Skip to content
ದೂರವಾಣಿ : | 22212487|developkanaja@gmail.com
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ-೨೬

Home/ಕನ್ನಡ/ಸಂಪುಟ-೨೬
Previous Next

ಸಂಪುಟ-೨೬

  • ಮೊನ್ನೆ ಯಾರೋ ಹೇಳಿದರು
  • ಗೂಢ
  • ಬೃಹಚ್ಚರಣರ ಭಾಷೆಯಲ್ಲಿ ಲಿಂಗ-ವಚನ ವ್ಯವಸ್ಥೆ
  • ತನ್ನವನು
  • ಪ್ರತಿಧ್ವನಿಯ ಭಾಷೆ
  • ರಾಮರಾಜ್ಯೋತ್ಸವ
  • ಜಾತ್ರೆ
  • ಶೆಕ್ಸ್ಪಿಯರ್ನ ಸಾನೆಟ್-೧೨೦ (ಅನುವಾದ)
  • ನಾಡಿನ ವಿಜಯ (ಅನುವಾದ)
  • ಗ್ರಹಣ
  • ರಾಜ್ಯೋತ್ಸವದ ದಿನದಂದು
  • ಭೈರಪ್ಪನವರ ದಾಟು: ಒಂದು ಟಿಪ್ಪಣಿ
  • ಏರ್ ಹೋಸ್ಟೆಸ್
  • ಮರಕುಟಿಗ-ವಿಮರ್ಶೆ
  • ಅಂತ್ಯ-ವಿಮರ್ಶೆ
  • ಏಕಾಂತ ರಾಮಯ್ಯನ ಅಬ್ಬಲೂರು ಶಾಸನದ ಒಂದು ಪದ್ಯ
  • ಭಾರತೀಪುರದ ರಾಜಕೀಯ-ಒಂದು ಸಮರ್ಥನೆ
  • ಮುಂದೇನ ಸಖಿ? ಮುಂದೇನ?

ಮೊನ್ನೆ ಯಾರೋ ಹೇಳಿದರು

ಮೊನ್ನೆ ಯಾರೋ ಹೇಳಿದರು,

ಎ ಕೆ ರಾಮಾನುಜನ್

ಬಿಳಿ ತಿಮಿಂಗಿಲ
(ಬಹಳ ಅಪರೂಪ)
ಹುಟ್ಟುವುದು

ಕಪ್ಪಗೆ,
ಕರಿ ಮರಿ ದಿನದಿನಕ್ಕೆ
ಮೈತೊಳೆದು
ಬಿಳಿಚಿಕೊಳ್ಳುತ್ತ

ಕಡಲುಪ್ಪಿಗೆ
ಕರಿ ತಿಮಿರು
ಕರಗಿಸುತ್ತ

ಬಿಸಿಲು ಕಾಯಿಸಿ
ಶುಕ್ರ ಕೊಬ್ಬಿಸಿ
ನೂರಡಿ ಧಾಂಡಿಗ

ನಾಗಿ ಬೆಳೆದು
ಬ್ರಹ್ಮರಂಧ್ರದಿಂದ
ಊರ್ಧ್ವರೇತಸ್ಸಿನ

ಹಾಗೆ ಇಡೀ
ಫೌಂಟನ್ನು
ಉಗುಳು

ತ್ತ ತಿಂಗಳು
ತಿಂಗಳಿಗೆ ಬೆಳ್ಳ
ಗಾಗುತ್ತಂತೆ.

ಸಾಗರ ಪಶು,
ನಮ್ಮ ನಿಮ್ಮ ಹಾಗೆ
ಹಾದು ಕೇದು

ಮರಿಹಾಕಿ ಮೋಲೆ
ಕೊಡುವ
ಹಸು.

ಏಳು ಸಮುದ್ರ
ದ ನೀರು ಕುಡಿಯುವ
ಧಡಿಯ, ಅಷ್ಟೆ.

ಆಗಲೋ ಈಗಲೋ
ಗಾಳಿಸವಾರಿಗೆಂತ
ಮೇಲೆ ಬಂದು

ಥಟ್ಟನೆ ದರ್ಶನ
ಕೊಟ್ಟು
ನೊರೆಯಲ್ಲಿ ಮಿರ‍್ರಂತ

ಮಿರುಗಿ
ಪೆಲ್‌ವಿಲ್‌ನ
ತಲೆ ತಿರುಗಿಸಿ

ಕೋರೈಸಿ
ಕತೆಯಾಗಿ
ಬೆಸ್ತರು ಬಾಯಿ

ಬಿಟ್ಟ ಪುರಾಣ
ಕ್ಕೆ ಕಾರಣ
ಈ ಶ್ವೇತಾಶ್ವ –

ತರ
ಈ ಮಹಾ
ಶ್ವೇತೆ.

ಕಣ್ಣಿದ್ದರೂ
ಮೈ ಎಲ್ಲ
ಕಿವಿ ;

ಈ ಪ್ರಪಂಚ
ದಲ್ಲಿ ನಾತವಿಲ್ಲ;
ರಸವೆಲ್ಲ

ಧ್ವನಿ.

ಇಂಥವು
ಇರುವುದು
ಇಡೀ ಏಳು ಸಮುದ್ರ

ದಲ್ಲಿ ವಾಕೋ
ಐದೋ
ಗಂಡಿಗೆ ತಕ್ಕ

ಹೆಣ್ಣು ಪ್ರತಿ
ವರುಷದ ಬೆದೆ
ಹೊತ್ತಿನಲ್ಲಿ

ಸಿಕ್ಕಿದರೆ
ಶಾಂತ
ಸಾಗರದಲ್ಲಿ

ಪ್ರಸ್ತ ತಪ್ಪಿದರೆ
ವರುಷಗಟ್ಟಲೆ
ಕಳೆದು

ಮತ್ತೆ
ಅಟ್ಲಾಂಟಿಕ್ಕಿನಲ್ಲೊ
ಆಫ್ರಿಕದ

ದಕ್ಷಿಣ ದಿಕ್ಕಿನಲ್ಲೊ
ಅದೃಷ್ಟ ಇದ್ದರೆ
ಈ ನೀರಾನೆಗೆ

ಪಾತಾಳದಲ್ಲಿ
ಪ್ರಣಯಸುಖ
ಗಜಗರ್ಭ

ಎರಡಡಿಯ
ಕರಿಯ
ಮರಿ.

ಮಲಗಿದರೆ
ಜಂಬೂದ್ವೀಪ
ಸತ್ತು ತೇಲಿ
ದಡಕ್ಕೆ ಬಿದ್ದರೆ

ಸಿಕ್ಕಿದವರಿಗೆ
ಸೂರೆ ಟನ್ನು

ಗಟ್ಟಲೆ ಕೊಬ್ಬು ಎಣ್ಣೆ
ಲಾರಿಗಟ್ಟಲೆ
ಮಾಂಸ
ಹೊಟ್ಟೆ ಕಿಸುರು ಕಿಲುಬು

ಕೂಡ ಶ್ರೀಗಂಧ
ಪಾರಿಸಿಗೆ ರಫ್ತು

ಬಾಲಲೀಲೆ
ಮಾತ್ರ

ದೋಣಿಗಳಿಗೆ
ಬಲು ಅಪಾಯ.
ಇದನ್ನೇ ಹಳಬರು
ಮತ್ಸ್ಯಾವತಾರ

ಮತ್ಸ್ಯಾವತಾರ
ಅಂದಿರಬೇಕು.

Close

ಗೂಢ

ಗೂಢ

ಗಂಗಾಧರ ಚಿತ್ತಾಲ

ನಿನ್ನೆ ಮೊನ್ನೆಯ ವರೆಗೆ ಎಲ್ಲ ಸುಲಭ ಸಲೀಸು
ಸ್ವೈರ ಸ್ವಚ್ಛಂದ ಗತಿ, ಹೆಜ್ಜೆ ಹೆಜ್ಜೆಗೆ ಸೊಗಸು
ಮನ ಬಂದ ಕಡೆ ತಿರುಗಿ ತುಡಿದ ಅಶ್ವಾರೋಹಿ
ಸಡಗರದ ನಡಿಗೆ ಗತ್ತಿನಲಿ ಮೈಮರೆತಿದ್ದ
ತಾನು ಯಾರೆಂಬರಿವ.

ಇಂದು ತತ್ತರಿಸಿ ಮುಗ್ಗರಿಸೆ ಕಂಡಿದ್ದಾನೆ
ಹೊರೆ ಹೊತ್ತ ಮೂಕ ಪಶು ತಾನೆ, ಸ್ವಾರನು ತಾನೆ.
ಬಡಪಾಯಿ ಕುದುರೆಗೋ ಆವರಿಸುತಿರೆ ಬೇನೆ
ಉತ್ತುಂಗ ಆರೂಢ
ನಾಗಿ ಮೆರೆದವನೀಗ
ಕುಗ್ಗಿ ಆಗಿದ್ದಾನೆ
ತಡವಿ ಎಡವಿ ತಡಕುವ ಎಬಡ
ಗತಿ ಮೂಢ-ಮತಿಮೂಢ.

ಅರರೆ ಸುಡುವೀ ಗೂಢ
ಹೊತ್ತು ತೊಳಲುವದೊಂದೆ ಗತಿಯಾಯ್ತೆ ಜೀವನಿಗೆ ?
ಎತ್ತಿ ಹಿಡಿವಂಥಾದ್ದೆ ಕೆಳಗೊತ್ತಿ ಕೆಡವುತಿದೆ.
ಈ ವಿಪತ್ತಿನಲಿ ಮೊರೆಯಿಡಲಾವ ದೇವನಿಗೆ ?
.

Close

ಬೃಹಚ್ಚರಣರ ಭಾಷೆಯಲ್ಲಿ ಲಿಂಗ-ವಚನ ವ್ಯವಸ್ಥೆ

ಬೃಹಚ್ಚರಣರ ಭಾಷೆಯಲ್ಲಿ ಲಿಂಗ-ವಚನ ವ್ಯವಸ್ಥೆ

ಕೆ ಎಸ್ ಮಧುಸೂದನ

ಬೃಹಚ್ಚರಣರು ಬಳಸುವ ‘ಕ್ಷುಲ್ಲಕ ಭಾಷೆ’ ಒಂದು ದ್ರಾವಿಡ ಭಾಷೆ. ಈ ಭಾಷೆಯಲ್ಲಿನ ಲಿಂಗ-ವಚನ ವ್ಯವಸ್ಥೆಯನ್ನು ಸ್ಫೂಲವಾಗಿ ಗಮನಿಸುವುದೇ ಈ ಟಿಪ್ಪಣಿಯ ಉದ್ದೇಶ.

ಎ ಎಲ್ಲ ದ್ರಾವಿಡ ಭಾಷೆಗಳಲ್ಲಿರುವಂತೆ, ಈ ಭಾಷೆಯಲ್ಲೂ ವಚನವನ್ನು ಸೂಚಿಸುವ ಪ್ರತ್ಯಯಗಳೇ ಲಿಂಗವನ್ನೂ ಸೂಚಿಸುತ್ತವೆ. ದ್ವಿವಚನ ಎಂಬ ಹಳಗನ್ನಡದಲ್ಲಿ ಸೂಚಿತವಾಗಿರುವ ಸಂಸ್ಕೃತದ ವಚನ ಇಲ್ಲಿ ಇಲ್ಲ.
ಬಿ-ಮಾರು, -ಅರು,-ಆಕು,-ಗು, -೦ಗು, -ಗಿ ಎಂಬ ಬಹುವಚನ ಪ್ರತ್ಯಯಗಳು ಏಕವಚನ ರೂಪದ ನಾಮಪ್ರಕೃತಿಗಳಿಗೆ ಸೇರಿ ಬಹುವಚನ ಶಬ್ದರೂಪಗಳನ್ನು ಸಾಧಿಸುತ್ತವೆ.

ಟಿಪ್ಪಣಿ :
1 ಕರ್ನಾಟಕ ರಾಜ್ಯದಲ್ಲಿ ಕೆಲವೆಡೆ ನೆಲೆಸಿರುವ ಸ್ಮಾರ್ತ ಐಯ್ಯರ್ (Iyer) ವರ್ಗದ ಮಂಜಿಪುತ್ತೂರ್ ಬೃಹಚ್ಚರಣ (»ಬ್ರಹದಾಚರಣ) ಬ್ರಾಹ್ಮಣರು ಮಾತಾಡುವ ಭಾಷೆ ಈ ಲೇಖನದಲ್ಲಿ ವಿವಕ್ಷಿತವಾದ್ದು.
2 ಡಾ|| ಬಿ. ಜಿ. ಎಲ್. ಸ್ವಾಮಿ ಅವರ ‘ಕಾಲೇಜು ರಂಗ’ದಲ್ಲಿ ಈ ಭಾಷೆಯ ಎರಡು ವಾಕ್ಯವಿದೆ.

ಏಕವಚನ ಬಹುವಚನ
ಎ)-ಅರು ಮನ್ಚು (ಮನುಷ್ಯ) ಮನ್ಚುರು (ಮನುಷ್ಯರು)
(= ಅನುನಾಸಿಕೀಕರಣ ಚಿಹ್ನೆ)
ಬಿ)-ಆಕು ಪಸ್ಲು (ಮಗು) ಪಸಾಕು (ಮಕ್ಕಳು)
ಹೈದಕ್ಕು
ಪುರುಷು (ಪುರುಷ) ಪುರುಷಾಕು (ಪುರುಷರು)

ಸಿ)-ಗು ಪಶುವು (ಹಸು) ಪಶುವುಗು (ಹಸುಗಳು)
ಪೂರ್ಲು (ಬಟ್ಟೆ ) ಪೂರ್ಲುಗು (ಬಟ್ಟೆಗಳು)
ವಾಸ್ಲು (ಬಾಗಿಲು) ವಾಸ್ಲುಗು (ಬಾಗಿಲುಗಳು)
ಪಾಂಬು (ಹಾವು) ಪಾಂಬುಗು (ಹಾವುಗಳು)

ಡಿ)-ಗಿ. ಚೆಡಿ (ಗಿಡ) ಚಡಿಗಿ (ಗಿಡಗಳು)
ಪೆರಿಚಾಳಿ (ಇಲಿ) ಪೆರಿಚಾಳಿಗಿ (ಇಲಿಗಳು)
ತಲೆ (ತಲೆ) ತಲೆಗಿ (ತಲೆಗಳು)

ಇ)-೦ಗು ಮರು (ಮರ) ಮರುಂಗು (ಮರಗಳು)
ವಾಟಮು (ರೊಟ್ಟಿ) ವಾಟಮುಂಗು (ರೊಟ್ಟಿಗಳು)
(ಬಹುವಚನದ : ಕೆ ಅಪರೂಪ)
ಪುಸ್ತಕು (ಪುಸ್ತಕ) ಪುಸ್ತಕುಂಗು (ಪುಸ್ತಕಗಳು)

ಎಫ್)-ಮಾರು ತಂಬಿ (ತಮ್ಮ) ತಂಬಿಮಾರು (ತಮ್ಮಂದಿರು)
ಅಕ್ಕು (ಅಕ್ಕ) ಅಕ್ಕುಮಾರು (ಅಕ್ಕಂದಿರು)
ಅಣ್ಣು (ಅಣ್ಣ) ಅಣ್ಣುಮಾರು (ಅಣ್ಣಂದಿರು)
ಅತ್ತಂಬಿ (ಭಾವ) ಅತ್ತಂಬಿಮಾರು (ಭಾವಂದಿರು)
ಸಿ ದ್ರಾವಿಡ ಭಾಷೆಗಳಲ್ಲಿ ಈ ಕೆಳಕಂಡ ರೀತಿಯಲ್ಲಿ ಲಿಂಗವಿವಕ್ಷೆ ಇದೆ :

೧ ಮೇಲು ಜಾತಿಯಲ್ಲಿ (ಮಹತ್, Rational) ಏಕವಚನದಲ್ಲಿ ಮಾತ್ರ ಪುಲ್ಲಿಂಗ, ಸ್ತ್ರೀಲಿಂಗಗಳ ವಿಭಜನೆ. ಬಹುವಚನದಲ್ಲಿ ಲಿಂಗ ವಿವಕ್ಷೆ ಇಲ್ಲ.
೨ ಕೀಳು ಜಾತಿಯಲ್ಲಿ (ಅಮಹತ್, Irrational) ಯಾವುದೇ ವಚನದಲ್ಲಿದ್ದರೂ ನಪುಂಸಕಲಿಂಗವೆಂಬ ಪರಿಗಣನೆ.

ಬೃಹಚ್ಚರಣರ ಭಾಷೆಯಲ್ಲೂ ಹೆಚ್ಚುಕಮ್ಮಿ ಈ ರೀತಿಯ ವ್ಯವಸ್ಥೆಯೇ ಇದೆ. ಉದಾಹರಣೆಗಳ ಮೂಲಕ ಇದನ್ನು ಗಮನಿಸಬಹುದು.

೧ ಎ) ಅವು ವಂದೊ (=ಅವನು ಬಂದನು) ಇಲ್ಲಿ, ಅವು
(=ಅವನು) ಶಬ್ದರೂಪ ಏಕವಚನ, ಪುಲ್ಲಿಂಗವನ್ನು ಸೂಚಿಸುತ್ತದೆ.

ಹಾಗೆಯೇ, ವಂದೊ (=ಬಂದನು) ಎಂಬ ಕ್ರಿಯಾಪದದಲ್ಲಿನ ಆಖ್ಯಾತ ಪ್ರತ್ಯಯವು ಏಕವಚನ ಹಾಗೂ ಪುಲ್ಲಿಂಗವನ್ನು ಸೂಚಿಸುತ್ತದೆ.
ಬಿ) ಅವು ವಂದ (=ಅವಳು ಬಂದರು. ವಾಕ್ಯದ ರೂಪ ; ಅವಳು
ಬಂದಳು ಎಂಬರ್ಥ)
ಇಲ್ಲಿ, ಅವು (=ಅವಳು), ಈ ಶಬ್ದರೂಪ ಏಕವಚನ, ಸ್ತ್ರೀಲಿಂಗವನ್ನು ಸೂಚಿಸುತ್ತದೆ.
ಈ ಸ್ತ್ರೀಲಿಂಗ ಏಕವಚನ ರೂಪದ ಜತೆಗೆ ವಾಕ್ಯದಲ್ಲಿ ಬಂದಿರುವ ಕ್ರಿಯಾಪದದ ಆಖ್ಯಾತ ಪ್ರತ್ಯಯವೂ ಸ್ತ್ರೀಲಿಂಗ, ಏಕವಚನವನ್ನು ಸೂಚಿಸಬೇಕಾಗಿತ್ತು. ಆದರೆ ಅದು ಯಾವುದೇ ಲಿಂಗವನ್ನೂ ಸೂಚಿಸುವುದಿಲ್ಲ ; ಅಷ್ಟೇ ಅಲ್ಲ ಏಕವಚನವನ್ನು ಸೂಚಿಸದೆ ಬಹುವಚನವನ್ನು ಸೂಚಿಸಿದೆ. ಇದು ಈ ಭಾಷೆಯ ಒಂದು ವೈಶಿಷ್ಟ್ಯ ಎಂದು ಹೇಳಬಹುದು. ಇದನ್ನು ಇನ್ನೂ ಕೆಲವು ಉದಾಹರಣೆಗಳ ಮೂಲಕ ಖಚಿತಪಡಿಸಿಕೊಳ್ಳಬಹುದು.

ಅವು ತಿನ್ನಾಕ್ರ (=ಅವಳು ತಿನ್ನುತ್ತಾರೆ)
ಅವು ಓಡಾಕ್ರ (=ಅವಳು ಓಡುತ್ತಾರೆ)
ಇವು ಅಳಾಕ್ರ (=ಇವಳು ಅಳುತ್ತಾರೆ)
ಅಂದ್ ಪಣ್ಣು ಚಿರಿಯಾಕ್ರ (=ಆ ಹುಡುಗಿ ನಗುತ್ತಾರೆ)

ಈ ರೀತಿಯು ಇತರ ದ್ರಾವಿಡ ಭಾಷೆಗಳಲ್ಲಿ ಕಂಡು ಬರುವುದಿಲ್ಲ. ಆದ್ದರಿಂದಲೇ “ಬೃಹಚ್ಚರಣರ ಭಾಷೆಯಲ್ಲೂ ಹೆಚ್ಚೂಕಮ್ಮಿ ಈ ರೀತಿಯ ವ್ಯವಸ್ಥೆಯೇ ಇದೆ’
ಎಂದು ಹೇಳಿರುವುದು.
ಸಿ) ಅವ ವಂದ (=ಅವರು ಬಂದರು)
ಇದು ಮೇಲು ಜಾತಿ, ಬಹುವಚನವಾದ್ದರಿಂದ ಲಿಂಗವಿವಕ್ಷೆ ಇಲ್ಲ.
2 (ಎ) ಅದು ವಂತು (=ಅದು ಬಂದಿತು)
ಅದು-ಏಕವಚನ
“ವಂತು’ ಕ್ರಿಯಾಪದದಲ್ಲಿನ ಆಖ್ಯಾತ ಪ್ರತ್ಯಯ } ನಪುಂಸಕಲಿಂಗ
ಏಕವಚನ ಸೂಚಕ

(ಬಿ) ಅವಿಗಿ ವಂತು (= ಅವು ಬಂದಿತು. ವಾಕ್ಯದ ರೂಪ ; ಅವು ಬಂದವು ಎಂಬರ್ಥ)

ಅವಿಗಿ- ಬಹುವಚನ
“ವಂತು’ ಕ್ರಿಯಾಪದದಲ್ಲಿನ ಆಖ್ಯಾತ ಪ್ರತ್ಯಯ } ನಪುಂಸಕಲಿಂಗ
ಏಕವಚನ ಸೂಚಕ
.

Close

ತನ್ನವನು

ತನ್ನವನು

ರಾಘವ ಜವಳಿ

ಜನರಲ್ ಆಸ್ಪತ್ರೆಯ ನಿಸ್ತೇಜ ಬಿಳಿಯ ಗೋಡೆಗಳ ಕಟ್ಟಡದ ಬಳಿ ಗಾಡಿ ಬಂದು ನಿಂತಾಗ, ಎತ್ತಿನ ಕೊರಳಿನ ಗಂಟೆಯ ಶಬ್ದ ನಿಂತಿತು. ಗಾಡಿಯಲ್ಲಿ ಹಳೆಯ ಕಂಬಳಿಯೊಳಗಿದ್ದ ಮುದುಕ ರೋಗಿ, ಮುಸುಕು ಸರಿಸಿ ಇನ್ನು ಮಲಗುವ ಹಾಗಿಲ್ಲವೆನ್ನುವಂತೆ ಮೈ ನೆಟ್ಟಗೆ ಮಾಡಿ ಏಳುವ ಪ್ರಯತ್ನ ಮಾಡಿದ. ಗಾಡಿ ನಿಲ್ಲಿಸಿದ ಹುಡುಗ ಎತ್ತಿನ ಕೊರಳು ಬಿಚ್ಚಿ ಎರಡು ಎತ್ತುಗಳನ್ನೂ ಒಂದೇ ಕಡೆಗೆ ಎಬ್ಬಿ, ಓರೆಗಣ್ಣಿನಿಂದ ರೋಗಿ ಎದ್ದನೋ ಇಲ್ಲವೋ ನೋಡಿ, ಆಲುಗುತ್ತಿದ್ದುದು ತಿಳಿದು, ತನ್ನ ಕೆಲಸದಲ್ಲಿ ಮುತುವರ್ಜಿ ವಹಿಸಿದ. ಹುಲ್ಲು ತೆಗೆದು ಎತ್ತು ಕಟ್ಟಿದಲ್ಲಿ ಹಾಕಿ ಒಂದು ಎತ್ತಿನ ಕತ್ತಿನಲ್ಲಿದ್ದ “ಉಣ್ಣಿ” ಯನ್ನು ಕಿತ್ತು ಬಿಸಾಕಿ, ತುರಿಸಿ, ಅದರ ಮುಸುಡಿ ಮೋಡಿ, ಬೆನ್ನು ಚಪ್ಪರಿಸಿ ಬಿಟ್ಟ. ಗಾಡಿಯ ಕೀಲು ಕಿತ್ತು ಅಲ್ಲೇ ಗಾಡಿಯಲ್ಲಿ ತೂಗುಹಾಕಿದ್ದ ಹಳೆಯ ಡಬ್ಬದಿಂದ ದಪ್ಪ ಕಪ್ಪು ಎಣ್ಣೆಯನ್ನು ಅಚ್ಚಿಗೂ ಕೀಲಿಗೂ ಸವರಿ ಕೀಲು ಹಾಕಿದ. ತೂಗುಬಿದ್ದಿದ್ದ ಅಚ್ಚಿನ ಹಗ್ಗವನ್ನು ಬಿಗಿದ. ಇಷ್ಟು ಹೊತ್ತಿಗೆ ಮುದುಕ ಎದ್ದು ಕಾಲು ನೆಲಕ್ಕೆ ಊರುವ ಅಸ್ಥಿರ ಪ್ರಯತ್ನ ಮಾಡುತ್ತಿದ್ದ. ಹುಲ್ಲು ತಿನ್ನಲು ಬಂದ ಬೇರೆ ದನವನ್ನು ಓಡಿಸುವ ನೆಪಮಾಡಿ ಹುಡುಗ ಆ ಕಡೆ ಹೋದಾಗ ಮುದುಕ ಹೆಜ್ಜೆ ಹಾಕಿ ಔಟ್‌ಪೇಷಂಟ್ ವಾರ್ಡ್ ಕಡೆಗೆ ನಡೆದ. ಗಾಡಿ ಬಂದದ್ದನ್ನು ಕುಕ್ಕುರುಗಾಲಿನಲ್ಲಿ ಕುಳಿತು ನಿರುಕಿಸುತ್ತಿದ್ದ ಇನ್ನೊಬ್ಬ ರೋಗಿ, ಗಾಡಿಯೊಳಗಿನ ಪ್ರಾಣಿ ಯಾವ ಕಾಹಿಲೆಯದು, ಓಡಾಡುವುದೋ, ಹೊರಬೇಕೋ, ಎನ್ನುವ ಕುತೂಹಲದಿಂದ ಕುಳಿತಲ್ಲೇ ಕತ್ತು ಚಾಚಿ ನೋಡು‍ತ್ತಿದ್ದ. ಹಳೆಯ ಕಂಬಳಿ ಮುದುಕನ ಹೆಗಲ ಮೇಲಿಂದ ಜೋತುಬಿದ್ದು, ಹಿಂದೆ ನೆಲವನ್ನು ಗುಡಿಸುತ್ತಿತ್ತು. ಎರಡು ಹೆಜ್ಜೆ ಹಾಕಿದ ಮುದುಕನಿಗೆ ನಂತರ ಇದು ತಿಳಿದು, ಮತ್ತೆ ಬಂದು ಅದನ್ನು ಗಾಡಿಯ ಮೇಲೆ ಚೆಲ್ಲಿ ತಲೆಗೆ ಸುತ್ತಿಕೊಂಡಿದ್ದ ಕೊಳಕು ಬಟ್ಟೆ ಯನ್ನು ಸುತ್ತ ಕಿವಿಗೂ ಮುಚ್ಚಿ, ಕುತ್ತಿಗೆಗೂ ಒಂದು ಸುತ್ತು ಬರಿಸುವ ಪ್ರಯತ್ನ ಮಾಡುತ್ತ ಮತ್ತೆ ಹೆಜ್ಜೆ ಹಾಕಿದಾಗ ಕಟ್ಟೆಯ ಮೇಲೆ ಕುಕ್ಕರಗಾಲಿನಲ್ಲಿ ಕುಳಿತಿದ್ದ ರೋಗಿ, ಮುದುಕ ರೋಗಿಯಲ್ಲಿ ಮೊದಲಿನ ಆಸಕ್ತಿ ಕಳೆದುಕೊಂಡು ತನ್ನ ಎರಡೂ ಕಾಲಿನ ಕಜ್ಜಿಯನ್ನೇ ದಿಟ್ಟಿಸುತ್ತಾ ಅದರ ಸುತ್ತ ಕೆರೆದುಕೊಳ್ಳಲಾರಂಭಿಸಿದ. ಔಟ್ ಪೇಷಂಟ್ ವಾರ್ಡಿನ ಮೆಟ್ಟಲಿಗೆ ಇನ್ನು ನಾಲ್ಕು ಹೆಜ್ಜೆ ಇರುವಾಗ ಮುದುಕನ ಕಿವಿಯಲ್ಲಿ ಏನೋ ಸಪ್ಪಳವಾಗಿ ಪಕ್ಕಕ್ಕೆ ತಿರುಗಿದಾಗ, ಗಕ್ಕನೆ ನಿಂತ ಕಾರಿನ ಮೈ ನೋಡಿ ಭೂತ ಕಂಡಂತಾಯಿತು. ಯಾವ ಕಡೆಗೆ ಹೋಗಬೇಕೆಂದು ತಿಳಿಯದಿದ್ದಾಗ ಕಾರಿನ ಕಿಂಡಿಯಿಂದ ತಲೆಯೊಂದು ಹೊರಬಂದು ಏನೋ ಹೇಳಿ ಕಿಸಕ್ಕನೇ ನಕ್ಕದ್ದು ಕಂಡಿತು. ಎಡಕ್ಕೆ ಎರಡು ಹೆಜ್ಜೆ ಹಾಕಿದಾಗ ಕಾರು ಮುಂದೆ ಹೋಗಿ ಮೆಟ್ಟಲಿಗೆ ತಾಗುವಂತೆ ನಿಂತಾಗ ತಾನು ಪಕ್ಕಕ್ಕೆ ಸರಿಯದ್ದಕ್ಕೆ ಹಲ್ಲು ಕಿಸಿದದ್ದು ಎಂದು ತಿಳಿಯಿತು. ಕಾರಿನಿಂದ ಗರ್ಭಿಣಿ ಹೆಂಗಸೊಬ್ಬಳು ಇಳಿಯುತ್ತಿರುವಾಗ ಅದರ ಪಕ್ಕದಲ್ಲಿ ಎಡೆಮಾಡಿಕೊಂಡು ಕಟ್ಟೆಹತ್ತಿ ಒಂದುಕಡೆ ಕುಳಿತು ಉಳಿದ ರೋಗಿಗಳ ಗುಂಪಿನಲ್ಲಿ ಸೇರಿಬಿಟ್ಟ. ಔಷಧಿ ವಾಸನೆ ಜೊತೆಗೇ ಮತ್ತೇನೋ ಬಂತೆಂದು ಪಕ್ಕದಲ್ಲಿ ನೋಡಿದಾಗ, ಉಬ್ಬಿದ ಕುತ್ತಿಗೆಗೆ ಹಳೆಯ ಬಟ್ಟೆ ಸುತ್ತಿದ್ದ ರೋಗಿ ನಿಸ್ತೇಜ ಕಣ್ಣುಗಳಿಂದ ಇವನ ಕಡೆಗೇ ನೋಡಿದ. ಸಂಭಾಷಣೆ ಪ್ರಾರಂಭವಾಯಿತು-
ಮುದುಕ : ಏನು ಹುಷಾರಿಲ್ಲ ?
ಕ್ಯಾನ್ಸರ್ ರೋಗಿ : ಕುತ್ತಿಗೆಯಲ್ಲಿ ಒಂದು ಬಾವು ಎದ್ದು ಮಾರಾಯ್ರೇ ಸಾಕಾಗಿ ಹೋಯ್ತು. ಎಲ್ಲೆಲ್ಲೆಲ್ಲಾ ಔಷಧಿ ಆಯ್ತು. ಇನ್ನು ಇವರದ್ದೊಂದು ನೋಡಬೇಕು. ಹೆಂಗಂತೆ ಡಾಕ್ಟ್ರು, ನಿಮಗೇನಾದ್ರೂ ಗೊತ್ತಾ ?
ಮುದುಕ : ನಾನೂ ಇವತ್ತೇ ಮೊದ್ದು ಬಂದಿದ್ದು. ಕೈ ಗುಣ ಒಳ್ಳೇದು ಅಂತಾರಪ್ಪ. ಡಾಕ್ಟ್ರು ಬಂದಿಲ್ಲಾ, ಇನ್ನೂ ?

ಕುತ್ತಿಗೆಗೆ ಬಟ್ಟೆ ಸುತ್ತಿಕೊಂಡವನಿಗೆ ಮಾತನಾಡಲು ತೊಂದರೆಯಾಗುತ್ತಿತ್ತು. ನಿಮಿಷಕ್ಕೆ ಮೂರು ಸಲ ಗಂಟಲು ಸರಿಮಾಡಿಕೊಂಡರೂ ಮಾತು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಬೇಡವೆಂದರೂ ಕೇಳದೇ ಆತ ಕುತ್ತಿಗೆ ಬಟ್ಟೆ ಬಿಚ್ಚಿ ತೋರಿಸಿದಾಗ, ಮುದುಕ ವಾಸನೆಯ
ಮೂಲವಾದ ಕೀವು ಒಸರುತ್ತಿದ್ದ ಬಾವು – ಅದರ ಕಪ್ಪು ಬಿಳುಪು ಕೊಳೆತ ಮಾಂಸ ಚರ್ಮ ನೋಡಿ ಮುಖ ತಿರುಗಿಸಿದ. ಮತ್ತೆ ಆತ ಗಂಟಲು ಸರಿಮಾಡಿಕೊಂಡು “ನಿಮಗೇನು ಹುಷಾರಿಲ್ಲ ? ಯಾವ ಊರಾತು ? ಗಾಡಿ ಹೊಡೆದ ಹುಡುಗ ಯಾರು ?” ಎಂದು ಕೇಳುತ್ತಿದ್ದವನು ಡಾಕ್ಟ್ರು ಬಂದಿದ್ದು ನೋಡಿ ರೋಗಿಗಳ ಗುಂಪು ಒಳಗೆ ನುಗ್ಗುವುದು ಕಂಡು ತಾನೂ ಧಾವಿಸಿದ. ಮುದುಕ ಆತನ ಪ್ರಶ್ನೆಗೆ ಕೊಡಬೇಕೆಂದಿದ್ದ ಉತ್ತರ ಕೇಳಲು ಅಲ್ಲಿ ಆತನಿರಲಿಲ್ಲ. ಮುದುಕ ಎದ್ದು ಹೋಗುವುದೇ, ಗುಂಪಿನಲ್ಲಿ ತಾನು ಕಾಯುತ್ತ ನಿಂತಿರಲು ಸಾಧ್ಯವೇ, ಸ್ವಲ್ಪ ಹೊತ್ತು ಹೋದರೆ ಡಾಕ್ಟ್ರು ಹೊರಟು ಬಿಟ್ಟರೆ ಎಂದು ಯೋಚಿಸುವಾಗ ಗಾಡಿ ಹೊಡೆದಿದ್ದ ಹುಡುಗ ಬಂದು, ‘ಅಜ್ಞಾ, ಎತ್ತಿಗೆ ಹಲ್ಲೆ ಕಟ್ಟಸಿ ಬತ್ತೀನಿ, ಆಯ್ತಾ, ವಾರ್ಡಿಗೆ ಸೇರಬೇಕು ಅಂದ್ರೆ ಸೇರು ಆಯ್ತಾ’ ಎಂದು ಉತ್ತರಕ್ಕೆ ಸ್ವಲ್ಪ ಕಾದಂತೆ ಮಾಡಿ ಮೆಲ್ಲಗೆ ಜಾರಿದೆ.
ಗುಂಪು ಸ್ವಲ್ಪ ತೆಳುವಾದಾಗ ಮುದುಕನೆದ್ದು ಸ್ವಲ್ಪ ನಿಂತು ನಂತರ ಸರದಿ ಬಂದಾಗ ಡಾಕ್ಟರ ಎದುರಿಗೆ ಬಂದು ನಾಲಿಗೆ ತೋರಿಸು ಎಂದಾಗ ತೋರಿಸಿ, ಕಣ್ಣು ಪರೀಕ್ಷೆ ಮಾಡುವಾಗ ಪಿಳಿಪಿಳಿ ಕಣ್ಣು ಬಿಟ್ಟು, ನಾಡಿ ನೋಡುವಾಗ ಯಾವಾಗ ವಾರ್ಡಿಗೆ ಸೇರಲು ಹೇಳುತ್ತಾರೆಂದು ಕಾದ. ವಯಸ್ಸು, ಹೆಸರು ಕೇಳಿ ಚೀಟಿ ಬರೆಯುವಾಗ ‘ವಾರ್ಡಿಗೆ’ ಎಂದ. ಡಾಕ್ಟರು ತಲೆ ಎತ್ತಿ ‘ವಾರ್ಡಿಗೆ ಯಾಕೆ ? ಮನೇಲಿ ಸ್ವಲ್ಪ ರೆಸ್ಟ್ ತಗೋ, ಯಾಕೆ ಮನೇಲಿ ಯಾರೂ ಇಲ್ಲವೇ ನೋಡಿಕೊಳ್ಳೋಕೆ’ ಎಂದರು.
ಮುದುಕ ಏನು ಉತ್ತರ ಕೊಡುವುದು ಎಂದು ಯೋಚಿಸಿದ.
ಯಾರಿದ್ದಾರೆ ಮನೆಯಲ್ಲಿ ಎಂದು ಉತ್ತರಕ್ಕೆ ಅವಸರಿಸಿದಾಗ ‘ಯಾರಿದ್ದಾರೆ’ ಎಂದು ಪುನರುಚ್ಚರಿಸಿದ. ಡಾಕ್ಟರು, “ನನ್ನ ಕೇಳಿದರೆ ? ನಿನ್ನ ಸಂಬಂಧಿಕರು ಯಾರು ಅಂತ ನೀನು ಹೇಳಬೇಕಲ್ಲಾ, ಅಜ್ಜಾ ?’ ಎಂದು ಸ್ವಲ್ಪ ನಕ್ಕಾಗ, ಹಿಂದೆ ಬಾಟ್ಲಿ ಹಿಡಿದು ನಿಂತಿದ್ದ ಮತ್ತೊಬ್ಬ ದೊಡ್ಡದಾಗಿ ನಕ್ಕು, ಡಾಕ್ಟರು ನೋಡಿದಾಗ, ಅದರಿಂದಲೇ ಡಾಕ್ಟರ ಸಹಾನುಭೂತಿ ತನ್ನ ಕಡೆಗೆ ಬಂದಿತೆಂದು ಭಾವಿಸಿ, ಬಾಟಲಿಯನ್ನು ಮುಂದೆ ಚಾಚಿ ಮುದುಕನನ್ನು ಬದಿಗೆ ಸರಿಸಿ, ಮುಂದೆ ಬಂದುಬಿಟ್ಟ. ಮುದುಕ ಚೀಟಿ ಹಿಡಿದು ಹೊರಬಂದ.
ಚೀಟಿ ತೋರಿಸಿ, ಔಷಧಿ ಪಡಕೊಳ್ಳುವುದು ಎಲ್ಲೆಂದು ಜಾಗ ತಿಳಿದು ಹೋಗಿ, “ಇಲ್ಲಿ ಅಲ್ಲ-ಹಾಗೆ ಬಲಕ್ಕೆ ತಿರುಗಿ ಮುಂದೆ ಹೋಗಿ’ ಎಂದಲ್ಲೆಲ್ಲಾ ತಿರುಗಿ ಮತ್ತೊಂದು ಗುಂಪು ನೋಡಿ, ಅಲ್ಲಿ ಕಾದು ನಿಂತು, ಔಷಧಿ ಪಡೆದು ಮತ್ತೆ ಗಾಡಿಯ ಬಳಿ ಬಂದು ಹುಡುಗ ಬರುವುದನ್ನೇ ಕಾಯುತ್ತ ಕುಳಿತ. ಮೂತ್ರಶಂಕೆಗೆಂದು ಸ್ವಲ್ಪ ದೂರದ ನೇರಿಳೇ ಮರದ ಬುಡದಲ್ಲಿ ಕುಳಿತು, ಎದ್ದು, ಬಟ್ಟೆ ಸರಿಮಾಡಿಕೊಳ್ಳುತ್ತಿದ್ದಾಗ ಆ ಘಟನೆ ನಡೆಯಿತು. ಸ್ವಲ್ಪ ಛಳಿಯೆನಿಸಿ ಹೆಗಲ ಮೇಲೆ ಕಂಬಳಿ ಹಾಕಿಕೊಂಡದ್ದು ಆಗ.
ಸಿಂಧೀ ದನ ಒಂದು, ಎಲ್ಲಿತ್ತೋ, ಯಾರು ರೇಗಿಸಿದರೋ, ಯಾರು ಓಡಿಸಿದರೋ, ಬಂದು, ಹಿಂದಿನಿಂದ ಮುದುಕನನ್ನು ಗುದ್ದಿಬಿಟ್ಟಿತು. ಒಂದು ಜೋಕಾಲಿ. ಮುದುಕ ನನ್ನ ಎಲ್ಲಿಗೋ ಕಳಿಸಿದಂತಾಯಿತು. ಆದರೆ ಬಿದ್ದಾಗ ಕೂಗಿದ್ದು, ದನದ ಹೂಂಕಾರ ಎರಡೂ ಸೇರಿ ಸುತ್ತಲಿನ ಜನವನ್ನು ಆಕರ್ಷಿಸಿತು. “ಅಯ್ಯೋ ಪಾಪ ಮುದುಕ” ಎಂದಿದ್ದು ನೆನಪಿದೆ. ಯಾರೋ, ‘ಎಚ್ಚರ ತಪ್ಪಿದೆ. ನೀರು ಹಾಕಿ’ ಎಂದಿದ್ದು ಕೇಳಿಸಿದೆ.
.
.
ವಾಚಕಮಹಾಶಯಾ, ಮುದುಕನಾಗಿದ್ದ ನಾಗಯ್ಯಗೌಡನನ್ನು ಅವನ ದೂರದ ಸಂಬಂಧದಲ್ಲಿ ಮೊಮ್ಮಗನಾದ ಶ್ರೀನಿವಾಸನು ಗಾಡಿಯಲ್ಲಿ ಜನರಲ್ ಆಸ್ಪತ್ರೆಗೆ ಕರಕೊಂಡು ಹೋಗಿದ್ದುದಾಗಿಯೂ, ಜ್ವರದಲ್ಲಿ ನರಳುತ್ತಿದ್ದ ನಾಗಯ್ಯನನ್ನು ವಾರ್ಡಿಗೆ ಸೇರಬೇಕೆಂದು ವೈದ್ಯರು ಹೇಳಿದರೂ ಕೇಳದೇ ನಾಗಯ್ಯ ಹೊರಗೆ ಬಂದುದಾಗಿಯೂ, ಆಗ ದನ ಒಂದು ಬಂದು ಗುದ್ದಿ ಪೆಟ್ಬಾದುದಾಗಿಯೂ, ರಾತ್ರಿ ಖಾರ ಅರೆಯಲು ನಾಗಯ್ಯನ ಬಿಡಾರಕ್ಕೆ ಶ್ರೀನಿವಾಸನ ಅಕ್ಕ ಶಾರದೆ ಹೋದಾಗ ನೀರು ಬಿಸಿಮಾಡಿ ಕೊಟ್ಟುದಾಗಿಯೂ, ಆದರೆ ಮಾರನೆಯ ದಿನದಿಂದ ನಾಗಯ್ಯನ ಪತ್ತೆಯಿಲ್ಲವೆಂದೂ, ಅಕ್ಕಪಕ್ಕದವರಲ್ಲಿಯೂ ಕಾಣಿಸದೆ, ಹಾಡಿಯಲ್ಲಿ ಕಾಡಿನಲ್ಲಿ ನೇಣು ಹಾಕಿಕೊಂಡನೋ, ಬಾವಿ ಹಾರಿಕೊಂಡನೋ ಎಂದು ನೋಡಿದಾಗ್ಯೂ ಆತ ಸಿಗಲಿಲ್ಲವೆಂಬುದಾಗಿ ನನಗೆ ವರ್ತಮಾನ ಬಂದಾಗ-
ನಾನು ಬಹಳ ದಿನಗಳಿಂದ ಬರೆಯಲಾಗದಿದ್ದ ಸಣ್ಣಕತೆಗೆ ವಸ್ತು ಯಾವುದೆಂದು ಹುಡುಕುತ್ತಿದ್ದೆ. ಆಗ ಈ ಘಟನೆ ನಡೆಯಿತು. ಮತ್ತೆ ಬೇರೆ ಏನು ಬರೆಯುವುದು ಎಂದು ಇದನ್ನೇ ನಿಮ್ಮೆದುರು ಇಡುತ್ತಿದ್ದೇನೆ. ಪೂರ್ತಿ ಓದಿದ ಮೇಲೆ ನನ್ನ ಕತೆಗಾರಿಕೆಯಲ್ಲಿ ನಿಮಗೆ ರುಚಿ ಕಂಡರೆ, ನಾನು ಹೇಳಿದ್ದನ್ನು ಆಗಬಹುದು, ಒಪ್ಪೋಣವೆಂದು ನೀವು ತಲೆಯಲ್ಲಾಡಿಸಲು ಅಡ್ಡಿ ಇಲ್ಲವಷ್ಟೇ ?
ನನಗೊಂದಷ್ಟು ಭೂಮಿ ಇದೆ. ಅಲ್ಲಿ ಸಣ್ಣ ಹಳ್ಳಿಮನೆ ಹಾಕಿದ್ದೇನೆ. ಪೇಟೆಯಲ್ಲಿ ವಾಸವಾಗಿರುವ ನಾನು, ನಾಗಯ್ಯ ಗೌಡನನ್ನು ಕೆಲಸಕ್ಕೆ ನೇಮಿಸಿಕೊಂಡು, ಹಳ್ಳಿಮನೆಯ ಒಂದು ಕೋಣೆಯಲ್ಲಿ ಅವನನ್ನು ಸ್ಥಾಪಿಸಿದ್ದೆ. ಅರವತ್ತು ವರ್ಷಗಳಾಗಿದ್ದರೂ, ನಾಗಯ್ಯ ಯಾರನ್ನೂ ಅವಲಂಬಿಸಿರಲಿಲ್ಲ. ಪಕ್ಕದಲ್ಲಿ ಅವನ ದೂರದ ಸಂಬಂಧಿಕರ ಮನೆ ಇತ್ತು. ಜಡ್ಡಾದಾಗ ಅಲ್ಲಿಂದ ಗಂಜಿ ಬರುತ್ತಿತ್ತು. ಕೆಲವೊಮ್ಮೆ ಉಣ್ಣುತ್ತಿದ್ದ. ಜಗಳಾಡಿದ್ದೇ ಹೆಚ್ಚು. ವಿಚಿತ್ರ ಸ್ವಭಾವ. ಯಾರನ್ನು ಕಂಡರೂ ಆಗುತ್ತಿರಲಿಲ್ಲ. ಲೋಭಿ. ಕೈಗೆ ಸಿಕ್ಕಿದ್ದನ್ನು ಕೋಣೆಯಲ್ಲಿ ಕೂಡಿಹಾಕುವುದು. ರಾತ್ರಿ ಹೊರಟು ಬೇರೆಯವರ ಹಿತ್ತಲಲ್ಲಿ ಕದ್ದು ತರಕಾರಿ ತರುವುದು. ಕಾನಿನಲ್ಲಿ ಯಾರಾದರೂ ಕಡಿದಿಟ್ಟಿದ್ದ ಸೌದೆ ಹೊತ್ತುಬಿಡುವುದು. ನನ್ನ ಹತ್ತಿರ ಬೀಡಿಯನ್ನು ಸಾಲ ಪಡೆದು ಇಷ್ಪಾಯಿತು ಎಂದು ಲೆಕ್ಕ ಹೇಳುವುದು. ವಾರಕ್ಕೊಮ್ಮೆ ತೆಗೊಳ್ಳಿ ಎಂಟಾಯಿತು ಎಂದು ಕೊಡಲು ಬರುವುದು. “ಇರ‍್ಲಿ ಬಿಡು” ಎನಿಸಿಕೊಂಡು ಆ ಎಂಟು ಬೀಡಿಗಳನ್ನು ಜೋಪಾನವಾಗಿ ತೆಗೆದಿಟ್ಟು ಮಾರನೇ ದಿನವೇ ಮತ್ತೆ ಬೇಡುವುದು–ಇಂತಹ ಮಾಮೂಲಿ ಸ್ವಭಾವದ ನಾಗಯ್ಯ ನನ್ನನ್ನು ಯಾವ ರೀತಿಯಲ್ಲೂ ಆಕರ್ಷಿಸದಿದ್ದರೂ ಆಸ್ಪತ್ರೆಗೆ ಹೋಗಿಬಂದಂದಿನಿಂದ ಮೂರು ದಿನಗಳಾದರೂ ಕಣ್ಮರೆಯಾಗುಳಿದು, ಕುತೂಹಲ ಹುಟ್ಟಿಸಿಬಿಟ್ಟ.
ಕಾಯಿಲೆ ಗುಣವಾಗುವುದಿಲ್ಲವೆಂದು ತಿಳಿದು, ದೂರದ ಸಂಬಂಧಿಕರ ಹಂಗಿನ ಕೂಳಿಗೇಕೆ ಬೀಳುವುದೆಂದು ಬಾವಿ ಹಾರಿಕೊಂಡು ನನ್ನನ್ನು ಪೋಲಿಸುಖಾತೆಯ ವಿಚಾರಣೆಗಳಿಗೆ ಗುರಿಮಾಡಿದನೇ ಎಂದು ಹೆದರಿದ್ದೆ ನಾನು. ಹಳ್ಳಿಮನೆಯ ಅಂಗಳದಲ್ಲಿಯೇ ಇದ್ದ ಆ ಬಾವಿಯಲ್ಲಿ ಇಳಿಸಿದವನನ್ನು ನಾಲ್ಕು ನಾಲ್ಕು ಸಲ ಮುಳುಗು ಹಾಕಲು ಹೇಳಿ, ಅವನು ಮೇಲೆ ಬರುವ ತನಕ ಗಾಬರಿ. ಅವನ ಮುಖ ನೋಡುವ ತನಕ ಸಮಾಧಾನವಿಲ್ಲ. “ಅಯ್ಯ, ನಾಗಯ್ಯ ಇಲ್ಲಿದ್ದಾನೆ’ ಎಂದು ಎಲ್ಲಿ ಹೇಳಿಬಿಡುತ್ತಾನೋ-‘ಇಲ್ಲಪ್ಪ, ಅವ್ನು ಯಾರ‍್ನಾದರೂ ಸಾಯ್ಸ್ತಾನೆ. ಛಳೀಲಿ ನಾವು ಮುಳುಗಿದ್ದೇ ಬಂತು’ ಎಂದು ಆತ ಮೇಲೆ ಬಂದು ಮೈ ಒರೆಸಿಕೊಳ್ಳುವಾಗ ನನಗೆ ಉಸ್ಸಪ್ಪ ಎಂದು ಎದೆಯ ಮೇಲಿನ ಭಾರ ಕಳೆದಂತಾಯಿತು.
ಸಂಜೆ ಗದ್ದೆ ನೋಡಲು ಹೋಗಿದ್ದೆ. ಹೊಂಬಿಸಿಲು ಬೀಸುವ ಗಾಳಿಯಲ್ಲಿ ಹೊಡೆ ತುಂಬಿದ ಪೈರಿನ ವಾಸನೆ ಬೆರೆತು ಪುಳಕ ಉಂಟುಮಾಡುತ್ತಿತ್ತು. ಕಾಫಿ ಕುಡಿಯುವ ಮನಸ್ಸಾಗಿ, ಕಾಫಿಮಾಡಿ ಕುಡಿದು, ಮಾಮೂಲಿನಂತೆ ನಾಗಯ್ಯನಿಗೆ ಕೊಡೋಣವೆಂದು ಅಭ್ಯಾಸಬಲದಿಂದ ಕರೆದರೆ ಆತನೆಲ್ಲಿ ? ಹಾದಿಯಲ್ಲಿ, ಬಾವಿಯಲ್ಲಿ ಹುಡುಕಿಸಿದ್ದು ನಾನೇ ಅಲ್ಲವೇ ? ಅಷ್ಟು ಹೊತ್ತಿಗೆ ದಿಗಂತದಲ್ಲಿ ಚಂದ್ರ ಮೂಡುವ ಸೂಚನೆ ಕಾಣಿಸಿತು. ಹುಣ್ಣಿಮೆಯ ನೆನಪಾಗಿ, ಬನದಲ್ಲಿ ಬೆಳದಿಂಗಳು ಚೂರುಚೂರಾಗಿ ಬೀಳುವ ಚೆಂದವನ್ನು ನೋಡಲು ಅಲ್ಲಿಗೆ ಹೋದೆ. ಸುತ್ತಲೂ ಮರಗಳೂ, ದಪ್ಪ ಬೀಳುಗಳೂ ಹೇಗೆಂದರೆ ಹಾಗೆ ಬೆಳೆದು ನಿಂತ ಹಾಡಿಮಧ್ಯ ಸ್ವಲ್ಪ ಜಾಗ ಸರಿಮಾಡಿ ಎರಡು ಕಲ್ಲು ಹಾಕಿದ್ದರು- “ದಯ್ಯ’-ನನಗೆ ಅಲ್ಲಿ ಬೆಳದಿಂಗಳು ಸೋರಿಬೀಳುವುದನ್ನು ನೋಡುವುದೇ ಆಕರ್ಷಣೆ,
ಹಾಲುಬೆಳದಿಂಗಳು ಕಪ್ಪ ನೆರಳಿನ ಚೂರುಗಳು ಸೇರಿ ನಿರ್ಮಿಸಿದ ಚಿತ್ತಾರ ನೋಡುತ್ತಿದ್ದಾಗ, ಅಲ್ಲೇ ಯಾರೋ ಕುಳಿತಂತೆ ಭಾಸವಾಯಿತು. ಸ್ವಲ್ಪ ಬೆಚ್ಚಿದೆ. ಮತ್ತೆ ನೋಡಿದಾಗ ಕಂಬಳಿ ಹೊದ್ದು ಕುಳಿತ ಭಂಗಿಯಿಂದ. ದಿನವೂ ನಾನು ನೋಡುತ್ತಿದ್ದ ಆ ಹಳೆಯ ಕಂಬಳಿಯಿಂದ ನಾಗಯ್ಯನೆಂದು ತಿಳಿಯಿತು. ಕಂಬಳಿಯ ಕಮಟು ವಾಸನೆ ಮೂಗಿಗೆ ಬಡಿಯಿತು. ಕರೆಯೋಣವೆಂದುಕೊಂಡೆ. ಬಾಯಿ ಬರಲಿಲ್ಲ, ಅಲ್ಲಿಂದ ಹೋಗಲೂ ಆಗಲಿಲ್ಲ. ಮುಂದೆ ಕಳೆದ ಹೊತ್ತಿನಲ್ಲಿ ಕೆಲವು ಸಂಗತಿಗಳು ನನ್ನ ಅರಿವಿಗೆ ಬಂದವು. ಅವನ ಮಾತಿನಲ್ಲೇ ಹೇಳಿಬಿಡುತ್ತೇನೆ.
.
.
ಹಿಂದಿನಿಂದ ಬಂದು ನನ್ನನ್ನು ಆ ಸಿಂಧೀ ದನ ಗುದ್ದಿದಾಗ ಜೋಕಾಲಿಯಲ್ಲಿ ಎಷ್ಟು ದೂರ ತುಯ್ದೆನೋ ಗೊತ್ತಿಲ್ಲ. ಆದರೆ ಯಾವುದೋ ಒಂದು ಗೆರೆಯನ್ನು ದಾಟಿ ಆಚೆ ಹೋದದ್ದು ನಿಜ. ಗಡಗಡ ಶಬ್ದ ಮಾಡುತ್ತ ಹೋಗುತ್ತಿದ್ದ ಗಾಡಿಯಲ್ಲಿ ಕುಲುಕಿದ ಮೈಗೆ ಎಚ್ಚರ ಬಂದಾಗ ಅಸಹ್ಯವಾದ ನೋವು. ಗಾಡಿ ಮನೆಯ ಕಡೆ ಹೋಗುತ್ತಿತ್ತು. ನನ್ನ ತಲೆಯೊಳಗೆ ಒಂದೇ. ಗಾಡಿ ಹೋಗುತ್ತ ಹೋಗುತ್ತ ಗೆರೆಯಿಂದ ಮುಂದೆ ಹೋಗುತ್ತಿದೆಯೋ, ಒಳಗೆ ಬರುತ್ತಿದೆಯೋ ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತು ಹೋದರೆ ಪಯಣ ಸಾಗಿದರೆ, ದೂರ ತಿಳಿಯುವುದಲ್ಲ ಎಂದು ಸುಮ್ಮನಾದೆ. ನನ್ನನ್ನ ಹೆಚ್ಚು ಕಡಿಮೆ ಹೊತ್ತುಕೊಂಡೇ ಮನೆಯ ಒಳಗೆ ಸಾಗಿಸಿ ಮಲಗಿದ್ದು ಮಸಕು ಮಸಕು ನೆನಪಿದೆ. ಬಾಗಿಲು ಎಳೆದುಕೊಂಡಿದ್ದು ಚಿಲಕದ ಶಬ್ದದಿಂದ ತಿಳಿದೆ. ಹಾಗೇ ಎಷ್ಟು ಹೊತ್ತು ಕಳೆದೆನೋ ಗೊತ್ತಿಲ್ಲ, ಎಚ್ಚರಾದಾಗ ಮುಚ್ಚಿದ ಬಾಗಿಲಿನ ಆಚೆಗೆ ಜಗುಲಿಯ ಮೂಲೆಯಲ್ಲಿದ್ದ ಕಲ್ಲಿನಲ್ಲಿ ಖಾರ ಕಡೆಯುತ್ತಿದ್ದ ಶಬ್ದ ಕೇಳಿಬರುತ್ತಿತ್ತು. ಆ ಶಬ್ದಕ್ಕೂ ನನಗೂ ಮಧ್ಯೆ ಒಂದು ಪಾರದರ್ಶಕ ಗೋಡೆ ಬಿದ್ದಿದ್ದು ಈ ಸಲ ಗೋಚರವಾಯಿತು. ತಳ್ಳಲು ನೋಡಿದೆ. ಅಲುಗಿದಾಗ ಮತ್ತಷ್ಟು ಘಟ್ಟಿಯಾಯಿತು. ನನ್ನ ನೆರಳು ಕೇಳಿತೇನೋ, ಕಡೆಯುವ ಕೈ ನಿಂತಿತು. ಬಾಗಿಲು ತಳ್ಳಿ ಶಾರದ ಕೇಳುತ್ತಿದ್ದಾಳೆ-‘ಅಜ್ಜಾ ಬಿಸಿ ನೀರು ಕಾಸಿ ಕೊಡ್ಲೇನೋ’. ನಾನು ಏನು ಹೇಳಿದೆನೋ. ಶಾರದ ಒಳಗೆ ಬಂದು ಲಾಟೀನು ಹಚ್ಚಿ ಮತ್ತೆ ನೀರು ಬಿಸಿಮಾಡಲು ಇಟ್ಟಳು. ನನಗೆ ಆಗ ನೆನಪಾಯಿತು. ಶಾರದೆಗೆ ನಾನೇ ಗಂಡು ಗೊತ್ತುಮಾಡಿದ್ದೆ, ಶಾರದ ನೋಡಲು ಸ್ವಲ್ಪ ದುರ್ಬಲ ಶರೀರೆ. ಆದರೆ ಎಲ್ಲ ಕೆಲಸ-ಮನೆಗೆಲಸ, ಗದ್ದೆ ತೋಟದ ಕೆಲಸ ಗೊತ್ತು, ಮಾಡುತ್ತಾಳೆ. ಸ್ವಲ್ಪವೂ ಆಲಸ್ಯವಿಲ್ಲ. ನಾಲ್ಕು ಜನ ಇರುವ ಕುಟುಂಬದಲ್ಲಿ ಚೆನ್ನಾಗಿ ನಿರ್ವಹಿಸುವ ತಾಳ್ಮೆ ಉಳ್ಳವಳು. ಇದನ್ನು ಹೇಳಿ ನಾನು ಮೂರನೆಯವನೊಬ್ಬನನ್ನು ಒಪ್ಪಿಸಿದ್ದೆ. ಇಬ್ಬರು ಇವಳ ಸಣಕಲ ಶರೀರ ನೋಡಿ ‘ಉಹುಂ’ ಎಂದಿದ್ದರು. ಇವನು ಮುಗುಳುಕೇರಿಯವನು ಯಾವಾಗ ಬರುತ್ತೇನೆಂದು ಕಾಗದ ಹಾಕುತ್ತೇನೆಂದಿದ್ದ. ಓದು ಬರಹ ಗೊತ್ತಿದ್ದವನು.
‘ಶಾರದಾ, ಮುಗುಳುಕೇರಿಯಿಂದ ಕಾಗದ ಬಂತೇನೇ ?”
‘ಹೂಂ, ಹಣ್ಣೀಗೇರಿ ತೇರಿನ ಬೆಳಿಗ್ಗೆ ಬತ್ತಾರಂತೆ’
ನೀರು ಬಿಸಿಯಾಗುತ್ತಿರುವ ಶಬ್ದ. ಶಾರದ ಸುಮ್ಮನೇ ನನ್ನ ಮಾತು ಆಲೈಸುತ್ತಿದ್ದಾಳೆ. ‘ನಾನು ಹೇಳೀನಿ ಅವ್ನಿಗೆಲ್ಲ. ನಂಗೆ ಬಾಸೆ ಕೊಟ್ಟಾನೆ ಮಾಡ್ಕೋತೀನಿ ಅಂತ’
ಅವಳಿಗೂ ಅದು ಗೊತ್ತಿರಬೇಕು. ಬೇರೆಯವರು ಹೇಳಿರಬಹುದು. ಅದರ ಬಗ್ಗೆ ಆತಂಕವಿಲ್ಲ ಅವಳಿಗೆ. ಬಿಕ್ಕುತ್ತಿದ್ದಾಳೆ. ‘ಏನೇ’ ಅಂದೆ. ಬಳೆಯ ಶಬ್ದ, ಕಣ್ಣು ಒರೆಸಿಕೊಳ್ಳುತ್ತಿರಬೇಕು.
“ಇನ್ನೂ ಹಣ್ಣಿಗೇರಿ ತೇರಿಗೆ ಹದಿನೈದು ದಿನದ ಮೇಲಿದೆ. ಅಷ್ಟರಲ್ಲಿ ನೀನು ಹುಸಾರಾಗಬೇಕಲ್ಲ” ಕೊನೆಯ ಶಬ್ಬಗಳು ಮತ್ತೆ ಬಿಕ್ಕುವುದರಲ್ಲಿ ಮುಳುಗಿದವು.
ಅಲ್ಲಿಗೆ ನನಗೆ ಖಾತರಿಯಾಯಿತು. ಶಾರದೆಯ ಮದುವೆಯ ಉತ್ಕಟ ಆಸೆಯಿದ್ದರೂ ನಾನು ಆ ಪಾರದರ್ಶಕ ಬಾಗಿಲನ್ನು-ಗೋಡೆಯನ್ನು ತಳ್ಳಲಾರೆ ? ಎಲ್ಲ ಆಚೆಗಿದ್ದಾರೆ. ಒಳಗೆ ನಾನೊಬ್ಬನೇ. ಒಳಗೆ ಎಂದರೆ ನಾನಿದ್ದ ಸಣ್ಣ ಕೋಣೆಯಾಗಿರಲಿಲ್ಲ ಅದು. ಮತ್ತೆ ನೋಡಿದರೆ ಅದರಲ್ಲಿ ಮುಚ್ಚಿದ ಬಾಗಿಲು, ಜಗುಲಿ, ಶಾರದ, ಖಾರದ ಕಲ್ಲು, ಹಣ್ಣಿಗೇರಿ ತೇರು, ಅಯ್ಯನ ಗದ್ದೆ ತೋಟ ಎಲ್ಲ ಇದೆ. ಆದರೆ ಇವನ್ನೆಲ್ಲ ಎಲ್ಲಿ ಬೇರ್ಪಡಿಸಿದ್ದಾರೆ. ಎಲ್ಲಿ ದೂರ ಮಾಡಿದ್ದಾರೆ ?
“ಇನ್ನು ನೀನು–ನೀನೊಬ್ಬನೇ ಕಣೋ, ಗೌಡ”
ನನ್ನನ್ನೇ ನಾನು ಗೌಡ ಎಂದು ಕರೆದುಕೊಳ್ಳುತ್ತಿದ್ದೇನೆ. ಕರೆದವರು ಯಾರು,
“ಅದೆಲ್ಲ ಇರಲಿ, ಏಳು ನಿನ್ನ ಕೆಲಸ ಬೇರೆ ಇದೆ.”
ಅದು ಯಾರೋ ಬೇರೆಯವರು, ಹೊರಗಿನವರು ಹೇಳಿದ್ದು ಎನಿಸಲೇ ಇಲ್ಲ. ಈ ನನ್ನ ಬಂಧು ಇಷ್ಟು ವರ್ಷಗಳ ನಂತರ, ಇಷ್ಟು ಹತ್ತಿರದಿಂದ ಪಿಸುಗುಟ್ಟುವವನು ಈಗಾದರೂ ಸಿಕ್ಕಿದನಲ್ಲ ಎನಿಸಿತು. ಇಷ್ಟು ದಿನ ಎಷ್ಟು ಜನರೊಂದಿಗೆ ಓಡಾಡಿದೆ. ಯಾರೂ ಇಷ್ಟು ಹತ್ತಿರ ಬಂದಿರಲಿಲ್ಲ. ಯಾರ ಕರೆಗೂ ನಾನು ಇಷ್ಟು ಕಿವಿಗೊಟ್ಟಿರಲಿಲ್ಲ. ಯಾರಿಗೂ ಇಷ್ಟು ವಿಧೇಯನಾಗಿರಲಿಲ್ಲ. ಯಾಕೆಂದರೆ ಈಗ ಈತ ಹೇಳಿದ್ದನ್ನು ಮಾಡಲು ಸಿದ್ಧನಾಗಿದ್ದೆ.
ಶಾರದ ಎದ್ದು ಹೋಗಿದ್ದಳು. ಮಿಣುಕು ದೀಪ ಉರಿಯುತ್ತಿತ್ತು. ತಲೆಯೊಳಗೆ ಯಾವುದೋ ದೊಡ್ಡ ಬೆಳಕು. ಅದರ ಎದುರು ಇದು ಯಾಕೆ ? ಒಲೆಯಲ್ಲಿದ್ದ ಕಟ್ಟಿಗೆ ತೆಗೆದುಕೊಂಡು ಲಾಟೀನಿಗೆ ಬಡಿದೆ. ಸುಮ್ಮನೇ ಗಾಜು ಪುಡಿಯಾಗಿ ಕತ್ತಲೆ ಆವರಿಸಿತು. ಅಲ್ಲ, ತಲೆಯೊಳಗಿನ ಬೆಳಕು ಸುತ್ತ ಹರಡಿತು?
ಕಂಬಳಿ ಹೆಗಲಮೇಲೆ ಹಾಕಿಕೊಂಡು ಹೊರಗೆ ಹೆಜ್ಜೆ ಹಾಕುತ್ತಿದ್ದಂತೆ ಮೈ ಹಗುರವಾಗಿತ್ತು. ಹುಷಾರು ಇಲ್ಲದ್ದು ಯಾರಿಗೆ. ದನ ಗುದ್ದಿದ್ದು ಯಾರಿಗೆ -ನಾನೇ ಆಗಿದ್ದರೂ ಈಗ ಯಾವ ಶಕ್ತಿ ಬಂದಿದೆ. ಅಲ್ಲೇ ಇದ್ದ. ಕಟ್ಟೆ ಕಟ್ಟಿಲ್ಲದ ಬಾವಿಯನ್ನು ಬಳಸಿ ಹೊರಟೆ. ಒಳಗೆ ಹಣಿಕಿದೆ. ಮೇಲೆಯೇ ಇದ್ದ ನೀರಲ್ಲಿ ಚಂದ್ರ ಕುಣಿಯುತ್ತಿದ್ದ. ಜೊತೆಗೇ ಅಯ್ಯನ ಮುಖ ಎದುರಿಗೆ ಬಂದಿತು. ನಾನು ಇಲ್ಲವೆಂದು ನಾಳೆ ನನ್ನನ್ನು ಇಲ್ಲೇ ಮೊದಲು ಹುಡುಕುತ್ತಾರೆ ಅವರು. ಪಾಪ, ನಾನೆಲ್ಲಿ ಸಿಗುತ್ತೇನೆ ಅವರಿಗೆ. ನನ್ನ ದಾರಿ ನನಗೆ, ಹೆಜ್ಜೆ ಹಾಕಿದೆ.
ಬನದಲ್ಲಿ ಸ್ವಲ್ಪ ಕುಳಿತುಕೊಂಡೆ. ದಯ್ಯದ ಕಲ್ಲು ನೋಡಿ ನಗು ಬಂದಿತು. ಕಲ್ಲಿನಿಂದ ದಯ್ಯ ಎದ್ದು ಹತ್ತಿರ ಬಂದು ನಿಂತಂತಾಯಿತು. ಎಂದಿನ ಭೀತಿ ಇರಲಿಲ್ಲ. ದಯ್ಯ ಮನುಷ್ಯನ ಭೇದ ಹೊರಟುಹೋಗಿತ್ತು. ಮುಕ್ತನಾಗಿದ್ದೆ. ನಿನ್ನಿಂದ ದೂರ ಹೋಗುವುದಿಲ್ಲ. ಎಲ್ಲಿದ್ದರೂ ನಿನಗೆ ಹಾಗೇ ನಡೆದುಕೊಳ್ಳುತ್ತೇನೆ ಎಂದು ಮುಂದೆ ನಡೆದೆ.
ಆಣೆಕಟ್ಟಿನ ಮೇಲೆ ದಾಟುವಾಗ ಸ್ವಲ್ಪ ಆಯಾಸ. ಕುಳಿತುಕೊಂಡೆ. ಇಲ್ಲಿ ಎಷ್ಟು ಸಲ ಬಂದು ನೀರು ಕಟ್ಟಿ ತಿರುಗಿಸಿಲ್ಲ. ಈಗೆಲ್ಲ ನೀರು ಬತ್ತಿ, ಕೆಳಗೆ ಹಾಸಿದ ಕಲ್ಲು ಕಾಣಿಸುತ್ತೆ. ಯಾವುದೂ ಅಸ್ವಾಭಾವಿಕವಿಲ್ಲ. ಮತ್ತೆ ಮಳೆ ಬರುತ್ತೆ. ಕೊಚ್ಚಿ ಕೊಚ್ಚಿ ಮೇಲಿಂದ ಹರಿದು ಬಂದ ನೀರನ್ನು ಅಡ್ಡ ಹಾಕಿ ಗದ್ದೆಗೆ ತಿರುಗಿಸ್ತೇವೆ-ತಿರುಗಿಸುತ್ತಾರೆ. ಪಶ್ಚಾತ್ತಾಪವಿಲ್ಲ. ನಾನು ಇಷ್ಟು ದಿನವೂ ಮಾಡಿದೆ. ಇನ್ನೂ ಎಷ್ಟು ದಿನ ? ನನಗೆ ನನ್ನ ಕೆಲಸವಿಲ್ಲವೇ ಈಗ ? ಮತ್ತೆ ಎದ್ದು ಹೊರಟೆ.
ಗೌಡರ ದೊಡ್ಡ ಮಾವಿನಮರ ಬಂದಾಗ ಯಾರೋ ಹಿಂಬಾಲಿಸುತ್ತಿರುವಂತೆ ಭಾಸವಾಯಿತು. ಕುಳಿತುಕೊಂಡು ಕಾದೆ. ಯಾರೂ ಇಲ್ಲ. ಯಾರಿಗೆ ಗೊತ್ತು ನಾನು ಹೊರಟಿದ್ದು ? ಮತ್ತೆ ಈ ದಾರಿಯಲ್ಲಿ ಯಾರು ಬರುತ್ತಾರೆ ? ಯಾರೂ ಬೇಕಾಗಿರಲಿಲ್ಲ. ಇಷ್ಟು ವರ್ಷಗಳು ಕಾಡಿದ ಅಭಾವ ಕಣ್ಮರೆಯಾಗಿತ್ತು. ನನಗೆ ಯಾರೂ ಇಲ್ಲ ಎಂದು ಕೊರಗುತ್ತಿದ್ದೆ. ಹೌದು ಒಬ್ಬೊಬ್ಬರೊಡನೆ ಜಗಳಾಡಿದಾಗಲೂ ಅವರಿಂದ ದೂರವಾದ ಅಸಹ್ಯ ಯಾತನೆ. ನನ್ನನ್ನು ಯಾವುದೋ ಕತ್ತಲ ಕೋಣೆಯೊಳಗೆ ತಳ್ಳುತ್ತಿದ್ದಾರೆ ಎಲ್ಲ ಸೇರಿ ಅನಿಸಿತ್ತು, ಈಚೆಗೆ. ಆದರೆ, ಬದುಕಿದೆ ಇವತ್ತು ಕತ್ತಲೆಯೆಲ್ಲ ಹರಿದು ಬೆಳಕು ಮೂಡಿದೆ. ಮತ್ತೆ ಆ ಬೇಸರವೆಲ್ಲ ಹಾರಿಹೋಗಿದೆ. ಸದ್ಯ ಯಾರೂ ಇಲ್ಲ ಹಿಂದೆ ಮುಂದೆ, ನೆರಳೂ ಇಲ್ಲ. ಇದೆಂತಹ ಸಂತೋಷ. ನಾನೊಬ್ಬನೇ. ಯಾರ ಹಂಗೂ ಇಲ್ಲ. ಯಾರ ಕಾಳಜಿಯೂ ಇಲ್ಲ. ಯಾರಿಲ್ಲವೆಂದು ದುಃಖವೂ ಇಲ್ಲ. ಈ ಒಂಟಿತನ ಇಷ್ಟು ತೃಪ್ತಿಕೊಡುತ್ತೆ ಎನಿಸಿದ್ದು ಇವತ್ತೇ. ಈ ತೃಪ್ತಿಗಾಗಿ ಏನು ಬಿಡಲೂ ಸಿದ್ದ. ಒಳಗಿನವನ ಮಾತು ಕೇಳಿ ಇಲ್ಲಿ ಬಂದು ಕುಳಿತಿಲ್ಲದಿದ್ದರೆ ಇದು ಅರ್ಥವಾಗುತ್ತಿರಲಿಲ್ಲ ನನಗೆ. ಅಲ್ಲೇ ಆ ಹಳೆಯ ಹಾಸಿಗೆಯಲ್ಲಿ. ಚಿಲ್ಲರೆ ಸಾಮಾನುಗಳಿದ್ದ ಚಿಲ್ಲರೆ ಜೀವನದೊಳಗೆ. ನನ್ನ ಮಲಮೂತ್ರದ ನಡುವೆ, ಅವರೆಲ್ಲರ ಕರುಣೆಯ ದೃಷ್ಟಿಯ ಬಲೆಯೊಳಗೆ, ಮೆಲ್ಲಮೆಲ್ಲಗೆ ಕೊನೆಯುಸಿರು ಎಳೆಯಬೇಕಿತ್ತು. ಸದ್ಯ ಆ ಗತಿಯಿಲ್ಲವಲ್ಲ. ತಣ್ಣಗೆ ಬೀಸುವ ಗಾಳಿ ಬಹಳ ಹಿತಕರವಾಗಿದ್ದು ‘ಬಂದ್ಯಾ’ ಎಂದು ಕೇಳುತ್ತಿದೆ. ತಲೆ ಎತ್ತಿ ನೋಡಿದೆ. ಗೌಡರ ದೊಡ್ಡ ಮಾವಿನಮರ ತಲೆದೂಗಿಸಿತು. ಎದ್ದು ಹೊರಟೆ.
ಕಾಲುಗಳು ‘ಹೊಟ್ಟುಕೆರೆ’ ಏರಿಯನ್ನು ಹತ್ತುವಾಗ ನೋಯುತ್ತಿದ್ದವು. ಬುದ್ದಿ ಹೇಳಿದೆ. ಅಲ್ಲಿ ನೋಡು ಎಂದೆ. ಹೌದು, ಮೊನ್ನೆ ಒಮ್ಮೆ ಬಳ್ಳಿಗೆ ಬಂದಾಗ ನೋಡಿದ್ದೆ. ಹೊಸ ಮಳೆಗೆ ಬಂದು ತುಂಬಿ ನಿಂತಿದ್ದ ನೀರು ಪಳಪಳ ಹೊಳೆಯುತ್ತ ಅಮೃತದ ಬಟ್ಟಲಿನಂತೆ ಕಾಣುತ್ತಿತ್ತು. ಕೆರೆ ಅಗಲವಾಗುತ್ತ ಹೋಯಿತು. ನೀರು ಹೆಚ್ಚುತ್ತ ಹೋಯಿತು. ಎಲ್ಲೆಲ್ಲೂ ನೀರು. ಒಂದೇ ವಟವೃಕ್ಷದೆಲೆ. ಕಾಲು ಬೆರಳು ಚೀಪುವ ಬಾಲಕೃಷ್ಣ. ಯೋಗನಿದ್ರೆ. ಮತ್ತೆ ಹೌದು ಆಶ್ಚರ್ಯ. ನನಗೂ ಇದಕ್ಕೂ ಮಧ್ಯ ಈಗ ಯಾವ ಪಾರದರ್ಶಕ ಗೋಡೆಯಾಗಲೀ ಬಾಗಿಲಾಗಲೀ ಇರಲಿಲ್ಲ. ಇಲ್ಲ, ಎಲ್ಲ ಒಂದೇ ಆಗಿದೆ. ತಲೆ ತಿರುಗುತ್ತಿದೆ ಎಂದು ಭಾಸವಾಗಿ ಹಳೆಯ ಕಂಬಳಿಯನ್ನು ಸಾವಧಾನವಾಗಿ ಮಡಚಿಟ್ಟೆ. ಯಾವ ಕೆಲಸಕ್ಕಾಗಿ ನಾನು ಎದ್ದು ಯಾರಿಗೂ ಹೇಳದೇ ಹೊರಟು ಬಂದಿದ್ದನೋ, ಅದನ್ನು ಶಾಂತನಾಗಿ ಮಾಡಿದೆ.
.
.
ಉಳಿದುದನ್ನು ಹಳೆಯ ಕಂಬಳಿಯೇ ಹೇಳಿತು. ಅದು ಇಂಥಲ್ಲಿದೆ ಎಂದವನನ್ನು “ತೋರಿಸು’ ಎಂದು ಹೋದಾಗ, ಅವನು, ದಯ್ಯದ ಬನವನ್ನು ಹಾದು, ನೀರಿಲ್ಲದ
ಆಣೆಕಟ್ಟಿನ ಮೇಲಿಂದ ಗೌಡರ ದೊಡ್ಡ ಮಾವಿನಮರದ ಪಕ್ಕದಲ್ಲಿ ಹೋಗಿ, ತೋಟದ ಮೇಲಿನ ಹೊಟ್ಟುಕೆರೆಯ ದಂಡೆಯ ಮೇಲೆ ಒಯ್ದು ನಿಲ್ಲಿಸಿದ.
ಸಾವಧಾನವಾಗಿ ಗಳಿಗೆಹಾಕಿ ಮಡಚಿಟ್ಟ ಹಳೆಯ ಕಂಬಳಿ ಅಲ್ಲಿತ್ತು. ಹೊಟ್ಟುಕೆರೆಯಲ್ಲಿ ಈಸಲ ಬಂದ ಮೊದಲ ಮಳೆಯ ಇಷ್ಟು ನೀರು ಅಲೆಯಾಡುತ್ತಿರುವುದು ನೋಡಿ ಆಶ್ಚರ್ಯವಾಯಿತು. ಸ್ವಲ್ಪ ಗುಂಡಿ ಇದ್ದಲ್ಲಿ ಗಳಹಾಕಿ ನೋಡಿದಾಗ ಕೆಳಗೆ ಯಾವುದಕ್ಕೋ ಸಿಕ್ಕಿಕೊಂಡಿದ್ದ’ ಮೂರುದಿನ ಕೊಳೆತ ಹೆಣ ಮೇಲೆ ಬಂದಿತು. ಹಣ್ಣು ಕೂದಲು, ಬಾರಾಪರದೆ ಕಚ್ಚೆ, ಉದ್ದ ದೇಹದ ಬಾಗಿದ ಬೆನ್ನು. ಎಲ್ಲ ಪರಿಚಿತವಾಗಿದ್ದರೂ, ನೀರೊಳಗಿನಿಂದ ಮೇಲೆ ಬಂದ ನಾಗಯ್ಯ ತೀರ ಬೇರೆಯವನಾಗಿಯೇ ಕಂಡ.
.

Close

ಪ್ರತಿಧ್ವನಿಯ ಭಾಷೆ

ಪ್ರತಿಧ್ವನಿಯ ಭಾಷೆ

ಎ ಎನ್ ಪ್ರಸನ್ನ

ಶಬ್ದ ತರಂಗ ಜಗತ್ತಿನ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ತರಂಗಗತಿಯ ಗುಣಗಳನ್ನು ಪಾಲಿಸುವ ಶಬ್ದ ತಾನು ಸ್ಪರ್ಶಿಸುವ ವಸ್ತುವಿನ ಬಗ್ಗೆ ಸಾಕಷ್ಟು ಮಾಹಿತಿ ಕೊಡುತ್ತದೆ. ದೈನಂದಿನ ಜೀವನನಾಡಿಯಾದ ಮಾತಿನ ರೂಪದ ಶಬ್ದ ಪ್ರತಿಧ್ವನಿಯ ರೂಪ ಪಡೆದಾಗ ಕೌತುಕಮಯವಾಗುತ್ತದೆ. ಪ್ರಾಣಿಗಳು ಪ್ರತಿಧ್ವನಿಯ ಪ್ರಯೋಜನ ಪಡೆಯುವ ರೀತಿ ನಿಜಕ್ಕೂ ವಿಸ್ಮಯಪೂರ್ಣ. ಪ್ರತಿಧ್ವನಿಯ ಕೃತಕ ನಿರ್ಮಾಣ ಮತ್ತು ನೈಜ ಹಾಗೂ ಕೃತಕ ಪ್ರತಿಧ್ವನಿಗಳ ಹೋಲಿಕೆ, ವಿಶ್ಲೇಷಣೆ, ವಿಜ್ಞಾನದ ಅನೇಕ ನಿಗೂಢ ಸಮಸ್ಯೆಗಳನ್ನು ಪರಿಹರಿಸಿದೆ.
ಮೋಡಗಳಾಚೆ ಹಾರುವ ವಿಮಾನ, ಸಮುದ್ರದಾಳದಲ್ಲಿ ಚಲಿಸುವ ಸಬ್ ಮೆರಿನ್ ಮುಂತಾದ ನಮ್ಮ ದೃಷ್ಟಿಗೆ ಗೋಚರವಾಗದೆ ಚಲಿಸುವ ವಸ್ತುಗಳ ಚಲನೆಯನ್ನು ಗುರುತಿಸುವುದು ಬಹು ಪ್ರಯಾಸದ ಕಾರ‍್ಯ. ಅಷ್ಟೆ ಪ್ರಯಾಸದ ಕೆಲಸ ಕಗ್ಗತ್ತಲಲ್ಲಿ ನಮ್ಮ ನಡಿಗೆಯನ್ನು ಗುರುತಿಸಿಕೊಳ್ಳುವುದು. ಅಲ್ಲದೆ, ಅತಿ ಹೆಚ್ಚು ಕಷ್ಟ ಕುರುಡರಾಗಿ ಜೀವನ ಸವೆಸುವುದು. ಅಗೋಚರ ವಸ್ತುಗಳನ್ನು ನಾವು ಗುರುತಿಸುವಲ್ಲಿ ಉಂಟಾಗುವ ಸಮಸ್ಯೆಗೂ ಕುರುಡರು ಎದುರಿಸಬೇಕಾದ ಸಮಸ್ಯೆಗೂ ಪರಸ್ಪರ ಹೋಲಿಕೆಯಿದೆ. ಇವುಗಳಲ್ಲಿ ಒಂದು ಸಮಸ್ಯೆಯ ಪರಿಹಾರ ಮತ್ತೊಂದನ್ನೂ ತಕ್ಕಮಟ್ಟಿಗೆ ಪರಿಹರಿಸುತ್ತದೆ. ಒಂದು ಬಗೆಯ ‘ಶಕ್ತಿ’ (energy) ಯನ್ನು ಹೊಮ್ಮಿಸಿ ಅದು ದೂರ ವಸ್ತುಗಳಿಂದ ಉಂಟುಮಾಡುವ ಪ್ರತಿಧ್ವನಿಯನ್ನು ಗ್ರಹಿಸುವಂತೆ ಮಾಡಲು ಸಾಧ್ಯವಾದರೆ ಈ ಸಮಸ್ಯೆಗಳ ನಿವಾರಣೆ ಸಾಧ್ಯ. ಇವುಗಳಿಗಾಗಿ ತಾಂತ್ರಿಕ ತಜ್ಞರನ್ನು ಅವಲಂಬಿಸುವುದು ಒಂದು ರೀತಿಯಾದರೆ ಅನೇಕ ವಿಧದಲ್ಲಿ ಕಾರ‍್ಯೋನ್ಮುಖವಾಗಿರುವ ನೈಜ ತಜ್ಞರನ್ನೂ ಅವಲೋಕಿಸಬೇಕಾಗುತ್ತದೆ. ಅಚ್ಚರಿಯೆಂದರೆ ಈ ನೈಜ ತಜ್ಞರು ಪ್ರಾಣಿಗಳು- ತಮ್ಮ ದೈನಂದಿನ ಜೀವನದ ಹೋರಾಟಕ್ಕೆ ಪ್ರತಿಧ್ವನಿಯನ್ನೇ ಅವಲಂಬಿಸಿರುವ ಪ್ರಾಣಿಗಳು. ಕಗ್ಗತ್ತಲಲ್ಲಿ ಹಾರಾಡುವ ಬಾವಲಿ, ನೀರಿನಾಳದಲ್ಲಿ, ಕಗ್ಗತ್ತಲಲ್ಲಿ ಜೀವಿಸುವ ಜಲಚರಗಳು.
ಅತ್ಯಂತ ಪರಿಶುದ್ಧ ನೀರಿನಲ್ಲಿ ಮಾತ್ರ ಬೆಳಕಿನ ಕಿರಣಗಳು ಸರಳ ರೇಖೆಯಲ್ಲಿ ಚಲಿಸಲು ಸಾಧ್ಯ. ಕಲ್ಮಶವಾದ ಸಮುದ್ರ, ನದಿ, ಸರೋವರಗಳಲ್ಲಿ ಇದು ಅಸಾಧ್ಯ, ಆದರೆ ಶಬ್ದ ತರಂಗಗಳು ಬೆಳಕಿನ ಕಿರಣಗಳಿಗಿಂತ ಹೆಚ್ಚು ಆಳದವರೆಗೆ ಚಲಿಸಬಲ್ಲವು. ಗಾಳಿಯಿಂದ ನೀರಿಗೆ ಹಾಗೂ ನೀರಿನಿಂದ ಗಾಳಿಗೆ ಶಬ್ದ ತರಂಗಗಳ ಚಲನೆ ಸುಲಭ ರೀತಿಯದಲ್ಲ. ಇವೆರಡನ್ನು ಬೇರ್ಪಡಿಸುವ ನೀರಿನ ಮೇಲ್ಮೈ ಅತಿ ದೊಡ್ಡ ತಡೆಯೊಡ್ಡುತ್ತದೆ. ಸಾಮಾನ್ಯವಾಗಿ ಶೇ. 99 ಭಾಗದ ಶಬ್ದ ತಾನು ಚಲಿಸಿ ಬಂದ ಮಾಧ್ಯಮದೊಳಕ್ಕೇ ಪ್ರತಿಫಲಿಸುತ್ತದೆ, ನೀರಿನೊಳಗೆ ಚಲಿಸುವ ಜಲಚರಗಳಿಗೆ ವಿಶೇಷವಾದ ಶ್ರವಣ ಶಕ್ತಿಯಿದೆ. ಆಹಾರ ಗಳಿಕೆ ಮತ್ತು ಪ್ರಾಣ ರಕ್ಷಣೆಗಳಿಗೆ ಅವು ಪ್ರತಿಧ್ವನಿಯನ್ನೆ ಅವಲಂಬಿಸಿರುತ್ತವೆ. ಜಲಚರಗಳು ಪ್ರತಿಧ್ವನಿಯ ಉಪಯೋಗ ಪಡೆಯುವ ರೀತಿಯನ್ನ ರಿಯಲು ವಿಲಿಯಮ್ ಶೆವಿಲ್ ಮತ್ತು ಬಾರ್ಬಾರಾ ಲಾರೆನ್ಸ್‌ ತಿಮಿ ವರ್ಗದ ಒಂದು ಸಸ್ತನಿ ಪ್ರಾಣಿಯ ಮೇಲೆ ಪ್ರಯೋಗಗಳನ್ನು ನಡೆಸಿದರು. ಸುಮಾರು ಎರಡು ಮೀಟರ್‌ ಉದ್ದದ ಈ ಪ್ರಾಣಿ ನೀಡುವ ಸರ್ಕಸ್ ರೀತಿಯ ಪ್ರದರ್ಶನ ನೋಟಕ್ಕೆ ರಂಜಕ. ಆಹಾರಕ್ಕೆಂದು ನೀರಿನಿಂದ ಚಿಮ್ಮಿ, ಮೇಲೆ ನೇತುಹಾಕಿದ ಸತ್ತ ಮೀನನ್ನು ಬುದ್ಧಿವಂತಿಕೆಯಿಂದ ಅದು ಹಿಡಿಯುವ ದೃಶ್ಯ ಸುಂದರವಾದದ್ದು. ಇದಕ್ಕೆ ವ್ಯತಿರಿಕ್ತವಾಗಿ ಗಾಳಿಯಲ್ಲಿ ವಿಶಿಷ್ಟ ಶ್ರವಣ ಶಕ್ತಿಯನ್ನು ಸೋಜಿಗಗೊಳಿಸುವ ರೀತಿಯಲ್ಲಿ ಪ್ರದರ್ಶಿಸುವ ಬಾವಲಿಯ ದೃಷ್ಟಾಂತವನ್ನು ಗಮನಿಸಬೇಕು. ಸಾಮಾನ್ಯವಾಗಿ ಧೂಳು ತುಂಬಿದ ಕತ್ತಲೆ ಕೋಣೆಯನ್ನು ಇಷ್ಟಪಡುವ ಈ ಚಿಕ್ಕ ಪ್ರಾಣಿಯ ಮೇಲೆ ಇಟಲಿಯ ಸ್ಪೆಲಾಜೆನಿ ಅನೇಕ ಪ್ರಯೋಗಗಳನ್ನು ನಡೆಸಿದ. 1793ರಲ್ಲಿ ಪ್ರಾರಂಭವಾದ ಈ ಪ್ರಯೋಗಗಳು ಪ್ರತಿಧ್ವನಿಯ ಉಪಯೋಗವನ್ನು ಕುರಿತು ಒಂದು ಹೊಸ ಅಧ್ಯಾಯವನ್ನೆ ಸೃಷ್ಟಿಸಿತೆನ್ನಬೇಕು. ಸ್ಪೆಲಾಜೆನಿ ಕತ್ತಲಲ್ಲಿ ಪ್ರಾಣಿಗಳು ಚಲಿಸುವ ರೀತಿಯನ್ನು ವಿಸ್ತಾರವಾಗಿ ಅಭ್ಯಸಿಸಿದ. ಗೂಬೆ ಮತ್ತಿತರ ಪ್ರಾಣಿಗಳು ಹಾರಾಟಕ್ಕೆ ಕಣ್ಣುಗಳನ್ನೆ ಅವಲಂಬಿಸಿ ಸಂಪೂರ್ಣ ಕತ್ತಲಲ್ಲಿ ನಿಸ್ಸಹಾಯಕವಾಗುವುವೆಂದು ಅವನು ತಿಳಿಸಿದ. ಆದರೆ ಬಾವಲಿ ಇದರಿಂದ ಹೊರತು, ಯಾವ ತೊಂದರೆಯೂ ಇಲ್ಲದಂತೆ ಬಾವಲಿ ಕಗ್ಗತ್ತಲಲ್ಲಿ ಹಾರಾಡುವುದನ್ನು ಕಂಡು ಚಕಿತನಾದ. ಸ್ಪೆಲಾಜೆನಿ ಪ್ರಯೋಗ ವಿಸ್ತರಣೆಗಾಗಿ ಕೆಲವು ಬಾವಲಿಗಳನ್ನು ಕುರುಡಾಗಿಸಿದ. ಆಗಲೂ ಬಾವಲಿಗಳು ಮೊದಲಿನಂತೆಯೇ ವರ್ತಿಸಿದವು. ಸುರಕ್ಷಿತವಾಗಿ ಹಾರಾಡಿದ್ದಲ್ಲದೆ ಯಶಸ್ವಿಯಾಗಿ ಕೀಟಗಳನ್ನು ಆಹಾರಕ್ಕಾಗಿ ದೊರಕಿಸಿಕೊಂಡವು. ಅನಂತರ ಸ್ಪೆಲಾಜೆನಿ ಬಾವಲಿಗಳ ಕಿವಿಯ ತಮಟೆ ಮುಚ್ಚಿ ಪ್ರಯೋಗ ನಡೆಸಿದ. ಆಗ ಬಾವಲಿಗಳು ಅಕ್ಕಪಕ್ಕಕ್ಕೆ ಢಿಕ್ಕಿ ಹೊಡೆದು ಕಂಗಾಲಾದವು. ನೋಟಕ್ಕೆ ಕಣ್ಣಿನ ಸ್ಥಾನವನ್ನು ಕಿವಿ ವಹಿಸಿಕೊಂಡಿದ್ದಕ್ಕೆ ಸೂಕ್ತ ವಿವರಣೆ 1800ರ ಹೊತ್ತಿಗೆ ನಡೆದ ಈ ಪ್ರಯೋಗ ಕಾಲದಲ್ಲಿ ಒದಗುವಂತಿರಲಿಲ್ಲ. ಸ್ಪೆಲಾಜೆನಿಯ ಬಾವಲಿ ಸಮಸ್ಯೆ ಎಂದು ಪ್ರಖ್ಯಾತಗೊಂಡರೂ ತಿರಸ್ಕೃತವಾದ ಈ ವಿಷಯದ ಬಗ್ಗೆ ಖಚಿತ ಅಧ್ಯಯನ ಪ್ರಾರಂಭವಾದದ್ದು ಕೇವಲ 50 ವರ್ಷದ ಹಿಂದೆ. ಹಾರ‍್ವರ್ಡ್‌ನ ಪಿಯರ‍್ಸ್‌ ಮಾನವ ಶ್ರವಣಾನೀಮೆಯಾಚೆಯ ಶಬ್ದ ತರಂಗಗಳನ್ನು ಗುರುತಿಸುವ ಎಲೆಕ್ಟ್ರಾನಿಕ್ ಉಪಕರಣವೊಂದನ್ನು ನಿರ್ಮಿಸಿ ಹೆಚ್ಚು ಸಹಕಾರಿಯಾದ. ಬಾವಲಿಗಳು ಪ್ರಯೋಗಕ್ಕೆ ಒಳಗಾಗಿ ಒಂದು ಬಗೆಯ ಶ್ರವಣಾತೀತ ಶಬ್ದವನ್ನು ಹೊರಸೂಸುತ್ತವೆಂದು ಗೊತ್ತಾಯಿತು. ಬಾವಲಿಗಳ ಬಾಯಿಯನ್ನು ಮುಚ್ಚಿದರೆ ಶಬ್ದ ಹೊಮ್ಮಿಸುವುದನ್ನೇ ನಿಲ್ಲಿಸಿದಂತಾಗಿ ಕಿವಿಯನ್ನು ಹಾಳುಮಾಡಿದ ರೀತಿಯಲ್ಲೆ ಡಿಕ್ಕಿ ಹೊಡೆಯುತ್ತ ಹಾರಾಡಿದವು. ಈ ಪ್ರಯೋಗಗಳಿಂದ ಬಾವಲಿಗಳ ಹಾರಾಟಕ್ಕೆ ಅವು ಸ್ಫುರಿಸುವ ಉನ್ನತಾವರ್ತದ (high trequency) ಶಬ್ದವೇ ಮೂಲವೆಂದು ಸ್ಥಿರಪಟ್ಟಿತು. ಮತ್ತೊಂದು ಕುತೂಹಲದ ಸಂಗತಿಯೆಂದರೆ ಬಾವಲಿ ಉನ್ನತಾವರ್ತದ ಶಬ್ದ ಹೊಮ್ಮಿಸುವುದರ ಜೊತೆಗೆ ಒಂದು ರೀತಿಯ ಟಿಕ್ ಶಬ್ಬವನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಸ್ವಲ್ಪ ಹೊತ್ತು ಹಾರಾಡುವ ಬಾವಲಿಯ ಹಾರಾಟವನ್ನು ಗಮನಿಸುವ ಪ್ರಯತ್ನ ಮಾಡಿದರೆ ಈ ಟಿಕ್ ಶಬ್ದವನ್ನು ಕೇಳಬಹುದು. ಸಸ್ಯಾಹಾರಿ ವರ್ಗದ ಬಾವಲಿಗಳು ಉಂಟುಮಾಡುವ ಟಿಕ್ ಶಬ್ದ ಹೆಚ್ಚು ಸ್ಪಷ್ಟವಾಗಿರುತ್ತದೆ. 1932 ರಲ್ಲಿ ಡಚ್ ವಿಜ್ಞಾನಿ ಸ್ವೆರ್ನ್‌ ಡಿಗ್ರಾಫ್ ಈ ಟಿಕ್ ಶಬ್ದದ ಬಗ್ಗೆ ಆಳವಾದ ಅಧ್ಯಯನದ ನಂತರ ಬಾವಲಿಗಳು ಹಾರಾಡುವಾಗ ಅಡ್ಡ ಬರುವ ತಡೆಗಳನ್ನು ಪ್ರತಿಧ್ವನಿಯ ಮೂಲಕವೇ ಗುರುತಿಸುತ್ತವೆಂದು ಕಂಡು ಹಿಡಿದ.
ಶಬ್ದ ತರಂಗಗಳು ದ್ರವ, ಘನವಸ್ತು ಹಾಗೂ ಅನಿಲಗಳಲ್ಲಿ ಚಲಿಸುತ್ತವೆ. ಅವುಗಳ ಚಲನೆಗೆ ಒಂದು ಮಾಧ್ಯಮ ಅವಶ್ಯಕ. ನಿರ‍್ವಾಯು ಮಾಧ್ಯಮದಲ್ಲಿ ಶಬ್ದ ಚಲಿಸುವುದಿಲ್ಲ. ಈ ತರಂಗಗಳ ವೇಗವೂ ಮಾಧ್ಯಮ ಮತ್ತು ಸ್ವಲ್ಪ ಮಟ್ಟಿಗೆ ಉಷ್ಣಾಂಶವನ್ನು ಅವಲಂಬಿಸುತ್ತದೆ. ಗಾಳಿಯಲ್ಲಿ 20°c ಉಷ್ಣಾಂಶವಿರುವಾಗ ಶಬ್ದ ತರಂಗದ ವೇಗ ಸೆಕೆಂಡಿಗೆ 344 ಮೀಟರ್‌ಗಳಿರುತ್ತದೆ ; ಮತ್ತು ೦°c ಉಷ್ಣಾಂಶವಿರುವ ಸವಂದ್ರದ ನೀರಿನಲ್ಲಿ ಅದರ ವೇಗ ಸೆಕೆಂಡಿಗೆ 1550 ಮೀಟರ್‌ಗಳಿರುತ್ತದೆ.
ಶಬ್ದ ತರಂಗದ ಚಲನೆಯನ್ನು ಕಂಡುಹಿಡಿಯಬೇಕಾದಲ್ಲಿ ಅದು ಯಾವುದೇ ವಸ್ತುವಿನೊಡನೆ-ಭೂಮಿ, ಗೋಡೆ ಇತ್ಯಾದಿ- ಪರಸ್ಪರ ಕ್ರಿಯೆ ಉಂಟುಮಾಡಬೇಕು. ಹಾಗಿಲ್ಲದೆ ಒಂದು ಬಗೆಯ ಕಾಸ್ಮಿಕ್ ಕಿರಣ ನ್ಯೂಟ್ರಿಸೊಸ್‌ನಂತೆ ಯಾವುದೇ ವಸ್ತುವಿನ ಮೇಲೆ ಅತಿ ಕಡಿಮೆ ಪ್ರಭಾವ ಬೀರಿದರೆ ತರಂಗ ಚಲನೆಯನ್ನು ನಿಖರವಾಗಿ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಆದರೆ ಬೆಳಕಿನ ಮತ್ತು ಶಬ್ದದ ತರಂಗಗಳು ಭೂಮಿಯಲ್ಲಿನ ವಸ್ತುಗಳ ಮೇಲೆ ಪರಸ್ಪರ ಕಾರ‍್ಯವೆಸಗುವುದರಿಂದ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಸಹಾಯ ಮಾಡಿದೆ.
ಶಬ್ದ ತರಂಗದ ಚಲನೆಗೂ ಮತ್ತು ಇತರ ತರಂಗಗಳ ಚಲನೆಗೂ ಸಾಕಷ್ಟು ವ್ಯತ್ಯಾಸವಿದೆ. ಮಾಧ್ಯಮವೊಂದರಲ್ಲಿ–ಗಾಳಿ ಮುಂತಾದುವುಗಳಲ್ಲಿ-ಚಲಿಸುವ ಶಬ್ದ ಒಂದು ಗೊತ್ತಾದ ಗತಿಗನುಸಾರವಾಗಿ ಒತ್ತಡವನ್ನು ಹೆಚ್ಚಿಸುತ್ತದೆ. ಇಲ್ಲವೆ ಕಡಿಮೆ ಮಾಡುತ್ತದೆ. ಇದನ್ನೆ ನಾವು ಆವರ್ತ (frequency) ಎನ್ನುವುದು. ಇದೂ ಕೂಡ ಸದಾ ಕಾಲ ಒಂದೆ ಬಗೆಯದಾಗಿರುವುದಿಲ್ಲ.
ಪ್ರತಿಧ್ವನಿ ದೂರವಸ್ತುವೊಂದರಿಂದ ಪ್ರತಿಫಲಿತಗೊಂಡ ಶಬ್ದ ತರಂಗ. ಹತ್ತಿರದ ವಸ್ತುಗಳಿಂದ ಉಂಟಾಗುವ ಸಮೂಹ ಪ್ರತಿಫಲನಗಳನ್ನು ವ್ಯನುನಾದ (reverberation) ಎನ್ನುತ್ತಾರೆ. ಪ್ರತಿಫಲನಗೊಳಿಸುವ ವಸ್ತು ಹತ್ತಿರವಿರುವುದರಿಂದ ಪ್ರತಿಫಲಿತ ಶಬ್ದದೊಡನೆ ಮೂಲ ಶಬ್ದವೂ ಮಿಳಿತಗೊಳ್ಳುವ ಸಂಭವ ಹೆಚ್ಚು. ಗಾಳಿಯಲ್ಲಿ ಪ್ರತಿಧ್ವನಿಯನ್ನು ಕೇಳಬೇಕಾದಲ್ಲಿ ಪ್ರತಿಫಲನಗೊಳಿಸುವ ವಸ್ತು ಮೂಲ ಶಬ್ದಕ್ಕಿಂತ 172 ಮೀಟರುಗಳಿಗಿಂತ ದೂರದಲ್ಲಿರಬೇಕು. ಅಂದರೆ ವಸ್ತು ಶಬ್ದ ತರಂಗದ ವೇಗದ ಅರ್ಧಕ್ಕಿಂತ ಹೆಚ್ಚು ದೂರದಲ್ಲಿರಬೇಕೆಂದು ಹೇಳಿದಂತಾಯಿತು.
ಗಾಳಿಯಲ್ಲಿ ಪ್ರತಿಧ್ವನಿಯ ಪ್ರಯೋಗದ ಪ್ರಯೋಜನ ಪಡೆಯುವ ಒಂದು ಸಾಮಾನ್ಯ ಉದಾಹರಣೆ ಕೊಡಬಹುದು. ಮಂಜು ತುಂಬಿದ ವಾತಾವರಣದಲ್ಲಿ ದೋಣಿಗಳಲ್ಲಿ ಹೋಗುವಾಗ ಅಂಬಿಗ ದೂರದ ತಡೆ, ದಡ ಮುಂತಾದುವುಗಳ ದೂರವರಿಯಲು ವಿವಿಧ ಸ್ಥಾಯಿಯಲ್ಲಿ ಕೂಗುತ್ತ ಪ್ರತಿಧ್ವನಿಗಾಗಿ ಕಾಯುತ್ತಾನೆ. ಅಂತರ್ಜಲದಲ್ಲಿ ಪ್ರತಿಧ್ವನಿಯ ಉಪಯೋಗ ಪಡೆಯಲು ಆಧುನಿಕ ಉಪಕರಣಗಳು ಸೃಷ್ಟಿಯಾಗಿವೆ. ದೋಣಿಯ ಹಾಯಿಪಟದಿಂದ ಶಬ್ದ ತರಂಗಗಳನ್ನು ಹೊಮ್ಮಿಸುವ ವ್ಯವಸ್ಥೆ ಮಾಡಿ ಅಂತರ್ಜಲದಿಂದ ಉಂಟಾಗುವ ಪ್ರತಿಧ್ವನಿಗಳನ್ನು ಈ ಉಪಕರಣಗಳು ದಾಖಲೆಗೊಳಿಸುತ್ತವೆ. ಈಗೀಗ ಹೆಚ್ಚು ಸುಧಾರಿತ ಉಪಕರಣದಲ್ಲಿ ಚಲಿಸುವ ಮೀನಿನ ಸಮೂಹವನ್ನು ಕೂಡ ಪತ್ತೆ ಹಚ್ಚಬಹುದು.
ಒಂದು ಗೊತ್ತಾಗ ಸ್ಥಾಯಿಯಲ್ಲಿ ಧ್ವನಿಯನ್ನು ಹೊಮ್ಮಿಸುವ ವಸ್ತುವನ್ನು-ಟೇಪ್ ರೆಕಾರ್ಡರ್‌ ಎಂದಿಟ್ಟುಕೊಳ್ಳಿ-ಬಯಲಿನಲ್ಲಿ ಮತ್ತು ರೂಮಿನೊಳಗಿಟ್ಟು ಗಮನಿಸಿದರೆ ಒಂದು ಕುತೂಹಲಕರ ಅನುಭವವಾಗುತ್ತದೆ. ರೂಮಿನಲ್ಲಿ ನಾವು ಗ್ರಹಿಸುವ ಶಬ್ದ ಬಯಲಿನಲ್ಲಿನ ಶಬ್ದಕ್ಕಿಂತ ಹೆಚ್ಚು ತೀವ್ರವಾಗಿರುತ್ತದೆ. ಇದಕ್ಕೆ ಶಬ್ದವು ಉಂಟುಮಾಡುವ ವ್ಯಮವದವೇ ಕಾರಣ.
ಶಬ್ದ ತರಂಗಗಳಿಗೂ ಬೆಳಕಿನ ತರಂಗಗಳಿಗೂ ಹಾಗೂ ನೀರಿನ ತರಂಗಗಳಿಗೂ ಹಲವಾರು ಸಮಾನ ಗುಣಗಳಿವೆ. ಶಬ್ದ ಸಂಕೇತಗಳನ್ನು ಗಾಳಿಯಲ್ಲಿ ಕಳುಹಿಸಲು ಸುಲಭ. ಆದರೆ ನೀರಿನಲ್ಲಿ ಇದು ಕಷ್ಟ. ಸಂಕೇತಗಳು ನೀರಿನಲ್ಲಿ ಬೇಗನೆ ನಿರ್ನಾಮವಾಗುವುದಲ್ಲದೆ ಅಲೆಗಳ ಶಬ್ದ ಮತ್ತಿತರ ಶಬ್ದದೊಂದಿಗೆ ಸೇರಿ ಗೊಂದಲವೇರ್ಪಡುತ್ತದೆ. ಪ್ರಯೋಗಾಲಯದಲ್ಲಿ ನೀರಿನ ಮುಖಾಂತರ ಸಂಕೇತ ಪ್ರವಹಿಸುವ ರೀತಿಯನ್ನರಿಯಲು ಜೀರುಂಡೆಯ ಮೇಲೆ 1920 ರಲ್ಲಿ ಜರ್ಮನಿಯ ಫೆಡ್ರಿಚ್ ಎಗ್ಗರ್ ಅನೇಕ ಪ್ರಯೋಗ ನಡೆಸಿದ.
ಅನಂತರ ಈ ದಿಕ್ಕಿನಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಲಿಲ್ಲ.
ಸಾಮಾನ್ಯವಾಗಿ ಪ್ರತಿಯೊಂದು ವಸ್ತುವೂ ಶಬ್ದವನ್ನು ಪ್ರತಿಫಲಿಸುತ್ತದೆ. ಮೂಲಧ್ವನಿ ಮತ್ತು ಪ್ರತಿಧ್ವನಿಗಳ ಕಾಲದಂತರವನ್ನು ಗುಣಿಸಿ ವಸ್ತುವಿನ ದೂರವನ್ನು ತಿಳಿಯಲು ಸಾಧ್ಯ. ಆದರೆ ಹಲವು ಸಂದರ್ಭಗಳಲ್ಲಿ ನಾವು ಪ್ರತಿಧ್ವನಿಯನ್ನು ಗ್ರಹಿಸದಿರುವುದಕ್ಕೆ ಈ ಕಾಲದಂತರ ಅತಿ ಸೂಕ್ಷ್ಮವಾಗಿರುವುದು ಪ್ರಮುಖ ಕಾರಣ. ಆವರ್ತ ಲೇಖಕದ (Cathode ray Osciliograph) ಮುಖಾಂತರ ಶಬ್ದ ತರಂಗಗಳ ರೂಪರೇಷೆಯನ್ನು ಗಮನಿಸಬಹುದು. ಮಾತನಾಡುವ ನಾವು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿದರೆ ಆವರ್ತ ಲೇಖಕದಲ್ಲಿನ ತರಂಗರೂಪ ತಕ್ಷಣ ಕರಗದೆ ಕ್ರಮೇಣ ಕರಗುತ್ತದೆ. ಆಡಿದ ಮಾತಿನ ಶಬ್ಬ ಗೋಡೆಯಿಂದ ಎದುರು ಗೋಡೆಗೆ ಮಾತು ನಿಲ್ಲಿಸಿದ ಮೇಲೂ ಚಲಿಸಿರುವುದನ್ನು ಇದು ನಿರೂಪಿಸುತ್ತದೆ. ಹೀಗುಂಟಾದ ಪ್ರತಿಧ್ವನಿಗಳ ಕಾಲ ವಿವಿಧ ಕಾರಣಗಳಿಗಾಗಿ ಒಂದು ಸೆಕೆಂಡಿಗಿಂತ ಬಹಳ ಕಡಿಮೆ.
ಬಾವಲಿ ಹಾಗೂ ಮನುಷ್ಯರು ಪ್ರತಿಧ್ವನಿಯ ಸಹಾಯದಿಂದ ಚಿಕ್ಕ ಮತ್ತು ದೊಡ್ಡ ವಸ್ತುಗಳನ್ನು ಗುರುತಿಸಲು ಸಾಧ್ಯ. ಚಿಕ್ಕ ವಸ್ತುಗಳನ್ನು ಗುರುತಿಸುವಾಗ ಪ್ರತಿಫಲಿತ ತರಂಗಗಳು ಹೆಚ್ಚು ಉಪಯುಕ್ತ. ತೀಕ್ಷ್ಣ ಶಬ್ದ ಉಂಟುಮಾಡುವ ವ್ಯವಸ್ಥೆಯಿಂದ ಅರ್ಧ ಅಡಿಯಿಂದ ಹಲವಾರು ಅಡಿ ದೂರವಿರುವ ಮರ, ಟೆಲಿಫೋನ್ ಕಂಬ ಇತ್ಯಾದಿ ಅನೇಕಾನೇಕ ವಸ್ತುಗಳನ್ನು ಪ್ರತಿಧ್ವನಿಯ ಸಹಾಯದಿಂದ ಕಂಡುಹಿಡಿಯಬಹುದು. ಈ ವಿಧಾನವನ್ನು ಇನ್ನಷ್ಟು ಉತ್ತಮಗೊಳಿಸಿ ತೀಕ್ಷ್ಣ ಶಬ್ದ ಉಂಟುಮಾಡುವ ವಸ್ತುವನ್ನು
ಮತ್ತೊಬ್ಬರ ಕೈಗೆ ಕೊಟ್ಟು, ಅದನ್ನು ಮರ ಇತ್ಯಾದಿ ವಸ್ತುಗಳ ಕಡೆ ನಿರ್ದೇಶಿಸುವಂತೆ ಹೇಳಿ, ಅತ್ತಿತ್ತ ಚಲಿಸುತ್ತೆ ಪ್ರತಿಧ್ವನಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿರುವ ಸ್ಥಾನವನ್ನು ಕಂಡುಹಿಡಿಯಲು ಸಾಧ್ಯ. ಹೀಗೆ ವರ್ತಿಸಿದಾಗ ಸಾಮಾನ್ಯವಾಗಿ ವಿಸ್ತಾರ ಕೋಣದಲ್ಲಿ ಹೆಚ್ಚು ಪ್ರಮಾಣದ ಪ್ರತಿಧ್ವನಿಯನ್ನು ಕೇಳಬಹುದು.
ಪ್ರತಿಧ್ವನಿಯ ಭಾಷೆಯನ್ನು ಅರಿಯಲು ಮನುಷ್ಯನು ಪ್ರಾಣಿಗಳಷ್ಟು ಸಮರ್ಥನಲ್ಲದಿದ್ದರೂ ಪ್ರತಿಧ್ವನಿಯನ್ನು ಗುರುತಿಸುವುದಕ್ಕೆ ಸಂಬಂಧಿಸಿದಂತೆ ಮಹತ್ವಪೂರ್ಣ ಪ್ರಗತಿ ಸಾಧಿಸಿದ್ದಾನೆ. ಅನೇಕ ಉಪಕರಣಗಳ ನಿರ್ಮಾಣವಾಗಿದೆ. ಕೇವಲ ಶಬ್ದ ತರಂಗಗಳನ್ನು ಒಳಗೊಳ್ಳುವ ಉಪಕರಣವನ್ನು ಸೋನಾರ್‌ ಎನ್ನುತ್ತಾರೆ ಮತ್ತು ವಿದ್ಯುತ್ಕಾಂತ ತರಂಗಗಳನ್ನು ಒಳಗೊಳ್ಳುವುದು ರಾಡಾರ್‌ ಉಪಕರಣ. ಸೋನಾರ್ ವ್ಯವಸ್ಥೆಯನ್ನು ಅಂತರ್ಜಲ ಪ್ರತಿಧ್ವನಿಯನ್ನು ಕುಡುಹಿಡಿಯುವುದಕ್ಕೂ ರಾಡಾರ್ ವ್ಯವಸ್ಥೆಯನ್ನು ಹೊರ ವಾತಾವರಣದಲ್ಲೂ ಬಳಸುತ್ತಾರೆ. ಸೋನಾರ್ ವ್ಯವಸ್ಥೆ ಸಾಕಷ್ಟು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದು ಎರಡನೆಯ ಮಹಾಯುದ್ಧದ ಕಾಲದಲ್ಲಿ. ಇದರಲ್ಲಿ ಶ್ರವಣಾತೀತ ಶಬ್ದಾವರ್ತಕಗಳಿರುವುದರಿಂದ ಅವುಗಳನ್ನು ಶ್ರವಣ ಸೀಮೆಗೆ ದೊರಕಿಸಿಕೊಳ್ಳಲು ಮತ್ತೊಂದು ವ್ಯವಸ್ಥೆ ಇರಬೇಕಾದದ್ದು ಅಗತ್ಯ. ಇದಕ್ಕಾಗಿ ಸೋನಾರ್‌ನಲ್ಲಿ ವಿದ್ಯುತ್‌ವ್ಯೂಹವೊಂದಿರುತ್ತದೆ.
ಮುಂಬರುವ ಪ್ರತಿಧ್ವನಿಯ ಜೊತೆಗೆ ನಿರ್ಮಾಣಗೊಂಡ ಸ್ಥಳೀಯಾವರ್ತಗಳು (local frequencies) ಸೇರಿ ಶ್ರವಣಸಾಧ್ಯವಾದ ಧ್ವನಿ ಸೂಚಕ (beat note) ಉದ್ಭವಿಸುತ್ತದೆ. ಉದಾಹರಣೆಗೆ ಪ್ರತಿಧ್ವನಿಯಾವರ್ತ ಸೆಕೆಂಡಿಗೆ ಇಪ್ಪತ್ತೊಂದು ಸಾವಿರವಿದ್ದು ಸ್ಥಳೀಯಾವರ್ತ ಸೆಕೆಂಡಿಗೆ ಇಪ್ಪತ್ತೆರಡು ಸಾವಿರವಿದ್ದರೆ ಇವೆರಡೂ ಸೇರಿ ಆವರ್ತ ಸಂಖ್ಯೆ ಸೆಕೆಂಡಿಗೆ ಒಂದು ಸಾವಿರವಿರುವ ಶ್ರವಣಸಾಧ್ಯ ಶಬ್ದವನ್ನು ಉಂಟುಮಾಡುತ್ತದೆ.
1912ರಲ್ಲಿ ದೈತ್ಯಾಕಾರದ ಮಂಜುಗಡ್ಡೆಯ ಕಾರಣದಿಂದ ದುರಂತಕ್ಕೀಡಾದ ಟಿಟ್ಯಾನಿಕ್ ನೌಕೆ ಕಗ್ಗತ್ತಲಲ್ಲಿ ಮಂಜುಗಡ್ಡೆಯನ್ನು ಗುರುತಿಸುವ ಪ್ರಯತ್ನಗಳಿಗೆ ಮೊದಲಿಡಲು ಕಾರಣವಾಯಿತು. 1959ರ ವರೆಗೂ ನೌಕಾಯಾನ ಮಂಜುಗಡ್ಡೆಯ ಭೀತಿಯಿಂದ ಮುಕ್ತವಾಗಿರಲಿಲ್ಲ. ಸರ್ ಹಿರ‍್ರಮ್ ಮ್ಯಾಕ್ರಿಮ್ ಇದಕ್ಕೆ ಮೊದಲೆ ನೌಕಾಯಾನಕ್ಕೂ ಬಾವಲಿಯ ರೀತಿಯನ್ನೆ ಬಳಸಬಹುದೆಂದು ಸೂಚಿಸಿದ್ದ. ಆದರೆ ತನ್ನ ವಿಚಾರವನ್ನು ಕಾರ್ಯರೂಪಕ್ಕೆ ತರಲು ಅಸಮರ್ಥನಾದ.
ಘನವಸ್ತುವಿನಲ್ಲಿ ಚಲಿಸುವ ಶಬ್ದ ತರಂಗಗಳನ್ನು ಗುರುತಿಸುವ ಉಪಕರಣಗಳು ಕಂಡು ಒಡಿಯಲ್ಪಟ್ಟಿವೆ. ಭೂಕಂಪ ಲೇಖಕದ (Seismograph) ನಿರ್ಮಾಣ ಭೂಕಂಪದ ಸಮಯದಲ್ಲಿ ನೆಲದ ನಡುಗುವಿಕೆ ಇತ್ಯಾದಿಗಳನ್ನು ದಾಖಲೆಗೊಳಿಸಲು ಸಹಾಯ ಮಾಡಿದೆ. ಗೊಂದಲದ ಶಬ್ದದೊಂದಿಗೆ ಸೇರಿಹೋದ ಸಂಕೀರ್ಣ ಶಬ್ದಗ್ರಹಣ ಕೇವಲ ಬಾವಲಿ ಮತ್ತಿತರ ಪ್ರಾಣಿವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಶಬ್ದಗಳ ಪ್ರಭೇದಶಕ್ತಿ ವಿಶಿಷ್ಟ ಬುದ್ಧಿಶಕ್ತಿಯುಳ್ಳ ಮನುಷ್ಯರಿಗೂ ಸಾಧ್ಯ. ಸಂಗೀತ, ಅರಿಯದ ಭಾಷೆ ಮುಂತಾದುವುಗಳನ್ನು ಕೇಳುವಾಗ ಮನುಷ್ಯನಿಗೆ ನೈಜವಾಗಿ ಲಭ್ಯವಾಗಿರುವ ಈ ಶಕ್ತಿಯ ಅರಿವಾಗುತ್ತದೆ.
ನಮ್ಮ ಇಡಿ ಜೀವನ ಬೆಳಕು ಹಾಗೂ ದೃಷ್ಟಿಯನ್ನು ಅವಲಂಬಿಸಿರುವುದರಿಂದ ಕುರುಡುತನ ಅತ್ಯಂತ ದಾರುಣವಾದದ್ದು. ಆದರೆ ಶಬ್ದ ಗ್ರಹಣ ಮತ್ತು ಅನುಸಂಧಾನಕ್ಕೆ ದೃಷ್ಟಿಯೊಂದೆ ಮಾರ್ಗವಲ್ಲ. ಶಬ್ದವೂ ಕೂಡ ದೃಷ್ಟಿಯಷ್ಟೆ, ಅಷ್ಟೇ ಏಕೆ, ಅದಕ್ಕಿಂತ ಹೆಚ್ಚು ಸೂಕ್ಷ್ಮ ಹಾಗೂ ಪ್ರಬಲ ಸ್ಥಾನ ಗಳಿಸಬಲ್ಲದು. ಇದು ಪ್ರಯೋಗಗಳಿಂದ ಸ್ಥಿರ ಪಟ್ಟದೆ. ಕುರುಡರಿಗೆ ದೃಷ್ಟಿಯ ಸಹಾಯ ಇಲ್ಲದಿರುವುದು ಸತ್ಯವಾದರೂ ನಡೆಯುವಾಗ ಎದುರಾಗುವ ತಡೆ ಇತ್ಯಾದಿಗಳನ್ನು ಗ್ರಹಿಸುವ ರೀತಿ ಸೋಜಿಗಗೊಳಿಸುವಷ್ಟು ಸಫಲವಾದದ್ದು. ವಸ್ತುಗಳನ್ನು ಮುಟ್ಟದೆ, ನೋಡದೆ, ಜನನಿಬಿಡ ಸ್ಥಳಗಳಲ್ಲಿ ಸಲೀಸಾಗಿ ಚಲಿಸುವ ಅವರನ್ನೆ ಕೇಳಿದರೆ ಅನೇಕ ಬಗೆಯ ವಿವರಣೆ ಸಿಗುತ್ತದೆ. ಈ ವಿಷಯವನ್ನು ಕುರಿತು ಡಾಲೆನ್ ಬ್ರಾಟ್ ತನ್ನಿಬ್ಬರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂಶೋಧನೆ ಬಹಳ ಉಪಯುಕ್ತವಾದದ್ದು. ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬನು ಕುರುಡನಾಗಿದ್ದುದರಿಂದ ಪ್ರಯೋಗ ಮತ್ತು ಸಂಶೋಧನೆಗೆ ಸಹಕಾರಿಯಾಯಿತು. ಈ ಪ್ರಯೋಗಗಳಿಂದ ಎರಡು ಪ್ರಮುಖ ಸಿದ್ಧಾಂತಗಳನ್ನು ರೂಪಿಸಿದ. ಒಂದು ಸಿದ್ದಾಂತದ ಪ್ರಕಾರ ಮನುಷ್ಯನ ಚರ್ಮ ಒಂದು ಬಗೆಯ ಸ್ಪರ್ಶ ಅಥವಾ ಒತ್ತಡದ ಸೂಚನೆಯನ್ನು ಒದಗಿಸುವುದೆಂದು ತಿಳಿಸಿದ. ಇನ್ನೊಂದು ಸಿದ್ಧಾಂತದಲ್ಲಿ ಶಬ್ದವೇ ಪ್ರಮುಖ ಪಾತ್ರ ವಹಿಸಿ ಕಾರ‍್ಯ ನಿರ್ವಹಿಸುವುದೆಂದು ವಿವರಿಸಿದ.
ಶಬ್ದ ತರಂಗಗಳಿಂದ ಅನೇಕ ಉಪಯೋಗಗಳಿವೆ. ರಬ್ಬರ್‌ ಮತ್ತಿತರ ವಸ್ತುಗಳ ಪರಿ ಶುದ್ಧತೆಯನ್ನು ವಿಶ್ಲೇಷಿಸಬಹುದು. ವಸ್ತುಗಳು ಪರಿಶುದ್ಧವಾಗಿದ್ದರೆ ಶಬ್ದ ತರಂಗದ ಚಲನೆ ಸುಲಲಿತವಾಗಿರುತ್ತದೆ. ಇಲ್ಲದಿದ್ದರೆ ಅಂಕುಡೊಂಕಾಗಿರುತ್ತದೆ. ಇತ್ತೀಚೆಗೆ ಶಬ್ದ ತರಂಗಗಳನ್ನು ಜೀವಿತ ವಸ್ತುಗಳಿಗೂ ಉಪಯೋಗಿಸಲು ಸಾಧ್ಯವಿದೆ. ಹಲವು ವಿಧದಲ್ಲಿ ಇದು ಕ್ಷ-ಕಿರಣಗಳಿಗಿಂತ ಉತ್ತಮವನ್ನಿಸಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ.

Close

ರಾಮರಾಜ್ಯೋತ್ಸವ

ರಾಮರಾಜ್ಯೋತ್ಸವ

ಅರವಿಂದ ನಾಡಕರ್ಣಿ

“ಹಾ ರಾಮ ಹಾ ರಾಮ….”
ರಾಮರಾಜ್ಯದ ಬುನಾದಿಯಲೆಲ್ಲೋ
ನರಳಿದ ಸದ್ದೆಂದಿರಾ ? ಸುಳ್ಳೇ ಸುಳ್ಳು.
ಜೇಲು ಜಲಿಯನ್‌ವಾಲಾಬಾಗ ಮಂಡಾಲೇ
ಭಗೀರಥರ ಮೂಳೆ ಹುಗಿದು
ಮಿಶ್ರಿತ ಸಿಮೆಂಟಿನ ಗುಡ್ಡವೇರಿಸಿ
ಕಟ್ಟಿದಯೋಧ್ಯಾಪುರಿಯಿದು.
ಕೆರಳಿದವರಿಲ್ಲ, ನರಳಿದ ಸದ್ದೆಂದರೇನು?
ಆನಂದಪರವಶ ಸಮಸ್ತಜನತೆ
ಕೊಳತೊಡೆದು ರಾಜರಾಣಿಯರಾಗಿ
ಸಮೃದ್ದಿಯುತ್ಸವದಲ್ಲಿ ಮೆರೆಯಬಂದವರು
ಭಗೀರಥ ಕತೆ ಮರೆತರೇನಂತೆ?
ಒಗೆ ಆ ಹಳೇ ಪುರಾಣಗಳ ತಟ್ಟು.
ನೋಡೀ ರಾಮರಾಜ್ಯದ ಗುಟ್ಟು.

ಪಟ್ಟಾಭಿಷೇಕದ ಹೊತ್ತು
ದಿಗ್‌ದಿಗಂತ ಮೊರೆಯುತಿದೆ
ರಘುಪತಿ ರಾಘವ ರಾಜಾರಾಮ……..”
“ಆರಾಮ ಹರಾಮ ಹೈ……..”
ಇತ್ತ ಮೆರೆಯುವರು ಕಾರ್ಯಮಗ್ನ
ಧಾರಾಳವಚನದಾನದ ಬೃಂಹಿತ ಕಂಠಪುಢಾರಿಗಳು
ತಮಗೊಂದು ಜನಕೊಂದು ಮಂತ್ರದ ಪುರೋಹಿತರು
ತಾವು ಮಾಡಿದ್ದೇ ಸರಿ
ಯಾವ ಪಾಪವೂ ತಗಲದೆಂಬ ಅಸ್ತ್ರಪಾರಂಗತರು
ರಾಮಕೃಷೆಗಾಗಿ ಪಕ್ಷಪಕ್ಷಕ್ಕೆ ಹಾರಿ ಬುಭುಕ್ಕೆಂಬ ಭಟರು
ದಕ್ಷಮೆದುಳಿನ ಸಂತೆಪಿಂಡಾರಿಗಳು
ಕಾಳಧನ ಭಂಡಾರಿಗಳು
ಸುಳ್ಳಿಂದಲೆ ಮುಳ್ಳತೊಡೆದು ಸುರಳೀತ ನಡೆವ ಸಂಭಾವಿತರು
ಸುಳ್ಳನ್ನ ನಿಜವೆಂದಪ್ಪಿ ಮರುಳಾದ ಕೋವಿದರು
ಆದದ್ದಾಗಲಿ ಗಾದಿಬಿಡೆನೆಂಬ ಹಟದವರು
ಏನೆಂದರೂ ಸರಿ
ಹಾಣಾಹಣಿಗೆ ಸದಾ ದುರುಗುಟ್ಟಿ ನಿಂತವರು
ಲಕ್ಷೋಪಲಕ್ಷ ರಾಮಕಿಂಕರರು
ಭಯಂಕರರು
ಉಧೋ ಉಧೋ ಉಧೋ
“ಭೋ ರಾಮ ಮಾಮುದ್ಧರ ಮಾಮುದ್ಧರ ಮಾಮುದ್ಧರ……..”

ಆಹಾ ಕೊಟಿದರಿದ್ರರಿಗೆ ನಿರಾಶ್ರಿತರಿಗೆ
ಕೆಲಸ ಕೊಡಿರೆಂದು ಗೆರಟೆಹಿಡಿದು ತಿರುಪೆಯಲೆದವರಿಗೆ
ಪುಟಪಾಥು ಕಚರಾಕೊಳೆವ ಕೇರಿಯಲ್ಲೇ ಬಿದ್ದು ನರಳಿದವರಿಗೆ
ಸಲೀಸು ಸಿಕ್ಕಿತೋ ರಾಮಾಶ್ರಯದಭಯ.
ಸಿದ್ದಿ ಸಮೃದ್ಧಿಭೋಗದೊಂದಿಷ್ಟು ಪಾಲು
ಪಾಯಸ ಹಾಲು ಸರ್ವೆ ಭದ್ರಾಣಿ ಪಶ್ಯಂತು………
ಸರ್ವಃ ಸರ್ವತ್ರ ನಂದತು …….

ಆದರಯ್ಯೋ ಇದೇನು !
ಕನಸೋ ಭ್ರಮೆಯೋ ಇಂದ್ರಜಾಲವೋ
ಹಾಲಿಲ್ಲದ ಮಕ್ಕಳು ಕೂಳಿಲ್ಲದ ಒಕ್ಕಲು
ಪುಟಪಾಥಿನಲ್ಲಿ ಹೊಟ್ಟೆಹೊಸೆಯುವ ಮೂಳೆಗಂಟುಗಳು
ರಾಮನ್ಯಾಯದ ಹನಿಗಾಗಿ ಬಾಯ್ತೆರೆತುಬಿದ್ದ ಚಾತಕಗಳು
ಕೆಲಸವಿಲ್ಲದಲೆಮಾರಿಗಳು ಕೊಳ್ಳೆಹೊಡೆವ ಸೋಮಾರಿಗಳು
ಬಯಲ ತುಂಬಾ ಗೋರಿಗಳು
ಈ ಮಾರಾಮಾರಿ ಗುಂಡೆಸೆತ ಕೊಳ್ಳಿ ತಿರುಗಿಸುವಾಟ
ಹಿಡಿಅಕ್ಕಿ ಪಿಂಟೊಂದು ಎಣ್ಣೆಗಾಗಿ ಹರದಾರಿ ಸಾಲು
ಆಶೆ ಹಿಡಿದೇ ಸತ್ತವರ ಅಸ್ಥಿಪಂಜರ ಜಾತ್ರೆ
ನಡುರಾತ್ರೆ
ಕೆಲಸಕೊಡಿ ಅನ್ನಕೊಡಿ ಮನೆಕೊಡಿ ಹುಯ್ಲೋ ಹುಯ್ಯಲು
ಗುಹಾ ಹೊಕ್ಕನು ಹಾಳುಗವಿ
ಶಬರಿ ಬಿದ್ದಳು ಹಳೇಬಾವಿ
ಕಲ್ಲಾದವಳು ಬರೇ ಮಣ್ಣಾದಳು
ಆ ಕುಲಟೆ ತ್ರಿಜಟಾಸ್ವಪ್ನ ಸಂಪನ್ನ
ನಡೆದದ್ದು ಅಯೋಧ್ಯಾದಹನ
ಉಧೋ ಉಧೋ ಉಧೋ
ಭಾರತಮಾತಾಕೀ ಜೈ
ಮಹಾತ್ಮಾ ಗಾಂಧೀಜೀಕಿ ಜೈ
ಹಾ ರಾಮ ಹಾ ರಾಮ
ಹಾ ರಾಮ ••••••

Close

ಜಾತ್ರೆ

ಜಾತ್ರೆ 3

ಎಂ ಎನ್ ಜೈಪ್ರಕಾಶ್

ದೃಶ್ಯ ೧ ಸ್ವಗತ
ಈ ಊರಿನ ಜಾತ್ರೆಯ ಪ್ರಯುಕ್ತವಾಗಿ ನಾಳೆಯಿಂದ ಕಾಲೇಜಿಗೆ ಮೂರು ದಿನ ಸ್ಥಳೀಯ ರಜಾ. ರಜಾದ ಕೊನೆಯಲ್ಲಿ ಭಾನುವಾರ ಬರುವುದರಿಂದ ಒಟ್ಟಿಗೆ ಅರ್ಧ ವಾರ ರಜಾ ಸಿಕ್ಕಂತಾಗುತ್ತದೆ.

ತೀರ್ಥರಾಜಪುರ ದೊಡ್ಡ ಪುರವಲ್ಲದಿದ್ದರೂ ತೀರಾ ಕುಗ್ರಾಮವೇನಲ್ಲ. ತಾಲ್ಲೂಕು ಸ್ಥಳ, ಊರಿನ ಮುಖಂಡರ ಮೆಹನತ್ತಿನಿಂದಾಗಿ ಕಾಲೇಜು ಸ್ಥಾಪಿತವಾಗಿದೆ. ಮೊನ್ನೆ ಮೊನ್ನೆ ತಾನೇ ಪ್ರಥಮ ಹಂತದ ಕೋರ್ಟು ಸಹಾ ಬಂದಿದೆ. ಇದೂ ಪುರಪಿತೃಗಳ ಪ್ರಭಾವದಿಂದಲೇ. ಇಂತಹ ನಾಗರಿಕ ಸೌಲಭ್ಯಗಳು ಲಭ್ಯವಾದ ಮೇಲೆ ಒಂದು ಊರು ಇದ್ದ ಹಾಗೆಯೇ ಇರುತ್ತದೆಯೆ ? ಏನಿಲ್ಲ. ಇರಲಿ.

ಸದ್ಯ ಬಂದಿರುವ ಜಾತ್ರೆ, ಇಲ್ಲಿನ ವರ್ಷಾವಧಿಯ ಏಕೈಕ ಜಾತ್ರೆ. ಜೊತೆಗೆ ಇದು ಅಷ್ಟಿಷ್ಟು ಪೌರಾಣಿಕ ಸ್ಥಳವೂ ಹೌದು. ಪರಶುರಾಮ ತನ್ನ ತಾಯಿಯನ್ನು ಕಡಿದ ಕೊಡಲಿಯ ಪಾಪ-ರಕ್ತವನ್ನು ತೊಳೆಯಲು ಪ್ರಪಂಚವೆಲ್ಲ ಅಲೆದನಂತೆ. ಎಲ್ಲೂ ಅವನ ಪಾಪ ಕ್ಷಯಿಸಲಿಲ್ಲ. ಕೊನೆಗೆ ಇಲ್ಲಿಗೆ ಬಂದು ತುಂಗೆಯ ನೀರಲ್ಲಿ ಅದ್ದಿದನಂತೆ. ಮರುಕ್ಷಣದಲ್ಲಿಯೇ ಅದರ ರಕ್ತ ತೊಡೆದು ಆತನ ಪಾಪಕ್ಷತವಾಯಿತಂತೆ. ಈ ಪುರಾವೆಗಳಿಗೆ ಇಂಬಾಗಿ ಹೊಳೆಯ ಕಲ್ಲುಬಂಡೆಗಳ ನಡುವೆ ಅವನು ಕೊಡಲಿಯನ್ನು ಅದ್ದಿದ ಎನ್ನುವ ಒಂದು ನೀರಿನಕೊಂಡ (ಈಗದರ ಹೆಸರು ಪರಶುರಾಮತೀರ್ಥ), ನದಿಯ ದಡದಲ್ಲಿ ಅವನೇ ಪ್ರತಿಷ್ಠಾಪಿಸಿದ ಎನ್ನಲಾಗುವ ರಾಮೇಶ್ವರ ಲಿಂಗ, ಸಾಧಾರಣ ಕೆತ್ತನೆಯ ಒಂದು ಕಲ್ಲಿನ ದೇವಸ್ಥಾನ ಇತ್ಯಾದಿಗಳಿವೆ, ಮತ್ತು ಇವೆಲ್ಲಕ್ಕಿಂತ ಮುಖ್ಯವಾಗಿ, ಈ ಜಾತ್ರೆಯ ದಿನ ತೀರ್ಥಕೊಂಡದಲ್ಲಿ ಮಿಂದವರಿಗೆ ಅವರ ಪಾಪವೆಲ್ಲವೂ ಪರಶುರಾಮನಂತೆ ಪರಿಹಾರವಾಗುವುದೆಂಬ ಪ್ರತೀತಿಯೂ ಇದೆ. ಇಷ್ಟೆಲ್ಲ ಆಕರ್ಷಕ ಐತಿಹ್ಯವಿದ್ದ ಮೇಲೆ ಭಕ್ತಾದಿಗಳಿಗೇನು ಕೊರತೆ? ಹೋ ! ಹೇಳುವುದನ್ನೇ ಮರೆತೆ-ಇತ್ತೀಚೆಗೆ ಯಾತ್ರಿಕರ ಅನುಕೂಲಕ್ಕಾಗಿ ಎಂಬಂತೆ ಹೊಸದಾಗಿ ಚುನಾಯಿತರಾದ ಪುರಸಭೆಯ ಅಧ್ಯಕ್ಷರು ಪರಶುರಾಮತೀರ್ಥಕ್ಕೆ ಎಂಬ ಬಾಣದ ಗುರುತಿರುವ ಬೋರ್ಡೊಂದನ್ನು ಬರೆಸಿ ನದಿಗೆ ತಿರುಗುವಲ್ಲಿ ಮೊನ್ನೆ ತಾನೇ ತೂಗಿಸಿಯೂ ಇದ್ದಾರೆ.

ಮೇಲಿನದಕ್ಕೆಲ್ಲ ಜೋಡಿಯಾಗಿ ರಥೋತ್ಸವ, ದೀಪೋತ್ಸವ, ಹೋಮ ಹವನ, ತೆಪ್ಪೋತ್ಸವಗಳಿವೆ. ಜಾತ್ರೆಯ ಇನ್ನಿತರ ರಂಗಿನ ಲೋಕವಾದ ವಿಶೇಷ ಯಕ್ಷಗಾನ ನಾಟಕ, ಸಿನಿಮಾ, ಸರ್ಕಸ್‌, ಜಾತ್ರೆಗಾಗಿಯೇ ಪಟ್ಟಣದಿಂದ ಬರುವ ಕಟ್ಲೇರಿ ಅಂಗಡಿಗಳು, ಬೆಂಡು, ಬತ್ತಾಸು, ಬೊಂಬಾಯಿ ಮಿಠಾಯಿ–ಇವೆಲ್ಲಾ ಇವೆ. ಮತ್ತಿವೆಲ್ಲಕ್ಕಾಗಿ ಉಧೋ ಎಂದು ನೆರೆಯುವ ಆಸ್ತಿಕ ಮಹಾಜನರು, ನಾಸ್ತಿಕರು, ಎರಡೂ ಅಲ್ಲದ ನಮ್ಮಂಥ ಮಧ್ಯದವರು, ಕಾಲೇಜಿನ ಗಿಲೀಟಿನ ತರುಣಿಯರು, ಸೀತಾಳೆ, ಕಾಬಾಳೆ, ರಂಜದ ಹೂವಿನ ದಂಡೆಗಳನ್ನು ಮುಡಿದುಕೊಂಡು ಬರುವ ಹಳ್ಳಿಯ ಸುಪುಷ್ಪ ಜವ್ವನೆಯರು. ಹೀಗೆ ಇನ್ನೂ.

ಇವೆಲ್ಲ ಯೋಚಿಸುತ್ತ ರಾತ್ರಿ ಇವನು ಟಿ.ಬಿ. ಯಲ್ಲಿ ಊಟಮಾಡಿ ಹಿಂದಿರುಗುವಾಗ ಸ್ನೇಹಿತರೆಲ್ಲ ಆಗಲೇ ಹಾಸ್ಟೆಲಿನಲ್ಲಿ ಸೇರಿಬಿಟ್ಟಿದ್ದರು. ಜಾತ್ರೆಯನ್ನು ಹೇಗೆ ಸೆಲಿಬರೇಟ್ ಮಾಡುವುದೆಂಬುದೇ ಅವರ ಮುಂದಿದ್ದ ಪ್ರಶ್ನೆ. ತುಂಬಾ ಧಿಮಾಕೋ ಅವಳಿಗೆ ತಾನು ಬ್ಯೂಟಿ ಕ್ವಿನಂತ. ನಾಳೆ ಅವಳಿಗೆ ಛೇಸ್ ಮಾಡೋಣ ಅಂದ ನಾಯರ್‌, ಸಾಯ್ಲಿ ಅವಳು. ಗೀತ, ಮೆಹರುನ್ನೀಸ, ಪದ್ಮನಿ ಎಲ್ಲಾ ಬಾರ‍್ತಾರೆ. ಅವರಿಗೆ ಕಂಪ್ನಿ ಕೊಡೋಣ ಅಂದ ಭಟ್ಟ. ಕಾಲೇಜು ಚುನಾವಣೆಯಲ್ಲಿ ಸೋತ ಕರಿಯಪ್ಪ ದೈನ್ಯ ಬಿಚ್ಚಿದ: ಆ ಯೂನಿಯನ್ ಸೆಕ್ರೆಟರಿಗೆ ಈ ಬಾರಿಯಾದ್ರೂ ವಿಚಾರಿಸಿಕೊಳ್ಳದಿದ್ದರೆ ನನ್ನ ಮರ್ಯಾದೆ ಕತೆ ಏನೊ ? ಈ ಯಾವ ಸಲಹೆಗಳೂ ಒಪ್ಪಿತವಾಗಲಿಲ್ಲ. ಕೊನೆಗೊಬ್ಬ ಅಂದ: ಇದೆಲ್ಲ ಎಂಥದು ? ಪಾಪ ಪರಿಹಾರಕ್ಕೆ ರಾಮಕೊಂಡದಲ್ಲಿ ಮುಳುಗಕ್ಕೆ ಬಾರಲ್ಲ ಅವರದ್ದೆಲ್ಲ ಫೋಟೋ ತೆಗೆಯೋಣ. ಹೇಗೆ ? ಎಲ್ಲರ ಕಂಠಗಳೂ ಸಂತೋಷ ವ್ಯಕ್ತಪಡಿಸಿದವು. ಇಲ್ಲಿ ಸಿಗುವ ನ್ಯಾಚುರಲ್ ಫಿಗರ್‌ಗಳ ಮುಂದೆ ಅವಳೆಂಥದು ಎಂದು ನಾಯರ್ ತನ್ನೊಳಗೆ ಸಮಾಧಾನ ಮಾಡಿಕೊಂಡ.

ಇವನೂ ಪ್ರವೇಶಿಸಿ ಮೂಕ ಪ್ರೇಕ್ಷಕನಾದ. ಹಾಗೆಂದು ಇವನಿಗೂ ಅದರಲ್ಲಿ ಆಸಕ್ತಿ ಇಲ್ಲವೆಂದಲ್ಲ. ಎಗ್ಗಿಲ್ಲದೆ ಇವರಂತೆ ಅಸಭ್ಯವಾಗಿ ಮಾತಾಡುವುದು ಅವನಿಗೆ ಹಿಡಿಸುವುದಿಲ್ಲ. ಅದಕ್ಕಾಗಿ ಸುಮ್ಮನಿದ್ದ. ಸುಮ್ಮನಿದ್ದಿದ್ದಕ್ಕೆ ಭಟ್ಟ, ಕೇಳಿದ: ನಾಳೆ ನೀನೂ ಬರ‍್ತೀಯಾ
…. ಇಲ್ಲಾ ನಿನ್ನ ಡಿಗ್ನಿಟಿ ಕಡಿಮೆಯಾಗುತ್ತೆ ಅಂತಾ……? ಭಟ್ಟನನ್ನು ನಿರ್ಲಕ್ಷಿಸಿ. ದೇಶಪಾಂಡೆಗೆ ನಿಮ್ಮ ಐಡಿಯಾಸ್‌ಗೆ ನನ್ದೂ ಒಪ್ಗೆ ಅಂದ. ಫೋಟೋಗಳಲ್ಲಿ ಸೆರೆಯಾಗುವ ಆ ಅರೆಬೆತ್ತಲೆ ಜೀವಗಳಲ್ಲಿ ಎಷ್ಟು ಬೆಚ್ಚನೆಯ ಜೀವಂತಿಕೆ ಇರಬಹುದೆಂದು ಊಹಿಸಿದ. ಮನದಲ್ಲಿ ಸಂತೋಷಪಟ್ಟ. ತೆಗೆಯೋದನ್ನ ಆದಷ್ಟು ನೈಸಾಗಿ ತೆಗೆಯಬೇಕು ಎಂದು ಸಲಹೆ ಕೊಟ್ಟಾಗ ಇವನ ನಾಗರಿಕ ಭಾಷೆ ಇಷ್ಟವಾಗದೆ ದೇಸಾಯಿ ಮುಖ ಕಿವುಚಿದ.

ಎಲ್ಲರೂ ಮೇಲೇಳುವಾಗ ಆಗಲೇ ಗಂಟೆ ಹನ್ನೆರಡಾಗಿತ್ತು.

ಸೆಕೆಂಡು, ನಿಮಿಷ, ಗಂಟೆಗಳಾಗಿ ಸಮಯ ಸರಿದರೂ ಇವನಿಗೆ ನಿದ್ರೆ ಹತ್ತಲಿಲ್ಲ. ಏನೋ ಮಂಪರು, ಏನೋ ಎಚ್ಚರ, ಪುನಃ ಮಂಪರು. ಪುನಃ ಎಚ್ಚರ. ಯಾವ ಯಾವೋ ಅಸ್ಪಷ್ಟ ಚಿತ್ರಗಳು ಕಣ್ಣಿನ ಮುಂದೆ : ನೀಳವಾದ ಜಡೆಗಳು…ವಕ್ರ ಸೊಬಗಿನಾಕೃತಿಯ ಹೊಕ್ಕಳುಗಳು…ಐಸ್‌ಕ್ಯಾಂಡಿ ಚೀಪುವ ಪೀಪಿ ಸದ್ದುಮಾಡುವ ಮಕ್ಕಳು……ಬಾಯಲ್ಲಿ ಬತ್ತಾಸು ಕಡಿಯುತ್ತಾ ಲಕಲಕ ಹೊಳೆಯುವ ಸೀತಾಳೆ ಗೊಂಚಲು ಸಿಕ್ಕಿಸಿಕೊಂಡು ಕಣ್ಣರಳಿಸುವ ಹಳ್ಳಿಯ ಜವ್ವನೆಯರು………ಫ್ರಾಕ್ ತೊಟ್ಟ ಒಂದಿಷ್ಟು ಬಾಬ್ ಕಟ್ಟಿನ ಕಾಮನ ಬಿಲ್ಲುಗಳು…… ಹೀಗೆ ಒಂದೇ ಎರಡೇ ಅಂದುಕೊಳ್ಳುತ್ತಿದ್ದಂತೆ ರೊಮ್ಯಾಂಟಿಕ್ ಆಗುತಿದ್ದೇನೆಂಬ ಪ್ರಜ್ಞೆ ಬಂದು ಅವನಿಗೇ ಜಿಗುಪ್ಪೆಯಾಯಿತು. ತಟಕ್ಕನೆ ಕಾಟಿನಿಂದ ಎದ್ದ. ಗಂಟೆ ನೋಡಿದರೆ ಆಗಲೇ ಎರಡು. ಥತ್ ದರಿದ್ರ ಕಲ್ಪನೆಗಳು ಎಂದು ಹೊರಗೆಹೋಗಿ. ಬಂದು ಮತ್ತೆ ಮಲಗಿದ. ನಿದ್ರೆ ಹತ್ತದ ಸಂಕಟಕ್ಕೆ ಬಣ್ಣದ ಜಗತ್ತೆಂದರೆ ಇದಿರಬೇಕಲ್ಲವೆ ಎಂದು ನಕ್ಕು-

ಜಾತ್ರೆ ನಾಳೆ ಎಂದುಕೊಂಡು ಎಡಕ್ಕೆ ಹೊರಳಿಕೊಂಡ.

ಮುಂಜಾನೆಯ ಬಿಸಿಲೇರಿದಂತೆ ದೇವಸ್ಥಾನದ ಸುತ್ತಿನಿಂದ ಜಾತ್ರೆಯ ಕಾವೂ ಏರ ತೊಡಗಿತ್ತು. ಮಂಗಳ ಕಾರ್ಯಗಳಿಗಾಗಿ ಹುಯಿಲಿಡುತ್ತಿದ್ದ ವಾದ್ಯ ನಗಾರಿಗಳ ನಿನಾದ ದೂರದಿಂದ ಅಲೆಅಲೆಯಾಗಿ ತೇಲಿಬರುತ್ತಿತ್ತು, ತೇಲಿಬಂದ ಅಲೆಗಳು ನಿಧಾನವಾಗಿ ಕೆಳಗಿಳಿದು ಇವನ ಕಿವಿಯ ತಮಟೆಯೊಳಗೆ ಅಗಲವಾಗಿ ಹರಡಿಕೊಂಡು ಮೆಲುವಾಗಿ ತಟ್ಟಿ ಎಚ್ಚರಿಸಿದವು. ಕಣ್ಣು ಬಿಟ್ಟಾಗ ಎಲ್ಲರೂ ಹೊರಡುವ ಅವಸರದಲ್ಲಿದ್ದರು. ಇನ್ನೂ
ಹಾಸಿಗೆಯಲ್ಲಿ ಇದ್ದವನು ಇವನೊಬ್ಬನೇ. ತನ್ನನ್ನು ಎಚ್ಚರಿಸದೆ ಇದ್ದ ದೇಸಾಯಿಯ ಮೇಲೆ ಕೋಪ ಬಂತು. ಸ್ಟೂಲಿನಿಂದ ಬಾಗಿಕೊಂಡು ಶೂಗಳಿಗೆ ಪಾಲೀಶು ಹಾಕುತ್ತಾ ಸುಖವಾಗಿ ಗುನುಗುತ್ತಿದ್ದ ಅವನ ಧ್ವನಿ ಕೇಳಿದೊಡನೆ ಸಿಟ್ಟು ಅಸಾಧ್ಯವಾಯಿತು. ದಬಾಯಿಸಬೇಕು ಅನ್ನುತ್ತಿರುವಾಗಲೇ ದೇಸಾಯಿ ತಿರುಗಿದ. ಏಳೋ ಮಾರಾಯ. ಲೇಟಾಗಿ ಬಿಡ್ತು. ರಾತ್ರಿಯೆಲ್ಲ ಎಂಥಾ ಕನವರಿಸ್ತಿದ್ದೆ? ಹಾಂ ಬಿ ಕ್ವಿಕ್‌, ಅಂದ…… ಉಸಿರೆತ್ತದೆ ಇವನು ಮೇಲೆದ್ದ.

ಸರಸರ ಎದ್ದು ಬಹಳ ಬೇಗ ರೆಡಿಯಾದೆನೆಂದುಕೊಂಡರೂ ಅವರೆಲ್ಲಾ ಹಾಸ್ಟೆಲ್ಲಿಂದ ಹೊರಟುಬಿಟ್ಟಿದ್ದರು. ಇನ್ನು ತಾನೊಬ್ಬನೇ ಓಡಿ ಅವರನ್ನು ಸೇರಿಕೊಳ್ಳಬೇಕು: ನಿರ್ಲಕ್ಷ ಗೆಳೆಯರು ಎಂದುಕೊಂಡ. ರೋಷ ಇನ್ನೂ ಪುಟಿಯಿತು. ಮಿತ್ರರ ವರ್ತನೆಯ ವಿಶ್ಲೇಷಣೆಗೆ ನಿಂತರೆ ಉತ್ಸಾಹ ಕೈಕೊಟ್ಟೀತೆಂದು ಅವರೆಡೆಗೆ ಕೂಡಿಕೊಳ್ಳಲು ಧಾವಿಸಿದ.

ಅದಾಗಲೇ ಅವರೆಲ್ಲರು ಪರಶುರಾಮತೀರ್ಥದ ಜನಜಂಗುಳಿಯಲ್ಲಿ ಕರಗಿಬಿಟ್ಟಿದ್ದರು. ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದಷ್ಟು ಗದ್ದಲ, ಅರ್ಥ ಕಳೆದುಕೊಂಡ ನಾನಾ ನಮೂನೆ ಮಾತುಗಳು ಒಂದಕ್ಕೊಂದು ಢೀಕೊಡುತ್ತ ಸ್ನಾನಘಟ್ಟದ ಸುತ್ತ ಅಸ್ಪಷ್ಟವಾಗಿ ಭ್ರಮಿಸುತ್ತಿದ್ದವು. ಬಾಯಿ ಕೈ ಆಡಿಸುತ್ತ ಏಕಾಗ್ರಚಿತ್ತದಿಂದ ಮಿಂದು ಪುನೀತರಾಗುತ್ತಿದ್ದ ಜನರು ದೂರದಿಂದ ಮೂಕ ದೃಶ್ಯದಂತೆ ಕಂಡು ನೋಡುವವರಿಗೆ ನಗು ಉಕ್ಕಿಸುತ್ತಿತ್ತು, ಹತ್ತಿರವಾದಾಗ ಇವನಿಗೆ ಸುತ್ತಲಿನ ಭಕ್ತರ ವಿಭೂತಿ, ಕರ್ಪೂರ, ಊದುಬತ್ತಿ, ಲೋಭಾನಗಳ ಸಮ್ಮಿಶ ಪರಿಮಳ ಘಮ್ಮೆಂದು ಅಪ್ಪಳಿಸಿತು.

ಗೆಳೆಯರಾರೂ ಇವನನ್ನು ಗಮನಿಸಲಿಲ್ಲ. ಇವನನ್ನು ಕಂಡ ನಾಯರ್ ಮಾತ್ರ ವೆಲ್ ಕಂ! ಅಂದವನೆ ಆ ಅರೆಬೆತ್ತಲೆ ದೇಹಗಳತ್ತ ಕ್ಯಾಮರ ತಿರುಗಿಸಿದ ಉಳಿದವರಾರೂ ಇವನನ್ನು ಸ್ವಾಗತಿಸುವ ಸೌಜನ್ಯ ತೋರಿಸಲಿಲ್ಲ.

ಕ್ಯಾಮರಾಗಳಿಗೆ ಬಿಡುವಿರಲಿಲ್ಲ: ಹಳ್ಳಿಗಳಿಂದ ಬಂದು ಭಕ್ತಿಯ ಕಾವಿನಲ್ಲಿ ಮುಳುಗು ಹಾಕುತ್ತಿದ್ದ ಹೆಂಗಸರಿಗಿರಲಿ (ಕ್ಲಿಕ್), ಚೆಂದದ ಜವ್ವನೆಯರಿಗಿರಲಿ (ಕ್ಲಿಕ್), ಊರಿನ ನಾಗರಿಕ ಮಹಾಜನತೆಗೂ ತಮ್ಮ ಪಾಪ ತೊಳೆದುಕೊಳ್ಳುವ ಮಹಾ ಚಪಲ, ಅಕ್ಕ ಪಕ್ಕದವರ ಬಗ್ಗೆ ಅವರ ಗಮನವಿರಲಿಲ್ಲ (ಸರಿ ಕ್ಲಿಕ್), ಜನರನ್ನು ನಿಯಂತ್ರಿಸುತ್ತಿದ್ದ ಗೃಹರಕ್ಷಕ ದಳದವರಿಗೂ ತಮ್ಮ ಕಣ್ಣನ್ನು ತೃಪ್ತಿಪಡಿಸುವ ಆಕಾಂಕ್ಷೆ, ಕ್ಲಿಕ್…ಕ್ಲಿಕ್ ……ಕ್ಲಿಕ್…..ನಡುವೆ ಬರಿಗೈಯಲ್ಲಿ ಇವನು. ಸಾಕ್ಷಿಭೂತ.

ಇತರರಂತೆ ಇವನೂ ಆ ಅರೆಬೆತ್ತಲೆ ಅಂಗಾಂಗಗಳ ಮೇಲೆ ಕಣ್ಣಾಡಿಸಲು ಪ್ರಯತ್ನಿಸಿದ. ಆದರೆ ಆಗಲೊಲ್ಲದು. ಒಳಗಿನಿಂದ ಏನೋ ಒಂದು ಪ್ರಬಲವಾಗಿ ವಿರೋಧಿಸಿದಂತೆ. ಅವರಂತೆ ಹೋಗಲಿ, ಕೊನೆಗೆ ಯಾರಂತೆಯೂ ನೋಡಲು ತನಗೇಕೆ ಸಾಧ್ಯವಾಗುತ್ತಿಲ್ಲ ? ಏನೋ ಹಿಂಜರಿಕೆಯಿಂದ ದೂರ ನಿಂತು ಕದ್ದು ನೋಡುತ್ತಿದ್ದ ಭಟ್ಟ ಕಂಡ. ತಾನು ಪುಕ್ಕನಲ್ಲ ಎಂದುಕೊಂಡು ಎದೆ ಸೆಟೆಸಿ ಮತ್ತೊಮ್ಮೆ ಪ್ರಯತ್ನಿಸಿದ. ಮತ್ತೆ ಸೋತ. ಭಟ್ಟ ಇವನನ್ನ ನೋಡಿ ವಿಕೃತ ಸುಖದಿಂದ ನಕ್ಕ. ನರನಾಡಿಯ ತುಂಬ ಅಸಹ್ಯ ಹೆಪ್ಪುಗಟ್ಟಿದಂತಾಗಿ ಜಿಗುಪ್ಪಯುಂಟಾಯಿತು. ಹಾಗಂತ ಕರಿಯಪ್ಪನಿಗೆ ಹೇಳಿದ್ದಕ್ಕೆ, ಹೋಗೋ ಬೇಕೂಫ. ಎಂಥ ಆಪರ‍್ಚುನಿಟಿ ಸಿಕ್ಕಿದೆ. ಅನುಭವಿಸೋದು ಬಿಟ್ಟು ನನಗೇ ಕಲ್ಚರು ಸಿವಿಲೈಸೇಷನ್ನು ಹೇಳೋಕೆ ಬರ‍್ತೀಯಲ್ಲೋ ? ಅಂದ ಖಾರವಾಗಿ, ಇನ್ನಷ್ಟು ಹೇಸಿಗೆಯಾಗಿ ಇವನು ಸುಮ್ಮನಾದ.

ಏಕಕಾಲಕ್ಕೆ ಈ ಪಾಪಕ್ಷಯ ಮತ್ತೆ ಈ ವೀಕ್ಷಕರ ಪಾಪ ಸಂಪಾದನೆ ಕಂಡು, ಇಲ್ಲಿ ನೆರೆದ ಭಕ್ತಕೋಟಿ ನೂರು ಸಾರಿ ತೀರ್ಥಸ್ನಾನದಿಂದ ಪುನೀತರಾದರೂ ಇವರಿಂದಾಗಿ ಪಾಪ ಪುಣ್ಯದ ಗಳಿಕೆ ಸರಾಸರಿಯಲ್ಲಿ ವಜಾಜಾತ ಒಂದೇ. ಕರೆದರೆ ಒಬ್ಬರೂ ಉತ್ತರಿಸಲಿಲ್ಲ. ತನ್ನ ಬಗ್ಗೆ ಗೆಳೆಯರ ಬಗ್ಗೆ ಅವನಿಗೇ ಕನಿಕರ ಉಂಟಾಯ್ತು. ಮುಂದೆ ನಿಲ್ಲಲಾಗದೆ ಅಲ್ಲಿಂದ ಹೊರಟ.

ಸ್ನಾನಘಟ್ಟದಿಂದ ದೇವಸ್ಥಾನದ ಕಡೆಗಿದ್ದ ಮೆಟ್ಟಿಲುಗಳನ್ನು ಒಂದೊಂದಾಗಿ ಏರತೊಡಗಿದ. ಸುತ್ತಲೂ ಎಡ-ಬಲಕ್ಕೆ ಥರಹಾವರಿ ಜನರು, ವ್ಯಾಪಾರಸ್ಥರು, ತೆಂಗಿನಕಾಯಿ ರಾಶಿ ಹಾಕಿಕೊಂಡವರು; ಕುಂಕುಮ ಊದುಬತ್ತಿ ಕರ್ಪೂರ ಮಾರುವ ಹುಡುಗರು ; ಹಣ್ಣಿನ ವ್ಯಾಪಾರಿಗಳು ; ಮುಖಾ ನೋಡಿದರೆ ಸುಖಾ ಇಲ್ಲ ಸ್ವಾಮಿ, ಇಲ್ಲಿ ಬನ್ನಿ, ಕಾಯಿಗೆ ಎಂಟಾಣೆ, ಕಿತ್ತಲೆ ಡಜನ್ನಿಗೆ ಒಂದೂವರೆ. ಇಲ್ಲಿ ಬನ್ನಿ. ಸ್ವಾಮಿ. ಇಲ್ಲಿ ಬನ್ನಿ ಯಜ್ಮಾನ್ರೆ, ಎಂದು ಪ್ರತಿ ರಾಶಿಯ ಮುಂದೆ ನಿಂತು ಭಕ್ತರನ್ನು ಕೂಗಿ ಆಕರ್ಷಿಸುವ ಚಿಕ್ಕಹುಡುಗರು. ಇವನು ಸುಮ್ಮನೆ ಮೆಟ್ಟಿಲುಗಳನ್ನು ಹತ್ತುತ್ತಿದ್ದ. ಮುಂದೆ ದೇವಸ್ಥಾನ ಹತ್ತಿರವಾದಂತೆ ಎಡ ಬಲಕ್ಕೆ ರುದ್ರಾಕ್ಷಿ ಸರದ ಅಂಗಡಿಗಳು : ‘ಕೈಕಾಲಿಲ್ಲದವರಿಗೆ ನೀನೆ ಸಿವಾ……ಕಣ್ಣಿಲ್ಲದವರಿಗೆ ನೀನೆ ಸಿವಾ…..’ ಎಂದು ಕೈಯೊಡ್ಡುವ ಅಂಗ ಊನವಾದ ಭಿಕ್ಷುಕರ ತಂಡ; ಕುರ‍್ರುಮಾಮ; ಹಸ್ತಸಾಮುದ್ರಿಕದವರು. ಯಾರ ಅಳಲೂ ಇವನನ್ನು ಸ್ಪಂದಿಸುವಂತೆ ಮಾಡಲಿಲ್ಲ. ಏನೋ ನೋಡಬಾರದ್ದನ್ನು ನೋಡಿದವನಂತೆ
ಮೈ ಮನಸ್ಸು ಮುದುಡಿಕೊಂಡಿದ್ದವು. ತಾನು ಚಿಕ್ಕವನಿದ್ದಾಗ ಅಮ್ಮ ಅಡಿಗಡಿಗೂ ಹೇಳುತ್ತಿದ್ದ ‘ಮೈಲಿಗೆ’ ಪದದ ನಿಜವಾದ ಭಾವಾರ್ಥ ಇದಿರಬಹುದೆ? ಎಂಬ ಸಂಶಯ ದೇವಸ್ಥಾನ ಹತ್ತಿರವಾದಾಗ ಬಲವಾಗಿ ಹೆಡೆಯಾಡಿಸಿತು.

ದೇವಸ್ಥಾನದ ಪ್ರಾಕಾರದ ಬಳಿ ಬಂದಾಗ ಎದುರಿನಿಂದ ಕಾಲೇಜಿನ ತರುಣಿಯರು ಬರುತ್ತಿರುವುದು ಗೋಚರಿಸಿತು. ಎಲ್ಲರ ಮುಖದಲ್ಲೂ ಜಾತ್ರೆಯ ಉತ್ಸಾಹ ಸಂಭ್ರಮಗಳು. ವಿಶೇಷ ಸಂದರ್ಭಗಳಲ್ಲಿ ಉಡುವಂಥ ಸಡಗರದ ಉಡುಪುಗಳಿಂದ ಅಲಂಕೃತರಾಗಿದ್ದ ಆ ಬಣ್ಣದ ಗುಂಪನ್ನು ಇವನ ಕಣ್ಣುಗಳು ಕಿರಿದಾಗಿ, ಇಡಿಯಾಗಿ ತುಂಬಿಕೊಳ್ಳತೊಡಗಿತು. ನಿನ್ನೆ ಕನಸಲ್ಲಿ ಕಂಡವರೆಲ್ಲ ಇವರೆ? ಯೋಚಿಸಲು ವ್ಯವಧಾನವಿಲ್ಲ; ಗುಂಪು ಹತ್ತಿರವಾಗುತ್ತಿದೆ. ಸರ‍್ರನೆ ತನ್ನ ಉಡುಪನ್ನು ನೋಡಿಕೊಂಡ, ಹೊರಡುವಾಗಲೆ ಗಡಿಬಿಡಿಯಾಗಿದ್ದರಿಂದ ಆದ ಎಡವಟ್ಟು ತಕ್ಷಣ ಗೊತ್ತಾಯಿತು. ಲ್ಯಾಬಿನಲ್ಲಿ ಪ್ರಾಕ್ಟಿಕಲ್ಸ್ ಮಾಡುವಾಗ ಆಸಿಡ್‌ ಬಿದ್ದು ಆದ ಚಿಕ್ಕ ತೂತುಗಳು ಶರ್ಟಿನಿಂದ ಬಾಯಗಲಿಸಿ ನಕ್ಕವು. ಕಸಿವಿಸಿಗೊಂಡು ಶೂಗಳನ್ನು ನೋಡಿಕೊಂಡ. ಪಾಲೀಶ್ ಸಾಕಾಗದೆ ಅವು ಸಹಾ ಮಂಕಾಗಿದ್ದವು. ಇದು ಕೈಯಾರೆ ಮಾಡಿಕೊಂಡ ಅಪಮಾನವೆನ್ನಿಸಿತು. ಇವರೆದುರಿಗೆ ಚೀಪ್ ಆಗುತ್ತೇನೆಂಬ ಸಂಕೋಚ ಬೆಳೆಬೆಳೆದು, ಇಲ್ಲಿಂದ ಮರೆಯಾಗು ಎಂದಿತು ಕಳ್ಳ ಮನಸ್ಸು. ಏನು ಮಾಡಲಿ ಎಂದುಕೊಳ್ಳುತ್ತಿದ್ದಂತೆ ಅವರು ಇನ್ನೂ ಸಮೀಪವಾಗಿ ಈ ಚಿಕ್ಕ ಮಾತುಗಳೇ ಬೃಹದಾಕಾರವಾಗಿ ಬೆಳೆದುಬಿಟ್ಟಿದ್ದವು. ಕಾಲೇಜು ಯುವತಿಯರು, ಆದೂ ತಾವೆ ಮೇಲೆಬಿದ್ದು ಬಾಯ್ತುಂಬ ಮಾತಾಡುವ ಈ ಚೆಲ್ಲು ಹುಡುಗಿಯರೆದುರು ಹೀಗಾಗಬೇಕೆ ?……ಗುಂಪು ಹತ್ತಿರವೇ ಬಂದುಬಿಟ್ಟಿತು.

ಜಯ, ಶಾಂತ, ಮೀನ, ಗೀತ ಪಕ್ಕಕ್ಕೆ ಬಂದಂತೆ ಇವನು ಅಂಗುಲ ಅಂಗುಲವಾಗಿ ಕುಬ್ಬನಾಗಿಬಿಟ್ಟ. ತನ್ನ ತಳಮಳವನ್ನು ಅದುಮಿಕೊಳ್ಳುತ್ತ ಏನೂ ಆಗದವನಂತೆ ಮುಖ ಭಾವವನ್ನು ಹಿಗ್ಗಿಸಿಕೊಳ್ಳುತ್ತ ಅವರೆಡೆಗೆ, ಹೇಗಿದೆ ಜಾತ್ರೆ ? ಇಸ್ ಇಟ್ ನಾಟ್ ಗ್ರಾಂಡ್ ? ಕೇಳಲು ಪ್ರಯತ್ನಪಟ್ಟ. ಸಾಧ್ಯವಾಗದೆ ಹೋಗಿ ಚಾರ್‌ಗೋಡಾ ಬೀಡಿಯ ಪ್ರಚಾರದ ಅಬ್ಬರದಲ್ಲಿ ಇವನ ಸಣ್ಣಧ್ವನಿ ಎಲ್ಲಿಯೋ ತಲೆಮರೆಸಿಕೊಂಡಿತು.

ಬಣ್ಣದ ಗುಂಪು ಪರಿಚಯದ ನಗೆಯನ್ನೂ ಬೀರದೆ ಮುಂದುವರಿಯಿತು.

ಆಘಾತವಾದಂತೆ ಇವನು ಹಿಂದುರುಗಿ ನೋಡಿದ. ಆ ಗುಂಪು ಮರೆಯಾದ ಸ್ಥಳದಲ್ಲಿ ವ್ಯಾನಿನ ಟಾಪಿನ ಮೇಲೆ ನಿಂತು ಬಣ್ಣ ಬಣ್ಣದ ಕೋಡಂಗಿ ವೇಷದವನೊಬ್ಬ ಚಾರ್ ಗೋಡಾ ಬೀಡಿಯ ಉತ್ಕೃಷ್ಟತೆಯನ್ನು ಗಂಟಲು ಹರಿಯುವಂತೆ ಪ್ರಚಾರ ಮಾಡುತ್ತಿದ್ದುದನ್ನು ಕಂಡ. ಮೊದಲು ಈ ಸುತ್ತಿಗೆಲ್ಲ ಬಹಳ ಹೆಸರಾಗಿದ್ದ ಬೀಡಿ ಇದು. ಈಗೀಗ ಬೇರೆ ಬೀಡಿ ಕಂಪೆನಿಗಳ ಸ್ಪರ್ಧೆಯಿಂದಾಗಿ ಇದರ ಪ್ರಸಿದ್ದಿ ಬಹಳ ಕಡಿಮೆಯಾಗಿಬಿಟ್ಟಿದೆ. ಮಿಲಿಯಾಂತರ ಜನರ ಮೆಚ್ಚಿನ ಬೀಡಿ ಚಾರ್‌ಗೋಡಾ! ಸೇವನೆಯ ಆನಂದಕ್ಕೆ ಚಾರ್‌ ಗೋಡಾ !! ಎಂದು ಕೋಡಂಗಿ ಕೂಗುತ್ತಲೇ ಇದ್ದ. ಕೂಗುತ್ತ ಕೂಗುತ್ತ ಸುತ್ತಲಿನವರ ಮೇಲೆ ಪುಕ್ಕಟೆಯಾಗಿ ಬೀಡಿಗಳ ಸ್ಯಾಂಪಲ್ ಪ್ಯಾಕೇಟುಗಳನ್ನು ಎರಚುತ್ತಿದ್ದ. ಒಂದು ಪ್ಯಾಕೇಟ್ ಇವನ ಮೇಲೂ ಬಿತ್ತು. ಅಲ್ಲೆ ಇದ್ದ ಹಳ್ಳಿಯವನೊಬ್ಬ ಇವನ ಮೇಲೆ ಬಿದ್ದು ಅದನ್ನು ಹೆರಕಿಕೊಂಡ. ಮಾತಿಲ್ಲದೆ ಇವನು ನಡೆಯುತ್ತಿದ್ದ.

ಮನಸ್ಸಿನ ತುಂಬ ಅಲ್ಲೋಲಕಲ್ಲೋಲ. ಪ್ರಾಯಃ ಅವರು ಗಮನಿಸಿಲ್ಲವೆಂದು ಸಮಾಧಾನ ಮಾಡಿಕೊಂಡರೂ ಒಳಮನಸ್ಸಿಗದು ಒಪ್ಪಿಗೆಯಾಗಲಿಲ್ಲ. ಸಂಪೂರ್ಣ ಜಾತ್ರೆಯೇ ಸ್ಮಶಾನ ಸದೃಶವಾಗಿ ಬೆಳೆಯಿತು. ಮಧ್ಯದಲ್ಲಿ ಜಾತ್ರೆಯ ವೈಭವಗಳನ್ನೆಲ್ಲ ಗುಡ್ಡೆ ಹಾಕಿ ನಿರ್ದಯವಾಗಿ ಸುಡುತ್ತ ಕೋಲೂರಿ ನಿಂತ ನಿಶ್ಯಕ್ತ ಮುದುಕ ಕಾವಲುಗಾರ. ಮುದುಕನ ಮುಖ ಗಮನಿಸಿದ. ಅಸಾಧ್ಯ ವೇದನೆಯೊಂದು ಗಂಟಲಿನಲ್ಲಿ ತತ್ತರಿಸಿತು. ಇನ್ನೂ ನಿಂತರೆ ನೋವು ಬಿರಿದೀತೆಂದು ಹಾಸ್ಟೆಲಿನ ರೂಮಿಗೆ ಕಾಲೆಳೆದು, ಅಷ್ಟಗಲ ಕಾಟಿನ ಮೇಲೆ ತನ್ನ ಅಸ್ಪಷ್ಟ ತುಮುಲಗಳನ್ನೆಲ್ಲ ಹೊರಚೆಲ್ಲಿದ……

ಮನಸ್ಸು ಸಮಾಧಾನಕ್ಕೆ ಬಂದು ಉಸಿರಾಟ ನಿಧಾನವಾಗಿ ಹದಕ್ಕೆ ಬಂದಿತು. ಪುನಃ ಸಪ್ಲಿಮೆಂಟರಿ ಪರೀಕ್ಷೆ ಕಟ್ಟಲು ಬಂದಿದ್ದ ಹಳೆಯ ಗೆಳೆಯನೊಬ್ಬ ಹೇಳಿದ ಮಾತುಗಳು ಆಗ ಅಚಾನಕವಾಗಿ ನೆನಪಾಯಿತು: ಅಲ್ವೊ, ಹೇಗೋ ಇಂಟರ್ ಮುಗಿಸಿ ಇಲ್ಲಿ ಕಾಲೇಜಿಗೆ ಸೇರ‍್ದೆ. ಮೂರುವರ್ಷ ಟ್ರಿಮ್ಮಾಗಿ ಕಳೆದೆ. ಪಬ್ಲಿಕ್ ಟರ್ಮಿನಲ್ಲಿ ಸಾಕಷ್ಟು ಕಾಪೀನು ಹೊಡ್ದೆ. ಆದರೆ ಮೊನ್ನೆ ಸಹಾ ಇದು ಪಾಸಾಗಲಿಲ್ಲ. ಪಾಸಾಗೋದು ಹೋಗ್ಲಿ, ಈ ಕ್ಯಾರಿಯರ‍್ನಲ್ಲಿ ಕೊನೆಗೊಂದು ಹುಡ್ಡಿನ ಲವ್‌ ಮಾಡ್ಲಿಕ್ಕೂ ಆಗ್ಲಿಲ್ಲ. ಛೇ, ನಾವೆಲ್ಲ ಯಾತಕ್ಕೋ ? ಯೂಸ್‌ಲೆಸ್……

ಎಷ್ಟು ಹಾಸ್ಯಾಸ್ಪದ ಸಂಗತಿ ಇದು! ಆದರೂ ಏನು ಛಾತಿ ಏನು ಭಂಡ ಧೈರ್ಯ ಅವನದ್ದು. ತನ್ನ ಅಭಿಪ್ರಾಯವನ್ನು ಹೇಗೆ ಎಗ್ಗಿಲ್ಲದೆ ಪ್ರಕಟಿಸಿಬಿಡುತ್ತಾನೆ! ಅಂದುಕೊಳ್ಳುತ್ತಿದ್ದಂತೆ ಹಿಂದೊಮ್ಮೆ ತಾನಾಡಿದ್ದ ಮಾತೊಂದು ಮರುಕಳಿಸಿತು: ಅಂದು ಇವನೂ ಮತ್ತು ದೇಶಪಾಂಡೆ ಊರ ಹೊರಗೆ ವಾಕ್ ಹೊರಟಿದ್ದರು, ಡಿಬೇಟಿನಲ್ಲಿ ಕಾಲೇಜಿಗೆ ಖಾಯಂ ಆಗಿ ಇವನು ರೋಲಿಂಗ್ ಫೀಲ್ಡ್ ದೊರಕಿಸಿ ಕೊಟ್ಟಿದ್ದಕ್ಕಾಗಿ ಅಂದು ಕಾಲೇಜಿನ ವಿದ್ಯಾರ್ಥಿ ಸಂಘದವರು ಇವನನ್ನು ಸನ್ಮಾನಿಸಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಮೇ ತಿಂಗಳು ಮರದಡಿ ಎಲ್ಲ ಹುಡುಗಿಯರಿಂದ Congratulations ಸ್ವೀಕರಿಸುವ ಅವಕಾಶವೂ ಸಿಕ್ಕಿ ಆಹ್ಲಾದಗೊಂಡಿದ್ದ. ಈ ಸಂತೋಷಕ್ಕೆ ದೇಶಪಾಂಡೆಯೂ ಸರಿಯಾಗಿ ಪ್ರಿಯವಾದ ಸುದ್ದಿಗಳನ್ನು ಹೇಳಿದ. ತಾನು ಮೊದಲಿನಿಂದಲೂ ಆಕೆಗೇ ತಿಳಿಯದಷ್ಟು ಗುಟ್ಕಾಗಿ ಮೆಚ್ಚುತ್ತಿದ್ದವಳ ಹೊಳಪು ಕಣ್ಣುಗಳ ಬಗ್ಗೆ ದೇಶಪಾಂಡೆ ಪ್ರಶಂಸಿಸಿದ. ಉತ್ತೇಜಿತಗೊಂಡ ಇವನೂ, ಈ ಕೊನೇ ವರ್ಷದಲ್ಲಿ ತನ್ನ ಬಗ್ಗೆ ಆಸಕ್ತಿ ತೋರಿಸುತ್ತಿದ್ದ ಗೌಡತಿಯ ಬಗ್ಗೆ ಪ್ರಶ್ನಿಸಿದ. ಅಫ್ ಕೋರ್ಸ್, ಒಳ್ಳೆ ಫಿಗರ‍್ರಿದೆ ಆಕೆಗೆ. ಬಟ್ ಷಿ ಈಸ್ ವೆರಿ ಪ್ರೌಡ್, ಅಂದ ಅವನು. ಹೌದೆ, ಅನ್ನುವಾಗ ಎದುರಿಂದ ಬೆದೆಗೆ ಬಂದ ಮಣಕವೊಂದು ಹಿಂದಿನಿಂದ ಓಡಿಬಂದಿತ್ತು. ತಕ್ಷಣ ಇಬ್ಬರೂ ಪಕ್ಕಕ್ಕೆ ಸರಿದುಕೊಂಡಿದ್ದರೂ ಅದರ ಬಾಲದ ಸಗಣಿ ಇವರ ಬಟ್ಟೆಗೆ ಹಾರಿಬಿಟ್ಟಿತ್ತು. ದೇಶಪಾಂಡೆ ಮಣಕಕ್ಕೆ ಇಂಗ್ಲೀಷಿನಲ್ಲಿ ಶಾಪ ಹಾಕಿದ. ಆದರೆ ಇವನು ಮಾತ್ರ ದೇಶಪಾಂಡೆಯ ಹತ್ತಿರ ಸರಿದು ಕಿವಿಯಲ್ಲಿ ಪಿಸುಗುಟ್ಟಿದ್ದ: ಅಲ್ಲ ದೇಶಪಾಂಡೆ …..ಈ ಮಣಕದಂತೆ ಇವರೆಲ್ರೂ ನಮ್ಮ ಹಿಂದೆ ಓಡೋಡಿ ಬಂದರೆ……..ಎಷ್ಟು ಥ್ರಿಲ್ಲಾಗಿರುತ್ತೆ ಅಲ್ವಾ?

ಅಂದುಕೊಂಡ, ಬೇಲಿಯ ಒಳಭಾಗದಲ್ಲಿ ಕಾಣುತ್ತಿರುವುದು ಇದೇ ಮಣಕವೆ? ಹೊರಗೆ ಜಾತ್ರೆಯಿಂದ ಬಂದ ಗೆಳೆಯರ ವಿಜಯೋತ್ಸಾಹದ ಕೇಕೆ ಮಣಕದ ಕೂಗನ್ನು ಮರೆ ಮಾಚಿತು……ಇವನು ಕಾಟಿನಲ್ಲಿ ಎದ್ದು ಕೂತ.

ದೃಶ್ಯ ೨: ಅಳಲು

ಜಾತ್ರೆಯ ಮೊದಲ ದಿನ ಸತ್ತು ಎರಡನೆ ದಿನ ಹುಟ್ಟಿತು. ಈ ದಿನ ರಥೋತ್ಸವ. ಹಿಂದಿನ ದಿನದ ಅಜಾಗರೂಕತೆಯ ಅನುಭವ ಇದ್ದದ್ದರಿಂದ ಇಂದು ಮುಂಜಾಗರೂಕತೆ ತೆಗೆದುಕೊಂಡ. ಎಡವಟ್ಟಾಗುವ ಪ್ರಮೇಯಗಳು ಬರಲಿಲ್ಲ.

ಜಾತ್ರೆಯ ಮುಖ್ಯ ಆಕರ್ಷಣೆಯ ರಥೋತ್ಸವ. ಆದ್ದರಿಂದ ಇಂದು ನಿನ್ನೆಗಿಂತ ಹೆಚ್ಚಾಗಿ ಸುತ್ತಲಿನ ಹಳ್ಳಿಗಳಿಂದ ಜನಪ್ರವಾಹ ವಿಪರೀತವಾಗಿ ಏರುತ್ತಿತ್ತು. ಸಣ್ಣ ಊರು, ಹೇಗೆ ಮಾಡಿದರೂ ನಡೆಯುತ್ತದೆ. ಗಮ್ಮತ್ತು ಮಾಡೋಣವೆಂದು ಸುತ್ತಾರು ಪಟ್ಟಣಗಳಿಂದ ಅನೇಕ ಷೋಕಿ ಯುವಕರೂ ಘೇರಾಯಿಸಿದ್ದರು. ಜನವೋ ಜನ; ಗೊಂದಲವೋ ಗೊಂದಲ. ನಾಟಕ, ಸರ್ಕಸ್, ಸಿನಿಮಾದವರ ಕಿವಿಗಡಚಿಕ್ಕುವ ಪ್ರಚಾರದ ಭೋರ್ಗರೆತ. ಆಕಾಶದಿಂದ ಕೆಂಡಕಾರುವ ಉರಿಬಿಸಿಲು ಬೇರೆ. ಈ ಎಲ್ಲದರ ನಡುವೆ ಮಕ್ಕಳ ಪೀಪಿಗಳು ತಮ್ಮ ಅಳಿಲುಸೇವೆ ಮಾಡುತ್ತಿದ್ದವು. ಎತ್ತ ತಲೆ ಹಾಕಿದರೂ ಗೌಜು, ಗಜಿಬಿಜಿ, ಇವೆಲ್ಲದರ ನಡುವೆ ಇವನು ಮತ್ತು ಇವನ ಗೆಳೆಯರು. ಪಕ್ಕದಲ್ಲಿ ಸಂಭ್ರಮದಿಂದ ಬಣ್ಣಬಣ್ಣದ ತ್ರಿವರ್ಣರಂಜಿತ ಪೋಸ್ಟರುಗಳನ್ನು ಅಂಟಿಸಿಕೊಂಡುನಿಂತ ಸಿನಿಮಾದ ಗಾಡಿ. ಗಾಡಿಯ ಮುಂದೆ ಪೋಸ್ಟರುಗಳನ್ನು ಅಂಟಿಸಿದ ಒಂದೊಂದು ಬ್ಯಾನರ್‌ಗಳನ್ನು ಹಿಡಿದುಕೊಂಡು ಶಿಸ್ತಿನ ಸಿಪಾಯಿಗಳಂತೆ ನಿಂತ ಹತ್ತಾರು ಹುಡುಗರು. ಗುಡಿಯೊಳಗೆ ಮೌತ್‌ಪೀಸ್ ಹಿಡಿದುಕೂತಿದ್ದ ಗೇಟ್‌ಕೀಪರ್‌ ಫಕೀರ ಹೇಳಿಕೊಟ್ಟಂತೆ ಈ ಹುಡುಗರು ಪ್ರಚಾರಪತ್ರಗಳನ್ನು ಎಸೆಯುತ್ತ ಘೋಷಣೆ ಹಾಕುವ ನವೀನ ಪ್ರಚಾರತಂತ್ರ–

ಗೋಪಾಲ……..ಗೋಪಾಲ : ಏನ್‌ ಸಾರ್‌……..ಏನ್
ಎಲ್ಲಿಗೆ ಹೊರಟೆ ಗೋಪಾಲ : ಸಿನಿಮಾಕ್ಕೆ ಸಾರ್……ಸಿನಿಮಾಕ್ಕೆ
ಯಾವ ಸಿನಿಮಾ ಗೋಪಾಲ : ಶ್ರೀ ಕೃಷ್ಣರುಕ್ಷ್ಮಿಣೀ ಸತ್ಯಭಾಮಾ
ಗೋಪಾಲ……..ಗೋಪಾಲ : ಏನ್‌ ಸಾರ್‌…….ಏನ್
ಎಲ್ಲಿಗೆ ಹೊರಟೆ ಗೋಪಾಲ : ಸಿನಿಮಾಕ್ಕೆ ಸಾರ್ ಸಿನಿಮಾಕ್ಕೆ
ಯಾವ ಟಾಕೀಸಿನಲ್ಲಿ : ಶ್ರೀ ಯಂಕಟೇಸ ಟಾಕೀಸಿನಲ್ಲಿ
ದಿನಕ್ಕೆಷ್ಟು ಆಟ ಗೋಪಾಲ : ದಿನಕ್ಕೆ ಮೂರು ಆಟ
ಯಾ ಕಲರ್‌ : ಈಸ್ಟ್‌ಮನ್ ಕಲರ್
ಯಾವ ಚಿತ್ರ ಗೋಪಾಲ : ಶ್ರೀ ಕೃಷ್ಣ ರುಕ್ಷ್ಮಿಣೀ ಸತ್ಯಭಾಮಾ
ಬನ್ನಿ ಸಾರ್ ನೋಡಿ ಸಾರ್‌ : ಬನ್ನಿ ಸಾರ್ ನೋಡಿ ಸಾರ್

ಅಲ್ಲಿ ಕೊಂಚ ಹೊತ್ತು ನಿಂತರು. ಎದುರಿನ ಬಯಲಿನತ್ತ, ಕೈಮಾಡಿ ಗುಂಪಿನಲ್ಲಿದ್ದವನೊಬ್ಬ ಪ್ಲೀಸ್‌ ಸೀ ದೇರ್, ಅಂದ. ಗಮನಿಸಿದಾಗ, ಮೇಲಿನಿಂದ ಕೆಳಕ್ಕೆ ತಿರುಗುತ್ತಿದ್ದ ರಾಟವಾಳದ ಚಕ್ರದಲ್ಲಿ ಜಯ, ಗೀತ, ಮಹರುನ್ನೀಸ, ಪದ್ಮನಿ, ಮೀನ, ಶಾಂತರ ಗುಂಪು ಹತ್ತುತ್ತಿತ್ತು. ಕಮಾನ್ ಎಂದವನೆ ದೇಸಾಯಿ ಅತ್ತ ಧಾವಿಸಿದ. ಇವರೂ ಒಬ್ಬರನ್ನೊಬ್ಬರು ದಬ್ಬಿ ತೊಟ್ಟಿಲುಗಳಲ್ಲಿ ಕುಳಿತರು. ನಗು ಚೆಲ್ಲುತ್ತ ಬಣ್ಣದ ಗುಂಪು ಇವರನ್ನು ಸ್ವಾಗತಿಸಿತು. ಇವನೂ ಸಹಜವೆಂಬಂತೆ ಮೀನಳತ್ತ ನೋಡಿ ನಕ್ಕ, ಕಣ್ಣಗಲಿಸಿ ಅವಳು ಬೆಳಕು ಚೆಲ್ಲಿದಳು. ಸುತ್ತಲೂ ಹಬ್ಬಿದ ವಾತಾವರಣ, ಸಂತೋಷ. ಉತ್ಸಾಹ.

ಮೇಲಕ್ಕೇರಿದ ತೊಟ್ಟಿಲಿನಲ್ಲಿ ಕುಳಿತಿದ್ದ ಇವನಿಗೆ ಹಿಮಾಲಯ ಹತ್ತಿದಂತೆ ಅನ್ನಿಸಿಕೆ. ತಾನು ಶ್ರೀ ಕೃಷ್ಣನಾದಂತೆ, ತನ್ನ ಹಿಂದುಮುಂದಿನ ತೊಟ್ಟಿಲುಗಳಲ್ಲಿರುವ ಈ ಬಣ್ಣದ ಕಾರಂಜಿಗಳು ರುಕ್ಷ್ಮಿಣಿ ಸತ್ಯಭಾಮೆಯರಾದಂತೆ, ಇದೇ ಎತ್ತರದಲ್ಲಿ ಕುಳಿತು ತಾನು ಸದಾ ಮುಗುಳ್ನಕ್ಕು ಅವರಿಂದ ಪ್ರತಿಯಾಗಿ ಮುಗುಳ್ನಗೆ ಸ್ವೀಕರಿ……ಖಡ್ ಕಟ್ ಕಟ್ ಕರ್‌ !

-ಸಶಬ್ದವಾಗಿ ರಾಟವಾಳದ ಚಕ್ರ ತಿರುಗತೊಡಗಿತ್ತು. ತಿರುಗುತ್ತಿದ್ದಂತೆ, ಜಯ ಹಾರುತ್ತಿದ್ದ ತನ್ನ ಸೆರಗನ್ನು ಸರಿಮಾಡಿಕೊಳ್ಳದೆ ಕರಿಯಪ್ಪನನ್ನು ಟೀಸ್ ಮಾಡತೊಡಗಿದ್ದಳು, ಉಳಿದವರು ಚಪ್ಪಾಳೆತಟ್ಟಿ ಹುರಿದುಂಬಿಸುತ್ತಿದ್ದರು. ಎಲ್ಲರಿಗೂ ಹರ್ಷದ ಉನ್ಮಾದ, ಕಡೆಗೆ ಈ ಮೀನಾಳಿಗೂ ಕೂಡ……ಇದ್ದಕ್ಕಿದ್ದಂತೆ ಇವನಿಗೆ ನಿರುತ್ಸಾಹ. ಹೌದು, ತನಗೆ ಈ ಚಕ್ರ ಮೇಲಿನಿಂದ ಕೆಳಕ್ಕೆ ತಿರುಗುವುದು ಬೇಕಾಗಿಲ್ಲ. ಆದರೆ ತನ್ನನ್ನು ಕೇಳುವರಾರು ?…… ಅಥವಾ ತನಗೆ ಬೇಕಾಗಿರುವುದಾದರೂ ಏನು ? ದೇಸಾಯಿಗೆ ಹೇಳಲೇ ಎಂದುಕೊಂಡ. ಆದರೆ ಈ ತಿರುಗುವಿಕೆಯ ಅನಿವಾರ್ಯಕ್ಕಾಗಿಯೇ ಹಣಕೊಟ್ಟು ಸಿದ್ಧರಾದ ಇವರ ಬಳಿ ಬೇಡವೆಂದರೆ ನಗೆಪಾಟಲಾದೀತು. ನನ್ನ ವಿಚಿತ್ರ ಅಪೇಕ್ಷೆಗೆ ಎಲ್ಲರೂ ನಗಬಹುದು, ಕೊನೆಗೆ ಗಂಭೀರಳಾದ ಮೀನಾ ಕೂಡ.

ಸರದಿ ಮುಗಿಯಿತು. ತೊಟ್ಟಿಲಿನಿಂದ ಇಳಿವಾಗ ಜಯ ದೇಸಾಯಿಯನ್ನು ನೋಡಿ, ಥೈಂಕ್ಯೂ ಆಲ್ ಫಾರ್ ದ ಕಂಪೆನಿ ಅಂದಳು. ಅವನ ಮುಖ ಅಗಲವಾಯಿತು. ದೇಸಾಯಿಯ ಬಗ್ಗೆ ನಿನ್ನೆಯಿಂದ ಮೂಕವಾಗಿ ಕಾಯುತ್ತಿದ್ದ ಕೋಪ ಇದ್ದಕ್ಕಿದ್ದಂತೆ ಕುದ್ದು ಇವನು ಮೀನಾಳನ್ನು ನೋಡಿ ನಕ್ಕ. ಆದರವಳು ಗಮನಿಸಲಿಲ್ಲ……ಸಿನಿಮಾದ ಪ್ರಚಾರ ಇಲ್ಲಿಗೂ ತೂರಿಬರುತ್ತಿತ್ತು. ಇದಕ್ಕೆ ಸೆಡ್ಡು ಹೊಡೆಯುವಂತೆ ನಾಟಕ, ಯಕ್ಷಗಾನದವರ ಪೈಪೋಟಿಯ ಪ್ರತಿಘೋಷ ಮತ್ತೊಂದು ಕಡೆಯಿಂದ ಲಗ್ಗೆ ಹಾಕುತಿತ್ತು-

ನಾಟಕ-ನಾಟಕ-ನಾಟಕ : ‘ಅತ್ಯಾಚಾರ.’

ಆಟ-ಆಟ-ಒಂದೇ ಆಟ: ‘ದೌಪದಿ ವಸ್ತ್ರಾಪಹರಣ’

ರಥೋತ್ಸವದ ಮುಹೂರ್ತ ಹತ್ತಿರವಾಗುತ್ತಿತ್ತು. ನೆಲಕಚ್ಚಿ ನಿಂತ ಇವನನ್ನು ತಳ್ಳಿಕೊಂಡು ಇವನನ್ನು ರಥೋತ್ಸವದ ಬಯಲಿನತ್ತ ಮಿತ್ರರು ದೌಡಾಯಿಸಿದರು.

ಎಲ್ಲಾ ಜನಪ್ರವಾಹವೂ ಅಲ್ಲಿ ಕೇಂದ್ರೀಕೃತವಾಗಿತ್ತು. ಕಣ್ಣು ಹಾಯಿಸಿದ ಕಡೆಗಳಲ್ಲೆಲ್ಲ ಕಪ್ಪು ಬಿಳಿ ಬೋಳು ತಲೆಗಳು. ಕಾಲು ಹಾಕಲು ಸ್ಥಳ ಸಿಗದಷ್ಟು ಜನಜಂಗುಳಿ, ಭಾರವಾಗಿ ಬೀಸುತ್ತಿದ್ದ ಬಿಸಿಗಾಳಿಯಲ್ಲಿ ಬೆಂಡು ಬತ್ತಾಸು, ಕರಿದ ತಿಂಡಿಗಳ, ಕಾಲಿನಡಿ ಸಿಕ್ಕಿ ನುಚ್ಚುನೂರಾದ ಹಣ್ಣು ಹೂವುಗಳ ಸಮ್ಮಿಶ್ರವಾದ ವಿಚಿತ್ರ ಗಂಧ, ಆಕಾಶದಿಂದ ಭಗಭಗ ಬೆಂಕಿ ರಾಚುವ ಸೂರ್ಯ, ಇದರ ಜತೆಗೆ ಭಕ್ತಕೋಟಿಯ ತಲೆ ಕಂಕಳು ಕತ್ತು ಹಣೆಯಿಂದ ಧಾರೆ ಇಳಿವ ಬೆವರು, ಇವೆಲ್ಲ ಸೇರಿ ಅಸಹ್ಯ ಕಮಟು ವಾಸನೆ, ಸಹಿಸಲಾಗದೆ ಕರ್ಚಿಫಿನಿಂದ ಮುಖ ಮೂಗುಗಳನ್ನೊಸಿರಿಕೊಂಡು ಮುಖ ತಿರುಗಿಸಿದರೆ, ದೂರದಲ್ಲಿ ತುದಿಕಾಲಿನಲ್ಲಿ ಕೊರಳೆತ್ತಿ ನಿಂತ ಮೀನಾ! ಅವಳ ಅಗಲ ಹಣೆಯಲ್ಲಿ ಮಣಿ ಕಟ್ಟಿದ್ದ ಬೆವರು ಹೊಳೆಯಿತು, ಹಾಗೇ ನೋಡಿದಾಗ ಅವಳ ತುಂಬು ಬ್ರೌಸಿನ ಕೊಂಕಳೂ ಅಷ್ಟಗಲ ಬೆವರಿದ್ದು ಸ್ಪಷ್ಟವಾಗಿ ಕಾಣಿಸಿತು…… ಇವನು ಕರ್ಚಿಫನ್ನು ಮಡಿಸಿ ಪ್ಯಾಂಟಿನ ಜೋಬಿಗೆ ಸೇರಿಸಿದ.

ಭವ್ಯವಾದ ಕರಿಮರದ ರಥ ನಭೋಮಂಡಲವನ್ನು ಭೇದಿಸುವಂತೆ ಬಯಲಿನ ನಡೂ ಮಧ್ಯೆ ಗಾಂಭೀರದಿಂದ ನಿಂತಿತ್ತು. ಈ 20 ರ ಶತಮಾನದಲ್ಲೂ ನಮ್ಮ ಪರಂಪರೆಯ ಭಾವನೆ ಎಷ್ಟು ಗಟ್ಟಿಯಿದೆ ಎಂದು ವಿಸ್ಮಯಪಟ್ಟು ಭೇಷ್ ಎಂದುಕೊಂಡ. ತೇರಿನ ಮೈತುಂಬ ನೋಡಿದಾಕ್ಷಣವೇ ಭಕ್ತಿಯನ್ನು ಉದ್ದೀಪನಗೊಳಿಸುವ ಉತ್ಕೃಷ್ಟ ಕೆತ್ತನೆಗಳಿದ್ದುವು: ದಶಾವತಾರದ ಕೆತ್ತನೆಗಳು: ರಾಮ ರಾವಣ ಕಪಿಮುಖ್ಯರ ಕೆತ್ತನೆಗಳು; ಮಹಾಭಾರತದ ಪ್ರಸಂಗಗಳು; ಅಲ್ಲಲ್ಲಿ ರಾಸಕ್ರೀಡೆಯ ಕೆತ್ತನೆಗಳು; ಇವೆಲ್ಲಕ್ಕೂ ಮೇಲೆ ರಾಶಿಗಳ ಬಣ್ಣಬಣ್ಣದ ಚಿತ್ರಪಟಗಳು : ಇದರ ನಂತರ ಬೃಹತ್ ಕೋಳಿಮೊಟ್ಟೆಯ ಆಕಾರದಲ್ಲಿ ದುಂಡಾಗಿ ಜೋಡಿಸಿದ ವರ್ಣಮಯ ಪತಾಕೆಗಳು; ಆಮೇಲೆ ಫಳಫಳ ಮಿಂಚುತ್ತ ಆಕಾಶಕ್ಕೆ ಚುಚ್ಚುವಂತೆ ತುದಿ ಚೂಪಾಗಿ ಬಿಮ್ಮನೆ ಬೀಗಿ ನಿಂತ ಬೆಳ್ಳಿ ಕಳಸ ……ಕಂಡೊಡನೆಯೆ ಪೂಜ್ಯತೆಯನ್ನು ಬರಿಸುವಂತಹ ಕಲಾಕೌಶಲ, ತೇರಿನ ಉದ್ದಗಲಕ್ಕೂ.

ಇವರು ಸ್ಥಳ ಹಿಡಿದು ನಿಲ್ಲುವಾಗಲೇ ದೇವರು ಪಲ್ಲಕ್ಕಿ ಉತ್ಸವದಲ್ಲಿ ರಾಜವೀಧಿಯ ತಲೆತನಕ ಹೋಗಿ ಹಿಂತಿರುಗಿ ರಥದ ಮುಂದೆ ಬಂದಿದ್ದರು, ಮಂಗಲ ವಾದ್ಯಗಳ ಸೇವೆ ನಡದೇ ಇತ್ತು. ದೇವರು ರಥಾರೂಢರಾಗಲು ಪ್ರಾಶಸ್ತ್ಯವಾದ ಅಭಿಜಿನ್ ಮುಹೂರ್ತಕ್ಕಾಗಿ ಕಾಯುತ್ತಿದ್ದರು. ತೇರಿನ ಸುತ್ತಲೂ ಅಷ್ಟದಿಕ್ಕುಗಳಿಗೆ ಗೋಪಾದದ ಜುಟ್ಟಿನ ಭಟ್ಟರು ಅವರ ಚಿಕ್ಕ ಮಾಣಿಗಳೂ ಕಂಚಿನ ಕಂಠದಿಂದ ಮಂತ್ರ ಪಠಿಸುತ್ತ ಹಳದಿ ಬಣ್ಣದ ಅನ್ನದ ‘ಬಲಿ’ ಹಾಕುತ್ತಿದ್ದರು. ಇವನು ಕೇಳರಿಯದ ಈ ವಿಧಾನವನ್ನು ಏಕಾಗ್ರ ನೋಡಿದ. ಹಾಗೇ ತರುಣಿಯರತ್ತ ನೋಡಿದ, ದೃಷ್ಟಿ ಹಾಗೇ ರಥದ ಕೆತ್ತನೆಗಳು ಹರಿಯಿತು. ಪುನಃ ಮತ್ತೊಂದು ಸುತ್ತುಹಾಕುತ್ತಿದ್ದ ಆ ಹಳದಿ ‘ಬಲಿ’ ಯನ್ನು ಗಮನಿಸಿದ. ಈ ರಿಚುಯಲ್ಸ್‌ಗಳಿಗೆಲ್ಲ ಒಂದು ಉದ್ದೇಶವಿದೆಯ ಹೇಗೆ ಎಂದುಕೊಳ್ಳುತ್ತ ಇವನ ಕಣ್ಣುಗಳು ವೃತ್ತಾಕಾರವಾಗಿ ರಾಸಕ್ರೀಡೆಯ ಕೆತ್ತನೆಗಳ ಮೇಲೆ, ಮಾನಭಂಗದ ಕೆತ್ತನೆಯ ಮೇಲೆ ನಂತರ ಯುವತಿಯರ ಸಮೂಹದತ್ತ ಪರಿಭ್ರಮಿಸತೊಡಗಿತು……ಮುಹೂರ್ತ ಸಮೀಪವಾಗಿತ್ತು. ಬಹುಸಂಖ್ಯಾತರೆಲ್ಲರೂ ರಥಾರೋಹಣಕ್ಕಾಗಿ ತುದಿಗಾಲಲ್ಲಿ ಮೂಗೆತ್ತಿ ನಿರೀಕ್ಷಿಸುತ್ತಿದ್ದರು. ಕ್ಷಣಕಾಲ ಇವನು ಗಾಢ ವಿಚಾರಕ್ಕೊಳಗಾದ: ನಮ್ಮೆಲ್ಲರ ಮೂಲಪ್ರವೃತ್ತಿಗಳಿಗೂ ಈ ಹಳದಿ ಬಲಿಗೂ ಏನಾದರೊಂದು ಸಾಂಕೇತಿಕ ಅರ್ಥ ಸಂಬಂಧವಿದ್ದೀತೆ ?

ಭೇರಿ ನಗಾರಿ ಕೊಂಬು ಕಹಳೆಗಳ ಘೋಷ ಹಂತಹಂತವಾಗಿ ತಾರಕಕ್ಕೇರಿ ಗಗನ ಬಿರಿಯಿತೋ ಎನ್ನುವಾಗ ಭಕ್ತವೃಂದವೆಲ್ಲ ಒಕ್ಕೊರಲಿನಿಂದ ‘ಜೈ ರಾಮೇಶ್ವರ ಸ್ವಾಮೀಕೀ ಎಂದು ಜಯಘೋಷ ಹಾಕುತ್ತಿದ್ದಂತೆ ದೇವರು ರಥಾರೂಢರಾದರು. ನೆರೆದ ಜನರೆಲ್ಲರೂ ಕೈಯಲ್ಲಿ ಹಿಡಿದುಕೊಂಡಿದ್ದ ಕಿತ್ತಳೆ ಬಾಳೆ ಹಣ್ಣುಗಳನ್ನೆಲ್ಲಾ ನಿರ್ವಿಘ್ನವಾಗಿ ರಥಾರೋಹಣವಾಗಿದ್ದಕ್ಕೆ-ರೂಢಿಯಂತೆ ಹರ್ಷಸೂಚಕವಾಗಿ ತೇರಿನಮೇಲೆ ಎಸೆದರು. ಭಕ್ತಿಯ ಮಹಾಪೂರ ಕೋಡಿಹರಿಯಿತು. ಇವನೂ ಒಂದು ರೀತಿಯ ಭಾವಿಷ್ಠನಾಗಿ ಕೈಜೋಡಿಸಿ ಕಣ್ಮುಚ್ಚಿದ.
ಕಣ್ಮುಚ್ಚಿದ್ದಷ್ಟೇ ಗೊತ್ತು ಇವನಿಗೆ…………..

ಇತ್ತ ಜನ ಸಮೂಹದಲ್ಲಿ ಏನೋ ಅಘಟನೆ ಸಂಭವಿಸಿತು. ನಿಮಿಷದಲ್ಲೇ ಭಯದ ಚಂಡಮಾರುತವೆದ್ದು ಗೊಂದಲವೋ ಗೊಂದಲ. ಕಲ್ಲುಗಳು ದಬದಬ ತೂರಿಬಂದವು. ಮುಗಿಲನ್ನು ಚುಚ್ಚುತ್ತಿದ್ದ ಕಳಶದ ಪಕ್ಕದಲ್ಲೇ ಹತ್ತಾರು ಕಲ್ಲುಗಳು ಹಾದುಹೋದವು. ಭಕ್ತಿ ಅಸ್ತವ್ಯಸ್ತವಾಯಿತು. ಬಯಲಿನ ತುಂಬಾ ಘಾಸಿಗೊಂಡ ಉದ್ಧಾರಗಳು: ಎಸ್ ಛಾರ್ಜ್…… ಹಾಂ! ಯಪ್ಪಾ ದಾರಿ……ಅಯ್ಯೋ ಅಮ್ಮಾ……ಎಸ್ ಛಾರ್ಜ್‌ ……ಕೂಗು……ಆರ್ತಧ್ವನಿ……ಏ ಬಾರೇ ಓಡಿ……ಅವರ ಮನೆಗೆ ನುಗ್ಗೋಣ ಬೇಗ ಬರ‍್ರಿ ರಾಯ್ರೆ ಬೇಗ……ಏ ಪೋಲೀಸ್ ಈಕಡೆ ಬಂದ…..ಆ ಕಡೆ ಓಡ್ರೋ ……ನೂರಾರು ಕಂಠಗಳು ಉಚ್ಚ ನೀಚ ಸ್ವರಗಳಲ್ಲಿ ಬೊಬ್ಬಿಟ್ಟವು. ರಕ್ಷಕ ದಳದವರು ಜನರನ್ನು ಕುರಿಗಳಂತೆ ದಬ್ಬುತ್ತಿದ್ದರು. ಮಂದಿ ಹುಚ್ಚೆದ್ದವರಂತೆ ಹಾದಿ ಕಂಡಲ್ಲೆಲ್ಲ ಹರಿಹಾಯುತ್ತಿದ್ದರು. ಇವನೂ ಗುಂಪಿನ ಪಾಲಾಗಿ ತತ್ತರಿಸುತ್ತಿದ್ದ.

ಕೊನೆಗೆ ನೋಡುವಲ್ಲಿ ಆದದ್ದು ಇಷ್ಟು: ರಥಾರೋಹಣದ ಸಂದರ್ಭದಲ್ಲಿ ಕೆಲವು ಕಿಡಿ ಗೇಡಿಗಳು ಯುವತಿಯರ ಮೇಲೆ ಕೈ ಮಾಡಿದ್ದರು. ಸರಿ ಅವರೆಲ್ಲರೂ ಕೂಗಿಕೊಂಡರು. ರಕ್ಷಣೆಗೆ ಪೋಲೀಸರು ಧಾವಿಸುವ ಮೊದಲೇ ಪ್ರಮಾದವಾಗಿಬಿಟ್ಟಿತ್ತು. ಒಬ್ಬಳ ಸೀರೆ ಹರಿದಿದ್ದರೆ ಇನ್ನೊಬ್ಬಳ ಕಮೀಜ್‌ ಅರೆ ಭಗ್ನವಾಗಿತ್ತು. ಮತ್ತೊಬ್ಬಳ ಅಜಂತಾ ಹೆರಳು ಬಿಚ್ಚಿ ನೇತಾಡುತ್ತಿತ್ತು……ಪರಿಣಾಮ ಲಾಠಿ ಛಾರ್ಜ್.

ಅರೆತಾಸಿನ ನಂತರ ಲಾಠೀ ಛಾರ್ಜ್ ಮುಖೇನ ಪರಿಸ್ಥಿತಿ ತಹಬಂದಿಗೆ ಬಂದಾಗ ಆ ಬಯಲು ನಾಶವಾದ ರೋಂ ಪಟ್ಟಣದಂತೆ ಕಾಣುತ್ತಿತ್ತು. ಆದರೆ ಕರಿಮರದ ರಥ ಮಾತ್ರ ಸುರಕ್ಷಿತವಾಗಿಯೇ ನಭೋಮಂಡಲದ ಮೇಲೆ ನಿಂತಿತ್ತು. ಸಂಶಯದ ಮೇಲೆ ಪೋಲೀಸರು ಕೆಲವರನ್ನು ಬಂಧಿಸಿದ್ದರು. ಅಂತೂ ದಿಕ್ಕಾಪಾಲಾಗಿದ್ದ ಜನರನ್ನು ಪುನಃ ಸೇರಿಸಿ ಭದ್ರವಾದ ರಕ್ಷಣೆಯಲ್ಲಿ ರಥ ಚಲಿಸಿತು.

-ವಿಜೃಂಭಣೆಯನ್ನು ಪೋಲೀಸು ವ್ಯಾನಿನ ಕಿಟಕಿಯಿಂದ ಇವನೂ ಕಣ್ಮುಂಬ ನೋಡಿದ.

ಹೇಳಿ. ಈ ದುರ್ಘಟನೆಗೆ ಇವನೂ ಕಾರಣನೆ ? ಹೇಳಿ. ಇವನೂ ಆಪರಾಧಿಯೆ? ಫೋಲೀಸಿನವರ ಲಾಟಿಗಳು ಇವನ ಬಿಳಿ ದೇಹದ ಇಂಚು ಇಂಚಿನಲ್ಲೂ ನಾನು ನಿರೂಪಿಸಲಾರೆ. ಇವನನ್ನೂ ಸೇರಿಸಿ ಬಂಧಿತರ ಮೇಲೆ ಕೇಸು ಫೈಲ್ ಮಾಡಲಾಯಿತು. ತದನಂತರ ಪುರಸಭಾಧ್ಯಕ್ಷರ ಮಧ್ಯಪ್ರವೇಶದಿಂದಾಗಿ ಇವರನ್ನೆಲ್ಲ ಜಾಮೀನಿನ ಮೇಲೆ ರಾತ್ರಿ ಹೊರದಬ್ಬಿದರು……ಇವನ ಮೈತುಂಬ ವಿಷಾದ ಹೆಪ್ಪು ಗಟ್ಟಿದೆ. ಗೆಳೆಯರಿಗೆ ಹೇಗೆ ಮುಖ ತೋರಿಸಲಿ ? ಪ್ರಿನ್ಸಿಪಾಲರಿಗೆ ಗೊತ್ತಾದರೆ ತನ್ನ ಗತಿ ? ಹುಡುಗಿಯರಿಗೆ ಮತ್ತೆ ಮೀನಾಳಿಗೆ ತಿಳಿದುಬಿಟ್ಟರೆ ನನ್ನ ಸ್ಥಿತಿ ? ಯೋಚಿಸಲು ಸಹ ಮೈಮನಸ್ಸಿನಲ್ಲಿ ತ್ರಾಣವಿರಲಿಲ್ಲ. ಸದ್ಯ ರಾತ್ರಿಯಾಗಿದ್ದರಿಂದ ಇತರರು ಗುರ್ತಿಸಿಯಾರೆಂಬ ಭಯವಿರಲಿಲ್ಲ. ಯಾಂತ್ರಿಕವಾಗಿ ರೂಮಿನತ್ತ ಕಾಲೆಳೆಯತೊಡಗಿದ.

ಭೂಮಿ ಇಲ್ಲಿ ಬಾಯಿಬಿಡಬಾರದೆ ? ಇಲ್ಲೇ ಬಿಡಬಾರದೇ….. ಬಾಯೀ?

ನಾಯರ್ ಕಂಡ, ರೂಮಿನಲ್ಲಿ ಕರೆದು ಕೂರಿಸಿಕೊಂಡು ಅನುಕಂಪ ವ್ಯಕ್ತಪಡಿಸಿದ. ಚೀ ರ‍್ಯಾಸ್ಕಲ್ಸ್ ಅವ್ರು. ನಿಂದೇನೂ ತಪ್ಪಿಲ್ಲ, ಎಂದು ಭಟ್ಟ ಲೊಚಗುಟ್ಟಿದ. ದೇಸಾಯಿ ನೆಸ್‌ಕೆಫೆ ಮಾಡಿಕೊಟ್ಟು, ಸಮಾಧಾನ ಮಾಡ್ಕೊ ಅಂದ. ಕಣ್ಣುಗಳು ತುಂಬಿ ಬಂದವು. ಇರಲಿ ಕುಡಿ, ಎಂದು ದೇಶಪಾಂಡೆ ಲೋಟ ಎತ್ತಿಕೊಟ್ಟ……ತುಟಿಯಂಚೆಗೆ ಲೋಟ ತಾಕಿಸುತ್ತಿದ್ದಂತೆ ಜಯ, ಶಾಂತಾ, ಮೆಹರುನ್ನೀಸ ಎಲ್ಲರೂ ಕಿಲಕಿಲ ನಕ್ಕಂತೆ; ಲೆಕ್ಚರರ್ ಎಲ್ಲ ಹುಬ್ಬೇರಿಸಿದಂತೆ; ಮೀನಾ ಆ! ಹೌದೇ ! ಎಂದು ಕಣ್ಣರಳಿಸಿದಂತೆ: ಅಯ್ಯೋ ಮತ್ತೆ ಕಿಲಕಿಲ ನಕ್ಕಂತೆ-ಕಣ್ಣರಳಿಸಿದಂತೆ- -ಹುಬ್ಬೇರಿಸಿದಂತೆ ಕಿಲಕಿಲ ನಕ್ಕ……..ಆಮೇಲೆ ಮಾತು. ಮೊದಲು ಕಾಫಿ ತಗೋ, ಎಂದು ಕರಿಯಪ್ಪ ಬೆನ್ನು ಸವರಿದ. ಲೋಟಾದ ಅಂಚಿನ ಆಚೆಯಿಂದ ತನ್ನ ಬಗ್ಗೆ ಕುಳಿತವರ ಕಣ್ಣುಗಳಲ್ಲಿ ತುಳುಕುವ ಬಗೆಬಗೆಯ ತೀವ್ರ ಕನಿಕರ. ಕುಡಿಯಲು ಆಗಲಿಲ್ಲ. ದುಃಖ ಒತ್ತರಿಸಿತು. ಮುಖ ಮೇಲೆತ್ತಲು ದೇಶಪಾಂಡೆ ಕಣ್ಣಿನಲ್ಲೇ ಆಂ ಅಂದ. ಆಕ್ರೋಶ ತಡೆಯಲಾಗಲಿಲ್ಲ–

“ದೇವರಿಲ್ಲ ಕಣೋ ದೇವರಿಲ್ಲ, ನಿಜವಾಗಿ ದೇವರೆಂಬ ಪದವೇ ಸುಳ್ಳು. ಅದು ಮೋಸ ವಂಚನೆಯ ಭ್ರಷ್ಟ ಪದ. ಆ ಪದಕ್ಕೆ ಬಹಿಷ್ಕಾರ ಹಾಕಬೇಕು. ಜಾತ್ರೆಗೆ ಮೊದಲು ದೇವಸ್ಥಾನಕ್ಕೆ ಹೋದಾಗ ನೋಡಿದ್ದೇನು ? ಏನಿತ್ತು ಅಲ್ಲಿ ?….ಬರಿ ಕಪ್ಪು ಕಲ್ಲಿನ ಗುಂಡು, ಕರೀ ಕಪ್ಪ ಲಿಂಗ ಅದಕ್ಕೆ ಮುಖಾ ಇಲ್ಲ. ತಲೆ ಇಲ್ಲಾ, ಕಣ್ಣು-ಕಣ್ಣು ಮೊದಲೇ ಇಲ್ಲ……ಅದೇ ಈ ಜಾತ್ರೆ ದಿನಗಳಲ್ಲಿ, ವಿಶೇಷದ ದಿನಗಳಲ್ಲಿ, ವಾರಕ್ಕೊಂದು ದಿನ ಸೋಮವಾರ ನೋಡಿ-ಅದಕ್ಕೆ ಬೆಳ್ಳಿ ಮೊಗವಾಡ ಹಾಕಿ ಮಂಕೆರಚ್ತಾರೆ ……ಮೋಸ ವಂಚನೆ….ಯಾವ ದೇವ್ರಿಗೂ ತಲೆಯಿಲ್ಲ. ಕಣ್ಣಿಲ್ಲ. ಅದು-ಅದು ಬರಿ ಮೊಗವಾಡದ ಭ್ರಾಂತಿ ಕಣೋ……..ಭ್ರಾಂತಿ…’

ಒಟ್ಟಿಗೆ ಎಲ್ಲರೂ ಛೇ ಛೇ ಛೇ ಅಂದರು. ಅಷ್ಟೆ. ದೇಸಾಯಿ ಬೆನ್ನು ತಟ್ಟಿ, ನಿನ್ನ ಮನಸ್ಸು ಸರಿಯಿಲ್ಲ ಈಗ. ನಂತರ ಎಲ್ಲ ಮಾತಾಡೋಣ. ಮಲಗು ಅಂದು ಬಾಗಿಲು ಸರಿಸಿಕೊಂಡ. ಎಲ್ಲರೂ ಹೊರಗೆ ಹೋದರು. ಸುಮ್ಮನಾದ, ಬಿಕ್ಕಳಿಕೆ ನಿಲ್ಲಲಿಲ್ಲ.

ಕಾರಿಡಾರಿನ ಬದಿಯಲ್ಲಿ ಅವರು ಸಾಧ್ಯವಿದ್ದಷ್ಟೂ ಸಣ್ಣ ಧ್ವನಿಯಲ್ಲಿ ಮಾತನಾಡುತ್ತಿದ್ದರೂ ಮಾತುಗಳು ನುಸುಳಿ ಬರುತ್ತಿದ್ದವು:

ಪಾಪ, ಮೆಂಟಲ್‌ ಷಾಕ್ ಆಗಿರಬೇಕು. ಅಲ್ವಾ ?
ಹೌದು ನೋಡು, ಎಷ್ಟು ವಿಚಿತ್ರವಾಗಿ ಮಾತಾಡಿದ,
ಜಾತ್ರೇಲಿ ನಮ್ಜೊತೇನೆ ಇದ್ದಿದ್ದರೆ ಹೀಗಾಗುತ್ತಿತ್ತ?
ಇದ್ದಿದ್ದರೆ ಹೀಗಾಗುತ್ತಿತ್ತ ?
ಎಲ್ಲಿ ನೋಡ್ತಾ……ಅಥ್ವಾ ಯಾರಿಗೆ ಗೊತ್ತು. ಇವನೂ ಸಹಾ……
ಷಟ್ ಅಪ್, ಅವ್ನು ಹಾಗಲ್ಲ. ನಾಯರ್ ಪ್ರತಿಭಟಿಸಿದ ಧ್ವನಿ.
ಕೇಳಲು ಅಸಹನೀಯವಾಗಿ ಕಿವಿ ಮುಚ್ಚಿಕೊಂಡ. ಉತ್ತರಿಸಲು ಎದ್ದು ಹೊರಗೆ ಹೋಗಲು ಪ್ರಯತ್ನಿಸಿ……ಸೋತ.

ದೃಶ್ಯ ೩ ಹಂಚಿಹೋದವನು

ದೀಪೋತ್ಸವ, ತೆಪ್ಪೋತ್ಸವಗಳೆಲ್ಲ ಇವನನ್ನು ನಿರ್ಲಕ್ಷಿಸಿ ಮೆರೆದವು.

ಈಗ ಜಾತ್ರೆ ಕಳೆದು ವಾರವಾಗಿದೆ. ಬೀದಿ ಬೀದಿಯ ತುಂಬೆಲ್ಲ ಮೊನ್ನೆ ತಾನೇ ಜಾತ್ರೆಯಾಗಿದೆ ಎಂಬ ನೆನಪೇ ಇಲ್ಲದಂತೆ ಹಾಸಿಕೊಂಡು ಬಿದ್ದ ಮೌನ. ರಥಬೀದಿಯಲ್ಲೂ ಹಿಂದಿನದೆ ಸದ್ದುಗದ್ದಲವಿಲ್ಲದ ವಾತಾವರಣ, ಇವನಿಗೂ ಈಗೀಗ ಸುತ್ತಲಿನೊಡನೆ ಮಾತಿಗಿಂತ ಮೌನವೆ ಪ್ರಿಯವೆನ್ನಿಸಿಬಿಟ್ಟಿದೆ. ಹಾಗಾಗಿ ಯಾರೊಡನೆಯೂ ಮಾತು ಬೇಕೆನಿಸುತ್ತಿಲ್ಲ. ಇದರಿಂದಾಗಿ ಸ್ನೇಹಿತರು ಇವನು ಮೊದಲಿಗಿಂತ ಹೆಚ್ಚಿಗೆ ಕುಂದಿದ್ದಂತೆ ಕಾಣುತ್ತಾನೆಂದು ಕಂಡಾಗಲೆಲ್ಲ ಹೇಳುತ್ತಾರೆ, ಹೌದೆ, ಕುಂದಿದ್ದೇನೆಯೆ ಎಂದು ಪ್ರಶ್ನೆ
ಹಾಕಿಕೊಂಡರೆ ಪೆಚ್ಚು ನಗೆ ಬರುತ್ತದೆ ಇವನಿಗೆ.

ಮೇಲಿನದನ್ನು ನೆನೆಸಿಕೊಂಡು, ಕೂತ ಈ ಕಾಫಿ ಕ್ಯಾಂಟೀನಿನಲ್ಲಿ ತನ್ನಷ್ಟಕ್ಕೆ ನಕ್ಕ. ಮೊನ್ನೆ ಇಲ್ಲೇ ಇರಬೇಕು. ಹೌದು, ಇಲ್ಲೇ ಕೂತು ಕಾಫಿ ಕುಡಿಯುತ್ತಿರುವಾಗ ಪಕ್ಕದ ಕಾರ್ಡ್ಬೋರ್ಡ್ ರೂಮಿನಿಂದ ಆ ಮಾತುಗಳು ಘಟಾರನೆ ಬಂದು ಮೈತುಂಬ ಅಪ್ಪಳಿಸಿದ್ದುವು, ಅಲ್ಲಿ ಫಿಸಿಕ್ಸ್ ಅಟೆಂಡರ್‌ ಜಗ್ಗು ಪಿಸುಗುಡುತ್ತಿದ್ದ : ಹೌದ್ರೀ..ಲೇಡೀಸು ಅವಿಗೆ ‘ಸ್ಥಿತಪ್ರಜ್ಞ’ ಅಂತ ತಮ್ಮೊಳಗೆ ಗೇಲಿ ಮಾಡ್ಕೊಂಡು ನಗ್ತಾಶ್ರೀ-ಪ್ರಾಕ್ಟಿಕಲ್ಸ್ ಮಾಡುವಾಗ !

ಎದ್ದು ಹೋಗಿ ಕಾಲು ಹಿಡಿದು ನಾಲ್ಕು ಕಪಾಳಕ್ಕೆ ಬಾರಿಸಲೆ ಎಂದುಕೊಂಡರೂ ಕಾಫೀ ಕುಡಿಸುವವರ ಸಂತೋಷಕ್ಕೆ ನನ್ನನ್ನು ಅವರ ಮನಸ್ಸಂತೋಷದ ಮೇವಾಗಿ ಒಡ್ಡಿದ್ದೇನೆ. ಬೀಚ್ ಸಾಯಲಿ ಎಂದುಕೊಂಡು ಪುನಃ ಸುಮ್ಮನಾಗಿದ್ದ. ಅವನನ್ನು ವಿಚಾರಿಸಿಕೊಂಡರೆ ಸಾಧಿಸುವ ಪುರುಷಾರ್ಥವಾದರೂ ಏನು ? ಪುನಃ ಸ್ವಲ್ಪ ಗುಲ್ಲಾಗುತ್ತಿತ್ತು. ಹಲವರು ನಿಜ ಮೆಂಟಲ್‌ ಷಾಕ್ ಆಗಿದ್ದು ಎನ್ನಬಹುದು. ಕೆಲವರು ಛೇ ಪಾಪ ಎನ್ನಬಹುದು. ಆತ್ಮೀಯರು ಇನ್ನಿಷ್ಟು ಕನಿಕರ ವ್ಯಕ್ತಪಡಿಸಬಹುದು……ಆದಕ್ಕಿಂತ ಹೆಚ್ಚಿಲ್ಲ. ಅಷ್ಟೆ.

ಗಂಟೆ ನೋಡಿಕೊಂಡ. ಹಾ! ಆಗಲೇ ಹನ್ನೊಂದು ಮುಕ್ಕಾಲು..ಅಭಿಜಿನ್ ಮುಹೂರ್ತ ಸಮೀಪವಾಗುತ್ತಿದೆ. ಅಲ್ಲಿಗೆ ಹೋಗಬೇಕಾದ ನೆನಪಾಗಿ ತಟಕ್ಕನೆ ಕ್ಯಾಂಟೀನಿನಿಂದ ಹೊರಗೆ ಬಂದ ಕಾಲೇಜಿಗೆ ಬೆನ್ನು ಹಾಕಿ ಕುಶಾವತಿಯಿಂದ ಪೇಟೆಗೆ ಬಂದು ಎಡಕ್ಕೆ ತಿರುಗಿ ರಥಬೀದಿಯನ್ನು ಹಾದು ಬಯಲಿನತ್ತ ಹೆಜ್ಜೆ ಹಾಕಿದ.

ಹೌದು. ಈಗ ಪ್ರತಿದಿನವೂ ಉರಿಬಿಸಿಲಿನ ಅಭಿಜಿನ್ ಮುಹೂರ್ತದಲ್ಲಿ ಎಲ್ಲಿದ್ದರೂ ಇವನು ಈ ರಥೋತ್ಸವದ ಬಯಲಿಗೆ ಧಾವಿಸಿ ಬರುತ್ತಾನೆ. ಬಂದು ಇನ್ನೂ ಬಿಚ್ಚದೆ ಇರುವ ರಥಕ್ಕೆದುರಾಗಿ ನಿಂತು ಅದೇನೋ ನೆನಪಿನಿಂದ ಅದನ್ನೇ ತದೇಕಚಿತ್ತದಿಂದ ನೋಡುತ್ತಾನೆ. ನಂತರ ಅದರ ಅಂಗುಲ ಅಂಗುಲವನ್ನೂ ಚಿಕಿತ್ಸಕ ದೃಷ್ಟಿಯಿಂದ ಪರೀಕ್ಷಿಸುತ್ತಾನೆ. ಆದರೆ ತೇರಿನಲ್ಲಿ ಯಾವ ವ್ಯತ್ಯಾಸವೂ ಆಗಿದ್ದು ಕಾಣಬರುವುದಿಲ್ಲ. ನಿರಾಸೆಯಾಗುತ್ತದೆ. ಇಂದು ಕಾಣದಿದ್ದ ವ್ಯತ್ಯಾಸ ನಾಳೆಯಾದರೂ ಕಂಡೀತೆಂಬ ಆಸೆ ಮತ್ತೆ ಮನದ ಯಾವುದೋ ಮೂಲೆಯಲ್ಲಿ ಚಿಗರುತ್ತದೆ. ಪುನಃ ಮಾರನೇ ದಿನ ಮತ್ತದರ ಮರುದಿನದ ಪುನರಾವರ್ತನೆಯಲ್ಲಿ ಮುಹೂರ್ತಕ್ಕೆ ಸರಿಯಾಗಿ ಎಲ್ಲಿದ್ದರೂ ಇಲ್ಲಿಗೆ ಬಂದು ಹಾಜರಾಗುತ್ತಾನೆ. ದಿಟ್ಟಿಸುತ್ತಾನೆ. ಯಥಾ ಪ್ರಕಾರ ನಿರಾಸೆ.

ರಥೋತ್ಸವದಲ್ಲಾದ ಅನೈತಿಕ ಘಟನೆ ತೇರಿನ ಮೇಲೆ ಯಾವ ಪರಿಣಾಮವನ್ನೂ ಮಾಡಿದಂತೆ ಗೋಚರಿಸುವುದಿಲ್ಲ. ನಿನ್ನೆಯಂತೆ ಇಂದೂ ರಥ ತನ್ನ ನಾಲ್ಕು ಗಾಲಿಗಳ ಮೇಲೇ ಭದ್ರವಾಗಿ ‘ಸ್ಥಿತಪ್ರಜ್ಞ’ನಂತೆ ಮುಗಿಲುದ್ದಕ್ಕೂ ನಿಂತಿದೆ. ನೋಡುತ್ತ ನೋಡುತ್ತಾ ದೃಷ್ಟಿ ಹಾಗೇ ಹರಿದು ರಥದ ಕೆತ್ತನೆಗಳ ಮೇಲೆ, ರಾಶಿಪಟಗಳ ಮೇಲೆ ವರ್ಣಮಯ ಪತಾಕೆಗಳ ಮೇಲೆ ನಿಲ್ಲುತ್ತದೆ. ಆಯ್ಕೆ ಇಲ್ಲಿಯೂ ಯಾವ ಬದಲಾವಣೆಯೂ ಕಾಣುವುದಿಲ್ಲ, ಅಥವಾ ಎಂದಿಗೂ, ಯಾರಿಗೂ, ಏನೂ ಕಾಣುವುದೇ ಇಲ್ಲವೇ? ಇಲ್ಲಿಯೂ ಅಂದಿನ ಅದೇ-

ರಾಸಲೀಲೆಯ ಸುಂದರ ಕೆತ್ತನೆಗಳು……
ರಾವಣ ಕುಂಭಕರ್ಣರಾದಿಯಾಗಿ ಕಪಿಮುಖ್ಯರ,
ಮಾನಭಂಗದ ಕುಸುರಿ ಕೆಲಸಗಳು…..
ಮೇಷ ವೃಷಭ ಕನ್ಯಾ ಮಿಥುನ ವೃಶ್ಚಿಕ-
ಮುಂತಾದ ರಾಶಿಗಳ ಬಣ್ಣದ ಪಟಗಳು……
ಮುಂಗಾಲನ್ನೆತ್ತಿ ಕೆನೆಯುತ್ತ ತೇರಿನ ಎಡಬಲಕ್ಕಿರುವ ಜೋಡಿ
ಕುದುರೆಗಳು. ಜೋಡಿಸಿರುವ ಈ ಕುದುರೆಗಳ ಮೇಲೆ
ಕಡಿವಾಣ ಹಿಡಿದು ಕೂತ ವೀರ ಸವಾರರು……
ಇವೆಲ್ಲದರೊಡನೆ-
ತೇರಿನ ಸುತ್ತಮುತ್ತ ವಿಚಿತ್ರ ಭಣಭಣ ವಾತಾವರಣದ
ರಣಮೌನದಲ್ಲಿ ಗಿರಿಗಿರಿ ಸುರುಳಿ ಸುತ್ತುತ್ತಾ ತಿರುಗುವ
ಹರಿದ ಪ್ರಚಾರಪತ್ರಗಳ ರಾಶಿರಾಶಿ ತುಂಡುಗಳು…..

ಇದನ್ನೆಲ್ಲ ಒಳಗೊಳ್ಳುತ್ತ ಇವನು ಅಭಿಜಿನ್ ಮುಹೂರ್ತ ಕಳೆಯುವವರೆಗೂ ಇಲ್ಲೇ ಜೀವ ಹಿಡಿದು ನಿಲ್ಲುತ್ತಾನೆ. ಆಗ ಇವನ ಕತ್ತಿನ ಹಸಿರು ನರಗಳು ನಿಧಾನ ಉಬ್ಬಿಕೊಂಡು ಮತ್ತೆ ಹಾಗೇ ತೆಳ್ಳಗಾಗುತ್ತವೆ. ಕೊನೆಗೊಮ್ಮೆ ಹರಿದು ಚಪ್ಪನ್ನಚೂರಾದ ಈ ಕೆಲವು ಪ್ರಚಾರ ಪತ್ರಗಳಲ್ಲಿ ಭಗ್ನವಾಗಿಯೂ ಇರಬಹುದಾದ ‘ಶ್ರೀ ಕೃಷ್ಣ ರುಕ್ಷ್ಮಿಣೀ ಸತ್ಯಭಾಮಾದ ಅಕ್ಷರಗಳನ್ನು ಅವನು ಮನದಲ್ಲಿ ಕ್ರಮಬದ್ಧವಾಗಿ ಕೂಡಿಸಲು ವ್ಯರ್ಥ ಸಾಹಸ ಮಾಡುತ್ತಾನೆ.

ಇನ್ನೂ ಹೇಳಬೇಕೆಂದರೆ, ಈ ವ್ಯರ್ಥ ಸಾಹಸದ ನೆನಪೂ ಇವನಿಗೆ ಕೆಲವು ನಿಮಿಷ ಮಾತ್ರ. ತದನಂತರ ಈ ನೆನಪೂ ಜೊತೆಗೆ ಈ ಇವನೂ ಸಹಾಪ್ರಜ್ಞೆಯಿಂದಲೆ ಎಲ್ಲೋ ಹೊರಗೆ ಹೋದಂತೆ. ಹೊರಗೆ ಎಂದರೆ, ಈ ನೆಲದಿಂದ ಈ ಜಲದಿಂದ ಈ ಮುಗಿಲಿಂದ ಮತ್ತೆ ಸದಾ ಸರಿಯುವ ವಿಸ್ತರಿಸುವ ಆ ಕ್ಷಿತಿಜದ ಗೆರೆಗಳಿಗಿಂತ ಅದರಾಚೆಗೆ ಎನ್ನಬಹುದೇನೋ …..

Close

ಶೆಕ್ಸ್ಪಿಯರ್ನ ಸಾನೆಟ್-೧೨೦ (ಅನುವಾದ)

ಶೇಕ್ಸ್‌ಪಿಯರ್‌ನ ಸಾನೆಟ್-೧೩೦

ಅನುವಾದ : ರಾಮಚಂದ್ರದೇವ

ನನ್ನವಳ ಕಣ್ಣುಗಳು ಸೂಯ್ಯನಂತೇನೂ ಖಂಡಿತ ಇಲ್ಲ;
ಹವಳದ ಕೆಂಪು ಅವಳ ತುಟಿಗಳ ಕೆಂಪಿಗಿಂತ ಇನ್ನೂ ಕೆಂಪು ;
ಹಿಮ ಬಿಳಿಯೆಂದಾದರೆ, ಯಾಕೆ. ಆಗ ಅವಳ ಮೊಲೆಗಳು ಕಂದು ;
ಕೂದಲು, ತಂತಿಯೆಂದಾದರೆ, ಅವಳ ತಲೆ ಮೇಲೆ ಬೆಳೆಯುವುದು ಕಪ್ಪಿನ
ತಂತಿ.
ಗುಲಾಬಿಗಳು ಬಿಳಿಕೆಂಪು ಬಿಚ್ಚಿಕೊಳ್ಳುವುದು ನೋಡಿದ್ದೇನೆ
ಆದರೆ ಅವಳ ಕೆನ್ನೆಗಳಲ್ಲಿ ಅಂಥ ಗುಲಾಬಿ ನನಗೆ ಕಾಣುವುದಿಲ್ಲ;
ಮತ್ತು ಕೆಲವು ಪರಿಮಳ ಕೊಡುವ ಪರಿಮಳದ ಸುಖ ನನ್ನವಳು
ಹೊರಬಿಡುವ ಉಸಿರ ವಾಸನೆಗಿಂತ ಎಷ್ಟೋ ಹೆಚ್ಚು.
ಅವಳ ಮಾತುಗಳ ಕೇಳುವುದು ನನಗಿಷ್ಟ; ಆದರೂ ಗೊತ್ತಿದೆ ನನಗೆ
ಸಂಗೀತದಿಂದ ಹೊರಡುವ ನಾದ ಇನ್ನೂ ಹೆಚ್ಚು ಸುಮಧುರವೆಂದು;
ಒಪ್ಪುತ್ತೇನೆ: ದೇವತೆ ನಡೆಯುವುದನ್ನೆಂದೂ ನಾನು ನೋಡಿಲ್ಲ;
ನನ್ನವಳು, ಅವಳು ನಡೆವಾಗ, ಈ ನೆಲವನ್ನು ತುಳಿಯುತ್ತಾಳೆ.

ಆದರೂ ಕೂಡ, ಆಣೆ, ನನ್ನ ಪ್ರೀತಿ ಅಪರೂಪದ್ದು
ಅಲ್ಲ ಖಂಡಿತಾ ಸುಳ್ಳು ಹೋಲಿಕೆಯಿಂದ ಕಟ್ಟಿ ಹೇಳಿದ್ದು.

Close

ನಾಡಿನ ವಿಜಯ (ಅನುವಾದ)

ನಾಡಿನ ವಿಜಯ

ಮಲಯಾಳಿ ಮೂಲ : ಸೇತು
ಕನ್ನಡ ಅನುವಾದ : ಎಂ ಎಸ್ ಲಕ್ಷ್ಮಣಾಚಾರ್‌

ನಮ್ಮೂರಿನ ಬೀದಿಯೊಂದರಲ್ಲಿ ಕಳ್ಳತನ ನಡೆದಾಗ ನಾನು ಊರಿನಲ್ಲಿರಲಿಲ್ಲ.
ಘಟನೆ ನಡೆದದ್ದು ನಡು ಹಗಲಿನಲ್ಲಿ. ನಾನು ಹಿಂದಿರುಗಿ ಬಂದದ್ದು ಸಾಯಂಕಾಲ. ಚೆಲ್ಲಪ್ಪನು, ನನ್ನ ಅಡಿಗೆಯವನು, ಬಲು ಗಾಬರಿಯಾಗಿಬಿಟ್ಟಿದ್ದ. ಎರಡು ಸಲ ಪೋಲೀಸರು ನನ್ನನ್ನು ಹುಡುಕಿಕೊಂಡು ಬಂದಿದ್ದರೆಂದು ಅವನು ಹೇಳಿದ. ಅವನ
ಮುಖ ಬಾಡಿತ್ತು. ಧ್ವನಿಯಲ್ಲಿ ಕಂಪನವಿತ್ತು.
“ಯಾಕಂತೆ ?” ನಾನು ಕೇಳಿದೆ.
“ಆ ಪಶ್ಚಿಮದ ಕಡೆಗಿರುವ ಚಿನ್ನ ಬೆಳ್ಳಿ ಅಂಗಡಿಯಲ್ಲಿ ಕಳ್ಳ ನುಗ್ಗಿದ್ದಾನೆ.”
“ಯಾವುದು ? ಆ ಸೇಟಜಿಯ ಅಂಗಡಿಗೇ ?”
“ಹೌದು”
“ಯಾವಾಗ”
“ಮಟ ಮಟ ಮಧ್ಯಾಹ್ನ”
“ಅದಕ್ಕೇನಂತೆ ?”
“ಈ ಮನೆಯ ತಾರಸಿ ಹತ್ತಿ ನಿಂತರೆ ಅದನ್ನು ನೋಡಬಹುದಾಗಿತ್ತೆಂದು ಪೊಲೀಸರು ಹೇಳಿದರು.”
“ನಾನು ಊರಲ್ಲಿರಲಿಲ್ಲವೆಂದು ನೀನು ಹೇಳಲಿಲ್ಲವೇನು ?”
“ಓ, ಹೇಳಿದೆ”
“ನಾನಿಲ್ಲದಿರುವಾಗ ನೀನು ತಾರಸಿ ಹತ್ತಿ ಹೋಗುವುದಿಲ್ಲವೆಂದು ಹೇಳಲಿಲ್ಲವೇ ?”
“ಹುಂ, ಹೇಳಿದೆ”
“ಅದಕ್ಕೇನಂದರು ?”
“ಇಂದು ರಜೆಯಲ್ಲವೇ ? ನೀವು ಇಲ್ಲೇ ಇರಬೇಕಿತ್ತಲ್ಲಾ, ಅದೂ ಕಳ್ಳತನ ನಡೆದಾಗ, ನೀವಿದ್ದೇ ಇರಬೇಕಿತ್ತೆಂದೂ ಅವರು ಹೇಳಿದರು.”
“ಆ ಮೇಲೆ ?”
“ನೀವು ಎಲ್ಲಿ ಹೋಗಿದ್ದೀರೆಂದು ಕೇಳಿದರು. ನನಗೆ ಗೊತ್ತಿಲ್ಲವೆಂದು ಹೇಳಿದೆ. ಅದಕ್ಕವರಿಗೆ ಕೋಪ ಬಂದುಬಿಟ್ಟಿತು. ಅವರಲ್ಲೊಬ್ಬನು ಬೆಲ್ಟ್ ಹಾಕಿದ್ದವನು, ನೆಲಕ್ಕೆ ಕಾಲನ್ನೆತ್ತಿ ಅಪ್ಪಳಿಸಿದನು. ಸರಿಯಾಗಿ ಹೇಳಬೇಕೆಂದರೆ ನಾನು ಭೂಮಿಗಿಳಿದುಹೋದೆ. ಅವರು ಹೊರಟು ಹೋದ ನಂತರವೇ ನಾನು ಉಸಿರೆಳೆದುಕೊಂಡಿದ್ದು.”
“ಕಳ್ಳತನವಾಗಿದ್ದು ಯಾವುದೋ ಜಾಗದಲ್ಲಿ. ಅದಕ್ಕೆ ನೀನೇಕೆ ಹೆದರಬೇಕು ? ನೀನೇನಾದರೂ ಕದ್ದಿದ್ದೀಯೇನು ?”
“ಇಲ್ಲ ಸಾರ್, ನನಗೆ ಅಷ್ಟು ಧೈರ್ಯವೆಲ್ಲಿಂದ ಬಂತು ?”
“ಹಾಗಾದರೆ ಕದ್ದವರಾರು ?”
“ನನಗೊತ್ತಿಲ್ಲ. ಮಧ್ಯಾಹ್ನ ಸುಡುವ ಬಿಸಿಲು. ಸೇಠ್‌ಜಿ ಎಂದಿನಂತೆ ತಲೆದಿಂಬನ್ನೊರಗಿ ಕುಳಿತಿದ್ದರಂತೆ. ಅವರಿಗೇ ಗೊತ್ತಿಲ್ಲದಂತೆ ಜೋಂಪು ಹಿಡಿದಿರಬೇಕು. ಸಾಧಾರಣವಾಗಿ ಅವರು ಹಾಗೆ ಮಾಡುವ ಅಭ್ಯಾಸವಿಲ್ಲ. ಇಂದೆಲ್ಲೋ ಹೆಚ್ಚು ಮಿಠಾಯಿ ತಿಂದಿರಬೇಕು. ಏನೋ ಆ ದೇವರಿಗೇ ಗೊತ್ತಷ್ಟೆ. ಒಮ್ಮೆ ಕಣ್ಣು ಮುಚ್ಚಿದಂತೆ ಮಾಡಿದರೇನೋ. ಅಲ್ಲಿಗೆ ಮುಗಿಯಿತು. ಮತ್ತೆ ಕಣ್ಣು ತೆರೆಯುವ ಹೊತ್ತಿಗೆ ಹಣದ ಪೆಟ್ಟಿಗೆ ಖಾಲಿ.”
“ಅಂಗಡಿಯಲ್ಲಿ ಕೆಲಸದವರಿಲ್ಲವೇ ?”
“ಅವರ‍್ಯಾರಿಗೂ ಗೊತ್ತಿಲ್ಲವಂತೆ. ಬಹುಶಃ ಅಂಗಡಿಯಲ್ಲಿ ಆಭರಣಗಳನ್ನು ನೋಡುತ್ತಾ ನಿಂತಿದ್ದವರಲ್ಲಿ ಯಾರಾದರೂ ಒಬ್ಬರಿರಬೇಕು.”
ನಾನು ಹೂಂಗುಟ್ಟಿದೆ.
ಸಾಮಾನ್ಯವಾಗಿ ಸೇಠ್‌ಹುಯ ಒಡವೆ ಅಂಗಡಿಯಲ್ಲಿ ಕಳ್ಳತನ ನಡೆದರೆ, ಅದಕ್ಕಾಗಿ ನಾನು ವಿಷಾದಪಡಬೇಕಾದ ಆವಶ್ಯಕತೆಯಿರಲಿಲ್ಲ. ಹಣ ಸಂಪಾದಿಸುವುದನ್ನು ಕಲಿತವರು ಅದನ್ನು ಜೋಪಾನವಾಗಿಡುವುದನ್ನೂ ಕಲಿಯಬೇಕು. ಆದರೆ ಸೇಠ್‌ಜಿಯು ನನ್ನ ನೆರೆಯವನೇ ಅಲ್ಲವೇ ? ನನ್ನ ರೂಮಿನಲ್ಲಿ ನಿಂತರೆ ಆತನ ಅಂಗಡಿಯನ್ನು ಚೆನ್ನಾಗಿ ಕಾಣಬಹುದು. ತಾರಸಿ ಹತ್ತಿ ನಿಂತುಕೊಂಡು ನೋಡಿದರೆ ಅಂಗಡಿಯಲ್ಲಿ ನಡೆಯುವ ಪ್ರತಿಯೊಂದು ಕೆಲಸವನ್ನೂ ಸ್ಪಷ್ಟವಾಗಿ ನೋಡಬಹುದು.
ಅಂದಾಕ್ಷಣವೇ ಆ ಕಳ್ಳತನಕ್ಕೆ ನಾನೊಬ್ಬ ಸಾಕ್ಷಿಯಾಗಿ ನಿಲ್ಲಬೇಕಾದ ಅವಶ್ಯಕತೆಯೇನಿಲ್ಲ. ನಾನು ರೂಮಿನಲ್ಲೇ ಇದ್ದಿದ್ದರೂ, ಆ ಕಳ್ಳತನವನ್ನು ಪ್ರತ್ಯಕ್ಷವಾಗಿ ಕಂಡಿದ್ದರೂ, ಕಳ್ಳನನ್ನು ಹಿಡಿಯಲು ಜೋರಾಗಿ ಕೂಗಿ ಕರೆದು ಜನರನ್ನು ಸೇರಿಸಿ ಸಹಾಯ ಮಾಡುತ್ತಿರಲಿಲ್ಲ. ಅಂತಹ ಧರ್ಮವೇನು ನನಗಿಲ್ಲ. ಒಂದೊಂದು ಬಾರಿ ರಜೆಯಲ್ಲಿ ಊರಿಗೆ ಹೋಗುವಾಗ ಆ ಅಂಗಡಿಯಿಂದ ಒಂದೆರಡು ಒಡವೆ ಕೊಂಡಿರುವುದುಂಟು. ಅಂತಹ ಸಮಯಗಳಲ್ಲಿ ಅವುಗಳ ಬೆಲೆಯನ್ನು ತೆರಿಗೆಯ ಸಮೇತ ತೀರಿಸಿಬಿಡುತ್ತಿದ್ದೆ. ಹಾಗಿರುವಾಗ ಸೇಠ್‌ಜಿಗೆ ನಾನು ಹೇಗೇ ಆಗಲಿ ಒಂದು ಉಪಕಾರ ಮಾಡಬೇಕಾಗಿದೆಯೆಂದು ಹೇಳಲಾಗುವುದಿಲ್ಲ.
ಇದೆ, ಆಲೋಚಿಸಿ ನೋಡುವುದಾದರೆ ಇದೆ.
ಒಂದು ಚಿಕ್ಕ ಉಪಕಾರ ಮಾಡಬೇಕಾಗಿದೆ. ಸೇಠ್‌ಜಿ ನನಗೆ ಒಂದು ಬೇಸಗೆಯಲ್ಲಿ ಒಂದು ಬುಟ್ಟಿ ತುಂಬ ಕಲ್ಲಂಗಡಿ ಹಣ್ಣನ್ನು ಕೊಟ್ಟು ಕಳುಹಿಸಿದ್ದನು. ಅದನ್ನು ನಾನೀಗಲೂ ನೆನೆಸಿಕೊಳ್ಳುವುದುಂಟು. ಆದರೆ ಆ ಉಪಕಾರದ ಹಿಂದೆ ಇದ್ದದ್ದು ನೆರೆಯವನ ಮೇಲಿನ ವಿಶ್ವಾಸ ಸ್ನೇಹಗಳಲ್ಲ. ವ್ಯಾಪಾರೀ ಮನೋಭಾವವಷ್ಟೇ. ಸೇಠ್‌ಜಿಯ ಕಲ್ಲಂಗಡಿ ಹಣ್ಣನ್ನು ತಿಂದ ನಂತರ ಬೇರೆಯವರ ಚಿನ್ನ ಬೆಳ್ಳಿ ಅಂಗಡಿಗೆ ಹೋಗಲು ಸಾಧ್ಯವಿಲ್ಲವಲ್ಲಾ? ಅವನಿಗೆ ಬೇಕಾಗಿದ್ದದ್ದು ಅದೇ ?
ಒಂದು ಸಲ ವಿಚಾರಿಸೋಣವೆಂದು ನಾನು ರಸ್ತೆಗಿಳಿದು ನಡೆದೆ.
ಅಂಗಡಿಯ ಮುಂದೆ ಜನರ ಗುಂಪಿತ್ತು. ಸೇಠೀಜಿಯ ನೆಂಟರು, ಇಷ್ಟರು, ಗಿರಾಕಿಗಳು, ದಾರಿಹೋಕರು, ಪುಂಡಪೋಕರಿಗಳು. ಆ ಗಲಾಟೆಯ ಮಧ್ಯೆ ನುಗ್ಗುತ್ತಿರುವಾಗ ನನಗೆರಡು ವಿಷಯಗಳು ಜ್ಞಾಪಕಕ್ಕೆ ಬಂದವು.
ಮೊದಲನೆಯದು ಸೇಠಜಿ ಇಂದು ಮಧ್ಯಾಹ್ನ ಧಾರಾಳವಾಗಿ ಮಿಠಾಯಿ ತಿಂದಿರಬೇಕು’ ಎರಡು ಕಳ್ಳತನವಾದ ಹಣದ ಸಂಖ್ಯೆ ಬಹಳ ದೊಡ್ಡದಿರಬೇಕು.
ತುಂಬಿದ್ದ ಜನ ಸೇಠ್‌ಜಿಯನ್ನು ಸಮಾಧಾನಪಡಿಸುತ್ತಿರಬೇಕು. ಪೋಲೀಸಿನವರ ಮೇಲೆ ತಪ್ಪು ಹೊರೆಸುತ್ತಿರಬೇಕು. ಹಾಡುಹಗಲು ಮಟ ಮಟ ಮಧ್ಯಾಹ್ನ, ಪೇಟೆಯ ಮಧ್ಯದಲ್ಲಿ ಇಂತಹ ದುರಾಕ್ರಮಣ ನಡೆದಿದ್ದಾದರೆ ಮನುಷ್ಯರಾದವರು ಸಹಿಸುವುದು ಹೇಗೆ ? ಇಲ್ಲಿ ವ್ಯಾಪಾರ ಮಾಡುವುದಾದರೂ ಹೇಗೆ ? ಅಂಗಡಿಯಲ್ಲಿದ್ದ ಮೂವರು ಕೆಲಸಗಾರರ ಕಣ್ಣಿಗೆ ಮಣ್ಣೆರಚಿಯಲ್ಲವೇ ಈ ಕಳ್ಳತನ ನಡೆದದ್ದು ? ಅಂದು ರಜಾದಿನವಾದ್ದರಿಂದ ಬೀದಿಯಲ್ಲಿ ನಿತ್ಯಕ್ಕಿಂತಲೂ ಹೆಚ್ಚಿಗೆಯೇ ಜನರಿದ್ದರು.
ಅಂತಹುದರಲ್ಲಿ ಇದು ಹೇಗೆ ಸಾಧ್ಯವಾಯಿತು ?
ಕಾನೂನಿನ ಪಾಲಕರ ಕಣ್ಣು ತಪ್ಪಿರಬೇಕಷ್ಟೆ ?
ಕೇಸನ್ನೂ ತನಿಖೆಮಾಡುವ ವಿಧಾನವೂ ಜನರಿಗೆ ಹಿಡಿಸಲಿಲ್ಲ. ಪೋಲೀಸರು ಹಾರಿ ಓಡಿ ತಿರುಗಾಡುತ್ತಿದ್ದರಂತೆ. ಅವರಿಗೆ ಒಬ್ಬ ಸಾಕ್ಷಿ-ನಡೆದದ್ದನು ಕಣ್ಣಾರೆ ಕಂಡಿರುವವನು ಬೇಕು ಅಷ್ಟೆ. ಆ ದಿನ ಅವರು ಒಂದು ನಾಯಿಯನ್ನು ಕರೆದು ತಂದು ವಾಸನೆ ತೋರಿಸಿ ಕಳ್ಳರ ಹಿಂದೆ ಓಡಿಸಿದ್ದರೆ-
ಅಲ್ಲದಿದ್ದರೆ ತಾನೆ ಏನು-
ಈಗಾಗಲೇ ಕಳ್ಳರು ಈ ನಾಡಿನ ಸರಹದ್ದನ್ನೆ ದಾಟಿ ಹೋಗಿರಬೇಕು.
ಜನರ ಮಧ್ಯೆ ನನ್ನನ್ನು ಕಂಡಾಗ ಸೇಠ್‌ಜಿ ನನ್ನನ್ನು ಕೂಗಿದನು.

“ಬನ್ನಿ ಮಹರಾಜ್, ಒಳಕ್ಕೆ ಬನ್ನಿ.”
ನಾನು ಒಳಕ್ಕೆ ಹೋದೆ. ಕುರ್ಚಿಯಲ್ಲಿ ಕುಳಿತೆ.
“ನಡೆದ ಸಮಾಚಾರ ತಿಳಿಯಿತೇ ?”
“ಹುಂ, ಗೊತ್ತಾಯಿತು”
ಸೇಠ್‌ಜಿಯ ಮುಖ ಬಿಳಿಚಿಕೊಂಡಿತ್ತು. ಆತನು ಕುಳಿತಿದ್ದ ಜಾಗದ ಹಿಂದಿದ್ದ ಸೇಫ್‌ನಿಂದಲೇ ಹಣ ಕದಿಯಲ್ಪಟ್ಟಿತ್ತು. ಹಾಗೆಂದ ಮೇಲೆ ಬೀಗದ ಕೈ ಅವರ ಬಳಿಯಿಂದಲೇ ತೆರೆದು ಸೇಫ್ ತೆರೆದು ಹಣ ಕದ್ದುಕೊಂಡು ಹೋಗಿರಬೇಕು. ಹಣದ ಮೊತ್ತ ದೊಡ್ಡದೇ ಇರಬೇಕು. ಬೆಳಿಗ್ಗೆ ತಾನೇ ತಂದಿಟ್ಟಿದ್ದರಂತೆ. ವ್ಯಾಪಾರಿಯೊಬ್ಬನಿಗೆ ಕೊಡಬೇಕಿತ್ತಂತೆ. ಆದರೆ ಎಷ್ಟೆಂದು ಹೇಳುವುದಿಲ್ಲ. ಎಲ್ಲೋ ಕಪ್ಪು ಬಿಳುಪು ಸೇರಿದ ಹಣವಿರಬೇಕು.
ಮುಖ ಬಾಡಿರುವುದು ನೋಡಿದರೆ ಸಂಖ್ಯೆಯ ಗಾತ್ರವನ್ನು ಒಂದು ವಿಧವಾಗಿ ಊಹಿಸಬಹುದು.
“ಏನು ಮಾಡುವುದು, ನೀವು ರೂಮಿನಲ್ಲಿಲ್ಲದ ಹೋದಿರಿ” ವಿಷಾದದಿಂದ ಸೇಠ್‌‌ಜಿ ಹೇಳಿದನು.
“ನಾನು ರೂಮಿನಲ್ಲಿದ್ದಿದ್ದರೆ ತಾನೆ ಏನು ?”
“ನನಗೊಬ್ಬ ಸಾಕ್ಷಿಯಾದರೂ ಸಿಗುತ್ತಿದ್ದನಲ್ಲಾ ?”
“ಹಣ ಹೋದಮೇಲೆ ಸಾಕ್ಷಿ ಸಿಕ್ಕಿದರೆ ಪ್ರಯೋಜನವೇನು ?”
“ಸಾಕ್ಷಿ ಸಿಕ್ಕಿದರೆ ಕೇಸಿಗೆ ಸುಳಿವು ಸಿಕ್ಕಂತೆ ಎಂದು ಪೋಲೀಸ್ ಅಧಿಕಾರಿಗಳೆಂದರು
“ಓ ಹಾಗೋ”
ಸ್ವಲ್ಪ ಹೊತ್ತಾದ ಮೇಲೆ ಏನೋ ನೆನೆಸಿಕೊಂಡು ಆತನ್ನ ಒಡನೆ ಕೇಳಿದನು.
“ಕಳ್ಳತನ ನಡೆದ ಹೊತ್ತಿನಲ್ಲಿ, ಎಂದರೆ ಮಟ ಮಟ ಮಧ್ಯಾಹ್ನ 1-48 ಕ್ಕೆ ನೀವೆಲ್ಲಿದ್ವಿರಿ?”
“ಹದಿನೈದು ಮೈಲಿ ದೂರದಲ್ಲಿದ್ದೆ.”
“ಅಲ್ಲಿ ಏನು ಮಾಡುತ್ತಿದ್ದಿರಿ ?”
“ಒಬ್ಬ ಸ್ನೇಹಿತನೊಂದಿಗೆ ಸೇರಿ ಕುಡಿಯುತ್ತಾ ಕುಳಿತಿದ್ದೆ.”
ಸೇಠ್‌ಜಿಯ ಕಷ್ಟ ನನಗರ್ಥವಾಯಿತು. ಬಲವಾದ ಸಾಕ್ಷಿಯೊಬ್ಬನು ಬೇಕು. ಅಷ್ಟು ದೊಡ್ಡ ಪೇಟೆ. ಹಾಡುಹಗಲು. ಆದರೂ ಕಣ್ಣಾರೆ ಕಂಡ ಸಾಕ್ಷಿಯಿಲ್ಲವೆಂದಾದರೆ-
ಹಣವು ಹೋದರೆ ಹೋಗಲಿ. ಆದರೆ ಒಬ್ಬ ಸಾಕ್ಷಿಯಿಲ್ಲದ ಕಳ್ಳತನವು ಒಂದು ಕಳ್ಳತನವೇ. ಸೇಠ್‌ಗೆ ನಾನೊಂದು ವಿಷಯ ತಿಳಿಸಲಿಲ್ಲ. ಆ ಸಮಯದಲ್ಲಿ ನಾನು ರೂಮಿನಲ್ಲಿದ್ದಿದೃರೂ ಸಹ ನಾನು ಸಾಕ್ಷಿಯಾಗುತ್ತಿರಲಿಲ್ಲ. ಯಾಕೆಂದರೆ ಕಾಣುವುದೂ, ಸಾಕ್ಷಿಯಾಗುವುದೂ ಎರಡೂ ಬೇರೆ ಬೇರೆ.
“ಪೋಲೀಸಿನವರು ತನಿಖೆ ನಡೆಸುತ್ತಿದ್ದಾರೆ” ಸೇಠ್‌ಜಿ ಶಾಂತವಾಗಿ ನುಡಿದನು. ಆತನಿಗೆ ಅವರ ಕೆಲಸಗಳಲ್ಲಿ ನಂಬಿಕೆಯಿಲ್ಲವೆಂದೆನ್ನಿಸಿತು.
“ಏನಾದರೂ ಸುಳಿವು ಸಿಕ್ಕಿತೇ ?”
“ಇಲ್ಲ”
“ಏನಾದರೂ ಸಿಕ್ಕಬಹುದು” ಎಂದು ನಾನು ಅವನನ್ನು ಸಂತೈಸಲೆತ್ನಿಸಲಿಲ್ಲ. ಅದಕ್ಕೆ ಬದಲಾಗಿ ಒಂದು ದೊಡ್ಡ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲೆತ್ನಿಸುತ್ತಿದ್ದೆ.
ರೂಮಿಗೇನೋ ಹಿಂದಿರುಗಿ ಬಂದೆನಾದರೂ ಆ ಘಟನೆ ನನ್ನ ಮನಸ್ಸಿನಲ್ಲಿ ಒಂದು ಕರಿಯ ಮಚ್ಚೆಯಂತೆ ಅಂಟಿಕೊಂಡೇ ಇತ್ತು. ಕೇವಲ ಕಲ್ಲಂಗಡಿ ಹಣ್ಣು ಕೊಟ್ಟಿದ್ದನೆಂಬ ಕಾರಣದಿಂದ ಅವನಿಗೆ ನಾನು ಉಪಕಾರ ಮಾಡಬೇಕಾಗಿದೆಯೇ ? ನೆರೆಯಮನೆಯವನೆಂಬ ಕಾರಣದಿಂದ ನಾನು ಆತನ ಕಷ್ಟದಲ್ಲಿ ಪಾಲ್ಗೊಳ್ಳಬೇಕಿಲ್ಲವೇ ? ಈ ಕಳ್ಳತನವನ್ನು ರುಜುವಾತು ಮಾಡಲು ನಾನು ನನ್ನಿಂದಾಗುವ ಸಹಾಯ ಮಾಡಬೇಕಾಗಿದೆಯೇ ?
ಬೇಕಿದ್ದರೆ ಒಂದು ಸುಳ್ಳು ಸಾಕ್ಷಿಯೂ ಆಗಬೇಕಾದೀತು. ಅದನ್ನು ನೆನೆಸಿಕೊಂಡಾಗ ನನಗೆ ಸ್ವಲ್ಪ ಕಷ್ಟವೆನಿಸಿತು. ಏನೋ ಮಾಡಬಾರದ್ದು ಮಾಡಬೇಕಾಗುವಂತೆ ತೋರಿತು.
ಬಹುಶಃ ಪೊಲೀಸರು ನನ್ನನ್ನು ಹುಡುಕಿಕೊಂಡು ಬಂದದ್ದು ಅದಕ್ಕೋಸ್ಕರವೇ ಇರಬೇಕು. ಅವರಿಗೆ ಬಲವಾದ ಸಾಕ್ಷ್ಯ ಬೇಕು ಅಷ್ಟೆ. ಯಾವ ಕೋರ್ಟೂ ನಂಬಲು ಸಾಧ್ಯವಾಗುವಂತೆ ಸಾಕ್ಷ್ಯ ನೀಡಬೇಕು.
ಹಾಗೆ ಮಾಡಿದರೋ-
ಪೋಲೀಸರ ಕೈಯಲ್ಲಿ ಸಿಕ್ಕಿ ಬೀಳುವ ಕೈದಿಗಳು ತಪ್ಪು ಮಾಡಿದವರಾಗುತ್ತಾರೆ. ಅಷ್ಟೇ
ಅಲ್ಲ ಜನರಿಗೊಂದು ಪಾಠವೂ ಆಗುತ್ತದೆ. ಈ ಪೇಟೆಯಲ್ಲಿ ಇನ್ನು ತಲೆಯಿಡಲು ಕಳ್ಳರು ಹಿಂದೂಮುಂದೂ ನೋಡುವಂತಾಗುತ್ತದೆ. ಬೀದಿಯಲ್ಲಿ ಶಾಂತತೆ ನೆಲೆಸುತ್ತದೆ. ಪರಿಶುದ್ದವಾಗುತ್ತದೆ. ಅದಿಲ್ಲದೆ ಈ ತಪ್ಪನ್ನು ರುಜುವಾತು ಮಾಡದಿದ್ದರೆ, ಬೀದಿಯಲ್ಲಿ ಶಾಂತಯುತ ಜೀವನವು ಅಸಾಧ್ಯವಾಗುತ್ತದೆ. ನೀಚರ ಕೈಯಲ್ಲಿ ಆಡಳಿತ ಸಿಕ್ಕಿಬೀಳುತ್ತದೆ. ಕಳ್ಳತನ, ವ್ಯಭಿಚಾರ, ಕೊಲೆ ವರ್ಧಿಸುತ್ತದೆ. ಸಜ್ಜನರು ತಲೆಯೆತ್ತಿ ಅಲೆದಾಡಲು ಸಾಧ್ಯವಾಗದೆ ಹೋಗುತ್ತದೆ. ವ್ಯಾಪಾರಿಗಳಿಗೆ ವ್ಯಾಪಾರ ಮಾಡಲೇ ಕಷ್ಟವಾಗಿ ಬಿಡುತ್ತದೆ.
ಇಂತಹ ಸಾಕ್ಷ್ಯ ಹೇಳುವುದರಲ್ಲಿ ತಪ್ಪೇನಿಲ್ಲವೆಂದು ನನಗೆ ಆಗ ಅನ್ನಿಸಿತು.
ಒಂದು ಬೀದಿಯಲ್ಲಿನ ಜವಾಬ್ದಾರಿಯು ಪೂರ್ಣವಾಗಿ ನನ್ನ ಭುಜದ ಮೇಲೇ ಬಿದ್ದಿದೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ. ನಾನೇ ಅವರನ್ನು ಕಾಪಾಡಬೇಕು. ಒಂದು ಚಿಕ್ಕ ಧರ್ಮಭ್ರಷ್ಠತೆಯಿಂದಾಗಿ ಒಂದು ಮಹಾ ಧರ್ಮವನ್ನೇ ಕಾಪಾಡಿದಂತಾಗುತ್ತದೆ.
ಸಾಯಂಕಾಲ ಪೋಲೀಸರು ಮತ್ತೆ ಬಂದರು. ಅವರು ನನ್ನನ್ನು ಪೋಲೀಸಧಿಕಾರಿಯ ಬಳಿ ಕರೆದೊಯ್ದರು. ಪಾರಿವಾಳದಂತಹ ಮುಖವೂ, ಗಂಟಲಿನಲ್ಲಿ ಗಂಟೊಂದು ಇರುವ ಅಧಿಕಾರಿಯಾತ.
ದೊಡ್ಡ ಮೇಜಿನೆದುರಿಗೆ ಕುಳಿತಿದ್ದ ಆತನು ಕೈತೋರಿಸಿ ಹೇಳಿದನು.
“ಕುಳಿತುಕೊಳ್ಳಿ ಸಾರ್‌.”
ನಾನು ಕುಳಿತೆ.
ಅಧಿಕಾರಿ ವಾಚಾಳಿಯಾಗಿದ್ದನು. ಆತನು ಮೃದುವಾಗಿ ಮಾತನಾಡತೊಡಗಿದನು.
“ಅಲ್ಲ ನಮ್ಮೂರಿಗೆ ಬಂದಿರುವ ಗತಿ ನೋಡಿದಿರಾ ? ಕೆಲ ಸ್ನೇಹಿತರು ಹೀಗೆ ಮೊದಲಿಟ್ಟರೆ ಇದಕ್ಕೆ ಕೊನೆಯಲ್ಲಿ. ನಮಗೆ ಕೈಕಟ್ಟಿ ಕುಳಿತಿರಲು ಸಾಧ್ಯವೇ ? ನಮ್ಮೂರಲ್ಲಿ ಗಂಡಸರೇ ಇಲ್ಲವೆಂದಾಗುವುದಿಲ್ಲವೇ ?”
ಮೇಜಿನೆದುರಿನಿಂದ ಮಾತುಗಳ ಸರಣಿ ಹರಿಯುತ್ತಲೇ ಇತ್ತು. ನಾನು ಕೇಳುತ್ತಲೇ ಇದ್ದೆ.
“ನಾನು ಹೇಳದೆಯೇ ನಿಮಗೆಲ್ಲಾ ವಿಷಯಗಳೂ ಗೊತ್ತಿರಬೇಕಲ್ಲವೆ ?”
“ಸ್ವಲ್ಪ ಸ್ವಲ್ಪ” ನನ್ನ ಧ್ವನಿ ಉದಾಸೀನವಾಗಿತ್ತು. ಅಡಗಿಕೊಂಡಿದ್ದ ಆಕಳಿಕೆಯೊಂದು ನನ್ನ ಬಾಯಿಂದ ಹೊರಕ್ಕುರುಳಿತು.
ಅಧಿಕಾರಿಗೆ ಅದು ಹಿಡಿಸಲಿಲ್ಲವೆಂದು ತೋರಿತು.
“ನೀವು ಆಲೋಚಿಸುವಷ್ಟು ಕ್ಷುಲ್ಲಕವಾದದ್ದಲ್ಲ ಈ ವಿಷಯ” ಆತನೆಂದನು. “ಕಳ್ಳತನದ ಮೊತ್ತ ದೊಡ್ಡದು. ಅದು ಹೋಗಲಿ ಅನ್ನೋಣ. ಎಷ್ಟಾದರೂ ಕೈ ಬಿಟ್ಟುಹೋದ ವಸ್ತುವಲ್ಲವೇ ? ಆದರೆ ಈ ಕೇಸು ರುಜುವಾಗದಿದ್ದರೆ……” ಅಧಿಕಾರಿ ಇದ್ದಕ್ಕಿದ್ದಂತೆ ನಿಲ್ಲಿಸಿದನು. ಗಂಟಲಿನಲ್ಲಿನ ಗಂಟು ಎರಡು ಮೂರು ಬಾರಿ ಹತ್ತಿ ಇಳಿಯಿತು.
“ಡಿಪಾರ್ಟ್‌ಮೆಂಟ್‌ಗೇ ಕೆಟ್ಟ ಹೆಸರು.” ನಾನು ಪೂರ್ತಿ ಮಾಡಿದೆ.
“ಡಿಪಾರ್ಟ್‌ಮೆಂಟ್‌ನ ಎಷಯ ಬಿಡಿ. ನಮ್ಮೂರಿನ ಗತಿ ಹೇಳಿ. ಹೋಗಲಿ, ನೀವೇ ಒಮ್ಮೆ ಆಲೋಚಿಸಿ ನೋಡಿ. ಆ ಬೀದಿಯಲ್ಲಿ ಇದಕ್ಕಿಂತ ಮುಂಚೆ ಯಾವಾಗಲಾದರೂ ಇಂತಹ ಘಟನೆ ನಡೆದಿದೆಯೇ ? ನೀವು ಇಲ್ಲಿಗೆ ಬಂದು ಎಷ್ಟು ವರ್ಷಗಳಾದುವು ?”
“ಎಂಟು ವರ್ಷ”
“ಆಂ, ಎಂಟು ವರ್ಷಗಳೇ, ಈ ಎಂಟು ವರ್ಷಗಳಲ್ಲಿ ಇಂತಹ ಒಂದು ನಾಚಿಕೆಗೇಡಿನ ಕೆಲಸ ನಮ್ಮ ಬೀದಿಯಲ್ಲಿ ನಡೆದಿತ್ತೇ ?”
“ಇಲ್ಲ”
“ಅದೇ ನಾನೂ ಅನ್ನುತ್ತಿರುವುದು. ಇಂತಹವನ್ನೆಲ್ಲಾ ಮೊಳಕೆಯಲ್ಲೇ ಚಿಗುಟಿ ಹಾಕದಿದ್ದರೆ ನಮ್ಮೂರ ಸ್ಥಿತಿ ಏನಾಗುತ್ತದೆ ?”
ಅದೂ ನಿಜವೆಂದು ನನಗೂ ಅನ್ನಿಸಿತು ಹೀಗೇ ಮುಂದುವರಿದರೆ ಊರಿನ ಭವಿಷ್ಯವೇನಾಗುತ್ತದೆ ? ಅಂಧಕಾರದಲ್ಲಿ ಸಿಕ್ಕುವುದಲ್ಲವೇ ? ಆದರೆ ಅದರಲ್ಲಿ ನಾನೇನು ತಪ್ಪು ಮಾಡಿದಂತೆ ?
“ಹಿಂಜರಿಯಬೇಡಿ” ಅಧಿಕಾರಿ ಮತ್ತೆ ಉತ್ತೇಜನ ಕೊಡುವಂತೆ ಹೇಳಿದರು, “ಇದೆಲ್ಲಾ ನಮ್ಮ ಊರಿಗೋಸ್ಕರವೇ ನಾವು ಮಾಡುತ್ತಿರುವುದು. ಮೊದಲು ಊರಿನ ವಿಷಯ. ಅನಂತರ ಜನರ ವಿಷಯ. ನಾಳೆ ನಮ್ಮ ಮಕ್ಕಳು ಈ ಬೀದಿಯಲ್ಲಿ ಆಟವಾಡಿ ನಡೆದಾಡಬೇಡವೇ ?”
“ಅದಕ್ಕೆ….?” ನನಗೆ ಸಹನೆ ಮೀರತೊಡಗಿತು.
“ನೀವು ಒಪ್ಪುವುದಾದರೆ ಒಳ್ಳೆಯದು. ಸ್ವಲ್ಪವೂ ಭಯಪಡಬೇಕಿಲ್ಲ. ನಾವೆಲ್ಲಾ ನೋಡಿಕೊಳ್ಳುತ್ತೇವೆ. ನಮ್ಮ ಕಸ್ಟಡಿಯಲ್ಲಿ ಬೇಕಾದಷ್ಟು ಕೈದಿಗಳಿದ್ದಾರೆ. ಬೇಕಾದರೆ ಈ ನಿಮಿಷವೇ ಲಾಕಪ್ಪಿನಲ್ಲಿ ಹಾಕೋಣ……ಆ ಮೇಲೆ ನಿಮ್ಮ ಸಾಕ್ಷ್ಯಾ. ಒಳ್ಳೆ ಬಲವಾಗಿ…..
ಏನೆಂದರೆ… …..
ಡಬ್ಬಲ್ ಗ್ರಾಜ್ಯುಯೇಟ್, ಸಸ್ಯಹಾರಿ, ಸ್ವಂತವಾದ ಇನ್‌ಕಂಟ್ಯಾಕ್ಟ್ ನಂಬರೊಂದಿರುವ, ಕಂಪೆನಿಯಲ್ಲಿ ಕೆಲಸಮಾಡುತ್ತಿರುವ ನಾನು ಒಂದು ದಿವಸ ಮಟ ಮಟ ಮಧ್ಯಾಹ್ನ ತಾರಸಿಯ ಮೇಲೆ ಹತ್ತಿ ನಿಂತಿದ್ದೆ. ಆಗ ಕೆಳಗಡೆ ಸೇಠ್‌ಜಿಯ ಅಂಗಡಿಯಲ್ಲಿ……….ಹೌದು ಆ ಮನುಷ್ಯ ಚೆನ್ನಾಗಿ ಜ್ಞಾಪಕದಲ್ಲಿದ್ದಾನೆ. ಐಡೆಂಟಿಫಿಕೇಷನ್ ಪೆರೇಡಿನಲ್ಲಿ ಮೂರನೆಯವನಾಗಿ ಬರುತ್ತಿದ್ದಾನಲ್ಲಾ ಅವನೇ ?
ನೀವೇತಕ್ಕೆ ಕಿರುಚಿಕೊಳ್ಳಲಿಲ್ಲ ? ಆ ಮನುಷ್ಯನನ್ನು ಕಳವು ಮಾಲಿನೊಂದಿಗೆ ಹಿಡಿಯಬಹುದಾಗಿತ್ತಲ್ಲ ?
ನಾನು ಸ್ವಂಭಿತನಾಗಿ ನಿಂತುಬಿಟ್ಟಿದ್ದೆ. ಎಲ್ಲಾ ಕಣ್ಣುರೆಪ್ಪೆ ಮಿಟುಕಿಸುವಷ್ಟರಲ್ಲಿ ನಡೆದುಹೋಗಿತ್ತು. ಒಂದು ದಪ್ಪ ಬ್ಯಾಗ್‌ನೊಂದಿಗೆ ಅವನು ರಸ್ತೆಗಿಳಿದು ಬಂದನು. ಎಲ್ಲಾ ಮುಂಚೆಯೇ ಸಿದ್ಧಮಾಡಿಟ್ಟಿರಬೇಕು. ರಸ್ತೆಬದಿಯಲ್ಲೇ ಕಾರು ನಿಲ್ಲಿಸಿದ್ದರು. ಇವನು ಹತ್ತಿದ ತಕ್ಷಣ ಅದು ತುಯ್ದು ಓಡಿತು. ಅದು ಒಂದು ಕರಿಯ ಅಂಬಾಸಿಡರ್‌.
ನಂಬರ್ ನೋಡಲಿಲ್ಲವೇ ?
ನಾನು ಮೊದಲೇ ಹೇಳಲಿಲ್ಲವೇ, ಗಾಬರಿಯಾಗಿದ್ದೆನೆಂದು… …..
ಈ ವಿಷಯಕ್ಕೆ ಬಂದರೆ, ಸೇಠ್‌ಜಿ ಪರದೇಶದವನೆನ್ನಿ” ಅಧಿಕಾರಿ ಹೇಳುವುದು ಕೇಳಿಸಿತು “ಆವರೂ ನಮಗೆ ಅಭಿಮಾನ ಬೇಡವೇ ? ನಮ್ಮೂರಿಗಲ್ಲವೇ ಈ ಅವಮಾನವಾಗಿರುವುದು? ಒಬ್ಬ ಅತಿಥಿಯೊಂದಿಗೆ ನಮ್ಮ ಈ ವರ್ತನೆ ಸರಿಯಾಗಿದೆಯೇ ?”
ನಾನೇನೂ ಹೇಳಲಿಲ್ಲ. ಹೌದು ಅಲ್ಲ ಎಂದೂ ಸಹ ಹೇಳಲಿಲ್ಲ. ಪರನಾಡಿನವನಾದ ಕಾರಣ ಸೇ‌ಠ್‌ಜಿಯ ವಿಷಯದಲ್ಲಿ ಒಂದು ಬಗೆಯ ಪ್ರತ್ಯೇಕವಾದ ಶ್ರದ್ದೆಯನ್ನು ತೋರಿಸಲು ನನಗೇನಭ್ಯಂತರವಿಲ್ಲ. ಕಳ್ಳ ಅದೇ ಪೇಟೆಯಲ್ಲಿನ ಬೇರೆ ಯಾವುದಾದರೂ ಅಂಗಡಿಯನ್ನು ಹೊಕ್ಕು ಕಳ್ಳತನ ಮಾಡಬಹುದಿತ್ತು. ಈಗ ಒಬ್ಬ ನೀಚನ ಕಾರಣದಿಂದಾಗಿ ಊರಿಗೇನೇ ಒಂದು ಕೆಟ್ಟ ಹೆಸರು ಬಂದಿದೆ.
“ಸರಿ, ನಾವು ಪುನಃ ನಾಳೆ ಬೆಳಿಗ್ಗೆ ಜೀಪ್ ಮನೆಗೆ ಕಳಿಸುತ್ತೇವೆ” ಅಧಿಕಾರಿ ನನ್ನ ಮುಖವನ್ನು ದೃಷ್ಟಿಸಿ ನೋಡಿ ಹೇಳಿದನು.
“ಹೂಂ” ನಾನು ಸುಮ್ಮನೆ ಹೂಂಗುಟ್ಟಿದೆ.
ರಾತ್ರಿ ಮಲಗಿದರೆ ನಿದ್ದೆಯೂ ಬರಲಿಲ್ಲ. ಊರಿನ ಮರ್ಯಾದೆ ದೊಡ್ಡದೋ ಅಥವಾ ನನ್ನ ಧರ್ಮ ದೊಡ್ಡದೋ ? ಊರು ದೊಡ್ಡದೋ ಅಥವಾ ಜನ ದೊಡ್ಡದೋ ? ಒಂದು ಚಿಕ್ಕ ಸುಳ್ಳಿನಿಂದಾಗಿ ಊರಿನ ಅಂತಸ್ತನ್ನು ರಕ್ಷಿಸಲು ಸಾಧ್ಯವಿಲ್ಲವೇ ? ಅಪರಾಧಿಗಳಾಗುವವರು ಜೈಲಿಗೆ ಹೋಗಲು ಸ್ವಲ್ಪವೂ ಮೈಗಳ್ಳರಲ್ಲದ ಶಾಶ್ವತ ಕೈದಿಗಳು. ಬಹಳವೆಂದರೆ ಎರಡೋ ಮೂರೋ ವರ್ಷ ಜೈಲುವಾಸವಾಗಬಹುದು. ನನಗೆ ನಷ್ಟ ವಾಗುವುದು ಏನೂ ಇಲ್ಲ. ಅದರ ಫಲವಾಗಿ ನಮ್ಮ ಬೀದಿ ಶುದ್ಧವಾಗುತ್ತದೆ. ಹಾಗಿದ್ದರೂ, ನನಗದಕ್ಕೆ ಮನಸ್ಸು ಬರಲಿಲ್ಲ.
ಅಂದು ರಾತ್ರಿ ಬಹಳವಾಗಿ ಯೋಚಿಸಿದ ನಂತರ ನಾನು ಗಾಡಿ ಹತ್ತಿದೆ. ಊರಿನ ಸರಹದ್ದನ್ನು ದಾಟಿ ಹೋದೆ. ತಾತ್ಕಾಲಿಕವಾದರೂ ತಪ್ಪಿಸಿಕೊಂಡೆ.
.
.
ಒಂದು ವಾರದ ನಂತರ ಹಿಂತಿರುಗಿ ಬಂದಾಗ ಊರೆಲ್ಲಾ ಗಜಿಬಿಜಿಯಾಗಿರುವುದನ್ನು ಕಂಡೆ. ಗಾಡಿಯಿಂದಿಳಿದ ಕೂಡಲೇ ಅಲ್ಲಲ್ಲಿ ಕಪ್ಪು ಬಾವುಟಗಳನ್ನು ಸಿಗಿಸಿರುವುದನ್ನು ಕಂಡೆ. ಬಂಡಿ ಪೇಟೆಯಲ್ಲಿ ಒಂದು ಅಂಗಡಿ ಹತ್ತಿ ಉರಿಯುತ್ತಿರುವುದನ್ನು ನಾನು ಕಂಡೆ. ಕಪ್ಪು ಬಟ್ಟೆಯ ಚೂರುಗಳನ್ನು ಷರಟಿಗೆ ಸಿಗಿಸಿಕೊಂಡು ಗಾಡಿಗಳನ್ನೋಡಿಸುತ್ತಿದ್ದವರು ನನ್ನನ್ನು ಕಂಡಾಗ ಮುಖ ತಿರುಗಿಸಿಕೊಂಡು ನಿಂತರು. ನನ್ನ ಮನೆಯ ಬೀದಿಗೆ ಹೋಗಲು ಒಂದು ಗಾಡಿಯೂ ಸಿಗಲಿಲ್ಲ.
ಹರತಾಳ, ಯಾರೋ ಗುಸುಗುಸು ಮಾತಾಡುತ್ತಿರುವುದನ್ನು ಕೇಳಿಸಿಕೊಂಡೆ. ನಾನು ನಡೆಯತೊಡಗಿದೆ. ಒಂದು ಮೈಲಿ. ಎರಡು ಮೈಲಿ. ರಸ್ತೆಯ ಇಬ್ಭಾಗದಲ್ಲಿ ಅಂಗಡಿಗಳು ಮುಚ್ಚಿದ್ದವು. ಅರ್ಧಕ್ಕೆ ಹಾರುತ್ತಿರುವ ಬಾವುಟಗಳು. ನಮ್ಮೂರು ಶೋಕಾಚರಣೆ ಮಾಡುತ್ತಿದೆ.
ಯಾರು ಸತ್ತರು ? ನಾನು ಸ್ವಗತ ನುಡಿದೆ. ಪೋಲೀಸಧಿಕಾರಿಯೇ ? ಅಥವಾ ನಮ್ಮನ್ನಾಳುವ ಮಹಾದೊರೆಯೇ ?
ರಸ್ತೆಗಳೆಲ್ಲಾ ನಿರ್ಜನವಾಗಿದ್ದವು. ಗಾಡಿಗಳು ಅಲ್ಲಲ್ಲೇ ರಸ್ತೆಯ ಬದಿಯಲ್ಲಿ ನಿಂತಿದ್ದವು. ಮೀನ್‌ಚಂದದಲ್ಲಿ ನೊಣಗಳ ಶಬ್ದವು ಮಾತ್ರವಿತ್ತಷ್ಟೆ. ರಸ್ತೆ ಪೇಟೆ ಎಲ್ಲಾ ಸತ್ತಂತಿತ್ತು.
ಮೊದಲು ಸಿಕ್ಕ ಪಾದಾಚಾರಿಯೊಂದಿಗೆ ನಾನು ವಿವರ ಕೇಳಿದೆ “ಏನಾಯಿತು.”
ಅವನು ಉರಿಯುವ ನೋಟದಲ್ಲಿ ನೋಡಿದನು. ಆ ನೋಟದಲ್ಲಿ ಏನೋ ಒಂದು ಬಗೆಯ ರೋಷವು ಹತ್ತಿ ಉರಿಯುವುದನ್ನೂ ಕಂಡೆ.
“ಗೊತ್ತಿಲ್ಲವೇನೋ ಅಲ್ಲವೆ ?”
“ಹೌದು”
“ನಮ್ಮೂರಿನಲ್ಲಿ ಗಂಡಸರಿದ್ದಾರೆಯೇ ಎನ್ನುವುದನ್ನು ಅರ್ಥ ಮಾಡಿಸುತ್ತೇವೆ……” ಮತ್ತೆ ಅದೇ ಉರಿನೋಟ ಬೀರಿ ಅವನು ದಾಪುಗಾಲು ಹಾಕುತ್ತಾ ಮುಂದಕ್ಕೆ ನಡೆದನು. ಅವನ ಷರಟಿನಲ್ಲಿ ಸಿಗಿಸಿಕೊಂಡಿದ್ದ ಕಪ್ಪು ಬಟ್ಟೆ ಚೂರು ಪಟಪಟವೆಂದು ಬಡಿದು ರಸ್ತೆಯ ಮೇಲೆ ಬಿತ್ತು.
ನಮ್ಮೂರಿನಲ್ಲಿ ಏನೋ ಒಂದು ಮಹತ್ವದ ಘಟನೆ ನಡೆದಿದೆಯೆಂದು ನನಗರ್ಥವಾಯಿತು. ದಾರಿಯಲ್ಲಿ ಸಿಕ್ಕವರೆಲ್ಲಾ ನನ್ನನ್ನು ಸಂಶಯದಿಂದ ದಿಟ್ಟಿಸಿ ನೋಡುತ್ತಿದ್ದರು. ಆ ನೋಟದಲ್ಲಿ ದ್ವೇಷವಿತ್ತು, ಎಚ್ಚರಿಕೆಯಿತ್ತು, ಜುಗುಪ್ಪೆಯಿತ್ತು.
ಆಲದ ಮರದಡಿಯ ಕಟ್ಟೆಯ ಮೇಲೆ ಅದೇ ಹಳೆಯ ಸನ್ಯಾಸಿ ಕುಳಿತಿದ್ದನು. ರುದ್ರಾಕ್ಷಿ ಮಾಲೆಯನ್ನು ಕೈಯಲ್ಲಿ ಹಿಡಿದು ಒಂದೊಂದೇ ಮಣಿಯನ್ನೆಣಿಸುತ್ತಾ ಜಪ ಮಾಡುತ್ತಿದ್ದನು.
“ಸ್ವಾಮಿ, ಈ ಊರಿಗೇನಾಗಿದೆ” ನಾನು ಕೇಳಿದೆ.
ಸನ್ಯಾಸಿ ನಕ್ಕನು. ಸರ್ವಜ್ಞನ ನಗುವಂತ್ತಿತ್ತದು.
“ಪಾಪ ಸುತ್ತಿಕೊಂಡಿದೆಯಪ್ಪಾ, ಮಗು” ಆತನು ಹೇಳಿದನು.
ಮೇಲುಗಡೆ ಆಲದಮರದ ರೆಂಬೆಗಳಲ್ಲಿ ಗೂಡು ಕಟ್ಟಿದ್ದ ಹಕ್ಕಿಗಳು ಚಿಲಿಪಿಲಿಗುಟ್ಟಿದವು.
“ಪಾಪ, ಊರಿನಲ್ಲಿ ಮಹಾಪಾಪ ಮತ್ತೆ ನಡೆದಿದೆ.”
ಏನು ಪಾಪವೆಂದು ಸನ್ಯಾಸಿ ಹೇಳಲಿಲ್ಲ. ಆದರೆ, ನನ್ನನ್ನು ಪಕ್ಕಕ್ಕೆ ಕರೆದನು.
“ಇಲ್ಲಿ ಬಾ ಮಗು”
ನಾನು ಪಕ್ಕಕ್ಕೆ ಹೋದೆ. ಆಲದ ಮರದಡಿಯ ಕಟ್ಟೆಯ ಮೇಲೆ ಕೈಯೂರಿ ಸನ್ಯಾಸಿಯನ್ನೊಮ್ಮೆ ದಿಟ್ಟಿಸಿ ನೋಡಿದೆ.
ಆತನು ತಟ್ಟನೆ ನುಡಿದನು.
“ಮಗು, ಊರು ದೊಡ್ಡದೋ, ಜನ ದೊಡ್ಡದೋ ?”
“ಜನರೇ ದೊಡ್ಡವರು” ನಾನೆಂದೆ, “ಜನರೇ ಊರನ್ನು ಸೃಷ್ಟಿಸುವುದು”
“ಹುಂ” ಸನ್ಯಾಸಿ ತುಚ್ಛವಾದ ಸ್ವರದಲ್ಲೆಂದನು. “ಊರು ದೊಡ್ಡದು ಮಗು. ನಿನ್ನ ಕಣ್ಣುಗಳಲ್ಲಿ ಪರದೇಶಿಯ ಕತ್ತಲು ಹಬ್ಬಿದೆ. ಅದು ಬದಲಾಗುವಾಗ ನಿನಗೇ ಎಲ್ಲಾ
ಅರ್ಥವಾಗುತ್ತದೆ. ಉತ್ತಿಷ್ಠತ, ಜಾಗ್ರತ.”
ಅವನೊಂದಿಗೆ ವಾದಿಸಲು ನನಗೆ ಸಮಯವಿರಲಿಲ್ಲ. ಸ್ವಲ್ಪ ಆಸಕ್ತಿಯೇನೋ ಇತ್ತು. ಊರಿಗೆ ಯಾವ ಪಾಪ ಪುನಃ ತಟ್ಟಿದೆ ?
ಜೋಂಪು ಹಿಡಿದು ಮಲಿಗಿರುವ ರಸ್ತೆಯಲ್ಲಿ ನಾನು ಪುನಃ ನಡೆದು ಹೋದೆ.
ರೂಮಿಗೆ ಬಂದಾಗ ಚೆಲ್ಲಪ್ಪನ್ ಬಹಳ ಗಾಬರಿಯಾಗಿರುವುದನ್ನು ಕಂಡೆ. ಅವನು ಬಟ್ಟೆಗಳನ್ನೆಲ್ಲಾ ಜೋಡಿಸಿ ಕಟ್ಟಿ ಚೀಲದಲ್ಲಿ ತುಂಬುತ್ತಿದ್ದನು.
“ನಾನು ಹೋಗುತ್ತೇನೆ ಸಾರ್” ಚೆಲ್ಲಪ್ಪನೆಂದನು. “ನನಗೆ ಇಲ್ಲಿಯ ಕೆಲಸ ಸಾಕು” ಅವನ ಮುಖ ನೋಡಿದರೆ ಬಹು ದಿನಗಳಿಂದ ನಿದ್ರೆಕೆಟ್ಟಂತಿತ್ತು. ಮುಖದಲ್ಲಿ ಅವ್ಯಕ್ತವಾದ ಭೀತಿ ನೆಲೆಸಿತ್ತು.
“ಏನಾಯಿತು ಚಲ್ಲಪ್ಪ ?”
“ಇಲ್ಲಿ ಬದುಕಿರಲು ಕಷ್ಟ ಸಾರ್”
“ಏನಾಯಿತು ಹೇಳು ?” ನನ್ನ ಧ್ವನಿಯು ಕಟುವಾಯಿತು.
“ನೆನ್ನೆ ರಾತ್ರಿ ಅವರು ನನ್ನನ್ನು ನಿದ್ದೆ ಮಾಡಲು ಬಿಡಲಿಲ್ಲ.”
“ಯಾರು ?”
“ಊರಿನವರು, ಪೋಲೀಸಿನವರು”
ನಾನು ಆಶ್ಚರ್ಯಚಕಿತನಾದೆ.
“ಸೇಲ್‌ಜಿಯ ಅಂಗಡಿಯಲ್ಲಿ ಮತ್ತೆ ಕಳ್ಳತನವಾಯಿತೇ ?”
“ಕಳ್ಳತನವಲ್ಲ ಸಾರ್, ಒಂದು ಹೆಣ್ಣನ್ನು ಹಿಡಿದರು.”
“ಆ ? ಎಲ್ಲಿ ?”
“ಆ ಗಲ್ಲಿಯಲ್ಲಿ”
ಆ ಗಲ್ಲಿ ನನ್ನ ರೂಮಿಗೆ ಎದುರಾಗಿ ಕೆಳಗಿತ್ತು. ನನ್ನ ಕುರ್ಚಿಯಲ್ಲಿ ಕುಳಿತರೆ ಫ್ಲೋರ್‌ಮಿಲ್ ಮತ್ತು ಅದನೆದುರಿಗಿನ ಜಿಂಕ್‌‌ಷೀಟ್ ಹಾಕಿ ಮುಚ್ಚಿದ ಹೊಲಗೇರಿಗಳೂ
ಚೆನ್ನಾಗಿ ಕಾಣಬಹುದು.
“ಯಾರಾ ಹುಡುಗಿ ?”
“ವಿಶಾಲು. ಮುನಿಸಿಪಾಲಟಿಯಲ್ಲಿ ಕಸಗುಡಿಸುವವಳು. ಆ ಮೀಸೆ ನರೆತ ಮುದುಕ ಇಲ್ಲವೇ ಅವನ ಮಗಳು.”
ಬಲು ಇಕ್ಕಟ್ಟಾದ ಗಲ್ಲಿಯಲ್ಲಿ, ಕತ್ತಲು ಗರ್ಭದಲ್ಲಿ ವಿಶಾಲು ಎಂಬ ಹೆಣ್ಣಿನ ಮೇಲೆ ಅತ್ಯಾಚಾರ ಮಾಡಿದರು. ಒಂದೆಡೆ ಮಿಲ್ಲನ್ನು ಮರೆ ಮಾಡಿರುವ ಗೋಡೆಯಿತ್ತು. ಮತ್ತೊಂದು ಕಡೆ ಜಿಂಕ್‌ಷೀಟ್ ಹಾಕಿ ಮುಚ್ಚಿರುವ ಹೊಲಗೇರಿಗಳು. ದೀಪಗಳು ಇದ್ದಕ್ಕಿದ್ದಂತೆ ಆರಿಹೋದ ರಾತ್ರಿ. ಬೀದಿಯ ಒಂದು ಬದಿಯಲ್ಲಿದ್ದ ನಲ್ಲಿಯಲ್ಲಿ ನೀರು ಹಿಡಿದು ತರಲು ವಿಶಾಲು ಹೋಗಿದ್ದಳು. ಮನೆಯ ಜಗುಲಿಯ ಮೇಲಿದ್ದ ದೊಡ್ಡ ಸಿಮೆಂಟ್ ಕೊಳವಿಯನ್ನೊರಗಿ ಕುಳಿತು ಅವಳ ತಂದೆ ಗಾಂಜಾ ಕುಡಿಯುತ್ತಿದ್ದನು. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ತಣ್ಣೀರಿನ ಕೊಡವು ಕೆಳಕ್ಕೆ ಜಾರಿ ಬಿದ್ದು ಒಡೆದ ಶಬ್ದವಾಗಲಿ, ಕಿರುಚಿದ ಶಬ್ದವು ಹಾಗೇ ಗಂಟಲಿನಲ್ಲಿ ಅಡಗಿ ಹೋದದ್ದಾಗಲಿ ಮುದುಕನಿಗೆ ತಿಳಿಯದು. ಕೆಲವು ನಿಮಿಷಗಳ ನಂತರ ಹರಿದು ಚಿಂದಿಯಾದ ಬಟ್ಟೆಗಳೊಂದಿಗೆ, ಹೋರಾಟ ನಡೆಸಿದ್ದರ ಫಲವಾಗಿ ಆಗಿದ್ದ ಹಲ್ಲು ಉಗುರುಗಳ ಗಾಯಗಳೊಂದಿಗೆ, ನಷ್ಟವಾದ ಮಾನದೊಂದಿಗೆ ಆ ಹೆಣ್ಣು ಮೆಲ್ಲನೆ ಬಂದಳು. ಸಿಮೆಂಟ್ ಕೊಳವಿಯ ಬಳಿ ಗಾಂಜಾ ಕುಡಿಯುವಾಗ ಬರುವ ಆ ಕೆಂಪು ಪ್ರಕಾಶದ ನೆರಳಿನಲ್ಲಿ ಅವಳು ಕುಸಿದುಬಿದ್ದಳು.
ಊರಿಗೊದಗಿದ ಎರಡನೆಯ ಆಪತ್ತು.
“ಅದಕ್ಕೆ ಪೋಲೀಸರು ನಿನ್ನನ್ನೇಕೆ ಗೋಳಾಡಿಸಬೇಕು” ನಾನು ಕೇಳಿದೆ.
“ಸಾರ್, ಅವರು ನಿಮ್ಮನ್ನೂ ಹುಡುಕಿಕೊಂಡೇ ಬಂದದ್ದು” ಚೆಲ್ಲರ್ಪ್ಪ ಹೇಳಿದನು.
“ರಾತ್ರಿಯಾದ್ದರಿಂದ ನೀವು ಇಲ್ಲೇ ಇರಬಹುದೆಂದು ಅವರು ಭಾವಿಸಿದ್ದರಂತೆ. ನೀವು ಕಣ್ಣಾರೆ ಎಲ್ಲವನ್ನೂ ನೋಡಿರುವಿರೆಂದು ಅವರೆಂದುಕೊಂಡಿದ್ದಾರಂತೆ.”
“ಇದೊಳ್ಳೇ ತಮಾಷೆ. ಇದಕ್ಕೆ ಮುಂಚೆ ಸೇಠ್‌ನ ಅಂಗಡಿಯಲ್ಲಿ ಕಳ್ಳನು ಹೊಕ್ಕಾಗ ಅವರು ಇದೇ ಮಾತನ್ನೇ ಹೇಳಿದರು. ಊರಿನಲ್ಲಿ ನಡೆಯುವ ಆಪತ್ಕರ ಘಟನೆಗಳನ್ನೆಲ್ಲಾ ನಾನು ನೋಡಬೇಕೆಂದಿದೆಯೇನು ?”
“ಕಳೆದ ಬಾರಿ ನೀವು ತಪ್ಪಿಸಿಕೊಂಡುಬಿಟ್ಟಿರಿ. ಆದ್ದರಿಂದ ಈ ಸಲ ಅವರಿಗೆ ಬಲು ಸಂಶಯ. ರಾತ್ರಿಯೆಲ್ಲಾ ಐದಾರು ಸಲ ಬಾಗಿಲನ್ನು ತಟ್ಟಿ ತಟ್ಟಿ ಎಬ್ಬಿಸಿದರು. ನೀವು ಬಂದರೇನು ಎಂದು ಕೇಳಿಯೇ ಕೇಳಿದರು. ನನಗೆ ಅಂದೆಲ್ಲಾ ನಿದ್ದೆಯೇ ಬರಲಿಲ್ಲ. ಆ ಯಮಕಿಂಕರರು ಬಾಗಿಲನ್ನೊದ್ದು ಒಳಕ್ಕೆ ಬಂದು ನನ್ನನ್ನೊದ್ದು ಕೊಂದು ಹಾಕಿದರೇನು ಗತಿ ?” ಚೆಲ್ಲಪ್ಪನ ಭಯವು ನ್ಯಾಯವಾದುದೆಂದು ನನಗನ್ನಿಸಿತು. ಬಂಡಿಪೇಟೆಯಲ್ಲಿ ಕಾಣಿಸಿದ ಕುದುರೆ ಗಾಡಿಯವನು. ಅನಂತರ ನಿರ್ಜನವಾದ ರಸ್ತೆಯಲ್ಲಿ ಕಾಣಿಸಿದ ಏಕಾಂಗಿಯೊಬ್ಬನು. ಅವರೆಲ್ಲಾ ನನ್ನನ್ನು ಉರಿಗಣ್ಣುಗಳಿಂದ ದಿಟ್ಟಿಸಿ ನೋಡುತ್ತಿದ್ದರು. ಅವರ ಕಣ್ಣುಗಳಲ್ಲಿ ದ್ವೇಷಾಸೂಯೆಗಳಿದ್ದವು. ಊರಿನಲ್ಲಿ ಇದ್ದಕ್ಕಿದ್ದಂತೆ ಪ್ರಕ್ಷೋಭವೆದ್ದಿದೆ. ಒಮ್ಮೆಲೇ ತಲೆಕೆಳಗಾಗಿರುವಂತಿದೆ. ಊರಿನಲ್ಲಿರುವ ಒಂದು ಹೆಣ್ಣಿನ ಮಾನವೆಂದರೆ ಊರಿನ ಮಾನವೇ ಅಲ್ಲವೇ ?
ನಿರೀಕ್ಷಿಸಿದಂತೆ ಸ್ವಲ್ಪ ಹೊತ್ತಿನಲ್ಲಿಯೇ ಪೋಲೀಸರು ಬಂದರು. ಈ ಸಲ ಅವರ ನಡೆ ನುಡಿಯಲ್ಲಿ ಇದಕ್ಕೆ ಮುಂಚೆ ತೋರಿದ ಆ ನಯವಿರಲಿಲ್ಲ. ಅವರ ಮುಖವು ಸಾಧಾರಣವಾಗಿ ಕ್ರೂರವಾಗಿತ್ತು ಕಣ್ಣುಗಳಲ್ಲಿ ಸಂಶಯವಿತ್ತು. ಅಂಗೈನಲ್ಲಿ ತಂಪಿತ್ತು.
“ಯಾವಾಗ ಬಂದಿರಿ ?” ಆ ಜನರಲ್ಲೆಲ್ಲಾ ದಪ್ಪಗಿದ್ದ, ಕುಂಕುಮದ ಬೊಟ್ಟಿಟ್ಟಿದ್ದ, ಎಲೆ ಅಡಿಕೆ ಹಾಕಿ ಅಗಿದ ಕೆಂಪು ತುಟಿಗಳುಳ್ಳ, ಖಾಕಿ ವಸ್ತ್ರಧಾರಿಯಾದೊಬ್ಬನು ಕೇಳಿದನು.
“ಈಗತಾನೆ ಬಂದೆನಷ್ಟೆ.”
“ಓ” ಅವನೊಮ್ಮೆ ಮಾತು ನಿಲ್ಲಿಸಿ ಹೂಂಕರಿಸಿದನು. ಅನಂತರ ಜೊತೆಯವರನ್ನೊಮ್ಮೆ ನೆಟ್ಟ ನೋಟದಿಂದ ನೋಡಿ ಕಣ್ಣು ಮಿಟುಕಿಸಿ “ಪ್ರಯಾಣ ಸುಖವಾಗಿತ್ತಷ್ಟೆ ?” ಎಂದು ನನ್ನನ್ನು ಕೇಳಿದನು.
“ಇತ್ತು”
“ದುಡ್ಡು ಬಹಳ ಖರ್ಚಾಗಿರಬೇಕು”
“ಹೌದು ಅದೆಲ್ಲಾ ಕಂಪೆನಿಯ ಖರ್ಚು.”
“ಯಾವ ಕಂಪೆನಿ ?”
“ನಾನು ಕೆಲಸದಲ್ಲಿರುವ ಕಂಪೆನಿ”
ಅವರು ನಂಬದವರಂತೆ ಪರಸ್ಪರ ನೋಡಿಕೊಂಡರು.
ಸ್ವಲ್ಪ ಹೊತ್ತಾದ ನಂತರ ಕುಂಕುಮದ ಬೊಟ್ಟಿಟ್ಟವನು ಕೇಳಿದನು.
“ಹಾಗಾದರೆ ಹೊರಡೋಣವೇ ?”
“ಎಲ್ಲಿಗೆ?
“ಅಧಿಕಾರಿಗಳ ಬಳಿಗೆ. ಅಲ್ಲದೆ ಇನ್ನೆಲ್ಲಿಗೆ ?”
ನಾನು ವಿರೋಧ ತೋರಲಿಲ್ಲ. ಅವರೊಂದಿಗೆ ಸದ್ದಿಲ್ಲದೆ ಹೊರಟೆ.
ಈ ಸಲ ಫೋಲೀಸ್ ಅಧಿಕಾರಿ ನನ್ನನ್ನು ಕಂಡಾಗ ನಗಲಿಲ್ಲ. ಗಂಭೀರವಾಗಿ ಒಮ್ಮೆ ಹೂಂಗುಟ್ಟಿ ಗಾಂಭೀರ‍್ಯದಿಂದ ಹಾಗೇ ಕುಳಿತಿದ್ದನು. ಆ ಪುಟ್ಟ ಮೀಸೆಯ ಮೇಲೊಮ್ಮೆ ಬೆರಳನ್ನಾಡಿಸಿ ಬಾಯಿತುಂಬಿದ ಉಗುಳನ್ನು ನುಂಗಿದನು. ಆಗ ಕತ್ತಿನಲ್ಲಿನ ಗೆಡ್ಡೆಯೊಮ್ಮೆ ಮೇಲಕ್ಕೂ ಕೆಳಕ್ಕೂ ಆಡಿದಂತಾಯಿತು. ಕೆನ್ನೆ ಒಳಕ್ಕೆ ಹೋಗಿ ಅಂಟಿಕೊಂಡಿತು. ಹಣೆಯ ಮೇಲಿನ ನೆರಿಗೆಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಆನೆಯ ಬಾಲದಂತಿರುವ, ಉಂಗುರ ತೊಟ್ಟ ಬೆರಳಿನಿಂದ ಮೇಜಿನ ಮೇಲಿದ್ದ ಹುಳುವೊಂದನ್ನು ಹಾಗೇ ಹೊಸೆದು ಹಾಕಿ ಅವನು ಮಾತನಾಡಿದನು.
“ಅಂದಹಾಗೆ ಇದೂ ನಡೆಯಿತಲ್ಲವೇ ?”
ನಾನೇನೂ ಮಾತನಾಡಲಿಲ್ಲ. ಏನು ನಡೆಯಿತೆಂಬುದು ನನಗಿನ್ನೂ ತಿಳಿಯದು. ನನ್ನ ಬೀದಿಯಲ್ಲಿ ನನ್ನ ರೂಮಿನ ಮುಂದೆ ನೆನ್ನೆ ರಾತ್ರಿ ಒಂದು ಅತ್ಯಾಚಾರ ನಡೆದಿದೆ. ಅದು
ಮಾತ್ರ ನನಗೆ ಗೊತ್ತಿತ್ತಷ್ಟೆ.
ಯಾರು ? ಹೇಗೆ ? ಅದೇನೂ ನನಗೆ ತಿಳಿಯದು.
“ಹೀಗೇ ಮುಂದುವರೆದರೆ ನಮ್ಮ ನಾಡಿನ ಗತಿ …..?” ಅಧಿಕಾರಿಯ ಸ್ವರದಲ್ಲಿ ನೋವೂ, ಅಸಹನೆಯೂ ಇತ್ತು. “ಎಷ್ಟು ಬೇಗ ಕೆಟ್ಟ ಹೆಸರು ಬರುತ್ತದೆ ನೋಡಿ. ಪರದೇಶದವರು ಅಪಹಾಸ್ಯ ಮಾಡಿ ನಗುವುದಿಲ್ಲವೇ ? ಇಲ್ಲದಿದ್ದರೂ ಅವರಿಗೆಲ್ಲಾ ಅಸೂಯೆ ಮೊದಲೇ ಇದೆ? ಕಾರಣವೇನು ಗೊತ್ತೆ ? ಈ ಭೂಮಿಯಲ್ಲಿ ಹೀಗೆ ಸಂಪತ್‌ಸಮೃದ್ಧಿಯಾದ ನಾಡಿನಂತೆ ಬೇರೆ ಯಾವುದಾದರೂ ಇದೆಯೇ ?”
ನಾನು ಆಗಲೂ ಏನನ್ನೂ ಮಾತನಾಡಲಿಲ್ಲ. ನಾಡಿನ ಮಾನವು ನನ್ನನ್ನು ಕಾಡಲಿಲ್ಲ.
ಸರಿಯಾಗಿ ಹೇಳಬೇಕೆಂದರೆ ನನ್ನ ಬೀದಿಯಲ್ಲಿ ಒಬ್ಬ ಹುಡುಗಿಯ ಮಾನಭಂಗವಾಗಿದ್ದಕ್ಕೆ ನನಗೆ ದುಃಖವಾಗಬೇಕಿತ್ತು. ಈ ಊರಿನ ಒಬ್ಬೊಬ್ಬ ಹುಡುಗಿಯ ಮಾನವೂ ನನ್ನದೆಂದೇ ಹೇಳಬೇಕಷ್ಟೆ. ಆದರೆ ಏತಕ್ಕೋ ಏನೋ ಆಗ ನನಗೆ ಹಾಗೆ ತೋಚಲಿಲ್ಲ. ನನ್ನ ಆಲೋಚನೆ ಸಂಪೂರ್ಣವಾಗಿ ಬೇರೆ ಯಾವುದರ ಮೇಲೋ ಇತ್ತು. ಈ ಸಲ ಸಾಕ್ಷಿಗಳ ಪಟ್ಟಿಯಿಂದ ಹೇಗೆ ತಪ್ಪಿಸಿಕೊಳ್ಳುವುದು. ತಪ್ಪಿಸಿಕೊಂಡೋಡಲು ಸಾಧ್ಯವಿಲ್ಲವಲ್ಲಾ. ಅವರದಕ್ಕೆ ಸಮಯ ಕೊಡುವುದಿಲ್ಲ. ಬಹುಶಃ ನನ್ನನ್ನೂ ಮನೆಯಲ್ಲೇ ಬಂಧಿಸುತ್ತಾರೆ. ಸಾಕ್ಷ್ಯ ಹೇಳಿ ಮುಗಿಯುವವರೆಗೂ ನನ್ನನ್ನು ಹೊರಕ್ಕೆ ಬಿಡಲಾರರು.
ಆವಾಗ ಮಾರ್ಗವೇನಿದೆ ?
ಹೀಗೆ ಯೋಚಿಸುತ್ತಾ ಇರಬೇಕಾದರೆ ಅಧಿಕಾರಿಯು ಪ್ರಶ್ನಿಸಿದನು :
“ಏನು ಮಾತನಾಡದೇ ಕುಳಿತಿದ್ದೀರಲ್ಲಾ?”
“ಏನಿದೆ ಮಾತನಾಡಲು.”
“ನನಗೇನೋ ಆಶ್ಚರ್ಯವಾಗಿ ತೋರುತ್ತಿದೆ. ಅಲ್ಲಾ, ನಮ್ಮ ನಾಡಿಗೆ ಇಂತಹ ಮಾನ ಹಾನಿಕರ ಪ್ರಸಂಗ ನಡೆದಿರುವುದನ್ನು ನೋಡಿದರೆ ನಿಮಗೇನೂ ಅನ್ನಿಸುವುದಿಲ್ಲವೇ ?”
“ಇಲ್ಲ”
ಇದು ಅಕ್ಷಮ್ಯವಾದದ್ದು” ಅಧಿಕಾರಿ ಮೂಗಿನ ಮೇಲೆ ಬೆರಳಿಟ್ಟನು. ಅವನ ಧ್ವನಿಯಲ್ಲಿ ಅಸಹನೆಗಿಂತ ಪಶ್ಚಾತ್ತಾಪವೇ ಕಾಣುತ್ತಿತ್ತು. ಒಂದು ವಿಚಿತ್ರ ಜಂತುವನ್ನೋ ಎಂಬಂತೆ ಆತನು ನನ್ನನ್ನು ನಾಲ್ಕಾರು ಬಾರಿ ಆಪಾದಮಸ್ತಕ ದಿಟ್ಟಿಸಿ ನೋಡಿದನು. ನನ್ನ ಶಾಂತತೆ ಅವನಿಗೆ ಸ್ವಲ್ಪವಾದರೂ ಅರ್ಥವಾಗಲೂ ಇಲ್ಲ, ಹಿಡಿಸಲೂ ಇಲ್ಲ. ಆತನ ಮನಸ್ಸಿನಲ್ಲೊಂದು ಹೋರಾಟವೇ ನಡೆಯುತ್ತಿರಬೇಕು. ಆ ಗೊಂದಲ ಆ ಮುಖದಲ್ಲಿ ಕಾಣುತ್ತಿತ್ತು. ಯಾವ ಬಗೆಯಲ್ಲಿ ನನ್ನನ್ನು ತರಾಟೆಗೆ ತೆಗೆದುಕೊಳ್ಳಬೇಕೆಂದು ಅವನು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿರಬೇಕು. ಒಂದು ಸಲವಾಗಲೇ ಅವರ ಕೈಯಿಂದ ಜಾರಿ ತಪ್ಪಿಸಿಕೊಂಡೆ. ಮತ್ತೆ ಇದರ ಪುನರಾವರ್ತನೆಯಾಗಬಾರದಲ್ಲಾ. ಕಳೆದ ಸಲ ‘ಸಾಮ’ವನ್ನು ಉಪಯೋಗಿಸಿದ್ದರು.
ಹಾಗಾದರೆ ಈಗ ದಾನ-ಹಾಗೆ ಅವರು ಆಲೋಚಿಸುತ್ತಿರಬಹುದು. ಸ್ವಲ್ಪ ಹೊತ್ತಾಯಿತು. ಅಧಿಕಾರಿ ತೀಕ್ಷ್ಣ ಸ್ವರದಲ್ಲಿ ಕೇಳಿದನು.
“ಆದರೂ ನೀವು ಮಾಡಿದ್ದು ದೊಡ್ಡ ತಪ್ಪಾಯಿತು.”
“ಏನೆಂದಿರಿ….ನಾನು..ತಪ್ಪು…”
“ನೀವು ಇದನ್ನು ನಿಲ್ಲಿಸಬಹುದಿತ್ತು”
“ಅದು ಹೇಗೆ ?”
“ಹೋದ ಸಲ ನೀವು ನಾವು ಹೇಳಿಕೊಟ್ಟಂತೆ ಸಾಕ್ಷ್ಯ ಹೇಳಿದ್ದರೆ ಕೈದಿಗಳು ಜೈಲು ಸೇರುತ್ತಿದ್ದರು. ಊರಿನವರಿಗೆ ಒಂದು ಭಯವಿರುತ್ತಿತ್ತು. ಒಂದು ಮಗು ಸಹ ಬೀದಿಯಲ್ಲಿ ತನ್ನ ಪುಟ್ಟ ಬೆರಳನ್ನಲ್ಲಾಡಿಸುವುದು ಸಾಧ್ಯವಾಗುತ್ತಿರಲಿಲ್ಲ. ಮುಠ್ಠಾಳರಿಗೆ, ಪಾಠ ಹೀಗೆ ಕಲಿಸಬಹುದಿತ್ತು. ದಡ್ಡನಿಗೆ ದೊಣ್ಣೆಯ ಪೆಟ್ಟು’ ಎಂದು ಹೇಳುವುದನ್ನು ಕೇಳಿಲ್ಲವೇ ?”
“ಅದೆಲ್ಲಾ ಸರಿ, ಹೀಗಾಗಿದ್ದು ಬಹಳ ತಪ್ಪೆಂದು ನಾನು ಎಲ್ಲರೆದುರಿಗೆ ಒಪ್ಪಿಕೊಳ್ಳುತ್ತೇನೆ, ಆದರೆ ನಾನು ಸಾಕ್ಷ್ಯ ಹೇಳಿದ್ದರೆ ಇದನ್ನು ತಡೆಯಲು ಸಾಧ್ಯವಾಗುತ್ತಿತ್ತೆಂದು ನೀವು ಹೇಳುತ್ತಿರುವುದು ಮಾತ್ರ ನನಗೆ ಅರ್ಥವಾಗುತ್ತಿಲ್ಲ.”
“ತಡೆಯುವುದು ಸಾಧ್ಯವಿತ್ತು. ಸಾಧ್ಯವಿತ್ತು” ಅಧಿಕಾರಿ ದೃಢಸ್ವರದಲ್ಲಿ ಹೇಳಿದನು.
“ಆಗುತ್ತಿತ್ತೇನು ?” ನಾನು ತಿರಸ್ಕಾರದಿಂದ ಹೇಳಿದೆ.
“ಈ ಸಲ ಸಹ ಈ ಘಟನೆ ನಡೆದಾಗ ನೀವು ಉಪಾಯದಿಂದ ತಪ್ಪಿಸಿಕೊಂಡು ಹೋದಿರಿ*
ಆತನು ನನ್ನನ್ನೇ ದಿಟ್ಟಿಸಿ ನೋಡುತ್ತಾ ಹೇಳಿದನು.
“ಹಾಗೆ ಮಾತ್ರ ಹೇಳಬೇಡಿ” ನಾನು ಕುಪಿತನಾದೆ. “ನಾನೇನು ತಪ್ಪಿಸಿಕೊಂಡು ಹೋಗಲಿಲ್ಲ.” ನನ್ನ ಕೋಪ ಏರುತ್ತಿತ್ತು.
“ಹಾಗಾದರೆ ನೆನ್ನೆ” ರಾತ್ರಿ ಒಂಭತ್ತೂವರೆಯಲ್ಲಿ ನೀವೆಲ್ಲಿದ್ದೀರಿ ?”
“ಐವತ್ತು ಮೈಲಿ ದೂರದಲ್ಲಿನ ಹೋಟೆಲೊಂದರಲ್ಲಿದ್ದೆ. ಅಂದರೆ ಬೇರೊಂದು ಊರಿನಲ್ಲಿ.”
“ಅಲ್ಲಿಗೇಕೆ ಹೋಗಿದ್ದಿರಿ?” ಆತನು ನಂಬಿಕೆಯಿಲ್ಲದವನಂತೆ ಏನೋ ಆಲೋಚಿಸುತ್ತಾ ನನ್ನನ್ನು ನೋಡಿದನು.
“ಕಂಪೆನಿ ಕೆಲಸದ ಮೇಲೆ”
“ಬಹಳ ಚೆನ್ನಾಗಿದೆ, ನಿಮ್ಮ ವಿನೋದ ವಿಲಾಸಗಳು. ಬೀದಿಯಲ್ಲಿ ಅತ್ಯಾಚಾರಗಳು ನಡೆಯುತ್ತಿರಬೇಕಾದರೆ ನಿಮಗೆ ಕಂಪೆನಿ ಕೆಲಸವಿರುತ್ತೇನು ?”
“ಅದನ್ನು ಕಂಪೆನಿಯವರನ್ನೇ ಕೇಳಬೇಕು.”
“ಕೇಳುತ್ತೇನೆ, ಕೇಳುತ್ತೇನೆ. ನಮಗೆ ಕಾನೂನು ಹೇಳಿಕೊಡುವುದಕ್ಕೆ ಬರಬೇಡಿ. ಆದರೆ ಒಂದು ವಿಷಯ ಜ್ಞಾಪಕದಲ್ಲಿರಲಿ. ಪೋಲೀಸರ ಗುಮಾನಿಯಲ್ಲಿರುವವರು ಊರು ಬಿಟ್ಟು ಹೊರಗೆ ಹೋಗಬೇಕಾದರೆ ಕೆಲವು ನಿಯಮಗಳನ್ನನುಸರಿಸಬೇಕೆಂಬ ಕಾನೂನು : ಜಾರಿಯಲ್ಲಿದೆ. ಅದನ್ನು ಅನುಸರಿಸದಿದ್ದರೆ, ತಪ್ಪಿಸಿಕೊಂಡು ಓಡಿ ಹೋದಂತೆಯೇ…”
“ಏನೆಂದಿರಿ ನಾನು ಗುಮಾನಿಯಲ್ಲಿದ್ದೇನೆಯೇ ?”
“ಹೌದು” ಮತ್ತೆ ದೀರ್ಘವಾದ ಮೌನ.
“ಒಮ್ಮೆ ಸಿಕ್ಕಿಬಿದ್ದರೇನೇ, ನಿಮಗದು ಅರ್ಥವಾಗುವುದು. ಇಲ್ಲಿ ಯಾವಾಗ ಅಕ್ರಮವೊಂದು ನಡೆಯುತ್ತದೆಯೋ ಆಗೆಲ್ಲಾ ನೀವು ಊರಿನ ಸರಹದ್ದಿನ ಹೊರಗೇ ಇರುತ್ತಿದ್ದೀರಿ. ದುರದೃಷ್ಟವಶಾತ್ ಯಾರಾದರೂ ಇಲ್ಲಿ ಏನಾದರೂ ಬಾಂಬ್ ಹಾಕಿದರೂ ಅಂದು ನೀವಿಲ್ಲಿರುವುದಿಲ್ಲ. ಇದನ್ನು ಒಂದು ಪಿತೂರಿಯೆಂದಲ್ಲದೆ ಇನ್ನೇನೆಂದು ಕರೆಯಬಹುದು ?…..ಅಪ್ಪ ಮೆನೊನ್ ನೀವೇ ಹೇಳಿ” ಅಧಿಕಾರಿ ದೃಷ್ಟಿ ತಿರುಗಿಸಿ ತನ್ನ ಸಿಬ್ಬಂದಿಯಲ್ಲಿ ಮುಖ್ಯಸ್ಥನಾದವನ ಕಡೆ ತಿರುಗಿ ನೋಡಿ ಕೇಳಿದನು.
ಆ ಪೋಲೀಸ್‌ ತಲೆಯಾಡಿಸಿದನು. ತಲೆ ಕೆರೆಯುತ್ತಾ ಹೇಳಿದನು.
“ನನಗನ್ನಿಸುತ್ತೆ, ಇದರಲ್ಲಿ ವಿದೇಶಿಗಳ ಕೈಯಿದೆಯೆಂದು. ನಮ್ಮ ನಾಡಿನಲ್ಲಿ ಆಂತರಿಕ ಕಲಹಗಳನ್ನುಂಟುಮಾಡಲು ಸಮಯ ಕಾಯುತ್ತಿರುವವರ ಒಂದು ಗುಂಪೇ ಹೊರಗಡೆ ಇದೆಯೆಂದೆನಿಸುತ್ತದೆ”
“ಹೌದೌದು.” ಅಧಿಕಾರಿ ಒಪ್ಪಿದನು. “ನಮ್ಮ ಆಲೋಚನೆಯೂ ಅದೇ”
ನಾನು ತಟ್ಟನೆ ನುಡಿದೆ.
“ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ನಾನು ಹೇಳಿದ್ದು ಖಂಡಿತ ನಿಜ.”
“ಹಾಗೆ ಹೇಳಿದರೇನು ಸರಿಹೋಗುವುದಿಲ್ಲ ಸಾರ್. ಎಲ್ಲಾ ನಾನೇ ನಿಮಗೆ ಹೇಳಿಕೊಡುತ್ತೇನೆ…….ನೆನ್ನೆ ರಾತ್ರಿ ನೀವು ಇಲ್ಲೇ ಇದ್ದಿರಿ. ನಿಮ್ಮ ರೂಮಿನಲ್ಲೇ ಇದ್ದಿರಿ.”
……….. …….. ………..
ಅಂದರೆ ಡಬ್ಬಲ್ ಗ್ರಾಜ್ಯುಯೇಟ್, ಸಸ್ಯಾಹಾರಿ, ಸ್ವಂತವಾದ ಇನ್‌ಕಂಟ್ಯಾಕ್ಟ್ ನಂಬರೊಂದಿರುವ, ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ನಾನು ನೆನ್ನೆ ರಾತ್ರಿ ತಾರಸಿಯ ಮೇಲೆ ಅಡ್ಡಾಡುತ್ತಿದ್ದೆ. ಆಗ ನನ್ನ ರೂಮಿನ ಬಳಿ, ಮುಂಭಾಗದಲ್ಲಿ ಕೆಳಗೆ ಕತ್ತಲೆಯಾದ ಗಲ್ಲಿಯಲ್ಲಿ ಒಂದು ಶಬ್ದ ಕೇಳಿಸಿತು. ಮಣ್ಣಿನ ಕೊಡ ಕೆಳಗೆ ಬಿದ್ದು ಒಡೆಯುವ ಶಬ್ದ. ನಾನು ಟಾರ್ಚ್ ಹಾಕಿ ನೋಡಿದೆ. ಅಲ್ಲಿ ನಡೆಯುತ್ತಿದ್ದುದು ಕಾಣಿಸಿತು. ಅವರುಗಳಿಬ್ಬರಿದ್ದರು. ಕಪ್ಪಗಿದ್ದರು. ಧಡಿಯರೂ ಆಗಿದ್ದರು. ಅವರು ಆ ಹುಡುಗಿಯನ್ನು ಎತ್ತಿಕೊಂಡು ಒಂದು ಗುಡಿಸಲಿಗೆ ಕರೆದೊಯ್ದರು. ಅವರ ಕೈಯಲ್ಲಿ ಸಿಕ್ಕಿಬಿದ್ದ ಹೆಣ್ಣು ಒದ್ದಾಡುತ್ತಿರುವುದನ್ನು ನಾನು ಈ ಕಣ್ಣುಗಳಿಂದ ನೋಡಿದೆ. ಹೌದು, ಆ ಮನುಷ್ಯರು ಇವರೇ. ಐಡೆನ್ನಿಫಿಕೇಷನ್ ಪೆರೇಡಿನಲ್ಲಿ ನಾಲ್ಕನೆಯವನಾಗಿಯೂ ಐದನೆಯವನಾಗಿಯೂ ಬಂದವರೇ ಅವರು.
ಒಳ್ಳೆ ಕತ್ತಲೆಯಾಗಿತ್ತಲ್ಲಾ, ನೀವು ಹೇಗೆ ಅವರನ್ನು ಗುರುತಿಸಲು ಸಾಧ್ಯವಾಯಿತು.
ನನ್ನ ಬಳಿ ಟಾರ್ಚ್ ಇತ್ತೆಂದೆನಲ್ಲಾ. ಇಲ್ಲಿರುವ ಇಬ್ಬರ ಛಾಯೆಯೇ ಅವರಿಗಿತ್ತು.
ನೀವು ಏಕೆ ಕಿರುಚಿಕೊಳ್ಳಲಿಲ್ಲ ? ಆಗಲೇ ಅವರನ್ನು ಹಿಡಿದುಬಿಡಬಹುದಿತ್ತಲ್ಲಾ?
ನಾನಾಗ ಬಲು ಗಾಬರಿಗೊಂಡಿದ್ದೆ. ಏನು ಮಾಡಲೂ ನನಗೆ ತೋಚಲಿಲ್ಲ. ಒಂದು ವೇಳೆ ನಾನು ಬೀದಿಗಿಳಿದು ಹೋಗಿದ್ದರೆ ಆ ಮುಠ್ಠಾಳರು ನನ್ನನ್ನು ಹಿಡಿದು ಚಟ್ನಿ ಮಾಡಿಬಿಡುತ್ತಿದ್ದರೇನೋ. ಬಹುಶಃ ಆ ಭಯವೇ ನನ್ನನ್ನು ಹಿಂದೆಗೆಯುವಂತೆ ಮಾಡಿರಬೇಕು.
………. ………… ………..
“ಏನೇ ಆದರೂ ಈ ವಿಷಯ ಬಹು ನಾಚಿಕೆಗೇಡಾದಂತಾಯಿತು.” ಅಧಿಕಾರಿ ಉಪ ಸಂಹಾರ ಮಾಡಿದರು. “ಇದೂ ಸಹ ತನಿಖೆಯಾಗದಿದ್ದಲ್ಲಿ ಈ ಊರಲ್ಲಿರಲು ಸಾಧ್ಯವಿಲ್ಲ. ಜನ ಈಗಲೇ ಬಹಳ ಕಳವಳಗೊಂಡಿದ್ದಾರೆ. ಇನ್ನವರು ಹುರಿದು ಮುಕ್ಕಿಬಿಡುತ್ತಾರೆ. ಅಲ್ಲದೆ ನಮಗೂ ಒಂದಂತಸ್ತಿಲ್ಲವೇ. ಅದಿಲ್ಲದೆ ಜೀವದೊಂದಿಗಿರುವುದರಿಂದೇನು ಪ್ರಯೋಜನ ?”
ಮಾತು ಮುಗಿಸುತ್ತಲೇ ಅಧಿಕಾರಿ ಕುರ್ಚಿಯಿಂದ ಮೇಲೆದ್ದನು. ಬಹು ಹೊತ್ತು ಮಾತನಾಡಿದ್ದುದರಿಂದ ಆತನು ನಿಶ್ಯಕ್ತನಾದಂತಿತ್ತು. ಅನೇಕಸಲ ಹತ್ತಿ ಇಳಿದು ಮಾಡಿದ್ದರಿಂದ ಕತ್ತಿನಲ್ಲಿದ್ದ ಗಂಟು ಕೆಂಪಡರಿತ್ತು.
ಆತನು ನನ್ನನ್ನೇ ನೆಟ್ಟ ದೃಷ್ಟಿಯಿಂದ ಅತ್ಯಾಸಕ್ತಿಯಿಟ್ಟು ನೋಡುತ್ತಿದ್ದನು. ನನಗೇನೋ ಏನೂ ಮಾತನಾಡಲೂ ಸಾಧ್ಯವಾಗಲಿಲ್ಲ.
“ನೀವು ಮಾಡುವ ಉಪಕಾರದಿಂದ ನಮ್ಮ ನಾಡಿಗೂ ಒಳ್ಳೆಯದಾಗುತ್ತೆಂದು ಭಾವಿಸಿ ಅದನ್ನು ನಾನೇನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲಾ……ಅಧಿಕಾರಿಯ ತುಟಿಗಳಲ್ಲಿ ಕುಚೋದ್ಯದ ನಗು ಕಾಣಿಸಿಕೊಂಡಿತು.”
ನಾನೆಣಿಸಿದಂತೆಯೇ……..ಅನಂತರ ದಾನ.
ದಾನ ಹೀಗಿತ್ತು.
ನಾಡಿನಲ್ಲೆಲ್ಲಾ ಬಹು ವಿಶ್ವಾಸಾರ್ಹನೆಂದು ನಾಡಿನ ಬೀಗದ ಕೈ ನನಗೆ ಸಮ್ಮಾನವಾಗಿ ತರಲಿದ್ದಾರೆ. ದೊಡ್ಡ ಸಮಾರಂಭವೇ ನಡೆಯಲಿದೆ. ನಾಡಿನಲ್ಲೆಲ್ಲಾ ಉತ್ಸವಗಳು ನಡೆಯಲಿವೆ. ಕೊನೆಗೆ ನಾಡನ್ನಾಳುವ ಮಹಾ ದೊರೆಯೇ ಪಟ್ಟಣದ ಬೀಗದ ಕೈಯನ್ನು ನನಗೆ ಸಮಾನವಾಗಿ ನೀಡಲಿದ್ದಾರೆ. ಯಾವಾಗ ಬೇಕಿದ್ದರೂ ಬೀಗ ಹಾಕಬಹುದು. ಬೀಗ ತೆಗೆಯಬಹುದು. ಒಟ್ಟಿನಲ್ಲಿ ಒಂದು ದೊಡ್ಡ ದಿಗ್ವಿಜಯ.
ಇದಕ್ಕೆ ಮುಂಚೆ ಈ ಬೀಗದ ಕೈಯನ್ನು ಸನ್ಮಾನಿಸಿರುವುದು ಒಮ್ಮೆ ಮಾತ್ರವಷ್ಟೆ. ಅನ್ಯದೇಶದ ಸಂದರ್ಶಕನೊಬ್ಬನಿಗೆ ಅದು ಸಿಕ್ಕಿತ್ತು. ಈಗ ನನಗೆ ಅದರ ಡೂಪ್ಲಿಕೇಟ್ ಕೊಡುತ್ತಿದ್ದರಷ್ಟೇ.
“ಇಲ್ಲದಿದ್ದರೂ…” ಅಧಿಕಾರಿ ಮುಂದುವರೆಸಿದನು. “ಇದನ್ನು ಉಪಕಾರವೆಂದು ಹೇಳುತ್ತಾರೆಯೇ ? ಇದು ಕರ್ತವ್ಯವಲ್ಲವೇ ? ಈ ನಾಡಿನ ಜನರಿಗೆ, ನಾಡಿಗೆ ಇಂತಹ ಒಂದು ಸೇವೆಯನ್ನು ಮತ್ತೆ ಮಾಡಲು ಸಾಧ್ಯವೇ ?”
ಹೌದು….. ನಾಡಿಗೆ ನನ್ನ ಕರ್ತವ್ಯ. ನನಗೂ ನಿಜವೆನಿಸಿತು.
ಆದರೆ…..ಯಾವುದು ಕರ್ತವ್ಯ ?
ಅದಕ್ಕೆ ಜವಾಬನ್ನು ಕಂಡುಹಿಡಿಯಲು ಸಾಧ್ಯವಾಗದೆ ಭ್ರಮಿಸಿದವನಂತೆ ನಾನೆದ್ದಾಗ ಜವಾಬನ್ನು ಕಾದಿದ್ದ ಅಧಿಕಾರಿಯ ಮುಖವು ತಟ್ಟನೆ ಕೆಂಪೇರಿತು.
“ಈ ಸಲ ತಪ್ಪಿಸಿಕೊಳ್ಳಲು ನೋಡಬೇಡಿ. ಅರ್ಥವಾಯಿತೇ ?” ಅಧಿಕಾರಿ ಎಚ್ಚರವಿತ್ತನು. “ಮನೆಗೆ ಹೋಗಿ ಚೆನ್ನಾಗಿ ಯೋಚಿಸಿ ನೋಡಿ. ಈ ರಾತ್ರಿಯೆಲ್ಲಾ ಯೋಚನೆ ಮಾಡಿ, ನಾಳೆ ಬೆಳಿಗ್ಗೆ ಹತ್ತು ಘಂಟೆಗೆ ಸರಿಯಾಗಿ ನಮ್ಮ ಜೀಪ್ ನಿಮ್ಮಲ್ಲಿಗೆ ಬರುತ್ತದೆ. ಅದರಲ್ಲೇರಿ ಇಲ್ಲಿಗೆ ಬನ್ನಿ. ಮಿಕ್ಕದ್ದೆಲ್ಲಾ ನಾವು ಹೇಳಿಕೊಡುತ್ತೇವೆ.”
ಹಿಂದಿರುಗಿ ಹೋಗುವಾಗ ಅವನು ಮತ್ತೊಮ್ಮೆ ಎಚ್ಚರವಿತ್ತನು.
“ತಪ್ಪಿಸಿಕೊಂಡು ಹೋಗಲು ನೋಡಬೇಡಿ. ನಿಮ್ಮ ರೂಮಿನ ಬಾಗಿಲ ಬಳಿ ನಾವು ರಾತ್ರಿಯೆಲ್ಲಾ ಕಾವಲಿರುತ್ತೇವೆ.”
ರೂಮಿಗೆ ಹಿಂದಿರುಗಿ ಬಂದಾಗ ಬಾಗಿಲ ಬಳಿ ಜನರ ಗುಂಪು ಸೇರಿತ್ತು. ಕಪ್ಪು ಬಟ್ಟೆಗಳ ಚೂರನ್ನು ಸಿಗಿಸಿಕೊಂಡಿದ್ದ ಗುಂಪು. ಮನೆಯ ಅಂಗಳದಲ್ಲಿ ಬೊಂಬು ನೆಟ್ಟು ಅದರಲ್ಲಿ ಕಪ್ಪು ಬಾವುಟ ಹಾರಿಸಿದ್ದರು. ಕೆಲವರು ವರಾಂಡದಲ್ಲಿ ಕುಳಿತಿದ್ದರು. ಕೆಲವರು ಮುಂಭಾಗದಲ್ಲಿ ಒಂದು ಮೂಲೆಯಲ್ಲಿ ಗುಂಪು ಸೇರಿ ನಿಂತಿದ್ದರು. ಯಾರೂ ಮಾತನಾಡುತ್ತಿರಲಿಲ್ಲ. ಗಂಭೀರ ಮೌನ ಆವರಿಸಿತ್ತು.
ಜೀಪ್‌ನಿಂದ ಇಳಿಯುತ್ತಿದ್ದ ನನ್ನನ್ನು ಕಂಡೊಡನೆಯೇ ಜನರ ಗುಂಪು ಒಮ್ಮೆ ಜಾಗೃತವಾಯಿತು. ಚೆದುರತೊಡಗಿತು. ಮೆಲ್ಲಗೆ ಶುರುವಾದ ಗುಸುಗುಸು ಧ್ವನಿ ದೊಡ್ಡದಾಯಿತು. ಕವಣೆಯಿಂದ ಹೊರಟ ಕಲ್ಲುಗಳಂತೆ ಹಲವಾರು ಧ್ವನಿಗಳು ತೂರಲ್ಪಟ್ಟವು.
“ಇವನೇ ಆಸಾಮಿ”
“ಇನ್ನೂ ಚಿಕ್ಕವನಂತೆ ಕಾಣುತ್ತಾನಲ್ಲಾ ?”
“ನಾಡಿಗಾಗಿ ಸಾಕ್ಷ್ಯ ಹೇಳದವನು.”
“ಇವನು ನಮ್ಮ ಪ್ರಾಯಕ್ಕೆ ಬರುವ ಹೊತ್ತಿಗೆ ನಮ್ಮ ನಾಡಿನ ಸ್ಥಿತಿಯೇನಾಗಿರುತ್ತದೆ ?”
ಅದನ್ನೆ ನಾನೂ ಆಲೋಚಿಸುತ್ತಿದ್ದೇನೆ.
ಜನರ ಗುಂಪು ನನ್ನೆದುರಿಗೆ ಒಂದು ಗೋಡೆ ಕಟ್ಟಿದಂತಿತ್ತು. ಅದನ್ನೊಡೆದು ಹೇಗೆ ರೂಮಿನೊಳಕ್ಕೆ ಪ್ರವೇಶಿಸುವುದೆಂದು ತೋರದೆ ನಾನು ಬಲು ಹೊತ್ತು ಗಾಬರಿಯಾಗಿ ನಿಂತಿದ್ದೆ.
ಆ ವೇಳೆಗೆ ಜನರನ್ನು ಪಕ್ಕಕ್ಕೆ ಸರಿಸಿ ಸೇಠ್‌ಜಿ ಮುಂದೆ ಬಂದರು. ಜೊತೆಯಲ್ಲಿ ಕಪ್ಪಗೆ ತೆಳ್ಳಗಿದ್ದ, ಕೊಂಬುಮೀಸೆಯಿದ್ದ ಒಬ್ಬನಿದ್ದನು.
“ಬನ್ನಿ ಮಹಾರಾಜ್” ಸೇಠ್‌ಜಿ ಕರೆದರು. “ನಾವು ಒಳಕ್ಕೆ ಹೋಗೋಣ. ನನ್ನ ಹಿಂದೆಯೇ ಬನ್ನಿ. ಇವರೇನು ನಿಮ್ಮನ್ನು ತಡೆದು ನಿಲ್ಲಿಸುವುದಿಲ್ಲ.”
ದ್ವೇಷದ ಕಿಡಿ ಹಾರುತ್ತಿರುವ ಕಣ್ಣುಗಳು ನೋಡುತ್ತಿರುವಂತೆಯೇ, ಬಿಗಿಯುತ್ತಿದ್ದ ಮುಷ್ಟಿಗಳ ನಡುವೆ, ಹೇಗೋ ಹಾದುಹೋಗಿ ರೂಮಿನೊಳಗೆ ಪ್ರವೇಶಿಸಿ ಬಾಗಿಲು ಹಾಕಿಕೊಂಡೆವು.
“ಅಬ್ಬ” ಸೇಠ್‌ಜಿ ಫ್ಯಾನು ಹಾಕಿ ಕುರ್ಚಿಯಲ್ಲಿ ಕುಳಿತರು. “ನಾಡಿನಲ್ಲಿ ಏನೆಲ್ಲಾ ನಡೆಯುತ್ತಿದೆ ? ಇದಕ್ಕೆ ಮುಂಚೆ ಏನಾದರೂ ಇತ್ತೆ ? ನನ್ನ ಮುತ್ತಜ್ಜನ ಕಾಲದಿಂದ ಇಲ್ಲಿ ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಸತ್ಯ ಮರ‍್ಯಾದೆ ಎನ್ನುವುದು ಸ್ವಲ್ಪವೂ ಇಲ್ಲದಂತಾಯಿತೇ ?” ಅವನು ಯಾರನ್ನೂ ಉದ್ದೇಶಿಸದೆ ಮಾತಾಡುತ್ತಿದ್ದನು.
“ಯಾಕಿಲ್ಲಿ ಹೀಗೆ ಗುಂಪು ಸೇರಿದೆ ?” ಸ್ವಲ್ಪ ಉಸಿರೆಳೆದುಕೊಂಡ ನಂತರ ನಾನು ಕೇಳಿದೆ.
“ಇಂದು ನಾಡಲ್ಲೆಲ್ಲಾ ಹರತಾಳ ನಡೆಯುತ್ತಿದೆ. ಇವರೆಲ್ಲಾ ಪ್ರತಿಭಟನಾ ಸಮ್ಮೇಳನ ಮುಗಿಸಿಕೊಂಡು ಬರುತ್ತಿದ್ದಾರೆ.”
“ಯಾರ ಮೇಲೆ ಪ್ರತಿಭಟನೆ ?”
“ಅಪರಾಧಿಗಳ ಮೇಲೆ ಮತ್ತೆ ನಾನು ಹೇಳದಿದ್ದರೂ ನಿಮಗೆ ಗೊತ್ತಿರಬೇಕಲ್ಲಾ-
ನಿಮ್ಮೊಂದಿಗೆ.”
“ನನಗೊಂದೂ ಅರ್ಥವಾಗುತ್ತಿಲ್ಲ.”
“ಒಂದು ಮಾತು…….” ಸೇಠ್‌ಜಿ ನನ್ನ ಬಳಿ ಬಂದು ಕೇಳಿದರು. “ನನಗೂ ಅರ್ಥವಾಗುತ್ತಿಲ್ಲ. ಒಂದು ಸಣ್ಣ ಸಾಕ್ಷ್ಯ ಹೇಳಲು ಏಕಿಷ್ಟು ಆಲಸ್ಯ ತೋರಿಸುತ್ತಿದ್ದೀರಿ ? ಒಂದು ತುಚ್ಛವಾದ ವಿಷಯಕ್ಕಾಗಿ ಈ ನಾಡಿನವರನ್ನೆಲ್ಲಾ ನೀವು ಶತ್ರುಗಳನ್ನಾಗಿ ಮಾಡಿಕೊಂಡರೆ ಪ್ರಯೋಜನ ತಾನೆ ಏನು ? ನಾಡಿಗೋಸ್ಕರ ಏನಾದರೊಂದು ಉಪಕಾರ ಮಾಡಲು ಇದಕ್ಕಿಂತ ಒಳ್ಳೆಯ ಅವಕಾಶ ನಿಮಗಿನ್ನು ದೊರೆಯುತ್ತದೆಯೇ ?”
ನಾನೇನೂ ಮಾತನಾಡಲಿಲ್ಲ.
ಸ್ವಗತದಲ್ಲಿ ಮಾತ್ರ ಹೇಳಿಕೊಂಡೆ. ನಾನಿದರಿಂದೇನು ಗಳಿಸಬಲ್ಲೆ ? ಏನಾದರೊಂದು ಕೆಲಸ ಮಾಡುವಾಗ, ಅದರಿಂದ ಸ್ವಲ್ಪವಾದರೂ ಲಾಭ ಪಡೆಯಬೇಡವೆ ? ನಾಡಿನೊಂದಿಗೆ ದ್ವೇಷ ಕಟ್ಟಿಕೊಂಡು ನಾನೇನು ಗಳಿಸಬಲ್ಲೆ ?
“ಊರಿನವರಿಗೆ ನಿಮ್ಮ ವಿಷಯದಲ್ಲಿ ಬಹಳ ಸಂದೇಹವಿದೆ.” ಆತನ ಧ್ವನಿಯಲ್ಲಿ ಗಾಂಭೀರ್ಯವಿತ್ತು. “ಜ್ಞಾಪಕವಿದೆಯಲ್ಲವೇ ? ಇದು ಮೊದಲನೆಯ ಬಾರಿಯಲ್ಲ.”
“ಪೋಲೀಸರಿಗೆ ನಿಜವಾದ ಕಳ್ಳರು ಬೇಕಾಗಿಲ್ಲ. ನಾನು ಸಾಕು. ಊರಿನವರೊ ಇದನ್ನೇ ಎನ್ನುತ್ತಾರೆ. ಇದ್ಯಾವ ನ್ಯಾಯ ?”
“ಇಂತಹ ಘಟನೆ ನಡೆಯುವುದೆಂದು ನಿಮಗೆ ಮುಂಚೆಯೇ ಗೊತ್ತಿತ್ತು. ಆ ನಮ್ಮ ಅಂಗಡಿಯಲ್ಲಿ ನಡೆಯುವ ಕಳ್ಳತನವೂ ನಿಮಗೆ ಮೊದಲೇ ಗೊತ್ತಿತ್ತು. ಆದ್ದರಿಂದಲೇ ನೀವು ಸದ್ದಿಲ್ಲದೆ ತಪ್ಪಿಸಿಕೊಂಡು ಹೋದಿರಿ.”
“ನಾನ್‌ಸೆನ್ಸ್”
“ನಾನು ನಿಮ್ಮ ಒಳ್ಳೆಯದಕ್ಕಾಗಿಯೇ ಹೇಳುತ್ತಿರುವುದು. ಇಷ್ಟವಿದ್ದಲ್ಲಿ ಕೇಳಬಹುದು ಅಷ್ಟೆ.” ಸೇಠ್‌ಜಿ ಮುಖ ಬಿಗಿದುಕೊಂಡೇ ಎದ್ದನು. ಬಾಗಿಲು ತೆರೆದು ಹೊರಡುವ ಮುಂಚೆ ಜೊತೆಯಲ್ಲಿದ್ದ ಸಣಕಲ, ಕೊಂಬಿನ ಮೀಸೆಯುಳ್ಳವನನ್ನು ನನಗೆ ಪರಿಚಯ ಮಾಡಿಸಿದನು.
“ನಮ್ಮ ಏಳನೆಯ ವಾರ್ಡ್‌ನ ಕೌನ್ಸಿಲರ್”
ಕೌನ್ಸಿಲರ್ ನಕ್ಕನು. ನಾನೂ ನಕ್ಕೆ.
ಸೇಠ್‌ಜಿ ಹೋದರೆಂಬುದನ್ನು ದೃಢಪಡಿಸಿಕೊಂಡ ನಂತರ ಕೌನ್ಸಿಲರ್ ಒಂದು ರಹಸ್ಯವೇನೋ ಎಂಬಂತೆ ಕಿವಿಯಲ್ಲಿ ರಹಸ್ಯ ಹೇಳಿದನು.
“ನಾವೆಲ್ಲಾ ಜೋರಾಗಿ ಸಿದ್ಧತೆಗಳನ್ನು ನಡೆಸಿದ್ದೇವೆ. ನೀವೇನೂ ಹೆದರಬೇಡಿ. ನಾವು ನಿಮ್ಮ ಬೆಂಬಲಕ್ಕಿದ್ದೇವೆ.”
ನಾನು ವಿಸ್ಮಯಗೊಂಡೆ. ಕೌನ್ಸಿಲರ್‌ನ ತೆಳ್ಳಗಿನ ಕೋಲುಮುಖದಲ್ಲಿ ಯಾವಾಗಲೋ ಬಿದ್ದ ಪೋಲೀಸರ ಏಟಿನ ಗುರುತುಗಳಿದ್ದವು. ಮಾತನಾಡುವಾಗ ಮಧ್ಯೆ ಮಧ್ಯೆ ಏದುಬ್ಬಸವಿರುತ್ತಿತ್ತು. ಕಪ್ಪಗಿನ ಕಫ ಹೊರ ಬರುತ್ತಿತ್ತು.
ಕೌನ್ಸಿಲರ್ ಕುರ್ಚಿಯನ್ನು ನನ್ನ ಹತ್ತಿರಕ್ಕೆ ಜರುಗಿಸಿಕೊಂಡರು. ನಾಲ್ಕು ಕಡೆಗೂ ಸಂದೇಹದಿಂದೊಮ್ಮೆ ನೋಡಿ ಯಾರೂ ಇಲ್ಲವೆಂದು ದೃಢಪಡಿಸಿಕೊಂಡು ಹೇಳಿದನು.
“ಇದನ್ನೆಲ್ಲಾ ನಡೆಸುತ್ತಿರುವವರು ಯಾರೇ ಆದರೂ ನಾನು ಅವರೊಂದಿಗಿದ್ದೇನೆ. ಪರಂಪರೆ ಪರಂಪರೆ ಎಂದು ಬಡಿದುಕೊಳ್ಳುತ್ತಾರಲ್ಲಾ ಅದರ ಅರ್ಥವಾದರೂ ಏನು? ನಮ್ಮ ನಾಡಿನಲ್ಲಿ ಅಂತಹ ಮಹಿಮೆಯಾದರೂ ಏನಿದೆ. ಇಲ್ಲಿ ಕಳ್ಳತನಗಳು ನಡೆಯಬೇಕು, ಮಾನಭಂಗಗಳಾಗಬೇಕು. ಕೊಲೆಯೂ ನಡೆಯಬೇಕು. ಇದನ್ನೆಲ್ಲಾ ನಡೆಸುವುದು ಯಾರೇ ಆದರೂ ಅದರ ಹಿಂದೆ ನಮ್ಮ ಕೈಯಿದೆ. ಧೈರ್ಯವಾಗಿರಿ. ಆ ಗಲಾಟೆಯನ್ನು ನೋಡಿ ಹೆದರಿಬಿಡಬೇಡಿ. ಮಹಾ ಅವರ ಕಪ್ಪು ಬಾವುಟವಿದ್ದರೇನು. ಸಾವಿರದೊಂಭೈನೂರ ನಲವತ್ತೆಂಟರಲ್ಲಿ……”
ಕೌನ್ಸಿಲರ್‌ನು ಬಹಳ ಹೊತ್ತು ಭಾಷಣ ಮಾಡುತ್ತಿದ್ದನು. ಅದರ ಮಧ್ಯೆ ತನ್ನ ಮೀಸೆಯನ್ನೊಮ್ಮೆ ನೇವರಿಸಿ ತಿರುವುತ್ತಿದ್ದನು. ಬೀಡಿಹಚ್ಚಿ ಎಳೆದನು. ಜುಬ್ಬದ ತೋಳನ್ನು ಮೇಲಕ್ಕೆ ಮಡಿಸಿದನು. ಕಿಟಕಿಯ ಬಳಿ ಹೋಗಿ ಕ್ಯಾಕರಿಸಿ ಉಗಿದನು.
ಹೊರಡಲು ಸಿದ್ಧರಾಗಿ ಎದ್ದಾಗ ಮತ್ತೊಮ್ಮೆ ನನಗೆ ಧೈರವಿತ್ತು ಎದೆಯನ್ನೊಮ್ಮೆ ತಟ್ಟಿಕೊಂಡು ನೋಡಿದನು.
“ಸಾರ್ ನೀವು ಯಾವುದೇ ಕಾರಣದಿಂದಲೂ ಹೆದರಬೇಕಾಗಿಲ್ಲ. ನಾವು ನಿಮ್ಮ ಬೆಂಬಲಕ್ಕಿದ್ದೇವೆ.”
“ಆದರೆ ನಾಳೆ ಬೆಳಿಗ್ಗೆ ನನ್ನನ್ನು ಕರೆದುಕೊಂಡು ಹೋಗಲು ಅವರು ಬರುತ್ತಾರೆ.”
“ಅದಕ್ಕಿಂತ ಮುಂಚೆ ನೀವು ನಮ್ಮ ಬಿಡಾರದಲ್ಲಿ ಬಂದಿರುತ್ತೀರಿ”
“ಅದು ಹೇಗೆ ಸಾಧ್ಯ ?”
“ಅರ್ಧ ರಾತ್ರಿಯಲ್ಲಿ ನಿಮ್ಮನ್ನು ಕರೆಯಲು ಜನ ಬರುತ್ತಾರೆ. ಅವರ ಜೊತೆ ಹೊರಟು ಬಂದುಬಿಡಿ.”
“ಆಮೇಲೆ ?”
ನಮ್ಮ ಗುಂಪಿನವರೊಂದಿಗೆ ಅಂಡರ್‌ಗ್ರೌಂಡ್‌ನಲ್ಲಿರುವಿರಂತೆ”
ಏನಾದರೂ ವಂಚನೆಯೇ ನನಗೆ ಸಂಶಯವಾಯಿತು. ಅದವನಿಗೆ ಅರ್ಥವಾಗಿರಬೇಕು. ಕೌನ್ಸಿಲರ್ ಹೇಳಿದನು.
“ಕರೆಯಲು ಬರುವವನು ಒಂದು ಸಂಕೇತವಾಕ್ಯವನ್ನು ಹೇಳುತ್ತಾನೆ. ಅದನ್ನು ಕೇಳಿದೊಡನೆ ಬಾಗಿಲನ್ನು ತೆರೆದರೆ ಸಾಕು.”
“ಹೊರಗೆ ಕಾವಲುಗಾರರಿರುತ್ತಾರಲ್ಲಾ?”
“ಅದೇನು ಪರವಾಗಿಲ್ಲ ಅವರೆಲ್ಲಾ ಒಳಗೊಳಗೇ ನಮ್ಮವರೇ”
“ಸಂಕೇತವಾಕ್ಯವ್ಯಾವುದು ?”
“ಹೊರಗಿನಿಂದ ಅವನು ಕೇಳುತ್ತಾನೆ. ರಾಭಣನನ್ನು ಕೊಂದವನಾರು ? ಎಂದು. ಆಗ ನೀವು ಸೀತ ಎಂದು ಉತ್ತರಿಸಿದರೆ ಸಾಕು.”
“ಆ”
“ರಾಭಣನನ್ನು ಕೊಂದವರ‍್ಯಾರು ?……..ಸೀತ”
“ಓ”
ಚಿಕ್ಕದೊಂದು ನಮಸ್ಕಾರ ಹಾಕಿ ಕೌನ್ಸಿಲರ್ ಹೊರಟುಹೋದ ನಂತರ ಒಳಗಿನ ಕೊಠಡಿಯಿಂದ ನೆನೆದು ಮುದ್ದೆಯಾದ ಒಂದು ಇಲಿ ಮರಿಯಂತೆ ಮುದುರಿಕೊಂಡು ಚೆಲ್ಲಪ್ಪನು ಹೊರಕ್ಕೆ ಬಂದನು.
“ನಾನು ಹೊರಡುತ್ತೇನೆ ಸಾರ್‌.”
“ಇದುವರೆಗೂ ನೀನು ಹೋಗಲೇ ಇಲ್ಲವೇನು ?”
“ಇಲ್ಲ, ಈಗ ಹೋಗುತ್ತೇನೆ ಸಾರ್‌.” ಒಂದು ಸಲ ಕೈಯೆಲ್ಲಿ ಚೀಲ ಹಿಡಿದು ಮೆಟ್ಟಲಿಳಿದು ಹೋದಾಗ ಅಲ್ಲಿ ನಿಂತಿರುವವರೆಲ್ಲಾ ಕೇಕೆ ಹಾಕತೊಡಗಿದರು.
ನಾನು ಒಂದು ನಿಮಿಷ ಆಲೋಚಿಸಿದೆ. ಇನ್ನು ಮುಂದಿನ ದಿನಗಳು ಸಾಮಾನ್ಯವಾಗಿ ಘಟನೆಗಳಿಂದ ಕೂಡಿರುತ್ತವೆ. ಮಧ್ಯರಾತ್ರಿಯಲ್ಲಿ ತಪ್ಪಿಸಿಕೊಂಡು ಹೋಗುವುದು. ಅದಾದ ನಂತರ ಅಂಡರ್‌ಗೌಂಡ್‌ನಲ್ಲಿರುವುದು ಎಷ್ಟು ದಿನಗಳು ? ಗೊತ್ತಿಲ್ಲ. ಬಹುಶಃ ಅಂಡರ್‌ಗೌಂಡೆಂಬ ಹುತ್ತದಿಂದ ಹೊರಕ್ಕೆ ಬರುವಾಗ ಈ ಮನೆ ಇಲ್ಲದೆ ಹೋಗಬಹುದು. ನಾಲ್ಕಾರು ಗೋಡೆಗಳ ಅವಶೇಷವಾಗಿ ಕಾಣಬಹುದಷ್ಟೆ. ಜನಗಳ
ಆವೇಶ. ಅಧಿಕಾರಿಯ ರೋಷ.
ಆದ್ದರಿಂದ ಚೆಲ್ಲಪ್ಪನನ್ನು ಕಳಿಸಿಬಿಟ್ಟೆ. ಅವನಾದರೂ ಜೀವಸಹಿತ ಉಳಿದುಕೊಳ್ಳಲಿ.
ಅರ್ಧರಾತ್ರಿಯಾಗುವುದನ್ನೇ ಕಾಯುತ್ತಿದ್ದೆ. ಯಾವುದೇ ಬಗೆಯ ಪ್ರತ್ಯೇಕ ಮನೋಭಾವನೆಗಳೂ ಆಗ ತೋರಲಿಲ್ಲ. ಸುಮ್ಮನೆ ಕಾದು ಕುಳಿತಿದ್ದೆನಷ್ಟೆ. ಟಪಾಲ್‌ಗಾಗಿ ಅಥವಾ ಪೇಪರ್‌ಗಾಗಿ ಕಾದಿರುವುದಿಲ್ಲವೇ ಹಾಗೆ ಕಾದಿದ್ದೆ. ಮರಗಟ್ಟಿದ್ದ ಮನಸ್ಸಿಗೆ ಸ್ವಲ್ಪವೂ ಕ್ಲೇಶ ತೋರುತ್ತಿರಲಿಲ್ಲ.
ಹೊರಗೆ ಜನರ ದೊಡ್ಡ ಗುಂಪೇ ಆಗಲೂ ಕಾವಲಿತ್ತು. ಕಿಟಕಿಯ ಗಾಜಿನ ಹೊರಗೆ ನೆರಳುಗಳು ಚಲಿಸುವುದನ್ನು ಆಗಲೂ ನೋಡಬಹುದಿತ್ತು. ಕಪ್ಪು ಬಾವುಟ ಕಟ್ಟಿದ್ದ ಬೊಂಬಿನ ನೆರಳು ಗಾಜಿನ ಮೇಲೆ ಬಿದ್ದಿತ್ತು.
ನಾನು ಮಹಡಿಯ ಮೇಲಿನ ಕೊಠಡಿಗೆ ಹೋದೆ. ಬಾಗಿಲು ತೆರೆದು ತಾರಸಿಯ ಮೇಲೆ ಹೋಗಿ ನಿಂತೆ. ಕೆಳಗೆ ಬೀದಿ ಶಾಂತವಾಗಿತ್ತು. ಮುಚ್ಚಿದ ಅಂಗಡಿಗಳು. ಕಾಲಹೆಜ್ಜೆಗಳ ಮೆಲ್ಲಗಿನ ಶಬ್ದ. ಬೀದಿಯ ದೀಪಗಳು ಉರಿಯುತ್ತಿರಲಿಲ್ಲ. ಆ ಗಲ್ಲಿಯೆಲ್ಲಾ ಕತ್ತಲೆಯಲ್ಲಿ ಮುಳುಗಿದೆ. ಹೊಲಗೇರಿಯಲ್ಲಿ ಮಾತ್ರ ಸೀಮೆ ಎಣ್ಣೆಯ ದೀಪಗಳ ಸಣ್ಣನೆಯ ಉರಿಯನ್ನು ಕಾಣಬಹುದು.
ಜನಗಳ ಉದ್ದೇಶದ ಪಾವಿತ್ರದಲ್ಲಿ ಆಗ ನನಗೆ ಮೊಟ್ಟಮೊದಲಾಗಿ ಮರ್ಯಾದೆ ತೋರತೊಡಗಿತು. ಒಬ್ಬ ಗುಡಿಸುವ ಹುಡುಗಿಯ ಮಾನವನ್ನು ತಮ್ಮ ಸ್ವಂತ ಮಾನದಂತೆ ಇವರು ಪರಿಗಣಿಸುತ್ತಿದ್ದಾರಲ್ಲವೇ ? ಒಂದು ಚಿಕ್ಕ ವಿಷಯಕ್ಕಾಗಿ ಎಷ್ಟು ದೊಡ್ಡ ಹರತಾಳ. ಹತ್ತಿಕೊಂಡು ಉರಿಯುತ್ತಿರುವ ಪ್ರತಿಭಟನೆ.
ಹಾಗಾದರೆ ಈ ಕೌನ್ಸಿಲರ್‌ನ ಮೋಟಿವ್ ಏನು ?
ಅದನ್ನು ಪತ್ತೆಹಚ್ಚಲು ಸ್ವಲ್ಪವೂ ಸಾಧ್ಯವಾಗಲಿಲ್ಲ. ಆದ್ದರಿಂದ ಆ ವಿಷಯಗಳ ಬಗ್ಗೆ ಆಲೋಚಿಸುವುದನ್ನು ಅಲ್ಲಿಗೇ ಬಿಟ್ಟು ಹೊರಗಿದ್ದ ಕತ್ತಲನ್ನು ದಿಟ್ಟಿಸುತ್ತಿದ್ದೆ.
ನಿಮಿಷಗಳುರುಳಿಹೋಗುತ್ತಿದ್ದವು. ಜನಗಳ ಗುಂಪು ಮೆಲ್ಲಮೆಲ್ಲನೆ ಕರಗುವುದನ್ನೂ ಕೊನೆಗೆ ಸುಮಾರು ಐದಾರು ಜನರು ಮಾತ್ರ ಉಳಿದಿದ್ದನ್ನೂ ನಾನು ಕಂಡೆ. ಅಂಗಳದ ಬಳಿಯ ಕರಿಯ ಬಾವುಟದ ಬಳಿ ಅವರು ಉರಿಯುತ್ತಿರುವ ದೀವಟಿಗೆಯೊಂದನ್ನು ನೆಟ್ಟಿದ್ದರು. ಅದರ ಸುತ್ತಲೂ ಬೀಡಿ ಸೇದುತ್ತ ಕೆಲ ಯುವಕರು ಇಸ್ಪೀಟಾಟವಾಡುತ್ತಿದ್ದರು. ಮಾನಭಂಗ ಮಾಡಲ್ಪಟ್ಟ ವಿಶಾಲುವಿದ್ದ ಹೊಲಗೇರಿಯಿಂದ ಜೋಗುಳದ ಹಾಡಿನ ಅಲೆಗಳು ಬಂದು ನನ್ನನ್ನು ಸುತ್ತಿದವು. ಅದರ ಹಿಂದೆಯೇ ಮುದುಕನ ಬೈಗಳ ಶಬ್ದ ಕೇಳಿಬಂತು. ಸ್ವಲ್ಪ ಹೊತ್ತಾದ ಮೇಲೆ ರಸ್ತೆಯು ಶಾಂತವಾಯಿತು.
ಅರ್ಧ ರಾತ್ರಿಯಲ್ಲಿ ಬಾಗಿಲು ತಟ್ಟಿದ ಶಬ್ದ ಕೇಳಿಬಂತು. ನಾನು ಕಿವಿಗೊಟ್ಟು ಕೇಳಿದೆ. ಒಂದು ಬಗೆಯ ಧ್ವನಿ. “ರಾಭಣವನ್ನು ಕೊಂದವರ‍್ಯಾರು ?”
“ಸೀ….. …. ….ತ” ನಾನು ಕಷ್ಟಪಟ್ಟು ತಡವರಿಸುತ್ತಾ ನುಡಿದೆ.
ಬಾಗಿಲು ತೆರೆದು ಆ ಕತ್ತಲೆಯಲ್ಲೇ ಹೊರಬಿದ್ದೆ. ದೀವಟಿಗೆ ಮಾತ್ರ ನೆಲದಲ್ಲಿ ನೆಟ್ಟಿತ್ತು. ಕಪ್ಪು ಬಾವುಟವಿದ್ದ ಬೊಂಬಿರಲಿಲ್ಲ. ಕಾವಲಿದ್ದ ಯುವಕರೂ ಇರಲಿಲ್ಲ. ಅರ್ಧರಾತ್ರಿ ಕೋಳಿಯ ದೀರ್ಘವಾದ ಕೂಗು ಮಾತ್ರ ಕೇಳಿಸುತ್ತಿತ್ತು.
“ಹೋಗೋಣ” ನನ್ನೆದುರಿಗಿದ್ದ ಮನುಷ್ಯನೆಂದನು.
ನಾನು ‘ಹೂಂ’ ಗುಟ್ಟಿದೆ.
ನಾವು ರಸ್ತೆಗಿಳಿದೆವು.
ಪಟ್ಟಣದ ಹೊರಗಿರುವ ಒಂದು ಕಣಜದಲ್ಲಿ ಕೌನ್ಸಿಲರ್ ಕಾದಿದ್ದನು.
“ಕ್ರಾಂತಿಯ ಅಭಿನಂದನೆಗಳು” ಆತನು ಮುಷ್ಟಿ ಬಿಗಿದು ಆ ಗಾಢಾಂಧಕಾರದಲ್ಲಿ ಒಮ್ಮೆ ಬೀಸಿದನು.
ನಾನು ಕದಲಲಿಲ್ಲ ಮಾತನಾಡಲಿಲ್ಲ.
ಎರಡು ಹಗಲು, ಎರಡು ರಾತ್ರಿ, ಕಣಜದಲ್ಲಿನ ಅಂಡರ್‌ಗೌಂಡ್‌ನಲ್ಲಿ ಅಡಗಿದ್ದೆವು. ಮೂರನೆಯ ಬೆಳಿಗ್ಗೆ ನಾನು ಹೊರಬರಲೇಬೇಕಾಗಿ ಬಂತು. ಕಾರಣವೇನೆಂದರೆ ಆ
ನಾಡಿನಲ್ಲಿ ಮೂರನೆಯ ಅಪರಾಧವು ನಡೆದುಹೋಗಿತ್ತು.
ಅದೊಂದು ಕೊಲೆ.
ಕೊಲೆಯಾದವನು ಕೌನ್ಸಿಲರ್. ಕೊಂದವನು ಅವನ ಒಬ್ಬ ಶಿಷ್ಯನೇ. ಅದೂ ಹಾಡು ಹಗಲಲ್ಲಿ ನನ್ನ ಕಣ್ಣಮುಂದೆಯೇ ಕೊಲೆ ನಡೆದಿತ್ತು. ರಕ್ತದಲ್ಲಿ ನೆನೆದ ಒಂದು ಮೀಸೆಯ ತುಂಡು ನನ್ನ ಮುಂದೆ ಬಿದ್ದು ಒದ್ದಾಡಿತು. ಬಿಸಿ ರಕ್ತವು ನೆಲದಲ್ಲಿ ಹರಿದು ಕರೆಕಟ್ಟಿತ್ತು. ಕಪ್ಪನೆಯ ಕಫ ಕಟವಾಯಿಯಲ್ಲಿ ಹೊರಕ್ಕೆ ಹರಿದಿತ್ತು.
ಸುದ್ದಿ ತಿಳಿದ ಜನರೆಲ್ಲಾ ಬಂದು ಸೇರಿದರು.
“ಅಯ್ಯೋ ದೇವರೇ, ಇದು ಹೀಗೇ ಮುಂದುವರೆದರೆ” ಜನರ ಗುಂಪಿನಲ್ಲಿರುವವರು ತಮ್ಮಲ್ಲೇ ಗೊಣಗುವುದನ್ನು ಕೇಳಿದೆ.
“ಕಳ್ಳತನದಲ್ಲಿ ಮೊದಲಾದ ಈ ಆಟವು ಈಗ ಕೊಲೆಯವರೆಗೂ ಬಂದಾಯಿತು. ಇನ್ನೂ ಏನೇನು ನಡೆಯಲಿದೆಯೋ ? ಯಾರಿಗೆ ಗೊತ್ತು. ಹೀಗೇ ಮುಂದುವರೆದರೆ ನಾಡಿನ ಗತಿ ಏನಾಗುತ್ತೋ ?”
“ಇದಕ್ಕೆ ಕೊನೆಯಿಲ್ಲವೇ ?”
ಇದಕ್ಕೆ ಉತ್ತರ ಹೇಳುವವರು ಮಾತ್ರ ಯಾರೂ ಇರಲಿಲ್ಲ. ಸುಮ್ಮನೆ ಪರಸ್ಪರ ಮುಖಗಳನ್ನು ನೋಡಿಕೊಂಡು ಮಾತಾಡಿದ ಮಾತುಗಳಷ್ಟೆ. “ಕುಳಿತುಕೊಳ್ಳಿ ಸಾರ್” ಒಬ್ಬನು ನನಗೊಂದು ಕುರ್ಚಿ ಹಾಕಿ ಕೊಟ್ಟನು.
ನಾನು ಕುಳಿತ ನಂತರ ಮುಂದುಗಡೆ ನಿಂತಿದ್ದವರಲ್ಲೊಬ್ಬನು ಪಕ್ಕಕ್ಕೆ ಬಂದು ಕೇಳಿದನು.
“ಕಾಫಿ ಕುಡಿಯುತ್ತೀರೋ ಟೀಯೋ ?”
“ಕಾಫಿ ಸಾಕು.”
ಕೊಲೆ ಮಾಡಿದವನು ರಕ್ತಮಯವಾದ ಚಾಕುವನ್ನು ಹಿಡಿದುಕೊಂಡು ಆಗಲೂ ಅಲ್ಲೇ ಮರೆಯಲ್ಲೇ ನಿಂತಿದ್ದನು. ಅವನ ಮುಖದಲ್ಲಿನ ವಿಶಿಷ್ಟ ಭಾವನೆಗಳನ್ನು ಗಮನಿಸುತ್ತಿದ್ದೆ. ಆದು ಹಗೆಯಾಗಿರಲಿಲ್ಲ, ತಿದ್ದಲಸಾಧ್ಯವಾದ ಯಾವುದೋ ಒಂದಪರಾಧವು ನಡೆದುಹೋದ ಭಾವನೆ ಆ ಮುಖದಲ್ಲಿತ್ತು. ಆದರೆ ಅವನು ಬಹುವಾಗಿ ಹೆದರಿದ್ದನು. ಅವನ ದೇಹವು ಈಗಲೂ ನಡುಗುತ್ತಿತ್ತು. ಬೇಕಾಗಿದ್ದರೆ ತನ್ನ ಕೆಲಸ ಮುಗಿದೊಡನೆ ಅವನು ಓಡಿ ಹೋಗಿ ಪಾರಾಗಬಹುದಿತ್ತು. ಹಾಗೆ ಮಾಡದೆ ಅವನೀಗ ನಾಲ್ಕು ದಿಕ್ಕಿನಲ್ಲಿಯೂ ದೃಷ್ಟಿಸಿ ನೋಡುತ್ತಿದ್ದನು.
ಕೌನ್ಸಿಲರ್‌ನ ಒದ್ದಾಟವು ಮುಗಿದು ಹೋದಾಗ ನಾನು ಕುರ್ಚಿಯ ಮೇಲೆಯೇ ಒರಗಿ ಕುಳಿತಿದ್ದೆ.
“ಎಲ್ಲವನ್ನೂ ಸರಿಯಾಗಿ ನೋಡಿದ್ದೀರಲ್ಲವೇ ? ಸರಿಯಾಗಿ ಜ್ಞಾಪಕದಲ್ಲಿಟ್ಟುಕೊಂಡಿರಬೇಕು ಗೊತ್ತಾಯಿತೇ ?” ಹಿಂದಿನಿಂದ ಯಾರೋ ಕೂಗಿ ಹೇಳಿದರು.
ನಾನು ಸಪ್ಪೆಯಾಗಿ ನಕ್ಕೆ. ಅದು ಗಲ್ಲಿನ ಕಂಬಕ್ಕೆ ಹೋಗುತ್ತಿರುವವನ ನಗುವಿನಂತಿರಬೇಕೆನ್ನಿಸಿತು. ತಪ್ಪಿಸಿಕೊಳ್ಳುವ ಸಕಲ ದ್ವಾರಗಳೂ ಮುಚ್ಚಲ್ಪಟ್ಟಿದ್ದವು. ಆದ್ದರಿಂದ ನನಗೀಗ ಮಾಡಲು ಸಾಧ್ಯವಾದದ್ದಷ್ಟೇ.
ಸ್ವಲ್ಪ ಹೊತ್ತಿಗೆಲ್ಲಾ ಪೋಲೀಸರು ಬಂದರು.
ಅವರು ಆ ಸ್ಥಳವನ್ನೊಮ್ಮೆ ನಡೆದಾಡಿ ನೋಡಿದರು. ಶವಶರೀರದ ಫೋಟೋ ತೆಗೆದುಕೊಂಡರು. ಟೇಪ್‌ನಿಂದ ಕೆಲ ಅಳತೆಗಳನ್ನು ತೆಗೆದು ಡೈರಿಯಲ್ಲಿ ಬರೆದಿಟ್ಟುಕೊಂಡರು. ಕೊಲೆಪಾತಕಿಯ ಕೈ ಮೂಳೆಯ ಕೀಲುಗಳು ಗಡ ಗಡ ನಡುಗಿ ಶಬ್ದ ಮಾಡುವುದನ್ನು
ನಾನು ಕಂಡೆ. ರಕ್ತದಲ್ಲಿ ಅದ್ದಿದಂತಿದ್ದ ಚಾಕುವು ಯಾವಾಗ ಬೇಕಾದರೂ ಕೆಳಗೆ ಬೀಳಬಹುದು ಹಾಗಿತ್ತು.
“ಬೇಡಿ ಹಾಕಲೇ ಸಾರ್” ಕಾನ್‌ಸ್ಟೇಬಲ್‌ ಇನ್‌ಸ್ಪೆಕ್ಟರ್‌ನನ್ನು ಕೇಳಿದನು.
ಇನ್‌ಸ್ಪೆಕ್ಟರ್‌ ಮೊದಲು ಚಾಕುವನ್ನು ದಿಟ್ಟಿಸಿ ನೋಡಿದರು. ಅನಂತರ ನಡುಗುತ್ತಿರುವ ಯುವಕನನ್ನು ದಿಟ್ಟಿಸಿ ನೋಡಿದರು. ಅನಂತರ ಆಜ್ಞಾಪಿಸಿದರು.
“ಅವನನ್ನು ಬೇಡ ಬಿಟ್ಟುಬಿಡು”
“ಹಾಗಾದರೆ”
“ಆ ಇನ್ನೊಬ್ಬ ಮನುಷ್ಯನನ್ನು ಕರೆದುಕೋ” ಕುರ್ಚಿಯಲ್ಲಿದ್ದ ನನ್ನ ಕಡೆಗೆ ಕೈತೋರಿಸಿ ಹೇಳಿದ್ದಾಗಿತ್ತು. “ಈ ಸಲ ಈತ ಗಿಣಿ ಹೇಳಿದಂತೆ ಹೇಳುತ್ತಾನೆ.”
“ಹಾಗಾದರೆ ಕೊಲೆ ಮಾಡಿದ ಮನುಷ್ಯನನ್ನೇನು ಮಾಡಬೇಕು ?” ಜನರ ಗುಂಪಿನಿಂದ ಯಾರೋ ಕೇಳಿದರು.
“ಕೈದಿಗಳು ನಮ್ಮ ಕಸ್ಟಡಿಯಲ್ಲಿ ಬೇಕಾದಷ್ಟಿದ್ದಾರೆ. ಸಾಕ್ಷ್ಯ ಹೇಳುವವರು ಹೆಚ್ಚಿಲ್ಲ ಅಷ್ಟೆ.”
ಹಾಗೆ ಮತ್ತೊಮ್ಮೆ ನಾನು ಅಧಿಕಾರಿಯ ಮುಂದೆ ನಿಂತೆ.
ನಾನು ಆತನ ಮುಖವನ್ನು ನೋಡಿದೆ. ಅಲ್ಲಿ ಹೆಪ್ಪುಗಟ್ಟಿಕೊಂಡಿದ್ದ ವೇದನೆಯನ್ನು ಕಂಡೆ. ಅಲ್ಲದೆ ಅದರ ಮಧ್ಯೆ ಒಂದು ನಿಸ್ಸಹಾಯಕತೆಯೂ ಇಣುಕುತ್ತಿತ್ತು. ಇವೆಲ್ಲದಕ್ಕೂ ಮೇಲೆ ಅಸಹ್ಯ. ಮೂರು ಪಾಪಗಳ ಭಾರವನ್ನು ಹೊರುತ್ತಿದ್ದಾನೆ ಪಾಪ.
“ಈಗ ತೃಪ್ತಿಯಾಯಿತಲ್ಲವೇ ?” ಆತನು ತುಚ್ಛಸ್ವರದಲ್ಲಿ ಕೇಳಿದನು. ನನಗೆ ಹೇಳಲೇನೂ ಇರಲಿಲ್ಲ. ಆದರೆ ತಪ್ಪು ಮಾಡಿದೆನೆಂಬ ಚಿಂತೆಯೇನಿರಲಿಲ್ಲ. ಸ್ವಲ್ಪವೂ ಇರಲಿಲ್ಲ. ಇನ್ನೂ
ಒಂದು ಪ್ರಶ್ನೆ ಬಂತು.
“ಈ ಸಲ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ ಅಲ್ಲವೇ ? ನಿಮ್ಮನ್ನು ಕಣ್ಣಾರೆ ಕಂಡ ಸಾಕ್ಷಿಗಳಿದ್ದಾರೆ.”
ನಾನು ತಲೆದೂಗಿದೆ. ಶರಣಾಗತನಾದೆ. ತಲೆಬಾಗಿ ನಿಂತೆ.
“ಇನ್ನು ನಾವೇನೂ ಹೇಳಿಕೊಡಬೇಕಾಗಿಲ್ಲ. ಅಲ್ಲವೇ ? ನೀವೇ ಎಲ್ಲಾ ಕಣ್ಣಾರೆ ಕಂಡಿದ್ದೀರಲ್ಲವೇ…. …. …..”
“ಹೌದು”
ತಲೆಕೆರೆದುಕೊಂಡೆ.
“ಹಾಗಾದರೆ ಇನ್ನು ನಂಬುತ್ತೀರಲ್ಲ, ಸಾಕ್ಷ್ಯ ಹೇಳುತ್ತೀರಲ್ಲ ?”
“ಹುಂ”
“ಇಷ್ಟು ನಾಶ ನಷ್ಟಗಳುಂಟಾದರೂ ಕೊನೆಗೆ ಗೆದ್ದವರಾರು ?”
“ನಮ್ಮ ದೇಶ”
“ಎಲ್ಲಾ ಮುಠ್ಠಾಳರಿಗೂ ಇದೊಂದು ಒಳ್ಳೆಯ ಪಾಠವಾಗುತ್ತದೆ.”
ಸೋತವನಂತೆ ತಲೆಬಾಗಿ ನಿಂತಾಗ ಹಿಂದುಗಡೆ ಪೋಲೀಸ್‌ನವರು ಬ್ಯಾಂಡ್‌ನಲ್ಲಿ ರಾಷ್ಟ್ರಗೀತೆಯನ್ನು ಬಾರಿಸುವುದನ್ನು ಕೇಳಿದೆ.

Close

ಗ್ರಹಣ

ಗ್ರಹಣ

ಕ ವೆಂ ರಾಜಗೋಪಾಲ

ಚಂದ್ರಮುಖಿ
ನಿನ್ನ
ಒಂದೊಂದೇ ಕಳೆ ಕಳೆದು
ಹುಣ್ಣಿಮೆ:
ಒಂದೊಂದೇ ಕಳೆದು
ಅಮಾಸೆ.
ಗಡಿಯಾರದಲ್ಲಿ ಚಕ್ರವರಸೆ.

ಇದ್ದಕ್ಕಿದ್ದಂತೆ
ನಿನ್ನ ಮುಖದಲ್ಲಿ ನೆರಳು
ಯಾರದ್ದೆಂದು ಹಗಲಿರುಳನೆಲ್ಲ ಬಳಸಿ
ಸೂತಕದಲ್ಲಿ
ಹೃದಯವ ತೊಳೆದು
ನೋಡಿದ ಸಮಯ-
ನೆಲದಿಂದ ಮುಗಿಲ ವರೆಗೂ
ನೆರಳು ನಿಂತಿರಬೇಕು
ಎನ್ನಿಸಿದಾಗ
ಅದರ ತುದಿ ನಿನ್ನ-
ಮುಖದಲ್ಲಿ ಕಂಡರೂ
ಬುಡ-ಬೇರು
ಕಾಣದೆ ಕೊರಗಿ
ಒಂದು ನಿಜ
ಉಳಿದೊಂಭತ್ತು ಭ್ರಮೆಯೆ ?

ಬರಿಯ ದೇಹಕ್ಕಾಗಿ
ಪರಿತಾಪದ ಪರದಾಟ
ಕಂಬನಿಯ ಧಾರೆ
ಬೆವತ ಹೃದಯದ ಮೋರೆ
ಬರಿಯ ಭ್ರಮೆಯೆ ?

ಗೋಡೆಯ ಮೇಲೆ ನಿಂತು
ನನ್ನ ನೆರಳೇ ನಕ್ಕು
ಅದು, ಆ ನೆರಳು, ನಿನ್ನದೇ…
ಎಂದ ಸಮಯ
ಹೊಸ ಹುಣ್ಣಿಮೆಯ ಉದಯ.

ನನ್ನ ಪ್ರೀತಿಯ ನೆರಳು
ಆಕ್ರಮಣ ನಡೆಸಿ
ಮೂಡಿದಂಥ ಭ್ರಮೆ
ನಮ್ಮ ಪ್ರೀತಿಯ ಮಹಿಮೆ.
.

Close

ರಾಜ್ಯೋತ್ಸವದ ದಿನದಂದು

ರಾಜ್ಯೋತ್ಸವದ ದಿನದಂದು

ಪಿ ಎಲ್ ಸುಬ್ರಮಣ್ಯಂ

ಇಂತಹ ಉತ್ಸವದ ದಿನ
ರಸ್ತೆಗಿಳಿದಾಗ, ಜನ-
ಮರುಳು ಜನ, ಮುಗ್ಧ ಜನ, ಸಜ್ಜನ, ಬೆರಕೆ ಜನ, ರಸ್ತೆಯೆಲ್ಲಾ
ತುಂಬಿ ತುಳುಕಿ, ಲಕ್ಷ ಲಕ್ಷ ದೀಪವ ಹಚ್ಚಿ, ಕುಣಿದು,
ಹಾಡಿ, ಹಬ್ಬ ಮಾಡಿದಾಗ,
ಬಡತನ, ಬರಡುತನಗಳ ದಿನದ ಕೋಟಲೆಯಲ್ಲಿ
ಸುರುಟಿ, ಮುರುಟಿದ
ಮನಸ್ಸನ್ನು ಹತ್ತಿಕ್ಕಿ, ಇದ್ದ ಕಾಡಲ್ಲೇ
ನಂಬಿ ಅರಳಬೇಕು ; ಆ ಮುಗ್ಧ
ಮಂದಿಯೊಡನೆ ಮೈಲಿಗಟ್ಟಲೆ ಮೆರವಣಿಗೆ ಹೋಗಬೇಕು-
ಇದು
ಅನಿವಾರ್ಯ-ಹೌದು. ಬೆಳಗೆಲ್ಲ ನಿನ್ನ
ನೋಡಿದಾಗ ಏನೂ ಆಗದಿದ್ದರೂ, ನಡುನಿಶೆಯ
ಅರೆನಿದ್ದೆ ಮಬ್ಬಿನಲ್ಲಿ ನಿನ್ನ
ತೊಡೆಯ ಬಿಸಿ ತಾಗಿ ನನ್ನ ತೊಡೆ
ಒಳಗೆ ಜುಳಜುಳಸಿದಾಗ, ಎಷ್ಟೇ ಬೇಡೆನ್ನಿಸಿದರೂ ಲಿಂಗ
ಕೆರಳಿ ಅನಿವಾರ್ಯ ಒತ್ತಡ ಮೈ ಏರುತ್ತದಲ್ಲ. ಹಾಗೆ-
ಇದೂ ಅನಿವಾರ್ಯ.
ನನಗೆ ಗೊತ್ತಿದೆ. ಈ ರಸ್ತೆ, ಈ ಮೆರವಣಿಗೆ ಎಲ್ಲ ನಿನ್ನ
ಮೈಯ ಹಾಗೆ. ಸಿಕ್ಕ
ಕಾವನ್ನೆಲ್ಲ ಹೀರಿ ಒಂದರೆ ಘಳಿಗೆ ಕುದಿಯುವುದು ; ಮತ್ತೆ
ತನ್ನಷ್ಟಕ್ಕೆ ತಾ
ತಣ್ಣಗೇ
ಉಳಿಯುವುದು.
ಮಧ್ಯಾಹ್ನದುರಿಬಿಸಿಲ ಭವ್ಯ ಮೆರವಣಿಗೆ
ಸಂಜೆ ಬೆಳಕಿನಲ್ಲಷ್ಟು ರಾರಾಜಿಸಿ
ರಾತ್ರೆಯಾಗುತ್ತಲೇ ಸುಸ್ತು.
ಭ್ರಮೆಯ ಮತ್ತು
ಇಳಿಯುವ ಹೊತ್ತೇ ಅಮಲಿನುನ್ನತ ಶಿಖರ ಘಳಿಗೆ
ಕೈಕಾಲು ಸೋತು ಸಾವರಿಸಿದರೂ, ಮನದ ಮುಂದೆಲ್ಲ
ನನಸು ಸುಳಿದಾಡಿದರೂ
ಮೆರವಣಿಗೆಯ ಕನಸು ಕಣ್ಣ ಕಟ್ಟುತ್ತದೆ.
ಎರಡೋ, ಐದೋ, ಏಳೋ, ಎಷ್ಟೋ
ವರ್ಷಗಳಿಗೊಮ್ಮೆ ಬಿಗಿಗೊಳ್ಳುವ ಮೂಗುದಾಣ
ಬಿಗಿವಾಗಷ್ಟೇ
ಎಚ್ಚರ. ಅದೂ ಅರ್ಧಮರ್ಧ.

Close

ಭೈರಪ್ಪನವರ ದಾಟು: ಒಂದು ಟಿಪ್ಪಣಿ

ಭೈರಪ್ಪನವರ ದಾಟು : ಒಂದು ಟಿಪ್ಪಣಿ

ಎಂ ಜಿ ಕೃಷ್ಣಮೂರ್ತಿ

೧

ಭೈರಪ್ಪನವರಿಗೆ ಹೆಚ್ಚು ಪರಿಚಿತವಿರುವ “ತಿಪಟೂರು ಚನ್ನರಾಯಪಟ್ಟಣಗಳನ್ನೊಳಗೊಳ್ಳುವ ಭಾಗ”, ಆ ಭಾಗದ ನುಡಿಗಟ್ಟು, ನಡೆನುಡಿಗಳು ನನಗೂ ಬಹಳ ಪರಿಚಿತವಾದವುಗಳು. ಆದ್ದರಿಂದ ಈ ಹಿನ್ನೆಲೆಯನ್ನು ಅವರ ಕಾದಂಬರಿಗಳ ಬಗ್ಗೆ ಬರೆಯುವಾಗ ನನ್ನ ನೆನಪು ಸೃಷ್ಟಿಸುವುದು ಎಷ್ಟು, ಕಾದಂಬರಿ ಸೃಷ್ಟಿಸುವುದು ಎಷ್ಟು ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಎಷ್ಟು ಕಷ್ಟವೋ ಅಷ್ಟೇ ಅವಶ್ಯಕವಾಗುತ್ತದೆ. ಈ ವೈಯಕ್ತಿಕ ಅವಶ್ಯಕತೆಯಿಂದಾಗಿ ದಾಟು ಕಾದಂಬರಿಯ ಆಶಯಕ್ಕೆ ಭೈರಪ್ಪನವರು ಯಾವ ರೀತಿ ದೇಹ ಕೊಡಲು ಪ್ರಯತ್ನಿಸಿದ್ದಾರೆ. ಆ ಪ್ರಯತ್ನದಲ್ಲಿ ಎಷ್ಟು ಜಯಗಳಿಸಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಯತ್ನಿಸುತ್ತೇನೆ. ಆದರೆ ವ್ಯಕ್ತಿಯ ನೆನಪು ನೆನಪೇ ಆಗುಳಿಯದೆ, ಬುದ್ದಿ ಆ ನೆನಪುಗಳಿಗೆ ಅರ್ಥಕೊಡಬಲ್ಲ ಚೌಕಟ್ಟನ್ನೂ ರಚಿಸುವುದರಿಂದ ಕಾದಂಬರಿಯ ಹೊರಗೆ ನಾನು ಕಂಡುಕೊಂಡ ಅರ್ಥವನ್ನು ಕಾದಂಬರಿಯ ಮೇಲೆ ಹೇರದಂತೆ ಕಾದಂಬರಿಗೆ ನಾನು ತೋರಿಸುವ ಪ್ರತಿಕ್ರಿಯೆಗಳಿಗೆ ಅಭಿವ್ಯಕ್ತಿ ಕೊಡಬೇಕಾಗುತ್ತದೆ. ಇದರಿಂದಾಗಿ ವಾಸ್ತವಿಕ ಪಂಥಕ್ಕೆ ಸೇರಿದ್ದು ಎಂದು ಸ್ಥೂಲವಾಗಿ ಹೇಳಬಹುದಾದ ದಾಟು ಚಿತ್ರಿಸುವ ನಿಜಗಳಿಗೂ ಕಾದಂಬರಿಯ ಒಟ್ಟು ಅರ್ಥಕ್ಕೂ ಇರುವ ಸಂಬಂಧಕ್ಕೆ ಸೂಕ್ಷಗಮನ ಕೊಡಬೇಕಾಗುತ್ತದೆ.

ಸನ್ನಿವೇಶ, ಹಿನ್ನೆಲೆ ಮತ್ತು ಘಟನೆಗಳ ಸಹಾಯದಿಂದ ಪಾತ್ರಗಳ ಆಂತರಿಕ ಜಗತ್ತಿಗೆ ಅಭಿವ್ಯಕ್ತಿ ಕೊಡಬಹುದು ಎಂಬ ನಂಬಿಕೆ ವಾಸ್ತವಿಕ ಕಾದಂಬರಿಗಳ ತಂತ್ರಕ್ಕೆ ತಳಹದಿ. ನೈಜ ಚಿತ್ರಣಗಳ ಮೂಲಕ, ಆ ಚಿತ್ರಣಗಳಿಗೆ ಸಂಬಂಧವೇರ್ಪಡಿಸುವ ಮೂಲಕ ವಾಸ್ತವಿಕ ಪಂಥಕ್ಕೆ ಸೇರಿದ ಕಾದಂಬರಿಗಳು ತಮ್ಮ ವಸ್ತುವನ್ನು ಬೆಳಸುತ್ತವೆ. ಅಂದರೆ ಈ ತರಹದ ಕಾದಂಬರಿಗಳು ಜಯ ಗಳಿಸುವುದು ಬಾಹ್ಯ ಮತ್ತು ಆಂತರಿಕ ನಿಜಗಳನ್ನು ಬೇರೆ ಬೇರೆ ಮಾಡದೆ ಒಂದು ಮತ್ತೊಂದಕ್ಕೆ ಅಭಿವ್ಯಕ್ತಿ ಕೊಡುವಂತೆ ಮಾಡಿದಾಗ ಮಾತ್ರ. ಈ ಸಂದರ್ಭದಲ್ಲೇ ಪ್ರಪಂಚದ ಶ್ರೇಷ್ಠ ಕಾದಂಬರಿಗಳೆಲ್ಲ ವಾಸ್ತವಿಕ ಮತ್ತು ಸಾಂಕೇತಿಕ ಧಾಟಿಗಳನ್ನು (modes) ಸೇರಿಸಿ, ಅಂದರೆ ವಾಸ್ತವಿಕ ಚಿತ್ರಣದ ಬೆನ್ನ ಹಿಂದೇ ಅದರ ಸಾಂಕೇತಿಕ ಅರ್ಥ ಹೊಳೆಯುವಂತೆ ಮಾಡಿ, ಜಯಗಳಿಸುತ್ತವೆ ಎಂಬ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿಬಿಡುವುದು ಉತ್ತಮ.
ಬಾಹ್ಯಕ್ಕೂ ಅಂತರಂಗಕ್ಕೂ ಸಂಬಂಧವಿದೆ. ಬಾಹ್ಯದ ಚಿತ್ರಣದ ಮೂಲಕವೇ ಅಂತರಂಗಕ್ಕೆ ಅಭಿವ್ಯಕ್ತಿ ಕೊಡಬೇಕು ಎಂಬ ನಂಬಿಕೆಯೇ ವಾಸ್ತವಿಕ ಕಾದಂಬರಿಗಳಲ್ಲಿ ಭಾವಾತಿರೇಕಕ್ಕೆ ತಡೆ ಹಾಕುತ್ತದೆ. ಆದರೆ ಇದೇ ನಂಬಿಕೆಯೇ ಅನೇಕ ವೇಳೆ ಚಿತ್ರಣಗಳು ವಸ್ತುವಿನ ಬೆಳವಣಿಗೆಗೆ ಸಹಾಯಕವಾಗದೆ ಕೇವಲ ಚಿತ್ರಣಗಳಾಗಿಯೇ ಉಳಿದು, ಕಾದಂಬರಿಯ ಒಟ್ಟರ್ಥವೇ ಅಸ್ಪಷ್ಟವಾಗುವಂತೆ ಮಾಡಬಹುದು. ದಾಟುವನ್ನು ರಿವ್ಯೂ ಮಾಡಿದವರೆಲ್ಲ ಗುರುತಿಸಿರುವ ಶಕ್ತಿ ನಮಗೆಲ್ಲ ಪರಿಚಿತವಿರುವ, ನಮ್ಮ ದೈನಂದಿನ ನಡವಳಿಕೆಗಳಲ್ಲಿ ವ್ಯಕ್ತವಾಗುವ ಸಾಮಾಜಿಕ ನಿಜಗಳನ್ನು ಕಾದಂಬರಿ ಚಿತ್ರಿಸಿರುವುದಕ್ಕೆ ಸಂಬಂಧಿಸಿದ್ದು. ದಾಟು ಸೋತಿರಬಹುದಲ್ಲವೇ ಎಂಬ ಶಂಕೆ ಈ ಚಿತ್ರಣಗಳ ಹಿಂದಿರಬೇಕಾದ ಅರ್ಥಕ್ಕೆ ಸಂಬಂಧಿಸಿದ್ದು.
೨
ಈ ಪೂರ‍್ವಗ್ರಹಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಕಾದಂಬರಿಯ ಕೆಲವು ಮುಖ್ಯ ಘಟನೆಗಳಿಗೂ ಕಾದಂಬರಿಯ ಅರ್ಥಕ್ಕೂ ಇರುವ ಸಂಬಂಧವನ್ನು ವಿಶ್ಲೇಷಿಸಿ ನನ್ನ ಪ್ರತಿಕ್ರಿಯೆಗಳಿಗೆ ಸೂಕ್ತ ಆಧಾರ ಕೊಡಲು ಪ್ರಯತ್ನಿಸುತ್ತೇನೆ. ಕಾದಂಬರಿಯ ಮೂರು ಮುಖ್ಯ ಪಾತ್ರಗಳು ಅವರ ಜೀವನದಲ್ಲಿ ಮುಖ್ಯವಾದ ಸಂದರ್ಭಗಳಲ್ಲಿ ಗುಡಿಯ ದೇವರ ಪ್ರತಿಮೆಗೆ ತೋರಿಸುವ ಪ್ರತಿಕ್ರಿಯೆಗಳು ಕಾದಂಬರಿಯನ್ನು ರಿವ್ಯೂ ಮಾಡಿದವರೆಲ್ಲರ ಗಮನ ಸೆಳೆದಿವೆ. ತಾವು ಹುಟ್ಟಿ ಬೆಳೆದ ಸಮಾಜದ ಸಂಪ್ರದಾಯಗಳನ್ನು ನಂಬಿದ ವೆಂಕಟರಮಣಯ್ಯ ದೇವರಿಗೆ ಮಂಗಳಾರತಿ ಮಾಡುತ್ತಿರುವಾಗ “ಇದು ಬರೀ ಕಲ್ಲು” ಎಂಬ ತೀರ್ಮಾನಕ್ಕೆ ಬರುವುದು ಕಾದಂಬರಿಯ ಬೆಳವಣಿಗೆಗೆ ಬೇಕೇಬೇಕಾಗಿದೆ. ಮಾತಂಗಿಯೊಂದಿಗೆ ಲೈಂಗಿಕ ಸಂಬಂಧ ಬೆಳೆದ ಮೇಲೆ ದೇವರ ಮಂಗಳಾರತಿ ಮಾಡುವಾಗ ದೇವರ ಕಣ್ಣುಕಟ್ಟುಗಳನ್ನು ನೋಡಲು ಹೆದರಿದ್ದರು. ಈ ಹೆದರಿಕೆಗೆ ಕಾರಣ ಸ್ಪಷ್ಟ ; ತಾನು ಪಾಪ ಮಾಡಿದ್ದೇನೆ ಎಂಬ ಹೆದರಿಕೆ ವೆಂಕಟರಮಣಯ್ಯನ ಹೆದರಿಕೆಗೆ ಕಾರಣ. “ಇದು ಬರೀ ಕಲ್ಲು” ಎನ್ನಿಸುವುದು ತಮ್ಮ ಮಗಳನ್ನು ಮದುವೆಯಾಗ ಬಯಸುವ ಶ್ರೀನಿವಾಸ ಮತ್ತು ಅವನ ತಾಯಿ ರಂಗಮ್ಮ ಗುಡಿಗೆ ಬಂದಾಗ, ಹತ್ತು ಹನ್ನೆರಡು ವರ್ಷಗಳ ನಂತರ ದೇವರ ಮುಖವನ್ನು ಮೊದಲ ಬಾರಿಗೆ ನೋಡಿದಾಗ, ಈ ಪ್ರತಿಕ್ರಿಯೆಗೂ ಅವರ ಪಾಪಪ್ರಜ್ಞೆಯೇ ಕಾರಣ ಎಂಬುದೂ ನಿಜ. ಪೂಜೆ ಮಾಡುತ್ತಿರುವಾಗ ರಂಗಮ್ಮನ ಧ್ವನಿಯನ್ನು ಕೇಳಿ :

“ತಿರುಗಿ ನೋಡಿದರೆ ಮೇಲಗಿರಿಯ ಹೆಂಡತಿ ರಂಗಮ್ಮ. ಅವಳ ಮಗ ತಿರುಮಲೇಶ ಗೌಡ. “ನಿಮ್ಮನ್ನು ಈ ಗುಡಿಯ ಒಳಕ್ಕೆ ಸೇರಿಸ ಕೂಡದು’–ಅನ್ನಬೇಕೆನ್ನಿಸಿತು. ಆದರೆ ತಮಗೇ ತಿಳಿಯದಂತೆ ಅವರು ಹಣ್ಣು ಕಾಯಿಗಳನ್ನು ಮಾಡಿಕೊಟ್ಟರು. ಅವರನ್ನು ಮಾತನಾಡಿಸಲಿಲ್ಲ…………ಮಂಗಳಾರತಿ ಮಾಡುವಾಗ ಅವರು ದೇವರ ಮುಖವನ್ನು ನೋಡಿ ಹತ್ತು ಹನ್ನೆರಡು ವರ್ಷದ ಮೇಲೆ ಆಗಿದೆ. ಆದರೆ ಈದಿನ ಅನ್ಯ ಮನಸ್ಕರಾಗಿ ತಲೆ ಎತ್ತಿ ಆ ಕಡೆ ನೋಡಿದರು………ಮುಖದ ಹತ್ತಿರ ಬಂದ ಮಂಗಳಾರತಿ ಹಾಗೆಯೇ ನಿಂತಿತು. ಅವರ ಕಣ್ಣು ದೇವರ ಮುಖದಲ್ಲಿ ನೆಟ್ಟಿತು…… ಅವರ ಧ್ಯಾನವು ದೇವರ ಮುಖದಲ್ಲಿ ನೆಟ್ಟು, ತಾನೂ ಧ್ಯಾನದಿಂದ ಬದ್ದವಾದಂತೆ ಬಲಗೈಯು ಮಂಗಳಾರತಿಯ ಹಲಗೆಯನ್ನು ಚಲಿಸದೆ ಹಿಡಿದುಬಿಟ್ಟಿತ್ತು. ನೋಡು ನೋಡುತ್ತಾ ಅವರು ಕಣ್ಣುಮುಚ್ಚಿದರು. ಒಂದು ಕ್ಷಣ ತಲೆಯಲ್ಲಿ ಏನೋ ಪ್ರಜ್ವಲಿಸಿದಂತೆ. ಆಗ ಆನಂತರ ಸರಿಯಾಯಿತು. ಇದ್ದಕ್ಕಿದ್ದ ಹಾಗೆಯೇ ಮನಸ್ಸಿಗೆ ಎನಿಸಿಬಿಟ್ಟಿತು : “ಇದು ಬರಿ ಕಲ್ಲು-ಬರೀ ಕರಿಯ ಕಲ್ಲು ; ಇದಕ್ಕೆ ಪೂಜೆ ಮಾಡೂದು ವ್ಯರ್ಥ………ಆಗಲೂ ಅವರು ವಿಗ್ರಹದ ಮುಖವನ್ನು ದಿಟ್ಟಿಸುತ್ತಿದ್ದರು.” (ಪುಟಗಳು ೧೯೩-೯೪, ಒತ್ತು ನನ್ನದು). ವೆಂಕಟರಮಣಯ್ಯನದು ಸಾಂಪ್ರದಾಯಿಕ ಪ್ರಜ್ಞೆಯಾದ್ದರಿಂದ, ದೇವಸ್ಥಾನದ ಪೂಜೆ ಅವರ ಮನೆಯ ಹಕ್ಕಾದ್ದರಿಂದ, ಅವರಿಗೆ “ಇದು ಕಲ್ಲು-ಬರೀ ಕರಿಯ ಕಲ್ಲು; ಇದಕ್ಕೆ ಪೂಜೆ ಮಾಡೂದು ವ್ಯರ್ಥ” ಎನ್ನಿಸುವುದು ಬಹಳ ಮುಖ್ಯವಾದ ಬದಲಾವಣೆ. ಈ ಬದಲಾವಣೆಗೂ ನಂತರ ಅವರು ಹವನದ ಸಹಾಯದಿಂದ ಸೃಷ್ಟಿಸಿಕೊಳ್ಳುವ ಭ್ರಾಮಕ ಲೋಕಕ್ಕೂ ಸಂಬಂಧವಿದೆ. ಈ ಕಾರಣದಿಂದಾಗಿ ಅವರಲ್ಲಾವ ಬದಲಾವಣೆಯು ಪೂರ್ಣ ಅರ್ಥವಾದ ಹೊರತು ಕಾದಂಬರಿಯ ಅರ್ಥದ ಒಂದು ಅಂಗವೇ ತಿಳಿಯುವುದಿಲ್ಲ.

ಶ್ರೀನಿವಾಸ ಮತ್ತು ರಂಗಮ್ಮನನ್ನು ಗುಡಿಯಲ್ಲಿ ನೋಡಿದಾಗ ವೆಂಕಟರಮಣಯ್ಯನ ಪ್ರತಿಕ್ರಿಯೆಗಳನ್ನು “ “ನಿಮ್ಮನ್ನು ಈ ಗುಡಿಯ ಒಳಕ್ಕೆ ಸೇರಿಸಬಾರದು’ ಅನ್ನಬೇಕೆನಿಸಿತು. ಆದರೆ ತಮಗೇ ತಿಳಿಯದಂತೆ ಅವರು ಹಣ್ಣು ಕಾಯಿಗಳನ್ನು ಮಾಡಿಕೊಟ್ಟರು” ಎಂಬ ಎರಡು ವಾಕ್ಯಗಳ ಮೂಲಕ ತಿಳಿಸಿಕೊಡಲು ಪ್ರಯತ್ನಿಸುವ ಸಂಯಮ ಮೆಚ್ಚಬೇಕಾದ್ದು. ವೈಯಕ್ತಿಕ ಭಾವನೆಗೂ ಕರ್ತವ್ಯಪ್ರಜ್ಞೆಗೂ ಘರ್ಷಣೆ ಉಂಟಾಗಿ, ಕರ್ತವ್ಯಪ್ರಜ್ಞೆ ಗೆಲ್ಲುತ್ತದೆ ಎಂಬುದನ್ನು ಈ ವಾಕ್ಯಗಳು ತಿಳಿಸಿಕೊಡುತ್ತವೆ. “ಇದು ಕಲ್ಲು” ಎನ್ನಿಸುವುದು ಬಹುಶಃ ತಾವು ದೇವರ ಮುಖ ನೋಡಿದರೂ, ಬ್ರಾಹ್ಮಣ ಹೆಣ್ಣನ್ನು ಮದುವೆಯಾಗ ಬಯಸುವ ಶ್ರೀನಿವಾಸ ಗುಡಿಯಲ್ಲಿ ನಿಂತಿದ್ದರೂ ಏನೂ ಆಗಲಿಲ್ಲ ಎಂಬ ಅರಿವಿನಿಂದಿರಬಹುದು. ಈ ಅರಿವು ಮತ್ತು ದೇವಸ್ಥಾನಕ್ಕೂ ಶ್ರೀನಿವಾಸನ ಮನೆತನಕ್ಕೂ ಇರುವ ಸಂಬಂಧ ಅವರು ದೇವರ ಪೂಜೆ ಮಾಡುವುದನ್ನು ನಿಲ್ಲಿಸುವುದಕ್ಕೆ ಕಾರಣವೆಂದು ಸುಲಭವಾಗಿ ಒಪ್ಪಿಕೊಳ್ಳಬಹುದು. ಆದರೆ ಅವರು ತಮ್ಮದೇ ಲೋಕವೊಂದನ್ನು ಸೃಷ್ಟಿಸಿಕೊಂಡು ಅದರಲ್ಲಿ ಅವರೇ ವಶಿಷ್ಠ, ಮಾತಂಗಿಯೇ ಅರುಂಧತಿ ಎಂದುಕೊಳ್ಳುವುದರ ಅರ್ಥವನ್ನು ಸ್ಪಷ್ಟಪಡಿಸುವ ಕ್ರಿಯೆಯಾಗಲೀ, ಸಂಕೇತಗಳ ಬೆಳವಣಿಗೆಯಾಗಲೀ `ಕಾದಂಬರಿಯಲ್ಲಿದ್ದಂತಿಲ್ಲ. ಅವರಿಗೆ ಹುಚ್ಚು ಹಿಡಿದಿದೆ ಎಂದು ಹೇಳಿ ಸುಲಭವಾಗಿ
ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಏಕೆಂದರೆ ಅವರನ್ನು ಹುಚ್ಚರನ್ನಾಗಿ ಮಾಡುವ ಹೊಣೆಗಾರಿಕೆ ಕಾದಂಬರಿಕಾರರದ್ದಾದ್ದರಿಂದ, ಆ “ಹುಚ್ಚಿ”ನ, ಅವರ ಮನೋಭಾವದ ಅರ್ಥವನ್ನು ಸೂಚಿಸುವ ಹೊಣೆಯೂ ಕಾದಂಬರಿಕಾರರದ್ದೇ ಆಗುತ್ತದೆ. ಸತ್ಯಭಾಮೆ ತನ್ನ ತಂದೆ ಹೇಳುವುದನ್ನೆಲ್ಲ ಹುಚ್ಚನ ಮಾತು ಎಂದು ತಳ್ಳಿಹಾಕುವುದಿಲ್ಲ. ಮಾತಂಗಿಯನ್ನು ಬ್ರಾಹ್ಮಣಿಯನ್ನಾಗಿ ಮಾಡಬೇಕು ಎಂಬ ಅವರ ನಿರ್ಧಾರಕ್ಕೆ ತಕ್ಕ ಹಿನ್ನೆಲೆಯೂ ಕಾದಂಬರಿಯಲ್ಲಿದೆ (ಪುಟಗಳು ೨೪೦-೨೪೨). ಆದರೆ ಸಂಪ್ರದಾಯಸ್ಥವಾದ, ಮಗಳು ಒಕ್ಕಲಿಗ ಹುಡುಗನನ್ನು ಮದುವೆಯಾಗುತ್ತೇನೆ ಎಂದಾಗ ತೀವ್ರ ಕಳವಳಕ್ಕೊಳಗಾದ ಅವರ ಪ್ರಜ್ಞೆ ಸಾವಿರಾರು ವರ್ಷಗಳ ಇತಿಹಾಸವನ್ನು ತಿರಸ್ಕರಿಸಿ ಹಿಂದೆಂದೋ ಇದ್ದಿರಬಹುದಾದ (?) ಸಾಮಾಜಿಕ ಸ್ಥಿತಿಯನ್ನು ಪುನರ್‌ನಿರ್ಮಿಸುವ ಸ್ಥೈರ್ಯ ಪಡೆಯುತ್ತದೆ ಎಂದು ನಂಬುವಂತೆ ಮಾಡುವ ಶಕ್ತಿ ಕಾದಂಬರಿಗಿಲ್ಲ.

ಆದ್ದರಿಂದ ಹಟಾತ್ತನೆ ಒಂದು ಸ್ತರದಿಂದ ಮತ್ತೊಂದು ಸ್ತರಕ್ಕೆ ನೆಗೆದಂತಾಗಿ, ಈ ಬೆಳವಣಿಗೆಯನ್ನು ಒಪ್ಪುವುದು ಬಿಡುವುದು ಓದುಗನ ಆಯ್ಕೆಯಾಗಿ ನಿಲ್ಲುತ್ತದೆ. ಅನಿವಾರ್ಯವಾಗುವುದಿಲ್ಲ, (ಶೇಕ್ಸ್ ಪಿಯರ್ ತನ್ನ ಕಿಂಗ್ ಲಿಯರ್‌ನಲ್ಲಿ ಲಿಯರ್‌ನ ಹುಚ್ಚನ್ನು ನಾಟಕದ ವಸ್ತುವಿನ ಬೆಳವಣಿಗೆಯ ಒಂದು ಹಂತವನ್ನಾಗಿ ಉಪಯೋಗಿಸುವ ಕಲೆಯನ್ನು ಗಮನದಲ್ಲಿಟ್ಟುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ.) ಕಾದಂಬರಿಯ ಕೊನೆಗೆ ಸತ್ಯಭಾಮೆ ತನ್ನ ತಂದೆ ಸಾಧ್ಯ ಎಂದುಕೊಂಡಿದ್ದನ್ನು (ಬ್ರಾಹ್ಮಣರಲ್ಲದವರಿಗೆ ಜನಿವಾರ ಹಾಕಿ, ಗಾಯತ್ರಿ ಉಪದೇಶಿಸಿ ಅವರನ್ನೂ ಬ್ರಾಹ್ಮಣರನ್ನಾಗಿ ಮಾಡಬಹುದು ಎಂಬುದನ್ನು) ತಿರಸ್ಕರಿಸುತ್ತಾಳೆ (ತನ್ನ ಜನಿವಾರ ಕಿತ್ತುಹಾಕಿ) ಎಂಬ ಸೂಚನೆಯಿದೆ. ನಿಜ, ಆದರೆ ಸತ್ಯಭಾಮೆ ದೇವಸ್ಥಾನ ಬಿಟ್ಟು ಹೋದ ಮೇಲೆ ತನ್ನ ಜನಿವಾರ ಕಿತ್ತುಹಾಕುವುದು ಬೆಳವಣಿಗೆಯನ್ನು ಸೂಚಿಸುತ್ತದೆ ಎನ್ನುವುದಾದರೆ. ಅದು ಯಾವ ರೀತಿಯ ಬೆಳವಣಿಗೆ ಎಂಬುದು ಅಸ್ಪಷ್ಟವಾಗಿಯೇ ಉಳಿಯುತ್ತದೆ. ಕಟ್ಟೆಯೊಡೆಯುವುದು ತಮ್ಮ ಸಾವಿನ ಮುಂಚೆ ವೆಂಕಟರಮಣಯ್ಯ ಹೇಳಿದ ಪ್ರಳಯದ ಪ್ರತೀಕವೆನ್ನಬಹುದಾದರೆ, ಎಲ್ಲ ನಾಶವಾಗಿ ಹೊಸ ಜಗತ್ತು ಸೃಷ್ಟಿಯಾಗುತ್ತದೆ ಎಂಬುದು ಕಾದಂಬರಿಯ ಬೆಳವಣಿಗೆಯಾಗುತ್ತದೆ.

ಆದರೆ ದೇವಸ್ಥಾನ ಇಂತಹ ಸಂಕೇತಾರ್ಥವನ್ನು ಹೊರಬಲ್ಲ ಶಕ್ತಿಯುತ ಪ್ರತೀಕವಾಗಿ, ಮಡಿವಂತಿಕೆಯ ಪ್ರತೀಕವಾಗಿ, ಕಾದಂಬರಿಯಲ್ಲಿ ಬೆಳೆದಿಲ್ಲ. (ಉದಾಹರಣೆಗೆ ಗ್ರಾಮಾಯಣದಲ್ಲಿ ಗೌಡರ ಸಾವು, ಮತ್ತು ಹೊಳೆಯ ಪ್ರವಾಹ ಒಂದು ಸಾಮಾಜಿಕ ಸ್ಥಿತಿಯ ವಿನಾಶಕ್ಕೆ ಪ್ರತೀಕವಾಗಿ ಬೆಳೆಯುತ್ತವೆ. ಅಥವಾ ನಮ್ಮ ಸಾಹಿತ್ಯದ ಹೊರಗಿಂದ ಉದಾಹರಿಸಬಹುದಾದಲ್ಲಿ ಡಿ. ಎಚ್. ಲಾರೆನ್ಸ್‌ನ The Virgin and the Gypsy ಯಲ್ಲಿ ಪ್ರವಾಹ, ಮುದುಕಿಯ ಸಾವು ಇಂತಹ ವಿವರಗಳು ಅರ್ಥಪೂರ್ಣ ಸಂಕೇತಗಳಾಗಿ ಬೆಳೆಯುತ್ತವೆ). ದಾಟುವಿನಲ್ಲಿ ನಾಶವಾಗುವುದು ದೇವಸ್ಥಾನ ಮತ್ತು ಮೋಹನದಾಸ. ದೇವಸ್ಥಾನ ಮಡಿವಂತಿಕೆಯ ಸಂಕೇತವಾಗಿ, ಮೋಹನದಾಸ ಈ ರೀತಿಯ
ಮಡಿವಂತಿಕೆಯ ವಿರೋಧ ಶಕ್ತಿಯಾಗಿ ಬೆಳೆದಿದ್ದರೆ ಈ ರೀತಿಯ ಕೊನೆ ಅರ್ಥಪೂರ್ಣವಾಗುತ್ತಿತ್ತು, ಆದರೆ ಹಾಗಾಗಿಲ್ಲ.

ಶ್ರೀನಿವಾಸ ದೇವರ ವಿಗ್ರಹ ನೋಡಿ ಹೆದರುವುದು ಅಷ್ಟು ಸಂಕೀರ್ಣವಾದ ಸಂಗತಿಯಲ್ಲದಿದ್ದರೂ ಓದುಗನಿಗೆ ಕೆಲವು ಸಮಸ್ಯೆಗಳನ್ನೊಡ್ಡುತ್ತದೆ. ತುಂಬ ಇಳಿದು ಹೋದ ವೆಂಕಟರಮಣಯ್ಯ, ತಾನು ಹುಟ್ಟಿ ಬೆಳೆದ ಹಳ್ಳಿಯ ಸನ್ನಿವೇಶ, ಅವನ ಹೆದರಿಕೆಗೆ ಕಾರಣಗಳು, ಆದರೆ ತಂದೆ ತಾಯಿಯರ ಮಾತು ಮೀರಿ ಸತ್ಯಭಾಮೆಯನ್ನು ಮದುವೆಯಾಗಲುಬೇಕಾದ ಧೈರ್ಯ ಶ್ರೀನಿವಾಸನಿಗಿಲ್ಲದ್ದರಿಂದ ಈ ಹೆದರಿಕೆಗೆ ಅವನಿಗೆ ತಿಳಿಯದ “ಈ ಸಂದಿಗ್ಧ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಬೇಕು” ಎಂಬ ಆಸೆ ಕಾರಣವಿರಲಾರದೇ ಎಂಬ ಪ್ರಶ್ನೆಯನ್ನೇ ಕಾದಂಬರಿಕಾರರು ಗಮನಿಸಿದಂತಿಲ್ಲ. ವೆಂಕಟರಮಣಯ್ಯನಿಗೆ ಹುಚ್ಚು ಹಿಡಿದಿದೆ ಎಂದು ತಿಳಿದ ನಂತರ ತಾನೂ ಹುಚ್ಚನಾಗಬೇಕು ಎಂದುಕೊಳ್ಳುವುದು. ಅವನಿಗೂ ಹುಚ್ಚು ಹಿಡಿಯುವುದು, ಮೊದಲಾದುವು ಅನಿವಾರ‍್ಯವಲ್ಲ ಅನ್ನಿಸುವುದಕ್ಕೆ ಕಾರಣ ಅವು ಕೇವಲ ಘಟನೆಗಳಾಗಿಯೇ ಉಳಿಯುವುದು. ಆದ್ದರಿಂದ ಘಟನೆಗಳು ರಂಜಕವಾಗಿದ್ದರೂ ವಸ್ತುವನ್ನು ಬೆಳೆಸುವುದರಲ್ಲಿ ವಹಿಸಬೇಕಾದ
ಪಾತ್ರ ವಹಿಸುವುದಿಲ್ಲ, ಕಾದಂಬರಿಯ ಒಂದು ಭಾಗ ಕೇವಲ ಕತೆಯಾಗಿ, ಮತ್ತೊಂದು ಭಾಗ ಕೇವಲ ಉಪನ್ಯಾಸವಾಗಿ ಉಳಿಯುವ ಸಂಭವ ಹೆಚ್ಚುತ್ತದೆ.

ಮೋಹನದಾಸ ಊರಿನ ಮಡಿವಂತರನ್ನು ವಿರೋಧಿಸಿ, ತನ್ನ ತಂದೆಯ ಮನೋಭಾವವನ್ನು ಬದಲಾಯಿಸಿ ತನ್ನ ಜಾತಿಯವರೊಡನೆ ದೇವಸ್ಥಾನದ ಒಳಕ್ಕೆ ಹೋಗುವುದು ಕಾದಂಬರಿಯ ಮುಖ್ಯ ಘಟನೆ. ತನ್ನ ಜಾತಿಯವರು ದೇವಸ್ಥಾನದೊಳಕ್ಕೆ ಹೋಗಬೇಕಾದ್ದು ಪೂಜೆ ಮಾಡುವುದಕ್ಕಲ್ಲ. ಬೇರೆಯ ಜಾತಿಯವರಿಗಿರುವ ಎಲ್ಲ ಹಕ್ಕುಗಳೂ ತಮಗೂ ಇವೆ ಎಂಬುದನ್ನು ತೋರಿಸಿಕೊಡುವುದಕ್ಕೆ ಎಂಬುದು ಅವನಿಗೆ ಸ್ಪಷ್ಟವಾಗಿ ತಿಳಿದಿದೆ. ನಿಧಾನವಾಗಿ, ಬೇರೆ ಜಾತಿಯವರ ಮನಸ್ಸನ್ನು ತಿದ್ದಿ ತನ್ನ ಜಾತಿಯವರ ಸ್ಥಿತಿಯನ್ನು ಉತ್ತಮಗೊಳಿಸಬೇಕು ಎಂಬ ಅಭಿಪ್ರಾಯವನ್ನು ಅವನು ತಿರಸ್ಕರಿಸುತ್ತಾನೆ. ಶತಮಾನಗಳಿಂದ ಅನ್ಯಾಯಕ್ಕೆ ಒಳಗಾದವರಿಗೆ ಶಾಂತಿ ಮತ್ತು ತಾಳ್ಮೆಯ ಪಾಠ ಹೇಳುವುದು ಮೋಸ ಎಂದು ನಂಬುತ್ತಾನೆ. ಒಂದು ದೃಷ್ಟಿಯಿಂದ, ತನ್ನ ತಂದೆ ಬೆಟ್ಟಯ್ಯ ಮೀಸೆ ಬೆಳೆಸಿದರು ಎಂಬ ಕಾರಣಕ್ಕಾಗಿ ಅವನನ್ನು ಹೊಡೆಸಿದ ಹಿರಿಯ ಗೌಡರ ಮಡಿವಂತಿಕೆಗೆ ವಿರೋಧವಾದ ಸಂಕೇತವಾಗಿ ಬೆಳೆಯಬಲ್ಲ ಪಾತ್ರವಾಗಿದ್ದಾನೆ.

ತನ್ನ ಜನರೊಂದಿಗೆ ದೇವಸ್ಥಾನದೊಳಕ್ಕೆ ಹೋದ ಮೋಹನದಾಸನಿಗೆ ಅನ್ನಿಸುವುದು ಬೇರೆಯ ಜಾತಿಯ ಜನರು ತನ್ನ ಜಾತಿಯವರೊಡನೆ ಬಂದು ದೇವಸ್ಥಾನದಲ್ಲಿ ನಿಲ್ಲುವವರೆಗೂ ತಾವು ಗೆಲ್ಲುವುದಿಲ್ಲ ಎಂದು ತನ್ನವರು ದೇವರ ಮೂರ್ತಿಗೆ ತೋರಿಸುತ್ತಿರುವ ಪ್ರತಿಕ್ರಿಯೆಗಳು ಅವನಲ್ಲಿ ತಿರಸ್ಕಾರ ಭಾವ ಹುಟ್ಟಿಸುತ್ತವೆ:

“ಮೋಹನದಾಸನ ಊರಿನ ಕುಲಬಾಂಧವರೆಲ್ಲ ಕೈಮುಗಿದುಕೊಂಡು, ‘ನನ್ನಪ್ಪಾ, ನನ್ನಪ್ಪಾ’, ಎನ್ನುತ್ತಿದ್ದಾರೆ. ಅದನ್ನು ಕೇಳಿ ಅವನ ಮನಸ್ಸಿನಲ್ಲಿ ಮಾತ್ರ ತಿರಸ್ಕಾರ ಹುಟ್ಟಿತು. ಮಂಗಳಾರತಿ ನಿಂತಲ್ಲೇ ನಿಂತಿತ್ತು, ಕರಿಯ ಮುಖ ಮಿನುಗುತಿತ್ತು. ಬೆಳ್ಳಿಯ ಕಣ್ಣು ಕಟ್ಟುಗಳು ಕಣ್ಣು ಕೋರೈಸುವಂತೆ ಹೊಳೆಯುತ್ತಿದ್ದುವು. ಹಣೆಯ ಮೇಲೆ, ಹೊಳೆಯುವ ನಾಮ. ತಲೆಯ ಮೇಲೆ, ಎದ್ದು ನಿಂತ ನಿಗನಿಗಿಸುವ ಕಿರೀಟ. ಎರಡು ಕಿವಿಗಳಲ್ಲೂ ಥಳಥಳನೆ ನೇತಾಡುವ ಕರ್ಣಕುಂಡಲಗಳು. ಥಳಥಳನೆ ಹೊಳೆಯುವ ಪ್ರಭಾವಳಿಯು ಹಿಂಭಾಗದ ಕತ್ತಲೆಯನ್ನು ತಡೆಯುವ ಅರೆವೃತ್ತಾಕಾರದ ಏರಿಯಂತಿದೆ. ಅದನ್ನು ದಿಟ್ಟಿಸಿ ನೋಡುತ್ತಾ ನಿಂತ ಮೋಹನದಾಸನಿಗೆ ಕಣ್ಣು ಕತ್ತಲೆಯಾಗುವಂತೆ ಎನಿಸಿತು. ತನ್ನ ಇಡೀ ಶರೀರವು ತೂಗುವಂತೆ ಭಾಸವಾಯಿತು. ಅವನು ಕಣ್ಣು ಮುಚ್ಚಿಕೊಂಡ. ತಲೆ ಸುತ್ತಿ ಬಂತು, ಕೂಡಲೇ ಕೂರಬೇಕೆನ್ನುವುದರಲ್ಲಿ ದೊಪ್ಪನೆ ಬಿದ್ದು ಬಿಟ್ಟ.” (ಪುಟಗಳು ೬೨೬-೨೭, ಒತ್ತು ನನ್ನದು) ಮೋಹನದಾಸ ಮೂರ್ಛೆ ಹೋಗುವುದು ಒಂದು ಹೊಸ ಅರಿವಿನಿಂದ ಎಂಬುದನ್ನು ಕಾದಂಬರಿ ತಿಳಿಸಲು ಯತ್ನಿಸುತ್ತಿದೆ ಎಂಬುದು ಸ್ಪಷ್ಟ. ಇಲ್ಲಿಯವರೆಗೂ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಿವೆ ಎಂಬ ಅವನ ನಂಬಿಕೆಯೇ ಅವನ ಕಾರ‍್ಯಶೀಲತೆಗೆ ಕಾರಣವಾಗಿತ್ತು. ಈಗ ಅವನಿಗೆ ಒಂದು ಮುಖ್ಯವಾದ, ಹೊಸದಾದ, ಅಮೂರ್ತವಾದ, ಅರಿವು ಉಂಟಾಗಿದೆ ಎಂಬುದನ್ನು ಕಾದಂಬರಿ ತಿಳಿಸಲು ಯತ್ನಿಸುತ್ತದೆ. ಮೋಹನದಾಸನ ಸುಪ್ತಪ್ರಜ್ಞೆಯಲ್ಲಿ ಅಡಗಿದ್ದ ಹೆದರಿಕೆಗಳು ಅವನು ದೇವಸ್ಥಾನದೊಳಕ್ಕೆ ಹೋದಾಗ ಜಾಗೃತವಾಗಿರಬಹುದು. ಆದರೆ ಅವನಿಗಿಂತಲೂ ಹೆಚ್ಚು ಹೆದರಬೇಕಾದವರು ಮೂರ್ಛೆ ಹೋಗುವುದಿಲ್ಲ. ಅವರ ಅನುಭವ ಅವನ ಅನುಭವದಷ್ಟು ಸಂಕೀರ್ಣವಲ್ಲ ಎಂಬುದು ಇದಕ್ಕೆ ಕಾರಣವಿರಬಹುದು. ಆದರೆ ಈ ವ್ಯತ್ಯಾಸಗಳು ನಮ್ಮ ಗಮನ ಸೆಳೆಯುವುದು ಮೋಹನದಾಸ ಯೋಚನೆ ಮಾಡುತ್ತಿರುವಾಗ ಉಳಿದವರೆಲ್ಲ ಹೊಸ ಅನುಭವವೊಂದಕ್ಕೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ ಎಂಬ ವಿವರ ಮಾತ್ರ. ಇದರಿಂದಾಗಿ ಈ ರೀತಿಯ ಅರ್ಥಗಳನ್ನು ಈ ರೀತಿಯ ಘಟನೆಗಳಲ್ಲಿ ಕಾಣಲು ಹೊರಟಾಗ, ಘಟನೆಗಳ ಮೇಲೆ ಅವುಗಳು ಹೊರಲಾರದ ಅರ್ಥಗಳನ್ನು ಹೇರುತ್ತಿದ್ದೇವೆಯೇ ಎಂಬ ಶಂಕೆ ಉಂಟಾಗುತ್ತದೆ. ಈ ರೀತಿಯ ಶಂಕೆಗಳನ್ನು ಕಾದಂಬರಿಯ ಚೌಕಟ್ಟಿನೊಳಗೇ ಪರಿಹರಿಸಿಕೊಳ್ಳುವುದು ಅಸಾಧ್ಯವಾಗುತ್ತದೆ.

ಶಿವರಾಮ ಕಾರಂತರು ಮುದುಕಿಯರ ಪಾತ್ರಗಳನ್ನು ಮತ್ತು ಅವರ ಸಾರ್ಥಕ ಜೀವನಗಳನ್ನು ತಮ್ಮ ಕಾದಂಬರಿಗಳಲ್ಲಿ ಉಪಯೋಗಿಸಿಕೊಂಡಾಗ ನಾವು ಇಂತಹ ಪ್ರಶ್ನೆಗಳನ್ನು ಎದುರಿಸಬೇಕಾಗುವುದಿಲ್ಲ. ಇದಕ್ಕೆ ಕಾರಣ ಆ ಮುದುಕಿಯರ ನಂಬಿಕೆಗಳು ಬೇರೆಯವರ ಜೀವನಗಳನ್ನು ಅಳೆಯುವ ಅಳತೆಗೋಲುಗಳಾಗುವುದಿಲ್ಲ ಎಂಬುದು. ಕಾರಂತರ ಕಾದಂಬರಿಗಳಲ್ಲಿ ಒತ್ತು ಬೀಳುವುದು ಮಾನವೀಯ ಮೌಲ್ಯಗಳ ಮೇಲೆ, ಧಾರ್ಮಿಕ ಮತ್ತು ಪಾರಮಾರ್ಥಿಕ ಮೌಲ್ಯಗಳ ಮೇಲಲ್ಲ ಎಂಬುದೂ ಒಂದು ಕಾರಣ. ಆದರೆ ಭೈರಪ್ಪನವರು ಮೌಲ್ಯಗಳು ಬದಲಾಗುವುದಕ್ಕೂ ಸಮಾಜದಲ್ಲಿ ಉಂಟಾಗುವ ಬದಲಾವಣೆಗಳಿಗೂ ಸಾಕಷ್ಟು ಗಮನ ಕೊಡುವಂತೆ ಕಾಣುವುದಿಲ್ಲ. ಬದಲಾಗುವ ಸಮಾಜ, ಮೌಲ್ಯಗಳ ಚೌಕಟ್ಟಿನಲ್ಲಿ ಉಂಟಾಗುವ ಗೊಂದಲಗಳು-ಇವುಗಳಿಗೆ ವಿರುದ್ದವಾಗಿ ಸ್ಪಷ್ಟವಾದ (ಅಥವಾ ಸರಳೀಕರಣದಿಂದಾಗಿ ಸ್ಪಷ್ಟವೆನ್ನಿಸುವ) ಪುರಾತನವನ್ನು ಎತ್ತಿ ಹಿಡಿಯುತ್ತಾರೆಯೋ ಎನ್ನಿಸುತ್ತದೆ. ಅಂದರೆ, ಕಾದಂಬರಿಗಳಲ್ಲಿ ತಮ್ಮ ಒಲವುಗಳನ್ನು ಸಾಕಷ್ಟು ಪರೀಕ್ಷೆಗೆ ಒಳಪಡಿಸುವುದಿಲ್ಲ, (ಡಿ. ಎಚ್. ಲಾರೆನ್ಸ್ ಮಾಡುವಂತೆ) ಎನ್ನಿಸುತ್ತದೆ.
೩
ಕಾದಂಬರಿಯ ಅತಿ ಮುಖ್ಯ ಮತ್ತು ಅನ್ವೇಷಕ ಪಾತ್ರವಾಗಿರುವ ಸತ್ಯಭಾಮೆಯ ಬಗೆಗೂ ಕಾದಂಬರಿಕಾರರು ಸಾಕಷ್ಟು ವಿಮರ್ಶಕವಾಗಿಲ್ಲ ಎನ್ನಿಸುತ್ತದೆ. ಆಕೆಯ ಸೋಲಿಗೆ ಅವಳೆಷ್ಟು ಕಾರಣ ಎಂಬ ಪ್ರಶ್ನೆಯನ್ನು ಸೂಕ್ಷ್ಮವಾಗಿ ಅವಳಾಗಲೀ ಕಾದಂಬರಿಕಾರರಾಗಲೀ ಎದುರಿಸಿದಂತಿಲ್ಲ. ಉದಾಹರಣೆಗೆ ಮೀರಾಳ ಸಾವಿಗೆ ಅವಳೂ ಹೊಣೆಗಾರಳಲ್ಲವೇ? ಹಿರಿಯಗೌಡರ ಅಜ್ಞಾನದ ಫಲವಾದ ಅವರ ಮಡಿವಂತಿಕೆಯ ಬಗ್ಗೆ ಕಟು ಟೀಕೆ ಮಾಡುವ ಕಾದಂಬರಿ ‘ಸುಧಾರಕ’ ಸತ್ಯಭಾಮೆಯ ಅಜ್ಞಾನದ ಬಗ್ಗೆ ಯಾಕೆ ಕಟು ಟೀಕೆ ಮಾಡುವುದಿಲ್ಲ ? ಸತ್ಯಭಾಮೆಯ ಅಜ್ಞಾನ ಯಾವ ತರಹದ್ದು ಎಂಬುದನ್ನು ಮೀರಾ ಮತ್ತು ಸತ್ಯಭಾಮೆಯರ ನಡುವೆ ನಡೆಯುವ ಒಂದು ಸಂಭಾಷಣೆ ತಿಳಿಸುತ್ತದೆ:
“ಮೀರಾ ಬಾಗಿ ಸತ್ಯಳ ಕಾಲು ಮುಟ್ಟಿ ನಮಸ್ಕಾರ ಮಾಡಿ, ‘ಹೋಗಿ ಬರ್ತಿನಿ’ ಎಂದಳು.”

“ನಮಸ್ಕಾರ ಯಾಕೆ ಮಾಡ್ಡೆ ?’

“ನಾನು ಮಾದಿಗಿತ್ತಿಯಲ್ಲ ಅಂತ ಒಪ್ಪಿ ಜನಿವಾರ ಹಾಕಿದಿರಲ್ಲ.’

‘ಯಾರೂ ಮಾದಿಗಿತ್ತಿಯರಲ್ಲ.’

“ನಿಮಗೆ ತಿಳಿಯೂಲ್ಲ, ನೀವು ಬರೀ ವೇದಾಂತದ ಮಾತು ಹೇಳ್ತೀರಿ.’

ಎನ್ನುವಾಗ ಅವಳ ಕಣ್ಣಿನಲ್ಲಿ ನೀರು ತುಂಬಿಕೊಂಡಿತು.” (ಪುಟ ೫೯೪). “ನಿಮಗೆ ತಿಳಿಯೂಲ್ಲ, ನೀವು ಬರೀ ವೇದಾಂತದ ಮಾತು ಹೇಳ್ತೀರಿ” ಎಂಬ ಮಾತಿನಲ್ಲಿರುವ ನಿಜಕ್ಕೆ ಕಾದಂಬರಿ ಸಾಕಷ್ಟು ಗಮನಕೊಡುವುದಿಲ್ಲ. ಯಾವ ಧೋರಣೆಯನ್ನೂ ವ್ಯಕ್ತಪಡಿಸುವುದಿಲ್ಲ. ತಾನು ಶ್ರೀನಿವಾಸನಿಗೆ ಮೀರಾಳನ್ನು ಮದುವೆಯಾಗು ಎಂದು ಹೇಳುವುದಕ್ಕೆ ತನ್ನ ಸುಪ್ತ ಪ್ರತೀಕಾರ ಮನೋಭಾವ ಎಷ್ಟರ ಮಟ್ಟಿಗೆ ಕಾರಣ, ತನ್ನ ಸುಧಾರಕ ಮನೋಭಾವ ಎಷ್ಟರ ಮಟ್ಟಿಗೆ ಕಾರಣ, ಎಂಬುದರ ಅರಿವೇ ಅವಳಿಗೆ ಇರುವಂತಿಲ್ಲ. ಅವಳ ಅಣ್ಣ ತನ್ನ ಮಾತಿನಿಂದ ಈ ಸಾಧ್ಯತೆಯತ್ತ ಗಮನ ಸೆಳೆದಾಗಲೂ ಸೂಕ್ಷ್ಮ ಪ್ರಜ್ಞೆಯುಳ್ಳ ಪಾತ್ರ ಒಳಗಾಗುವ ತಳಮಳಕ್ಕೆ ಸತ್ಯಭಾಮೆ ಒಳಗಾಗುವುದಿಲ್ಲ.

ಕಾದಂಬರಿಯ ಕೆಲವು ವಿವರಗಳು ಸೂಚಿಸುವ ಅರ್ಥಕ್ಕೂ ಕಾದಂಬರಿಯ ಒಟ್ಟು ಧೋರಣೆಗೂ ಸಂಬಂಧವಿಲ್ಲದ್ದಕ್ಕೆ ಡಿ. ಎಚ್. ಲಾರೆನ್ಸ್ ನ “Never trust the arist, trust the tale” ಎಂಬ ಮಾತಿನ ಸಹಾಯದಿಂದ ಉತ್ತರ ಕೊಡಲಾಗುವುದಿಲ್ಲ. ಏಕೆಂದರೆ ಕಾದಂಬರಿಯನ್ನು ರೂಪಿಸುವ ತಮ್ಮ ಮೌಲ್ಯಗಳ ಬಗ್ಗೆ ಲೇಖಕರು ನಿರ್ಲಿಪ್ತರಾಗಿಲ್ಲ. ಅನುಭವಕ್ಕೂ ಮೌಲ್ಯಗಳಿಗೂ ಅರ್ಥಪೂರ್ಣ ಸಣೆಸಾಟ ಬೆಳೆಯುವುದಿಲ್ಲ. ಆದ್ದರಿಂದ ಪ್ರಜ್ಞೆ ತನ್ನ ಅಭಿವ್ಯಕ್ತಿಗೆಬೇಕಾದ ತಂತ್ರಗಳನ್ನು ಸೃಷ್ಟಿಸಿಕೊಳ್ಳುತ್ತದೆ ಎನ್ನಬಹುದಾದರೆ ಕಾದಂಬರಿಯ ಸೋಲು ಕೇವಲ ತಾಂತ್ರಿಕವಲ್ಲ ಎನ್ನಲೇಬೇಕಾಗುತ್ತದೆ.

Close

ಏರ್ ಹೋಸ್ಟೆಸ್

ಏರ್ ಹೋಸ್ಟೆಸ್‌

ಎಂ ಎನ್ ವ್ಯಾಸರಾವ್

ಮೀನ ನಿನ್ನ ವಿನಹ ಯಾರನ್ನೂ ನೋಡುವುದಿಲ್ಲವೆಂದು
ಶಪಥ ಮಾಡಿ ಹೊರಟಾಗ ನನಗೇ ನಗು ಬಂದಿತ್ತು
ಏಕೆ ಗೊತ್ತಾ ಎಂಥ ಹಸಿ ಸುಳ್ಳು ಹೇಳಿದ್ದೆ.
ನಂಗೂ ನಿಂಗೂ ಇಬ್ಬರಿಗೂ ಗೊತ್ತು ಹಾಗಾಗುವುದಿಲ್ಲವೆಂದು
ಆದರೂ ಸಂಪ್ರದಾಯ
ನಾನು ಮನೆ ಬಿಟ್ಟು ಏರ್‌ಪೋರ್ಟ್‌ ತಲುಪುವಾಗಲೇ
ಶಪಥ ಅ ಆ ಇಂದ ಕ್ಷ ವರೆಗೂ ಮುರಿದಿದ್ದೆ
ಮೆತ್ತಗಿನ ಸ್ಟಾನಿಷ್ ಆರಾಮಿಗೆ ಒರಗಿದಾಗಲೇ
ಕಣ್ಣು ತುಂಬುವ ಮತ್ತು
ಸೈಡ್‌ ಷಟರ‍್ಸಿಂದ ನುಗ್ಗಿ ಬರುವ ಇಂಡಿಯನ್
ಗಾಳಿಯಲ್ಲಿ ನಿನ್ನ ನೆನಪು ಅಷ್ಟಿಷ್ಟೇ–
ಜಾಮೂನು ಪಾಯಸ ಹಲ್ವದ ಮೂಲಕ
ಮಂಜು ಮುದ್ದೆಯ ಅಪ್ಪರೆಯ
ಮುದ್ದು ಮುಖದ ಗುಲ್‌ಮೊಹರ್‌ ನಗೆ ತುಂಬಿದ
ಹಲೋ ಜೊತೆಯಲ್ಲೇ ನಿನ್ನೆಲ್ಲವನ್ನೂ
ಭೂಗರ್ಭದಲ್ಲೇ ಬಿಟ್ಟು ಟೇಕಾಫ್ ಆದಾಗ
ಸುತ್ತ ಮೋಡಗಳ ನಡುವೆ ಬಾನಲ್ಲಿ ನಾನೆಷ್ಟು ಹಗುರ-
ಅಂತೀಯ
ಕ್ಷಣ ಕ್ಷಣಕ್ಕೂ ತೂರುವ ತೇಲು ಮೋಡದ ಡಿಕ್ಕಿಗೆ
ಮಣ್ಣಿಲ್ಲದೆ ಹೋಸ್ಟೆಸ್ ಮುಡಿಯೊಳಗೆ ಅರಳಿದ ಗುಲಾಬಿಗೆ
ಹೇಗೆ ಕರಗಿದೇ ಅಂತೀಯ
ಮುಂದೆ ಪ್ಯಾರಿಸ್ ಮುಟ್ಟುವ ತನಕ
ಅವಳ ಪಾರದರ್ಶಕ ನಗೆ ಅಯಸ್ಕಾಂತ ನಿಲುವು
ಮೈಯೊಂದೇ ನನಗೆ ಆಧಾರ
ಎಷ್ಟು ಭಾರಿ ನಿನ್ನ ನೆನಪು ಬೆದಕಿದೆ ಗೊತ್ತಾ?
ಸಹ ಪ್ರಯಾಣಿಕರ ಮೂಲಕ ; ಮೋಡಗಳ ಮೂಲಕ
ಕಾಲೇಜು ದಿನಗಳ ಆಳದಿಂದ ಹೋಸ್ಟೆಸ್ ಸ್ಪರ್ಶದಿಂದ
ಅದೂ ಇದೂ ಹಿಂದಿನ ರಾತ್ರಿ
ಚಂದ್ರ ಮಂಚ ಇತ್ಯಾದಿಗಳ ತಳಗಿಂದ
ತುಟಿಯಿಂದ ಎಬ್ಬಿ ತೊಡೆಯಿಂದ ಅರಿಯಲು ಪ್ರಯತ್ನಿಸಿದೆ
ಆದರೆ ಎಲ್ಲೂ ಮರೆತಿದ್ದೆ.
ಪ್ಯಾರಿಸ್ಸಿನಲ್ಲಿ ಇಳಿಯುವಾಗ ಬೆಲ್ಸ್ ಟೈಟ್
ಮಾಡಿಕೊಂಡು ಭೂಮಿಯ ಜೊತೆಗೆ ಭಾರವಾಗಿ
ಒಂದಾದಾಗ
ನನ್ನೊಗೆದ ವಿಮಾನ ದೂರವಾಗಿ ಮೋಡದೊಳಗೆ
ಚಿಕ್ಕಿಯಾಗಿ ಮರೆಯಾದಾಗ
ನೆಲದ ಗಾಳಿಯಪ್ಪುವಿಕೆಯಲ್ಲಿ ನಿನ್ನ ನೆನಪು
ಸೂರ್ಯವಾಗಿತ್ತು ಕಣೆ
ಅದುವರೆಗೂ ಹೋಸ್ಟೆಸ್‌ನಲ್ಲಿ ನಿನ್ನ
ಮರೆಸುವಂಥದೇನಿತ್ತೆ ?

Close

ಮರಕುಟಿಗ-ವಿಮರ್ಶೆ

ಮರಕುಟಿಗ-ವಿಮರ್ಶೆ

ರಾಮಚಂದ್ರದೇವ

ಬರಗೂರು ರಾಮಚಂದ್ರಪ್ಪನವರ ಈ ಪದ್ಯಪುಸ್ತಕದಲ್ಲಿರುವ ‘ಮಹಾತ್ಮರು’ ಮತ್ತು “ಉದ್ದಾರಕ” ಎಂಬ ಎರಡು ಬರೆವಣಿಗೆಗಳನ್ನು ಕವನಗಳೆಂದು ಕರೆಯಬಹುದು. ‘ಮಹಾತ್ಮರು’ ಕವನದ ಸಾಲುಗಳು ಇವು:

ಇದ್ದಾಗ ಕಣ್ಣಿಗೆ ಕ್ಷಣಮಾತ್ರವೂ ಬೀಳದೆ ಸತ್ತಾಗ
ಸರ್ಕಲ್ಲು ಪಾರ್ಕುಗಳ ಮಧ್ಯೆ ಎದ್ದು ನಿಲ್ಲುವವರು
ಕಂಡಕಂಡವರ ಕೈಯ ಚಲಾವಣೆಗೆ ಸಿಕ್ಕಿ
ನಾಣ್ಯವಾಗುವವರು.
ಅಂಚೆಯಲ್ಲಿ ಸಂಚರಿಸುತ್ತ ಊರೂರಲ್ಲಿ ಸದೆ ಬಡಿಸಿಕೊಳ್ಳುವ
ತಾಳ್ಮೆ ತಳೆದವರು.

ಈ ಪದ್ಯದ ಮತ್ತು “ಉದ್ಧಾರಕ’ದ ಉದ್ದೇಶ ಸಾಮಾಜಿಕ ವ್ಯಕ್ತಿಗಳನ್ನು ವಿಡಂಬಿಸುವುದು. ಈ ಪದ್ಯಗಳ ಬರವಣಿಗೆಯ ರೀತಿಯಲ್ಲಿ ವ್ಯಕ್ತವಾಗುವ ಗುಣ ಇದು: ಸಾಮಾಜಿಕ ವ್ಯಕ್ತಿಯ ಪೊಳ್ಳುತನವನ್ನು ಮತ್ತು ವಿಜೃಂಭಣೆಯನ್ನು ಅವು ನಮಗೆ ಚಿತ್ರಿಸಿ ಕೂಡುತ್ತವೆ. ನಮಗೆ ಕಲ್ಪಿಸಿಕೊಳ್ಳುವುದಕ್ಕೆ ಬೇಕಾದ ಚಿತ್ರಸಾಮಾಗ್ರಿಗಳನ್ನು ಬರೆ ವರು ಪದ್ಯದಲ್ಲೇ ಒದಗಿಸುತ್ತಾರೆ. ನಾನು ಎಂಬುದು, ಇಲ್ಲಿ ಹೇಳಿಕೆಗಳಿಲ್ಲ, ಚಿತ್ರಣವುಂಟು ಎಂತ. ಮತ್ತೆ ಇವನ್ನು ಕವನ ಎಂಬುದು ಅದಕ್ಕೆ : ಹೇಳಿಕೆ ಕೊಡದೆ, ಹೀಗೆ ಹೀಗೆ ಆಯ್ತು ಅಥವಾ ಹೀಗೆ ಹೀಗೆ ಮಾಡ್ತಾರೆ ಎಂದು ವಿವರಿಸುತ್ತಾರೆ. ಅನುಭವವನ್ನು ನಮ್ಮ ಕಣ್ಣುಗಳಿಗೆ ತೋರಿಸುವ ಪ್ರಯತ್ನ ಇಲ್ಲಿ ಉಂಟು.

ಈ ಪದ್ಯಗಳ ಜೊತೆಗೆ ಪುಸ್ತಕದ ಯಾವ ಪದ್ಯ ಇಟ್ಟು ನೋಡಿದರೂ ಬರಗೂರು ರಾಮಚಂದ್ರಪ್ಪನವರ ಸೃಷ್ಟಿಕ್ರಿಯೆಯ ಸಾಮಾನ್ಯ ಮಾರ್ಗ ಗೊತ್ತಾಗುತ್ತದೆ. ಮತ್ತೆ ಅವೆಲ್ಲಾ ಯಾಕೆ ಪದ್ಯ ಅಲ್ಲ ಎಂಬೋದೂ ತಿಳಿದೀತು, ಮರಕುಟಿಗ ಎಂದೆಂಬ ಪದ್ಯ ಈ ಸಾಲು ನೋಡಿ:

ಮೈ ನೆರೆದ ಮರದಲ್ಲಿ ಮೋಹಕುಟಿಗ
ಕಿತ್ತು ತಿನ್ನುವ ಕತ್ತು ಬಳಸುವ ಹತ್ತಾರು ಸಲಗ
ಹಂಟರನು ಹಿಡಿದಾಗ ಹಲಗೆ ಬಡಿತ
ಕಾಲ ಕುಣಿಸುವ ಕುದುರೆ ಕೆನೆತ
ಹಂಟರಿನ ಮೈಯಲ್ಲಿ ಸಂಗೀತ ಸ್ವೀಚ್ಚೊತ್ತಿ
ಮೆಲ್ಲಗೆ ಮತ್ತೇರಿದ ಹೆಡೆಯ ನಾಗ.

ಅಥವಾ ‘ತಳಮಳ’ ಎಂಬೊಂದು ಪದ್ಯದಲ್ಲಿ ರಾಮಚಂದ್ರಪ್ಪನವರು ಹೀಗೆ ಅನುಭವವನ್ನು ತಿಳಿಸುವವರು:

ನೂರೆಂಟು ತಾಪತ್ರಯಗಳ ತಂಗಳು ವಾಸನೆ
ವಾಕರಿಕೆ ವಾಂತಿ
ಹಸಿರ ಹೊಂಗೆಯಲ್ಲಿ ಕೆನ್ನಾಲಿಗೆ ಕತ್ತಿ

ಚಿತ್ತದಲ್ಲಿ ಚಿತ್ತವಿಟ್ಟು ಬರೆಯುತ್ತ ಬಂದ ಬಾಳಬುಕ್ಕಿನಲ್ಲಿ
ಹೊತ್ತೇರುವ ಹೊತ್ತಿಗೇ ಅಲ್ಲಲ್ಲಿ ಚಿತ್ತು ;
ಪುಸ್ತಕದ ಪಿನ್ನು ಕಳಚಿ ಹಾಳೆಗಳು ಚೂರು ಚೂರು.

“ಮರಕುಟಿಗ’ ದಾದ ಉದ್ದರಿಸಿದ್ದಕ್ಕೆ `ಕುಣಿಯುವುದು ಆಗಾಗ’ ಎಂದು ಕೊನೆಯಲ್ಲಿ ಸೇರಿಸಿ; ಎರಡನೆಯ ಉದ್ಧರಣದ ಕೊನೆಯಲ್ಲಿ ‘ವೃತ್ತದ ಸುತ್ತ ವ್ಯರ್ಥ ಸಂಚಾರ ಎಪ್ಪತ್ತಾರು’ ಎಂದು ಸೇರಿಸಿ : ಅಥವಾ ಈ ಉದ್ಧರಣಗಳಲ್ಲಿ ಕೊನೆಗೆ, ಮೊದಲಿಗೆ ‘ರಸದ ಬೀಡು’ ಪದ್ಯದ ‘ಉರಿನಾಲಗೆಯಲ್ಲಿ ಚಿಮ್ಮಬಾರದೆ ನವಸೃಷ್ಟಿ ?/ ನಮ್ಮ ಮಣ್ಣೆ ಅರಳಿಸಿದ ಪುಷ್ಪವೃಷ್ಟಿ ?” ಸೇರಿಸಿ;- ವಸ್ತುವಿನಲ್ಲಿ, ಲಯದಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ; ಅಂದರೆ ಕ. ಪದ್ಯಗಳು ಗಟ್ಟಿಗೊಂಡು ತಮ್ಮ ಪಟ್ಟ ಸ್ಥಾಪಿಸುವುದಿಲ್ಲ. ಯಾರು ಬೇಕಾದರೂ ನುಗ್ಗಿ ಗೊತ್ತಾಗದ ರೀತಿಯಲ್ಲಿ ಯಾವ ವ್ಯತ್ಯಾಸವನ್ನೂ ಮಾಡಬಹುದಾದ ಮುರಿದು ಬೀಳಹೊರಟ ಜೋಪಡಿಗಳಂತೆ ಈ ಪದ್ಯಗಳಿವೆ.

‘ಉದ್ಧಾರಕ’ ಮತ್ತು ‘ಮಹಾತ್ಮರು’ ಪದ್ಯಗಳ ಜೊತೆಗೆ ಹೋಲಿಸಿದರೆ ಈ ಉದ್ಧರಣಗಳು ಕೆಲವು ತಾತ್ವಿಕ ಹೇಳಿಕೆಗಳನ್ನು ಮಾಡುವುವು ಎನ್ನುವುದು ತಿಳಿಯುತ್ತದೆ. ಆದರೆ ಈ ತಾತ್ವಿಕ ಹೇಳಿಕೆಗಳಿಗೆ ಬೆನ್ನುಕೊಡುವ ವಿವರಣೆಗಳು ಪದ್ಯದಲ್ಲಿ ಇಲ್ಲ. ಇವರಿಗೆ ವಾಸ್ತವವನ್ನು ಬೆರಳು ಕಚ್ಚಿ ಹಿಡಿದುಕೊಳ್ಳಲಿಕ್ಕೆ ಬರುವುದಿಲ್ಲ ಎನ್ನುವುದಕ್ಕೆ ಒಂದು ಉದಾಹರಣೆ:

ಹಂಟರಿನ ಮೈಯಲ್ಲಿ ಸಂಗೀತ ಸ್ವಿಚ್ಚೊತ್ತಿ

“ಇದನ್ನು ಸಾಂಕೇತಿಕವಾಗಿ ತೆಗೆದುಕೊಳ್ಳಬೇಕೆಂದು ಹೇಳಬಹುದು. ಆದರೆ ಸಂಕೇತಗಳು ವಾಸ್ತವ ಮಟ್ಟದಲ್ಲಿ ನಮ್ಮನ್ನು ಒಳ್ಳೆಯ ಪದ್ಯದಲ್ಲಿ ತೃಪ್ತಿಗೊಳಿಸುತ್ತವೆ ಎಂಬುದನ್ನು `ಒಳ್ಳೆಯ ಪದ್ಯಗಳನ್ನು ಅಭ್ಯಾಸ ಮಾಡಿದಾಗ ತಿಳಿಯುತ್ತದೆ. ವಾಸ್ತವ ಮಟ್ಟದಲ್ಲಿ ಕಲ್ಪಿಸಿಕೊಳ್ಳಲಾಗದ ಇದನ್ನು ಸಾಂಕೇತಿಕ ಅರ್ಥದಲ್ಲಿಯೂ ತೆಗೆದುಕೊಳ್ಳುವುದೂ ನಮಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಒಂದೋ ಹೇಳಿಕೆಗಳು ಇಲ್ಲ ಅಸ್ಪಷ್ಟ. ಪ್ರತಿಮೆಗಳು ಪದ್ಯದಲ್ಲಿ ತುಂಬಿಕೊಳ್ಳುತ್ತವೆ. ಒಂದು ಸೂಚನೆ: ಮಾನವನ ಜೀವನದ ಉದ್ದೇಶವೇನು ಎಂಬುದನ್ನು ಸದ್ಯಕ್ಕೆ ರಾಮಚಂದ್ರಪ್ಪನವರು ಬಿಟ್ಟುಕೊಟ್ಟು ಬರಿಯ ದೃಶ್ಯ ಚಿತ್ರಗಳನ್ನಷ್ಟೇ ಬರೆಯುವುದು ಒಂದು ಒಳ್ಳೆಯ ಅಭ್ಯಾಸವಾದೀತು.

ದೊಡ್ಡ ತತ್ವಜ್ಞಾನಿಯ ಯೋಚನೆಯ ಕೊನೆಯ ಹಂತಗಳೇನೋ ಎಂಬಂತೆ ರಾಮ ಚಂದ್ರಪ್ಪನವರು ಈ ರೀತಿಯ-ಏನಿದು ಭಗ್ಗೆಂದು ಕೇಕೆ? | ಬೆಚ್ಚಿ ನೋಡಿದರೆ ಇಲ್ಲಿ ಕೈ ಕೈ ಹಿಡಿದು ಕುಣಿಯುವ / ಕತ್ತಲಕುಲವೃತ್ತ’ ಅಥವಾ ‘ಖುಷಿ ಘಾಸಿಯಾಗಿ ಹಲ್ಲಿರಿವ ಹಗ್ಗದ ಅಣಕು / ಪ್ರಶ್ನೆ ಬದುಕು’ ಇತ್ಯಾದಿ- ಹೇಳಿಕೆಗಳನ್ನೇಕೆ ಮಾಡುತ್ತಿರಬಹುದು? ಬಹುಶಃ ಜೀವನದ ಬಗ್ಗೆ ಗಂಭೀರವಾದ ಕಾಳಜಿ ಕವಿಗೆ ಇರಬೇಕು ಎಂದು ನಮ್ಮ ವಿಮರ್ಶಕರು ಹೇಳಿದ್ದಾರೆ; ರಾಮಚಂದ್ರಪ್ಪನವರ ಮನಸ್ಸಿನಲ್ಲಿ ಬರೆಯುವ ಹೊತ್ತಿಗೆ ಕವಿಯೆಂದರೆ ಈ ಕಾಳಜಿಗಳಿರುವವನು ಎಂಬುದು ಮಾತ್ರ ಉಳಿದುಕೊಂಡು ಅದಕ್ಕನುಗುಣವಾಗಿ ಬರೆಯುತ್ತಿರಬಹುದು. ಆದರೆ ಕವಿಗೆ ತತ್ತ್ವಗಳಲ್ಲಿ ಆಸಕ್ತಿ ಇರುವುದಕ್ಕಿಂತಲೂ ಮೊದಲು ಈ ನಮ್ಮ ಸಮಾಜದಲ್ಲಿ ಆಸಕ್ತಿ ಇರಬೇಕಾಗುತ್ತದೆ. ಸಮಾಜದಲ್ಲಿ ಆಸಕ್ತಿ ಇದ್ದರೆ, ಬರೆದದ್ದು ಇಲ್ಲಿಗೆ relevent ಆಗಬೇಕು ಎಂದಿದ್ದರೆ ಶ್ರೇಷ್ಠವಾಗಿರಲಿ ಬಿಡಲಿ, relevent ಆಗಬೇಕೆಂದಿದ್ದರೆ ಈ ಸಮಾಜದ ವಿವರಗಳಲ್ಲಿ ಪದ್ಯ ಬರೆಯುವುದು ಅನಿವಾರ‍್ಯವಾಗುವುದು. ಇವು ಬರಗೂರು ರಾಮಚಂದ್ರಪ್ಪನವರ ಪದ್ಯಗಳ ಮಟ್ಟಿಗೆ ಹೇಗೋ ಹಾಗೇ ಸಾಕ್ಷಿ, ಪ್ರಜಾವಾಣಿ, ಸಂಕ್ರಮಣ ಪತ್ರಿಕೆಗಳಲ್ಲಿ ಬರುವ ಬಹಳಷ್ಟು ಪದ್ಯಕಾರರ ಪದ್ಯಗಳಿಗೂ ಅನ್ವಯಿಸುತ್ತದೆ. (ಉದಾಹರಣೆಗೆ “ಬಿಳಿಯ ನೆರಳು’ ‘ನಾನೊಂದು ಲೋಳೆ’ ಇತ್ಯಾದಿ ಗೆರೆಗಳನ್ನು-ಪದ್ಯದ ಮೊದಲಲ್ಲೇ-ಕಾಣಬಹುದು.) ಇವು ಒಂದೋ ಗಂಭೀರ ಕಾಳಜಿಯ ಹೆಸರಿನಲ್ಲಿ ಮಾಡುವ ಸುಳ್ಳು ಹೇಳಿಕೆಗಳು. ಇಲ್ಲ ಅಫೀಷಿಯಲ್ ಸಂಕೇತಗಳ-ಹಾವು, ಬೆಕ್ಕು, ಹುಲಿ ಕಾಮಕ್ಕೆ ಸಂಕೇತ, ಆಗಂತುಕನೊಬ್ಬನ ಆಗಮನ ಸಾವಿಗೆ ಸಂಕೇತ ಇತ್ಯಾದಿ ಈಗಾಗಲೇ ಮುದ್ರೆ ಪಡೆದ -ಪದ್ಯಗಳು. ಲಕ್ಷಣಗ್ರಂಥಗಳಲ್ಲಿ ಬರುವ ಲಕ್ಷ ಪದ್ಯಗಳ ಹಾಗೆ ಇವು ಇರುತ್ತವೆ. ಬರಗೂರು ರಾಮಚಂದ್ರಪ್ಪನವರ ಅನೇಕ ಪದ್ಯಗಳೂ ಹೀಗೇ. ಸಿಪಿಕೆ ಮೊದಲಾದವರು ಬೇಂದ್ರೆ ಮೊದಲಾದವರ ಶ್ರೇಷ್ಠ ಪದ್ಯಗಳನ್ನು ಓದಿ ಕಾವ್ಯ ಎಂದರೆ ಹೂವು ಸುಂದರವಾಗಿದೆ. ಗಾಳಿ ಮಂದಾನಿಲವಾಗಿ ಬೀಸುತ್ತಿದೆ ಎಂದಷ್ಟೇ ತಿಳಿದುಕೊಂಡು ಬರೆದಂತೆ ನವ್ಯಕಾವ್ಯದಿಂದ ಗಂಭೀರ ಕಾಳಜಿ, ಅನಾಥ ಪ್ರಜ್ಞೆ, ಪಾಪಪ್ರಜ್ಞೆ ಇತ್ಯಾದಿ ತಿಳಿದುಕೊಂಡು ಬರೆದಂತಿವೆ ಈ ಪದ್ಯಗಳು. ಆದರೆ ಸಿಪಿಕೆಯಂಥ ಪಂಡಿತರು ‘ಮಲಗಿದ್ದವನ ಮೆಯ್ಯ ಮೇಲೆತ್ತಿ ಬಿಟ್ಟಂತೆ’ ಸ್ಟಾನ್‌ಜಾದ ಮಾತ್ರೆ, ಗಣಗಳ ತಪ್ಪನ್ನು ಮಾಡುವುದಿಲ್ಲ. ಆದರೆ ಒಳ್ಳೆ ಪದ್ಯ ಮಾತ್ರೆ, ಗಣ, ಸಂಕೇತ, ತಾತ್ವಿಕ ಹೇಳಿಕೆ ಅಲ್ಲ ; ಅದು ಭಾಷೆಯಲ್ಲಿ ಮೂಡಿ ಓದುಗನಿಗೆ ಇಂದ್ರಿಯಗಳಲ್ಲಿ ಭಾವಿಸಲು ಕೊಡುವ ಒಂದು ಘಟಕ. ರಾಮಚಂದ್ರಪ್ಪನವರಿಗೆ ಒಳ್ಳೆಯ ಕಾವ್ಯದ ಹಿಂದಿರುವ ಈ ಗುಟ್ಟು ಗೊತ್ತಿಲ್ಲವೆನ್ನುವುದಕ್ಕೆ ಅವರ ಪದ್ಯಗಳು ಸಾಕ್ಷಿಯಾಗುವುವು.

Close

ಅಂತ್ಯ-ವಿಮರ್ಶೆ

ಅಂತ್ಯ-ವಿಮರ್ಶೆ

‘ಅಂತ್ಯ’ ನಮಗೆ ಅದರ ಅನುಭವವನ್ನು ಮುಟ್ಟಿಸುತ್ತದೆ: ಯಾಕೆ ಹೇಳಿದರೆ, ‘ಇಲ್ಲಿ ಹೇಳಿಕೆಗಳನ್ನು ಮಾಡುವ ಪ್ರಯತ್ನ ಇಲ್ಲ: ವಿವರಣೆ, ಘಟನೆ, ಪಾತ್ರಗಳ ಮೂಲಕವೇ ಓದುಗನಿಗೆ ಅನುಭವ ಕೊಡಬೇಕೆಂಬ ಸಾಹಿತ್ಯದ ಮೂಲ ತತ್ತ್ವವನ್ನು ವೈಕುಂಠರಾಜು ಒಪ್ಪಿಕೊಂಡದ್ದು ಈ ಪುಸ್ತಕದಿಂದ ಗೊತ್ತಾಗುತ್ತದೆ. ಆದ್ದರಿಂದ ಜೀವನದಲ್ಲಿ ಸಿಹಿಕಹಿಗಳೆರಡೂ ಇವೆ ಎಂದು ಸಾಮಾನ್ಯವಾಗಿ ಹೊರಟುಹೋಗಬಹುದಾಗಿದ್ದ ತತ್ತ್ವವನ್ನು ನೀಳ್ಗತೆಯಲ್ಲಿ ಅನುಭವವಾಗಿ ಕೊಡುವುದು ಬರಹಗಾರರಿಗೆ ಸಾಧ್ಯವಾಗಿದೆ.

ಅನುಭವ ನಿರೂಪಣೆಗೆ ವೈಕುಂಠರಾಜು ಅವರು ಉಪಯೋಗಿಸುವುದು ಎಲ್ಲ ದೂರದಲ್ಲಿ ಗಮನಿಸಿಕೊಂಡು ಮತ್ತೆ ಅನುಭವಿಸಿಕೊಂಡು ಹೋಗುವ ಒಬ್ಬ ಬುದ್ದಿವಂತ ವ್ಯಕ್ತಿಯನ್ನು, ನೀಳ್ಗತೆ ಅವನು ಏನು ಗಮನಿಸುತ್ತಾನೆ ಎಂಬುದಾದ್ದರಿಂದ ವಿವರಗಳು ಸಹಜವಾಗಿಯೇ ಬರುತ್ತದೆ. ಹೀಗೆ ದೂರದಲ್ಲಿ ಗಮನಿಸುವ ವ್ಯಕ್ತಿ ಸಾಯುತ್ತಿರುವವನ ಮಗನೂ ಹೌದು. ಆದರೆ ಮಗ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಏನೇನು ಭಾವೋದ್ರೇಕಿಸಿಕೊಳ್ಳುತ್ತಾನೆ ಎಂಬುದು ಜನಪ್ರಿಯ ಕಾದಂಬರಿಗಳನ್ನು ಓದಿದ ನನಗೆ ಗೊತ್ತು. ಈ ಉದ್ವೇಗದ ಭಾವನೆಗಳನ್ನು ವೈಕುಂಠರಾಜು ನಿವಾರಿಸುತ್ತಾರೆ. ಆದರೆ ಇದು ಪ್ರಯತ್ನಪೂರ್ವಕವಾಗಿ ಮಾಡಿದ್ದು ಎಂತ ಅನ್ನಿಸದು: ಯಾಕೆಂದರೆ ನಾಯಕ ಊರಿಗೆ ಬರುವ ಮೊದಲೇ ತಂದೆಯ ಸಾವನ್ನೊಮ್ಮೆ ಬಸ್ಸಿನಲ್ಲಿ ಮಾನಸಿಕವಾಗಿ ಅನುಭವಿಸಿದ್ದಾನೆ. ಅವನು ಕಣ್ಣೆದುರು ನೋಡುವ ಅಂತ್ಯ ಆಗಲೇ ಭಾವಿಸಿದ್ದಾದ್ದರಿಂದ ದೂರದಿಂದ ಗಮನಿಸುವ ಮನಃಸ್ಥಿತಿ ಅವನಿಗೆ ಬಂದಿದೆ. ನೀಳ್ಗತೆಯ ಕೊನೆ ಹೇಗೆ ಆಗುತ್ತದೆ ಎಂಬುದು ಓದುಗರಿಗೆ ಮೊದಲೇ ಊಹಿಸುವ ಹಾಗಿದ್ದರೂ ನೀಳ್ಗತೆ ಪುನರಾವರ್ತನೆ ಅಲ್ಲ.

ಯಾಕೆ ಹೇಳಿದರೆ, ಇದು ಸಾವಿನ ಬಗ್ಗೆ ಹೇಗೆ ಕತೆಯೋ ಹಾಗೆಯೇ ಬದುಕಿನ ಬಗ್ಗೆಯೂ ಹೌದು, ಉದಾಹರಣೆಗೆ ನರ್ಸ್‌ನ ಪ್ರಣಯ ಪ್ರಸಂಗಗಳು, ಅಥವಾ ತಂದೆಯನ್ನು ಕಾಯುತ್ತಾ ಕೂತ ಸೋದರರಿಗೆ ಉಂಟಾಗುವ ಹಸಿವು ಬಾಯಾರಿಕೆಗಳು ಸಾವಿನ ವಿರುದ್ಧವಾಗಿ ಬದುಕಿನ ಇಚ್ಛೆಯನ್ನು ತೋರಿಸುತ್ತವೆ. ಸಾವು ಎಷ್ಟು ಸಹಜವೆಂಬ ಧೋರಣೆ ಇದೆಯೋ ಅಷ್ಟೇ ಸಹಜ ಇದೂ ಕೂಡಾ ಎಂಬ ಧೋರಣೆ ಬರೆವಣಿಗೆಯಲ್ಲಿ ಇದೆ. ಹಾಗಾಗಿ ಇಲ್ಲಿ ಯಾವುದೇ ಘಟನೆಗೂ, ಪಾತ್ರಕ್ಕೂ ಸಮಾನ ಪ್ರಾಮುಖ್ಯತೆ ಇದೆ. ಎಲ್ಲವೂ ಅವುಗಳಷ್ಟಕ್ಕೆ ಅವು ಎನ್ನುವ ಹಾಗೆ ಬದುಕುತ್ತಿರುತ್ತವೆ.

ಭಾಷೆ ಹಳೆಯ ಸರಕುಗಳಿಂದ ಬಿಡಿಸಿಕೊಂಡದ್ದು. ಆದರೆ ಈ ಭಾಷೆ ನಮ್ಮ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನೂ ಪ್ರತಿಬಿಂಬಿಸುವ ಭಾಷೆ ಅಲ್ಲ. ಹೀಗೆ ನೋಡಿದರೆ ನಾವು ಅನಂತಮೂರ್ತಿ, ಲಂಕೇಶ ಮೊದಲಾದವರಿಂದ ತಿಳಿದುಕೊಳ್ಳಬೇಕಾದ್ದಕ್ಕಿಂತ ಕಾರಂತ, ಮಾಸ್ತಿಯವರಿಂದ ತಿಳಿದುಕೊಳ್ಳಬೇಕಾದ್ದು ಹೆಚ್ಚು.

Close

ಏಕಾಂತ ರಾಮಯ್ಯನ ಅಬ್ಬಲೂರು ಶಾಸನದ ಒಂದು ಪದ್ಯ

ಏಕಾಂತ ರಾಮಯ್ಯನ ಅಬ್ಬಲೂರು ಶಾಸನದ
ಒಂದು ಪದ್ಯ

ಕೆ ಆರ್ ಗಣೇಶ

ಅಕ್ಷರ ವೃತ್ತಗಳಲ್ಲಿ ಪ್ರಯೋಗ ಮಾಡಿ ರನ್ನ ಮುಂತಾದ ಕವಿಗಳು ಪ್ರಸಿದ್ಧರಾಗಿದ್ದಾರೆ. ಶಾಸನ ಕವಿಗಳೂ ಅನೇಕ ಪ್ರಯೋಗಗಳನ್ನು ನಡೆಸುತ್ತಿದ್ದರೆಂದು ತೋರುತ್ತದೆ. ಏಕಾಂತದ ರಾಮಯ್ಯನ ಚರಿತ್ರೆ ಇರುವ ಅಬ್ಬಲೂರು ಶಾಸನದಲ್ಲಿ, ಅಂತಹ ಪ್ರಯೋಗವೊಂದು ಕಂಡುಬರುತ್ತದೆ.

ಏಕಾಂತದ ರಾಮಯ್ಯನ ವಿರುದ್ದ ದೂರನ್ನು ತಂದಿದ್ದ ಜೈನರನ್ನು ಕಳುಹಿಸಿದ ಬಿಜ್ಜಳ ರಾಯನು ಎಲ್ಲರಿಗೂ ತಿಳಿಯುವಂತೆ ಜಯಪತ್ರವನ್ನು ಕೊಡುತ್ತಾನೆ. ಪ್ರಸ್ತುತ ಶಾಸನದಲ್ಲಿ, ೫೧ ನೇ ಸಾಲಿನ ಮಧ್ಯಭಾಗದಿಂದ ಪ್ರಾರಂಭವಾಗಿ ೫೨ ನೇ ಸಾಲು ಪೂರ್ತಿಯಾಗಿ, ಬಿಜ್ಜಳನನ್ನು ಹೊಗಳುವ ಒಂದು (ಮತ್ತೇಭವಿಕ್ರೀಡಿತ’ ಇದೆ. ಅದು ಪೂರ್ಣ ಸಂಸ್ಕೃತದಲ್ಲಿದೆ.

೫೩ ನೇ ಸಾಲಿನಿಂದ ಪ್ರಾರಂಭವಾಗುವ ಶಾಸನ ಭಾಗದಲ್ಲಿ, ಹೀಗಿದೆ:

“ಚೋಳನನಿಕ್ಕಿ ಲಾಳನನಧಕ್ಕರಿಸಿ ಸ್ಥಿತಿಹೀನ ಮಾಡಿ ನೇಪಾಳನನಂಧ್ರನಂ
ತುಳಿದು ಗುರ್ಜರನಂ ಸೆರೆಯಿಟ್ಟು ಚೇದಿ ಭೂಪಾಳನ ಮೈಮಯಂ
ಮುರೆದು
ಸಂಗನ ಬೀಸಿ(ಸಿ) ಕಾದಿ ಕೊಂದು ಬಂ-

೫೪ ನೇ ಸಾಲು:

ಗಾಳ ಕಳಿ (0)ಗ ಮಾಗಧ ಪಟಸ್ವರ ಮಾಳವ ಭೂಮಿಪಾಳರಂ ಪಾಳಿಸಿದಂ
ಧರಾವಳ)ಯಮಂ ಕಲಿ ಬಿಜ್ಜಳರಾಯ ಭೂಭುಜಂ ||

-ಇಲ್ಲಿಂದಾಚೆಗೆ, ೫೫ ನೇ ಸಾಲಿನಲ್ಲಿ ಮುಂದುವರೆದಿರುವ ‘ಕಂದ’ ಪದ್ಯವೊಂದಿದೆ.

ಪ್ರಸ್ತುತ ಶಾಸನದಲ್ಲಿ, ಪದ್ಯಗಳು ಪ್ರಾರಂಭವಾಗುವ ಕೆಲವೆಡೆ || ವೃ|| ಅಥವಾ ||ಕ||
ಮುಂತಾಗಿ ಸಂಕೇತಗಳಿವೆ, ಮೇಲಿನ ಸಂದರ್ಭದಲ್ಲಿ ಯಾವ ಸಂಕೇತಗಳನ್ನೂ ಕೊಟ್ಟಿಲ್ಲ.
ಒಟ್ಟು ಲಯ ಹಾಗೂ ನಡಿಗೆಗಳಿಂದ ಉತ್ಪಲ ಮಾಲೆಯನ್ನು ಗುರುತಿಸಬಹುದು.

ಕನ್ನಡ ಕೈಪಿಡಿ ಸಂಪುಟ ೧-ಭಾಗ ೨ ರಲ್ಲಿ ವರ್ಣವೃತ್ತ ಪ್ರಕರಣದಲ್ಲಿ ಕೊಟ್ಟಿರುವ
‘ಖ್ಯಾತ ಕರ್ನಾಟಕ’ ಗಳಲ್ಲಿ ಒಂದಾದ ಉತ್ಪಲ ಮಾಲೆಯ ಲಕ್ಷಣ:

“ಉತ್ಪಲ ಮಾಲೆಯಪ್ಪುದು ಭರಂ ನಭಭಂ ರಲಗಂ ನೆಗರ‍್ದಿರಲ್”

ಈ ಲಕ್ಷಣಕ್ಕೆ ಬದ್ಧವಾದ ರಚನೆಯಾಗಿ, ಮೇಲೆ ಉದ್ಧರಿಸಿರುವ ಶಾಸನ ಭಾಗವು ಒಂದು ಉತ್ಪಲ ಮಾಲೆಯಾಗುತ್ತದೆ.

ಚೋಳನನಿಕ್ಕಿ ಲಾಳನನಧಕ್ಕರಿಸಿ ಸ್ಥಿತಿಹೀನ ಮಾಡಿ ನೇ
ಪಾಳನ ನಂಧ್ರನಂ ತುಳಿದು ಗುರ್ಜರನಂ ಸೆರೆಯಿಟ್ಟು ಚೇದಿ ಭೂ
ಪಾಳನ ಮೈಮೆಯಂ ಮುರಿದು ವಂಗನ ಬೀಸಿ(ಸಿ) ಕಾದಿ ಕೊಂದು ಬಂ
ಗಾಳ ಕಳಿ(0)ಗ ಮಾಗಧ ಪಟಸ್ವರ ಮಾಳವ ಭೂಮಿಪಾಳರು
ಪಾಳಿಸಿದಂ ಧರಾವಳ)ಯಮಂ ಕಲಿ ಬಿಜ್ಜಳರಾಯ ಭೂಭುಜಂ |

ಅಕ್ಷರ ವೃತ್ತಗಳಲ್ಲಿ ನಾವು ಸಾಮಾನ್ಯವಾಗಿ ಕಾಣುವುದು ಚತುಷ್ಪದಿಗಳನ್ನು, ಪಂಚಪಾದ! ಗಳಿರುವ ಈ ಮೇಲಿನ ಉದಾಹರಣೆ, ನಮ್ಮ ಶಾಸನ ಕವಿಗಳು ಪ್ರಯೋಗಶೀಲರಾಗಿದ್ದ ರೆಂಬುದಕ್ಕೆ ಸಾಕ್ಷಿಯಾಗಿದೆ, ಕಲಿ ಬಿಜ್ಜಳರಾಯನನ್ನು ಸಾಂಪ್ರದಾಯಿಕವಾಗಿ ಹೊಗಳುವ ಈ ಪದ್ಯಕ್ಕೆ ಕನ್ನಡ ಛಂದಸ್ಸಿನ ಚರಿತ್ರೆಯಲ್ಲಿ ವಿಶೇಷ ಸ್ಥಾನವಿದೆ.

೧ ಪಂಚವಾದಗಳು ವಿಶೇಷವಾದುದೇನೂ ಅಲ್ಲ, ಅಕ್ಷರ ವೃತ್ತಗಳಲ್ಲಿ ಪಂಚ ಪಾದ ಪ್ರಯೋಗವನ್ನು ನಮ್ಮ ಕವಿಗಳು ಮಾಡಿದ್ದಾರೆ. ಆ ಪ್ರಯೋಗ ಪ್ರಸಿದ್ಧವಾದುದು ಎಂದು ಡಾ| ಎಂ.ಚಿದಾನಂದ ಮೂರ್ತಿಗಳು ನನಗೆ ಒಮ್ಮೆ ತಿಳಿಸಿದರು, “ಕನ್ನಡ ಛಂದೋವಿಕಾಸ’, ‘ಕನ್ನಡ ಛಂದಸ್ಸು’, ‘ಕನ್ನಡ ಕೈಪಿಡಿ ಮುಂತಾದ ಛಂದೋ ಗ್ರಂಥಗಳಲ್ಲಿ ಇದರ ಉಲ್ಲೇಖವಿಲ್ಲ, ಛಂದಸ್ಸಿನ ಪಾಠ ಕೇಳಿದ, ನನ್ನ ಉಪಾಧ್ಯಾಯ ಮಿತ್ರರನ್ನೂ, ಪಾಠ ಹೇಳುತ್ತಿರುವ ಉಪಾಧ್ಯಾಯರುಗಳನ್ನು ವಿಚಾರಿಸಿದಾಗ,
ಅವರಿಂದಲೂ, ಈ ಪ್ರಯೋಗ ಹೊಸದೆಂಬ ಆಥವಾ ತಾವು ಕೇಳಿಲ್ಲವೆಂಬ ಉತ್ತರ ಬಂದಿತು.

Close

ಭಾರತೀಪುರದ ರಾಜಕೀಯ-ಒಂದು ಸಮರ್ಥನೆ

ಭಾರತೀಪುರದ ರಾಜಕೀಯ–
ಒಂದು ಸಮರ್ಥನೆ

-ಜಿ ರಾಜಶೇಖರ್‌

ಅನಂತಮೂರ್ತಿಯವರ ಭಾರತೀಪುರ ನೇರವಾಗಿ ಪ್ರಗತಿಶೀಲ ರಾಜಕೀಯಕ್ಕೆ ಸಂಬಂಧಿಸಿದ ಕಾದಂಬರಿ, ರಾಜಕೀಯ ಪ್ರಗತಿಶೀಲ ಚಿಂತನೆಯ ಪ್ರಭಾವ ಅವರ ಎಲ್ಲ ಕೃತಿಗಳಲ್ಲಿಯೂ ಕಾಣಿಸುತ್ತದೆ, ಅವರ ಕಥಾ ನಾಯಕರು ಸಂಪ್ರದಾಯದ ಭಾರದಲ್ಲಿ ನರಳಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಒಂದೋ ತಮ್ಮ ಸಹಜ ಆಸೆಗಳನ್ನೆಲ್ಲಿ ಹತ್ತಿಕುವ ಅಂತರ ಪಿಶಾಚಿಗಳಾಗುತ್ತಾರೆ; ಇಲ್ಲವೆ ಧೋರಣೆಯ ಮಟ್ಟದಲ್ಲಿ ಆದರ್ಶವಾದಿಗಳಾಗಿ, ನಿಜ ಜೀವನದ ಅಸಹಾಯಕತೆಯಲ್ಲಿ ತಾವು ನಂಬಿದ ಅಮೂರ್ತ ತತ್ವಗಳಿಗಿಂತ ಬೇರೆಯಾಗಿ ಬಾಳುವ ಎಡಬಿಡಂಗಿಗಳಾಗುತ್ತಾರೆ. ಸಣ್ಣ ಕಥೆಗಳಾದ ಖೋಜರಾಜ, ಪ್ರಶ್ನೆ, ಪ್ರಕೃತಿ, ಘಟಶ್ರಾದ್ಧ, ಕ್ಲಿಪ್ ಜಾಯಿಂಟ್, ಆವಾಹನೆ ನಾಟಕದ ನಾಯಕರು ಇಂತಹವರು: ಸಂಸ್ಕಾರ ಕಾದಂಬರಿಯ ಬಗ್ಗೆಯಂತೂ ಬೇರೆ ಹೇಳಬೇಕಾದುದೇ ಇಲ್ಲ. ಈ ಕೃತಿಗಳಲ್ಲಿ ಸ್ಪಷ್ಟ ಗುರುತಿಸುವಷ್ಟು ನೇರವಾಗಿ ರಾಜಕೀಯಕ್ಕೆ ಸಂಬಂಧಿಸಿದವು ಎಂದು ನನ್ನ ಅರ್ಥವಲ್ಲ, ನಮ್ಮ ಸಮಾಜವ್ಯವಸ್ಥೆಯ ಮೌಲ್ಯಗಳು ವ್ಯಕ್ತಿಗಳ ಬಾಳನ್ನು, ಅವರ ನ್ಯಾಯಬದ್ಧ ಸಹಜ ಆಸೆಗಳನ್ನು ಹೇಗೆ ಹಿಚುಕಿ ಹಾಕುತ್ತವೆ ಎಂದು ತೋರಿಸುವಲ್ಲಿ ಅವರು ಮನುಷ್ಯ ಸ್ವಾತಂತ್ರ್ಯದ ಬಗ್ಗೆ ತಮಗಿರುವ ಕಾಳಜಿಯನ್ನು ವ್ಯಕ್ತ ಪಡಿಸುವುದರಿಂದ, ವ್ಯಕ್ತಿಗಳ ಬದುಕಿನ ಮೇಲೆ ನಿರಂಕುಶ ಹಿಡಿತವಿಟ್ಟುಕೊಂಡಿರುವ

ನಮ್ಮ ಧಾರ್ಮಿಕ ಸಾಂಸ್ಕೃತಿಕ ನಂಬಿಕೆಗಳನ್ನು ಟೀಕಿಸುವುದರಿಂದ ಅವು ರಾಜಕೀಯಕ್ಕೆ ಸಂಬಂಧಿಸಿದವಾಗುತ್ತವೆ, ರಾಜಕೀಯವಾಗಿ ಪ್ರತಿಗಾಮಿಯಾಗಿರುವ ಅಥವಾ ಯಥಾ ಸ್ಥಿತಿಯನ್ನು ಎತ್ತಿ ಹಿಡಿಯುವ ಒಬ್ಬ ಲೇಖಕನಿಂದ ನಾವು ಇಂತಹ ಕೃತಿಗಳನ್ನು ನಿರೀಕ್ಷಿಸಲಾರೆವು ಎಂಬ ಅರ್ಥದಲ್ಲಿಯೂ ಅವು ರಾಜಕೀಯಕ್ಕೆ ಸಂಬಂಧಿಸಿದ ಕೃತಿಗಳು, ಹೀಗೆ ಭಾರತೀಪುರ ಬರವಣಿಗೆಯನ್ನು ಧ್ಯಾನದಂತಹ ಒಂದು ಕ್ರಿಯೆ ಎಂದು ಭಾವಿಸಿರುವ ಅನಂತಮೂರ್ತಿಯವರು ಈಗ ಅನೇಕ ವರ್ಷಗಳಿಂದ ಬರೆಯುತ್ತಿರುವ ಒಂದೇ ಒಂದು ಅಖಂಡ ಕೃತಿಯ ಮುಂದಿನ ಭಾಗವಾಗಿದೆ.

ಲೇಖಕರ ರಾಜಕೀಯನಿಷ್ಠೆ, (Commitment) ಬಗ್ಗೆ ಬರೆಯುತ್ತ ಡೇವಿಡ್‌ಕಾಟ್ ಎಂಬ ವಿಮರ್ಶಕ ಹೀಗೆ ಹೇಳುತ್ತಾನೆ“Commitment ಎನ್ನುವ ಶಬ್ದ ಸಾರ್ತ್ರೆ ಯಂಥ ಲೇಖಕರ ಖ್ಯಾತಿಯ ದೆಸೆಯಿಂದ ವಾಮಪಂಥೀಯ ನಿಷ್ಟೆ ಎಂದೇ ಅರ್ಥವನ್ನು ಪಡೆದಿದ್ದರೂ ನಿಜವಾಗಿಯೂ ಎಲ್ಲ ಗಮನಾರ್ಹ ಲೇಖಕರು committed ಲೇಖ ಕರೇ, ಲೇಖಕ ಜೀವನವನ್ನು ಪರಿಶೀಲಿಸುವ, ಅದರ ಬಗ್ಗೆ ಬರೆಯುವ ರೀತಿಯಲ್ಲಿಯೇ ಮೌಲ್ಯನಿರ್ಣಯಗಳನ್ನು ಮಾಡುತ್ತ ಹೋಗುವುದರಿಂದ, ರಾಜಕೀಯ ನಿಷ್ಠೆ ಇಲ್ಲದ apolitical ಎನ್ನಬಹುದಾದ ಗಮನಾರ್ಹ ಲೇಖಕರೇ ಇಲ್ಲ. ಮೇಲು ನೋಟಕ್ಕೆ ಹೀಗೆ ಕಾಣಬಹುದಾದ ಲೇಖಕರೂ ವಾಸ್ತವವಾಗಿ ಒಂದೋ ಸೂಕ್ಷವಾಗಿ ಪರಂಪರಾವಾದಿಗಳಾಗಿರುತ್ತಾರೆ, ಇಲ್ಲಿ ಯಥಾಸ್ಥಿತಿವಾದಿಗಳಾಗಿರುತ್ತಾರೆ.”

ಈ ಹಿನ್ನೆಲೆಯಲ್ಲಿ, ಕನ್ನಡ ಕಾದಂಬರಿಗಳಲ್ಲಿ ಭಾರತೀಪುರ ಏಕೆ ಮಹತ್ವದ್ದಾಗುತ್ತದೆ, ಅದರ ರಾಜಕೀಯ ನಿಷ್ಠೆ ಎಂತಹದ್ದು, ಕೃತಿಯಲ್ಲಿ ಅದು ಎಷ್ಟ ನಿಜವಾಗುತ್ತದೆ ಎಂದು ನೋಡುವುದು ನನ್ನ ಉದ್ದೇಶ, ನನ್ನದು ನಿಶ್ಚಯವಾಗಿ partisan ಸೃಷ್ಟಿ, ಪಕ್ಷ ಪಾತವಿಲ್ಲದೆ ಎಂದರೆ ರಾಜಕೀಯ ಪಕ್ಷ ಪಾತವಿಲ್ಲದೆ ಭಾರತೀಪುರಕ್ಕೆ ಪ್ರತಿಕ್ರಿಯೆ ತೋರಿಸುವುದು ಸಾಧ್ಯವಿಲ್ಲವೆಂದು ನನಗೆ ಅನ್ನಿಸುತ್ತದೆ. ಸಂಸ್ಕಾರವನ್ನು ಒಳಗೊಂಡು ಅವರ ಹೆಚ್ಚಿನ ಕೃತಿಗಳಿಗೆ ಗ್ರಾಮೀಣ ಸಂಸ್ಕೃತಿಯ ಹಿನ್ನೆಲೆ ಇದೆ. ಕ್ಲಿಪ್‌ಜಾಯಿಂಟ್ ಮತ್ತು ಆವಾಹನೆ ನಾಟಕಗಳು ಕೂಡ ಪರೋಕ್ಷವಾಗಿ ಇದೇ ಹಿನ್ನೆಲೆಯನ್ನು ಪಡೆದಿವೆ. ಆದರೆ ಈ ಕೃತಿಗಳಲ್ಲೆಲ್ಲ ಅವರ ವಿವೇಚನೆ ನಮ್ಮ ಪರಂಪರಾಗತ ಸಂಸ್ಕೃತಿ ಹೆಣ್ಣು ಗಂಡಿನ ಸಂಬಂಧಗಳನ್ನು, ಕೌಟುಂಬಿಕ ಸಂಬಂಧಗಳನ್ನು ಹೇಗೆ ವಿಷಮಗೊಳಿಸುತ್ತದೆ ಎಂದು ಪರಿಶೀಲಿಸುವುದಕ್ಕೆ ಮಾತ್ರ ಸೀಮಿತವಾಗಿವೆ, ನಮ್ಮ ಗ್ರಾಮೀಣ ಸಂಸ್ಕೃತಿ ಜನತೆಯ ಮೇಲೆ ಹೇರಿ ಬಿಟ್ಟಿರುವ ಎಲ್ಲ ವಿಷಮ ಮನುಷ್ಯ ಸಂಬಂಧಗಳೂ ಅವರ ಕೃತಿಗಳಲ್ಲಿ ಅಖಂಡವಾಗಿ ಮೈದಳೆಯುವುದಿಲ್ಲ. The ruling ideas of every age are the ideas of the ruling classes ಎಂದು ಲೆನಿನ್ ಹೇಳುತ್ತಾನೆ, ಹೆಣ್ಣು ಗಂಡಿನ ಸಂಬಂಧಗಳನ್ನೂ, ಕಾಮಜೀವನದ ವಿಧಿನಿಷೇಧಗಳನ್ನೂ ರೂಪಿಸಿರುವ ಈ ದೇಶದ ಆಳುವ ವರ್ಗ ಅದಕ್ಕಿಂತ ಮುಖ್ಯವಾಗಿ ಆಸ್ತಿ ಸಂಬಂಧಗಳನ್ನು ನಿರ್ಧರಿಸಿ ತನ್ಮೂಲಕ ಎಲ್ಲ ವಿಷಮ ಮನುಷ್ಯ ಸಂಬಂಧಗಳಿಗೂ ಕಾರಣವಾಗಿದೆ. ಆದರೆ ಹೆಣ್ಣು ಗಂಡಿನ ಸಂಬಂಧದಷ್ಟೇ ಮುಖ್ಯವಾದ, ನಿಜವಾಗಿಯೂ ಈ ಸಂಬಂಧಗಳನ್ನೂ ರೂಪಿಸುವ ಆಸ್ತಿ ಸಂಬಂಧದ, `ಭೂಮಿ ಒಡೆತನದ ಪ್ರಶ್ನೆಗಳ ಬಗ್ಗೆ ಈ ಕೃತಿಗಳು ಉದಾಸೀನವಾಗಿರುವುದರಿಂದ ಅಷ್ಟರ ಮಟ್ಟಿಗೆ ಈ ಕೃತಿಗಲ್ಲಿನ ಮೌಲ್ಯ ನಿರ್ಣಯಗಳು ಮತ್ತು ಸ್ವಾತಂತ್ರದಲ್ಲಿ ಅವರಿಗಿರುವ ಶ್ರದ್ದೆ ಅಪೂರ್ಣವಾಗಿವೆ. ಈ ದೃಷ್ಟಿಯಿಂದ ಭಾರತೀಪುರ ನಮ್ಮ ಸಂಸ್ಕೃತಿ ರೂಪಿಸಿರುವ ಮನುಷ್ಯ ಸಂಬಂಧಗಳನ್ನು ಅಖಂಡವಾಗಿ ಶೋಧಿಸುವ ಅವರ ಮೊದಲ ಪ್ರಯತ್ನವಾಗಿದೆ. ಅಲ್ಲದೆ ಭಾರತೀಪುರ ಅವರ ಹಿಂದಿನ ಕೃತಿಗಳಂತೆ ಅವರೇ ಒಂದೆಡೆ ಹೇಳಿರುವ ಹಾಗೆ ಬಾಲ್ಯದ ನೆನಪುಗಳ ಆಧಾರದ ಮೇಲೆ ನಿಂತದ್ದಲ್ಲ. ಅದರ ಕಾಲ ವರ್ತಮಾನ. ಈ ದೃಷ್ಟಿಯಿಂದಲೂ ಭಾರತೀಪುರದ ಹರಹು ವಿಶಾಲವಾದದ್ದು, ಮತ್ತು ನೇರವಾಗಿ ನಮಗೆಲ್ಲರಿಗೂ ಸಂಬಂಧಿಸಿದ್ದಾಗಿದೆ.

ಭಾರತೀಪುರ ಒಮ್ಮೆಗೆ ದಿಗ್ಭ್ರಮೆಗೊಳಿಸುವ ಕಾದಂಬರಿ, ಈ ಕಾದಂಬರಿಯೊಡನೆ ಹೋಲಿಸಬಹುದಾದ ಇನ್ನೊಂದು ಕಾದಂಬರಿ ಕನ್ನಡದಲ್ಲಿಲ್ಲ, ಬಹುಶಃ ಚೋಮನದುಡಿಯನ್ನು ಬಿಟ್ಟರೆ ವಸ್ತುವಿನಲ್ಲಿ ಈ ಕಾದಂಬರಿಯ ಹತ್ತಿರಕ್ಕೆ ಬರುವ ಕೃತಿಗಳೂ ಇಲ್ಲ. ಆದರೆ ಚೋಮನದುಡಿ ಆಶಯದಲ್ಲಿ ಭಾರತೀಪುರಕ್ಕಿಂತ ಭಿನ್ನವಾದದ್ದು, ಪ್ರಾದೇಶಿಕ ಎಂಬ ಅಪನಾಮಕರಣವನ್ನು ಹೊತ್ತಿರುವ ಗ್ರಾಮಜೀವನವನ್ನು ಚಿತ್ರಿಸಬಯಸುವ ಯಾವ ಕನ್ನಡ ಕಾದಂಬರಿಯೊಡನೆಯೂ ಈ ಕಾದಂಬರಿಯನ್ನು ಹೋಲಿಸಲಿಕ್ಕಾಗುವು ದಿಲ್ಲ. ಕಾರಂತರ ‘ಮರಳಿ ಮಣ್ಣಿಗೆ’, ‘ಬೆಟ್ಟದ ಜೀವ’, ಮುಗಿದ ಯುದ್ಧ’, ‘ಸಮೀಕ್ಷೆ’. ‘ಕುಡಿಯರ ಕೂಸು’, ಪುಟ್ಟಪ್ಪನವರ ‘ಕಾನೂರ ಹೆಗ್ಗಡಿತಿ’, ‘ಮಲೆಗಳಲ್ಲಿ ಮದುಮಗಳು’ ರಾವ್ ಬಹದ್ದೂರರ ‘ಗ್ರಾಮಾಯಣ’, ಅಣ್ಣಾರಾಯಮಿರ್ಜಿ ಅವರ ‘ನಿಸರ್ಗ’ ಕನ್ನಡದ ಈ ಶ್ರೇಷ್ಠ ಕಾದಂಬರಿಗಳೆಲ್ಲ ಗ್ರಾಮೀಣ ಜೀವನಕ್ಕೆ ಸಂಬಂಧಿಸಿದವಾಗಿದ್ದರೂ ನಮ್ಮ ಗ್ರಾಮೀಣ ಬದುಕಿನ ಆಳವಾದ ವೈಷಮ್ಯಗಳ ಬಗ್ಗೆ ಅವು ಕುರುಡಾಗಿದ್ದಾವೆ, ಭೂಮಿಯ ನ್ಯಾಯಬದ್ಧ ಒಡೆತನದ ಪ್ರಶ್ನೆ ಮತ್ತು ಜಾತಿಸಮಾಜದ ದುರಂತಗಳ ಮಾರ್ಮಿಕ ಚಿತ್ರಣವಾಗಿರುವ ‘ಚೋಮನದುಡಿ’ ಯನ್ನು ಬಿಟ್ಟು ತಮ್ಮ ಉಳಿದ ಕೃತಿಗಳಲ್ಲಿ ಕಾರಂತರು ಈ ವೈಷಮ್ಯಗಳ ಬಗ್ಗೆ, ನಮ್ಮ ಬದುಕಿನ ಮೂಲದಲ್ಲಿರುವ ಈ ವಿಕೃತಿಗಳ ಬಗ್ಗೆ ಉದಾಸೀನರಾಗಿದ್ದಾರೆ, ಆದ್ದರಿಂದಲೇ ಸ್ವಾತಂತ್ರ್ಯ ಚಳುವಳಿಯ ಭ್ರಮನಿರಸನವನ್ನೇ ಚಿತ್ರಿಸುವ ಅವರ ಬೃಹತ್ ಕಾದಂಬರಿ ‘ಔದಾರ್ಯದ ಉರುಳಲ್ಲಿ’ ಮತ್ತು ‘ಗೊಂಡಾರಣ್ಯ’ ಸೋಲುತ್ತವೆ, ಕಾನೂರು ಹೆಗ್ಗಡಿತಿ ಮತ್ತು ಮಲೆಗಳಲ್ಲಿ ಮದುಮಗಳು ಕಾದಂಬರಿಗಳ ಶ್ರೀಮಂತ ಅನುಭವ ಪ್ರಪಂಚ ಕೇವಲ ರಮ್ಯವಾದ ಕಥೆಯೊಂದನ್ನೇ ಹೇಳುವುದಕ್ಕೆ ವ್ಯಯವಾಗಿದೆ, ವಿಷಮ ಆಸ್ತಿ ಚಾತಿ ಸಂಬಂಧಗಳು ಗ್ರಾಮೀಣ ಬದುಕನ್ನು ಎಂತಹ ಮೌಢ್ಯ, ಅಸಹಾಯಕತೆಗಳಲ್ಲಿ ಇಟ್ಟಿದ್ದಾವೆಂಬುದನ್ನು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಅನೇಕ ವಿವರಗಳು ಎತ್ತಿತೋರಿಸುತ್ತವೆ ; ಆದರೆ ಅನುದ್ದಿಷ್ಟವಾಗಿ ಒಂದು ದೃಷ್ಟಿಯಿಂದ ಗ್ರಾಮಾಯಣ ಕಾದಂಬರಿಯ ಅನರ್ಥ ಘಟನಾವಳಿ ಭೂಮಿಯ ಒಡೆತನಕ್ಕೆ ಸಂಬಂಧಿಸಿದೆ. ಬಾಪೂ ಸಾಹೇಬನ ವಾಡೆಯ ಯಜಮಾನಿಕೆ, ಶಂಕರಪ್ಪ ಗೌಡರ ಗೌಡಿತಿ, ಲಿಂಗಪ್ಪ ಗೌಡನ ವಾರಸಾ, ಶೇಷಪ್ಪನ ಟೆನೆನ್ಸಿ ಕಾಯಿದೆ ಜ್ಞಾನ, ಮಠಾಧಿಪತಿ ಪಡದಯ್ಯನ ದುಷ್ಟತನಗಳ ಸುತ್ತ ಇಡಿ ಕಾದಂಬರಿಯ ಕ್ರಿಯಾಪ್ರಪಂಚ ಹಬ್ಬಿದೆ, ಗ್ರಾಮಾಯಣದ ಪುಟ 301 ರಲ್ಲಿ ಒಂದು ಸಾಲು ಹೀಗಿದೆ. ‘ಪಾದಳ್ಳಿಯ ಭೂಮಿಗಳಲ್ಲಿ ಮೂರರಲ್ಲೊಂದು ಭಾಗ ಜಾಗಿರದಾರರದು, ಇನ್ನೊಂದು ಭಾಗ ಗೌಡರದು, ಉಳಿದ ಒಂದು ಭಾಗ ಶ್ಯಾನುಭೋಗ ಹಾಗೂ ಗೌಡರದು.” ಇಂತಹ ಒಂದು ವ್ಯವಸ್ಥೆಯೇ ಮೂಲಭೂತವಾಗಿ ವೈಷಮ್ಯದ್ದು ಎಂದು ಲೇಖಕರು ತಿಳಿದಿದ್ದಾರೆ ಎಂದು ಕಾದಂಬರಿಯಲ್ಲಿ ಬೇರೆಲ್ಲಿಯೂ ವ್ಯಕ್ತವಾಗುವುದಿಲ್ಲ. ಆದ್ದರಿಂದಲೇ ಜೈನರ ಜಿನ್ನಪ್ಪ ಕಾಯಿದೇ ಪಂಡಿತ ಶೇಷಪ್ಪನೊಡನೆ ತನ್ನ ಜೀವನದಲ್ಲಿ ಮೊದಲ ಬಾರಿಗೆ ತಾಲೂಕು ಕಛೇರಿಗೆ ಹೋಗುವ ಪ್ರಸಂಗದಂತಹ ವಿವರಣೆ ಕೂಡ ಓದುಗರನ್ನು ರಂಜಿಸುತ್ತದೆಯೇ ಹೊರತು ಬೇರೆ ಪ್ರತಿಕ್ರಿಯೆಯನ್ನು ಓದುಗನಿಂದ ಬೇಡುವುದಿಲ್ಲ. ಜೊತೆಗೆ ಈ ಕಾದಂಬರಿಗಳೆಲ್ಲ ನೆನಪುಗಳ ಆಧಾರದ ಮೇಲೆ ನಿಂತಿದ್ದು nostalgic recreations ಆಗಿರುವುದರಿಂದ ಅನೇಕ ಕಟುಸತ್ಯಗಳಿಂದ ತಪ್ಪಿಸಿಕೊಂಡಿವೆ. ಇವುಗಳಲ್ಲಿ ಕಾರಂತರ ಚೋಮನದುಡಿ ಮತ್ತು ಸರಸಮ್ಮನ ಸಮಾಧಿ ಕಾದಂಬರಿಗಳು ಮಾತ್ರ ನನಗೆ ಅಪವಾದವಾಗಿ ಕಾಣಿಸುತ್ತವೆ. ಗ್ರಾಮ್ಯಜೀವನದ ಎಲ್ಲ ಅನುಭವ, ಎಲ್ಲ ಮುಖಗಳಿಗೂ ಈ ಕಾದಂಬರಿಕಾರರು ಏಕಪ್ರಕಾರವಾಗಿ ಎಚ್ಚರವಾಗಿರಲಿಲ್ಲ ; ಆದ್ದರಿಂದ ಈ ಕಾದಂಬರಿಗಳೆಲ್ಲ ಅಪೂರ್ಣವಾಗಿಯೇ ಉಳಿದಿವೆ. ವಿಕೃತ ಮನುಷ್ಯ ಸಂಬಂಧಗಳನ್ನು order ಎಂದು ಭಾವಿಸಿವೆ. ನಿಂತ ನೀರಿನ ಬದುಕೇ ಸೊಗಸಿನದ್ದು ಎಂಬ ಭ್ರಮೆಯನ್ನು ಹುಟ್ಟಿಸುತ್ತವೆ, ಗ್ರಾಮೀಣ ಬದುಕಿನ ಹಿನ್ನೆಲೆ ಇರುವ ನಮ್ಮ ಬಹುತೇಕ ಕೃತಿಗಳ ಕೊನೆಯ ಭಾಗಗಳಲ್ಲಿ, ಅಂದರೆ ವರ್ತಮಾನಕ್ಕೆ ಅವು ಸಮೀಪಿಸಿದಂತೆಲ್ಲ ಹಳ್ಳಿಯ ಅನ್ಯೋನ್ಯದ ಬದುಕು ಛಿದ್ರಛಿದ್ರವಾಗುತ್ತಿದೆ, ಕುಲಗೆಡುತ್ತಿದೆ, ಅಥವಾ ಹೊರಗಿನ ನಾಗರಿಕ ಶಕ್ತಿಗಳ ಪ್ರವೇಶವಾಗಿ ನಾಶವಾಗುತ್ತಿದೆ ಎಂದೇ ಚಿತ್ರಣವಿದೆ, ನಮ್ಮ ಹೆಚ್ಚಿನ ಲೇಖಕರಿಗೆ ಈ ಧಾಟಿಯಲ್ಲಿ ಯೋಚಿಸುವುದೇ ಒಂದು ಅಭ್ಯಾಸವಾಗಿದೆಯೇನೋ ಎಂಬಷ್ಟು ಮಟ್ಟಿಗೆ ಇದು ಸಾಮಾನ್ಯವಾಗಿ ಹೋಗಿದೆ ; ನಮ್ಮ ನವ್ಯರೂ ಇದಕ್ಕೆ ಹೊರತಲ್ಲ ಎಂದು ಇಲ್ಲಿ ಗಮನಿಸಬೇಕು, ಆದ್ದರಿಂದ ಅನಿವಾರ್ಯವಾಗಿ ನಮ್ಮ ಲೇಖಕರು ಆಧುನಿಕತೆಯನ್ನು ಅರ್ಥೈಸಿಕೊಂಡ ರೀತಿ ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗುತ್ತದೆ; ಜೊತೆಗೆ ಭಾರತೀಯ ಸಾಹಿತ್ಯ ಐರೋಪ್ಯ ಸಾಹಿತ್ಯದಷ್ಟು ಶ್ರೀಮಂತವಾಗಿಲ್ಲದಿರುವುದಕ್ಕೆ ಯುರೋಪಿಯನ್ನರಿಗಿದ್ದ ಮಹಾಯುದ್ಧ ಸರ್ವಾಧಿಕಾರಗಳ ದುರಂತದ ಭೀಕರ ಅನುಭವದ ಹಿನ್ನೆಲೆ ನಮ್ಮ ಲೇಖಕರಿಗಿಲ್ಲದೆ ಹೋದದ್ದು ಎಂಬ ಶ್ರೀ ಬುದ್ದ ದೇವ ಬಸು ಅವರ ವಾದಕ್ಕೆ ಲೋಹಿಯಾ ಅವರ ಉಗ್ರ ಪ್ರತಿಕ್ರಿಯೆ ನೆನಪಾಗುತ್ತದೆ. ಲೋಹಿಯಾ ಬರೆಯುತ್ತಾರೆ :

“ಎಂಥ ಭಯಂಕರವಾದ ಮೂರ್ಖತನ ಇದು ? ಒಂದೇ ಒಂದು ಕ್ಷಾಮದಲ್ಲಿ ಈ ಮೂರು ನಾಲ್ಕು ಮಿಲಿಯ ಜನ ಉದುರಿ ಹೋದದ್ದು ಇಂಡಿಯಾದ ಈ ಬುದ್ದಿಜೀವಿಗೆ ಆಳವಾದ ಸಂಕಟಕ್ಕೋ ಸಂಪನ್ನ ಅನುಭವಕ್ಕೂ ಕಾರಣವಾಗದೆ ಹೋಯಿತು……ನಮ್ಮ ದೇಶದಲ್ಲಿ ಜನಸಾಮಾನ್ಯರ ಅನ್ನಿಸಿಕೆಗೂ ಬುದ್ದಿಜೀವಿಗಳ ಚಿಂತನೆಗೂ ನಡುವೆ ಇಂಥ ಆಳವಾದ ಕಂದಕ ಏತಕ್ಕೆ ಉಂಟಾಯಿತು ಎಂದು ಮೇಲಿಂದ ಮೇಲೆ ನನಗೆ ಯೋಚನೆಯಾಗು ತದೆ. ಅದಕ್ಕೆ ಉತ್ತರವನ್ನೂ ಕಂಡುಕೊಂಡಿದ್ದೇನೆ, ಮೂಲಕಾರಣ ಒಂದೇ, ಇಂಡಿಯಾದ ಬುದ್ದಿ ಜೀವಿಗಳೆಲ್ಲ ಸಾಮಾನ್ಯವಾಗಿ ಮೇಲು ಜಾತಿಗಳಿಗೆ ಸೇರಿದವರು. ಆದರೆ ಕ್ಷಾಮದಲ್ಲೂ ಧಾರ್ಮಿಕ ಅಥವಾ ರಾಜಕೀಯ ದುರಂತಗಳಲ್ಲೋ ಸಾಯುವವರು ಕೀಳು ಜಾತಿಯ ಹರಿಜನರೇ ಮೊದಲಾದವರು. ಆ ಮೇಲು ಜಾತಿಗಳು ಈ ಕೀಳು ಜಾತಿಗಳು -ಇವು ಬೇರೆ ಬೇರೆಯೇ ಆದ ಎರಡು ಪ್ರಪಂಚಗಳು……ಐರೋಪ್ಯ ಲೇಖಕರು ಎಷ್ಟೋ ಸಲ ತಮ್ಮ ನೆಲದಲ್ಲೇ ಇರುವ ಶ್ರೀಮಂತ ಹಾಗೂ ದರಿದ್ರ ಹೀಗೆ ಎರಡು ರಾಷ್ಟ್ರಗಳ ದ್ವಿಮುಖದ ಬಗ್ಗೆ ಮಾತಾಡಿದ್ದುಂಟು. ಆದರೆ ಇಂಡಿಯಾದ ಒಂದೇ ರಾಷ್ಟ್ರ ದಲ್ಲಿರುವ ಈ ಮೇಲು ಜಾತಿ ಕೀಳು ಜಾತಿಗಳ ಎರಡು ವಿಭಿನ್ನ ಜನಾಂಗಗಳು-ಇಬ್ಬ ರಿಗೂ ಅವರವರದ್ದೇ ಆದ ತೀರ ವಿಭಿನ್ನವಾದ ಅನುಭವಗಳು-ಇದು ಅದನ್ನು ಪ್ರತ್ಯಕ್ಷ ಕಂಡವರಿಗೇ ಅಲ್ಲದೆ ಮತ್ತು ಅದನ್ನು ಸದಾ ಸತತವಾಗಿ ಪ್ರಜ್ಞೆಯಲ್ಲಿಟ್ಟು ಕೊಂಡವರಿಗೇ ಅಲ್ಲದೆ ಬೇರೆಯವರಿಗೆ ಅರ್ಥವಾಗದಂಥದ್ದು……ಆತ (ಇಂಡಿಯಾದ ಬುದ್ದಿಜೀವಿ) ತನ್ನ ಜಾತಿ ಸಂಕುಚಿತತೆಯ ಹೊದಿಕೆಚರ್ಮದಿಂದ ಹೊರಗೆ ಕಾಲಿಟ್ಟು ಬರಲಾರನಾದರೆ, ಹಿಂದುಳಿದ ಜಾತಿಯ ಜನಗಳ ಹಸಿವು ಕಷ್ಟ ಕಾರ್ಪಣ್ಯಗಳನ್ನು ಕೆಲ ಮಟ್ಟಿಗಾದರೂ ಅನುಭವಿಸಲು ಶಕ್ತನಾಗದೆ ಹೋದರೆ ಸಾವು ಆ ಜನರನ್ನು ಎಷ್ಟು ಸುಲಭ ಸುರಳೀತ ಬಲಿಗೊಂಡು ಬಿಡುತ್ತದೆ ಎಂಬುದನ್ನು ಕಾಣಲಾರದವನಾದರೆ ಆತ ಮಹಾ ಲೇಖಕನಿಗಿರಬೇಕಾದ ಸೂಕ್ಷ್ಮ ಪ್ರಜ್ಞೆಯನ್ನು ಸರ್ವಥಾ ಪಡೆದುಕೊಳ್ಳಲಾರ.” (“ರಾಜಕೀಯದ ಮಧ್ಯೆ ಬಿಡುವು -ಡಾ. ರಾಮನೋಹರ ಲೋಹಿಯೂ ಅನು: ಕೆ. ವಿ. ಸುಬ್ಬಣ್ಣ”)

ತನ್ನ An Area of darknessನಲ್ಲಿ ಭಾರತೀಯ ಬಡತನವನ್ನು ಅಳುಬುರುಕ ಭಾವುಕತೆಯಲ್ಲಿ ತೇಲಿಸಿಬಿಡುವ ಭಾರತೀಯ ಲೇಖಕರ ಬಗ್ಗೆ ಬರೆಯುತ್ತ V.S. Naipaul ಖ್ಯಾತ ಕಾದಂಬರಿಕಾರ ಪ್ರೇಮಚಂದರ ಉದಾಹರಣೆಯನ್ನು ಕೊಡುತ್ತಾರೆ, ಪ್ರೇಮ ಚಂದರ ಒಂದು ಕಾದಂಬರಿಯ ಒಂದು ಸಾಲು ಹೀಗಿದೆ: “ಆ ವರ್ಷ, ಆ ಕುಟುಂಬಕ್ಕೆ ಎಷ್ಟು ಬಡತನ ಬಂದಿತೆಂದರೆ, ಭಿಕ್ಷುಕರು ಕೂಡ ಅವರ ಮನೆ ಬಾಗಿಲಿನಿಂದ ಬರಿಗೈಯಲ್ಲಿ ಹೋಗಬೇಕಾಯಿತು.” ನೈಪಾಲ್ ಉದ್ಧರಿಸುತ್ತಾರೆ,” That indeed is our Poverty; not the fact of beggary, but that beggers should have to go from our doors empty handed.” Naipaul ಇನ್ನೊಂದು ಕಡೆ ಬರೆಯುತ್ತಾರೆ: “The Sweetness and sadness which can be found in Indian writing and Indian films are a turning away from a too overwhelming reality; they reduce the horror to a warm virtuous emotion; Indian sentimentality is the opposite of concern.” ನಾನು ಮೇಲೆ ಉದಾಹರಿಸಿದ ಲೇಖಕರೆಲ್ಲ ಖಂಡಿತ ಪ್ರೇಮಚಂದರಷ್ಟು ಸರಳ ಮನಸ್ಕರಲ್ಲ, “ಮಲೆಗಳಲ್ಲಿ ಮದುಮಗಳು” ಬಗ್ಗೆ ನನ್ನ ಅಭಿಪ್ರಾಯ ಸರಿಯಿರಬಹುದೇ ಎಂಬ ಸಂಶಯ ನನಗಿನ್ನೂ ಇದೆ, ಆದರೆ ಒಟ್ಟಿನಲ್ಲಿ ನಮ್ಮ ಪ್ರಾದೇಶಿಕ ಕಾದಂಬರಿಗಳೆಲ್ಲ ಮೂಲಭೂತವಾಗಿ ನಮ್ಮ ಗ್ರಾಮೀಣ ಬದುಕಿನ ಕರಾಳ ಮುಖಗಳಿಗೆ ಕುರುಡಾಗಿದ್ದಾನೆ; ಖ್ಯಾತ್ ಇಟಾಲಿಯನ್ ವಾಮಪಂಥೀಯ ಅಂಟೋನಿಯೋ ಗ್ರಾಮ್ಷಿ (Antonio Gramsci) ಅವರ ಮಾತಿನಲ್ಲಿ ಹೇಳುವುದಾದರೆ ಅವೆಲ್ಲ ಯಥಾಸ್ಥಿತಿಯನ್ನು “Legitimatize’ ಮಾಡುತ್ತಾನೆ; ಅವು ಓದುಗನ ಮೇಲೆ ಹೇರುವುದು, “a culture of silence” ಎನ್ನುವ ನನ್ನ ಅಭಿಪ್ರಾಯದಲ್ಲಿ ನನಗೆ ಸಂಶಯವಿಲ್ಲ. ಆದ್ದರಿಂದ ಕನ್ನಡ ಕಾದಂಬರಿಗಳ ಪರಂಪರೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಯೋಚಿಸಿದಾಗ ಭಾರತೀಪುರ ಅನನ್ಯವಾಗಿದೆಯೆನ್ನಿಸುತ್ತದೆ.

ಭಾರತೀಪುರವಾದರೂ ನಮ್ಮ ಹಳ್ಳಿಗಳ ಬದುಕಿಗೆ ಮೂಲಾಧಾರವಾಗಿರುವ ಎಲ್ಲ ವಿಷಮ ಮನುಷ್ಯ ಸಂಬಂಧಗಳಿಗೂ ಸಮನಾಗಿ ಎಚ್ಚರವಾಗಿದೆಯೇ ಎಂಬುದರ ಬಗ್ಗೆ ನನಗೆ ಸಂಶಯವಿದೆ. ಹರಿಜನರನ್ನೊಳಗೊಂಡು, ನಮ್ಮ ದೇಶದ ಕೀಳು ಜಾತಿಗಳ ಬಹುತೇಕ ಜನ ಹಳ್ಳಿಗಳಲ್ಲಿ ಭೂಹೀನ ಕೃಷಿ ಕಾರ್ಮಿಕರಾಗಿರುವುದು, ವಂಚನೆಯ ಭೂ ಸುಧಾರಣೆಗಳ ದೆಸೆಯಿಂದ ರಾಷ್ಟ್ರಾದ್ಯಂತ ಒಕ್ಕಲೆಬ್ಬಿಸುವಿಕೆ (Evictions), ಸರ್ಕಾರದಿಂದ ಹೆಚ್ಚು ಹೆಚ್ಚು ಜನ ಗೇಣಿದಾರರು ತಮ್ಮ ಭೂಮಿ ಕಳೆದುಕೊಂಡು ಈ ನಿರ್ಗತಿಕ ಪಡೆಯನ್ನು ಈಗ ಸೇರಿಕೊಳ್ಳುವುದು, ಆಧುನಿಕ ವೈಜ್ಞಾನಿಕ ಕೃಷಿ ಸೌಲಭ್ಯಗಳು, ಒಂದೇ ಸಮನೆ ಏರುತ್ತಿರುವ ಆಹಾರಧಾನ್ಯಗಳ ಬೆಲೆಗಳು ಮತ್ತು ತಮಗೇ ಅನುಕೂಲವಾಗಿರುವ ಭೂಸುಧಾರಣೆ, ಇವುಗಳಿಂದ ಹಳ್ಳಿಯ ಊಳಿಗಮಾನ್ಯ ಜಮೀನ್ದಾರರು ಈಗ ಕೃಷಿಕಾರ್ಮಿಕರನ್ನು ದುಡಿಸುವ ಹಳ್ಳಿಯ ಬಂಡವಾಳಷಾಹಿಗಳಾಗುತ್ತಿರುವುದು, ಅಂದರೆ ಒಟ್ಟಿನಲ್ಲಿ ಗ್ರಾಮೀಣ ಪಾಳೆಯಗಾರೀ ಅರ್ಥವ್ಯವಸ್ಥೆಯು ಈಗ ನಿಧಾನವಾಗಿ ಸುಧಾರಣೆಗಳಿರಗಳಲ್ಲಿ ಭೂಹೀನ ಕಂಡು, ನಮ್ಮ ದೇಶದ ಬುದರ ಬಗ್ಗೆ

ಬಂಡವಾಳಷಾಹಿಯಾಗಿ ಮಾರ್ಪಡುತ್ತಿರುವುದು-ಗನ್ನಾರ್‌ ಮಿರ್ಡಾಲ್, ಪೂಲ್ಮ್ ಲಾಸೆಜಿನ್ಸಿಯಂತಹ ಲಿಬರಲ್ ಅರ್ಥಶಾಸ್ತ್ರಜ್ಞರೇ ವಿಶ್ಲೇಷಿಸುವ ಸ್ವಾತಂತ್ರ‍್ಯೋತ್ತರ ಭಾರತದ ಈ ಸತ್ಯಗಳ ಬಗ್ಗೆ ಭಾರತೀಪುರ ಎಚ್ಚರವಾಗಿಲ್ಲ ಎಂದು ನನಗನ್ನಿಸುತ್ತದೆ. ಜೊತೆಗೆ ಈ ದೇಶದ ರಾಜಕೀಯದಲ್ಲಿ ಅರ್ಥಪೂರ್ಣವಾಗಿರುವ ತೆಲಂಗಾಣ ಚಳುವಳಿ ಕೇರಳ ಮತ್ತು ಬಂಗಾಳ ಕಮ್ಯೂನಿಸ್ಟ್ ಸರಕಾರಗಳ ಅನುಭವಗಳು, ದುರಂತದಲ್ಲಿ ಕೊನೆಗೊಂಡ ನಕ್ಸಲೀಯ ಚಳುವಳಿ-ಇವುಗಳ ಮೂಲದಲ್ಲಿ ಭೂಮಿಯ ನ್ಯಾಯ ಬದ್ದ ಒಡೆತನದ ಪ್ರಶ್ನೆಗಳೇ ಇವೆ. ಇವು freak ಉದಾಹರಣೆಗಳೇ ಆಗಿರಬಹುದು ; ಆದರೆ ನಮ್ಮ ರಾಜಕೀಯದ ಕೆಲವು ಸಾಧ್ಯತೆಗಳನ್ನು ಇವು ಎತ್ತಿ ತೋರಿಸುತ್ತವೆ. ದೇಶಾದ್ಯಂತ ವಿಶೇಷವಾಗಿ ಬಿಹಾರ ಉತ್ತರ ಪ್ರದೇಶಗಳಲ್ಲಿ ಹರಿಜನರ ಮೇಲೆ ಸವರ್ಣೀಯರ ಹಲ್ಲೆಗಳಲ್ಲಿ ಹೆಚ್ಚಿನವು ಭೂಮಿಯ ಹೋರಾಟಕ್ಕೆ ಸಂಬಂಧಿಸಿದವು, ಈ ಎಲ್ಲ ರಾಜಕೀಯ ಬೆಳವಣಿಗೆಗಳಲ್ಲೂ ಆ ಪ್ರದೇಶಗಳ ಕೀಳು ಜಾತಿಯ ಜನರು ಉತ್ಸಾಹಿಗಳಾಗಿ ಭಾಗವಹಿಸಿದ್ದರಿಂದ, ಮತ್ತು ಭಾರತೀಪುರದ ಕಾಲ ವರ್ತಮಾನವಾದ್ದರಿಂದ ನಾನು ಈ ಉದಾಹರಣೆಗಳನ್ನು ಹೇಳುತ್ತಿದ್ದೇನೆ. ಆಸ್ತಿ ಸಂಬಂಧಗಳ ಮತ್ತು ಮನುಷ್ಯ ಸಂಬಂಧಗಳ ಅನ್ಯೋನ್ಯದ ಬಗ್ಗೆ ಕಾದಂಬರಿಯಲ್ಲಿ ಎಲ್ಲೋ ಒಂದೆರಡು ಕಡೆ ಹೇಳಿಕೆ ರೂಪದ ಮಾತುಗಳು ಮಾತ್ರ ಇವೆ. ಚೋಮನ ದುಡಿಯಲ್ಲಿ ಈ ವಿಷಮತೆಯೇ ಕಾದಂಬರಿಯುದ್ದಕ್ಕೂ ಹೇಗೆ ಮಾರ್ಮಿಕವಾಗಿ ಚಿತ್ರಿತವಾಗಿದೆ ಎಂದು ಕಲ್ಪಿಸಿಕೊಂಡರೆ ನನ್ನ ಮಾತು ಸ್ಪಷ್ಟವಾಗುತ್ತದೆ.

ಆದರೆ ಇದು ಕಾದಂಬರಿಯ ನಾಯಕನ ಪಾತ್ರ ಚಿತ್ರಣದ ಒಂದು ವಿರೋಧಾಭಾಸ ಎಂದು ನಾನು ಒಪ್ಪುವುದಿಲ್ಲ. ಜಗನ್ನಾಥ ನೈಜಕ್ರಾಂತಿಕಾರಿಯಾಗಿದ್ದರೆ, ಆತ ತನ್ನ ಅಸ್ತಿಯನ್ನೆಲ್ಲ ಏಕೆ ಹಂಚಿ ಬಿಡುವುದಿಲ್ಲ ಎಂದು ಒಬ್ಬ ವಿಮರ್ಶಕರು ಪ್ರಶ್ನಿಸಿದ್ದಾರೆ. ಇದು ಅಸಂಬದ್ಧವಾದ ಪ್ರಶ್ನೆ, ಏಕೆಂದರೆ ಭೂಮಿಯ ನ್ಯಾಯಬದ್ದ ಒಡೆತನದ ಪ್ರಶ್ನೆ ಬಗೆಹರಿಯಬೇಕಾದ್ದು ಪ್ರಜಾಸತ್ತಾತ್ಮಕ ಹೋರಾಟದ ಮುಖಾಂತರವೇ ಮತ್ತು ಪ್ರಜಾ ಸತ್ಯಾತ್ಮಕವಾದ ಹೋರಾಟಗಳಿಗೆ ತುಳಿಯಲ್ಪಟ್ಟವರಲ್ಲಿ ಪ್ರಜಾಸತ್ತಾತ್ಮಕವಾದ ಒತ್ತಾಸೆಗಳು ಇರಬೇಕಾಗುತ್ತದೆ, ಈ ದೇಶದ ಭೂಸುಧಾರಣೆಗಳು ಆಳುವ ಸರಕಾರದ ಒಂದು ಬೂಟಾಟಿಕೆಯ ನಾಟಕವಾಗಿರುವುದಕ್ಕೆ ಕಾರಣಗಳನ್ನು ಕೂಡುತ್ತ (Charaeಮಿರ್ಡಾಲ್ ನಮ್ಮ ಭೂ ಸುಧಾರಣೆಗಳಿಗೆ ಕೊಟ್ಟ ಹೆಸರು) ಈ ಕಾನೂನು ಗಳೆಲ್ಲ ಆಳುವವರು ತಮ್ಮ ಅಧಿಕಾರದ ಪ್ರಚಾರದ ರಾಜಕೀಯಕ್ಕೆ ಬಳಸಿಕೊಂಡ ತಂತ್ರಗಳಾಗಿದ್ದು ನೈಜ ಭೂ ಸುಧಾರಣೆಗೆ ಈ ದೇಶದ ಕೃಷಿ ಕಾರ್ಮಿಕರಿಂದ ಯಾವುದೇ ಪ್ರಜಾ ಸತ್ತಾತ್ಮಕವಾದ ಹೋರಾಟ ನಡೆಯದೆ ಇರುವುದರಿಂದ, ಇವು ಅವರ ಪಾಲಿಗೆ ವಂಚನೆಯಲ್ಲಿ ಕೊನೆಗೊಂಡಿವೆ ಎಂದು ಹೇಳುತ್ತಾರೆ. ಕಾದಂಬರಿಯ ನಾಯಕನ ಉದ್ದೇಶ ಹರಿಜನರನ್ನು ಭಾರತೀಯ ಸಂದರ್ಭದಲ್ಲಿ ಇಂತಹ ಪ್ರಜಾ ಸತ್ತಾತ್ಮಕ ಹೋರಾಟಕ್ಕೆ ತಯಾರು ಮಾಡುವುದೇ ಆಗಿದೆ, ಕಾದಂಬರಿಯ ಮುಕ್ತಾಯದ ಸಾಲುಗಳು ಇದನ್ನು ಅತಿ ಸ್ಪಷ್ಟಪಡಿಸುತ್ತವೆ. ಆತನ ಉದ್ದೇಶ Politicising, ತನ್ನ ಕ್ರಿಯೆಯನ್ನು, ಶತ ಮಾನಗಳ ಇತಿಹಾಸದಲ್ಲಿ ಹರಿಜನರು ಇಡುವ ಮೊದಲ ಹೆಜ್ಜೆ ಮಾತ್ರ ಎಂದು ಆತ ಭಾವಿಸಿರುವುದನ್ನು ಕಾದಂಬರಿಯಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಲಾಗಿದೆ. ಉದಾಹರಣೆಗಳು ಅನಗತ್ಯ.

ಜಗನ್ನಾಥನ ಪಾತ್ರ ಚಿತ್ರಣ ವಿರೋಧಾಭಾಸಗಳಿಂದ ಕೂಡಿದೆ ಎಂದು ಸಾಧಿಸಲು ಶ್ರೀ- ಎನ್. ಎಸ್, ರಘುನಾಥ್ ಭಾರತೀಪುರವನ್ನು ಗಾರ್ಕಿಯ ‘ತಾಯಿ’ ಕಾದಂಬರಿಗೆ ಹೋಲಿಸಿದ್ದಾರೆ. (ಸಂಕ್ರಮಣ 58) ಈ ಹೋಲಿಕೆಯೂ ಸರಿಯಲ್ಲವೆಂದು ನನಗನ್ನಿಸುತ್ತದೆ. ಗಾರ್ಕಿ ತನ್ನ ಕಾದಂಬರಿಯ ಎಲ್ಲ ಪಾತ್ರಗಳೊಡನೆಯೂ ತಾದಾತ್ಮ್ಯವನ್ನು ಹೊಂದುತ್ತಾನೆ. ಕಾದಂಬರಿಯ ನಾಯಕರಾದ ಪಾವೆಲ್ ಮತ್ತು ಆತನ ತಾಯಿ ಮಾತ್ರವೇ ಅಲ್ಲದೆ ಉಳಿದ ಪಾತ್ರಗಳೂ ಗಾರ್ಕಿಯ ವಕ್ತಾರರೇ. ಕಾದಂಬರಿಯುದ್ದಕ್ಕೂ ಒಂದು ಕ್ರಾಂತಿಕಾರೀ ಉತ್ಸಾಹ ವಿಜೃಂಭಿಸಿದ್ದು ಗಾರ್ಕಿ ಕೂಡ ಆ ಉತ್ಸಾಹದಲ್ಲಿ ಭಾಗಿ ಯಾಗುತ್ತಾನೆ, ‘ತಾಯಿ’ ಮೊದಲು ಪ್ರಕಟವಾದ ವರುಷ 1907 ಎಂದು ಜ್ಞಾಪಿಸಿ ಕೊಂಡರೆ, ಅಂದಿನ ಸಿಡಿಮದ್ದಿನ ಕೋಟೆಯಾಗಿದ್ದ ರಷ್ಯವನ್ನು ನೆನೆಸಿಕೊಂಡರೆ ಗಾರ್ಕಿ ತನ್ನಲ್ಲಿ ಉತ್ಸಾಹ ಆವೇಶಗಳನ್ನು ಇರಿಸಿಕೊಂಡೂ ರಷ್ಯದ ವಾಸ್ತವವನ್ನೇ ಚಿತ್ರಿಸು ತಿದ್ದಾನೆಂದು ತಿಳಿಯುತ್ತದೆ. ಆದರೆ ಭಾರತೀಪುರದಲ್ಲಿ ಎಲ್ಲಿಯೂ ಇಂತಹ ಸಾರ್ವತ್ರಿಕವಾದ ಕ್ರಾಂತಿಕಾರಿ ಉತ್ಸಾಹ ಕಾಣಿಸುವುದೇ ಇಲ್ಲ, ಏಕೆಂದರೆ ನಮ್ಮ ಸದ್ಯದ ವಾಸ್ತವ ಇಂತಹ ಉತ್ಸಾಹವನ್ನು ಪ್ರಚೋದಿಸುವಂತಹದ್ದಲ್ಲ. ಅಲ್ಲದೆ ಪಾವೆಲ್ ಗಾರ್ಕಿಯ ವಕ್ತಾರನಾಗಿರುವಂತೆ ಜಗನ್ನಾಥ ಅನಂತಮೂರ್ತಿ ಅವರ ವಕ್ತಾರನಲ್ಲ: ಸಂಪೂರ್ಣವಾಗಿ ಅಲ್ಲ, ಅವರು ಎಲ್ಲ ಕೃತಿಗಳ ನಾಯಕರೂ ಲೇಖಕನಿಂದ ಒಂದು distanceನಲ್ಲಿಯೇ ಇರುತ್ತಾರೆ. ಈ distance ಇರುವುದರಿಂದಲೇ ತನ್ನ ನಾಯಕರನ್ನು ವ್ಯಂಗ್ಯದಲ್ಲಿಯೂ ಚಿತ್ರಿಸುವುದು ಲೇಖಕರಿಗೆ ಸಾಧ್ಯವಾಗುತ್ತದೆ, ಜಗನ್ನಾಥ ತನ್ನ ಕ್ರಿಯೆಯನ್ನು ನಿಶ್ಚಯಿಸಿಕೊಂಡು ಪತ್ರಿಕೆಗಳ ಸಂಪಾದಕರಿಗೆ ಪತ್ರ ಬರೆಯುವುದು, ಹೊಲೆಯರಿಗೆ ಅಕ್ಷರಾಭ್ಯಾಸ ಮಾಡಿಸುವುದು, ಆತ ಕೊಟ್ಟ ಹೊಸಬಟ್ಟೆಯಲ್ಲಿ ಹೊಲೆಯರು ಹಾಸ್ಯಾಸ್ಪದವಾಗುವುದು, ಅವರ ಕೈಯಲ್ಲಿ ಸಾಲಿಗ್ರಾಮ ಮುಟ್ಟಿಸುವುದು, ಕೊನೆಗೆ ಅವರೆಲ್ಲ ದೇವಾಲಯದ ಒಳಗೆ ನುಗ್ಗುವುದು, ಮೊದಲಿನ ಈ ಎಲ್ಲವಕ್ಕೂ ಕಳಶವಿಡುವಂತೆ ಮಂಜುನಾಥನೇ ಗರ್ಭಗುಡಿಯಲ್ಲಿ ಕಾಣೆಯಾಗಿರುವುದು ತನ್ನ ನಾಯಕನಲ್ಲಿ ಸಂಪೂರ‍್ಣ ತಾದಾತ್ಮ ಹೊಂದಿ ಆತನನ್ನು ತನ್ನ ಪೂರ್ಣ ವಕ್ತಾರನನ್ನಾಗಿ ಮಾಡಿಕೊಳ್ಳುವ ಲೇಖಕ ಇಂತಹ ಪ್ರಸಂಗಗಳನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ ?

ಜಗನ್ನಾಥ ಅಪೂರ್ಣ ಕ್ರಾಂತಿಕಾರಿಯೆಂಬುದು ನಿಜ, ಆದರೆ ಲೇಖಕರ ಉದ್ದೇಶವೇ ಒಬ್ಬ ಅಪೂರ್ಣ ಕ್ರಾಂತಿಕಾರಿಯನ್ನು ಚಿತ್ರಿಸುವುದಾಗಿದೆ. ಈ ಅಪೂರ್ಣತೆಯ ಮೂಲವಿರುವುದು ಅಮೂರ್ತ ತತ್ವ ಮತ್ತು ವಾಸ್ತವಗಳ ನಡುವಿನ ದ್ವಂದ್ವದಲ್ಲಿ, ತತ್ವ ಮತ್ತು ವಾಸ್ತವಗಳ ನದುವಿನ ಅಂತರವನ್ನೂ, ತತ್ವ ಕ್ರಿಯೆಯಾಗುವಾಗ ಪಡೆಯಬಹುದಾದ ಬರ್ಬರತೆಯನ್ನೂ ಗಮನದಲ್ಲಿಟ್ಟುಕೊಂಡೂ ಕಾದಂಬರಿ ಬದಲಾವಣೆಗೆ ಕ್ರಾಂತಿಗೆ ನಿಷ್ಠೆ ತೋರಿಸುತ್ತದೆ.

ಉದಾಹರಣೆಗೆ ಕಾದಂಬರಿಯ ಈ ಕೆಳಗಿನ ಪ್ಯಾರಾಗಳನ್ನು ನೋಡಿರಿ, ಹೊಲೆಯರ ಗುಡಿಸಲಿಗೆ ಬೆಂಕಿ ಬಿದ್ದು, ಅವರಲ್ಲೊಬ್ಬ ಹುಡುಗ ಸತ್ತ, ಅವರೆಲ್ಲರೂ ಗೋಳಿಡುವಂತಹ ಪ್ರಸಂಗವನ್ನು ನೀಲಕಂಠಸ್ವಾಮಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಸಂದರ್ಭ :

“ಅಲ್ಲೋ ಜಗಣ್ಣ, ಈ ರಾಜಕೀಯದ ಜನ ವಿಚಿತ್ರವಪ್ಪ, ನಿಮ್ಮ ನೀಲಕಂಠ ಸ್ವಾಮಿನ್ನ ನೋಡು……………..”

ಜಗನ್ನಾಥನಿಗೆ ನೋವಾಯಿತು.

“ಅಡಿಗರೆ, ನಿಮ್ಮ ಅನುಭವದ ಹಿಂದೆ ದೇವಸ್ಥಾನವಿದೆ, ದುಡ್ಡಿದೆ, ಮೂಢನಂಬಿಕೆಯಿದೆ, ಅಪರಾತ್ರೀಲಿ ಬೆಂಕಿ ಹಚ್ಚಿ ಮಕ್ಕಳನ್ನ ಕೊಲ್ಲೋರಿದಾರೆ, ಹಾಗೇ ನನ್ನಂಥವರ ಹಿಂದೆ ಕುಟಿಲ ರಾಜಕಾರಣ ಮಾಡೋರಿದಾರೆ. ಆದರೆ ಇವುಗಳ ನಡುವೆ ನನಗೇನು ಅನ್ನಿಸುತ್ತೆ ಹೇಳಲ ? ನಿಮ್ಮಂಥವರ ಅಲೌಕಿಕ ದುಃಖಕ್ಕಿಂತ ಈಗ ನೀಲಕಂಠಸ್ವಾಮಿ ಫೋಟೋ ಹಿಡಿದು ಮಾಡ್ತಿರೋ ಕೆಲಸವಿದೆಯಲ್ಲ-ಆದೇ ಹೆಚ್ಚು ಅರ್ಥಪೂರ್ಣ.”

ಹೇಳಿದ ಮಾತಿನಲ್ಲಿ ಅನುಮಾನವಿದ್ದರೂ ಅದನ್ನೊಂದು ಕ್ಷಣ ಗೆದ್ದು ಜಗನ್ನಾಥ ಮಾತಾಡಿದ್ದ. (ಪುಟ ೨೨೯), ಬಹುಶಃ ಇಂತಹ ಎಲ್ಲೋ ಒಂದೆರಡು ಕಡೆ ಜಗನ್ನಾಥ ಅನಂತಮೂರ್ತಿಯವರ ವಕ್ತಾರನಾಗುತ್ತಾನೆ ಎಂದು ಕಾಣುತ್ತದೆ. ಸಂಕೀರ್ಣವಾಗಿ ವ್ಯಕ್ತವಾಗುವ ಈ ನಿಷ್ಠೆಯನ್ನು ನಾನು ಏಕೆ ಮೆಚ್ಚಿಕೊಳ್ಳುತ್ತೇನೆ ಎಂಬುದಕ್ಕೆ ಕನ್ನಡದ ಇಬ್ಬರು ಧಿಮಂತರ ಉದಾಹರಣೆಯನ್ನು ಕೊಡುತ್ತೇನೆ, ತತ್ವ ಮತ್ತು ಬದುಕಿನ ನಡುವೆ ನಿರಂತರವಾಗಿ ಇರುವ ದ್ವಂದ್ವ ನಮ್ಮ ಲೇಖಕರಲ್ಲಿ ಗಂಭೀರವಾಗಿ ಪರಿಶೀಲನೆಗೆ ಒಳಪಟ್ಟಿರುವುದು ಕಾದಂಬರಿಗಳಲ್ಲಿ ಕಾರಂತರ ಕೃತಿಗಳಲ್ಲಿ ಮತ್ತು ಕಾವ್ಯದಲ್ಲಿ ಗೋಪಾಲ ಕೃಷ್ಣ ಅಡಿಗರಲ್ಲಿ. ಆದರೆ ಇಬ್ಬರೂ ಈ ದ್ವಂದ್ವದಲ್ಲಿ ತಮ್ಮ ನಿಷ್ಠೆಯನ್ನು ಹೇಗೆ ರೂಪಿಸಿಕೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾದದ್ದು. ಕಾರಂತರು ಹೆಣ್ಣು ಗಂಡಿನ ಸಂಬಂಧದಲ್ಲಿ ಸ್ವತಂತ್ರವಾದ, ಆರೋಗ್ಯಕಾರಿಯಾದ ಧೋರಣೆ ತೋರಿಸಿದ ಕನ್ನಡ ಲೇಖಕರಲ್ಲಿ ಮೊದಲಿಗರು ; ಧಾರ್ಮಿಕ ಶ್ರದ್ದೆ .ಹೇಗೆ ಆತ್ಮವಂಚನೆ ಪರವಂಚನೆಗೆ ದಾರಿ ಮಾಡಿಕೊಡ ಬಹುದು ಎಂದು ಚಿತ್ರಿಸಿದವರಲ್ಲಿಯೂ ಮೊದಲಿಗರು, ಸ್ಪಷ್ಟ ಪ್ರಮಾಣಗಳುಳ್ಳ ವೈಜ್ಞಾನಿಕ ಕ್ಷೇತ್ರದಲ್ಲಿ ಕನ್ನಡದ ಬೇರಾವುದೇ ಲೇಖಕನಿಗೆ ಇಲ್ಲದಷ್ಟು ಅವರಿಗಿರುವ ಒಲವು ಅವರ ಮನೋಧರ್ಮದ ಒಂದು ಮುಖವನ್ನು ತೋರಿಸುತ್ತದೆ. ಆದರೆ ಅವರು ಆಸ್ತಿ ಸಂಬಂಧಗಳಲ್ಲಿ, ವರ್ಗ ಸಂಬಂಧಗಳಲ್ಲಿ, ರಾಜಕೀಯದಲ್ಲಿ ಏಕೆ ಯಥಾಸ್ಥಿತಿವಾದಿಗಳಾಗುತ್ತಾರೆ ಎಂಬುದು ಕುತೂಹಲದ ವಿಷಯ.

ಭಾರತೀಪುರವನ್ನು ಓದುತ್ತಿದ್ದಂತೆ ನನಗೆ ಮೇಲಿಂದ ಮೇಲೆ ನೆನಪಿಗೆ ಬಂದದ್ದು ಅಡಿಗರ, “ಆನಂದ ತೀರ್ಥರಿಗೆ ಕವನದ ಈ ಸಾಲುಗಳು:

ಇಲ್ಲಿ ಕಟ್ಟಿಗೆ ತೇರು ವರ್ಷ ವರ್ಷಕ್ಕೇರು
ಅಕ್ಕಿ ಮುಡಿ ಮುಡಿ ವಾದಿರಾಜ ಗುಳ್ಳ
ಪ್ರಾಣ ಮುಖ್ಯರ ಮುಟ್ಟು, ಚಟ್ಟು ತೊಟ್ಟಿಗಳಲ್ಲಿ
ನಿಂತ ನೀರಿನ ವಾಸ ಸುತ್ತಲೆಲ್ಲ.

ಆದರೆ ಆ ಕವಿತೆಯ ಕೊನೆಯ ಸೊಲ್ಲಿನಲ್ಲಿ ಆನಂದ ತೀರ್ಥರನ್ನು ಉದ್ದೇಶಿಸಿ, “ನಿಮ್ಮ ನಿಮ್ಮಂಥವರ ಕಾದು ಕುಳಿತಿದೆ ತೀರದಾಸೆ” ಎಂಬ ಮಾತು ಬರುತ್ತದೆ, ಮೊದಲಿನ ನಾಲ್ಕು ಸಾಲುಗಳು ಮತ್ತು ಈ ಸಾಲು ಎರಡೂ ಅವರ ಶ್ರದ್ದೆಗೆ ಪ್ರಾತಿನಿಧಿಕವಾದವು: ಕಾರಂತರು ಮತ್ತು ಅಡಿಗರು ಇಬ್ಬರೂ ನೆಹರೂ ಯುಗದ ರಾಜಕೀಯಕ್ಕೆ ಪ್ರತಿರೋಧವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಭಾರತೀಪುರದ ಗುರಪ್ಪ ಗೌಡನಂತಹವರ ಭಂಡ ರಾಜಕೀಯವೇ ಇಬ್ಬರ ಕೋಪಕ್ಕೂ ತುತ್ತಾಗಿದೆ. ಆದರೆ ಗುರಪ್ಪ ಗೌಡನಂತಹವರ ರಾಜಕೀಯದ ಹಿಂದೆ ಒಂದು ವರ್ಗದ ಒತ್ತಾಸೆಗಳಿವೆ ಎಂಬುದನ್ನು ಇವರು ಗಮನಿಸಿದಂತಿಲ್ಲ. ಆದ್ದರಿಂದಲೇ ನೆಹರೂ ಯುಗದ ಸುಳ್ಳು ಸಮಾಜವಾದವನ್ನೇ ಇಬ್ಬರೂ ನಿಜವೆಂದು ಭಾವಿಸಿದರು, ಮತ್ತು Communist totalitarian state ಇನ್ನೇನು ಬಂದೇಬಿಡುತ್ತದೆ ಎಂದು ನಂಬಿದರು. ಆದರೆ ವಾಸ್ತವ ಅದಕ್ಕೆ ತದ್ವಿರುದ್ಧವಾದದ್ದು ಎಂಬುದು ಈಗ ಎಲ್ಲರಿಗೂ ತಿಳಿದಿರುವ ವಿಷಯ, ನೆಹರೂ ಯುಗದಲ್ಲಿಯೇ ಶ್ರೀಮಂತರು ಇನ್ನಷ್ಟು ಶ್ರೀಮಂತವಾಗುತ್ತ ಹೋದದ್ದು ಮತ್ತು ಬಡವರು ಪಾತಾಳಕ್ಕಿಳಿದದ್ದು ಬಹುಶಃ ಸ್ವತಂತ್ರಪಕ್ಷ ಕೂಡಾ ನಿರಾಕರಿಸಲಾರದ ಸತ್ಯ ಇದು. ಇಬ್ಬರೂ ಸಂಘಟಿತ ಕಾರ್ಮಿಕ ವರ್ಗವನ್ನು ಜೀವನದಲ್ಲಿ ಅಮೂಲ್ಯವಾದದ್ದನ್ನೆಲ್ಲ ಗುಂಪಿನ ಬಲದಲ್ಲಿ ಕೊಚ್ಚಿ ಹಾಕುವ ತೋಳಗಳ ಮಂದೆ ಎಂದೇ ತಿಳಿದರು, ಆದರೆ ಸ್ವಾತಂತ್ರ‍್ಯೋತ್ತರ ಭಾರತದ ಕಾರ್ಮಿಕ ಚಳುವಳಿಯ ಇತಿಹಾಸ ಬಲ್ಲವರಿಗೆ, ಈ ದೇಶದ ಕಾರ್ಮಿಕ ವರ್ಗದಿಂದ ಈ ದೇಶದ ಪಟ್ಟಭದ್ರ ವ್ಯವಸ್ಥೆಗೆ ಎಂದೂ ಅಪಾಯ ತಟ್ಟಿದ್ದಿಲ್ಲವೆಂದೂ, ನಾನಾಕಾರಣಗಳಿಂದ ಈ ದೇಶದ ಒಟ್ಟು ಕಾರ್ಮಿಕ ಚಳುವಳಿ ಕೇವಲ ಸಂಬಳ ಸಾರಿಗೆಯ ಆರ್ಥಿಕ ಪ್ರಶ್ನೆಗಳಿಗೆ ಸೀಮಿತವಾಗಿದ್ದು “Economism” ಎಂದು ಲೆನಿನ್ ಕರೆಯುವ ಇಂತಹ ಚಳುವಳಿಗಳು ಇಂಗ್ಲೆಂಡ್ ಅಮೇರಿಕೆಗಳಲ್ಲಿಯೂ ನಡೆಯುತ್ತವೆ ಎಂಬುದೂ ಗೊತ್ತಿದೆ. ಒಟ್ಟಿನಲ್ಲಿ ಕನ್ನಡದ ಈ ಇಬ್ಬರು ಶ್ರೇಷ್ಠ ಬುದ್ದಿಜೀವಿಗಳ ರಾಜಕೀಯ ಶ್ರದ್ದೆ ಒಬ್ಬ smug ಸದ್ಗೈಹಸ್ಥನ ಶ್ರದ್ದೆಯಷ್ಟು ಸರಳವಾದದ್ದು ಎಂದು ಹೇಳದೆ ವಿಧಿಯಿಲ್ಲ.

ಜಮಿನ್ದಾರ ಜಗನ್ನಾಥನಿಗೆ ಕ್ರಾಂತಿ ತನ್ನನ್ನು ನಿಜ ಮಾಡಿಸಿಕೊಳ್ಳಲಷ್ಟೇ ಬೇಕಾಗುತ್ತದೆ; ಅದು ಆತನಿಗೆ ಲಕ್ಷುರಿ ಎಂಬ ಒಂದು ವಾದವಿದೆ. “ಭಾರತೀಪುರದ ಧೋರಣೆಯಲ್ಲಿ ಕ್ರಾಂತಿಯ ಧ್ವನಿ ಇರುವುದಾದರೂ ಅದು ದಲಿತರಲ್ಲ” (ದಲಿತ-೧) ಎಂದು ಡಾ. ಬುದ್ದಣ್ಣ ಹಿಂಗಮಿರೆ ಅವರು ಹೇಳುವಾಗ ಬಹುಶಃ ಅವರೂ ಹೀಗೆಯೇ ಯೋಚಿಸಿರಬೇಕು, ಬ್ರಾಹ್ಮಣ ಜಗನ್ನಾಥ ಹರಿಜನರನ್ನು ಉಪಯೋಗಿಸಿಕೊಳ್ಳುತ್ತಾನೆ ಎಂಬ ಭಯಂಕರವಾದ ಒಂದು ವಾದವೂ ಇದೆ, ಕಾದಂಬರಿಯ, ಜಗನ್ನಾಥನನ್ನು ಬಿಟ್ಟರೆ ಉಳಿದ ಮೂರು ಮುಖ್ಯ ಪಾತ್ರಗಳಾದ ಅಡಿಗ, ಪುರಾಣಿಕ ಮತ್ತು ಶ್ರೀಪತಿ ರಾಯರ ಪಾತ್ರ ಚಿತ್ರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ವಾದ ಹುರುಳಿಲ್ಲದ್ದು ಎಂದು ಅನ್ನಿಸುತ್ತದೆ. ಭಾರತೀಪುರದ ಅಸಹ್ಯವಾದ ವಾಸ್ತವದಿಂದ ಪುರಾಣಿಕರು ಮತ್ತು ಅಡಿಗರು ತಪ್ಪಿಸಿಕೊಳ್ಳಬಲ್ಲರು, “Westernise yourself and stay sane ಎಂದು ಹೇಳುವ, ಪಾತ್ರಚಿತ್ರಣದ ವಿವರಗಳಲ್ಲಿ, ಆಲೋಚನೆಯ ಧಾಟಿಯಲ್ಲಿ ಮತ್ತೆ ಮತ್ತೆ ಶ್ರೀ: ನೀರದ ಚೌಧುರಿ ಅವರನ್ನು ನೆನಪಿಗೆ ತರುವ ಪುರಾಣಿಕರು ಈ ಅಸಹ್ಯ ವಿಷಮತೆಗಳಿಂದ ತಪ್ಪಿಸಿಕೊಂಡೂ ಸೂಕ್ಷವಾಗಿರಬಲ್ಲರು; ಅವರ ಒ.ಡಿ, ತಳಮುಟ್ಟುವವರೆಗೆ, ಪುರಾಣಿಕರ ತದ್ವಿರುದ್ದವಾದ ಅಡಿಗರೂ ಇವುಗಳಿಂದ, ತನ್ನ ಸ್ವಂತ ಸಂಸಾರ ತಾಪತ್ರಯಗಳಿಂದಲೂ ಕೆಲಕ್ಷಣಗಳಾದರೂ ತಪ್ಪಿಸಿಕೊಂಡು, ಅವನ್ನು ಮೀರಿ ಇರಬಲ್ಲರು, ವಿಷ್ಣು ಕಾಂತಿಯನ್ನು ಕುಡು ನೀಲಮೇಘಶ್ಯಾಮನನ್ನು ನೆನೆಸಿ ಅಳುವಷ್ಟು ಪರವಶರಾಗಬಲ್ಲ, ಹಸಿವಿಲ್ಲದವನಿಗೂ ಹಸಿವಾಗಬೇಕೆನ್ನುವಷ್ಟು ರುಚಿ ಸುಖಗಳಿಂದ ಊಟ ಮಾಡಬಲ್ಲ ಅಡಿಗರು ನಮ್ಮ ಆರ್ಷೇಯ ಸಂಸ್ಕೃತಿಯ ಶಕ್ತಿ ದೌರ್ಬಲ್ಯಗಳೆರಡಕ್ಕೂ ಉದಾಹರಣೆ. ಅಡಿಗರ ಪಾತ್ರಚಿತ್ರಣ “ಅನಂತಮೂರ್ತಿಯವರದ್ದೇ’ ಭಾರತೀಯ ಸಂಸ್ಕೃತಿ ಮತ್ತು ಲೇಖಕ ಪ್ರಬಂಧದ ಈ ಮಾತುಗಳನ್ನು ನೆನಪಿಗೆ ತಂದುಕೊಡುತ್ತವೆ : “ಯಾವ ಫೋಕಸ್ಸೂ ಇಲ್ಲದ ಸಂಸ್ಕೃತಿ ನಮ್ಮದಾದ್ದರಿಂದ ಎಲ್ಲವನ್ನೂ ಒಪ್ಪಿಕೊಳ್ಳುವ ಈ ಭೋಳೆತನ ಸುಲಭಸಾಧ್ಯವಾಗುತ್ತದೆ……………ಆದರೆ ಏನನ್ನೂ ನಿರಾಕರಿಸದೆ ಎಲ್ಲವನ್ನೂ ಸ್ವೀಕರಿಸುವ ನಮ್ಮ ಸಂಸ್ಕೃತಿಯ ಧೋರಣೆಗಳು ಯಾವ ಸ್ಪಷ್ಟ ರೂಪಚರ್ಯೆಯೂ ಇಲ್ಲದ ಮುದ್ದೆಯಾದ ಈ ಮನೋಧರ್ಮವನ್ನು ಉಂಟುಮಾಡಿದಂತೆಯೇ ಸೃಷ್ಟಿಯಲ್ಲಿ ವೀರ್ಯವತ್ತಾದುದರ ಜೊತೆ ಸಂಪರ್ಕ ಪಡೆದಿದ್ದ ಎಲ್ಲ ಸಂಕೋಚ ಗಳನ್ನೂ ಕಿತ್ತೊಗೆದಿದ್ದ ರಾಮಕೃಷ್ಣ ಪರಮಹಂಸರಂತಹವರಿಗೂ ಪ್ರೇರಕವಾಗಬಲ್ಲದು ಎಂಬುದನ್ನು ಮರೆಯಕೂಡದು.” (ಅಡಿಗರ ಪಾತ್ರಚಿತ್ರಣದ ಬಗ್ಗೆ, “ಆತ ಒಬ್ಬ ನಿರುಪಯೋಗಿ ಕೂಳುಬಾಕೆ” ಎಂಬ ಅತ್ಯಂತ ಮೂರ್ಖ ಪ್ರತಿಕ್ರಿಯೆಯೊಂದನ್ನು ಒಬ್ಬ ವಿಮರ್ಶಕರು ವ್ಯಕ್ತಪಡಿಸಿರುವುದರಿಂದ ಈ ವಿವರಣೆ ಕೊಡಬೇಕಾಗಿದೆ.) ಆದರೆ ಹೀಗೆ ತನ್ನನ್ನು Westernise ಮಾಡಿಕೊಂಡು ಭಾರತೀಪುರದಿಂದ ದೂರನಿಲ್ಲುವ ಪುರಾಣಿಕರ ಮಾರ್ಗವಾಗಲೀ, ಹಿಂದೂ ಪರಂಪರೆ ಮಾತ್ರ ಸೃಷ್ಟಿಸಬಲ್ಲ ಅಡಿಗರ ತೀವ್ರ ಆರ್ಷೇಯ ಶ್ರದ್ದೆಯಾಗಲೀ ಭಾರತೀಪುರದ ಬಹುಸಂಖ್ಯಾತರಿಗೆ ನಿರುಪಯೋಗಿ ಭಾರತೀಪುರದ ವಾಸ್ತವವನ್ನು ಮೀರಿ ನಿಲ್ಲಲು, ಕಡೆಗೆ ಮರೆಯಲಾದರೂ ಎಲ್ಲರೂ ಪುರಾಣಿಕರಂತಾಗುವುದು ಅಥವಾ ಅಡಿಗರಂತಾಗುವುದು ಅಸಾಧ್ಯ, ಅಂದರೆ ಪುರಾಣಿಕರ ಆಂಗ್ಲೀಕರಣವಾಗಲೀ, ಅಡಿಗರ ಶ್ರದ್ದೆಯಾಗಲೀ, ಶ್ರೀಪತಿರಾಯರ common sense ಆಗಲೀ ಸಾರ್ವತ್ರಿಕ ಮೌಲ್ಯಗಳಾಗಲಾರವು; ಅನ್ಯಾಯಕ್ಕೊಳಗಾದವರಿಗೆ ಸ್ವಾತಂತ್ರ್ಯದ ವಾಹಕಗಳಾಗಲಾರವು. ಆದ್ದರಿಂದಲೇ ಜಗನ್ನಾಥ ಉದ್ದೇಶಿಸಿದ ಕ್ರಿಯೆಗೆ ಅರ್ಥ ಬರುತ್ತದೆ. ಜಮೀನುದಾರನ ಮಗನೊಬ್ಬ ಇಂಗ್ಲೆಂಡಿನಲ್ಲಿ ಓದಿ ಬಂದವ ಎಷ್ಟರಮಟ್ಟಿಗೆ ನಿಜವಾದ ಕ್ರಾಂತಿಕಾರಿಯಾಗಬಲ್ಲ ಎಂಬ ಪ್ರಶ್ನೆಯೂ ಈಗ ಎದ್ದಿದೆ. ಇದು ಜಗನ್ನಾಥ ಕಾದಂಬರಿ ಯೊಂದರ ಪಾತ್ರ ಎಂಬುದನ್ನು ಮರೆತು ನಮಗೆ ಪರಿಚಯವಿರುವ ಜೀವಂತ ವ್ಯಕ್ತಿ ಎಂಬ ಬಾಲಿಶವಾದ ಆದರೆ ಕಾದಂಬರಿಗಳ ವಿಮರ್ಶೆಯಲ್ಲಿ ಸಾಮಾನ್ಯವಾಗಿರುವ ತಪ್ಪು ಕಲ್ಪನೆಯಿಂದ ಹುಟ್ಟಿದ್ದು, ಜಗನ್ನಾಥ ವಿರೋಧಾಭಾಸಗಳುಳ್ಳ ಪಾತ್ರ ಎಂದರೆ. ಕಾದಂಬರಿಯ ಯಾವ ಪಾತ್ರ ವಿರೋಧಾಭಾಸಗಳಿಂದ ಕೂಡಿಲ್ಲ ? ಪುರಾಣಿಕರು, ಶ್ರೀಪತಿ ರಾಯರು, ಅಡಿಗರು, ಪ್ರಭು, ನಾಗರಾಜ ಶಾಸ್ತ್ರಿಗಳು, ಗಣೇಶ, ವಾಸು, ಸತ್ಯ ಪ್ರಕಾಶ, ನೀಲಕಂಠಸ್ವಾಮಿ, ಕೊನೆಗೆ PRT. ಕೂಡ ವಿರೋಧಾಭಾಸಗಳುಳ್ಳ ಪಾತ್ರಗಳೇ, ಆದರೆ ಈ ವಿರೋಧಾಭಾಸಕ್ಕೆ ಕಾದಂಬರಿಕಾರರ ಅಪಕ್ವ ಚಿಂತನೆ ಕಾರಣವಲ್ಲ ಸದ್ಯದ ನಮ್ಮ ಸಮಾಜ ಜೀವನದ ವಿರೋಧಾಭಾಸಗಳೇ ಇಲ್ಲಿ ಮೈದಳೆದಿವೆ. ಬ್ರಾಹ್ಮಣ, ಜಮೀನ್ದಾರ, ಇಂಗ್ಲೆಂಡಿಗೆ ಹೋಗಿ ಬಂದವ ಇತ್ಯಾದಿ ಇತ್ಯಾದಿ ಆಗಿರುವ ಜಗನ್ನಾಥ ಪಾತ್ರದ ಕಲ್ಪನೆಯೇ ಅಸಂಬದ್ದ ವೆನ್ನುವವರಿಗೆ, ನಾನು ತೀರ ಇತ್ತೀಚೆಗೆ ಪ್ರಕಟವಾದ, ಖ್ಯಾತ ಝಕ್ ಬುದ್ದಿಜೀವಿ (ಈಗ ದೇಶಭ್ರಷ್ಟ) Antonin J Liehm ಅವರು ಸಂಪಾದಿಸಿರುವ, “The politics of culture” ಪುಸ್ತಕದ ಅವರ ಮುನ್ನುಡಿಯ ಮಾತುಗಳನ್ನು ಹೇಳಬಯಸುತ್ತೇನೆ. ವಿಷಯಕ್ಕೆ ನೇರವಾಗಿ ಸಂಬಂಧಿಸಿರುವುದರಿಂದ, ನನ್ನ ವಾದಕ್ಕೆ ಬೇಕಾದ ಎಲ್ಲ ಸಮರ್ಥನೆಗಳೂ ಅಲ್ಲಿರುವುದರಿಂದ ಸ್ವಲ್ಪ ದೀರ್ಘವಾಗಿಯೇ ಉದ್ದರಿಸುತ್ತೇನೆ. Liehm ಬರೆಯುತ್ತಾರೆ:

“No socialist or revolutionary movement can do without intellectuals. The majority of intellectuals tend to come from bourgeois backgrounds and are full of the best intentions … . . . .. Neither Marx nor Engels suffered from such complex (guilt), it did not occur to them to apologise to the workers for their nonproletarian origins or to think that some loudmouth had to be correct simply because he came from the working class

“A bourgeois intellectual about to join the revolutionary socialist movement faces the challenge of a double liberation. The first is liberation from the class of his origin, which is relatively easy since it really involves only a radical rejection. The second liberation is much more difficult because it means freeing oneself from an inferiority comlex and a sense of guilt. The twofold liberation requires a good deal of sacrifice. It is paid for by the necessity of giving up many pleasant things and living through a period of suspicion and lack of confidence. But the freedom gained as a result more than makes up for the cost involved.”

ಆದ್ದರಿಂದಲೇ ಹರಿಜನರ ಸ್ವಾತಂತ್ರ್ಯ ಜಗನ್ನಾಥನ ಸ್ವಾತಂತ್ರ್ಯಕ್ಕೋಸ್ಕರವೂ ಅವಶ್ಯ ; ಮತ್ತು ಜಗನ್ನಾಥನ ಸ್ವಾತಂತ್ರ್ಯದ ಹಂಬಲ ಕ್ರಾಂತಿ ವಿರೋಧಿಯಾಗುವುದಿಲ್ಲ.

೨೬೮ ಪುಟಗಳ ಈ ಕಾದಂಬರಿಯಲ್ಲಿ Hair splitting ವಿಮರ್ಶೆಗೆ ಸಾಕಷ್ಟು ಅವಕಾಶವಿದೆ, ಆದರೆ ಪ್ರಜಾಪ್ರಭುತ್ವದ ಶಿಶುವಾಗಿರುವ ಕಾದಂಬರಿ ಜನಸಾಮಾನ್ಯರಿಗೆಂದೇ ಇರುವ ಸಾಹಿತ್ಯ ಪ್ರಕಾರವಾದ್ದರಿಂದ ಯಾವುದೇ ಕಾದಂಬರಿಯನ್ನು ಪಂಡಿತರಿಗಿಂತ ಸಾಮಾನ್ಯರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದೇ ಮುಖ್ಯ ಅತ್ತ ಹಳ್ಳಿಯೂ ಅಲ್ಲದ ಇತ್ತ ನಗರವೂ ಅಲ್ಲದ ಊರುಗಳಲ್ಲಿ ವಾಸಿಸುವ, ಯಾವುದೇ ಪೂರ್ವನಿಶ್ಚಿತ ರಾಜಕೀಯ ಧೋರಣೆಗಳಿಲ್ಲದ ಕನ್ನಡದ ಸಾಮಾನ್ಯ ಓದುಗ (ಇಂತಹವರ ಸಂಖ್ಯೆಯೇ ಹೆಚ್ಚು : ಮತ್ತು ಅನಂತಮೂರ್ತಿ ಅವರಿಗೆ ಇಂತಹ ಓದುಗರ ಸಂಖ್ಯೆಯೂ ದೊಡ್ಡದಿದೆ) ಮೇಲೆ ಭಾರತೀಪುರ ಎಂತಹ ಪರಿಣಾಮವನ್ನು ಬೀರುತ್ತದೆ, ತನ್ನ ಸಮಾಜದ ಬಗ್ಗೆ ಯಾವೆಲ್ಲ ಪ್ರಶ್ನೆಗಳನ್ನು ಆತ ತನಗೆ ತಾನೇ ಕೇಳಿಕೊಳ್ಳುವಂತೆ ಮಾಡುತ್ತದೆ ಎಂಬುದೇ ಮುಖ್ಯ. ಕನ್ನಡದಲ್ಲಿ ಹೀಗೆ ತನ್ನ ಪರಿಸರದಲ್ಲಿ ಯೋಚಿಸುವಂತೆ ಓದುಗನನ್ನು ಹಚ್ಚುವ ಕಾದಂಬರಿಗಳು ಬಹಳ ಇಲ್ಲ ಎಂಬುದನ್ನೂ ಗಮನಿಸಬೇಕು, ಅಲ್ಲದೆ ಅದರ ವಸ್ತುವಿನ ದೃಷ್ಟಿಯಿಂದ ಯೋಚಿಸಿದರೆ ಭಾರತೀಪುರದ ಬಗ್ಗೆ ಬೇರೆ ಯಾವ ಮಾನದಂಡದಿಂದ ಅಳೆಯುವುದೂ ಅಸಂಬದ್ದವಾಗುತ್ತದೆ, ಆದ್ದರಿಂದಲೇ ಕಾದಂಬರಿಯ ಬಗ್ಗೆ ನಾನು ಬಹಳ ಉತ್ಸಾಹಿಯಾಗಿದ್ದೇನೆ.

ಈ ಪ್ರಬಂಧವನ್ನು ವಿಕಾಸ ಪ್ರಕಾಶನ ಮೈಸೂರು ಇವರ ಆಶ್ರಯದಲ್ಲಿ ೭೪, ಏಪ್ರಿಲ್‌ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಓದಿದಾಗ ಶ್ರೀ ದಾಮೋದರರಾವ್ ‘ಪ್ರಬಂಧದಲ್ಲಿ ಭಾರತೀಪುರದ ಕಾಲ ವರ್ತಮಾನ ಎಂದಿದೆ ; ಜಗನ್ನಾಥ ವರ್ತಮಾನದ ಒಂದು ಪಾತ್ರ ಎಂಬುದು ನಿಜ: ಆದರೆ ಒಳ್ಳ ನಂತಹವರು ನಲವತ್ತು ವರುಷಗಳ ಹಿಂದಿನ ಭಾರತದ ವ್ಯಕ್ತಿಗಳಾದ್ದರಿಂದ ಕಾದಂಬರಿಯಲ್ಲಿ ಸಮ ತೋಲವಿಲ್ಲ” ಎಂದು ಅಭಿಪ್ರಾಯ ಪಟ್ಟರು. ಅವರ ಮಾತುಗಳಿಗೆ ನನ್ನ ಅಭಿಪ್ರಾಯ ಸೂಚಿಸುವ ಅವಕಾಶ, ಅಂದು ಇದ್ದಿರಲಿಲ್ಲ, ನನ್ನ ಉತ್ತರ ಹೀಗಿದೆ: ಪಿಳ್ಳ ಮತ್ತು ಕಾದಂಬರಿಯಲ್ಲಿ ಬರುವ ಇತರ ಹರಿಜನರು ನಲವತ್ತು ವರ್ಷಗಳ ಹಿಂದಿನ ಭಾರತದವರೂ ಹೌದು; ಇಂದಿನ ಭಾರತದವರೂ ಹೌದು, ನಮ್ಮ ಪ್ರಸ್ತುತ ವ್ಯವಸ್ಥೆಯ ಆರ್ಥಿಕ ಸ್ವರೂಪ ಹೀಗೆಯೇ ಮುಂದುವರಿದುಕೊಂಡು ಹೋದರೆ, ಬೆಳ್ಳಿ ಮತ್ತು ಅವನಂತಹವರು ಎಂದೆಂದಿಗೂ ಹೀಗೆಯೇ ಇರುತ್ತಾರೆ.ಹರಿಜನರಲ್ಲಿ ಶೇಕಡ ೯೦ ಕ್ಕೂ ಹೆಚ್ಚಿನವರು ಹಳ್ಳಿಗಳಲ್ಲಿ ಭೂ ಹೀನ ಕೃಷಿ ಕಾರ್ಮಿಕರಾಗಿರುವುದರಿಂದ, ಭೂಮಿಯ ನ್ಯಾಯ ಬದ್ಧ ಒಡೆತನದ ಪ್ರಶ್ನೆ ಇತ್ಯರ್ಥವಾಗುವವರೆಗೆ ಅವರ ಸ್ಥಿತಿ ಬದಲಾಗದು ; ಅಲ್ಲಿಯವರೆಗೆ ಪಿಳ್ಳನಂತಹವರ ಪಾತ್ರಚಿತ್ರಣ ಸಮಕಾಲೀನವಾಗಿಯೇ ಉಳಿಯುತ್ತದೆ. ಈಗ ಸುಮಾರು ೪೦ ವರ್ಷ ಗಳ ಹಿಂದೆ ಪ್ರಕಟವಾದ “ಚೋಮನದುಡಿ” ಈಗಲೂ ನಮಗೆ ಸಮಕಾಲೀನವಾಗಿ ಉಳಿದಿಲ್ಲವೆ ? ನಮ್ಮ ವ್ಯವಸ್ಥೆ ಹೀಗೆಯೇ ಮುಂದುವರಿಯುವಷ್ಟು ಕಾಲ “ಭಾರತೀಪುರ’ವೂ ಸಮಕಾಲೀನ ವಾಗಿಯೇ ಉಳಿಯುತ್ತದೆ,

Close

ಮುಂದೇನ ಸಖಿ? ಮುಂದೇನ?

ಮುಂದೇನ ಸಖಿ ? ಮುಂದೇನ ?

ವ್ಯಾಸ ದೇಶಪಾಂಡೆ

(ರಂಗಸ್ಥಳದಲ್ಲಿ ಪಡದೆಯ ಮುಂದೆ ಸಾಲಾಗಿ ಏಳು ಗೊಂಬೆಗಳು, ರಂಗಸ್ಥಳದ ಉಳಿದ ಭಾಗ ಕತ್ತಲೆಯಲ್ಲಿ)

೧ ನೇ ಗೊಂಬೆ : ಹೇಳ ಗೆಳತಿ, ಹೇಳ ಗೆಳತಿ, ಇಲ್ಲಿ ಮಲಗಿರೋ ಹುಡುಗನ ಕಥೀ
ಏನು ಐತಿ ?
೨ ನೇ : ಕೇಳ ಯವ್ವಾ ಕೇಳ ಹುಡುಗಾ ಖಂಬೀರಾ, ಹಾದಿ ತಪ್ಯಾನು. ಅವನ ಬಾಳಿನ ಒಗಟಾ ಭಾಳಾ ಕಠಿಣ ಐತಿ.
೩ ನೇ : ಅಂವಂದೊಂದೂರು, ಊರಾಗ ಒಂದು ಮನಿ, ಮನ್ಯಾಗ ಒಬ್ಬ ಅಪ್ಪಾ.
೫ ನೇ : ಅಂವಂದೊಂದೂರು, ಊರಾಗ ಒಂದು ಮನೀ, ಮನೀ ಮುಂದ ಒಂದ ಬೇವಿನ ಗಿಡಾ, ೪ ನೇ : ಅಪ್ಪಾ ಆಡಲಾಕ ಒಂದ ಕಟಗಿ ಕುದರೀ ಕೊಡಸಲಿಲ್ಲಾ ಅಂತ ಖಂಬೀರ ಕುಮಾರಾ ಆ ಗಿಡಾನ್ ತನ್ನ ಕುದರೀ ಮಾಡಿಕೊಂಡಾ. ಏನೂ ?
(ಎಲ್ಲಾ ಗೊಂಬೆಗಳೂ chorus ನಲ್ಲಿ ರಾಗವಾಗಿ ಹೇಳುವವು)
ಖಂಬೀರಕುಮಾರ ಗಿಡಾನ ತನ್ನ ಕುದರೀ ಮಾಡಿಕೊಂಡಾ
ಆ ಖಂಬೀರ ಕುಮಾರ ಗಿಡಾನ ತನ್ನ ಕುದರೀ ಮಾಡಿಕೊಂಡಾ
೬ ನೇ : ಅವಂದೊಂದೂರು ಊರ ಹೊರಗೆ ಒಂದ ಕೆರಿ, ಕೆರೀ ಸುತ್ತಲೂ ವಂಡಿ, ವಂಡೀ ತುಂಬೆಲ್ಲಾ ಕಳ್ಳಿ ಕಂಟಿ.

10

೪ ನೇ : ಖಂಬೀರಕುಮಾರಾ ಕಳ್ಳಿಕಂಟೀ ಸೈನ್ಯಾ ಮಾಡಿಕೊಂಡಾ ಕೆರೀ
ಒಂಡೀನ ತನ್ನ ರಾಜ್ಯಾ ಮಾಡಿಕೊಂಡಾ, ಏನೂ ?
(ಎಲ್ಲಾ ಗೊಂಬೆಗಳೂ chorusನಲ್ಲಿ ರಾಗವಾಗಿ)
ಖಂಬೀರಕುಮಾರಾ ರಾಜ್ಯಾ ಮಾಡಿಕೊಂಡಾ
ಭಲೇ, ಸೈನ್ಯಾ ಮಾಡಿಕೊಂಡಾ.
೭ ನೇ : ಅಂವಂದೊಂದೂರು, ಊರಾಗ ಒಂದ ಮನಿ, ಮನ್ಯಾಗ ಒಬ್ಬ ಅಜ್ಜಿ.
ಆ ಅಜ್ಜಿದು ಒಂದ ತಲಿ. ಆಕೀ ತಲೀ ತುಂಬಾ ಕಥೀ, ಆಕೀ ಕಥೀ
ತುಂಬಾ ರಾಕ್ಷಸರು.
೪ ನೇ : ಖಂಬೀರಾ ತನ್ನ ಕುದರೀ ಹತ್ತಿದ್ದs ಹತ್ತಿದ್ರೂ, ರಾಕ್ಷಸರನ ಕೊಂದದ್ದ; ಕೊಂದದ್ದು, ಹಿಂಗಾಗಿ, ಕಡೇಕ ಖಂಬೀರಾ ಕುದರೀ ಬಿಟ್ಟು ಇಳೀ ಲಾರದ್ಹಂಗಾದಾ, ಏನೂ ? (
(ಎಲ್ಲಾ ಗೊಂಬೆಗಳೂ chorus ನಲ್ಲಿ ರಾಗವಾಗಿ)
ಖಂಬೀರ ಕುಮಾರಾ ಕುದರೀ ಬಿಟ್ಟು ಇಳೀಧಂಗಾದಾ
ಅಯ್ಯೋ ಇಳೀಧಂಗಾದಾ, ಅಯ್ಯಯ್ಯೋ, ಇಳೀಧಂಗಾದಾ,
೪ ನೇ : ಶುಶ್ ! ಸುಮ್ಮನಿರಿ, ಹೊಯ್ಕೋಬ್ಯಾಡಿ, ಮುಂದ ಭಾಳಾ ಮಜಾ ಅದ. ಹಿಂಗ ಹದಿನಾರು ಸಂವತ್ಸರ ದಾಟಲಾಗಿ ಖಂಬೀರ ಕುಮಾರಗ ಯೌವನ ಬಂತು, ಆವಾಗ, (ಎಲ್ಲಾ ಗೊಂಬೆಗಳು ಅದರ ಸುತ್ತ ಗುಂಪುಗೂಡುವವು)
ಒಂದ ದಿವಸ ಖಂಬೀರಕುಮಾರ ಕೆರೀ ದಂಡ್ಯಾಗ ಕುತ್ಯಾಗ ಅಲ್ಲೆ
ಸ್ನಾನಾ ಮಾಡ್ತಿರೋ ಒಬ್ಬ ಗಂಡ ಹುಡುಗನ್ನ ನೋಡ್ದ್ಯಾ, ಅವನ ರೂಪಾ, ಒಯಸ್ಸು ಬಣ್ಣಾ ನೋಡಿ ಖಂಬೀರಗ ಅವನ ಮ್ಯಾಲೆ ಮೋಹ ಹುಟ್ಟಿತು. ಕಥೀ ರಾಕ್ಷಸರನ ಬಿಟ್ಟು ಅವನ ಕಡೇ ಬಂದಾ. ಕೇಳಿದಾ. ‘ಹುಡಗಾ, ಹುಡಗಾ, ನನ್ನ ಮದುವ್ಯಾಗು’ ಅಂತ, ಹುಡುಗ ಅಂದಾ ‘ಛೇ ಹುಚ್ಚಪ್ಪಾ, ಇದು ಸಾಧ್ಯ ಇಲ್ಲಾ’ ಅಂತ, ಅದಕ್ಕೆ ಖಂಭೀರ ಅಂದಾ. ‘ಇಲ್ಲಾ, ನಾ ನಿನ್ನ ಮ್ಯಾಲೇ ಜೀವಾ ಇಟ ಗೊಂಡೇನಿ’ ಅಂತ, ಕಡೇಕ,
(ಎಲ್ಲಾ ಗೊಂಬೆಗಳು ಆತುರದಿಂದ ಹೂಂ.)
ಆ ಹುಡುಗಾ ಒಂದ ಶರ‍್ಯತ್ತು ಇಟ್ಟಾ,
(ಎಲ್ಲಾ ಗೊಂಬೆಗಳು-ಏನಂತ ?)
೪ ನೇ : ಶುಶ್ ! ನಡಕ ಮಾತಾಡಬ್ಯಾಡ್ರಿ. ಏನಂದ್ರ
(ಎಲ್ಲಾ ಗೊಂಬೆಗಳು ಕಿವಿಗೆ ಕೈ ಹಚ್ಚಿಕೊಂಡು ತುಂಬ Tensionಲ್ಲಿ
ಮೌನವಾಗಿ ನಿಲ್ಲುತ್ತವೆ).
೪ ನೇ : (ತಗ್ಗಿದ ಧ್ವನಿಯಲ್ಲಿ ‘ಒಂದು ಬಕೀಟು ತುಂಬಾ ಬಿಸಿಬಿಸಿ ಕುದಿಯೋ
ನೀರು ತಕ್ಕೊಂಡು, ಅದರಾಗ ಒಂದು ಅಡಿಕೀ ಬೆಟ್ಟದ ಗಾತ್ರದ ಆಣೀಕಲ್ಲು (ಆಲಿಕಲ್ಲು) ಹಾಕೋದು, ಅದು ಕರಗೀದ್ರ ಮಾತ್ರ ನಾ ನಿನ್ನ ಮದುವಿ ಆಗೊಂವಾ’ ಅಂತ.
(ಇಷ್ಟು ಹೇಳುತ್ತ, ತಕ್ಷಣ ಸುಮ್ಮನಾಗಿ ಬಿಡುವದು, ಎಲ್ಲಾ ಗೊಂಬೆಗಳೂ Explode ಆದಂತೆ)
-ಏ ಗೆಳತೀ, ಕಲ್ಲು ಕರಗಿತೋ ಇಲ್ಲೋ ? ಅವರು ಮದುವ್ಯಾದರೋ ಇಲ್ಲೋ ? ಮುಂದೇನಾತು ? ಹೇಳೇ ಯವ್ವಾ ಹಿಂಗ್ಯಾಕ ಅರ್ಧಾಕ್ಕೆ
ಬಿಟ್ಟು ನಮ್ಮ ಜೀವಾ ತಗೀತಿ ?
೧ ನೇ : ಶುಶ್ ! ಸುಮ್ಮನಾಗ್ರಿ, ಅಂವಗ ಎಚ್ಚರಾಧಂಗ ಕಾಣಸ್ತದ.
(ಎಲ್ಲಾ ಗೊಂಬೆಗಳೂ ತಮ್ಮ ಮೊದಲಿನ ಸ್ಥಳಕ್ಕೆ ಧಾವಿಸಿ (ಪ್ರತಿಮೆ ಗಳಂತೆ ನಿಂತುಬಿಡುವವು. ಸಾವಕಾಶವಾಗಿ Lightಈ ಗೊಂಬೆಗಳಿಂದ ಮುಂದಕ್ಕೆ ಬರುವದು, ಈಗ ಗೊಂಬೆಗಳು ಪೂರ‍್ತಿ, ಕತ್ತಲಿನಲ್ಲಿ, Lightನ ಬೆಳಕಿನಲ್ಲಿ ರಥದ ಸೆಟ್ಟಿಂಗ, ಮೇಲ್ಭಾಗ ಮಾತ್ರ, ಗಾಲಿಗಳನ್ನು ತೋರಿಸುವ ಅವಶ್ಯಕತೆಯಿಲ್ಲ, ಕುದುರೆಗಾಡಿ ಓಡುತ್ತಿರುವಂತೆ ಹಿನ್ನೆಲೆ ಸಂಗೀತ, ಸಾರಥಿ ಕಾಣಿಸುತ್ತಿರುವನು. ಕ್ರಮೇಣ ಹಿಂದಿನ ಆಸನದಲ್ಲಿ ಮಲಗಿದ್ದ ಖಂಬೀರ ಕುಮಾರ ಎದ್ದು ಕುಳಿತುಕೊಳ್ಳುವನು. ಕೈಗಳನ್ನು ತಿಕ್ಕಿಕೊಂಡು ಅದರಲ್ಲಿ ಮುಖ ನೋಡಿಕೊಳ್ಳುವನು.)
ಖಂಬೀರ : ಚನ್ನ್ಯಾ
ಸಾರಥಿ : ಧಣೀ.
ಖಂಬೀರ : ರಥಾ ಬರೋಬ್ಬರಿ ಅದನ… ?
ಸಾರಥಿ : ಅದ ಹಂಗ ಕಾಣಸ್ತದ ಧಣಿ.
ಖಂಬೀರ : ಕುದರಿ ಠೀಕ ಅವನ ?
ಸಾರಥಿ : ಅವ ಹಂಗ ಕಾಣಸ್ತದ ಧಣಿ.
ಖಂಬೀರ : ನೀ ಬರೋಬರ ಅದೀಯಾ ?
ಸಾರಥಿ : ಅದೀನಿ ಹಂಗ ಕಾಣಸ್ತದ ಧಣಿ.
ಖಂಬೀರ : ಚನ್ನ್ಯಾ
ಸಾರಥಿ : ಧಣೀ.
ಖಂಬೀರ : ಮತ್ತೇನೇನ ಕಾಣಸ್ತದ ?
ಸಾರಥಿ : ಹಾದಿ ಮಾತ್ರ ತಪ್ಪಿಧಾಂಗ ಕಾಣಸ್ತದ ಧಣಿ.
ಖಂಬೀರ : ಚನ್ಯಾ, ಹಂಗರ ಹಿಂಗ ಮಾಡು, ರಥಾ ತಿರಗೀಸಿ ಒಯ್ದು ಬದಲ ರಾಸ್ತಾಕ್ಕ
ಹೊಡದು ಬಿಡು.
ಸಾರಥಿ : ಅದ ಆಗಾಕಿಲ್ಲ ಧಣಿ.
ಖಂಬೀರ : ಯಾಕ ?
ಸಾರಥಿ : ನಾವು ಮುಂದ ಮುಂದ ಬಂಧಂಗ ಉಸಕ ಸುರದು ಹಿಂದಿನ ರಸ್ತೆ`ಗುರತು ಸಿಗಧಾಂಗ ಆಗೇದ ಧಣಿ.
ಖಂಬೀರ : ಚನ್ಯಾ
ಸಾರಥಿ : ಧಣೀ.
ಖಂಬೀರ : ನೀ ಹುಚ್ಚ, ಅದಿ, ನಾ ಶ್ಯಾಣ್ಯಾ ಅದೇನ್ನೊಡು.
ಸಾರಥಿ : ಯಾಕ ಧಣಿ ?
ಖಂಬೀರ : ಹಂಗ ಆಗಬಾರದಂತ, ನಾನು ರಸ್ತೆಗುಂಟ ಸಿಗರೇಟು ಸೇದಿ ಗುರ‍್ತಕ್ಕ ಒಕ್ಕೊತ ಬಂದೇನಿ, ನಾ ಮದಲ್ನೇ ಸಿಗರೇಟು ಸೇದಿ ಒಗದ ಜಗಾ ಈಗೆ ಸೈತ ಗುರು ಹಿಡೀತೇನಿ ನೋಡು.
ಸಾರಥಿ : ಸಿಗರೇಟ ಮ್ಯಾಲಿಂದೇನು ಧಣೀ ?
ಖಂಬೀರ : ಅಲ್ಲಲೇ, ನಾನು ಮದಲೇ ಸಿಗರೇಟು ಸೇದಿದಾಗ ಅಲ್ಲೇನೇನು ಭಾವನೆಗಳು ಬಂದವು, ಅವು ಇನ್ನೂ ನನಗ ಗುರ‍್ತು ಸಿಗತಾವ ಕೆಟ್ಟ ಮಳ್ಯಾಗ ಘಾಟು ಹೊಗಿ ತಲೀಗೆ ಹತ್ತಿದಾಗ ಅಮಲ ಏರಿಧಾಂಗ ಆಗಿತ್ತು. ಆ ಅಮಲಿನ್ಯಾಗ ನಾ ಭಾಳ ದೊಡೋಂವಾ ಆಧಾಂಗ ಅನಿಸಿತ್ತು. ಭಾಳ ದೊಡ್ಡ ಕೆಲಸ ಮಾಡೋಂವ ಇದ್ದೇನಿ ಅಂತ ಅನಿಸಿತ್ತು.
ಸಾರಥಿ : ಧಣೀ
ಖಂಬೀರ : ಹಾಂನಪಾ.
ಸಾರಥಿ : ಮತ್ತೇನೇನ ಗುರತು ಮಾಡಿಕೊಂಡು ಬಂದಿ ?
ಖಂಬೀರ : ಮತ್ತೇನಪಾ ಅಂದ್ರೆ ಒಂದ ಹುಡಗಿ ಗುರತು ಏನಪಾ, ಹಸರ ಪರಕಾರ
ಹಕ್ಕೊಂಡಿತ್ತು. ನೇರಳಿ ಬಣ್ಣದಾಗ ಸ್ವಲ್ಪ ಕೆಂಪ ಸರಾಯಿ ಕೂಡಿಸಿಧಾಂಗ ಕಣ್ಣಿನ ಬಣ್ಣಾ, ನನ್ನ ಮನಸ್ಸು ಗುಬ್ಬಿ ಹಾಂಗ ಆಕೀ ಕುತಗಿ ಮ್ಯಾಲೆ ಕೂತು ಪೋಲಕಾ ಸರಿಸಿ ಸರಿಸಿ ನೋಡತಿತ್ತು. ಆಕಿ ನಡದಳಂದ್ರ, ನೆಲಾ ಕರಗಿಧಾಂಗ ಅನಸ್ತಿತ್ತು, ಸಾರಥಿ : ಧಣೀ
ಖಂಬೀರ : ಹಾಂನಪಾ
ಸಾರಥಿ : ಆಕೀ ಕಾಲ ಕೆಳಗಿಂದೋ ಏನ ನಿನ್ನ ಕಾಲ ಕೆಳಗಿಂದೊ ?
ಖಂಬೀರ : ಊಂ–ಬೇಕಾದ್ರ ಇಬ್ಬರ ಕಾಲ ನಡುವಿಂದೂ ಅಂತ ಇಟಗೋ’ ಆ ಮ್ಯಾಲೆ ……ಒಬ್ಬ ಹೆಂಗಸಿನ ಗುರತು ಏನಪಾ, ಕತ್ತಲೀ ವಳಗ, ಮನೀ ಮುಂದ ನಿಂತು ಕೈಮಾಡಿ ಕರದ್ಲು, ಒಳಗ್ಹೋಗಿ ಹೊಟ್ಟೀ ಮ್ಯಾಲೆ ಕೆಳಗೆ ಎಲ್ಲಾ ಕೈಯಾಡಿಸಿ ನೋಡಿದ್ರ ಸತ್ಹಾಂಗ ಇದ್ಲು. ಉಂಗರಾ ಕೊಡ್ಲಿಲ್ಲಾ-ಐದ ರೂಪಾಯಿ ಕೊಟ್ಟ ಬಂದೆ. ಆ ಮ್ಯಾಲೆ ಕೆಲವು ಜಗದಾಗ ಹಾಡೋ ಧ್ವನಿ ಕೇಳತಾವೇನಪಾ, ಕೆಲವು ಜಗದಾಗ ಮಲಗಿದರ ಕನಸು ಬೀಳತಾವ, ಅದಿರ‍್ಲಿ ಚನ್ಯಾ, ಯಾಕ ರಸ್ತೆ ಎರಡೂ ನಿಟ್ಟಿಗೆ ಎತ್ತರಾಕ್ಕೊತ ಕೊಳ್ಳದಾಗ ಹೊಂಟ ಹಾಂಗ ಹೊಂಟೇವಿ ?
ಸಾರಥಿ : ಧಣೀ
ಖಂಬೀರ : ಹಾಂನಪಾ
ಸಾರಥಿ : ಇದೊಂದು ಬತ್ತಿಹೋದ ಹೊಳಿ, ಅದರ ಪಾತ್ರದಾಗ ನಾವು ಹೊಂಟೇವಿ.
ಅದು ಆಳ ಆಕ್ಕೋತ ಹೊಂಟದ.
ಖಂಬೀರ : ಹಿಂಗೇನು ? ಚನ್ಯಾ, ಇದೇನು ಗಣಾ ಗಣಾ ಗಂಟೀ ಅಂಥಾ ಸಪ್ಪಳಾ ?
ಯಾವ್ದರ ಸಾಲೀದ ಇರಬೇಕಲ್ಲ ?
ಸಾರಥಿ : ಧಣೀ
ಖಂಬೀರ : ಹಾಂನಪಾ.
ಸಾರಥಿ : ಇದೇನು ಒಳಗ ಕರಿಯೋ ಘಂಟ್ಯೋ, ಏನ ಹೊರಗ ಹಾಕೊ ಘಂಟ್ಯೋ ? ಖಂಬೀರ : ಚನ್ಯಾ, ಇದು ಮನಿ ಒಳಗ ಇದ್ದವರ‍್ನ ಹೊರಗ ಹಾಕೊ ಘಂಟೆ, ಸಾಲೀ ಹೊರಗ ಇದ್ದವರನ್ನ ಒಳಗೆ ಕರಿಯೋ ಘಂಟಿ.
ಸಾರಥಿ : ಹಿಂಗೇನು ? (ಸ್ವಲ್ಪ ಹೊತ್ತು ಆಲಿಸಿ) ಏ ಧಣೀ, ಇದು ಗಣಾ ಗಣಾ ಸಪ್ಟಳಲ್ಲಾ. ಗಳಾ ಗಳಾ ಸಪ್ಪಳ, ನೀರ ಹರಿಯೋ ಸಪ್ಪಳ, ಎಲ್ಯೋ ಮಳೀ ಆಗಿ ಹೊಳೀ ಒಳಗ ನೀರು ತುಂಬಿಕೊಳ್ಳಲಿಕ್ಕೆ ಹತ್ತೇತಿ.
ಖಂಬೀರ : (ಬೆದರುವನು) ಏ ಅಲ್ಲ ಹೊಗಲೆ.
ಸಾರಥಿ : ಹೌದೋ ಯಪ್ಪಾ, ಮುಂಗಾಲಿಗೆ ತಣ್ಣೀರು ಬಡದು ಕುದರಿಗೋಳ ಕಾಲು ನೋಡು ಹ್ಯಾಂಗ ಗದಾಗದಾ ನಡಗಲಾಕ ಹತ್ಯಾವ……. ಬಗ್ಯರs ನೋಡು ನೀರು ಎಷ್ಟ ರಭಸದಲೇ ಮ್ಯಾಲೆ ಏರಲಾಕ ಹತ್ತೇದ.
ಖಂಬೀರ : ಅಯ್ಯೋ ಚನ್ಯಾ ! ಘಾತ ಆತಲ್ಲಲೇ ! ಏನ ಮಾಡೋದು ರಥಾ ಎಡಕ್ಕೆ
ಹೋಗಲಿಕ್ಕೆ ಜಗಾ ಇಲ್ಲಾ, ಬಲಕ್ಕ ಹೋಗಲಿಕ್ಕೆ ಜಗಾ ಇಲ್ಲಾ, ಹಿಂದ ತಿರಗಸಲಿಕ್ಕೆ ಬರೋ ಹಂಗಿಲ್ಲಾ, ಸಾಯತೇವಲ್ಲೋ ಯಪ್ಪಾ, ಅಯ್ಯ !
ನೀರು ರಥದ ಮ್ಯಾಲ ತನಕಾ ಬಂದವು.
(ಇಬ್ಬರೂ ಎದ್ದು ನಿಲ್ಲುವರು, ರಟ್ಟಿನ ಮೇಲೆ paint ಮಾಡಿದ ನೀರಿನ ಅಲೆಗಳು ಹಾಡಿನಲ್ಲಿಯ ಸೂಚನೆಗೆ ಅನುಗುಣವಾಗಿ ಮೇಲಕ್ಕೆ ಏರುತ್ತ ಹೋಗುವುವು.)
(ಇಬ್ಬರೂ ನರ್ತನಾಭಿನಯದೊಡನೆ)
ಖಂಬೀರ : “ಚನ್ಯಾ, ಚನ್ಯಾ, ಮಣಕಾಲ್ಮಟಾ ನೀರು ಬಂದಾವೂ !”
ಸಾರಥಿ : “ಹ್ಯಾಂಗ ಮಾಡಲಿ ಧಣಿಯೇ,
ನಿನ್ನವ್ವಾ ಹಾಗಲಕಾಯಿ ತಿಂದು ಹಡದಾಳೊ!”
ಖಂಬೀರ : “ಚನ್ಯಾ, ಚನ್ಯಾ, ಟೊಂಕದ ಮಟಾ ನೀರು ಬಂದಾವೂ!”
ಸಾರಥಿ : “ಹ್ಯಾಂಗ ಮಾಡಲಿ ಧಣಿಯೇ,
ನಿನ್ನವ್ವಾ ಹಾಗಲಕಾಯಿ ತಿಂದು ಹಡದಾಳೆ”
ಖಂಬೀರ : “ಚನ್ಯಾ, ಚನ್ಯಾ, ಎದಿ ವಟಾ ನೀರು ಬಂದಾವೋ”
ಸಾರಥಿ : “ಹ್ಯಾಂಗ ಮಾಡಲಿ ಧಣಿಯೇ,
ನಿನ್ನವ್ವಾ ಹಾಗಲಕಾಯಿ ತಿಂದು ಹಡದಾಳೊ”
ಖಂಬೀರ : “ಚನ್ಯಾ, ಚನ್ಯಾ, ಕುತಗಿ ಮಟಾ ನೀರು ಬಂದಾವೋss”
ಸಾರಥಿ : “ಹ್ಯಾಂಗ ಮಾಡಲಿ ಧಣಿಯೇ,
ನಿನ್ನವ್ಯಾ ಹಾಗಲಕಾಯಿ ತಿಂದು ಹಡದಾಳೋ”
ಖಂಬೀರ : ಚನ್ಯಾ,
ಸಾರಥಿ : ಧಣೀ
ಖಂಬೀರ : ಮುಳಗತೇವಲ್ಲೋ
(ಇಬ್ಬರೂ ಅಪ್ಪಿಕೊಳ್ಳುವರು)
ಚನ್ಯಾ, ಹಾಡು ಕುಣತಾ ಸಾಕಿನ್ನ, ಇಲ್ಲಿಂದ ಪಾರಾಗೋ ದಾರಿ ಹುಡಕೋಣು, ಎಲ್ಯರ ಡೋಣಿ ಹೊಂಟ್ಹಂಗ ಕಾಣಸ್ತ್ರದೇನು ನೋಡು,
ಸಾರಥಿ : (ಹಣೆಗೆ ಕೈಹಚ್ಚಿಕೊಂಡು ದಿಟ್ಟಿಸಿ ನೋಡುವನು) ಧಣೀ, ಅಲ್ಯೊಂದು
ಡೋಣ್ಯಾಗ ಒಬ್ಬ ಮನಸ್ಯಾ ಹೊಂಟಾನು.
ಖಂಬೀರ : ನಿನ್ನ ರುಮಾಲು ಬೀಸಿ ಬೀಸಿ ಕೂಗೋಣು, ಅವನ್ನಿಲ್ಲೆ.
(ಚನ್ನ ಕೈಯೆತ್ತಿ ರುಮಾಲು ಬೀಸುತ್ತಿರುವಂತೆ ಇಬ್ಬರೂ ಕೂಗುವರು)
ಇಲ್ಲೆ ಬರ‍್ಯಪೋss, ಇಲ್ಲೆ ಬರ‍್ಯಪೋss,
(ನೀರಿನ ಸೆಟ್ಟಿಂಗ ಮೇಲೆ ‘ಡೋಣಿ ನಿಧಾನವಾಗಿ ಬರುವುದು)
ಸಾರಥಿ : ಬರ‍್ರಿ ಬೇಶ ಹೊತ್ತಿಗೆ ಬಂದ್ರಿ, ಇಂವಾ ಖಂಬೀರ ಕುಮಾರಾ, ನಾ ಇಮ್ಮ ಸಾರಥಿ, ಇಬ್ರೂ ಮುಳಗಿ ಸಾಯಲಾಕಹತ್ತಿದ್ವಿ. ಆಯ್ತ ಹೊತ್ತಿಗೆ ದೇವರ‍್ಹಂಗ ನಮ್ಮನ್ನ ಕಾಪಾಡಲಿಕ್ಕೆ ಬಂದ್ರಿ.
ಡೋ : ಶುಶ್ ! ಸುಮ್ಮನಿರ‍್ರಿ, ನಾ ನಿಮ್ಮನ್ನ ಕಾಪಾಡಲಿಕ್ಕೆ ಬಂದಂವಲ್ಲಾ.
ಸಾರಥಿ : ಮತ್ತ ಯಾರ ನೀವು ? ಯಾಕ ಬಂದ್ರಿ ?
ಡೊ. : ನಾನು ಪೇಪರಿನ ಸುದ್ದಿಗಾರ, ಪ್ರೆಸ್ ರಿಪೋರ್ಟರ್, ಇಲ್ಲೆ ಇಬ್ರು ಮುಳಗಲಿಕ್ಕೆ ಹತ್ತಿಧಂಗ ಕಾಣಿಸ್ತು, ಅದಕ್ಕೆ ಪೇಪರಿಗೆ ಸುದ್ದಿ ಕೊಡಲಿಕ್ಕೆ ಬಂದೆ.
ಸಾರಥಿ : ಆದ್ರೂ ನಮ್ಮನ್ನ ಪಾರ ಮಾಡ್ರಿ, ಬಾತ್ಮಿದಾರ ಸಾಹೇಬರ.
ಖಂಬೀರನ ಅವ್ವಾ-ಅಪ್ಪಾ ಭಾಳ ನೆನಸ್ತಾರ ಅವನ್ನ,
ಡೋ : ನೀವು ಸಾಯದಿದ್ರ ಪೇಪರಿಗೆ ಏನ ಸುದ್ದಿ ಕೊಡಬೇಕು ನಾನು ?
ಬೇಕಾದ್ರ ಖಂಬೀರ ಕುಮಾರನ ಅವ್ವಾ-ಅಪ್ಪಗ ಇಂವಂದೊಂದು ಫೋಟೋ ಒಯ್ದು ಕೊಡತೀನಿ, ನೆನಪಿಗೆ.
ಸಾರಥಿ : ನೀವನ್ನೋದೂ ತಪ್ಪಲ್ಲ ತಗೊಳ್ರಿ, ಹಾಂಗ ಮಾಡೋಣೇನು ಧಣಿ ?
ಫೋಟೊ ಕಳಸೋಣ ?
ಖಂಬೀರ : (ಸ್ವಲ್ಪ ವಿಚಾರ ಮಾಡಿ) ಫೋಟೋ ಏನ ಬ್ಯಾಡಾ, ಅದರ ಬದ್ಲಿ, ನನ್ನ
ರುಂಡಾ ತಕ್ಕೊಂಡು ಹೋಗ್ಲಿ, ನಮ್ಮಪ್ಪಾ ಅವ್ವಾ, ನನ್ನ ನೆನಪಿಗೆ
ಇದಗೋತಾರಾ,
ಸಾರಥಿ : (ಡೋಣಿಯವನಿಗೆ) ಏನಂತೀರಿ ?
ಡೊ. : ಅದಾಗೂದುಲ್ಲಾ.
ಸಾರಥಿ : ಯಾಕ ?
ಡೋ; : ಅದು ಖೂನಾಗ್ತದ ಖೂನು, ಬೇಕಾದ ಫೋಟೊ ಒಂದ ಒಯ್ಯತೇನಿ ನೋಡು.
ಸಾರಥಿ : ಏನಂತಿ ಧಣಿ ?
ಖಂಬೀರ : ಫೋಟೊದ್ಲೆ ಏನ ನೆನಪುಳಿತ್ತದ ಚನ್ಯಾ ? ರುಂಡಾದ್ರೆ ಬೇಕಾದಾಗ ನನ್ನ ನೋಡಿಧಾಂಗ ಆಗ್ಯದಪಾ, ರುಂಡದಾಗಿನ ನನ ಕಣ್ಣು ಅವರ ನೋಡಿಕೋತ ಇರ‍್ತಾವ ಎಲ್ಲಾರ‍್ನೂ ಬಿರಿಬಿರಿಗಣ್ಣಲೇ ನೋಡಿ ಬೆದರಿಸಿಕೋತ ಇರ‍್ತಾವ, ಕೆಲವು ದಿವಸಕ್ಕ ನನ್ನ ಮೆದುಳು ಕೊಳಿಲಿಕ್ಕೆ ಹತ್ತಿತಂದ್ರ ಆ ನಾತದ ಜೋಡಿ ನನ್ನ ವಿಚಾರ ಸುದ್ದಾ ಎಲ್ಲಾ ಕಡೇ ಹಬ್ಬತಾವ ಆ ನನ್ನ ವಿಚಾರಗಳು ತಿಳದ್ವಂದ್ರ ಆವಾಗ ಎಲ್ಲಾರಿಗೂ ಗೊತ್ತಾಗತದ ನಾ ಎಂಥಾ ದೊಡ್ಡ ಮನಶಾ ಅಂಬೋದು ! ಊರವರೆಲ್ಲಾ ಸೇರಿ ನನ್ನ ರುಂಡದ ಮ್ಯಾಲೊಂದು ಗುಡಿ ಕಟ್ಟಿಸತಾರ.
(ರೋಮಾಂಚಿತನಾಗಿ, ಉತ್ತೇಜಿತನಾಗಿ, ಒಂದು ಕ್ಷಣ ಮಾತನಾಡದೇ
ಸುಮ್ಮನಿರುವನು) ಚನ್ಯಾ, ನಾ ದೇವರಾಗಿ ಬಿಡ್ತೇನಿ ! ನನ್ನ ವಿಚಾರ ಧರ‍್ಮ ಆಗತಾವ ! ನಾಡಿನ ಜನರೆಲ್ಲಾ ನನ್ನೆದುರಿಗೆ ಬಗ್ಗತಾರ. ನನ್ನ ಮ್ಯಾಲೆ ಕಾಣಿಕೆಗಳ ಸುರಿಮಳಿ ಆಗ್ತsದ, ನನ್ನ ಮೆದುಳು ಇನ್ನಷ್ಟು ಕೊಳತು ಆ ವಾಸನಿ ದಟ್ಟವಾಗಿ ಹಬ್ಬಿತಂದ್ರ ಜನರ ಬುದ್ದಿ ಮಬ್ಬಾಗಿ ಬಿಡ್ತsದ, ಆ ವಾಸನೀಗೆ ಜನರು ಹೆದರಿ ಹೆದರಿ ಬದಕ್ತಾರ, ಗಟ್ಟಿಯಾಗಿ ಮಾತಾಡಲಿಕ್ಕೇ ಹೆದಾರ‍್ತಾರ, ಹುಡುಗರು, ಹುಡುಗೀರನ್ನ ಚುಡಾಯಿಸಲಿಕ್ಕೆ ಹೆದರ‍್ತಾರ, ಕ್ಲಾಸಿನಾಗ ಧಾಂದಲೇ ಮಾಡಲಿಕ್ಕೆ ಹೆದರ‍್ತಾರ. ಜನರು ಮೋಸಾ ಮಾಡಲಿಕ್ಕೆ ಹೆದರ‍್ತಾರ, ಲಂಚಾ ತಗೊಳ್ಳಿಕ್ಕೆ ಹೆದರ‍್ತಾರ, ದೈವಭೀತಿಯ ಉತ್ಕೃಷ್ಟ ನಡಾವಳಿಯ ಸಮಾಜ ನಿರ‍್ಮಾಣ ಆಗ್ತsದ, ನನ್ನ ಗೆಳ್ಯಾರೆಲ್ಲಾ ನನ್ನ ನೆನಪಿನಾಗ ನರಳಿಕೋತ ಬದಕತಾರ. ಯಾರಿಗೂ ಬ್ಯಾರೇ ಜೀವನಾನ ಉಳಿಯೂದುಲ್ಲಾ, ಗುಡಿಗೆ ಬರೋ ಹೆಂಗಸರೆಲ್ಲಾ ನನ್ನ ಗಂಡಾ ಅಂತ ಭಾವಿಸಿಕೋತಾರ, (ವಿಪರೀತ ಸಂತೋಷದಲ್ಲಿ) ಹೆಚ್ಚೇನು ಹೇಳಲಿ ಚನ್ಯಾ, ನಾನ ರಾಜಾ ಆಗ್ತೇನಿ, ನಾನs ದೇವರಾಗ್ತೇನಿ, ಎಲ್ಲಾರೂ ನನ್ನ ಗುಲಾಮರಾಗ್ತಾರ (ಕುಣಿ ದಾಡುತ್ತ) ಚನ್ಯಾ, ಹೊಸಾ ಸಮಾಜ ಮಾಡಲಿಕ್ಕೆ ನನ್ನ ತಲೀ ಬಲಿದಾನ ಮಾಡಲಿಕ್ಕೆ ನಾ ತಯಾರ ಇದ್ದೇನಿ, ತಯಾರ ಇದ್ದೇನಿ.
ಸಾರಥಿ : ಇಷ್ಟ ಹೇಳಿಕೊಳ್ಲಿಕ್ಕತ್ಯಾನ ಹುಡುಗಾ, ಅವನ ರುಂಡಾ ಒಯ್ದ ಬಿಡರೆಪಾ, ಅಲ್ಲದs ಅವರವ್ವ ಅಪ್ಪನ ಒಳಮನಸ್ಸು ನೋಡಿದ್ರ, ಅವರಿಗೂ ಅವನ್ನ ಸತತ ತಮ್ಮ ಕಪಾಟಿನಾಗ ಇಟಗೊಳ್ಳದ ಐತಿ.
ಡೊ. : ಹಂಗ ಮಾಡಲಿಕ್ಕೆ ಬರೂದುಲ್ಲಾ, ಅದು ಖೂನಾಗ್ತದ ಅಂತ ಒಮ್ಮೆ
ಹೇಳಲಿಲ್ಲಾ?
ಸಾರಥಿ : ಹೋಗಲಿ ಬಿಡ್ರಿ ಹಂಗಾದರ.
ಡೊ. : ಈಗ ಇಂವಾ ಸಾಯೋ ಸುದ್ದಿ ಜೋಡಿ ಇವನ ಬಗ್ಗೆ ಸ್ವಲ್ಪ ಮಾಹಿತಿನೂ ಪೇಪರಿನ್ಯಾಗ ಹಾಕಬೇಕಾಗ್ತsದ ಅದಕ್ಕೆ ನನ್ನ ಕೆಲವು ಪ್ರಶ್ನೆಗಳಿಗೆ
ಉತ್ತರಾ ಕೊಡ್ರಿ.
ಸಾರಥಿ : ಮಾರಾಯಾ ! ಮೂಗು ಬಾಯಿ ಮಟಾ ನೀರಿನ್ಯಾಗ ಮುಳಗೇವಿ, ಏನ
ಕೊಡೋಣು ಉತ್ತರಾನ ? ಅಲ್ಲಿ ತನಕಾನರs ಡೋಣ್ಯಾಗ ಜಗಾ ಕೊಡಕೊ. ಡೊ. : ನನ್ನ ಪ್ರಶ್ನೆಗಳಿಗೆ ಉತ್ತರಾ ಕೊಡೊ ತನಕಾ ಡೋಣ್ಯಾಗ ಕೂಡ ಬರ‍್ರಿ,
ಅಲ್ಲಿಂದ ನೀರಿನ್ಯಾಗ ಜಿಗಿಬೇಕು.
ಸಾರಥಿ : ಆಗಲೆಪಾ. (ಇಬ್ಬರೂ ಡೋಣಿಯಲ್ಲಿ ಕೂಡ್ರುವರು.)
ಡೋ, : ಇನ್ನ ನನ್ನ ಪ್ರಶ್ನೆಗಳಿಗೆ ಉತ್ತರಾ ಕೊಡ್ರಿ.
ಸಾರಥಿ : ಕೇಳ್ರಿ.
ಡೊ : ಇವನ ಹೆಸರಂತೂ ‘ಖಂಬೀರ ಕುಮಾರ” ಅಂಧಂಗಾತು.
ಸಾರಥಿ : ಆತು.
ಡೋ. : ಈಗ ಈಂವಾ ಎಲ್ಗೆ ಹೊಂಟಾನ ? ಯಾಕ ಹೊಂಟಾನ ?
(ಚನ್ನ ಉತ್ತರ ಕೊಡಲು ಪ್ರಾರಂಭಿಸಿದಂತೆ ಡೋಣಿಯವ ಕಾಗದ
ಪೆನ್ಸಿಲ್ ತೆಗೆದು ಬರೆದುಕೊಳ್ಳಲು ಪ್ರಾರಂಭಿಸುವನು.)
ಸಾರಥಿ : ಯಾsಕ ಹೊಂಟಾನs ಅಂದ್ರೆ ಅದು ಹೀಂಗsತೀ…. ಈಂವಾ ನಮ್ಮ
ಖಂಬೀರಾ ಸಣ್ಣ ಹುಡಗ ಇದ್ದಾಗಿನ ಪಟಾ ಎಲ್ಲಾರ‍್ಹಂಗ ಅಲ್ಲಾ. ಇದೊಂದು ಅಸಾಮಾನ್ಯ ವ್ಯಕ್ತಿ, ಎಲ್ಲಾರ‍್ಹಂಗ ಗೋಲಿ-ಗುಂಡಾ, ಗಿಲ್ಲಿದಾಂಡು ಆಡಿಕೋತ ಬೆಳದಾಂವಲ್ಲಾ, ಅದರ ಬದಲಿ, ಈಂವಾ ಕೆಲವು ಚಿಂತನಗಳ ಜೋಡಿ ಬೆಳದಾ,ಕೆಲವು ಆದರ್ಶಗಳ ಜೋಡಿ ಬೆಳದಾ. ಧೊಡ್ಕೊಂವಾಧಾಂಗ ಇವನ ವ್ಯಕ್ತಿತ್ವ ಭಾಳ ಘನತರ ಆತು, ಇವನ ಜಗತ್ತು ಭಾಳಾ ಎತ್ತರಕ್ಹೋತು, ಆ ಎತ್ತರದಿಂದ ಇಂವಾ ಕೆಳಗೆ ಬಗ್ಗಿ. ಏನ ಕಂಡಾ? (ಈ ಮಾತುಗಳನ್ನು ಹೇಳುತ್ತಿದ್ದಂತೆ ತನ್ನ ಮೈಮರೆತು ಅರ್ಧ ಕಣ್ಣು ಮುಚ್ಚಿರುವನು.)
ಖಂಬೀರ : (ಹಿಗ್ಗಿನಿಂದ) ಹೇಳ ಚನ್ಯಾ, ಹೇಳು, (ಡೋಣಿಯವನಿಗೆ) ಇಂವಾ ಹೇಳೊದೆಲ್ಲಾ ಬರಕೋಳಲಿಕ್ಕೆ ಹತ್ತಿರ‍್ಯೊಇಲ್ಲೋ ? ಏನೂ ಬಿಡ ಬ್ಯಾಡರಿ ಮತ್ತ.
ಡೋ. : (Interruption ದಿಂದ ಅಸಮಾಧಾನಗೊಂಡು, ಹಾಗೆಯೇ ಬರೆಯುತ್ತಾ ಮುಖ ಮೇಲೆತ್ತದೆ)
ನಾ ಅದನ್ನs ನಡಸೇನ್ರೀ, ನೀವು ಥ್ಪಾಡೆ ಗಪ್ಪ ಕುತಗೊಂಡ್ರ ನನ್ನ ಕೆಲಸ ಸರಳಾಗ್ತದ.
ಸಾರಥಿ : (ಇದ್ಯಾವುದನ್ನೂ ಗಮನಿಸದೇ, ಮರೆತು ಅರ್ಧ ಕಣ್ಣು ಮುಚ್ಚಿದ್ದಂತೆ)
ಏನs ಕಂಡಾ! ತಮ್ಮೂರಿನ ಜನರ‍್ನ ಕಂಡಾ! ಅವರೆಲ್ಲಾ ಪಕ್ಕಾ ಹಜಾಮರು ! ಅಗದೀ ಮೂರ್ಖರು! ಅವರಿಗೆಲ್ಲಾ ಮಾನವ ಜೀವನದ ದೂರದ ಗುರಿ ಕಾಣಸೂದsನೇ ಇಲ್ಲಾ. ಅದರ ಸೌಂದರ‍್ಯದ ಕಲ್ಪನಾನs ಇಲ್ಲಾ, ಇದ್ದದ್ದನ್ನ ಬಿಟ್ಟು ಇಲ್ಲದ್ದರ ಕಡೇ ತುಡಿಲಿಕ್ಕೆ ಬರೂದನs ಇಲ್ಲಾ, ಖಂಬೀರಾ ತನ್ನ ಕುದರೀ ಹತ್ತಿಕೊಂಡು ನನ್ನ ಕಡೆ ಬಂದಾ. ಹೇಳಿದಾ ‘ಚನ್ಯಾ, ದೂರದಾಗಿನ ಕಾಮನಬಿಲ್ಲನ್ನ ಬರೇ ನೋಡಿಕೋತ ಎಷ್ಟು ದಿವಸ ಇರೋದು ? ಅದನ್ನ ಮುಟ್ಟಲಿಕ್ಕೇ ಬೇಕು, ಅದರಾಗ ಬದಕಲಿಕ್ಕೇ ಬೇಕು, ಅದರ ಬೆಳಕಲೇ ನನ್ನ ಜೀವನಾ ಸಿಂಗಾರ ಮಾಡಿ ಕೊಳ್ಲಿಕ್ಕೇ ಬೇಕು, ಚನ್ಯಾ, ಇಕಾ ನಾ ಹೊಂಟೆ’ ಅಂದಾ. ನಾ ಹೇಳಿದೆ. ‘ಧಣೀ, ನಿನ್ನ ಬಿಟ್ಟು ನಾ ಹ್ಯಾಂಗ ಇದ್ದೇನು ? ನಡಿ, ನಾನೂ ಬಂದೆ’ ಅಂತ, ಕುದರೀಗೆ ರಥಾ ಕಟ್ಟಿದವನs ಹೊಡಕೊಂಡು ಹೊಂಟೆ.
ಡೋ : ಸ್ವಲ್ಪ ಸವಕಾಶ ಹೇಳಪಾ, ಒಂದ ಉಸರಿನ್ಯಾಗ ಹೀಂಗ ಒದರಿಕೊಂಡರ
ನಾ ಏನ ಬರಕೊಳ್ಳಿ ? (ಬರೆದುಕೊಳ್ಳುತ್ತ) ರ ಥ-ಕ ಟ್ಟಿ-ಕೊಂ-ಡು– ಹೋ -ರ-ಟ-ರು, ಹೊಂ. ಎಲ್ಲಿ ಹೋಂಟದ್ದು ಅಂತ ಹೇಳೇ ಇಲ್ಲಲ್ಲಾ ?
ಸಾರಥಿ : ಎಳ್ಳೆ ಹೊಂಟದ್ದೂ ಅಂದ್ರ ಅದು ಹೀಂಗಾತು, ಒಂದು ದಿವಸ ಖಂಬೀರಾ ತನ್ನ ಕುದರಿ ಮ್ಯಾಲೆ ಹೊಂಟಾಗ ಹಾದ್ಯಾಗ ಒಬ್ಬ ಕಾಂಗ್ರೆಸಿಗ, ಒಬ್ಬ ಬಲಪಂಥಗಾಮಿ, ಒಬ್ಬ ಪ್ರಜಾಪ್ರಭುತ್ವನಿಷ್ಠ, ಎಡ ಪಂಥಗಾಮಿ ಮತ್ತು ಒಂದು ಕುರಿಹಿಂಡು ನೋಡಿದಾ ಕೇಳಿದಾ. ‘ಚನ್ಯಾ, ಇದೆಲ್ಲಾ ಏನೂ ?” ಅಂತ. ಆವಾಗ ಅವಂಗ ನಮ್ಮ ಪ್ರಜಾ ಪ್ರಭುತ್ವದಾಗ ಸಂಶಯ ಹುಟ್ಟಿತು, ಹಾಂಗ ಸ್ವಲ್ಪ ಮುಂದ ಹೋಗುದುರಾಗ (ಈಗ ಡೋಣಿಯವ ಬರೆಯುವುದನ್ನು ಬಿಟ್ಟು ಚನ್ನನನ್ನೇ ನೆಟ್ಟಗೆ ನೋಡುತ್ತ ಕುಳಿತಿರುವನು) ಅಂವಾ ಒಬ್ಬ ಗಾಂಧೀವಾದಿ, ಒಬ್ಬ ಅರವಿಂದವಾದಿ, ಒಬ್ಬ ಆರ್ಷೇಯವಾದಿ, ಇವರ‍್ನ ನೋಡಿದಾ. ಆವಾಗ ಅಂವಗ ನಮ್ಮ ಜೀವನದ ಮೌಲ್ಯಗಳೊಳಗೆ ಸಂಶಯ ಹುಟ್ಟಿತು. ಮುಂದ ಹೋಗುದರಾಗ ಒಬ್ಬ ಮುತ್ತೈದಿ, ಒಬ್ಬ ಸೂಳಿ, ಒಬ್ಬ ಎಲ್ಲಮ್ಮನ ಗುಡ್ಡದ ಜೋಗತಿ ಇಷ್ಟ ನೋಡಿದಾ, ಅಂವಗ ಜೀವನದೊಳಗೇನೇ ಸಂಶಯ ಹುಟ್ಟಿಬಿಡ್ತು, ಹೇಳಿದಾ ‘ಚನ್ಯಾ, ನಮ್ಮ ಜೀವನ ಮೌಲ್ಯಗಳು ಲಡ್ಡಾಗಿ ಹೋಗ್ಯಾವ, ನಮ್ಮ ಜೀವನ ಗೊಡ್ಡಾಗಿ ಹೋಗೇದ, ನಮ್ಮ ಜೀವನಕ್ಕೆ ಒಂದು ಹೊಸಾ ಅರ್ಥ ಹುಡುಕಬೇಕು. ನಮ್ಮ ಊರಿನ ಮಂದಿ ಅಡಪ ಹತ್ತಿದ ನಾಯಿ ಹಂಗ ಆಗ್ಯಾರ. ಆವರನ್ನ, ಈ ನೀತಿ, ಈ ರೊಕ್ಕ, ಈ ಜನಿವಾರ, ಈ ಶಿವದಾರ, ಸುಟ್ಟು -ಸುಡುಗಾಡು, ಈ ಗೊಂದಲದ್ದೇ ಪಾರಗಾಣಿಸಿ, ನಮ್ಮ ಊರಿನ ಜೀವನಕ್ಕೆ ಒಂದು ಹೊಸಾ ಉದ್ದೇಶಾ ತಂದು ಕೊಡಬೇಕು, ಚನ್ಯಾ, ಇಕಾ ನಾ ಹೊಂಟೆ’ ಅಂದಾ. ‘ಧಣಿ, ನಿನ್ನ ಬಿಟ್ಟು ನಾ ಎಲ್ಯರsಇದ್ದೇನೇನು !” ಅಂದವ್ನ ನಾ ರಥಾ ಕಟ್ಟಿದೆ. ಇಬ್ಬರೂ ಹೊಂಟಿವಿ.
ಡೋ. : ನಾನೂ ಆವಾಗ್ನಿಂದs ಅದನ್ನ ಕೇಳಲಿಕ್ಕೆ ಹತ್ತೇನಪಾ ಎಲ್ಲಿ ಹೊಂಟ್ರಿ, ಎಲ್ಲಿ ಹೊಂಟ್ರೀ ? ಅಷ್ಟ ಹೇಳೋದು ಬಿಟ್ಟು ಯಾಕ ನನ್ನ ತಲಿ ತಿನ್ನಲಿಕ್ಕೆ ಹತ್ತಿ ? ಖಂಬೀರ : ಚನ್ಯಾ, ನೀ ಹೇಳೋದು ಅವರಿಗೆ ತಿಳೀವಲ್ತು, ನಾ ಹೇಳ್ತೀನಿ ಬಿಡು.
(ಎದ್ದು ನಿಂತು ಅಭಿನಯದೊಡನೆ) ಒಂದ ದಿವಸ, ಭಯಂಕರ ಮಳಿ, ಭಯಂಕರ ಕತ್ತಲು, ಮುಗಲ ತುಂಬೆಲ್ಲಾ ಸಿಕ್ಕಾಪಟೀ ಮಿಂಚಲಿಕ್ಕೆ ಹತ್ತಿತ್ತು, ಖಿಡಕ್ಯಾಗಿಂದ ನಾ ನೋಡಿಕೋತ ನಿಂತಿದ್ದೆ, ಒಂದು ಅದ್ಭುತ ಮಿಂಚು ಹೊಡಿತು. ಆವಾಗ ನಾ ಏನ ಕಂಡೆ ?
(ಈಗ ಡೋಣಿಯವ, ಮತ್ತೆ ಬರೆಯುವದನ್ನು ಬಿಟ್ಟು ಇವನನ್ನೇ ದಿಟ್ಟಿಸುತ್ತ ಕುಳಿತಿರುವನು.)
ಖಿಡಕಿ ಬಾಜೂಕಿನ ಬೈಲು, ಅದರ ಬಾಜೂಕಿನ ಕಾಡು-ಮಳೀವಳಗ ತೊಯ್ಸಿಕೋತ ನಿಂತದ ಸಣ್ಣ ಹುಡಗೊರ‍್ಹಂಗ, ಅದರತ್ಲಾಗಿನ ಗುಡ್ಡ -ಎರಕೊಳ್ಲಿಕ್ಕೆ ಕುತ್ತ, ಮೈನಾರಿದ ಹುಡಗೀಹಂಗ, ಅದರತ್ಲಾಗ, ಅದರತ್ಲಾಗ, ನೋಡಿಕೋತ ಹೋದೆ. ತಂಪಗಾಳಿ ಮೈಯೆಲ್ಲಾ ಬೀಸಿ ಮೈತುಂಬಾ ಆವೇಶ ತುಂಬಿಕೊಂಡ್ಹಂಗಾತು. ಹಂಗೆs ನೋಡೇ ನೋಡಿದೆ. ಇಡೀ ಇತಿಹಾಸಾನ ನನ್ನೆದುರಿಗೆ ಬಿದ್ದದಲ್ಲೆ ! ಸಾಮ್ರಾಜ್ಯಾ ದಾಟಿ ಆ ಕಡೇ ನದೀ ತೀರದ ಸಂಸ್ಕೃತಿ, ಅದರಾಗ ಅಟ್ಟಂಬಟ್ಟಂ ಅಡಿವಿ, ತಾರ ತಂತಿ ಕಂಬಾ ನೋಡಿದ್ರ ಕ್ರೂಸಿಷ್ಟಾ ಆದ ಕ್ರಿಸ್ತ ಕಂಡಾ. ನಾ ಹೇಳಿದೆ, ಚನ್ಯಾ, ಇದೆಲ್ಲಾ ದಾಟಿ ಹೋಗಬೇಕು. ಈ ಮಿಂಚಿನ ಗುಂಟ ಹೋಗಬೇಕು, ಇದನ್ನೆಲ್ಲಾ ಮೂಡಸೋ ಮುಳಗಸೋ ಶಕ್ತಿ ಚೋಡಿ ಇರಬೇಕು, ಅದನ್ನ ತಿಳಕೋಬೇಕು ಚನ್ಯಾ, ಇಕಾ ನಾ ಹೊಂಟೆ.
ಡೋ. : (ಸಿಟ್ಟಿನಿಂದ, ಕಾಗದ ಪೆನ್ಸಿಲ್ ಒಗೆದು ಎರಡೂ ಕೈ ಬೀಸುತ್ತಾ) ಚನ್ಯಾ ಹೇಳಿದಾ ‘ಧಣೀ ನಿನ್ನ ಬಿಟ್ಟು ನಾ ಏನು ಇರೋದು.’ ರಥಾ ಕಟ್ಟಿದಾ. ಹೊಂಟರಿ, (ಎರಡೂ ಕೈಯೆತ್ತಿ ಕೂಗುತ್ತ) ಅದನ್ನ ಕೇಳಲಿಕ್ಹತ್ತೇನಿ ನಾನು, ಎಲ್ಲಿ ಹೊಂಟರಿ ? ಎಲ್ಲಿ ಹೊಂಟೀರಿ ? ಮತ್ತ ಈ ಸುಳ್ಳ ಹೇಳೋ ಚಟಾ ಬಿಡ್ರಿ, ಒಂದ ಮಿಂಚು ಮಿಂಚಿ ಮಾಯ ಆಗೊದ್ರಾಗ ಅಷ್ಟೆಲ್ಲಾ ನೋಡಲಿಕ್ಕೆ ಸಾಧ್ಯ ಆದ ಏನು ?
(ಡೋಣಿಯವ ಮಾತಾಡುತ್ತಿರುವಾಗ ಚನ್ನ ನೀರಿಗೆ ಕೈಹಾಕಿ ಸಂಭ್ರಮದಿಂದ) ಸಾರಥಿ : ಧಣೀ ನೀರಿನ್ಯಾಗ ತೇಲಿಕೊಂಡು ಹೊಂಟಿದ್ದ ಎರಡು ಬುಟ್ಟಿ ಸಿಕ್ಕವುನೋಡು, ಇದರಾಗ ಕುತಗೊಂಡು ತೇಲಿ ನಮ್ಮ ಜೀಂವಾ ಕಾಪಾಡಿಕೋಬಹುದು. ಖಂಬೀರ : (ಸಂತೋಷದಿಂದ) ಚನ್ಯಾ, ದೇವರು ಧೊಡ್ಡೊಂವಾ, ಅಂತೂ ನಮ್ಮ
ಪ್ರಾಣಾ ಉಳಿಸಿದಾ ನೋಡು, ಅಲ್ಲದ ಇದರಾಗ ತೇಲಿಕೇತ ನಮ್ಮ
ಪ್ರಯಾಣಾನೂ ಮುಂದವರೆಸಬಹುದು.
ಸಾರಥಿ : (ಡೋಣಿಯವನಿಗೆ) ಸದ್ಯ, ನಿಮಗೂ ತೊಂದರೆ ತಪ್ಪಿಧಂಗಾತು ಬಿಡ್ರಿ
ಸಾಹೇಬರ, ನಾವೇನು ಸಾಯೋದುಲ್ಲಾ, ನೀವೇನು ಸುದ್ದಿ ಕೊಡ ಬೇಕಾಗಿಲ್ಲಾ. ನಾವೆಲ್ಲಿ ಹೊಂಟೇವಿ ಅಂತ ತಿಳೀದ ಒದ್ದಾಡಬೇಕಾಗಿಲಾ ನಾ ಹೇಳೇ ಹೇಳಿದೆನೇಪಾ, ಖಂಬೀರಕುಮಾರ ಜೀವನದ ಹೂಸಾ ಮೌಲ್ಯಗಳು, ಹೊಸಾ ಅರ್ಥಾ ತಿಳಕೊಳ್ಲಿಕ್ಕೆ ಹೊಂಟಾನ ಅಂತ.
(ಇಬ್ಬರೂ ಡೋಣಿಯಿಂದ ಒಂದೊಂದು ಬುಟ್ಟಿಗೆ ಇಳಿಯುವರು.)
ಸಾರಥಿ : (ಡೋಣಿಯವನಿಗೆ) ಹಂಗಾರ ಹೋಗಿ ಬರ‍್ತೇವ್ರಪಾ, ನಮಸ್ಕಾರ.
ಡೋ. : ಸಾಯದಿದ್ರೇನಾತು ? ಏನೋ ತಿಳಕೋಳ್ಲಿಕ್ಕೆ ಹೊಂಟಾನ ಅಂತೀದಿ.
ಅದನ್ನ ಪೇಪರಿನ್ಯಾಗ ಹಾಕಿಸಿ ಬಿಡ್ತೀನಿ.
ಸಾರಥಿ : ಏನಂತ ?
ಡೋ. : ‘ಹೆಚ್ಚಿನ ಜ್ಞಾನಕ್ಕಾಗಿ ಖಂಬೀರ ಕುಮಾರರವರ ಜಲಪ್ರಯಾಣ’ ಅಂತ. ಸಾರಥಿ : (ಒಂದು ಕ್ಷಣ ಗರಬಡಿದವನಂತೆ ನಿಂತು, ಬಳಿಕ ಸಂತೋಷದಿಂದ)
ನಿಮಗ ಪುಣ್ಯಾ ತಟ್ಟಲ್ರೆಪಾ, ಅಷ್ಟ ಮಾಡಿಬಿಟ್ಟರ ಭಾಳ ಮಸ್ತ್ರ ಆಗತದs ನೋಡ್ರಿ, ನಮ್ಮ ಖಂಬೀರನ ಯೋಗ್ಯತಾಕ ಕಡೀಕ್ಯರs ಜನ ಮನ್ನಣಾ ಸಿಕ್ಕ ಹಂಗ ಆಗ್ತದ
ಡೋ. : ಆದ್ರ, ನೀವು ನಡಕ ಸತ್ತ ಹೋದರ ? ನನಗ್ಹ್ಯಾಂಗ ಗೊತ್ತಾಗಬೇಕು.
ನೀವೇನು ಹೋಗಿ ಮುಟ್ಟಿದ್ಯರೋ ಇಲ್ಲಾ ನಡಕ ಮುಳಗಿ ಸತ್ಯ ಹೊದ್ಯರೋ ಅಂತ ?
ಸಾರಥಿ : ಅದಕ್ಯಾಕ ಚಿಂತಿ ? ಒಂದ ಉಪಾಯ ಐತಿರಿ. ಒಂದೆ ಬಕೀಟು ತುಂಬಾ
ಬಿಸಿಬಿಸಿ ಕುಡಿಯೋ ನೀರು ತಗೋಳ್ಳಿ, ಅದರಾಗ ಒಂದು ಅಡಿಕೆ ಬೆಟ್ಟದ ಗಾತ್ರದ ಆಣೀಕಲ್ಲು ಹಾಕರಿ. ಆ ನೀರು ಥಣ್ಣಗಾಗಿ ಹೋದವಂದ್ರ ಖಂಬೀರಾ ಹೋಗಿ ಮುಟ್ಟಿದ ಅಂತ ತಿಳಕೋಳ್ರಿ, ಜರ ಕಲ್ಲs ಕರಗಿ
ಹೋತಂದ್ರ ಅಂವಾ ಸತ್ತ ಅಂತ ತಿಳಕೋಳ್ರಿ, ನಾವು ಬರೋಣ ಇನ್ನ ?
ಡೋ. : ನಿಂದರ‍್ರಿ ಸ್ವಲ್ಪ, ಈ ಕಲ್ಲು ಕರಗಸೋ ಧಂದೇದಾಗ ನನಗೇನು ನಂಬಿಗಿ ಕೂಡವಲ್ಲತು. ನೀವೆಲ್ಯೋ ಭಾಳ ಲುಚ್ಚಾ ಮಂದೀ ಹಂಗ ಕಾಣಸ್ತೀರಿ, ನಿಮ್ಮ ಖರೇ ಹಕೀಕತ್ತು ಏನನ್ನೊದು ಹೇಳಿ ಹೋಗ್ರಿ. (ಅಷ್ಟರಲ್ಲಿ ಬುಟ್ಟಿಗಳು ರಂಗಸ್ಥಳದ exit ಕಡೆ ತೇಲತೊಡಗುವವು.)
ನಾ ಹಂಗ ಬಿಡೂದುಲ್ಲ ನಿಮ್ಮನ್ನ (ಬುಟ್ಟಿಗಳು ಮರೆಯಾಗುವವು ) ಏ, ನಿಂದರ‍್ರ‍್ಯೋ ಲಫಂಗ ಸೂಳೆ ಮಕ್ಕಳs, ಹಲ್ಕಟ್ಟ ಸೋಳೇಮಕ್ಕಳs (ಡೋಣಿಯಲ್ಲಿ ಅವರನ್ನು ಬೆಂಬತ್ತುವನು. ಡೋಣಿ ಮರೆಯಾಗುತ್ತಾ) ಕಲ್ಲು ಕರಗಬೇಕಂತ ಕಲ್ಲು!
(ಈಗ ರಂಗದಲ್ಲಿ ಗೊಂಬೆಗಳ ಮೇಲೆ ಬೆಳಕು ಬೀಳುವದು.)
೧ ನೇ : ಗೆಳತೀ, ಕಲ್ಲು ಕರಗಿತೇನು ?
೨ ನೇ : ಶುಶ್, ಸುಮ್ಮನಿರ‍್ರಿ, ಅಂವಾ ಬಡಬಡಸಲಿಕ್ಕೆ ಹತ್ತಿಧಂಗ ಕೇಳಸ್ತದ,
(ಪರದೆಯ ಹಿಂದಿನಿಂದ ಮಾತುಗಳು ಕೇಳಿ ಬರುವವು.)
ಖಂಬೀರ : ಚನ್ಯಾ, ಏನದು ?
ಸಾರಥಿ : ಒಂದ ಒಡಕ ವನಿಕಿ ನೀರಾಗ ತೇಲಿ ಬರಲಿಕ್ಕೆ ಹತ್ತೇದ ಧಣಿ……
ಖಂಬೀರ : ತಗೋ ಅದನ, ಏನರ ಉಪಯೋಗ ಬಂದೀತು.
ಸಾರಥಿ : ಆಗಲಿ ಧಣಿ.
ಖಂಬೀರ : ಚನ್ಯಾ, ಅವೇನು ?
ಸಾರಥಿ : ಒಂದು ಮುರುಕು ಛತ್ರಿ, ಹರಕ ಟೊಪಗಿ ತೇಲಿಕೊಂಡು ಬರಾಕತ್ಯಾವ ಧಣಿ.
ಖಂಬೀರ : ಅವನ್ನೂ ತಗೊ, ಯಾವ್ದರ ಕೆಲಸಕ್ಕೆ ಬಂದಾವು.
ಸಾರಥಿ : ಆಗಲಿ ಧಣಿ.
(ಈಗ ಬುಟ್ಟಿಗಳು ತೇಲುತ್ತಾ ಮತ್ತೆ ರಂಗಸ್ಥಳವನ್ನು ಪ್ರವೇಶಿಸುವವು. ಗೊಂಬೆಗಳು ಮತ್ತೆ ಕತ್ತಲಲ್ಲಿ, ಮುಂದಿನ ಬುಟ್ಟಿಯಲ್ಲಿ ಖಂಬೀರ. ತಲೆಯ ಮೇಲೆ ಹರಕು ಟೋಪಿ, ಒಡಕು ಒನಕೆಯಿಂದ ಹುಟ್ಟು ಹಾಕಿ ಕೊಂಡಂತೆ ನಟಿಸುತ್ತಿರುವನು, ಹಿಂದಿನ ಬುಟ್ಟಿಯಲ್ಲಿ ಸಾರಥಿ, ಛತ್ರೀ ಏರಿಸಿ ಖಂಬೀರನ ತಲೆಯ ಮೇಲೆ ಹಿಡಿದಿರುವನು, ಚನ್ನ anounce ಮಾಡುವವನಂತೆ ಈ ರೀತಿ ಕೂಗುವನು.)
ಸಾರಥಿ : ಕೇಳ್ರೆಪಾ ಕೇಳೋ, ಕಿವೀ ಇದ್ದವರೆಲ್ಲಾ ಕೇಳ್ರಿ. ನಮ್ಮ ಖಂಬೀರ
ಕುಮಾರಾ ಜಲಪ್ರಯಾಣಕ್ಕೆ ಹೊಂಟಾನ, ಹೆಚ್ಚಿನ ಜ್ಞಾನಕ್ಕಾಗಿ ಜಲ ಪ್ರಯಾಣಕ್ಕೆ ಹೊಂಟಾನ. (ಹಾಡುವನು, ಹಾಡು ಮುಗಿಯುವಂತೆ ಬುಟ್ಟಿಗಳು ರಂಗದ ಇನ್ನೊಂದು ತುದಿಯ ವರೆಗೆ ಚಲಿಸಿ ಮರೆಯಾಗುವವು.)

ಹರಕು ಬುಟ್ಟಿ ಹರಿಗೊಲಿನ್ಯಾಗ,
ಪ್ರವಾಸ ಹೊಂಟಾನ 1 ಖಂಬೀರ ಪ್ರವಾಸ ಹೊಂಟಾನ ||
ಒಡಕ ಒನಿಕೆ ಹುಟ್ಟು ಹಾಕ್ಕೊಂಡು,
ಪ್ರವಾಸ ಹೊಂಟಾನ | ಖಂಬೀರ ಪ್ರವಾಸ ಹೊಂಟಾನ ||
ಮುರಕು ಛತ್ರಿ, ಚಿಂದೀ ಟೊಪಗಿ,
ಪ್ರವಾಸ ಹೊಂಟಾನ | ಖಂಬೀರ ಪ್ರವಾಸ ಹೊಂಟಾನ ||
ಹುಚ್ಚ ಚನ್ಯಾನ ಹಿಂದ ಕಟಿಗೊಂಡು,
ಪ್ರವಾಸ ಹೊಂಟಾನ | ಖಂಬೀರ ಪ್ರವಾಸ ಹೊಂಟಾನ ||

‘(ಬುಟ್ಟಿಗಳು ಮರೆಯಾಗುತ್ತಿದ್ದಂತೆ ಇನ್ನೊಂದು ಪ್ರವೇಶದಿಂದ ಡೋಣಿ
ರಂಗದ ಮೇಲೆ ಬರುವದು.)
ಡೋ. : ನೀವು ಯಾರೂ ಅಂತ ಖರೇ ಹೇಳೋ ತನಕಾ ನಾ ನಿಮ್ಮನ್ನ ಬಿಡೂದುಲ್ಲಾ, ಏ ಲಫೋಟ ಸೂಳೇ ಮಕ್ಕಳ, ಅರೆ, ಹೋಗೆ ಬಿಟ್ರೇನು ಇವರಾಪನ-ನಾ ಬಿಡೊದುಲ್ರ‍್ಯೋ ನಿಮ್ಮನ್ನ ಲಡದೂ ಸೋಳೇ ಮಕ್ಕಳ, ಎಲ್ಲಿ ಹೋದೀರಿ ನೀವು ? (ಹೀಗೆ ಅನ್ನುತ್ತಿದ್ದಂತೆ ಡೋಣಿ ಬುಟ್ಟಿಗಳು ಹೋದ ದಿಕ್ಕಿನಲ್ಲಿ ಹೋಗಿ ಮರೆಯಾಗುವದು, ಮತ್ತೆ ಗೊಂಬೆಗಳ ಮೇಲೆ ಬೆಳಕು.) (ಹಾಡುವದು)
೨ ನೇ : ಕುದರಿ ಹೋತು ರಥಾ ಬಂತು. ಡುಂ ಡುಂ ಡುಂ ಡುಂ, ರಥಾ ಹೋತು ಡೋಣಿ ಬಂತು ಡುಂ ಡುಂ-ಡುಂ ಡುಂ, ಡೋಣಿ ಹೋತು. ಬುಟ್ಟಿ ‘ಬಂತು ಡುಂ ಡುಂ.-ಡುಂ ಡುಂ. ಬುಟ್ಟಿ ಹೋಗಿ…….. ೧ ನೇ : (ನಡುವೆಯೇ ತಡೆದು) ಏ, ಗೆಳತಿ, ಅರ್ಧಾಕ್ಕೆ ನಿಂದರಿಸಿದೆಲ್ಲಾ ಖಂಬೀರನ ಕಥೀ ? ಮುಂದೇನಾತು ?
೨ ನೇ : ಆ ಮ್ಯಾಲೆ ಖಂಬೀರ ಕುಮಾರಾ ಒಂದ ಪ್ರತಿಜ್ಞಾ ಮಾಡಿದಾ. ಏನಂದ್ರ ‘ಈ ಕುದರೀ ಪಳಗಿಸಿ ನಾ ಹೇಳಿದಂಗ ಕೇಳೋ ಹಂಗ ಮಾಡಿ ಬಿಟ್ಟ
ಜಾಗಕ್ಕೆ ವಾಪಸ ತರತೇನಿ’ ಅಂತ, ಈ ಶರ‍್ಯತ್ತಲೇ ಕುದರೀ ಏರಿದಾ
೩ ನೇ : ಆದರ ಹಂಗ ಮಾಡಲಿಕ್ಕೆ ಆಗಲಿಲ್ಲಾ.
೪ ನೇ : ಕುದರಿ ತನ್ನ ಮನಸ್ಸು ಬಂಧಂಗ ರಭಸದಲೇ ಓಡಿಕೋತ ಹೋಗಿ. ಬಿಡ್ತು, ಯಾರಿಗೂ ಅಸಗೊಳ್ಳೋ ಕುದರೀನs ಅಲ್ಲ ಅದು ! ಖಂಬೀರಗ ಕುದರೀ ಬಿಟ್ಟು ಇಳೀಲಿಕ್ಕೂ ಆಗವಲ್ತು, ಅದು ಭೂಮೀ ಮ್ಯಾಲೆ ಗಾಳೀ ಹಂಗ ಓಡಿತು, ಆಕಾಶದಾಗ ಗರುಡನ ಹಂಗ ಹಾರಿತು,
೫ ನೇ : ಅಯ್ಯ! ಅದು ರೆಕ್ಕೀ ಕುದರಿ ಇತ್ತೇನು ?
೪ ನೇ : (ಪ್ರಶ್ನೆಯನ್ನು ಗಮನಿಸದೇ) ಸಮುದ್ರದೊಳಗೆ ಮೀನಿನ ಹಂಗ ಈಜಿತು. ಕಡೇಕ ಆ ಬೆಟ್ಟದಂಥಾ ಬಿಳೇ ಕುದರಿ ಖಂಬೀರನ ತಗೊಂಡು ಅಟ್ಟಂಬಟ್ಟಂ ಅರಣ್ಯದಾಟಿ, ಆರು ಸಮುದ್ರಾ ದಾಟಿ ಏಳನೇ ಸಮುದ್ರ ಅಂವನ್ನ ಒಗದು ಮಾಯ ಆಗಿ ಬಿಡ್ತು, ಆ ಸಮುದ್ರದ ನಡಕೊಂದು ಬಂಡೆಗಲ್ಲು, ಆ ಬಂಡೀ ಮ್ಯಾಲೆ ಒಂದು ಗುಡಿ, ಆ ಗುಡಿ ಮುಂದ ಒಂದು ಎಂಥಾ ಗಾಳಿಗೂ ಆರದ ಸಣ್ಣ ದೀಪಾ, ಆ ಗುಡೀ ಒಳಗಿನ ದೇವರಿಗೆ ಬೇಡಿದ ಕಾಣಿಕೆ ನೀಡಿದ್ರ, ಕೇಳಿದ ವರಾ ಸಿಗ್ತsದ. ಖಂಬೀರಗ ತನ್ನ ಶರ‍್ಯತ್ತು ಗೆದೀಲಿಕ್ಕೆ ಒಂದು ಅವಕಾಶ, ಖಂಬೀರ ಗುಡೀ ಒಳಗ ಹೋದಾ. (ಒಮ್ಮೆಲೇ ಸುಮ್ಮನಾಗಿ ಬಿಡುವದು)
೬ ನೇ : ಮುಂದೇನಾತು ? ಲಗೂ ಹೇಳs?
೭ ನೇ : ಹಿಂಗ್ಯಾಕ ಮಾಡತೀಯs ಯವ್ವಾ ? ಮುಂದೇನಾತು ? ಹೇಳು, ನಿನ್ನ
ಕಾಲಿಗೆ ಬೀಳತೇನಿ ಹೇಳು.
೪ ನೇ : ನೀವೆಲ್ಲಾ ಒಂದ ಗಳಿಗಿ ಕಣ್ಣು ಮುಚ್ಚಿಕೊಂಡು ನಿದ್ದೀ ಮಾಡರಿ, ಘಂಟಿ
ಗಳು ಬಾರಸೋ ಸಪ್ಪಳ ಕೇಳಿಸಿದ ಕೂಡಲೇ ಕಣ್ಣು ಬಿಡ್ರಿ, ಮುಂದಿನ ಕಥೀನ ಕಣ್ಣಾರೆ ನೋಡಿರಂತ.
(ಬೆಳಕು ಈಗ ಗೊಂಬೆಗಳಿಂದ ಮುಂದೆ ಬರುವದು. ರಟ್ಟಿನ ಮೇಲೆ ಸಮುದ್ರದ ಅಲೆಗಳ ಪೇಂಟಿಂಗ, ತಕ್ಕ ಹಿನ್ನೆಲೆ ಸಂಗೀತ, ಖಂಬೀರ,
ಚನ್ಯಾ, ಬುಟ್ಟಿಗಳಲ್ಲಿ ಎದ್ದು ನಿಂತಿರುವರು.)
ಖಂಬೀರ : ಚನ್ಯಾ,
ಸಾರಥಿ : ಧಣೀ.
ಖಂಬೀರ : ನಾವು ನದೀ ಅಂತ ತಿಳ್ಕೊಂಡದ್ದು ಸಮುದ್ರ ಆಗಿಬಿಟ್ಟದಲ್ಲಲೇ ?
ಸಾರಥಿ : ನದೀ ಬಂದು ಸಮುದ್ರಕ್ಕೆ ಕೂಡಿರಬೇಕು ಧಣಿ.
ಖಂಬೀರ : ಕೂಡಲಿ ಬಿಡು, ನಾವೂ ಕೂಡೋಣಂತ (ಇಬ್ಬರೂ ಕೂಡುವರು.) ಖಂಭೀರ : ಚನ್ಯಾ,
ಸಾರಥಿ : ಧಣೀ,
ಖಂಬೀರ : ಹಂಗ ನೋಡಿದ್ರ ರಥದಕಿಂತಾ ಬುಟ್ಟಿನ ಭೇಷ ಬಿಡಲೇ.
ಸಾರಥಿ : ಯಾಕ ಧಣೀ ?
ಖಂಬೀರ : ಅಲ್ಲೆ ಕುದುರಿಗೆ ಭಾರ ಆಗೋಕ್ಕಿಂತಾ ಇಲ್ಲಿ ನಮ್ಮ ಮುಕಳೀ ಮ್ಯಾಲೆ
ನಾವು ಕುತ್ತಿರತೇವಿ ನೆಡಲೇ.
ಸಾರಥಿ : ಹೌದ ಧಣೀ
ಖಂಭೀರ : ಚನ್ಯಾ,
ಸಾರಥಿ : ಧಣೀ,
ಖಂಬೀರ : ಮನಸ್ಯಾ, ಯಾವಾಗಾದರೂ, ತನ್ನ ಕಾಲ ಮ್ಯಾಲೆ ತಾ ನಿಲ್ಲಬೇಕು. ತನ್ನ ಮುಕಳೀ ಮ್ಯಾಲೆತಾ ಕೂಡಬೇಕು, ಏನಂತಿ ?
ಸಾರಥಿ : ಕೂಡುತೇನಿ ಧಣೀ.
ಖಂಬೀರ : ಚನ್ಯಾ,
ಸಾರಥಿ : ಧಣೀ
ಖಂಬೀರ : ನದೀ ಸೆಳವಿನ ಹೊಡತಾ ನೋಡಿದರ, ನಮ್ಮ ಊರಿಗೆ ಊರ ಕೊಚಿಗೊಂಡು ಹೋಗಿರಬೇಕಲ್ಲ ?
ಸಾರಥಿ : ಹಾಂಗ ಕಾಣತsದ ಧಣೀ, ಅಂಧಂಗ ಧಣೀ, ಇನ್ನ ನೀ ಹಾದಿ ಗುರತಾ
ಹ್ಯಾಂಗ ಇಟಗೊಳೊಂವಾ ?
ಖಂಬೀರ : ಚನ್ಯಾ, ಇನ್ಯಾಕ ಹಾದಿ ಗುರತು ? ನದೀ ರೋಷಕ್ಕ ನಮ್ಮೂರಿನ ಸೌಳ
ಮಣ್ಣಿನ ಗೋಡೆಗಳೆಲ್ಲಾ ಕುಸದು ಬಿದ್ದಿರಬೇಕು, ತೊಗಲು ಕೆರಕೋತ ಕುತ್ತಿರೋ ಮುದಕರೆಲ್ಲಾ ಶೆಟದು ಹೋಗಿರಬೇಕು, ಥಣ್ಣನ್ನೀರು ಬಂದು ಸೀರಿ, ಧೋತ್ರದ ಒಳಗೆ ಹೊಕ್ಕಾಗ ನವಾರಿನ ಮಡಿವಂತ ಮಂದಿಗೆ ಪಾಪನs ಬಂದು ತಟ್ಟಿಧಂಗ ಅನಿಸಿರಬೇಕು, ಮುಂದ ಆ ನೀರಿನ್ಯಾಗ ಪಾಪಾನ, ಪುಣ್ಯಾ, ಸೀರಿ, ಧೋತ್ರಾ ಎಲ್ಲಾ ಕೊಚಿಗೊಂಡು ಹೋಗಿರಬೇಕು, ದ್ಯಾಮವ್ವಾ ದುರಗವ್ವನ ಗುಡಿ, ಮುನಸೀಪಾಲ್ಟಿ, ಸಾಲಿ, ಕಚೇರಿ ಎಲ್ಲಾ ನದೀ ತಳಾ ಕಂಡಿರಬೇಕು.
ಸಾರಥಿ : ಹಾಂಗ ಅಂತ ಕಾಣಸ್ಯsದ ಧಣೇ
ಖಂಬೀರ : ಈ ಜಲಪ್ರಳಯದಾಗ, ನಾ ಒಬ್ಬೊಂವಾ ಮನು ಮಹರ್ಷಿ ಹಾಂಗ
ಮುಂದಿನ ಪೀಳಗಿ ಉಳಸಲಿಕ್ಕೆ ಉಳದೇನೆ ನೋಡು.
ಸಾರಥಿ : ಮತ್ತೆ ನಾನು ಧಣೀ ?
ಖಂಬೀರ : ಏ ಚನ್ಯಾ, ನಾನೂ ನೀನೂ ಬ್ಯಾರೆ ಬ್ಯಾರೆ ಏನಲೆ ? ಎರಡು ದೇಹ
ಒಂದು ಪ್ರಾಣೇನಪಾ, ಅದಿರಲಿ, ಭಾಳ ಬ್ಯಾಸರಾಗೇದ, ಒಂದ ಹಾಡೆ
ಹಾಡು.
ಸಾರಥಿ : ನನಗ ಬರದಲ್ಲ ಧಣೀ ನೀನ ಹಾಡು,
ಖಂಬೀರ : ಹಿಂಗs? ಹಂಗಾರ ಕೇಳು ಈ ಲಾವಣಿ, (ಹಾಡತೊಡಗುವನು.)
‘ಬಾಳಿನ ಬಟ್ಯಾಗ, ಏನೇನು ಕಂಡಿ ?
ಅಂಚಲ್ಲಿ ಹಂಚ್ಯಾವೋ, ನೈಲಾನು ಗುಂಡಿ’
ಸಾರಥಿ : ಸ್ವಲ್ಪ ತಡೀ ಧಣೀ.. ಅಲ್ಲೇನು ಕಾಣಸಲಿಕ್ಕತ್ತೇದ ನೋಡು ಒಂದು
ಬಂಡೀಗಲ್ಲು, ಅದರ ಮ್ಯಾಲೊಂದು ಗುಡಿ, ಗುಡಿ, ಮುಂದ ಒಂದು
ದೀಪಾ, ಅಲ್ಲಾ ಧಣೀ, ಇಂಥಾ ಘಾಳಿ ವಳಗೂ ಅದು ಆರವಲ್ಲತಲ್ಲಾ?
ಖಂಬೀರ : (ಚಕಿತನಾಗಿ ಎದ್ದು ನಿಂತು ತನಗೇ ಹೇಳಿಕೊಂಡಂತೆ)
ಗಾಳಿಗೆ ಆರದಂಥ ದೀಪ 1 (ಹರ್ಷದಿಂದ ಕುಣಿಯುವನು.) ಇನ್ನೂ ತಿಳಿಲಿಲ್ಲೇನು ಚನ್ಯಾ ನಿನಗ ? ಅದs ಅಲ್ಲೇನಲೇ ನಾವು ಮುಟ್ಟಬೇಕಾಗಿದ್ದ ಸ್ಥಳ ? ನೆನಪ ಬರವಲ್ಲತೇನು ನಿನಗ ? ಹಾದೀ ವಳಗ ಒಂದು ಶಕುನ ಏನು ಹೇಳಿತ್ತು ? ‘ಸಮುದ್ರದ ನಡಕ, ದೇವಸ್ಥಾನದ ಮುಂದ, ಆರದಂಥಾ ದೀಪ ಉರಿಸ್ತಿರತಾರ. ಅಲ್ಲಿ ಹೋಗಿ, ಕೇಳಿದ್ದ ಕಾಣಿಕೆ ಕೊಟ್ಟರ, ನೀವು ಹೋದ ಕೆಲಸ ಆಗತದ ಅಂತ ?
ಸಾರಥಿ : (ಸಂತೋಷದಿಂದ) ಹೌದಲ್ಲss! ಭಾಳ ಛೊಲೋ ಆತು ಬಿಡು ಧಣೀ.
ನನಗೂ ರಗಡ ಚಿಂತಿ ಆಗಿತ್ತು, ನಮ್ಮ ಕೆಲಸ ಕಡೀಕರ ಆಗ್ತದೋ ಇಲ್ಲೋ ಅಂತ, ಹಂಗರ ಬುಟ್ಟಿ ಅತ್ಲಾಗ ತಿರಗಸೋಣಲ್ಲಾ ?
ಖಂಬೀರ : ಚನ್ಯಾ, ಇನ್ನ ಈ ಬುಟ್ಟಿ-ಗಿಟ್ಟಿ ನಕಲೀ ವಾಹನಗಳಾಲ್ಲಾ ಉಪಯೋಗ
ಬೀಳೊದುಲ್ಲಾ, ಅಲ್ಲೆ ಹೋಗಿ ಸೇರಬೇಕಂದ್ರ ನಮ್ಮ ಹೊಟ್ಟಿಮ್ಯಾಲೆ ನಾವು ಈಸಿಗೋತ ಹೋಗೋದ ಸೈ, ಬಾ, ಹೋಗೋಣು.
(ರಂಗಸ್ಥಳದಲ್ಲಿ ಕತ್ತಲೆ ಇದ್ದ ಕಡೆ ಸಣ್ಣ ದೀಪ ಉರಿಯುತ್ತಿರುವದು. ನೀರಿಗೆ ಧುಮುಕಿ ಇಬ್ಬರೂ ಆಕಡೆ ಈಜಿದಂತೆ ನಟಿಸುವರು.)
ಚನ್ಯಾ, ಕೇಳಿಸತs ಗುಡಿ ಭಜನಿ ಶಬ್ದ? ಎಷ್ಟು ಛೊಲೇ ಅನಸ್ತದ ನೋಡು.
(ಇಷ್ಟರ ವರೆಗೆ ಮೆಲ್ಲಗಿದ್ದ ಭಜನೆ ಇವರು ಸಮೀಪಕ್ಕೆ ಹೋದಂತೆ ಗಟ್ಟಿ
ಯಾಗಿ ಕೇಳಬರುವದು.)
“ಸುಳ್ಳಿನ ಬಲಿಯಾಗ ಸಿಗಬಿದ್ದೇ | ಶಿವನs ಕಳ್ಳ ಹುದಲಾಗ ಹುಗಿಬಿದ್ದೇ | ಶಿವನs
ಮಳ್ಳನ ಇಲ್ಲೆ ಕೈ ಬಿಡಬೇಡೋ | ಶಿವನs
ಬಂಧನದಿಂದ ಕಾಪಾಡೋ ಶಿವನ | ಪರಶಿವನs
(ಕೊನೆಯ ಸಾಲಿನೊಡನೆ ಜೋರಾಗಿ ಗಂಟೆಗಳು ಬಾರಿಸುವವು. ತಕ್ಷಣ
ಗೊಂಬೆಗಳ ಮೇಲೆ ಬೆಳಕು.)
೪ನೇ : ಘಂಟೀ ಸಪ್ಪಳಾತು. ಎಲ್ಲಾರೂ ಕಣ್ಣು ಬಿಟ್ಟು ನೋಡ್ರೀ, ಖಂಬೀರ
ಕುಮಾರಾ ಗುಡೀ ಒಳಗ ಬಂದಾನ ದೇವರ ಮುಂದೆ ನಿಂತು ನಮಸ್ಕಾರ
ಮಾಡಿ ಅಲ್ಲಿ ಬೈರಾಗಿಗೆ ವರಾ ಕೇಳಲಿಕ್ಕೆ ಹತ್ಯಾನ.
(ಈಗ ಗೊಂಬೆಗಳು, ಖಂಬೀರ, ಚನ್ಯ, ಬೈರಾಗಿ, ದೇವರ ಮೂರ್ತಿ
ಎಲ್ಲ ಬೆಳಕಿನಲ್ಲಿ.)
ಬೈರಾಗಿ : ನೀ ದೊಡ್ಡವರಾ ಕೇಳಲಿಕ್ಕೆ ಹತ್ತಿ, ನಿನಗ ದೊಡ್ಡ ಕಾಣಿಕಿ ಕೊಡಬೇಕಾಗ್ತದ.
ಖಂಬೀರ : ನನ್ನ ಕಡೇ ಇದ್ದದ್ದು ಬೇಕಾದ್ದು ಕೇಳಿ ಕೊಡತೇನಿ.
ಬೈರಾಗಿ : ನೋಡು, ಆ ಮ್ಯಾಲೆ ಹೆದರಿ ಇಲ್ಲಾ ಅಂದೀ
ಖಂಬೀರ : ನೀವ ಕೇಳ್ಯರ ಕೇಳಿರಿ ನಾ ಕೊಟ್ಟ ತೀರತೀನಿ,
ಬೈರಾಗಿ : ಸರಿ, ನಿನ್ನ ರುಂಡಾ ಕತ್ತರಿಸಿ ಕೊಡು (ಖಂಬೀರನ ಕೈಗೆ ಕತ್ತಿ
ಕೊಡುವನು.)
ಖಂಬೀರ : (ಬೆದರಿ) ಅಯ್ಯಯ್ಯೋ ! ನನ ರುಂಡಾ ಹ್ಯಾಂಗ ಕತ್ತರಿಸಿ ಕೊಡಲಿ ?
ಬ್ಯಾರೆ ಏನರ ಕೊಡತೇನಿ, ಈ ವನಿಕಿ ತಗೋಳ್ರಿ.
ಸಾರಥಿ : ಎಷ್ಟ ಶ್ಯಾಣ್ಯಾ ನೋಡು ನಮ್ಮ ಖಂಬೀರಾ ! ಯಾವ್ದರ ಕೆಲಸಕ್ಕೆ
ಬರ‍್ತದ ಅಂತ ಮದಲ ವಿಚಾರ ಮಾಡಿ ಹ್ಯಾಂಗ ವನಿಕಿ ತಂದಾ.
ಬೈರಾಗಿ : ಅದರೇ ಆಗೊದುಲ್ಲಾ ಖಂಬೀರ : ಹಂಗರ ಈ ಛತ್ರಿ ತಗೊಳ್ರಿ.
ಸಾರಥಿ : ಎಷ್ಟ ಶ್ಯಾಣ್ಯಾ ನೋಡು ನಮ್ಮ ಖಂಬೀರಾ ! ಯಾವ್ದರ ಕೆಲಸಕ್ಕೆ
ಬರ‍್ತದ ಅಂತ ಮದಲ ವಿಚಾರ ಮಾಡಿ ಹ್ಯಾಂಗ ಛತ್ರಿ, ತಂದಾ.
ಬೈರಾಗಿ : ಅದಕ್ಕೇ ಆಗೊದುಲ್ಲಾ ಖಂಬೀರ : ಹಂಗರ ಈ ಟೊಪಗಿ ತಕ್ಕೊಳ್ರಿ.
ಸಾರಥಿ : ಎಷ್ಟ ಶ್ಯಾಣ್ಯಾ ನೋಡು ನಮ್ಮ ಖಬೀರಾ ! ಯಾರ ಕೆಲಸಕ್ಕೆ
ಬರದ ಅಂತ ಮದಲ ವಿಚಾರ ಮಾಡಿ ಹ್ಯಾಂಗ ಟೊಪಗೀ ತಂದಾ. ಬೈರಾಗಿ : ಅದರೇ ಆಗೊದುಲ್ಲಾ. ಖಂಬೀರ : ಹಂಗರ ಈಚನ್ಯಾನರುಂಡಾ ತಕ್ಕೊಳ್ರೀ.
ಸಾರಥಿ : ಎಷ್ಟ ಶ್ಯಾಣ್ಯಾ ನೋಡು ನಮ್ಮ ಖಂಬೀರಾ ! ಯಾವರ ಕೆಲಸಕ್ಕೆ
ಬರ‍್ತೇನಿ ಅಂತ ಮದಲ ವಿಚಾರ ಮಾಡಿ ನನ್ನ ಜೋಡಿ ಕಸ್ಕೊಂಡು ಬಂದಾ. (ಹೀಗೆ ಅಂದ ನಂತರ ಖಂಬೀರನ ಮಾತಿನ ಅರ್ಥ ತಲೆಗೆ ಮುಟ್ಟಿ) (ಹೌಹಾರಿ) ಏನೋ ಮಾರಾಯಾ ! ನನ್ನ ತಲೀ ತಗ್ಯಾಕ ನಿಂತೀ ಅಲ್ಲಾ! ನಾ ಒಲ್ಯೊ ಯಪ್ಪಾ ! ಏನ ಬಡವರ ಮಕ್ಕಳ
ಬಾಳೇಗೇಡ ಮಾಡತೀ ಏನ ?
ಖಂಬೀರ : ಚನ್ಯಾ, ನಾ ಮದಲ ಹೇಳಿಲ್ವೇನಲೇ ನಾವಿಬ್ರೂ ಎರಡು ದೇಹಾ,
ಒಂದ ಜೀವಾ ಅಂತ ? ಏನಾತ ನಿನ್ನ ತಲೀ ಹೋದ್ರ ? ಬಾ ಇಲ್ಲೆ. ನಿನ್ನ ತಲೀ ಕೊಡು, (ಕತ್ತಿ ಎತ್ತುವನು. ಚನ್ಯ ತಪ್ಪಿಸಿಕೊಳ್ಳಲು ಗುಡಿಯಲ್ಲಿ ಓಡಾಡುವನು.)

ಚನ್ಯ : ಕಾಪಾಡ್ರಪೋ, ಯಾರರ ಕಾಪಾಡ್ರಪೋ, ನನ್ನ ಪ್ರಾಣಾ ಕಾಪಾರ‍್ರ‍್ಯಪೋ.
ಖಂಬೀರ : (ಅವನ ಹಿಂದೆ ಓಡುತ್ತ) ಚನ್ಯಾ. ಜೀವಗಳ್ಳಾ! ಎಲ್ಲಿ ಓಡಿ ಹೋಗ್ತಿ!
ಕೊಡು ನಿನ್ನ ತಲೀನ, (ಎಡಗೈಯಿಂದ ಚನ್ಯನ ಕೂದಲು ಹಿಡಿಯುವನು, ಚನ್ಯ ಮೊಳಕಾಲೂರುವನು.)
ಸಾರಥಿ : ಕೈ ಮುಗಿತೇನಪಾ, ನನ್ನ ತಲೀ ಕಡೀಬ್ಯಾಡಾ, ನೀ ಸತ್ಕುಲ ಪ್ರಸೂತ ಅದಿ, ವಿದ್ಯಾವಂತ ಅದಿ, ಬುದ್ಧಿಜೀವಿ ಅದಿ, ನಿನ್ನ ತಲೀ ಕಿಮ್ಮತ್ತು ನನ್ನ ತಲೀಗೆ ಹ್ಯಾಂಗಪಾ ಬಂದೀತು ? ತಿರಗಿ ನೋಡಿದ್ರೆ ಆ ವನಿಕಿ, ಛತ್ರಿ, ಟೊಪಗಿ, ಅಷ್ಟ ಸುದ್ದಾ ನನ್ನ ತಲಿಗೆ ಕಿಮ್ಮತ್ತಿಲ್ಲಾ.
ಖಂಬೀರ : (ಕತ್ತಿ, ಎತ್ತುವನು) ಚನ್ಯಾ, ನೀ ಏನ ಹೇಳು, ಬೇವರ್ಸಿ ಸೋಳೆ ಮಗನ, ನಿನ್ನ ತಲೀ ಕಡದ ತೀರ‍್ತೇನಿ.
ಬೈರಾಗಿ : ಅವನ್ನ ಬಿಡು, ಈ ಕೆಲಸ ಆಗಬೇಕಂದ್ರೆ ನಿನ್ನ ತಲೀ ಬೀಳಲಿಕ್ಕೇಬೇಕು.
ಖಂಬೀರ : (ವಿಚಾರ ಮಾಡುತ್ತ) ಹಂಗಾದ್ಮೇಲೆ ನನ್ನ ತಲೀ ಕತ್ತರಿಸಿಕೊಳ್ಲಿಕ್ಕೇಬೇಕು, ಇಲ್ಲಿದ್ರ ಬದಕ್ಯೊ ಸತ್ಥಾಂಗ! ಎಷ್ಟು ದಿವಸಂತ ಹೀಂಗ ಗೊಳ್ಳಾಗಿರೋದು ? ಈ ನಾಟಕಕ್ಕೆ ಮುಕ್ತಾಯ ಮಾಡಲೇ ಬೇಕು.
ಚನ್ಯಾ, ನಿರ್ಧಾರ ಮಾಡಿದೆ. ತಲೀ ಕತ್ತರಿಸಿಕೊಳ್ಳತೇನಿ.
ಸಾರಥಿ : ಬರೋಬರಿ ನಿರ್ಧಾರ ಧಣೀ.
ಖಂಬೀರ : (ಗೊಂಬೆಗಳಿಗೆ ನೀವು ಕಡೀ-ಕಡೀ-ಕಡೀ ಅಂತ ಜೋರಲೇ ಕೂಗಿ
ಕೋತ ಇರ‍್ರಿ, ಆ ಗದ್ದಲದಾಗ ನೋವಾಗಿದ್ದ ತಿಳಿಯೂದುಲ್ಲಾ.
ಚನ್ಯಾ, ನೀ ಮೂರ ಎಣಸು.
(ಖಂಬೀರ ಕತ್ತಿಯನ್ನೆತ್ತಿ ತಯಾರಾಗಿ ನಿಲ್ಲುವನು. ಮುಖದ ಮೇಲೆ ನಿರ್ಧಾರದ ಕಳೆ ಬೆಳಗುತ್ತಿದೆ. ಗೊಂಬೆಗಳು ಕಡೀ-ಕಡೀ-ಕಡೀ
ಎಂದು ಬೊಬ್ಬಿಡುವಾಗ)
ಚನ್ಯ : ಒಂದೂ……ಎರಡೂ……
ಖಂಬೀರ : (ಒಮ್ಮೆಲೇ ಆರ್ತ, ಸೋತದನಿಯಲ್ಲಿ)
ಚನ್ಯಾ: ಧಣಿ
ಖಂಬೀರ : ತಲೀ ಕಡಕೋಳ್ಲ್ಯೊ, ಬ್ಯಾಡಲೇ ?
(ತೆರೆ)
ಚನ್ನ

Close
By kanaja|2021-01-06T19:21:24+05:30May 17, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೧

    ಸಂಪುಟ-೩೧

Leave A Comment Cancel reply

Recent Posts

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

Categories

  • 1. ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ
  • e-ದಿನ
  • QR-ಕಣಜ
  • ಅಂಕಣಗಳು
  • ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ)
  • ಅಡ್ಡೂರು ಕೃಷ್ಣರಾವ್‌
  • ಅನುಸೂಯ ಶರ್ಮ
  • ಅನ್ನ ಕೊಡುವ ಅನನ್ಯ ತೋಟ ತದ್ರೂಪಿ ಕಾಡು
  • ಅಭಿವೃದ್ಧಿ ರಥದ ಚಕ್ರದಡಿ ಸಿಕ್ಕಿಬಿದ್ದವರು
  • ಅಮೆರಿಕಾ
  • ಅಮೆರಿಕಾ ಚರಿತ್ರೆಯ ವಿವಿಧ ಆಯಾಮಗಳು
  • ಅರಣ್ಯ
  • ಅರುಣ್ ಜೋಳದಕೂಡ್ಲಿಗಿ ಅಂಕಣ
  • ಅರ್ಥಶಾಸ್ತ್ರ
  • ಆಧುನಿಕ ತಂತ್ರಜ್ಞಾನ
  • ಆನಂದ ದೇಶಪಾಂಡೆ
  • ಆಫ್ರಿಕಾ
  • ಆಫ್ರಿಕಾ ಚರಿತ್ರೆಯ ವಿವಿಧ ಆಯಾಮಗಳು
  • ಆರೂರ್ ಮಂಜುನಾಥ್ ರಾವ್
  • ಆರೋಗ್ಯ
  • ಆರೋಗ್ಯ – ಆರೈಕೆ ನಿಮ್ಮ ಕೈಯಲ್ಲಿ
  • ಆರೋಗ್ಯ ಮತ್ತು ಅನಾರೋಗ್ಯದಲ್ಲಿ ಮಿದುಳಿನ ರಚನೆ ಮತ್ತು ಕಾರ್ಯ ವಿಧಾನ
  • ಆರೋಗ್ಯ ವಿಜ್ಞಾನ
  • ಆರೋಗ್ಯ ವಿಜ್ಞಾನ (ಹೆಲ್ತ್ ಸೈನ್ಸ್)
  • ಆರ್ಥಿಕ ಅಭಿವೃದ್ದಿ
  • ಆಹಾರ ವಿಜ್ಞಾನ
  • ಇಂಧನಗಳು
  • ಇತಿಹಾಸ
  • ಇತಿಹಾಸ
  • ಇತಿಹಾಸ
  • ಇತಿಹಾಸ-ಪ್ರಾಕ್ತನಶಾಸ್ತ್ರ
  • ಈರಯ್ಯ ಕಿಲ್ಲೇದಾರ
  • ಈರಯ್ಯ ಕಿಲ್ಲೇದಾರ ಅಂಕಣ
  • ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳು
  • ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು
  • ಉದಯ ಶಂಕರ ಪುರಾಣಿಕ ಅಂಕಣ
  • ಉನ್ನತ ಶಿಕ್ಷಣ
  • ಉಪನ್ಯಾಸ ಗ್ರಂಥಮಾಲೆ – ೪೮೨
  • ಎ. ಓ. ಆವಲ ಮೂರ್ತಿ
  • ಎ.ವಿ. ಗೋವಿಂದ ರಾವ್
  • ಎಸ್. ಎಂ. ಪೆಜತ್ತಾಯ
  • ಏಷ್ಯಾ
  • ಏಷ್ಯಾ ಚರಿತ್ರೆಯ ವಿವಿಧ ಆಯಾಮಗಳು
  • ಔಷಧೀಯ ಸಸ್ಯಗಳು
  • ಕಂಪ್ಯೂಟರ್ ಊಟ, ಅಡವಿ ಮಾರಾಟ
  • ಕಟ್ಟೆ ಪ್ರಕಾಶನ
  • ಕಥಾ ಕೀರ್ತನೆ
  • ಕನ್ನಡ
  • ಕನ್ನಡ ಕಲಿಯಿರಿ
  • ಕನ್ನಡ ಕಲಿಯಿರಿ
  • ಕನ್ನಡ ನಾಡಿನ ಶಾಸನಗಳ  ಅಧ್ಯಯನ: ಕೆಲವು ಗ್ರಹಿಕೆಗಳು
  • ಕನ್ನಡ ಭಾಷೆ – ಸಾಹಿತ್ಯಗಳ ಸಂಶೋಧನೆ – ಒಂದು ದಶಕದ (೨೦೦೧ – ೨೦೧೧) ಕಿರುನೋಟ
  • ಕನ್ನಡ ವ್ಯಾಕರಣ ದರ್ಪಣ
  • ಕನ್ನಡ ಸಂಘ ಕಾಂತಾವರ
  • ಕನ್ನಡ ಸಾಹಿತ್ಯ
  • ಕನ್ನಡದ ಸಾಹಿತಿಗಳು
  • ಕಬ್ಬು
  • ಕಮರಾಕ್ಷಿ
  • ಕರ್ಣಾಟಕ ಕಾದಂಬರಿ
  • ಕರ್ಣಾಟಕ ಪಂಚತಂತ್ರಂ
  • ಕರ್ನಾಟಕ ಇತಿಹಾಸ
  • ಕರ್ನಾಟಕ ಗ್ಯಾಸೆಟಿಯರ್
  • ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
  • ಕರ್ನಾಟಕ ಸಂಗೀತ
  • ಕರ್ನಾಟಕದ ಇತಿಹಾಸ
  • ಕರ್ನಾಟಕದ ಪ್ರವಾಸಿ ತಾಣಗಳು
  • ಕರ್ನಾಟಕದ ಸಮಕಾಲೀನ ಇತಿಹಾಸ
  • ಕಲೆ
  • ಕಲೆ
  • ಕಲೆ ಮತ್ತು ಮನರಂಜನೆ
  • ಕವಿರಾಜಮಾರ್ಗ
  • ಕಾಗದದ ದೋಣಿ
  • ಕಾದಂಬರಿ – ಕಥಾಸಾಹಿತ್ಯ
  • ಕಾವ್ಯ – ವಚನ
  • ಕಾವ್ಯ-ಕಥಾಸಾಹಿತ್ಯ
  • ಕಾವ್ಯಾರ್ಥ ಚಿಂತನ (ತೌಲನಿಕ ಕಾವ್ಯಮೀಮಾಂಸೆಯ ಕೆಲವು ವಿಚಾರಗಳು)
  • ಕಿಶನರಾವ್ ಕುಲಕರ್ಣಿ
  • ಕಿಶನ್ ರಾವ್ ಕುಲಕರ್ಣಿ ಅಂಕಣ
  • ಕುಂದನಾಡಿನ ಜಾನಪದ ಹಾಡುಗಳು
  • ಕುಮಾರವ್ಯಾಸ ಭಾರತ
  • ಕುಮಾರ್ ಪೆರ್ನಾಜೆ
  • ಕುರಿ ಸಾಕಾಣಿಕೆ
  • ಕುರುವ ಬಸವರಾಜ್ ಅಂಕಣ
  • ಕುವೆಂಪು
  • ಕುವೆಂಪು: ಪುನರಾಲೋಕನ
  • ಕೃಷಿ
  • ಕೃಷಿ ಅನುಭವ
  • ಕೃಷಿ ಋಷಿ ಡಾ. ಎಲ್.ಸಿ. ಸೋನ್ಸ್
  • ಕೃಷಿ ಕಾನೂನು
  • ಕೃಷಿ ಚಟುವಟಿಕೆಗಳು
  • ಕೃಷಿ ಶಿಕ್ಷಣ
  • ಕೃಷಿ ಸಂಬಂಧಿ ಚಟುವಟಿಕೆಗಳು
  • ಕೃಷಿ ಸಂರಕ್ಷಣೆ
  • ಕೃಷಿ ಸಂಸ್ಕೃತಿ
  • ಕೃಷಿಗಾಗಿ ನೀರು ಹಂಚಿಕೆ ವಿಧಾನಗಳು
  • ಕೃಷಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಸಾಂಪ್ರದಾಯಿಕ ಜ್ಞಾನ
  • ಕೆ ಟಿ ಗಟ್ಟಿ ಅಂಕಣ
  • ಕೆ.ಎಸ್. ನವೀನ್
  • ಕೆ.ಎಸ್. ಪ್ರಭು ಅಂಕಣ
  • ಕೇರಳ ಕಥನ
  • ಕೇಶವ ಕುಡ್ಲ
  • ಕೈಗಾರಿಕೆಗಳು ಮತ್ತು ಉದ್ಯೋಗ
  • ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳು
  • ಕೊಳಲು
  • ಕೊಳ್ಳೇಗಾಲ ಶರ್ಮ
  • ಕೋಲಾರ ಜಿಲ್ಲೆಯ ಪ್ರವಾಸಿ ತಾಣಗಳು
  • ಕ್ರೀಡೆ
  • ಕ್ರೀಡೆ
  • ಕ್ಷಮಾ ವಿ. ಭಾನುಪ್ರಕಾಶ್
  • ಖಗೋಳ ವಿಜ್ಞಾನ
  • ಗಣಿತವಿಜ್ಞಾನ
  • ಗಣೇಶ ಭಟ್
  • ಗದಗ ಜಿಲ್ಲೆಯ ಪ್ರವಾಸಿ ತಾಣಗಳು
  • ಗಮಕ
  • ಗಾಣಧಾಳು ಶ್ರೀಕಂಠ
  • ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಯ ಪ್ರವಾಸಿ ತಾಣಗಳು
  • ಗೊಂಡರ ರಾಮಾಯಣ
  • ಗೋಬರ್ ಅನಿಲ ಸ್ಥಾವರ
  • ಗ್ರಹಣ
  • ಗ್ರಾಮೀಣ ಅಭಿವೃದ್ಧಿ
  • ಗ್ರಾಮೀಣ ಅಭಿವೃದ್ಧಿ
  • ಗ್ರಾಮೀಣ ಅಭಿವೃದ್ಧಿ
  • ಘಟಂ
  • ಘಟವಾದನ
  • ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳು
  • ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳು
  • ಚಿತ್ರಕಲೆ
  • ಚಿತ್ರಕಲೆ
  • ಚಿತ್ರದುರ್ಗ ಜಿಲ್ಲೆಯ ಪ್ರವಾಸಿ ತಾಣಗಳು
  • ಚಿದಂಬರ ಬೈಕಂಪಾಡಿ
  • ಚೇರ್ಕಾಡಿ ಗಾಂಧಿ ರಾಮಚಂದ್ರ ರಾಯರು
  • ಜನಜೀವನದಲ್ಲಿ ವಿಜ್ಞಾನ
  • ಜನಪದ
  • ಜನಪದ
  • ಜನಪದ
  • ಜನಪದ
  • ಜನಪದ ಕಲೆ
  • ಜನಪದ ಕೃಷಿ
  • ಜನಪದ ದೈವಗಳು
  • ಜನಪದ ಮತ್ತು ಪ್ರದರ್ಶನ ಕಲೆ
  • ಜನಪದ ಮಹಾಕಾವ್ಯಗಳು
  • ಜನಪದ ವಿಜ್ಞಾನ
  • ಜನಪದ ಸಾಹಿತ್ಯ
  • ಜಯಪ್ರಸಾದ ಬಳ್ಳೇಕೆರೆ
  • ಜಯಪ್ರಸಾದ್ ಬಳ್ಳೇಕೆರೆ ಅಂಕಣ
  • ಜಲಕೊಯ್ಲು
  • ಜಾನಪದ
  • ಜಾನಪದ ಸಾಹಿತ್ಯ
  • ಜಾನಪದ ಸಾಹಿತ್ಯ ದರ್ಶನ – ೨೪
  • ಜಾನಪದ ಹಬ್ಬಗಳು
  • ಜಿ ವಿ ಗಣೇಶಯ್ಯ ಅಂಕಣ
  • ಜಿ.ಕೃಷ್ಣಪ್ರಸಾದ
  • ಜಿ.ವಿ. ನಿರ್ಮಲ
  • ಜಿತೇಂದ್ರ ಕುಂದೇಶ್ವರ
  • ಜೀವ ವಿಜ್ಞಾನ
  • ಜೀವಲೋಕದ ವಿಸ್ಮಯಕಾರಿ ಪ್ರಾಣಿಗಳು ಹಾವುಗಳು
  • ಜೀವವಿಜ್ಞಾನ
  • ಜೀವಶಾಸ್ತ್ರ (ಬಯಾಲಜಿ)
  • ಜೀವಿ ಸಂರಕ್ಷಣೆ
  • ಜೇನು ಕೃಷಿ
  • ಜೈಮಿನಿ ಭಾರತ
  • ಜೈವಿಕ ಇಂಧನ
  • ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ
  • ಟಿ. ಎಸ್. ಗೋಪಾಲ್
  • ಟಿ. ಜಿ. ಶ್ರೀನಿಧಿ
  • ಡಾ. ಅರುಣ್ ಜೋಳದಕೂಡ್ಲಿಗಿ
  • ಡಾ. ಆರ್. ತಾರಿಣಿ ಶುಭದಾಯಿನಿ
  • ಡಾ. ಎಚ್.ಎಸ್. ನಿರಂಜನ ಆರಾಧ್ಯ
  • ಡಾ. ಚಂದ್ರಶೇಖರ ಕಂಬಾರ
  • ಡಾ. ಮೀರಾಸಾಬಿಹಳ್ಳಿ ಶಿವಣ್ಣ
  • ಡಾ. ಯು.ಆರ್. ಅನಂತಮೂರ್ತಿ
  • ಡಾ. ರಾಮಲಿಂಗಪ್ಪ ಟಿ. ಬೇಗೂರು
  • ಡಾ. ಶಾಲಿನಿ ರಘುನಾಥ್ ಅಂಕಣ
  • ಡಾ. ಸಿ ಆರ್ ಚಂದ್ರಶೇಖರ್
  • ಡಾ|| ಕೆ. ಮಂಜಪ್ಪ
  • ಡಾ|| ಜಿ ಎಸ್ ಶಿವರುದ್ರಪ್ಪ
  • ತಂತ್ರಜ್ಞಾನ
  • ತಂತ್ರಜ್ಞಾನ
  • ತತ್ವಪದಗಳು
  • ತತ್ವಶಾಸ್ತ್ರ
  • ತಬಲ
  • ತರಕಾರಿಗಳು
  • ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು
  • ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು
  • ದತ್ತಾಂಶಗಳು
  • ದಾಟ್‌ಸಾಲು ಊರ ಗುಡ್ಡಗಳಲ್ಲಿ ಕಾಡು ನೀರಿನ ಕಲಿಕೆ
  • ದಾವಣಗೆರೆ ಜಿಲ್ಲೆಯ ಪ್ರವಾಸಿ ತಾಣಗಳು
  • ದೈಹಿಕ ಸಮಸ್ಯೆಗಳು
  • ಧರ್ಮ
  • ಧಾರವಾಡ ಜಿಲ್ಲೆಯ ಪ್ರವಾಸಿ ತಾಣಗಳು
  • ಧಾರ್ಮಿಕ
  • ಧ್ವನಿ – ಚಿತ್ರ
  • ನಗರಾಭಿವೃದ್ಧಿ
  • ನದಿಗಳು
  • ನಮ್ಮ ಮನೆಯ ಮಲ್ಲಿಗೆ
  • ನಾ ಕಾರಂತ ಪೆರಾಜೆ ಅಂಕಣ
  • ನಾ ಡಿಸೋಜಾ ಅಂಕಣ
  • ನಾ. ಕಾರ೦ತ ಪೆರಾಜೆ
  • ನಾಗೇಶ ಹೆಗಡೆ
  • ನಾಟಕ-ರಂಗಭೂಮಿ
  • ನಾಟಕಗಳು
  • ನಾಟಿ ಬೆಳೆಗಳು
  • ನಾಡಿಗೆ ನಮಸ್ಕಾರ ಪುಸ್ತಕ ಸರಣಿ
  • ನಾದ ಲಹರಿ (ಹಿಂದುಸ್ತಾನಿ ಸಂಗೀತ ಲೇಖನಗಳು)
  • ನಿಸರ್ಗ
  • ನೃತ್ಯ
  • ನೃತ್ಯ
  • ನೇಕಾರ ಸಮಾಜ, ಸಂಸ್ಕೃತಿ ಆರ್ಥಿಕ ಸ್ಥಿತಿಗತಿ
  • ನೇಯ್ಗೆ ಮತ್ತು ಕಸೂತಿ
  • ನೈಸರ್ಗಿಕ ವಿಜ್ಞಾನ
  • ನ್ಯಾಯ ನಿಷ್ಠುರದ ನ್ಯಾಯವಾದಿ ಕೌಡೂರು ಸದಾನಂದ ಹೆಗ್ಡೆ
  • ಪಂಪಮಹಾಕವಿ ವಿರಚಿತ ಪಂಪಭಾರತಂ
  • ಪಕ್ಷಿ ಪ್ರಪಂಚ
  • ಪಕ್ಷಿ ಪ್ರಪಂಚ
  • ಪಕ್ಷಿಗಳ ಪರಿಚಯ
  • ಪತ್ರಿಕೆಗಳು
  • ಪತ್ರಿಕೋದ್ಯಮ
  • ಪದ್ಯ ಸಾಹಿತ್ಯ ಪ್ರಕಾರ – ೧ಎ
  • ಪದ್ಯ ಸಾಹಿತ್ಯ ಪ್ರಕಾರ – ೧೪
  • ಪದ್ಯ ಸಾಹಿತ್ಯ ಪ್ರಕಾರ – ೧೫
  • ಪದ್ಯ ಸಾಹಿತ್ಯ ಪ್ರಕಾರ – ೧೫ಅ
  • ಪದ್ಯ ಸಾಹಿತ್ಯ ಪ್ರಕಾರ – ೧೭
  • ಪದ್ಯ ಸಾಹಿತ್ಯ ಪ್ರಕಾರ – ೧೮
  • ಪದ್ಯ ಸಾಹಿತ್ಯ ಪ್ರಕಾರ – ೧೯
  • ಪದ್ಯ ಸಾಹಿತ್ಯ ಪ್ರಕಾರ – ೨೦
  • ಪದ್ಯ ಸಾಹಿತ್ಯ ಪ್ರಕಾರ ೮
  • ಪರಂಪರೆ
  • ಪರಂಪರೆ
  • ಪರಿಸರ
  • ಪರಿಸರ ಸಂಸ್ಕೃತಿ
  • ಪಾರಂಪರಿಕ ಜ್ಞಾನ
  • ಪಾಲಹಳ್ಳಿ ವಿಶ್ವನಾಥ್
  • ಪಾಲಹಳ್ಳಿ ವಿಶ್ವನಾಥ್ ಅಂಕಣ
  • ಪಿಟೀಲು
  • ಪುರಾತತ್ವ ಶಾಸ್ತ್ರ
  • ಪುರಾತತ್ವ ಶಾಸ್ತ್ರ
  • ಪುಸ್ತಕಗಳಿಂದ
  • ಪೂರ್ಣಪ್ರಜ್ಞ ಬೇಳೂರು ಅಂಕಣ
  • ಪೂರ್ಣಪ್ರಜ್ಞ, ಬೇಳೂರು
  • ಪ್ರವಾಸ ಸಾಹಿತ್ಯ
  • ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ
  • ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ
  • ಪ್ರಾಚೀನ ಕೃತಿಗಳು
  • ಪ್ರಾಣಿ ಪ್ರಪಂಚ
  • ಪ್ರಾಥಮಿಕ – ಮಾಧ್ಯಮಿಕ ಶಿಕ್ಷಣ
  • ಪ್ರಾಥಮಿಕ ಶಿಕ್ಷಣ
  • ಪ್ರೊ. ಸಿ. ಡಿ. ಪಾಟೀಲ್ ಅಂಕಣ
  • ಬದುಕು
  • ಬದುಕು
  • ಬರಲಿದೆಯೇ ಭೀಕರ ವಾಯುಗುಣ ಬದಲಾವಣೆ ?
  • ಬಳ್ಳಾರಿ ಜಿಲ್ಲೆಯ ಪ್ರವಾಸಿ ತಾಣಗಳು
  • ಬಳ್ಳಿ ಮತ್ತು ಸೊಪ್ಪು ತರಕಾರಿಗಳು
  • ಬಸವೇಶ್ವರ
  • ಬಾಗಲಕೋಟೆ ಜಿಲ್ಲೆಯ ಪ್ರವಾಸಿ ತಾಣಗಳು
  • ಬಾದಾಮಿ ಚಾಲುಕ್ಯರು
  • ಬಾಲವಿಜ್ಞಾನ ಮಾಸ ಪತ್ರಿಕೆ – ಆಗಸ್ಟ್ ೨೦೧೦
  • ಬಾಲವಿಜ್ಞಾನ ಮಾಸ ಪತ್ರಿಕೆ – ಜುಲೈ ೨೦೧೦
  • ಬಾಲವಿಜ್ಞಾನ ಮಾಸ ಪತ್ರಿಕೆ – ಡಿಸೆಂಬರ ೨೦೦೯
  • ಬಾಲವಿಜ್ಞಾನ ಮಾಸ ಪತ್ರಿಕೆ – ನವೆಂಬರ್ ೨೦೧೦
  • ಬಾಲವಿಜ್ಞಾನ ಮಾಸ ಪತ್ರಿಕೆ – ಪೆಬ್ರವರಿ ೨೦೧೧
  • ಬಾಲವಿಜ್ಞಾನ ಮಾಸ ಪತ್ರಿಕೆ – ಸೆಪ್ಟೆಂಬರ್ ೨೦೧೦
  • ಬಾಲವಿಜ್ಞಾನ ಮಾಸ ಪತ್ರಿಕೆ – ಸೆಪ್ಟೆಂಬರ್ ೨೦೧೧
  • ಬಾಲವಿಜ್ಞಾನ ಮಾಸ ಪತ್ರಿಕೆ ಕರಾವಿಪ ಪ್ರಕಟಣೆ
  • ಬಾಲವಿಜ್ಞಾನ ಮಾಸ ಪತ್ರಿಕೆ – ಜೂನ್ ೨೦೧೦
  • ಬಾಲವಿಜ್ಞಾನ ಮಾಸ ಪತ್ರಿಕೆ – ಮೇ ೨೦೧೦
  • ಬಿ ಎಸ್ ಶೈಲಜಾ
  • ಬಿ ಎಸ್ ಶೈಲಜಾ, ಬಿ ಎ ಶಾರದ ಅಂಕಣ
  • ಬಿ.ಎಂ. ರೋಹಿಣಿ
  • ಬಿ.ಟಿ.ಗೆ ಒತ್ತು – ಬದನೆಗೆ ಕುತ್ತು ನಾಟಿ ಬದನೆಗೆ ಒದಗಿದ ಕಂಟಕ..!
  • ಬಿಜಾಪುರ ಜಿಲ್ಲೆಯ ಪ್ರವಾಸಿ ತಾಣಗಳು
  • ಬೀದರ್ ಜಿಲ್ಲೆಯ ಪ್ರವಾಸಿ ತಾಣಗಳು
  • ಬುಡಕಟ್ಟು ಮಹಾಕಾವ್ಯಗಳು
  • ಬುಡಕಟ್ಟುಗಳು
  • ಬುಡಕಟ್ಟುಗಳು
  • ಬೆಂಗಳೂರು ಜಿಲ್ಲೆಯ ಪ್ರವಾಸಿ ತಾಣಗಳು
  • ಬೆಟ್ಟದ ನೆಲ್ಲಿ
  • ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣಗಳು
  • ಬೆಳೆ ವೈವಿಧ್ಯ
  • ಬೆಳ್ಳಿ ಹಬ್ಬದ ಪ್ರಯುಕ್ತ ಸನ್ಮಾನಿತರ ಕಿರುಪರಿಚಯ
  • ಬೈಜಿಕ ಭೌತವಿಜ್ಞಾನ
  • ಬ್ಯಾಂಕಿಂಗ್
  • ಭರತನಾಟ್ಯ
  • ಭಾರತದ ಇತಿಹಾಸ
  • ಭಾಷಾ ಸಾಹಿತ್ಯ ಮತ್ತು ವ್ಯಾಕರಣ
  • ಭಾಷಾತಂತ್ರಜ್ಞಾನ
  • ಭಾಷೆ
  • ಭೂತದೈವಗಳ ಆರಾಧನೆ
  • ಭೂಮಿ
  • ಭೂವಿಜ್ಞಾನ
  • ಭೌತ ವಿಜ್ಞಾನ
  • ಭೌತಶಾಸ್ತ್ರ (ಫಿಸಿಕ್ಸ)
  • ಮಂಜುನಾಥ ಎಚ್ ಅಂಕಣ
  • ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳು
  • ಮಕ್ಕಳ ಕತೆಗಳು
  • ಮಕ್ಕಳ ಕವನ ಸಂಕಲನ
  • ಮಕ್ಕಳ ಗಣಿತ
  • ಮಕ್ಕಳ ನಾಟಕ
  • ಮಕ್ಕಳ ವಿಜ್ಞಾನ
  • ಮಕ್ಕಳ ವಿಜ್ಞಾನ
  • ಮಕ್ಕಳ ಸಾಹಿತ್ಯ
  • ಮಕ್ಕಳ ಸಾಹಿತ್ಯ
  • ಮನೋಲೋಕ
  • ಮನೋವಿಜ್ಞಾನ
  • ಮನೋವೈಜ್ಞಾನಿಕ ಸಮಸ್ಯೆಗಳು
  • ಮರಗಳ ಪರಿಚಯ ಒಂದು ಕೈಪಿಡಿ – ಭಾಗ ೨
  • ಮಲ್ಲಿಕಾರ್ಜುನ ಹೊಸಪಾಳ್ಯ ಅಂಕಣ
  • ಮಹಾತ್ಮಾ ಗಾಂಧೀಜಿ
  • ಮಾಧ್ಯಮ
  • ಮಾನವಶಾಸ್ತ್ರ
  • ಮಾನವಶಾಸ್ತ್ರ
  • ಮಾನಸಿಕ ಕಾಯಿಲೆಗಳ ಪರಿಚಯ ನಿಮಗಿರಲಿ
  • ಮಾಹಿತಿ ತಂತ್ರಜ್ಞಾನ
  • ಮಾಹಿತಿ ತಂತ್ರಜ್ಞಾನ
  • ಮುದ್ರಾಡಿ ನಿಟ್ಟೆ
  • ಮೂಡಲಪಾಯ ಯಕ್ಷಗಾನ ಸಂಪುಟ – ೩
  • ಮೂಡಲಪಾಯ ಯಕ್ಷಗಾನ ಸಂಪುಟ-1
  • ಮೂಡಲಪಾಯ ಯಕ್ಷಗಾನ ಸಂಪುಟ-೨
  • ಮೃದಂಗ
  • ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳು
  • ಮ್ಯಾಗಜಿನ್‌ಗಳು
  • ಯಕ್ಷಗಾನ ಸಾಹಿತ್ಯ ಸಂಪುಟ – ೧ಉ
  • ಯಕ್ಷಗಾನ-ಬಯಲಾಟ
  • ಯಾದಗಿರಿ ಜಿಲ್ಲೆಯ ಪ್ರವಾಸಿ ತಾಣಗಳು
  • ಯುರೋಪ್
  • ಯುರೋಪ್ ಚರಿತ್ರೆಯ ವಿವಿಧ ಆಯಾಮಗಳು
  • ರಂಗಭೂಮಿ
  • ರಂಗಭೂಮಿ ಸಾಹಿತ್ಯ ಪ್ರಕಾರ – 2ಆ
  • ರಂಗಭೂಮಿ ಸಾಹಿತ್ಯ ಪ್ರಕಾರ – ೧ಅ
  • ರಂಗಭೂಮಿ ಸಾಹಿತ್ಯ ಪ್ರಕಾರ – ೧ಆ
  • ರಂಗಭೂಮಿ ಸಾಹಿತ್ಯ ಪ್ರಕಾರ – ೧ಈ
  • ರಂಗಭೂಮಿ ಸಾಹಿತ್ಯ ಪ್ರಕಾರ – ೨
  • ರಂಗಭೂಮಿ ಸಾಹಿತ್ಯ ಪ್ರಕಾರ – ೨ಅ
  • ರಂಗಭೂಮಿ ಸಾಹಿತ್ಯ ಪ್ರಕಾರ ೧
  • ರಂಗಭೂಮಿ ಸಾಹಿತ್ಯ ಪ್ರಕಾರ ೧ಇ
  • ರಂಗಭೂಮಿ ಸಾಹಿತ್ಯ ಪ್ರಕಾರ ೪
  • ರಂಗಭೂಮಿ ಸಾಹಿತ್ಯ ಪ್ರಕಾರ – ೧ಎ
  • ರಂಗಭೂಮಿ ಸಾಹಿತ್ಯ ಪ್ರಕಾರ-೧ಋ
  • ರಂಗಸ್ವಾಮಿ ಮೂಕನಹಳ್ಳಿ
  • ರಮಾ ಎಸ್. ಅರಕಲಗೂಡು
  • ರಸಾಯನಶಾಸ್ತ್ರ (ಕೆಮಿಸ್ಟ್ರಿ)
  • ರಾ. ಶ್ರೀನಾಗೇಶ್
  • ರಾಘವೇಂದ್ರ ಮಹಾಬಲೇಶ್ವರ
  • ರಾಜನೀತಿಯ ಅಪರಂಜಿ ಡಾ. ಅಡ್ಡೂರು ಸುಬ್ಬರಾವ್
  • ರಾಜ್ಯಶಾಸ್ತ್ರ
  • ರಾಜ್ಯಶಾಸ್ತ್ರ
  • ರಾಯಚೂರು ಜಿಲ್ಲೆಯ ಪ್ರವಾಸಿ ತಾಣಗಳು
  • ರಾಷ್ಟ್ರಕವಿ ಕೃತಿ ಸಂಚಯ
  • ಲಿಂಗ ಸಂಬಂಧಿ ಅಭಿವೃದ್ಧಿ  ಅಧ್ಯಯನ ಪ್ರಬಂಧಗಳು
  • ಲೇಖನ ಸಂಗ್ರಹ
  • ಲೇಖನಗಳಿಂದ
  • ಲೇಖನಗಳು
  • ಲೈಂಗಿಕ ಆರೋಗ್ಯ
  • ವಚನಕಾರರು
  • ವಡ್ಡಾರಾಧನೆ
  • ವನ್ಯಜೀವಿ ಸಂದೇಶದ ಶುಭಾಶಯ ಪತ್ರಗಳು
  • ವರದಾ ನದಿಯ ಅಕ್ಕಪಕ್ಕ
  • ವರ್ಣಚಿತ್ರ ಕಲಾವಿದ ಪಾವಂಜೆ ಗೋಪಾಲಕೃಷ್ಣಯ್ಯ
  • ವಸಾಹತುಕಾಲೀನ ಬಳ್ಳಾರಿ ಜಿಲ್ಲೆ (ಬಳ್ಳಾರಿ ಜಿಲ್ಲೆಯಲ್ಲಿ ಬ್ರಿಟಿಷರ ಆಳ್ವಿಕೆ)
  • ವಸುಂಧರಾ ಭೂಪತಿ
  • ವಾಣಿಜ್ಯ ಬೆಳೆಗಳು (ಕಮರ್ಶಿಯಲ್ ಕ್ರಾಪ್ಸ್)
  • ವಾಣಿಜ್ಯ-ಕನ್ನಡ
  • ವಾಲ್ಮೀಕಿ ಸಮುದಾಯ
  • ವಾಸ್ತುಶಿಲ್ಪಶಾಸ್ತ್ರ
  • ವಿ ಜಿ ಪೂಜಾರ್ ಅಂಕಣ
  • ವಿ.ಎನ್. ಲಕ್ಷ್ಮೀನಾರಾಯಣ
  • ವಿ.ಎನ್. ವೆಂಕಟಲಕ್ಷ್ಮಿ
  • ವಿಕಾಸ : ಜೀವನ-ಕೌಶಲ ಪಠ್ಯ
  • ವಿಕ್ರಮ್
  • ವಿಜಯ ನಗರ
  • ವಿಜಯನಗರ
  • ವಿಜಯನಗರ
  • ವಿಜ್ಞಾನ
  • ವಿಜ್ಞಾನ
  • ವಿಜ್ಞಾನ – ಗಣಿತ
  • ವಿಜ್ಞಾನದ ಇತಿಹಾಸ
  • ವಿಜ್ಞಾನಿಗಳು
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ವ ಇತಿಹಾಸ
  • ವೀಣೆ
  • ವೈಯಕ್ತಿಕ ಬ್ಲಾಗ್
  • ವೈಜ್ಞಾನಿಕ ಇತಿಹಾಸ
  • ವೈದ್ಯಕೀಯ ಕೃಷಿ
  • ವೈದ್ಯಕೀಯ ವಿಜ್ಞಾನ
  • ವೈದ್ಯಶಾಸ್ತ್ರ
  • ವ್ಯಂಗ್ಯಚಿತ್ರ
  • ವ್ಯಕ್ತಿ ಪರಿಚಯ
  • ವ್ಯಕ್ತಿಚಿತ್ರ
  • ವ್ಯಕ್ತಿಚಿತ್ರ
  • ವ್ಯಕ್ತಿಚಿತ್ರ
  • ವ್ಯಕ್ತಿತ್ವ ವಿಕಸನ
  • ವ್ಯಕ್ತಿಸಾಹಿತ್ಯ
  • ವ್ಯಾಕರಣ
  • ಶಾಲಾ ಪಠ್ಯ ಪುಸ್ತಕಗಳು
  • ಶಾಸನಗಳು
  • ಶಿಕ್ಷಣ
  • ಶಿಕ್ಷಣ
  • ಶಿಲ್ಪಕಲೆ
  • ಶಿಲ್ಪಕಲೆ
  • ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳು
  • ಶಿವಾನಂದ ಕಳವೆ
  • ಶಿವಾನಂದ ಕಳವೆ ಪುಸ್ತಕ
  • ಶೈಕ್ಷಣಿಕ ಅಭಿವೃದ್ಧಿ
  • ಸ ರಘುನಾಥ ಅಂಕಣ
  • ಸಂಗೀತ
  • ಸಂಗೀತ
  • ಸಂಬಂಧಿತ ವಿಜ್ಞಾನ
  • ಸಂಸ್ಕೃತಿ
  • ಸಂಸ್ಕೃತಿ
  • ಸಂಸ್ಕೃತಿ
  • ಸಂಸ್ಕೃತಿ
  • ಸಂಸ್ಕೃತಿ – ಪರಂಪರೆ
  • ಸಂಸ್ಕೃತಿ ಮಹಿಳಾ ಮಾಲಿಕೆ -1
  • ಸಂಸ್ಕೃತಿ ಮಹಿಳಾ ಮಾಲಿಕೆ -2
  • ಸಂಸ್ಕೃತಿ ಮಹಿಳಾ ಮಾಲಿಕೆ -3
  • ಸಂಸ್ಕೃತಿ ಮಹಿಳಾ ಮಾಲಿಕೆ -4
  • ಸಂಸ್ಕೃತಿ ಮಹಿಳಾ ಮಾಲಿಕೆ -5
  • ಸಂಸ್ಕೃತಿ ಮಹಿಳಾ ಮಾಲಿಕೆ -6
  • ಸಂಸ್ಕೃತಿ ಮಹಿಳಾ ಮಾಲಿಕೆ -7
  • ಸಂಸ್ಕೃತಿ ಸಮುದಾಯ
  • ಸಂಸ್ಕೃತಿ-ಪರಂಪರೆ
  • ಸಂಸ್ಕೃತಿ-ಸಮುದಾಯ
  • ಸದ್ಯೋಜಾತ ಭಟ್
  • ಸಮಕಾಲೀನ ಕನ್ನಡ
  • ಸಮಕಾಲೀನ ಕರ್ನಾಟಕ
  • ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು (ಸಂಪಾದಿತ)
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೨
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೪
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೬
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೦
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೧
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೬
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೭
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೮
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೦
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೧
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೭
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೮
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೮
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ -೧೫
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೩
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೭
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ-೧೯
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ-೩೨
  • ಸಮಗ್ರ ಕನ್ನಡ ಜನಪದ, ಯಕ್ಷಗಾನ ಸಾಹಿತ್ಯಮಾಲೆ – ೩೬
  • ಸಮಗ್ರ ಕನ್ನಡ ಸಾಹಿತ್ಯಮಾಲೆ – ೨೯
  • ಸಮಗ್ರ ಕಲೆಗಳು
  • ಸಮಗ್ರ ಕಾವ್ಯ
  • ಸಮಗ್ರ ಕ್ರೀಡೆ
  • ಸಮಗ್ರ ಗದ್ಯ 1
  • ಸಮಗ್ರ ಗದ್ಯ 2
  • ಸಮಗ್ರ ಗದ್ಯ 3
  • ಸಮಗ್ರ ಗದ್ಯ 4
  • ಸಮಗ್ರ ಗದ್ಯ 5
  • ಸಮಗ್ರ ಸಾಹಿತ್ಯ
  • ಸಮಾಜ ಕಲ್ಯಾಣ
  • ಸಮಾಜ ಕಲ್ಯಾಣ ಮತ್ತು ಸಮಾಜ ಸುಧಾರಣೆ
  • ಸಮಾಜ ಮತ್ತು ಅಭಿವೃದ್ಧಿ
  • ಸಮಾಜ ಶಾಸ್ತ್ರ
  • ಸಮಾಜ ಶಾಸ್ತ್ರ
  • ಸಮಾಜ ಶಾಸ್ತ್ರ
  • ಸಮಾಜ ಶಾಸ್ತ್ರ
  • ಸಮಾಜ ಸುಧಾರಣೆ
  • ಸಮುದಾಯ ಸಾಹಿತ್ಯ
  • ಸಮುದಾಯಗಳು
  • ಸರೋಜಾ ಪ್ರಕಾಶ
  • ಸರೋದ್‌
  • ಸಸ್ಯವಿಜ್ಞಾನ
  • ಸಹಜ ಸಮೃದ್ಧ ಪ್ರಕಾಶನ
  • ಸಾಮಾಜಿಕ ಚಳುವಳಿಗಳು
  • ಸಾಮಾನ್ಯ ಆರೋಗ್ಯ
  • ಸಾಮಾನ್ಯ ಗಣಿತ
  • ಸಾಮಾನ್ಯ ವಿಜ್ಞಾನ (ಜನರಲ್ ಸೈನ್ಸ್)
  • ಸಾಹಿತ್ಯ
  • ಸಾಹಿತ್ಯ ವಿಮರ್ಶೆ
  • ಸಾಹಿತ್ಯ ವಿಮರ್ಶೆ
  • ಸಿ. ಡಿ. ಪಾಟೀಲ
  • ಸಿ.ಎಸ್. ಸುರೇಶ್
  • ಸಿದ್ದಿಕ್ ನೀರಾಜೆ
  • ಸಿದ್ಧರಾಮ ಹಿರೇಮಠ
  • ಸುಗಮ ಸಂಗೀತ
  • ಸುಧೀಂದ್ರ ದೇಶಪಾಂಡೆ
  • ಸೂಕ್ಷ್ಮಜೀವಿಗಳು
  • ಸೌಂದರ್ಯ ಸಮೀಕ್ಷೆ
  • ಸ್ತ್ರೀ ವಾದ
  • ಸ್ತ್ರೀವಾದ
  • ಹಣ್ಣುಗಳು
  • ಹದಿಹರೆಯ
  • ಹವಾಮಾನ ಪರಿಣಾಮ
  • ಹಸಿರು ಹಾದಿ : ಸಾವಯವದಿಂದ ಜೀವವೈವಿಧ್ಯದವರೆಗೆ :
  • ಹಾವೇರಿ ಜಿಲ್ಲೆಯ ಪ್ರವಾಸಿ ತಾಣಗಳು
  • ಹಾಸನ ಜಿಲ್ಲೆಯ ಪ್ರವಾಸಿ ತಾಣಗಳು
  • ಹಿಂದುಸ್ತಾನಿ ಸಂಗೀತ
  • ಹಿತ್ತಿಲು ಕೃಷಿ
  • ಹೈನುಗಾರಿಕೆ
  • ೨. ಅಮೆರಿಕಾದಲ್ಲಿ ಕನ್ನಡಿಗ ೧೨೭ – ೨೬೧
  • ೩. ಇಂಗ್ಲೆಂಡಿನಲ್ಲಿ ಚತುರ್ಮಾಸ ೨೬೫ – ೪೦೬
  • ೪. ಗಂಗೆಯ ಶಿಖರಗಳಲ್ಲಿ ೪೦೯ – ೫೧೭

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2017 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - developkanaja@gmail.com

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top