Skip to content
ದೂರವಾಣಿ : | 22212487|kanaja@karnataka.gov.in
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ-೨೮

Home/ಕನ್ನಡ/ಸಂಪುಟ-೨೮
Previous Next

ಸಂಪುಟ-೨೮

  • ಶಿಸ್ತು
  • ಮುದ್ದು ಮಕ್ಕಳಿಗೊಂದು ಕವಿತೆ
  • ತುಣುಕುಗಳು
  • ಅಧ್ಯಾಪಕರೆ ನಿಮ್ಮ ನಡೆನುಡಿಗಳ ಬಗ್ಗೆ ಗಮನವಿರಲಿ
  • ಹುರಿಗಾಳು
  • ಅಂಕುರ
  • ಯಶವಂತ ಚಿತ್ತಾಲರ ಮೂರು ಕಥೆಗಳಲ್ಲಿ-ಸಾವು
  • ಅತಿವೃಷ್ಟಿ; ಅನಾವೃಷ್ಟಿ
  • ಆಲನಹಳ್ಳಿಯವರ-ಪರಸಂಗದ ಗೆಂಡೆತಿಮ್ಮ
  • ನವ್ಯ ಸಾಹಿತ್ಯ ಒಂದು ಹಿನ್ನೋಟ

ಶಿಸ್ತು

ಶಿಸ್ತು

-ಜಿ ಟಿ ನಾರಾಯಣರಾವ್

೧
ಪರಿಸರದ ಬಲಗಳಿಗೆ ಅನುವರ್ತಿಯಾಗಿ ನಮ್ಮ ಜೀವನವನ್ನು ರೂಪಿಸಿಕೊಳ್ಳುವ ವಿಧಾನಕ್ಕೆ ಶಿಸ್ತು ಎಂದು ಹೆಸರು. ಇಲ್ಲಿ ಪರಿಸರ, ಬಲ ಮತ್ತು ಜೀವನ ಎನ್ನುವ ಪದಗಳನ್ನು ಅವುಗಳಿಗೆ ರೂಢಿಯಲ್ಲಿರುವ ಅರ್ಥಕ್ಕಿಂತಲೂ ಬಹು ವ್ಯಾಪಕವಾದ ಅರ್ಥದಲ್ಲಿ ಬಳಸಿದ್ದೇನೆ.
ಮೂರು ಉದಾಹರಣೆಗಳಿಂದ ಮೇಲಿನ ವ್ಯಾಖ್ಯೆಯನ್ನು ವಿಶದೀಕರಿಸುತ್ತೇನೆ.
ಶಿಲಾವರೋಹಣ (rock-rappling) ಎನ್ನುವ ಕ್ರೀಡೆಯಲ್ಲಿ ಭಾಗವಹಿಸಲು ನಾವು ಉದ್ದೇಶಿಸಿದ್ದೇವೆಂದು ಭಾವಿಸೋಣ. ಕಡಿದಾದ ಮತ್ತು ಎತ್ತರವಾದ ಒಂದು ಬಂಡೆ ಉಂಟು. ಅದರ ಮಂಡೆಯ ಮೇಲೆ ಅಂಚಿನವರೆಗೆ ಬಂದು ಕೆಳಗಿನ ಆಳವಾದ ಪ್ರಪಾತಕ್ಕೆ ಜಿಗಿಯುವ ಆಟವಿದು. ಹಿಂದೆ ಮುಂದೆ ನೋಡದೆ ನೇರವಾಗಿ ನೆಗೆದೇಬಿಟ್ಟೆವಾದರೆ ನಮಗೆ “ಶಾಶ್ವತ ಸಂತೋಷ” ಪ್ರಾಪ್ತಿಯಾಗುವುದರ ಜೊತೆಗೆ ಇತರ ಭಾಗಿಗಳಿಗೆ ಸಾಕಷ್ಟು ತಾಪತ್ರಯವನ್ನೂ ಈ ಹುಚ್ಚು ಸಾಹಸ ಒದಗಿಸುತ್ತದೆ ಎನ್ನುವುದು ಸ್ಪಷ್ಟ. ಇಂಥ ದುರಂತಕ್ಕೆ ನಾವು ತುತ್ತಾಗಬಾರದು. ಆದರೆ ಅವರೋಹಣ ಕ್ರೀಡೆಯ ಸಂತೋಷ ನಮಗೆ ಲಭಿಸಬೇಕು ಎನ್ನುವುದು ನಮ್ಮ ಉದ್ದೇಶ. ಇದರ ಸಿದ್ಧಿಗಾಗಿ ನಾವು ಪರಿಸರದ ಬಲಗಳು ಏನು, ನಮ್ಮ ಇತಿಮಿತಿಗಳೇನು, ಸ್ವರಕ್ಷಣೆಯನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬೀ ವಿವರಗಳನ್ನು ಕೂಲಂಕಷವಾಗಿ ಅಧ್ಯಯಿಸಬೇಕಾಗುವುದು. ಸ್ಕೂಲವಾಗಿ ಇವು ಹೀಗಿವೆ : ತಳದೆಡೆಗೆ ನಮ್ಮನ್ನು ಆಕರ್ಷಿಸುವ ಭೂಗುರುತ್ವ ಬಲ, ಬಂಡೆಯ ರಚನೆ- ಇವಿಷ್ಟು ಪರಿಸರದ ಬಲಗಳು. ನಮ್ಮ ದೇಹ ಬಲು ಜಟಿಲವಾದ ಮತ್ತು ನವುರಾದ ಒಂದು ವ್ಯವಸ್ಥೆ. ಇದು ಅತಿ ವೇಗವನ್ನಾಗಲಿ ತೀವ್ರ ಧಕ್ಕೆಯನ್ನಾಗಲಿ ಎದುರಿಸಿ ಉಳಿಯಲಾರದು. ಇದರ ಪ್ರತಿಯೊಂದು ಚಟುವಟಿಕೆಯ ಮೇಲೂ ನಮ್ಮ ಹತೋಟಿಯನ್ನು ಕಾಯ್ದುಕೊಂಡಿರಬೇಕಾದದ್ದು ಅವಶ್ಯಕ. ಇವಿಷ್ಟು ನಮ್ಮ ಇತಿಮಿತಿಗಳ ವಿವರಣೆ. ಇವೆರಡನ್ನು ಅನುಲಕ್ಷಿಸಿ ಸ್ವರಕ್ಷಣೆಯನ್ನು ಸಾಧಿಸಲು ನಾವು ಅನುಸರಿಸಬೇಕಾದ ವಿಧಾನ ಶಿಲಾವರೋಹಣ ಕ್ರೀಡೆಯಲ್ಲಿನ ಶಿಸ್ತು ಆಗುತ್ತದೆ. ಲೋಹದ ಕೊಣಿಕೆಗಳು, ನೈಲಾನ್ ದಾರಗಳು, ಬಿಲೇಕಾರ, ಜಿಗಿವಾತನ ದೇಹವಿನ್ಯಾಸ ಇವೆಲ್ಲವೂ ಈ ಶಿಸ್ತಿನ ಅಂಗಗಳಾಗಿ ಒದಗಿ ಬರುತ್ತವೆ. ಇದರಲ್ಲಿನ ಯಾವುದೇ ಅಂಗದ ಅಲಕ್ಷವೂ ಶಿಸ್ತಿನ ಉಲ್ಲಂಘನೆ ಆಗುತ್ತದೆ. ಆಗ ನಮಗೆ ಅಪಾಯ ತಪ್ಪಿದ್ದಲ್ಲ.
ಪ್ರಾಯೋಗಿಕ ವಿಜ್ಞಾನದ ಒಂದು ಅತಿ ಸರಳ ನಿದರ್ಶನವನ್ನು ಎರಡನೆಯ ಉದಾಹರಣೆಯಾಗಿ ಪರಿಶೀಲಿಸೋಣ. ಪುತ್ತೂರು-ಮಂಗಳೂರು ದೂರ ೫೦ ಕಿಲೋಮೀಟರುಗಳು. ಗಂಟೆಗೆ ಸರಾಸರಿ ೪೦ ಕಿಲೋಮೀಟರ್ ವೇಗದಿಂದ ಓಡಬಲ್ಲ ಒಂದು ಬಸ್ಸು ಈ ದೂರವನ್ನು ಒಂದು ಗಂಟೆ ಹದಿನೈದು ಮಿನಿಟುಗಳಲ್ಲಿ ಗಮಿಸಬಲ್ಲುದು ಎಂದು ನಾವು ತಟಕ್ಕನೆ ಹೇಳಬಲ್ಲೆವು. ನಮಗೆ ತಿಳಿದೋ ತಿಳಿಯದೆಯೋ ಇಲ್ಲಿ ನಾವು ದೂರವನ್ನು (ಅದು d ಆಗಿರಲಿ) ವೇಗದಿಂದ (ಅದು v ಆಗಿರಲಿ) ಭಾಗಿಸಿ ಕಾಲವನ್ನು (ಅದು t ಆಗಿರಲಿ) ಪಡೆದಿದ್ದೇವೆ. ಪ್ರತೀಕದ ಭಾಷೆಯಲ್ಲಿ ಇದು
d = t ಅಥವಾ d= vt
–
v
ಎಂದಾಗುವುದು. ಇದೇ ಸೂತ್ರವನ್ನು ಅನ್ವಯಿಸಿ ಈ ಮುಂದಿನ ಸಮಸ್ಯೆಯನ್ನು ಕೂಡ ಅಷ್ಟೇ ಸುಲಭವಾಗಿ ಪರಿಹರಿಸಬಲ್ಲೆವು. ಗಂಟೆಗೆ ಸರಾಸರಿ ೩೬ ಕಿಲೋಮೀಟರ್ ವೇಗದಿಂದ ಓಡಬಲ್ಲ ಒಂದು ಬಸ್ಸು ಪುತ್ತೂರು-ಮಡಿಕೇರಿ ಪ್ರಯಾಣವನ್ನು ೨ ಗಂಟೆ ೨೪ ಮಿನಿಟುಗಳಲ್ಲಿ ಮುಗಿಸಿದರೆ ಇವೆರಡು ಊರುಗಳ ನಡುವಿನ ದೂರ ಎಷ್ಟು ? ಮೇಲಿನ ಸೂತ್ರದಲ್ಲಿ v=36, t= 24 ; d ಬೇಕಾಗಿದೆ.
–
60
d = 36 x 144 = 86.4
–
60
ಆದ್ದರಿಂದ ಪುತ್ತೂರು-ಮಡಿಕೇರಿ ದೂರ 86.4 ಕಿಲೋಮೀಟರುಗಳು. ಮೇಲಿನ ಎರಡೂ ಗಣನೆಗಳಲ್ಲಿ ನಾವು (ತಿಳಿದೋ ತಿಳಿಯದೆಯೋ) ಪಾಲಿಸಿದ ಶಿಸ್ತು ಏನು ? ಎರಡರಲ್ಲೂ ದೂರ, ವೇಗ ಹಾಗೂ ಕಾಲದ ಪರಿಮಾಣಗಳನ್ನು ಅಳೆದಿರುವ ಏಕಮಾನಗಳಲ್ಲಿ ಏಕರೂಪತೆಯನ್ನು ಪಾಲಿಸಿಕೊಂಡು ಬಂದಿದ್ದೇವೆ. ಅಂದರೆ ದೂರವನ್ನು ಕಿಲೋಮೀಟರುಗಳಲ್ಲೂ ವೇಗವನ್ನು ಗಂಟೆಗೆ ಕಿಲೋಮೀಟರುಗಳಲ್ಲೂ ಕಾಲವನ್ನು ಗಂಟೆಗಳಲ್ಲೂ ಅಳೆದಿದ್ದೇವೆ. ಈ ಶಿಸ್ತನ್ನು ಉಲ್ಲಂಘಿಸಿ, ಉದಾಹರಣೆಗೆ ಎರಡನೆಯ ನಿದರ್ಶನದಲ್ಲಿ, ಕಾಲ t ಯನ್ನು ತತ್ಸಮಾನವಾಗಿ 144 ಮಿನಿಟುಗಳೆಂದು ಬಳಸಿದ್ದರೆ ಆಗ ನಮಗೆ
d= 36 X 144 = 5184
ಎಂಬ ವಾಸ್ತವತೆಗಿಂತ ತೀರ ಭಿನ್ನವಾದ (ಮತ್ತು ತಪ್ಪಾದ) ಉತ್ತರ ಲಭಿಸುತ್ತಿತ್ತು.
ಕೊನೆಯ ಉದಾಹರಣೆಯಾಗಿ ವ್ಯಾಪಾರೋದ್ಯಮದಿಂದ ಒಂದು ನಿದರ್ಶನವನ್ನು ಪರಿಶೀಲಿಸೋಣ. ಪುತ್ತೂರು ಪೇಟೆಯಲ್ಲಿ ಅತ್ಯಂತ ಆಧುನಿಕ ಫಲಸಂಸ್ಕರಣ ಕೈಗಾರಿಕೆಯನ್ನು (fruit canning industry) ಸ್ಥಾಪಿಸುವುದು ನಮ್ಮ ಉದ್ದೇಶ. ಈ ಕೈಗಾರಿಕೆಯ ಮೇಲೆ ನಾವು ಹೂಡಿದ ಬಂಡವಾಳ ನಮಗೆ ದೀರ್ಘಕಾಲದಲ್ಲಾದರೂ, ಯೋಗ್ಯ ಆರ್ಥಿಕ ಪ್ರತಿಫಲವನ್ನು ನೀಡದಿದ್ದರೆ ಇದೊಂದು ವಿಫಲ ಸಾಹಸವಾಗುವುದು; ಆದ್ದರಿಂದ ಈ ಉದ್ಯಮವನ್ನು ಆರಂಭಿಸುವ ಮೊದಲು ನಾವು ಪರಿಶೀಲಿಸಬೇಕಾದ ಪರಿಸರದ ಮುಖ್ಯ ಬಲಗಳೆಂದರೆ ಕಚ್ಚಾ ಸಾಮಗ್ರಿಗಳ (ಹಣ್ಣು ಹಂಪಲುಗಳು) ಸ್ತಿಮಿತ ಪೂರೈಕೆ, ಸಿದ್ಧ ವಸ್ತುಗಳಿಗೆ (ಸಂಸ್ಕರಿತ ಫಲಗಳು ಹಾಗೂ ಇತರ ಉಪೋತ್ಪನ್ನಗಳು) ಯೋಗ್ಯ ಮಾರುಕಟ್ಟೆ ಮತ್ತು ಯಂತ್ರ ಸ್ಥಾವರದ ಸ್ಥಾಪನೆಯ ಸಮಸ್ತ ಅವಶ್ಯಕತೆಗಳು. ಇವು ವಿಧಿಸುವ ವಿಧಾನವನ್ನು ಅಂದರೆ ಶಿಸ್ತನ್ನು ನಾವು ಅನುಸರಿಸಿದರೆ ಮಾತ್ರ ನಮ್ಮ ಉದ್ಯಮ ಲಾಭದಾಯಕವಾಗುವುದು. ಹೀಗಲ್ಲದೇ ಯಾವುದೋ ಒಂದು ಆಮಿಷಕ್ಕೆ ಬಲಿಯಾಗಿ ಇಂಥ ಒಂದು ಕೈಗಾರಿಕೆಯನ್ನು ಪ್ರವರ್ತಿಸಿದ್ದೇ ಆದರೆ (ಅಂದರೆ ಶಿಸ್ತನ್ನು ಉಲ್ಲಂಘಿಸಿದ್ದೇ ಆದರೆ ಅಪಯಶಸ್ಸು ಒಂದಲ್ಲ ಒಂದು ದಿವಸ ನಮಗೆ ಎದುರಾಗುವುದು ಖಂಡಿತ.
ಇಷ್ಟು ಹೇಳಿದ ಬಳಿಕ ಪರಿಸರ, ಬಲ ಮತ್ತು ಜೀವನ ಎಂಬ ಪದಗಳನ್ನು ನಾನು ಯಾವ ವ್ಯಾಪಕಾರ್ಥದಲ್ಲಿ ಬಳಸಿದ್ದೇನೆ ಎನ್ನುವುದು ಓದುಗರಿಗೆ ವೇದ್ಯವಾಗಿರಬಹುದು. ಮನುಷ್ಯನ ಒಂದೊಂದೂ ಚಟುವಟಿಕೆಯ (ಜೀವನ) ಸಿದ್ಧಿಯ ಹಾದಿಯಲ್ಲಿ ಎದುರಾಗುವ ಎಡರು ತೊಡರುಗಳೇ ಪರಿಸರದ ಬಲಗಳು.
ಮನುಷ್ಯ ಪರಿಸರದ (ನಿಸರ್ಗ, ಸಮಕಾಲೀನ ಪ್ರಪಂಚ ಎನ್ನುವ ಅರ್ಥಗಳಲ್ಲಿ) ಶಿಶು. ಆದ್ದರಿಂದ ಆತನ ಯಾವುದೇ ಉದ್ಯಮದಲ್ಲಿ ಪರಿಸರವನ್ನು ಅಸಡ್ಡೆ ಮಾಡಿದ್ದೇ ಆದರೆ ಅಂಥ ಕ್ರಿಯೆ ಶಿಸ್ತಿನ ಉಲ್ಲಂಘನೆ ಎನ್ನಿಸುತ್ತದೆ. ಇದರಿಂದ ಅವನ ಉದ್ಯಮದಲ್ಲಿ ವೈಫಲ್ಯ ಸ್ವತಸ್ಸಿದ್ಧ. ಇದು ಒಡನೆ ಪ್ರಕಟವಾಗಬಹುದು ; ಅಥವಾ ಹಲವಾರು ತಲೆಮಾರುಗಳ ಅವಧಿಯಲ್ಲಿ ಪ್ರಕಾಶಕ್ಕೆ ಬರಬಹುದು.
ಮೂರು ಉದಾಹರಣೆಗಳಿಂದ ಈ ಹೇಳಿಕೆಯನ್ನು ವಿಶದೀಕರಿಸುತ್ತೇನೆ.
ನಾವು ಬೆಳೆಗಳಿಗೆ ನೀಡುವ ಗೊಬ್ಬರವನ್ನು ಸ್ಕೂಲವಾಗಿ ಎರಡು ವರ್ಗಗಳಾಗಿ ವಿಭಾಗಿಸಬಹುದು : ಸಾವಯವ (Organic) ಮತ್ತು ನಿರವಯವ (Inorganic), ಮನುಷ್ಯ ಹಾಗೂ ಪ್ರಾಣಿಗಳು ವಿಸರ್ಜಿಸುವ ವಸ್ತುಗಳಿಂದಲೂ ಸಸ್ಯಭಾಗಗಳಿಂದಲೂ ಮಿಶ್ರಣವಾಗಿ ಕೊಳೆತು ದೊರೆಯುವ ವಸ್ತು ಸಾವಯವ ಗೊಬ್ಬರ. ಹಟ್ಟಿ ಗೊಬ್ಬರ ಈ ವರ್ಗಕ್ಕೆ ಸೇರಿದೆ. ಇಂದು ರಸಗೊಬ್ಬರ ಎಂದು ಪರಿಚಿತವಾಗಿರುವ ರಾಸಾಯನಿಕ ಇಲ್ಲವೇ ಕೃತಕ ಇಲ್ಲವೇ ಸಂಶ್ಲೇಷಿತ ಗೊಬ್ಬರ ಎರಡನೆಯ ವರ್ಗದ್ದು. ಅಮೋನಿಯಂ ಸಲ್ಫೇಟ್, ಸೂಪರ್ ಫಾಸ್ಪೇಟ್, ಪೊಟ್ಯಾಸಿಯಮ್ ಕ್ಲೋರೈಡ್ ಇವೇ ಮೊದಲಾದ ರಾಸಾಯನಿಕವಾಗಿ ತಯಾರಿಸಲ್ಪಟ್ಟ ಗೊಬ್ಬರಗಳು ಈ ವರ್ಗಕ್ಕೆ ಸೇರಿವೆ. ಪಶ್ಚಿಮದಿಂದ ಆಮದಾದ ಸಮಸ್ತವೂ ತೀರ್ಥವೇ ಸ್ವದೇಶೀಯವಾದ ಸಮಸ್ತವೂ ವ್ಯರ್ಥವೇ ಎಂಬ ನಂಬಿಕೆ ನಮ್ಮ ಅಧಿಕೃತ ಕೃಷಿ ಪ್ರಚಾರಕರಲ್ಲಿ ಬಲವಾಗಿ ಬೇರು ಬಿಟ್ಟಿದ್ದ ಒಂದು ಕಾಲದಲ್ಲಿ ಹಟ್ಟಿಗೊಬ್ಬರದ ತೀವ್ರ ಅಲಕ್ಷ್ಯ ಮತ್ತು ರಸಗೊಬ್ಬರದ ಅತಿ ಬಳಕೆ ಬೆಳೆಯ ಮೇಲೆ ಅನಾಹುತ ಪರಿಣಾಮ ಬೀರಿದ್ದು ಈಗ ಸರ್ವವೇದ್ಯವಾಗಿದೆ. ಇದು ಏಕೆ ಹೀಗಾಯಿತು ಎಂಬುದರ ವಿಚಾರವಾಗಿ ನಮ್ಮ ದೇಶದಲ್ಲಿ ಪರದೇಶಗಳಲ್ಲೂ ನಡೆಸಲಾವ ವೈಜ್ಞಾನಿಕ ಪ್ರಯೋಗಗಳು ಅನುಭವಜ್ಞಾನ ನಮಗೆ ನೀಡುವ ಸಮಾಧಾನವನ್ನೇ ಸ್ಥಿರೀಕರಿಸಿವೆ : ಆಯಾ ಮಣ್ಣಿನ, ಪ್ರದೇಶದ ಹವೆಯ ಹಾಗೂ ಬೆಳೆಯ ಗುಣಲಕ್ಷಣಗಳನ್ನು ಅನುಸರಿಸಿ ಎರಡೂ ವರ್ಗದ ಗೊಬ್ಬರಗಳ ಯುಕ್ತ ಮಿಶ್ರಣದ ಸಕಾಲಿಕ ಬಳಳಿ ಅಧಿಕ ಇಳುವರಿಯನ್ನು ನೀಡಬಲ್ಲುದು. ಅರ್ಥಾತ್, ಸರ್ವ ಕೃಷ್ಯುತ್ಪನ್ನಗಳಿಗೆ ಸದಾ ಕಾಲದಲ್ಲಿ ಸಂಜೀವಿನೀ ರೂಪದ ಒಂದು ಗೊಬ್ಬರ ಇಲ್ಲ. ರಸಗೊಬ್ಬರದ ಅತಿ ಬಳಕೆ ಮಣ್ಣಿನ ಸಾಲ ಸಾಮರ್ಥ್ಯಗಳನ್ನು ತೊಡೆದು ಹಾಕಿ ಅಪಾಯಕಾರೀ ಕೀಟ ಮಾರಕಗಳನ್ನು ಸಿಂಪಡಿಯನ್ನು ಅನಿವಾರ‍್ಯ ಮಾಡಿದುದರ ಕಾರಣ, ಅವೇ ಬಿಸಿಲಿನೆಲ್ಲಿ ಒಣಗಿ ಗಾಳಿಯಲ್ಲಿ ಆರಿ ನೀರಿನಲ್ಲಿ ತೋಯ್ದು ಸತ್ವವನ್ನು ಕಳೆದುಕೊಂಡು ಸಾಂಪ್ರದಾಯಿಕ ಹಟ್ಟಿ ಗೊಬ್ಬರದ ಕುರುಡು ಬಳಕೆ ಕೃಷಿಯನ್ನು ಅತಿ ನಷ್ಟದ ಒಂದು ಉದ್ಯಮವನ್ನಾಗಿ ಮಾಡಿದುದರ ಕಾರಣ ಒಂದೇ-ಕೃಷಿ ಕಾರ‍್ಯ ವಿಧಿಸುವ ಶಿಸ್ತಿನ ಉಲ್ಲಂಘನೆ.
ಇಂದು ಮನುಷ್ಯನ ಉಳಿವಿಗೆ ಕಠೋರ ಸವಾಲಾಗಿ ಪರಿಣಮಿಸಿರುವ ಪರಿಸರ ಮಾಲಿನ್ಯವನ್ನು ಎರಡನೆಯ ಉದಾದರಣೆಯಾಗಿ ಪರಿಶೀಲಿಸೋಣ. ವಿಜ್ಞಾನ ಮುಂದುವರಿದಂತೆ ನವಾವಿಷ್ಕಾರಗಳೂ (new discoveries) ನವೋಪಜ್ಞೆಗಳೂ, (new inventions) ಜನಜೀವನದ ಮೇಲೆ ಮಹತ್ತರವಾದ ಪರಿಣಾಮಗಳನ್ನು ಬೀರುತ್ತ ಬಂದುವು. ಸ್ವಯಂಚಾಲಿತ ವಾಹನಗಳು, ಯಂತ್ರ ಸ್ಥಾವರಗಳು, ಪರಮಾಣು ರಿಯಾಕ್ಟರುಗಳು ಮುಂತಾದವೆಲ್ಲವೂ ನಮ್ಮ ಇಂದಿನ ಜೀವನದ ಅವಿಭಾಜ್ಯ ಅಂಗಗಳಾಗಿರುವುದು ಸರಿ ಯಷ್ಟೆ. ನಿಸರ್ಗದ ಪರಿಮಿತ ಸಂಪನ್ಮೂಲಗಳ ನಿರಂತರ ವಿನಿಯೋಗದಿಂದ (ಸೂರೆಯಿಂದ) ಈ ದೈತ್ಯ ಉದ್ಯಮಗಳು ಬೆಳೆದು ತ್ರಿವಿಕ್ರಮಾವತಾರವನ್ನು ತಳೆದಿವೆ. ಈ ಸಮಸ್ತ “ಪ್ರಗತಿ”ಯಲ್ಲಿ ಮನುಷ್ಯ ನಿಸರ್ಗದ ಬಲಗಳಿಗೆ ಅನುವರ್ತಿ ಆಗದೇ, ಬಹು ವೇಳೆ ಅವುಗಳಿಗೆ ವಿರುದ್ಧವಾಗಿ ವರ್ತಿಸುತ್ತ ಬಂದಿರುವುದರಿಂದ ಪರಿಸರ ಮಾಲಿನ್ಯ ಎಂಬ ಭೀಕರ ಪಿಡುಗನ್ನು ಇಂದಿನ ಜನಾಂಗ ಎದುರಿಸಬೇಕಾಗಿ ಬಂದಿದೆ. ವಿಶ್ವದಲ್ಲಿ ಒಂದು ಧೂಳಿನ ಕಣಕ್ಕಿಂತಲೂ ಕಿರಿದಾಗಿರುವ ಈ ಭೂಮಿಯ ಮೇಲಿನ ಆಕಸ್ಮಿಕ ಬೆಳವಣಿಗೆಯಾದ ಮನುಷ್ಯನ ಬಾಳ್ವೆಯ ಹೋಮದ ಪೂರ್ಣಾಹುತಿ, ಆತನ ನಿರಂತರ ಅವಿವೇಕ ವರ್ತನೆಯಿಂದ, ಈಗಾಗಲೇ ಪ್ರಾರಂಭವಾಗಿದ್ದು ಕ್ರಿಸ್ತಶಕ ೨೦೧೦ ವರ್ಷದ ವೇಳೆಗೆ ಇದು ಪರಿಸಮಾಪ್ತಿಗೊಳ್ಳುವ ಲಕ್ಷಣಗಳು ನಿಚ್ಚಳವಾಗಿ ಕಾಣುತ್ತಿವೆ ಎಂಬುದಾಗಿ ಪ್ರಪಂಚದ ಬೇರೆ ಬೇರೆ ಕಣಗಳಲ್ಲಿ ಸಂಶೋಧನೆ ನಡೆಸಿರುವ ಪರಿಸರ ವಿಜ್ಞಾನಿಗಳು ಬಡಿದಿರುವ ಎಚ್ಚರಿಕೆಯು ಗಂಟೆಯ ನಿನಾದವನ್ನು ಆಲಿಸಿ ಗಂಭೀರವಾಗಿ ಚಿಂತಿಸಿ ಸಮಗ್ರ ಪುಹಾರವನ್ನು ಒಡನೆ ಅರಸುವ ಪ್ರಯತ್ನ ಈಗ ಎಂದಿಗಿಂತ ಹೆಚ್ಚು ಅವಶ್ಯವಾಗಿದೆ, ಆನಿವಾರ‍್ಯವಾಗಿದೆ ಕೂಡ. ಇಂಥ ಪರಿಸ್ಥಿತಿಯ ಉದಯದ ಕಾರಣ- ಪರಿಸರ ವಿಧಿಸುವ ಶಿಸ್ತಿನ ಉಲ್ಲಂಘನೆ.
ಕೊನೆಯ ಉದಾಹರಣೆಯಾಗಿ ತಾಲಿಡೊಮೈಡ್‌ ಶಿಶುಗಳ ಕರುಣಾಮಯ ಕತೆಯನ್ನು ಹೆಸರಿಸಬಹುದು. ಗರ್ಭಿಣಿಯರಿಗೆ ಹೆಚ್ಚಾಗಿ ಎಳೆ ಬಸುರಿನಲ್ಲಿ ತಲೆದೋರುವ ವಮನ ಮುಂತಾದ ಅಹಿತಕರಾನುಭವಗಳನ್ನು ತತ್‌ಕ್ಷಣ ನಿವಾರಿಸಿ ಸುಲಭವಾಗಿ ನಿದ್ದೆ ಬರಿಸುವ ಒಂದು ಹೊಸ ಮದ್ದು ತಾಲಿಡೊಮೈಡ್. ಇದನ್ನು ಸೇವಿಸಿದ ಗರ್ಭಿಣಿಯರಿಗೆ ಜೀವನ ಬಲು ಲಘುವಾಗಿ:ತು. ಉಲ್ಲಾಸಭರಿತವಾಯಿತು. ಹೀಗಾಗಿ ತಾಲಿಡೊಮೈಡಿನ ಉಪಯೋಗ ಕ್ಷಿಪ್ರವಾಗಿದೆ. ಅತಿಯಾಗಿಯೂ ಪಶ್ಚಿಮ ರಾಷ್ಟ್ರಗಳಲ್ಲಿ, ವಿಶೇಷವಾಗಿ
ಮದ್ದು ತಯಾರಕರಾದ ಪಶ್ಚಿಮ ಜರ್ಮನಿಯಲ್ಲಿ ಪ್ರಸರಿಸಿತು (೧೯೫೦-೬೦) (ಮದ್ದು ಕಂಪೆನಿ ಅತಿಯಾದ ಲಾಭವನ್ನು ಗಳಿಸಿತೆನ್ನುವುದು ಸ್ವಯಂಸ್ಪಷ್ಟ.) ಮುಂದೆ ; ಯುಕ್ತ ವೇಳೆಯಲ್ಲಿ ಶಿಶುಗಳ ಜನನವಾದಾಗ ವೈದ್ಯಪ್ರಪಂಚ ಊಹಿಸದಿದ್ದಂಥ ಒಂದು ಹೊಸ ಮಾನವೀಯ ಸಮಸ್ಯೆ ಹಠಾತ್ತಾಗಿ ಅನಾವರಣಗೊಂಡಿತು ; ಅಂಗವಿಕಲ ಜೀವಂತ ಶಿಶುಗಳ ಜನನದಲ್ಲಿ ಅತಿ ಬಾಹುಳ್ಯ. ಇವು ತಾಲಿಡೊಮೈಡ್ ಶಿಶುಗಳೆಂದೇ ಪ್ರಸಿದ್ಧವಾದುವು. ಈ ದುರ್ಘಟನೆಯ ಕಾರಣ ಸ್ಪಷ್ಟ- ದೇಹ ವಿಜ್ಞಾನ ವಿಧಿಸುವ
ಶಿಸ್ತಿನ ಉಲ್ಲಂಘನೆ.
ಪರಿಸರದ ಶಿಶುವಾದ ಮನುಷ್ಯ ತನ್ನ ಬುದ್ದಿ ಹಾಗೂ ಪ್ರಯತ್ನಗಳ ಫಲವಾಗಿ ಹಲವಾರು ಸಿದ್ಧಿಗಳನ್ನು ಪಡೆದಿರುವುದು ನಿಜ. ಆದರೆ ಇವುಗಳಿಂದ ಆತ ವಿಚಲಿತಮನಸ್ಕನಾಗಿ ಪರಿಸರದ ಜನಕನೇ ತಾನು ಎಂಬುದಾಗಿ ವರ್ತಿಸಿರುವುದರ ಘೋರ ಪರಿಣಾಮ, ಈ ಮೇಲೆ ಹೇಳಿದಂತೆ, ಆತನ ಪೂರ್ಣಾಹುತಿಯ ಏರ್ಪಾಡು. ನಿಸರ್ಗವನ್ನು ಬಿಟ್ಟು ಮನುಷ್ಯ ಬದುಕಲಾರ. ಮನುಷ್ಯನಿಲ್ಲದಿದ್ದರೂ ನಿಸರ್ಗ ಉಳಿಯಬಲ್ಲುದು (ಪ್ರಾಯಶಃ ಇನ್ನೂ ಚೆನ್ನಾಗಿ ! ). ಈ ಜ್ಞಾನದ ಅರಿವೇ ಶಿಸ್ತಿನ ಮೂಲ.
೩
ಉದ್ದಿಷ್ಟ ಕಾವ್ಯವನ್ನು ನೆರವೇರಿಸುವಲ್ಲಿ ಅದರ ಇತಿ ಮಿತಿಗಳು ವಿಧಿಸುವ ವಿಧಾನವೇ ಶಿಸ್ತು ಆಗಿರುವುದರಿಂದ ಸ್ವತಃ ಶಿಸ್ತಿಗೆ ಒಳ್ಳೆ ಅಥವಾ ಕೆಟ್ಟ ಗುಣ ಎಂಬುದನ್ನು ಆರೋಪಿಸಲು ಸಾಧ್ಯವಿಲ್ಲ. ದರೋಡೆಕಾರ ತನ್ನ ದುಷೋದ್ದೇಶವನ್ನು ಈಡೇರಿಸುವ ಹಾದಿಯಲ್ಲಿ ಅದೆಷ್ಟು ಶಿಸ್ತಿನಿಂದ ವರ್ತಿಸಬೇಕು ಎಂಬುದನ್ನು ಲಕ್ಷಿಸಿದರೆ ಈ ಹೇಳಿಕೆಯ ಅರ್ಥ ಸ್ಪಷ್ಟವಾದೀತು. ವಾಸ್ತವವಾಗಿ ವಾಮಮಾರ್ಗಗಾಮಿಗಳಿಗೆ ಅಧಿಕ ಶಿಸ್ತಿನ ಅವಶ್ಯಕತೆ ಉಂಟು. ಏಕೆಂದರೆ ಹೆಜ್ಜೆ ಹೆಜ್ಜೆಗೂ ಅವರು ಪರಿಸರದ ವಿರೋಧ ಬಲಗಳನ್ನು ಎದುರಿಸಿ ಮುಂದುವರಿಯಬೇಕಾಗುತ್ತದೆ. ಆದರೆ ಸಾಮಾನ್ಯವಾಗಿ ಶಿಸ್ತನ್ನು ಒಳ್ಳೆಯ ಕಾರ‍್ಯಗಳ ನಿರ್ವಹಣೆಯೊಂದಿಗೆ ಲಗತ್ತಿಸುವುದು ವಾಡಿಕೆ.
ಒಂದು ಹೊಳೆಯ ಗತಿಯನ್ನು ಅನುಸರಿಸೋಣ-ಶಕ್ತಿಯ ಎಂಥ ಅಪವ್ಯಯವಿದು ಎಂದೆನ್ನಿಸದಿರದು. (ನಮ್ಮ ದೃಷ್ಟಿಯಿಂದ) ಹೊಳೆಗೆ ಉದ್ದೇಶರಹಿತ ಪ್ರವಹನವಿರುವುದೇ ಇದರ ಕಾರಣ. ಈಗ ಅದೇ ಹೊಳೆಗೆ ಒಂದು ಅನುಕೂಲ ಸ್ಥಳದಲ್ಲಿ ಕಟ್ಟೆಕಟ್ಟಿ ನೀರಿನ ಹರಿವಿಗೆ ಒಂದು ಶಿಸ್ತನ್ನು ವಿಧಿಸಿದರೆ ಶಕ್ತಿ ಸಂಚಯನವಾಗಿ ನಮಗೆ ವಿವಿಧ ಉಪಯೋಗಗಳಿಗೆ ಲಭಿಸುವುದು.
ಸಾವಿರ ಜನರ ದೊಂಬಿಯನ್ನು ಕೇವಲ ಹತ್ತು ಮಂದಿ ಪೋಲಿಸರ ಲಾಠೀ ಪ್ರಹಾರ ನಿಮಿಷಗಳಲ್ಲಿ ಚದರಿಸುವ ದೃಶ್ಯವನ್ನು ಸ್ಮರಿಸಿಕೊಳ್ಳಬಹುದು. ಪೊಲೀಸರ ಉದ್ದೇಶಪೂರ್ವಕ ಶಕ್ತಿ ಪ್ರಯೋಗ ಸಾವಿರ ಜನರ ಉದ್ದೇಶ ರಹಿತ ಶಕ್ತಿ ಪ್ರಾಸವನ್ನು ಎದುರಿಸಲು ಸಮರ್ಥವಾಗುವುದು ಪೊಲೀಸರಲ್ಲಿ ಶಿಸ್ತು ಇರುವುದರಿಂದ.
ಆದ್ದರಿಂದ ಶಿಸ್ತು ಜನರ ಬಿಡಿ ಶಕ್ತಿಗಳನ್ನು ಒಂದು ನಿರ್ದಿಷ್ಟ ಉದ್ದೇಶದೆಡೆಗೆ ಪ್ರವರ್ತಿಸಿ ಒಟ್ಟಾಗಿ ಸಂಘಟಿಸಿ ಒಂದು ಮಹಾಕಾರ‍್ಯ ನೆರವೇರುವಂತೆ ಮಾಡಬಲ್ಲುದು.
೫
ಇಷ್ಟು ಹೇಳಿದ ಬಳಿಕ ವರ್ತಮಾನ ಜೀವನ ನಮಗೆ ಹಸನಾಗಲು ಮತ್ತು ನಮ್ಮ ಪೀಳಿಗೆ ಬದುಕಿ ಬಾಳಲು ಜೀವನದ ಒಂದೊಂದು ಹಂತದಲ್ಲೂ ಶಿಸ್ತಿನ ನಡವಳಿಕೆ ಅದೆಷ್ಟು ಮುಖ್ಯ ಎಂಬುದು ಸ್ಪಷ್ಟವಾಗುತ್ತದೆ. ದತ್ತ ಸನ್ನಿವೇಶದಲ್ಲಿ ಶಿಸ್ತು ಯಾವುದು ಅಶಿಸ್ತು ಯಾವುದು ಎನ್ನುವುದರ ವಿವೇಚನೆ ಮತ್ತು ತೀರ್ಮಾನ ಒಬ್ಬ ವ್ಯಕ್ತಿಗೆ ಆಗಬೇಕಾದರೆ ಅವನಿಗೆ ಯುಕ್ತ ಶಿಕ್ಷಣ ಮತ್ತು ಸಂಸ್ಕಾರ ದೊರೆತಿರುವುದು ಅತ್ಯಗತ್ಯ.
ಪುನಃ ಮೂರು ಉದಾಹರಣೆಗಳನ್ನು ಪರಿಶೀಲಿಸೋಣ.
ಒಂದು ಕಾಲೇಜಿನ ಪ್ರಿನ್ಸಿಪಾಲರು ಸಚ್ಚಾರಿತ್ರ್ಯಕ್ಕೂ ಪಕ್ಷ ಸೇವೆಗೂ ಹೆಸರಾಂತವರು. ಶೈಕ್ಷಣಿಕ ವರ್ಷದ ಆರಂಭದಲ್ಲಿ ಅವರು ಹೊಸ ವಿದ್ಯಾರ್ಥಿಗಳನ್ನು ಒಂದು ನಿರ್ದಿಷ್ಟ ವೈಜ್ಞಾನಿಕ ತತ್ತ್ವಾನುಸಾರ ಪರೀಕ್ಷಿಸಿ ಉತ್ತೀರ್ಣರಾದವರಿಗೆ ಮಾತ್ರ ಪ್ರವೇಶವನ್ನು ಕೊಡುತ್ತಿದ್ದರು. ಒಂದು ವರ್ಷ ಅವರಿಗೆ ಹೊಸ ಸವಾಲು ಎದುರಾಯಿತು : ಪ್ರವೇಶ ಲಭಿಸದಿದ್ದಂಥ ಹಲವಾರು ಅಭ್ಯರ್ಥಿಗಳು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರೊಡನೆ ತಮ್ಮ ಅಹವಾಲನ್ನು ನಿವೇದಿಸಿಕೊಂಡರು. ಈ ಮಂದಿ ಸ್ವಜಾತಿ ಬಾಂಧವರೆನ್ನುವ ವ್ಯಕ್ತಿನಿಷ್ಠ ಕಾರಣದಿಂದ ಆ ಅಧ್ಯಕ್ಷರು, ಇವರನ್ನು ಕಾಲೇಜಿಗೆ ಸೇರಿಸಿಕೊಳ್ಳತಕ್ಕದ್ದು ಎನ್ನುವ ಅಣತಿಯನ್ನು ಪ್ರಿನ್ಸಿಪಾಲರಿಗೆ ನೀಡಿದರು. ಅವರು ಒಪ್ಪಲಿಲ್ಲ. ಫಲಿತಾಂಶ ಅಧ್ಯಕ್ಷರ ಪರೋಕ್ಷ ಬೆಂಬಲದಿಂದ ಪ್ರಿನ್ಸಿಪಾಲರ ವಿರುದ್ಧ ವಿದ್ಯಾರ್ಥಿಗಳ ಗೂಂಡಾ ವರ್ತನೆ, ಕಾಲೇಜಿನ ಹೊಣೆಗಾರಿಕೆಯ ನಿರ್ವಹಣೆ ಪ್ರಿನ್ಸಿಪಾಲರಿಗೆ ದುಸ್ಸಹನೀಯವಾಯಿತು. ಇಂಥ ಸನ್ನಿವೇಶದಲ್ಲಿ ಅವರು ಹೇಗೆ ನಡೆದುಕೊಳ್ಳಬೇಕು ? ಹುದ್ದೆಗೆ ರಾಜಿನಾಮೆಯಿತ್ತು ಶಿಸ್ತನ್ನು, ಅಂದರೆ ತಮ್ಮ ಧರ್ಮವನ್ನು ಅವರು ಕಾಪಾಡಿಕೊಂಡರು.
ವಿಜ್ಞಾನ ಸಂಶೋಧಕರ ಒಂದು ತಂಡ : ಅದರ ನಾಯಕ ವಿಜ್ಞಾನಿ-ರಾಜಕಾರಣಿ ಆಗಿದ್ದುದರಿಂದ ಅಧಿಕಾರ ವಲಯಗಳಲ್ಲಿ ಬಲು ಪ್ರಭಾವೀ ಪುರುಷನಾಗಿದ್ದ. ಈ ತಂಡದ ಮುಂದೆ ಬಂದ ಸವಾಲು ಗೋದಿಯ ತಳಿಯನ್ನು ಸುಧಾರಿಸಿ ಕೃಷಿಕ್ಷೇತ್ರದಲ್ಲಿ ಹಸಿರು ಕ್ರಾಂತಿಯನ್ನು ಆವಾಹಿಸುವುದು ಹೇಗೆ ಎಂದು. ಇದರ ಯಶಸ್ಸಿನ ಮೇಲೆ ಈ ತಂಡಕ್ಕೆ ಮುಖ್ಯವಾಗಿ ನಾಯಕನಿಗೆ, ಅಪಾರ ಕೀರ್ತಿ ಪ್ರತಿಷ್ಠೆ ಲಭಿಸುವುದು ನಿಶ್ಚಯ. ನೂರಾರು ಪ್ರಯೋಗಗಳು ನಿರ್ದಿಷ್ಟ ಯೋಜನಾನುಸಾರ ನಡೆದವು. ಆದರೆ ಅವುಗಳ ಸಂಕಲಿತ ಫಲಿತಾಂಶ ಆಶಾದಾಯಕವಾಗಿರಲಿಲ್ಲ. ಆಗ ನಾಯಕ ಖಾಸಗಿಯಾಗಿ ತನ್ನ ಅನುಯಾಯಿಗಳಿಗೆ ಒಂದು ಆದೇಶ ನೀಡಿದ : ಅವರೆಲ್ಲರೂ ತಮ್ಮ ತಮ್ಮ ಪ್ರಯೋಗ ಫಲಿತಾಂಶಗಳನ್ನು ಪೂರ್ವ ನಿರ್ಧರಿತ ತೀರ್ಮಾನ ಬರುವಂತೆ ತಿದ್ದುಪಡಿ ಮಾಡಿಕೊಡಬೇಕೆಂದು. ಈ ಅವೈಜ್ಞಾನಿಕ ಮಾರ್ಗವನ್ನು ಅನುಸರಿಸಿದ ಸಹಾಯಕರಿಗೆ ಒಡನೆ ಬಡ್ತಿ ದೊರೆತು ಅಧಿಕಾರದ, ಅಂತೆಯೇ ಆರ್ಥಿಕ ಸವಲತ್ತುಗಳ, ನಿಚ್ಚಣಿಕೆಯಲ್ಲಿ ಶೀಘ್ರವಾಗಿ ಮೇಲೇರುವುದು ಸಾಧ್ಯವಾಯಿತು. ಅದನ್ನು ಅನುಸರಿಸದವರಿಗೆ, ಅಂದರೆ ಶಿಸ್ತನ್ನು ಕಾಪಾಡಿಕೊಂಡವರಿಗೆ, ಆ ತಂಡದಲ್ಲಿ ಮುಂದುವರಿಯುವುದು ಬೆಂಕಿ ಮೇಲಿನ ವಾಸವಾಯಿತು.
ವಿಕ್ಟರ್ ಹ್ಯೂಗೋ ಬರೆದಿರುವ Les Miserables ಎನ್ನುವ ಸುಪ್ರಸಿದ್ಧ (ಫ್ರೆಂಚ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದವಾಗಿರುವ) ಕಾದಂಬರಿ ಉಂಟು. ಪೋಲೀಸ್ ಇನ್ಸ್‌‌ಪೆಕ್ಟರ್ ಜೇವರ್ಟ್ ಮತ್ತು ಮಾಜಿ ಕೈದಿ ಮತ್ತು ಪ್ರಚಲಿತ ಸರ್ಕಾರೀ ಕಾನೂನಿನ ದೃಷ್ಟಿಯಿಂದ ಅಪರಾಧಿ ಜೀನ್‌ವೇಲ್ ಜೀನ್ ಎಂಬ ಎರಡು ಪಾತ್ರಗಳು ಇದರಲ್ಲಿ ಬರುತ್ತವೆ. ಮೊದಲನೆಯ ಪಾತ್ರ ಕಠೋರ ಶಿಸ್ತಿನ ಪರಮೋಚ್ಚ ನಿದರ್ಶನವಾದರೆ ಎರಡನೆಯ ಪಾತ್ರ ಸಮಾಜದ ನಾನಾ ಬಗೆಯ ಅನ್ಯಾಯ ಹಿಂಸೆ ಪೀಡೆಗಳಿಗೆ ಬಲಿಯಾಗಿಯೂ ಸದಾ ಸದ್ವರ್ತನೆಯನ್ನೇ ಪ್ರದರ್ಶಿಸುತ್ತಿದ್ದ ಮಾನವೀಯತೆಯ ಸಾಕಾರ ಮೂರ್ತಿ. ಸನ್ನಿವೇಶಗಳ “ಪಿತೂರಿ” ಹೇಗೆ ಕೂಡಿ ಬಂತೆಂದರೆ ಜೀನ್‌ವೇಲ್ ಜೀನನನ್ನು ಜೇವರ್ಟ್ ಕೈದು ಮಾಡುವುದರ ಬದಲಾಗಿ ಅದೇ “ಅಪರಾಧಿ”ಯಿಂದ ಇದೇ “ಅಪರಾಧಿ ಶೋಧಕ ಅಧಿಕಾರಿ” ಜೀವದಾನ ಪಡೆದು ಅಪ್ರತಿಭನಾಗಿ ದಿಙ್ಮೂಡನಾಗಿ ಮರಳುವಂತಾಯಿತು. ಜೇವರ್ಟನ ಜೀವನದಲ್ಲಿ ಎಂದೂ ಎದುರಾಗದ ಹೊಸ ಸಮಸ್ಯೆ ಈಗ ಎದುರಾಗಿದೆ : “ಗೂಢ ಯೋಚನೆಗಳೂ ಚಂಚಲ ತರ್ಕಗಳೂ ತನ್ನ ಮನಸ್ಸಿನ ಶಾಂತಿಗಾಗಿ ಪ್ರಯತ್ನಿಸುತ್ತಿದ್ದ ಪ್ರಯತ್ನಗಳೂ ಅವನನ್ನು ಹಿಂಸಿಸುತ್ತಿದ್ದವು. ಆಳುವ ಅಧಿಕಾರವೇ ಮೂರ್ತಿವತ್ತಾಗಿ ಪೇರಿಸ್ಸಿನ ಬೀದಿಗಳಲ್ಲಿ ನಡೆಯುತ್ತಿದ್ದಂತೆ ನಡೆದ ಜೇವರ್ಟನು ಇಂದು ಕೇವಲ ಒಬ್ಬ ದೀನ ವ್ಯಕ್ತಿಯಂತೆ ಅದೇ ಬೀದಿಗಳಲ್ಲಿ ನಡೆದು ಹೋಗುತ್ತಿದ್ದನು…ಜೀನ್‌ವೇಲ್‌ಜೀನನನ್ನು ಕೈದು ಮಾಡಿ ಸರಕಾರಕ್ಕೆ ಒಪ್ಪಿಸುವುದು. ತನ್ನ ಏಕೈಕ ಕರ್ತವ್ಯವೆಂದು ತಿಳಿಯುತ್ತಿದ್ದುದು ಜತೆಯಲ್ಲೇ ಅವನನ್ನು ಮುಟ್ಟದೆ ಅವನಷ್ಟಕ್ಕೇ ಬಿಟ್ಟು ಕೊಡುವುದೂ ಕರ್ತವ್ಯವೆಂದು ತಿಳಿಯುತ್ತಿದ್ದನು. …. …. ….. ಇನ್ಸ್‌‌ಪೆಕ್ಟರನಾಗಿ ಕರ್ತವ್ಯಭ್ರಷ್ಟನಾಗುವುದೇ ಅಥವಾ ಮನುಷ್ಯನಾಗಿ ಕೃತಘ್ನನಾಗುವುದೇ ಎಂಬುದು ಅವನೆದುರಿಗಿದ್ದ ಏರಿಹೋಗಲಾಗದಿದ್ದ ಪರ್ವತಗಳಾಗಿದ್ದುವು…. …. ….. ಕೊನೆಗಂತೂ ತಾನೊಂದು ಪರ್ವತಶಿಖರದಲ್ಲಿದ್ದು ಅಲ್ಲಿಂದ ಕಣ್ಣು ಮುಚ್ಚಿ ಧುಮುಕುವ ಒಂದೇ ಗುರಿಯನ್ನು ಕಾಣತೊಡಗಿದನು……..” (ನೋಡಿ -ದುಃಖಾರ್ತರು, ಅನುವಾದಕ: ಎ. ಪಿ. ಸುಬ್ಬಯ್ಯ) ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಜೇವರ್ಟ್ ಈ ಬಡಬಾಗ್ನಿಯಿಂದ ಶಾಶ್ವತವಾಗಿ ಬಿಡುಗಡೆ ಪಡೆಯುತ್ತಾನೆ. ಜೆವರ್ಟನಂಥ ಪಾತ್ರ ಬೇರೆ ಯಾವ ರೀತಿಯಲ್ಲಿಯೂ ಈ ಸಿಕ್ಕಿನಿಂದ ಪಾರಾಗುವುದು ಸಾಧ್ಯವಿರುತ್ತಿರಲಿಲ್ಲ ಎಂಬ ಅಂಶ ಸಮಗ್ರ ಕಾದಂಬರಿಯನ್ನು ಓದಿದವರಿಗೆ ಹೊಳೆಯದಿರದು.
೬
ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿ ಶಿಸ್ತು ಇರುವಂತೆ ವ್ಯಕ್ತಿಗೆ ದೊರೆಯಬೇಕಾದ ಶಿಕ್ಷಣ ಮತ್ತು ಸಂಸ್ಕಾರ ಹೇಗಿರಬೇಕು ?
ಈ ಪ್ರಶ್ನೆಗೆ ಸರಳವಾದ ಒಂದು ಉತ್ತರವಿಲ್ಲ. ಸ್ಥೂಲವಾಗಿ ಇಷ್ಟು ಹೇಳಬಹುದು. ಆಯಾ ರಾಷ್ಟ್ರ ಆಯಾ ಕಾಲದ ಸ್ಥಿತಿಗತಿಗಳಿಗೆ ಅನುಸಾರವಾಗಿ ಸಮಗ್ರ ರಾಷ್ಟ್ರದ ಮತ್ತು ತನ್ಮೂಲಕ ಸಮಗ್ರ ಮಾನವ ಜನಾಂಗದ ಕಲ್ಯಾಣದ ದೃಷ್ಟಿಯಿಂದ ತನ್ನ ಶಿಕ್ಷಣ ವಿಧಾನವನ್ನು ರೂಪಿಸಿ ಅದನ್ನು ರೂಢಿಸಬೇಕು. ಸರ್ವೇಜನಾಸ್ಸುಖಿನೋ ಭವಂತು ಎನ್ನುವಲ್ಲಿ ಇದೇ ಭಾವ ಅಧ್ಯಾಹಾರವಾಗಿದೆ. ಇಂದಿಗಾದರೂ ಇದೊಂದು ಆದರ್ಶವಾಗಿ ಉಳಿದಿದೆಯೇ ವಿನಾ ಪ್ರತ್ಯಕ್ಷ ಪ್ರಯೋಗವಾಗಿ ಎಲ್ಲ ನಡೆದಂತಿಲ್ಲ. ಇದರ ಕಾರಣ, ಪ್ರಾಯಶಃ ಪ್ರತಿಯೊಂದು ರಾಷ್ಟ್ರದ ಮತ್ತು ಆ ರಾಷ್ಟ್ರದ ಒಳಗಿನ ಪ್ರತಿಯೊಂದು ಬಣದ ಸ್ವಾರ್ಥದ ಮೂಲ ದುರಾಸೆಗಳು. ಅಂತಃಕಲಹಗಳು ಅಂತಾರಾಷ್ಟ್ರೀಯ ಯುದ್ದಗಳು ಮುಂತಾದ ಸಮಸ್ತ ಕ್ಷೋಭೆಗಳಿಗೂ ಕಾರಣವನ್ನು ಇಲ್ಲಿ ಕಾಣಬಹುದು.
ಇದಕ್ಕೆ ಪರಿಹಾರವಿಲ್ಲವೇ ?
ಸಮಸ್ತ ಜನರಿಗೂ ಅನ್ವಯವಾಗುವಂತ ಪರಿಹಾರವನ್ನು ನೀಡುವ ಪ್ರಯತ್ನವೂ ಧಾರ್ಷ್ಟ್ಯವೆನಿಸೀತು ; ಇಲ್ಲವೇ ಸಮಸ್ಯೆಯ ಅತಿ ಸರಳೀಕರಣವೆನಿಸೀತು. ನಮ್ಮ ಮಟ್ಟಿಗೆ ಎಂದರೆ ಈ ಲೇಖನವನ್ನು ಓದುವ, ಮುಖ್ಯವಾಗಿ, ವಿದ್ಯಾರ್ಥಿಗಳ ಮಟ್ಟಿಗೆ-
ಒಂದು ಮಾತನ್ನು ಹೇಳಬಹುದು. ವಿದ್ಯಾರ್ಥಿಗಳ ಏಕೈಕ ಲಕ್ಷ್ಮ, ಅರ್ಜುನ ಲಕ್ಷ ಎನ್ನಬೇಕಾದರೆ, ವಿದ್ಯಾರ್ಜನೆ ಆಗಿರಬೇಕು. ಜ್ಞಾನಾನ್ವೇಷಣೆಯ ಪಯಣದಲ್ಲಿ ಅವರು “ಹುಚ್ಚ” ರೇ ಆಗಿರದಿದ್ದರೆ ಅವರ ವರ್ತಮಾನ ಜೀವನ ನಿರಾಶಾಮಯವಾಗುತ್ತದೆ. ವಿದ್ಯಾರ್ಜನೆಯ ದಿಶೆಯಲ್ಲಿ ಸಾಗಿದ ಹಾದಿ ಸಹಜವಾಗಿ ಶಿಸ್ತಿನಿಂದ ಕೂಡಿರುವುದು. ಇಂಥ ಗುರಿಯ ಸಿದ್ಧಿಗೆ ಮಾರಕವಾಗುವಂಥ ಒಂದೊಂದು ನಡವಳಿಕೆಯೂ ಅಶಿಸ್ತಾಗುತ್ತದೆ.
೭
ನಾವು ಸದಾ ನೇರ ನಡೆಯನ್ನು ಮಾತ್ರ ಪಾಲಿಸುತ್ತಿದ್ದರೆ ಮತ್ತು ಎಂದೂ ಡೊಂಕು ನಡೆಯನ್ನು ಅನುಸರಿಸದಿದ್ದರೆ ಆಗ ಶಿಸ್ತು ನಮ್ಮ ಅರಿವಿಲ್ಲದೆಯೇ ನಮ್ಮ ಜೀವನದಲ್ಲಿ ಬೆರೆತು ಹೋಗಿರುತ್ತದೆ,. ಇದರಿಂದ ಮೂಲತಃ ನಮಗೆ ಸಂತೃಪ್ತಿ ಉಂಟು. ಅನುಷಂಗಿಕವಾಗಿ, ಇಂದಿನ ಕಲುಷಿತ ಸಮಾಜ ಜೀವನದಲ್ಲಿ ಇತರರ ಮೇಲೆ ಸತ್ಪ್ರಭಾವ ಆಗಿಯೇ ಆಗುತ್ತದೆ, ಇಂಥ ಓರ್ವ ಆದರ್ಶ ವ್ಯಕ್ತಿಯ, ಅಂದರೆ ಶಿಸ್ತಿನ ಸಾಕಾರ ಮೂರ್ತಿಯ ನಡವಳಿಕೆಯನ್ನು ಪರಿಶೀಲಿಸುವುದರ ಮೂಲಕ ಈ ಅಮೂರ್ತ ಗುಣದ ಕೆಲವು ಮುಖ್ಯ ಲಕ್ಷಣಗಳನ್ನು ಗುರುತಿಸಬಹುದು.
ಶಿಸ್ತುಗಾರನೊಬ್ಬ ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಫೋಶಿಯನ್ ಎಂಬಾತ ಅಥೆನ್ಸಿನ (ಗ್ರೀಸ್) ಸೇನಾಧಿಪತಿ ಆಗಿದ್ದ. ದೂರದರ್ಶಿತ್ವ ಹಾಗೂ ಪರಾಕ್ರಮಗಳಿಗೆ ಮನೆ ಮಾತಾಗಿದ್ದ ಅವನನ್ನು ಜನ “ಸುತ್ಪುರುಷ” ಎಂದೇ ಅರ್ಥಪೂರ್ಣವಾಗಿ ಕರೆಯುತ್ತಿದ್ದರು. ಅಲೆಕ್ಸಾಂಡರ್‌ ಮಹಾಶಯ ಗ್ರೀಸ್ ರಾಷ್ಟ್ರವನ್ನು ಮುತ್ತಿಗೆ ಹಾಕಿ ವಶ ಮಾಡಿಕೊಳ್ಳುತ್ತಿದ್ದ ಸಂದರ್ಭ. ಫೋಶಿಯನ್ನನ ನಿಷ್ಠೆಯನ್ನು ತನ್ನ ಕಡೆಗೆ ಒಲಿಸಿಕೊಳ್ಳಲು ಅಲೆಕ್ಸಾಂಡರ್‌ ಬಹು ಬಗೆಯ ಎರೆಗಳನ್ನು ಎಸೆದ. “ಅಲೆಕ್ಸಾಂಡರನು ನಿಜವಾಗಿಯೂ ನನ್ನನ್ನು ಗಣ್ಯವೆಂದು ಭಾವಿಸುವುದಾದರೆ ನನ್ನ ಪ್ರಾಮಾಣಿಕತೆಯನ್ನು ಆತ ಗೌರವಿಸಲಿ’–ಇದು ಫೋಶಿಯನ್ ಸತ್ಪುರುಷನ ಸಹಜ ಉತ್ತರ. ಮಹಾಭಾರತದಲ್ಲಿ ಬರುವ “ಕರ್ಣಭೇದನ’ದ ಸನ್ನಿವೇಶವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕರ್ಣನ ಜನನ ವೃತ್ತಾಂತವನ್ನು ಅವನಿಗೆ ಕೃಷ್ಣ ಬಲು ಸೊಗಸಾಗಿ ವರ್ಣಿಸುತ್ತಾನೆ.
ಕೌರವರ ಕೆಳೆತನವನ್ನು ತೊರೆದು ತನ್ನ ಸಂಗಾತ ಅವನು ಬಂದದ್ದೇ ಆದರೆ (ಮುಂದಿನ ಉದ್ಧರಣೆಗಳು ಕುಮಾರವ್ಯಾಸ ಭಾರತದಿಂದ)

ನಿನ್ನಯ ಪದಕೆ ಕೆಡಹುವೆನೈವರನು
ಎಂಬುದಾಗಿ ಕೃಷ್ಣ ಆಶ್ವಾಸಿಸುತ್ತಾನೆ. ಅಲ್ಲದೇ
ನಿನಗೆ ಹಸ್ತಿನಪುರದ ರಾಜ್ಯದ ಘನತೆಯನು ಮಾಡುವೆನು
ಎಂಬ ಆಮಿಷವನ್ನೂ ಒಡ್ಡುತ್ತಾನೆ. ಆದರೆ ಸಚ್ಚಾರಿತ್ರಕ್ಕೂ ತ್ಯಾಗಕ್ಕೂ ಪರ್ಯಾಯ ನಾಮವಾಗಿದ್ದ ಕರ್ಣನ ಅನುಕ್ರಿಯೆ ಏನು ?
ಕೊರಳ ಸೆರೆ ಹಿಗ್ಗಿದುವು ದೈಗುಜಲ ಉರವಣಿಸಿ ಕಡುನೊಂದನಕಟಾ !
ಕುರುಪತಿಗೆ ಕೇಡಾದುದೆಂದನು ಮನದೊಳಗೆ

ರಾಜ್ಯದ ಆಕರ್ಷಣೆ, ಅಧಿಕಾರದ ಪ್ರಲೋಭನೆ, ಕುಲದ ಹಿರಿತನ ಒಂದೂ ಕರ್ಣನ ಪಾರದರ್ಶಕ ಚಾರಿತ್ರ್ಯದ ಮೇಲೆ ಕರೆ ಬರಿಸಲು ಸಮರ್ಥವಾಗಲಿಲ್ಲ. ಕೃಷ್ಣ ಮತ್ತೆ ಮತ್ತೆ ಕರ್ಣನನ್ನು ಕೆದಕಿ ಪಾಂಡವರೆಡೆಗೆ ಅವನನ್ನು ಒಲಿಸಲು ಪ್ರಯತ್ನಿಸಿದಾಗ ಕರ್ಣ ನೀಡಿದ ಉತ್ತರ ತುಂಬ ಮಾರ್ಮಿಕವಾಗಿದೆ:
ಹೊರೆದ ದಾತಾರಂಗೆ ಹಗೆವರ ಶಿರವನರಿದೊಪ್ಪಿಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ
ಕೌರವೇಶ್ವರನೊಲುಮೆ ತಪ್ಪಿಸಿ ಭುವನದೊಳಗೆನಗಾಪ್ತ ಜನವಿಲ್ಲ… ….. …….
ಚತುರಂಗ ಬಲದಲಿ ಕೌರವನ ರುಣ ಹಿಂಗೆ ರಣದಲಿ ಸುಭಟಕೋಟಿಯನು
ತೀರಿಸಿಯೆ ಪತಿಯವಸರಕ್ಕೆ ಶರೀರವನು ನೂಕುವೆನು

ಶಿಸ್ತುಗಾರನನ್ನು ನೀವು ಕೊಳ್ಳಲಾರಿರಿ.
ಕರ್ತವ್ಯ ನಿರ್ವಹಣೆಯೊಂದೇ ಶಿಸ್ತುಗಾರನ ಆದರ್ಶ. “ಕರ್ತವ್ಯದ ಕ್ಷೇತ್ರ ಅನಂತವಾಗಿದೆ. ಜೀವನದ ಪ್ರತಿಯೊಂದು ರಂಗವನ್ನೂ ಅದು ವ್ಯಾಪಿಸಿದೆ. ನಾವು ಹಣವಂತರಾಗಿರುವುದಾಗಲಿ ಬಡವರಾಗಿರುವುದಾಗಲಿ ಸಂತೋಷಿಗಳಾಗಿರುವುದಾಗಲಿ ದುಃಖಿಗಳಾಗಿರುವುದಾಗಲಿ ನಮ್ಮ ಆಯ್ಕೆಯಿಂದ ಅಲ್ಲ. ಆದರೆ ನಮ್ಮನ್ನು ಎಲ್ಲ ಕಡೆಗಳಲ್ಲಿಯೂ ಸುತ್ತುವರಿದುಕೊಂಡಿರುವ ಕರ್ತವ್ಯವನ್ನು ನಿರ್ವಹಿಸುವುದು ನಮ್ಮ ಪಾತ್ರವೆಂಬುದಂತೂ ಖಂಡಿತ. ಎಷ್ಟೇ ತ್ರಾಸದಾಯಕವಾಗಲಿ ಮತ್ತು ಅಪಾಯಕಾರಿ ಆಗಲಿ ಪರಮೋಚ್ಚ ನಾಗರಿಕ ಜೀವನದ ತಿರುಳು ಕರ್ತವ್ಯಕ್ಕೆ ತಲೆಬಾಗುವುದೇ ಆಗಿದೆ.. ಮಹಾ ಸಾಧನೆಗಳಿಗಾಗಿ ಈಗಲೂ ಗತಕಾಲದಂತೆಯೇ ಕಾರ್ಯವೆಸಗಲೇಬೇಕು, ಆಶಿಸಲೇಬೇಕು, ಸಾಯಲೇಬೇಕು” ಎಂಬುದಾಗಿ ಸೇಮ್ಯುಯಲ್ ಸ್ಮೈಲ್ಸ್ ಹೇಳಿರುವ (೧೮೮೦) ಮಾತು ಚಿರಂತನ ಸತ್ಯ. ಸೀತಾನ್ವೇಷಣೆಗಾಗಿ ಸಾಗರೋಲ್ಲಂಘನ ಮಾಡುತ್ತಿದ್ದ ಹನುಮಂತನ ಹಾದಿಗೆ ಎದುರಾಗಿ ಮೈನಾಕ ಪರ್ವತರಾಜ ಜಲರಾಶಿಯಿಂದ ಮೇಲೆದ್ದು ತನ್ನ ಆತಿಥ್ಯವನ್ನು ವಾಯುಸುತ ಸ್ವೀಕರಿಸಿ ಮುಂದೆ ಸಾಗಬೇಕೆಂದು ಬಿನ್ನವಿಸಿಕೊಂಡ. ಆಗ ಹನುಮಂತ ನೀಡಿದ ಉತ್ತರ ಬಲು ಸಾಂಕೇತಿಕವಾಗಿದೆ. “ನಾನು ಸಂತುಷ್ಟ ನಾದೆನು, ಆತಿಥ್ಯವನ್ನು ನೀನು ಮಾಡಿದ್ದಾಯಿತು. ಕೋಪಿಸಿಕೊಳ್ಳಬೇಡ ಕಾರ್ಯ ಸಾಧನೆಯಾಗಬೇಕಾದ ಕಾಲವು ನನ್ನನ್ನು ತ್ವರೆ ಪಡಿಸುತ್ತಿದೆ. ಹಗಲೂ ಕಳೆದುಹೋಗುತ್ತಿವೆ. ಎಲ್ಲಿಯೂ ಮಧ್ಯಮಾರ್ಗದಲ್ಲಿ ನಾನು ನಿಲ್ಲುವುದಿಲ್ಲವೆಂದು ಭಾಷೆ ಕೊಟ್ಟಿರುವೆನು. 1 ಕರ್ತವ್ಯಪ್ರಜ್ಞೆಗೆ ಶಾಶ್ವತ ಪ್ರತೀಕ ಹನುಮಂತ.
ಕಾಲನಿಷ್ಠೆ ಶಿಸ್ತುಗಾರನ ಬದುಕಿನ ಉಸಿರು. ನಮ್ಮ ಯಾವ ಪ್ರಯತ್ನವೂ ಇಲ್ಲದೆ ಸ್ಥಿರ ದರದಿಂದ ಖರ್ಚಾಗಿ ಹೋಗುವ ಮತ್ತು ಎಂದೆಂದೂ ಮರಳಿ ಬರದಿರುವ ಏಕೈಕ ಪರಿಮಾಣವೆಂದರೆ ಕಾಲ. ಸರ್ವಕಾಲಗಳಲ್ಲಿಯೂ ಸರ್ವರಿಗೂ ಸಮಾನವಾಗಿ ಅನ್ವಯಿಸುವ ನಿಯಮವಿದು. ಆದ್ದರಿಂದ ನಾವು ಏನನ್ನಾದರೂ, ಲೋಕದ ಮಾತಂತಿರಲಿ ಕನಿಷ್ಠಪಕ್ಷ ನಮ್ಮ ಒಳಿತಿಗಾಗಿ ಆದರೂ, ಸಾಧಿಸಬೇಕೆಂದಿದ್ದರೆ ಅದು ವರ್ತಮಾನ ಕಾಲದ ಸದುಪಯೋಗವೊಂದರಿಂದಲೇ ಸಾಧ್ಯ. ಗತಕಾಲದಿಂದ ಪಡೆದ ಅನುಭವದಿಂದ ಭವಿಷ್ಯತ್ತನ್ನು ರೂಪಿಸುವುದಕ್ಕೋಸ್ಕರ ವರ್ತಮಾನ ಕಾಲದಲ್ಲಿ ತೀವ್ರವಾಗಿ ಬಾಳಬೇಕು. ಕಾಲನಿಷ್ಠೆ ಇಲ್ಲದ ಸೇನಾನಿಗಳ ಬೇಜವಾಬ್ದಾರಿಯಿಂದಾಗಿ ಯುದ್ಧಗಳಲ್ಲಿ ಸಾವು ಸೋಲು ಉಂಟಾಗಿವೆ. ಕಾಶ್ಮೀರದ ವೀರ ಎಂಬ ಬಿರುದನ್ನು ಪಡೆದ ಜನರಲ್ ತಿಮ್ಮಯ್ಯನವರು ಒಮ್ಮೆ ಒಂದು ಭಾಷಣದಲ್ಲಿ ಹೇಳಿದ ಮಾತುಗಳು ಬಲು ಅರ್ಥಪೂರ್ಣವಾಗಿವೆ. “ಯಾವುದೇ ಯಶಸ್ವೀ ಕಾರ‍್ಯದ ಅಡಿಪಾಯ ಶಿಸ್ತು. ಇಂಥ ಶಿಸ್ತು ನಮ್ಮ ಸಮಸ್ತ ಚಟುವಟಿಕೆಗಳಲ್ಲೂ ಹಾಸುಹೊಕ್ಕಾಗಿ ಪಸರಿಸಬೇಕಾದರೆ ನಾವು ಕಲಿಯಬೇಕಾದ ಮೊದಲ ಪಾಠ ಕಾಲವಪ್ರಜ್ಞೆಯನ್ನು ಕುರಿತದ್ದು.” ಕಾಶ್ಮೀರವನ್ನು ಕಬಳಿಸಲು ಸನ್ನಾಹ ಮಾಡಿದ್ದ ಪಾಕಿಸ್ತಾನೀ ಧೂರ್ತರ ಕುಟಿಲ ನೀತಿಯನ್ನು ನಿರ್ನಾಮ ಮಾಡಿದ್ದು ತಿಮ್ಮಯ್ಯನವರು ಕಾಲದೊಡನೆ ಸೆಣಸಿ ಗೆದ್ದ ಅದ್ಭುತ ರೀತಿ : ಟ್ಯಾಂಕುಗಳ ಬಿಡಿ ಭಾಗಗಳನ್ನು ಯಾರೂ ಊಹಿಸದ ತೆರನಾಗಿ ಗಿರಿಶಿಖರಗಳಿಗೆ ಸಾಗಿಸಿ ಅಲ್ಲಿ ಅವನ್ನು ಮರು ಜೋಡಿಸಿ ನವಟ್ಯಾಂಕುಗಳನ್ನು ಶತ್ರುಗಳೆದುರು ಹೂಡಿ ಅವರನ್ನು ದಂಗುಬಡಿಸಿದ ಪವಾಡ. ಓರ್ವ ಶಿಸ್ತುಗಾರ ಸ್ವಂತ ಜೀವನದಲ್ಲಿ ಕಾಲನಿಷ್ಠೆಯನ್ನು ಬಲು ಸಹಜವಾಗಿ

1 ನೋಡಿ-ಕನ್ನಡ ವಾಲ್ಮೀಕಿ ರಾಮಾಯಣ, ಅನುವಾದಕ : ಸಿ ಎನ್ ಶ್ರೀನಿವಾಸ ಐಯ್ಯಂಗಾರ್

ರೂಢಿಗೆ ತಂದಿರುತ್ತಾನೆ. ತನ್ನ ವೇಳೆಗೆ ತುಂಬ ಬೆಲೆಯನ್ನು ಕೊಡುವ ಆತ ಇತರರ ವೇಳೆಗೆ ಅದಕ್ಕಿಂತಲೂ ಹೆಚ್ಚಿನ ಮಹತ್ವವನ್ನು ಕೊಡುತ್ತಾನೆ. ಕಾಲನಿಷ್ಠೆ ನಮ್ಮ ಆಂತರಂಗಿಕ ಸಂಸ್ಕೃತಿಯ ಬಾಹ್ಯ ಪ್ರಕಟಿತ ರೂಪ.
ಆರ್ಥಿಕ ನಿಷ್ಕೃಷ್ಟತೆ ಶಿಸ್ತುಗಾರನ ಬದುಕಿನ ನೀತಿ. ಇತರರಿಗೆ ಪಾವತಿಸಬೇಕಾದ್ದನ್ನು ಆತ ಮೊದಲು ಕೊಟ್ಟುಬಿಡುತ್ತಾನೆ. ತನ್ನ ಖಾಸಗಿ ವ್ಯವಹಾರಗಳಲ್ಲಿ ಅವನು ಎಂದೂ ಹಾಸಿಗೆಗಿಂತ ಉದ್ದಕ್ಕೆ ಕಾಲುಗಳನ್ನು ಚಾಚುವುದಿಲ್ಲ. ನೇರ ಬದುಕನ್ನು ನಡೆಯಲು ಅವನಿಗೆ ಹಣ ಒಂದು ಸಾಧನ ಮಾತ್ರ. ಅದೇ ಲಕ್ಷ್ಯ ಅಲ್ಲ. ಆತನ ಚಟುವಟಿಕೆಗಳು ಆಸಕ್ತ ವಿಷಯಗಳ ಅಧ್ಯಯನ, ಪ್ರಯೋಗ ಮುಂತಾದವುಗಳ ಸುತ್ತ ಹೆಣೆದುಕೊಂಡಿರುವುದೇ ವಿನಾ ಅರ್ಥಸಂಪಾದನೆ ಮತ್ತು ಶೇಖರಟಿಯ ಸುತ್ತ ಅಲ್ಲ. ಆಧುನಿಕ ಜೀವನದ ಸಂಕೀರ್ಣ ಬಗೆಗಳಲ್ಲಿ ವ್ಯಕ್ತಿ-ವ್ಯಕ್ತಿ, ವ್ಯಕ್ತಿ-ಸಂಸ್ಥೆ ನಡವಳಿಕೆಗಳಲ್ಲಿ ಹಣದ ಪಾತ್ರ ಬಲು ಹೆಚ್ಚಿನದು, ಬಲು ನಿಕಟವಾದದ್ದು, ಬಲು ಜಟಿಲವಾದದ್ದೂ ಕೂಡ. ಇಂಥಲ್ಲಿ ಓರ್ವ ಶಿಸ್ತುಗಾರನ ವರ್ತನೆ ಸದಾ ಸಂಶಯಾತೀತವಾಗಿರುವುದು ಮಾತ್ರವಲ್ಲ. ಅದು ಯಾವಾಗಲೂ ಒಂದು ತೆರೆದ ಪುಸ್ತಕವೇ ಆಗಿರುತ್ತದೆ. “ನನ್ನ ಸಾವಿರ ರೂಪಾಯಿ ಹೋದರೂ ಚಿಂತೆ ಇಲ್ಲ, ಇತರರ ಒಂದು ಪೈಸವೂ ಕಾನೂನು ಬಾಹಿರವಾಗಿ ನನಗೆ ಬೇಡ” ಎಂಬುದಾಗಿ ಓರ್ವ ಶಿಸ್ತುಗಾರ ಉಸುರುವಲ್ಲಿ ಆತ ಉಪನಿಷತ್ತುಗಳ ಹೇಳಿಕೆಯನ್ನೇ ಪ್ರತಿಸ್ಪಂದಿಸಿದ್ದಾನೆ:
ತೇನ ತ್ಯಕ್ತೇನ ಭುಂಜೀಥಾ ಮಾಗೃಧಃ ಕಸ್ಯಸ್ವಿದ್ಧನಂ

ಶಿಸ್ತುಗಾರನ ಜೀವನ ಧೈರ‍್ಯಸಹಿತವಾದದ್ದು. ಇದರ ಒಂದು ಪ್ರಮುಖ ಕಾರಣ ಆತನ ಆರ್ಥಿಕ ಪರಿಶುಧ್ದ್ಯ.
ಶಿಸ್ತುಗಾರನೊಬ್ಬ ಸುಸಂಸ್ಕೃತ ವ್ಯಕ್ತಿ. ಎಂಥ ದುರ್ಭರ ಪ್ರಸಂಗದಲ್ಲಿಯೂ ಆತ ಸಂಯಮವನ್ನು ಕಳೆದುಕೊಳ್ಳಲಾರ. ಸದ್ವರ್ತನೆಗೆ ಅವಸು ಪರ್ಯಾಯನಾಮ. ಅವನು ಧೈರ್ಯಶಾಲಿ, ಕಷ್ಟಸಹಿಷ್ಣು, ಸಹನಶೀಲ ಮತ್ತು ಸಾಹಸ ಪ್ರಿಯ. ಶಿಸ್ತುಗಾರರ ಸಂಖ್ಯೆ ಯಾವ ರಾಷ್ಟ್ರದಲ್ಲಿ ಬಹುಮತದಲ್ಲಿರುವುದೋ ಅಲ್ಲಿ ಮಹಾಕಾರ‍್ಯಗಳು ನಡೆಯುತ್ತವೆ. ಆ ರಾಷ್ಟ್ರ ಉತ್ಸರ್ಪಿಣೀ ಸ್ಥಿತಿಯಲ್ಲಿರುತ್ತದೆ. ಇತರ ರಾಷ್ಟ್ರಗಳಿಗೆ ಮುಂದಾಳಾಗಿರುತ್ತದೆ.

Close

ಮುದ್ದು ಮಕ್ಕಳಿಗೊಂದು ಕವಿತೆ

ಮುದ್ದು ಮಕ್ಕಳಿಗೊಂದು ಕವಿತೆ

ಜಯಂತ ಕಾಯ್ಕಿಣಿ

ನೀಟಾಗಿ ಪುಟುಪುಟು ಎಳೆಕ್ರಾಪು ಬಾಚಿ
ಪೌಡರು ಘಮ ಘಮಿಸುವ ಪುಟಾಣಿ ಮಕ್ಕಳೇ
ಖುಷಿಯಾಗುತ್ತದೆ ನಿಮ್ಮ ಕಂಡು
-ನಿಮ್ಮ ಹಾಗೆಯೇ ನಾನೂ ಇದ್ದೆನಲ್ಲಾ
ತತ್‌ಕ್ಷಣ ನೋಂಡು ಕಹಿಯಾಗುತ್ತದೆ ಮನ
-ನನ್ನ ಹಾಗೆಯೇ ಮುಂದೆ ನೀವೂ ಆಗುವಿರಲ್ಲಾ

ಏಕೆ ಮಕ್ಕಳೇ ಪಾಪ
ನಿಮಗೇನು ಗೊತ್ತು ನಿಮ್ಮ ಹುಟ್ಟಿನ ತಡ
ನಿಮಗೇನು ಗೊತ್ತು ನೀವಪ್ಪಳಿಸಲ್ಪಟ್ಟ
ನದಿಯೇ ಇಲ್ಲದ ದಡ
ನಿಮ್ಮ ಪುಟ್ಟ ದೃಷ್ಟಿಗೆ ಈ ನಾನು
ನನ್ನವರು ಎಷ್ಟು ವಿಶಾಲ ತಾನೆ
ನಿರ್ಭೀತ ನಿಮ್ಮ ನಿಲುವುಗಳಿಗೆ ಈ ಎಲ್ಲ ನಕಾಶೆ ಗುಡ್ಡ
ಕೊಳ್ಳ ಕಾಲುವೆ ಕಾಡು ಕೇವಲ ಹಿನ್ನೆಲೆ ತಾನೆ
ತಾನೇ ತಾನಾಗಿ ಬೃಹದಾಕಾರಕ್ಕೆ ಬೆಳೆಯುವ
ಪ್ರಶ್ನೆಗಳ ಮೇಲೆ ನಿಮ್ಮ

ಪಟ್ಟ ಸಾಕ್ಸುಗಳೊಳಗಿನ ಬಿಳಿ ಎಳೆ ಮೀನು
ಪಾವಗಳ ಗುರುತು ಮೂಡುವದಿಲ್ಲ ಮಕ್ಕಳೆ?

ಪ್ರಶ್ನೆ ಕೇಳಲು ನೀವು ಕೈಯೆತ್ತಿ ಒಮ್ಮೆ
ಎಲ್ಲ ಕೈಗಳ ಎಳೆ ಮೊಗ್ಗು ಬೆರಳು
ಕೂಡಿ ಚಂದದ ಮಲ್ಲಿಗೆ ರಾಶಿ
ಒಮ್ಮೆ ಅತ್ತು ಬಿಡಿ ದೇಶಕ್ಕಾಗಿ- ಹಾ ಹಾ
ಆ ಎಸಳು ತುಟಿಯಿಂದ ಪಟಪಟ ಹುಡಿ
ಉದುರುವ ಚಂದ್ರ ಸೂರ್ಯ ನಕ್ಷತ್ರ
ಬೆಳ್ಳನೆ ಹಾಲು ಬೆಳದಿಂಗಳು
ಮೈಕಿಗೆ ಬಾಯಿ ಕೊಡಿ ನೋಡುವಾ-
ತಿಳಿತಿಳಿ ತೊದಲು ದೃಷ್ಟಿ ಭಾಷೆ ಎಷ್ಟು ಹಿತದರಳು
ಹಸಿವೆಗೆ ಹಾರ‍್ಲಿಕ್ಸು
ಅತ್ತರೆ ಚಾಕಲೇಟು- ಮತ್ತೆ ಮುತ್ತಿನೋಕುಳಿ
ಅರಿವೇ ಇಲ್ಲದ ಕ್ಷಣದ ಕೋಶಾವಸ್ಥೆ

ನಿಮ್ಮ ಕಣ್ಣುಗಳೊಳಗೆ ಏನು ನಡೆದಿಲ್ಲ
ಯಾಕೆ ನಡೆದಿಲ್ಲ
ಸದ್ಯ ನಿಮ್ಮ ನೋಟದ ನೇರ ಇನ್ನೂ ಒಡೆದಿಲ್ಲ
ಶಿಸ್ತಾಗಿ ಶಾಲೆಗೆ ಹೋಗುತ್ತೀರಿ ಅರ್ಧಮರ್ಧ
ಕಲಿಯುತ್ತೀರಿ ನಿಮ್ಮ ಅಪ್ಪ ಅಮ್ಮ
ನೆರೆಹೊರೆಯಲ್ಲ ನಿಮ್ಮ ಕೊಂಡಾಡಿ ಕಚ್ಚಾಡಿ
ನೀವು ನಿದ್ದೆ ಹೋದ ಮೇಲೆ ಮೆತ್ತಗೆ ಎದ್ದು
ಒಟ್ಟಿಗೇ ಮಲಗುತ್ತ-ಬ್ಯಾಂಕಲ್ಲಿ ನಿಮ್ಮ ಎಕೌಂಟಿಗೆ ಜಮಾ
ಮಾಡಿ ಮಾಡಿ ಮಾಡಿ ಸುಸ್ತಾಗುತ್ತಿರುವಾಗಲೇ
ಈ ಹವೆಗೇ-ಎಂತೆಂಥ ಕಾಲದಿಂದಲೂ ಈ ನೆಲಕ್ಕಂಟೇ ಇರುವ
ಈ ಹವೆಗೇ ನಿಮ್ಮ ಪುಫ್ಪುಸಗಳು ಅರಳಿಕೊಳ್ಳುತ್ತವೆ
ನೀವು ಬೆಳೆದು ಬಿಟ್ಟಿರುತ್ತೀರಿ ಮಕ್ಕಳೇ ನಿಮಗದು ಗೊತ್ತಾಗುವದಿಲ್ಲ
ಇಂದಿನ ಇರುವೆಗಳೇ ಅಂದಿನ ಚೇಳಾಗಿರುತ್ತವೆ
ಇಂದಿನ ಎರೆಹುಳಗಳೇ ಅಂದಿನ ಹಾವಾಗಿರುತ್ತವೆ

ಆಟ ಆಡಿ ಮಕ್ಕಳೇ
ಗುಬ್ಬಿಗೂಡು ಅದೂ ಇದೂ ಆಟ ಆಡಿ ಮಕ್ಕಳೇ
ಒಬ್ಬ ಮರಿ ಬ್ಯಾಟ್ಸ್‌ಮನ್ ಒಬ್ಬ ನರಿ ಸ್ಟೇಟ್ಸ್‌ಮನ್
ಒಬ್ಬ ನಟಿ ಒಬ್ಬ ನಟ ದಾರ ಕಳೆದ ಗಾಳಿಪಟ
ಈಗಲೇ ಎಲ್ಲವನ್ನೂ ತಮಾಷೆ ಎಂದುಕೊಂಡು
ಆಡಿಕೊಳ್ಳಿ ಮಕ್ಕಳೇ

ಇಂದಿನ ಈ ತೆಂಗು ಕಂಗು ಹೊಟ್ಟೆ ಟೊಪ್ಪಿಗೆ
ಇವೆಲ್ಲ ಒಮ್ಮೆ ನಿಮ್ಮ ಹಾಗೆಯೇ ಇದ್ದವು
ಈ ಗಂಟಲು ನರಗಳು ಗದ್ದುಗೆ ಪಾದಗಳು ಘಟಾನು
ಘಟಿಗಳು ಎಲ್ಲ ಒಮ್ಮೆ ನಿಮ್ಮ ಹಾಗೆಯೇ ಇದ್ದವು
ಅಂತೆಯೇ
ನಿಮ್ಮನ್ನು ನೋಡುತ್ತಿರುವಂತೆ ನನಗೆ ಹೆದರಿಕೆ ಆಗುತ್ತದೆ
ಜತೆಗೇ
ಈ ನಿರ್ಲಿಪ್ತ ಅತೀತ ಅತೀಂದ್ರಿಯ ಖುಷಿಗೆ
ಅಸೂಯೆ ಆಗುತ್ತದೆ.

ಈ ಪುಟ್ಟ ಪುಟ್ಟ ತೊಂಡೆ ಬೆರಳು ಸೌತೆ ಕೈಕಾಲು
ಬೆಳೆದು ಬಿರುಸಾಗಿ ಈ ಜೀವರಸ
ಚಿಮ್ಮುವ ಗಲ್ಲಗಳು ಒಣಗಿ ಗೆರೆಸುಕ್ಕು ಮೂಡಿ
ಧೀರ ಗಂಭೀರ ಮೀಸೆ ಗಡ್ಡಾದಿಗಳ
ಎಂತೆಂಥದೋ ಕಳೆಗಳ ಒಡೆಯರಾಗಿ
ಅಪ್ಪಂದಿರಾಗಿ ಥೇಟು ಅಪ್ಪಂತರಾಗಿ
ವಸ್ತುಗೆ ಮೀರಿದ ಭಾವ ಹೊತ್ತು ವೆಂರೆಯಲಿರುವ
ನಿಮ್ಮ ಘೋರ ಕವಿಸಮಯಗಳನ್ನು ಊಹಿಸಲಾರೆ

ಬನ್ನಿ ಮಕ್ಕಳೇ
ನೀವು ಹೀಗೆಯೇ ಇದ್ದು ಬಿಟ್ಟಿದ್ದರೆ… …. …..
ಎಂದುಜೊಳ್ಳುತ್ತ ಒಟ್ಟಾರೆ
ಖುಷಿಯಿಂದ ಮುತ್ತಿಡುತ್ತೇನೆ
ಈ ಇಂದಿನ ಹಗಲು ಇರಳಾಗುವದರೊಳಗೇ
.

Close

ತುಣುಕುಗಳು

ತುಣುಕುಗಳು
(ಸಣ್ಣ ಕಥೆ)

ವೇಣುಗೋಪಾಲ ಸೊರಬ

ಮಧ್ಯಾಹ್ನ ಎರಡರಿಂದ ಮೂರರವರೆಗಿನ ಕ್ಲಾಸ್ ಮುಗಿಸಿ ಹೊರಬಿದ್ದಾಗ, ನಿರೀಕ್ಷಿಸಿದ್ದಂತೆ ಮಿಸ್‌ ಗೀತಾ ಎದುರಾಗಲಿಲ್ಲ. ಗೀತಾ ಎಷ್ಟು ಪಂಕ್ಚ್ಯುಅಲ್ ಎಂದರೆ ನಾನು ಹೊರಗೆ ಹೆಜ್ಜೆ ಇಡುತ್ತಿರುವ ಸಮಯಕ್ಕೆ ಬಾಗಿಲಲ್ಲೇ ನಿಂತಿರಬೇಕು. ಆದರೆ ಇವೊತ್ತು ಅವಳು ಕಾಣಲಿಲ್ಲ. ಅಂದರೆ, ಅವಳು ರಜೆ ಮೇಲೆ ಇರಬಹುದೇನೋ ಎನ್ನುವಂತಿಲ್ಲ. ಯಾಕೆಂದರೆ, ನಾನು ಕ್ಲಾಸಿಗೆ ಹೋಗುವ ಮುಂಚೆ ಲೈಬ್ರರಿಯ ಮಟ್ಟಿಲಲ್ಲಿ ಅವಳು ಯಾವುದೋ ವಿದ್ಯಾರ್ಥಿಗೆ ಯಾವುದೋ ಪುಸ್ತಕದ ಯಾವುದೋ ಪುಟ ತೆರೆದು ತೋರಿಸುತ್ತಿದ್ದಳು. ಅವಳು ಓದಿ ಹೇಳುತ್ತಿದ್ದುದು ಆ ವಿದ್ಯಾರ್ಥಿಗೆ ಕೇಳಿಸುತ್ತಿತ್ತೋ ಇಲ್ಲವೊ. ಆದರೆ ಅವಳ ಮುಖಭಾವವನ್ನು ಗ್ರಹಿಸಿದವಳಂತೆ ಬಹಳ ತನ್ಮಯತೆಯಿಂದ ಅವನು ನಿಂತಿದ್ದ. ಇದು ಯಾವ ಹುಡುಗನೂ ಇಷ್ಟಪಡುತ್ತಿದ್ದಂತಹ ವಿಷಯ. ಕೈಗೆಟುಕದಿದ್ದವರು ಕರುಬುತ್ತಿರಲೂಬಹುದು. ತರಗತಿಗಳಲ್ಲೂ ಅಷ್ಟೇ. ಅವಳಂ ಪುಸ್ತಕದಿಂದ ವರ್ಕ್ಡ್‌ ಔಟ್ ಪ್ರಾಬ್ಲಮ್ಸ್‌ನ್ನೇ ಮಾಡಿಸಿದರೂ, ಕೆಲವು ಆಯ್ದ ವಿದ್ಯಾರ್ಥಿಗಳನ್ನು ತನ್ನ ಬಳಿಗೆ ಕರೆದು, ಅವರ ನೋಟ್‌ಬುಕ್ಕನ್ನು ಬಹಳ ಆಸಕ್ತಿಯಿಂದ ಪರೀಕ್ಷಿಸುತ್ತಿದ್ದಳು. ಅನೇಕ ಬಾರಿ ಅವಳಿಗೆ ತನ್ನ ಚಿತ್ರಗಳೇ ಕಂಡುಬರುತ್ತಿದ್ದು, ಅದನ್ನು ನಿರಾಳವಾದ ಮನಸ್ಸಿನಿಂದ ಸ್ವಾಗತಿಸುತ್ತಿದ್ದಳು. ಅಂತೂ ಅವಳ ತಂಗಸಿಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ನೂರಕ್ಕೆ ನೂರರಷ್ಟುಎನ್ನುವುದೊಂದು ಸಾಮಾನ್ಯ ಸಂಗತಿ.
ಕಾಮನ್ ರೂಮಿನಲ್ಲಿ ಇಣುಕಿನೋಡಿದಾಗ ಮಿಸ್. ಕಾಮಾಕ್ಷಿಯೊಬ್ಬಳೇ ಕುಳಿತುಕೊಂಡಿರುವುದು ಕಾಣಿಸಿತು. “ಹಲೊ’ ಎಂದು ವಿಶ್ ಮಾಡಿದ ಕಾಮಾ ‘ಬನ್ನಿ’ ಎನ್ನುವಂತೆ ಕಣ್ಸನ್ನೆ ಮಾಡಿದಳು. ‘ಬರ‍್ತಿನೀ ಮ್ಯಾಡಂ, ಒಂದು ಎಂಗೇಜ್‌ಮೆಂಟ್ ಬೇರೆಯಿದೆ. ಇನ್ನು ಬಸ್ಸು ಬೇರೆ ಹಿಡಿದು ಹೋಗಬೇಕಲ್ಲ’ ಎಂದೆ. ಕಾಮಾ ತನ್ನ ಕತ್ತನ್ನು ಸಾಧ್ಯವಾದಷ್ಟೂ ಚಾಚಿ, ಏನೋ ಗಾಳಿಯಲ್ಲೇ ಬರೆದ ಹಾಗೇ ತುಟಿ ಆಡಿಸಿದಳು. ಅವಳೇನೋ ಇರುವ ಜಾಣತನವನ್ನೆಲ್ಲ ಉಪಯೋಗಿಸಿದಳು. ಆದರೆ ನನಗೆ ಅದು ಕೇಳಬೇಕಲ್ಲ ? ಹತ್ತಿರ ಹೋದೆ. ಅವಳು ಎದ್ದು ನಿಂತು ಹೆಗಲಿನ ಹತ್ತಿರ ಮುಖ ಇಟ್ಟು ನಾಲ್ಕು ಮಾತು ಗೊಣಗಿ, ‘ಗೊತ್ತಿಲ್ಲವೆ ?’ ಎಂದು ದೊಡ್ಡ ದನಿಯಲ್ಲಿ ಅಂದಳು. ಅವಳ ಭಾರವಾದ ರೇಷ್ಮೆ ಸೀರೆ ಹೆಗಲಿನಿಂದ ಜಾರುತ್ತಿತ್ತು. ನನಗೆ ಇವಳು ಯಾಕೆ ಇಷ್ಟು ಗುಟ್ಟು ಮಾಡಬೇಕೆಂದು ತೋಚಲಿಲ್ಲ. “ಸರಿ, ಅಷ್ಟೇ ತಾನೆ ?” ಎಂದು ಹೊರಟುಬಿಟ್ಟೆ. ಅವಳಿಗೆ ನನ್ನ ಕೈ ಹಿಡಿದು ಎಳೆದುಬಿಡಬೇಕೆನ್ನುವಷ್ಟು ಕಾತರ ಇದ್ದಂತೆ ತೋರಿತು. ಆದರೆ ಇಂತಹ ಬಣ್ಣದ ಜೀರುಂಡೆಗಳು ಹುಡುಗರ ಕೈಯಲ್ಲಿ ದಾರ ಕಟ್ಟಿಸಿಕೊಂಡು ಬೆಂಕಿಪೊಟ್ಟಣದ ಸೆರೆ ಅನುಭವಿಸಲಿಕ್ಕೇ ಸರಿ ಎನಿಸಿತು.
“ಏನ್ ಸಾರ್ ಗೀತಮ್ಮನವರು ಆಸ್ಪತ್ರೆ ಸೇರಿದಾರಂತಲ್ಲ” ಎಂದು ಲೈಬ್ರರಿ ಅಟೆಂಡರ್ ಶಾಂತಪ್ಪ ಒಂದು ತರಹ ನಗುತ್ತಾ ಕೇಳಿದ. ಶಾಂತಪ್ಪ ಈಗಾಗಲೇ ಇಪ್ಪತ್ತು ವರ್ಷ ಸರ್ವಿಸ್ ಮಾಡಿದಾನೆ, ಇದೇ ಕಾಲೇಜಿನಲ್ಲಿ. “ಏನು ಶಾಂತಪ್ಪ ಇಷ್ಟು ಬೇಗ ಮನೆಗೆ ಹೊರಟು ಬಿಟ್ಟೆಯ ?” ಎಂದು ಮಾತು ಬದಲಿಸುವವನ ಹಾಗೆ ಮರದ ನೆರಳಲ್ಲಿ ನಿಂತು ಕೇಳಿದೆ. ಮೋಟು ಕಾಂಪೌಂಡು ಹತ್ತಿ ಎರಡೂ ಕಾಲುಗಳನ್ನು ಮೇಲಿಟ್ಟುಕೊಂಡು ಜೇಬಿನಿಂದ ಕೊರೆ ಬೀಡಿ ತೆಗೆಯುತ್ತ, “ಹ್ಞೂ” ಎಂದು ನನ್ನ ಮಾತಿನ ಬಗ್ಗೆ ಅಸಡ್ಡೆ ತೋರಿಸಿದ ಶಾಂತಪ್ಪ, “ಅಲ್ಲ ಈಯಮ್ಮ ಲಂಗ-ಕುಬುಸ ಹಾಕ್ಕೊಂಡು ಬರ‍್ತಾಇತ್ತು ಕಾಲೇಜಿಗೆ ಸೇರಿದಾಗ. ತಾನಾಯಿತು, ತನ್ನ ಓದಾಯಿತು. ಈಗ ನೋಡಿ, ಕೆಲಸಕ್ಕೆ ಸೇರಿ ಮೂರು ವರ್ಷ ಆಯ್ತೊ ಇಲ್ಲೊ. ಆ ಮೈಸೂರಿನಿಂದ ಬರುವಾಗಲೇ ಎಷ್ಟು ಬದಲಾಗಿ ಬಿಟ್ಟಿದ್ದಳು ಹುಡುಗಿ” ಎಂದು ಬಡಬಡಿಸತೊಡಗಿದ ಶಾಂತಪ್ಪ. ಶೂನ್ಯದಲ್ಲಿ ತನ್ನ ದೃಷ್ಟಿ ನೆಟ್ಟು. “ಇದೇನ್ ಶಾಂತಪ್ಪ, ಏನೋ ಜೋರಾಗಿ ಮಾತಾಡ್ಕೋತಿದೀಯ” ಎಂದೆ. “ನಿಮಗೆ ಗೊತ್ತಿಲ್ಲ ಬಿಡಿ ಸಾರ್,” ಎಂದ. ನನಗೆ, ಅವನ ಕಪಾಳಕ್ಕೆ ನಾಲ್ಕು ಬಿಗಿದು, ‘ಸುಮ್ಮನಿರು’ ಎಂದು ಹೇಳೊಣ ಎನ್ನಿಸಿತು. ಕಾಲೇಜಿಗೆ ಸೇರಿದಾಗ, ಪಿಯುಸಿ ವಿದ್ಯಾರ್ಥಿನಿ. ಏನೂ ತಿಳಿದಿರಲಿಲ್ಲ. ಪ್ರಪಂಚ ಗೊತ್ತಿಲ್ಲ. ಮೈಸೂರಿಗೆ ಹೋಗಿ ಎಂ. ಎಸ್ಸಿ. ಮಾಡಿಕೊಂಡು ಬರುವ ಹೊತ್ತಿಗೆ ಪ್ರಪಂಚ ಅಂದರೆ ಏನು ಅಂತ ಗೊತ್ತಿರಬೇಡವೆ ? ಪ್ರಪಂಚ (ಅಂದರೆ ಶಾಂತಪ್ಪ ಮತ್ತು ಅವನ ಕಾಲೇಜಿನಷ್ಟು ಚಿಕ್ಕದಾಗಿರಬೇಕೇ ? ಅಥವಾ ಗೀತಾ ಆಸ್ಪತ್ರೆ ಸೇರಿದಾಳೆ ಅಂದ ಮಾತ್ರಕ್ಕೆ ಪ್ರಪಂಚವೇ ತಲೆ ಕೆಳಗೆ ಆಗಬೇಕೆ ? ಆ ಕಾಮಾ-ಅವಳೊ, ಏನೊ ಅನ್ಯಾಯ ಆಗಿದೆ ಅನ್ನೋ ಹಾಗೆ ಕಿವೀನಲ್ಲಿ ಪಿಸುಗುಡುತ್ತಾಳೆ. ಇವನೋ ಪಬ್ಲಿಕ್ ರಸ್ತೇಲಿ ಕುಳಿತುಕೊಂಡು, ಜಗಳ ಬಗೆಹರಿಸೋ ತರಹ ಬಡಬಡಿಸ್ತಾನೆ. ಅವನ ಜತೇಲಿ ಮಾತೇ ಬೇಡವೆನಿಸಿತು. ಎರಡು ಹೆಜ್ಜೆ ಆ ಕಡೆ ಸರಿದು, ಮುಖ ಮೇಲೆ ಮಾಡಿ ನಿಂತುಕೊಂಡೆ. ಆಕಾಶದಲ್ಲಿ ಒಂದು ತುಂಡು ಮೋಡ ಕೂಡ ಇಲ್ಲ. ಮಲೆನಾಡಾದರೂ ಬಿಸಿಲು ರಣಗುಡುತ್ತಿತ್ತು. ರಸ್ತೆ ಪಕ್ಕದಲ್ಲಿ ಇರೋದು ಒಂದೇ ಒಂದು ಮರ, ಬಿಸಿಲು ತಡೆಯಲಾರದೆ ಮತ್ತೆ ಅಲ್ಲಿಗೇ ಬಂದು ನಿಂತೆ. ಬೀದಿಯ ತಂಬ ಲಾರಿಗಳ ಆರ್ಭಟ, ಟಾರ್ ಮಾಡಿದ ರಸ್ತೆಯಾದರೂ ರಸ್ತೆಯ ಪಕ್ಕದ ಧೂಳು ಪ್ರತಿ ಸಾರಿ ಮೇಲೆ ಎದ್ದು, ಮೈ ತುಂಬ ಮುತ್ತಿಕೊಳ್ಳುತ್ತಿತ್ತು.
“ಅಲ್ಲ ಸಾರ್‌, ಆ ಹುಡುಗಿಗೆ ಅಷ್ಟು ಬುದ್ಧಿ ಬರಬೇಡವೆ ಸಾರ್. ಮನೇಲಿ ತಂದೆ ದೊಡ್ಡ ಲಾಯರು, ತಾಯಿ ಗ್ರಾಜುಯೇಟ್……..”
ಆಗಲೇ ಮೂರು ಇಪ್ಪತ್ತು. ಬಸ್ ಬರುವುದಕ್ಕೆ ಇನ್ನು ಹತ್ತು ನಿಮಿಷವಾದರೂ ಬೇಕು. ಅಲ್ಲಿಯವರೆಗೂ ಈ ಗೂಬೆ ಶಾಂತಪ್ಪನ ಮಾತು ಕೇಳಿಕೊಂಡು ನಿಂತುಕೊಳ್ಳುವುದೆಂದರೆ ಅದೊಂದು ಶಿಕ್ಷೆಯೇ ಸರಿ. ಯಾವಾಗ ನಮ್ಮ ಯಾವುದೋ ಒಂದು ಕಟ್ಟಳೆಗೆ ಬೇರೆ ಎಲ್ಲ ವಿಷಯಗಳನ್ನು ತಾಳೆ ಹಾಕಿ ನೋಡಲು ಶುರುಮಾಡುತ್ತೇವೆಯೋ ಆಗಲೇ ಎಲ್ಲ ಅಪಾರ್ಥಗಳೂ ಅನರ್ಥಗಳೂ ಪ್ರಾರಂಭವಾಗುತ್ತವೆ. ಪ್ರತಿಯೊಂದು ಘಟನೆಯನ್ನೂ, ಆಯಾ ಸನ್ನಿವೇಶಕ್ಕೆ ಸರಿಯಾಗಿ ವಿವೇಚನೆ ಮಾಡುವುದೊಂದೇ ನಮ್ಮ ಗುರಿಯಾಗಿರಬೇಕಲ್ಲವೆ? ಆದರೆ ಅದಕ್ಕೆ ಎಷ್ಟು ಜನ ಒಪ್ಪುತ್ತಾರೆ ? ಇದೇ ಶಾಂತಪ್ಪನೇ ಹರಿದ ಲೈಬ್ರರಿ ಪುಸ್ತಕಗಳನ್ನು ಎಷ್ಟು ಸಾರಿ ಲೊಚಗುಟ್ಟಿಕೊಂಡು, ಒಳಗೆ ಇಟ್ಟು ಕೊಳ್ಳುವುದಿಲ್ಲ ? ಕಳೆದ ಪುಸ್ತಕಗಳನ್ನು ಹಳೆಯ ಲೆಕ್ಕಕ್ಕೆ ಹಾಕಿ, ವಿದ್ಯಾರ್ಥಿಗಳ ಹತ್ತಿರ ಕಾಫಿ-ತಿಂಡಿ ಗಿಟ್ಟಿಸುವುದಿಲ್ಲ ?
“ಪ್ಯಾಕ್ಟ್ರಿ ತಾವು ಬಸ್ ಐತೇನಣ್ಣ ?” ಶುಗರ್ ಫ್ಯಾಕ್ಟರಿ ಕಡೆಯಿಂದ ಬರುತ್ತಿದ್ದ ಯಾವನನ್ನೋ ಶಾಂತಪ್ಪ ಜಬರಿಸುವವನಂತೆ ಕೇಳಿದ. ಇನ್ನೊಬ್ಬರ ಮೇಲೆ ಅಧಿಕಾರ ನಡೆಸಬೇಕು ಅಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ? ಬೀದಿಯಲ್ಲಿ ಬರುತ್ತಿದ್ದ ವ್ಯಕ್ತಿ ಯಾರನ್ನು ಕೇಳಿದನೋ ಅಂತ ಒಂದು ಸಾರಿ ತಿರುಗಿ ನೋಡಿ, ತನ್ನನ್ನೇ ಎಂದು ಖಾತ್ರಿ ಮಾಡಿಕೊಂಡು “ನೀಲಿ ಬಸ್‌ ನಿಂತೈತ್ರಿಯಪ್ಪಾ” ಎಂದು ವಿಧೇಯತೆಯಿಂದ ಹೇಳಿದ. ಶಾಂತಪ್ಪ ಕೇಳಿದ್ದು ಸಿಟಿ ಬಸ್ಸಿನ ವಿಷಯ ಎಂದು ಮನಸ್ಸಿಗೆ ಖಚಿತ ಮಾಡಿಕೊಂಡು ; ನೀಲಿ ಬಸ್ಸು ಎಂದು ತಿಳಿದುಕೊಂಡು ಹೇಳಿದ್ದು ನೋಡಿ, ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ಯಾಕೆ ಇಷ್ಟೊಂದು ಬುದ್ಧಿ ಇರಬಾರದು ? ಎನಿಸಿತು. ಬಸ್ಸಿನ ಸಮಾಚಾರ ಅಷ್ಟು ತಿಳಿಸಿ, ಮುಂದೆ ಹೊರಟಿದ್ದ ವ್ಯಕ್ತಿ, ಏನೋ ಜ್ಞಾಪಿಸಿಕೊಂಡವನಂತೆ, ಕಿವಿಯ ಸಂದಿಯಿಂದ ಒಂದು ಮೋಟು ಬೀಡಿ ತೆಗೆದು, ಶಾಂತಪ್ಪನ ಬಳಿ ಬೆಂಕಿ ಯಾಚಿಸಿದ. ಶಾಂತಪ್ಪ ಅವನಿಗಾಗಿಯೇ ಒಂದು ಕಡ್ಡಿ ಖರ್ಚು ಮಾಡುವವನೆ ? ತನ್ನ ಜೇಬಿನಿಂದ ಒಂದು ಪನಾಮ ತೆಗೆದು ಅದನ್ನು ಸರಿಯಾಗಿ ಅರ್ಧಕ್ಕೆ ಮುರಿದು, ತುದಿಯನ್ನು ಒಂದು ಸಾರಿ ಕಚ್ಚಿ, ಕಡ್ಡಿ ಕೆರೆದು ತನ್ನ ಸಿಗರೇಟು ಹಚ್ಚಿಕೊಂಡು, ಆಮೇಲೆ ಅವನ ಬೀಡಿಗೆ ಹಚ್ಚಿದ. ಒಂದು ದಮ್ಮು ಎಳೆದು ಹೊಗೆ ಬಿಡುತ್ತಲೇ, “ಇವರ ಮನೆ ಹಾಳಾಗ, ಈ ಡ್ರೈವರು ಕಂಡಕ್ಟರ್‌ಗಳಿಗೆ ಟೇಮ್‌ ಅನ್ನೋದೇ ಇಲ್ಲ” ಎಂದು ಗೊಣಗಿದ. ಬೀಡಿ ಯೆಳೆಯುತ್ತಿದ್ದ ದಾರಿಹೋಕ, “ಅಲ್ಲೇನೋ ಗಲಾಟೆ ನಡೆದಿತ್ರೀಯಪ್ಪಾ” ಎಂದು ಉತ್ತರಿಸಿದ. ಹಾಗಿದ್ದರೆ ಈ ಬಸ್ಸು ಇನ್ನೆಷ್ಟು ಹೊತ್ತಿಗೆ ಬರುತ್ತದೆಯೋ ಎಂದುಕೊಳ್ಳುತ್ತಿರುವಂತೆ, ಬಸ್ಸು ಬಂದೇಬಿಟ್ಟಿತು. ಆದರೆ ಎಲ್ಲ ಸಿಟಿ ಬಸ್ಸುಗಳಂತೆ ಅದು ಸ್ಟಾಂಡಿನಿಂದ ಅರ್ಧ ಫರ್ಲಾಂಗು ದೂರದಲ್ಲಿಯೇ ನಿಂತುಕೊಂಡಿತು. ಬೇರೆ ಊರುಗಳಲ್ಲಿ ಅದು ಯಾರ ತಪ್ಪೊ ಹೇಳಲಿಕ್ಕೆ ಬರಲ್ಲ. ಇಲ್ಲಿ ಮಾತ್ರ, ಅದು ಡ್ರೈವರನ ಖಯಾಲಿ ಎಂದೇ ಹೇಳಬೇಕು. ಅಂತೂ ಅಲ್ಲಿಗೆ ಓಡಿಕೊಂಡು ಹೋಗಿ, ಬಸ್ಸು ಹತ್ತಿದ್ದು ಒಂದು ಸಾಹಸವೇ ಆಯಿತು.
ಬಸ್ಸನ್ನ ಹತ್ತಬೇಕು ಅನ್ನೋದರಲ್ಲಿ ಕಂಡಕ್ಟರ್ “ಹತ್ತಬೇಡಿ ಸಾರ್” ಎಂದು ಕೈ ಅಡ್ಡ ತರುತ್ತಿದ್ದವನು, ಶಾಂತಪ್ಪನ ಮುಖ ನೋಡಿ, ಏನೂ ಹೇಳಲಾರದೆ ಸುಮ್ಮನಾದ. ಮೊದಲ ನೋಟಕ್ಕೇ ಎಲ್ಲ ತಿಳಿದುಕೊಂಡವನಂತೆ, ಶಾಂತಪ್ಪ “ಏನ್ ಟೇಸನ್‌ಗ ?” ಎಂದ. “ಇಲ್ಲ ಕಣಣ್ಣ ಆಸ್ಪತ್ರೆಗೆ”, ಎಂದು “ಬಾ ಮಧ್ಯ ಎಲ್ಲೂ ನಿಲಿಸೂದಿಲ್ಲ” ಎನ್ನುತ್ತಾ ಮತ್ತೆ ಬಾಗಿಲು ತೆರೆದ. ಶಾಂತಪ್ಪ “ನಾವೂ ಆಸ್ಪತ್ರೇಗೆ ಕಣಪ್ಪ” ಎಂದು ಹೇಳಿ, ನನ್ನ ಕಡೆ ತಿರುಗಿ, “ನಡ್ರಿ ಸಾರ್” ಎಂದು ಒಳಕ್ಕೆ ನೂಕಿದ.
ಬಸ್ಸಿನೊಳಗಿನ ಪ್ರಪಂಚ ಹೊರಗಿನ ಪ್ರಪಂಚಕ್ಕಿಂತ ಬೇರೆಯೇ ಆಗಿತ್ತು. ಶಾಂತಪ್ಪ ಅಲ್ಲಿದ್ದ ಒಬ್ಬ ಪೋಲೀಸನ್ನು ‘ಏನು’ ಎನ್ನುವಂತೆ ನೋಡಿದ. ಅವನು “ಇದ್ದೇ ಐತಲ್ಲ ಮಾಮೂಲಿ. ಆದರೆ ಹುಡುಗಿ ಮೈನರ‍್ರು” ಎಂದ. ಅವನ ಮಾತಿನಲ್ಲಿ ಮನುಷ್ಯರಿಗೂ ಪ್ರಾಣಿಗಳಿಗೂ ವ್ಯತ್ಯಾಸವೇ ಇರಲಿಲ್ಲ. ಶಾಂತಪ್ಪ ತನ್ನ ರಸಿಕತೆಯನ್ನೆಲ್ಲ ಮಾತಿನಲ್ಲಿ ಎರಕ ಹೊಯ್ಯುವವನಂತೆ “ಹಂಗಾರೆ ಪರೆ ಹರಿದಿಲ್ಲ ಅನ್ನು” ಎಂದು ಲೊಚಗುಟ್ಟಿದ. ಲೈಬ್ರರಿಯ ಕೌಂಟರಿನಲ್ಲಿ ಕುಳಿತು ಪುಸ್ತಕ ಹಿಂತಿರುಗಿಸಲು ಬರುವ ಹುಡುಗಿಯರ ಮೈಮೇಲೇ ಬೀಳುವ ಅವನ ನಾಯಿಬುದ್ಧಿ ಕಾಲೇಜಿನಲ್ಲೆಲ್ಲ ಸಾಕಷ್ಟು ಪ್ರಚುರವಾಗಿತ್ತು.
ಶಾಂತಪ್ಪನ ಅಸ್ತಿತ್ವವನ್ನು ಮರೆಯಲು ಪ್ರಯತ್ನ ಮಾಡಬೇಕು. ಆದರೆ, ಅದು ಹೇಗೆ ಸಾಧ್ಯ ? ಬಸ್ಸಿನಲ್ಲಿನ ವಾತಾವರಣ ಅಸಹ್ಯ ಹುಟ್ಟಿಸುವಂತಿತ್ತು. ಕಾಮಾ ಹೆಗಲಿಗೆ ತಲೆಯಿಟ್ಟು ಏನೇನೋ ಪಿಸುಗುಟ್ಟಿದುದು ಒಂದು ತರಹ ಅಸಹ್ಯ ಹುಟ್ಟಿಸಿದರೆ, ಇಲ್ಲಿನ ವಾತಾವರಣ ಇನ್ನೊಂದು ರೀತಿ ಅಸಹ್ಯ ಉಂಟು ಮಾಡುತ್ತಿತ್ತು. ಬಸ್ಸಿನಲ್ಲಿ ಇದ್ದ ಜನಗಳೇನೋ ಕಡಿಮೆ. ಅದರಲ್ಲಿ ಸುಮಾರು ಇಪ್ಪತ್ತೈದರ ಒಬ್ಬ ತರುಣ. ಅವನ ಮೈಯಲ್ಲಿ ಅಲ್ಲಲ್ಲಿ ಗಾಯಗಳಾಗಿದ್ದು ಬಹಳ ಏಟು ಬಿದ್ದದ್ದು ಕಾಣಿಸುತ್ತಿತ್ತು. ಅವನ ಬಟ್ಟೆಗಳೆಲ್ಲ ರಕ್ತದ ಕಲೆಗಳಿಂದ ಕೂಡಿತ್ತು. ಅವನ ಪಕ್ಕದಲ್ಲಿ ಕುಳಿತಿದ್ದ ಅವನಿಗಿಂತ ನಾಲ್ಕಾರು ವರ್ಷ ದೊಡ್ಡವನಾದ ಇನ್ನೊಬ್ಬ ಸ್ವಲ್ಪ ಗಾಬರಿಗೊಂಡವನಂತೆ ಕಾಣುತಿದ್ದು, ಅವನಿಗೆ ಪ್ರಪಂಚವೇ ಒಂದು ಅದ್ಭುತವಾದ ಆಶ್ಚರ್ಯದಂತೆ ಕಾಣುತ್ತಿತ್ತು. ಅವರಿಬ್ಬರಿಂದ ಪ್ರತ್ಯೇಕವಾಗಿ ಬೇರೆ ಏಳೆಂಟು ಜನಗಳು ಒಂದು ಗುಂಪಿನಂತೆ ಒಟ್ಟಿ ಗಿದ್ದರು. ಅವರಲ್ಲಿ ಎಲ್ಲರಿಗಿಂತ ಚಿಕ್ಕವಳಾದ ವ್ಯಕ್ತಿ ಮುಖ ಮುಚ್ಚಿಕೊಂಡು ಕುಳಿತಿದ್ದಳು. ನೋಡಿದರೆ ಅವಳಿಗೂ ಗಾಯಗಳಾದಂತೆ ಇತ್ತು. ಬಹುಶಃ ಅವಳ ತಾಯಿ ತಂದೆ ಇರಬೇಕು. ಅವರಿಬ್ಬರೂ ಅವರ ಹತ್ತಿರದಲ್ಲೇ ಕುಳಿತಿದ್ದು ಯಾವುದೋ ಆಸಾಧ್ಯವಾದ ಶಿಕ್ಷೆಯನ್ನು ಅನುಭವಿಸುತ್ತಿರುವಂತಿತ್ತು. ತಾಯಿಯ ಕಣ್ಣಿನಿಂದ ನೀರು ಸಹ ಉರುಳುತ್ತಿತ್ತು. ಅವಳಿಗೆ ಪ್ರಪಂಚದ ಮೇಲೆ ಬದುಕುವುದೇ ಅಸಾಧ್ಯವೆನ್ನುವಂತೆ ಕಂಡು ಬರುತ್ತಿತ್ತು. ಬಿಗಿದ ಮುಖಗಳ, ತಮ್ಮಿಂದ ಎಲ್ಲಿ ಏನು ಕಳವಾಗಿ ಹೋಗಿ ಬಿಡುತ್ತದೋ, ತಾವು ಸ್ವಲ್ಪ ಮೈ ಸಡಿಲಗೊಳಿಸಿದರೆ, ಎನ್ನುವಂತಹ ಮೌಢ್ಯ ಬಂಧಿತ ವ್ಯಕ್ತಿಗಳು ತಮ್ಮ ಅಸ್ತಿತ್ವವನ್ನು ಸ್ಥಾಪಿಸಲೂ ಆಗದೆ ಬಿಡಲೂ ಸಾಧ್ಯವಾಗದೆ ಸಂಕಟಗೊಳ್ಳುತ್ತಿದ್ದುದರ ಛಾಯೆ ಅಲ್ಲಿ ಚೆನ್ನಾಗಿ ವ್ಯಕ್ತವಾಗುತ್ತಿತ್ತು.
ಅಸ್ತಿತ್ವದ ಪ್ರಶ್ನೆಯೇ ಎಷ್ಟೊಂದು ಸೂಕ್ಷ್ಮ-ಸಂಕೀರ್ಣ, ಅಲ್ಲ ! ಇದೆ ಎಂದು ಭಾವಿಸಿದಾಗ, ಅದರ ಅರಿವಿನ ವ್ಯಾಪ್ತಿ ಎಷ್ಟು ? ಅರಿವಿನ ವ್ಯಾಪ್ತಿಗೆ ಒಳಪಡದೆ ಇರುವುದು ಅಸ್ತಿತ್ವ ಹೊಂದುವುದಾದರೂ ಹೇಗೆ ? ನಮ್ಮ ನಮ್ಮ ಅರಿವು ವಿಸ್ತಾರವಾದಂತೆ ಅಸ್ತಿತ್ವ ಅಲ್ಲೆಲ್ಲ ನೆಲೆಗೊಳ್ಳುವುದರ ಬದಲು, ಸಂಕುಚಿತವಾಗುತ್ತಾ ಹೋಗುತ್ತದೆ. ಯಾವುದು ನಮ್ಮ ಅಸ್ತಿತ್ವಕ್ಕೆ ಪೂರಕವಾಗುವುದಿಲ್ಲವೊ ಅದು ಹೊರೆಯಾಗುತ್ತದೆ, ಶಿಕ್ಷೆಯಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸಾಹಸವಾಗುತ್ತದೆ ಬಿಡುಗಡೆಗೆ ಜೀವ ಹಾತೊರೆಯುತ್ತದೆ. ಆದರೆ ಬಿಡುಗಡೆ ಜೀವನಕ್ಕೆ ಅವಶ್ಯಕವಾದದ್ದಲ್ಲ. ಹಾಗಂತಲೆ ನಾವು ಯಾವುದಾದರೊಂದು ಸಂಬಂಧಕ್ಕೆ, ಸ್ನೇಹಕ್ಕೆ, ವಾದಕ್ಕೆ, ತತ್ವಕ್ಕೆ ಗಂಟುಬೀಳುತ್ತೇವೆ. ಬಿಡುಗಡೆ ಕೇವಲ ಒಂದು ಭ್ರಮೆ…. ಶಾಂತಪ್ಪ ಸದ್ಯದ ಅಸ್ತಿತ್ವದ ಒಂದು ಅವಿಭಾಜ್ಯ ಅಂಗವಾಗಿದ್ದ. ಬಸ್ಸು ಆಸ್ಪತ್ರೆ ಕಾಂಪೌಂಡಿನೊಳಗೆ ನುಗ್ಗಿ ದಂತೆ “ಹೇಗಯ್ತೊ ಆ ಯಮ್ಮ ?” ಎಂದ. ಇದುವರೆಗೂ ಮನಸ್ಸಿನ ಹಿಂದೆ
ಅಡಗಿದ್ದ ಗೀತ ಒಮ್ಮೆಲೇ ಹೊರಗೆ ಧಾವಿಸಿದಳು. ಇದುವರೆಗೂ ಗೀತ ಆಸ್ಪತ್ರೆ ಸೇರಿದ್ದಾಳೆ ಎನ್ನುವ ಮಾತಿನ ಅರ್ಥ ಬೇರೆ ಏನೋ ಆಗಿದ್ದು, ಈಗ ಸಹಜವಾದ ಬೆಲೆ ಅದಕ್ಕೆ ಬಂದಂತಾಗಿತ್ತು. ಗೀತ-ಆಸ್ಪತ್ರೆ ಒಂದಕ್ಕೊಂದು ಹೊಂದಲಾರದ ವಸ್ತುಗಳೆನಿಸಿದ್ದು, ಈಗ ಹಾಗಾಗ ಬೇಕಿಲ್ಲ ಎನಿಸುವಂತೆ ಭಾಸವಾಗಿತ್ತು.
ಶಾಂತಪ್ಪ ತನ್ನ ಎಂದಿನ ತರಾತುರಿಯಲ್ಲಿ ಬಸ್ಸಿಳಿದು “ಬನ್ರಿ ಸಾರ್” ಎಂದು ಆಸ್ಪತ್ರೆ ಕಡೆ ಮುಖ ಮಾಡಿ ಬೀಡಿ ಹಚ್ಚುತ್ತಿದ್ದ. ಬಸ್ಸಿನಿಂದಿಳಿದದ್ದೇನೊ ಸರಿ. ಆಸ್ಪತ್ರೆಯೊಳಗೆ ಹೋಗಬೇಕಾದದ್ದರ ಆವಶ್ಯಕತೆಯಿದೆಯೆ ? ನಾಲ್ಕು ಗಂಟೆಗೆ ಪ್ರಭಾಕರನ ರೂಮಿಗೆ ಬೇರೆ ಹೋಗಬೇಕಲ್ಲ. ಅದೊಂದು ತಲೆನೋವು. ಅವನಿಗೆ ಹೇಳಿದ ಒಂದು ಮಾತೂ ಅರ್ಥವಾಗಲ್ಲ. ಇನ್‌ಷೂರೆನ್ಸ್ ಬೇಡ ಅಂತ ಆರು ತಿಂಗಳಿನಿಂದ ಹೇಳುತ್ತಿದ್ದರೂ, ಮುಖ ಕಂಡ ಕೂಡಲೇ, ಅದೇ ಮೊದಲನೆ ಮಾತು. ಏನು ಮಾಡೋದು ? ಹೋಗದೆ ಇರೋ ಹಾಗಿಲ್ಲ. ಆಸ್ಪತ್ರೆಯ ವಾತಾವರಣ ಭೀಕರವಾಗಿ ಕಾಣುತ್ತದೆ. ಆ ಒರಟ ಶಾಂತಪ್ಪ ಇಷ್ಟರ ಮಧ್ಯೆಯೂ, ಬಸ್ಸಿಳಿದು ಹೋಗುತ್ತಿರುವ ಹುಡುಗಿಯನ್ನು ತಿಂದುಹಾಕುವವನಂತೆ ನೋಡುತ್ತಾ, “ಈ ಆಸ್ಪತ್ರೆ ಅಂದರೆ ಬಹಳ ಮಜ. ಸಂಭೋಗ ಆಗಿದೆಯೋ ಇಲ್ಲವೋ ಅನ್ನೋದನ್ನೂ ಡಾಕ್ಟೇ ಹೇಳಬೇಕು. ಸತ್ತು ನಾಕು ದಿನ ಆದರೂ ಹೆಣ ಕೊಯ್ತಾರೆ. ಆಕ್ಸಿಡೆಂಟ್ ಆದ್ರೆ, ಡ್ರೈವರ್‌ ಕುಡಿದಿದ್ದು ಇಲ್ಲ ಅನ್ನೋದನ್ನೂ ಸರ್ಟಿಫೈ ಮಾಡ್ತಾರೆ-” ಎಂದು ತಾತ್ಮಿಕವಾಗಿ ಹರಟುತ್ತಿದ್ದ.
“ಗೀತ ಯಾವ ವಾರ್ಡಿನಲ್ಲಿರ‍್ತಾಳೆ ಶಾಂತಪ್ಪ ?” ಎಂದೆ. ಅದುವರೆಗೂ ನನ್ನನ್ನು ಅಜ್ಞಾತ ಮೂಲೆಯೊಂದರಲ್ಲಿ ಕುಳಿತು ಕೆಣಕುತ್ತಿದ್ದಂತೆ ತೋರುತ್ತಿದ್ದು, ಈಗ ಬಿರುಗಾಳಿಯಾಗಿ ಹೊರಗೆ ಬಂದಿದ್ದಳು.
“ಇನ್ನೇನು ಎಮರ್ಜೆನ್ಸಿ ವಾರ್ಡು-ಆಕ್ಸಿಡೆಂಟು ಅಂದ್ರೆ ಗೊತ್ತೇ ಇದೆಯಲ್ಲ……..”
ನನ್ನನ್ನು ಶಾಂತಪ್ಪ ಒತ್ತಾಯ ಪೂರ್ವಕವಾಗಿ ಎಳೆದುಕೊಂಡು ಹೋಗುತ್ತಿರುವಂತೆ ಅನಿಸಿತು. ಎರಡು ಹೆಜ್ಜೆ ಮುಂದಿಡುವುದರಲ್ಲಿ, “ಏನಮ್ಮಾ, ಫ್ರೆಂಡ್ಸ್‌ನ ನೋಡೋದಕ್ಕೆ ಬಂದೆಯಾ?” ಎಂದು ಕೂಗಿದ್ದು ಕೇಳಿಸಿತು. ತಿರುಗಿ ನೋಡಿದರೆ, ಪ್ರಭಾಕರ ! ಪ್ರಭಾಕರನಿಗೆ ಆಸ್ಪತ್ರೆಯೆಂದರೆ ಸ್ವಂತ ಮನೆಯಿದ್ದ ಹಾಗೆಯೇ. ಅವನು ಇನ್ಷೂರೆನ್ಸ್ ಏಜೆಂಟ್‌ ಅಷ್ಟೇ ಅಲ್ಲ, ಊರಿನ ಪತ್ರಕರ್ತನೂ ಹೌದು.
“ಹೇಗಿದಾಳೆ ಗೀತ ?” ಆಲೋಚನೆ ರೂಪುಗೊಳ್ಳುವ ಮೊದಲೆ, ಮಾತು ಆಕೃತಿ ಪಡೆದಿತ್ತು.
“ತಲೇಗೇ ಏಟು ಬಿದ್ದಿದೆ. ಬೆಂಗಳೂರು ಮೆಂಟಲ್ ಹಾಸ್ಪಿಟಲ್‌ಗೇ ಅಡ್ಮಿಟ್ ಮಾಡಿ ಅಂತ ಅಡ್ವೈಸ್ ಮಾಡಿದಾರೆ, ಆರ್‌. ಎಂ. ಒ.”
“ಏನು ಆಕ್ಸಿಡೆಂಟೇ ?”
“ಗೊತ್ತಿಲ್ವೇನಮ್ಮ ನಿನಗೆ ? ಅದೇ ಅವನಿದಾನಲ್ಲ ದಿಲೀಪ ಠಾಕ್ರೆ, ಅವನು ಸ್ಕೂಟರ್ ಮೇಲೆ ಕರೆದುಕೊಂಡ್ ಬರ‍್ತಿದ್ದನಂತೆ ಎರಡೂವರೆಲಿ, ಕಾಲೇಜಿನಿಂದ ಬರಾ ದಾರೀಲಿ, ಹಳ್ಳಿಕ್ಕೆ ಬಿದ್ದು ಬಿಡ್ತು. ಅವನಿಗೇನೂ ಹೆಚ್ಚು ಗಾಯ ಆಗಿಲ್ಲ ಅಂತಾರೆ….. ಅಲ್ಲಯ್ಯ ಅವನಿನ್ನೂ ಬಿ. ಎಸ್‌ಸಿ. ಪಾಸೂ ಮಾಡ್ಲಿಲ್ಲ-ಬೇರೆ ಒಂದು ಕೆಲಸಾನೂ ಇಲ್ಲ. ಯೋಗ್ಯತೆನಾದರೂ ಇದೆಯೆ ? ಅವನನ್ನು ಯಾಕಯ್ಯಾ ಇವಳು ಕಟ್ಟಿಕೊಂಡು ಒದ್ದಾಡಬೇಕು ? ಕ್ಲಾಸ್‌ಮೇಟೂ ಅನ್ನೋ ವ್ಯಾಮೋಹ ಎಷ್ಟು ದಿನ ಚೆನ್ನಾಗಿರತ್ತಯ್ಯ?”
ಪ್ರಭಾಕರನಿಗೆ ಮಾತು ಕಷ್ಟವಿಲ್ಲ. ಅವನಿಗೆ ಯಾವ ವಿಷಯವಾದರೂ ಅಷ್ಟೇ. ಮಾತು ಆಡುವುದಷ್ಟೇ ತನ್ನ ಕರ್ತವ್ಯ ಅಂತ ತಿಳಿದಿದಾನೆ.
ಆಸ್ಪತ್ರೆಯೊಳಗೆ ಕಾಲಿಡಬೇಕು ಅನ್ನೋ ಭಾವನೆ ಬತ್ತಿಹೋಯಿತು. ಪ್ರಜ್ಞಾಹೀನ ಸ್ಥಿತಿಯಲ್ಲಿರೋ ಗೀತನ್ನ ನೋಡಿದರೆಷ್ಟು ? ಬಿಟ್ಟರೆಷ್ಟು ? ಗೀತ, ಅಲ್ಲಿ ಬೇರೆ ಯಾರೇ ಆ ಸ್ಥಿತಿಯಲ್ಲಿದ್ದರೂ ಪ್ರಭಾಕರನಿಗೆ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ತನ್ನ ಸೋಮಾರಿತನಕ್ಕೆ ಇನ್ನೊಬ್ಬರ ನೋವು ಸಂಕಟ ಅಪಮಾನಗಳನ್ನು ಆಹಾರ ಮಾಡಿಕೊಳ್ಳುವ ಶಾಂತಪ್ಪನಿಗೂ ಕೂಡ ಅಷ್ಟೇ. ಕಾಮಾ ಗಾಳಿಯಲ್ಲೇ ಬರೆದ ಹಾಗೆ ತುಟಿ ಮಾಡಿದ್ದು ಭಾವ ಕೂಡ ಈಗ ಅರ್ಥವಾದಂತೆ ತೋರುತ್ತಿದೆ.
ಆಸ್ಪತ್ರೆಯಲ್ಲಿನ ವಿಶಾಲವಾದ ಕಾಂಪೌಂಡಿನಲ್ಲಿ ವಿಜಾತೀಯ ಮುಗಿಲು ಮುಟ್ಟುವ ಮರಗಳು. ದಟ್ಟವಾದ ಮೋಡಗಳು ಅವುಗಳ ಮೇಲೇ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಂತಿವೆ. ಒಂದು ಪಕ್ಕದಲ್ಲಿ ಮಾತ್ರ ಎಲೆಕ್ಟ್ರಿಕ್ ತಂತಿಗೆ ಸಿಕ್ಕಿಬಿದ್ದು ಕಾಗೆ ಸತ್ತಿದೆ. ಅದರ ಸುತ್ತ ಕಾ ಕಾ ಎಂದು ಕರ್ಕಶವಾಗಿ ಕೂಗುತ್ತಾ ದೊಡ್ಡದೊಂದು ಕಾಗೆಯ ಬಳಗವೇ ಸೇರಿದೆ. ಅವುಗಳ ವಿಕಾರವಾದ ಆರ್ತಸ್ವರ. ಕರ್ಕಶವಾಗಿ, ಘೋರವಾಗಿ ಕೇಳಿಬರುತ್ತಿದೆ.
ಗೀತ, ದಿಲೀಪ, ಬಸ್ಸಿನಲ್ಲಿ ಬಂದ ಮೈನರ್‌ ಹುಡುಗಿ. ಏಟು ತಿಂದ ಯುವಕ. ಅವರ ಜತೆಗಿದ್ದ ಜನಗಳು, ಕಂಡಕ್ಟರು, ಶಾಂತಪ್ಪ, ಕಾಮಾಕ್ಷಿ, ಪ್ರಭಾಕರ ಒಂದಕ್ಕೊಂದು ಸಂಬಂಧವಿಲ್ಲ. ನನಗೆ ಇವರೊಬ್ಬರೂ ಬೇಡ. ಇವರೊಬ್ಬರ ಅವಶ್ಯಕತೆಯೂ ನನಗಿಲ್ಲ. ಆದರೆ ಇವರುಗಳ ನಡುವೆ ನನ್ನ ಜೀವಿತ ಅಷ್ಟೊಂದು ಹಂಚಿಹೋಗಿದೆ. ಜೀವನದ ಒಂದು ಕ್ಷಣವಾದರೂ ಬೆದರುಗಣ್ಣಿನ ಆ ಹುಡುಗಿ, ಆಸಕ್ತಿ ಕೆರಳಿಸುವ ಗೀತ, ಮೈಮೇಲೆ ಬೀಳುವ ಕಾಮಾ…ಇವರುಗಳಿಲ್ಲದೇ ನನ್ನ ಜೀವಿತದ ಒಂದು ಎಳೆ ನಿರರ್ಥಕವಾಗುವುದಿಲ್ಲವೆ ? ಶಾಂತಪ್ಪ ಪ್ರಭಾಕರ ಇವರುಗಳ ಮಾತಿನ ಅರ್ಥ ನನಗಾಗದೆ ಇದ್ದರೂ ಅವರುಗಳ ನೆರಳು ನನ್ನನ್ನು ಆವರಿಸಿಲ್ಲವೆ ?
ಆಸ್ಪತ್ರೆಯ ಗೇಟಿನ ಕಡೆಗೆ ದಡ ಬಡ ಹೆಜ್ಜೆ ಹಾಕುತ್ತಾ ನಡೆದೆ. ಗೇಟಿನಾಚೆಯ ದೊಡ್ಡ ರಸ್ತೆಯಲ್ಲಿನ ಗದ್ದಲ ಗಲಿಬಿಲಿಯ ನಡುವೆ ಅವಿತುಕೊಳ್ಳಬೇಕೆಂಬ ಕಾತರ ನನ್ನನ್ನು ದೂಡುತ್ತಿತ್ತು. ಅಷ್ಟರ ಮಧ್ಯೆ ಯಾರಾದರೂ ಗುರುತಿನವರೊಬ್ಬರು ಕಂಡು ಬಿಟ್ಟರೆ ?
ಮೇಲೆ ತಲೆ ಎತ್ತಿ ನೋಡಿದೆ.
ಮೋಡಗಳು ಗರ್ಭಕಟ್ಟಿ ಇನ್ನೇನು ಹನಿಯೊಡೆಯಬೇಕು.
ಗೇಟು ತಲುಪುತ್ತಿದ್ದಂತೆ ಪಟ ಪಟ ಎಂದು ದೊಡ್ಡ ಹನಿಗಳು ಸುರಿಯತೊಡಗಿದವು…
.

Close

ಅಧ್ಯಾಪಕರೆ ನಿಮ್ಮ ನಡೆನುಡಿಗಳ ಬಗ್ಗೆ ಗಮನವಿರಲಿ

ಅಧ್ಯಾಪಕರೆ
ನಿಮ್ಮ ನಡೆನುಡಿಗಳ ಬಗ್ಗೆ ಗಮನವಿರಲಿ

-ಬಿ ಶಶಿಧರ

ಅಧ್ಯಾಪಕ ವಿದ್ಯಾರ್ಥಿಯ ಜೀವನದಲ್ಲಿ ವಹಿಸುವ ಪಾತ್ರ ಮಹತ್ತರವಾದದ್ದು. ಶಾಲಾ ಜೀವನದ ಪರಿಚಯವಿರುವವರೆಲ್ಲರೂ ನಿರ್ವಿವಾದವಾಗಿ ಈ ವಿಷಯವನ್ನು ಒಪ್ಪುತ್ತಾರೆ, ತರಗತಿಯಲ್ಲಿ ಅಧ್ಯಾಪಕ ಅನುಭವಿಸುವ ಅಧಿಕಾರ ಅತ್ಯುನ್ನತ ಮಟ್ಟದ್ದು. ಶಾಲೆಯ ಹೊರಗಡೆ ಸಮಾಜದಲ್ಲಿ ಅಷ್ಟೇನೂ ಪ್ರಿಯವೂ, ಆಕರ್ಷಣೀಯವೂ ಅಲ್ಲದ ಸ್ಥಾನಮಾನಗಳನ್ನು ಗಳಿಸಿದ್ದರೂ ತರಗತಿಯಲ್ಲಿ ಆತ ಅನಭಿಷಕ್ತ ಸಾಮ್ರಾಟ. ಈ ಅನಿಸಿಕೆ ಅವಾಸ್ತವ ಅಥವಾ ಉಪ್ಪೇಕ್ಷೆಯದಲ್ಲ. ಈ ಅಂಶ ಆತನ ಚಟುವಟಿಕೆ ಹಾಗೂ ಅವುಗಳಿಂದ ಉಂಟಾಗುವ ಪ್ರಭಾವಗಳನ್ನು ಗಮನಿಸಿದಾಗ ಸುಸ್ಪಷ್ಟ.

ಶಾಲೆಯ ಕಿರು ವಿಶ್ವದಲ್ಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪರಸ್ಪರ ಸಂಧಿಸುತ್ತಾರೆ. ಇವರ ಪರಿಸರಗಳು ವಿಭಿನ್ನವಾದವು. ಹಾಗೆಯೇ ಅವರ ಆಶೋತ್ತರಗಳು, ಉದ್ದೇಶಗಳು ಮತ್ತು ಸಾಮರ್ಥ್ಯ ಕೂಡ. ಆದುದರಿಂದಲೇ ವೈವಿಧ್ಯಮಯವಾದ ಶಾಲೆ/ತರಗತಿಯನ್ನು ಪುಟ್ಟ ಸಮಾಜ (Miniature Society) ವೆಂದು ಕರೆಯುವುದುಂಟು.

ವಿದ್ಯಾರ್ಥಿಗಳು ಶೈಕ್ಷಣಿಕ ಕಾರ್ಖಾನೆಗಳಿಗೆ ಅತ್ಯವಶ್ಯಕವಾದ ಕಚ್ಚಾವಸ್ತುಗಳು. ಅಧ್ಯಾಪಕರು ತಮ್ಮ ನಿಶ್ಚಿತ ಕಾರ‍್ಯಕ್ರಮಗಳ ಮೂಲಕ ಉದ್ದೇಶಿತ ಬದಲಾವಣೆಗಳನ್ನು
ಇವರಲ್ಲಿ ತರಬೇಕು. ಅವರನ್ನು ಸಿದ್ಧಗೊಳಿಸಬೇಕು. ಸಮಾಜದ ವಿವಿಧ ಕಾರ‍್ಯಕ್ರಮಗಳಿಗಾಗಿ ಅವರನ್ನು ಸಜ್ಜುಗೊಳಿಸಬೇಕು. ಗತಿಮಿತಿಯಿಲ್ಲದೆ ಹರಿಯುವ ವಿದ್ಯಾರ್ಥಿಗಳ ಅಂತಃಶ್ಚತನವು ಸರಿ ಹಾದಿಯಲ್ಲಿ ಗಮಿಸುವಂತೆ ಮಾಡಬೇಕು.

ಹಾಗೆಯೇ ವಿದ್ಯಾರ್ಥಿಗಳೂ ಸಹ ತಮ್ಮದೇ ಆದ ಹುಟ್ಟರಿವಿನ (instinct) ಅಥವಾ ಸಹಜವೃತ್ತಿಯ ನೆರವಿನಿಂದ ತಮ್ಮ ಗುರಿಯನ್ನು ತಲುಪಲು ಶ್ರಮಿಸಬೇಕು. ತಮ್ಮ ಸಾಮರ್ಥ್ಯವು ಪುಷ್ಪದಂತೆ ಪೂರ್ಣವಾಗಿ ವಿಕಸಿತಗೊಳ್ಳಲು ಶ್ರಮಿಸಬೇಕು. ಸಮಾಜದ, ಶಾಲೆಯ ಅರ್ಥಹೀನ ಆಚರಣೆಗಳ, ಅಡೆತಡೆಗಳ ವಿಜೃಂಭಣೆಯಲ್ಲಿ ತಮ್ಮ ಸೃಜನಶೀಲತೆ ನಾಮಾವಶೇಷಗೊಳ್ಳದಂತೆ ಎಚ್ಚರವಹಿಸಬೇಕು.

ಹೀಗೆ ವಿಭಿನ್ನ ಆಶೋತ್ತರಗಳನ್ನು ಹೊಂದಿದ ಈ ಎರಡು ಗುಂಪುಗಳು ತರಗತಿಯಲ್ಲಿ ವೈಷಮ್ಯತೆಯನ್ನು ತಾಳುತ್ತವೆ. ಈ ವಿಷಮತೆ ಕೇವಲ ತೋರಿಕೆಯಲ್ಲಿ ಮಾತ್ರವಲ್ಲದೆ ಆಚರಣೆಯಲ್ಲೂ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಈ ಗುಂಪುಗಳು ಒಂದು ಇನ್ನೊಂದಕ್ಕೆ ಪೂರಕವಾಗಿ ನಿಲ್ಲದೆ ಒಂದರ ಮಾರ್ಗದಲ್ಲಿನ್ನೊಂದು ಅಡ್ಡಲಾಗಿ ನಿಲ್ಲುತ್ತದೆ.

ಪ್ರತಿಯೊಂದು ದೇಶದ ಸಾಹಿತ್ಯದಲ್ಲೂ ಅಧ್ಯಾಪಕನ, ಅಧ್ಯಾಪಕ ವೃತ್ತಿಯ ಬಗೆಗಿನ ಗುಣಗಾನ ನಿರಂತರವಾಗಿ ಸಾಗಿದೆ. ಆತನು ವಹಿಸುವ ಪಾತ್ರದ ಬಗ್ಗೆ ಅಗಣಿತವಾದ ಸಂಶೋಧನೆಗಳು ನಡೆದಿವೆ, ನಡೆಯುತ್ತಿವೆ. ಆತನನ್ನು ವರ್ಣಿಸಲು ಬಗೆಬಗೆಯ ಉಪಮಾನ, ಉಪಮೇಯಗಳು ಬಳಸಲ್ಪಟ್ಟಿವೆ. ಅಂತಹವುಗಳಲ್ಲಿ ಆತನನ್ನು ತೋಟಗಾರನಿಗೆ (ಹೂದೋಟದ ಮಾಲಿಗೆ) ಹೋಲಿಸುವುದೂ ಒಂದು. ಅಧ್ಯಾಪಕ ಭಾವೀ ಜನಾಂಗಕ್ಕೆ ಸಂಸ್ಕೃತಿಯನ್ನು ರವಾನಿಸುವವರಲ್ಲಿ ಅಗ್ರಗಣ್ಯ, ಶಾಲಾಮಕ್ಕಳು ತಾವು ತಮ್ಮ ಭಾವೀ ಜೀವನದಲ್ಲಿ ವಹಿಸಬೇಕಾಗಿರುವ ಪಾತ್ರಗಳ ಬಗೆಗಿನ ಅರಿವನ್ನೂ, ಆ ಪಾತ್ರಗಳ ನಿರ್ವಹಣೆಗೆ ಬೇಕಾದ ಕೌಶಲ್ಯಗಳನ್ನು ಗಳಿಸುವುದೂ ಅವನ ನೆರವಿನಿಂದಲೇ. ಹಾಗೆಯೇ ಶಾಲೆಯ ಹೊರಗಿನ ಸಮಾಜದ ಸಂಕೀರ್ಣತೆಯನ್ನು ವೀಕ್ಷಿಸಿ, ವಿಶ್ಲೇಷಿಸಿ ಆರಿಯುವುದೂ ಬಹುಮಟ್ಟಿಗೆ ಆತನ ಮೂಲಕವೇ.

ಮನಶ್ಯಾಸ್ತ್ರ, ಸಮಾಜಶಾಸ್ತ್ರ ಹಾಗೂ ಶಿಕ್ಷಣಶಾಸ್ತ್ರಗಳಲ್ಲಿ ಅಧ್ಯಾಪಕ ವಹಿಸುವ ಪಾತ್ರದ ವಿಶ್ಲೇಷಣೆ (Role analysis), ಅಧ್ಯಾಪಕ ಬೀರುವ ಪ್ರಭಾವ (Teacher effectivegess), ಗುರು-ಶಿಷ್ಯರ ಸಂಬಂಧ ಬೋಧನಾ ವಿಧಾನ ಇತ್ಯಾದಿಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲಿವೆ. ಅಧ್ಯಾಪಕರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಒಮ್ಮೆ ಹೆನ್ರಿ, ಆಡಮ್ಸ್ ‘ಅಧ್ಯಾಪಕ ಬೀರುವ ಪ್ರಭಾವ ಅನಂತ. ತಮ್ಮ ಪ್ರಭಾವ ಎಲ್ಲಿ ಕೊನೆಯಾಗುತ್ತದೆ ಎಂದು ಅವರು ಅರಿಯುವುದೇ ಇಲ್ಲ’ ಎಂದಿದ್ದಾರೆ. ಇದು ಅನಿಸಿಕೆಯೆನಿಸಿದರೂ ಸತ್ಯದೂರವಲ್ಲದ ಸಂಗತಿ. ಆದುದರಿಂದಲೇ ಎಲ್ಲವೂ ಯಾಂತ್ರೀಕೃತವಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಅಧ್ಯಾಪಕನ ಪಾತ್ರವು ಗಣನೀಯವಾದ ಸ್ಥಾನಮಾನಗಳನ್ನು ನಿರಂತರವಾಗಿ ಗಳಿಸುತ್ತಲೇ ಮುನ್ನಡೆದಿದೆ.

ಅಧ್ಯಾಪಕ ಹಾಗೂ ವಿದ್ಯಾರ್ಥಿಗಳ ನಡುವೆ ನಡೆಯುವ ಪರಸ್ಪರ ಕ್ರಿಯೆಯಲ್ಲಿ (Interaction) ಅಧ್ಯಾಪಕರಿಂದ ಬಳಸಲ್ಪಡುವ ಪದಗಳು ಹಾಗೂ ಸಂಕೇತಗಳು (ಮುಖಭಾವ ಇತ್ಯಾದಿ) ಬಹಳಷ್ಟು ಪ್ರಭಾವ ಬೀರುತ್ತವೆ. ವಿದ್ಯಾರ್ಥಿಯ ಮೇಲೆ ಅಧ್ಯಾಪಕನ ನಿರೀಕ್ಷೆ ಅಥವಾ ಹಾರೈಕೆ (Teacher’s expectation) ಬೀರುವ ಪ್ರಭಾವದ ಬಗ್ಗೆ ವಿವಿಧ ತೆರನಾದ ಅಭಿಪ್ರಾಯಗಳನ್ನು ಸಂಶೋಧಕರು ವ್ಯಕ್ತಪಡಿಸುತ್ತಾರೆ. ಆದಾಗ್ಯೂ ಗುರು-ಶಿಷ್ಯರ ನಡುವೆ ನಡೆಯುವ ಪರಸ್ಪರ ಕ್ರಿಯೆಯು ಈರ್ವರ ಕಾರ‍್ಯ ನಿರ್ವಹಣೆಯ ಬಗ್ಗೆ ಪರಸ್ಪರರ ನಿರೀಕ್ಷಣೆಯ ವಿನಿಮಯವೆಂದು ಪರಿಗಣಿಸಲಾಗಿದೆ. ಈ ಅಂಶ ಗಮನಾರ್ಹ. ಅಧ್ಯಾಪಕರ ಬಗ್ಗೆ ವಿದ್ಯಾರ್ಥಿಗಳು ವ್ಯಕ್ತಪಡಿಸುವ ನಿರೀಕ್ಷೆ ಅಧ್ಯಾಪಕರ ಕಾರ‍್ಯನಿರ್ವಹಣೆಯ ಮೇಲೆ ಪ್ರಭಾವ ಬೀರುತ್ತವೆ, ಕುತೂಹಲಿ ವಿದ್ಯಾರ್ಥಿಗಳು ತರಗತಿಯಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಅಧ್ಯಾಪಕ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲೇಬೇಕಷ್ಟೆ. ಆರ‍್ಯಭಟನ ಬಗ್ಗೆ ಏನೇನೂ ತಿಳಿಯದಿದ್ದರೂ, ವಿದ್ಯಾರ್ಥಿ ಸಮುದಾಯದಲ್ಲಿ ಜನಪ್ರಿಯತೆಯನ್ನು ಗಳಿಸಲೋಸುಗವಾದರೂ ಹಳೆಯ ವೃತ್ತಪತ್ರಿಕೆಗಳನ್ನು ತಿರುವಿಹಾಕಬೇಕಾಗುವುದಲ್ಲವೇ? ವಿದ್ಯಾರ್ಥಿಗಳ ಭಾವನೆಯಲ್ಲಿ ಅಧ್ಯಾಪಕ ಒಂದು ಸಂಚಾರಿ ವಿಶ್ವಕೋಶ ಈ ಭಾವನೆಯನ್ನು ಸುಳ್ಳಾಗಿಸುವ ಎದೆಗಾರಿಕೆಯನ್ನು ಯಾವ ಅಧ್ಯಾಪಕ ತಾನೇ ತೋರಿಸಬಲ್ಲ? ಹಾಗೆಯೇ ಅಧ್ಯಾಪಕರು ವ್ಯಕ್ತಪಡಿಸುವ ನಿರೀಕ್ಷೆ ವಿದ್ಯಾರ್ಥಿಯ ಪ್ರಗತಿಯ ಹಾಗೂ ಕಾರ‍್ಯ ನಿರ್ವಹಣೆ ಶೈಲಿಯ ಮೇಲೆ ಗಣನೀಯ ಪ್ರಭಾವ ಬೀರುತ್ತದೆ.

ತರಗತಿಗಳಲ್ಲಿ ನಡೆಯುವ ದೈನಂದಿನ ವಿದ್ಯಮಾನಗಳನ್ನು ಗಮನಿಸಿದರೆ ಅವು ಒಂದು ಬಗೆಯ ಸಾಂಪ್ರದಾಯಿಕ ಜಾಡಿನಲ್ಲಿರುವುದನ್ನು ಗಮನಿಸಬಹುದು. ಸಂಶೋಧಕರು, ಇವುಗಳನ್ನು ಸಾಂಪ್ರದಾಯಿಕ ವ್ರತಾಚರಣೆಗಳೆಂದು (Ceremonial Rituals) ಕರೆಯುತ್ತಾರೆ. ಈ ಸಾಂಪ್ರದಾಯಿಕತೆಯ ಅನುಭವವಿರುವ ಯಾವ ವ್ಯಕ್ತಿಯೇ ಆಗಲಿ ಅನಾಯಾಸವಾಗಿ ಅವುಗಳನ್ನು ನೆನೆಯಬಲ್ಲ ಹಾಗೆ ನೆನೆಸಿಕೊಂಡಾಗ ಆತನ ಚಿತ್ತಭಿತ್ತಿಯಲ್ಲಿ ಅಧ್ಯಾಪಕನ ವಿವಿಧ ತೆರನಾದ ಭಾವನೆಗಳು, ಅಭಿವ್ಯಕ್ತಿಗಳು ಆತನ ಹಾವಭಾವ ಮತ್ತು ಮುಖಭಂಗಿಗಳು ಮೂಡುತ್ತವೆ. ಅಧ್ಯಾಪಕರಿಂದ ಹೊಗಳಿಸಿಕೊಂಡ ಅಥವಾ ತೆಗಳಿಸಿಕೊಂಡ ಸನ್ನಿವೇಶಗಳನ್ನು ಯಾರಾದರೂ ಮರೆತಾರೇ?

ಅಧ್ಯಾಪಕ ವಿದ್ಯಾರ್ಥಿಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ಫ್ಲಾಂಡರ‍್ಸ್‌ ಮತ್ತಿತರರು ನಡೆಸಿದ ಸಂಶೋಧನೆಗಳು ಅಧ್ಯಾಪಕ ಹಾಗೂ ವಿದ್ಯಾರ್ಥಿಗಳ ನಡುವಣ ಪರಸ್ಪರ ಕ್ರಿಯೆಯು ಉಪಾಧ್ಯಾಯನ ಮಾತನ್ನೊಳಗೊಂಡ (ಶಾಬ್ಲಿಕ ವರ್ತನೆ; verbal behaviour ವರ್ತನೆಯಿಂದ ಮಾತ್ರವಲ್ಲದೆ ಮಾತಿಲ್ಲದ ವರ್ತನೆ (non verbal behaviour) ಯಿಂದಲೂ ಪ್ರಭಾವಿತವಾಗುತ್ತದೆ ಎಂಬುದನ್ನು ಸೂಚಿಸಿವೆ. ಹಾಗೆಂದಾಗ ನಗು, ಹಾಸ್ಯ, ಅಸಮಾಧಾನ, ಬೇಸರ ಇತ್ಯಾದಿ ಭಾವನೆಗಳನ್ನು ಸೂಚ್ಯವಾಗಿ ಹೊರಹೊಮ್ಮಿಸುವ ಮುಖಭಂಗಿಗಳು ಅಥವಾ ಭಾವಾಭಿನಯಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಶಾಲೆಯಲ್ಲಿ ಪರೀಕ್ಷೆಯ ಅಂಕಗಳನ್ನು ಅಧ್ಯಾಪಕರು ಪ್ರಕಟಿಸುವ ದಿನ ಎಂದಾಗ ಮನಸ್ಸಿಗೆ ಹೊಳೆಯುವುದಾದರೂ ಏನು? ಅಧ್ಯಾಪಕರಿಂದ ತಾನು ಪಡೆಯಬಹುದಾದ ಟೀಕೆ-ಟಿಪ್ಪಣಿಗಳು, ವಿಮರ್ಶೆಗಳು, ಪ್ರೋತ್ಸಾಹಕರ ನುಡಿಗಳು, ಅಪಹಾಸ್ಯ, ಕೊಂಕು ನುಡಿ, ಇವೇ ತಾನೆ? ಮೌಲ್ಯ ಮಾಪನದ ನಂತರ ಅಧ್ಯಾಪಕ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಹಂಚುವ ದಿನ ಅತಿ ಕೌತುಕಮಯವಾದದ್ದು. ಕಾತರದ ದಿನವೂ ಹೌದು. ವಿದ್ಯಾರ್ಥಿಗಳು ಆ ದಿನವನ್ನು ಮಿಶ್ರಭಾವನೆಗಳಿಂದ ಎದುರು ನೋಡುತ್ತಿರುತ್ತಾರೆ. ಆ ದಿನ ಮೊದಲೇ ಗೊತ್ತುಪಡಿಸಲಾಗಿದ್ದರೆ ಅನೇಕರು ತರಗತಿಯಿಂದ ಪರಾರಿಯಾಗಲೂ ಹಿಂತೆಗೆಯುವುದಿಲ್ಲ. ವಿದ್ಯಾರ್ಥಿ ಎಷ್ಟೇ ಪ್ರತಿಭಾವಂತನಾಗಿದ್ದರೂ ಆತನ ತಳಮಳ ಅವರ್ಣನೀಯ. ಆದರೆ ಹೀಗಾಗಲು ಕಾರಣವೇನು ? ವಿದ್ಯಾರ್ಥಿಗಳು ಉತ್ತರವನ್ನು ಸರಿಯಾಗಿ ಬರೆಯದಿರುವುದೇ ? ಅಥವಾ ತಮ್ಮ ಸಾಮರ್ಥ್ಯದ ಬಗೆಗಿನ ಅಪನಂಬಿಕೆಯೇ ? ವಾಸ್ತವವಾಗಿ ಈ ಬಗೆಯ ಸಮಜಾಯಿಷಿಗಳು ಈ ತಳಮಳ ಭರಿತ, ಕಾತರದ ಕ್ಷಣಗಳಿಗೆ ಸರಿಯುತ್ತರವಲ್ಲ, ಹಾಗಾದರೆ, ಸರಿಯುತ್ತರವನ್ನು ಪಡೆಯುವ ಬಗೆ? ಅಧ್ಯಾಪಕ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ನಡೆಸುವ ಸಾಂಪ್ರದಾಯಿಕ ಕ್ರಿಯೆಗಳನ್ನು ಗಮನಿಸಿದರೆ ಮೇಲಿನ ಪ್ರಶ್ನೆಗೆ ಉತ್ತರ ವೇದ್ಯವಾಗುತ್ತದೆ. ಹಾಗೆ ಗಮನಿಸಿದಾಗ ನಿಸ್ಸಂದೇಹವಾಗಿ ಮರಣೋತ್ತರ ಪರೀಕ್ಷೆಯ ವರದಿಗಳಂತಿರುವ ಅಧ್ಯಾಪಕನ ಭಾಷಣಗಳನ್ನು (Postmorten report like speeches) ಕೇಳಬಹುದು, ಅಂತಹ ಸುಯೋಗ (!) ಎಲ್ಲ ವಿದ್ಯಾರ್ಥಿಗಳ ಪಾಲಿಗೂ ಸರ್ವೇಸಾಮಾನ್ಯ. ಈ ಬಗೆಯ ಕ್ರಿಯಾಚರಣೆ ಅಧ್ಯಾಪಕನಿಗೆ ಅತಿಪ್ರಿಯವಾದದ್ದು. ಇದು ಶಾಲೆಯ ಅಲಿಖಿತ ಸಂವಿಧಾನದಿಂದ ಅಧ್ಯಾಪಕನಿಗೆ ದತ್ತವಾಗಿರುವ ಅಧಿಕಾರ. ಇನ್ನಾರಿಗೂ ದೊರಕದ ವಿಶೇಷ ಸವಲತ್ತು. ಆತ ಈ ಬಗೆಯ ಕ್ಷಣಗಳಲ್ಲಿ ಪ್ರಕ್ಷುಬ್ದ ಸಾಗರದ ಅಲೆಗಳಂತೆ ಇಡೀ ವಿದ್ಯಾರ್ಥಿ ಸಮುದಾಯದ ಮೇಲೆ ಅಪ್ಪಳಿಸಬಯಸುತ್ತಾನೆ. ಈ ಸಾಂಪ್ರದಾಯಿಕ ವ್ರತದ ಅನುಷ್ಠಾನ ಇಷ್ಟಕ್ಕೇ ಸಾಮಾನ್ಯವಾಗಿ ನಿಲ್ಲುವುದಿಲ್ಲ. ಅಧ್ಯಾಪಕ ತನ್ನ ಶ್ರಮಕ್ಕೆ ದೊರೆತ ಪ್ರತಿಫಲವನ್ನು ಕಂಡು ಸ್ವಾಭಾವಿಕವಾಗಿಯೇ ಭಾವಾವೇಶಕ್ಕೊಳಗಾಗುತ್ತಾನೆ. ಆತನ ಶಿಷ್ಯರ ಸಾಧನೆ ಅಷ್ಟೇನೂ ತೃಪ್ತಿಕರವಾಗಿರದಿದ್ದರೆ, ಆತನ ಮೇಲಧಿಕಾರಿಗಳು ಅವನನ್ನು ಚುಚ್ಚಿ ಮೂದಲಿಸಿದ್ದರೆ, ಸಹೋದ್ಯೋಗಿಗಳ ಅವಹೇಳನಕ್ಕೊಳಗಾಗಿದ್ದರೆ ಹತಿಗೊಂಡ ಅವನ ಮನಸ್ಸು ಕಲಕಿದ ಕೊಳವಾಗುತ್ತವೆ. ಬುದ್ಧಿ ಹಾದಿಗೆಡುತ್ತದೆ. ಆತ ತನ್ನ ತರಗತಿಯ ಕೆಲವು ಪ್ರತಿಭಾವಂತರನ್ನು ಹೊಗಳಿದರೆ ಆತನ ಹೊಣೆ ಮುಗಿದು ಹೋಗುವುದಿಲ್ಲ. ಅವರ ಪ್ರಗತಿಯೂ ಏರುಪೇರಾದರೆ? ಆಗಲೂ ಹೊಗಳಲು ಸಾಧ್ಯವೇನು? ಮೇಲಾಗಿ ವಿದ್ಯಾರ್ಥಿಯನ್ನು ನೇರವಾಗಿ ಹೊಗಳುವುದು ಸಾಧ್ಯವೇ? ಅಂಕುಡೊಂಕಿನ ಶೈಲಿ, ಕೊಂಕು ಮಾತು ಇತ್ಯಾದಿಗಳು ಅವನ ಶಾಬ್ದಿಕ ವರ್ತನೆಯ ಮೂಲ ಮಂತ್ರಗಳಾಗುತ್ತವೆ. ಇದು ಕೇವಲ ಸಾಮುದಾಯಿಕ ಅಥವಾ ಗುಂಪಿನ ಮಟ್ಟದಲ್ಲೇ ನಿಲ್ಲುವುದಿಲ್ಲ. ಪ್ರತಿ ಉತ್ತರ ಪತ್ರಿಕೆಯೊಡನೆ ಪ್ರತಿ ವಿದ್ಯಾರ್ಥಿಯೆಡೆಗೂ ಹರಿದು ಬರುತ್ತದೆ ಈ ಭಾವನೆಗಳ ಲಾವಾರಸ, ಗುಡ್, ಜಾಣ, ಇವನನ್ನು ನೋಡಿ ಕಲಿತುಕೊಳ್ರೋ ಎಂದು ಹೊಗಳಿದರೆ: ಕತ್ತೆ, ದಡ್ಡ ಮುಂಡೇದು, ನಾಲಾಯಖ್‌ ಎಂದು ದೂಷಿಸಿದರೆ ಸಾಕೇ. ಸ್ವಲ್ಪ ವೈವಿಧ್ಯ ಬೇಡವೇನು? ವಿದ್ಯಾರ್ಥಿಯ ಆಕೃತಿಗೆ ತಕ್ಕಂತೆ ಗುದ್ದುವುದು, ಚಿವುಟುವುದು ಅಥವಾ ಬೆತ್ತದೇಟಿನ ಸವಿಯನ್ನುಣ್ಣಿಸುವುದು ಇತ್ಯಾದಿಗಳ ವಿಶೇಷ ರೂಪವನ್ನು ತಳೆಯುತ್ತದೆ. ಆದುದರಿಂದಲೇ ಇವುಗಳ ಪ್ರಭೇದ ಅಸಂಖ್ಯಾತ. (ಇಲ್ಲಿ ಇವುಗಳ ವಿವರಣೆ ಅನವಶ್ಯಕ.)

ಆಧ್ಯಾಪಕನ ಈ ಬಗೆಯ ವರ್ತನೆಗಳನ್ನು ವಿದ್ಯಾರ್ಥಿಗಳು ಸ್ಥಿತಪ್ರಜ್ಞರಂತೆ ಸಹಿಸಿಯಾರೇ? ಅವರಿಗೆ ನಿರ್ಲಿಪ್ತ ಮನೋಭಾವ ಬಂದಿತೇ? ಇಲ್ಲ. ಈ ಬಗೆಯ ಸಂದರ್ಭಗಳಲ್ಲಿ ಅವರೂ ಮಿಶ್ರ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಾರೆ. ಇದು ಸ್ವಾಭಾವಿಕ, ತಮ್ಮ ಅಂಕಗಳನ್ನು ಎಲ್ಲರೆದುರಿಗೆ ಪ್ರಕಟಿಸಬೇಡಿ ಎಂದು ಅಂಗಲಾಚುತ್ತಾರೆ. ಅಪಮಾನ, ಜೈಗಳಿಂದ ಅವರ ಮುಖ ಕೆಂಪೇರಿರುತ್ತದೆ. ವೇದನೆ, ಅಸಹನೆ; ಅಸಹಾಯಕತೆಗಳು ಅವರ ಮುಖದಲ್ಲಿ ಒಡೆದು ಮೂಡಿರುತ್ತವೆ. ಅನೇಕರು ಅತಿ ಸಂವೇದನಾಶೀಲರೂ ಆಗುತ್ತಾರೆ. ಅಸಹಾಯಕತೆಯಿಂದ ಅನೇಕರು ತಮ್ಮ ಸ್ಥಾನಗಳಲ್ಲಿ ಮಿಸುಕಾಡುವುದನ್ನೂ ಗಮನಿಸಬಹುದು. ಅನೇಕರು ತಮ್ಮ ಮುಖಗಳನ್ನು ತಮ್ಮ ಕಿರಿದಾದ ಹಸ್ತಗಳಲ್ಲೇ ಅಡಗಿಸಿಕೊಳ್ಳುವ ವಿಫಲ ಯತ್ನವನ್ನೂ ನಡೆಸುತ್ತಾರೆ.

ಅಧ್ಯಾಪಕರು ಅನೇಕ ರೀತಿಯ ಮನೋವಿಕಾರಗಳಿಗೆಡೆ ಕೊಡುವ ಈ ರೀತಿಯ ಸಂಪ್ರದಾಯಗಳನ್ನೇಕೆ ನಂಬುತ್ತಾರೆ? ಈ ಕ್ರಿಯೆ ಲಾಭದಾಯಕವೆಂಬ ಅರಿವು ಅಧ್ಯಾಪಕರಿಗುಂಟು. ಅಧ್ಯಾಪಕ ಬಳಸುವ ಟೀಕಾಸ್ತ್ರಗಳು, ವಿಮರ್ಶೆ, ಚುಚ್ಚುನುಡಿ ಅಥವಾ ಇನ್ನಾವುದೇ ಶಾಬ್ದಿಕ ಸಂಕೇತದ ಅರ್ಥವಿಷ್ಟೆ. ನಿರ್ದಿಷ್ಟ ವಿದ್ಯಾರ್ಥಿಯು ಗಳಿಸಿದ ಮಟ್ಟದ ಬಗ್ಗೆ ತನ್ನ ಸಮ್ಮತಿ ಅಥವಾ ಅಸಮ್ಮತಿಯನ್ನು ಸೂಚಿಸುವುದೇ ಇದರ ಮೂಲ ಉದ್ದೇಶ. ಈ ಸಮ್ಮತಿ ಅಥವಾ ಅಸಮ್ಮತಿಗಳು ವಿದ್ಯಾರ್ಥಿಯ ಬಗ್ಗೆ ಅಧ್ಯಾಪಕನಿರಿಸಿರುವ ನಿರೀಕ್ಷೆಯ ಪ್ರತಿಮಾರೂಪವೆಂದು ಬೇರೆ ವಿವರಿಸಿ ಹೇಳುವ ಅಗತ್ಯವಿಲ್ಲ.

ರೋ ಸೆಂಥಾಲ್ ಮತ್ತು ಜ್ಯಾಕಬ್ಸನ್‌ರವರು 1968 ರಲ್ಲಿ ವಿದ್ಯಾರ್ಥಿಯ ಕಾರ‍್ಯನಿರ್ವಹಣೆಯ ಮೇಲೆ ಅಧ್ಯಾಪಕನ ನಿರೀಕ್ಷೆಯ ಪ್ರಭಾವದ ಬಗ್ಗೆ ಸಂಶೋಧನೆಯೊಂದನ್ನು ಕೈಗೊಂಡಿದ್ದರು. ಅವರ Pygmallion in the classroom ಎಂಬ ಪುಸ್ತಕದಲ್ಲಿ ಅವರು ಇದನ್ನು Self fulflling prophecy ಎಂದು ಕರೆಯುತ್ತಾರೆ. ಇದರ ಸರಳಾರ್ಥವಿಷ್ಟೆ, ಅಧ್ಯಾಪಕರು ತಾವು ಏನನ್ನು ವಿದ್ಯಾರ್ಥಿಗಳಿಂದ ಪಡೆಯಬೇಕೆಂದು ಉದ್ದೇಶಿಸುತ್ತಾರೋ ಅದನ್ನು ಖಂಡಿತವಾಗಿ ಪಡೆಯುತ್ತಾರೆ. ಅದು ಹೇಗೆ ಸಾಧ್ಯ ?

ಈ ಅಂಶದ ನಿರೂಪಣೆಗಾಗಿ ಅವರೊಂದು ಪ್ರಯೋಗವನ್ನು ಕೈಗೊಂಡರು. ಪ್ರಯೋಗಕ್ಕಾಗಿ ಸ್ಯಾನ್‌ಫ್ರಾನ್ಸಿಸ್ಕೋ ನಗರದ ಪ್ರಾಥಮಿಕ ಶಾಲೆಯೊಂದನ್ನು ಆರಿಸಿಕೊಳ್ಳಲಾಯಿತು. ಪ್ರಯೋಗದ ಸಲುವಾಗಿ ಅವರು ವಿದ್ಯಾರ್ಥಿಗಳನ್ನು ಯಾವುದೇ ಒಂದು ಗೊತ್ತುಗುರಿಯಿಲ್ಲದೆ, ಪೂರ್ವಾಗ್ರಹ ಪೀಡಿತರಾಗದೆ ಆರಿಸಿಕೊಂಡರು. ತರಗತಿಯ ಅಧ್ಯಾಪಕರಿಗೆ ಈ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡುವಾಗ ಅವರು ಶೈಕ್ಷಣಿಕವಾಗಿ ಉಚ್ಛ್ರಾಯ ಸ್ಥಿತಿಗೆ ಬರುವ ಸಾಮರ್ಥ್ಯವುಳ್ಳವರೆಂದು ಪರಿಚಯ ಮಾಡಿಕೊಡಲಾಯಿತು. ವರ್ಷದ ಕೊನೆಯಲ್ಲಿ ಆ ವಿದ್ಯಾರ್ಥಿಗಳ ಬುದ್ಧಿ ಸೂಚಕಾಂಕಗಳನ್ನು (I.Q.) ಸಂಶೋಧಕರು ಅಳೆದರು. ಆಗ ಅವರಿಗೆಂದು ವಿಸ್ಮಯಕರ ಸಂಗತಿ ಕಾದಿತ್ತು. ವಿದ್ಯಾರ್ಥಿಗಳ ಬುದ್ದಿ ಸೂಚಕಾಂಕಗಳಲ್ಲಿ ಗಣನೀಯ ಪ್ರಗತಿಯಾಗಿತ್ತು! ಮೇಲಾಗಿ ಹೀಗಾಗಲು ವಿದ್ಯಾರ್ಥಿಗಳಿಗೆ ಯಾವ ಬಗೆಯ ನೆರವನ್ನೂ ಸಂಶೋಧಕರು ಕೊಟ್ಟಿರಲಿಲ್ಲ. ವಾಸ್ತವವಾಗಿ ಈ ವಿದ್ಯಾರ್ಥಿಗಳು ತರಗತಿಯಲ್ಲಿ ಅತ್ಯಂತ ಕೆಳಮಟ್ಟದ ಪ್ರಗತಿಯನ್ನು ತೋರಿಸುತ್ತಿದ್ದವರಾಗಿದ್ದರು. ಅಂದರೆ ಉತ್ತಮವಾದ ಶೈಕ್ಷಣಿಕ ವಾತಾವರಣದ ನೆರವಿನಿಂದ ವೃದ್ಧಿಸುವ ಅಥವಾ ಕೀಳ್ದರ್ಜೆಯ ವಾತಾವರಣದ ದೆಸೆಯಿಂದ ಕ್ಷೀಣಿಸುವ ಸಮಾನಾವಕಾಶಗಳು ಪಡೆದಿದ್ದ ಗುಂಪು ಅವರದಾಗಿತ್ತು.

ಈ ಸಂಶೋಧನೆ ಅನೇಕರಿಂದ ಕಟು ವಿಮರ್ಶೆಗೊಳಗಾಗಿದೆ. ಆದರೂ ಇದು ಈ ದಿಸೆಯಲ್ಲಿ ನೀಡಿರುವ ಕೊಡುಗೆ ಅಮೂಲ್ಯವಾದದ್ದು. ಈ ಅಂಶವನ್ನು ಸುಲಭವಾಗಿ ಕಡೆಗಣಿಸಲು ಸಾಧ್ಯವಿಲ್ಲ. ಸ್ವತಃ ರೋಸೆಂಥಾಲ್ ಅಭಿಪ್ರಾಯ ಪಟ್ಟಿರುವಂತೆ ಕೇವಲ ನಿರೀಕ್ಷಿಸುವುದರಿಂದಲೇ ಬೌದ್ಧಿಕ ಸಾಮರ್ಥವನ್ನು ಹೆಚ್ಚಿಸಲು ಅಧ್ಯಾಪಕರಿಗೆ ಹೇಗೆ ಸಾಧ್ಯವಾಯಿತು ಎಂಬುದು ಸಂಶೋಧಕರಿಗೆ ಗೊತ್ತಾಗಿಲ್ಲ. ಅಧ್ಯಾಪಕ ಉನ್ನತ ಮಟ್ಟದ ಗುರಿಯನ್ನಿರಿಸುವುದರ ಮೂಲಕ ವಿದ್ಯಾರ್ಥಿಗಳಿಂದ ಕಠಿಣ ಶ್ರಮವನ್ನು ಅಪೇಕ್ಷಿಸಿರಬಹುದು. ಹಾಗೆಯೇ ಬುದ್ದಿ ಸೂಚಕಾಂಕಗಳಲ್ಲಿ ಕಂಡುಬಂದ ವ್ಯತ್ಯಾಸಕ್ಕೆ ಅಧ್ಯಾಪಕ ಬಳಸಿದ ಅಳತೆಗೋಲುಗಳ ಕಾರಣವಿರಬಹುದು. ರೋಸೆಂಥಾ ಮತ್ತು ಜ್ಯಾಕಬ್‌ಸನ್‌ರವರು ಸೂಚಿಸಿರುವಂತೆ ತನ್ನ ಮುಖಭಂಗಿ, ಅಂಗವಿನ್ಯಾಸ ಅಥವಾ ಅಷ್ಟೇಕೆ ಸ್ಪರ್ಶದಿಂದಲೂ ಕೂಡ ಅಧ್ಯಾಪಕ ತಾನು ನಿಮ್ಮಿಂದ ಉನ್ನತ ಮಟ್ಟದ ಸಾಮರ್ಥ್ಯವನ್ನು ಬಯಸುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಸೂಚಿಸಿರಬಹುದು.

ಅಧ್ಯಾಪಕ ಭಾಷಾ ಮಾಧ್ಯಮದ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸಿವಾಗ ಆತನ ಆಲೋಚನಾ ತರಂಗವನ್ನು ರವಾನಿಸುವುದರ ಜೊತೆಗೆ ಅಧ್ಯಾಪಕನ ನಿರೀಕ್ಷೆಗಳನ್ನೂ ಸಹ ಆತ ಬಳಸುವ ಮಾತುಗಳು (ಶಾಬ್ದಿಕ ಸಂಕೇತಗಳು) ರವಾನಿಸುತ್ತವೆ. ಮೇಲಿನ ನಿದರ್ಶನದಲ್ಲಿ ಅಧ್ಯಾಪಕ ಹೆಚ್ಚಿನ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದುದರಿಂದ ವಿದ್ಯಾರ್ಥಿಗಳ ಸಾಮರ್ಥ್ಯ (ಬುದ್ದಿ ಸೂಚಕಾಂಕ) ಹೆಚ್ಚಾದುದನ್ನು ಗಮನಿಸಲಾಯಿತು. ಈ ಕ್ರಿಯೆ ಸಾಧ್ಯವಾಗಿರಬೇಕಾದರೆ ಅವಹೇಳನಕಾರಿ ಮಾತುಗಳು ಹಾಗೂ ದಮನ ನೀತಿಯನ್ನು ಅನುಸರಿಸುವುದರಿಂದ ಸಾಧನಾ ಸಾಮರ್ಥ್ಯವನ್ನು ಕುಗ್ಗಿಸುವುದೂ ಸಾಧ್ಯವಾಗಬೇಕು. ಅದರೆ ವಿದ್ಯಾರ್ಥಿಯ ಸಾಧನಾ ಸಾಮರ್ಥ್ಯವು ಅಧ್ಯಾಪಕ ತನ್ನ ವಿದ್ಯಾರ್ಥಿಯ ಬಗ್ಗೆ ವ್ಯಕ್ತಪಡಿಸುವ ನಿರೀಕ್ಷೆಗೆ ಅನುಗುಣವಾಗಿಸುತ್ತದೆ.

ಅಧ್ಯಾಪಕ ಆದುದರಿಂದಲೇ ವಿದ್ಯಾರ್ಥಿಗಳೆದುರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಾಗ ಹೆಚ್ಚು ಎಚ್ಚರ ವಹಿಸುವುದು ಅವಶ್ಯಕ. ಏಕೆಂದರೆ ಅವರು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸುವ ಭಾವನೆಗಳು, ನಿರೀಕ್ಷಣೆಗಳು ಬ್ಯೂಮಲ್ಯಾಂಗ್‌ನಂತೆ ಅವರೆಡೆಗೇ ಹಿಮ್ಮರುಳುತ್ತವೆ, ಇವುಗಳ ಮೇಲೆ ವಿದ್ಯಾರ್ಥಿಯ ಮುಂದಿನ ಪ್ರಗತಿಯು ಅವಲಂಬಿತಗೊಂಡು ರೂಪು ತಳೆಯುತ್ತದೆ. ‘ಬಿತ್ತಿದ್ದನ್ನು ಬೆಳೆದುಕೊ’ ಎಂಬ ಗಾದೆಯ ನೆನಪು ಸಮಯೋಚಿತವಾದೀತು. ಆದರೆ ಈ ಕ್ರಿಯಾಸರಣಿಯುಂಟಾಗುವ ಬಗೆಯಾದರೂ ಯಾವುದು ? ವಿದ್ಯಾರ್ಥಿಗಳು ಅಧ್ಯಾಪಕರ ನಿರೀಕ್ಷೆಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾರೆ. ಈ ಅರಿವು (Perception) ವಿದ್ಯಾರ್ಥಿಯಲ್ಲಿ ತನ್ನತನದ ಅರಿವನ್ನು’ (Self-concept) ರೂಪಿಸುತ್ತದೆ. ಇದರಿಂದಾಗಿ ಆತ ತನ್ನ ಬಗ್ಗೆ ತಾನೇ ಅಭಿಪ್ರಾಯಗಳನ್ನು ತಳೆಯಲಾರಂಭಿಸುತ್ತಾನೆ. ಈ ಅಭಿಪ್ರಾಯಗಳು ಉಂಟಾಗುವಾಗ ಆತ ಇತರರು ತನ್ನ ಬಗ್ಗೆ ಏನೆಂದು ಭಾವಿಸುತ್ತಾರೆ ಎಂದು ಪಡುವ ಅಭಿಪ್ರಾಯಗಳೂ ಪೂರಕವಾಗುತ್ತವೆ. ಈ ಬಗೆಯ ಅರಿವು ಎಷ್ಟೇ ಅತಾರ್ಕಿಕ ಅಥವಾ ಅಸಂಬದ್ಧವೆನಿಸಿದರೂ, ಅದು ಗುರುಶಿಷ್ಯರ ಪರಸ್ಪರ ಸಂಬಂಧದ ಗತಿ ಹಾಗೂ ಲಕ್ಷಣಗಳನ್ನು ರೂಪಿಸುತ್ತದೆ.

ಈ ಅಂಶಕ್ಕೆ ಸಂಬಂಧಿಸಿದಂತೆ ಡೇವಿಡ್‌ಸನ್ ಮತ್ತು ಲ್ಯಾಂಗ್‌ರವರು ನಡೆಸಿದ ಸಂಶೋಧನೆಯೊಂದರಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳ ಬಗ್ಗೆ ಹೊಂದಿದ್ದ ನಿರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗಿದ್ದ ಅರಿವು ವಿದ್ಯಾರ್ಥಿಯು ತನ್ನ ಬಗ್ಗೆ ಹೊಂದಿದ್ದ ಅಭಿಪ್ರಾಯದೊಡನೆ (Self-image) ಗಣನೀಯವಾಗಿ ಹೊಂದಿಕೊಂಡಿದ್ದುದು ಕಂಡುಬಂತು. ಹಾಗೆಯೇ ಮೈರಾನ್ ರೋಬಾರ್ಟ್ ಮತ್ತಿತರರು ನಡೆಸಿದ ಸಂಶೋಧನೆಯಲ್ಲಿ ಅಧ್ಯಾಪಕರ ನಿರೀಕ್ಷೆಯು ವಿದ್ಯಾರ್ಥಿ ಹಾಗೂ ಅಧ್ಯಾಪಕರ ನಡುವಣ ಪರಸ್ಪರ ಕ್ರಿಯೆಯ ಮೇಲೆ ಗಣನೀಯವಾಗಿ ಪ್ರಭಾವ ಬೀರುವುದನ್ನು ಗಮನಿಸಿದರು. ತಾವು ಉನ್ನತ ಮಟ್ಟದ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದ ಗುಂಪಿನ ವಿದ್ಯಾರ್ಥಿಗಳಲ್ಲಿ ಅಧ್ಯಾಪಕರು ಹೆಚ್ಚು ಆಸ್ಥೆ ವಹಿಸುತ್ತಿದ್ದರು. ತಾವು ಕಡಿಮೆ ನಿರೀಕ್ಷೆ ವ್ಯಕ್ತಪಡಿಸಿದ್ದ ಗುಂಪಿನ ವಿದ್ಯಾರ್ಥಿಗಳು ಬೌದ್ಧಿಕವಾಗಿ ಕೀಳ್ದರ್ಜೆಯವರು ಎಂದು ಅವರು ಪರಿಗಣಿಸಿದ್ದರು. ಅವರ ಈ ಗಣನೆ ಯಾವುದೇ ಆಧಾರದ ಮೇಲೂ ಅವಲಂಬಿತವಾಗಿರಲಿಲ್ಲ. ಈ ಸಂಶೋಧನೆಯಲ್ಲಿ ಹೊರಬಿದ್ದ ಆಸಕ್ತಿದಾಯಕ ಸಂಗತಿಯೆಂದರೆ ಅಧ್ಯಾಪಕರು ಉನ್ನತ ಮಟ್ಟದ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿದ್ದ ಗುಂಪಿನ ವಿದ್ಯಾರ್ಥಿಗಳು ಹೆಚ್ಚು ವಾಚಾಳಿಗಳಾಗಿದ್ದರು. ಈ ವಾಚಾಳತ್ವಕ್ಕೆ ಮೂಲಕಾರಣ ಅಧ್ಯಾಪಕರು ವ್ಯಕ್ತಪಡಿಸಿದ್ದ ನಿರೀಕ್ಷೆಯೇ ಇರಬೇಕು. ಇನ್ನೊಂದು ಗುಂಪಿನ ವಿದ್ಯಾರ್ಥಿಗಳಿಗೆ ಸಹಾನುಭೂತಿ, ಪ್ರೋತ್ಸಾಹಗಳು ದೊರೆಯದೇ ಹೋಗಿ, ಅಧ್ಯಾಪಕನ ತುಚ್ಛೀಕರಿಸುವ ನಿರೀಕ್ಷೆಗಳು ಅವರನ್ನು ಅಧ್ಯಾಪಕನಿಂದ ಹರಿದಾರಿ ದೂರವಿಟ್ಟಿರಬೇಕು. ನಿರೀಕ್ಷೆಗಳು ಕೃತಕ ಅಡೆತಡೆಗಳನ್ನು ನಿರ್ಮಿಸಿರಬೇಕು.

ಇನ್ನು ತರಗತಿಯಲ್ಲಿ ನಡೆಯುವ ಹಲವು ವಿದ್ಯಮಾನಗಳ ಕಡೆಗೆ ಗಮನ ಹರಿಸೋಣ. ಶಾಲಾ ಚಟುವಟಿಕೆಗಳಲ್ಲಿ ಅಂಕಗಳಿಕೆಯಲ್ಲಿ ಕೇವಲ ಕೆಲವರದೇ ಮೇಲುಗೈ. ಈ ಅಗ್ರ ಗಣ್ಯರು ಅಧ್ಯಾಪಕರ ಪ್ರೀತಿ ಪಾತ್ರರು. ಅವರ ಈ ಸಾಧನೆ ಕೇವಲ ಅವರ ಸಾಮರ್ಥ್ಯದಿಂದುಂಟಾದುದಲ್ಲ. ಯಾವುದೇ ಬಗೆಯಲ್ಲಿ ವಾದಿಸಿದರೂ ಈ ವಿದ್ಯಾರ್ಥಿಗಳ ಶ್ರಮಿಸುವಿಕೆಗೆ ಕಾರಣ ಬೇರೊಂದಿದೆ. ಈ ಮೇಲೆ ನಿರೂಪಿಸಲಾಗಿರುವಂತೆ ಉದ್ದೇಶ ಸಾಧನೆಗಾಗಿ ಹೆಣಗುವಿಕೆ ಇತರ ಕಾರಣಗಳಿಂದ ಪ್ರೇರಿತವಾಗಿರುವಂತಹದ್ದು. ತನ್ನೊಲುಮೆಯ ವಿದ್ಯಾರ್ಥಿಗಳನ್ನು ತನ್ನ ನಿರೀಕ್ಷೆಯನ್ನು ಸೂಚ್ಯವಾಗಿ ಅಥವಾ ಇನ್ನಾವುದೇ ರೀತಿಯಲ್ಲಿ ತಿಳಿಯಪಡಿಸುವುದರ ಮೂಲಕ ಎಚ್ಚರಿಸಬಹುದು. ಕಾರ‍್ಯೋನ್ಮುಖರಾಗುವಂತೆ ಅವರನ್ನು ಪ್ರೇರೇಪಿಸಬಹುದು. ಅವರಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ ಅವರನ್ನು ಪ್ರೋತ್ಸಾಹಿಸಲೂ ಬಹುದು. ಇದರೊಡನೆ ಸದಾ ಅಧ್ಯಾಪಕನ ಒಲುಮೆಗೆ, ಗೆಳೆಯರ ಪುರಸ್ಕಾರಕ್ಕೆ ಹಾತೊರೆಯುವ ವಿದ್ಯಾರ್ಥಿ ಈ ಬಗೆಯ ಸುವರ್ಣಾವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಾನೆ.

ಶಾಲೆಯಲ್ಲಿ ಅಂಕಗಳಿಕೆ ಒಂದು ಪ್ರಮುಖವಾದ ಕಾರ್ಯ. ಇದು ತರಗತಿಯಲ್ಲಿ ವಿದ್ಯಾರ್ಥಿಗಳ ಅಂತಸ್ತೀಕರಣ ವ್ಯವಸ್ಥೆಗೆ ನೆರವಾಗುತ್ತದೆ. ಅಧ್ಯಾಪಕ ತೋರ್ಪಡಿಸುವ ನಿರೀಕ್ಷೆ ಹೀಗೆ ಅಂತಸ್ತೀಕರಣ ಕ್ರಿಯೆ (Process of Social Stratification) ಯೊಡನೆ ಮಿಳಿತಗೊಳ್ಳುತ್ತದೆ. ಆ ಕ್ರಿಯೆಗೆ ಪೂರಕವಾಗುತ್ತದೆ. ಯಾವ ಅಧ್ಯಾಪಕನನ್ನೇ ಆಗಲಿ ಈ ಬಗ್ಗೆ ಪ್ರಶ್ನಿಸಿದಾಗ ಆತನಿಂದ ತಾನು ಎಲ್ಲರೊಡನೆಯೂ ಸಮಭಾವದಿಂದ ವರ್ತಿಸುತ್ತೇನೆ ಎಂಬ ಉತ್ತರ ಬರುತ್ತದೆ. ಇದು ಆದರ್ಶದ ಮಾತು ಅವಾಸ್ತವ ವಾದ ಸಂಗತಿ, ಈ ರೀತಿ ವರ್ತಿಸುವುದು ಅಸಾಧ್ಯವೂ ಕೂಡ. ತರಗತಿಯಲ್ಲಿನ ಎಲ್ಲ ವಿದ್ಯಾರ್ಥಿಗಳನ್ನೂ, ಅನೇಕ ವಿಷಯಗಳಿಂದ ಪೂರ್ವಗ್ರಹ ಪೀಡಿತವಾಗಿರುವ ಅಧ್ಯಾಪಕ ಸಮತಾಭಾವದಿಂದ ನೋಡಲು ಅಸಾಧ್ಯ. ಹಾಗೆ ಭಾವಿಸುವುದೂ ಅಸಾಧು. ಅವರ ಮಟ್ಟಕ್ಕೆ, ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಯುವ ಹಾಗೆ ಅವಕಾಶಗಳನ್ನೊದಗಿಸಬೇಕು. ನಿನ್ನ ಹಣೆಯ ಬರಹವಿಷ್ಟೆ ; ನಿನಗ್ಯಾಕೋ ಸ್ಕೂಲು, ಕತ್ತೆ ಬೆಳೆದ್ದಾಂಗೆ ಬೆಳೆದಿದ್ದೀಯಾ ಇತ್ಯಾದಿ ಹಣೆಪಟ್ಟಿಗಳನ್ನು ತಗುಲಿಸಿಕೊಂಡ ವಿದ್ಯಾರ್ಥಿಗಳು ಹೇಗೆ ಮುಂದೆ ಬಂದಾರು? ಆದುದರಿಂದ ಕರ್ತವ್ಯವಿಮುಖರಾಗುವ, ವಿಫಲರಾಗುವ ಹಿಂಬೆಂಚಿನ ವಿದ್ಯಾರ್ಥಿಗಳನ್ನು ಯಾರೇ ಆಗಲಿ ದೂಷಿಸಬೇಕಾಗಿಲ್ಲ. ಜಡ್ಡು ಹಿಡಿದಿರುವ ಅವರ ಮೈಮನಗಳನ್ನು ಇನ್ನಷ್ಟು ಘಾಸಿಗೊಳಿಸುವ ಶ್ರಮ ಪಡಬೇಕಾಗಿಲ್ಲ. ಗುರಿ ಮುಟ್ಟದಿರುವುದಕ್ಕಾಗಿ ಅವರನ್ನು ತಮ್ಮೊಲುಮೆಯ ಬಾಲಕರ ಮುಂದೆ ಲೇವಡಿ ಮಾಡಬೇಕಾಗಿಲ್ಲ.

ವಾಸ್ತವವಾಗಿ ಅವರು ಯಾರಿಗಾಗಿ ಶ್ರಮಿಸಬೇಕು ? ಯಾವ ಪುರುಷಾರ್ಥಕ್ಕಾಗಿ ಅವರು ಉದ್ಯೋಗಶೀಲರಾಗಬೇಕು ? ಪ್ರೋತ್ಸಾಹದ ಅಭಾವದಲ್ಲಿ ಕೂಡ ಕರ್ತವ್ಯವಿಮುಖರಾಗದಿರಲು ಅವರೇನು ಕ್ಯಾಕ್ಟಸ್ ಗಿಡಗಳೇ? ಹೀಗೆ ಅವರು ತಮ್ಮದೇ ಆದ ದೃಷ್ಟಿ ಕೋನದಿಂದ ಸರಿಯೆನಿಸುವಂತಿದ್ದಾರೆ. ಅಧ್ಯಾಪಕರು ಅವರಿಂದ ನಿರೀಕ್ಷಿಸಿದ್ದು ಕೆಳಮಟ್ಟದ ಸಾಧನೆಯನ್ನು, ಅವರು ಸಾದರಪಡಿಸಿದ್ದೂ ಅದನ್ನೇ.

ಅಧ್ಯಾಪಕನ ನಿರೀಕ್ಷೆ ವಿದ್ಯಾರ್ಥಿಗಳ ಸಮುದಾಯದ ಮೇಲೆ ಇನ್ನೊಂದು ಬಗೆಯ ಪ್ರಭಾವವನ್ನೂ ಬರುತ್ತದೆ. ಅದು ಗುಂಪಿನಲ್ಲಿನ ಸಾಮಾಜಿಕ ಮೌಲ್ಯಗಳನ್ನು ರೂಪಿಸು
ತಿದೆ. ವ್ಯಕ್ತಿ ಗುಂಪಿನ ದಾಸ ತಾನೇ? ವ್ಯಕ್ತಿಯ ಚಟುವಟಿಕೆಗಳನ್ನು ಈ ಸಾಮಾಜಿಕ ಮೌಲ್ಯಗಳು ನಿಯಂತ್ರಿಸುತ್ತವೆ. ಅಧ್ಯಾಪಕನು ವ್ಯಕ್ತಪಡಿಸುವ ನಿರೀಕ್ಷೆಗಳು ಈ ಮೌಲ್ಯಗಳ ಸಂರಕ್ಷಣೆಯಲ್ಲಿ ಪಾತ್ರವಹಿಸುತ್ತವೆ ವಿದ್ಯಾರ್ಥಿಯ ಸಾಧನೆಯ ಬಗೆಗಿನ ಮೌಲ್ಯಗಳು ವಿದ್ಯಾರ್ಥಿಗಳಲ್ಲಿ ಮೇಲು ಕೀಳು ಎಂಬ ವರ್ಗೀಕರಣವನ್ನು ಮಾಡುತ್ತವೆ. ಮೇಲಂತಸ್ತನ್ನು ಪಡೆದ ವಿದ್ಯಾರ್ಥಿಗಳು ಜನಪ್ರಿಯರೂ, ಗುಂಪಿನ ಕೇಂದ್ರ ಬಿಂದುಗಳೂ ಆಗುತ್ತಾರೆ. ಇದಿಷ್ಟೇ ಅಲ್ಲದೆ ಈ ವರ್ಗೀಕರಣ ವಿದ್ಯಾರ್ಥಿಯ ಚಿತ್ರ ಸ್ವಾಸ್ಥ್ಯ ಮತ್ತು ಸಾಮಾಜಿಕ ಹಾಗೂ ಭಾವನಾತ್ಮಕ ಹೊಂದಾಣಿಕೆಯ ಮೇಲೂ ಪ್ರಭಾವ ಬೀರುತ್ತದೆ.

ಈ ಕಾರಣಗಳಿಂದಾಗಿ ನಿಮ್ಮ ವರ್ತನೆಗಳೊಡನೆ ನಿಮ್ಮ ಮಾತನ್ನೂ ಎಚ್ಚರಿಕೆಯಿಂದ ಗಮನಿಸಿ ಎಂದು ಅಧ್ಯಾಪಕರಿಗೆ ಕರೆ ನೀಡುವ ಕಾಲ ಸನ್ನಿಹಿತವಾಗಿದೆ. ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ಗುಂಪುಗಳಲ್ಲಿ ಅಧ್ಯಾಪಕರದೂ ಒಂದು ಪ್ರಮುಖವಾದದ್ದು. ಆದ್ದರಿಂದ ತಮ್ಮ ನಡೆ ನುಡಿ ವಿದ್ಯಾರ್ಥಿಗಳ ಮೇಲುಂಟುಮಾಡುವ ಪ್ರಭಾವವನ್ನು ಅವರು ಅರಿಯಬೇಕು. ಉತ್ತಮ ರೀತಿಯಲ್ಲಿ ಶಬ್ದ ಸಂಕೇತಗಳನ್ನು ಬಳಸುವ ಕಲೆಯನ್ನು ಕಲಿಯಬೇಕು. ಪ್ರಾಯಶಃ ಉನ್ನತ ಮಟ್ಟದ ನಿರೀಕ್ಷೆ, ಪ್ರೋತ್ಸಾಹ, ಉತ್ತಮ ರೀತಿಯಲ್ಲಿ ಇತರರೊಡನೆ ಸಂಪರ್ಕ ಬೆಳೆಸುವ ಕಲೆ ಇತ್ಯಾದಿಗಳ ನೆರವಿನಿಂದ ಅಧ್ಯಾಪಕ ವಿದ್ಯಾರ್ಥಿಯ ಸಾಧನೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆತನ ಬೌದ್ಧಿಕ ಸಾಮರ್ಥ್ಯವನ್ನೂ ಔನ್ನತ್ಯಕ್ಕೇರಿಸಬಲ್ಲ.
ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇ ಆದ ಬಗೆಯಲ್ಲಿ, ಮಟ್ಟದಲ್ಲಿ ಪರಿಪೂರ್ಣತೆ ಯನ್ನು ಕಂಡುಕೊಳ್ಳಲು ಆತನಿಗೆ ಅಧ್ಯಾಪಕ ನೆರವಾಗಬೇಕು. ಅವಶ್ಯಕತೆಗೆ ತಕ್ಕಂತೆ ನಿರೀಕ್ಷೆಯಲ್ಲಿ ವ್ಯತ್ಯಾಸ ತರಬೇಕು. ಈ ವ್ಯತ್ಯಾಸ ಪ್ರೋತ್ಸಾಹಕರವಾಗಿರಬೇಕು, ಈ ರೀತಿಯಲ್ಲಿ ವರ್ತಿಸುವುದರಿಂದ ಶೈಕ್ಷಣಿಕವಾಗಿ ಹಿಂದುಳಿಯುತ್ತಿರುವ ವಿದ್ಯಾರ್ಥಿಗಳ ಮಟ್ಟವನ್ನೂ ಹೆಚ್ಚಿಸಬಹುದು. ಹಾಗೆ ಮಾಡಿದರೆ ಬರುವ ಹೆಚ್ಚು ಲಾಭ ಅಧ್ಯಾಪಕನಿಗೇ ತಾನೇ ? ! ಇಲ್ಲದಿದ್ದರೆ ಸಮಾಜದ ಅನಿಷ್ಟಗಳನ್ನು ತೊಡೆದು ಹಾಕಲು ಯತ್ನಿಸ ಬೇಕಾಗಿರುವ ಅಧ್ಯಾಪಕನೇ ಅವುಗಳನ್ನು ಅರಿವಿದ್ದೋ, ಇಲ್ಲದೆಯೋ ಫೋಷಿಸಿಯಾನು, ಶಾಲೆಯಲ್ಲಿನ ಅಂತಸ್ತೀಕರಣಕ್ಕೆ ಮೂಲಕಾರಕವಾಗುವ ಆತನ ನಿರೀಕ್ಷೆಗಳು ಸಮಾಜದ ಅಂತಸ್ತೀಕರಣ ವ್ಯವಸ್ಥೆಗೂ ಅಡಿಪಾಯ ಹಾಕಿಯಾವು. ಹಾಗಾದರೆ ಜಾತಿ ಪದ್ಧತಿ, ಆರ್ಥಿಕ ಅಸಮಾನತೆ ಮೊದಲಾದ ಸಾಮಾಜಿಕ ಅನಿಷ್ಟಗಳನ್ನೂ ತೊಡೆದುಹಾಕಲು ಹೆಚ್ಚು ಶ್ರಮವಾಗುತ್ತದೆ. ಆದುದರಿಂದ ಪ್ರಭಾವಯುತವಾದ ತನ್ನ ನಡೆನುಡಿಗಳು ಈ ವಿಷವರ್ತುಲವನ್ನು ಆರಂಭಿಸದಂತೆ ಅಧ್ಯಾಪಕ ಎಚ್ಚರವಹಿಸಬೇಕು.

Close

ಹುರಿಗಾಳು

ಹುರಿಗಾಳು

-ರಾಮದಾಸ್
೧. ೧೯೭೫

ಉದ್ದಾನೆ ರೇಶಿಮೆ ಸೀರೆ
ಸ್ವಚ್ಛಂದ
ತಿರುಗಿದಳು ಬುಗುರಿ
ಇಪ್ಪತ್ತೆಂಟು ಸುತ್ತು
ತುಂಬು ಯೌವನದ ಬತ್ತಲು ಮೈ
ಕಪಿಮುಷ್ಟಿ
ದುಃ
ಶಾಸನ.

೨ ಬಿಳಿಯಾನೆ

ಕರಿಯರ ಕಾಲೋನಿಗಳಲ್ಲಿ
ಕಂಟ್ರಿ ನಾಯಿ
ಬಿಳಿಯಾಗಿ ಕಂಡದ್ದಕ್ಕೆಲ್ಲ ಹುಲಿಯ ಗರ್ಜನೆ
ರಾಕ್ಷಸರಿಗೆ ಮೀಸೆ ಖಾಸಾಪೋಸು.

ಗುಬ್ಬಿಗಳಿಗೆ ಬ್ರಹ್ಮಾಸ್ತ್ರ
ಇಂಗು ತಿಂದ ಮಂಗ
ಗಳಿಗೆ ಸುಗ್ರೀವ
ಬೆನ್ನುಹುರಿ ಕಳೆದ ಬಡಪಾಯಿಗಳ
ಬಿಳಿಯಾನೆ.

೩ ಹೊಸ ಠರಾವು

ಪಾಳುಬಾವಿಯ ತಳದಲ್ಲಷ್ಟು ನೀರು
ನೀರಲ್ಲಿ ಬಣ್ಣ ಬಣ್ಣದ ಮುಗಿಲು
ಕುತ್ತಿಗೆ ಮುರಿದುಬಿದ್ದ ಕುರಿಗಳಿಗೆ
ಪ್ರತಿಬಿಂಬ
ಸುತ್ತಲೂ ನಿಂತು ನೋಡಿ
ಹಾಡಿ
ಬಂದು ಬಿತ್ತು
ಮತ್ತೊಂದೂ ಬಿತ್ತು
ಬೀಳುತ್ತಲೇ ಇತ್ತು
ಘೋಷಿಸಿ ಹೊಸ ಠರಾವು
ಸೇರಿತ್ತು
ಹಳೆಯ ಬಾವಿ

೪ ಪ್ರಹ್ಲಾದ

ಮೂಲಭೂತ
ಅಸ್ತಿತ್ವಕ್ಕೆ ಕಾರಣಳಾದ ತಾಯ ಕೆ
ವಿಷದ ಬಟ್ಟಲು-
ಪ್ರಹ್ಲಾದ.
ಹಿರಣ್ಯಕಶಿಪು ಆಡಿದ್ದೆ ಮಾತು
ಪ್ರತಿ ಮಾತಿನ ಪ್ರಹ್ಲಾದನಿಗೀಗ
ಹೆಜ್ಜೆ.
ಇಟ್ಟಲ್ಲೆಲ್ಲ ವಿಷದ ಹಗ್ಗ
ಹೇಗೆ ಸಗ್ಗ ?

೫ ಗಾಣ

ದಾರಿಗಳು ಅಡ್ಡ
ದಾರಿಗಳು ಒಳದಾರಿಗಳು
ಕಳ್ಳ ದಾರಿಗಳು ದಿಲ್ಲಿಗೂ
ದೇವಗಿರಿಗು

೬ ದ…ದ..ದ…

ಕೆರೆ ಕಟ್ಟೆ ಬಾವಿ
ಮಳೆ ಹೊಳೆ ಸಮುದ್ರ
ದ
ದ
ದ

ನೀರೆಲ್ಲ ಜಿನುಗಿ
ಕೊರೆದು
ಹರಿದು
ಒದ್ದೆ
ಆಟಂ ಬಾಂಬು

ದರಿದ್ರ
ನಾರಾಯಣಪ ದವಡೆ
ಗಿಲ್ಲ ನೋವು

೭ ದಾಹ

ಕತ್ತಲಿನಲ್ಲಿ ಗರಿಕೆ
ಗರಿಕೆಯ ಮೇಲೆ ಇಬ್ಬನಿ
ಇಬ್ಬನಿಗೆ ಬೆಳಕಿನ ಬಯಕೆ
ಬಯಸಿದ ಬೆಳಕೆ
ಬಿಸಿಲು
ಬಿಸಿಲಿಗೆ ದಾಹ

೮ ಕಾಲ

ಸನಾತನ
ಅನಂತನ ಅಂತ್ಯ
ಕಾಲಕ್ಕಿಲ್ಲ ದಯೆ
ದಾಕ್ಷಿಣ್ಯ

ಕಾಶಿ ಸೇರಿದ ಸಂನ್ಯಾಸಿ
ಕುಡುಗೋಲು
ಹಿಡಿದು ವೋಲ್ಗಾ ದಾರಿ
ನಡೆದಿದ್ದಾನೆ

೯ ಗೂಢ

ಸಹಸ್ರಾಕ್ಷ
ಸಹಸ್ರ ಬಾಹು
ಟೆಲಿಕಮ್ಯುನಿಕೇಷನ್
ಮೈಕ್ರೋವೇವು

ಗಂಡ ಹೆಂಡತಿ ನಡುವೆ
ನೂರು ಕಿವಿ
ನೂರು ಕಣ್ಣು
ನಕ್ಕರೂ ಸಕ್ಕರೆ
ಹುಣ್ಣು

೧೦ ಕರ‍್ತವ್ಯ

ಕಚೇರಿ ಮುತ್ತಿ
ಕ್ಯಾಂಟೀನ್ ಸುತ್ತಿ
ಹಾರಾಡಿದ ನೊಣಗಳು
ಸದಾ ಇರುವ
ದುಡಿದುಡಿದುಡಿವ
ಇರುವೆ–
ಗಂಡ
ಮಾಡದ್ದನ್ನು
ಗಂಡಸು ಮಾಡಿದ
ಮೇಲೆ

೧೧ ಮೂಕ

ವೇದೋಷನಿಷತ್ತು
ಭಾಗವತ ಹರಿ
ಹಎನಾಮ ಸಂಕೀರ್ತನ
ಬೌದ್ದ ಕಣಾವ
ಚಾರ್ವಾಕ
ರೆಲ್ಲ ಮೂಕ

ವೇದ ಭೂಮಿ
ವಾದ ಭೂಮಿ
ಅಲ್ಲಾ!

೧೨ ದೇಶ

ದೇಶಗಳ ಬಗ್ಗೆ ಇರುವ
ಕೋಶಗಳನ್ನೆಲ್ಲ ನೋಡಿ
ಕೋಶಗಳಲ್ಲಿ
ಕೋಶಾಗಾರಗಳಲ್ಲಿ
ಇಲ್ಲ ಅರ್ಥ
ಎಲ್ಲ ವ್ಯರ್ಥ

೧೩

ಆಆ ಬಾರದವನಿಗೆ
ಅಲಂಕಾರ ಶಾಸ್ತ್ರ
ಕೋಣನ ಮುಂದೆ ವೀಣೆ—
ಕಾವ್ಯ
ಕತ್ತೇ ಕೂಗು
ಲಯತ್ರಯ
ಪ್ರಲಯ

೧೪ ನಾರಿ

ನಾರಿ
ಮುನಿದರೆ ಮಾರಿ
ಮುನಿ
ಯದಿದ್ದರೆ ಹೆಮ್ಮಾರಿ
ಗಟ್ಟಿಗಳನ್ನೂ ತೂರಿ
ಕಾಣಿಸಿದೆ ಗೋರಿ

೧೫ ಮೈದಾಸ
ಲೋಹಗಳನ್ನೆಲ್ಲ ಬಂಗಾರ
ವಾಗಿಸುವ ಸ್ಪರ್ಶಮಣಿ
ತಾಗಿ.
ಊಹಾಲೋಹ ಜೀವಾಜೀವ ಅನ್ನ
ಎಲ್ಲ ಚಿನ್ನ

ಸ್ವಸ್ತಿಕ ಹಿಡಿದು ಹಸಿವಾಗದೇ
ಕುಣಿಯುತ್ತಿರುವ
ಮೈ
ದಾಸ

೧೬ ಪಾರಿಜಾತ

ಎಂದೂ ಮುಳುಗದ ಸೂರ‍್ಯ
ಮುಳುಗಿದಾಗ
ಮುಗುಳು ಮುಗುಳಾದ
ಪಾರಿಜಾತ
ಅರಳಿ ಹರಡಿದ ಪರಿಮಳ
ಕತ್ತಲಲ್ಲೇ ಸುಳಿದು
ಬೆಳಗಾಗೋ
ಆಷ್ಟರಲ್ಲೇ ಅಳಿದು
ಕೊಳೆತ ವಾಸನೆ

೧೭ ವಿಡಂಬನ

ಸಂಗೀತವಿದ್ದಲ್ಲಿ ಸಾಹಿತ್ಯ
ಸಾಹಿತ್ಯವಿದ್ದಲ್ಲಿ ಸಹೃದಯ
ಅಧಿಕಾರವಿದ್ದಲ್ಲಿ ಬುದ್ಧಿ
ಬುದ್ದಿಯಿದ್ದಲ್ಲಿ ಅಭಿವ್ಯಕ್ತಿ
ಎಣ್ಣೆ ಸೀಗೇಕಾಯಿ ಅಲ್ಲವೇ ತಾಯಿ ?

೧೮ ಭಕ್ಷಿ

ಮಾಡಿದ್ದೆಲ್ಲ ಪೂಜೆ
ನೀಡಿದ್ದೆಲ್ಲ ನೈವೇದ್ಯ

೧೯ ಬೆಂಕಿ

ತೇನವಿನಾ ತೃಣಮಪಿ ನೇ ಚಲತಿ
ಅಂದಮೇಲೆ
ಹನುಮನ ಬಾಲಕ್ಕೆ ಬೆಂಕಿ
ಹಚ್ಚಿದವ ನೀನೆ ನಾರಾಯಣಾ.
ನಾರಾಯಣ
ಲಂಕೆಯಲ್ಲೂ ಮನೆಗಳಿವೆ
ಮನೆಗಳಲ್ಲಿ ಹಣತೆಗಳಿವೆ.
ಹಣತೆ ಹಚ್ಚದೆ ಹನುಮ
ಮನೆಮನೆಗೂ ಬೆಂಕಿಯಿಟ್ಟ
ಎಲ್ಲ ಸತ್ತರೆ ಹೇಗೆ ಹೊರುವೆ ಚಟ್ಟ?

೨೦ ಸುದ್ದಿ

ಇತ್ತೀಚೆಗಿನ ವಾರ್ತಮಾನ
ಪತ್ರಿಕೆಗಳೆಲ್ಲ ಬರಿದೋ ಬರಿದು.
ಹ್ಞಾ
ಒಂದು ಸುದ್ದಿ ಗಮನೀಯ :

ಬಿಳಿಯ ಕಾಗೆಗಳೆರಡು
ಮೊಟ್ಟೆಯೊಡೆದು ಬಂದಿವೆ ಹೊರಗೆ !

೨೧ ಪ್ರಿಮೆಚೂರ್ ಬರ‍್ತ್‌

ಹಟ ಹಿಡಿದು ಹಡೆದ ಮಗು
ಬಾಣಂತಿಗಿಪ್ಪತ್ತೆಂಟೇ ದಿವಸ
ಇಪ್ಪತ್ತೆಂಟರ ಮಗು
ಮಗುವಿಗೆರಡೇ ಕೈ
ಮೂರು ಕೆಲಸ :

ಕಣ್ಣೆರಡ ಮುಚ್ಚಬೇಕು
ಕಿವಿಯರಡ ಮುಚ್ಚಬೇಕು
ತಿಕಬಾಯ ಮುಚ್ಚಬೇಕು

ದಿನ ತುಂಬದೇ ಹುಟ್ಟಿದ
ದುರ್ಬಲ ಶಿಶು
ಕರ‍್ಮತ್ರಯಕ್ಕೆ ಕಕ್ಕಾಬಿಕ್ಕಿ
ಇನ್ನೆಷ್ಟು ನಿಮಿಷ
ಕಣ್ ಕಿವಿ ಬಾಯ್ಮುಚ್ಚಿ
ಬದುಕಬಹುದು ?

೨9 ಮಮತೆ

ಹೊರನಾಡಿನಾಕಾಶವಾಣಿ
ಗಳೆಲ್ಲ ಕಪ್ಪ ನಾಯಿ
ಗೆ ಸುಣ್ಣ ಬಳಿಯುತ್ತಿವೆ.

ರಥಬೀದಿಯಲ್ಲೊಬ್ಬ ಹುಚ್ಚ
ನಮ್ಮನ್ನೆಲ್ಲ
ಹುಚ್ಚರೆಂದು ಹೀನಾಮಾನ ಅಂದ.

ದೆಹಲಿಯಾಕಾಶ
ವಾಣಿ ಚಂದ.

೨೩ ಚಿನ್ನದ ಚೂರಿ

ಹೆತ್ತವಳನತ್ತು ಕೇಳಿದರೆ
ಹಾಲು ಹಾಲಾಹಲ
ಸತ್ತ ಭೂಮಿಯನುತ್ತು ಬಾಳಿದರೆ
ಪಾಲು ಕೋಲಾಹಲ.
ಬಿನ್ನಹಕೆ ಬಾಯಿಲ್ಲವಯ್ಯಾ.

೨೪ ನಿರ್ಧಾರ

ಈಸಬೇಕು
ಇದ್ದು ಜೈಸಬೇಕು.
ಈಸಬೇಕೆ ನೀರಿಗೆ ಬೀಳಬೇಕು
ನೀರಿಗೆ ಬೀಳಬೇಕೆ ಈಸು
ಬರ ಬೇಕು.

ಈಸು ಈಸು ಇನ್ನೇಸು
ಬರ
ಬೇಕು ?

೨೫ ಜೈ

ಜೈ ಎನ್ನಿರೋ ಜೈ ಎನ್ನಿರಿ
ಭಾರತಮಾತೆಗೆ ಜೈ ಭಾರ
ತಮಾಷೆಗೆ ಜೈ ಭಾ
ರತಮಾತೆಗೆ
ಬರಿ
ಮಾತಿಗೆ ಮಾತೆಗೆ ಜೈ
ಎನ್ನಿರೋ ಮಾಮಾತೆಗೆ ಮಾ
ತೆಗೆ ಜೈ
ತೆಗೆ
ಘೇ!

Close

ಅಂಕುರ

ಅಂಕುರ

ರಾಜಗೋಪಾಲ ಎಂ

ಯಾವುದೋ ಶಬ್ದಕ್ಕೆ ಫಕ್ಕನೆ ಎಚ್ಚರವಾಯಿತು. ಎಲ್ಲಿದ್ದೇನೆಂದು ಯೋಚಿಸುತ್ತಾ, “ಹಾಂ ಹಾಂ, ಬಂಗಲೆಯಲ್ಲಲ್ಲವೇ’, ಎಂದು ಉತ್ತರಿಸುತ್ತಾ, ಮಗ್ಗುಲು ಬದಲಿಸುತ್ತಿದ್ದಂತೆ ಮಂಚ “ಚಿರೀಂ” ಅಂದಾಗ, ತಲೆಯ ಬಳಿ ನಿನ್ನೆ ಇಟ್ಟಿದ್ದ ಟಾರ್ಚು ಹುಡುಕಿದ. ಕೂಡಲೇ ಸಿಗದಾಗ-‘ಎಲಾ ಇದರಪ್ಪನ’-ಎಂದು ಶಪಿಸಿ-ತಡವಿಸಿಕ್ಕಿದೊಡನೆಯೇ ಸ್ವಿಚ್ಚನ್ನೊತ್ತಿ-ಮಂದ ಬೆಳಕಿನಲ್ಲಿ ವಾಚು ನೋಡಿದ ‘ಇನ್ನೂ ಐದೂ ಆಗಿಲ್ಲ’-ಎಂದು, ಎಲ್ಲೋ ಸರಿದಿದ್ದ ಹೊದಿಕೆ ಎಳೆದ. ಮೈಮೇಲೆ ಹರಿಯುತ್ತಿದ್ದುದು, ಸೊಳ್ಳೆಯೋ, ತಗಣಿಯೊ, ಎಂದೂ ತಿಳಿವ ಗೋಚಿಗೆ ಹೋಗದೆ ಪೂರಾ ಮುಸುಕೆಳೆದು ಬಿಮ್ಮನೆ ಮಲಗಿದ. ಛಳಿಯ ಇರುವಿಕೆಯ ಅರಿವಾದಂತೆ ಅನಿಸಿ, ಈ ಗೂಡಿನೊಳಗೂ ಏನೋ ಕಚ್ಚಿದಂತಾಗಿ, ಮೈ ಪರಚುತ್ತಿದ್ದಂತೆಯೇ, ತನ್ನ ಬಿಸಿ ಉಸುರಿಗೆ, ಹೊದಿಕೆ ಪದರೂ ಬಿಸಿ ಏರುವುದರ ಅರಿವಾದಂತೆ “ಏಳೋ” ಎಂದಾರೋ ಬಾಗಿಲು ಬಡಿದಿದ್ದರು.
ಆ ಕರ್ಕಶ ಶಬ್ದಕ್ಕೆ ಎದೆ “ಝಲ್” ಎಂದರೂ, ‘ಈ ಛಳಿಗೆ ಯಾರಿಗಪ್ಪಾ ಇಷ್ಟು ಜೀವ ಎಳೆಯುವುದು’ ಎಂದನ್ನಿಸಿತು. ಪುನಃ ಬಾಗಿಲು ಬಡಿದಂತಾದಾಗ “ಪಾಪ, ಆಗಲೂ ಬಾಗಿಲು ಬಡಿತದ್ದೇ ಶಬ್ದ ಎದ್ದಿರಲೂಬಹುದು ನನ್ನನ್ನು ಎಚ್ಚರಿಸಿದ್ದು” ಎಂದು ಮುಸುಕು ಸರಿಸಿ “ಬಂದೆ” ಅಂದ. “ಯಾರಾದರೂ ಕಳ್ಳನಿದ್ದರೆ…” ಎಂದು
ಯಾರೆಂದು ಕೇಳುವ ಮನಸ್ಸಾದರೂ “ಕಳ್ಳ ಬಂದರೂ ನನ್ನಲ್ಲೇನಿದೆ…. ಹೋದದ್ದೇ ದಾರಿ, ನಿಂತದ್ದೇ ಮನೆಯವನಿಗೆ”……ಎಂದು ಪುನಃ ಟಾರ್ಚನ್ನು ಕೈಗೆತ್ತಿಕೊಂಡ.
ಮಂಚದಿಂದ ಕೆಳಕ್ಕಿಳಿಯುತ್ತಿದ್ದಂತೆ ಕಾಲು ನೆಲಕ್ಕೆ ಸೋಂಕಿದೊಡನೆಯೇ, “ಅಬ್ಬಾ ಛಳಿ” ಎಂದು ಚಪ್ಪಲಿ ಹುಡುಕಿ ಸಿಕ್ಕಿಸಿದ. ಬಾಗಿಲಿನ ಬಳಿ ಸರಿದು ಇಲೆಕ್ನಿಕ್‌ ಸ್ವಿಚ್‌‌ನೊತ್ತಿದ. ತೀವ್ರ ಬೆಳಕಿಗೆ ಒಮ್ಮೆ ಕಣ್ಣು ಮಸುಕಾದರೂ ಬಾಗಿಲಿನ ಬೋಲ್ಟ್ ಎಳೆದ. ಬಾಗಿಲು ತೆರೆಯುತ್ತಿದ್ದಂತೆಯೇ “ಬೇಗ, ಬೇಗ”-ಅಂದಾರೋ ಅಂದಂತಾಗಿ, ಹೊರಗಿಣುಕಿದ. ಎದುರು ಯಾರೂ ಕಾಣದಾದಾಗ, ಭೂತದ ಉಪದ್ರವವೋ ಎಂದು ಭಯವಾಗಿ, ಪುನಃ ಬಾಗಿಲು ಮುಚ್ಚುತ್ತಿದ್ದಂತೆ, ಎದುರು ಕಂಬದ ಬಳಿ ಏನೋ ಶಬ್ದ. ಏನೋ ಚಲನವಲನವಾದಂತಾಗಿ, ಏನೆಂದು ನೋಡುತ್ತಲೇ ಇದ್ದಂತೆ, ಧಡಿಯನ ದರ್ಶನವಾಯಿತು. ಧುತ್ತೆಂದು ಎದುರು ಬಂದ. ತುಂಬು ಮೀಸೆಯ ಆ ಕರೀ ಧಡೂತಿ ಅಸಾಮಿಯನ್ನು ನೋಡುತ್ತಿದ್ದಂತೆಯೇ ಆತ ಆ ಛಳಿಗೂ ಪೇಂಟ್, ಕೋಟುಗಳೊಳಗೆ ಬೆವರಿದ. ನಾಲಿಗೆ ತುಟಿಗೆ ಸರಿಸಿ ತೇವವಾಗಿಸಿ, ತೊದಲಿದ “ಯ್ಯಾ ರು ಬೇಕಾಗಿತ್ತು”.
“ಇವತ್ತೇ ಎಲ್ಲಾ ಮುಗೀಬೇಕು….ತಿಳೀತೋ ಬೇಗ, ಬೇಗ ಪ್ರಾತರ್ವಿಧಿ ತೀರಿಸಿ ಹೊರಡು; ನಾನಿಲ್ಲೇ ಇದ್ದೇನೆ” ಅಂದ. ಫಕ್ಕನೇ ತನ್ನ ಕರ್ತವ್ಯದ ನೆನಪಾಗಿ, ಆತ “ಸರಿ, ಐದೇ ನಿಮಿಷ, ಒಳಗೆ ಕೂತಿರಿ”-ಅಂದ. “ಫಟ್ಟಾಂಗವೆಲ್ಲಾ ಮತ್ತೆ: ಇಡೀ ದಿನ ಇದೆ ಅದಕ್ಕೆ” ಎಂದು ಗದರಿಸಿ, ಅದೇ ಕಂಬದತ್ತ ಸರಿದ.
“ಇವನೆಂತಹ ಜನವಪ್ಪಾ”-ಎಂದನ್ನಿಸಿದರೂ ಧಡಿಯನ ಗತ್ತಿಗೆ, ತಾಕತ್ತಿಗೆ ಬೆದರಿ ಬೇಗ ಬೇಗ, ಬೇಗ್‌ನ ಜಿಪ್ ಸರಿಸಿದ. ಪೇಸ್ಟ್, ಬ್ರಶ್, ಹುಡುಕಿ ತೆಗೆದು, ಬ್ರಶ್‌ಗೆ ಪೇಸ್ಟ್ ಸವರಿ, ಹಲ್ಲುಜ್ಜುತ್ತಾ ಬಾತ್ ರೂಮಿನತ್ತ ನಡೆದ. ಸ್ವಿಚ್ ಹಾಕಿ ಮಂದ ಬೆಳಕಿನಲ್ಲಿ ನೀರಿದೆಯೆ ಎಂದು ನಳ್ಳಿ ತಿರುಗಿಸಿದ. ಪುಣ್ಯಕ್ಕೆ ನೀರೂ ಬರುತ್ತಿತ್ತು. ಒಡೆದ ಬಕೆಟ್, ಅತ್ತ ಸರಿಸಿ ನೀರು ತುಂಬಲು ಬಿಟ್ಟ. ಹಲ್ಲುಜ್ಜಿ, ಸೋರಿ ಉಳಿದ ನೀರಿನಲ್ಲಿ ಕೊಳೆಯಾದ ಮೊಗ್ಗನ್ನು ಒಮ್ಮೆ ತೊಳೆದು, “ನೀರು, ಛಳಿ”-ಅದು ಮುಖ ತೊಳೆದ. ‘ಪುನಃ ಯಾರು ಬಟ್ಟೆ ಬದಲಿಸುವುದು’ ಎಂದು ಕೋಟು ಅಲ್ಲೇ ತೆಗೆದಿರಿಸಿ, ಪ್ಯಾಂಟು ಸರಿಸಿ, ಲ್ಯಾವಾಟರಿಯಲ್ಲಿ ಕುಳಿತ. ಆಗಲೂ ಯಾರೋ ‘ಬೇಗ ಬೇಗ ಅಂದಂತಾಯಿತು. “ಊಂ, ಊಂ”–“ಬೇಗ, ಬೇಗ”, ಅಂದು ಅಣಕಿಸುತ್ತಾ, “ಉಹೂಂ” ಎಂದು, ತನ್ನಷ್ಟಕ್ಕೇ ಕೋಟು ಸಿಕ್ಕಿಸಿ, ಬ್ರಶ್ ಹಿಡಿದು ದೀಪ ಆರಿಸಿದ. ಮೇಜಿನ ಬಳಿ ಬಂದು, ಬ್ರಶ್ ಬೇಗ್‌ಗೆ ಸೇರಿಸಿ, ಬಾಚಣಿಗೆ ಹುಡುಕಿ ಹೊರತೆಗೆದ. ಮಸಕುಮಸುಕಾಗಿದ್ದ ಕೋಣೆಯ ಕನ್ನಡಿಯಲ್ಲಿ ತಲೆ ಬಾಚುತ್ತಿದ್ದಂತೆಯೇ ತೆರೆದಿದ್ದ ಬಾಗಿಲಿನಿಂದ ಧಡಿಯ ಒಳಸರಿದ. ಕೈಲಿದ್ದ ಪ್ಲಾಸ್ಕು, ಕೇರಿಯ‌ರ್‌ಗಳನ್ನು ಇದೇನೆಂದು ಕೇಳುವ ಮೊದಲೇ ಧಡಿಯ “ತಿನ್ನು”-ಅಂದ. “ನೀವು ಸ್ವಲ್ಪ-ಕಂಪೆನಿಗೆ”-ಎಂದು ಬಾಯಿ ತೆಗೆಯಬೇಕು ಎಂದನ್ನುವಷ್ಟರಲ್ಲಿಯೇ “ಎಷ್ಟು ಅಧಿಕ ಪ್ರಸಂಗ-ತಿನ್ನು ಮೊದಲು”- ಎಂದು ಗದರಿಸಿದ ; ಮತ್ತೆ ಯಾಕೋ …. ….. ನಕ್ಕ.
ಆತ ಕ್ಯಾರಿಯರ್‌ನ ಹೇಂಡಲ್ ಸರಿಸಿ ಮುಚ್ಚಳ ತೆರೆದೊಡನೆಯೇ ಇಡ್ಲಿ, ತೋವೆ ; ಎರಡನೇ ಅಂಕಣದಲ್ಲಿ ಮಸಾಲೆ ದೋಸೆಗಳು ಹಬೆಯಾಡುತ್ತಿದ್ದುವು. “ಅಬ್ಬಬ್ಬಾ, ಇಷ್ಟು”-ಎಂದು ಕಣ್ಣು ಬಿಟ್ಟರೂ ವಾಸನೆ ಆಹ್ಲಾದಕರವಾಗಿತ್ತು. ಹಸಿವನ್ನು ಉದ್ದೀಪಿಸಿತ್ತು. ಧಡಿಯ ಕೇಳದವನಂತೆ, ಅಂದಿನ (?) ಪೇಪರು ಓದತೊಡಗಿದ.
ತಿಂದು, ತಿಂದು–ಸಾಕಾಗಿ, “ಉಸ್ಸಪ್ಪಾ”-“ಇನ್ನು ಆಗೋಲ್ಲ”-ಅಂದ. ಧಡಿಯ ಒಮ್ಮೆಲೇ ನಕ್ಕು “ನೋಡು, ಇಂದೇ ಎಲ್ಲಾ ಮುಗೀಬೇಕು. ಮತ್ತೆ ಹಸಿವಾದರೆ ಏನು ಮಾಡ್ತೀಯಾ”, ಎಂದು ರಮಿಸಿದ. ಧಡಿಯ, ಸ್ವಲ್ಪ ಮೆತ್ತಗಿದ್ದಾನೆಂದು, ಆತನಿಗೆ ಸ್ವಲ್ಪ ಧೈರ್ಯ ಬಂದಂತಾಗಿ “ನನ್ನ ಹೊಟ್ಟೆ ನನಗೆ ಗೊತ್ತಿಲ್ವೇ”-ಎಂದು ಗೊಣಗಿದ. ಧಡಿಯ ಪುನಃ ಗಂಭೀರನಾದ. ಒಮ್ಮೆ ಹುಬ್ಬುಗಂಟಿಕ್ಕಿ, ಪುನಃ ಸಡಿಲಿಸಿದ” ಛೇ… ಛೇ……..ನಿನ್ನ ಬಗ್ಗೆ ನಿನಗೆ ಗೊತ್ತು ಮರೀ…….. ಆದರೆ ಹಿಂದಿನದ್ದು ಮತ್ತು ಇಂದಿನದ್ದು. ಈಗ ತಿನ್ತಿರೋರು ಹಿಂದೆಗೂ ಅಲ್ಲ, ಈಗಕ್ಕೂ ಅಲ್ಲ……..ಮುಂದೆಗೆ…….. ತಿಳೀತೇನು ?”.
ಎಲ್ಲವನ್ನೂ ತಿಂದು ಪ್ಲಾಸ್ಕಿನ ಬಿಸಿ ಕಾಫಿ ಬಗ್ಗಿಸುತ್ತಿದ್ದಂತೆ ಆತನಿಗನ್ನಿಸಿತು,- ‘ಬಹುಶಃ ಹೊಟ್ಟೆ ಬಿರಿದೇ ಹೋಗುತ್ತದೆ’ ಎಂದು. ಆದರೂ ಕುಡಿಯುತ್ತಲೇ ಹೋದ ; ಒಂದು ಕಣ್ಣಿನಿಂದ, ಧಡಿಯನನ್ನು ನೋಡುತ್ತಾ ನೋಡುತ್ತಾ…. …..
ಆತ ಕೈತೊಳೆದು ಕರ್ಚೀಫಿನಿಂದ ಕೈ ಒರಸುತ್ತಾ ಬಂದ. ಧಡಿಯ ಎದ್ದು ನಿಂತು “ಬಾ” ಅಂದ. “ಡ್ರೆಸ್‌, ಬದಲಾಯಿಸುವುದು ಬೇಡವೇ” ಅಂದ ಆತ. “ಬೇಡ” ಅನ್ನುತ್ತಾ ಧಡಿಯ ಹೊರ ನಡೆದ. ಆದರೂ, ಆತ ಟೇಪು, ಜಲಮಟ್ಟಗಳನ್ನು ಕೋಟಿನ ಕಿಸೆಗಿಳಿಸಿದ. ಕಂಬದ ಬಳಿಹೋಗಿ ಅಲ್ಲಿ ಒರಗಿಸಿಟ್ಟಿದ್ದ ಬೆತ್ತ ಹಿಡಿದು ‘ಟಕ್ ಟಕ್” ಅಂದು ಶಬ್ಧಿಸುತ್ತಾ ಧಡಿಯ ಅಂಗಳಕ್ಕಿಳಿದ. ಆತ, “ಅರೇ ನಾನು ಬಾಗಿಲೂ ಹಾಕಿಲ್ಲ, ಕೊಂಚ ತಡೆಯಿರಿ, ಬೇಗು, ಡ್ರೆಸ್ಸೂ ಎಲ್ಲಾ ಅಲ್ಲೇ ಇದೆ”-ಅಂದು ತಡವರಿಸಿದ. “ನಿಂದು ಯಾರಿಗ್ಬೇಕೋ, ? ಎಲ್ಲಾ ನಾನಿದ್ದೇನೆ. ಮಾತು, ಮಾತು, ಮಾತು, ಅಕ್ಷರ, ಶಬ್ದ, ವಾಕ್ಯ, ವೃಥಾ ಕಾಲಹರಣ”-[“ಗದರಿಸುವುದು ಧಡಿಯನ ಮೂಲಭೂತ ಹಕ್ಕು-”?] “ಆದರೂ ತನ್ನ ಫಾರಿನ್ ಪೆನ್ನು ಇರುವ ಬೇಗು ಯಾರಾದರೂ ಹೊತ್ತರೆ” ಎಂದು ಕಸಿವಿಸಿಯಾಯಿತು- ಆತನಿಗೆ, ತಂಪುಗಾಳಿ ಬೀಸುತ್ತಿದ್ದಂತೆ, ಈ ಇಬ್ಬನಿಗೆ ಛಳಿಗಾಳಿಗೆ, ಕೋಟು, ಪೇಂಟು ಸಿಕ್ಕಿಸಿದ್ದುದೇ ಒಳಿತಾಯಿತೆಂದು ತೋರಿತವನಿಗೆ. ಆದರೂ, ‘ಧಡಿಯ ಬರೇ, ಲುಂಗಿ ಬನಿಯನ್ನುಗಳಲ್ಲೇ ಇದ್ದಾನಲ್ಲ’ ; “ಅದೂ ಲುಂಗಿ, ಎತ್ತಿ ಕಟ್ಟಿಕೊಂಡು ನಡೆಯುತ್ತಿದ್ದಾನಲ್ಲ’, ‘ಪಿಟಕ್ ಎನ್ನದೆ’ – ಎಂದು ಆಶ್ಚರ್ಯವಾಯಿತು ; ಕೇಳುವ ಧೈರ್ಯ ಮಾತ್ರ ಆಗಲಿಲ್ಲ. ಯಾರಲ್ಲಾದರೂ, ಏನಾದರೂ, ಮಾತನಾಡಬೇಕು’-ಎಂದು ತೋರಿತು. ಧಡಿಯನ ಮೇಲೆ ಸಿಟ್ಟೂ ಬಂದಿತು ; ಆತನ ಮೌನಕ್ಕೆ : ಹಾಗೆಯೇ ತನ್ನ ಹೇಡಿತನಕ್ಕೆ.
ದಾರಿ-ಹುಲ್ಲಿನ ನಡುವೆ ಸಾಗತೊಡಗಿದಂತೆ, ಟಾರ್ಚೂ ಇಲ್ಲದೆ, ಭಾರವಾದ ಹೊಟ್ಟೆ ಹೊತ್ತು ಧಡ ಧಡ ನಡೆಯುತ್ತಿದ್ದಂತೆ, ಚುರ್ ಅನ್ನುತ್ತಿತ್ತು;-ಪೇಂಟು ಆವರಿಸದ ಕಾಲಿನ ಕೆಳಭಾಗ. ಒಮ್ಮೊಮ್ಮೆ ಓಡುತ್ತಾ ಹೊಟ್ಟೆ ಅಮುಕಿಕೊಳ್ಳುತ್ತಾ, ಒಮ್ಮೊಮ್ಮೆ ನಡೆಯುತ್ತಾ ಕಾಡು, ಗುಡ್ಡೆ, ಗದ್ದೆ, ಬದುಪುಗಳಲ್ಲಿ ಧಡಿಯನನ್ನು ಹಿಂಬಾಲಿಸಿದ ; ಏನಾದರೂ ಹರಿಯುವಂಥಾದ್ದು, ಇದ್ದರೆ, ಕಟ್ಟಿದರೆ ಎಂದು ಮೈ “ಜುಂ” ಎಂದರೂ, ಚಿಂತಿಸುತ್ತಾ ನಿಲ್ಲಲು ಸಮಯವಿಲ್ಲದೆ, ಮುಂದೆ ಮುಂದೆ ನಡೆದ. ಚಿಕ್ಕ ತೋಡಿಗಿಳಿದಾಗ ಚಪ್ಪಲಿ ಕೈಗೆತ್ತಿಕೊಂಡು, ಪೇಂಟ್ ಮೇಲೆತ್ತಲೂ, ಪುರುಸೊತ್ತಿಲ್ಲದೆ ದಾಟಿದ.
ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದಂತೆ, ಸೂರ್ಯ ಉದಯಿಸುವಲ್ಲಿ ಕೆಂಬಣ್ಣದ ಛಾಯೆ, ಮೂಡುತ್ತಿದ್ದಂತೆ, ಅವರಿಬ್ಬರೂ ಗಟ್ಟಿ ಶಿಲೆಯ ಆ ಕಟ್ಟಡದ ಬಳಿ ತಲುಪಿದ್ದರು. ಧಡಿಯ “ಇಲ್ಲೇ” ಅಂದ. ಧಡಿಯನ ದಪ್ಪ ಮೂಗಿನಿಂದ ಹೊರಬೀಳುತ್ತಿದ್ದ ಹೊಗೆ ಇಂಜಿನನ್ನು ವೀಕ್ಷಿಸುತ್ತಾ, ಆತ “ಏನು”-ಅಂದ–ಏನೂ ತಿಳಿಯದೆ. ಧಡಿಯ ತತ್ವಜ್ಞಾನಿಯ ನಗೆ ನಕ್ಕ.-ಮತ್ತು ಅಣಕಿಸಿದ “ಏನು ?……ಅಯ್ಯೋ….. ……ನಿನ್ನ
ಪೇಪರು ನೋಡು………” ಅಂದ. ಇನ್ನೂ ಮಸುಕಾದ ನಸು ಬೆಳಕಿನಲ್ಲಿ “ಧ್ವಜಾರೋಹಣ’ ಎಂಬ ದೊಡ್ಡಕ್ಷರ ಓದಿದ. “ಇನ್ನು ಯಾರು….. …….ಏನು ಎಲ್ಲಿ ಎಂದು ಕೇಳುತ್ತಿರಬೇಡ……ಇಲ್ಲೇ ಮತ್ತು ನಿನ್ನಿಂದಲೇ…ಒಡೆ ತೆಂಗಿನಕಾಯಿ, ಹೂಂ ಆರಂಭಿಸು”-ಅಂದು ಪೇಪರು ಕಸಿದುಕೊಂಡ. “ಎಲ್ಲಿದೆ ತೆಂಗಿನ ಕಾಯ್‌”-ಅಂದು ಆತ ತಡವರಿಸುವ ಮೊದಲೇ ಧಡಿಯ ತನ್ನ ಲುಂಗಿಯಿಂದ ಒಂದು ಕಾಯ್‌ ಹೊರತೆಗೆದ.
“ಇನ್ನು ಚಿಕ್ಕ ಮಕ್ಕಳಂತೆ ಪಿರಿಪಿರಿ ಮಾಡಬೇಡ ; ನೋಡು- ಆ ಕಟ್ಟಡದ ತುದೀ ಕೋಣೆಯಲ್ಲಿ ಬೇಕಾದ್ದೆಲ್ಲಾ ಇದೆ”- ಎಂದು ಬೀಡಿ ಒಂದನ್ನು ಉರಿಸಿ, ಹೊಗೆ ಬಿಡುತ್ತಾ ನಿಂತ.
.
.
.
ಬಾಗಿಲು ಮಾತ್ರ ಮುಚ್ಚಿದ್ದು, ಚಿಲಕವನ್ನೂ ಸಿಕ್ಕಿಸದಿದ್ದ, ಆ ಕೋಣೆಯ ಒಳ ಹೊಕ್ಕ ಆತ, ಒಮ್ಮೆ ಎದುರು ಕಣ್ಣಾಡಿಸಿದ : “ಉಹೂಂ” ಸೋಮಾರಿ ಕತ್ತಲು ಇನ್ನೂ ನಿದ್ರಿಸುತ್ತಿತ್ತು. ಟಾರ್ಚ್ ತರದ್ದಕ್ಕೆ ತನ್ನನ್ನೇ ಶಪಿಸುತ್ತಾ ಹೆಜ್ಜೆ ತಡವುತ್ತಾ ಇಡುತ್ತಿದ್ದಂತೆ, ಯಾವುದನ್ನೋ ಎಡವಿದ. ಬಗ್ಗಿ-ಮುಟ್ಟಿ, ಹಿಡಿ, ಎಳೆದು “ಹಾರೆ” -ಅಂದ. ಮತ್ತೊಂದನ್ನು ತಡವಿ “ಪಿಕ್ಕಾಸು” ಅಂದ. ಎರಡನ್ನೂ ಎತ್ತಿ ಹೊರ ಬಂದ.
ಕೋಟಿನ ಕಿಸೆಯಿಂದ ಟೇಪು ಹೊರ ತೆಗೆದು ತೆಂಗಿನಕಾಯಿ ಒಡೆದಲ್ಲೇ, ಆರು ಅಡಿ ಉದ್ದ, ಆರು ಅಡಿ ಅಗಲಗಳ ಚೌಕವನ್ನು ಗುರುತಿಸಿದ. ಡ್ರೆಸ್ ಕಳಚಲು ಬಟನ್ ಬಿಚ್ಚುತ್ತಿದ್ದಂತೆಯೇ ಧಡಿಯ, “ಬೇಡ” ಅಂದ-ಇತ್ತ ತಿರುಗಿ, ಪಿಕ್ಕಾಸು ತೆಗೆದು ಅಗೆಯ ತೊಡಗಿದ. ಮೊದ ಮೊದಲು ಛಳಿಗೆ ಮರಗಟ್ಟಿದ್ದ ಕೈಗಳೂ ಬಿಸಿಯಾಗಿ, ಮೈಯೂ ಬಿಸಿಯಾಗಿ ಅಭ್ಯಾಸಬಲದಿಂದ, ಆತ ತನ್ನ ಎಂದಿನ ವೇಗದಲ್ಲಿ ಅಗೆಯುತ್ತಾ ಅದರಲ್ಲೇ ತಲ್ಲೀನನಾದ. ಮೊದಲನೇ ಅಗೆತದಲ್ಲಿ “ನೆಲ ಬಹಳ ಗಟ್ಟಿ, ಪಿಕ್ಕಾಸು ಒಂದು ಇಂಚೂ ಇಳಿಯುತ್ತಿಲ್ಲ” ಎನ್ನುತ್ತಾ-ಮರಕಲ್ಲನ್ನು ಶಪಿಸುತ್ತಿದ್ದಂತೆ, ಎಲ್ಲಿಂದಲೋ ಕೇಳುತ್ತಿದ್ದ ಸುಪ್ರಭಾತಕ್ಕೆ ಆತನ ಹಾರೆ, ಪಿಕ್ಕಾಸುಗಳು ತಾಳ ಬಡಿಯುತ್ತಿದ್ದವು. ಒಮ್ಮೆಯ ಮಣ್ಣು ಹಾರೆಯಿಂದ ಸರಿಸಿ, ಎರಡನೇ ಸುತ್ತು ಅಗೆಯುತ್ತಿದ್ದಂತೆಯೇ ಮಣ್ಣು ಸ್ವಲ್ಪ ಮೆತ್ತಗಿರುವಂತೆ ಕಂಡಿತು. “ಬಚಾವ್” ಅಂದಿತು, ಆತನ-ಒಂದೊಮ್ಮೆ ಗೊಣಗಿದ ಮನಸ್ಸು, ತೆಂಗಿನ ಕಾಯಿಯ ಚೂರುಗಳು ಅಣಕಿಸುತ್ತಿದ್ದಂತೆಯೇ ಮೂರನೇ ಸುತ್ತು ಅಗೆದ. ಮಣ್ಣು ಮತ್ತೂ ಮೆತ್ತಗಿದ್ದಂತೆ ಭಾಸವಾಗಿ “ಅರೇ ಇದರ ಮೇಲೆ ಹೇಗಪ್ಪಾ ಕಲ್ಲು ಕಟ್ಟುವುದು” ಎಂದು ಯೋಚಿಸಿದ. ನಾಲ್ಕನೇ ಸುತ್ತು ಅಗೆಯುತ್ತಿದ್ದಂತೆಯೇ, ಬರೇ ಉಸುಕು ಪದರವಾಗಿ ಹಾರಿದಾಗ ವಿಹ್ವಲನಾದ ; ಧಡಿಯನನ್ನಾದರೂ ಈ ಬಗ್ಗೆ ಕೇಳೋಣವೇ-ಎಂದು ಅತ್ತ ತಿರುಗಿದ; ಸ್ತಂಭೀ ಭೂತನಾದ.
ಭವ್ಯವಾದ ತಾತ್ಕಾಲಿಕ ಸೂರಿನ ಕೆಳಗೆ, ಕುರ್ಚಿ-ಮೇಜುಗಳು ಓರಣವಾಗಿರಿಸಿದ್ದುವು. ಧಡಿಯ ಬಂದು ಚೇರಿನಲ್ಲಿ ಮಂಡಿಸಿ, ಮೇಜಿನ ಮೇಲಿದ್ದ ದಪ್ಪನಾದ ಫೈಲೊಂದರ
ಪುಟ ತಿರುವುತ್ತಾ, ನಗುತ್ತಾ, ಗೊಣಗುತ್ತಾ, “ಓ ಹೋಂ”, “ಹೋಂ”, “ಹುಂ”, “ಸರಿ”-ಆಂದೂ-ಬಾಯಿ-ಮೂಗುಗಳಲ್ಲಿ ಶಬ್ದ ಹೊರಡಿಸುತ್ತಾ, ಸುತ್ತಲಿನ ಪರಿವೆಯೇ ಇಲ್ಲದವನಂತಿದ್ದ.
ಸೂರಿನ ಅಸ್ತಿತ್ವ, ಧಡಿಯನ ಆಸ್ಪಷ್ಟ ಉಕ್ತಿಗಳ ಬಗ್ಗೆ, ತೀರಾ ಗಲಿಬಲಿಗೊಂಡ ಆತ, “ಈಗೇನ್ಮಾಡೋದು”-ಎಂದು ತೊದಲಿದ ಉಗುಳು ನುಂಗುತ್ತಾ, ಧಡಿಯನನ್ನುದ್ದೇಶಿಸಿ, ಧಡಿಯ ತನ್ನ ಹಿಂದಿನ ಸ್ಥಿತಿಯಲ್ಲಿ ಅಂತರವನ್ನೇನನ್ನೂ ತೋರದಾಗ, ಧಡಿಯನ ಬೇಜವಾಬ್ದಾರಿತನದ ಬಗ್ಗೆ ಮತ್ತು ತನ್ನ ಅಸಹಾಯಕತೆಯ ಬಗ್ಗೆ, ಆತನಿಗೊಮ್ಮೆಲೇ ಸಿಟ್ಟು ಬಂದು “ನಿಮ್ಮನ್ನೇ ಕೇಳ್ತಿರೋದು”-ಈಗೇನ್ಮಾಡೋದು” ಅಂದು ಒದರಿದ. “ನಿನಗೆ ತಿಳಿದಂತೆ” ಅಂದು ಕೈ ತಿರುಗಿಸಿದ ಧಡಿಯನ ಕೃತಿಯ ಬಗ್ಗೆ, ಭುಗಿಲ್ಲೆಂದು ಎದ್ದ ಸಿಟ್ಟಿನಿಂದ, ಆತ ಹಾರೆ ಅಲ್ಲೇ ಕುಕ್ಕಿ, “ನನಗೆ ತಿಳೀದ್ದಕ್ಕೆ ಕೇಳ್ತಿರೋದು” ಅಂದು ಆರ್ಭಟಿಸಿದ. ಧಡಿಯ ನಕ್ಕ. ಮತ್ತೆ ಗಂಭೀರನಾದ, “ನೋಡು ಮರಿ, ನಾನು ಯುಗ ಯುಗಗಳಿಂದಲೂ ಹೀಗೇ ಇರೋದು, ನನಗೇಣು ನಿನ್ನ ಸಿಟ್ಟು ಸೆಡವುಗಳು, ಅಸಮ್ಮತಿಗಳು ಗಣ್ಯವಾಗುವುದಿಲ್ಲ. ನಾನು ಸೋತರೂ, ಮಾನಸಿಕ ಒತ್ತಡದಿಂದ ನರಳಲಾರೆ ; ನಶಿಸಲಾರೆ. ಅದೆಲ್ಲ ಕ್ಷಣಿಕ ಕೃತಿಯ ನಂತರ ಫಕ್ಕನೇ ಮೇಲಕ್ಕೆ ಜಿಗಿಯಬೇಕೆಂದಿರುವ ಅಥವಾ ಕುಪ್ಪಳಿಸುವ, ನಿನಗೆ ಮತ್ತು ನಿನ್ನಂತಹವರಿಗೇ ಸರಿ”- ಅಂದು ನಿಧಾನವಾಗಿ ಹೇಳುತ್ತಾ, ಕೊನೇ ವಾಕ್ಯ ಹೇಳುತ್ತಿರುವಾಗಲೇ ಫೈಲಿನತ್ತ ದೃಷ್ಟಿ ಹಾಯಿಸುತ್ತಾ, ಅದರಲ್ಲಿ ಮುಳುಗೇ ಹೋದ. ಆತ, ಅವಾಕ್ಕಾಗಿ ಧಡಿಯನ ಬಗ್ಗೆ ಯೋಚಿಸಿ, “ಉಹೂ” ಅಂದು, ತನ್ನ ಕೆಲಸಕ್ಕೆ ಕೈ ಹಚ್ಚಿದ. ಬೇಗ, ಬೇಗ, ಅಂದಂತಾಗಿ, ಯಾರೆಂದು ಎದುರು ನೋಡಿದ. ಯಾರೂ ಕಾಣಿಸದಾದಾಗ “ಸರ್ಪ, ಸರ್ಪ ಸರ್ವೊಭವ”-ಅಯ್ಯೋ ನನ್ನ…. …..ಶಾಪ ಕೊಡುವಂತಿದ್ದರೆ, ಮತ್ತದು ಫಲಿಸುವಂತಿದ್ದರೆ ಈ ಧಡಿಯನನ್ನು……
ಸೂರ್ಯ ಸುಮಾರು ಮೇಲೇರಿದ್ದು, ಛಳಿ ಗಾಳಿಯ ನಡುವೆಯಾ, ಉರಿ ಆರಂಭವಾದಂತೆ ತೋರಿತು. ಬರೇ ಉಸುರಿನೊಂದಿಗೆ ಗುದ್ದಾಟ ಬೇಸರವಾಗಿ, ಆದರೂ ಅದು ಅನಿವಾರ್ಯವಾಗಿ ಮಾಡಲೇಬೇಕಾದ್ದಲ್ಲವೇ- -ಎಂದೂ ಹೊಳೆದಂತಾಗಿ ಹಾರೆಯಿಂದ ಮಣ್ಣನ್ನೆತ್ತಿ – ಎತ್ತಿ ಬದಿಗೆ ಗುಡ್ಡೆ ಹಾಕತೊಡಗಿದ. ಅದು ಪುನಃ ಹೊಂಡಕ್ಕೆ ಸೋರತೊಡಗಿದಾಗ, ಹೊಂಡದಿಂದ ಮೇಲೇರಿ, ಹಾರೆಯಿಂದ, ಉಸುಕು ದೂರ ಎಳೆಯಲಾರಂಭಿಸಿದ.
ಧಡಿಯ “ವಾಹ್‌‌” ಅನ್ನುತ್ತಾ, “ಸರೇ ಸರಿ’ ಎಂದು ತಲೆದೂಗುತ್ತಾ, ತನ್ನ ಗೊಗ್ಗರು ಗಂಟಲಿನಲ್ಲಿ, ಫೈಲಿನ ಹಾಳೆಯೊಂದನ್ನು ಓದಲಾರಂಭಿಸಿದ. “ಜೀವನಾ ಅಂದ್ರೆ ಹ್ಯಾಗಿರಬೇಕು. “ಝುಣಕ್” ಎಂದು ಆರಂಭವಾಗಿ ‘ಠಣ್’ ಎಂದು ಕೊನೆಗೊಳ್ಬೇಕು. ಅದೇನೂ ಸಂಗೀತವಲ್ಲ-ನಿಧಾನವಾಗಿ ಮಧುರ ಆಲಾಪನೆಯಲ್ಲಿ ಆರಂಭವಾಗಿ, ಪದರು ಪದರಾಗಿ ಮೇಲೇರಿ-ಅಲ್ಲಷ್ಟು ಆಟವಾಡಿ, ಅವರಿವರ ತಲೆದೂಗಿಸಿ, ಹುಚ್ಚು ಹುಚ್ಚಾಗಿ ತಾಳ ಬಡಿಸಿ…….ಪುನಃ ಮೆಲ್ಲನೇ ಸ್ಥಾಯಿ, ತಂದ್ರ…. ….ಮಂದಗಳಿ ಗಿಳಿಯಲು… ….ಜೀವನ ಅಂದ್ರೆ, ಯಾವುದೋ ಕತ್ತಲಿನ ಗರ್ಭ ಸೀಳಿ, ಹೊರಬಂದ ಪ್ರಖರ ಜ್ಯೋತಿ : “ಕ್ವಾ”ದಲ್ಲಿ ಆರಂಭ : ಅಲ್ಲಿ ಅರ್ಧ ವಿರಾಮಗಳಿಲ್ಲ, ಆಶ್ಚರ್ಯ ಚಿಹ್ನೆಗಳಿಲ್ಲ, ಪ್ರಶ್ನೆಗಳಿಲ್ಲ. ಬರೇ ವೇಗ ವೇಗ….. ….. ಅಕ್ಷರ, ಶಬ್ದ, ವಾಕ್ಯ…ಗಳ ವೇಗೋತ್ಕರ್ಷ. ಭೋರ್ಗರೆವ ಜಲಪಾತದಲ್ಲಿ ಧುಮ್ಮಿಕ್ಕುವವರೆಗೂ ಬೆಳವಣಿಗೆ,-ನಾದದಲ್ಲಿ, ಕೃತಿಯಲ್ಲಿ, ಶಬ್ದದಲ್ಲಿ, ಶರೀರದಲ್ಲಿ, ಒಳ ಜ್ಯೋತಿಯಲ್ಲಿ.
ಆರೇ–ಇದನ್ನೆಲ್ಲೊ ಆತ ಕೇಳಿದ್ದ ; ಎಲ್ಲೆಂದು ತಡವರಿಸಿ, ನೆನೆಪಿನಾಳದಲ್ಲಿ, ಹುತ್ತ ಗಟ್ಟಿದ್ದ……ಹೊಯ್ಗೆ ರಾಶಿಯ ನಡುವೆ ಬಿಡಿಸಲಾಗದೆ, ತಲೆಗೂಡವಿ, ಒಮ್ಮೆಲೇ ಲಯ ತಪ್ಪಿದಂತೆ, ಜೋರಾಗಿ ಅಗೆಯ ತೊಡಗಿದ. “ಬೇಗ, ಬೇಗೆ”-ಅನ್ನುತ್ತಾ “ಇಲ್ಲೇ ಎಲ್ಲೋ ಹುಗಿದಿರಬೇಕು, ಜ್ಞಾಪಕಾ ಬರೋದಿಲ್ಲ” – ಅನ್ನುತ್ತಾ “ಥೂ”…. “ಸಂಬಂಧವೇ ಇಲ್ಲದ ಬರೇ ಬಿಡಿ…..ಅಕ್ಷರಗಳು” ಅಂದು, ಗೊಣಗುತ್ತಾ ವೇಗ ಹೆಚ್ಚಿಸುತ್ತಾ ಹೋದ…..ಹೋದ……
ಆತನಿಗೊಮ್ಮೆಲೇ ಗಂಟೆ ಎಷ್ಟಾಗಿರಬಹುದೆಂಬ ಪ್ರಶ್ನೆ ಎದ್ದಿತು ; “ಯಾರಲ್ಲಿ ಕೇಳುವುದು ; ಧಡಿಯನಲ್ಲೂ ವಾಚು ಇಂದ್ದಂತಿಲ್ಲ”, ಎಂದು ಹೊಂಡದಿಂದ ಮೇಲೆ ಬಂದ ; ತನ್ನ ನೆರಳಿನ ಉದ್ದ ನೋಡಿ….. ಸೇರಿಸಿ……ರಿಂದ ಭಾಗಿಸಿ……ಕಳೆದು… ……. ಗಳಿಗೆ…ಅಳೆದು……ಗಂಟೆಗೆ ಪರಿವರ್ತಿಸಿ…….
ಧಡಿಯ ಯಾವುದೋ ಕವನವಿರಬೇಕು. ವಾಂಚಿಸುತ್ತಿದ್ದ……..ತನ್ನ…….ನಾಚಿಸುವ ಗೊಗ್ಗರು ಗಂಟಲಿನಲ್ಲಿ……
“ದೀರ್ಘ ನಿದ್ರೆಯ ಬಳಿಕ ಕಣ್ಣು ಹೊಸೆಹೊಸೆದು
ಅಬ್ಬ ನಗ್ತಾನೆ ;
“ಗಂಟೆ ಎಷ್ಟಾಯ್ತು ಸಾರ್‌ ?” “
ಎರಡು ಐವತ್ತಾರು
ಹಿಂದಿನ ದಿನ ವಾಚು ನಿರಾಹಾರಿ;
(ಆದರೂ ವಿತಂತು ಕನ್ನೆ)
ಥತ್ ಈ ಹಾಳು ಮರೆವು-
ಹತ್ತು ಮಕ್ಕಳಮ್ಮನಿಗೆ ಹಡೆದಾಗಲೆಲ್ಲಾ ಹೊಟ್ಟೆ ನೋವು…….”

ಎಲಾ ಇವನ”–ಅಲದ. ವಾಚು ತನ್ನ ಕೈಯಲ್ಲೇ ಇರುವುದರ ನೆನಪಾಗಿ, ಕೋಟಿನ ಕೈ ಸರಿಸಿದ. ಗಂಟೆ ಇನ್ನೂ “ಐದೂ” ಆಗಿರಲಿಲ್ಲ…ನಕ್ಕ. ಗಂಟೆ ನಿದ್ರಿಸುತ್ತಿದೆ ; ಕಾಲ ಚಲಿಸುತ್ತಿದೆ……ಬೇಗ ಬೇಗ’ ಎಂದು ಕಿವಿಗೆ ಅಪ್ಪಳಿಸಿದಂತೆ ಶಬ್ದವಾದಾಗ, ಉಸುಕಿನೊಂದಿಗೆ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದ ; ಆವರೂ ಹಾರೆ ಪಿಕ್ಕಾಸುಗಳ ಏಟಿನಿಂದ ಪಾರಾಗಿದ್ದ. ಕೋಟು ಪೇಂಟುಗಳಲ್ಲಿದ್ದ ಹೊಯ್ಗೆ ಕೊಡವಿ, ಪುನಃ ಉಸುಕು ಮೇಲಕೈತ್ತಬೇಕಾದ ತನ್ನ ಸ್ಥಿತಿಯನ್ನು ಶಪಿಸುತ್ತಾ “ಥೂ”-ಅಂದು ಎತ್ತತೊಡಗಿದ.
“ತುಂಬಾ ಸೆಕೆ”-ಎಂದನ್ನಿಸಿತು. ಪೇಂಟು ಕೋಟು ಕಳಚಿ ತನ್ನ ಕೆಲಸ ಮುಂದುವರಿಸಬೇಕು ಎಂದುಕೊಂಡ. ಕೋಟಿನ ಗುಬ್ಬಿ ಕಳಚುತ್ತಿದ್ದಂತೆ, ಎದುರು ಕಣ್ಣು ಹಾಯಿಸಿದ; ಮಾಳಿಗೆಯ ಕಟ್ಟಡವೊಂದನ್ನು ಕಂಡು ದಿಗ್ಭ್ರಮೆಯಾಯಿತು. “ಅರೇ ನಾನೀವರೆಗೂ ನೋಡಲೇ ಇಲ್ಲವಲ್ಲಾ’, ಎಂದುಕೊಂಡಾಗ ಮಾಡಿನ ಮೇಲೆ ಹುಲ್ಲು ಚೆಗುರಿದ್ದನ್ನು ನೋಡಿ, “ಇದೇನೂ, ಇಂದ್ರಜಾಲವಲ್ಲ ; ಆಗಲೇ ಇದ್ದಿರಬೇಕು. ನಾನು ಮಾತ್ರ ನೋಡಿಲ್ಲ”-ಅಂದು ತನಗೇ ಉತ್ತರವಿತ್ತ. ಫಕ್ಕನೇ ಯಾರೋ ನಕ್ಕಂತಾಗಿ, ಆದ ‘ಹೆಣ್ಣು ಧ್ವನಿ’ ಎಂದಾದ ಮೇಲೆ, “ಎಲ್ಲಿ” ಎಂದು ಅತ್ತಿತ್ತ ನೋಡಿ, ಆ ಕಟ್ಟಡದ ಮಾಳಿಗೆಗೆ ಕಣ್ಣು ಹಾಯಿಸಿದಾಗ–ವೆರಾಂಡದಲ್ಲಿ ‘ವಿರಾಜ’ಮಾನಳಾದ, ಚೆಂದೊಳ್ಳಿ ಚೆಲುವೆಯಿನ್ನೂ ನಗುತ್ತಲೇ ಇದ್ದಳು. “ಝಮ್‌”-ಎಂದಿತು ಎದೆ. ಗುಬ್ಬಿ ತೆರೆಯುತ್ತಿದ್ದ ಕೈಗಳೂ ಅಂತೆಯೇ ನಿಂತು, ನಡುಗಿ……ಅಸಭ್ಯವೆನಿಸಿದರೂ ಆಕೆಯತ್ತ, ಆಕೆಯ ಬೆಲ್‌ಬಾಟಮ್ ಪೇಂಟಿನತ್ತ, ಉಬ್ಬಿದ ಎದೆಯತ್ತ, ನಿರಿಗೆಗಳ ಅಂಗಿಯತ್ತ, ನೀಳ ಜಡೆಯತ್ತ, ಸುಂದರ ಮುಖದತ್ತ ನೋಡುತ್ತಾ ನಿಂತ. ಆಕೆಯೂ ನಸುನಕ್ಕು ಕೈ ಎತ್ತಿ “work is worship”, “ಬೆವರಿನ ಬಿಂದುಗಳಲ್ಲಿ ಹ ದೇವ”-ಎಂದು ಬಡಬಡಿಸಿ ಮರೆಯಾದಳು. ‘ಸೆಕೆ’ ಎಂದನಿಸಿದರೂ, “ಆಕೆ ಎಲ್ಲಾದರೂ ಪುನಃ ಬಂದರೆ– ಎಂದು ಟ್ರಿಮ್ಮಾಗಿ ನಿಂತ ; ‘ಈ ಊರಿನಲ್ಲಿ ಎಷ್ಟು ಸೆಕೆ ; ಅದಕ್ಕಿಂತಲೂ ಏನು ಬೆವರು -ಎಂದು ಕೋಟು, ಶರ್ಟು, ಬನಿಯನ್‌ಗಳನ್ನೆತ್ತಿ ಒಳಗೆ ಬಾಯುಸಿರು ಹಾಯಿಸಿದ. ಒಳಗೆ “ಜಾತಿ ಗುಲಾಮ’ನಿರುವುದನ್ನು ಖಾತ್ರಿ ಮಾಡಿಕೊಂಡ. ‘ಆಗಾಗ್ಗೆ `ಸೇದುವ ಬೀಡಿಗಳ ನಡುವೆ ಧಡಿಯನ ಕವಿತಾ ವಾಚನಕ್ಕೆ ವಿರಾಮವೇ ಇಲ್ಲವೇನೋ ಎಂದುದುಕೊಂಡ…… ಕೀರಲು, ಕರ್ಕಶ ಸ್ವರಗಳಲ್ಲಿ
ಮುಂದಿನ ಮಾತುಗಳೊಂದೂ ಆತನಿಗೆ ಕೇಳಿಸಲೇ ಇಲ್ಲ….ಮೈ ಪೂರಾ ಬೆವರಿ…“ಇವೇ ಮಾತುಗಳನ್ನು ನಾನು ತಲ್ಲೊ ಕೇಳಿದ್ದೇನೆ….ಎಲ್ಲಿ ? ಎಲ್ಲಿ ?” ಬಳಿ ರಾಶಿ ಬಿದ್ದಿದ್ದ ಶಿಲೆ ಕಲ್ಲುಗಳನ್ನು ಎತ್ತಿ ಜೋರು ಜೋರಾಗಿ ಹೊಂಡಕ್ಕೆಸೆಯ ತೊಡಗಿದ. ಅನಪೇಕ್ಷಿತವಾದ ಮತ್ತು ಬರೇ ತ್ರಾಸದಾಯಕವಾದ ಈ ಯಾಂತ್ರಿಕ ವಿಚಾರಗಳನ್ನು-ಆ ಬಗೆಗಿನ ಚಿಂತನೆಯನ್ನು ಕೇವಲ ತಿರಸ್ಕರಿಸುತ್ತಾ, ಒತ್ತಾಯಕ್ಕೆ ಕಟ್ಟುಬಿದ್ದವನಂತೆ ಒದ್ದಾಡುತ್ತಾ, ನುಣುಚುತ್ತಾ, “ಉಹೂಂ”-ಅಂದು-ಎತ್ತಲಾರದ ಕಲ್ಲನ್ನೆತ್ತಿ ಎಸೆಯುತ್ತಿದ್ದಂತೆ ಪುನಃ ಮೈ ವಾಲಿದಂತಾಗಿ ಕೆಳಕ್ಕೆ ಜಿಗಿದ.
“ಕಲ್ಲು ಕಟ್ಟಬೇಕೆಂದಾದರೆ ಮುರಕಲ್ಲುಗಳು, ಕಲ್ಲು ಕೆತ್ತುವ ಉಪಕರಣಗಳು ಬೇಕಲ್ಲವೇ? -ಎಲ್ಲಿವೆ?-ಎಂದು ಧಡಿಯನನ್ನೇ ಕೇಳೋಣವೆಂದು ಬಾಯಿ ತೆರೆಯುವ ಮೊದಲೇ “ಎಲ್ಲಾ ಆ ಕೋಣೆಯಲ್ಲಿದೆ”-ಮಾತು-ನೆನಪಾಗಿ–ಆ ಕೋಣೆಯತ್ತ ನಡೆದ. ಇದೀಗ ಚೆನ್ನಾದ ಬೆಳಕು ಕೋಣೆಯೊಳಕ್ಕೂ ನುಗ್ಗಿ, ಒಳಗಿನ ವಸ್ತುಗಳನ್ನು ಅಡ್ಡಾ ದಿಡ್ಡಿಯಾಗಿ ಬಿದ್ದಿದ್ದರೂ ಗುರುತಿಸಬಹುದಾಗಿತ್ತು. ಎದುರಿಗೆ ಇದ್ದ ಕಲ್ಲುಗಳನ್ನು ಒಂದೊಂದಾಗಿ ಹೊಂಡದತ್ತ ಸಾಗಿಸತೊಡಗಿದ. ಛಡಿಯ ಏನಾದರೂ ಸಹಾಯ ಮಾಡುತ್ತಾನೋ ಎಂದತ್ತ ನೋಡಿ “ಛೇ : ಅಂತಹಾ ಜಾತಿ ಅಲ್ಲ’–ಅಂದು ಎಲ್ಲವನ್ನೂ ‘ಬೇಕಾಗಬಹುದು’ ಎಂದು ಹೊತ್ತ.
ಮಟ್ಟ, ತಾಪಿ, ಮತ್ತಿತರ ಉಪಕರಣಗಳನ್ನು ಸಾಗಿಸಿ ಕೆತ್ತತೊಡಗಿದ.
“ತೆಗೋ ಕಾಫಿ”-ಅಂದಾಗ-“ಅರೇ, ಇವನಿಗೆ ಹೇಗಪ್ಪಾ, ಗೊತ್ತಾಯಿತು, ನನ್ನ ಕಾಫಿಯ ಚಟ”-ಅಂದು, “ಥೇಂಕ್ಸ್” ಆದ ಗಟ್ಟಿಯಾಗಿ. ಗ್ಲಾಸ್ ಕೈಗೆತ್ತಿಕೊಂಡು ಹಬೆಯಾಡುತ್ತಿದ್ದ ಕಾಫಿಯನ್ನು ಹೀರತೊಡಗಿದ. ಧಡಿಯ ಹೊಂದಕ್ಕೊಂದು ಸುತ್ತು ಬಂದು ಕುಡಿದಾಗ ಗ್ಲಾಸನ್ನೆತ್ತಿ, ತನ್ನ ಆಸನದತ್ತ ನಡೆದ. ಒಂದು ಬೀಡಿಯನ್ನಾದರೂ, ಕೇಳೋಣವೆನ್ನಿಸಿತು ; ಆದರೂ ಧೈರ‍್ಯ ಸಾಲದೆ, ಧಡಿಯ ಹೋಗುವುದನ್ನೇ ನೋಡುತ್ತಾ ನಿಂತ.
ಉಚ್ಚೆ ಹೊಯ್ಯುವ ಬಯಕೆಯಾಯಿತು. ಪೇಂಟಿನ ಬಟನ್ ಸರಿಸುತ್ತಿದ್ದಂತೆ, ಮೇಲೆ ನೋಡಿದ; ಅದೇ ಹುಡುಗ ಅದೇ ವೆರಾಂಡದಲ್ಲಿ ನಿಂತು, ಎದುರಿನ ಅಡ್ಡಕ್ಕೆ ಕೈ ಆನಿಸಿ ಮುಗ್ಧಳಂತೆ ನೋಡುತ್ತಿದ್ದಳು : ಇವನನ್ನು, ಮತ್ತವನ ಕೆಲಸವನ್ನು, “ಇಸ್ಸೀ” ಅಂದು, ನಾಚಿ, ಇತ್ತ ತಿರುಗಿ, ಬಟನ್ ಸಿಕ್ಕಿಸಿದ, “ಆಕೆ ಹೊದ ಮೇಲೆ ಮಾಡೋಣ”- ಎಂದು ಕಲ್ಲು ಕೆತ್ತತೊಡಗಿದ.
ಮುಂದಿನ ಮಾತುಗಳೊಂದೂ ಆತನಿಗೆ ಕೇಳಿಸಲೇ ಇಲ್ಲ….ಮೈ ಪೂರಾ ಬೆವರಿ…“ಇವೇ ಮಾತುಗಳನ್ನು ನಾನು ಎಲ್ಲೊ ಕೇಳಿದ್ದೇನೆ….ಎಲ್ಲಿ ? ಎಲ್ಲಿ ?” ಬಳಿ ರಾಶಿ ಬಿದ್ದಿದ್ದ ಶಿಲೆ ಕಲ್ಲುಗಳನ್ನು ಎತ್ತಿ ಜೋರು ಜೋರಾಗಿ ಹೊಂಡಕ್ಕೆಸೆಯ ತೊಡಗಿದ. ಅನಪೇಕ್ಷಿತವಾದ ಮತ್ತು ಬರೇ ತ್ರಾಸದಾಯಕವಾದ ಈ ಯಾಂತ್ರಿಕ ವಿಚಾರಗಳನ್ನು-ಆ ಬಗೆಗಿನ ಚಿಂತನೆಯನ್ನು ಕೇವಲ ತಿರಸ್ಕರಿಸುತ್ತಾ, ಒತ್ಯಾಯಕ್ಕೆ ಕಟ್ಟುಬಿದ್ದವನಂತೆ ಒದ್ದಾಡುತ್ತಾ, ನುಣುಚುತ್ತಾ, “ಉಹೂಂ”-ಅಂದು-ಎತ್ತಲಾರದ ಕಲ್ಲನ್ನೆತ್ತಿ ಎಸೆಯುತ್ತಿದ್ದಂತೆ ಪುನಃ ಮೈ ವಾಲಿದಂತಾಗಿ ಕೆಳಕ್ಕೆ ಜಿಗಿದ.
“ಕಲ್ಲು ಕಟ್ಟಬೇಕೆಂದಾದರೆ ಮುರಕಲ್ಲುಗಳು, ಕಲ್ಲು ಕೆತ್ತುವ ಉಪಕರಣಗಳು ಬೇಕಲ್ಲವೇ -ಎಲ್ಲಿವೆ?-ಎಂದು ಧಡಿಯನನ್ನೇ ಕೇಳೋಣವೆಂದು ಬಾಯಿ ತೆರೆಯುವ ಮೊದಲೇ “ಎಲ್ಲಾ ಆ ಕೋಣೆಯಲ್ಲಿದೆ”-ಮಾತು-ನೆನಪಾಗಿ–ಆ ಕೋಣೆಯತ್ತ ನಡೆದ. ಇದೀಗ ಚೆನ್ನಾದ ಬೆಳಕು ಕೋಣೆಯೊಳಕ್ಕೂ ನುಗ್ಗಿ, ಒಳಗಿನ ವಸ್ತುಗಳನ್ನು, ಅಡ್ಡಾದಿಡ್ಡಿಯಾಗಿ ಬಿದ್ದಿದ್ದರೂ, ಗುರುತಿಸಬಹುದಾಗಿತ್ತು. ಎದುರಿಗೆ ಇದ್ದ ಕಲ್ಲುಗಳನ್ನು ಒಂದೊಂದಾಗಿ ಹೊಂಡದತ್ತ ಸಾಗಿಸತೊಡಗಿದ. ಧಡಿಯ ಏನಾದರೂ ಸಹಾಯ ಮಾಡುತ್ತಾನೋ ಎಂದು ನೋಡಿ “ಛೇ : ಅಂತಹಾ ಜಾತಿ ಅಲ್ಲ’–ಅಂದು ಎಲ್ಲವನ್ನೂ ‘ಬೇಕಾಗಬಹುದು’ ಎಂದು ಹೊತ್ತ.

ಮಟ್ಟ, ತಾಪಿ, ಮತ್ತಿತರ ಉಪಕರಣಗಳನ್ನು ಸಾಗಿಸಿ ಕೆತ್ತತೊಡಗಿದ.
“ತೆಗೋ ಕಾಫಿ”-ಅಂದಾಗ-“ಅರೇ, ಇವನಿಗೆ ಹೇಗಪ್ಪಾ, ಗೊತ್ತಾಯಿತು, ನನ್ನ ಕಾಫಿಯ ಚಟ”-ಅಂದು, “ಥೇಂಕ್ಸ್” ಆದ ಗಟ್ಟಿಯಾಗಿ. ಗ್ಲಾಸ್ ಕೈಗೆತ್ತಿಕೊಂಡು ಹಬೆಯಾಡುತ್ತಿದ್ದ ಕಾಫಿಯನ್ನು ಹೀರತೊಡಗಿದ. ಧಡಿಯ ಹೊಂದಕ್ಕೊಂದು ಸುತ್ತು ಬಂದು ಕುಡಿದಾಗ ಗ್ಲಾಸನ್ನೆತ್ತಿ, ತನ್ನ ಆಸನದತ್ತ ನಡೆದ. ಒಂದು ಬೀಡಿಯನ್ನಾದರೂ, ಕೇಳೋಣವೆನ್ನಿಸಿತು ; ಆದರೂ ಧೈರ‍್ಯ ಸಾಲದೆ, ಧಡಿಯ ಹೋಗುವುದನ್ನೇ ನೋಡುತ್ತಾ ನಿಂತ.
ಉಚ್ಚೆ ಹೊಯ್ಯುವ ಬಯಕೆಯಾಯಿತು. ಪೇಂಟಿನ ಬಟನ್ ಸರಿಸುತ್ತಿದ್ದಂತೆ, ಮೇಲೆ ನೋಡಿದ; ಅದೇ ಹುಡುಗ ಅದೇ ವೆರಾಂಡದಲ್ಲಿ ನಿಂತು, ಎದುರಿನ ಅಡ್ಡಕ್ಕೆ ಕೈ ಆನಿಸಿ ಮುಗ್ಧಳಂತೆ ನೋಡುತ್ತಿದ್ದಳು : ಇವನನ್ನು, ಮತ್ತವನ ಕೆಲಸವನ್ನು, “ಇಸ್ಸೀ” ಅಂದು, ನಾಚಿ, ಇತ್ತ ತಿರುಗಿ, ಬಟನ್ ಸಿಕ್ಕಿಸಿದ, “ಆಕೆ ಹೊದ ಮೇಲೆ ಮಾಡೋಣ”- ಎಂದು ಕಲ್ಲು ಕೆತ್ತತೊಡಗಿದ.
ಸುರುವಾಯಿತು ; ಧಡಿಯನ ಫೈಲು ಅಧ್ಯಯನ “….ಹಾಗೆಂದ ಮಾತ್ರಕ್ಕೆ ಜೀವನವನ್ನು ಅಪ್ಪಿಕೊಳ್ಳಲು, ನನಗೆ ತುಂಬಾ ತವಕವಿದೆ ಎಂದರ್ಥವಲ್ಲ. ಬದುಕನ್ನು ಪ್ರತಿಭಟಿಸುತ್ತಾ, ಕೆಲವೊಮ್ಮೆ ಒಂದಾಗುತ್ತಾ, ಕೆಲವೊಮ್ಮೆ ಕೆಲ ಹೊಂದಾಣಿಕೆಯೊಂದಿಗೆ ಮುನ್ನಡೆಸುತ್ತಾ ತೆವಳುತ್ತಿದ್ದೇನೆ. ಇದೇ ಪ್ರತಿಭಟನೆ ನನ್ನೆಲ್ಲಾ ಕೃತಿಗಳನ್ನು ಸಂಕುಚಿತಗೊಳಿಸುತ್ತದೆ. ನಿಧಾನಿಸುತ್ತದೆ. ಮತ್ತೆ ಕೆಲವೊಮ್ಮೆ ಸಾಯಿಸುತ್ತದೆ. ಕ್ರಿಯೆಗೆ ಬೇಕಷ್ಟು ಸಿದ್ದತೆಗಳನ್ನು ಮಾಡಿಕೊಂಡಷ್ಟೂ ಆ ಕ್ರಿಯೆ ಬೇರೆ ಯಾವುದೋ ಜಾಡನ್ನು ತುಳಿದು, ನನ್ನ ಅಸ್ತಿತ್ವವನ್ನೇ ಜಾಲಾಡಿಸಿ ಬಿಡುತ್ತದೆ. ಸಿದ್ದತೆಗಳೆಲ್ಲಾ ವ್ಯರ್ಥವಾಗಿ, ಆದರೂ “ಯಾವುದಕ್ಕೂ ನಾಶವಿಲ್ಲದ ನಿಯಮದಂತೆ, ಬೇರೆ ದಿಕ್ಕುಗಳಲ್ಲಿ ಚಲಿಸುವುದು, ನನ್ನದೇ ದುರಂತವಲ್ಲವೇ. ಜನನ, ಮರಣ, ಸುಖ-ದುಃಖ, ಕ್ರಿಯೆ ನಿಷ್ಕ್ರಿಯೆಗಳೆಲ್ಲಾ ಪ್ರಭಾವ ಬೀರಿ “ಗತಿ”ಯನ್ನು ಏರುಪೇರುಗಳಲ್ಲಿ ಓಲಾಡಿಸಿ, ಆಗಲೂ ತೃಪ್ತವಾಗದೆ ಕೊನೆಗೆ ಉಳಿಯುವುದು ನಮ್ಮದೇ ಚಿಂತನೆಗಳ ಬಗ್ಗೆ -ಅಸ್ತಿತ್ವದ ಬಗ್ಗೆ ಒಂದು ಪ್ರಶ್ನೆ ಮಾತ್ರ. ಅನುಭವದ ತೀವ್ರತೆಯ ಹೊರತು…” ಆತ ತಲೆ ಚಿಟ್ಟು ಹಿಡಿಯುವಷ್ಟೂ ದ್ವಂದ್ವದಲ್ಲುರುಳಿದ. “ಈ ಪತ್ರ (?)ದ ಧಾಟಿ, ನಿರೂಪಣೆಯನ್ನು ಎಲ್ಲೋ ಓದಿದಂತಿದೆಯಲ್ಲಾ….. ….. …..”ಎಂದು ತಲೆ ಬಿರುಕು ಬಿಡುವಂತೆ “ಗುಮ್” ಗಂಟ್ಟಿದಾಗ, “ಬೇಗ, ಬೇಗ”ಕ್ಕೆ ತನ್ನ ಕೆಲಸದ ನೆನಪಾಗಿ, ಮನಸ್ಸು ಅತ್ತಿತ್ತ ಹರಿಯದಂತೆ, ಕಲ್ಲು ಕೆತ್ತತೊಡಗಿದ.
ಒಮ್ಮೆಲೇ…“ಜೀವನದ ಜೀವಂತಿಕೆಯನ್ನು ಬಯಸುತ್ತಾ ಜವಾಬ್ದಾರಿಯಿಂದ ಹೆದರುತ್ತೇನೆ….ಜವಾಬ್ದಾರಿಯಿಂದ ಹೆದರುತ್ತೇನೆ…ಹೆದರುತ್ತೇನೆ….” ಅಂದಂತಾಗಿ, ಬವಳಿ ಬಂದಂತಾಗಿ-ಎಚ್ಚತ್ತಾಗ ಧಡಿಯ ಗಾಳಿ ಹಾಕುತ್ತಿದ್ದ ತನ್ನ ಕೊಳೆ ಅಂಗವಸ್ತ್ರದಿಂದ “ಅವೇ , ಯೋಚನೆಗಳು, ಸತ್ತ ಶಬ್ದಗಳು, ಕೊಳೆತ ವಾಕ್ಯಗಳು, ನೊಣ ಹಾರುವ ಧೈಯಗಳು… ನೆನಪಿಡು..ಕೆಲಸ ಇಂದೇ ಮುಗೀಬೇಕು”-ಎಂದು ಗದರಿಸಿ-ಧಡಿಯ ಹಿಂದಿರುಗಿದ.
ಆತನಿಗೆ ಅಸಾಧ್ಯ ಸಿಟ್ಟು ಬಂತು, ತನ್ನ ಅಸಹಾಯಕತೆಗೆ ; “ಧಡಿಯ ಆ ಸೂರಿನ ಕೆಳಗೆ ಎಷ್ಟು ಆರಾಮವಾಗಿದ್ದಾನೆ” ಎಂದು ಮತ್ಸರವೂ ಆಯಿತು. “ತನ್ನ ಅಸ್ತಿತ್ವವೇ ಒಂದು ನೊಣದ ಹೆಣದಂತಾಗಿದೆಯಲ್ಲ, ಜೀವದ ಮಿಡಿತದ ಬಗ್ಗೆ ತಕರಾರಿಲ್ಲದಿದ್ದರೂ
-ಸ್ವಂತಿಕೆಯ ಜೀವಂತ-ಯಾ-ಶವದ ರೂಪವೂ ಧಡಿಯನಿಗೆ ಜಿಗುಪ್ಪೆಗೆ ಆಹ್ವಾನವಿತ್ತಂತಾಗುವುದಲ್ಲ”-ಪ್ರತಿಭಟಿಸುವ ಶಕ್ತಿಯನ್ನೇ ಕಳೆದುಕೊಂಡವನಂತೆ, ಆ ವಿತಂತು ಮಧ್ಯಾಹ್ನದ ರಣ ಬಿಸಿಲಿಗೆ, ಪುನಃ ಕಲ್ಲು ಕೆತ್ತತೊಡಗಿದ. ಕಳೆಯಿಲ್ಲದ ತನ್ನ ಜೀವನದ ಅರ್ಥವನ್ನೇ ಪ್ರಶ್ನಿಸಿದ. ತನ್ನ ದೀನನಾನುತನಕ್ಕೆ ತಾನೇ “ಹೇಸಿ”-“ಆತ”-ಎಲ್ಲಾದರೂ ನೋಡಿದಳೋ ಎಂದು ಮೇಲೆ ನೋಡಿದಾಗ, ಆಕೆ ಅಲ್ಲೇ ನಿಂತು ವಿಹ್ವಲಳಾದವಳಂತೆ, ಕರುಣೆಯ ಮೂರ್ತಿಯಂತೆ “ಗಾಬರಿ ಬೇಡ……ಅಯ್ಯೋ ಪಾಪ”– ಎಂದು ಸಂತೈಸುವವಳಂತೆ ; ಆತನನ್ನೇ ನೋಡುತ್ತಿದ್ದಳು ; ಆತನಿಗಂತೂ ತುಂಬಾ ಕೆಡುಕೆನಿಸಿತು.
ಧಡಿಯ ಮುಂದರಿಸಿಯೇ ಇದ್ದ. “ಮಹನೀಯರೇ, ಮಹಿಳೆಯರೇ…ಇದೆ ನೋಡಿ… ನಮಗೊಮ್ಮೊಮ್ಮೆ ಅನ್ನಿಸುತ್ತದೆ – ಜೀವನವಿಡೀ ನಾವು ನಡೆಸುವ ಕ್ರಾಂತಿ, ಬರೇ ಬುಡಾಯವಾಗುತ್ತದೋ ಎಂದು. ದ್ವಂದ್ವದಲ್ಲಿ ತೆವಳುತ್ತಾ, ನಿಷ್ಕ್ರಿಯರಾಗುತ್ತಾ ಗುರಿಯಿಲ್ಲದ ಕ್ಷಣಗಳನ್ನು ಕಳೆಯುತ್ತೇವೆ; ಸಿಡಿದೇಳುತ್ತೇವೆ ; ಶಾಂತವಾಗುತ್ತೇವೆ. ಬದುಕು:- ಅಂದರೆ ಹೋರಾಟ, ಆ ಹೋರಾಟಕ್ಕೆ ಅಣಿಯಾಗದಿದ್ದಲ್ಲಿ ಬದುಕು ನಮ್ಮೊಂದಿಗೆ ಹೋರಾಡುತ್ತದೆ. ನಮ್ಮನ್ನು ಹನಿಹನಿಯಾಗಿ ಕರಗಿಸಿ ನಶಿಸುವಂತೆ ಮಾಡುತ್ತದೆ. ಈ ಹೋರಾಟದಲ್ಲಿ ನಾವು ಸಿಂಹಗಳಾಗಬೇಕು-ಶೌರ್ಯದಲ್ಲಿ ; ಜೇನುನೊಣಗಳಾಗಬೇಕು -ಭವಿಷ್ಯತ್ತಿನ ದೃಷ್ಟಿಯಲ್ಲಿ; ಕುನ್ನಿಗಳಾಗಬೇಕು-ಸೇವೆಯಲ್ಲಿ. ದಿನದ ನಿಮಿಷ ನಿಮಿಷಗಳು ಸೆಕೆಂಡು-ಸೆಕೆಂಡುಗಳು, ರಾಷ್ಟ್ರಕ್ಕೆ ಮೀಸಲಾಗಿಸಬೇಕು. ರಾಷ್ಟ್ರವಿದ್ದಲ್ಲಿ ನಾವು…..ನಾವು ಈ ರಾಷ್ಟ್ರದಲ್ಲಿ ಒಂದು ಅನಾಘ್ರಾಣಿತ ಕುಸುಮ, ಒಂದು ತುಷಾರ. ಕುಸುಮದ ಗುರಿ ಆ ಮಾತೆಯ ಮುಡಿಗೇರುವುದರಲ್ಲಿ, ಬಿಂದುವಿನ ಪರೀಕ್ಷೆ ಮತ್ತು ನಿರೀಕ್ಷೆ ಆ ಮಾತೆಯ ಪಾದ ತೊಳೆಯುವುದರಲ್ಲಿ…..ಅದರ ಒಳಿತಿಗೆ. ಅದರ ಭವಿಷ್ಯತ್ತಿಗೆ…..ಇದೋ ಈ ನಮ್ಮ ಜೀವನ ಮುಡಿಪು……” “ವ್ಹಾಹ್’, ವ್ಹಾಹ್‌’ ಅನ್ನುತ್ತಿದ್ದ ಧಡಿಯ. “ಥತ್ತೇರಿ ಸಮಾಜ ಸೇವಕನ ಭಾಷಣವೇ”-ಅನ್ನಿಸಿತು, ಆತನಿಗೆ. ಎಲ್ಲಾ ಕಣ್‌ಕಟ್ಟು. ಬೌದ್ಧಿಕನಂತೆ ಆರಂಭಿಸಿ, ಅದೇ ಕೊಳಕು ದೇ. ಭ. ನಾಗುವುದು.
.
.
.
ಕಲ್ಲು ಕೆತ್ತಿದ್ದ ಸಾಕಾಗಬಹುದೋ- ಎಂದು ಯೋಚಿಸಿದ. ‘ಇರಲಿ’ ಉಳಿದರೆ ಸುತ್ತ ಅಲಂಕಾರಕ್ಕಾಯಿತು ಎಂದು ಉಳಿದ ಕಲ್ಲುಗಳನ್ನೂ ಕೆತ್ತತೊಡಗಿದ.
“ಆದರೂ ಒಂದು ಮಾತು : ಒಂದೇ ಪರಮಾಣುವಿನಲ್ಲಿರುವ ಪ್ರೋಟೋನು. ನ್ಯೂಟ್ರೋನು, ಇಲೆಕ್ಟ್ರಾನುಗಳು ಬೇರೆ ಬೇರೆಯಾಗಿಯೂ ತಮ್ಮ ಸ್ವತಂತ್ರ ಅಸ್ತಿತ್ವವನ್ನು ಸ್ಥಿರಪಡಿಸುವಂತೆ-ವ್ಯಕ್ತಿ ಸಮಾಜದ ಅಂಗವಾಗಿದ್ದೂ ಸ್ವತಂತ್ರನಾಗಿದ್ದಾನೆ. ಅದೇ ಪ್ರತ್ಯೇಕತೆ–ಆತನ ಜೀವನದ ಮಿಡಿತ….ಇಲ್ಲವಾದರೆ ಮಿಡಿತದ ಬೆಡ್‌
ನಂಬರ್”ಗೂ ಶಾಂತ “ಬೋಡಿಗೂ” ಇರುವ ಅಂತರವೇನು ಗೊತ್ತೇ ? “ಹೊದಿಕೆ ಕುತ್ತಿಗೆ ಮಟ-ಮುಸುಕು ತಲೆ ಪೂರ”-ಧಡಿಯ “ಗುಡ್” ಅಂದ. ಆತ ಒಮ್ಮೆಲೇ ಜೋರಾಗಿ ಬೆವರಿದ ಪ್ರತ್ಯೇಕತೆಯ ಬಗ್ಗೆ ಆ ಮಾತುಗಳು “ಸಾಲವು” ಎಂದೆನ್ನಿಸಿತು. ಮತ್ತೆ, ಹೇಗೆ ಹೇಳಬೇಕು ಎಂದು ಯೋಚಿಸಿದ “ಏನೋ ಬೇರೆ ಇದೆ. ಆದರೆ ತನ್ನ ಭಾವನೆಗಳೊಂದಿಗೆ ಶಬ್ದಗಳು ಸಹ ಸ್ಪಂದಿಸುತ್ತಿಲ್ಲ”-ಎಂದು ಸುಮ್ಮನಾದ ಮತ್ತೆ ಅದೇ ಕೋಣೆಗೆ ನಡೆದ.
.
.
.
ನಳ್ಳಿ ಹುಡುಕಿದ ; ಸಿಗಲಿಲ್ಲ. ಸಿಕ್ಕಿದ ಎರಡು ಬಕೆಟ್‌ಗಳನ್ನು ಸರಿಸುತ್ತಿದ್ದಂತೆ, ಅಲ್ಲೇ ನಳ್ಳಿಯೂ ಇತ್ತು. ತಿರುಗಣಿ ತಿರುಗಿಸಿದಂತೆ, ನೀರ ಧಾರೆ ವೇಗವಾಗಿ ಕೆಳಕ್ಕೆ ಚಿಮ್ಮಿತು. ಬಕೆಟ್‌ಗಳೆರಡನ್ನೂ ತುಂಬಿಸಿ, ಹೊಂಡದತ್ತ ಸಾಗಿಸಿದ. ಹೊಂಡಕ್ಕೆರೆದು ಒದ್ದೆ ಮಾಡಿದ : ಪುನಃ ಪುನಃ ನೀರು ತುಂಬಿಸಿ ತಂದು, ಎಂದಿಗೂ ಬೆಸೆಯಲಾಗದ, ಹೊಯ್ಗೆ ಶಿಲೆಕಲ್ಲುಗಳನ್ನು ಸೇರಿಸುವ ವಿಫಲ ಪ್ರಯತ್ನ ಮಾಡಿ, ಸೋಲನೊಪ್ಪಿಕೊಂಡ. “ಏಕೆ ಬೆಸೆಯಬೇಕು”-ಎಂದು ತನ್ನನ್ನೇ ಪ್ರಶ್ನಿಸಿ ಉತ್ತರ ಕಾಣದಾದಾಗ, ತೂಗುಕಲ್ಲನ್ನು ಇಳಿಬಿಟ್ಟು, ಜಲಮಟ್ಟವನ್ನೂ ಕಿಸೆಯಿಂದ ಹೊರತೆಗೆದು ; ಸಮಮಟ್ಟದಲ್ಲಿ ನಾಲ್ಕು ಮೂಲೆಗಳಲ್ಲಿ ಕಲ್ಲುಗಳನ್ನಿರಿಸಿದ ; ನೆಲಸರಿಪಡಿಸಿ-ಆ ಕೋಣೆಗೆ ಹಿಂದಿರುಗಿದ.
ಈ ಅಭಾವ ಕಾಲದಲ್ಲೂ ನಿಜವಾಗಿಯೂ ಕಲಬೆರಕೆಯಾಗದೆ ಉಳಿದಿದ್ದ ಸಿಮೆಂಟ್‌ನ ಗೋಣಿಗಳನ್ನು ಕಷ್ಟದಲ್ಲಿ ಎಳೆದು ಹೊರತಂದ. ಧಡಿಯನನ್ನಾದರೂ ಕರೆದು, ‘ಒಂದು ಬದಿ ಹಿಡಿಯ ಹೇಳಬೇಕು’ ಎಂದು ಅತ್ತ ನಡೆದ. “ಅನಾದಿ ಹಜಾಮನೂ ಉಳಿಸಿದ್ದ ಪಿಳ್ಳೆ ಜುಟ್ಟು, ಒಂದೊಂದಾಗಿ….” ಆತ ಅದಕ್ಕೆ ಗಮನ ಕೊಡದೆ “ಸಿವೆಂಟ್ ಇತ್ತ ತರ‍್ಬೇಕು”-ಅಂದ. ಧಡಿಯ ‘ಅದಕ್ಕೇನಾಗ್ಬೇಕು’–ಅನ್ನುವಂತೆ ಮುಖವನ್ನು ಪ್ರಶ್ನೆ ಚಿಹ್ನೆಗಿಳಿಸಿದ. “ಸ್ವಲ್ಪ ಒಂದು ಬದಿಯಿಂದ ಕೈ” ಎನ್ನುತ್ತಿರುವಂತೆಯೇ, ಧಡಿಯ ಕಾಲಪ್ಪಳಿಸಿ, ಎದ್ದು ನಿಂತ. “ನಾನೇನೂ ಸಮಾಜ ಸೇವಕನಲ್ಲ ತಿಳೀತೇನು ; ನಾನಿಲ್ಲಿರೋದು ನಿನ್ನ ನೋಡ್ಕೊಳ್ಳೋಕೆ ಹೊರ‍್ತು, ನಿನಗೆ ಸ್ವಲ್ಪ ಕೈ….ಕಾಲು”ಗಳಿಗಲ್ಲ ಗೊತ್ತಾಯ್ತೇನು. ನನ್ಗೂ ಕೆಲಸ ಇದೆ. ಮೊದ್ಲು ನಡೆ ಇಲ್ಲಿಂದ”….ಅಂದ. ಶಬ್ದ ಪ್ರವಾಹಕ್ಕೆ ಬೆದರಿ, “ನಡೆ ಇಲ್ಲಿಂದ”ಕ್ಕೆ ಮೊದಲೇ ಆತ ನಡೆದಿದ್ದ : ಜೋಲು ಮೋರೆ ಹಾಕಿಕೊಂಡು-ಕಾಲೆಳೆಯುತ್ತಾ….ಚೀಲಗಳನ್ನು ಒಂದೊಂದಾಗಿ ಎಳದೇ ಸಾಗಿಸಿದ. ಕಾಡುತ್ತಿದ್ದ ದುಗುಡಕ್ಕೆ ಹಸಿವೆಯೂ ಸಂಗಾತಿಯಾಗಿತ್ತು. ಆದರೂ ಏನೂ ಹೇಳುವಂತಿರಲಿಲ್ಲ. ಕಾದ ನೆಲ, ಬಿಸಿ ಗಾಳಿ, ಸುಡುವ ಸೂರ್ಯ, ಧಡಿಯನ ಕ್ರೂರ ನೀತಿಯ ಮಾತುಗಳು. ತನ್ನನ್ನು ಹೊರಗಿನಿಂದ ಮತ್ತು ಒಳಗಿನಿಂದ ಏಕಕಾಲದಲ್ಲಿ ಹುರಿಯುತ್ತಿರುವಂತೆ ತೋರಿತು.
“Be like a little flower that perfumes even that hand-that crushes it” -ಹೆಣ್ಣಿನ ಧ್ವನಿ. ಆಗಲಿ, ಆಕೆಗಾದರೂ ತನ್ನ ಮೇಲೆ ಸಹಾನುಭೂತಿಯಿದೆಯಲ್ಲಾ- ಎಂದು ದಯಾ ಭಿಕ್ಷುಕನಂತೆ ಆಕೆಯತ್ತ ನೋಡಿದ. ಆಕೆಯ ಕಣ್ಣಂಚಿನಲ್ಲೂ ನೀರು ತೊಟ್ಟಿಕ್ಕುತ್ತಿದ್ದುವು. ಹೌದ-ಆಕೆ ಅಂದರೆ “crush”-ಆಗುವುದೇ ಒಳಿತು ಎಂದನಿಸಿತು-ಒಂದು ಕ್ಷಣ. ಅಬ್ಬ ಈ ಹಸಿವೆ ಒಂದಿಲ್ಲದಿದ್ದರೆ……ಎಂದು ಮಂಡಿಗೆ ಕೊರೆದ.
ಕಬ್ಬಿಣದ ತಟ್ಟೆ, ಡಬ್ಬಗಳಲ್ಲಿದ್ದ ಸುಣ್ಣ ಹುಡುಕಿ ತಂದ; ಅಲ್ಲೇ ಇದ್ದ ಹೊಯ್ಗೆ, ಸುಣ್ಣ, ಸಿಮೆಂಟ್‌ಗಳನ್ನು ಪ್ರಮಾಣದಲ್ಲಿ ಸೇರಿಸಿ, ಹಾರೆಯಿಂದ ಕಡಿದು, ಹಾರೆಯ ಹಿಡಿಯನ್ನು ಕ್ರಿಕೆಟ್ಟಿನಲ್ಲಿ ಚೆಂಡನ್ನು ಆಫ್ ಬ್ರೇಕ್‌ಗೆ ತಿರುಗಿಸಿದಂತೆ ಹಾರಿಸುತ್ತಾ, ಮಿಶ್ರಗೊಳಿಸಿದ. ಕಟ್ಟೆಯಂತೆ ಮಾಡಿ ನೀರೆರೆದು -ಪುನಃ ಹದಗೊಳಿಸಿದ. ಕಬ್ಬಿಣದ ತಟ್ಟೆಯಲ್ಲಿ ತುಂಬಿಸಿ, ಹೊಂಡಕ್ಕಿಳಿದ. ಒಂದೊಂದಾಗಿ ಕಲ್ಲು ಎತ್ತಿ ಇಳಿಸುತ್ತಾ, ಜಾಗದಲ್ಲಿ ಇಡುತ್ತಾ, ನೂಲಿಗೆ ಸರಿ ಹೊಂದಿಸುತ್ತಾ, ಸಿಮೆಂಟ್ ತುಂಬಿಸುತ್ತ ಹೋದ.
ಪುಟ ಮಗುಚುತ್ತಿದ್ದ ಧಡಿಯ, ಒಂದೊಮ್ಮೆ ಆವೇಶ ಬಂದವನಂತೆ ಒದರತೊಡಗಿದ ……ವಿವಿಧ ಸ್ವರಗಳಲ್ಲಿ.
ಮಗು : ಅಮ್ಮಾ ಹಸಿವೋ ಹಸಿವು……ತಿನ್ನಲು ಏನಾದರೂ ಕೊಡು.
ಅಮ್ಮ : ಏನನ್ನು ಕೊಡಲಿ ಮರಿ……ನಿನ್ನಪ್ಪ……ಕೆಲಸಕ್ಕಾಗಿ ಒದ್ದಾಡುತ್ತಿದ್ದಾನೆ. ನಿನ್ನಮ್ಮ ಮರ್ಯಾದೆಗಾಗಿ ಪ್ರಾಣ ಬಿಡುತ್ತಾಳೆ…ಇನ್ನು ಕೂಳು..
ರಾಜಕಾರಿಣಿ : ಈ ವರ್ಷಾ ತುಂಬಾ ಕೆಟ್ಟದೂಂತ ಜೋಯಿಸರು ಹೇಳಿದ್ದಾರೆ. ನಮಗೂ ಗೊತ್ತು-ನಿಮ್‌ ಕಷ್ಟಾ. ನಮ್ಮ ರಾಷ್ಟ್ರದ ಜನತೆ -ಹಿಂದೆಂದೂ ಇಲ್ಲದ ಕಷ್ಟಗಳನ್ನು ಎದುರಿಸಲು ಸಿದ್ಧರಾಗ್ಬೇಕು. ಜನತೆಯ ಮೇಲೆ ಅವರ ಮೌನ ಗೋಳಿನ ಬಗ್ಗೆ ನಮಗೆ ತುಂಬಾ ಸಹಾನುಭೂತಿಯಿದೆ. ಅವರ ಸಮಸ್ಯೆಗಳು ನಮಗೂ ಅರ್ಥವಾಗುತ್ತದೆ. ಆದರೆ ನಾವೂ ನಿರುಪಾಯರಾಗಿದ್ದೇವೆ……Poor Fundಗೆ ದಯವಿಟ್ಟು ಎಲ್ಲರೂ ದಾನ ಮಾಡಿರಿ……ನಿಮ್ಮ ದಾನ……ಪೈಸೆ ಇರಲಿ, ರೂಪಾಯಿ ಇರಲಿ…….ಯಾವ ಮೊತ್ತವೂ ಚಿಕ್ಕದಲ್ಲ….. ಈಸಲದ ಬೆಳೆ ತುಂಬಾ ಉತ್ತಮವಿದೆ ; ಒಮ್ಮೆ ಕಟಾವು ಆರಂಭವಾಯ್ತೆಂದರೆ, ಎಲ್ಲಾ ಪ್ರಾಬ್ಲಮ್ಮೂ, ಸೋಲ್ವ್‌ ಆಗುತ್ತವೆ… ….. ಮತ್ತು ನಿಮ್ ಕಷ್ಟಾ……
ಆತನಿಗೆ ತನ್ನನ್ನೇ ಯಾರೋ ಅಣಕಿಸುವಂತೆ ತೋರಿತು. ಆದರೂ ಏನೂ ಮಾಡಲಾರದವನಂತಿದ್ದ. ಏನೋ ಮರೆತವನಂತೆ, ಫಕ್ಕನೆ ಹೊಳೆದಂತಾಗಿ “ಊಟ”ದ ಸವಿ ನೆನಪಿಗೆ, ಹಸಿವು ಮತ್ತೂ ಹೆಚ್ಚಾಗಿ ಮೇಲೆ ನೋಡಿದ. ಸೂರ್ಯ ನಡು ನೆತ್ತಿಗೂ ಮೇಲೇರಿ, ಪಡುದಿಕ್ಕಿಗೆ ವಾಲಿದ್ದ. “ಎಂದಪ್ಪಾ, ಮಧ್ಯಾಹ್ನದ ಊಟ”–ಎಂದು
ತನ್ನಷ್ಟಕ್ಕೆ ಗೊಣಗಿದ.
ಧಡಿಯ ಎದ್ದು ನಿಂತು ಬೊಗಳುತ್ತಿದ್ದ.
ಚೇಲ : ನಮ್-ಯಜಮಾರ‍್ರೂ, ಏನು ಹೇಳ್ತವ್ರೆ ಅಂದ್ರೆ…. ಅಂದ್ರೆ….ಮೂರು ಹೊತ್ತು ಉಣ್ಣುತ್ತಿದ್ದೋರು ಎರಡೇ ಹೊತ್ತು: ಎರಡು ಸಲದೋರು ಒಂದೇ ಹೊತ್ತು…ಮತ್ತು ಒಂದು ಸಲದೋರು….ಸಲದೋರು…ಅಲ್ಲಲ್ಲ …. ಊಹೂ೦ ಉಹೂಂ ಹಾಗಲ್ಲ-ಅಂತೂ ಉಳಿಸಿ, ಹೆಚ್ಚು ಬೆಳೆಸಿ, ಈ ಕಷ್ಟದ ಸಮಯ ದಾಟಿದ್ರೆ…
ಕಲ್ಲುಗಳೇರುತ್ತಾ ನೆಲಮಟ್ಟ ಬಂದಾಗ ಆತ ತುಂಬಾ ಸುಸ್ತಾಗಿದ್ದ. ಆ ಕೋಣೆಯ ಅದೇ ನಳ್ಳಿ ನೀರನ್ನು ಬೊಗಸೆ ಹಿಡಿದು ಸಾಕಷ್ಟು ಕುಡಿದ. ಅರ್ಧ ಜೀವ ಬಂದಂತಾಗಿ ಪುನಃ ಕಲ್ಲು ಕಟ್ಟತೊಡಗಿದ. ಯಾರೋ ಬೇಗ ಬೇಗ” ಅಂದಂತಾದಾಗ ಯಾರು ಎಂದ ನೋಡುವ ಗೋಜಿಗೆ ಹೋಗದೆ, ವಿವಶತೆಯಿಂದ ಕಲ್ಲು ಕೂಡಿಸುತ್ತಾ, ಸಿಮೆಂಟ್ ಸೇರಿಸುತ್ತಾ, ಕಟ್ಟೆಗಳಾಗಿಸುತ್ತಾ ಹೋದ.
ಧಡಿಯ “ಮಹಾ ಕಾವ್ಯಗಳು ವಿಮರ್ಶೆ” ಅನ್ನುತ್ತಾ ಹೊಸ ಪುಟ ತೆರೆದ. “ಉದ್ದೇಶ ಪೂರ್ವ ನಿಯೋಜಿತ ಅಥವಾ ಕ್ರಿಯೆಯೊಡನೆ ಸಂಬಂಧ, ಮಾರ್ಪಾಟುಗಳೇನೇ ಇದ್ದರೂ, ಕ್ರಿಯೆಯ ಎರಕದಂತೆ, ಸೃಷ್ಟ್ಯಾತ್ಮಕವಾಗಿ – ಜೀವನದ ವಿವಿಧ ಸ್ವರಗಳಲ್ಲಿ, ತತ್ಯಾಲೀನ ಕ್ರಿಯೆಯೊಂದಿಗೆ, ಮೂಲೋದ್ದೇಶವೇ ಬೆಳೆಯುತ್ತ ಹೋಗುವುದು. ಪ್ರಾಯಶಃ ಮಹಾಕಾವ್ಯದಲ್ಲಿ ಮಾತ್ರ ಕಾಣಬಹುದಾದ-ವಿಶೇಷತೆ, ಸೋಲು ಗೆಲುವುಗಳು ; ಕತ್ತಲೆ-ಬೆಳಕುಗಳು ; ಮಾನಸಿಕ ಯುದ್ಧ ಸ್ವ-ಮಾ-ಯುದ್ಧ ಸ್ವಗಳು ; ಸಂಬಂಧದ ಬಗ್ಗೆ ತುಮುಲಗಳು; ಕ್ರಿಯ-ಕಾಲದಲ್ಲಿ ಲೀನವಾಗುತ್ತಾ ಹೋದಂತೆ ಪುಟವಿಟ್ಟಂತಾಗುವುದು ; ಮೂಲೋದ್ದೇಶ, ಕೈಗೆಟುಕಿದ ಮೇಲೂ, ಕ್ರಿಯೆ–ಆ ಉದ್ದೇಶವನ್ನೇ ಬೆಳೆಯಿಸಿಕೊಂಡು, ತಾನೂ ಸ್ವತಃ ಬೆಳೆಯುತ್ತಾ, ಜೀವನದ ಅಂತ್ಯದಲ್ಲಿ-ಸ್ವಂತಿಕೆಯ ಅನಿವಾರ್ಯ ನಿರ್ನಾಮದಲ್ಲಿ, ಪರ್ಯವಸಾನವನ್ನು ಹೊಂದುವಂತೆ ತೋರಿಯೂ, ತಾದಾತ್ಮ್ಯವನ್ನು ಪಡೆಯುವುದು ; ಅತ್ಯಂತ ಉತ್ಕಟವಾದ ಸಂಘರ್ಷರಹಿತ ಸ್ಥಿತಿ. ‘ದ್ವಂದ್ವ’ ಎನ್ನುವುದು. ಓರ್ವ ವ್ಯಕ್ತಿಯ ಚಿಂತನೆಯ ಮಸೆತವಾಗಿ ಉಳಿಯದೆ, ಸಾಮಾಜಿಕವೂ, ಸಾರ್ವತ್ರಿಕವೂ ಆಗಬೇಕು. ಆದರೂ ಈ ಎಲ್ಲಾ ಉದ್ದೇಶ, ಕ್ರಿಯೆಗಳ ಬೆಳವಣಿಗೆಯ ಮೂಲ, ವ್ಯಕ್ತಿಯ ಪ್ರಜ್ಞೆ ; ಮತ್ತು ಅದರ ಪರಿಣಾಮವೂ ತೀವ್ರವಾಗಿ ಬೀರಲ್ಪಡುವುದು. ಅದೇ ವ್ಯಕ್ತಿಯು ಮತ್ತು ಪರಿಸರದ……
ಆತ ಯೋಚಿಸಹತ್ತಿದ.-ಇದು ಮಹಾಭಾರತದ ಬಗ್ಗೆ ಬರೆದದ್ದಿರಬೇಕಲ್ಲವೇ…… ಎಲ್ಲಿ ಓದಿದ್ದು……? ಪುರಾಣ ವಾಚನದಲ್ಲಿ ಕೇಳಿದ್ದು…..? ಭಾಷಣ ಆಲಿಸಿದ್ದು …..? ಆದರೂ ಸ್ಪಷ್ಟವಾಗಿದೆಯಲ್ಲ……ಕ್ರಿಯೆಯೇ ಬೆಳೆಯುತ್ತಾ……ಅಲ್ಲ…… ವಲೋದ್ದೇಶವೇ ಕ್ರಿಯೆಯೊಂದಿಗೆ ಬೆಳೆಯುತ್ತಾ……ನಶಿಸುವುದು……ಕ್ರಿಯೆಗೆ, ಧ್ಯೇಯ, ಗತ್ತು, ಇಲ್ಲದಿದ್ದಲ್ಲಿ ಅದು ಬರೇ ಒತ್ತಾಯಕ್ಕಾದಲ್ಲಿ……ಸೋಗು, ನಿರ್ವಿಣ್ಣತೆಗಳು……ಏನೋ…… ಇರಲಿ……ಎಂದು ಮುಂದೆ ಚಿಂತಿಸಲೂಬಾರದೆ ತನ್ನ ಕೆಲಸದತ್ತ ಮನ ಹಾಯಿಸಿದ.
ಧಡಿಯ ಎದ್ದು ನಿಂತು, “ಕೊನೆಯದಾಗಿ ಹಾಯಿಕುಗಳು”-ಅಂದ.
1 ನಿರ್ಜಿವ ಕಂಬಗಳೆಡೆ, ದೇವರೆಡೆ, ಬಾಗಿಲುಗಳೆಡೆ, ಸೂರಿನ ಕೆಳಗೆ, ಜ್ವಲಿತ ವಿದ್ಯುತ್‌ ತಂತಿಗಳಡಿ-ಶೀರ್ಷಾಸನಕ್ಕೆ ತಯಾರಿ.
2 ಸಾಹಿತಿ ಮತ್ತು ರಾಜಕಾರಿಣಿಗಳೊಳಗಿನ ಪರಸ್ಪರ ಸ್ಪರ್ಧಾತ್ಮಕ ಈರ್ಷೆಗಿಂತ ಅವರೊಳಗಿನ ಅನೈತಿಕ ಒಪ್ಪಂದ, ತತ್ಕಾಲೀನ ಸಾಮಾಜಿಕ ಸ್ಥಿತಿಗೆ ಹೆಚ್ಚು ದುರಂತ.
3 ಚೆಂದದ ಚಂದಿರ, ಬೊಂಬೆ “ಬೆಳ್ಳಿ”ಯ-ಲಂಗ ಸರಿಪಡಿಸಿ ಚುಂಬಿಸಿದ.-

4 ಜೀವನದ ಅನಂತ-ಕಪ್ಪು ಬಿಳುಪುಗಳ ಕಲ್ಲೋಲದೆಡೆಯಲ್ಲೂ, ಕೆಂಪು ಹಸುರುಗಳ ಓಕುಳಿಯಾಟ,-
5 ದೇವರೂ ‘ನಮಸ್ತೆ’–ಅಂದೊಡನೆ-
“Through the proper channel” ಅನ್ಬೇಕೇ ಭಡವಾ,
6 ವಿಧುರಾಶ್ವತ್ಥಕ್ಕೆ ಬರುವ ಸುತ್ತುಗಳ-ತಪ್ಪಿದ ವಿಳೆ ಜಾಡಿಸಿ
ಯಾರಾದರೂ ವಿತಂತು ಇತ್ತ ದೃಷ್ಟಿ ಹರಿಸಿ-
ದರೆ-‘ಪುನಃ ಪೂಜಾಂ ಕರಿಷ್ಯೇ’ಗೆ
ಒಗ್ಗಿಕೊಳ್ಳುವ ನಮ್-ನಿಮ್‌-ಗೆ-
7 ಎರಡು ದಿನಗಳ ಹಿಂದೆ ಹುಟ್ಟಿ-ಇಂದು-ಸತ್ತ
ಮಗುವನ್ನು ನೆನೆದು ಅಳುತ್ತಿರುವ ಮಡದಿಗೆ
ಅಂದ-“ಪ್ರಿಯೇ ಅನುಭವ ಮುಖ್ಯ-ಜೀವನದಲ್ಲಿ
ಹೆರುವ ಅನುಭವವಾಯ್ತಲ್ಲಾ ಮಳ್ಳೀ”.

ಇವೆಲ್ಲವುಗಳನ್ನು ಓದಿದಂತೆ, ಅನುಭವಿಸಿದಂತೆ, ತನ್ನ ಹೃದಯಕ್ಕೆ ತೀರಾ ಸಮೀಪವಾದ ಉಕ್ತಿಗಳಂತೆ, ಆತನಿಗನ್ನಿಸಿತು ; ಆದರೂ ಹಾಗೆಂದು ಹೇಳುವ ಧೈರ್ಯ ಮಾತ್ರ ದೂರದಲ್ಲುಳಿಯಿತು. ಧಡಿಯನಲ್ಲಿ ‘ಮಾತನಾಡುವ ಗೋಜೇ’ ಬೇಡ-ಎಂದು ಸುಮ್ಮನಾದ. ಮೂರನೇ ಮೆಟ್ಟಲಿನ ಹಂತದಲ್ಲಿ ನಡುವೆ ತುಂಡು ಮುರಕಲ್ಲು, ಮಣ್ಣು ಸೇರಿಸಿ ಪೀಠಕ್ಕೆ ಕಟ್ಟೆ ಕಟ್ಟಿದ. ‘ಆರೇ ಎಲ್ಲಾ ಕಲ್ಲುಗಳೂ ಮುಗಿದುವಲ್ಲ, ಹೆಣ್ಣೂ ಇಲ್ಲ ಕಡಿಮೆಯೂ ಇಲ್ಲ’-ಎಂದು ಆಶ್ಚರ್ಯವಾಯಿತವನಿಗೆ. ‘ಅಶೋಕಸ್ತಂಭವನ್ನಿಡಬೇಕು’, ಎಂದು ಕೋಣೆಗೆ ಹೋದ. ಎತ್ತಲು ಪ್ರಯತ್ನಿಸಿ, ಸೋತು, “ಹೇಗಪ್ಪಾ ಸಾಗಿಸುವುದು’ ಎಂದುಕೊಂಡ. ತಡೆಯಲಾರದ ಬಾಯಾರಿಕೆಗೆ-ಪುನಃ ಬೊಗಸೆ ಹಿಡಿದು, ನಳ್ಳಿ ನೀರು ಕುಡಿದ. ಖಾಲಿ ಗೋಣಿಯ ಮೇಲೆ, ಮೆಲ್ಲಗೆ ಉರುಳಿಸಿ ಇಟ್ಟು, ಹೊರಕ್ಕೆ ಎಳೆದ. ಹಲಗೆಯೊಂದನ್ನು ಮೆಟ್ಟಲುಗಳ ಮೇಲಿಟ್ಟು ಮೆಲ್ಲನೆ ಗೋಣಿ ಜಾರಿಸುತ್ತಾ ಹೋಗಿ, ಅಂಗಳದಲ್ಲೆಳೆಯುತ್ತಾ, ಏದುಸಿರು ಬಿಡುತ್ತಾ, ಪೀಠದತ್ತ ಸಾಗಿಸಿದ. ಎತ್ತಿ ಇಡಲು ಬೇರೆ ಮಾರ್ಗವೇ ಕಾಣದೆ, ಧಡಿಯನತ್ತ ಅಸಹಾಯಕವಾಗಿ ನೋಡಿದರೆ-ಫೈಲು ಮುಚ್ಚಿತ್ತು. ಧಡಿಯ ಯಾರಲ್ಲೋ ಮಾತನಾಡುತ್ತಿದ್ದ. ಆತ “ನನಗೇನು” ಅಂದುಕೊಂಡ. ಹಲಗೆ ಮತ್ತು ಹಗ್ಗದ ಸಹಾಯದಿಂದ-ಸ್ತಂಭವನ್ನು ಕಷ್ಟದಲ್ಲಿ ಮೇಲಕ್ಕೇರಿಸಿ ಹಲಗೆ ಜಾರಿಸಿದ.
“Single man’s work ! marvelous ! ಆಂದಂತಾಯಿತು. ಆತ ತಲೆ ಎತ್ತುತ್ತಿದ್ದಂತೆ ಧಡಿಯ ಆ ಆಗಂತುಕನೊಡನೆ ವಿನೀತನಾಗಿ “yes sir”- ಅಂದು ಆತನ ಕೃತಿಯನ್ನು ಹೊಗಳ ಹತ್ತಿದ. ಆತ-ನಿಗೆ ಆಶ್ಚರ್ಯವೋ ಆಶ್ಚರ್ಯ. “ಎಲಾ ಇವನ”-ಅಂದುಕೊಂಡ ಮನಸ್ಸಿನಲ್ಲಿಯೇ. ‘ಇಂದಾಗಬಹುದಲ್ಲವೇ, ಬೇಗ ಆಗಬೇಕಿತ್ತಲ್ಲಾ……” ಎಂದ-ಧಡಿಯನ ಮಾತು-ಆತನದೇ ಹೌದೋ ಅಲ್ಲವೋ-ಎಂದು ಆತ ಹೋಚಿಸತೊಡಗಿದ ; ಉತ್ತರಿಸಲಿಲ್ಲ. “ಮಾನ್ಯರು ಮಾತನಾಡುವುದು ಕಡಿಮೆ. ಕೆಲಸ, ಕೆಲಸ, ಕೆಲಸ… ….ಇಂದು ಬೆಳಿಗ್ಗೆಯಿಂದಲೂ ನೋಡ್ತೇನೆ. ಒಂದೇ, ಒಂದು ನಿಮಿಷ ಹಾಳು ಮಾಡಿಲ್ಲ…..ಮಾತು-ಅಂತೆಯೇ-ಕೃತಿ” -ಧಡಿಯನ ಪರಾಕು ನಡೆಯುತ್ತಿತ್ತು. ಆಗಂತುಕ “ಸರಿ-ವ್ಯವಸ್ಥೆಯಾಗಬೇಕಲ್ಲಾ-ಹೊರಡುತ್ತೇನೆ”-ಅಂದು ಹೊರಟೇ ಬಿಟ್ಟ. ಧಡಿಯನನ್ನು ‘ಸಿಗಿದೇ ಬಿಡಬೇಕು’-ಎಂದು ತೋರಿತು–ಆತನಿಗೆ. ‘ಅಬ್ಬಾ ಧಡಿಯನ ಸೋಗೇ’-! “ಏನು ವಿನಯ, ಏನು ಮಾತು! ಅವನತ್ತ ನೋಡಬೇಕು ; ಗುರ‍್ರೆಂದು ನೋಡಬೇಕು ಎನ್ನುವಾಗ ಧಡಿಯ ದೂರ ಸಾಗಿದ್ದ.
.
.
.
ಕೆಳಗೇನೆ ಚರಚರ ಅಂದ ಹಾಗಾಯ್ತು. ‘ಏನು ನೆಲವೇ ಬಿರಿಯುತ್ತದೋ ಏನೋ, ಎಂದನಿಸಿ, “ಮತ್ತಿನ್ನೇನಾದೀತು, ಈ ಹೊಯ್ಗೆಯಲ್ಲಿ’-ಅನ್ನುತ್ತಾ ಸಿಮೆಂಟ್ ಸವರತೊಡಗಿದ. “ನಾಳೆ ಬೇಕಿದ್ದರೆ ಜರಿದೇ ಹೋಗಲಿ, ಇಂದು ಒಮ್ಮೆ ಪೂರ್ತಿಯಾಗಿ ನಾನಿಲ್ಲಿಂದ ಜಾರಿದರೆ ಸಾಕು’ ಎಂದು ಮನಸ್ಸಿನಲ್ಲಿಯೇ ಅಂದ. ‘ಹೌದು, ಇದು ನಾಳೆ ನಿಜವಾಗಿಯೂ ಬಿರಿಯಲೇಬೇಕು ; ಬಳಿ ಧಡಿಯ ನಿಂತಿರಬೇಕು. ಆತ ಹೊಂಡಕ್ಕೆ ಕಾಲು ಮೇಲಾಗಿ ಬಿದ್ದು, ಆತನ ಡೊಳ್ಳು ಹೊಟ್ಟೆಯ ಮೇಲೆ ಈ ಧ್ವಜಸ್ತಂಭ ಕೂರಬೇಕು. ಹ ಹ ಹೇಗಿರುತ್ತದೆ ವಂಚಾ….. …..ಒತ್ತಾಯದ ಕೃತಿಯ ಪರಿಣಾಮದ ಬಗ್ಗೆ …….. ಬುದ್ಧಿ ಬರುತ್ತದೆ……. ಎಂದು ಮಂಡಿಗೆ ಕೊರೆತ. ಮೇಲೆ ನೋಡಿದ ; ಹುಡುಗೆ ಇರಲಿಲ್ಲ. ಅಬ್ಬಾ ಹೊಟ್ಟೆ ಕೆಳಭಾಗ ಬಿರಿಯುವಂತಿದೆ. ಒಮ್ಮೆ ಉಚ್ಚೆ ಹೊಯ್ದೇ ಬಿಡಬೇಕು-ಅಂದು ಪೇಂಟಿನ ಗುಬ್ಬಿಗೆ ಕೈ ಹಾಕುತ್ತಿದ್ದಂತೆ “ಇಲ್ಲಿ, ಇಲ್ಲಿ” ಶಬ್ದ ಕೇಳಿ ಬೆಚ್ಚಿ ನೋಡಿದ. “ನೂರಾರು……ಸಾವಿರಾರು…. ಎಷ್ಟು, ಎಂದೂ ಎಣಿಸಲಾರದಷ್ಟು ಮಕ್ಕಳು, ಓಡಿ ಓಡಿ ಬರುತ್ತಿದ್ದರು ಧಡಿಯನ ಬಳಿ. ‘ಆಯ್ತು ಇನ್ನು ಉಚ್ಚೆ ಹೊಯ್ದಂತೆಯೇ ; ಹೊಂಡದಲ್ಲಾದರೂ ಆಗಲೇ ಮಾಡಬಹುದಿತ್ತು. ಅದನ್ನೂ ಮುಚ್ಚಿ ಆಯಿತು”-ಎಂದು ಬಟನ್ ಸಿಕ್ಕಿಸಿದ.
“ಸೂರ್ಯ ಸುಮಾರು ಕೆಳಗಿಳಿದಾಯಿತು. ಅರ್ಜೆಂಟ್ ಆಗ್ಬೇಕು”, ಅನ್ನುತ್ತಾ, ಸಿಮೆಂಟ್, ಹೊಯ್ಗೆ ಸೇರಿಸಿ ಪ್ಲಾಸ್ಟರ್ ಮಾಡತೊಡಗಿದ……“ನೀನಿಲ್ಲಿ”, “ನೀನಿಲ್ಲಿ”-‘ಏ’ “ಓ’ ಗಳ ಗಲಾಟೆಯಲ್ಲಿ ಮಕ್ಕಳು ದೂರ ಸಾಲಾಗಿ ನಿಲ್ಲುವುದರಲ್ಲೇ ಮಗ್ನರಾಗಿದ್ದಂತೆ ತೋರಿತವನಿಗೆ. ಬಹುಶಃ ಧಡಿಯನಂದ “ಕೆಲಸ ಮಾಡುವವರ ಬಳಿ ಯಾರೂ ಹೋಗ್ಬಾರ‍್ದು”-ವಿಗೆ ಹೆದರಿರಲೂ ಬಹುದು.
ಧಡಿಯ, ಮಕ್ಕಳು ಅನುಸರಿಸಬೇಕಾದ ಶಿಸ್ತು: ಅನಂತರದ ಸಭೆಯಲ್ಲಿ ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಭಾಷಣ ಬಿಗಿಯುತ್ತಿದ್ದ ; ನಡುನಡುವೆ ಏನೇನೋ ಕತೆ, ಹಾಸ್ಯಗಳನ್ನು ಹೇಳಿ ಮಕ್ಕಳನ್ನು ನಗಿಸುತ್ತಲೂ ಇದ್ದ……
“ಕಾವಿ ಬಣ್ಣ ತರಬೇಕು”-ಎಂದು ಕೋಣೆಗೆ ಹೋದ. “ಎಲ್ಲಿ” ಎಂದು ಕಾಣದೆ ಯೋಚಿಸುತ್ತಿರುವಾಗಲೇ ಮುಚ್ಚಿದ ಕಿಟಿಕಿಯ ಬಳಿ ಏನೋ ‘ಕಟ್ಟು’ ಮತ್ತು ಗುಂಡು ಕಲ್ಲು ಕಂಡು ಕಟ್ಟು ಬಿಚ್ಚಿದ. “ಹಾ ಅದೇ” ಅಂದು ತನ್ನ ತಾವಿಗೆ ತಂದ. ಸಿಮೆಂಟ್ ನೀರಿಗೆ ಕಾವಿ ಸೇರಿಸಿ ಕಲಸಿದ. ನೀರು ತರಲು ಬಕೆಟ್ ಹಿಡಿದು ಕೋಣೆಗೆ ಬಂದ. ನಳ್ಳಿ, ತಿರುಗಿಸಿದರೆ ನೀರು ನಿಧಾನವಾಗೆ ‘ಫಸ್” “ಫಸ್” ಅನ್ನುತ್ತಾ ಬರುತ್ತಿತ್ತು. ‘ಎಲಾ, ಮಗನೇ’ ಅನ್ನುತ್ತಾ, ಕಾದು ತುಂಬಿಸಿ, ಇನ್ನೊಂದು ಬಕೆಟ್ ಅಲ್ಲೆ ಇಟ್ಟು, ನಳ್ಳಿ ತಿರುಗಿಸಿ ಬಂದ. ಬಣ್ಣ ಸವರುತ್ತಾ, ಗುಂಡುಕಲ್ಲಲ್ಲಿ ಆರೆಯತೊಡಗಿದ. ಆಗಲೇ ಜನ ಚಾತ್ರೆಗೋ ಎಂಬಂತೆ ಸೇರಿದ್ದನ್ನು ನೋಡಿ ಗಲಿಬಿಲಿಗೊಂಡ. ಮನಸ್ಸಿನಲ್ಲೇ ಕೊಂಚ ಹೆಮ್ಮೆ ಎನಿಸಿದರೂ, ‘ತನಗೇಕೆ ಇಲ್ಲದ ಉಸಾಬರಿ’ ಎಂದು ತನ್ನ ಕಾರ್ಯದಲ್ಲೇ ಮಗ್ನನಾದ.
.
.
.
ಬಸ್ಸುಗಳ, ಕಾರುಗಳ, ಟ್ರಕ್ಕುಗಳ, ರಿಕ್ಷಾಗಳ, ಸೈಕಲ್ಲುಗಳ, ಕಿವಿಗಡಚಿಟ್ಟುವ ಶಬ್ದದಲ್ಲಿ, ಒಬ್ಬರಿಗೊಬ್ಬರು ಮಾತನಾಡುವುದೂ ಕೇಳಿಸದಷ್ಟು ಗುಲ್ಲು ಎದ್ದು, ಜಾತ್ರೆಗೆ ಬಂದ ‘ಜನ’, ಪೀಂ ಪೀಂ……ಕಡ್ಲೆ ಕಡ್ಲೆ, ಟೈಂ ಟೈಂ……ಐಸ್‌ ಕ್ರೀಂ……ಪುಗ್ಗ ಪುಗ್ಗ ……ಗಳಿಂದ ಆತ ಆಕರ್ಷಿತನಾದ. ತನ್ನ ಬಗ್ಗೆ, ತನ್ನ ಕೃತಿಯ ಬಗೆಗಿನ ಸಂತಸವನ್ನು ಆನಂದವನ್ನು ವ್ಯಕ್ತಪಡಿಸೋಣವೆಂದು ಮೇಲೆ ನೋಡಿದರೆ ಹುಡುಗೆಯೇ ಇರಲಿಲ್ಲ ……ಆದರೂ ಇನ್ನು ಈ ಹಾಳು ಉಚ್ಚೆ ಹೊಯ್ಯುವಂತೆಯೂ ಇರಲಿಲ್ಲ. ನೆಲ ಅರೆಯುತ್ತಾ, ಅರೆಯುತ್ತಾ, ಫಳ ಫಳ, ಹೊಳೆಯುತ್ತಿದ್ದಂತೆ, ಸೂರ್ಯನೂ ಕೆಂಬಣ್ಣಕ್ಕೆ ತಿರುಗಿ ಅದರಲ್ಲಿ ಪ್ರತಿಫಲಿಸುತ್ತಿದ್ದ. ಆಗಾಗ್ಗೆ ಕಲ್ಲನ್ನು ಬಕೆಟ್ಟಿನ ನೀರಿನಲ್ಲಿ | ಮುಳುಗಿಸಿ ಮತೂ ಅರೆಯುತ್ತಲೇ ಇದ್ದ…….
ಬಳಿಯೇ ಮೇಜುಗಳು, ಕುರ್ಚಿಗಳು, ಮೇಲ್ವಾಸುಗಳು, ಹೂದಾನಿಗಳು, ಜಮಖಾನೆಗಳು, ಸುಗಂಧದ್ರವ್ಯಗಳು ಬಂದಿಳಿದಿದ್ದು….“ಛೇ ಛೇ, ಈ ರೀತಿಯ ಸ್ವಾಗತ ಈವರೆಗೂ ಇದ್ದಿರಲಿಲ್ಲ… ಎಂತಹ ಸಭೆ, ಎಷ್ಟು ಜನ”-ಅಂದು ಬೀಗಿದ.
ಆದರೂ ದೇಹ ನಿತ್ರಾಣವಾದಂತಾಗಿ, ಅದರಲ್ಲೂ-ಬಾಯಿ ಪಸೆಯೇ ಆರಿ, ಆ ಕೋಣೆಗೆ ಹೋದ. ಮಂದ ಬೆಳಕಿನಲ್ಲಿ, ನೀರಿಳಿಯದ ನಳ್ಳಿಯಡಿಯ, ಅರ್ಧ ತುಂಬಿದ ಬಕೆಟಿನ ನೀರನ್ನೇ ಬೊಗಸೆಯಿಂದೆತ್ತಿ ಕುಡಿದ. ನೀರಿಗೆ ಸ್ವಲ್ಪ ಸಿಮೆಂಟಿನ ರುಚಿಯೂ ಸೇರಿತ್ತು. ಹಿಂದಿರುಗಿ ಬಂದಾಗಲೇ ತುದಿಗೆ ಕೊಳಿಕೆಯಿರುವ ಪೈಪನ್ನು ಎತ್ತಿ ತಂದ-ಮತ್ತೆ ಕೋಣೆಯಲ್ಲಿ ಕಾಣದೆಂದು. ನೆಲ ಅಗೆತದ ಕೆಲಸವನ್ನು ಪುನಃ ಮುಂದುವರಿಸಿದ. “ನೆಲಕ್ಕೆ ನೀರು ಕಟ್ಟಬೇಕಾಯ್ತು, ನೀರಿಲ್ಲವಲ್ಲ’ ಎಂದುಕೊಂಡು ‘ಬೇಕಿದ್ದರೆ ಯಾರಾದರೂ ಕಟ್ಟಲಿ, ನನಗೇನು’-ಎಂದು ತನ್ನನ್ನೇ ಉತ್ತರಿಸಿಕೊಂಡ.
ವೇದಿಕೆಯ ಬಳಿ, ಸುತ್ತ ಜನವೋ ಜನ. ಮೈಕ್ ಬೇರೆ ಸಿನಿಮಾ ಪದ್ಯಗಳನ್ನು ಹಾಡುತ್ತಿತ್ತು. ಧಡಿಯ ಭಾರೀ ಅರ್ಜೆಂಟ್‌ನಲ್ಲಿರುವವನಂತೆ-ಅರ್ಜೆಂಟಾಗಿ ಮೈಕದ ಎದುರು ಓಡಿ ಬಂದ. ಯಾವುದೋ ಪದ್ಯ ಅರ್ಧಕ್ಕೇ ನಿಂತು, ಗೊಗ್ಗರು ಗಂಟಲಿನ ಕರ್ಕಶ ಸ್ವರ `ಹಲೋ, ಹಲೋ’ ಅಂದು ಮಾತನಾಡತೊಡಗಿತು. “ಮಹನೀಯರೇ-ಮಹಿಳೆಯರೇ-ಇಂದು ನಮ್ಮ ಪಾಲಿಗೆ ಅತೀ ಪವಿತ್ರ ದಿನ…ಈ ಸಮಾರಂಭದ ಅತೀ ಮುಖ್ಯ ವ್ಯಕ್ತಿ ಇವರು…… ಸಮಾಜ ಸೇವಕ, ಸಾಹಿತಿ, ರಾಜಕಾರಿಣಿ……ಮತ್ತೇನೇನೋ…….
ಆತನಿಗೆ ಪೈಪ್‌ಗೆ ಕಟ್ಟಬೇಕಾದ ಹಗ್ಗದ ನೆನಪಾಗಿ ಕೋಣೆಗೆ ಓಡಿದ. ಕತ್ತಲು ಕೋಣೆಯನ್ನು ನುಂಗುತ್ತಿತ್ತು. ಹುಡುಕಿ, ಹುಡುಕಿ, ಖಾಲಿ ಗೊಣಿಗಳಡಿಯಲ್ಲಿ ಬಿದ್ದಿದ್ದ ಹೊಸ ಹಗ್ಗ ದೊರಕಿಸಿಕೊಂಡ ; ಹೊದಂತೆ-ಸಭೆಯ ಬದಿಯಲ್ಲೇ ಹಿಂದಿರುಗಿದ. ಅಸಂಖ್ಯಾತ ಕಣ್ಣುಗಳು ತನ್ನನ್ನೇ ವೀಕ್ಷಿಸುತ್ತಿರಬಹುದೆಂದು ಖಾತ್ರಿಪಡಿಸಿಕೊಂಡ. ಕೊಕ್ಕೆಗೆ ಹಗ್ಗವನ್ನು ಸಿಕ್ಕಿಸಿ ; ಪೀತೆದ ಮೇಲೆ ಹಲಗೆಯನ್ನಿಟ್ಟು, ಪೈಪನೆತ್ತಿ ಅಶೋಕ ಸ್ತಂಭದಲ್ಲಿದ್ದ ನಡುವಿನ ರಂಧ್ರದಲ್ಲಿ ಸಿಕ್ಕಿಸಲು ಹೆಣಗಿದ. ಒಮ್ಮೆಲೇ ಮೈ ವಾಲಿದಂತಾಗಿ, ಹೇಗೋ ಸಂಭಾಳಿಸಿಕೊಂಡ. ಪುನಃ ಅನಿಸಿಕೊಂಡು, ತನ್ನ ಮುಂದಿನ ಕೃತಿಯೂ ತನಗೇ ಕೈಕೊಡುತ್ತಿದೆಯಲ್ಲಾ”-ಎಂದು ನಿಧಾನವಾಗಿ ರಂದ್ರದೊಳಗೆ ಇಳಿದ, “ಬಚಾವ್” ಅಂದು ತಿರುಗುಣಿ ತಿರುಗಿಸಿದ.
ಆತ, ಕೆಳಕ್ಕಿಳಿಯುತ್ತಿದ್ದಂತೆ-ಧಡಿಯ ಮತ್ತಿತರರು ಚಪ್ಪಾಳೆ ತಟ್ಟುತ್ತಿದ್ದರು.
ಯಾಕೆಂದೇ ಅರ್ಥವಾಗದೆ, ನೆಲದ ಉಳಿದ ಒಂದು ಬದಿಯನ್ನು ಅಗೆಯತೊಡಗಿದ. ಧಡಿಯ ಭಾಷಣ ಮುಂದುವರಿಸಿಯೇ ಇದ್ದ.
“ಶ್ರೀಯುತರ ಧೈಯ; ಈ ಕವನಗಳಲ್ಲಿ ವ್ಯಕ್ತವಾಗಿದೆ. ನೋಡಿ :
“ಎನ್ನ ಜೀವನ ಧರ್ಮ ತೆರೆದಿಟ್ಟ ಪುಸ್ತಕವಲ್ಲ
ಪ್ರಿಯ ಸಖೀ
ಅದು ಮುಟ್ಟಿಟ್ಟದ್ದು-ಮುಟ್ಟಿಬಚ್ಚಿಟ್ಟದ್ದು :
ಆದರೂ ಒಂದಾಸೆಯಿದೆ ಗೆಳತೀ
ಯಾರಾದರೂ ಅದನು ಕದಿಯಲೆಂದು.
ಕದ್ದು ಓದಲೆಂದು,
ಓದಿಯೂ ಯಾರಿಗೂ ಹೇಳದಿರಲೆಂದು…”

ಷಾಕ್ ಹೊಡೆದಂತಾಗಿ, ಆತ ಒಮ್ಮೆಲೇ ಧಡಿಯನ ಸುತ್ತ ನೋಡಿದ ; ಧಡಿಯ ಅದೇ ಫೈಲು ಓದುತ್ತಿದ್ದ. ‘ಹಾಗಿದ್ದಲ್ಲಿ ಇಂದು ಈವರೆಗೂ ಓದುತ್ತಿದ್ದುದು ತನ್ನದೇ ಮಾತುಗಳನ್ನೇನು? ಆ ಫೈಲಿನಲ್ಲಿರುವುದು…* ಬೆವರಿದ ; ‘ತಾನು ಕುಸಿಯುತ್ತಿದ್ದೇನೆ’ ಅನ್ನಿಸಿತು. ಮುಂದಿನದ್ದೇನೂ ಅರ್ಥವಾಗದೆ, ತನ್ನ ಸತ್ವವೇ ನಾಶವಾಗುತ್ತಾ ಬಂದಂತೆ ತೋರಿ-ಪೀಠಕ್ಕೊರಗಿದ ; ಕೈ ತಲೆಗಾನಿಸಿಕೊಂಡ. ಮತ್ತೆ ಸಾವರಿಸಿ, ನಿಧಾನವಾಗಿ ಮುಂದುವರಿಸಿದ.
ಧಡಿಯ ಉತ್ಸಾಹದ ಮೂರ್ತಿಯಂತೆ ಪುಟಿಯುತ್ತಿದ್ದ. ವಾಕ್ ಪ್ರವಾಹ ಭೋರ್ಗರೆಯುತ್ತಿತ್ತು. “ನಾವು ಸಿಂಹಗಳಾಗಬೇಕು ಸ್ಥೈರ್ಯದಲ್ಲಿ, ಹಿಚುಕಿದ ಕೈಗಳಿಗೂ ಪರಿಮಳ ಬೀರುವ ಹೂವಿನಂತಿರಬೇಕು…..ಹಸಿವು-‘ಥತ್!-ಅದನ್ನು ಜಯಿಸಲೇಬೇಕು. ಜೀವನದಿಂದ ಪಲಾಯನ ಮಾಡಿದುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ…. ಒಂದೇ ಕಾಲದಲ್ಲಿ, ನಿಯಮ ನಿಷ್ಟ, ಸ್ವಾಮಿಭಕ್ತ, ಚರಿತ್ರ ಹೀನ ವರ್ಗಗಳನ್ನೆಲ್ಲಾ…. ಆಳಬಲ್ಲ ಸುಯೋಧನ-ನಿಜವಾದ ವ್ಯಾವಹಾರಿಕ ಹೀರೋ ಆಗುತ್ತಾನೆ. ಆತನೆಂದೂ ವಸ್ತು ಅಥವಾ ವ್ಯಕ್ತಿಗಳಿಂದ ಪಲಾಯನ ಮಾಡಿ ದ್ವಿಮುಖ ಹೇಡಿತನವನ್ನು ಪ್ರತಿನಿಧೀಕರಿಸಲಿಲ್ಲ. ಮಹಾಕಾವ್ಯಗಳಲ್ಲಿರುವಂತೆ ನಮ್ಮ ಉದ್ದೇಶವನ್ನೇ ಕ್ರಿಯೆಯೊಂದಿಗೆ ಬೆಳಸುತ್ತಾ ಹೋಗಬೇಕು. ‘ಮಹಾಭಾರತದಲ್ಲಿ, ಉದ್ದೇಶವೇ ಬೆಳೆಯುತ್ತಾ ಹೋಗಿ ವರ್ಣಸಂಕರದ- ಸ್ಥಿತಿಯಿಂದ ಅಂಧ ರಾಜ್ಯವನ್ನು ತಲುಪಿ ಅದನ್ನೂ ಮೀರಿ ನಡೆದು ಶಿಷ್ಟಪರಿಪಾಲನೆ-ದುಷ್ಟ ನಿಗ್ರಹಗಳನ್ನು ಮೆಟ್ಟಿ ನಿಂತು-ವ್ಯಕ್ತಿ, ಗುಣ, ವರ್ಗಗಳ
ಪರಿಭೇದವಿಲ್ಲದೆ, ಎಲ್ಲರೂ ಜಗತ್ತಿನಲ್ಲಿ ಪಡೆಯಲೇಬೇಕಾದ ನಲಿವು-ನೋವುಗಳ, ಸತ್ಯ ಅಥವಾ ಅದರ ಛಾಯೆಯ, ಸಮಕಾಲೀನ ಧರ್ಮದ ಮಧ್ಯೆ ಉದ್ಭವಿಸುವ ದ್ವಂದ್ವಗಳ, ವ್ಯವಹಾರ ನಿಯಮಗಳ, ನೀತಿ-ಅನೀತಿಗಳ ಅನುಭವಗಳನ್ನು, ಮೌಢ್ಯದ ತೆರೆ ಹರಿದು, ಅವರವರ ಮಟ್ಟಕ್ಕನುಗುಣವಾಗಿ ಗ್ರಹಣ ಮಾಡಿ, ತಾವು ನೋವನ್ನನುಭವಿಸುವಲ್ಲಿ, ತಾವೇ ಕಾರಣೀಭೂತರಾಗಿದ್ದಾಗ, ಇತರರು ಪಡೆದಿರಬಹುದಾದ, ಘರ್ಷಣೆಯ ನೋವನ್ನೂ ಸ್ಮರಿಸಿ, ಜೀವನವನ್ನು ಕೊನೆಗಾಣಿಸುವವರೆಗೂ ಸಾಗುತ್ತದೆ. ಅದು ಜೀವನದ ನರನರಗಳ ಸ್ಪಂದನದ, ಸಮಗ್ರ ಸ್ಪಷ್ಟ್ಯಾತ್ಮಕ ಕಾವ್ಯವೂ ಆಗುತ್ತದೆ…… ಹಾ, ಕೆಲಸ, ಕೆಲಸ…ಅಕ್ಷರ, ಶಬ್ದ, ವಾಕ್ಯ…ಜೀವನ ಅಂದರೆ…ವೇಗ, ವೇಗ ವೇಗೋತ್ಕರ್ಷ. ಅದೇ ಸ್ಥಳದಿಂದ ದಿನದ ಬೇರೆ ಬೇರೆ ಸಮಯಗಳಲ್ಲಿ ಹೊರಟವರು ಏಕಕಾಲದಲ್ಲಿ ತಾವಿನಲ್ಲಿ ಒಟ್ಟಾಗುತ್ತಾರೆ…… ಕೆಲಸದ ತೀವ್ರತೆ ಹೆಚ್ಚುತ್ತಾ ಹೋದಂತೆ ಮನಸ್ಸು ಸಮಯಕ್ಕೆ ಅಧೀನವಾಗುತ್ತದೆ……ಜೀವನ ಅಂದರೆ ತ್ಯಾಗ…… ”
ಧಡಿಯ ಸ್ಟೇಜಿನಿಂದಿಳಿದ, ಸೀದಾ ಆತನತ್ತ ನಡೆದ. ಆತ ಕುಳಿತು ಅರೆಯುತ್ತಿದ್ದಂತೆಯೇ ಆತನ ಕೋಟು ಬಿಚ್ಚಿದ, ಶರ್ಟು ಕಳಚಿದ ; ಪೇಂಟಿನ ಗುಬ್ಬಿ ತೆರೆದ. ಆತ “ಏನು” ಅನ್ನುವಂತೆ ಮೇಲೆ ನೋಡಿದ. ಆದರೂ ಧಡಿಯನ ಕೂರತೆಗೆ ಹೆದರಿ, ಪೇಂಟು ಜಾರಿಸಲೂ ಬಿಟ್ಟ. ಅವನನ್ನೊಮ್ಮೆ ಆಪಾದ ಮಸ್ತಕ ನೋಡಿ “ಹಾ” ಅಂದು, ಆತನ ವಾಚೂ ಬಿಚ್ಚಿ ಎಲ್ಲವನ್ನೂ ಸ್ಟೇಜಿನತ್ತ ಒಯ್ದ. ಅಸಂಖ್ಯ ಕಣ್ಣುಗಳು ಅವನತ್ತ ಸೋಡುತ್ತಿರುವಂತೆ ಭಾಸವಾಯಿತವನಿಗೆ.
ಧಡಿಯ ಬೊಗಳಿದ “ನೋಡಿ, ಶ್ರೀಯುತರು, ನಮ್ಮ ರಾಷ್ಟ್ರಕ್ಕಾಗಿ, ತಮ್ಮ ‘ಆತೀ ಆವಶ್ಯಕಗಳನ್ನು ಬಿಟ್ಟು, ಸರ್ವಸ್ವವನ್ನೂ ಉದಾರವಾಗಿ ಸ್ವಹಸ್ತದಿಂದಲೇ ದಾನ ಮಾಡಿದ್ದಾರೆ. ಇವುಗಳನ್ನು ಅವುಗಳ ಪ್ರೇಮ ಬೆಲೆಯ ಮೇಲೆ ಏಲಂ ಹಾಕಲಾಗುವುದು. ಗಮನಿಸಿ ಇವುಗಳಲ್ಲೊಂದೊಂದೂ, ಯಾರ ಬಳಿಯೂ ಇರಬೇಕಾದ ಅಮೂಲ್ಯ ಸೊತ್ತು. ಟಾಗೋರ್ ಅಂದ. “ಹುಟ್ಟಿನ ಬೆವರಿನ ಬೆಲೆ-ನಮ್ಮ ಪೂರ್ವಜರು ಅನ್ನುತ್ತಿದ್ದ. “ಕರ್ಮಯೋಗ’ದ ‘ಪುರುಷ ರೂಪ’ವನ್ನೇ ನೀವು ನಿಮ್ಮೆದುರು ಕಾಣುತ್ತಿರುವುದು ; ಆದ್ದರಿಂದಲೇ ಈ ವಸ್ತುಗಳಿಗೆ ಅಷ್ಟೂ ಮಹತ್ವ……ಈಗ ಕೋಟು……ಐದು ಸಾವಿರ……ಅನ್ನುತ್ತಿದ್ದಂತೆ ಹತ್ತು, ಹದಿನೈದೂ ಹದಿನೆಂಟು ……ಗಳು ಅಲ್ಲಿಲ್ಲಿಂದ ಕೇಳಹತ್ತಿದುವು. ‘ಪೇಂಟು’, ‘ಶರ್ಟು’, ಒಟ್ಟಿಗೇ ಹತ್ತು……”
-ಧಡಿಯನಂದ…….. ……’ವಾಚು’-ಎರಡು ಮೂರು…. ……
.
.

ಆತ ಹಸಿವೆಯಿಂದ ಬಳಲುತ್ತಿದ್ದ ; ಆದರೂ ಮಾತನಾಡದೆ ಅರೆಯುತ್ತಲೇ ಕುಳಿತ“-ಇನ್ನು ಸಾಕಾಗಬಹುದು’ ಎಂದನ್ನಿಸಿದರೂ……ನಿರ್ಲಿಪ್ತನಂತೆ.
ಧಡಿಯ “ಮಹನೀಯರೇ ಮತ್ತು ಮಹಿಳೆಯರೇ, ಇಂದಿನ ಸಭೆಯ ಉದ್ಘಾಟನೆಯನ್ನು ‘ಮಿಸ್‌’ರೂ; ಅಧ್ಯಕ್ಷತೆಯನ್ನು ಮಾನ್ಯ ಸಮಾಜ ಸೇವಕರೂ ; ವಹಿಸಿಕೊಳ್ಳಬೇಕು ಎಂದು ತಮ್ಮೆಲ್ಲರ ಪರವಾಗಿ ಕೇಳಿಕೊಳ್ಳುತ್ತೇನೆ. (ಚಪ್ಪಾಳೆ) ಆದರೆ, ನೀವೇ ನೋಡುತ್ತಿರುವಂತೆ, ಕಾರ್ಯನಿಮಿತ್ತ ನಮ್ಮ ಸಮಾಜ ಸೇವಕರು, ತಮ್ಮ ಕೆಲಸ ಮಾಡುತ್ತಿರುವಂತೆಯೇ, ಆಧ್ಯಕ್ಷರ ಕೆಲಸವನ್ನೂ ಮಾಡುತ್ತಾರೆ”-ಎಂದ.
ಆ ಸಂಘದ ಪರವಾಗಿ, ಈ ಕೂಟದ ಪರವಾಗಿ, ಮತ್ತೊಂದು ಕ್ಲಬ್ಬಿನ ವತಿಯಿಂದ, ಬಂದ ಹೂಮಾಲೆಗಳನ್ನು ಉದ್ಘಾಟಕರು ದಯವಿಟ್ಟು ಹಾಕಿಸಿಕೊಂಡರು ; ಅಧ್ಯಕ್ಷರಿಗೆ ಬಂದ ಹಾರಗಳನ್ನು ಧಡಿಯ -‘ಆತ’ನ ಪರವಾಗಿ ಮೇಜಿನ ಮೇಲೆ ಇರಿಸಿದ ಯಾರೋ ಪಟಾಕಿ ಹೊಡೆದರು, ಬಾಣ ಬಿಟ್ಟರು, “ಐಸಾ”-ಹಾಡಿದರು, ‘ವಾರೆವ್ಹಾ’- ಅಂದರು.
ಧಡಿಯ-ತಿರುಗಿ ಎದ್ದು ನಿಂತ. ಮೈಕನ್ನೆಳೆದು ಅರ್ಭಟಿಸಿದ “ದಯವಿಟ್ಟು ಸಭಿಕರು ಶಾಂತರಾಗಬೇಕು. ಇದೀಗ ಧ್ವಜಸ್ತಂಭದ ಉದ್ಘಾಟನೆ. ಇಂದು ಈ ವರ್ಷದ ಕೊನೆಯ ದಿನ. ಇದೇ ದಿನ ನಮ್ಮೆಲ್ಲಾ ಕೆಲಸಗಳೂ ಮುಗಿದು, ಮಂಗಳ ಹಾಡಿ ; ನಾಳಿನ ಹೊಸ ವರ್ಷದ ಮೊದಲನೇ ದಿನಕ್ಕೆ ಹಾರ್ದಿಕ ಸ್ವಾಗತವನ್ನು ಕೋರೋಣ. ಈ ಸಂತಸದ ಕೆಲಸದಲ್ಲಿ ಪಾಲುಗೊಂಡ….. ನಿಮಗೆಲ್ಲರಿಗೂ……ಏಯ್……ಮಕ್ಕಳೆಲ್ಲ, ಆಗ ತಿಳಿಸಿದಂತೆ ಸಾಲಾಗಿ ನಿಲ್ಲಿ……ದಯವಿಟ್ಟು ದೊಡ್ಡವರೂ……..ಅವರ ಹಿಂದೆ ಸರತಿಯಲ್ಲಿ ನಿಲ್ಲಬೇಕಾಗಿ ವಿನಂತಿ.”
ಆತ, ಎಲ್ಲಾ ಕೆಲಸ ಮುಗಿದು,……ಹಗ್ಗಕ್ಕೆ ಕುಣಿಕೆ ಬಿಗಿಯುತ್ತಿದ್ದ. ಇಷ್ಟು ಜನರೆದುರು ತನ್ನ ಅರ್ಧ ನಗ್ನ ಸ್ಥಿತಿಯನ್ನು ಕಂಡು ತುಂಬಾ ಸಂಕೋಚವಾಯಿತು. “ಆದರೂ ಕತ್ತಲಾಗುತ್ತಾ ಇದೆ, ಚಿಂತಿಲ್ಲ” ಎಂದು ತನ್ನನ್ನೇ ಅರ್ಧ ಸಮಾಧಾನಪಡಿಸಿಕೊಂಡ ; ಅತ್ತಿತ್ತ ನೋಡದೆ ತನ್ನಷ್ಟಕ್ಕೆ ಮುದುಡಿದ.
ಧ್ವಜಾರೋಹಣಕ್ಕೆ ಎಲ್ಲಾ ತಯಾರಿ ನಡೆದು, ಎಲ್ಲರೂ “Attention Position” -ದಲ್ಲಿ ನಿಂತಾದ ಮೇಲೆ, ಉದ್ಘಾಟಕರೂ, ಮಾನ್ಯ ಧಡಿಯರೂ ಧ್ವಜಸ್ತಂಭದತ್ತ ಸಾಗಿದರು.
ಆತ—‘ನಾಳೆ ಹೊಸ ವರ್ಷದ ಮೊದಲ ದಿನ-ಇಡೀ ದಿನ ಗೊರಕೆ ಹೊಡೆಯಬೇಕು ….. ಅಂತ ಸಂಭ್ರಮದಿಂದ ಮೆಲುಕು ಹಾಕುತ್ತಿದ್ದ. ಅದೇ ಗುಂಗಿನಲ್ಲಿ, ಬಳಿ ಯಾರೋ
ಸುಳಿದಂತಾಗಿ, ಮುಖ ಮೇಲೆತ್ತಿದ. ಧಡಿಯನನ್ನು ‘ಹೂ’- ಅಂದು ಪ್ರಶ್ನಿಸಿದ. “ಈಗ ಧ್ವಜಾರೋಹಣ”-‘ಎಲ್ಲಿ ಹಗ್ಗ ಇತ್ತಕೊಡು’-ಅಂದ. ‘ಬೇಗ, ಬೇಗ- ಅಂದ, ಬಲು ಮೆಲ್ಲನೆ. ಮಾನ್ಯ ಉದ್ಘಾಟಕರು ಎಲ್ಲರೆದುರೇ ತಮ್ಮ ಪಾಶ್ಚಾತ್ಯ ಕ್ರಮದಲ್ಲಿ ಅಧ್ಯಕ್ಷರನ್ನು ಅಭಿನಂದಿಸಿ ಬಂದಾಗ ಆತ ತಲೆ ಎತ್ತಿ ನೋಡಿದ……“ಹೌದು, ಅದೇ ವನಿತೆ. ತುಂಡು ಲಂಗದಲ್ಲಿದ್ದಾಳೆ -ಅಷ್ಟೆ”-ಅಂದು ಆಶ್ಚರ್ಯಪಟ್ಟ. ಉದ್ಘಾಟಕರು “I really love you” ಎಂದು ಆಧ್ಯಕ್ಷರನ್ನು ಬಿಗಿದಪ್ಪಿಕೊಂಡು, ಚುಂಬಿಸೇ ಬಿಟ್ಟಾಗ, ಧಡಿಯ “ನಿನ್ನದೇ ಅನ್‌ಪಾರ್ಲಿಮೆಂಟರಿ ವರ್ಡ್, ನೆನಪಿಡು- ರತಿಯ ಅನಂತರದ ಕಾಮಿನಿ ಓದಿ ಬಿಸುಟ ಪೇಪರಿನಂತೆ…ಅಲ್ವೇ”-ಅಂದು ನಕ್ಕ. ತನ್ನ ಉಡುಪಿನ ಬಗ್ಗೆ, ಸ್ಥಿತಿಯ ಬಗ್ಗೆ ಆತನಿಗೇ ಹೇಸಿಗೆಯನಿಸಿದರೂ, ಧಡಿಯನೆಂದ ರಶಿಯ ನೆನಪಾಗಿ, ತನ್ನಲ್ಲೇ “ರತಿಯ ಮೊದಲು ಕಾಮಿನಿ”-ಅಂದು ಪ್ರಶ್ನಿಸಿದ.
“ಏನೇ ಆಗಲಿ-ಧಡಿಯನಿಗೊಂದು ಸವಾಲಾಗಬೇಕು ; ಇಷ್ಟು ಜನರೂ ಅವಾಕ್ಕಾಗಬೇಕು…ಮು…ಮಕ್ಕಳು……ಇವರೆಲ್ಲರೆದುರೇ ಈಕೆಯೊಡನೆ ರತಿಕೇಳಿಗಿಳಿದು ಬಿಡಲೇಬೇಕು ಎಂದು ಆತ ಯೋಚಿಸುತ್ತಿದ್ದಂತೆ, ಏನೋ ಕುತ್ತಿಗೆಯತ್ತ ಸರಿದಂತಾಗಿ ಏನೆಂದೂ ತಿಳಿಯುವ ಮೊದಲೇ –
ಆತ, ಆಕೆಯನ್ನು ಗಟ್ಟಿಯಾಗಿ ಅಪ್ಪಿ, ಬಿಸಿಯುಸಿರು ಬಿಡುತ್ತಿದ್ದ.

ಕೆಮರಾಗಳ ಕ್ಲಿಕ್-ಕ್ಲಿಕ್‌ಗಳ ನಡುವೆ,
ಧಡಿಯ “ಅರ್ಜೆಂಟ್, ಸೆಲ್ಯೂಟ್‌” ಅಂದಾಗ,
ಜಾತ್ರೆಯವರೆಲ್ಲಾ ಕೃಹಣೆಗೆ ಸರಿಸಿದಾಗ,
ಪಿಳ್ಳೆಗಳ “ವಂದೇ ಮಾತರಂ ದ ನಡುವೆ-
ಅಧ್ಯಕ್ಷರ ಪರವಾಗಿ ಮಾನ್ಯ ಧಡಿಯರೂ,
ಸಹಾಯಕರಾಗಿ ಮಿಸ್‌. ಉದ್ಘಾಟಕರೂ,
ಧ್ವಜಾರೋಹಣ ಮಾಡಿದಾಗ ;
ನೆಲ “ಚರಾ ಚರಾ-ಅನ್ನುತ್ತಿದ್ದಂತೆ,
ಆತ-ಉಸಿರು ಕಟ್ಟಿದಂತಾಗಿ- ಬೆವರಿ-ಉಳಿ”
-ದದ್ದನ್ನೆಲ್ಲಾ ಉಚ್ಚೆ ಹೊಯ್ದ.

Close

ಯಶವಂತ ಚಿತ್ತಾಲರ ಮೂರು ಕಥೆಗಳಲ್ಲಿ-ಸಾವು

ಯಶವಂತ ಚಿತ್ತಾಲರ
ಮೂರು ಕತೆಗಳಲ್ಲಿ – ಸಾವು
(ಅದೃಷ್ಟ, ಪಯಣ, ಮತ್ತು ಆಟ)

ಟಿ ಎಸ್ ನಾಗರಾಜ ಶೆಟ್ಟಿ

೧೯೬೯ ರಲ್ಲಿ ಚಿತ್ತಾಲರ “ಆಟ” ಕಥಾ ಸಂಕಲನ ಪ್ರಕಟವಾದಾಗ ಅನೇಕ ಓದುಗರಿಗೆ ಅದು ಸೋಜಿಗವನ್ನುಂಟು ಮಾಡಿತು, ಅದರಲ್ಲಿನ ಕತೆಗಳು ಕನ್ನಡ ಸಣ್ಣ ಕತೆಯ ಇತಿಹಾಸಕ್ಕೆ ಹೊಸ ಆಯಾಮ ಕೊಟ್ಟ ಹಾಗೆ ಪ್ರಮುಖ ವಿಮರ್ಶಕರು ಗುರುತಿಸಿ ಪ್ರಶಂಸಿಸಿದರು, ಅವುಗಳಲ್ಲಿ ಕಂಡು ಬರುವ ಭಾಷೆಯ ಬಿಗುವು, ಸಂಕೇತಗಳ ಸಾರ್ಥಕ್ಯ, ಎಡವದೆ ನೇರ ನಡೆವ ನಿರ್ದುಷ್ಟ ನಿರೂಪಣೆ, ಕಥಾವಸ್ತು ತಕ್ಕ ವಾತಾವರಣದೊಂದಿಗೇ ಹರಳುಗೊಳ್ಳುವ (Crystalising) ವೈಶಿಷ್ಟ್ಯ-ಮುಂತಾದ ಪ್ರಬುದ್ದ ಅಂಶಗಳು “ಚಿತ್ತಾಲತನ’ವನ್ನು ಸ್ಪಷ್ಟಪಡಿಸುತ್ತವಷ್ಟೇ ಅಲ್ಲದೆ ಓದುಗರಿಗೆ ಹೊಸ ಅನುಭವವನ್ನು ಕೊಡುವುದರಲ್ಲಿ ಯಶಸ್ವಿಯಾಗುತ್ತವೆ.

ವಸ್ತು ತನ್ನೆಲ್ಲ ಅಂಗಾಂಗಗಳಿಂದ ಮೈದುಂಬಿಕೊಳ್ಳುವಂಥ ಅದ್ಭುತ ವಿನ್ಯಾಸವನ್ನು ಸಂಯಮದಿಂದ ನಿರ್ವಹಿಸುವ ಚಿತ್ತಾಲರು ಭಾಷೆಯನ್ನು ಆಕರ್ಷಕವಾಗಿ ಬಳಸುತ್ತ ಕತೆಯನ್ನು ಸ್ವಸಂಪೂರ್ಣಘಟಕವಾಗಿಸುತ್ತಾರೆ. ಈ ಸಂಕಲನದ ಎಲ್ಲ ಕತೆಗಳಲ್ಲಿ ಅವರು ತಮ್ಮ ‘ಪರಿಣತ ಪ್ರಜ್ಞೆ’ಯಿಂದ ತೊಡಗಿರುವರಾಗಿ ಅವೆಲ್ಲವೂ (‘ಹಾವು’ ಕತೆ ಹೊರತು) ಉತ್ತಮ ಮಟ್ಟದ ಕತೆಗಳಾಗಿ ಪರಿಣಮಿಸಿವೆ, ಈ ಸಂಕಲನದ ಮೂಲಕ ಚಿತ್ಕಾಲರು ಕನ್ನಡದ ಮಹತ್ವಪೂರ್ಣ ಕತೆಗಾರರ ಸಾಲಿಗೆ ಸದ್ದಿಲ್ಲದೆ ಸೇರಿಬಿಟ್ಟಿದ್ದಾರೆ.

ಈ ಸಂಕಲನದ ‘ಪುಸ್ತಕ ಎರಡು ವಿಭಾಗ ಒಳಗೊಂಡಿರುವ `ಅದೃಷ್ಟ’, ‘ಪಯಣ’ ಮತ್ತು ‘ಆಟ’-ಈ ಮೂರೂ ಕತೆಗಳಲ್ಲಿ ಚಿತ್ತಾಲರ ‘ಸಾವಿನ ಪ್ರಜ್ಞೆ’ ಹೇಗೆ ಹರಡಿಕೊಂಡಿದೆ, ಆದರ ಚಿತ್ರಣ ಯಾವ ವಿನ್ಯಾಸದಲ್ಲಿ ಸಾಕಾರಗೊಂಡಿದೆ ಎನ್ನುವ ಪರಿಶೀಲನೆ ಈ ಲೇಖನದ ಉದ್ದೇಶ, ಏಕೆಂದರೆ ಕತೆಗಾರರು ಹಲವು ಬಗೆಯಲ್ಲಿ ಸಾವನ್ನು ಚಿತ್ರಿಸುವ ಹವಣಿಕೆಯಲ್ಲಿರಂತೆ ಈ ಮೂರೂ ಕಡೆಗಳು ಆ ಪ್ರಜ್ಞೆಯ ಸುತ್ತ ಗಸ್ತು ಹೊಡೆಯುತ್ತವೆ.

ಮನುಷ್ಯನ ಚಿತ್ತಕ್ಕೆ ಅತೀತವಾದ ಮತ್ತು ಅವನ ಬೌದ್ಧಿಕತೆಗೆ ನಿಲುಕದ, ಗಾಢವಾದ ಕೆಲವೇ ಸತ್ಯಗಳಲ್ಲಿ ‘ಸಾವು’ ಪ್ರಮುಖವಾದುದು, ಈ ದೃಷ್ಟಿಯಿಂದ ಚಿತ್ತಾಲರು ಈ ವಸ್ತುವಿನತ್ತ ಗಮನ ಹರಿಸಿರುವುದು, ಅದನ್ನು ಕಲಾತ್ಮಕವಾಗಿ ಕಂಡರಿಸಿರುವುದು’ ಶ್ಲಾಘ್ಯವೇ ಆಗುತ್ತದೆ.

ಸಾವು ಅಪರಿಹಾರ್ಯವಾದ, ಹುಟ್ಟಿನೊಂದಿಗೆ ಬೆನ್ನಟ್ಟಿ ಬರುವ ಭೂತ, ಅನಪೇಕ್ಷಿತವಾದರೂ ಅನಿವಾರ್ಯ: ಇದು ಮನುಷ್ಯನನ್ನು ಆಕಸ್ಮಿಕವಾಗಿ ಅಥವಾ ನಿರೀಕ್ಷಿತವಾಗಿ ಕೂಡ ಆಕ್ರಮಿಸಬಹುದು. ‘ಅದೃಷ್ಟ’ ಕತೆಯಲ್ಲಿ ಸಾವು ಪೊಕ್ಕನ ಅಣ್ಣನಿಗೆ ಅನಿರೀಕ್ಷಿತವಾದುದು , ‘ಪಯಣ’ದಲ್ಲಿ ಹೆಸರಿಲ್ಲದ ನಾಯಕನಿಗೆ ಅದು ಅವ್ಯಕ್ತ ರೀತಿಯಲ್ಲಿ ಕರೆಯುವ ಅಪ್ರತ್ಯಕ್ಷ ಶಕ್ತಿ : ‘ಆಟ’ದಲ್ಲಿ ನರಸಿಂಹನಿಗೆ ಕೇವಲ ಗುಮಾನಿ ಮತ್ತು ಅಸ್ಪಷ್ಟವಾದರೂ ಕೊನೆಯಲ್ಲಿ ದಾಳಿಯಿಡುತ್ತದೆ.

ಈ ಮೂರೂ ಕತೆಗಳ ಪೈಕಿ ‘ಪಯಣ’ ಶ್ರೇಷ್ಟವಾದುದು ಮತ್ತು ಪ್ರಾತಿನಿಧಿಕವಾದುದು, ಒಮ್ಮೊಮ್ಮೆ ನಮ್ಮ ಸಂವೇದನೆಗೆ ನಿಲುಕದ ಅನುಭವಗಳು, ವಿವರಿಸಲು ಮಾತಿನ ತೆಕ್ಕೆಗೆ ಒಗ್ಗದ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಅಂಥ ಒಂದು ರೀತಿಯ `ಸಾವಿನ ರಹಸ್ಯ ಆವರಣ’ದ ಸಮರ್ಥ ಚಿತ್ರಣ ಈ ಕತೆ.

ಅಸ್ಪಷ್ಟ ಕರೆಯೊಂದಕ್ಕೆ ಬದ್ಧನಾಗಿ, ಅವ್ಯಕ್ತ ಭೀತಿಭಾವಗಳಿಗೆ ಪಕ್ಕಾಗಿ, ಗೂಢ ಶಕ್ತಿಯೊಂದರ ಹಿಡಿತಕ್ಕೆ ಸಿಕ್ಕಿ, ಆಕಸ್ಮಿಕವಾಗಿ ಸಾವನ್ನಪ್ಪುವ ‘ಟ್ರವಲಿಂಗ್ ಸೇಲ್ಸ್ ಮನ್’ ಒಬ್ಬನ ಅಂತ್ಯಕಾಲದ ಉತ್ಕಟ ನಿರೂಪಣೆ, ಎಲ್ಲ ವಿವರಗಳನ್ನು ನಿರ್ದಿಷ್ಟ ಗುರಿಯಲ್ಲೇ ಪೇರಿಸುತ್ಯ ತುತ್ತತುದಿಗೊಯ್ದು ಒಂದು ಸ್ವರೂಪಕ್ಕೆ ಮುಟ್ಟಿಸುವ, ಇಡಿಯಾಗಿ ಶಿಲ್ಪವನ್ನು ತಡೆದು ನಿಲ್ಲಿಸುವ ‘ಧಾರಣ ಸಾಮರ್ಥ್ಯ’ ಕಿತ್ತಾಲರಿಗೆ ಸಿದ್ಧಿಸಿದೆ, ಇದು ಈ ಕತೆಯಲ್ಲೂ ಕಾಣಿಸಿಕೊಳ್ಳುತ್ತದೆ.

ಘನೀಭವಿಸಿದ ಮಾತುಗಳು ಕತೆಯನ್ನು ಬಿಚ್ಚುತ್ತಾ ಹೋಗುವ ಇಲ್ಲಿನ ಧಾಟಿ ಕನ್ನಡ ಕಥಾಲೋಕದಲ್ಲೇ ಅಪರೂಪ, ಇದು ಒಂದೇ ಉಸಿರಿನಲ್ಲಿ-ಓದುಗರ ಕುತೂಹಲದ ಲಗಾಮನ್ನು ಹಿಡಿದಿಟ್ಟುಕೊಂಡೇ-ಕತೆಯನ್ನು ನಡೆಸುತ್ತದೆ. ಒಂದೇ ದಿನದ ಒಂದು ರಾತ್ರಿಯ ಕಾಲದ ಬಳಕೆಯ ತಂತ್ರವೂ ಇದಕ್ಕೆ ಪೋಷಕವಾಗುತ್ತದೆ. ವಸ್ತು ಸಮಗ್ರವಾಗಿ ದಟ್ಟೈಸಿಕೊಂಡು ಅಂತ್ಯದಲ್ಲಿ ಧುತ್ತೆಂದು ಮೃತ್ಯುವಿನ ಗೆಲುವನ್ನು ಸ್ಫೋಟಿಸುತ್ತದೆ. ಈ ಧಾಟ ರೂಪಕ ವಿಧಾನದಲ್ಲಿ ಪ್ರವೃತ್ತವಾಗಿರುವುದು ಮತ್ತಷ್ಟು ಹಿರಿಮೆಯನ್ನು ಗಳಿಸಿಕೊಳ್ಳುತ್ತದೆ. ಇದು ಈ ಕತೆಯ ಗೆಲುವಿನ ಗುಟ್ಟು ಮತ್ತು ವೈಶಿಷ್ಟ್ಯ.

ಬಂದ ಭಾಗ್ಯಕ್ಕೆ, ಒದಗಿದ ವಿಪತ್ತಿಗೆ ನಿಷೇಧವನ್ನು ಒಡ್ಡದ (negative approach ಇಲ್ಲದ) ಒಂದು ವಿಧೇಯ ಚೈತನ್ಯವಾಗಿ ಇಲ್ಲಿ ನಾಯಕ ಕಾಣಿಸಿಕೊಳ್ಳುತ್ತಾನೆ. ಅವನಿಗೆ ಯಾವುದೇ ಹೆಸರಿಲ್ಲದಿರುವ ಅಂಶ ಗಮನೀಯ. ಅವನು ಯಾರೇ ಆಗಿರಬಹುದು ಎನ್ನುವುದನ್ನು ಇದು ಸೂಚಿಸುತ್ತದೆ. ಸಾವಿನ ನಿಗೂಢ ಆವಿರ್ಭಾವದ ಜೊತೆಯಲ್ಲೇ ಅವನ ವ್ಯಕ್ತಿತ್ವವೂ ವ್ಯಕ್ತವಾಗುವುದರಿಂದ ಮತ್ತು ಅವನು ಒಪ್ಪುತ್ತಲೇ ಎಲ್ಲ ಚಟುವಟಿಕೆಗಳನ್ನೂ ಮುಂದುವರಿಸುವುದರಿಂದ ಕತೆ ಗಟ್ಟಿತನವನ್ನು ಕಾಪಾಡಿಕೊಳ್ಳುತ್ತದೆ. ಸಾವಿನ ಸಿದ್ಧತೆಯಲ್ಲಿ ಭರದಿಂದ ತಯಾರಾಗುವ ನಾಯಕ ಕೊನೆಗೆ ಸಾವಿಗೆ ತುತ್ತಾಗಿ ತನಗರಿವಿಲ್ಲದ ರೀತಿಯಲ್ಲೇ ಅದನ್ನು ಸಮರ್ಥಿಸುತ್ತಾನೆ. ಸಿದ್ಧತೆಯ ಕಾಲದ ಅವನ ಧೈರ್ಯ, ಭಯ ; ನೋವು, ನಗೆ ; ಎಚ್ಚರ ಸ್ಥಿತಿ, ಸುಪ್ತ ಸ್ಥಿತಿ ; ಮುಂತಾದ ಎಲ್ಲ ದ್ವಂದ್ವಗಳೂ ಕತೆಯ ಗಂಭೀರತೆಯನ್ನು ಉಳಿಸಿಕೊಳ್ಳುತ್ತವೆ.

ಸಾವನ್ನು ಪಯಣದೊಂದಿಗೆ ಸಮಿಕರಿಸಿರುವ ಇಲ್ಲಿನ ರೀತಿ-ಅಪೂರ್ವ ಕೇಂದ್ರ ಪ್ರಜ್ಞೆಯ ಮೂಲಕ ಸಮಗ್ರ ಪರಿಣಾಮ ಬೀರುವುದರಲ್ಲಿ ಪಡೆದಿರುವ ಸಾಫಲ್ಯ ಮೆಚ್ಚುವಂಥದ್ದು.

ಇಲ್ಲಿ ಮೃತ್ಯು ಬಾಗಿಲಲ್ಲಿ ಹಣಿಕಿಕ್ಕಿ ಪಯಣಕ್ಕೆ ಸಿದ್ಧನಾಗಿರಲು ಹೇಳಿಹೋಗುವುದು, ಹೆಸರಿಲ್ಲದ ನಾಯಕ ಅದಕ್ಕೆ ಪ್ರತಿಕ್ರಿಯೆಯಾಗಿ ಯಾವುದೇ ಆಕ್ಷೇಪಣೆ ಇಲ್ಲದೆ, ಆ ಕರೆಯ ಸಂಪೂರ್ಣ ಹಾಗೂ ತರ್ಕಬದ್ಧವಾದ ತಿಳಿವಿಲ್ಲದೆ, ಯಾರು ಯಾತಕ್ಕಾಗಿ ಎಲ್ಲಿಗೆ ಕರೆದರು ಎಂಬ ಶಂಕೆಯೇ ಇಲ್ಲದೆ ತವಕದಿಂದ ಸಿದ್ಧನಾಗುವುದು. ಆ ಆತಂಕದಲ್ಲಿ ಕಲ ಕತ್ತೆಯಲ್ಲಿನ ತನ್ನ ವಹಿವಾಟುಗಳು, ಜಗತ್ತಿನಲ್ಲಿ ತನ್ನ ಜವಾಬ್ದಾರಿ ಇವುಗಳ ಅವಶ್ಯಕತೆಯನ್ನು ಅವನು ತಿರಸ್ಕಾರಯುತವಾಗಿ ಪರಿಗಣಿಸುವುದು, “ಮುಂದಿನ ನಿಮ್ಮ ಮುಕ್ಕಾಮು ಎಲ್ಲಿ ?” ಎಂಬ ಹೊಟೆಲಿನ ಕೌಂಟರಿನಲ್ಲಿದ್ದ ರೆಜಿಸ್ಟರಿನಲ್ಲಿನ ಪ್ರಶ್ನೆಗೆ ಅವನು “ಗೊತ್ತಿಲ್ಲ” ಎಂದು ಬರೆಯುವುದು ಮುಂತಾದ ಅಂಶಗಳೆಲ್ಲ ಕತೆ ಇಡಿಯಾಗಿ ಒಂದು ರೂಪಕವಾಗಲು ದುಡಿದಿವೆ. ಸಾವಿನ ಸ್ವರೂಪ ಅದರ ಮಿತವಾದ ಮಾತಿನ ಕರೆ ಇವೆಲ್ಲವುಗಳ ಚಾಲಕಶಕ್ತಿಯಾಗಿದೆ; ನಾಯಕ ಪ್ರತಿಪಾದಕನಾಗಿದ್ದಾನೆ ; ಇಲ್ಲಿ ಸಾವು ತನ್ನೆಲ್ಲ ನಿಗೂಢತೆಯನ್ನು ಕಾಪಾಡಿಕೊಂಡು ತನ್ನತನವನ್ನು ನಿರೂಪಿಸುತ್ತದೆ.

ಬದುಕನ್ನು ಕುರಿತ ಕಾಳಜಿ ಈ ಕಥೆಯಲ್ಲಿ ಮಾತ್ರ ಕಂಡುಬರುತ್ತದೆ. ಸಾವಿನ ನೆನಪು ಮನಸ್ಸಿನಲ್ಲಿ ನೆಲೆ ನಿಂತರೆ ಮಾತ್ರ ಬದುಕನ್ನು ಕುರಿತ ಹಗರ, ಕಷ್ಟಕೋಟಲೆಗಳನ್ನು ಎದುರಿಸಬಹುದಾದ ಧೈರ್ಯ ಒಮ್ಮೆಲೇ ಉಂಟಾಗುತ್ತವೆ. ಈ ಕತೆಯ ನಾಯಕ ಉದ್ದಕ್ಕೂ (ಬಾಲ್ಯದಿಂದಲೂ) ಬಂದದ್ದಕ್ಕೆ ಬಿಜಿ ಮಾಡಿಕೊಳ್ಳುವ ಸ್ವಭಾವದವನು. “ತನ್ನೆಲ್ಲ ಚಟುವಟಿಕೆಗಳ ರೂಪರೇಷೆಗಳನ್ನು ಯಾವಾಗಲೂ ಬೇರೆಯವರೇ ನಿಶ್ಚಯಿ ಸಿರುತ್ತಾರೆ–ಅದೂ ತನ್ನ ಹಿತಕ್ಕೇ ಎಂಬ ನಂಬುಗೆಯಿಂದಲೇ, ತಾನು ಅವುಗಳಿಗೆ ಪ್ರತೀಕಾರ ಮಾಡಿ ಅವರನ್ನೇ ನಿರಾಸೆಗೊಳಿಸಲಿ…..” (ಇಟ-53) ಎನ್ನುವ ಮೆತ್ತನೆಯ ಮನುಷ್ಯ, ಸ್ಪಷ್ಟವಾಗಿ ಕತೆಗಾರ ಒಂದೆಡೆ ಹೇಳುವಂತೆ, “ಪ್ರತಿಭಟನೆಗೆ ಅರ್ಥವೇ ಇಲ್ಲ ಎಂಬುದು ಅವನ ಜೀವನದ ತತ್ವಜ್ಞಾನವಾಗಿತ್ತು” (ಪ್ರಟ-೫೫) ಆದರೆ ಪಯ ಣವ ಕರೆ ಬಂದಮೇಲೆ ಅವನ ನಡವಳಿಕೆ ಇಡಿಯಾಗಿ ಬದಲಾಗುತ್ತದೆ. ಮೊದಲ ಬಾರಿಗೆ ಅವನು ತನ್ನ ಸ್ವಂತ ತೀರ್ಮಾನವನ್ನು-ಬಾಸ್‌ನ ಮಾತನ್ನೂ ಉಲ್ಲಂಘಿಸಿ – ಪಯಣ ಹೊರಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ. ಅದಕ್ಕಾಗಿ ತಾನೇ ಸ್ವಂತ ಎಲ್ಲವನ್ನೂ ಸಿದ್ಧಪಡಿಸಿಕೊಳ್ಳುತ್ತಾನೆ; ಅಡೆತಡೆಗಳೆಲ್ಲವನ್ನೂ ಕ್ರಮವಾಗಿ ನಿವಾರಿಸಿಕೊಳ್ಳುತ್ತಾನೆ. ಈ ಕತೆಯ ಸಿದ್ಧಿಯಲ್ಲಿ ಈ ಅಂಶವೂ ಸೇರಿಕೊಳ್ಳುತ್ತದೆ.

ಹೀಗೆ ಒಂದು ಕತೆಯನ್ನು ಇಷ್ಟು ಎಚ್ಚರಿಕೆಯಿಂದ, ವಿವರಗಳಲ್ಲಿ ವಾಸ್ತವತೆಯಿಂದ ದೂರ ಸರಿಯದಂತೆ ಅಮೂರ್ತವಾದ ಸಾವು ಮೂರ್ತವಾಗದೆ ತನ್ನ ಶಕ್ತಿಯ (power) ಮೂಲಕವೇ ನಿರೂಪಿತವಾಗುವಂತೆ ಸಮರ್ಪಕವಾಗಿ ನಿರ್ವಹಿಸುವ ರೀತಿ ಸಾಮಾನ್ಯ ಕತೆಗಾರನಿಗೆ ನಿಲುಕುವಂಥದ್ದಲ್ಲ. ತನ್ನ ಮಿತಿಯಲ್ಲೇ ಪರಿಪೂರ್ಣತೆಯನ್ನು ಪಡೆದುಕೊಳ್ಳುವ ಇಂತಹ ಕತೆಗಳು ಮನನೀಯ ಎನ್ನುವುದರಲ್ಲಿ ಸಂದೇಹವಿಲ್ಲ.

ಚಿತ್ತಾಲರು ಈ ಮೂರೂ ಕಡೆಗಳಲ್ಲಿ ಪರಿಣಾಮದ ಸಲುವಾಗಿ ಮೃತ್ಯುವನ್ನು ಅಸ್ಪಷ್ಟವಾಗಿ ಭಯಾನಕವಾಗಿ ನಿರ್ದಿಷ್ಟವಾದ ಹಿನ್ನೆಲೆಯಲ್ಲಿ ವರ್ಣಿಸಿರುವ ರೀತಿ ಅಪ್ರತಿಮವಾಗಿದೆ;

ಸುಮಾರು ಒಂದು ಗಂಟೆ ಮೇಲೆ ಎಚ್ಚರಗೊಂಡು ‘ಧಡಕ್ಕನೆ’ ಎದ್ದು ಕೂತಾಗ, ಹೊರಗೆ ಒಮ್ಮೆಲೇ ಗುಡುಗು-ಮಿಂಚು-ಮಳೆ ಸುರುವಾಗಿದ್ದವು. ಗುಡುಗು-ಮಳೆಗಳ ಸದ್ದಿಗೆ ಮೈಮೇಲೆ ರೋಮಾಂಚನವೆದ್ದಿತು. ಕೆಲಹೊತ್ತಿನವರೆಗೆ ಏನು ಎಲ್ಲಿದ್ದೇನೆ ? ಯಾಕೆ ಹೀಗೆ ಒಮ್ಮೆಲೇ ಎದ್ದು ಕುಳಿತೆ ? ಎನ್ನುವುದು ತಿಳಿಯದೇ ದಿಗ್ಭ್ರಾಂತನಂತೆ ಸುತ್ತಲೂ ನೋಡಹತ್ತಿದ. ರೂಮಿನಲ್ಲಿಯ ಎಲ್ಲ ದೀಪಗಳೂ ಬೆಳ್ಳಗೆ ಉರಿಯುತ್ತಿದ್ದವು, ಮಂಚದ ಮೇಲೆ, ಕಾಲು ಮಾಡುವ ದಿಕ್ಕಿನಲ್ಲಿ ಆಗ ನಿರಿಗೆ ಮಾಡಿಟ್ಟ ಸೂಟು ಇತ್ತು, ಅದನ್ನು ನೋಡಿದ ಕೂಡಲೇ ತನ್ನ ಪಯಣದ ನೆನಪು ಬಂತು, ಗಂಟೆ ನೋಡಿಕೊಂಡ. ಇನ್ನು ಮೂರು ತಾಸಾದರೂ ಇರಬೇಕು ಅವನು ಬರಲು, ಎಂದುಕೊಂಡು ಹೊರಗೇ ಉಳಿದ ಸೂಟನ್ನು ಸೂಟ್‌ಕೇಸಿನಲ್ಲಿ ತುಂಬಬೇಕು ಎನ್ನುವಾಗ ಬಂದ ವಿಚಾರಕ್ಕೆ ಅವನು ಅವ್ಯಕ್ತವಾಗಿ ಹೆದರಿದ. ತಾನು ಇಂದು ಇಷ್ಟೇಕೆ ಗೊಂದಲಿಸಿದ್ದೇನೆ ? ಬೆಳಿಗ್ಗೆ ಅವನು ಬಂದಾಗ ಯಾವ ಡ್ರೆಸ್ಸಿನಲ್ಲಿ ಹೋಗಬೇಕು ಎಂಬ ವಿಚಾರವನ್ನೂ ಮಾಡದೇ ಎಲ್ಲ ಅರಿವೆಗಳನ್ನೂ ಸೂಟ್ -ಕೇಸಿನಲ್ಲಿ ತುಂಬಿದೆನಲ್ಲ. ಬೆಳಿಗ್ಗೆ ಯಾವ ಡ್ರೆಸ್ಸು ಹಾಕಿಕೊಳ್ಳಲಿ ? ಈ ಸೂಟನ್ನೇ ಧರಿಸಿದರೆ ಹೇಗೆ ? ಈಗ ಬಂದ ನೆನಹಿನಿಂದ ಮಾತ್ರ ಅವನು ತತ್ತರ ನಡುಗಿದ : ಮೂರು ಸಂಜೆಯ ಹೊತ್ತಿಗೆ ಅವನನ್ನು ಭೆಟ್ಟಿಯಾಗಲು ಬಂದಾತ ಬಟ್ಟೆಯನ್ನೇ ತೊಟ್ಟಂತಿರಲಿಲ್ಲ ! ಈಗ ನೆನಪಿಗೆ ಬಂತು : ಕೆದರಿದ ಕೂದಲು ; ಹರೆವಾದ ಭುಜಗಳು ; ಹರವಾದ ಎದೆ ; ಮಾಂಸಲ ಕೈರಟ್ಟೆಗಳು ; ಕಪ್ಪು ಮೈಬಣ್ಣ ; ಮೋರೆಗೆ ಇಷ್ಟುದ್ದ ಕಪ್ಪು ಪೊತ್ತೆ-ಮಿಸೆಗಳು ; ಕಪ್ಪು ಎದೆಯ ಮೇಲೆ ಕಪ್ಪ ರೊಣೆ ; ಎಡಗೈ ರಟ್ಟೆಗೆ ಕಪ್ಪು ಬಣ್ಣದ ಇಷ್ಟು ದಪ್ಪ ದಾರ, ಬಂದ. ಕದ ತಟ್ಟಿದ. ತಾನೇ ಕದ ತೆರೆದ. (ಅಗಳಿ ಹಾಕಿರಲಿಲ್ಲ.) ಸೊಂಟದವರೆಗಿನ ದೇಹ ಒಳಗೆ ಹಾಕಿದ, “ನಾಳೆ ನಸುಕಿನಲ್ಲಿ ಕೋಳಿ ಕೂಗುವ ಮೊದಲೇ ಹೊರಡಬೇಕು, ಸಿದ್ದನಾಗಿರು” ಎಂದ. ಮೈ ಹಿಂತೆಗೆದುಕೊಂಡ ಕದ ಮುಚ್ಚಿದ, ಹೋಗಿ ಬಿಟ್ಟ. “ಈಗಿಂದೀಗ ಸಿನೆಮಾಕ್ಕೆ ಹೋಗಬೇಕು’ ಎಂದು ‘ಬಾಸ್’ ಹೇಳಿದಾಗ ‘ಹುಂ’ ಎನ್ನುವ ಸಹಜತೆಯಿಂದಲೇ ತಾನು ಒಪ್ಪಿಕೊಂಡುಬಿಟ್ಟೆ, ಒಪ್ಪಿಕೊಂಡು ಬಿಟ್ಟೆನೇ ? ಅವನ ಮನಸ್ಸಿನಲ್ಲಿ ಪ್ರಥಮ ಬಾರಿ ಸಂಶಯ ಮೂಡಿತು, ದಣಿವೂ ಬಂದಂತೆ ಎನಿಸಿತು. ಗೊಂದಲಿಸುತ್ತ ಹಾಸಿಗೆಗೆ ಬಂದ, ಅಡ್ಡವಾದ, ಕಣ್ಣು ಮುಚ್ಚಿದ.
(ಪಯಣ : ಪುಟ ೫೭, ೫೮)

ಮೆಟ್ಟಲೇರಿ ಬಂದದ್ದೇ, ‘ಅಬ್ಬಬ್ಬ ಏನ್ ಗುಡುಗು ಎಂಥ ಮಿಂಚು’ ಎಂದು ಉದ್ಗರಿಸಿದ ನಾಗೇಶ, “ಏ ಮಿಂಚು ಅಂದ ಕೂಡಲೇ ನೆನಪಾಯಿತು ನೋಡು, ನಿಮ್ಮ ದಣಪೆಯ ಹತ್ತಿರದ ಮಾವಿನ ಮರದ ಕೆಳಗೊಬ್ಬ ಕರ‍್ರಗಿನ ಕಂಬಳಿಕೊಪ್ಪೆ ಹಾಕಿ ನಿಂತಿದ್ದ ನೋಡು, ದಣಪೆ ಹೊಕ್ಕತಿರಬೇಕಾದರೆ ಮಿಂಚು ಝಗ್‌ ಎಂದಾಗ ನೋಡಿದೆ, ಎದೆ ಜಲ್ ಅಂದಿತು ನೋಡು, ಮೋರೆ ಕಾಣಲಿಲ್ಲ, ಕೊಪ್ಪೆ ಮಾತ್ರ’.
(ಆಟ : ಪುಟ ೬೭)

ಅರೆನಿದ್ದೆಯಲ್ಲಿರುವಾಗ ಕಣ್ಣಮುಂದೆ ಯಾರದೋ ಮೋರೆ-ಮೋರೆ ಮಾತ್ರ: ಕತ್ತಲೆಯ ಹೊಟ್ಟೆಯೊಳಗಿಂದ ಮಲ್ಲನೆ ಹೊರಬರಹತ್ತಿತು, ಅಜ್ಜನದಿರಬಹುದೇ ? ಇರಬೇಕು; ಅಂತಹದೇ ಹಲ್ಲಿಲ್ಲದ ಬಾಯಿ, ತೆರೆದೇ ಇತ್ತು, ಎದೆ ಅಲುಗಾಡದ, ತೆರೆದೇ ಇದ್ದ ಕಣ್ಣುಗಳು : ಇಷ್ಟಗಲವಾಗಿ ಇಲಿಯ ಬಿಲಗಳ ಹಾಗೆ ಅರಳಿದ ಮೂಗಿನ ಹೊರಳೆಗಳು, ಆಲ್ಲ ಅಲ್ಲ. ಅಜ್ಜನ ಮೋರೆ ಅಲ್ಲವೇ ಅಲ್ಲ, ಮೋರೆ ಹತ್ತಿರ ಹತ್ತಿರವಾಗಹತ್ತಿತು. ಕೊನೆಗೆ ತೀರ ಹತ್ತಿರ ಬಂದು ನಿಂತಿತು, ನೀಲಕಂಠ ಹೆದರಿ ಚೀರಿಕೊಂಡ.

(ಅದೃಷ್ಟ : ಪುಟ ೪೫)

ಸುಳಿವು ಹತ್ತಿದ ಸಾವಿನ ಅಸ್ಪಷ್ಟ ಭೀತಿಯಿಂದ ಅಸಾಧ್ಯವಾದರೂ ಪಾರಾಗಲು ಬಯಸಿ ವಿಫಲಗೊಳ್ಳುವ ಮನಸ್ಸಿನ ವಿಚಿತ್ರ ಸ್ಥಿತಿಯ ಸಮರ್ಥ ಚಿತ್ರಣ, “ಆಟ” ಕಥೆ; “ಕಚ್ಚಿದ್ದು ಇಲಿಯೊಂದು ಅಜ್ಜಿ-ಅಮ್ಮರಿಗೆ ಬಾಯಿಂದ ಹೇಳುವಾಗಲೂ ಸಾವಿನ ಮುಂಗಾಳಿ ಹತ್ತಿದ ಜೀವ ಅಳದಲ್ಲೆಲ್ಲೂ ಹೆದರಿಯೇ ಗೆಳೆಯರನ್ನು ಆಟಕ್ಕೆ ಕರೆಸಿರಬೇಕು” (ಪುಟ: ೭೨) ಎನ್ನುವ ಬುಡಣ ಸಾಬರ ಗುಂಗು ಹಿಂದಿನ ಎಲ್ಲ ವಿವರಗಳಿಗೂ ಅರ್ಥವನ್ನು ಛಾಪಿಸಿಬಿಡುತ್ತದೆ. ಆಟಕ್ಕಾಗಿ ಕತ್ತಲಲ್ಲಿ ಸಸಿಂಹನ ಮನೆಗೆ ಓಣಿಯ ಮೂಲಕ ಹೊರಟ ಗೆಳೆಯರು ಭಯದ ಪ್ರಮಾಣವನ್ನು ಸಹ್ಯಮಟ್ಟಕ್ಕೆ ಕುಗ್ಗಿಸಿಕೊಳ್ಳಲು ಹಾಡುತ್ತ ಕುಣಿಯುತ್ತ ಹೋಗುವಾಗಿನ ದೃಶ್ಯ ಪರಂಪರೆ ಇದಕ್ಕೆ ಪೂರಕವಾಗುತ್ತದೆ; ಬುಡಣ ಸಾಬರು ಇಲ್ಲಿ ಕತೆಯ ತಂತ್ರವಾಗಿ ಬರುತ್ತಾರೆ ಎನ್ನಲು ಪೋಷಕವಾಗುತ್ತದೆ.

ಈ ಕತೆಯಲ್ಲಿ ವಾತಾವರಣ ನಿರ್ಮಿತಿ, ಚಿತ್ರ ನಿರ್ಮಾಣಶಕ್ತಿ ಮೇಲುಗೈ ಪಡೆದು, ಮೇಲು ನೋಟಕ್ಕೆ ಸಾವಿನ ಪ್ರಜ್ಞೆ ಹಗುರವಾದಂತೆ ಭಾಸವಾದರೂ ಅವು ಸಾವಿನ ದಾಳಿಗೆ ಬಲವಾದ ಹಿನ್ನಲೆಯಾಗಿ ಪರಿಣಮಿಸಿರುವುದರಿಂದ ಸ್ವಲ್ಪ ಮಟ್ಟಿಗೆ ಗಾಂಭೀರ್ಯವನ್ನು ಉಳಿಸಿವೆ, “ನಿನ್ನೆಯ ಸಂಜೆಯೇ ಹಾವಿನ ರೂಪ ಧರಿಸುತ್ತ ಅವನ ಸಾವಿಗಾಗಿ ಸಿದ್ಧವಾಗುತ್ತಿತ್ತು ಹೊಂಚುಹಾಕುತ್ತಿತ್ತು ಎಂದು ಅನ್ನಿಸಿದಾಗ ಜೀವ ಜುಮ್ ಎಂದಿತು” (ಪುಟ: ೭೨) ಎನ್ನುವ ಬುಡಣ ಸಾಬರ ಅನ್ನಿಸಿಕೆ ಇದನ್ನೇ ಸೂಚಿಸುತ್ತದೆ. ವಿವರಗಳು ಕೇವಲ ವರ್ಣನೆಗಳಂತೆ ಭಾಸವಾದರೂ ಕೂಡ ಅಷ್ಟಕ್ಕೆ ಸೀಮಿತವಾಗದೆ ಸಾವಿನ ಸೈನ್ಯದ ಮಂಚೂಣಿಯ ಸೈನಿಕರೆಂಬಂತೆ ದುಡಿಯುತ್ತವೆಯಾದ್ದರಿಂದ ಸಾವು ತನ್ನ ಅಧಿಕಾರವನ್ನೂ, ವಿವರಗಳು ಅದರೊಂದಿಗೆ ಜೀವಂತ ಸಂಬಂಧವನ್ನೂ ಸ್ಥಾಪಿಸಿಕೊಳ್ಳುತ್ತದೆ ಏಕೆಂದರೆ ಅವು ದಟ್ಟವಾದ ಅನುಭವವನ್ನು ಸಾವಿನ ಹಿನ್ನೆಲೆಗೆ ಭಿತ್ತಿಯನ್ನು ಕಲ್ಪಿಸುವುದರ ಮೂಲಕ ನಮ್ಮನ್ನು ಒಂದು ರೀತಿಯ ಸಿದ್ಧತೆಗೆ ಒಳಪಡಿಸುತ್ತವೆ ಎನ್ನು ವುದನ್ನು ಮರೆಯಬಾರದು, ಉದಾಹರಣೆಗೆ: ಹೊರಗೆ ಮಳೆ ಧಾರೆ ಹಿಡಿದು ಹೊಯ್ಯಹತ್ತಿತು, ಗುಡುಗು ಮಿಂಚುಗಳೊಂದಿಗೆ ದೊಡ್ಡ ಗಾಳಿಯೂ ಬಿಟ್ಟಿದ್ದರಿಂದ ಹಿತ್ತಲ ಮರಗಳೆಲ್ಲ ರಭಸದಿಂದ ತೂಗಿ ಹೆಗ್ಗೆಗಳು. ತೂರಾಡಿ ಭೋssಎನ್ನಹತ್ತಿದವು, ಹೊತ್ತು ಹೋದಂತೆ ಗಾಳಿಮಳೆಗಳ ಜೋರು ಹೆಚ್ಚುತ್ತಲೇ ಹೋಯಿತು, ಕತ್ತಲೆಯಲ್ಲಿ ಒಂದೇ ಸಮನೆ ಕಣ್ಣುಮುಚ್ಚಿ ಹೊಯ್ಯುತಿದ್ದ ನೀರಿನ ಸದ್ದು ಗದ್ದಲ ಕೇಳುತ್ತ, ಅಂಗಳದಲ್ಲಿ ದೃಷ್ಟಿ ನೆಟ್ಟು ಕೂತ ಅಜ್ಜಿಯ ಮನಸ್ಸು ಹಿಂದೆ ಇಂತಹದೇ ಮಳೆ ಬಂದ ದಿನಗಳನ್ನು ನೆನೆಯುತ್ತ, ಇತಿಹಾಸದಿಂದ ಪುರಾಣದ ತನಕವೂ ಹೋಗಿ ತಿರುಗಿ ವರ್ತಮಾನಕ್ಕೆ ಬಂದಾಗ ಮೈನವಿರಿಗೊಳಗಾಗಿ, ಕೊಟ್ಟಿಗೆಯ ಹತ್ತಿರ ಬಂದವನು ಏನು ಮಾಡುತ್ತಿದ್ದಾನೋ, ಇವನೊಬ್ಬ ಹೀಗೆ ಹೇಳದೇ ಕೇಳದೇ ಇಂತಹ ವೇಳೆಯಲ್ಲಿ ಏಕೆ ಬಂದಿದ್ದಾನೋ, ಎಂದು ಆತಂಕಪಟ್ಟು ಒಮ್ಮೆಗೆಲೇ ಎದ್ದು ಜಗಲಿಯ ಮೆಟ್ಟಲಿಗೆ ಬಂದು, ಹೊರಗೆ ಹಣಕಿಕ್ಕಿ ನೋಡುತ್ತಿದ್ದಾಗ, ಕಚ್ ಎಂದು ಕತ್ತಲನ್ನು ಕಚ್ಚಿದ ಮಿಂಚು ಹಗಲಾಯಿತೆನ್ನಿಸುವಷ್ಟು ಬೆಳಕನ್ನು ಗಳಕ್ಕನೆ ಕಾರಿಸಿದಾಗ: ಅಂಗಳ, ಅದರಂಚಿನಲ್ಲಿಯ ಹಿತ್ತಲು, ಮೂಲೆಯಲ್ಲಿ ನಿಂತ ಕೊಟ್ಟಿಗೆ, ಅದರಾಚೆಯ ಓಣಿ ಎಲ್ಲ ಎಲ್ಲ ಒಮ್ಮೆ ಝಗ್ ಎಂದು ಬೆಳಗಿ ತಿರುಗಿ ಕಪ್ಪೇರಿದಾಗ, ಕಪ್ಪಾಗುವ ಮೊದಲಷ್ಟೇ ಅಂಗಳದಲ್ಲಿ ತುಳಸೀ ವೃಂದಾವನದ ಹತ್ತಿರವೇ ಫಕ್ಕನೆ ಕಂಡಂತಾದವನನ್ನು ಬಾಯಲ್ಲಿ ವರ್ಣಿಸುವುದಸಾಧ್ಯವಾದಾಗ, ಜೀವಕ್ಕೆ ಹತ್ತಿದ ನಡುಕದಿಂದ ಸಾವರಿಕೊಳ್ಳುತ್ತ ತಿರುಗಿ ಹೊಸತಿಲಿಗೆ ಬರುವ ಹೊತ್ತಿಗೆ, ಇತ್ಯ,
ಆಟ ಒಳ್ಳೇ ರಂಗಕ್ಕೆ ಬಂದಿತ್ತು,
(ಪುಟ: ೬೯)

(ಇಲ್ಲಿ ಕಂಬಳಿಕೊಪ್ಪೆಯವನ ಪಾತ್ರ ಕತೆಗೆ ಅಮುಖ್ಯವಾದರೂ ಅರ್ಥಾತ್ ಅವನು ‘ಕತೆ ಯಲ್ಲಿ ಸಕ್ರಿಯವಾಗಿ ಭಾಗವಹಿಸದಿದ್ದರೂ ಕತೆಯ ನಿಗೂಢತೆಯನ್ನು ಉಳಿಸಿಕೊಳ್ಳುವಲ್ಲಿ ಸಹಾಯಕವಾಗುತ್ತದೆ.)

ಈ ವಾತಾವರಣ ವಿವರಣೆ, ಚಿತ್ರ ನಿರ್ಮಾಣವನ್ನು ಬುಡಣಸಾಬರ ಕಣ್ಣಿನ ಮೂಲಕ ನಮ್ಮ ಮುಂದಿಡುವುದು ಕತೆಗಾರರ ತಂತ್ರ (Technique), ಹೀಗಾಗಿ ಅವರ ಪಾತ್ರಕ್ಕೆ ಮಿತಿಮೀರಿದ ಪ್ರಾಧಾನ್ಯ ಸಿಕ್ಕಿದೆ, ಅಡಿಗರು ಮುನ್ನುಡಿಯಲ್ಲಿ ಹೇಳಿರುವಂತೆ, ಇದು ಕತೆಯ ಏಕಾಗ್ರತೆಗೆ ಭಂಗ ತಂದಿರುವುದು ನಿಜ, ಆದರೆ ಆ ಪ್ರಾಧಾನ್ಯ ಚಿತ್ರಣಕ್ಕೆ ಮೀಸಲಾದ ಶ್ರಮ ವ್ಯರ್ಥವೆನ್ನಿಸುತ್ತದೆ ಎಂಬ ಅವರ ಮಾತು ಸ್ವಲ್ಪ ನಿಷ್ಟುರವಾಯಿತೆನಿಸುತ್ತದೆ. ಬುಡಣ ಸಾಬರ ಮೂಲಕವೇ ಎಲ್ಲ ವಿವರಗಳಿಗೆ ಅರ್ಥ ಬರುತ್ತದೆ ಎನ್ನುವುದನ್ನು ನೆನೆದಾಗ ಈ ಆಕ್ಷೇಪಣೆ ಅರ್ಧಸತ್ಯವಾಗುತ್ತದೆ. ಬುಡಣ ಸಾಬರಿಗೆ ಲಭಿಸಿದ ಈ ಅತಿಪ್ರಾಧಾನ್ಯದ ಒಂದು ಕಾರಣದಿಂದ ನಾವು ಕತೆಯ ಉತ್ತಮ ಮಟ್ಟವನ್ನು ಅಲ್ಲ ಗಳೆಯುವಂತಿಲ್ಲ. ಇದು ಒಂದು ದೋಷವೆಂದೂ ಇದರಿಂದಾಗಿ ಕತೆಯ ಸಾಂಗತ್ಯಕ್ಕೆ ಕಿಂಚಿತ್ತಾದ ಭಂಗ ಬಂದಿದೆಯೆಂದೂ ಒಪ್ಪಿಕೊಳ್ಳಬಹುದು.

ಸಾಂಗತ್ಯ ಸ್ವಲ್ಪ ಸಡಿಲವಾಗಿದ್ದರೂ ಕೂಡ ಆ ರಾತ್ರಿಯಲ್ಲಿ ಝಗಿಲ್ಲನೆ ಮೂಡುವ ಗುಡುಗು ಮಿಂಚುಗಳು, ಓಣಿಯ ನೀರವತೆ, ಕಣ್ಣಿಗೆ ಕತ್ತಲಿಡುವ ರಾತ್ರಿಯಲ್ಲಿ ಧೋss ಎಂದು ಧಾರೆ ಹೊಯುವ ಮಳೆ, ಸುರುಳಿ ಸುತ್ತಿದ ಹಗ್ಗ ಹಿಡಿದ ಕಂಬಳಿಕೊಪ್ಪೆ ಹೊದ್ದ ವ್ಯಕ್ತಿ, ಎಲ್ಲರ ಚಲನವಲನಗಳನ್ನೂ ಗಮನಿಸುವ ಸಾಕ್ಷಿಪ್ರಜ್ಞೆ’ಯಂಥ ಬುದಣಸಾಬರು, ಅಟಕ್ಕೆ ಬರುವ ಹುಡುಗರು, ಸ್ತಬ್ಧವಾಗಿ ನಿಂತ ಚಕ್ಕಡಿ, ತಡೆಯಿಲ್ಲದೇ ಬೊಗಳುವ ನಾಯಿ-ಇವೆಲ್ಲ ಮೃತ್ಯುವಿನ ಆಗಮನದ ಹಿನ್ನೆಲೆಗೆ ಭಿತ್ತಿಯನ್ನು ಕಲ್ಪಿಸುವಲ್ಲಿ ಕತೆಯ ಪರಿಕರಗಳಾಗಿಬಿಡುತ್ತವೆ. ಈ ಅಂಶಗಳ ಸಮೃದ್ಧಿ (Opulence) ಒಟ್ಟಾರೆ ಕಾರ‍್ಯ ನಿರ್ವಹಿಸಿ ನರಸಿಂಹನ ಸಾವಿನ ದುರಂತವನ್ನು ತೀವ್ರಗೊಳಿಸುತ್ತವೆ, ಈ ಆರ್ಥದಲ್ಲಿ ನಾವು ಇಲ್ಲಿ ‘ಪ್ರಬಂಧ ಧ್ವನಿ’ಯ ವಿಧಾನವನ್ನು ಗುರುತಿಸಬಹುದು. ಹೀಗಾಗಿ, “ಮೃತ್ಯು ಪ್ರಜ್ಞೆಯ ಅತ್ಯಂತ ಹೃದಯಸ್ಪರ್ಶಿಯಾದ ಕಥನವಿದ್ದರೂ ಕಥೆ ಬಹು ಮಟ್ಟಿಗೆ ಸಫಲವಾಗಿದ್ದರೂ ಇಡೀ ಕಥೆಯೇ ಒಂದು ರೂಪಕವಾಗಿ ಅರಳುವ ಪವಾಡ ಸಿದ್ಧಿಸುವುದಿಲ್ಲ”ಎನ್ನುವ ಅಡಿಗರ ಮಾತು ಅಷ್ಟು ಸಮಂಜಸವಲ್ಲವೆನಿಸುತ್ತದೆ.

ಪ್ರಕೃತಿ, ಪ್ರಾಣಿಗಳು, ಮನುಷ್ಯರು-ಎಲ್ಲವನ್ನೂ ಕತೆಯ ಅಂಗಗಳನ್ನಾಗಿಸುವ ಪ್ರಯತ್ನದಿಂದಾಗಿ ಈ ಗೊಂದಲ ಉಂಟಾಗುತ್ತದೆ, ಸ್ವಲ್ಪಮಟ್ಟಿಗೆ ಇವೆಲ್ಲವೂ ಇಡಿ ಕಿರಿದು ಕತೆಯ ಪ್ರಮಾಣ ಬದ್ಧತೆಯನ್ನು ಸ್ವಲ್ಪ ಚಂಚಲಗೊಳಿಸಿದ್ದರೂ ಕತೆ ಕೆಲವು ದೃಷ್ಟಿಗಳಿಂದ-ಅದು ಕೊಡುವ ಅನುಭವದಿಂದ–ಗಮನಾರ್ಹವಾಗುತ್ತದೆ, (ಇದೇ ರೀತಿ ಕೆಲವು ದೋಷಗಳಿದ್ದರೂ ‘ಅದೃಷ್ಟ’ ಕತೆ ಕೂಡ ಕೆಲವು ವಿಚಾರಗಳಿಂದ ಗಮನಾರ್ಹವಾಗುತ್ತದೆ) ‘ಆಟ’ದಲ್ಲಿ ಚಿತ್ತಾಲರು ಪ್ರಾದೇಶಿಕ ಭಾಷೆಯನ್ನು ಬಹಳ ಸೊಗಸಾಗಿ ಬಳಸಿಕೊಂಡಿದ್ದಾರೆ.

ಈ ಎರಡೂ ಕತೆಗಳೂ ಒಂದೇ ರಾತ್ರಿಯ ಅವಧಿಯಲ್ಲಿ ಘಟಿಸಿದರೂ ಸಮಗ್ರ ಪರಿಣಾಮ ಬೀರುವುದರಲ್ಲಿ ಯಶಸ್ವಿಯಾಗಿವೆ. ಸಾವು ‘ಪಯಣ’ದಲ್ಲಿ ಸದ್ದಿಲ್ಲದೇ ಬಂದರೆ ‘ಆಟ’ದಲ್ಲಿ ಸೂಚಿಸಿ ಅನಂತರ ನಿರ್ದಾಕ್ಷಿಣ್ಯವಾಗಿ ಬರುತ್ತದೆ, ಎರಡೂ ಕತೆಗಳಲ್ಲೂ ಸಾವಿನ ಬಲೆಗೆ ಬೀಳುವ ನಾಯಕರು ಸಾವಿನ ಆಸ್ಪಷ್ಟ, ಅನಿರ್ದಿಷ್ಟ ಬರವಿನ ಮುಂಚೆಯ ಅವಸ್ಥೆಯಲ್ಲಿ ಗೊಂದಲಿಸುವಾಗ ಗಂಗಾಧರ ಚಿತ್ತಾಲರ “ಅಣ್ಣ” ಪದ್ಯದ ಕೊನೆಯ ಸಾಲುಗಳನ್ನು ನೆನಪಿಗೆ ತರುತ್ತಾರೆ:

“ಕೊನೆ ಕೊನೆಯ ದಿನದಲ್ಲಿ ಹೊತ್ತೇ ಇಲ್ಲದವನಂತೆ ಓಡಾಡಿದನಲ್ಲ
ನೆರಳೆದ್ದು ಬರುವುದನು ಕಂಡಿದ್ದನೇ? ಹೊರಡಬೇಕಾದವನು ಒಬ್ಬಂಟಿ ಎನಿಸಿ ಎದೆಗುಂದಿದ್ದ ನೇ ?”

`ಅದೃಷ್ಟ’ ಕತೆಯಲ್ಲಿ ಕೂಡ ವಾತಾವರಣ ಪ್ರಮುಖ ಪಾತ್ರ ವಹಿಸುತ್ತದೆ. ಗಿರೆಡ್ಡಿಯವರು ಹೇಳಿರುವಂತೆ, “ಚಿತ್ತಾಲರ ಹೆಚ್ಚಿನ ಕತೆಗಳು ತಮ್ಮ ಸತ್ವ ಹಾಗೂ ಸ್ವತ್ವಗಳಿಗಾಗಿ ಇಂಥ ವಾತಾವರಣದ ಅಪೂರ್ವತೆಯನ್ನು ಅವಲಂಬಿಸಿರುವುದು ಗಮನಿಸಬೇಕಾದ ವಿಷಯು……….ಇಲ್ಲೂ ಕೂಡ ವಾತಾವರಣದ ಹದವೇ ಕಥೆಗೆ ಸಹಜತೆಯನ್ನು, ಅಪೂರ್ವತೆಯನ್ನು ಒದಗಿಸಿದೆ.”

ಮಬ್ಬುಮಬ್ಬಾದ ಕೋಣೆಯಲ್ಲಿ ಜ್ವರದಿಂದ ಮಲಗಿದ ನೀಲಕಂಠ, ಅದು ಮೈಲಿಬೇನೆಗೆ ತಿರುಗಿ ತೀವ್ರವಾಗಿ, ಅರೆ ಪ್ರಜ್ಞಾವಸ್ಥೆಯಲ್ಲಿ ಅಜ್ಜನ ಸಾವಿನ ನೆನಪಿನ ಕಾಟ, ಪೊಕ್ಕನ ಅಣ್ಣ ಬಂದ ಸಂತೋಷ, ಆತ ವಿಕಾರ ರೂಪದಲ್ಲಿ ಬಂದು ಕಾಣಿಸಿಕೊಂಡ ಕನಸು, ಆ ದೀನ ಸ್ಥಿತಿಯಲ್ಲಿ ಪ್ರಪಂಚವನ್ನು ಶ್ರವಣಪ್ರಜ್ಞೆಯ ಮೂಲಕ ತಿಳಿಯುತ ಆಂತರಿಕವಾಗಿ ಸಾವಿನೊಡನೆ ಸೆಣಸುತ್ತ ಒಂದು ರೀತಿಯ ರಹಸ್ಯಮಯವಾದ ಭೀತಿ, ಕನಸು, ಕನವರಿಕೆಗಳಲ್ಲಿ ಸಾವಿನ ಅಂಚನ್ನು ಹಾಯ್ದು ಬರುವ ಅದೃಷ್ಟದ ಪ್ರತಿಪಾದನೆ ಮೈಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಚಿತ್ರಿತವಾಗಿರುವುದು “ಅದೃಷ್ಟ” ಕತೆಯ ವೈಶಿಷ್ಟ್ಯ. ನೀಲಕಂಠನ ಈ ಅದೃಷ್ಟಕ್ಕೆ ವೈದೃಶ್ಯವಾಗಿ (contrast) ಹಲವಾರು ವರ್ಷಗಳ ಅನಂತರ ತಂದೆತಾಯಿಗಳಿಗೆ ಕೊನೆಗಾಲದ ಆಸರೆಯೆಂಬಂತೆ, ತಾನು ಮಾಡದ ತಪ್ಪಿಗೆ. ಶಿಕ್ಷೆಯನ್ನನುಭವಿಸಿ ಅನಿರೀಕ್ಷಿತವಾಗಿ ಮರಳಿಬಂದ ಪೊಕ್ಕನ ಅಣ್ಣ ಅನಿರೀಕ್ಷಿತವಾಗಿಯೇ ಮೈಲಿಬೇನೆಗೆ ತುತ್ತಾಗುತ್ತಾನೆ, ಹೀಗೆ ಬದುಕು ಸಾವುಗಳ ಅದೃಷ್ಟ ದುರಾದೃಷ್ಟಗಳ ನಡುವೆ ಈ ಕತೆ ಗೆರೆ ಎಳೆದು ತೋರಿಸುತ್ತದೆ. ಇಲ್ಲಿ ಸಾವು ನಿರೀಕ್ಷಿತ ವ್ಯಕ್ತಿಯಿಂದ ವ್ಯತ್ಯಸ್ಯವಾಗಿ ಮತ್ತೊಬ್ಬ ವ್ಯಕ್ತಿಯನ್ನು ಅನಿರೀಕ್ಷಿತವಾಗಿ ಬಲಿಗೊಳ್ಳುತ್ತದೆ; ಅಹ ಪೇಕ್ಷಿತವೂ ಆಗುತ್ತದೆ.

ಇಲ್ಲಿ ಸಾವಿನ ಚಿತ್ರಣ ಸೂತ್ರ ಹಾಕಿಕೊಂಡು ಅದರಂತೆ ಕತೆಯನ್ನು ನಿರ್ವಹಿಸಿರುವ ಕೈ ಚಳಕ ಸ್ಪಷ್ಟವಾಗಿ ಕಾಣಿಸಿಕೊಂಡು, ತನ್ನ ಹಿಂದೆ ಒಂದು ಬೌದ್ಧಿಕ ಚಟುವಟಿಕೆ ಕಾರ್ಯ ಪ್ರವೃತ್ತವಾಗಿರುವ ಸುಳಿವು ಹತ್ತಿ ಕತೆ ಕೃತಕವಾಗಿಬಿಡುತ್ತದೆ ; ಸಂಭವನೀಯವಾದರೂ ಕೇವಲ ಲೆಕ್ಕಾಚಾರದ್ದಾಗಿಬಿಡುತ್ತದೆ. ಸಾವಯವ ಸಂಬಂಧ ಸಾಧ್ಯವಾಗದಂತೆ ಬಿರುಕು ಕಾಣಿಸಿಕೊಂಡು ಕತೆಗಾರರ ಸಾವಿನ ವಿಚಾರ ವಿಚಾರವಾಗಿಯೇ ತಟಸ್ಥವಾಗುತ್ತದೆಯೇ ಹೊರತು ಕತೆಯಾಗಿ ಕಲಾತ್ಮಕವಾಗಿ ಆವಿಷ್ಕಾರಗೊಳ್ಳುವುದಿಲ್ಲ, ಇಲ್ಲಿ ಕತೆಗೆ ಅತ್ಯಗತ್ಯವಾದ ಗಾಂಭೀರ್ಯ ಮುರಿದುಬೀಳುತ್ತದೆ; ಒಟ್ಟಾರೆ ಕಥೆ ತೀವ್ರ ಸಂವೇದನೆಯಿಂದ ಹುಟ್ಟಿಲ್ಲವಾಗಿ ಪರಿಣಾಮ ಬೀರುವುದರಲ್ಲಿ ಸೋಲುತ್ತದೆ, ಈ ಮೂರು ಕಥೆಗಳಲ್ಲಿ `ಅದೃಷ್ಟ’ ಪೇಲವವಾದ ಕಥೆಯಾಗಿದೆ.

ಅಣ್ಣ ಬಂದಾಗ ಹುರುಪು ತೋರುವ ಪೊಕ್ಕ ಕೊನೆಯಲ್ಲಿ ಅವನು ಸತ್ತಾಗ ಅಳಹತ್ತಿದಾಗ ಕೂಡ ಆ ಸಾವಿನ ಸ್ಪಷ್ಟ ಮಾಹಿತಿ ನೀಲಕಂಠನಿಗೆ ಲಭಿಸುವುದೇ ಇಲ್ಲ. “ಎಂದೂ ಕಂಡಿರದ ಪೊಕ್ಕನ ಹೊಸ ಅಣ್ಣ ಹೀಗೆ ಒಮ್ಮಿಂದೊಮ್ಮೆಲೇ ಬಂದುದೇಕೆ ? ಒಮ್ಮಿಂದೊಮ್ಮೆಲೆ ಹೊರಟು ಹೋದುದೇಕೆ ? ಅರ್ಥವಾಗಲಿಲ್ಲ” ಎಂದು ಅವನು ವಿಸ್ಮಿತನಾದಾಗ ದುರಂತದ ಕಾವು ಹೆಚ್ಚುತ್ತದೆ.

ಗಿರಡ್ಡಿಯವರು ಹೇಳುವಂತೆ, “ಅದೃಷ್ಟದ ವಸ್ತುವಿನಲ್ಲಿ ಹೊಸತನವೇನೂ ಇಲ್ಲ, ಹಳೆಯ ಮಾತಿನಲ್ಲಿ ಹೇಳುವುದಾದರೆ ಇದು ದೈವಲೀಲೆಯನ್ನು ಚಿತ್ರಿಸುತ್ತದೆ. ಆದರೆ ಮೈಲಿ ಬೇನೆಯಿಂದ ನರಳುತ್ತ ಸಾವಿನ ದವಡೆಯಲ್ಲಿ ಸಿಕ್ಕು ಸಿಕ್ಕು ಉಳಿದು ಬಂದ ಬಾಲಕನೊಬ್ಬನ ಮೂಲಕ ಬರುವುದರಿಂದ ಕಥೆಗೆ ಹೊಸದೊಂದು ಮೊನೆ ಬರುತ್ತದೆ.”

ಕಥೆಯ ಆರಂಭದಲ್ಲಿ ಜ್ವರದಿಂದ ಮಲಗಿದ್ದ ನೀಲಕಂಠನಿಗೆ ಜಂತೆ ಹಲಗೆಗಳು, ಗೋಡೆಗಳು, ವಾತಾವರಣವೆಲ್ಲ ಮಬ್ಬುಮಬ್ಬಾಗಿ ಕಂಡದ್ದು, ಅವನ ಸಾವಿನಿಂದ ಪಾರಾದ ಅದೃಷ್ಟವಂತನಾದ ಮೇಲೆ ಸ್ವಚ್ಛವಾಗಿ ನಿಷ್ಕಲಂಕವಾಗಿ ಕಾಣುವುದು ಅರ್ಥಪೂರ್ಣವಾಗುತ್ತದೆ; ಇದಕ್ಕೆ ಪೂರಕವಾಗಿ ಕಥೆಯ ಉದ್ದಕ್ಕೂ ನಡೆಯುವ ನೆರಳು ಬೆಳಕಿನಾಟ ಜೀವಂತವಾಗುತ್ತದೆ.

ಹೀಗೆ ಚಿತ್ತಾಲರ ‘ಸಾವಿನ ಪ್ರಜ್ಞೆ’ ಮೂರೂ ಕಥೆಗಳಲ್ಲಿ ವಿವಿಧ ಸ್ತರಗಳಲ್ಲಿ ಕಾಣಿಸಿಕೊಂಡು ವಿಭಿನ್ನ ರೀತಿಗಳಲ್ಲಿ ಪ್ರತಿಪಾದಿತವಾಗಿದೆ.

ಗ್ರಂಥ ಋಣ :

ಗಿರಡ್ಡಿ ಗೋವಿಂದರಾಜರ “ಸಣ್ಣ ಕತೆಯ ಹೊಸ ಒಲವುಗಳು”
ಎ. ಗೋಪಾಲಕೃಷ್ಣ ಅಡಿಗರ ಮುನ್ನುಡಿ

Close

ಅತಿವೃಷ್ಟಿ; ಅನಾವೃಷ್ಟಿ

ಅತಿವೃಷ್ಟಿ ; ಅನಾವೃಷ್ಟಿ

ಚೆ ರಾಮಸ್ವಾಮಿ

೧

ಅತಿವೃಷ್ಟಿ ;
ಕರಿಮುಗಿಲು ದಟ್ಟೈಸಿ, ತುಂಬಿದ ಬಾನಗರ್ಭಕ್ಕೆ
ಸಿಡಿಲು ಗುಡುಗಿನ ಚಾಕು
ಜಗವೆಲ್ಲ ಜೋಗ
ಹರಿದಿತ್ತು, ಹೊಳೆ ಭೋಗ

ತಪ್ಪಿಸಿಕೊಂಡಿದ್ದ ಹೈದ
ನನ್ನ ತನುಜ
ಕರಿಮುಗಿಲು, ಕರಿ ಇರುಳು
ಜಗವೆಲ್ಲ ಕಡಲು
ಮಿಂಚುವಾಗೊಮ್ಮೊಮ್ಮೆ ಅಲ್ಲಲ್ಲೆ ಕಂಡು ಅವ ಮಾಯ
ತೆಪ್ಪವಿಲ್ಲೆನಗೆ, ನೆಲವೆಲ್ಲ ನೀರು
ತೇಲುತ್ತಿದ್ದಾನೆ, ಈಸುತ್ತಿದ್ದಾನೆ
ಯಾವ ದಂಡೆಗೋ ಕಾಣೆ
ಕಾಣದ ಕೊನೆ

ಗೆ ಕೊನೆ
ಗೂ ಮಾಯ, ಮಾಯ
ಮಳೆ, ನೀರು, ಹೊಳೆ, ಮಗ.
ಕಪ್ಪು ಮಣ್ಣಿನ್ನೂ ಕಪ್ಪಗಾಗಿತ್ತು.

ಕೊನೆಗೊಂದು ಸಿಡಿಲು ಜಗವೆಲ್ಲ ಮಿಂಚಿ
ಕೈಲಾಸ ಸೀಳಿ ಧರೆಗಿಳಿದಿತ್ತು, ಶಬ್ಬ, ಸ್ತಬ್ದ
ಹರಳರುಣೋದಯ.

ತೇಲಿ ಹೋವವನು ಹಾರಿ ಬಂದಿದ್ದಾನೆ
ಈಸಿ ಹೋದವನು ವೇಷ ಮಾಸಿ ಬಂದಿದ್ದಾರೆ
ಅವನೇ ನಾನಾಗಿದ್ದೇನೆ
ಅವನ ತಲೆ, ನನ್ನ ಬಾಯಿ
ಆವನ ಕ್ರಿಯೆ, ನನ್ನ ಕೈ
ಮಗ ಬಂದಿದ್ದ ಮಧ್ಯಾಹ್ನಕ್ಕೆ

ಬಯಲಲ್ಲಿ ಬಂದವನು, ಬಯಲಾಗಿ ನಿಂದವನು
ಅರಮನೆಯ ದೊಂದಿಯಲಿ, ಗುಡಿಲ ಮೊಂಬತ್ತಿಯೇರಿಸಿ
ಕಪ್ಪು ಮಣ್ಣಿಗೆ ಚಿನ್ನವ ಹಾಸು ಬೆಳ್ಳಿ ಮೋಡದ ಛಾವಣಿ
ಎಂದು ಕೈಲಾಸಕ್ಕೆ ಕೈ ಚಾಚಿದವನು
ಕವಿದ ಕರಿಮುಗಿಲ ಸಂತೆಯಲಿ
ಉಪ್ಪಿನಂಗಡಿ ತೆರೆದು ನೀರೊಳಗೆ ಹುದುಗಿದನು

೨
ಅನಾವೃಷ್ಟಿ ;
ಬಾನಿನಂಗಡಿಯಲ್ಲಿ ಸರಕೇ ಇಲ್ಲ
ಕಳ್ಳ ಸಾಗಣಿಕೆಗೆ ಆರ್ಯಭಟನ ಪಹರೆ
ಜಗಪೆಲ್ಲ ಸುಡುಗಾಡು
ಪಾತಾಳ ಗರ್ಭದಲಿ ದಾವಾನಳ ಹೊಳೆ
ಒರತೆಯಿಲ್ಲದ ಸಹರಾ

ತಪ್ಪಿಸಿಕೊಂಡಿದ್ದೇನೆ, ಕಂದನೂ ಇಲ್ಲ
ಉರಿಗಾಳಿ ; ಉರಿ ಬಿಸಿಲು
ಜಗವೆಲ್ಲ ಮರಳು
ರಾಚಿ ಬೀಸಿದ ಜ್ವಾಲೆ ಗಾಳಿ
ಬಿರುಗಾಳಿ, ಎಲ್ಲೆಲ್ಲೂ ಮರಳು-ಮರಳು

ಬರಿಗೈಲಿ ಬಂದವರು ಬಯಲಲ್ಲಿ ನಿಂದವರು
ಸಿಂಹಾಸನ ತೆಗೆದು ಪದ್ಮಾಸನ ಹಾಕಿ
ಸುತ್ತ ಬೇಲಿ, ಮೂಲೆ ಮೂಲೆಗೆ ತುಪಾಕಿ
ಕಾವಲು; ಹಾಕಿ, ಕ್ರಿಕೆಟ್‌ ವೀರರು
ವಾಚಕ ವಾಣಿ ಅನುಭವ ಮಂಟಪ
ಶಿವಾನುಭವಿಗಳಲ್ಲಿ ಬಿಜ್ಜಲ ರೂಪ
ರದ್ದಿ ಕಾಗದ ತಲೆ ವೃತ್ತ ಪತ್ರಿಕೆ ನಾಲಗೆ

ವೇದಾಗಮ ಉಪನಿಷತ್ ಕಾವ್ಯಗಳ
ಸಾರ ಕರಗಿ ಮಳೆ ಹನಿ ಹನಿದು
ಕುಡಿದು ದಣಿದು ವಜ್ರವಾಗಿರುವ ಮಣ್ಣು
ಬೆವರು ರಕ್ತಕ್ಕೆ ಅಂಟಿಗಂಟಾದ ಹೆಂಟೆ
ನವ ನಿರ್ಮಾಣಕ್ಕೆ ಇಟ್ಟಂಗಿ

ಬಯಕೆ ; ಬರಬೇಕು ಕೆಂಪು ಮಳೆ
ರಕ್ತ ಬೀಜ ಮೊಳೆತು ಹಸಿರು ಗಿಡಗಿಳಿಗೆ
ಬಿಳಿಯ ಹೂಗಳು, ಆಗ
ಛಾವಣಿಗೆ ಬೆಳ್ಳಿ ಮೋಡೆ
ಕಪ್ಪು ಮಣ್ಣಿಗೆ ಚಿನ್ನದ ಹಾಸು.

Close

ಆಲನಹಳ್ಳಿಯವರ-ಪರಸಂಗದ ಗೆಂಡೆತಿಮ್ಮ

ಆಲನಹಳ್ಳಿಯವರ-ಪರಸಂಗದ ಗೆಂಡೆತಿಮ್ಮ

-ಮಾಧವ ಕುಲಕರ್ಣಿ

ನನ್ನ ಸಮವಯಸ್ಕರಾದ ಶ್ರೀಕೃಷ್ಣ ಆಲನಹಳ್ಳಿಯವ ಸಾಹಿತ್ಯಕ ಬೆಳವಣಿಗೆಯನ್ನು ಅವರ ‘ಮುಣ್ಣಿನ ಹಾಡು’ ಕವನ ಸಂಗ್ರಹದಿಂದರ್ಣಿ ವೀಕ್ಷಿಸುತ್ತ ಬಂದಿರುವ ನನಗೆ, ಅವರ ಚಿಕ್ಕ ಕತೆಗಳ ಗುತ್ತದ ನೂತರ ಬಂದ ‘ಕಾಡು’ ಅಷ್ಟೇನೂ ತೃಪ್ತಿಯನ್ನು ಕೊಡಲಿಲ್ಲ.

‘ಮಣ್ಣಿನ ಹಾಡು’ ವಿನಲ್ಲಿಯ ಕವನಗಳು, ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸೆಮಿನಾರಿನಲ್ಲಿ ಅವರು ಓದಿದ ‘ಕರಿಯ’ ಎನ್ನುವ ಕವನ-ಇವು, ಆಲನಹಳ್ಳಿ ಜೀವನದಲ್ಲಿ ಅಪಾರ ಅನುಕಂಪವಿರುವ ಸಾಹಿತಿಯಾದ್ದರಿಂದ humanism ವ ಬೆಳವಣಿಗೆಯ ವಿಶಿಷ್ಟ ಹಂತವೊಂದು ಈ ಸಾಹಿತಿಯ ಸಾಹಿತ್ಯದಲ್ಲಿ ಕೂಡಿ ಒಡೆಬರಬಹುದೆಂದು ನಿರೀಕ್ಷಿಸಿದ್ದೆ, ಇಲ್ಲಿಯೇ ಇನ್ನೊಂದು ಮಾತನ್ನೂ ಹೇಳಿಬಿಡುತ್ತೇನೆ: ಸದ್ಯದ ಕನ್ನಡ ಸಾಹಿತ್ಯದ ಚಟುವಟಿಕೆಯಲ್ಲಿ ದೇವನೂರ ಮಹಾದೇವ ಹಾಗೂ ಶ್ರೀಕೃಷ್ಣ ಆಲನಹಳ್ಳಿ ಇವರು ವೇದಿಕೆಯಿಂದ ಏನೇ ಮಾತನಾಡಲಿ, ಕಲೆಯನ್ನು ಬಿಟ್ಟು ಬೇರೆ ಏನೇ ಬರೆಯಲಿ, ಸಾಹಿತ್ಯಕ ಕಲಾಕೃತಿಗೆ ತೊಡಗಿದಾಗ ಮಾತ್ರ ಹಕ್ಕುಗಳ ಹೋರಾಟದ ಸೀಮಿತತೆಯನ್ನು ಕಿತ್ತೆಸೆದು ಬರೆಯುವ ಸಾಮರ್ಥ್ಯ ಉಳ್ಳವರಾಗಿದ್ದಾರೆ. ಅಲ್ಲದೇ ತಾವು ಕಲಿತದ್ದನ್ನು ಮರೆತು ಬರೆಯುವ ನಿಜವಾದ ಕಲಾವಂತರಾಗಿದ್ದಾರೆ, ದೇವನೂರರ ”ಪ್ಯಾನತೂರು’ ಕಥಾ ಸಂಗ್ರಹ ಇದನ್ನು ಸ್ಪಷ್ಟಪಡಿಸಿತಾದರೂ, ಆಲನಹಳ್ಳಿಯವರ ‘ಕಾಡು’ ಹೆಚ್ಚು

ತಂತ್ರ ಬಾಧಿತವಾಗಿ ಕಲಾಕಾರ ತನ್ನ ಆಂತರಿಕ ಅನುಭವದ ಸಂಪತ್ತನ್ನು ಪೂರ್ಣವಾಗಿ ದೋಚುವುದಕ್ಕೆ ಸಂಪೂರ್ಣ ಎಡೆಮಾಡಿ ಕೊಡಲಿಲ್ಲ, ಆದರೆ ಅವರ ಎರಡನೆಯ ಕಾದಂಬರಿ ‘ಪರಸಂಗದ ಗೆಂಡೆತಿಮ್ಮ’ ನನ್ನ ನಿರೀಕ್ಷೆಯನ್ನು ಸುಳ್ಳಾಗಿಸಲಿಲ್ಲ. ಈ ಕಾದಂಬರಿಯ ಸೋಲು, ಗೆಲುವುಗಳು ಏನೇ ಇರಲಿ, ಆಲನಹಳ್ಳಿ ತಮ್ಮ ಕಾವ್ಯದಲ್ಲಿ ಉಪಸ್ಥಿತವಿರುವ ಮುಗ್ಧ, ಹಳ್ಳಿಯ ಚೇತನ ಒಂದರ ಕಣ್ಣುಗಳಿಂದ ಜೀವನವನ್ನು ನೋಡಿ ನಯವಾದ ಕತೆಗಾರಿಕೆಯ ಗದ್ಯಕ್ಕೆ ಇಳಿಸಲು ಸಮರ್ಥರಾಗಿದ್ದಾರೆ. ಇದು ಈ ಸಾಹಿತಿಯ ಗದ್ಯ ಬರವಣಿಗೆಯಲ್ಲಿಯ ಮಹತ್ವದ ತಿರುವು, ಕಾವ್ಯಕ್ಕೆ ಬಂದೊಡನೆ ದಕ್ಕುತ್ತಿದ್ದ ಮುಗ್ಧ ಚೈತನ್ಯ ಅವರ ಚಿಕ್ಕ ಕತೆಗಳಿಗಿಲ್ಲ. ಈ ಚೈತನ್ಯವನ್ನು ಪಡೆಯುವ ದಿಶೆಯಲ್ಲಿಯ ಪ್ರಯತ್ನವಾಗಿಯೇ ‘ಕಾಡು’ವಿನ ನಾಯಕ ಚಿಕ್ಕ ಹುಡುಗನಾಗುತ್ತಾನೆ. ಆದರೆ ‘ಕಾಡು’ವಿನ ನಾಯಕ ಒಂದು ಮಟ್ಟದಲ್ಲಿ ತಾಂತ್ರಿಕ ಅವಶ್ಯಕತೆಯಾಗಿಯೇ ಉಳಿದು ಬಿಡುವುದರಿಂದ, ಆಲನಹಳ್ಳಿಯವರ, ಕಾವ್ಯದಿಂದ ಗದ್ಯಕ್ಕೆ ಬರಬೇಕಾದ ಜಿಗಿತ ಸಂಪೂರ್ಣವಾಗಿ ಕಾಡು’ವಿನಲ್ಲಿ ಸಫಲವಾಗುವುದಿಲ್ಲ. ‘ಪರಸಂಗದ ಗೆಂಡೆತಿಮ್ಮ’ ಈ ಸಾಹಿತಿಯ ಕಾವ್ಯವನ್ನು ಸಫಲವಾಗಿ ಗದ್ಯದಲ್ಲಿ ಒಡಮೂಡುವಂತೆ ಮಾಡಿದೆ. ಇದು ಕೇವಲ ಭಾಷೆಗೆ ಸಂಬಂಧಿಸಿದ ಪ್ರಶ್ನೆಯಾಗಿರದೇ ಒಟ್ಟು ಬರವಣಿಗೆಯ ಹಿಂದಿನ ಚೈತನ್ಯದ ಸ್ಥಳಾಂತರದ ಯಶಸ್ಸಾಗಿದೆ. ಈ ಕಾರಣದಿಂದಾಗಿಯೇ ‘ಪರಸಂಗದ ಗೆಂಡೆತಿಮ್ಮ’ ನನ್ನಲ್ಲಿ ಕುತೂಹಲವನ್ನು ಕೆರಳಿಸಿದೆ.

ಹಾಗೆ ನೋಡಿದರೆ ‘ಪರಸಂಗದ ಗೆಂಡೆತಿಮ್ಮ’ ‘ದಂತಕತೆ’ ಯಾಗುವ ಬಗೆಯನ್ನು (process) ಅಭ್ಯಸಿಸುವ ಒಂದು ವಿಶಿಷ್ಟವಾದ ಕಾದಂಬರಿ, ಒಂದು ದಂತಕತೆಗೆ ಬೇಕಾದ ಸಾಹಿತ್ಯಕ ಸರಕುಗಳೆಲ್ಲ ಇಲ್ಲಿವೆ ; ಆದರೆ, ಲೇಖಕ ಈ ಕಾದಂಬರಿಯನ್ನೂ ಒಂದು ದಂತಕತೆಯನ್ನು ಹೇಳುವ ರೀತಿಯಲ್ಲಿಯೇ ಬರೆದು ಸಾರ್ವಕಾಲಿಕತೆಯತ್ತ ನಗೆಯಲು ಮಾಡಿದ ಪ್ರಯತ್ನ ಅದ್ಭುತವಾದದ್ದು, ‘ಗೆಂಡೆತಿಮ್ಮ’ ಹಾಗೂ ‘ಮರಂಕಿ’ಯರ ಸುತ್ತ ಬೆಳೆಯುವ ಕತೆ, ಸಾಲುಂಡಿ, ಮೈಸೂರು, ಹಾಗೂ ಗೌವಳ್ಳಿಗಳನ್ನು ಪಾತ್ರವಾಗಿಸಿಕೊಳ್ಳುತ್ತದೆ, ಸಾಲುಂಡಿಯ ಗೆಂಡೆತಿಮ್ಮ, ನವನಾಗರಿಕತೆಯ ಮೈಸೂರಿನಿಂದ ಗೌವಳ್ಳಿಗೆ ವ್ಯಾಪಾರಕ್ಕೆ ಹೋಗುತ್ತಾನೆ, ಮದುವೆಯಾದ ಮೇಲೆ, ಅವನ ಹೆಂಡತಿ ಮರಂಕಿ ಸಾಲುಂಡಿಯಲ್ಲಿ ಈ ನಾಗರಿಕತೆಯನ್ನು ಬಿತ್ತಿದರೆ, ಅವಳಿಂದ ಪ್ರೋತ್ಸಾಹಿತನಾದ ಗೆಂಡೆತಿಮ್ಮ ಗೌವಳ್ಳಿಯಲ್ಲಿ ಈ ನಾಗರಿಕತೆಯನ್ನು ಬಿತ್ತುತ್ತಾನೆ, ಇದರ ಫಲವಾಗಿ ಇಬ್ಬರೂ ಸಾವನ್ನಪ್ಪುತ್ತಾರೆ. ಲೇಖಕರ ಆಶಯವೂ ತೋರಿಕೆಗೆ ಇಷ್ಟೇ ಎಂದು ಮೇಲುನೋಟಕ್ಕೆ ಕಾಣುತ್ತದೆ. ಆದರೆ, ಕಾದಂಬರಿಯನ್ನು ತೀವ್ರವಾದ ಅಭ್ಯಾಸಕ್ಕೆ ಗುರಿಪಡಿಸಿದರೆ, ಈ ದಂತಕತೆಯಂತೆ ಕಾಣುವ ಕಾದಂಬರಿ, ಈ ವಸ್ತುವಿನಿಂದ ಸಾಕಷ್ಟು ದೂರ ಹೋಗುತ್ತದೆಂದು ಸ್ಪಷ್ಟವಾಗುತ್ತದೆ. ‘ವಿಚಿತ್ರವೆಂದರೆ, ಗೌವಳ್ಳಿ ಗೌಡರ ಮಗ

ಮುದ್ಧ ಕುಪ್ಪೆಯ ಹೊಗೆಯಿಂದ ಕಪ್ಪಾದ ಸ್ಥಳದಲ್ಲಿ ಮರಂಕಿ ಹಾಗೂ ಗೆಂಡೆತಿಮ್ಮನ ಹೆಸರುಗಳನ್ನು ಕೆತ್ತಿದಾಗ ಆ ಹೆಸರುಗಳು ಮರುಕ್ಷಣ ಇಲ್ಲವಾಗುತ್ತದೆ. ಇದೊಂದು ಪ್ರತಿಮೆ ಎಂದು ಕಾದಂಬರಿಯಲ್ಲಿ ಬಳಕೆಯಾಗಿದ್ದರೂ, ಎಂಥ ಪ್ರಾಥಮಿಕ ಪ್ರತಿಮೆ ! ಆದರೆ ದಂತಕತೆಗೆ ಎಷ್ಟು ಔಚಿತ್ಯ ಪೂರ್ಣವಾದ ಪ್ರತಿಮೆ ! ಇಂಥ ಪ್ರತಿಮೆಗಳನ್ನು ಅರ್ಥೈಸುತ್ತ ಈ ಕಾದಂಬರಿಯ ಮೂಲಾರ್ಥಕ್ಕೆ ಹೊರಟರೆ ನಾನು ಈಗ ಮೇಲೆ ವಿವರಿಸಿರುವ ಕಾದಂಬರಿಯ ವಸ್ತುವನ್ನು ಬಿಟ್ಟು ಬೇರೆ ಇನ್ನೇನೂ ಸಿಗುವ ಸಾಧ್ಯತೆಯೇ ಇಲ್ಲ . ಈ ದೃಷ್ಟಿಯಿಂದ ಆಳವಾದ ಅರ್ಥವನ್ನು ಹೊಂದಿಯೂ ತೀರಾ ಸಾದಾ ಆಗಿ ಕಾಣುವ ಈ ಕಾದಂಬರಿ ನಮ್ಮ ಸಾಹಿತ್ಯಕ್ಕೆ ಹೊಸದು ಹಾಗೂ ಗಂಭೀರ ಸಾಹಿತ್ಯ ಮತ್ತು ಸಾಮಾನ್ಯ ಓದುಗನ ನಡುವಿನ ಕಂದರವನ್ನು ಸಂಕುಚಿತಗೊಳಿಸುವ ವಿಶಿಷ್ಟ ಪ್ರಯತ್ನ.

ಇಲ್ಲಿಯ ಮರಂಕಿ, ಅದಮ್ಯ ಜೀವನ ಉತ್ಸಾಹದಿಂದೊಡಗೂಡಿದ ಚೇತನ, ಭಾವ ನಾಗರಿಕತೆಯಲ್ಲಿಯೂ ಕಾಣಸಿಗಬಹುದಾದ ಹೆಣ್ಣು, ಪರಿವಾರದ ಜಾತಿಯಲ್ಲಿಯೇ ಹುಟ್ಟಿದ ಇನ್ನೂ ಅನೇಕರಂತೆ ಅವಳು ಏಕಿಲ್ಲ ಎಂಬ ಪ್ರಶ್ನೆ ಸಮಾಜಶಾಸ್ತ್ರಕ್ಕೆ ಸಂಬಂಧಿಸಿದ್ದಾದರೂ ಕಾದಂಬರಿಯಲ್ಲಿ ಅವಳು ಮೂಡಿಬಂದಿರುವ ರೀತಿ ಇಂಥ ಪ್ರಶ್ನೆಗಳಿಗೆ ಅವಕಾಶವನ್ನೇ ಕೊಡುವುದಿಲ್ಲ. ಅವಳ ಮಲತಾಯಿ, ಮದುವೆಗಿಂತ ಮೊದಲೇ ಹಾದರ ದಲ್ಲಿ ತೊಡಗಿದವಳು, ಅವಳ ತಂದೆ ಮದುವೆಗಿಂತ ಮೊದಲು ಮತ್ತೂ ನಂತರ ಹಾದರವನ್ನು ಮೌಲ್ಯಗಳ ಧಿಡೀರ್ ಆವನತಿ ಎಂದು ತಿಳಿದವನಲ್ಲ; ನಂಜನಗೂಡಿನ ಸಂಬಂಧಿ ನಾಯಕನೊಡನೆ ತನ್ನ ಮಗಳು ಮಲಗುತ್ತಾಳೆಂದು ಗೊತ್ತಿದ್ದರೂ ಅವಳು ಹೋಗುವ ಹಟಹಿಡಿದರೆ ಒಬ್ಬಳೇ ಮಗಳೆಂಬ ಪ್ರೀತಿಯಿಂದ ಏನಾದರೂ ಮದುವೆ ಮಾಡಿಯೇನೆಂಬ ಪ್ರೀತಿಯಿಂದ ಕೇಳಿಸುತ್ತಾನೆ. ಅಂದರೆ, ತಂದೆ, ಮಗಳು, ಮಲತಾಯಿ ಇವರಾರಿಗೂ ಇನ್ನೊಬ್ಬ ಗಂಡಸಿನೊಡನೆ ಅಥವಾ ಹೆಂಗಸಿನೊಡನೆ ಸಂಬಂಧ ಬೆಳೆಸುವುದು ಸಮಾಜದ ಬಂಧನದ ಹೆದರಿಕೆಯಿಂದಾಗಿ ಕದ್ದುಮಾಡುವ ಕೆಲಸವಾಗಿದೆಯೇ ಹೊರತು, ಎಂದೆಂದೂ ವೈಯಕ್ತಿಕ ಸಮಸ್ಯೆಯಾಗಿರಲಿಲ್ಲ. ಇಂಥ ವಾತಾವರಣದಲ್ಲಿ ಬೆಳೆದ ಮರಂಕಿ ನಂಜನ ಗೂಡಿನ ನಾಯಕನೊಡನೆಯಾಗಲೀ, ಶಿವಣ್ಣನೊಡನೆಯಾಗಲೀ ಪಡೆಯುವ ಸಂಬಂಧ ಆನೈತಿಕ ಎಂದು ಬಗೆಯುವುದು ಸಾಧ್ಯವೇ ಇಲ್ಲ, ಅವಳಿಗೆ ಗಂಡನ ಬಗೆಗಿರುವ ಅನುಕಂಪವೊಂದೇ ಕೊನೆಗೆ ಮೌಲ್ಯವಾಗುತ್ತದೆಯೇ ಹೊರತು, ತನ್ನ ಅನೈತಿಕವೆನ್ನಬಹುದಾದ ವ್ಯವಹಾರ ಎಂದೂ ಅವಳನ್ನು ಗೊಂದಲಕ್ಕೀಡುಮಾಡುವುದಿಲ್ಲ, ಕಾದಂಬರಿಯ ಕತೆ ಹೇಳುವಿಕೆ ಇದಕ್ಕೆ ಎಷ್ಟು ಪೂರಕವಾಗಿದೆ ಎಂದರೆ, ದಂತಕತೆಯ ಮಟ್ಟದಲ್ಲಿಯೇ ಕತೆಗಾರಿಕೆ ನಡೆದಿರುವುದರಿಂದ ಪಾತ್ರಗಳು ಅಂತರ್ಮುಖಿಗಳಾಗುವ ಅವಶ್ಯಕತೆ ಇಲ್ಲ ; ಇದು ಇಲ್ಲದಿರುವುದರಿಂದ ಮರಂಕಿಯ ‘ಪಾಪ ನಿರ್ಲಿಪ್ತ’ ಮನಸ್ಸು ಓದುಗನನ್ನು ಮೌಲ್ಯ ಪ್ರಜ್ಞೆಯತ್ತ ಎಳೆದೊಯ್ಯುವುದಿಲ್ಲ. ಇಂಥ ಮರಂಕಿಯೊಡನೆ, ಮದುವೆಯ ವಯಸ್ಸನ್ನು ಮೀರಿದ ಗೆಂಡೆತಿಮ್ಮ ಮದುವೆಯಾದರೆ, ಅವಳು ತನ್ನ ದೈಹಿಕ ದಾಹವನ್ನು ತೀರಿಸಿಕೊಳ್ಳಲು ಹಾಗೂ ತನ್ನ ಅಹಂಕಾರವನ್ನು (ego) ತೃಪ್ತಿಪಡಿಸಲು, ನವನಾಗರಿಕತೆಯ ಪ್ರತಿನಿಧಿ ಶಿವಣ್ಣನೊಡನೆ ಸಂಬಂಧ ಬೆಳೆಸುತ್ತಾಳೆ, ಮರಂಕಿಯ ಆಶೆಗಳು ನೂರು ; ಆದರೆ ಕಬ್ಬಿಣದ ಕಾಯದ ವ್ಯಕ್ತಿಯೊಂದು ಈ ಚೇತನಕ್ಕೆ ಸಿಕ್ಕಿದ್ದರೆ, ಅವಳ ಆಶೆಗಳಿಗೆ ಕಡಿವಾಣವಿರಬಹುದಿತ್ತು, ಅದಕ್ಕೇ ಗೆಂಡೆತಿಮ್ಮ ಅವಳ ಆಶೆಗಳನ್ನು ಪೂರೈಸುವುದರಲ್ಲಿಯೇ ಗಂಡನಾಗಿ ಉಳಿಯಬೇಕಾದರೆ, ಮರಂಕಿ ಅನಿವಾರ್ಯವಾಗಿ ಚಿಗುರು ಮೀಸೆಯ ಶಿವಣ್ಣನನ್ನು ಕೂಡುತ್ತಾಳೆ, ನಾಗರಿಕತೆಯ ಅಂಚಿನಲ್ಲಿರುವ ನಮ್ಮ ಈ ಕಾಲಕ್ಕೆ ಮರಂಕಿಯ ನೈಸರ್ಗಿಕ ಅಭಿಲಾಷೆ ಹಾಗೂ ಸಾಮಾಜಿಕ ಪ್ರತಿಷ್ಠೆ, ಅಲಾ ಯದವಾಗಿ ಸಂಕೇತಗಳಾಗುತ್ತವೆ.

‘ಗೆಂಡೆತಿಮ್ಮ’ ಈ ಹೊಸ-ಹಳೆಯ ಸಂಸ್ಕೃತಿಗಳ ನಡುವೆ ಸಿಕ್ಕ ಮಗ್ಗ ಎಂದರೆ ಅವನನ್ನು ಹಾಗೆಯೇ ಕಾದಂಬರಿಯನ್ನು ಬಹಳ ಸರಳಗೊಳಿಸಿದಂತಾಗುತ್ತದೆ. ಲೇಖಕರ ಅಗಾಧವಾದ ಅನುಕಂಪಕ್ಕೆ ಒಳಗಾಗಿಯೂ ಅತಿಭಾವುಕ ಪಾತ್ರವಾಗದೆ ಉಳಿದಿರುವುದು, ಈ ಪಾತ್ರದ ಅಜರಾಮರತೆಗೆ ಕಾರಣವಾಗಬಹುದು, ಕಾದಂಬರಿಯಲ್ಲಿ ಎಷ್ಟೇ ಪ್ರಾಥಮಿಕ ಪ್ರತಿಮೆಗಳು ಬಂದರೂ ಗೌವಳ್ಳಿ ಗೌಡರ ಮಗ ಮುದ್ದ, ಗೆಂಡೆತಿಮ್ಮನ ಅಂತರಂಗಕ್ಕೆ ಸಂಕೇತವಾಗುವುದು ಕಾದಂಬರಿಯಲ್ಲಿ ಮಾನವ ಸಂಬಂಧದ ರೂಪರೇಷೆಗಳನ್ನು ಸ್ಪಷ್ಟವಾಗಿ ಕಡೆಯುವದಲ್ಲದೇ, ಗೆಂಡೆತಿಮ್ಮನ ಪಾತ್ರವನ್ನು ಅಳೆಯುವ ಸಾಧನಗಳು ಕಾದಂಬರಿಯ ಹರಹಿನಲ್ಲಿಯೇ ನಿರ್ಮಾಣಗೊಂಡಿವೆ ಎಂಬುದನ್ನು ತೋರಿಸುತ್ತದೆ. ಇಲ್ಲಿ ಯಾವ ನೀಚ ಶಕ್ತಿಯೂ ಇಲ್ಲ; ಆದರೂ ಗೆಂಡೆತಿಮ್ಮನ ಜೀವನ ದುರಂತದಲ್ಲಿ ಕೊನೆಗೊಳ್ಳುತ್ತದೆ. ಇದಕ್ಕೆ ಅವನ ಹೆಂಡತಿಯ ಹಾದರ ಕಾರಣವಲ್ಲ. ಅವನು ತನ್ನಲ್ಲಿಯೇ ನಿರ್ಮಿಸಿಕೊಂಡಿದ್ದ ತನ್ನ ಮರ್ಯಾದೆಯ ಅಂತಸ್ತು (ಕಾದಂಬರಿಯಲ್ಲಿ ಎಷ್ಟು ಮುಗ್ಧವಾಗಿ ಮೂಡಿಬಂದಿದೆ ಇದು !) ಹಾಗೂ ‘ಪಾಪ ನಿರ್ಲಿಪ್ತ’ ಮನಸ್ಸಿನ ಸಂಗ, ಅಂದರೆ, ನೈಸರ್ಗಿಕ ಆವಶ್ಯಕತೆಗಳನ್ನು ಮೀರಿ ಮರಂಕಿಯ ದೇಹ ಬೆಳೆಯದಿದ್ದರೂ, ಗೆಂಡೆತಿಮ್ಮನ ಬಗೆಗೆ ಅವಳಲ್ಲಿ ಮಾನಸಿಕವಾದ ಅನುಕಂಪವೂ ಇದೆ; ಪ್ರೀತಿಯೂ ಇದೆ, ಆದರೆ ನೆಲೆ ಸಿಕ್ಕಿತೆಂದು ತಿಳಿದಿದ್ದ ಗೆಂಡೆತಿಮ್ಮ, ಸಾಮಾಜಿಕ ಅವಮಾನವನ್ನೂ ಕೂಡ ಸಹಿಸಲು ಸಿದ್ದನಾದಾಗ ನೆಲೆಯ (ಮರಂಕಿಯ) ಅಭದ್ರತೆಗೊತ್ತಾಗಿ ಸಾವನ್ನು ಸ್ವೀಕರಿಸುತ್ತಾನೆ. ಮರಂಕಿಗೆ ಕೊನೆಗೂ ಸಾವಿಗೆ ಕಾರಣವಾಗುವದು ಅನುಕಂಪ. ಗೆಂಡೆತಿಮ್ಮನ ಸಾವು ನ್ಯಾಯದವರು ಮಾಡುವ ಅವಮಾನವಾದ ಕೂಡಲೇ ಸಂಭವಿಸಿದ್ದರೆ ಮರಂಕಿ ಬದುಕಿ ಉಳಿಯುವ ಸಾಧ್ಯತೆಗಳು ಕಾದಂಬರಿಯಲ್ಲಿ ಇವೆ. ಆದರೆ ಶಿವಣ್ಣನೊಡನೆಯ ಅವಳ ಸಂಬಂಧ ಗೆಂಡೆತಿಮ್ಮನಿಗೆ ಗೊತ್ತಾಗಿ ಅದು ಅವನ ಸಾವಿನಲ್ಲಿ ಪರಿವರ್ತನೆಯಾದಾಗ ಅವನ ಬಗೆಗೆ ಅವಳಿಗಿರುವ ಅನುಕಂಪ ಅವಳನ್ನು ಸಾವಿಗೆ ಒಡ್ಡುತ್ತದೆ. ಅನುಕಂಪದ ಮೇಲೆ ಬೇರೂರಿರುವ ಇವರಿಬ್ಬರ ಈ ಸಂಬಂಧವೇ ಈ ಕಾದಂಬರಿಯನ್ನು ದಂತಕತೆಯು ಮಟ್ಟದಿಂದ ಮೇಲಕ್ಕೆತ್ತುತ್ತದೆ.

ಇಷ್ಟಾದರೂ ಈ ಸಂಬಂಧ ಕಾದಂಬರಿಯಲ್ಲಿ ಪೂರ್ಣವಾಗಿ ಮೂಡಿಬಂದಿಲ್ಲ. ಇದಕ್ಕೆ ಮುಖ್ಯವಾದ ಕಾರಣವೆಂದರೆ, ಮರಂಕಿ-ಗೆಂಡೆತಿಮ್ಮರ ದಾಂಪತ್ಯಕ್ಕೆ ಪೂರಕವಾಗಿ ಮೂಡಿ ಬಂದು ಅರ್ಥದ ಸಂಕೀರ್ಣ ಸೆಲೆಯೊಡಿಸುವುದರ ಕಡೆಗೆ ಕಾದಂಬರಿಕಾರರು ಅಲಕ್ಷ್ಯ ತೋರಿದ್ದು, ಕಾದಂಬರಿಯಲ್ಲಿ-ಗೌವಳ್ಳಿ ಗೌಡರು-ದೇವಿರಪ್ಪ: ಗೂಳನಾಯ್ಕ -ಅವನ ಹೆಂಡತಿ ; ಗೆಂಡೆತಿಮ್ಮನ ಅತ್ತೆ-ಮಾವ ; -ಹೀಗೆ ಸಾಕಷ್ಟು ದಂಪತಿಗಳು ಬರುತ್ತಾರೆ. ಆದರೆ ಅವರೊಬ್ಬರ ಜೀವನವೂ ಗೆಂಡೆತಿಮ್ಮನ ದಾಂಪತ್ಯ ಜೀವನಕ್ಕೆ ಹೋಲಿಕೆಗಾಗಲೀ ಅಥವಾ ಪೂರಕವಾಗಿಯಾಗಲೀ ಸಿಕ್ಕುವುದಿಲ್ಲ. ಈ ಕ್ರಿಯೆ ಕಾದಂಬರಿಯಲ್ಲಿ ಯಶಸ್ವಿಯಾಗಿ ನಡೆದುದಾಗಿದ್ದರೆ, ಗೆಂಡೆತಿಮ್ಮ ಹಾಗೂ ಮರಂಕಿಯ ಸಂಬಂಧವನ್ನು ವೀಕ್ಷಿಸಲು ಓದುಗನಿಗೆ ಕಾದಂಬರಿಯಲ್ಲಿ ದೃಷ್ಟಿಕೋನವನ್ನು ಒದಗಿಸಿದಂತಾಗುತಿತ್ತು, ಪ್ರಾಯಶಃ ಕಾದಂಬರಿಯಲ್ಲಿ ಈಗ ಮರಂಕಿಯ ಅನುಕಂಪಕ್ಕೆ ಬೇರೆ ಆಯಾಮಗಳು ಲಭಿಸದಿರುವುದಕ್ಕೆ ಇದೇ ಕಾರಣವಿರಬಹುದು.

ಮರಂಕಿಯ ಜೀವನ ಉತ್ಸಾಹಕ್ಕೆ ಅನುಗುಣವಾಗಿ ಹಾಗೂ ಅವಳ ದೈಹಿಕ ತೃಷೆ ತೃಪ್ತಿಗೊಂಡಾಗಲೆಲ್ಲ ಇಲ್ಲಿಯ ಪ್ರಕೃತಿ ಹಸಿರುಬ್ಬು ನಲಿಯುತ್ತದೆ. ಅದರಂತೆಯೇ ಗೌವಳ್ಳಿಯ ನ್ಯಾಯದಲ್ಲಿ ತನಗಾದ ಅವಮಾನವನ್ನು ಸಹಿಸಲಾಗದೇ ಮಧ್ಯರಾತ್ರಿಯಲ್ಲಿ ಮರಂಕಿಯ ಆಸರೆಯ ನೆಲೆಯನ್ನರಸಿ ಕಾಡನ್ನು ಸೇರುವ ಗೆಂಡೆತಿಮ್ಮಆ ಕ್ಷಣದಲ್ಲಿ ತನ್ನ ಆಂತರ‍್ಯದ ಗೊಂದಲಗೆಟ್ಟ ಕಾಡನ್ನೂ ಸೇರುತ್ತಾನೆ. ಅನಾಯಾಸವಾಗಿ ಹೀಗೆ ಕೆಲಾಕಾರನ ಸುಪ್ತ ಚೇತನದ ಆಳದಿಂದಲೇ ಇದು ಪ್ರತಿಮೆಯಾಗಿ ಹೊರಹೊಮ್ಮುವುದರಿಂದ, ಕಾಡಿನಲ್ಲಿ ಗೆಂಡೆತಿಮ್ಮ ಬಿದಿರಿನ ಮಳೆ ಹೊತ್ತು ಬರುವ ಗಾಡಿಯನ್ನು ಆನೆ ಎಂದು ಭ್ರಮಿಸಿ ಗಿಡ ವೇರಿ ಮೈತುಂಬ ಮುಳ್ಳು ಚುಚ್ಚಿಕೊಳ್ಳುವುದಕ್ಕೆ ಕಾದಂಬರಿಯ ಸಂವರ್ಭದಲ್ಲಿ ವಿಶಿಷ್ಟ ಅರ್ಥಗಳು ಲಭಿಸುತ್ತವೆ. ಈ ಸಂದರ್ಭಯಲ್ಲಿ ಗೆಂಡೆತಿಮ್ಮ ತನಗೆ ಹೇಳಿಕೊಳ್ಳುವ ಮಾತುಗಳು (‘ಇವನಪ್ಪಂದು………….ಬ್ಯಾಲದ ಮುಳ್ಳು ಯಂಗಿರಾತ್ಬುಟ್ಟಿದೆ.) ಅವನು ಆತ್ಮಹತ್ಯೆಯ ಯೋಚನೆಯನ್ನು ಮಾಡುತ್ತಿದ್ದಾನೆ ಎಂಬ ಸುಳಿವು ಕೊಡದಿದ್ದರೂ, ಅವನು ಆ ಮಧ್ಯರಾತ್ರಿಯಲ್ಲಿ ಹೊಕ್ಕ ಕಗ್ಗಾಡು ಮುಂದೆ ಕಾದಿರುವ ದುರಂತವನ್ನು ಸೂಕ್ಷ್ಮವಾಗಿ ಧ್ವನಿಸುತ್ತದೆ. ಹೀಗಾಗಿ ಮರಂಕಿ ಹಾಗೂ ಗೆಂಡೆತಿಮ್ಮರ ಸಾವಿಗೆ ವಾತಾವರಣ ಕಾದಂಬರಿಯ ಪ್ರಾರಂಭದಿಂದಲೂ ರೂಪುಗೊಂಡಿಲ್ಲವೆನ್ನಿಸಿದರೂ, ಈ ಕಗ್ಗಾಡಿನ ಅನಾಯಾಸ ಸಂಕೇತ, ದುರಂತ ಛಾಯೆಯನ್ನು ಸಾವಿಗೆ ಮೊದಲೇ ತೆರೆದು ತೋರಿಸುತ್ತದೆ. ನೀಚ ಶಕ್ತಿಯ ಗೈರು ಹಾಜರಿಯಲ್ಲಿಯೇ ಗೆಂಡೆತಿಮ್ಮನ ದುರಂತ ಸಂಭವಿಸುವುದ ‘ರಿಂದ, ಗೂಳನಾಯ್ಕನೂ ದುರಂತ ವ್ಯಕ್ತಿಯೇ ಆಗುತ್ತಾನೆ. ಎಲ್ಲದಕ್ಕೂ ಸಾಕ್ಷಿಭೂತವಾಗಿ ನಿಂತ ಅವನು, ತಮ್ಮನ ಕೆಡುಕನ್ನು ಬಯಸದಿದ್ದರೂ ತನ್ನ ಜಡ್ಡುಗಟ್ಟಿದ ಸಂಪ್ರದಾಯದಿಂದ ಹೊರಬರಲಾರದೆ ನಿಸ್ಸಹಾಯಕನಾಗಿದ್ದಾನೆ.

ಒಂದು ಕೇಂದ್ರ ಪ್ರಜ್ಞೆಯ ಸುತ್ತವೇ ಬೆಳೆಯುವ ಶೃತಿ ಅತ್ಯುತ್ತಮ ಮಟ್ಟದ್ದಾಗಿರುವ ಸಾಧ್ಯತೆ ಇದೆ ಎಂಬ ನಂಬಿಕೆ ನಮ್ಮಲ್ಲಿ ಪ್ರಬಲವಾಗಿ ಬೇರೂರಿದೆ. ಆದರೆ, ಈ ನಂಬಿಕೆಗೆ ಕಾರಣಗಳು ಎರಡು: ಮೊದಲನೆಯದಾಗಿ ಈ ನಂಬಿಕೆಯಿಂದಲೇ ಹುಟ್ಟಿಕೊಂಡಿರುವ ಶೃತಿಗಳು ಹಾಗೂ ಅವುಗಳ ಆಧಾರದ ಮೇಲೆಯೇ ನಿರ್ಮಾಣಗೊಂಡಿರುವ ವಿಮರ್ಶೆಯ ಸೂತ್ರಗಳು. ಎರಡನೆಯದಾಗಿ ಬ್ರಿಟಿಷ್ ಸಾಹಿತ್ಯದ ಗಾಢವಾದ ಪ್ರಭಾವ, ಈ ಮೊದಲೇ ಬೇರೆ ಒಂದು ಸಂದರ್ಭದಲ್ಲಿ ಹೇಳಿದ ಮಾತನ್ನೇ ಇಲ್ಲಿ ಪುನರುಚ್ಚರಿಸಬಯಸುತ್ತೇನೆ, ಒಂದು ಭಾಷೆಯ ಶ್ರೇಷ್ಠ ಕೃತಿಗಳು ವಿಮರ್ಶಾ ಸೂತ್ರಗಳನ್ನು ನಿರ್ಧರಿಸಬೇಕೆ ಹೊರತು, ಬೇರೆ ಭಾಷೆಯ ಶ್ರೇಷ್ಠ ಕೃತಿಗಳಿಂದ ಬಂದ ವಿಮರ್ಶಾ ಮೌಲ್ಯಗಳು ನಮಗೆ ಕೇವಲ ಹೈಪೋಥೆಸಿಸ್ (hypothesis) ಮಾತ್ರ ಆಗಲು ಸಾಧ್ಯ. ಇದು ನನ್ನ ದೃಡವಾದ ನಂಬಿಕೆ, ಚೀನಾ, ಜಪಾನ ಮುಂತಾದ ದೇಶಗಳ ಸಾಹಿತ್ಯವನ್ನು ಓದಿದಾಗ ಅಲ್ಲಿಯ ಸಾಹಿತ್ಯದ ಹಿಂದಿರುವ ಪ್ರಜ್ಞೆ ಬ್ರಿಟಿಷ್ ಪ್ರಜ್ಞೆಗಿಂತ ತೀರಾ ಭಿನ್ನವಾದುದು ಮತ್ತು ನಮ್ಮ ಪ್ರಜ್ಞೆಗೆ ಸಮೀಪವಾದುದು ಎಂದು ನನಗನ್ನಿಸಿದೆ, ಸರಳತೆಯ ಮೂಲಕ ಗಾಢವಾದದ್ದನ್ನು ಧ್ವನಿಸುವ, ನಿರ್ಮಿಸುವ ಕಲೆ ವೈಚಾರಿಕ ಮೂಲದಿಂದ ಕಟ್ಟಲ್ಪಟ್ಟದ್ದಾಗಿರದೇ, ಇನ್ನೂ ಸುಪ್ತಚೇತನದಿಂದ ಹೊಮ್ಮುವ spontaneous ಕಲೆ ಯಾಗಿದೆ ಎನ್ನಿಸುತ್ತದೆ. ಈ ದೃಷ್ಟಿಯಿಂದ ನೋಡಿದಾಗ, ತೇಜಸ್ವಿ, ಆಲನಹಳ್ಳಿ ಹಾಗೂ ದೇವನೂರ ಮಹಾದೇವ, ಇಂಥ ಒಂದು ಕಲೆಗಾರಿಕೆಯನ್ನು ಪ್ರಥಮ ಸಲವಾಗಿ ಬ್ರಿಟಿಷ್ ಸಂಪ್ರದಾಯದಿಂದ ಬಿಡಿಸಿಕೊಂಡು ರೂಢಿಸಿಕೊಳ್ಳುತ್ತಿದ್ದಾರೆನ್ನಿಸುತ್ತದೆ. ಇಂಥ ಒಂದು ಪ್ರಯತ್ನದ ಸಾಹಸವಾಗಿ ಹೊರ ಬಂದ ‘ಪರಸಂಗದ ಗೆಂಡೆತಿಮ್ಮ’, ಸದ್ಯದ ಕನ್ನಡ ಸಾಹಿತ್ಯಕ್ಕೆ ಹೊಸ ತಿರುವು ಕೊಡಬಲ್ಲ ಸಮರ್ಥ ಕೃತಿಯಾಗಿದೆ. ಏಕೆಂದರೆ, ನಮ್ಮ ಹೆಚ್ಚಿನ ಲೇಖಕರು ಗ್ರಾಮ್ಯಮೂಲದವರಾಗಿದ್ದರೂ, ಇಷ್ಟು ದಿನ ಕತೆ ಹೇಳುವುದರಲ್ಲಿಯೇ ಇರುವ ಶಕ್ತಿ ಮತ್ತು ಅನಂತ ಅವಕಾಶಗಳನ್ನು ‘ಕಲಿಯುವಿಕೆಯ’ ಮೂಲಕ ಮರೆತಂತೆ ಕಾಣುತ್ತದೆ. ‘ಪರಸಂಗದ ಗೆಂಡೆತಿಮ್ಮ’ ಇಂಥ ಒಂದು ಮೂಲ ನೆಲೆಯನ್ನು ಹುಡುಕುವ ಪ್ರಯತ್ನವಾಗಿರುವುದರಿಂದ, ಹೊಸ ಬರಹಗಾರರಿಗೆ ಹಾಗೆಯೇ ಶ್ರೀಕೃಷ್ಣ ಆಲನಹಳ್ಳಿಯವರಿಗೆ ಮುಂದಿನ ದಾರಿಯನ್ನು, ಮುಖ್ಯವಾಗಿ ಓದುಗ ಹಾಗೂ ಸಾಹಿತ್ಯದ ನಡುವಿನ ಕಂದರವನ್ನು ಕಡಿಮೆ ಮಾಡುವ ಮಾಯಾ ದಿವ್ಯವನ್ನು ತೆರೆದು ತೋರಿಸಬಹುದು. ಕಳೆದು ಹೋದ ಜೀವನದ ಕಂಪಿಗೆ ತಮ್ಮ ಕಾದಂಬರಿಗಳಲ್ಲಿ ತವಕಿಸುವ ಕುವೆಂಪು ಒಂದು ಕಡೆ ಹಾಗೂ ವೈಚಾರಿಕತೆಯನ್ನು ಕಾದಂಬರಿಯ ಮೂಲಕ ಮೂರ್ತಗೊಳಿಸಲೆತ್ನಿಸುತ್ತಿರುವ ಅನಂತಮೂರ್ತಿ ಇನ್ನೊಂದು ಕಡೆ ಇರುವಾಗಲೂ ಶ್ರೀಕೃಷ್ಣ ಆಲನಹಳ್ಳಿ ಇವೆರಡರ ಮಧ್ಯದ ಸೂಕ್ಷ್ಮ ದಾರಿಯನ್ನು ತುಳಿಯುತ್ತಿರುವುದರಿಂದ, ಈ ಲೇಖಕನಿಂದ ಕನ್ನಡ ಸಾಹಿತ್ಯ ಬಹಳಷ್ಟು ನಿರೀಕ್ಷಿಸಬಹುದು.

Close

ನವ್ಯ ಸಾಹಿತ್ಯ ಒಂದು ಹಿನ್ನೋಟ

ನವ್ಯ ಸಾಹಿತ್ಯ – ಒಂದು ಹಿನ್ನೋಟ

-ಎಸ್‌ ಶಿವಾನಂದ

ನವೋದಯ ಕಾಲದ ಲೇಖಕರು ಸಾಮಾಜಿಕ ಸಾಂಸ್ಕೃತಿಕ ಸಂಬಂಧಗಳನ್ನೊಳಗೊಂಡ ಹಳೆಯ ವ್ಯವಸ್ಥೆಯನ್ನು ಭಾವನಾತ್ಮಕವಾಗಿ ಶ್ರದ್ಧೆಯಿಂದ ಒಪ್ಪಿಕೊಂಡಿದ್ದರಿಂದ ಮೌಲ್ಯಗಳನ್ನು ಪ್ರಶ್ನಿಸುವ ಗೋಜು ಇವರಿಗಿರಲಿಲ್ಲ. ಗೋಪಾಲಕೃಷ್ಣ ಅಡಿಗರು ಹಳೆಯ ಮೌಲ್ಯಗಳನ್ನು ವೈಜಾರಿಕ ನೆಲಗಟ್ಟಿನ ಮೂಲಕ ಅಳೆದು ನೋಡಿ ಆರ್ಷೇಯತೆಯನ್ನು ತಮ್ಮ ಸಂವೇದನೆಯನ್ನಾಗಿಸಿಕೊಂಡರು. ನಂಬಿಕೆಗಳನ್ನು ಕೆದರಿ ನೋಡುವ, ಪ್ರಶ್ನಿಸುವ ಪ್ರವೃತ್ತಿ ಅಡಿಗೋತ್ತರ ಲೇಖಕರಲ್ಲಿ ವ್ಯವಸ್ಥೆಯ ಬುನಾದಿಗಳನ್ನೆ ಬುಡಮೇಲು ಮಾಡಿ, ಹಳೆಯ ಮೌಲ್ಯಗಳು ಸಂಪೂರ್ಣ ಅರ್ಥಹೀನಗೊಂಡವು. ಇಲ್ಲಿನ ಭಿನ್ನತೆ ಹಾಗೂ ವೈಚಾರಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟು ಕೊಳ್ಳಬೇಕು. ಅಂದರೆ, ಅಡಿಗರು ಮತ್ತು ನಂತರದವರು ತಾತ್ವಿಕವಾಗಿ ಭಿನ್ನರಾಗಿ ಕಂಡರೂ, ನವೋದಯ ಲೇಖಕರಿಂದ ಭಿನ್ನವಾಗುವಲ್ಲಿ ಒಂದಾಗುತ್ತಾರೆ.

ಅಡಿಗರು ಹಳೆಯ ವ್ಯವಸ್ಥೆಯ ವಿರುದ್ಧ ಬಂಡೇಳಲಿಲ್ಲ; ಅವರದು ಅನ್ವೇಷಣೆಯ ಪ್ರವೃತ್ತಿ; ಹಳೆಯ ಮೌಲ್ಯಗಳನ್ನು ಕಾಸಿ, ಸೋಸಿ, ತಮ್ಮ ಇಷ್ಟಕ್ಕೊಳ್ಳುವ ಅಪರಂಜಿ ಚಿನ್ನವನ್ನು ಸ್ವೀಕರಿಸುವಿಕೆ’: “ಮೂಲ ಕತ್ತಲಿನಲ್ಲಿ ಮುಳುಗಿ ಹೋಗುತ್ತಿರುವ ಪರಂಪರಾಗತ ತಿಳಿವನೆತ್ತುವಿಕೆ ; ‘ಬೇರ ಬಗೆವ’, ‘ಕಳೆದದ್ದನ್ನು ಪಡೆವ’, ‘ತನ್ನ ತಾನೇ ತಿಕ್ಕಿ ತಿಕ್ಕಿ’, ‘ಸಾಕ್ಷಾತ್ಕಾರಗೊಳ್ಳಬಹುದಾದ್ದರ’ ಕಡೆಗೆ ಪ್ರಯಾಣ. ಇವರ ಅನ್ವೇಷಣೆ ಹಳೆಯ ಮೌಲ್ಯಗಳನ್ನು ವಿರೋಧಿಸುತ್ತ ಆರಂಭವಾಗಿ, ದೂರ ಹೋದಂತೆಲ್ಲ ಒಳ ಗೊಳಕ್ಕೇ ಹತ್ತಿರವಾಗುತ್ತೆ, ಎಲ್ಲಿಂದ ಹೊರಟಿದ್ದರೋ ಅಲ್ಲಿಗೇ ಬಂದು ತಲುಪಿದ್ದಾರೆ ಎಂದೆನಿಸುತ್ತದೆ. ಅಂದರೆ, ಪ್ರಾರಂಭದಲ್ಲಿ ಬಂಡಾಯಗಾರರಂತೆ ಕಂಡರೂ, ಅಡಿಗರದು ಮೂಲತಃ ಬಂಡಾಯ ಪ್ರವೃತ್ತಿಯಲ್ಲ. ‘ಕಟ್ಟುವವು ನಾವು’ ಕವನದಿಂದ ಇವರ ಅನ್ವೇಷಣೆ ಪ್ರಾರಂಭವಾಗಿ ‘ಅಜ್ಜ ನೆಟ್ಟಾಲ’ ದಿಂದೀಚಿನ ಕವನಗಳಲ್ಲಿ ಹಳೆಯ ಮೌಲ್ಯಗಳನ್ನು ಅನುಭವದ ಶೋಧನೆಯ ಮೂಲಕ ಧನಾತ್ಮಕವಾಗಿ ಒಪ್ಪಿಕೊಳ್ಳುವ ಸ್ಥಿತಿಯನ್ನು ಮುಟ್ಟಿದ್ದಾರೆ; ಹೀಗಾಗಿ, ಆಧ್ಯಾತ್ಮಿಕ ಆಯಾಮ ಇವರ ಕಾವ್ಯದಲ್ಲಿ ಅವಿಭಾಜ್ಯವಾಗಿ ಅವಿತುಕೊಂಡಿರುತ್ತದೆ; ಆಳದಲ್ಲಿ ಅನುಭಾವ ಕಾವ್ಯಕ್ಕೆ ತೀರ ಹತ್ತಿರದಲ್ಲಿರುತ್ತದೆ. ಆದರೆ ನವ್ಯರು ಈ ದೃಷ್ಟಿಯಲ್ಲಿ ಅನ್ವೇಷಕರಲ್ಲ. ಅಡಿಗರು ತಮ್ಮ ವೈಚಾರಿಕತೆಯನ್ನು ಹಳೆಯ ಮೌಲ್ಯಗಳನ್ನು ಶೋಧಿಸಲು ತೊಡಗಿಸಿಕೊಂಡರೆ, ನವ್ಯರು ಹಳೆಯ ವ್ಯವಸ್ಥೆಯನ್ನು ತಿರಸ್ಕರಿಸಿದ್ದರಿಂದ ಸಾಮಾಜಿಕ ಸಂಬಂಧಗಳನ್ನು ಕಡಿದುಕೊಂಡು ಸಾಂಸ್ಕೃತಿಕವಾಗಿ ಮೌಲ್ಯಗಳಿಲ್ಲದ ನಿರ್ವಾಣ ಸ್ಥಳದಲ್ಲಿ ನಿಂತುಕೊಂಡಿದ್ದರಿಂದ ಅಂತರ್ಮುಖಿಗಳಾದರು; ಹೀಗಾಗಿ ದ್ವಂದ್ವ, ಸಂಕೀರ್ಣತೆ ಇವರ ಮುಖ್ಯ ಧೋರಣೆಗಳಾದವು-ಕಾರಣ, ಇವರ ವೈಚಾರಿಕ ನಿಲುವಿನಿಂದಾಗಿ, ರಮ್ಯ ಸಂಪ್ರದಾಯ (‘ಭಾವ ತರಂಗ’)ದಲ್ಲಿ ಬೇರಿಳಿಸಿ ಪ್ರಾರಂಭವಾದ ಅಡಿಗರ ಕಾವ್ಯಕ್ಕೆ ವೈಜಾರಿಕತೆಯ ಸನ್ನೆಗೋಲು ಸಿಕ್ಕಿದ್ದರಿಂದ ರಮ್ಯತೆಯಿಂದ ಬಿಡಿಸಿಕೊಂಡು ಹೊರಬಂದರೂ, ಹೊರ ಜಗತ್ತು ಗೊಂದಲಪುರವಾಗಿ, ಶವದ ಪೆಟ್ಟಿಗೆಯಾಗಿ ಕಂಡು ಅಂತರ್ಮುಖಿಯಾಗಿ ತನ್ನ ಆತ್ಮವನ್ನು ಹಸನು ಮಾಡಿಕೊಳ್ಳಲು ತೊಡಗಿತು. ಅಂದರೆ, ಅಡಿಗರ ಅಂತರ್ಮುಖತೆ ಬೆಳೆದದ್ದು (೧) ರಮ್ಯ ಸಂಪ್ರದಾಯದ ಭಾವುಕ ಪ್ರವೃತ್ತಿಯಿಂದಾಗಿ, (೨) ವೈಚಾರಿಕ ಅನ್ವೇಷಣೆಯಿಂದಾಗಿ (ಅನುಭವ ಶೋಧನೆಯಿಂದಾಗಿ).

“ಸಾವಯವ ಶಿಲ್ಪದ ಸಮಗ್ರೀಕರಣ’-ಕಾವ್ಯಸೃಷ್ಟಿಯ ಮುಖ್ಯ ಕಾಳಜಿ, ಅಡಿಗ-ನವ್ಯರಲ್ಲಿ. ಇದು ಕಾವ್ಯಕ್ರಿಯೆಯೊಳಗಿನ ಮತ್ತು ಅಭಿವ್ಯಕ್ತಿಯಲ್ಲಿನ ಒಂದು ತಾಂತ್ರಿಕ ವ್ಯವಸ್ಥೆಯತ್ತ ಗಮನ ಹಿಡಿದಿಟ್ಟಿತು. ಈ ತಾಂತ್ರಿಕ ಅಚ್ಚುಕಟ್ಟು ಕಾವ್ಯದಲ್ಲಿ ಸಂಕ್ಷಿಪ್ತತೆ ಸಾಂಕೇತಿಕತೆ ಮುಖ್ಯವಾಗಲು ಕಾರಣವಾಯಿತು. ಆದ್ದರಿಂದ ಮಾಧ್ಯಮದ ಮೇಲೆ ಹೆಚ್ಚು ಜವಾಬ್ದಾರಿ. ಈ ಅಚ್ಚುಕಟ್ಟು ನವ್ಯರಿಗೆ ಒಂದು ಶಿಸ್ತನ್ನು ಕೊಟ್ಟರೂ ಹೊರ ಬದುಕಿನ ಸ್ಪರ್ಶವನ್ನೊಳಗೊಳ್ಳದ ಮಡಿವಂತಿಕೆಯನ್ನು ಬೆಳೆಸಿತು. ಅಂತರ್ಮುಖ ವ್ಯಕ್ತಿತ್ವ ಬೆಳೆದಂತೆಲ್ಲ ‘ಪ್ರಜ್ಞೆ’ಯ ಸ್ತರಕ್ಕೆ ಸಹಜವಾಗಿ ಒತ್ತು ಬಿದ್ದಿತು. ಪ್ರಜ್ಞೆಯ ಸ್ತರದಲ್ಲಿನ ದ್ವಂದ್ವ, ಸಂಕೀರ್ಣತೆಗಳನ್ನು ವೈಚಾರಿಕ ನೆಲಗಟ್ಟಿನಲ್ಲಿ ನಿಂತು ದಾಖಲುಗೊಳಿಸುತ್ತಾ ಹೋಗುವಲ್ಲಿ ಭಾಷೆಯ ಕ್ರಿಯಾತ್ಮಕತೆಯ ಕಡೆ ಹೆಚ್ಚು ಒತ್ತು ಬಿದ್ದಿತು. ಅಂದರೆ, ಪ್ರಜ್ಞೆಗೆ ಹೆಚ್ಚು ಮಹತ್ವ ಕೊಟ್ಟಿದ್ದರಿಂದ ಗುಹ್ಯಾತ್ ಗುಹ್ಯತರ ಸೂಕ್ಷ್ಮ ಭಾವನೆ-ವಿಚಾರಗಳನ್ನು ಹಿಡಿದಿಡುವ ಮಾಧ್ಯಮದ ಮೇಲೆ ಜವಾಬ್ದಾರಿ ಹೆಚ್ಚಿತು; ಮತ್ತು ಪ್ರಜ್ಞೆಯಲ್ಲಿನ ಸೂಕ್ಷ್ಮ ಭಾವನೆಗಳನ್ನು ಅಭಿವ್ಯಕ್ತಿಸಲು ಸಾಂಕೇತಿಕತೆ ಹಾಗೂ ವಸ್ತುಪ್ರತಿರೂಪ ತಂತ್ರಗಳ ಮೂಲಕ ಸಾಧ್ಯವಾಯಿತು. ಜೀವನದ ವಾಸ್ತವ್ಯದ ವಾಸ್ತವ ಚಿತ್ರಣ ಕೊಡುವುದರಿಂದ ಫೋಟೋಗ್ರಾಫಿಕ್ ನೈಜತೆ ಹಾಗೂ ವಾಚ್ಯತೆ ಹೆಚ್ಚಾಗುತ್ತವೆಂಬ ಭಯದಿಂದಾಗಿ ಸಾಂಕೇತಿಕತೆಗೆ ಪ್ರಾಧಾನ್ಯ ದೊರೆಯಿತು. ಹೀಗಾಗಿ ನವ್ಯರಲ್ಲಿ ಮಾಧ್ಯಮದ ಕಲೆಗಾರಿಕೆ ಮುಖ್ಯವಾಗುತ್ತದೆ. ಏನನ್ನು ಹೇಳಬೇಕು ಎನ್ನುವುದಕ್ಕಿಂತ ಹೆಂಗೆಲ್ಲಾ ಹೇಳಬೇಕು ಎನ್ನುವುದರ ಕಡೆ ಹೆಚ್ಚು ನಿಗಾ ; ಹಾಗು, ತಮ್ಮ ಕಲೆಗಾರಿಕೆಯ ಮೂಲಕ ಪ್ರಜ್ಞೆಯ ಕಸರತ್ತುಗಳನ್ನು ಪ್ರದರ್ಶಿಸಲು ಸಾಹಿತ್ಯ ಮಾಧ್ಯಮವಾಯಿತು. ರಾಮಚಂದ್ರಶರ್ಮ, ರಾಮಾನುಜನ್, ಆರ್ಯರನ್ನು ಮುಖ್ಯವಾಗಿ ಉದಾಹರಿಸಬಹುದು.

ನವೋದಯ ಕಾಲದಲ್ಲಿ ಗ್ರಾಂಥಿಕವಾಗಿದ್ದ, ಸಂಸ್ಕೃತ ಭೂಯಿಷ್ಠವಾಗಿದ್ದ ಕಾವ್ಯ ಭಾಷೆ (Poetic Diction) ಯಿಂದ ಬಿಡಿಸಿಕೊಳ್ಳಲು ನವ್ಯಕಾವ್ಯ ‘ಮಣ್ಣಿನ ವಾಸನೆ’ ಯ ಭಾಷೆಯ ಮೂಲಕ ಪುನಶ್ಚೇತನಗೊಳಿಸಿ ಸೃಷ್ಟಾತ್ಮಕವಾದ ಆಡುಮಾತಿನ ಲಯಕ್ಕೆ ಹತ್ತಿರವಾಯಿತು. ನವೋದಯದವರೂ ‘ಅಂತರ್ಮುಖಿ’ಗಳು; ಆದರೆ ಇವರಲ್ಲಿ ಭಾವನಾಸ್ತರಕ್ಕೆ ಹೆಚ್ಚು ಒತ್ತು ಬಿದ್ದಿದ್ದರಿಂದ ಭಾವನೆಗಳನ್ನು ಹಿಡಿದಿಡಬಲ್ಲ ನಾದ -ಗೇಯತೆಗಳ ಮೂಲಕ ಮಾಧ್ಯಮ ಕಂಡುಕೊಂಡದ್ದರಿಂದ, ವೈಚಾರಿಕತೆಯನ್ನೊಳ ಗೊಳ್ಳದ ಗೇಯತೆಯಿಂದಾಗಿ ಭಾಷೆ ಭಾವುಕವಾಯಿತು. ಹೀಗಾಗಿ ಮಾಧ್ಯಮದ ಬಿಕ್ಕಟ್ಟಿನ ಸಮಸ್ಯೆ ನವೋದಯದವರಿಗೆ ಹೊರಗುಳಿಯಿತು. ಬೇಂದ್ರೆಯವರು ಭಾವೋದ್ರಿಕ್ತರಾದಂತೆಲ್ಲ ಪದಗಳ ಶಬ್ದಗಳ ಜೋಡಣೆಯಲ್ಲಿನ ನಾದ ಲೀಲೆಯಾಗಿ ಮ್ಯಾಜಿಕ್ಕಾಗಿ ಭಾಷೆ ಕುಣಿಯುತ್ತದೆ. ಕುವೆಂಪುರವರ ಕವನಗಳೂ ಭಾವುಕ ವ್ಯಕ್ತಿತ್ವದ ಅಭಿವ್ಯಕ್ತಿಗಳು, ಸರಳ, ಭಾವುಕ ಭಾವನೆಗಳಿಗೆ ವೈಭವದ ಆಡಂಬರದ ಭಾಷೆ ತೊಡಿಸುವುದರಿಂದ ಕೃತಕವಾಗಿ ಕಾಣುತ್ತದೆ. ಅವರು ತಮ್ಮ ಮಹಾ ಹಾಗೂ ಖಂಡ ಕಾವ್ಯಗಳಲ್ಲಿ ನಮ್ಮ ಪೂರ್ವಜರೊಡನೆ ಮಾತಾಡುತ್ತಿರುವಂತೆ ಭಾಸವಾಗಿ ನಮಗೆ ಬಹುದೂರವಾಗಿ ಕಾಣಿಸುತ್ತಾರೆ. ಹಿಂದಿನವರ ಕೃತಕ ಎನ್ನಬಹುದಾದ, ಸಂಸ್ಕೃತ ಭೂಯಿಷ್ಠವಾದ ಭಾಷೆ ಹಾಗೂ ನವ್ಯರ ದಟ್ಟ ಕ್ಲಿಷ್ಟ ಸಾಂಕೇತಿಕ ಭಾಷೆ-ಈ ಎರಡೂ ಓದುಗನನ್ನು ಅಪ್ಪಿಕೊಳ್ಳಲು ಸಾಧ್ಯವಾಗದೆ ಅಸ್ಪಷ್ಟವಾಗಿ ಉಳಿದಿವೆ. ಜನಕ್ಕೆ ಅರ್ಥವಾಗಬೇಕೆನ್ನುವ ಹಾಗು ಸಮಷ್ಟಿಗಾಗಿ ಬರೆಯಬೇಕೆನ್ನುವ ಉದ್ದೇಶವಿಲ್ಲದ್ದಕ್ಕೆ ಈ ಕೃತಕತೆ, ಕ್ಲಿಷ್ಟತೆಗಳು ಸೃಷ್ಟಿಯಾಗಿವೆ. ಸಾಹಿತ್ಯ ಭಾವನಾಜೀವಿಗಳಿಗೆ ಮಾತ್ರ ಎಂಬ ಭಾವನೆ ಹಿಂದೆ ಬೆಳೆದುಕೊಂಡಂತೆಯೇ ಸಾಹಿತ್ಯ ಬುದ್ದಿಜೀವಿಗಳಿಗೆ ಮೀಸಲು ಎಂಬ ಭಾವನೆ ಈಗ ಬೆಳೆದುಕೊಂಡಿದೆ. ಕ್ಲಿಷ್ಟತೆಯನ್ನ ಸೃಷ್ಟ್ಯಾತ್ಮಕ ಎಂದುಕೊಂಡದ್ದರಿಂದ ನವ್ಯಕಾವ್ಯ ಜನ ಸಂಪರ್ಕ ಕಡಿದುಕೊಂಡು ಬುದ್ದಿವಂತ ವರ್ಗಕ್ಕಾಗಿ ನಿರ್ಮಾಣವಾಗುತ್ತಾ ಹೋಯಿತು. ಓದುಗ ಇವರ ಸಾಂಕೇತಿಕ ತಾಂತ್ರಿಕ ಚಮತ್ಕಾರಗಳ ಮಧ್ಯೆ ಸಿಕ್ಕು ಗೊಂದಲಗೆಡುತ್ತಾನೆ. ನವ್ಯ ಸಾಹಿತ್ಯವನ್ನು ಒಟ್ಟಾಗಿ ಎಷ್ಟು ಜನ ಓದುತ್ತಾರೆ ಎಂಬ ಪ್ರಶ್ನೆಗೆ ಎಷ್ಟು ಜನ ನವ್ಯ ಸಾಹಿತ್ಯ ಬರೆಯುತ್ತಾರೋ ಅಷ್ಟು ಜನ ಎಂದು ಉತ್ತರಿಸಬಹುದು.

ನವೋದಯದವರ ನಂಬುಗೆ, ಪೂಜ್ಯಭಾವನೆಗಳ ವಿರುದ್ಧ ಬಂಡೇಳುವುದು ನವ್ಯರ ಮೊದಲ ಕೆಲಸವಾಯಿತು; ಅಂದರೆ, ಹಳೆಯ ಮೌಲ್ಯಗಳಿಗೆ ಸಾಣೆ ಕೊಡುವುದು ಮುಖ್ಯವಾಯಿತು. ಈ ಐಕನೆಕ್ಲಾಸ್ಟ್ ಮನೋಧರ್ಮ ಇವರನ್ನು ಸಂಸ್ಕೃತಿಯ ಬೇರುಗಳಿಂದ ಬೇರ್ಪಡಿಸಿತು, ಹಾಗು ಶಾಮದ ಬಗ್ಗೆ ಮಿತಿಮೀರಿ ಬರೆಯಲು ಪುಟ ಕೊಟ್ಟಿತು. ನವೋದಯದವರು ಮುಚ್ಚಿ ಹೇಳಿದ್ದನ್ನು ನವ್ಯರು ಬಿಚ್ಚಿ ಹೇಳುವುದರಲ್ಲಿಯೇ ಸಂತೃಪ್ತರಾದರು. ಹೆಣ್ಣಿನ ಸಾಮಾಜಿಕ ಆರ್ಥಿಕ ವ್ಯಕ್ತಿತ್ವಗಳಿಗಿಂತ ಮುಖ್ಯವಾಗಿ ಆಕೆ ತನ್ನ ಕಾಮದ ಅಭಿವ್ಯಕ್ತಿಗೆ ಒಂದು ‘ವಸ್ತು’ವಾದಳು ಸಂಕೇತವಾದಳು.

ನವ್ಯರು ಅಂತರ್ಮುಖತೆಯ ಒಳತೋಟಿಯಲ್ಲಿ ಅವಿತುಕೊಳ್ಳಲು ವಚನ ಸಾಹಿತ್ಯದ ಅಭ್ಯಾಸವೂ ಪುಟಕೊಟ್ಟಿದೆ. ಆದರೆ ಅಂತರಂಗದ ಹೊಯ್ದಾಟವಿರುವ ಹಾಗು ಸಾಂಕೇತಿಕತೆ ಪ್ರತಿಮಾ ವಿಧಾನಗಳಿರುವ ವಚನಗಳ ಅಭ್ಯಾಸ ಮತ್ತು ಪ್ರಭಾವ ಹೆಚ್ಚಿದಂತೆಯೆ, ವಚನಕಾರರು ಸಮಾಜ ಕಂಡು ಬರೆದ ವಚನಗಳು ಯಾಕೆ ನವ್ಯರು ಗಮನ ಹರಿಸಲಿಲ್ಲ ?

ವಿಮರ್ಶೆ ಸಾಮಾನ್ಯ ಜನತೆಗಾಗಿಯೂ ಸೃಷ್ಟಿಯಾಗಬೇಕಾದ್ದು; ಕೇವಲ ಬುದ್ಧಿವಂತರಿಗಾಗಿಯೇ ಹುಟ್ಟಿಕೊಂಡದ್ದು ನವ್ಯ ವಿಮರ್ಶೆಯ ಒಂದು ದೌರ್ಬಲ್ಯ. ಕೃತಿಯ ಕಲಾನಿಪುಣತೆಗೆ, ಮಾಧ್ಯಮದ ಚೊಕ್ಕತನಕ್ಕೆ ಅತೀವ ಮಹತ್ವ ಕೊಡುವ ನವ್ಯ ವಿಮರ್ಶಕರೂ ಸಾಹಿತ್ಯ ಜನಸಂಪರ್ಕ ಕಡಿದುಕೊಂಡು ದೂರ ಉಳಿಯಲು ಮತ್ತಷ್ಟು ನೆರವಾಯಿತು. ಪಾಶ್ಚಾತ್ಯ ಲೇಖಕರ ವೈಚಾರಿಕ ಪ್ರಭಾವ ನಮ್ಮ ಲೇಖಕರ ಮೇಲಾದಂತೆಯೆ, ತಾಂತ್ರಿಕ ಅಭಿವ್ಯಕ್ತಿಗೆ ಹೆಚ್ಚು ಮಹತ್ವ ಕೊಡುವ ಎಲಿಯಟ್, ಲಿವಿಸ್‌, ರಿಚರ್ಡ್ಸ್, ಎಂಪ್ಸನ್ ಮುಂತಾದವರ ದಟ್ಟ ಪ್ರಭಾವವನ್ನು ನಮ್ಮ ವಿಮರ್ಶಕರಲ್ಲಿ ಕಾಣಬಹುದಾಗಿದೆ. ಸಾಮಾಜಿಕ ಒರೆಗಲ್ಲಿನಿಂದ ಸಾಹಿತ್ಯವನ್ನು ನೋಡುವ ಕಾಲ್ಡ್‌ವೇಲ್, ಜೆ.ಎಸ್. ಫ್ರೆಸ್‌ರ್‌, ಟ್ರಿಲ್ಲ್‌ಂಗ್ ಮುಂತಾದವರ ಪ್ರಭಾವ ನಮ್ಮ ವಿಮರ್ಶಕರ ಮೇಲೆ ಯಾಕಾಗಲಿಲ್ಲ ಎಂಬ ಪ್ರಶ್ನೆಯೂ ಹುಟ್ಟುತ್ತದೆ, ಅಥವಾ, ರಾಜೀವ ತಾರಾನಾಥರ ಸಂದೇಹ ಇಲ್ಲಿ ಮುಖ್ಯವಾಗಿ ಕಾಣುತ್ತದೆ. “ನಮ್ಮ ವಿಮರ್ಶೆಯಲ್ಲಿಯ ನಿರ್ಣಯಗಳಿಗೆ ಪ್ರೇರಕವಾಗಿರುವ ತತ್ವ ಮತ್ತು ವಿಚಾರಗಳು ನಮ್ಮ ಸಾಂಸ್ಕೃತಿಕ ಪರಂಪರೆಯೊಂದಿಗೆ ಸ್ಪಷ್ಟವಾದ, ತರ್ಕಬದ್ಧವಾದ ಸಂಬಂಧವನ್ನು ಇಟ್ಟುಕೊಂಡಿಲ್ಲವೆಂದು ನನಗೆ ಎಷ್ಟೋ ಸಾರೆ ಅನ್ನಿಸಿದೆ”, (ಮನ್ವಂತರ-೭, ಸಾಹಿತ್ಯ ವಿಮರ್ಶೆಯಲ್ಲಿ ವೈಚಾರಿಕತೆಯ ಸಮಸ್ಯೆಗಳು.)

ಅಂತರ್ಮುಖಿ ವ್ಯಕ್ತಿತ್ವದಿಂದಾಗಿ ಬದುಕಿನ ಬಹಿರ್ಮುಖತೆಯಿಂದ, ಬಹುರೂಪಿತನದಿಂದ ದೂರವಾದದ್ದು, ಈ ಮೂಲಕ ಸಾಹಿತ್ಯ ಜನತೆಯನ್ನು ತಲುಪದೆ ಹೊರಗುಳಿದದ್ದು’ ಕಂದಕ ದೊಡ್ಡದಾಗುತ್ತ ಹೋದದ್ದು ನಮ್ಮ ಸಾಹಿತ್ಯದ ಒಂದು ದೊಡ್ಡ ದುರಂತ. ಅಡಿಗರು ಆತ್ಮದೊಳಕ್ಕೆ ಸೆಳೆದುಕೊಂಡಂತೆ ನಂತರದವರು ‘ಪ್ರಜ್ಞೆ’ಯ ಸ್ತರದಲ್ಲಿಯೇ ನಿಂತರು. ರೋಮ್‌ ನಗರಕ್ಕೆ ಬೆಂಕಿ ಬಿದ್ದಾಗಲೂ ಪಿಟೀಲು ಬಾರಿಸುತ್ತ ಕೂತ ನೀರೋ ಚಕ್ರವರ್ತಿಯಂತೆ ನವ್ಯರು ತಮ್ಮ ಪ್ರಜ್ಞೆಯ ಸ್ತರದಲ್ಲಿನ ವೈಯಕ್ತಿಕ ಹೊಯ್ದಾಟಗಳನ್ನು ಸೂಕ್ಷ್ಮವಾಗಿ ಸಾಂಕೇತಿಕವಾಗಿ ಅಭಿವ್ಯಕ್ತಿಸುವ ಕಲೆಗಾರಿಕೆಗೆ ಒಡ್ಡಿಕೊಂಡದ್ದು ಅವರ ಸಾಮಾಜಿಕ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಶಾಶ್ವತ ಮೌಲ್ಯಗಳತ್ತ ನವ್ಯರ ದೃಷ್ಟಿ ಕೇಂದ್ರೀಕೃತವಾಗುವುದಕ್ಕೆ ಸಮಕಾಲೀನ ಬದುಕಿನ ಮೇಲೆ ಹಿಡಿತವಿಲ್ಲದಿರುವುದೇ ಕಾರಣ. ಸಮಾಜದಲ್ಲಿನ ಶೋಷಣೆಗಳು, ವರ್ಗಭೇದ, ಬಡತನದ ಕ್ರೂರತೆ, ಶ್ರೀಮಂತಿಕೆಯ ಅಮಾನುಷ ಮುಖಗಳು ಇತ್ಯಾದಿ ಸಾಮಾಜಿಕ ಸಮಸ್ಯೆಗಳು ನವ್ಯರನ್ನೇಕೆ ಬಡಿದೆಬ್ಬಿಸಲಿಲ್ಲ? ಸ್ವಾತಂತ್ರಾನಂತರದಲ್ಲಿ ಭರವಸೆಗಳು ಭಗ್ನವಾಗಿ ನಿರಾಶರಾದೆವೆಂದು ಹೇಳಿಕೊಳ್ಳುವ ನವ್ಯರಲ್ಲಿ ಎಷ್ಟರಮಟ್ಟಿನ ರಾಜಕೀಯ ಪ್ರಜ್ಞೆ ಅಭಿವ್ಯಕ್ತವಾಗಿದೆ? ಪ್ರಜೆಗಳ ಬದುಕನ್ನು, ಹಣೆಬರಹವನ್ನು ಬರೆಯುವುದು ನಮ್ಮ ಸಂವಿಧಾನವಾದ್ದರಿಂದ ‘ರಾಜಕೀಯ ಪ್ರಜ್ಞೆ’ಯ ಅರ್ಥ ಇನ್ನೂ ಹರಹು ಪಡೆಯುತ್ತದೆ. ಈ ಸಿಟ್ಟಿನಲ್ಲಿ ಇವರಿಂದ ಎಂತಹ ಸಾಹಿತ್ಯ ಸೃಷ್ಟಿಯಾಗಿದೆ? ಇವರಿಗೇಕೆ “Socio-Political consciousness’ ಇಲ್ಲ ? ಎಂಬ ಪ್ರಶ್ನೆಗಳು ಸಹಜವಾಗಿ ಏಳುವ ಕಾರಣ ಇವರು ದಂತ ಗೋಪುರದಲ್ಲಿ ಕುಂತು, ಸಮಾಜದ ಹೊಕ್ಕುಳ ಬಳ್ಳಿಯ ಸಂಬಂಧ ಹರಿದುಕೊಂಡು ‘ಪರಕೀಯ’ರಾಗಿ, “ಅನಾಥ ಪ್ರಜ್ಞಾ’ಶೀಲರಾಗಿ ಸಾಹಿತ್ಯ ಸೃಷ್ಟಿಸಿದ್ದಾರೆ ಎಂಬ ನಿಂದನೆಗೆ ಒಳಗಾಗುತ್ತಾರೆ. ನವ್ಯರಲ್ಲಿ ಸಾಮಾಜಿಕ ಹೊಣೆಗಾರಿಕೆ ಸಂಪೂರ್ಣ ಇಲ್ಲ ಎಂದು ನನ್ನ ವಾದದ ತಿರುಳಲ್ಲ; ಆದರೆ ಅವರ ಮುಖ್ಯ ಮುತುವರ್ಜಿ ಇದಾಗಿರಲಿಲ್ಲ ಎಂಬುದು ನನ್ನ ಆಕ್ಷೇಪ. ‘ತನಗೆ ತೀರ ವೈಯಕ್ತಿಕವಾದ ಪ್ರಜ್ಞೆಯ ಮೇಲೆಯೇ ಎಲ್ಲ ಜವಾಬ್ದಾರಿಯನ್ನು ವಹಿಸಿಕೊಂಡು ಹೋಗುವ ನವ್ಯರಲ್ಲಿ ತನ್ನ ಪ್ರಜ್ಞೆಗೆ ಸಮಾಜ ಹೇಗೆ ಕಾಣುತ್ತದೆ ಎನ್ನುವಲ್ಲಿ ಭಾರೀ ಒತ್ತು ಬಿದ್ದು, ಸಮಾಜ ತನ್ನನ್ನು ಹೇಗೆ ಕಾಣುತ್ತದೆ ಎಂಬುದೂ ಮುಖ್ಯವಾಗದೆ ಹೋಗುತ್ತದೆ. ಹೀಗಾಗಿ.ವ್ಯಕ್ತಿ ಮತ್ತು ಪರಿಸರಗಳ ಸಂಬಂಧಕ್ಕೆ ಇಲ್ಲಿ ಸಮತೂಕವಿಲ್ಲ, ಪರಸ್ಪರ ಅನ್ನೋನ್ಯತೆಯಿಲ್ಲ, ಈ ವೈಯುಕ್ತಿಕತೆ, ಅಂತರ್ಮುಖತೆಗಳಿಂದಾಗಿ ನವ್ಯರು “Neo-Romantic’ ಗಳಾಗಿ ಕಾಣುತ್ತಾರೆ. ಆದರೆ ತಮ್ಮ ವ್ಯಂಗ್ಯ ಕವನಗಳಲ್ಲಿ ನವ್ಯರು ಬಹಿರ್ಮುಖಿಗಳಾಗುವವರಂತೆ ಕಾಣಿಸುತ್ತಾರೆ. ಕೆ. ಎಸ್. ನಿಸಾರರ “ಕುರಿಗಳು ಸಾರ್‌, ಕುರಿಗಳು’, “ಅಮೇರಿಕಾ, ಅಮೇರಿಕಾ’, ಲಂಕೇಶರ ‘ದೇ, ಭ, ಸೂ. ನ ಗದ್ಯ ಗೀತೆ, ಕಂಬಾರರ “ಮಾವೋತ್ಸೆ ತುಂಗನಿಗೆ”, ಅಡಿಗರ ‘ದೆಹಲಿಯಲ್ಲಿ’ ಕವನಗಳಲ್ಲಿ ರಾಜಕೀಯ, ಸಾಮಾಜಿಕ ಮುತುವರ್ಜಿಗಳನ್ನು, ಗದ್ಯ ಸಂವೇದನೆಯನ್ನು ಕಾಣಬಹುದಾಗಿದೆ. ಸಾಂಸ್ಕೃತಿಕ ಕಾಳಜಿಯನ್ನು ಹೊಂದಿರುವ ಕಂಬಾರರ ‘ಗಂಗಾಮಾಯಿ’ ಕಾವ್ಯ ಸಂವೇದನೆಯಲ್ಲಿ ಹಾಗು ನಿಬಿಡ ಸಾಂಕೇತಿಕ ನಿರೂಪಣೆಯಲ್ಲಿ ಸಾಗುತ್ತದೆ. ಭಾವುಕತನದ ಹಿಡಿತದಿಂದ ಬಿಡಿಸಿ, ವೈಚಾರಿಕತೆ ಹೊರುವಷ್ಟು ತಾರ್ಕಿಕ ಶಕ್ತಿಯನ್ನು, ಹಾಗು ಪ್ರಜ್ಞೆಯಲ್ಲಿನ ಸೂಕ್ಷ್ಮ ಭಾವಗಳನ್ನು ಹೇಳುವಷ್ಟು ನಯಸ್ಸು-ನಾಜೂಕುಗಳನ್ನು ನವ್ಯರು ಭಾಷೆಗೆ ನೀಡಿದ್ದಾರೆ. ಆದರೆ ನವ್ಯಕಾವ್ಯದ ಪರಿಕರಗಳೆಲ್ಲ ಕ್ಲೀಷೆಗಳಾಗುತ್ತಿವೆ ಎಂದೂ ಅನ್ನಿಸುತ್ತಿದೆ.

ಪಾಶ್ಚಾತ್ಯ ಲೇಖಕ ತನ್ನ ನೆಲದ ಸಂವೇದನೆಗೆ ಹೇಗೆ ಪ್ರಾಮಾಣಿಕನಾಗಿದ್ದಾನೋ ಹಾಗೆ ನಮ್ಮ ಲೇಖಕ ಯಾಕೆ ನಮಗೆ ಪ್ರಾಮಾಣಿಕನಾಗಿಲ್ಲ ? ನಮ್ಮ ಪರಿಸರದ ಸಂವೇದನೆಯೊಳಗಿನಿಂದಲೇ ನಮ್ಮ ಲೇಖಕನ ವೈಚಾರಿಕತೆ ಯಾಕೆ ಅಂಕುರವಾಗಿಲ್ಲ ? ದ್ವಿತೀಯ ಮಹಾ ಯುದ್ಧದ ಭೀಕರ ಪರಿಣಾಮಗಳು ಅಲ್ಲಿನ ಸಾಮಾಜಿಕ ಸಾಂಸ್ಕೃತಿಕ ಸಂಬಂಧಗಳನ್ನು ಛಿದ್ರಗೊಳಿಸಿ, ವ್ಯಕ್ತಿ-ವ್ಯಕ್ತಿಗಳ, ವ್ಯಕ್ತಿ-ಸಮಾಜದ ಕುಣಿಕೆ ಮುರಿದು ಬಿದ್ದು, ವ್ಯಕ್ತಿ ಯಾಂತ್ರಿಕನಾದ, stranger ಆದ, ಹುಳುವಾದ, ಅಲ್ಲಿನ ಲೇಖಕರ ಈ disillksions, ಈ ಅನುಭವ ಅಲ್ಲಿನ ಒಬ್ಬ ಸಾಮಾನ್ಯನಿಗೂ ನಿಜವೆನ್ನಿಸಬಲ್ಲದು. ವಿಜ್ಞಾನ, ಟೆಕ್ನಾಲಜಿ ಮುಂದುವರೆದಂತೆಲ್ಲ ನಂಬಿಕೊಂಡಿದ್ದ ನಾಗರಿಕತೆಯ ಭಗ್ನಗೊಳ್ಳುವ ಅನುಭವ ಪಾಶ್ಚಾತ್ಯ ಲೇಖಕನನ್ನು ಮನುಷ್ಯತ್ವಕ್ಕಾಗಿ ಮತ್ತು spirituality ಗಾಗಿ ಹಂಬಲಿಸಲು ತೊಡಗಿಸಿತು ಈ ಯುದ್ಧದ ಪರಿಣಾಮಗಳಾಗಲಿ, ಅಥವ ವಿಜ್ಞಾನ, ಟೆಕ್ನಾಲಜಿಗಳ ದಟ್ಟ ಪ್ರಭಾವಗಳಾಗಲಿ ಇಲ್ಲದ ನಮ್ಮ ಜೀವನ ಇಲ್ಲಿ monotonous ಆಗಿಲ್ಲ ; ನಮಗೆ ಸಾಂಸ್ಕೃತಿಕ ಹಿನ್ನೆಲೆ ಇದೆ; ನಮ್ಮಲ್ಲಿ ಸಾಮಾಜಿಕ ಮೌಲ್ಯಗಳಿಗಾಗಿ ಹಂಬಲಿಸಬೇಕಾಗಿಲ್ಲ. ಹೀಗಾಗಿ ನಮ್ಮ ಸಂವೇದನೆ ಅವರಿಗಿಂತ ಭಿನ್ನ: ಅವರು ಜೀವನವನ್ನು ಭಯಂಕರವಾಗಿ ನೋಡುವಂತಹ ದೃಷ್ಟಿ ನಮ್ಮದಾಗುವುದಿಲ್ಲ. ಮಹಾಯುದ್ಧದ ಪರಿಣಾಮವಾಗಿ ಪಾಶ್ಚಾತ್ಯರಲ್ಲಿ ವೈಯಕ್ತಿಕತೆ, ಮೌಲ್ಯಗಳ ಛಿದ್ರತೆ, ಏಕಾಂಗಿತನ, ದುಃಸ್ವಪ್ನ, ಆಸಂಗತ ಪ್ರಜ್ಞೆಗಳು ಸಾಹಿತ್ಯದಲ್ಲಿಯೂ ಮೊಳೆತುಕೊಂಡಂತೆ, ಭಾರತೀಯರಲ್ಲಿಯೂ 1947 ರ ಸ್ವಾತಂತ್ರ್ಯದ ಪರಿಣಾಮದಿಂದ ಬೇರೆ ಆಯಾಮ ಬರಬೇಕಿತ್ತು. ಅಂದರೆ, ಪಾರತಂತ್ರ್ಯದ ಒಳಗೇ ಕಂದಿಕೊಂಡಿದ್ದ ಭಾರತೀಯತೆ ನಮ್ಮ ಪರಿಸರದ ಸಂಸ್ಕೃತಿಯ ವಿವೇಚನೆಯ ಮೂಲಕ ಒಂಟಿತನ, ದ್ವಂದ್ವ, ಮೌಲ್ಯಗಳ ವಿಘಟನೆಗಳಿಗಿಂತ ನಮ್ಮವೇ ಮೌಲ್ಯಗಳ ಹೊಸಹುಟ್ಟು, ಸಮಷ್ಟಿ ಧೋರಣೆಯ ಸಂವೇದನೆ ಕುದುರಿಕೊಳ್ಳಬೇಕಿತ್ತು. ಕಾರ್ಲ್‌ಮಾರ್ಕ್ಸ್ ಅರ್ಥೈಸುವಂತೆ, ಕೈಗಾರಿಕೀಕರಣ-ಯಂತ್ರೀಕರಣ ಇಡೀ ಪರಿಸರ-ಜೀವನವನ್ನೆ ಆಕ್ರಮಿಸಿಕೊಂಡಾಗ ವ್ಯಕ್ತಿ ಅಥವ ಕಾರ್ಮಿಕ ಅನುಭವಿಸುವ `ಪರಕೀಯ ಪ್ರಜ್ಞೆ’ ಎಂಬುದು, ನಮ್ಮ ಸಮಾಜದಲ್ಲಿ ಸಹಜ ಎನ್ನಿಸುತ್ತದೆಯೆ? ಪ್ರಗತಿಶೀಲ ಲೇಖಕರು ತಮ್ಮ ಸಮಾಜದ ಜಾಯಮಾನ, ಸಂವೇದನೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ; ಆದರೆ, ತಮ್ಮ ಕಾಲದ ಸಾಮಾಜಿಕ ಸಮಸ್ಯೆಗಳನ್ನು ವೈಚಾರಿಕ ಹರಿತವಿಲ್ಲದಿದ್ದರೂ ಪ್ರತಿಬಿಂಬಿಸಿದ್ದಾರೆ. ಆದರೆ ಶ್ರೀಕೃಷ್ಣ ಆಲನಹಳ್ಳಿಯವರ ಕಿಟ್ಟಿಯಂತಹ ಪಾತ್ರಗಳು ಭಾರತದ ಹಳ್ಳಿಯ ನೆಲದಲ್ಲಿ ಸಹಜ ಎನ್ನಿಸುತ್ತವೆಯೆ? ಪಾಶ್ಚಿಮಾತ್ಯರಿಗೆ ಅಥವ ಭಾರತೀಯ ಬುದ್ದಿಜೀವಿಗಳಿಗೆ ‘ಕಾಡು’ ಚಿತ್ರ ಸಹಜ ಎನ್ನಿಸಬಲ್ಲುದು. ಕಾರಣ, ಕಾದಂಬರಿಯ ಒಟ್ಟು ಐಡಿಯಾ ಹಾಗೂ ಸಂವೇದನೆ ನಮ್ಮ ಪರಿಸರದ ಸಂವೇದನೆಯೊಳಗಿನಿಂದ ಹುಟ್ಟಿ ಬಂದದ್ದಾಗಿರದೆ. ಪಾಶ್ಚಾತ್ಯ ಐಡಿಯಾದೊಂದಿಗೆ ಇಲ್ಲಿನ ಪರಿಸರ, ಪರಿಕರಗಳ ಮೂಲಕ ಬೌದ್ಧಿಕ ಕಸಿಗೊಳಿಸುವಿಕೆಯಾಗಿದೆ. ಕಿಟ್ಟಿಯ ವ್ಯಕ್ತಿತ್ವ ಪಾಶ್ಚಾತ್ಯ ನೆಲಲ್ಲಿ ಬೆಳೆಯುವಂತಹ ವಾತಾವರಣ ಅಲ್ಲಿ ಸೃಷ್ಟಿಯಾಗಿದೆ. ಕಿಟ್ಟಿ ಯಾಕೆ ಕೇಂದ್ರಪಾತ್ರ ಎಂದು ‘ಕಾಡು’ ಓದಿದ ನಮ್ಮ ಎಷ್ಟು ಜನಕ್ಕೆ ಅರ್ಥವಾಗುತ್ತೆ? ಆದರೆ ಕಿಟ್ಟಿ ನಮ್ಮ ಪರಿಸರದಲ್ಲಿ ‘ಆಗಂತುಕ’ನಾಗುತ್ತಾನೆ; ಅವನಿಗೆ ಸಮಾಜವೇ ಒಂದು ದಟ್ಟ ಅರಣ್ಯವಾಗಿ ಕಾಣುತ್ತದೆ.

ಭಾರತದಲ್ಲಿ ಬಡತನಕ್ಕೆ ಸಾಮಾಜಿಕ, ರಾಜಕೀಯ, ಆಧ್ಯಾತ್ಮಿಕ ಆಯಾಮಗಳಿಗೆ ನಮ್ಮ ಸಮಾಜದಲ್ಲಿನ ಹೋರಾಟ, ಬದುಕುಗಳಿಗೆ ಇಲ್ಲಿನ ಆರ್ಥಿಕ ಅಸಮಾನತೆ, ಅಸಹಾಯಕತೆ ಮುಖ್ಯ ಸಮಸ್ಯೆಗಳು, ತುಳಿಸಿಕೊಂಡ ಜನಾಂಗಕ್ಕೆ ತಾವು ನಾಗರಿಕರಾಗಬೇಕೆಂಬುದಾಗಲಿ, ಅಥವ ತಮ್ಮ ಮೇಲ್ವರ್ಗದವರೊಡನೆ ಬಂಡೇಳಬೇಕೆಂಬು ದಾಗಲಿ ಮುಖ್ಯವಲ್ಲ, ‘ಭಾರತೀಪುರ’ದ ಜಗನ್ನಾಥ ಹಾಗು ‘ದಂಗೆಯ ಪ್ರಕರಣ’ ಕತೆಯ ಗೋವಿಂದ ತಮ್ಮ ಕ್ರಾಂತಿಯ ಸ್ಫೋಟನೆಗಳಲ್ಲಿ ವಿಫಲರಾಗಲು ಕಾರಣ ಅವರ ಕ್ರಾಂತಿಯ ಸಂವೇದನೆ ನಮ್ಮ ಸಮಾಜದ ಸಮಸ್ಯೆಗಳ ಪರಿವೆಯಿಂದ ಹುಟ್ಟಿಬಂದದ್ದಾಗಿರದೆ ಕಾಮು, ಸಾರ್ತ್ರೆಯವರ ಕ್ರಾಂತಿಯ ಐಡಿಯಾವಾದ್ದರಿಂದ, ‘ಭಾರತೀಪುರ’ದ ಜಗನ್ನಾಥನ ಚಡಪಡಿಕೆ, ಶೂದ್ರರನ್ನು ಮೇಲೆತ್ತಬೇಕೆಂಬ (Standardization) ಸಮಸ್ಯೆ ನಮಗಾಗಲಿ, ಶೂದ್ರರಿಗಾಗಲಿ ಮುಖ್ಯವಲ್ಲ. ಜಗನ್ನಾಥನ ಈ ಹಂಬಲ ಪಾಶ್ಚಾತ್ಯ ಸಂವೇದನೆಯಿಂದ ಹುಟ್ಟಿಬಂದದ್ದಾದ್ದರಿಂದ ನಮ್ಮಲ್ಲಿನ ಸಾಮಾಜಿಕ ಆರ್ಥಿಕ ಸಂಬಂಧಗಳೊಳಗಿರುವ ತೊಡಕುಗಳ ಪರಿವೆಯಿಲ್ಲದಿರುವುದು ಕಾಣುತ್ತದೆ. ಮೌಲ್ಯಗಳ ನಿರ್ಣಯದ ಘರ್ಷಣೆಯಲ್ಲಿ ತೊಡಗುವ ‘ಸಂಸ್ಕಾರ’ದ ಪ್ರಾಣೇಶಾಚಾರ್ಯ ಮತ್ತು “ಸ್ವರೂಪದ ನಾಯಕ ನಮಗೆ ಹತ್ತಿರವಾಗದೆ, ಪಾಶ್ಚಿಮಾತ್ಯ ತತ್ವಗಳಿಗಾಗಿ ಇಲ್ಲಿನ ಪರಿಸರ, ಸೆಂಟಿಮೆಂಟ್ಸನ್ನು ಕಸಿಗೊಳಿಸಿಕೊಂಡು ದುಡಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಲೇಖಕರು ದುಡಿಸಿಕೊಳ್ಳುವುದು ನಮ್ಮನ್ನೂ ಅಲ್ಲ, ಪಾಶ್ಚಿಮಾತ್ಯರನ್ನು. ಅಂದರೆ, ಪಾಶ್ಚಿಮಾತ್ಯ ವೈಚಾರಿಕತೆಯೊಡನೆ ಇವರ ಸೆಣಸಾಟ, ಇವರ ಬುದ್ದಿ ಪಾಶ್ಚಿಮಾತ್ಯ ನೆಲದಲ್ಲಿ ಚಿಗುರಿ, ಭಾರತದಲ್ಲಿ ಸುತ್ತುತ್ತಿರುತ್ತದೆ. ಜಗನ್ನಾಥ ನಮ್ಮ ಜನಕ್ಕೆ ಎಷ್ಟು ಹತ್ತಿರ ? ಎಷ್ಟು ನಿಜ? ನಮ್ಮ ಜನಕ್ಕೇ ಈತ ಅಪರಿಚಿತನಾಗುತ್ತಾನೆ. ‘ಗತಿ-ಸ್ಥಿತಿ’ ಕಾದಂಬರಿಯೊಳಗೆ ಒಂದು ಸಮಾಜದ ಕಲ್ಪನೆಯೇ ಇಲ್ಲವೆಂದು ಭಾಸವಾಗುತ್ತದೆ. ದಿನನಿತ್ಯ ಎದುರಿಸಬಹುದಾದ, ಅನಿವಾರ್ಯವೆನ್ನಿಸುವಂತಹ ಚಿಲ್ಲರೆ ಘಟನೆಗಳೂ ಅಲ್ಲಿನ ನಾಯಕ ‘ಆತ’ನಿಗೆ ಬೆಟ್ಟ, ಕಲ್ಲು ಬಂಡೆಗಳಾಗುತ್ತಾ ಹೋಗುವುದು. ಅವನ ಮಾನಸಿಕ ಅಸ್ವಸ್ಥತೆ, ಚಡಪಡಿಕೆಗಳೆಲ್ಲ ನಮ್ಮ ನೆಲದ ಸಂವೇದನೆಯಲ್ಲ ಎಂದು ನನಗನ್ನಿಸುವುದು ಆತ ನಮಗೇ ಆಗಂತುಕನಾಗಿರುವುದರಿಂದ. ಅಲ್ಲಿನ ಬೋರ‍್ಡಮ್ ಆತನಿಗೆ ಒಂದು ರಿಲಿಜಿಯನ್’ ಆಗಿದೆ; ಪಾಶ್ಚಾತ್ಯ ನಗರಗಳಲ್ಲಿ ಅಂತಹ ವಾತಾವರಣ ಇರಲಿಕ್ಕೆ ಸಾಧ್ಯವಿದೆ. ಈ sensation ನಮ್ಮಲ್ಲಿ ನಿಜ ಎನ್ನಿಸುತ್ತದೆಯೆ? ಕೈಗಾರಿಕೀಕರಣ, ವಿಜ್ಞಾನ, ಟೆಕ್ನಾಲಜಿಗಳಿಂದ ಸ್ಫೋಟಗೊಂಡು ಜೀವನದ ಮನಾಟನಸ್‌ನಿಂದ, ಬೋರ್ಡ್‌ಮ್ಮಿನಿಂದ, ಫ್ಯಾಂಟಸಿಯಿಂದ ಬಿಡಿಸಿಕೊಳ್ಳಲು ಹಿಪ್ಪೀತನ ಅಲ್ಲಿ ನೈಜವಾಗಿ ಅಂಕುರವಾಯಿತು. ಆದರೆ ಭಾರತದಂತಹ ದೇಶದಲ್ಲಿ ‘ಆತ’ನ ಮಾನಸಿಕ ಹಿಪ್ಪೀತನ ಸಹಜ ಎನ್ನಿಸುತ್ತದೆಯೆ? ವ್ಯಕ್ತಿ ಮತ್ತು ಸಮಾಜದ ಮಧ್ಯೆ ಸಂಬಂಧ ಕಳಚಿಬಿದ್ದು, ಸುಳ್ಳಿನ ಆವರಣದಲ್ಲಿ, ಫ್ಯಾಂಟಸಿಯಲ್ಲಿ ಬದುಕುವ ‘ಬಿರುಕು’ ಕಾದಂಬರಿಯ ಬಸವರಾಜು ನಮಗೆ ಎಷ್ಟರಮಟ್ಟಿಗೆ ಸ್ಪಂದಿಸಬಲ್ಲ? ಈ ಕಾದಂಬರಿಕಾರರ ಸಮಸ್ಯೆಗಳು ನಮ್ಮ ಇಲ್ಲಿನ ಪರಿಸ್ಥಿತಿಗೆ ನಮ್ಮ ಸಮಸ್ಯೆಗಳಾಗಿವೆಯೆ? ‘ದಾಟು’ ಕಾದಂಬರಿಯಲ್ಲಿ ಪಾಶ್ಚಾತ್ಯ ಸಂವೇದನೆಯ ಪ್ರಭಾವಕ್ಕಿಂತ ಭಾರತೀಯತೆ, ಹಾಗು ಸ್ಥಾಪಿತ ಸಾಮಾಜಿಕ ಸಂಬಂಧಗಳನ್ನು, ಧಾರ್ಮಿಕ ವಿಧಿಗಳನ್ನು ಅನಾಮತ್ತಾಗಿ ಓದುಗ ಒಪ್ಪಿಕೊಳ್ಳುವಂತೆ ಒತ್ತಾಯ ತರುವ ಅಪಾಯದಿಂದಾಗಿ ಇಲ್ಲಿನ ಕ್ರಾಂತಿಕಾರ ನಾಯಿಕೆ ಹಾಗು ಮೋಹನದಾಸ ವಿಫಲರಾಗುತ್ತಾರೆ. ಹೀಗಾಗಿ ಇಲ್ಲಿ ಭಾರತೀಯ ಸಂವೇದನೆ ನಮ್ಮ ನೆಲದ ಸಮಸ್ಯೆಗಳ ಅರಿವಿನ ವಿವೇಚನೆಯಿಂದ ಮೌಲ್ಯಗಳ ಹೊಸ ಹುಟ್ಟು ರೂಪಣಗೊಳ್ಳದೆ, ಕ್ರಾಂತಿ ಸಾಮಾಜಿಕ ಆರ್ಥಿಕ ಧಾರ್ಮಿಕ ಆಯಾಮಗಳನ್ನು ಪಡೆದುಕೊಳ್ಳದೆ, ಕೇವಲ ಮಾನಸಿಕ ಭ್ರಾಂತಿಯಾಗಿ, ಪೊಳ್ಳಾಗಿ ಉಳಿಯುತ್ತದೆ.

ತುಘಲಖ್‌, ಹಯವದನ, ಯಯಾತಿ ನಾಟಕಗಳು, ಕಾಡು, ಸಂಸ್ಕಾರ ಕಾದಂಬರಿಗಳು ನಾಟಕ ಅಥವ ಸಿನೆಮಾಗಳಾಗಿ ಪ್ರಯೋಗವಾದಾಗ, ಅಲ್ಲಿನ ಪರಿಕರಗಳು ನಮ್ಮವೇ ಆದ್ದರಿಂದ ನಾವು ಮೇಲ್ಮೈಯಲ್ಲಿ ತೃಪ್ತಿಪಡೆಯುತ್ತೇವೆ. ಇದು ಕೇವಲ ಸಾಮಾನ್ಯ ಓದುಗ-ಪ್ರೇಕ್ಷಕನ ಕುರಿತು ಹೇಳುವ ಮಾತಲ್ಲ. ಒಬ್ಬ ಬುದ್ದಿ ಜೀವಿಗೂ ಸ್ಪಷ್ಟವಾಗಿ ನಿಲುಕಲಾರದಂತಹದು. ಕಾಮುವಿನ `ಕಲಿಗುಲಾ’ದ ಐಡಿಯಾ ‘ತುಘಲಖ್‌’ನಲ್ಲಿ, ಕಾಮುವಿನ ‘ದಿ ಪ್ಲೇಗ್” ಹಾಗು “ಔಟ್ ಸೈಡರ್’ ಕೃತಿಗಳ ಐಡಿಯಾ ‘ಸಂಸ್ಕಾರ’ ದಲ್ಲಿ. ಸಾರ್ತ್ರೆಯ ಅಸ್ತಿತ್ವವಾದದ ಐಡಿಯಾ ಹಾಗು ಕಾಮುವಿನ ‘ದಿ ಫಾಲ್” ಕಾದಂಬರಿಯ ತಾಂತ್ರಿಕ ಐಡಿಯಾ ‘ಸ್ವರೂಪ’ದಲ್ಲಿ, ‘ದಿ ಚರ್ಚ್‌’ ಎಂಬ ರಶಿಯನ್ ಕಾದಂಬರಿಯ ಐಡಿಯಾ ‘ಭಾರತೀಪುರ’ದಲ್ಲಿ ಮುಂತಾಗಿ ಗುರುತಿಸಬಹುದು. ಲಂಕೇಶರ ನಾಟಕಗಳಲ್ಲಿ ಪಾಶ್ಚಾತ್ಯ ಸಾಹಿತ್ಯದಲ್ಲಿನ ‘ಆಂಗರ್ ಥಿಯೇಟರ್” ಹಾಗು “ಅಬ್ಸರ್ಡ್ ಥಿಯೇಟರ್’ಗಳಲ್ಲಿನ ಐಡಿಯಾವನ್ನು ಕಾಣಬಹುದು. ಮೂಲಭೂತ ಐಡಿಯಾ ಸಂವೇದನೆ ನಮ್ಮ ನೆಲದಲ್ಲಿ ಅಂಕುರವಾದದ್ದಲ್ಲವಾದ್ದರಿಂದ ಇಂಥ ಕೃತಿಗಳು ನಮ್ಮ ಜನಕ್ಕೆ ಸ್ಪರ್ಶಿಸುತ್ತವೆಯೆ ?

ಜನತೆಯನ್ನು ತಕ್ಷಣ ತಲುಪಬಲ್ಲ ನಾಟಕ ಮಾಧ್ಯಮ ಕೂಡ ನಮ್ಮ ಜನಕ್ಕೆ ಅರ್ಥವಾಗದ ಖುಷಿಕೊಟ್ಟು, ಗಂಭೀರ ವಿಚಾರಗಳೂ ರಂಜನೀಯವಾಗಿ ಕಂಡುಬಿಡುತ್ತವೆ. ಈ ಅಬ್ಸರ್ಡ್‌ ನಾಟಕಗಳಲ್ಲಿನ ಪಾತ್ರಗಳು, ಸನ್ನಿವೇಶ, ಸಂಭಾಷಣೆಗಳು ಬದುಕಿನ ಬಹಿರ್ಮುಖತೆಯ ಅತಾರ್ಕಿಕತೆ, ಅಸಂಬದ್ಧತೆಯ ಆವರಣದ ಆಳದಲ್ಲಿ ತಾತ್ವಿಕವಾದ ತಾರ್ಕಿಕತೆ ಹುದುಗಿಕೊಂಡಿರುತ್ತದೆ. ಹೀಗಾಗಿ ಇಡೀ ಅಬ್ಸರ್ಡ್‌ ನಾಟಕವೆ ಸಾಂಕೇತಿಕ ಆಯಾಮದಲ್ಲಿರುತ್ತದೆ. ಸಾಮಾಜಿಕ ವರ್ತನೆಗಳ ತಳದಲ್ಲಿ ಮನುಷ್ಯನ ಮೂಲಭೂತ ತಾತ್ವಿಕ ಸಮಸ್ಯೆಗಳ ಪರಿಮಾಣವಿರುತ್ತದೆ. ಹುಟ್ಟು, ಸಾವು, ಬದುಕಿನ ನಿಸ್ವಾರ್ಥಕತೆ, ಅಸಂಗತ ಅರಿವು-ಇವು ಮಹಾಯುದ್ಧದ ಪರಿಣಾಮಗಳಿಂದಾಗಿ ಪಾಶ್ಚಾತ್ಯ ಲೇಖಕನಲ್ಲಿ ಅನುಭವದ ಮೂಲಕ ಅಭಿವ್ಯಕ್ತಗೊಂಡವು. ಈ ಅಸಂಗತ ಅನುಭವ ಭಾರತೀಯನನ್ನು ಸಂವೇದಿಸಬಲ್ಲುದೆ ? ಓದುಗ ಅಥವ ಪ್ರೇಕ್ಷಕ ಇಂಥ ವೈಚಾರಿಕತೆಯನ್ನು ಅನುಭವಿಸಲು ತಯಾರಿ ಪಡೆದಿಲ್ಲ ಎಂಬುದು ಇದಕ್ಕೆ ಸಮಂಜಸ ಉತ್ತರವೆ? ಪಾಶ್ಚಾತ್ಯ ಲೇಖಕರ ಐಡಿಯಾ-ಅನುಭವಗಳನ್ನು ಸಾಚಾ ಎನ್ನುವಷ್ಟರ ತೀವ್ರತೆಯಲ್ಲಿ ಅಭಿವ್ಯಕ್ತಿಸಿದ್ದರೂ ಮೂಲಭೂತ ಐಡಿಯಾ ಕುರಿತು ನಮ್ಮ ಲೇಖಕರ ಪ್ರಾಮಾಣಿಕತೆಯ ಪ್ರಶ್ನೆ ಏಳುತ್ತದೆ. ರಾಜೀವ ತಾರಾನಾಥರ ಪ್ರಶ್ನೆ ಇನ್ನೂ ಸ್ಪಷ್ಟಗೊಳಿಸುತ್ತದೆ “ಯಾವುದು ಪಾಶ್ಚಾತ್ಯ ಲೇಖಕನಿಗೆ ಅನುಭವವಾಗುತ್ತದೋ ಅದು ಕನ್ನಡ ಲೇಖಕನಿಗೆ ಕೇವಲ ಒಂದು ವೈಚಾರಿಕತೆಯಾಗಿ ಕಾಣುವುದು ಸಾಧ್ಯವಿದೆಯೆ? ಮತ್ತು ಅದು ಅನುಭವಕ್ಕಿಂತ ಹೆಚ್ಚು ಉದ್ದೀಪಕವಾಗಬಲ್ಲುದೇ ?” (ಮನ್ವಂತರ೭) ಡಾ. ಯು. ಆರ್. ಅನಂತಮೂರ್ತಿಯವರೂ ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ-“ಯಾಕೆ ನಮಗೆ ಪಾಶ್ಚಾತ್ಯ ವಿಚಾರವೇ ಮಾದರಿಯಾಗಬೇಕು? ನಾವು ಹೊಸದಾಗಿ ಭಾರತೀಯವಾಗಿ ಚಿಂತಿಸಲಾರೆವೆ? ಬರೆಯಲಾರೆವೆ? ಆಂಗ್ಲ ವಿದ್ಯಾಭ್ಯಾಸದಿಂದ ಪ್ರಚೋದಿತರಾದ ನಾವು ಅನುಕರಣಕ್ಕಿಂತ ಹೊರತಾಗಿ ಬೇರೆ ಏನೂ ಸೃಷ್ಟಿಸಲಾರೆವೆ? ಹಿಂದುಳಿದ ದೇಶದ ನಾವು ಕೀಳೆಂಬ ಭಾವನೆ ಇದಕ್ಕೆ ಕಾರಣವೆ?” (ಸಾಕ್ಷಿ ೨೧; ‘ಭಾರತೀಯತೆ), ದೇವನೂರು ಮಹಾದೇವ ಇಂಥ ಪಾಶ್ಚಾತ್ಯ ಪ್ರಭಾವದ ಅಪಾಯಗಳ ಕುರಿತು ಹೀಗೆ ಸ್ಪಷ್ಟ ಮುಂದಿಡುತ್ತಾರೆ-“ಪ್ರಮುಖವಾಗಿ ನವ್ಯ ಬರಹಗಳು ಎಲಿಯಟ್, ಕಾಮು, ಕಾಫ್ಕ, ಸಾರ್ತ್ರೆ ಹುಟ್ಟಿದಲ್ಲಿ ಹುಟ್ಟಬೇಕಾದಂಥವುಗಳು ಎಂದು ಇಂದೂ ಅನ್ನುವ ಮಂದಿ ಉಂಟು. ಇದನ್ನು ಒಪ್ಪಿಕೊಂಡರೆ ಸ್ವಲ್ಪವೇ ಇರಬಹುದಾದ ನಿಜವನ್ನು ಆಗಾಧ ಮಾಡಿದಂತಾಗುತ್ತದೆ. ಹಾಗೆಂದು ಕಡೆಗಣಿಸಬೇಕೆಂದೂ ಹೇಳ ಹೊರಟಿಲ್ಲ. ಏಕಾಂಗಿತನ ಅನಾಥಪ್ರಜ್ಞೆ, ನಿರರ್ಥಕತೆ ಇಂಥವುಗಳು ನಮ್ಮನ್ನು ಪೂರ್ಣವೆ ಕಾಡಿಲ್ಲದಿರಬಹುದು. ಅಂತಹದು ನಮ್ಮ ಲಿಟರರಿ ಕೃತಿಯಾಗ ಹೊರಟರೆ ಅದು ಇಲ್ಲಿನ ಮಯ್ಯಿ ಪಡೆದಿದ್ದರೂ ಕೂಡ ಪೂರ್ಣವೆ ನಿಜವಾಗದೆ ಹೋಗಬಹುದು. ಅಥವ ಅಂಥ ತಿಳಿವು ವಿಕಸಿತ ಆಗುವುದರ ಬಗೆಗೆ ನಾವು ಶಂಕೆ ತಾಳಬಹುದು. ಆ ಕಾರಣಕ್ಕಾಗೆ ನಮ್ಮ ರಕ್ತ ಪೂರ್ಣ ಸಂವೇದಿಸುವಂತಹದನ್ನೆ ಹಿಡಿಯಹೊರಡುವುದು ಇಂದು ಆಗಬೇಕಾದ್ದು” (ಸಾಕ್ಷಿ ೧೮; ಖಾಸನೀಸ ಮುಖೇನ ಸಣ್ಣ ಕಥೆ). ಪಾಶ್ಚಾತ್ಯರ ತತ್ವಗಳನ್ನೂ ನಾವು ಅಳವಡಿಸಿಕೊಳ್ಳುವುದು ನಮ್ಮ ಪರಿಸರದ ಸಮಸ್ಯೆಗಳಿಗೆ ಮೋಸಮಾಡಿದಂತೆ. ಇಂತಹ ಪರಕೀಯ ವೈಚಾರಿಕತೆಯ ಸಂವೇದನೆಯಿಂದಾಗಿರುವ ಅನಾಹುತ ನಮ್ಮ ಹೊಸ ಪೀಳಿಗೆಯ ಮುಂದಿರುವುದರಿಂದ, ಎಚ್ಚರಿಕೆಯಿಂದ ಬಿಡಿಸಿಕೊಂಡು ಮುಂದುವರೆಯುವುದು ನಮ್ಮ ಜನಕ್ಕೆ, ಪರಿಸರಕ್ಕೆ ಆರೋಗ್ಯಕರ.

ಹಳೆಯ ಮೌಲ್ಯಗಳನ್ನು ಒಪ್ಪಿಕೊಳ್ಳದ, ಹೊಸ ಮೌಲ್ಯಗಳ ಆಧಾರವಿಲ್ಲದ ನವ್ಯರ ನಿರ್ವಾತ ಸ್ಥಿತಿ ಸಾಂಸ್ಕೃತಿಕವಾಗಿ ಒಂದು ಮುಖ್ಯ ಘಟ್ಟ: ನಮ್ಮ ಸಂಸ್ಕೃತಿಯಲ್ಲಿನ ಅರ್ಥಹೀನತೆಯನ್ನು ಇದು ತೋರಿಸಿ ಕೊಡುವಷ್ಟೇ ಮುಖ್ಯವಾಗಿ-ನಂತರದ ಪೀಳಿಗೆ ಹೊಸ ಮೌಲ್ಯಗಳ ಸೃಷ್ಟಿಗೆ ಕಾಯುತ್ತದೆ; ಅನಂತಮೂರ್ತಿ, ಲಂಕೇಶರ ತಲೆಮಾರಿನ ನಂತರ ಹೊಸದೊಂದು ಸಮರ್ಥವಾದ ಪೀಳಿಗೆ ಯಾಕೆ ಹುಟ್ಟುತ್ತಿಲ್ಲ ಎಂಬುದಕ್ಕೆ ಇಲ್ಲಿ ವಿಚಾರ ಮಾಡಬೇಕು. ಹೊಸ ಜನಾಂಗದ ಧೋರಣೆಗಳು ಅನಿವಾರ್ಯವಾಗಿ ಬದಲಾಗಬೇಕಾಗಿದೆ: ಮೌಲ್ಯಗಳ ಹೊಸ ಹುಟ್ಟು ಪಡೆಯಬೇಕಾಗಿದೆ. ಹೀಗಾಗದೆ ಹೋದಲ್ಲಿ ಶ್ರೀಕೃಷ್ಣ ಆಲನಹಳ್ಳಿ, ರಾಮಚಂದ್ರದೇವ, ಬಿ.ಆ‌ರ್‌. ಲಕ್ಷ್ಮಣರಾವ್, ಜಯಸುದರ್ಶನ, ಜಯಂತ ಕಾಯ್ಕಿಣಿರವರಂತೆ ಮತ್ತೆ ಹಳೆಯ ಹೆಜ್ಜೆಗಳನ್ನು ತುಳಿಯಬೇಕಾಗುತ್ತದೆ. ತೇಜಸ್ವಿಯವರು ತಮ್ಮ ಇತ್ತೀಚಿನ ಕತೆಗಳಲ್ಲಿ, ಲಂಕೇಶರು “ಉಮಾಪತಿಯ ಸ್ಕಾಲರ್‌ಷಿಪ್ ಯಾತ್ರೆ”ಯಲ್ಲಿ ದೇವನೂರು ಮಹಾದೇವರವರು ‘ದ್ಯಾವನೂರು’ ಕತೆಗಳಲ್ಲಿ ನಮ್ಮದೇ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಪರಿಸರವ ಸಂವೇದನೆಗೆ ಸ್ಪಂದಿಸುತ್ತ ಹೊಸ ಹುಟ್ಟು ಪಡೆಯುತ್ತಿರುವ ಆರಂಭದ ಸೂಚನೆಗಳು ಕಾಣಬರುತ್ತಿರುವುದು ಆಶಾದಾಯಕ.

ಈ ಲೇಖನದ ಕೊನೆಯಲ್ಲಿ ನಾವು ವಿಚಾರ ಮಾಡಬೇಕಾದದ್ದು – ನಮ್ಮ ಜನಕ್ಕೆ ನಾವು ಎಂತಹ ಸಾಹಿತ್ಯ ಕೊಟ್ಟಿದ್ದೇವೆ? ನಮ್ಮ ಜನಕ್ಕೆ ಅರ್ಥವಾಗುವ ಭಾಷೆಯಲ್ಲಿ ಏನನ್ನು ಹೇಳಿದ್ದೇವೆ? ನಮ್ಮದೇ ಸಮಸ್ಯೆಗಳ ಪರಿಸರದ ಸಂವೇದನೆಯ ಮೂಲಕ ಎಷ್ಟು ಸಾಹಿತ್ಯ ಸೃಷ್ಟಿಯಾಗಿದೆ ?

ನವಯುಗದ ಆರಂಭ

ಭೂ ಸುಧಾರಣೆ ಶಾಸನವನ್ನು ಕಾರ್ಯಗತ ಮಾಡುತ್ತಿರುವುದರಿಂದ ಕರ್ನಾಟಕದಲ್ಲಿ ಸುಮಾರು 80 ಸಾವಿರ ಕುಟುಂಬಗಳು ಭೂಮಿಯನ್ನು ಪಡೆಯುವರು. ಇವರಲ್ಲಿ 40 ಸಾವಿರ ಹರಿಜನ ಗಿರಿಜನ ಕುಟುಂಬಗಳು, ಇದಲ್ಲದೆ ಹತ್ತು ಲಕ್ಷ ಹೆಕ್ಟೇರುಗಳಲ್ಲಿ ಸಾಗುವಳಿ ಮಾಡುತ್ತಿರುವ ಒಕ್ಕಲುಗಳಿಗೆ ಭೂ ಮಾಲೀಕತ್ವದ ಹಕ್ಕುಗಳನ್ನು ಕೊಡಲಾಗುವುದು.

ಮನೆ ಇಲ್ಲದವರಿಗೆ ಮನೆ

ವಾಸಕ್ಕೆ ಮನೆ ಇಲ್ಲದ ಕೃಷಿ ಕಾರ್ಮಿಕರಿಗೆ ರಾಜ್ಯದಲ್ಲಿ 3.37 ಲಕ್ಷಕ್ಕೂ ಮೀರಿ ನಿವೇಶನಗಳನ್ನು ಹಂಚಲಾಗಿದೆ. ಜನತಾ ಗೃಹ ನಿರ್ಮಾಣ ಯೋಜನೆಯನ್ವಯ 35 ಸಾವಿರ ಕಡಿಮೆ ವೆಚ್ಚದ ಮನೆಗಳನ್ನು ಕಟ್ಟುವ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ಸಾವಿರಾರು ಮನೆಗಳ ನಿರ್ಮಾಣ ಹೊಂದಿ ವಾಸಕ್ಕೆ ಆಸರೆಯಾಗಿವೆ. ಈ ಯೋಜನೆಯಲ್ಲಿ ಇನ್ನೂ 17,500 ಮನೆಗಳನ್ನು ಕಟ್ಟಲಾಗುವುದು.

ಕಾರ್ಮಿಕರಿಗೆ ಹೆಚ್ಚಿನ ವೇತನ

ಕರ್ನಾಟಕದ ಜನ ಸಂಖ್ಯೆಯ ಹತ್ತರಲ್ಲಿ ಒಂದರಷ್ಟಿರುವ ಸುಮಾರು ಮೂವತ್ತು ಮೂರು ಲಕ್ಷ ಕೆಲಸಗಾರರು ಅಕ್ಟೋಬರ್ 2, 1975 ರಿಂದ ಗಮನಾರ್ಹವಾಗಿ ಹೆಚ್ಚಿನ ವೇತನ ಪಡೆಯುವರು. ಅವರಲ್ಲಿ 27 ಲಕ್ಷ ಕೃಷಿ ಕಾರ್ಮಿಕರು, ಐದು ಲಕ್ಷ ಬೀಡಿ ಕಾರ್ಮಿಕರು ಮತ್ತು ಒಂದು ಲಕ್ಷ ಕಲ್ಲು ಕುಟಿಗರು ಮುಂತಾದವರಿದ್ದಾರೆ. ನೇಕಾರರಿಗೆ ನೆರವು ಕರ್ನಾಟಕ ಕೈ ಮಗ್ಗ ನೇಕಾರರ ಅಭಿವೃದ್ಧಿ ಕಾರ್ಪೊರೇಷನ್ ರಚಿಸಲಾಗಿದೆ. ಕೈ ಮಗ್ಗದ ಉದ್ಯಮದಲ್ಲಿ ನಿರತರಾಗಿರುವವರಿಗೆ ಈ ಕಾರ್ಪೊರೇಷನ್ ಸಹಾಯ ಮಾಡುವುದಲ್ಲದೆ ಕೈ ಮಗ್ಗ ಕೈಗಾರಿಕೆ ಸ್ಥಾಪನೆ ಹಾಗೂ ಅಭಿವೃದ್ಧಿಗೆ ನೆರವು ನೀಡುವುದು. ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಸಾರಿರುವ 20 ಅಂಶಗಳ ಕಾರ್ಯಕ್ರಮ ಜಾರಿಗೆ ತರುವಲ್ಲಿ ಕರ್ನಾಟಕ ಕೈಗೊಂಡಿರುವ ಅನೇಕ ಕಾರ್ಯಕ್ರಮಗಳಲ್ಲಿ ಇವು ಕೆಲವು ಮಾತ್ರ.
ಪ್ರಕಟಣೆ
(ನಿರ್ದೆಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ, ಕರ್ನಾಟಕ ಸರಕಾರ)

Close
By kanaja|2021-01-06T19:19:24+05:30May 17, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೧

    ಸಂಪುಟ-೩೧

Leave A Comment Cancel reply

ವಿಭಾಗಗಳು

ಹೊಸ ಅಂಕಣಗಳು

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕನ್ನಡ ಭಾಷೆ,ಸಾಹಿತ್ಯ

  • ಸಂಪುಟ-೩೪
  • ಸಂಪುಟ-೩೩
  • ಸಂಪುಟ-೩೨
  • ಸಂಪುಟ-೩೧
  • ಸಂಪುಟ-೩೦

ಕಲೆ,ಸಂಗೀತ

  • ರಂಗ ವಿಮರ್ಶೆಯ ಬೆನ್ನು ಹತ್ತಿ..
  • ರಂಗಭೂಮಿಯೊಂದೇ ಸಮತಾವಾದದ ಪ್ರತೀಕ
  • ರಂಗಭೂಮಿಯ ನಡಿಗೆ
  • ರಂಗ ಪರದೆಗಳು : ಶಬ್ದಪಾರಮಾರ್ಗಮಶಕ್ಯಂ
  • ರಂಗ ಪರದೆಗಳು : ರಂಗ ಪರದೆಗಳ ಹಿನ್ನೆಲೆ

ವಿಜ್ಞಾನ , ತಂತ್ರಜ್ಞಾನ

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕೃಷಿ ,ರೈತರ ಅನುಭವ

  • ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016
  • ಪದವಿನ್ಯಾಸ: ೧೨. ಸನಿಕೆ
  • ಪದವಿನ್ಯಾಸ: ೧೩. ಈಚು
  • ಪದವಿನ್ಯಾಸ: ೧೪. ಕಣಜ
  • ಪದವಿನ್ಯಾಸ: ೯. ಬೆಳೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2020 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕೃತ ಜಾಲತಾಣ
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - kanaja@karnataka.gov.in

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top

ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ
ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ.