ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಮಿಯ ಪ್ರಶ್ನೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಮಿಯ ಪ್ರಶ್ನೆ
-ಜಿ ಆರ್
ಕರ್ನಾಟಕ ಸರ್ಕಾರ 1-3-74 ರಿಂದ ಜಾರಿಗೆ ತಂದ ಭೂಸುಧಾರಣಾಶಾಸನ (1965 ರ ಭೂಸುಧಾರಣಾಕಾಯಿದೆಯ ತಿದ್ದುಪಡಿ) ದ ಅನುಷ್ಠಾನದ ಮೊದಲನೆ ಹಂತದ ಕಾರ್ಯಕ್ರಮ ರಾಜ್ಯದಲ್ಲಿ ಇದೀಗ ಮುಗಿದಿದೆ. ಕಾಯಿದೆಯ ಪ್ರಕಾರ ಗೇಣಿ ಒಕ್ಕಲುಗಳು ತಾವು ಭೂಮಿಯ ಧನಿಗಳಿಂದ ದೇಣಿಗೆ ಪಡೆದ ಭೂಮಿಯ ವಿಸ್ತೀರ್ಣ, ಸರ್ವೆ ನಂ, ಧನಿಯ ಹೆಸರು, ವಿಳಾಸ ಇತ್ಯಾದಿಗಳನ್ನು, ಸರಕಾರ ಸಿದ್ಧಪಡಿಸಿರುವ ಫಾರ್ಮು 7ರಲ್ಲಿ “ಡಿಕ್ಲರೇಷನ್” ಮುಖಾಂತರ ತಾಲ್ಲೂಕು ಮಟ್ಟದ ಭೂ ನ್ಯಾಯ ಮಂಡಳಿಗಳಿಗೆ (ಲ್ಯಾಂಡ್ ಟ್ರಿಬ್ಯೂನಲ್) ಘೋಷಿಸಿಕೊಳ್ಳುವುದು ಶಾಸನ ಜಾರಿಯ ಮೊದಲ ಹಂತ. ಶಾಸನದಲ್ಲಿ ಮೊದಲು ಹೀಗೆ ಡಿಕ್ಲರೇಷನ್ ಸಲ್ಲಿಸಲು ಆರು ತಿಂಗಳ ಕಾಲಾವಕಾಶವನ್ನು ಮಾತ್ರ ನಿಗದಿ ಮಾಡಿದ್ದರೂ (1-3-74 ರಿಂದ 31-8-74 ರ ವರೆಗೆ), ಆದಷ್ಟು ಹೆಚ್ಚು ಒಕ್ಕಲುಗಳಿಗೆ ಅನುಕೂಲವಾಗಲಿ ಎಂದು ಸರಕಾರ ಈ ಕಾಲಾವಧಿಯನ್ನು ಮುಂದೂಡುತ್ತ ಬಂದಿದೆ. ಇದುವರೆಗೂ ಡಿಕ್ಲರೇಷನ್ ಸಲ್ಲಿಸದ ಒಕ್ಕಲುಗಳು ತಡವಾಗಿರುವುದಕ್ಕೆ ಕಾರಣ ಕೊಟ್ಟರೆ, ಡಿಕ್ಲರೇಷನ್ ಸಲ್ಲಿಸಲು ಈಗಲೂ ಅವಕಾಶವಿದೆ. ಈಗಾಗಲೇ ಈ ಜಿಲ್ಲೆಯ 8 ತಾಲ್ಲೂಕು ಭೂನ್ಯಾಯಮಂಡಳಿಗಳ ಮುಂದೆ ಸುಮಾರು ಒಂದೂವರೆ ಲಕ್ಷದಷ್ಟು ಡಿಕ್ಲರೇಷನ್‌ಗಳು ಬಂದಿದ್ದು ಅವುಗಳ ಇತ್ಯರ್ಥ ಆಮೆ ನಡಿಗೆಯಲ್ಲಾದರ ಪ್ರಾರಂಭವಾಗಿದೆ. ಕರ್ನಾಟಕ ಸರಕಾರ ಈ ಶಾಸನದ ಬಗ್ಗೆ ಮೊದಲಿನ ಸರಕಾರಗಳು ತಮ್ಮ ಭೂ ಶಾಸನಗಳ ಬಗ್ಗೆ ತೋರಿಸಿದ್ದಕ್ಕಿಂತ ಹೆಚ್ಚಿನ ಮುತುವರ್ಜಿ ತೋರಿಸುತ್ತಿರುವುದೂ ಸ್ಪಷ್ಟವಾಗಿದೆ. ಆಗಬೇಕಾಗಿರುವ ಕೆಲಸದ ಅಗಾಧತೆಯ ಕಾರಣದಿಂದ ಈ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಆಡಳಿತ ಕ್ರಮಗಳು, ನೇಮಿಸಿದ ಸಿಬ್ಬಂದಿ ಏನೇನೂ ಸಾಲದಾದರೂ ಮೊದಲಿನ ಸರಕಾರಗಳು ಇಷ್ಟನ್ನೂ ಮಾಡಿರಲಿಲ್ಲ ಎಂದು ಜ್ಞಾಪಿಸಿಕೊಂಡಾಗ ಇವು ಮುಖ್ಯವೆನ್ನಿಸುತ್ತವೆ. ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡುವ ಆಶ್ವಾಸನೆಗಳನ್ನೇನೂ ಧಾರಾಳ ಕೊಟ್ಟ, ಆದರೆ ಕಾರ್ಯರೂಪದಲ್ಲಿ ಏನನ್ನೂ ಸಾಧಿಸದ, ಅಥವಾ ಅವರ ತದ್ವಿರುದ್ಧವಾದದ್ದನ್ನೇ ನಡೆಸಿದ ಕರ್ನಾಟಕವೂ ಸೇರಿ ಭಾರತದ ಹೆಚ್ಚಿನ ರಾಜ್ಯಗಳ ಭೂ ಶಾಸನಗಳ ಹಿನ್ನೆಲೆಯಲ್ಲಿ 1972ರಲ್ಲಿ ಅಧಿಕಾರಕ್ಕೆ ಬಂದ ಪ್ರಸ್ತುತ ಕರ್ನಾಟಕ ಸರಕಾರ ತನ್ನ ಶಾಸನದ ಅನುಷ್ಠಾನದಲ್ಲಿ ಹೆಚ್ಚು ಪ್ರಾಮಾಣಿಕವಾಗಿರುವಂತೆ ಕಾಣುತ್ತದೆ.
ಆದರೆ ಶಾಸನ ಈಗ ಹಳ್ಳಿಯ ಹಂತದಲ್ಲಿ ಜಾರಿಗೆ ಬರುತ್ತಿರುವ ರೀತಿ ನೋಡಿದರೆ ಶಾಸನ ಅಕ್ಷರಶಃ ಪಾಲಿಸಲ್ಪಡುತ್ತಿದೆಯಾದರೂ ಶಾಸನದ ಹಿರಿಯ ಉದ್ದೇಶಗಳು ಮಾತ್ರ ಸಂಪೂರ್ಣವಾಗಿ ವಿಫಲಗೊಂಡಿರುವುದು ಸ್ಪಷ್ಟವಾಗಿದೆ. ಯಾವುದೇ ಸದುದ್ದೇಶದ ಕಾನೂನು ಕೂಡಾ ಅನುಷ್ಠಾನದಲ್ಲಿ ಎಂತಹ ವಿಕೃತರೂಪ ತಳೆದುಬಿಡಬಹುದು ಎಂಬುದನ್ನು ವಿವರಿಸಬೇಕಾದ ಅಗತ್ಯವಿಲ್ಲ. ಜನಹಿತದ ದೃಷ್ಟಿಯಿಂದಲೇ ರಚಿತವಾದ ಕಾನೂನುಗಳಿಂದ ಜನ ತೊಂದರೆಗೊಳಗಾದ ನಿದರ್ಶನಗಳಿಗೇನೂ ಕೊರತೆ ಇಲ್ಲ. ಅದರಲ್ಲಿಯೂ ಹಳ್ಳಿಗಳ ಅಶಿಕ್ಷಿತ ರೈತರ ಬದುಕು ಬದಲಾಯಿಸುವಂತಹ ಕಾಯಿದೆಯೊಂದನ್ನು ಕೆಳಹಂತದ ಅಧಿಕಾರಶಾಹಿ ಸುಲಭದಲ್ಲಿ ಹೇಗೆ ವಿಫಲಗೊಳಿಸಬಹುದು ಎಂದು ಯಾರಾದರೂ ಊಹಿಸಬಹುದು. ಜೊತೆಗೆ ಈ ಶಾಸನ ಕೇವಲ ಬಡ ರೈತರಿಗಷ್ಟೇ ಅಲ್ಲದೆ, ಹಳ್ಳಿಗಳ ಆಸ್ತಿವಂತರಿಗೂ ಸಂಬಂಧಿಸಿದ್ದಾದ್ದರಿಂದ, ತಮ್ಮ ಹಿತಕ್ಕೆ ಹಾನಿ ಮಾಡಬಹುದಾದ ಕಾನೂನಿನ ವಿಧಿಗಳು ಜಾರಿಗೆ ಬರದಂತೆ ತಡೆಯಲು ಸಹಜವಾಗಿಯೇ ಇವರೂ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಾರೆ. ಸದ್ಯಕ್ಕೆ ನಮ್ಮ ಹಳ್ಳಿಗಳ ರಾಜಕೀಯದ ನಾಯಕ ಸ್ಥಾನಗಳಲ್ಲಿರುವವರು ಹಳ್ಳಿಗಳ ಶ್ರೀಮಂತರು. ಆದ್ದರಿಂದ ರಾಜ್ಯದ ರಾಜಕೀಯದಲ್ಲೂ ಇವರೇ ನಿರ್ಣಾಯಕ ಶಕ್ತಿಗಳು. ಸ್ವಾತಂತ್ರಾನಂತರ ಈ ದೇಶದಲ್ಲಿ ಸ್ಪಷ್ಟ ಕಾಣಿಸಿಕೊಂಡ ಒಂದು ಬೆಳವಣಿಗೆಯೆಂದರೆ ರಾಜಕೀಯ ನಾಯಕರಿಗೂ ಅಧಿಕಾರಶಾಹಿಗೂ ಬೆಳೆದ ಗಾಢಮೈತ್ರಿ. ಇಂತಹ ಸಂಬಂಧವಿರದಂತೆ ತಡೆಯಲು ರಚಿಸಲ್ಪಟ್ಟ IAS,,I.P.S. ಶ್ರೇಣಿಗಳು, ಕೇಂದ್ರ ಮತ್ತು ವಿವಿಧ ರಾಜ್ಯಗಳ ಪಬ್ಲಿಕ್ ಸರ್ವಿಸ್ ಕಮಿಷನ್‌ಗಳು ಇದ್ದರೂ ಈ ಪರಸ್ಪರ ಕೊಳುಕೊಡುಗೆಯ ಸ್ನೇಹಸಂಬಂಧ ಮೊದಲಿಗಿಂತಲೂ ಈಗ ಗಾಢವಾಗಿದೆ, ಅಧಿಕಾರಶಾಹಿಯ ನೆರವಿಲ್ಲದೆ ಪುಢಾರಿಯ ಬೇಳೆ ಬೇಯಲಾರದು. ಪುಢಾರಿಯ ಅಭಯಹಸ್ತವಿಲ್ಲದಿದ್ದರೆ ಅಧಿಕಾರಿ ನೆಮ್ಮದಿಯಲ್ಲಿರಲಾರ. ಹೀಗೆ ಯಾವುದೇ ಕಾನೂನು ತನ್ನ ಹಿತಕ್ಕೆ ವಿರೋಧಿಯಾದರೆ ಅದು ಜಾರಿಗೆ ಬರದಂತೆ ನೋಡಿಕೊಳ್ಳಲು, ಅಥವಾ ಕಾನೂನಿನಡಿಯಲ್ಲಿಯೇ ನುಸುಳಿಕೊಳ್ಳಲು, ಪುಢಾರಿಗೆ, ಶ್ರೀಮಂತನಿಗೆ ವಕೀಲರ ನೆರವು ಬಿಡಿ, ಅಧಿಕಾರಶಾಹಿಯ ನೆರವು ಕೂಡಾ ಸದಾ ಸಿದ್ಧವಾಗಿರುತ್ತದೆ. ಬಡ ರೈತನ ಉದ್ದಾರವನ್ನು ಗುರಿಯಾಗಿಟ್ಟುಕೊಂಡು ರಾಜಧಾನಿಯಲ್ಲಿ ರೂಪಿತವಾಗುವ ಅನೇಕ ಕಾನೂನುಗಳು, ಸೌಲಭ್ಯಗಳು, ಹಳ್ಳಿಯ ಮಟ್ಟದಲ್ಲಿ ಒಂದೋ ಜಾರಿಗೆ ಬರದೆ, ಅಥವಾ, ಹಳ್ಳಿಯ ಪಟ್ಟಭದ್ರನಿಗೇ ಅನುಕೂಲವಾಗುವಂತೆ ಜಾರಿಗೆ ಬರುವುದು ನಮ್ಮಲ್ಲಿ ತೀರ ಸಾಮಾನ್ಯ. ದಕ್ಷಿಣ ಏಷ್ಯಾದ ರಾಷ್ಟ್ರಗಳ, ಅದರಲ್ಲಿಯೂ ವಿಶೇಷವಾಗಿ ಭಾರತದ ಅರ್ಥ ವ್ಯವಸ್ಥೆಯನ್ನು ಆಳವಾಗಿ ಅಭ್ಯಾಸ ಮಾಡಿದ ಹಿರಿಯ ಅರ್ಥಶಾಸ್ತ್ರಜ್ಞ ಗನ್ನಾರ್ ಮಿರ್ದಾಲ್ ಬರೆಯುತ್ತಾರೆ:
All the significant policy measures for agricultural uplift adopted by the governments—whether technological or institutional have tended to shift the power balance of the rural structure in favour of the privileged classes. The piecemeal reforms have bolstered the political, social and economic position of the rural upper strata on which the present governments depend for crucial support………………..These forces exert a strong pressure for Conservatism in regard to the agrarian structure, however radical the tone of policy resolutions and certain laws. (Asian Drama Vol II. P. 1367), ಕರ್ನಾಟಕದ ಭೂ ಶಾಸನವೂ ಹೀಗೆ ಅನೇಕ ಕಡೆಗಳಲ್ಲಿ ವಿಫಲಗೊಳಿಸಲ್ಪಟ್ಟಿದೆ. ನೌಕರಶಾಹಿಯ ನೆರವು, ಕೋರ್ಟುಗಳ ತಮಗೇ ಅನುಕೂಲಕರವಾದ ತೀರ್ಪುಗಳು, ರಾಜಕೀಯದ ಪ್ರಭಾವ,- ಇವನ್ನು ಬಳಸಿಕೊಂಡು ಈ ಜಿಲ್ಲೆಯಲ್ಲಿ ಅನೇಕ ಭೂ ಮಾಲಿಕರು ಈ ಕಾನೂನು ಜಾರಿಗೆ ಬರುವುದಕ್ಕೆ ಬಹಳ ಮೊದಲೇ, ಇಂತಹ ಯಾವ ಕಾನೂನಿಂದ ತಪ್ಪಿಸಿಕೊಳ್ಳಲು ಅವಶ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಂಡು ಈಗ ನೆಮ್ಮದಿಯಾಗಿದ್ದಾರೆ.
1974 ರ ಕರ್ನಾಟಕದ ಭೂಸುಧಾರಣಾಶಾಸನವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದಾಗ ಕಾನೂನಿನಲ್ಲಿಯೇ ಕೆಲವು ಗಂಭೀರವಾದ ದೋಷಗಳಿರುವುದರಿಂದ, ಸರಕಾರದ “ಸಮಾಜವಾದೀ’ ಉದ್ದೇಶಗಳನ್ನು ಕಾನೂನೇ ವಿಫಲಗೊಳಿಸಿರುವುದೂ ಗೋಚರವಾಗುತ್ತದೆ. ಈ ಶಾಸನದಿಂದ, “ಉಳುವವನೇ ನೆಲದೊಡೆಯನಾಗುವನು. ಎಲ್ಲ ತರದ ಗ್ರಾಮೀಣ ಸಾಮಾಜಿಕ ಅನ್ಯಾಯಗಳು ಕೊನೆಗೊಳ್ಳುವುವು” – ಇತ್ಯಾದಿಯಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹೀರಾತುಗಳು, ಮಂತ್ರಿಗಳ ಭಾಷಣಗಳು ಪ್ರಚಾರ ನಡೆಸುತ್ತಿದ್ದರೂ, ಕಾನೂನಿನಲ್ಲಿಯೇ ಇರುವ ಮೂಲಭೂತ ದೋಷಗಳಿಂದ, ಕಾನೂನು ಮುತುವರ್ಜಿ ತೋರಿಸುತ್ತಿರುವುದೂ ಸ್ಪಷ್ಟವಾಗಿದೆ. ಆಗಬೇಕಾಗಿರುವ ಕೆಲಸದ ಅಗಾಧತೆಯ ಕಾರಣದಿಂದ ಈ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಆಡಳಿತ ಕ್ರಮಗಳು, ನೇಮಿಸಿದ ಸಿಬ್ಬಂದಿ ಏನೇನೂ ಸಾಲದಾದರೂ ಮೊದಲಿನ ಸರಕಾರಗಳು ಇಷ್ಟನ್ನೂ ಮಾಡಿರಲಿಲ್ಲ ಎಂದು ಜ್ಞಾಪಿಸಿಕೊಂಡಾಗ ಇವು ಮುಖ್ಯವೆನ್ನಿಸುತ್ತವೆ. ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡುವ ಆಶ್ವಾಸನೆಗಳನ್ನೇನೋ ಧಾರಾಳ ಕೊಟ್ಟ, ಆದರೆ ಕಾರ್ಯರೂಪದಲ್ಲಿ ಏನನ್ನೂ ಸಾಧಿಸದ, ಅಥವಾ ಅದರ ತದ್ವಿರುದ್ಧವಾದದ್ದನ್ನೇ ನಡೆಸಿದ ಕರ್ನಾಟಕವೂ ಸೇರಿ ಭಾರತದ ಹೆಚ್ಚಿನ ರಾಜ್ಯಗಳ ಭೂ ಶಾಸನಗಳ ಹಿನ್ನೆಲೆಯಲ್ಲಿ 1972ರಲ್ಲಿ ಅಧಿಕಾರಕ್ಕೆ ಬಂದ ಪ್ರಸ್ತುತ ಕರ್ನಾಟಕ ಸರಕಾರ ತನ್ನ ಶಾಸನದ ಅನುಷ್ಠಾನದಲ್ಲಿ ಹೆಚ್ಚು ಪ್ರಾಮಾಣಿಕವಾಗಿರುವಂತೆ ಕಾಣುತ್ತದೆ.
ಆದರೆ ಶಾಸನ ಈಗ ಹಳ್ಳಿಯ ಹಂತದಲ್ಲಿ ಜಾರಿಗೆ ಬರುತ್ತಿರುವ ರೀತಿ ನೋಡಿದರೆ ಶಾಸನ ಅಕ್ಷರಶಃ ಪಾಲಿಸಲ್ಪಡುತ್ತಿದೆಯಾದರೂ ಶಾಸನದ ಹಿರಿಯ ಉದ್ದೇಶಗಳು ಮಾತ್ರ ಸಂಪೂರ್ಣವಾಗಿ ವಿಫಲಗೊಂಡಿರುವುದು ಸ್ಪಷ್ಟವಾಗಿದೆ. ಯಾವುದೇ ಸದುದ್ಧೇಶದ ಕಾನೂನು ಕೂಡಾ ಅನುಷ್ಠಾನದಲ್ಲಿ ಎಂತಹ ವಿಕೃತರೂಪ ತಳೆದುಬಿಡ ಬಹುದು ಎಂಬುದನ್ನು ವಿವರಿಸಬೇಕಾದ ಅಗತ್ಯವಿಲ್ಲ. ಜನಹಿತದ ದೃಷ್ಟಿಯಿಂದಲೇ ರಚಿತವಾದ ಕಾನೂನುಗಳಿಂದ ಜನ ತೊಂದರೆಗೊಳಗಾದ ನಿದರ್ಶನಗಳಿಗೇನೂ ಕೊರತೆ ಇಲ್ಲ ಅದರಲ್ಲಿಯೂ ಹಳ್ಳಿಗಳ ಅಶಿಕ್ಷಿತ ರೈತರ ಬದುಕು ಬದಲಾಯಿಸುವಂತಹ ಕಾಯಿದೆಯೊಂದನ್ನು ಕೆಳಹಂತದ ಅಧಿಕಾರಶಾಹಿ ಸುಲಭದಲ್ಲಿ ಹೇಗೆ ವಿಫಲಗೊಳಿಸಬಹುದು ಎಂದು ಯಾರಾದರೂ ಊಹಿಸಬಹುದು. ಜೊತೆಗೆ ಈ ಶಾಸನ ಕೇವಲ ಬಡ ರೈತರಿಗಷ್ಟೇ ಅಲ್ಲದೆ, ಹಳ್ಳಿಗಳ ಆಸ್ತಿವಂತರಿಗೂ ಸಂಬಂಧಿಸಿದ್ದಾದ್ದರಿಂದ, ತಮ್ಮ ಹಿತಕ್ಕೆ ಹಾನಿ ಮಾಡಬಹುದಾದ ಕಾನೂನಿನ ವಿಧಿಗಳು ಜಾರಿಗೆ ಬರದಂತೆ ತಡೆಯಲು ಸಹಜವಾಗಿಯೇ ಇವರೂ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಾರೆ. ಸದ್ಯಕ್ಕೆ ನಮ್ಮ ಹಳ್ಳಿಗಳ ರಾಜಕೀಯದ ನಾಯಕ ಸ್ಥಾನಗಳಲ್ಲಿರುವವರು ಹಳ್ಳಿಗಳ ಶ್ರೀಮಂತರು. ಆದ್ದರಿಂದ ರಾಜ್ಯದ ರಾಜಕೀಯದಲ್ಲೂ ಇವರೇ ನಿರ್ಣಾಯಕ ಶಕ್ತಿಗಳು. ಸ್ವಾತಂತ್ರಾ ನಂತರ ಈ ದೇಶದಲ್ಲಿ ಸ್ಪಷ್ಟ ಕಾಣಿಸಿಕೊಂಡ ಒಂದು ಬೆಳವಣಿಗೆಯೆಂದರೆ ರಾಜಕೀಯ ನಾಯಕರಿಗೂ ಅಧಿಕಾರ ಶಾಹಿಗೂ ಬೆಳೆದ ಗಾಢಮೈತ್ರಿ. ಇಂತಹ ಸಂಬಂಧವಿರದಂತೆ ತಡೆಯಲು ರಚಿಸಲ್ಪಟ್ಟ IAS.,I.P.S. ಶ್ರೇಣಿಗಳು, ಕೇಂದ್ರ ಮತ್ತು ವಿವಿಧ ರಾಜ್ಯಗಳ ಪಬ್ಲಿಕ್ ಸರ್ವಿಸ್ ಕಮಿಷನ್‌ಗಳು ಇದ್ದರೂ ಈ ಪರಸ್ಪರ ಕೊಳುಕೊಡುಗೆಯ ಸ್ನೇಹಸಂಬಂಧ ಮೊದಲಿಗಿಂತಲೂ ಈಗ ಗಾಢವಾಗಿದೆ. ಅಧಿಕಾರಶಾಹಿಯ ನೆರವಿಲ್ಲದೆ ಪುಢಾರಿಯ ಬೇಳೆ ಬೇಯಲಾರದು. ಪುಢಾರಿಯ ಅಭಯಹಸ್ತವಿಲ್ಲದಿದ್ದರೆ ಅಧಿಕಾರಿ ನೆಮ್ಮದಿಯಲ್ಲಿರಲಾರ. ಹೀಗೆ ಯಾವುದೇ ಕಾನೂನು ತನ್ನ ಹಿತಕ್ಕೆ ವಿರೋಧಿಯಾದರೆ ಅದು ಜಾರಿಗೆ ಬರದಂತೆ ನೋಡಿಕೊಳ್ಳಲು, ದೇಶದ ಕೃಷಿ ವ್ಯವಸ್ಥೆಯ ಅನೇಕ ಬೆಳವಣಿಗೆಗಳನ್ನು ಇದು ತೋರಿಸಬಹುದು ಎಂದು ನನಗೆ ದೃಢವಾಗಿ ಅನ್ನಿಸುತ್ತದೆ.
ಸರಕಾರ ಈ ಶಾಸನವನ್ನು ಪ್ರಜಾಸತ್ತೆಯ ಮೌಲ್ಯಗಳನ್ನು ಅನುಷ್ಠಾನಕ್ಕೆ ತರುವ ಉದ್ದೇಶದಿಂದ ರೂಪಿಸಿದೆ ; ಒಬ್ಬನ ದುಡಿಮೆಯನ್ನು ಇನ್ನೊಬ್ಬ ಕೂತು ತಿನ್ನುವ, ದುಡಿಯುವವನನ್ನು ಸದಾ ಅವಿದ್ಯೆ, ಬಡತನಗಳಲ್ಲಿಡುವ ಭೂಮಾಲಿಕತ್ವದ ಅನಿಷ್ಟ ವನ್ನು ತೊಡೆದು ಹಾಕುವ ಗುರಿಯನ್ನಿಟ್ಟುಕೊಂಡಿದೆ. ಸರಕಾರದ ಈ ಉದ್ದೇಶಗಳು ನ್ಯಾಯಸಮ್ಮತವೆಂದು ನನ್ನ ಅಭಿಪ್ರಾಯ. ಈ ಲೇಖನದಲ್ಲಿಯೂ ತಾನೂನಿನ ವಿಶ್ಲೇಷಣೆಯನ್ನು ನಾನು ಮಾಡುತ್ತಿರುವುದು ಇದೇ ಮೌಲಿಕ ಆಧಾರ (value premises) ಗಳ ಮೇಲೆ ಎಂಬುದನ್ನು ಮೊದಲೇ ಹೇಳಿಬಿಡುತ್ತೇನೆ. ಯಾಕೆಂದರೆ ಪೂರ್ವನಿಶ್ಚಿತ ಮೌಲಿಕ ನಿರ್ಣಯಗಳಿಲ್ಲದೆ ಇಂತಹ ಯಾವ ವಿಶ್ಲೇಷಣೆಯೂ ಸಾಧ್ಯವಿಲ್ಲ. ಮಿರ್ದಾಲ್ ಹೇಳುವಂತೆ, ಬರೇ ಆರ್ಥಿಕ ಸಮಸ್ಯೆ ಎನ್ನಬಹುದಾದ ಯಾವ ಸಮಸ್ಯೆಯೂ ಇಲ್ಲ; ಕೇವಲ ಸಮಸ್ಯೆಗಳಿವೆ. (There are no economic problems as Such, There are problems) ಆರ್ಥಿಕ ಸಮಸ್ಯೆಗಳಿಗೆ ರಾಜಕೀಯ, ಇತಿಹಾಸ, ಜನರ ಬದುಕಿನ ಕ್ರಮ, ಸಂಸ್ಕೃತಿಯ ಧೋರಣೆಗಳು-ಇವುಗಳೊಂದಿಗೆ ನಿಕಟ ಸಂಬಂಧವಿರುವುದರಿಂದ, ನಮ್ಮ ಅರ್ಥವ್ಯವಸ್ಥೆಯ ಸಮಸ್ಯೆಗಳು ನಮ್ಮ ಸಂಸ್ಕೃತಿಯ ಸಮಸ್ಯೆಗಳು ಕೂಡಾ. ಇವೆಲ್ಲದರ ಬಗ್ಗೆ ಯೋಚಿಸದೆ ಬರೇ ಆರ್ಥಿಕ ಸಮಸ್ಯೆಗಳ ಬಗ್ಗೆ ಮಾತ್ರ ಯೋಚಿಸುವುದು ಅಸಾಧ್ಯ ; ಮತ್ತು ಈ ಸಮಸ್ಯೆಗಳ ಬಗ್ಗೆ ಯೋಚಿಸುವುದೆಂದರೆ ಅನಿವಾರ್ಯವಾಗಿ ನಮ್ಮ ಎಲ್ಲ ರಾಜಕೀಯ ಸಾಂಸ್ಕೃತಿಕ ಪೂರ‍್ವಗ್ರಹಗಳೊಂದಿಗೆ ಯೋಚಿಸುವುದು. ಶತಮಾನಗಳಿಂದ ಈದೇಶದ ಮನುಷ್ಯ ಸಂಬಂಧಗಳನ್ನೂ, ಸಂಸ್ಕೃತಿಯನ್ನೂ ರೂಪಿಸುತ್ತಬಂದಿರುವ ಕೃಷಿಯ ಅರ್ಥವ್ಯವಸ್ಥೆಯ ಬಗ್ಗೆಯಂತೂ ಇದು ಇನ್ನಷ್ಟು ಸತ್ಯ. ಈ ಸಂಬಂಧ ಮರೆತು ಕೇವಲ Pure economics ನ input-output ಸಿದ್ದಾಂತಗಳಲ್ಲಿ ಯೋಚಿಸಿದರೆ ಎಂತಹ ವಿಪರ್ಯಾಸಗಳಾಗುತ್ತವೆ ಎಂಬುದಕ್ಕೆ ಯಾವುದೇ ಸಾಮಾಜಿಕ ಬದಲಾವಣೆಗಳನ್ನು, (ವಿರ್ದಾಲ್ ಮತ್ತೆ ಮತ್ತೆ ಭಾರತದ ಅರ್ಥವ್ಯವಸ್ಥೆಯ ಬಗ್ಗೆ ಹೇಳುವ institutional changes) ತರದೆ, ರಾಸಾಯನಿಕ ಗೊಬ್ಬರ, ಯಾಂತ್ರೀಕೃತ ನೀರಾವರಿ, ಸುಧಾರಿತ ಬಿತ್ತನೆ ಬೀಜಗಳನ್ನು ಒದಗಿಸಿದ ತಕ್ಷಣ ನಮ್ಮ ಕೃಷಿ ಉತ್ಪಾದನೆಯಲ್ಲಿ ಭಾರೀ ಹೆಚ್ಚಳವಾಗಿ ಬಿಡುತ್ತದೆ. ಆಹಾರ ಧಾನ್ಯಗಳ ಬೆಲೆಗಳು ಇಳಿಯುತ್ತವೆ : ಜನರ ಬಡತನ ತೊಲಗುತ್ತದೆ ಎಂದೆಲ್ಲ ಸರಳವಾಗಿ ಯೋಚಿಸಿ, ‘ಹಸಿರು ಕ್ರಾಂತಿ’ ಯನ್ನು ರೂಪಿಸಿದ ನಮ್ಮ ಯೋಜಕರೇ ಸಾಕ್ಷಿ. ಹಸಿರುಕ್ರಾಂತಿ ಕೃಷಿ ಉತ್ಪಾದನೆಯಲ್ಲಿ ಗಣನೀಯವಾದ ಹೆಚ್ಚಳವನ್ನೂ ಸಾಧಿಸಲಿಲ್ಲ ; ಆಹಾರ ಧಾನ್ಯಗಳ ಬೆಲೆಗಳನ್ನೂ ಇಳಿಸಲಿಲ್ಲ; ಹಳ್ಳಿಗಳ ಬಡತನವನ್ನೂ ನೀಗಿಸಲಿಲ್ಲ; ಬದಲು ಹಳ್ಳಿಯ ಶ್ರೀಮಂತರನ್ನು ಇನ್ನಷ್ಟು ಕೊಬ್ಬಿಸಿತು. (ಸ್ವಲ್ಪ ಮಟ್ಟಿಗೆ ಒಕ್ಕಲೆಬ್ಬಿಸಿ ಬಡ ರೈತರಿಂದ ಶ್ರೀಮಂತ ರೈತರು ಭೂಮಿ ಕಸಿಯುತ್ತಿರುವ ದೇಶವ್ಯಾಪೀ ಪ್ರವೃತ್ತಿಗೆ “ಹಸಿರು ಕ್ರಾಂತಿ’ ಯೂ ಕಾರಣ). ನಮ್ಮ ಸರಕಾರವೇ ಇಂದು ಇದನ್ನು ಒಪ್ಪಿಕೊಂಡಿದೆ. ತಾತ್ವಿಕ ವಿಶ್ಲೇಷಣೆಯಲ್ಲೂ ಇಂತಹ “ಶುದ್ಧ” ಮಾರ್ಗದ ಬೆಲೆ ಎಷ್ಟು ಎನ್ನುವುದನ್ನು ಮಿರ್ದಾಲ್ ಹೀಗೆ ವಿವರಿಸುತ್ತಾರೆ-A purely factual study or an observation of a segment of social reality with no preconceptions is not possible ; it could only lead to a chaotic accumulation of meaningless impressions. Even the savage has his selective preconceptions by which he can orgroize, interpret and give meaning to his experiences. Scientific data-facts established by observation and classification have no existence outside the framework of preconceptions…………………In strict logic 8 non-theoretical approach in scientific Work is thus impossible”. (Asian drama, Vol-1, P-24.) ಮಿರ್ದಾಲ್ ಮುಂದುವರಿದು ಬರೆಯುತ್ತಾರೆ, “A disinterested social science has never existed and never will exists. For logical reasons it is impossible. A view presupposes a view point”. (Asian drama Vol-I, P-32).
ಭೂಸುಧಾರಣಾ ಶಾಸನವನ್ನು, ಯಾವುದೇ ಭೂಸುಧಾರಣಾ ಶಾಸನವನ್ನು, ಅದು ಅನುಷ್ಠಾನಕ್ಕೆ ಬಂದಿದೆಯೆ ? ಬಂದಿದ್ದರೆ ಹೇಗೆ ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳದೆ ಭೂ ಸುಧಾರಣೆಯಿಂದ ಭೂಮಿ ಹಂಚಿಹೋಗಿ, ಭೂಮಿಯ ಒಟ್ಟು ಫಸಲು ಕಡಿಮೆಯಾಗುತ್ತದೆ: ಉತ್ಪಾದಿತ ಫಸಲಿನಲ್ಲಿಯ ಬಹುಪಾಲನ್ನು ಬಡ ರೈತರೇ ತಿಂದುಹಾಕುವುದರಿಂದ ಮೊದಲಿನಂತೆ ಭೂ ಮಾಲಕರಿಂದ ಮಾರುಕಟ್ಟೆಗಳಿಗೆ ಹರಿದುಬರುತ್ತಿದ್ದ ಆಹಾರ ಧಾನ್ಯಗಳ “marketable surplus ಕೂಡಾ ಕಡಿಮೆಯಾಗಿ ಆಹಾರಧಾನ್ಯಗಳ ಬೆಲೆಗಳು ಮಿತಿ ಮೀರಿ ಏರುತ್ತವೆ ಎನ್ನುವ “ಆರ್ಥಿಕ” ವಾದಗಳಿವೆ. (ಮೇಲಿಂದ ಮೇಲೆ ಕೇಳಿಬರುವ ಈ ವಾದಗಳಿಗೆ ಯಾವುದೇ ವೈಜ್ಞಾನಿಕ ತಳಹದಿಯೂ ಇಲ್ಲ. ಎರಡನೆಯ ವಾದದಲ್ಲಿ ಮಾನವೀಯತೆ ಕೂಡ ಇಲ್ಲ). ಭೂ ಸುಧಾರಣೆ ವ್ಯಕ್ತಿಯ ಆಸ್ತಿ ಹಕ್ಕನ್ನು ಅಂದರೆ ವ್ಯಕ್ತಿ ಸ್ವಾತಂತ್ರವನ್ನು ನಿರಾಕರಿಸುತ್ತದೆ ; ಕೊನೆಗೆ ಇದು ‘totalitarian’ ವ್ಯವಸ್ಥೆಗೆ ದಾರಿ ಮಾಡಿಕೊಡುತ್ತದೆ ಎನ್ನುವ ಭಯಾನಕ ಚಿತ್ರಗಳನ್ನು ಮುಂದಿಡುವವರೂ ಇದ್ದಾರೆ. “ಆರ್ಥಿಕ”ವಾದಗಳನ್ನು ಮುಂದಿಡುವ ಅರ್ಥಶಾಸ್ತ್ರಜ್ಞರು ಮತ್ತು ಈ ಲಿಬರಲ್‌ಗಳು (ಈಗ ಯಾರು ಲಿಬರಲ್ ಅಲ್ಲ ?) ತಮ್ಮ ವಾದಗಳಲ್ಲಿ ಯಾವುದೇ ರಾಜಕೀಯ ಪೂರ್ವಗ್ರಹಗಳಿಲ್ಲ ಎಂದು ನಟಿಸಿದರೂ ಅವರು ಹೇಳಿದ್ದರಲ್ಲಿ ಇರುವ ಮುಸುಕಿನೊಳಗಿನ ರಾಜಕೀಯಕ್ಕಿಂತ ಹೇಳಲೇಬೇಕಾದ್ದನ್ನು ಹೇಳದೆ ಇರುವುದರಲ್ಲಿ ಗಮನಿಸಲೇಬೇಕಾದ್ದನ್ನು ಮರೆಮಾಡುವುದರಲ್ಲಿ ಇರುವ ರಾಜಕೀಯ ಹೆಚ್ಚಿನದು. (ಲೇಖನದ ಕೊನೆಯಲ್ಲಿರುವ ಟಿಪ್ಪಣಿ 1 ನೋಡಿ.)
ಬದುಕು ಎಲ್ಲ ತತ್ವಗಳನ್ನೂ, ವರ್ಗಿಕರಣಗಳನ್ನೂ ಸದಾ ಮೀರಿ ನಿಲ್ಲುತ್ತದೆ ಎನ್ನುವುದು ಸತ್ಯವಾದರೂ ಯಾವುದೇ ಪ್ರಜ್ಞಾಪೂರ್ವಕವಾದ ತಾತ್ವೀಕರಣ (Conceptionalization) ವಿಲ್ಲದೆ ಆರ್ಥಿಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಯೋಚಿಸ ಹೊರಟಾಗೆ ಅನಾಹುತಗಳಾಗುತ್ತವೆ. ಎಲ್ಲ ತತ್ವಕ್ಕೂ ಒಂದೊಂದು exception ಇರಬಹುದಾದರೂ, ಪೂರ್ವನಿಶ್ಚಿತ ತತ್ವದ ಚೌಕಟ್ಟಿಲ್ಲದೆ ಯಾವುದೇ ವಿಶ್ಲೇಷಣೆಯೂ ಸಾಧ್ಯವಿಲ್ಲ. ಉದಾಹರಣೆಗೆ ಈಗ ಬಳಕೆಯಲ್ಲಿರುವ, ಬೇಕಾಬಿಟ್ಟಿಯಾಗಿ ಉಪಯೋಗಿಸಲ್ಪಡುತ್ತಿರುವ, ರೈತ, ಭೂಮಾಲಕ, ಧನಿ ಇತ್ಯಾದಿ ಶಬ್ದಗಳನ್ನು ನೋಡಿರಿ. ರೈತ ಭಾರತದ ಬೆನ್ನೆಲುಬು ಎನ್ನುವಾಗ ರೈತರದ್ದು ಒಂದು ಅಖಂಡ ಜನಸ್ತೋಮ, ಒಂದು homogeneous entity ಎಂಬ ಕಲ್ಪನೆ ಬರುತ್ತದೆ. ಭೂಮಾಲಕ, ಧನಿ-ಈ ಶಬ್ದಗಳೂ ಇದೇ ಸ್ವರೂಪದವು. ಆದರೆ ಈ ಶಬ್ದಗಳು ಕೊಡುವ ಚಿತ್ರಕ್ಕೂ ವಾಸ್ತವಕ್ಕೂ ತುಂಬ ಅಂತರವಿದೆ. ರೈತ, ರೈತಾಪಿ ಜನತೆ, ರೈತ ಸಮುದಾಯ, ಹಳ್ಳಿಯ ಬಡ ಬೋರೇಗೌಡ ಇತ್ಯಾದಿ phraseಗಳು ಸೂಚಿಸುವಂತೆ ರೈತರದ್ದು ಒಂದು ಅಖಂಡ ಸಮುದಾಯವಲ್ಲ. ಹಳ್ಳಿಗಳ ಬದುಕು ನಿಯಂತ್ರಿಸುವ ಶ್ರೀಮಂತ ರೈತ ಪುಢಾರಿಗಳಿಂದ, ಕಡು ಬಡತನದಲ್ಲಿ ಬದುಕುವ ಭೂಹೀನ ಕೃಷಿಕಾರ್ಮಿಕರವರೆಗಿನ ಅನೇಕ ಹಂತಗಳಲ್ಲಿರುವ ಜನಸಮುದಾಯದ ವರ್ಗಭೇದದ ವಾಸ್ತವವನ್ನು ಈ ಶಬ್ದಗಳು ಮರೆಮಾಚುತ್ತವೆ. ಹಾಗೆಯೇ ಧನಿ, ಭೂಮಾಲಕ ಎಂಬ ಶಬ್ದಗಳು ಕೂಡಾ ಭಾರೀ ಭೂಮಾಲಕರು, ಶ್ರೀಮಂತ ರೈತರಿಂದ ಹಿಡಿದು ನಾನಾ ಕಾರಣಗಳಿಂದ (ಸಾಂಸ್ಕೃತಿಕ ಸಾಮಾಜಿಕ ಕಾರಣಗಳೂ ಸೇರಿ) ಸ್ವಂತ ಸಾಗುವಳಿ ಮಾಡಲಾರದೆ, ಭೂಮಿಯನ್ನು ಗೇಣಿಗೆ ಕೊಟ್ಟಿರುವ ಎಷ್ಟೋ ವೇಳೆ ತನ್ನ ಒಕ್ಕಲಿಗಿಂತಲೂ ಹೀನಸ್ಥಿತಿಯಲ್ಲಿರುವ ಚಿಕ್ಕ ಹಿಡುವಳಿದಾರನವರೆಗಿನ ವಿವಿಧ ಹಂತಗಳ ಭೇದಗಳನ್ನೂ, ಇವುಗಳ ಒಳಗೇ ಇರುವ ಹಿತಾಸಕ್ತಿಗಳ ಪರಸ್ಪರ ವೈರುಧ್ಯಗಳನ್ನೂ (Contradictions) ಈ ಶಬ್ದಗಳು ಮರೆಮಾಚುತ್ತವೆ (1974ರ ಕರ್ನಾಟಕ ಭೂ ಶಾಸನ ಕೂಡಾ ಈ ಮೂಲಭೂತವಾದ ತಪ್ಪನ್ನು ಮಾಡಿದೆ). ಯೋಚನೆಯ ಅಸ್ಪಷ್ಟತೆ ಭಾಷೆಯನ್ನು ಆಸ್ಪಷ್ಟಗೊಳಿಸುತ್ತದೆ. ಭಾಷೆಯ ಅಸ್ಪಷ್ಟತೆ ಯೋಚನೆಗಳನ್ನು ಇನ್ನಷ್ಟು ಮಬ್ಬುಗೊಳಿಸುತ್ತದೆ. ಆರ್ವೆಲ್ ಹೇಳುವಂತೆ :
“Language becomes ugly and inaccurate becaus: our thoughts are foolish, but the slovenlines of our language makes it easier for us to have foolish thoughts.” (“Politics & the English language selected writings”. ಈ ಪ್ಯಾರಾಕ್ಕೆ ಸ್ಫೂರ್ತಿಯೂ ಈ ಪ್ರಬಂಧದ್ದೆ). ಆದ್ದರಿಂದ ಎಲ್ಲ ವರ್ಗಿಕರಣಗಳನ್ನೂ, ಎಲ್ಲ ತತ್ವಗಳನ್ನೂ ಮೀರಿ ಪರಮ ಸತ್ಯವನ್ನೇ ಹೇಳುತ್ತೇನೆ ಎಂದು ಹೊರಟವ, ಭಾರತದ ಬದುಕಿನ ಇಂದಿನ ಸಂದರ್ಭದಲ್ಲಿ ಗೊತ್ತಿಲ್ಲದೆ ಸುಳ್ಳು ಹೇಳುವ ಪೆದ್ದನಾಗುತ್ತಾನೆ ; ಅಥವಾ ಉದ್ದೇಶಪೂರ್ವಕವಾಗಿ ಸುಳ್ಳು ಹೇಳುವ ಫಟಿಂಗನಾಗುತ್ತಾನೆ. “The limits of my language are the limits of my World” ಎಂದು ವಿಟ್‌ಗೆನ್‌ಸ್ಟೀನ್ ಹೇಳುತ್ತಾನೆ. ಬದುಕಿಗೆ ಹೇಗೋ ಹಾಗೆ ಭಾಷೆಗೂ ಪ್ರಾಪ್ತವಾಗುವುದು ನಾವು ಅದಕ್ಕೆ ಕೊಡುವಷ್ಟೇ ಅರ್ಥ. (“Life has only that meaning which I give it”-ಸಾರ್ತ್ರೆ). ಭಾರತದ ಹಳ್ಳಿಗಳ ಸ್ಥಿತಿಗತಿಗಳ ಕುರಿತು ಯೋಚಿಸುವಾಗ, ಮೇಲಿಂದ ಮೇಲೆ ನಾವು ಓದುವ “ಪ್ರಜಾಪ್ರಭುತ್ವ, ಜನ ಸಾಮಾನ್ಯ, ರೈತ-ಭೂಮಾಲಿಕ, ಧನಿ–ಒಕ್ಕಲು, ಪ್ರಗತಿಶೀಲ, ಧರ್ಮ, ಪರಂಪರೆ ಮುಂತಾದ ಶಬ್ದಗಳಿಗೆ ಏನೂ ಅರ್ಥವಿಲ್ಲವೆನ್ನಿಸುತ್ತದೆ. ಇವುಗಳಲ್ಲಿ ಕಾಣುವುದು ಭಾಷೆಯ ದುಂದು, ಅಂದರೆ ಯೋಚನೆಯ ಅಭಾವ. ಕಥೆ ಕಾದಂಬರಿಗಳಿಂದ ಹಿಡಿದು ಪತ್ರಿಕೆಗಳ ಕಾರ್ಟೂನ್‌ಗಳವರೆಗೆ ಜನಸಾಮಾನ್ಯನ ಹೆಸರಿನಲ್ಲಿ ಚಿತ್ರಿತವಾಗುವುದು ನಗರಗಳ ಮಧ್ಯಮ ವರ್ಗದ ಸೀಮಿತ ಬದುಕಿನ ಚಿತ್ರಣ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ಎಂದರೆ ಯಾರ ಪ್ರಭುತ್ವ ? ಪರಂಪರೆ, ಶ್ರದ್ದೆ ಎಂದರೆ ಯಾರ ಪರಂಪರೆ, ಯಾರ ಶ್ರದ್ದೆ ? ಇವು ನಾವು ತಿಳಿದಂತೆ ಒಟ್ಟು ಜನಾಂಗಕ್ಕೆ ಅಖಂಡವಾಗಿ ಅನ್ವಯವಾಗುವಂತಹವೆ ? ನಗರದ ಲಿಬರಲ್‌ನ ಸೋಗುಗಳ ಪ್ರಗತಿಶೀಲತೆಯೆ ? ಅಸಮಾನತೆ, ವರ್ಗವೈರುಧ್ಯ ಕಣ್ಣು ಕುಕ್ಕುವಷ್ಟು ಸ್ಪಷ್ಟ ಕಾಣಿಸುವ ನಮ್ಮ ಪರಿಸರದಲ್ಲಿ ಇಂತಹ ಶಬ್ದಗಳು ಕೇವಲ ಶಬ್ದಗಳಾಗಿ ಉಳಿದಿಲ್ಲ ; ಅವು ಆಸ್ಕಕ್ತರ ಕೀಳುಮಟ್ಟದ ಪ್ರಚಾರದ ತಂತ್ರಗಳಾಗಿವೆ.
ಇಂತಹದ್ದೇ ದುರುಪಯೋಗದಿಂದ ಅರ್ಥಹೀನವಾಗಿರುವ ಇನ್ನೆರಡು ಶಬ್ದಗಳೆಂದರೆ ಬ್ರಾಹ್ಮಣ-ಶೂದ್ರ, ಮತ್ತೆ ಈ ಎರಡು ಶಬ್ದಗಳೂ ಸೂಚಿಸುವುದು ಎರಡು ವಿರುದ್ಧ ಹಿತಾಸಕ್ತಿಗಳುಳ್ಳ, ಮುಖಾಮುಖಿಯಾಗಿ ನಿಂತಿರುವ ಎರಡು ಅಖಂಡ ಜನಸ್ತೋಮಗಳನ್ನು. ಆದರೆ ಬ್ರಾಹ್ಮಣರೂ ಸೇರಿ ಎಲ್ಲ ಜಾತಿಗಳಲ್ಲಿಯೂ ಕಡುಬಡವರು ದೊಡ್ಡ ಸಂಖ್ಯೆಯಲ್ಲಿರುವುದನ್ನೂ, ಜಾತಿ ವ್ಯವಸ್ಥೆಯಲ್ಲಿಯೂ ಹಂತಗಳಲ್ಲಿರುವುದನ್ನೂ, ಈ ಜೋಡಿ ಶಬ್ದಗಳು ಮರೆಮಾಚುತ್ತವೆ.
ತಾತ್ವಿಕವಾಗಿ ವಾಸ್ತವದ ಬಗ್ಗೆ ಯೋಚಿಸದೆ ಬರೆದಾಗ ಒಂದು ಶಬ್ದ ತನ್ನಷ್ಟಕ್ಕೆ ತಾನೇ ಎಂಥ ಭಯಂಕರ ಸುಳ್ಳಾಗಿಬಿಡಬಹುದೆಂಬುದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಈಗ ವ್ಯಾಪಕವಾಗಿ ಬಳಕೆಯಲ್ಲಿರುವ, “ಕೃಷಿ ಕಾರ್ಮಿಕ” ಎನ್ನುವ ಶಬ್ದ. (ಬೇರೆ ಸರಿಯಾದ ಶಬ್ದ ಸಿಗದ್ದಕ್ಕೆ ನಾನೂ ಉದ್ದಕ್ಕೂ ಇದೇ ಶಬ್ದವನ್ನೇ ಉಪಯೋಗಿಸಿದ್ದೇನೆ.
ಕಾರ್ಮಿಕ ಎಂದ ತಕ್ಷಣ ನಮ್ಮ ಮನಸ್ಸಿನ ಮುಂದೆ ನಿಲ್ಲುವುದು ಒಂದೇ ತರಹೆಯ ಕೆಲಸವನ್ನು ಹಲವರೊಡನೆ ಸೇರಿ ದುಡಿಯುವ ವ್ಯಕ್ತಿ. ಈತನ ಕೆಲಸಕ್ಕೆ ಸಂಬಂಧಿಸಿದ ಕೆಲಸದ ವೇಳೆ, ಕೆಲಸದ ಪ್ರಮಾಣ, ಸ್ಥಳ, ಸಂಬಳ ಎಲ್ಲವೂ ನಿಯಮಬದ್ಧ. ತನ್ನಂತಿರುವ ಇತರ ಅನೇಕರೊಡನೆ ಈತ ತನ್ನ ಜೀವನ ಮಟ್ಟವನ್ನು ಮಾತ್ರವಲ್ಲ ಜೀವನ ಕ್ರಮವನ್ನು ಹಂಚಿಕೊಂಡಿರುವವನು; ತನ್ನ ಬದುಕಿನ ಈ ವಿಶಿಷ್ಟತೆಯ ಕಾರಣದಿಂದಲೇ ಸ್ವಲ್ಪ ಮಟ್ಟಿಗಾದರೂ ಇತರರೊಡನೆ ಸಂಘಟಿತನಾಗಿರುವವನು. ಔದ್ಯಮಿಕ ಕ್ರಾಂತಿಯಿಂದ ಹುಟ್ಟಿಕೊಂಡ ಈ ಕಾರ್ಮಿಕ ವರ್ಗಕ್ಕೆ ಸಂಘಟನೆ ಪ್ರತಿಭಟನೆಗಳ ಕಾರಣದಿಂದ ಹಳ್ಳಿಯ ಬಡ ಕೃಷಿಕೂಲಿಗೆ ಸಿಗದ ಅನೇಕ ಸೌಲಭ್ಯಗಳು ದೊರೆತಿವೆ. ಆದರೆ ಸ್ವಂತ ಭೂಮಿ ಇಲ್ಲದ ಕೃಷಿಕಾರ್ಮಿಕನಿಗೆ ಅಥವಾ ಸ್ವಂತಭೂಮಿಯ ಫಸಲಿನಿಂದ ಬದುಕಲಾರದೆ ಇನ್ನೊಬ್ಬರ ಹೊಲದಲ್ಲಿಯೂ ದುಡಿಯುವ ಬಡರೈತನಿಗೆ ನಗರಗಳ ಕಾರ್ಮಿಕನ ಈ ಯಾವ ವಿಶಿಷ್ಟ ಗುಣವೂ ಇಲ್ಲ. ಆತ ಫ್ಯಾಕ್ಟರಿ ಕೆಲಸಗಾರನಂತೆ ನೂರಾರು ಜನರ ಮಧ್ಯೆ ಒಬ್ಬನಲ್ಲ. ಆದ್ದರಿಂದ ಆತನಿಗೆ ಆ ಸಂಘಟನೆಯ ಬಲವೂ ಇಲ್ಲ. ಒಂದು ನಿಶ್ಚಿತ ಉದ್ದೇಶಕ್ಕೆ ಕೃಷಿಕೂಲಿಗಾರ, ಕಾರ್ಮಿಕರಂತೆ, ತನ್ನಂತಿರುವ ಇತರರೊಡನೆ ಸುಲಭದಲ್ಲಿ ಒಗ್ಗಟ್ಟಾಗಲಾರ. ಭಾರತದಲ್ಲಿ ಹಳ್ಳಿಯ ಭೂಹೀನ ಕೃಷಿಕರನ್ನು ಸಂಘಟಿಸಲು, ರಾಜಕೀಯ ಪಕ್ಷಗಳು, ವಿಶೇಷವಾಗಿ ವಾಮಪಂಥೀಯ ಪಕ್ಷಗಳು ಪ್ರಯತ್ನಗಳನ್ನು ನಡೆಸಿವೆಯಾದರೂ, ಪ. ಬಂಗಾಳ, ಕೇರಳ, ಬಿಹಾರ ಮತ್ತು ತಮಿಳುನಾಡಿನ ಕೆಲವು ಭಾಗಗಳನ್ನು ಬಿಟ್ಟರೆ ಉಳಿದೆಡೆಗಳಲ್ಲಿ ಇವು ಅಷ್ಟು ಯಶಸ್ವಿಯಾಗಿಲ್ಲ. ಅಶಿಕ್ಷಿತನಾದ ಈತ ಲೇಬರ್ ಕೋರ್ಟಿನಂತಹ ಯಾವ ಅಧಿಕಾರದ ಎದುರೂ ತನ್ನ ದೂರು ಹೇಳಿಕೊಳ್ಳಲಾರ. ಕಾರ್ಮಿಕನಂತೆ ವರುಷದುದ್ದಕ್ಕೂ ಈತನಿಗೆ ಕೆಲಸವಿರುವುದಿಲ್ಲ. ಕೃಷಿಯ ಕೆಲಸ ಋತುಮಾನವನ್ನು ಅವಲಂಬಿಸಿ ನಡೆಯುವುದರಿಂದ ಈತನಿಗಿರುವ ಕೆಲಸ ವರುಷದ ಕೃಷಿ ನಡೆಯುವ ಒಂದೆರಡು ತಿಂಗಳುಗಳಲ್ಲಿ ಮಾತ್ರ. ದ. ಕ. ಜಿಲ್ಲೆಯಲ್ಲಿ ಕೃಷಿಯ ಹೆಚ್ಚಿನ ಕೆಲಸ ನಡೆಯುವುದು ಮೊದಲ ಬೆಳೆ ನೆಡುವ ಜೂನ್, ಜೂಲೈ ತಿಂಗಳುಗಳು ಮತ್ತು ಖಟಾವ್ ನಡೆಯುವ ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಮಾತ್ರ. ಎರಡು ಮತ್ತು ಮೂರು ಬೆಳೆಗಳು ಬೆಳೆಯುವ ಪ್ರದೇಶ ಈ ಜಿಲ್ಲೆಯಲ್ಲಿ ತೀರ ಕಡಿಮೆ-(ಒಂದು ಬೆಳೆಯ ಪ್ರದೇಶ 1,23,650 ಹೆಕ್ಟೇರುಗಳು, 2 ಬೆಳೆಯದ್ದು 49307 ಹೆಕ್ಟೇರುಗಳು, 3 ಬೆಳೆಯದ್ದು 7440 ಹೆಕ್ಟೇರುಗಳು, South Kanara District Gazeetteer-1973) ಕೃಷಿ ಕಾರ್ಮಿಕನ ಕೆಲಸವೇ seasonal ಆದ್ದರಿಂದ ಕೆಲಸದ ಭದ್ರತೆಯ ಕುರಿತು ಯೋಚಿಸುವುದೂ ಹಾಸ್ಯಾಸ್ಪದ. ಈ ಕೃಷಿ ಕೂಲಿಗಳ ಕುಟುಂಬದದಲ್ಲಿ ಹತ್ತು ಹನ್ನೊಂದು ವರುಷದ ಪ್ರಾಯದ ಹುಡುಗರೂ ಸೇರಿ ಎಲ್ಲರೂ ಎಲ್ಲ ತರದ ದೈಹಿಕ ಕೆಲಸಗಳಿಗೂ ಸಿದ್ಧರಾಗಿರುತ್ತಾರೆ. (ಈ ಜಿಲ್ಲೆಯಲ್ಲಿ ಭೂ ಹೀನ ಕೃಷಿಕೂಲಿಗಳ ಒಂದು ಸಣ್ಣ ಭಾಗದವರು ಬೀಡಿಕಟ್ಟುತ್ತಾರೆ.) ದ. ಕ. ಜಿಲ್ಲೆಯಲ್ಲಿ ಬ್ರಾಹ್ಮಣರು ಮತ್ತು ಗೌಡಸಾರಸ್ವತರನ್ನು ಬಿಟ್ಟು ಉಳಿದ ಎಲ್ಲ ಜಾತಿಗಳಲ್ಲೂ ಕೃಷಿ ಕಾರ್ಮಿಕರಿದ್ದರೂ ಜಾತಿಯ ಮೆಟ್ಟಿಲು ಕೆಳಗಿಳಿದಂತೆ. ಇವರ ಪ್ರಮಾಣ ಹೆಚ್ಚುತ್ತ ಹೋಗುತ್ತದೆ. ಉದಾ : ಹಳ್ಳಿಗಳ ಹರಿಜನರು ಮತ್ತು ಗಿರಿಜನರಲ್ಲಿ ಬಹುಸಂಖ್ಯಾಕರು ಭೂಹೀನ ಕೃಷಿಕಾರ್ಮಿಕರು, (ಜಿಲ್ಲೆಯ ಒಟ್ಟು ಜನಸಂಖ್ಯೆ 1971ರಲ್ಲಿ 19,39,315. ಇವರಲ್ಲಿ 99,687 ಜನ ಹರಿಜನರು, 63,596 ಗಿರಿಜನರು, ಒಟ್ಟು ಜನಸಂಖ್ಯೆಯಲ್ಲಿ 20.27% ರಷ್ಟು ಅಂದರೆ 3,93,178 ಜನ ನಗರವಾಸಿಗಳಾದರೆ ಹರಿಜನಗಿರಿಜನರಲ್ಲಿ ನಗರಗಳಲ್ಲಿದ್ದವರು ಕೇವಲ 14,100 ಹರಿಜನರು ಮತ್ತು 3,630 ಗಿರಿಜನರು. (S. K. Dt. Gazetteer 73) “ಕಾರ್ಮಿಕ” ಎನ್ನುವ ಶಬ್ದ ಹೇಳುವ ಯಾವ ವಿಶಿಷ್ಟ ತೆಯ ಹಳ್ಳಿಗಳ ಈ ದರಿದ್ರರಲ್ಲಿ ಇಲ್ಲ. ಇವರನ್ನು ಅಡನಾಡಿ ಕೂಲಿಗಳು (Lumper proletariat) ಎಂದು ಪರಿಗಣಿಸುವುದೇ ವಾಸ್ತವಕ್ಕೆ ಹೆಚ್ಚು ಹತ್ತಿರವಾಗುತ್ತದೆ. ದೇಶದ ಉಳಿದ ಭಾಗಗಳಂತೆ, ಈ ಜಿಲ್ಲೆಯಲ್ಲಿಯ ಇವರ ಸಂಖ್ಯೆ ಜನಸಂಖ್ಯೆಯ ಹೆಚ್ಚಳವನ್ನು ಮೀರಿ, ಹೆಚ್ಚುತ್ತ ಹೋಗಿದೆ. 1961ರಲ್ಲಿ ಜಿಲ್ಲೆಯ ಕೃಷಿ ಕೂಲಿಗಾರರ ಸಂಖ್ಯೆ 1,30,607 ಇದ್ದರೆ 1971 ರಲ್ಲಿ ಇದು 1,85,591ಕ್ಕೇರಿತ್ತು. ಆದರೆ 1961 ರಲ್ಲಿ ಸಾಗುವಳಿದಾರರ ಸಂಖ್ಯೆ 343147 ಇದ್ದರೆ 71 ರಲ್ಲಿ ಅದು 219945 ಕ್ಕಿಳಿದಿತ್ತು. ಕೃಷಿಕೂಲಿಗಳ ಈ ಸಂಖ್ಯಾಬಲ ಯಾವುದೇ ಸಂಘಟಿತ ರೂಪದಲ್ಲಿಯೂ ಇದುವರೆಗೆ ಈ ಜಿಲ್ಲೆಯಲ್ಲಿ ವ್ಯಕ್ತವಾಗಿಲ್ಲ. ಈ ಸಂದರ್ಭದಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಈ ದೇಶದಲ್ಲಿ ಕೃಷಿ ಇನ್ನೂ ಬಹುಮಟ್ಟಿಗೆ ಮನುಷ್ಯ ದುಡಿಮೆಯನ್ನೇ ಅವಲಂಬಿಸಿಕೊಂಡಿರುವಂತಹದ್ದು (labour intensive). ದೇಶದ ಕೆಲವೆಡೆ ಕೃಷಿ ಸ್ವಲ್ಪ ಮಟ್ಟಿಗೆ ಯಾಂತ್ರೀಕೃತವಾಗಿದ್ದರೂ ಇದರ ಪ್ರಮಾಣ ತೀರ ಗೌಣ. ದ. ಕ. ಜಿಲ್ಲೆಯ ಮಟ್ಟಿಗಂತೂ ಈ ಜಿಲ್ಲೆಯ ಭೌಗೋಳಿಕ ವಿಶಿಷ್ಟತೆಯ ಕಾರಣದಿಂದ ಭವಿಷ್ಯದಲ್ಲಿ ಇಲ್ಲಿನ ಕೃಷಿ ಯಾಂತ್ರೀಕೃತವಾಗುವ ಸಂಭವ ಕಡಿಮೆ (1972 ರಲ್ಲಿ ಇದೇ ಜಿಲ್ಲೆಯಲ್ಲೇ ಬತ್ತದ ಕೃಷಿಗೆ ಸಂಬಂಧಿಸಿದ ಯಂತ್ರಗಳ ಸಂಖ್ಯೆ ಹೀಗಿದೆ. 1. Tractors-11 2. Power tillers-424 3. Paddy threshers -27 4. Bull Dozers-4 5. Borewell rigs-4. ಆದರೆ ಜಿಲ್ಲೆಯಲ್ಲಿ ನೀರಾವರಿಗೆ ಸಂಬಂಧಿಸಿದಂತೆ ಡಿಸೇಲ್ ಮತ್ತು ವಿದ್ಯುತ್‌ಚಾಲಿತ ಪಂಪುಸೆಟ್ಟು ಗಳ ಉಪಯೋಗ ಹೆಚ್ಚಾಗಿದೆ. 1972 ರಲ್ಲೇ ಈ ಜಿಲ್ಲೆಯಲ್ಲಿ ಸುಮಾರು 20,000 ಪಂಪ್‌ಸೆಟ್ಟುಗಳಿದ್ದವು. ರಾಸಾಯನಿಕ ಗೊಬ್ಬರ ಮತ್ತು ಸುಧಾರಿತ ಬೀಜಗಳ ಉಪಯೋಗದಲ್ಲಿಯೂ ಗಣನೀಯವಾದ ಹೆಚ್ಚಳವಾಗಿದೆ. ಆದರೆ ಈ ಸೌಲಭ್ಯಗಳನ್ನು ಹೊಂದಿರುವವರು ಜಿಲ್ಲೆಯ ಶ್ರೀಮಂತ ಮತ್ತು ಮಧ್ಯಮ ರೈತರು ಮಾತ್ರ). ಕೃಷಿಯ ಕೆಲಸ ಒಂದು ನಿರ್ದಿಷ್ಟ ವೇಳೆಯೊಳಗೇ ನಡೆಯಬೇಕಾದ್ದರಿಂದ ಸಾಮಾನ್ಯವಾಗಿ ಅರ್ಧ ಎಕ್ರೆಯಿಂದ ಎರಡು ಎಕ್ರೆಗಳ ಜಮೀನುಳ್ಳ ಸಣ್ಣ ಹಿಡುವಳಿದಾರರು ಕೂಡ ಕೃಷಿ ಕೆಲಸಕ್ಕೆ ಕೃಷಿಕೂಲಿಗಳನ್ನು ಅವಲಂಬಿಸಿಕೊಂಡಿರುವುದು ತೀರ ಸಾಮಾನ್ಯ. (ಇದು ಭಾರತದ ಕೃಷಿಯ ವಿಶಿಷ್ಟತೆ ಎಂದು ಸ್ಟಾಫನ್ ಲಿಂಡ್‌ಬರ್ಗ್ ಮತ್ತು ಗೋರಾನ್ ಜ್ಯೂರ್‌ಫೆಲ್ಟ್ -ಸ್ವೀಡಿಷ್ ಅರ್ಥಶಾಸ್ತ್ರಜ್ಞರು-ಅಭಿಪ್ರಾಯಪಡುತ್ತಾರೆ. ಬಡರೈತರೂ ತಮ್ಮ ಹೊಲಗಳ ಕೃಷಿಗೆ ಕೃಷಿಕೂಲಿಗಳನ್ನು ಅವಲಂಬಿಸುತ್ತಾರೆ ; ತಮ್ಮ ಹೊಲಗಳ ಉತ್ಪತ್ತಿ ತಮ್ಮ ಕುಟುಂಬದ ಜೀವನ ನಿರ್ವಹಣೆಗೆ ಸಾಕಾಗದ್ದರಿಂದ, ತಾವೂ ಇತರರ ಹೊಲಗಳಲ್ಲಿ ದುಡಿಯುತ್ತಾರೆ. ಇವರ ಹಿಡುವಳಿಗಳು ತೀರ ಚಿಕ್ಕದಾದ್ದರಿಂದ, ಇವರ ಹೊಲದಲ್ಲಿ ಬೆಳೆಯುವ ಫಸಲು, ಇವರ ದುಡಿಮೆಯ ಸಂಬಳವೇ (wage) ಹೊರತು ಸಂಪತ್ತಿನ ಉತ್ಪಾದನೆಯಲ್ಲ. ಅಂದರೆ Economy of scale ಈ ರೈತರ ಹೊಲಗಳಿಗೆ ಅನ್ವಯವಾಗುವುದೇ ಇಲ್ಲ.[ಈ ಜಿಲ್ಲೆಯಲ್ಲಿ ಒಂದು ಕೊಯಿಲು ಅಂದರೆ 10 ಸೆಂಟ್ಸ್ ವಿಸ್ತೀರ್ಣದ ಗದ್ದೆಯಲ್ಲಿ ಬೆಳೆಯುವ ಬೆಳೆ ಸರಾಸರಿ, ಒಂದೂವರೆಯಿಂದ ಎರಡು ಮುಡಿ ಅಕ್ಕಿಯ ಭತ್ತ. 1 ಮುಡಿ=42 ಸೇರು. 3 ಮುಡಿಯಷ್ಟು ಅಕ್ಕಿಯ ಭತ್ತ 1 ಕೊಯಿಲಿನಲ್ಲಿ ಬೆಳೆಯುವವರೂ ಇದ್ದರೂ ಇವರು ಪಂಪ್‌ಸೆಟ್ ನೀರಾವರಿ, ಕೃತಕ ಗೊಬ್ಬರ ಮೊದಲಾದವುಗಳನ್ನು ಬಳಸಿ ಬೆಳೆ ತೆಗೆಯುವ ಶ್ರೀಮಂತ ರೈತರು. ನೀರಿನ ಆಶ್ರಯವಿರುವ ಬಯಲು ಗದ್ದೆಗಳಿಗಿಂತ, ನೀರಿನ ಆಶ್ರಯ ಅಷ್ಟೊಂದಾಗಿ ಇಲ್ಲದ ಬೆಟ್ಟುಗದ್ದೆಗಳಲ್ಲಿ ಬೆಳೆ ಇದಕ್ಕಿಂತ ಕಡಿಮೆಯಿರುತ್ತದೆ. 2 ಮತ್ತು 3 ನೆಯ ಬೆಳೆಗಳಲ್ಲಿಯೂ ಫಸಲು ಇದಕ್ಕಿಂತ ಸಾಮಾನ್ಯವಾಗಿ ಕಡಿಮೆಯಿರುತ್ತದೆ. (ಇಂತಹ ಗದ್ದೆಗಳು ಜಿಲ್ಲೆಯಲ್ಲಿ ತೀರ ಕಡಿಮೆ.) 2ನೆಯ ಬೆಳೆ ಉದ್ದು, ಹುರುಳಿ ಅಥವಾ ಅಲಸಂಡೆ ಧಾನ್ಯವಾದರೆ ಸಾಮಾನ್ಯವಾಗಿ 10 ಸೆಂಟ್ಸ್ ವಿಸ್ತೀರ್ಣದಲ್ಲಿ 14 ಸೇರು ಬೆಳೆಯುತ್ತದೆ.]
ಈ ಬಡ ರೈತ ಕಂ ಕೃಷಿಕೂಲಿಗಳ ಜೊತೆಗೆ, ಹೆಸರಿಗೆ ಕೂಡ ಒಂದು ಅಂಗುಲ ಭೂಮಿಯಿಲ್ಲದ ಭೂಹೀನ ಕೃಷಿ ಕಾರ್ಮಿಕರೂ ಭಾರತದ ಹಳ್ಳಿಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಭಾರತದ ಕೃಷಿಯ ಈ ವೈಶಿಷ್ಟ್ಯದಿಂದ ದ. ಕ. ಜಿಲ್ಲೆಯೂ ಹೊರತಲ್ಲ. ಲಿಂಡ್ ಬರ್ಗ್ ಮತ್ತು ಜ್ಯೂರ್‌ಫೆಲ್ಟ್, “ಭಾರತದ ವಾಮ ಪಂಥೀಯ ಪಕ್ಷಗಳು ಭಾರತದ ಕೃಷಿಯ ಅರ್ಥವ್ಯವಸ್ಥೆಯ ಈ ವೈಶಿಷ್ಟ್ಯವನ್ನು ಗಮನಿಸಿಯೇ ಇಲ್ಲ’ ಎಂದು ಅಭಿಪ್ರಾಯ ಪಡುತ್ತಾರೆ ; ವಾಮ ಪಂಥೀಯರ ಈ ಅಲಕ್ಷ್ಯ ಗಂಭೀರ ರಾಜಕೀಯ ಪರಿಣಾಮಗಳಿಗೆ ದಾರಿ ಮಾಡಿಕೊಡಬಹುದು ಎಂದೂ ಅವರು ಎಚ್ಚರಿಸಿರುತ್ತಾರೆ. (Some features of the Political Economy of Agriculture in a Tamil Village— Staffan Lindberg, Goran Djurfeldt-Social Scientist- 13 & 14). ಬಹುಶಃ ಹಳ್ಳಿಯ ಬಡಜನತೆಯನ್ನು ಸಂಘಟಿಸಲು ಭಾರತದ ವಾಮ ಪಂಥೀಯರು ನಡೆಸುವ ಪ್ರಯತ್ನಗಳೆಲ್ಲ ಮತ್ತೆ ಮತ್ತೆ ಸೋಲುತ್ತಿರುವುದಕ್ಕೆ ಈ ಸೈದ್ಧಾಂತಿಕ ಅಲಕ್ಷ್ಯವೇ ಕಾರಣವಾಗಿರಬಹುದು. ಭೂ ಹೀನ ಕೃಷಿ ಕಾರ್ಮಿಕರನ್ನು ದುಡಿಸುವವರು ಭಾರೀ ಭೂ ಮಾಲಕರೇ ಆಗಬೇಕೆಂದಿಲ್ಲ ; ಗೇಣಿ ಒಕ್ಕಲುಗಳು, ಸ್ವಂತ ಸಾಗುವಳಿಯ ಮಧ್ಯಮ, ಬಡ ರೈತರು ಕೂಡಾ ತಮ್ಮ ಭೂಮಿಯ ಕೃಷಿಗೆ ಕೃಷಿ ಕೂಲಿಗಳನ್ನು ಬಳಸುವುದು ಈ ಜಿಲ್ಲೆಯಲ್ಲಂತೂ ತೀರ ಸಾಮಾನ್ಯ. ಈ ಕೃಷಿ ಕೂಲಿಗೆ ಭಾರೀ ಭೂ ಮಾಲಕನೂ ಒಂದೆ, ಧನಿಯೂ ಒಂದೆ, ಒಕ್ಕಲೂ ಒಂದೆ, ಜಾತಿಯ ಹಂತಗಳಲ್ಲಿ ತೀರ ಕೆಳಗಿರುವ ಹರಿಜನ ಕೃಷಿ ಕೂಲಿಗಳ ಮಟ್ಟಿಗೆ, ಬ್ರಾಹ್ಮಣರು ಮತ್ತು ಬ್ರಾಹ್ಮಣೇತರ ಜಾತಿಗಳ ಭೂ ಮಾಲಕರಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಸರಕಾರದ ಭೂ ಸುಧಾರಣಾ ಶಾಸನ ಹಳ್ಳಿಯ ಬಡವರ ಉದ್ಧಾರಕ್ಕೆಂದು ಮಾಡುವ ಯಾವ ಶಾಸನ ಕೂಡಾ-ಮುಟ್ಟಲಾರದ ಜನ ಇವರು. 1974ರ ಕರ್ನಾಟಕ ಭೂ ಶಾಸನದ ಬಗ್ಗೆ ಸರಕಾರ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಜಾಹೀರಾತುಗಳಲ್ಲಿ ಈ ಶಾಸನದಿಂದ, “ಉಳುವವನೇ ನೆಲದೊಡೆಯ ನಾಗುವನು” ಎಂಬ ಮಾತಿದ್ದರೂ ಈ ಶಾಸನದ ಪ್ರಕಾರ ಭೂಮಿ ಇವರಿಗೆ ದೊರೆಯುವುದಿಲ್ಲ. ಇವರನ್ನು ದುಡಿಸುವ ಒಕ್ಕಲಿಗೆ ಸಿಗುತ್ತದೆ. (ಶಾಸನದಲ್ಲಿಯೇ ಸ್ವಂತ ಸಾಗುವಳಿ ಎಂದರೆ ಸ್ವತಃ ಮಾಡುವ ಕೃಷಿ. ಕುಟುಂಬದ ಇತರ ಸದಸ್ಯರೊಡನೆ ಮಾಡುವ ಕೃಷಿ ಮಾತ್ರವಲ್ಲ ಕೃಷಿ ಕೂಲಿಗಳನ್ನು ಸಂಬಳಕ್ಕೆ ನೇಮಿಸಿಕೊಂಡು ಮಾಡುವ ಕೃಷಿ ಕೂಡಾ ಸ್ವಂತ ಸಾಗುವಳಿ ಎಂದೇ definition ಇದೆ). ಆ ಒಕ್ಕಲು ಕೂಡಾ ಬಡ ರೈತನೇ ಆಗಿರಬೇಕೆಂದಿಲ್ಲ. ಒಕ್ಕಲೇ ತನ್ನ ಧನಿಗಿಂತ ಆರ್ಥಿಕವಾಗಿ ಬಲಿಷ್ಠನಾಗಿರುವುದೂ, ಗೇಣಿಗೆ ಧನಿಯಿಂದ ಪಡೆದ ಹೋಲಗಳ ಜೊತೆಗೆ ಸ್ವಂತದ ಹೆಸರಿನಲ್ಲಿಯೂ ಭೂಮಿ ಹೊಂದಿರುವ ಶ್ರೀಮಂತ ರೈತನಾಗಿರುವುದೂ ಈ ಜಿಲ್ಲೆಯಲ್ಲಿ ಅಪರೂಪವಲ್ಲ. (ಈ ಕಾರಣದಿಂದಲೇ, ಕೃಷಿಯ ಅರ್ಥವ್ಯವಸ್ಥೆಯ ಕುರಿತು ಯೋಚಿಸುವಾಗ ಕೇವಲ ಧನಿ-ಒಕ್ಕಲು ಎನ್ನುವ ಎರಡೇ ಶಬ್ದಗಳಲ್ಲಿ ಯೋಚಿಸುವುದು ವಾಸ್ತವಕ್ಕೆ ದೂರವಾಗುತ್ತದೆ.)
ಕರ್ನಾಟಕದಲ್ಲಿ ವ್ಯವಸಾಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವವರಲ್ಲಿ ಬಹುಶಃ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಕಾಫೀ, ಟೀ, ರಬ್ಬರ್, ಏಲಕ್ಕಿ ತೋಟಗಳ ಸುಮಾರು 2 ಲಕ್ಷ ತೋಟ ಕಾರ್ಮಿಕರನ್ನು (ಮತ್ತು ದ. ಕ. ಜಿಲ್ಲೆ, ಶಿವಮೊಗ್ಗ ಜಿಲ್ಲೆಗಳ ಭಾರೀ ಅಡಿಕೆ ತೋಟಗಳ ಕೂಲಿಗಳನ್ನು) ಮಾತ್ರ ಕೃಷಿ ಕಾರ್ಮಿಕರೆಂದು ಆ ಶಬ್ದದ ನಿಜ ಅರ್ಥದಲ್ಲಿ ಪರಿಗಣಿಸಬಹುದೋ ಏನೋ. ಆದರೆ ದೂರದ ಊರುಗಳಿಂದ ವಲಸೆ ಬಂದು ಇಲಿ ಬೋನಿನಂತಿರುವ ‘ಲೈನು’ಗಳಲ್ಲಿ (ಒಂದೇ ಮಾಡಿನಡಿಯಲ್ಲಿ ಸಾಲುಸಾಲಾಗಿರುವ ಹಲವು ಮನೆಗಳು) ವಾಸಿಸುವ ಈ ಕಾರ್ಮಿಕರು ಬದುಕುವ ರೀತಿಯಲ್ಲಿ ಮಾಡುವ ಕೆಲಸದ ಏಕರೂಪತೆ (Uniformity) ಮತ್ತು ನಿಯಮಬದ್ಧತೆಯಲ್ಲಿ ಈ ಕೂಲಿಗಳು ಹಳ್ಳಿಗಳ ಭೂಹೀನ ಕೃಷಿಕಾರ್ಮಿಕರಿಗಿಂತ ನಗರಗಳ ಫ್ಯಾಕ್ಟರಿ ಕೆಲಸಗಾರರಿಗೆ ಹೆಚ್ಚು ಹತ್ತಿರವಾಗಿದ್ದಾರೆ.
ಕರ್ನಾಟಕದ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಕಾಫೀ, ಟೀ, ರಬ್ಬರ್, ಏಲಕ್ಕಿ ತೋಟಗಳ 2 ಲಕ್ಷ ಕಾರ್ಮಿಕರಲ್ಲಿ 60% ರಷ್ಟು ಜನ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಗಳಿಂದ ವಲಸೆ ಬಂದವರು ; 30% ರಷ್ಟು ಜನ ತಮಿಳುನಾಡಿನಿಂದ, 6 ರಿಂದ 7% ರಷ್ಟು ಜನ ಕೇರಳದಿಂದ ಬಂದವರು ; ಉಳಿದ 3 ರಿಂದ 4% ರಷ್ಟು ಜನ ಸ್ಥಳೀಕರು, ಲಂಬಾಣಿ ಮತ್ತಿತರ ಗಿರಿಜನರು. ದ. ಕ. ಜಿಲ್ಲೆಯಿಂದ ಈ ತೋಟಗಳಿಗೆ ಕೂಲಿಗಳಾಗಿ ಹೋದವರಲ್ಲಿ ಬ್ರಾಹ್ಮಣರು ಮತ್ತು ಗೌಡಸಾರಸ್ವತರನ್ನು ಬಿಟ್ಟು ಉಳಿದ ಎಲ್ಲ ಜಾತಿಗಳವರೂ (ಕ್ರೈಸ್ತರು ಮತ್ತು ಮುಸ್ಲಿಮರೂ ಇದ್ದಾರೆ) ಇದ್ದರೂ ಹರಿಜನರ ಸಂಖ್ಯೆಯೇ ಜಾಸ್ತಿ. ಉಳಿದ ರಾಜ್ಯಗಳಿಂದ ಬಂದ ಕೂಲಿಗಳಿಗೂ ಈ ಮಾತು ಅನ್ವಯವಾಗುತ್ತದೆ. ಈ ಜಿಲ್ಲೆಯಿಂದ ವಲಸೆ ಹೋದ ಇಂತಹ ಕೃಷಿ ಕೂಲಿಗಳು ಕೇರಳದ ವೈನಾಡಿನ ಕಾಫಿ ತೋಟಗಳು ಮತ್ತು ತಮಿಳುನಾಡಿನ ನೀಲಗಿರಿಯ ತೋಟಗಳಲ್ಲೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹೀಗೆ ವಲಸೆ ಹೋದವರೆಲ್ಲರೂ ಕೀಳು ಜಾತಿಗಳವರು ಮತ್ತು ಬಡ ರೈತರ, ಕೃಷಿ ಕೂಲಿಗಳ ವರ್ಗದಿಂದಲೇ ಬಂದವರು ಎಂಬುದನ್ನೂ ಗಮನಿಸಬೇಕು. ಸಾಂಪ್ರದಾಯಿಕ ಮನೋಧರ್ಮದ, ಸಾಮಾನ್ಯ ಮಟ್ಟದ ಬಡತನ ಅಭ್ಯಾಸವೇ ಆಗಿರುವ, ಈ ನೆಲದಲ್ಲಿ ಆಳವಾದ ಬೇರುಗಳಿರುವ ಈ ಜನ ತಮ್ಮ ಹಳ್ಳಿಗಳಲ್ಲಿ ಬದುಕು ನಡೆಸಲಾರದೆ, ದೊಡ್ಡ ಸಂಖ್ಯೆಯಲ್ಲಿ ಬುಡ ಬೇರು ಕತ್ತರಿಸಿಕೊಂಡು ಹಳ್ಳಿಗಳ ಹೊರಗೆ ನಡೆದದ್ದು (ಮುಖ್ಯವಾಗಿ ಔದ್ಯಮಿಕ ಕೇಂದ್ರಗಳಾದ ನಗರಗಳಿಗೆ) ಒಂದು ಅಖಿಲ ಭಾರತ ಬೆಳವಣಿಗೆ. ಹೀಗೆ ವಲಸೆ ಹೋದವರೆಲ್ಲ, ಕೆಳಜಾತಿ ಕೆಳವರ್ಗಗಳಿಗೆ ಸೇರಿದವರಾದದ್ದಕ್ಕೋ ಏನೋ ಯಾವ ಬುದ್ದಿ ಜೀವಿಯೂ ಈ ಜನಾಂಗದ ಅನುಭವದ ಕೇಂದ್ರದಲ್ಲಿರುವ ಈ ಅಲೆಮಾರಿತನದ ಬಗ್ಗೆ ಅಷ್ಟೊಂದು ಗಮನ ತೋರಿಸಿಲ್ಲ. (ಕನ್ನಡದಲ್ಲಿ ಕಾರಂತರ ‘ಚೋಮನದುಡಿ’ ಕಾದಂಬರಿ ಮಾತ್ರ ಈ ಅನುಭವಕ್ಕೆ ಮಾತು ಕೊಡುವ ಸಫಲ ಪ್ರಯತ್ನ ಮಾಡಿದೆ). ಉದಾಹರಣೆಗೆ, ಈ ಜಿಲ್ಲೆಯಿಂದ ಯಾವ ಯಾವ ಜಾತಿ ವರ್ಗಗಳ ಎಷ್ಟು ಜನ ಹೀಗೆ ವಲಸೆ ಹೋಗಿದ್ದಾರೆ, ಎಲ್ಲಿಗೆ ಮತ್ತು ಯಾಕೆ ? ಎಂದು ಯಾರೂ ಇದುವರೆಗೂ ಒಂದು ಮಾದರಿ ಸರ್ವೆ ನಡೆಸಿರುವುದೂ ನನಗೆ ಗೊತ್ತಿರುವ ಮಟ್ಟಿಗೆ ಇಲ್ಲ. ಈ ಜಿಲ್ಲೆಯ ಅರ್ಥವ್ಯವಸ್ಥೆ ತನ್ನ ಎಲ್ಲ ಜನರಿಗೂ ಅನ್ನ ಉದ್ಯೋಗಗಳನ್ನು ಕೊಡುವ ಶಕ್ತಿಯನ್ನು ಎಂದೋ ಕಳೆದುಕೊಂಡಿದೆ. ಕರ್ನಾಟಕದ ಉಳಿದ ಎಲ್ಲ ಜಿಲ್ಲೆಗಳಿಗಿಂತಲೂ ಈ ಜಿಲ್ಲೆಯಿಂದ ಹೊರ ನಡೆದವರ ಸಂಖ್ಯೆ ಹೆಚ್ಚು ಎಂದು ನನ್ನ ಊಹೆ. (ಆದರೆ ನಿಖರವಾದ ಅಂಕೆ ಸಂಖ್ಯೆಗಳಿಲ್ಲದಿರುವುದರಿಂದ ಇದನ್ನು ಸಿದ್ದಪಡಿಸಲಾರೆ.) ಈ ವಲಸೆಯ ಬಗ್ಗೆ ಎಂತೆಂತಹ ಹಾಸ್ಯಾಸ್ಪದ ಕಲ್ಪನೆಗಳಿರಬಹುದು ಎಂಬುದಕ್ಕೆ S. K. Dt gazeetteer (1973)ನಲ್ಲಿರುವ ಈ ಅಣಿಮುತ್ತುಗಳನ್ನು ನೋಡಿ-ಗೆಝೆಟಿಯರ್ ಪ್ರಕಾರ ವಲಸೆಗೆ ಕಾರಣಗಳು ಹೀಗಿವೆಯಂತೆ“-
…………There are the common lures of town life such as the impersonal living and attractions of hotels, cinemas etc. The notion that town life is dependable and easy going in contrast with the uncertainities and hardships of agricultural life is also responsible to a certain extent for the drift in population” (ಪುಟ 89. ಎಸ್. ಕೆ. ಡಿ. ಗೆಝೆಟಿಯರ್-1973).
ಜನ, ನಗರಗಳಿಗೆ ವಲಸೆ ಹೋಗುತ್ತಿರುವುದಕ್ಕೆ ಹೋಟೆಲು ಸಿನೇಮಗಳ ಆಕರ್ಷಣೆ ಕಾರಣವಂತೆ ; ಕೃಷಿಯ ಕೆಲಸದ ಕಷ್ಟಗಳು ಮತ್ತು ಅನಿಶ್ಚಿತತೆಯೂ ಸ್ವಲ್ಪ ಮಟ್ಟಿಗೆ ಕಾರಣವಂತೆ. ಗ್ರಾಮದ ಜನತೆಯ ಬಹು ದೊಡ್ಡ ಭಾಗವೊಂದು ದಿವಾಳಿ ಎದ್ದಿರುವುದು. ಬಡ ರೈತರು ಭೂಮಿ ಕಳೆದುಕೊಂಡದ್ದು, ಭೂಹೀನ ಕೃಷಿ ಕೂಲಿಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾದದ್ದು, ನಗರಗಳ ಭಾರೀ ಕೈಗಾರಿಕಾ ಬಂಡವಾಳಶಾಹಿಗಳೊಡನೆ ಸ್ಪರ್ಧಿಸಲಾರದೆ ಗ್ರಾಮಾಂತರ ಸಣ್ಣ ಕೈಗಾರಿಕೆಗಳೆಲ್ಲ ನಾಶಗೊಂಡದ್ದು,- ಈ ಯಾವ ಕಾರಣವೂ ಗೆಝಟಿಯರ್‌ನ ಬೃಹಸ್ಪತಿಗಳಿಗೆ ಹೊಳೆಯಲೇ ಇಲ್ಲ. ಈ ಗೆಝೆಟಿಯರ್‌ನ್ನು ಸಂಪಾದಿಸಿದವರು ಸರಕಾರದ ಎಲ್ಲ ಸುಧಾರಣೆಗಳನ್ನೂ ಅನುಷ್ಠಾನಕ್ಕೆ ತರಬೇಕಾದ ಅಧಿಕಾರಶಾಹಿಯ ಅತ್ಯುನ್ನತ ಹಂತಗಳಲ್ಲಿರುವವರು. (ಕರ್ನಾಟಕ ಸರಕಾರ ಇತ್ತೀಚೆಗೆ ಎಲ್ಲ ಜಿಲ್ಲೆಗಳ ಬಗ್ಗೆಯೂ, ಜಿಲ್ಲೆಯ ಎಲ್ಲ ಮಾಹಿತಿಗಳನ್ನೂ ಒಳಗೊಂಡ ಬ್ರಹತ್ ಗಾತ್ರದ ಗೆಝೆಟಿಯರುಗಳನ್ನು ಹೊರತಂದಿದೆ). ವಸ್ತುಸ್ಥಿತಿ ಹೀಗಿರದೆ ಇದ್ದರೆ ಮೇಲಿನ ವಾಕ್ಯಗಳನ್ನು ‘ಜೋಕು’ಗಳೆಂದು ಮರೆತುಬಿಡಬಹುದಾಗಿತ್ತು.
ಫ್ಯಾಕ್ಟರಿ ಕಾರ್ಮಿಕರ ಬದುಕಿನ ಅನೇಕ ಲಕ್ಷಣಗಳನ್ನು ಹೊಂದಿರುವ ಕಾಫೀತೋಟದ ಕಾರ್ಮಿಕರೂ ಸ್ವಲ್ಪಮಟ್ಟಿಗೆ ಟ್ರೇಡ್ ಯೂನಿಯನ್ನುಗಳಲ್ಲಿ ಸಂಘಟಿತರಾಗಿರುವುದರಿಂದ ಕಾರ್ಮಿಕ ಕಾಯಿದೆಗಳ ಅನೇಕ ಪ್ರಯೋಜನಗಳನ್ನು ಪಡೆಯುವುದೂ ಇವರಿಗೆ ಸಾಧ್ಯವಾಗಿದೆ. (ಪಿ. ಎಫ್. ಬೋನಸ್ಸು, ನಿಗದಿ ಸಂಬಳ, ಹೆಂಗಸರಿಗೆ ಹೆರಿಗೆ ಭತ್ತೆ, ರಜಾ ಸೌಲಭ್ಯ ಇತ್ಯಾದಿ). ಎಲ್ಲ ತೋಟ ಕಾರ್ಮಿಕರಿಗೂ ಈ ಸೌಲಭ್ಯಗಳು ದೊರಕುತ್ತಿಲ್ಲ. ಸಂಘಟನೆ ಇಲ್ಲದೆಡೆಗಳಲ್ಲಿ ತೋಟಗಳ ಮಾಲೀಕರು ಕಾರ್ಮಿಕರಿಗೆ ಇವನ್ನು ವಂಚಿಸುವುದು ಸಾಮಾನ್ಯ. ಅಲ್ಲದೆ ಈ ತೋಟಗಳಲ್ಲಿಯೂ ಹಳ್ಳಿಗಳ ಭೂಹೀನ ಕೃಷಿ ಕಾರ್ಮಿಕರಂತೆ, ದಿನಗೂಲಿ, ಚೆಂಗೂಲಿ, Contract labourಗಳ ಮೇಲೆ ಇರುವ ಕೂಲಿಗಳೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇವರಿಗೂ ಈ ಸೌಲಭ್ಯಗಳು ದೊರೆಯುವುದಿಲ್ಲ. ಆದರೆ ತೋಟ ಕಾರ್ಮಿಕರ ಒಂದು ಗಣನೀಯ ವಿಭಾಗ ಈ ಸೌಲಭ್ಯಗಳನ್ನು ಪಡೆಯುತ್ತಿದೆ. ಆದರೆ ಹೊಲದಲ್ಲಿ ದುಡಿಯುವ ಭೂಹೀನ ಕೃಷಿ ಕಾರ್ಮಿಕನಿಗೆ, ಈ ತೋಟ ಕಾರ್ಮಿಕರ ಯಾವ ಗುಣ ವಿಶೇಷವೂ ಇಲ್ಲ. ಇದು ಗೊತ್ತಿಲ್ಲದೆ, ಈ ಬಗ್ಗೆ ಯೋಚಿಸದ ಮಂದಿ, “ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿ, ಇ. ಎಸ್. ಐ. ಸೌಲಭ್ಯ ಕೊಡುಗೆ” ಇತ್ಯಾದಿ ದಪ್ಪಕ್ಷರದ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿದ ತಕ್ಷಣ ನಂಬಿಬಿಡುತ್ತಾರೆ. “ರಾಜ್ಯದ 27 ಲಕ್ಷ ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿಯಾಗಿರುವುದು, ಇ. ಎಸ್. ಐ. ಸೌಲಭ್ಯ ಕೊಡಮಾಡಿರುವುದು ಸ್ವಾಗತಾರ್ಹ. ಇದು ಯಾವತ್ತೋ ಆಗಬೇಕಿತ್ತು. ಈಗಲಾದರೂ ಆಗುತ್ತಿರುವುದು ತುಂಬ ಸಂತೋಷ” ಇತ್ಯಾದಿಯಾಗಿ ನಮ್ಮ ತಿರುಳ್ಗನ್ನಡದ ವೃತ್ತ ಪತ್ರಿಕೆಗಳ ಸಂಪಾದಕೀಯಗಳನ್ನು ಓದಿದರಂತೂ, ಓದಿದ್ದು ಪರಮಸತ್ಯ ಎನ್ನಿಸಿಬಿಡುತ್ತದೆ. ಯೋಚಿಸದೆ ಬರೆದ ಶಬ್ದಗಳೂ ವಾಕ್ಯಗಳೂ ತಮ್ಮಷ್ಟಕ್ಕೇ ತಾವೇ ಜಾಹೀರಾತುಗಳಾಗುವುದು ಹೀಗೆ. ರಾಜ್ಯದ ನೂರಾರು ಹಳ್ಳಿಗಳಲ್ಲಿ ಇದನ್ನು ಜಾರಿಗೊಳಿಸುವುದಕ್ಕೆ ಏನಾದರೂ ವ್ಯವಸ್ಥೆ ಇದೆಯೆ ? ಯಾವ ವ್ಯವಸ್ಥೆಯೂ ಇಲ್ಲದೆ ಇದು ಜಾರಿ ಆದೀತೆ ?
ಈ ಕೊಡುಗೆಯನ್ನು ಕಾರರೂಪಕ್ಕೆ ತರಲು ಏನಾದರೂ ಆಡಳಿತ ಸೂತ್ರಗಳಿವೆಯೇ ? ಎಂಬ ಯಾವ ಪ್ರಶ್ನೆಗಳೂ ಈ ಆಶ್ವಾಸನೆ, ಈ ಸಂಪಾ ದಕೀಯಂಗಳ ಎದುರು ನಿಲ್ಲಲಾರವು, ಈ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ, ಈಗಲೇ ಜಿಲ್ಲೆಯ ಹೆಚ್ಚಿನೆಡೆಗಳಲ್ಲಿ ಕೃಷಿಕೂಲಿಗಳಿಗೆ ಸರಕಾರ ನಿಗದಿಗೊಳಿಸಿರುವುದಕ್ಕಿಂತ ಹೆಚ್ಚಿನ ದಿನಗೂಲಿ ದೊರೆಯುತ್ತಿದೆ, ಕೃಷಿಯ ಅಥವಾ ಇನ್ನಿತರ ದೈಹಿಕ ಶ್ರಮದ ಕೆಲಸಕ್ಕೆ ಅದು ಇಡೀ ದಿನದ ಕೆಲಸವಾದರೆ 7-8 ರೂಪಾಯಿ ಅಥವಾ ಮೂರರಿಂದ ನಾಲ್ಕು ಸೇರು ಅಕ್ಕಿಯ ಕೂಲಿ ದರ ಈಗಲೇ ಹಲವೆಡೆ, ವಿಶೇಷವಾಗಿ ಪೇಟೆಗಳ ಸಮೀಪವಿರು ವೆಡೆಗಳಲ್ಲಿ ಇದೆ ; ಹೆಂಗಸರಿಗಾದರೆ ಇದು ಸ್ವಲ್ಪ ಕಡಿಮೆ ; ಹರಿಜನರಾದರೆ ಇನ್ನೂ ಸ್ವಲ್ಪ ಕಡಿಮೆ, [ಅವರು ‘ಮೂಲದ ಹೊಲೆಯ’ರಾದರೆ, ಅಂದರೆ ಧನಿಯ ಜಾಗದಲ್ಲಿ ಧನಿ ಕಟ್ಟಿಸಿದ ಮನೆಯಲ್ಲಿಯೇ ವಾಸವಾಗಿರುವವರಾದರೆ, ಒಂದು ಖಾಯಂ ಸಂಬಳಕ್ಕೆ (ದಿನಕ್ಕೆ ಒಂದು ಅಥವಾ 2 ಸೇರು ಅಕ್ಕಿ) ಧನಿ ಹೇಳಿದ ಯಾವುದೇ ಕೆಲಸ ಮಾಡ ಬೇಕಾಗುತ್ತದೆ ; ಅಂತಹ ವಿಶೇಷ ಕೆಲಸವಿಲ್ಲದ ದಿನದಲ್ಲೂ ಈ ಕೂಲಿಗೆ ತತ್ವಾರವಿಲ್ಲ ಇದು ಜೀತದ ಅನೇಕ ಲಕ್ಷಣಗಳನ್ನು ಹೊಂದಿದ್ದರೂ ಜೀತವಲ್ಲ, ಜೀತದ ಸಾಲದ ಋಣಾನುಬಂಧ ಇಲ್ಲಿ ಸಾಮಾನ್ಯವಾಗಿ ಇರುವುದಿಲ್ಲ]. ಆದರೆ ಕೃಷಿಯ ಹೆಚ್ಚಿನ ಕೆಲಸ ಗಳು Seasonal ಮಾತ್ರವಲ್ಲ, ಹಿಡುವಳಿಗಳ ವಿಸ್ತೀರ್ಣ ಚಿಕ್ಕದಿದ್ದಾಗ (ಈ ಜಿಲ್ಲೆ ಯಲ್ಲಿ ಇಂತಹ ಚಿಕ್ಕ ಹಿಡುವಳಿಗಳದ್ದೇ ಜಾಸ್ತಿ ಸಂಖ್ಯೆ) ಕೃಷಿಯ ಕೆಲಸ, ಕೂಡಾ piecemeal ಕೆಲಸವಾಗಿರುತ್ತದೆ, ಆದ್ದರಿಂದ ಕೃಷಿ ಕಾರ್ಮಿಕರ ಮಟ್ಟಿಗೆ ಕನಿಷ್ಟ ದಿನಗೂಲಿ’ ಎಂಬುದು ಅರ್ಥಹೀನವಾದದ್ದು, ಶಬ್ದಗಳನ್ನು ಅವುಗಳ ಅರ್ಥ ನಿಖರತೆಯ ಬಗ್ಗೆ ಯೋಚಿಸದೆ, ‘ಈ ಸಂದರ್ಭದಲ್ಲಿ ಈ ಶಬ್ದಕ್ಕೆ ನಾನು ಕೊಡುವ ಅರ್ಥ ಇದು’ ಎಂದು define ಮಾಡದೆ, ಉಪಯೋಗಿಸಿದಾಗ ಶಬ್ದ ಹೇಳಹೊರಟ ಸತ್ಯ, ಹೇಗೆ ಪತ್ತೆಯಾಗದ ಹಾಗೆ ಮರೆಯಾಗಿ ಬಿಡುತ್ತದೆ ಎಂಬುದಕ್ಕೆ ಇದೂ ಒಂದು ಒಳ್ಳೆಯ ಉದಾಹರಣೆ. ದುರಂತವೆಂದರೆ ಇಂತಹದ್ದನ್ನು ಬರೆದವರೂ ಬಹುವೇಳೆ ಬರೆದದ್ದನ್ನು ನಂಬಿರುತ್ತಾರೆ ; ಮತ್ತು ತಮಗೆ ಗೊತ್ತಿಲ್ಲದಂತೆ ವ್ಯವಸ್ಥೆಯ ಪ್ರಚಾರಕರಾಗಿಬಿಡುತ್ತಾರೆ. ಮಾತಿಗೆ ಮತ್ತು ಯೋಚಿಸುವುದಕ್ಕೆ ನಮಗಿರುವುದು ಇದೊಂದೇ ಭಾಷೆಯಾದ್ದರಿಂದ ಭಾಷೆಯ ಅರ್ಥ ನಿಖರತೆಯನ್ನು ವ್ರತದಂತೆ ಕಾಪಾಡಿಕೊಂಡು ಬರಬೇಕಾದ ಅಗತ್ಯ ಎಂದಿಗಿಂತ ಈಗ ಹೆಚ್ಚು. ಆರ್ವೆಲ್ ಹೇಳುತ್ತಾನೆ : “If thought corrupts language, language can also corrupt thought”. (Politics & the english language). ಹೀಗೆ ಭಾಷೆಯ ಶೀಲ ಕೆಡಿಸಿದರೆ ಸೇಡು ತೀರಿಸಿಕೊಳ್ಳುವುದಕ್ಕೆ ಭಾಷೆಗೆ ತನ್ನದೇ ಆದ ಮಾರ್ಗಗಳಿವೆ. ಕಾಗದದ ಮೇಲೆ ಕಾರಿಕೊಂಡದ್ದು, ಮೈಕಿನ ಮುಂದೆ ಉಗುಳಿದ್ದು ಮೊದಲು ಸುಳ್ಳಾದದ್ದು ನಂತರ ಭ್ರಮೆಯಾಗುತ್ತದೆ. ಸುಳ್ಳಿನ ಬಲೆಯಲ್ಲಿ ಬಿದ್ದ ಪೆದ್ದನಂತೆ, ಬಲೆಬೀಸಿದ ಫಟಿಂಗ ಕೂಡ, ತನ್ನ ಜಾಲದಲ್ಲಿ ತಾನೇ ಸಿಕ್ಕಿಕೊಳ್ಳುತ್ತಾನೆ. ದೇಶವೇ ಇಂತಹ ಸುಳ್ಳಿನ ಬಲೆಯೊಳಗೆ ಸಿಕ್ಕಿಬಿದ್ದು ಒದ್ದಾಡುತ್ತಿರುವ ದುರಂತ ಈಗ ನಮ್ಮ ಕಣ್ಣೆದುರಿಗೆ ನಡೆಯುತ್ತಿರುವಂತಹದ್ದು.
ಯಾಕೆ ಇಷ್ಟನ್ನು ಬರೆಯಬೇಕಾಯಿತೆಂದರೆ, ಈ ಶಬ್ದಗಳೆಲ್ಲ ಇಂದು ಕೇವಲ ಶಬ್ದಗಳಾಗಿ ಉಳಿದಿಲ್ಲ. ಕೆಲವರ ರಾಜಕೀಯ ಅಸ್ತ್ರಗಳಾಗಿರುವ ಈ ಶಬ್ದಗಳಲ್ಲಿ ಈ ಜಿಲ್ಲೆಯ ಅಥವಾ ಈ ರಾಜ್ಯದ ಭೂಮಿಯ ಪ್ರಶ್ನೆಯನ್ನು ವಿವರಿಸಲಾಗುವುದಿಲ್ಲ. ಅಂತಹ ಯಾವುದೇ ಪ್ರಯತ್ನ ಶುದ್ದ ಮೋಸ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಆದರೆ ಈ ಬಗ್ಗೆ ನಮ್ಮ ಪ್ರಸಾರ ಮಾಧ್ಯಮದ ಮುಖಾಂತರ ಬರುತ್ತಿರುವ ಹೆಚ್ಚಿನ ವಿವರಣೆಗಳೆಲ್ಲ ಈ ಶಬ್ದಗಳಲ್ಲೇ ಇರುವಂತಹವು. ಅರ್ಥಶಾಸ್ತ್ರಾಭ್ಯಾಸಿಗೇನೂ ಬೆನ್ನಿನಲ್ಲಿ ರೆಕ್ಕೆಗಳಿಲ್ಲ. ಆತ ಕೂಡ ಮರ್ತ್ಯರ ಭಾಷೆಯಲ್ಲಿಯೇ ಯೋಚಿಸಬೇಕು ; ಬರೆಯಬೇಕು. ಆರ್ವೆಲ್ ಹೇಳುವಂತೆ, “The decline of language must have ultimately political and economic courses”, ಈ ಜಿಲ್ಲೆಯ ಕೃಷಿಯ ಅರ್ಥವ್ಯವಸ್ಥೆಯ ಮತ್ತು ಈ ವ್ಯವಸ್ಥೆ ರೂಪಿಸಿದ ಮನುಷ್ಯ ಸಂಬಂಧಗಳು ಧನಿ-ಒಕ್ಕಲು ಭೂಮಾಲಕ-ಬಡವ ಇತ್ಯಾದಿ ಶಬ್ದಗಳಲ್ಲಿ ವಿವರಿಸಬಹುದಾದಷ್ಟು ಸರಳವಾಗಿಲ್ಲ. (ದೇಶದ ಎಲ್ಲಿಯೂ ಇದು ಇಷ್ಟು ಸರಳವಲ್ಲ). ಭೂಮಾಲಕರಲ್ಲೂ ಒಕ್ಕಲುಗಳಲ್ಲೂ ಪರಸ್ಪರ ವಿರುದ್ಧ ಹಿತಾಸಕ್ತಿಗಳುಳ್ಳ ವೈರುಧ್ಯಗಳುಳ್ಳ ಹಲವು ಗುಂಪುಗಳಿರುವುದು, ರೈತಾಪಿ ಜನತೆ ಒಂದು ಅಖಂಡ ಸಮುದಾಯವಾಗಿಲ್ಲದಿರುವುದು ಈ ಜಿಲ್ಲೆಯ ಕೃಷಿವ್ಯವಸ್ಥೆಯಲ್ಲಿ ಎದ್ದು ಕಾಣುವ ಸತ್ಯ. ಈ ಕೆಳಗಿನ ಟೇಬಲ್ಲು (ತಃಖ್ತೆ) ನೋಡಿ. ಇದು 1956 ಅಂಕಿ ಸಂಖ್ಯೆಗಳು. (ಇದಕ್ಕಿಂತ ಹೆಚ್ಚು ವಿವರಗಳುಳ್ಳ, ವರ್ತಮಾನಕ್ಕೆ ಹೆಚ್ಚು ಸಮೀಪವಾದ ವಿವರಗಳುಳ್ಳ ಪಟ್ಟಿಯೊಂದನ್ನು ಮುಂದೆ ಕೊಟ್ಟಿದ್ದೇನೆ. 1956 ರಿಂದ 1975 ರವರೆಗೆ ಭಾರೀ ಶ್ರೀಮಂತ ಹಿಡುವಳಿದಾರರು, ಬರಬಹುದಾದ ಎಲ್ಲ ಕಾನೂನುಗಳಿಂದಲೂ ತಪ್ಪಿಸಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ಹಿಡುವಳಿಗಳ ಬೇನಾಮಿ ಪರಭಾರೆ ಮತ್ತು ಹಂಚಿಕೆಗಳನ್ನು ನಡೆಸಿರುವುದನ್ನು ತೋರಿಸಲು ಈ ಹಳೆಯ ಅಂಕಿ ಸಂಖ್ಯೆಗಳ ಮಾಡಲು ಕೊಡುತ್ತೇನೆ).
ಹಿಡುವಳಿಯ ಪ್ರಮಾಣ ಹಿಡುವಳಿಗಳ ಒಟ್ಟು ಸಂಖ್ಯೆ ಒಟ್ಟು ವಿಸ್ತೀರ್ಣ
(ಹೆಕ್ಟೇರುಗಳಲ್ಲಿ)
2 ಹೆಕ್ಟೇರಂಗಳ ಒಳಗೆ 42800 27540
2 ರಿಂದ 4 ಹೆಕ್ಟೇರು 12300 36045
4 ರಿಂದ 6 ಹೆಕ್ಟೇರು 7400 37260
6 ರಿಂದ 12 ಹೆಕ್ಟೇರು 10900 93150
12 ರಿಂದ 24 ಹೆಕ್ಟೇರು 6200 103275
24 ರಿಂದ 40 ಹೆಕ್ಟೇರು 2200 66420
40 ರಿಂದ 80 ಹೆಕ್ಟೇರು 1300 72090
80 ಹೆಕ್ಟೇರುಗಳನ್ನು ವಿಕ್ಕಿರುವುವು 650 118260
(1 ಹೆಕ್ಟೇರು=2.47105 ಎಕ್ರೆ. 1 ಎಕ್ರೆ-100 ಸೆಂಟ್ಸ್).
(ಆಧಾರ: S. K Dt. Gazetteer)
2 ಹೆಕ್ಟೇರುಗಳು ಅಂದರೆ ಸುಮಾರು ಐದು ಎಕ್ರೆಗಳ ಒಳಗಿನ ಹಿಡುವಳಿಗಳು ಸಂಖ್ಯೆಯಲ್ಲಿ 42800 ಆದರೂ ಒಟ್ಟು ವಿಸ್ತೀರ್ಣ 27540 ಹೆಕ್ಟೇರುಗಳು ಮಾತ್ರ. ಆದರೆ 80 ಹೆಕ್ಟೇರುಗಳಿಗಿಂತಲೂ ಹೆಚ್ಚಿಗಿರುವ ಹಿಡುವಳಿಗಳು ಕೇವಲ 650 ಆದರೂ ಈ ಹಿಡುವಳಿಗಳ ಒಟ್ಟು ವಿಸ್ತೀರ್ಣ 118260 ಹೆಕ್ಟೇರುಗಳು. 12 ಹೆಕ್ಟೇರುಗಳ ಒಳಗೆ ಹಿಡುವಳಿಗಳಿರುವವರ ಒಟ್ಟು ಸಂಖ್ಯೆ 73400 ; ಮತ್ತು ಭೂಮಿಯ ಒಟ್ಟು ವಿಸ್ತೀರ್ಣ 193995 ಹೆಕ್ಟೇರುಗಳು. 12 ಹೆಕ್ಟೇರುಗಳಿಗಿಂತ ಹೆಚ್ಚಿರುವ ಹಿಡುವಳಿಗಳ ಸಂಖ್ಯೆ 16200. ಆದರೆ ಒಟ್ಟು ವಿಸ್ತೀರ್ಣ 360045 ಹೆಕ್ಟೇರುಗಳು. ಅಂದರೆ ದ.ಕ. ಜಿಲ್ಲೆಯ ಹಿಡುವಳಿದಾರರಲ್ಲಿ ಹೆಚ್ಚಿನವರು ಚಿಕ್ಕ ಹಿಡುವಳಿದಾರರಾದರೂ ಅವರಲ್ಲಿರುವ ಭೂಮಿಯ ವಿಸ್ತೀರ್ಣ, ಭಾರೀ ಹಿಡುವಳಿದಾರರ ಭೂಮಿಯ ವಿಸ್ತೀರ್ಣಕ್ಕಿಂತ ಮೂರು ಪಾಲಷ್ಟು ಕಡಿಮೆ. ದ. ಕ. ಜಿಲ್ಲೆಯಲ್ಲಿ ಭಾರೀ ಭೂಮಾಲಕರಿಲ್ಲ (ಇದು ಮೇಲಿಂದ ಮೇಲೆ ಕೇಳಿಬರುವ ಅಭಿಪ್ರಾಯ) ಎನ್ನುವವರು ಈ ಅಂಕಿ ಸಂಖ್ಯೆಗಳನ್ನು
ಪರಿಶೀಲಿಸಬೇಕು. (1956 ರಿಂದ 1975ರ ಒಳಗಿನ ಅವಧಿಯಲ್ಲಿ ಈ ಪರಿಸ್ಥಿತಿ ವಾಸ್ತವದಲ್ಲಿ ಬದಲಾಗಿಲ್ಲ. ಕೆಲವು ದೊಡ್ಡ ಹಿಡುವಳಿಗಳು ಆಸ್ತಿ ಪಾಲಾಗಿ ವಾಸ್ತವದಲ್ಲಿಯೂ ಹಂಚಿಹೋಗಿದ್ದರೂ ಬಹುಪಾಲು ದೊಡ್ಡ ಹಿಡುವಳಿಗಳಲ್ಲಿ ಭಾರೀ ಪ್ರಮಾಣದಲ್ಲಿ ಬೇನಾಮಿ ಪರಭಾರೆಗಳಾಗಿವೆ ಅಷ್ಟೆ,) ಭಾರೀ ಭೂಮಾಲಕರ ಸಂಖ್ಯೆ ಕಡಿಮೆ ನಿಜ. ಮನುಷ್ಯ ಮತ್ತು ಭೂಮಿಯ ಅನುಪಾತ (man-land ratio) ವಿಪರೀತವಿರುವ ದ.ಕ. ಜಿಲ್ಲೆಯಂತಹ ಪ್ರದೇಶದಲ್ಲಿ ಈ ಸಂಖ್ಯೆ ಹೆಚ್ಚಿರುವುದೂ ಅಸಾಧ್ಯ. ಹಾಗೆ ನೋಡಿದರೆ ಈ ದೇಶದ ಖಾಸಗಿ ಕೈಗಾರಿಕೆಗಳನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಂಡ ಟಾಟಾ ಬಿರ್ಲಾ ಮುಂತಾದ ಏಕಸ್ವಾಮ್ಯ ಗುತ್ತೇದಾರ ಕುಟುಂಬಗಳ ಸಂಖ್ಯೆ 50 ಕೋಟಿ ಜನರಿರುವ ಈ ದೇಶದಲ್ಲಿ ಐವತ್ತನ್ನೂ ಮೀರಲಾರದು. ಹಾಗೆಂದು ಈ ದೇಶದಲ್ಲಿ ಏಕಸ್ವಾಮ್ಯ ಗುತ್ತೇದಾರಿಗಳೇ ಇಲ್ಲ ಎನ್ನಲಾದೀತೆ ? ಅಲ್ಲದೆ ಕೃಷಿಯಲ್ಲಿ ತೊಡಗಿರುವವರಲ್ಲಿ ಬಹುಸಂಖ್ಯಾಕರು ಕಡು ಬಡವರಾಗಿರುವ ಪರಿಸ್ಥಿತಿಯಲ್ಲಿ ಈ “ಭಾರಿ” ಎಂದರೆ ಎಷ್ಟು ? ಈ ಜಿಲ್ಲೆಯ ವಾಸ್ತವವನ್ನು ಗಮನದಲ್ಲಿಟ್ಟು ರೈತರ ವರ್ಗಿಕರಣ ಮಾಡುವುದಾದರೆ, ಈ ಜಿಲ್ಲೆಯ ಕೃಷಿವ್ಯವಸ್ಥೆಯೊಡನೆ ಅನೇಕ ಸಮಾನ ಗುಣಗಳನ್ನು ಹೊಂದಿರುವ, ತಮಿಳುನಾಡಿನ ತಾಯೂರು ಎಂಬ ಹಳ್ಳಿಯ ಅರ್ಥವ್ಯವಸ್ಥೆಯನ್ನು ಅಭ್ಯಾಸ ಮಾಡಿದ Staffan Lindberg and Goran Djurfeldt ಅವರು ಮಾಡಿದ ಈ ಕೆಳಗಿನ ವರ್ಗಿಕರಣ ಒಳ್ಳೆಯ ಮಾದರಿ ಆಗಬಹುದು.
1) Big farmers-8 ಎಕ್ರೆ ಮತ್ತು ಅದಕ್ಕಿಂತ ಹೆಚ್ಚಿನ ಭೂಮಿಯನ್ನು ಹೊಂದಿರುವವರು.
2) Big Middle farmers-4 ಎಕ್ರೆಯಿಂದ 7.99 ಎಕ್ರೆಗಳಷ್ಟು ಭೂಮಿಯನ್ನು ಹೊಂದಿರುವವರು.
3) Small Middle farmers–2.50 ಎಕ್ರೆಯಿಂದ 3.99 ಎಕ್ರೆಗಳವರೆಗೆ ಭೂಮಿ ಇರುವವರು.
4) Small farmers-10 ಸೆಂಟ್ಸ್‌ನಿಂದ 2.49 ಎಕ್ರೆಗಳಷ್ಟು ಭೂಮಿ ಇರುವವರು.
5) Land less agricultural labourers-ಭೂಹೀನ ಕೃಷಿ ಕಾರ್ಮಿಕರು.
(ನೋಡಿ- Sorme-features of the political Economy of Agriculture in a Tamil Villagge. Social Scientist 13 and 14).
ಕರ್ನಾಟಕ ಭೂಶಾಸನ ಸ್ವಂತ ಸಾಗುವಳಿಗೆ ಕುಟುಂಬವೊಂದು ಹೊಂದಿರಬಹುದಾದ ಭೂಮಿಗೆ ವಿಧಿಸಿದ ಸೀಲಿಂಗು’ಳನ್ನು ಮಾತ್ರ ಗಮನನದಲ್ಲಿಟ್ಟು ನೋಡಿದಾಗ ದ. ಕ. ಜಿಲ್ಲೆಯಲ್ಲಿ ಭಾರೀ ಭೂಮಾಲಕರಿಲ್ಲವೆಂದೇ ಹೇಳಬೇಕು. ಆದರೆ ಸರಕಾರ, ರಾಜ್ಯದ ಕೃಷಿಯ ಅರ್ಥವ್ಯವಸ್ಥೆಯ ವೈಪರೀತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸೀಲಿಂಗುಗಳನ್ನು ನಿರ್ಧರಿಸಿಲ್ಲ. ಭೂಶಾಸನ ವಿಧಿಸಿರುವ ಸೀಲಿಂಗುಗಳು ಹೀಗಿವೆ:
1) ಸರಕಾರೀ ಮೂಲಗಳಿಂದ ನೀರಿನ ಸೌಕರ್ಯವಿರುವ ಎರಡು ಅಥವಾ ಹೆಚ್ಚು ಬೆಳೆಗಳುಳ್ಳ “A” ವರ್ಗದ ಕೃಷಿ ಭೂಮಿಯ ಭೂಮಿತಿ ಹತ್ತು ಎಕ್ರೆ.
2) ಸರಕಾರೀ ಮೂಲದ ನೀರಿನ ಸೌಕರ್ಯವಿರುವ ಆದರೆ ಒಂದೇ ಬೆಳೆ ಬೆಳೆಯುವ ಅಥವಾ ಏತದ ನೀರಾವರಿಯಿಂದ ಎರಡು ಬೆಳೆ ಬೆಳೆಯುವ “B” ವರ್ಗದ ಕೃಷಿ ಭೂಮಿಯ ಭೂಮಿತಿ ಹದಿನೈದು ಎಕ್ರೆ.
3) ಮಳೆ ನೀರಿನಿಂದ, ರೈತನ ಸ್ವಂತ ಪಂಪ್‌ಸೆಟ್ ಮತ್ತಿತರ ಮೂಲಗಳಿಂದ ನೀರಾವರಿ ಇರುವ “C” ವರ್ಗದ ಕೃಷಿ ಭೂಮಿಯ ಭೂಮಿತಿ 25 ಎಕ್ರೆ.
4) ಯಾವುದೇ ನೀರಾವರಿಯ ಸೌಕರ್ಯವಿಲ್ಲದ ಖುಷಿ ಭೂಮಿಯ “D” ವರ್ಗದ ಭೂಮಿತಿ 54 ಎಕ್ರೆ.
ಭೂ ಸಾರದ ಆಣೆವಾರು ವರ್ಗಿಕರಣ ಎಂಟಾಣೆಗಿಂತ ಕಡಿಮೆ ಇದ್ದರೆ ಎ, ಬಿ, ಮತ್ತು ಸಿ ವರ್ಗಗಳ ಭೂಮಿತಿ ಅನುಕ್ರಮವಾಗಿ 13, 20 ಮತ್ತು 30 ಎಕ್ರೆಗಳಾಗುತ್ತವೆ. ದ. ಕ. ಜಿಲ್ಲೆಯ ಹೆಚ್ಚಿನ ಕೃಷಿಯ ಭೂಮಿಗಳ ಹಿಡುವಳಿಗಳು ಬರುವುದು ಬಿ ಮತ್ತು ಸಿ ವರ್ಗಿಕರಣದೊಳಗೆ. (“ಸಿ” ಯಲ್ಲಿಯೇ ಜಾಸ್ತಿ.) ಈ ಜಿಲ್ಲೆಯ ಭೂಮಿ-ಮನುಷ್ಕರ ಅನುಪಾತವನ್ನೂ ಬಡ ರೈತರು ಮತ್ತು ಭೂ ಹೀನ ಕೃಷಿ ಕಾರ್ಮಿಕರ ದೊಡ್ಡ ಸಂಖ್ಯೆಯನ್ನೂ ಆಹಾರ ಧಾನ್ಯಗಳಿಗೆ ಈಗ ಇರುವ ಬೆಲೆಯನ್ನೂ ಗಮನದಲ್ಲಿಟ್ಟು ನೋಡಿದಾಗ ಈ ಸೀಲಿಂಗು ಹಾಸ್ಯಾಸ್ಪದವೆನ್ನಿಸುತ್ತದೆ. ಶ್ರೀಮಂತ ರೈತರು ಮತ್ತು ಭಾರೀ ಭೂ ಮಾಲಕರ ಹಿತಾಸಕ್ತಿಗಳಿಗೆ ಒಂದಿಷ್ಟೂ ಧಕ್ಕೆ ತರದ ಈ ಸೀಲಿಂಗನ್ನು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸಿದಾಗಲೂ (ಆ ಸಂಭವ ಕಡಿಮೆ) ಇದರ ಪರಿಣಾಮ ಗೌಣ. ಅಲ್ಲದೆ ಈ ಸೀಲಿಂಗಿನ ಮಿತಿಗೆ ಮೀರಿದ ಭೂಮಿಯನ್ನು ಹೊಂದಿರುವ ಭೂ ಮಾಲಕರೇನೂ ದಡ್ಡರಲ್ಲ : ಇಂತಹ ಎಲ್ಲ ಸೀಲಿಂಗುಗಳಿಂದಲೂ ತಪ್ಪಿಸಿಕೊಳ್ಳಲು ಬೇಕುಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಬಲ್ಲ. ತಮ್ಮ ಕಾನೂನುಬಾಹಿರ ಕ್ರಮಗಳನ್ನು ಜೀರ್ಣಿಸಿಕೊಳ್ಳಬಲ್ಲ ತಾಖತ್ತುಳ್ಳವರು. ಅಧಿಕಾರದಲ್ಲಿರುವ ರಾಜಕಾರಣಿಗಳೂ ಭೂ ಸುಧಾರಣೆಯ ಮಾತು ಆಡುತ್ತಿರುವುದು ಇವತ್ತು ನಿನ್ನೆಯಿಂದಲ್ಲ. ಸ್ವಾತಂತ್ರ್ಯದಿಂದೀಚೆ ಈ ಬಗ್ಗೆ ಆಶ್ವಾಸನೆಗಳು, ಘೋಷಣೆಗಳು, ಭೂಮಾಲಕರಿಗೆ ಗಂಭೀರ ಎಚ್ಚರಿಕೆಗಳು ನಮ್ಮ ನಾಯಕರ ನಿತ್ಯವಿಧಿಗಳಾಗಿಬಿಟ್ಟಿವೆ; ಕೆಲವು ಹುಸಿ ಕಾನೂನುಗಳು ಕೂಡ ಬಂದಿವೆ. ಇದೆಲ್ಲದರ ಒಟ್ಟು ಪರಿಣಾಮವೆಂದರೆ ಭೂ ಮಾಲಕರು ಸಕಾಲದಲ್ಲಿ ಎಚ್ಚೆತ್ತುಗೊಂಡದ್ದು ಮತ್ತು ಕಾನೂನಿನ ಕಣ್ಣಿಗೆ ಮಣ್ಣೆರಚುವುದಕ್ಕೆ ಅವಶ್ಯ ಕ್ರಮಗಳನ್ನೆಲ್ಲ ಕೈಗೊಂಡು ರಿಕಾರ್ಡುಗಳನ್ನೆಲ್ಲ ಸರಿಪಡಿಸಿಕೊಂಡದ್ದು. ವಾದಕ್ಕೋಸ್ಕರ ಪ್ರಸ್ತುತ ಭೂಸುಧಾರಣಾ ಶಾಸನದ ಸೀಲಿಂಗುಗಳು ಪ್ರಾಮಾಣಿಕವಾಗಿ ಎಲ್ಲೆಡೆಗಳಲ್ಲೂ ಜಾರಿಗೆ ಬರುತ್ತದೆ ಎಂದೇ ಇಟ್ಟುಕೊಳ್ಳೋಣ. ಆಗಲೂ ಇದರಿಂದ ಮೊದಲೇ ಹೇಳಿದ ಕಾರಣಗಳಿಗೆ ನಮ್ಮ ಕೃಷಿ ವ್ಯವಸ್ಥೆಯ ವೈರುಧ್ಯಗಳೇನೂ ಕೊನೆಗೊಳ್ಳಲಾರವು. ಯಾಕೆಂದರೆ ಭೂ ಮಾಲಕರಲ್ಲೇ ಭಾರೀ ಹಿಡುವಳಿದಾರರೂ ಇರುವಂತೆ, ಮಧ್ಯಮ ಹಿಡುವಳಿದಾರರಿದ್ದಾರೆ; ತನ್ನ ಕುಟುಂಬ ಸಾಕುವುದಕ್ಕೆ ಬೇಕಾಗುವಷ್ಟು ಮಾತ್ರ ಭೂಮಿ ಇರುವ ಸಣ್ಣ ಹಿಡುವಳಿದಾರರೂ ಇದ್ದಾರೆ. ಇನ್ನೂ ಇಲ್ಲದೆ ಕುಟುಂಬ ನಿರ್ವಹಣೆಗೋಸ್ಕರ, ಇತರರ ಭೂಮಿಯಲ್ಲಿಯ ಕೃಷಿ ಕೂಲಿ ಮತ್ತು ಇನ್ನಿತರ ಜಾಕರಿಗಳನ್ನು ಮಾಡಿ ಜೀವಿಸುವ ಸಣ್ಣ ರೈತರಿದ್ದಾರೆ. ಒಕ್ಕಲುಗಳಲ್ಲೂ ಈ ಭೇದಗಳು ಇವೆ. ಭಾಗಶಃ ಸ್ವಂತ ಕೃಷಿ ಮಾಡಿ ಉಳಿದದ್ದನ್ನು ಗೇಣಿ ಒಕ್ಕಲುಗಳಿಗೆ ಕೊಟ್ಟಿರುವ ವಿವಿಧ ಹಂತಗಳ ಭೂಮಾಲಕರಿರುವಂತೆ, ಒಕ್ಕಲುಗಳಲ್ಲಿ ಸ್ವಂತ ಭೂಮಿ ಹೊಂದಿದ್ದು ಇತರರಿಂದ ಗೇಣಿಗೆ ಪಡೆದ ಭೂಮಿಗಳಲ್ಲಿ ಸಾಗುವಳಿ ನಡೆಸುವ ಅನೇಕ ಹಂತಗಳ ರೈತರಿದ್ದಾರೆ. ಈ ಜಿಲ್ಲೆಯ ಕೃಷಿವ್ಯವಸ್ಥೆಯನ್ನು ಕುರಿತು ಯೋಚಿಸುವಾಗ, ಈ ಕೆಳಗಿನ ಎರಡು ವರ್ಗಿಕರಣಗಳು ಗಮನಾರ್ಹವೆನ್ನಿಸುತ್ತವೆ ; ಈ ಜಿಲ್ಲೆಯ ಕೃಷಿ ವ್ಯವಸ್ಥೆಯ ವಾಸ್ತವಕ್ಕೆ ಇವು ಹತ್ತಿರವಾಗಿದ್ದಾವೆ ಎಂದು ನನಗನ್ನಿಸುವುದರಿಂದ ಇಲ್ಲಿ ಕೊಡುತ್ತಿದ್ದೇನೆ.
I ರೈತಾಪಿ ಜನತೆಯನ್ನು (ತನ್ನ ಸಮಕಾಲೀನ ಯೂರೋಪ್‌ನ ಅದರಲ್ಲಿಯೂ ಮುಖ್ಯವಾಗಿ ರಷ್ಯದ ರೈತಾಪಿ ಜನತೆಯನ್ನು ಗಮನದಲ್ಲಿಟ್ಟು) ಲೆನಿನ್ ಈ ಕೆಳಗಿನಂತೆ ವರ್ಗಿಕರಿಸುತ್ತಾನೆ :
1 ಕೃಷಿಯ ಶ್ರಮಜೀವಿಗಳು-ಕೃಷಿ ಕೂಲಿಗಳು (Agricultural proletariat -wage labourers)-ಸ್ವಂತ ಭೂಮಿ ಏನೂ ಇಲ್ಲದೆ ಕೃಷಿ ಕೂಲಿಯಿಂದಲೂ ಹಾಗೂ ಇನ್ನಿತರ ಚಿಕ್ಕಪುಟ್ಟ ದೈಹಿಕ ಶ್ರಮಪ್ರಧಾನ ಉದ್ಯೋಗಗಳಿಂದಲೂ ಜೀವನ ನಡೆಸತಕ್ಕವರು.
2 ಅರೆ ಕೂಲಿಗಳು-ತೀರ ಸಣ್ಣ ರೈತರು (Semi-proletarians dwarf_peasants) -ಸ್ವಂತದ ಆಥವಾ ಗೇಣಿಗೆ ಪಡೆದಿರುವ ಚಿಕ್ಕ ಹಿಡುವಳಿಗಳಲ್ಲಿ
ಕೃಷಿ ಮಾಡುವವರು. ಈ ಕೃಷಿಯಿಂದ, ಕುಟುಂಬದ ಜೀವನ ನಿರ್ವಹಣೆ ಅಸಾಧ್ಯವಾದುದರಿಂದ ಉಳಿದವರ ಹಿಡುವಳಿಗಳಲ್ಲಿ ಕೃಷಿಕೂಲಿ ಮತ್ತು ಇತರ ಚಿಕ್ಕ ಪುಟ್ಟ ಉದ್ಯೋಗಗಳನ್ನು ಅವಲಂಬಿಸಿರುವರು.
3 ಸಣ್ಣ ರೈತರು (Small peasantry- Small tillers)-ಸ್ವಂತದ ಅಥವಾ ಗೇಣಿಗೆ ಪಡೆದ ಭೂಮಿಯಲ್ಲಿ ಕೃಷಿಮಾಡುವವರು ; ತಮ್ಮ ಕುಟುಂಬದ ಜೀವನ ನಿರ್ವಹಣೆಗೆ ಅವಶ್ಯವಿರುವ ಪೂರ್ಣ ಉತ್ಪತ್ತಿಯನ್ನು ತಮ್ಮ ಹಿಡುವಳಿಯ ಕೃಷಿಯಿಂದಲೇ ಪಡೆಯುವವರು ; ಆದರೆ ಹಿಡುವಳಿ ಚಿಕ್ಕ ಪ್ರಮಾಣದ್ದಾಗಿರುವುದರಿಂದ, ಕೃಷಿಗೆ ಕೂಲಿಗಳನ್ನು ಇವರು ಅವಲಂಬಿಸುವುದಿಲ್ಲ ; ಇವರ ಕುಟುಂಬವೇ ಎಲ್ಲ ಕೆಲಸಗಳನ್ನೂ ನಿರ್ವಹಿಸುತ್ತದೆ. ಆದರೆ ಈ ರೈತರು ಸ್ವತಂತ್ರರಾದರೂ ಸರಕಾರದ ಲೆವಿ, ತೆರಿಗೆಗಳು ಮತ್ತು ಭಾರೀ ಭೂಮಾಲಕರ ಸಾಲದ ಋಣಗಳಿಂದ ಮುಕ್ತರಲ್ಲ : ಕೃಷಿಗೆ ಅವಶ್ಯವಿರುವ ಆಧುನಿಕ ಉಪಕರಣಗಳು, ಉತ್ತಮ ತಳಿಯ ಜಾನುವಾರು ಇವುಗಳನ್ನು ಇವರು ಹೊಂದಿರಲಾರರು ; ಇವು ಅವಶ್ಯವೆನ್ನಿಸಿದಾಗ ಭೂ ಮಾಲಿಕನನ್ನೇ ನೆಚ್ಚಿರುವವರು.
4 ಮಧ್ಯಮ ರೈತರು (Middle peasants) ಸಣ್ಣ ರೈತರಂತೆ ಸ್ವಂತ ಯಾ ಗೇಣಿಗೆ ಪಡೆದ ಭೂಮಿಯಲ್ಲಿ ಕೃಷಿಕೂಲಿಗಳನ್ನು ಅವಲಂಬಿಸದೆ ಕೃಷಿಮಾಡುವವರು; ಕುಟುಂಬದ ಜೀವನ ನಿರ್ವಹಣೆಗೆ ಬೇಕಾದ ಆದಾಯವೆಲ್ಲವನ್ನೂ ತಮ್ಮ ಕೃಷಿಯಿಂದಲೇ ಪಡೆಯುವವರು. ಆದರೆ ಬೆಳೆ ಚೆನ್ನಾಗಿರುವ ವರುಷಗಳಲ್ಲಿ, ಇದಕ್ಕಿಂತ ಸ್ವಲ್ಪ ಜಾಸ್ತಿ ಅಂದರೆ ಒಂದು ಅಲ್ಪ ಪ್ರಮಾಣದ marketable Surplusನ್ನೂ ಬೆಳೆಯಲ್ಲಿ ಉತ್ಪಾದಿಸುವವರು.
5 ಭಾರೀ ರೈತರು (The big peasants)–ಕೃಷಿಯ ಬಂಡವಾಳಶಾಹೀ ರೈತರು. ಹಲವು ಜನ ಕೃಷಿಕೂಲಿಗಳನ್ನು ನೇಮಿಸಿಕೊಂಡು ಸ್ವಂತಭೂಮಿಯ ಕೃಷಿ ಮಾಡುವವರು; ಭೂಮಿಯನ್ನು ಗೇಣಿಗೆ ಕೊಟ್ಟಿರುವವರು. ಕೃಷಿಯಲ್ಲಿ ತಮ್ಮ ಜೀವನ ನಿರ್ವಹಣೆಯನ್ನು ಮಾತ್ರವಲ್ಲ, ಅಪಾರ ಲಾಭವನ್ನೂ ಗಳಿಸುವವರು. ಇವರಿಗೂ ಉಳಿದ ರೈತರಿಗೂ ಯಾವುದೇ ಹೋಲಿಕೆ ಇಲ್ಲ. ಲೆನಿನ್ ಬರೆಯುತ್ತಾನೆ-“These big peasants are capitalist enterepreneurs in agriculture who as a rule employ several hired labourers and are connected with the peasantry’ only by their low cultural level, habits of life and the manual labour they themselves perform on their farms”.
(V. I Lenin-Preliminary Draft of theses on Agrarian question’- “A collection on the Agrarian question”).
II ಕ್ರಾಂತಿಯ ನಂತರ, ಚೀನದ ಕಮ್ಯೂನಿಸ್ಟ್ ಸರಕಾರ ಚೀನದಲ್ಲಿ ಜಾರಿಗೆ ತಂದ ಭೂಸುಧಾರಣಾ ಶಾಸನ-The Agrarian Reform law of tbe people’s Republic of China-1950 ಚೀನದ ರೈತರನ್ನು ಕೆಳಗಿನಂತೆ ವರ್ಗೀಕರಿಸಿತ್ತು.
1 ಭೂ ಮಾಲಕರು (Land-lords)-ಭಾರೀ ಹಿಡುವಳಿಗಳನ್ನು ಹೊಂದಿರುವವರು ; ತಮ್ಮ ಹಿಡುವಳಿಗಳ ಸಾಗುವಳಿಯಲ್ಲಿ ಒಂದಿಷ್ಟೂ ಭಾಗವಹಿಸದೆ ಇರುವವರು. ಗೇಣಿ ಮತ್ತು ಬಡ ರೈತರಿಗೆ ಕೊಟ್ಟ ಸಾಲದ ಬಡ್ಡಿಯಿಂದಲೇ ಬದುಕುವವರು.
2 ಶ್ರೀಮಂತ ರೈತರು (Rich peasants)-ಸ್ವಂತ ಕೃಷಿ ಭೂಮಿಯನ್ನು ಹೊಂದಿರುವವರು; ಸ್ವತಃ ಕೃಷಿ ಕೆಲಸಗಳಲ್ಲಿ ಭಾಗವಹಿಸುವವರು ; ಆದರೆ ತಮ್ಮ ಹಿಡುವಳಿಗಳ ಕೃಷಿಗೆ ಕೂಲಿಗಳನ್ನೂ ಬಳಸುವವರು. ಭೂಮಾಲಿಕರಷ್ಟು ದೊಡ್ಡ ಹಿಡುವಳಿದಾರರಲ್ಲವಾದರೂ ಬಡ ರೈತರ ಮಟ್ಟಿಗೆ, ವರ್ತನೆಯಲ್ಲಿ ಅವರಿಗಿಂತ ಭಿನ್ನವಲ್ಲದವರು.
3 ಮಧ್ಯಮ ರೈತರು (Middle peasantry)-ಸ್ವಂತ ಕೃಷಿ ಭೂಮಿಯ ಜೊತೆಗೆ ಕೃಷಿಯ ಉಪಕರಣ, ಜಾನುವಾರುಗಳನ್ನೂ ಹೊಂದಿರುವವರು ; ಸ್ವತಃ ಕೃಷಿ
ಮಾಡುವವರು ; ಕೃಷಿಯ ಕೆಲಸಕ್ಕೆ ತಮ್ಮ ಕುಟುಂಬದ ಹೊರಗೆ ಯಾರನ್ನೂ ಅವಲಂಬಿಸದೆ ಇರುವವರು. ತಮ್ಮ ಜೀವನ ನಿರ್ವಹಣೆಗೆ ಸಾಕಾಗುವಷ್ಟನ್ನು ತಮ್ಮ ಹಿಡುವಳಿಗಳಿಂದಲೇ ಉತ್ಪಾದಿಸುವವರು.
4 ಬಡ ರೈತರು (Poor peasants)- ಸಣ್ಣ ಪ್ರಮಾಣದ ಹಿಡುವಳಿಗಳನ್ನು ಹೊಂದಿರುವವರು ; ಸ್ವತಃ ಕೃಷಿ ಮಾಡುವವರು; ಆದರೆ ಜೀವನ ನಿರ್ವಹಣೆಗೆ ಕೃಷಿ ಕೂಲಿಯನ್ನೂ ಮಾಡಲೇಬೇಕಾಗಿರುವವರು. ಸ್ವಲ್ಪ ಮಟ್ಟಿಗೆ ಕೃಷಿಯ ಉಪಕರಣಗಳನ್ನು ಹೊಂದಿರುವವರು ; ಕೆಲವರು ಜಾನುವಾರುಗಳನ್ನೂ ಹೊಂದಿರಬಹುದು.
5 ಭೂಹೀನ ಕೃಷಿಕಾರ್ಮಿಕರು (The landless labourers) ಜೀವನ ನಿರ್ವಹಣೆಗೆ ಕೃಷಿಕೂಲಿಯನ್ನೇ ನಂಬಿರುವವರು ; ಹಳ್ಳಿಯ ಅತ್ಯಂತ ಶೋಷಿತ ಸಮುದಾಯ.
(William Hinton-Fanshen)
1973 ಗಲ್ಲಿ ದ. ಕ. ಜಿಲ್ಲೆಯಲ್ಲಿದ್ದ ಜೈಷಿ ಭೂಮಿಯ ಹಿಡುವಳಿಗಳು (ಹೆಕ್ಟೇರುವಾರು 12 ವರ್ಗಿಕರಣಗಳಲ್ಲಿ)
ಹಿಡುವಳಿ ಹಿಡುವಳಿಗಳ ಒಟ್ಟು ಪೂರ್ಣ ಸ್ವಂತ ಸಾಗುವಳಿಯ ಹಿಡುವಳಿಗಳು ಪೂರ್ಣಗೇಣಿಗೆ ಹಿಡುವಳಿಗಳು
ಪ್ರಮಾಣ ಒಟ್ಟುವಿಸ್ತೀರ್ಣ ಸಂಖ್ಯೆ ವಿಸ್ತೀರ್ಣ ಸಂಖ್ಯೆ ವಿಸ್ತೀರ್ಣ
ಸಂಖ್ಯೆ
1 0.5 ಹೆ.ಒಳಗೆ 32640 8453 16523 4190 14780 3774
2 0.5 ರಿಂದ 28 21095 12254 9001 14416 10695
3 1 ರಿಂದ 2 36738 52095 14973 21264 18795 26360
4 2 ರಿಂದ 3 16033 38374 6788 16303 7596 17984
5 3 ರಿಂದ 4 6583 22401 3021 10648 2609 8767
6 4 ರಿಂದ 5 3439 15009 1822 8014 1088 4717
7 5 ರಿಂದ 10 4654 30314 2932 19599 938 5969
8 10 ರಿಂದ 20 994 12821 732 9518 79 959
9 20 ರಿಂದ 30 125 2917 101 2360 4 89
1 30 ರಿಂದ 40 29 973 26 868 – –
11 40 ರಿಂದ 50 11 487 9 395 – –
12 50 ಹೆ, ಮೀರಿದವು 7 468 6 405 – –
ಹಿಂದಿನ ಪುಟದ ಕೋಷ್ಟಕದಲ್ಲಿ ಈ ಮುಖ್ಯಾಂಶಗಳನ್ನು ಗಮನಿಸಿ :
1) 5 ಹೆಕ್ಟೇರುಗಳ ಒಳಗಿನ ಹಿಡುವಳಿಗಳ ಸಂಖ್ಯೆ 124061, ವಿಸ್ತೀರ್ಣ 157435 ಹೆಕ್ಟೇರಂಗಳು.
ಪೂರ್ಣ ಸ್ವಂತ ಸಾಗುವಳಿಯಲ್ಲಿರುವ ಹಿಡುವಳಿಗಳ ಸಂಖ್ಯೆ 55484 ವಿಸ್ತೀರ್ಣ 69420 ಹೆಕ್ಟೇರುಗಳು.
ಪೂರ್ಣ ಗೇಣಿಗೆ ಕೊಟ್ಟಿರುವ ಹಿಡುವಳಿಗಳು ಸಂಖ್ಯೆ 59284. ವಿಸ್ತೀರ್ಣ 72297 ಹೆಕ್ಟೇರುಗಳು.
2) 5 ಹೆಕ್ಟೇರುಗಳಿಗೆ ಮೀರಿದ ಹಿಡುವಳಿಗಳ ಸಂಖ್ಯೆ 5820. ವಿಸ್ತೀರ್ಣ 48480 ಹೆಕ್ಟೇರುಗಳು.
ಪೂರ್ಣ ಸ್ವಂತ ಸಾಗುವಳಿಯಲ್ಲಿರುವ ಹಿಡುವಳಿಗಳು 3806. ವಿಸ್ತೀರ್ಣ 33145 ಹೆಕ್ಟೇರುಗಳು.
ಪೂರ್ಣ ಗೇಣಿಗೆ ಕೊಟ್ಟಿರುವ ಹಿಡುವಳಿಗಳು 1021. ವಿಸ್ತೀರ್ಣ 7017 ಹೆಕ್ಟೇರುಗಳು.
ಅಂದರೆ ಹಿಡುವಳಿಗಳಲ್ಲಿ ಪೂರ್ಣ ಗೇಣಿಗೆ ಒಳಗಾಗಿರುವ ಹಿಡುವಳಿಗಳ ಸಂಖ್ಯೆ 5 ಹೆಕ್ಟೇರುಗಳ ಒಳಗಿನ ಹಿಡುವಳಿಗಳಲ್ಲಿಯೇ ಜಾಸ್ತಿ. ಇದನ್ನು ಮೀರಿದ ಹಿಡುವಳಿಗಳಲ್ಲಿ ಹೆಚ್ಚಿನವು ಸ್ವಂತ ಸಾಗುವಳಿಯ ಹಿಡುವಳಿಗಳು. ಈ ಶಾಸನದಿಂದ ನಿರ್ಗತಿಕರಾಗುವವರೂ ಈ ಪೂರ್ಣ ಗೇಣಿಯ ಹಿಡುವಳಿಗಳ ಸಣ್ಣ ಹಿಡುವಳಿದಾರರೇ ಹೊರತು ಶ್ರೀಮಂತರಲ್ಲ.
ಮೇಲಿನ ಕೋಷ್ಟಕದಲ್ಲಿ ಹಿಡುವಳಿಗಳ ಒಟ್ಟು ಸಂಖ್ಯೆಯಲ್ಲಿ ಪೂರ್ಣ ಸ್ವಂತ ಸಾಗುವಳಿಯ ಮತ್ತು ಪೂರ್ಣ ಗೇಣಿಯ ಹಿಡುವಳಿಗಳನ್ನು ಬಿಟ್ಟು ಉಳಿದದ್ದು ಭಾಗಶಃ ಸ್ವಂತ ಸಾಗುವಳಿಯ, ಭಾಗಶಃ ಗೇಣಿಯ ಹಿಡುವಳಿಗಳು.
ಮೇಲಿನ ಕೋಷ್ಟಕವನ್ನು ಪರಿಶೀಲಿಸಿದರೆ, ಭೂಹೀನ ಕೃಷಿಕಾರ್ಮಿಕರನ್ನು ಬಿಟ್ಟು, ಈ ಜಿಲ್ಲೆಯ ಉಳಿದ ರೈತರು, ಹಿಡುವಳಿದಾರರು ಹೇಗೆ ಧನಿ-ಒಕ್ಕಲು, ಭಮೂಲಕ ಇತ್ಯಾದಿ ಶಬ್ದಗಳು ಹೇಳುವಂತೆ ಒಂದು ಅಖಂಡ ಸಮುದಾಯವಾಗಿಲ್ಲ ಎಂಬುದು ತಿಳಿಯಬಹುದು. ಇವರೆಲ್ಲರ ಹಿತಾಶಕ್ತಿಗಳೂ ಖಂಡಿತ ಒಂದೇ ಅಲ್ಲ. ಪಾಣಿಯಾಗಲೀ ಅರ್ಥವ್ಯವಸ್ಥೆಯಲ್ಲಿಯೂ ಸುಪ್ತವಾಗಿದ್ದ ಈ ಹಿತಾಸಕ್ತಿಗಳ ವೈರುಧ್ಯಗಳು ದ. ಕ. ಜಿಲ್ಲೆಯೂ ಸೇರಿ ದೇಶದ ಕೃಷಿಯ ಅರ್ಥವ್ಯವಸ್ಥೆ ನಿಧಾನವಾಗಿ ಬಂಡವಾಳ ಶಾಹಿಯಾಗಿ ಮಾರ್ಪಡುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಸ್ಪುಟವಾಗುತ್ತಿವೆ. ಉದಾಹರಣೆಗೆ ಹಿಡುವಳಿದಾರರಲ್ಲೇ (ಸ್ವಂತದ್ದೆ ಆಗಿರಲಿ, ಗೇಣಿಯದ್ದೆ ಇರಲಿ) ಭಾರೀ ಹಿಡುವಳಿದಾರರಿಗೆ ಈಗ ದೊರಕುವಷ್ಟು ಸೌಲಭ್ಯಗಳು ಸಣ್ಣ ಹಿಡುವಳಿದಾರರಿಗೆ ದೊರೆಯುತ್ತಿಲ್ಲ. ದ. ಕ. ಜಿಲ್ಲೆಯಾದ್ಯಂತ ಕಳೆದ 10-15 ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಖಾಸಗಿ, ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಹಾರದ ಪ್ರಯೋಜನ ದೊರೆತಿರುವುದು ಈ ಭಾರೀ ಹಿಡುವಳಿದಾರರಿಗೆ ಮಾತ್ರ. ಹಳ್ಳಿಯೊಂದರ ಜೋಪಡಿಗಳ ಮಧ್ಯೆ ಠೀಕು ಠೀಕಾದ ಕಟ್ಟಡದಲ್ಲಿ ಅತ್ಯಾಧುನಿಕ ಕೌಂಟರಿನ ಬ್ಯಾಂಕಿನ ಶಾಖೆ ತೆರೆಯಲ್ಪಡುವುದೇ ಪ್ರಗತಿಯ ಸಂಕೇತ ಎಂದು ತಿಳಿಯುವ ಮೂರ್ಖರಿಗೆ ನಮ್ಮಲ್ಲಿ ಕೊರತೆ ಇಲ್ಲ. ಆದರೆ ಹಳ್ಳಿಯ ಬಡವರನ್ನು ದಿವಾಳಿಗೆಬ್ಬಿಸಿರುವ ಶಕ್ತಿಗಳಲ್ಲಿ ಈ ಬ್ಯಾಂಕುಗಳನ್ನೂ ಒಂದು ಗಣನೀಯ ಸ್ಥಾನ ಎಂಬುದು ಸ್ಪಷ್ಟವಾಗಿದೆ. ಈ ಬ್ಯಾಂಕುಗಳ ಸಾಲಗಳೆಲ್ಲ ಹೋಗಿರುವುದು ಶ್ರೀಮಂತರಿಗೆ ಮತ್ತು ಆಹಾರ ಧಾನ್ಯಗಳ ಸಟ್ಟಾ ವ್ಯಾಪಾರಕ್ಕೆ (ಸಾರ್ಕಾರದ, ರಿಸರ್ವ್ ಬ್ಯಾಂಕಿನ ಅಡೆತಡೆಗಳಿದ್ದರೂ). ಕೃಷಿ ಅಭಿವೃದ್ಧಿಗೆಂದೇ ಬ್ಯಾಂಕಿನವರು ಕೊಡುವ ಸಾಲ ಶ್ರೀಮಂತ ಭೂಮಾಲಕನಿಗೆ, ಬಡರೈತನಿಂದ ಭೂಮಿ ಕಸಿಯುವಂತೆ ಪ್ರೇರಿಸಿದೆ (Eviction). ಅಲ್ಲದೆ ಕೃಷಿಯ ಅಭಿವೃದ್ಧಿಗೆ ಆತ ಮೊದಲು ವಿನಿಯೋಗಿಸಬಹುದಾಗಿದ್ದ ಫಸಲಿನ ಆದಾಯದ ಒಂದು ಭಾಗವನ್ನು ಆತ ಈಗ ಆಹಾರ ಧಾನ್ಯಗಳ ಸಟ್ಟಾ ವ್ಯಾಪಾರದಲ್ಲಿ ವಿನಿಯೋಗಿಸಲು ಈ ಸಾಲಗಳು ಅನುಕೂಲ ಮಾಡಿಕೊಟ್ಟಿವೆ. ಇದರಿಂದಲೂ ಹಳ್ಳಿಯ ಬಡವರು ತೊಂದರೆಗೊಳಗಾದರು. ಹೀಗೆ ಬ್ಯಾಂಕುಗಳ ಗ್ರಾಮಾಂತರ ಉದ್ದರಿ ವ್ಯವಹಾರ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶ್ರೀಮಂತ ಹಿಡುವಳಿದಾರರನ್ನು ಕೊಬ್ಬಿಸಿತು; ಬಡ ರೈತನನ್ನು ಇನ್ನಷ್ಟು ಕೆಳಗಿಳಿಸಿತು.
ಬಡ ರೈತರಿಗೆ, ಕೃಷಿ ಕಾರ್ಮಿಕರಿಗೆ ಬ್ಯಾಂಕುಗಳು ಕೊಟ್ಟಿರುವ ಸಾಲ ಏನಾದರೂ ಇದ್ದರೆ ಅದು ಕೇವಲ ಪ್ರಚಾರದ, ಸ್ಟಂಟಿನ ಉದ್ದೇಶವುಳ್ಳದ್ದಾಗಿರುವುದರಿಂದ, tokenismನ ಎಲ್ಲೆಯನ್ನು ದಾಟಿ ಹೋಗಿಲ್ಲ. ಹಳ್ಳಿಗಳ ಸಹಕಾರೀ ಸಂಸ್ಥೆಗಳನ್ನು ಹೆಗ್ಗಣಗಳಾಗಿ ಕೊಳ್ಳೆ ಹೊಡೆದಿರುವವರೂ ಈ ಶ್ರೀಮಂತ ರೈತರೇ. ಚಿಕ್ಕ ಹಿಡುವಳಿದಾರ ಮತ್ತು ಬಡ ರೈತರಿಗಿಂತ, ಇವರ ಜೀವನ ಮಟ್ಟ ಸ್ವಲ್ಪ ಹೆಚ್ಚಿನದಾಗಿರುವುದರಿಂದ, ಇವರದ್ದು ಹೆಚ್ಚು ಆಧುನಿಕ ಮನೋಧರ್ಮ. ತಮ್ಮ ಭೂಮಿಗಳಲ್ಲಿ ಕೃತಕ ಗೊಬ್ಬರ, ಕ್ರಿಮಿನಾಶಕ, ಪಂಪ್‌ಸೆಂಟ್ ನೀರಾವರಿ, ಸುಧಾರಿತ ತಳಿಯ ಜಾನುವಾರು, ಉತ್ತಮ ದರ್ಜೆಯ ಬಿತ್ತನೆ ಬೀಜಗಳು-ಮುಂತಾದ ವೈಜ್ಞಾನಿಕ ಕೃಷಿ ಸೌಲಭ್ಯಗಳನ್ನು ಬಳಸುತ್ತಿರುವವರೂ ಇವರೆ. ಹಳ್ಳಿಗಳ ಬಹುಸಂಖ್ಯಾಕರಾಗಿರುವ ಬಡ ರೈತರಲ್ಲಿ ಹೆಚ್ಚಿನವರು ಅವಿದ್ಯಾವಂತರೂ ಆಗಿರುವ ಆವರಣದಲ್ಲಿ ಈ ಶ್ರೀಮಂತ ರೈತನ ಆಧುನಿಕ ಮನೋಧರ್ಮ ಕೂಡ ಇವನ ಬಂಡವಾಳವಾಗಿಬಿಡುತ್ತದೆ. ಆಹಾರ ಧಾನ್ಯಗಳ ಮಾರುಕಟ್ಟೆಯಲ್ಲಿ, ಚಿಕ್ಕ ಹಿಡುವಳಿದಾರ ಶ್ರೀಮಂತ ರೈತನೊಡನೆ ಸ್ಪರ್ಧಿಸಲಾರ. ಚಿಕ್ಕ ಹಿಡುವಳಿದಾರ ಬೆಳೆದದ್ದು ಅವನ ಸಂಸಾರದ ಅವಶ್ಯಕತೆಗಳಿಗೆ ಮಿಕ್ಕಿದ್ದಾಗಲೂ, ಅಂದರೆ ಒಂದು marketable Surplusನ್ನು ಈತ ಬೆಳೆದರೂ, ಬೆಳೆದದ್ದಕ್ಕೆ ಒಳ್ಳೆಯ ಬೆಲೆ ಬರುವವರೆಗೆ ಈತ ಕಾಯುತ್ತ ಕೂಡಲಾರ. ಈ ದೇಶಾದ್ಯಂತ ಆಹಾರಧಾನ್ಯಗಳ ಸಗಟು ಬೆಲೆಗಳು, ಮೊದಲ ಬೆಳೆ ದೇಶದ ಹೆಚ್ಚಿನೆಡೆಗಳಲ್ಲಿ ಖಟಾವ್ ಆಗುವ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಕನಿಷ್ಠ ಮಟ್ಟಕ್ಕಿಳಿದು, ಸರಕಾರೀ ವಾರ್ಷಿಕ ಲೆಕ್ಕಾಂತ್ಯದ ಮಾರ್ಚ್ ತಿಂಗಳಿನಿಂದ ಏರಿಕೆಯ ಪ್ರವೃತ್ತಿ ತೋರಿಸುವುದು ಹಿಂದಿನಿಂದಲೂ ರೂಢಿಯಾಗಿ ಬಂದದ್ದು. ಆದರೆ ಚಿಕ್ಕ ಹಿಡುವಳಿದಾರನೂ, ಬಡ ರೈತನೂ ಅವರ ಬಡತನದ ಕಾರಣದಿಂದ ಬೆಳೆದದ್ದನ್ನು ಆರೇಳು ತಿಂಗಳು ಕೂಡಿಡಲಾರರು. ಸಾಮಾನ್ಯವಾಗಿ ಇವರು ಬೆಳೆದದ್ದನ್ನು ಖಟಾವ್ ಆದ ತಕ್ಷಣ ಅಂದರೆ ಬೆಲೆಗಳು ಕನಿಷ್ಟ ಮಟ್ಟದಲ್ಲಿದ್ದಾಗಲೇ ಮಾರಿಬಿಡುತ್ತಾರೆ. ಬಹಳಷ್ಟು ಸಣ್ಣ ರೈತರು ಬೆಳೆದದ್ದರಲ್ಲಿ ಅವರ ಅವಶ್ಯಕತೆಗೆ ಮಿಕ್ಕ ಯಾವ surplus ಇಲ್ಲದಿದ್ದಾಗಲೂ, ಪರಿಸ್ಥಿತಿಯ ದುರ್ಭರತೆಯಿಂದ ಬೆಳೆದದ್ದನ್ನು ಖಟಾವ್ ಆದ ತಕ್ಷಣ ಮಾರಿಬಿಡುತ್ತಾರೆ.[ಲಿಂಡ್‌ಬರ್ಗ್ ಮತ್ತು ಜ್ಯೋರ್‌ಫೆಲ್ಡ್ ಬರೆಯುತ್ತಾರೆ: “The marketed surplus is entirely produced by big and middle formers (and most of all by their hired labourers), because only they have holdings which can produce a surplus over their own consemption requirements”].
ಈ ಬಡರೈತರೇನೂ ಸಂತರಲ್ಲ; ಒಳ್ಳೆಯ ಬೆಲೆ ಬರುವವರೆಗೂ ಕಾದಿದ್ದು ನಂತರ ಬೆಳೆದದ್ದನ್ನು ಮಾರುವ ಆಸೆ ಇವರಿಗೂ ಇದೆ; ಆದರೆ ಇವರ ಪರಿಸ್ಥಿತಿಯೇ ಇವರನ್ನು ಹಾಗೆ ಮಾಡದಂತೆ ತಡೆಯುತ್ತದೆ. ಈ ಸಣ್ಣ ರೈತರು, ಆಹಾರ ಧಾನ್ಯಗಳ ಮಾರು ಕಟ್ಟೆಯ ಈ ವೈಪರೀತ್ಯದಿಂದ ಎರಡು ವಿಧದಲ್ಲಿ ನಷ್ಟಕ್ಕೊಳಗಾಗುತ್ತಾರೆ. 1) ನಗದು ಬೆಲೆಗಳು ಕಡಿಮೆ ಇರುವಾಗ ಬೆಳೆದದ್ದನ್ನು ಮಾರಿ ನಷ್ಟಕ್ಕೊಳಗಾಗುವುದು. 2) ಆಹಾರ ಧಾನ್ಯಗಳ ಬೆಲೆ ಏರಿಕೆಯ ತಿಂಗಳುಗಳಲ್ಲಿ ಇವರಲ್ಲಿ ಹೆಚ್ಚಿನವರಿಗೆ ಪೇಟೆಯಿಂದಲೇ ತಮ್ಮ ಆಹಾರಧಾನ್ಯಗಳನ್ನು ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಇರುವುದರಿಂದ ಈ ಬೆಲೆ ಏರಿಕೆಯ ನಷ್ಟಕ್ಕೂ ಒಳಗಾಗುವುದು. ಉಳಿದ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಬಿಡಿ. ಆಹಾರ ಧಾನ್ಯಗಳ ಬೆಲೆ ಏರಿಕೆ ಕೂಡ, ಹೀಗೆ ಚಿಕ್ಕ ಹಿಡುವಳಿದಾರರಿಗೆ, ಬಡ ರೈತರಿಗೆ ಲಾಭದಾಯಕವಾಗುವ ಬದಲು ಇವರನ್ನು ಸಂಕಟಕ್ಕೊಳಪಡಿಸುತ್ತದೆ. ಆಹಾರ ಧಾನ್ಯಗಳ ಬೆಲೆಗಳು ಇಳಿಯಲಿ ಎಂದು ನಗರಗಳ ಕೆಳ ಮಧ್ಯಮವರ್ಗದ ನೌಕರರು ಮತ್ತು ಕಾರ್ಮಿಕರು ಗಲಭೆ ಮಾಡಿದರೆ, “ರೈತನಿಗೆ ತಾನು ಬೆಳೆದದ್ದಕ್ಕೆ ನ್ಯಾಯಬೆಲೆ ದೊರೆಯಬಾರದೇ ?” ಎಂದು ಕೇಳುವ ಪ್ರಕೃತಿಗಳು (ಅವರಿಗೂ ನಮ್ಮಲ್ಲಿ ಕೊರತೆ ಇಲ್ಲ) ಈ ಅಂಶವನ್ನು ಬಚ್ಚಿಡುತ್ತಾರೆ. ದ. ಕ. ಜಿಲ್ಲೆಯಲ್ಲಿ ಅಂತರ್ಜಿಲ್ಲಾ ಆಹಾರ ಧಾನ್ಯಗಳ ಸಾಗಾಟದ ಮೇಲೆ ಸರಕಾರ ಹಾಕಿದ ನಿರ್ಬಂಧದಿಂದ ಅಕ್ಕಿಯ ಬೆಲೆ ಕಳೆದ ವರುಷ ಮಾರ್ಚ್‌ನಲ್ಲಿ ಕಿಲೋ ಒಂದರ 2 ರೂಪಾಯಿಯಿಂದ 3-3 1/2 ರೂಪಾಯಿಗೇರಿದಾಗ (ಈಗಲೂ ಈ ಜಿಲ್ಲೆಯಲ್ಲಿ ಅಕ್ಕಿಗೆ ಇದೇ ಬೆಲೆ ಇವೆ) ಕಷ್ಟಕ್ಕೊಳಗಾದವರು ಈ ಜಿಲ್ಲೆಯ ನಗರವಾಸಿಗಳು ಮಾತ್ರವಲ್ಲ, ಹಳ್ಳಿಗಳ ಸಣ್ಣ ಹಿಡುವಳಿದಾರರು, ಬಡ ರೈತರು, ಕೃಷಿಕಾರ್ಮಿಕರು ಕೂಡಾ ಈ ಬೆಲೆ ಏರಿಕೆಯ ಕಷ್ಟವನ್ನು ಅನುಭವಿಸಬೇಕಾಯಿತು. (ಇವರಲ್ಲಿ ಬಹುತೇಕ ಜನರಿಗೆ ಒಂದು ನಿಶ್ಚಿತ ವರಮಾನವಿಲ್ಲದಿರುವುದರಿಂದ ಇವರೇ ನಿಜಕ್ಕೂ ನಗರವಾಸಿಗಳಿಗಿಂತ ಹೆಚ್ಚಿನ ಕಷ್ಟಕ್ಕೊಳಗಾದವರು). ಅನೇಕ ಬಡರೈತರ ಮನೆಗಳಲ್ಲಿ ಒಪ್ಪತ್ತಿನ ಊಟ ಕೂಡಾ ಮರೆಯಾಯಿತು. ಸಾಮಾನ್ಯವಾಗಿ 60-70% ಹಾಜರಾತಿ ಇರುವ ಈ ಜಿಲ್ಲೆಯ ಅನೇಕ ಗ್ರಾಮಾಂತರ ಶಾಲೆಗಳಲ್ಲಿ ಈ ಬೆಲೆ ಏರಿಕೆಯ ನಂತರ, ಮಕ್ಕಳ ಹಾಜರಾತಿ ಒಮ್ಮಿಂದೊಮ್ಮೆಗೆ 20-30% ಕ್ಕಿಳಿಯಿತು ಎಂದು ಕೇಳಿದ್ದೇನೆ. ಇದೇ ವೇಳೆಯಲ್ಲಿ ಅಕ್ಕಿಯ ಬೆಲೆ ಜಿಲ್ಲೆಯಲ್ಲಿ ಏರುತ್ತ ಹೋದಂತೆ, ಬಡವರ ಖಾದ್ಯವಾದ ಗೆಣಸಿನ ಬೆಲೆಯೂ ಇಮ್ಮಡಿಯಾದದ್ದು ಗಮನಾರ್ಹ. ಹಳ್ಳಿಗಳ ಬಡರೈತರು ಇತರ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯ ಜೊತೆಗೆ ಆಹಾರ ಧಾನ್ಯಗಳ ಬೆಲೆ ಏರಿಕೆಯನ್ನೂ ಅನುಭವಿಸಬೇಕಾಗಿರುವುದು ನಮ್ಮ ಕೃಷಿ ವ್ಯವಸ್ಥೆಯ ಮೂಲಭೂತ ವೈಷಮ್ಯಗಳಿಗೆ ಒಂದು ಉದಾಹರಣೆ. ಜಿಲ್ಲೆಯಲ್ಲಿ ಈ ಪರಿಸ್ಥಿತಿ ಈಗಲೂ ಬದಲಾಗಿಲ್ಲ.
ಆದರೆ ಈ ಜಿಲ್ಲೆಯಲ್ಲಿ ಆಹಾರ ಧಾನ್ಯಗಳ (ಮುಖ್ಯವಾಗಿ ಅಕ್ಕಿಯ) ಬೆಲೆ ಏರಿಕೆಯ ಹೊಡೆತದಿಂದ ತಪ್ಪಿಸಿಕೊಂಡ ಒಂದೇ ಒಂದು ವರ್ಗವೆಂದರೆ ಜಿಲ್ಲೆಯ ಶ್ರೀಮಂತ ರೈತರು ಮತ್ತು ಭಾರೀ ಭೂಮಾಲಿಕರು. ಈ ಬೆಲೆ ಏರಿಕೆಯಿಂದ ಲಾಭ ಪಡೆದವರೂ ಇವರೆ; ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆಗೆ ಕಾರಣರೂ ಇವರೆ. ಈ ಜಿಲ್ಲೆ ಮೊದಲಿನಿಂದಲೂ ಸ್ವಲ್ಪ ಪ್ರಮಾಣದಲ್ಲಿ ಅಕ್ಕಿಯನ್ನು ಹೊರಗಿನಿಂದ (ಮುಖ್ಯವಾಗಿ ಶಿವಮೊಗ್ಗ ಜಿಲ್ಲೆ) ತರಿಸಿಕೊಳ್ಳುತ್ತಿದ್ದರೂ, ಅಂತರ್ಜಿಲ್ಲಾ ನಿಬಂಧನೆ ಬಂದು ಅಕ್ಕಿಯ ಬೆಲೆ ಈ ಪ್ರಮಾಣಕ್ಕೆ ಏರುವಷ್ಟು ಈ ಜಿಲ್ಲೆಯ ಆಹಾರ ಪರಿಸ್ಥಿತಿ ಕೆಟ್ಟಿರಲಿಲ್ಲ. ಬೆಲೆಗಳು ಏರುತ್ತ ಹೋದಂತೆ, ಅವು ಇನ್ನಷ್ಟು ಏರುವ ಆಸೆಯಿಂದ ತಮ್ಮ ಆಹಾರ ಧಾನ್ಯಗಳ ಸಂಗ್ರಹವನ್ನು ಮಾರುಕಟ್ಟೆಗೆ ಬಿಡದೆ ಬಚ್ಚಿಟ್ಟ ಶ್ರೀಮಂತ ರೈತರು ಮತ್ತು ಸಗಟು ವರ್ತಕರೇ ಬಹುಮಟ್ಟಿಗೆ ಈ ಬೆಲೆ ಏರಿಕೆಗೆ ಕಾರಣರು. ಸರಕಾರವೂ ತನ್ನ ಆಡಳಿತ ಸಿಬ್ಬಂದಿಯನ್ನು ಬಳಸಿಕೊಂಡು ಈ ಬಗ್ಗೆ ತಕ್ಕ ಕ್ರಮಗಳನ್ನು ಕೈಗೊಳ್ಳುವುದರ ಬದಲು “ಭೂಮಾಲಿಕರಲ್ಲಿ ವರ್ತಕರಲ್ಲಿ ಸಂಗ್ರಹವಾಗಿರುವ ಆಹಾರ ಧಾನ್ಯಗಳನ್ನು ಹೊರಗೆಳೆಯಿರಿ” ಎಂದು ಜನತೆಗೆ ಕರೆಕೊಟ್ಟಿತು. ಮಂತ್ರಿಗಳ ಈ ಮಾತುಗಳನ್ನು ಅಕ್ಷರಶಃ ಪಾಲಿಸಿ ಕ್ರಿಮಿನಲ್ ಕೇಸುಗಳಲ್ಲಿ ಸಿಕ್ಕಿಕೊಂಡು ಜೈಲಿಗೆ ಹೋಗುವುದು ಈ ಜಿಲ್ಲೆಯಲ್ಲಿ ಯಾರಿಗೂ ಅಷ್ಟು ಅಪ್ಯಾಯಮಾನವೆಂದು ತೋರದ ಕಾರಣ, ಜನ ಈ ಮಾತನ್ನು ಪಾಲಿಸಲಿಲ್ಲ; ಅತ್ತೂ ಕರೆದೂ ಹೆಚ್ಚಿನ ಬೆಲೆಯನ್ನೇ ತೆತ್ತರು.
ಈ ಜಿಲ್ಲೆಯ ಸಾಗುವಳಿದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಭೂಹೀನ ಕೃಷಿ ಕಾರ್ಮಿಕರ ಮಟ್ಟಿಗೆ ಪರಸ್ಪರ ವಿರುದ್ಧ ಹಿತಾಸಕ್ತಿಗಳುಳ್ಳ ಭಾರೀ ಭೂಮಾಲಿಕ, ಶ್ರೀಮಂತ ರೈತ, ಚಿಕ್ಕ ಹಿಡುವಳಿದಾರ, ಬಡ ರೈತ ಎಲ್ಲರೂ ಒಂದೆ. ದ. ಕ. ಜಿಲ್ಲೆಯ ಕೃಷಿ ಈ ಅಪಾರ ಸಂಖ್ಯೆಯ ಅರೆ ನಿರುದ್ಯೋಗಿಗಳ ಪಡೆ ಇಲ್ಲದೆ ನಡೆಯದಾದರೂ, ಇವರು ಮಾತ್ರ ವರುಷದುದ್ದಕ್ಕೂ ತಮ್ಮ ಆಹಾರ ಧಾನ್ಯಗಳನ್ನು ಪೇಟೆಯಿಂದಲೇ ಕೊಂಡು ತರಬೇಕು. (ಈ ಜಿಲ್ಲೆಯ ಹೆಚ್ಚಿನೆಡೆಗಳಲ್ಲಿ ಧಾನ್ಯರೂಪದಲ್ಲಿ ಕೂಲಿ ಸಂದಾಯವಾಗುವುದು ಈಗ ನಿಂತುಹೋಗಿದೆ.) ಕೃಷಿಕಾರ್ಮಿಕನ ದುಡಿಮೆಯ ಮೇಲೆ ಇಲ್ಲಿನ ಒಟ್ಟು ವ್ಯವಸ್ಥೆ ನಿಂತಿರುವುದಾದರೂ ಈತ ಮಾತ್ರ ಈ ವ್ಯವಸ್ಥೆಗೆ ಅನ್ಯ, ದ ಕ. ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಹೈಸ್ಕೂಲು ಕಾಲೇಜುಗಳು ತಲೆ ಎತ್ತಿಕೊಂಡಿವೆಯಾದರೂ ಈತನ ಮಕ್ಕಳು ಮಾತ್ರ ಇವುಗಳಿಂದ ಹೊರಗುಳಿದಿದ್ದಾರೆ. ಈ ಸಂಸ್ಥೆಗಳು ವರುಷ ವರುಷವೂ ಸಾವಿರಗಟ್ಟಲೆಯಲ್ಲಿ ನಮ್ಮ ಅರ್ಥವ್ಯವಸ್ಥೆ ಅರಗಿಸಿಕೊಳ್ಳಲಾರದ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿವೆ ; ಆದರೂ ಈ ಸಮಾಜದ ಒಂದು ದೊಡ್ಡ ವಿಭಾಗಕ್ಕೆ ಅವು ಬಾಗಿಲು ಮುಚ್ಚಿಕೊಂಡಿವೆ. ಈ ವ್ಯವಸ್ಥೆಯ ಮೂಲಭೂತ ವೈರುಧ್ಯಕ್ಕೆ ಇದು ಇನ್ನೊಂದು ಉದಾಹರಣೆ. ನೇಯ್ಗೆ, ಮೂರ್ತೆ, ಬಡಗಿ ಕೆಲಸ ಮುಂತಾದ ವೃತ್ತಿ ನೈಪುಣ್ಯವುಳ್ಳವರು ಈ ಜಿಲ್ಲೆಯ ಸಣ್ಣ ಹಿಡುವಳಿದಾರರಲ್ಲಿ ಇದ್ದಾರೆಯೇ ಹೊರತು, ಜಾತಿ ವ್ಯವಸ್ಥೆಯ ಕೆಳಹಂತಗಳಲ್ಲಿ ಇರುವ ಈ ಕೃಷಿ ಕಾರ್ಮಿಕರಲ್ಲಿಲ್ಲ. ಅಂತಹ ಹೇಳಿಕೊಳ್ಳುವ ಯಾವ ವೃತ್ತಿ ನೈಪುಣ್ಯವೂ ಇವರಲ್ಲಿಲ್ಲ. ಕುರಿಮಂದೆಯಂತೆ ಲಾರಿಗಳಲ್ಲಿ ತುಂಬಿಸಿಕೊಂಡು ಹೋಗಿ ಚುನಾವಣೆಯಲ್ಲಿ ಇವರಿಂದ ಓಟು ಹಾಕಿಸಿಕೊಳ್ಳುವ ಪುಢಾರಿಗೆ ಇವರು ಅಧಿಕಾರ ರಾಜಕೀಯದ ಕಚ್ಚಾ ಪದಾರ್ಥ, ಮೊದಲೇ ಹೇಳಿದಂತೆ ಸಂಘಟನೆ ಇಲ್ಲದ ಕಾರಣ ಇವರ ಸಂಖ್ಯಾಬಲವೂ ಇವರಿಗೆ ಏನನ್ನೂ ಗಳಿಸಿಕೊಟ್ಟಿಲ್ಲ… ಪ್ರಚಾರದ ಜಾಹಿರಾತುಗಳಲ್ಲಿ ಕರ್ನಾಟಕದ ಭೂಶಾಸನದಿಂದ “ಉಳುವವನೇ ನೆಲದೊಡೆಯನಾಗುವನು” ಎಂದಿದೆ. ಆದರೆ ಶಾಸನದಲ್ಲಿ ಮಾತ್ರ ಸ್ವಂತ ಸಾಗುವಳಿ ಎಂದರೆ ಸ್ವತಃ ಅಥವಾ
ಕೃಷಿ ಕೂಲಿಗಳನ್ನು ನೇಮಿಸಿಕೊಂಡು ಮಾಡುವ ಸಾಗುವಳಿ ಎಂದೇ definition ಇದೆ. ಈ ಶಾಸನದ ಪ್ರಕಾರ, ಧನಿಯ ಭೂಮಿ ಒಕ್ಕಲಿನ ಸ್ವಂತಕ್ಕಾಗುತ್ತದೆಯೇ ಹೊರತು ಅದರ ಒಂದು ಸಣ್ಣ ಪಾಲು ಕೂಡ ಕೃಷಿ ಕಾರ್ಮಿಕನಿಗೆ ದೊರೆಯುವುದಿಲ್ಲ. ಭೂಶಾಸನದ ಸೀಲಿಂಗಿಗೆ ಮಾರಿದ ಭೂಮಿಯನ್ನು ಇವರಿಗೆ ಹಂಚುವ ಆಶ್ವಾಸನೆ ಶಾಸನದಲ್ಲೇ ಅಡಕವಾಗಿದೆ. ಈ ಸೀಲಿಂಗುಗಳು ಹೇಗೆ ಅರ್ಥಹೀನ ಮತ್ತು ವಾಸ್ತವದಲ್ಲಿ ಇವು ಜಾರಿ ಬಂದಾಗಲೂ ಹೇಗೆ ವಿಫಲಗೊಳ್ಳಬಹುದು ಎಂಬುದನ್ನು ಮೊದಲೇ ವಿವರಿಸಿದ್ದೇನೆ. ಶಾಸನದ ಸೀಲಿಂಗು ಮತ್ತು ಅವುಗಳಿಗೆ ಮೀರಿದ ಮಿಗತೆ ಭೂಮಿಯ ಹಂಚಿಕೆ ಈ ಜಿಲ್ಲೆಯಲ್ಲಿ ಇನ್ನೂ ಜಾರಿಗೆ ಬಂದಿಲ್ಲ. ಜಾರಿಗೆ ಬಂದಾಗ ಭೂಹೀನ ಕೃಷಿಕಾರ್ಮಿಕರಲ್ಲಿ ಬೆರಳೆಣಿಕೆಯಷ್ಟು ಜನರಿಗೂ ಸ್ವಂತ ಕೃಷಿ ಭೂಮಿ ದೊರೆಯಲಾರದು ಎಂದು ನನ್ನ ಊಹೆ. ಈ ಭೂಹೀನ ಕೃಷಿ ಕಾರ್ಮಿಕರಿಗೆ ಹಂಚುವ ಉದ್ದೇಶದಿಂದ ವಶಪಡಿಸಿಕೊಳ್ಳುವ ಸೀಲಿಂಗಿಗೆ ಮೀರಿದ ಭೂಮಿಯ ಪ್ರಮಾಣ ಗಣನೀಯವಾಗಿರುತ್ತದೆ ಎಂದೇ ವಾದಕ್ಕೆ ಒಪ್ಪಿಕೊಂಡರೂ ಹಂಚಿಕೆಯಲ್ಲಿ ಇವರಿಗೆ ನ್ಯಾಯ ದೊರೆಯುತ್ತದೆ ಎನ್ನುವ ಖಾತರಿ ಏನು ? ಸರಕಾರೀ ಭೂಮಿಯ ದರಖಾಸ್ತುಗಳ ಹಂಚಿಕೆಯೇ ಇದುವರೆಗೆ ನಡೆದ ರೀತಿ ನಾನು ಹೀಗೆ ಸಂಶಯ ಪಟ್ಟುಕೊಳ್ಳುವುದಕ್ಕೆ ಕಾರಣ. ಈ ಜಿಲ್ಲೆಯಲ್ಲಿ ನೀರಿನ ಆಶ್ರಯವಿರುವ, ಕೃಷಿಯೋಗ್ಯವಾದ ಸರಕಾರೀ ಭೂಮಿಯ ದರಖಾಸ್ತುಗಳೆಲ್ಲವನ್ನೂ ಹಳ್ಳಿಗಳಲ್ಲಿ ಮೇಲುವರ್ಗದ ಹಿಡುವಳಿದಾರರೇ ಲಪಟಾಯಿಸಿಕೊಂಡಿರುವುದೂ, ಹರಿಜನ ಗಿರಿಜನ ಕೃಷಿಕಾರ್ಮಿಕರಿಗೆ ದೊರೆತ ದರಖಾಸ್ತುಗಳೆಲ್ಲ ನೀರಿನ ಆಶ್ರಯ ಏನೂ ಇಲ್ಲದ ಹುಲ್ಲು ಕೂಡಾ ಬೆಳೆಯದ ಬೋಳು ಗುಡ್ಡೆಯಂತಹ ಪ್ರದೇಶಗಳಾಗಿರುವುದೂ ಕೇವಲ ಆಕಸ್ಮಿಕಗಳಲ್ಲ.
ಜಿಲ್ಲೆಯ ಕೃಷಿ ವ್ಯವಸ್ಥೆಯ ಈ ವೈರುಧ್ಯಗಳನ್ನೆ ಕರ್ನಾಟಕದ ಭೂಶಾಸನ ತೊಡೆದುಹಾಕುವ ಬದಲು, ಇನ್ನಷ್ಟು ಹೆಚ್ಚಿಸುವ ಲಕ್ಷಣಗಳು ಕಾಣಿಸುತ್ತಿವೆ. ಶಾಸನದ ಅನುಷ್ಠಾನ ಇದೀಗ ಪ್ರಾರಂಭವಾಗಿದ್ದರೂ (ಈ ದಿನದವರೆಗೆ ಈ ಜಿಲ್ಲೆಯಲ್ಲಿ ಇತ್ಯರ್ಥವಾದ ಡಿಕ್ಲರೇಷನ್‌ಗಳು ಕೇವಲ 748. ಉದಯವಾಣಿ 29-9-1975.) ಈ ಶಾಸನ ವಿಫಲವಾಗುವುದರಲ್ಲಿ ನನಗಂತೂ ಯಾವ ಸಂಶಯವೂ ಉಳಿದಿಲ್ಲ. ಶಾಸನದ ಸೋಲಿಗೆ ಮೊತ್ತ ಮೊದಲನೆಯ ಕಾರಣವೆಂದರೆ ಎಂದೋ ಕೈಗೊಳ್ಳಬೇಕಾಗಿದ್ದ ಅತಿ ತುರ್ತಿನ ಕ್ರಮವೊಂದನ್ನು ಸರಕಾರ ಇಷ್ಟು ತಡವಾಗಿ ಜಾರಿಗೆ ತರುತ್ತಿರುವುದು. ಸ್ವಾತಂತ್ರ್ಯಪೂರ್ವದಿಂದಲೂ ಕಾಂಗ್ರೆಸ್ ಭೂಸುಧಾರಣೆಯ ಮಾತು ಆಡುತ್ತಲೇ ಇದೆ ; ಆಶ್ವಾಸನೆಗಳನ್ನು ಕೊಡುತ್ತಲೇ ಇದೆ. ರಾಜಕೀಯ ಸ್ವಾತಂತ್ರ್ಯ ಈ ದೇಶದ ಬಹುಸಂಖ್ಯಾಕರಿಗೆ ಅರ್ಥಪೂರ್ಣವಾಗುವುದು ಭೂಸುಧಾರಣೆಯ ಮುಖಾಂತರವೇ ಎಂಬುದನ್ನು ವಿವರಿಸಬೇಕಾಗಿಲ್ಲ. ಆದರೆ ಆಶ್ವಾಸನೆಗಳನ್ನೇನೋ ಧಾರಾಳ ಕೊಟ್ಟ ಸರಕಾರ ಭೂಸುಧಾರಣಾ ಕಾನೂನಿನ ನಿರೂಪಣೆ ಮತ್ತು ಅದನ್ನು ಕರಗತಗೊಳಿಸುವುದರಲ್ಲಿ ಯಾವ ನಿಷ್ಠೆಯನ್ನೂ ತೋರಿಸಲಿಲ್ಲ. ಸ್ವಾತಂತ್ರ್ಯದಿಂದೀಚೆಗೆ ದೇಶದ ಎಲ್ಲ ರಾಜ್ಯ ಸರಕಾರಗಳೂ ಭೂಸುಧಾರಣಾ ಕಾನೂನುಗಳನ್ನು ಮಾಡಿದ್ದರೂ, ಆ ಕಾನೂನುಗಳಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿಯೇ ಕಾನೂನಿನಲ್ಲಿಯೇ ಹೇರಳ ಅವಕಾಶಗಳನ್ನು ಕಲ್ಪಿಸಲಾಗಿತ್ತು. ಸ್ವಂತ ಸಾಗುವಳಿಯ ಮೇಲೆ ಹೇರಿದ ಈ ಶಾಸನಗಳು ಸೀಲಿಂಗುಗಳಂತೂ ಹಾಸ್ಯಾಸ್ಪದವನ್ನಿಸುವಷ್ಟು ಹೆಚ್ಚಿಗಿದ್ದವು. ಈ ಸೀಲಿಂಗಗಳನ್ನೂ ಸರಕಾರಗಳು ಪ್ರಾಮಾಣಿಕವಾಗಿ ಜಾರಿಗೆ ತಂದದ್ದಿಲ್ಲ. ಕರ್ನಾಟಕವೂ ಇದಕ್ಕೆ ವ್ಯತಿರಿಕ್ತವಲ್ಲ. ಭೂ ಮಾಲಿಕರು ಸರಕಾರಗಳ ಈ ಕಾನೂನುಗಳ loopholes ಗಳ ಸಂಪೂರ್ಣ ಪ್ರಯೋಜನ ಪಡೆದುಕೊಂಡರು. ಒಕ್ಕಲುಗಳ ಮೇಲೆ ಕಾನೂನು ಪ್ರಕಾರವೇ ಕೋರ್ಟುಗಳಲ್ಲಿ ದಾವೆ ಹೂಡಿ, ತವರಿಗೇ ಅನುಕೂಲಕರವಾದ ತೀರ್ಪುಗಳನ್ನು ಪಡೆದು ಒಕ್ಕಲುಗಳಿಂದ, ಸ್ವಂತ ಸಾಗುವಳಿಗೊಂದು ಭೂಮಿ ಬಿಡಿಸಿಕೊಳ್ಳುವುದು ತೀರ ಸಾಮಾನ್ಯವಾಗಿ ಬಿಟ್ಟಿತು. ಇದೊಂದು ದೇಶವ್ಯಾಪೀ ಬೆಳವಣಿಗೆ, ದ. ಕ. ಜಿಲ್ಲೆಯಲ್ಲಿಯೂ ಇಂತಹ ಒಕ್ಕಲೆಬ್ಬಿಸುವಿಕೆ ವ್ಯಾಪಕವಾಗಿ ನಡೆದಿದೆ. 1955 ಮತ್ತು 1956 ರ ಮದರಾಸು ಪ್ರಾಂತ್ಯದ ಗೇಣಿದಾರರ ರಕ್ಷಣೆಯ ಭೂಸುಧಾರಣಾ ಕಾನೂನು (The Madras Cultivating Tenants Protection Act 1955 ಮತ್ತು The Madras Cultivating Tannants (Payment of Fair rent) Act 1956 (for South Kanara Dt & Kollegal Tq.) ಗಳ ಪ್ರಕಾರವೇ ಈ ಜಿಲ್ಲೆಯಲ್ಲಿ ಸಾವಿರಾರು ಒಕ್ಕಲುಗಳ ಭೂ ಹೀನರಾದರು. ಈ ಎರಡೂ ಕಾನೂನುಗಳಲ್ಲಿ ಧನಿಯು ಸ್ವಂತ ಸಾಗುವಳಿಯ ಉದ್ದೇಶ ಹೊಂದಿದ್ದರೆ ಒಕ್ಕಲಿನಿಂದ ಸೋಡಾಚೀಟಿ ಕೊಟ್ಟು ಭೂಮಿ ಬಿಡಿಸಿಕೊಳ್ಳುವ ಅವಕಾಶವಿತ್ತು. ಜೊತೆಗೆ ಗೇಣಿಗೆ ಕೊಟ್ಟ ಭೂಮಿ ಸಾಗುವಳಿ ಮಾಡದೆ ಇದ್ದರೆ, ಗೇಣಿ ಜಾಗದ ಭೂಮಿಯನ್ನು ಅರೂಪಗೊಳಿಸಿದ್ದರೆ (ಭೂಮಿಯ ಸಾರವನ್ನು ಕೆಡಿಸಿದ್ದು, ಮರಗಳನ್ನು ಕಡಿದದ್ದು ಇತ್ಯಾದಿ) ಇಂತಹ ಭೂಮಿಯನ್ನೂ ಒಕ್ಕಲಿನಿಂದ ಬಿಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದಿತ್ತು. ಕಾನೂನಿನ ಈ ಅವಕಾಶವನ್ನು ಉಪಯೋಗಿಸಿಕೊಂಡು, ಧನಿಗಳು ಸುಳ್ಳು ದಾವೆಗಳನ್ನು ಹೂಡಿ ಒಕ್ಕಲಿನಿಂದ ಭೂಮಿ ಬಿಡಿಸಿಕೊಳ್ಳುವುದಕ್ಕೆ ಅನುಕೂಲವಾಯಿತು: (ಭೂಮಿಗೆ ಒಕ್ಕಲು ಗಮನ ಕೊಡದೆ, ಫಸಲು ಕಡಿಮೆಯಾಗಿದೆ, ಗೇಣಿಗೆ ಕೊಟ್ಟ ಭೂಮಿಯಲ್ಲಿ ಸಾಗುವಳಿಯಾಗಿಲ್ಲ; ಗೇಣಿ ಜಾಗದಲ್ಲಿದ್ದ ಮರಮಟ್ಟುಗಳನ್ನು ಕಡಿಯಲಾಗಿದೆ ಇತ್ಯಾದಿ ಆರೋಪಗಳನ್ನು ಸಾಕ್ಷಿ ಸಮೇತ ಸಿದ್ದಪಡಿಸಿ ಜಿಲ್ಲೆಯಲ್ಲಿ ಅನೇಕ ಧನಿಗಳು ಹೀಗೆ ಒಕ್ಕಲುಗಳಿಂದ ಭೂಮಿ ಬಿಡಿಸಿಕೊಂಡರು.) ಮೂರು ವರ್ಷ ಸತತವಾಗಿ ಒಕ್ಕಲಿನಿಂದ ಗೇಣಿ ಬಾಕಿಯಿದ್ದಲ್ಲಿ ಧನಿಗೆ ಭೂಮಿ ಬಿಡಿಸಿಕೊಳ್ಳುವ ಅವಕಾಶವಿದ್ದಿತು. ಯಾವ ರೀತಿಯಿಂದಲೂ ಒಕ್ಕಲೆಬ್ಬಿಸಲು ಸಾಧ್ಯವಾಗದ ಧನಿಗಳು ಕಾನೂನಿನ ಈ ಅಂಶವನ್ನು ಉಪಯೋಗಿಸಿಕೊಂಡರು. (ಒಕ್ಕಲೆಬ್ಬಿಸುವ ಪ್ರವೃತ್ತಿ ಇಂದು ನಿನ್ನೆಯದಲ್ಲ ಸ್ವಾತಂತ್ರ್ಯದಿಂದೀಚೆ ಇದು ಅವ್ಯಾಹತವಾಗಿ ನಡೆದುಬಂದಿದೆ).
ರಶೀದಿ ಕೊಡದೆ ಗೇಣಿ ವಸೂಲು ಮಾಡಿದ ಧನಿಗಳು, “ಗೇಣಿ ಕೊಟ್ಟಿಲ್ಲ” ಎಂದು ಸುಳ್ಳು ದಾವೆ ಹೂಡಿ ಭೂಮಿ ಬಿಡಿಸಿಕೊಂಡರು. ಈ ವಿವಾದಗಳನ್ನು ಇತ್ಯರ್ಥಪಡಿಸಲೆಂದೇ ರಚಿತವಾದ ಕೋರ್ಟು ಕೂಡಾ (ಅದಕ್ಕಿದ್ದ Eviction Court ಎಂಬ ಹೆಸರೂ ಗಮನಾರ್ಹ) ಒಕ್ಕಲಿಗಿಂತ ಧನಿಗೇ ಹೆಚ್ಚು ಅನುಕೂಲಕರ ಮನೋಧರ್ಮದ್ದಾಗಿತ್ತು. ಉದಾಹರಣೆಗೆ ಧನಿಗೆ ಒಕ್ಕಲು ಸಲ್ಲಿಸಬೇಕಾಗಿದ್ದ ಗೇಣಿ ಬಾಕಿಯನ್ನು (ಅದು ಸತ್ಯವಿರಲಿ ಸುಳ್ಳೇ ಆಗಿರಲಿ) ಒಕ್ಕಲಿಗೆ ಕೊಡುವುದಕ್ಕೆ ಅಸಾಧ್ಯವಾದ ಎರಡೋ ಮೂರೂ ಕಂತುಗಳಲ್ಲಿ ಕಟ್ಟಬೇಕೆಂದು ನಿರ್ದೆಶವಿತ್ತದ್ಧೂ, ಒಕ್ಕಲು ಇದನ್ನು ಕೊಡಲು ಅಸಮರ್ಥನಾದರೆ, ಆವನ ಭೂಮಿ ವಶಪಡಿಸುವ ಹಕ್ಕನ್ನೂ ಧನಿಗೆ ಕೊಟ್ಟಿದ್ದೂ ಈಕೋರ್ಟಿನ ತೀರ್ಪುಗಳಲ್ಲಿ ಸರ್ವೆ ಸಾಮಾನ್ಯವಾಗಿತ್ತು. ಜೊತೆಗೆ ಎದುರ್ನುಡಿ, ಗೇಣಿ ಚೀಟು, ಗಣಿ ರಶೀದಿ ಇತ್ಯಾದಿ ಯಾವ ದಾಖಲೆಯೂ ಇಲ್ಲದ ಬಾಯ್ದೆರೆ ಒಕ್ಕಲುಗಳನ್ನೂ ಎಬ್ಬಿಸುವುದಂತೂ ಧನಿಗಳಿಗೆ ಅತ್ಯಂತ ಸುಲಭವಾಗಿತ್ತು. ‘ತನ್ನ ಸ್ವಂತದ ಭೂಮಿಯ ಅಕ್ರಮ ಪ್ರವೇಶ” ಎನ್ನುವ ಸೆಕ್ಷನ್ 144ರ ನೆಲೆಯ ಮೇಲೆಯೂ ಈ ಜಿಲ್ಲೆಯಲ್ಲಿ ನೂರಾರು ಒಕ್ಕಲುಗಳನ್ನು ಭೂಮಾಲಿಕರು ಒಕ್ಕಲೆಬ್ಬಿಸಿದ್ದಾರೆ. 1965 ರ ಕರ್ನಾಟಕ ಭೂ ಶಾಸದಲ್ಲಿ (1956 ರಲ್ಲಿ ಈ ಜಿಲ್ಲೆ ಅಂದಿನ ಮೈಸೂರು ರಾಜ್ಯದಲ್ಲಿ ಸೇರ್ಪಡೆಯಾಯಿತು 🙂 ಈ ಜಿಲ್ಲೆಯ ಮಟ್ಟಿಗೆ ಸಾಧಿಸಿದ್ದು ಇದನ್ನೇ. (ಈ ಪ್ರಬಂಧಕ್ಕೆ ವಸ್ತುವಾಗಿರುವ 1974 ರ ಭೂ ಶಾಸನ, ಈ ಶಾಸನದ ತಿದ್ದುಪಡಿ.) ಈ ಕಾನೂನುಗಳ ಒಳ್ಳೆಯ ಅಂಶಗಳನ್ನು ಜಾರಿಗೆ ತರಲು ಸರಕಾರ ಯಾವ ಕ್ರಮಗಳನ್ನೂ ಕೈಗೊಂಡಿರಲಿಲ್ಲ ; ತಕ್ಕ ಆಡಳಿತ ಯಂತ್ರವನ್ನೂ ರೂಪಿಸಿರಲಿಲ್ಲ. ಆದ್ದರಿಂದ ಯಾರನ್ನು ಉದ್ದೇಶಿಸಿ ಈ ಕಾನೂನುಗಳು ರಚಿತವಾದುವೋ, ಆತನಿಗೆ ಏನೂ ಪ್ರಯೋಜನವಾಗಲಿಲ್ಲ. ಜೊತೆಗೆ ಈ ಕಾನೂನುಗಳೆಲ್ಲ ಭೂಮಾಲಿಕನನ್ನು ಹಿಡುವಳಿದಾರನನ್ನು ಎಚ್ಚರಿಸಿ, ಗೇಣಿದಾರ ಒಕ್ಕಲುಗಳ ಕೈಯಲ್ಲಿರುವ ತಮ್ಮ ಭೂಮಿಯನ್ನು ತಮ್ಮ ಸ್ವಂತ ಸಾಗುವಳಿಗೆ ಕಿತ್ತುಕೊಳ್ಳುವಂತೆ ಪ್ರೇರೇಪಿಸಿದವು. ಕಾನೂನಿನಲ್ಲಿಯೇ ಇದಕ್ಕೆ ಅವಕಾಶಗಳನ್ನೂ ಕಲ್ಪಿಸಿದ್ದುದರಿಂದ ನ್ಯಾಯಬದ್ಧವಾಗಿಯೇ (ಅಂದರೆ ಕಾನೂನುಬದ್ದವಾಗಿ) ಒಕ್ಕಲುಗಳಿಂದ, ಅವರು ಸಾಗುವಳಿ ಮಾಡಿಕೊಂಡಿದ್ದ ಭೂಮೀರಿ ಯಿಂದ ಉಚ್ಚಾಟಿಸುವುದೂ ಅವರಿಗೆ ಸಾಧ್ಯವಾಯಿತು. ಹೀಗೆ ಈ ಜಿಲ್ಲೆಯಲ್ಲಿ 1956 ರಿಂದ 1971 ರ ವರೆಗಿನ ಹದಿನೈದು ವರುಷಗಳಲ್ಲಿ ಸಾವಿರಾರು ಒಕ್ಕಲುಗಳು ಭೂಮಿ ಕಳೆದುಕೊಂಡು ನಿರ್ಗತಿಕರಾದರು. ಒಂದೋ ಹಳ್ಳಿ ಬಿಡಬೇಕಾದ, ಇಲ್ಲವೇ ಹಳ್ಳಿಯ ಭೂಹೀನ ಕೃಷಿಕಾರ್ಮಿಕರ ಅರೆ ಉದ್ಯೋಗಿಗಳ ದರಿದ್ರರ ಪಡೆಯನ್ನು ಸೇರಿಕೊಳ್ಳಬೇಕಾದ ದುಃಸ್ಥಿತಿ ಇವರಿಗೊದಗಿತು.
ಇದು ಒಂದು ದೇಶವ್ಯಾಪೀ ಬೆಳವಣಿಗೆ. ನಮ್ಮ ಸರಕಾರವೇ ಇಂದು ಇವನ್ನು ಒಪ್ಪಿನಿನ ನಿರೂಪಣೆ ಮತ್ತು ಅದನ್ನು ಕಾರ್ಯಗತಗೊಳಿಸುವುದರಲ್ಲಿ ಯಾವ ನಿಷ್ಠೆಯನ್ನೂ ತೋರಿಸಲಿಲ್ಲ. ಸ್ವಾತಂತ್ರ್ಯದಿಂದೀಚೆಗೆ ದೇಶದ ಎಲ್ಲ ರಾಜ್ಯ ಸರಕಾರಗಳೂ ಭೂಸುಧಾರಣಾ ಕಾನೂನುಗಳನ್ನು ಮಾಡಿದ್ದರೂ, ಆ ಕಾನೂನುಗಳಿಂದ ತಪ್ಪಿಸಿಕೊಳ್ಳಲು, ಉದ್ದೇಶಪೂರ್ವಕವಾಗಿಯೇ ಕಾನೂನಿನಲ್ಲಿಯೇ ಹೇರಳ ಅವಕಾಶಗಳನ್ನು ಕಲ್ಪಿಸಲಾಗಿತ್ತು. ಸ್ವಂತ ಸಾಗುವಳಿಯ ಮೇಲೆ ಹೇರಿದ ಈ ಶಾಸನಗಳು ಸೀಲಿಂಗುಗಳಂತೂ ಹಾಸ್ಯಾಸ್ಪದವೆನ್ನಿಸುವಷ್ಟು ಹೆಚ್ಚಿಗಿದ್ದವು. ಈ ಸೀಲಿಂಗುಗಳನ್ನೂ ಸರಕಾರಗಳು ಪ್ರಾಮಾಣಿಕವಾಗಿ ಜಾರಿಗೆ ತಂದದ್ದಿಲ್ಲ. ಕರ್ನಾಟಕವೂ ಇದಕ್ಕೆ ವ್ಯತಿರಿಕ್ತವಲ್ಲ. ಭೂ ಮಾಲಿಕರು ಸರಕಾರಗಳ ಈ ಕಾನೂನುಗಳ loopholes ಗಳ ಸಂಪೂರ್ಣ ಪ್ರಯೋಜನ ಪಡೆದುಕೊಂಡರು. ಒಕ್ಕಲುಗಳ ಮೇಲೆ ಕಾನೂನು ಪ್ರಕಾರವೇ ಕೋರ್ಟುಗಳಲ್ಲಿ ದಾವೆ ಹೂಡಿ, ತಮಗೇ ಅನುಕೂಲಕರವಾದ ತೀರ್ಪುಗಳನ್ನು ಪಡೆದು ಒಕ್ಕಲುಗಳಿಂದ, ಸ್ವಂತ ಸಾಗುವಳಿಗೆಂದು ಭೂಮಿ ಬಿಡಿಸಿಕೊಳ್ಳುವುದು ತೀರ ಸಾಮಾನ್ಯವಾಗಿ ಬಿಟ್ಟಿತು. ಇದೊಂದು ದೇಶವ್ಯಾಪೀ ಬೆಳವಣಿಗೆ. ದ. ಕ. ಜಿಲ್ಲೆಯಲ್ಲಿಯೂ ಇಂತಹ ಒಕ್ಕಲೆಬ್ಬಿಸುವಿಕೆ ವ್ಯಾಪಕವಾಗಿ ನಡೆದಿದೆ. 1955 ಮತ್ತು 1956 ರ ಮದರಾಸು ಪ್ರಾಂತ್ಯದ ಗೇಣಿದಾರರ ರಕ್ಷಣೆಯ ಭೂಸುಧಾರಣಾ ಕಾನೂನು (The Madras Cultivating Tenants Protection Act 1955 ಮತ್ತು The Madras Cultivating Tannants (Payment of Fair rent) Act 1956 (for South Kanara Dt & Kollegal Tq.) ಗಳ ಪ್ರಕಾರವೇ ಈ ಜಿಲ್ಲೆಯಲ್ಲಿ ಸಾವಿರಾರು ಒಕ್ಕಲುಗಳಂ ಭೂ ಹೀನರಾದರು. ಈ ಎರಡೂ ಕಾನೂನುಗಳಲ್ಲಿ ಧನಿಯು ಸ್ವಂತ ಸಾಗುವಳಿಯ ಉದ್ದೇಶ ಹೊಂದಿದ್ದರೆ ಒಕ್ಕಲಿನಿಂದ ಸೋಡಾಚೀಟಿ ಕೊಟ್ಟು ಭೂಮಿ ಬಿಡಿಸಿಕೊಳ್ಳುವ ಅವಕಾಶವಿತ್ತು. ಜೊತೆಗೆ ಗೇಣಿಗೆ ಕೊಟ್ಟ ಭೂಮಿ ಸಾಗುವಳಿ ಮಾಡದೆ ಇದ್ದರೆ, ಗೇಣಿ ಜಾಗದ ಭೂಮಿಯನ್ನು ಅರೂಪಗೊಳಿಸಿದ್ದರೆ (ಭೂಮಿಯ ಸಾರವನ್ನು ಕೆಡಿಸಿದ್ದು, ಮರಗಳನ್ನು ಕಡಿದದ್ದು ಇತ್ಯಾದಿ) ಇಂತಹ ಭೂಮಿಯನ್ನೂ ಒಕ್ಕಲಿನಿಂದ ಬಿಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದಿತ್ತು. ಕಾನೂನಿನ ಈ ಅವಕಾಶವನ್ನು ಉಪಯೋಗಿಸಿಕೊಂಡು, ಧನಿಗಳು ಸುಳ್ಳು ದಾವೆಗಳನ್ನು ಹೂಡಿ ಒಕ್ಕಲಿನಿಂದ ಭೂಮಿ ಬಿಡಿಸಿಕೊಳ್ಳುವುದಕ್ಕೆ ಅನುಕೂಲವಾಯಿತು: (ಭೂಮಿಗೆ ಒಕ್ಕಲು ಗಮನ ಕೊಡದೆ, ಫಸಲು ಕಡಿಮೆಯಾಗಿದೆ, ಗೇಣಿಗೆ ಕೊಟ್ಟ ಭೂಮಿಯಲ್ಲಿ ಸಾಗುವಳಿಯಾಗಿಲ್ಲ; ಗೇಣಿ ಜಾಗದಲ್ಲಿದ್ದ ಮರಮಟ್ಟುಗಳನ್ನು ಕಡಿಯಲಾಗಿದೆ ಇತ್ಯಾದಿ ಆರೋಪಗಳನ್ನು ಸಾಕ್ಷಿ ಸಮೇತ ಸಿದ್ಧಪಡಿಸಿ ಜಿಲ್ಲೆಯಲ್ಲಿ ಅನೇಕ ಧನಿಗಳು ಹೀಗೆ ಒಕ್ಕಲುಗಳಿಂದ ಭೂಮಿ ಬಿಡಿಸಿಕೊಂಡರು.) ಮೂರು ವರ್ಷ ಸತತವಾಗಿ ಒಕ್ಕಲಿನಿಂದ ಗೇಣಿ ಬಾಕಿಯಿದ್ದಲ್ಲಿ ಧನಿಗೆ ಭೂಮಿ ಬಿಡಿಸಿಕೊಳ್ಳುವ ಅವಕಾಶವಿದ್ದಿತು. ಯಾವ ರೀತಿಯಿಂದಲೂ ಒಕ್ಕಲೆಬ್ಬಿಸಲು ಸಾಧ್ಯವಾಗದ ಧನಿಗಳು ಕಾನೂನಿನ ಈ ಅಂಶವನ್ನು ಉಪಯೋಗಿಸಿಕೊಂಡರು. (ಒಕ್ಕಲೆಬ್ಬಿಸುವ ಪ್ರವೃತ್ತಿ ಇಂದು ನಿನ್ನೆಯದಲ್ಲ ಸ್ವಾತಂತ್ರ್ಯದಿಂದೀಚೆ ಇದು ಅವ್ಯಾಹತವಾಗಿ ನಡೆದುಬಂದಿದೆ).
ತ್ತಾನೆ. 2) ಶಾಸನದ ಸೀಲಿಂಗುಗಳು, ಈ ಜಿಲ್ಲೆಯ ಕೃಷಿವ್ಯವಸ್ಥೆಯಲ್ಲಿ ಹೇಗೆ ಅವಾ ಸ್ತವವೆನ್ನಿಸುವಷ್ಟು ಹೆಚ್ಚಿಗಿದೆ ಎಂಬುದನ್ನು ಈಗಾಗಲೇ ವಿವರಿಸಿದ್ದೇನೆ, ಶಾಸನದ ಈ ಭಾಗದಿಂದ ಕೂಡ ಒಕ್ಕಲೆಬ್ಬಿಸಿ ಭೂಮಿ ಸ್ವಂತಕ್ಕೆ ಮಾಡಿಕೊಂಡ ಹೆಚ್ಚಿನ ಹಿಡುವಳಿದಾರರು ಹೊರಗುಳಿಯುತ್ತಾರೆ. 3) ಒಕ್ಕಲೆಬ್ಬಿಸುವಿಕೆಯ ಸತ್ಯ ಸರಕಾರಕ್ಕೆ ತಿಳಿಯದ್ದಲ್ಲ. ಅದಕ್ಕೆಂದೇ 74ರ ಭೂ ಶಾಸನದಲ್ಲಿ ಕೋರ್ಟುಗಳಲ್ಲಿ ತೀರ್ಮಾನವಾಗದೆ ಬಾಕಿ ಇರುವ ಎಲ್ಲ ಭೂ ಮರು ಸ್ವಾಧೀನತೆಯ ಕೇಸುಗಳನ್ನೂ ಸರಕಾರ ತೊಡೆದುಹಾಕಿದೆ. ಆದರೆ ಈಗಾಗಲೇ ಮರು ಸ್ವಾಧೀನಕ್ಕೆ ಕೋರ್ಟಿನ ಅನುಕೂಲಕರ ತೀರ್ಪು ಬಂದಿದ್ದು, ಕಾಯಿದೆ ಜಾರಿಯಾಗುವುದರೊಳಗೆ ಒಕ್ಕಲು, ಧನಿಗೆ ಭೂಮಿ ಬಿಟ್ಟುಕೊಟ್ಟರೆ, ಅಂತಹ ಸಂದರ್ಭಗಳಲ್ಲಿ ಈ ನಿಷೇಧ ಅನ್ವಯವಾಗುವುದಿಲ್ಲ. ಹಿಂದಿನ ಸರಕಾರಗಳ ಬೇಜವಾಬ್ದಾರಿ ಕ್ರಮಗಳೇ ಒಕ್ಕಲೆಬ್ಬಿಸುವಿಕೆಯ ಪ್ರವೃತ್ತಿಗೆ ಇಂಬುಕೊಟ್ಟಿರುವುದರಿಂದ 1956 ರಿಂದಲೂ ಈ ಕಾನೂನು ಪೂರ್ವಾನ್ವಯವಾಗುವಂತೆ ಹೊಸ ಭೂಶಾಸನದಲ್ಲಿ ತಿದ್ದುಪಡಿ ತರುವುದೇ ಈ ಸರಕಾರದ ನೈತಿಕ ಕರ್ತವ್ಯವಾಗಿತ್ತು. ಆದರೆ ಸರಕಾರ ಹಿಂದೆ ಆದದ್ದು ಆಗಿಹೋಯಿತು ಎಂದು ಕೈತೊಳೆದುಕೊಂಡು ಬಿಟ್ಟಿದೆ.
ಈ ಜಿಲ್ಲೆಯಲ್ಲಿ ಕಾನೂನಿನ ಬಿಸಿ ತಟ್ಟಿರುವುದು ತೀರ ಸಣ್ಣ ಹಿಡುವಳಿದಾರರಿಗೆ ಮಾತ್ರ. ಈ ಕಾನೂನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ಬರುತ್ತಿರುವುದೂ ಬಹುಮಟ್ಟಿಗೆ ಒಕ್ಕಲುಗಳ ವಶವಿರುವ ಇವರ ಭೂಮಿಯ ಮಟ್ಟಿಗೆ ಮಾತ್ರ. ಈ ಸಣ್ಣ ಹಿಡುವಳಿದಾರರಲ್ಲಿ ಹೆಚ್ಚಿನವರಿಗೆ ಯಾವ ರಾಜಕೀಯ ಬಲವೂ ಇಲ್ಲ. ಹಳ್ಳಿಯಲ್ಲಿ ಇವರ ಸಂಖ್ಯೆ ಭಾರೀ ಮಾಲಕರಿಗಿಂತಲೂ ಹೆಚ್ಚಿನದ್ದಾದರೂ ಈ ಸಣ್ಣ ಹಿಡುವಳಿದಾರರು, ಅವರಂತೆ ಹಳ್ಳಿಯ ರಾಜಕೀಯದ heavy weights ಅಲ್ಲ. ಭಾರೀ ಭೂಮಾಲಕರಿಗೆ ಹೆದರಿಕೊಂಡು ಅದಕ್ಕೆ ಒಕ್ಕಲು ಭೂಮಿ ಬಿಟ್ಟದ್ದು, ಭೂಮಿ ಬಿಡಿಸಿಕೊಳ್ಳದೆ ಕೃಪೆತೋರಿದ ಭೂಮಾಲಕರಿಗೆ ನಮ್ರವಾಗಿ ಇದುವರೆಗೂ ಗೇಣಿ ಕೂಡಾ ಸಲ್ಲಿಸುತ್ತ ಬಂದಿರುವುದೂ, ಕೇವಲ ಭಯದಿಂದ ಡಿಕ್ಲರೇಷನ್ ಕೂಡಾ ಸಲ್ಲಿಸದೆ ಇರುವುದೂ ಕಂಡು ಬರುತ್ತದೆ. ಆದರೆ ಈ ಚಿಕ್ಕ ಹಿಡುವಳಿದಾರನ ಒಕ್ಕಲು ಮಾತ್ರ ಕಳೆದ ಹದಿನೈದು ವರುಷಗಳಿಂದಲೂ ತನ್ನ ಧನಿಯನ್ನು ನಿರ್ಭಿತವಾಗಿ ಎದುರಿಸುತ್ತ ಬಂದಿದ್ದಾನೆ. ಕಳೆದ ಹತ್ತು ವರುಷಗಳಿಂದ ಈ ಹಿಡುವಳಿದಾರರ ಒಕ್ಕಲುಗಳು ಜಿಲ್ಲೆಯಲ್ಲಿ ಧನಿಗಳಿಗೆ ಗೇಣಿ ಕೊಟ್ಟದ್ದೂ ಅಪರೂಪ. ಎಲ್ಲೋ ಅಶನಾರ್ಥದಲ್ಲಿ ಬದುಕುವ ವಿಧವೆಯರಿಗೋ ಅಥವಾ ತೀರ ಹೀನಸ್ಥಿತಿಯಲ್ಲಿರುವ ಧನಿಗೋ ಒಕ್ಕಲು ಕರುಣೆ ತೋರಿಸಿ ಅಷ್ಟಷ್ಟು ಗೇಣಿ (ಪೂರ್ಣ ಪ್ರಮಾಣದ ಗೇಣಿ ಅಲ್ಲ) ಕೊಟ್ಟದ್ದು ಉಂಟೇ ಹೊರತು, ಉಳಿದವರಿಗೆ ಈ ಒಕ್ಕಲುಗಳು ಕಾಳು ಅಕ್ಕಿ ಗೇಣಿ ಕೊಟದ್ದಿಲ್ಲ. ಇವರಿಂದ ಭೂಮಿ ಬಿಡಿಸಿಕೊಳ್ಳಬೇಕೆಂಬ ಆಸೆ ಏನೋ ಈ ಸಣ್ಣ ಹಿಡುವಳಿದಾರರಿಗಿದ್ದರೂ ಅವರಿಗೆ ಇದುವರೆಗೂ ಅದು ಸಾಧ್ಯವೂ ಆಗಿಲ್ಲ. ಜಬರ್ದಸ್ತಿನಲ್ಲಿ ಒಕ್ಕಲನ್ನು ಭೂಮಿ ಬಿಟ್ಟೇಳುವಂತೆ ಮಾಡುವ ತಾಣ ಇವರದ್ದಲ್ಲ. ಕೋರ್ಟು ಕಛೇರಿ ಎಂದು ಅಲೆದಾಡುವಷ್ಟು ದೊಡ್ಡ ಕಿಸೆಯೂ ಇವರದ್ದಲ್ಲ ಬಹಳಷ್ಟು ಜನ ಸಣ್ಣ ಹಿಡುವಳಿದಾರರು, ಯಾವ ಕಾನೂನು ಬಂದರೂ ತಮ್ಮ ಭೂಮಿಗೆ ಅದು ಅನ್ವಯವಾಗಲಾರದು ಮತ್ತು ಅನ್ವಯವಾದರೂ, ತಮ್ಮ ಹಿಡುವಳಿಯ ಪ್ರಮಾಣ ಸಣ್ಣದಾದ್ದರಿಂದ, ಸ್ವಂತಕ್ಕೆ ಅದರಲ್ಲಿ ಒಂದು ಭಾಗವನ್ನಾದರೂ ವಶಪಡಿಸಿಕೊಳ್ಳುವ ಅವಕಾಶ ಅದರಲ್ಲಿ ಇದ್ದೇ ತೀರುತ್ತದೆ ಎಂದು ನಂಬಿಕೊಂಡವರು.
ಈ ಶಾಸನ ಜಾರಿಗೆ ಬಂದಮೇಲೆ ದ. ಕ. ಜಿಲ್ಲೆಯಲ್ಲಿ ನಡೆದ ಧನಿ-ಒಕ್ಕಲು ವಿವಾದ-ಘರ್ಷಣೆಗಳಲ್ಲಿ ಹೆಚ್ಚಿನವು ಈ ಸಣ್ಣ ಹಿಡುವಳಿದಾರರು ಮತ್ತು ಇವರ ಒಕ್ಕಲುಗಳಲ್ಲಿ ನಡೆದ ಘರ್ಷಣೆಗಳು. ಸಣ್ಣ ಹಿಡುವಳಿದಾರನ ಆರ್ಥಿಕ ಪರಿಸ್ಥಿತಿಯನ್ನು ನೋಡಿದಾಗ ಈ ಘರ್ಷಣೆಗಳ ಬಗ್ಗೆ ಸ್ವಲ್ಪ ವ್ಯಥೆಯಾಗುತ್ತದೆ. ಯಾಕೆಂದರೆ ಇವು ಲಂಗೋಟಿಯಿಲ್ಲದವ ಅರ್ಧ ಲಂಗೋಟಿ ತೊಟ್ಟವನೊಡನೆ ಜಗಳಕ್ಕೆ ನಿಂತಂತಹ ಪ್ರಸಂಗಗಳು. ಧನಿಗಿಂತ ಒಕ್ಕಲೇ ಬಲಿಷ್ಠನಾಗಿರುವ ಸಂದರ್ಭಗಳಲ್ಲಂತೂ ಇದು ಕರುಣಾಜನಕ. ಒಕ್ಕಲನ್ನು ಪೂರ್ತ ದಿವಾಳಿ ಎಬ್ಬಿಸದ (ಅಂದರೆ ಶಾಸನ ಬರುವ ಮೊದಲೇ ಅವನನ್ನು ಸೋಡಾ ಚೀಟಿ ಕೊಟ್ಟು ಒಕ್ಕಲೆಬ್ಬಿಸದ) ಭಾರೀ ಭೂಮಾಲಕರು ಮತ್ತು ಒಕ್ಕಲುಗಳಲ್ಲಿ ನಡೆದ ಘರ್ಷಣೆಗಳು ಜಿಲ್ಲೆಯಲ್ಲಿ ಬಹಳ ಕಡಿಮೆ. ಅನೇಕ ಎಡೆಗಳಲ್ಲಿ “ಕಿತಾಪತಿ ನಡೆಸಿದರೆ ಸೊಂಟ ಮುರಿಯುವ” ಈ ಧನಿಗಳ ಬೆದರಿಕೆಯಿಂದಲೇ ಒಕ್ಕಲು ಡಿಕ್ಲರೇಷನ್ ಕೂಡಾ ಸಲ್ಲಿಸದೆ ಸುಮ್ಮನೆ ಕೂತದ್ದಿದೆ. ಧನಿ-ಒಕ್ಕಲು ವಿವಾದ ಪ್ರಕರಣಗಳನ್ನು ಪರಿಶೀಲಿಸುತ್ತುದ್ದಂತೆ ನನ್ನ ಗಮನಕ್ಕೆ ಬಂದ ಒಂದು ಅಂಶವೆಂದರೆ, ಬಹುತೇಕ ಸಣ್ಣ ಹಿಡುವಳಿದಾರರ ಒಕ್ಕಲುಗಳಲ್ಲಿ ಗೇಣಿ ಚೀಟಿ, ರಶೀದಿ, ಲೆವಿ ನೋಟಿಸು, ಲೆವಿ ರಶೀದಿ ಮುಂತಾದ ಎಲ್ಲ ರಿಕಾರ್ಡುಗಳೂ ಇದ್ದವು; ತನ್ನ ಧನಿಯ ಭೂಮಿಯ ಮೇಲೆ ತನ್ನ ಹಕ್ಕು ಸ್ಥಾಪಿಸಲು ಈತನಿಗೆ ಯಾವ ಕಾನೂನಿನ ರಿಕಾರ್ಡಿನ ತಡೆಯೂ ಇಲ್ಲ. ಆದರೆ ದೊಡ್ಡ ಭೂ ಮಾಲಿಕರ ಒಕ್ಕಲುಗಳಲ್ಲಿ ಸಾಮಾನ್ಯವಾಗಿ ಈ ಯಾವ ರಿಕಾರ್ಡುಗಳೂ ಇಲ್ಲ. ಈ ಬಾಯ್ದೆರೆ ಒಕ್ಕಲುಗಳಿಗೆ ಗೇಣಿ ಚೀಟು ಮತ್ತು ಗೇಣಿ ರಶೀದಿ ಬಿಟ್ಟು, ಲೆವಿ ನೋಟೀಸು, ಲೆವಿ ರಶೀದಿ ಕೂಡಾ ಇಲ್ಲ. ಎಲ್ಲ ಕೃಷಿಕರಿಂದಲೂ ಲೆವಿ ವಸೂಲು ಮಾಡಲಾಗುತ್ತದೆ. ಆದರೆ ಲೆವಿಯನ್ನು ಕಟ್ಟುವವನು ಒಕ್ಕಲೇ ಆದರೂ ಲೆವಿ ನೋಟೀಸು ಮತ್ತು ಲೆವಿ ರಶೀದಿಗಳು ಮಾತ್ರ ಈ ಧನಿಯ ಹೆಸರಿನಲ್ಲಿದ್ದದ್ದು ಅನೇಕ ಕಡೆ ನಾನು ಗಮನಿಸಿದ್ದೇನೆ. “ಇದು ಧನಿ ಮತ್ತು ದಗಲ್‌ಬಾಜಿಯಲ್ಲಿ ಹಳೆಯ ಶಾನುಭಾಗ ಪಟೇಲರನ್ನೂ ಮೀರಿಸುವ ಈಗಿನ ಗ್ರಾಮಸೆಕ್ರೆಟರಿಗಳ ಒಳಸಂಚಿನಿಂದ ನಡೆದದ್ದು. ಅಂದರೆ ಭೂಮಿ ಸಾಗುವಳಿ ಮಾಡುತ್ತಿರುವುದರ ಬಗ್ಗೆ ಒಕ್ಕಲಿನ ಹತ್ತಿರ ಯಾವ ಪುರಾವೆಯೂ ಇಲ್ಲ. ಧನಿ, ಭೂಮಿ ಒಕ್ಕಲಿಗೆ ಕೊಟ್ಟದ್ದೇ ಇಲ್ಲ ; ಅದು ನನ್ನ ಸ್ವಂತ ಸಾಗುವಳಿಯದ್ದು ಎಂದು ಹೇಳಿದರೆ ಧನಿಗೆ ಅದನ್ನು ಸಿದ್ಧಪಡಿಸುವುದಕ್ಕೆ ರಿಕಾರ್ಡುಗಳಿವೆ; ಒಕ್ಕಲಿನ ಹತ್ತಿರ ಏನೂ ಇಲ್ಲ. ಧನಿಯ ಜಾಗದಲ್ಲೇ ವಾಸ್ತವ್ಯ ಮಾಡಿಕೊಂಡಿದ್ದರೆ ಅದೂ ಕೂಡಾ ಒಕ್ಕಲಿನ ಪರವಾಗಿ ಒಂದು ಪುರಾವೆಯಾಗಬಹುದಾದ್ದರಿಂದ, ಎಷ್ಟೋಕಡೆ ಭಾರೀ ಧನಿಗಳು ಒಕ್ಕಲುಗಳನ್ನು ರಾತಾರಾತ್ರೆ ಮನೆಯಿಂದ ಓಡಿಸಿದ ಪ್ರಕರಣಗಳೂ ಈ ಜಿಲ್ಲೆಯಲ್ಲಿ ನಡೆದಿವೆ. ಒತ್ತಾಯದಲ್ಲಿ ಇಂತಹ ಗೇಣಿ ಭೂಮಿಯಲ್ಲಿ ವಾಸಮಾಡಿರುವ ಒಕ್ಕಲಿನ ಮನೆಗೆ ಬಾಡಿಗೆ ಚೀಟು ಮಾಡಿಸಿಕೊಂಡಿದ್ದೂ ಉಂಟು. ಇಂತಹ ಒಕ್ಕಲುಗಳು ಪೋಲೀಸರಿಗೆ ದೂರು ಕೊಟ್ಟರೆ ಇವರ ಕೇಸುಗಳು ರಿಜಿಸ್ಟರ್ ಕೂಡಾ ಆಗದೆ, ಯಾವ ತನಿಖೆಯೂ ನಡೆಯದೆ, ದೂರು ಕೊಟ್ಟ ಒಕ್ಕಲುಗಳೇ ಪೋಲಿಸರಿಂದ ಬೈಗುಳ, ಹೊಡೆತಗಳನ್ನು ಪಡೆದದ್ದೂ ಇದೆ. ಅನೇಕ ಪೋಲಿಸು ಠಾಣೆಗಳಲ್ಲಿ ದೂರುಕೊಟ್ಟ ಒಕ್ಕಲನ್ನೂ ಧನಿಯನ್ನೂ ಪೋಲಿಸರೇ ಒಟ್ಟು ಸೇರಿಸಿ, ದೂರಿನ ತನಿಖೆ ಮಾಡುವುದರ ಬದಲು, ಒಕ್ಕಲು ಧನಿಯಿಂದ ಸ್ವಲ್ಪ ಹಣ ಪಡೆದು ಭೂಮಿಯನ್ನು ಧನಿಗೆ ಬಿಟ್ಟುಬಿಡಬೇಕೆಂಬ, ಧನಿಗೆ ಅನುಕೂಲವಾದ, ಒಕ್ಕಲಿನ ಹೊಟ್ಟೆಗೆ ಹೊಡೆಯುವ ತೀರ್ಮಾನಗಳನ್ನೂ ಒಕ್ಕಲುಗಳ ಮೇಲೆ ಹೇರಿದ್ದಿದೆ. (ನೋಡಿ-ಟಿಪ್ಪಣಿ 2)
ಸಣ್ಣ ಹಿಡುವಳಿದಾರನೂ ಸಂಭಾವಿತನಲ್ಲ : ಏನಕೇನ ಪ್ರಕಾರೇಣ ಒಕ್ಕಲೆಬ್ಬಿಸುವುದಕ್ಕೆ ಅವನೂ ಪ್ರಯತ್ನಿಸಿದವನೆ. ಆದರೆ ಆತ ಇಂತಹದ್ದರಲ್ಲಿ ಗೆದ್ದುಕೊಂಡದ್ದು ಮಾತ್ರ ಅಪರೂಪ. ವರಮಾನದ ದೃಷ್ಟಿಯಿಂದ ನಗರದ ಕೆಳ ಮಧ್ಯಮವರ್ಗಕ್ಕಿಂತಲೂ ಕೆಳಮಟ್ಟದಲ್ಲಿರುವ ಈ ಸಣ್ಣ ಹಿಡುವಳಿದಾರರು ರಾಜಕೀಯದಲ್ಲಿ ಮೊದಲಿನಿಂದಲೂ ಬಲಪಂಥೀಯ ಯಥಾಸ್ಥಿತಿವಾದೀ ಧೋರಣೆಗಳನ್ನೇ ಎತ್ತಿ ಹಿಡಿದವರು ; “ಬ್ರಿಟಿಷರ ಕಾಲದಷ್ಟು ಒಳ್ಳೆಯ ಕಾಲ ಇನ್ನೆಂದಿಗೂ ಬರಲಾರದು” ಎಂದು ದೃಢವಾಗಿ ನಂಬಿದವರು, ಇವರಲ್ಲಿ ಹೆಚ್ಚಿನವರು ಈಗಿನ ತಮ್ಮ ದುಃಸ್ಥಿತಿಗೆ ಕಮುನಿಸ್ಟರೇ ಕಾರಣ ಎಂದು ನಂಬಿದ್ದಾರೆ. ಆದರೆ ಚೀನವನ್ನೂ ಒಳಗೊಂಡು ಜಗತ್ತಿನ ಯಾವ ಕಮ್ಯೂನಿಸ್ಟ್ ದೇಶದಲ್ಲಿಯೂ ಸಣ್ಣ ಹಿಡುವಳಿದಾರರನ್ನು ದಿವಾಳಿ ಎಬ್ಬಿಸಿ ಭೂ ಸುಧಾರಣೆಗಳು ಆಗಿಲ್ಲ. ಭಾರತದ ಕಮ್ಯೂನಿಸ್ಟರ ಧೋರಣೆಯೂ ಇವರ ಈ ಪೂರ್ವಗ್ರಹವನ್ನು ಸಮರ್ಥಿಸುವಂತಹದ್ದಲ್ಲ. ಉದಾಹರಣೆಗೆ ಗೇಣಿ ಪದ್ಧತಿಯ ನಿರ್ಮೂಲ ಮತ್ತು ಸಣ್ಣ ಹಿಡುವಳಿದಾರರ ಸ್ಥಿತಿಗತಿಗಳ ಬಗ್ಗೆ ಭಾರತ ಮಾರ್ಕ್ಸ್‌ವಾದೀ ಕಮೂನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಈ ನಿರ್ಣಯ ನೋಡಿ-
“Lands of small holders owning land less than half the ceiling. but eking out their livelihood in factories, small sbops, schools, small government jobs or as ordinary soldiers and junior army offcers, or in any other profession, even if they ore not cultivating their lands shall not be taken. But if these lands are leased, then tenants shall have security of lease and pay fixed fair rents only. They will have the option to part with their lands to government and the government shall pay them the market rate [Central Committee Resolutlons on Certain Agrarin issues-Commnist party of India (Marxist) 1973]
ಕರ್ನಾಟಕ ಭೂಶಾಸನದಲ್ಲಿ ಸೈನಿಕರು ಮತ್ತು ನಾವಿಕರನ್ನು ಬಿಟ್ಟು ಬೇರೆ ಯಾರಿಗೂ ಒಕ್ಕಲುಗಳನ್ನು ಇಟ್ಟುಕೊಳ್ಳುವ ಹಕ್ಕಾಗಲೀ, ಒಕ್ಕಲುಗಳಲ್ಲಿ ಇರುವ ತಮ್ಮ ಭೂಮಿ ಬಿಡಿಸಿಕೊಳ್ಳುವ ಹಕ್ಕಾಗಲೀ ಇಲ್ಲ. ಈ ಶಾಸನ ಹಿಡುವಳಿದಾರರಲ್ಲೇ ವರ್ಗ ಭೇದಗಳಿರುವುದನ್ನೂ, ಚಿಕ್ಕ ಹಿಡುವಳಿದಾರ ಕೂಡ ಆರ್ಥಿಕವಾಗಿ ಬಲಹೀನ ಸ್ಥಿತಿಯಲ್ಲಿರುವುದನ್ನೂ ದ. ಕ. ಜಿಲ್ಲೆಯಂತಹ ಪ್ರದೇಶದಲ್ಲಿ ಚಿಕ್ಕ ಹಿಡುವಳಿದಾರನಿಗೂ ಒಕ್ಕಲಿಗೂ ಹೆಚ್ಚಿನ ವರಮಾನದ ಅಂತಸ್ತಿನ ವ್ಯತ್ಯಾಸ ಇಲ್ಲದಿರುವುದನ್ನೂ ಗಮನಕ್ಕೆ ತೆಗೆದುಕೊಂಡಿಲ್ಲ: ಭಾರೀ ಭೂಮಾಲಕರು, ಈಗಾಗಲೇ ಒಕ್ಕಲೆಬ್ಬಿಸಿ Owner-Cultivators ಆಗಿರುವ ಅಂಶವನ್ನು ಇದು ಗಮನಿಸಿಲ್ಲ. ಶಾಸನದ ಪ್ರಕಾರ, ಸ್ವಂತ ಸಾಗುವಳಿಯಲ್ಲಿ ಕೃಷಿ ಕಾರ್ಮಿಕರನ್ನು ದುಡಿಸುವ ಅವಕಾಶ ಈ ಸಾಗುವಳಿದಾರರಿಗಿದೆ. ಈ ಜಿಲ್ಲೆಯ ಕೃಷಿ ನಿಂತಿರುವುದೇ ಈ ಕೃಷಿ ಕಾರ್ಮಿಕರ ದುಡಿಮೆಯ ಮೇಲೆ. ಕೃಷಿ ಕಾರ್ಮಿಕನನ್ನು ಸ್ವಂತ ಸಾಗುವಳಿಯ ಹೆಸರಿನಲ್ಲಿ ದುಡಿಸುವ ಅವಕಾಶ ಈಗಾಗಲೇ ಒಕ್ಕಲೆಬ್ಬಿಸಿದ ಭೂ ಮಾಲಕನಿಗೆ ಮತ್ತು ಈಗ ಭೂಮಾಲಕನಾಗುವ ಒಕ್ಕಲಿಗೆ ಸಿಗುವುದು ನ್ಯಾಯವಾದರೆ ಈ ಅವಕಾಶ ಸಣ್ಣ ಹಿಡುವಳಿದಾರನಿಗೆ ಏಕೆ ದೊರಕಕೂಡದು? ಶಾಸನದ ಪ್ರಕಾರ, ಹಿಡುವಳಿದಾರನ ಭೂಮಿ ಶಾಸನ ಜಾರಿಗೆ ಬಂದ ದಿನದಿಂದ ಸರಕಾರದ್ದಾಗುವುದು : ಮತ್ತು ಸರಕಾರ ಈ ಭೂಮಿಯನ್ನು ಸೀಲಿಂಗಿಗೆ ಮೀರದಂತೆ, ಹಿಡುವಳಿದಾರನ ಒಕ್ಕಲಿಗೆ ಸುಲಭ ಕಂತುಗಳ ಸಾಲದ ಆಧಾರದ ಮೇಲೆ ಕೊಡುವುದು. ಅಂದರೆ ಒಕ್ಕಲು ಭೂಮಿಯ ಒಡೆಯನಾಗುತ್ತಾನೆ: ಸ್ವಂತ ಸಾಗುವಳಿ ಇಲ್ಲದ, ಬೇರೆ ವರಮಾನದ ಮೂಲವೂ ಇಲ್ಲದ ಚಿಕ್ಕ ಹಿಡುವಳಿದಾರ ನಿರ್ಗತಿಕನಾಗುತ್ತಾನೆ. ನ್ಯಾಯವಾಗಿ ಈ ಚಿಕ್ಕ ಹಿಡುವಳಿದಾರನಿಗೂ, ಇವನ ಹಿಡುವಳಿಯಲ್ಲಿ ಇವನ ಒಕ್ಕಲಿಗಿರುವಷ್ಟೇ ಹಕ್ಕು ಇರಬೇಕು. ಆದರೆ ಸರಕಾರದ ಕಾನೂನು ಮಾತ್ರ ಹಿಡುವಳಿದಾರನ ಆರ್ಥಿಕ ಪರಿಸ್ಥಿತಿ ಏನೇ ಇರಲಿ ಹಿಡುವಳಿಯ ಪ್ರಮಾಣ ಯಾವುದೇ ಇರಲಿ, ಗೇಣಿ ಪದ್ಧತಿ ಮುಂದುವರಿಯುವು ದಕ್ಕಾಗಲೀ, ಒಕ್ಕಲಿನಿಂದ ಭೂಮಿಯ ಒಂದು ಭಾಗವನ್ನಾದರೂ ಬಿಡಿಸಿಕೊಳ್ಳುವ ಅವಕಾಶವನ್ನಾಗಲೀ ಕೊಡುವುದಿಲ್ಲ. ಈ ಜಿಲ್ಲೆಯಲ್ಲಿ ಬೇರೆ ಯಾವ ವರಮಾನದ ಮೂಲವಾಗಲೀ, ಸ್ವಂತ ಸಾಗುವಳಿಯ ಭೂಮಿಯಾಗಲೀ ಇಲ್ಲದ ಇಂತಹ ಸಹಸ್ರಾರು ಸಣ್ಣ
ಹಿಡುವಳಿದಾರರು ಈ ಶಾಸನದಿಂದ ನಿರ್ಗತಿಕರಾಗಿದ್ದಾರೆ. ಇವರು ಕಳೆದುಕೊಂಡ ಭೂಮಿಗೆ ಸರಕಾರ ನಿಗದಿ ಮಾಡಿರುವ ಪರಿಹಾರದ ದರ ಕೂಡಾ ಗಾಯದ ಮೇಲೆ ಬರೆ ಎಳೆಯುವಂತಹದ್ದು. ಸರಕಾರ ಭೂಮಿ ಕಳೆದುಕೊಳ್ಳುವ ಸಣ್ಣ ಹಿಡುವಳಿದಾರರಿಗೆ, ವಿಧವೆಯರಿಗೆ, ಅಂಗವಿಕಲರು ಮತ್ತಿತರ ದುರ್ಬಲರಿಗೆ ಗೇಣಿಯ ಇಪ್ಪತ್ತು ಪಾಲು ಪರಿಹಾರಧನವೆಂದು ತೀರ್ಮಾನಿಸಿದೆ. ಆದರೆ ಈ ಗೇಣಿ ಮಾತ್ರ ಹಳೆಯ ಮದರಾಸು ಪ್ರಾಂತದ ಭೂಶಾಸನ, ನ್ಯಾಯಗೇಣಿ ಎಂದು ನಿರ್ಧರಿಸಿದ. ಉತ್ಪನ್ನದ 40% ಪಾಲು ಅಲ್ಲ ; ಬದಲು ವರ್ಷವೊಂದಕ್ಕೆ ಭೂಕಂದಾಯ ಮತ್ತು ನೀರಿನ ತೆರಿಗೆಯ ಹತ್ತುಪಟ್ಟು, ದ. ಕ. ಜಿಲ್ಲೆಯಲ್ಲಿ ಸರಕಾರೀ ಮೂಲದ ನೀರಾವರಿಯ ಕೃಷಿ ಭೂಮಿ ತೀರ ಕಡಿಮೆ ಇರುವುದರಿಂದ ಭೂ ಕಂದಾಯ (ತೀರ್ವ)ದ ಹತ್ತು ಪಟ್ಟು ಮಾತ್ರ ಗೇಣಿಯಾಗುತ್ತದೆ. ದ. ಕ. ಜಿಲ್ಲೆಯಲ್ಲಿ ಭೂ ಕಂದಾಯದ ದರ, ಭೂಮಿ ನಂಜ (ಗದ್ದೆ, ಕೃಷಿಭೂಮಿ) ಅಥವಾ ಬಾಗಾಯತು (ಮನೆ ಅಡಿ, ತೋಟ) ವರ್ಗಗಳಲ್ಲಿ ಬರುವುದಾದರೆ ಸೆಂಟ್ ಒಂದಕ್ಕೆ ಅತಿ ಹೆಚ್ಚು ಅಂದರೆ 10 ಪೈಸೆ: ಪುಂಜ (ಹಾಡಿ, ಗುಡ್ಡ)ವಾದರೆ ಸೆಂಟ್ 1ಕ್ಕೆ 1 ರಿಂದ 2 ಪೈಸೆ. ಅಂದರೆ ಈ ಶಾಸನದ ಪ್ರಕಾರ, ಒಂದು ಎಕ್ರೆ ನಂಜದ ಭೂಮಿಯನ್ನು ಗೇಣಿ ಕೊಟ್ಟ ಹಿಡುವಳಿದಾರನಿಗೆ, ಶಾಸನ ಒದಗಿಸುವ ಪರಿಹಾರ 2000 ರೂಪಾಯಿಗಳನ್ನು ಮೀರುವುದಿಲ್ಲ. ವಿಧವೆಯರು ಮತ್ತು ಅಂಗವಿಕಲರನ್ನು ಬಿಟ್ಟು ಉಳಿದವರಿಗೆ ಸರಕಾರ ಈ ಪರಿಹಾರವನ್ನು ಅದು 2000 ರೂ ಮೊತ್ತವನ್ನೂ ಮೀರಿ ದರ ಏಕಕಂತಿನಲ್ಲಿ ನಗದಾಗಿ ಕೊಡುವುದಿಲ್ಲ ; 20 ವರುಷಗಳ ಸರಕಾರೀ ಬಾಂಡುಗಳ ರೂಪದಲ್ಲಿ ಕೊಡುತ್ತದೆ. ಬೇರೆ ವರಮಾನದ ಮಲವಾಗಲೀ, ಉದ್ಯೋಗವಾಗಲೀ ಇಲ್ಲದ ಸಣ್ಣ ಹಿಡುವಳಿದಾರ (ದ. ಕ. ಜಿಲ್ಲೆಯಲ್ಲಿ ಸಣ್ಣ ಹಿಡುವಳಿದಾರರ ಸಂಖ್ಯೆಯೇ ಜಾಸ್ತಿ: ಕೋಷ್ಟಕ ನೋಡಿ, ಇವರಲ್ಲಿ ಹೆಚ್ಚಿನವರಿಗೆ ಯಾವ ಉದ್ಯೋಗವಾಗಲೀ, ಇನ್ನಿತರ ವರಮಾನ ಮೂಲಗಳಾಗಲೀ ಇಲ್ಲ) ಈ ಅಲ್ಪ ಪರಿಹಾರವನ್ನು ತೆಗೆದುಕೊಂಡು ಏನು ಮಾಡಬೇಕು ? ಈ ಶಾಸನದಿಂದ ನಿರ್ಗತಿಕನಾದ ಒಬ್ಬ ಇಂತಹ “ಧನಿ” ನನ್ನೊಡನೆ ಹೇಳಿದ ಹಾಗೆ, “ಇದು ವಿಷ ತೆಗೆದುಕೊಳ್ಳಲಿಕ್ಕೂ ಸಾಕಾಗದ” ಪರಿಹಾರ.
ಸಣ್ಣ ಹಿಡುವಳಿದಾರ ಮತ್ತು ಅವನ ಒಕ್ಕಲು ಇಬ್ಬರಿಗೂ ಅನ್ಯಾಯವಾಗದ ಹಾಗೆ ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ ? ಈ ಬಗ್ಗೆ ಭಾರತ ಮಾರ್ಕ್ಸ್‌ವಾದೀ ಕಮ್ಯೂನಿಸ್ಟ್ ಪಕ್ಷದ ಧೋರಣೆಯೇ ಅತ್ಯಂತ ನ್ಯಾಯಬದ್ಧವೆನ್ನಿಸುತ್ತದೆ. ಯಾವುದೇ ಭೂ ಸುಧಾರಣಾ ಶಾಸನ, ಸಣ್ಣ ಹಿಡುವಳಿದಾರರಿಗೆ ಹೇಗೆ ಅನ್ವಯವಾಗಬೇಕು ಎಂಬುದರ ಬಗ್ಗೆ ಆ ಪಕ್ಷದ ನಿರ್ಣಯ ಹೀಗಿದೆ-If one is a tenant on small holders land owning less than half the ceiling, and if such a small holder ತನ್ನ ಭೂಮಿಯ ಮೇಲಿರುವ ಮೋಹಕ್ಕಿಂತ, ಈ ಭಾವನೆ ಬೇರೆ ರೀತಿಯದ್ದು. ಹೆಚ್ಚು ಆಳವಾದದ್ದು. ಇದು ಕೇವಲ ನನ್ನ ವೈಯಕ್ತಿಕ ಭಾವನೆ ; ಇದಕ್ಕೆ ಯಾವ ವೈಜ್ಞಾನಿಕ ತಳಹದಿಯೂ ಇಲ್ಲ). ಭೂಮಿಯನ್ನು ತಾಯಿ ಎಂದು ತಿಳಿಯುವವನಿಗೆ ಭೂಮಿ ಇನ್ನೊಬ್ಬರ ಸ್ವಂತದ್ದಾಗುವುದು ಶೀಲಭಂಗದಷ್ಟು ಅಪವಿತ್ರವೆನ್ನಿಸುತ್ತದೆ. ಪಾಳೆಯಗಾರ ಮನೋಧರ್ಮ ಎಂದು ನಾವು ಇದನ್ನು ತಿರಸ್ಕರಿಸಬಹುದು. ಆ ವಿಶ್ಲೇಷಣೆ ಸರಿ ಕೂಡ. ಆದರೂ ನಾವು ಯೋಚಿಸುತ್ತಿರುವುದು ನಿರ್ಜೀವ ಘಟಕಗಳ ಬಗ್ಗೆ ಅಲ್ಲ. ನೆನಪುಗಳುಳ್ಳ, ಭಾವನೆಗಳುಳ್ಳ ಮನುಷ್ಯರ ಬಗ್ಗೆ. ರಾತಾರಾತ್ರೆ ಒಕ್ಕಲೆಬ್ಬಿಸಲು ಪ್ರಯತ್ನಿಸಿದ ಘರ್ಷಣೆ, ವಿವಾದ ಕಿತಾಪತಿಗಳನ್ನು ನಡೆಸಿದ, ಪೋಲಿಸು ಕೇಸುಗಳನ್ನು ಸೃಷ್ಟಿಸಿದ ಸಣ್ಣ ಹಿಡುವಳಿದಾರನ ಹತಾಶ ಕ್ರೌರ್ಯದ ಹಿಂದೆ ಏನಿದೆ ಎಂದು ತಿಳಿಯಲು ನಾನು ಪ್ರಯತ್ನಿಸುತ್ತಿದ್ದೇನೆ.
ಅಲ್ಲದೆ ಈ ಶಾಸನ ಬಂದ ತಕ್ಷಣ, ಈ ಸಣ್ಣ ಹಿಡುವಳಿದಾರ ಯಾವ ಘರ್ಷಣೆ ವಿವಾದಗಳೂ ಇಲ್ಲದೆ, ತನ್ನ ಭೂಮಿಯ ಹಕ್ಕನ್ನು ಬಿಟ್ಟುಕೊಡಬೇಕೆಂದು ನಿರೀಕ್ಷಿಸುವುದಕ್ಕೆ ಯಾರಿಗಾದರೂ ಯಾವ ನೈತಿಕ ಹಕ್ಕು ಇದೆ ? ಈ ಮೊದಲೇ ವಿವರಿಸಿದಂತೆ ಈ ಸಣ್ಣ ಹಿಡುವಳಿದಾರ ಆರ್ಥಿಕವಾಗಿ ಬಲಹೀನ ನಗರಗಳ ಕೆಳ ಮಧ್ಯಮ ವರ್ಗಗಳವರ ಆದಾಯಕ್ಕಿಂತಲೂ ಈತನ ಆದಾಯ ಕಡಿಮೆ. ಜೀವನಾವಶ್ಯಕ ವಸ್ತುಗಳ ಬೆಲೆಗಳ ಮಟ್ಟಿಗೆ ಹಳ್ಳಿ ಮತ್ತು ನಗರ ಇವುಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲದ ದ.ಕ ಜಿಲ್ಲೆಯಲ್ಲಂತೂ (ಈ ಜಿಲ್ಲೆಯಲ್ಲಿ ಮಾತ್ರ ಇಡೀ ದೇಶದಲ್ಲೇ ನಿಧಾನವಾಗಿ ಆಗುತ್ತಿರುವ ಕೃಷಿಯ ಬಂಡವಾಳಷಾಹೀಕರಣದಿಂದ ಸಾರಿಗೆ ಸೌಕರ್ಯಗಳ ಹೆಚ್ಚಳದ ಕಾರಣದಿಂದ ಈ ವ್ಯತ್ಯಾಸ ಈಗ ಅಳಿಸಿಹೋಗತ್ತಿದೆ) ಈತನ ಸ್ಥಿತಿ, ನಗರಗಳ ಕೆಳಮಧ್ಯಮ ವರ್ಗದ ಕಛೇರಿ ನೌಕರರಿಗಿಂತಲೂ ಕಡೆಯದ್ದು. (ನಗರಗಳಲ್ಲಿ ದುಡಿಯುವವರಲ್ಲಿ ಎಲ್ಲರೂ ಕಛೇರಿ ನೌಕರರಲ್ಲ. ಹಳ್ಳಿಗಳ ಭೂಹೀನ ಕೃಷಿಕಾರ್ಮಿಕರ ಮಟ್ಟದಲ್ಲೇ ಇರುವ, ಅಸಂಖ್ಯಾತ ಅರೆ ಉದ್ಯೋಗಿಗಳೂ, ನಿರುದ್ಯೋಗಿಗಳೂ ಯಾವ ಕಾರ್ಮಿಕ ಕಲ್ಯಾಣದ ಸೌಲಭ್ಯವೂ ಇಲ್ಲದ ದೈಹಿಕ ಶ್ರಮಜೀವಿಗಳೂ ನಗರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ನಮ್ಮ ಅರ್ಥವ್ಯವಸ್ಥೆಯ ವಿತರಣೆಯ ವೈಪರೀತ್ಯಗಳನ್ನು ತೋರಿಸಲು ಮಾತ್ರ ಮೇಲಿನ ಹೋಲಿಕೆ ಕೊಡುತ್ತಿದ್ದೇನೆ). ಸಾಮಾಜಿಕ ವಿತರಣೆಯ ನ್ಯಾಯವನ್ನು ಸರಕಾರ ನಗರಗಳಲ್ಲಿ ಎಷ್ಟು ಶ್ರದ್ದೆಯಿಂದ ಪಾಲಿಸುತ್ತಿದೆ ? ಸಂಪಾದನೆ-ಏನಕೇನ ಪ್ರಕಾರೇಣ ಸಂಪಾದನೆ-ಈ ಸಮಾಜದ ನಾಯಕ ಸ್ಥಾನಗಳಲ್ಲಿರುವವರ ಬದುಕಿನ ಪರಮ ಮೌಲ್ಯವೇ ಆಗಿಬಿಟ್ಟಿರುವಾಗ, ಈ ಸಣ್ಣ ಹಿಡುವಳಿದಾರ ಮಾತ್ರ ಯಾವ ಆಸೆಯೂ ಇಲ್ಲದ ಧರ್ಮರಾಯನಂತೆ ವರ್ತಿಸಬೇಕೆಂದು ನಮ್ಮ ಸರಕಾರ ನಿರೀಕ್ಷಿಸುತ್ತಿದೆ. ಈತನೊಬ್ಬನ ಮಟ್ಟಿಗೆ ಮಾತ್ರ ತನ್ನ ವಿತರಣೆಯ ನ್ಯಾಯವನ್ನು ಅನ್ವಯಿಸಲು ಈ ಕೊಂಡು ಇರುವುದಕ್ಕೆ ಎಷ್ಟು ಅಗತ್ಯವೋ ಅಷ್ಟು ಮಾತ್ರ; ಅಂದರೆ ಮಾರ್ಕ್ಸ್‌ವಾದಿಗಳು ಹೇಳುವ subsistence wage, ಭೂಮಿ ಅಭಿವೃದ್ಧಿಪಡಿಸುವುದಕ್ಕೆ ಬೇಕಾದ ಬಂಡವಾಳದ ಕೊರತೆಯೂ ಇವನಿಗೆ ಬರಲಿಲ್ಲ. ಈ ಜಿಲ್ಲೆಯಲ್ಲಿ ವಿಪರೀತ ಬೆಳೆದಿರುವ ಬ್ಲಾಕಿಂಗ್ ಮತ್ತು ಸಹಕಾರೀ ಸಂಸ್ಥೆಗಳ ಪೂರ್ಣ ಪ್ರಯೋಜನವನ್ನು ಪಡೆದುಕೊಂಡವನೂ ಈ ಸ್ವಂತ ಸಾಗುವಳಿದಾರನೇ. ತನ್ನ ಭೂಮಿಯ ಕೃಷಿಗೆ ಅಗತ್ಯವಾದ ದೈಹಿಕ ಶ್ರಮವೂ ಸೇರಿ ಎಲ್ಲದಕ್ಕೂ ಈತನಿಗಿದ್ದುದು ಬಹುಮಟ್ಟಿಗೆ, ಇವನಿಗೇ ಅನುಕೂಲಕರವಾದ buyer’s market. ಆದರೆ ಆಹಾರ ಧಾನ್ಯಗಳ ಬೆಲೆ ಏರಿಕೆಯ ಮತ್ತು ಸಹಜ ಕೃತಕ ಅಭಾವಗಳ ಹಿನ್ನೆಲೆಯಲ್ಲಿ ಈತ ಬೆಳೆದದ್ದನ್ನು ಮಾರುಕಟ್ಟೆಯಲ್ಲಿ ಮಾರುವ ಮಟ್ಟಿಗೆ ಮಾತ್ರ ಇತನದ್ದು seller’s market (ಸರಕಾರದ ಕಡ್ಡಾಯ ಲೆವಿ ಇದ್ದರೂ).
ಸಣ್ಣ ಹಿಡುವಳಿದಾರನಿಗೆ ಮಾತ್ರ ಈ ಯಾವ ಸೌಕರ್ಯವೂ ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಆತನಿಗೆ ಗೇಣಿ ವಸೂಲಿಯೂ ಇಲ್ಲ ; ವಸೂಲಾದದ್ದೂ ಗೋಪಾಳದಷ್ಟು. ಆತನ ಸ್ಥಾನಮಾನದ ದೆಸೆಯಿಂದ ಒಕ್ಕಲೆಬ್ಬಿಸುವುದೂ ಆತನಿಗೆ ಸಾಧ್ಯವಾಗಲಿಲ್ಲ. ಸೀಲಿಂಗಿನ ಒಳಗೆ ಸ್ವಂತ ಕೃಷಿ ಮಾಡುತ್ತೇನೆಂದರೆ, ಒಕ್ಕಲಿನಿಂದ ಭೂಮಿ ಬಿಡಿಸಿಕೊಳ್ಳುವ ಹಾಗಿಲ್ಲ. “ಬಗ್ಗಿದವನಿಗೆ ಒಂದು ಗುದ್ದು ಹೆಚ್ಚು, ತಾನು ವಂಚಿತನಾದ, ಅತಂತ್ರನಾದೆ” ಎಂದು ಈತನಿಗನ್ನಿಸಿದರೆ ಅದೇನೂ ಆಧಾರವಿಲ್ಲದ ಭಾವನೆ ಅಲ್ಲ. ಹಾಗೆಂದು, ಈತ ತನಗಿಂತಲೂ ಬಡತನದಲ್ಲಿದ್ದ ತನ್ನ ಒಕ್ಕಲುಗಳು ಅಥವಾ ಕೃಷಿ ಕಾರ್ಮಿಕರ ಬಗ್ಗೆ ಉದಾರವಾಗಿ ಏನೂ ನಡೆದುಕೊಂಡಿರಲಿಲ್ಲ. ಪಾಳೆಯಗಾರ ಮನೋ ಧರ್ಮದ ಈತನಿಂದ ಅದನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ. ನಾನು ಈ ಸಣ್ಣ ಹಿಡುವಳಿ ದಾರನನ್ನು ಎಷ್ಟಕ್ಕೂ ಸಮರಿಸುತ್ತಿಲ್ಲ. ದೊಡ್ಡ ಭೂಮಾಲಕನ ಎಲ್ಲ ಕೆಟ್ಟಚಾಳಿಗಳನ್ನೂ ಈತನೂ ಅಷ್ಟಷ್ಟು ಮೈಗೂಡಿಸಿಕೊಂಡವನೆ ; ಸಾಧ್ಯವಿದ್ದರೆ ಈತನೂ ಒಕ್ಕಲೆಬ್ಬಿಸಿ, ಒಕ್ಕಲನ್ನು ಅತಂತ್ರನನ್ನಾಗಿ ಮಾಡಿ ತನ್ನ ಬುಡ ಭದ್ರಮಾಡಿಕೊಳ್ಳುತ್ತಿದ್ದ. ಆದರೆ ಅದು ಸಾಧ್ಯವಾಗಲಿಲ್ಲ. ಈತನ ಹತಾಶ ಭಾವನೆ, ಅನ್ಯಾಯಕ್ಕೊಳಗಾದೆ ಎಂಬ ಭಾವನೆ ಸಕಾರಣವಾದದ್ದು ಎಂದು ಮಾತ್ರ ನನ್ನ ಅಭಿಪ್ರಾಯ. ಅಲ್ಲದೆ ಸಣ್ಣ ಹಿಡುವಳಿದಾರನಿಗಿರುವ ಭೂಮಿಯ ವ್ಯಾಮೋಹವನ್ನು ಪೂರ್ಣವಾಗಿ ಆರ್ಥಿಕ ಹಿತಾಸಕ್ತಿಯ ದೃಷ್ಟಿ ಯಿಂದ ವಿವರಿಸಲಾಗುವುದಿಲ್ಲ. ಈ ಜಿಲ್ಲೆಯ ಬಹುತೇಕ ಸಣ್ಣ ಹಿಡುವಳಿದಾರರು absentee landlords ಅಲ್ಲ; ತಮ್ಮ ಭೂಮಿಯ ಸಮೀಪವೇ ವಾಸವಾಗಿರುವವರು: ಇವರ ಭೂಮಿಯನ್ನು ಒಕ್ಕಲು ಸಾಗುವಳಿ ಮಾಡಿದರೂ ಇವರ ಭೂಮಿಯ ಮೇಲೆ ಒಕ್ಕಲಿಗಿದ್ದಂತೆ ಇವರಿಗೂ ಒಂದು ಭಾವನಾತ್ಮಕ attachment ಇರುವುದನ್ನು ನಾನು ಅನೇಕ ಸಂದರ್ಭಗಳಲ್ಲಿ ಗಮನಿಸಿದ್ದೇನೆ (ಭಾರೀ ಭೂಮಾಲಕನಿಗೆ, ಶ್ರೀಮಂತ ರೈತನಿಗೆ ತನ್ನ ಭೂಮಿಯ ಮೇಲಿರುವ ಮೋಹಕ್ಕಿಂತ, ಈ ಭಾವನೆ ಬೇರೆ ರೀತಿಯದ್ದು. ಹೆಚ್ಚು ಆಳವಾದದ್ದು. ಇದು ಕೇವಲ ನನ್ನ ವೈಯಕ್ತಿಕ ಭಾವನೆ ; ಇದಕ್ಕೆ ಯಾವ ವೈಜ್ಞಾನಿಕ ತಳಹದಿಯೂ ಇಲ್ಲ). ಭೂಮಿಯನ್ನು ತಾಯಿ ಎಂದು ತಿಳಿಯುವವನಿಗೆ ಭೂಮಿ ಇನ್ನೊಬ್ಬರ ಸ್ವಂತದ್ದಾಗುವುದು. ಶೀಲಭಂಗದಷ್ಟು ಅಪವಿತ್ರವೆನ್ನಿಸುತ್ತದೆ. ಪಾಳೆಯಗಾರ ಮನೋಧರ್ಮ ಎಂದು ನಾವು ಇದನ್ನು ತಿರಸ್ಕರಿಸಬಹುದು. ಆ ವಿಶ್ಲೇಷಣೆ ಸರಿ ಕೂಡ. ಆದರೂ ನಾವು ಯೋಚಿಸುತ್ತಿರುವುದು ನಿರ್ಜಿವ ಘಟಕಗಳ ಬಗ್ಗೆ ಅಲ್ಲ. ನೆನಪುಗಳುಳ್ಳ. ಭಾವನೆಗಳುಳ್ಳ ಮನುಷ್ಯರ ಬಗ್ಗೆ. ರಾತಾರಾತ್ರೆ ಒಕ್ಕಲೆಬ್ಬಿಸಲು ಪ್ರಯತ್ನಿಸಿದ, ಘರ್ಷಣೆ, ವಿವಾದ ಕಿತಾಪತಿಗಳನ್ನು ನಡೆಸಿದ, ಪೋಲಿಸು ಕೇಸುಗಳನ್ನು ಸೃಷ್ಟಿಸಿದ ಸಣ್ಣ ಹಿಡುವಳಿದಾರನ ಹತಾಶ ಕ್ರೌರ್ಯದ ಹಿಂದೆ ಏನಿದೆ ಎಂದು ತಿಳಿಯಲು ನಾನು ಪ್ರಯತ್ನಿಸುತ್ತಿದ್ದೇನೆ.
ಅಲ್ಲದೆ ಈ ಶಾಸನ ಬಂದ ತಕ್ಷಣ, ಈ ಸಣ್ಣ ಹಿಡುವಳಿದಾರ ಯಾವ ಘರ್ಷಣೆ ವಿವಾದಗಳೂ ಇಲ್ಲದೆ, ತನ್ನ ಭೂಮಿಯ ಹಕ್ಕನ್ನು ಬಿಟ್ಟುಕೊಡಬೇಕೆಂದು ನಿರೀಕ್ಷಿಸುವುದಕ್ಕೆ ಯಾರಿಗಾದರೂ ಯಾವ ನೈತಿಕ ಹಕ್ಕು ಇದೆ ? ಈ ಮೊದಲೇ ವಿವರಿಸಿದಂತೆ ಈ ಸಣ್ಣ ಹಿಡುವಳಿದಾರ ಆರ್ಥಿಕವಾಗಿ ಬಲಹೀನ ನಗರಗಳ ಕೆಳ ಮಧ್ಯಮ ವರ್ಗಗಳವರ ಆದಾಯಕ್ಕಿಂತಲೂ ಈತನ ಆದಾಯ ಕಡಿಮೆ. ಜೀವನಾವಶ್ಯಕ ವಸ್ತುಗಳ ಬೆಲೆಗಳ ಮಟ್ಟಿಗೆ ಹಳ್ಳಿ ಮತ್ತು ನಗರ ಇವುಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲದ ದ. ಕ. ಜಿಲ್ಲೆಯ ಅಂತೂ (ಈ ಜಿಲ್ಲೆಯಲ್ಲಿ ಮಾತ್ರ ಇಡೀ ದೇಶದಲ್ಲೇ ನಿಧಾನವಾಗಿ ಆಗುತ್ತಿರುವ ಕೃಷಿಯ ಬಂಡವಾಳಷಾಹೀಕರಣದಿಂದ ಸಾರಿಗೆ ಸೌಕರ್ಯಗಳ ಹೆಚ್ಚಳದ ಕಾರಣದಿಂದ ಈ ವ್ಯತ್ಯಾಸ ಈಗ ಅಳಿಸಿಹೋಗತ್ತಿದೆ) ಈತನ ಸ್ಥಿತಿ, ನಗರಗಳ ಕೆಳಮಧ್ಯಮ ವರ್ಗದ ಕಛೇರಿ ನೌಕರರಿಗಿಂತಲೂ ಕಡೆಯದ್ದು. (ನಗರಗಳಲ್ಲಿ ದುಡಿಯುವವರಲ್ಲಿ ಎಲ್ಲರೂ ಕಛೇರಿ ನೌಕರರಲ್ಲ. ಹಳ್ಳಿಗಳ ಭೂಹೀನ ಕೃಷಿಕಾರ್ಮಿಕರ ಮಟ್ಟದಲ್ಲೇ ಇರುವ, ಅಸಂಖ್ಯಾತ ಅರೆ ಉದ್ಯೋಗಿಗಳೂ, ನಿರುದ್ಯೋಗಿಗಳೂ ಯಾವ ಕಾರ್ಮಿಕ ಕಲ್ಯಾಣದ ಸೌಲಭ್ಯವೂ ಇಲ್ಲದ ದೈಹಿಕ ಶ್ರಮಜೀವಿಗಳೂ ನಗರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ನಮ್ಮ ಅರ್ಥವ್ಯವಸ್ಥೆಯ ವಿತರಣೆಯ ವೈಪರೀತ್ಯಗಳನ್ನು ತೋರಿಸಲು ಮಾತ್ರ ಮೇಲಿನ ಹೋಲಿಕೆ ಕೊಡುತ್ತಿದ್ದೇನೆ). ಸಾಮಾಜಿಕ ವಿತರಣೆಯ ನ್ಯಾಯವನ್ನು ಸರಕಾರ ನಗರಗಳಲ್ಲಿ ಎಷ್ಟು ಶ್ರದ್ದೆಯಿಂದ ಪಾಲಿಸುತ್ತಿದೆ ? ಸಂಪಾದನೆ-ಏನಕೇನ ಪ್ರಕಾರೇಣ ಸಂಪಾದನೆ-ಈ ಸಮಾಜದ ನಾಯಕ ಸ್ಥಾನಗಳಲ್ಲಿರುವವರ ಬದುಕಿನ ಪರಮ ಮೌಲ್ಯವೇ ಆಗಿಬಿಟ್ಟಿರುವಾಗ, ಈ ಸಣ್ಣ ಹಿಡುವಳಿದಾರ ಮಾತ್ರ ಯಾವ ಆಸೆಯೂ ಇಲ್ಲದ ಧರ್ಮರಾಯನಂತೆ ವರ್ತಿಸಬೇಕೆಂದು ನಮ್ಮ ಸರಕಾರ ನಿರೀಕ್ಷಿಸುತ್ತಿದೆ. ಈತನೊಬ್ಬನ ಮಟ್ಟಿಗೆ ಮಾತ್ರ ತನ್ನ ವಿತರಣೆಯ ನ್ಯಾಯವನ್ನು ಅನ್ವಯಿಸಲು ಈ ಸರಕಾರಕ್ಕಾದರೂ ಯಾವ ನೈತಿಕ ಹಕ್ಕು ಇದೆ ? ತನಗೆ ಅನ್ಯಾಯವಾಗಿದೆ ಎಂದು ಈ ಸಣ್ಣ ಹಿಡುವಳಿದಾರನಿಗೆ ಅನ್ನಿಸಿದರೆ ಅದರಲ್ಲಿ ತಪ್ಪಿದೆಯೆ ?
ಗೇಣಿ ಪದ್ದತಿಯ ಮೂಲದಲ್ಲಿರುವುದು. ಭೂಮಿಯ ಒಡೆತನ, ಮತ್ತು ಕೃಷಿಯ ಶ್ರಮಗಳ ನಡುವೆ ಇರುವ ವೈರುಧ್ಯ, ಭೂಮಾಲಕತ್ವದ ಎಲ್ಲ ಅನಿಷ್ಟಗಳ ಹಿನ್ನೆಲೆಯಲ್ಲಿರುವುದೂ ಈ ವೈರುಧ್ಯವೇ. ಇದನ್ನು ಕೊನೆಗಾಣಿಸುವ ಯಾವ ಪ್ರಯತ್ನವೂ ಸಹಜವಾಗಿ ಈ ಸಮಾಜದ ಸಂದರ್ಭದಲ್ಲಿ ದೈಹಿಕಶ್ರಮವನ್ನು ಮೊದಲಿನಿಂದಲೂ ತಿರಸ್ಕಾರದಿಂದ ಕಂಡ ಬ್ರಾಹ್ಮಣನ ಹಿತಕ್ಕೆ ವಿರೋಧಿಯಾಗುತ್ತದೆ. ದ. ಕ. ಜಿಲ್ಲೆಯಲ್ಲಿ ಈ ಶಾಸನದಿಂದ ತುಂಬ ತೊಂದರೆಗೊಳಗಾದ ಸಣ್ಣ ಹಿಡುವಳಿದಾರರಲ್ಲಿ ಬ್ರಾಹ್ಮಣರದ್ದೇ ಹೆಚ್ಚಳ. ಇತರ ಜಾತಿಗಳಲ್ಲೂ ಗೇಣಿಗೆ ಕೊಟ್ಟ ಭೂಮಿ ಇರುವ ಸಣ್ಣ ಹಿಡುವಳಿದಾರರು ಇಲ್ಲ ಎಂದಲ್ಲ. ಆದರೆ ಅವರ ಸಂಖ್ಯೆ ತೀರ ಕಡಿಮೆ. ಬೇರೆ ಪೂರ್ಣಾವಧಿಯ ಉದ್ಯೋಗ ಅಥವಾ ವರಮಾನದ ಮೂಲ ಇರುವ ಸಣ್ಣ ಹಿಡುವಳಿದಾರರು ಮಾತ್ರ ಇತರ ಜಾತಿಗಳಲ್ಲೂ ಗೇಣಿ ಒಕ್ಕಲುಗಳಿಗೆ ಭೂಮಿ ಕೊಟ್ಟದ್ದುಂಟು. ಅದಿಲ್ಲದವರಿಗೆ ಗೇಣಿಗೆ ಭೂಮಿ ಕೊಡುವ ಅವಶ್ಯಕತೆಯೇ ಇಲ್ಲದ್ದರಿಂದ, ಬ್ರಾಹ್ಮಣೇತರ ಜಾತಿಗಳ ಹೆಚ್ಚಿನ ಸಣ್ಣ ಹಿಡುವಳಿದಾರರು, ಸ್ವಂತ ಸಾಗುವಳಿದಾರರೇ ಆಗಿದ್ದಾರೆ. ಹಾಗೆಂದು ಬ್ರಾಹ್ಮಣ ಭೂಮಾಲಿಕರಲ್ಲಿ ಒಕ್ಕಲೆಬ್ಬಿಸಿ, ಭೂಮಿ ಸ್ವಂತಕ್ಕೆ ಮಾಡಿಕೊಂಡು, ಕೃಷಿ ಕೂಲಿಗಳನ್ನು ದುಡಿಸಿ ಕೃಷಿ ಮಾಡುವ, ‘ಸುಧಾರಿತ’ ಮನೋವೃತ್ತಿಯ (ಅಂದರೆ ಕೃತಕ ಗೊಬ್ಬರ, ಪಂಪ್‌ಸೆಟ್ ನೀರಾವರಿ, ಸುಧಾರಿತ ಬಿತ್ತನೆ ಬೀಜಗಳನ್ನು ಬಳಸಿ ಹೆಚ್ಚು ಫಸಲು ತೆಗೆಯುವ) ಶ್ರೀಮಂತ ರೈತರಿಗೂ ಕೊರತೆ ಇಲ್ಲ ; ಉಳುವುದೊಂದನ್ನು ಬಿಟ್ಟು ಕೃಷಿಗೆ ಸಂಬಂಧಿಸಿದ ಉಳಿದ ಎಲ್ಲ ಕೆಲಸಗಳನ್ನೂ ರಟ್ಟೆ ಮುರಿದು ಕುಟುಂಬದ ಗಂಡಸರು ಮತ್ತು ಹೆಂಗಸರು ದುಡಿಯುವ ಸಣ್ಣ ರೈತರೂ ಬ್ರಾಹ್ಮಣರಲ್ಲಿ ಸಾಕಷ್ಟು ಜನ ಇದ್ದಾರೆ. ಇವರು ಬದಲಾಗುತ್ತಿರುವ ಕಾಲವನ್ನು ಅರ್ಥಮಾಡಿಕೊಂಡ ಅದೃಷ್ಟ ಶಾಲಿಗಳು. ಆದರೆ ಬ್ರಾಹ್ಮಣರಲ್ಲಿ ಹೆಚ್ಚಿನ ಸಣ್ಣ ಹಿಡುವಳಿದಾರರ ಭೂಮಿ ಸ್ವಂತ ಸಾಗುವಳಿಯದ್ದಲ್ಲ ; ಗೇಣಿ ಒಕ್ಕಲಿನಿಂದ ಭೂಮಿ ಬಿಡಿಸಿಕೊಳ್ಳುವುದಕ್ಕೂ ಇವರಿಗೆ ಸಾಧ್ಯವಾಗಲಿಲ್ಲ. ಈಗ ಈ ಶಾಸನದಿಂದ ನಿರ್ಗತಿಕರಾಗುವ ಇವರ ದುರಂತವೆಂದರೆ ಇವರಲ್ಲಿ ಹೆಚ್ಚಿನವರಿಗೆ ಯಾವ ಉತ್ಪಾದನಾ ಕೌಶಲವೂ ಇಲ್ಲ. (ಅಡುಗೆ ಮಾಡುವುದು, ಪೌರೋಹಿತ್ಯ, ಜಾತಕ ಸ್ಫುಟ ಮಾಡುವುದು, ಅಳಲೆಕಾಯಿ ವೈದ್ಯಕೀಯ ಇತ್ಯಾದಿಗಳನ್ನು ಕೌಶಲಗಳೆಂದು ಕರೆಯಬಹುದಾದರೆ ಕೆಲವರು ಇವನ್ನು ಮೇಲು ಸಂಪಾದನೆಗೆ ಮಾಡುತ್ತಿರುವವರು). ಇಂಗ್ಲಿಷ್ ವಿದ್ಯಾಭ್ಯಾಸವೂ ಇಲ್ಲ. ಹೋಗಲಿ ; ನಮ್ಮಲ್ಲಿ ಕೆಲವರು ಈಗ stereotype ಮಾಡಿರುವಂತೆ ಇವರನ್ನು ವೇದೋಪನಿಷತ್ತುಗಳ ಸಂಸ್ಕೃತಿಯ ಉತ್ತರಾಧಿಕಾರಿಗಳು ಎಂದು ಭಾವಿಸೋಣವೇ ? (ಇಂತಹ ಉತ್ತರಾಧಿಕಾರಕ್ಕೆ ಈಗ ಮೂರು ಕಾಸಿನ ಬೆಲೆ ಇಲ್ಲ ಎನ್ನುವ ಮಾತು ಬೇರೆ. ) ಕಾಲವೇ ಕೈ ಬಿಟ್ಟಿರುವ ಈ ಬಡಪಾಯಿಗಳಲ್ಲಿ ಹೆಚ್ಚಿನವರಿಗೆ ಆಪೋಶನ, ಆಚಮನಗಳನ್ನು ಬಿಟ್ಟು ಸಂಸ್ಕೃತದ ಗಂಧವೂ ಇಲ್ಲ. ರಾಜಕೀಯವಾಗಿ, ಆರ್ಥಿಕವಾಗಿ ಯಾವ ಬಲವೂ ಇಲ್ಲದ ಇವರಿಗೆ ಕಳೆದ ಹತ್ತು ವರುಷಗಳಿಂದ ಒಕ್ಕಲು ಗೇಣಿ ಕೊಟ್ಟದ್ದೂ ಇಲ್ಲ. ಇಂತಹದ್ದೇ ಅಸಹಾಯಕ ಸ್ಥಿತಿಯಲ್ಲಿರುವ ಇನ್ನೊಂದು ಗುಂಪೆಂದರೆ ಅಶನಾರ್ಥದಲ್ಲಿ ಬದುಕುತ್ತ ಸಾವಿಗೆ ಕಾಯುತ್ತ ದಿನ ದೂಕುತ್ತಿರುವ ವಿಧವೆಯರದ್ದು. ಇವರಲ್ಲಿಯೂ ಹೆಚ್ಚಿನವರು ಬ್ರಾಹ್ಮಣರು. ಈ ಶಾಸನ ಈಗ ಒಮ್ಮಿಂದೊಮ್ಮೆಗೆ ತಮ್ಮ ಭೂಮಿಯ ಮೇಲೆ ಇವರಿಗಿದ್ದ ಎಲ್ಲ ಹಕ್ಕುಗಳನ್ನೂ, ಯಾವ ರಿಯಾಯಿತಿಯನ್ನು ತೋರಿಸದೆ ಕಸಿದುಕೊಂಡು ಬಿಟ್ಟಿದೆ. ಸಾವಿರ ವರುಷದ ದೈಹಿಕ ಶ್ರಮದ ಬಗ್ಗೆ ಬ್ರಾಹ್ಮಣನಿಗಿದ್ದ ತಿರಸ್ಕಾರದ, ಬ್ರಾಹ್ಮಣ್ಯದ ಮಡಿ ಮೈಲಿಗೆ ವಿಧಿ ನಿಷೇಧಗಳ ದರಿದ್ರ ಪರಂಪರೆಗೆ, ಏಕಾಏಕಿ ಈ ಬಡ ಬ್ರಾಹ್ಮಣರು ಬೆಲೆ ತೆರಬೇಕಾದ್ದು ಕರುಣಾಜನಕ. ನೇಗಿಲು ಹಿಡಿಯುವದನ್ನು, ನೇಜಿ ನೆಡುವುದನ್ನು, ಕೈ ಕೆಸರು ಮಾಡಿಕೊಳ್ಳುವುದನ್ನು ಬ್ರಾಹ್ಮಣ ಕಲಿತಿದ್ದರೆ, ಈಗ ಈ ಸಣ್ಣ ಹಿಡುವಳಿದಾರರ ಹೀನ ಪರಿಸ್ಥಿತಿಯಿಂದ ಕೆಲವರಾದರೂ ಖಂಡಿತ ತಪ್ಪಿಸಿಕೊಳ್ಳುತ್ತಿದ್ದರು. ನನಗೇ ಗೊತ್ತಿರುವ ಅನೇಕ ಬ್ರಾಹ್ಮಣ ಸಣ್ಣ ಹಿಡುವಳಿದಾರರು, ಕೋರ್ಟು ಮುಖಾಂತರ ಒಕ್ಕಲೆಬ್ಬಿಸುವುದು ಸಾಧ್ಯವಾಗಿದ್ದ ಕಾಲದಲ್ಲಿ ಗೇಣಿ ಕೊಡದ ಒಕ್ಕಲಿನ ಮೇಲೆ ವ್ಯಾಜ್ಯ ಹೂಡಿ, ಕೋರ್ಟು ಕಛೇರಿ ಅಲೆದಾಡಿ, ಡಿಕ್ರಿ ತಂದು ಭೂಮಿ ಬಿಡಿಸಿಕೊಂಡು, ಮತ್ತೆ ಅದನ್ನು ಇನ್ನೊಬ್ಬನಿಗೆ ಗೇಣಿಗೆ ಕೊಟ್ಟದ್ದಿದೆ. ಕಾಲ ಬದಲಾಗಲಾರದು ; ಬದಲಾದರೂ ತನ್ನನ್ನು ತಟ್ಟಲಾರದು ಎಂಬ ವಿಶ್ವಾಸ, ಇನ್ನೊಬ್ಬನ ದುಡಿಮೆಯನ್ನೇ ಅವಲಂಬಿಸಿಕೊಂಡಿರುವುದು ಲಜ್ಜಾಸ್ಪದ ಮಾತ್ರವಲ್ಲ ಅಪಾಯಕಾರಿ ಕೂಡ ಎಂದು ತಿಳಿಯದ ಮೂರ್ಖತನ, ಈ ಬಡ ಬ್ರಾಹ್ಮಣನ ಈಗಿನ ಕರುಣಾಜನಕ ಸ್ಥಿತಿಗೆ ಕಾರಣ. ಈ ಜಿಲ್ಲೆಯಲ್ಲಂತೂ ಕಾಲ ನಿಂತ ನೀರಾಗಿಲ್ಲ, ಕೃಷಿಯ ಉತ್ಪಾದನಾ ಕ್ರಮ ಮತ್ತು ಅದರಿಂದ ರೂಪಗೊಂಡ ಮನುಷ್ಯ ಸಂಬಂಧಗಳು ತೀವ್ರವಾಗಿ ಬದಲಾಗುತ್ತಿವೆ. ಕಾಲದ ಜೊತೆ ಬದಲಾಗಲಾರದ ದುರ್ಬಲನನ್ನೂ, ಬದಲಾಗಲಾರೆ ಎಂದು ಹುಳಿ ತೋರಿಸುವ ಶಠನನ್ನೂ ಅದು ಮೆಟ್ಟಿ ತುಳಿಯುತ್ತಿದೆ. ಈ ಭೂ ಶಾಸನದ ಬಗ್ಗೆ ನಾನು ಮಾತನಾಡಿಸಿದ ಅನೇಕ ಬಡ ಬ್ರಾಹ್ಮಣ ಹಿಡುವಳಿದಾರರು, ತಾವೊಂದು ಒಳಸಂಚಿಗೆ ತುತ್ತಾಗಿದ್ದೇವೆ ಎಂಬ ಅರ್ಥದಲ್ಲಿ ಮಾತನಾಡಿದರು; ಇವರ ಪ್ರಕಾರ ಈ ಒಳಸಂಚಿನಲ್ಲಿ ಸೇರಿದವರ ಪಟ್ಟಿ ದೊಡ್ಡದಿದೆ,-“ಇಂದಿರಾಗಾಂಧಿ, ದೇವರಾಜ ಅರಸು, ಕಮ್ಯೂನಿಸ್ಟರು, ವಿಶೇಷ ಸವಲತ್ತುಗಳನ್ನು ಪಡೆಯುತ್ತಿರುವ, “ಆಪಾತ್ರ”ರಾದ ಹರಿಜನರು, ಎಲ್ಲ ಅಧಿಕಾರಗಳನ್ನೂ ಹಿಡಿದಿರುವ ‘ಬ್ರಹ್ಮದ್ವೇಷಿ’ಗಳು, ಮತ್ತು last but not least, ಇವರ ಒಂದೋ ಎರಡೋ ಎಕ್ರೆ ಭೂಮಿ ಸಾಗುವಳಿ ಮಾಡಿಕೊಂಡಿದ್ದು ಈಗ ಉಪ್ಪಿನ ಋಣವಿಲ್ಲದೆ ಡಿಕ್ಲರೇಷನ್ ಕೊಟ್ಟ ಇವರ ಒಕ್ಕಲು ಎಲ್ಲರೂ ಇವರ ಬೆನ್ನಿಗೆ ಚೂರಿ ಹಾಕಿದವರ ಪಟ್ಟಿಯಲ್ಲಿ ಸೇರಿದ್ದಾರೆ. ಈಗ ಇವರಿಗಿರುವ ಒಂದೇ ಆಸೆ ಎಂದರೆ, ‘ಅನ್ಯಾಯದಲ್ಲಿ ಆಸ್ತಿ ನುಂಗಿದ’ ಇವರ ಒಕ್ಕಲಿಗೆ ದೇವರು ಒಳ್ಳೆಯದು ಮಾಡಲಾರ ಎಂಬುದು. ಆದರೆ ಈ ಬಗ್ಗೆ ದೇವರು ಇವರಿಗೆ ಉಪಕಾರ ಮಾಡುವ ಲಕ್ಷಣ ಏನೂ ಕಾಣಿಸುವುದಿಲ್ಲ. ಈ ಬಡ ಬ್ರಾಹ್ಮಣರ ದಯನೀಯ ಸ್ಥಿತಿ, ಇವರ ಅಲ್ಪತನದ ಮತ್ಸರ, ರೊಚ್ಚು, ತಮ್ಮ ಬಡತನಕ್ಕೆ ಯಾವ್ಯಾರೋ ಕಾರಣ ಎಂಬ ಇವರ ದೂರು, ಇವರ ಶುದ್ಧ ಅತಂತ್ರ ಬಣ್ಣಗೇಡಿ ಬದುಕಿನ ಬೋಗಾರು ದುಃಖ ನನ್ನನ್ನು ಕಲಕುತ್ತದೆ, ಇವರಿಗೆ ಅನ್ಯಾಯವಾಗಿರುವುದು ನಿಜ. ಯಾಕೆಂದರೆ ಸಾವಿರ ವರುಷದ ಪರಂಪರೆಯ ಅನಿಷ್ಟಕ್ಕೆ ಕೆಲವರು ಒಮ್ಮಿಂದೊಮ್ಮೆಗೆ ಬೆಲೆ ತೆರಬೇಕಾಗಿಬರುವುದು ಅಮಾನುಷ. ಇವರ ಜೀವನಕ್ರಮ ಇವರ ಆಯ್ಕೆಯಲ್ಲಿ (ಯಾರ ಜಾತಿ ವತ್ತು ಜೀವನ ಕ್ರಮಗಳೂ ಅವರವರ ಆಯ್ಕೆಗಳಲ್ಲ: ನಾವು ಯಾರೂ ಕೇಳಿಕೊಂಡು ಹುಟ್ಟುವುದಿಲ್ಲ.) ಜಾತಿ ಪದ್ಧತಿಯ ಇನ್ನೊಂದು ತುದಿಯಲ್ಲಿರುವ ಹೊಲೆಯರಂತೆ, ಈ ಬಡ ಬ್ರಾಹ್ಮಣರೂ ಚರಿತ್ರೆಯ ಮೂಕ ಬಲಿಗಳು. [ಇಂತಹ ಹೋಲಿಕೆ ಕೊಡುವಾಗಲೂ ನಾವು ಈ ಸಮಾಜದ ಬಡತನದಲ್ಲಿಯೂ ಅಂತಸ್ತುಗಳಿರುವುದನ್ನು ಮರೆಯಕೂಡದು. ಉದಾಹರಣೆಗೆ ಬ್ರಾಹ್ಮಣ ಎಷ್ಟು ಬಡತನ ಅನುಭವಿಸಿದರೂ ಎಂಜಲೆಲೆಯಿಂದ ಅನ್ನಸಂಗ್ರಹಿಸುವ ಕೊರಗನ ಮಟ್ಟಕ್ಕಿಳಿಯುವುದಿಲ್ಲ. ಈ ಜಿಲ್ಲೆಯಲ್ಲಿ ಈ ಅಮಾನುಷ ಬದುಕು ನಡೆಸುತ್ತಿರುವ ಕೊರಗರ ಸಂಖ್ಯೆ (ಹರಿಜನರ ಒಂದು ಬುಡಕಟ್ಟು) ಯೂ ಕಡಮೆಯದ್ದಲ್ಲ.] ಇವರ ಈಗಿನ ಕರುಣಾಜನಕ ಸ್ಥಿತಿಗೆ ಕಾರಣವಾದ ಒಳಸಂಚು ಏನಾದರೂ ಇದ್ದರೆ ಅದು ಬದಲಾಗುತ್ತಿರುವ ಉತ್ಪಾದನಾ ಕ್ರಮದ್ದು ; ಅಂದರೆ ಚರಿತ್ರೆಯದ್ದು.
ಬ್ರಾಹ್ಮಣರ ಬಡತನ ಎತ್ತಿ ತೋರಿಸುತ್ತ ಹೋಗಿ ಗೊತ್ತಾಗದ ಹಾಗೆ ಬ್ರಾಹ್ಮಣವಾದಿಗಳಾಗಿಬಿಡುವ ಅಪಾಯ ಇರುವಂತೆ (ಅನಂತಮೂರ್ತಿ), ಈ ಸಣ್ಣ ಹಿಡುವಳಿದಾರರ ಸಮಸ್ಯೆಗಳನ್ನು ತೋರಿಸುತ್ತ ಹೋದಂತೆ ನಾವು ಇವರ ವಕ್ತಾರರಾಗಿಬಿಡುವ ಆಪಾಯವೂ ಇದೆ. ಎಲ್ಲ ಭೂಸುಧಾರಣಾ ಶಾಸನಗಳನ್ನು ವಿರೋಧಿಸುವವರೂ, ತಮ್ಮ ವಿರೋಧಕ್ಕೆ ಈ ಸಣ್ಣ ಹಿಡುವಳಿದಾರರ ಸಂಕಷ್ಟಗಳನ್ನೇ ನೆಪವಾಗಿಟ್ಟುಕೊಳ್ಳುತ್ತಾರೆ ಎಂಬುದನ್ನು ನಾವು ಮರೆಯಕೂಡದು. ಈ ಸಣ್ಣ ಹಿಡುವಳಿದಾದರೂ ಇವತ್ತು ಇದ್ದ ನೆಲ ಕಳೆದುಕೊಳ್ಳಬೇಕಾಗಿರುವುದು, ಒಕ್ಕಲುಗಳ ಬಗ್ಗೆ ಇವರಿಗಿರುವ ಉದಾರ ಮನೋಧರ್ಮದ ಕಾರಣದಿಂದಲ್ಲ. ಈಗ ಶ್ರೀಮಂತರಾಗಿರುವ ಹಳೆಯ ಭಾರೀ ಭೂಮಾಲಕರಂತೆ, ಈಗಾಗಲೇ ಒಕ್ಕಲೆಬ್ಬಿಸುವುದು ಇವರಿಗೆ ಸಾಧ್ಯವಾಗದ್ದರಿಂದ, ಆದರೆ ಶ್ರೀಮಂತ ರೈತರಂತೆ, ಇವರು ಕೂಡಾ ಒಕ್ಕಲುಗಳಿಲ್ಲದಿದ್ದರೆ, ಇವರ ಭೂಮಿಯ ಕೃಷಿ ಭೂಹೀನ ಕೃಷಿ ಕಾರ್ಮಿಕರನ್ನೂ ಬಡರೈತರನ್ನೋ ಬಳಸಬೇಕಾಗಿರುವುದರಿಂದ, ನಮ್ಮ ಕೃಷಿಯ ಅರ್ಥವ್ಯವಸ್ಥೆಯ ಮೂಲಭೂತ ವೈರುಧ್ಯಗಳು, ಇವರಿಗೆ ರಕ್ಷಣೆ ದೊರಕಲಿ, ದೊರೆಯದೆ ಇರಲಿ ಹಾಗೆಯೇ ಮುಂದುವರಿಯುತ್ತವೆ. 1952 ರ ತೆಲಂಗಾಣ ರೈತ ಹೋರಾಟದ ನಾಯಕರಲ್ಲಿ ಒಬ್ಬರಾಗಿದ್ದ ಈಗ ಭಾರತ ಮಾರ್ಕ್ಸ್‌ವಾದೀ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ. ಸುಂದರಯ್ಯ ಅವರು, ಇಡೀ ಭಾರತದ ಕೃಷಿ ವ್ಯವಸ್ಥೆಯನ್ನು ಗಮನದಲ್ಲಿಟ್ಟು, ತನ್ನ ಪಕ್ಷದ ರೈತ ಕಾರ್ಯಕರ್ತರಿಗೆ ಹೇಳಿದ ಮಾತುಗಳು ಈ ಜಿಲ್ಲೆಗೆ ಚೆನ್ನಾಗಿ ಅನ್ವಯಿಸುವಂತಹವು. ಸುಂದರಯ್ಯ ಹೇಳುತ್ತಾರೆ,-
“There is a tendency to exaggerate the dimension of the tenant problem as it now exists, two decades after independence……… …. ….. …… Without mobilising these tenant masses in the first instance for security of tenancy or for hereditary rights and educating them about their legitimate rights to ownership of the lands they cultivate an all-inclussive agrarian revolutionary movement can not be built up. But we should not confuse this tenancy problem as if that is the predominant issue before the vast rural masses and ignore the tremendous growth of agricultural labour due to pauperization on the one hand and due to the development of capitalism in agriculture itself. To go on exaggerating the problem of tenancy out of proportion and out of reality is in fact to ignore the need to concentrate on agricultural labour, their demands, their struggles and organisation, (P, 35, 36 C.P.I (M.) Central Committee Resolution on certain Agrarian issues and an explanatory note by P Sudarayya,)
ಆದರೆ ಕರ್ನಾಟಕ ಭೂಶಾಸನದಿಂದ, ನಮ್ಮ ಕೃಷಿ ವ್ಯವಸ್ಥೆಯ ಈ ಮೂಲಭೂತ ವೈರುಧ್ಯ ಕೊನೆಗೊಳ್ಳುವುದಿಲ್ಲ. ಭೂಸುಧಾರಣೆಯಿಂದ ಭೂಮಿ ಪಡೆಯುವ ಒಕ್ಕಲುಗಳಲ್ಲಿಯೂ ಬಹುಜನರು ಬಡರೈತರೇ. ಭೂಮಿ ಪಡೆದ ಇವರು ಸಣ್ಣ ಹಿಡುವಳಿದಾರರಾಗುತ್ತಾರೆ. ಅಂದರೆ ಆಸ್ತಿಯ ಹಸ್ತಾಂತರವಾಗುತ್ತದೆಯೇ ಹೊರತು ಆಸ್ತಿಯ ವಿತರಣೆ ಆಗುವುದಿಲ್ಲ. ಇವರೂ ಇವರ ಕುಟುಂಬದವರೂ ಕೃಷಿಯ ಕೆಲಸದಲ್ಲಿ ಭಾಗವಹಿಸಿದರೂ (ಗೇಣಿಗೆ ಭೂಮಿ ಕೊಟ್ಟ ಸಣ್ಣ ಹಿಡುವಳಿದಾರೆ ಇಷ್ಟನ್ನೂ ಮಾಡದೆ ಕೂತು ಗೇಣಿ ತಿನ್ನುತ್ತಾನೆ ಎಂಬುದನ್ನು ನಾವು ಮರೆಯಕೂಡದು). ಕೃಷಿ ಕೂಲಿಗಳನ್ನು ಇವರೂ ಬಳಸಬೇಕಾಗುತ್ತದೆ. ಗೇಣಿ ಪದ್ದತಿ-ಅದು ಭಾರೀ ಭೂಮಾಲಿಕ, ಮಧ್ಯಮ ರೈತ, ಸಣ್ಣ ಹಿಡುವಳಿದಾರ-ಯಾರಿಗೇ ಸಂಬಂಧಿಸಿರಲಿ-ಒಂದು ಪಾಳೆಯಗಾರೀ ಅವಶೇಷ. ಕಾಲಕ್ರಮದಲ್ಲಿ ಅದು ಹೋಗಲೇಬೇಕಾಗಿರುವುದು ಅನಿವಾರ್ಯ. ಸಮಾಜವಾದೀ ವ್ಯವಸ್ಥೆ ಹೋಗಲಿ ಬಂಡವಾಳಷಾಹೀ ವ್ಯವಸ್ಥೆ ಕೂಡ ಪಾಳೆಯಗಾರೀ ಸಂಬಂಧಗಳನ್ನು ಸಹಿಸುವುದಿಲ್ಲ, ಕೃಷಿಯಲ್ಲಿ ಬಂಡವಾಳ ಹೂಡಿಕೆ, ಆಧುನಿಕ ಉಪಕರಣಗಳು, ಗೊಬ್ಬರಗಳು, ವೈಜ್ಞಾನಿಕ ಉತ್ಪಾದನಾ ಕ್ರಮಗಳ ಬಳಕೆಗಳಿಗೆ ಹಳೆಯಧನಿ ಒಕ್ಕಲು ಸಂಬಂಧ ಅಡ್ಡ ಬರುವುದರಿಂದ ಬಡವಾಳಷಾಹೀ ಉತ್ಪಾದನ ಕ್ರಮ ಕೂಡ ಇದನ್ನು ಸಹಿಸಲಾರದು. ಇಡೀ ದೇಶದಲ್ಲಿಯೇ ಈಗ ಕೃಷಿಯ ಅರ್ಥವ್ಯವಸ್ಥೆ ಪಾಳೆಯಗಾರೀ ಪದ್ಧತಿಯಿಂದ ನಿಧಾನವಾಗಿ ಬಂಡವಾಳಷಾಹಿಯತ್ತ ಹೊರಳಿಕೊಳ್ಳುತ್ತಿದೆ. ಎಲ್ಲ ಆಧುನಿಕ ವೈಜ್ಞಾನಿಕ ಸೌಲಭ್ಯಗಳನ್ನು ಬಳಸಿಕೊಂಡು, ಬಂಡವಾಳ ಹೂಡಿ, ಕೃಷಿ ಕೂಲಿಗಳನ್ನು ನೇಮಿಸಿಕೊಂಡು ಅಧಿಕ ಇಳುವರಿಯನ್ನು ಪಡೆಯುತ್ತಿರುವ, ಆಹಾರ ಧಾನ್ಯಗಳ ಮಾರುಕಟ್ಟೆಯ ಬಗ್ಗೆ ಹಳೆಯ ಭೂಮಾಲಿಕನಿಗಿಂತಲೂ ಹೆಚ್ಚು ಗಮನ ಕೊಟ್ಟು ತನ್ನ ಲಾಭಕ್ಕೆ ಸರಿಯಾಗಿ ಅದನ್ನು ರೂಪಿಸುತ್ತಿರುವ ಶ್ರೀಮಂತ ರೈತರ ವರ್ಗವೊಂದು ಸ್ವಾತಂತ್ರ್ಯಾ ನಂತರ ಈ ದೇಶದಲ್ಲಿ ಸ್ಪಷ್ಟವಾಗಿ ರೂಪುಗೊಂಡಿದೆ. ಲಕ್ಷಾಂತರ ಜನ ರೈತರು ಒಕ್ಕಲೆಬ್ಬಿಸಲ್ಪಟ್ಟು ಹಳ್ಳಿಗಳಲ್ಲಿ ಭೂಹೀನ ಕೃಷಿಕಾರ್ಮಿಕರಾಗಿದ್ದಾರೆ; ಅಥವಾ ಅನ್ನ ಅರಸಿಕೊಂಡು ನಗರಗಳಿಗೆ ವಲಸೆ ನಡೆದಿದ್ದಾರೆ. ಇದೂ ಕೂಡಾ ಒಂದು “ಅಖಿಲ ಭಾರತ’ ಬೆಳವಣಿಗೆ, ನಾವು ಈಗಾಗಲೇ ನೋಡಿದಂತೆ ಎಲ್ಲ ರಾಜ್ಯ ಸರಕಾರಗಳ ಭೂಸುಧಾರಣೆಗಳೂ ಈ ಬಂಡವಾಳಷಾಹೀ ಪ್ರವೃತ್ತಿ ಬೆಳೆಯುವುದಕ್ಕೆ ತಕ್ಕ ವಾತಾವರಣವನ್ನು ಕಲ್ಪಿಸಿವೆ.
ದ. ಕ. ಜಿಲ್ಲೆಯ ಕೃಷಿಯ ಆರ್ಥವ್ಯವಸ್ಥೆಯೂ ಈ ಅಖಿಲ ಭಾರತ ಬೆಳವಣಿಗೆಯಿಂದ ಹೊರತಲ್ಲ. ನಗರಗಳಲ್ಲಿ ಕೈಗಾರಿಕಾ ಬಂಡವಾಳಶಾಹಿ ಮತ್ತು ವರ್ಗವೈರುಧ್ಯಗಳನ್ನೂ
ಹಾಗೆಯೇ ಇಟ್ಟು ಹಳ್ಳಿಗಳ ಕೃಷಿಯ ಅರ್ಥವ್ಯವಸ್ಥೆಯನ್ನು ಮಾತ್ರ ಸಮಾಜವಾದಿಯಾಗಿ ಮಾರ್ಪಡಿಸುವ (ತಾರ್ಕಿಕವಾಗಿ ಮತ್ತು ನಿಜಜೀವನದ ಅನುಭವದಲ್ಲಿ ಇಂತಹ ಯಾವ ಪ್ರಯತ್ನವೂ ಅರ್ಥಹೀನ ಮತ್ತು ಹಾಸ್ಯಾಸ್ಪದ) ಸರಕಾರದ ವಂಚನೆಯ ಭೂ ಸುಧಾರಣಾ ಶಾಸನ ನಮ್ಮ ಕೃಷಿ ವ್ಯವಸ್ಥೆಯ ಮೂಲದಲ್ಲಿರುವ ವೈರುಧ್ಯಗಳನ್ನೂ ಹೋಗಲಾಡಿಸಲಾರದು ಮಾತ್ರವಲ್ಲ, ವಾಸ್ತವವಾಗಿ ತನ್ನ ಭಾರೀ ಪ್ರಚಾರದ ತೆರೆಮರೆಯಲ್ಲಿ ಈ ವೈರುಧ್ಯಗಳನ್ನು ಇನ್ನಷ್ಟು ವಿಷಮಗೊಳಿಸುತ್ತಿದೆ. ಈ ಜಿಲ್ಲೆಯಲ್ಲೂ ಈ ವೈರುಧ್ಯ ಈಗ ಹೆಚ್ಚು ಸ್ಫೋಟಕವಾಗಿ ಕಾಣಿಸುತ್ತಿದೆ. ಉದಾಹರಣೆಗೆ ಈ ಜಿಲ್ಲೆಯಲ್ಲ ಕೃಷಿಯ ಬಂಡವಾಳಶಾಹೀಕರಣ, ಕೃಷಿಯ ಪಾಳೇಗಾರೀ ಸಂಬಂಧಗಳನ್ನೆಲ್ಲ ನಾಶಪಡಿಸಿದೆ. ಜಾತಿಭೇದವಿಲ್ಲದೆ ಈ ಜಿಲ್ಲೆಯಲ್ಲಿ ಎಲ್ಲ ಭೂಮಾಲಕರೂ ತಮ್ಮ ಒಕ್ಕಲುಗಳನ್ನು ಎಬ್ಬಿಸಿದ್ದಾರೆ; ತಮ್ಮ ಜಾತಿಗೆ ಸೇರಿದ ಒಕ್ಕಲುಗಳಿಂದ ಭೂಮಿ ಕಸಿಯುವುದಕ್ಕೆ ಇವರಲ್ಲಿ ಯಾರಿಗೂ ಜಾತಿಯ ನೆನಪು ಅಡ್ಡ ಬರಲಿಲ್ಲ. ಬಹುಶಃ ಹೊಲೆಯರು, ಗಿರಿಜನರನ್ನ ಬಿಟ್ಟು ಈ ಜಿಲ್ಲೆಯ ಬ್ರಾಹ್ಮಣರೂ ಸೇರಿ ಎಲ್ಲ ಜಾತಿಗಳಲ್ಲೂ ಹೀಗೆ ಒಕ್ಕಲುಗಳಿಂದ ಭೂಮಿ ಕಸಿದು, ಈಗ ಸ್ವಂತ ಸಾಗುವಳಿಯ “ಸುಧಾರಿತ” ಶ್ರೀಮಂತ ರೈತರು ಕಾಣಸಿಗುತ್ತಾರೆ. ಭೂಮಾಲಕರು (ಅವರು ಶ್ರೀಮಂತ ರೈತರೆ ಆಗಿರಲಿ ಅಥವಾ ವಾಚಿಕ ರೈತರೇ ಆಗಿರಲಿ, ಯಾವ ಜಾತಿಯವರೇ ಇರಲಿ) ಮತ್ತು ಭೂಹೀನ ಕೃಷಿ ಕಾರ್ಮಿಕರು ಇವರ ನಡುವಿನ ವೈರಧ್ಯವನ್ನು ಈ ಶಾಸನ ಇನ್ನಷ್ಟು ಹೆಚ್ಚಿಸಬಹುದೇ ವಿನಾ ತೊಡೆದುಹಾಕಲಾರದು. ಉದಾಹರಣೆಗೆ ದೇಶದ ಇತರೆಡೆಗಳಂತೆ, ಭೂಹೀನ ಕೃಷಿ ಕಾರ್ಮಿಕರೇ ಹೆಚ್ಚಾಗಿರುವ ಈ ಜಿಲ್ಲೆಯ ಹರಿಜನ ಗಿರಿಜನರ ಜೀವನ ಬದಲಾಗಬೇಕಾದರೆ ಭೂಮಿಯ ಒಡೆತನದ ಪ್ರಶ್ನೆ ಕ್ರಾಂತಿಕಾರಕವಾಗಿ ಇತ್ಯರ್ಥವಾಗಬೇಕಾಗುತ್ತವೆ. ಆದರೆ ಸರಕಾರ ಇಂತಹ ಯಾವುದೇ ಮೂಲಭೂತ ಬದಲಾವಣೆಗಳನ್ನು ಕೈಗೊಳ್ಳದೆ (ವಿರ್ದಾಲ್ ಹೇಳುವ institutional changes) ತೇಪೆ ಹಚ್ಚುವ, ಪ್ರಚಾರದಲ್ಲಿ ಮಾತ್ರ ರಂಗಾಗಿ ಕಾಣಿಸುವ ಕಾರ್ಯಕ್ರಮಗಳನ್ನಷ್ಟೆ ಕೈಗೊಂಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರೀ ಹುದ್ದೆಗಳ ಸ್ಥಳ ಕಾಯ್ದಿರಿಸಿದರೂ ಗ್ರಾಮಾಂತರ ಪ್ರದೇಶಗಳ ಹರಿಜನಗಿರಿ ಜನರು ಈ ಸೌಲಭ್ಯಗಳನ್ನು ಪಡೆದುಕೊಳ್ಳಲಾರರು. ಸರಕಾರೀ ಉದ್ಯೋಗ ಕೊಟ್ಟೇ ಇವರ ಸ್ಥಿತಿಗತಿಗಳನ್ನು ಉತ್ತಮಗೊಳಿಸುತ್ತೇನೆ ಎಂದು ಹಠ ತೊಟ್ಟರೆ ಇವರಲ್ಲಿ ಎಲ್ಲರಿಗೂ ಉದ್ಯೋಗ ಒದಗಿಸಬೇಕಾಗುವುದರಿಂದ ಅಂತಹ ಯಾವುದೇ ಸರಕಾರವೂ ದಿವಾಳಿ ಎದ್ದೀತು. ಒಬ್ಬ ಹರಿಜನ ರಾಜಕೀಯ ಮುಖಂಡನನ್ನೋ, ಸರಕಾರೀ ಅಧಿಕಾರಿಯನ್ನೋ ಕಂಡು ಹೊಟ್ಟೆ ಉರಿದುಕೊಳ್ಳುವ ಮಂದಿ ಅಸಂಖ್ಯಾತ ಹರಿಜನ ಗಿರಿಜನರು ಅಮಾನುಷ ಬಡತನ, ಆವಿದ್ಯೆಗಳಲ್ಲಿ ಕೊಳೆಯುತ್ತಿರುವುದನ್ನು ಮರೆಯುತ್ತಾರೆ. ಭಂಡರಿಗೆ ಅಪ್ರಿಯವಾದದ್ದನ್ನು ಮರೆಯುವುದಕ್ಕೆ ಯಾವ ನೆಪವೂ ಸಾಕು. ಭೂಮಿಯ ಪ್ರಶ್ನೆಯನ್ನು ಕ್ರಾಂತಿಕಾರಕವಾಗಿ ಬಿಡಿಸಿ ಈ ಹರಿಜನ ಗಿರಿಜನರ ಬವಣೆಗೆ ಪರಿಹಾರ ತೋರಿಸುವ ಬದಲು ಸರಕಾರ ಇಂತಹ ನೆಪಗಳನ್ನೇ ಸೃಷ್ಟಿಸುತ್ತ ಹೋಗಿದೆ. ಇದು ಕೂಡಾ ಒಂದು ಅಖಿಲಭಾರತ ಬೆಳವಣಿಗೆ. ಈ ಜಿಲ್ಲೆಯಲ್ಲಿ ಕೀಳು ಜಾತಿಗಳ ಕೃಷಿ ಕಾರ್ಮಿಕರ ಅರೆ ಉದ್ಯೋಗಿಗಳ ಪಡೆಗೆ ಈಗ ದಿವಾಳಿ ಎದ್ದ ಇತರ ಜಾತಿಗಳವರೂ ಸೇರಿಕೊಳ್ಳುತ್ತಿದ್ದಾರೆ. ಕೃಷಿಯೇತರ ಉದ್ಯಮಗಳಲ್ಲಿ ಇವರಿಗೆ ಉದ್ಯೋಗ ಒದಗಿಸುವಷ್ಟು ಶಕ್ತಿಶಾಲಿಯಾಗಿ ಈ ಜಿಲ್ಲೆಯ ನಗರಗಳ ಅರ್ಥವ್ಯವಸ್ಥೆ ಬೆಳೆದಿಲ್ಲ. ಜಿಲ್ಲೆಯ ಸಾಂಪ್ರದಾಯಿಕ ಉದ್ದಿಮೆಗಳಾದ ಬೀಡಿ, ಹಂಚು, ನೇಯ್ಗೆ ಮೊದಲಾದವು ಇನ್ನೂ ಬೆಳೆಯಲಾರದ, ಹೊಸ ಉದ್ಯೋಗಗಳನ್ನು ಕಲ್ಪಿಸಲಾರದ ಒಂದು ಗರಿಷ್ಠ ಸ್ಥಿತಿಯನ್ನು ಈಗಾಗಲೇ ಮುಟ್ಟಿವೆ. (ನೋಡಿ-ಟಪ್ಪಣಿ 3) ಬೇರೆ ಅಂತಹ ಹೇಳಿಕೊಳ್ಳುವ ಯಾವ ಉದ್ದಿಮೆಯೂ ಈ ಜಿಲ್ಲೆಯಲ್ಲಿಲ್ಲ. ಕೆಲವು ಉದ್ಯೋಗಗಳಿಗೆ ವಿದ್ಯಾರ್ಹತೆ, ವೃತ್ತಿನೈಪುಣ್ಯಗಳು ಬೇಕಾಗುವುದರಿಂದ ಈ ಮಂದಿ ಅವುಗಳಿಗೆ ಸ್ಪರ್ಧಿಸಲಾರರು. ಈಗಾಗಲೇ ಈ ಜಿಲ್ಲೆಯ ನಗರಗಳಲ್ಲೂ ವ್ಯಾಪಕ ನಿರುದ್ಯೋಗದ ಸಮಸ್ಯೆ ಇರುವುದರಿಂದ ಇಂತಹ ಯಾವುದೇ ಸ್ಪರ್ಧೆ, ಸಮಸ್ಯೆಯನ್ನು ಇನ್ನಷ್ಟು ವಿಷಮಗೊಳಿಸುತ್ತದೆ. ವ್ಯಾಪಕ ಔದ್ಯಮೀಕರಣ ಮತ್ತು ಔದ್ಯೋಗೀಕರಣಗಳಿಲ್ಲದೆ ಈ ಸಮಸ್ಯೆಗೆ ಪರಿಹಾರವೂ ಇಲ್ಲ.
ಒಟ್ಟಿನಲ್ಲಿ ಈ ಜಿಲ್ಲೆಯ ಅರ್ಥವ್ಯವಸ್ಥೆ ಈ ಜಿಲ್ಲೆಯ ಎಲ್ಲ ಜನರಿಗೂ ಮನುಷ್ಯ ಯೋಗ್ಯವಾದ ಬದುಕನ್ನು ಕಲ್ಪಿಸಿಕೊಡಲು ಅಸಮರ್ಥವಾಗಿದೆ; ಹಳ್ಳಿಯ ಕೃಷಿ ವ್ಯವಸ್ಥೆ ಸಾವಿರಾರು ಜನರನ್ನು ದಿವಾಳಿಗೆಬ್ಬಿಸಿದೆ; ಈಗಾಗಲೇ ಭೀಕರವಾಗಿರುವ ನಿರುದ್ಯೋಗದ ಕಾರಣದಿಂದ ನಗರಗಳೂ ಇವರಿಗೆ ಆಶ್ರಯ ಕೊಡಲಾರವು. ಸ್ವಾತಂತ್ರೋತ್ತರ ಭಾರತ ಸರಕಾರದ ಅತಿ ದೊಡ್ಡ ಸಾಧನೆಯಾದ ಈ ದೇಶವ್ಯಾಪೀ ಅನಿಷ್ಟ ಬರುವ ದಿನಗಳಲ್ಲಿ ಇನ್ನಷ್ಟು ಭಯಂಕರವಾಗುವ ಎಲ್ಲ ಸೂಚನೆಗಳೂ ನಮ್ಮ ಅರ್ಥಮಂಡಲದಲ್ಲಿ ಕಾಣಿಸಿಕೊಳ್ಳುತ್ತಿವೆ. ಪ್ರಚಾರದ ಭಾಜಾಭಜಂತ್ರಿ ಎಷ್ಟು ಪ್ರಯತ್ನಿಸಿದರೂ ಮುಚ್ಚಿಡಲಾರದ ಸತ್ಯ ಇದು. ಹಾಗಾದರೆ ನಮ್ಮ ಹಳ್ಳಿಗಳ ಭೂಹೀನ ಕೃಷಿ ಕಾರ್ಮಿಕರನ್ನು, ಬಡ ರೈತರನ್ನು, ಈ ಶಾಸನದಿಂದ ನಿರ್ಗತಿಕರಾಗುವವರನ್ನೂ ನಮ್ಮ ಅರ್ಥವ್ಯವಸ್ಥೆಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವಂತೆ ಮಾಡುವ, ಮನುಷ್ಯಯೋಗ್ಯ ಬದುಕಿನ ಕನಿಷ್ಟ ಅಗತ್ಯಗಳನ್ನಾದರೂ ಅವರು ಪಡೆಯುವಂತೆ ಮಾಡುವ, ಯಾವ ಮಾರ್ಗವೂ ಇಲ್ಲವೆ ? ಇದು ಬಹಳ ತುರ್ತಿನ ಪ್ರಶ್ನೆ. ಆದರೆ ಪ್ರಸ್ತುತ ರಾಜಕೀಯ ಆರ್ಥಿಕ ವ್ಯವಸ್ಥೆಯಲ್ಲಿ ಈ ಪ್ರಶ್ನೆಗಳಿಗೆ ಪರಿಹಾರವಿಲ್ಲ. ಅಷ್ಟು ಮಾತ್ರವೇ ಅಲ್ಲ ಈ ವೈರುಧ್ಯಗಳನ್ನು ಇನ್ನಷ್ಟು ವಿಷಮಗೊಳಿಸುವುದೇ ಈ ವ್ಯವಸ್ಥೆಯ ಮುಖ್ಯ ಲಕ್ಷಣ. ಬೂರ್ಚ್ವಾ ಬೌದ್ಧಿಕ ಚಿಂತನೆಯಲ್ಲಿಯೂ ಈ ಸಮಸ್ಯೆಗಳಿಗೆ ತಾತ್ವಿಕ ಪರಿಹಾರವಿಲ್ಲ. (ಸಮಸ್ಯೆಯ ಪ್ರಜ್ಞೆಯೇ ಅಪರೂಪ). ಈ ಸಮಾಜ ವ್ಯವಸ್ಥೆಯ ಸೋಲಿಗೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ.
ಹೀಗೆಂದು ನಾವು ಈ ಉರಿಯುವ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲಾರೆವು. ವಾಸ್ತವದಿಂದ ಯಾರಿಗೂ ಬಿಡುಗಡೆ ಇಲ್ಲವಾದ್ದರಿಂದ ಉತ್ತರಗಳಿಲ್ಲ ಎಂದು ಗೊತ್ತಿದ್ದರೂ ನಾವು ಈ ಪ್ರಶ್ನೆಗಳನ್ನು ಕೇಳಲೇಬೇಕು ; ಮತ್ತು ನಮ್ಮ ಪೂರ್ವನಿಶ್ಚಿತ ಮೌಲ್ಯಗಳಿಗೆ ಅನುಗುಣವಾಗಿ ಪರಿಹಾರಗಳನ್ನು ಸೂಚಿಸಲೇಬೇಕು. (ಅರ್ಥಶಾಸ್ತ್ರದ ವಸ್ತು ಕೂಡಾ ಇಂತಹ ಪ್ರಕ್ರಿಯೆಯನ್ನು ಬಯಸುತ್ತದೆ). ಈ ನೆಲದ ದರಿದ್ರರು ಸದಾ ಹೀಗೆಯೇ ಇತಿಹಾಸದ ಗತಿಗೆ ಅನ್ಯರಾಗಿ ನಿಶ್ಚಲ ಇದ್ದು ಬಿಡುತ್ತಾರೆಯೆ ? ಈ ವ್ಯವಸ್ಥೆಯ ಸಕಲವೂ ನಿಂತಿರುವುದೂ ತಮ್ಮ ದುಡಿಮೆಯ ಮೇಲೆ ಎಂಬುದನ್ನು ಎಂದೂ ತಿಳಿಯದೆ ಹೋಗುತ್ತಾರೆಯೆ ? ನಾನು ಹೀಗೆ ಭಾವಿಸುವಷ್ಟು ನಿರಾಶಾವಾದಿಯೂ ಅಲ್ಲ; ಚರಿತ್ರೆ ತಿಳಿಯದ ದಡ್ಡನೂ ಅಲ್ಲ. ಈ ಲೇಖನದುದ್ದಕ್ಕೂ ನನ್ನ ರಾಜಕೀಯ ಏನು ಎಂಬುದನ್ನು ನಾನು ಮುಚ್ಚುಮರೆ ಮಾಡಿಲ್ಲ. ಈ ಪ್ರಶ್ನೆಗಳಿಗೆ ನನ್ನ ಉತ್ತರಗಳೇನು ಎಂಬುದು ಯಾರಿಗಾದರೂ ಹೊಳೆಯಬಹುದಾದದ್ದು ; ಅದು ತಿಳಿಯದವರಿಗೆ ಹೇಳಿ ಪ್ರಯೋಜನವಿಲ್ಲ ; ಮಾತುಗಳಲ್ಲಿ ಭವಿಷ್ಯದ ಕನಸು ನೇಯುತ್ತ ಕೂಡುವುದಕ್ಕೆ ನನಗೆ ಇಷ್ಟವೂ ಇಲ್ಲ.[ದ. ಕ. ಜಿಲ್ಲೆಯ ಕೃಷಿಯ ಅರ್ಥವ್ಯವಸ್ಥೆಯ ವೈರುದ್ಯಗಳು ಮತ್ತು ಇದಕ್ಕೆ ಸಂಬಂಧಿಸಿದಂತೆ 1974 ರ ಕರ್ನಾಟಕ ಭೂ ಸುಧಾರಣಾ ಶಾಸನ ಈ ಲೇಖನಕ್ಕೆ ವಸ್ತು. ಆದರೆ ಶಾಸನದ ಜೊತೆಗೆ ಈ ವೈರುಧ್ಯಗಳನ್ನು ಇನ್ನಷ್ಟು ವಿಷಮಗೊಳಿಸುತ್ತಿರುವ, ಕೃಷಿಗೆ ಸಂಬಂಧಿಸಿದಂತೆ ಜಿಲ್ಲೆಯ ರಾಷ್ಟ್ರೀಕೃತ, ಖಾಸಗೀ ಹಾಗೂ ಸರಕಾರೀ ಬ್ಯಾಂಕುಗಳ ಗ್ರಾಮಾಂತರ ಚಟುವಟಿಕೆಗಳು, ವಿವಿಧ ಉದ್ದೇಶಗಳ ಗ್ರಾಮಾಂತರ ಸಹಕಾರ ಸಂಘಗಳು, ಭೂಮಿಯ ಒಡೆತನ ಮತ್ತು ಆಧುನಿಕ ವೈಜ್ಞಾನಿಕ ಕೃಷಿ ಸೌಲಭ್ಯಗಳ ವಿತರಣೆ, ಭೂಮಿಯ ಒಡೆತನ ಮತ್ತು ಜಿಲ್ಲೆಯ ಶೈಕ್ಷಣಿಕ ಮತ್ತಿತರ ನಾಗರಿಕ ಸೌಲಭ್ಯಗಳ ವಿತರಣೆ, ನಗರೀಕರಣದ ಪ್ರಭಾವಗಳು, ಜಿಲ್ಲೆಯ ಗ್ರಾಮಾಂತರ ನೆಯ್ಗೆ ಮತ್ತಿತರ ಗುಡಿ ಕೈಗಾರಿಕೆಗಳು ಬೀಡಿ, ಮೂರ್ತೆ, ಮೀನುಗಾರಿಕೆ ಮತ್ತಿತರ ಕಸುಬುಗಳ ಭವಿಷ್ಯ ಆಹಾರ ಧಾನ್ಯಗಳ ಮಾರುಕಟ್ಟೆ, ಹಳ್ಳಿಗಳ ಆಹಾರ ಧಾನ್ಯಗಳನ್ನು ಬಿಟ್ಟು ಉಳಿದ, ಜೀವನಾವಶ್ಯಕ ವಸ್ತುಗಳ ಮಾರುಕಟ್ಟೆ, ಆಸ್ತಿಯ ಒಡೆತನ ಮತ್ತು ಈ ಜಿಲ್ಲೆಯ ವಿಶಿಷ್ಟ ಸಾಂಸ್ಕೃತಿಕ ಧಾರ್ಮಿಕ ಪರಂಪರೆ-ಸಾಹಿತ್ಯ, ಸಂಗೀತ, ಚಿತ್ರ, ನೃತ್ಯ, ಶಿಲ್ಪ ಈ ಎಲ್ಲ ಕಲೆಗಳಲ್ಲೂ ಈ ದೇಶದಲ್ಲಿ ಒಂದು ಶಿಷ್ಟ ಸಂಪ್ರದಾಯ ಇರುವಂತೆ, ಕಣ್ಣಿಗೆ ಹೊಡೆಯುವಷ್ಟು ಸ್ಪಷ್ಟವಾಗಿ ಈ ಸಂಪ್ರದಾಯಕ್ಕೆ ಸಮಾನಾಂತರವಾದ ಒಂದು ಜಾನಪದ ಸಂಪ್ರದಾಯವೂ ಇದೆ. ಇವೆರಡೂ ಸದಾ ಒಂದು ಇನ್ನೊಂದರಿಂದ ಬೇರೆಯಾಗಿದ್ದರೂ ಎರಡರ ನಡುವೆ ಕೊಳುಕೊಡುಗೆಯ ಸಂಬಂಧವೂ ಮೊದಲಿನಿಂದ ಬೆಳೆದುಬಂದಿದೆ. ನಮ್ಮ ಧಾರ್ಮಿಕ ಪರಂಪರೆಯ ಅಖಂಡವಲ್ಲ; ಅದರಲ್ಲಿಯೂ ಈ ವ್ಯತ್ಯಾಸ ಸ್ಪಷ್ಟ ಗುರುತಿಸಬಹುದಾಗಿದೆ. ನಮ್ಮ ಸಂಸ್ಕೃತಿಯ ಪರಸ್ಪರ ಭಿನ್ನ ಭಿನ್ನವಾದ ಈ ಎರಡು ಸಂಪ್ರದಾಯಗಳು ಯಾರಿಂದ ಮತ್ತು ಯಾರಿಗೋಸ್ಕರ ಸೃಷ್ಟಿ ಯಾದವು ಎಂದು ವಿವರಿಸಬೇಕಾದ ಅಗತ್ಯವಿಲ್ಲ. ನಮ್ಮ ಕೃಷಿಯ ಅರ್ಥವ್ಯವಸ್ಥೆಯ ವೈರುಧ್ಯಗಳಿಗೂ, ಸಂಸ್ಕೃತಿಯ ಈ ವೈರುಧ್ಯಗಳಿಗೂ ನಿಕಟವಾದ ಸಂಬಂಧವಿದೆ. (ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಭಾರತದ ಕೃಷಿಯ ಅರ್ಥವ್ಯವಸ್ಥೆಗಳ ನಡುವೆ ಇರುವ ಈ ವೈರುಧ್ಯದ ಸಂಬಂಧದ ಸಾಧಾರ ಮತ್ತು ಮಾರ್ಮಿಕ ಚಿತ್ರಣಕ್ಕೆ ಲೋಕ ಖ್ಯಾತ ಭಾರತೀಯ ಇತಿಹಾಸಕಾರ ದಾಮೋದರ ಧರ್ಮಾನಂದ ಕೊಸಾಂಬಿಯವರ ಮು ಖ್ಯ ವಾ ಗಿ “The culture and civilisation of Ancient India in Historical Outline’ ಎಂಬ ಗ್ರಂಥ ಮತ್ತು ಅವರ ಇತರ ಬರಹಗಳನ್ನು ನೋಡಿ).
ಅರ್ಥವ್ಯವಸ್ಥೆ ಮತ್ತು ಸಂಸ್ಕೃತಿಗಳ ನಡುವೆ ಇರುವ ಈ ಸಂಬಂಧ ಅರ್ಥವಾಗದಿದ್ದರೆ, ಜಾನಪದ ನಮ್ಮ ನಗರಗಳ ಬೂರ್ಜ್ವಾಗಳ ಡ್ರಾಯಿಂಗ್ ರೂಮ್‌ನ ಫ್ಯಾಶನ್ ಆಗುತ್ತಿರುವ ವೇಳೆಯಲ್ಲಿಯೇ ನಮ್ಮ ಹಳ್ಳಿಗಳಲ್ಲಿ ಅದು ನಾಶವಾಗುತ್ತಿರುವ ವಿಚಿತ್ರ ಸನ್ನಿವೇಶವೂ ಆರ್ಥವಾಗುವುದಿಲ್ಲ.) ಈ ಎಲ್ಲವನ್ನು ಈ ಲೇಖನದ ವ್ಯಾಪ್ತಿಯ ಹೊರಗಿಟ್ಟಿದ್ದೇನೆ. ಅಲ್ಲದೆ ಲೇಖನದಲ್ಲಿ ನಾನು ಮಾಡಿರುವ ಎಲ್ಲ ಸರಳೀಕರಣ (generalizations) ಗಳಿಗೆ exception ಗಳಿರುವುದೂ ಸಾಧ್ಯ. ಈ ಲೇಖನ ಜಿಲ್ಲೆಯ ಭೂಮಿಯ ಪ್ರಶ್ನೆಗೆ ಸಂಬಂಧಿಸಿದಂತೆ ಕೇವಲ ಒಂದು elementary ಪ್ರಯತ್ನ. ಕೃಷಿಯ ಅರ್ಥವ್ಯವಸ್ಥೆ ಎಷ್ಟು ಸಂಕೀರ್ಣವಾದದ್ದು ಮತ್ತು ಅಧಿಕಾರದಲ್ಲಿರುವವರು ಮತ್ತು ಇವರ ಪ್ರಚಾರದ ಕಂತ್ರಾಟು ತೆಗೆದುಕೊಂಡಿರುವ ಪ್ರಚಾರ ಮಾಧ್ಯಮಗಳ ಮಂದಿ ಬಚ್ಚಿಡಲು ಪ್ರಯತ್ನಿಸುತ್ತಿರುವ ವಾಸ್ತವ ಎಷ್ಟು ಭಯಾನಕವಾದದ್ದು ಎಂಬ ಕಲ್ಪನೆ ಓದುಗನಿಗೆ ಬಂದರೆ ಈ ಲೇಖನ ಸಾರ್ಥಕ.]
ಟಿಪ್ಪಣಿ 1 : ಅರ್ಥಶಾಸ್ತ್ರದ ಮುಸುಕಿನೊಳಗಿನ ರಾಜಕೀಯ
ಕೃಷಿ ಪ್ರಧಾನ ಅರ್ಥವ್ಯವಸ್ಥೆಯನ್ನು ಹೊಂದಿರುವ ಭಾರತದ ಬಡತನವನ್ನು ಬಲ ಪಂಥೀಯ ನಿಲುವಿನಿಂದ ವಿಶ್ಲೇಷಿಸುವ ಅರ್ಥಶಾಸ್ತ್ರಜ್ಞರು ಸಾಮಾನ್ಯವಾಗಿ ಕೊಡುವ ಉದಾಹರಣೆ, ಜಪಾನ್ ದೇಶದ ಆರ್ಥಿಕ ಉತ್ಕರ್ಷದ್ದು. ಆದರೆ ಏಷ್ಯಾದ ರಾಷ್ಟಗಳಲೆಲ್ಲ, ಪಶ್ಚಿಮ ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಸಾಮ್ರಾಜ್ಯಷಾಹಿಗೆ ಒಳಗಾಗದೆ ಉಳಿದ ಒಂದೇ ಒಂದು ದೇಶ ಜಪಾನ್ ಎಂಬುದನ್ನು. ದೂರದೃಷ್ಟಿಯಿದ್ದ ಜಪಾನಿನ 19 ನೇ ಶತಮಾನದ ಮೀಜಿ ದೊರೆಗಳು ಪ್ರಜ್ಞಾಪೂರ್ವಕವಾಗಿ ಸ್ಥಾಪಿಸಿದ ಉದ್ಯಮಗಳ ಕಾರಣದಿಂದ, ಏಷ್ಯದ ಉಳಿದ ರಾಷ್ಟ್ರಗಳಿಗಿಂತ ಜಪಾನ್ ದೇಶದಲ್ಲಿ ಮೊದಲಿಗೆ ಔದ್ಯಮಿಕ ಕ್ರಾಂತಿ ನಡೆಯಿತು ಎಂಬುದನ್ನು ಇವರು ಗಮನಿಸುವುದಿಲ್ಲ. ಜಪಾನ್, ಇಂದು ತನ್ನ ಆರ್ಥಿಕ ಬಲದಲ್ಲಿ, ಏಷ್ಯದ ಇತರ ರಾಷ್ಟ್ರಗಳಿಗಿಂತ, ಪಶ್ಚಿಮದ ದೇಶಗಳಿಗೆ ಸರಿಸಾಟಿಯಾಗಿರುವುದಕ್ಕೆ ಕಾರಣ. ಜಪಾನ್ ಔದ್ಯಮಿಕ ಕ್ರಾಂತಿಯಲ್ಲಿ ಇತರ ರಾಷ್ಟ್ರಗಳಿಗಿಂತ, ಅನೇಕ ಹಂತಗಳಲ್ಲಿ ಮುಂದಿರುವುದು ಮತ್ತು ಪಶ್ಚಿಮದ ರಾಷ್ಟ್ರ ಗಳಿಗೆ ಹೆಚ್ಚು ಸಮಕಾಲೀನವಾಗಿರುವುದು. (ಭೌಗೋಳಿಕವಾಗಿ ಕೂಡಾ ಜಪಾನ್ ಪಶ್ಚಿಮಕ್ಕೆ ಮುಖ್ಯವಾಗಿ ಅಮೇರಿಕಕ್ಕೆ ಹೆಚ್ಚು ಸಮೀಪವಾಗಿದೆ). ಭೂಮಧ್ಯ ರೇಖೆಯ ದಕ್ಷಿಣಕ್ಕಿರುವ, ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೇರಿಕ ದೇಶಗಳ ಕೃಷಿಪ್ರಧಾನ ಅರ್ಥವ್ಯವಸ್ಥೆಗೂ, ಈ ದೇಶಗಳೆಲ್ಲ ಅನುಭವಿಸಬೇಕಾಗಿ ಬಂದ ಪಶ್ಚಿಮದ ರಾಜಕೀಯ ಮತ್ತು ಆರ್ಥಿಕ ಸಾಮ್ರಾಜ್ಯಷಾಹಿಗೂ, ಈ ದೇಶಗಳ ಬಹುಸಂಖ್ಯಾತರ ಕಡುಬಡತನಕ್ಕೂ ನಿಕಟ ಸಂಬಂಧವಿದೆ. ತಮ್ಮ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಧ್ಯವಾದಷ್ಟು ಶೀಘ್ರದಲ್ಲಿ ಈ ದೇಶಗಳು ಔದ್ಯಮೀಕರಣವನ್ನು ಸಾಧಿಸಿಕೊಳ್ಳದಿದ್ದರೆ, ರಾಜಕೀಯ ಸಾಮ್ರಾಜ್ಯಷಾಹಿಯಿಂದ ಇದೀಗ ಬಿಡುಗಡೆಗೊಂಡ ಈ ದೇಶಗಳು ಪಶ್ಚಿಮದ ಆರ್ಥಿಕ ಸಾಮ್ರಾಜ್ಯ ಷಾಹಿಗೆ ಮತ್ತೆ ಪಕ್ಕಾಗುವ ಭಯವಂತೂ ಇದ್ದೇ ಇದೆ. ಜೊತೆಗೆ ಈ ದೇಶಗಳ ಕೃಷಿಯ ಅರ್ಥವ್ಯವಸ್ಥೆ ಒಟ್ಟು ಜನತೆಗೆ ಅನ್ನ, ಉದ್ಯೋಗಗಳನ್ನು ಕಲ್ಪಿಸಿಕೊಡಲು ಅಸಮರ್ಥವಾಗಿರುವುದರಿಂದ (ಹಳ್ಳಿಗಳಿಂದ ನಗರಕ್ಕೆ ಬೇಡ ಜನರ ವಲಸೆ ಈ ಎಲ್ಲ ರಾಷ್ಟ್ರಗಳಲ್ಲಿಯೂ ಎದ್ದು ಕಾಣಿಸುತ್ತಿರುವ ಪ್ರವೃತ್ತಿ) ಮತ್ತು ಉದ್ಯಮ ಮಾತ್ರ ಸೃಷ್ಟಿಸಬಲ್ಲ ವಸ್ತುಗಳು ಮತ್ತು ಸೌಲಭ್ಯಗಳಿಲ್ಲದೆ ಯಾವ ಸಮಕಾಲೀನ ಜನಾಂಗವೂ ಬದುಕಲಾರದ್ದರಿಂದ ಅನಿವಾರ್ಯವಾಗಿ ಈ ದೇಶಗಳೆಲ್ಲ ತಮ್ಮ ತೀರ ಸೀಮಿತ ಸಂಪನ್ಮೂಲಗಳನ್ನು ಉದ್ಯಮಗಳಲ್ಲಿ ತೊಡಗಿಸಲೇಬೇಕಾಗಿದೆ. ಹೀಗೆ ಭಾರತವೂ ಸೇರಿ ಈ ರಾಷ್ಟ್ರಗಳಲ್ಲೆಲ್ಲ ಭೂಮಿಯ ಪ್ರಶ್ನೆ ಕೇವಲ ಕೃಷಿಯ ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಅದು ಔದ್ಯಮೀಕರಣದ ಪ್ರಶ್ನೆಯ ಜೊತೆಗೂ ತಳಕು ಹಾಕಿಕೊಂಡಿದೆ. (ಭಾರತದ ಪಂಚವಾರ್ಷಿಕ ಯೋಜನೆಗಳು ಉದ್ಯಮಗಳಿಗೆ ಕೊಟ್ಟ ಪ್ರಾಶಸ್ತ್ಯವನ್ನು ಕೃಷಿಗೆ ಕೊಡದೆ ಇದ್ದುದೇ ನಮ್ಮ ಇಂದಿನ ದುಃಸ್ಥಿತಿಗೆ ಕಾರಣ ಎಂದು ವಾದಿಸುವವರು ಈ ಅಂಶಗಳನ್ನೆಲ್ಲ ಮರೆತುಬಿಡುತ್ತಾರೆ. ಮೇಲಿಂದ ಮೇಲೆ ಕೇಳಿಬರುತ್ತಿರುವ ಈ ವಾದವನ್ನು ಈ ದೇಶದಲ್ಲಿ ಪ್ರಚಲಿತಗೊಳಿಸಿದವರು ಬಲ ಪಂಥೀಯ ಅರ್ಥಶಾಸ್ತ್ರಜ್ಞರು ಮತ್ತು ರಾಜಕಾರಿಣಿಗಳು ಎಂಬುದನ್ನು ಈ ಸಂದರ್ಭದಲ್ಲಿ ಗಮನಿಸಬೇಕು). ಆದರೆ ಜಗತ್ತಿನ ಬಡತನ ಕೇಂದ್ರೀಕೃತವಾಗಿರುವ ಭಾರತವೂ ಸೇರಿ, ಈ ಎಲ್ಲ ಬಡರಾಷ್ಟ್ರಗಳು ತಮ್ಮ ಅರ್ಥವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಈ ಸಂಕಟಗಳಿಂದ ಮುಕ್ತವಾಗಿರುವ ಒಂದೇ ಒಂದು ದೇಶವೆಂದರೆ ಜಪಾನ್. ಉದ್ಯಮ ಪ್ರಧಾನ ಅರ್ಥವ್ಯವಸ್ಥೆಯನ್ನು ಹೊಂದಿರುವ, ಯಾವ ಪರಕೀಯ ಸಾಮ್ರಾಜ್ಯಷಾಹಿಯ ನೆರವೂ ಇಲ್ಲದ ಜಪಾನ್, ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೇರಿಕಾದ ಉಳಿದ ದೇಶಗಳ ಅರ್ಥವ್ಯವಸ್ಥೆಯ ಮೂಲಭೂತ ವೈಷಮ್ಯಗಳಿಂದ ಮುಕ್ತವಾಗಿದೆ. ಜೊತೆಗೆ ದ್ವಿತೀಯ ಯುದ್ಧಾನಂತರ ಜಪಾನಿಗೆ ಹರಿದುಬಂದ ಭಾರೀ ಪ್ರಮಾಣದ ಅಮೇರಿಕನ್ ನೆರವನ್ನು ಕೂಡಾ ನಾವು ಮರೆಯುವಂತಿಲ್ಲ. ಏಷ್ಯದ ಇತರ ಯಾವ ರಾಷ್ಟ್ರವೂ ಈ ಪ್ರಮಾಣದ ಅಮೇರಿಕನ್ ಬಂಡವಾಳ ಮತ್ತು ತಾಂತ್ರಿಕತೆಯ ನೆರವನ್ನು ಪಡೆದಿಲ್ಲ. ಇಷ್ಟೆಲ್ಲ ಅನುಕೂಲಗಳಿದ್ದರೂ ಕೂಡ ಇಂದಿಗೂ ಜಪಾನಿನ ಅರ್ಥವ್ಯವಸ್ಥೆ ಸ್ವಲ್ಪಮಟಿಗೆ ಒಂದು freak ಬೆಳವಣಿಗೆ, ತನ್ನ ಇಂಧನಕ್ಕೆ ಸಂಪೂರ್ಣವಾಗಿ ಅರಬ್ ದೇಶಗಳನ್ನೂ, ತನ್ನ ಸಿದ್ದ ವಸ್ತುಗಳ ಮಾರಾಟಕ್ಕೆ ಪಶ್ಚಿಮ ರಾಷ್ಟ್ರಗಳ ಮಾರುಕಟ್ಟೆ ಯನ್ನೂ ಅವಲಂಬಿಸಿರುವ ಜಪಾನ್ ಸದಾ ಈ ಎರಡು ಬಣಗಳ ಮರ್ಜಿಯನ್ನೇ ಹಿಡಿದಿರಬೇಕಾಗಿದೆ. ಕಳೆದ ವರುಷದ ತೈಲಬಿಕ್ಕಟ್ಟು ಮತ್ತು ಅಮೇರಿಕವೂ ಸೇರಿ ಕಮ್ಯೂನಿಷ್ಟೇತರ ಪಶ್ಚಿಮ ದೇಶಗಳ ಆರ್ಥಿಕ ಕುಸಿತಗಳಿಂದ ಜಪಾನಿನ ಅರ್ಥವ್ಯವಸ್ಥೆ ಭಾರೀ ಏರುಪೇರುಗಳನ್ನು ಎದುರಿಸಿತು. ಹೋಲಿಕೆ ಯಾವಾಗಲೂ ಸಮಾನ ಗುಣಗಳ ಆಧಾರದ ಮೇಲೆ ಇರಬೇಕೆಂಬುದನ್ನು ಮರೆತು ಭಾರತವನ್ನು ಜಪಾನನ್ನು ಹೋಲಿಸಿ ನೋಡುವವರು ಈ ಎಲ್ಲ ಅಂಶಗಳನ್ನು ಬಚ್ಚಿಡುತ್ತಾರೆ.
ಅರ್ಥಶಾಸ್ತ್ರದ ಮುಸಕಿನೊಳಗಿನ ರಾಜಕೀಯ ಎಂತಹ ಜಾಣ ಮಾತುಗಳಲ್ಲಿ ವ್ಯಕ್ತವಾಗಬಹುದು ಎಂಬುದಕ್ಕೆ ಇನ್ನೊಂದು ಉದಾಹರಣೆಯೆಂದರೆ, ಬಲಪಂಥೀಯ ಅರ್ಥ ಶಾಸ್ತ್ರಜ್ಞರೂ ರಾಜಕಾರಣಿಗಳೂ ಸೂತ್ರ ರೂಪದಲ್ಲಿ ಹೇಳುವ “ಮೊದಲು ಉತ್ಪಾದನೆ ; ನಂತರ ವಿತರಣೆ’ ಎಂಬ ಮಾತು ಅರ್ಥಶಾಸ್ತ್ರದ ಎ. ಬಿ. ಸಿ. ಗೊತ್ತಿರುವವನಿಗೂ ಯಾವುದೇ ಅರ್ಥವ್ಯವಸ್ಥೆಯಲ್ಲಿ ಅದು ಬೆಳವಣಿಗೆಯ ಯಾವ ಹಂತದಲ್ಲಿಯೇ ಇರಲಿ -ಸಂಪತ್ತಿನ ಉತ್ಪಾದನೆ ಮತ್ತು ವಿತರಣೆ ಏಕಕಾಲದಲ್ಲಿ ಪಡೆಯುವ ಕ್ರಿಯೆಗಳು ಎಂಬುದು ಗೊತ್ತಿರುತ್ತದೆ. ಉತ್ಪಾದನ ವಿತರಣೆಯನ್ನು ಉತ್ಪಾದನೆಯ ಶ್ರಮ (mode of production)ವೇ ನಿರ್ದೆಶಿಸುತ್ತದೆ. ಹಾಗಾಗಿ ಉತ್ಪಾದಿತ ಸಂಪತ್ತು ಒಂದು ನಿಶ್ಚಿತ ರೀತಿಯಲ್ಲಿ ವಿತರಣೆ ಆಗಿಯೇ ತೀರುತ್ತದೆ. ಆದ್ದರಿಂದ ಪ್ರಶ್ನೆ ಇರುವುದು ವಿತರಣೆ ಬೇಕೋ ಬೇಡವೋ ಎಂಬುದಲ್ಲ: ವಿತರಣೆ ಈಗ ಇರುವಂತೆ ಅಸಮಾನವಾಗಿ ಆಗಬೇಕೆ ? ಅಥವ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಆಗಬೇಕೆ ? ಎಂಬುದು. ಭಾರತದಂತಹ ಕೃಷಿಪ್ರಧಾನ ಅರ್ಥವ್ಯವಸ್ಥೆಯಲ್ಲಿ ಮೊದಲು ಉತ್ಪಾದನೆ ನಂತರ ವಿತರಣೆ ಎಂಬ ಮಾತಿಗೆ ಏನು ಅರ್ಥವಿದೆ ? ಈ ಮಾತು ವಾದಕ್ಕೆ ಸರಿ ಎಂದು ಒಪ್ಪಿಕೊಂಡರೆ, ಕೃಷಿಯ ಉತ್ಪಾದನೆಯ ಯಾವ ಮಟ್ಟದಲ್ಲಿ ವಿತರಣೆ ಪ್ರಾರಂಭಿಸಬಹುದು ಎಂಬುದಕ್ಕೆ ಈ ವಾದ ಮುಂದೂಡುವವರಲ್ಲಿ ಯಾವುದಾದರೂ ಗರಿಷ್ಠ ಮಿತಿ ಇದೆಯೆ ? ಹಾಗೆ ವಿತರಣೆ ಪ್ರಾರಂಭವಾಗುವವರೆಗೂ, ಉತ್ಪಾದಿತ ಸಂಪತ್ತು ಬ್ಯಾಂಕಿನಲ್ಲಿಟ್ಟಿರುವ ಎಸ್.ಬಿ. ಠೇವಣಿಯಂತೆ ಭದ್ರವಾಗಿರುತ್ತವೆಯೆ ? ಮತ್ತು ನಮ್ಮ ಎಲ್ಲ ಯೋಚನೆಗಳ ಕೇಂದ್ರದಲ್ಲಿರಬೇಕಾದ ಮನುಷ್ಯ ಬದುಕಿ ಉಳಿದಾನೆಯೆ ? ಅರ್ಥವ್ಯವಸ್ಥೆಯ ಸಂಕೀರ್ಣತೆ ಗೊತ್ತಿಲ್ಲದ ಪೆದ್ದರು ಮಾತ್ರ ಇಂತಹ ಸೂತ್ರಗಳನ್ನು ನಂಬಿಯಾರು. ಆದರೆ ಬಹುಮಟ್ಟಿಗೆ ಇಂತಹ ಅರ್ಥಶಾಸ್ತ್ರದ ಮುಸುಕಿನೊಳಗಿನ ರಾಜಕೀಯದ ವರಸೆ ಪಟ್ಟುಗಳೆಲ್ಲ ಪೆದ್ದರನ್ನುದ್ದೇಶಿಸಿಯೇ ಇರುವುದರಿಂದ, ನಾವು ಕಾಳಜಿಯಿಂದ ಪ್ರಶ್ನಿಸಬೇಕಾದ್ದು ಈ ಮಂದಿಯ ಅರ್ಥಶಾಸ್ತ್ರದ ಮಾಹಿತಿಯನ್ನಲ್ಲ. ಇವರ ಮನಸ್ಸಿನ ಆರೋಗ್ಯದ ಸ್ಥಿತಿಯನ್ನು.
ಮೂರ್ಖತನದಲ್ಲಿ ಮೇಲೆ ಹೇಳಿದ ಸೂತ್ರಕ್ಕೆ ಬಹಳ ಹತ್ತಿರವಿರುವ ಇನ್ನೊಂದು ಚಿರಪರಿಚಿತ ವಾದಸರಣಿ ಹೀಗಿದೆ-“ಮಾರುಕಟ್ಟೆಯಲ್ಲಿ ವಸ್ತುಗಳ ಉತ್ಪಾದನೆ, ದಾಸ್ತಾನು ಮತ್ತು ಅವುಗಳಿಗಿರುವ ಬೇಡಿಕೆ-ಇವುಗಳ ನಡುವಿನ ಸಮತೋಲನದಲ್ಲಿ ವಸ್ತುವಿನ ಬೆಲೆ ನಿರ್ಧರಿತವಾಗುತ್ತದೆ ಮತ್ತು ಸಹಜವಾಗಿ ಉತ್ಪಾದಕ ಮತ್ತು ಬಳಕೆದಾರ ಇಬ್ಬರ ಹಿತಕ್ಕೂ ಅನುಗುಣವಾಗಿರುತ್ತದೆ. ಹೇಗೆಂದರೆ ಬೆಲೆ ಏರಿದರೆ ಬೇಡಿಕೆ ಕಡಿಮೆಯಾಗುತ್ತದೆ; ಬೇಡಿಕೆ ಕಡಿಮೆ ಆದರೆ ದಾಸ್ತಾನು ಹೆಚ್ಚಾಗುತ್ತದೆ. ದಾಸ್ತಾನು ಹೆಚ್ಚಾದರೆ ಬೆಲೆಗಳು ಇಳಿಯಲೇಬೇಕು. ಹೀಗೆ ಮಾರುಕಟ್ಟೆಯನ್ನು ಅದರ ಪಾಡಿಗೆ ಬಿಟ್ಟು ಬಿಟ್ಟರೆ ತನ್ನ ಸಮತೋಲವನ್ನು ಕಾಲಕ್ರಮದಲ್ಲಿ ತಾನೇ ಕಂಡುಕೊಳ್ಳುತ್ತದೆ ; ತನ್ನನ್ನು ತಾನೇ ಒಂದು ಶಿಸ್ತಿಗೆ ಒಳಪಡಿಸಿಕೊಳ್ಳುತ್ತದೆ.” ಎಲ್ಲ ನಿಯಂತ್ರಣಗಳನ್ನೂ ವಿರೋಧಿಸುವ ಈ ವಾದ ಸರಣಿಯ ಬಲಪಂಥೀಯ ಅರ್ಥಶಾಸ್ತ್ರಜ್ಞರು ಮತ್ತು ರಾಜಕಾರಣಿಗಳಿಗೆ ಪ್ರಿಯವಾದದ್ದು. ಆದರೆ ಯಾವ ಅರ್ಥವ್ಯವಸ್ಥೆಯೂ, ಈ ವಾದ ನಮ್ಮನ್ನು ನಂಬಿಸಲು ಪ್ರಯತ್ನಿಸುವಷ್ಟು ಸರಳವಾಗಿರುವುದಿಲ್ಲ. ಮಾರುಕಟ್ಟೆಯಲ್ಲಿ ಬೆಲೆ ನಿರ್ಧರಿಸುವವನು ಭಾರತದಂತಹ ದೇಶದಲ್ಲಂತೂ ಗಿರಾಕಿ ಖಂಡಿತ ಅಲ್ಲ. ಇಲ್ಲಿ ಅದು ಇವತ್ತಿಗೂ ಉತ್ಪಾದಕ ಮತ್ತು ವರ್ತಕನ ಇಷ್ಟಕ್ಕನುಗುಣವಾಗಿ ನಡೆಯುತ್ತಿದೆ. ಅಲ್ಲದಿದ್ದರೆ ಇಲ್ಲಿ ಕೃತಕ ಅಭಾವಗಳು ಏಕೆ ಸೃಷ್ಟಿಯಾಗುತ್ತವೆ ? ಆಹಾರಧಾನ್ಯಗಳು ದಾಸ್ತಾನಿದ್ದರೂ ಬೆಲೆಗಳು ಏಕೆ ಏರುತ್ತ ಹೋಗುತ್ತವೆ ? (ವರ್ತಕ ಕೇಳಿದ ಬೆಲೆಯನ್ನು ಕೊಡಲು ತಯಾರಿದ್ದರೆ ಯಾವ ಜೀವನಾವಶ್ಯಕ ವಸ್ತುವನ್ನೂ ಯಾವ ಪ್ರಮಾಣದಲ್ಲಿಯೂ ಕೊಳ್ಳಬಹುದಾದ ಸತ್ಯ ಯಾರಿಗೆ ಗೊತ್ತಿಲ್ಲ ?) ಆಹಾರಧಾನ್ಯಗಳ ಬೆಲೆ ಏರಿಕೆಯಿಂದ ಶ್ರೀಮಂತ ರೈತನಿಗೆ ಲಾಭವಾದರೆ ಚಿಕ್ಕ ಹಿಡುವಳಿದಾರನಿಗೆ ಬಡ ರೈತನಿಗೆ ಏಕೆ ನಷ್ಟ ವಾಗುತ್ತದೆ ? ಮೇಲಿನ ವಾದದಲ್ಲಿ ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ವಸ್ತುಗಳ ಬೆಲೆಗಳನ್ನು ನಿರ್ಧರಿಸುವುದು ಮಾರುಕಟ್ಟೆಯ ಸರಬರಾಜು ಮತ್ತು ಬೇಡಿಕೆ ಮಾತ್ರವಲ್ಲ; ರಾಜಕೀಯ ಅರ್ಥವ್ಯವಸ್ಥೆಯ ವರ್ಗಸ್ವರೂಪವೂ ಇದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಮೇಲಿನ ವಾದಸರಣಿಯನ್ನು ಮುಂದಿಡುವವರು ಬಚ್ಚಿಡಲು ಪ್ರಯತ್ನಿಸುವ ಸತ್ಯವೇ ಇದು.
ಟಿಪ್ಪಣಿ 2: ಭೂಸುಧಾರಣ ಶಾಸನ ಮತ್ತು ನಮ್ಮ ಆಡಳಿತ ಯಂತ್ರ
ಈ ಜಿಲ್ಲೆಯಲ್ಲಿ 1974ರ ಭೂಸುಧಾರಣಾ ಶಾಸನ ಜಾರಿಗೆ ಬಂದಮೇಲೆ ಕೂಡಾ ಒಕ್ಕಲೆಬ್ಬಿಸುವ ಪ್ರಕರಣಗಳು ಸಾಕಷ್ಟು ನಡೆದಿವೆ. ಭೂಸುಧಾರಣಾ ಶಾಸನವನ್ನು ಜಾರಿಗೆ ತರಲು ಸರಕಾರ ಹೊಸ ಆಡಳಿತ ಯಂತ್ರವನ್ನೇನೂ ರೂಪಿಸಿಲ್ಲ ; ಈಗ ಇರುವ ಅಧಿಕಾರಷಾಹಿಯೇ, ಈ ಶಾಸನವನ್ನು ಕಾರಗತಗೊಳಿಸಬೇಕಾಗಿದೆ. ಸಾಮಾನ್ಯವಾಗಿ ತಾನು ಗೇಣಿಗೆ ಪಡೆದದ್ದಕ್ಕೆ ಗೇಣಿ ಚೀಟು, ಆರ್.ಆರ್. (Records of Rights), ಲೆವಿ ರಶೀದಿ, ಗೊಬ್ಬರ ಕಾರ್ಡು ಇತ್ಯಾದಿ ಯಾವ ದಾಖಲೆಯೂ ಇಲ್ಲದ ಒಕ್ಕಲಿನ ಮೇಲೆ, ಈತ ತನ್ನ ಭೂಮಿಯ ಮೇಲೆ ಅಕ್ರಮ ಪ್ರವೇಶ ನಡೆಸಿದ್ದಾನೆ ಎಂದು ಪೋಲಿಸರಿಗೆ ದೂರು ಕೊಟ್ಟು ಒಕ್ಕಲು ಉತ್ತು ಬಿತ್ತಿದ ಗದ್ದೆಗಳನ್ನೇ ಪ್ರವೇಶಿಸದಂತೆ 144ನೇ ಸೆಕ್ಷನ್ ಪ್ರಕಾರ ಧನಿಗಳು ಇಂಜಕ್ಷನ್ ತಂದ ಪ್ರಕರಣಗಳಿವೆ. ಪೋಲೀಸು ಠಾಣೆಗಳಲ್ಲಿ ಧನಿ ಕೊಟ್ಟ ದೂರಿನ ಆಧಾರದ ಮೇಲೆ ಒಕ್ಕಲನ್ನು ಕರೆಸಿ, ಪೋಲಿಸರು ಹೊಡೆದು ಬಡೆದು ಅಶ್ಲೀಲವಾಗಿ ಬೈದು ಭೂಮಿ ತನ್ನದಲ್ಲವೆಂದೂ ತಾನು ಅಕ್ರಮ ಪ್ರವೇಶ ಮಾಡಿದ್ದು ಹೌದೆಂದೂ ಬರೆಸಿ ಒತ್ತಾಯದಲ್ಲಿ ಹೆಬ್ಬೆಟ್ಟು ಒತ್ತಿಸಿಕೊಂಡದ್ದೂ ಉಂಟು. ಪೋಲಿಸರಿಗೆ ನ್ಯಾಯ ನಿರ್ಣಯದ ಹಕ್ಕಾಗಲೀ ಶಿಕ್ಷೆ ವಿಧಿಸುವ ಹಕ್ಕಾಗಲೀ ಇಲ್ಲ. ಅದು ಇರುವುದು ಕೋರ್ಟಿಗೆ. ಆದರೆ ನಮ್ಮ ಪೋಲಿಸರು ಮಾತ್ರ “ಅಪಾದಿತ ತಪ್ಪಿತಸ್ಥ ಎಂದು ಸಿದ್ದವಾಗುವವರೆಗೂ ಆತ ನಿರ್ದೋಷಿ ಎಂದೇ ಆತನನ್ನು ಪರಿಗಣಿಸಬೇಕು” ಎಂಬ ಕಾನೂನಿನ ಮೂಲಭೂತ ಅಂಶವನ್ನು ಮರೆತುಬಿಡುತ್ತಾರೆ; ವಿಚಾರಣೆ, ತೀರ್ಪು ಮತ್ತು ಶಿಕ್ಷೆಯ ಮೂರೂ ಕರ್ತವ್ಯಗಳನ್ನು ತಾವೇ ನ್ಯಾಯಬಾಹಿರವಾಗಿ ನಿರ್ವಹಿಸುತ್ತಾರೆ. ದ. ಕ. ಜಿಲ್ಲೆಯ ಅನೇಕ ಪೋಲಿಸು ಠಾಣೆಗಳಲ್ಲಿ ಹೀಗೆ ಬಡ ಒಕ್ಕಲುಗಳನ್ನು ಹಿಡಿದು ಜಬರ್ದಸ್ತಿನಲ್ಲಿ ಮಾತನಾಡಿಸಿ, ಬಗ್ಗದಿದ್ದರೆ ನಾಲ್ಕು ಒದೆತಗಳನ್ನು ಏರಿಸಿ ಒಕ್ಕಲು ಭೂಮಿ ಬಿಟ್ಟೇಳುವಂತೆ ಮಾಡಿದ್ದಿದೆ ; ಅನೇಕ ಠಾಣೆಗಳಲ್ಲಿ ಸಬ್ ಇನ್ಸ್‌ಪೆಕ್ಟರ್ ಸಮ್ಮುಖದಲ್ಲಿ ಪಂಚಾಯಿತಿ ನಡೆದು ಧನಿಯಿಂದ ಒಂದೋ ಎರಡೋ ಸಾವಿರ ರೂ. ಪಡೆದು ಒಕ್ಕಲು ಭೂಮಿ ಬಿಡಬೇಕೆಂಬ ನಿರ್ಣಯವನ್ನು ಒಕ್ಕಲಿನ ಮೇಲೆ ಹೇರಿದ್ದಿದೆ.
ಶಾಸನವನ್ನು ಜಾರಿಗೆ ತರಲು, ಈ ಸಂಬಂಧದಲ್ಲಿ ಬರಬಹುದಾದ ಎಲ್ಲ ತೊಡಕುಗಳನ್ನು ನಿವಾರಿಸಲು ಶಾಸನ ಒಂದು ಭೂ ಪಂಚಾಯಿತಿಯನ್ನ (Land Tribunal) ಕಲ್ಪಿಸಿದೆ. ಒಂದೊಂದು ತಾಲೂಕಿಗೆ ಒಂದೊಂದರಂತೆ ಇರುವ ಈ ಟ್ರಿಬ್ಯೂನಲ್ಲಿಗೆ ಅಸಿಸ್ಟೆಂಟ್ ಕಮಿಷನ್ನರು ಅಧ್ಯಕ್ಷರು, ಉಳಿದ ನಾಲ್ಕು ಜನ ಸದಸ್ಯರಲ್ಲಿ ಒಬ್ಬ ಶಾಸಕ, ಒಬ್ಬ ಪರಿಶಿಷ್ಟ ಜಾತಿಯವ, ಮತ್ತಿಬ್ಬರು ಸ್ಥಳೀಕ “ರೈತರ ಸಮಸ್ಯೆಗಳ ಪರಿಚಯವುಳ್ಳವರು”, Ex, oficio ಆಗಿ ನೇಮಕವಾಗಿರುವ A.C. ಯನ್ನು ಬಿಟ್ಟು ಉಳಿದ ನಾಲ್ಕು ಜನ ಸದಸ್ಯರೂ ಕೂಡಾ ರಾಜಕೀಯ ಆಯ್ಕೆಗಳೇ. ಪಟ್ಟಭದ್ರ ಪುಢಾರಿಗಳೇ ಎಲ್ಲೆಲ್ಲೂ ಈ ಭೂ ಪಂಚಾಯಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಭೂ ಪಂಚಾಯಿತಿಯ ತೀರ್ಮಾನಗಳನ್ನು ಸರಕಾರ ಕೋರ್ಟುಗಳ ವ್ಯಾಪ್ತಿಯ ಹೊರಗಿಟ್ಟಿದೆ. ಎಲ್ಲದರಲ್ಲಿಯೂ ಭೂ ಪಂಚಾಯಿತಿಯದ್ದೇ ಅಂತಿಮ ತೀರ್ಮಾನ. ದ. ಕ. ಜಿಲ್ಲೆಯ 8 ತಾಲ್ಲೂಕುಗಳಲ್ಲಿ 15,46,137 ಜನ ವಾಸಿಸುವ 687 ಹಳ್ಳಿಗಳಿವೆ ಎಂದು ಗಮನಿಸಿದಾಗ, ಭೂ ಪಂಚಾಯಿತಿಯ ಸದಸ್ಯರ ಆಯ್ಕೆಯ ಆಧಾರ, ಅವರ ವರ್ಗ ಸ್ವಭಾವಗಳನ್ನು ಗಮನಿಸಿದಾಗ, ಈ ಭೂ ಪಂಚಾಯಿತಿಗಳು ಬಡರೈತರ ದೂರುಗಳನ್ನು ಎಷ್ಟು ದಕ್ಷತೆಯಿಂದ, ಎಷ್ಟು ನ್ಯಾಯವಾಗಿ ಪರಿಹರಿಸಬಹುದು ಎಂಬುದನ್ನು ಯಾರಾದರೂ ಊಹಿಸಬಹುದಾಗಿದೆ. ನಾನು ಗಮನಿಸಿದಂತೆ ಸರಕಾರದ ರೆವಿನ್ಯೂ ಆಡಳಿತ ಯಂತ್ರ ಮತ್ತು ಈ ಭೂ ಪಂಚಾಯಿತಿಗಳು ಸಣ್ಣ ಹಿಡುವಳಿದಾರನ ಭೂಮಿ ಬಿಡಿಸಿ ಒಕ್ಕಲಿಗೆ ಕೊಡಲು ತೋರಿದಷ್ಟು ಉತ್ಸಾಹವನ್ನು ದೊಡ್ಡ ಭೂಮಾಲಿಕರ, ಹಳ್ಳಿಗಳ ಪಟ್ಟಭದ್ರರ ಒಕ್ಕಲುಗಳ ಬಗ್ಗೆ ತೋರಿಸುತ್ತಿಲ್ಲ. ಇದುವರೆಗೂ ಯಾವ ಕಾರಣಕ್ಕೂ ಒಕ್ಕಲೆಬ್ಬಿಸುವುದು ಸಾಧ್ಯವಾಗದ ಧನಿಗಳು ಈಗ ಈ ಕಾನೂನು ಬಂದನಂತರ ಕ್ರಿಮಿನಲ್ ಮಾರ್ಗಗಳಲ್ಲಿ ಒಕ್ಕಲೆಬ್ಬಿಸುವುದಕ್ಕೆ ಪ್ರಾರಂಭಿಸಿದ್ದಾರೆ.
ಈ ಭಾರೀ ಭೂಮಾಲಿಕರ ಒಕ್ಕಲುಗಳ ಒಂದು ವೈಶಿಷ್ಟ್ಯವೆಂದರೆ ಇವರಲ್ಲಿ ಹೆಚ್ಚಿನವರು ಬಾಯ್ದೆರೆ ಒಕ್ಕಲುಗಳು. (ಸಣ್ಣ ಹಿಡುವಳಿದಾರರ ಒಕ್ಕಲುಗಳಲ್ಲಿ ಹೆಚ್ಚಿನವರಿಗೆ ಗೇಣಿಗೆ ಭೂಮಿ ಪಡೆದದ್ದರ ಬಗ್ಗೆ ರಿಕಾರ್ಡುಗಳಿವೆ.) ಈ ಒಕ್ಕಲುಗಳೂ ಡಿಕ್ಲರೇಷನ್ ಸಲ್ಲಿಸಬಹುದಾಗಿದೆ. ಟ್ರಿಬ್ಯೂನಲ್ ಮುಂದೆ ಅವರು ತಾವು ಒಕ್ಕಲುಗಳಾಗಿರುವುದರ ಬಗ್ಗೆ ಪ್ರಬಲ ಸಾಕ್ಷಿಗಳನ್ನೊದಗಿಸಿದರೆ ಭೂಮಿ ಆವರಿಗೇ ಆಗುವ ಸಾಧ್ಯತೆಗಳೂ ಕಾನೂನು ಪ್ರಕಾರ ಇದೆ. ಆದರೆ ಈ ಒಕ್ಕಲುಗಳು ತಂದ ಸಾಕ್ಷಿಗಳಷ್ಟೇ ಪ್ರಬಲ ಸಾಕ್ಷಿಗಳನ್ನು ಧನಿಗಳೂ ತಂದರೆ ? ತಾಲ್ಲೂಕಿನ ಎಲ್ಲ ಹಳ್ಳಿಗಳ ಎಲ್ಲ ವ್ಯವಹಾರಗಳನ್ನೂ ತಿಳಿದಿರಲು ಟ್ರಿಬ್ಯೂನಲ್ಲಿನ ಸದಸ್ಯರೇನು ಬೃಹಸ್ಪತಿಗಳೇ ? ಇಂತಹ ಪ್ರಕರಣಗಳಲ್ಲಿ ಟ್ರಿಬ್ಯೂನಲ್ಲಿನ ಸದಸ್ಯರು ಸ್ಥಳ ಪರೀಕ್ಷೆ ಮಾಡಿ ತೀರ್ಪು ಕೊಡಬೇಕೆಂದು ಕಾನೂನು ಹೇಳುತ್ತದೆ. ಆದರೆ ಇದನ್ನು ತಪ್ಪಿಸಲೆಂದೇ ಈ ಜಿಲ್ಲೆಯಲ್ಲಿ ಅನೇಕ ಭೂಮಾಲಿಕರು ಗೂಂಡಾಗಳನ್ನು ಉಪಯೋಗಿಸಿಕೊಂಡು, ಒಕ್ಕಲುಗಳ ಮನೆಗಳನ್ನು ನಾಶಪಡಿಸಿ, ರಾತಾ ರಾತ್ರೆ ಆತ ತನ್ನ ಸ್ಥಳಬಿಟ್ಟೋಡುವಂತೆ ಮಾಡಿ, ಆತ ತನ್ನ ಸ್ಥಳದಲ್ಲಿ ಇರಲೇ ಇಲ್ಲ ಎಂದು ಸಾಧಿಸಲು ಸಿದ್ಧತೆಗಳನ್ನು ಮಾಡಿದ್ದಾರೆ. ಇಂತಹ ಒಕ್ಕಲು ಪೋಲಿಸರಿಗೆ ದೂರು ಕೊಟ್ಟರೂ, ಧನಿ ಪ್ರಬಲನಾಗಿದ್ದ ಸಂದರ್ಭಗಳಲ್ಲಿ ಒಕ್ಕಲಿಗೆ ಯಾವ ಪ್ರಯೋಜನವೂ ಆಗಲಿಲ್ಲ. ಬದಲು ದೂರು ತೆಗೆದುಕೊಂಡು ಹೋದ ಒಕ್ಕಲಿಗೇ ಪೋಲಿಸರ ಆಸ್ಖಲಿತ ಭಾಷೆಯ ಬೈಗುಳ, ಹೊಡೆತಗಳೂ ದೊರೆತದ್ದುಂಟು. ಧನಿಯ ಕಿರುಕುಳಗಳ ಬಗ್ಗೆ ಒಕ್ಕಲು ಕೊಟ್ಟ ಯಾವ ದೂರನ್ನೂ ರಿಜಿಸ್ಟರ್ ಮಾಡಿಕೊಂಡು ವಿದ್ಯುಕ್ತ ವಿಚಾರಣೆ ನಡೆಸದೆ, ಈ ಒಕ್ಕಲಿನ “ಅತಿಕ್ರಮ ಪ್ರವೇಶದ ಬಗ್ಗೆ ಧನಿ ಕೊಟ್ಟ ದೂರನ್ನು ಮಾತ್ರ ರಿಜಿಸ್ಟರ್ ಮಾಡಿಕೊಂಡು, ಒಕ್ಕಲೆಬ್ಬಿಸಲು ಧನಿಗೆ ಪೋಲಿಸರೇ ಸಹಾಯ ಮಾಡಿದ ಪ್ರಸಂಗಗಳೂ ಈ ಜಿಲ್ಲೆಯಲ್ಲಿ ನಡೆದಿವೆ.
ಹಳ್ಳಿಯ ಬಡ ಅಶಿಕ್ಷಿತ ರೈತನನ್ನು ಅಧಿಕಾರಶಾಹಿಯ ತೀರ ಕೆಳಹಂತದಲ್ಲಿರುವ ಒಬ್ಬ ಕನಿಷ್ಟ ಬಿಲ್ಲೆ, ಒಬ್ಬ ವಿಲೇಜು ಎಕೊಂಟೆಂಟು ಕೂಡಾ ಅಪಾರ ಕಷ್ಟನಷ್ಟಕ್ಕೊಳಪಡಿಸಬಹುದು.
ಕಾನೂನು ಪ್ರಕಾರ ಬಾಯ್ದೆರೆ ಒಕ್ಕಲುಗಳೂ ಡಿಕ್ಷರೇಷನ್ ಕೊಡಬಹುದು. ಆದರೆ ಹೆಚ್ಚಿನವರಿಗೆ ಇವರು ಕೃಷಿ ಮಾಡಿಕೊಂಡಿದ್ದ ಭೂಮಿಯ ಸರ್ವೆ ನಂ.ಗಳು ಗೊತ್ತಿರುವುದಿಲ್ಲ. ಸರ್ವೆ ನಂ. ಮಾಹಿತಿ ಇರುವುದು ಗ್ರಾಮ ಲೆಕ್ಕಿಗನ ಹತ್ತಿರ. ಈತ ಒಕ್ಕಲಿನಿಂದ ಲಂಚವೂ ತೆಗೆದುಕೊಂಡು ಸುಳ್ಳು ಸರ್ವೆ ನಂ.ಗಳನ್ನು ಕೊಟ್ಟದ್ದಿದೆ. ಧನಿಯಿಂದ ಪಡೆದ ಲಂಚ ಅಷ್ಟು ಬೇಗ ಮರೆಯುವುದಕ್ಕಾಗುತ್ತದೆಯೇ ? ಅಲ್ಲದೆ ಸರ್ವೆ ನಂ. ಸರಿಯಾಗಿದ್ದಾಗಲೂ ಗ್ರಾಮ ಲೆಕ್ಕಿಗ Record of Rightsನ್ನು ಧನಿಯ ಹೆಸರಲ್ಲಿ ಬರೆದಿರುವ ಪ್ರಸಂಗಗಳೂ ಇವೆ. (ಧನಿ ಪ್ರತಿಷ್ಠಿತ ಕುಳುವಾಗಿರುವ ಸಂದರ್ಭಗಳಲ್ಲಿ). ಜಿಲ್ಲೆಯ ರೈತ ಸಂಘವೊಂದರ ಕಾರ್ಯಕರ್ತರು ನನಗೆ ಹೇಳಿದ ಪ್ರಕಾರ, “ಈ R R ಗಳಲ್ಲಿ ರಾತ್ರಿ ಹಗಲಾದದ್ದುಂಟು”. ಕಾನೂನಿಗೆ ಒಕ್ಕಲಿನ ಹತ್ತಿರ ಇರುವ ಯಾವ ದಾಖಲೆಯೂ-ಲೆವಿ ನೋಟಿಸು, ಲೆವಿ ರಶೀದಿ, ಗೊಬ್ಬರ ಕಾರ್ಡು ಯಾವುದೂ ಆತ ಕೃಷಿ ಮಾಡಿಕೊಂಡಿದ್ದ
ಭೂಮಿಯ ಬಗ್ಗೆ ದಾಖಲೆಯಾಗುತ್ತದೆ. ಆದರೆ ಭೂಮಾಲಿಕ ಭಾರೀ ಕುಳುವಾಗಿರುವ ಸಂದರ್ಭಗಳಲ್ಲಿ ಗ್ರಾಮ ಲೆಕ್ಕಿಗ ಒಕ್ಕಲಿನಿಂದ ಲೆವಿ ವಸೂಲು ಮಾಡಿ ಧನಿಯ ಹೆಸರಿಗೆ ಲೆವಿ ನೋಟೀಸು ಲೆವಿ ರಶೀದಿಗಳನ್ನು ಕೊಟ್ಟ ಪ್ರಸಂಗಗಳಿವೆ. ಈ ಜಿಲ್ಲೆಯಲ್ಲಿ ಹಳ್ಳಿಗಳಲ್ಲಿ ಬಡ ರೈತರ ರಾಜಕೀಯ ಸಂಘಟನೆ ಏನೇನೂ ಇಲ್ಲವಾದ್ದರಿಂದ ನೌಕರಷಾಹಿ ಮತ್ತು ಪೋಲೀಸು ಖಾತೆಯ ಇಂತಹ ಅವ್ಯವಹಾರಗಳ ಬಗ್ಗೆ ಯಾವ ಪ್ರತಿಭಟನೆಯನ್ನೂ ತೋರಿಸಲು ರೈತರು ಅಸಮರ್ಥರಾಗಿದ್ದಾರೆ. ಕೇರಳದಲ್ಲಿ ಗ್ರಾಮಗಳಲ್ಲಿ ಪ್ರಬಲವಾಗಿರುವ ರೈತ ಸಂಘಗಳು, “ಜಮೀನಿನ ವ್ಯವಹಾರ ದಾಖಲೆ ಪತ್ರಗಳು ಮುಂತಾದುವುಗಳ ಮೇಲೆ ಸದಾ ಒಂದು ಕಣ್ಣಿಟ್ಟಿರುತ್ತವೆ. ಇದರ ಪರಿಣಾಮವಾಗಿ ಜಮೀನುಗಳ ದಾಖಲೆ ಪತ್ರಗಳಲ್ಲಿ ಅವ್ಯವಹಾರ ನಡೆಯುವುದು ಕಷ್ಟವಾಗಿರುತ್ತದೆ.” (-ಭಾರತದಲ್ಲಿ ಗ್ರಾಮೀಣ ಬಡತನ-ಸ್ವಭಾವ ಮತ್ತು ಪರಿಚಯ-ಪ್ರಮೋದ ಕುಮಾರ ಮಿಶ್ರ. ಒಡನಾಡಿ. 1) ಆದರೆ ಕರ್ನಾಟಕದಲ್ಲಿ ಇಂತಹ ದಾಖಲೆಗಳ ಅವ್ಯವಹಾರ ಒಂದು ರೂಢಿಯೇ ಆಗಿಬಿಟ್ಟಿದೆ. ಈ ದಾಖಲೆಗಳ ಅವ್ಯವಹಾರಗಳು, ಪೋಲೀಸು ಖಾತೆಯ ದುಷ್ಪವರ್ತನೆಗಳು ದುಡ್ಡು ಮತ್ತು ರಾಜಕೀಯದ ಬಲವುಳ್ಳ ಭಾರೀ ಭೂ ಮಾಲಿಕರ ಒಕ್ಕಲುಗಳ ಭೂಮಿಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾತ್ರ ನಡೆಯುತ್ತವೆ ಎಂಬುದು ಈ ಜಿಲ್ಲೆಯಲ್ಲಿ ನಾನು ಗಮನಿಸಿದ ಅಂಶ.
ಟಿಪ್ಪಣಿ 3 : ಕೃಷಿಯ ಅರ್ಥವ್ಯವಸ್ಥೆ ಮತ್ತು ನಿರುದ್ಯೋಗ
(ದ. ಕ. ಜಿಲ್ಲೆಯಲ್ಲಿ ಬೀಡಿ ಉದ್ದಿಮೆಗೆ ಸಂಬಂಧಿಸಿದಂತೆ)
ದೇಶದ ಉಳಿದೆಡೆಗಳಂತೆ ದ. ಕ. ಜಿಲ್ಲೆಯ ಹಳ್ಳಿಗಳಲ್ಲಿಯೂ ಕೆಳವರ್ಗದ ಜನ ದಿವಾಳಿ ಎದ್ದು ಒಂದೇ ಸಮನೆ ತಮ್ಮ ನೆಲದ ನೀರಿನ ಋಣ ಕಡಿದುಕೊಂಡು ನಗರಗಳಿಗೆ ವಲಸೆ
ಹೋಗುತ್ತಿದ್ದಾರೆ. ನಗರಗಳಲ್ಲಿಯೂ ವ್ಯಾಪಕ ನಿರುದ್ಯೋಗವಿರುವುದರಿಂದ (ಸಾಮಾನ್ಯವಾಗಿ ನಾವು ನಿರುದ್ಯೋಗದ ಬಗ್ಗೆ ಯೋಚಿಸುವಾಗಲೆಲ್ಲ ವಿಶ್ವವಿದ್ಯಾನಿಲಯಗಳ ಹೊಸ್ತಿಲು ದಾಟಿದವರ ನಿರುದ್ಯೋಗದ ಬಗ್ಗೆಯೇ ಯೋಚಿಸುತ್ತೇವೆ. ಆದರೆ ಪದವೀಧರರಲ್ಲದ ಅಶಿಕ್ಷಿತ, ಅರೆಶಿಕ್ಷಿತ ನಿರುದ್ಯೋಗಿಗಳೂ ನಗರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ ; ಮತ್ತು ಇವರ ಸಮಸ್ಯೆ ಇನ್ನಷ್ಟು ದಾರುಣವಾದದ್ದು.) ಇಂತಹ ವಲಸೆ ನಗರಗಳ ಬದುಕನ್ನು ಇನ್ನಷ್ಟು ವಿಷಮಗೊಳಿಸುತ್ತಿದೆ. ಜೊತೆಗೆ ಈ ವಲಸೆಯ ಕ್ರೂರ Selective Process ನಿಂದ ಹಳ್ಳಿಗಳ ನಿರುದ್ಯೋಗದ ಸಮಸ್ಯೆ ಏನೂ ಕಡಿಮೆಯಾಗಿಲ್ಲ. ಹಳ್ಳಿಗಳಲ್ಲಿಯೂ ವ್ಯಾಪಕ ನಿರುದ್ಯೋಗ, ಅರೆ ಉದ್ಯೋಗ, ಮುಸುಕಿನೊಳಗಿನ ನೀರುದ್ಯೋಗ (ಉತ್ಪಾದನೆಯನ್ನಾಗಲೀ ಸಂಪತ್ತನ್ನಾಗಲೀ ಬದುಕಿನ quality ಯನ್ನಾಗಲೀ ಯಾವ ರೀತಿಯಲ್ಲಿಯೂ ಹೆಚ್ಚಿಸದ ಉದ್ಯೋಗಗಳು) ಗಳ ಸಮಸ್ಯೆ ಭೀಕರವಾಗಿದೆ. ಕೃಷಿಯ ಅರ್ಥವ್ಯವಸ್ಥೆ ಈ ಎಲ್ಲ ನಿರುದ್ಯೋಗಿಗಳಿಗೂ ಅರ್ಥಪೂರ್ಣ ಪೂರ್ಣಾವಧಿ ಉದ್ಯೋಗಗಳನ್ನು ಕಲ್ಪಿಸಿಕೊಡಲಾರದು. ಯಾವ ಕ್ರಾಂತಿಕಾರಕ ಭೂ ಸುಧಾರಣಾ ಶಾಸನವೂ ಎಷ್ಟೇ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ಬಂದರೂ ಈ ಗ್ರಾಮೀಣ ನಿರುದ್ಯೋಗದ ಸಮಸ್ಯೆ ಪರಿಹಾರವಾಗಲಾರದು. ಕ್ರಾಂತಿಯ ನಂತರ ಚೀನದ ಹಳ್ಳಿಗಳಲ್ಲಿ ನಡೆದಂತೆ ವ್ಯಾಪಕ ಔದ್ಯೋಗೀಕರಣದ ಕಾರ್ಯಕ್ರಮಗಳು ಅಥವಾ ಈ ಎಲ್ಲ ನಿರುದ್ಯೋಗಿಗಳಿಗೂ ಉದ್ಯೋಗ ಕೊಡುವಂತಹ ಬೃಹತ್ ಉದ್ದಿಮೆಗಳ ಸ್ಥಾಪನೆ ಮಾತ್ರ ಈ ಸಮಸ್ಯೆಯನ್ನು ಬಗೆಹರಿಸೀತು. ಇಂತಹ ಯಾವುದೇ ಕಾರ್ಯಕ್ರಮವನ್ನು ನಮ್ಮ ಸರಕಾರಗಳು ಕೈಗೊಂಡಿಲ್ಲ. ಆದ್ದರಿಂದ ಈಗ ಇರುವ ಸೀಮಿತ ಉದ್ಯೋಗಗಳಿಗೇ ಅಸಂಖ್ಯ ಜನ ಸ್ಪರ್ಧಿಸುವ ವಿಷಮ ವಾತಾವರಣ ನಮ್ಮಲ್ಲಿ ಸೃಷ್ಠಿಯಾಗಿದೆ. ಇದು ಎಂತಹ ಅನಿಷ್ಟ ಎನ್ನುವುದಕ್ಕೆ ಉದಾಹರಣೆ ಈ ಜಿಲ್ಲೆಯ ಬೀಡಿ ಉದ್ದಿಮೆ. ಮೊದಲಿನಿಂದಲೂ ಈ ಜಿಲ್ಲೆಯಲ್ಲಿ ಬೀಡಿ ಕಟ್ಟುತ್ತಿದ್ದವರು ಬ್ರಾಹ್ಮಣೇತರ ಕೆಳಜಾತಿಗಳವರು ಮತ್ತು ಅಶಿಕ್ಷಿತರು. ಇವರಲ್ಲಿ ಕೆಲವರು ಬಡರೈತರೋ ಭೂಹೀನ ಕೃಷಿಕಾರ್ಮಿಕರೋ ಆಗಿ, ಬೀಡಿ ಕಾಯಕವನ್ನು ತಮ್ಮ ಮೇಲು ಸಂಪಾದನೆಗೆ ಉಪಯೋಗಿಸುತ್ತಿದ್ದವರು. ಈ ಜಿಲ್ಲೆಯ ಮಂಗಳೂರು, ಬಂಟವಾಳ ಮತ್ತು ಉಡುಪಿ ತಾಲ್ಲೂಕುಗಳು ಬೀಡಿ ಉದ್ದಿಮೆಯ ಕೇಂದ್ರಗಳು. ಈಗ ಇದು ಈ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ನಿಧಾನವಾಗಿ ಹಬ್ಬಿಕೊಳ್ಳುತ್ತಿದೆ. ಆದರೆ ಈ ಉದ್ದಿಮೆ ಜಿಲ್ಲೆಯ ಹಳ್ಳಿಗಳಿಗೆ ಅಷ್ಟೊಂದು ಇಲ್ಲ. ಪೇಟೆಗಳು ಮತ್ತು ಅವಕ್ಕೆ ತಾಗಿಕೊಂಡಿರುವ ಹಳ್ಳಿಗಳಲ್ಲಿ ಮಾತ್ರ ಬೀಡಿ ಕಟ್ಟು ವವರು ಕಾಣಸಿಗುತ್ತಾರೆ. ಆದರೆ ಹೆಚ್ಚಿನವರು ಇದನ್ನೇ ಪೂರ್ಣಾವಧಿಯ ಉದ್ಯೋಗವನ್ನಾಗಿ ಮಾಡಿಕೊಂಡವರು. ಈಗ ಈ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ದುರ್ಭರ ಬಡತನವನ್ನು ತಡೆಯಲಾರದೆ ಬ್ರಾಹ್ಮಣರೂ ಬೀಡಿ ಕಟ್ಟುವುದನ್ನು ಪ್ರಾರಂಭಿಸಿದ್ದಾರೆ.
ಜಾತಿಯ ಹುಣಿಸೇಹಣ್ಣು ಇನ್ನೂ ಸಂಪೂರ್ಣ ತೊಳೆದು ಹೋಗದ್ದಕ್ಕೋ ಅಥವಾ ಬರೇ ನಾಚಿಕೆಯಿಂದಲೋ ಇದನ್ನು ಆದಷ್ಟು ಗುಟ್ಟಾಗಿರಿಸುವ ಪ್ರಯತ್ನವನ್ನೂ ಇವರು ನಡೆಸುವುದನ್ನು ನಾನು ಗಮನಿಸಿದ್ದೇನೆ. ಹೈಸ್ಕೂಲು, ಕಾಲೇಜು ಓದಿದವರೂ ಬೇರೆ ಉದ್ಯೋಗ ಸಿಗದ್ದಕ್ಕೆ ಈ ಕೆಲಸಕ್ಕೆ ಈಗ ಇಳಿದಿದ್ದಾರೆ. ಇವರಲ್ಲಿ ಕೆಲವರು ಇದನ್ನು ಮೇಲು ಸಂಪಾದನೆಗೆ ಮಾಡುವರು : ಇನ್ನೂ ಕೆಲವರದ್ದು ಇದೇ ಪೂರ್ಣಾವಧಿ ಉದ್ಯೋಗ. (ಬೀಡಿ ಕಟ್ಟುವುದಕ್ಕೆ ಯಾವ ವೃತ್ತಿ ನೈಪುಣ್ಯವೂ ಬೇಕಾಗಿಲ್ಲ, ಎರಡು ಮೂರು ಗಂಟೆಗಳೊಳಗೆ ಯಾರೂ ಇದನ್ನು ಕಲಿಯಬಹುದು.) ಬೀಡಿ ಉದ್ದಿಮೆಯ ಸ್ಥಿತಿಗತಿ ಗೊತ್ತಿಲ್ಲದವರು “ಆಹಾ! ಬ್ರಾಹ್ಮಣರು, ವಿದ್ಯಾವಂತರು ತಮ್ಮ ಸಂಕುಚಿತ ಭಾವನೆಗಳನ್ನು ಬಿಡುತ್ತಿದ್ದಾರೆ” ಎಂದು ಖುಷಿ ಪಡಬಹುದು. ಆಮೇಲೆ ಈ ಜಿಲ್ಲೆಯ ಬೀಡಿ ಉದ್ದಿಮೆಯ ಉದ್ಯೋಗಾವಕಾಶದ ಸಾಧ್ಯತೆಗಳು (Employment Potential) ಹೀಗೆ ಖುಷಿಪಡುವಷ್ಟು ಚೆನ್ನಾಗಿಲ್ಲ. ಸಾರ್ವತ್ರಿಕ ನಿರುದ್ಯೋಗದ ಕಾರಣದಿಂದ ಈ ಉದ್ದಿಮೆಯಲ್ಲಿ ಈಗಾಗಲೇ ಅವಶ್ಯವಿರುವುದಕ್ಕಿಂತ ಹೆಚ್ಚು ಜನ ಕೆಲಸಗಾರರು ಇದ್ದಾರೆ. ಈಗ ಬೀಡಿ ಕೆಲಸಗಾರರಿಗೆ ವರುಷದುದ್ದಕ್ಕೂ ಪೂರ್ಣಾವಧಿ” ದಿನದ ಕೆಲಸ ಸಿಗುವುದು ಕಷ್ಟವಾಗಿದೆ. ಪರಿಸ್ಥಿತಿ ಬರುವ ದಿನಗಳಲ್ಲಿ ಇನ್ನಷ್ಟು ಗಂಭೀರವಾಗಬಹುದು. ಅಲ್ಲದೆ ಈ ರೀತಿಯ ಕಾರ್ಮಿಕರ ಹೆಚ್ಚಳದಿಂದ, ಕಾನೂನು ಪ್ರಕಾರ ಬೀಡಿ ಕಾರ್ಮಿಕರಿಗೆ ಮಾಲಿಕರು ಕೊಡಬೇಕಾದ ಅನೇಕ ಸವಲತ್ತುಗಳನ್ನು ವಂಚಿಸುವುದೂ ಮಾಲಿಕರಿಗೆ ಸಾಧ್ಯವಾಗಿದೆ. ವರುಷಕ್ಕೆ ಸುಮಾರು ಹತ್ತು ಕೋಟಿ ರೂಪಾಯಿಗಳ ವಹಿವಾಟಿನ 200000 ಕಾರ್ಮಿಕರಿರುವ ಈ ಜಿಲ್ಲೆಯ ಬೀಡಿ ಉದ್ದಿಮೆ ಇವತ್ತಿಗೂ ನಡೆಯುತ್ತಿರುವುದು ಬಹು ಮಟ್ಟಿಗೆ contract labour, Casual labour ಗಳ ಆಧಾರದ ಮೇಲೆ ದ. ಕ. ಜಿಲ್ಲಾ ಗೆಝೆಟಿಯಲ್ (1973)ರ ಪ್ರಕಾರ ಈ ಉದ್ದಮೆಯಲ್ಲಿ 1973 ರಲ್ಲಿದ್ದ ಕೆಲಸಗಾರರ ಸಂಖ್ಯೆ 70000. ಅವರಲ್ಲಿ ಫ್ಯಾಕ್ಟರಿ ಶಾಸನ ಅನ್ವಯವಾಗುತ್ತಿದ್ದವರ ಸಂಖ್ಯೆ ಕೇವಲ 1000. ಇತ್ತೀಚೆಗೆ ಬೀಡಿ ಉದ್ದಿಮೆಯ ವಕ್ತಾರರೊಬ್ಬರು ನೀಡಿದ ಪತ್ರಿಕಾ ಪ್ರಕಟನೆಯ ಪ್ರಕಾರ ಜಿಲ್ಲೆಯಲ್ಲಿದ್ದ ಬೀಡಿ ಕಾರ್ಮಿಕ ಸಂಖ್ಯೆ 2 ಲಕ್ಷ. ಫ್ಯಾಕ್ಟರಿ ಶಾಸನ ಈಗ ಅನ್ವಯವಾಗುವ ಕಾರ್ಮಿಕ ಸಂಖ್ಯೆ ಖಡಿತ 1000 ಕ್ಕಿಂತ ಹೆಚ್ಚಾಗಿದೆ. ಆದರೆ ಬೀಡಿ ಕಾರ್ಮಿಕರ ಬಹು ದೊಡ್ಡ ಭಾಗಕ್ಕೆ ಸರಕಾರದ ಬೀಡಿ ಮತ್ತು ಸಿಗಾರ್ ಕಾರ್ಮಿಕರ ಫ್ಯಾಕ್ಟರಿ ಶಾಸನ ಇವತ್ತಿಗೂ ಅನ್ವಯವಾಗುತ್ತಿಲ್ಲ. ಹೀಗಾಗಿ ಬೀಡಿ ಉದ್ದಿಮೆಯ ಮಾಲಿಕರು ಉದ್ದಿಮೆಯಿಂದ ಗಳಿಸುತ್ತಿರುವ ಅಪಾರ ಲಾಭದ ಒಂದಂಶವೂ ಬೀಡಿ ಕಾರ್ಮಿಕರಿಗೆ ಆರೋಗ್ಯ ವಿಮೆ, (ಬೀಡಿ ಕಟ್ಟುವವರಿಗೆ ದೈಹಿಕ ಅನಾರೋಗ್ಯದ ಮುಖ್ಯವಾಗಿ ಕ್ಷಯದ ಭಯ ತಪ್ಪಿದ್ದಲ್ಲ), ನಿವೃತ್ತಿ ವೇತನ, ಹೆರಿಗೆ ಭತ್ಯೆ, ರಜಾ ಸೌಲಭ್ಯ, ಖಾಯಂ ಕೆಲಸ ಮುಂತಾದ ಯಾವ ಸೌಲಭ್ಯಗಳ ಮುಖಾಂತರವೂ ದೊರಕುತ್ತಿಲ್ಲ. ಹೋಗಲಿ ಅವರಿಗೆ ದೊರೆಯುವ ಕೂಲಿಯೂ ನ್ಯಾಯವಾದ ಕೂಲಿಯಲ್ಲ. (ಬೀಡಿ ಮಾಲಿಕರ ಪತ್ರಿಕಾ ಪ್ರಕಟಣೆಗಳೇನೋ, ಕೂಲಿಯ ಹೆಚ್ಚಳದಿಂದ ಅವರೇ ಈ ಕಾರ್ಮಿಕರಿಗಿಂತ ಕಡೆಯಾಗಿ ಬಿಟ್ಟಿದ್ದಾರೆ ಎಂದು ನಮ್ಮನ್ನು ನಂಬಿಸಲು ಪ್ರಯತ್ನಿಸುತ್ತವೆ.)
1000 ಬೀಡಿ ಕಟ್ಟುವುದಕ್ಕೆ ಈಗ ಇರುವ ಕೂಲಿ ರೂ. 5-20. ಈ 1000 ಬೀಡಿಗಳಲ್ಲಿ 20 ಅಥವಾ 30 ಬೀಡಿಗಳನ್ನು ಹಾಳು ಎಂದು ಮುರಿದು ಬಿಸಾಡಿ ಕಂಟ್ರಾಕ್ಟರುಗಳು ಇದರ ಬೆಲೆಯನ್ನು ಈ ಕೂಲಿಯಿಂದಲೇ ಕಡಿದುಕೊಳ್ಳುತ್ತಾರೆ. ಬೀಡಿ ಎಲೆ ಕತ್ತರಿಸುವುದಕ್ಕೆ, ಕತ್ತರಿಸಿದ ಎಲೆ ಒದ್ದೆ ಮಾಡುವುದಕ್ಕೆ ಒಬ್ಬ ಸಹಾಯಕನಿದ್ದರೆ, ಒಬ್ಬ ಸತತವಾಗಿ ಕೂತು 9-10 ಗಂಟೆಗಳಲ್ಲಿ 1000 ಬೀಡಿ ಕಟ್ಟ ಬಹುದು. ಕೇರಳದಲ್ಲಿ ಎಲೆ ಕತ್ತರಿಸುವುದಕ್ಕೆ, ನೀರಿನಲ್ಲಿ ನೆನೆಸುವುದಕ್ಕೆ, ತಂಬಾಕನ್ನು ಕತ್ತರಿಸಿದ ಎಲೆಯಲ್ಲಿಟ್ಟು ಸುರುಳಿ ಸುತ್ತಿ ನೂಲು ಕಟ್ಟುವುದಕ್ಕೆ (wetting, cutting and rolling) ಪ್ರತ್ಯೇಕ ದರಗಳು ನಿಗದಿಯಾಗಿವೆ. ಕರ್ನಾಟಕದಲ್ಲಿ ಹೀಗಿಲ್ಲ; ಈ ಎಲ್ಲ ಕೆಲಸಗಳಿಗೂ ಸೇರಿ 1000 ಬೀಡಿಗೆ 5-20 ಕೂಲಿ ದರ ಎಂದು ಸರಕಾರ ನಿಗದಿ ಮಾಡಿದೆ. ಒಬ್ಬ ಮೂವತ್ತು ದಿನವೂ ದಿನಕ್ಕೆ 9-10 ಗಂಟೆ ಮೈಬಗ್ಗಿಸಿ ಕೂತು ದುಡಿದರೆ (ಒಬ್ಬ ಸಹಾಯಕನನ್ನಿಟ್ಟುಕೊಂಡು) ಆತನಿಗೆ ಸಿಗುವುದು 156 ರೂಪಾಯಿಗಳು. (Contract labour ಆದದ್ದರಿಂದ ಇವರಲ್ಲಿ ಹೆಚ್ಚಿನವರಿಗೆ ರಜಾ ಸೌಲಭ್ಯವೂ ಇಲ್ಲ) ಈ ಕಾರಣದಿಂದ ಈ ಉದ್ದಿಮೆಯಲ್ಲಿ ಬೀಡಿ ಕಟ್ಟುವವರ ಕುಟುಂಬದ ಗಂಡಸರು ಮತ್ತು ಹೆಂಗಸರ ಜೊತೆಗೆ ಅವರ ಅಪ್ಯಾಯಸ್ಥ ಮಕ್ಕಳು ಕೂಡ ದುಡಿಯಬೇಕಾಗಿದೆ. ನಾಗರಿಕತೆಯಲ್ಲಿ ನಾವು ಯಾರಿಗೂ ಹಿಂದೆ ಇಲ್ಲವಾದ್ದರಿಂದ ನಮ್ಮಲ್ಲಿಯೂ child labour ನಿಷೇಧಿಸುವ ಒಂದು ಕಾರ್ಮಿಕ ಶಾಸನವಿದೆ. ಆದರೆ ನನಗೆ ಗೊತ್ತಿದ್ದ ಮಟ್ಟಿಗೆ ಜಿಲ್ಲೆಯ ಒಬ್ಬ ಲೇಬರ್ ಆಫೀಸರ್ ಆಗಲೀ, ಲೇಬರ್ ಇನ್ಸ್‌ಪೆಕ್ಟರ್ ಆಗಲೀ ಬೀಡಿ ಉದ್ದಿಮೆಯ ಈ ಅನಿಷ್ಠದ ಬಗ್ಗೆ ತಲೆಕೆಡಿಸಿಕೊಂಡದ್ದಿಲ್ಲ. ಬೀಡಿ ಕೆಲಸ, ಕಾರ್ಮಿಕರ ಮನೆಗಳಲ್ಲಿಯೇ ನಡೆಯುವುದರಿಂದ (cootract labour ನ ಕ್ರಮ ಇಲ್ಲದ ಕಡೆಗಳಲ್ಲಿ ಫ್ಯಾಕ್ಟರಿ ಶಾಸನ ಅನ್ವಯವಾಗುವಲ್ಲಿ ಇದು ಫ್ಯಾಕ್ಟರಿಗಳಲ್ಲಿ ಡಿಪೋಗಳಲ್ಲಿ ನಡೆಯುತ್ತದೆ) ಆ ಬಗ್ಗೆ ಇವರು ಏನೂ ಮಾಡುವಂತಿಲ್ಲ.
ಬೀಡಿ ಕಾರ್ಮಿಕರು ಈಗ ಪಡೆಯುತ್ತಿರುವ ಅಲ್ಪಸ್ವಲ್ಪ ಸೌಲಭ್ಯಗಳನ್ನಾದರೂ (ಕೆಲವರಿಗಾದರೂ ಫ್ಯಾಕ್ಟರಿ ಶಾಸನದ ಅನ್ವಯ, ಕೂಲಿಯಲ್ಲಿ 5-20 ರಷ್ಟಾದರೂ ಹೆಚ್ಚಳ) ಪಡೆದಿರುವುದು ಬೇಡಿ ಮಾಲಕರ ಸೌಜನ್ಯದಿಂದಲ್ಲ ; ತಮ್ಮ ಸುದೀರ್ಘ ಸಂಘಟಿತ ಹೋರಾಟದ ಫಲವಾಗಿ. (ಈ ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆ ಹೋರಾಟಗಳ ಚಳುವಳಿ ಪ್ರಾರಂಭಿಸಿದವರೇ ಬೀಡಿ ಕಾರ್ಮಿಕರು). ಹೀಗಿದ್ದೂ ಇವತ್ತು ಬಹುಸಂಖ್ಯಾತ ಬೀಡಿ ಕಾರ್ಮಿಕರು ಕಡು ಬಡವರೇ ಆಗಿದ್ದಾರೆ. ಈಗ ಇವರ ಈ ಕೆಲಸಕ್ಕೆ ಮೇಲು ಜಾತಿಯವರೂ, ಶಿಕ್ಷಿತರೂ ಇವರ ಜೊತೆ ಸ್ಪರ್ಧಿಸುತ್ತಿದ್ದಾರೆ. ಬೀಡಿ ಉದ್ದಿಮೆ ಇವತ್ತಿಗೂ ಬಹುಮಟ್ಟಿಗೆ Contract labourನ ಮೇಲೆ ನಡೆಯುತ್ತಿರುವುದಕ್ಕೆ, 10-12 ವರುಷದ ಮಕ್ಕಳೂ ಅದರಲ್ಲಿ ದುಡಿಯುತ್ತಿರುವುದಕ್ಕೆ ಬೀಡಿಯ ಕೂಲಿ ದರ ನ್ಯಾಯವಾಗಿಲ್ಲದಿರುವುದಕ್ಕೆ ಈ ವ್ಯಾಪಕ ನಿರುದ್ಯೋಗ ಸೃಷ್ಟಿಸಿದ ಸ್ಪರ್ಧೆಯೇ ಕಾರಣ. ಒಬ್ಬನ ಕೆಲಸಕ್ಕೆ ಸಾವಿರ ಜನ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಕಾರ್ಮಿಕರಿಗೆ ಆಘಾತಕಾರಿಯಾದರೆ, ಮಾಲಕರಿಗೆ ಅದರಷ್ಟು ಅನುಕೂಲಕರವಾದ ಪರಿಸ್ಥಿತಿ ಇನ್ನೊಂದಿಲ್ಲ. ಕಾರ್ಮಿಕನಿಗೆ ಉದ್ಯೋಗ ಅನಿವಾರ್ಯವಾಗಿರುತ್ತದೆ; ಆದರೆ ಮಾಲಕನಿಗೆ ಯಾವ ಕಾರ್ಮಿಕನೂ indispensable ಅಲ್ಲ. ಒಂದು ವಿಷಮ ಅರ್ಥವ್ಯವಸ್ಥೆ ವ್ಯಕ್ತಿಯ ಬದುಕಿನ ಎಲ್ಲ ಗೌರವವನ್ನೂ ಕಸಿದು ಅವನನ್ನು ವ್ಯವಸ್ಥೆಗೆ ಅನ್ಯನನ್ನಾಗಿ ಮಾಡುವುದು ಹೀಗೆ. ಬೀಡಿಗೇನೂ ನಿರಂತರವಾದ ಬೇಡಿಕೆ ಇರುವುದರಿಂದ ಈಗ ಇರುವ ಕೆಲಸಗಾರರಿಗೆ ಕೆಲಸಕ್ಕೆ ತತ್ವಾರವಾಗಲಾರದು. ಆದರೆ ಈ ಕೆಲಸ ಮಾಡಲು ಇಷ್ಟೊಂದು ಜನ ತಯಾರಾಗಿ ನಿಲ್ಲದಿದ್ದರೆ ಬೀಡಿ ಉದ್ದಿಮೆಯ ದಿನಗೂಲಿ ಪದ್ಧತಿ, ಮೇಲು ಸಂಪಾದನೆ ಮಾತ್ರ ಕೆಲವರು ಮಾಡುವ Casual labour, ಬೀಡಿ ಕಟ್ಟುವವರ ಅಪ್ರಾಯಸ್ಥ ಮಕ್ಕಳು ಕೂಡ ದುಡಿಯಬೇಕಾಗಿರುವ ಅಮಾನುಷ ಪರಿಸ್ಥಿತಿ ಎಂದೊ ಈ ಉದ್ದಿಮೆಯಲ್ಲಿ ಬದಲಾಗುತ್ತಿತ್ತು ; ಈಗ ಬೀಡಿ ಕೆಲಸಗಾರರು ಪಡೆಯುತ್ತಿರುವ 1000 ಬೀಡಿಗಳಿಗೆ 5-20 ರೂಪಾಯಿಗಳ ಕೂಲಿಯೂ ಇನ್ನಷ್ಟು ಹೆಚ್ಚಾಗಿರುತ್ತಿತ್ತು: ಜೊತೆಗೆ ಕಾರ್ಮಿಕರೆಲ್ಲರೂ ರಜಾ ದಿನಗಳ ಸೌಲಭ್ಯ, ಪಿ ಎಫ್. ಹೆರಿಗೆ ಬತ್ತೆ, ತಿಂಗಳ ಸಂಬಳ, ನಿಯಮಿತ ಗಂಟೆಗಳ ಕೆಲಸ ಮೊದಲಾದ ಫ್ಯಾಕ್ಟರಿ ಶಾಸನದ ಎಲ್ಲ ಸೌಲಭ್ಯಗಳನ್ನೂ ಪಡೆಯಬಹುದಾಗಿತ್ತು.
ಎರಡು ಕವಿತೆಗಳು
ಎರಡು ಕವಿತೆಗಳು
-ಅರವಿಂದ ನಾಡಕರ್ಣಿ
೧ ಇಳಿಜಾರು
ಏರಂತೂ ಅಲ್ಲ ಬಿಡಿ
ಇಳಿಜಾರೇ ? ಯೋಚಿಸಬೇಕು.
ಸಾವಿರವರುಷ ದೂರ ಹಿಮಾಲಯ
ಶಿಖರ ಬಿಡಿ ಕಂದರದ ನೆನಪೂ ಇಲ್ಲ
ಇಂದ್ರಪ್ರಸ್ಥವೋ ಎಲ್ಲೋ ಇದ್ದದ್ದು
ಭರ್ಜರಿ ತೇಜಸ್ಸಿನಲ್ಲಿ ಹಿಮಾಲಯವೇರಿದ್ದು
ಅದು ಇದು ಚೂರು ನೆನಪೂ ಇಲ್ಲ
ಸಾವಿರ ಸಾವಿರ ವರುಷ ದೂರ ಹಿಮಾಲಯ.
ಸುಲಿವ ರಕ್ಕಸಸೇನೆ ಕರೆದು
ನಾಡೆಲ್ಲ ಮಸಣ ಮಾಡಿ
ಹೊಟ್ಟೆಯುರಿ ನಂದಿಸಿದ ಘೋರಕೃತಿಗಳ
ನೆನಪಿದೆ ಒಂದಿಷ್ಟು
ಆಗಾಗ ಕರುಳು ಹಿಚುಕುತಿವೆ ಕರಾಳಸ್ಮೃತಿಗಳು
ಧನದಾಶಯ ಫಿತೂರಿತನದ
ವಿಲಾಸದ ಬಾಜಿರಾಯತನದ
ಬಿಸಿರಕ್ತ ತುಳುಕುತಿದೆ ಮೈಯಲ್ಲಿ
ಕುದಿಯುತಿದೆ
ಪೂರ್ವಸತ್ಯದವಶೇಷಗಳ ಕದಿಯುತಿದೆ.
ಸಾವಿರ ನೋವುಗಳ ಕಾಡಿದೆ
ಪ್ರತಾಪರಕ್ತದ ಹನಿಯಿಲ್ಲ
ಸಾವಿರ ಭೋಗಗಳ ಕೋಟೆಯಿದೆ
ಶಿವರಾಯತಪಸ್ಸಿನ ಧ್ವನಿಯಿಲ್ಲ
ಸಾವಿರ ಅಧರ್ಮಗಳ ತಮಸ್ಸಿದೆ
ಗಾಂಧಿಸೂತ್ರದ ಬೆಳಕಿಲ್ಲ.
ಜಾರಿದಲ್ಲೇ ಜಾರಿಜಾರಿ ಉರುಳುರುಳಿ
ಮಣ್ಣ ಮುಕ್ಕುವ
ರಾಡಿಮೈಯಲ್ಲೆ ಲಾಗಹಾಕುವ
ಡೊಂಬರವಿದ್ಯೆ ಸರ್ವತ್ರಸಿದ್ಧ.
ತಗ್ಗಿನಲ್ಲೇ ಹಿಗ್ಗಿ ಸುಗ್ಗಿ ಕುಣಿಯುವದು
ಪರಮಹಿತ.
ಹೊಂಡ ಕುಣಿ ಗಟಾರು ಸಾಲದು
ಅತಳವಿತಳರಸಾತಳ ಕೆಳಕೆಳಕೆಳಗೆ
ಪಾತಾಳದ ಕೆಳಗೂ ಬಯಲಿದ್ದರೆ
ಪರಮಹಿತ.
ಸ್ವಹಿತಕ್ಕೊಂದೊಂದು ಶಪಥ
ಮಾಡಿ, ಮಾಮೂಲಿ ಸುಳ್ಳುಗಳೊಡನೆ
ಅಂತರ್ಲಾಗ ಹಾಕಿ
ಎಲ್ಲೆಲ್ಲೂ ಕೈಚಾಚಿ ಚುಚ್ಚಿ
ಸುರಳೀತ ದೋಚಿಬಂದದ್ದೆ ಪೌರುಷ
ಯಾರೆಂದದ್ದು ಕಿಲ್ಬಿಷ?
ಗೆದ್ದು ಮೆರೆದರೆ ಸಾಕು ಪುಣ್ಯವೋ ಪುಣ್ಯ.
ಈ ಜನಾ ದೇಶದ್ದೇನು ಮಹಾ?
ಯಾರಿಗಂತೆ ಸದೇಹ ಸ್ವರ್ಗಾರೋಹಣ ಚಿಂತೆ ?
ಕೆಲಸಕ್ಕೆ ಬಾರದ ವಿಚಾರ ಬಿಡಿ
ಪುತ್ರಪೌತ್ರರು ಕುಣಿದಾಡುವಂಥ
ಬಂಗಲೆ ಕಟ್ಟಿ ಉಸಿರಬಿಡುವೆವು
ನಂತರ ಹೇಳಿ,
ಏರೇ ಇಳಿಜಾರೇ ಎಂತ.
೨ ಪೌರುಷ
ಕೇಳಿಲ್ಲವೇ
ನಾನೂದಿದ ಪೌಂಡ್ರಕ ದೇವದತ್ತ
ನೋಡಿಲ್ಲವೇ
ನಾ ಹಾರಿದ ಕಡಲುಗಳ ಸುಟ್ಟ ಲಂಕೆಗಳ
ಸಹಜ ಹೊತ್ತಿಳೆಗೆ ತಂದೈರಾವತಗಳ
ಮೆಟ್ಟಿ ದಾಟಿದ ವಿಂಧ್ಯಗಳ
ಚಟಕ್ಕನೆ ಚದುರಿಸಿದ ಚಕ್ರವ್ಯೂಹಗಳ
ಪಿಟಕ್ಕನೆ ನಿಲಿಸಿದ ವಿಜಯಸ್ತಂಭಗಳ
ಮೆರೆಯಿಸಿದ ಅಶ್ವಮೇಧಯಾಗಗಳ
ಕಂಡೂ ಕಾಣದವನಂತಿದ್ದಿಯಲ್ಲೋ.
ಕುಡಿದಿಲ್ಲವೇ
ನಾ ಬರೆದ ಕಾವ್ಯಗಳ ರಸಪಾಕ
ಇಳೆಗಿಳಿಸಿದ ದಿವ್ಯ ಗಂಗೋದಕ
ಥೂ ನಿನ್ನ
ಉತ್ತರನಿಗಿಂತಲೂ ಪುಕ್ಕಾ
ಕೈಹಿಡಿದು ಬಾ ನೋಡು ಪಕ್ಕಾ
ವೈಜಯಂತಿ ಹಗ್ಗವೆಸೆದು ದಕ್ಕಿಸಿದ ದುರ್ಗ
ಕಾದಿಟ್ಟ ವೀರಕಂಕಣ ಚಿಲಕತ್ತು
ನಿಂತೆಯಾ, ಭೀರು, ಛೀ
ಇನ್ನಾದರೂ
ಈ ಗಂಡುಗಲಿಯೊಡನೆ ಬರಲೇನು ಹರಕತ್ತು?
ಬಾರಯ್ಯಾ
ಎಲಾ ಇವನ, ಹೋಗೇ ಬಿಟ್ಟ
ಕೆಟ್ಟ.
ಸರಿ ಸರಿ.
ಅದು ಹೀಗಾಯ್ತರೀ
ಹೀ……..ಗೆ ಅಂದರೆ
ಹೇ……ಗೆಂ……ದ……ರೆ
ಎರಡು ಕಾಸು
ಬರೇ ಎರಡೇ ಕಾಸು ಸ್ವಾಮಿ
ಗಿಟ್ಟಿಸಿ
ಬಡಪಾಯಿಯೊಬ್ಬನ ದಪ್ತರು ಸಾಗಿಸಿದ್ದೆ
ಅದೂ ಆ ದಪ್ಪಚರ್ಮದ
ಸಾಹೇಬಮುಂಡೇಮಗನಿಗೆ ಹೇಗೋ ತಿಳಿದು
ಥೇಟು ರಾವಣನಂತೆ ಗುಡುಗಿದ್ದು ನೋಡಿ
ನಾನೇನೋ ಸ್ವಲ್ಪ
ಸ್ವಲ್ಪ ಎಂದರೆ ಬಹಳೇ ಸ್ವಲ್ಪ
ನಡುಗಿದ್ದದ್ದೂ ಸರಿ
ಅಷ್ಟೇ ತಿಳಿದದ್ದು ಈ ಗೊಡ್ಡು.
ನಂತರ ಆ ಮುಂಡೇಮಗನಿಗೂ ಪಾಲು ಕೊಟ್ಟು
ಅವನ ಪಿತ್ಥ ಬರೋಬರಿ ಇಳಿಸಿದ ಗುಟ್ಟು
ಈ ಪುಕ್ಕನಿಗೆ ಗೊತ್ತಿಲ್ಲಾ ಸ್ವಾಮಿ
ತಿಳಿಯತಲ್ಲವೇ
ಅಲ್ಲದೇ
ಈ ಷಂಡರಿಗೇನು ಸ್ವಾಮಿ ಗೊತ್ತು
ಗಂಡುಗಲಿಗಳ ವಿಕ್ರಮದ ಗುಟ್ಟು
ಹ್ಹ ಹ್ಹ ಹ್ಹಾ !
ಸಂಕ್ಷಿಪ್ತ ಕನ್ನಡ ನಿಘಂಟು (ಒಂದು ಪರಿಶೀಲನೆ)
ಸಂಕ್ಷಿಪ್ತ ಕನ್ನಡ ನಿಘಂಟು
(ಒಂದು ಪರಿಶೀಲನೆ) 5
ಬಿ ಬಿ ರಾಜಪುರೋಹಿತ
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆಗೊಂಡು ಬೃಹನ್ನಿಘಂಟಿನ ಯೋಜನೆಯನ್ನು ಹಮ್ಮಿಕೊಂಡು ಹಲವು ವರ್ಷಗಳು ಸಂದಿದ್ದರೂ ಹೊರಬಿದ್ದಿರುವ ಸಾಮಗ್ರಿಯ ಗುಣ ಗಾತ್ರಗಳು ತೃಪ್ತಿಕರವಾಗಿಲ್ಲವೆಂದು ವಿವಿಧ ಮೂಲೆಗಳಿಂದ ಕೇಳಿ ಬರುತ್ತಿತ್ತು. ಈ ಸಂದರ್ಭದಲ್ಲಿ ಸಂಕ್ಷಿಪ್ತವಾದರೂ ಸಂಪೂರ್ಣವಾದ ಕನ್ನಡ-ಕನ್ನಡ ನಿಘಂಟನ್ನು ಕೊಟ್ಟು ಪರಿಷತ್ತು ಬಹು ದಿನದ ಕೊರತೆಯನ್ನು ನಿವಾರಿಸಿದೆಯೆಂದು ಹೇಳಬೇಕು. ಅಷ್ಟೆ ಅಲ್ಲ, ನಿಘಂಟಿನ ನಿರ್ಮಾಣ ಮೌಲ್ಯ ೧೩ ರೂಪಾಯಿಗಳಾಗಿದ್ದರೂ ಕನ್ನಡ ಜನತೆಯ ಮನೆ ಮನೆಗಳಿಗೂ ನಿಘಂಟೋಂದು ಮುಟ್ಟಲೆಂದು ೫ ರೂಪಾಯಿಗೆ ಸಾವಿರ ಪುಟದ ಗ್ರಂಥವನ್ನು ಕೊಟ್ಟ ಪರಿಷತ್ತಿನ ಕಾರ‍್ಯ ಸ್ತುತ್ಯರ್ಹವೇ ಸರಿ. ೫ ಸಾವಿರ ಪ್ರತಿಗಳಲ್ಲಿ ೩೦ ಸಾವಿರ ಪ್ರತಿಗಳು ತಿಂಗಳೊಪ್ಪತ್ತಿನಲ್ಲಿ ಮಾರಾಟವಾದುದು ಒಂದು ವಿಕ್ರಮವೇ ಅಲ್ಲದೇ ಕನ್ನಡ ಜನತೆ ನಿಘಂಟಿಗಾಗಿ ಎಷ್ಟೊಂದು ನೀರಡಿಸಿದ್ದರು ಎಂಬುದರ ದ್ಯೋತಕವೂ ಆಗಿದೆ. ಆದುದರಿಂದ ಶಾಸ್ತ್ರೀಯವಾಗಿ ಪರಿಪೂರ್ಣವಲ್ಲದಿದ್ದರೂ ಹೊತ್ತಿಗೆ ಸರಿಯಾದ ಕೆಲಸವಿದು. ನಿಘಂಟಿನ ವಿಷಯದಲ್ಲಂತೂ ‘ಪರಿಪೂರ್ಣತೆ’ ಎಂಬುದು ನಿಘಂಟಿನ ಸಂಪಾದಕರಿಗಿರುವ ಪ್ರಜ್ಞೆಯೇ ಹೊರತು ನಿಘಂಟಿನಲ್ಲಿ ಮೂಡಿ ಬರುವ ಬದುಕಲ್ಲ. ಏಕೆಂದರೆ ಭಾಷೆ ಒಂದು ಘಟ್ಟಕ್ಕೆ ಬೆಳೆದು ಬಂದಾಗ ಅದಕ್ಕೆ ನಿಘಂಟು ಹುಟ್ಟುತ್ತದೆ. ನಿಘಂಟು ಬರುವ ಹೊತ್ತಿಗೆ ಭಾಷೆಯಲ್ಲಿ ಇನ್ನೇನೋ ಹುಟ್ಟಿಕೊಂಡಿರುತ್ತದೆ. ಆಕ್ಸ್‌ಫರ್ಡ ಇಂಗ್ಲಿಷ್ ಡಿಕ್ಷನರಿಗೆ ಬಂದ, ಇನ್ನೂ ಬರಬಹುದಾದ ಪುರವಣಿಗಳನ್ನು ಇಲ್ಲಿ ನೆನೆಯಬಹುದು. ಪರಿಪೂರ್ಣಗೊಳಿಸಿಯೇ ನಿಘಂಟನ್ನು ಹೊರ ಹಾಕಬೇಕೆಂದರೆ ಅದು ಎಂದೂ ಮೂಡದ ಕೃತಿಯಾಗುತ್ತದೆ. ಹಾಗೆಂದ ಮಾತ್ರಕ್ಕೆ ಯಾವದೇ ನಿಘಂಟಿನ ಗುಣಮಾಪನ ಮಾಡಬಾರದೆಂದರ್ಥವಲ್ಲ. ನಿಘಂಟನ್ನು ಉಪಯೋಗಿಸುವವರ ವಿವೇಕ ವರ್ಧನೆಗಾಗಿ ಅದೂ ಅಗತ್ಯವೆನಿಸುತ್ತದೆ.
ನಿಘಂಟು ಎಂದರೆ ಒಂದು ಭಾಷೆಯ ಎಲ್ಲ ಶಬ್ದಗಳಿಗೆ ಎಲ್ಲ ಅರ್ಥಗಳನ್ನು ಕೊಡುವ ಕೋಶವಷ್ಟೇ ಅಲ್ಲ, ಅದು ಭಾಷೆಯ ವ್ಯಾಕರಣವನ್ನು ಹೇಳುವ, ಜನಾಂಗದ ಸಂಸ್ಕೃತಿಯನ್ನು ನಿರೂಪಿಸುವ ಮಾಧ್ಯಮವೂ ಆಗಬಲ್ಲದು. ವ್ಯಾಕರಣದಲ್ಲಿ ಯಾವುದೇ ಭಾಷೆಯಲ್ಲಿರಬಹುದಾದ ಎಲ್ಲ ಶಬ್ದಗಳ ಅನುಶಾಸನವನ್ನು ಕೊಡುವದು ಸಾಧ್ಯವಾಗುವುದಿಲ್ಲ. ವ್ಯಾಕರಣದಲ್ಲಿ ರಚಿಸಿಕೊಂಡ ವರ್ಗಗಳಿಗೆ ಪ್ರಾತಿನಿಧಿಕವಾಗಿ ಕೆಲವೊಂದು ಉದಾಹರಣೆಗಳನ್ನು ಕೊಟ್ಟು ಉಳಿದುವನ್ನು ನಿಘಂಟುವಿನ ಹೊಣೆಗೆ ಬಿಟ್ಟುಕೊಡಲಾಗುತ್ತದೆ. ಆದುದರಿಂದ ಪ್ರತಿ ಶಬ್ದವು ವ್ಯಾಕರಣದ ಯಾವ ವರ್ಗಕ್ಕೆ ಸೇರುತ್ತದೆ. ಅದರ ರೂಪಾವಲಿಯೇನು ಎಂಬ ಬಗ್ಗೆ ನಿಘಂಟಿನಲ್ಲಿ ಅವಶ್ಯವಾಗಿ ಸಾಮಗ್ರಿಯಿರಬೇಕಾಗುತ್ತದೆ. ಈ ವಿವರಣೆಯನ್ನು ಕೊಡದೆ ಕೂಡ ನಿಘಂಟಿನ ರಚನೆಯನ್ನು ಇಟ್ಟುಕೊಳ್ಳಬಹುದು. ಅಲ್ಲಿ ನಿಘಂಟಿನ ಉದ್ದೇಶ ಕೇವಲ ಶಬ್ದಾರ್ಥಕ್ಕೆ ಸೀಮಿತವಾಗಿರುತ್ತದೆ. ಆದರೆ ವ್ಯಾಕರಣದ ವಿವರಗಳನ್ನು ಕೊಡಬೇಕೆಂಬ ನಿರ್ಣಯವನ್ನಂಗೀಕರಿಸಿ ನಿಘಂಟಿನ ರಚನೆಗೆ ತೊಡಗುವಾಗ ಆ ಭಾಷೆಯ ಭಾಷಾ ವೈಜ್ಞಾನಿಕ ಅಥವಾ ಪರಂಪರಾಗತ ವ್ಯಾಕರಣದ ಚೌಕಟ್ಟು ಸ್ಪಷ್ಟವೂ, ಅಸಂದಿಗ್ಧವೂ ವಿರೋಧಾಭಾಸ ರಹಿತವೂ ಆಗಬೇಕಾಗಿರುತ್ತದೆ.
ಯಾವ ನಿಘಂಟೇ ಆಗಲಿ ಅದು ಯಾರ ಉಪಯೋಗಕ್ಕಾಗಿ ಇದೆ ಎಂಬುದರ ಸ್ಪಷ್ಟ ಕಲ್ಪನೆ ನಿಘಂಟುಕಾರನಿಗೆ ಇದ್ದಾಗ ಉದ್ದೇಶವನ್ನು ಸಫಲಗೊಳಿಸುವ ಪ್ರಯತ್ನಗಳು ಖಚಿತವಾಗಿರುತ್ತವೆ. ಉದಾಹರಣಾರ್ಥವಾಗಿ ಆ ಭಾಷೆಯನ್ನು ಮೊದಲ ಭಾಷೆಯಾಗಿ ಅಭ್ಯಸಿಸುವವರ ಶಬ್ದ ಸಾಮರ್ಥ್ಯವರ್ಧನೆಗಾಗಿ ನಿಘಂಟಿನ ರಚನೆಯಾಗುತ್ತಿದ್ದರೆ ಶಬ್ದಗಳ ಇತಿಹಾಸವನ್ನು ರೂಪಿಸುವಂತೆ ಶಬ್ದಗಳ ಎಲ್ಲ ಅವಸ್ಥಾಂತರಗಳನ್ನು ಕೊಟ್ಟು, ಇತರ ಉಪಭಾಷೆಗಳಲ್ಲಿ ದೊರೆಯಬಹುದಾದ ಪ್ರದೇಶ-ವಿಶಿಷ್ಟ ಶಬ್ದಗಳನ್ನೂ ಅವುಗಳ ವ್ಯಾಕರಣದ ಅನುಶಾಸನವನ್ನೂ ಕೊಡಬೇಕಾಗುತ್ತದೆ. ಅಲ್ಲಿ ಪರ‍್ಯಾಯಾರ್ಥಗಳಿಲ್ಲದ ಸುಲಭ ಶಬ್ದಗಳನ್ನು ಬಿಟ್ಟರೂ ತೊಂದರೆಯಾಗುವದಿಲ್ಲ. ಆದರೆ ನಿಘಂಟು ಆ ಭಾಷೆಯನ್ನು ಎರಡನೆಯ ಭಾಷೆಯಾಗಿ ಕಲಿಯುವವರ ಉಪಯೋಗಕ್ಕಾಗಿ ಇದ್ದರೆ ಅಲ್ಲಿ ಶಬ್ದಗಳ ಇತಿಹಾಸವನ್ನಾಗಲಿ, ವ್ಯುತ್ಪತ್ತಿಯನ್ನಾಗಲಿ, ಶಬ್ದಗಳ ರೂಪಾವಲಿಯಲ್ಲಿ ಕೆಲವನ್ನಾಗಲಿ ಬಿಟ್ಟರೆ ಬಾಧೆಯಿಲ್ಲ. ಹೀಗೆ ಪ್ರತಿ ನಿಘಂಟಿನ ವಿಶಿಷ್ಟೋದ್ದೇಶ ಸ್ಪಷ್ಟವಾಗಿರಬೇಕಾಗುತ್ತದೆ. ಇಂದಿನ ಕಾಲದಲ್ಲಿ ನಿಘಂಟು ಶಾಸ್ತ್ರವೂ ನಿಕಷಾತ್ಮಕ ರೀತಿಯಲ್ಲಿ ಬೆಳದು ನಿಂತಿದೆ.
ಈ ಹಿನ್ನೆಲೆಯಲ್ಲಿ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟ’ನ್ನು ಪರಿಶೀಲಿಸಿದರೆ ಅದರ ಶಬ್ದಸಂಗ್ರಹದ ಬಗ್ಗೆ, ಪರ‍್ಯಾಯಾರ್ಥಗಳ ವಿಸ್ತಾರದ ಬಗ್ಗೆ ಸಂತೋಷವಾಗುತ್ತದೆ. ಆದರೆ ಅದರ ಶಾಸ್ತ್ರೀಯ ಹಂದರದಲ್ಲಿ ಅನೇಕ ಖೇದಕಾರಕ ಅಂಶಗಳು ಸೇರಿಕೊಂಡಿವೆ. ನಿಘಂಟಿನ ವಿವಿಧೋದ್ದೇಶಗಳಲ್ಲಿ ಭಾಷೆಯ ವ್ಯಾಕರಣವು ನಿರೂಪಿತವಾಗುವಂತೆ ನಿಘಂಟನ್ನು ಕೊಡುವದೂ ಒಂದು ಉದ್ದೇಶವಾಗಬಲ್ಲದು. ಆದರೆ ಈ ನಿಘಂಟಿಗೆ ಮೂಲಭೂತವಾದ ವ್ಯಾಕರಣವು ಹೇಗೆ ರಂಧ್ರಗಳಿಂದ ಕೂಡಿದೆ ಎಂಬುದನ್ನು ಇಲ್ಲಿ ಚರ್ಚಿಸಬಹುದು.
ಈ ನಿಘಂಟಿನಲ್ಲಿ ಕ್ರಿಯಾವಾಚಕ, ನಾಮವಾಚಕ, ಗುಣವಾಚಕ, ಸರ್ವನಾಮ, ಅವ್ಯಯ ಎಂಬ ವಿಭಾಗಗಳನ್ನು ಮಾತ್ರ ಇಟ್ಟುಕೊಂಡಿದ್ದಾರೆ. ಇದರಿಂದ ಅನೇಕ ಸೂಕ್ತ ವಿವರಗಳು ಉಳಿದುಕೊಳ್ಳುತ್ತವೆ. ಅಲ್ಲದೆ ಅನೇಕ ಸಂದಿಗ್ಧತೆಗೆ ಅವಕಾಶವಾಗುತ್ತದೆ. ಉದಾಹರಣೆಗೆ, ವಿಶೇಷಣ ಎಂಬ ವಿಭಾಗವನ್ನೂ ಅದರಲ್ಲಿ ಗುಣ, ಸಂಖ್ಯಾ, ಪರಿಮಾಣ ವಾಚಕ ಉಪ ವಿಭಾಗಗಳನ್ನೂ ಗುರುತಿಸದಿದ್ದುದರಿಂದ ಒಂದು. ಎರಡು ಮೊದಲಾದ ಸಂಖ್ಯಾವಾಚಕ ವಿಶೇಷಣಗಳಿಗೂ, ಅಷ್ಟು ಇಷ್ಟು, ಹೆಚ್ಚು, ಕಡಮೆ ಮೊದಲಾದ ಪರಿಮಾಣ ವಾಚಕ ವಿಶೇಷಣಗಳಿಗೂ ‘ನಾಮವಾಚಕ’ ಸಂಜ್ಞೆಯನ್ನು ಕೊಟ್ಟಿದ್ದಾರೆ. ‘ಒಂದರಿಂದ, ಎರಡಕ್ಕೆ, ಅಷ್ಟರಲ್ಲಿ, ಇಷ್ಟರೊಳಗೆ, ಹೆಚ್ಚಿಗೆ ಕಡಿಮೆಯಲ್ಲಿ’ ಮೊದಲಾದ ರೂಪಗಳಲ್ಲಿ ವಿಭಕ್ತಿ ಪ್ರತ್ಯಯದ ಪ್ರಯೋಗ ಕಂಡುಬಂದರೂ ಇವುಗಳಲ್ಲಿ ಹಲವು ಅವ್ಯಯಗಳಾಗಿ ರೂಪುಗೊಳ್ಳುತ್ತಿವೆಯಾದುದರಿಂದ ಇವು ನಾಮವಾಚಕಗಳಂತೂ ಅಲ್ಲ ಎಂಬ ನಿರ್ಣಯ ಹೊರಡುತ್ತದೆ. ಅಲ್ಲದೆ ನಾಮವಾಚಕಗಳೇ ಆದ ಪಕ್ಷದಲ್ಲಿ ‘ಎರಡು ಹಕ್ಕಿ’ಯು ದ್ವಂದ್ವ ಸಮಾಸವಾಗಬೇಕಾಗುತ್ತದೆ. ವಿಶೇಷಣ-ವಿಶೇಷ್ಯದ ರಚನೆಯನ್ನು ಗುರುತಿಸದೇ ಹೋದಂತಾಗಿ ವ್ಯಾಕರಣದಲ್ಲಿ ಅವ್ಯವಸ್ಥೆ ಏರ್ಪಡುತ್ತದೆ.
ಅದೇ ಪ್ರಕಾರ ಧಾತುಗಳ ಸಕರ್ಮಕ ಅಕರ್ಮಕ ವಿಭಾಗವನ್ನು ಇಟ್ಟುಕೊಂಡಿದ್ದರೆ “ಅಂಟು-ಅಟ್ಟು, ಅಡಗು-ಅಡಕು’ ಮೊದಲಾದ ಶಬ್ದಗಳ ಐತಿಹಾಸಿಕ ಬಂಧುತ್ವದ ಮೇಲೆ ಬೆಳಕು ಚೆಲ್ಲಿದಂತಾಗುತ್ತಿತ್ತು.
ನಿಘಂಟಿನ ರಚನೆಗೆ ಬಳಸಿದ ವರ್ಣಮಾಲೆಯು ಕನ್ನಡದ ವರ್ಣಸಮಾಮ್ನಾಯವನ್ನು ಹೇಳುವದಿಲ್ಲ. ‘ಋ’ ವರ್ಣವು ಏಳನೆಯ ಅಕ್ಷರವಾಗಿ ಮುಂದಿನ ‘ಎ’ ವರ್ಣವು
ಹನ್ನೊಂದನೆಯದಾಗಬೇಕಾದರೆ ಮಧ್ಯೇ ಋ, ಇ ,ಈ , ಗಳನ್ನೂ ಎಣಿಸಿದ್ದಾರೆಂದು ತಿಳಿಯಬೇಕಾಗುತ್ತದೆ. ಅದೇ ಪ್ರಕಾರ ‘ಕ್ಷ” ಹದಿನಾರನೆಯದಾಗಿ ಮುಂದಿನ “ಕ” ವು ಇಪ್ಪತ್ತೊಂದನೆಯದಾಗಬೇಕಾದರೆ ಮಧ್ಯೆ ಅನುಸ್ವಾರ (೦), ವಿಸರ್ಗ (ಃ), ಜಿಹ್ವಾ ಮೂಲೀಯ ಮತ್ತು ಉಪಧ್ಯಾನೀಯ (00) ಗಳನ್ನು ಎಣಿಸಿದ್ದಾರೆಂದು ತಿಳಿಯ ಬೇಕಾಗುತ್ತದೆ. ಆ ಪ್ರಕಾರ ‘ಳ’ ದ ವರೆಗೆ ಕನ್ನಡಕ್ಕೆ ೫೬ ವರ್ಣಗಳಾಗುತ್ತವೆ, ಆದರೆ ಕನ್ನಡದಲ್ಲಿ ಬಂದು ಸೇರಿದ ಸಂಸ್ಕೃತ ಪದಗಳನ್ನೂ ಸೇರಿಸಿ ವರ್ಣಸಮಾಮ್ನಾಯವನ್ನು ತೆಗೆದರೂ ಆ ಸಂಖ್ಯೆ ೫೬ ಕ್ಕಿಂತ ಖಂಡಿತ ಕಡಿಮೆ ಇದೆ. ‘ಋ’ ವನ್ನು ಸ್ವರವರ್ಣವೆಂದು ಗಣಿಸಿ, ರ,ಳ ಗಳನ್ನು ಸೇರಿಸಿ, ಐ ಔ ಗಳನ್ನು ಸಂಧ್ಯಕ್ಷರಗಳೆಂದು ತಿಳಿದು ಲೆಕ್ಕ ಹಾಕಿದರೆ ಸುಸಂಸ್ಕೃತ (Standard) ಕನ್ನಡಕ್ಕೆ ೪೮ ವರ್ಣಗಳಾಗುತ್ತವೆ. ಕನ್ನಡದ ಉಪ ಭಾಷೆಗಳನ್ನು ಗಮನಿಸಿದಾಗ ಈ ಸಂಖ್ಯೆ ಹೆಚ್ಚು ಕಡಿಮೆಯಾಗುತ್ತದೆ ಎಂಬ ಮಾತಂತೂ ಉಂಟೇ ಉಂಟು. ಕನ್ನಡದಲ್ಲಿ ಎಂದೂ ವರ್ಣತ್ವ ಪಡೆದವುಗಳನ್ನೆಲ್ಲ ಸೇರಿಸಿಕೊಳ್ಳುವುದರ ಬದಲು ಕ್ರಿಯಾತ್ಮಕ ವರ್ಣಮಾಲೆಯನ್ನು ಪೀಠಿಕೆಯಲ್ಲಿ ಕೊಟ್ಟು ಅದನ್ನನುಸರಿಸಿದ್ದರೆ ನೆಟ್ಟಗಿತ್ತು.
ಮುನ್ನುಡಿಯಲ್ಲಿ ಕನ್ನಡದಲ್ಲಿ – ಇಸು ಪ್ರತ್ಯಯವು ಎಲ್ಲೆಲ್ಲಿ ಪ್ರಯೋಗವಾಗುತ್ತದೆಂಬ ಬಗ್ಗೆ ಕೊಟ್ಟ ಟಿಪ್ಪಣಿ ಸಮರ್ಪಕವಾಗಿಲ್ಲ.- ಇಸು ಪ್ರತ್ಯಯವು ಸಂಸ್ಕೃತ, ಕನ್ನಡಗಳ ನಾಮ, ಧಾತುಗಳಿಗೂ ಅನುಕರಣವಾಚಿಗಳಿಗೂ ಸೇರುತ್ತದೆ. ಸಂ, ನಾಮಪದಕ್ಕೆ ಉದಾ: ರೂಪ-ಇಸು, ಸುಂ. ಧಾತುವಿಗೆ. ರಚ್-ಇಸು, ಕ. ನಾಮಕ್ಕೆ: ಚೂರು-ಇಸು, ಕ. ಧಾತುವಿಗೆ: ನಗು-ಇಸ್ಸು.೧ ನೆಯ ಹಾಗೂ ೩ ನೆಯ ಉದಾಹರಣೆಗಳಲ್ಲಿ-ಇಸು ಪ್ರತ್ಯಯವು ಧಾತುಕಾರಕವಾಗಿಯೂ, ೨ ನೆಯದರಲ್ಲಿ ದೇಶ್ಯಕಾರಕವಾಗಿಯೂ, ೪ ನೆಯದರಲ್ಲಿ ಪ್ರಯೋಜಕಾರ್ಥದಲ್ಲಿ ಸೇರಿದೆ. ಅನುಕರಣ ವಾಚಿಗಳ ಮೇಲೆ ‘ಆ ರೀತಿಯ ಕ್ರಿಯೆ ಮಾಡು’ ಅರ್ಥದಲ್ಲಿ ಅದು ಸೇರುತ್ತದೆ; ಕುಪ್ಪಳಿ-ಇಸು ಗಜಬಜ-ಇಸು, ಹೀಗೆ ಹೇಳುವದು ವರ್ಣನಾತ್ಮಕವಾಗಿ ಸಂಕ್ಷಿಪ್ತ, ಸೂಕ್ತ. ಅದನ್ನು ಬಿಟ್ಟು ಶಬ್ದಾನುಶಾಸನ ಸೂತ್ರ: ‘ಇಸುಪ್ತತ್ಕರೋತಿ ಭಾವೇ ಲ್ಕುಟೋgಶಯನಾ ದೇರ್ಲುಷ್ಚ ದೋ :’ (ಸೂತ್ರ. ೫೩೩) ಪ್ರಕಾರ ಚುಂಬನ-ಇಸು>ಚುಂಬಿಸು ಎಂದು ಸಾಧಿಸುತ್ತಾರೆ. ಕನ್ನಡದ ಕ್ಲಾಸಿಕಲ್ ವೈಯಾಕರಣರು ಹೀಗೆ ಸಾಧಿಸುವಲ್ಲಿ ಅವರಿಗೆ ಕಾರಣವಿತ್ತು. ಸಂಸ್ಕೃತ ಪ್ರಕೃತಿಗಳಿಗೆ ನೇರವಾಗಿ ಕನ್ನಡದ ಪ್ರತ್ಯಯ ಸೇರುವದನ್ನು ಅವರು ಪ್ರತಿಬಂಧಿಸಿಕೊಂಡಿದ್ದರು. ಅಲ್ಲದೆ “ಚುಂಬಿಸು’ ವಿನ ವ್ಯುತ್ಪತ್ತಿ ವಾಕ್ಯದಲ್ಲಿ ‘ಚುಂಬನಮಂ ಮಾಡುವಂ’ ಎಂದೇ ಹೇಳಬಹುದಾಗಿತ್ತು. ಆದುದರಿಂದ ಚುಂಬನ – ಇಸು ಪ್ರಕ್ರಿಯೆಯಲ್ಲಿ ‘ದು’ ಪ್ರತ್ಯಯದ (ಅಂದರೆ ಇಲ್ಲಿ ಚುಂಬ್ ಧಾತುವಿನ ಮೇಲೆ ಸೇರಿದ ಕೃನ್ನಾಮಕಾರಕ ಪ್ರತ್ಯಯ) ಲೋಪವನ್ನೂ ಹೇಳಬೇಕಾಯಿತು. ಎಲ್ಲ ತದ್ಧಿತ. ಕೃದಂತಗಳನ್ನು ವ್ಯತ್ಪತ್ತಿವಾಕ್ಯದಿಂದಲೇ ಹೇಳುತ್ತಿದ್ದರೆಂಬುದನ್ನು ಅಂಗಡಿಯಲ್ಲಿ ವ್ಯವಹರಿಸುವವನು ಎಂದು ಅಂಗಡಿಕಾರ’ ಮೊದಲಾದುವುಗಳಲ್ಲಿ ನೋಡಬಹುದು. ಆ ವೈಯಾಕರಣರ ದೃಷ್ಟಿಯಲ್ಲಿ ಆದು ಯುಕ್ತವೇ ಆಗಿರಬಹುದು. ಆದರೆ ವರ್ಣನಾತ್ಮಕ ವ್ಯಾಕರಣಕಾರನಿಗೆ ಅದು ದ್ರಾವಿಡ ಪ್ರಾಣಾಯಾಮವೆನಿಸುತ್ತದೆ. ಅದು ಹೋಗಲಿ. ಭಟ್ಟಾಕಳಂಕನನ್ನಾದರೂ ಚಾಚೂ ತಪ್ಪದೇ ಅನುಸರಿಸಬಹುದಿತ್ತು. ಅವನು ಶಯನ – ಇಸು>ಶಯಿಸು ರೂಪವನ್ನು ನಿಷೇಧಿಸಿದ್ದರೂ ನಿಘಂಟಿನಲ್ಲಿ ಅದನ್ನೂ ಸಾಧಿಸಲಾಗಿದೆ. ಆದರೂ ‘ಪಚಿಸು’ವನ್ನು ‘ಪಚನ’ದ ಕೆಳಗೆ-ಇಸುವಿನ ಜೊತೆ ಕೊಡದೆ ಮುಖ್ಯ ಉಲ್ಲೇಖವನ್ನಾಗಿ ಕೊಡಲಾಗಿದೆ. ಅವುಗಳ ಅರ್ಥದ ಪರಿಧಿಯ ವಿಶೇಷ ಭಿನ್ನವಿಲ್ಲ. ಭಟ್ಟಾಕಳಂಕನ ‘ದು’ ಭಾಗಕ್ಕೆ ಲೋಪವನ್ನು ಹೇಳಿದ್ದರೂ ‘ಗಮನ-ಇಸು’ ದಿಂದ ‘ಗಮಿಸು, ಗಮನಿಸು’ ಎಂಬ ಭಿನ್ನಾರ್ಥವಾಚಿ ಧಾತುಗಳು ಹುಟ್ಟುವದರಿಂದ “ದು’ ಭಾಗಕ್ಕೆ ಕೆಲವು ಶಬ್ದಗಳಲ್ಲಾದರೂ ವಿಕಲ್ಪವಿದೆಯೆಂದು ಇಂದು ನಾವು ತಿಳಿಯಬೇಕಾಗುತ್ತದೆ. “ಹಿಂಗ್ವಾಷ್ಟಕವು ಅನ್ನವನ್ನು ಪಚನಿಸುತ್ತದೆ’ಯಂಥ ಪ್ರಯೋಗಗಳಲ್ಲಿ “ಪಚನಿಸು’ವು ಆ ವಿಕಲ್ಪಕ್ಕೆ ಇನ್ನೊಂದು ಉದಾಹರಣೆ. ಆದರೆ ನಿಘಂಟಿನಲ್ಲಿ ‘ಗಮ-ಇಸು’ ದಿಂದ ‘ಗಮಿಸು’ವನ್ನೂ, ‘ಗಮನ-ಇಸು’ದಿಂದ ಪುನಃ ‘ಗಮಿಸು, ಗಮನಿಸು” ಎಂಬ ಎರಡು ಅರ್ಥಪರ‍್ಯಾಯಗಳನ್ನು ಹುಟ್ಟಿಸಿದ್ದುದರ ಹಿಂದೆ ಇದ್ದ ಶಾಸ್ತ್ರ ಊಹೆಗೆ ನಿಲುಕದಂತಾಗುತ್ತದೆ.
“” ಈ ಚಿಹ್ನೆಯ ಮುಂದೆ ಬಂದ ಶಬ್ದ ಮುಖ್ಯ ಉಲ್ಲೇಖದೊಡನೆ ಸಮಾಸವಾಗಿದೆ ಎಂಬ ಮುನ್ನುಡಿಯಲ್ಲಿಯ ಮಾತನ್ನೂ ಪರೀಕ್ಷಿಸಿದಾಗ ಚಕಾರ ಇಸು, ಪರೆ ಕಾರ, ಲಂಚ ಗುಳಿ ಇವುಗಳ ಸಮಾಸಗಳೇ ಎಂದು ಆಶ್ಚರ್ಯಪಡುವಂತಾಗುತ್ತದೆ. ಆದರೆ ನಿಘಂಟಿನಲ್ಲಿ ಅವು ಸಮಾಸಗಳು! ಕೃದ್ವೃತ್ತಿ, ತದ್ಧಿತ ವೃತ್ತಿಗಳನ್ನು ಸಮಾಸ ವೃತ್ತಿಯಲ್ಲಿ ಅಂತರ್ಭಾವವಾಗಿ ಹೇಳುವದಕ್ಕಿಂತ ಮೂರೂ ಭಿನ್ನ ವೃತ್ತಿಗಳೆಂದು. ಹೇಳುವ ಪರಿಪಾಠವು ಹೆಚ್ಚು ರೂಢವಾದುದರಿಂದಲೂ, ಚಿಹ್ನೆಯ ನಂತರ ಬರುವ ಕೃತ್ತದ್ಧಿತ ಪ್ರತ್ಯಯಗಳಿಗೆ ಸಮಾಸ ಸಾಮರ್ಥ್ಯವಿಲ್ಲದ್ದುದರಿಂದಲೂ ಮೇಲಿನ ಉದಾಹರಣೆಗಳನ್ನು ‘-‘ ಚಿಹ್ನೆಯೊಡನೆ ಸೂಚಿಸಬಹುದಿತ್ತು.
ದುಂಡು ಕಂಸಗಳ ಉಪಯೋಗದ ವಿವರಣೆಯಲ್ಲಿ ‘ಕಂಸದ ಹಿಂದಿನ ವರ್ಣ ಅಥವಾ ಅಕ್ಷರಕ್ಕೆ (Syllable) ಪ್ರತಿಯಾಗಿ ಸಂಧಿಯಲ್ಲಿ ಬರುವ ವರ್ಣ ಅಥವಾ ಅಕ್ಷರಗಳನ್ನು ಸೂಚಿಸಲು ಬಳಸಲಾಗಿದೆ’ ಎಂಬ ಮಾತನ್ನು ಸೇರಿಸಿದ್ದರೆ ಅದರ ಉಪಯೋಗದ ವಿವರಣೆ ಪೂರ್ತಿಯಾಗುತ್ತಿತ್ತು. (ಪೀಠಿಕೆ ಪು. xv), ಅಲ್ಲದೆ ಕನ್ನಡದ ಲೋಪಾಗಮಾದೇಶಗಳನ್ನು ಹೀಗೆ ಕಂಸದ ತಂತ್ರದಿಂದ ತೋರಿಸಿದಂತೆ, ಸಂಸ್ಕೃತದ ಸವರ್ಣ ದೀರ್ಘ, ಯಣ್, ಗುಣ, ವೃದ್ಧಿಗಳನ್ನೂ ತೋರಿಸಿದ್ದರೆ ಅನುಕೂಲವಾಗುತ್ತಿತ್ತು. ಸಂಸ್ಕೃತದ ಸಮಸ್ತಪದಗಳು ಕನ್ನಡದಲ್ಲಿ ಪ್ರಯೋಗವಾಗುತ್ತಿರುವಾಗ ಸಂಸ್ಕೃತ ಸಂಧಿಗಳಿಂದ ಬಿಡುಗಡೆಯಿಲ್ಲ.
ಅಂದಹಾಗೆ, ನಿಘಂಟಿನಲ್ಲಿ ‘ಅಡಂಗು’ವು ‘ಅಡ(ಂ)ಗು’ ಎಂದೂ ‘ಅಣಂಬೆಯು ‘ಅಣ(0)ಬೆ’ ಎಂದೂ ಇರಬೇಕಿತ್ತೆಂದೆನಿಸುತ್ತದೆ !
ವಲ್ಲರಿ=ಬಳ್ಳಿ. (ಪು. ೭೫೭) ಆದರೆ ‘ಅಂಗಾರ ವಲ್ಲರಿ’ಯಲ್ಲಿ ಬಳ್ಳಿಯಲ್ಲ. ಅದು ೧. ಹೊಂಗೆ ಮರ, ೨. ಹುಲಿಗಿಲಿ ಗಿಡ, ಇಲ್ಲಿಯೂ ಮುನ್ನುಡಿಯಲ್ಲಿಯ ವ್ಯಾಖ್ಯೆಯ ಪ್ರಕಾರ ‘೧, ೨,೩ ಸಂಖ್ಯೆಗಳ ಮುಂದೆ ಅರ್ಥಚ್ಛಾಯೆ ಬರುತ್ತದೆ’ (ಪು. xiv) ಎಂದಿದ್ದುದರಿಂದ ಹಾಗೆ ಪರಿಶೀಲಿಸಿದರೆ ಹೊಂಗೆ ಮರ ಮತ್ತು ಹುಲಿಗಿಲಿ ಗಿಡಗಳು ಪರ‍್ಯಾಯ ಪದಗಳಲ್ಲ ಒಂದೇ ಗಿಡಕ್ಕೆ ಮೈಸೂರು ಹಾಗೂ ಧಾರವಾಡ ಸೀಮೆಗಳಲ್ಲಿ ಇರುವ ಪ್ರಾದೇಶಿಕ ಶಬ್ದಗಳು. ಸಂಖ್ಯೆಯ ಬದಲು ಅಲ್ಲಿ ಅಲ್ಪ ವಿರಾಮವಿರಬೇಕಿತ್ತು.
ಹೀಗೆ ಭಾಷಾ ಶಾಸ್ತ್ರೀಯ ಅಥವಾ ಪರಂಪರಾಗತ ವ್ಯಾಕರಣದ ತಳಹದಿ ಭದ್ರವಾಗಿದ್ದಿದ್ದರೆ ನಿಘಂಟಿನ ಉಪಯುಕ್ತತೆ ಇನ್ನೂ ಹೆಚ್ಚುತ್ತಿತ್ತು. ನಿಘಂಟು ಹಾಕಿಕೊಂಡ ನಿಯಮಾವಳಿಗೆ ವಿರೋಧ ಬಾರದಂತೆಯಾದರೂ ನೋಡಬೇಕಿತ್ತು. ಈ ನಿಘಂಟನ್ನು ಮುಂದೆ ಮಾಡಿಕೊಂಡು ಸುಧಾರಿತ ನಿಘಂಟುಗಳು ಬೇಗ ಬರಲಿ ಎಂದು ಹಾರೈಸೋಣ.
ಮುಂದೋದು :
1 Chapman, Robert W. : Lexicography, 1948,
2 Friend, Joseph H• : The Development of Lexicography, 1967.
3 Ghatage A. M., Dandekar & Mehendale : Studies in Historical Sanskrit Lexicography, 1973.
4 Householder F. W. and Sol Saporta (Ed8) : Problems in Lexicography, 1967.
5 Katre S. M. Lexicography, 1965.
6 Mc. David Raven I and Duckert (Eds) : Lexicography in English, 1973.
7 Robinson Dow H. : Manual for Bilingual Dictionaries, 1969.
8 Zgusta Ladislay: Manual of Lexicography, 1971.
9 ಕರ್ನಾಟಕ ಶಬ್ದಾನುಶಾಸನ ಪ್ರಕಾಶಿಕೆ.
ಮಿಲರೇಪ
ಮಿಲರೇಪ
–ಎಚ್ ಎಸ್ ಶಿವಪ್ರಕಾಶ
“ನತ್ಥಿ ಸಂಖಾರೇ ಸಾಸ್ಸತರಿ….”
-ಧಮ್ಮಪದ
ಕನಸು ಕಂಡಿದ್ದೀಗ ಕಣ್ಣಮುಂದಿನ ನೋಟ:
ನವಣೆ ಹೊಲಗಳ ಮಧ್ಯ ಪಾಳು ನೆಲ,
ಬಿದ್ದಮನೆ, ಗೆದ್ದಲಿಕ್ಕಿದ ಕಂಬಗಳು
ಇಲ್ಲಿದ್ದ ಮನೆಯ ಉಳಿದ ಕೊನೆಯ ಚಿಹ್ನೆಗಳು.
ಮಂಜಿನ ಅನಾಮಧೇಯತೆಯ ಕೆಳಗೆ
ಹೂತ ಚಿಕ್ಕಂದಿನ, ತಲೆಮಾರ ನೆನಪುಗಳು.
ಇಲ್ಲೇನೆ ಕುಪ್ಪಳಿಸಕಲಿತದ್ದು ; ಕತ್ತರಿಸುವ
ಛಳಿಯಲ್ಲಿ ಉಣ್ಣೆಬಟ್ಟೆಯ ಒಳಗೆ
ಬಚ್ಚಿಟ್ಟ ಮೈಯ ಮಧ್ಯ ಯೌವನ ಜ್ವಾಲೆ
ಚಿಗಿತದ್ದು : ಹೊಸ್ತಿಲನ್ನೊದೆಯುತ್ತ
ಗುರುವಿನೆಡೆ ಹೊರಟಾಗ ತಾಯ ಮುಚ್ಚಿದ
ಬಾಯ ಕಂಬನಿಯ ಬಿಂದು ಸ್ಪರ್ಶಿಸಿದ್ದು.
ಎಲ್ಲಿರುವೆ ತಂದೆ, ನವಣೆ ಮೂಟೆಗಳ
ಹೊತ್ತು ತರುತ್ತಿದ್ದ ಕಟ್ಟಾಳು ರೈತ?
ಶಾರಬಲ್ಲೆನೆ ತಿರುಗಿ ಗೋಳಿಡುವ ಮಂಜು-
ಗುಪ್ಪೆಗಳ ನಡುಮಧ್ಯ ಇಟಗಿ ರಾಶಿಯ ಅಡಿ
ನೆನಪಾಗಿ ಹೂತ ಜೀವದಾತರ ಈಗ?
ನಿಂತುಕೊಂಡಿದೆ ಕೈತಟ್ಟಿ ಡಾಕಿನಿ ಸಂಕುಲ;
ಅಂದಿದೆ: ತರುತ್ತೇವ ಸತ್ತವರ ಮತ್ತೆ,
ಮಂಜುಕಣಗಳ ಹೊನ್ನನಾಗಿಸುತ್ತೇವೆ
ಮಿಲರೇಪ ನೀ ಹೂಂ ಅಂದರೆ.
ಚಿಟಕಿ ಹಾಕಿದರೆ ಆಶೆಯೀಡೇರಿಸುವ
ಡಾಕಿನಿಯರ ವಶಮಾಡಿ, ಆಶೆ ಹೀಗೆ
ಬೀಳುವ ವಂನೆಗೆ, ಸಂಸಾರಕ್ಕೆ ಬುನಾದಿ
ಎಂದು ತೋರಿದೆ ಗುರು ಮಾರ್ಪ.
ಚಕ್ರ ತಿರುಗುವುದ; ನಿಧಾನಗಳ ಗುಟ್ಟ;
ಬಾಧೆಗಳ ರೂಪಗಳ ಡಾಕಿನೀ ಸಂಕುಲದ
ಮೊದಲುಕೊನೆ ಕಾಣಿಸಿದೆ.
ಕಾಲ, ಜಾಗಗಳ ಬೀಳುಬೀಳಿನಿಕ್ಕಟ್ಟಲ್ಲಿ
ಕರೆದೊಯ್ಯ ವಜ್ರಾಯಾನದಗ್ನಿರಥ
ಸಾರಥಿಯೆ, ನಮನ, ನಮನ ನಿನಗೆ.
ಬಿದ್ದ ಇಟ್ಟಿಗೆಯ ಅಳಿಸಿದ್ದ ಮಂಜು,
ಬಿಳಿ ಗಗನಕ್ಕೆ ಬಾಯ್ದಿಟ್ಟ ಗೆದ್ದಲುಕಂಬ
ಹದಿನಾಲ್ಕು ಲೋಕಗಳ ಹಣೆಬರಹ:
ನಿರ್ವಾಣದಂಚಲ್ಲಿ ಬುದ್ಧಗುರುವಿಗೆ ಕೂಡ
ಕಿಬ್ಬೊಟ್ಟೆ ನೋವು.
ಯಾಕೆ ಬಲಿಕೊಡಲಿ ಚಕ್ರದ ತಿರುಗಣಿಗೆ
ಅಪ್ಪ, ಅಮ್ಮ ನಿಮ್ಮ ?
* ಮಿಲರೇಪ ಟಿಬೆಟ್ಟಿನ ಮಹಾಯೋಗಿಗಳಲ್ಲೊಬ್ಬನಾದ ಲೋತ್ಸಾವ ಮಾರ್ಪನ ಶಿಷ್ಯ. ಅನೇಕ ವರ್ಷಗಳ ಕಾಲ ಗುರುವಿನ ಬಳಿ ವಜ್ರಾಯಾನ ಯೋಗದ ಅಭ್ಯಾಸ ನಡೆಸಿದ. ಆಮೇಲೆ ಗುರುವಿನ ಅಪ್ಪಣೆಯ ಮೇರೆಗೆ ಮನೆಗೆ ವಾಪಾಸಾಗುವಾಗ ತನ್ನ ಮನೆ ಬಿದ್ದಂತೆ, ತಂದೆ ತಾಯಿಗಳು ಸತ್ತಂತೆ, ತಂಗಿಗೆ ಹುಚ್ಚು ಹಿಡಿದಂತೆ ಸ್ವಷ್ಟವಾಯಿತು. ತನ್ನ ಊರನ್ನು ಮುಟ್ಟಿದಾಗ ಈ ಸ್ವಪ್ನ ನಿಜವಾಗಿತ್ತು ಇವೆಲ್ಲವನ್ನೂ ಸರಿಪಡಿಸುವ ಯೋಗಸಿದ್ಧಿಗಳು ಲಭಿಸಿದ್ದರೂ, ಅದನ್ನು ಉಪಯೋಸಗಿದೆ ಅವನು ಮತ್ತೆ ತಪಸ್ಸಿಗೆ ಹೊರಟುಹೋದ.
ಪ್ರತಿಪಾದಿತ, ಸೂಚಿತ ಮತ್ತು ಗೃಹೀತಾರ್ಥಗಳು
ಪ್ರತಿಪಾದಿತ, ಸೂಚಿತ ಮತ್ತು ಗೃಹೀತಾರ್ಥಗಳು
-ಡಿ ಯನ್ ಶಂಕರಭಟ್ಟ
– ಒಂದು ವಾಕ್ಯಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಮೂರು ಬೇರೆ ಬೇರೆ ರೀತಿಯ ಅರ್ಥಗಳಿರಲು ಸಾಧ್ಯವಿದೆ. ಆ ವಾಕ್ಯ ನೇರವಾಗಿ ಪ್ರತಿಪಾದಿಸುವಂತಹ ಅರ್ಥವೊಂದು, ಅದರಿಂದ ಸೂಚಿತವಾಗುವಂತಹ ಅರ್ಥ ಇನ್ನೊಂದು ; ಮತ್ತು ಅಂತಹ ವಾಕ್ಯಕ್ಕೆ ಔಚಿತ್ಯ ಇಲ್ಲವೇ ಪ್ರಾಮಾಣಿಕತೆಯನ್ನು ತಂದುಕೊಡುವಂತಹ ಗೃಹೀತಾರ್ಥ ಮತ್ತೊಂದು.
ಸೂಚಿತಾರ್ಥಕ್ಕೂ ಗೃಹೀತಾರ್ಥಕ್ಕೂ ನಡುವಿರುವ ಮುಖ್ಯ ವ್ಯತ್ಯಾಸವೆಂದರೆ, ಒಂದು ವಾಕ್ಯ ನಿಜವಿರಲಿ, ಸುಳ್ಳಿರಲಿ ಅದರ ಗೃಹೀತಾರ್ಥ ನಿಜವಾಗಿಯೇ ಇರುತ್ತದೆ ; ಆದರೆ. ವಾಕ್ಯವೊಂದನ್ನು ಸುಳ್ಳೆಂದು ಸಾಧಿಸಿದಾಗಲೆಲ್ಲ ಅದರ ಸೂಚಿತಾರ್ಥ ನಷ್ಟವಾಗುತ್ತದೆ.
ಉದಾಹರಣೆಗಾಗಿ ಈ ಕೆಳಗಿನ ಎರಡು ವಾಕ್ಯಗಳನ್ನು ಗಮನಿಸಬಹುದು ;
೧) ಅವನು ಎಂಟು ಗಂಟೆಗೆ ಬಂದಿದ್ದಾನೆ.
೨) ಅವನು ಬಂದದ್ದು ಎಂಟು ಗಂಟೆಗೆ.
ಮೊದಲನೇ ವಾಕ್ಯದಲ್ಲಿ “ಅವನು ಬಂದಿದ್ದಾನೆ” ಎಂಬ ಸೂಚಿತಾರ್ಥವಿದೆಯಾದರೆ, ಎರಡನೆಯ ವಾಕ್ಯದಲ್ಲಿ ಅದೇ ಅರ್ಥ ಗೃಹೀತವಾಗಿದೆ. ಈ ವ್ಯತ್ಯಾಸ ಮೇಲಿನ ಎರಡು ವಾಕ್ಯಗಳ ನಿಷೇಧರೂಪ (೩, ೪) ಗಳನ್ನು ಪರಿಶೀಲಿಸಿದಲ್ಲಿ ಸ್ಪಷ್ಟವಾದೀತು.
೩) ಅವನು ಎಂಟು ಗಂಟೆಗೆ ಬರಲಿಲ್ಲ.
೪) ಅವನು ಬಂದದ್ದು ಎಂಟು ಗಂಟೆಗಲ್ಲ.
“ಅವನು ಬಂದಿದ್ದಾನೆ” ಎಂಬರ್ಥ (೩) ರಿಂದ ಸೂಚಿತವಾಗುತ್ತಿಲ್ಲ, ಆದರೆ (೪) ರಲ್ಲಿ ಅದು ಹಾಗೆಯೇ ಉಳಿದುಕೊಂಡಿದೆ. ಹೀಗೆ ವಾಕ್ಯವು ನಿಜವಾದರೂ ಸುಳ್ಳಾದರೂ (ನಿಷೇಧಿಸಲ್ಪಟ್ಟರೂ) ತಿಳಿಯದೆ ಉಳಿಯುವ ಅರ್ಥ ಗೃಹೀತಾರ್ಥ.
2. ಈ ರೀತಿಯಾಗಿ ಗೃಹೀತಾರ್ಥಗಳನ್ನೊಳಗೊಂಡಿರುವಂತಹ ಕೆಲವು ವಾಕ್ಯಗಳನ್ನು ಈ ಕೆಳಗೆ ಕೊಡಲಾಗಿದೆ. ಆ ವಾಕ್ಯಗಳ ನಿಷೇಧ ರೂಪದಲ್ಲೂ ಅವುಗಳ ಗೃಹೀತಾರ್ಥ ಹಾಗೆಯೇ ಉಳಿದಿರುವುದನ್ನು ಗಮನಿಸಬಹುದು.
೧) ಮಂಚದ ಕೆಳಗಿರುವುದು ಹಾವು.
ಮಂಚದ ಕೆಳಗಿರುವುದು ಹಾವಲ್ಲ.
ಗೃಹೀತ : ಮಂಚದ ಕೆಳಗೆ ಏನೋ ಇದೆ.
೨) ಈ ಗಿಡವನ್ನು ಕಡಿದು ಹಾಕಿದ್ದು ನಾನು.
ಈ ಗಿಡವನ್ನು ಕಡಿದು ಹಾಕಿದ್ದು ನಾನಲ್ಲ.
ಗೃಹೀತ : ಈ ಗಿಡವನ್ನು ಯಾರೋ ಕಡಿದು ಹಾಕಿದ್ದಾರೆ.
೩) ನಾವು ತಿರುಪತಿಗೆ ಹೋಗಿದ್ದೇವೆಂದು ಅವನಿಗೆ ಗೊತ್ತಿದೆ.
ನಾವು ತಿರುಪತಿಗೆ ಹೋಗಿದ್ದೇವೆಂದು ಅವನಿಗೆ ಗೊತ್ತಿಲ್ಲ.
ಗೃಹೀತ : ನಾವು ತಿರುಪತಿಗೆ ಹೋಗಿದ್ದೇವೆ.
೪) ಅವನು ಬಹಳ ಕಷ್ಟದಲ್ಲಿ ಸತ್ತ.
ಅವನು ಬಹಳ ಕಷ್ಟದಲ್ಲಿ ಸಾಯಲಿಲ್ಲ.
ಗೃಹೀತ : ಅವನು ಸತ್ತ.
೫) ಅವನು ಇಷ್ಟು ಬೇಗ ಬಂದದ್ದು ಆಶ್ಚರ್ಯ.
ಅವನು ಇಷ್ಟು ಬೇಗ ಬಂದದ್ದು ಆಶ್ಚರ್ಯವೇನಲ್ಲ.
ಗೃಹೀತ : ಅವನು ಬೇಗನೆ ಬಂದಿದ್ದಾನೆ.
೬) ಮೋಹನ ಸೀತೆಯ ತಂಗಿಯನ್ನು ಮದುವೆಯಾಗಿದ್ದಾನೆ.
ಮೋಹನ ಸೀತೆಯ ತಂಗಿಯನ್ನು ಮದುವೆಯಾಗಿಲ್ಲ.
ಗೃಹೀತ : ಸೀತೆಗೆ ತಂಗಿಯಿದ್ದಾಳೆ.
೭) ದಾರಿಯಲ್ಲಿ ಬಿದ್ದು ಸಿಕ್ಕಿದ ನಾಣ್ಯವನ್ನು ಆಕೆ ರಂಗನಿಗೆ ಕೊಟ್ಟಿದ್ದಾಳೆ.
ದಾರಿಯಲ್ಲಿ ಬಿದ್ದು ಸಿಕ್ಕಿದ ನಾಣ್ಯವನ್ನು ಆಕೆ ರಂಗನಿಗೆ ಕೊಟ್ಟಿಲ್ಲ.
ಗೃಹೀತ : ಆಕೆಗೆ ದಾರಿಯಲ್ಲಿ ನಾಣ್ಯ ಬಿದ್ದು ಸಿಕ್ಕಿದೆ.
೮) ಆ ಕಳ್ಳ ಜೈಲಿನಿಂದ ತಪ್ಪಿಸಿಕೊಂಡು ಹೋದದ್ದು ಹೇಗೆಂದು ಜೈಲರನಿಗೆ ಗೊತ್ತಿದೆ.
ಆ ಕಳ್ಳ ಜೈಲಿನಿಂದ ತಪ್ಪಿಸಿಕೊಂಡು ಹೋದದ್ದು ಹೇಗೆಂದು ಜೈಲರನಿಗೆ ಗೊತ್ತಿಲ್ಲ.
ಗೃಹೀತ : ಆ ಕಳ್ಳ ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದಾನೆ.
3. ಸೂಚಿತಾರ್ಥವು ನಿಷೇಧ ವಾಕ್ಯದಲ್ಲಿ ಬದಲಾಗದೆ ಉಳಿದುಕೊಳ್ಳುವುದಿಲ್ಲವೆಂಬ ವಿಷಯ ಈ ಕೆಳಗಿನ ವಾಕ್ಯಗಳಿಂದ ಸ್ಪಷ್ಟವಾಗುತ್ತದೆ :
೧) ರಮೇಶನೂ ಕೂಡ ನಮ್ಮಲ್ಲಿಗೆ ಬಂದಿದ್ದ.
ಸೂಚಿತ : ಬೇರೆಯವರೂ ನಮ್ಮಲ್ಲಿಗೆ ಬಂದಿದ್ದರು.
ರಮೇಶನೂ ಕೂಡ ನಮ್ಮಲ್ಲಿಗೆ ಬರಲಿಲ್ಲ.
ಸೂಚಿತ : ಬೇರೆಯವರೂ ನಮ್ಮಲ್ಲಿಗೆ ಬರಲಿಲ್ಲ.
೨) ರಾಮು ಒಬ್ಬನೇ ಸಿನಿಮಾಕ್ಕೆ ಹೋದದ್ದು.
ಸೂಚಿತ : ಉಳಿದವರು ಸಿನೆಮಾಕ್ಕೆ ಹೋಗಲಿಲ್ಲ.
ರಾಮು ಒಬ್ಬನೇ ಸಿನಿಮಾಕ್ಕೆ ಹೋಗದಿದ್ದದ್ದು.
ಸೂಚಿತ : ಉಳಿದವರೆಲ್ಲ ಸಿನಿಮಾಕ್ಕೆ ಹೋಗಿದ್ದರು.
೩) ಚೆಂಡು ಪುಸ್ತಕದ ಮೇಲಿದೆ.
ಸೂಚಿತ : ಪುಸ್ತಕ ಚೆಂಡಿನ ಕೆಳಗಿದೆ.
ಚೆಂಡು ಪುಸ್ತಕದ ಮೇಲಿಲ್ಲ.
ಸೂಚಿತ : ಪುಸ್ತಕ ಚೆಂಡಿನ ಕೆಳಗಿಲ್ಲ.
ವಾಕ್ಯವನ್ನು ನಿಷೇಧಿಸಿದಾಗಲೆಲ್ಲ ಅದರ ಪ್ರತಿಪಾದಿತಾರ್ಥದೊಂದಿಗೆ ಸೂಚಿತಾರ್ಥವೂ ಕೂಡ ಬದಲಾಗುತ್ತ ಹೋಗುವುದೆಂಬುದನ್ನು ಈ ಮೇಲಿನ ವಾಕ್ಯಗಳಿಂದ ತಿಳಿಯಬಹುದು.
4 ನಿರ್ದೆಶಾತ್ಮಕ ವಾಕ್ಯದಲ್ಲಿ ಪ್ರತಿಪಾದಿತಾರ್ಥವಿರುವಂತೆ ಅದಕ್ಕೆ ಸಮನಾಗಿ ಪ್ರಶ್ನ ವಾಕ್ಯದಲ್ಲಿ ಪ್ರಶ್ನಾರ್ಥವಿದೆ, ನಿಷೇಧ ವಾಕ್ಯದಲ್ಲಿ ನಿಷೇಧಾರ್ಥವಿದೆ, ವಿಧಿ ವಾಕ್ಯದಲ್ಲಿ ವಿಧ್ಯರ್ಥವಿದೆ ಮತ್ತು ಸಂಭಾವನಾ ವಾಕ್ಯದಲ್ಲಿ ಸಂಭಾವನಾರ್ಥವಿದೆ. ಹೀಗೆ ಮುಖ್ಯಾರ್ಥವು ಬೇರೆ ಬೇರೆ ರೀತಿಯ ವಾಕ್ಯಗಳಲ್ಲಿ ಬೇರೆ ಬೇರೆ ರೂಪಗಳನ್ನು ತಳೆಯುವುದಾದರೂ, ವಾಕ್ಯದ ಗೃಹೀತಾರ್ಥ ಮಾತ್ರ ಒಂದೇ ಆಗಿ ಬದಲಾಗದೆ ಉಳಿಯುತ್ತದೆ.
ನಿರ್ದೇಶ : ಅವನು ಹೆಂಡತಿಗೆ ಹೆದರುತ್ತಾನೆ.
ನಿಷೇಧ: ಅವನು ಹೆಂಡತಿಗೆ ಹೆದರುವುದಿಲ್ಲ.
ಪ್ರಶ್ನೆ : ಅವನು ಹೆಂಡತಿಗೆ ಹೆದರುತ್ತಾನೇನು ?
ಸಂಭಾವನೆ : ಅವನು ಹೆಂಡತಿಗೆ ಹೆದರುತ್ತಿರಬಹುದು.
ವಿಧಿ : ಅವನೊಡನೆ ಹೆಂಡತಿಗೆ ಹೆದರಬಾರದೆಂದು ಹೇಳಿರಿ.
ಈ ಎಲ್ಲಾ ವಾಕ್ಯಗಳಲ್ಲೂ ಕೂಡ “ಅವನಿಗೆ ಹೆಂಡತಿಯಿದ್ದಾಳೆ” ಎಂಬ ಗೃಹೀತಾರ್ಥ ಸಮನಾಗಿದೆ.
ಹೀಗೆ ಗೃಹೀತಾರ್ಥವು ಎಲ್ಲಾ ರೀತಿಯ ವಾಕ್ಯಗಳಲ್ಲೂ ಬದಲಾಗದೆ ಉಳಿಯುವುದಾದರೆ, ಸೂಚಿತಾರ್ಥವು ಒಂದು ವಾಕ್ಯ ಭಿನ್ನ ಭಿನ್ನವಾದಂತೆಲ್ಲ ತಾನೂ ಭಿನ್ನ ಭಿನ್ನವಾಗುತ್ತ ಹೋಗುವುದೆಂಬುದನ್ನು ಈ ಕೆಳಗಿನ ವಾಕ್ಯಗಳಿಂದ ತಿಳಿಯಬಹುದು.
ವಾಕ್ಯ ಸೂಚಿತಾರ್ಥ
ಅವನಿಗೆ ವಂದುವೆಯಾಗಿದೆ. ಅವನಿಗೆ ಹೆಂಡತಿಯಿದ್ದಾಳೆ.
ಅವನಿಗೆ ಮದುವೆಯಾಗಿಲ್ಲ. ಅವನಿಗೆ ಹೆಂಡತಿಯಿಲ್ಲ.
ಅವನಿಗೆ ಮದುವೆಯಾಗಿದೆಯೇ ? ಅವನಿಗೆ ಹೆಂಡತಿಯಿದ್ದಾಳೆಯೇ ?
ಅವನಿಗೆ ಮದುವೆಯಾಗಿರಬಹುದು. ಅವನಿಗೆ ಹೆಂಡತಿಯಿರಬಹುದು.
ಅವನಿಗೆ ಮದುವೆ ಮಾಡಿಸು. ಅವನಿಗೆ ಹೆಂಡತಿ ಕೊಡಿಸು.
ಇತ್ಯಾದಿ
5. ಗೃಹೀತಾರ್ಥ ಸುಳ್ಳಾದರೆ ಅಥವಾ ಅದನ್ನು ಸುಳ್ಳೆಂದು ಸಾಧಿಸಿದರೆ, ಒಂದು ವಾಕ್ಯದ ಔಚಿತ್ಯ ನಷ್ಟವಾಗುತ್ತದೆ. ಒಂದು ವಾಕ್ಯವನ್ನು ಅದರ ಗೃಹೀತಾರ್ಥ ತಪ್ಪೆಂದು ಹೇಳುವ ವಾಕ್ಯದೊಡನೆ ಸೇರಿಸಿದಾಗಲೆಲ್ಲ ವಿರೋಧಾಭಾಸ ತೋರಿಬರಲು ಇದುವೇ ಕಾರಣ. ಉದಾಹರಣೆಗಾಗಿ ಈ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು.
* ಅವನು ಹೆಂಡತಿಗೆ ಹೆದರುತ್ತಿರುವುದು ನಿಜ,
ಆದರೆ ಅವನಿಗೆ ಮದುವೆಯಾಗಿಲ್ಲ,
* ಆ ತಬ್ಬಲಿ ಹುಡುಗನ ತಂದೆ ನನಗೆ ನಾಳೆ
ಹತ್ತು ರೂಪಾಯಿ ಕೊಡಲಿದ್ದಾರೆ.
* ನಿಮ್ಮ ಕಾಗದವನ್ನು ಅನಕ್ಷರಸ್ಥನೊಬ್ಬ ನನಗೆ ಓದಿ ಹೇಳಿದ್ದಾನೆ.
* ನನಗೆ ನೂರು ರುಪಾಯಿ ಕೊಟ್ಟ ಮನುಷ್ಯ ಹಣ ಕೊಡಲಿಲ್ಲ.
* ರಾಮುವಿನ ತಾಯಿ ಬಹಳ ವರ್ಷಗಳಿಂದ ಮಕ್ಕಳಾಗಬೇಕೆಂದು ಸಿಕ್ಕಿದ
ದೇವರುಗಳಿಗೆಲ್ಲ ಹರಕೆ ಹೊರುತ್ತಿದ್ದಾಳೆ.
* ನಮ್ಮ ಮನೆತನದಲ್ಲಿ ಬ್ರಹ್ಮಚರ್ಯವು ವಂಶಪಾರಂಪರ‍್ಯವಾಗಿ ಬಂದಿದೆ.
* ವಂಧ್ಯಾಪುತ್ರ
* ಶತವಿಷಾಣ
* ಉಂಡು ಉಪವಾಸಿ
* ಬಳಸಿ ಬ್ರಹ್ಮಚಾರಿ
5 ಬಾಗಿಲು ತೆರೆದುಕೊಂಡೇ ಇರುವಾಗ “ಬಾಗಿಲು ತೆರೆ” ಎಂದು ವಿಧಿಸುವುದು ಹೇಗೆ
– ಅನುಚಿತವೋ, ಹಾಗೆಯೇ ಮದುವೆಯಾಗದವನೊಬ್ಬ ತನ್ನ ಹೆಂಡತಿಗೆ ಹೆದರುತ್ತಿದ್ದಾನೆನ್ನುವುದೂ ಕೂಡ ಅನುಚಿತ. ಅಂತಹ ಮಾತನ್ನು ಸರಿಯೆನ್ನಲೂ ಸಾಧ್ಯವಿಲ್ಲ, ಸುಳ್ಳೆನ್ನಲೂ ಸಾಧ್ಯವಿಲ್ಲ. ಹೀಗೆಯೇ “ರಾಮು ಹೆಂಡತಿಗೆ ಹೊಡೆಯುವುದನ್ನು ನಿಲ್ಲಿಸಿದ್ದಾನೇನು ?” ಎಂಬ ಪ್ರಶ್ನೆಗೆ ಯಾವ ಉತ್ತರ ಕೊಟ್ಟರೂ (ಹೌದೆಂದರೂ ಇಲ್ಲವೆಂದರೂ) ಕೂಡ, “ರಾಮುವಿಗೆ ಹೆಂಡತಿಯಿದ್ದಾಳೆ” ಎಂಬ ಗೃಹೀತಾರ್ಥವನ್ನು ಒಪ್ಪಿಕೊಂಡ ಹಾಗಾಗುತ್ತದೆ.
6. ಯಾವುದಾದರೊಂದು ವಿಷಯವನ್ನು ತಾತ್ಕಾಲಿಕವಾಗಿ ಕಲ್ಪಿಸಿಕೊಂಡು ವಾದ ಮಾಡುವ ಕ್ರಮ ತಾರ್ಕಿಕರಲ್ಲಿದೆ. ವಿಜ್ಞಾನಿಗಳಲ್ಲಿಯೂ ಕೂಡ, ಅಜ್ಞಾತವಾಗಿರುವ ವಸ್ತುವೊಂದನ್ನು (ಉದಾ : ಈಥರ್) ಕಲ್ಪಿಸಿಕೊಂಡು ಅದರ ಮೂಲಕ ಸಮಸ್ಯಾತ್ಮಕವಾದ ಘಟನೆಗಳಿಗೆ ವ್ಯಾಖ್ಯಾನ ಹೇಳುವ ಕ್ರಮ ಬಳಕೆಯಲ್ಲಿದೆ. ದಿನನಿತ್ಯದ ಭಾಷಾ ವ್ಯವಹಾರದಲ್ಲಿ ಕೂಡ -ರೆ ಪ್ರತ್ಯಯದ ಉಪಯೋಗ (ನೂರು ರುಪಾಯಿ ಇದ್ದಿದ್ದರೆ ಒಂದು ನೈಲಾನ್ ಸೀರೆ ಕೊಂಡುಕೊಳ್ಳಬಹುದಿತ್ತು) ಇಂತಹ ಕಲ್ಪಿತವಾದ ಗೃಹೀತಾರ್ಥದ ಮೇಲೆಯೇ ಆಧರಿಸಿದೆ. ಆದರೆ, ಈ ಮೇಲಿನ ಪ್ರಯೋಗಗಳಲ್ಲೆಲ್ಲ ಗೃಹೀತಾರ್ಥವು ಕಲ್ಪಿತವಾಗಿದೆಯೆಂಬುದನ್ನು ಸ್ಪಷ್ಟವಾಗಿಯೇ ಸೂಚಿಸಲಾಗಿದೆಯಾದ್ದರಿಂದ ಅದು ಕಲ್ಪಿತವೆಂದು (ಸುಳ್ಳೆಂದು) ತಿಳಿದಿದ್ದರೂ ಕೂಡ ಮಾತಿನ ಔಚಿತ್ಯಕ್ಕೆ ಭಂಗ ಬರುವುದಿಲ್ಲ.
ಇದಕ್ಕೆ ಬದಲು, ನೇರವಾದ ಮಾತಿನಲ್ಲಿಯೂ ಕೂಡ ಗೃಹೀತಾರ್ಥವನ್ನು ತಪ್ಪಾಗಿ ಬಳಸಿದರೆ ಅದು ಅನರ್ಥಕ್ಕೆಡೆ ಕೊಡಬಲ್ಲುದು. ಕೈಯಲ್ಲಿ ಹಣವೇನೂ ಇಲ್ಲದಿದ್ದರೂ ಕೂಡ, “ಹಣದ ಚಿಂತೆ ಯಾಕೆ, ನಡೀರಿ ಹೋಟೆಲಿಗೆ” ಅಂದರೆ ಹೇಗೆ ಮಾತನಾಡುವವನ ಅಪ್ರಾಮಾಣಿಕತೆ (ಹಣ ಕೊಡುವ ಸಮಯ ಬಂದಾಗ) ಸಿದ್ಧವಾಗುವುದೋ ಹಾಗೆಯೇ ಸೀತೆಗೆ ಮಕ್ಕಳಿಲ್ಲವೆಂದು ಗೊತ್ತಿದ್ದೂ ಕೂಡ, “ಸೀತೆಯ ಮಕ್ಕಳೆಲ್ಲರೂ ಜಾಣರು” ಎಂದು ಹೇಳಿದಲ್ಲಿ ಹಾಗೆ ನುಡಿದವನ ಅಪ್ರಾಮಾಣಿಕತೆ ಸಿದ್ಧವಾಗುತ್ತದೆ.
7. ಗೃಹೀತಾರ್ಥದ ಅವಶ್ಯಕತೆಯನ್ನು ಈ ಕೆಳಗಿನ ವಾಕ್ಯ ಬಹಳ ಚನ್ನಾಗಿ ಸ್ಪಷ್ಟ ಪಡಿಸಿಕೊಡುತ್ತದೆ.
೧) ಈ (೧) ನೇ ವಾಕ್ಯದಲ್ಲಿ ಹೇಳಿರುವ ಸಂಗತಿ ಸುಳ್ಳು.
ಈ ಮೇಲಿನ ವಾಕ್ಯ ನಿಜವಾಗಿರಬೇಕಾದರೆ ಅದು ಸುಳ್ಳಾಗಿರಬೇಕು ಮತ್ತು ಸುಳ್ಳಾಗಿರಬೇಕಾದರೆ ಅದು ನಿಜವಾಗಿರಬೇಕು. ಈ ರೀತಿಯ ವಿರೋಧಾಭಾಸವನ್ನು ಹೋಗಲಾಡಿಸಲು ಇಂತಹ ಸಮೀಕರಣಾತ್ಮಕ ವಾಕ್ಯಗಳಲ್ಲೆಲ್ಲ ಸುಳ್ಳಾಗಿರದಂತಹ ಗೃಹೀತಾರ್ಥವೊಂದು ಇದ್ದೇ ತೀರಬೇಕೆಂಬ ನಿಯಮ ಹಾಕುವುದೊಂದೇ ದಾರಿ. ಮೇಲಿನ ವಾಕ್ಯದಲ್ಲಿ ಅದರ ಗೃಹೀತಾರ್ಥವೇ ಸುಳ್ಳೆಂದು ಪ್ರತಿಪಾದಿತವಾಗಿದೆಯಾದ್ದರಿಂದ, ಅದನ್ನು ಪ್ರಯೋಗಿಸುವುದರಲ್ಲಿ ಔಚಿತ್ಯ ಇಲ್ಲವೇ ಪ್ರಾಮಾಣಿಕತೆಯಿಲ್ಲ. ಎಂದರೆ, ಆ ವಾಕ್ಯ ನಿಜವೋ ಸುಳ್ಳೋ ಎಂಬ ಪ್ರಶ್ನೆಯೇ ಏಳುವುದಿಲ್ಲ.
8. ಎರಡು ವಾಕ್ಯಗಳನ್ನು ಒಟ್ಟು ಸೇರಿಸಿ ಹೇಳುವಾಗ, ಇಲ್ಲವೇ ಒಂದನ್ನು ಇನ್ನೊಂದರಲ್ಲಿ ಅಂತರ್ಗತವನ್ನಾಗಿ ಮಾಡಿ ಹೇಳುವಾಗ, ಅಂತಹ ವಾಕ್ಯಗಳಲ್ಲಿ ಬರುವ ಗೃಹೀತಾರ್ಥ ಮತ್ತು ಪ್ರತಿಪಾದಿತಾರ್ಥಗಳೊಳಗೆ ಸಂಘರ್ಷಣೆಯುಂಟಾಗಲು ಸಾಧ್ಯವಿದೆ. ಮೇಲೆ (೫) ರಲ್ಲಿ ವಿವರಿಸಿದಂತಹ ವಿರೋಧಾಭಾಸಗಳೆಲ್ಲ ಇಂತಹ ಸಂಘರ್ಷಣೆಯ ಫಲವೆನ್ನಬಹುದು. ಆದರೆ, ಇಂತಹ ಸನ್ನಿವೇಶಗಳನ್ನು ನಿಯಂತ್ರಿತವಾಗಿ ಬಳಸಿಕೊಳ್ಳಲೂ ಕೂಡ ಭಾಷೆಗಳು ಸಮರ್ಥವಾಗಿರುತ್ತವೆ.
ಸಾಮಾನ್ಯವಾಗಿ ಇಂತಹ ಸಂಯುಕ್ತ ವಾಕ್ಯಗಳಲ್ಲಿ ಬರುವ ಒಂದು ಉಪವಾಕ್ಯದ ಗೃಹೀತಾರ್ಥವು ಕಲ್ಪಿತವೆಂಬುದನ್ನು ಇನ್ನೊಂದು ಉಪವಾಕ್ಯ ಸುಸ್ಪಷ್ಟವಾಗಿ (ಎಂದರೆ ತನ್ನ ಪ್ರತಿಪಾದಿತಾರ್ಥದ ಮೂಲಕ) ತಿಳಿಸುವುದೇ ಇಂತಹ ನಿಯಂತ್ರಿತ ಪ್ರಯೋಗಗಳ ಒಳಗುಟ್ಟೆನ್ನಬಹದು. ಉದಾ:
೧) ಅವನ ಮಕ್ಕಳು ಜಾಣರಿರಬಹುದು.
೨) ಅವನಿಗೆ ಮಕ್ಕಳಿದ್ದಾರಾದರೆ ಅವರು ಜಾಣರಿರಬಹುದು.
ಇಲ್ಲಿ ಮೊದಲನೆಯ ವಾಕ್ಯಕ್ಕೆ “ಅವನಿಗೆ ಮಕ್ಕಳಿದ್ದಾರೆ” ಎಂಬ ಗೃಹೀತಾರ್ಥವಿದೆಯಾದರೂ, ಎರಡನೆಯ ವಾಕ್ಯದಲ್ಲಿ ಅದು ಗೃಹೀತವಾಗಿ ಉಳಿದಿಲ್ಲ. ಆ ಅರ್ಥ ಕಲ್ಪಿತವೆಂಬುದನ್ನು ಸುಸ್ಪಷ್ಟವಾಗಿ ತಿಳಿಸುವಂತಹ ಇನ್ನೊಂದು ವಾಕ್ಯ ಸಂಭಾವನಾ ರೂಪದಲ್ಲಿ (ಅವನಿಗೆ ಮಕ್ಕಳಿದ್ದಾರಾದರೆ) ಆಂತರ್ಗತವಾಗಿರುವುದೇ ಇದಕ್ಕೆ ಕಾರಣ. ಹೀಗಾಗಿ, ಎರಡನೆಯ ವಾಕ್ಯವನ್ನು “ಅವನಿಗೆ ಮಕ್ಕಳಿಲ್ಲದೇ” ಇರುವ ಸಂದರ್ಭದಲ್ಲೂ ಕೂಡ ಬಳಸಲು ಸಾಧ್ಯವಿದೆ. ಮೊದಲಿನ ವಾಕ್ಯವನ್ನು ಇಂತಹ ಸಂದರ್ಭದಲ್ಲಿ ಬಳಸಲು ಸಾಧ್ಯವಿಲ್ಲವೆಂಬುದನ್ನು ಗಮನಿಸಬೇಕು.
ಇಂತಹದೇ ಪರಿಸ್ಥಿತಿಯನ್ನು (ಗೃಹೀತಾರ್ಥ ಕಲ್ಪಿತವೆಂಬ ವಿಷಯವನ್ನು ಸ್ಪಷ್ಟವಾಗಿ ತಿಳಿಸಿರುವುದನ್ನು) ಈ ಕೆಳಗಿನ ವಾಕ್ಯಗಳಲ್ಲೂ ಕೂಡ ಕಾಣಬಹುದು.
ಮದುವೆಯಾದರೆ ಅವನು ತನ್ನ ಹೆಂಡತಿಯನ್ನು
ಊಟಿಗೆ ಕರೆದುಕೊಂಡು ಹೋಗುತ್ತಾನಂತೆ.
ಪುಸ್ತಕ ಬರೆದ ಮೇಲೆ ಅದನ್ನು ಅಚ್ಚು ಹಾಕಿಸಲು
ನಿಮ್ಮಲ್ಲಿಗೇನೇ ಕಳಿಸುತ್ತೇವೆ.
ಅವನಿಗೆ ಮದುವೆಯಾಗಿಲ್ಲ, ಇಲ್ಲವೇ ಅವನ
ಹೆಂಡತಿ ಅವನೊಂದಿಗೆ ವಾಸಿಸುತ್ತಿಲ್ಲ.
ಅವನಿಗೆ ಪುಸ್ತಕ ಬರೆದಾಗಿಲ್ಲ, ಇಲ್ಲವೇ ಬರೆದ
ಪುಸ್ತಕವನ್ನು ಅಚ್ಚು ಹಾಕಿಸಲು ಅವನು
ಬೇರೆಲ್ಲಿಗೋ ಕಳಿಸಿದ್ದಾನೆ.
9, ಆಖ್ಯಾತಗಳನ್ನು ವಾಸ್ತವಿಕ ಮತ್ತು ಅವಾಸ್ತವಿಕಗಳೆಂದರೆ ಎರಡಾಗಿ ವಿಂಗಡಿಸಿದಲ್ಲಿ, ಅಂತಹ ಆಖ್ಯಾತಗಳನ್ನೊಳಗೊಂಡ ವಾಕ್ಯಗಳಲ್ಲಿ ಅಂತರ್ಗತವಾಗಿರುವ ವಾಕ್ಯಗಳ ಗೃಹೀತಾರ್ಥವು ಬೇರೆ ಬೇರೆ ರೀತಿಯಲ್ಲಿ ಬದಲಾಗುವುದನ್ನು ಗಮನಿಸಬಹುದು. ಒಳಗೊಂಡ ವಾಕ್ಯದಲ್ಲಿ (ಮಾತೃಕೆಯಲ್ಲಿ) ವಾಸ್ತವಿಕವಾದ ಆಖ್ಯಾತವಿದೆಯಾದರೆ, ಅಂತರ್ಗತವಾದ ವಾಕ್ಯದ ಗೃಹೀತಾರ್ಥ ಹಾಗೆಯೇ ಉಳಿಯುತ್ತದೆ- ಎಂದರೆ ಅದು ಮಾತೃಕೆಯ ಗೃಹಿತಾರ್ಥವಾಗಿಯೂ ಬರುತ್ತದೆ ; ಆದರೆ, ಮಾತೃಕೆಯಲ್ಲಿ ಅವಾಸ್ತವಿಕವಾದ ಆಖ್ಯಾತವಿದೆಯಾದರೆ, ಅಂತರ್ಗತವಾದ ವಾಕ್ಯದ ಗೃಹೀತಾರ್ಥ ಮಾತೃಕೆಯ ಗೃಹೀತಾರ್ಥವಾಗಿ ಬರುವುದಿಲ್ಲ. ಎಂದರೆ, ಒಂದು ವಾಕ್ಯದ ಗೃಹೀತಾರ್ಥ ತಪ್ಪೆಂದು ತಿಳಿದಿದ್ದರೂ ಕೂಡ, ಅಂತಹ ವಾಕ್ಯವನ್ನು ಅವಾಸ್ತವಿಕವಾದ ಆಖ್ಯಾತವಿರುವ ಮಾತೃಕೆಯಲ್ಲಿ ಅಂತರ್ಗತವಾಗಿ ಮಾಡಿ ಹೇಳಲು ಸಾಧ್ಯವಿದೆ.
ಈ ಕೆಳಗಿನ ಉದಾಹರಣೆಗಳಿಂದ ಮೇಲಿನ ವಿಷಯ ಸ್ಪಷ್ಟವಾಗಬಹುದು : “ಆಕೆಯ ಮಕ್ಕಳು ಬಹಳ ಜಾಣರು” ಎಂಬ ವಾಕ್ಯದಲ್ಲಿ “ಆಕೆಗೆ ಮಕ್ಕಳಿದ್ದಾರೆ” ಎಂಬ ಅರ್ಥ ಗೃಹೀತವಾಗಿದೆಯಷ್ಟೆ. ಇದನ್ನು ಈ ಕೆಳಗೆ ಮೊದಲನೆಯ ವಾಕ್ಯದಲ್ಲಿ ಒಂದು ವಾಸ್ತ್ರವಿಕವಾದ ಆಖ್ಯಾತವಿರುವ ವಾಕ್ಯದೊಳಗೆ ಅಂತರ್ಗತವಾಗಿ ಮಾಡಿ ಹೇಳಲಾಗಿದೆ ಮತ್ತು ಎರಡನೆಯ ವಾಕ್ಯದಲ್ಲಿ ಅದನ್ನೇ ಒಂದು ಅವಾಸ್ತವಿಕವಾದ ಆಖ್ಯಾತವಿರುವ ವಾಕ್ಯದೊಳಗೆ ಅಂತರ್ಗತವಾಗಿ ಮಾಡಿ ಹೇಳಲಾಗಿದೆ.
೧) ಆಕೆಯ ಮಕ್ಕಳು ಬಹಳ ಜಾಣರೆನ್ನುವುದು ಬಹಳ ಸಮಾಧಾನಕರವಾದ ಸಂಗತಿ.
೨) ಆಕೆಯ ಮಕ್ಕಳು ಬಹಳ ಜಾಣರೆನ್ನುವುದು ರಾಮು ಹೇಳಿದ ಮಾತು.
ಮಾತೃಕೆಯಲ್ಲಿ ವಾಸ್ತವಿಕವಾದ ಆಖ್ಯಾತವಿರುವ ಮೊದಲನೆಯ ವಾಕ್ಯದಲ್ಲಿ “ಅವಳಿಗೆ ಮಕ್ಕಳಿದ್ದಾರೆ” ಎಂಬ ಗೃಹೀತಾರ್ಥ ಹಾಗೆಯೇ ಉಳಿದಿದೆ ; ಆದರೆ, ಮಾತೃಕೆಯಲ್ಲಿ ಅವಾಸ್ತವಿಕವಾದ ಅರ್ಥವಿರುವ ಎರಡನೆಯ ವಾಕ್ಯದಲ್ಲಿ ಅದು ಅಳಿದು ಹೋಗಿದೆ. ಈ ವ್ಯತ್ಯಾಸವನ್ನು ಈ ಕೆಳಗಿನ ಎರಡು ವಾಕ್ಯಗಳು ಸ್ಪಷ್ಟಪಡಿಸುತ್ತವೆ. ಗೃಹೀತಾರ್ಥ ಸುಳ್ಳು ಎಂದು ತಿಳಿಸುವ ವಾಕ್ಯವೊಂದನ್ನು ಮೊದಲನೆಯ ವಾಕ್ಯಕ್ಕೆ ಸೇರಿಸಿದಾಗ ವಿರೋಧಾಭಾಸವುಂಟಾಗುವುದೆಂಬುದನ್ನು ಮೂರನೆಯ ವಾಕ್ಯದಿಂದಲೂ, ಎರಡನೆಯ ವಾಕ್ಯಕ್ಕೆ ಸೇರಿಸಿದಾಗ ವಿರೋಧಾಭಾಸ ಬರುವುದಿಲ್ಲವೆಂಬುದನ್ನು ನಾಲ್ಕನೆಯ ವಾಕ್ಯದಿಂದಲೂ ತಿಳಿಯಬಹುದು.
೩) * ಆಕೆಯ ಮಕ್ಕಳು ಬಹಳ ಜಾಣರೆನ್ನುವುದು ಸಮಾಧಾನಕರವಾದ ಸಂಗತಿ,
ಆದರೆ ಆಕೆಗೆ ಮಕ್ಕಳೇ ಇಲ್ಲ.
೪) ಆಕೆಯ ಮಕ್ಕಳು ಬಹಳ ಜಾಣರೆನ್ನುವುದು ರಾಮು ಹೇಳಿದ ಮಾತು, ಆದರೆ ಅಕೆಗೆ ಮಕ್ಕಳೇ ಇಲ್ಲ.
ಅಂತರ್ಗತ ವಾಕ್ಯದ ಗೃಹೀತಾರ್ಥದ ಮೇಲೆ ವಾಸ್ತವಿಕ ಮತ್ತು ಅವಾಸ್ತವಿಕ ಆಖ್ಯಾತಗಳು ಹೀಗೆ ಬೇರೆ ಬೇರೆ ರೀತಿಯ ಪ್ರಭಾವ ಬೀರುವುವೆಂಬುದನ್ನು ಈ ಕೆಳಗಿನ ಉದಾಹರಣೆಗಳಿಂದಲೂ ತಿಳಿಯಬಹುದು. ಕೆಳಗೆ ಕೊಟ್ಟಿರುವ ಪ್ರತಿಯೊಂದು ಜೋಡಿಯ್ಲಲೂ ಮೊದಲನೆಯ ವಾಕ್ಯದಲ್ಲಿ ಗೃಹೀತಾರ್ಥವನ್ನುಳಿಸುವ ವಾಸ್ತವಿಕವಾದ ಆಖ್ಯಾತವಿದೆ ಮತ್ತು ಎರಡನೆಯ ವಾಕ್ಯದಲ್ಲಿ ಗೃಹೀತಾರ್ಥವನ್ನು ಅಳಿಸುವ ಅವಾಸ್ತವಿಕವಾದ ಆಖ್ಯಾತವಿದೆ. ಮೊದಲನೆಯ ವಾಕ್ಯದ ಕೆಳಗೆ ಕೊಟ್ಟಿರುವ ಗೃಹೀತಾರ್ಥ ಅಂತರ್ಗತ ವಾಕ್ಯ ಮತ್ತು ಮಾತೃಕೆ-ಇವೆರಡಕ್ಕೂ ಸಮಾನವಾಗಿರುವಂತಹದೆಂಬುದನ್ನು ಗಮನಿಸಬೇಕು. ಇದಲ್ಲದೆ, ವಾಸ್ತವಿಕವಾದ ಆಖ್ಯಾತವಿರುವ ಮಾತೃಕೆಗೆ ಅಂತರ್ಗತವಾದ ವಾಕ್ಯವೂ ಕೂಡ ಗೃಹೀತವಾಗಿ ಬರುತ್ತದೆ.
೫) ರಾಮು ಬಂದದ್ದು ನಿನ್ನೆ ಬೆಳಿಗ್ಗೆ ಎಂದು ಮುರಳಿಗೆ ಗೊತ್ತಿದೆ.
ಸಮಾನ ಗೃಹೀತ : ರಾಮು ಬಂದಿದ್ದಾನೆ.
ರಾಮು ಬಂದದ್ದು ನಿನ್ನೆ ಬೆಳಿಗ್ಗೆ ಎಂದು ಮುರಳಿ ಹೇಳಿದ್ದಾನೆ.
(ಸಮಾನ ಗೃಹೀತಾರ್ಥವಿಲ್ಲ).
೬) ದಾರಿಯಲ್ಲಿ ಬಿದ್ದು ಸಿಕ್ಕಿದ ಒಂದು ನಾಣ್ಯವನ್ನು ಅವರು ನನಗೆ ಕೊಟ್ಟಿದ್ದಾರೆಂದು ಹರಿ ಊಹಿಸಿದ್ದಾನೆ.
ಸಮಾನಗೃಹೀತ : ಅವರಿಗೆ ದಾರಿಯಲ್ಲಿ ನಾಣ್ಯ ಬಿದ್ದು ಸಿಕ್ಕಿದೆ.
ದಾರಿಯಲ್ಲಿ ಬಿದ್ದು ಸಿಕ್ಕಿದ ಒಂದು ನಾಣ್ಯವನ್ನು ಅವರು ನನಗೆ ಕೊಟ್ಟಿದ್ದಾರೆಂದು ಹರಿಯ ಆಲೋಚನೆ.
(ಸಮಾನ ಗೃಹೀತಾರ್ಥವಿಲ್ಲ)
೭) ರಾಮರಾಯರ ಮಗಳಿಗೆ ಮದುವೆಯಾಗಿದೆಯೆಂದು ಶೀಲಾ ಕಂಡುಹಿಡಿದಿದ್ದಾಳೆ.
ಸಮಾನ ಗೃಹೀತ : ರಾಮರಾಯರಿಗೆ ಮಗಳಿದ್ದಾಳೆ.
ರಾಮರಾಯರ ಮಗಳಿಗೆ ಮದುವೆಯಾಗಿದೆಯೆಂದು ಶೀಲಾ ಬರೆದಿದ್ದಾಳೆ.
(ಸಮಾನ ಗೃಹೀತಾರ್ಥವಿಲ್ಲ).
ಪ್ರತಿವಾಸ್ತವಿಕ ಎಂಬುದು ಇನ್ನೊಂದು ರೀತಿಯ ಆಖ್ಯಾತದ ಹೆಸರು. ಇದನ್ನು ಪ್ರಯೋಗಿಸಿದಾಗಲೆಲ್ಲ ಅಂತರ್ಗತವಾಗಿರುವ ವಾಕ್ಯಕ್ಕೆ ಯಾವ ಅರ್ಥವಿದೆಯೋ, ಅದಕ್ಕೆ ವಿರುದ್ಧವಾಗಿರುವಂತಹ ಅರ್ಥ ಮಾತೃಕೆಯ ಗೃಹೀತಾರ್ಥವಾಗಿ ಬರುತ್ತದೆ.
೮) ಆತ ಕೋಪ ಬಂದವನ ಹಾಗೆ ನಟಿಸಿದ.
ಆತ ಕೋಪ ಬಂದವನ ಹಾಗೆ ನಟಿಸಲಿಲ್ಲ.
ಅಂತರ್ಗತ ವಾಕ್ಯ : ಆತನಿಗೆ ಕೋಪ ಬಂತು.
ಗೃಹೀತಾರ್ಥ : ಆತನಿಗೆ ಕೋಪ ಬರಲಿಲ್ಲ.
೯) ಆಕೆ ರಾಣಿಯ ಹಾಗೆ ಮಾತನಾಡುತ್ತಾಳೆ.
ಆಕೆ ರಾಣಿಯ ಹಾಗೆ ಮಾತನಾಡುತ್ತಿಲ್ಲ.
ಅಂತರ್ಗತ ವಾಕ್ಯ : ಆಕೆ ರಾಣಿ.
ಗೃಹೀತಾರ್ಥ : ಆಕೆ ರಾಣಿಯಲ್ಲ.
10. ಈ ಮೂರು ಅರ್ಥಗಳಲ್ಲದೆ, ಧ್ವನಿತಾರ್ಥವೆಂಬ ಇನ್ನೊಂದು ರೀತಿಯ ಅರ್ಥವನ್ನೂ ಕೂಡ ಒಂದು ವಾಕ್ಯದಲ್ಲಿ ಕಾಣಲು ಸಾಧ್ಯವಿದೆ. ಉದಾಹರಣೆಗಾಗಿ, ಈ ಕೆಳಗಿನ ವಾಕ್ಯಗಳನ್ನು ಗಮನಿಸಿರಿ :
೧) ಆಕೆ ಪಾತ್ರೆಯನ್ನು ತೊಳೆದಿದ್ದಾಳೆ.
೨) ಆಕೆ ಪಾತ್ರೆಯನ್ನು ತೊಳೆದಿಲ್ಲ.
ಈ ಎರಡೂ ವಾಕ್ಯಗಳಲ್ಲಿ “ಪಾತ್ರೆ ಕೊಳೆಯಾಗಿತ್ತು” ಎಂಬ ಅರ್ಥ ಧ್ವನಿಸುತ್ತದೆ. ಇಂತಹ ಧ್ವನಿತಾರ್ಥಕ್ಕೂ ಗೃಹೀತಾರ್ಥಕ್ಕೂ ನಡುವಿರುವ ಮುಖ್ಯ ವ್ಯತ್ಯಾಸವೆಂದರೆ, ಧ್ವನಿತಾರ್ಥವನ್ನು ಅಲ್ಲಗಳೆದರೆ ಆ ವಾಕ್ಯ ಗೃಹೀತಾರ್ಥವನ್ನು ಅಲ್ಲಗಳೆದಾಗ (೫ ನೇ ವಿಭಾಗವನ್ನು ನೋಡಿ) ಆಗುವಷ್ಟು ಅನುಚಿತ ಇಲ್ಲವೇ ಅಪ್ರಾಮಾಣಿಕವೆಂದು ತೋರುವುದಿಲ್ಲ.
ಪಾತ್ರೆ ಕೊಳೆಯಾಗಿಲ್ಲವಾದ್ದರಿಂದ ಆಕೆ ಅದನ್ನು ತೊಳೆದಿಲ್ಲ.
ಪಾತ್ರೆ ತೊಳೆಯಾಗಿಲ್ಲವಾದರೂ ಆಕೆ ಅದನ್ನು ತೊಳೆದಳು.
ಬಹುಶಃ ಗೃಹೀತಾರ್ಥ ಮತ್ತು ಧ್ವನಿತಾರ್ಥಗಳು ಒಂದೇ ಅವಿಚ್ಛಿನ್ನತೆಯ ಎರಡು ಧೃವಗಳಾಗಿದ್ದು ಅವುಗಳ ನಡುವೆ ಸ್ಪಷ್ಟವಾದ ವಿಭಜನೆಯನ್ನು ಮಾಡಲು ಸಾಧ್ಯವಿಲ್ಲವೆಂದೇ ಹೇಳಬಹುದೇನೋ.
.
ಈ ಲೇಖನ ನಾನು ಬರೆಯುತ್ತಿರುವ “ಹೊಸಗನ್ನಡದ ವಾಕ್ಯರಚನೆ” ಎಂಬ ಪುಸ್ತಕದ ಒಂದು ಭಾಗ)
ಎರಡು ಕವಿತೆಗಳು
ಎರಡು ಕವಿತೆಗಳು
ಜಯಸುದರ್ಶನ
೧. ಬ್ರಾಹ್ಮಣಿಕೆ
ಪ್ರಸ್ತಕ್ಕೆ ಮುಂಚೆ ಮಗನ ಬದಿಗೆ ಕರೆದು
ಬ್ರಾಹ್ಮಣ ತಂದೆ ಅಂದ : ಮಗನೆ ಕಲಿಗಾಲದಲ್ಲಿ
ಬ್ರಾಹ್ಮಣಿಕೆ ತಲೆ ಮೇಲೆ ತೂಗುವ ಕತ್ತಿ ; ವೈದಿಕ
ಕುಳಿತರೆ, ನಿಂತರೆ, ಮಲಗಿ ಮಗುವಾದರೆ ಕೃತ
ಯುಗದ ದೂರದ ಕೃತಕೃತ್ಯತೆಯ ಮಹಾ
ತಪಸ್ಸು ತಿದಿಯೊತ್ತುವುದು, ಅದರ ಭಾರಕ್ಕೆ
ಎದೆಯ ಬಡಿತಕ್ಕೆ ತೇಕು ಹತ್ತುವುದು, ಪೂರ್ವಜರ
ಪುಣ್ಯದ ನೆನಪು ತಂದುಕೊಂಡರೆ ಕ್ಷಣಕ್ಕೆ ಸಮಾಧಾನ.
ತ್ರೇತಕ್ಕೆ ಕ್ಷತ್ರಿಯ ರಾಮ, ದ್ವಾಪರದಲ್ಲಿ ಒಕ್ಕಲಿಗ
ಕೃಷ್ಣ, ಕಲಿಯಾಗಿ ಅವತರಿಸಬಹುದಾದ ಶೂದ್ರ
ಕಲ್ಕಿಗಳಿಂದ ಮುಜರೆಯೊಪ್ಪಿಸಿಕೊಂಡು ಇದ್ದಲ್ಲೆ
ಹೈರಾಣಾದ ಬ್ರಾಹ್ಮಣಿಕೆ ಸತ್ಯಯುಗದ ವೇದಕ್ಕೆ,
ಉಪನಿಷತ್ತುಗಳ ಅಪೌರುಷೇಯಕ್ಕಂಟಿದ ಸತ್ವದವಶೇಷಕ್ಕೆ
ಬಾಯ್ದೆರೆದು ಕುಳಿತಿತೇ ? ಇರಲಿ, ಶುಕ್ರವಾರದ ಹಾಗೆ
ಬ್ರಹ್ಮಚರ‍್ಯೆ ಪಾಲಿಸಿದರೂ, ಕ್ಷಣಿಕ ಲೋಲುಪ್ತಿಗೆ
ದೊನ್ನೆ ಹುಡುಕುವ ಕೃಪಣನಾಗದಿರು ; ದ್ವಿಜನಾಗಿ
ಹುಟ್ಟಿದಾಗಲೇ ಅಜತ್ವಕ್ಕೇರುವ ದಾರಿಯ ಕಾಮಗಳ
ಆಗಾಗ್ಗೆ ಒಪ್ಪುವುದು ಕ್ಷಮೆಗೆ ಸೂಕ್ತ ; ಆಗ ಜನಿವಾರ
ಹಿಡಿದು ಭದ್ರ, ನೆನೆದು ಕಾಡದಿರೋ ಮೈಯೊಳಗೆ
ಸಮಾಧಿಗೊಂಡ ಘನ ಪಿತಾಮಹರ. ಮಣ್ಣಕಾಯಕಕ್ಕೆ
ಮನಸಿಟ್ಟು ಇಳಿವಾಗ ತರ್ಪಣಕ್ಕಿಲ್ಲ ಕರ್ತವ್ಯದವಸರ.
ಕಲಿಯುಗದಲ್ಲಿ ಮೊದಲ ಬಲಿ ಮನಸ್ಸಿನ ವೇಗಕ್ಕೆ
ಸರಿಸಮ ಹೆಜ್ಜೆಯಿಕ್ಕದ ಕಾಲ ; ಕಾಲು ಕೀಳುವ ಮುಂಚೆ
ನೆಲದಾಳದಲ್ಲಿರುವ ಖುಷಿಮೂಲಗಳ ಆಜ್ಞೆಗಳ ಸಾರ್ಥಕ್ಯಕ್ಕೆ
ಪಾಲಿಸಬೇಕು ; ಬೆನ್ನುಹತ್ತುವ ಪ್ರೇತಗಳ ಭೂತಶಾಂತಿಗೆ
ಶ್ರದ್ದೆ ಕಾಯಬೇಕು. ಕಾಯುವ ಸಹನೆಯಲ್ಲೇ
ಪುರಾತನಗಳ ಕರ್ಮ ಸವೆಸಬೇಕು. ಸಂತತಿಯ ಪಿತಾ-
ಮಹನಾಗಿ ನೀ ಹೊತ್ತ ಹೊರೆ ದಾಟಿಸಬೇಕು ; ಬೀಜ
ಪುತ್ರರ ಹೆಗಲು ಮೆಟ್ಟಿ ನೆಲದ ಗಡಿ ದಾಟಬೇಕು. ಮಗೂ,
ಕಮಲೋದ್ಭವನ ಉದಯವೂ ಬಯಲ ಬಿತ್ತುವ ಹರಿಯ
ಬಿತ್ತ ; ಕಾಲಾಂತ್ಯಕ್ಕೆ ಹರನಿಚ್ಚಿಸುವ ಸರ್ವವಿನಾಶವೂ ಬರೆ
ನಿಮಿತ್ತ. ಕುಲವರ್ಧನ ವಟುವೆ, ಗಾಯತ್ರಿಯಾವಾಹನೆಗೆ
ಸಮಯ ಸನ್ನಿಹಿತವಾಗುವವರೆಗೆ ಹಿತವಾಗಿ ಯೋನಿಯೊಳ-
ಹೊರಗೆ ಸಂಚರಿಸುತ್ತಿರಲಿ ಋಣಭಾರಕ್ಕೆ ನಿನ್ನ ಸತ್ವ : ಮೊಳಕೆ-
ಯೊಡೆಯಲಿ ಅಲ್ಲಿ ನಿನ್ನಲ್ಲಿ ಕಳಿತ ಪೂರ್ವಜರ ಫಲಮಹತ್ವ.
೨ ಅನ್ಯ
ನೀಲ ನಿಷ್ಪಥದಲ್ಲಿ ಅಸ್ಪಷ್ಟಕ್ಕೆ ತುಡಿಯುವ ಹಕ್ಕಿ
ಕಲಿತ ಮೊದಲ ಪಾಠವೆ ಇಷ್ಟು:
ನೆಲದ ಗಾಳಿಗೆ ರೆಕ್ಕೆ ಸ್ಪಂದಿಸಿದರೂ, ಗುರಿ ತೆರೆದ ಆಕಾಶ.
ರೆಕ್ಕೆ ಚಾಚಿದರೆ ದಿಗಂತ ಮರ‍್ಯಾದೆಯೊಳಗೆ ಸರಳ ರೇಖೆಯ
ಮಾತು ಭೂಗೋಳಕ್ಕೆ ಸಂಬಂಧಿಸಿದ್ದು, ಶುದ್ಧ ಡೊಂಕು.
ಇಷ್ಟಗಳ ನಿರ್ಣಯಿಸುವ ಮೊದಲೇ ಪಡೆದದ್ದು ಬೇಡದಷ್ಟು: ಹುಟ್ಟಿದ್ದು, ಆಯುಷ್ಯ ಕುಡಿದದ್ದು, ಸಾವ ಕಳೆಗೆ ಬಯಸಿದ್ದು,
ಸುಳ್ಳೇ ಪಲಾಯನಗಳ ಸುಖಿಸಿದ್ದು, ತಿಳಿವಿನಾಚೆಗಿನ ಮಹತ್ವ
ಮರ್ಮಗಳ ಮೂಗಿನ ಮೇಲೆ ಬೆರಳಿಟ್ಟಿದ್ದು, ಸತ್ಯಕ್ಕೆ ಕೆರಳಿದ್ದು,
ಸುಳ್ಳಿಗರಳಿದ್ದು, ಪಶ್ಚಾತಾಪಕ್ಕೆ ಸೋತು ಫಲಿತಾಂಶವಾದದ್ದು,
ಒಪ್ಪಿಕೊಂಡದ್ದು ; ಅನುಭವವ ಬಿತ್ತಿ ಬದುಕಿಗೆ ಬೆಲೆ ಕಟ್ಟಿದ್ದು.
ಪಾಂಥನಾದರೆ ಇಲ್ಲಿ ಅವಸರಕ್ಕೆ ಜಿಜ್ಞಾಸೆ ಮೆದುಳಿನ ಆಸ್ತಿ.
ಉಂಡದ್ದು ದೇಹಪುಷ್ಟಿ, ಇಂದ್ರಿಯ ತೃಪ್ತಿ ಮನಸ್ಸಿನ
ಸೃಷ್ಟಿ, ಮನಸ್ಸು ಭೂತಗಳ ಸಮಷ್ಟಿ , ಇಂತು ಜೀಯಾ,
ಮೂಲಭೂತ ಪ್ರಾಪ್ತಿಗಳಿಗೆಲ್ಲ ಹೊಸ ಉತ್ತರಗಳ ಹುಡುಕುವ
ಮಾತೆ ಹಳಸು ; ಒಪ್ಪಿದರು ಇತಿಹಾಸ, ಪುನಃಪ್ರಾಪ್ತಿ ಸಲೀಸು.
ನಿಷ್ಕೃತಿಯ ಮೊಟ್ಟೆಯೊಡೆಯುವವರೆಗೆ ಆಚೆ ಕಾವಾಗಿ
ಕಾಯ್ದ ಬಯಲಿಗೆ ಕಳವಳ, ಹೌದೆ ?
ಹೀಗಿರಲು, ರೆಕ್ಕೆ ಬಲಿತು ಅದರ ಹೆಗಲೇರಿದೆಯೆನ್ನು,
ಆಗಲೂ ಸ್ವಕೀಯವೆನ್ನಿಸದೆ ಈ ಎಲ್ಲ ತಳಮಳದ ಕವಳ ?
ಅಲೆಯುವವನಿಗೂ ಕೂಡ ಒಮ್ಮೊಮ್ಮೆ ಹೆಜ್ಜೆ
ಗುರುತನ್ನು ಮರಳಿನಲ್ಲಾದರೂ ಮೂಡಿಸುವ ಹಂಬಲವುಂಟೆ ?
ಇಷ್ಟಕ್ಕೆ ಇಲ್ಲಿ ಇಟ್ಟವರಾರು ಏನಿಲ್ಲವೆನ್ನಿಸುವ ಇಂಥ ತೆರವಾದ ಬಯಲ ?
ಇದರೊಳಗೇ ಭ್ರಮಿಸುವ ಗ್ರಹ ತಾರೆಗಳ, ಬೆಳಕಿನ ವರ್ಷಗಳ,
ವ್ಯತ್ಯಸ್ಥ ಕಾಲಗಳ, ಅಸಂಖ್ಯ ಆಯಾಮಗಳ ಸಿಕ್ಕುಬಿದ್ದಿರುವ ಜಾಲ ?
ಮುಳುಗಿ ಮುಳುಗದೆ ಇಲ್ಲಿ ರೆಕ್ಕೆ ಬಡಿಯದೆ ಇಲ್ಲಿ ತೇಲಿದರೆ
ಕೊಂಚ ಸ್ವಸ್ಥ, ತಿಳಿದೀತು: ಉತ್ತರಗಳು ಯಾರಿಗೂ ಯಾವ
ಕಾಲಕ್ಕೂ ಬೇಕಾಗಿಯೇ ಇದ್ದಿಲ್ಲ ; ಆಹಾ, ನಿಜದ ಗಡಿಯಲ್ಲಿ ಮರುಳಾಗಿ
ಎಡವಿದರೆ ತೆರೆಯ ನಿರಾಳದಲ್ಲಿ ಸಂದೇಹಗಳು ಮತ್ತೆ ಗಾಳಿಯಾಡುತ್ತವೆ.
ದಟ್ಟ ಕವಿಯುವ ಇರುಳ ಗುರುತ್ವವನ್ನು ಎಲ ಎಲಾ, ಹಗಲಿನ ಸೊಳ್ಳೆ
ಪರದೆ ಕವಿಗು, ಉಸಿರುಗಟ್ಟಿಸಿ ಕೊಂದಿತೇ, ಹೇಗೆ ಮತ್ತು ಏಕೆ ಸಾಧ್ಯ ?
ಹಾಡೇ ಹಗಲು ಆಕಾಶದೂರಗಳು ಇದ್ದಲ್ಲಿ ಇಂಗಿ, ಕಣ್ಣಳವಿನೊಳಗೆ
ತಂಗುವುದಷ್ಟೆ ಸದಾ ಕಾಲಕ್ಕೆ ಚೋದ್ಯ.
ಹೀಗೆ, ಬೆಳಕು ತೆರೆಯುವುದಕ್ಕಿಂತ ಮುಚ್ಚಿ ಮರೆಸುವುದೆ ಹೆಚ್ಚು.
ಗತಿ ಬದಲಾಯಿಸಿದರೂ ವಿಕಾಸವಾದಕ್ಕೆ ಸಾಪೇಕ್ಷ ಗತದ ಸಾಕ್ಷ್ಯವೆ ದಿಕ್ಕು.
ಇಲ್ಲಿ ಪರಮಾಣುಗಳು ಏಕಾಕಿ ಜತೆಗಾಗಿ ಅಲೆವ ಅಕ್ಷರ ಸ್ಥಿತಿಯಲ್ಲಿ
ಆಗೀಗ ಪರಿಧಿಗಳು ಬಿರಿದು, ಉದ್ದಗಲ ಆಳವೆತ್ತರಗಳೆಲ್ಲ ಬರಿದು ;
ತೇಲುತ್ತಲೇ ಇರುವಾಗ ಕಾಲೂರುವಗತ್ಯವೇ ಇರದು ;
ಬದಲಾವಣೆಯೊಂದೆ ನಿರಂತರವಾದ ಸದ್ಯದ ಸುಳಿಯಲ್ಲಿ
ಅನ್ಯತ್ವದ ಸ್ವತ್ವ ಸಂತೋಷಗಳು ತಮ್ಮನ್ನು ತಾವು ತೊರೆದವೆನ್ನು-
ಓ, ಈಗ ಖಾಸಗಿಯಾಗಿ ಹೊಸ ಪ್ರಶ್ನೆಗಳ ಚಲಾಯಿಸುವ ಸ್ವಂತ ಸರದಿ !
.
ಅಸ್ತಿತ್ವವಾದ ಮತ್ತು ಸಾರ್ತ್ರ
ಅಸ್ತಿತ್ವವಾದ ಮತ್ತು ಸಾರ್ತ್ರ
-ಮೀರಾ ಚಕ್ರವರ್ತಿ
ಇಂದಿನ ಪಾಶ್ಚಾತ್ಯ ತತ್ವಶಾಸ್ತ್ರಗಳಲ್ಲಿ ಅಸ್ತಿತ್ವವಾದವು ಎಷ್ಟು ಜನಪ್ರಿಯವೋ ಅಷ್ಟೇ ಮಟ್ಟಿಗೆ ಅಪಗ್ರಹಿತವೂ ಆಗಿದೆ. ಅದರ ಪ್ರವಂಖ ಪ್ರವರ್ತಕ ಜ್ಯಾಂ-ಪಾಲ- ಸಾರ್ತ್ರ ಪ್ಯಾರಿಸ್ಸಿನಲ್ಲಿ ಒಮ್ಮೆ ಮಾತನಾಡುತ್ತ “ಅಸ್ತಿತ್ವವಾದ ಎಂಬ ಶಬ್ದವನ್ನು ಉಪಯೋಗಿಸುವ ಅನೇಕರು ಅದನ್ನು ವಿವರಿಸಬೇಕಾಗಿ ಬಂದಾಗ ಮುಜುಗರ ಪಡುತ್ತಾರೆ” ಎಂದನು. ಸಾರ್ತ್ರ ತನ್ನ ಕಾದಂಬರಿಗಳು ಹಾಗೂ ನಾಟಕಗಳ ಮೂಲಕ ಜನಪ್ರಿಯಗೊಳಿಸಿದ ಅಸ್ತಿತ್ವವಾದವು ಇಂದಿನ ಯುರೋಪಿನ ಮನೋಭಾವವನ್ನು ಪ್ರತಿನಿಧಿಸುತ್ತದೆ. ಅದು ಕ್ಯಾಂಟ ವಂತ್ತು ಹೆಗೆಲ್ ಇವರುಗಳ ತತ್ವಶಾಸ್ತ್ರಗಳ ಅಂತರ್ಲಾಗಗಳು ಮತ್ತು ಎರಡನೆಯ ಜಾಗತಿಕ ಮಹಾಯುದ್ಧದ ದಿನಗಳಲ್ಲಿ ಯುರೋಪಿನಲ್ಲಿಯ ವ್ಯಾಪಕ ಭ್ರಮನಿರಸನದ ಪರಿಣಾಮವಾಗುತ್ತದೆ. 1930 ರ ಮಹಾ ಆರ್ಥಿಕ ಹಿಂಜರಿತ, ಎರಡನೇ ಜಾಗತಿಕ ಮಹಾಯುದ್ಧದ ಸ್ಫೋಟ ಮುಂತಾದ ವಿದ್ಯಮಾನಗಳು ಅಸ್ತಿತ್ವವಾದದ ಬರವಿಗೆ ಯುರೋಪಿನ ಮನೋಭೂಮಿಕೆಯನ್ನು ಸಿದ್ಧಗೊಳಿಸಿದವು. ಅಸ್ತಿತ್ವವಾದವು ಯುರೋಪಿನಲ್ಲಿ ಒಂದು ಮೂರ್ತರೂಪ ಪಡೆಯಲು ಪ್ರಾಯಶಃ ಫ್ರಾನ್ಸಿನ ಪರಾಭವವೇ ಕಾರಣವಿರಬಹುದು.
ಹೆಗಲ್‌ನ ಅಧ್ಯಾತ್ಮಮೂಲ ತತ್ವಶಾಸ್ತ್ರದ (metaphysics) ಬಗ್ಗೆ ಮತ್ತು ಕ್ಯಾಂಟನ ವಿಚಾರವಾದದ (rationalism) ಬಗ್ಗೆ ತಾತ್ವಿಕ ನೆಲೆಯಲ್ಲಿ ಉಂಟಾದ ಭ್ರಮನಿರಸನ
ಫ್ರಾನ್ಸಿನ ಪರಾಭವದಷ್ಟೇ ತೀವ್ರವೂ ಕಹಿಯೂ ಆಗಿತ್ತು. “ಇರುವಿಕೆ” (being) ಹಾಗೂ ‘ಆಲೋಚನೆ’ (thought)ಗಳನ್ನು ಸಮೀಕರಿಸಿದ ಹೆಗಲ್‌ನ ತತ್ವಶಾಸ್ತ್ರ ಭ್ರಮನಿರಸನವನ್ನುಂಟು ಮಾಡಿದ್ದಷ್ಟೇ ಅಲ್ಲದೇ ಬಂಡಾಯಕ್ಕೂ ಪ್ರಚೋದನೆ ನೀಡಿತು. ಹೆಗಲ್ ಒಡಬೆರಸಿಟ್ಟ ‘ಇರುವಿಕೆ” ಮತ್ತು “ಆಲೋಚನೆಗಳನ್ನು ಪ್ರತ್ಯೇಕಿಸುವುದು ಡೇನಿಶ್ ತತ್ವಚಿಂತಕ ಸೋರೆನ್ ಸೀರ್ಕೆಗಾರ್ಡನಿಗೆ ಪ್ರಯಾಸಕರವೇ ಆಯಿತು. ಕೀರ್ಕೆಗಾರ್ಡನಿಗೆ ಅಸ್ತಿತ್ವ ಎಂದರೆ “ಆಲೋಚನೆ”ಯಿಂದ ಪ್ರತ್ಯೇಕಗೊಂಡ “ಇರುವಿಕೆ’. “ವ್ಯವಸ್ಥೆ’ಯ ಅಂಗಭಾಗ ಮಾತ್ರ ಮನುಷ್ಯ ಎಂಬಂಥ ಹೆಗಲ್‌ನ ಕಲ್ಪನೆಯನ್ನು ಸಾರ್ತ್ರ ಕಟುವಾಗಿ ವಿರೋಧಿಸಿ, ಮಾನವನನ್ನು ‘ಮುಕ್ತ’ ಎಂದು ಘೋಷಿಸಿದ. ಹೆಗಲ್ ‘ವ್ಯವಸ್ಥೆಯನ್ನು ಆರಾಧಿಸಿದರೆ ಅಸ್ತಿತ್ವವಾದಿಗಳು ತರ್ಕಬದ್ದ ಆಧ್ಯಾತ್ಮಿಕ ವ್ಯವಸ್ಥೆಯನ್ನೇ ನಿರಾಕರಿಸಿದರು.
ಬರ್ಕಲೆ ಹೇಳುವ ಇಂದ್ರಿಯ ಜ್ಞಾನವನ್ನೂ (sensation) ಹಾಗೂ ಹ್ಯೂಮ್ ಹೇಳುವ ಗ್ರಹಿಕೆ (Perception)ಯನ್ನೂ ಉಂಟುಮಾಡುವ, ಆದರೂ ಅರ್ಥ ಮಾಡಿಕೊಳ್ಳಲಾಗದ ಪ್ರಮಾಣ ಮಾಡಿ ತೋರಿಸಲೂ ಸಾಧ್ಯವಾಗದ ಕ್ಯಾಂಟ್‌ನ ಇಂದ್ರಿಯಾತೀತ ‘ತನ್ನಲ್ಲಿ ತಾನಿರುವ ವಸ್ತು’ (thing-in-itself) ವಿನ ತತ್ವಶಾಸ್ತ್ರದ ಬಗ್ಗೆಯೂ ಭ್ರಮನಿರಸನವಾಗಿತ್ತು. ಈ ರೀತಿ, ಅಸ್ತಿತ್ವವಾದದೊಡನೆ ಬಹಳ ಕಡಿಮೆ ಅಂತರವಿರುವ ಫೆನಾಮಿನಾಲಜಿ. * (ಪ್ರಜ್ಞೆಯ ರಚನಾ ಮೂಲ ವಿಶ್ಲೇಷಣೆ) ಕ್ಯಾಂಟ ಹಾಗೂ ಅವನಂತಹ ವಿಚಾರವಾದಿಗಳ “ಇಂದ್ರಿಯಾತೀತ ಅಸ್ತಿತ್ವ’ವುಳ್ಳ ವಸ್ತು ಮೂಲ ತತ್ವಶಾಸ್ತ್ರದ ವಿರುದ್ಧದ ಬಂಡಾಯವಾಗಿದೆ.
ಈ ರೀತಿ ಅಸ್ತಿತ್ವವಾದವು ಕೇವಲ ಅಧ್ಯಾತ್ಮ ಮೂಲ ತತ್ವಶಾಸ್ತ್ರವಾಗಿರದೆ ಮನುಷ್ಯ ಪ್ರಜ್ಞೆಯ ಮನೋವಿಶ್ಲೇಷಣೆಯೂ, ರಚನಾ ಮೂಲ ವಿಶ್ಲೇಷಣೆಯೂ ಆಗಿದೆ. ಅದು ತಾರ್ಕಿಕ ಲೋಕ ಸಿದ್ಧಾಂತವಾದಕ್ಕೆ (Logical Positivism) ತೀರ ವ್ಯತಿರಿಕ್ತವಾದ ಮನುಷ್ಯನ ತೀವ್ರಾನುರಕ್ತಿಗಳ ಸಿದ್ಧಾಂತವಾಗಿದೆ. ಸೋರನ್ ಕೀರ್ಕೆ ಗಾರ್ಡನ ಮನೋವಿಜ್ಞಾನ, ನೀತ್ಜೆಯ ತತ್ವಶಾಸ್ತ್ರ, ಹಸ್ರೆಲನ ಮೂಲ ತತ್ವಶಾಸ್ತ್ರ (ontology) ಇವುಗಳು ಅಸ್ತಿತ್ವವಾದದ ನೆಲೆಗಟ್ಟಾಗಿದೆ. “ನಿರೀಶ್ವರವಾದದ ಸುಸಂಗತ ನೆಲೆಯಿಂದ ಎಲ್ಲ ಪರಿಣಾಮಗಳನ್ನು ಪಡೆಯುವ ಯತ್ನ” ಎಂದು ಸಾರ್ತ್ರ ಇದಕ್ಕೆ ಪರಿಭಾಷೆ ನೀಡುತ್ತಾನೆ, ಇದೊಂದು ಮಾನವನನ್ನು ಕೇಂದ್ರಬಿಂದುವನ್ನಾಗಿ ಇಟ್ಟುಕೊಂಡ ನವ ಮಾನವತಾವಾದ.
* ಫಿನಾಮಿನಾಲಜಿ ಒಂದು ವಿಧಾನ, ಅದು ಪ್ರಜ್ಞೆಯ ಸ್ವರೂಪದ ಅಧ್ಯಯನ ಎಂದು ಹಸ್ರೆಲ್ ಹೇಳುತ್ತಾನೆ.
ಮಾನವ ಮತ್ತು ಆತನ ಪರಿಸರವನ್ನು ತಿಳಿಯುವ ಪ್ರಯತ್ನವೇ ತತ್ವಚಿಂತನೆ ಎನಿಸಿಕೊಳ್ಳುತ್ತದೆ. ಸಾಕ್ರಟೀಸನ “ನಿನ್ನನ್ನು ತಿಳಿ’ (know thyself) ಡಕಾರ್ತನ ‘ಪ್ರಜ್ಞೆ’ (cogito) ‘ತನ್ನತನದ ನೇರ ಜ್ಞಾನ’ ಉಪನಿಷತ್ತಿನ ‘ಆತ್ಮಾನಂ ವಿದ್ಧಿ’-ಇಲ್ಲಿಂದ ಅಸ್ತಿತ್ವವಾದದ ಪ್ರಾರಂಭ.
ಭೌತವಾದವು (materialism) ಮನುಷ್ಯ ಪ್ರಯತ್ನಕ್ಕೆ ಯಾವುದೇ ಅವಕಾಶವನ್ನು ಉಳಿಯಗೊಟ್ಟಿರಲಿಲ್ಲ. ಅದು ‘ಗುಂಪಿ’ನಲ್ಲಿ ಅವನನ್ನು ಮುಳುಗಿಸಿತ್ತು. ನಿಯತವಾದ (determinism) ಆಧಿಪತ್ಯ ನಡೆಸಿತ್ತು. ಮನುಷ್ಯ ಹುಟ್ಟು ಹೇಡಿ, ಹುಟ್ಟು ಶೂರ ಅಥವಾ ಹುಟ್ಟು ಜಿಪುಣನಾಗಿರುತ್ತಾನೆ ಎಂದು ಭಾವಿಸಲಾಗುತ್ತಿತ್ತು. ಆದರೆ ಈತ ಹುಟ್ಟುವ ಮೊದಲು ಇವನು ಹೀಗಿರಬೇಕೆಂದು ಕಲ್ಪಿಸಿಕೊಂಡವರು ಯಾರು ? ಸಾರ್ತ್ರ ಕಾಗದ ಕತ್ತರಿಸುವ ಚಾಕುವಿನ ಉದಾಹರಣೆಯನ್ನು ಕೊಡುತ್ತಾನೆ. ಅದನ್ನು ತಯಾರಿಸುವ ಮುನ್ನವೇ ಅದರ ಮೂಲತತ್ವ ಮತ್ತು ಬಳಕೆ ಇಲ್ಲವೇ ಉಪಯೋಗಗಳ ಕಲ್ಪನೆಯಾಗಿರುತ್ತದೆ. ನೀತ್ಯೆಯ ‘ದೇವರು ಸತ್ತ’ ಜಗತ್ತಿನಲ್ಲಿ ಮನುಷ್ಯನನ್ನು ಆತ ಹುಟ್ಟುವ ಮೊದಲೇ ಕಲ್ಪಿಸಲು ಯಾರೂ ಇಲ್ಲ. ಆದುದರಿಂದ ಮನುಷ್ಯ ಮೊದಲು ಇರುತ್ತಾನೆ ನಂತರ ಆಗುತ್ತಾನೆ, ಅಸ್ತಿತ್ವ, ಸತ್ವಕ್ಕಿಂತ ಮೊದಲು (existence precedes essence.).ಅಸ್ತಿತ್ವವಾದಕ್ಕೆ ಅತಿ ಮುಖ್ಯವೆನಿಸಿದ ಈ ಮೂಲತತ್ವದ ನೆಲೆಗಟ್ಟನ್ನು ಒದಗಿಸಿಕೊಟ್ಟವನು ಜರ್ಮನ್ ತತ್ವಚಿಂತಕ ಹೀಡೆಗ್ಗರ್. ಮಾನವನನ್ನು ಅವನ ಅಸ್ತಿತ್ವಕ್ಕಿಂತ ಮೊದಲು ಪರಿಭಾಷಿಸಲು ಸಾಧ್ಯವಿಲ್ಲ. ವಸ್ತುಗಳ ಬಗ್ಗೆ ಮಾತ್ರ ಹಾಗೆ ಮಾಡಲು ಸಾಧ್ಯ. ಮಾನವ ತನ್ನ ಕ್ರಿಯೆಯ ಮೂಲಕ ತನ್ನ ಪರಿಭಾಷೆಯನ್ನು ಕಲ್ಪಿಸಿಕೊಳ್ಳುತ್ತಾನೆ.
ಸಾರ್ತ್ರನು ‘ಸನ್ನಿವೇಶ’ ಎಂದು ಬಣ್ಣಿಸುವ ಚೌಕಟ್ಟಿನಲ್ಲಿ ಮನುಷ್ಯ ಆಯ್ಕೆಗಳನ್ನು ಮಾಡುತ್ತಾ ಕ್ಷಣದಿಂದ ಕ್ಷಣಕ್ಕೆ ಬದುಕಬೇಕಾಗಿದೆ. ಮೊದಲು ಆತ ‘ಇದ್ದು’ ತರುವಾಯ “ಆಗು’ವುದರಿಂದ ತನ್ನ ಕ್ರಿಯೆಗಳನ್ನು ಆಯ್ದುಕೊಳ್ಳಲು ಆತ ಮುಕ್ತ. ವೈವಿಧ್ಯಮಯ ಸಾಧ್ಯತೆಗಳು ಆತನ ಎದುರಾಗುತ್ತವೆ. ಒಂದು ನಿರ್ಧಾರಕ್ಕೆ ಬರಲು ನೆರವಾಗುವಂತಹ “ಮಾನವ ಸ್ವಭಾವ” ಎಂಬುದು ಅವನ ಹಿನ್ನೆಲೆಯಲ್ಲಿಲ್ಲ. ಸಾರ್ತ್ರ ಇದಕ್ಕೊಂದು ಉದಾಹರಣೆ ಕೊಡುತ್ತಾನೆ. ಒಬ್ಬ ಮನುಷ್ಯನ ಮನೆಯಲ್ಲಿ ದೇಶಪ್ರೇಮಿ: ಯೋಧರು ಅಡಗಿರುತ್ತಾರೆ. ಅವರ ಶೋಧಕ್ಕಾಗಿ ಬಂದ ಶತ್ರುಯೋಧರು ಅವನ ಮಗಳ ಮೇಲೆ ಅತ್ಯಾಚಾರಕ್ಕೆ ಮುಂದಾಗುತ್ತಾರೆ. ಈ ಸನ್ನಿವೇಶದಲ್ಲಿ ಒಂದಲ್ಲ ಒಂದು ದಿನ ದೇಶಪ್ರೇಮಿ ಯೋಧರನ್ನು ವಂಚಿಸುವುದೇ ಅಥವಾ ಮಗಳ ಮೇಲೆ ಅತ್ಯಾಚಾರಕ್ಕೆ ಅವಕಾಶ ನೀಡುವುದೇ ಎಂಬ ನಿರ್ಧಾರಕ್ಕೆ ಆ ಮನುಷ್ಯ ಬರಲೇಬೇಕಾಗುತ್ತದೆ. ಮಗಳನ್ನು ಒಪ್ಪಿಸಲು ದೇಶಪ್ರೇಮವಾಗಲಿ, ದೇಶ ಬಾಂಧವರನ್ನು ವಂಚಿಸಲು ಕುಟುಂಬ ಪ್ರೇಮವಾಗಲಿ ಪ್ರೇರಕವಲ್ಲ. ಆದರೆ ಮಗಳನ್ನು ಒಪ್ಪಿಸುವುದರ ಮೂಲಕ ಆತ ದೇಶಪ್ರೇಮಿಯಾಗುತ್ತಾನೆ. ಮನುಷ್ಯ ಮುಕ್ತ ಎಂದು ಸಾರ್ತ್ರ ಹೇಳುವುದು ಇದೇ ಕಾರಣಕ್ಕಾಗಿ. ಅಸ್ತಿತ್ವಕ್ಕಿಂತ ಸತ್ವ ಮೊದಲಾದರೆ ಅವನ ಕ್ರಿಯೆ ಪೂರ್ವನಿಶ್ಚಿತವಾಗಿಬಿಡುತ್ತದೆ. ಆದುದರಿಂದ ಅವನು ಮುಕ್ತನಲ್ಲ. ಆದರೆ ಆಸ್ತಿತ್ವ ಸತ್ವಕ್ಕಿಂತ ಮೊದಲಾದುದರಿಂದ ಅವನ ಇರುವಿಕೆಯೇ ಅವನ ಆಗುವಿಕೆಯನ್ನು ನಿರ್ಧರಿಸುವ ಕಾರಣ ಆತ ಮುಕ್ತ. ಈ ಮುಕ್ತಿಯಿಂದ ಆತನಿಗೆ ಬಿಡುಗಡೆ ಇಲ್ಲ. ಆಯ್ಕೆ ಅನಿವಾರ್ಯ. ತಾನೊಂದು ಆಯ್ಕೆ ಮಾಡುತ್ತಿಲ್ಲವಾದರೂ ಆತ `ಆಯ್ದುಕೊಳ್ಳದಿರುವ’ ಆಯ್ಕೆಯನ್ನು ಮಾಡುತ್ತಿರುತ್ತಾನೆ. ಮನುಷ್ಯ ‘ಅಸಹಾಯ’ ಮುಕ್ತ ಸ್ಥಿತಿಗೆ ದೂಡಲ್ಪಟ್ಟಿದ್ದಾನೆ. (condermned to be free.) 3 ಎಂದು ಸಾರ್ತ್ರ ಹೇಳುತ್ತಾನೆ. ಅಸಹಾಯ ಏಕೆಂದರೆ ಅವನು ತನ್ನ ಹುಟ್ಟಿಗೆ ಕಾರಣನಲ್ಲ. ‘ಮುಕ್ತ’ ಏಕೆಂದರೆ ದೇವರಿಲ್ಲದ ಈ ಜಗತ್ತಿನಲ್ಲಿ ಆತ ಅನಾಥ, ಏಕಾಕಿ (forlorn). ಹೀಗಾಗಿ ಮನುಷ್ಯನ ಅಪರಿಮಿತ ಸಾಧ್ಯತೆಗಳಿಗೆ ಇರುವ ಒಂದೇ ಮಿತಿಯೆಂದರೆ `ಸಾವು. ಕ್ಷಣದಿಂದ ಕ್ಷಣಕ್ಕೆ ಆಯ್ಕೆಗಳ ಮೂಲಕವೇ ಆತ ಬದುಕುವುದರಿಂದ ಆತನ ಸ್ವರೂಪ ಎಂದಿಗೂ ಅನಿಶ್ಚಿತ ಮತ್ತು ಆಯ್ಕೆಯ ಸ್ವಾತಂತ್ರ ಅವನಿಗಿರುವುದರಿಂದ ಆತ ತಾನು ಮಾಡುವುದಕ್ಕಷ್ಟೇ ಅಲ್ಲ, ತನಗೂ ಅಥವಾ ತಾನು ಏನಾಗಿದ್ದಾನೆಂಬುದಕ್ಕೂ ಅಥವಾ ತಾನು ಏನಾಗುತ್ತಾನೆಂಬುದಕ್ಕೂ ಹೊಣೆಗಾರ. ಆತ ಯಾವಾಗಲೂ ‘ಆಗುತ್ತಿರುತ್ತಾನೆ’. ಕಾರಣ ಮನುಷ್ಯನನ್ನು ಕಂಡುಕೊಳ್ಳುವುದು’ ಮನುಷ್ಯನೇ. ಒಳಿತು ಕೆಡ-ಕುಗಳನ್ನು ಕಂಡುಕೊಳ್ಳುವುದೂ’ ಆತನೇ. ಆತ ನರಕಕ್ಕೆ ದೂಡಲ್ಪಟ್ಟನೆಂದರೆ ಆ ನರಕವೂ ಆತನ ಕೃತಿಯೇ. ‘ಮುಕ್ತಿ’ ಮತ್ತು ‘ಹೊಣೆಗಾರಿಕೆ’ಯ ಈ ತತ್ವಚಿಂತನೆಯಲ್ಲಿಯೇ ಅಸ್ತಿತ್ವವಾದೀ ನೈತಿಕತೆಯ ಅಂಕುರಗಳನ್ನು ಕಾಣಬಹುದು. ಪಾಪ ಎಂಬುದಿಲ್ಲ. ಸಾರ್ತ್ರನಿಗೆ ಅದು ಒಂದು ಕೆಟ್ಟ -ನಂಬಿಗೆ ಮಾತ್ರ. ಈ ಮುಕ್ತಿಯು ‘ಸಂಕಟ’ (anguish) ದಿಂದ ತುಂಬಿದೆ. ಮಗನನ್ನು ಬಲಿ ಕೊಡಲು ಕನಸಿನಲ್ಲಿ ಕಾಣಿಸಿಕೊಂಡ ದೇವತೆ ಕರೆ ನೀಡಿದ ಸಂದರ್ಭದಲ್ಲಿ ಅಬ್ರಹಾಮನಿಗೆ ಇದ್ದ ಸ್ವಾತಂತ್ರ ತನ್ನೊಟ್ಟಿಗೆ ಸಂಕಟವನ್ನು ಕರೆತಂದಿತು. ಕನಸಿನ ದೇವತೆ ಸತ್ಯ ಅಥವಾ ಮಿಥ್ಯ ಎಂದು ಆತ ಜಾರಿಕೊಳ್ಳುವುದು ಹೇಗೆ ? ಈ ಸಂದರ್ಭ ಕೊಂಚ ಮಟ್ಟಿಗೆ ದಾಯಾದಿಗಳನ್ನೇ ಸಾಯಿಸಬೇಕಾಗಿ ಬಂದ ಅರ್ಜುನನ ವಿಷಾದಯೋಗವನ್ನು ಹೋಲುತ್ತದೆ. ಕೃಷ್ಣನನ್ನು ದೇವರೆಂದು ಬಗೆದುದು ಅರ್ಜುನನ ಸ್ವಂತ ಆಯ್ಕೆಯಲ್ಲವೇ ? ಮನುಷ್ಯ ಈ ರೀತಿ ಏಕಾಕಿ.
ಮನುಷ್ಯ ಸನ್ನಿವೇಶಗಳಲ್ಲಿ ಇರುತ್ತಾನೆ ಮತ್ತು ತಾನು ಮುಕ್ತನೆಂದು ಅರಿಯುತ್ತಾನೆ. ಆಯ್ಕೆಗಳ ಮೂಲಕ ತನ್ನನ್ನು ಆಯ್ದುಕೊಳ್ಳುವಾಗ ‘ಆದರ್ಶ ಮಾನವ’ನ ಕಲ್ಪನೆಯನ್ನು ಆಯ್ಕೆ ಮಾಡುತ್ತಾನೆ ಹಾಗೂ ತನ್ಮೂಲಕ ಇತರರನ್ನು ಆಯ್ಕೆ ಮಾಡುವ’ ಹೊಣೆಗಾರಿಕೆಯನ್ನೂ ವಹಿಸಿಕೊಳ್ಳುತ್ತಾನೆ. ಹೀಗಾಗಿ ಆತ ತನಗಾಗಿ ಮಾತ್ರವಲ್ಲದೆ ಇತರರಿಗೂ ಹೊಣೆಗಾರನಾಗಿರುತ್ತಾನೆ. ಜಾಗತಿಕ ಮಟ್ಟದಲ್ಲಿ ಈ ಹೊಣೆಗಾರಿಕೆ ಹೊಸ ಮಾನವತಾವಾದ ಆಗುತ್ತದೆ. ಮನುಷ್ಯ ತಾನು ಕಾಣುತ್ತಾನಷ್ಟೇ ಅಲ್ಲ ಅನುಭವಿಸುತ್ತಾನೆ ಕೂಡಾ. ಆತ ‘ಜಗತ್ತಿನಲ್ಲಿ’ ಇದ್ದಾನೆಯೇ ಹೊರತು ‘ಜಗತ್ತಿನ-ನಡುವೆ’ ಅಲ್ಲ. “ಜಗತ್ತಿನೊಂದಿಗೆ ಸಹ-ಅಸ್ತಿತ್ವ ಪಡೆದಿರುವ ಶರೀರ ಎಲ್ಲ ವಸ್ತುಗಳನ್ನು ವ್ಯಾಪಿಸಿರುತ್ತದೆ ಹಾಗೂ ಅದೇ ಕಾಲಕ್ಕೆ ಈ ಒಂದು ಬಿಂದುವಿನಲ್ಲಿ ‘ಘನೀಭೂತ’ವಾಗಿರುತ್ತದೆ.” 4 ಸಾರ್ತ್ರನ ‘ನಾಸಿಯ’ ಎಂಬ ಕಾದಂಬರಿಯ ನಾಯಕ ರಾಕ್ವೆಂಟನ್ ಕೇವಲ ಕಾಣುತ್ತಾನಷ್ಟೇ ಅಲ್ಲ ಅನುಭವಿಸುತ್ತಾನೆ ಕೂಡಾ. ಆತ ‘ಜಗತ್ತಿನಲ್ಲಿ’ ಇದ್ದಾನೆ. ‘ಜಗತ್ತಿನ-ನಡುವೆ’ ಅಲ್ಲ. ಆಯ್ಕೆಯ ಸ್ವಾತಂತ್ರ್ಯ ಮತ್ತು ‘ಸನ್ನಿವೇಶ’ದ ಮೂಲಕ ಮನವರಿಕೆಯಾದ ಹೊಣೆಗಾರಿಕೆ ಮನುಷ್ಯನಿಗೆ ‘ಪ್ರಾಮಾಣಿಕ’ (authentic) ಅಸ್ತಿತ್ವವನ್ನು ದೊರಕಿಸಿಕೊಡುತ್ತದೆ. ಸಾಹಿತ್ಯದ ಬಗೆಗಿನ ಅಸ್ತಿತ್ವವಾದದ ನಿಲುವಿನ ಮೂಲಭೂತ ಅಂಶಗಳು ಇವೇ ಆಗಿವೆ. ಈ ನಿಲುವನ್ನೇ ಆಧರಿಸಿ ಸಾರ್ತ್ರ ಹಿಂದಿನ ಶತಮಾನದ ಕಾದಂಬರಿಕಾರರು ಜಗತ್ತಿನ ಕಿಂಡಿ ನೋಟವನ್ನೇ ಪ್ರಸ್ತುತಪಡಿಸಿರುವರೆಂದು ಆಪಾದಿಸಿದನು. ಮುಕ್ತಿಗೆ ದಾರಿಗಳು (Roads to Freedom) ಎಂಬ ಕಾದಂಬರಿ ಸರಣಿಯ ಮ್ಯಾಥ್ಯೂವಿನಂತಹ ಪಾತ್ರಗಳು ಷೇಕ್ಸ್‌ಪಿಯರನ ಶೈಲಾಕನಂತಹ ಪಾತ್ರಗಳಿಗಿಂತ ಮೂಲಭೂತವಾಗಿ ಭಿನ್ನವಾಗಿವೆ. ಮ್ಯಾಥ್ಯೂನ ‘ಇರುವಿಕೆ’ ಪ್ರಾಮಾಣಿಕವಾದುದಲ್ಲ ಆದರೂ ಅವನಲ್ಲಿ ಸಾಧ್ಯತೆಗಳು ಅಂತರ್ಗತವಾಗಿವೆ. ‘ಅಸ್ತಿತ್ವ ಹಾಗೂ ಶೂನ್ಯತೆ’ (Being and Nothingness) ಎಂಬ ತಾತ್ವಿಕ ಚಿಂತನೆ ಕುರಿತಾದ ಪ್ರಮುಖ ಗ್ರಂಥದಲ್ಲಿ ಸಾರ್ತ್ರ ಅಸ್ತಿತ್ವವಾದದ ರೂಪ ವಿನ್ಯಾಸಗಳನ್ನು ವಿವರಿಸಿ ಹೇಳಿದ್ದಾನೆ. ಸಾರ್ತ್ರ ಮೊದಲಿಗೆ ತನ್ನನ್ನು ಹಸ್ರೆಲ್ ಪಂಥಕ್ಕೆ ಸೇರಿದ ‘ಫಿನಾಮಿನಾಲಜಿಸ್ಟ್’ ಎಂದೇ ಭಾವಿಸಿದ್ದನು. ಆದುದರಿಂದಲೇ `ಅಸ್ತಿತ್ವ ಹಾಗೂ ಶೂನ್ಯತೆ’ಯ ಉಪನಾಮ “ಫಿನಾಮಿನಾಲಜಿಯ ಮೂಲತತ್ವಗಳಿಗೆ ಸಂಬಂಧಿಸಿದ ಒಂದು ಪ್ರಬಂಧ. ಅವನು ಪ್ರಜ್ಞೆಯ ವಿಶ್ಲೇಷಣೆ ಮತ್ತು ಇಂದ್ರಿಯಗೋಚರ ವಿಷಯಗಳಿಂದ ತನ್ನ ಪ್ರತಿಪಾದನೆ ಆರಂಭಿಸುತ್ತಾನೆ. ಪ್ರಜ್ಞೆ ‘ಯಾವುದಾದುದೊಂದರ’ (of something) ಬಗ್ಗೆಯೇ ಆಗಿರುತ್ತದೆ ಹಾಗೂ ಆ ಸ್ಥಿತಿಯಲ್ಲಿಯೇ ಅದು ಸ್ವತಃಪ್ರಜ್ಞ (self-conscious) ವಾಗಿರುತ್ತದೆ. ಈ ರೀತಿಯ ಪ್ರಜ್ಞೆಯ ವಸ್ತು (object) ದೃಷ್ಟಿಗೋಚರ ಸ್ವಭಾವ ಮಾತ್ರವುಳ್ಳದ್ದು, ತೋರಿಕೆಯಿಂದಾಚೆ ಅಥವಾ ತೋರಿಕೆಯ ಹಿಂದೆ ಇರುವ ಕಾಂಟನ ‘ತನ್ನಲ್ಲಿ ತಾನಿರುವ’ ವಸ್ತುವಿಲ್ಲ. ಇದನ್ನು ಸಾರ್ತ್ರ ಎನ್‌ಸೋಯಿ, ‘ತನ್ನಲ್ಲೇ ಇರುವ ತಾನು’ (in-itself) ಎನ್ನುತ್ತಾನೆ. ಪ್ರಜ್ಞೆಯುಳ್ಳ ವಿಷಯ, ವಿಷಯಗತ ಪ್ರಜ್ಞೆ (subject) ಸ್ವತಃ ಪ್ರಜ್ಞಾಯುಕ್ತವಾದದ್ದು. ಇದನ್ನು ಸಾರ್ತ್ರ ಪೋರಸೋಯಿ ‘ತನಗಾಗಿ ತಾನು’ (for-itself) ಎನ್ನುತ್ತಾನೆ. ಈ ಪ್ರಜ್ಞೆಯ ವಸ್ತು, ಪ್ರಜ್ಞೆಯುಳ್ಳ ವಿಷಯ, ಭಿನ್ನವಾದವುಗಳು. ಈ
ವಿಶ್ಲೇಷಣೆಯ ಮೂಲಕ ಸಾರ್ತ್ರ `ಜ್ಞಾನ’ಕ್ಕೆ ಪರಿಭಾಷೆ ನೀಡುತ್ತಾನೆ. ಪ್ರಜ್ಞೆಯ ವಸ್ತು ಹಾಗೂ ಪ್ರಜ್ಞೆಯುಳ್ಳ ವಿಷಯಗಳ ನಡುವಣ ಅಂತರ ದಾಟಲು ಅಸಾಧ್ಯವಾದುದು. ಈ ಅಂತರವನ್ನು ಸಾರ್ತ್ರ ‘ಶೂನ್ಯ’ ಎನ್ನುತ್ತಾನೆ ಹಾಗೂ ಈ ಶೂನ್ಯವನ್ನು ಕಂಡುಕೊಳ್ಳುವುದರಿಂದ ‘ಭಯ’ (dread) ಉಂಟಾಗುತ್ತದೆ ಹಾಗೂ ಅದು ಹತಾಶ (despair) ಸ್ಥಿತಿಯಲ್ಲಿ ಪರಿಣಮಿಸುತ್ತದೆ. ಈ ಅತರ ದಾಟಲು ಅಸಾಧ್ಯವೆಂದು ಕಂಡುಕೊಂಡರೂ ಸಹ ಮಾನವ ಅದನ್ನು ದಾಟಲು ಅವಿರತ ಪ್ರಯತ್ನ ಮಾಡುತ್ತಾನೆ ಹಾಗೂ ಆ ಕಾರಣ ಅಪ್ರಾಮಾಣಿಕ ಜೀವನವನ್ನು ನಡೆಸುತ್ತಾನೆ.
ಅಪರಿಹಾರ್ಯ ನೆಲೆಗೆ ತಂದು ನಿಲ್ಲಿಸುವಂತಹ ಈ ವಿಶ್ಲೇಷಣೆ ಅಸ್ತಿತ್ವವಾದವು ನಿರಾಶೆಯ ತತ್ವಚಿಂತನವೆಂದು ಟೀಕಿಸಲು ಎಡೆಮಾಡಿಕೊಟ್ಟಿದೆ. ಆದರೆ `ಅಸ್ತಿತ್ವವಾದಕ್ಕಿಂತ ಹೆಚ್ಚು ಭರವಸೆಯ ಸಿದ್ಧಾಂತ ಮತ್ತೊಂದಿಲ್ಲ’-ಎಂದು ಸಾರ್ತ್ರ ಹೇಳುತ್ತಾನೆ- ಮನುಷ್ಯನ ಭವಿಷ್ಯ ಅವನಲ್ಲಿ ಅಂತರ್ಗತವಾಗಿದೆ. ಕ್ರಿಯಾತತ್ಪರನಾಗಿರುವುದೊಂದೇ ಮನುಷ್ಯನಿಗಿರುವ ಭರವಸೆ. ಮನುಷ್ಯ ಜೀವಿಸುವುದನ್ನು ಸಾಧ್ಯವಾಗಿಸುವುದು ಕ್ರಿಯೆಯೆಂದೇ ಈ ಸಿದ್ದಾಂತ ತಿಳಿಸುತ್ತದೆ. (1) ಕ್ರಿಯೆ ಮತ್ತು ಅದರಲ್ಲಿ “ತೊಡಗುವಿಕೆಯನ್ನು ಕುರಿತ ಒಂದು ನಡವಳಿಕೆಯ ಸಂಹಿತೆ” (1) ಎಂದು ಅಸ್ತಿತ್ವವಾದವನ್ನು ಸಾರ್ತ್ರ ಬಣ್ಣಿಸುತ್ತಾನೆ. ಈ ರೀತಿ ಅಸ್ತಿತ್ವವಾದ ಮನುಷ್ಯನಲ್ಲಿ ಮೂಲಭೂತವಾಗಿರುವ ಅಪಾರ ಸಾಧ್ಯತೆಗಳ ಅರಿವನ್ನು ಅವನಿಗೆ ಉಂಟುಮಾಡಿ ಭರವಸೆಯನ್ನು ನೀಡುವ ಒಂದು ಸಿದ್ದಾಂತ.
.
ಟಿಪ್ಪಣಿ :
1 ಅಸ್ತಿತ್ವವಾದ ಮತ್ತು ಮಾನವತಾವಾದ : ಸಾರ್ತ್ರ
2 ಕನ್‌ಕ್ಲೂಡಿಂಗ್ ಪೋಸ್ಟ್ ಸ್ಕ್ರಿಪ್ಟ್ : ಸೋರೆನ್ ಕೀರ್ಕೆ ಗಾರ್ಡ್.
3 ಲೆ ಸುರ್ಸಿಸ್ : ‘ಮುಕ್ತಿಗೆ ದಾರಿಗಳು’ ಕಾದಂಬರಿ ಸರಣಿಯ ಎರಡನೇ ಕಾದಂಬರಿ.
4 ಅಸ್ತಿತ್ವ ಹಾಗೂ ಶೂನ್ಯತೆ : ಸಾರ್ತ್ರ.
ಪಾವನಾ
ಪಾವನಾ
-ನಾಗಭೂಷಣ
ಪಾವನಾ ಅವರಿಗೆ–
ಇದನ್ನು ನಿಮಗೆ ತುಂಬಾ ಸಂಕೋಚದಿಂದ ಬರೆಯುತ್ತಿದ್ದೇನೆ, ನಿಮಗೆ ಬರೆಯಬೇಕೆಂದು ಆಸೆ ಬಹಳ ಇದ್ದರೂ ತಪ್ಪು ತಿಳಿದೀರಿ ಎಂದು ಹಿಂಜರಿದು ಹಿಂಜರಿದು ಬರೆಯುತಿದ್ದೇನೆ. ನಿಮಗೆ, ನಿಮ್ಮ ಬಗ್ಗೆ ನನ್ನಲ್ಲಿದ್ದ ಸ್ನೇಹವನ್ನು, ತಿಳಿಸಲು ಆಗದೆ ಒತ್ತಿ ಎದೆಯಲ್ಲಿ ಬಚ್ಚಿಟ್ಟು ಕೊಂಡಿದ್ದನ್ನು, ಈಗ, ಆ ಸ್ನೇಹದ ನೋವನ್ನು ಕಡಮೆ ಮಾಡಿಕೊಳ್ಳಲು ಬರೆಯುತ್ತಿದ್ದೇನೆ. ನನಗೆ ನಿಮ್ಮ ಬಗ್ಗೆ ಅನ್ನಿಸುವುದನ್ನೆಲ್ಲ ಬರೆದು ಬಿಡುತೇನೆ. ಆದರೆ ಉರಿಯುತ್ತ ಇದ್ದ ಬೆಂಕಿಗೂ, ಆರಿ ಹೋಗುತ್ತಿರುವ ಇದ್ದಿಲಿಗೂ ಇರುವಷ್ಟೆ ವ್ಯತ್ಯಾಸ ಆಗ ಇದ್ದ ಭಾವನೆಗಳಿಗೂ, ಅವನ್ನು ಹೇಳುತ್ತಿರುವ ಈ ಮಾತುಗಳಿಗೂ ಇದೆ. ಇದನ್ನು ಓದಿದ ಮೇಲೆ ನಿಮಗೆ ನಾನು ತಮಾಷೆಯಾಗಿ ಕಾಣಬಹುದು, ಕೋಪ ಬರಬಹುದು, ಬೇಸರ ಉಂಟಾಗಬಹುದು, ನೀವು ನನ್ನನ್ನು ತಪ್ಪು ತಿಳಿಯುವುದಕ್ಕೆ ಕಾರಣ ಬೇಕಾದಷ್ಟು ಇದೆ. ನಿಮ್ಮೊಡನೆ ಎರಡು ವರ್ಷ ಕಳೆದರೂ ನಿಮ್ಮೊಡನೆ ಮಾತ ನಾಡಿದ್ದು ಕಡಮೆ, ನಿಮ್ಮ ಪರಿಚಯ ಆಗಲೇ ಇಲ್ಲ ಅಂತಲೂ ಅನ್ನಿಸುತ್ತದೆ. ಕೊನೆಯ ಎರಡು ತಿಂಗಳು ಸ್ವಲ್ಪ ಮಾತನಾಡಿದ್ದು ಅಲ್ಲವೇ ? ನೀವು ಆಡಿದ ಒಂದೆರಡೇ ಮಾತುಗಳು, ಆ ಸಂದರ್ಭ ನನಗೆ ಚೆನ್ನಾಗಿ ನೆನಪಿದೆ. ಆ ಎರಡು ವರ್ಷ ತುಂಬ ಹಿಂಸೆ ಅನುಭವಿಸಿದೆ–ನನಗೆ ನಿಮ್ಮ ಸ್ನೇಹ ಬೇಕು ಅನ್ನುವ ಅಪೇಕ್ಷೆ ಇದೆ ಅಂತ ನಿಮಗೆ ನಿಜವಾಗಿ
ತಿಳಿಸುವ ಬಗೆ ಹೇಗೆ ಎಂದು ತಿಳಿಯದೆ, ನಮ್ಮ ಜೊತೆಯಲ್ಲಿ ಇನ್ನೂ ಬೇರೆಯ ಹುಡುಗಿಯರಿದ್ದರಲ್ಲ-ಚಂದ್ರಿಕಾ, ವಸಂತಾ, ನರ್ಮದಾ-ಇವರೆಲ್ಲರಿಗಿಂತ ನೀವು ಬೇರೆಯದೇ ರೀತಿಯವರು ಅನ್ನಿಸಿತು.
ನನಗೆ ಮೊದಲು ನಿಮ್ಮ ಹೆಸರು ಗೊತ್ತಿತ್ತು. Register ನಲ್ಲಿ ನಿಮ್ಮ ಹೆಸರು ಆದ ಮೇಲೆ ನನ್ನದು ಇತ್ತು, ನೀವು ಗೊತ್ತಿರಲಿಲ್ಲ. ಮೊದಲ ವರ್ಷ Picnic ಗೆ ಹೋಗಿದ್ದೆವಲ್ಲ ಆಗ, ವಸಂತಾ-‘ಪಾವನಾ’-ಎಂದು ಕೂಗಿದಾಗ ನೀವು ಮಾತನಾಡಿದಿರಲ್ಲ ಆಗ ಗೊತ್ತಾಯಿತು ನೀವೇ ಪಾವನಾ ಅಂತ, ನೀವು ನನಗೆ ಗೊತ್ತಾದಿರಿ ಅಂತ ನಿಮಗೆ ಗೊತ್ತಾಗಲಿಲ್ಲ.
ಆಗಿನ ದಿನಗಳ ನನ್ನ ಸ್ಥಿತಿ ನೆನಸಿಕೊಂಡರೆ ನಾಚಿಕೆ ಆಗುತ್ತದೆ, ಆಮೇಲೆ ನಗು ಬರುತ್ತದೆ, ಅಂತಹ ಸ್ಥಿತಿ ಒಂದು ವಯಸ್ಸಿನಲ್ಲಿ ಸಹಜ ತಾನೇ ? ನಾಚಿಕೆ ಆದರೂ ನಗು ಬಂದರೂ, ಅದೂ ಒಂದು ನಿಜವಲ್ಲವೇ ? ಆಗ ಅನ್ನಿಸಿದ್ದು ತೀರ ನಿಜ ಅಂತ ಈಗಲೂ ಅಂದುಕೊಳ್ಳುತ್ತೇನೆ.
ಆದರೆ ಕೆಲವು ಸಂದರ್ಭಗಳಲ್ಲಿ ನಾನು ನಡೆದುಕೊಂಡ ರೀತಿ ತೀರ ಎಳಸಾಗಿತ್ತು,
ನಿಮ್ಮ ಹೆಸರು ನೀವು ಎರಡೂ ಪರಿಚಯವಾದ ಮೇಲೆ ನಿಮ್ಮನ್ನು ಗಮನಿಸಲು ತೊಡಗಿದೆ ತೀರ ಸಾಮಾನ್ಯ ಸಂಗತಿಗಳನ್ನೂ, ನೀವು ಬರಿಯ ಕಾಲಿನಲ್ಲಿ ಬರುತ್ತಿದ್ದಿರಿ. ಹಣೆಗೆ ಗುಂಡಗೆ ಕುಂಕುಮ ಇಟ್ಟುಕೊಳ್ಳುತ್ತಿದ್ದಿರಿ, ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದಿರಿ. ನನಗಿಂತಲೂ ಕಡಮೆ ಎತ್ತರ ಇದ್ದಿರಿ. ನಿಮ್ಮ ಹತ್ತಿರ ಒಳ್ಳೆಯ ಸೀರೆ ಮೂರು ಮಾತ್ರ ಇತ್ತು ಅಂತ ಕಾಣುತ್ತದೆ ಅಥವಾ ಹಾಗಂದುಕೊಂಡೆ. ನೀವು ನನಗಿಂತಲೂ ಶ್ರೀಮಂತರಲ್ಲ ಎಂದು ಒಂದು ತರಹ ನನಗೆ ತೃಪ್ತಿ ಇತ್ತು, ಒಂದು ವೇಳೆ ನಿಮ್ಮ ಪರಿಚಯ ಆದರೆ ನಿಮಗೆ ನಮ್ಮ ಮನೆಗಳನ್ನು ತೋರಿಸುವ ಆಸೆ ಆಗುತ್ತಿತ್ತು.
ಪಿಕ್‌ನಿಕ್ ಪೂರ್ತಿ ನೀವು ಮೌನವಾಗಿಯೇ ಇದ್ದಿರಿ, ನಾನೂ ಅಷ್ಟೆ, ಆದರೆ ನನ್ನ ಮೌನ ಬಲವಂತದ್ದು. ಅಂದರೆ ನನ್ನ ಇರುವಿಕೆ ನಾನು ಇರುವ ಗುಂಪಿನ ಮೇಲೆ ಯಾವ ಪರಿಣಾಮವನ್ನೂ ಮಾಡುತ್ತಿಲ್ಲ ಎಂದು ತಿಳಿಯುವುದರಿಂದ ಬಂದದ್ದು, ರಾಬರ್ಟನ ಮಟ್ಟವಾದ ದೇಹ, ಎತ್ತರ, ಗಡ್ಡ, ಅವನೊಡನೆ ಬೇರೆಯ ಹುಡುಗಿಯರು ಮಾತನಾಡಬೇಕೆಂದು ಹಾತೊರೆಯುತ್ತಿದ್ದುದ್ದು, ಕುಲಕರ್ಣಿ ಮಮ್ತಾಜಳ ಜೊತೆ ಇರುತ್ತಿದ್ದ ರೀತಿ ಇಂತಹವನ್ನೆಲ್ಲ ನೋಡಿ ಅಸೂಯೆಪಡುತ್ತಿದ್ದೆ, ನಾನು ಚಿಕ್ಕಂದಿನಿಂದ ಬೆಳೆದ ರೀತಿಗಳಿಗೂ, ನಂಬಿಕೊಂಡಿದ್ದ ವರ್ತನೆ ನಡತೆಗಳಿಗೂ, ಈ ಜನರ ರೀತಿ ನೀತಿಗಳಿಗೂ ತುಂಬಾ ವ್ಯತ್ಯಾಸ ಇತ್ತು. ನಾನೂ ಹೀಗೆ ಇರಬೇಕು ಅಂತ ಆಸೆಯಾಗುತ್ತಿತ್ತು, ಆದರೆ ನನ್ನ ದುರ್ಬಲ ದೇಹ, ಸಂಕೋಚ ಸ್ವಭಾವ ಅಡ್ಡಬರುತ್ತಿತ್ತು,
ಈ ಜನಗಳ ಹಾಗೆ ಇರಬೇಕು ಎಂದು ಆಸೆ ಇದ್ದರೂ ಇದು unnatural ಅನ್ನಿಸುತ್ತಿತ್ತು, ನಗು, ಮಾತು ಎಲ್ಲವೂ ಕೃತಕ ಅನ್ನಿಸುತ್ತಿತ್ತು. ಯಾಕೆ ? ನನಗೆ ಹಾಗೆ ಇರಲು ಆಗುವುದಿಲ್ಲ ಎಂಬ ಹೊಟ್ಟೆಕಿಚ್ಚಿನ ಕಾರಣಕ್ಕೇನು ? ಅವರದು ನನ್ನದಲ್ಲದ ರೀತಿಯಾದ ಮಾತ್ರಕ್ಕೆ ಅದು unnatural ಎಂದು ಯಾವ ಲೆಕ್ಕ ? ನನಗೆ ಹಾಗೆ extrovert ಆಗಿರಲು ಆಗುವುದಿಲ್ಲ ಎಂದು ಸುಮ್ಮನೆ ಇದ್ದೆ,
ಇವೆಲ್ಲ ನನಗೆ ಆಗ ಗೊತ್ತಿರಲಿಲ್ಲ, ಆಗಿನದನ್ನೆಲ್ಲ ಜ್ಞಾಪಿಸಿಕೊಂಡಾಗ ಹೀಗೆ ಕಾರಣಗಳು ಸಿಗುತ್ತವೆ, ಆದರೆ ನೀವು ಸುಮ್ಮನೆ ಇದ್ದುದು ಸಹಜವಾಗಿಯೇ ಅನ್ನಿಸಿತು. ಮೇರೆ ಸಪನೋಂಕಿರಾಣಿ-ಚಂದಾ ಓ ಚಂದಾ-ಚಪ್ಪಾಳೆ-ನಗು -ಅಟ್ಟಹಾಸ-ಹುಡುಗರು ಹುಡುಗಿಯರು-ಗದ್ದಲ-competition. ನೀವು ಮಾತ್ರ ಮೌನ. ಅದೇ ನನ್ನ ಗಮನ ಸೆಳೆದದ್ದು, ನೀವು ನನ್ನನ್ನು ಗಮನಿಸುವ ಹಾಗೆ ಏನು ಮಾಡಲಿ ? ನಿಮ್ಮ ಹಾಗೇ ಕಿಟಕಿಯ ಆಚೆ ನೋಡಿದರೆ ? ರಸ್ತೆಯ ಪಕ್ಕದಲ್ಲಿ ಮಣ್ಣು ತೋಡಿದ್ದ ಹಳ್ಳ, ಮರ, ಇನ್ನೊಂದು, ಮೇಕೆಗಳು, ಬಂಡೆ, ಅದರ ಮಧ್ಯೆ ಗಿಡದ ಬೇರು, ಮಣ್ಣಿನ ಗುಡ್ಡ ಅದರ ಮೇಲೆ ಮೋಡದ ನೆರಳು, ಲೈಟುಕಂಬ,ಫರ‍್ಲಾಂಗಿನ ಕಲ್ಲು… ಸಾಧ್ಯವಾಗಲಿಲ್ಲ. ಸಂಭ್ರಮದ ಮಧ್ಯೆ ಅದರಲ್ಲಿ ಸೇರಲು ಆಸೆಯಿದ್ದೂ ಸಂಕೋಚದ ಬಲವಂತಕ್ಕೆ ಸುಮ್ಮನೆ ಇರುವವನು ಇದಕ್ಕೆ ಹೇಗೆ ಗಮನ-ಚಲುವಯ್ಯ ಚಲುವೊ’ ಹಾಡಿಗೆ ನಾನೂ ತಟಕ್ಕನೆ ಧ್ವನಿ ಸೇರಿಸಿದೆ, ಆ ಹಾಡು ನನಗೂ ಬರುತ್ತದೆ ಎಂದು ನಿಮಗೆ ತಿಳಿಯುವುದಕ್ಕೆ, ಈಗ ನಗು ಬರುತ್ತದೆ. ಹುಚ್ಚು, ನನಗೆ ಸಹಜವಲ್ಲದ ಕೆಲಸ ಮಾಡಿದರೆ ಬಫೂನಿನ ಹಾಗೆ ತಾನೇ ಕಾಣಬೇಕು.
ಆಮೇಲೆ ನೀವು ಜಲಪಾತ ನೋಡಲು ಬಂದಿರಿ, ನಾನು ಕುಳಿತಿದ್ದ ಕಡೆ ಬಂಡೆಗಳು. ಅಲ್ಲಿಗೆ ಬರಬೇಕಾದರೂ ಕಲ್ಲುಗಳನ್ನು ಹತ್ತಿ ಇಳಿದೇ ಬರಬೇಕು, ನನ್ನ ಹಿಂದೆ ಒಂದು ಬಂಡೆ. ಅದು ಮೇಲಕ್ಕೆ ಏರಿ ತಲೆಯ ಮೇಲೆ roof ನ ಹಾಗಿತ್ತು ನಮ್ಮ ಎದುರಿಗೇ ನೀರು, ಅಲ್ಲಿಯ ತನಕ ನಿಧಾನವಾಗಿ ಹರಿದು ಬಂದದ್ದು, ಜೋರಾಗಿ ಮೂವತ್ತು ಅಡಿ ಕೆಳಕ್ಕೆ ಧುಮುಕುತ್ತಿತ್ತು, ಮತ್ತೆ ಹರಿದು ದೂರದಲ್ಲಿ ತಿರುಗಿ ಮರೆಯಾಗುತ್ತಿತ್ತು. ಆ ಧುಮುಕುವ pointನ ಪಕ್ಕದಲ್ಲಿ ನಾನು ಇದ್ದದ್ದು, ಆ ಜಾಗ ಬಹಳ ಚೆನ್ನಾಗಿತ್ತು. ನಮ್ಮ ಗುಂಪಿನ ಉಳಿದವರೆಲ್ಲ ಇನ್ನೂ ಕೆಳಗಡೆ ಇದ್ದರು, ಯಾರೋ ಒಂದಿಬ್ಬರು ದೂರದಲ್ಲಿ ಸೇತುವೆಯ ಮೇಲೆ ಹೋಗುತ್ತಿದ್ದರು, ಯಾವುದೋ ಪಕ್ಷಿ ಹಾರಿ
ಹೋಯಿತು, ಬೆಳಗಿನ ಹತ್ತು ಗಂಟೆಯ ಬಿಸಿಲು, ಹರಿಯುವ ನೀರಿನ ಕೆಳಗೆ ಬಂಡೆ ಕಲ್ಲು, ಧುಮುಕುವ ನೀರಿನ ಶಬ್ದ, ನೊರೆ, ಹೊಗೆ, ಬಿಳೀಬಣ್ಣ, ಸುಮ್ಮನೆ ನೋಡುತ್ತಿದ್ದೆ. ನೀರಿನ ಶಬ್ದದ ಜೊತೆಗೇ ಕ್ಷೀಣವಾಗಿ ಜನಗಳ ಮಾತು, ಬಿಸಿಲಿಗೆ ಸ್ವೆಟರು ಚುಚ್ಚಿದಹಾಗೆ ಆಗುತ್ತಿತ್ತು. ಸ್ವೆಟರು ತೆಗೆದೆ, ಸ್ವೆಟರು ತೆಗೆಯುವಾಗ ಮುಖ ಮುಚ್ಚಿಕೊಂಡಿತ್ತಲ್ಲ ಆ ಸ್ವಲ್ಪ ಹೊತ್ತಿನಲ್ಲಿ ಆಗಲೇ ನೀವು ಬಂದಿದ್ದೀರಿ. ನೀವು ಪಾವನಾ, ನನ್ನ ಬಲಗಡೆ ಸ್ವಲ್ಪ ದೂರದಲ್ಲಿ ನನ್ನ ಕೈಚಾಚಿದರೆ ಸಿಗುವಷ್ಟು ದೂರ. ಅಲ್ಲಿ ಕುಳಿತು ನಿಮ್ಮ ಕಾಲನ್ನು ನೀರಿಗೆ ಇಳಿಬಿಟ್ಟಿರಿ, ಆಗೊಂದು ಸಾರಿ ನಿಮ್ಮ ಮುಖ ನೋಡಿದೆ, ತುಂಬ ಸಂತೋಷ ಆಗಿತ್ತು ನಿಮಗೆ. ಬಿಳಿಯ ಕಾಲು, ಹರಿದು ಹೋಗುವ ನೀರಿನಲ್ಲಿ ನಿಮ್ಮ ಕಾಲಿನ ಉಗುರು ಬೆಳ್ಳಗೆ ಕೆಂಪಗೆ ಕಾಣುತ್ತಿತ್ತು, ನಿಮ್ಮ ಜೊತೆ ಮಾತನಾಡಬೇಕು ಅನ್ನಿಸಿತು. ಮಾತು ಗಂಟಲಿನವರೆಗೆ ಬಂದು, ಮಾತನಾಡಿಯೇ ಬಿಡುತ್ತೇನೆ ಅಂದುಕೊಂಡು ಆದರೆ ಏನು ಅಂತ ಗೊತ್ತಾಗದೆ. ಮಾತನಾಡಿಬಿಟ್ಟರೆ ಏನು ಆಗಿಹೋಗುತ್ತದೆಯೋ ಎಂದು. ಮಾತೆಲ್ಲ ಉಸಿರಾಡಿಬಿಟ್ಟು, ಎದೆ ಜೋರಾಗಿ ಹೊಡೆದುಬಿಟ್ಟು ಎದ್ದು ಹೋದೆ. ಆಗ ನಿಮಗೆ ನಾನು ಗೊತ್ತಿರಲಿಲ್ಲ.
ವಾಪಸ್ಸು ಬರುವಾಗ ಮಳೆ ಬಂತು ಜೋರು ಮಳೆ, ನಾನಿದ್ದ ಕಿಟಕಿಯ ಕಡೆ ಇರಚಲು ಇರಲಿಲ್ಲ, ಅದಕ್ಕೇ ಕಿಟಕಿ ತೆರೆದಿದ್ದೆ. ಎರಡು ಬಸ್ಸು ತಾನೆ, ನಮ್ಮದರಲ್ಲಿ ಕಡಮೆ ಜನ ಇದ್ದರು, ಯಾರು ಯಾರು ಎಂದು ತಿರುಗಿ ನೋಡಿದರೆ, ನೀವು ಮತ್ತು ನರ್ಮದಾ ನನ್ನ ಹಿಂದಿನ ಸೀಟಿನಲ್ಲಿ, ಚಡಪಡಿಸಿದೆ, ನೀರಿನಲ್ಲಿ ಮುಳುಗಿದ ಹಾಗೆ, ನೀವು ನನಗೆ ಕಾಣುವುದಿಲ್ಲ, ನಾನು ಕಾಣುತ್ತೇನೆ, ನಿಮಗೆ ಹೇಗೆ ಕಾಣುತ್ತೇನೋ ? ಬರುವಾಗ ಇದ್ದ ಆರ್ಭಟ, ಗದ್ದಲ, ಈಗ ಇರಲಿಲ್ಲ, ಎಲ್ಲರೂ ತಮ್ಮ ನೆನಪುಗಳಲ್ಲಿ ಮುಳುಗಿದ್ದರು. ಊರಿನ, ನಾಳೆಯ ಯೋಚನೆ ಮಾಡುತ್ತಿದ್ದರು, ತೂಕಡಿಸುತ್ತಿದ್ದರು. ಮಳೆಯ ಸದ್ದು. ಯಾರಾದರೂ ಬೆಳಗಿನ ಹಾಗೆ ಜೋರಾಗಿ ಹಾಡಬಾರದೆ, ಮರಗಳು ಮಸುಕು ಮಸುಕಾಗಿ ನೀರಿನ ಆಚೆ ಕಾಣುತ್ತಿತ್ತು. ಯಾರೋ ಹಳ್ಳಿಯವನು ಗೋಣಿಚೀಲ ಹೊದ್ದು ಕಂಡು ಮರದ ಕೆಳಗೆ ನಿಂತಿದ್ದ, ನಮ್ಮ ಬಸ್ಸಿಗೆ ಕೈ ತೋರಿಸಿದ. ಬಸ್ಸಿನ ಕಿಟಕಿಯ ಕಂಬಿಯ ಮೇಲೆ ನೀರಿನ ಹನಿಗಳು ಶೇಖರವಾಗಿ, ದಪ್ಪ ಆಗಿ ಕೆಳಕ್ಕೆ ಉರುಳುತ್ತಿದ್ದವು. ನೀರು ಇಳಿದು ಕಂಬಿಯ ಮೇಲೆ ಹನಿಹನಿಯಾಗಿ ಸಾಲಾಗಿ ಬರುತ್ತಿತ್ತು, ಆ ಹನಿಗಳನ್ನು ಕೈಯಲ್ಲಿ ಒರೆಸಿ ಹಾಕುವುದಕ್ಕೆ ಶುರುಮಾಡಿದ, ತಮಾಷೆ, ತುಂಬ ಚೆನ್ನಾಗಿತ್ತು. ಒರೆಸಿದ ಹಾಗೆಲ್ಲ ಮತೆ ನೀರಿನ ಹನಿ ಮಳೆ ನಿಲ್ಲುವವರೆಗೂ ಹೀಗೇ ಮಾಡುತ್ತಿದ್ದ, ಕತ್ತಲಾಗಿ ಹೊಯಿತು ಪಾವನಾ. ಕತ್ತಲಾಗುವ ಹೊತ್ತಿಗೆ ಮಳೆಯೂ ನಿಂತಿತು. ಬಸ್ಸಿನೊಳಗೆ ದೀಪಗಳು ಹತ್ತಿಕೊಂಡವು, ಓಡುವ ಬಸ್ಸಿನ ದೀಪದ ಬೆಳಕು, ಕಿಟಿಕಿಯ ನೆರಳು ರಸ್ತೆಯ ಮೇಲೆ, ಮರಗಳ ಮೇಲೆ ಬೀಳುತ್ತಿತ್ತು, ಬಸ್ಸಿನ ವೇಗ ಶಬ್ದ ಒಂದೇ ಸಮ ಇತ್ತು.
ನಿಶ್ಯಬ್ದ, ಬಸ್ಸಿನೊಳಗೆ ವಸಂತಾ ವತ್ತು ಭಾರ್ಗವಿ ಒಂದು ಜೋಡಿ ಹಾಡು ಹೇಳಿದರು. ನೀವು ನರ್ಮದಾ ಜೊತೆ ಏನೋ ಹೇಳಿದಿರಿ, ಅಕಸ್ಮಾತ್ ತಿರುಗಿ ನೋಡಿದೆ, ನರ್ಮದಾ ಮುಗುಳ್ನಕ್ಕಳು, ನನ್ನ ಕೈ ಒದ್ದೆ ಆಗಿತ್ತು, ಒರೆಸಿಕೊಂಡೆ ಮತ್ತೆ ಮೊದಲಿನ ಹಾಗೆ. ಅದು ನನಗೆ ತುಂಬಾ ಇಷ್ಟ ಆಯಿತು, ಮಳೆ ನಿಂತ ಮೇಲೆ ಸಂಜೆಯ ನಂತರದ. ಕತ್ತಲು, ವೇಗ ಶಬ್ದ ಜನ ನಿಶ್ಯಬ್ದ ಆದರೂ ಒಬ್ಬನೇ ಬಸ್ಸು ಹೀಗೆ ಹೋಗುತ್ತಿರಲಿ. ಹೋಗುತ್ತಲೇ ಇರಲಿ.
ಊರು ಬಂದಾಗ ನೀವು ನರ್ಮದಾ ಜೊತೆಯಲ್ಲಿ ಲೇಡೀಸ್ ಹಾಸ್ಟೆಲ್‌ನ ಹತ್ತಿರ ಇಳಿದಿರಿ. ನೀವು ಇದೇ ಊರಿನವರಲ್ಲ ಎಂದು ತಿಳಿದುಕೊಂಡೆ. ಹಾಗಾದರೆ ನಿಮ್ಮ ಪರಿಚಯ ಆದರೆ ನಿಮಗೆ ಕಾಗದ ಬರೆಯಬಹುದು
-ನಾನು ಮಾತನಾಡುವುದಕ್ಕಿಂತ ಹೆಚ್ಚು ಚೆನ್ನಾಗಿ ಬರೆಯುತ್ತೇನೆ. ಒಂದು ಸಾರಿ ನಾನು ಬರೆದ ಕಾಗದ ಓದಿದ ಮೇಲೆ ನೀವು ನನ್ನನ್ನು ಮರೆಯುವುದಕ್ಕೆ ಆಗುವುದಿಲ್ಲ.
ಆಮೇಲೆ ನಾನು ನಿಮ್ಮನ್ನು ದಿನವೂ ನೋಡುತ್ತಿದ್ದೆ. ಆಲದ ಮರದ ಹತ್ತಿರ ತಿರುಗುವಾಗ, ಮಹಡಿ ಮೆಟ್ಟಲು ಹತ್ತುವಾಗ, ಕಾಫಿ ಕುಡಿಯುವಾಗ, ಅಪರೂಪಕ್ಕೆ ಪಕ್ಕದ ಹುಡುಗಿಯ ಜೊತೆ ಬಗ್ಗಿ ಮಾತನಾಡುವಾಗ. ಒಂದೊಂದು ಸಾರಿ ನೀವು ನಗುತ್ತಿದ್ದಿರಿ. ಸ್ವಲ್ಪವೂ ಅಳುತ್ತಿಲ್ಲದ ನಗು, ಆ ನಗುವನ್ನು ಕಂಡು ತುಂಬಾ ಸಂತೋಷಪಡುತ್ತಿದ್ದೆ. ಆ ಸಂತೋಷ ಒಂದು ತರಹ ಸಿಹಿಯಾದ ನೋವು, ನಿಮ್ಮ ಜೊತೆಯಲ್ಲಿ ನನ್ನನ್ನು ಹೋಲಿಸಿಕೊಳ್ಳುತ್ತಿದ್ದೆ, ದೊಡ್ಡ ನೀರಿನ ಹಾಳೆಯ ಮೇಲೆ ಅಲೆಗಳು ನಿಧಾನವಾಗಿ ಬಂದ ಹಾಗೆ ಯೋಚನೆ ಮಾಡುತ್ತಿದ್ದೆ, ನನಗಿನ್ನೂ ಬೇಕಾದದ್ದು ಎಷ್ಟೊಂದು ಇದೆ ಎಂದು ನನ್ನ ಕೊರತೆಯ ಬಗ್ಗೆ, ದುಃಖ ಪಡುತ್ತಿರಲಿಲ್ಲ, ಆಶ್ಚರ್ಯಪಡುತ್ತಿದ್ದೆ, ನೀವು ಒಂದೊಂದು ಸಾರಿ ತಲೆ ಎತ್ತಿ ನನ್ನನ್ನು ನೋಡುತ್ತಿದ್ದಿರಿ, ಯಾವುದೋ ನೀರಿನ ತೆರೆಯ ಹಿಂದೆ ನೀವು ಕಂಡ ಹಾಗೆ ಇರುತ್ತಿತ್ತು, ನೀರು ಕುಡಿಯುವ ಹಸುಗಳು ತಲೆ ಎತ್ತಿ, ನಿಧಾನವಾಗಿ, ಒಂದೊಂದು ಸಾರಿ ನೋಡುವ ಹಾಗೆ, ನನಗೆ ಏನೋ ಅಸ್ಪಷ್ಟವಾಗಿ ಅರ್ಥವಾದ ಹಾಗೆ, ಆಗದ ಹಾಗೆ, ಆಗುತ್ತಿತ್ತು, ನಮ್ಮ ಹಳ್ಳಿಯ ಆಚೆ ಒಂದು ನದಿ ಇದೆ. ಅದರಲ್ಲಿ ನೀರು ಇಲ್ಲವೇ ಇಲ್ಲ, ಬರೀ ವಿಶಾಲವಾದ ಮರಳಿನ ಹಾಸಿಗೆ. ಆಚೆಯ ದಡದಲ್ಲಿ ಒಂದು ಆಲದಮರ, ದೊಡ್ಡದು, ಅದರ ಜ್ಞಾಪಕ ಮರಳಿನಲ್ಲಿ ನಡೆ ದಾಡಿದ್ದರ ಜ್ಞಾಪಕ ಬರುತ್ತಿತ್ತು, ನಮ್ಮ ಮನೆಯಲ್ಲಿ ನಿಮ್ಮ ಹಾಗೇ ಒಬ್ಬ ಹುಡುಗಿ, ಇದ್ದಿದ್ದರೆ, ಆಗ ನಮ್ಮ ದೊಡ್ಡಮನೆಯಲ್ಲಿ ನಾನು ಒಬ್ಬನೇ ಇರಬೇಕಾಗುತ್ತಿರಲಿಲ್ಲ. ನಿಮ್ಮಂತಹ ಒಬ್ಬಳು ನನ್ನ ಸ್ನೇಹಿತಳಾಗಿದ್ದಿದ್ದರೆ ನಾನು ಪೂರ್ತಿ ಇನ್ನೂ ಬೇರೆಯ ತರಹದವನಾಗುತ್ತಿದ್ದೆ, ಇಷ್ಟೊಂದು ದಿವಸ ಸ್ನೇಹದ ಪರಿಚಯವೇ ಇರಲಿಲ್ಲ, ಈಗ ಬಾಯಾರಿಕೆ ಆಗುತ್ತದೆ, ನನ್ನಲ್ಲಿರುವ ಅಥವಾ ಇರಬಹುದಾದ ಎಲ್ಲಾ ಒಳ್ಳೆಯತನ ವನ್ನೂ ನಿಮ್ಮಲ್ಲಿ ನೋಡಿದೆ. ಹಾಗೆಯೇ ನನ್ನ ಹಿಂಜರಿಕೆ ನಿಮ್ಮಲ್ಲೂ ಇದೆ ಅಂದು ಕೊಂಡೆ-ನಿಮಗೆ ಏನು ಬೇಕು ಅನ್ನುವುದನ್ನು ಬಾಯಿಬಿಟ್ಟು ಕೇಳುವವರಲ್ಲ. ನೀರಿನ ಅಲೆಗಳು.
ನಿಮ್ಮ ಮತ್ತು ನನ್ನ ಮೌನ ಪರಿಚಯ ಬೆಳೆಯುತ್ತ ಹೋಯಿತು, ನೀವು ಸೂರ್ಯನ ಹಾಗೆ ಆದಿರಿ, ನಿಮ್ಮನ್ನು ಎಲ್ಲಿ ಎಂದು ಹುಡುಕಲೇ ಬೇಕಾಗಿರಲಿಲ್ಲ. ನಿಮ್ಮನ್ನು ನೋಡಲೂ ಬೇಕಾಗಿರಲಿಲ್ಲ. ನೀವಿರುವುದು, ಸೂರ್ಯ ಇರುವ ಹಾಗೆಯೆ, ಅಪ್ರಯತ್ನ ವಾಗಿಯೋ, ತಿಳಿದುಬಿಡುತ್ತಿತ್ತು, ಒಂದು ಸತ್ಯ ಆಗಿಬಿಟ್ಟಿರಿ, ಎಷ್ಟೇ ಜನಗಳ ಗುಂಪಿನಲ್ಲಿದ್ದರೂ ನೀವಿರುವುದು, ಬಿಳಿಯ ಹೂಗಳ ರಾಶಿಯಲ್ಲಿ ಕೆಂಪು ಗುಲಾಬಿಯ ಹಾಗೆ, ಸಹಜವಾಗಿ ಗೊತ್ತಾಗಿ ಹೋಗುತ್ತಿತ್ತು, ನಿಜವೋ ಅಲ್ಲವೋ ನಾನಂತೂ ನಿಮ್ಮ ಸಂತೋಷ ಕೊಡುವ ನಗುವಿಗೆ ನಾನೇ ಕಾರಣ ಅಂದುಕೊಳ್ಳುತ್ತಿದ್ದೆ. ತೇಲುವ ನಗುವಿನ ಅಲೆಯ ಮೇಲೆ ಸೂರ್ಯನ ಪ್ರತಿಬಿಂಬ ಕೊಳದ ಅಗಲಕ್ಕೂ ನೂರು ನೂರಾಗಿ ಚಲಿಸುತಿತ್ತು, ನೀರು.
ಚಂದ್ರಿಕಾ, ಅಥವಾ ನೀವು ಅಥವಾ ನಿರ್ಮಲಾ ಜ್ಞಾಪಕ ಬಂದಾಗ ನೀರಿನ ಜ್ಞಾಪಕ ಬರುತ್ತದೆ. ಇರಬಹುದು ನೀವು ನೀರು ನಾನು ಯಾವ ಆಕಾರ ಕೊಟ್ಟರೆ ಅದು ಪಡೆಯುತ್ತೀರಿ. ನೀವು ಏನಾಗಿದ್ದೀರಿ ಅಂದುಕೊಂಡಿದ್ದೆನೋ ಅದು ನನ್ನ ಕೇವಲ ಕಲ್ಪನೆ ಇರಬಹುದು. ಹರಿದು ಹೋಗುತ್ತೀರಿ, ದಡದ ಮಣ್ಣನ್ನು ಇಷ್ಟಿಷ್ಟೆ ಕೊಚ್ಚಿ ಕೊಂಡು ಹೋಗುತ್ತೀರಿ, ನೀರು ಬೇಕು ನೀರು.
(ಮನಸ್ಸಿಗೆ ಗೊತ್ತಿದ್ದನ್ನು ಮಾತಿನಲ್ಲಿ ನಿಜ ಮಾಡಿಕೊಳ್ಳಲು ಆಗಲಿಲ್ಲ ಯಾಕೆ ? ನನಗೆ ಆಗದಿದ್ದರೆ ನಿಮಗೂ ಯಾಕೆ ಆಗಲಿಲ್ಲ ಪಾವನಾ ?)
ಒಂದು ವರ್ಷ ಕಳೆದು ಹೋಯಿತು, ನೀವು ಇನ್ನು ಈ ಊರಿನಲ್ಲಿ ಹತ್ತು ತಿಂಗಳು ಮಾತ್ರ ಇರಬಹುದು. ನಾನು ಈ ಕೊನೆಯ ತಿಂಗಳುಗಳನ್ನು ಹೇಗೆ ಕಳೆದೆ ಎಂದು ಹೇಳುವುದು ಕಷ್ಟ, ಯಾಕೆಂದರೆ ನನ್ನ ಮನಸ್ಸು ಯಾವುದೋ ಆಕಾರಕ್ಕೆ mould ಆಗುತ್ತಿತ್ತು. ನಿಮ್ಮನ್ನು ನೋಡುವ ತನಕ ಬೆಳೆದಿದ್ದ ಬೆಳವಣಿಗೆಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿತ್ತು. ಅಬ್ಬಾ, ಬೆಳೆಯುವುದು ಎಂದರೆ ಎಷ್ಟು ಕಷ್ಟ, ಎಷ್ಟು ಸಹಜ. ಇಷ್ಟವಿಲ್ಲದ ಕನಸಿನಿಂದ ಏಳಲು ಆಗದೆ ಒದ್ದಾಡುವ ಹಾಗೆ-ಅರ್ಧ ನಿದ್ರೆ ಅರ್ಧ ಎಚ್ಚರದಲ್ಲಿ-ಆಮೇಲೆ ಎಷ್ಟು ಸಲೀಸು, ಮತ್ತೆ ಅಂತಹ ಅನುಭವ ಆಗುವವರೆಗೆ ,
ಚಂದ್ರಿಕಾ, ಪಾವನಾ, ಮಧ್ಯೆ ನಾನು, ಚಂದ್ರಿಕಾ ಹರಿದಳು, (ಸಾಸುವೆಯ ಮೇಲೆ ಸಮುದ್ರ ಹರಿದ ಹಾಗೆ), ಅನುಭವಗಳು ಹೆದರಿಕೆ, ಪ್ರಶ್ನೆ disturbance, ಸಮುದ್ರದಲ್ಲಿ ಅದ್ದಿದಳು. ನನ್ನ ಸ್ವಭಾವ ರೀತಿ ಎಲ್ಲವನ್ನೂ ಕಲಕಿದಳು. ಬೇಡ ಅನ್ನುವ ಹಾಗಿಲ್ಲ. ಅನುಭವದ ಆಯ್ಕೆಗೆ ಯಾರಿಗೂ ಸ್ವಾತಂತ್ರ್ಯವಿಲ್ಲ. ಕನಸಿನ ನಕ್ಷತ್ರ ಎಣಿಸುತ್ತಿದ್ದವ ನನ್ನು ನಿಜದ ಬಿಸಿಲಿಗೆ ಎಳೆದು ತಂದಳು, “ನೀನು ಹೀಗೆ ಕಾಣುತ್ತೀ ನೋಡಿಕೋ’ ಎಂದು ತೋರಿಸಿದಳು, ಈ ಸಮುದ್ರದಿವ್ಯದಿಂದ ತಪ್ಪಿಸಿಕೊಳ್ಳುವುದಕ್ಕೆ ಹೆಣಗಿದೆ, ಮುಖ, ಕತ್ತು, ಎದೆ, ತಲೆ ಎಲ್ಲ ಮುಳುಗಿಹೋಗುತ್ತಿತ್ತು, ಹೊರಗೆ ಬರಬೇಕು. ಸಮಾಧಾನ ಬೇಕು, ಮೊದಲಿನ ಹಾಗೆ ಹಳೆಯ ಕನಸುಗಳನ್ನು ಕಾಣುವುದು ಸಾಧ್ಯವಿಲ್ಲ. ಆ ಕನಸಿನ ಮೆಟ್ಟಲನ್ನು ಚಂದ್ರಿಕಾ ಮುರಿದು ಹಾಕಿದಳು. ಅವಳ ಹಾಗೆ ಇರುವುದು ಅಸಾಧ್ಯ, ನೀರು ಅದುಮುತ್ತದೆ. ಸಮುದ್ರದಿಂದ ಬಾಯಾರಿಕೆ ಹೋಗುವುದಿಲ್ಲ.
ನಿಮ್ಮ ಮತ್ತು ಚಂದ್ರಿಕಳ impression ಗಳು Overlap ಆಗುತ್ತವೆ. ನನಗೆ ನಿಮ್ಮ ಸ್ನೇಹ ಬೇಕು ಅನ್ನುವ ಆಸೆ ಜಾಸ್ತಿ ಇದ್ದರೂ ಅದಕ್ಕೆ ಆಕಾರ ಬಂದರೆ ಅದು ಎಲ್ಲಿ ನನ್ನ ಆಸೆಯಾಗದೆ ಸೋತು ಹೋಗುತ್ತದೋ ಎಂದು ಅಳುಕುತ್ತಿರುವಾಗ ಚಂದ್ರಿಕಾ ನನ್ನ ತೀರ ಹತ್ತಿರಕ್ಕೆ ಬಂದಳು. ನನ್ನನ್ನು ‘ವಿನು’ ಎಂದು ಕರೆಯುವ ಅಧಿಕಾರ ಪಡೆದಳು. ಈ ಕೊನೆಯ ತಿಂಗಳುಗಳಲ್ಲಿ ನನ್ನ ಬರಹ ಮಾತು, ಪ್ರಭಾವ ಹೆಚ್ಚಾಗುತ್ತಿತ್ತು, ಮೇಲು ನೋಟಕ್ಕಾದರೂ ನನ್ನ ಸ್ನೇಹ ಬೇಕು ಅನ್ನುವ ಜನ ಜಾಸ್ತಿಯಾಗಿದ್ದರು. ಅವರಲ್ಲಿ ಚಂದ್ರಿಕಾ ಒಬ್ಬಳು, ನನ್ನ ಮನಸ್ಸಿನ ಮೇಲೆ ಆಲದಮರದ ಹಾಗೆ,ಬೆಳೆದಳು. ಅದರಿಂದಾಗಿ ನಿಮ್ಮ ಸ್ನೇಹ ಬೆಳೆಯಲಿಲ್ಲವೊ ನಿಮ್ಮಿಂದ ಆಕೆ ದೂರ ಹೋದಳೋ, ಅಥವಾ ನಿಮ್ಮಿಬ್ಬರ ಬಗ್ಗೆ ನಾನು ಸರಿಯಾಗಿ ಇರಲಿಲ್ಲವೋ, ಹೇಗೆ ಹೇಳಲಿ ?
ಅವತ್ತು ನನಗೆ ಮಾತಿನ ಮತ್ತು ಬಂದಿತ್ತು, ನನ್ನ ಪ್ರಬಂಧಗಳನ್ನು ತುಂಬ ಜನ ಮೆಚ್ಚಿ ಕೊಂಡಿದ್ದರು, ಮಧ್ಯಾಹ್ನದ ವಿರಾಮ, ನೀವು ನರ್ಮದಾ ಮತ್ತು ನಾನು ಮಾತ ನಾಡುತ್ತಿದ್ದೆವು. ಮಾತಿನಲ್ಲಿ ಚಂದ್ರಿಕಾಳನ್ನು ತುಂಬಾ ನೋಯಿಸಿಬಿಟ್ಟೆ ನಾನು, ಆಗ ಗೊತ್ತಾಗಲಿಲ್ಲ. ನೀವು ನಗುತ್ತಿದ್ದಿರಿ, ನೀವು ನಗುವುದು ನೋಡಬೇಕು ಅನಿಸಿತು. ಚಂದ್ರಿಕಾ ನನ್ನ ಹಾಸ್ಯಕ್ಕೆ ವಸ್ತುವಾದಳು. ಯಾಕೆ ಹಾಗೆ ಮಾಡಿದೆ ? ಅವಳ ಬಗ್ಗೆ ನನಗೆ ಅಷ್ಟು concern ಇಲ್ಲ ಅಂತ ನೀವು ತಿಳಿಯಲಿ ಅಂತ ಇರಬಹುದು, (ಅವಳು ತನ್ನ ಸಂಗೀತ ಕಾರ್ಯಕ್ರಮಗಳಿಗೆ ನನ್ನನ್ನು ಪ್ರತ್ಯೇಕವಾಗಿ ಆಹ್ವಾನಿಸುತ್ತಿದ್ದದ್ದು ನಿಮಗೆ ಗೊತ್ತು); ಅವಳ ಬಗ್ಗೆ ಅವಳ ಜೊತೆ ನಾನು ತಿರುಗುತ್ತಿದ್ದರಿಂದ ನನ್ನ ಬಗ್ಗೆ ಬೇರೆಯವರು ಹೇಳುತ್ತಿದ್ದ ಮಾತು ಕೇಳಿದ್ದರಿಂದ ಇರಬಹುದು, (ನಾನು ಚಂದ್ರಿಕಾಳ ಪಕ್ಕದಲ್ಲಿ ಕುಳಿತು ನಾಟಕ ನೋಡುತ್ತಿದ್ದನ್ನು ನೀವು ಅಂದು ಅಕಸ್ಮಾತ್ತಾಗಿ ನೋಡಿದಿರಿ, ಆಮೇಲೆ ನೀವು ಅದನ್ನು ನೋಡದೆ ಇದ್ದರೆ ಚೆನ್ನಾಗಿತ್ತು ಅಂದುಕೊಂಡಿದ್ದೆ); ನೀವು ನಗುವುದನ್ನು ನೋಡಬೇಕು ಎಂದಿರಬಹುದು.
ಇವಲ್ಲದೆ ಇನ್ನೂ ಒಂದು ಕಾರಣವಿದೆ. ನಿಮಗೆ ಅದನ್ನು ಹೇಳಬಹುದೋ, ಇಲ್ಲವೋ ಗೊತ್ತಿಲ್ಲ, ಆದರೂ ಹೇಳಿಬಿಡುತ್ತೇನೆ. ಏಕೆಂದರೆ ನೀವೂ ಸ್ವಲ್ಪ ಹೆಚ್ಚು ಕಡಿಮೆ ಅದೇ ರೀತಿ ವರ್ತಿಸಿದ್ದರಿಂದಲೇ ನಿಮ್ಮ ಸ್ನೇಹದ ಬಾಗಿಲು ತಟ್ಟಿ ಅದು ತೆರೆಯುವ ಮುನ್ನವೇ ನಾನು ಹೊರಟು ಹೋಗಿದ್ದು,
ನನಗೆ ಬೇಕಾಗಿದ್ದು ಚಂದ್ರಿಕಾಳ ಸ್ನೇಹ, ಅದು ಹೇಗಿರಬೇಕು ಅಂತ ಗೊತ್ತಿಲ್ಲದೇ ಇದ್ದರೂ ಹೇಗಿರಬಾರದು ಅಂತ ಗೊತ್ತಿತ್ತು. ಅವಳಿಂದ ತಾಯ್ತನದ Suggestion ಬಂದಾಗ ಬೇಸರ ಆಗಿದ್ದೂ ಅದಕ್ಕೆ ನನಗೆ ಸ್ನೇಹ ಬೇಕಿತ್ತು, ಸಂಬಂಧದ ಹೆಸರಲ್ಲ.
ಆದರೆ ಚಂದ್ರಿಕಾಳಲ್ಲಿ ಬೇರೆ ಇನ್ನೇನೋ ಇತ್ತು, ಇಲ್ಲದಿದ್ದರೆ ಅವಳ ಕತೆ ಹೇಳಿ ಅಳಬೇಕಾಗಿರಲಿಲ್ಲ. ನನ್ನನ್ನು ಕಲ್ಲು ಎಂದಳು, ಹೆಂಗಸರ ರೀತಿ ನಿಮಗೆ ಗೊತ್ತಿಲ್ಲ ಅಂದಳು, ನಾನು ಮಾತನಾಡಿದ್ದೂ, ಅದಕ್ಕೆ ನೀವು ನಕ್ಕಿದ್ದೂ ಎರಡೂ ಅವಳಿಗೆ ನೋವು ಉಂಟುಮಾಡಿತ್ತು, ಅವಳನ್ನು ಸಮಾಧಾನ ಮಾಡಬೇಕೋ, ಬೇಡವೋ ತಿಳಿಯಲಿಲ್ಲ. ಹೇಡಿತನ ಇರಬೇಕು. ತಪ್ಪು ನಿಮ್ಮ ಮೇಲೆ ಹಾಕಿದೆ. ‘ಅವಳು (ಅಂದರೆ ನೀವು) ನಕ್ಕರೆ ಅದಕ್ಕೆ ಯಾಕೆ ಅಷ್ಟು ಬೆಲೆ ಕೊಡುತ್ತಿ? ಅವಳು ಯಾವಾಗಲೂ ನಗುತ್ತಲೇ ಇರುತ್ತಾಳೆ’ ಅಂದೆ, ಸುಳ್ಳು, ತಪ್ಪು ನನ್ನದು, ಆದನ್ನು ನಿಮ್ಮ ಮೇಲೆ ಹಾಕಿ ನಾನು ಒಳ್ಳೆಯವನಾದೆ.
ಆದರೆ ಚಂದ್ರಿಕಾ ದೂರ ಹೋಗುವುದಕ್ಕೆ ತೊಡಗಿದಳು, ನಾನು ನಿಮ್ಮ ಹತ್ತಿರ ಆಗುತ್ತಿದ್ದೆ. ಬಹುಶಃ ತಪ್ಪಿಗೆ compensate ಮಾಡುವುದಕ್ಕೆ ಇರಬಹುದು. ನೀವು ಹತ್ತಿರ ಆಗುತ್ತಿದ್ದಿರಿ, ಎಷ್ಟು ಹತ್ತಿರ ! ಅವತ್ತು ಇಬ್ಬರೂ ಜೊತೆಯಲ್ಲೇ ನಡೆದುಕೊಂಡು ಹೋಗುತ್ತಿದ್ದೆವು. Extension ನಲ್ಲಿ ರೈಲ್ವೆ ಲೈನಿನ ಆಚೆ ಇರುವ ಪ್ರೊಫೆಸರರ ಮನೆಯಲ್ಲಿ ನಮಗೆ ಡಿನ್ನರ್, ದಾರಿಯ ಉದ್ದಕ್ಕೂ ನೀವು ಎಷ್ಟು ಮಾತನಾಡಿದಿರಿ. ನಿಮಗೆ ಹೀಗೆ ಮಾತು ಬರುತ್ತೆ ಎಂದು ತಿಳಿದೇ ಇರಲಿಲ್ಲ. ನಾನು ತಮಾಷೆ ಮಾಡಿದೆ. ನೀವು ನಕ್ಕಿರಿ. ನಿಮ್ಮ ಊರಿಗೆ ನಾನು ಚಿಕ್ಕವನಾಗಿದ್ದಾಗ ಬಂದಿದ್ದು ಹೇಳಿದೆ. ಎಷ್ಟು ಚಿಕ್ಕವನಿದ್ದಾಗ ಎಂದು ತುಂಟತನದಿಂದ ಕೇಳಿದಿರಿ. ಇನ್ನೊಂದು ಸಾರಿ ಬಂದಾಗ ಬನ್ನಿ ಎಂದು ಕರೆದಿರಿ, ನಿಮ್ಮ ತಂಗಿ ನಿಮ್ಮ ತಂದೆ ನಿಮ್ಮ ಮನೆ ಎಲ್ಲಾ ಹೇಳಿದಿರಿ. ನೀವು ನಿಮ್ಮ ತಂಗಿ ಚಿಕ್ಕಂದಿನಿಂದಲೂ ಮನೆಯ ಹೊರಗೇ, ಬೇರೆಯ ಊರುಗಳಲ್ಲಿ ಬೆಳೆದದ್ದು ಮನೆ ಎಂದರೆ ಏನು ಎಂದು ಹೇಳಿದಿರಿ, ನಿಮ್ಮ ತಾಯಿ ತೀರಿ ಹೋದದ್ದು, ನಿಮ್ಮ ತಂದೆ ಕಡಮೆ ಸಂಬಳದ ಮಾಸ್ತರಾಗಿ ಕೆಲಸಕ್ಕೆ ಸೇರಿದ್ದು ಇವನ್ನೆಲ್ಲಾ ಹೇಳಿದಿರಿ, ನೀವು ಹೀಗೆ ಬೇರೆಯವರ ಹತ್ತಿರ ಆತ್ಮೀಯವಾಗಿ ಮಾತನಾಡಿ ಬಹಳ ಕಾಲ ಆಗಿತ್ತೇನೋ ಅನ್ನಿಸಿತು, ನೂರಾರು ದಿನಗಳ ಸಂಕೋಚ ಮರೆಯಾಗಿತ್ತು, ನನ್ನ impression ನಿಮ್ಮ ಮೇಲೆ ಆಗುತ್ತಿದೆ ಅಂತ ಖಂಡಿತವಾಯ್ತು. ನರ್ಮದಾಳಿಗೆ ಆಶ್ಚರ್ಯ. ಎಂದೂ ಮಾತನಾಡದ ನೀವು ಎಷ್ಟೊಂದು ಮಾತನಾಡುತ್ತಿದ್ದೀರಿ ಎಂದು, ದಾರಿಯ ಉದ್ದಕ್ಕೂ ಸಂಜೆ ಪೂರ್ತಿ ಮಾತನಾಡಿದಿರಿ.
ಪ್ರೊಫೆಸರರ ಮನೆಯ ಮುಂದೆ ಎರಡು, ಮೂರು ಎಳೆಯ ತೆಂಗಿನ ಮರದ ಸಸಿಗಳು. ಅವುಗಳ ಕೆಳಗೆ ಜಮಖಾನೆ, ಖುರ್ಚಿ, ಪಕ್ಕದಲ್ಲೆ compound ಗೋಡೆ, ಅದರ ಆಚೆ ರೈಲ್ವೆ ಲೈನು.
ರಾತ್ರಿ ಬೆಳದಿಂಗಳು, ಮಾರನೆಯ ದಿನ ಬೆಳಗಾದರೆ ನೀವು ಊರಿಗೆ ಹೊರಟು ಹೋಗುತ್ತೀರಿ, ನಾನು ನಿಮಗೆ ಏನೋ ಹೇಳಬೇಕು ಅಂತ, ಹೇಗೆ ಅಂತ, ಕಾಯುತ್ತಿದ್ದೆ, ಈಗ ನೀವು ಮರದ ಕೆಳಗೆ ಕುರ್ಚಿಯ ಮೇಲೆ, ನನ್ನ ಎದುರಿಗೆ ಕುಳಿತಿದ್ದೀರಿ, ಸುತ್ತಲೂ ಜನ ಇದ್ದಾರೆ, ಚಮಚ ತಟ್ಟೆಗಳ ಸದ್ದು ಇದೆ. ಬೆಳದಿಂಗಳಿದೆ, ಬಾಯಿ ತಿಂಡಿ ತಿನಿಸು ಮೆಲ್ಲುತ್ತಿದೆ. ವಸಂತಾ ನಮ್ಮ ಜೊತೆ ಮಾತಿಗೆ ಬಂದು ಸೇರಿದಳು Polite meaningless talk, ಗಾಳಿ ಬಂದಾಗ ತೆಂಗಿನ ಗರಿ ಅಲುಗಾಡುತ್ತಿತ್ತು, ಆಗ ಹೊರಗಿನ ಬೀದಿ ದೀಪದ ಬೆಳಕು, ಅಲುಗದ ಗರಿಗಳ ನೆರಳು, ಬೆಳದಿಂಗಳು ನಿಮ್ಮ ಮುಖದ ಮೇಲೆ ಬೀಳುತ್ತಿತ್ತು. ಊಟ ಮಾಡುತ್ತಾ ಮಾತನಾಡುತ್ತಿದ್ದೆವು. ಊಟ ಮುಗಿಯಿತು, ವಸಂತಳನ್ನು ಹಾಡುವಂತೆ ಬಲವಂತ ಮಾಡಿದರು, ಹಾಡು ಹೇಳತೊಡಗಿದಳು, “ಕಭಿ ನ ಕಭಿ ಕೋಯಿನ ಕೋಯಿ ಆಯೇಗ” ನಮ್ಮ ಬಸ್ಸು, ಪ್ರಯಾಣ ಜಲಪಾತ ಜ್ಞಾಪಕ ಬರುತ್ತಿತ್ತು. ಯಾರು ಬರುತ್ತಾರೆ ? ಯಾವಾಗ ಬರುತ್ತಾರೆ ? ಹಾಡು ಹೇಳುತ್ತಿದ್ದಾಗ ರಾತ್ರಿಯ ರೈಲು ಕೂಗಿದ್ದು ಕೇಳಿಸಿತು, ರೈಲು ಬರುವ ಶಬ್ದಕ್ಕೆ ಕಾಂಪೌಂಡು ಅದುರುವ ಹಾಗೆ ಆಗುತ್ತಿತ್ತು, ಹತ್ತಿರ ಬಂತು, ಮನೆಗೆ ತೀರ ಸಮೀಪ ಕೂಗುತ್ತಿತ್ತು. ರಾತ್ರಿಯ ಕತ್ತ ಲಲ್ಲಿ ಎಂಜನ್ನಿನ ಒಳಗಿನ ಬೆಂಕಿ ಬಹಳ ಪ್ರಖರವಾಗಿತ್ತು. ಫೈರ್‌ಮನ್ ತಲೆಗೆ ಚೌಕ ಕಟ್ಟಿಕೊಂಡು ಇನ್ನೂ ಕಲ್ಲಿದ್ದಲನ್ನು ಒಳಗೆ ಹಾಕುತ್ತಿದ್ದ, ಇನ್ನೊಬ್ಬ ಎಂಜಿನ್ನಿನ ಕಿಟಕಿ ಹತ್ತಿರ ನಿಂತಿದ್ದ, ಒಂದೆರಡು ಕ್ಷಣ, ಎಂಜಿನ್ನು ಹೋಯಿತು, ಶಬ್ದ ಕಡಮೆ ಆಯಿತು. ಒಂದರ ಹಿಂದೆ ಒಂದು ಬೋಗಿಗಳು, ಕೆಲವಕ್ಕೆ ದೀಪ, ಕೆಲವಕ್ಕೆ ಇಲ್ಲ. ರೈಲಿನ ಗದ್ದಲಕ್ಕೆ ಹಾಡು ನಿಂತಿತ್ತು, ರಾತ್ರಿ 9-45 ಹೋಗಬೇಕು, ಎದ್ದೆವು. ಚಂದ್ರಿಕಾ ಮರೆತುಹೋಗಿದ್ದಳು, ಬಂದಿರಲಿಲ್ಲ. ನೀವು ಗೇಟಿನ ಹತ್ತಿರ ಇದ್ದಿರಿ, ನಾನೂ ಅಲ್ಲೇ ಇದ್ದೆ. ‘ಬರೋಣ ಇನ್ನು ; ಸರಿ ಲೈಫ್‌ನಲ್ಲಿ ಮತ್ತೆ ಯಾವಾಗಲಾದರೂ ಮಿಾಟ್ ಆಗೋಣ’-ಯಾರೋ ಇಬ್ಬರು ಹೇಳುತ್ತಿದ್ದರು. ‘ನಮ್ಮ ಊರಿಗೆ ಬಂದರೆ ತಪ್ಪದೆ ಬನ್ನಿ’, ‘ಆಗಲಿ’, ಎಂದೆ, ಮಾತು ಆಡುವುದಕ್ಕೆ ಏನೂ ಇರಲಿಲ್ಲ, ನೀವು ಇನ್ನು ಹೋಗಬೇಕು ಅಂತ ಗೊತ್ತಿತ್ತು. ಆದರೆ ನೀವು ಯಾವಾಗಲೂ ಹಾಗೇ ಇರುತ್ತೀರಿ, ನಾನೂ ಅಷ್ಟೆ ಅಂತಲೂ ಅನ್ನಿಸುತ್ತಿತ್ತು, ‘ನಿಮಗೆ ವಿಳಾಸ ಕೊಡುತ್ತೇನೆ, ಕಾಗದ ಬರೆಯಿರಿ, ಬೇಕಾದರೆ’, ಅಂದೆ, ನನ್ನ ಹತ್ತಿರ ಬೇರೆ ಯಾರೋ ಬಂದರು, ಮಾತನಾಡುತ್ತಿದ್ದೆ, ನೀವು ಮತ್ತೊಮ್ಮೆ ‘ಬರಲಾ’ ಅಂದು ಹೊರಟು ಹೋದಿರಿ. ರಾತ್ರಿಯ ಬೆಳದಿಂಗಳಲ್ಲಿ ನಡೆದುಕೊಂಡು ಮನೆಗೆ ಬಂದೆ. ಗೆಳೆಯರನ್ನು ರೈಲಿನಲ್ಲಿ ಕಳಿಸಿ, ರೈಲು ಹೋದಮೇಲೆ ಸ್ಟೇಷನ್ ಖಾಲಿಯಾದಾಗ ಅನಿಸುವ ಹಾಗೆ; ತುಂಬಾ ದಿನದಿಂದ ಇದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿ ಲಾರಿಗೆ ಸಾಮಾನು ತುಂಬಿಸಿ ಖಾಲಿ ಮನೆಯೊಳಕ್ಕೆ ಒಂದು ಸಾರಿ ಹೋಗಿ ನೋಡಿದಾಗ ಆಗುವ ಹಾಗೆ-ಆಗಿತ್ತು.
ನಾನು ನಿಮ್ಮ ವಿಳಾಸ ಕೇಳಲಿಲ್ಲ, ನನ್ನದೂ ಕೊಡಲಿಲ್ಲ. ಆಮೇಲೆ ನರ್ಮದಾಳಿಗೆ ಬರೆದು ನಿಮ್ಮ ವಿಳಾಸ ತರಿಸಿಕೊಂಡೆ. ಆದರೆ ಅಂದು ರಾತ್ರಿ ಹೇಗಿದ್ದೆ ಗೊತ್ತೆ ಪಾವನಾ.
ಮತ್ತೆ ನಿಮ್ಮನ್ನು ನೋಡುವುದಿಲ್ಲ. ನೋಡುತ್ತೇನೋ ಇಲ್ಲವೋ ಗೊತ್ತಿಲ್ಲ. ಪಾವನಾ. ರಸ್ತೆಯಲ್ಲಿ ತಿರುಗಿದೆ, ಪಾವನಾ, ಬಾಗಿಲು ತಟ್ಟಿದೆ, ಚಿಲಕ ತಟ್ಟಿದ ಶಬ್ದ, ಪಾವನಾ. ಮಲಗುವ ಮೊದಲು ಕೈಕಾಲು ತೊಳೆದೆ, ಸಿಮೆಂಟಿನ ನೆಲದ ಮೇಲೆ ನೀರು ಬಿತ್ತು, ನೀರಿನಲ್ಲಿ ಚಂದ್ರ ಸಾವಿರ ಚೂರಾಗಿ ಹರಿದುಹೋಗುತ್ತಿದ್ದ, ಪಾವನಾ, ಸೊಳ್ಳೆಪರದೆ ಬಿಟ್ಟುಕೊಂಡೆ, ಪಾವನಾ, ಮಗ್ಗುಲು ಬದಲಾಯಿಸಿದೆ, ನಿಮ್ಮ ನೆನಪೇ ಇತ್ತು. ಪಾವನಾ, ಪಾವನಾ, ಪಾವನಾ.
ಇದನ್ನು ಅವಳಿಗೆ ಯಾಕೆಲ್ಲ ಬರೆದು ಹೇಳಬೇಕು ? ಅವಳಿಗೆ ಅಷ್ಟು ನೆನಪಿದ್ದಿದ್ದರೆ ಒಂದು ಕಾಗದ ಬರೆಯಬಹುದಿತ್ತು, ಅಥವಾ ಬರೆಯುವುದಕ್ಕೆ ಸಾಧ್ಯ ಇಲ್ಲ. ಅವಳ ಪರಿಚಯ ನನಗೆ ಇಲ್ಲ, ನನ್ನ ಪರಿಚಯ ಅವಳಿಗೆ ಇಲ್ಲ. Casual ಆಗಿ ದಿನ ಕಳೆದೆವು. ಏನೂ ಆಗಲಿಲ್ಲ. Life ಪೂರ್ತಿ ಹೀಗೆ ಇರುತ್ತೊ ಏನೋ, ಏನೂ ಆಗುವುದಿಲ್ಲ, ಎಲ್ಲ ಅದರಷ್ಟಕ್ಕೆ ಅದು ಸಾಗಿಹೋಗುತ್ತದೆ, ನೆನಪಿನಲ್ಲಿ ಮಾತ್ರ ನಡೆದದ್ದಕ್ಕೆ ಕಾರಣ, ಅರ್ಥ ಸಿಗುತ್ತದೆ.
ಪಾವನಾಗೆ ಜಂಬ ಇರಬಹುದು, ಅಥವಾ ನನಗೇ ಜಂಬ ಅಂತ ಅವಳು ಅಂದುಕೊಂಡಿರಬಹುದು, ಎಲ್ಲೋ ಒಂದು ದಿನ ಎರಡು ದಿನ ಮಾತನಾಡಿದ ನನ್ನನ್ನು ಸ್ನೇಹಿತ ಅಂತ consider ಮಾಡುವುದು ಕಷ್ಟ ಇರಬಹುದು.
ಇಲ್ಲ, ಇದು ಯಾವುದೂ ಕಾರಣ ಅಲ್ಲ, ಬೇರೆ ಇದೆ, ಅದನ್ನು ಮರೆಯುವುದಕ್ಕೆ ಇದೆಲ್ಲ ಆಟ ಅಷ್ಟೆ, She was not indiferent towards me, ಆದರೆ ಅವಳು ನನ್ನ ನೋಡಿದ ರೀತಿ, ಅದೇ ನನಗೆ ಇಷ್ಟ ಇಲ್ಲದ್ದು, ಅವತ್ತು ಅವಳು ಹೇಳಿದಳು, ಅದನ್ನು ಬೇಕು ಅಂತ ಕಾಗದದಲ್ಲಿ ಹೇಳಲಿಲ್ಲ. ನನ್ನ ಮಾತು, ನನ್ನ ಬುದ್ಧಿವಂತಿಕೆ ನನ್ನ impression ಎಲ್ಲಾ ಬೇರೆಯದೇ ರೀತಿಯ ಪ್ರಭಾವ ಅವಳ ಮೇಲೆ ಮಾಡಿತ್ತು, “I would be glad, no, fortunate to have a son like you’ ಅಂದಳು. O, damn her.
ಆಗುವುದಿಲ್ಲ, ಆದರೆ ನನಗೆ ಹೀಗೆ ಅನ್ನಿಸಿತು ಅಂತ ಅವಳಿಗೆ ತಿಳಿಯುವುದು ಹೇಗೆ ? ಅವಳ ಬಗ್ಗೆ ನನಗೆ ಏನನ್ನಿಸಿತು ಅಂತ ಅವಳಿಗೆ ಗೊತ್ತಾಗುವುದು ಹೇಗೆ ? ಕಾಗದ ಅವಳಿಗೆ ತಲಪಿಸುವ ಮನಸ್ಸಿಲ್ಲ, ಯಾಕೆಂದರೆ ನನಗೆ ಇಷ್ಟವಿಲ್ಲದ ಕಾರಣಗಳು ತುಂಬ ಇವೆ, ಆದರೆ ಅವಳ ನೆನಪು ಎಂತಹದೋ ಅಲೆಗಳನ್ನು ಏಳಿಸುತ್ತದೆ.
ಏನೂ ಇಲ್ಲ, ಏನೂ ಆಗುವುದಿಲ್ಲ, ಬಹುಶಃ ಕಾಗದ ಮಡಿಸಿ ಎತ್ತಿಟ್ಟೆ, ನನಗೇ ಬೇಕು, ಬೇಕಾದೀತು ಅಂತ. ನೀವು ಅನ್ನುವುದು ಹೋಗಿ ನೀನು ಅಂತ ಆಗಬಹುದು. ಅಷ್ಟೇ, ನಿನಗಿಂತಲೂ ಹಿಂದಕ್ಕೆ ಹೋಗಿ ಅದು ನಾನೇ ಅಂತ ಆಗುವುದಿಲ್ಲ, ನಾನು ಮಾತ್ರ ಅಷ್ಟೆ, ನಾನು ಮಾತ್ರ ಒಬ್ಬನೇ ಅನ್ನುವುದು ನಿಜ. ಹೀಗೆಂದು ವಿನೋದ ಡೈರಿಯಲ್ಲಿ ಬರೆದುಕೊಂಡ.
ಕಳೆದದ್ದರ ಕುರಿತು
ಕಳೆದದ್ದರ ಕುರಿತು
-ಎಂ ಎನ್ ಜೈಪ್ರಕಾಶ್
ಗೆಳತಿ, ಹೇಳು, ದಿನಪತ್ರಿಕೆಯಲಿ ದಿನಾ ಮಹಾ ಅದೆಂಥ ವಿಶೇಷವಿರುತ್ತೆ ? ಇಂದಿರಾ ರಾಜಕಾರಣದ, ಪ್ರಜಾಪ್ರಭುತ್ವದ, ಯುದ್ಧಭೀತಿಯ, ಜಲಕ್ಷಾಮದ ಬರಿ ಭೀತ ಚಿತ್ರಗಳ ಬಿಟ್ಟು ? ಅದಕ್ಕೇ ನಾನು ಸುದ್ದಿ ಪತ್ರಿಕೆ ಓದುವುದಿಲ್ಲ. ನೀವೆಂಥವರು, ಕ್ಷಯಿಸುತ್ತಿರುವ ಈ ದೇಶದಲ್ಲಿ ರಾಜಕೀಯವೇ ದೇಶವಾಗಿರುವಾಗ ಅದ ಮರೆತು ಬದುಕುವುದೇ ಅಸಾಧ್ಯವಾಗಿರುವಾಗ-ಓದುವುದಿಲ್ಲ ಪತ್ರಿಕೆ ನಾನು ಎನ್ನುವಿರಿ | ಬಿಹಾರದಲ್ಲಿ ಏನಾಗುತ್ತಿದೆ ಗೊತ್ತೋ ? ಎಂದೆ ನೀನಾಗ ಅದಕ್ಕೆ
ಈ ದಿನ
ಪತ್ರಿಕೆ ಬಿಡಿಸಿ ಕಾಣದ ಕಣ್ಣಿಗೇರಿಸಿ ಕನ್ನಡಕ ಮುತುವರ್ಜಿ ವಹಿಸಿದೆ.
ದೊಡ್ಡಕ್ಷರಗಳ ದೊಡ್ಡ ದೊಡ್ಡ ಸುದ್ದಿಗಳು ಒಳಗಿನೊಳಗನ್ನು ತಟ್ಟಲಿಲ್ಲ. ಆದರೂ ಓದುತ್ತ ಓದುತ್ತಾ ನಡೆದೆ ಒಳಪುಟದ ಕೊನೆಯ ಕಾಲಮ್ಮಿಗೆ, ಆಗೋ ! ಗೆಳತಿ, ಬಿತ್ತು ನೋಡು ಕಣ್ಣಿಗೆ, ಆ ಅಭೂಕ್ತ ಮೂಲೆಯಲ್ಲಿದ್ದ ಚಿಕ್ಕಕ್ಷರಗಳ ಸಣ್ಣ ಸಾಲುಗಳು : ‘ಕಾಣೆಯಾಗಿದ್ದಾನೆ-ಕಳೆದುಹೋಗಿದ್ದಾನೆ? ಮನಸ್ಸಿಟ್ಟು ನೋಡಿದೆ. ಬಗೆಗಣ್ಣಿಗೆ ಕಾಣದ, ನನ್ನ ಕನ್ನಡಕಕ್ಕೆ ಅರ್ಥವಾಗದ, ಕರುಳ ತುಡಿತದಿಂದ ತುಯ್ಯುತ್ತಿದ್ದವು ಅಲ್ಲಿ ಮೂಕನೋವಿನ ಮಾತುಗಳು. ಗೆಳತಿ, ಹುಡುಗ ಐದು ವರ್ಷದವನಂತೆ, ನೋಡಲು ಬಿಳಿಮುದ್ದು, ಭತ್ತ, ಅರಳಾದಂತೆ
ಮಾತು, ಪುಟಾಣಿ ಪ್ಯಾಂಟು, ಹೂಹೂ ಚಿಟ್ಟೆಚಿಟ್ಟೆ ಅಂಗಿ, ಬಿಳೀಗಲ್ಲಕೆ ಕರೀಕಪ್ಪು ಮಚ್ಚೆ, ಮುಖತುಂಬ ಮುಗ್ಧ ಮಲ್ಲಿಗೆ–ನಗು, ಹುಡುಕಿಕೊಟ್ಟವರಿಗೆ ಬಹುಮಾನ,
ಗೆಳತಿ,
ನೋಡು, ಅಂಗಲಾಚುವ ಬರಹ……ಇದನ್ನೆಲ್ಲ ಯಾರು ಓದುತ್ತಾರೆ ? ಬಿಡಿ, ಪ್ರತಿದಿನವೂ ಇಂಥವು ನೂರಾರು ; ಓದಲು ಪುರುಸೊತ್ತಿಲ್ಲ – ಎನ್ನುತ್ತಿ ನೀನು.
ಹೌದು ಗೆಳತಿ, ಬಿಡುವೆಲ್ಲಿ ರಾಜಕಾರಣವೇ ನಮ್ಮ ಜೀವದುಸಿರಾಗಿರುವಾಗ ? ‘ಕಾಣೆಯಾಗಿದ್ದಾನೆ’ ಎಂಬುದು ಕಾಣದೆ ಹೋಗಿಬಿಡುತ್ತದೆ; ಹೋಗೇ ಬಿಡುತ್ತದೆ.
ಆದರೆ ಅದರೊಡನಿದ್ದ ಚಿತ್ರ, ಆ ಭಾವಚಿತ್ರ, ಅಪರೂಪಕ್ಕೆ ಪತ್ರಿಕೆ ಮುಟ್ಟಿದ
ನಾನು ಹೇಗೆ ಮರೆಯಲೇ ? ಗೆಳತೀ, ಹೇಗೆ ಮರೆಯಲೇ ?
ಆ ಸಾಲುಗಳ ಯಾತನೆಯ, ಕೊರಗಿನ, ನೋವಿನ, ತಪ್ತತೆಯ ಹಿನ್ನೆಲೆಯಲ್ಲಿ
ಕೋಟ್ಯಂತರ ಅದೃಶ್ಯ ಕಣ್ಣುಗಳು ನನ್ನ ಒತ್ತುತ್ತವೋ, ಗೆಳತಿ, ಒತ್ತುತ್ತವೆ:
ಉಲ್ಲಾಸ ಕಳೆದು ಹೋಗಿದ್ದಾನೆ, ದಮ್ಮಯ್ಯ ಯಾರಾದರೂ ಹುಡುಕಿಕೊಡಿ.
ಗೆಳತಿ, ಯಾರು ಹುಡುಕುವರೆ ? ಇವರನ್ನೆಲ್ಲ ಯಾರು ತಡುಕುವರೆ ?
ಭರವಸೆಗಳು ಆವಿಯಾಗಿ, ಅಕ್ಕಿ ಸಕ್ಕರೆ ಸೀಮೆಯೆಣ್ಣೆ ಹಾಲುಪುಡಿ ಇತ್ಯಾದಿ ಫಕ್ಕನೆ
ಕಾಣೆಯಾಗುವುದರ ಮೇಲೆ ಕಣ್ಣಿಡಬೇಕಾದ ದಿನಗಳ ನಡುವೆ ಕಾಣೆಯಾದವರು
ಸಟಕ್ಕನೆ ಎದುರಿಗೆ ಬಂದರೂ ಯಾರು ಗಮನಿಸುತ್ತಾರೆ ತಟ್ಟನೆ ?
ಅಲ್ಲವಾ, ಆ ಸಹನೆಯಾದರೂ ಮತ್ತೆಲ್ಲಿದೆ ನಮಗೆ ?
ನಿಜ ಗೆಳತಿ ನಿಜ, ನಮಗೆ ನಮ್ಮದೇ ಹಾಸಲುಂಟು ಹೊದೆಯಲುಂಟು, ಮುಖಂಡರಿಗೆ
ಸರ್ಕಾರಿ ರಥ ಎಳೆವ ಭಾರವುಂಟು, ಈ ಭಾರದಡಿಗೆ ಅಸಂಖ್ಯ ಇಂಥವು ಅಪ್ಪಚ್ಚಿ.
ಅಂತೂ ಇವರು ನಾಥರಿದ್ದೂ ಅನಾಥರಾಗುತ್ತ,, ಕಾಣೆಯಾಗುತ್ತಾ, ಕೊನೆಗೆಮ್ಮ
ಕಳೆದೇ ಹೋಗಿಬಿಡುತ್ತಾರೆ, ನಂತರ ಎಲ್ಲೋ ಕಾಲಮ್ಮಿನ ತುದಿಬಾಲಕ್ಕೆ, ಖಾಲಿಜಾಗ |
ತುಂಬುವುದಕ್ಕೆ, ಬೇರೆ ದೊಡ್ಡ ಸುದ್ದಿಯಿಲ್ಲದ್ದಕ್ಕೆ, ಅಚ್ಚಾಗುವ ಸಣ್ಣಕ್ಷರದ ನಿರ್ಲಕ್ಷ್ಯ
ಸಾಲುಗಳಾಗಿ ಬಿಡುತ್ತಾವೆ, ಗೆಳತೀ, ಬರೀ ಸಾಲುಗಳಾಗಿ ಬಿಡುತ್ತಾವೆ.
ಸರಿ ಗೆಳತಿ, ನೀನು ಹೇಳಿದ್ದು ಅಪ್ಪಟ ಸತ್ಯ ; ದಿನವೂ ಇಂಥ ಸುದ್ದಿಯ
ಸಣ್ಣಕ್ಷರದವರದು ಸಾವಿರ ಕತೆ, ಹುಡುಕುವುದೆಲ್ಲಿ, ಸಾಯಲಿ ಬಿಡು!
ಆದರೂ ಪ್ರಿಯ ಗೆಳತಿ, ದಾರಿ ಬದಿಯಲ್ಲಿ, ಸಾರ್ವಜನಿಕ ನೆರಳಡಿಯಲ್ಲಿ ಇವು ಇನ್ನೂ
ಬೀಡು ಬಿಟ್ಟಿವೆ. ಅಲ್ಲಿಳಿದು ನೋಡು, ಅವು ನನ್ನ ನಿನ್ನ ಮತ್ತು ಇಡೀ ನಮ್ಮ
ಪ್ರಶ್ನಿಸುತ್ತಿವೆ, ಗೆಳತಿ, ಅವು ಬಿಡದೆ ಪ್ರಶ್ನಿಸುತ್ತಲೇ ಇವೆ;
ಕಳೆದು ಹೋಗಿದ್ದೇವೆ ನಾವು ಕಾಣೆಯಾಗಿದ್ದೇವೆ;
ಹುಡುಕುವುದಿಲ್ಲವೇ ನೀವು ನಮ್ಮನ್ನು ಹುಡುಕುವುದಿಲ್ಲವೇ ?
ಇವು ಏಕಕಾಲಕ್ಕೆ ನಮ್ಮನ್ನು ಅಂಗಲಾಚುತ್ತ ತೀವ್ರ ದ್ವೇಷಿಸುತ್ತ ಕುಕ್ಕುತ್ತಲೇ
ಇವೆ ಕಣೇ, ನೋಡಿಲ್ಲಿ ಈ ಕಾಲಮ್ಮಿನ ತುದಿಯಲ್ಲಿ,
ಇದರಾಚೆ ವಿಶಾಲ ಆ ಹೊರವಲಯಗಳಲ್ಲಿ ಕಾಣುತ್ತದಾ ನಿನಗೆ ?
ನಿನಗೇನು, ನನಗೂ ಯಾರಿಗೂ ಕಾಣುವುದಿಲ್ಲ, ಕಾಣುವುದೇ ಕಳೆದುಹೋಗಿಬಿಟ್ಟಿದೆ.
ಕಳೆದುಹೋಗಿಬಿಟ್ಟಿದೆ ಕಣೇ ಅದು ಧೂಳಲ್ಲಿ ಬಿದ್ದು ಹೋಗಿಬಿಟ್ಟಿದೆ.
ಗೆಳತೀ, ಗೊತ್ತಾಯ್ತು, ಕಳೆದದ್ದು ನಮ್ಮದು ಕಣೆ ನಮ್ಮದು.
ಹುಡುಕಿಕೊಡುವರಾರು ? ಪ್ರಕಟಣೆ ಕೊಟ್ಟರೆ-ಸುದ್ದಿ ಪತ್ರಿಕೆಗೆ-
ರಾಜಕೀಯವೇ ಉಸಿರಾಗಿರುವಲ್ಲಿ ಸಣ್ಣಕ್ಷರಗಳನ್ನು ಓದಲು ಬಿಡುವಿಲ್ಲ ಕಣೇ.
ಊರು-ಕಾದಂಬರಿಯ ಪರಿಚಯ
ಊರು-ಕಾದಂಬರಿಯ ಪರಿಚಯ
– ಡಿ ಪಿ ಹೆಗಡೆ
“ಒಂದು ಊರು ಕ್ಷಯಿಸಿದ್ದನ್ನು ಕಂಡ ನೆನಪು ತುಂಬ ತೀಕ್ಷ್ಣ”. ಆ ನೆನಪನ್ನೇ ಆಧಾರ ವಾಗಿಟ್ಟುಕೊಂಡು ಬರೆದ ಕಾದಂಬರಿ ಆರ್. ನಾಗರಾಜರ ಊರು. ಒಂದು ಕಾಲದಲ್ಲಿ ಜೀವನದ ವಿವಿಧ ಕ್ಷೇತ್ರಗಳಲ್ಲಿ ಮಹದೌನ್ಯತ್ಯವನ್ನು ಸಾಧಿಸಿ ಒಂದು ಹೆಮ್ಮೆಯ ಕಾಡಿನಾಬೀಡಾದ ಊರು ಅವನತಿಯನ್ನು ಹೊಂದಿತು. ಒಂದು ಊರು ಉಚ್ಛ್ರಾಯಸ್ಥಿತಿಗೆ ಬರಲು ಅಥವಾ ಅವನತಿಯನ್ನು ಹೊಂದಲು ಹಲವಾರು ಕಾರಣಗಳಿರುತ್ತವೆ. ಊರಿನ ಪ್ರಗತಿಗೆ ಅಥವಾ ಅವನತಿಗೆ ಕಾರಣರೂಪದಲ್ಲಿದ್ದ ಪರಿಸ್ಥಿತಿಗಳು ಹಾಗೂ ವ್ಯಕ್ತಿಗಳು ಕಾದಂಬರಿಕಾರರ ಮನದಲ್ಲಿ ಚಿರಸ್ಥಾಯಿಗಳಾಗಿದ್ದು ಅವರನ್ನು ಕಾಡಿಸಿದ್ದೂ ಉಂಟು ಎಂದು ಅವರೇ ಹೇಳುತ್ತಾರೆ. ಕಾದಂಬರಿಕಾರರ ನೆನಪು ನಿವೇದನೆಯ ರೂಪವನ್ನು ತಾಳಿದಾಗ ಊರು ಕಾದಂಬರಿಯ ಆವಿರ್ಭಾವವಾಯಿತು.
ಪ್ರಸ್ತುತ ಕಾದಂಬರಿಯನ್ನು ಮುಖ್ಯವಾಗಿ ಮೂರು ಭಾಗಗಳನ್ನಾಗಿ ವಿಂಗಡಿಸಬಹುದು :
೧. ರಾಮೇಶ್ವರಪುರದ ಸ್ಥಳಪುರಾಣ. ೨ .ರಾಮೇಶ್ವರಪುರದ ಉಚ್ಛ್ರಾಯ ಸ್ಥಿತಿಗೆ ಕಾರಣ ರೂಪದಲ್ಲಿರುವ ವ್ಯಕ್ತಿಗಳು ಮತ್ತು ಪರಿಸ್ಥಿತಿಗಳು. ೩ ಉಚ್ಛ್ರಾಯದ ಪಡಿನೆರಳಿನಲ್ಲಿಯೇ ಬಿತ್ತಲ್ಪಟ್ಟ ಅವನತಿಯ ಬೀಜಗಳು ಮೊಳೆತು ಹೆಮ್ಮರವಾಗಿ ಊರಿನ ಅಧಃಪತನವನ್ನುಂಟು
ಮಾಡಿದ ಬಗೆ. ರಾಮೇಶ್ವರಪುರದ ಸ್ಥಳಪುರಾಣವು ವ್ಯಂಗ್ಯ ಮಹಾಕಾವ್ಯದ (mock epic) ಚೌಕಟ್ಟಿನಲ್ಲಿ ಮತ್ತು ಅದರದೇ ಆದ ಲಹರಿಯಲ್ಲಿ ವರ್ಣಿತವಾಗಿದೆ. ಕಾದಂಬರಿಯು -” ತ್ರೇತಾಯುಗ ಪ್ರಸಿದ್ಧರಾದ ಅಗ್ತಸ್ಯ ಮಹಾಮುನಿಗಳೊಮ್ಮೆ ವಿಂಧ್ಯವನ್ನು ಮೆಟ್ಟಿ ದಕ್ಷಿಣಾಭಿಮುಖವಾಗಿ ತೆರಳಿ ಕವೇರ ಪುತ್ರಿಯನ್ನು ಕಮಂಡಲುವಿನಲ್ಲಿ ಹಿಡಿದಿಡಲಾರದೇ ಕಳೆದುಕೊಂಡು ತೊರೆಯಾಗಿ ಹರಿದವಳನ್ನರಸುತ್ತ ತೊಳಲುತ್ತಿರಬೇಕಾದರೆ, ಜಂಬೂದ್ವೀಪದ ಭರತಖಂಡದ ಕರ್ನಾಟಕ ಪ್ರಾಂತದ ಹಾಸನೂರು ಜಿಲ್ಲೆಯ ಅರೆಕಲ್ಲುಗೂಡು ತಾಲ್ಲೂಕಿನ ರಾಮನಾಥಪಟ್ಟಣ ಹೋಬಳಿಯ ಗೊಬ್ಬಳೀ ಕಾಡೆಂಬಲ್ಲಿ ಕಣ್ಣು ಕಾಣದಂತೆ ಇರುಳಾಗಲು ಪರಮಶಿವಧ್ಯಾನ ಮಾಡುತ್ತ ನಿದ್ದೆ ಹೋದರು………ಮಲಗಿದ್ದ ವಲನಿಗಳು ಹರಹರ ಎಂದರು-
ಅರ್ಥಾತ ಹರ ಸ್ಮರಣೆ ಮಾಡುತ್ತೆ ಮೇಲೆದ್ದರು. ಆಗ ಕೋಳಿ ಕೂಗಲು ‘ಇದೇನಚ್ಚರಿಯಲಾ!” ಎಂದು ಬೆರಗುವಟ್ಟು ಮುಂದುವರಿದಿರಬೇಕಾದರೆ ಪತಿತಪಾವನೆಯಾದ ಕಾವೇರಿ ಅಡ್ಡಲಾದಳು” -ಎಂದು ಪ್ರಾರಂಭವಾಗುವದು.
ಹಾಗೆಯೇ ಮುಂದುವರಿಯುತ್ತಿದ್ದ ಅಗಸ್ತ್ಯರು ಕಾವೇರಿಯ ‘ಮರಳದಂಡೆಯ ವೈಶಾಲ್ಯ’ ವನ್ನು ವೀಕ್ಷಿಸಿ ‘ಸಮೃದ್ಧವಾಗಿ ಬೆಳೆಯುತ್ತಿದ್ದ ದೊಡ್ಡ ಗದ್ದೆಗಳನ್ನು ನೋಡಿ ಆನಂದಿಸಿ ಕೊಡಗಮಯವಾದ ಹುಣಿಸೆ ತೆಂಗಿನ ಮರಗಳನ್ನು ಪರಾಂಬರಿಸಿ ಅರಳೀ ತೋಪಿನ ಕಡೆಗೆ ಮುಂದುವರಿಯುತ್ತಿರಲು, ನದಿಯ ದಡದಲ್ಲಿರುವ ‘ಭೀಮ ಬಂಡೆಗಳು’ ಎದುರಾದವು, ‘ಬ್ರಹ್ಮಾಂಡವನ್ನೇ ಅರೆದು ಹಾಕಲು ಬಳಸಬಹುದಾದಂತಹ ಬಂಡೆಯೊಂದು”ಇದು ಇಲ್ಲಿರುವವರೆಗೂ ಈ ಜಾಗದ ಉನ್ನತಿಗೆ ಕುಂದಿಲ್ಲ”ವೆಂದು ಸಾರುವಂತಿತ್ತು. ಅಗಸ್ತ್ಯರ ಪಾದಾರವಿಂದ ಪುನೀತವಾದ ಈ ಕ್ಷೇತ್ರವು ಶ್ರೀರಾಮ ಕ್ಷೇತ್ರವೆಂಬ ಅಭಿದಾನದಿಂದ ಪ್ರಸಿದ್ಧವಾಯಿತು. ಹೊಳೆಯ ಒಂದು ದಂಡೆಯ ಮೇಲೆ ಶ್ರೀರಾಮಮೂರ್ತಿಯ ಲಿಂಗವು ಪ್ರಾದುರ್ಭಾವವಾದರೆ, ಅಗಸ್ತ್ಯರ ಬಿನ್ನಹದ ಮೇರೆಗೆ ಅದರ ಇನ್ನೊಂದು ದಡದ ಮೇಲಿರುವ ಹುಣಿಸೆಮರದ ಬುಡದಲ್ಲಿ ಲಕ್ಷ್ಮಣಸ್ವಾಮಿಯ ಲಿಂಗ ಪ್ರತಿಷ್ಠಾಪನೆ ಯಾಯಿತು. ಕೋಡಗಗಳನ್ನು ಬೀಳ್ಕೊಟ್ಟು ದಯಾನಿಧಿಯಾದ ಶ್ರೀರಾಮನು “ನೀವಿಲ್ಲಿ ರುವವರೆಗೂ ಈ ಕ್ಷೇತ್ರ ಪ್ರವೃದ್ಧಮಾನಕ್ಕೆ ಬರುತ್ತಿರುತ್ತದೆ” ಎಂದು ಆಶೀರ್ವದಿಸುತ್ತಾನೆ. ರಾಮೇಶ್ವರಪುರದ ನೆರೆಯಾದ ಮಂಚದಕಟ್ಟೆಯು ಸೀತಾದೇವಿಯು ಬಯಸಿದ ಬಚ್ಚಲಾಯಿತು, “ಅದರ ಹಾಸುಗಲ್ಲಿಗೆ ಸೀತೆಯ ಕಲ್ಲೆಂತಲೇ ಹೆಸರಾಗಿ ಅದು ತೀರ್ಥಸ್ಥಳವಾಯಿತು”, ಭವಾನಿಯ ಶಾಪದಿಂದ ನಿಜ ಧೇನುಕೆಯು ಕಲ್ಲಿನ ಧೇನುಕೆಯಾದಳು, ಭಕ್ತಪರಾಧೀನನಾದ ಪರಮೇಶ್ವರನು “……ಕಲಿಯುಗದಲ್ಲಿ ಮಾನವರು ತಮ್ಮ ಪಾಪವೆಲ್ಲವನ್ನೂ ನಿನ್ನ ಗರ್ಭದಲ್ಲಿ ಭರಿಸುತ್ತಾರೆ. ಆಗ ಪತಿತಪಾವನೆಯನ್ನಿಸಿದ ನೀನು ತನ್ಮೂಲಕ ಅವರಿಗೂ ಸದ್ದತಿ ಕಾಣಿಸಿ ನಿನ್ನ ಶಿಲಾರೂಪದಿಂದಲೂ ಆಸ್ಫೋಟ-ಮುಕ್ತಿಹೊಂದಿ ನಿಜರೂಪದಲ್ಲಿ ಪುನಃ ಸ್ವರ್ಗವಾಸಿಯಾಗುತ್ತೀಯೆ”, ಎಂದು ವಿಶಾಪಾನು ಗ್ರಹ ಮಾಡುತ್ತಾನೆ. ಹೊಳೆಯಾಚೆಯ ಲಕ್ಷ್ಮಣೇಶ್ವರ ಮೂರ್ತಿಯು ಮುಸಲ್ಮಾನರ ಧಾಳಿಯ ಕಾಲದಲ್ಲಿ ಭಿನ್ನವಾಯಿತು. ಆ ಭಿನ್ನವಲೂರ್ತಿಗೆ ನೈವೇದ್ಯವಿಲ್ಲದಾಯಿತು. ಹೊಳೆಯಿಚಿನ ದೇವರುಗಳಿಗೆ “ನೂರಾ ಎಂಟು ಉತ್ಸವ ಸಮಾರಂಭ ಸಂತರ್ಪಣೆಗಳು ವಿಜೃಂಭಣೆಯಿಂದ ಸಲ್ಲುತ್ತಿದ್ದವು”, ಊರಿನ ಸಮಸ್ತ ದೇವ-ದೇವತೆಗಳ ಪೂಜೆ, ವ್ರತ ಕೈಂಕರ್ಯಾದಿಗಳಲ್ಲಿ ಸಮಸ್ತರಿಗೂ ಸಮಾನ ಹಕ್ಕಿದ್ದರೂ ಕೂಡ ಕೆಲವೊಂದು ವಿಶಿಷ್ಟ ಸಂದರ್ಭಗಳಲ್ಲಿ ಪೂಜಾದಿಗಳು ನಿಯೋಜಿತ ಜನರಿಂದಲೇ ಆಗಬೇಕೆಂಬ ನಿಯಮವಿದ್ದಿತು -” ಪಟ್ಟಾಭಿರಾಮ ದೇವಸ್ಥಾನದಲ್ಲಿ ಷಡಗೋಪ ಮತ್ತು ಸುಬ್ರಮಣ್ಯನ ದೇವಸ್ಥಾನದಲ್ಲಿ ರಾಘವಚಾರಿಯದು ಅಗ್ರಮರ್ಯಾದೆ. ಆದರೆ ಎಲ್ಲಿಯೂ ರಾಮೇಶ್ವರಪ್ಪನ ಹಿರಿತನ ಮುಂದಾಳ್ತನಗಳಿಲ್ಲದಿರುತ್ತಿರಲಿಲ್ಲ. ಅದು ಮನಸಾ ಒಪ್ಪಿ ಬಂದುದಾಗಿತ್ತು, ಎಲ್ಲರ ಪಾಲಿಗೂ, ಅದು ಗುಣ, ಕಾರ್ಯಕ್ಷಮತೆ, ವ್ಯಕ್ತಿತ್ವ, ವರ್ಚಸ್ಸು ಒಟ್ಟಿನಲ್ಲಿ ಆತ್ಮದ ಔನ್ಯತ್ಯಕ್ಕೆ ಸಂದ ಗೌರವ, ಸುಬ್ರಮಣ್ಯನ ರಥ ಊರಿನ ಹಿರಿತನದ ಹಾಗೂ ಔನ್ಯತ್ಯದ ಸಂಕೇತವಾಗಿತ್ತು.” “ಸುಬ್ರಮಣ್ಯನ ರಥವೆಂದರೆ ಅಂಥಿಂಥ ತೇರಲ್ಲ. ಜಗತ್ತನ್ನೇ ಮೈಮೇಲೆ ಹೊತ್ತಿದ್ದ ಆರು ಚಕ್ರಗಳ ಬೃಹದ್ರಥ” ಎಂದು ಅದು ವರ್ಣಿತವಾಗಿದೆ. ರಥದ ಔನ್ಯತ್ಯ ಹಾಗೂ ಸಂತರ್ಪಣೆಯ ಔದಾರ್ಯ ಇವೂ ಕೂಡ ಊರಿನ ಹಿರಿಮೆಯ ಹೆಗ್ಗುರುತುಗಳಾಗಿದ್ದವು.
ಊರಿನ ದೇವತೆಗಳೂ ಕೂಡ ಹಿರಿಮೆಯ ಸಂಕೇತಗಳಾಗಿದ್ದವು. ದೇವರಂಥ ಮನುಷ್ಯರು ಊರಿನ ಕೀರ್ತಿ ಪತಾಕೆಯ ಆಧಾರಸ್ತಂಭಗಳಾಗಿದ್ದರು. ಆ ಊರಿನಲ್ಲಿ ಊರವಂದಿಗರಾದ ಪ್ರಾಣಿಗಳೂ ಕೂಡ ಊರಿನ ಹಿರಿಮೆಯನ್ನು ಹಿರಿದಾಗಿಸುವದರಲ್ಲಿ ತಮ್ಮ ಅಳಿಲು ಕೊಡುಗೆಯನ್ನು ನೀಡಿದ್ದವು, ಅಲ್ಲಿನ ಕಪಿಗಳು ಜನರ ದೃಷ್ಟಿಯಲ್ಲಿ ಸಾಕ್ಷಾತ್ ರಾಮ ಬಂಟರುಗಳೇ ಆಗಿದ್ದವು. ಕಪಿಗಳಿಗೆ ‘ಹನುಮಂತ’ ಎಂಬ ಗೌರವ ನಾಮಧೇಯವಿದ್ದಿತು. ಕಲ್ಲಿನ ಕಪಿಗೆ ಕಾಯಿ ಒಡೆದು ದಿಟದ ಕಪಿಯನ್ನು ಕೊಲ್ಲುವ ದುಷ್ಟತನ ಅಲ್ಲಿಯ ಜನರಲ್ಲಿ ಇದ್ದಿಲ್ಲ. ಕಪಿಗಳು ಅಲ್ಲಿಯ ವನಶ್ರೀಯನ್ನು ವರ್ಧಿಸುತ್ತಿದ್ದವು, “ಕಪಿ ಇಲ್ಲದ ತೋಪಿಲ್ಲ, ತೋಪಿಲ್ಲದ ಊರಿಲ್ಲವೆಂಬಂತೆ ಆಗಿನ ಭಾವನ”, ಕಪಿಗಳಂತೆ ನವಿಲುಗಳೂ ಇದ್ದವು, “ಕಾವೇರಿಯ ಪುಷ್ಕರಣಿಯಲ್ಲಿಯ ಮೀನುಗಳು ಯಾಂತ್ರಿಕರ ಆಕರ್ಷಣೆಯಾಗಿದ್ದವು”, ಮೈಸೂರಿನ ಅರಸರೊಬ್ಬರು ಮೀನೊಂದಕ್ಕೆ ಮೂಗುತಿಯುಂಗುರ ಹಾಕುವ ಕೃಪೆಯನ್ನೂ ತೋರಿದ್ದರು. ಅಲ್ಲದೇ ಅಲ್ಲಿ ಮೀನುಗಳನ್ನು ಹಿಡಿಯುವದು ಅಪರಾಧವೆಂದು ಸಾರಿದ್ದರು. ಜನರು ತಮ್ಮಲ್ಲಿಯ ಶ್ರದ್ದೆಯಿಂದಾಗಿ ಮೀನುಗಳನ್ನು ರಕ್ಷಿಸುತ್ತಿದ್ದರೇ ವಿನಾ ರಾಜಾಜ್ಞೆಯ ಭಯದಿಂದಲ್ಲ. ಪರಸ್ಥಳದಿಂದ ಯಾರೇ ಬಂದರೂ ಕೂಡ ಅವರನ್ನು ಆದರದಿಂದ ಸ್ವಾಗತಿಸಿ ತಮ್ಮ ಮನೆಗೆ ಬರಮಾಡಿಕೊಂಡು ಅತಿಥಿ ಸತ್ಕಾರವನ್ನು ತಮ್ಮ ಯಥಾನುಶಕ್ತಿ ಮಾಡಿ ಕಳುಹಿಸುವ ಹೃದಯದ ವೈಶಾಲ್ಯ ಮತ್ತು ಅತಿಥಿ ಸತ್ಕಾರಪ್ರಿಯತೆ ಇವು ಅಲ್ಲಿಯ ಜನರಲ್ಲಿ ಮನೆಮಾಡಿದ್ದವು, ಧಾರ್ಮಿಕ ವಿಷಯಗಳಲ್ಲಿ ಜನರಿಗೆ ತುಂಬಾ ಶ್ರದ್ದೆಯಿತ್ತು, ಅವರು ಧಾತ್ಮಿಕ ವಿಷಯಗಳಲ್ಲಿ ಧರ‍್ಮಮೂಢರಾಗಿರದೇ ಲೌಕಿಕ (secular) ಭಾವನೆಯುಳ್ಳವರಾಗಿದ್ದರು, ಅವರು “ಊರಿನ ಒಕ್ಕಟ್ಟನ್ನು ಮುರಿಯಲಿಲ್ಲ. ಅವರವರ ಆಚಾರ ಅವರವರಿಗೇ ಹೆಚ್ಚು. ಮಾನವೀಯತೆ ಎಲ್ಲರಿಗೂ ಹೆಚ್ಚು.” ಅವರದು ಶ್ರದ್ಧೆಯ ಜೀವನವಾಗಿತ್ತು ಧರ್ಮದಲ್ಲಿ ಶ್ರದ್ಧೆ ಮಾನವೀಯತೆಯಲ್ಲಿ ಶ್ರದ್ದೆ-ಶ್ರದ್ಧೆಯೇ ಅವರ ಜೀವನದ ಉಸಿರಾಗಿತ್ತು. “ಎಂತಹದೇ ಪ್ರಸಂಗ ಬಂದರೂ ಆಚಾರದ ಹೆಸರೆತ್ತಿ ಮಾನವೀಯತೆಯನ್ನು ನೀಗಗೊಡುವ ಅಥವಾ ನೀಗಿಸುವ ಛಲ ತೊಡುವದು ದುರಾಗ್ರಹ. ಎರಡಕ್ಕೂ ಶಿಕ್ಷೆ ಕಟ್ಟಿಟ್ಟದ್ದು, ಬಲಿಯಾಗುವವನು ಮನುಷ್ಯನೇ, ಇದು ರಾಮೇಶ್ವರಪ್ಪನೇ ಮುಂತಾದವರ ನೇತೃತ್ವದಲ್ಲಿ ಆ ಊರು ಉಸಿರಾಡಿಸುತ್ತಿದ್ದ ಶ್ರದ್ದೆಯ ವೈಖರಿ”.
ಊರಿನ ಸಮಸ್ತ್ರ ವ್ಯವಹಾರವನ್ನೂ ಸಹಕಾರಿ ತತ್ವವನ್ನವಲಂಬಿಸಿ ನಿಭಾಯಿಸಲಾಗುತ್ತಿತ್ತು, ಊರಿನ ಎಲ್ಲ ಜನರೂ ಒಂದೇ ಕುಟುಂಬದವರು ಎಂಬ ಭಾವನೆಯು ಅವರಲ್ಲಿತ್ತು, ಊರು ಸ್ವಾವಲಂಬನೆಯ ಒಂದು ಮೂರ್ತಿಮತ್ತಾದ ಸ್ವರಪದಲ್ಲಿತ್ತು”ಎಲ್ಲರೂ ಎಲ್ಲರ ಸುಗ್ಗಿಯಲ್ಲಿ ನೆರವಾಗುತ್ತಿದ್ದುದು ರಾಮೇಶ್ವರಪುರದ ವೈಶಿಷ್ಟ್ಯ. ಹೀಗಾಗಿ ಊರಿಗೆ ಊರೇ ಒಂದು ಮನೆಯಂಬ ಭಾವವಿದ್ದಿತು, ತಾವು ಬೆಳೆದುದನ್ನು ಪರವೂರಿಗೆ ಕಳುಹಿಸಿ ಪರವೂರಿನದನ್ನು ತಾವು ತಂದು ತಿನ್ನುವ ಸಲ್ಲದ ಪರದಾಟ ಅವರಿಗೆ ಕಾಣದ್ದು, ತಾವು ಬೆಳೆದುದನ್ನು ತಾವು ತಿಂದು ತೃಪ್ತಿಯ ನಗು ತಳೆಯುತ್ತಿದ್ದರು.” ಊರಿನವರಲ್ಲಿ ವ್ಯಾಪಾರೀ ಮನೋವೃತ್ತಿಯು ಲವಲೇಶವೂ ಇದ್ದಿಲ್ಲ, ವಿಶ್ವಾಸಕ್ಕಾಗಿ ವಿನಿಮಯ ಮಾಡಿಕೊಳ್ಳುತ್ತಿದ್ದರೇ ವಿನಾ ವ್ಯಾಪಾರಕ್ಕಾಗಿಯಾಗಲೀ ಅಥವಾ ತಮ್ಮ ಸ್ವಂತ ಲಾಭಕ್ಕಾಗಿಯಾಗಲೀ ಯಾವದೇ ವ್ಯವಹಾರವನ್ನು ಮಾಡುತ್ತಿರಲಿಲ್ಲ. “ಹಾಗೆ ಪ್ರೀತಿಗೆ ತಾವು ಕೇರಳಾಪುರದ ಕೆಂಭತ್ತವನ್ನೊ ಹುಣಸೂರಿನ ಕರಿಹುಣಸೆಯನ್ನೂ ತರುತ್ತಿದ್ದುದುಂಟು, ತಮ್ಮಲ್ಲಿಯ ರಾಜಭೋಗವನ್ನೋ ಕೆಮ್ಮಣಸನ್ನೋ ಕೊಡುತ್ತಿದ್ದುದು ಉಂಟು, ಆದರೆ ಅವರಿವರ ನಡುವಿನ ವಿಶ್ವಾಸಕ್ಕೆ ಹೊರತೂ ವ್ಯಾಪಾರಕ್ಕಾಗಿ ಅಲ್ಲ”.
ಇಂಥ ಒಂದು ಸಮೃದ್ಧಿ, ಶಾಂತತೆ, ದೈವಭಕ್ತಿ, ಶ್ರದ್ಧೆ, ಪ್ರೀತಿ ವಿಶ್ವಾಸಗಳಿಂದ ತುಂಬಿದ ಊರು ಸ್ವಾಭಾವಿಕವಾಗಿಯೇ ಉಚ್ಛ್ರಾಯ ಯ ಸ್ಥಿತಿಗೆ ಬಂದಿತು. ಕಾಲ-ಪರಿಸ್ಥಿತಿಗಳು ಅನುಕೂಲವಾಗಿದ್ದವು, ಜನರು ಒಂದು ಹಿರಿಯ ಆದರ್ಶದ ಕುಲುಮೆಯಲ್ಲಿ ಪಳಗಿದವರಾಗಿದ್ದರು. ಒಂದು ರೀತಿಯ ಸಂಪ್ರದಾಯಬದ್ಧವಾದ ಜೀವನ (Life of tradition) ನಡೆಸುತ್ತಿದ್ದ ಊರಿನ ಜೀವನದಲ್ಲಿ. ಊರಿನ ಕ್ಷೇತ್ರದಲ್ಲಿ ಅವನತಿಯ ಬೀಜಗಳು ಹೇಗೋ ಬಂದು ಬಿದ್ದು ಮೊಳೆಯಲು ಪ್ರಾರಂಭಿಸಿದ್ದವು, ರಾಮೇಶ್ವರಪ್ಪ ಮಲಗಿ ವಿಚಾರಿಸುತಿದ್ದಾಗ ಬೆಳೆಯುತ್ತಿರುವ ವಿಧ್ವಂಸಕ ಶಕ್ತಿಗಳು (Destructive forces) ಅವನ ವಿಚಾರಸರಣಿಯಲ್ಲಿ ಸುಳಿದು ಹೋಗುತ್ತವೆ. “ರಾಮೇಶ್ವರಪ್ಪ ಮಲಗಿದ. ಅವನು ಹಾಗೆ ಕಾಲ ಕೆಡ್ತಾ ಇದೆ ಅನ್ನುವದಕ್ಕೆ ಕಾರಣಗಳಿದ್ದವು, ಅವನ ಮುಂದಿನ ಪೀಳಿಗೆಯಲ್ಲಿ ಹುಸಿ, ಹಾದರ, ತಟವಟ, ದುಡ್ಡಿನಾಸೆ, ದಗಾಖೋರತನ, ಒಂದು-ಎರಡು- ವತ್ತಿನ್ನೊಂದು ಎನ್ನುವ ಅದ್ವೈತ, ದ್ವೈತ, ವಿಶಿಷ್ಟಾದ್ವೈತಗಳ ಗೋಜು ತರಲೆ ಮುಂತಾದ ಬಾಳಬೇನೆಗಳು ಅಲ್ಲಲ್ಲಿ ಮೊಳೆಯುತ್ತಿದ್ದವು”, ಈ ಎಲ್ಲ ಬಾಳಬೇನೆಗಳು ಅವನ ಕಾಲದಲ್ಲಿಯೂ ಇದ್ದವು. ಆದರೆ ಕಾಲ ಮುಂದುವರಿದಂತೆ ಅವು ಹೇಗೋ ನೀರು ನೆಲ ಪ್ರಕಾಶಗಳನ್ನು ಪಡೆದು ಒಳ್ಳೇ ರಭಸದಿಂದ ಸುಪ್ತಾವಸ್ಥೆಯನ್ನು ಮೀರಿ ಬೆಳೆದು ನಿಲ್ಲಲಾರಂಭಿಸಿದವು.
ರಾಮೇಶ್ವರಪ್ಪನಂತೆ ಊರಿನ ಅವಸಾನವನ್ನು ಮಾನಸಿಕವಾಗಿ ಚಿತ್ರಿಸಿ ವ್ಯಥೆಗೊಂಡವರು ಅವಧಾನಿಗಳು ಕೂಡ, ಊರಿನಲ್ಲಿ ವಿಧ್ವಂಸಕ ಶಕ್ತಿಗಳು ತಾಂಡವವಾಡಿ ಕೋಲಾಹಲವನ್ನುಂಟು ಮಾಡುತ್ತಿರುವ ಸಂದರ್ಭದಲ್ಲಿ ಅವಧಾನಿಗಳು “ತಾವು ನೆಚ್ಚಿದ್ದ ಊರಿನ ನಡೆ ತಪ್ಪಿದ್ದರ ಬಗ್ಗೆ ಚಿಂತಿಸುತ್ತಲೇ ಬಂದರು. ಅದೇ ಸಮಯಕ್ಕೆ ದುರ್ವಿಕಾರೀ ಸಂವತ್ಸರ ಹುಟ್ಟಿದ್ದು ಊರಿನ ಅವನತಿಯ ಪಥದಲ್ಲಿ ಇದು ಒಂದು ಮೈಲುಗಲ್ಲು. ರಾಮೇಶ್ವರಪ್ಪನೇನೋ ಕಾಲ ಕೆಡುತ್ತಿದೆ ಎಂದು ಹೇಳುತ್ತಲೇ ಇದ್ದ. ಅದು ಅವನಿಗೆ ತುಂಬಾ ಮನವರಿಕೆಯಾದ ವಿಷಯವಾಗಿತ್ತು, ಅವನ ಮೊದಲ ಮೊಮ್ಮಗ ಕೋದಂಡರಾಮ ಸತ್ತಾಗಲೇ ರಾಮೇಶ್ವರಪ್ಪನ ಜೀವ ಹಣ್ಣಾಗಿತ್ತು-ಅದೇ ದಿನ ರಾಮೇಶ್ವರಪ್ಪ ಮುದುಕನಾದ, ಅವನ ಮಗ ಸೊಸೆಯರ ಇತ್ತಂಡ ಬದುಕಿನ ಕತ್ತಲಲ್ಲಿ ಕಂಡಿದ್ದ ಕುಡಿ ಬೆಳಕು ನಂದಿ ಕಪ್ಪು ಹೆಚ್ಚಿತು”, ಹಿರಿಯರ ಹಿಡಿತದಲ್ಲಿ ಇನ್ನೂ ಭದ್ರವಾಗಿ ಉಳಿದಿದ್ದ ಊರಿನ ಕಟ್ಟುನಿಟ್ಟಾದ ಸದಾಚಾರ ನಡತೆಯರು ಕಾಮಾಕ್ಷಿಯು “ಜೋಡಿ ತೆಂಗುಗಳ ಬದಿಯಿಂದ ಭರ‍್ರನೇ ಕತ್ತಲಿಗೆ ನುಗ್ಗಿ” ದಾಗೆ ನುಚ್ಚುನೂರಾಯಿತು. ಯಾವ ರಾಜ್ಯದಲ್ಲಿ ಮಾನವಂತ ಮಹಿಳೆಯರ ಮಾನವು ರಕ್ಷಿಸುವವರಿಲ್ಲದೇ ಮೂರು ಕಾಸಾಗುವುದೋ ಆ ರಾಜ್ಯವು ಅಧೋಗತಿಯಂ ಕೊನೆಯ ಮೆಟ್ಟಿಲನ್ನಿಳಿದಂತೆಯೇ ಎಂಬ ಉಕ್ತಿಯೊಂದಿದೆ. ಈ ಘಟನೆಯು ಇದೇ ಊರಿನ ನೈತಿಕ ಅವನತಿಯ ಸಂಕೇತವಾಗಿ ಚಿತ್ರಿತವಾಗಿದೆ. ಅದೇ ಸಮಯಕ್ಕೆ “……..ಮೊದಲ ಬಾರಿಗೆ ಊರಿನ ತೇರು ಅರ್ಧಕ್ಕೆ ಮುರಿಯಿತು, ಜಾತ್ರೆ ಜಾರಿತು”, ಎಂತಹ ಅಪಶಕುನ ! ಒಂದು ಕಾಲದಲ್ಲಿ ಊರಿನ ಉಚ್ಚ್ರಾಯ ಕಾಲದ ಸಂಕೇತವಾಗಿದ್ದು ಮೆರೆದ ತೇರು ಅರ್ಧಕ್ಕೇ ಮುರಿದು ಅವನತಿಯ ಅಪಶೃತಿಯನ್ನು ಹಾಡಿದಂತಾಯಿತು. ಊರಿನ ಆಂತರಿಕ ಜೀವನದಲ್ಲಿಯೂ ತುಂಬಾ ವ್ಯತ್ಯಾಸವುಂಟಾಗಿ ಹಿರಿಯರೆನ್ನಿಸಿದವರು ಮೂಲೆಗುಂಪಾಗಿ ಕುಳಿತುಕೊಳ್ಳುವ ಪ್ರಸಂಗ ಬಂದಿತು- “ಸೀತಾ ಪತಿಗೆ ನಿರಾಳ, ಕಳ್ಳರಾಮನ ಕಾಫಿ ಚಟಕ್ಕೆ ತೃಪ್ತಿ, ಗೋಪಣ್ಣನ ಕಾಮಯಜ್ಞವಾದಾ ರಭ್ಯ ಮನಸ್ಸು ಕೆಟ್ಟು, ಆರೋಗ್ಯ ಕೆಟ್ಟು ಮನೆಯ ಮೂಲೆ ಹಿಡಿದಿದ್ದ ಅಪ್ಪಣ್ಣಾವ ಧಾನಿಗಳ ವಿಷಯವಂತೂ ಅದೇ ಒತ್ತಟ್ಟಿಗಾಗಿ ಹೋಗಿತ್ತು, ಅವರಿಗೆ ಇತ್ತೀಚೆಗೆ ಮನೆಯ ಮುಂದಿದ್ದ ತೆಂಗಿನಮರದ ಸೊಗೆಯನ್ನೆಣಿಸುತ್ತಿರುವದೊಂದೇ ಕೆಲಸವಾಗಿ ಹೋಗಿತ್ತು.” ಅಪ್ಪಣ್ಣಾವಧಾನಿಗಳು ಊರಿನ ಅನೇಕ ಹಿರಿಯರಲ್ಲಿ ಒಬ್ಬರು, ಬಹುತೇಕ ಊರಿನ ಎಲ್ಲ ಹಿರಿಯರ ಅವಸ್ಥೆಯೂ ಅಪ್ಪಣ್ಣಾವಧಾನಿಗಳಂತಾಗಿದ್ದರಲ್ಲಿ ಸಂದೇಹವಿಲ್ಲ.
ಅದೇ ಸಮಯಕ್ಕೆ ಸರಿಯಾಗಿ ನಾಣುವಿನ ಹೊಟೆಲು ಊರಿಗೆ ಬಂತು, ಅವನನ್ನು ಬಾ ಎಂದು ಬಾಯಾರೆ ಕರೆದವರು ಯಾರೂ ಇಲ್ಲ, ಅವನು ಬಂದ ದೋಸೆ ಹೋಯ್ದ ಹಾಗೂ ಊರವರನ್ನು ಗೆದ್ದ… “ಅಂತೂ ನಾಣುವಿನ ಹೊಟೆಲು ನಿಂತಿತು, ನೆಲೆಸಿತು, ಯಾರೂ ನಾಣುವಿಗೆ ಒಪ್ಪಿಗೆಯನ್ನು ಕೊಡಲಿಲ್ಲ, ಆದರೆ ಜನರ ನಾಲಿಗೆಯ ರುಚಿಯ ಹದ ಅವನಿಗೆ ಸಿಕ್ಕೇ ಸಿಕ್ಕಿತು. ಕಾವಲಿ ಕಾದಿದೆಯೇ ಇಲ್ಲವೇ ಎನ್ನುವುದನ್ನು ತಿಳಿಯುವುದಕ್ಕೆ ಅದನ್ನು ಮುಟ್ಟಿ ನೋಡಬೇಕೇ ? ಒಂದು ಹನಿ ನೀರು ಚಿಮುಕಿಸಿದರೆ ಸಾಕು ! ಹಳೆಯ ತಲೆಮಾರಿನ ನೊಂದ ಇನ್ನೊಬ್ಬ ಹಿರಿಯ ವ್ಯಕ್ತಿ ಷಡಗೋಪ, ಸಡಯುತ್ತಿರುವ ಅನಾಹುತವನ್ನು ನೋಡಿ ನೊಂದು ಊರನ್ನೇ ಬಿಡಲು ನಿರ್ಧರಿಸಿದ ಷಡಗೋಪನ ಮನದಲ್ಲಿ ತುಮುಲ, ಹುಟ್ಟಿಬೆಳೆದ ಊರಿನ ಕುಲವನ್ನು ತೊಡೆದು ಹೋಗುವದು ದುಃಸಾಧ್ಯವೆನಿಸುವದು, ಅದನ್ನು ತೊಡಲಾರ, ಬಿಡಲಾರ- ಅದು ಷಡಗೋಪನ ಮನದ ತುಮುಲದ ಅಂತರಂಗ. ಕಲಕಿದ ಅಶಾಂತ ಮನಸ್ಸಿನ ಸ್ಥಿಮಿತವನ್ನು ಪುನಃ ತಂದುಕೊಳ್ಳಲು ರಾಮೇಶ್ವರಪ್ಪನನ್ನು ಮರೆಹೋಗುತ್ತಾನೆ ಭಗವಧ್ಯಾನದ ಮುಂದೆ “ಯಾವ ಬಾಧ್ಯವೂ ಇಲ್ಲ” ಎಂದು ಯಾವಾಗಲೂ ಹೇಳುತ್ತಿರುವ ರಾಮೇಶ್ವರಪ್ಪನ ಮಥಿತಾರ್ಥವು ಪಡಗೋಪನಿಗೆ ಸಹಜವಾಗಿಯೇ ಆಗುತ್ತ ಹೋಗುವದು, ಮಾತು ಪುನಃ ಊರಿನ ಅವನತಿಯತ್ತ ತಿರುಗುವದು, “ರಾಮಪ್ಪಾ ನನ್ನ ನಿನ್ನ ಕಾಲ ಮುಗಿ ಯಿತು” ಎಂದು ಹೇಳಿ ಷಡಕೋಪ ಮುಂದುವರಿಸಿದ, “ಊರಿನ ಸ್ಥಿತಿಗತಿಗಳನ್ನು ನೋಡಿದರೆ ನನಗೆ ಯಾಕೋ ವಿಚಿತ್ರವಾಗಿ ತೋರುತ್ತದೆ, ಆಡಂಬರ ಅತಿಯಾಯಿತು, ಜನರಲ್ಲಿ ಸತ್ವ ಕುಂದುತ್ತಿದೆ. ಸತ್ಯಕ್ಕೂ ಎಡೆ ಕಡಿಮೆ……..ಅಂತಹ ಒಳ್ಳೆಯವನಿಗೇ ಆ ದುರ್ಗತಿ ಬಂದಮೇಲೆ ಇನ್ನು ಊರಿಗುಳಿಗಾಲವೆಲ್ಲಿ ? ಶಂಭು ದೀಕ್ಷಿತರ ನೆನಪಾಗು ವದು, ಊರನ್ನು ಅದರ ಹಣೆಪಾಡಿಗೆ ಬಿಟ್ಟು ಧೈರ್ಯದಿಂದ ಊರನ್ನು ಬಿಟ್ಟವರು ದೀಕ್ಷಿತರು” ಹೋಗುವಾಗ “ಊರು ಉರಿಬಯಲಾಯಿತು, ಅದರ ಬೂದಿಯನ್ನು ಗಂಗೆಯಲ್ಲಿ ಕೆದರಲು ಹೋಗುತ್ತಿದ್ದೇನೆ” ಎಂದು ಘಂಟಾಘೋಷವಾಗಿ ಸಾರಿದರು. ಅಂತೂ ಕೊನೆಗೂ ಷಡಗೋಪ ಧೈರ್ಯವಾಗಿ ಊರಿಗೆ ಕೊನೆಯ ನಮಸ್ಕಾರ ಹೇಳಿದ.
“ರಾಮೇಶ್ವರಪ್ಪ ಮಾಗಿದ್ದ.” ಊರಿನ ಸ್ಥಿತಿಗತಿಗಳು ಅವನ ಮುಷ್ಟಿಯ ಹಿಡಿತದಿಂದ ಎಂದೋ ಪಾರಾಗಿ ದೂರವಾಗುತ್ತಿದ್ದವು, “ಅರ್ಥವಾಗುವದಿಲ್ಲವೇ ? ಆಗುವದೂ ಕಷ್ಟವೇ ಆದರೂ ಆದೀತು, ಈಶ್ವರನ ಇಚ್ಛೆ” ಎಂದು ದೇವರ ಮೇಲೆ ಸರ್ವಭಾರ ಹಾಕುವ ಸಮಯವೊದಗಿತ್ತು, ಆದರೆ “ಗುಡಿಯೊಳಗಿನ ಶಂಭು ತಪೋಮಗ್ನನಾಗಿದ್ದ” ಆಮೇಲೆ “ಸ್ಥಾಣು” ವಾದ ಅವನ ಯೋಗನಿದ್ರೆ ಚಿರನಿದ್ರೆಯೆನ್ನುವಂತೆ ಭಾಸವಾಗುವಂತಿತ್ತು. ಅರ್ಚಕ ಶೇಷ ರಾಮೇಶ್ವರ ಗುಡಿಯಲ್ಲಿಯ ದೇವರನ್ನೆಬ್ಬಿಸಲು ತನ್ನ ಶಕ್ತಿ ಮೀರಿ ಗಂಟೆ ಬಾರಿಸಿದರೂ ಕೂಡ ಆ ದೇವರಿಗೆ ಎಚ್ಚರವಾಗುತ್ತಿರಲಿಲ್ಲ. ಅಲ್ಲದೇ ಅಲ್ಲಿಯ ಸೋಮಸೂತ್ರದ ಧಾರೆ ಅಕಾರಣವಾಗಿ ನಿಂತುಹೋಗಿತ್ತಂತೆ, ರಾಮೇಶ್ವರಪ್ಪನ ಅವಸಾನದೊಂದಿಗೆ ಊರಿನ ಉಚ್ಛ್ರಾಯ ಕಾಲದ ಹಂಸಗೀತವನ್ನು (Swan Song) ಹಾಡಿದಂತಾಯಿತು. ಅಲ್ಲಿಗೆ “ದಿಬ್ಬದ ಮನೆ ಖಾಲಿ, ಸೂರಪ್ಪನ ಮನೆ ಖಾಲಿ, ಭಾವಿಯು ಮನೆ, ಚಕ್ಕೋತದ ಮನೆಗಳು ಖಾಲಿ…….” ಹೀಗೆ ಊರೆಲ್ಲ ಭಣ ಭಣವಾಯ್ತು. ಊರಿನ ಉಚ್ಛ್ರಾಯ ಕಾಲದ ಕುರುಹಂತಿದ್ದ ಗೌತಮಾಶ್ರಮದ ಬಿಲ್ವಪತ್ರೆಯ ತೋಪೂ ಕೂಡ ನಾಶವಾಗಿ ಚದುರಂಗದ ಮಟ್ಟಿಯಾಯಿತು, ಹಾಗೆಯೇ ವಕ್ರಭಾನು ಸಂವತ್ಸರವು ಒಂದು ಊರಿನ ಭವಿಷ್ಯವನ್ನೇ ವಕ್ರಿಸಿತು, “ಎಲ್ಲಾ ಅಧರ್ಮ! ಅಧರ್ಮ! ಇನ್ನೇನಿಲ್ಲ. ಬದುಕೇ ಬಂಡಾಟವಾಗ್ತಾ ಇದೆ” ಎನ್ನುವ ಸರ್ವಸಾಮಾನ್ಯ ಹೇಳಿಕೆಯಲ್ಲಿ ಊರಿನ ಜನರ ಬದುಕಿನ ಬೆನ್ನೆಲುಬಾಗಿದ್ದ ಶ್ರದ್ದೆಯ ಸಮಾಧಿಯಾದುದನ್ನು ಕಾಣುತ್ತೇವೆ.
ಮಳೆಯಾಗದೆ ಅಥವಾ ಬಿದ್ದ ಮಳೆ ಸಾಲದೇ ಹಾಳಾಗುತ್ತಿರುವ ಜನರ ಬೇಸಾಯವನ್ನು ಪುನರುಜೀವಿಸಲು ಮಾಡಿದ ಪರ್ಜನ್ಯ ವಿಪರೀತವಾದ ಅಧ್ಯಾನಕ್ಕೆಡೆಯಾಯ್ತು, “ಕಾವೇರಿ ಭೋರ‍್ಗರೆದಳು.” ಜನರು, ದನಗಳು, ಗಿಡಗಂಟಿಗಳು ಕಾವೇರಿಯ ಸೆಳೆತದ ಪ್ರವಾಹದಲ್ಲಿ ಕೊಚ್ಚಿಹೋದವು. “ಇದೇನು ತಾನಾಗಿ ಒಲಿದು ಬಂದು ಕೊಟ್ಟ ಮಾತನ್ನುಳಿಸಿಕೊಳ್ಳದಾದ ಅಗಸ್ತ್ಯರ ಕಮಂಡಲುವಿನಿಂದ ನುಗ್ಗಿ ಬಂದ ಕವೇರನ ಮಗಳ ಆವೇಶವೋ ಇಲ್ಲ ಅಳಿವು ಉಳಿವು ಎರಡನ್ನೂ ಡಮರುಗದ ಎರಡು ತಮ್ಮಟ ಮಾಡಿ ತಾಳಗುಣಿಯುತ್ತಿರುವ ತಾಂಡವ ರೀತಿಯೋ ?” ಎನ್ನುವಂತೆ ಕಾವೇರಿ ಅಬ್ಬರದಿಂದ ಮೊರೆದಳು. ಗೌತಮ ಬಂಡೆಯನ್ನು ಒಡೆದು ಸೇತುವೆ ನಿರ್ಮಾಣ ಮಾಡುವ ಪ್ರಯತ್ನ ನಡೆದುದು ಊರಿನ ಪತನದಲ್ಲಿ ಮುಂದುವರಿದ ಇನ್ನೊಂದು ಹೆಜ್ಜೆಯು, ವಕ್ರಭಾನು ವಕ್ರಿಸಿದಾಗ ಊರು ಉರಿಯಿತು. ಗೌತಮ ಬಂಡೆಯನ್ನು ಒಡೆದಾಗ ಊರಿನ ಸಂಪ್ರದಾಯಸ್ಥ ಜೀವನವು ಚೂರು ಚೂರಾಯಿತು, ಒಳಿತಾಗಿಯೋ ಅಥವಾ ಕೆಡುಕಿಗಾಗಿಯೋ ಸೇತುವೆಯ ರಚನೆಯಾದುದರಿಂದ ಊರು ಹೊರ ಊರುಗಳ ಸಂಪರ್ಕವನ್ನು ಪಡೆಯಲು ಆರಂಭಿಸಿತು, “ಊರು ಉರಿದು ಒಡೆಯಿತು, ಗೌತಮ ಬಂಡೆ ಸಿಡಿದು ಚೂರಾಯಿತು, ಸೇತುವೆ ಏಳುತ್ತಿದ್ದಿತು …… ಪ್ರವಾಹ ಅದನ್ನು ಮುಳುಗಿಸಿ ಹರಿಯುತ್ತಿದ್ದಿತು. ಏನು ಪ್ರವಾಹ ! ಎಷ್ಟೆಲ್ಲ ತೇಲಿ ಹೋಯಿತು!” ಎಂಬ ಮಾತು ಪತನದ ದಾರುಣ ಕಥೆಯ ಸಮೂಹಗಾನದಂತೆ (chorus) ಕಾದಂಬರಿಯಲ್ಲಿ ಎಲ್ಲೆಡೆ ಸರ್ವ ವ್ಯಾಪಿಯಾಗಿ ಕೇಳಿ ಬರುವದು.
ಸೇತುವೆ ಸಿದ್ಧವಾಯಿತು, ಹೊರಗಿನ ನಾಗರಿಕತೆಯ ಸಂಪರ್ಕವು ಒಳಗಿನವರಿಗಾಗಲು ಪ್ರಾರಂಭವಾಯ್ತು. ಚಿಕ್ಕದಾದ ಊರು ಹೊರಗಿನ ಹಿರಿಯೂರುಗಳ ಸಂಗಡ ಸಂಪರ್ಕವನ್ನು ಹೊಂದಲು ಪ್ರಾರಂಭಿಸಿತು, ರಾಮೇಶ್ವರಪುರವು ಪ್ರವಾಸಿಗಳ ನಕಾಶೆಯಲ್ಲಿ ತನ್ನ ಇರವನ್ನು ಸ್ಥಾಪಿಸಿತು, ರಾಮೇಶ್ವರಪುರದಿಂದ ಮೈಸೂರಿಗೆ, ಹಾಸನೂರಿಗೆ, ಮಡಿಕೇರಿಗೆ ಮತ್ತು ಹಲವಾರು ಚಿಕ್ಕಪುಟ್ಟ ಊರುಗಳ ಜೊತೆಗೆ ರಸ್ತೆ ಸಂಪರ್ಕ ಬೆಳೆಯಿತು, ಕಾದಂಬರಿಯ ಮುಖಪುಟದಲ್ಲಿಯ ಊರಿನ ಚಿತ್ರವು ಒಂದು ಅರ್ಥದಲ್ಲಿ ಸಾಂಕೇತಿಕವಾದುದು ಎಂದರೆ ತಪ್ಪಾಗಲಾರದು. ಹೊರ ಊರುಗಳಿಂದ ಬರುವ ರಸ್ತೆಗಳೆಲ್ಲ ರಾಮೇಶ್ವರಪುರದ ಗಡಿಯಲ್ಲಿ ಕೂಡುವ ತಾಣದಲ್ಲಿ ಬಿರುಕು ಬಿಟ್ಟಿವೆ. ರಸ್ತೆಗಳೇನೋ ಆದವು, ಆದರೆ ಅಸಮ ಸಂಬಂಧದ ರಸ್ತೆಗಳಿಂದಾಗುವ ಪ್ರಯೋಜನವೂ ಅಷ್ಟಕ್ಕಷ್ಟೇ ಅಲ್ಲವೇ ?
ರಾಮೇಶ್ವರಪ್ಪ ಮನೆಮಾಡಿದ, ಕಮತ ಕಟ್ಟಿದ, ಒಕ್ಕಲುತನ ಬೆಳೆಸಿದ. ಆದರೆ ಮಗನ ಮದುವೆಯ ಸಮಯದಲ್ಲಿ ತೋರಿಸಿದ ದುಡುಕಿನಿಂದ ತನ್ನ ಸ್ವಂತ ಸಂಸಾರದ ಮುರುಕುತನದ ನಾಂದಿಯನ್ನು ಹಾಡಿದ. ತನ್ನ ಸ್ವಂತ ಸಂಸಾರದ ಅವನತಿಯ ಬೀಜವನ್ನು ತನಗರಿವಿಲ್ಲದಂತೆ ತಾನೇ ಬಿತ್ತಿದ್ದ. ತನ್ನ ತಪ್ಪಿನ ಅರಿವಾದಾಗ ಮನನೊಂದ, ಮರುಗಿದ ಮಾಗಿದ ಕೊನೆಗೆ ಮುದುಕನಾಗಿ ಬೂದಿಯಾದ. ಅವನಿಗೆ ತನ್ನ ಮನೆ ಬೇರೆಯಲ್ಲ ತಾನು ನೆಚ್ಚಿದ ಊರು ಬೇರೆಯಲ್ಲ. ತನ್ನ ಸ್ವಂತ ಮನೆತನವನ್ನು ಕಟ್ಟುವದರಲ್ಲಿ ಯಶಸ್ಸನ್ನು ಗಳಿಸಲಾರದ ರಾಮೇಶ್ವರಪ್ಪ ಊರನ್ನು ಕಟ್ಟುವವರಲ್ಲಿ ಯಶಸ್ವಿಯಾಗುವದಾದರೂ ಹೇಗೆ ? ನಂಬಿದ ದೇವರುಗಳಲ್ಲಿ ನಂಬುಗೆ ಕಡಿಮೆಯಾಗಲು ಅವು ಬರಿಯ ಕಲ್ಲುಗಳಾದವು, ಊರಿನ ಉಚ್ಛ್ರಾಯ ವೈಭವವನ್ನು ಹಾಗೂ ತುತ್ತತುದಿಯನ್ನು ಕಂಡನುಭವಿಸಿದ ರಾಮೇಶ್ವರಪ ಅದರ ಅವನತಿಯನ್ನು ಮಾನಸಿಕವಾಗಿ ಚಿತ್ರಿಸಿಕೊಂಡು ಸೋತು ಮರುಗಿ ಮರೆಯಾದ, ಮಗ ಕುಳ್ಳರಾಮ ತಂದೆಯಷ್ಟು ಆದರ್ಶವಾದಿಯಲ್ಲ. ಬದಲಾಗುತ್ತಿರುವ ಸಮಾಜದ ಪರಿಸರಕ್ಕೆ ಹೊಂದಿಕೊಂಡು ನವನಾಗರಿಕತೆಯನ್ನು ಸವಿಯಬಯಸಿದವ, ಕಾದಂಬರಿಯ ಕೊನೆಯ ಹಂತದಲ್ಲಿ ಅವನ ಮಾನಸಿಕ ಸ್ಥಿತಿಯಿದ್ದುದು ಹೀಗೆ- “ಅಂದಿನಿಂದ ಅವನು ಊರ ಬಗ್ಗೆ ಪರಿಸ್ಥಿತಿ ಬದಲಾಗಿದೆಯೆಂಬುದನ್ನು ಮನಸ್ಸಿನಲ್ಲಿ ಗ್ರಹಿಸಿ ತನ್ನ ವೈಯಕ್ತಿಕ ಕೌಟುಂಬಿಕ ಪರಿಸ್ಥಿತಿಯಲ್ಲಿಯೂ ಹೆಚ್ಚು ಒಳಿತಿನ ಪರವಾದ ಬದಲಾವಣೆಗಳಾಗಿವೆಯೆಂಬುದನ್ನು ಗ್ರಹಿಸಿ-ಸೋತದ್ದು ಊರಂತರ,
ಗೆದ್ದದ್ದು ಸೂರಂತರ-ಎಲ್ಲ ಮುಗಿದ ಮೇಲೂ ಒಪ್ಪಿಕೊಳ್ಳದೇ ಒದ್ದಾಡುವದು ಅರ್ಥರಹಿತ ; ಸೋತೇ ಇಲ್ಲವೆಂಬುದು ಆತ್ಮವಂಚನೆಯಾದರೆ ಗೆದ್ದೇ ಇಲ್ಲವೆಂಬುದು ಆತ್ಮವಂಚನೆಯೆ ಅಳಲು ಉಳಿಯುತ್ತದೆ”, ಸೋತು ಸುಣ್ಣವಾಗಿ ಬದುಕನ್ನು ಬರಿದಾಗಿಸಿ ಬದುಕುವದಕ್ಕಿಂತ ಊರು ಬಿಡುವದೇ ಲೇಸೆಂದು ಸಂಸಾರ ಸಮೇತ ಊರನ್ನು ತ್ಯಜಿಸಿದ “ಮನೆಯ ಮುಂದೆ ನಿಂತಿದ್ದ ಕುಮ್ಮನ ಕಣ್ಣಿಗೆ, ನಾಣಿಯ ಕಣ್ಣಿಗೆ, ಸೋಮುಣ್ಣನ ಕಣ್ಣಿಗೆ, ಮುದುಕ ದೊಡ್ಡ ಭೈರನ ಕಣ್ಣಿಗೆ, ಯಂಕಪ್ಪಯ್ಯನ ಕಣ್ಣಿಗೆ, ಸೇತೂ ರಾಯನ ಕಣ್ಣಿಗೆ–ಆ ಮನೆ, ಆ ಅರಳೀಕಟ್ಟೆ, ಆ ದೇವಸ್ಥಾನ, ಆ ತೋಪು, ಆ ಬನ ಆ ಊರಿನ ಕಣ್ಣಿಗೆ-ಧೂಳು ಹಾರಿಸಿ ಬಸ್ಸು ಹೊರಟುಹೋಯಿತು”, ವ್ಯಕ್ತಿಗತವಾದ ಛಿದ್ರವೊಂದು ಕುಟುಂಬದ ಪರಿಸರದಲ್ಲಿ ಬೆಳೆದು ಇಡೀ ಊರನ್ನೇ ಕಬಳಿಸಿ ಸರ್ವವ್ಯಾಪಿಯಾಗಿ ಅವನತಿಯ ಕಥೆ ಮುಗಿಯುತ್ತದೆ. ನಿರ್ಮಮತೆಯಿಂದ ಚಿತ್ರಿಸಿದ ಊರಿನ ಕ್ಷಯ ಓದುಗರ ಮನಸ್ಸಿನ ‘ದಟ್ಟ ಅನುಭವ’ವಾಗಿ ಪರಿಣಮಿಸುವುದರಲ್ಲಿ ಸಾಫಲ್ಯವನ್ನು ಪಡೆದಿದೆ.
ಕಾದಂಬರಿಯ ಕಥೆಯು ದುರಂತದ ಛಾಯೆಯನ್ನು ಹೊಂದಿದ್ದರೂ ಕೂಡ ಇಡೀ ಕಾದಂಬರಿಯನ್ನು ಒಂದು ರುದ್ರ ಕಾದಂಬರಿ (tragic novel) ಎಂದು ಕರೆಯುವದು ಸಮಂಜಸವಾಗಲಾರದು. ಕಾದಂಬರಿಯಲ್ಲಿ ಉರೇ ಒಂದು ಮುಖ್ಯಪಾತ್ರವಾಗಿದ್ದು ಅದರ ಜೀವನದಲ್ಲಿ ಉಚ್ಛ್ರಾಯದಿಂದ ಅವನತಿಯಾದುದನ್ನು ಚಿತ್ರಿಸುವದು ಕಾದಂಬರಿಕಾರರ ಮುಖ್ಯ ಉದ್ದೇಶವಿದ್ದಂತೆ ತೋರುವದು, ಊರು ಒಂದು ಮನುಷ್ಯಪಾತ್ರವಲ್ಲವಾದುದರಿಂದ ಊರಿನ ಪಾತ್ರದಲ್ಲಿ ರುದ್ರಕಾದಂಬರಿಗಳಲ್ಲಿ ಅಥವ ನಾಟಕಗಳಲ್ಲಿ ಇರಬೇಕಾಗಿದ್ದ ದುರಂತ ಛಿದ್ರವು (tragic flaw) ಕಂಡು ಬರಲು ಶಕ್ಯವಿಲ್ಲ, ಕಾದಂಬರಿಯನ್ನು ಕೇವಲ ಒಂದು ಸುಖಾಂತ್ಯದ ಕೃತಿಯೆಂದು ಕರೆಯಲೂ ಅಸಾಧ್ಯ, ಘಟನೆಗಳಿಗೆ ಹೆಚ್ಚಿನ ಪ್ರಾಶಸ್ಯವಿರುವದರಿಂದ ಈ ಕಾದಂಬರಿಯನ್ನು ಘಟನಾ ಪ್ರಧಾನ ಕಾದಂಬರಿ (novel of action) ಎಂದು ಕರೆಯಬಹುದು. ಕಾದಂಬರಿಯ ನಿವೇದನೆಯಲ್ಲಿಯ ಅನೇಕ ವಿಚಾರಗಳನ್ನು, ಆಗುಹೋಗುಗಳನ್ನು ಮತ್ತು ವ್ಯಕ್ತಿ-ವಿಚಾರಗಳನ್ನು ಸಾಂಕೇತಿಕವಾಗಿ ಅಳವಡಿಸಿಕೊಳ್ಳಬಹುದು, ಅವುಗಳನ್ನು ಸಂಕೇತಗಳಾಗಿ ಪರಿವರ್ತಿಸುವದು ಓದುಗರ ಮತ್ತು ವಿಮರ್ಶಕರ ಪ್ರಯತ್ನಕ್ಕೊಂದು ಸವಾಲು, ಅವು ಎಷ್ಟರಮಟ್ಟಿಗೆ ಸಂಕೇತಗಳಾಗಿಯೇ ಉಳಿಯುವವು ಮತ್ತು ಸಾಂಕೇತಿಕ ಮೌಲ್ಯಗಳನ್ನು ದೃಢೀಕರಿಸಿ ಪ್ರಸ್ತುತ ಕಾದಂಬರಿಯನ್ನು ಸಾಂಕೇತಿಕ ಕಾದಂಬರಿ (symbolic novel)ಯ ಮಟ್ಟಕ್ಕೆ ಏರಿಸ ಬಲ್ಲವು ಎಂಬ ವಿಚಾರಗಳು ಗಹನವಾದವುಗಳು, ಇಡೀ ಕಾದಂಬರಿಯನ್ನು ಒಂದು ಸಾಂಕೇತಿಕ ಕಾದಂಬರಿ ಎಂದು ಬೇಕಾದವರು ಓದಿಕೊಳ್ಳಬಹುದು, ಆದರೆ ಕಾದಂಬರಿಯಲ್ಲಿ ವರ್ಣಿತವಾದ ಘಟನೆಗಳು ವಾಸ್ತವ ಸಂಗತಿಗಳಾಗಿದ್ದು ಕಾದಂಬರಿಕಾರರೇ ಹೇಳಿದಂತೆ ಅವರ ನೆನಪಿನ ಉಗ್ರಾಣದಿಂದ ನೇರವಾಗಿ ತೆಗೆದುಕೊಂಡು ನಿರೂಪಿಸಿದಂತಹವುಗಳು, ಆದುದರಿಂದ ಈ ಕಾದಂಬರಿಯನ್ನು ಸಾಂಕೇತಿಕ ಎನ್ನುವದಕ್ಕಿಂತ ವಾಸ್ತವವಾದಿ (realistic) ಎಂದು ಕರೆದರೆ ಹೆಚ್ಚು ಅರ್ಥಪೂರ್ಣವಾಗಬಹುದು.
ಕಾದಂಬರಿಯಲ್ಲಿಯಂ ಪಾತ್ರಗಳನ್ನು ಮಾನವ ಪಾತ್ರಗಳು ಮತ್ತು ಮಾನವರಲ್ಲದ ಪಾತ್ರಗಳು ಎಂದು ವರ್ಗೀಕರಿಸಬಹುದು. ಕಾದಂಬರಿಯಲ್ಲಿ ಬರುವ ಎಲ್ಲ ವ್ಯಕ್ತಿಗಳು ಮಾನವ ಪಾತ್ರಗಳು, ವ್ಯಕ್ತಿಗಳ ಹೊರತಾಗಿರುವ ಊರು, ನದಿ, ಮತ್ತು ಪ್ರಾಣಿಗಳೂ ಕೂಡ ಸಜೀವ ಪಾತ್ರಗಳಾಗಿ ಕಾದಂಬರಿಯ ತುಂಬ ಚಲಿಸುತ್ತವೆ. ಮಾನವ ಪಾತ್ರಗಳು ಹಲವಾರು ಇದ್ದು ಅವರನ್ನು ಹಳೆಯ ಜನಾಂಗದವರು ಮತ್ತು ಹೊಸ ಪೀಳಿಗೆಯವರು ಎಂದು ಪುನಃ ದ್ವಿಭಾಗಿಸಬಹುದು. ರಾಮೇಶ್ವರಪ್ಪ ಮತ್ತು ಅವನ ಸವ:ಕಾಲೀನರದು ಒಂದು ಗುಂಪಾದರೆ ಕುಳ್ಳರಾಮ ಮತ್ತು ಅವನ ಸಮಕಾಲೀನರದು ಇನ್ನೊಂದು ಗುಂಪು. ಹಳೆಯ ಜನಾಂಗಕ್ಕೆ ಸೇರಿದವರಲ್ಲಿ ದೈವಭಕ್ತಿ, ನಿಷ್ಠೆ, ವಿಶ್ವಾಸ, ಶ್ರದ್ಧೆ, ಧರ್ಮಭೀರುತನ, ಮತ್ತು ಭೂತದಯೆ ಇವು ಸರ್ವಸಾಮಾನ್ಯ ಗುಣಗಳು, ಹೊಸತನ, ಹೊಸಗಾಳಿ ಯನ್ನು ಸವಿಯುವ ಸಾಹಸ ಇವು ಹೊಸ ಜನಾಂಗದ ಸರ್ವಸಾಮಾನ್ಯ ಗುಣಗಳು. ಆಧುನಿಕತೆಯು ಅತಿಯಾಗುವ ಮಟ್ಟಿಗೆ ಅವರ ಆಚಾರ-ವಿಚಾರಗಳಲ್ಲಿ ಹಳೆಯವರಿಗಿಂತ ಭಿನ್ನತೆಯು ಕಂಡುಬರುವದು.
ಹಳ್ಳಿಯ ಸಂಪ್ರದಾಯಬದ್ಧ ಜೀವನದಲ್ಲಿ ರಾಮೇಶ್ವರಪ್ಪ ಹಿರಿಯ–ಒಂದು ಕುಟುಂಬದ ಯಜಮಾನ, ಒಂದು ಊರಿನ ಮುಖಂಡ, ರಾಮೇಶ್ವರಪ್ಪ ಧೀರೋದಾತ್ತ ಮನುಷ್ಯ. ಅಂತಹ ಶ್ರೀಮಂತನೇನೂ ಅಲ್ಲ. “ರಾಮೇಶ್ವರಪ್ಪ ದುಡ್ಡಿನಲ್ಲಿ ಭಾರಿಯ ಕುಳವೇನಲ್ಲದಿದ್ದರೂ ನಿಶ್ಚಿಂತೆಯ ಬದುಕು ಮಾಡಿಕೊಂಡಿದ್ದ, ತಾನೂ ತಿನ್ನುತ್ತಿದ್ದ-ಬೇರೆಯವ ರಿಗೂ ತಿನ್ನಿಸುತ್ತಿದ್ದ, ಊರಿನ ಮಹತ್ವದ ಕೆಲಸಗಳೆಲ್ಲವೂ ರಾಮೇಶ್ವರಪ್ಪನ ಹಿರಿತನ ದಲ್ಲಿಯೇ ನಡೆಯುತ್ತಿದ್ದವು. “ಎಲ್ಲಿ ಯಾವ ಕೆಲಸ ನಿಂತಿದ್ದರೂ ರಾಮೇಶ್ವರಪ್ಪ ಅದಕ್ಕೆ ಸಿದ್ಧ, ಸಮರ್ಥ, ಬೇಕಾದುದನ್ನು ಕೂಡಲೇ ಒದಗಿಸುವ ಹೊಣೆ”ಅವನದು. ರಾಮೇಶ್ವರಪ್ಪ ಸಂದರ್ಭ ಸೃಷ್ಟಿಸಿದ ಮುಖಂಡನಲ್ಲ, ತನ್ನ ಗುಣಗಳಿಂದ, ತನ್ನ ಕರ್ತವ್ಯ ದಕ್ಷತೆಯಿಂದ ಮುಖ್ಯವಾಗಿ ಜನಾನುರಾಗದಿಂದ ಅವರ ಹೃದಯ ನಿಯೋಜಿತ ಮುಖಂಡ ರಾಮೇಶ್ವರಪ್ಪ, “ಆಳು ಗಡಸು, ಮಾತು ಗಡಸು, ರೇಗಿದರೆ ರುದ್ರ. ಆದರೆ ಕೆಟ್ಟುದನ್ನು ನೋಡಿದರೆ ಮಾತ್ರ ರೇಗುತ್ತಾನೆ. ಆಗಲೂ ಮನಸ್ಸು ನಿರ್ಮಲ, ಧೈಯ ಶುಭಕರ ವೆಂಬುದನ್ನು ಎಲ್ಲರೂ ಬಲ್ಲರು, ಯಾರೂ ಅವನ ಮಾತಿಗೆ ಇದಿರಾಡುತ್ತಿರಲಿಲ್ಲ. ಅದಕ್ಕೆ ಅವರ ವಿಶ್ವಾಸ ಗೌರವಗಳೆಷ್ಟು ಕಾರಣವೋ ಅವನ ವಿವೇಚನೆ, ಸರ್ವಶ್ರೇಯೋ ಭಾವವೂ ಅಷ್ಟೇ ಕಾರಣ.”
________________
ಮನುಷ್ಯ ಯಾವಾಗ ತಾನು ವಿಚಾರಿಸಿದ್ದು ಸರಿ, ತಾನು ಮಾಡಿದ್ದೇ ಸರಿ ಎಂದು ತಿಳಿದು ಒಂದು ಕೆಲಸವನ್ನು ಮಾಡುತ್ತಾನೋ ಆವಾಗ ಅವನ ಹತ್ತಿರದವರು ಅವನಿಗೆ ವಿರುದ್ಧವಾಗಿ ವಿಚಾರಿಸುವರು, ಸುತ್ತಲಿನ ಸಮಾಜ ವಿರುದ್ಧವಾಗಿ ವಿಚಾರಿಸುವದು. ಇದು ಮನುಷ್ಯನಲ್ಲಿಯ ರುದ್ರಛಿದ್ರದ (tragic flaw) ಬೀಜವಾಗಬಹುದು, ಹಾಗೆ ವಿಚಾರಿಸುವದಕ್ಕೆ ಜಂಭವೂ ಕೂಡ (vanity) ಒಂದು ಕಾರಣವಾಗಿರಬಹದು, ಕಾದಂಬರಿಯ ರಾಮೇಶ್ವರಪ್ಪ ಹಾಗೆಯೇ ವಿಚಾರಿಸಿ ಒಮ್ಮೆ ದುಡುಕಿದ. ಅದರ ಫಲವನ್ನು ತನ್ನ ಜೀವನದ ಶೇಷ ಭಾಗದಲ್ಲಿ ಮಾನಸಿಕವಾಗಿ ಅನುಭವಿಸಿದ. ಗೆಳೆಯನ ಮಗಳ
ಮದುವೆಯ ಸಂದರ್ಭದಲ್ಲಿ ಗೆಳೆಯನ ಮನೆತನದ ಮರ್ಯಾದೆಯನ್ನುಳಿಸುವ ಹುಚ್ಚು ಆದರ್ಶದ ಹಂಬಲದಲ್ಲಿ ದುಡುಕಿದ. ಮಗನ ಮನಸ್ಸಿನ ವಿಚಾಯವನ್ನು ತಿಳಿಯದೇ ಮತ್ತು ಹಾಗೆ ತಿಳಿಯಲು ಯಾವದೇ ಅಸ್ಟದವನ್ನೀಯದೇ ಗೆಳೆಯನ ಮಗಳು ಸರಸ್ವತಿಯನ್ನು ವನೆಯ ಸೊಸೆಯಾಗಿ ತಂದುಕೊಂಡ. ಆಗ ಮಗನ ಬಗ್ಗೆ ರಾಮೇಶ್ವರಪ್ಪನ ವಿಚಾರ ಹೀಗಿತ್ತು-“ಈ ಎಮ್ಮೆ ರಾಮ ಹೇಗೆ ಬಾಳುತ್ತಾನೋ ಗೊತ್ತಿಲ್ಲ-ತಿದ್ದಬೇಕು, ನಿಧಾನವಾಗಿ ಉಪಾಯದಿಂದ ತಿದ್ದಬೇಕು-ಆದೀತು-ಆದರೂ-“
ರಾಮೇಶ್ವರಪ್ಪ ದೇವಸದೃಶ ಮನುಷ್ಯ, ಕಾವೇರಮ್ಮ ಸರಸ್ವತಿಗೆ ಹೇಳುತ್ತಾಳೆ, “ನಾ ಇರ್ತಿನಿ ಅಂದಾಗ ನಿನ್ನ ಮಾವ ಇದಾನಲ್ಲ-ನಮ್ಮ ರಾಮಣ್ಣ-ದೇವ್ರಂಥಾ ಮನುಷ್ಯ-ಇರು ಕಾವೇರಿ ಚಿಂತೆ ಮಾಡ್ಬ್ಯಾಡ ಅಂತ ಧೈರ್ಯ ಹೇಳ್ದ, ಬೆನ್ನಲ್ಲಿ ಬಿದ್ದ ತಮ್ಮನ ಹಾಗೆ ನೋಡ್ಕಂಡ, ಪುಣ್ಯಾತ್ಮ”, ಊರಿನ ಜನರ ಸುಖದುಃಖಗಳ, ಯೋಗ ಕ್ಷೇಮದ ಭಾರವನ್ನು ರಾಮೇಶ್ವರಪ್ಪ ತಾನಾಗಿಯೇ ಹೊತ್ತಿದ್ದ, ಒಂದು ಅರ್ಥದಲ್ಲಿ ರಾಮೇಶ್ವರಪ್ಪ ಯೋಗಿ, ಬಂದುದೆಲ್ಲವನ್ನೂ ನಿರ್ಮಮಕಾರದಿಂದ ಸಹಿಸಿ ಹಣ್ಣಾದವ ರಾಮೇಶ್ವರಪ್ಪ, ಷಡಗೋಪ ರಾಮೇಶ್ವರಪ್ಪನಿಗೆ ಹೇಳುತ್ತಾನೆ, “ನೀನೂ ಕಷ್ಟ ಸುಖ ಉಂಡು ಅರಗಿಸಿಕೊಂಡವನು, ಆಗ್ಗಲಿಲ್ಲ, ಆಗುವಂಥಹದೇನನ್ನೂ ಮಾಡಲೂ ಇಲ್ಲ. ಎತ್ತರದಲ್ಲಿ ಬಾಳಿದೆ, ಬಾಳಿಸಿದೆ”, , ಮಾತು ಮೀರಿ ನಡೆವ ಮಗ ಎಮ್ಮೆ ವ್ಯಾಪಾರವೇ ಮೊದಲಾದವುಗಳಲ್ಲಿ ಮುಂದುವರಿದಾಗ ರಾಮೇಶ್ವರಪ್ಪ ತಣ್ಣಗಾದ.
ಊರಿನ ಹಳೆಯ ತಲೆಮಾರಿನ ಇನ್ನೊಬ್ಬ ಮುಖ್ಯವ್ಯಕ್ತಿ ಷಡಗೋಪ, ಊರಿನ ಮಹತ್ವದ ಕಾರಕಲಾಪಗಳಿಗೆ ಬೇಕಾಗುವ ಎಲ್ಲ ಸಾಧನ ಸಾಮಗ್ರಿಗಳನ್ನು ಒದಗಿಸುವ ಭಾರ ರಾಮೇಶ್ವರಪ್ಪನದಾದರೆ ಅದನ್ನು ಹದಗೂಡಿಸಿ ರುಚಿಕಟ್ಟಾದ ಪಾಕ ಸಿದ್ಧಮಾಡುವ ಹೊಣೆ ಷಡಗೋಪನದು”, ಬದಲಾಗುತ್ತಿರುವ ಊರಿನ ಪರಿಸ್ಥಿತಿಯನ್ನು ನೋಡಿ ಮನಃಕ್ಷೇಶಗೊಂಡ ಷಡಗೋಪನ ಮನಸ್ಸಿನಲ್ಲಿಯ ತುಮುಲ ಕಾದಂಬರಿಯಲ್ಲಿ ಒಳ್ಳೆ ಪರಿಣಾಮಕಾರಿಯಾಗಿ ಬಂದಿದೆ.(ಪುಟ ೪೩-೪೫) ಅವರಿಗೆ ಸರಿತೂಕದವರು ಅವಧಾನಿಗಳು, ಅವಧಾನಿಗಳು ವೃದ್ದರು, ಅವರು “ಕೋಲು ಹಿಡಿದು ಬಂದರು, ತಾವು ನೆಚ್ಚಿದ್ದ ಊರಿನ ನಡೆ ತಪ್ಪಿದ್ದರ ಬಗ್ಗೆ ಚಿಂತಿಸುತ್ತಲೇ ಬಂದರು”, ಹಾಗೆಯೇ ಲೆಕ್ಕದ ರಾಘವಾ ಚಾರಿಯ ಕೂಡ ಬೆಂದು ನೊಂದು ಹಣ್ಣಾದ ಜೀವ, ಈ ತಲೆಮಾರಿಗೆ ಸೇರಿದ ಇನ್ನೊಂದು ಹಿರಿಯ ಜೀವ ಕೇಶವಯ್ಯ, ಕೇಶವಯ್ಯ ಪ್ರಾಣಿದಯೆಯೇ ಮೂರ್ತಿ ಮತ್ತಾಗಿ ಅವತರಿಸಿವೆಯೋ ಎನ್ನುವಂತಿದ್ದ ಮನುಷ್ಯನು, ಸೂರಪ್ಪನೂ ಕೂಡ ಈ ಹಿರಿಯರ ಗುಂಪಿನ ಒಂದು ಧ್ರುವತಾರೆ. ಉತ್ಸವ ಸಮಯದಲ್ಲಿ ಯಾತ್ರಿಕರಿಗೆ ಗೋಗರ್ಭ ಸ್ಥಾನವನ್ನು ಒಳ್ಳೇ ದಕ್ಷತೆಯಿಂದ ಮಾಡಿಸುವದು ಸೂರಪ್ಪನ ಕೆಲಸ. “ಜುಟ್ಟು ಹಿಡಿದು ಈ ಕಡೆಯಲ್ಲಿ ಅದ್ದಿ ನೂಕಿ ಆ ಕಡೆಯಲ್ಲಿ ಸೂಟಿಯಿಂದ ಎಳೆದು ಕೊಳುತ್ತಿದ್ದ, ಸುಬ್ರಮಣ್ಯನ ಷಷ್ಠಿಯ ದಿವಸ ಸಾವಿರಾರು ಮಂದಿಯನ್ನು ಅವನು ಹಾಗೆ ಅದ್ದಿ ಎತ್ತುತ್ತಿದ್ದ, ನಟ್ಟನಡುರಾತ್ರೆಯಲ್ಲಿ ಕೂಡ ಸೂರಪ್ಪನಿದ್ದರೆ ಕಂಕುಳ ಕಂದಗಳ ಸ್ನಾನವೂ ಸುಸೂತ್ರವಾಗಿ ನಡೆದುಹೋಗುವದೆಂದು ತಾಯಂದಿರು ಧೈರ್ಯವಾಗಿದ್ದರು, ಅದು ಹಾಗೇ ಆಗುತ್ತಿದ್ದುದೂ ಹೌದು, ಇಂಥ ಸಾತ್ವಿಕ ನಡೆನುಡಿಯ ಸೂರಪ್ಪ ಸತ್ತ, ಅವನ ಹೆಂಡತಿ “ತಬ್ಬಲಿ ಮಕ್ಕಳನ್ನು ಕಟ್ಟಿಕೊಂಡು ನಿಟ್ಟುಸುರು ಹಾಕಿ ಊರು ತೊರೆದಳು”, ಷಡಗೋಪನ ಅಭಿಪ್ರಾಯದಲ್ಲಿ ಸೂರಪ್ಪನಿಗಾದ ದುರ್ಗತಿ ಯಿಂದಲೇ ಊರಿಗೆ ಅಳಿಗಾಲ ಬರಲಾರಂಭಿಸಿತು.
ಕಾವೇರಮ್ಮನದೂ ಕೂಡ ಹಿರಿಯ ಜೀವವೇ, ‘ಮದುವೆಯಾದ ಮೂರು ತಿಂಗಳಿಗೇ ಗಂಡನನ್ನು ತಿಂದೊಂಡ (ಈ) ಮುಂಡೆ ಮೂಳಿಯಾದ’ ಕಾವೇರಮ್ಮ ರಾಮೇಶ್ವರಪ್ಪ ನವರಂಥವರ ಕರುಣೆ ಅನುಗ್ರಹಗಳಿಂದ ಊರಿನಲ್ಲಿ ಬದುಕಿ ಬಂದಿದ್ದಾಳೆ. ಅವಳು ವ್ಯವಹಾರ ಚತುರಳು, ಸಂಸಾರಧರ್ಮದ ರಹಸ್ಯವನ್ನರಿತವಳು, ಅವಳು ಸರಸ್ವತಿಗೆ ‘ಹಾಗೇ ಮನೆಧರ್ಮಾನೆಲ್ಲ ಸೂಕ್ಷ್ಮವಾಗಿ ತಿಳಕೊಂಡು ಉಳಿಸ್ಕೋಬೇಕಮ್ಮ’ ಎಂದು ಸಾಂಸಾರಿಕ ನೀತಿಬೋಧೆಯನ್ನು ಮಾಡುವಳು, ಕಾವೇರಮ್ಮ ಊರಿನ ಉಚ್ಛ್ರಾಯ ಕಾಲವನ್ನು ಕಂಡರಿತವಳು, ಅದಕ್ಕೆ ಕಾರಣರೂಪದಲ್ಲಿರುವ ಪುಣ್ಯಪುರುಷರ ನೆರಳಿನಲ್ಲಿ ಬೆಳೆದವಳು. ಅದೇ ಊರಿನ ಪತನಕ್ಕೆ ಕಾರಣರಾದ ಕೋತೀಸ್ವಭಾವದ ಜನರನ್ನು ನೋಡಿ ಅಸಹ್ಯ ಪಟ್ಟು “ಊರನ್ನು ಬಯ್ದು ಹೊರಟು ಹೋಗಿದ್ದಳು”, “ಗಂಡ ಸತ್ತ ಮುಂಡೇ ರಾಸ್ತೀನೂ ಕದ್ದು ದಕ್ಕಿಸಿಕೊಳೆ ಮುಂಡೇಮಕ್ಕಳು ಹುಟ್ಟಿದ ಮೇಲೆ ಈ ಊರು ಉಳಿದೀತೆ ? ಸುಟ್ಟು ನಾಶವಾಗಿ ಹೋದೀತು !” ಎಂದು ಶಾಪವಿತ್ತು ದೂರದ ನೆಂಟರ ಮನೆಗೆ ಹೋದಳು.
ಕಿರಿಯ ವಯಸ್ಸಿನ ಸರಸ್ವತಿ ಹಿರಿಯರ ನೆರಳಿನಲ್ಲಿಯೇ ಬೆಳೆದು ಕಿರಿದರಲ್ಲಿಯೇ ಹಿರಿತನವನ್ನು ತೋರಿದ ಪಾತ್ರ, ಅವಳನ್ನು ಕಾಣುವದು ಮುಗ್ಧ ಮದುವಣಗಿತ್ತಿಯಾಗಿ
ವಜ್ರದ ಹಗರಣದಿಂದಾಗಿ ನಿಶ್ಚಿತವರ ಕೈಬಿಟ್ಟಾಗ ಕುಳ್ಳರಾಮನ ಧರ್ಮಪತ್ನಿಯಾಗಿ ರಾಮೇಶ್ವರಪ್ಪನ ಮನದುಂಬಿದಳು, ರಾಮೇಶ್ವರಪ್ಪನ ದೃಷ್ಟಿಯಲ್ಲಿ “ಸೊಸೆ ಒಳ್ಳೆಯ ಹುಡುಗಿ, ಮಾವನವರ ಬೇಕು ಬೇಡಗಳನ್ನರಿತು ಏನೊಂದಕ್ಕೂ ಅವರಿಗೆ ಕಷ್ಟವಾಗ ದಂತೆ ನೋಡಿಕೊಳ್ಳುತ್ತಿದ್ದಳು.” ಅವಳಿಗೆ ಆ ಊರಿನ ಉಸಿರನ್ನು ಒಗ್ಗಿಸಿದವಳು ಕಾವೇರಮ್ಮ, ಒಬ್ಬಂಟಿಗಳಾದ ಕಾವೇರಮ್ಮ ಅವಳಿಗೆ ಎಲ್ಲವೂ ಆದಳು, ಗಂಡನ ದುರ್ನಡತೆಯನ್ನು ಕೇಳಿ ನೋಡಿಯೂ ಶಾಂತಮನಸ್ಸಿನಿಂದ ನಡೆದುಕೊಂಡ ಪುಣ್ಯವನಿತೆಯವಳು. ಎರಡು ಮಕ್ಕಳನ್ನು ಹಡೆದು ಅವರನ್ನು ಕಳೆದುಕೊಂಡ ಹತಭಾಗಿಯವಳು. ಜೀವನದಲ್ಲಿ ಕೇವಲ ಕಹಿ ಹಾಗೂ ಆಘಾತಗಳನ್ನು ಒಂದೇ ಮನಸ್ಸಿನಿಂದ ಅನುಭವಿಸಿದ ಕ್ಷಮಾ ಅವಳು, ಹಾಯುವ ಎಮ್ಮೆಯು ಹಾಯಲು ಬಂದಾಗ “ಹಾದರೆ ಹಾಯಲಿ !” ಎಂದುಬಿಟ್ಟಳು.
ಈ ಮಾತು ಸರಸ್ವತಿಯು ಇಲ್ಲಿಯವರೆಗೆ ಬದುಕಿ ಅನುಭವಿಸಿದ ಜೀವನದ ಕಹಿಯ ಸಂಕೇತ, “ಅದುವರೆಗಿನ ಜೀವಮಾನದ ಅಳಲೇ ಆ ನುಡಿಯ ಅನಿವಾರ‍್ಯ ನೈರಾಶ್ಯದಲ್ಲಿ ಸಿಡಿದು ಬಂದು ರಾಚಿದಂತಾಯಿತು ಕುಳ್ಳರಾಮನಿಗೆ.” ಎಮ್ಮೆಯ ಎದುರಿನಿಂದ ಹೊರಟುಹೋಗು ಎಂದು ಕುಳ್ಳರಾಮನು ಅರಚಿದರೂ ಕೂಡ ಅವಳು “ಬಿಡಿ ಅದನ್ನು-ಹಾದರೆ ಹಾಯಲಿ” ಎಂದು ಹೇಳುವಳು, ನಂತರ ಬಡಿಗೆ ಹಿಡಿದ ಭೈರವಿ ಯಾಗುವಳು, ಸರಸ್ವತಿಯ ಆ ರೂಪ ರುದ್ರಪ್ರಶಾಂತತೆಯಲ್ಲಿ “ಅಕರಾಳ ವಿಕರಾಳ ಹೆಣ್ಣು ರೂಪ ನಗ್ನಗತ್ತಲ ಉರಿಯಲ್ಲಿ ಅದ್ದಿದಂತೆ” ಕಂಡುಬಂದಿತು. ಕಾದಂಬರಿಯಲ್ಲಿ ಊರು ಅವನತಿಯಾಗುತ್ತಿರುವಾಗ ಕುಳ್ಳರಾಮ ಮನುಷ್ಯನಾಗುತ್ತ ಬಂದ, ಗಂಡನ ಆರೈಕೆ, ಗೃಹಕೃತ್ಯಗಳು ಮತ್ತು ತನ್ನ ಗೃಹಕ್ಕೆ ಸಂಬಂಧಪಟ್ಟ ಇತರೇ ವಿಷಯಗಳು ಅವಳ ಜಗತ್ತು ಆದವು, (ಪುಟ ೧೦೮-೧೧೧) ಗಂಡನ ಜೊತೆಯಲ್ಲಿ ತೀರ್ಥಯಾತ್ರೆ ಪ್ರವಾಸಾದಿಗಳು ಆದವು, ಅವರ ದಾಂಪತ್ಯದ ಪ್ರಥಮ ಕೂಸಾಗಿ (ಮೊದಲೆರಡು ವರಕ್ಕಳು ಆಗಿ ತೀರಿಹೋಗಿದ್ದರಿಂದ) ನಾಗೇಶ ಬಂದ. ಆಮೇಲೆ ಗಂಡನೊಂದಿಗೆ ಪರ ವೂರ ವಾಸಕ್ಕಾಗಿ ಊರನ್ನು ಬಿಟ್ಟು ಹೊರಟು ನಿಂತಳು, ಕಾದಂಬರಿಯಲ್ಲಿಯ ಗುಣ ಸಂಪನ್ಮ ಪಾತ್ರಗಳೆಲ್ಲ ಊರಿನ ಅವನತಿಯನ್ನು ನಿರೀಕ್ಷಿಸಿ ನೊಂದು ಊರು ಬಿಟ್ಟವರೇ, ಆದರೆ ಸರಸ್ವತಿ ಮಾತ್ರ ಸಮೀಪಿಸುತ್ತಿರುವ ಊರಿನ ಅವನತಿಯನ್ನು ಕುರಿತು ಯಾವದೇ ಪ್ರತಿಕ್ರಿಯೆಯನ್ನು ಎಲ್ಲಿಯೂ ವ್ಯಕ್ತಪಡಿಸುವದಿಲ್ಲ, ಕಾದಂಬರಿಯ ಘಟನಾವಳಿಗಳಿಂದ ನಯವಾಗಿ ಜಾರಿ ಮಾಯವಾಗುವ ಪಾತ್ರ ಸರಸ್ವತಿಯದು.
ಬಿಸಿರಕ್ತದ ಹೊಸ ಹುರುಪಿನ ಕುಳ್ಳರಾಮ ಹೊಸ ಜನಾಂಗದ ಪ್ರತಿನಿಧಿ ವ್ಯಕ್ತಿಯು. ಹಾಗೆಂದು ಸಂಪ್ರದಾಯಬದ್ಧ ಜೀವನದ ಅಂಶಗಳು ಅವನಲ್ಲಿ ಇಲ್ಲವೆಂದು ಅರ್ಥವಾಗುವದಿಲ್ಲ. ತಂದೆ ರಾಮೇಶ್ವರಪ್ಪನ ದೃಷ್ಟಿಯಲ್ಲಿ ಅವನಿನ್ನೂ ಅಪಕ್ವ, ಜೀವನದ ವಿವಿಧ ಮುಖ ಅನುಭವಗಳಿಂದ ಪರಿಪಕ್ವವಾಗಬೇಕಾದ ದೋರಗಾಯಿ ಕುಳ್ಳರಾಮ, “ನಿಧಾನವಾಗಿ ಉಪಾಯದಿಂದ (ಅವನನ್ನು) ತಿದ್ದಬೇಕು” ಎಂಬುದು ರಾಮೇಶ್ವರಪ್ಪನ ಖಚಿತವಾದ ಅಭಿಪ್ರಾಯವು, ಆದರೆ ರಾಮೇಶ್ವರಪ್ಪ ಮಗನ ಭವಿಷ್ಯವನ್ನೂ ಕೂಡ ಎಲ್ಲದರಂತೆ ಭಗವದರ್ಪಣ ಭಾವದಿಂದ ನೋಡುವನು, ರಾಮೇಶ್ವರಪ್ಪನ ವಿಚಾರದಲ್ಲಿ ಮಗ ಕುಳ್ಳರಾಮ ಎಮ್ಮೆ ರಾಮ, ಕುಳ್ಳರಾಮನದು ಬಹಳ ವಿಚಿತ್ರವಾದ ಸ್ವಭಾವ, ಊರಿ ನವರು ಭಿನ್ನಮೂರ್ತಿಯಾದ್ದರಿಂದ ಪೂಜಾರ್ಹವಲ್ಲವೆಂದು ತ್ಯಜಿಸಿದ ಲಕ್ಷ್ಮಣೇಶ್ವರನಲ್ಲಿ ಕುಳ್ಳರಾಮನ ಭಕ್ತಿ, ನಿಷ್ಠೆ, ಊರಿನಲ್ಲಿ ನಾಣಿಯು ಹೋಟೆಲ್ ಇಡುತ್ತೇನೆಂದು ಹೇಳಿದಾಗ ಬಹುಶಃ ಆ ವಿಚಾರವನ್ನು ಮೊದಲು ಸ್ವಾಗತಿಸಿದವ ಕುಳ್ಳರಾಮ, ಕಂತರಾಟದಾರನು ಊರಿನ ಕೀರ್ತಿಯ ಕಳಶವಾದ ಗೌತಮ ಬಂಡೆಯನ್ನು ಒಡೆಯುತ್ತಾನೆಂದು ತಿಳಿದಾಗ ಮೊದಲು ವಿರೋಧಿಸಿದರೂ ಕೂಡ ಆ ವಿಷಯವನ್ನೂ ಸ್ವಾಗತಿಸಿದವನು ಕುಳ್ಳರಾಮನೇ, ಊರಿಗೇ ಹಿರಿಯನಾದ, ಊರವರ ಹೃದಯಸಿಂಹಾಸನದಲ್ಲಿ ಅನಭಿಷಕ್ತ ದೊರೆಯಾದ ಮತ್ತು ತಂದೆಯಾದ ರಾಮೇಶ್ವರಪ್ಪನನ್ನೂ ವಿರೋಧಿಸಿದ ರಾಮೇಶ್ವರಪ್ಪ ಸತ್ತಾಗ “ಕುಳ್ಳರಾವು ಅಪ್ಪನನ್ನು ಬೂದಿ ಮಾಡಿದವನು ತಲೆಗೊಂದು ಟವಲನ್ನು ಅರ್ಧ ಮುಖ ಮುಚ್ಚುವಂತೆ ಸುತ್ತಿಕೊಂಡು ಊರು ಅಲೆದ.” ತಂದೆಯ ಮರಣದಿಂದ ಅವನಿಗೆ ನಿಜವಾಗಿ ದುಃಖವಾಗಿದೆ, ಸಂಕಟವಾಗಿದೆ. ಅದೇ ಸಮಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕ ಬಗ್ಗೆ ಆನಂದವೂ ಆಗಿರಬೇಕು, ಕೈಹಿಡಿದ ಹೆಂಡತಿಯನ್ನು ಗೋಳಾಡಿಸಿದ, ಪರಸ್ತ್ರೀಯಲ್ಲಿ ಹೆಂಡತಿಯಲ್ಲಿ ಕಾಣದ ಸುಖವನ್ನು ಪಡೆಯಬಯಸಿದ. ಸರಸ್ವತಿಯನ್ನು ತನ್ನ ಹೆಂಡತಿಯಾಗಿ ತಂದದ್ದು ಅಪ್ಪನ ತಪ್ಪೆಂದು ಮನದಲ್ಲಿಯೇ ವಾದಿಸಿದ ಮುಖ್ಯವಾಗಿ ಅಪ್ಪ ಹೇಳಿದಕೂಡಲೇ ಒಪ್ಪಿಕೊಂಡು ಸರಸ್ವತಿಯನ್ನು ಮದುವೆಯಾದುದು ತನ್ನಲ್ಲಿಯ ಒಂದು ರೀತಿಯ ದುರ್ಬಲತೆ ಎಂದು ಶಂಕಿಸಿದ. ಅವಳು ತನಗೆ ಹೇಳಿಸಿದವಳಲ್ಲ ಬೇರೆಯೊಬ್ಬನಿಗೆ ಮೀಸಲಾಗಿದ್ದವಳು ಎಂದು ಭಾವಿಸಿದ. ತನಗೆ ತಾನೇ ಅಂದುಕೊಂಡ “ಸರಸ್ವತಿಯನ್ನು ನಾನು ಹಿಂದಿನ ದಿನವಷ್ಟೇ ನೋಡಿದ್ದೆ. ಹುಡುಗ ಭಾಗ್ಯಶಾಲೀ ಎಂದುಕೊಂಡಿದ್ದೆ. ನಿಜ, ಆದರೆ ಅವನು ನಾನಾಗಿರಲಿಲ್ಲವಲ್ಲ. ನಾನು ಅವನಾಗಬೇಕಾಯಿತು. ನಾನು ನಾನಾಗಿ ಉಳಿಯಲಾಗಲಿಲ್ಲ. ಒಂದು ಕ್ಷಣದಲ್ಲಿ ಆ ಪ್ರವಾಹದಲ್ಲಿ ದಿಮ್ಮಿ ಹಿಡಿದು ನಿಲ್ಲಿಸಲಾಗಲಿಲ್ಲ, ಅದು ವ್ಯಥೆ, ಯಾರಿಗೋ ಬಡಿ ಸಿದ್ದ ಎಲೆ.” ತಾನು ಹೆಂಡತಿಯನ್ನು ಸರಿಯಾಗಿ ನಡೆಯಿಸಿಕೊಳ್ಳಲಿಲ್ಲವಲ್ಲ ಎಂಬ ಪಾಪಭೀರುತನದ ಅಳುಕೂ ಅವನಲ್ಲಿತ್ತು, ಆ ಪಾಪದ ಫಲವಾಗಿಯೇ ತನ್ನೆರಡೂ ಮೊದಲಿನ ಮಕ್ಕಳು ಸತ್ತವು, ತಾನು ಆ ಪಾಪದ ಪ್ರತಿಫಲವನ್ನುಣ್ಣುತ್ತಿದ್ದೇನೆ ಎಂದು ತನ್ನನ್ನೇ ತಾನು ಸಾಂತ್ವನಗೊಳಿಸಿಕೊಂಡ (ಪುಟ ೮೦).
ಊರಿಗೆ ಉಪಕಾರ ಮಾಡುವದರಲ್ಲಿ ಅಪ್ಪನಂತೆ ಮಗ, ಆದರೆ ಯಾರೂ ಕರೆಯದಿದ್ದರೆ ಆ ಕಡೆ ಸುಳಿಯುತ್ತಿರಲಿಲ್ಲ, ಕುಳ್ಳರಾಮ ಎಮ್ಮೆ ವ್ಯವಹಾರ ಮತ್ತು ಎಮ್ಮೆ ವ್ಯಾಪಾರದಲ್ಲಿ ಪರಿಣತ, “ಕೋಡು ಸವರಿ ನೋಡು, ಹಲ್ಲು ಕಿರಿಸಿ ನೋಡು, ಬಾಲ ನೀವಿ ನೋಡು, ಕೆಚ್ಚಲು ಗಂಟು ತಡವಿ ನೋಡು”ಎಂದು ಎಮ್ಮೆ ಖರೀದಿದಾರರನ್ನು ಮುಂಜಾಗ್ರತೆ ವಹಿಸಲು ಕೇಳಿಕೊಳ್ಳುತ್ತಿದ್ದ, ಅವನಿಗೆ ಊರಿನ ಶ್ರೇಷ್ಠತೆಯ ಅರಿವಿತ್ತು, ಅದನ್ನು ಅಪ್ಪನಿಂದ ಕೇಳಿ ತಿಳಿದುಕೊಂಡಿದ್ದ, ಕೊನೆಕೊನೆಗೆ ಕುಳ್ಳರಾಮ ಊರಿನ ವ್ಯವಹಾರಗಳಲ್ಲಿ ನಿರಾಸಕ್ತನಾದ. ಆಗುವದು ಆಗುತ್ತಿರಲೇಬೇಕೆಂಬ ವಿಧಿತತ್ವವನ್ನು (fatality) ಮನಸಾ ಒಪ್ಪಿಕೊಂಡ. ಮುಳುಗಿ ಸಾಯುತ್ತಿದ್ದ ಅಮಲ್ದಾರರನ್ನು ಅವರು ತನ್ನ ವಿರೋಧಿಯಾಗಿದ್ದರೂ ಕೂಡ ಬದುಕಿಸಿದ. ಮಹಾಪ್ರಳಯದಲ್ಲಿ ಸತ್ತವರು ಯಾರೇ ಇದ್ದರೂ ಕೂಡ ಅವರ ಹೆಣ ಸಿಕ್ಕಿದರೆ ಅಂತ್ಯಸಂಸ್ಕಾರವನ್ನೂ ಮಾಡಿದ. ಕುಳ್ಳರಾಮ ಕೊನೆಗೆ ಹಾದಿಗೆ ಬಂದನು-ತೀರ್ಥಯಾತ್ರೆ ಮಾಡಿ ಮಾಡಿದ ಪಾಪವನ್ನು ತೊಳೆದುಕೊಂಡ, ಹೆಂಡತಿಯನ್ನು ಹೆಂಡತಿಯಾಗಿ ಸ್ವೀಕರಿಸಿ ವಂಶವೃಕ್ಷ ಬೆಳೆಸಿದ. ಊರು ಅವನತಿ ಹೊಂದಿ ಬೀಕೋ ಅನ್ನಲು ಊರನ್ನೇ ತ್ಯಜಿಸಿ ಬೇರೊಂದು ಊರಿಗೆ ಹೋಗಿ ನೆಲೆಸಲು ನಿರ್ಧರಿಸಿದ, ಕಾದಂಬರಿಯಲ್ಲಿ ಕುಳ್ಳರಾಮ ಬೆಳೆಯುತ್ತಿರುವ ಪಾತ್ರವಾಗಿ ಬಂದಿದ್ದಾನೆ. ಅವನು ಸಂಪ್ರದಾಯಸ್ಥ ಜೀವನವನ್ನು ಬಿಟ್ಟರೂ ಕೂಡ ಅದರ ಕೆಲವು ಅಂಶಗಳು ಅವನಲ್ಲಿ ಸ್ಥಾಯೀಯಾಗಿ ಉಳಿದವು.
ಅಂಗಡೀ ಕೇಶವಯ್ಯನ ಮಗ ಸೀತಾಪತಿ ತಂದೆಗೆ ಸರ್ವವಿಧಗಳಿಂದಲೂ ತದ್ವಿರುದ್ಧ. ತಂದೆ ಧರ್ಮಭೀರುವಾದ ಭಾವುಕ ವ್ಯಕ್ತಿಯಾಗಿದ್ದರೆ ಮಗ ಪಕ್ಕಾ ವ್ಯಾವಹಾರಿಕ ಮನುಷ್ಯ ; ವ್ಯಾಪಾರೀ ಮನೋವೃತ್ತಿಯವ, ಅಂತೆಯೇ ಗೋಪಣ್ಣ ನಾಳೇ ಮೊದ ಲಾದವರು ಕೇವಲ ವ್ಯಾಪಾರೀ ಮನೋವೃತ್ತಿಯವರು ತಮ್ಮ ಸ್ವಂತ ಲಾಭಕ್ಕಾಗಿ ಏನನ್ನು ಮಾಡಲೂ ಕೂಡ ಹೇಸದವರು, ವ್ಯಾಪಾರದ ಸೋಗು, ಲಂಪಟತನ, ಇಲ್ಲದ ಸೋಗು, ನೆವಗಳನ್ನೊಡ್ಡಿ ಊರಿನ ಅವನತಿಗೆ ಕಾರಣರಾದವರು ಅವರು.
ಮಾನವರಲ್ಲದ ಪಾತ್ರಗಳಲ್ಲಿ ನದಿ ಕಾವೇರಿಯು ಮುಖ್ಯವಾದವಳು, ಕಾವೇರಿ ಊರಿನ ಜನರ ಭಾಗ್ಯತಾರೆಯು, ಜನರ ನಂಬುಗೆಯ, ವಿಶ್ವಾಸದ ನದಿಯು, ಕಾವೇರಿಯಲ್ಲಿ ಮುಳುಗಿ ಮೇಲೇಳುವದರಲ್ಲಿಯೇ ಜನರು ತಮ್ಮ ಜನ್ಮಸಾರ್ಥಕತೆಯನ್ನು ಪಡೆಯುತಿದ್ದರು. ಅವರ ನಿತ್ಯದ ಜೀವನ ಪ್ರಾರಂಭವಾಗುವದೇ ಕಾವೇರಿಯಲ್ಲಿ ಮುಳುಗಿ ಏಳುವ ಕಾರ್ಯಕ್ರಮದಿಂದಲೇ, “ಹೋದ ಹಗಲನು ಬಂದ ಇರುಳನು ಒಂದೇ ಮನದಲಿ ನೂಕುತ” ನಿಚ್ಚಳವಾಗಿ, ನಿರ್ಭಯವಾಗಿ ಕಾವೇರಿ ಹರಿದಳು, ಊರಿನ ಜೀವನದಲ್ಲಿ ಎಂಥ ವ್ಯತ್ಯಾಸವಾಗುತ್ತಿದ್ದರೂ ಕೂಡ “ಹೊಳೆ ಹರಿಯುತ್ತಿತ್ತು, ಅರಳೀಮರ ದಲ್ಲಿಯ ಎಲೆಗಳು ವಟಗುಟ್ಟುತ್ತಿದ್ದವು, ರಾಮೇಶ್ವರ ಗುಡಿಯಲ್ಲಿ ಸ್ಥಾಣು ತಪೋಮಗ್ನ ನಾಗಿದ್ದ, ಲೋಕ ನಿದ್ರಿಸಿತ್ತು”, ಈ ಸಾಂಕೇತಿಕ ಮಾತುಗಳು ಇಡೀ ಕಾದಂಬರಿಯ ಘಟನೆಗಳಿಗೆ ಸಮೂಹಗೀತವಾಗಿ ಬರುತ್ತವೆ. ಅವು ಪಲ್ಲವಿಯಂತೆ ಇಡೀ ಕಾದಂಬರಿಯ
ತುಂಬ ಪ್ರತಿಧ್ವನಿತವಾಗುತ್ತವೆ, ಅದೇ ಕಾವೇರಿಗೆ ಸೇತುವೆಯಾಯಿತು, ಬಸ್ಸುಗಳು ಓಡಾಡಲಾರಂಭಿಸಿದವು, ಕಾವೇರಿಯ ಮಂಜುಳ ನಿನಾದವು ಆಧುನಿಕತೆಯ ಗೊಂದಲದಲ್ಲಿ ಮಾಯವಾಯಿತು, ಪ್ರವಾಹದ ಕಾಲದಲ್ಲಿ ರುದ್ರಭೀಕರ ಕಾವೇರಿಯಾಗಿ ಮೆರೆದು ಊರಿನ ಅವನತಿಯನ್ನು ಘಂಟಾಘೋಷವಾಗಿ ಸಾರಿದವಳು ಕಾವೇರಿ, ಜೀವನಾಧಾರಳಾದ ಕಾವೇರಿ ಮಾರಿಯಾದಳು.
ಊರಿನಲ್ಲಿ “ನೂರಾರು ಕಪಿಗಳಿದ್ದವು, ಅಂತೆಯೇ ನವಿಲುಗಳಿದ್ದವು, ಕಾವೇರಿಯ ಪುಷ್ಕರಣಿಯಲ್ಲಿಯ ಮೀನುಗಳು ಯಾತ್ರಿಕರ ಆಕರ್ಷಣೆಯಾಗಿದ್ದವು”, ಇವೂ ಕೂಡ ಊರಿನ ಅವನತಿಯ ಕಾಲದಲ್ಲಿ ತಮ್ಮ ಅಸ್ತಿತ್ವಕ್ಕೆ ಕಲ್ಲುಹಾಕಿಕೊಂಡವು, ರಾಮೇಶ್ವರಪ್ಪನ ಗಡವವೂ ಕೂಡ ಊರಿನ ಉಚ್ಛ್ರಾಯ ಕಾಲದಲ್ಲಿ ಜನಾದರಣೆಗೆ, ಜನರ ಭಕ್ತಿಗೆ ಪಾತ್ರವಾಗಿತ್ತು. ಇಡೀ ಊರಿಗೆ ಊರೇ ರಾಮಬಂಟರ ಭಕ್ತನಾಗಿತ್ತು. ಊರಿನ ಅವನತಿಯೊಂದಿಗೆ ಈ ಪ್ರಾಣಿಗಳೂ ಕೂಡ ಹೇಳಹೆಸರಿಲ್ಲದೇ ಮಾಯವಾದವು. ಗೌತಮಾಶ್ರಮದ ಬಿಲ್ವಪತ್ರೆಯ ತೋಪೂ ಕೂಡ ನಾಶವಾಗಿ ಹೋಯಿತು. ಕಾದಂಬರಿಯ ರಚನಾ ತಂತ್ರವು (structure) ಕಾದಂಬರಿಯ ಪ್ರಾರಂಭದಲ್ಲಿ ಮಹದಾಶೆಯನ್ನುಂಟು ಮಾಡಿ ಕೊನೆಕೊನೆಗೆ ಹೋದಂತೆ ನಿರಾಶೆಯನ್ನುಂಟುಮಾಡುವದು. ಪ್ರಾರಂಭದಲ್ಲಿಯ ಸ್ಥಳಪುರಾಣವು ವ್ಯಂಗ್ಯ ಮಹಾಕಾವ್ಯದ (Mock epic) ಚೌಕಟ್ಟಿನಲ್ಲಿ ವರ್ಣಿತವಾಗಿದೆ, ಕಥೆ ಮುಂದುವರಿದಂತೆ ಆ ಚೌಕಟ್ಟು ಸಾವಕಾಶವಾಗಿ ಸಡಿಲಾಗುತ್ತ ಹೋಗಿ ಕೊನೆಯಲ್ಲಿ ಮಂಗಮಾಯವಾಗುವದು, ಕಾದಂಬರಿಯ ಅಂತ್ಯದವರೆಗೂ ವ್ಯಂಗ್ಯ ಮಹಾಕಾವ್ಯದ ಚೌಕಟ್ಟನ್ನು ಕಾಪಾಡಿಕೊಂಡು ಬುದಿದ್ದರೆ ಚೆನ್ನಾಗಿತ್ತೇನೋ ಅನ್ನಿಸದಿರದು. ಊರಿನ ಉಚ್ಚ್ರಾಯ ಕಾಲದ ನಿವೇದನೆಯು ಗಂಭೀರವಾದ ಕಾವ್ಯ ಮಯವಾದ ಶೈಲಿಯಲ್ಲಿದೆ. ಆದರೆ ಮುಂದಿನ ನಿರೂಪಣೆಯು ಸಪ್ಪೆಯಾಗಿದ್ದು ಕೇವಲ ಗದ್ಯಮಯ (prosaic) ಆಗುವಂತೆ ಕಾಣುವದು. ಕಾದಂಬರಿಯ ಪ್ರಾರಂಭದಿಂದ ತುದಿಯವರೆಗೂ ಮೃದುವಾದ ವ್ಯಂಗ್ಯವು ಹಾಸುಹೊಕ್ಕಾಗಿ ಬಂದಿದೆ. ಕಾದಂಬರಿಕಾರರ ಹಾಸ್ಯ ಚಟಾಕಿಯು ಓದುಗರ ಬುದ್ದಿಗೆ ಕಸರತ್ತಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು, ಉದ್ದವಾದ ಬಳಸುದಾರಿಯ ಶೈಲಿಯು ಮಹಾಕಾವ್ಯದ ಥಾಟನ್ನು ನೆನಪಿಗೆ ತಂದುಕೊಡುವಂತಿದ್ದರೂ ಕೂಡ ಅದರಲ್ಲಿ ಪೂರ್ಣ ಸಾಫಲ್ಯವನ್ನು ಪಡೆಯಲಿಲ್ಲ. ಕಾದಂಬರಿಯ ನಿರೂಪಣೆಯನ್ನು (aarrative) ಸುಲಭ ಶೈಲಿಯಲ್ಲಿ ನಿರ್ವಹಿಸಿದ್ದರೆ ಊರು ಒಂದು ಕಬ್ಬಿಣದ ಕಡಲೆಯಾಗುತ್ತಿರಲಿಲ್ಲವೇನೋ ಎಂದು ಅನಿಸುವದು. ಊರಿನ ಅವನತಿಯನ್ನು ಹಂತ ಹಂತವಾಗಿ ಚಿತ್ರಿಸಿದಂತೆ ಹಿರಿಮೆಯನ್ನೂ ಕೂಡ ಹಂತ-ಹಂತವಾಗಿ ಚಿತ್ರಿಸಿದ್ದರೆ ಇನ್ನೂ ಹೆಚ್ಚು ಅನುಕೂಲವಾಗಬಹುದಿತ್ತು, ಕಾದಂಬರಿಯ ಓದುವಿಕೆಯು ಒಂದು ಕಸರತ್ತಿನ ಅನುಭವವಾಗಿ ಉಳಿಯುವದು.
Leave A Comment