಲು ತೆಗೆದು ಒಳಗೆ ಹೋಗುತ್ತಿದ್ದಂತೆ ಹಿಂದಿನಿಂದ ಕೊಣ್ಣೂರಿ, ‘ಸಾಬ್‌‌’ ಎನ್ನುತಾ ಬಂದ. ಇವನದಿನ್ನೇನು ರಗಳೆ ಅನ್ನಿಸಿ ‘ಏನಪ್ಪಾ ಲಪಣ್ಣೂರಿ’ ಅಂದಾಗ, “ನಿಮಗೊಂದು ಟೆಲಿಗ್ರಾಂ ಒಂದದ. ಈಗ ಒಂದು ವೀಸ್ ಪಂಚ್‌ವೀಸ್‌ ಮಿನಿಟು ಪೈಲೆ ಪೋಸ್ಟ್‌ಮನ್ ನಿಮ್ಮ ಹೆಸರ‍್ಹಿಡಿದುಕೊಂಡು ಬಂದಾರಿ. ನಾನೇ ಕೊಡೋಣೆಂದು ಇಸ್ಕೊಂಡೆ. ತೊಗೋರಿ’ ಎನ್ನುತ್ತಾ ಕೊಟ್ಟ. ಒಡೆದು ಓದಿದೆ. “Mother serious, Start immediately’ ಎಂದಿತ್ತು. ಫಕ್ಕನೆ ಎಲ್ಲೋ ಸಿಡಿಲು ಹೊಡೆದಂತೆ. ಮೈ ಜುಂ ಎಂದಾಗ ಒಂದು ನಿಮಿಷ ತಲೆಗೆ ಕೈಹಿಡಿದು ಕಾಟಿನ ಮೇಲೆ ಕುಳಿತೆ. ಎಚ್ಚತ್ತು ವಾಚ್ ನೋಡಿದಾಗ ೬ ೧/೪. ಆರೂವರೆಗೆ ಡೆಕ್ಕನ್. ಆಲೋಚಿಸಲು ವೇಳೆಯಿಲ್ಲ. ಶೆಟ್ಟಿಗೆ ಹೇಳಲು ವೇಳೆಯಿಲ್ಲ. ಬೇಗನೆ ಶೆಟ್ಟಿಗೊಂದು ಕಾಗದ ಹಾಗೂ ಒಂದು ವಾರಕ್ಕೆ C.L. ಬರೆದಿಟ್ಟು ಎರಡು ಮೂರು ಅ೦ಗಿ ಪ್ಯಾಂಟು ಎಳೆದು ಬ್ಯಾಗಿನ್ನು ತುಂಬಿಕೊಂಡು ಹೊರಟೆ. ಆಟೋಗೆ ಕಾಯಲು ಪುರುಸೊತ್ತಿಲ್ಲ. ಗೋವಾ ವೇಸ್‌ಗಾಗಿ ಓಡಿ ಬಿಡುವುದು ಲೇಸು. ಇಲ್ಲಿಂದ ಈ ಬೆಳಗಾಮಿನಿಂದ ಈ
ಥಳಕಿನಿಂದ ಈ ನಳಿನಿಯಿಂದ ದೂರ ಓಡುತ್ತಿದ್ದೇನೆಯೇ ?
ಮಳೆ ನಿಂತರೂ ರಾಡಿಯಾಗಿತ್ತು. ದೀಪಗಳು ಮಿಣ ಮಿಣನೆ ಹೊತ್ತಿಕೊಂಡಿದ್ದವು ಒಂದು ರೀತಿಯ ಓಟದ ನಡಿಗೆ ಓಟ ; ದಾಪುಗಾಲು. ಟ್ರೇನು ಬಂದು ನಿಂತಿತ್ತು. ಟಿಕೇಟು ಕೊಂಡು ಹತ್ತಲು ಪುರುಸೊತ್ತಿಲ್ಲ. ಹುಬ್ಬಳ್ಳಿಯಲ್ಲಿ ಅರ್ಧ ಗಂಟೆ ನಿಲ್ಲುತ್ತದೆ ಕೊಂಡರಾಯಿತು ಎಂದುಕೊಂಡು ಹತ್ತಿ ಕುಳಿತೆ. ಒಂದು ರೀತಿಯ ಸಮಾಧಾನವೂ ಅಲ್ಲದ ಬೇಸರವೂ ಅಲ್ಲದ ತಪ್ತ ಸ್ಥಿತಿ. ಎದುರಿನ ಜನರನ್ನು ನೋಡುತ್ತಾ ಕುಳಿತೆ. ಬಹಳಿಲ್ಲ. ನಾಲ್ಕೈದು ಗಂಡಸರು. ಬಹುಶಃ ಬೆಂಗಳೂರಿಗೆ ಹೋಗುತ್ತಿರಬಹುದು ಅಥವಾ ಲೋಂಡದಲ್ಲೋ ಹುಬ್ಬಳ್ಳಿಯಲ್ಲೋ ಇಳಿಯಲೂಬಹುದು. ಬೇರೇನೂ ಹೊಳೆಯುತ್ತಿಲ್ಲ. ಇಷ್ಟು ಹೊತ್ತಿಗೆ ಟ್ರೇನು ಹೊರಟು ವೇಗವನ್ನು ಗಳಿಸಿಕೊಂಡಿತ್ತು. ಕಿಟಕಿಯಿಂದ ಹೊರಗೆ ನೋಡಿದರೆ ಅಷ್ಟುದ್ದಕ್ಕೆ ಬಯಲು. ಅಲ್ಲೊಂದು ಸಣ್ಣ ಗುಡ್ಡ ಕಾಲು ಚಾಚಿ ವಿಸ್ತಾರಕ್ಕೆ ಕುಳಿತುಕೊಂಡಿದೆ. ಕತ್ತಲು ತಲೆ ಹಾಕಿ ವಿಸ್ತಾರವನ್ನು ತಬ್ಬಿಕೊಳ್ಳುತ್ತಿತ್ತು. ಈ ಊರೇನು ? ಬರೇ ಬೋಳು, ಉಸಿರೇ ಇಲ್ಲದಂತೆ ; ಜನಸಂಚಾರವಿಲ್ಲದೆ ಮೌನದಲ್ಲಿ ಭಯ ಹುಟ್ಟಿಸುತ್ತದೆ. ನಮ್ಮೂರು ಚೆಂದ : ಎಲ್ಲಿ ನೋಡಿದರೂ ಹಸಿರು, ಅಲ್ಲೊಂದು ಇಲ್ಲೊಂದು ಮನೆಗಳು, ಜನರು. ಅವರ ಕೆಸರು ಮೆತ್ತಿದ ಧೋತರ. ಮಲೆಯಾಳಿ, ತುಳು ಮಾತುಗಳು, ಜಗಳಗಳು, ಇಷ್ಟು ವಿಸ್ತಾರಕ್ಕೆ ಮೌನವಿಲ್ಲ, ಎಷ್ಟೋ ಚೆನ್ನಾಗಿದೆ ಅನ್ನಿಸಿತು.
ಹುಬ್ಬಳ್ಳಿ ಇನ್ನೂ ಅರ್ಧ ಗಂಟೆ ಇದೆ. ಸ್ವಲ್ಪ ಮಲಗೋಣ ಎಂದುಕೊಂಡು ಒಂದಕ್ಕೆ ಹೋಗಿ ಬಂದು ಮೇಲಿನ ಬರ್ತ್‌ನಲ್ಲಿ ಮಲಗಿದೆ. ಬ್ಯಾಗನ್ನು ತಲೆಯಡಿಗೆ ಇಟ್ಟುಕೊಂಡು ಕಣ್ಣುಮುಚ್ಚಿದೊಡನೆ ಎಲ್ಲ ಬಿಚ್ಚಿಕೊಂಡಿತು. ಊರೆಂದೊಡನೆ ಮನೆ, ಮನೆಯೆಂದೊಡನೆ ಅಮ್ಮನ ನೆನಪಾಯಿತು. ಅಕ್ಕಂದಿರು, ತಮ್ಮ, ತಂಗಿ ಎಲ್ಲ ಸುತ್ತ ಕುಳಿತಿರಬಹುದು. ಅಮ್ಮ ಚಾವಣಿ ನೋಡುತ್ತಾ ಮಲಗಿರಬಹುದು. ಸಾಧ್ಯವಿಲ್ಲವೆನ್ನಿಸಿತು. ಅಲ್ಲಿನ ಆ ಭಯದ ವಾತಾವರಣದೊಳಕ್ಕೆ ತೂರಿಕೊಳ್ಳುವುದು ಹೇಗೆ ? ವಿಚಿತ್ರವಾದ ಭಯ. ಕಣ್ಮುಚ್ಚಿದರೆ ಭಯ. ಟ್ರೇನಿನಲ್ಲಿ ಹೋಗಲು ಭಯ. ಹೋಗುತ್ತಿದ್ದಂತೆ ಭಯ ಹೆಚ್ಚುತ್ತಾ ಹೋಗುತ್ತದೆ. ಹೀಗೇ ಹೊದರೆ ಇದು ಕೊಂದುಬಿಡಬಹುದು. ಈ ಮೋಡಿ ಹಾಕುವ ಭಯದಿಂದ ಬಿಡುಗಡೆ ಹೇಗೆ ?
ಕಣ್ಣು ಬಿಟ್ಟರೆ ಟ್ರೇನಿನೊಳಗೆ ಚಿಕ್ಕ ಬಲ್ಬ್‌ ಉರಿದು ಉರಿದು ಕತ್ತಲನ್ನು ನುಂಗುತ್ತಿತ್ತು. ಹೊರಗಿನಿಂದ ಯಥೇಚ್ಛ ಕತ್ತಲು ಒಳಕ್ಕೆ ನುಗ್ಗಿ ನಾಶವಾಗುತ್ತಿತ್ತು. ಧಾರವಾಡದಲ್ಲಿ ಟ್ರೇನು ನಿಂತೊಡನೆ ಕೆಳಗಿಳಿದು ಒಂದು ಸಿಗರೇಟು ಹಚ್ಚಿಕೊಂಡು ಬಂದು ಕುಳಿತೆ. ಕಣ್ಣುರಿ ಇನ್ನೂ ಹೋಗಿರಲಿಲ್ಲ. ಫಕ್ಕನೆ ಅಮ್ಮನ ರೋಗ ಉಲ್ಬಣಿಸಲು ನಾನೇ ಕಾರಣನಾದೆ ಅನ್ನಿಸಿತು. ಕಳೆದ ಸಲವಷ್ಟೇ ಊರಿಗೆ ಹೋಗಿದ್ದಾಗ ಅಮ್ಮ ನನ್ನ ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದು, ತನ್ನ ಅಣ್ಣನ ಮಗಳು ಚಂದ್ರಕಲೆಯನ್ನು ಸೊಸೆಯಾಗಿ ಮಾಡಿಕೊಳ್ಳಬೇಕೆಂದು ಅಮ್ಮನ ಆಸೆ. ನನಗದು ಇಷ್ಟವಿಲ್ಲ. ಆ ಕಜ್ಜಿಬುರುಕಿ, ಚಂದ್ರಕಲಳ ಮುಖದ ಮೈಮೇಲಿನ ಕಲೆಗಳನ್ನು ನನ್ನಿಂದ ಎಣಿಸಲು ಸಾಧ್ಯವೆ ? ಹಾಗೆಂದೇ ಹೇಳಿದೆ. ಆದರೆ ಅಮ್ಮನಿಗೆ ಮೂರು ದಿನಕ್ಕೊಮ್ಮೆ ಬರುವ ತನ್ನ ಅಣ್ಣನ ಮೇಲಿನ ಅತೀ ಮಮತೆ ಒಂದು ಕಡೆಯಾದರೆ, ಪ್ರೀತಿಪಾತ್ರನಾದ ಮಗ ತನ್ನ ಮಾತು ಕೇಳಬೇಕೆಂಬ ಹಠ ಇನ್ನೊಂದೆಡೆ.
ಮಾತಿನ ಭರದಲ್ಲಿ, “ನಾನು ಈ ಊರಲ್ಲಿ ಯಾರನ್ನೂ ಮದುವೆಯಾಗಲಾರೆ ಅಮ್ಮ. ಬೆಗಾವಿಯಲ್ಲಿ ಹುಡುಗಿ ನೋಡಿದ್ದೇನೆ, ಆದರೆ ಆಕೆಯನ್ನೇ ಮದುವೆಯಾಗುತ್ತೇನೆ ಇಲ್ಲದಿದ್ದರೆ ಆಗುವುದೇ ಇಲ್ಲ’ ಎಂದು ನನ್ನ ಬಳಿಯಿದ್ದ ನಳಿನಿಯ ಫೋಟೋ ತೋರಿಸಿ ಹೇಳಿದ್ದೆ. ಆಮ್ಮ ಕೋಪಿಸಿದಳು, ಕೂಗಾಡಿದಳು, ಮಾತು ಬಿಟ್ಟಳು. ನಾನು ಬದಲಾಯಿಸಲಿಲ್ಲ. ಕೊನೆಗೆ, ‘ನೀನಿನ್ನು ಆ ವಿಚಾರವನ್ನೆತ್ತಿದರೆ ನಾನು ಮನೆಗೇ ಬರಲಾರನೆಂದು ಕೋಪಿಸಿಕೊಂಡು ಹೊರಟು ಬಂದಿದ್ದೆ. ಆದರೆ ನಾನಂದು ಹೇಳಿದುದು ಪೂರಾ ಹುಡುಗಾಟಕ್ಕೆ ! ಈ ರೀತಿಯಲ್ಲಿಯಾದರೂ ಅಮ್ಮ ಚಂದ್ರಕಲಳ ಆಸೆ ಬಿಟ್ಟು ಆಕೆಯ ಮದುವೆ ಆಗಿಹೋಗಲಿ ಎಂದುಕೊಂಡಿದ್ದೆ. ನಳಿನಿಯನ್ನು ಮದುವೆಯಾಗಬೇಕೆಂದಲ್ಲ, ಕೇವಲ ಅಮ್ಮನ ಹಠ ಗೆಲ್ಲಬಾರದು ಎಂದು ಅಷ್ಟೆ ! ಬೇಕಿದ್ದರೆ ಪ್ರಮಾಣ ಮಾಡಿ ಹೇಳಬಲ್ಲೆ. ಹೀಗೆ ಅವನಿಗೆ ಮನಶ್ಶಾಂತಿ ಇಲ್ಲದಾಗಿಸಿ ನಡೆದುಬಿಟ್ಟೆ. ಎಲ್ಲ ಬಂಧನವನ್ನೂ ಕಳಚಿದೆನೆ ? ಇಲ್ಲ. ಖಂಡಿತ ಕಳಚಿಲ್ಲ !
ಟ್ರೇನು ಪಟ್ಟಿಯಿಂದ ಪಟ್ಟಿಗೆ ಬದಲಿಸುತ್ತಾ ಕದಲತೊಡಗಿತು. ಇದು ಹತ್ತಿರ ಕೊಂಡೊಯ್ಯುತ್ತಿದೆ. ಸಿಳ್ಳು ಹಾಕುತ್ತಾ ಕತ್ತಲನ್ನು ಸೀಳುತ್ತಾ ಊರನ್ನು ಊರಿಗೆ ಜೋಡಿಸುತ್ತದೆ. ಕಡಿದುಕೊಂಡ ಬಂಧನವನ್ನು ಒಂದುಗೂಡಿಸುತ್ತದೆಯೆ ?
ದೂರದಲ್ಲಿ ಹುಬ್ಬಳ್ಳಿಯ ದೀಪಗಳು ಕಾಣತೊಡಗಿದವು. ಕತ್ತಲಲ್ಲಿ ತಡವಿತ್ತಾ, ಹುಬ್ಬಳ್ಳಿಗಾಗಿ ಹುಡುಕುತ್ತಾ ಸಾಗಿದ ಟ್ರೇನಿಗೆ ಕೊನೆಗೂ ಸಿಕ್ಕಿಬಿಟ್ಟಂತಾಗಿ ನಿಟ್ಟುಸಿರು ಬಿಡುವಷ್ಟ ರಲ್ಲಿ ಪ್ಲ್ಯಾಟ್‌ಫಾರ್ಮ್‌ನಲ್ಲಿ ಟ್ರೇನು ನಿಂತಿತು. ಇಲ್ಲಿ ಇಳಿಯಬೇಕು. ಮೆಲ್ಲನೆ ಎದ್ದೆ. ಇಳಿದು ಕೌಂಟರನ್ನು ಹುಡುಕುತ್ತಾ ಒಮ್ಮೆ ಉದ್ದಕ್ಕೆ ನಡೆದೆ. ಟ್ರೈನು ಬಂದು ನಿಂತುದರಿಂದ ಸ್ಟೇಶನ್ ತುಂಬಾ ಗೊಂದಲಗೊಂಡಿತ್ತು. ಜನರು ಎಲ್ಲೆಂದರಲ್ಲಿ ತಿಣುಕುತ್ತಿದ್ದರು.
ಕೂಲಿಗಳು, ಹಮಾಲಿಗಳು, ಅವರ ತಲೆಯ ಮೇಲಿನ ಪೆಟ್ಟಿಗೆಗಳು, ಕಾಫಿ, ಚಾ, ಸ್ಟೂಲುಗಳು ಎಲ್ಲವೂ ಎಚ್ಚತ್ತಿದ್ದವು. ಸಡಗರದಿಂದ ಅವ್ಯಕ್ತ platform ಅಲ್ಲಾಡದೆ ನಿಂತಿತ್ತು.
ಹುಡುಕುತ್ತಾ ನಡೆದೆ. ಇಲ್ಲೇ ಎಲ್ಲೋ ನೋಡಿದ ನೆನಪು. ಒಮ್ಮ ಉದ್ದಕ್ಕೆ ಆ ಕಡೆ ಪುನಃ ಆ ಕಡೆಯಿಂದ ಈ ಕಡೆ ಬರುತ್ತಾ ಕೊನೆಗೂ ಸಿಕ್ಕಿತು. ಕೌಂಟರಿನಲ್ಲಿ ಬೀರೂರಿಗೆ ಟಿಕೇಟು ಕೇಳಿದಾಗ ಚಿಲ್ಲರೆ ಎಣಿಸುತ್ತಿದ್ದಾತ, ತನ್ನ ದೊಡ್ಡ ದನಿ ತೆಗೆದು, “ಲಗೂ ಬರೊಕೇನಾತ್ರಿ ? ಮೇಲೇನು ಬರದದ ನೋಡ್ರಿ-ಗಾಡಿ ಬರೋಕೆ ಅರ್ಧ ಗಂಟಿ ಮೊದಲು ಟಿಕೀಟು ಬಿಡಲಾಗುತ್ತೆ ಅಂತ ಆದ ಇಲ್ಲೇನು ? ಹೇಳಬೇಕೆಂದಿದ್ದೆ. “ಗಾಡಿ ಬಂದ ಮೇಲೆ ಕೊಡೋದಿಲ್ಲ ಎಂದೇನೂ ಬರೆದಿಲ್ಲ’ ಎಂದು. ಆದರೆ ಮಾತಾಡಲಿಲ್ಲ. ಆತ ಟಿಕೀಟು ಕೊಟ್ಟೊಡನೆ ಹೊರಬಂದೆ. ಇನ್ನೂ ಕಾಲುಗಂಟೆ ಸಮಯವಿದೆ. ಸ್ವಲ್ಪ ತಿಂಡಿ ತಿನ್ನಬಹುದು ಎಂದುಕೊಂಡು “Refreshments Stall’ ಎಂದು ಬರೆದಿದ್ದಲ್ಲಿಗೆ ಹೋಗಿ ವಡೆ, ಇಡ್ಲಿ ಹೊಟ್ಟೆಗೆ ಹಾಕಿಕೊಂಡೆ. ಆ ಕಡೆ ತುಂಬಾ ಲವಲವಿಕೆಯಿಂದ ಇದ್ದ ದಂಪತಿಗಳು ತಿಂಡಿ ತಿನ್ನುತ್ತಿದ್ದರು. ಆ ಹುಡುಗಿ ತುಂಬಾ ಉತ್ಸಾಹದಿಂದಿದ್ದಂತಿತ್ತು. ಆತನ ಅತ್ಯಂತ ಆಸಕ್ತಿಯಿಂದ ಆಕೆ ಹೇಳುವುದನ್ನು ಕೇಳುತ್ತಾ ಮಧ್ಯೆ ಮಧ್ಯೆ ನಗು ಚಿಮ್ಮಿಸುತ್ತಿದ್ದನು. ಇಬ್ಬರೂ ತಮ್ಮ ಸುತ್ತ ಸಂತೋಷದ ಕೋಟೆಯನ್ನು ಕಟ್ಟಿಕೊಂಡು, ಇವರೆಲ್ಲಾ ಕುಡಿದ ನೀರು ಅಲ್ಲಾಡದಂತೆ ಹೇಗೆ ಇರುತ್ತಾರೆ ? ದುಃಖವೆಂಬುದೇ ಇಲ್ಲದ ಸಖಜೀವಿಗಳೆ ?
ಸುಮ್ಮನೆ ಚಪಲಕ್ಕಾಗಿ ಆ ಕಡೆ ಒಮ್ಮೆ ಹೋಗಿ ಬರುತ್ತಾ ಆ ದುಪತಿಗಳು ಇನ್ನೂ ಇದ್ದಾರೆಯೆ ಎಂದು ನೋಡಿದೆ. ಇಲ್ಲ, ಒಂದು ಸಿಗರೇಟು ಕೊಂಡು ಹಚ್ಚಿಕೊಂಡು ಹೋಗಿ ಟ್ರೈನಿನಲ್ಲಿ ಕುಳಿತೆ. ನನ್ನೆದುರು ಕುಳಿತಿದ್ದ ವ್ಯಕ್ತಿಗಳಲ್ಲಿ ಒಬ್ಬ ಇಳಿದು ಹೋಗಿದ್ದ. ಹೊಸಬರಿಬ್ಬರು ಆಗಮಿಸಿದ್ದರು. ಏನೂ ಆಸಕ್ತಿಯೇ ಹುಟ್ಟಲಿಲ್ಲ. ಹೋಗಿ ಮಲಗಿಕೊಂಡೆ. ಗಾಡಿ ಒಮ್ಮೆ ಜೀಕುಕೊಟ್ಟು ಕತ್ತಲಲ್ಲಿ ನುಗ್ಗಿತು.
ಎಚ್ಚರವಾಯಿತು. ನೋಡಿದರೆ ಮೂರುಗಂಟೆಯಾಗಿದೆ. ೩-೨೦ ಕ್ಕೆ ಬೀರೂರು. ಬಹುಶಃ ಬೀರೂರು ಸಮೀಪಿಸುತ್ತಿರಬಹುದು. ಚಿಕ್ಕಜಾಜೂರು ಕಳೆದಿರಬೇಕು. ಮಂಗಳೂರಿಗೆ ಹೋಗುವ ಬಸ್ಸುಗಳ ಏಜೆಂಟರು ಟ್ರೇನಿನಲ್ಲಿ, ಮಂಗಳೂರಿಗೆ ಹೋಗುವವರನ್ನು ಗುರುತಿಸಿ ಬುಕ್‌ ಮಾಡಿಕೊಳ್ಳುತ್ತಿರಬಹುದು. ಹರಿಹರದಲ್ಲೋ ದಾವಣಗೆರೆಯಲ್ಲೋ ಟ್ರೇನಿಗೆ ಹತ್ತಿ ಮಲಗಿದ್ದವರನ್ನೆಬ್ಬಿಸಿ ಬುಕ್‌ ಮಾಡುವ ಇವರಿದ ತುಸಿಕೊಳ್ಳುವುದೆಂದರೆ ಪ್ರಯಾಸವೇ ಸರಿ. ಕೆಳಗಿಳಿದು ಕಿಟಕಿಯಲ್ಲಿ ಬಗ್ಗಿ ನೋಡಿದಾಗ ಬೀರೂರಿನ ದೀಪಗಳು ಕಂಡೊಡನೆಯೇ ಒಂದಕ್ಕೆ ಹೋಗಿ ಹೊರ ಬರುವಷ್ಟರಲ್ಲಿ, ಟ್ರೇನು ನಿಂತಿತು.
ಬ್ಯಾಗ್‌ ತೆಗೆದುಕೊಂಡು ಇಳಿದೆ. ಚಳಿ, ಟಿಕೇಟು ಕೊಟ್ಟು ಹೊರಬರುವಷ್ಟರಲ್ಲಿ ಹಲ್ಲು ಕಚ್ಚಿ ಹೋಯಿತು. ಅರೆ ! ಟ್ರೇನಿನಲ್ಲಿ ಇದರ ಅನಂಭವವೇ ಇಲ್ಲವಲ್ಲ ಎಂದುಕೊಂಡು ಸ್ವೆಟರ್ ತೆಗೆದುಕೊಂಡು ಹಾಕಿಕೊಂಡು ಬಿಡುವಷ್ಟರಲ್ಲಿ ಏಜೆಂಟಂಗಳು ಹಾಜರ್. ಎರಡು ಮೂರು ಬಸ್ಸುಗಳಲ್ಲಿ ಕೆಲವು ಜನ ತೂಕಡಿಸುತ್ತಿದ್ದರು. ಕೆಲವರು ಲಗ್ಗೇಜು ಟಾಪಿಗೆ ಹಾಕಿಸುವುದರಲ್ಲಿ ನಿರತರಾಗಿದ್ದರು. ಹೆಂಗಸರೂ ಮಕ್ಕಳೂ ಮೌನವಾಗಿ ಬಸ್ಸನು ಹತ್ತುತ್ತಿದ್ದರು. ಯಾವುದೋ ಒಂದು ಬಸ್ಸು ಹತ್ತಿ ಕುಳಿತೆ. ಗಾಜಿನ ಶಟರ‍್ಸ್‌ ಕ್ಲೋಸು ಮಾಡಿದ್ದರಿಂದ ಬಸ್ಸಿನೊಳಗೆ ಬೆಚ್ಚಗಿತ್ತು. ಹೋಗಿ ಕುಳಿತಾಗ ಹಿತವೆನಿಸಿತು. ಇಲ್ಲಿ ಸ್ವಲ್ಪ ಬೇಸರ ಕಡಿಮೆಯಾಗಬಹುದು ಎಂದುಕೊಂಡೆ. ಅರ್ಧಂಬರ್ಧವಾಗಿದ್ದ ಬಸ್ಸು ಭರ್ತಿಯಾಯಿತು. ಅಲ್ಲಿ ಇಲ್ಲಿ ಪಿಸ ಪಿಸ ಮಾತು ಸುರುವಾಯಿತು. ಮೌನವಾಗಿ ಗಾಳಿ ಅಲ್ಲಾಡಿಕೊಂಡು ಬೆಚ್ಚಗಿದ್ದ ಬಸ್ಸಿನಲ್ಲಿ ಸ್ವಲ್ಪ ಹೊತ್ತಿಗೆಲ್ಲಾ ಗೊಂದಲವಾಗಿ, ಬಿಸಿ ಏರಿ ಬೆವರಲು ತೊಡಗಿ ಇನ್ನಿಲ್ಲದಷ್ಟು ಹಿಂಸೆಯಾಗತೊಡಗಿತು. ಬಸ್ಸು ಬೇಗ ಹೊರಟಿದ್ದರೆ ಅನ್ನಿಸಿದಾಗ ಒಂದೊಂದಾಗಿ ಎಲ್ಲಾ ಬಸ್ಸುಗಳು ಹೊರಡತೊಡಗಿದವು. ಕಂಡಕ್ಟರೋ ಯಾರೋ ಒಬ್ಬ ಬಸ್ ಹತ್ತಿ ಟಿಕೆಟ್ ಚೆಕ್ ಎಂದು ಸುರುಮಾಡಿದ. ಇದು ಮುಗಿಯುವಾಗ ದಿನವೇ ಕಳೆಯಬಹುದು ಅನ್ನಿಸಿ ಸಿಟ್ಟು ಬರತೊಡಗಿತು. ‘ಹೋಗತ್ತಾ ಮಾಡಬಹುದಲ್ಲವೆ ?” ಆದರೆ ‘ದುಡ್ಡು ಇಲ್ಲದೇ ಹತ್ತಿದ ಆಸಾಮಿಗಳಿರುತ್ತಾರಲ್ಲ ಸ್ವಾಮಿ, ಏನು ಮಾಡೋದು ಚೆಕ್ ಮಾಡಲೇ ಬೇಕಾಗುತ್ತದೆ’ ಎಂದು ತನ್ನ ಕಾರ್ಯದಲ್ಲಿ ಅತ್ಯಂತ ಶ್ರದ್ಧೆಯಿಂದ ತೊಡಗಿದ.
ಕೊನೆಗೆ ಒಂದರ್ಧ ಗಂಟೆಯಷ್ಟು ತಡವಾಗಿ ಬಸ್ಸು ಹೊರಟು ಈ ಬೆವರು, ಈ ಹಿಂಸೆ ಇವೆಲ್ಲ ಸ್ವಲ್ಪ ಗಾಳಿ ಬಂದಾಗ ಹಾಯೆನಿಸಿತು. ಸ್ವಲ್ಪ ಹೊತ್ತಿಗೆ ಜನರ ಮಾತೆಲ್ಲ ನಿಂತು ಹೋಗಿ ಎಲ್ಲೆಂದರೆ ಅಲ್ಲೇ ತೂಕಡಿಸತೊಡಗಿದರು. ಎಷ್ಟೊಂದು ಕಲಾತ್ಮಕವಾಗಿ ಇವರು ತೂಕಡಿಸುತ್ತಿದ್ದರೆಂದರೆ ಇವರನ್ನೆಲ್ಲಾ ಹಿಪ್ನೊಟೈಸ್‌ ಮಾಡಿ ಬಸ್ಸೊಳಗೆ ಕೂಡಿ ಹಾಕಿದಂತಿತ್ತು.
ಮನೆಗೆ ಹತ್ತಿರವಾದೊಡನೆ ಧುಮುಗುಟ್ಟಲು ಪ್ರಾರಂಭಿಸುತ್ತದೆ. ಎಲ್ಲ ಹೇಗೆ ? ಒಮ್ಮೆ ಚೆನ್ನಾಗಿದ್ದರೆ ಸಾಕಿತ್ತು. ಅಮ್ಮನಿಗೆ ಹೇಗಾದರೂ ಮುಖ ತೋರಿಸಲಿ. ಒಮ್ಮೆ ತೋರಿಸಿಬಿಟ್ಟರೆ, ಎಲ್ಲ ಹೇಳಿಬಿಟ್ಟರೆ ಸಾಕು. ಮತ್ತೆಂದೂ ಹೀಗೆ ಮಾಡಲಾರೆ. ಅಮ್ಮ ಜೀವ ಹಿಡಿದುಕೊಂಡಿದ್ದರೆ ಸಾಕು. ಹೇಳಿಯೇಬಿಡುತ್ತೇನೆ. ನೀನು ಹೇಳಿದಂತೆಯೇ ಆಗಲಿ. ಚಂದ್ರಕಲಳನ್ನೇ ಆ ಸಿಂಬಳಚಬುರುಕಿಯನ್ನೇ ಆದರೂ ಆಗಲಿ, ನಿನ್ನನ್ನು ಬಿಟ್ಟು ಹೇಗೆ ಬದುಕಲಿ ಅಮ್ಮ ?
ಹೊರಗೆ ದೀಪಗಳು ಒಂದೊಂದಾಗಿ ಸರಿದು ಹಿಂದೆ ಹೋಗುತ್ತಿದ್ದಂತೆ ಕತ್ತಲು ಕಳ್ಳತನದಿಂದ ಆಕ್ರಮಿಸುತ್ತಿತ್ತು. ಚಿಕ್ಕಮಗಳೂರು ಕಳೆಯಿತು. ಇನ್ನೇನು ಮೂಡಿಗೆರೆ ಬಂದುಬಿಡುತ್ತದೆ. ಒಮ್ಮೆ ಘಾಟಿ ಕಳೆಯಿತೆಂದರೆ ಊರು ಬಂದಂತೆಯೆ ! ಎಲ್ಲ ಚೆನ್ನಾಗಿ ಕಳೆದುಬಿಟ್ಟರೆ ಜೀವ ಹಗುರಾಗಬಹುದು ! ಅಮ್ಮ ಎಷ್ಟೆಂದರೂ ಒಳ್ಳೆಯವಳು. ಅವಳಿಗೆ ಗೊತ್ತಿಲ್ಲವೆ ಈ ಜೀವದ ಮಿಡಿತ ?
ಮೂಡಿಗೆರೆಯ ಬಸ್‌ಸ್ಟ್ಯಾಂಡಿನಲ್ಲಿ ಬಂದು ನಿಂತಾಗ ಮಂಜು, ಹೊರಗೆ ತಲೆ ಇಟ್ಟರೆ ಸತ್ತು ಕೊಳ್ಳಿಯಾಗುವ ಚಳಿ. ಹೋಟಲಿನಲ್ಲಿ ಬಿಸಿ ನೀರಿತ್ತು. ಬೆಚ್ಚಗೆ ಕೈಕಾಲು ಮುಖ ತೊಳೆದುಕೊಂಡು ಕುಳಿತುಕೊಂಡೆ. ಹೋಟಲಿನೊಳಗೆ ಬೆಚ್ಚಗೇನೋ ಇತ್ತು. ಆದರೆ ಕೊಳಕು ! ಮೇಜು ಕುರ್ಚಿಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಪೇರಿಸಿಟ್ಟಿದ್ದರು. ಅರೆ ! ಇಲ್ಲೇನು ಕಾಫಿ ಕುಡಿಯಬಹುದೆ ? ಅನ್ನುವಷ್ಟು ಕೊಳಕು. ಹೇಗೋ ಒಂದು ಇಡ್ಲಿ, ಚಾ ಕುಡಿದು ಹೊರಬಂದು ಬಸ್ಸು ಹತ್ತಿಯಾಯಿತು. ಜನ ಬಹಳ ಮೆಲ್ಲಗೆ ಆರಾಮವಾಗಿ ಕುಳಿತು ತಿನ್ನುತ್ತಾ ಇದ್ದರು. – ಅವಸರವಿಲ್ಲ. ಇನ್ನೊಂದು ದಿನ ಕಳೆದು ಹೊರಟರೂ ಸಾಕು ಎನ್ನಿಸುವಂತೆ ! ಇವರ ಬದುಕು ಇಷ್ಟೊಂದು ಆರಾಮವಾಗಿದೆಯೇ ?
ಬಸ್ಸು ಹೊರಟೊಡನೆ ಮಸುಕು ಮಸುಕಾಗಿ ಎಲ್ಲ ಕಾಣತೊಡಗಿತು. ಅರೆ ! ಬೆಳಗಾಗಿ ಬಿಟ್ಟಿತಲ್ಲ. ಇದು ಎಲ್ಲವನ್ನೂ ತೆರೆದು ತೋರಿಸುತ್ತದೆ. ಕತ್ತಲೇ ಚೆನ್ನಾಗಿತ್ತು -ಅನ್ನಿಸಿತು. ಹೊರಗೆ ಅಲ್ಲಲ್ಲಿ ಹೊಲಕ್ಕೆ ಇನ್ನೇತರಕ್ಕೋ ಹೋಗುವ ಜನಗಳು, ಕಂಬಳಿ ಹೊದ್ದುಕೊಂಡು ಕಪ್ಪಗೆ ಕಾಣಿಸುತ್ತಿದ್ದರು. ಬಸ್ಸಿನೊಳಗೆ ಕೆಲವರು ಎಚ್ಚತ್ತಿದ್ದರು. ಕೆಲವರು ಇನ್ನೂ ತೂಕಡಿಸುತ್ತಾ ಬದುಕಿಗೆ ಸವಾಲಾಗಿದ್ದಂತಿತ್ತು.
ಬಸ್ಸು ಘಟ್ಟ ತಲುಪಿ ಕೆಳಗಿಳಿಯುತ್ತಿದ್ದಂತೆ, ಕಣಿವೆಗಳೆಲ್ಲ ಕಾಣತೊಡಗಿ ಹಿತವಾಯಿತು. ಉದ್ದಕ್ಕೆ ಹಸಿರು, ಅಲ್ಲೊಂದು ಇಲ್ಲೊಂದು ತೊರೆಗಳು. ಪುಟ್ಟ ಜಲಪಾತವಾಗಿ ಕೆಳಗಿಳಿಯುತ್ತಾ ಅತ್ಯಂತ ಮನೋಹರವಾಗಿ ಕಾಣುತ್ತಿದ್ದವು. ಒಂದು ಬದಿ ಗುಡ್ಡ ಅಭೇದ್ಯವಾಗಿ ನಿಂತು ನಗುತ್ತಿತ್ತು. ಈ ಗುಡ್ಡವನ್ನು ಕೊರೆದು ದಾರಿ ಮಾಡಿಕೊಂಡು, ಹಾವಿನಂತಹ ಹಾದಿಯಲ್ಲಿ ಬಸ್ಸು ಸಾಗುತ್ತಿತ್ತು, ಅಲ್ಲಲ್ಲಿ ಕೆಲಸಗಾರರ ಜೋಪಡಿಗಳು.
ಹೊರಗೇನಿಲ್ಲ ಎಲ್ಲ ನೋಡಿದ್ದೇ. ಆಸಕ್ತಿಯೇ ಹುಟ್ಟುತ್ತಾ ಇಲ್ಲ. ಅಲ್ಲಿ ಅಮ್ಮ ನೋವು ತಿನ್ನುತ್ತಾ ಮಲಗಿರಬಹುದು. ಸೀರಿಯಸ್‌ ಅಂದರೆ ? ಇಲ್ಲ. ಇಷ್ಟರಲ್ಲಿ ಸ್ವಲ್ಪ ಗುಣವಾಗಿರಬಹುದು. ಎದ್ದು ಕುಳಿತುಕೊಳ್ಳುವಷ್ಟು ಹುಶಾರಾಗಿಬಹುದು ಎಂದು ಸಮಾಧಾನ ತರಲೆತ್ನಿಸಿದೆ. ಅಕ್ಕ, ತಂಗಿಯಂದಿರು, ತಮ್ಮಂದಿರು, ಎಲ್ಲ ನನ್ನನ್ನೇ ಎದುರು ನೋಡುತ್ತಿರಬಹುದು. ಟೆಲಿಗ್ರಾಮ್‌ ಕೊಟ್ಟ ಸಮಯದಿಂದ ಇಷ್ಟು ಹೊತ್ತಿನಲ್ಲಿ ಬರಬಹುದೆಂದು ಲೆಖ್ಖ ಹಾಕುತ್ತಿರಬಹುದು. ಏನಿದ್ದರೂ ಅಮ್ಮನಲ್ಲಿ ಎಲ್ಲ ಹೇಳಬೇಕು. ತಮ್ಮ ತಂಗಿಯರಂತಲ್ಲ. ಅಮ್ಮನಿಗೆ ನನ್ನ ಹೃದಯ ಗೊತ್ತಿದೆ. ಅದರೊಳಗೆ ತಡಕಾಡಿದ್ದಾಳೆ, ಅಲ್ಲಿನದೆಲ್ಲವನ್ನೂ ಓದಿಬಿಡುತ್ತಾಳೆ.
ಮಂಗಳೂರಿನಲ್ಲಿ ಇಳಿದಾಗ ಗಂಟೆ ಹನ್ನೆರಡೂ ಇಪ್ಪತ್ತು. ಇನ್ನು 15 ನಿಮಿಷಕ್ಕೆ ಟ್ರೇನು ಹೊರಡುತ್ತದೆ. ಅಲ್ಲೇ ಹಣ್ಣಿನಂಗಡಿಯಿಂದ ಮುಸಂಬಿ, ಕಿತ್ತಳೆಗಳನ್ನು ಕೊಂಡು ಬ್ಯಾಗಿನೊಳಗೆ ತುಂಬಿಕೊಂಡು ಆಟೋ ಒಂದನ್ನು ಕೂಗಿ ಹಿಡಿದು, ಅರ್ಜೆಂಟು ಎಂದಾಗ ಹೊರಟ. ಸ್ಟೇಶನ್ನಿನೊಳಕ್ಕೆ ಹೋಗುತ್ತಿದ್ದಂತೆ ಅಲ್ಲಿನ ಕ್ಯೂ ಕಂಡು ಹೆದರಿಕೆಯಾಯಿತು. ಕೊಳ್ಳಲು ಸಮಯವಿಲ್ಲ. ಓಡಿದೆ. Platform ನಲ್ಲಿ ಓಡಿದೆ. ಅಯ್ಯೋ ಎಷ್ಟೊಂದು ದೂರ ನಿಂತಿದೆಯಲ್ಲ ! ಸಿಳ್ಳು ಹಾಕಿತು. ಉಸಿರು ಕಟ್ಟಿ ಓಡಿದೆ. ಸಿಕ್ಕಿತು. ಮೆಲ್ಲನೆ ಹೊರಟಿತ್ತಷ್ಟೆ. ಹತ್ತಿ ಒಳಗೆ ಹೋದರೆ ಜನ ತುಂಬಿ ಹೋಗಿ ಗಾಳಿಯೇ ಇರಲಿಲ್ಲ. ಉಳ್ಳಾಲ, ಮಂಜೇಶ್ವರ ಕಳೆದಾಗ ಜನರೆಲ್ಲ ಇಳಿದು ಹೋಗಿ ಆರಾಮವಾಯಿತು.
ಕುಂಬಳೆಯಲ್ಲಿಳಿದೊಡನೆಯೆ ಬಸ್ಸು ಸಿಗಬಹುದೆ ? ಎಂದು ಆತಂಕವಾಯಿತು. ಬಸ್ಸಿಗೆ ಲೇಟಿದ್ದರೆ ಯಾವುದಾದರೂ ಟ್ಯಾಕ್ಸಿ ಹೋಗುವುದಿರಬಹುದೋ-ವಿಚಾರಿಸಬೇಕು.
ಕುಂಬಳೆಯಲ್ಲಿ ಟ್ರೇನು ನಿಂತೊಡನೆಯೇ ಇಳಿದೆ. ಓಡುತ್ತಾ ಬಸ್‌ಸ್ಟ್ಯಾಂಡನ್ನು ತಲಪಿ, ಬಸ್ಸಿಗಾಗಿ ಹುಡುಕುತ್ತಿದ್ದಾಗ ಕಿದಿಯೂರಿನ ಭಾವ ಸಿಕ್ಕಿದ. “ಹೋ ! ಏನಯ್ಯ ನೀನಿಲ್ಲಿ ! ನಿನ್ನ ಬೈಗೆ ಜೋರಿದೆಯಂತೆ. ಈಗ ಬರುತ್ತಿರುವುದೂ ? ಏನು ಕತೆ ?” ಎಂದಾತ ಕೇಳಿದಾಗ ದಿಗಿಲಾಗಿ, ‘ಹೌದೇ ಭಾವಯ್ಯ ಹೇಗಿದೆ ಈಗ ಕಡಿಮೆಯಲ್ಲವ ?” ಎಂದು ಕೇಳಿದೆ. “ಇದ್ದರೆ ಇರಬೇಕಯ್ಯ ನಿನ್ನಂತಹ ಮಕ್ಕಳು. ಹೆತ್ತಬ್ಬೆಗೆ ಹೊಟ್ಟೆಗೆ ಸಂಕಟಮಾಡಿ ಓಡಿದೆಯಲ್ಲ. ಈಗ ‘ಎಲ್ಲ ಮುಗಿದ ಮೇಲೆ’ ಅಂದನೆ ?
ಊರಿಗೆ ಹೋಗುವ ಟ್ಯಾಕ್ಸಿಯೊಂದು ಕೂಗುತ್ತ ಬಂದಾಗ ಹತ್ತಿ ಕುಳಿತೊಡನೆ, ಪೇಟೆಗೆ ಮತ್ತೊಂದು ಸುತ್ತು ಹಾಕಿ ಮತ್ತೂ ಒಂದಿಬ್ಬರನ್ನು ಹತ್ತಿಸಿಕೆಂಡು ಹೊರಟಿತು. ನಮ್ಮ ಮನೆಗೆ ಹೋಗುವ ಮಾರ್ಗದ ಬದಿಯಲ್ಲಿ ಇಳಿದೆ. ದಿಗಿಲಿನಲ್ಲಿ ಎದೆಹೊಡೆದು ಹಾರುತ್ತಿತ್ತು. ಹೇಗಿದೆಯೋ ? ಎಲ್ಲ ಚೆನ್ನಾಗಿದ್ದರೆ ಸಾಕಿತ್ತು. ದಾಪುಗಾಲು ಹಾಕುತ್ತಾ, ಮನೆಯ ಹತ್ತಿರ ಬರುತ್ತಿದ್ದಂತೆ, ಕೆಲಸದ ಕಣ್ಣ ಎದುರಾದ. ‘ಏನು ?” ಎಂದು ಕೇಳಿದರೆ, ಉತ್ತರವೇ ಹೇಳದೆ ಒಂದು ರೀತಿ ನೋಡಿ ಹೊರಟುಹೋದ. ಗೇಟು ತೆಗೆದರೂ ಯಾರ ಸುಳಿವಿಲ್ಲ. ಮೌನ. ಭೀಕರ ಮೌನ. ಮನೆ ಎದುರು ಬಂದು ಹಜಾರದೊಳಕ್ಕೆ ಕಾಲಿಟ್ಟೊಡನೆ ಫಕ್ಕನೆ ಕಂಡುದು ಬಿಳಿ ಬಟ್ಟೆಯಿಂದ ಹೊದೆಸಿದ ಅಮ್ಮನ ದೇಹ. ಎಲ್ಲ ಸುತ್ತ ಕುಳಿತು ಕಣ್ಣೀರು ಹಾಕುತ್ತಿದ್ದರು. ಯಾರೋ ಮೂಲೆಯಿಂದ ಏನೋ ಹೇಳುತ್ತಿದ್ದಂತೆ ಹಿಂತಿರುಗಿ ನೋಡದೆ ಓಡಿದೆ. ಗೇಟುದಾಟಿ ಬ್ಯಾಗನ್ನು ಹಿಡಿದು ಓಡಿದೆ.

Close

ಹೇಡಿಗಳು (ನಾಟಕ)

ಹೇಡಿಗಳು (ನಾಟಕ)

ರಾಮದಾಸ್

ಪಾತ್ರಗಳು :

ನಾಟಕಕಾರ
ನಾಯಕ
ಹಿಪ್ಪಿ ೧, ೨ ಮತ್ತು ಆರೇಳು ಜನ ಹಿಪ್ಪಿಗಳು, ಹಿಪ್ಪಿಣಿಯರು
ಪೀಟರ್-ಕೊಳಲೂದುವ ಮತ್ತೊಬ್ಬ ಹಿಪ್ಪಿ
ಗೈಡ್ ಮತ್ತು ಇಬ್ಬರು ಪ್ರವಾಸಿಗಳು
ಒಬ್ಬ, ಮತ್ತೊಬ್ಬ-ಗೈಡ್‌ನ ಗೂಂಡಾ ಗೆಳೆಯರು
ವ್ಯಕ್ತಿ ೧
ವ್ಯಕ್ತಿ ೨

ಹಿಪ್ಪಣಿ-ಹೆಸರು ಕ್ರಿಸ್ಟಿನಾ

ಸ್ಥಳ : ಗೋವಾದ ಅಂಜುನಾ ಬೀಚಿನ ಮೇಲಿನ ಗುಡ್ಡ

ಕಾಲ : ಬೆಳುದಿಂಗಳ ಒಂದು ರಾತ್ರಿ

(ಗುಡ್ಡ ದಿಬ್ಬಗಳಿಂದ ಕೂಡಿದ ರಂಗಮಂಟಪ, ಅರ್ಧವೃತ್ತಾಕಾರದ ಆಕಾಶನೀಲಿಯ ಹಿನ್ನೆಲೆ ಮಂದ ವಾದ ಬೆಳಕಿನಲ್ಲಿ ರಂಗದ ನಡುವೆ ನಿಂತ ನಾಟಕಕಾರ, ಕವಿತೆಯೊಂದನ್ನು ಓದುತ್ತ ಮುಂದೆ ಮುಂದೆ ಬರುತ್ತಾನೆ.)

ನಾಟಕಕಾರ : ಹೇಡಿಗಳು

ಮುಂದುಳಿದ ನಾವು ಹೇಡಿಗಳು ಸ್ವಾಮಿ ಹೇಡಿಗಳು
ಬೇರರಿ, ಸುತ್ತಲೂ ಬಿಳಲ ಕಯ್ಯೂರಿ, ರಸ ಹೀರಿ ಹೆಮ್ಮರವಾಗಿ
ಬೆಳೆದು ನಿಲ್ಲುವ ಥಾಕತ್ತಿಲ್ಲ ಸ್ವಾಮಿ ನಮಗೆ,
ಅಗ್ನಿಪ್ರವೇಶ ಮಾಡಿ ನಿಲ್ಲುವುದಾಗಲೀ
ದಿವ್ಯಗಳಿಗೆ ಕಯ್ ಚಾಚಿ ಗೆಲ್ಲುವುದಾಗಲೀ
ಬದುಕೆಂಬ ಸಾಗರ ಹೀರಿ ಅಗಸ್ತ್ಯಾಫೋಶನ ಸಲ್ಲುವುದಾಗಲೀ
ನಮ್ಮಿಂದಾಗದ ಮಾತು ಸ್ವಾಮಿ, ನಮ್ಮ ಕಯ್ಗೆಟುಕದ್ದು.
ಬೆಪ್ಪುತಕ್ಕಡಿಗಳಂತೆ ಬಿಟ್ಟ ಬಾಯ್ ಬಿಟ್ಟು ನೋಡಿದ್ದೇವೆ ಹಿಪ್ಪಿಗಳನ್ನ
ಸಮುದ್ರ ತೀರದಲ್ಲಿ
ಕಂಡ ಕಂಡು ಕಾಣದಂತೆ ಕುಡಿದ್ದೇವೆ:
ಕುಲುಕುವ ಕುಂಡಗಳನ್ನ
ಧ್ಯಾನಾಸ್ತ ಯೋಗಿಬಂಡೆಗಳನ್ನ
ಬತ್ತು ಬಾಡಿ ಬಿದ್ದ ಮೊಲೆಗಳನ್ನ
ಕಟ್ಟಿಗೆಯ ತುಂಡಾದ ನಡು ತೊಡೆಗಳನ್ನ
ಅದರೆಡೆಗಳನ್ನ;
ಸಮುದ್ರದಲೆಯ ತೊಟ್ಟಿಲಲ್ಲಿ ತೇಲುವ ಶಾಪಗ್ರಸ್ತ ದೇವತೆಗಳನ್ನ!
ಬಿಳಿಬಿಳೀ ಕೆಂಪು ಬಡಕಲು ದೇಹಗಳನ್ನ
ದಡದ ಮರಳಲ್ಲಿ ಹೊರಳುವ ಜೋಡಿ ಸ್ನೇಹಗಳನ್ನ
ಸಮುದ್ರಸ್ನಾನದಿಂದ ಸೂರ‍್ಯಸ್ನಾನಕ್ಕೂ, ಸೂರ‍್ಯಸ್ನಾನದಿಂದ ಸಮುದ್ರ
ಸ್ನಾನಕ್ಕೂ ಎಡತಾಕುವ ಮಡ್ಡಿಗಳನ್ನ!
ಅಡ್ಡಾಡುವ ಗುಡ್ಡಗಳನ್ನ
ನೂರು ಮಾತಿನ ಪ್ರಶ್ನೆಗೊಂದು ಮುಗುಳು ನಗೆಯನ್ನ
ಸಾವಿರ ಪ್ರಶ್ನೆಗೊಂದು ಮಾತಿನುತ್ತರವನ್ನ
ಶಬ್ದಾತೀತರಾದವರ ನಡವಳಿಕೆಯೆತ್ತರವನ್ನ !

ಹಿಡಿದರೂ ಹಿಡಿದು
ಸದೆಬಡಿದರೂ ಬಡಿದು
ಅಪ್ಪಿಲಕೊಂಡರೂ ಅಪ್ಪಿ
ಮುದ್ದಿಟ್ಟರೂ ಬಿಸಿಲಲ್ಲಿ
ಬಿಸಿಬಿಸಿ ಮರಳಲ್ಲೆ ಮಲಗಿಸಿಕೊಂಡು ಕೂಡಿದರೂ
ಕೂಡಿ ಮಾಡಿದರೂ
ಮಾಡಿ ನೋಡಿದರೂ, ಸ್ವಾಮಿ
ಹೂ ಕೊಡುವ ಗಿಡಗಳಾಗುತ್ತಾವೇ ಹೊರತು, ಸ್ವಾಮಿ
ಫಲ ಕೊಡುವ ಮರಗಳಾಗುತ್ತಾವೇ ಹೊರತು
ತಕರಾರು ಮಾಡುವುದಿಲ್ಲ.
ಇಲ್ಲಾ ಸ್ವಾಮಿ ಇಲ್ಲ; ಹಾಗೆ ಹೊಗೆಯಾಗಿ ಹೋಗಲಾರೆವು ನಾವು ಇದ್ದೂ ಇಲ್ಲದಂಥ ವ್ಯಕ್ತವಾಗಲಾರೆವು ನಾವು, ಗಾಳಿಯಾಗಲಾರೆವು ಆಕಾಶವಾಗಲಾರೆವು, ಕಲ್ಲೂ ಮಣ್ಣು ಮರಗಿಡಗಳಾಗಲಾರವು. ಭಗ್ನರಾಗ ಲಾರೆವು, ನಿಮಗ್ನರಾಗಲಾರೆವು, ನಗ್ನರಾಗಲಾರೆವು ಯಾಕೆಂದರೆ : ಮುಂದುಳಿದ ನಾವು ಹೇಡಿಗಳು ಸ್ವಾಮಿ ಹೇಡಿಗಳು.

(ನಾಟಕಕಾರ ಮುಂದೆ ಬಂದಿದ್ದಾನೆ. ಬೆಳಕು ಚೆನ್ನಾಗಿದೆ, ಕವಿತೆಯನ್ನೋದಿದ ಆತ, ಪ್ರೇಕ್ಷಕರನ್ನೊಮ್ಮೆ ನೋಡಿ, ಒಂದು ಕ್ಷಣ ತಡೆದು-) ಆ ಹ ಹ ಹಾ ಎಂಥಾ ಪ್ರತಿಕ್ರಿಯೆ ! ಎಲ್ಲಾ ಕಲ್ಲಿನ ಬೊಂಬೆಗಳು ಕೂತ ಹಾಗೆ ಕೂತಿದೀರಲ್ಲ ! ಸದ್ದೂ ಗದ್ಲಾ ಇಲ್ದೆ ಸುಮ್ನೆ ಬೆಪ್ ತಕ್ಕಡೀಗಳ್ ಹಾಕೊತಿದ್ದು ಇದ್ದಕ್ಕಿದ್ಹಾಗೆ ಜ್ವಾಲಾಮುಖಿ ಥರ ಸಿಡಿದು ಬೀಳೋಣ ಅಂತ್ಲೋ ; ಇಂಥಾ ಆವಾಚ್ಯ ಅಶ್ಲೀಲ ಕವನಾನ ಸಭ್ಯ ಸಮಾಜದೆದ್ರು, ಓದಿದವ್ನ್ ಹಲ್ ಮುರ‍್ಯೋಣ ಅಂತ್ಲೋ ಪ್ಲ್ಯಾನ್ ಮಾಡ್ತಿದೀರ ? ಹೀಗೆಲ್ಲ ಆಗತ್ತೆ ಅಂತ್ಲೇ ನಾನ್ ಪದ್ಯ ಬರ‍್ಯೋ ಕೆಲ್ಸ ಬಿಟ್ ಕೂತಿದೀನಿ. ಕೋಣನ ಮುಂದೆ ವೀಣೆ ನುಡಿಸಿ ಉಪಯೋಗಾ ಇಲ್ಲಾಂತ ನನಗ್ ಮಂದಟ್ಟಾಗಿದೆ, ಚುರುಕು ಮೆಣಸಿನ್‌ಕಾಮ್ ಮುಟ್ಟಿ, ತುರಿಕೇ ಸೊಪ್ಪನ್ನ ನಿಮ್ಮಯ್ಗೆಲ್ಲಾ ಚಕ್ ಚಕಾಂತುಜ್ಜಿ, ಚಾವಟೀಲ್ ನಾಲಕ್ ಬಿಗಿದ್ರೆ ನಿಮಗರ್ಥಾ ಆಗೋದು, ಆಗ್ಲಿ, ನನ್ ಭಾಷೆ ನಿಮಗರ್ಥ ಆಗೊಲ್ಲ. ನಿಂಭಾಷೇಲೇ ಮಾತಾಡ್ತೀನಿ.
(ಸ್ವಲ್ಪ ತಡೆದು)
ಆದರೆ ಮಾತೂ ನಿಮಗರ್ಥ ಆಗೊಲ್ಲ. ಕ್ರಿಯೆ ಕ್ರಿಯೇಂತ ಬಡಕೊತೀರಿ.

ಅದಕ್ಕೇ ಈಗ್ ಸಿದ್ದತೆ ಮಾಡ್ಕೊಂಡಿದೀನಿ, ನಾನ್ ಬರ‍್ದ ಪದ್ಯ ಅಶ್ಲೀಲ ಅಲ್ಲಾ ಅನ್ನೋ ಸಾಕ್ಷಾತ್ಕಾರಾನ ಕ್ರಿಯಾತ್ಮಕವಾಗ್ ಮಾಡ್‌ಕೊಡ್ತೀನಿ. ಅದಕ್ಕೆ ಈ ನಾಟಕ, ಜಡ್ ಹಿಡಿದುಹೋಗಿರೋ ನಿಂ ಇಂದ್ರಿಯಗಳ್ನ ಹರಿತಾ ಮಾಡ್ಕೊಳ್ಳಿ, ಗಮನಾ ಇಟ್‌ನೋಡಿ, ಗಮನಾ ಇಟ್ ಕೇಳಿ, ಗಮನಾ ಇಟ್ ಮೂಸಿ ಗಮನಾ ಇಟ್ಟು ಮುಟ್ಟಿ, ಗಮನಾ ಇಟ್ ರುಚಿ ನೋಡಿ.

(ಆತ ನಾಟಕೀಯವಾಗಿ ರಂಗಮಧ್ಯಕ್ಕೆ ಹೋಗುತ್ತಾನೆ, ರಂಗದ ಮೇಲೆ ಮಂದವಾದ ಹಸಿರು ಬೆಳಕು, ಹಿನ್ನೆಲೆಗೆ ಆಕಾಶನೀಲಿ.)

ನೋಡಿ, ಇದೇ ಗೋವಾ ಸಮುದ್ರ ತೀರ ಪ್ರದೇಶ, ಅನುಮಾನಾ ಬೇಡ. ನಿ೦ ಕಲ್ಪನೇಗೂ ಸ್ವಲ್ಪ ಕಸರತ್ ಕೋಡಿ, ಪಂಜಿಮ್ಮಿಂದ ಹತ್ತಿಪ್ಪತ್ ಮೈಲಿ ದೂರದಲ್ಲಿರೋ ಅಂಜುನಾ ಬೀಚ್, ಅಂಜುಮಾನ್‌ ಅಥ್ವಾ ಅನುಮಾನ್ ಬೀಚ್ ಇದೇನೆ. ನಾನು ಮರಳು ಹಾಸಿನ ಹಿಂದಕ್ಕಿರೋ ಗುಡ್ಡದ್ ಮೇಲ್ ನಿಂತಿದೇನೆ. ನನ್ ಹಿಂದಕ್ಕೆ ಇಳಿಜಾರು, ಕೆಳಗಿದೇ ಬಂಗಾರದ ಮರಳಿನ ರಾಶಿ, ಅಲ್ಲಲ್ಲಿ ಸಣ್ಣ ಪುಟ್ಟ ದೊಡ್ಡ ಬಂಡೆಗಳು, ತೆಂಗಿನಮರಗಳು, ಗುಡ್ಡದ ಮಯ್ಗೆ ತಾಗಿದ ಹಾಗೆ ಹತ್ತಯ್ವತ್ತು ಗುಡಿಸ್ಲುಗಳು, ಜಗತ್ತಿನ್ ಮೂಲೆ ಮೂಲೆಯಿಂದ ಬಂದ ಹಿಪ್ಪೀ ಜನ ಇವುಗಳಲ್ ವಾಸ ಮಾಡ್ತಾರೆ. ಹಿಂದೆ ನೀಲಿಯಾಕ್ಕಾಣೋದು ಆಕಾಶ, ಅದರ ಬುಡಕ್ಕೇ ವಿಶಾಲವಾದ್ ಸಮುದ್ರ ಹರಡ್‌ಕೊಂಡಿದೆ, ಇವತ್ತಿನ್ ನಾಟಕ ನಡ್ಯೋ ಜಾಗ ಇದೇನೇವೇಯೆ, ನನ್ ನಾಟಕಕ್ ಒಬ್ಬ ನಾಯಕ ಇದಾನೆ, ಅವಂಗೆ ಒಂದೊಳ್ಳೇ ಉದ್ಯೋಗಾ ಇದೆ. ಚೆಂದದ ಹೆಂಡ್ತಿ ಇದಾಳೆ, ಮುದ್ದಾದ್ ಮಕ್ಕಳಿದಾವೆ. ಹಿಪ್ಪೀ ಜೀವ್ನ ಹೇಗಿರತ್ತೆ ಅಂತ ತಿಳ್ಕೊಳ್ಳೋಕೋ ಅಥ್ವಾ ಅವ್ರ ಲೈಂಗಿಕ ಸ್ವಾಚ್ಚಂದ್ಯದ್ ದುರ್ಲಾಭ ಪಡೆಕೊಳ್ಕೋಕೋ ಅದು, ನೀವೆ ನಿರ್ಣಯಿಸ್‌ಬೇಕಾದ್ದು, ಯಾಕೆ ಅಂತ ನಂಗೊತ್ತಿಲ್ಲ: ಗೋವಾ ಟೂರ‍್ಗೆ ಅಂತ ಬಂದ್ ನಂ ನಾಯಕ ನಿನ್ನೆ ಈ ಬೀಚಿಗೆ ಬಂದಿದ್ದ. ಶಾಂತಿ ಅನ್ನೋ ಒಬ್ಬ ಅಮೇರಿಕನ್ ಹಿಪ್ಪೀ ಜತೆ ದೇವರಿಲ್ಲ ಅಂತ ವಾದಾ ಮಾಡ್ಡ, ಹಿಪ್ಪೀ, ” ನಾಳೆ ಬಾ ಮಾತಾಡೋಣ”, ಅಂದ. ಅದಕ್ಕೇ ನಾಯಕ, ಇವತ್ ಈ ಕಡೆ ಬರ‍್ತಿದಾನೆ, ಕಂಡ್‌ಕಂಡ್‌ ಹಿಪ್ಪೀಗಳ್ನ ಮಾತಾಡಿಸ್ತ ಇದಾನೆ………….
(ರಂಗದಲ್ಲಿ ಕತ್ತಲು, ನಾಟಕಕಾರ ಮರೆಯಾಗುತ್ತಾನೆ, ಹಿನ್ನೆಲೆಯಿಂದ, ” ಶಾಂತಿ…..ಶಾಂತೀ…..” ಎಂದು ಕೂಗಿ ಕರೆಯುಂವ ನಾಯಕನ ಧ್ವನಿ, ಮಂದಪ್ರಕಾಶ ತೊಡಗಿದಾಗ, ಆಗಾಗ ಆಲ್ಲೊಬ್ಬ ಇಲ್ಲೊಬ್ಬ ಅರೆನಗ್ನ ಹಿಪ್ಪಿ ಎತ್ತಲೋ ನೋಡುತ್ತ ಕಾಣಿಸಿ ಮರೆಯಾಗುತ್ತಾನೆ, ಕೆಲವೊಮ್ಮೆ ಒಬ್ಬಿಬ್ಬರು ಮರಳ ಹಾಸಿನಿಂದ ಗುಡ್ಡವೇರಿ ಬರುತ್ತಾರೆ; ಗುಡ್ಡವಿಳಿದು ಮರಳ ಹಾಸಿನತ್ತ ಹೋಗುತ್ತಾರೆ, ನಾಯಕ ಅಲ್ಲಲ್ಲಿ ನಿಂತು ಶಾಂತಿಯನ್ನು ಹುಡುಕುತ್ತ, ಗುಡ್ಡವನ್ನೇರಿ ಬರುವ ಹಿಪ್ಪಿಯೊಬ್ಬ ನನ್ನು ಕಂಡು.)

ನಾಯಕ : ಶಾಂತಿ !.., ಹೋಯ್ ಶಾಂತಿ,
ಹಿಪ್ಪಿ ೧ : (ನಿಂತು, ನಿರೀಕ್ಷಿಸಿ ಕಡೆಗೆ ಕೈಯೆತ್ತಿ) ಹೊಯ್ ತಾಂತಿ
ನಾಯಕ : ನೀನ್ ತಾನೆ ಶಾಂತಿ ?
ಹಿಪ್ಪಿ ೧ : ಶಾಂತಿ!
ನಾಯಕ : ಹೌದು, ಯಾಕೆ ?••••• ನೀನ್ ಶಾಂತಿ ಅಲ್ವಾ ? ನಿನ್ನೆ ನೀನ್ ನಂಗ್ ಸಿಕ್ಕಿದ್ಯಲ್ಲ ? ನಾಳೆ ಬಾ ಮಾತಾಡೋಣ ಅಂತ ಹೇಳಿದ್ದಿ.
ಹಿಪ್ಪ ೧ : ಇಲ್ಲಾ….ಇಲ್ಲ, (ಎಂದು ತಲೆಯಾಡಿಸುತ್ತ ಹೋಗುತ್ತಾನೆ, ನಾಯಕ ಮತ್ತೆ ಗಡ್ಡ, ದಿಬ್ಬ ಹತ್ತಿ ಇಳಿದು ಹುಡುಕಾಡುತ್ತ,
ನಾಯಕ : ಶಾಂತಿ….ಶಾಂತೀ….ಶಾಂತೀ….ಇಲ್ಲ, ಇಲ್ವೇ ಇಲ್ಲ, ಶಾಂತಿ ಎಲ್ಲೂ ಇಲ್ಲ, ನಿನ್ನೆ ಸಿಕ್ಕಿದ್ದ, ಇವತ್ ಬಾ ಅಂದಿದ್ದ, ಆದರೆಲ್ಲ ಇಲ್ಲ, (ಯಾವುದೊ ಒಂದು ದಿಕ್ಕನ್ನು ನಡುತ್ತ) ಶಾಂತಿ….ಏ ಶಾಂತಿ… ಹಿಪ್ಪ ೨ : (ಸಾವಕಾಶವಾಗಿ ಪ್ರವೇಶಿಸಿ, ಕೈಯೆತ್ತಿ) ಶಾಂತಿ ?
ನಾಯಕ : ಹೌದು ಶಾಂತಿ, ನೀನೇ ಶಾಂತಿ, ಅಲ್ವಾ ? ನೀನೇ ಶಾಂತಿ ?
ಹಿಪ್ಪ ೨ : (ನಕಾರಾತ್ಮಕವಾಗಿ ತಲೆ ಆಡಿಸುತ್ತಾನೆ.)
ನಾಯಕ : ಶಾಂತಿ ನಿಂಗೊತ್ತ ? ಅವನೊಬ್ಬ ಅಮೆರಿಕನ್, ಅವಂಜತೆ ರಾಬಿ ಇದಾಳೆ.
ಹಿಪ್ಪ ೨ : (ಹೊರಟು) ನಂಗೊತ್ತಿಲ್ಲ.
ನಾಯಕ : (ತಡೆದು) ನಿನ್ನೆ ಇಲ್ಲೇ ಸಿಕ್ಕಿದ್ದ, ಇವತ ಬಾ ಅಂದಿದ್ದ.
ಹಿಪ್ಪಿ ೨ : ಇರಭೌದು ನಂಗೊತ್ತಿಲ್ಲ, (ಗುಡ್ಡದ ಕೆಳಕ್ಕೆ ಕಮ್ ತೋರಿಸಿ) ಹುಡುಕ್
ನೋಡು, ಆ ಮನೆಗಳಲ್ಲೆಲ್ಲಾದ್ರೂ ಸಿಕ್‌ಭೌದು, (ಹೋಗುತ್ತಾನೆ)
(ನಾಯಕ ಆಚೆ ಈಚೆ ಹಿಂದೆ ಮುಂದೆ ಹುಡುಕುತ್ತ, ಆದಾಗ ಮರೆಯಾಗಿ ಕಾಣಿಸಿಕೊಂಡು ಮತ್ತೆ ಮರೆಯಾಗಿ ಒಂದೆರಡು ಕ್ಷಣ ತಡೆದು ವೇಗವಾಗಿ. ಅಬ್ಬಬ್ಬಾ ಎನ್ನುತ್ತ ಪ್ರವೇಶಿಸಿ, ಎತ್ತರವಾದ ದಿಬ್ಬವೊಂದರ ಮೇಲೆ ತಲೆ ತಗ್ಗಿಸಿ ಕೂತು ಮತ್ತೆ ತಲೆ ಎತ್ತಿ-)
ನಾಯಕ : ಶಾಂತಿ ಇಲ್ಲ, ಎಲ್ಲೂ ಶಾಂತಿ ಇಲ್ಲ, ನಿನ್ನೆ ತಾನೇ ಸಿಕ್ಕಿದ್ದ. ನಾನ್ ಶಾಂತಿ
ಹುಡುಕ್ತಿದೀನಿ, ನಾನು! ತಮಾಷಿಯಾಗಿದೆ. ನನ್ ಮನಸ್ಸಲ್ಲಿ ಯಾವ್ ಚಿಂತೇನೂ ಇಲ್ಲ, (ಎದ್ದು ನಿಂತು, ನಕ್ಕು) ನಾನ್ ತೃಪ್ತ, ಜೀವಂದಲ್ಲಿ ನಂಗ್ ಯಾವ್ ಅರಕೇನೂ ಇಲ್ಲ, ಯಾವ್ ಕೊರತೇನೂ ಇಲ್ಲ, ಆದ್ರೆ ನಾನೇ ಶಾಂತಿ ಶಾಂತಿ ಅಂತ ಹುಡುಕ್ತಾ ಅಲೀತಿರೋದು ಎಂಥಾ ವಿಡಂಬನೆ ! ಆ ಗುಡಿಸ್ಲಲ್ಲೆಲ್ಲಾದ್ರೂ ಶಾಂತಿ ಸಿಗ್‌ಭೌದು, ನೋಡಿ ಅಂದ ಅವ್ನು , ಆದ್ರೆ…………..ಅಬ್ಬಬ್ಬಾ ಎಂಥಾ ಜನ! ಬರೀ ಬತ್ಲೆ ! ಮಯ್ ಮೇಲೊಂದು ಚೂರ್ ಬಟ್ಟೆ ಇಲ್ಲ. ಒಂದಕ್ಕಿಂತಾ ಒಂದು ಬಣ್ಣಕ್ಕಿಂತಾ ಬಣ್ಣ: ಬಂಗಾರದ್ ಬಣ್ಣದ್ ಹುಡುಗೀರು { ಶಾಂತಿ ಹುಡುಕ್ಕೊಂಡ್ ಆಲ್ದಾಡ್ತಿರೋ ದುರದೃಷ್ಟ ಚೇತನಗಳು ! (ದೂರದಿಂದ ಕೊಳಲದನಿ ಕೇಳಿಬರುತ್ತದೆ. ಅತ್ತ ಗಮನವಿಟ್ಟು ನೋಡುತಾನೆ, ಕ್ಷೀಣವಾಗಿದ್ದ ಕೊಳಲ ದನಿ ಏರತೊಡಗುತ್ತದೆ.) ಪ್ರತಿಯೊಬ್ಬರ ಶಾಂತಿ ಥರಾನೇ ಕಾಡ್ತಾರೆ! ಇವನೇ ಶಾಂತಿ ಇದ್ದೇಕು. ಶಾಂತಿ..ಏ ಶಾಂತೀ……(ಕೊಳಲೂದುತ್ತ ಪ್ರವೇಶಿಸಿದ ಹಿಪ್ಪಿ ಒಂದು ಕ್ಷಣ ನಿಂತು, ಕೊಳಲು ನಿಲ್ಲಿಸಿ, ನಾಯಕನತ್ತ ನೋಡಿ ಮತ್ತೆ ಕೊಳಲೂದುತ್ತ ಹೊರಡುತ್ತಾನೆ. ನಾಯಕ ಪ್ರಶ್ನಾರ್ಥಕವಾಗಿ, ಶಾಂತಿ ? ಎಂದಾಗ ಹಿಪ್ಪಿ ಕೊಳಲು ನಿಲ್ಲಿಸಿ ಮುಖ ನೋಡುತ್ತಾನೆ.) ನೀನೇ..ನೀನೇ ಶಾಂತಿ ಅಲ್ವಾ? ಬಾ ಬಾ ಇಲ್ ಕುತ್ಕೊಳೋಣ.
(ಎಂದು ಅವನ ಕಯ್ ಹಿಡಿದು ದಿಬ್ಬವೊಂದರ ಮೇಲೆ ಕೂರಿಸಿ, ನಾಯಕನೂ ಕೂಡುತ್ತಾನೆ. ಹಿಪ್ಪಿಯ ಕೊಳಲವಾದನ ಮುಂದುವರಿಯುತ್ತದೆ.)
ಶಾಂತಿ, ನೀನೂ ಅಂದ್‌ಕೊಂಡು ತುಂಬಾ ಜನರನ್‌ ಮಾತಾಡಿಸ್ದೆ. ನೀವೆಲ್ಲ ವಿದೇಶಿಗಳು ಒಂದೇ ಥರ ಕಾಣುಸ್ತಿರ, ಒಂದ್ ಗಂಟೆಯಿಂದ ನಿಂಗೋಸ್ಕರ ಹುಡುಕ್ತಿದೀನಿ, ನಿಂಜತೆ ತುಂಬಾ ಮಾತಾಡ್ಬೇಕು (ಉತ್ತರ ನಿರೀಕ್ಷಿಸಿ ಸೋತು) ಅಂದ್ಹಾಗೇ ನಿಂಜತೆ ಇದ್ದಲ್ಲಾ ರಾಬಿ,
ಅವಳೆಲ್ಲಿ ?
ಹಿಪ್ಪಿ : (ಕಳಲು ನಿಲ್ಲಿಸಿ) ರಾಬಿ ?
ನಾಯಕ : ಹೌದು ರಾಬಿ.
ಹಿಪ್ಪಿ : (ನಕಾರಾತ್ಮಕವಾಗಿ ತಲೆ ಆಡಿಸುತ್ತಾನೆ) ನಾಯಕ : ನೀನ್ ಶಾಂತಿ ಹೌತ್ತಾನೇ ? ನಿನ್ನೆ ನಿಂಜತೆ ಸ್ವಲ್ಪಾ ಹೊತ್ತು ಮಾತಾಡಿದ್ನಲಾ ………..ನಾನೇ…….ನಾನೇ ನಾಯಕಾ…(ಹಿಪ್ಪಿ ಮತ್ತೆ ತಲೆ ಆಡಿಸುತ್ತಾನೆ.) ನೀನ್ ಶಾಂತಿ ಅಲ್ವಾ ? ಹಾಗಾದ್ರೆ…ನಿನ್ ಹೆಸರೇನು?
ಹಿಪ್ಪಿ : ಪೀಟರ್,
ನಾಯಕ : (ಚಿಂತಾಮಗ್ನನಾಗಿ) ಹಾಗಾದ್ರೆ ಶಾಂತಿ ಎಲ್ ಹೋದ! (ಪೀಟರ್‌ ಮುಗುಳು ನಕ್ಕು ಕೊಳಲೂದತೊಡಗುತ್ತಾನೆ, ಇಬ್ಬರು ಪ್ರವಾಸಿಗಳ ಜತೆ ಗಡ್ಡಧಾರಿ ಗೈಡ್, ಬೀಚಿನ ಮತ್ತು ಹಿಪ್ಪಿಗಳ ವಿವರ ನೀಡುತ್ತ ಪ್ರವೇಶಿಸುತ್ತಾನೆ)
ಗೈಡ್ : ಇದೇ ಸಾರ್ ಅನುಮಾನ ಬೀಚ್, ನೋಡಿ ಸಾರ್‌ ಅಲ್ಲಿ, ಇದೂ ಸೀಜನ್ನಲ್ಲ ಸಾರ್, ಸೀಜನ್ನಿನಲ್ಲಿ ಸಾಮಿಗಟ್ಲೆ ಇಪ್ಪಿಗಳಿರ‍್ತಾರೆ ಸಾರ್. ಫ್ರೆಂಡ್ಸಿಪ್‌ ಮಾಡ್ಕಂಡೀ ಒಳ್ಳೆ ಊಟ ಕೊಡ್ಸಿದ್ರೆ ಸಾಕು ಸಾರ್. ನಿಮ್ಗೇನ್ಲಾ ಇಂಗ್ಲೀಸ್ಬತ್ತದೆ, ಕೆಲ್ಸಾ ಬಲೇ ಸುಲಭಾ ಸಾರ್, ಕಾಡೂ ಗೀಸು ಏನೂ ಕೊಡೂದ್ ಬೇಡ ಸಾರ್, ಬರೀ ಫ್ರೆಂಡ್ಸಿಪ್ಪು, ಏವನ್ ಮಾಲುಗಳು, ನೋಡಿ ಸಾರ್ ಅಲ್ಲಿ : ಬಟ್ಟೆಗಿಟ್ಟೆ ಏನೂ ಇಲ್ಲ, ಉಟ್ಟುದ್ ಬಟ್ಟೇಲವ್ರೆ ಸಾರ್‌…
(ಎಂದು ಕಯ್ತೋರಿಸುತ್ತಿರುವಾಗ ಪೀಟರ್, ಕೊಳಲ ದನಿಯೇರಿಸುತ್ತ ಹೊರಟು ಹೋಗುತ್ತಾನೆ.) ಈಜೊಡ್ಯೋದು…ಮಳ್ಳಲ್ ಬಂದ್ ಮಲಕ್ಕೊಳ್ಳೋದು ; ಈಜೊಡ್ಯೋದು…ಮಳ್ಳಲ್‌ ಬಂದ್‌ ಮಲಕ್ಕೊಳ್ಳೋದು…….ಯಾವಾಗ್ ನೋಡಿದ್ರು ಅಷ್ಟೇ ಸಾರ್, (ಮೆಲ್ಲನೆ) ಕುಸೀ ಬಂದ್ರೆ ಅಲ್ಲೇ….ಅಲ್ಲೇ ಎಲ್ಲಾನೂ ಸಾರ್.
(ಎಂದು ಅತ್ತಿತ್ತ ನೋಡುವಾಗ ನಾಯಕನನ್ನು ಕಂಡು ಗುರ್ತಿಸಿ ನಗುತ್ತಾನೆ, ನಾಯಕ, ಅಪರಿಚಿತನಂತೆ ಎದ್ದು ಹೋಗುತ್ತಾನೆ.)
ಈಗ್ಲೂ ಅತ್ತಿಪ್ಪತ್ ಉಡುಗೀರವ್ರೆ ಸಾರ್‌, ಇಲ್ ಬನ್ನಿ ಸಾರ್,‍ ಈ ಕಡೆ ನೋಡಿ ಅಹಾಹ………………. (ಎಂದು ಹೊರಟಾಗ ದೀಪ ಆರುತ್ತದೆ, ನೀಲಿ ಹಿನ್ನಲೆಯಲ್ಲಿ, ರಂಗದ ಮೇಲೆ ಹಸಿರು ಬೆಳಕು ಹರಡಿದಾಗ ನಾಟಕಕಾರ, ರಂಗದ ನಡುವೆ ನಿಂತಿದ್ದಾನೆ.)
ನಾಟಕಕಾರ : ಇಲ್ಲ, ನಾಯಕಂಗ್ ಶಾಂತಿ ಸಿಕ್ಲೇ ಇಲ್ಲ, ಆದರೆ ನಾಯಕ ವಾಪಸ್ ಹೋಗ್ಲಾರ, ಅವನ್ ಹೋದದ್ದು ಇದೋ ಇಲ್ಲಿ ಈ ಕಡೆ, ನನ್ ಬಲಗಡೆ ಒಂದು ಕ್ಯಾಂಟೀನಿದೆ ಇಲ್ಲಿಗೆ ಈ ಕ್ಯಾಂಟೀನ್, ಇಲ್ ವಾಸಾ ಮಾಡ್ತಾಯಿರೋ ಹಿಪ್ಪಿಗಳ ಭೋಜನಶಾಲೆ, ಹಿಪ್ಪಿಗಳು ಸಮುದ್ರದಲ್ಲೀಜಾಡ್ತಾರೆ, ಮರಳಲ್ ಹೊರಳಾಡ್ತಾರೆ, ಹೊಟ್ಟೆ ಹಸಿದಾಗ ಈ ಕ್ಯಾಂಟೀನಿಗ್ ಬರ‍್ತಾರೆ. ಇಲ್ಲಿ ಒಣಗಿಹೋದ ಬನ್ ಇದೆ. ಬಾಡಿಹೋದ ಬಾಳೇಹಣ್ಣಿದೆ, ಸೋಡಾ ಇದೆ, ಕೊ ಕೋಲಾ ಇದೆ, ಚಾ ಇದೆ. ಸೂಪಿದೆ, ಹಿಪ್ಪಿಗಳಿಗೆ ಇವೇ ಪಂಚಭಕ್ಷ ಪರಮಾನ್ನ, ನಾಯಕ ಇಲ್ಲೇ ಉಳಿಯೋ ತೀರ್ಮಾನ ಮಾಡಿರ‍್ಬೇಕ. ಇನ್ನು ಅವಂಗೂ ಇದೇ ಒಣ ಬನ್ನು, ಬಾಳೇಹಣ್ಣು, ಚಾ, ಕ್ಯಾಂಟೀನ್ ನಡಸೋ ಜನ ಹಿಪ್ಪಿಗಳಿಗೆ ಒಗ್ ಹೋಗಿದಾರೆ. ಗಡ್ಡದ ಗೈಡ್ ಇಲ್ಲಿಗೆ ಆಗಾಗ್ ಬರ‍್ತಿರ‍್ತಾನೆ. ಎಲ್ರಿಗೂ ಅವ್ನ ಪರಿಚಯ ಇದೆ. ಮಾಪ್ಸಾಗ್ ಹೊಗೋ ಕಡೇ ಬಸ್ ಹೊರಡೋ ಸಮಯ ಆಗಿದೆ, ಗೈಡ್ ಜತೆ ಇದ್ ಪ್ರವಾಸಿಗಳು ಬಸ್ ಹತ್ತಿದಾರೆ, ಆದ್ರೆ ನಾಯಕ ಮೇಲೇಳೊಲ್ಲ, ಹಿಪ್ಪಿಗಳು ತುಂಬಿಕೊಂಡ ಕ್ಯಾಂಟೀನ್ನಲ್ಲಿ ತಲೇ ಕೆಳಗ್ಹಾಕ್ಕೂತಿದಾನೆ, ಅಗೋ ಹಿಪ್ಪಿಗಳು ಹಶೀಷ್ ಸೇತ್ತಿದಾರೆ. ಈಗ ನಾಯಕ ಕುತೂಹಲದಿಂದ ಅವರ್ ಕಡೆ ನೋಡ್ತಿದಾನೆ, ಚಿಲುಮೆ ಸರದೀ ಪ್ರಕಾರ ಎಲ್ಲರ್‌ ಕಯ್ ದಾಟಿ ನಾಯಕನ್ ಕಯ್ಸೇರಿದೆ. ನಾಯಕ ಆಳವಾಗ್ ಉಸಿರ‍್ತೆಗೆದು ಹಶೀಷ್ ಎಳೀತಿದಾನೆ. ಆದರೆ ಗಡ್ಡದ ಗೈಡ
(ಪ್ರಶ್ನಾರ್ಥಕವಾಗಿ ಅತ್ತಿತ್ತ ನೋಡಿ, ರಂಗದ ಮೂಲೆಯತ್ತ ದೃಷ್ಟಿ ಹರಿಸಿ)
ಗೈಡ್ ಮಾತ್ರ ತನ್ನ ಗೂಂಡಾ ಗೆಳೆಯರಿಬ್ಬರ ಜತೆ……….
(ದೀಪ ಆರುತ್ತದೆ. ರಂಗದ ಮೂಲೆಯಲ್ಲಿ ಗೈಡ್ ಮತ್ತು ಇಬ್ಬರ ಮಾತುಕಥೆ, ಅವರ ಮೇಲೆ ಮಾತ್ರ ಮಸುಕಾದ ಬೇಳಕು,)
ಗೈಡ್ : ಅವನೇ ಇವ್ನು , ಮನ್ನೆ ದಿನ ಪಂಜಿನಲ್ಲಿದ್ದ, ಓಟ್ಟು ಟೂರಿಸ್ಟ್‌ನಾಗ್ ಇಳ್ಕೊಂಡಿದ್ದ, ಇವಂಜತೆ ಇನ್ನೂ ಮೂರ್ ಜನಾ ಇದ್ರು, ಕಾರಿಟ್ಟಿದಾನೆ. ಜೋಬ್’ ತುಂಬಾ ದುಡ್ಡಿದೆ, ಕಡೇ ಬಸ್ ಹೊರಟ್ಹೋಯ್ತು, ಇವ್ನ್ ಮಾತ್ರ ಓಗ್ಲಿಲ್ಲ.
ಒಬ್ಬ : ಚಾನ್ಸ್‌ ಬುಟ್‌ಕೊಡ್‌ಬಾರ‍್ದು,
ಮತ್ತೊಬ್ಬ : ಅಕ್ಕಿ ತಾನಾಗೇ ಬಂದ್ ಬುಟ್ಟೀಲ್ ಬಿದ್ದಿದೆ.
ಒಬ್ಬ : ಅಂದ್‌ಮ್ಯಾಗೆ ಬುಟ್‌ಕೊಡ್ನೇಬಾರ್ದು,
ಗೈಡ್ : ಅವಂಗೇ ನನ್ನ್ ಗುರ‍್ತ ಚನ್ನಾಗಿದೆ. ಆದ್ರೂ ಗೊತ್ತಿಲ್ದೆ ಇದ್ದವ್ನಂಗೆ ಮಾಡ್ತಾನೆ: ಮಾಡ್ಲಿ, ನೋಡ್ಕಂತೀನಿ ಮನ್ನೆ ಟೂರಿಸ್ಟ್ ಅತ್ರ ಓಗ್ತಿದ್ದಾಗ ನನ್ ಕರ‍್ದ, “ನೀನೇ ಅಲ್ಲೇನಯ್ಯ ಗಡ್‌ದೋನು ? ನಿನ್ನೆ ಉಡುಕ್ತಾ ಇದ್ವು…ಒಳ್ಳೇದೇನಾದ್ರೂ ಇದ್ರೆ ತೋರ‍್ಸಯ್ಯ”, ಅಂದ. ವಾಸ್ಕೋಗೂ ಓಗಿದ್ನಂತೆ, ಒಳ್ಳೇದ್ ಸಿಕ್ಕಿಲ್ವಂತೆ, ನಾನೂ ಬೀಚತ್ರ ಕರ‍್ಕೊಂಡೋದೆ ನೋಡಿ, ಚೌಕಾಸಿ ಮಾಡಿ ಬ್ಯಾಡಾಂದ, ಮಂಗಳಾ ದೇವಿ ಟೆಂಪಲ್ಲತ್ರ ಓದ್ವು, ಅವ್ನೊ ಬ್ಯಾಡಾಂದ, ಪಾರೀನ್ ಮಾಲ್ ಬೇಕಂತೆ ಪಾರೀನ್ ಮಾಲು, ಅದ್ನೇ ಉಡುಕ್ಕೊಂಡಿಲ್ಲೇಗ್ ಬಂದವ್ನೆ.
ಒಬ್ಬ : ಅಂಗಾದ್ರೆ ಇವ್ನ ಇವತ್ತಿಲ್ಲಿಂದೋಗೋಂಗಿಲ್ಲ.
ಮತ್ತೊಬ್ಬ : ದಂ ಎಳಿತಾ’ವ್ನೆ.
ಗೈಡ್ : ಏರ‍್ಲಿ ಬುಡು ತಲೆಗೆ, ನೋಡ್ಕಳಾನ.
ಒಬ್ಬ : ಇವತ್ತೂಳೇ ಪಾರ್ಟಿ ಕೊಡ್ಬೇಕಪ್ಪಾ,
ಮತ್ತೊಬ್ಬ : ಏವನ್ ಪಾರ್ಟಿ ಕೊಡೇಕು.
ಗೈಡ್ : ಕೋಡಾಂವ್ ನಡೀರೊ..
(ಮೊದಲಿನಂತೆ ಹಸಿರು ಬೆಳಕು, ರಂಗದಲ್ಲಿ ನಾಟಕಕಾರ, ತನ್ನ ಕಡೆಯ ಮಾತನ್ನೇ ಮುಂದುವರಿಸುತ್ತ)
ನಾಟಕಕಾರ : ಗೈಡ್ ಮಾತ್ರ, ತನ್ನ ಗೂಂಡಾ ಗೆಳೆಯರಿಬ್ಬರ ಜತೆ ಸೇರಿ ಏನೋ ಮಸಲತ್ತು ಮಾಡುತ್ತಿದ್ದಾನೆ. ನಾಯಕ ಒಂದೇ ಸಮನೆ ಹಶೀಷ್ ಎಳೆದು ಅವನ ಕಣ್ಣು ಬಾಡಿವೆ, ಅಗೋ ಕನಸಿನಲ್ಲಿ ಅನ್ನೋ ಹಾಗೆ ಎದ್ದು ನಿಂತ ಈ ಕಡೇನೆ ಬರ‍್ತಿದಾನೆ. ಪ್ರೇತದ ಹಾಗೆ ಕಯ್ ಜೋತ್ ಬಿಟ್ಟಿದ್ದಾನೆ.
ನಾಯಕ : (ಗುಂಗಿನಲ್ಲಿ) ಶಾಂತಿ………ಶಾಂತಿ………..ಇನ್ನೂ ಬಲ್ಲಿಲ್ಲ, ನಿನ್ನೆ ಸಿಕ್ಕಿದ್ದ. ಇವತ್ ಸಿಗ್ತೇನೆ ಅಂದಿದ್ದ, ಅವಂಜತೆ ರಾಬಿ, ರಾಬೀ ಕಣ್ಣಲ್ಲಿ ನಾನಿವತ್ ಬರ‍್ತಿನೋ ಇಲ್ವೋ ಅನ್ನೋ ಅನುಮಾನ : ಬರ‍್ಲೀ ಅನ್ನೊ ಆಸೆ. ನಾನ್ ಬಂದೆ, ಶಾಂತೀನ್‌ ಹುಡುಕ್ಕೊಂಡ್ ಬಂದೆ. ರಾಬೀ ಕಣ್‌ ಕರೀತು, (ಒಂದು ಕ್ಷಣ ತಡೆದು) ಗಡ್ಡದ ಗೈಡ್ ನನ್ನನ್ನೇ ದುರಂಗುಟ್ಟಿ ಕೊಂಡ್ ನೋಡ್ದ, ಮಾಪ್ಸಾಗ್ಹೋಗೋ ಕಡೇ ಬಸ್ ಹೊರ‍್ಟ್‌ಹೊಯ್ತು. ಟೂರಿಸ್ಟೆಲ್ಲಾ ವಾಪಸ್‌ ಹೋದ್ರು, ಆದ್ರೆ ಗೈಡ್… ಗೈಡ್….. (ಹಸಿರು ಹೋಗಿ ಕಡುನೀಲಿ ಬೆಳಕು, ಕಪ್ಪು ನಿಲುವಂಗಿ ಧರಿಸಿದ ವ್ಯಕ್ತಿ ೧, ಯಾಂತ್ರಿಕವಾಗಿ ಮಾತಾಡುತ್ತ ಪ್ರವೇಶ.)
ವ್ಯಕ್ತಿ ೧ : ಕಡೇ ಬಸ್ ಹೊರಟ್‌ಹೋಯ್ತು, ಎಲ್ರೂ ಹೋದ್ರು, ಗೈಡ್ ಮಾತ್ರ ಹೋಗ್ಲಿಲ್ಲ.
ನಾಯಕ : ಎಲ್ಲೂ ಹೋದ್ರು
ವ್ಯಕ್ತಿ ೧ : ಗೈಡ್ ಮಾತ್ರ ಹೋಗ್ಲಿಲ್ಲ.
ನಾಯಕ : ಗೈಡ್ ಮಾತ್ರ ಹೋಗ್ಲಿಲ್ಲ!
ವ್ಯಕ್ತಿ ೧ : ಗಡ್ಡದಾಸಾಮಿ, ಹುಡುಗಿರೇಜೆಂಟು, ಗೈಡ್ ಮಾತ್ರ ಹೋಗ್ಲಿಲ್ಲ,
ನಾಯಕ : ಹೋಗದಿದ್ರೆ ಬೇಡ, ನಂಗೇನು ?
ವ್ಯಕ್ತಿ ೧ : ಗಡ್ಡದ ಗೈಡ್ ಹೂಗ್ಲಿಲ್ಲ, ನಿಂಗಪಾಯ ತಪ್ಪಿದ್ದಲ್ಲ;
ನಾಯಕ : ಅಪಾಯ! ನಂಗೆಂಥ ಅಪಾಯ?
ವ್ಯಕ್ತಿ ೧ : ಅಪಾಯ, ನಿಂಗೇ ಅಪಾಯ, ನಿಂದುಡ್ಡಿಗಪಾಯ, ನಿನ್ ಪ್ರಾಣಕ್ಕಪಾಯ.
ನಾಯಕ : (ಬೆಚ್ಚಿ) ಯಾರ್‌ ನೀನು? ಯಾಕ್ ಬಂದೆ?
ವ್ಯಕ್ತಿ೧ : ನಾನ್ಯಾರು ಗೊತ್ತಿಲ್ವೆ? ನಾನ್ನಿನ್ನಿಂಟ್ಯೂಷನ್ನು, ನಿನ್ನಂತಃ ಪ್ರಜ್ಞೆ, ನಿನ್ ಮೂರನೇ
ಕಣ್ಣು, ನಿನ್ ಮೂರನೇ ಕಿವಿ, ನಿನ್ ಆರನೇ ಇಂದ್ರಿಯ.
ನಾಯಕ : ಅಲ್ಲಾ.. ನೀನ್ ಯಾವ್ದೂ ಅಲ್ಲ, ಸತ್ಯಕ್ ಬೆನ್ ಹಾಕಿರೋ ನನ್ ಹೇಡಿತನ ನೀನು, ನೀನ್ ಬೆಳಿಯೋದಕ್’ ನಾನವತಾಶಾ ಕೊಡೋಲ್ಲ.
ವ್ಯಕ್ತಿ ೧ : ಮುಚ್ಚು ಬಾಯ್, ನಾನ್ ಹೇಡಿತನ ಅಲ್ಲ, ನಿನ್ನಿಂಟ್ಯೂಷನ್ನು, ನಾನ್
ತರ್ಕಾತೀತ, ಚರ್ಚೆಮಾಡೋ ದುರಭ್ಯಾಸನಂಗಿಲ್ಲ, ನನ್ ಮಾತು ಕೇಳು, ಈಗ್ಲೇ ಇಲ್ಲಿಂದ ಓಡ್ಹೋಗು, ನಿಂಜೀವ ಉಳುಸ್ಕೊ, ಹಶೀಷ್ ನಿನ್’ ತಲೆಗೇರ್‌ ಬಿಟ್ಟಿದೆ. ನೀನ್ ಜಡವಾಗಿದೀಯೆ, ನೀನ್ ಸ್ವತಃ ವಿಚಾರಾ ಮಾಡ್ಲಾರೆ, ನಿನ್ ಬೆನ್ನಲ್ಲೇನಾಗ್ತಿದೆ ಅನ್ನೋದು ನಿಂಗೊತ್ತಾಗೊಲ್ಲ. ಗಡ್ಡದ್ ಗೈಡ್ ದೊಡ್ ಪ್ಲಾಟ್ ಮಾಡಿದಾನೆ, ನಿನ್ ಜೇಬಿನಲ್ಲಿರೋ ಪುಡಿಕಾಸಿನಾಸೆಗೆ ನಿನ್ ಪ್ರಾಣಾ ತೆಗೀತಾನೆ ಗಮನಾ ಇಟ್ ನೋಡು, ಗಮನಾ ಇಟ್ ಕೇಳು; ಗಮನಾ ಇಟ್ ನೋಡು, ಗಮನಾ ಇಟ್ ಕೇಳು………….
(ನೀಲಿ ದೀಪ ಹೋಗಿ ಮತ್ತೆ ಮೂಲೆಯ ಮೇಲೆ ಮಸಕಾದ ಬೆಳಕು, ಅಲ್ಲಿ ಗೈಡ್ ಮತ್ತು ಅವನ ಗೆಳೆಯರು.)
ಗೈಡ್ : ದಂ ಎಳೀತಾವ್ನೆ ದಂ,
ಗೆಳೆಯರು : ದಂ ಎಳೀತಾವ್ನೆ ದಂ (ಒಟ್ಟಿಗೆ ಕೇಕೆ ಹಾಕಿ ನಗುತ್ತಾರೆ)
ಗೈಡ್ : ಇವ್ನಿವತ್ತಿಲ್ಲಿಂದೋಗೋಂಗಿಲ್ಲ.
ಗೆಳೆಯರು : ಇವ್ನಿವತ್ತಿಲ್ಲಿಂದೋಗೋಂಗಿಲ್ಲ (ನಗುತ್ತಾರೆ)
ಗೆಳೆಯರು : (ಚಪ್ಪಾಳೆ ತಟ್ಟುತ್ತ) ಒಳ್ಳೆ ಪಾರ್ಟಿ ಕೊಡ್ಬೇಕು,
ಗೈಡ್ : ಒಳ್ಳೇ ಪಾರ್ಟಿ ಕೊಡ್ತೀನಿ.
ಗೆಳೆಯರು : ಏವನ್ ಪಾರ್ಟಿ ಕೊಡ್ಬೇಕು,
ಗೈಡ್ : ಏವನ್ ಪಾರ್ಟಿ ಕೊಡ್ತೀನಿ
ಮೂವರು : ಏವನ್ ಪಾರ್ಟಿ ! ಏವನ್ ಪಾರ್ಟಿ ! (ಎಂಬುದನ್ನೇ ಮತ್ತೆ ಮತ್ತೆ ಹೇಳುತ್ತ, ವೇಗ ಹೆಚ್ಚಿಸಿ, ಚಪ್ಪಾಳೆ ತಾಳ ಹಾಕುತ್ತ ಕುಣಿಯುತ್ತಾರೆ. ವ್ಯಕ್ತಿ ೨ “ಸದ್ದೂ” ಎಂದು ಅಬ್ಬರಿಸಿದ್ದು ಒಳಗಿನಿಂದ ಕೇಳುತ್ತದೆ. ಮೂವರೂ ಚಿತ್ರಪ್ರತಿಮೆಗಳಂತಾಗುತ್ತಾರೆ. ದೀಪ ಆರುತ್ತದೆ. ರಂಗದ ನಡುವೆ ನಾಯಕ, ಒಂದು ಪಕ್ಕಕ್ಕೆ ವ್ಯಕ್ತಿ ೧, ಅದೇ ಪಕ್ಕದಿಂದ ಕಡುನೀಲಿ ಬೆಳಕು, ಮತ್ತೊಂದು ಪಕ್ಕದಿಂದ ತುಂಬ ಚಟುವಟಿಕೆಯುಳ್ಳ ಬಿಳೀ ನಿಲುವಂಗಿ ಧರಿಸಿದ ವ್ಯಕ್ತಿ ೨ ಮಾತಾಡುತ್ತ ಪ್ರವೇಶ, ಅತ್ತ ಕಡೆಯಿಂದ
ಹಸಿರು ಬೆಳಕು.)
ವ್ಯಕ್ತಿ ೨ : ನಾಯಕಾ……….ಜೀವನಾನ ಅದರ ನೂರು ಮುಖಗಳಿಂದ ನೋಡಿ ಅರ್ಥಾ
ಮಾಡ್ಕೊಬೇಕೂಂತ ಬಂದಿರೋ ನೀನು ಕರ‍್ತವ್ಯಭ್ರಷ್ಟನಾಗ್ಬೇಡ, ನಿನ್ ಹೇಡಿತನ ನಿನ್ನಲ್ ಬೇರೂರಿ ಬೆಳ್ದು ಬ್ರಹ್ಮರಾಕ್ಷಸ ಆಗೋಕವಕಾಶಾ ಕೊಡ್‌ಬೇಡ, ನಾಲಕ್ ದಂ ಹಶೀಷ್ ಎಳೆದ್ ಮಾತ್ರಕ್ಕೇ ವಿಚಾರಶಕ್ತಿ ಕಳೆದುಹೋಯ್ತು ಅಂದುಕೋಬೇಡ, ಸತ್ಯ ಏನೂ ಅನ್ನೋದನ್ನ ಅರ್ಥಾ ಮಾಡಿಕೊಳ್ಳೋಕೆ ಮೂರನೇ ಕಣ್ಣು, ಮರನೇ ಕಿವಿ, ಆರನೇ ಇಂದ್ರಿಯ ಯಾವ್ದೂ ಬೇಡ. ನಿನ್ನಿಂದ್ರಿಯಗಳು ಈಗ ಮೊದಲಿಗಿಂತ ಹೆಚ್ಚು ಚುರುಕಾಗಿವೆ, ಸೂಕ್ಷ್ಮಾತ್ ಸಕ್ಷ್ಮತರವಾಗಿವೆ. ಅದರ ಸದುಪಯೋಗಾ ಮಾಡಿಕೊ. ನಾಯಕ : ಯಾರ್‌ ನೀನು? ತುಂಬ ಆಕರ್ಷಕವಾಗ್‌ ಮಾತಾಡಿ, ನನ್ನ ಬುಟ್ಟೀಲ್
ಹಾಕ್ಕೊಬೇಕೂಂತಿರೋ ಶಕ್ತಿ, ಯಾರ್ ನೀನು ?
ವ್ಯಕ್ತಿ ೨ : ನಾನ್ ವಿವೇಕ, ನಿನ್‌ ವಿಚಾರ, ನಿನ್ ವಿವೇಚ್ನೆ, ನಾನ್ನಿನ್ ತರ್ಕ, ನಿನ್ ಬುದ್ದಿ, ನಿನ್‌ ವ್ಯಕ್ತಿತ್ವ ರೂಪಿಸೋನು ನಾನ್‌ ಸತ್ಕಾನ್ ಎದುರಿಸೋ ನಿನ್ ಛಾತಿ, ನಿನ್ ಛಲ, ನಾನೇ ಪ್ರಕೃತಿ, ನಾನೇ ನಿಸರ್ಗ. ಅಷ್ಟಲ್ಲಾ ಯಾಕೆ ? ಒಟ್ನಲ್ಲಿ ನಾನ್ನಿನ್ ಸರ‍್ವಸ್ವ.
ನಾಯಕ : ಅಂದ್ರೆ….ನೀನ್ ನನ ಕಣ್ಣಿನ್ ಬೆಳಕೂ ?
ವ್ಯಕ್ತಿ ೨ : ನಾನಗೋ ಅಲ್ ಕಾಣ್ತಾ ಇರೋ ಚಂದ್ರನ್ ಬೆಳದಿಂಗಳು.
ವ್ಯಕ್ತಿ ೧ : ಅಲ್ಲ ಅಲ್ಲಾ, ಬೆಂಗಾಡಿನ್ ಬಿಸಿಲ್ ಕುದುರೆ
ನಾಯಕ : ನೀನ್ ನನ್ ಕಿವೀ ಸಂಗೀತ ?
ವ್ಯಕ್ತಿ ೨ : ನಾನಗೋ ಅಲ್ ಮೊರೀತಾ ಇರೋ ಸಮುದ್ರ ಘೋಷ.
ವ್ಯಕ್ತಿ ೧ : ಆಲ್ಲ ಆಲ್ಲಾ, ಬೆತ್ಲೇ ಆಕಾಶದ್ ಬರಸಿಡ್ಲು.
ನಾಯಕ : ನೀನ್ ನನ್ ನಾಲಗೆ ಆಮ ತ?
ವ್ಯಕ್ತಿ ೨ : ನಾನಗೆ ಅಲ್ ಕುಣೀತಿರೋ ಹಿಪ್ಪಿ ಹೆಣ್ಣುಗಳಧರರಸ.
ವ್ಯಕ್ತಿ ೧ : ಅಲ್ಲ ಅಲ್ಲಾ, ವಿಷಕನ್ಯ ತುಟೀ ತುಂಬಿರೋ ಮಹಾವಿಷ,
ನಾಯಕ : ನೀನ್ ನನ್ ಮೂಗಿನ್ ಗಂಧಾನಿಲ?
ವ್ಯಕ್ತಿ೨ : ನಾನಗೋ ಅಲ್ಲುದುರ‍್ತಿರೋ ಪಾರಿಜಾತದ್ ಪರಿಮಳ.
ವ್ಯಕ್ತಿ ೧ : ಅಲ್ಲ ಅಲ್ಲಾ, ಜೀವ್ನಾನ್ ಕೊಂದು ಸುಟ್ಟ ಹೆಣದ್ ವಾಸನೆ
ನಾಯಂಕ : ನೀನ್ನ………….ನನ್ ಮಯ್ ಕಾದಾಗ ಮಂದಮಾರುತ ? ನನ್‌ ಮಮ್
ತಂಪಾದಾಗ ಹೂ ಬಿಷ್ಟು ?
ವ್ಯಕ್ತಿ ೨ : ನಾನಗೊ ಅಲ್ಕುಣೀತಿರೋ ಹದೀ ಹೆಣ್ಣಿನ್ ಹಾಸಿಗೆ,
ವ್ಯಕ್ತಿ ೧ : ಅಲ್ಲ ಅಲ್ಲಾ, ಮಯ್ಯೊತ್ತಿ ಒತ್ತೀ ಸುತ್ತೋ ಹೆಬ್ಬಾವು.
ನಾಯಕ : ಹಾಗಾದ್ರೆ ನೀನು……………. ನೀನೇ ಸತ್ಯ!
ವ್ಯಕ್ತಿ ೨ : ಹೌದು ನಾನೇ ಸತ್ಯ, ನಾನೇ ಅಸ್ತಿತ್ವ.
(ಮುಂದಿನ ಮಾತುಗಳಾಗುವಾಗ ವ್ಯಕ್ತಿ ೧ ಹಿಂಜರಿಯುತ್ತ, ವ್ಯಕ್ತಿ ೨ ಮುಂದುವರಿಯುತ್ತ ಹೋಗುತ್ತಾರೆ, ವ್ಯಕ್ತಿ ೧ರ ದನಿ ಇಳಿಯುತ್ತ, ವ್ಯಕ್ತಿ ೨ರ ದನಿ ಏರುತ್ತ ಹೋಗುತ್ತದೆ, ನೀಲಿ ಬೆಳಕು ಕ್ಷೀಣವಾಗುತ್ತ, ಹಸಿರು ಬೆಳಕು ಪ್ರಖರವಾಗುತ್ತ ಹೋಗುತ್ತದೆ.)
ವ್ಯಕ್ತಿ ೧ : ಆದರೆ………………..ಆದರೆ ನಾನ್ ಮೂರನೇ ಕಣ್ಣು ? ವ್ಯಕ್ತಿ ೨ : ಕುರುಡರಿಗೆ ಮಾತ್ರ ನಿನ್ನಗತ್ಯ.
ವ್ಯಕ್ತಿ ೧ : ನಾನ್ ಮೂರನೇ ಕಿವಿ?
ವ್ಯಕ್ತಿ ೨ : ಕಿವುಡರಿಗೆ ಮಾತ್ರ ನಿನ್ನಗತ್ಯ.
ವ್ಯಕ್ತಿ ೧ : ನಾನ್ ಆರನೇ ಇಂದ್ರಿಯ.
ವ್ಯಕ್ತಿ ೨ : ನೀನ್ ಸಂನ್ಯಾಸಿಗಳ್ ಸೂತ್ತು, ಅವರ್ ಸಂಪತ್ತು, ವ್ಯಕ್ತಿ ೧ : ನಾನಂತಃಪ್ರಜ್ಞೆ, ನಾನ್ ಪ್ರತಿಭೆ, ನಾನಿಂಟ್ಯೂಷನ್ನು.
ವ್ಯಕ್ತಿ ೨ : (ಜೋರಾಗಿ) ನೀನ್ ಹೇಡಿ, ಹೇಡಿ.
ನಾಯಕ : (ಮುನ್ನುಗ್ಗಿ) ಹೌದು ನೀನ್ ಹೇಡಿ, ನೀನ್ ಹೇಡಿ, ಹೋಗು, ಓಡ್ಹೋಗು, ಹೊರಟ್ಹೋಗ್ ಇಲ್ಲಿಂದ.
ವ್ಯಕ್ತಿ ೧ : ಹೇಡಿ! ನಾನ್ ಹೇಡಿ, ಹೇಡಿ, ನಾನ್ ಹೇಡಿ !
(ಎಂದು ಹಿಂಜರಿದು ಹೋಗುತ್ತಾನೆ, ನೀಲಿ ದೀಪ ಆರಿ, ಹಸಿರು ಬೆಳಕು
ತುಂಬುತ್ತದೆ.)
ವ್ಯಕ್ತಿ ೨ : ಅಬ್ಬಾ…………ಸಧ್ಯ ನಿನ್ ಹೇಡಿತನ ಹೊರಟ್ಹೋಯ್ತು, ನೀನೀಗ ಜಡವಾದ್ ಕಲ್ಬಂಡೆ ಅಲ್ಲ. ಚೈತನ್ಯದ್ ಮೂರ್ತಿ, ನಿನ್ ಕಯ್ಗಳನ್ನ ಹಾಗ್ಯಾಕ್ ಜೋತ್ ಬಿಟ್ಟಿದಿ? ಮೇಲಕ್ಕೆತ್ತು, ನಿಂತಲ್ಲೆ ನಿಲ್‌ಬೇಡ. ಸುತ್ತಾಮುತ್ತ ನೋಡು, ಬೆಳದಿಂಗಳು ಹರಡಿದೆ. ನೆತೀ ಮೇಲ್ ಚಂದ್ರ ಹೊಳೀತಿದಾನ ಸಮುದ್ರ ಉಕ್‌ ಮೊರೀತಾ ಇದೆ, ಒಂದಷ್ಟ್ ಜನ ಹಿಪ್ಪಿಗಳ್ ಈಜಾಡ್ತಿದಾರೆ. ಮತ್ತೂಂದಷ್ಟ್ ಜನ ದಡದ್ ಮರಳಿನ ಮೇಲೆ ಅಲ್ಲಲ್ ಹಾಯಾಗಿ ಬೆತ್ಲೇ ಮಲಗಿದಾರೆ. ಸಮುದ್ರ………..ಮರಳು……..ಗುಡ್ಡ. ……ಬೆಳದಿಂಗಳು…ಬಟ್ಟೆ ಕಿಕ್ ಬಿಸಾಡು……..ಹಾಡು….ಕುಣಿ ………….(ಎಂದು ನಾಯಕನಿಗೆ ಮುಖ ಹಾಕಿ ಹಿಂದೆ ಹಿಂದೆ ನಡೆಯುತ್ತ, …..ಮತ್ತೊಮ್ಮೆ)ಸಮುದ್ರ ………..ಮರಳು….ಬೆಳದಿಂಗಳು….ಬಟ್ಟೆ ಕಿತ್ ಬಿಸಾಡು……….ಹಾಡು…ಕುಣಿ …………(ಹೂಗುತ್ತಾನೆ).
ನಾಯಕ : ಹಾಡು……….ಕುಣಿ……..ಹಾಡು……….ಕುಣಿ (ಎನ್ನುತ್ತ ಲವಲವಿಕೆಯಿಂದ ರಂಗದ
ತುಂಬ ತುಂಬಿಕೊಳ್ಳುತ್ತಾನೆ) ಸಮುದ್ರ……ಮರಳು…….ಗಂಡ….ಬೆಳದಿಂಗಳು…ಬಟ್ಟೆ ಕಿತ್ ಬಿಸಾಡು (ಎಂದು ಶರಟು ಕಳಚಿ ಬಿಸಾಡಿ, ಲಾಸ್ಯ ನೃತ್ಯಕ್ಕೆ ತೊಡಗಿ) ಗುಡ್ಡ..ಬೆಳದಿಂಗಳು….ನಾನು….ನಾನು…ಬೆಳದಿಂಗಳು….ಚುದ್ರ.., (ಎಂದು ಆಕಾಶ ನೋಡುತ್ತಾನೆ. ಟ್ಯೂಬ್‌ಲೈಟಿನ ಚಿಕು) ಹಹ್ಹಹ್ಹಾ ಚಂದ್ರ….!

“ಖೋಯಾ ಖೋಯಾ ಚಾಂದ್, ಬುಲಾ ಆಸ್‌ಮಾನ್
ಆಂಖೋಂಮೆ ಸರೀ’ ರಾತ್ ಜಾಯೇಗೀ
ತುಂ ಕೋ ಭೀ ಕೈಸೇ ನೀಂದ್ ಆಯೇಗೀ
ಖೋಯಾ ಖೋಯಾ ಚಾಂದ್………”
(ಹಾಡತ್ತ ನರ್ತಿಸಿದ ನಾಯಕ, ದಿಬ್ಬವೊಂದರ ಮೇಲೆ ಕೂತು ಮತ್ತೆ
ಹಾಡುತ್ತಾನೆ)
“ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ ತೂಗುತ್ತಿತ್ತ”
(ಅದೇ ದಿಬ್ಬವನ್ನೊರಗಿ ಮಲಗಿ ಆಕಾಶ ನೋಡುತ್ತ)
“ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ”
(ಎಂದು ಹಾಡಿ ನಕ್ಕು)
ಆಕಾಶ……ಚಂದ್ರ……..ಗುಡ್ಡ…..ಬೆಳದಿಂಗಳು….ಏಕಾಂತ..ಸುಗೀತ…………. ನೃತ್ಯ……ಹಾಡು……ಕುಣಿ………
(ಎಂದು ಹೇಳುತ್ತಿರುವಾಗ ಆರಂಭವಾಗುವ ಕೊಳಲ ದನಿ, ಕ್ರಮೇಣ
ಏರುತ್ತಿದ್ದಂತೆ ನಾಯಕ ಮೌನ ತಳಿಯುತ್ತಾನೆ. ಪೀಟರ್,‍ ಕೊಳಲೂದುತ್ತ ಪ್ರವೇಶಿಸಿ ನಾಯಕನ ಹತ್ತಿರ ಬಂದು ಕೂತು, ಸ್ವಲ್ಪ ಹೊತ್ತು ಕೊಳಲೂದಿ, ನಿಲ್ಲಿಸಿ) ಪೀಟರ್ : ನೀನ್ ತುಂಬಾ ಚೆನ್ನಾಗ್ ಹಾಡ್ತೀಯ.
ನಾಯಕ : ಹೌದ ? ಪೀಟರ್ : ನೀನ್ ಹಾಡ್ ಹೇಳು, ನಾನ್ ಕೊಳಲು ನುಡಿಸ್ತೀನಿ.
ನಾಯಕ : ಹ್ಞಾ….”ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ
ನಾಲ್ಕು ಹನಿಯ ಚೆಲ್ಲಿ”
(ಎಂಬ ನುಡಿಯನ್ನೇ ಮೂರು ನಾಕು ಬಾರಿ ಹಾಡುತ್ತಾನೆ. ಪೀಟರ್‍ ಕೊಳಲು ನುಡಿಸುತ್ತಾನೆ.)
ನಾಯಕ : (ನಿಲ್ಲಿಸಿ, ನಕ್ಕು) ಆಷ್ಟೇ ಬರೋದು.
(ಪೀಟರ್ ನಕ್ಕು ಕೊಳಲನ್ನು ಒರೆಸಿ ಚೀಲದಲ್ಲಿಟ್ಟು, ಚೀಲದಿಂದ ಹಶೀಷ್ ತುಂಬಿಟ್ಟಿದ್ದ ಚಿಲುಮೆಯೊಂದನ್ನು ತೆಗೆದು, ಅದಕ್ಕೆ ಬೆಂಕಿ ಹಚ್ಚಿ ಒಂದು ದಂ ಎಳೆದು, ಚಿಲುಮೆಯನ್ನು ನಾಯಕನಿಗೆ ಕೊಡುತ್ತಾನೆ. ನಾಯಕ ಒಂದು ದಂ ಎಳೆದು ಪೀಟರಿಗೆ ಕೊಡುತ್ತಾನೆ.)
ಪೀಟರ್ : ಇವತ್ತು… ನಮಗೆಲ್ಲ…ಒಂದ್‌ ಪಾರ್ಟಿ ಇದೆ,
ನಾಯಕ : (ಬೆಚ್ಚಿ ಬಿದ್ದು, ಎದ್ದು ನಿಂತ) ಪಾರ್ಟಿ!
ಪೀಟರ್ : ಹೌದು, ಪಾರ್ಟಿ,
ನಾಯಕ : (ತನಗೆ ತಾನು) ಪಾಟಿ…………..ಏ ವನ್ ಪಾರ್ಟಿ…?
ಪಿಟರ್ : ಯಾಕೆ ?
ನಾಯಕ : ಕ್ಯಾಂಟೀನ್ ಬಂದಾಗಿದೆ, ಹತ್ತಿರದಲ್ಲೆಲ್ಲೂ ಹೋಟ್ಲಿಲ್ಲ:ಮಿಥ ಪಾರ‍್ಟಿ?
ಪೀಟರ್ : (ದಂ ಎಳೆದು, ಚುಮೆ ಕೊಡುತ್ತ) ಹೀಗೆ .. ಪಾರ್ಟಿ: ಹಾಡೂ,
ಸಂಗಿತ, ಕುಣಿತ…….
ನಾಯಕ : (ಕೂತು, ದು ಎಳೆದು) ಯಾರ‍್ಯಾರ್ ಬಾರ‍್ತಾರೆ?
ಪೀಟರ್ : ನಾವೇ…………ಎಲ್ಲಾ ಹಿಪ್ಪಿಗಳು.
ನಾಯಕ : (ಮತ್ತೂಂದು ದಂ ಎಳೆದು) ಕುಡಿತ ಇದ್ಯಾ?
ಪೀಟರ್ : (ಚಿಲುಮೆ ತೆಗೆದುಕೊಂಡು) ಇಲ್ಲ.
ನಾಯಕ : ಮತ್ತ?
ಪೀಟರ್ : (ದಂ ಎಳೆದು) ಹೀಗೇ-ಹಶೀಷ್ ಸೇದೋದು………………..ಮಜಾ ಮಾಡೋದು,
(ಸ್ವಲ್ಪ ತಡೆದು) ನೀನ್ ಬೇರೆ ಏನಾದ್ರೂ ತಗೋತೀಯ?
ನಾಯಕ : ಏನಾದ್ರೂ ಅಂದ್ರೆ ?
ಪೀಟರ್ : (ಉತ್ತರಿಸದೆ, ದಂ ಎಳೆದು) ಪಾರ್ಟಿಗೆ ನಂಜತೆ ನೀನೂ ಬರ‍್ತೀಯ ?
ನಾಯಕ : ಖರ‍್ತೀನಿ (ಚಿಲುಮೆ ತೆಗೆದುಕೊಳ್ಳುತ್ತಾನೆ)
ಪೀಟರ್ : ಟ್ರಿಪ್ ಹೋಗಿದೀಯ ?
ನಾಯಕ : (ದಂ ಎಳೆಯಲಿದ್ದವನು ತಡೆದು) ಎಂಥಾ ಟ್ರಿಪ್‌ ?
ಪೀಟರ್ : ಎಲ್ಲಿ ಟ್ರಿಪ್
ನಾಯಕ : ಇಲ್ಲಾ.
ಪೀಟರ್ : ಪಾರ್ಟಿ ಹೋಗೋಣ, ಇವತ್ತೆಲ್ಲಾ ಟ್ರಿಪ್ಪಿಗೆ ಹೋಗ್ತಾರೆ.
ನಾಯಕ : ಪಾರ್ಟಿ ಎಲ್ಲಿ ?
ಪೀಟರ್ : ಇಲ್ಲೇ …ಸಮುದ್ರ ತೀರದಲ್ಲಿ.
ನಾಯಕ : ನಾನೆಲ್ಲೆಸ್ಡಿ ತಗೊಳೊಲ್ಲ, (ಎಂದು ದಂ ಎಳೆಯುತ್ತಾನೆ)
ಪೀಟರ್ : (ಎದ್ದು ನಿಂತು) ಯಾಕೆ ?
ನಾಯಕ : (ಚಿಲುಮೆ ಕೊಟ್ಟು ನಾನಿವತ್ತಿಂತಂಕ ತಗೊಂಡಿಲ್ಲ, ಇಂಥಾ ಕಡೇ……………
ಒಬ್ನೇ ಬಂದು…………
ಹೀಟರ್ : (ಚಿಲುಮೆ ಖಾಲಿ ಮಾಡಿ ಚೀಲದಲ್ಲಿಡುತ್ತ) ಹಾಗಾದ್ರೆ……….ನಿನ್ ಬರೋಲ್ಲ ? ನಾಯಕ : ಇಲ್ಲಾ,
ಪೀಟರ್ : ಶಾಂತಿ !
(ಎಂದು ಕಯ್ಯೆತ್ತಿ ಹೇಳಿ, ಕೊಳಲು ತೆಗೆದು ನುಡಿಸುತ್ತ ಹೋಗುತ್ತಾನೆ. ನಾಯಕ ಎದ್ದು ನಿಂತು, ಪೀಟರ್ ಹೋದ ಕಡೆ ನೋಡುತ್ತಿದ್ದು ಮತ್ತೆ ಗಾಳಿಯಲ್ಲಿ ತೇಲುವಂತೆ ನರ್ತಿಸತೊಡಗುತ್ತಾನೆ. ವ್ಯಕ್ತಿ ೨ ನರ್ತಿಸುತ್ತ ಪ್ರವೇಶಿಸುತ್ತಾನೆ. ಇಬ್ಬರೂ ಚಪ್ಪಾಳೆ ತಟ್ಟುತ್ತ ವೃತ್ತಾಕಾರದಲ್ಲಿ ಕುಣಿಯುತ್ತಾರೆ, ಬೆಳಕಿನ ಬಣ್ಣಗಳು ಬದಲಾಗುತ್ತಿರುತ್ತವೆ.)
ವ್ಯಕ್ತಿ ೨ : ಆಹಾ ಚಂದ್ರ!
ನಾಯಕ : ಆಹಾ ಚಂದ್ರ!
ವ್ಯಕ್ತಿ ೨ : ಆ ಆಕಾಶ.
ನಾಯಕ : ಆ ಆಕಾಶ
ವ್ಯಕ್ತಿ ೨ : ಆಹಾ ಚಂದ್ರ !
ನಾಯಕ : ಆಹಾ ಚಂದ್ರ !
ವ್ಯಕ್ತಿ ೨ : ಬೆಳ್ಳಂ ಬೆಳಗೋ ತಿಂಗಳ ಬೆಳಕು.
ನಾಯಕ : ಬೆಳ್ಳಂ ಬೆಳಗೋ ತಿಂಗಳ ಬೆಳಕು.
ವ್ಯಕ್ತಿ ೨ : ಮೆಲ್ಲನೆ ಬೀಸೋ ತಂಗಾಳಿ,
ನಾಯಕ : ಮೆಲ್ಲನೆ ಬೀಸೋ ತಂಗಾಳಿ,
ವ್ಯಕ್ತಿ೨ : ಮೊರೆಮೊರೆದುಕ್ಕುವ ಸಮುದ್ರಘೋಷ.
ನಾಯಕ : ಮೊರೆಮೊರೆದುಕ್ಕುವ ಸಮುದ್ರಘೋಷ.
ವ್ಯಕ್ತಿ ೨ : ಸಮುದ್ರ ತೀರದಿ ಬೆತ್ತಲೆ ಬಾಲೆ.
ನಾಯಕ : ಸಮುದ್ರ ತೀರದಿ ಬೆತ್ತಲೆ ಬಾಲೆ.
ವ್ಯಕ್ತಿ ೨ : ಗುಡ್ಡದ ಮೇಲೆ ನೃತ್ಯದ ಲೀಲೆ.
ನಾಯಕ : ಗುಡ್ಡದ ಮೇಲೆ ನೃತ್ಯದ ಲೀಲೆ.
ವ್ಯಕ್ತಿ ೨ : ಹಾಡುತ ಹಾಕು ಕಯ್ ಚಪ್ಪಾಳೆ.
ನಾಯಕ : ಹಾಡುತ ಹಾಕು ಕಯ್ ಚಪ್ಪಾಳೆ.
ವ್ಯಕ್ತಿ ೨ : ಬೆತ್ತಲೆ ಬಾಲೆ,
ನಾಯಕ : ಕಯ್ ಚಪ್ಪಾಳೆ.
ವ್ಯಕ್ತಿ ೨ : ನೃತ್ಯದ ಲೀಲೆ.
ನಾಯಕ : ಕಯ್ ಚಪ್ಪಾಳೆ.
(ಕಡೆಯ ನುಡಿಗಳನ್ನು ಮತ್ತೆ ಮತ್ತೆ ಹೇಳುತ್ತ ಇಬ್ಬರೂ ಪರಸ್ಪರ ಚಪ್ಪಾಳೆ ತಟ್ಟಿಕೊಂಡು ಕುಣಿಯುತ್ತಿರುವಂತೆ ಅವರ ಧ್ವನಿ ಕ್ಷೀಣವಾಗುತ್ತದೆ, ಬೆಳಕಿನ ಬಣ್ಣ ಬದಲಾಗುವ ವೇಗ ಕಡಿಮೆಯಾಗುತ್ತದೆ. ಬಿರು ಗಾಳಿಯ ಧ್ವನಿ ಮೆಲ್ಲನೆ ಆರಂಭವಾಗಿ ಜೋರಾಗುತ್ತದೆ. ದೀಪ ಆರುತ್ತದೆ. ಸಿಡಿಲಿನ ಭಯಂಕರ ಧ್ವನಿ ಕೇಳುತ್ತದೆ, ಸ್ವಲ್ಪ ಹೊತ್ತು ನೀರವ. ಕಿಡು ನೀಲಿ ಬೆಳಕು ಕಂಡ ಕೂಡಲೆ
ವ್ಯಕ್ತಿ ೧, ಬರಗಾಳಿಯಂತೆ ಪ್ರವೇಶಿಸಿ, “ಮೂರ್ಖಾ” ಎಂದು ವ್ಯಕ್ತಿ ೨ರ ಕೆನ್ನೆಗೆ ಬಾರಿಸುತ್ತಾನೆ. ಉರುಳಿ ಬಿದ್ದ ವ್ಯಕ್ತಿ ೨ ಕಷ್ಟದಿಂದ ಎದ್ದು ಹೋಗುತ್ತಾನೆ.) ವ್ಯಕ್ತಿ ೧ : ನಾಯಕಾ, ನಿಂಗ್ಯಾಕ್ ಅರ್ಥಾ ಆಗೊಲ್ಲ ನಾಯಕಾ, ನಿಂಗ್ಯಾಕರ್ಥಿ
ಆಗೊಲ್ಲ ? ನಿನ್‌ ವ್ಯಕ್ತಿತ್ವ ಪುಡಿ ಪುಡಿಯಾಗ್ ಹೋಗ್ತಿದೆ. ಆಕಾಶಾ ಚಂದ್ರಾ ತಿಂಗಳ ಬೆಳಕೂ ತಂಗಾಳೀ ಬೆತ್ಲೇ ಬಾಲೇ ನೃತ್ಯದ್ ಲೀಲ್ ಕಯ ಚಪ್ಪಾಳೇ ಅಂದ್ಕೊಂಡು ನಿನ್‌ ವ್ಯಕ್ತಿತ್ವಾನ ಹರ‍್ದ ಹಂಚ್ ಹಾಕಿ, ನೀನ್ ಸೊನ್ನೆ ಆಗ್ತಿದೀ, (ಸ್ವಲ್ಪ ತಡೆದು) ಅಲ್ ಮೊರೀತಾ ಇರೋದು ಸಮುದ್ರಾ ಅಲ್ಲ, ಕಾಳಿಂದೀ ಮಡು : ನೀನ್ ನಿಂತಿರೋ ಈ ಗುಡ್ಡ ಗುಡ್ಡಾ ಅಲ್ಲ, ಕಾಳಿಂಗನ್ ಹೆಡೆ : ಅದರ್ ಮೇಲ್ ಕುಣಿತಿರೋ ನೀನು ಕೃಷ್ಣಾ ಅಲ್ಲ, ಸಾಮಾನ್ಯ ಮನುಷ್ಯ, ಯಾವ್ ಗಳಿಗೇಲಿ ನಿನ್ ಇತಿಶ್ರೀ ಆಗತ್ತೋ ಹೇಳೋಕಾಗೊಲ್ಲ, ನೀನುಳುಕೋಬೇಕಾದ್ರೆ, ನಿನ್ ವ್ಯಕ್ತಿತ್ವ ಉಳುಕಬೇಕಾದ್ರೆ: ಈಗ್ಲೇ, ಈ ಕ್ಷಣದಲ್ಲೇ ಈ ಜಾಗ ಖಾಲೀ ಮಾಡು, ಓಡ್‌ಹೋಗು, ನಾನ್ ನಿಂಗಿನ್ಯಾವ್ ಸಹಾಯಾನೂ ಮಾಡ್ಲಾರೆ, ನಾನ್ ಹೊರ‍್ಟ್ ಹೋಗ್ತಿನಿ, (ಎಂದು ಹೊರಟು, ಮತ್ತೆ ತಿರುಗಿ) ಆದ್ರೆ ಹೋಗೋಕ್ ಮದ್ಲು ಒಂದೇ ಒಂದ್ಮಾತು…ನೋಡೋ …(ನೀಲಿ ಬೆಳಕು ಮಸಕಾಗುತ್ತ ಹೋಗಿ ಗಾಢವಾದ ರಕ್ತವರ್ಣ ಕಾಣಿಸ ತೊಡಗುತ್ತದೆ) ನಿನ್ ಸುತ್ತಾಮುತ್ತಾ ಏನಿದೇ, ಏನಾಗ್ತಿದೇ ನೋಡು. ಸುಂದರವಾದ್ ಪ್ರಕೃತೀ ಗರ್ಭದಲ್ಲಡಗಿರೆ ರಾಕ್ಷಸೀ ಶಕ್ತಿಗಳು ಕತ್ಲಲ್ಲೆಚ್ಚತು, ಕೇಕೆ ಹಾಕಿ ಕುಣೀತಿರೋದನ್ನ ಗಮನ್ಸು, (ತಕ್ಷಣ ಹೊರಟು ಹೋಗುತ್ತಾನೆ. ರಂಗದಲ್ಲಿ ಪ್ರಖರವಾದ ರಕ್ತವರ್ಣ ಮಾತ್ರ)
ನಾಯಕ : (ಮೆಲುಕು ಹಾಕುವಂತೆ) ಸುಂದರವಾದ್ ಪ್ರಕೃತಿ, ಪ್ರಕೃತಿ ಗರ್ಭ,
ಗರ್ಭದಲ್ಲಡಗಿದೇ ರಾಕ್ಷಸೀ ಶಕ್ತಿ, ಸುಂದರವಾದ್ ಪ್ರಕೃತಿ, ಪ್ರಕೃತಿ ಗರ್ಭ, ಗರ್ಭದಲ್ಲಡಗಿದೇ ರಾಕ್ಷಸೀ ಶಕ್ತಿ (ಎಚ್ಚತ್ತವನಂತೆ ಜೋರಾಗಿ)ಶಾಂತೀ……….. …….ಶಾಂತೀ….(ಆಚೀಚೆ ಸುತ್ತಿ ನೋಡಿ) ಶಾಂತಿ ಇಲ್ಲ, ನಿನ್ನ ಸಿಕ್ಕಿದ್ದ, ಇವತ್ತು ಸಿಕ್ತೀನಿ ಅಂದಿದ್ದ. ಎಲ್ಲೂಇಲ್ಲ.. (ಸುತ್ತ ನೋಡಿ) ಸುಂದರವಾದ್ ಪ್ರಕೃತಿ, ಪ್ರಕೃತೀ ಗರ್ಭ, ಗರ್ಭದಲ್ಲಡಗಿದೇ ರಾಕ್ಷಸೀ ಶಕ್ತಿ, ರಾಕ್ಷಸೀ ಶಕ್ತಿ……..ಗಡ್ಡದ್ ಗೈಡು…. ಎಲ್ಲೂ ಹೊರ‍್ಟ್ ಹೋದ್ರು, ಗೈಡ್ ಮಾತ್ರ ಹೋಗ್ಲಿಲ್ಲ. ಗೈಡ್ ಏಕಾಂಗಿ ಅಲ್ಲ. ಅವಂಜತೇಗ್ ಇಬ್ರಿದಾರೆ. (ಗೈಡ್ ಮತ್ತು ಗೆಳೆಯರು ಪ್ರವೇಶಿಸಿ ಓಬೊಬ್ಬರು ಒಂದೊಂದು ಕಡೆ ನಿಲ್ಲುತ್ತಾರೆ.) ಇಬ್ರು. (ಓಡಿ ಹೋಗುವಂತೆ ಅವರಿರುವೆಡೆಗೇ ಹೋಗಿ ಬೆಚ್ಚಿ, ಹಿಮ್ಮೆಟ್ಟಿ) ಇಬ್ರಲ್ಲಾ ನಾಕ್ ಜನಾ…ಅಲ್ಲಾ ಹತ್ ಜನಾ… ಹತ್ತಲ್ಲ ನೂರು….ನೂರು……..ನೂರ್ ಜನಾ…ಸುತ್ತಾಮುತ್ತ ನೂರ್ ಜನಾ ನೂರಾರ್‌ ಜನಾ……..ಸಾವ್ರಾರ್ ಜನಾ…ಗೈಡ್ ಕಡೆ ಜನ ನನ್ ಸುತ್ತ ಘೇರಾಯ್ಸಿದಾರೆ, ಹಿಪ್ಪಿಗ್ಳೂ ಅವಂಜತೆ ಶಾಮೀಲಾಗಿದ್ದಾರೆ. ನಾನ್ ಓಡ್ ಹೋಗ್ಬೇಕು…ನಾನ್ ಬಚಾವಾಗ್ಬೇಕು…, (ಎಂದು ಆಚೀಚೆ ಓಡಲು ಪ್ರಯತ್ನಿಸಿ, ಎತ್ತರವಾದೊಂದು ದಿಬ್ಬದ ಮೇಲೆ ನಿಂತು) ಸುತ್ತಾ ಸುತ್ಕೊಂಡ್ ಬಿಟ್ಟಿದಾರೆ. ಎಲ್ಲಾ ಕಡೆ ಕವರ್‌ ಆಗಿದಾರೆ, ನನ್ ಕೊಲ್ತಾರೆ ……ಕೊಂದ್‌ ಹಾಕ್ತಾರೆ… (ಎರಡೂ ಕಯ್ ಚಾಚಿ) ಹೆಲ್ಪ್….ಹೆಲ್ಪ್…. ಹೆಲ್ಪ್…. ಎಂದು ಜೋರಾಗಿ ಅರಚುತ್ತಾನೆ, ಅರೆಬೆತ್ತಲಾದ ಹತ್ತಾರು ಜನ ಹಿಪ್ಪಿಗಳು ಗುಡ್ಡ ಹತ್ತಿ ಹತ್ತಿರ ಬರುತ್ತಾರೆ, ಗೈಡ್ ಮತ್ತು ಗೆಳೆಯರು ಓಡಿಹೋಗುತ್ತಾರೆ) ಬರಬೇಡಿ….ಯಾರೂ ನನ್ ಹತ್ರ ಬರಬೇಡಿ..ಹೋಗಿ…ಹೊರ‍್ಟ್ ಹೋಗಿ… (ಹಿಪ್ಪಿಗಳು ಹಿಂಜರಿಯುತ್ತಾರೆ, ಹಿಪ್ಪಣಿ ಒಬ್ಬಳು ಮಾತ್ರ ನಿಂತಲ್ಲೇ ನಿಂತು)
ಹಿಪ್ಪಣಿ : ಎಂಥಾ ಹುಚ್ಚ ನೀನು “ಹೆಲ್ಪ್, ಹೆಲ್ಪ್” ಅಂತ ಕೂಗ್‌ಕೊಳ್ತಿ;
ಸಹಾಯಕ್‌ ಬಂದ್ರೆ, “ಹೋಗೀ……ದೂರಾ ಹೋಗೀ” ಅಂತಿ!
ನಾಯಕ : ನಂಗ್ ಹೆದರೆ ಆಗತ್ತೆ, ನೀವಲ್ಲ ಆ ಗಡ್ಡದ್ ಗೈಡ್ ಜತೇ ಸೇರಿ ನನ್ ಅಟ್ಯಾಕ್ ಮಾಡ್ತಿದೀರ, ಅವ್ನ್ ನಿಮ್ಗೆಲ್ಲಾ ಏನೋ ಹೇಳಿಕೊಟ್ಟಿದಾನೆ, ಅವ್ನೆ ಕೆಟ್ಟವ್ನು, ಹುಡುಗೀರೇಜೆಂಟು, ಪಕ್ಕಾ ಕಳ್ಳ…. ನೀವು….ನೀವೂ ಅವಂಜತೆ ಸೇರಿದೀರ, ಹೂಗಿ ಹೋರ‍್ಟ್ ಹೋಗಿ
ಹಿಪ್ಪಣಿ : (ಹಿಂಜರಿದು ನಿಂತ ಹಿಪ್ಪಿಗಳತ್ತ ನೋಡಿ) ನೀವೆಲ್ಲ ಹೋಗಿ (ಎನ್ನುತ್ತಾಳೆ ಅವರು ಹೋಗುತ್ತಾರೆ.) ಹೆದರಬೇಡ, ಇಲ್ಯಾವ್‌ ಹೆದರಿಕೇನೂ ಇಲ್ಲ, ಯಾರ್ ಹೇದರಿಕೇನೂ ಇಲ್ಲ, ನಾವೆಲ್ಲ ಸಾಧೂ ಜನಗಳು, ಯಾರಿಗೂ ಏನೂ ತೊಂದರೆ ಕೊಡೋದಿಲ್ಲ, ನಮ್ದು ಪ್ರಶಾಂತವಾದ್ ಜೀವನ. ಕೂಗೀ ಕೂಗಿ ನಂ ಶಾಂತಿ ಕೆಡಿಸ್ಬೇಡ.
ನಾಯಕ : ನಿಂ ಪ್ರಶಾಂತ್‌ವಾದ್‌ ಜೀವ್ನ ನೋಡ್‌ಬೇಕೂಂತ್ಲೇ ನಾನಿಲ್ಲೇಗ್ ಬಂದೆ.
ಆದ್ರೆ ಆ ಗೈಡ್…..ಎಲ್ರೂ ವಾಪಸ್ ಹೊರ‍್ಟ್ ಹೋದ್ರು, ಅವ್ನ್ ಮಾತ್ರ ಹೋಗ್ಲಿಲ್ಲ, ಶಾಂತಿ ನಿನ್ನೆ ಸಿಕ್ಕಿದ್ದ. ಇವತ್ ಬಾ ಅಂದಿದ್ದ, ಅವನ್ನೇ ಕಾಯ್ತಾ ಇಲ್ಲೇ ಉಳ್ಕೊಂಡ್ಬಿಟ್ಟೆ,
ಹಿಪ್ಪಣಿ : ಇಲ್ ಬಾ, ನಂಜತೆ ಕುತ್ಕೋ, ಶಾಂತಿ ಸಿಕ್ಕೇ ಸಿಗುತ್ತೆ. ನಾಯಕ : ಊಹ್ಞೂ, ನಾನ್ ಬರೊಲ್ಲ. ನಂಗ್ ಹೆದರ‍್ಕೆ ಆಗತ್ತೆ.
ಹಿಪ್ಪಣಿ : ಇಲ್ ಯಾರೂ ಇಲ್ಲ, ಎಲ್ಲಾ ಹೊರ‍್ಟ್ ಹೋದ್ರು, ನಾನೊಬ್‌ಳೇ ಇರೋದು:
ಹೆಣ್ ಹೆಂಗ್ಸು, ಬಾಮ್ಮಾ.ಜಾಣ ……ಬಾ ಇಲ್ ಕೂತ್ಕೊ. (ಎಂದು ಸಣ್ಣ ದಿಬ್ಬವೊಂದರ ಮೇಲೆ ಕೂಡುವಳು, ನಾಯಕ ಹೆದರಿ ಹೆದರಿ ಅಚೀಚೆ ನೋಡುತ್ತ ಬಂದು, ಅವಳಿಗಿಂತ ಸ್ವಲ್ಪ ಕೆಳಮಟ್ಟದಲ್ಲಿ ಕೂಡುವನು. ಒಂದು ಕ್ಷಣ ಮೌನ, ಹಿಪ್ಪಣಿ ನಾಯಕನ ತಲೆ ನೇವರಿಸುವಳು.)
ನಾಯಕ : ನಿನ್ನ ಹೆಸರೇನು ?
ಹಿಪ್ಪಣಿ : ಕ್ರಿಸ್ಟಿನಾ,
ನಾಯಕ : ನಿಂದ್ ಯಾವ್ ದೇಶ?
ಕ್ರಿಸ್ಟಿನಾ : ಜರ‍್ಮನಿ.
ನಾಯಕ : ಇಲ್ ಯಾಕ್ ಬಂದಿ ?
ಕ್ರಿಸ್ಟಿನಾ : ಶಾಂತಿ ಹುಡುಕೊಂಡು.
ನಾಯಕ : ಅಮೆರಿಕನ್ ಶಾಂತಿ!………………….ರಾಬಿ ಜತೆ ಇದ್ನಲ್ಲಾ?
ಕ್ರಿಸ್ಟಿನಾ : ಅಲ್ಲಾ, ಯೂನಿವರ್ಸಲ್ ಶಾಂತಿ,
ನಾಯಕ : ಶಾಂತಿ ಸಿಕ್ತಾ ?
ಕ್ರಿಸ್ಟೀನಾ : ಸಿಕ್ತು
ನಾಯಕ : ಜರ‍್ಮನೀಲಿ ಶಾಂತಿ ಇರ‍್ಲಿಲ್ವಾ ?
ಕ್ರಿಸ್ಟೀನಾ : (ನಿಟ್ಟುಸಿರಿನೊಡನೆ ) ಇರ‍್ಲಿಲ್ಲ.
ನಾಯಕ : ಯಾಕೆ ?
ಕ್ರಿಸ್ಟಿನಾ : ನನ್ ಗಂಡ ತುಂಬ ಕ್ರೂರಿಯಾಗಿದ್ದ.
ನಾಯಕ : ಹೊಡೀತಿದ್ನ ?
ಕ್ರಿಸ್ಟಿನಾ : ನೆವರ್, ಆದ್ರೆ ಅದಕ್ಕಿಂತ ಕ್ರೂರವಾಗ್ ನಡಕೊತಿದ್ದ, ಡಿವೋರ್ಸ್ ಮಾಡದೆ ಬೇರೆ ದಾರೀನೇ ಇರ‍್ಲಿಲ್ಲ. ಅದೇ ಸಮಯಕ್ಕೆ ಹಿಪ್ಪಿ ಫಿಲಾಸಫಿ ನನ್ ಆಕರ್ಷಿಸ್ತು, ಅವನ್ ಬಿಟ್ಟು, ನನ್ ಆರ್ ವರ್ಷದ್ ಮಗಳನ್ ಕರ‍್ಕೊಂಡು ಇಲ್ಲಿಗ್ ಬಂದೆ. ನಾಯಕ : (ಸ್ವಗತ) ಜೀವನಕ್ ಬೆನ್ ಹಾಕ್ ಬಂದಿರೋ ಹೇಡಿಗಳು…………ಹಿಪ್ಪಿಗಳೆಲ್ಲ
ಹೇಡಿಗಳು, (ಎಂದು, ಕ್ರಿಸ್ಟಿನಾಗೆ) ನಿನ್ ಮಗಳೂ ಹಿಪ್ಪಿಯಾಗಿದ್ದಾಳಾ?
ಕ್ರಿಸ್ಟಿನಾ : ಹೌದು, ಅವಳನ್ನ ಕಾಡ್ನಲ್ಲಿ ಸ್ವಚ್ಛಂದವಾಗ್ ಬೆಳ್ಯೋ ಹೂವಿನ್ ಹಾಗ್
ಬೆಳೆಸ್ತದೀನಿ (ಸ್ವಲ್ಪ ತಡೆದು) ಬಾ ಕೆಳಗ್ಹೋಗೋಣ ; ಪಾರ್ಟಿ ಶುರು
ವಾಗಿರಭೌದು.
ನಾಯಕ : ಪಾರ್ಟಿ !
ಕ್ರಿಸ್ಟಿನಾ : ಹೌದು, ಟ್ರಿಪ್ ಕೂಡ.
ನಾಯಕ : ನಾನೆಲ್ಲೆಸ್ಡಿ ತಗೊಳೋಲ್ಲ.
ಕ್ರಿಸ್ಟೀನಾ : (ತಲೆ ನೇವರಿಸಿ) ಯಾಕೆ ?
ನಾಯಕ : (ಅವಳನ್ನು ಆಶ್ರಯಿಸುತ್ತ) ನಂಗ್ ಹೆದರ‍್ಕೆ ಆಗತ್ತೆ.(ಎಂದು, ಅವಳ
ಕಯ್, ತೋಳು ಮುದ್ದಿಸಿ ಅಪ್ಪಿಕೊಳ್ಳಲು ಹೋಗುತ್ತಾನೆ.)
ಕ್ರಿಸ್ಟಿನಾ : (ಅವನನ್ನು ತಡೆದು) ನಿಂಗೇ……ಶಾಂತಿ ಬೇಕ್ ತಾನೆ ?
ನಾಯಕ : ನಂಜಿವನದಲ್ಲಿ ಶಾಂತಿ, ಸುಖ, ಸಮಾಧಾನ ಬೇಕಾದಷ್ಟಿದೆ.
ಕ್ರಿಸ್ಟಿನಾ : ಇಲ್ಲಾ….ಖಂಡಿತ ಇಲ್ಲ, ಆದ್ರೂ ನಿನ್ ಭ್ರಮೆ, ನಿಂಗ್‌ ಶಾಂತಿ ಇದ್ದಿದ್ರೆ,
ನಿಂಗ್‌ ಹೆದರಿಕೆ ಆಗ್ತಾ ಇರ‍್ಲಿಲ್ಲ, (ಸ್ವಲ್ಪ ತಡೆದು) ಒಂದೇ ಒಂದ್ಸಾರಿ ನಂ ಜತೆ ಟ್ರಿಪ್ಪಿಗೆ ಬಾ, ನಿಜವಾದ ಶಾಂತಿ ಏನು, ಹೇಗಿರತ್ತೆ ಅಂತ ಗೊತ್ತಾಗತ್ತೆ.
ನಾಯಕ : ಹೇಗಿರತ್ತೆ ಅದು ?
ಕ್ರಿಸ್ಟೀನಾ : ಅದೂ…..ಹೇಳೋಕಾಗೋ ಅಂಥಾದಲ್ಲ.
ನಾಯಕ : ಅಂದ್ರೆ?
ಕ್ರಿಸ್ಟಿನಾ : ನೀನ್ ಬ್ರಾಹ್ಮಣ್‌ನಾ ?
ನಾಯಕ : ಹೌದು.
ಕ್ರಿಸ್ಟಿನಾ : ಬ್ರಹ್ಮದ್ ವರ್ಣನೆ ಕೇಳಿದೀಯ ?
ನಾಯಕ : ಓದಿದೀನಿ,
ಕ್ರಿಸ್ಟಿನಾ : ಅದೇ ಇದು, (ಎಂದು ಎದ್ದು ನಿಂತು) ಆತ್ಮ ಪರಮಾತ್ಮನು ಸೇರಿ ಹೋಗೋ ದಿವ್ಯಾನುಭವ, ನಿನ್ ವ್ಯಕ್ತಿತ್ವ, ನಿನ್ ಚಿಲ್ಲರೇ ಸುಖದಃಖ ಎಲ್ಲಾ ಮರ‍್ತು, ನೀನೀ ಮಹಾವಿಶ್ವದ್ದೊಂದ್‌ ಭಾಗ ಆಗ್ ಹೋಗ್ತಿ ಅಲ್ಲ ಹಾಗಲ್ಲ: ನೀನೇ ಈ ಮಹಾವಿಶ್ವ ಆಗಹೋಗ್ತಿ ! ಅನುಭವಿಸೋನೂ ನೀನೇ, ಅನುಭವಾನೂ ನೀನೇ ಆಗ್ ಹೋಗ್ತಿ, (ಮುಂದಿನ ಮಾತಾಡುತ್ತಾ ಅವಳು ಗುಡ್ಡವಿಳಿದು ಹೋಗುತ್ತಾಳೆ. ಅವಳ ಧ್ವನಿ ಸ್ವಗತವೆಂಬಂತೆ ಕ್ರಮೇಣ ಕ್ಷೀಣವಾಗುತ್ತದೆ.) ನೀನೇ ಚಂದ್ರ…
ನೀನೇ ಬೆಳದಿಂಗಳು …ನೀನೇ ಸಮುದ್ರ…. ನೀನೇ ಸಂಗೀತ…..ನೀನೆ ಮರಾಗಿಡಾ ಬಳ್ಳೀ ಬೆಟ್ಟಾ ಗುಡ್ಡಾ ಹೂವೂ ಹಣ್ಣೂ…(ಅವಳು ಮರೆಯಾಗುತ್ತಾಳೆ. “ನಾಯಕಾ” ಎಂಬ ವ್ಯಕ್ತಿ ೧ರ ಗಂಭೀರ ಧ್ವನಿ ಮೊಳಗುತ್ತದೆ, ನಾಯಕ
ದಿಗ್ಗನೆದ್ದು ನಿಲ್ಲುತ್ತಾನೆ.)
ವ್ಯಕ್ತಿ೧ ರ
ಹಿನ್ನೆಲೆ ಧ್ವನಿ : ನಾಯಕಾ ನೀನ್ ಉಳುಕೋಬೇಕಾದ್ರೆ, ನಿನ್‌ ವ್ಯಕ್ತಿತ್ವ ಉಳುಕೋಬೇಕಾದ್ರೆ: ಈಗ್ಲೇ, ಈ ಕ್ಷಣದಲ್ಲೇ ಈ ಜಾಗಾ ಖಾಲಿ ಮಾಡು, ಓಡ್ ಹೋಗು…ಓಡ್ ಹೋಗು……….
ನಾಯಕ : ನಾನು……ನಾನು……ನನ್ ವಕ್ತಿತ್ವ …..ನನ್ ಹೆಂಡ್ತೀ ಮಕ್ಳು …ನನನ್ನುದ್ಯೋಗ
ನನ್ ಸ್ಥಾನಮಾನಾಮರ‍್ಯಾದೆ….ನಾನು……..ನನ್ ವ್ಯಕ್ತಿತ್ವ…..ಸುಂದರವಾದ್ ಪ್ರಕೃತೀ…ಪ್ರಕೃತೀ ಗರ್ಭ…ಗರ್ಭದಲ್ಲಡಗಿದೇ ರಕ್ಷಸೀ ಶಕ್ತಿ…….ನಾ ಸಿಕ್ಕೊಲ್ಲ: ಬಚಾವಾಗ್ತೀನಿ, ಓಡ್ ಹೋಗ್ತಿನಿ, ಬದುಕ್ಕೋತೀನಿ, ಬಚಾವಾಗ್ತಿನಿ, ಬದುಕೋತೀನಿ
(ಓಡಿ ಹೋಗುತ್ತಾನೆ, ನಾಟಕಕಾರ, ಓಡುತ್ತಿರುವ ನಾಯಕನ ಕಡೆಗೆ ಕಯ್ ತೋರಿಸುತ್ತ, “ಹೇಡಿ ಹೇಡಿ”, ಎನ್ನುತ್ತ ಪ್ರವೇಶಿಸುತ್ತಾನೆ. ಪೂರ್ಣ ಪ್ರಕಾಶ) ನಾಟಕಕಾರ : ಹೇ, ಹೇಡಿ, ಓಡ್ ಹೋದ, ನಂ ನಾಯಕ ತಾನ್ ಹೇಡಿ ಅನ್ನೋದನ್ನ ನಿರೂಪ್ಸಿ ಓಡ್ ಹೋದ. ಆಂಥಾ ಹೇಡಿ ಇಲ್ಲೀಗ್ ಯಾಕ್ ಬಂದ ? ಹಿಪ್ಪೀ ಜೀವನ ಹೇಗಿರತ್ತೆ ಅಂತ ತಿಳ್ಕೊಳ್ಳೋಕೋ ಅಥ್ವಾ ಕ್ರಿಸ್ಟಿನಾ ಮೇಲೆ ಕಯ್ ಹಾಕಿ, ಸಿಕ್ಕಿದ್ದಿದ್ರೆ ರಾಬೀ ಮೇಲ್ ಕಯ್ ಹಾಕಿ ಅವರ ಲೈಂಗಿಕ ಸ್ವಾಚ್ಛಂದ್ಯದ ದುರ್ಲಾಭ ಪಡಕೊಳ್ಳೋಕೋ ? ನಂಗಂತೂ ಅರ್ಥಾ ಆಗಿಲ್ಲ, ಶಾಂತೀ ಜತೆ ಚರ್ಚೆ ಮಾಡೋ ನೆಪದಲ್ಲಿ ಬಂದ್ ನಾಯಕ ಮಹಾ ಪುಕ್ಕ, ಮಹಾ ಹಡಿ, ಆಕಾಶದಲ್ ಹಾರೋ ಹಕ್ಕಿಗಳ್ ಥರಾ, ನೀರ‍್ನಲ್ಲೀಜೋ ಮೀನುಗಳ್ ಥರಾ ಕಾಡಲ್ ಬೆಳ್ಕೋ ಮರಗಿಡಗಳ್ ಥರಾ ಜೀವ್ನಾ ಮಾಡ್ತಿರೋ ಈ ಹಿಪ್ಪಿಗಳನ್ ಕಂಡಾಗ, ನಂಗೆ ದಿಗಂಬರ ಜೈನ್ ಸನ್ಯಾಸಿಗಳೇ ನೆನಪಾಗತ್ತೆ, ಆದರೂ ನಾಯಕ ಹೇಳ್ತಾನೆ: “ಹಿಪ್ಪಿಗಳು ಹೇಡಿಗಳು, ಜೀವನಕ್ ಬೆನ್ ಹಾಕ್ ಬಂದಿರೋ ಹೇಡಿಗಳು”, ಅಂತ ! ಆದರೆ ನಾಯಿಕಾ ಆಗ್ಲಿ, ನಾನಾಗ್ಲೀ, ನೀವಾಗ್ಲೀ ದಿಗಂಬರರಾಗೋಕೆ ಸಾಧ್ಯ ಇಲ್ಲ. ನಂ ಹೇಡಿತನ ಅದಕ್ ಅವಕಾಶಾಕೊಡೋಲ್ಲ.

ಇಲ್ಲಾ ಸ್ವಾಮಿ ಇಲ್ಲ ; ಹಾಗೆ ಹೊಗೆಯಾಗಿ ಹೋಗಲಾರೆವು ನಾವು ಇದ್ದೂ ಇಲ್ಲದಂಥ ಅವ್ಯಕ್ತವಾಗಲಾರೆವು ನಾವು ಗಾಳಿಯಾಗಲಾರೆವು. ಆಕಾಶವಾಗಲಾರೆವು, ಕಲ್ಲೂ ಮಣ್ಣುಮರಗಿಡಗಳಾಗಲಾರೆವು, ಭಗ್ನರಾಗ ಲಾರೆವು, ನಿಮಗ್ನರಾಗಲಾರೆವು, ನಗ್ನರಾಗಲಾರವು ಯಾಕೆಂದರೆ ; ಮುಂದುಳಿದ ನಾವು ಹೇಡಿಗಳು ಸ್ವಾಮೀ ಹೇಡಿಗಳು.

(ನಾಟಕ ಪ್ರಯೋಗ ಮಾಡಲಿಚ್ಚಿಸುವವರು ಲೇಖಕರ ಅನುಮತಿ ಪಡೆಯುವುದು ಅಗತ್ಯ)

Close

ರಾಯ್ ಅವರ ಅಶನಿ ಸಂಕೇತ್

ರಾಯ್ ಅವರ ಅಶನಿ ಸಂಕೇತ

ಶರದ್ ಸೌಕೂರ್

೧೯೭೩ ರ ಬರ್ಲಿನ್ ಚಿತ್ರಮೇಳದಲ್ಲಿ ‘Golden Bar’ ಪ್ರಶಸ್ತಿಯನ್ನೂ ಚಿಕಾಗೋ ಚಿತ್ರೋತ್ಸವದಲ್ಲಿ ಸ್ವರ್ಣಪದಕವನ್ನೂ ಗಳಿಸಿದ ಸತ್ಯಜಿತ್ ರಾಯ್ ಅವರೆ “ಅಶನಿ ಸಂಕೇತ್ (ದೂರದ ಗುಡುಗು) ಬಂಗಾಲಿ ವರ್ಣಚಿತ್ರ ಹಲವು ಬಗೆಯ ನಿರೀಕ್ಷೆಗಳನ್ನು ಕೆರಳಿಸಿತ್ತು. ಆದರೆ ಚಿತ್ರ ನೋಡಿದಾಗ ಹುಟ್ಟಿದ್ದು : ರಾಯ್ ತಮ್ಮ ಹಿಂದಿನ ಚಿತ್ರಗಳಲ್ಲಿನದಕ್ಕಿಂತ ಮಹತ್ತಿನದನ್ನೇನೂ ಕೊಟ್ಟಿಲ್ಲೆಂಬ ನಿರಾಸೆ’.

‘ಪಾಥೇರ್ ಪಾಂಚಾಲಿ’ಯ ನಂತರದ ಚಿತ್ರಗಳಲ್ಲಿ ರಾಮ್ ಹಂತ ಹಂತವಾಗಿ ಬೆಳವಣಿಗೆ ತೋರುತ್ತ ಬಂದರೂ ಇತ್ತೀಚಿನ ಪ್ರತಿದ್ವಂದಿ’, “ಸೀಮಾಬದ್ಧ’ ಚಿತ್ರಗಳು ಅವರ ರಚನಾತ್ಮಕ ಪ್ರತಿಭೆ ತನ್ನ Saturation Point ತಲುಪಿತೇ ಎಂಬ ಅನಿಸಿಕೆ ಹುಟ್ಟಿಸಿದವು, ತಮ್ಮ ತಮ್ಮ Individualistic ದಾರಿಗಳಲ್ಲಿ ಸಾಗುತ್ತಿರುವ ಮೃಣಾಲ್ ಸೇನ್, ಮಣಿ ಕೌಲ್ ಮತ್ತಿತರರ ಚಿತ್ರಗಳ ಹಿನ್ನೆಲೆಯಲ್ಲಿ ಈ ಅನಿಸಿಕೆ ದಟ್ಟವಾಗ ಕೊಡಗಿತು, ‘ಆಶನಿ ಸಂಕೇತ್’ ಆದನ್ನೇ ಅನುಮೋದಿಸುತ್ತದೆ.

ಮಹಾಯುದ್ಧದ ಬಿಸಿ ದೂರದಿಂದ ಬಂದು ಬಂಗಾಲದ ಪಟ್ಟ ಹಳ್ಳಿಯೊಂದನ್ನು. ಧೃತಿಗೆಡಿಸಿದ ಕತೆಯನ್ನು (ಬಿಭೂತಿ ಭೂಷಣ್ ಚಟ್ಟೋಪಾಧ್ಯಾಯರ ಕಾದಂಬರಿ) ರಾಮ್ ನಮ್ಮ ಮುಂದಿಟ್ಟಿದ್ದಾರೆ. ಚಿತ್ರದ ನಾಯಕ ಶೂದ್ರರ ಹಳ್ಳಿಯಲ್ಲಿ ನೆಲೆಯೂರುತ್ತಿರುವ ಏಕೈಕ ಬ್ರಾಹ್ಮಣ, ಅಲ್ಲಿ ಬ್ರಾಹ್ಮಣ್ಯವೊಂದೇ ಅವನ ಭಂಡವಾಳ, ಮುಗ್ಧ ಹಳ್ಳಿಗರಿಗೆ ಆತ ಅಧ್ಯಾಪಕ, ವೈದ್ಯ, ವೈದಿಕ ಎಲ್ಲವೂ ಆಗುತ್ತಾನೆ. ಆದರೆ ಹಳ್ಳಿಗರ ವಿಶೇಷ ಗೌರವ ಅವರು ನೆಮ್ಮದಿಯಿಂದಿಷ್ಟು ಕಾಲ ಮಾತ್ರ ಆತನಿಗೆ ದಕ್ಕುತ್ತದೆ. ಮಹಾಯುದ್ಧ ಆರಂಭವಾಗಿ ಅಕ್ಕಿ, ಸೀಮೆದೆಣ್ಣೆ ಮಾಯವಾದಾಗ ಅವರೆಲ್ಲ ಕಂಗೆಡುತ್ತಾರೆ. ಅವರ ಉದ್ವಿಗ್ನತೆ ಕೊನೆಗೆ ವ್ಯಗ್ರತೆಗೆ ತಿರುಗುತ್ತದೆ, ಅಂಗಡಿಗಳನ್ನು ದೋಚುತ್ತಾರೆ, ಅಕ್ಕಿ ಅಡಗಿಸಿರುವನೆಂದು ತಮ್ಮ ಮುಖಂಡನ ತಲೆಯೊಡೆಯುತ್ತಾರೆ. ಮನೆ ಮನೆಗಳಲ್ಲಿ ಭೀತಿ, ಕಾತರ, ಆನಿರ್ದಿಷ್ಟತ ಮನೆಮಾಡುತ್ತವೆ.

ಒಂದು ಸಂಜೆ ನಾಯಕ ಮಡದಿಯನ್ನು ಕರೆದು ತೋರಿಸುತ್ತಾನೆ: “ಅಗೋ ನೋಡು” ದೂರದಲ್ಲಿ ೧೪ ಮೈಲು ದೂರದ ಹಳ್ಳಿಯ ಇನ್ನೊಬ್ಬ ಬ್ರಾಹ್ಮಣ ಮುದುಕ ತನ್ನ ಪರಿವಾರದೊಂದಿಗೆ ಈತನ ಆಶ್ರಯಕ್ಕೆ ಬರುತ್ತಿರುವುದು ಕಾಣುತ್ತದೆ. “ಇಬ್ಬರಿದ್ದೆವು. ಈಗ ಹತ್ತಾದೆವು.” ಆಗ ಆಕೆ ನಸುನಾಚಿ ಮುಗುಲ್ನಗುತ್ತಾಳೆ: “ಹತ್ತಲ್ಲ, ಹನ್ನೊಂದು !” ಆತ ಆಕೆಯನ್ನು ದಿಟ್ಟಿಸುತ್ತಾನೆ. ಮರುಕ್ಷಣ ಇಬ್ಬರೂ ಗಂಭೀರರಾಗುತ್ತಾರೆ. ಆಗ ಗುಂಪು ಗುಂಪಾಗಿ ಜನರ ನೆರಳುಗಳು ಪ್ರೇಕ್ಷಕರತ್ತ ಸಾಗುತ್ತಿದ್ದಂತೆ ಭಾಸವಾಗುತ್ತದೆ. ೧೯೪೭ ರ ಮನುಷ್ಯ ನಿರ್ಮಿತ ಬರಗಾಲದಲ್ಲಿ ಬಂಗಾಲದ ೫ ಮಿಲಿಯನ್ ಜನ ಅವಸಾನ ಕಂಡರೆಂದು ವರದಿಯಾಗಿರುತ್ತದೆ’ ಎಂಬ ಬರವಣಿಗೆ ಕಾಣಿಸಿಕೊಳ್ಳುತ್ತದೆ, ಅಲ್ಲಿಗೆ ಚಿತ್ರ ಮುಗಿಯುತ್ತದೆ.

ಬ್ರಾಹ್ಮಣನ ಮಡದಿ ಗಡ್ಡೆ ಗೆಣಸು ಹುಡುಕಲು ಕಾಡಿಗೆ ಹೋದಾಗ ಅಪರಿಚಿತ ಖಳ ನಾಯಕನ ಹಟಸಂಭೋಗದ ವಿಫಲಯತ್ನಕೊಳಗಾಗುವ ಸಂದರ್ಭ ಹಿಂದಿ ಫಿಲ್ಲಮ್ಮುಗಳನ್ನು ನೆನಪಿಸುವಷ್ಟು ಮೆಲೋಡ್ರಾಮೆಟಿಕ್ ಆಗಿ ಬಂದಿದೆ. ಹಳ್ಳಿಗರ ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಆಗಮ್ಮೆ ಈಗೊಮ್ಮೆ ನೆಲದ ಮೇಲೆ, ಮನೋನ್ಮುಖವಾಗಿ. ಬಿದ್ದ ಪಾತರಗಿತ್ತಿಗಳನ್ನು ತೋರಿಸಿದ್ದು ಅನಗತ್ಯ ಕ್ಲೀಷೆಯಾಗಿ ತೋರುತ್ತದೆ. ಇಂಥ ಕೆಲ ದೋಷಗಳನ್ನು ಬಿಟ್ಟರೆ ಸೊಂಪಾದ ಬಣ್ಣದಲ್ಲಿ ಹಳ್ಳಿಯ ಸೌಂದರ್ಯವನ್ನು ಅರ್ಥ ಪೂರ್ಣವಾಗಿ, ಕಲಾತ್ಮಕವಾಗಿ ಸೆರೆಹಿಡಿದಿರುವ ರೀತಿ ಗಮನಾರ್ಹವಾಗಿದೆ, ರಾಯ್ ಅವರೇ ಜೋಡಿಸಿರುವ ಹಿನ್ನೆಲೆ ಸಂಗೀತದಲ್ಲಿ ವಿಮಾನಗಳ ಸದ್ದು, ಹುಳಹುಪ್ಪಟೆಗಳ ಸದ್ದು, ದೂರದ ಗಂಟೆಯ ಸದ್ದುಗಳು ಸುಸಂಗತ ಧ್ವನಿಗಳಾಗುತ್ತವೆ.

ಪ್ರತಿಯೊಂದು ಪಾತ್ರವೂ ತನ್ನದೇ ಆದ ಅಚ್ಚೊಂದನ್ನು ಒತ್ತುತ್ತದೆ. ಪ್ರಮುಖ ಪಾತ್ರಗಳಲ್ಲಿ ಸೌಮಿತ್ರ ಚಟರ್ಜಿ, ಬಬಿತಾ, ಸಂಧ್ಯಾರೋಯ್ ಕಾಣಿಸಿಕೊಂಡಿದ್ದಾರೆ.

೧೮೪೭ ರ ಕತೆಯಾದರೂ ಒಂದು ಸಾರ್ವಕಾಲಿಕ ಸಮಸ್ಯೆಯನ್ನು ಧ್ವನಿಸುವ ಈ ಚಿತ್ರ ವನ್ನು ತಾತ್ವಿಕ ಅರ್ಥದಲ್ಲಿ ಡಾಕ್ಯೂಮೆಂಟರಿಯೆಂದು ಕರೆಯಬಹುದು.

Close

ಮಕ್ಕಳ ನಾಟಕ-ಪ್ರಯೋಗ

ಮಕ್ಕಳ ನಾಟಕ-ಪ್ರಯೋಗ

ಬಿ ವಿ ವೈಕುಂಠರಾಜು

ವಿಶಾಲ ಅರ್ಥದಲ್ಲಿ ನಾಟಕಗಳನ್ನು ಮಕ್ಕಳ ನಾಟಕಗಳು ದೊಡ್ಡವರ ನಾಟಕಗಳು ಎಂದು ವಿಭಜಿಸುವುದು ಅಷ್ಟಾಗಿ ಸರಿತೂಗದಿರಬಹುದು, ದೊಡ್ಡವರ ನಾಟಕ ವಕ್ಕಳಿಗೆ, ಮಕ್ಕಳ ನಾಟಕ ದೊಡ್ಡವರಿಗೆ ಹಿಡಿಸುವುದಿಲ್ಲ ಎನ್ನುವ ಕರಾರುವಾಕ್ಕಾದ ನಿಯಮವೇನೂ ಇಲ್ಲ, ರಂಗದ ಮೇಲೆ ನೋಡುತ್ತಿರುವಾಗ ಪ್ರೇಕ್ಷಕರಿಗೆ ಒಂದು ವಿಶಿಷ್ಟ ಅನುಭವವನ್ನು ತಂದುಕೊಡುವುದು ನಾಟಕದ ಉದ್ದೇಶವಾದ್ದರಿಂದ, ಪ್ರೇಕ್ಷಕರಿಗೆ ಅವರ ಬೌದ್ದಿಕ ಮಟ್ಟಕ್ಕನುಗುಣವಾಗಿ, ವಯಸ್ಸಿಗನುಗುಣವಾಗಿ ನಾಟಕದ ಅನುಭವವಾಗಬಹುದು. ಆದರೆ ಅನೇಕ ನಾಟಕಗಳು ಮಕ್ಕಳ ತೆಕ್ಕೆಗೆ ಸಿಕ್ಕದಿರಬಹುದು. ಅವರ ಸೀಮಿತ ಅನುಭವದ ವ್ಯಾಪ್ತಿಗೆ ಮೀರಿದ ಜಟಿಲ ಸಮಸ್ಯೆಗಳು ಬಂದಾಗ ನಾಟಕದಲ್ಲಿ ಆಕರ್ಷಣೆ ಇಲ್ಲದಂತಾಗಬಹುದು, ಆಗ ಮಕ್ಕಳಿಗೆ ಅಂತಹ ನಾಟಕಗಳಿಗಿಂತ ತಾವು ಆಡುವ ಆಟಗಳೇ ಹೆಚ್ಚು ಅರ್ಥಪೂರ್ಣವಾಗಿ ತೋರುತ್ತವೆ. ಅಲ್ಲದೆ ನಾಟಕ ಪ್ರೇಕ್ಷಕರನ್ನು Involve ಮಾಡಿಕೊಳ್ಳಲಾಗದೆ ನಾಟಕದ ಮೂಲ ಉದ್ದೇಶಕ್ಕೆ ಭಂಗವುಂಟಾಗುತ್ತದೆ. ಈ ಮಾತಿಗೆ ಉದಾಹರಣೆಗಳನ್ನು ನೀಡಬಹುದು.

ಶ್ರೀರಂಗರ ‘ಸ್ವರ್ಗಕ್ಕೆ ಮೂರೇ ಬಾಗಿಲು’ ಕಾರಂತರ ನಿರ್ದೇಶನದಲ್ಲಿ ಯಶಸ್ವಿಯಾಗಿ ಪ್ರಯೋಗವಾಗಿದೆ. ಪ್ರಾಚೀನ ಕಾಲದಿಂದ ಒಂದಲ್ಲ ಒಂದು ವರ್ಗ ಶ್ರೀಸಾಮಾನ್ಯನನ್ನು ಶೋಷಿಸುತ್ತಾ ಬಂದಿರುವುದನ್ನು ಪ್ರತಿಪಾದಿಸುವ ಈ ನಾಟಕದ ತಿರುಳೇ ಮಕ್ಕಳ ಕಲೆಗೆ ಹೊಗಲಾರದು. ಆಗ ಆಕರ್ಷಕವಾದ ಸೆಟ್‌ಗಳು ರಂಗದ ಮೇಲೆ ಚಟುವಟಿಕೆಯಿಂದ ಓಡಾಡುವ ಸಮೂಹ ಮಕ್ಕಳಿಗೆ ಆಕರ್ಷಕವಾಗಿ ಕಂಡರೂ, ನಾಟಕದಲ್ಲಿ ತಲ್ಲೀನರಾಗಲು ಅಸಾಧ್ಯವಾದುದರಿಂದ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ, ಗಿರೀಶರ ‘ಹಯವದನ’ ವನ್ನು ಮಕ್ಕಳು ನೋಡುವಾಗ ಕುದುರೆ ಮಾತನಾಡುವುದು, ತಲೆಗಳು ಅದಲುಬದಲಾಗುವುದು ಕೇವಲ ಚಮತ್ಕಾರಗಳಂತೆ ಕಂಡು ಸ್ವಲ್ಪ ಖುಷಿಪಟ್ಟರೂ ನಾಟಕದ ಬಹು ಭಾಗ ಅವರಿಗೆ ಎಟುಕಲಾರದೆ ಹೀಗಾಗಿ ಮಕ್ಕಳ ತೆಕ್ಕೆಗೆ ಸಂಪೂರ್ಣವಾಗಿ ಒಗ್ಗುವ, ನಾಟಕದುದ್ದಕ್ಕೂ ಪೂರ್ಣವಾಗಿ ಅವರನ್ನು Involve ಮಾಡಿಕೊಳ್ಳುವ ನಾಟಕಗಳ ರಚನೆ, ಪ್ರಯೋಗಗಳು ಅನಿವಾರ್ಯವಾಗಿ ಬೇಕಾಗುತ್ತವೆ. ಈ ದೃಷ್ಟಿಯಿಂದ ಮಕ್ಕಳ ರಂಗಮಂದಿರ ಪ್ರತ್ಯೇಕವಾಗಿ ಬೆಳೆಯುವುದೂ ಅಗತ್ಯವಾಗುತ್ತದೆ, ‘ಚಂದಮಾಮ’ ದತಹ ಪತ್ರಿಕೆಗಳು ಸಾಹಿತ್ಯಕ ಪತ್ರಿಕೆಗಳಿಗೆ ಮೆಟ್ಟಲುಗಳಾದಂತೆ ಮಕ್ಕಳ ರಂಗಮಂದಿರ ಚಿಕ್ಕವರ ಬೆಳವಣಿಗೆಗೆ ಸಹಾಯಕವಾಗಬೇಕಾಗುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ನಡೆದ ಮಕ್ಕಳ ನಾಟಕ ಪ್ರಯೋಗಗಳಲ್ಲಿ ನನಗೆ ಅತ್ಯಂತ ಮುಖ್ಯವಾಗಿ ಕಂಡಿವುದು ಠಾಕೂರರ ‘ಪಂಜರಶಾಲೆ’ (ಅಳವಡಿಕೆ-ನಿರ್ದೆಶನ : ಬಿ. ವಿ. ಕಾರಂತ) ಕಾಡಿನಲ್ಲಿ ಸ್ವತಂತ್ರವಾಗಿ ವಿಹರಿಸುವ ಗಿಳಿಗಳ ಗುಂಪಿನಲ್ಲಿದ್ದ ಒಂದು ಮರಿಯನ್ನು ಬಂಧಿಸಿ ಕರೆತರುತ್ತಾರೆ. ರಾಜನ ಅಳಿಯ ಇದಕ್ಕೆ ಪೋಷಕನಾಗಿ ನಿಲ್ಲುತಾನೆ. ಅದಕ್ಕಾಗಿ ಒಂದು ವೈಭವವಾದ ಪಂಜರಶಾಲೆಯ ನಿರ್ಮಾಣವಾಗುತ್ತದೆ. ರಾಜಾಜ್ಞೆಯಂತ ಗಿಳಿಮರಿಯನ್ನು ಸಕಲಶಾಸ್ತ್ರ ಪಾರಂಗತನನ್ನಾಗಿ ಮಾಡುವ ವ್ಯವಸ್ಥೆಯಾಗುತ್ತದೆ. ಗಾಯನ, ನೃತ್ಯಗಳನ್ನು ಕಲಿಸಲು ಗಾಯಕಿಯರು, ನರ್ತಕಿಯರು ನೇಮಕರಾಗುತ್ತಾರೆ, ಗಿಳಿಮರಿ ಗಿಳಿಮರಿಯೇ, ಈ ಎಲ್ಲ ಪ್ರಯತ್ನಗಳೂ ಅರ್ಥಶೂನ್ಯವಾಗುತ್ತವೆ. ಗಿಳಿಮರಿಗೆ ಇಷ್ಟೆಲ್ಲ ಕಲಿಸಲು ಪ್ರಯತ್ನಪಟ್ಟರೂ, ಅದು ಸ್ವತಂತ್ರವಾಗಿ ಹಾಡಲು, ಹಾರಾಡಲು ಮಾತ್ರ ಕಲಿಸುವುದಿಲ್ಲ ಎನ್ನುವುದೂ ನಾಟಕದಲ್ಲಿ ವ್ಯಕ್ತವಾಗಿ ಕೊನೆಗೆ ಅದನ್ನು ಕಾಡಿನಲ್ಲಿಯೇ ಬಿಟ್ಟು ಬರುತ್ತಾರೆ.

ನಾಟಕದ ಪ್ರಾರಂಭದಲ್ಲಿಯೇ ಗಿಳಿಗಳ ಗುಂಪು ಮಕ್ಕಳನ್ನು ಆಕರ್ಷಿಸುತ್ತದೆ, ಅವು ಹಾರಾಡುತ್ತಾ ಬಂದು ನೀರು ಕುಡಿಯುವುದನ್ನು (ಪಾತ್ರಗಳ ಚಲನೆಗೆ ಕಾರಂತರು ಪಿಶೇಷ ಗಮನವನ್ನು ನೀಡುತ್ತಾರೆ ಎನ್ನವುದು ಬಲು ಮುಖ್ಯ) ಕಂಡಾಗ, ರಂಗದ ಮೇಲೆಯೇ: ಪಂಜರದ ನಿರ್ಮಾಣವಾಗುತ್ತಿರುವಾಗ ಮಕ್ಕಳು ನಾಟಕದಲ್ಲಿ ತಲ್ಲೀನರಾಗಿ ಬಿಡುತ್ತಾರೆ. ಈ ದೃಷ್ಟಿಯಿಂದ ಪ್ರಯೋಗ ಎಷ್ಟು ಮುಖ್ಯ ಎನ್ನುವುದು ಅರ್ಥವಾಗುತ್ತದೆ. ಮಕ್ಕಳಿಗೆ ಆಕರ್ಷಕವಾಗಿ ಕತೆ ಹೇಳುವುದೇ ಮುಖ್ಯವಲ್ಲ, ಅದನ್ನು present ಮಾಡುವ ರೀತಿಯೂ ಅಷ್ಟೆ: ಮುಖ್ಯ ಎನ್ನುವುದನ್ನು ಈ ನಾಟಕ ತೋರಿಸಿ ಕೊಟ್ಟಿತು, ರಂಗದ ಮೇಲೆ ನಡೆಯುವ ಚಟುವಟಿಕೆಗಳು ಮಕ್ಕಳ ಕಣ್ಣಿಗೆ ಹಬ್ವವನ್ನುಂಟುಮಾಡಬೇಕು.

‘ಪಂಜರಶಾಲೆ’ಯಂತೆಯೇ ಇನ್ನೊಂದು ಗಮನಾರ್ಹವಾದ ಪ್ರಯೋಗವೆಂದರೆ “ನೀಲಿ ಕುದುರೆ’ (ಬ್ರೆಜಿಲ್ ನಾಟಕದ ಅನುವಾದ; ಅನುವಾದ ಮತ್ತು ನಿರ್ದೇಶನ: ಬಿ, ವಿ. ಕಾರಂತ), ಒಂದು ದೃಷ್ಟಿಯಿಂದ ಇಲ್ಲಿ ಕತೆಗೆ ಪ್ರಾಧಾಪ್ಯವೇ ಇಲ್ಲ, ಒಬ್ಬ ಹುಡುಗ ಪ್ರೀತಿಸುತ್ತಿದ್ದ ನೀಲಿಕುದುರೆಯನ್ನು ಅವನ ತಂದೆ ಮಾರುತ್ತಾನೆ, ಅದನ್ನು ಹುಡುಕಿಕೊಂಡು ಈ ಹುಡುಗ ಹೊರಟಾಗ ಸರ್ಕಸ್ ಕಂಪನಿಯವರು ಸಿಕ್ಕುತ್ತಾರೆ, ನೀಲಿಕುದುರೆ’ ಯೆಂದಾಗ ಅದನ್ನು ಹೇಗಾದರೂ ಪಡೆಯಬೇಕೆಂಬ ಆಸೆ ಅವರಿಗುಂಟಾಗುತ್ತದೆ. ಅವರೂ ಹುಡುಗನನ್ನು ಹಿಂಬಾಲಿಸುತ್ತಾರೆ. ಇಲ್ಲಿ ಸರ್ಕಸ್ ಕಂಪನಿಯವರ ಹಾವಭಾವಗಳು ವಿದೂಷಕ ಚಟುವಟಿಕೆಗಳು ಮಕ್ಕಳಿಗೆ ಪ್ರಿಯವಾಗುತ್ತವೆ. ‘ನೀಲಿಕಂದರೆ’ ಯ ಹುಡುಗನನ್ನು ರಂಜಿಸುವುದಕ್ಕಾಗಿ ಭಗವಾನ್ ಬಾಬಾ ಸೃಷ್ಟಿಸಿದ ಮಾಯಾಬಜಾರ್ ಮಕ್ಕಳನ್ನು ರಂಜಿಸುವ ಒಂದು ಪ್ರಮುಖ ದೃಶ್ಯ. (ಕಾರಂತರು ಕ್ಷಣಕಾಲದಲ್ಲಿ ಒಂದು ಮಾರುಕಟ್ಟೆಯನ್ನು ನಿರ್ಮಿಸುತ್ತಾರೆ.) ಇಲ್ಲಿ ಕಾರಂತರು ಉದ್ದೇಶಪೂರ್ವಕವಾಗಿಯೇ ಮಕ್ಕಳಿಗೆ ಪ್ರಿಯವಾದ ಬಣ್ಣ ಬಣ್ಣದ ಬೆಲೂನುಗಳು, ಟೇಪುಗಳು ಮೊದಲಾದುವನ್ನು ಪ್ರದರ್ಶಿಸುತ್ತಾರೆ, ಇವೆಲ್ಲವೂ ಮಕ್ಕಳ ನಾಡಿಯ ಮಿಡಿತವನ್ನು ಬಲ್ಲ ನಿರ್ದೇಶಕನ ಸೃಷ್ಟಿ.

ಈ ಎರಡು ಉದಾಹರಣೆಗಳನ್ನು ನಾನು ನೀಡಿದುದಕ್ಕೆ ಕಾರಣ ಮಕ್ಕಳ ರಂಗಮಂದಿರ ಲ್ಲಿ Visual aspects ಎಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎನ್ನುವುದನ್ನು ತೋರಿಸುವುದಕ್ಕಾಗಿ. ಮಕ್ಕಳಿಗೆ ಪಾಠ ಹೇಳುವಾಗ ಬಣ್ಣ ಬಣ್ಣದ ಚಿತ್ರಗಳ ನೆರವನ್ನು ಪಡೆಯುವಂತೆ ನಿರ್ದೇಶಕ ಹಲವು ಜೀವಂತ ಬಣ್ಣದ ಚಿತ್ರಗಳನ್ನು ಸೃಷ್ಟಿಸಬೇಕಾಗುತ್ತದೆ. ಆದರೆ ಈ ಎಲ್ಲ ಕೌಶಲಗಳೂ ನಾಟಕದಲ್ಲಿ ಬೆರೆತುಕೊಳ್ಳಲೇಬೇಕು, ಹಾಗೆ ಬೆರೆತುಕೊಳ್ಳದೆ ಪ್ರತ್ಯೇಕವಾಗಿಯೇ ಉಳಿದರೆ ಮಕ್ಕಳ ಮೇಲೆ ಅಂತಹ ಪರಿಣಾಮವೇನೂ ಆಗಲಾರದು, ‘ಜಂಬೂಸವಾರಿ’ (ನಾಟಕ : ಎ.ಎಸ್. ಮೂರ್ತಿ, ನಿರ್ದೇಶನ: ಕಾರಂತ) ಇದಕ್ಕೆ ಒಳ್ಳೆಯ ನಿದರ್ಶನ ಪ್ರಜಾಸತ್ತೆಯ ಅಣಕವನ್ನು ತೋರಿಸುವುದು ಈ ನಾಟಕದ ಉದ್ದೇಶವಾದರೂ, ನಾಟಕಕಾರರು ಹೇಳಬೇಕೆಂದಿರುವ ತತ್ವ ನಾಟಕದಲ್ಲಿ ಮಿಲನವಾಗದೆ ಕೊನೆಯಲ್ಲಿ ಆನೆಯ ಮೂಲಕ ಒಂದು ಭಾಷಣವನ್ನು ಕೊಡಿಸುತ್ತಾರೆ. ನಾನು ನೋಡಿದ ಪ್ರಯೋಗದಲ್ಲಿ, ಈ ವೇಳೆಗೆ ವಕ್ಕಳ ತಾಳ್ಮೆಯೂ ಮುಗಿದುಹೋಗಿತ್ತು. ನೀಲಿಕುದರೆ, ಪಂಜರಶಾಲೆಯಲ್ಲಿ ಕಾಣುವ ಸಮೂಹ ದೃಶ್ಯಗಳು, ಸಾಮೂಹಿಕ ಚಟುವಟಿಕೆಗಳನ್ನು ತಂದರೂ ಕೂಡ ಅವು ಏನೂ ಪರಿಣಾಮವನ್ನುಂಟು ಮಾಡಲಿಲ್ಲ. ಇದರಿಂದ ಈ ನಾಟಕವನ್ನು ಕಾರಂತರೆ ನಿರ್ದೇಶಿಸಿದರೂ, ಇದು ಕಾರಂತರ ಇತರ ಪ್ರಯೋಗಗಳ ಅನುಕರಣೆಯಾಗಿ ಕಂಡಿತು.

ಮಕ್ಕಳ ನಾಟಕವೆಂದರೆ ಮಕ್ಕಳೇ ಪಾತ್ರವಹಿಸಬೇಕೆಂದೇನೂ ಇಲ್ಲ, ಮಕ್ಕಳಿಗೆಂದೇ ರಚಿತವಾದ ನಾಟಕಗಳಲ್ಲಿ ಬರಿಯ ದೊಡ್ಡವರೇ ಪಾತ್ರವಹಿಸಬಹುದು, ಮಕ್ಕಳಿಗೆ ಎಟುಕದ ನಾಟಕಗಳಲ್ಲಿ ಮಕ್ಕಳೇ ಪಾತ್ರವಹಿಸಿದರೂ ಅವು ಮಕ್ಕಳ ನಾಟಕಗಳು ಎನ್ನಿಸಿಕೊಳ್ಳಲಾರವು. ನಾಟಕ-ಪ್ರಯೋಗಗಳ ಮೂಲಕವೇ ನನ್ನ ಮಾತುಗಳನ್ನು ಸಮರ್ಥಿಸಿಕೊಳ್ಳುವುದು ನನ್ನ ಉದ್ದೇಶವಾದ್ದರಿಂದ ಈ ಅಭಿಪ್ರಾಯಕ್ಕೆ ಕ್ರಮವಾಗಿ ಅಪಕಾರಿಯ ಕತೆ (ಹಾರ‍್ಸೆಬರೋ ಬರೆದ ಇಂಗ್ಲಿಷ್ ನಾಟಕದ ಅನುವಾದ-ಬಿ ಚಂದ್ರಶೇಖರ್, ನಿರ್ದೇಶನ : ಎಂ. ರ್ಎ, ಶ್ರೀನಿವಾಸ್) ಮತ್ತು ಅಂಚೆಮನೆ (ಠಾಕೂರರ ನಾಟಕದ ಆಧಾರದ ಮೇಲೆ ಇದನ್ನು ಬರೆದವರು ಕೆ. ವಿ ಸುಬ್ಬಣ್ಣ, ನಿರ್ದೆಶನವೂ ಅವರದೇ) ಪ್ರಯೋಗಗಳನ್ನು ಉದಾಹರಣೆಯಾಗಿ ನೀಡುತ್ತೇನೆ, ಒಬ್ಬ ವ್ಯಕ್ತಿ ಕಾಡಿನ ಭಾವಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಒಂದು ಕೋತಿ, ಒಂದು ಹುಲಿ, ಒಂದು ಹಾವು ಮತ್ತು ಒಬ್ಬ ಮನುಷ್ಯನನ್ನು ಪಾರುಮಾಡುತ್ತಾನೆ. ಮನುಷ್ಯನನ್ನು ಪಾರುಮಾಡುವುದಕ್ಕೆ ಮುಂಚೆ ‘ಅವನನ್ನು ಮಾತ್ರ ಹೊರತೆಗೆಯ ಬೇಡ, ಅವನು ಕೃತಘ್ನ’ ಎಂದು ಈ ಮೂರು ಪ್ರಾಣಿಗಳೂ ಎಚ್ಚರಿಸುತ್ತವೆ, ಆದರೆ ಆ ದಯಾಮಯಿ: ಬಾವಿಯಲ್ಲಿದ್ದ ಮನುಷ್ಯನನ್ನೂ ಹೊರತೆಗೆಯುತ್ತಾನೆ. ಆ ಪ್ರಾಣಿಗಳು ಎಚ್ಚರಿಕೆ ಕೊಟ್ಟಂತೆ ಆ ಮನುಷ್ಯನೇ ತನ್ನನ್ನು ಪಾರುಮಾಡಿದವನನ್ನು ಕೊಲೆಯ ಆಪಾದನೆಗೆ ಗುರಿಪಡಿಸುತಾನೆ, ಆ ಪ್ರಾಣಿಗಳು ಅವನನ್ನು ಪಾರುಮಾಡುತ್ತವೆ, ಇದು ಒಂದು ನೀತಿ ಕತೆ, ಶ್ರೀನಿವಾಸ್ ಪ್ರಯೋಗದಲ್ಲಿ ಈ ನಾಟಕದಲ್ಲಿ ಪಾತ್ರವಹಿಸಿದ್ದವರೆಲ್ಲಾ ದೊಡ್ಡವರೆ, ಆದರೂ ಈ ನಾಟಕ ಮಕ್ಕಳಿಗೆ ಕಡಿಮೆ ಖುಷಿ ಕೊಡಲಿಲ್ಲ. ‘ಅಂಚೆಮನೆ’ಯಲ್ಲಿ ಚಿಕ್ಕ ಚಿಕ್ಕ ಮಕ್ಕಳೇ ಪಾತ್ರವಹಿಸಿದ್ದರು. ಒಬ್ಬ ರೋಗಿ ಬಾಲಕ ಬೆಟ್ಟದಡಿಯಲ್ಲಿ, ನದಿಯ ದಡದಲ್ಲಿ ವಿಹರಿಸುವ ಕನಸು ಕಾಣುತ್ತಾ ಕಾಲ ಕಳೆಯುತ್ತಿರುತ್ತಾನೆ, ಹೊಸದಾಗಿ ಸ್ಥಾಪಿತವಾದ ಅಂಚೆಮನೆಯಿಂದ ಪತ್ರವನ್ನು ನಿರೀಕ್ಷಿಸುತ್ತಾ ಇರುತ್ತಾನೆ ಕೊನೆಗೆ ‘ಸಾವಿನ ಪತ್ರ’ ಅವನಿಗೆ ಬರುತ್ತದೆ, ಇಲ್ಲಿ ಅವನು ತೋಡಿಕೊಳ್ಳುವ ಬಯಕೆಗಳು, ಅಕಾಂಕ್ಷೆಗಳು ಮಕ್ಕಳಿಗೆ ಅರ್ಥವಾಗುವುದು ಕಷ್ಟ, ಅಂಚೆಮನೆಯ ಸಂಕೇತವಂತೂ ಅವರ ಹತ್ತಿರವೂ ಬರುವುದಿಲ್ಲ. ಆದರೆ ಸುಬ್ಬಣ್ಣನವರ ಪ್ರಯೋಗ ಸೂಕ್ಷ್ಮಸಂವೇದನೆಗಳನ್ನು ಅಭಿವ್ಯಕ್ತಗೊಳಿಸಲು ಸಮರ್ಥವಾಯಿತು, ಸದ್ದುಗದ್ದಲವಿಲ್ಲದೆ ನಾಟಕವನ್ನು ನಯವಾಗಿ ನಡೆಸಿಕೊಂಡು ಹೋದರು, ಇವೆಲ್ಲವೂ ಅರ್ಥವಾದದ್ದು ದೊಡ್ಡವರಿಗೇ ಹೊರತು ಅವರು ಕರೆದುಕೊಂಡು ಬಂದಿದ್ದ ಮಕ್ಕಳಿಗಲ್ಲ, ಇದೇ ಮಾತಿಗೆ ಇನ್ನೊಂದು ನಿದರ್ಶನ ಕುರ್ತಕೋಟಿಯವರ ‘ಆ ಮನಿ’, (ಪ್ರಯೋಗ-ರಂಗಸಂಪದ, ನಿರ್ದೆಶನ-ಪರಿಕೃಷ್ಟ).

ಕುರ್ತಕೋಟಿ ಅವರ “ಆ ಮನಿ”ಯ ಎಲ್ಲ ಪಾತ್ರಗಳೂ ಮಕ್ಕಳು, ಅವರು ಆಡುವುದ ಮಕ್ಕಳ ಆಟ, ತಾವು ನೋಡಿದ ಮದುವೆ ಆಟ ಆಡುತ್ತಾರೆ, ಸಂಜೆಯಾದಾಗ ಮನೆಗೆ ಹೋಗುತ್ತಾರೆ, ಇಷ್ಟರ ಮಟ್ಟಿಗೆ ಇದು “ಮಕ್ಕಳ ನಾಟಕ”, ಆದರೆ, ಇವರು ಆಡುವುದು ‘ಸಾವು ಮತ್ತು ಬದುಕಿನ ದುರಂತಕ್ಕೆ ಸಂಕೇತವಾದ ಆ ಮನೆಯ ಆವರಣದಲ್ಲಿ, ಮದುವೆಯ ಆಟ ಎಲ್ಲೋ ಒಂದು ಕಡೆ, ಗಂಡ-ಹೆಂಡತಿಯಾದ ಮಕ್ಕಳಿಗೆ “ಆಟ ನಿಜ* ಅನಿಸುವ ಹಂತಕ್ಕೆ ಬರುತ್ತದೆ. ಆ “ಆಟ”ದ ಮದುವೆಯ ಹಿಂದೂ ದುಃಖವಿದೆ, ಇದು ನಾಟಕದ ಹಿಂದಿನ ಧ್ವನಿ : ಸಾವು-ಬದುಕಿನ ಒಡನಾಟ, ಆಟದ ಹಿಂದಿನ ದುಃಖದ ತಾತ್ವಿಕ ಹಿನ್ನೆಲೆಯಿಂದಾಗಿ ಮಕ್ಕಳ ಆಟದ ಹುಡುಗಾಟಿಕೆಯ ಮಾತುಗಳಿಂದ ರಂಜಿಸುತ್ತಲೇ ಗಂಭೀರ ನಾಟಕವಾಗುತ್ತದೆ.

ಮಕ್ಕಳ ನಾಟಕವೆಂದ ಮಾತ್ರಕ್ಕೆ ಸರಾಗವಾಗಿ ಏಕಮುಖವಾಗಿ ಕತೆಯನ್ನು ಹೇಳಿಕೊಂಡು ಹೋಗಬೇಕೆಂದೇನೂ ಅಲ್ಲ, ಮೇಲ್ನೋಟಕ್ಕೆ ಕತೆ ಸರಳವಾಗಿರಬೇಕು, ಸಿಕ್ಕುಗಳಿಲ್ಲದಂತಿರಬೇಕು ಎನ್ನುವುದು ನಿಜ, ಆದರೆ ನಾಟಕ ಕರ್ತೃ ಇನ್ನೂ ಹೆಚ್ಚಿನ ಆಯಾಮಗಳನ್ನು ನೀಡಬಹುದು. ಪಂಜರಶಾಲೆಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಮಕ್ಕಳಿಗೆ ಅರ್ಥವಾಗುವಂತೆ ಗಿಳಿಮರಿಯ ಕತೆಯಿದೆ, ಜೊತೆಗೆ ಪ್ರಜಾಸತ್ತೆಯ ಅಣಕವೂ ಇದೆ. ನಾಟಕಕಾರ ನಾಗರಿಕರ ಎರಡು ಗುಂಪುಗಳ ಮೂಲಕ ಅದನ್ನು ಧ್ವನಿಸುವಂತೆ ಮಾಡು ತಾರೆ, ತನ್ನ ಅಸಂಖ್ಯಾತ ಪ್ರಜೆಗಳಿಗೆ ಶಿಕ್ಷಣ ಕೊಡುವುದನ್ನು ಯೋಚಿಸದೆ ಒಂದು ಗಿಳಿಮರಿಯನ್ನು, ಸಕಲವಿದ್ಯಾಪಾರಂಗತನನ್ನಾಗಿ ಮಾಡಲು ಪ್ರಯತ್ನಿಸುವುದನ್ನು ಒಂದು ಗುಂಪು ಮೂದಲಿಸುತ್ತದೆ. ಕೊನೆಗೆ ಗಿಳಿಗೆ ಏನು ಕಲಿಸಿದರೂ, ಸ್ವತಂತ್ರವಾಗಿ ಹಾರುವುದನ್ನು (ಅದು ಪ್ರಕೃತಿಸಹಜವಾಗಿ ಬರಲೇಬೇಕಾದ್ದು) ಕಲಿಸಿಲ್ಲ ಎಂದಾಗ ನಮ್ಮ ಪ್ರಜಾಸತ್ತೆಯನ್ನು ಸೂಕ್ಷ್ಮವಾಗಿ ಅಲುಗಾಡಿಸಿದಂತಾಗುತ್ತದೆ, ಇದು ಮಕ್ಕಳಿಗೆ ಅರ್ಥವಾಗದಿದ್ದರೂ ಅದರಿಂದ ತೊಂದರೆಯೇನೂ ಇಲ್ಲ, ಅವರವರ ಬೌದ್ಧಿಕ ಬೆಳವಣಿಗೆಗೆ ಅನುಗುಣವಾಗಿ ನಾಟಕ ತೃಪ್ತಿ ಕೊಡುತ್ತದೆ.

ನಾನು ಇದುವರೆಗೆ ಪ್ರಸ್ತಾಪಿಸಿದ ಯಶಸ್ವಿ ಪ್ರಯೋಗಗಳು ಅನುವಾದಗಳು ಕನ್ನಡದಲ್ಲಿ ಇತ್ತೀಚೆಗೆ ಸ್ವತಂತ್ರ ಕೃತಿಗಳು ಬಂದಿಲ್ಲವೆ ಎನ್ನುವ ಪ್ರಶ್ನೆ ಬಂದರೆ ಅದಕ್ಕೆ ಉತ್ತರ ಕೊಡುವುದು ಕಷ್ಟವೆ, ಹೊಸದಾಗಿ ಬರೆಯದಿದ್ದರೂ ನಮ್ಮ ಅನೇಕ ಜಾನಪದ ಕತೆಗಳನ್ನು ಈ ಮಾಧ್ಯಮಕ್ಕೆ ಅಳವಡಿಸಬಹುದು, ಚುದ್ರಶೇಖರ ಕಂಬಾರರು ಜಾನಪದ ರಾಜಕುಮಾರನ ಕತೆಯಂ ಧಾಟಿಯಲ್ಲಿ ‘ಕಿಟ್ಟಿಯ ಕತೆ’ಯನ್ನು ಬರೆದಿದ್ದಾರೆ, ಸೂತ್ರದ ಬೊಂಬೆಗಾಗಿ ಬರೆದದ್ದನ್ನು ಅನಂತರ ಮಕ್ಕಳ ನಾಟಕವನ್ನಾಗಿ ಅವರೇ ಪ್ರಯೋಗಿಸಿದರು, (ಪಪೆಟ್ ಲ್ಯಾಂಡ್‌ನವರು ಸೂತ್ರದ ಬೊಂಬೆಯ ಪ್ರದರ್ಶನವಿತ್ತರು). ಕಂಬಾರರ ಪ್ರಯೋಗದಲ್ಲಿ ಇನ್ನೂ ಕೆಲವು ಸುಧಾರಣೆಗಳಾಗಬೇಕು, ಕಳೆದ ವರ್ಷ ಬೆಂಗಳೂರಿನ ಬಾಲಭವನದವರು ಏರ್ಪಡಿಸಿದ್ದ ಮಕ್ಕಳ ನಾಟಕೋತ್ಸವದಲ್ಲಿ ರ್ಎ. ಎಸ್ ವೆಂಕಟರಾಂ ಅವರು ಮತಿಘಟ್ಟ ಕೃಷ್ಣಮೂರ್ತಿಯವರ `ಕಳಸಾಪುರದ ಹುಡುಗರು’ ಕಾದಂಬರಿಯ ಕೆಲವು ಭಾಗಗಳನ್ನು ನಾಟಕರೂಪಕ್ಕೆ ಅಳವಡಿಸಿ ಪ್ರಯೋಗಿಸಿದರು, ನಾಟಕ ಹಲವು ಘಟನೆಗಳ ಸಂಕಲನದಂತೆ ಕಂಡುಬಂದಿದ್ದರಿಂದ ಹೆಚ್ಚು ಪರಿಣಾಮವನ್ನುಂಟುಮಾಡಲಿಲ್ಲ. ಆದರೂ ಈ ನಾಟಕೋತ್ಸವ ಮಕ್ಕಳ ರಂಗಭೂಮಿಯ ಚಳವಳಿಗೆ ನಾಂದಿ ಹಾಕಿದೆ.

ಹೆಗ್ಗೋಡಿನ ನೀಲಕಂಠೇಶ್ವರ ನಾಟ್ಯಸೇವಾ ಸಂಘದ ಮೂಲಕ ಕೆ.ವಿ. ಸುಬ್ಬಣ್ಣನವರು ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ನಾನು ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಪಂಜರಶಾಲೆ, ನೀಲಿಕುದುರೆ, ಅಂಚೆಮನೆ ಈ ಸಂಘದ ಕೊಡುಗೆ, ಇತರ ಕಡೆಯೂ ಈ ಪ್ರವೃತ್ತಿ ಬೆಳೆದು ಮಕ್ಕಳ ಗವನ ರಂಗಭೂಮಿಯತ್ತ ಸೆಳೆಯುವಂತಾಗಬೇಕು. ಅದಕ್ಕೆ ಪೂರಕವಾಗಿ ನಮ್ಮಲ್ಲಿ ಸ್ವತಂತ್ರವಾದ ನಾಟಕಗಳೂ ಬರಬೇಕಾಗಿದೆ.

Close
By kanaja|2021-01-06T19:30:17+05:30April 27, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೧

    ಸಂಪುಟ-೩೧

Leave A Comment Cancel reply

ವಿಭಾಗಗಳು

ಹೊಸ ಅಂಕಣಗಳು

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕನ್ನಡ ಭಾಷೆ,ಸಾಹಿತ್ಯ

  • ಸಂಪುಟ-೩೪
  • ಸಂಪುಟ-೩೩
  • ಸಂಪುಟ-೩೨
  • ಸಂಪುಟ-೩೧
  • ಸಂಪುಟ-೩೦

ಕಲೆ,ಸಂಗೀತ

  • ರಂಗ ವಿಮರ್ಶೆಯ ಬೆನ್ನು ಹತ್ತಿ..
  • ರಂಗಭೂಮಿಯೊಂದೇ ಸಮತಾವಾದದ ಪ್ರತೀಕ
  • ರಂಗಭೂಮಿಯ ನಡಿಗೆ
  • ರಂಗ ಪರದೆಗಳು : ಶಬ್ದಪಾರಮಾರ್ಗಮಶಕ್ಯಂ
  • ರಂಗ ಪರದೆಗಳು : ರಂಗ ಪರದೆಗಳ ಹಿನ್ನೆಲೆ

ವಿಜ್ಞಾನ , ತಂತ್ರಜ್ಞಾನ

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕೃಷಿ ,ರೈತರ ಅನುಭವ

  • ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016
  • ಪದವಿನ್ಯಾಸ: ೧೨. ಸನಿಕೆ
  • ಪದವಿನ್ಯಾಸ: ೧೩. ಈಚು
  • ಪದವಿನ್ಯಾಸ: ೧೪. ಕಣಜ
  • ಪದವಿನ್ಯಾಸ: ೯. ಬೆಳೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2020 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕೃತ ಜಾಲತಾಣ
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - kanaja@karnataka.gov.in

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top

ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ
ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ.