Skip to content
ದೂರವಾಣಿ : | 22212487|developkanaja@gmail.com
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ- ೨

Home/ಕನ್ನಡ/ಸಂಪುಟ- ೨
Previous Next

ಸಂಪುಟ- ೨

  • ಪರಜಾಪ್ರಭುತ್ವಕ್ಕೆ ಹೆದ್ದಾರಿಯ ಬದಲು
  • ಮನೋವಿಜ್ಞಾನ ಮತ್ತು ಸಾಹಿತ್ಯ
  • ಬಹುಲಗ್ರಹಣ
  • ಅನಂತಮೂರ್ತಿಯವರ ‘ಸಂಸ್ಕಾರ’
  • ಕಾವ್ಯಗುಣಗಳು: ಆಲಂಕಾರಿಕರ ಸಮಸ್ಯೆ
  • ಪ್ರಜ್ಞೆ ಮತ್ತು ಪರಿಸರ
  • ಕನ್ನಡದ ಅಭಿಮಾನ
  • ಕನ್ನಡ ಮತ್ತು ಇಂಗ್ಲಿಷ್ ಅಥವಾ ಹಿಂದಿ

ಪರಜಾಪ್ರಭುತ್ವಕ್ಕೆ ಹೆದ್ದಾರಿಯ ಬದಲು

ಶಿವರಾಮ ಕಾರಂತ

ಪ್ರಜಾಪ್ರಭುತ್ವಕ್ಕೆ ಹೆದ್ದಾರಿಯ ಬದಲು

ಹೊಲಸು ದಾರಿ ಹಿಡಿದಂತಿದೆ ನಾವು. ಎಂದೂ ಕಾಣದ ಸ್ವಾತಂತ್ರ‍್ಯ ನಮ್ಮ ಜೀವಮಾನದಲ್ಲಿ ನಮಗೆ ದೊರಕಿಸಿ ಕೊಟ್ಟಿತು. ಸ್ವಾತಂತ್ರ್ಯದ ಹಸಿವು ಮಾನವ ಕುಲದ್ದು, ಅದಕ್ಕಾಗಿ ಕಾದಾಟ ಹಲವಾರು ಶತಮಾನಗಳಲ್ಲಿ ವಿವಿಧ ದೇಶಗಳಲ್ಲಿ ಮೂರ್ತರೂಪ ತಾಳಿ ವಿಕಾಸಗೊಂಡುದರ ಫಲವಾಗಿ ಫ್ರಾನ್ಸ್ ದೇಶದಲ್ಲಿ ಅಲ್ಲಿನ ಕ್ರಾಂತಿಯ ದೆಸೆಯಿಂದಾಗಿ ತನ್ನ ವಿಜಯವನ್ನು ಸ್ಥಾಪಿಸಿತು. ಪುರೋಹಿತರು, ನಿರಂಕುಶ ವೀರರು, ಅರಸರು ತಮ್ಮ ಸುತ್ತಲಿನ ಜನತೆಯ ಅಜ್ಞಾನವನ್ನು, ನಿಸ್ಸಹಾಯ ಸ್ಥಿತಿಯನ್ನು ಕಂಡು ತಮ್ಮ ಬಲೆಯನ್ನು ಬೀಸಿದರು ; ಅವರ ದೇಹ, ಮನಸ್ಸುಗಳೆರಡನ್ನು ಆಳುವ ಸ್ಥಿತಿಯನ್ನು ಪಡೆದರು, ತೀರ ಹಿಂದಿನವರು ಜನತೆಯ ಆತ್ಮ ಕಾಯಲು ಹೊರಟರು ; ನರಕದ ಭಯ ತೋರಿಸಿದರು, ಅದರಿಂದ ನಂಬಿದವ ರನ್ನು ತಾವು ಕಾಯುತ್ತೇವೆಂದು ಆಸೆ ಹುಟ್ಟಿಸಿದರು. ಸತ್ತಮೇಲೆ ಅವರು ಕೊಟ್ಟ ಭರವಸೆ ಉಳಿಯಿತೇ ಇಲ್ಲವೇ-ಎಂದು ಯಾರು ಕಂಡುಹಿಡಿಯ ಬೇಕು- ಹೇಗೆ? ಹೀಗಾಗಿ ಮಠಗಳು, ಚರ್ಚುಗಳು ವಿಮರ್ಶೆಯಿಲ್ಲದ ಭಾವನೆಗಳನ್ನು ಬೆಳೆಯಿಸಿ, ಜನಗಳ ಗುಂಪುಗಳನ್ನು ಆಳಿದರು. ಅನಂತರ ಜನರ ದೇಹ ರಕ್ಷಿಸುವ ಕೆಲಸ ಬಂದಿತು. ಅದಕ್ಕೆ ಭುಜಬಲ ಶಸ್ತ್ರಬಲ ಬೇಕಾಯಿತು, ಮಂತ್ರ, ಮಾಟ ಕೆಲಸ ಮಾಡದಾಯತು, ಶಸ್ತ್ರವೀರರ, ಅರಸರ ಕುಲ ಹುಟ್ಟಿತು – ಅಂಥವರ ಸ್ಪರ್ಧೆಯಲ್ಲಿ ಮನುಷ್ಯ ಕುಲ ನುಚ್ಚು ನೂರಾಯಿತು. ಅರಸರೂ, ಪುರೋಹಿತರೂ ಕೂಡಿಯೇ ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ಹೊಸ ಧರ್ಮ ಹುಟ್ಟಿಸಿ ತಮ್ಮ ಅಧಿಕಾರವನ್ನು ಹಲವಾರು ಶತಮಾನಗಳ ತನಕವೂ ನಡೆಯಿಸಿದರು. ಫ್ರೆಂಚ್ ಕ್ರಾಂತಿ ಅದಕ್ಕೆ ಕೊನೆ ತಂದಿತು; ನಮ್ಮ ದೇಶದಲ್ಲೂ 1947ರಲ್ಲಿ ಬ್ರಿಟೀಷ್ ಪ್ರಭುತ್ವ ಕಳಚಿತು “ಭಾರತದ ಜನ ಪ್ರಭುಗಳು’ ಎನಿಸಿದರು.

ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರನ ; ಸ್ವಂತ ಜೀವನ ನಡೆಯಿಸಲು ಹಕ್ಕುಳ್ಳವನು; ಅವನ ವಾಕ್ಸ್ವಾತಂತ್ರ‍್ಯ, ವೃತ್ತಿ ಸ್ವಾತಂತ್ರ‍್ಯಗಳು ನಿರ್ಭಾಧಿತವಾದುವೆಂಬುದೇ ಈ ಕಲ್ಪನೆಯ ಮೂಲ. ವಸ್ತುತಃ ಪ್ರತಿಯೊಬ್ಬರೂ ರಾಷ್ಟ್ರವನ್ನು ನಡೆಯಿಸುವುದೆಂಬುದು ಯಾವುದೇ ಸಮಾಜದಲ್ಲಿ ಅಸಾಧ್ಯದ ಮಾತಾದರೂ, ಈ ತತ್ವವನ್ನೊಪ್ಪಿ, ಪ್ರಜೆಯಿಂದ ಅಧಿಕಾರವನ್ನು ಪಡೆದ ಪ್ರತಿನಿಧಿಗಳಿಂದ ರಾಷ್ಟ್ರವು ಆಳಲ್ಪಡಬೇಕೆಂಬುದು ಇದರ ಮುಖ್ಯ ತತ್ವ. ಯಾವ ಸೋಗಿನಲ್ಲೇ ಆಗಲಿ, ಅಧಿಕಾರವನ್ನು ಪಡೆದ ಪ್ರತಿನಿಧಿಗಳಾಗಲಿ, ಅವರ ಆದೇಶದಂತೆ ನಡೆಯುವ ಒಂದು ಸರಕಾರವಾಗಲಿ ಪ್ರಜೆಯ ಮೂಲಭೂತ ಹಕ್ಕುಗಳನ್ನು ಕಸಿಯದೆಯೆ ಅಂಥ ಕೆಲಸ ನಡೆಯಬೇಕಾಗುತ್ತದೆ. ಈ ಎಲ್ಲ ದೃಷ್ಟಿಗಳಿಂದ ನಮ್ಮ ದೇಶದಲ್ಲಿ ಸ್ವಾತಂತ್ರ‍್ಯಾ ನಂತರ ನಡೆದಿರುವ ಪ್ರಜಾಪ್ರಭುತ್ವದ ರೀತಿಯನ್ನು ಪರಿಶೀಲಿಸುವುದು ನಮ್ಮ ಹೊಣೆ. ಈ ಹೊಣೆಯನ್ನು ಮರೆತಂತೆ, ಮಾರಿಕೊಂಡಂತೆ, ಪ್ರಜೆ ಗುಲಾಮಗಿರಿಗಿಳಿಯಲೇಬೇಕಾಗುತ್ತದೆ.

ಪಾರ್ಲಿಮೆಂಟಿನಲ್ಲಿ ಬಹುಮತ ಪಡೆದ ಕಾಂಗ್ರೆಸ್ಸು ಪಂಗಡವೇ ಆ ಮೊದಲು ಭಾರತೀಯ ಘಟನೆಯನ್ನು ನಿರ್ಮಿಸಿದ ಶಕ್ತಿ. ವಿವಿಧ ಪ್ರಜಾಪ್ರಭುತ್ವವಾದೀ ದೇಶಗಳ, ರಾಜ್ಯ ಘಟನೆಗಳ ಉತ್ತಮಾಂಶಗಳನ್ನು ಆರಿಸಿ ನಮ್ಮ ಘಟನೆಯನ್ನು ನಾವು ಮಾಡಿಕೊಂಡೆವು. ಅನಂತರ ಏನಾಯಿತು ? ಎಷ್ಟು ಬಾರಿ ಅದಕ್ಕೆ ತಿದ್ದುಪಡಿ ತಂದೆವು-ಎಂಬುದನ್ನು ವಿವರವಾಗಿ ಪರಿಶೀಲಿಸಿದರೆ-ಒಂದು ವಿಚಾರ ಸ್ಪಷ್ಟವಾಗುತ್ತದೆ: ಆಳುವ ಚಪಲ ಬೆಳೆಯುತ್ತ ಹೋದಂತೆ ನಾವು ಆರಿಸಿದ ಪ್ರತಿನಿಧಿಗಳಿಗೆ-ಆಳಿಸಿಕೊಳ್ಳುವವರ ಸಾರ್ವಭೌಮತ್ವ ಬೇಡವಾಯಿತು. ಅವರಲ್ಲಿ ನಿರಂಕುಶ ಪ್ರವೃತ್ತಿ ಬೆಳೆದು, ದಿನೇದಿನೇ ಪ್ರಜೆಯ ಹಕ್ಕು ರಾಷ್ಟ್ರ ಕಲ್ಯಾಣದ ನೆಪದಲ್ಲಿ ಮೊಟಕಾಯಿತು. 19 ನೇ ತಿದ್ದುಪಡಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟಿನ ತೀರ್ಮಾನದಲ್ಲಿ ಈ ಎಲ್ಲ ಅಂಶಗಳು ಪ್ರತಿಪಾದಿತವಾಗಿವೆ. ಮುಖ್ಯ ನ್ಯಾಯಾಧೀಶರಾಗಿದ್ದ ಕೋಕ ಸುಬ್ಬರಾಯರವರು ಈವರೆಗೆ ಮಾಡಿದ ತಪ್ಪು ಸಾಕು, ಇನ್ನು ಇದಕ್ಕೆ ಕೊನೆ” ಎನ್ನಬೇಕಾಯಿತು. ಆ ತೀರ್ಮಾನವನ್ನು ನಮ್ಮ ಶಾಸಕರು ಸಹಿಸಲಾರರಾದರು. ಪಾರ್ಲಿಮೆಂಟಿನ ಸಾರ್ವಭೌಮತ್ವವನ್ನು ಪ್ರಜೆಯು ಇಲ್ಲವೆ ಘಟನೆಯ ಸಾರ್ವಭೌಮತ್ವಕ್ಕಿಂತ ಮುಂದಿರಿಸುವ ಪ್ರಯತ್ನ ನಡದೇ ಇದೆ. ಕಾಂಗ್ರೆಸ್ಸೂ, ಕಮ್ಯುನಿಸ್ಟ್ ಪಕ್ಷಗಳೂ ತುಳಿದ ಹಾದಿಯನ್ನೇ ಇತರ ಸಮಾಜವಾದೀ ಪಕ್ಷಗಳು ತುಳಿಯತೊಡಗಿವೆ. ಪ್ರಜಾಸಮಾಜವಾದೀ ಪಕ್ಷದ ಧ್ಯೇಯ ಧೋರಣೆಗಳಲ್ಲಿ ಈ ಅಂಶ ಸ್ಪಷ್ಟವಾಗಿದೆ. ಯಾವತ್ತೂ ಜನತೆ ಅದರ ಪಾಲಿಗೆ ಪ್ರಜಾ ಸಮೂಹವಲ್ಲ; ‘ಪ್ರೋಲಿಟೇರಿಯಟ್’ ಮಾತ್ರ ಅದರ ಜನತೆ ! ಬಹು ಸಂಖ್ಯಾತರು ನಿರಕ್ಷರರು ಶ್ರಮ ಜೀವಿಗಳು-ಎಂಬುದರಿಂದ, ಅಧಿಕಾರ ; ಅವರಿಂದ ಪಡೆಯುವ ಈ ರಾಜಕೀಯ ಪಕ್ಷಗಳು-ಸಮತೆ, ಸತ್ಯ, ಮೂಲ ಭೂತ ಹಕ್ಕು-ಮೊದಲಾದುವನ್ನು ಗಮನಿಸಲಾರವು.

ಯಾವುದೇ ರಾಷ್ಟ್ರ ಇಂದಿನ ಬುದ್ಧಿಯುಗದಲ್ಲಿ ಮೈ ಬೆವರಿನ ಮೇಲೆ ನಡೆಯಲಾರದು. ಕಮ್ಯುನಿಸ್ಟ್ ರಾಷ್ಟ್ರದಲ್ಲಿ ಕೆಲಸಗಾರರು ಸೈಗುಡಲೇ ಬೇಕಾದ ಜೀವಿಗಳು; ಅಲ್ಲಿ ಬುದ್ದಿವಂತ, ಉಪಾಯಗಾರ, ಪಂಗಡ ಕಟ್ಟಬಲ್ಲ ನೇತಾರರು ಸರ್ವತಂತ್ರ ಸ್ವತಂತ್ರರು. ಈ ಸರ್ವತಂತ್ರ ಪ್ರಭಾವವು-ಪ್ರಜೆಯ ಪಾಲಿನ ಕೊಡಲಿಯೇಟು ! ಪ್ರಜೆಗೂ ಅವನಿಂದ ಅಧಿಕೃತನಾದ ಪ್ರತಿನಿಧಿಗೂ ಇರುವ ಸಂಬಂಧ ತಲೆಕೆಳಗಾದ ಮೇಲೆ ಪ್ರಜಾಪ್ರಭುತ್ವ ಎಷ್ಟು ಉಳಿದೀತು ?

ಪ್ರಜಾಪ್ರಭುತ್ವದ ಹಿನ್ನಡೆಗೆ ಇನ್ನೊಂದು ಕಾರಣವನ್ನು ನಾವು ಕಾಣಬಹುದು. ನಮ್ಮ ರಾಜಕೀಯ ಪಕ್ಷಗಳು ಯಾವುದೇ ಇರಲಿ- ಮತದಾರರ ಸಂಖ್ಯೆಗೂ, ರಾಜಕೀಯ ಪಂಗಡಗಳ ಸಂಖ್ಯೆಗೂ ಸಂಬಂಧವೇ ಇಲ್ಲ. 480 ಮಿಲಿಯ ಜನಸಂಖ್ಯೆಯುಳ್ಳ ದೇಶದಲ್ಲಿ ರಾಜಕೀಯ ಪಕ್ಷಗಳ ಸದಸ್ಯರು ಹತ್ತು ಮಿಲಿಯ ಆಗುತ್ತಾರೋ ಇಲ್ಲವೋ ! ಅದರಲ್ಲಿಯೂ ‘ಖೋಟಾ’ ಸದಸ್ಯರ ಸಂಖ್ಯೆಯೇ ಅಧಿಕ. ರಾಜಕೀಯ ನಿರಾಸಕ್ತಿ ನಮ್ಮಲ್ಲಿರುವ ಇನ್ನೊಂದು ದೊಡ್ಡ ಕೊರತೆ.

ಈಗ ನಮ್ಮ ವಿವಿಧ ಪಕ್ಷಗಳು ಪ್ರತಿನಿಧಿಗಳಾಗಿ ಆರಿಸುತ್ತಿರುವ ಜನರಾದರೂ ಎಂಥವರು ? ಒಂದು ಪಕ್ಷ ಚುನಾವಣೆಯಲ್ಲಿ ಬಹು ಸಂಖ್ಯೆಯಿಂದ ಗೆದ್ದು ಬರುವುದಕ್ಕೇ ಆಗಲಿ, ವಿರೋಧಿ ಪಂಗಡವಾಗಿ ಕೆಲಸ ಮಾಡುವುದಕ್ಕೇ ಆಗಲಿ ಅದರಲ್ಲಿ ಸಮರ್ಥರೂ, ನಿಷ್ಟಾವಂತರೂ ಇರಲೇಬೇಕೆಂಬುದು ನಿರ್ವಿವಾದ. ಈ ಸಾಮರ್ಥ್ಯ ಯಾವ ತೆರನದಿರಬೇಕು ! ಸರಕಾರ ಎಷ್ಟೆಲ್ಲ ಕೆಲಸಗಳನ್ನು ಮಾಡಬೇಕಾಗುತ್ತದೋ ಆ ಎಲ್ಲ ಪ್ರಶ್ನೆಗಳನ್ನು ಕಂಡು, ತಿಳಿದು ತಿದ್ದಿ ನಡೆಯಿಸಬಲ್ಲ ವ್ಯಕ್ತಿಗಳಿಂದ ಅದು ಕೂಡಿರಬೇಕು. ಹಾಗಿದ್ದರೆ ಅದು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ…ವಾಣಿಜ್ಯ, ಉದ್ಯಮ, ಶ್ರಮಗಾರಿಕೆ, ಆರೋಗ್ಯ, ವಿದ್ಯೆ, ಅರ್ಥಶಾಸ್ತ್ರ, ವಿದೇಶ ನೀತಿ, ಸೇನಾನೀತಿ ಮೊದಲಾದ ಕ್ಷೇತ್ರಗಳಲ್ಲಿನ ಅರಿವಿನಿಂದ ಬರಬೇಕಾಗಿದೆ. ಇಂಥ ಒಂದೇ ಒಂದರಲ್ಲಿಯೂ ಸಾಮಾನ್ಯ ತಿಳಿವಿಲ್ಲದವರೂ ಇವತ್ತು ರಾಜ್ಯ ನಡೆಸುವುದನ್ನು, ಶಾಸನ ಮಾಡುತ್ತಿರುವುದನ್ನು ಕಾಣುವಾಗ – ಇದು ನಂದೂರಾಯನ
ರಾಜ್ಯಭಾರವಾಗುವುದರಲ್ಲಿ ಆಶ್ಚರ್ಯವೇನು ? ರಾಜಕೀಯವೇ ದಂಧೆಯಾಗಿರುವ ಜನರು ತಮ್ಮಲ್ಲಿ ಇಂಥಿಂಥ ತಜ್ಞ ವ್ಯಕ್ತಿಗಳಿದ್ದಾರೆ ಎಂದು ಹೆಮ್ಮೆ ಪಡುವ ಸ್ಥಿತಿಯೇ ಇಂದಿಲ್ಲ. ಯಾರು ಯಾವ ಕಾರಣದಿಂದ ಆರಿಸಿಬರಬಹುದು-ಎಂದು ಎಣಿಕೆಹಾಕಿ ಅಂಥವರನ್ನು ಪಕ್ಷದಿಂದ ‘ನಾಮಿನೇಟ್’ ಮಾಡುವ ಈ ಪದ್ಧತಿಗಿಂತ ಇನ್ನೊಂದು ಹೀನ ಸ್ಥಿತಿಯುಂಟೆ ?

ಈ ಪದ್ಧತಿಯಿರುವುದರಿಂದಲೇ- ಪ್ರೈಮರಿ ಶಿಕ್ಷಣ ಪಡೆದ ಭೂಪತಿಗೂ ಮಂತ್ರಿಯಾಗುವ ಬಾಯಾರಿಕೆ ಬರುತ್ತದೆ. ತಾನು ಮಾಡಬೇಕಾದ ಕರ್ತವ್ಯಕ್ಕೆ ತಕ್ಕ ತಿಳಿವು, ತಜ್ಞತೆ ತನಗಿದೆಯೇ ಎಂಬ ಪ್ರಶ್ನೆಯೇ ಹುಟ್ಟುವುದಿಲ್ಲ. ಆರಿಸಿಬಂದವರು ಎಂಥ ಕೆಲಸಕ್ಕೂ ತಮ್ಮ ಸ್ಥಾನದಿಂದಾಗಿ ತಜ್ಞರೆನಿಸುತ್ತಾರೆ. ಇಂಥ ಜನಕ್ಕೆ ‘ದೇಶ ಕಲ್ಯಾಣ’ ಸ್ವಾರ್ಥದ ಬೇಳೆ ಬೇಯಿಸಲು ಒಂದು ನೆಪ. ಅಧಿಕಾರದಲ್ಲಿ ಇರುವ ನಾಲ್ಕು ದಿನಗಳಲ್ಲಿ ಏನೇನು ಲಾಭ ಪಡೆಯಬಹುದು ಎಂಬುದನ್ನು ನಿತ್ಯ ಕಾಣುತ್ತಿದ್ದೇವೆ, ಆಗ ಶಾಸಕರೆಲ್ಲರೂ ಅಂತಹ ಕನಸಿನ ಗೋಪುರ ಕಟ್ಟುವುದರಲ್ಲಿ ಸೋಜಿಗವೇನು ?

ಪ್ರಜೆ ಪ್ರತಿನಿಧಿಯನ್ನಾರಿಸುವ ತನಕ ಸಾರ್ವಭೌಮ; ಅನಂತರ ಗುಲಾಮ. ಹಾಗೆಯೇ ಪಕ್ಷದ ವತಿಯಿಂದ ನಾಮಕರಣವಾಗುವ ತನಕ ಒಬ್ಬ ಅದರ ಭಕ್ತ. ಆರಿಸಿ ಬರುವ ತನಕ ಅವನ ಪಕ್ಷನಿಷ್ಠೆ, ಅನಂತರ ಅದು ಹೇಗೆ ಉಳಿಯಬೇಕು ? ಅವನನ್ನೇ ಮಂತ್ರಿಯಾಗಿ ಮಾಡಿದರೆ ಆಯಿತು ಇಲ್ಲವಾದರೆ ಅವನು ಪಕ್ಷವಿರೋಧಿ, ಯಾರು ಅವನನ್ನು ಗದ್ದುಗೆಗೆ ಏರಿಸುತ್ತಾರೋ ಆ ಪಂಗಡ ಅವನದು ! ಕಳೆದ ಚುನಾವಣೆಯ ಬಳಿಕ ಈ ಕಾಯಿಲೆ ಉಲ್ಬಣಾವಸ್ಥೆಗೆ ಬಂದಿದೆ. ಕಾಂಗ್ರೆಸ್ಸಿಗರು ಬಹುಸಂಖ್ಯಾತರಾಗಿರುವಷ್ಟು ದಿನ ಅವರ ಜನಕ್ಕೆ ಈ ಚಪಲ ಬರಲಿಲ್ಲ. ಸೋಲು ಯಾರಿಗೂ ಬೇಡ. ಆದರೆ ಎಂದು ‘ಗೆಲುವು’ ಅನಿರ್ದಿಷ್ಟವಾಗುತ್ತದೋ ಆಗ ಮನಸ್ಸು ಲಾಭ-ನಷ್ಟ ತೂಗುತ್ತದೆ; ಗೆಲುವವರನ್ನು ಕೂಡುವ ಚಪಲ ಬೆಳೆಯುತ್ತದೆ. ಇಂದು ದೇಶನಿಷ್ಠೆ ಹೇಗೆ ಬರಿಯ ಬಾಯಿಮಾತೋ, ಪಕ್ಷನಿಷ್ಠೆಯೂ ಅಷ್ಟೇ ಪೊಳ್ಳು ಮಾತು, ಪ್ರಜಾಪ್ರಭುತ್ವಕ್ಕೆ ಇದರಷ್ಟು ಗಂಡಾಂತರಕಾರಿ ಸ್ಥಿತಿ ಇನ್ನಿಲ್ಲ. ಕಾಂಗ್ರೆಸ್ಸು ಕಲಿಸಿದ ತಿರುಮಂತ್ರವನ್ನು ಇಂದು ಅದೂ, ಅನ್ಯಪಕ್ಷಗಳ ಅನುಭವಿಸಬೇಕಾಗಿದೆ. ಇದಕ್ಕೆ ಒಂದು ಮುಖ್ಯ ಕಾರಣವೂ ಇದೆ-“ಪಕ್ಷದ ಹೆಸರಿಂದ ನಾವು ಆರಿಸಿ ಬಂದಿದ್ದೇವೆ, ಅದಿಲ್ಲವಾದರೆ ನಾವು ಆರಿಸಿ ಬರುತ್ತಿರಲಿಲ್ಲ” ಎಂಬ ಅಳುಕು ನಮಗಿಲ್ಲದೆ ಹೋಗಿದೆ. ಚುನಾವಣೆಯಲ್ಲಿ ತಾಂಡವವಾಡುವ ಜಾತೀಯತೆ, ಹಣದ ಪ್ರಭಾವಗಳು ಓಟನ್ನು ಗಳಿಸುವ ಶಕ್ತಿಗಳಾಗಿರುವುದರಿಂದಲೇ – ನಮ್ಮ ಶಾಸಕರಿಗೆ ಈ ಧೈರ್ಯ ಬರುತ್ತಿದೆ; ಪಕ್ಷದ ಹೆಸರಲ್ಲಿ ಆರಿಸಲ್ಪಡುವ ವ್ಯಕ್ತಿಗಳು ಈ ದೃಷ್ಟಿಯಿಂದ ಆರಿಸಲ್ಪಡುವವರು ಹೊರತು, ತಮ್ಮ ಯೋಗ್ಯತೆಯಿಂದಲ್ಲ. ಆದುದರಿಂದ ನಮ್ಮ ಚುನಾವಣೆಗಳೆಂಬುವು- ಆಯ್ಕೆಯ ವಿಚಾರದಲ್ಲಿ, ಪ್ರತಿನಿಧಿಯ ವ್ಯಕ್ತಿತ್ವವನ್ನು ಅಳೆಯಲಾರದ ಮಾಪಕಗಳು.

ನಮ್ಮ ಪ್ರಜಾಪ್ರಭುತ್ವದಲ್ಲಿ ಕಾಣಿಸಿಕೊಂಡಿರುವ ಇನ್ನೊಂದು ಭಯಂಕರ ಸ್ಥಿತಿಪ್ರಲೋಭನೆ, ಗವರ್ನರು, ಗವರ್ನರುಜನರಲುಗಳ ಸ್ಥಾನಗಳು ಆಳುವವರು ಕೊಡುವ ಭಕ್ಷೀಸುಗಳು ! ಎಲ್ಲಿ ನಿಷ್ಪಕ್ಷಪಾತ ನಿಯಂತ್ರಣ ನಡೆಯಬೇಕೋ ಅಲ್ಲಿ ಈ ದುರಾಸೆಯ ಪ್ರಭಾವ ಕಾಣುತ್ತದೆ. ಅಂಥ ಸ್ಥಾನಕ್ಕೆ ಏರುವವರು ಜೀವನದಲ್ಲಿ ಇನ್ನೇನೂ ಶ್ರಮವಹಿಸಲಾರದ, ವಾನಪ್ರಸ್ಥಕ್ಕಷ್ಟೇ ತಕ್ಕವರಾದ ಜರ್ಜರಿತರು, ಅವರಿಗೂ ಅಂಟಿರುವ ವೈಭವದ ಲಾಲಸೆಯನ್ನು ಕಂಡಾಗ ಇನ್ನೂ ಬೇಸರ ಪಡಬೇಕು.

ಈ ತನಕ ನಾವು ದೇಶದ ನ್ಯಾಯಸ್ಥಾನಗಳ ವಿಷಯದಲ್ಲಿ ಗೌರವ ಉಳ್ಳವರೇ ಆಗಿದ್ದೇನೆ, ಆದರೆ ವಿವಿಧ ಪ್ರಾಂತ್ಯಗಳಲ್ಲಿ ಆಳುವ ರಾಜಕೀಯ ಪಕ್ಷಗಳು ನ್ಯಾಯಾಧೀಶರ ಆಯ್ಕೆಯಲ್ಲಿ ತೋರಿಸುತ್ತಿರುವ ಪ್ರಭಾವವನ್ನು ಕಂಡಾಗ-ಜನಕ್ಕೆ ನ್ಯಾಯಸ್ಥಾನವನ್ನು ಕುರಿತು ಇರುವ ಗೌರವ ದೀರ್ಘಕಾಲ ಉಳಿಯುವಂತಿಲ್ಲ. ಎನಿಸುತ್ತದೆ. ಅಲ್ಲಿಂದ ನಿವೃತ್ತರಾಗುವ ನ್ಯಾಯಾಧೀಶರ ಮುಂದೆ ಇತರ ಪ್ರಲೋಭನಗಳನ್ನು ತೂಗುತ್ತಿದ್ದೇವೆ. ಅವರಲ್ಲಿ ಬುದ್ಧಿ ಮಂಕಾಗುವ ತನಕವೂ ಮೆರೆಯುವ, ಲಾಭಗಳಿಸುವ ಚಪಲವನ್ನು ಬೆಳೆಯಿಸುತ್ತಿದ್ದೇವೆ. ಇಂಥ ಸ್ಥಿತಿಯಲ್ಲಿ ಪ್ರಜೆಗಳಲ್ಲಿ, ನ್ಯಾಯಾಂಗದ ನಿರ್ದುಷ್ಟತೆಯನ್ನು ಕುರಿತ ನಂಬಿಕೆ ದೀರ್ಘಕಾಲ ಉಳಿಯಲಾರದು.

ಈ ಇಪ್ಪತ್ತು ವರ್ಷಗಳಲ್ಲಿ ಭಾರತದ ಅಭಿವೃದ್ಧಿಯ ಸೂಚ್ಯಂಕವಾಗಿ ನಮ್ಮ ಅರ್ಥನೀತಿ, ಅದರ ಪರಿಣಾಮವಾಗಿ ಬೆಲೆಯೇರಿಕೆ, ಅಭದ್ರತೆಗಳು-ಎಂತಹ ಮೂರ್ಖ ಪ್ರಜೆಗೂ ಎಚ್ಚರ ಕೊಡಲು ಸಾಕಾಗಿದೆ. ಅವನು ರಾಷ್ಟ್ರರಥವನ್ನು ಹೊಟ್ಟೆಗಿಲ್ಲದೆ, ಹುಲ್ಲುಮೆಂದು, ಎಳೆಯಬೇಕಾದ ಹೇಸರಗತ್ತೆಯ ಸ್ಥಾನಕ್ಕೆ ಬಂದಿದ್ದಾನೆ ! ಅವನಲ್ಲಿ ಇನ್ನೂ ಹೇರುವ, ಎಳೆಯುವ ಸಾಮರ್ಥವಿದೆ-ಅವನು ತ್ಯಾಗಿಯಾಗಬೇಕು ಎಂದು ಹೇಳುವುದನ್ನು ಕಂಡಾಗ ಭಾರತದಲ್ಲಿ ಮೂರ್ಖತೆಗೂ ಪಾಂಡಿತ್ಯಕ್ಕೂ ವ್ಯತ್ಯಾಸವೇ ಕಾಣಿಸದು ಎನ್ನಬೇಕಾಗುತ್ತದೆ.

Close

ಮನೋವಿಜ್ಞಾನ ಮತ್ತು ಸಾಹಿತ್ಯ

ಗಿರಿ

ಮನೋವಿಜ್ಞಾನ ಮತ್ತು ಸಾಹಿತ್ಯ

ಭಾಗ ೧

ಸಾಹಿತ್ಯಕ್ರಿಯೆ ಎಂಬುದು ಏನು, ಅದು ಏಕೆ, ಹೇಗೆ ಉಂಟಾಗುತ್ತದೆ ಎಂಬ ಪ್ರಶ್ನೆಗಳಿಗೆ ಮನೋವಿಜ್ಞಾನ ಕೊಡಲು ಪ್ರಯತ್ನಿಸಿದ ಉತ್ತರಗಳನ್ನಿಲ್ಲಿ ಸಂಗ್ರಹಿಸಲು ಯತ್ನಿಸಲಾಗಿದೆ. ಈ ಲೇಖನದ ಮೊದಲ ಭಾಗದಲ್ಲಿ ಫ್ರಾಯ್ಡ್‌ ಮತ್ತು ಯೂಂಗರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಎರಡನೆಯ ಭಾಗದಲ್ಲಿ ಪ್ರಾಯೋಗಿಕ ಮನೋವಿಜ್ಞಾನಿಗಳು ಈಗ ಈ ಸಮಸ್ಯೆಗಳ ಮೇಲೆ ಏನು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ವಿವರಿಸಲಾಗುವುದು. ಮೊದಲು ಯೂಂಗ್ ಮತ್ತು ಫ್ರಾಯ್ಡರ ಅಭಿಪ್ರಾಯಗಳನ್ನು ಕೊಡಲು ಕಾರಣಗಳು ಎರಡು. ಮೊದಲನೆಯದಾಗಿ ಮನೋವಿಜ್ಞಾನದ ಪರಿಮಿತಿಗಳಲ್ಲಿ ಸೃಷ್ಟ್ಯಾತ್ಮಕ ಬರಹಗಳ ಬಗ್ಗೆ ಬರೆದವರು ಐತಿಹಾಸಿಕವಾಗಿ ಇವರು ಮೊದಲಿಗರು. ಎರಡನೆಯದಾಗಿ ಸಾಹಿತಿಗಳಲ್ಲಿ ಮತ್ತು ಸಾಹಿತ್ಯಾಸಕ್ತರಲ್ಲಿ ಇವರ ವಿಚಾರಗಳು ಹೆಚ್ಚು ಪ್ರಚಾರದಲ್ಲಿ ಇದ್ದಂತೆ ಮತ್ತು ಮನೋವಿಜ್ಞಾನವೆಂದರೆ ಫ್ರಾಯ್ಡ್‌-ಯೂಂಗರ ಬರಹಗಳೆಂಬ ಅಭಿಪ್ರಾಯವಿದ್ದಂತೆ ತೋರುವುದು. ಹೊರತು ಇವರ ಬರಹಗಳು ಮನೋವಿಜ್ಞಾನದ ಪ್ರಾತಿನಿಧಿಕ ಎಂಬ ಕಾರಣದಿಂದ ಅಲ್ಲ.

ಈ ಲೇಖನದ ಉದ್ದಕ್ಕೂ ಅನುಕೂಲಕ್ಕೋಸ್ಕರ ಸಾಹಿತ್ಯಕ್ರಿಯೆ, ಅಥವಾ ಕಾವ್ಯ ಕ್ರಿಯೆ ಎಂಬ ಶಬ್ದಗಳನ್ನು ಬಳಸಲಾಗಿದೆ. ಅವುಗಳ ಅರ್ಥವನ್ನು ವ್ಯಾಪಕವಾಗಿ ಅಂದರೆ ಕಾವ್ಯ, ನಾಟಕ, ಕತೆ, ಕಾದಂಬರಿ ಇತ್ಯಾದಿ ಎಲ್ಲ ವಿಧವಾದ ಸೃಷ್ಟ್ಯಾತ್ಮಕ ಬರಹಗಳಿಗೂ ಅನ್ವಯವಾಗುವಂತೆ ಗ್ರಹಿಸಬೇಕು.

ಕಾರ್ಲ್ ಯೂಂಗ್
ಮೊದಲು ಮನಸ್ಸಿನ ಕ್ರಿಯೆಗಳ ಬಗ್ಗೆ ಸ್ವಲ್ಪ ಅರಿತುಕೊಳ್ಳುವುದು ಅವಶ್ಯವಾಗುತ್ತದೆ. ಯೂಂಗನ ಪ್ರಕಾರ ಮನುಷ್ಯನ ಮನಸ್ಸು ಮೂರು ಬೇರೆ ಬೇರೆ ವಿಧವಾದ ಕ್ರಿಯಾ ಪರಿಸರಗಳಿಂದ ಕೂಡಿರುತ್ತವೆ-ಜಾಗೃತ, ವೈಯಕ್ತಿಕ ಸುಷ್ಯ ಚೇತನ ಮತ್ತು ಸಾಮೂಹಿಕ ಸುಪ್ತಚೇತನ. ಜಾಗೃತವೆಂಬುದು ವ್ಯಕ್ತಿಯ ಅರಿವು, ಅದು ಸದಾ ವರ್ತಮಾನದ ಘಟನೆಗಳನ್ನು ಗ್ರಹಿಸುತ್ತಲೂ ಅವುಗಳಿಗೆ ಪ್ರತಿಕ್ರಿಯೆ ಸೂಚಿಸುತ್ತಲೂ ಇರುತ್ತದೆ. ಮುಖ್ಯವಾಗಿ ಈ ಕ್ಷಣದ ಘಟನೆಗಳೊಡನೆ ಪ್ರಜ್ಞಾಪೂರ್ವ ಸಂಬಂಧ ಜಾಗೃತದ ಕ್ರಿಯೆ. ಫ್ರಾನ್ಸ್ ಯಾವುದನ್ನೂ ಸುಪ್ತಚೇತನವೆಂದು ಕರೆದನೋ ಯೂಂಗ್ ಅದನ್ನೇ ಎರಡು ಭಾಗವಾಗಿ ವಿಂಗಡಿಸುತ್ತಾನೆ. ಜಾಗೃತಕ್ಕೆ ತೀರ ಹತ್ತಿರವಾದದ್ದು ವೈಯ್ಯಕ್ತಿಕ ಸುಪ್ತಚೇತನ, ಇನ್ನೂ ಆಳದ ಪದರು ಸಾಮೂಹಿಕ ಸುಪ್ತ ಚೇತನ. ವೈಯಕ್ತಿಕ ಸುಪ್ತ ಚೇತನವು ಜೀವನದುದ್ದಕ್ಕೂ ವ್ಯಕ್ತಿಯ ಸ್ವಂತ ಗಳಿಕೆ. ಇದು ವ್ಯಕ್ತಿಯ ಜಾಗೃತ ಮನಸ್ಸಿಗೆ ಒಪ್ಪಿಗೆಯಾಗದ ಆದರೆ ಮನಸ್ಸಿಗೆ ವೇದ್ಯವಾದ ವಿಷಯಗಳ ಸಂಗ್ರಹಣೆ. ಜೊತೆಗೆ ಜಾಗೃತ ಮನಸ್ಸನ್ನು ಸೇರುವಷ್ಟರ ಮಟ್ಟಿಗಿನ ತೀವ್ರತೆಯನ್ನು ಪಡೆದುಕೊಂಡಿರದ ಸಂವೇದನೆಗಳೂ ಸೇರುತ್ತವೆ. ಮರೆತು ಹೋದ ವೈಯಕ್ತಿಕ ಅನುಭವಗಳು, ಅಶ್ಲೀಲ, ಅನೀತಿಕರ, ಸಮಾಜ ವಿರೋಧ-ಎಂದು ಹತ್ತಿಕ್ಕಲ್ಪಟ್ಟ ಆಸೆ, ಒತ್ತರ, ಆಕಾಂಕ್ಷೆಗಳು ಇಲ್ಲಿ ಸೇರಿರುತ್ತವೆ. ಸುಪ್ತ ಚೇತನದ ಈ ಎಲ್ಲ ವಿಷಯಗಳು ಅನುಭವಗಳು ವ್ಯಕ್ತಿಯ ಅಹಂಗೆ ಸೇರಿದ್ದಾದ್ದರಿಂದ ಯೂಂಗ್ ಇದನ್ನು ವೈಯಕ್ತಿಕವೆಂದು ಕರೆದಿದ್ದಾನೆ. ವೈಯ್ಯಕ್ತಿಕ ಸುಪ್ತ ಚೇತನದ ಒತ್ತರಗಳು ಜಾಗೃದವಸ್ಥೆಯನ್ನು ತಲುಪಬಲ್ಲವು. ಕನಸಿನಲ್ಲಿ ಇವು ಸುಲಭವಾಗಿ ಕಾಣಿಸಿಕೊಳ್ಳುತ್ತವೆ.

ಮನಸ್ಸಿನ ಇನ್ನೂ ಆಳವಾದ ಪದರವೆಂದರೆ ಸಾಮೂಹಿಕ ಸುಪ್ತಚೇತನ ಇದು ವ್ಯಕ್ತಿ ಕೆಟ್ಟದ್ದೆಂದು ಹತ್ತಿಕ್ಕಿಕೊಂಡ ಅನುಭವಗಳ ಶೇಖರಣೆ ಅಲ್ಲ. ನಿಜವಾಗಿ ವ್ಯಕ್ತಿಯ ಅನುಭವಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ದೇಹದ ಮೂಲ ದ್ರವ್ಯಗಳು ಹೇಗೆ ಆನುವಂಶಿಕವಾಗಿ ಬರುತ್ತವೆಯೋ ಹಾಗೆ ಸಾಮೂಹಿಕ ಸುಪ್ತ ಚೇತನವು ಸಂಪೂರ್ಣವಾಗಿ ಆನುವಂಶಿಕತೆಯಿಂದಲೇ ಉಂಟಾಗುತ್ತದೆ. ಇದು ವ್ಯಕ್ತಿತ್ವಾತೀತ ಹಾಗೂ ಕಾಲಾತೀತ. ಇದರ ಮುಖ್ಯ ಗುಣವೆಂದರೆ ಇದು ಇಡೀ ಮನುಷ್ಯ ಜನಾಂಗಕ್ಕೆ ಸರ್ವ ಸಾಮಾನ್ಯವಾದದ್ದು. ವೈಯ್ಯಕ್ತಿಕ ಸುಪ್ತಚೇತನ ಸ್ವಯಂನಿಷ್ಠ ಮನಸ್ಸಾದರೆ ಸಾಮೂಹಿಕ ಸುಪ್ತಚೇತನ ವಸ್ತುನಿಷ್ಠ ಮನಸ್ಸು. ಸಾಮೂಹಿಕ ಸುಪ್ತಚೇತನದಲ್ಲಿ ಮನುಷ್ಯವರ್ಗದ ಅತಿ ಪ್ರಾಚೀನ ದಿನಗಳಿಂದ ಇದುವರೆಗಿನ ಎಲ್ಲ ಮಾನವಾನುಭವಗಳ ಶೇಖರಣೆ ಆಗಿರುತ್ತದೆ. ಇದರ ವಿಷಯಗಳನ್ನು ಯೂಂಗ್ ಆದಿಪ್ರವೃತ್ತಿಗಳೆಂದು ಕರೆಯುತ್ತಾನೆ. ಮನುಷ್ಯ ಪುನಃ ಪುನಃ ಅನುಭವಿಸುವ ಅನುಭವಗಳಿಂದ (ಸೂರ್ಯೋದಯ, ಹುಟ್ಟು, ಸಾವು) ಉಂಟಾಗುವ ಆದಿ ಪ್ರವೃತ್ತಿಗಳು ಸಾಮೂಹಿಕ ಸುಪ್ತಚೇತನದಲ್ಲಿ ಸಂಕೇತಗಳಾಗಿ ಇರುತ್ತವೆ. ಒಟ್ಟಿನಲ್ಲಿ ವೈಯಕ್ತಿಕ ಸುಪ್ತಚೇತನದ ಅನುಭವಗಳು ಒಂದಲ್ಲ ಒಂದು ಕಾಲದಲ್ಲಿ ವ್ಯಕ್ತಿಯ ಅನುಭವಕ್ಕೆ ಸೇರಿದ್ದವಾದರೆ ಸಾಮೂಹಿಕ ಸುಪ್ತಚೇತನವು ಎಂದೂ ವ್ಯಕ್ತಿಯ ಜಾಗೃತಕ್ಕೆ ಸೇರಿರಲಿಲ್ಲ. ವೈಯ್ಯಕ್ತಿಕ ಸುಪ್ತಚೇತನವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾದರೆ ಸಾಮೂಹಿಕ ಸುಪ್ತಚೇತನವು ಇಡೀ ಮಾನವ ಕುಲಕ್ಕೇ ಒಂದು.

ಕೆಲವೊಂದು ಪರಿಸ್ಥಿತಿಗಳಲ್ಲಿ ಹುಟ್ಟುಗುಣದ ಒತ್ತಡದಂತೆ ಜಾಗೃತ ಮನಸ್ಸಿಗೆ ಆದಿ ಪ್ರವೃತ್ತಿಗಳು (ಸಾಮೂಹಿಕ ಸುಪ್ತಚೇತನದ ಸಂಕೇತಗಳು) ದಾರಿ ಮಾಡಿಕೊಳ್ಳುತ್ತವೆ. ಹಾಗೆ ಜಾಗೃದವಸ್ಥೆಗೆ ಬಂದಾಗ ಈ ಅನುಭವಗಳು ಭಾವಗಳಾಗುತ್ತವೆ, ಸಂಕೇತಗಳಾಗುತ್ತವೆ. ಯೂಂಗನ ಪ್ರಕಾರ ಉತ್ತಮ ಮಟ್ಟದ ಸಾಹಿತ್ಯ, ಪುರಾಣಗಳು, ಕಟ್ಟುಕತೆಗಳು, ಜನಪದ ಸಾಹಿತ್ಯ- ಇವುಗಳು ಸುಪ್ತ ಚೇತನದ ಅಭಿವ್ಯಕ್ತಿಗಳು.

ಯೂಂಗ್ ಎರಡು ವಿಧವಾದ ಸೃಷ್ಟ್ಯಾತ್ಮಕ ಬರಹಗಳನ್ನು ಗುರುತಿಸುತ್ತಾನೆ. ಒಂದು ಮಾನಸಿಕ, ಇನ್ನೊಂದು ದಾರ್ಶನಿಕ. ಮಾನಸಿಕ ಸಾಹಿತ್ಯಕ್ರಿಯೆಗೆ ಸಾಮಗ್ರಿಗಳು ಜಾಗೃತ ಮನಸ್ಸಿನಿಂದಲೇ ದೊರೆಯುತ್ತವೆ. ಬರಹಗಾರನ ನೈಜ ಅನುಭವಗಳು ಮಾನಸಿಕ ಆಘಾತಗಳು, ಮನುಷ್ಯ ಜೀವನದ ಸಂದಿಗ್ಧ ಪರಿಸ್ಥಿತಿಗಳು, ಭಾವ ವಿಕಾರಗಳು ಈ ತರದ ಸಾಹಿತ್ಯ ರಚನೆಗೆ ನೆರವಾಗಬಲ್ಲವು. ಎಲ್ಲರೂ ಅಸ್ಪಷ್ಟವಾಗಿ, ಅಸಮರ್ಪಕವಾಗಿ ಅನುಭವಿಸುವುದನ್ನೇ ವಿಶೇಷ ರೀತಿಯಲ್ಲಿ ಅರಗಿಸಿಕೊಂಡ ಲೇಖಕ ಅವುಗಳಿಗೆ ಒಂದು ಅಸಾಧಾರಣ ಆಳವನ್ನು ಹೊಸ ದೃಷ್ಟಿಯನ್ನು ಕೊಡುತ್ತಾನೆ; ಎಲ್ಲರ ಪ್ರಜ್ಞೆಯಲ್ಲಿರುವ ಸಾಮಗ್ರಿಗಳನ್ನೇ ಇನ್ನಷ್ಟು ಬೆಳಗಿಸುತ್ತಾನೆ; ಅವುಗಳಿಗೆ ಅರ್ಥ ಕೊಡುತ್ತಾನೆ. ಇಂತಹ ಬರಹಗಳನ್ನು ಮನೋವಿಜ್ಞಾನಿ ವಿಶ್ಲೇಷಿಸಬೇಕಾದ ಅವಶ್ಯಕತೆ ಇಲ್ಲ. ಕೃತಿಗಳ ಅರ್ಥ ಸ್ಪಷ್ಟವಾಗಿ ನಿರ್ದಿಷ್ಟವಾಗಿ ಇರುತ್ತದೆ. ಬಹು ಪಾಲು ಸಾಹಿತ್ಯಕೃತಿಗಳನ್ನು ಈ ವರ್ಗಕ್ಕೆ ಸೇರಿಸಬಹುದು, ಅಂತಹ ಕತೆಯಾಗಲಿ, ಕವನವಾಗಲಿ, ನಾಟಕವಾಗಲಿ, ಕಾದಂಬರಿಯಾಗಲಿ, ಅದು ಕವಿಯ ಜಾಗ್ರತ ಮನಸ್ಸಿನಿಂದ ಬರುತ್ತದೆ. ಇವುಗಳನ್ನು ಮಾನಸಿಕ ಸೃಷ್ಟಿಕ್ರಿಯೆ ಎಂದು ಏಕೆ ಕರೆಯುವುದೆಂದರೆ, ಇವು ಎಂದೂ ಸಾಧಾರಣ ಪ್ರಜ್ಞೆಯ ಮಾನಸಿಕ ಅರ್ಥ ವ್ಯಾಪ್ತಿಯನ್ನು ಮೀರುವುದಿಲ್ಲ. ತೋರಿಕೆಗೆ ಕೂಡ ಅಸಂಬದ್ಧ, ವಿಚಿತ್ರ ಎನ್ನಿಸುವುದಿಲ್ಲ.

ದಾರ್ಶನಿಕ ಬರಹಗಳು ಈ ಮಾನಸಿಕ ಅರ್ಥವ್ಯಾಪ್ತಿಯನ್ನು ಮೀರುತ್ತವೆ. ಅವು ಓದುಗರಿಗೆ ಅಪರಿಚಿತವಾಗಿ ಕೆಲವೊಮ್ಮೆ ತೀರ ವಿಚಿತ್ರವಾಗಿ ತೋರುತ್ತವೆ. ಮನಸ್ಸಿನ ಯಾವುದೋ ಮೂಲೆಯಿಂದ ಎದ್ದು ಬಂದಂತೆ ತೋರುವ ಈ ಬರಹಗಳ ಅನುಭವಗಳಿಗೂ ಜಾಗ್ರಗಾವಸ್ಥೆ ಯ ಅನುಭವಗಳಿಗೂ ಅಪಾರವಾದ ಅಂತರವಿದ್ದಂತೆ, ಯುಗ ಯುಗಾಂತರಗಳ ಕತ್ತಲೆ ಕವಿದಂತೆ ಎನ್ನಿಸುತ್ತದೆ. ಅತಿಮಾನವ ಪ್ರಪಂಚದ ವಿರೋಧಾಭಾಸದ ಕತ್ತಲೆ ಬೆಳಕಿನಂತೆ ಅನುಭವ ವೇದ್ಯವಾಗುತ್ತವೆ. ಮನುಷ್ಯನ ಈ ಕ್ಷಣದ ಅರಿವಿನ ಹಿಡಿತಕ್ಕೆ ಮೀರಿದ್ದಾಗಿ ಈ ಬರಹಗಳ ವಸ್ತುಗಳು ಕಾಲಾತೀತ ಆಳವೊಂದರಿಂದ ಎದ್ದು ಬಂದಂತೆ, ತನ್ನಷ್ಟಕ್ಕಿರುವ ವೈಚಿತ್ರದಂತೆ, ಬಹುಮುಖವಾಗಿ ಅಪಾರವಾಗಿ ವಿಕೃತವಾಗಿ ತೋರುತ್ತವೆ. ದಾರ್ಶನಿಕ ಬರಹವು ಇಂದಿನ ಪ್ರಜ್ಞೆಯ ಅನುಭವಕ್ಕೆ ಭಾವಗಳಿಗೆ ಮೌಲ್ಯ ಪ್ರಮಾಣಗಳಿಗೆ ಮೀರಿದಂತೆ, ಹೊರತಾದಂತೆ ಅಥವಾ ಸಂಬಂಧವೇ ಇಲ್ಲದಂತೆ ಕಾಣುತ್ತದೆ.

ಮಾನಸಿಕ ಬರಹಗಳಲ್ಲಿ ವ್ಯಕ್ತವಾಗುವ ಅನುಭವಗಳೆಲ್ಲ ಮಾನವೀಯ ಪ್ರಪಂಚದಲ್ಲಿ ಸಾಧ್ಯವೆಂದು ತೋರುತ್ತವೆ. ಅವು ಸಾಕಷ್ಟು ವ್ಯವಸ್ಥಿತವಾಗಿ, ತರ್ಕಬದ್ಧವಾಗಿ ಇರುತ್ತವೆ. ದಾರ್ಶನಿಕ ಬರಹಗಳು ಇದಕ್ಕೆ ವಿರುದ್ಧವಾಗಿ, ಕಂಡು ಕೇಳರಿಯದ ಬಹುಶಃ ಇನ್ನೂ ಅಸ್ತಿತ್ವಕ್ಕೆ ಬರದ ಪ್ರಪಂಚದ ಅನುಭವಗಳೆನಿಸುತ್ತವೆ. ಅನೇಕ ವೇಳೆ ತರ್ಕಕ್ಕೆ ಮೀರಿ ವಿಚಾರಕ್ಕೆ ಹೊರತಾಗಿ ಕಾಣುವುದರಿಂದ ಓದುಗ ಗೊಂದಲ ಗೆಡುತ್ತಾನೆ, ದಿಗೃಮೆಗೊಳ್ಳುತ್ತಾನೆ, ಕೆಲವೊಮ್ಮೆ ಜುಗುಪ್ಪೆ ಕೂಡ ಆಗಬಹುದು. ಇಂತಹ ಸನ್ನಿವೇಶಗಳಲ್ಲಿ ಸಾಮಾನ್ಯ ಓದುಗರು ಟೀಕೆ ವಿವರ ವ್ಯಾಖ್ಯಾನಗಳನ್ನು ಬೇಡುತ್ತಾರೆ, ಆದರೆ ಹಲವು ಓದುಗರು ತಿರಸ್ಕರಿಸುತ್ತಾರೆ, ಸಾಹಿತ್ಯ ವಿಮರ್ಶಕರು ಮುಜಗರ ಪಡುತ್ತಾರೆ.

ದಾರ್ಶನಿಕ ಬರಹಗಳಿಗೂ ಬರಹಗಾರನ ವೈಯ್ಯಕ್ತಿಕ ಅನುಭವಗಳಿಗೂ ಯಾವ ಸಂಬಂಧವೂ ಇರುವುದಿಲ್ಲ. ಮತ್ತೆ ಮತ್ತೆ ಯೂಂಗ್ ಕಲಾವಿದ ಬೇರೆ, ವ್ಯಕ್ತಿ ಬೇರೆ ಎಂದು ಹೇಳುತ್ತಾನೆ. ತಾವು ಬರೆದದ್ದು ತಮ್ಮ ಅನುಭವಗಳಿಗೆ ಸಂಬಂಧಿಸಿದ್ದೆಂದು ಕವಿಗಳು ಹೇಳಿದರೂ ಕೂಡ ಅದರಲ್ಲಿ ನಿಜಾಂಶವಿರದೆಂದು ಯೂಂಗ್ ತೀರ್ಮಾನಿಸುತ್ತಾನೆ.

ಈ ಎರಡು ವಿಧವಾದ ಬರಹಗಳಲ್ಲಿರುವ ವ್ಯತ್ಯಾಸವನ್ನು ಸ್ಪಷ್ಟಪಡಿಸಲು ಯೂಮಗ್ ಗಯತೆಯ ‘ಫಾಸ್ಟ್‌’ ಕೃತಿಯನ್ನು ಉದಾಹರಿಸುತ್ತಾನೆ. ಇದರ ಮೊದಲ ಭಾಗದಲ್ಲಿ ಮಾನಸಿಕ ಸೃಷ್ಟಿ ಇದೆ ಎಂತಲೂ ಎರಡನೆಯ ಭಾಗದಲ್ಲಿ ದಾರ್ಶನಿಕ ಸೃಷ್ಟಿ ಇದೆ ಎಂತಲೂ ಅವನ ಅಭಿಪ್ರಾಯ. ಎರಡನೆಯ ಭಾಗದ ಅನುಭವಗಳು ವಿಚಿತ್ರ, ಅಪರಿಚಿತ, ಆದರೆ ಮೊದಲ ಭಾಗದ ಅನುಭವಗಳು ಹೆಚ್ಚು ತರ್ಕ ಬದ್ಧ, ಸಾಧ್ಯ ಸಾಮಾನ್ಯ, ದಾರ್ಶನಿಕ ಬರಹಗಳಿಗೆ ಇನ್ನು ಕೆಲವು ಉದಾಹರಣೆಗಳೆಂದರೆ : ಡಾಂಟೆಯ The Shepherd of Hermas, ನೀಷೆಯ Dionysian Exuberance, ವ್ಯಾಗ್ನರನ Neibclungning, ಬ್ಲೇಕನ ಪದ್ಯಗಳು, ರೀಡರ್ ಹೆಗಾರ್ಡ್‌ನ She ಮೊದಲಾದವುಗಳು.

ಹೀಗೆ ಸಾಹಿತ್ಯಕ್ರಿಯೆಯನ್ನು ವಿಭಾಗಿಸಿದ ಮೇಲೆ ಯೂಂಗ್ ಅವುಗಳನ್ನು ವಿವರಿಸುತ್ತಾನೆ. ಮೊದಲ ವರ್ಗದ ಕ್ರಿಯೆಗಳಿಗೆ ವಿವರಣೆಯ ಅವಶ್ಯಕತೆ ಇಲ್ಲ. ಇರುವುದು ದಾರ್ಶನಿಕ ಬರಹಗಳ ವಿಷಯದಲ್ಲಿ. ದಾರ್ಶನಿಕ ಬರಹಗಳು ಸಾಮೂಹಿಕ ಸುಪ್ತ ಚೇತನದ ಅಭಿವ್ಯಕ್ತಿ. ಇಂತಹ ಬರಹಗಳ ಸಾಮಗ್ರಿ ಮಾನವ ಜೀವದ ಪ್ರಾರಂಭದಿಂದ ಇದುವರೆಗೆ ನಡೆದ ಅನುಭವಗಳ ಸಾರ. ಆದ್ದರಿಂದ ದಾರ್ಶನಿಕ ಬರಹಗಳಲ್ಲಿ ನಾವು ಕಾಣುವುದು ವ್ಯಕ್ತಿಯ ಅನುಭವಕ್ಕೆ ಹೊರತಾದ, ಆ ಅನುಭವಕ್ಕೆ ಬಂದೇ ಇರದ ಸಾಮೂಹಿಕ ಅನುಭವದ ಸಂಕೇತಗಳನ್ನು. ಈ ಅನುಭವಗಳು ಕಾಲಾತೀತವಾಗಿ ತರ್ಕಕ್ಕೆ ಮೀರಿ ಇರುತ್ತವೆ. ಇವು ಮಾನವಕುಲ ಅನುಭವಿಸಿದ ಆದರೆ ಮರೆತು ಹೋದ ಅನುಭವಗಳು ಮನುಷ್ಯನ ಭಾವನೆಗಳು ಪ್ರಜ್ಞೆಯ ಪರಿಮಿತಿಯಲ್ಲಿ ಇದ್ದರೆ ದಾರ್ಶನಿಕ ಅನುಭವಗಳು ಅದನ್ನು ಮೀರುತ್ತವೆ. ನಮ್ಮ ಭಾವನೆಗಳಿಂದ ನನಗೆ ಆಗಲೇ ಗೊತ್ತಿರುವುದನ್ನು ಅನುಭವಿಸುತ್ತೇವೆ. ಆದರೆ ಅಂತರ್ ದೃಷ್ಟಿಯು ನಮಗೆ ಗೊತ್ತಿಲ್ಲದ, ಹುದುಗಿರುವ ಜ್ಞಾನದತ್ತ ಕೈ ತೋರುತ್ತದೆ. ಇಂತಹ ಹುದುಗಿರುವ ಜ್ಞಾನ ಪ್ರಜ್ಞೆಗೇರಲು ಪ್ರಯತ್ನಿಸಿದರೆ ನಾವು ಕೂಡಲೇ ಅದನ್ನು ಹತ್ತಿಕ್ಕಿಕೊಳ್ಳುತ್ತೇವೆ, ತರ್ಕಕ್ಕೆ ಮೀರಿದ ಈ ವಿಷಯಗಳ ವಿರುದ್ಧ ತರ್ಕ ಮತ್ತು ವಿಜ್ಞಾನದ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತೇವೆ.

ಹೀಗೆ ಪ್ರಜ್ಞೆಯ ಕೆಳಮಟ್ಟಕ್ಕೂ ಕೆಳಗೆ ಹುದುಗಿ ಹೋದ, ಮನುಷ್ಯವರ್ಗ ಆದಿಯಿಂದ ಅನುಭವಿಸಿದ ಎಲ್ಲ ಅನುಭವಗಳು ವ್ಯಕ್ತವಾಗುವುದು ದಾರ್ಶನಿಕ ಬರಹಗಳಲ್ಲಿ ಮಾತ್ರವಲ್ಲ, ಸಂತರು, ದಾರ್ಶನಿಕರು, ಮುಂದಾಳುಗಳು ಕೂಡ ಈ ಅನುಭವಸ್ತರಗಳೊಡನೆ ಸಂಪರ್ಕ ಹೊಂದಿರುತ್ತಾರೆ. ಮಾನವ ಸಮಾಜದ ಪ್ರಾರಂಭದಿಂದಲೂ ಇಂತಹ ಗ್ರಹಿಕೆಗಳನ್ನು ವ್ಯಕ್ತಪಡಿಸುವ ಪ್ರಯತ್ನಗಳನ್ನು ನಾವು ಕಾಣಬಹುದು. ಶಿಲಾಯುಗದ ಕೆತ್ತನೆಗಳು, ಪುರಾಣಗಳು, ದಂತಕತೆಗಳು, ಅನೇಕ ಶಿಲ್ಪಕೃತಿಗಳು, ಧಾರ್ಮಿಕ ವಿಧಿಗಳು, ಸಂಪ್ರದಾಯಬದ್ದ ನಡವಳಿಕೆಗಳು ಇಂತಹ ಆದಿಭೂತ ಅನುಭವಗಳ ಅಭಿವ್ಯಕ್ತಿಗಳು. ಕವಿಯ ಸೃಷ್ಟಿಕ್ರಿಯೆಯ ಉಗಮ ಈ ಅನುಭವಗಳೇ ಆಗಿರುವುದರಿಂದ ಕವಿ ಪುನಃ ಪುನಃ ಪುರಾಣಗಳ, ವಿಧಿಗಳ ಪ್ರತಿಮೆಗಳನ್ನು ತನ್ನ ಅಭಿವ್ಯಕ್ತಿಯಲ್ಲಿ ಬಳಸುತ್ತಾನೆ.

ಶ್ರೇಷ್ಠ ಕಾವ್ಯಗಳು ತಮ್ಮ ಸತ್ವವನ್ನು ಎಲ್ಲ ಮಾನವ ಜೀವಿಗಳ ಅನುಭವದಿಂದ ಸೆಳೆದುಕೊಳ್ಳುತ್ತವೆ. ಅಂತಹ ಅನುಭವಗಳ ಶೇಖರಣೆಯೇ ಸಾಮೂಹಿಕ ಸುಪ್ತ ಚೇತನ. ಇದು ಪ್ರಜ್ಞೆಗೆ ಹೊರತಾದ, ಅನುವಂಶಿಕವಾಗಿ ಬಂದ ಮಾನಸಿಕ ಪರಿಸರಣ. ಮಾನವನ ದೈಹಿಕ ರಚನೆಯಲ್ಲಿ ಜೀವವಿಕಾಸದಲ್ಲಿ ಕಳೆದುಹೋದ ಹಂತಗಳ ಅವಶೇಷಗಳನ್ನು ಕಾಣುವಂತೆ. ಮಾನಸಿಕ ಬೆಳವಣಿಗೆಯೂ ಈ ತರದ ಜೀವವಿಕಾಸ ಕ್ರಮಕ್ಕೆ ಬದ್ಧವೆಂದು ಭಾವಿಸಬಹುದು. ಕನಸಿನಲ್ಲಿ ಮಂಪರು ಪರಿಸ್ಥಿತಿಗಳಲ್ಲಿ ಮತ್ತು ಮನೋರೋಗಗಳಲ್ಲಿ ಮನಸ್ಸಿನ ಬೆಳವಣಿಗೆಯ ಪ್ರಾಚೀನ ಅವಸ್ಥೆಗಳನ್ನು ಗುರುತಿಸಬಹುದು. ಆಧುನಿಕ ವೇಷಧರಿಸಿದ ಪೌರಾಣಿಕ ಸಂಕೇತಗಳೂ ಹಾಗೆಯೇ. ಸಮಷ್ಟಿ ಸುಪ್ತ ಚೇತನದ ಈ ಅಭಿವ್ಯಕ್ತಿಗಳು ಸಾಹಿತ್ಯಾ ಭ್ಯಾಸಕ್ಕೆ ಪ್ರಮುಖವಾದವು. ಏಕೆಂದರೆ ಇವು ಒಮ್ಮುಖವಾದ ಜಾಗೃತಮನಸ್ಸಿಗೆ ಒಂದು ಪರಿಪೂರ್ಣ ಸ್ವರೂಪವನ್ನು ಕೊಡುತ್ತವೆ. ಅಂದರೆ ಒಮ್ಮುಖವಾದ, ವಿಕೃತವಾದ, ಅಪಾಯಕಾರಿಯಾದ ಜಾಗೃತ ಮನಸ್ಸಿಗೆ ಈ ಅಭಿವ್ಯಕ್ತಿಗಳಿಂದ ಸಮತೋಲ ಬರುತ್ತದೆ. ಮನೋರೋಗಗಳಲ್ಲಿ ಈ ಅಭಿವ್ಯಕ್ತಿಗಳು ನೇತ್ಯರ್ಥಕವಾಗಿ ವ್ಯಕ್ತಿತ್ವದ ಸಮತೋಲನವನ್ನು ನಾಶಗೊಳಿಸುತ್ತವೆ. ಇದೇ ಮನೋರೋಗಕ್ಕೂ ಸಾಹಿತ್ಯ ರಚನೆಗೂ ಇರುವ ಮುಖ್ಯ ವ್ಯತ್ಯಾಸ.

ಉತ್ತಮ ಸಾಹಿತ್ಯ ಕೃತಿಗಳಲ್ಲಿ ವೈಯ್ಯಕ್ತಿಕ ಅನುಭವಗಳು ಇರುವುದಿಲ್ಲ. ಇದ್ದರೆ ಅದು ತೀರ ದೊಡ್ಡ ದೋಷ, ತೀರ ವೈಯ್ಯಕ್ತಿಕ ಕೃತಿ ರಚನೆಯನ್ನು ಲಘು ಮನೋರೋಗದ ಚಿಹ್ನೆಗಳೆಂದು (ಫ್ರಾಯ್ಡ್ ಪರಿಗಣಿಸಿದಂತೆ) ಹೇಳಬಹುದು. ನಿಜವಾದ ಕೃತಿ ವೈಯ್ಯಕ್ತಿಕ ಮಟ್ಟದಿಂದ ಮೇಲೆದ್ದು ಎಲ್ಲ ಮಾನವರ ಹೃದಯಕ್ಕೆತಾಗಬೇಕು. ಆದ್ದರಿಂದಲೇ ನಿಜವಾದ ಕಲಾವಿದನಲ್ಲಿ, ಕವಿಯಲ್ಲಿ ಸಾಮೂಹಿಕ ಸುಪ್ತ ಚೇತನದ ಹೊರೆ ಹೆಚ್ಚಾಗಿರುತ್ತದೆ. ವೈಯ್ಯಕ್ತಿಕ ಚೇತನ ಸಾಮೂಹಿಕ ಚೇತನಕ್ಕೆ ಅಧೀನವಾಗಿರುತ್ತದೆ. ಕಲೆ ಒಂದು ತರದ ಸಹಜ ಶಕ್ತಿ; ಅದು ಒಂದು ವ್ಯಕ್ತಿಯನ್ನು ಸೆಳೆದು ಆತನನ್ನು ತನ್ನ ಸಾಧನವನ್ನಾಗಿರಿಸಿಕೊಳ್ಳುತ್ತದೆ. ಕಲಾವಿದ ತನ್ನ ಸ್ವಂತ ಉದ್ದೇಶಗಳನ್ನಿಟ್ಟುಕೊಂಡು ಅವುಗಳನ್ನು ಸಾಧಿಸಿಕೊಳ್ಳಬಲ್ಲ ಸ್ವತಂತ್ರ ಇಚ್ಛೆಯ ವ್ಯಕ್ತಿ ಅಲ್ಲವೇ ಅಲ್ಲ. ಬದಲು, ಅವನು ಕಲೆ ಅದರ ಉದ್ದೇಶವನ್ನು ತನ್ನ ಮೂಲಕ ಸಾಧಿಸಿಕೊಳ್ಳಲು ಬಿಡುವವನು ಒಬ್ಬ ಮನುಷ್ಯನಾಗಿ ಅವನಲ್ಲಿ ಭಾವನೆಗಳು ಆಸೆ ಆಕಾಂಕ್ಷೆಗಳು ಇರಬಹುದು, ಆದರೆ ಕಲಾವಿದನಾಗಿ ಆತ “ಸಾಮೂಹಿಕ ಮಾನವ’. ಮಾನವಕುಲದ ಸುಪ್ತ ಚೇತನವನ್ನು ರೂಪಿಸುವವನು. ಕಲಾವಿದನ ಜೀವನವನ್ನು ಆಳುವುದು, ರೂಪಿಸುವುದು ಜಾಗೃತ ಪ್ರಜ್ಞೆಯಲ್ಲ, ಸುಪ್ತ ಚೇತನ. ಅವನ ಜಾಗೃತ ಚೇತನ ಅಸಹಾಯಕ ಸಾಕ್ಷಿ ಮಾತ್ರ. ಗಯತೆ ಫಾಸ್ಟ್ನನ್ನು ರೂಪಿಸಲಿಲ್ಲ, ಫಾಸ್ಟ್ ಗಯತೆಯನ್ನು ರೂಪಿಸಿತು.
ಆದ್ದರಿಂದಲೇ ಕಾವ್ಯ ವೈಯ್ಯಕ್ತಿಕ ಅನುಭವವನ್ನು ಅವಲಂಬಿಸಿದೆ – ಎಂದರೆ ಕಾವ್ಯದ ಅರ್ಥವೇ ತಪ್ಪಿಹೋಗುತ್ತದೆ. ಸಾಮೂಹಿಕ ಚೇತನವು ಜೀವಂತ ಅನುಭವವಾಗಿ ಒಂದು ಕಾಲದ ಪ್ರಜ್ಞೆಗೆ ಒಂದು ಹೊಸ ರೂಪುಕೊಟ್ಟರೆ ಅದು ಸೃಷ್ಟಾತ್ಮಕ ಕ್ರಿಯೆ ಎನ್ನಿಸಿಕೊಳ್ಳುತ್ತದೆ. ಮನುಷ್ಯನ ಸಾಮೂಹಿಕ ಸುಪ್ತ ಚೇತನದಲ್ಲಿ “ಪರವು ವಿವೇಕಿಯ” ಅಥವಾ ರಕ್ಷಕನ ಸಂಕೇತ ಶಕ್ತಿ ಮಾನವ ಸಂಸ್ಕೃತಿಯ ಪ್ರಾರಂಭದಂದಿನಿಂದ ಹುದುಗಿರುತ್ತದೆ. ಈ ತರದ ಆದಿಭೂತ ಪ್ರತಿಮೆಗಳು ಅಸಂಖ್ಯಾತವಾಗಿವೆ. ಆದರೆ ಅವುಗಳು ಜನರ ಕನಸಿನಲ್ಲಾಗಲಿ, ಕಲೆಯಲ್ಲಾಗಲೀ ಯಾವಾಗಲೂ ವ್ಯಕ್ತವಾಗುವುದಿಲ್ಲ. ಮಾನವ ಸಮಾಜ ಅಸ್ತವ್ಯಸ್ತಗೊಂಡಾಗ, ತೀರ ಗಂಭೀರ ಸ್ವರೂಪದ ತಪ್ಪುಗಳಿಗೆ ಎಡೆಮಾಡಿಕೊಟ್ಟಾಗ ಇಂತಹ ಸಂಕೇತಗಳು ಜಾಗೃತವಾಗುತ್ತವೆ. ಜನರು ಗೊಂದಲಗೆಟ್ಟಾಗ ಅವರಿಗೆ ಒಬ್ಬ ಮಾರ್ಗದರ್ಶಕನ, ಉಪದೇಶಕನ ಕೊನೆಗೊಬ್ಬ ವೈದ್ಯನ ಆವಶ್ಯಕತೆ ಉಂಟಾಗುತ್ತದೆ. ಜನರು ಸತ್ವಹೀನರಾದಾಗ, ಜಾಗೃತ ಜೀವನ ಒಮ್ಮುಖವಾಗಿ ಅಸತ್ಯ ನಡತೆಯಿಂದ ಕೂಡಿದಾಗ ಈ ಸಂಕೇತಗಳು ತಾವಾಗಿಯೇ ಜಾಗೃತವಾಗಿ ಕಲಾವಿದರ ಮತ್ತು ಸಂತರ ದರ್ಶನಗಳಲ್ಲಿ ಕಾಣಿಸಿಕೊಂಡು ಆ ಕಾಲದ ಮಾನಸಿಕ ಸಮತೋಲವನ್ನು ಸ್ಥಾಪಿಸುತ್ತವೆ. ಆ ಕಾಲದಲ್ಲಿ ಬದುಕುವ ಎಲ್ಲರಿಗೂ ಅದು ಪ್ರಾಮುಖ್ಯವುಳ್ಳ ಘಟನೆಯಾಗುವುದಲ್ಲದೆ ಮಾನವ ಕುಲಕ್ಕೇ ಅದು ಒಂದು ಸಂದೇಶವಾಗುತ್ತದೆ.

ಫ್ರಾಯ್ಡ್‌

ಕಾವ್ಯಕ್ರಿಯೆಯ ಬಗೆಗೆ ಫ್ರಾನ್ಸ್ ಹೇಳಿದುದನ್ನು ಅರ್ಥಮಾಡಿಕೊಳ್ಳಲು ಅವನ ಒಂದೆರಡು ಕಲ್ಪನೆಗಳನ್ನು ಅರಿತುಕೊಳ್ಳಬೇಕಾಗುತ್ತದೆ ಮುಖ್ಯವಾಗಿ, ಸುಪ್ತಚೇತನ ಮತ್ತು ಈಡಿಪಸ್ ಕಾಂಪ್ಲೆಕ್ಸ್-ಈ ಎರಡು ಕಲ್ಪನೆಗಳನ್ನು ಪರಿಶೀಲಿಸಬೇಕು. ಸುಪ್ತ ಚೇತನದಲ್ಲಿ ನಾವು ನುಂಗಿಕೊಂಡ ಆಸೆ ಆಕಾಂಕ್ಷೆಗಳು ತುಂಬಿರುತ್ತವೆ, ಅದರಲ್ಲೂ ಮುಖ್ಯವಾಗಿ ಇದು ದಮನಕ್ಕೀಡಾದ ಬಾಲ್ಯಾವಸ್ಥೆಯ ಲೈಂಗಿಕ ಒತ್ತಡಗಳಿಂದ ಕೂಡಿರುತ್ತದೆ. ಸೆನ್ಸಾರ್ ಎಂದು ಫ್ರಾಯ್ಡ್‌ ಕರೆಯುವ ಒಂದು ಕ್ರಿಯಾಶಕ್ತಿ ಸುಪ್ತ ಚೇತನದ ಒತ್ತಡಗಳು ಜಾಗೃದವಸ್ಥೆಗೆ ಬರದಂತೆ ತಡೆ ಹಿಡಿದಿರುತ್ತದೆ. ಈ ದ್ವಾರಪಾಲಕನ ಶಕ್ತಿ ನಿದ್ದೆಯಲ್ಲಿ ಕುಂದುತ್ತದೆ. ಆಗ ಆಸೆ ಒತ್ತಡಗಳು ವೇಷ ಮರೆಸಿಕೊಂಡು ಒಂದು ಮಟ್ಟದ ಪ್ರಜ್ಞೆಗೆ ಏರಿ ಸಾಂಕೇತಿಕ ಅಭಿವ್ಯಕ್ತಿಯನ್ನು, ತೃಪ್ತಿಯನ್ನು ಪಡೆಯುತ್ತವೆ, ಇವು ಕನಸುಗಳ ವಿಧಾನಗಳು, ಸುಷ್ಯ ಚೇತನದ ಒತ್ತಡಗಳು ಅತಿ ತೀವ್ರವಾಗಿ, ದ್ವಾರಪಾಲಕನ ಶಕ್ತಿ ಕುಂದಿ, ವ್ಯಕ್ತಿ ಜಾಗೃತನಾಗಿದ್ದಾಗಲೇ ಅವು ವೇಷ ಮರೆಸಿಕೊಂಡು ಪ್ರಜ್ಞಾವಸ್ಥೆಗೆ ತೂರುವ ಆಸೆಗಳೇ ಮನೋರೋಗದ ಚಿಹ್ನೆಗಳು, ಬಾಲ್ಯಾವಸ್ಥೆಯ ಲೈಂಗಿಕ ಒತ್ತಡಗಳು ದಮನಕ್ಕೀಡಾಗುವುದು ಸಮಾಜದ, ಅದರ ಪ್ರತಿನಿಧಿ ತಂದೆಯ ಕಾರ್ಯಾಚರಣೆಯಿಂದ.

ಸಾಹಿತ್ಯಾಭ್ಯಾಸಕ್ಕೆ ಅವಶ್ಯವಾದ ಪ್ರಾಯನ ಇನ್ನೊಂದು ಕಲ್ಪನೆಯೆಂದರೆ ಈಡಿಪಸ್ ಕಾಂಪ್ಲೆಕ್ಸ್. ಇದು ಅನೇಕರು ಭಾವಿಸುವಂತೆ ಎಲ್ಲ ಸಮಯದಲ್ಲೂ ರೋಗ ಚಿಹ್ನೆ ಅಲ್ಲ, ಬದಲು ಇದು ಎಲ್ಲ ಮಾನವರಿಗೂ ಸರ್ವಸಾಮಾನ್ಯವಾದ ಬಾಲ್ಯಾವಸ್ಥೆಯಲ್ಲಿಯ ಒಂದು ಹಂತ. ಲೈಂಗಿಕ ಬೆಳವಣಿಗೆ ಸುಸೂತ್ರವಾಗಿ ಸಾಗದೆ (ಅನೇಕ ಕಾರಣಗಳಿಂದ) ಭಾವ ಸಮುದಾಯಗಳು ಗೋಜಲಾಗಿ ಮನೋವಿಕೃತಿಗಳು ಉಂಟಾಗಬಹುದು, ಆದರೆ ಸಾಮಾನ್ಯವಾಗಿ ಇದು ಸುಲಲಿತವಾಗಿ ಮುಂದಿನ ಬೆಳವಣಿಗೆಗೆ ಹಾದಿ ಮಾಡಿಕೊಡುತ್ತದೆ, ಈಡಿಪಸ್ ಕಾಂಪ್ಲೆಕ್ಸಿನ ಮುಖ್ಯ ಅಂಶಗಳು ಇಷ್ಟು : ಕಾಮು ಎಂಬುದು ತಾರುಣ್ಯದ ಹೊತ್ತಿಗೆ ಮಾತ್ರ ತಲೆ ದೋರುವ ಪ್ರವೃತ್ತಿ ಅಲ್ಲ. ಅಲ್ಲದೆ ಕಾಮವೆಂಬುದು ಬೆಳೆದ ಹೆಣ್ಣು ಗಂಡುಗಳ ಲೈಂಗಿಕ ಸಂಬಂಧ ಮಾತ್ರವಲ್ಲ. (ಜೀವದ ರಕ್ಷಣೆ, ಬೆಳವಣಿಗೆ, ಅಭಿವೃದ್ಧಿ, ಸುಖ, ಸಂತೋಷ, ಕಲ್ಯಾಣಕ್ಕೆ ಅನುವಾಗುವ ಏನೆಲ್ಲ ಚಟುವಟಿಕೆಯನ್ನೂ ಫ್ರಾಯ್ಡ್‌ ಕಾಮವೆಂಬ ಕಲ್ಪನೆಗೆ ಒಗ್ಗಿಸುತ್ತಾನೆ). ಈ ವಿಷಯದಲ್ಲಿ ಮುಗ್ಧರೆಂದು ನಾವು ಪರಿಗಣಿಸುವ ಮಕ್ಕಳು (ಸುಪ್ತ ಚೇತನದ ದೃಷ್ಟಿಯಿಂದ) ನಿಜವಾಗಿ ಮುಗ್ಧರಲ್ಲ. ಕಾಮ ಎಂಬುದು ಹುಟ್ಟಿದಂದಿನಿಂದ ಪ್ರಾರಂಭವಾಗಿ ಬೇರೆ ಬೇರೆ ಚಟುವಟಿಕೆಗಳಲ್ಲಿ ಅಭಿವ್ಯಕ್ಷವಾಗಿ ಬೇರೆ ಬೇರೆ ಹಂತಗಳನ್ನು ದಾಟಿ ಅನೇಕ ವಿಧವಿಧವಾದ ರೂಪ ಸ್ವರೂಪಗಳನ್ನು ಪಡೆದು ಜೀವದ ಒಟ್ಟು ಅಭಿವೃದ್ಧಿಗೆ ಕಾರಣವಾಗುವ ಒಂದು ಪ್ರವೃತ್ತಿ, ಜೀವಶಕ್ತಿ, ಈಡಿಪಸ್ ಕಾಂಪ್ಲೆಕ್ಸ್ ಎಂಬುದು ಬೆಳವಣಿಗೆಯ ಈ ಹಂತಗಳ ಪೈಕಿ ಒಂದು. ಈ ಹಂತದಲ್ಲಿ, ಅವಸ್ಥೆಯಲ್ಲಿ ಐದಾರು ವರ್ಷಕ್ಕೂ ಚಿಕ್ಕ ಗಂಡು ಮಗುವಿಗೆ ತಂದೆಯನ್ನು ದೂರ ತಳ್ಳಿ, ಅವನ ಸ್ಥಾನವನ್ನು ಆಕ್ರಮಿಸಿ ತಾಯಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಯಿಸುವ ಬಯಕೆ ತುಂಬಾ ಪ್ರಬಲವಾಗಿರುತ್ತದೆ. ಅದೇ ವೇಳೆ ಈ ತನ್ನ ಆಸೆ ತೀರ ತಪ್ಪೆಂಬುದು ಗೊತ್ತಿದ್ದು ಇದರ ಬಗ್ಗೆ ತಂದೆಗೆ ಗೊತ್ತಾದರೆ ತನ್ನನ್ನು ನಪುಂಸಕನನ್ನಾಗಿ ಮಾಡುವಂತಹ ತೀವ್ರವಾದ ಶಿಕ್ಷೆಗೆ ಗುರಿಪಡಿಸಬಹುದೆಂದು ಅಪಾರವಾಗಿ ಮಗು ಭಯ ಪಡುತ್ತದೆ. ಈ ಭಯ, ತಂದೆತಾಯಿಗಳು ಪೋಷಿಸುತ್ತಿರುವ ಸಾಮಾಜಿಕ ಪ್ರಜ್ಞೆ ಆಸೆಯನ್ನು ಹತ್ತಿಕ್ಕುತ್ತದೆ. ಸುಪ್ತ ಚೇತನದೊಳಕ್ಕೆ ತಳ್ಳಲ್ಪಡುತ್ತದೆ. ಈ ಬಯಕೆ, ಕ್ರಮೇಣ ತಾನು ತಂದೆಯ ಹಾಗೆ ಬೆಳೆಯಬೇಕೆನ್ನುವ ಪ್ರವೃತ್ತಿಗೆ ಎಡೆಮಾಡಿಕೊಡುವುದರಿಂದ ಮಗುವಿನ ಮುಂದಿನ ಬೆಳವಣಿಗೆ ಸುಗಮವಾಗುತ್ತದೆ, (ಅದೇ ತರದ ವಿರುದ್ಧ ಪ್ರವೃತ್ತಿಯನ್ನು ಫ್ರಾನ್ಸ್ ಹೆಣ್ಣು ಮಕ್ಕಳಲ್ಲಿ ಗುರುತಿಸುತ್ತಾನೆ.) ಹೀಗೆ ಈಡಿಪಸ್ ಕಾಂಪ್ಲೆಕ್ಸ್‌ ಎಲ್ಲರ ಬೆಳವಣಿಗೆಯಲ್ಲೂ ಕಂಡು ಬಂದು ಸುಗಮವಾಗಿ ಬಗೆ ಹರಿದು (ಹತ್ತಿಕ್ಕಲ್ಪಟ್ಟು) ಹೋಗುತ್ತದೆ. ಆದರೆ ಕೆಲವು ವ್ಯಕ್ತಿಗಳಲ್ಲಿ ಇದು ಇಷ್ಟು ಸುಲಭವಾಗಿ ಬಗೆಹರಿಯದೆ ಮಾನಸಿಕ ತೊಂದರೆಗಳು ಉಂಟಾಗುತ್ತವೆ.

ಫ್ರಾಯ್ಡ್‌ನ. ಪ್ರಕಾರ ಸಾಹಿತ್ಯಕ್ರಿಯೆ ಒಂದು ತೀರ ವೈಯಕ್ತಿಕ ಚಟುವಟಿಕೆ. ಮುಖ್ಯವಾಗಿ ಸಾಹಿತ್ಯಕ್ರಿಯೆ ಬಯಕೆಗಳು ಸಾಂಕೇತಿಕವಾಗಿ ತೃಪ್ತಿ ಪಡೆಯುವ ವಿಧಾನಗಳು. ಹಲವು ಸನ್ನಿವೇಶಗಳಲ್ಲಿ ಇದು ಈಡಿಪಸ್‌ ಬಯಕೆಯಾಗಿರುತ್ತದೆ. ಸಂಕ್ಷಿಪ್ತವಾಗಿ ಇದಿಷ್ಟು ಫ್ರಾಯ್ಡನ ತೀರ್ಮಾನ.

ಅತಿ ಪ್ರಮುಖವೂ ಮೂಲಭೂತವೂ ಆದ ಕೆಲವೊಂದು ಅನುಭವಗಳನ್ನು ವ್ಯಕ್ತಿ ದೊಡ್ಡವನಾದಮೇಲೆ ಕಾವ್ಯಕ್ರಿಯೆಯಲ್ಲಿ ಪುನರ್ ಪರಿಶೀಲಿಸಬಹುದು. ಈ ಅನುಭವಗಳು ಸಾಮಾನ್ಯವಾಗಿ ಬಾಲ್ಯಾವಸ್ಥೆಯವು ; ಎಲ್ಲ ಸಮಯದಲ್ಲೂ ಅತೃಪ್ತ ಬಯಕೆಗಳು ; ಅನೇಕ ವೇಳೆ ಅತೃಪ್ತ ಲೈಂಗಿಕ ಬಯಕೆಗಳು, ಈಡಿಪಸ್ ಒತ್ತಡಗಳು. ಸಾಹಿತ್ಯ ಕ್ರಿಯೆಗೂ ಮಕ್ಕಳ ಆಟಗಳಿಗೂ ಫ್ರಾಯ್ಡ್‌ ಸಾಮ್ಯವನ್ನು ಗುರುತಿಸುತ್ತಾನೆ. ಆಟದಲ್ಲಿ ಮಕ್ಕಳು ಸನ್ನಿವೇಶಗಳನ್ನು ಸೃಷ್ಟಿಸಿ, ಚಟುವಟಿಕೆಗಳನ್ನು ನಡೆಸಿ ತೃಪ್ತಿ ಪಡೆಯುತ್ತಾರೆ. ಈ ಆಟಗಳಲ್ಲಿ ಮಕ್ಕಳು ತಮ್ಮ ಅನೇಕ ಆಸೆಗಳನ್ನು, ಮುಖ್ಯವಾಗಿ ಬೆಳೆದು ದೊಡ್ಡವರಾಗಬೇಕೆಂಬುದನ್ನು ವ್ಯಕ್ತಪಡಿಸುತ್ತಾರೆ. ಆಟದಲ್ಲಿ ಆ ಬಯಕೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಹಾಗೆಯೇ ಕಾವ್ಯಕ್ರಿಯೆಯಲ್ಲಿ ಕೂಡ, ವ್ಯಕ್ತವಾಗುವುದು ಅತೃಪ್ತ ಆಸೆಗಳು. ಬರಹ ಆಟದಂತೆ. ಕವಿ ತಾನು ಸೃಷ್ಟಿಸಿದ ಪ್ರಪಂಚದ ಬಗ್ಗೆ ಬಲು ಗಂಭೀರವಾಗಿ ವರ್ತಿಸುತ್ತಾನೆ, ಏಕೆಂದರೆ ಅವು ತನ್ನ ಮೂಲಭೂತ ಅನುಭವಗಳ ಅಂಶಗಳು. ಎಲ್ಲ ಬರಹಗಳಲ್ಲಿ ನಾಯಕನೆನಿಸಿಕೊಂಡವನು ನಿಜವಾಗಿ ನಾಯಕನ ಅಹಂ. ಹಾಗೆಯೇ ಎಲ್ಲ ಹಗಲುಗನಸುಗಳಲ್ಲಿ ಊಹಾನುಭವಗಳಲ್ಲಿ ಕೂಡ, ಕವಿಯ ಯಾವುದೋ ಒಂದು ವಾಸ್ತವಿಕ ಅನುಭವ ಬಾಲ್ಯಾವಸ್ಥೆಯ ಅನುಭವವೊಂದರ ನೆನಪನ್ನು ಜಾಗೃತಗೊಳಿಸುವುದರ ಮೂಲಕ ಬಯಕೆಯೊಂದನ್ನು ಕೆರಳಿಸುತ್ತದೆ. ಕವಿ ಆಗ ಸೃಷ್ಟಿಸುವ ಬರಹದಲ್ಲಿ ಆ ಆಸೆ ಕಾಲ್ಪನಿಕ ತೃಪ್ತಿಯನ್ನು ಪಡೆಯುತ್ತದೆ. ಒಟ್ಟಿನಲ್ಲಿ ಸೃಷ್ಟ್ಯಾತ್ಮಕ ಬರಹಗಳು ಹಗಲುಗನಸುಗಳಂತೆ ಬಾಲ್ಯದ ಆಟಗಳ ಇನ್ನೊಂದು ಸ್ವರೂಪ. ಇವೆಲ್ಲದರ ಮೂಲ ಚೇತನ ಬಯಕೆಗಳು.

ಇನ್ನು ಕೆಲವು ಬರಹಗಳಲ್ಲಿ ಫ್ರಾಯ್ಡ್‌ ಈ ಬಯಕೆ ಮೂಲತಃ ಈಡಿಪಸ್ ಸ್ವರೂಪದ್ದೆಂದು ಹೇಳುತ್ತಾನೆ. ಇದಕ್ಕೆ ಉದಾಹರಣೆಯಾಗಿ ವಿಶ್ವದ ಮಹಾ ಕೃತಿಗಳಾದ ಸೊಫೋಕ್ಲೀಸನ ಈಡಿಪಸ್ ರೆಕ್ಸ್, ಷೇಕ್ಸ್‌ಪಿಯರನ ಹ್ಯಾಮ್ಲೆಟ್, ಮತ್ತು ದಾಯ್‌ಸ್ತೋವ್‌ಸ್ಕಿಯ ಬ್ರದರ್ಸ್ ಕರಮರೋವ್- ಈ ಕೃತಿಗಳನ್ನು ಸೂಚಿಸುತ್ತಾನೆ, ಫ್ರಾಯ್ಡ್‌‌ನ ಪ್ರಕಾರ ಈ ಮೂರರ ಮೂಲಭೂತ ವಸ್ತು ಪಿತೃವಧೆ. ಮನುಕುಲಕ್ಕೇ ಸರ್ವ ಸಾಮಾನ್ಯವಾದ ಈ ಪಿತೃವಧೆ ನೇರವಾಗಿ ವ್ಯಕ್ತ ವಾಗಿರುವುದು ಸೊಫೋಸನ ಗ್ರೀಕ್ ನಾಟಕದಲ್ಲಿ, ಇಂಗ್ಲಿಷ್ (ಹ್ಯಾಮೈಟ್) ನಾಟಕದಲ್ಲಿ ಇದು ನೇರವಾಗಿ ವ್ಯಕ್ತವಾಗಿಲ್ಲ. ನಾಯಕನೇ ಪಿತೃವಧೆ ಮಾಡದಿದ್ದರೂ ಅಂತಹ ಕೊಲೆ ನಡೆದಾಗ ನಾಯಕ ಪ್ರದರ್ಶಿಸಿದ ಭಾವನೆಗಳು ಪ್ರತಿಕ್ರಿಯೆಗಳು ಅಂತಹ ಆಸೆಯೊಂದನ್ನು ಸೂಚಿಸುತ್ತವೆಂದು ಫ್ರಾಯ್ಡ್‌ನ ವಾದ. ರಷ್ಯನ್ ಕಾದಂಬರಿಯಲ್ಲಿ ಕೂಡ ಪಿತೃವಧೆಯನ್ನು ನಾಯಕ ಮಾಡುವುದಿಲ್ಲ, ಆದರೆ ಆತನ ಸೋದರ ಮಾಡುತ್ತಾನೆ. ಇಲ್ಲಿ ಗಮನಿಸಬೇಕಾದ್ದೆಂದರೆ ದಾಯ್‌ಸ್ತೋವ್‌ಸ್ಕಿ ತನ್ನ ಮೂರ್ಛೆರೋಗವನ್ನು ಆ ಕೊಲೆಪಾತಕಿಯಲ್ಲೂ ಚಿತ್ರಿಸಿದ್ದಾನೆ. ಅಲ್ಲದೆ ಲೇಖಕ ಕೊಲೆಪಾತಕಿಯ ಬಗ್ಗೆ ಅಪಾರ ಅನುಕಂಪ, ಸಹಾನುಭೂತಿಯನ್ನು ತೋರುತ್ತಾನೆ. ಫ್ರಾಯ್ಡನ ಪ್ರಕಾರ ಈ ಸಹಾನುಭೂತಿಯ ಅರ್ಥ ಲೇಖಕ ತನ್ನನ್ನೇ ಕೊಲೆಪಾತಕಿಯಲ್ಲಿ ಕಂಡಿದ್ದಾನೆ ಎನ್ನುವುದು. ಅಂದರೆ ಬ್ರದರ್ಸ್ ಕರನುರೋಪ್‌ನಲ್ಲಿ ಲೇಖಕನ ಪಿತೃವಧೆಯ ಬಯಕೆ, ಅಥವಾ ಬಗೆಹರಿಯದ ಈಡಿಪಸ್ ಕಾಂಪ್ಲೆಕ್ಸ್, ವ್ಯಕ್ತವಾಗಿದೆ. ದಾಯ್‌ಸ್ತೋವ್‌ಸ್ಕಿ ಮೊದಲು ಸಾಮಾನ್ಯವಾದ ಕೊಲೆಪಾತಕಿಯನ್ನು ಚಿತ್ರಿಸಿದವನು (ಕ್ರೈಮ್ ಎಂಡ್ ಪನಿಶ್ಮೆಂಟ್) ತನ್ನ ಜೀವನದ ಕೊನೆಯಲ್ಲಿ ಮನುಷ್ಯ ಕುಲಕ್ಕೆ ಹಾಗೂ ತನಗೆ ಮೂಲಭೂತವಾದ ಪಾಪಕ್ಕೆ-ಪಿತೃವಧೆಗೆ-ಮರಳಿ ಕಲಾಕೃತಿಯೊಂದರಲ್ಲಿ ತನ್ನ ಅಪರಾಧವನ್ನು ನಿವೇದಿಸಿಕೊಂಡಿದ್ದಾನೆ.

ಈ ರೀತಿ ದಾಯ್‌ಸ್ತೋವ್‌ಸ್ಕಿಯಲ್ಲಿ ಬಾಲ್ಯಾವಸ್ಥೆಯ ಈಡಿಪಸ್‌ ಬಯಕೆ ಆ ಮೇಲಿನ ಅವನ ಬಲು ಮುಖ್ಯ ಸಾಹಿತ್ಯ ಕೃತಿಗಳ ಕಾರಣಾನುಭವವಾಗುತ್ತದೆ. ದಾಯ್‌ಸ್ತೋವ್‌ಸ್ಕಿಯ ಜೀವನ ಚರಿತ್ರೆಯಿಂದ ಕೆಲವು ಅಂಶಗಳನ್ನು ಆಯ್ದುಕೊಂಡು ಫ್ರಾಯ್ಡ್‌ ತನ್ನ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಜೀವನ ಚರಿತ್ರೆಯ ವಾಸ್ತವಾಂಶಗಳು ಇಷ್ಟು : ದಾಯ್‌ಸ್ತೋವ್‌ಸ್ಕಿಗೆ ಮೂರ್ಛೆ ರೋಗವಿತ್ತು. ದಾಯ್‌ಸ್ಟೋವ್‌ಸ್ಕಿ ಮತ್ತು ಅವನ ತಂದೆಯ ಸಂಬಂಧ ಹಿತಕರವಾಗಿರಲಿಲ್ಲ. ಆತ ತಂದೆಯನ್ನು ವಿಪರೀತವಾಗಿ ದ್ವೇಷಿಸುತ್ತಿದ್ದ, ಫ್ರಾಯ್ಡ್‌ ದಾಯ್‌ಸ್ಟೋವ್‌ಸ್ಕಿಯ ಮೂರ್ಛೆರೋಗ ಮನೋರೋಗವೆಂದು ವಾದಿಸುತ್ತಾನೆ. ಮೂರ್ಛೆರೋಗವು ಮಾನಸಿಕ ಅಥವಾ ದೈಹಿಕ ಕಾರಣಗಳಿಂದ ಉಂಟಾಗಬಹುದು. ಇದರ ಮೂಲ ಫ್ರಾನ್ಸ್ ಹೇಳುವಂತೆ ಅತೃಪ್ತ ಬಯಕೆ ಇರಬಹುದು. ಇತ್ತೀಚಿನ ಮನೋವಿಜ್ಞಾನಿಗಳು ಹೇಳುವಂತೆ ಅನುಪಯುಕ್ತ ಅಭ್ಯಾಸವೊಂದರ ಕಲಿಕೆ ಇರಬಹುದು. ಇವು ಮಾನಸಿಕ, ಅಥವಾ ಅದರ ಮೂಲ ಮೆದುಳಿನ ಜೀವಕಣಗಳಿಗೆ ತಗುಲಿದ ಪೆಟ್ಟು. ಘಾಯ ಆಗಬಹುದು. ಇದು ದೈಹಿಕ. ಸಾಮಾನ್ಯ ‘ದೃಷ್ಟಿಗೆ ಈ ಎರಡು ವಿಧವಾದ ರೋಗಗಳೂ ಒಂದೇ ತರ ಕಂಡರೂ ಅವುಗಳ ಅಭಿವ್ಯಕ್ತಿಗಳಲ್ಲಿ ವ್ಯತ್ಯಾಸವಿದೆ. ಫ್ರಾಯ್ಡ್‌ನ ಪ್ರಕಾರ ದಾಯ್‌ಸ್ಟೋವ್‌ಸ್ಕಿಯದು ಮನೋರೋಗ (ಹಿಸ್ಟೀರಿಯಾ). ಈ ರೋಗದ ಮೂಲಕಾರಣ (ಫ್ರಾಯ್ಡ್‌ನ ಪ್ರಕಾರ) ತಂದೆಯನ್ನು ಕೊಂದು ತಾಯಿಯನ್ನು ಸಂಭೋಗಿಸುವ ಬಯಕೆ. ಅಂತಹ ಬಯಕೆ ಅನೀತಿಕರವಾದ್ದರಿಂದ ಭಯ; ಇಂತಹ ಕೆಟ್ಟ ಬಯಕೆಯುಳ್ಳ ತಾನು ಕಠಿಣವಾದ ಶಿಕ್ಷೆಗೆ ಅರ್ಹನೆಂಬ ಪಾಪ ಮನೋಭಾವ. ಅವನು ಅನುಭವಿಸಿದ ಭಯಂಕರ ರೋಗ ತನ್ನನ್ನೇ ತಾನು ಶಿಕ್ಷಿಸಿಕೊಂಡ ವಿಧಾನ. ದಾಯ್‌ಸ್ಟೋವ್‌ಸ್ಕಿ ತಂದೆಯನ್ನು ದ್ವೇಷಿಸುತ್ತಿದ್ದುದು ಈಡಿಪಸ್ ಕಾಂಪ್ಲೆಕ್ಸಿನ ತೊಂದರೆಗಳಿಗೆ ಇನ್ನೊಂದು ಸಾಕ್ಷಿ. ಅಲ್ಲದೇ ದಾಯ್‌ಸ್ಟೋವ್‌ಸ್ಕಿ ಜೂಜಾಡುತ್ತಿದ್ದುದು ಕೂಡ ತನ್ನನ್ನು ತಾನು ಶಿಕ್ಷಿಸಿಕೊಳ್ಳುತ್ತಿದ್ದ ವಿಧಾನ. ಪ್ರತಿಸಾರಿಯೂ ಇದ್ದ ಹಣವನ್ನೆಲ್ಲ ಜೂಜಿನಲ್ಲಿ ಕಳೆದುಕೊಂಡು ಊಟ ಬಟ್ಟೆಗಿಲ್ಲದೆ ಮನೆಗೆ ಬಂದು ಹೆಂಡತಿಯೆದರು ತನ್ನನ್ನು ಹಳಿದುಕೊಳ್ಳುತ್ತಾ ಆಕೆಯೂ ತನ್ನನ್ನು ಹೀಯಾಳಿಸುವಂತೆ ಪ್ರೇರೇಪಿಸುತ್ತಿದ್ದುದು ಕೂಡ ತಾನು ಶಿಕ್ಷಾರ್ಹ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತದೆ.
ಫ್ರಾನ್ಸ್ ತನ್ನ ಅಭಿಪ್ರಾಯಗಳಿಗೆ ಉದಾಹರಣೆಯಾಗಿ ಇನ್ನು ಕೆಲವು ಕೃತಿಗಳನ್ನು ಸೂಚಿಸುತ್ತಾನೆ. ಷೇಕ್ಸ್‌ಪಿಯರ್‌ನ ಮರ್ಚೆಂಟ್ ಆಫ್ ವೆನಿಸ್‌ನಲ್ಲಿ ನಾಯಕ ಸೀಸದ ಪೆಟ್ಟಿಗೆಯನ್ನು ಆರಿಸುವುದು, ತನ್ಮೂಲಕ ನಾಯಕಿಯನ್ನು ಗೆಲ್ಲುವುದು ಕವಿಯ (ಹಾಗೇ ಎಲ್ಲ ಮಾನವರ) ಸಾವನ್ನು ಗೆಲ್ಲಬೇಕೆಂಬ ಬಯಕೆಯ ಸಾಂಕೇತಿಕ ಅಭಿವ್ಯಕ್ತಿ. ಈ ನಾಟಕದ ನಾಯಕಿಯ ಪ್ರಶಾಂತ ಗಂಭೀರ ಸ್ವರೂಪ ಸಾವಿನ ಸಂಕೇತವೆಂದು ಫ್ರಾಯ್ಡ್‌ ವಾದಿಸುತ್ತಾನೆ, ಹಾಗೆಯೇ ಸೀಸವೂ ಕೂಡ. ಫ್ರಾಯ್ಡ್‌ ಆದ ಮೇಲೆ ಅವನ ಇತರ ಅನುಯಾಯಿಗಳು ಫ್ರಾಯ್ಡ್‌ನ “ಸಿದ್ಧಾಂತ” ದ ಪ್ರಕಾರ ಇನ್ನಿತರ ಕೆಲವು ಕೃತಿಗಳನ್ನು ವಿಶ್ಲೇಷಿಸಿದ್ದಾರೆ. ಕಾಫ್ಕನ ಬರಹಗಳು ಈಡಿಪಸ್‌ ಬಯಕೆಯನ್ನೂ ಅದರ ಪರಿಣಾಮಗಳನ್ನೂ ಸೂಚಿಸುತ್ತವೆ. ಕಾಫ್ಕ ತನ್ನ ತಂದೆಗೆ ಬರೆದಿದ್ದ ದೊಡ್ಡ ಪತ್ರವೊಂದರಲ್ಲಿ “ನನ್ನೆಲ್ಲ ಬರಹವೂ ನಿನ್ನ ಬಗ್ಗೆ, ನಿನ್ನೊಡನೆ ನಾನು ಪಟ್ಟ ದುಃಖದ ಬಗ್ಗೆ”-ಎಂದು ಹೇಳಿದ್ದಾನೆ. ಜೀವನದುದ್ದಕ್ಕೂ ಕಾಫ್ಕ ತನ್ನ ತಂದೆಯೊಡನೆ ಹೋರಾಡಿದ. ಅಲ್ಲದೆ ಕಾಫ್ಕ ತನ್ನೆಲ್ಲ ಕೃತಿಗಳನ್ನೂ ಒಟ್ಟುಗೂಡಿಸಿ ಅದಕ್ಕೆ “ತಂದೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ” ಎಂಬ ಹೆಸರು ಕೊಡಬೇಕೆಂದು ಯೋಚಿಸಿದ್ದನಂತೆ ! ಫ್ರಾಯ್ಡ್‌ನ ಮನೋವಿಶ್ಲೇಷಣೆಯ ಸೂತ್ರಗಳ ಪ್ರಕಾರ ಈ ದ್ವೇಷಕ್ಕೆ ಕಾರಣ ಕಾಫ್ಕನ ಈಡಿಪಸ್ ಕಾಂಪ್ಲೆಕ್ಸ್, ಹೀಗೆ ಮನೋವಿಶ್ಲೇಷಣೆಯ ಸೂತ್ರಗಳನ್ನು ಜಾಯ್ಸ್‌ನ, ಲಾರೆನ್ಸ್ನ ಕೃತಿಗಳಿಗೂ ಅನ್ವಯಿಸಲಾಗಿದೆ. ಈ ಪಟ್ಟಿಯನ್ನು ಎಷ್ಟೂ ಮುಂದುವರಿಸಬಹುದು.

ಸಾಹಿತ್ಯಕ್ಕೆ ಮಾತ್ರವಲ್ಲದೆ, ಫ್ರಾಯ್ಡ್‌ ನನ್ನ “ಸಿದ್ಧಾಂತ” ವನ್ನು ಎಲ್ಲ ವಿಧವಾದ ಸೃಷ್ಟ್ಯಾತ್ಮಕ ಬರಹಗಳಿಗೂ ಅನ್ವಯಿಸುತ್ತಾನೆ. ಚಿತ್ರಕಲೆ, ಶಿಲ್ಪಕಲೆ, ನಾಟ್ಯ ಯಾವುದೂ ಇದಕ್ಕೆ ಹೊರತಾಗಿಲ್ಲ. ಲಿಯನಾರ್ಡೊ ಡಾ ವಿನ್ಸಿಯ ಚಿತ್ರಕಲೆಯ ಮೂಲವನ್ನು ಈಡಿಪಸ್ ಕಾಂಪ್ಲೆಕ್ಸ್‌ನಲ್ಲಿ ಕಾಣುತ್ತಾನೆ. ಇವುಗಳನ್ನೆಲ್ಲ ಪರಿಶೀಲಿಸುವುದು ಅವಶ್ಯವಾದರೂ ಇಲ್ಲಿ ಅವಕಾಶವಿಲ್ಲ.

ಒಟ್ಟಿನಲ್ಲಿ ಪ್ರಾಯ್ಡ್‌ನ ವಿಚಾರಗಳ ಸಾರಾಂಶ : ಸೃಷ್ಟ್ಯಾತ್ಮಕ ಬರಹಗಳು, ಕೃತಿಗಳು ಹಗಲುಗನಸಿನಂತೆ. ಅವು ಮೂಲತಃ ಮನುಷ್ಯನ ಬಯಕೆಯ ಅಭಿವ್ಯಕ್ತಿಗಳು. ಒಂದು ಕೃತಿಯಲ್ಲಿ ಯಾವುದೋ ಒಂದು ಬಾಲ್ಯಾವಸ್ಥೆಯ ಬಯಕೆಯ ಸಾಂಕೇತಿಕ ತೃಪ್ತಿಯನ್ನು ನಾವು ಕಾಣಬಹುದಾದರೂ, ಅನೇಕ ಸಾರಿ ಇದು ಈಡಿಪಸ್ ಕಾಂಪ್ಲೆಕ್ಸ್ ಆಗಿರುತ್ತದೆ. ವಿಶ್ವದ ಮಹಾಕಲಾಕೃತಿಗಳಲ್ಲಿ ಮನುಷ್ಯನ ಈ ಮೂಲಭೂತ ಅನುಭವವನ್ನು ಗುರುತಿಸಬೇಕು. ಅನೇಕ ವೇಳೆ ಈ ಅಭಿವ್ಯಕ್ತಿಗಳು ಮಾನಸಿಕ ಅಸ್ವಾಸ್ಥ್ಯತೆಯ ಚಿಹ್ನೆ. ಈ ಎಲ್ಲ ವಿಚಾರಗಳನ್ನೂ ಯೂಂಗ್ ತಿರಸ್ಕರಿಸುತ್ತಾನೆ. ಯೂಂಗ್‌ನ ಪ್ರಕಾರ ಸಾಹಿತ್ಯ ವೈಯಕ್ತಿಕ ಅನುಭವದ ಅಭಿವ್ಯಕ್ತಿಯೇ ಅಲ್ಲ: ಬಯಕೆಯ ಪ್ರಶ್ನೆಯೇ ಇಲ್ಲ; ಲೈಂಗಿಕವಂತೂ ಖಂಡಿತ ಅಲ್ಲ, ಸಾಹಿತ್ಯ ಮಾನವ ಜನಾಂಗ ಅನುಭವಿಸಿದ ಎಲ್ಲಾ ಅನುಭವಗಳ ಸಾರದ ಅಭಿವ್ಯಕ್ತಿ. ಒಂದು ಕಾಲದ ಜನತೆಗೊಂದಲಗೆಟ್ಟಾಗ ಸಾಮೂಹಿಕ ಸುಪ್ತಚೇತನದ ಈ ಅನುಭವಗಳು ಜಾಗೃತವಾಗಿ ಕಾವ್ಯದಲ್ಲಿ ಅಭಿವ್ಯಕ್ತಿವಾಗಿ ಆ ಕಾಲದ ಜನರ ಮಾನಸಿಕ ಸಮತೋಲವನ್ನು ಪುನಃಸ್ಥಾಪಿಸುತ್ತವೆ.

ವಿಮರ್ಶೆ

ಯೂಂಗ್‌ ಮತ್ತು ಫ್ರಾಯ್ಡ್‌ರ ಕಲ್ಪನೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವಾಗ ಅವರು ಹೇಳಿದ್ದು ಸರಿಯೇ ತಪ್ಪೇ ಎಂಬುದಕ್ಕಿಂತ ಮುಖ್ಯವಾದ ಪ್ರಶ್ನೆ ಅವರು ಅಂತಹ ತೀರ್ಮಾನಗಳಿಗೆ ಹೇಗೆ ಬಂದರು ಎಂಬುದೇ. ಈ ವಿಷಯವಾಗಿ ಕೆಲವು ಮಾತುಗಳನ್ನು ಇಬ್ಬರಿಗೂ ಅನ್ವಯವಾಗುವಂತೆ ಹೇಳಬಹುದು ಈಗಿನ ಮನೋ ವಿಜ್ಞಾನಿಗಳು ಕಟುವಾಗಿ ಟೀಕಿಸುವುದು ಫ್ರಾಯ್ಡ್‌ ಮತ್ತು ಯೂಂಗರು ತಮ್ಮ ತೀರ್ಮಾನಗಳಿಗೆ ಬಂದು ಮುಟ್ಟಿದ ಕ್ರಮ ಅಥವಾ ತಂತ್ರಗಳನ್ನು, ಇವರ ಮುಖ್ಯ ತಂತ್ರವಿಶ್ಲೇಷಣೆ. ಇದು ವೈಜ್ಞಾನಿಕ ಕ್ರಮಗಳಲ್ಲಿ ಒಂದೆಂಬುದು ನಿಜವೇ, ಆದರೆ ಅದೊಂದೇ ಆದರೆ ಅದರ ತೀರ್ಪುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಸಮಸ್ಯೆಯನ್ನು ವಿಶ್ಲೇಷಿಸಿ ನಾವು ಉತ್ತರಗಳನ್ನು ಊಹಿಸುತ್ತೇವೆ. ಈ ಪ್ರಶ್ನೆಗೆ ಈ ಉತ್ತರ ಇರಬಹುದೇ ಎಂದು ಅನುಮಾನಪಡುತ್ತೇವೆ. ಈ ಅನುಮಾನವನ್ನು ತಾತ್ಕಾಲಿಕ ಉತ್ತರವನ್ನು ಪ್ರಾಯೋಗಿಕವಾಗಿ ಸಿದ್ಧಪಡಿಸಬೇಕು. ಈ ಮುಖ್ಯ ಘಟ್ಟವನ್ನು ನಾವು ಫ್ರಾಯ್ಡ್‌ ಮತ್ತು ಯೂಂಗರಲ್ಲಿ ಕಾಣುವುದಿಲ್ಲ, ಅನುಮಾನಗಳನ್ನು ಸಿದ್ಧಾಂತಗಳೆಂದು ಮಂಡಿಸಿದರು. ವಿಜ್ಞಾನ ಒಪ್ಪಿಕೊಂಡ ವಿಧಾನಗಳ ಪ್ರಕಾರ ತಮ್ಮ ಉತ್ತರಗಳನ್ನು ಪರೀಕ್ಷೆಗೆ ಒಳಪಡಿಸಲಿಲ್ಲ. ಹಾಗಾಗಿ ಫ್ರಾಯ್ಡ್‌ ಮತ್ತು ಯೂಂಗರು ಪ್ರಾಯೋಗಿಕ ಮನೋವಿಜ್ಞಾನದ ಸಂಪ್ರದಾಯಕ್ಕೆ ಹೊರತಾಗಿದ್ದಾರೆ. ಇದೇ ಪ್ರಕಾರದ ಇನ್ನೊಂದು ಅಂಶವೆಂದರೆ ಫ್ರಾಯ್ಡ್‌ ಅಥವಾ ಯೂಂಗರ ಅನುಮಾನಗಳನೇಕವನ್ನು ಪರೀಕ್ಷೆಗೆ ಗುರಿಪಡಿಸುವುದೇ ಸಾಧ್ಯವಿಲ್ಲ. ಪ್ರಯೋಗ ಪದ್ಧತಿಗೆ ಒಗ್ಗದ ಇವರ ಹೇಳಿಕೆಗಳನ್ನು (ಈಡಿಪಸ್ ಕಾಂಪ್ಲೆಕ್ಸ್‌, ಸಾಮೂಹಿಕ ಸುಪ್ತ ಚೇತನ) ವೈಜ್ಞಾನಿಕವಾಗಿ ಸರಿಯೇ ತಪ್ಪೇ ಎಂದು ಪರೀಕ್ಷಿಸಿ ನೋಡುವುದೇ ಸಾಧ್ಯವಿಲ್ಲ. ವೈಜ್ಞಾನಿಕ ಪದ್ಧತಿಯ ಪ್ರಕಾರ ವಿಜ್ಞಾನಿ ಮಾಡುವ ಹೇಳಿಕೆಗಳು ಪ್ರಾಯೋಗಿಕ ಅಥವಾ ಇನ್ನಿತರ ಪರೀಕ್ಷೆಗೆ ಒಳಪಡುವ ಸಾಧ್ಯತೆಯನ್ನು ಪಡೆದಿರಬೇಕು. ಹೇಳಿಕೆಗಳು ನಿಜವಾಗಿಯೂ ತಪ್ಪಾಗಿದ್ದರೆ ಹಾಗೆಂದು ತೋರಿಸಲು ಸಾಧ್ಯವಿರಬೇಕು. ಆದರೆ ಈ ಇಬ್ಬರ ಹೇಳಿಕೆಗಳು ಈ ಸಾಧ್ಯತೆಯನ್ನು ಮೀರುತ್ತವೆ. ನಾಲ್ಕು ವರ್ಷದ ಮಗುವಿನ ಮನಸ್ಸಿನಲ್ಲಿ ಈಡಿಪಸ್‌ ಬಯಕೆ ಇದೆಯೋ ಇಲ್ಲವೋ ಎಂದು ತೀರ್ಮಾನಿಸುವುದು ಹೇಗೆ ? ಮಗುವಿನ ಮನಸ್ಸನ್ನು ಎಷ್ಟು ಪರಿಶೀಲಿಸಿದರೂ, ಅಭ್ಯಸಿಸಿದರೂ ಅದು ಗೊತ್ತಾಗುವುದಿಲ್ಲ ಫ್ರಾಯ್ಡನ ಪ್ರಕಾರ ಹೌದು, ಅದು ಗೊತ್ತಾಗುವುದಿಲ್ಲ ಏಕೆಂದರೆ ಅದು ದಮನಕ್ಕೆ ಈಡಾಗಿದೆ; ತುಂಬಾ ತೀಕ್ಷ್ಮವಾಗಿ ಪರಿಶೀಲಿಸಿದರೆ ಮಾತ್ರ ಗೊತ್ತಾಗಬಹುದು, ಆಗಲೂ ಗೊತ್ತಾಗದಿದ್ದರೆ ಮತ್ತೆ ಉತ್ತರ ಇದ್ದೇ ಇದೆ-ದಮನಕ್ಕೀಡಾದ ಭಾವ ಪ್ರಜ್ಞೆಗೇರದಂತೆ ಪ್ರತಿರೋಧವಿದೆ ! ಹೀಗೆ ಈ ಅನೇಕ ಹೇಳಿಕೆಗಳು ಪ್ರಯೋಗಕ್ಕೆ ಸಿಗುವುದಿಲ್ಲ, ಪ್ರಮಾಣಗಳಿಲ್ಲದಿದ್ದರೂ ಅದು ಇದ್ದೇ ಇದೆ, ಏಕೆಂದರೆ ಪ್ರಮಾಣ ಕೊಡದಿರುವುದೇ ಅದರ ಸ್ವರೂಪ !

ಎರಡನೆಯದಾಗಿ ಫ್ರಾಯ್ಡ್‌ ಮತ್ತು ಯೂಂಗ್ ತಮ್ಮ ಪರೀಕ್ಷೆಗೆ ಆಯ್ದುಕೊಂಡ ವಿಷಯಗಳು ಫ್ರಾಯ್ಡಂತೂ ತುಣುಕು ತುಣುಕಾಗಿ ಮೊರೆತ ಜೀವನ ಚರಿತ್ರೆಯ ಅಂಶಗಳನ್ನು ಆಧರಿಸಿದ. ಆಲ್ಲಿ ಇಲ್ಲಿ ಅವರಿವರು ಹೇಳಿ ಕೇಳಿದ ವಿಷಯಗಳು, ಅಸ್ಪಷ್ಟವಾದ ಅನಿರ್ದಿಷ್ಟವಾದ ಜೀವನ ಚರಿತ್ರೆಯ ಅಂಶಗಳನ್ನು ವಿಶ್ಲೇಷಿಸಿ ತೀರ್ಮಾನಕ್ಕೆ ಬರುವುದು ತಪ್ಪಾಗುತ್ತದೆ. ದಾಯ್‌ಸ್ತೋವ್‌ಸ್ಕಿ, ಲಿಯನಾರ್ಡೊ ಡಾ ವಿನ್ಸಿ-ಮೈಖೆಲೆಂಜಲೋ-ಇವರೆಲ್ಲರ ಬಗ್ಗೆ ಫ್ರಾಯ್ಡ್‌ ಮಾಡಿದ ವಿಶ್ಲೇಷಣೆ ಬಗ್ಗೆ ಈ ಆಕ್ಷೇಪವನ್ನು ಎತ್ತಬಹುದು. ಯೂಂಗ್ ಕವಿಯ ಬದುಕಿಗೂ ಅವನ ಕೃತಿಗೂ ಯಾವ ಗಮನವನ್ನೂ ಕೊಡಲಿಲ್ಲ. ಕೃತಿಗಳನ್ನು ಕೂಡ ಹೆಚ್ಚು ವಸ್ತು ನಿಷ್ಠವಾಗಿ ಪರಿಶೀಲಿಸಲಿಲ್ಲ. ಅನೇಕ ಕೃತಿಗಳನ್ನು ಉದಾಹರಿಸುತ್ತಾನೆಯೇ ಹೊರತು ಹೇಗೆ ಅವುಗಳಲ್ಲಿ ಸಾಮೂಹಿಕ ಸುಪ್ತಚೇತನ ವ್ಯಕ್ತವಾಗಿದೆ, ಇವುಗಳಿಗೆ ಏನಾದರೂ ಪ್ರಮಾಣಗಳಿವೆಯೇ ಎಂಬ ಬಗ್ಗೆ ಏನೂ ಹೇಳುವುದಿಲ್ಲ.

ಇವುಗಳಿಂದ ನಾವು ತಿಳಿಯುವುದೇನೆಂದರೆ ಫ್ರಾಯ್ಡ್‌ ಅಥವಾ ಯೂಂಗ್ ಸಾಹಿತ್ಯ ಕ್ರಿಯೆಯನ್ನು ವಸ್ತುನಿಷ್ಠವಾಗಿ ಅಭ್ಯಾಸಕ್ಕೆ ಒಂದು ಸಮಸ್ಯೆ-ಎಂದು ಎತ್ತಿಕೊಳ್ಳಲಿಲ್ಲ. ಬದಲಾಗಿ ಮನೋರೋಗಿಗಳ ಚಿಕಿತ್ಸೆಯ ಅನುಭವದಲ್ಲಿ ತಾವು (ಮತ್ತೆ ತಮ್ಮದೇ ಆದ ವಿಧಾನದಿಂದ) ಕಟ್ಟಿದ ಕಲ್ಪನೆಗಳನ್ನು ಮನುಷ್ಯನ ಇತರ ಎಲ್ಲ ಚಟುವಟಿಕೆಗಳಿಗೂ ಅನ್ವಯಿಸಿದರು. ತಮ್ಮ ಪೂರ್ವ ಕಲ್ಪಿತ “ಸಿದ್ಧಾಂತಗಳನ್ನು ಸಾಹಿತ್ಯಕ್ರಿಯೆಗೂ ವಿಸ್ತರಿಸಿದರು, ಸಾಹಿತ್ಯ, ಸಮಾಜ, ಸಂಸ್ಕೃತಿ-ಇವೆಲ್ಲಕ್ಕೂ ಈ ಕಲ್ಪನೆಗಳು ಅನ್ವಯವಾಗುವುದೆಂದು ತೋರಿಸುವುದರ ಮೂಲಕ ತಮ್ಮ ಮೂಲಭೂತ ಕಲ್ಪನೆಗಳಿಗೆ ಸಮರ್ಥನೆ ಸಿಕ್ಕಿತೆಂದು ಭಾವಿಸಿದರು.

ವೈಜ್ಞಾನಿಕವಾಗಿ ಫ್ರಾಯ್ಡ್‌ ಅಥವಾ ಯೂಂಗ್ ಕಾವ್ಯಕ್ರಿಯೆಗಳ ಬಗ್ಗೆ “ಸಿದ್ಧಾಂತ” ವನ್ನು ಕೊಟ್ಟೇ ಇಲ್ಲ. ಏಕೆಂದರೆ ಒಂದು ಘಟನೆಯ ವಿವರಣೆಯು ವೈಜ್ಞಾನಿಕ ಸಿದ್ಧಾಂತದ ಮಟ್ಟಕ್ಕೆ ಏರಬೇಕಾದರೆ ವೈಜ್ಞಾನಿಕ ಪ್ರಮಾಣಗಳಿರಬೇಕಲ್ಲದೆ, ಆ ವಿವರಣೆಯು ಆ ಘಟನೆಯ ಬಗ್ಗೆ ನಮಗೆ ಇದುವರೆಗೆ ಗೊತ್ತಾದ ಎಲ್ಲ ಅಂಶಗಳನ್ನೂ ಸಮರ್ಪಕವಾಗಿ ವಿವರಿಸಬೇಕು. ಹಾಗೆ ನೋಡಿದರೆ ಇವರ “ಸಿದ್ಧಾಂತಗಳು ಕಾವ್ಯಕ್ರಿಯೆಯ ಬಗ್ಗೆ ನಮಗೆ ಖಚಿತವಾಗಿ ತಿಳಿದಿರುವ ಯಾವೊಂದು ಅಂಶವನ್ನೂ ಒಳಗೊಳ್ಳುವುದಿಲ್ಲ, ವಿವರಿಸುವುದಿಲ್ಲ. ಎಲ್ಲರೂ ಕವಿಗಳಾಗಲು ಸಾಧ್ಯವಿಲ್ಲ ಎಂಬುದು ವಾಸ್ತವಿಕ ಅಂಶ, ಏಕೆ ? ಸಾಮೂಹಿಕ ಸುಪ್ತ ಚೇತನ ಎಲ್ಲರಿಗೂ ಸರ್ವಸಾಮಾನ್ಯವಾದರೆ, ಕಾವ್ಯ ಕೇವಲ ಇದರ ಅಭಿವ್ಯಕ್ತಿಯಾದರೆ, ಕೆಲವರಲ್ಲಿ ಮಾತ್ರ ಏಕೆ ಅದು ಅಭಿವ್ಯಕ್ತಿಗೊಳ್ಳಬೇಕು? ಸೃಷ್ಟಿಕ್ರಿಯೆಗೂ ಬುದ್ಧಿಶಕ್ತಿಗೂ ಏನಾದರೂ ಸಂಬಂಧವಿದೆಯೆ? ಅಸಾಧಾರಣ ಬುದ್ದಿವಂತರೆಲ್ಲ ಕವಿಗಳಾಗುತ್ತಾರೆಂಬ ನಿಯಮವಿಲ್ಲವಾದರೂ ತೀರ ಪೆದ್ದರು ಅಸಾಧಾರಣ ಕವಿಗಳಾದದ್ದು ಬಹುಶಃ ಎಂದೂ ಇಲ್ಲ. ಯೂಂಗ್, ಫ್ರಾಯ್ಡರ ಕಲ್ಪನೆಗಳ ಪ್ರಕಾರ ಸೃಷ್ಟಿಕ್ರಿಯೆಯಲ್ಲಿ ಬುದ್ಧಿಶಕ್ತಿಯ ಪಾತ್ರ ಏನೇನೂ ಇದ್ದಂತೆ ಕಾಣುವುದಿಲ್ಲ. ಈ ಇಬ್ಬರ ಕಲ್ಪನೆಗಳ ಅತಿ ದೊಡ್ಡ ಕೊರತೆಗಳು ಈ ತರದವು. ಕಾವ್ಯಕ್ರಿಯೆಯಂತಹ ಸಂಕೀರ್ಣವೂ, ಮಹತ್ತರವೂ, ಅಮೂರ್ತವೂ ಆದ ಚಟುವಟಿಕೆಗಳಲ್ಲಿ ಬುದ್ಧಿಶಕ್ತಿಯ ಪಾತ್ರವೇ ಇಲ್ಲವೆಂದು ನಟಿಸುವುದು ನನಗಿರುವ ಅನೇಕ ಪ್ರಮಾಣಗಳ ದೃಷ್ಟಿಯಿಂದ ಅಸಂಬದ್ದ ಎನ್ನಿಸುತ್ತದೆ. ಅಭ್ಯಾಸ ಮತ್ತು ಪರಿಶ್ರಮಗಳು ಕೂಡ ಸೃಷ್ಟಿಕ್ರಿಯೆಯ ಮೇಲೆ ಪರಿಣಾಮ ಬೀರಬಲ್ಲವು. ಹೇಗೆ? ಈ ತರದ ಅನೇಕ ವಾಸ್ತವಾಂಶಗಳನ್ನು ಇವರ ಕಲ್ಪನೆಗಳು ಗಣನೆಗೇ ತೆಗೆದುಕೊಳ್ಳುವುದಿಲ್ಲ.

ಇನ್ನು ಯೂಂಗ್ ಮತ್ತು ಫ್ರಾಯ್ಡರ ಕಲ್ಪನೆಗಳು ಎಷ್ಟು ತೃಪ್ತಿಕರ ಎಂದು ಬೇರೆ ಬೇರೆಯಾಗಿ ಕೊಂಚ ಪರಿಶೀಲಿಸಬಹುದು. ಯೂಂಗನ ಸಾಮೂಹಿಕ ಸುಪ್ತಚೇತನದ ಅಭಿವ್ಯಕ್ತಿಯೇ ಸಾಹಿತ್ಯ ಎಂಬ ಕಲ್ಪನೆಯ ಬಗ್ಗೆ ಎತ್ತಬೇಕಾದ ಬಲು ದೊಡ್ಡ ಆಕ್ಷೇಪಣೆ ವೈಯಕ್ತಿಕ ಅನುಭವವನ್ನು ಪರಿಪೂರ್ಣವಾಗಿ ಕಡೆಗಣಿಸುವುದು; ವೈಯಕ್ತಿಕ ಅನುಭವದ ಅಂಶಗಳು ಇದ್ದರೆ ಅದು ಬಲು ದೊಡ್ಡ ದೋಷ-ಎಂದು ಪರಿಗಣಿಸುವುದು. ಯಾವ ಸಾಮಾಜಿಕ, ಸಾಂಸ್ಕೃತಿಕ ಪ್ರಾಮುಖ್ಯವೂ ಇಲ್ಲದ ತೀರ ಪರಿಮಿತವಾದ, ಗೌಣವಾದ ಖಾಸಗಿ ಅನುಭವಗಳು ಸಾಹಿತ್ಯದಲ್ಲಿ ವ್ಯಕ್ತವಾದರೆ ಅದಕ್ಕೆ ಅಂತಹ ಬೆಲೆ ಬರಲಾರದೆಂಬುದು ನಿಜವೇ ಇರಬಹುದು. ಆದರೆ ಯಾವ ಒಂದು ಸ್ತರದಲ್ಲೂ ವಿಧದಲ್ಲೂ ಸಂವೇದನೆಯ ಯಾವುದಾದರೊಂದು ರೂಪದಲ್ಲೂ ವ್ಯಕ್ತಿಯ ಅನುಭವಕ್ಕೆ ಸಂಬಂಧವೇ ಇಲ್ಲದ ವಸ್ತು-ಯೂಂಗ್ ಹೇಳುವಷ್ಟರ ಮಟ್ಟಿಗೆ ವ್ಯಕ್ತಿ ಪ್ರಜ್ಞೆಗೇ ಹೊರತಾದ ವಸ್ತು ಹೇಗೆ ಅಸ್ತಿತ್ವಕ್ಕೆ ಬರಲು ಸಾಧ್ಯ ಎಂಬುದೇ ಪ್ರಶ್ನೆ. ಅಂತಹ ಸಾಹಿತ್ಯಕ್ರಿಯೆ ಬಹುಶಃ ಸಾಧ್ಯವೇ ಇಲ್ಲ ಎನ್ನಿಸುತ್ತದೆ. ವ್ಯಕ್ತಿಯ ನಿಜವಾದ ಸಂವೇದನೆಗಳಿಗೊಳಪಟ್ಟ ಅನುಭವವೇ ಯಾವುದೋ ಒಂದು ಮಟ್ಟದಲ್ಲಿ ಸಾರ್ವತ್ರಿಕವಾದ, ಸಮಾಜದ, ಸಂಸ್ಕೃತಿಯ ಅಥವಾ ಆ ಕಾಲದ ಅನುಭವದ ಮಾದರಿಯಾಗಿ ಇಲ್ಲವೆ ಭಾಗವಾಗಿ ಇಲ್ಲವೆ ಸಂಕೇತವಾಗಿ ಕಾವ್ಯ ಕ್ರಿಯೆಯಲ್ಲಿ ಅದು ವ್ಯಕ್ತವಾಗಬಹುದು – ಎಂಬುದು ರೋಮಾಂಚಕವಲ್ಲದ, ಸಾಮಾನ್ಯವಾದ, ಆದರೆ ಬಹುಶಃ ಹೆಚ್ಚು ವಾಸ್ತವಿಕವಾದ ಹೇಳಿಕೆ ಎನ್ನಿಸುತ್ತದೆ. ಯೂಂಗ್ “ಮಾನಸಿಕ ಸಾಹಿತ್ಯದ ಬಗ್ಗೆ ಹೇಳಿದರೂ ಕೂಡ ಅದನ್ನು ಕೀಳಾಗಿ ಪರಿಗಣಿಸುವುದರಿಂದ ಮತ್ತು ಅಲ್ಲಿಯ ವೈಯಕ್ತಿಕ ಅನುಭವದ ಪ್ರಾಮುಖ್ಯವನ್ನು ಅಲ್ಲಗಳೆಯುವುದರಿಂದ ಈ ಆಕ್ಷೇಪಗಳನ್ನು ಎತ್ತಲಾಗಿದೆ.

ಕಲೆ ಒಂದು ಸಹಜ ಶಕ್ತಿ, ಅದು ಒಂದು ವ್ಯಕ್ತಿಯನ್ನು ಸೆಳೆದು ಅವನನ್ನು ತನ್ನ ಸಾಧನವನ್ನಾಗಿಸಿಕೊಳ್ಳುತ್ತದೆ-ಎಂಬುದು ಮತ್ತು ಕಲಾವಿದ ಸ್ವಂತ ಇಚ್ಛೆ ಇಲ್ಲದವ, ಕಲೆ ಅದರ ಉದ್ದೇಶವನ್ನು ಸಾಧಿಸಿಕೊಳ್ಳಲು ತನ್ನಲ್ಲಿ ಅವಕಾಶ ಕೊಡುವವ ಎಂಬ ಯೂಂಗನ ಹೇಳಿಕೆಗಳನ್ನೂ ಹಾಗೆಯೇ ತಿರಸ್ಕರಿಸಬೇಕಾಗುತ್ತದೆ. ಗಾಳಿಯಲ್ಲಿ ಹೊಂಚು ಹಾಕಿ ಕಾದು ಕುಳಿತು ಯಾವುದೋ ಒಂದು ವ್ಯಕ್ತಿಯ ಮೇಲೆ ಎರಗುತ್ತದೆ ಕಲೆ ; ಮುಂದವನು ಕಲಾವಿದನಾಗುತ್ತಾನೆ-ಎಂಬ ಮಟ್ಟಕ್ಕಿಳಿಯುವ ಈ ಹೇಳಿಕೆ ತೀರ ಅವಾಸ್ತವಿಕ, ಅವೈಜ್ಞಾನಿಕ. ಕಲೆ ಅದರ ಉದ್ದೇಶವನ್ನು ಸಾಧಿಸಿಕೊಳ್ಳುತ್ತದೆ-ಎಂಬುದು ಗ್ರಹಿಕೆಗೆ ಮೀರಿದ್ದು. ಮನುಷ್ಯನ ಅನುಭವ ಪ್ರಪಂಚದ ಹೊರಗೆ ನಿಂತು ಮನುಷ್ಯನಂತೆ ಯೋಚಿಸುವ, ಉದ್ದೇಶಿಸುವ, ಸೆಳೆದು ಹಿಡಿದು ಒಂದು ವ್ಯಕ್ತಿಯನ್ನು ಉಪಯೋಗಿಸಿಕೊಳ್ಳುವ ಶಕ್ತಿ ಕಲೆ – ಎಂಬ ಕಲ್ಪನೆ ಏನೇ ಆದರೂ ವೈಜ್ಞಾನಿಕ ಚಿಂತನೆಯ ಫಲವಲ್ಲ. ಮುಂದೆ, ದಾರ್ಶನಿಕ ಸಾಹಿತ್ಯ ಏನು ಮಾಡಬಲ್ಲದು, ಅದು ಏಕೆ ಹುಟ್ಟುತ್ತದೆ ಎಂದು ಯೂಂಗ್ ಹೇಳುವಾಗ “ಯದಾ ಯದಾಹಿ ಧರ್ಮಸ್ಯ”ದ ನೆನಪಾಗುತ್ತದೆ. ಒಂದು ಕಾಲದ, ಸಮಾಜದ ಜನ ಅಸ್ತವ್ಯಸ್ತಗೊಂಡಾಗ, ಸತ್ವಹೀನರಾದಾಗ, ಅಸತ್ಯ ನಡತೆಯಿಂದ ಕೂಡಿದಾಗ, ಗೊಂದಲ ಗೆಟ್ಟಾಗ, ಸಾಮೂಹಿಕ ಸುಪ್ತ ಚೇತನದಲ್ಲಿ ಹುದುಗಿದ “ಪರಮ ವಿವೇಕಿ”ಯ ಅಥವಾ ಆರಕ್ಷಕನ ಮತ್ತು ಇಂತಹ ಇತರ ಸಂಕೇತಗಳು “ತಾವಾಗಿಯೇ” ಜಾಗೃತಗೊಂಡು ಆ ಕಾಲದ ಮಾನಸಿಕ ಸಮತೋಲನವನ್ನು ಸ್ಥಾಪಿಸುತ್ತವೆ. ಈ ತರದ ಹೇಳಿಕೆಗಳು ಅನೇಕರಿಗೆ, ಅದರಲ್ಲೂ ಬುದ್ದಿವಾದ ವಿರೋಧಿಗಳಿಗೆ ಬಲು ತೃಪ್ತಿಯನ್ನು ಕೊಡಬಹುದು, ಒಪ್ಪಿಗೆಯಾಗಬಹುದು. ಆದರೆ ಇದು ಮನೋವೈಜ್ಞಾನಿಕ ಬರಹವಲ್ಲ.

ಕೊನೆಯದಾಗಿ ಒಂದು ಪ್ರಶ್ನೆ, ಯೂಂಗನ ಅಭಿಪ್ರಾಯಗಳನ್ನು ಓದಿದ ಮೇಲೆ ಸಾಹಿತ್ಯಕ್ರಿಯೆಯ ಬಗ್ಗೆ ನಿಜವಾಗಿ ನಮ್ಮ ಅರಿವು ಹೆಚ್ಚಾಯಿತೆ ? ಅದರ ಸ್ವರೂಪ ಅರ್ಥವಾಯಿತೆ ?

ಫ್ರಾಯ್ಡ್‌ ಹೇಳುವುದರಲ್ಲೆಲ್ಲಾ ಸಾಹಿತ್ಯಕ್ರಿಯೆ ಮೂಲಭೂತವಾದ ವೈಯಕ್ತಿಕ ಅನುಭವಗಳ ಪರಿಶೀಲನೆ; ಅಭಿವ್ಯಕ್ತಿ…ಎಂಬುದರಲ್ಲಿ ಸತ್ಯಾಂಶ ಇದ್ದಂತೆ ತೋರುತ್ತದೆ. ಆದರೆ ಆ ಅನುಭವಗಳು ಯಾವಾಗಲೂ ಬಾಲ್ಯಾವಸ್ಥೆಯಲ್ಲಿ ನಡೆದವು ಎಂಬುದು ಮತ್ತು ಅವುಗಳು ಲೈಂಗಿಕ ಸ್ವರೂಪದವು (ಈಡಿಪಸ್‌) ಎಂಬ ಹೇಳಿಕೆಗಳಿಗೆ ಸಾಕಷ್ಟು ಪುಷ್ಟಿ ಇಲ್ಲ. ಯೂಂಗ್‌ನದು ಪೂರ್ತಿ ಊಹೆಯಾದರೆ ಫ್ರಾಯ್ಡ್‌ ನಮ್ಮೆಲ್ಲರೆದುರಿರುವ ಕೆಲವು ವಿಷಯಗಳನ್ನು ವಿಶ್ಲೇಷಣೆಗೆ ಗುರಿಮಾಡಿ ತೀರ್ಪು ಕೊಡುತ್ತಾನಾದ್ದರಿಂದ ಆ ವಿಶ್ಲೇಷಣೆಯ ವಿಧಾನವನ್ನೇ ಪರೀಕ್ಷಿಸುವುದು ಸೂಕ್ತ. ಮೊದಲೇ ಹೇಳಿದಂತೆ, ನಮ್ಮ ತೀವ್ರವಾದ ಆಕ್ಷೇಪಣೆ ಫ್ರಾಯ್ಡ್‌ ಉಪಯೋಗಿಸಿದ ವೈಜ್ಞಾನಿಕ ಪದ್ಧತಿಯು ಬಗ್ಗೆ, ಸಾಹಿತ್ಯಕ್ರಿಯೆ ಈಡಿಪಸ್‌ ಬಯಕೆಯೇ ಇರಬಹುದು ಎಷ್ಟರ ಮಟ್ಟಿಗೆ ಫ್ರಾಯ್ಡ್‌ ಇದಕ್ಕೆ ಸಮರ್ಥನೆ ಕೊಡುತ್ತಾನೆ ?

ದಾಯ್‌ಸ್ತೋವ್‌ಸ್ಕಿಯ ಕೃತಿಗಳನ್ನೇ ತೆಗೆದುಕೊಳ್ಳಬಹುದು, ದಾಯ್‌ಸ್ತೋವ್‌ಸ್ಕಿಗೆ ಪಿತೃವಧೆ ಮಾಡುವ ಬಯಕೆ ಇತ್ತೆಂಬುದಕ್ಕೆ ಫ್ರಾಯ್ಡ್‌ ಕೊಡುವ ಮುಖ್ಯ ಸಮರ್ಥನೆಯೆಂದರೆ ಅವನಿಗೆ ಇದ್ದ ಮೂರ್ಛೆರೋಗ ಮಾನಸಿಕ ರೋಗವೆಂಬ ಅಭಿಪ್ರಾಯ. ಬಗೆಹರಿಯದ ಈಡಿಪಸ್‌ ಬಯಕೆ, ಅದರಿಂದುಂಟಾದ ಪಾಪ ಮನೋಭಾವ ಈ ರೋಗದ ಮೂಲ. ಮೂರ್ಛೆ ರೋಗದಲ್ಲಿ ತನ್ನನ್ನು ತಾನು ಶಿಕ್ಷಿಸಿಕೊಳ್ಳುತ್ತಿದ್ದ, ತಾನು ಮಾಡಲಿಚ್ಚಿಸಿದ ಪಾಪಕೃತ್ಯಕ್ಕೆ-ಇದಿಷ್ಟು ಆಧಾರವುಳ್ಳ ಅಂಶಗಳು. ಇಲ್ಲಿ ಫ್ರಾಯ್ಡ್‌ ಬಹುಶಃ ಮಾಡಿದ ಮೂಲಭೂತವಾದ ತಪ್ಪೆಂದರೆ ದಾಯ್‌ಸ್ತೋವ್‌ಸ್ಕಿಯದು ಮನೋರೋಗವೆಂದು ಪರಿಗಣಿಸಿದ್ದು, ಮೊದಲೇ ಹೇಳಿದಂತೆ ಮೂರ್ಛೆ ರೋಗವನ್ನು ಹೋಲುವಂತಹ ಮನೋರೋಗವೊಂದು ಇದೆ (ಹಿಸ್ಟೀರಿಯಾದ ಒಂದು ರೂಪ) ಫ್ರಾಯ್ಡ್‌ ಬರೆಯುತ್ತಿದ್ದ ಕಾಲದಲ್ಲಿ ಮಾನಸಿಕ ಮೂರ್ಛೆಗೂ ದೈಹಿಕ ಕಾರಣಗಳಿಂದುಂಟಾಗುವ ಮೂರ್ಛೆಗೂ ಇರುವ ವ್ಯತ್ಯಾಸಗಳ ಬಗ್ಗೆ ಸಂಶೋಧನೆಗಳೇ ನಡೆದಿರಲಿಲ್ಲ, ವಾಸ್ತವವಾಗಿ ಆಗತಾನೇ ಹಿಸ್ಟೀರಿಯಾ ಎಂಬ ಮನೋರೋಗದ ಕಲ್ಪನೆ ರೂಪು ತಳೆಯುತ್ತಿತ್ತು, ಪ್ರಾಯ್ಡ್‌ನೇ ಈ ದಿಸೆಯಲ್ಲಿ ಹೆಚ್ಚು ಕೆಲಸಮಾಡಿದವರಲ್ಲಿ ಮೊದಲಿಗ. ಆದ್ದರಿಂದ ಆ ಕಾಲದಲ್ಲಿ ಈ ಎರಡು ವಿಧವಾದ ಮೂರ್ಛೆರೋಗಗಳನ್ನೂ ಬೇರ್ಪಡಿಸುವುದು ಸುಲಭವಾಗಿರಲಿಲ್ಲ. ಆಮೇಲೆ ನಡೆದ ಸಂಶೋಧನೆಗಳ ಪ್ರಕಾರ ಈಗ ನನಗೆ ಕೆಲವು ಖಚಿತವಾದ ಅಂಶಗಳು ಗೊತ್ತಾಗಿವೆ. ಇದರ ಆಧಾರದ ಮೇಲೆ ಈಗ ದಾಯ್‌ಸ್ತೋವ್‌ಸ್ಕಿಯ ರೋಗಚಿಹ್ನೆಗಳನ್ನು ಪರಿಶೀಲಿಸಿದರೆ ಅದು ಹಿಸ್ಟೀರಿಯಾ ಅಲ್ಲವೆಂಬುದು ಸ್ಪಷ್ಟವಾಗುತ್ತದೆ. ಎಲ್ಲಂದರಲ್ಲಿ ಬರುವ ಈ ಮೂರ್ಛೆ, ಅದರಿಂದಾಗುತ್ತಿದ್ದ ದೈಹಿಕ ಆಘಾತಗಳು, ರಾತ್ರಿ ನಿದ್ದೆಯಲ್ಲಿ ಕೂಡ ಬರುತ್ತಿದ್ದುದು, ಕೊನೆಗೆ ದಾಯ್‌ಸ್ತೋವ್‌ಸ್ಕಿಯ ಬುದ್ಧಿಶಕ್ತಿಯ ಮೇಲೆ ಕೂಡ ಪರಿಣಾಮ
ಉಂಟಾದದ್ದು-ಇವೆಲ್ಲ ಅದು ಹಿಸ್ಟೋರಿಯ ಎಂಬುದನ್ನು ವಿರೋಧಿಸುತ್ತವೆ, ಅಲ್ಲದೆ ಅವನು ತನ್ನ ಕೃತಿಗಳಲ್ಲಿ ಕೂಡ (Idiot, Brothers Karamazov) ಮೂರ್ಛೆ ರೋಗವನ್ನು ಕೆಲವೆಡೆ ಬಲು ಸ್ಪಷ್ಟವಾಗಿ ವರ್ಣಿಸಿದ್ದಾನೆ. ಈ ವರ್ಣನೆಗಳು ದಾಯ್‌ಸ್ತೋವ್‌ಸ್ಕಿಯ ಅನುಭವ ನಿಜವಾದ ದೈಹಿಕ ಮೂರ್ಛೆರೋಗ ಎಂಬ ಕಲ್ಪನೆಗೆ ಪುಷ್ಟಿಕೊಡುತ್ತವೆ. ಹಾಗೆ ನೋಡಿದರೆ ನಾವಿಂದು ಮೂರ್ಛೆರೋಗಕ್ಕೆ ಪಠ್ಯಪುಸ್ತಕಗಳಲ್ಲಿ ಕಾಣುವ ಚಿತ್ರವನ್ನು ಅಷ್ಟೇ ಸಮರ್ಥವಾಗಿ ದಾಯ್‌ಸ್ತೋವ್‌ಸ್ಕಿ Idiot ಕಾದಂಬರಿಯಲ್ಲಿ ಕೊಟ್ಟಿದ್ದಾನೆ. ಈ ಚಿತ್ರ ಹಿಸ್ಟೀರಿಯಾವನ್ನು ಎಂದೂ ಸೂಚಿಸುವುದಿಲ್ಲ. ಹಾಗೆಯೇ ಅವನ ಜೀವನ ಚರಿತ್ರೆಯ ಆಂಶಗಳು ಕೂಡ, ಮೇಲೆ ಹೇಳಿದಂತೆ ಹಿಸ್ಟೀರಿಯಾ ಎಲ್ಲಂದರಲ್ಲಿ ಪ್ರದರ್ಶಿಸಿಕೊಳ್ಳುವುದಿಲ್ಲ, ನಿದ್ದೆ ಹೋದಾಗ ಅದು ಉಂಟಾಗುವುದು ಬಲು ಅಪರೂಪ, ಅದರಿಂದ ದೈಹಿಕ ಆಘಾತಗಳು ಉಂಟಾಗುವುದಿಲ್ಲ, ಬುದ್ಧಿಶಕ್ತಿಯ ಮೇಲೆ ಮಹತ್ತರ ಪರಿಣಾಮಗಳು ಆಗುವುದಿಲ್ಲ, ಹೀಗೆ ಹಿಸ್ಟೀರಿಯಾದ ಅಭಿವ್ಯಕ್ತಿಗೂ ದೈಹಿಕ ಮೂರ್ಛೆ ರೋಗಕ್ಕೂ ಇನ್ನೂ ಅನೇಕ ವ್ಯತ್ಯಾಸಗಳಿವೆ. ಇವುಗಳನ್ನು ಹೆಚ್ಚು ದೀರ್ಘವಾಗಿ ಪರಿಶೀಲಿಸಲು ಇಲ್ಲಿ ಅವಕಾಶವಿಲ್ಲ. ಆಸಕ್ತರು ಮಾನಸಿಕ ಅಸ್ವಾಸ್ಥ್ಯದ ಮೇಲಿನ ಯಾವುದೇ ಪಠ್ಯ ಪುಸ್ತಕವನ್ನು ನೋಡಬಹುದು. ಹಾಗೆಯೇ ಫ್ರಾಯ್ಡ್‌ನ Dotoevsky and Parricide ಎಂಬ ಲೇಖನವನ್ನು ಕೂಡ, ಈ ಲೇಖನ ಬರೀ ಪೂರ್ವ ನಿರ್ಧರಿತ ಕಲ್ಪನೆಗಳ, ಬುಡವಿಲ್ಲದ ಊಹೆಗಳ ಸಂಗ್ರಹ.

ಹೀಗೆ ದಾಟ್‌ಸ್ಟೋವ್‌ಸ್ಕಿಯದು ಹಿಸ್ಟೀರಿಯಾ ಆಗಿರಲಿಲ್ಲ ಎಂಬುದಕ್ಕೆ ಅದು ಹಿಸ್ಟೀರಿಯಾ ಆಗಿತ್ತು ಎಂಬುದಕ್ಕಿಂತ ಹೆಚ್ಚು ಗಟ್ಟಿಯಾದ ನಿದರ್ಶನಗಳೂ ನಮಗಿವೆ. ಎಂದ ಮೇಲೆ ಈ ಒಂದು ಅನುಮಾನದ ಮೇಲೆ ಕಟ್ಟದ ಉಳಿದೆಲ್ಲ ಕಲ್ಪನೆಗಳೂ ತತ್‌ಕ್ಷಣ ಪ್ರಶ್ನಾರ್ಹವಾಗುತ್ತವೆ, (ಹಿಸ್ಟೀರಿಯಾ ಇದ್ದದ್ದರಿಂದ) ದಾಯ್‌ಸ್ತೋವ್‌ಸ್ಕಿಯಲ್ಲಿ ಬಗೆಹರಿಯದ ಈಡಿಪಸ್‌ ಬಯಕೆ ಇತ್ತೆಂಬುದು, ಬ್ರದರ್ಸ್ ಕರವಝೇನ್‌ನಲ್ಲಿ ಆತ ಅದನ್ನು ನಿವೇದಿಸಿಕೊಂಡನೆಂಬುದು-ಆಧಾರವಿಲ್ಲದ ಹೇಳಿಕೆಗಳಾಗುತ್ತವೆ. ಪರಿಣಾಮವಾಗಿ ಸಾಹಿತ್ಯಕ್ರಿಯೆ ಎಂಬುದು ಈಡಿಪಸ್ ಕಾಂಪ್ಲೆಕ್ಸಿನ ಅಭಿವ್ಯಕ್ತಿ ಎಂಬುದು ವೈಜ್ಞಾನಿಕ ಸಮರ್ಥನೆ ಇಲ್ಲದ ಬರೀ ಒಂದು ಹೇಳಿಕೆಯಾಗಿ, ಅನುಮಾನವಾಗಿ, ಉಳಿಯುತ್ತದೆ, ಉಳಿದಿದೆ.

ಕೊನೆಯದಾಗಿ, ಫ್ರಾಯ್ಡ್‌ನ ಪ್ರಕಾರ ಸಾಹಿತ್ಯಕ್ರಿಯೆಗೂ ಮನೋರೋಗಗಳಿಗೂ ಮೂಲಭೂತವಾದ ವ್ಯತ್ಯಾಸವಿದ್ದಂತೆ ಕಂಡು ಬರುವುದಿಲ್ಲ. ಬಗೆಹರಿಯದ ಈಡಿಪಸ್ ಅನುಭವದಿಂದ ಎಲ್ಲ ವಿಧವಾದ ಮನೋರೋಗಗಳು ಉಂಟಾಗುವುದೆಂದು ಅವನ ಅಭಿಪ್ರಾಯ, ಸಾಹಿತ್ಯಕ್ರಿಯೆಯನ್ನು ಕೂಡ ಈ ಅನುಭವಕ್ಕೆ ಎಳೆದೊಯ್ದರೆ ಅವುಗಳೆರಡರ ನಡುವಿನ ವ್ಯತ್ಯಾಸವೇನು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಫ್ರಾಯ್ಡನ ಬರಹದಲ್ಲಿ ಇಲ್ಲ. ಒಟ್ಟಿನಲ್ಲಿ ಸಾಹಿತ್ಯಕ್ರಿಯೆಯೂ ಒಂದು ರೋಗಗ್ರಸ್ತ ಚಟುವಟಿಕೆ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಒಬ್ಬ ಮನೋರೋಗಿ ಏಕೆ ತನಗೂ ಸಮಾಜಕ್ಕೂ ಘಾತಕನಾಗಬೇಕು ಇಲ್ಲ ಅಪ್ರಯೋಜಕನಾಗಿ ಇತರರಿಗೆ ಭಾರವಾಗಬೇಕು, ಅದೇ ಇನ್ನೊಂದು ರೋಗಿ ಏಕೆ ಶ್ರೇಷ್ಠ ಕಾದಂಬರಿಕಾರ ಅಥವಾ ಕವಿಯಾಗಬೇಕು ? ದಾಯ್‌ಸ್ತೋವ್‌ಸ್ಕಿ ಹಿಸ್ಟೀರಿಯಾದಿಂದ ನರಳುತ್ತಿದ್ದರೂ ಏಕೆ ಕತೆ ಕಾದಂಬರಿ ಬರೆಯಬೇಕಿತ್ತು ? ನಾವು ನೋಡುವ ಇನ್ನಿತರ ಸಾವಿರಾರು ಹಿಸ್ಟೀರಿಯಾ ರೋಗಿಗಳಂತೆ ಅವನೇಕೆ ಇರಲಿಲ್ಲ ? ಈ ದೃಷ್ಟಿಯಿಂದ ಫ್ರಾಯ್ಡ್‌ ಸಾಹಿತ್ಯಕ್ರಿಯೆಯನ್ನು ವಿವರಿಸಲೇ ಇಲ್ಲ. ಒಬ್ಬ ಹಿಸ್ಟೀರಿಯಾದಿಂದ ಮೂರ್ಛೆರೋಗ ಪ್ರದರ್ಶಿಸುತ್ತಾನೆ, ಇನ್ನೊಬ್ಬ ಮೂರ್ಛೆಯ ಜೊತೆಗೆ ಜಗತ್ಪಸಿದ್ಧ ಕಾದಂಬರಿಯನ್ನೂ ಬರೆಯುತ್ತಾನೆ ! ಹೇಗೆ ? ಏಕೆ ? ಇಂದಿನ ಮನೋವೈಜ್ಞಾನಿಕ ಪ್ರಯೋಗಗಳು ಫ್ರಾಯ್ಡ್‌ನ ಮನೋರೋಗದ ಕಲ್ಪನೆಗಳನ್ನೂ ತೀವ್ರವಾಗಿ ಪ್ರಶ್ನಿಸುತ್ತಿರುವುದನ್ನು ಇಲ್ಲಿ ಸೂಚಿಸಬಹುದು. ಹಾಗೆ ನೋಡಿದರೆ “ಮನೋರೋಗಗಳು” ಎಂದು ಕರೆಯುವುದೇ ತಪ್ಪು, “ರೋಗ” ಎಂಬ ಕಲ್ಪನೆಯನ್ನೇ ಕೈಬಿಡಲಾಗುತ್ತಿದೆ. ಒಟ್ಟಿನಲ್ಲಿ ಮುಖ್ಯವಾದ ಅಂಶವೆಂದರೆ ಫ್ರಾಯ್ಡ್‌ ಮತ್ತು ಯೂಂಗರ ಹೇಳಿಕೆಗಳಿಗೆ ವೈಜ್ಞಾನಿಕ ಪ್ರಮಾಣಗಳು ಇಲ್ಲದಿರುವುದು ಅಷ್ಟೇ ಅಲ್ಲದೆ, ಅವರ ಅನೇಕ ಹೇಳಿಕೆಗಳು ತಪ್ಪೇ ಇರಬಹುದೆಂಬುದಕ್ಕೆ ಪ್ರಮಾಣಗಳು ದೊರೆಯುತ್ತಿವೆ.

ಫ್ರಾಯ್ಡ್‌ ಮತ್ತು ಯೂಂಗರ ಬರಹಗಳು ಸಾಹಿತಿಗಳ ಮೇಲೆ, ವಿಮರ್ಶಕರ ಮೇಲೆ ಸಾಕಷ್ಟು ಪ್ರಭಾವ ಬೀರಿದವು. ಈ ಪ್ರಭಾವ ತೀರಾ ವಿರೋಧಾಭಾಸಗಳ ಕಂತೆ. ಬಹುಶಃ ಬರೀ ತಂತ್ರದ ದೃಷ್ಟಿಯಿಂದ ಮನೋವಿಶ್ಲೇಷಣ ಬರಹಗಳನ್ನು ಓದಿ, ಕೆಲವೆಡೆ ಬೇಕೆಂದೇ ಫ್ರಾಯ್ಡ್‌ನ ಕಲ್ಪನೆಗಳನ್ನು ತನ್ನ ಕೃತಿಯಲ್ಲಿ ಉಪಯೋಗಿಸಿದ ಜಾಯ್ಸನಿಂದ ಹಿಡಿದು ಪ್ರಾಯ್ಡ್‌ನ ಬರಹಗಳನ್ನು ಅಸಮರ್ಪಕವಾಗಿ ಅರ್ಥಮಾಡಿಕೊಂಡು ಬರೀ ಭಾವಾತಿರೇಕದಿಂದ ವಾದಿಸಹೊರಟ ಲಾರೆನ್ಸನವರೆಗೆ ಈ ಪ್ರಭಾವ ಬಹುಮುಖವಾಗಿದೆ. ಈ ಪ್ರಭಾವವನ್ನು ಉತ್ತೇಕ್ಷಿಸುವ ಧೋರಣೆ ಹೆಚ್ಚಾಗಿದೆ. ಬರಹಗಾರರು ಮನೋವಿಶ್ಲೇಷಣೆಯ ಪ್ರಭಾವದಿಂದ ಬರೆದದ್ದಕ್ಕಿಂತ, ಬರೆದದ್ದನ್ನೆಲ್ಲ ಮನೋವಿಶ್ಲೇಷಣೆಯ ಕಲ್ಪನೆಗೆ ಅನುಗುಣವಾಗಿ ವ್ಯಾಖ್ಯಾನಿಸ ಹೊರಟ ಫ್ರಾಯ್ಡ್‌ನ ಅನುಯಾಯಿಗಳು ಬಹುಮಟ್ಟಿಗೆ ಅಂತಹ ಉತ್ಪ್ರೇಕ್ಷೆಗೆ ಜವಾಬ್ದಾರರು. ಅಲ್ಲದೆ, ಬುದ್ಧಿ ವಿರೋಧವಾದ, ನಿಗೂಢ ಸ್ವರೂಪದ ಕ್ರಾಂತಿಕಾರಿ ಎನ್ನಿಸಿದ ಈ ರೋಮಾಂಚಕ ಕಲ್ಪನೆಗಳು ಹೇಗೋ ಸಾಹಿತಿಗಳನ್ನು ಆಕರ್ಷಿಸಿದಂತೆ ತೋರುತ್ತದೆ. ಇದಕ್ಕೆ ಸಾಹಿತಿಗಳ, ಸಾಹಿತ್ಯಾಸಕ್ತರ ಮನಃಪ್ರವೃತ್ತಿಯೇ ಕಾರಣವಾಗಿರಬಹುದು ಅಥವಾ ಹಲವರಿಗೆ ಈ ಕಲ್ಪನೆಗಳು ನಿಜವಾಗಿಯೂ ತೃಪ್ತಿಕರವಾಗಿರಬಹುದು. ಆದರೆ ಇಲ್ಲಿನ ಮೂಲಭೂತ ಆಕ್ಷೇಪಣೆ ವೈಜ್ಞಾನಿಕ ಪದ್ಧತಿಯದು.

ಆಧಾರ ಗ್ರಂಥಗಳು
FRUED, S. :Character and Culture, Collier Books, New York, 1963
HOFFMAN, F.: Freudianism and the Literary Mind, Louisiana State University Press, 1957
JUNG, C. G.: Modern man in Search of a Soul, Routledge and Kegan Paul Ltd., London, 1959

Close

ಬಹುಲಗ್ರಹಣ

ಎಚ್, ಎಸ್, ಬಿಳಿಗಿರಿ

ಬಹುಲಗ್ರಹಣ

ಒಂದು ಟಿಪ್ಪಣಿ
೧
ಭಾರತೀಯ ವ್ಯಾಕರಣ ಸಾಹಿತ್ಯವನ್ನು ಅಭ್ಯಾಸ ಮಾಡುವವರಿಗೆ ‘ಬಹುಲ’ ಎಂಬ ಶಬ್ದ ಆಗಾಗ್ಗೆ ಎದುರಾಗುತ್ತದೆ. ಆ ಶಬ್ದವನ್ನು ಕುರಿತು ಒಂದೆರಡು ಮಾತುಗಳನ್ನು ಬರೆಯುವುದೇ ಈ ಟಿಪ್ಪಣಿಯ ಉದ್ದೇಶ.

‘ಬಹುಲ’ ಎಂಬ ಪದ ಎರಡು ಅರ್ಥದಲ್ಲಿ ಪ್ರಯೋಗವಾಗುತ್ತದೆ. ಮೊದಲ ಅರ್ಥದಲ್ಲಿ, ಬಹುಲ’ ಮತ್ತು ‘ವಿಕಲ್ಪ’ ಎರಡೂ ಪರ್ಯಾಯ ಶಬ್ದಗಳು. “ಬಹುಲ’ ಎಂದರೂ ಒಂದೇ “ವಿಕಲ್ಪ’ ಎಂದರೂ ಒಂದೇ, ಎರಡನೆಯದಾಗಿ, ಸೂತ್ರದಲ್ಲಿ ವಿಧಿಸಿದ ಕಾರ್ಯವು ಬರುವುದು ಕೆಲವೇ ಲಕ್ಷಗಳಲ್ಲಿ ಮಾತ್ರ ಎಂಬುದನ್ನು ಬಹುಲ’ ಎಂಬುದು ಸೂಚಿಸುತ್ತದೆ ಹಾಗಾದರೆ, ಸೂತ್ರಕ್ಕೆ ವಿಷಯವಾದ ಇತರ ಲಕ್ಷಗಳಲ್ಲಿ ಏನಾಗುತ್ತದೆ ? ಇತರ ಲಕ್ಷ್ಯಗಳಲ್ಲಿ ವಿಧಿಸಿದ ಕಾರ್ಯವು ಬರದೇ ಇರಬಹುದು, ಅಥವಾ ವಿಕಲ್ಪವಾಗಿ ಬರಬಹುದು, ಅಥವಾ ವಿಧಿಸಿದ ಕಾರ್ಯಕ್ಕಿಂತ ಬೇರೆಯದಾದ ಮತ್ತಾವುದೋ ಕಾರ್ಯ ಬರಬಹುದು. ಇಷ್ಟೇ ಅಲ್ಲ, ಸೂತ್ರಕ್ಕೆ ವಿಷಯವಾಗದ ಕೆಲವು ಲಕ್ಷ್ಯಗಳಲ್ಲಿ ವಿಧಿಸಿದ ಕಾರ್ಯ ಕಂಡು ಬರಬಹುದು. ಇಲ್ಲಿ ಐದು ಅಂಶಗಳಿವೆ : ವಿಧಿಸಿದ ಕಾರ್ಯವು (೧) ಕೆಲವು ಲಕ್ಷ್ಯಗಳಲ್ಲಿ ಬರುವುದು, (೨) ಕೆಲವು ಲಕ್ಷ್ಯಗಳಲ್ಲಿ ಬರದಿರುವುದು, (೩) ಕೆಲವು ಲಕ್ಷ್ಯಗಳಲ್ಲಿ ವಿಕಲ್ಪವಾಗಿ ಬರುವುದು, (೪) ಕೆಲವು ಲಕ್ಷ್ಯಗಳಲ್ಲಿ ಬೇರೆಯದೇ ಆದ ಕೌರ್ಯವು ಬರುವುದು, (೫) ಸೂತ್ರಕ್ಕೆ ವಿಷಯವಾಗದ ಕೆಲವು ಲಕ್ಷ್ಯಗಳಲ್ಲೂ ಬರುವುದು ‘ಬಹುಲಂ’ ಎಂದು ಹೇಳಿದ ಸೂತ್ರಗಳಿಗೆಲ್ಲಾ ಈ ಐದೂ ತೆರದ ಲಕ್ಷ್ಯಗಳಿರಬೇಕಾಗಿಲ್ಲ. ಮೊದಲನೆಯದು ಒಂದು ಇರಲೇಬೇಕಷ್ಟೆ (ಇಲ್ಲದಿದ್ದರೆ ಸೂತ್ರವೇ ಇರುತ್ತಿರಲಿಲ್ಲ ! ) ಮುಂದಿನ ನಾಲ್ಕರಲ್ಲಿ, ಯಾವ ಒಂದಾಗಲಿ, ಯಾವ ಎರಡಾಗಲಿ, ಯಾವ ಮೂರಾಗಲಿ ಇದ್ದರೂ ಸಾಕು, ನಾಲ್ಕೂ ಇದ್ದರೆ ಸರಿಯೇ ಸರಿ.

ಒಂದು ಕೃತಕ ಉದಾಹರಣೆ : X ಎಂಬುದರ ಪರದಲ್ಲಿರುವ Y ಎಂಬುದಕ್ಕೆ ಬಹುಲವಾಗಿ ಆದೇಶವಾಗಿ ಬರುತ್ತದೆ ಎಂದಿದೆ. ಮೊದಲನೆಯ ಅರ್ಥದ ಪ್ರಕಾರ, X Y ಎಂದಿರುವಾಗ, Y ಎಂಬುದಕ್ಕೆ Z ಎಂಬುದು ವಿಕಲ್ಪವಾಗಿ ಬರುತ್ತದೆ ಎಂದಾಗಬಹುದು. ಎರಡನೆಯ ಅರ್ಥದ ಪ್ರಕಾರ, (೧) ಕೆಲವು ಲಕ್ಷಗಳಲ್ಲಿ ಈ ಆದೇಶ ಕಂಡು ಬರದಿರಬಹುದು : X Y ಎಂದೇ ಉಳಿಯಬಹುದು ; (೨) ಕೆಲವು ಲಕ್ಷ್ಯಗಳಲ್ಲಿ ಈ ಆದೇಶವು ವಿಕಲ್ಪವಾಗಿ ಕಂಡು ಬರಬಹುದು : X Y ಎಂದೇ ಉಳಿಯಬಹುದು: (೩) ಕೆಲವು ಲಕ್ಷ್ಯಗಳಲ್ಲಿ X Y ಎಂಬುದಾಗಲಿ, X Z ಎಂಬುದಾಗಲಿ, ಅವೆರಡೂ ಆಗಲಿ, ಬರದೆ X W ಎಂದಾಗಬಹುದು; (೪) ಕೆಲವು ಲಕ್ಷಗಳಲ್ಲಿ Y ಎಂಬುದು X ಎಂಬುದರ ಪರದಲ್ಲಿಲ್ಲದಿದ್ದರೂ V ಎಂಬುದರ ಪರದಲ್ಲಿದ್ದರೂ, V Y ಎಂಬುದು V Z ಎಂದಾಗಬಹುದು.
೨
ಭಾಷೆಗಳಲ್ಲಿ ಕಂಡುಬರುವ ರೂಪಗಳಲ್ಲಿ ಬಹುತೇಕವಾದವುಗಳು ಸಾಮಾನ್ಯವಾದ ವ್ಯಾಕರಣ ನಿಯಮಗಳಿಂದ ಸಿದ್ಧಿಸುತ್ತವೆ. ಇದು ಸಾಧ್ಯವಿಲ್ಲದಿದ್ದರೆ ವ್ಯವಹಾರವೇ ಸಾಧ್ಯವಾಗುತ್ತಿರಲಿಲ್ಲ. ಭಾಷೆಗಳಲ್ಲಿ ಈ ವ್ಯವಸ್ಥೆ ಇದ್ದರೂ ಆಗಾಗ ಅವ್ಯವಸ್ಥೆಯ ಕಂಡು ಬರುವುದುಂಟು. ಕ್ವಚಿತ್ತಾದರೂ ಅವ್ಯವಸ್ಥೆಯಿಲ್ಲದ ಭಾಷೆಯೇ ಇಲ್ಲ. ಆದುದರಿಂದ ಅವ್ಯವಸ್ಥೆಯ ಭಾಷೆಗಳಿಗಿರುವ ಒಂದು ಲಕ್ಷಣ ಎಂದು ಹೇಳಬಹುದು ! ಒಂದು ಭಾಷೆಯ ವ್ಯಾಕರಣನಿಯಮಗಳನ್ನು ಕಂಡು ಹಿಡಿದು ಅವುಗಳನ್ನು ಆದಷ್ಟು ಸಾಮಾನ್ಯವಾಗುವಂತೆ ಹೇಳಲು ಪ್ರಯತ್ನಿಸುವ ವ್ಯಾಕರಣಕಾರನಿಗೆ ಕೆಲವು ಅವ್ಯವಸ್ಥಿತ ರೂಪಗಳು ಬಹಳ ತೊಂದರೆಕೊಡುತ್ತವೆ. ಅಂಥ ಸಂದರ್ಭಗಳಲ್ಲಿ ವ್ಯಾಕರಣಕಾರನು “ಬಹುಲ’ ದ ಕಾಲನ್ನು ಹಿಡಿಯಬೇಕಾಗುತ್ತದೆ. ಇದನ್ನೇ ‘ಬಹುಲ ಗ್ರಹಣ’ ಎನ್ನುವುದು !

ಆದರೆ, ಈ ಬಹುಲಗ್ರಹಣ ಅನಿವಾರ್ಯವಾಗಿರಬೇಕು. ಸಾಮಾನ್ಯ ನಿಯಮಗಳನ್ನು ಮಾಡಲು ಸಾಧ್ಯವಿದ್ದಾಗಲೂ, ಅವುಗಳನ್ನು ಕಂಡು ಹಿಡಿಯಲು ಆಗದೆಯೋ, ಅಥವಾ ಸೋಮಾರಿತನದಿಂದಲೋ, ಬಹುಲ ಗ್ರಹಣ ಮಾಡಿದರೆ ವ್ಯಾಕರಣವು ದೂಷಿತವಾಗುತ್ತದೆ. ಸುಮಾರು ನಾಲ್ಕು ಸಾವಿರ ಸೂತ್ರಗಳಿರುವ “ಅಷ್ಟಾಧ್ಯಾಯಿ’ಯಲ್ಲಿ ಕೇವಲ ಮೂವತ್ತನಾಲ್ಕು ಸಲ ಬಹುಲಗ್ರಹಣ ನಡೆದಿದೆ, ಅವುಗಳಲ್ಲಿ ಕೆಲವು ವೈದಿಕ ಸಂಸ್ಕೃತಕ್ಕೆ ಸಂಬಂಧಿಸಿದುವುಗಳು, ಕೆಲವು ವಿಕಲ್ಪಾರ್ಥದಲ್ಲಿ ಬಂದವುಗಳು. ಇವುಗಳನ್ನು ಕಳೆದರೆ, ಬಹುಲಗ್ರಹಣದ ಸಂಖ್ಯೆ ಇನ್ನೂ ಕಡಿಮೆಯಾಗುತ್ತದೆ. ಕಾತಂತ್ರ ವ್ಯಾಕರಣದಲ್ಲಿ ಬಹುಲಗ್ರಹಣ ನಡೆದಂತೆ ತೋರುವುದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರೆ ಒಂದೆರಡು ದೊರಕಬಹುದೇನೋ. ಕೇಶಿರಾಜ ಮಾತ್ರ ಬಹುಲಗ್ರಹಣವನ್ನು ಧಾರಾಳವಾಗಿ ಮಾಡಿದ್ದಾನೆ.

ಆದರ್ಶವಾದ ವ್ಯಾಕರಣದಲ್ಲಿ, ಬಹುಲಗ್ರಹಣ ನಡೆದಾಗ ಸಂಪೂರ್ಣವಾಗಿರುವ ಪಟ್ಟಿಗಳನ್ನು ಕೊಡಬೇಕಾಗುತ್ತದೆ. ವಿಧಿಸಿದ ಕಾರ್ಯವು ಎಲ್ಲೆಲ್ಲಿ ನಡೆಯುವುದಿಲ್ಲ ಎಲ್ಲೆಲ್ಲಿ ವಿಕಲ್ಪವುಂಟು ಇತ್ಯಾದಿ ಸಂಪೂರ್ಣವಾದ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಅದಿಲ್ಲದೆ, “ಶಿಷ್ಟ ಪ್ರಯೋಗಗಳನ್ನು ನೋಡಿ ತಿಳಿದುಕೊ” ಎಂದು ಹೇಳಿಬಿಟ್ಟರೆ, “ಶಿಷ್ಟ ಪ್ರಯೋಗಗಳನ್ನು ನೋಡಿ ತಿಳಿದುಕೊಳ್ಳುವುದಾದರೆ ನಿನ್ನ ವ್ಯಾಕರಣವನ್ನು ಯಾಕೆ ಓದಬೇಕು ?” ಎಂದು ಉತ್ತರ ಕೊಡಬೇಕಾಗುತ್ತದೆ. ಶಿಷ್ಟ ಪ್ರಯೋಗಗಳು ಯಾವುವು ಎಂಬುದನ್ನು ಹೇಳಲು ಹೊರಟಿರುವ ವ್ಯಾಕರಣವೇ ಶಿಷ್ಟ ಪ್ರಯೋಗಗಳ ಕಡೆಗೇ ಬೆರಳು ತೋರಿದರೆ ಏನು ಗತಿ ? ಈ ವಿಷಯದಲ್ಲಿ ಪಾಣಿನಿಯೂ ಎಡವಿದ್ದಾನೆ. ಆದುದರಿಂದಲೇ, ಪಾಣಿನಿಯಂಥವನೂ ಹೀಗೆ ಮಾಡಿರುವುದರಿಂದಲೇ,
ಆದರ್ಶವಾದ’ ಎಂಬ ವಿಶೇಷಣವನ್ನು ಮೇಲೆ ಉಪಯೋಗಿಸಲಾಯಿತು. *
* ಕೇಶಿರಾಜನ ‘ಶಬ್ದಮಣಿದರ್ಪಣ’ ದ ಮೇಲೆ ನಾನು ಬರೆಯುತ್ತಿರುವ ವ್ಯಾಖ್ಯಾನದ ಒಂದು ಖಂಡವೇ ಈ ಟಿಪ್ಪಣಿಯಾಗಿದೆ.

Close

ಅನಂತಮೂರ್ತಿಯವರ 'ಸಂಸ್ಕಾರ'

ಪಾ. ಲ. ಸುಬ್ರಹ್ಮಣ್ಯ

ಅನಂತಮೂರ್ತಿಯವರ ‘ಸಂಸ್ಕಾರ’

ಈಗಾಗಲೇ ಕನ್ನಡ ಸಾಹಿತ್ಯರಂಗದಲ್ಲಿ ‘ಸಂಸ್ಕಾರ’ದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಕೆಲವರು ಇದರಲ್ಲಿ ಬ್ರಾಹ್ಮಣ್ಯವನ್ನು ಅಲ್ಲಗಳೆದಿದ್ದಾರೆ’ ಎಂದು ಬರಹಗಾರರ ಮೇಲೆ ಕ್ರುದ್ಧರಾದರೆ, ಮತ್ತೆ ಕೆಲವರು ಅದೇ ಕಾರಣಕ್ಕಾಗಿ ಬರಹಗಾರರನ್ನು ಹೊಗಳುತ್ತಾರೆ, ಪ್ರಾಣೇಶಾಚಾರ್ಯ ಮತ್ತು ಚಂದ್ರಿಯ ಸಮಾಗಮದ ದೃಶ್ಯವಂತೂ ಎಷ್ಟೋ ಜನರಲ್ಲಿ ದೊಡ್ಡ ಗೊಂದಲವನ್ನೇ ಎಬ್ಬಿಸಿದೆ. ಇಂತಹದನ್ನೆಲ್ಲಾ ತೋರಿಸಿಬಿಟ್ಟಿದ್ದಾರಲ್ಲಾ ಎಂದು ಘಾಬರಿ ಗೊಂಡವರು, ಸಾಹಿತ್ಯದಲ್ಲಿ ಇಂತಹ ನಗ್ನಸತ್ಯಗಳನ್ನು ತೋರಿಸುವ ಅವಶ್ಯಕತೆ ಏನಿದೆ ಎನ್ನುತ್ತಾರೆ. ಆ ದೃಶ್ಯವನ್ನು ಓದಿ ಸಡಿಲಗೊಂಡವರು ತಮ್ಮ ಸಿಟ್ಟು ತಮ್ಮ ಮೇಲೊ, ಬರಹಗಾರರ ಮೇಲೋ ಎಂಬುದು ತಿಳಿಯದೆ, ಸಾಹಿತ್ಯದಲ್ಲಿ ನೀತಿಯ ರೂಪ ಹೇಗಿರಬೇಕು, ಅದರ ಮಟ್ಟ ಎಷ್ಟಿರಬೇಕು ಎಂದೆಲ್ಲಾ ಭಾಷಣ ಮಾಡುತ್ತಾರೆ. ಇನ್ನು ಕೆಲವರು ಈ ದೃಶ್ಯವನ್ನು ಓದಿ, ಸೋಜಿಗಗೊಂಡು ಕಥೆ ರುಚಿಯಾಗಿಯೇ ಇರಬೇಕು ಎಂಬ ಭಾವನೆಗೆ ಒಳಗಾಗಿದ್ದಾರೆ.

ಇವೆಲ್ಲದರ ನಡುವೆ ನಿಜವಾದ ಸಾಹಿತ್ಯಕ ಮೌಲ್ಯಗಳ ನೆಲೆಯಲ್ಲೂ ಚರ್ಚೆ* ನಡೆದು
* “ಮನೋಹರ ಗ್ರಂಥಮಾಲೆ, ಧಾರವಾಡ’ ದ ಆಶ್ರಯದಲ್ಲಿ ಮೇ, 1967 ರಲ್ಲಿ ನಡೆದ ಚರ್ಚಾಕೂಟದಲ್ಲಿ.
________________

ಎಷ್ಟೋ ವಿಚಾರಗಳು ಹೊರಬಂದಿವೆ. ನನ್ನ ಈ ಲೇಖನಕ್ಕೆ ಇವೆಲ್ಲಾ ವಿಚಾರಗಳೂ ಒಂದಲ್ಲದೊಂದು ರೀತಿಯಲ್ಲಿ ಪ್ರೇರಕವಾಗಿವೆ.

“ಸಂಸ್ಕಾರ”ದ ಕಥಾವಸ್ತು ಸಂಸ್ಕಾರ. ಒಳ್ಳೆಯ ಸಂಸ್ಕಾರದ ಮುಖ್ಯಾಂಶಗಳಾದ ಧಾರ್ಮಿಕ ಮತ್ತು ನೈತಿಕ ನೇಮ, ನಿಷ್ಠೆ, ವಿದ್ಯೆ, ಸೌಜನ್ಯ, ಚಾರಿತ್ರಬಲ ಇವೆಲ್ಲಾ ಇದ್ದರೂ, ಪ್ರಾಣೇಶಾಚಾರ್ಯರು ಸಂಪ್ರದಾಯದ ನೆರಳಿನಲ್ಲಿ ಸತ್ವ ಹೀನರಾಗಿ ಉಳಿಯುತ್ತಾರೆ. ತಮ್ಮ ಸಂಸ್ಕಾರವನ್ನು ಒಂದು ಸಜೀವ ಕಲ್ಯಾಣ ಶಕ್ತಿಯನ್ನಾಗಿ ಉಪಯೋಗಿಸಿ, ಅಗ್ರಹಾರದ ಉಳಿದ ಬ್ರಾಹ್ಮಣರಿಗೆ ಅದರ ಸ್ವಲ್ಪಾಂಶವನ್ನಾದರೂ ಧಾರೆಎರೆದು ಕೊಡುವುದು ಸಾಧ್ಯವಾಗದೆ ತೊಳಲುತ್ತಾರೆ. ಆಚಾರ್ಯರನ್ನು ಬಿಟ್ಟರೆ ದುರ್ವಾಸಪುರದ ಉಳಿದ ಬ್ರಾಹ್ಮಣರೆಲ್ಲಾ ‘ಪರಮ ಪಾಪಿಗಳು, ಅನ್ನಮೂಲವಾದ, ಕಾಂಚನಮೂಲವಾದ ಸರ್ವ ಪಾಪಗಳನ್ನೂ ಮಾಡಿದವರು.? ಇವರಿಗೆ ಧರ್ಮ, ವಿದ್ಯೆ, ಶಾಸ್ತ್ರ ಇವು ಮೌಲ್ಯಗಳೇ ಅಲ್ಲ, ತಮ್ಮ ತಮ್ಮ ಆಸೆ, ಅಸೂಯೆಗಳನ್ನು ಅವಲಂಬಿಸಿದ ಅನುಕೂಲ ವಸ್ತುಗಳು. ನಾರಣಪ್ಪ ಇವರ ಸುಳ್ಳು ಬ್ರಾಹ್ಮಣ್ಯ, ಕುಟಿಲತೆ, ಮತ್ತು ಅಲ್ಪತನದ ವಿರುದ್ಧ ಚಳುವಳಿ ಹೂಡಿ ನಿಂತವನು. ಪ್ರಾಣೇಶಾಚಾರ್ಯರ ಧೈಯವಾದಿ ಜೀವನವನ್ನೂ ಅಲ್ಲಗಳೆಯುವಂತಹ ದುರಾಗ್ರಹಕ್ಕೆ ಬಿದ್ದವನು. ದುರ್ವಾಸಪುರದ ಬ್ರಾಹ್ಮಣರು ನಾರಣಪ್ಪನ ಕೋಪಕ್ಕೆ ಬಹುಮಟ್ಟಿಗೆ ಪಾತ್ರರೆನಿಸಿದರೂ, ನಾರಣಪ್ಪನ ಉದ್ದೇಶ, ಸಮಾಜ ಕಲ್ಯಾಣಕ್ಕಾಗಿ ಆಗದೇ, ಬರಿಯ ಬಂಡುಗಾರತನವಾದ್ದರಿಂದಲೇ, ಪ್ರಾಣೇಶಾಚಾರ್ಯರು ದುಃಖಿತರಾಗಿ “ಪುಣ್ಯಕ್ಕೆ ನಾಲಗೆ ಇಲ್ಲಪ್ಪ, ಪಾಪಕ್ಕಿದೆ” ಎನ್ನುತ್ತಾರೆ.

ಈ ಧೋರಣೆಗಳ ಮಧ್ಯೆ ನಾರಣಪ್ಪನ ಮೃತ್ಯ ಅವನ ಶವ ಸಂಸ್ಕಾರದ ಸಮಸ್ಯೆಯನ್ನು ತಂದೊಡ್ಡುತ್ತದೆ. ಈ ಸಮಸ್ಯೆ ಮತ್ತು ಇದರ ಸುತ್ತಲೂ ಹುಟ್ಟಿಕೊಳ್ಳುವ ಸನ್ನಿವೇಶ ಪ್ರಾಣೇಶಾಚಾರ್ಯರಲ್ಲಿ ಹುಟ್ಟಿಸುವ ವೈಚಾರಿಕ ತುಮುಲ, ಆತ್ಮವಿವೇಚನೆ ಇವುಗಳ ಮೂಲಕ ಬೆಳೆಯುವ ಕಥೆಯಲ್ಲಿ ಒಂದು ಸಜೀವ, ಸತ್ವಪೂರ್ಣ, ಕಲ್ಯಾಣಕಾರಿ ಸಂಸ್ಕಾರದ ರೂಪ ಹೇಗಿರಬೇಕು ಎಂಬ ಮಾತು ಸೂಚಿತವಾಗಿದೆ. ಬ್ರಾಹ್ಮಣ್ಯ ಜಾತಿಯ ಅರಿವು ಮಾತ್ರವಾಗಿದ್ದರೆ ಸಾಲದು. ಅದು ಒಂದು ಸಂಸ್ಕಾರ ಬಲವಾಗಬೇಕು ಎಂಬ ಮಾತೂ ಇದರಲ್ಲಡಗಿದೆ. ಇಲ್ಲಿಯ ಚಿಂತನೆ ಬ್ರಾಹ್ಮಣ ಧರ್ಮಕ್ಕೆ ಮಾತ್ರ ಅನ್ವಯಿಸುವಂತಹದಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಯಾವುದೇ ಧರ್ಮವಾಗಲಿ, ಎಂತಹದೇ ವಿದ್ಯೆಯಾಗಲೀ ಅವು ವ್ಯಷ್ಟಿ ಮತ್ತು ಸಮಷ್ಟಿ ನೆಲೆಗಳೆರಡರಲ್ಲೂ ಸಕ್ರಿಯ ಸ್ವರೂಪವನ್ನು ಪಡೆಯದಿದ್ದಲ್ಲಿ, ನಿಂತ ನೀರಿನ ಹಾಗೆ, ದುರ್ವಾಸಪುರದ ಹಾಗೆ ಕೊಳೆಯುವ ಮಡುವಾಗಿ ಉಳಿಯುವವು. ಆದರೆ ಕಥೆಯ ಮುಕ್ತಾಯದಲ್ಲಿ ಪ್ರಾಣೇಶಾಚಾರ್ಯರಲ್ಲಿ ಇಂತಹ ಒಂದು ಸಂಸ್ಕಾರ ಬಲ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುವುದಿಲ್ಲ, ಇದರ “ಅರಿವು” ಅಷ್ಟೇ ಕಥಾವಸ್ತುವಿನ ಪರಿಮಿತಿಗೆ ಒಳಪಟ್ಟಿದ್ದು. ಈ ಅರಿವಿನ ಪರಿಣಾಮರೂಪ ಕಥೆಗೆ ಹೊರತಾದ್ದು. ಯಾವುದೇ ಜ್ಞಾನದ ಪರಿಣಾಮಕಾರಿ ರೂಪವನ್ನು ಕೇವಲ ಉದ್ದೇಶದಿಂದ ನಿರ್ಧರಿಸುವುದು ಸಾಧ್ಯವಿಲ್ಲವಾದ್ದರಿಂದ ಅಂತಹ ಉದ್ದೇಶ ಈ ಕಥೆಯ ಪರಿಮಿತಿಗೆ ಒಳಪಟ್ಟದ್ದಲ್ಲ.

“ಪ್ರಾಯಶಃ ಅವನ ಶವದ ಸುತ್ತ ಬೆಂಕಿ ನೆಗೆದಾಡಿದರೆ ಒಂದು ಸಮಾಧಾನ. ಹೇಳುವಾಗ ಪಶ್ಚಾತ್ತಾಪದ ಸೋಂಕಿರಕೂಡದು, ತಾನು ಪಾಪಿಯಾಗಿಬಿಟ್ಟೆನೆಂಬ ದುಃಖವಿರಕೂಡದು, ಇಲ್ಲವೇ ದ್ವಂದ್ವ ಕಳೆಯದು ಮಹಾಬಲನನ್ನು ನೋಡಬೇಕು. ನಮ್ಮ ನಿಶ್ಚಯದಲ್ಲಿ ನಾವು ಗಳಿಸಿಕೊಳ್ಳುವ ಸ್ವರೂಪ ಮಾತ್ರ ಖಾತ್ರಿಯಾಗಿ ನಮ್ಮದೆಂದು ಅವನಿಗೆ ಹೇಳಬೇಕು. “ಲಲಿತಲವಂಗಲತಾಪರಿಶೀಲನಕೋಮಲ ಮಲಯ ಸಮೀರೇ” ಎಂಬುವುದಾದರೂ ನಿಜವೇ, ಹಾಗಾದರೆ ನಿನಗೇನೂ ಈಗ ದೇವರ ಹಂಬಲವೇ ಇಲ್ಲವೇ ಎಂದು ಕೇಳಬೇಕು’ (ಪುಟ 142) ಎಂದರೆ, ತನ್ನ ವಿಚಾರ, ಅನುಭವಗಳಿಂದ ಬೇರೆಯಾದ ಒಂದು ಮಾರ್ಗವನ್ನು ಹಿಡಿದ ಮಹಾಬಲನನ್ನು ನೋಡಬೇಕು, ಅವನ ತನ್ನ ಅನುಭವಗಳ ತುಲನೆ ಮಾಡಬೇಕು ಎಂಬುದೇ ಪ್ರಾಣೇಶಾಚಾರ್ಯರ ಸ್ಥಿತಿ ಈಗ. ಇನ್ನೂ ಯಾವುದೂ ಖಚಿತವಾದ ರೂಪ ತಾಳಿಲ್ಲ. ದ್ವಂದ್ವ ಕಳೆದಿಲ್ಲ. ಇದು ಕಥಾವಸ್ತುವಿಗೆ ಪುಷ್ಟಿ ಕೊಡುವ ಅನುಭವದ ಪ್ರಾಮಾಣಿಕ ಮಿತಿ. ಹೀಗಾಗಿ ಗಾಡಿ ಹತ್ತಿದ ಮೇಲೆ, ಇನ್ನೂ ನಾಲ್ಕೈದು ಘಂಟೆಗಳ ಪ್ರಯಾಣ ಇದೆ ಎನ್ನಿಸಿ ಪ್ರಾಣೇಶಾಚಾರ್ಯರು ‘ನಿರೀಕ್ಷೆಯಲ್ಲಿ, ಆತಂಕದಲ್ಲಿ, ಕಾದರು.’

ಪ್ರಾಣೇಶಾಚಾರ್ಯರು ತಮ್ಮ ವಿದ್ಯೆ, ಧಾರ್ಮಿಕ ಮನೋವೃತ್ತಿ ಇವುಗಳಿಂದ ಕಂಡುಕೊಂಡ ಮಾರ್ಗ ಸುಳ್ಳಲ್ಲದಿದ್ದರೂ, ಅದು ಅನುಭವದ ಅಗ್ನಿಪರೀಕ್ಷೆಗೆ ಗುರಿಯಾಗಿಲ್ಲ. ಧರ್ಮ, ಆಚಾರಗಳ ಬಗೆಗಿನ ಗೌರವದಿಂದ ಹುಟ್ಟಿದ ಹಠದ ಮುಷ್ಟಿಯಲ್ಲಿ ಬಂಧಿತವಾಗಿ ಬಿಟ್ಟಿದೆ. ಆದ್ದರಿಂದ ಇದು ಸಕ್ರಿಯ ಶಕ್ತಿಯಾಗಿ ಮಾರ್ಪಡುವ ಅವಕಾಶ ಹೊಂದಿಲ್ಲ.

ಆಚಾರ್ಯರಿಗೆ ಚಂದ್ರಿಯೊಡನೆ ಆಗುವ ಸಮಾಗಮ ಇಂತಹ ಒಂದು ಪರೀಕ್ಷೆಯ ಘಳಿಗೆಯಾಗಿ ಪರಿಣಮಿಸುತ್ತದೆ. ಮುಂದೆ ಅವರಲ್ಲಿ ದ್ವಂದ್ವದ ಬೆಂಕಿಯನ್ನು ಉರಿಸಿ ಆತ್ಮ ವಿವೇಚನೆಗೆ ದಾರಿ ಮಾಡಿಕೊಡುತ್ತದೆ.

ಇನ್ನು ಕಥೆಯ ಶಿಲ್ಪದ ಬಗ್ಗೆ ಕೆಲವು ಮಾತುಗಳು: ಪ್ರಾಣೇಶಾಚಾರ್ಯರ ಜ್ಞಾನಮಾರ್ಗದಲ್ಲಿ ನಾರಣಪ್ಪನ ಪಾತ್ರ ಮಹತ್ವದ್ದು. ಅವನ ಶವದ ಸಂಸ್ಕಾರ ಪ್ರಾಣೇಶಾಚಾರ್ಯರ ಬ್ರಾಹ್ಮಣ್ಯಕ್ಕೆ ಪ್ರಶ್ನೆಯಾಗಿ ಬರುವ ವಿಷಯ, ಒಂದು ಸಣ್ಣ ಮಾತನ್ನು ಅವಲಂಬಿಸಿದ್ದು, ಆ ಮಾತೆಂದರೆ, ಆಚಾರ್ಯರು ಶಾಸ್ತ್ರಗಳಲ್ಲಿ ಶವಸಂಸ್ಕಾರಕ್ಕೆ ಅನುಮತಿ ಕೊಡುವ ವಿಧೇಯಕವನ್ನು, ಆಪದ್ಧರ್ಮದ ಮಾರ್ಗವನ್ನು, ಹುಡುಕಲಾರದೇ ಹೋದದ್ದು.

ಶವಸಂಸ್ಕಾರಕ್ಕೆ ಬೇರೆ ಬೇರೆ ಧೋರಣೆಗಳಿಂದ ಅನುಮತಿ ಸಿಕ್ಕುವುದು ನಿಜ. ಪಾರಿಜಾತಪುರದವರು ತಮ್ಮ ಪ್ರತಿಷ್ಠೆಯನ್ನು ತೋರಿಸಿಕೊಳ್ಳುವುದಕ್ಕೆ ಆಚಾರರಂತಹವರು ಪೇಚಿನಲ್ಲಿ ಬಿದ್ದಾಗ ತಾವು ಶವಸಂಸ್ಕಾರಕ್ಕೆ ಒಂದು ಮಾರ್ಗವನ್ನು ತೋರಿಸಿದೆವು ಅನ್ನಿಸಿಕೊಳ್ಳುವುದಕ್ಕೆ ದುರ್ವಾಸಪುರದವರ ಬಂಗಾರದ ಮೋಹ, ಕ್ಷುಲ್ಲಕತನ ಇವುಗಳನ್ನು ಎತ್ತಿ ತೋರಿಸುವುದಕ್ಕೆ.-

ಉಡುಪಿ ಮಠದ ಗುರುಗಳು ನಾರಣಪ್ಪನ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ –
ದಾಸಾಚಾರ್ಯ ತನ್ನ ಹಸಿವು ತಡೆಯಲಾರದೆ.-

ಹೀಗೆ ನಾನಾ ರೀತಿಯಲ್ಲಿ, ಸ್ವಪ್ರಯೋಜನದ ದೃಷ್ಟಿಯಿಂದ ಹುಟ್ಟಿದ ಕಾರಣಗಳಿಗಾಗಿ ಶವಸಂಸ್ಕಾರಕ್ಕೆ ಅನುಮತಿ ಸೂಚಿಸಲ್ಪಡುತ್ತದೆ. ಆದರೆ, ಇವೆಲ್ಲ ತಪ್ಪಾದರೂ, ಶಾಸ್ತ್ರದಲ್ಲಿ ನಿಜವಾಗಿಯೂ ಇಂತಹ ಒಂದು ಸಂದಿಗ್ಧ ಸ್ಥಿತಿಯಿಂದ ವಿಮೋಚನಾಮಾರ್ಗ ಇರಲಿಲ್ಲವೇ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಅಥವಾ ಅಂತಹ ಮಾರ್ಗವಿದ್ದೂ ಅದು ಆಚಾರ್ಯರ ವಿದ್ವತ್ತಿಗೆ ಎಟುಕದೇ ಇತ್ತೆ ? ಇವುಗಳಲ್ಲಿ ಯಾವ ಪ್ರಶ್ನೆಗಾದರೂ ಉತ್ತರ ಸಿಗಲಿ, ಸಿಗದೇ ಇರಲಿ, ಇವು ಶವಸಂಸ್ಕಾರದ ಸಮಸ್ಯೆಯನ್ನು ಸಾಮಾಜಿಕ ಮಟ್ಟಕ್ಕೆ ತರುತ್ತವೆ, ಶವಸಂಸ್ಕಾರದ ಸಮಸ್ಯೆ ಪ್ರಾಣೇಶಾಚಾರ್ಯರಿಗೆ ವೈಯಕ್ತಿಕವಾದ ಸಮಸ್ಯೆ ಅನ್ನಿಸುವುದಿಲ್ಲ, (ಪ್ರಾಯಶಃ ಅವನ ಶವದ ಸುತ್ತ ಬೆಂಕಿ ನೆಗೆದಾಡಿದರೆ ಒಂದು ಸಮಾಧಾನ’ ಪುಟ 142) ಪ್ರಾಯಶಃ ಅಷ್ಟೆ. ಅದೂ ಸಮಾಧಾನರೂಪವಾಗಿ ಮಾತ್ರ ಸಮಸ್ಯೆಯ ಪರಿಹಾರರೂಪವಾಗಿ ಅಲ್ಲ. ಆದರೆ ಜೀವಂತ ನಾರಣಪ್ಪ, ಶಾಸ್ತ್ರದ ದೃಷ್ಟಿಯಿಂದ ಹೊರತಾಗಿಯೂ, ಒಟ್ಟು ಒಂದು ಸಂಸ್ಕಾರದ ಮೌಲ್ಯದ ನೆಲೆಯಲ್ಲಿಯೂ, ಪ್ರಾಣೇಶಾಚಾರ್ಯರಿಗೆ ವೈಯಕ್ತಿಕವಾದ ಸಮಸ್ಯೆಯಾಗಿದ್ದ. ಹೀಗಾಗಿ ಆಚಾರ್ಯರ ವೈಯಕ್ತಿಕ ಸಮಸ್ಯೆಗೆ ನಾರಣಪ್ಪನ ಶವದ ಸಂಸ್ಕಾರ, ಜೀವಂತ ನಾರಣಪ್ಪನಂತೆ ಸಾಕಷ್ಟು ಮೂರ್ತವಾದ ಬಲಯುತವಾದ ಪ್ರೇರಕವಾಗುವುದಿಲ್ಲ.

ವ್ಯಷ್ಟಿ ಮತ್ತು ಸಮಷ್ಠಿ ನೆಲೆಗಳೆರಡರಲ್ಲೂ, ಸಕ್ರಿಯ ಸ್ವರೂಪವನ್ನು ಪಡೆಯಬಲ್ಲ ಶಕ್ತಿಯೇ ಸಾರ್ಥಕ ಸಂಸ್ಕಾಗಬಲವಾಗಬಲ್ಲದು ಎಂಬ ಮಾತನ್ನು ಹೇಳಿದ್ದಾಗಿದೆ.

ಈ ದೃಷ್ಟಿಯಿಂದ ಪ್ರಾಣೇಶಾಚಾರ್ಯರ ಪಾತ್ರ ಚಿತ್ರಣ ಒಂದು ಪರಿಪೂರ್ಣ ಸಾಧನೆಯಾಗಿಲ್ಲ, ಸಾಹಸಮಯ ಪ್ರಯತ್ನವಾಗಿದೆ.

ಮೊದಲನೆಯ ಭಾಗದಲ್ಲಿ ಆಚಾರ್ಯರ ಕೃತಿಗಳಲ್ಲಾಗಲೀ, ವಿಚಾರಗಳಲ್ಲಾಗಲೀ ವ್ಯಷ್ಟಿ ಮತ್ತು ಸಮಷ್ಟಿ ನೆಲೆಗಳೆರಡರ ನಡುವೆ ಭೇದ ಕಂಡುಬರುವುದಿಲ್ಲ. ಆದರೆ ಎರಡನೇ ಭಾಗದಿಂದ, ಆಚಾರ್ಯರ ಪ್ರಜ್ಞೆ ಅನಿವಾರ್ಯವಾಗಿ ವೈಯಕ್ತಿಕ ನೆಲೆಯಲ್ಲಿ ಮಾತ್ರ ತನ್ನತನವನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ತೊಡಗುತ್ತದೆ. ಸಾಮಾಜಿಕ ನೆಲೆಯನ್ನು ಪೂರ್ಣವಾಗಿ ಬಿಟ್ಟುಕೊಡಬೇಕಾಗುತ್ತದೆ. (“ಮಾರ್ಗದರ್ಶನ ಮಾಡಬೇಕಾದ ತನ್ನ ಜವಾಬ್ದಾರಿ, ಅಧಿಕಾರ ನಾಶವಾಗಿ ತಾನು ಸ್ವತಂತ್ರನಾದೆ ಎಂದು ಹಗುರೆನ್ನಿಸಿತು…, ಪುಟ 81) ಮತ್ತು (“ನಾನು ಸೋತೆ…. ನನಗೆ ಏನೂ ತಿಳಿಯದು ಈಗ ನೀವು ನಿಮ್ಮ ನಿಮ್ಮ ಮನಸ್ಸಿಗೆ ಅನ್ನಿಸಿದಂತೆ ಮಾಡಿ.” ಪುಟ 82)

ಇದು ಕತೆಯ ಒಟ್ಟು ಶಿಲ್ಪದಲ್ಲಿ ಒಂದು ಬಿರುಕು, ಪ್ರಾಣೇಶಾಚಾರ್ಯರು ವೈಯಕ್ತಿಕವಾಗಿ ತಮ್ಮ ದಾರಿಯನ್ನು ತಾವು ಕಂಡುಕೊಂಡರೂ, ಅವರಿಗೆ ಸಿಕ್ಕುವ ಉತ್ತರ, ದುರ್ವಾಸಪುರದ ಸಮಸ್ಯೆಗೆ ಸಮಂಜಸವಾದ ಉತ್ತರವಲ್ಲ.

ಶಾಸ್ತ್ರಜ್ಞಾನ, ಶ್ರದ್ಧೆ, ಆಚಾರ ಇವುಗಳ ಉಪಯೋಗ ಎಷ್ಟೇ ನಿಷ್ಠೆಯಿಂದ ಮಾಡಲ್ಪಟ್ಟರೂ, ಅದು ಜೀವನವನ್ನು ಗೊಡ್ಡಾಗಿಸಬಾರದು, ಬರಡು ಮಾಡಬಾರದು. ಅಥವಾ ಬರಿಯ ನಾಮಗುಣವಾಗಿ ನಿರ್ಲಕ್ಷವಾಗಿಯೂ ಉಳಿಯಬಾರದು, ಅದು ನೈಜವಾದ, ಪ್ರಕೃತಿಸಹಜವಾದ, ಸಫಲ, ಆರೋಗ್ಯಕರ ಜೀವನಕ್ಕೆ ದಾರಿಯಾಗಬೇಕು. ನಾರಣಪ್ಪನಲ್ಲಿ ಶಾಸ್ತ್ರಜ್ಞಾನ ಒಂದು ವಿಷವು ಶಕ್ತಿಯಾಗಿ ಬೆಳೆಯುತ್ತದೆ. ಉಳಿದ ಬ್ರಾಹ್ಮಣರಲ್ಲಿ ಮೂಢ, ಸತ್ವಹೀನ, ಸ್ವಪ್ರಯೋಜಕ ಡಂಭಾಚಾರವಾಗುತ್ತದೆ. ಈ ಎರಡು ಗುಂಪುಗಳಿಗೂ ಸೇರದೆ ಉತ್ತಮರಾದ ಪ್ರಾಣೇಶಾಚಾರ್ಯರ ಇದು ಬಂಧಿತ ಶಕ್ತಿಯಾಗಿಯೇ ಉಳಿಯುತ್ತದೆ, ವಿಕಾಸಗೊಳ್ಳುವುದಿಲ್ಲ, ಶ್ರದ್ಧೆ ಇದ್ದರೂ, ಶಾಸ್ತ್ರಜ್ಞಾನ ಮಾನವತೆಯ ಮೌಲ್ಯಗಳಿಂದ ಪುಷ್ಟಿಗೊಳ್ಳದೇ ಇರುವುದೇ ಇದಕ್ಕೆ ಕಾರಣ, ಯಾವುದೇ ವ್ಯಕ್ತಿಯಲ್ಲಾಗಲೀ, ಸಮಾಜದಲ್ಲಾಗಲೀ, ಶಾಸ್ತ್ರ, ಆಚಾರ, ಧರ್ಮ ಇವು ಸಂಸ್ಕಾರಬಲವಾಗಿ ರೂಪುಗೊಳ್ಳಬೇಕಾದರೆ, ಅಂಧಶ್ರದ್ಧೆ, ನಂಬಿಕೆ, ನಿಷ್ಠೆ ಇವುಗಳ ಆಧಾರದಮೇಲೆ ಬೆಳೆದರೆ ಸಾಲದು, ಜೀವನಾನುಭವದಿಂದ ಪುಷ್ಟಿಗೊಳ್ಳಬೇಕು.

ಇದು ಪ್ರಾಣೇಶಾಚಾರ್ಯರಲ್ಲಿ ಇಲ್ಲದೇ ಇರುವುದರಿಂದ, ಒಂದುಕಡೆ ನಾರಣಪ್ಪ, ಶ್ರೀಪತಿ ಇಂತಹವರು ಸಕ್ರಿಯಸತ್ವವಿಲ್ಲದಿದ್ದರೂ, ಆಚಾರ್ಯರೆದುರಿಗೆ ಸಮಸ್ಯೆಗಳಾಗಿ ನಿಲ್ಲುತ್ತಾರೆ, ಮತ್ತೊಂದು ಕಡೆ, ಮಹಾಬಲ, ನಿಂತಲ್ಲಿ ಪರಮಾತ್ಮನ ಅನುಭವ ಆಗಿಬಿಡಬೇಕೆಂದು ಹೇಳುತ್ತಿದ್ದವನು, ಇದ್ದಕ್ಕಿದ್ದಂತೆ ವ್ಯಾಸಂಗವನ್ನು ಬಿಟ್ಟು, ಭ್ರಷ್ಟನಾಗಿ ವೇಶ್ಯೆಯ ಮೊರೆಹೊಕ್ಕು ಗುಡಿಗುಡಿ ಸೇದುತ್ತಾ ಕೂರುತ್ತಾನೆ.

ಇವೆಲ್ಲಾ ತುಮುಲದಿಂದ ಮಂಥನಗೊಂಡು ಬರುವ ಆಚಾರ್ಯರ ಧೋರಣೆಯ ಆದರ್ಶವಾದದಲ್ಲಿ ಎಂದರೆ, ಮತ್ಯಾವ ಮಾರ್ಗ ಮಾನವ ಸಮಾಜಕ್ಕೆ ಆದರ್ಶವಾದೀತು ಎಂಬ ಪ್ರಶ್ನೆ ಉದ್ಭವಿಸಬಹುದು.

ಶವಸಂಸ್ಕಾರದ ಬಗ್ಗೆ ಆಪದ್ಧರ್ಮವನ್ನು ಹುಡುಕುವುದು ದೊಡ್ಡ ಮಾತಲ್ಲ. ಮಹಾಬಲನೂ ವೈಯಕ್ತಿಕ ನೆಲೆಯಲ್ಲಷ್ಟೇ ಸಮಸ್ಯೆಯಾಗಿದ್ದವನು. ಆದರೆ ಜೀವಂತ ನಾರಣಪ್ಪ ವ್ಯಷ್ಟಿ ಮತ್ತು ಸಮಷ್ಟಿ ನೆಲೆಗಳೆರಡರಲ್ಲೂ ಸಮಸ್ಯೆಯಾಗಿ, ಆಚಾರ್ಯರ ಮುಂದೆ ಬಿಡಿಸಲಾರದ ಒಂದು ಪ್ರಶ್ನೆಯಾದವನು ನಾರಣಪ್ಪ ಮತ್ತು ಶ್ರೀಪತಿಗೆ ತಮ್ಮ ವಿವಾಹ ಸಂಬಂಧದಿಂದ ಹುಟ್ಟಿದ ನೈಜವಾದ ವೈಯಕ್ತಿಕ ಸಮಸ್ಯೆಗಳಿಗೂ, ಆ ಸಮಸ್ಯೆಗಳಿಂದ ಸಮಾಜಕ್ಕೆ ತಲೆದೋರುವ ತೊಂದರೆಗಳಿಗೂ, ಆಚಾರ್ಯರು ಪರಿಹಾರ ಮಾರ್ಗವನ್ನು ತೋರಿಸಬಲ್ಲರೇ?

ವಿವಾಹಪೂರ್ವದಲ್ಲಿರದೆ, ವಿವಾಹಾನಂತರ ತಲೆದೋರಬಹುದಾದ, ಇಂತಹ ವೈಯಕ್ತಿಕವಾದರೂ, ಸಮಾಜದ ಮೇಲೆ ತೀವ್ರ ಪ್ರಭಾವವನ್ನು ಬೀರಬಹುದಾದ ಸಮಸ್ಯೆಗಳಿಂದ, ದೇಹಾತೀತ ಪ್ರೇಮ, ಕರುಣೆ, ಅಥವಾ ‘ಸೋಲನ್ನೊಪ್ಪಿ ಸಾಮಾಜಿಕ ಕಟ್ಟುಪಾಡುಗಳಿಗೆ ಅನ್ವಯಿಸಿಕೊಳ್ಳುವ ಧೋರಣೆ ಇವುಗಳನ್ನು ಬಿಟ್ಟು, ಯಾವುದಾದರೂ ವಿಮೋಚನಮಾರ್ಗ ಶಾಸ್ತ್ರದಲ್ಲಿ ಸಿಕ್ಕೀತೆ ?

ಪುರಾಣದ ಋಷಿಗಳಂತೆ ಮತ್ಸಗಂಧಿಯನ್ನು ತಬ್ಬಿ ಮಲಗುವ ಧೋರಣೆ, ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯವಾಗಬಲ್ಲುದೇ ?

ಇಡೀ ಕಾದಂಬರಿ, ಅದರಲ್ಲೂ ” ಮೊದಲನೆಯ ಭಾಗ ಸ್ವಲ್ಪಮಟ್ಟಿಗೆ ಜಿಜ್ಞಾಸಾಪೂರ್ವಕವಾಗಿರುವುದರಿಂದ ಈ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಪ್ರಾಣೇಶಾಚಾರ್ಯರ ಪಾತ್ರ ಸತ್ವಶಃ ವ್ಯಕ್ತಿನಿಷ್ಠವಾದ್ದರಿಂದ, ಈ ಪ್ರಶ್ನೆಗಳಿಗೆ ಉತ್ತರ ಕಥೆಯ ಪರಿಮಿತಿಯಲ್ಲಿ ಸಿಗಲಾರದು.

ಪ್ರಾಣೇಶಾಚಾರ್ಯರ ಪಾತ್ರಚಿತ್ರಣದ ಬಗ್ಗೆ ಒಂದು ಪ್ರಶ್ನೆ. ಚಂದ್ರಿಯೊಡನೆ ಸಮಾಗಮವಾದಮೇಲೆ, ಪ್ರಾಣೇಶಾಚಾರ್ಯರು ತಮ್ಮ ಜೀವನದ ಇಡೀ ಧೋರಣೆಯನ್ನೇ ವಿವೇಚಿಸುತ್ತಾರೆ. ಅವರ ಪೂರ್ಣ ವ್ಯಕ್ತಿತ್ವ ಹೊಸದಾಗಿ ರೂಪುಗೊಳ್ಳದಿದ್ದರೂ, ಈ ಪ್ರಜ್ಞೆ ಹೊಸದು. ಆದರೆ ಈ ಪ್ರಜ್ಞೆಯಲ್ಲೂ ಅವರ ಹಳೆಯ ಸಾತ್ವಿಕಭಾವ ತಾನೇ ತಾನಾಗಿ ವಿರಾಜಿಸುತ್ತದೆ. ತಮ್ಮ ಮತ್ತು ತಮ್ಮ ಹೆಂಡತಿಯ ಸಂಬಂಧದ ಬಗ್ಗೆ ಅವರ ಈ ಹೊಸ ಪ್ರಜ್ಞೆಯಲ್ಲಿ ಸಾಕಷ್ಟು ತುಮುಲ ಹುಟ್ಟಿದ್ದರೂ, ಈ ತುಮುಲ ಸಾತ್ವಿಕವಾಗಿಯೇ ಅಭಿವ್ಯಕ್ತಗೊಳ್ಳುತ್ತದೆ. “ಸ್ವಭಾವತಃ ಸುಖಿಯಾದ ಚಂದ್ರಿಗೆ ಆತ್ಮಾವಹೇಳನದ ಪದ್ಧತಿಯ ಮಾತುಗಳ ಪರಿಚಯವಿರಲಿಲ್ಲ” ಆದರೆ ಪ್ರಾಣೇಶಾಚಾರ್ಯರಿಗೆ? ಪುಟ್ಟನಂತೆ ಸರಳ ಮನಸ್ಸಿನವರಲ್ಲದವರಿಗೆ ಪ್ರಾಣೇಶಾಚಾರ್ಯರೇ ಸ್ವತಃ “ಚಕ್ರ, ಕರ್ಮಚಕ್ರ, ಇದು ರಜಸ್ಸು, ಕಾಮವನ್ನು ನಾನು ಬಿಟ್ಟರೂ ಕಾವು ನನ್ನನ್ನು ಬಿಡಲಿಲ್ಲ” ಎಂಬುದನ್ನು ಹೇಳಿದರೂ ಅವರು ತಮ್ಮನ್ನು ವಿವೇಚಿಸಿಕೊಳ್ಳುವ ಮನಸ್ಸಿನ ನೆಲೆ ಮತ್ತು ಧ್ವನಿ ಸಾತ್ವಿಕವಾಗಿಯೇ ಉಳಿಯುತ್ತದೆ. ಆಚಾರ್ಯರು ತುಮುಲ ದ್ವಂದ್ವಗಳನ್ನು ಕಳೆದು ಮತ್ತೆ ಸಾತ್ವಿಕತೆಗೆ ಮರಳುವುದು ಸಹಜವೇ ಸರಿ. ಆದರೆ ಅವರೇ ಹೇಳುವಂತೆ ದ್ವಂದ್ವ ಇನ್ನೂ ಕಳೆದಿಲ್ಲ. (“ದ್ವಂದ್ವ ಕಳೆಯದು.” ಪುಟ 142) ಪಶ್ಚಾತ್ತಾಪದ ಸೋಂಕು, ತಾನು ಪಾಪಿಯಾಗಿ ಬಿಟ್ಟೆನೆಂಬ ದುಃಖ ಇರಕೂಡದು ಎನ್ನುತ್ತಾರೆ ಅವು ಸ್ವಲ್ಪಮಟ್ಟಿಗಾದರೂ ಇವೆ ಎಂದಾಯಿತು. ಆದರೆ ಈ ಭಾವನೆ ಕಥೆಯಲ್ಲಿ ಮೂಡಿ ಬರುವುದಿಲ್ಲ.

ಹೀಗೆ ಅನಿರೀಕ್ಷಿತ ಘಟನೆಗಳಿಂದಾದ ವೈಚಾರಿಕ, ಭಾವನಾತ್ಮಕ ತುಮುಲದಲ್ಲಿ ಸಿಕ್ಕಾಗಲೂ, ಸಾತ್ವಿಕತೆಯನ್ನು ಕಳೆದುಕೊಳ್ಳದೇ ಇರುವುದು ಅಸಹಜ ಎನ್ನಿಸುತ್ತದೆ. ಪ್ರಾಣೇಶಾಚಾರ್ಯರಲ್ಲಿ ನಡೆಯುವ ತುಮುಲದ ತೀವ್ರತೆ, ಅವರಿಂದ ಹೇಳಲ್ಪಟ್ಟಿದೆಯೇ ಹೊರತು, ನಮ್ಮ ಸಂವೇದನೆಗೆ ನಿಲುಕುವುದಿಲ್ಲ. ಅವರು ಬಹುಮಟ್ಟಿಗೆ ತಮ್ಮನ್ನು ವಿವೇಚಿಸಿಕೊಳ್ಳುವವರಂತೆ ಕಾಣದೆ, ಪೂರ್ವಗೃಹೀತ ದೋಷಗಳಿಂದ ವಿಮೋಚನೆಗೊಂಡ ಬಿಚ್ಚು ಮನಸ್ಸಿನಿಂದ ತಮ್ಮಿಂದ ಹೊರತಾದ ಮತ್ತೊಬ್ಬರನ್ನು ವಿವೇಚಿಸುವವರಂತೆ ಕಾಣುತ್ತಾರೆ. ಒಂದು ಅನುಭವ ಆಗುವುದೇ ತಡ, ಅದರ ಬಗ್ಗೆ ಸತ್ವಪೂರ್ಣ ವಿವೇಚನೆ ಮಾಡತೊಡಗುತ್ತಾರೆ.

ಕಥೆಗೆ ಅಳವಡಿಸಿಕೊಂಡಿರುವ ತಂತ್ರ ಬಹುಮಟ್ಟಿಗೆ ಪರಿಣಾಮಕಾರಿಯಾಗಿದೆ. ಪರಸ್ಪರ ವಿರೋಧ ಪಾತ್ರಗಳಾದ ನಾರಣಪ್ಪ ಮತ್ತು ಮಹಾಬಲ, ಆಚಾರ್ಯರ ಪಾತ್ರವನ್ನು ಮೂರ್ತಗೊಳಿಸುವಂತೆ, ಅದಕ್ಕೆ, ತಮ್ಮ ಪರೋಕ್ಷ ಇರುವಿಕೆಯಿಂದಲೇ ಅರ್ಥತುಂಬುವಂತೆ, ಸನ್ನಿವೇಶಗಳ ಜೋಡಣೆಯಲ್ಲಿಯೂ, ಮಂಜಯ್ಯನವರ ಸುಶಿಕ್ಷಿತ ನಾಗರಿಕತೆಯ ಕುರುಹಾದ (antiseptic, clinical ಧೋರಣೆ) ಪ್ಲೇಗಿನ ಬಗೆಗಿರುವ ತಿಳುವಳಿಕೆ, ಎಚ್ಚರಿಕೆ ಒಂದು ಕಡೆ ; ಮುಗ್ಧವಾದರೂ, ಉದ್ದೇಶಿತವಲ್ಲದ, ಸಂಪ್ರದಾಯದಿಂದ ಬಂದಿದ್ದರೂ ಅದರ ಪ್ರಜ್ಞೆಯೂ ಇಲ್ಲದ, ಬೆಳ್ಳಿ, ಚಂದ್ರಿಯರ, ಒಟ್ಟು ಹೊಲಗೇರಿಯ ಶುಭ್ರತೆ ಮತ್ತೊಂದು ಕಡೆ; ಇವು ದುರ್ವಾಸಪುರದಲ್ಲಿ ಬ್ರಾಹ್ಮಣರ ಮಡಿವಂತಿಕೆಯಿಂದ ಉಂಟಾದ ಅವರು, ಎಷ್ಟೇ ಉದ್ದೇಶಿಸಿದರೂ ಕಳೆಯಲಾರದ ಹೊಲಸು ದುರ್ನಾತದ ಈ ಸನ್ನಿವೇಶವನ್ನು ಮೂರ್ತಗೊಳಿಸುತ್ತವೆ.

ಮೊದಲನೆಯ ಭಾಗದ ಪ್ರಾರಂಭದಲ್ಲಿ ಬ್ರಾಹ್ಮಣರ ಬಗ್ಗೆ ಅನಾವಶ್ಯಕ ಕೋಪ ಪ್ರಕಟವಾದಂತೆ ಕಾಣುತ್ತದೆ. ದಾಸಾಚಾರ್ಯನ ಹಸಿವು, ಲಕ್ಷ್ಮಣಾಚಾರನ ಹೊಟ್ಟೆ, ಕುಚೇಲತನ, ಒಟ್ಟು ಬ್ರಾಹ್ಮಣರ ಜಿಹ್ವಾಚಾಪಲ್ಯ, ಕ್ಷುಲ್ಲಕತನ ಇವೆಲ್ಲಾ, ಕೆಲವೆಡೆ, ಕಥೆಯ ಮೂಡಿಗೆ ಬೇಕಾದುದಕ್ಕಿಂತ ಹೆಚ್ಚು ವ್ಯಂಗ್ಯವನ್ನು ಸಹಿಸಬೇಕಾಗುತ್ತದೆ. ಒಮ್ಮೆ ತಿಳಿಸುವ ವಿಷಯವನ್ನು, ಮತ್ತೆ ಮತ್ತೆ ವ್ಯಂಗ್ಯದಿಂದ ಆಡಿ, ರೊಚ್ಚಿನ ಕೋಲನ್ನು ಹಿಡಿದು ನಗಾರಿ ಬಾರಿಸಿದ ಹಾಗಾಗಿದೆ. ಸನ್ನಿವೇಶವನ್ನು ಚಿತ್ರಿಸುವ ಪ್ರಯತ್ನಕ್ಕಿಂತ ಹೆಚ್ಚಾಗಿ, ಪಾತ್ರಗಳನ್ನು ಬಯಲಿಗೆಳೆಯುವ ಚಿಂತನೆ ಹೆಚ್ಚಾಗಿದೆ.*

ಆದರೆ ಮುಂದೆ ಕಥೆ ಬಿಗಿಗೊಳ್ಳುತ್ತದೆ. ದುರ್ವಾಸಪುರದ ಬ್ರಾಹ್ಮಣರ ಮೌಡ್ಯ, ಕುಲ್ಲಕತನ ಆಳದಿಂದ ಆಳಕ್ಕೆ ಇಳಿದಂತೆ, ಇಲಿಗಳೂ ಹದ್ದುಗಳೂ ಬಂದು ಅವರನ್ನೂ ಅಗ್ರಹಾರವನ್ನೂ ಹೊರಗಿನಿಂದಲೂ ಆವರಿಸುತ್ತವೆ. ದುರ್ನಾತ ಅಗ್ರಹಾರದಲ್ಲೆಲ್ಲಾ ಅಡರುತ್ತದೆ. ಹದ್ದುಗಳನ್ನು ಓಡಿಸಲು ಬಾರಿಸಿದ ಜಾಗಟೆಯ ಶಬ್ದದಂತೆ, ಅಗ್ರಹಾರದ ಬ್ರಾಹ್ಮಣರ ಮನಸ್ಸಿನಲ್ಲಿ ನಾರಣಪ್ಪನ ಸಾವಿನಿಂದ ಉಂಟಾದ ಗೊಂದಲ, ಗುಂಯ್‌ಗುಟ್ಟುತ್ತದೆ. ವಿಧವೆ ಲಕ್ಷ್ಮೀದೇವಮ್ಮ, ‘ಹೇಮ್’ ಎಂದು ತೇಗುತ್ತಾ ಅಸಹ್ಯವನ್ನುಂಟುಮಾಡುತ್ತಾ, ಹಾಗೆಯೇ ಕೆಲವು ಕಠೋರ ಸತ್ಯಗಳನ್ನೂ ಹೇಳುತ್ತಾಳೆ.

ಕೆಲವು ಪ್ರತಿಮೆಗಳ ಉಪಯೋಗ ಬಹಳ ಸಾರ್ಥಕವಾಗಿದೆ.

ಕಾವ್ಯದಲ್ಲೇ ಆಗಲಿ, ಕಥೆಯಲ್ಲೇ ಆಗಲಿ ಯಾವುದಾದರೊಂದು ಪ್ರತಿಮೆಯ ಪ್ರತೀಕಾರ್ಥ ಸಾರ್ಥಕವಾಗಬೇಕಾದರೆ, ಅನಂತಮೂರ್ತಿಯವರದೇ ಆದ ‘ಕಾರ್ತಿಕ’ ದಲ್ಲಿಯ ಕಾರ್ತಿಕ ಹಬ್ಬದಂತೆ, ‘ಪ್ರಶ್ನೆ’ ಯಲ್ಲಿಯ ಹುಲಿಯ ಭಯದಂತೆ, ಅಡಿಗರ ಕವನ ‘ಪ್ರಾರ್ಥನೆ’ ಯಲ್ಲಿಯ ದೊಂದಿಯಂತೆ, “ಸಂಸ್ಕಾರ” ದಲ್ಲಿಯ ಊರ ಹೊರಗಿನ ಹೊಲೆಯರ ಗುಡಿಸಲುಗಳಂತೆ, ಆ ಪ್ರತಿಮೆ ಕಥೆಯ ಪರಿಸರದಲ್ಲಿ ಅದರ ಪ್ರಕೃತಿಗೆ ಸಹಜವಾದ ಸ್ಥಾನವನ್ನು ಪಡೆದಿರಬೇಕು. ಅದರ ಪ್ರತೀಕಾರ್ಥ ಓದುಗನ ಮನಸ್ಸಿಗೆ ಕಥೆಯ ಅರ್ಥವನ್ನು ಗ್ರಹಿಸುವ ವಿಧಾನದಲ್ಲಿಯೇ ಹೊಳೆಯಬೇಕು.
* ಪುಟಗಳು : 14, 35, 37, 54, 61,
________________

ಹೊಲಗೇರಿಯಲ್ಲಿ ಪ್ಲೇಗಿನ ಬಗ್ಗೆ ಕಂಡುಬರುವ ಪ್ರತಿಕ್ರಿಯೆ, ಅವರು ಗುಡಿಸಲಿಗೆ ಬೆಂಕಿ ಹಚ್ಚುವುದು, ಅವರ ನಗ್ನತೆ, ಬೆಳ್ಳಿ ಸ್ನಾನಮಾಡಿ ಶ್ರೀಪತಿಯ ಜೊತೆ ಮಲಗುವುದು, ಇವೆಲ್ಲ ಕಥೆಯ ಪ್ರಕೃತಿಗೆ ಸಹಜವಾದ ಸನ್ನಿವೇಶಗಳು, ಇವುಗಳ ಪ್ರತೀಕಾರ್ಥ ಒಮ್ಮೆಲೇ ಗೋಚರವಾಗುವುದಿಲ್ಲ. ಅಷ್ಟೇ ಅಲ್ಲ, ಮುಂದೆ ಆ ಪ್ರತೀಕಾರ್ಥ ಓದುಗರ ಪ್ರಜ್ಞೆಯಲ್ಲಿ ರೂಪುಗೊಳ್ಳುವಾಗಲೂ, ಅದು ಕಥೆಗಾರನ ಉದ್ದೇಶದಿಂದ ಆಗುವುದಿಲ್ಲ. ತನ್ನ ಅರ್ಥವ್ಯಾಪ್ತಿಯ ಸಾರ್ಥಕತೆಯಿಂದ ಆಗುತ್ತದೆ. ಹೀಗೆಯೇ ಮೂರನೆಯ ಭಾಗದಲ್ಲಿ ಜಾತ್ರೆಯಲ್ಲಿ ನಡೆಯುವ ಹುಂಜಗಳ ಕಾಳಗ ಹಾಗೂ ಒಟ್ಟು ಜಾತ್ರೆಯ ಸನ್ನಿವೇಶ, ಪ್ರಾಣೇಶಾಚಾರ್ಯರ ವಿಹ್ವಲ ಮನಸ್ಸಿಗೆ ಸ್ವಲ್ಪವೂ ಓಗೊಡದ, ಸಹೃದಯತೆ ಇಲ್ಲದ ಸಂತಸ, ಗದ್ದಲ; ತನ್ನನ್ನು ಯಾರು ಕಂಡುಹಿಡಿಯುತ್ತಾರೋ ಎಂಬ ಗಾಬರಿ ಇದ್ದರೂ, ಒಂದು ತರಹ ಕಠೋರ ಒಂಟಿತನ; ಹುಂಜಗಳ ಕಾಳಗ ಆಚಾರ್ಯರಲ್ಲಿ ಮೂಡಿಸುವ ಪ್ರಶ್ನೆ ; ಇವೆಲ್ಲಾ ನಾಟಕೀಯವಾಗಿ ಚಿತ್ರಿತವಾಗಿವೆ.

ತಾಂತ್ರಿಕ ದೃಷ್ಟಿಯಿಂದ ಮೂರನೆಯ ಭಾಗ ಬಹಳ ಯಶಸ್ವಿಯಾಗಿದೆ. ಉಳಿದ ಭಾಗಗಳಿಗಿಂತ ಇದು ಹೆಚ್ಚು ಬಿಗಿಯಾಗಿ ಹೆಣೆಯಲ್ಪಟ್ಟಿದೆ. ಉಳಿದ ಭಾಗಗಳ ಹೆಣಿಕೆ ವೈಚಾರಿಕ.’ ಇಲ್ಲಿಯದು ನಾಟಕೀಯ. ಇಲ್ಲಿಯ ಶೈಲಿ, ಮಾಲೇರ ಪುಟ್ಟನ ನಡಿಗೆಯ ತೀವ್ರತೆಗನುಗುಣವಾಗಿ ಓಡುತ್ತದೆ. ಮಾಲೇರ ಪುಟ್ಟ ಆಚಾರ್ಯರನ್ನು ಹಿಂಬಾಲಿಸಿ ಅವರ “ಬೆನ್ನಹತ್ತಿದ ಶನಿಯಾಗಿ,” ಜಾತ್ರೆಯ ಗೊಂದಲವನ್ನೆಲ್ಲಾ ದಾಟಿ, ಕೊನೆಗೆ ಸೂಳೆಯ ಮನೆಗೆ ಕರೆದುಕೊಂಡು ಹೋಗುವ ಸನ್ನಿವೇಶ ಬಹಳ ಪ್ರಭಾವಯುತವಾಗಿದೆ. ಆಚಾರ್ಯರು ಗುಡಿಯಲ್ಲಿ ಊಟಮಾಡುವ ಸನ್ನಿವೇಶವೂ ಕೂಡ ಅಷ್ಟೇ ನಾಟಕೀಯವಾಗಿದೆ. ಅನಂತಮೂರ್ತಿಯವರ ಕಥೆಗಳಲ್ಲಿ, ವಿಶೇಷವಾಗಿ ಸಂಸ್ಕಾರದಲ್ಲಿ. ಘಟನೆಗಳು, ಪಾತ್ರಗಳು ಮತ್ತು ಸನ್ನಿವೇಶಗಳಿಗಿಂತ “ವಿಚಾರ”ದ ಮೇಲೆ ಹೆಚ್ಚು ಅವಲಂಬನ ಕಂಡುಬರುತ್ತದೆ. ಆದರೆ ಮೂರನೆಯ ಭಾಗದಲ್ಲಿ ಇಂತಹ ಧೋರಣೆ ಇಲ್ಲ. ಈ ಭಾಗ ಸಾರ್ಥಕ ಕ್ರಿಯಾವಿಧಾನದ ಮಾದರಿ ಎನ್ನಬಹುದು.
ಒಟ್ಟಿನಲ್ಲಿ “ಸಂಸ್ಕಾರ” ಯಶಸ್ವಿಯಾದ ಕಾದಂಬರಿ ಎಂದು ಹೇಳಲಾಗದೇ ಇದ್ದರೂ, ಸಾರ್ಥಕ ಕೃತಿ ಎಂದು ಹೇಳಬಹುದು. ಕಲ್ಪನೆಯ ವೈಶಾಲ್ಯ, ಧಾರ್ಮಿಕ ಮತ್ತು ವೈಚಾರಿಕ ಚಿಂತನೆಯ ಗಾಂಭೀರ್ಯ, ಅನುಭವದ ಸಂಕೀರ್ಣತೆ, ಅನುಭವಕ್ಕೆ ನಿಲುಕಿದುದರ ಪ್ರಾಮಾಣಿಕ ಅಭಿವ್ಯಕ್ತಿ ಇವುಗಳಿಂದಾಗಿ “ಸಂಸ್ಕಾರ” ಕನ್ನಡ ಸಾಹಿತ್ಯಕ್ಕೆ ಒಂದು ಅರ್ಥಪೂರ್ಣ ಕೊಡುಗೆ.

Close

ಕಾವ್ಯಗುಣಗಳು: ಆಲಂಕಾರಿಕರ ಸಮಸ್ಯೆ

ಪಿ. ನರಸಿಂಹ ಭಟ್ಟ

ಕಾವ್ಯಗುಣಗಳು : ಆಲಂಕಾರಿಕರ ಸಮಸ್ಯೆ

ಅಲಂಕಾರ ಶಾಸ್ತ್ರದಲ್ಲಿ ಅತಿತೊಡಕಿನ ಸಮಸ್ಯೆಯೆಂದರೆ ಕಾವ್ಯಗುಣಗಳ ವಿವೇಚನೆ. ಇದಕ್ಕೆ ಕಾರಣಗಳು ಅನೇಕ. ಮೊದಲನೆಯದಾಗಿ, ಈ ಕಾಲ್ಪನಿಕ ವಸ್ತುಗಳ ಸಂಖ್ಯೆ, ಸ್ಥಾನ ಮೊದಲಾದುವುಗಳನ್ನು ನಿರ್ಣಯಿಸಲು ಎರಡು ಪ್ರತ್ಯೇಕ ವಿಚಾರ ಸರಣಿಗಳು ಹೊರಟಿವೆ. ಈ ಎರಡೂ ಸರಣಿಗಳು ತೀರಾ ಭಿನ್ನ ಸ್ವರೂಪದವುಗಳಾಗಿದ್ದು ಕೊನೆಯವರೆಗೂ ತಮ್ಮ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಇವುಗಳ ಉತ್ಪತ್ತಿಯ ದೃಷ್ಟಿಯಿಂದ ಒಂದನ್ನು ಪ್ರಾಚೀನವೆಂದೂ ಇನ್ನೊಂದನ್ನು ಅರ್ವಾಚೀನವೆಂದೂ ಕರೆಯುವುದು ಸಾಧ್ಯವಾದರೂ ಇತರ ಕೆಲವು ಕಲ್ಪನೆಗಳ ವಿಷಯದಲ್ಲಿ ಸಾಧ್ಯವಾದಂತೆ ಅರ್ವಾಚೀನ ಪಕ್ಷಕ್ಕೆ ಪ್ರಾಚೀನ ಪಕ್ಷವನ್ನು ಮೂಲೆಗೆ ತಳ್ಳಲು ಈ ವಿಷಯದಲ್ಲಿ ಸಾಧ್ಯವಾಗಿಲ್ಲ.
ಈ ಸಮಸ್ಯೆಯ ಕ್ಲಿಷ್ಟತೆಗೆ ಇನ್ನೊಂದು ಕಾರಣವೆಂದರೆ, ಇದರ ಸುತ್ತಲೂ ಬೆಳೆದಿರುವ ಪಾರಿಭಾಷಿಕ ಆವರಣ. ಮೇಲೆ ಹೇಳಿದ ಎರಡು ಸರಣಿಗಳಲ್ಲಿ ಯಾವುದನ್ನು ಆರಿಸಿಕೊಂಡು ಗುಣಗಳ ವಿವೇಚನೆಯನ್ನು ಮಾಡಲು ಹೊರಟರೂ ಇನ್ನೊಂದು ಪಾರಿಭಾಷಿಕ ವಸ್ತುವಿನ ಸಹಾಯವಿಲ್ಲದೆ ಇವುಗಳನ್ನು ಲಕ್ಷಿಸುವುದು (Defining) ಸಾಧ್ಯವಾಗುವುದಿಲ್ಲ.
ಇಷ್ಟೆಲ್ಲಾ ಕ್ಲಿಷ್ಟತೆಗೆ ಅವಕಾಶವಿದ್ದರೂ “ಗುಣಗಳು” ಮತ್ತು “ದೋಷಗಳು” ಎಂಬ ಕಲ್ಪನೆ ವ್ಯಕ್ತಿಗಳ ಮತ್ತು ವಸ್ತುಗಳ ವಿಮರ್ಶೆಯಲ್ಲೂ ಸಾಮಾನ್ಯವಾಗಿರುವುದರಿಂದ ಈ ಸಮಸ್ಯೆ ತುಂಬಾ ಆಕರ್ಷಕವಾಗಿದೆ. ವ್ಯವಹಾರದ ಬಳಕೆಯಲ್ಲಿರುವ ಈ ಪದಗಳು ಯಾವ ಯಾವ ಅರ್ಥಚ್ಛಾಯೆಗಳನ್ನು ಹೊಂದಿದುವು ಮತ್ತು ಯಾವ ಯಾವ ದಿಕ್ಕುಗಳಲ್ಲಿ ಕಾವ್ಯ ಮೀಮಾಂಸಕರ ಬುದ್ಧಿಯನ್ನು ಓಡಿಸಿದುವು ಎಂಬ ವಿಚಾರ ಬಹಳ ಕುತೂಹಲಕಾರಿ.
ಐತಿಹಾಸಿಕ ದೃಷ್ಟಿಯಿಂದಲೇ ಶಾಸ್ತ್ರವನ್ನು ಅಭ್ಯಾಸ ಮಾಡುವವರು ಮೇಲೆ ಹೇಳಿದ ವಿಚಾರಸರಣಿಗಳಲ್ಲಿ ಪ್ರಾಚೀನವಾದುದನ್ನೇ ಮೊದಲು ಆರಿಸಿಕೊಂಡು ವಿಶ್ಲೇಷಿಸಬಹುದು. ಶಾಸ್ತ್ರದ ಅಖಂಡತೆಯನ್ನು ಕೇಂದ್ರವಾಗಿಟ್ಟು ಆಧುನಿಕದೃಷ್ಟಿಯಿಂದ ಅದರ ಮೌಲ್ಯವನ್ನು ನಿರ್ಣಯಿಸುವುದೇ ಪ್ರಧಾನ ಉದ್ದೇಶವಾಗಿದ್ದಲ್ಲಿ ಈ ಕ್ರಮವನ್ನೇ ಅನುಸರಿಸಬೇಕಾಗಿಲ್ಲ. ಅಲ್ಲದೆ, ಅನೇಕ ಸಂದರ್ಭಗಳಲ್ಲಿ ಈ ಕ್ರಮವನ್ನನುಸರಿಸುವುದರಿಂದ ವಿಷಯ ಗ್ರಹಣಕ್ಕೆ ತೊಡಕೂ ಉಂಟಾಗಬಹುದು. ಈ ಕಾರಣದಿಂದ, ಜಟಿಲವಾಗಿದ್ದರೂ ಹೆಚ್ಚಿನ ಮಹತ್ವವನ್ನೊಳಗೊಂಡ ಎರಡನೆಯ ಸರಣಿಯನ್ನು ಮೊದಲು ಆರಿಸಿಕೊಂಡು ವಿಶ್ಲೇಷಿಸುವುದೇ ಪ್ರಕೃತಕ್ಕೆ ಸೂಕ್ತವೂ ಅನುಕೂಲವೂ ಆಗಬಹುದು.

೧
ಈ ಸರಣಿಯ ಸಿದ್ಧಾಂತದ ಪ್ರಕಾರ ವ್ಯಕ್ತಿಯ ಹಾಗೆಯೇ ಕಾವ್ಯಕ್ಕೂ ದೇಹ-ಆತ್ಮವೆಂದು ಎರಡು ವಿಧವಾದ ಸ್ವರೂಪ. ಇವೆರಡರಲ್ಲಿ ದೇಹವು ಸ್ಫೂಲ ಮತ್ತು ಅಪ್ರಧಾನ. ಆತ್ಮವು ಸೂಕ್ಷ್ಮ ಮತ್ತು ಪ್ರಧಾನ. ಶಬ್ದ ಮತ್ತು ಅದರ ರೂಢಿಮೂಲವಾದ ಅರ್ಥ ಇವೆರಡೂ ಸೇರಿ ಕಾವ್ಯದ ದೇಹ. ಈ ದೇಹದಲ್ಲಿ ಸೂಕ್ಷ್ಮವಾಗಿ ಅಡಗಿದ್ದು ಹೆಚ್ಚಿನ ಸಂಸ್ಕಾರವುಳ್ಳ ಅಭ್ಯಾಸಿಯ ಮನಸ್ಸಿನಲ್ಲಿ ತಟ್ಟನೆ ಹೊಳೆಯುವ ಸುಂದರವಾದ ಅರ್ಥವೇ ಆತ್ಮ ಈ ಅರ್ಥವು ಅಲೌಕಿಕವೂ ಸಾಧಾರಣವೂ ಆನಂದಮಯವೂ ಆಗಿದ್ದು ವಸ್ತುಜ್ಞಾನ-ವಸ್ತುಮೂಲವಾದ ಜ್ಞಾನ ಇವೆರಡನ್ನೂ ಮೀರಿಸಿದಾಗ ಕಾವ್ಯಕ್ಕೆ ಪರಮ ಶ್ರೇಷ್ಠತೆ.
ಇಂತಹ ಸುಂದರವಾದ ಅರ್ಥಕ್ಕೆ ಕಾವ್ಯವೇ ಮೂಲವಾಗಿದ್ದರೂ ಅದರ ಅನುಭವ ಉಂಟಾಗುವುದು ಅಭ್ಯಾಸಿಯ ಮನಸ್ಸಿನಲ್ಲಿ. ಆದ್ದರಿಂದ ಈ ಅರ್ಥವನ್ನು ಸೃಷ್ಟಿಸಬಲ್ಲ ಕವಿ ಮತ್ತು ಅರ್ಥಕ್ಕೆ ಅಂತಿಮ ಆಶ್ರಯನಾಗಿ ನಿಲ್ಲುವ ಸಹೃದಯ-ಇಬ್ಬರೂ ಸೇರಿದರೆ ಮಾತ್ರ “ಸರಸ್ವತೀ” ಎಂಬ ತತ್ವಕ್ಕೆ ಯಥಾರ್ಥವಾದ ಅಸ್ತಿತ್ವ.
ಪಾರಿಭಾಷಿಕವಾಗಿ ಹೇಳುವುದಿದ್ದರೆ, ಶಬ್ದ-ರೂಢಿಮೂಲವಾದ ವಾಚ್ಯಾರ‍್ಥ-ವಾಚ್ಯಾರ್ಥದ ವಿಸ್ತಾರ ರೂಪವಾದ ಲಕ್ಷ್ಯಾರ್ಥ-ಇವಿಷ್ಟೂ ಕಾವ್ಯ ಶರೀರ. ಈ ಅರ್ಥಗಳಿಗೆ ಮೀರಿದ ವ್ಯಂಗ್ಯಾರ್ಥ ಕಾವ್ಯದ ಆತ್ಮ. ಈ ಅರ್ಥದ ರೂಪದಲ್ಲಿ ಗೋಚರವಾಗುವ ಸೂಕ್ಷ್ಮತನ ವಸ್ತುವೇ ರಸ.
ಕಾವ್ಯ ಶರೀರದ ಅಂಗಗಳಲ್ಲೊಂದಾದ ಶಬ್ದವನ್ನು ಅಲಂಕರಿಸುವ ಅಕ್ಷರ ವಿನ್ಯಾಸವಿದ್ದಲ್ಲಿ ಶಬ್ದಾಲಂಕಾರ. ಹೀಗೆಯೇ ಇನ್ನೊಂದಂಗವಾದ ವಾಚ್ಯಾರ್ಥವನ್ನು ಅಲಂಕರಿಸುವ ಉಕ್ತಿವೈಚಿತ್ರವಿದ್ದಲ್ಲಿ ಅರ್ಥಾಲಂಕಾರ. ಅಪ್ರತ್ಯಕ್ಷವಾಗಿ ರಸದ ಅಭಿವ್ಯಕ್ತಿಗೆ ಬೇಕಾದ ಸಹಾಯವನ್ನು ಮಾಡುವುದೇ ಈ ಎರಡು ವರ್ಗದ ಅಲಂಕಾರಗಳ ಉದ್ದೇಶ. ಅಂದರೆ, ಇವುಗಳು ಸಾಕ್ಷಾತ್ತಾಗಿ ಶಬ್ದಾರ್ಥ ಸಂಬಂಧಿಗಳು ; ಪರಂಪರೆಯಿಂದ ರಸಸಂಬಂಧಿಗಳು. ರಸದ ಅನುಭವಕ್ಕೆ ಸಹೃದಯನ ಮನಸ್ಸನ್ನು ಸಿದ್ಧಪಡಿಸುವಲ್ಲಿ ಇವುಗಳ ಪಾತ್ರ ಮುಂದೆ ಬರುವ ವಸ್ತುಗಳ ಪಾತ್ರದಷ್ಟು ಎದ್ದು ಕಾಣುವಂಥದ್ದಲ್ಲ.
ರೀತಿ ಮತ್ತು ವೃತ್ತಿಗಳು ರಸದ ಅಭಿವ್ಯಕ್ತಿಗೆ ಅಲಂಕಾರಗಳಿಗಿಂತ ಮುಖ್ಯ. ರೀತಿಯೆಂದರೆ ವಿಶಿಷ್ಟ ರೀತಿಯ ಪದಗಳ ಜೋಡಣೆ. ವೃತ್ತಿಯೆಂದರೆ ವಿಶಿಷ್ಟ ರೀತಿಯ ವಾಚ್ಯಾರ್ಥಗಳ ಜೋಡಣೆ.
ರೀತಿ ಮತ್ತು ವೃತ್ತಿಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದಲ್ಲಿ ರಸಗಳ ಪ್ರಭೇದಗಳನ್ನೂ ತಿಳಿದುಕೊಳ್ಳಬೇಕು. ಆಲಂಕಾರಿಕರು ಹೆಸರಿಸುವ ರಸಗಳಲ್ಲಿ ಎರಡು ಮುಖ್ಯ ಸ್ವಭಾವಗಳನ್ನು ಕಾಣಬಹುದು : ಕೆಲವು ರಸಗಳು ಮನಸ್ಸನ್ನು ಉದ್ರೇಕಗೊಳಿಸಿ ಸಂತೋಷಪಡಿಸುವಂತಹವು. ಇನ್ನೂ ಕೆಲವು ಮನಸ್ಸನ್ನು ಸಮಾಧಾನಗೊಳಿಸಿ ಅಥವಾ ಕರಗಿಸಿ ಸಂತೋಷಪಡಿಸುವಂತಹವು. ಮೊದಲನೆಯ ಸ್ವಭಾವವನ್ನು ಲಾಲಿತ್ಯವೆಂದೂ ಎರಡನೆಯದನ್ನು ಔದ್ಧತ್ಯವೆಂದೂ ಕರೆಯಬಹುದು. ಇಂತಹ ರಸಗಳ ಅನುಭವಕ್ಕೆ ಸಹೃದಯನ ಮನಸ್ಸನ್ನು ಸಿದ್ಧಗೊಳಿಸುತ್ತಾ ಹೋಗುವುದು ಕಾವ್ಯವು ಮಾಡಬೇಕಾದ ಮೊದಲ ಸಾಧನೆ. ಈ ಸಾಧನೆಯು ಸಫಲವಾಗಬೇಕಾದಾಗ ರಸಕ್ಕನುಗುಣವಾಗಿ ವಿಶಿಷ್ಟವಾದ ಪದರಚನೆ ಮತ್ತು ವಿಶಿಷ್ಟವಾದ ಅರ್ಥರಚನೆಯನ್ನು ಕಾವ್ಯವು ಆಶ್ರಯಿಸಬೇಕಾಗುವುದು. ಪದರಚನೆ ಪ್ರತೀತವಾಗಲಿರುವ ರಸಕ್ಕೆ ಹೊಂದಿಕೆಯಾಗುವಂತೆ ಕವಿ ಎಚ್ಚರಿಕೆ ವಹಿಸಿದಲ್ಲಿ ರೀತಿ ಸಿದ್ಧವಾದಂತಾಯಿತು. ಹೀಗೆಯೇ ಅರ್ಥರಚನೆ ರಸಕ್ಕೆ ಹೊಂದಿಕೆಯಾದಲ್ಲಿ ವೃತ್ತಿ ಸಿದ್ಧವಾದಂತಾಯಿತು.
ಮೇಲೆ ಹೇಳಿದ ರಸವಿವೇಚನೆಗನುಸಾರವಾಗಿ ರೀತಿ ವೃತ್ತಿಗಳಲ್ಲೂ ವಿಭಜನೆ ಇರುವುದು. ರಸವು ಅತಿಶಯದಿಂದ ಉದ್ಧತವಾಗಿರುವಲ್ಲಿ ರೀತಿಯ ಔದ್ಧತ್ಯದಿಂದ ಕೂಡಿದ “ಗೌಡೀಯಾ” ಆಗಿರಬೇಕು. ರಸವು ಅತಿಶಯದಿಂದ ಲಲಿತವಾಗಿರುವಲ್ಲಿ ಲಾಲಿತ್ಯದಿಂದ ಕೂಡಿದ “ವೈದರ್ಭೀ” ರೀತಿಯಿರಬೇಕು. ಉಳಿದ ರೀತಿಗಳು ಮಧ್ಯವರ್ತಿಗಳು. ಅಂದರೆ, ಈ ಎರಡು ತುದಿಗಳಲ್ಲಿ ಯಾವುದಾದರೂ ಒಂದರ ಕಡೆಗೆ ವಾಲುವಂತಹವು ವೃತ್ತಿಗಳಲ್ಲೂ ಅತ್ಯುದ್ಧತ ರಸಕ್ಕೆ ಸಹಾಯವಾಗುವಂಥಾದ್ದು “ಆರಭಟೀ” ವೃತ್ತಿ. ಹಾಗೆಯೇ ಅತಿ ಲಲಿತರಸಕ್ಕೆ ಸಹಾಯವಾಗುವಂಥಾದ್ದು ಕೌಶಿಕೀ ವೃತ್ತಿ. ಉಳಿದ ವೃತ್ತಿಗಳು ಮಧ್ಯವರ್ತಿಗಳು.
ಮೇಲಿನ ವಿವರಣೆಯನ್ನು ಸಂಪೂರ್ಣವಾಗಿ ಗ್ರಹಿಸಿಕೊಂಡಾಗ ಈ ಎಲ್ಲಾ ವಸ್ತುಗಳಿಗೂ ಸಂಬಂಧಿಸುವಂತೆ ಗುಣಗಳ ಸ್ಥಾನವನ್ನು ನಿರ್ಣಯಿಸುವುದು ಸಾಧ್ಯವಾಗುವುದು. ರೀತಿ ವೃತ್ತಿಗಳು ರಸಕ್ಕೆ ಎಷ್ಟು ನಿಕಟವರ್ತಿಗಳೆಂಬುದು ಮೇಲಿನ ವಿವರಣೆಯಲ್ಲಿ ಸ್ಪಷ್ಟ ವಾಗುವುದು. ಪ್ರತ್ಯೇಕವಾಗಿರುವ ಈ ಎರಡು ವಸ್ತುಗಳು ರಸದ ಅಭಿವ್ಯಕ್ತಿಗೆ ಮಾಡುವ ಸಹಾಯವನ್ನು ಏಕರೂಪವಾಗಿದ್ದುಕೊಂಡು ಮಾಡುವ ವಸ್ತುವೇ ಗುಣ ಎಂಬುದು ಮೇಲಿನ ಸಿದ್ದಾಂತದ ಅಂಶ. ಅಂದರೆ, ಶಬ್ದ-ಶಬ್ದಗಳ ಪರಸ್ಪರ ಜೋಡಣೆ, ಅರ್ಥ-ಅರ್ಥಗಳ ಪರಸ್ಪರ ಜೋಡಣೆ ಮತ್ತು ಶಬ್ದ -ಅರ್ಥಗಳ ಪರಸ್ಪರ ಜೋಡಣೆ ಇವಿಷ್ಟೂ ರಸದ ಅಭಿವ್ಯಕ್ತಿಗೆ ಅನುಗುಣವಾಗಿದ್ದಲ್ಲಿ ಕಾವ್ಯವು ಬೇಕಾದ ಗುಣವನ್ನು ಹೊಂದಿರುವುದೆಂದು ಹೇಳಿದಂತಾಯಿತು.
ಈ ಹಿನ್ನೆಲೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಅರ್ವಾಚೀನ ಸರಣಿಯಿಂದ ಗುಣವನ್ನು ಪ್ರತಿಪಾದಿಸುವ ಆಲಂಕಾರಿಕರು ಗುಣಗಳ ಸಂಖ್ಯೆ ಮೂರು ಎಂದು ನಿರ್ಣಯಿಸಿರುವರು. ಇವುಗಳ ಹೆಸರುಗಳು ಪ್ರಸಾದ, ಮಾಧುರ್ಯ ಮತ್ತು ಓಜಸ್ಸು. ಇವುಗಳಲ್ಲಿ ಪ್ರಸಾದವು ಎಲ್ಲಾ ಯೋಗ್ಯ ಕಾವ್ಯಗಳಲ್ಲೂ ಸಾಮಾನ್ಯವಾಗಿ ಇರಬಹುದಾದ ಗುಣ. ಮಾಧುರ್ಯ ಮತ್ತು ಓಜಸ್ಸುಗಳು ಕ್ರಮವಾಗಿ ಲಲಿತ ಮತ್ತು ಉದ್ಧತ ರಸಗಳೇ ಪ್ರಧಾನವಾಗಿರುವ ಕಾವ್ಯಗಳಲ್ಲಿರಬೇಕಾದ ಗುಣಗಳು.
ರೌದ್ರ, ವೀರ, ಅದ್ಭುತ, ಶೃಂಗಾರ ಮತ್ತು ಕರುಣ-ಇವಿಷ್ಟು ಪ್ರಧಾನ ರಸಗಳು. ಇವುಗಳಲ್ಲಿ ಮೊದಲಿನ ಮೂರು ಉದ್ಧತ ಸ್ವರೂಪದ ರಸಗಳು. ಉಳಿದವುಗಳೆರಡು ಲಲಿತ ಸ್ವರೂಪದವುಗಳು. ಹಿಂದಿನ ವಿವೇಚನೆಯನ್ನು ಸ್ಪಷ್ಟಪಡಿಸುವುದಿದ್ದರೆ, ರೌದ್ರ ವೀರ ಮತ್ತು ಅದ್ಭುತರಸಗಳನ್ನು ವ್ಯಕ್ತಪಡಿಸುವುದಕ್ಕೆ ಅನುಕೂಲವಾಗುವ ಗುಣವು ಓಜಸ್ಸು. ಹಾಗೆಯೇ ಶೃಂಗಾರ ಮತ್ತು ಕರುಣರಸಗಳನ್ನು ವ್ಯಕ್ತಪಡಿಸುವುದಕ್ಕೆ ಅನುಕೂಲವಾಗುವ ಗುಣವು ಮಾಧುರ್ಯ.
ಗುಣ ಮತ್ತು ರಸಗಳ ನಡುವಿನ ಈ ಸಂಬಂಧವನ್ನು ಆಲಂಕಾರಿಕರು ಇನ್ನೂ ಸ್ಪಷ್ಟ ವಾಗಿ ಮಾಡಿರುವರು. ಪ್ರತಿಯೊಬ್ಬ ಮನುಷ್ಯನ ಮನಸ ಕರಗುವುದು, ಉರಿಯುವುದು ಮತ್ತು ವಿಶಾಲಗೊಳ್ಳುವುದು ಎಂಬ ಮೂರು ಆಕಾರಗಳನ್ನು ಹೊಂದಬಲ್ಲುದು. ಈ ಆಕಾರಗಳನ್ನು ಉಂಟುಮಾಡಲು ಬೇಕಾದ ಶಕ್ತಿಗಳೇ ಕಾವ್ಯದ ಗುಣಗಳು. ಮಾಧುರ್ಯ ಗುಣವೆಂದರೆ ಮನಸ್ಸನ್ನು ಕರಗಿಸಲು ಬೇಕಾದ ಶಕ್ತಿ, ಓಜೋಗುಣ ಎಂದರೆ ಮನಸ್ಸನ್ನು ಉರಿಯುತ್ತಿರುವಂತೆ ಮಾಡಲು ಬೇಕಾದ ಶಕ್ತಿ. ಹಾಗೆಯೇ ಪ್ರಸಾದಗುಣವೆಂದರೆ, ಮನಸ್ಸನ್ನು ವಿಸ್ತಾರಗೊಳಿಸಲು ಬೇಕಾದ ಶಕ್ತಿ. ಮನಸ್ಸು ಹೊಂದಬಹುದಾದ ಈ ಮೂರು ಆಕಾರಗಳನ್ನು ಪಾರಿಭಾಷಿಕವಾಗಿ ದ್ರುತಿ, ದೀಪ್ತಿ ಮತ್ತು ವಿಸ್ತಾರಗಳೆಂಬುದಾಗಿ ಕರೆಯುವರು.
ಈ ಸುದೀರ್ಘವಾದ ವಿವರಣೆಯನ್ನು ಆಲಂಕಾರಿಕರು ತಮ್ಮ ಪರಿಭಾಷೆಯ ಮೂಲಕ ಒಂದೇ ವಾಕ್ಯದಲ್ಲಿ ಹೇಳಿ ಮುಗಿಸುವರು: “ಗುಣಗಳು ರಸಧರ್ಮಗಳು.” ಇದನ್ನೇ ಮುಂದುವರಿಸಿ ತಮ್ಮದೇ ಆದ ಪರಿಭಾಷೆಯಲ್ಲಿ “ರಸವೇ ಕಾವ್ಯದಲ್ಲಿ ಆಂಗಿ ( ಆತ್ಮ) ಸ್ವರೂಪವುಳ್ಳದ್ದು. ಈ ಆತ್ಮನನ್ನು ಆಶ್ರಯಿಸಿಕೊಂಡಿರುವಂಥವುಗಳೇ ಗುಣಗಳು. ಇವುಗಳು ಒಬ್ಬ ವ್ಯಕ್ತಿಯಲ್ಲಿ ಶೌರ್ಯ ಮೊದಲಾದ ಗುಣಗಳು ಹೇಗೆ ದೇಹದ ಧರ್ಮಗಳಾಗುವುದಿಲ್ಲವೋ ಹಾಗೆಯೇ ಕಾವ್ಯದೇಹವಾಗಿರುವ ಶಬ್ದಾರ್ಥಗಳ ಧರ್ಮಗಳಾಗುವುದಿಲ್ಲ. ‘ಅಲಂಕಾರ’ಗಳು ಮಾತ್ರ ಕಾವ್ಯದೇಹವಾಗಿರುವ ಶಬ್ದಾರ್ಥಗಳಿಗೇ ಸಂಬಂಧಿಸಿದುವು – “ಬಳೆ, ಹಾರ ಮೊದಲಾದ ಆಭರಣಗಳು ವ್ಯಕ್ತಿಯ ದೇಹಕ್ಕೆ ಸಂಬಂಧಿಸಿರುವ ಹಾಗೆ” ಎಂದೂ ವಿವರಿಸುವರು.
ಈ ವಿವರಣೆಯ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ ಆಲಂಕಾರಿಕರು ಕೆಲವು ಪ್ರಶ್ನೆಗಳನ್ನು ಕೇಳುವರು : “ಗುಣವು ರಸದ ಧರ್ಮವು ಮಾತ್ರ ಆಗಿರುವಲ್ಲಿ ಕಾವ್ಯವು ಮಧುರವಾಗಿದೆ ಎಂಬಿತ್ಯಾದಿ ವ್ಯಾವಹಾರಿಕ ವಾಕ್ಯಗಳಿಗೆ ಅರ್ಥವೇನು ?” ಇದಕ್ಕೆ ಮೇಲಿನ ಪಕ್ಷದವರ ಉತ್ತರವೆಂದರೆ, ವಸ್ತುತಃ ಗುಣವು ರಸದ ಧರ್ಮವಾಗಿದ್ದರೂ ರಸವ್ಯಂಜನೆಗೆ ಕಾವ್ಯವು ಮೂಲವಾಗಿರುವುದರಿಂದ ರಸದ ಧರ್ಮವನ್ನು ಕಾವ್ಯದ ಧರ್ಮವೆಂದೂ ವ್ಯವಹರಿಸಬಹುದು. ಹೇಗೆ ದರೆ, ಧೈರ್ಯ ಮೊದಲಾದುವುಗಳು ವ್ಯಕ್ತಿಯ ದೇಹಕ್ಕೆ ಸಂಬಂಧಿಸಿದವುಗಳಲ್ಲದಿದ್ದರೂ ಕೆಲವು ಸಂದರ್ಭಗಳಲ್ಲಿ ದೇಹವೇ ಧೈರ್ಯವನ್ನು ಹೊಂದಿದೆ ಎಂಬ ರೀತಿಯಲ್ಲಿ ವ್ಯವಹರಿಸಬಹುದು.”
ಒಟ್ಟಿನಲ್ಲಿ ಹೇಳುವುದಿದ್ದರೆ, ಗುಣಗಳನ್ನು ರಸಗಳ ಅತ್ಯಂತ ಅವಿಭಾಜ್ಯ ಸಂಬಂಧಿಗಳು ಮತ್ತು ಕಾವ್ಯದ ಅತಿಸಾಕ್ಷ್ಯ ಶಕ್ತಿಗಳೆಂದು ಪ್ರತಿಪಾದಿಸುವುದು ಈ ಸರಣಿಯನ್ನು
6*

ಆಶ್ರಯಿಸಿದ ಆಲಂಕಾರಿಕರ ಪರಮ ಧ್ಯೇಯ. ಅಲಂಕಾರ, ರೀತಿ, ವೃತ್ತಿ, ಗುಣ ಇವಿಷ್ಟನ್ನೂ ಪರಸ್ಪರ ವಿವೇಚಿಸಿ ಸ್ಥಾನನಿರ್ಣಯ ಮಾಡುವ ಸರಣಿಯನ್ನೇ ಆಶ್ರಯಿಸಿ ಕಾವ್ಯ ಪ್ರಪಂಚದಲ್ಲಿ ವಿವೇಚಿಸುವುದು ಇವರ ವೈಶಿಷ್ಟ್ಯ.
೨
ಪ್ರಾರಂಭದಲ್ಲೇ ಹೇಳಿದಂತೆ, ಗುಣಗಳ ಬಗ್ಗೆ ವಿವೇಚಿಸಿದ ಇನ್ನೊಂದು ಆಲಂಕಾರಿಕ ಸರಣಿಯಿರುವುದು. ಈ ಸರಣಿಯ ಬಗ್ಗೆ ಕಾಣುವ ಅತಿ ಮುಖ್ಯವಾದ ವಿಷಯವೆಂದರೆ, ಈ ಯುಗದ ಆಲಂಕಾರಿಕರೆಲ್ಲರೂ ಕಾವ್ಯಗಳನ್ನು ಬೇರೆ ಬೇರೆ ಮಾರ್ಗಗಳಾಗಿ ವರ್ಗಿಕರಿಸುತ್ತಿದ್ದುದು. ಈ ಮಾರ್ಗಗಳು ಪ್ರಾರಂಭವಾಗುವುದಕ್ಕೆ ಮೂಲಭೂತ ಕಾರಣವೆಂದರೆ, ಕಾವ್ಯಗಳಿಗಿದ್ದ ಭೌಗೋಳಿಕ ಆವರಣ. ಈ ಊಹೆಗೆ ಮುಖ್ಯ ಆಧಾರವಾಗಿರುವುದು ಈ ಮಾರ್ಗಗಳನ್ನು ಹೆಸರಿಸಲು ಆಲಂಕಾರಿಕರು ಉಪಯೋಗಿಸುವ “ವೈದರ್ಭೀ”* ಮೊದಲಾದ ಪದಗಳು. ಇವುಗಳಲ್ಲದೆ, ಒಂದೊಂದು ಪ್ರದೇಶದವರು ಒಂದೊಂದು ರೀತಿಯ ಲಕ್ಷಣಗಳಿಂದ ಕೂಡಿರುವ ರೀತಿಯಲ್ಲಿ ಕಾವ್ಯರಚನೆ ಮಾಡುತ್ತಿದ್ದರೆಂಬ ಊಹೆಯನ್ನು ಬಾಣನ ಹರ್ಷಚರಿತದಲ್ಲಿನ ಒಂದು ಶ್ಲೋಕವೂ ಪುಷ್ಟೀಕರಿಸುವುದು.
ಅಲ್ಲದೆ, ಆಲಂಕಾರಿಕರ ಗಮನದಲ್ಲಿ ಪ್ರಾರಂಭದಲ್ಲಿದ್ದ ಮಾರ್ಗಗಳು ಸಂಖ್ಯೆಯಲ್ಲಿ ಎರಡೇ ಆಗಿದ್ದಂತೆಯೂ ಗ್ರಂಥಗಳಿಂದ ಕಂಡುಬರುವುದು. ಇದರ ಜೊತೆಗೆ ಈ ಎರಡೂ ಮಾರ್ಗಗಳಲ್ಲಿ ಉತ್ತಮಾಧಮತೆಯ ಪ್ರಶ್ನೆಯೆದ್ದು ಆಲಂಕಾರಿಕರಲ್ಲಿ ಒಬ್ಬೊಬ್ಬರು ಒಂದೊಂದು ಮಾರ್ಗದ ಪಕ್ಷ ವಹಿಸುತ್ತಿದ್ದಂತೆಯೂ ಕಂಡುಬರುವುದು. ಈ ರೀತಿಯಲ್ಲಿ ಮಾರ್ಗಪಕ್ಷಪಾತವು ಬೆಳೆಯುತ್ತಿದ್ದಂತೆ, ಇದಕ್ಕೆ ಪ್ರತಿಕ್ರಿಯೆಯಾಗಿ ಎಲ್ಲಾ ಮಾರ್ಗಗಳನ್ನೂ ಸಮಾನದೃಷ್ಟಿಯಿಂದ ನೋಡಬೇಕು ಮತ್ತು ಒಳ್ಳೆಯದು ಕೆಟ್ಟದ್ದು ಯಾವ ಮಾರ್ಗದಲ್ಲಿಯೂ ಇರಬಹುದು ಎಂಬ ನ್ಯಾಯಪಕ್ಷಪಾತವು ಬೆಳೆದಿರುವುದಕ್ಕೂ ಅತಿ ಪ್ರಾಚೀನ ಉಪಲಬ್ಧ ಗ್ರಂಥಗಳಲ್ಲೇ ಪ್ರಮಾಣಗಳು ಕಂಡು ಬರುವುವು.
ಹೀಗೆ ಮಾರ್ಗ ಪಕ್ಷಪಾತ ಮತ್ತು ನ್ಯಾಯ ಪಕ್ಷಪಾತಗಳೊಳಗೆ ಹೋರಾಟವು ನಡೆದು ಕೊನೆಗೆ ಉತ್ತಮಾಧಮತೆಯ ಪ್ರತಿಪತ್ತಿಯು ಹೋಗಿ ಪ್ರತಿಯೊಂದು ಮಾರ್ಗವೂ ಒಂದೊಂದು ರೀತಿಯೆಂದು ಪ್ರಸಿದ್ದವಾದುದೂ ಇದರ ಜೊತೆಗೆ ಮಾರ್ಗಗಳ ಸಂಖ್ಯೆಯೂ

* ಅರ್ವಾಚೀನ ಸರಣಿಯ ಬೆಳವಣಿಗೆಯ ಕಾಲಕ್ಕೆ ಇಂತಹ ಪದಗಳಿಗೆ ಯಾವ ಅರ್ಥಗಳು ಬಂದಿರುವುವೆಂದು ಹಿಂದೆಯೇ ವಿವರಿಸಲಾಗಿದೆ.

ಹೆಚ್ಚಿ ಬೇರೆ ಬೇರೆ ರೀತಿಗಳನ್ನು ಆಲಂಕಾರಿಕರು ಹೆಸರಿಸಿ ವಿವೇಚಿಸಿರುವುದೂ ಕಂಡು ಬರುವುದು.
ಈ ರೀತಿಯ ಮಾರ್ಗವಿಭಜನೆಗೆ ಉಪಯುಕ್ತವಾದುವುಗಳು ಕಾವ್ಯಗುಣಗಳು. ಮಾರ್ಗಗಳು ಎರಡೇ ಎಂಬ ಕಲ್ಪನೆಯುಳ್ಳ ಗ್ರಂಥಗಳಲ್ಲಿ ಒಂದು ಮಾರ್ಗದಲ್ಲಿ ಗುಣವೆಂದು ಕರೆಯಲ್ಪಡುವುದರ ವಿಪರ‍್ಯಾಸವೇ ಇನ್ನೊಂದು ಮಾರ್ಗದ ಗುಣವೆಂದೂ ಉಲ್ಲಿಖಿತವಾಗಿರುವುದು ಕಂಡುಬರುವುದು. ಅಂದರೆ, ಒಂದು ಮಾರ್ಗದವರ ದೃಷ್ಟಿಯಲ್ಲಿ ಕಾವ್ಯದೋಷವಾಗಿದ್ದುದು ಇನ್ನೊಂದು ಮಾರ್ಗದವರ ದೃಷ್ಟಿಯಲ್ಲಿ ಗುಣವಾಗಿ ಪರಿಣಮಿಸುತ್ತಿತ್ತು.
ಈ ಪ್ರಾಚೀನ ಸರಣಿ ನಿಶ್ಚಿತ ಆಕಾರವನ್ನು ಹೊಂದಿದ ಕಾಲವನ್ನು ಗಮನಿಸಿದರೆ ಗುಣಗಳ ಸಂಖ್ಯೆ “ಹತ್ತು” ಆಗಿದ್ದುದು ಕಂಡುಬರುವುದು. ಶಬ್ಬಾರ್ಥಗಳೇ ಕಾವ್ಯವೆಂಬುದು ಈ ಯುಗದ ಆಂತರಿಕ ಕಲ್ಪನೆಯಾಗಿದ್ದು ಕೆಲವು ಗುಣಗಳು ಶಬ್ದಕ್ಕೆ ಸಂಬಂಧಿಸಿರುವಂತೆಯೂ ಇನ್ನು ಕೆಲವು ಅರ್ಥಕ್ಕೆ ಸಂಬಂಧಿಸಿರುವಂತೆಯೂ ಗ್ರಂಥಕಾರರು ಪ್ರತಿಪಾದಿಸುತ್ತಿದ್ದರು. ಅಂದರೆ, ಕಾವ್ಯದಲ್ಲಿ ಶಬ್ದ ಮತ್ತು ಅರ್ಥಗಳ ಪ್ರತ್ಯೇಕತೆಯು ವಿವೇಚನೆಯಾಗಲೀ ಗುಣಗಳಲ್ಲಿ ಶಬ್ದ ಗುಣ ಮತ್ತು ಅರ್ಥಗುಣಗಳೆಂಬ ವಿವೇಚನೆಯಾಗಲೀ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿದ್ದಂತೆ ಕಾಣುವುದಿಲ್ಲ.
ಈ ಯುಗದ ಕೊನೆಯ ಕಾಲಕ್ಕೆ ಮಾತ್ರ ಇಂತಹ ವಿವೇಚನೆ ನಡೆದುದು ಸ್ಪಷ್ಟವಾಗಿ ಕಂಡುಬರುವುದು. ಶಬ್ದಕ್ಕೂ ಅರ್ಥಕ್ಕೂ ಕಾವ್ಯದಲ್ಲಿ ಸಮಾನ ಪ್ರಾಧಾನ್ಯವೆಂಬ ಹಿನ್ನೆಲೆಯಲ್ಲಿ ಶಬ್ದದಷ್ಟೇ ಅರ್ಥವೂ ಗುಣವನ್ನು ಹೊಂದಿರಬಲ್ಲುದು ಎಂಬ ಅಭಿಪ್ರಾಯವುಂಟಾಗಿ ಶಬ್ದಗುಣಗಳಷ್ಟೇ ಅರ್ಥಗುಣಗಳನ್ನೂ ಹೆಸರಿಸಿ, ಲಕ್ಷಿಸಿ, ಉದಾಹರಿಸಿರುವುದು ಈ ಯುಗವು ಸಾಧಿಸಿದ ತಾರ್ಕಿಕ ಪ್ರಗತಿ. ಇದರಿಂದಲಾಗಿಯೇ ಗುಣಗಳ ಸಂಖ್ಯೆ ಹತ್ತಾಗಿದ್ದುದು ಇಮ್ಮಡಿಸಲೂ ಕಾರಣವಾಯಿತು. ಇಷ್ಟರಲ್ಲಿ ಮಾರ್ಗಗಳೊಳಗಿನ ಉಚ್ಚನೀಚತಾಭಾವನೆಗಳು ಸಂಪೂರ್ಣವಾಗಿ ಹೋಗಿದ್ದುವು. ಮಾರ್ಗಗಳ ಸಂಖ್ಯೆಯೂ ಹೆಚ್ಚಿ ಪ್ರತಿಯೊಂದು ಮಾರ್ಗದ ಲಕ್ಷಣಗಳನ್ನೂ ಆಲಂಕಾರಿಕರು ಸ್ಪಷ್ಟವಾಗಿ ಗುರುತಿಸಿದರು.
ಈ ಯುಗದ ಒಟ್ಟು ಸಾಧನೆಯ ಸಾರಾಂಶವನ್ನು ಸಂಗ್ರಹಿಸುವುದಿದ್ದರೆ, ಶಬ್ದ ಮತ್ತು ಅಕ್ಷಗಳೆಂಬ ಎರಡು ವಸ್ತುಗಳನ್ನು ಪ್ರತ್ಯೇಕಿಸಿ ನೋಡುವ ಅಭ್ಯಾಸವನ್ನು ಮಾಡಿದುದು ಆಲಂಕಾರಿಕರು ಈ ಯುಗದ ಕೊನೆಯ ಕಾಲದಲ್ಲಿ. ಇದರ ಜೊತೆಗೆ ಮಾರ್ಗಗಳೊಳಗಿನ ಉಚ್ಚ ನೀಚತಾಭಾವನೆಗಳು ಹೋಗಿ ಬೇರೆ ಬೇರೆ ಗುಣಗಳು ಒಂದೊಂದು ಮಾರ್ಗದ ಲಕ್ಷಣಗಳಾಗಿ ಆಲಂಕಾರಿಕರಿಂದ ಅಂಗೀಕೃತವಾದುದೂ ಈ ಯುಗದ ಇನ್ನೊಂದು ಸಾಧನೆಯೆಂದು ಹೇಳಬಹುದು.
ಎರಡು ಯುಗಗಳ ಸರಣಿಗಳನ್ನೂ, ಸಾಧನೆಗಳನ್ನೂ ಹೋಲಿಸಿದಾಗ ಹೊಳೆಯುವ ಒಂದು ಮುಖ್ಯ ವಿಷಯವೆಂದರೆ ಗುಣಗಳನ್ನು ಅಲಂಕಾರಗಳಿಂದ ಬೇರ್ಪಡಿಸುವ ಪ್ರಯತ್ನ ಪ್ರಾಚೀನ ಯುಗದಲ್ಲಿ ನಡೆದರೂ ಅದು ಸಾಕಷ್ಟು ಸಫಲವಾಗಲಿಲ್ಲ. ಶಬ್ದ ಮತ್ತು ಅರ್ಥಗಳು ಕಾವ್ಯ ಶರೀರ. ಈ ಶರೀರಕ್ಕೆ ಸೌಂದರ್ಯವನ್ನು ಕೊಡುವಂತಹ ಎಲ್ಲವೂ ಅಲಂಕಾರಗಳು ಎಂಬುದು ಈ ಯುಗದ ವಿಶಾಲ ಕಲ್ಪನೆಯಾಗಿತ್ತು. ಇದರ ಜೊತೆಗೆ ಅಲಂಕಾರ ಪದಕ್ಕೆ ಸಂಕುಚಿತ ಅರ್ಥವನ್ನೂ ಕಲ್ಪಿಸಿ ಕಾವ್ಯ ಶರೀರದಲ್ಲಿ ಅತ್ಯಂತ ನಿಕಟವಾಗಿ ಸೇರಿಕೊಂಡಿರುವ ಗುಣಗಳೆಂಬ ವಸ್ತುಗಳಾಗಿರದೆ ಈ ಮುಖ್ಯ ವಸ್ತುಗಳು ಕೊಡುವ ಸೌಂದರ್ಯವನ್ನು ಮತ್ತೂ ಹೆಚ್ಚಿಸುವ ವಸ್ತುಗಳು ಅಲಂಕಾರಗಳು ಎಂಬ ಅಭಿಪ್ರಾಯವೂ ಈ ಯುಗದ ಕೊನೆಗೆ ಕಂಡುಬರುವುದು. “ಸ್ತ್ರೀಯ ದೇಹದಲ್ಲಿ ಯೌವನ, ಅಂಗಸೌಷ್ಠವ ಮೊದಲಾದ ಗುಣಗಳಿದ್ದಂತೆ ಕಾವ್ಯಶರೀರದಲ್ಲಿ ಕಾವ್ಯ ಗುಣಗಳು. ಈ ಸುಂದರ ದೇಹದ ಮೇಲೆ ಧರಿಸುವ ಆಭರಣಗಳಿದ್ದಂತೆ ಕಾವ್ಯ ಶರೀರದಲ್ಲಿ “ಅಲಂಕಾರಗಳು” ಎಂಬ ಹೋಲಿಕೆ ಅರ್ವಾಚೀನಪಕ್ಷವು ಜನಪ್ರಿಯವಾದ ಮೇಲಿನ ಕೆಲವು ಆಲಂಕಾರಿಕರಿಂದಲೂ ಮೆಚ್ಚಿಗೆಯನ್ನು ಪಡೆದಿದೆ. ಅರ್ವಾಚೀನ ಪಕ್ಷದವರು ಕೊಡುವ “ವ್ಯಕ್ತಿಗೆ ಶೌರ್ಯಾದಿಗುಣಗಳಿದ್ದಂತೆ ಕಾವ್ಯಕ್ಕೆ ಗುಣಗಳು. ಹಾರಾದಿ ಅಲಂಕಾರಗಳಿದ್ದಂತೆ ಉಪಮಾದಿ ಅಲಂಕಾರಗಳು” ಎಂಬ ಉಪಮೆಗಿಂತ ಮೇಲಿನ ಉಪಮೆಯಲ್ಲೇ ಹೆಚ್ಚಿನ ಸ್ಪಷ್ಟತೆಯಿರುವುದು ಗಮನಾರ್ಹ. ಶೌರ್ಯಾದಿ ಗುಣಗಳ ಅಸ್ತಿತ್ವವನ್ನು ವ್ಯಕ್ತಿಯಲ್ಲಿ ಗುರುತಿಸುವುದು ಅವನು ಮಾಡುವ ಕಾರ‍್ಯಗಳಿಂದ. ಈ ಹೋಲಿಕೆಯ ಪ್ರಕಾರ ಮುಂದುವರಿದಾಗ ರಸಧರ್ಮಗಳಾದ ಗುಣಗಳ ಅಸ್ತಿತ್ವಕ್ಕೂ ಕಾರ್ಯರೂಪವಾದ ಪ್ರಮಾಣಗಳಿರಬೇಕೆಂದು ಸಿದ್ಧವಾಗುವುದು. ರಸವೇ ಅಂತಿಮ ಗುರಿಯಾಗಿರುವಲ್ಲಿ ಮುಂದಿನ ಕಾರ್ಯವೇನು ? ಎಂಬ ಸಮಸ್ಯೆ ಉದ್ಭವಿಸುವುದು. ಇದನ್ನು ಆಲಂಕಾರಿಕರು ಬಿಡಿಸಿದಂತೆ ತೋರುವುದಿಲ್ಲ. ಬಹುಶಃ ಅವರ ಸಿದ್ಧಾಂತದಲ್ಲಿ ಈ ಕೆಳಗಿನ ಸಮಾಧಾನವು ಅಂತರ್ಗತವಾಗಿರಬಹುದು. “ರಸವು ಅಲೌಕಿಕ ಸ್ವರೂಪದಲ್ಲಿ ಸಹೃದಯ ನಿಷ್ಠವಾದರೂ ಅದರ ಲೌಕಿಕ ಸ್ವರೂಪದ ಪ್ರತಿನಿಧಿಯಾಗಿ ಉಳಿಯುವುದು ಕಾವ್ಯ, ಈ ಅರ್ಥದಲ್ಲೇ ರಸ-ಆತ್ಮನಿಗೆ ಶಬ್ದಾರ್ಥ ರೂಪವಾದ ಕಾವ್ಯವು ಶರೀರ. ಲೌಕಿಕ ರಸದ ಪ್ರತಿನಿಧಿಯಾಗಿದ್ದುಕೊಂಡು ಅಲೌಕಿಕ ರಸವನ್ನು ಸಹೃದಯನಲ್ಲಿ ಅಭಿವ್ಯಕ್ತವಾಗುವಂತೆ ಮಾಡುವಲ್ಲಿ ಸಹಾಯವಾಗುವ ಗುಣಗಳೇ ಕಾವ್ಯಗುಣಗಳು.*
* ಅಭಿನವಗುಪ್ತನ ಸಿದ್ದಾಂತ ಇದಕ್ಕೆ ಸಮೀಪವಾಗಿರುವುದು.

ಈ ರೀತಿಯಲ್ಲಿ ರಸದ ಲೌಕಿಕ ಮತ್ತು ಅಲೌಕಿಕ ಕಲ್ಪನೆಗಳನ್ನು ಬಿಟ್ಟು ಕೇವಲ ಸಹೃದಯನಿಷ್ಠ ಅಲೌಕಿಕ ರಸವನ್ನು ಮಾತ್ರ ಮನಸ್ಸಿನಲ್ಲಿಟ್ಟುಕೊಂಡಲ್ಲಿ ಕಾವ್ಯಕ್ಕೂ ರಸಕ್ಕೂ ಇವರು ಹೇಳುವ ದೇಹ-ಆತ್ಮ ಸಂಬಂಧವೇ ಉಳಿಯುವುದಿಲ್ಲ.
೩
ಹೀಗೆ ಎರಡು ವಿಚಾರಸರಣಿಗಳ ಪ್ರಕಾರ ಗುಣವೆಂದರೇನೆಂಬ ಪರಿಚಯವನ್ನು ವಿಸ್ತಾರವಾಗಿ ಮಾಡಿಸಿದಂತಾಯಿತು. ಈ ಎರಡು ಪಕ್ಷಗಳ ಸಾಧನೆಯನ್ನೂ ಒಟ್ಟು ಸೇರಿಸಿ ಸಮನ್ವಯಗೊಳಿಸುವ ಪ್ರಯತ್ನವನ್ನು ಕೆಲವು ಅರ್ವಾಚೀನ ಆಲಂಕಾರಿಕರು ಮಾಡಿರುವರಾದರೂ ಅವರಲ್ಲಿ ಗಮನಾರ್ಹವಾದ ಸಫಲತೆ ಕಂಡು ಬರುವುದಿಲ್ಲ. ಅರ್ವಾಚೀನರ ಮೂರು ಗುಣಗಳು ರಸಕ್ಕೆ ಸೇರಿದವುಗಳೆಂದು, ಪ್ರಾಚೀನರ ಹತ್ತು ಅಥವಾ ಇಪ್ಪತ್ತು ಗುಣಗಳು ಶಬ್ದಾರ್ಥಗಳಿಗೆ ಸೇರಿದುವೆಂದು ಇಡೀ ಶಾಸ್ತ್ರವು ನಿರ್ಣಯಿಸಿದೆಯೆನ್ನಬಹುದು.
ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ, ಈ ಎರಡು ಸರಣಿಗಳಿಗೂ ಸಮ್ಮತವಾಗುವ ಒಂದು ಮುಖವು ಗುಣಗಳಿಗಿರುವುದು. ಅದು “ಔಚಿತ್ಯ”. ಯಾವುದೇ ಗುಣವನ್ನು ಸಂದರ್ಭದಿಂದ ಬೇರ್ಪಡಿಸಿದಾಗ ಗುಣವೆಂದು ನಿರ್ಣಯಿಸಲಾಗುವುದಿಲ್ಲ. ಹೀಗೆ ದೋಷವನ್ನೂ ಕೂಡ. ಒಂದು ಸಂದರ್ಭದಲ್ಲಿ ದೋಷವೆಂದು ಕಂಡುದು ಇನ್ನೊದು ಸಂದರ್ಭದಲ್ಲಿ ಗುಣವಾಗಬಲ್ಲುದು. ಇಲ್ಲಿ ಔಚಿತ್ಯವೆಂಬ ವಿಶಾಲತತ್ವವನ್ನು ನಿಯಾಮಕವಾಗಿ ಅಂಗೀಕರಿಸಬೇಕು.
ಗುಣಗಳ ರೂಪದಲ್ಲಿ ಅಲಂಕಾರ ಶಾಸ್ತ್ರವು ಕೊಟ್ಟ ಹೊಸ ವಿಚಾರವೇನು ? ಎಂಬುದು ಈಗ ಉತ್ತರಿಸಬೇಕಾದ ಪ್ರಶ್ನೆ. ಪ್ರಾಚೀನ ಪಕ್ಷದವರು* ಹೇಳುವ ಗುಣಗಳಲ್ಲಿ ಕೆಲವು ಎಲ್ಲಾ ಕಾಲದ ದೃಷ್ಟಿಯಿಂದಲೂ ಮತ್ತು ಎಲ್ಲಾ ಭಾಷೆ-ದೇಶಗಳ ದೃಷ್ಟಿಯಿಂದಲೂ ಕಾವ್ಯಮೀಮಾಂಸೆಯಲ್ಲಿ ಸ್ಥಾನವುಳ್ಳವುಗಳು. ಉದಾಹರಣೆಗೆ, ಅವರು ಹೇಳುವ “ಪ್ರಸಾದ” ವೆಂಬ ಗುಣ. ಉಪಯೋಗಿಸಿದ ಪದಗಳು ಪ್ರಸಿದ್ಧವಾಗಿದ್ದು ಸುಲಭವಾಗಿ ಅಪೇಕ್ಷಿಸಿದ ಅರ್ಥವನ್ನು ಕೊಡತಕ್ಕವುಗಳಾಗಿರಬೇಕು ಎಂಬುದು ಇದರ ಅರ್ಥ.
* ಇಲ್ಲಿ ದುಡಿಯ “ಕಾವ್ಯಾದರ್ಶ”ವೆಂಬ ಗ್ರಂಥವನ್ನು ಪಕ್ಷದ ಪ್ರತಿನಿಧಿಯಾಗಿಟ್ಟು ವಿಶ್ಲೇಷಣೆ ಮಾಡಲಾಗಿದೆ.

ಇದನ್ನು ಕಾವ್ಯಗುಣವಲ್ಲವೆಂದು ಯಾರೂ ಹೇಳುವಂತಿಲ್ಲ. ಹೀಗೆಯೇ, “ಅರ್ಥವ್ಯಕ್ತಿ”. ಅರ್ಥವು ಸ್ಪುಟವಾಗಿ ತಿಳಿಯುವಂತಿರಬೇಕೆಂಬುದು ಇದರ ಅರ್ಥ. ಅಂದರೆ, ಪ್ರಯೋಗಿಸಿದ ಪದಗಳು ಮಾತ್ರ ಪ್ರಸಿದ್ಧವಾಗಿದ್ದರೆ ಸಾಲದು. ಅವುಗಳನ್ನು ಜೋಡಿಸಿದ ರೀತಿಯೂ ಅರ್ಥವನ್ನು ಸುಲಭವಾಗಿ ವ್ಯಕ್ತಪಡಿಸುವಂತಿರಬೇಕು. ಈ ಪಕ್ಷದವರ ಕೆಲವು ಗುಣಗಳು ಬಂಧಗಳಿಗೆ ಮಾತ್ರ ಸಂಬಂಧಿಸಿದುವು. ಉದಾಹರಣೆಗೆ, ಶ್ಲೇಷ ಗುಣ, ಅನೇಕ ಪದಗಳ ಜೋಡಣೆ ಅವುಗಳನ್ನು ಒಂದುಗೂಡಿಸುವಂತಿರುವ ಅಕ್ಷರವಿನ್ಯಾಸದಿಂದ ಕೂಡಿರಬೇಕು ಎಂಬುದು ಇದರ ಅರ್ಥ. ಇನ್ನು ಕೆಲವು ಗುಣಗಳು ಅನಂತರದ ಆಲಂಕಾರಿಕರು ಹೇಳುವ ವ್ಯಂಗ್ಯಾರ್ಥವನ್ನು ಸಮೀಪಿಸುವಂಥವು. ಉದಾಹರಣೆಗೆ, “ಉದಾರತ್ವ”ವೆಂಬ ಗುಣ. ಒಬ್ಬನ ವಿಷಯವಾಗಿ ಒಂದು ಮಾತನ್ನು ಹೇಳಿದಾಗ ಅವನ ಗುಣವು ಕೇಳುವವನ ಮನಸ್ಸಿನಲ್ಲಿ ತಟ್ಟನೆ ಹೊಳೆಯಬೇಕು ಎಂಬುದು ಇದರ ಅರ್ಥ. ಹೀಗೆ, ಈ ಗುಣಗಳಲ್ಲಿ ಕೆಲವು ಕಾವ್ಯ ಪ್ರಪಂಚಕ್ಕೇ ವ್ಯಾಪಿಸುವಷ್ಟು ವಿಶಾಲ. ಇನ್ನು ಕೆಲವು ಕೇವಲ ಬಂಧದ ಬಗ್ಗೆ ಕೆಲವು ನಿಯಮಗಳನ್ನು ತಿಳಿಸುವಂತಹವು. ಇನ್ನು ಕೆಲವು ಅನಂತರದ ಆಲಂಕಾರಿಕರ ಅಭಿಪ್ರಾಯಗಳ ಛಾಯೆಗಳನ್ನೊಳಗೊಂಡವು.
ಈ ಮೂರು ರೀತಿಯ ಗುಣಗಳೂ ವ್ಯಾವಹಾರಿಕವಾಗಿ ಕಾವ್ಯಮೀಮಾಂಸೆಯಲ್ಲಿ ಹೆಚ್ಚಿನ ಸಾಧನೆಯನ್ನು ಮಾಡದಿರುವುದು ಅವುಗಳ ಮೌಲ್ಯದ ಪರಿಮಿತಿ, ಅತಿ ವ್ಯಾಪಕವಾಗಿರುವ ಕೆಲವು ಬಹಳ ಸ್ಫೂಲವಾದ ಅಭಿಪ್ರಾಯಗಳಾಗಿದ್ದು ಕಾವ್ಯ ಮೀಮಾಂಸಕನಿಗೆ ಸ್ಪಷ್ಟವಾದ ಸಲಹೆಯನ್ನು ಮಾಡುವುದಿಲ್ಲ. ಬಂಧಗುಣಗಳು ಎಷ್ಟೊಂದು ಪರಿವಿತವೆಂದು ಹೇಳಬೇಕಾಗಿಲ್ಲ. ಇವು ಒಂದು ಭಾಷೆಯ ಮತ್ತು ಒಂದು ಆವರಣದ ದೃಷ್ಟಿಯಿಂದ ಮಾತ್ರ ಉಪಯುಕ್ತವಾಗುವುದೇ ಹೊರತು ಅದಕ್ಕಿಂತ ಹೆಚ್ಚಿನ ಯಾವ ವಿಚಾರವನ್ನೂ ಕೊಡುವುದಿಲ್ಲ. ಇನ್ನುಳಿದ ಕೆಲವು ಗುಣಗಳು ಕೇವಲ ಅಪ್ರಬುದ್ಧ ಅವಸ್ಥೆಯಲ್ಲಿದ್ದು ತಮ್ಮ ಬಗ್ಗೆ ಸ್ಪಷ್ಟ ಕಲ್ಪನೆಗಳನ್ನೇ ಕೊಡುವುದಿಲ್ಲ. ತರ್ಕದ ಪರಿಭಾಷೆಯಲ್ಲಿ ಹೇಳುವುದಿದ್ದರೆ, ಈ ಗುಣಗಳಲ್ಲಿ ಕೆಲವು ಅತಿವ್ಯಾಪಕಗಳಾಗಿ ಇರುವುದರಿಂದ ತುಂಬಾ ಅಸ್ಪಷ್ಟ. ಇನ್ನೂ ಕೆಲವು ಅವ್ಯಾಪಕಗಳಾಗಿರುವುದರಿಂದ ಅಸಮರ್ಥ.
ಹೀಗೆಯೇ ಅರ್ವಾಚೀನ ಪಕ್ಷದವರು ವೇದಾಂತದಂತಹ ಶಾಸ್ತ್ರಗಳ ಪ್ರಭಾವಕ್ಕೆ ಒಳಗಾಗಿರುವುದು ಅವರು ಮಾಡುವ ದೇಹ-ಆತ್ಮವಿವೇಚನೆಯಿಂದ ಸ್ಪಷ್ಟವಾಗುವುದು. ಕೇವಲ ಬೌದ್ಧಿಕವಾಗಿ ನೋಡುವುದಾದರೆ, ಈ ಆಲಂಕಾರಿಕರು ಸಾಧಿಸಿದ ಪ್ರಗತಿ ಅಸಾಧಾರಣವಾದ್ದು. ಯಾಕೆಂದರೆ, ಗುಣವೆಂಬ ಕಲ್ಪನೆ ವ್ಯಾವಹಾರಿಕವಾಗಿ ಬಹಳ ಅಸ್ಪಷ್ಟ. ಒಬ್ಬ ಮನುಷ್ಯನು ಗುಣಿಯೆಂದು ಹೇಳಿದಾಗ ಅವನ ವ್ಯಕ್ತಿತ್ವದ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ. ಇಂತಹ ಅಸ್ಪಷ್ಟ ಕಲ್ಪನೆಯನ್ನಾರಿಸಿಕೊಂಡು ತಮ್ಮ ತರ್ಕಸರಣಿಯ ಸಹಾಯದಿಂದ ಕಾವ್ಯಮೀಮಾಂಸೆಯಲ್ಲಿ ಅದಕ್ಕೊಂದು ನಿರ್ದಿಷ್ಟ ಸ್ಥಾನವನ್ನು ಕಲ್ಪಿಸಿರುವುದು ಈ ಆಲಂಕಾರಿಕರ ಬೌದ್ದಿಕ ಸಾಹಸ.
ಈ ಸಾಹಸವು ಎಷ್ಟು ಗಮನಾರ್ಹವೋ ಇವರ ವಿಚಾರದ ಪರಿಮಿತಿಯ ಕಾವ್ಯಮೀಮಾಂಸೆಯ ದೃಷ್ಟಿಯಿಂದ ಅಷ್ಟೇ ಗಮನಾರ್ಹ. ಮುಖ್ಯವಾಗಿ, ದೇಹ-ಆತ್ಮಗಳ ಪ್ರತ್ಯೇಕತೆ ಕಾವ್ಯಮೀಮಾಂಸೆಯಲ್ಲಿ ಬಹಳ ಅಪಾಯಕರ. ದೇಹವೇ ಸರ್ವಸ್ವವೆಂದು ತಿಳಿಯುವ ಸ್ಥೂಲದೃಷ್ಟಿಗೆ ಬೆಳಕು ತೋರಿಸುವುದು ತತ್ತ್ವಶಾಸ್ತ್ರದಲ್ಲಿ ಆತ್ಮವಿವೇಚನೆಯ ಮುಖ್ಯ ಉದ್ದೇಶ. ಈ ಉದ್ದೇಶವನ್ನು ಮರೆತು ವಿವೇಚನೆಯನ್ನು ಅತಿಯಾಗಿಸಿದಲ್ಲಿ ದೇಹ-ಆತ್ಮಗಳ ಪ್ರತ್ಯೇಕತೆ ಅತಿಯಾಗಿ ಬೆಳೆದು ಅವೆರಡರ ಅಖಂಡತ್ವದ ಕಲ್ಪನೆಯನ್ನು ಸಂಪೂರ್ಣ ನಾಶಮಾಡುವ ಅಪಾಯಕ್ಕೆ ಕಾರಣವಾಗಬಹುದು. ಕಾವ್ಯಮೀಮಾಂಸೆಯಲ್ಲಿ ಇಂತಹ ಅಪಾಯಕ್ಕೂ ಅದರ ತೀವ್ರ ಪರಿಣಾಮಗಳಿಗೂ ಬಹಳ ಅವಕಾಶವಿದೆ. ಈ ಅಪಾಯ ಮತ್ತು ಅದರ ಪರಿಣಾಮಗಳು ಅಲಂಕಾರ ಶಾಸ್ತ್ರದಲ್ಲಿ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಬರುವುದಕ್ಕೆ ಒಂದು ಮುಖ್ಯ ಕಾರಣವೆಂದರೆ, ಗುಣಗಳ ಸ್ಥಾನನಿರ್ಣಯಕ್ಕೋಸ್ಕರ ಆಲಂಕಾರಿಕರು ಮಾಡಿದ ದೇಹ-ಆತ್ಮವಿವೇಚನೆ. ಈ ಆಲಂಕಾರಿಕರು ರಸಕ್ಕೂ ಗುಣಕ್ಕೂ ಹೇಳುವ ವ್ಯತ್ಯಾಸವನ್ನು ವಿಶ್ಲೇಷಣೆಯ ಕಾಲದಲ್ಲಿ ಮಾತ್ರ ನಾವು ಬೌದ್ಧಿಕವಾಗಿ ಅನುಭವಿಸಬಹುದೇ ಹೊರತು, ಇವರು ಹೇಳುವ ಗುಣಗಳನ್ನು ನಾವು ಅನುಭವದಿಂದ ತಿಳಿಯುವುದು ಹೇಗೆ ಸಾಧ್ಯ ? ಈ ರೀತಿಯಲ್ಲಿ ಆಲಂಕಾರಿಕರು ಯಾವುದನ್ನು ಅತಿಬೌದ್ದಿಕತೆಯಿಂದ ತಮ್ಮ ಜಯವೆಂದು ಸ್ವೀಕರಿಸಿದರೋ ಅದೇ ಅನುಭವ ಸಂವಾದಿಯಲ್ಲದಿದ್ದುದರಿಂದ ಅವರ ಪರಾಜಯವಾಯಿತು.

Close

ಪ್ರಜ್ಞೆ ಮತ್ತು ಪರಿಸರ

ಯು.ಆರ್. ಅನಂತಮೂರ್ತಿ

ಪ್ರಜ್ಞೆ ಮತ್ತು ಪರಿಸರ

ಒಂದು ಟಿಪ್ಪಣಿ
ಮಾರ್ಕ್ಸ್‌ನ ವಾದ ಸ್ಥೂಲವಾಗಿ ಇದು : ವ್ಯಕ್ತಿ ವ್ಯಕ್ತಿಗಳ ನಡುವೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಏರ್ಪಡುವ ಎಲ್ಲ ರೀತಿಯ ಸಂಬಂಧಗಳ ಒಟ್ಟು ಮೊತ್ತ ಒಂದು ಸಮಾಜ ವ್ಯವಸ್ಥೆ ಎನ್ನಿಸಿಕೊಳ್ಳುತ್ತದೆ. ಯಾವ ರೀತಿಯ ಸಮಾಜ ವ್ಯವಸ್ಥೆಯೇ ಆಗಲಿ, ಅದರ ಮುಖ್ಯವಾದ ಸ್ವರೂಪ ನಿರ್ಣಯವಾಗುವುದು ಅದರ ತಳಪಾಯದಂತಿರುವ ಆರ್ಥಿಕ ವ್ಯವಸ್ಥೆಯ ಮೇಲೆ. ಆದ್ದರಿಂದಲೇ, ಆರ್ಥಿಕ ವ್ಯವಸ್ಥೆಯಲ್ಲಿ-ಎಂದರೆ ಉತ್ಪತ್ತಿ ಸಂಪಾದನಾ ಕ್ರಮಗಳಲ್ಲಿ -ಮೂಲಭೂತವಾದ ಬದಲಾವಣೆಗಳು ಆದಾಗ್ಗೆಲ್ಲ ವ್ಯಕ್ತಿ-ವ್ಯಕ್ತಿಗಳ ನಡುವಿನ ಎಲ್ಲ ಇತರ ಸಂಬಂಧಗಳಲ್ಲಿ ಸೂಕ್ಷ್ಮ ಮಾರ್ಪಾಡುಗಳು ಆಗುತ್ತವೆಂಬುದನ್ನು ನಾವು ಇತಿಹಾಸದುದ್ದಕ್ಕೂ ಕಾಣುತ್ತೇವೆ.
ಫ್ರಾಯ್ಡ್‌ನ ಮೂಲಭೂತ ‘ಕಾಮ’ದಂತೆಯೇ ಮಾರ್ಕ್ಸ್‌ನ ಈ ದೃಷ್ಟಿಯೂ ಮನುಷ್ಯನ ಸೂಕ್ಷ್ಮ ಸಮಸ್ಯೆಗಳನ್ನೆಲ್ಲ ಸರಳಗೊಳಿಸುವ ಸಾಧ್ಯತೆ ಇದೆ. ಆದರೆ ಸುಖ-ಸಂಕಟಗಳಿಗೆ ಕಾರಣವಾಗಿ ಬದಲಾಗುತ್ತಿರುವ ಇಂದಿನ ಸಮಾಜವನ್ನೇ ಆಗಲಿ, ಮನುಷ್ಯನ ಒಟ್ಟು ಇತಿಹಾಸವನ್ನೇ ಆಗಲಿ ಅರಿಯಲು ಪ್ರಯತ್ನ ಮಾಡುವವನಿಗೆ ಆಧ್ಯಾತ್ಮವಾದಿಯ ಸನಾತನ ತತ್ವಗಳಿಗಿಂತ ಮಾರ್ಕ್ಸ್‌ನ ದ್ವಂದ್ವಾತ್ಮಕ ವಸ್ತುವಾದ ಹೆಚ್ಚು ಪ್ರಯೋಜನ ಉಳ್ಳದ್ದು.
ಉದಾಹರಣೆಗೆ : ಭಾರತೀಯನೊಬ್ಬನ ಒಟ್ಟು ಮನೋಧರ್ಮಕ್ಕೂ, ಯೂರೋಪಿಯನ್ ಒಬ್ಬನ ಮನೋವೃತ್ತಿಗೂ-ಆದ್ದರಿಂದ ಇಬ್ಬರ ಲೋಕದೃಷ್ಟಿಗೂ-ನಡುವೆ ಇರುವ ವ್ಯತ್ಯಾಸಕ್ಕೆ ಕಾರಣ ಇಬ್ಬರ ಸ್ವಭಾವದಲ್ಲಿರುವ ಮೂಲಭೂತವಾದ ಅಂತರ ಎನ್ನುವುದಕ್ಕಿಂತ ಹೆಚ್ಚಾಗಿ, ಯೂರೋಪಿನಲ್ಲಿ ಕೈಗಾರಿಕಾಕ್ರಾಂತಿ ಒಂದು ಘಟ್ಟ ಮುಟ್ಟಿದೆ. ಭಾರತದಲ್ಲಿ ಅದು ಇನ್ನೂ ಪ್ರಾರಂಭವಾಗಿದೆ ಎನ್ನುವುದೇ ಹೆಚ್ಚು ಸಮರ್ಪಕವಾದ ಉತ್ತರ. ಯೂರೋಪ್ ಭಾರತಗಳಷ್ಟು ದೂರದ ದೇಶಗಳ ಅಂತರದ ಮಾತಿರಲಿ-ಭಾರತದಲ್ಲೇ ಮನುಷ್ಯನ ಮನೋಧರ್ಮ ಹಳ್ಳಿ ಮತ್ತು ಪಟ್ಟಣಗಳಲ್ಲಿ ಬೇರೆ ಬೇರೆ ರೀತಿ ಸೃಷ್ಟಿತವಾಗುವುದನ್ನು ನಾವು ಕಾಣಬಹುದು. ಒಡೆಯ-ಒಕ್ಕಲು ಸಂಬಂಧ ನಡೆಯುವ ಹಳ್ಳಿಯೊಂದರಲ್ಲಿ ಈ ಸಂಬಂಧದ ತಳಪಾಯದ ಮೇಲೆ ನಿಂತಿರುವ ಉಳಿದೆಲ್ಲ ವ್ಯವಹಾರಗಳ ಮೂಲಕ ರೂಪಿತವಾಗುವ ಜೀವನದೃಷ್ಟಿ ಬೇರೆ ; ಮಾಲಿಕ-ನೌಕರ ಸಂಬಂಧವೇ ಅಡಿಗಲ್ಲಾದ ಪಟ್ಟಣದಲ್ಲಿ ಮೂಡುವ ಬಾಳಿನ ಸ್ವರೂಪ ಬೇರೆ. ಜಾತಿಪದ್ಧತಿಯಾಗಲಿ, ಪರಂಪರಾನುಗತವಾಗಿ ಪೂರ್ವನಿಶ್ಚಿತವಾದ ತಮ್ಮ ತಮ್ಮ ಸ್ಥಾನದ ಕಲ್ಪನೆಯಾಗಲಿ, ಅವಯವಸಾಮರಸ್ಯದ ಗ್ರಾಮಜೀವನದ ಅನ್ಯೋನ್ಯತೆಯಾಗಲಿ ಬೃಹತ್ ನಗರವೊಂದರಲ್ಲಿ ಉದ್ಯೋಗಕ್ಕೆ ನಿಂತ ಜನರ ನಡುವೆ ಬಹಳಕಾಲ ಉಳಿದುಕೊಂಡು ಬರುವುದು ಕಷ್ಟದ ವಿಷಯ (ಹಳ್ಳಿಗಳೂ ಈಗ ಬದಲಾಗುತ್ತಿವೆ : ಜೀವನವನ್ನು ಕಟ್ಟುವ ಆರ್ಥಿಕ ವ್ಯವಸ್ಥೆಯಲ್ಲಿ, ಆದ್ದರಿಂದ ಜೀವನ ದೃಷ್ಟಿಯಲ್ಲಿ.) ಯಾವುದಕ್ಕೆ ನಾವು ಭಾವನಾತ್ಮಕವಾಗಿ ಮಾತ್ರ ಗಂಟುಬಿದ್ದು, ಪ್ರಯತ್ನಪೂರ್ವಕವಾಗಿಯೇ ಉಳಿಸಿಕೊಂಡು ಬರಬೇಕಾಗುವುದೋ, ಅದು ಕೊನೆಗೆ ನಿತ್ಯ ಬದುಕಿನ ವಾಸ್ತವದಲ್ಲಿ ನಶಿಸಿ ಸ್ಮೃತಿರೂಪವಾಗಿ ಮಾತ್ರ ಉಳಿಯುತ್ತದೆ.
ಅಂದರೆ : ನಮ್ಮ ಉದ್ಯೋಗ- ಉತ್ಪಾದನಾ ಕ್ರಮಗಳು, ನಮ್ಮ ಒಟ್ಟು ಸಮಾಜ ವ್ಯವಸ್ಥೆ, ನಮ್ಮ ಜೀವನದೃಷ್ಟಿ – ಈ ಮೂರೂ ಸದಾ ಬದಲಾವಣೆಗೆ ಒಳಪಟ್ಟ, ಪರಸ್ಪರ ಸಂಬಂಧವಿರುವ ವಿಷಯಗಳು. ಯಾವೊಂದರಲ್ಲಿ ಆಗುವ ಬದಲಾವಣೆಯೂ (ಎಲ್ಲ ಮಾರ್ಕ್ಸ್‌ವಾದಿಗಳು ಇದನ್ನು ಒಪ್ಪುವುದಿಲ್ಲ) ಇನ್ನೊಂದನ್ನು ಹೋಗಿ ಮುಟ್ಟುತ್ತದೆ. ಈ ಮೂರರ ನಡುವೆ ಆರ್ಥಿಕ ವ್ಯವಸ್ಥೆಯಲ್ಲಾಗುವ ಬದಲಾವಣೆ ಅತ್ಯಂತ ವ್ಯಾಪಕವಾದ ಮಾರ್ಪಾಡುಗಳಿಗೆ ಕಾರಣವಾಗುತ್ತದೆ ಎನ್ನುವ ಮಟ್ಟಿಗೆ ಮಾರ್ಕ್ಸ್‌ನನ್ನು ನಾವು ಒಪ್ಪಬಹುದು. ಭಾರತದ ಜೀವನಕ್ರಮದಲ್ಲಿ ಅತ್ಯಂತ ಮುಂದ ಗತಿಯ ಬದಲಾವಣೆಗಳಾಗಿವೆ-ಯೂರೋಪಿಗೆ ಹೋಲಿಸಿದಲ್ಲಿ- ಎನ್ನುವುದಕ್ಕೆ ಕಾರಣ ನಮ್ಮ ಆರ್ಥಿಕ ವ್ಯವಸ್ಥೆ ಹಾಗೂ ಹೀಗೂ ಈ ತನಕ ಕುಂಟುತ್ತ ನಡೆದು ಬಂದಿದೆ ಎಂಬುದು ; ನಮ್ಮ ಮೌಲ್ಯಗಳು ಯೂರೋಪಿನವರದ್ದಕ್ಕಿಂತ ಹೆಚ್ಚು ಗಟ್ಟಿ ಎಂಬುದಲ್ಲ. ಆದ್ದರಿಂದಲೇ ಐತಿಹಾಸಿಕ ದೃಷ್ಟಿಯಿಂದ ಮನುಷ್ಯನ ಬದಲಾಗುತ್ತಿರುವ ಸ್ವರೂಪವನ್ನು
*7

ನೋಡುವಾಗ ನಮ್ಮ ಜೀವನದೃಷ್ಟಿ ಮತ್ತು ನಮ್ಮ ಮನೋಧರ್ಮದ ಮೂಲದಲ್ಲಿರುವ ಪ್ರಜ್ಞೆ ತೀರಾ ವ್ಯಕ್ತಿಗತವಾದದ್ದು ಎನ್ನಲು ಸಾಧ್ಯವಿಲ್ಲ. ಮನುಷ್ಯನ ಪ್ರಜ್ಞೆಯ ಸೂಕ್ಷ್ಮಸ್ವರೂಪವಲ್ಲದಿದ್ದರೂ, ಅದರ ಸಾಧಾರಣ ರೂಪುರೇಷೆಗಳು ನಿರ್ಧರಿತವಾಗುವುದು ವ್ಯಕ್ತಿ-ವ್ಯಕ್ತಿಗಳ ನಡುವೆ ಏರ್ಪಡುವ ನಾನಾ ಬಗೆಯ ಸಂಬಂಧಗಳ ಮಥನದಲ್ಲಿ. ಅಂದರೆ ಒಂದು ಸಮಾಜ ವ್ಯವಸ್ಥೆಯನ್ನು ವ್ಯಕ್ತಿ ಒಪ್ಪಿಯೋ, ಅಥವಾ ವಿರೋಧಿಸಿಯೊ ಬಾಳುವುದರಲ್ಲಿ; ಉದ್ಯೋಗದಿಂದ ಮೊದಲಾಗಿ ನಮ್ಮ ಪಾರಮಾರ್ಥದ ತನಕ ನಾವು ತೊಡಗುವ ಕ್ರಿಯೆಗಳಲ್ಲಿ. ವ್ಯಕ್ತಿ ಪ್ರಜ್ಞೆ ಕಾಲಾತೀತವಾದ ಶೂನ್ಯದಲ್ಲಿಯೊ, ಅಸ್ಪರ್ಶ ಅವಕಾಶದಲ್ಲಿಯೊ, ನಾವು ಸ್ವಯಂಭೂವಿನಂತೆ ಸೃಷ್ಟಿಸಿಕೊಳ್ಳುವ ವಸ್ತುವಲ್ಲ. ಪದಾರ್ಥಲೋಕದಲ್ಲಿ ಮತ್ತು ತನ್ನಂತಹ ಇತರರು ಇರುವ ಲೋಕದಲ್ಲಿ ತೊಡಗುವುದರ ಮೂಲಕ ಮಾತ್ರ ಮನುಷ್ಯನ ಪ್ರಜ್ಞೆ ತನ್ನನ್ನು ತಾನು ಗೊತ್ತುಪಡಿಸಿಕೊಳ್ಳುತ್ತದೆ ; ರೂಪಿಸಿಕೊಳ್ಳುತ್ತದೆ.
ಅಂದ ಮಾತ್ರಕ್ಕೆ ವ್ಯಕ್ತಿ ಪ್ರಜ್ಞೆಗೂ, ಸಮಾಜ ವ್ಯವಸ್ಥೆಗೂ ನಡುವೆ ಇರುವ ಸಂಬಂಧವನ್ನು ಸಮೀಕರಣದಷ್ಟು ಸ್ಪಷ್ಟವಾದ ರೀತಿಯಲ್ಲಿ ಲೆಕ್ಕಾಚಾರಮಾಡಿ ನಿರ್ಧರಿಸುವುದು ಅಸಾಧ್ಯ. ಸುಲಭ ರೀತಿಯಲ್ಲಿ ಸೂತ್ರಾನ್ವಯಮಾಡುವ ಮಾರ್ಕ್ಸ್‌ವಾದಿಗಳು ಹೆಜ್ಜೆ ತಪ್ಪುವುದು ಇಲ್ಲೆ. ಆರ್ಥಿಕ ವ್ಯವಸ್ಥೆಯೇ ತಳಪಾಯ, ನಮ್ಮ ಸಾಂಸ್ಕೃತಿಕ, ಭೌತಿಕ, ರಾಜಕೀಯ ವ್ಯವಹಾರಗಳೆಲ್ಲ ಈ ತಳಪಾಯಕ್ಕನುಗುಣವಾಗಿ ಬೆಳೆದ ಕಟ್ಟಡ ಎಂದು ಮಾರ್ಕ್ಸ್‌ ಅಂದಿದ್ದರೂ ಸಹ, ಯುವಕ ಮಾರ್ಕ್ಸ್‌ನಲ್ಲ ಮತ್ತು ಅವನ ಸಹೋದ್ಯೋಗಿಯಾಗಿದ್ದ ಎಂಗೆಲ್ಸ್‌ನಲ್ಲೂ ನಮ್ಮ ಬೌದ್ಧಿಕ ಪ್ರೇರಣೆಗಳ ಮೂಲಕವೂ ಸಮಾಜದಲ್ಲಿ ಬದಲಾವಣೆಗಳು ಆಗುವುದು ಶಕ್ಯ ಎಂಬ ಸೂಚನೆಯೂ ಇದೆ.
ಆದರೆ ಈ ಸೂಚನೆ ಮಾತ್ರ ಮಾರ್ಕ್ಸ್‌ನ ಒಟ್ಟು ವಿಚಾರಕ್ಕೆ ಮೂಲಭೂತವಾದದ್ದಲ್ಲ. ಮಾರ್ಕ್ಸ್ ಹೆಚ್ಚು ಮಹತ್ವ ಕೊಡುವುದು ಆರ್ಥಿಕ ವ್ಯವಸ್ಥೆಗೇ ; ಇದರಿಂದಾಗಿ ಮನುಷ್ಯನ ಸಮಾಜವನ್ನು ಐತಿಹಾಸಿಕ ದೃಷ್ಟಿಯಿಂದ ಅಭ್ಯಾಸಮಾಡುವವರಿಗೆ ನಿಶಿತವಾಗಿ ನಿರ್ದಿಷ್ಟವಾಗಿ ವಿಶ್ಲೇಷಿಸಲು ಒಂದು ದೃಷ್ಟಿಕೋನ ಸಿಕ್ಕಂತಾಗುತ್ತದೆ. ಆದರೆ ಐತಿಹಾಸಿಕ ದೃಷ್ಟಿಯಿಂದಲ್ಲದೆ, ನಿತ್ಯವಾಗಿ ಘಟಿಸುವ ಅನುಭವವೆಂದು ಜೀವನವನ್ನು ನೋಡುವವರಿಗೆ ಮಾತ್ರ ಆರ್ಥಿಕ ವ್ಯವಸ್ಥಾಂತರದಲ್ಲೆ ಪುರುಷಾರ್ಥಗಳ ಸಂಪೂರ್ಣ ವ್ಯವಸ್ಥಾಂತರಗಳನ್ನೂ ಕಾಣುವ ಮಾರ್ಕ್ಸ್‌ನ ದೃಷ್ಟಿಅತೃಪ್ತಿಯನ್ನು ತರುತ್ತದೆ.
ಇತಿಹಾಸದ ಪ್ರವಾಹದೃಷ್ಟಿಗೆ ಪ್ರತಿಘಳಿಗೆಯೂ ನಿಲ್ಲದಂತೆ ಹರಿಯುತ್ತಿರುವ ಬಿಂದುಗಳಲ್ಲಿ ಇನ್ನೊಂದು ಬಿಂದು ; ಹುಟ್ಟು -ಸಾವು-ಸಂಭೋಗಗಳ ಪುನರಾವೃತ್ತಿಯೆಂದೊ, ಸಫಲತೆಯ ಹೊಯ್ದಾಟವೆಂದೊ ಜೀವನವನ್ನು ನೋಡುವವನಿಗೆ ಮಾತ್ರ ಪ್ರತಿ ಘಳಿಗೆಯೂ ಚಿರಸತ್ಯವನ್ನು ತನ್ನೊಳಗೆ ಗರ್ಭಿಸಿಕೊಂಡ ಮುಹೂರ್ತ. ಅಜಂತದ ಚಿತ್ರಗಳು ಮೂರ್ತೀಭವಿಸಿದ ಕಾಲ ಇತಿಹಾಸದ ಪ್ರವಾಹಕ್ಕೆ ವಶವಾಗಿ ಕಳೆದುಹೋಗಿದ್ದರೂ, ಇವಕ್ಕೆ ರೂಪವನ್ನು ಕೊಟ್ಟಿದ್ದ ಆರ್ಥಿಕ ವ್ಯವಸ್ಥೆ ಈಗ ನಶಿಸಿದ್ದರೂ ಚಿತ್ರಗಳು ಮಾತ್ರ ಗತಕಾಲದ ಕುರುಹುಗಳಂತಲ್ಲದೆ, ಈ ಕ್ಷಣಕ್ಕೂ ಜೀವಂತವಾಗಿ ಒದಗುವಂತಹ ಅನುಭವಗಳಾಗಿ ಉಳಿದಿವೆ. ಬದಲಾಗುವ ಆರ್ಥಿಕ ವ್ಯವಸ್ಥೆಯಿಂದ ಜೀವನಾನುಭವದ ಸ್ವರೂಪವೆ ಸಂಪೂರ್ಣ ಮಾರ್ಪಡುವಂತಿದ್ದರೆ, ಪುರಾತನನಾದ ಹೋಮರ್ ಇವತ್ತಿಗೂ ತನ್ನ ಮನಸ್ಸನ್ನು ಯಾಕೆ ಕಲಕಬೇಕು ಎಂದು ವಿಚಾರಿಸುವಾಗ ಮಾರ್ಕ್ಸ್‌ ಗೊಂದಲಕ್ಕೊಳಗಾಗುತ್ತಾನೆ.
ಅಂದರೆ ಮನುಷ್ಯನ ಪ್ರಜ್ಞೆಯೇ ಎಲ್ಲದಕ್ಕೂ ಕರ್ತೃ ಮತ್ತು ಕಾರಣ ಎನ್ನುವ ಆದರ್ಶವಾದವಾಗಲಿ ಅಥವಾ ಮಾರ್ಕ್ಸ್‌ನ ಕೇವಲ ಐತಿಹಾಸಿಕ ದೃಷ್ಟಿಯಾಗಲಿ ಒಂದಕ್ಕೊಂದು ಹೊರತಾಗಿ ನಿಂತಾಗ ಮನುಷ್ಯನನ್ನು ಒಟ್ಟಾಗಿ ಗ್ರಹಿಸಲು ಸಾಲದಾಗುತ್ತದೆ. ಆರ್ಥಿಕ-ಐತಿಹಾಸಿಕ ಶಕ್ತಿಗಳ ಪರಿಸರದಲ್ಲೆ ಮನುಷ್ಯನ ಪ್ರಜ್ಞೆಯ ವಿಸ್ತಾರವನ್ನು ನಿರ್ಧರಿಸುವ ಮಾರ್ಕ್ಸ್‌ ಕೂಡ ದಲಿತನಲ್ಲಿ ಕ್ರಾಂತಿಯ ಬೀಜವನ್ನು ಕಾಣುವಾಗ ಮನುಷ್ಯನ ಪ್ರಜ್ಞೆಯ ಸ್ತರದಲ್ಲಿ ಇತಿಹಾಸವನ್ನು ಮೀರುವ ಪ್ರಯತ್ನವನ್ನು ಗುರುತಿಸಬೇಕಾಗುತ್ತದೆ. ನಮ್ಮನ್ನು ರೂಪಿಸುವುದರಲ್ಲಿ ಆರ್ಥಿಕ, ಸಾಮಾಜಿಕ ಪರಿಸರಗಳು ಎಷ್ಟು ಪ್ರಭಾವಶಾಲಿಯಾಗಿದ್ದರೂ ಕೂಡ, ಈ ಪ್ರಭಾವಗಳ ತಿಕ್ಕಾಟಕ್ಕೆ ಸಿಕ್ಕ ತನ್ನ ಸ್ವಂತ ನಿರ್ಧಾರದ ಮೇಲೆಯೇ ಸದಾ “ಆಗು”ತ್ತಿರುವುದು ಎಲ್ಲ ಕಾಲಕ್ಕೂ ಶಾಶ್ವತವಾಗಿ ಮನುಷ್ಯನ ಪ್ರಜ್ಞೆಯೇ ಎಂಬುದನ್ನು ಕಡೆಗಾಣಿಸಿ ಬಿಡುವಂತಿಲ್ಲ. ಮೂಲದಲ್ಲಿರುವುದು ಬರೀ ಪರಿಸರವೆ ಅಥವಾ ಬರೀ ಪ್ರಜ್ಞೆಯೆ ಎಂಬ ಪ್ರಶ್ನೆಯಿಂದ ಮನುಷ್ಯನ ಅನುಭವವನ್ನು ವರ್ತಮಾನ-ತ್ರಿಕಾಲ ದೃಷ್ಟಿಯಿಂದ ಒಟ್ಟಿಗೇ ಗ್ರಹಿಸುವ ಯತ್ನಕ್ಕೆ ಪ್ರಯೋಜನವಿಲ್ಲ; ಅಥವಾ ಒಂದಿಷ್ಟು ಆದರ್ಶವಾದವನ್ನು ಇನ್ನೊಂದಿಷ್ಟು ಐತಿಹಾಸಿಕ ದೃಷ್ಟಿಯೊಡನೆ ಬೆಸೆಯುವ ಸುವರ್ಣ ಮಾಧ್ಯಮದ ರಾಜಿಯಿಂದಲೂ ಉಪಯೋಗವಿಲ್ಲ. ಪರಿಸರದ ಒತ್ತಡವನ್ನೂ , ತನ್ಮಧ್ಯೆಯಿದ್ದೂ ‘ಮೀರ’ಲೆತ್ನಿಸುವ ಮನುಷ್ಯ ಪ್ರಜ್ಞೆಯ ಶಾಶ್ವತ ಹೋರಾಟವನ್ನೂ ಅಖಂಡವಾಗಿ ಹಿಡಿಯಲು ಪ್ರಯತ್ನಿಸುವ ಸಾಹಿತ್ಯದ ಮಾರ್ಗಕ್ಕೆ-ಇದು ವ್ಯಕ್ತಿಯ ವಿಶಿಷ್ಟ ಅನುಭವದ ಶೋಧನೆಯಲ್ಲಿ ಸಮಷ್ಟಿಯ ಸಾಧಾರಣ ಸ್ವರೂಪವನ್ನು ಕಂಡುಕೊಳ್ಳುವ ಮಾರ್ಗವಾದ್ದರಿಂದ-ಪ್ರಜ್ಞೆ, ಪರಿಸರಗಳ ದ್ವಂದ್ವದಲ್ಲಿನ ಸೆಳೆತವನ್ನು ವಿಚಾರ ನಿರ್ದಿಷ್ಟವಾಗಲೆಂಬ ಉದ್ದೇಶದಿಂದ ಸಡಿಲಮಾಡುವುದರಲ್ಲಿ ಲಾಭವಿಲ್ಲ.
ಪ್ರಜ್ಞೆ ಮತ್ತು ಪರಿಸರಗಳಲ್ಲಿ ಯಾವುದು ಸಾರ್ವಭೌಮ ಎನ್ನುವ ಪ್ರಶ್ನೆ ಅಮುಖ್ಯವಾದಾಗ ಸಮಾಜದ ಸಮಷ್ಟಿಯಲ್ಲಿ ವ್ಯಕ್ತಿ ಪಾಲುಗೊಳ್ಳುವುದಾಗಲಿ, ಸ್ವಂತ ನಿಶ್ಚಯದಲ್ಲಿ ಹೊರನಿಲ್ಲುವುದಾಗಲಿ, ಪರಕೀಯ ಭಾವದಲ್ಲಿ ತಪ್ತನಾಗುವುದಾಗಲಿ, ಇರುವುದನ್ನು ಬಿಟ್ಟು ಇಲ್ಲದುದನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗುವುದಾಗಲಿ ಅರ್ಥಪೂರ್ಣವಾದ ಸಂದಿಗ್ಧವೆಂದು ತಿಳಿಯುವುದು ಸಾಧ್ಯವಾಗುತ್ತದೆ. ತಾನಾಗಿಯೇ ಬೆಳೆಯುತ್ತ, ಕೂಡಿಕೊಳ್ಳುತ್ತ, ಏರುತ್ತ ಹೋಗುವ ಸಮನ್ವಯವಾದಿಗಳ ಪ್ರಜ್ಞೆಯ ಚಿತ್ರವಾಗಲಿ ; ಅಥವಾ ತನ್ನ ಅತಿಯಿಂದ ತಾನೇ ನಿಷೇಧಿಸಲ್ಪಟ್ಟು ಬದಲಾಗುತ್ತ, ಬೆಳೆಯುತ್ತ ಮನುಷ್ಯನನ್ನು ರೂಪಿಸುವ ಮಾರ್ಕ್ಸಿಸ್ಟರ ಆರ್ಥಿಕ ವ್ಯವಸ್ಥೆಯಾಗಲಿ ಅನುಭವದ ಸತ್ಯಕ್ಕೆ ದೂರವಾದವು. ಇತರರೇ ಇಲ್ಲವೆಂಬಂತಿರುವ ಪ್ರಪಂಚದಲ್ಲಿ ತನ್ನನ್ನು ತಾನು ಶೋಧಿಸಿಕೊಳ್ಳುವ ಪ್ರಜ್ಞೆಯ ಚಿತ್ರ ಯರೋಪಿಯನ್ ನವ್ಯ ಸಾಹಿತ್ಯದ ವಿಪರೀತಕ್ಕೆ ಮುಟ್ಟಿದ ಕೃತಿಗಳಲ್ಲಿ ಮತ್ತು ಅರವಿಂದರ ಅನುಯಾಯಿಗಳಾದ ಆಧ್ಯಾತ್ಮವಾದಿ ಲೇಖಕ ಕೆಲವರಲ್ಲಿ-ಈಚೆಗೆ ಹೆಚ್ಚಾಗಿ ಕಾಣುತ್ತಿದೆ. ಸರಳಮನಸ್ಕನಾದ ಮಾರ್ಕ್ಸ್‌ವಾದಿಯ ಆರ್ಥಿಕ ವ್ಯವಸ್ಥೆಯ ಲಕ್ಷ್ಮಣಗೆರೆ ಮೀರಲಾರದ ಪ್ರಜ್ಞೆಯ ಚಿತ್ರದಂತೆಯೇ, ಈ ಸರ್ವತಂತ್ರ ಸ್ವತಂತ್ರ ಪ್ರಜ್ಞೆಯೂ ಒಂದು ಕಲ್ಪನಾವಿಲಾಸ. ದೇಹ ಮಣ್ಣು, ಸಮಾಜ, ಪರಿಸರ, ಆತ್ಮ-ಈ ಯಾವೊಂದರಿಂದಲೂ ವ್ಯಕ್ತಿ ಪ್ರಜ್ಞೆಯನ್ನು ಹೊರಗಿಡುವ ಪ್ರಯತ್ನ ವಿರುದ್ದ ಶಕ್ತಿಗಳ ಸೆಳೆತಕ್ಕೊಳಗಾದುದನ್ನು ಕೃತ್ರಿಮವಾಗಿ ಸಡಿಲಿಸಿದಂತಾಗುತ್ತದೆ.
ವಿಪರೀತವಾದ ವ್ಯಕ್ತಿವಾದ ಯೂರೋಪಿನಲ್ಲಿ ಬೆಳೆಯುತ್ತಿರುವುದಕ್ಕೂ, ಅಲ್ಲಿ ನಡೆಯುತ್ತಿರುವ ಕೈಗಾರಿಕಾ ಕ್ರಾಂತಿಯಲ್ಲಿ ಕುಟುಂಬದಂತಿದ್ದ ಸಮಾಜ ಒಡೆದು ವ್ಯಕ್ತಿ-ವ್ಯಕ್ತಿಯ ಅನ್ನೋನ್ಯ ಕಲ್ಪನೆ ಕಳೆಯುತ್ತ ಹೋದುದಕ್ಕೂ ಸಂಬಂಧವಿದೆಯೆಂಬುದನ್ನು ಮರೆಯಬಾರದು. ಹಾಗೆಯೇ ಗುರು-ದೇವ-ಪಿತೃ ಋಣಭಾವಗಳಿಂದ ಭಾರತೀಯನ ಉಳಿದೆಲ್ಲ ಯೋಚನೆಗಳು ಪ್ರಭಾವಿತವಾಗುವುದಕ್ಕೂ, ಅವನು ಹುಟ್ಟಿ ಬೆಳೆದು ಬರುವ ಸಮಷ್ಟಿ ಕುಟುಂಬದ ಲೋಕಕ್ಕೂ ಸಂಬಂಧವಿದೆ. ಆದ ಕಾರಣವೇ ನಮ್ಮ ಸಮಷ್ಟಿ ಕುಟುಂಬಗಳಲ್ಲಿ ಬಿರುಕು ಬಿಡುತ್ತಿದ್ದಂತೆ, ಕೈಗಾರಿಕಾ ಕ್ರಾಂತಿಯಿಂದಾಗಿ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ವ್ಯಾಪಕವಾದ ಮಾರ್ಪಾಡಾಗುತ್ತಿದ್ದಂತೆ ನಮ್ಮಲ್ಲಿಯೂ ವ್ಯಕ್ತಿವಾದ ತಲೆಹಾಕುತ್ತಿದೆ. ಆದರೆ ಯೂರೋಪಿನಲ್ಲಾಗಲಿ, ಭಾರತದಲ್ಲಾಗಲಿ ಸಮಷ್ಟಿಗೂ ತನಗೂ ಸಂಬಂಧವಿಲ್ಲವೆನ್ನುವ ವ್ಯಕ್ತಿವಾದ ವಾಸ್ತವದ ನಿಜ ಚಿತ್ರಣವಲ್ಲ. ತಾನು ‘ಪರಕೀಯ’ ಎಂಬ ಭಾವನೆ ವ್ಯಕ್ತಿಯಲ್ಲಿ ಅತ್ಯಂತ ತಪ್ತ ಅನುಭವವನ್ನು ಉಂಟುಮಾಡುತ್ತದೆ ಎಂಬುದೇ ಇದಕ್ಕೆ ಉದಾಹರಣೆ ಪೆಡಂಭೂತದಂತೆ ಬೆಳೆದು ವ್ಯಕ್ತಿಯನ್ನು ತನ್ನ ಆವರಣಕ್ಕೆ ಪರಕೀಯನನ್ನಾಗಿ ಮಾಡುತ್ತಿರುವ ಪರಿಸರಕ್ಕೆ ಇದು ವ್ಯಕ್ತಿಯ ಕ್ಷುಬ್ಧ ಸವಾಲೂ ಹೌದು.
ಈ ಟಿಪ್ಪಣಿಯ ಉದ್ದೇಶ : ಮನುಷ್ಯನನ್ನು ಅವನ ಅಂತರಂಗದಿಂದ ಹೇಗೊ ಹಾಗೆ ಅವನ ಪರಿಸರದ ಹೊರಗಿನಿಂದಲೂ ಗ್ರಹಿಸಲು ಯತ್ನಿಸುವ ಸಾಹಿತ್ಯಕ್ಕೆ ಸಂಪೂರ್ಣ ವ್ಯಕ್ತಿಗತವಾದ ದೃಷ್ಟಿಯೂ ಸಾಲದು, ಐತಿಹಾಸಿಕ ದೃಷ್ಟಿಯೂ ಸಲ್ಲದು – ಎಂಬುದು. ಇಂತಹ ಸಾಮಾನ್ಯವಾದ ತತ್ವವನ್ನು ಮತ್ತೆ ಚರ್ಚಿಸಬೇಕಾಗಿ ಬಂದಿರಲು ಕಾರಣವೆಂದರೆ :
(ಒಂದು) ಆಧ್ಯಾತ್ಮವಾದಿಗಳು ಬರಿಯ ತತ್ವಗಳ ಮಟ್ಟದಲ್ಲೆ ಪ್ರಯತ್ನಿಸುವ ಕೃತಕ ಸಮನ್ವಯ ;
(ಎರಡು) ಯೂರೋಪಿನ ಕೆಲವು ಸಾಹಿತಿಗಳಲ್ಲಿ ವಿಪರೀತಕ್ಕೆ ಹೋದ ನವ್ಯತೆಯನ್ನು ನಮ್ಮ ಸಾಹಿತಿಗಳು ಕಣ್ಣು ಮುಚ್ಚಿ ಅನುಕರಿಸಬಹುದಾದ ಅಪಾಯ ;
(ಮೂರು) ಮೇಲಿನೆರಡಕ್ಕೂ ವಿರೋಧವಾಗಿ ಹುಟ್ಟಬಹುದಾದ ಸರಳ ಮಾರ್ಕ್ಸ್‌ವಾದ.

Close

ಕನ್ನಡದ ಅಭಿಮಾನ

ಗೋಪಾಲಕೃಷ್ಣ ಅಡಿಗ

ಕನ್ನಡದ ಅಭಿಮಾನ

ತಾನು, ತನ್ನದು, ತನಗೆ ಸಂಬಂಧಪಟ್ಟದ್ದು ಎಂಬ ಅಭಿಮಾನ ಸ್ವಪ್ರಜ್ಞೆ ಎಲ್ಲೆಲ್ಲಿ ಜಾಗ್ರತವಾಗಿದೆಯೋ ಅಲ್ಲಲ್ಲಿ ಸಹಜ. ಆದಕಾರಣ ಅದು ಬೇಕೋ ಬೇಡವೋ ಎಂಬ ಪ್ರಶ್ನೆ ಹುಟ್ಟುವುದಿಲ್ಲ. ಅಭಿಮಾನ ಎಂಬ ಈ ಮನಸ್ಥಿತಿ ತನಗೆ ತಾನೇ ಒಳ್ಳೆಯದೂ ಅಲ್ಲ ಕೆಟ್ಟದ್ದೂ ಅಲ್ಲ; ಸಮಯ, ಸಂದರ್ಭ, ಸನ್ನಿವೇಶಗಳ ವಿಶಿಷ್ಟತೆಯಿಂದ ಇದು ಒಳ್ಳೆಯದೂ ಆಗಬಹುದು, ಕೆಟ್ಟದ್ದೂ ಆಗಬಹುದು. ಸದಭಿಮಾನ, ದುರಭಿಮಾನ ಎಂಬ ಶಬ್ದಗಳ ಪ್ರಯೋಗ ಈ ಅರ್ಥವನ್ನು ಸೂಚಿಸುತ್ತದೆ. ಇಲ್ಲಿ ನಾವು ನೆನಪಿಡಬಹುದಾದ ಒಂದು ಮಾನಸಿಕ ಸತ್ಯವೆಂದರೆ ದ್ವಂದ್ವಗಳಿಂದ ತುಂಬಿದ ಈ ಜಗತ್ತಿನಲ್ಲಿ ಒಂದು ದ್ವಂದ್ವದಲ್ಲಿರುವ ಎರಡು ವಿರುದ್ಧ ಪ್ರವೃತ್ತಿಗಳ ಮುಖಾಮುಖಿಯಲ್ಲಿ ಒಂದಕ್ಕೆ ಮೇಲುಗೈ ಆದಾಗ ಅದು ಕೆಡುಕಿಗೆ ಕಾರಣವಾಗುತ್ತದೆ ; ಅದೇ ರೀತಿ ಒಂದು ಇನ್ನೊಂದನ್ನು ಆದಷ್ಟು ಒಳಕೊಂಡು ಯಾವುದಾದರೊಂದು ಪ್ರಮಾಣದಲ್ಲಿ ಸಮತೂಕ ಸಿದ್ಧವಾದರೆ, ಆಗ ಅದು ಒಳ್ಳೆಯದಕ್ಕೆ ಕಾರಣವಾಗುತ್ತದೆ. ಮನುಷ್ಯನಲ್ಲಿ ಇಂಥ ದ್ವಂದ್ವ ಪ್ರವೃತ್ತಿಗಳು ಸಹಜವಾಗಿರುವುದರಿಂದ ಅವನ ಜೀವನ ಸಾರ್ಥಕವಾಗಬೇಕಾದರೆ ಪ್ರತಿಯೊಂದು ದ್ವಂದ್ವದ ಎರಡೂ ಪಡಿಗಳನ್ನು ಸುಸೂತ್ರವಾಗಿಸಿಕೊಳ್ಳುವುದು ಅಗತ್ಯ. ಅಭಿಮಾನ ಎಂಬ ಈ ಪ್ರವೃತ್ತಿ ಸ್ವಪ್ರಜ್ಞೆಯ, ಆತ್ಮವಿಶ್ವಾಸದ, ಆತ್ಮಗೌರವದ ಕುರುಹಾಗಿ ವ್ಯಕ್ತಿಯ, ಸಮಾಜದ ಅಭ್ಯುದಯಕ್ಕೆ ಅಗತ್ಯವಾದ ಆತ್ಮಸತ್ವವಾಗುತ್ತದೆ. ಆದರೆ ಇದರ ಜೊತೆಗೇ ಇದಕ್ಕೆ ಪ್ರತಿವಾದಿಯಾಗಿ ಇರುವ ಇನ್ನೊಂದು ಮೂಲಭೂತ ಪ್ರವೃತ್ತಿ ವಿನಯ: ತನ್ನ ಪರಿಮಿತಿಗಳ, ದೌರ್ಬಲ್ಯಗಳ, ಅಸಹಾಯತೆಯ ಅರಿವಿನಿಂದ ಹುಟ್ಟುವ ಸಂಕೋಚ, ತನಗಿಂತ ಉತ್ತಮವಾದುದಕ್ಕೆ ತಲೆಬಾಗುವ, ಶ್ರೇಷ್ಠವಾದುದನ್ನು ಪೂಜಿಸುವ, ಆತ್ಮಪ್ರದರ್ಶನಕ್ಕೆ, ಆತ್ಮಸ್ತುತಿಗೆ ಹಿಂದೇಟು ಹಾಕುವ, ಹೇಸುವ ಪ್ರವೃತ್ತಿ, ಅಭಿಮಾನ ಅತಿರೇಕಕ್ಕೆ ಹೋದಾಗ ಅದು ತಾನು ಕಂಡದ್ದೇ ಸರಿ ಎನ್ನುವ ಮೂರ್ಖತ್ವಕ್ಕೂ, ತನ್ನನ್ನು ಬಿಟ್ಟರೆ ಇಲ್ಲ ಎಂಬ ದುರಹಂಕಾರಕ್ಕೂ, ತಾನು ಹೇಳಿದ ಹಾಗೆ ಎಲ್ಲರೂ ಕೇಳಲೇ ಬೇಕೆಂಬ ಸರ್ವಾಧಿಕಾರಿ ಮನೋಭಾವಕ್ಕೂ, ತನ್ನದಲ್ಲದ ಎಲ್ಲವನ್ನೂ ಧಿಃಕರಿಸುವ, ಕೀಳ್ಬಗೆಯುವ, ಅಸಹಿಷ್ಣುತೆಗೂ ಕಾರಣವಾಗುತ್ತದೆ. ಅದೇ ರೀತಿ ವಿನಯವೂ ಅತಿರೇಕಕ್ಕೆ ಹೋದಾಗ ತನಗಿಂತ ಹೀನರಿಲ್ಲವೆಂಬ ದೈನ್ಯಕ್ಕೂ ತನ್ನ ಕೈಯಿಂದ ಏನೂ ಸಾಧಿಸಲಾರದು ಎಂಬ ಕರ್ಮವಿಮುಖತೆಗೂ ತನ್ನನ್ನು ತುಳಿದರೂ, ಬಯ್ದರೂ, ಒದ್ದರೂ ಅದನ್ನು ಸಹಿಸಿಕೊಳ್ಳುವಂಥ ನಪುಂಸಕ ಸಹಿಷ್ಣುತೆಗೂ ಕಾರಣವಾಗುತ್ತದೆ. ಈ ಎರಡರಲ್ಲಿ ಯಾವುದೂ ಅತಿರೇಕಕ್ಕೆ ಹೋಗದ ಹಾಗೆ ಒಂದರೊಡನಿನ್ನೊಂದನ್ನು ತೂಗುತ್ತ ಒಂದು ಇನ್ನೊಂದಕ್ಕೆ ಪೂರಕವಾಗುವ ಹಾಗೆ ಸಂಸ್ಕಾರಗೊಳ್ಳುವುದು ವ್ಯಕ್ತಿಯ ಹೇಗೋ ಹಾಗೆ ಸಮಾಜದ ಸುಸ್ಥಿತಿಗೂ ಪ್ರಗತಿಗೂ ಅಗತ್ಯ. ಅಭಿಮಾನ ಭಾವನಾತ್ಮಕ ಹೇಗೋ ಹಾಗೆ ಮೂಲತಃ ವಿನಯವೂ ಕೂಡ. ಈ ಎರಡನ್ನೂ ತೂಕದಲ್ಲಿಡುವಂಥದು ಬುದ್ದಿ, ಸಂಸ್ಕಾರ. ಆದ ಕಾರಣ ಎಲ್ಲಿ ವಿಚಾರಪೂರ್ವಕವಾದ ಕ್ರಿಯೆ ಇಲ್ಲವೋ ಅಲ್ಲಿ ಈ ಸಮತೂಕವೂ ಸಾಧಿಸಲಾರದು.
ಹೀಗೆ ಹೇಳುವುದು ಎಷ್ಟು ಸುಲಭವೋ ಅಷ್ಟೇ ಕಷ್ಟ ಈ ರೀತಿಯಲ್ಲಿ ಆಚರಿಸುವುದು. ವೈಯಕ್ತಿಕವಾಗಿ ಅಲ್ಲಲ್ಲಿ ಇಂಥ ಆಚರಣೆ ಕಂಡು ಬರಬಹುದಾದರೂ ಸಾಮೂಹಿಕವಾಗಿಯೂ ಈ ಸಮತೂಕವನ್ನು ಸ್ಥಾಪಿಸಿ ಕಾದಿಟ್ಟುಕೊಳ್ಳುವುದು ಅತ್ಯಂತ ಕಷ್ಟಕರವಾದ ಕೆಲಸ. ಈ ಎರಡು ಪ್ರವೃತ್ತಿಗಳಲ್ಲಿ ಪ್ರಬಲವಾದದ್ದು ಅಭಿಮಾನ ಎಂದು ತೋರುತ್ತದೆ. ಏಕೆಂದರೆ ಅದು ಮಾನವ ಜೀವಿತದ ಪ್ರಾಥಮಿಕ ಸತ್ಯವಾದ ವ್ಯಕ್ತಿತ್ವಕ್ಕೆ ವ್ಯಕ್ತಿ ಪ್ರತ್ಯೇಕತೆಗೆ ಸಂಬಂಧಪಟ್ಟದ್ದು. ಅಭಿಮಾನ ಕುದುರಿದರೆ ಸಾಕು, ಸುಲಭವಾಗಿ ಬೆಳೆದು ಅಷ್ಟೇ ಸುಲಭವಾಗಿ ಅತಿರೇಕ ಸ್ಥಿತಿಯನ್ನೂ ಮುಟ್ಟಬಲ್ಲುದು. ವಿನಯವೂ ವ್ಯಕ್ತಿ ಪ್ರತ್ಯೇಕ ಭಾವನೆಯಿಂದಲೇ ಹುಟ್ಟುವುದಾದರೂ ಅದಕ್ಕೆ ಮುಖ್ಯ ಕಾರಣ ಒಂದು ಕಡೆ ವ್ಯಕ್ತಿ, ಇನ್ನೊಂದು ಕಡೆ ಸಮಸ್ತ್ರ ಜಗತ್ತು. ಈ ಅನಂತ ವಿಶ್ವ, ಈ ಎರಡರ ಪರಸ್ಪರ ಮುಖಾಮುಖಿ ; ಆ ಮುಖಾಮುಖಿಯ ಜ್ವಲಂತ ಅರಿವು. ಆದಕಾರಣ ಅಭಿಮಾನದಂತೆ ವಿನಯ ಸುಲಭವಾಗಿ ಬೇರೂರುವಂಥದಲ್ಲ. ವಿದ್ಯೆ ವಿನಯವನ್ನು ಕೊಡುತ್ತದೆ ಎಂದು ಸಂಸ್ಕೃತದಲ್ಲಿರುವ ವಾಕ್ಯ ಇದೇ ಅರ್ಥವನ್ನು ಸೂಚಿಸುತ್ತದೆ. ವ್ಯಕ್ತಿಯಲ್ಲಾಗಲೀ ಸಮಾಜದಲ್ಲಾಗಲೀ ಆತ್ಮಗೌರವ ಬೆಳೆಯದಿರುವಾಗ ಈ ವಿನಯ ಪ್ರವೃತ್ತಿ ಕೇವಲ ಭಯವಾಗಿ, ಅಂಜುಬುರುಕುತನವಾಗಿ, ಜೀವನ ಸಾಫಲ್ಯಕ್ಕೆ ಕಾರಣವಾಗುವ ಹೊಸ ಸಾಹಸಗಳಿಗೆ ದೊಡ್ಡ ಪ್ರತಿಬಂಧಕವಾಗಿ ನಿಲ್ಲುತ್ತದೆ. ಆದರೆ ಎಲ್ಲಿ ಆತ್ಮಗೌರವ ಜಾಗ್ರತವಾಗಿರುವುದೋ ಅಲ್ಲಿ ವಿನಯ ಅಂತಃಸತ್ವ ವಿಕಾಸಕ್ಕೆ ಕಾರಣವಾಗಿ ಮೌಲ್ಯವಿವೇಚನಸಾಧನವಾಗಿ, ಶ್ರೇಷ್ಠ ವರ್ಗದ ಕ್ರಿಯಾಪ್ರವೃತ್ತಿಗೆ ಪೋಷಕವಾಗುತ್ತದೆ. ಅನೇಕ ಬುಡಕಟ್ಟು, ಜಾತಿ, ಮತ, ಸಂಪ್ರದಾಯ, ಭಾಷೆ ಇವುಗಳ ಅಸ್ತಿತ್ವದಿಂದ ಸಹಜವಾಗಿವೇ ಗುಂಪುಗುಂಪಾಗಿ ಒಡೆದು ಪ್ರತಿಯೊಂದು ಗುಂಪಿನ ಅಹಂಕಾರವೂ ಪರಸ್ಪರ ವಿರುದ್ಧವಾಗಿ ಸೆಟೆದುನಿಲ್ಲುವ ಪ್ರವೃತ್ತಿಯೇ ನಮ್ಮ ದೇಶದಲ್ಲಿ ಮೂಲಭೂತವಾಗಿದ್ದದ್ದರಿಂದ ನಮ್ಮ ಸಂಸ್ಕೃತಿಯಲ್ಲಿ ವಿನಯಸಹಿಷ್ಣುತೆಗಳನ್ನೇ ಒತ್ತಿ ಹೇಳುತ್ತ ಎಲ್ಲರಿಗೂ ಸಮಾನವಾದ, ವಸ್ತುನಿಷ್ಠ ಧರ್ಮಕ್ಕೆ ತಲೆಬಾಗುವ ಶಿಕ್ಷಣಕ್ಕೆ ಮಹತ್ವ ಕೊಡುತ್ತ ಬಂದದ್ದು ಸ್ವಾಭಾವಿಕ. ಪ್ರತಿಯೊಂದು ಗುಂಪೂ ತನ್ನ ತನ್ನ ಅಭಿಮಾನವನ್ನು ಹದ್ದಿನಲ್ಲಿಟ್ಟುಕೊಳ್ಳದಿದ್ದರೆ ಈ ದೇಶದಲ್ಲಿ ರಾಷ್ಟಜೀವನವೇ ಏಕೆ ಗ್ರಾಮ ಜೀವನವೂ ಕೂಡ ಅಸಂಭವವಾಗುತ್ತದೆ. ಆದ್ದರಿಂದ ಈ ದೇಶದಲ್ಲಿ ಯಾವ ಕಾಲದಲ್ಲೂ ಬಹಿರಂಗದಲ್ಲಿ ಏಕತೆಯನ್ನು ತರುವ ನಿಷ್ಫಲ ಪ್ರಯತ್ನವನ್ನು ಮಾಡದೆ, ಅಂತರಂಗ ಸಾಮರಸ್ಯವನ್ನೇ ಬೆಳಸುವ ಪ್ರಯತ್ನ ನಡೆದದ್ದನ್ನೂ ಅದು ತಕ್ಕಮಟ್ಟಿಗೆ ಯಶಸ್ವಿಯಾಯಿತೆಂಬುದನ್ನೂ ನಾವು ಗಮನಿಸಬೇಕು. ಅಲ್ಲದೆ, ಈ ಅಂತರಂಗ ಸಾಮರಸ್ಯ ಸೂತ್ರವೇ ಮಾನವ ಕುಲಕ್ಕೆ ತಾರಕವಾಗಬಲ್ಲುದೆಂಬುದನ್ನೂ ಮರೆಯತಕ್ಕದ್ದಲ್ಲ. ಇಂದು ಮತ್ತೆ ಪುನಃ ಈ ದೇಶವನ್ನು ಭಾವನಾತ್ಮಕವಾಗಿ ಒಂದಾಗಿಸುವ, ಏಕರಾಷ್ಟ್ರವಾಗಿ ಕಟ್ಟುವ ಪ್ರಯತ್ನ ನಡೆಸುವಾಗ ಈ ನಮ್ಮ ದೇಶದ ಈ ವಿಶಿಷ್ಟ ಸ್ವರೂಪವನ್ನು ಮರೆತರೆ ಸೋಲು ಕಟ್ಟಿಟ್ಟದ್ದೇ ಎಂದೂ ಹೇಳಬಹುದು. ಹೀಗೆ ನಾವು ತಲೆತಲಾಂತರದಿಂದಲೂ ಸಹಿಷ್ಣುತೆಯ ಪಾಠವನ್ನೇ ಕಲಿಯುತ್ತ ಬಂದದ್ದರಿಂದ ಅದರ ಪರಿಣಾಮವಾಗಿ ಒಟ್ಟಿನಲ್ಲಿ ಸ್ವಾಭಿಮಾನದ ಪ್ರಮಾಣವೂ ಕ್ರಮೇಣ ಕಡಿಮೆಯಾಗುತ್ತ ಬಂದು ತೂಕತಪ್ಪಿ ಪರಕೀಯರು ಧಾಳಿ ನಡೆಸತೊಡಗಿದಾಗ ನಪುಂಸಕ ಸಹಿಷ್ಣುತೆಯ, ನಿಷ್ಕ್ರಿಯ ವಿನಯದ ನಿರ್ವೀರ‍್ಯರಾಗಿ ಹೋದೆವು ಎಂಬುದು ನಿಜ. ಅಂಥ ಸಮಯದಲ್ಲಿ ಸ್ವತಂತ್ರ ವ್ಯಕ್ತಿತ್ವವುಳ್ಳ ಪ್ರಭಾವಶಾಲಿಯಾದ ತಾರುಣ್ಯಭರಿತವಾದ ಇನ್ನೊಂದು ಸಂಸ್ಕೃತಿಯ ಜೊತೆಗೆ ಸಂಘಟನೆ ನಡೆಯದೆ ಆತ್ಮಾಭಿಮಾನ ಜಾಗ್ರತವಾಗುವುದೂ ಅಸಾಧ್ಯ, ಇಂಗ್ಲಿಷರ ಜೊತೆಗೆ ಬಂದ ಪಾಶ್ಚಾತ್ಯ ಸಂಸ್ಕೃತಿಯ ಸಂಗಡ ನಮ್ಮ ಸಂಘರ್ಷಣೆ ಶುರುವಾಗುವವರೆಗೆ ಅನೇಕ ಶತಮಾನಗಳ ಕಾಲ ನಮ್ಮಲ್ಲಿ ರಾಜಕೀಯ ದಾಸ್ಯಕ್ಕೆ ತಕ್ಕ ಪರಿಸ್ಥಿತಿ ಇದ್ದದ್ದಕ್ಕೂ, ಒಟ್ಟಿನಲ್ಲಿ ಸೃಷ್ಟಿಶಕ್ತಿಯೇ ಸುಪ್ತವಾಗಿದ್ದದ್ದಕ್ಕೂ ಅನಂತರವೇ ಇಲ್ಲಿ ಸ್ವಾಭಿಮಾನ ಕುದುರಿದ್ದಕ್ಕೂ ಸಂಸ್ಕೃತಿಯ ನವೋದಯ ಸಾಹಸಗಳು ತಲೆದೋರಿದ್ದಕ್ಕೂ ಇರುವ ಸಂಬಂಧವನ್ನು ಮರೆಯತಕ್ಕದ್ದಲ್ಲ.
ಸಹಿಷ್ಣುತೆಯ ಪಾಠವನ್ನು ನಮ್ಮ ಕನ್ನಡ ಜನ ಕಲಿತ ಹಾಗೆ ಬಹುಶಃ ಇನ್ನು ಯಾರೂ ಈ ದೇಶದಲ್ಲಿ ಕಲಿತಂತೆ ತೋರುವುದಿಲ್ಲ. ಕನ್ನಡ ಜನವೆಲ್ಲ ಒಂದು, ಕನ್ನಡ ಪ್ರದೇಶಗಳೆಲ್ಲ ಒಂದು ರಾಜ್ಯವಾಗಿ ರೂಪುಗೊಳ್ಳಬೇಕು ಎಂಬ ಭಾವನೆಯನ್ನೂ, ಈ ಕನ್ನಡ ನಮ್ಮದು ಎಂಬ ಅಭಿಮಾನವನ್ನೂ ಇಲ್ಲಿ ಕುದುರಿಸಲು ಅನೇಕ ದಶಕಗಳ ಸತತ ಪರಿಶ್ರಮವೇ ಬೇಕಾಯಿತು. ಈ ದೇಶದ ಉಳಿದೆಲ್ಲ ಪ್ರದೇಶಗಳ ಜನರ ಸ್ವಭಾಷಾಭಿಮಾನ ಬಹು ಶೀಘ್ರವಾಗಿ ಜಾಗ್ರತ ದೇಶಾಭಿಮಾನದ ಸಹಜ ಮುಂದಡಿಯಾಗಿ ರೂಪುಗೊಂಡು ವಿಜೃಂಭಿಸಿತು. ಈ ದೃಷ್ಟಿಯಿಂದ ನಮ್ಮ ಈ ಕನ್ನಡ ಪ್ರದೇಶ ಭಾರತೀಯ ಸಂಸ್ಕೃತಿಯ ಅತ್ಯುತ್ತಮ ಉದಾಹರಣೆ ಎನ್ನಲೂಬಹುದು. ವಿನಯಪೂರ್ವಕ ಸಹಿಷ್ಣುತೆಯನ್ನು ನಾವು ಎಷ್ಟರ ಮಟ್ಟಿಗೆ ಕಲಿತೆವೆಂದರೆ ನಮ್ಮಮನೆಯೂ ನಮಗೆ ಛತ್ರದ ಹಾಗೆ ಕಂಡಿತು; ನಮ್ಮೂರಿನಲ್ಲೇ ನಾವು ಪರಕೀಯರಾಗುವ ಸ್ಥಿತಿಯೂ ಬಂತು. ಅಭಿಮಾನಶೂನ್ಯತೆಯ ಈ ಭೀಕರ ಪರಿಸ್ಥಿತಿಯನ್ನು ಅನುಭವಿಸಿದವರು ಮಾತ್ರ ಅರಿಯಬಲ್ಲರು. ಇದಕ್ಕೆ ನಮ್ಮಲ್ಲಿರುವ ಒಳ್ಳೆಯತನ ಅಥವಾ ಸಹಜ ಸಹಿಷ್ಣುತೆಗಿಂತ ಹೆಚ್ಚಾಗಿ ಐತಿಹಾಸಿಕ, ಭೌಗೋಲಿಕ, ಆರ್ಥಿಕ ಪರಿಸ್ಥಿತಿಗಳ ವೈಶಿಷ್ಟ್ಯವೇ ಕಾರಣ. ಈ ವಿಶಿಷ್ಟ ಪರಿಸ್ಥಿತಿಗಳು ಮಾರ್ಪಾಟಾಗುತ್ತ ಬಂದ ಹಾಗೆ ನಮ್ಮ ವಿನಯ ಸಹಿಷ್ಣುತೆಗಳೂ ಕೂಡ ಕಡಿಮೆಯಾಗುತ್ತ ನಾವೂ ಕೂಡಾ ಬಂಗಾಳಿಗಳು, ತಮಿಳರು, ಮರಾಟಿಗರು ಇವರ ದಾರಿಯನ್ನೇ ಈಗ ಹಿಡಿಯುತ್ತಿರುವುದು ಗಮನಾರ್ಹವಾದುದು. ಮೊದಲಿನಿಂದಲೂ ಕನ್ನಡ ಭಾಷೆಯನ್ನು ಆಡುವ ಜನರಿದ್ದ ಪ್ರದೇಶದಲ್ಲಿ ವಿವಿಧ ಭಾಷೆಗಳನ್ನಾಡುವ ಜನ, ತಮಿಳರು, ತೆಲುಗರು, ಮಲೆಯಾಳಿಗಳು, ಕೊಂಕಣಿಗರು, ಮರಾಠರು ಹೀಗೆ ಅಕ್ಕ ಪಕ್ಕದಲ್ಲೇ ತಕ್ಕಷ್ಟು ಸಂಖ್ಯೆಯಲ್ಲಿ ನೆಲಸಿಕೊಂಡು ಬಂದಿದ್ದಾರೆ. ಅವರನ್ನೆಲ್ಲ ಅವರ ಬೆನ್ನ ಹಿಂದೆ ಗೇಲಿಮಾಡಿ ಆ ಮೂಲಕ ನಾವು ನಮಗೆ ಅವರ ಬಗೆಗಿದ್ದ ಅಲ್ಪಸ್ವಲ್ಪ ಅಸಹನೆಗೆ ತಕ್ಕ ಅಭಿವ್ಯಕ್ತಿ ಪಡೆದು, ಬಹಿರಂಗವಾಗಿ ಅವರ ಜೊತೆಗೆ ಯಾವೊಂದೂ ವಿಶೇಷ ತಿಕ್ಕಾಟವಿಲ್ಲದೆ ಬಾಳುವುದನ್ನು ಕ್ರಮಶಃ ಕಲಿತುಕೊಂಡು ಬಂದವು. ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಇತರ ಭಾಷೆಯ ಜನಸಮೂಹ ಹೋಗಿ ತಕ್ಕಷ್ಟು ಸಂಖ್ಯೆಯಲ್ಲಿ ಎಂದೂ ನೆಲಸಲಿಲ್ಲ. ಸಹಿಷ್ಣುತೆಯ ಅಗತ್ಯ ಪಾಠವನ್ನು ನಮ್ಮಷ್ಟು ಚೆನ್ನಾಗಿ ಕಲಿಯಲು ಅವರಿಗೆ ಅವಕಾಶ ಸಿಕ್ಕಲಿಲ್ಲ. ಬೇರೆ ಬೇರೆ ಪ್ರದೇಶಗಳ ಜನ ನಮ್ಮ ಕನ್ನಡನಾಡಿನಲ್ಲಿ ಬಂದು ನೆಲಸಲಿಕ್ಕೆ ಮುಖ್ಯ ಕಾರಣ ಕನ್ನಡ ದೇಶದಲ್ಲಿ, ಮುಖ್ಯವಾಗಿ ಮೈಸೂರು ಪ್ರದೇಶದಲ್ಲಿ ಸುಭಿಕ್ಷ ಇದ್ದದ್ದು. ಜನಸಂಖ್ಯೆಯ ದಟ್ಟಣೆ ಹೆಚ್ಚಿಗೆ ಇಲ್ಲದ್ದು. ಮನೆಯಲ್ಲಿ ಜನ ಹೆಚ್ಚಿಗೆ ಇಲ್ಲದೆ ಇದ್ದಾಗ, ಉಣ್ಣಲು ತಿನ್ನಲು ಹೇರಳ ಇರುವಾಗ ದಾನಧರ್ಮಬುದ್ದಿ ತನಗೆ ತಾನೇ ಬೆಳೆಯುತ್ತದೆ ; ಯಾರು ಬಂದರೂ ಬರಲಿ, ಒಂದು ತುತ್ತು ಉಂಡು ಹೋಗಲಿ ಅಥವಾ ಪಕ್ಕದಲ್ಲೇ ಒಂದು ಗುಡಿಸಲು ಹಾಕಿಕೊಂಡರೂ ಒಂದು ನೆರೆ ಸಿಕ್ಕಿದ ಹಾಗಾಯಿತು ಎನ್ನಿಸುತ್ತದೆ. ಈ
*8

ಅನುಕೂಲ ಬಹುಶಃ ದಕ್ಷಿಣ ರಾಜ್ಯಗಳಲ್ಲಿ ಇನ್ನು ಯಾವುದಕ್ಕೂ ಇದ್ದಿರಲಿಲ್ಲ ಎಂದು ತೋರುತ್ತದೆ. ಇರುವ ಜನಕ್ಕೆ ಜಾಗವಾಗಲೀ, ಕೆಲಸವಾಗಲೀ, ಅನ್ನವಾಗಲೀ ಇಲ್ಲದೆ ಇರುವಾಗ ಹೊಸಬರನ್ನು ಸ್ವಾಗತಿಸುವುದಂತಿರಲಿ, ಬಂದವರನ್ನು ಹೊರಗಟ್ಟುವ ಪ್ರವೃತ್ತಿಗೆ ಪುಷ್ಟಿ ದೊರಕುವುದು ಸ್ವಾಭಾವಿಕ. ಅಂಥ ಕಡೆ ಬಹುಬೇಗ ಅಸಹಿಷ್ಣುತೆಯ ವಿಷವೇರಿದ್ದರಲ್ಲಿ ಆಶ್ಚರ್ಯವಿಲ್ಲ. ಆದರೆ ಅದೇ ವಿಷ ಈಗ ನಮ್ಮಲ್ಲೂ ನಿಧಾನವಾಗಿ ಏರುತ್ತಿರುವುದನ್ನು ಗಮನಿಸಿದಾಗ, ಮೂಲತಃ ನಾವು ಉಳಿದ ಭಾಷಾಸಮೂಹಗಳಿಗಿಂತ ಭಿನ್ನ ಪ್ರವೃತ್ತಿಯವರು, ಹೆಚ್ಚು ಸುಸಂಸ್ಕೃತರು, ಸಹಿಷ್ಣುಗಳು ಎಂದು ಹೇಳಿಕೊಳ್ಳಲು ಅವಕಾಶವಿಲ್ಲ. ಉಳಿದ ಭಾಷರಾಜ್ಯಗಳಲ್ಲಿ ಯಾವ ದುರಭಿಮಾನವನ್ನು ನಾವು ಟೀಕಿಸುತ್ತೇವೋ ಅದು ನಮ್ಮಲ್ಲೂ ಉಂಟು-ಸ್ವಲ್ಪ ಕಡಿಮೆ ಪ್ರಮಾಣದಲ್ಲಿ. ಈ ಪ್ರಮಾಣ ಹೆಚ್ಚುವ ಲಕ್ಷಣಗಳು ಧಾರಾಳವಾಗಿರುವಾಗ ನಾವು ಹೆಚ್ಚು ಜಾಗರೂಕರಾಗಿ ಇರಬೇಕಾದ್ದು ಅಗತ್ಯ ಎಂಬ ಅರಿವು ಈಗ ಮೂಡಬೇಕು. ಅಲ್ಲದೆ, ನಮ್ಮಲ್ಲಿ ಯಾವುದು ಅಭಿಮಾನಶೂನ್ಯತೆ ಎಂದು ಕಂಡಿತ್ತೋ ಅದು ಮೂಲತಃ ಈ ನಮ್ಮ ಭಾರತದ ಧಾರಣೆಗೂ, ಸುಸ್ಥಿತಿಗೂ ಕಾರಣವಾಗಬಲ್ಲ ಏಕಮಾತ್ರ ಸೂತ್ರವಲ್ಲವೋ ಎಂಬುದನ್ನೂ ಪರ್ಯಾಲೋಚಿಸಬೇಕು. ಏಕೆಂದರೆ ತಮಿಳರು, ತೆಲುಗರು, ಮರಾಠರು, ಮಲೆಯಾಳಿಗಳು ಇವರು ನಿಜವಾಗಿಯೂ ನಮ್ಮ ಅಕ್ಕಪಕ್ಕದ ಜನ ಅಲ್ಲವೋ ? ಅವರನ್ನು ಸಹಿಸದೆ, ಅವರ ಜೊತೆಗೆ ಸಹಕರಿಸದೆ ಇನ್ನು ಯಾವ ರೀತಿ ನಾವು ಈ ದೇಶದಲ್ಲಿ ಬದುಕುವುದು ಸಾಧ್ಯ ?
ಕನ್ನಡಭಾಷೆ ನಮ್ಮದು; ನಮ್ಮ ಜನ ತಲೆತಲಾಂತರಗಳಿಂದ ತಮ್ಮ ಆತ್ಮಪ್ರಕಟನಕ್ಕಾಗಿ ಬಳಸಿಕೊಂಡು ಬಂದದ್ದು ; ತಮ್ಮ ಅತ್ಯಂತ ಆತ್ಮೀಯವಾದ ಭಾವನೆಗಳನ್ನು ಕಾವ್ಯದಲ್ಲಿ ಮೂರ್ತಗೊಳಿಸಲು ನಮ್ಮ ಕವಿಗಳು ಶತಮಾನಗಳ ಕಾಲದಿಂದ ತಿದ್ದಿ, ಸಂಸ್ಕರಿಸಿ, ಹದಗೊಳಿಸಿದ್ದು ; ನಮ್ಮ ಸಾಮಾನ್ಯ ಜನ ತಮ್ಮ ನಲವು ಒಲವು ನೋವು ನೋಂಪಿಗಳಿಗೆ ರೂಪುಗೊಡುವ ಬಯಲಾಟ, ಸುಗ್ಗಿ ಕುಣಿತ, ಲಾವಣಿ ಮುಂತಾದವುಗಳಲ್ಲಿ ತಮ್ಮತನವನ್ನು ಕಂಡುಕೊಳ್ಳಲು ಉಪಯೋಗಿಸಿಕೊಂಡು ಬಂದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಈ ಭಾಷೆ ಹರಿದು ಬಂದಿದೆ. ಇದಕ್ಕೊಂದು ಇತಿಹಾಸವಿದೆ, ಸತ್ವವಿದೆ, ವಿಶಿಷ್ಟವಾದ ವ್ಯಕ್ತಿತ್ವವಿದೆ. ಆದಕಾರಣ ಈ ಭಾಷೆಯ ಬಗ್ಗೆ ನನಗೆ ಅಭಿಮಾನ ಇರುವುದು ಸಹಜ. ಈ ಅಭಿಮಾನ ಅತಿರೇಕಕ್ಕೆ ಹೋಗಿ ಅದರಿಂದ ಹುಟ್ಟುವ ನಿಷ್ಕಾರಣ ದ್ವೇಷ, ಅಸಹನೆ, ದೃಷ್ಟಿಮಾಂದ್ಯಗಳಿಗೆ ನಾವು ತುತ್ತಾಗದಂತೆ ಎಚ್ಚರ ವಹಿಸಬೇಕಾದ್ದು ಮಾತ್ರ ಅಗತ್ಯ. ವಾಸ್ತವಿಕ ಜಗತ್ತಿನಲ್ಲಿ ಕೃತಕೃತ್ಯವಾಗಬೇಕಾಗಿರುವ ಯಾವುದೇ ಭಾವನೆಯಾಗಲೀ ವಿಚಾರದ ಜೊತೆಗೆ ಬೆರೆತು ಪಾಕಗೊಳ್ಳದೇ ಇದ್ದಾಗ ಅದು ಮಾರಕವಾಗುತ್ತದೆ. ಕ್ರಿಯೆಯನ್ನು ಪ್ರಚೋದಿಸುವುದು ಭಾವನೆಯಾದರೆ ಮಾಡಿದ ಕೆಲಸ ಸಫಲವೂ ಸತ್ಫಲವೂ ಆಗುವಂತೆ ಮಾಡುವುದು ವಿಚಾರ, ಯೋಜನೆ, ದೂರದರ್ಶಿತ್ವ, ಸಾಮೂಹಿಕವಾಗಿ ವಿಚಾರ ರಹಿತವಾದ ಉದ್ವೇಗವೊಂದೇ ಕಾರ್ಯಪ್ರವೃತ್ತಿಗೆ ಕಾರಣವಾಗಿರುವುದರಿಂದ ಬುದ್ಧಿಯ ಮಟ್ಟದಲ್ಲಿ ಕೆಲಸ ಮಾಡುವವರ ಹೊಣೆಗಾರಿಕೆ ಹೆಚ್ಚು. ಕನ್ನಡದ ಅಭಿಮಾನ ಬೀದಿಕೂಗಾಗಿ ಮಾರ್ಪಟ್ಟಾಗ ಏನೆಲ್ಲ ಆಗಬಹುದೆಂಬುದಕ್ಕೆ ನಮ್ಮಲ್ಲೇ ತಕ್ಕಷ್ಟು ಉದಾಹರಣೆಗಳಿರುವುವಾದರೂ ನಾವೆಲ್ಲರೂ ಬೀಳ್ಗಳೆಯುವ ಶಿವಸೇನೆ, ಹಿಂದೀಸೇನೆ, ದ್ರಾವಿಡಸೇನೆಗಳ ಭ್ರೂಣ ನಮ್ಮೊಳಗೂ ಬೆಳೆಯುತ್ತಿರುವುದನ್ನು ನಾವು ಗಮನಿಸಬೇಕು. ಕನ್ನಡದ ಬಗ್ಗೆ ಸ್ವಾಭಿಮಾನ ತಕ್ಕಷ್ಟು ಜಾಗ್ರತವಾಗಿರುವ ಈ ಕಾಲದಲ್ಲಿ ಆತ್ಮನಿರೀಕ್ಷಣ, ಆತ್ಮ ವಿಮರ್ಶೆಗಳ ವಿನಯವನ್ನು ಜಾಗೃತಗೊಳಿಸಿದಲ್ಲಿ ಮಾತ್ರ ನಾವು ನಮ್ಮ ಭಾಷೆಯ ಪುರೋಭಿವೃದ್ಧಿಗೂ ನಮ್ಮ ಒಟ್ಟು ಬದುಕಿನ ಪ್ರಗತಿಗೂ ತಕ್ಕ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ದುರಭಿಮಾನದ ಅಂತ್ಯಪರಿಣಾಮವೇನು ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾದರೆ ಹಿಟ್ಲರನ ಕೈಕೆಳಗೆ ಜರ್ಮನಿಯಲ್ಲಿ ಮಂದಯಿಸಿದ ಆತ್ಮಾಭಿಮಾನದ ಅತಿರೇಕ ಹೇಗೆ ಕೊನೆಯಲ್ಲಿ ಆತ್ಮಘಾತಕನಾಯಿತು ಎಂಬುದನ್ನು ನೆನೆದರೆ ಸಾಕು.
ಕನ್ನಡದ ಬಗ್ಗೆ, ಕನ್ನಡ ರಾಜ್ಯದ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸುವಾಗ ಈ ಕೆಲವು ಪ್ರಶ್ನೆಗಳ ಬಗ್ಗೆ ವಿವೇಚನೆ ನಡೆಸುವುದು ಅಗತ್ಯವೆಂದು ತೋರುತ್ತದೆ : (೧) ನಮ್ಮ ಭಾಷೆ ಬೆಳೆಯಬೇಕಾದರೆ ನಾವು ಅದನ್ನು ಯಾವ ಭಾಷೆಗಳ ಜೊತೆಗೆ ಹೋಲಿಸಬೇಕು, ಅದಕ್ಕಿಂತ ಕಡಿಮೆ ಬೆಳೆದ ಭಾಷೆಗಳ ಜೊತೆಗೋ, ಅಷ್ಟೇ ಬೆಳೆದ ಭಾಷೆಗಳ ಜೊತೆಗೋ ಅಥವಾ ಜಗತ್ತಿನ ಅತ್ಯುತ್ತಮ ಆಧುನಿಕ ಭಾಷೆಗಳ ಜೊತೆಗೋ ? ಇಂಗ್ಲಿಷ್, ಸಂಸ್ಕೃತ ಮುಂತಾದ ಭಾಷೆಗಳ ಜೊತೆಗೆ ಕನ್ನಡವನ್ನಿಟ್ಟು ತೂಗಿ ನಮ್ಮ ಭಾಷೆಯ ಕುಂದುಕೊರತೆಗಳನ್ನರಿತು ಅವುಗಳನ್ನು ನಿವಾರಿಸಲು ಯಾವ ಕಾರ್ಯಕ್ರಮ ಕೈಕೊಳ್ಳಬೇಕೆಂದು ನಾವು ವಿನಯಪೂರ್ವಕವಾಗಿ ಯೋಚಿಸಿ ನಿರ್ಧರಿಸುವುದು ಅಗತ್ಯವೋ ಅಥವಾ ಕನ್ನಡದಲ್ಲಿ ಏನಿಲ್ಲ ? ಎಂದು ದುರಹಂಕಾರವನ್ನು ಬೆಳಸಿಕೊಳ್ಳುವುದು ಅಗತ್ಯವೋ ? (೨) ನಾವು ಬದುಕಿರುವ ಈ ಕನ್ನಡ ರಾಜ್ಯ ಸರ‍್ವತಂತ್ರ ಸ್ವತಂತ್ರವಾದ ಸಾರ‍್ವಭೌಮ ರಾಜ್ಯವಾಗಿದೆಯೋ? ಅಂಥ ರಾಜ್ಯವಾಗಿಯೇ ಇದು ರೂಪುಗೊಳ್ಳಬಹುದೋ ? ಹಾಗಾಗುವುದು ವಾಂಛನೀಯವೋ? (೩) ನಮ್ಮ ಇತಿಹಾಸದಲ್ಲೇ ಮೊತ್ತಮೊದಲನೆಯ ಬಾರಿಗೆ ಒಂದು ರಾಜಕೀಯ ಘಟಕವಾಗಿ ರೂಪುಗೊಳ್ಳುತ್ತಿರುವ ನಮ್ಮ ಈ ದೇಶ, ಭಾರತರಾಷ್ಟ ಒಂದು ರಾಷ್ಟ್ರವಾಗಿ ಬೆಳೆಯಬೇಕೋ ಅಥವಾ ಅನೇಕಾನೇಕ ಭಾಷಾರಾಜ್ಯಗಳಾಗಿ ವಿಘಟನೆಗೊಳ್ಳಬಹುದೋ ? (೪) ಈಗಿನ ಜಗತ್ತಿನ ವೈಜ್ಞಾನಿಕವಾದ ಬೆಳವಣಿಗೆಯ ದೃಷ್ಟಿಯಲ್ಲಿ ನಾನಾ ಶಾಸ್ತ್ರಗಳಲ್ಲಿ, ಕಲೆಗಳಲ್ಲಿ ಮುಖ್ಯವಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತ ಬಂದಿರುವ, ನಡೆಯುತ್ತಿರುವ ಅಪಾರವೂ ಅಗಾಧವೂ ಆದ ಜ್ಞಾನಸಂಚಯದ ದೃಷ್ಟಿಯಲ್ಲಿ ಕನ್ನಡ ಭಾಷೆ ಈಗ ಈ ಮುಹೂರ್ತದಲ್ಲಿ ಮಾತ್ರವಲ್ಲ, ಇನ್ನೂ ಎಷ್ಟೋ ವರ್ಷಗಳವರೆಗೆ ತಾನು ಸ್ವಯಂಪೂರ್ಣ ಎಂದು ತಿಳಿಯುವುದು ಸಾಧ್ಯವೋ, ಸಾಧುವೋ ನಮಗೆ ಅದು ಶ್ರೇಯಸ್ಕರವೋ ? (೫) ನಾವು ಕಲಿಯಬೇಕಾದ ಪ್ರತಿಯೊಂದು ಶಾಸ್ತ್ರಕ್ಕೂ ಮೂಲ ಆಕರಗಳುಳ್ಳ, ಪ್ರತಿ ವರ್ಷವೂ ತನ್ನ ಜ್ಞಾನಭಂಡಾರವನ್ನು ವರ್ಧಿಸಿಕೊಳ್ಳುತ್ತಿರುವ ಇಂಗ್ಲಿಷ್ ಭಾಷೆಯ ಅಭ್ಯಾಸವನ್ನು ನಾವು ಬಿಟ್ಟುಕೊಟ್ಟಲ್ಲಿ ಕನ್ನಡದ ಅಭಿವೃದ್ಧಿಗೆ ಅದರಿಂದ ಯಾವ ಬಾಧಕವೂ ಆಗುವುದಿಲ್ಲವೋ ? -ಈ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕು, ತಕ್ಕ ಉತ್ತರಗಳನ್ನು ಪಡೆಯಲು ಪ್ರಯತ್ನಿಸಬೇಕು.
ಭಾರತ ದೇಶದಲ್ಲಿ ಈಗ ಬಳಕೆಯಲ್ಲಿರುವ ಯಾವ ಭಾಷೆಯೇ ಆಗಲಿ ಆಧುನಿಕ ಜಗತ್ತಿನ ನಾನಾ ಮುಖವಾದ ಜ್ಞಾನದ ಸಂಪಾದನೆಗಾಗಲಿ, ಆಧುನಿಕ ಶಾಸ್ತ್ರೀಯ ವಿಷಯಗಳ ಪ್ರತಿಪಾದನೆಗಾಗಲೀ ಇನ್ನೂ ಸಮರ್ಥವಾಗಿಲ್ಲ ಎಂಬುದು ಸತ್ಯ ಸಂಗತಿ. ಈ ದೃಷ್ಟಿಯಿಂದ ನಮ್ಮ ಕನ್ನಡ ಭಾಷೆಯೂ ಕೂಡ ಇತರ ಭಾರತೀಯ ಭಾಷೆಗಳಂತೆಯೇ ತುಂಬ ಅಸಮರ್ಪಕವಾಗಿದೆ. ಈ ಕೊರತೆಯನ್ನು ಹೋಗಲಾಡಿಸುವುದು ಹೇಗೆ ? ಕೇವಲ ಪ್ರೀತಿಯಿಂದಾಗಲೀ ಅಭಿಮಾನದಿಂದಾಗಲೀ ಯಾವ ಬೇಳೆಯು ಬೇಯುವುದಿಲ್ಲ. ನಮ್ಮ ಭಾಷೆಯನ್ನೇ ರಾಜ್ಯಭಾಷೆ ಮಾಡಿ ಪ್ರಾಥಮಿಕ ದರ್ಜೆಗಳಿಂದ ಹಿಡಿದು ವಿಶ್ವವಿದ್ಯಾನಿಲಯ ಶಿಕ್ಷಣದವರೆಗೆ ಕನ್ನಡವನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಹೇರಿದರೂ ಕನ್ನಡ ಭಾಷೆ ಹಾಗೆ ಬೆಳೆಯುವುದಿಲ್ಲ. ಭಾಷೆ ಬೆಳೆಯುವುದು ಅಂದರೆ ಆ ಭಾಷೆಯನ್ನು ಬಳಸುವ ಜನವೇ ಬೆಳೆಯುವುದು ಎಂದು ಅರ್ಥವಲ್ಲವೆ ? ಜನ ಬೆಳೆಯುವುದು ಎಂದರೆ ಜನರ ಮನಸ್ಸು, ವಿಚಾರ ಮತ್ತು ಭಾವನೆಯ ಸಾಧ್ಯತೆಗಳು ವೃದ್ಧಿಗೊಳ್ಳುವುದು ಎಂದೇ ಅರ್ಥ. ಭಾಷೆ ಮನಸ್ಸಿಗೆ ಸಂಬಂಧಪಟ್ಟದ್ದು. ಮನಸ್ಸಿನ ಕ್ರಿಯೆಗಳ ಆಳವೂ ವೈವಿಧ್ಯವೂ ಹೆಚ್ಚದೆ ಯಾವ ಭಾಷೆಯೂ ಬೆಳೆದಿಲ್ಲ. ಮನಸ್ಸಿನ ಕ್ರಿಯೆ ಚೆನ್ನಾಗಿ ನಡೆಯಲು ಅದಕ್ಕೊಂದು ಸವಾಲು ಅಗತ್ಯ. ಈ ಸವಾಲನ್ನು ಇಂದಿನವರೆಗೂ ಇಂಗ್ಲಿಷ್ ಭಾಷೆ ಒದಗಿಸಿಕೊಂಡು ಬಂದಿದೆ. ಇಂದು ನಮ್ಮ ಭಾರತದಲ್ಲಿ ಆರಂಭವಾಗಿರುವ ಯಂತ್ರಯುಗ ವೈಜ್ಞಾನಿಕವಾಗಿ ನನಗೆ ತಕ್ಕ ಸವಾಲನ್ನು ಹಾಕುತ್ತಿದೆ. ಈ ಎರಡನ್ನೂ ಒಪ್ಪಿಕೊಂಡಲ್ಲದೆ ನಮ್ಮ ಮನಸ್ಸು ತನ್ನ ಪರಿಪೂರ್ಣ ಸಾಮರ್ಥ್ಯದಿಂದ ಕೆಲಸಮಾಡಲು ಶಕ್ಯವಿಲ್ಲ. ಈ ಎರಡೂ ಸವಾಲುಗಳ ಸನ್ನಿಕರ್ಷದಲ್ಲೇ ನಾವು ಕನ್ನಡಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಬೇಕು. ಅವನ್ನು ನಿರ್ಲಕ್ಷಿಸಿದರೆ ನಾವು ಈಗ ಇರುವಂಥ ನಮ್ಮ ಮನಸ್ಸಿನ ಬೆಳವಣಿಗೆಗೂ ಈಗ ಇರುವಂಥ ನಮ್ಮ ಆರ್ಥಿಕ ಪರಿಸ್ಥಿತಿಗೂ ಅಂಟಿಕೊಂಡು ಕನ್ನಡತನವನ್ನು ಮೆರೆಸುವ ಅವಸರದಲ್ಲಿ ಕನ್ನಡವನ್ನೇ ಮರೆತುಬಿಡಬಹುದು. ಆಧುನಿಕ ಜ್ಞಾನವಿಜ್ಞಾನಗಳ ವಿದ್ಯಾಸಂಸ್ಕಾರಗಳ ಮಟ್ಟಕ್ಕೆ ತೀರ ಕೆಳಗಿರುವ ನಾವು ಆ ಮಟ್ಟವನ್ನು ಮುಟ್ಟುವುದು ಹೇಗೆ ಎಂಬುದೇ ನಮ್ಮ ಮುಂದಿರುವ ಪ್ರಶ್ನೆಯಲ್ಲದೆ ಆ ಮಟ್ಟವನ್ನು ಮರೆತು ಜಡವೂ ವಿನಾಶಕಾರಿಯೂ ಆದ ಆತ್ಮಸಂತೃಪ್ತಿಯನ್ನು ಪಡೆಯುವುದು ಹೇಗೆ ಎಂಬುದಲ್ಲ.
ಕನ್ನಡ ಭಾಷೆಯನ್ನು ನಾವು ಪಂಪನ ಕಾಲದಿಂದ ಇಂದಿನ ತನಕವೂ ಮುಖ್ಯವಾಗಿ ಭಾವಗಳನ್ನು ವ್ಯಕ್ತಪಡಿಸಲು ಉಪಯೋಗಿಸಿಕೊಂಡು ಬಂದಿದ್ದೆವಲ್ಲದೆ ಅದನ್ನು ಬುದ್ಧಿ ವಿಚಾರಗಳ ಸಾಧನವನ್ನಾಗಿ ಮಾಡಿಕೊಂಡಿಲ್ಲ. ನಮ್ಮಲ್ಲಿ ತಕ್ಕಮಟ್ಟಿನ ಕಾವ್ಯಸಾಹಿತ್ಯ ಬೆಳೆದು ಬಂದಿದೆಯಲ್ಲದೆ ಗದ್ಯಸಾಹಿತ್ಯವೆಂಬುದು ಈ ಇಪ್ಪತ್ತನೆಯ ಶತಮಾನದ ವರೆಗೂ ಇದ್ದೇ ಇರಲಿಲ್ಲ ಎನ್ನಬಹುದು. ವಿಚಾರಗಳ ಅಭಿವ್ಯಕ್ತಿಗೆ ತಕ್ಕ ಗದ್ಯ ಅಥವಾ ಪದ್ಯ ಬೆಳೆಯದೆ ಇದ್ದದ್ದರಿಂದ ವಿಶ್ವ ಸಾಹಿತ್ಯದ ಅತ್ಯುತ್ತಮ ಕಾವ್ಯಗಳ ಸರಿಸಮಕ್ಕೆ ಬರುವಂಥ ಪ್ರಥಮ ವರ್ಗದ ಕಾವ್ಯವೂ ನಮ್ಮಲ್ಲಿ ಬೆಳೆಯದೆ ಹೋಯಿತು. ನಮ್ಮ ಪುರಾತನ ಶಾಸ್ತ್ರಗ್ರಂಥಗಳೆಲ್ಲ ಇದ್ದದ್ದು ಸಂಸ್ಕೃತದಲ್ಲಿ : ನಮ್ಮ ಜ್ಯೋತಿಷ್ಯ, ಆಯುರ್ವೇದ, ಅಲಂಕಾರಶಾಸ್ತ್ರ, ತತ್ವಶಾಸ್ತ್ರ, ಗಣಿತ, ಖಗೋಳಶಾಸ್ತ್ರ ಈ ಎಲ್ಲವೂ. ಕೇರಳದ ಶಂಕರಾಚಾರ್ಯರಾಗಲೀ, ಕರ್ನಾಟಕದ ಸಾಯಣಾಚಾರರಾಗಲೀ ಬುದ್ಧಿಯ ಭಾಷೆಯನ್ನಾಗಿ ಉಪಯೋಗಿಸಿದ್ದು ಸಂಸ್ಕೃತವನ್ನಲ್ಲದೇ ಮಲೆಯಾಳಿ ಅಥವಾ ಕನ್ನಡವನ್ನಲ್ಲ. ಜೀವನದ ಅತ್ಯಂತ ಗಂಭೀರವಾದ ಸಮಸ್ಯೆಗಳು, ಬುದ್ಧಿಯ ಅತಿ ಸೂಕ್ಷವಾದ ಕ್ರಿಯೆಗಳು ಇವುಗಳ ಬಗ್ಗೆ ಚಿಂತನಸಾಮಗ್ರಿಯನ್ನು ನಾವು ಕಂಡದ್ದು ಸಂಸ್ಕೃತದಲ್ಲಿ. ನಮ್ಮ ಚಿಂತನಕ್ಕೆ ರೂಪುಗೊಡಲು ಪ್ರಯತ್ನಿಸಿದ್ದೂ ಸಂಸ್ಕೃತದಲ್ಲೇ. ಇಡೀ ದೇಶದ ಧೀಮಂತರನ್ನೆಲ್ಲ ಒಂದುಗೂಡಿಸುವ ಸಾಧನವಾದ ಸಂಪರ್ಕ ಭಾಷೆಯಾಗಿ ರೂಪುಗೊಂಡದ್ದೂ ಸಂಸ್ಕೃತವೇ. ಉಳಿದೆಲ್ಲ ಭಾರತೀಯ ಭಾಷೆಗಳೂ ಸಂಸ್ಕೃತಕ್ಕೆ ಅಧೀನವಾಗಿ, ಅದರ ಸಾರ್ವಭೌಮತ್ವವನ್ನು ಒಪ್ಪಿಕೊಂಡು ಆ ಮೂಲಕ ಸಾಂಸ್ಕೃತಿಕವಾಗಿ ಈ ದೇಶಕ್ಕೆ ಐಕ್ಯವನ್ನು ತಂದುಕೊಡಲು ಕಾರಣವಾದುವು. ಇದು ನಮ್ಮ ಇತಿಹಾಸ. ಅನಂತರ ಆಧುನಿಕ ಕಾಲದಲ್ಲಿ ಇಂಗ್ಲಿಷರ ಸಂಪರ್ಕವಾದ ಬಳಿಕ ಅದೇ ನಮ್ಮ ಬುದ್ಧಿಯ ಭಾಷೆಯ ಈ ಸಮಸ್ಯೆ ಭಾರತದ ಬುದ್ದಿಕ್ರಿಯೆಗಳನ್ನು ಒಂದುಗೂಡಿಸುವ ವಿದ್ಯಾವಂತರ ಭಾಷೆಯೂ ಆಗಿ ಕೆಲಸಮಾಡ ತೊಡಗಿತು. ಇದು ಇತ್ತೀಚಿನ ಇತಿಹಾಸ. ಈ ಇತಿಹಾಸದಿಂದ ನಾವು ಯಾವ ಪಾಠವನ್ನು ಕಲಿಯಬೇಕು ? ಅತಿ ಸೂಕ್ಷವೂ ಪ್ರಬುದ್ಧವೂ ಆದ ಶಾಸ್ತ್ರೀಯ ವಿಚಾರಗಳನ್ನು ವ್ಯಕ್ತಪಡಿಸಲು ತಕ್ಕ ಸಾಮರ್ಥ್ಯ ನಮ್ಮ ಕನ್ನಡಕ್ಕಾಗಲೀ, ಇತರ ಭಾರತೀಯ ಭಾಷೆಗಳಿಗಾಗಲೀ ಇನ್ನೂ ಬಂದಿರುವುದಿಲ್ಲ. ಇದು ಕೇವಲ ಶಬ್ದಗಳ ಕೊರತೆಗೇ ಮಾತ್ರ ಸಂಬಂಧಿಸಿದ್ದು ಹೊಸ ಶಬ್ದಗಳನ್ನು ಸಂಸ್ಕೃತದ ಸಹಾಯದಿಂದ ಸಿದ್ಧಪಡಿಸಿಕೊಳ್ಳುವುದರಿಂದ ತುಂಬುವಂಥದಲ್ಲ. ಇದು ಭಾಷಾಂತರಗಳಿಂದ ತುಂಬುವಂಥದೂ ಅಲ್ಲ. ಇದು ಇಡೀ ಭಾಷೆಯ ಪರಿಪಾಕಕ್ಕೆ, ಅದರ ವಿಕಸನ ಶಕ್ತಿಗೆ, ಆ ಶಕ್ತಿಯ ಈಗಿನ ಪರಿಮಿತಿಗೆ ಸಂಬಂಧ ಪಟ್ಟದ್ದು. ಇಂದು ಈಗ ಈ ಇಪ್ಪತ್ತನೆಯ ಶತಮಾನದಲ್ಲಿ ಉಜ್ವಲವಾಗಿ ಜೀವಂತವಾಗಿದ್ದು, ಈ ಇಂದಿನ ವಿಶಿಷ್ಟ ಸಂದರ್ಭಕ್ಕೆ ತಕ್ಕ ಪ್ರತಿಕ್ರಿಯೆಗಳನ್ನು ತೋರುತ್ತ ನಾವು ಇಂದಿಗೆ ಸಲ್ಲುವಂತೆ ಯೋಚಿಸಿದ್ದನ್ನು, ಕಂಡು ಹಿಡಿದದ್ದನ್ನು, ಅನುಭವಿಸಿದ್ದನ್ನು ಕನ್ನಡದಲ್ಲೇ ಹೇಳಲು ಪ್ರಯತ್ನಿಸುವಂಥ ಅತ್ಯುಚ್ಚ ವರ್ಗದ ಬುದ್ಧಿ ವ್ಯವಸಾಯವನ್ನು ನಡಸಿದಲ್ಲಿ ಮಾತ್ರ ಕ್ರಮೇಣ ನಮ್ಮ ಕನ್ನಡ ಬುದ್ಧಿಯ ಭಾಷೆಯಾಗಿ ಬೆಳೆಯಬಹುದು. ಹಾಗೆ ಆಗುವುದು ಯಾವ ಯೋಜನೆಯಿಂದಲೇ ಆಗಲಿ, ಹಣವನ್ನು ನೀರಿನಂತೆ ಖರ್ಚು ಮಾಡುವುದರಿಂದಾಗಿ ಸಾಧ್ಯವಾಗದು. ಸತತ ಪರಿಶ್ರಮದಿಂದ, ಮೂಲಭೂತ ಸಂಶೋಧನೆಗಳಿಂದ ಮಾತ್ರ ಅದು ಸಾಧ್ಯವಾಗಬಹುದು. ಈ ಇಪ್ಪತ್ತನೆಯ ಶತಮಾನದಲ್ಲಿ ನಾವು ಕನ್ನಡ ಗದ್ಯವನ್ನು ವಿಚಾರದ ಭಾಷೆಯನ್ನಾಗಿಯೂ ಬಳಸಲು ಯತ್ನಿಸುತ್ತ ಬಂದಿದ್ದೇವೆ. ಆದರೆ ಇಂದು ಕೂಡಾ ವಿಜ್ಞಾನದ ಬಗ್ಗೆ, ಇತಿಹಾಸದ ಬಗ್ಗೆ, ತತ್ವಜ್ಞಾನದ ಬಗ್ಗೆ ಸಾಹಿತ್ಯ-ವಿಚಾರ ವಿಮರ್ಶೆಗಳ ಬಗ್ಗೆ, ಅರ್ಥಶಾಸ್ತ್ರ, ಮನೋವಿಜ್ಞಾನ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮುಂತಾದುವುಗಳ ಬಗ್ಗೆ ಉಚ್ಚ ಮಟ್ಟದ ವಿಷಯಗಳನ್ನು ಅರಿಯಲು ಇಂಗ್ಲಿಷಿನಲ್ಲಿರುವ ಮೂಲ ಗ್ರಂಥಗಳನ್ನೂ, ಇಂಗ್ಲಿಷ್ ನಿಯತಕಾಲಿಕಗಳಲ್ಲಿ ಬರುವ ಸಂಶೋಧನ ಲೇಖನಗಳನ್ನೂ, ಅಭ್ಯಾಸ ಮಾಡದೆ ನಾವು ನಮ್ಮ ಬುದ್ಧಿಜೀವನವನ್ನು ಆರೋಗ್ಯವಾಗಿಯೂ ಸಮರ್ಥವಾಗಿಯೂ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹೆಚ್ಚೇಕೆ, ನಾವು ಸಂಸ್ಕೃತ ಸಾಹಿತ್ಯದ ಬಗ್ಗೆ ಆಳವಾದ ಅಭ್ಯಾಸ ನಡೆಸಲೂ ಇಂಗ್ಲಿಷಿನ ಸಹಾಯವಿಲ್ಲದೆ ಇಂದು ಸಾಧ್ಯವಾಗದು. ಈಗ ಕನ್ನಡದ ಅಭಿಮಾನದಿಂದ “ಇಂಗ್ಲಿಷಿನಲಿನ್ನೇನು, ಸಂಸ್ಕೃತದಲಿನ್ನೇನು ?” ಎಂದು ಹೇಳುವಂಥವರೆಲ್ಲರೂ ಇಂಗ್ಲಿಷನ್ನು ಬಲ್ಲವರು. ಬೇಕಾದಾಗ ಥಟಕ್ಕನೆ ಇಂಗ್ಲಿಷ್ ಗ್ರಂಥಗಳನ್ನೊ, ಕೋಶಗಳನ್ನೋ, ವಿಶ್ವಕೋಶಗಳನ್ನೋ ನೋಡಿ ತಮ್ಮ ಬೌದ್ಧಿಕ ಕಾರ‍್ಯಗಳನ್ನು ನಡೆಸುವ ಸಾಮರ್ಥ್ಯವುಳ್ಳವರು. ಇಂಥ ಇಂಗ್ಲಿಷ್‌ ಜ್ಞಾನವುಳ್ಳ ಜನ ಇಂಗ್ಲಿಷನ್ನು ಹೊರದೂಡಿ ಕೇವಲ ಕನ್ನಡದ ಮೂಲಕವೇ ನಮ್ಮ ಹುಡುಗರು ತಮ್ಮ ಬುದ್ಧಿಯನ್ನು ಬೆಳಸಿಕೊಂಡು ಆಧುನಿಕ ಜಗತ್ತಿನಲ್ಲಿ ಬದುಕುವುದಕ್ಕೆ ಸಮರ್ಥವಾದ ವಿದ್ಯೆಯನ್ನು ಪಡೆಯುವುದು ಸಾಧ್ಯ ಎಂದು ತಿಳಿಯುವುದು ಪರಮಾಶ್ಚರ್ಯ. ದೂರದೃಷ್ಟಿಯ, ಕಲ್ಪನಾಶಕ್ತಿಯ ದುರಂತ ಅಭಾವವನ್ನು ಈ ಧೋರಣೆ ಸೂಚಿಸುತ್ತದೆ. ಆಧುನಿಕ ಜಗತ್ತಿನಲ್ಲಿ ಸಂಪೂರ್ಣ ಜಾಗೃತರಾಗಿ ತಮ್ಮ ಬುದ್ಧಿಯನ್ನು ಅತ್ಯಂತ ಸೂಕ್ಷಸಾಧನವಾಗಿ ಮಾಡಿಕೊಂಡು ವಿಜ್ಞಾನದಲ್ಲಿ ವರ್ಷ ವರ್ಷಕ್ಕೂ ಹೊಸಹೊಸ ಅನ್ವೇಷಣಗಳನ್ನು ನಡೆಸುತ್ತ, ಹೊಸ ಸಿದ್ಧಾಂತಗಳನ್ನು ರೂಪಿಸುತ್ತ, ಹೊಸಹೊಸ ಶಕ್ತಿಗಳನ್ನು ಪಡೆಯುತ್ತ ಕೆಲಸ ಮಾಡುತ್ತಿರುವ ಜನ ಪಾಶ್ಚಾತ್ಯರು. ಅವರಿಂದ ನಾವು ಕಲಿಯಬೇಕಾದ್ದು ಅಪಾರ ಎನ್ನುವಷ್ಟು ಇರುವಾಗ, ನಮ್ಮಲ್ಲಿ ಸ್ವತಂತ್ರ ಬುದ್ಧಿಯ ಕೆಲಸ ಆರಂಭದಶೆಯಲ್ಲೇ ಇರುವಾಗ, ಇಂಗ್ಲಿಷನ್ನು ಬಿಟ್ಟುಕೊಟ್ಟು ನಾವು ಜ್ಞಾನಸಂಪಾದನೆ ಮಾಡುವುದಾದರೂ ಹೇಗೆ ? ವೈಜ್ಞಾನಿಕವಾಗಿ ಮುಂದುವರಿದ ರಾಷ್ಟ್ರಗಳ ಸರಿಸಮಕ್ಕೆ ಏರುವುದು ಹೇಗೆ ? ಯಾವಾಗಲೂ ಕೊನೆಯ ಪಕ್ಷ ಒಂದು ತಲೆಮಾರಿನಷ್ಟಾದರೂ ಹಿಂದುಳಿದಿರುವ ಪಠ್ಯಪುಸ್ತಕಗಳ ಅಸಮರ್ಪಕ ಅನುವಾದಗಳಿಂದ ಇದು ಸಾಧ್ಯವಾಗುವುದೋ ? ವಿಜ್ಞಾನವನ್ನು ಕೇವಲ ತಾಂತ್ರಿಕವಾಗಿ ಬಳಸುವಷ್ಟು, ಕಸಬುಗಾರಿಕೆಯನ್ನು ನಾವು ಕಲಿತರೆ ಸಾಕೆ ? ಆಗ ಹೊಸ ಸಂಶೋಧನೆಗಳನ್ನು ಪಾಶ್ಚಾತ್ಯರು ನಡೆಸುವುದು-ಅವುಗಳನ್ನು ಅನುಕರಿಸಿ ನಾವು ಕೈಗಾರಿಕೆಗಳನ್ನು ನಡೆಸುವುದು- ಇದೇ ನಮ್ಮ ಹಣೆಯ ಬರಹವೋ ? ಹೊಸ ಕೈಗಾರಿಕೆಗಳ ಹಿಂದಿರುವ ವೈಜ್ಞಾನಿಕ ಮನೋಧರ್ಮವೂ ನಮ್ಮಲ್ಲಿ ಬೆಳೆಯದೆ ಹೋದರೆ ರಾಜಕೀಯವಾಗಿಯೂ, ಆರ್ಥಿಕವಾಗಿಯೂ ಸುವ್ಯವಸ್ಥೆಯನ್ನು ಏರ್ಪಡಿಸುವುದು ಹೇಗೆ ಸಾಧ್ಯವಾದೀತು ? ನಾವೇ ಸ್ವತಃ ಸಂಶೋಧನೆ ನಡೆಸಲು ತಕ್ಕ ವಿಜ್ಞಾನದ ಪೂರ್ವಸಿದ್ಧತೆ ಪಡೆಯಲು ನಮ್ಮ ವಿಜ್ಞಾನಿಗಳು ಇಂಗ್ಲಿಷಿನಲ್ಲಿ ಪ್ರಕಟವಾಗಿರುವ, ಪ್ರಕಟವಾಗುತ್ತಿರುವ ಶಾಸ್ತ್ರೀಯ ಗ್ರಂಥಗಳನ್ನೂ, ಲೇಖನಗಳನ್ನೂ ಅವು ಪ್ರಕಟವಾಗುತ್ತಿದ್ದಂತೆಯೇ ಓದಿ ಮನನಮಾಡಿ ಅಲ್ಲಿಂದ ಮುಂದೆ ಹೆಜ್ಜೆಯಿಡಲು ಯತ್ನಿಸುವುದಲ್ಲದೆ ಬೇರೆ ಯಾವ ದಾರಿ ಇದೆ ? ನಮಗೂ ಆಧುನಿಕ ಜಗತ್ತಿಗೂ ಕೊನೆಯ ಪಕ್ಷ ಒಂದು ಶತಮಾನದ ಅಂತರವಾದರೂ ಇದೆ. ಈಗೀಗಂತೂ ಸುಮಾರು ಹತ್ತು ವರ್ಷಗಳಲ್ಲಿ ಮಾನವಲೋಕದ ಜ್ಞಾನಸಂಪತ್ತು ದ್ವಿಗುಣವಾಗುತ್ತ ಹೋಗುತ್ತಿದೆ. ಇಂಗ್ಲಿಷನ್ನು ಹೊರದೂಡಿ ನಾವು ನಮ್ಮ ಭಾಷೆಯ ಇಂದಿನ ಸಿದ್ಧಿಗೆ ಸರಿಹೋಗುವಂಥ ಹತ್ತೊಂಭತ್ತನೆಯ ಶತಮಾನದ ಮಧ್ಯಭಾಗದಲ್ಲೇ ಇದ್ದು ಬಿಡುವುದೋ ? ಇಂಗ್ಲಿಷು ಬೇಡ ಅನ್ನುವುದಕ್ಕೆ, ಅದರ ಮೂಲಕ ನಮಗೆ ಅತ್ಯವಶ್ಯ ಜೀವಧಾತುವಾದ ಜ್ಞಾನವನ್ನು ಪಡೆಯುವುದಿಲ್ಲ ಎನ್ನುವುದಕ್ಕೆ ಕಾರಣವಾದರೂ ಏನು ? ಅದು ಪರಕೀಯ ಅಂತಲೋ ? ಹಾಗಾದರೆ ಇಂಗ್ಲಿಷೊಂದೇ ನಮ್ಮ ಜೀವನದಲ್ಲಿ ಪರಕೀಯವಾದುದೋ ? ನಾವು ಒಪ್ಪಿ ಆಚರಣೆಗೆ ತರಲು ಪ್ರಯತ್ನಿಸುತ್ತಿರುವ ಪ್ರಜಾತಂತ್ರ ರಾಜ್ಯ ಪದ್ಧತಿ, ನಾವು ನಮ್ಮದೆಂದು ಸ್ವೀಕರಿಸಿ ಬಳಸುತ್ತಿರುವ ಕಾನೂನು, ನ್ಯಾಯ ವಿತರಣ ವಿಧಾನ, ನಾವು ಬಳಸುತ್ತಿರುವ ವೈದ್ಯ ವಿಧಾನ, ನಮ್ಮ ಸೈನಿಕ ಶಿಕ್ಷಣ, ವ್ಯೂಹರಚನೆ, ಯುದ್ಧ ವಿಧಾನ, ಆಯುಧಗಳು, ವಿಮಾನಗಳು-ಇವೂ ಅಷ್ಟೇ ಪರಕೀಯವಲ್ಲವೋ ? ಯಂತ್ರಗಳ ಮೂಲಕ ಬೃಹತ್ಪ್ರಮಾಣದಲ್ಲಿ ಉತ್ಪನ್ನಗೊಳಿಸುವ ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆ-ಅವುಗಳಿಗೆ ಅಗತ್ಯವಾದ ತಾಂತ್ರಿಕ ಜ್ಞಾನ ಪರಕೀಯರಿಂದ ಬಂದದ್ದಲ್ಲವೋ ? ನಾವು ಕುಳಿತುಕೊಳ್ಳುವ, ಸವಾರಿಮಾಡುವ ಕಾರು, ಬಸ್ಸು, ರೈಲು, ವಿಮಾನ ; ಬಳಸುವ ವಿದ್ಯುತ್ತು, ತಂತಿಟಪ್ಪಾಲು, ರೇಡಿಯೋ, ಟೆಲಿವಿಷನ್, ಫಿಲ್ಮ್‌ -ಇವೂ ನಮ್ಮ ಶಾಸ್ತ್ರಗಳಲ್ಲಿ ಉಕ್ತವಾಗಿ ಬಂದುವೇನೂ ಅಲ್ಲ.
ಈ ಎಲ್ಲವನ್ನೂ ಸೃಷ್ಟಿಸಿಕೊಳ್ಳಲು, ಉಪಯೋಗಿಸಿಕೊಳ್ಳಲು, ಇವುಗಳಲ್ಲಿ ತಿದ್ದುಪಡಿಗಳನ್ನು ಮಾಡಿಕೊಳ್ಳಲು, ದುರಸ್ತಿಮಾಡಲು, ಉತ್ತಮಗೊಳಿಸಲು ಅತ್ಯಗತ್ಯವಾದ ಜ್ಞಾನವನ್ನೂ ತಂತ್ರನೈಪುಣ್ಯವನ್ನೂ ಒದಗಿಸುವ ಇಂಗ್ಲಿಷ್ ಭಾಷೆಯೊಂದೇ ಪರಕೀಯ ಎಂದರೆ ಅರ್ಥವೇನು ? ನಮ್ಮ ಇಂದಿನ ವೈಜ್ಞಾನಿಕ ಸಾಧನಸಂಪತ್ತು ನಮ್ಮ ದೇಶದ ಕೈಗಾರಿಕೆಯ ಕ್ರಾಂತಿಗೆ ಹಿನ್ನೆಲೆಯಾಗಿ ಬಂದಂಥದಲ್ಲ. ಅದರ ಫಲವಾಗಿ ಬೆಳೆದಂಥದಲ್ಲ. ಈ ಎಲ್ಲವನ್ನೂ ನಾವು ಪಾಶ್ಚಾತ್ಯರ ಸಂಪರ್ಕದ ಮೂಲಕ, ಇಂಗ್ಲಿಷ್ ಭಾಷೆಯ ಅಭ್ಯಾಸದಿಂದ, ಆ ಭಾಷೆಯ ಮೂಲಕ ಅಭ್ಯಾಸ ಮಾಡಿದ್ದರಿಂದ ಪಡೆದದ್ದು. ಈ ಎಲ್ಲವನ್ನೂ ಬಿಟ್ಟರೆ ನಾವು ನಿಜವಾದ ಭಾರತೀಯರೂ ಕನ್ನಡಿಗರೂ ಆಗಬಹುದೋ ಏನೋ. ಆದರೆ ವಿಜ್ಞಾನದ ಈ ಎಲ್ಲ ಯುಗಪ್ರವರ್ತಕ ಸಾಧನಗಳನ್ನೂ ಬಿಟ್ಟು ನಾವು ಬದುಕಲು ಸಿದ್ಧವಾಗಿದ್ದೆವೋ ? ಈ ಎಲ್ಲವನ್ನೂ ಬಿಟ್ಟು ನಮ್ಮ ಪೂರ್ವಿಕರು ಇದ್ದಹಾಗೆ ಹಳ್ಳಿಯ ಸರಳ ಮುಗ್ಧ ಜೀವನವನ್ನು ನಡಸುತ್ತ, ನಮ್ಮ ಕನಸುಗಳನ್ನೂ ಸಾಹಸಗಳನ್ನೂ ಒಂದು ಹಳ್ಳಿಯ ಪರಿಧಿಗೇ ಸೀಮಿತಗೊಳಿಸಿಕೊಂಡು ಅತ್ಯಂತ ಸರಳವಾದ ಜೀವನವನ್ನು ನಡಸುತ್ತ ಭೌತಿಕವಾದ ಎಲ್ಲ ಆಸೆ-ಆಮಿಷಗಳನ್ನೂ ತ್ಯಜಿಸಿ ಪರಮಾರ್ಥವೊಂದನ್ನೇ ಗಮ್ಯವಾಗಿಟ್ಟುಕೊಂಡು ಗಂಭೀರವಾದ ಶುದ್ಧ ಸಾಧು ಜೀವನವನ್ನು ನಡೆಸಲು ಸಿದ್ಧವಾಗಿದ್ದರೆ-ಆಗ ಮಾತ್ರ ನಾವು ಇಂಗ್ಲಿಷ್ ಭಾಷೆಯನ್ನೂ ಅದರ ಹಿಂದೆ ಇರುವ ವೈಜ್ಞಾನಿಕ ಸಂಸ್ಕೃತಿಯ ಸಂಪರ್ಕವನ್ನೂ ತ್ಯಜಿಸಿ ನಮ್ಮ ಸ್ವತ್ವವನ್ನು ಅದು ಏನಾದರಿರಲಿ-ಮೆರೆಯುವುದು ಸಾಧ್ಯವಾಗಬಹುದು. ಆದರೆ ಇಂದು ಇದು ಸಾಧ್ಯವಲ್ಲ, ನಮ್ಮಲ್ಲಿ ಎಷ್ಟು ಜನ ಆ ಬಗೆಯ ಸರಳ ಜೀವನವನ್ನು ನಡೆಸಲು ಸಿದ್ದವಾಗಿದ್ದಾರೆ ? ಇಂಗ್ಲಿಷ್ ಭಾಷಾ ಜ್ಞಾನದಿಂದ ಬರುವ ಫಲವೆಲ್ಲವೂಬೇಕು. ಆದರೆ ಆ ಭಾಷಾಜ್ಞಾನ ಮಾತ್ರ ಅಗತ್ಯವಿಲ್ಲ ಎನ್ನುವುದು ಬುದ್ಧಿವಂತಿಕೆ ಎನ್ನಲಾದೀತೆ ? ಅಲ್ಲದೆ ವೈಜ್ಞಾನಿಕ ಸಂಸ್ಕೃತಿಯ ಪ್ರಭಾವ ಪ್ರಸಾರಗಳಿಂದ ಇಡೀ ಮಾನವ ಪ್ರಪಂಚದ ಸನ್ನಿವೇಶವೇ ಬದಲಾಗಿದೆ. ರಾಷ್ಟ್ರ ರಾಷ್ಟ್ರಗಳ ಪರಸ್ಪರಾವಲಂಬನೆ ಅತ್ಯಂತ ನಿಕಟವೂ ಗಾಢವೂ ಆಗಿದೆ. ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮಾನವ ಲೋಕವೆಲ್ಲ ಒಂದು “ನೀಡ’ವಾಗಿ ರೂಪುಗೊಳ್ಳುತ್ತಿರುವ ಈ ಕಾಲದಲ್ಲಿ ಸ್ಥಳೀಯ ವ್ಯತ್ಯಾಸಗಳೆಲ್ಲ ಕರಗಿಹೋಗುತ್ತಿವೆ. ಒಂದು ಹೊಸ ಮಾನವತೆಯ ಉದಯಚಿಹ್ನಗಳು ಕಂಡುಬರುತ್ತಿವೆ. ನಮ್ಮ ರವಿಶಂಕರರ ಸಂಗೀತ ಅಮೆರಿಕನರಿಗೂ ಪ್ರಿಯವಾಗುತ್ತಿದೆ. ಅಲ್ಲಿ ವಿಶ್ವವಿದ್ಯಾನಿಲಯದಲ್ಲಿ ಅವರು ಭಾರತೀಯ ಸಂಗೀತವನ್ನು ಕಲಿಸುತ್ತಾರೆ; ಮಹೇಶಯೋಗಿಗೆ ಅಮೆರಿಕದ ಅನೇಕ ತರುಣತರುಣಿಯರು ಅನುಯಾಯಿಗಳಾಗಿದ್ದಾರೆ. ನಮಗೆ ಗೊತ್ತಿಲ್ಲದ ಹಾಗೆ, ನಮ್ಮ ಇಷ್ಟಕ್ಕೆ ಎಷ್ಟೋ ಸಲ ವಿರೋಧವಾಗಿಯೇ ನಾವು ಈ ಹೊಸ ಮಾನವೀಯತೆಯ ಪ್ರಭಾವಕ್ಕೆ ಒಳಗಾಗುತ್ತಲೇ ಇದ್ದೇವೆ. ಶುದ್ಧ ಕಾವಿಬಟ್ಟೆ ತೊಟ್ಟು, ಸನಾತನ ಧರ್ಮದ ಪುನರುಜ್ಜಿವನದ ಬಗ್ಗೆ ಪ್ರವಚನ ನೀಡುವ ಮಠಾಧೀಶರೂ ಈಗ ಕಾರಿನಲ್ಲಿ ಪ್ರಯಾಣ ಮಾಡುತ್ತಾರೆ. ಅಮೆರಿಕದ ಗೋಧಿ ಬಾರದೆ ಇದ್ದರೆ ಕ್ಷಾಮಗ್ರಸ್ತ ಭಾರತ ಪ್ರದೇಶಗಳ ಜನ ಸಾಯಬೇಕಾಗುತ್ತದೆ. ಶ್ರೀಮಂತ ರಾಷ್ಟ್ರಗಳ ದಾನದ ನೆರವಿನಿಂದ, ಸಾಲದಿಂದ ನಮ್ಮ ಯೋಜನೆ ಕುಂಟಬೇಕಾಗಿದೆ. ಯಂತ್ರಗಳ ಬಿಡಿ ಭಾಗಗಳೂ ಹೊರಗಿನಿಂದಲೇ ಬರಬೇಕು-ಇಲ್ಲೇ ತಯಾರಿಸಬೇಕಾದರೆ ಪರಕೀಯರ ದುಡ್ಡು ಬೇಕು, ಹೊರಗಿನ ತಂತ್ರಜ್ಞರ ಸಲಹೆ, ನೆರವು ಬೇಕು. ನಮ್ಮ ವಿದ್ಯಾರ್ಥಿಗಳು ಇಂಗ್ಲಂಡ್, ಅಮೆರಿಕಾ, ಜರ್ಮನಿ ಮುಂತಾದ ಪರರಾಷ್ಟ್ರಗಳಿಗೆ ಹೋಗಿ ಅಲ್ಲಿ ಪರಿಣತಿ ಪಡೆದು ಬರಬೇಕು. ಇಂಥ ಈ ಹೊಸ ಸನ್ನಿವೇಶವನ್ನು ಅರಿತು ಅದರೊಡನೆ ಬೆರೆತು ಅದರ ಮೂಲಕವೇ ಸಾರ್ಥಕತೆಯನ್ನು ಪಡೆಯುವ ಪ್ರಯತ್ನವನ್ನು ನಾವು ಮಾಡದೆ ನಮ್ಮ ಅಭ್ಯುದಯ ಸಾಧ್ಯವಿಲ್ಲ. ಇಂಗ್ಲಿಷನ್ನು ಬಿಟ್ಟೆವೆಂದರೆ ನಮ್ಮ ಪ್ರಗತಿ ಕುಂಠಿತವಾಗುವುದು ಖಂಡಿತ ; ಇಂಗ್ಲಿಷರ ಆಗಮನಕ್ಕೆ ಮೊದಲು ಅನೇಕ ಶತಮಾನಗಳತನಕ ನಮ್ಮ ದೇಶದಲ್ಲಿದ್ದ ಜಡವೂ ನಿಷ್ಕ್ರಿಯವೂ ಸೃಜನಕಾರ್ಯಶೂನ್ಯವೂ ಆದ ಜೀವನ್ಮೃತಾವಸ್ಥೆಗೆ ನಾವು ಮತ್ತೆ ಹಿಂತಿರುಗಬೇಕಾಗುತ್ತದೆ. ಏಕೆಂದರೆ ಇಂಗ್ಲಿಷ್ ಕೇವಲ ಒಂದು ಭಾಷೆ ಮಾತ್ರವಲ್ಲ; ನಾವು ಇಲ್ಲಿ ರೂಢಿಗೊಳಿಸಲು ಬಯಸುವ ಆಧುನಿಕ ಜೀವನಕ್ಕೆ ಅತ್ಯಗತ್ಯವಾದ ಒಂದು ಹೊಸ ಜೀವನ ವಿಧಾನದ ಸ್ಫೂರ್ತಿಸಂಕೇತವೂ ಹೌದು. ಅದನ್ನು ಬಿಡುವುದೆಂದರೆ ನಾವು ಆಧುನಿಕತೆಯನ್ನೇ ಬಿಡುವುದಕ್ಕೆ ಪ್ರಯತ್ನಿಸಿ ಅದನ್ನು ಬಿಡಲೂ ಆಗದೆ ಹಿಡಿಯಲೂ ಆಗದೆ ಇರುವ ತ್ರಿಶಂಕು ಸ್ಥಿತಿಯನ್ನು ಮುಟ್ಟಿದ ಹಾಗೇ ಸರಿ. ಆಧುನಿಕತೆಯೆಂಬುದು ಇಂದಿನ ಜೀವನ ವಿಕಾಸಕ್ಕೆ ಅತ್ಯವಶ್ಯವಾದ ಮೂಲ ಧಾತು. ಅದನ್ನು ಬಿಟ್ಟು ಸಾರ್ಥಕವಾದ ತುಂಬು ಜೀವನವೇ ಅಸಾಧ್ಯ. ಪ್ರಕೃತಿಯಲ್ಲಿ ಹೇಗೋ ಹಾಗೆ ಮಾನವ ಜೀವನದಲ್ಲಿ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ. ಹಿಂದಿನದರಲ್ಲಿ ನಿಜವಾಗಿ ಜೀವವುಳ್ಳದ್ದು ಇದ್ದರೆ ಅದು ಇಂದು ನಮ್ಮಲ್ಲಿ ಯಾವ ಪ್ರಮಾಣದಲ್ಲಿದೆಯೋ ಅಷ್ಟು ಮಾತ್ರವೇ ; ಉಳಿದದ್ದೆಲ್ಲ ಬರೀ ಕನಸು, ಹಳವಂಡ. ಈ ಶತಮಾನದ ಆದಿಭಾಗದಲ್ಲಿ ನಮ್ಮ ದೇಶದ ಮೂಲೆಮೂಲೆಯಲ್ಲೂ ಹೊಸಜೀವನ ಮಿಡಿಯತೊಡಗಿದ್ದು ಇಂಗ್ಲಿಷ್ ಭಾಷೆಯ ಪ್ರಭಾವದಿಂದ ; ಅದರ ಮೂಲಕ ನಮ್ಮ ಮನಸ್ಸನ್ನು ಬಡಿದೆಬ್ಬಿಸಿದ ಪಾಶ್ಚಾತ್ಯ ಸಂಸ್ಕೃತಿಯ ಸಂಘಟನೆಯಿಂದ ಈ ಹೊಸ ಜೀವ ಸ್ಪಂದನವನ್ನು ಮಧ್ಯದಲ್ಲಿಯೇ ನಿಲ್ಲಿಸುವ ಪ್ರಯತ್ನ ನಿಜವಾಗಿಯೂ ಆತ್ಮಘಾತಕವೇ ಸರಿ.
ಇಂಗ್ಲಿಷಿನ ಪ್ರಭಾವ ನಮ್ಮ ಕನ್ನಡತನವನ್ನು ತೊಡೆದು ಹಾಕಿದೆ, ಹಾಕುತ್ತಿದೆ ಎಂಬ ಮಾತಿನಲ್ಲಿ ಹುರುಳಿಲ್ಲ. ಈ ಶತಮಾನದಲ್ಲಿ ಕನ್ನಡದಲ್ಲಿ ನಡೆದ ಅತ್ಯುತ್ತಮವಾದ ಕೆಲಸಕ್ಕೆ ಪ್ರೇರಕವಾದದ್ದು ಇಂಗ್ಲಿಷ್. ಕನ್ನಡದಲ್ಲಿ ಅಂಥ ಉತ್ತಮವಾದ ಕೆಲಸವನ್ನು ಮಾಡಿದವರೆಲ್ಲ, ಕನ್ನಡ ನಮ್ಮದು ಎಂದು ಕಳಕಳಿಯಿಂದ ದುಡಿದವರೆಲ್ಲ
– *9
ಇಂಗ್ಲಿಷ್ ಮೂಲಕವೇ ವಿದ್ಯೆ ಪಡೆದವರು. ಈಗಲೂ ಕೂಡಾ ಕನ್ನಡ ಭಾಷೆಯ ದಿಗಂತವನ್ನು ವಿಸ್ತರಿಸಲೂ, ಅದರ ಅಭಿವ್ಯಂಜನಶಕ್ತಿಗೆ ಆಳವನ್ನೂ, ಸೂಕ್ಷ್ಮತೆಯನ್ನೂ ತರಲು ಯತ್ನಿಸುತ್ತಿರುವವರೆಲ್ಲರೂ ಇಂಗ್ಲಿಷ್‌ ಓದಿದವರು. ಬಹುಶಃ ಉಳಿದೆಲ್ಲರಿಗಿಂತಲೂ ತುಂಬ ಚೆನ್ನಾಗಿ ಓದಿದವರು. ಇಂಥ ಕೆಲಸ ನಡೆಯುತ್ತ ಬಂದದ್ದು ಅದರಿಂದ ಬರುವ ಲಾಭಕ್ಕಾಗಿಯಲ್ಲ, ಯಶಸ್ಸಿಗಾಗಿ ಅಲ್ಲ, ಭಾಷಾಸೇವೆ ಎಂಬ ತ್ಯಾಗ ಬುದ್ಧಿಯಿಂದಲೂ ಅಲ್ಲ-ಸಹಜವಾಗಿ. ಕನ್ನಡ ನಾಡಿನಲ್ಲಿ ಹುಟ್ಟಿದವರೆಲ್ಲರೂ ತಮ್ಮತನದ ವಿಕಾಸವನ್ನು ಬಯಸುವಂಥವರೇನೂ ಅಲ್ಲ. ಯಾವ ಯಾವ ಕನ್ನಡಿಗ ತನ್ನತನವನ್ನು ಬೆಳಸಿಕೊಳ್ಳಲು ಯತ್ನಿಸುತ್ತಾನೋ ಆತ ಕನ್ನಡದಲ್ಲಿಯೇ ಕೆಲಸ ಮಾಡದೇ ವಿಧಿಯಿಲ್ಲ. ಈ ಕೆಲಸ ಮಾಡುವ ಜರೂರನ್ನು ತೀವ್ರವಾಗಿ ಅನುಭವಿಸುವಂಥವರು ಮೊತ್ತ ಮೊದಲನೆಯದಾಗಿ ಸಾಹಿತಿಗಳು, ಅನಂತರ ಇತರ ಬುದ್ದಿಜೀವಿಗಳು. ಏಕೆಂದರೆ ತನ್ನ ಅಂತರಂಗ ಜೀವನದ ಸಂಪೂರ್ಣ ಆವಿಷ್ಕಾರವನ್ನು ಬಯಸುವವನೇ ಸಾಹಿತಿ. ಸಂಪ್ರದಾಯದಲ್ಲಿ ಜೀವಂತವಾಗುಳಿದು ಇಂದಿನ ನಮ್ಮ ಅಂತರಂಗದ ಒಂದು ಅಂಗವಾಗಿ ಯಾವುದು ಇರುವುದೋ ಅದೇ ನಿಜವಾದ ಜೀವವುಳ, ಜೀವ ಕೊಡುವ ಸಂಪ್ರದಾಯ. ಅಂಥ ಸಂಪ್ರದಾಯವನ್ನು ಒಳಗೊಂಡಿರುವುದೇ ಭಾಷೆ. ಅಂಥ ಭಾಷೆಯಲ್ಲೇ ನಡೆಯುವ ಕೆಲಸವಾದ ಸಾಹಿತ್ಯವೂ ಜೀವಂತ ಸಂಪ್ರದಾಯವನ್ನು ಜೀರ್ಣಿಸಿಕೊಂಡಲ್ಲದೆ ಸಾರ್ಥಕವಾಗದು. ಆದ ಕಾರಣ ಕನ್ನಡದಲ್ಲಿ ಹುಟ್ಟಿದ ಯಾವ ಸಾಹಿತಿಯ ಕನ್ನಡದಲ್ಲಿ ಅಲ್ಲದೆ ಇನ್ನು ಯಾವ ಭಾಷೆಯಲ್ಲೂ ನಿಜವಾದ ಕೃತಿಗಳನ್ನು ರಚಿಸಲಾರ: ಏಕೆಂದರೆ ಭಾಷೆಯ ಸ್ವರೂಪವೇ ಹಾಗೆ ಭೂತಕಾಲದಿಂದ ಬಂದು ಮುಂದೆ ನಡೆಯತಕ್ಕದ್ದು. ಆದ ಕಾರಣವೇ ಭಾಷೆಯ ಪರಿಮಿತಿಯೊಳಗೇ ಸಾಹಿತ್ಯವೂ ತನ್ನ ಪರಿಮಿತಿಯನ್ನು ಕಾಣಬೇಕಾಗುತ್ತದೆ. ಈಗ ಇರುವ ಈ ಕನ್ನಡ ಭಾಷೆ ಅದರ ಇಂದಿನ ಸ್ಥಿತಿಯಲ್ಲಿ, ಇಂದು ನಿಜವಾಗಿಯೂ ಬದುಕುತ್ತ ಇಂದಿನ ಜೀವನದ ಪರಿವರ್ತಿತ ಸಂವೇದನಗಳನ್ನೆಲ್ಲ ಒಳಗೊಂಡಿರುವ ಸಾಹಿತಿಯ ಕೃತಿ ಶಕ್ತಿಯನ್ನು ಸಂಪೂರ್ಣವಾಗಿ ರೂಪುಗೊಳಿಸಲು ಇನ್ನೂ ಅಸಮರ್ಥವಾಗಿದೆ ಎಂಬುದು ಈಗ ಬರೆಯುತ್ತಿರುವ ಪ್ರತಿಯೊಬ್ಬ ಕನ್ನಡ ಸಾಹಿತಿಯ ಅನುಭವಕ್ಕೆ ಬಂದಿರಬೇಕು. ಆದರೆ ಈ ಭಾಷೆಯ ಪರಿಮಿತಿಗಳನ್ನು ಉಲ್ಲಂಘಿಸಲು ನಿರಂತರವಾಗಿ ಯತ್ನಿಸುತ್ತ ಅದನ್ನು ಅದ್ಯತನ ಅನುಭವ ಭಾರವನ್ನು ಹೊರಲು ಸಮರ್ಥವಾಗುವಂತೆ ಮಾಡಲು ಯತ್ನಿಸುವುದೇ ನಾವು ಇಂದು ಕನ್ನಡದ ಅಭಿಮಾನವನ್ನು ವ್ಯಕ್ತಪಡಿಸುವ ಅತ್ಯುತ್ತಮ ಮಾರ್ಗ. ಈ ಮಾರ್ಗವನ್ನು ಹಿಡಿಯುವುದರಿಂದಲೇ ತನ್ನ ಜೀವನ ಸಫಲವಾಗುತ್ತದೆ ಎಂದು ಯಾವ ಸಾಹಿತಿ ತಿಳಿಯುತ್ತಾನೋ ಅವನು ಕನ್ನಡದಲ್ಲಿ ಅಲ್ಲದೆ ಬೇರೆ ಯಾವ ಭಾಷೆಯಲ್ಲೂ ತನ್ನ ಅತ್ಯಂತ ಆತ್ಮೀಯವಾದ ಅನುಭವಗಳಿಗೆ ಪ್ರತಿರೂಪವನ್ನು ಬಯಸಲಾರ. ಈ ರೀತಿ ಕೆಲಸ ಮಾಡುವವನಿಂದಲೇ ನಮ್ಮ ಭಾಷೆ ಬೆಳೆಯುತ್ತದಲ್ಲದೆ ಭಾಷಾಂತರದಿಂದಲ್ಲ. ಇದೇ ರೀತಿ ನಿಜವಾದ ವಿಜ್ಞಾನಿಯಾಗಲೀ ಅಥವಾ ಬೇರೆ ಯಾವುದೇ ಶಾಸ್ತ್ರದ ವಿದ್ವಾಂಸನಾಗಲೀ ಕನ್ನಡದಲ್ಲೇ ತನ್ನ ಜ್ಞಾನಕ್ಕೆ ಸಾರ್ಥಕತೆಯನ್ನು ಕಾಣಬಯಸಿ ಕೆಲಸ ಮಾಡಿದರೆ ಆಗ ಕನ್ನಡದ ಗದ್ಯಸಾಹಿತ್ಯ, ವಿಚಾರಸಾಹಿತ್ಯ ಬೆಳೆಯುತ್ತದೆ-ಇಂಗ್ಲಿಷನ್ನು ಹೊರಗಟ್ಟು ವುದರಿಂದಲ್ಲ, ವಿಶ್ವವಿದ್ಯಾನಿಲಯ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಬಲವಂತವಾಗಿ ಹೇರುವುದರಿಂದಲ್ಲ, ಕನ್ನಡದ ಬಗ್ಗೆ ವೀರಾವೇಶದಿಂದ ಭಾಷಣ ಬಿಗಿಯುವುದರಿಂದಲೂ ಅಲ್ಲ. ಎಂದರೆ ಇನ್ನೂ ಅನೇಕ ವರ್ಷಕಾಲ ನಾವು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಏನು ಕಲಿಯಬೇಕೋ ಅದನ್ನು ಇಂಗ್ಲಿಷಿನ ಮೂಲಕವಲ್ಲದೆ ಬೇರೆ ಯಾವ ರೀತಿಯಿಂದಲೂ ಕಲಿಯುವುದು ಸಾಧ್ಯವಿಲ್ಲ. ಕನ್ನಡ ನಮ್ಮ ಭಾಷೆ. ಅದರ ಮೂಲಕವೇ ಎಲ್ಲ ಜ್ಞಾನವನ್ನೂ ಸಂಪಾದಿಸುವುದು ಸಾಧ್ಯವಾಗಿದ್ದರೆ ತುಂಬ ಚೆನ್ನಾಗಿರುತ್ತಿತ್ತು ನಿಜ. ಆದರೆ ನಾವು ಕನ್ನಡದಲ್ಲಿ ಕಲಿಯುವುದಾದರೂ ಏನನ್ನು ? ಸಾಮಾನ್ಯವಾದ ತಿಳುವಳಿಕೆಗಾದರೂ ಸಾಲುವಷ್ಟು ಜನಪ್ರಿಯ ರೀತಿಯಲ್ಲಿ ಬರೆದಂಥ ಶಾಸ್ತ್ರೀಯ ಗ್ರಂಥಗಳೂ ಕನ್ನಡದಲ್ಲಿ ವಿರಳವಾಗಿರುವಾಗ ಪ್ರೌಢಜ್ಞಾನಕ್ಕೆ ಇಂಗ್ಲಿಷನ್ನು ಆಶ್ರಯಿಸದೆ ಬೇರೆ ಯಾವ ದಾರಿ ಇದೆ ? ಅಧ್ಯಾಪಕ ಇಂಗ್ಲಿಷಿನಲ್ಲಿ ಓದಿಕೊಂಡು ಬಂದು ಕನ್ನಡದಲ್ಲಿ ಹೇಳುವುದೋ ? ಎಷ್ಟು ಜನ ಅಧ್ಯಾಪಕರಿಗೆ ತಾವು ಓದಿದ್ದನ್ನು ಕನ್ನಡಕ್ಕೆ ಅನುವಾದ ಮಾಡಿ ಹೇಳುವಷ್ಟು ಭಾಷಾಪ್ರಭುತ್ವವಿದೆ ? ಕನ್ನಡವನ್ನೇ ಬೋಧನಭಾಷೆಯಾಗಿ ಮಾಡಿದ ಬಳಿಕ ಅಧ್ಯಾಪಕರಾಗಿ ಬರುವವರು ಏನು ಮಾಡಬೇಕು ? ಅಲ್ಲದೆ ಹೈಸ್ಕೂಲ್ ಶಿಕ್ಷಣದವರೆಗೆ ವಿದ್ಯಾರ್ಥಿಗಳು ಅಧ್ಯಾಪಕರಿಂದ ಕಲಿಯುವುದೇ ಹೆಚ್ಚಾಗಿದ್ದರೆ ನಿಜವಾದ ವಿಶ್ವವಿದ್ಯಾಲಯ ಶಿಕ್ಷಣದಲ್ಲಿ ವಿದ್ಯಾರ್ಥಿ ತನಗೆ ತಾನೆ ಓದಿ ಕಲಿಯಬೇಕಾದ್ದೇ. ಮುಕ್ಕಾಲು ಮೂರುವೀಸ ; ಅಲ್ಲಿ ಅಧ್ಯಾಪಕ ಕೇವಲ ಮಾರ್ಗದರ್ಶನ ಮಾಡುತ್ತ ವಿದ್ಯಾರ್ಥಿಯಿಂದಲೇ ಕೆಲಸ ಮಾಡಿಸುವುದು ನಿಜವಾದ ಉನ್ನತ ಶಿಕ್ಷಣ. ಅಲ್ಲಿ ವಿದ್ಯಾರ್ಥಿಗೆ ಒಂದು ಪಠ್ಯ ಪುಸ್ತಕವಿದ್ದರೆ ಸಾಲದು ; ತಾನು ಕಲಿಯುವ ವಿಷಯಕ್ಕೆ ಸಂಬಂಧಪಟ್ಟ ಎಲ್ಲ ಗ್ರಂಥಗಳನ್ನೂ ಓದುವ ಸಾಮರ್ಥ್ಯ ಅವನಿಗೆ ಬೇಕು ; ಆ ಎಲ್ಲ ಗ್ರಂಥಗಳು ಅವನಿಗೆ ದೊರೆಯಬೇಕು. ಬೇರೆ ಬೇರೆ ವಿಷಯಗಳ ಮೇಲೆ ಪಠ್ಯಪುಸ್ತಕಗಳೂ ಕನ್ನಡದಲ್ಲಿ ಇಲ್ಲದೆ ಇರುವಾಗ ಉಳಿದ ಪುಸ್ತಕಗಳನ್ನು ಎಲ್ಲಿಂದ ತರಬೇಕು? ಆದ ಕಾರಣ ಕಾಲೇಜಿನ ಮಟ್ಟದಲ್ಲಿ, ಬಿ.ಎ., ಬಿ.ಎಸ್‌ಸಿ, ಎಂ.ಎ., ಎಂ.ಎಸ್‌ಸಿ. ತರಗತಿಗಳಲ್ಲಿ, ಮೆಡಿಕಲ್, ಎಂಜಿನಿಯರಿಂಗ್ ಮುಂತಾದ ತಾಂತ್ರಿಕ ತರಗತಿಗಳಲ್ಲಿ ಇಂಗ್ಲಿಷ್ ಮೂಲಕವೇ ಶಿಕ್ಷಣವನ್ನು ಕೊಡದೆ ಬೇರೆ ದಾರಿ ಇಲ್ಲ. ಇದು ನಿಷ್ಠುರವಾದ, ಬಹುಶಃ ನಮ್ಮ ಅಭಿಮಾನಕ್ಕೆ ಹೆಚ್ಚು ಪ್ರಿಯವಾಗಲಾರದ ಸತ್ಯ. ಈ ಸತ್ಯವನ್ನೂ ಅದರ ಪರಿಣಾಮಗಳನ್ನೂ ಸಂಪೂರ್ಣವಾಗಿ ಮನವರಿಕೆಮಾಡಿಕೊಳ್ಳದೆ ನಾವು ಕನ್ನಡದ ಅಭಿಮಾನದಿಂದ ಕೈಗೊಳ್ಳಬಹುದಾದ ಪ್ರತಿಯೊಂದು ಕಾರ್ಯಕ್ರಮವೂ ನಮಗೆ ಘಾತಕವಾಗುವುದರಲ್ಲಿ
ಸಂದೇಹವಿಲ್ಲ. ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿತುಕೊಳ್ಳಲಿ ನಮ್ಮ ಹುಡುಗರು, ವಿಷಯಗಳನ್ನು ಕನ್ನಡದ ಮೂಲಕವೇ ಅರಿಯಲಿ ಎಂಬ ವಾದವನ್ನೂ ಇಲ್ಲಿ ಗಮನಿಸಬೇಕು. ಅಂಥ ಸಂದರ್ಭದಲ್ಲಿ ಸಾಮಾನ್ಯ ವಿದ್ಯಾರ್ಥಿ ಹಾಗೂ ಹೀಗೂ ಇಂಗ್ಲಿಷಿನಲ್ಲಿ ಪಾಸಾಗಲು ಯತ್ನಿಸುವನಲ್ಲದೆ, ತಾನು ಕಲಿಯುವ ಇತರ ವಿಷಯಗಳ ಮೇಲೆ ಇಂಗ್ಲಿಷಿನಲ್ಲಿರುವ ಗ್ರಂಥಗಳನ್ನು ಓದಲು ಪ್ರಯತ್ನಿಸಲಾರ. ಹಾಗೆ ಅವನು ತನ್ನ ವಿಷಯದ ಮೇಲೆ ಇಂಗ್ಲಿಷ್ ಗ್ರಂಥಗಳನ್ನು ಓದದೆ ಇದ್ದರೆ ಅವನಿಗೆ ಆ ವಿಷಯದಲ್ಲಿರುವ ಜ್ಞಾನ ತೀರ ಪ್ರಾಥಮಿಕವಾಗುವುದು ಖಂಡಿತ. ಅದೇ ರೀತಿ ಇಂಗ್ಲಿಷ್ ಕೇವಲ ಲೈಬ್ರರಿ ಭಾಷೆಯಾಗಲಿ ಎಂಬ ವಾದವೂ ಅಪಾಯಕಾರಿಯಾಗುತ್ತದೆ. ಏಕೆಂದರೆ ಬರೇ ಓದುವುದರಿಂದ ಯಾವ ಭಾಷೆಯನ್ನಾಗಲಿ ಸರಿಯಾಗಿ ತಿಳಿದುಕೊಳ್ಳುವ, ಉಪಯೋಗಿಸುವ ಶಕ್ತಿ ಬರುವದಿಲ್ಲ ; ಮುಖ್ಯವಾಗಿ ಅದರಲ್ಲಿ ಸ್ಪಷ್ಟವಾಗಿ ಬರೆಯುವ ಸಾಮರ್ಥ್ಯ ಬರಬೇಕು ; ಸಾಮಾನ್ಯ ರೀತಿಯಲ್ಲಾದರೂ ಅದರಲ್ಲಿ ಮಾತಾಡುವ ಶಕ್ತಿಯೂ ಇರಬೇಕು. ಅನೇಕ ಭಾಷಾರಾಜ್ಯಗಳುಳ್ಳ ನಮ್ಮ ದೇಶದಲ್ಲಿ ವಿದ್ಯಾವಂತನಿಗೆ ಈ ರೀತಿ ಇಂಗ್ಲಿಷನ್ನು ಬಳಸುವ ಶಕ್ತಿ ಇಲ್ಲವಾದರೆ ರಾಜ್ಯರಾಜ್ಯಗಳ ನಡುವಿನ ಸಾಂಸ್ಕೃತಿಕ ಬೌದ್ಧಿಕ ಸಂಪರ್ಕವೇ ತಪ್ಪಿಹೋಗಿ ದೇಶ ಒಡೆದುಹೋಗುವುದು ಸಹಜ. ಇದೇ ನಮ್ಮ ಮುಂದಿರುವ ಸಂದಿಗ್ಧ: ಕನ್ನಡ ಬೆಳೆಯಬೇಕು, ಅದರಲ್ಲೇ ನಾವು ಎಲ್ಲ ವಿಷಯಗಳನ್ನೂ ಮಂಡಿಸಲು ಸಮರ್ಥರಾಗಬೇಕು ; ಹಾಗೆ ಬೆಳೆಯಬೇಕಾದರೆ ಇಂಗ್ಲಿಷನ್ನು ಬಿಟ್ಟರೆ ಸಾಧ್ಯವಿಲ್ಲ. ಈ ಸಂದಿಗ್ಧದಿಂದ ಪಾರಾಗಲು ನಾವು ಕ್ರಮಶಃ ಕೈಕೊಳ್ಳಬಹುದಾದ ಉಪಾಯ ಇದು : ಕಾಲೇಜಿನ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಒಂದು ವಿಷಯದ ಮೇಲೆ ನಾಲ್ಕು ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯಬೇಕಿದ್ದಲ್ಲಿ ಒಂದು ಅಥವಾ ಎರಡು ಪ್ರಶ್ನೆಪತ್ರಿಕೆಗಳಿಗೆ ಕನ್ನಡದಲ್ಲೂ ಉಳಿದ ಪತ್ರಿಕೆಗಳಿಗೆ ಇಂಗ್ಲಿಷಿನಲ್ಲೂ ಉತ್ತರ ಬರೆಯುವ ಪದ್ಧತಿಯನ್ನು ತರುವುದರ ಮೂಲಕ ಕ್ರಮೇಣ ಕನ್ನಡ ಭಾಷೆಯನ್ನು ಆಧುನಿಕ ಜ್ಞಾನವನ್ನು ಪ್ರತಿಪಾದಿಸಲು ತಕ್ಕ ಸಾಧನವನ್ನಾಗಿ ಮಾಡಿಕೊಳ್ಳುವುದರ ಜೊತೆಗೆ ಇಂಗ್ಲಿಷಿನ ಮೂಲಕವೇ ದೊರೆಯಬೇಕಾದ ಜ್ಞಾನವನ್ನು ಸಂಪಾದಿಸುವ ಶಕ್ತಿಯನ್ನೂ ಉಳಿಸಿಕೊಂಡ ಹಾಗೆ ಆಗುತ್ತದೆ.
ಇದೇ ಸಂದರ್ಭದಲ್ಲಿ ನಮ್ಮ ನಮ್ಮ ಭಾಷೆಗಳಲ್ಲೇ ಅತ್ಯುನ್ನತ ವಿದ್ಯೆಯನ್ನೂ ಕೊಡುವುದು ಸಾಧ್ಯ ಎಂಬ ವಾದದ ಒಂದೆರಡು ಅಂಶಗಳನ್ನು ವಿಮರ್ಶಿಸುವುದು ಅಗತ್ಯ. ಹಾಗೆ ವಾದ ಮಾಡುವಾಗ ಜಪಾನಿನಂಥ ಏಕಭಾಷಾರಾಷ್ಟ್ರದ ಆಥವಾ ರಷ್ಯದಂಥ ಏಕಭಾಷಾ ಪ್ರಭುತ್ವವುಳ್ಳ ದೇಶಗಳ ಉದಾಹರಣೆ ತೆಗೆದುಕೊಂಡು ಕನ್ನಡದ ಮೂಲಕವೇ ಅಥವಾ ಹಿಂದಿಯ ಮೂಲಕವೇ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ. ಜಪಾನಿನಲ್ಲಿ ಜಪಾನಿ ಭಾಷೆಯೇ ಅಲ್ಲಿಯ ಸಹಜವಾದ ರಾಷ್ಟ್ರಭಾಷೆ ; ಅದರ ಜೊತೆಗೆ ಪೈಪೋಟಿ ನಡೆಸತಕ್ಕ ಇನ್ನೊಂದು ಭಾಷೆ ಅಲ್ಲಿ ಇಲ್ಲ. ಆ ಭಾಷೆಯಲ್ಲಿಯೇ ಅತಿ ಪೂರ್ವಕಾಲದಿಂದಲೂ ಜಪಾನಿಯರು ತಮ್ಮ ಭಾವನೆಗಳನ್ನು ಹೇಗೋ ಹಾಗೆ ವಿಚಾರಗಳನ್ನೂ ವ್ಯಕ್ತಪಡಿಸಿಕೊಳ್ಳುತ್ತ ಬಂದಿದ್ದಾರೆ. ಪಾಶ್ಚಾತ್ಯರ ಸಂಪರ್ಕವಾಗುವ ಮೊದಲು ಆ ದೇಶದಲ್ಲಿ ನಡೆದಿದ್ದ ಎಲ್ಲ ಬೌದ್ಧಿಕ ಕ್ರಿಯೆಗಳೂ ನಡೆದದ್ದು ಎಲ್ಲ ಶಾಸ್ತ್ರಗಳ ಬೆಳವಣಿಗೆ, ಎಲ್ಲ ಪ್ರೌಢ ವಿಚಾರಗಳ ಪ್ರತಿಪಾದನೆ ನಡೆದದ್ದು ಆ ಭಾಷೆಯಲ್ಲಿಯೇ. ಇಡೀ ದೇಶದ ಧೀಶಕ್ತಿಯ ಸ್ಫುರಣ ಸಂಚಯನ ಸಂವರ್ಧನಗಳು ನಡೆಯುತ್ತ ಬಂದದ್ದು ಆ ಭಾಷೆಯಲ್ಲಿಯೇ. ಆದಕಾರಣ ಆಧುನಿಕ ಜಗತ್ತಿನ ನೂತನ ಜ್ಞಾನದ ಸಾಧನವನ್ನಾಗಿ ಆ ಭಾಷೆಯನ್ನು ರೂಪುಗೊಳಿಸಲು ಇಡೀ ದೇಶದ ಎಲ್ಲ ಮನಸ್ಸುಗಳೂ ಕೂಡಿ ಕೆಲಸ ಮಾಡುವುದೂ, ಇಡೀ ರಾಷ್ಟ್ರದ ಸಾಧನಸಂಪತ್ತನ್ನು ಅದಕ್ಕಾಗಿ ಬಳಸಿಕೊಳ್ಳುವುದೂ ಸಾಧ್ಯವಾಗಿ ಆ ಜನ ಪಾಶ್ಚಾತ್ಯರ ತಾಂತ್ರಿಕ ವಿಜ್ಞಾನವನ್ನು ತಮ್ಮ ಭಾಷೆಯಲ್ಲೇ ಅಳವಡಿಸಿಕೊಳ್ಳುವುದು ಶಕ್ಯವಾಯಿತು. ಆದರೆ ನಿಜವಾದ ಆಧುನಿಕ ವಿಚಾರವಂತಿಕೆ, ವೈಜ್ಞಾನಿಕ ವಾತಾವರಣ, ಪ್ರಜಾತಂತ್ರಕ್ಕೆ ಯೋಗ್ಯವಾದ ಮನಸ್ಥಿತಿ ಇವು ಅಲ್ಲಿ ರೂಪುಗೊಳ್ಳದೆ ಇರುವುದಕ್ಕೆ ಪ್ರತಿಕ್ಷಣವೂ ಸವಾಲನ್ನು ಹಾಕುವ ಪಾಶ್ಚಾತ್ಯ ಭಾಷೆಯೊಂದರ ಸತತ ಸಂಪರ್ಕ ಇಲ್ಲದೆ ಇದ್ದದ್ದು, ತನ್ನ ಕೃತಿಗಳನ್ನು ವಿಮರ್ಶಿಸಲು ತಕ್ಕ ಒರೆಗಲ್ಲಾಗಿ ಇನ್ನೊಂದು ಭಾಷೆಯ ನಿಕಟ ಸಾಹಚರ್ಯ ಇಲ್ಲದೆ ಇದ್ದದ್ದು ಕಾರಣ. ಇದೇ ಮಾತು ಒಂದೇ ಒಂದು ಭಾಷೆಯುಳ್ಳ ಎಲ್ಲ ರಾಷ್ಟ್ರಗಳಿಗೂ ಅನ್ವಯಿಸುತ್ತದೆ. ಆದರೆ ನಮ್ಮ ಕನ್ನಡ ಅಥವಾ ಯಾವುದೇ ಭಾರತೀಯ ಭಾಷೆ ಅಂಥ ಭಾಷೆಯಲ್ಲ. ಯಾವುದೇ ಒಂದು ಭಾಷೆಯ ಬೆಳವಣಿಗೆಗಾಗಿ ನಮ್ಮ ಸಾಧನ ಸಂಪತ್ತೆಲ್ಲವನ್ನೂ ಮುಡಿಪಾಗಿಡುವುದು ನಮ್ಮ ರಾಷ್ಟ್ರಕ್ಕೆ ಆಗದ ಮಾತು. ಬಹಳ ಹಿಂದಿನ ಕಾಲದಿಂದಲೂ ಬುದ್ದಿಯ ಭಾಷೆಯಾಗಿ ಈ ಯಾವ ಭಾಷೆಗಳೂ ಬೆಳೆದು ಬಂದಂಥವಲ್ಲ. ಈ ಎರಡು ವಿಶಿಷ್ಟ ಸಂದರ್ಭಗಳ ವ್ಯತ್ಯಾಸಗಳನ್ನು ಗಣನೆಗೆ ತಾರದೆ ಅಲ್ಲಿ ಸಂದದ್ದು ಇಲ್ಲಿಯೂ ಸಲ್ಲ ಬಲ್ಲದು ಎಂಬುದು ಕೇವಲ ಆತ್ಮವಂಚನೆಯಾದೀತಲ್ಲದೆ ಸರಿಯಾದ ವಾದ ಆಗುವುದಿಲ್ಲ.
ರಷ್ಯಾದ ಪರಿಸ್ಥಿತಿ ಇದಕ್ಕಿಂತ ಭಿನ್ನವಾದದ್ದು. ಅಲ್ಲಿ ಅನೇಕಾನೇಕ ಹಿಂದುಳಿದ ಮುಗ್ಲ ಭಾಷೆಗಳಿದ್ದರೂ ರಷ್ಯನ್ ಭಾಷೆಯೊಂದೇ ಅತ್ಯಂತ ಪ್ರೌಢವಾದ, ತಲತಲಾಂತರಗಳಿಂದಲೂ ವಿಚಾರದ, ಶಾಸ್ತ್ರದ ಭಾಷೆಯಾಗಿ ಬೆಳೆದು ಬಂದ ಸಾರ್ವಭೌಮ ಗುಣಗಳುಳ್ಳ ಭಾಷೆ, ಆ ಭಾಷೆಯನ್ನಾಡುವ ಜನ ಇಡೀ ರಾಷ್ಟ್ರದಲ್ಲಿ ಬಹು ಸಂಖ್ಯೆಯವರು. ಆ ಭಾಷೆಯ ಜೊತೆಗೆ ಪೈಪೋಟಿ ನಡೆಸಲು ತಕ್ಕ ಸಾಮರ್ಥ್ಯ ಅಲ್ಲಿ ಇನ್ನು ಯಾವ ಭಾಷೆಗೂ ಇಲ್ಲ. ಇದೂ ಅಲ್ಲದೆ ರಷ್ಯಾದಲ್ಲಿ ಸರ್ವಾಧಿಕಾರಿ ರಾಜ್ಯವಿರುವುದರಿಂದ ದೇಶದ ಆದ್ಯಂತವೂ ರಷ್ಯನ್ ಭಾಷೆಯನ್ನು ಎರಡನೆಯ ತರಗತಿಯಿಂದಲೇ ಕಡ್ಡಾಯವಾದ ಶಿಕ್ಷಣ ವಿಷಯವನ್ನಾಗಿ ಮಾಡುವುದೂ ಅಲ್ಲಿ ಸಾಧ್ಯವಾಯಿತು.
ಜಾರರ ಕಾಲದಿಂದಲೂ ರಷ್ಯನ್ ಭಾಷೆ ಪಾಶ್ಚಾತ್ಯ ಸಂಸ್ಕೃತಿಯ ಕೇಂದ್ರಗಳಲ್ಲಿ ಒಂದಾಗಿದ್ದು ಉಳಿದ ಪಾಶ್ಚಾತ್ಯ ಭಾಷೆಗಳ ಜೊತೆ ಸರಿಸಮವಾಗಿ ಬೆಳೆದು ಬಂದಿದೆ. ಹೀಗಾಗಿ ಅಲ್ಲಿನ ಭಾಷಾ ಸಮಸ್ಯೆಗೂ ನಮ್ಮ ದೇಶದ ಭಾಷಾ ಸಮಸ್ಯೆಗೂ ಯಾವ ಸಾಮ್ಯವೂ ಇಲ್ಲ. ಹಿಂದಿಯನ್ನು ರಷ್ಯನ್ ಭಾಷೆಗೂ ಇತರ ಭಾರತೀಯ ಭಾಷೆಗಳನ್ನು ರಷ್ಯಾದೇಶದ ಇತರ ಭಾಷೆಗಳಿಗೂ ಹೋಲಿಸಿ ಹಿಂದಿಯೇ ರಾಷ್ಟ್ರಭಾಷೆಯಾಗಲಿ ಆಗ ಎಲ್ಲ ಸಮಸ್ಯೆಗಳಿಗೂ ಉತ್ತರ ಸಿಕ್ಕುತ್ತದೆ ಎಂಬ ವಾದ. ಆದ ಕಾರಣ, ತರ್ಕಬಾಹಿರವಾಗಿದೆ.
ಇನ್ನೊಂದು ಮುಖ್ಯವಾಗಿ ನೆನಪಿನಲ್ಲಿಡಬೇಕಾದ ಸಂಗತಿ ಎಂದರೆ ಈ ಕನ್ನಡ ರಾಜ್ಯವನ್ನು ರಾಜ್ಯವೆಂದು ಕರೆಯುತ್ತೇವಲ್ಲದೆ ಅದು ನಿಜವಾಗಿಯೂ ಅಂಥ ಸಾಲ್ವಭೌಮ ರಾಜ್ಯವಲ್ಲ; ಸಾರ್ವಭೌಮ ರಾಜ್ಯವಾದ ಭಾರತರಾಷ್ಟದ ಒಂದು ಅಂಗ, ಘಟಕ. ಇಲ್ಲಿ ನಾವು ನಿರ್ಧರಿಸಬೇಕಾದ್ದು ಈ ಭಾರತದೇಶ ಒಂದು ರಾಷ್ಟ್ರವಾಗಿ ಇರಬೇಕೇ ಅಥವಾ ಇದು ಅನೇಕಾನೇಕ ಸಾಲ್ವಭೌವು ರಾಜ್ಯಗಳಾಗಿ ವಿಘಟಿಸಿ ಹಿಂದಿನ ಕಾಲದಲ್ಲಿದ್ದಂತೆ ಛಪ್ಪನ್ನೈವತ್ತಾರು ರಾಜ್ಯಗಳಾಗಿ ಒಡೆದು ಒಂದೊಂದೂ ಇನ್ನೊಂದರಿಂದ ಬೇರೆಯಾಗಿ ಸಿಡಿದು ನಿಲ್ಲಬೇಕೇ ? ಎಂಬ ಮಾತು. ಇದು ಏಕರಾಷ್ಟ್ರ ವಾಗಿಯೇ ಇರಬೇಕು ಎಂದು ಹೇಳುತ್ತ ಭಾವೈಕ್ಯ ಸಮ್ಮೇಳನಗಳನ್ನು ನಡೆಸುತ್ತ ಆದರೆ ಈ ಏಕರಾಷ್ಟ್ರ ಭಾವನೆಗೆ ವಿರುದ್ಧವಾದದ್ದನ್ನೇ ಮಾಡುತ್ತ ಬಂದಿರುವುದರ ಪರಿಣಾಮವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಈ ದೇಶ ಹಿಂದೆ ಯಾವ ಕಾಲದಲ್ಲೂ ರಾಜಕೀಯವಾಗಿ ಒಂದಾಗಿರಲಿಲ್ಲ. ಯಾವುದೋ ಒಂದು ಮಟ್ಟದಲ್ಲಿ, ಮುಖ್ಯವಾಗಿ ಹಿಂದೂ ಸಂಪ್ರದಾಯಗಳ ಸಾಮಾನ್ಯ ಬಂಧನದಿಂದ ಇದು ಒಂದು ದೇಶ, ಭಾರತವರ್ಷ, ಭರತಖಂಡ ಎಂಬ ಕಲ್ಪನೆ ಇದ್ದಿತ್ತು. ಹಾಗೆ ಇದ್ದ ಐಕ್ಯವನ್ನು ಧಾರ್ಮಿಕ ಅಥವಾ ಸಾಂಸ್ಕೃತಿಕ ಅನ್ನಬಹುದಲ್ಲದೆ ಆಧುನಿಕ ದೃಷ್ಟಿಯ ರಾಷ್ಟ್ರತ್ವದ ಕಲ್ಪನೆಯೇ ಇರಲಿಲ್ಲ, ಈ ಇಡೀ ದೇಶ ಒಂದು ರಾಷ್ಟ್ರ ಎಂಬ ಕಲ್ಪನೆ ಮೂಡಿದ್ದು ಬ್ರಿಟಿಷರ ಕೈಕೆಳಗೆ ಮೊತ್ತಮೊದಲನೆಯ ಬಾರಿಗೆ ಸಮಸ್ತ ದೇಶವೂ ಒಂದೇ ರಾಜ್ಯಭಾರಕ್ಕೆ ಒಳಪಟ್ಟ ಮೇಲೆ. ರಾಜಕೀಯವಾದ ಐಕ್ಯ ಹೀಗೆ ಸಿದ್ಧಿಸಿದ ಮೇಲೆ ಏಕರಾಷ್ಟ್ರ ಕಲ್ಪನೆ ಕ್ರಮಕ್ರಮವಾಗಿ ಬೆಳೆದು ಬಲಗೊಂಡಿತು. ಹಿಂದೆ ಸಂಸ್ಕೃತ ಭಾಷೆ ಈ ದೇಶದ ಧೀಮಂತ ವಿದ್ಯಾವಂತರನ್ನೆಲ್ಲ ಒಂದುಗೂಡಿಸಿ ಸಾಂಸ್ಕೃತಿಕ ಸಾಮರಸ್ಯಕ್ಕೆ ಕಾರಣವಾಗಿದ್ದಂತೆ ಈಗ ಇಂಗ್ಲಿಷರ ಆಳ್ವಿಕೆಯಲ್ಲಿ ಇಂಗ್ಲಿಷ್ ಭಾಷೆ ಅದೇ ಕೆಲಸವನ್ನು ಮಾಡುತ್ತ ಬಂತು. ಇಂಗ್ಲಿಷ್ ವಿದ್ಯೆ ಕಲಿತವರು ಪಾಶ್ಚಾತ್ಯ ಸಂಸ್ಕೃತಿಯ ಮುಖ್ಯ ಲಕ್ಷಣಗಳಾದ ದೇಶಾಭಿಮಾನ, ಪ್ರಜಾತಂತ್ರ ವ್ಯಕ್ತಿ ಸ್ವಾತಂತ್ರ, ಸಮಾನತೆ, ವೈಜ್ಞಾನಿಕ ಮನೋಧರ್ಮ ಮುಂತಾದ ಆಧುನಿಕ ಗುಣಗಳನ್ನೂ, ಭಾವನೆಗಳನ್ನೂ, ಧೋರಣೆಗಳನ್ನೂ ತಮ್ಮದಾಗಿ ಮಾಡಿಕೊಂಡು ದೇಶದ ಆದ್ಯಂತವೂ ದೇಶಭಕ್ತಿಯನ್ನೂ, ಸ್ವಾಭಿಮಾನವನ್ನೂ ಉದ್ದೀಪಿಸಿ ಈ ದೇಶ ಸಾಂಸ್ಕೃತಿಕವಾಗಿ ಮಾತ್ರವಲ್ಲ, ರಾಜಕೀಯವಾಗಿಯೂ ಒಂದು ಎಂಬ ಭಾವನೆಯನ್ನು ಕೆರಳಿಸಿ ಸ್ವಾತಂತ್ರ ಸಂಗ್ರಾಮದ ನೇತೃಗಳೂ ಆಗಿ ರಾಜಕೀಯ ಸ್ವಾತಂತ್ರವನ್ನು ಗಳಿಸಲು ಸಮರ್ಥ ರಾದರು. ಇಂಗ್ಲಿಷ್ ಶಿಕ್ಷಣದ ಪರಿಣಾಮವಾಗಿ ಅನುಕರಣ ಬುದ್ಧಿ ದಾಸ್ಯಗಳು ಹೇಗೆ ತಲೆದೋರಿದುವೋ ಅದೇ ರೀತಿ ಸ್ವಾಭಿಮಾನ ಸ್ವತಂತ್ರ ಚಿಂತನಗಳೂ ನಮ್ಮ ದೇಶದಲ್ಲಿ ಬೆಳೆದುವು ಎಂಬುದನ್ನು ನಾವು ಮರೆಯಬಾರದು. ಈ ಇಡೀ ದೇಶವನ್ನು ಹಾಗೆ ಒಂದು ರಾಷ್ಟ್ರವಾಗಿ ಬೆಸೆದು ಐಕ್ಯಭಾವನೆಯನ್ನು ಪ್ರಚೋದಿಸಿ ರಾಷ್ಟ್ರ ಭಾವನೆಯನ್ನೂ ಪೋಷಿಸಿಕೊಂಡು ಬಂದದ್ದು ಇಂಗ್ಲಿಷ್ ವಿದ್ಯಾಭ್ಯಾಸ ಪದ್ಧತಿಯೇ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈ ಭಾಷೆ ನಮ್ಮಲ್ಲಿ ಧೀಮಂತರಾದವರನ್ನು ಇಡೀ ಜಗತ್ತಿನ ಜ್ಞಾನ ಸಂಚಯದ ಬಾಗಿಲಿಗೆ ಕರೆದೊಯ್ದಿತು. ಈ ದೇಶದಲ್ಲಿ ವೈಜ್ಞಾನಿಕ, ವೈಚಾರಿಕ ವಾತಾವರಣ ಹಬ್ಬಲು ಕಾರಣವಾಯಿತು. ಅತ್ಯಂತ ಜಡವೂ ಕಠೋರವೂ ಆಗಿ ಬೇರು ಬಿಟ್ಟಿದ್ದ ಜಾತಿಭಾವನೆಯನ್ನು ಅಲ್ಲಾಡಿಸಿತು. ಶತಶತಮಾನಗಳ ಕ್ರಿಯಾಶೂನ್ಯತೆಯನ್ನು ನಿವಾರಿಸಿ ಹೊಸ ಸೃಷ್ಟಿಯ ಉತ್ಸಾಹವನ್ನು ಕೆರಳಿಸಿತು. ನಮ್ಮ ಕಲೆ, ಕಾವ್ಯ, ಸಂಸ್ಕೃತಿ, ಆಚಾರ ವಿಚಾರ, ತತ್ವಜ್ಞಾನ, ಸಮಾಜವ್ಯವಸ್ಥೆ–ಈ ಎಲ್ಲಕ್ಕೂ ಒಂದು ಸವಾಲಾಗಿ ನಿಂತು ಹೊಸ ಸ್ವತಂತ್ರ ಕೃತಿಗಳಿಗೆ ಸ್ಫೂರ್ತಿಯೂ, ಅವುಗಳಿಗೆ ಒಂದು ಒರೆಗಲ್ಲೂ ಆಗಿ ಉಪಕರಿಸಿತು. ಇಷ್ಟು ಸತ್ಫಲದಾಯಕವಾಗಿರುವ ಇಂಗ್ಲಿಷನ್ನು ಪರಕೀಯವೆನ್ನುವುದು ಕಷ್ಟ. ಈಗ್ಗೆ ನೂರು ವರ್ಷಗಳಿಂದಲೂ ಈ ಇಂಗ್ಲಿಷ್ ಮತ್ತು ಅದು ಸಂಕೇತಿಸುವ ಪಾಶ್ಚಾತ್ಯ ಸಂಸ್ಕೃತಿಯ ಆಧುನಿಕ ಗುಣಗಳು ನಮ್ಮ ಸಂಪ್ರದಾಯದ ಅಂಶವಾಗಿ ನಮ್ಮ ಇಂದಿನ ಬದುಕಿನ ಅವಿಭಾಜ್ಯ ಅಂಗಗಳಾಗಿ ನಿಂತಿವೆ. ಆ ಭಾಷೆಯನ್ನು ದ್ವೇಷಿಸುವುದಂತೂ ಕೃತಘ್ನತೆಯ ಪರಮಾವಧಿ ಎನ್ನಬಹುದು. ಇಂಗ್ಲಿಷ್‌ ಅಭ್ಯಾಸವನ್ನು ನಾವು ಈಗ ನಿಲ್ಲಿಸಿಬಿಟ್ಟರೆ ನಾಳೆಯೇ ನಾವು ಈ ಬಸ್ಸು-ರೈಲು-ವಿಮಾನ ಎಲ್ಲವನ್ನೂ ಬಿಟ್ಟು ಕೊಟ್ಟು ಇದ್ದ ಸ್ಥಳದಲ್ಲಿಯೇ ತಟಸ್ಥರಾಗಿ ಕುಳಿತಂತೆ ಆಗುತ್ತದೆ. ನಾವು ನಮ್ಮದೇಶದ ಬೇರೆ ಬೇರೆ ಭಾಷಾ ರಾಜ್ಯಗಳೊಡನೆ ಯಾವ ಸಂಪರ್ಕವನ್ನೂ ಇಟ್ಟುಕೊಳ್ಳಲು ಸಾಧ್ಯವಾಗದೆ ನಮ್ಮದೇ ಒಂದು ಸ್ವತಂತ್ರ ರಾಜ್ಯವಾಗಿ ಇತರ ಅನೇಕ ಸರ್ವತಂತ್ರ ಸ್ವತಂತ್ರ ರಾಜ್ಯಗಳ ನಡುವೆ ಪ್ರತ್ಯೇಕವಾಗಿ ನಿಲ್ಲಬೇಕಾಗುತ್ತದೆ. ಹಾಗೆ ಆಗುವುದು ನಮಗೆ ಬೇಡವಾದ ಪಕ್ಷದಲ್ಲಿ ಇಲ್ಲಿಯವರೆಗೆ ನಡೆದುಕೊಂಡು ಬಂದಂತೆ ಇನ್ನು ಮುಂದೆಯೂ ಇಡೀ ದೇಶಕ್ಕೆ ಸಂಪರ್ಕ ಭಾಷೆಯಾಗಿ, ಈ ದೇಶದ ಭಾಷಾ ವರ್ಗಗಳಲ್ಲಿ ಯಾವುದಕ್ಕೂ ಹೆಚ್ಚು ಅನುಕೂಲವನ್ನಾಗಲೀ ಅನಾನುಕೂಲವನ್ನಾಗಲೀ ಮಾಡದೆ ಎಲ್ಲರಿಗೂ ಸಮಾನ ವಿದ್ಯಾಸಾಧನವಾಗಿ ಇರಲು ಸಮರ್ಥವಾದ ಇರಬೇಕಾದ ಭಾಷೆ ಇಂಗ್ಲಿಷ್ ಅಲ್ಲದೆ ಬೇರೆ ಯಾವುದೂ ಆಗುವುದು ಸಾಧ್ಯವಿಲ್ಲ.
ನಮ್ಮ ಭಾರತದೇಶ ಒಂದು ರಾಷ್ಟ್ರವಾಗಿರುವುದರಿಂದ ನಮಗೆಲ್ಲರಿಗೂ ನಮ್ಮದೇ ಆದ ಒಂದು ಭಾಷೆ ಅಗತ್ಯ. ಅದಿಲ್ಲದೆ ಇಂಗ್ಲಿಷನ್ನೇ ನಾವು ನಮ್ಮ ದೇಶದ ಒಳಗೂ ಹೊರಗೂ ಬಳಸುವುದು ನಮ್ಮ ಅಭಿಮಾನಕ್ಕೆ ಕುಂದು, ನಮಗೆ ಅವಮಾನ ಎಂಬ ವಾದವಿದೆ. ಆದರೆ ಭಾರತೀಯರಾದ ನಮಗೆ ನಮಗೆಲ್ಲರಿಗೂ ಸಾಮಾನ್ಯವಾದ ಒಂದು ಭಾರತೀಯ ಭಾಷೆ ಇಲ್ಲ ಎಂಬುದು ಸತ್ಯವಲ್ಲವೋ? ಆ ಸತ್ಯವನ್ನು ಒಪ್ಪಿಕೊಳ್ಳುವುದು ಅವಮಾನ ಹೇಗಾದೀತು? ನಮ್ಮದು ಈ ಜಗತ್ತಿನಲ್ಲಿರುವ ಬೇರೆ ರಾಷ್ಟ್ರಗಳಂತಹ ರಾಷ್ಟ್ರ ಅಲ್ಲವೇ ಅಲ್ಲ. ಈ ದೇಶದ ಜನರೆಲ್ಲರಿಗೂ ಒಂದೇ ಮತ ಇಲ್ಲದೆ ಇರುವುದು, ಒಂದೇ ಜಾತಿ ಇಲ್ಲದೆ ಇರುವುದು, ಇಲ್ಲಿ ಒಂದೇ ಒಂದು ರಾಜಕೀಯ ಪಕ್ಷ ಇಲ್ಲದೆ ಇರುವುದು ಈ ಎಲ್ಲವೂ ಆ ದೃಷ್ಟಿಯಿಂದ ಅವಮಾನವೇ ಸರಿ. ಈ ಜಗತ್ತಿನಲ್ಲೂ ಕೂಡಾ ನಾನಾ ಭಾಷೆಗಳಿರುವುದು ಮಾನವಕುಲಕ್ಕೆ ಅವಮಾನ ಅಲ್ಲವೋ? ಏಕತೆಯೇ ಮಾನದ ಚಿಹ್ನೆ, ವೈವಿಧ್ಯ ಅಲ್ಲ ಎಂಬ ಅಭಿಪ್ರಾಯ ಅಭಿಮಾನದ ಅತಿರೇಕದಿಂದ ಹುಟ್ಟುವ ಸಮವಸ್ತ್ರಪರ ಮನೋಧರ್ಮವನ್ನು ಸೂಚಿಸುತ್ತದೆ. ಈ ದೇಶದಲ್ಲಿ ಪ್ರತಿಯೊಬ್ಬನಿಗೂ ತನ್ನದೇ ಆದ ಶುದ್ಧ ಸ್ವದೇಶೀ ಭಾಷೆ ಇದ್ದೇ ಇದೆ. ನಮಗೆ ಕನ್ನಡವಿದೆ. ಅದೇ ನಮ್ಮ ಭಾಷೆ. ಅದನ್ನೇ ನಾವು ನಮ್ಮ ನಮ್ಮಲ್ಲಿನ ಸಂಭಾಷಣೆ ವಿಚಾರ ರಾಜ್ಯಭಾರಾದಿ ಎಲ್ಲ ವ್ಯವಹಾರಗಳಿಗೂ ಬಳಸಬೇಕು. ಇಂಗ್ಲಿಷಿನ ಸಹಾಯದಿಂದ ನಾವು ನಮ್ಮ ಭಾಷೆಯನ್ನು ಬೆಳಸಿ ಅದನ್ನು ಸಮರ್ಥವನ್ನಾಗಿ ಮಾಡಲು ಯತ್ನಿಸುತ್ತೇವೆ. ಇಂಗ್ಲಿಷಿನ ಮೂಲಕ ಇತರರೊಡನೆ ನಮ್ಮ ವ್ಯವಹಾರವನ್ನು, ವಿಚಾರ ವಿನಿಮಯವನ್ನೂ ನಡೆಸುತ್ತೇವೆ. ಇದರಲ್ಲಿ ಯಾವ ಅವಮಾನವಿದೆ? ಈ ದೇಶದಲ್ಲಿರುವ ಯಾವ ಭಾಷೆಯೂ ಇನ್ನೊಂದು ಭಾಷೆಗೆ ತಾನು ಮೇಲು ಎನ್ನಲು ಸಾಧ್ಯವಿಲ್ಲ. ಇದಕ್ಕೆ ಸರಿಸುಮಾರಾಗಿ ಎಲ್ಲ ಭಾಷೆಗಳ ಬೆಳವಣಿಗೆಯೂ ಒಂದೇ ಮಟ್ಟದಲ್ಲಿರುವುದು ಮಾತ್ರವೇ ಕಾರಣವಲ್ಲ; ದೇಶಾಭಿಮಾನದ ಮರಿಯಾಗಿ ಬಂದು ಈಗ ಅದನ್ನು ಮೀರಿ ಮಸಗುತ್ತಿರುವ ಸ್ವಭಾಷಾಭಿಮಾನವೂ ಕಾರಣ. ಇದಕ್ಕೆ ಸ್ವಭಾಷಾಭಿಮಾನವನ್ನೂ ಮೀರಿದ ಇನ್ನೂ ಆಳವಾದ ಕಾರಣವಿದೆ. ಈ ದೇಶದ ಭಾಷೆಗಳೆಲ್ಲವೂ ಸಾಮಾನ್ಯವಾಗಿ ಸಂಸ್ಕೃತದಿಂದ ಪ್ರಭಾವಿತವಾಗಿ ಒಂದೇ ಸಂಸ್ಕೃತಿಯ ಫಲಗಳಾಗಿರುವುದರಿಂದ ಒಂದಕ್ಕೂ ಇನ್ನೊಂದಕ್ಕೂ ಮೂಲಭೂತವಾದ ಯಾವ ವ್ಯತ್ಯಾಸವೂ ಇಲ್ಲ. ಹಿಂದಿನಿಂದ ಇವು ಬೆಳೆದು ಬಂದ ರೀತಿ, ಆಧುನಿಕ ಕಾಲದಲ್ಲಿ ಇವುಗಳಲ್ಲಿ ಆಗುತ್ತ ಬಂದಿರುವ ಬದಲಾವಣೆಗಳು ಒಂದೇ ಸ್ವರೂಪದವು. ಆದ ಕಾರಣ ಕನ್ನಡದವರಾದ ನಾವು ಸಂಸ್ಕೃತವೊಂದನ್ನು ಬಿಟ್ಟು ಇನ್ನು ಯಾವ ಭಾರತೀಯ ಭಾಷೆಯನ್ನು ಕಲಿತರೂ ಒಂದು ಹೊಸ ಭಾಷೆಯನ್ನು ಕಲಿತಷ್ಟಲ್ಲದೆ ಇನ್ನು ಯಾವ ಅರ್ಥಪೂರ್ಣವಾದ ಉಪಯೋಗವೂ ಆಗದು. ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಸ್ವೀಕರಿಸಿ ಅದನ್ನೇ ಸಂಪರ್ಕ ಭಾಷೆಯಾಗಿ ಬೆಳಸಬೇಕಾದರೆ ನಮ್ಮೆಲ್ಲ ವಿದ್ಯಾರ್ಥಿಗಳೂ ಹಿಂದಿಯನ್ನು ಕಡ್ಡಾಯವಾಗಿ ಕಲಿಯದೆ ಬೇರೆ
ದಾರಿ ಇಲ್ಲ, ಆದರೆ ಇದು ಸಾಧ್ಯವೆನ್ನಿಸಿದರೂ ವಾಂಛನೀಯವೇ ಎಂಬುದನ್ನು ವಿವೇಚಿಸಬೇಕು. ಒಂದು ಭಾಷೆಯನ್ನು ಯಾರು ಬೇಕಾದರೂ ಕಲಿಯಬಹುದು-ಇಷ್ಟಪಟ್ಟರೆ. ಆದರೆ ಅದನ್ನು ಕಡ್ಡಾಯವಾಗಿ ಮಾಡುವಾಗ ಅದು ಅತ್ಯಗತ್ಯ, ಅನಿವಾರ‍್ಯ ಎಂಬುದು ಖಚಿತವಾಗಬೇಕು. ಹಿಂದಿಯನ್ನು ಈ ದೇಶದಲ್ಲಿ ಉಳಿದೆಲ್ಲ ಭಾಷೆಗಳಿಗಿಂತ ಹೆಚ್ಚು ಜನ ಬಳಸುತ್ತಾರೆ ಎಂಬುದು ನಿಜ. ಆದರೆ ಹಿಂದಿ ಮಾತನಾಡುವವರೇನೂ ಈ ದೇಶದಲ್ಲಿ ಬಹು ಸಂಖ್ಯೆಯವರಲ್ಲ. ಕೇವಲ ಇತ್ತೀಚೆಗೆ ತನ್ನ ಸ್ವರೂಪಸಿದ್ಧಿ ಮಾಡಿಕೊಳ್ಳಲು ಯತ್ನಿಸುತ್ತಿರುವ ಹಿಂದಿ ಕನ್ನಡ, ತಮಿಳುಗಳಷ್ಟು ಪುರಾತನವಾದ ಸಾಹಿತ್ಯ ಸಂಸ್ಕೃತಿಗಳುಳ್ಳದ್ದಲ್ಲ; ಬಂಗಾಳಿಯಷ್ಟು ಆಧುನಿಕತೆಯನ್ನು ಜೀರ್ಣಿಸಿಕೊಂಡುದಲ್ಲ. ದಕ್ಷಿಣ ಭಾರತದ ಭಾಷೆಗಳ ಜೊತೆಗೆ ಹೋಲಿಸಿದರೆ ತೀರ ಕೃತಕವಾದ, ಅತ್ಯಂತ ಮುಗ್ಧವಾದ ಭಾಷೆ, ಆ ಭಾಷೆಯನ್ನು ಕಷ್ಟ ಪಟ್ಟು ತಮಿಳು ಕನ್ನಡ ಹುಡುಗರು ಕಲಿತದ್ದರಿಂದ ನನಗೆ ಭಾವನಾತ್ಮಕವಾದ ಸಮಾಧಾನ ಕೊಂಚ ದೊರೆಯಬಹುದೋ ಏನೋ. ಇನ್ನು ಬೇರೆ ಯಾವ ಪ್ರಯೋಜನವೂ ಇಲ್ಲ. ಅದು ಬುದ್ದಿಯ ಭಾಷೆಯಲ್ಲ, ವಿಜ್ಞಾನದ ಭಾಷೆಯಲ್ಲ, ತತ್ವಜ್ಞಾನದ ಭಾಷೆ ಅಲ್ಲ, ಕನ್ನಡದಲ್ಲೇ ನಾವು ಕಲಿಯಲಾರದ್ದು ಅದರಲ್ಲಿ ಏನೂ ಇಲ್ಲ. ಮೊದಲಿಂದಲೂ ಅದು ಕೇವಲ ವ್ಯವಹಾರದ ಭಾಷೆಯಾಗಿ ಬೆಳೆದು ಬಂದದ್ದು, ಅದು ಈಗ ಇರುವುದೂ ಹಾಗೆಯೇ ಮೂಲತಃ ಹಿಂದಿಯೂ ನಮ್ಮ ಕನ್ನಡಕ್ಕಿರುವಂಥವೇ ಸಂಪ್ರದಾಯ ಸಂಸ್ಕಾರವುಳ್ಳದ್ದಾಗಿರುವುದರಿಂದ ಅದನ್ನು ಕಡ್ಡಾಯಗೊಳಿಸಿ ಸರಕಾರಿ ಕೆಲಸಕ್ಕೆ ಅದು ಅತ್ಯಗತ್ಯವೆಂದು ಸಾರಿದರೆ ಆಗ ಆ ಭಾಷೆ ನಮ್ಮ ಕನ್ನಡಕ್ಕೆ ಅತ್ಯಂತ ವಿನಾಶಕಾರಿ ಪ್ರತಿಸ್ಪರ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಆಗ ಆ ಭಾಷೆಗೆ ರಾಷ್ಟ್ರಭಾಷೆಯ ಮರ್ಯಾದೆ, ಸರಕಾರದ ಪ್ರೋತ್ಸಾಹ ದೊರೆಯುವುದರಿಂದ ಕ್ರಮೇಣ ಅದು ಕನ್ನಡವನ್ನು ಮೂಲೆಗೆ ತಳ್ಳಿ ತಾನೇ ಪ್ರಭುವಾಗಿ ಕನ್ನಡದ ಅಭಿವೃದ್ಧಿಗೆ ದೊಡ್ಡ ಪ್ರತಿಬಂಧಕವಾಗುವುದಲ್ಲದೆ, ಕನ್ನಡದ ಅಭಿವೃದ್ಧಿಗೆ ಅದರಿಂದ ಯಾವ ಸಹಾಯವೂ ಆಗಲಾರದು. ಇಂಗ್ಲಿಷ್ ಅಭ್ಯಾಸದಿಂದ ದೊರೆಯಬಹುದಾದ ಆಧುನಿಕತೆಯ ಸಂಸ್ಕಾರವಾಗಲೀ, ನಾನಾವಿಧ ಶಾಸ್ತ್ರಜ್ಞಾನವಾಗಲೀ, ಪ್ರತಿ ಕ್ಷಣಕ್ಕೂ ನಮ್ಮ ಸ್ವತ್ವಸಮರ್ಥನೆಯನ್ನು ಕೋರುವ ಸವಾಲಾಗಲೀ ನಮ್ಮ ಬೌದ್ಧಿಕ, ಕಲಾತ್ಮಕ ಕ್ರಿಯೆಗಳಿಗೆ ತಕ್ಕ ಒರೆಗಲ್ಲಾಗಲೀ ಹಿಂದಿಯಿಂದ ಖಂಡಿತ ದೊರೆಯುವುದಿಲ್ಲ. ಅಲ್ಲದೆ, ಸದ್ಯಕ್ಕೆ ಹಿಂದಿ ಕೇವಲ ಕೇಂದ್ರದ ವ್ಯವಹಾರ ಭಾಷೆ ಮಾತ್ರ ಎಂದು ಹೇಳಿ, ಎಲ್ಲ ರಾಜ್ಯಗಳಲ್ಲೂ ಅಲ್ಲಲ್ಲಿಯ ಭಾಷೆಯೇ ರಾಜ್ಯದೊಳಗಿನ ಎಲ್ಲ ವ್ಯವಹಾರಗಳಿಗೂ, ವಿಶ್ವವಿದ್ಯಾನಿಲಯದ ಮಟ್ಟದ ವರೆಗೂ ಮಾಧ್ಯಮವಾಗಲಿ ಎಂದು ಹೇಳಿ, ಹಾಗೆ ಆಗುವುದರಿಂದ ಈ ದೇಶಕ್ಕೊಂದು ಸಂಪರ್ಕ ಭಾಷೆಯೇ ಇಲ್ಲದಾಗುವ ಪರಿಸ್ಥಿತಿ ಬಂದಾಗ, ಇಂಗ್ಲಿಷನ್ನು ಮೊದಲೇ ಹೊಡೆದಟ್ಟಿರುವುದರಿಂದ, ಹಿಂದೀ ಮಾಧ್ಯಮವನ್ನೇ ಇಡೀ ದೇಶ ಸ್ವೀಕರಿಸಬೇಕಾಗುವುದೆಂಬ
*10
ಲೆಕ್ಕಾಚಾರವೂ ಹಿಂದಿವಾದಿಗಳಲ್ಲಿದೆ ಎಂದೂ ತೋರುತ್ತದೆ. ಆದ ಕಾರಣ ಹಿಂದಿಯನ್ನು ನಮ್ಮಮಕ್ಕಳು ಕಲಿಯಲೇಬೇಕೆಂದು ಕಡ್ಡಾಯಗೊಳಿಸುವುದಕ್ಕೆ ಕೇವಲ ಭಾವನಾತ್ಮಕವಾದ, ಈ ದೇಶವನ್ನು ಅದಕ್ಕೆ ತದ್ವಿರುದ್ಧವಾದ ಬೇರೆ ರಾಷ್ಟ್ರಗಳ ಹಾಗೆ ರೂಪಿಸಬೇಕೆಂಬ ವ್ಯರ್ಥ ಸಾಹಸ ಪ್ರವೃತ್ತಿಯಲ್ಲದೆ ಬೇರೆ ಯಾವ ಪ್ರಬಲ ಕಾರಣವೂ ಇಲ್ಲ. ಆದ ಕಾರಣ ಹಿಂದಿಯನ್ನು ಐಚ್ಛಿಕವಾಗಿ, ಇನ್ನು ಯಾವುದಾದರೂ ಭಾರತೀಯ ಭಾಷೆಯನ್ನು ಕಲಿಯುವಂತೆಯೇ ನಮ್ಮ ಹುಡುಗರು ಕಲಿಯುವುದಕ್ಕೆ ಅಥವಾ ಕಲಿಯದಿರುವುದಕ್ಕೆ ಅವಕಾಶ ಮಾಡಿಕೊಡುವುದು ಕನ್ನಡದ ಅಭಿವೃದ್ಧಿಗೆ ಮಾತ್ರವಲ್ಲ ಈ ದೇಶ ಒಂದು ರಾಷ್ಟ್ರವಾಗಿ ಉಳಿಯುವುದಕ್ಕೂ ಕೈಕೊಳ್ಳಬೇಕಾದ ಅತ್ಯಂತ ಸಕಾರಣವಾದ ಕಾರ್ಯ ವಿಧಾನ. ಹಿಂದಿಯನ್ನು ನಮ್ಮ ಯಾವ ಭಾರತೀಯ ಭಾಷೆಗೂ ಪ್ರತಿಸ್ಪರ್ಧಿಯಾಗಿ ಮಾಡುವುದು ಎಂದರೆ ದೇಶದ ಐಕ್ಯವನ್ನೇ ಗಂಡಾಂತರಕ್ಕೊಡ್ಡಿದಂತೆ.
ಮತ್ತೊಮ್ಮೆ ಒತ್ತಿ ಹೇಳಬೇಕಾದ ಮಾತು ಎಂದರೆ ಈ ದೇಶದ ಮೂಲಗುಣ ವೈವಿಧ್ಯಮಯತೆ ; ಈ ಬಗೆಯ ಈ ದಿಗ್ಟಾಂತಿಗೊಳಿಸುವ ವೈವಿಧ್ಯ ಈ ಜಗತ್ತಿನ ಇನ್ನು ಯಾವ ದೇಶದಲ್ಲೂ ಇದರ ಒಂದು ಶತಾಂಶದಷ್ಟೂ ಇಲ್ಲ ಎಂಬುದು ಯಾವ ಧೋರಣೆಯೇ ಆಗಲೀ ಯೋಜನೆಯಾಗಲೀ ಈ ಮೂಲ ಸತ್ಯವನ್ನು ಮರೆತರೆ ಅದಕ್ಕೆ ಅಪಜಯ, ಅಪಯಶಸ್ಸು ಕಟ್ಟಿಟ್ಟದ್ದು. ಫೆಡರಲ್ ಮಾದರಿಯ, ಎಂದರೆ ಅನೇಕ ರಾಜ್ಯಗಳ ಸಮೂಹದಲ್ಲಿ ಪ್ರತಿಯೊಂದು ರಾಜ್ಯವೂ ತನ್ನ ಒಳಾಡಳಿತದಲ್ಲಿ ಸ್ವತಂತ್ರವಾಗಿದ್ದು ಎಲ್ಲ ರಾಜ್ಯಗಳಿಗೂ ಸಾಮಾನ್ಯವಾದಂಥ ಬಾಬುಗಳಲ್ಲಿ ಮಾತ್ರ ಕೇಂದ್ರಸ್ಥ ಸರಕಾರಕ್ಕೆ ಅಧೀನವಾಗಿರುವ, ರಾಜ್ಯ ಪದ್ಧತಿ ಮಾತ್ರವೇ ಈ ದೇಶದ ಜಾಯಮಾನಕ್ಕೂ, ವಲಗುಣಕ್ಕೂ ಸರಿಹೋಗುವಂಥದು. ಇವತ್ತಲ್ಲ ನಾಳೆ ಈ ರೀತಿಯ ಸಂವಿಧಾನವನ್ನು ನಾವು ರೂಪಿಸಿಕೊಳ್ಳಲೇಬೇಕಾಗುತ್ತದೆ-ಪರಿಸ್ಥಿತಿಯ ಒತ್ತಡದ ಮೂಲಕ. ಇಂಥದೊಂದು ದೇಶದಲ್ಲಿ ಪ್ರತಿಯೊಂದು ಭಾಷಾರಾಜ್ಯದಲ್ಲೂ ಮೊದಲ ಪೂಜೆ ಸಲ್ಲತಕ್ಕದ್ದು ಸ್ವಭಾಷೆಗೆ, ಸ್ವರಾಜ್ಯಕ್ಕೆ ಇದು ಸಹಜ. ಆದರೆ ಈ ಯಾವೊಂದು ರಾಜ್ಯವೂ ಇಂದಿನ ಈ ಆಧುನಿಕ ಯುಗದ ವಿಶಿಷ್ಟ ಪರಿಸ್ಥಿತಿಗಳಲ್ಲಿ ಸರ್ವತಂತ್ರ ಸ್ವತಂತ್ರವೂ ಸಾರ್ವಭೌಮವೂ ಆಗುವುದು ಅಸಾಧ್ಯ ಮತ್ತು ಅಂಥ ಪ್ರಯತ್ನ
ಆತ್ಮನಾಶಕವಾಗುವ ಭಯವಿರುವುದರಿಂದ ಮಾತ್ರ ಭಾರತರಾಷ್ಟ್ರದ ಕಲ್ಪನೆ ಅವಶ್ಯ. ಆದ್ದರಿಂದಲೇ ಆ ಭಾವನೆಯ ಪೋಷಣೆಯ ಅಗತ್ಯ, ಈ ಬಗೆಯ ಫೆಡರಲ್ ಮಾದರಿಯ ರಾಷ್ಟ್ರ ಮಾತ್ರವೇ ನಮ್ಮ ದೇಶಕ್ಕೆ ತಕ್ಕ ಪ್ರಜಾತಂತ್ರವನ್ನು ರೂಪಿಸಲು ಕ್ರಮೇಣ ಸಮರ್ಥವಾಗಬಹುದು. ಇಂಥ ಒಂದು ಪರಿಸ್ಥಿತಿಯಲ್ಲಿ ಹಿಂದಿಯನ್ನು ಹೇರುವ ಪ್ರಯತ್ನವೂ ನಡೆದರೆ ದೇಶ ಛಿದ್ರಛಿದ್ರವಾಗುವುದು ಖಂಡಿತ. ಭಾಷಾರಾಜ್ಯಗಳಲ್ಲಿ ಆಗಲೇ ತಲೆದೋರುತ್ತಿರುವ ಸ್ವಭಾಷಾಭಿಮಾನದ ಅತಿರೇಕ ಈ ಅಪಾಯವನ್ನು
ಸ್ಪಷ್ಟವಾಗಿ ಸೂಚಿಸುತ್ತದೆ. ಪ್ರತಿಯೊಂದು ಭಾಷಾರಾಜ್ಯಕ್ಕೂ ಇರುವ ಆತ್ಮಾಭಿಮಾನಕ್ಕೆ ಯಾವ ರೀತಿಯಿಂದಲೂ ಏಟು ಬೀಳದ ಹಾಗೆ ನೋಡಿಕೊಳ್ಳುತ್ತ ನಿಧಾನವಾಗಿ ರಾಷ್ಟ್ರ ಭಾವನೆಯನ್ನು ಬೆಳಸಿಕೊಂಡು ಬರುವುದು ಸಾಧ್ಯ. ಏಕೆಂದರೆ ಈ ದೇಶ ಒಂದು ರಾಷ್ಟ್ರವಾಗಿಲ್ಲದೆ ಹೋದರೆ ನಾವು ಕೈಗಾರಿಕೆಗಳ ಬೆಳವಣಿಗೆಯ ದೃಷ್ಟಿ ಯಿಂದಾಗಲೀ, ಸಂರಕ್ಷಣೆಯ ದೃಷ್ಟಿಯಿಂದಾಗಲೀ, ನಿರುದ್ಯೋಗ, ಬಡತನಗಳ ನಿವಾರಣೆಯ ದೃಷ್ಟಿಯಿಂದಾಗಲೀ ಆಹಾರ ಸ್ವಾವಲಂಬನೆಯ ದೃಷ್ಟಿಯಿಂದಾಗಲೀ ಪ್ರಗತಿಪರ ಮಾರ್ಗಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನಮ್ಮ ಜನ ಅರಿತೇ ಅರಿಯುತ್ತಾರೆ. ಅರಿಯುತ್ತಲೂ ಇದ್ದಾರೆ. ಈ ಅರಿವು ರಾಷ್ಟ್ರಾಭಿಮಾನವಾಗಿ ಆದಷ್ಟು ಬೇಗ ಪರಿಣಮಿಸಬೇಕಾದರೆ ಮಾಡಬೇಕಾದ ಕೆಲಸ ಹಿಂದಿಯನ್ನು ನಮ್ಮೆಲ್ಲರ ಮೇಲೂ ಹೇರುವುದಲ್ಲ. ದೇಶದ ಆದ್ಯಂತವೂ ಸುರಾಜ್ಯ ಇರುವ ಹಾಗೆ ನೋಡಿಕೊಳ್ಳುವುದು ; ನ್ಯಾಯಶಾಂತಿಯನ್ನು ಸ್ಥಾಪಿಸಿ ಈ ದೇಶದ ಯಾವ ಪ್ರಜೆಯೇ ಆಗಲಿ, ಅವನ ಜಾತಿ, ಮತ, ಕುಲ, ಭಾಷೆ, ಪಕ್ಷ ಯಾವುದೇ ಇರಲಿ, ಅವನಿಗೆ ಇಲ್ಲಿ ಈ ದೇಶದಲ್ಲಿ ನ್ಯಾಯ ದೊರತೇ ದೊರೆಯುತ್ತದೆ ಎಂಬ ವಿಶ್ವಾಸವನ್ನು ವಸ್ತುನಿಷ್ಠ, ನಿಷ್ಪಕ್ಷಪಾತ ರಾಜ್ಯಭಾರದ ಮೂಲಕ ಹುಟ್ಟಿಸುವುದು. ಅನಂತರ ತಕ್ಕಷ್ಟು ಕಾಲಕಳೆದು ನಮ್ಮ ಭಾಷೆಗಳು, ನಮ್ಮ ಕನ್ನಡವೂ ಸೇರಿ, ತಕ್ಕಮಟ್ಟಿಗೆ ಬುದ್ದಿಯ ಮತ್ತು ವಿಜ್ಞಾನದ ಭಾಷೆಯೂ ಆಗಿ ಪರಿಪಾಕಗೊಂಡ ಬಳಿಕ ನಮ್ಮದೇ ಆದ ಭಾಷೆಯೊಂದನ್ನು ಈ ದೇಶದ ಎಲ್ಲ ಜನರೂ ಸ್ವೀಕರಿಸಲು ಸಿದ್ಧರಾದರೂ ಆಗಬಹುದು. ಆ ನಿರ್ಧಾರವನ್ನು ಕಾಲಕ್ಕೂ ನಮ್ಮ ಮುಂದಿನ ತಲೆಮಾರುಗಳ ವಿವೇಕಕ್ಕೂ ಬಿಟ್ಟುಕೊಡುವುದೇ ಕ್ಷೇಮ. ನಾವು ಸದ್ಯ ಕನ್ನಡವನ್ನೂ ಇಂಗ್ಲಿಷನ್ನೂ ಚೆನ್ನಾಗಿ ಕಲಿಯುತ್ತ ನಮ್ಮ ರಾಜ್ಯದೊಳಗಡೆಯ ಎಲ್ಲ ವ್ಯವಹಾರಗಳಿಗೂ ಕ್ರಮಕ್ರಮವಾಗಿ ಕನ್ನಡವನ್ನೆ ಬಳಸುತ್ತ, ಕನ್ನಡದಲ್ಲೇ ಯೋಚಿಸಿ, ಸಂಶೋಧಿಸಿ, ಚಿಂತಿಸಿ ಅದನ್ನು ಶಾಸ್ತ್ರೀಯ ಭಾಷೆಯಾಗಿ ಪರಿಣತಗೊಳಿಸಲು ಪ್ರಯತ್ನಿಸುತ್ತ; ಆಳವಾದ ಅಭ್ಯಾಸಕ್ಕೆ ಮನಸ್ಸಿನ ಬೆಳವಣಿಗೆಗೆ, ನನ್ನ ಕೃತಿಗಳ ತುಲನೆಗೆ, ಅವುಗಳ ಮೌಲ್ಯಮಾಪನಕ್ಕೆ, ಬೇರೆ ಬೇರೆ ಭಾಷಾರಾಜ್ಯಗಳೊಡನೆಯೂ, ಪರದೇಶಗಳೊಡನೆ ಸಂಪರ್ಕ ಬೆಳಸುವುದಕ್ಕೆ ಇಂಗ್ಲಿಷನ್ನು ಬಳಸಿಕೊಳ್ಳುತ್ತ ಬರುವುದೊಂದೇ ಶ್ರೇಯಸ್ಕರ. ಅದರಿಂದ ನಮ್ಮ ಕನ್ನಡಕ್ಕಾಗಲೀ ನಮ್ಮ ರಾಷ್ಟ್ರಭಾವನೆಯ ವಿಕಾಸಕ್ಕಾಗಲಿ ಯಾವ ಧಕ್ಕೆಯೂ ಬರುವುದು ಸಾಧ್ಯವಿಲ್ಲ. ಈ ನಡುವೆ ಈ ದೇಶದಲ್ಲಿ ನಾವು ನಮ್ಮ ಭಾಷೆಗಳಲ್ಲಿ ಎಷ್ಟು ಭಾಷೆಗಳನ್ನೂ ಕಲಿತರೂ ಆಷ್ಟು ಒಳ್ಳೆಯದು ಎಂಬುದನ್ನು ಮರೆಯುವುದು ಬೇಡ. ತಮಿಳು, ತೆಲುಗು, ಮಲೆಯಾಳಿ, ಮರಾಠಿ ಮೊದಲಾದ ನಮ್ಮ ನೆರೆಯ ಭಾಷೆಗಳನ್ನೂ ಹಿಂದಿ, ಬಂಗಾಳಿ ಮುಂತಾದ ಉತ್ತರಭಾರತದ ಭಾಷೆಗಳನ್ನೂ ಕಲಿಯಲು ಅಲ್ಲಲ್ಲಿ ತಕ್ಕ ಏರ್ಪಾಟು ನಡೆಯಲಿ. ಆದರೆ ಅದಕ್ಕೆ ಯಾವ ಕಡ್ಡಾಯವೂ ಅಗತ್ಯವಿಲ್ಲ.
ಇಂಗ್ಲಿಷ್ ಭಾಷೆಯಲ್ಲಿರುವ ಜ್ಞಾನ, ವಿಜ್ಞಾನ-ತಂತ್ರಜ್ಞಾನಗಳು ಅಗತ್ಯವೋ ಅಲ್ಲವೋ ಎಂಬುದೇ ಮುಖ್ಯ ಪ್ರಶ್ನೆ. ಅವು ಅಗತ್ಯವಾದಲ್ಲಿ ಆ ಜ್ಞಾನವನ್ನು ಇಂಗ್ಲಿಷಿನ ಮೂಲಕವೇ ಪಡೆಯದೇ ಬೇರೆ ದಾರಿ ಇಲ್ಲ. ನಮ್ಮ ಕನ್ನಡ ಹುಡುಗರಿಗೆ ಇಂಗ್ಲಿಷ್ ಕಲಿಯುವುದು ತುಂಬ ಕಷ್ಟವಾಗುತ್ತದೆ. ಅದು ಅವರಿಗೆ ಬಲು ದೊಡ್ಡ ಭಾರ ಎಂಬ ವಾದ ವಿದ್ಯಾಭ್ಯಾಸ ಪ್ರಶ್ನೆಗೆ ಸಂಗತವಾಗುವುದಿಲ್ಲ. ಪ್ರಶ್ನೆ ಇಂಗ್ಲಿಷ್ ಅಭ್ಯಾಸ ಅಗತ್ಯವೋ ಅಲ್ಲವೋ ಎಂಬುದು ಮಾತ್ರ. ಅಗತ್ಯವಾದಲ್ಲಿ ಅದನ್ನು ಕಲಿಯಲೇಬೇಕು -ಕಷ್ಟಪಟ್ಟೂ ಕಲಿಯಬೇಕು. ನಮ್ಮ ಹುಡುಗರಿಗೆ ಅಕ್ಷರಮಾಲೆ, ಕಾಗುಣಿತ ಕಲಿಯುವುದೂ ಕಷ್ಟವಲ್ಲವೇ? ಬೆಳಗ್ಗೆದ್ದ ಕೂಡಲೇ ಮುಖ ತೊಳೆಯಬೇಕು, ಶುಚಿಯಾಗಿರಬೇಕು, ಪ್ರತಿದಿನ ಸ್ನಾನ ಮಾಡಬೇಕು ಎಂಬುದನ್ನೂ ನಮ್ಮ ಚಿಕ್ಕ ಮಕ್ಕಳಿಗೆ ಕಲಿಸುವುದು ಎಷ್ಟು ಕಷ್ಟವಾಗುತ್ತದೆ. ಮಗ್ಗಿ ಕಲಿಯುವುದೂ ಎಷ್ಟು – ಕಷ್ಟ ! ಸಂಸ್ಕೃತ ಭಾಷೆಯನ್ನು ನಮ್ಮ ಹಿಂದಿನವರು ಎಷ್ಟು ಕಷ್ಟ ಪಟ್ಟು ಹಗಲು ರಾತ್ರಿಯೆನ್ನದೆ ಅಭ್ಯಾಸ ಮಾಡುತ್ತಿರಲಿಲ್ಲ ! ಅದೇ ರೀತಿ ಗಣಿತ, ವಿಜ್ಞಾನ, ಏಕೆ ನಮ್ಮ ಕನ್ನಡ ಭಾಷೆಯೂ ಕೂಡಾ ಕಷ್ಟವಾಗುವಂಥ ಕನ್ನಡ ಮಕ್ಕಳೂ ನಮ್ಮಲ್ಲಿ ಬಹಳ ಇದ್ದಾರೆ. ಹಾಗಾದರೆ ಇವುಗಳನ್ನೆಲ್ಲ ಬಿಟ್ಟು ಬಿಡೋಣವೋ ? ವಿದ್ಯೆ ಕಲಿಯದಿರುವುದೊಂದೇ ನಿಜವಾಗಿ ಸುಲಭವಾದ ಮಾರ್ಗ. ಆ ಸ್ವಾತಂತ್ರ ಎಲ್ಲರಿಗೂ ಇದ್ದೇ ಇದೆ. ವಿದ್ಯೆ ಬೇಕಾದ ಪಕ್ಷದಲ್ಲಿ ಅದು ಇಂದಿನ ಜೀವನಕ್ಕೆ ಉಪಯುಕ್ತವೂ ಸಾರ್ಥಕವೂ ಬುದ್ಧಿಯ ಉದ್ದೀಪನಕ್ಕೆ, ಆತ್ಮೋನ್ನತಿಗೆ ಸಾಧಕವೂ ಆಗಿರಬೇಕು ಅಷ್ಟೆ. ಈ ದೃಷ್ಟಿಯಿಂದ ಯೋಚಿಸಿದಾಗ ಈಗ ಇಂಗ್ಲಿಷ್‌ ಅಭ್ಯಾಸದ ಮಟ್ಟ ನಮ್ಮ ವಿಶ್ವವಿದ್ಯಾನಿಲಯದ ತರಗತಿಗಳಲ್ಲೂ ಕೆಳಕ್ಕಿಳಿದಿದೆ. ಆದ ಕಾರಣ ಇಂಗ್ಲಿಷ್ ಬೇಡ ಎಂಬ ವಾದವೂ ಸರಿ ಎನ್ನಿಸುವುದಿಲ್ಲ. ಮಟ್ಟ ಕೆಳಕ್ಕಿಳಿದಿರುವುದು ಇಂಗ್ಲಿಷ್ ಅಭ್ಯಾಸವೊಂದರಲ್ಲೇ ಅಲ್ಲ ಇತರ ವಿಷಯಗಳಲ್ಲೂ ಹಾಗೇ ಆಗಿದೆ. ಇಡೀ ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಜೀವನದ ವಿಚಾರದ, ಆಚಾರದ ಮಟ್ಟ ತುಂಬ ಕೆಳಕ್ಕೆ ಬಂದಿದೆ. ಅದನ್ನು ಮತ್ತೆ ಕಷ್ಟಪಟ್ಟು ಮೇಲಕ್ಕೆತ್ತಲು ಸಮರ್ಥವಾಗುವ ವಿದ್ಯಾಭ್ಯಾಸ ಪದ್ಧತಿಯನ್ನು ರೂಪಿಸಿ ಅದನ್ನು ನಿಷ್ಠೆಯಿಂದ ಆಚರಣೆಗೆ ತರಬೇಕು – ಅಷ್ಟೆ, ಅಲ್ಲದೆ ಉನ್ನತ ವಿದ್ಯಾಭ್ಯಾಸಕ್ಕೆ ಸ್ವಭಾವತಃ ಅಸಮರ್ಥರಾದ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ತುಂಬಿಕೊಳ್ಳದ ಹಾಗೆ ತಕ್ಕ ವ್ಯವಸ್ಥೆ ಮಾಡಿ ನಿಜವಾಗಿಯೂ ಆಳವಾದ, ದೇಶಾಭ್ಯುದಯಕ್ಕೆ ಕಾರಣವಾಗುವಂಥ ಅತ್ಯುತ್ತಮ ವಿದ್ಯೆ ನಮ್ಮ ಹುಡುಗರಿಗೆ ದೊರೆಯುವಂತೆ ಮಾಡುವುದು ಆದ್ಯ ಕರ್ತವ್ಯವೆಂದು ನಮ್ಮ ಸರಕಾರಗಳೂ ವಿಶ್ವ ವಿದ್ಯಾನಿಲಯಗಳೂ ಇನ್ನೂ ತಿಳಿಯಬೇಕಾಗಿದೆ. ಯಾವ ವಿದ್ಯಾರ್ಥಿಗೆ ಯಾವ ಶಿಕ್ಷಣ ಕೊಟ್ಟರೆ ಅವನಿಗೂ ದೇಶಕ್ಕೂ ಒಳ್ಳೆಯದಾಗುತ್ತದೆ ಎಂದು ನಿರ್ಧರಿಸುವ ಒಂದು ಕ್ರಮವನ್ನು ನಾವಿನ್ನೂ ನಿರ್ಧರಿಸಿಯೂ ಇಲ್ಲ. ಕೈಕೊಂಡೂ ಇಲ್ಲ. ವಿಶ್ವ
ವಿದ್ಯಾನಿಲಯದ ಉನ್ನತ ಶಿಕ್ಷಣ ಎಲ್ಲರಿಗೂ ಬೇಕಿಲ್ಲ. ಬಹು ಸಂಖ್ಯೆಯ ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಉಪಜೀವನಕ್ಕೆ ಸಾಧನವಾಗಬಲ್ಲ ತರಬೇತಿ. ಅದನ್ನು ಅವರಿಗೆ ಕೊಟ್ಟು, ಉನ್ನತ ವಿದ್ಯಾಭ್ಯಾಸಕ್ಕೆ ತಕ್ಕ ಸಂಶೋಧನ ಬುದ್ಧಿಯುಳ್ಳವರನ್ನು ಮಾತ್ರ ಕಾಲೇಜುಗಳಿಗೆ ಸೇರಿಸಿಕೊಳ್ಳುವುದರಿಂದ ತನ್ನಿಂದ ತಾನೇ ಉನ್ನತ ಶಿಕ್ಷಣದ ಮಟ್ಟ ಹೆಚ್ಚುತ್ತದೆ. ಆಗ ಇಂಗ್ಲಿಷ್‌ ಕಷ್ಟ ಎಂಬ ಸೊಲ್ಲು ಖಂಡಿತ ಏಳಲಾರದು. ಪಾಶ್ಚಾತ್ಯ ಸಂಸ್ಕೃತಿಯ ನೇರವಾದ ಸಂಪರ್ಕ ಆಗದೆ ಇರುವ ಜನ ನಮ್ಮಲ್ಲಿ ಆಸಂಖ್ಯಾತರಾಗಿದ್ದಾರೆ. ಇಂಗ್ಲಿಷ್ ವಿದ್ಯಾಭ್ಯಾಸದ ಲಾಭ ಪಡೆದ ಜನ ಕೆಲವು ವರ್ಗದವರೂ, ಜಾತಿಯವರೂ ಮಾತ್ರ. ಈಗ ತಾವೇ ಉನ್ನತಾಭ್ಯಾಸವನ್ನು ಬಯಸಿ ಬರುತ್ತಿರುವವರಿಗೆ ಇಂಗ್ಲಿಷ್‌ ಜ್ಞಾನ ಇಲ್ಲದ ಹಾಗೆ ಮಾಡಿ ಆಧುನಿಕ ಜೀವನಕ್ಕೆ ಅವಶ್ಯವಾಗಿದ್ದು, ಇಂಗ್ಲಿಷ್‌ ಅಭ್ಯಾಸದಿಂದಲೇ ಕಲಿಯತಕ್ಕ ಮೌಲ್ಯಗಳ ಜ್ಞಾನಕ್ಕೆ ಅವರನ್ನು ಬಾಹಿರರಾಗಿ ಮಾಡುವ ಪ್ರಯತ್ನ ನ್ಯಾಯವಲ್ಲ.
ಒಟ್ಟಿನಲ್ಲಿ ಹೇಳುವುದಾದರೆ, ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಸಹಜವಾದರೂ ಅದು ಕುರುಡು ಪ್ರೀತಿ ಅಥವಾ ದುರಭಿಮಾನವಾಗದ ಹಾಗೆ ನೋಡಿಕೊಂಡು ನಮ್ಮ ಅಂಧ ಪ್ರೀತಿ ಅಭಿಮಾನಗಳಿಂದ ನನಗೇ ಆಗಲಿ, ನಮ್ಮ ಮುಂದಿನ ತಲೆಮಾರುಗಳಿಗೇ ಆಗಲಿ ತುಂಬಿಕೊಳ್ಳಲಾರದ ಹಾನಿ ಆಗದಂತೆ, ಕನ್ನಡದ ಅಭಿವೃದ್ಧಿಗೆ ಬಾಧಕ ಬಾರದಂತೆ ನೋಡಿಕೊಳ್ಳಬೇಕಾದ್ದು ಅಗತ್ಯ, ಕನ್ನಡದ ಬಗ್ಗೆ ನಾವು ಯೋಚಿಸುವಾಗ ಆಧುನಿಕ ವಿದ್ಯಾಭ್ಯಾಸಕ್ಕೆ ತಕ್ಕಷ್ಟು ಸಾಧನ ಸಂಪತ್ತು ಕನ್ನಡಕ್ಕೆ ಇನ್ನೂ ಇಲ್ಲ. ಕನ್ನಡವೊಂದೇ ಈ ದೇಶದ ಭಾಷೆಯಲ್ಲ, ಈ ದೇಶವೂ ಒಂದು ರಾಷ್ಟ್ರವಾಗಿ ಮುಂದುವರಿಯಬೇಕಾದದ್ದು ಅಗತ್ಯ ಎಂಬುದನ್ನೂ ಮರೆಯಬಾರದು. ಕನ್ನಡ ನಾಡಿನೊಳಗಿನ ಎಲ್ಲ ವ್ಯವಹಾರಗಳೂ ಇಂದಿನ ಪ್ರಜಾತಂತ್ರ ರಾಜ್ಯಭಾರದ ದೃಷ್ಟಿಯಿಂದಲೂ, ಕನ್ನಡ ಜನದ ಸತ್ವ ಬೆಳೆಯುವುದು ಅಗತ್ಯ ಎನ್ನುವ ದೃಷ್ಟಿ ಯಿಂದಲೂ ಅತ್ಯವಶ್ಯವಾದರೂ ಆಧುನಿಕ ಜ್ಞಾನವಿಜ್ಞಾನಗಳಿಗೆ ಬೀಗದ ಕೈ ಹಾಗೆ ಇರುವ, ಈಗ್ಗೆ ನೂರು ವರ್ಷಗಳ ಬಳಕೆಯ ಮೂಲಕ ಪರಿಚಿತವಾಗಿರುವ, ಜಗತ್ತಿನ ಅತ್ಯುತ್ತಮ ಭಾಷೆಗಳಲ್ಲಿ ಒಂದಾಗಿರುವ, ಅನೇಕ ದೃಷ್ಟಿಯಿಂದ ನಮ್ಮ ಸಂಸ್ಕೃತಿ ಜೀವನದ ಅಂಗವೇ ಆಗಿರುವ ಇಂಗ್ಲಿಷಿನ ಮೂಲಕವೇ ಇನ್ನೂ ಎಷ್ಟೋ ಕಾಲ ನಾವು ಉನ್ನತ ವಿದ್ಯಾಭ್ಯಾಸವನ್ನು ಪಡೆಯುವುದು ನಮ್ಮ ಭಾಷೆಯ ಬೆಳವಣಿಗೆಗೋಸ್ಕರವಾಗಿಯೂ ನಾವು ಆಧುನಿಕ ಜಗತ್ತಿನ ಇತರ ರಾಷ್ಟ್ರಗಳ ಸರಿಸಮಕ್ಕೆ ಬೆಳೆಯುವುದಕ್ಕೋಸ್ಕರವಾಗಿಯೂ ಅಗತ್ಯವಾಗಿದೆ. ಹಿಂದಿಯಿಂದ ನಾವು ಕಲಿಯಬೇಕಾದ್ದು ಏನೂ ಇಲ್ಲವಾಗಿರುವುದರಿಂದ ಅದರ ಶಿಕ್ಷಣವನ್ನು ಕಡ್ಡಾಯ ಮಾಡುವ ಅಗತ್ಯವಿಲ್ಲ; ಅದನ್ನು ರಾಷ್ಟ್ರಭಾಷೆಯ ಸ್ಥಾನಕ್ಕೆ ಏರಿಸುವುದರಿಂದ ಅದು ನಮ್ಮ
ಕನ್ನಡಕ್ಕೆ ಪ್ರತಿಸ್ಪರ್ಧಿಯಾಗಿ ಅದರ ಬೆಳವಣಿಗೆಯನ್ನು ಕುಂಠಿಸುವುದು ಖಂಡಿತ. ಇಂಗ್ಲಿಷ್‌ ಅಭ್ಯಾಸದಿಂದ ನಮ್ಮ ಭಾಷೆಗೆ ನಿರಂತರವಾಗಿ ಸಿಕ್ಕಬಹುದಾದ ಸವಾಲೂ ನಮ್ಮ ಬೆಳವಣಿಗೆಗೆ ಒಂದು ಒರೆಗಲ್ಲೂ ಹಿಂದಿಯ ಅಭ್ಯಾಸದಿಂದ ದೊರೆಯಲಾರದು. ಮೂಲತಃ ಭಾರತ ರಾಷ್ಟ್ರವೇ ಫೆಡರಲ್ ಮಾದರಿಯಾಗಿರುವುದರಿಂದ ಇಲ್ಲಿ ಬೇರೆ ದೇಶಗಳಲ್ಲಿ ಕಾಣುವ ಏಕತೆಯನ್ನು ಬಯಸುವುದು ಸಾಧ್ಯವಿಲ್ಲವಾಗಿ ಹಿಂದಿಯನ್ನು ತಮ್ಮ ಭಾಷೆಯಾಗಿ ಇತರ ಭಾಷಾವರ್ಗಗಳು ಸ್ವೀಕರಿಸುವುದು ತೀರ ಅಸಂಭವವಾಗಿರುವುದರಿಂದ ಈವರೆಗೆ ಇದ್ದಂತೆ ಇನ್ನು ಮುಂದೆ ಕೂಡಾ ಇಂಗ್ಲಿಷನ್ನೇ ಇಡೀ ದೇಶಕ್ಕೂ ಸಂಪರ್ಕಭಾಷೆಯನ್ನಾಗಿಟ್ಟುಕೊಳ್ಳುವುದರ ಮೂಲಕ ರಾಷ್ಟ್ರ ಭಾವನೆಯನ್ನು ಕ್ರಮ-ಕ್ರಮವಾಗಿ ನಮ್ಮ ದೇಶದಲ್ಲಿ ರೂಢಿಸುವುದು ಸಾಧ್ಯವಾಗುತ್ತದೆ. ಸದ್ಯಕ್ಕೆ ಭಾರತದ ವಿದ್ಯಾರ್ಥಿಗಳೆಲ್ಲ ತಮ್ಮ ಭಾಷೆ ಮತ್ತು ಇಂಗ್ಲಿಷನ್ನು ಕಲಿತರೆ ಮಾತ್ರ ಸಾಕು ಎಂದು ವ್ಯವಸ್ಥೆ ಮಾಡಿ ಈ ವ್ಯವಸ್ಥೆಯ ಪುನರ್‌ವಿಮರ್ಶನ ಕಾರ‍್ಯವನ್ನು ನಮ್ಮ ಮುಂದಿನ ತಲೆಮಾರುಗಳ ವಿವೇಕಕ್ಕೆ ಬಿಡುವುದೊಂದೇ ನಮಗೆ ಶ್ರೇಯಸ್ಕರವಾದ ಮಾರ್ಗ.

Close

ಕನ್ನಡ ಮತ್ತು ಇಂಗ್ಲಿಷ್ ಅಥವಾ ಹಿಂದಿ

ಟಿ. ಜಿ. ರಾಘವ

ಕನ್ನಡ ಮತ್ತು ಇಂಗ್ಲೀಷ್ ಅಥವಾ ಹಿಂದಿ

ವಿಚಾರವಂತರ ಅವಗಾಹನೆಗಾಗಿ ನಾದವೊಂದನ್ನು ಇಡಬಯಸುತ್ತೇನೆ : ಒಂದು ದೇಶದ ಜನರ ಏಳಿಗೆ ಅವರು ಮಾತನಾಡುವ ಭಾಷೆಯಿಂದ ಮಾತ್ರ ಸಾಧ್ಯ: ಒಂದು ಭಾಷೆಯ ಜೀವಂತತೆಯೂ ಕೂಡ ಪರಭಾಷಾ ಸಂಪರ್ಕದಿಂದ ಮಾತ್ರ. ಈ ಮಾತು ತೋರಿಕೆಗೆ ವಿರುದ್ಧವಾಗಿ ಕಂಡರೂ ವಿದ್ಯೆಯಲ್ಲ. ಆದರೆ ವಿಷಯ ರಾಜಕೀಯ ಮುಖಂಡರ ಗ್ರಾಸವನ್ನು ಕಸಿದು, ಜನರ ಭಾವಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಿ, ಅವರ ಕೋಪಕ್ಕೆ ತುತ್ತಾಗುವಂತೆ ಮಾಡುತ್ತದೆಂಬುದು ಸತ್ಯ, ಮೊನ್ನೆ ಮೈಸೂರಿನಲ್ಲಿ ಹಿಂದಿ ವಿರುದ್ದ ಘೋಷಣೆಗಳನ್ನು ಮಾಡುತ್ತ ಹೊರಟ ವಿದ್ಯಾರ್ಥಿಗಳ ಗುಂಪೊಂದು ಸಭೆ ಸೇರಿ, ಸಭೆ ಮುಗಿಯುವ ವೇಳೆಗೆ ಕೆಲವು ರಾಜಕೀಯ ಪುಢಾರಿಗಳಿಂದಾಗಿ ಇಂಗ್ಲಿಷ್ ವಿರುದ್ದ ಹಾಗೂ ಕನ್ನಡ ಶಿಕ್ಷಣ ಮಾಧ್ಯಮವಾಗಬೇಕೆಂಬ ಘೋಷಣೆ ಮಾಡತೊಡಗಿದರು. ಈ ಗೊಂದಲಕ್ಕೆ ಕಾರಣ ದೇಶಭಾಷೆ ಮತ್ತು ಸಂಪರ್ಕ ಭಾಷೆಗಳ ಪ್ರಶ್ನೆ ಬೇರೆಯದು. ಈಗ ದಕ್ಷಿಣದಲ್ಲಿ ನಡೆಯುತ್ತಿರುವ ಚಳುವಳಿ ಸಂಪರ್ಕ ಭಾಷೆ ಯಾವುದಾಗಬೇಕೆಂಬುದರ ಸಲುವಾಗಿ ಎಂಬ ಸ್ಪಷ್ಟ ಅರಿವು ಅವರಲ್ಲಿ ಮೂಡದಿದ್ದುದರಿಂದ ; ಪುಢಾರಿಗಳಿಂದ ಪರಿಸ್ಥಿತಿಯ ದುರುಪಯೋಗ ವಾದುದರಿಂದ ; ಇರಲಿ.
ಅಧ್ಯಾಪಕನಾಗಿ ಕೆಲಸ ಮಾಡುತ್ತಿರುವ ನಾನು ದೇಶಭಾಷೆಯ ಬಗ್ಗೆ ಕೆಲವು ಮಾತುಗಳನ್ನು ಹೇಳಬಯಸುತ್ತೇನೆ: ನಾನು ನನ್ನ ಭಾಷೆಯಲ್ಲಿ ನನ್ನ ವಿಚಾರ, ಭಾವ,
ಸಂವೇದನೆ, ಭಾವನೆಗಳನ್ನು ವ್ಯಕ್ತಗೊಳಿಸುವಷ್ಟು ಚೆನ್ನಾಗಿ ಮತ್ಯಾವ ಭಾಷೆಯಲ್ಲಿಯೂ ಮಾಡಲಾರೆ ; ನನ್ನ ಭಾಷೆಯೆಂದರೆ, ನಾನು ನನ್ನ ಸುತ್ತಮುತ್ತಲಿನ ವರೊಂದಿಗೆ ವಿಚಾರ ವಿನಿಮಯಕ್ಕಾಗಿ ಉಪಯೋಗಿಸುವ ಭಾಷೆ. ನನ್ನ ಮಾತೃಭಾಷೆ ತಮಿಳೆಂದು ನಮ್ಮನ್ನು ಹೇಳಿದ್ದುಂಟು. ಆದರೆ ನಾನು ಮನೆಯ ಒಳಗೆ ಹೊರಗೆ ಚಿಕ್ಕಂದಿನಿಂದ ಆಡುತ್ತ ಬಂದಿರುವ ಭಾಷೆ ಕನ್ನಡ ; ಆದ್ದರಿಂದ ನನ್ನ ಭಾಷೆ ಕನ್ನಡ. ಒಬ್ಬ ಕನ್ನಡಿಗ ಕನ್ನಡದ ಮಖಾಂತರ ಕಲಿಯುವಷ್ಟನ್ನು ಮತ್ಯಾವ ಭಾಷೆಯ ಮುಖಾಂತರವೂ ಕಲಿಯಲಾರ. ಕನ್ನಡಿಗರ ಏಳ್ಗೆ ಕನ್ನಡದಿಂದ ಮಾತ್ರ ಸಾಧ್ಯ. ನಾವು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಜನ ; ಸಾಮಾನ್ಯನಿಗೂ ಬುದ್ಧಿವಂತನಷ್ಟೇ ಏನನ್ನೂ ಕಲಿಯಲು ಸಮಾನಾವಕಾಶವನ್ನು ಕೇಳುವ ಜನ. ಇದರಿಂದಾಗಿ ಶಿಕ್ಷಣ ಮಾಧ್ಯಮ ನಮ್ಮ ದೇಶಭಾಷೆಯೇ ಆಗಬೇಕು. ಪರಭಾಷಾ ಸಿದ್ಧಿ ಎಲ್ಲರಿಗೂ ಅಲ್ಲ; ಕೆಲವರಿಗೆ ಮಾತ್ರ ಸಾಧ್ಯ. ಕನ್ನಡ ದರಿದ್ರ ಭಾಷೆಯೇನಲ್ಲ, ಇಂದು ಕನ್ನಡದಲ್ಲಿ ವಿಜ್ಞಾನ, ತತ್ವಶಾಸ್ತ್ರ, ಚರಿತ್ರೆ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಸಾಹಿತ್ಯ ಮತ್ತಿತರ ಜ್ಞಾನ ಪ್ರಕಾರಗಳ ಬೋಧನೆಸಾಧ್ಯ. ಕನ್ನಡವನ್ನು ಬಲ್ಲ ಶಿಕ್ಷಕ ಇವುಗಳನ್ನು ಕಷ್ಟ ಪಟ್ಟರೆ ಕನ್ನಡದಲ್ಲಿಯೇ ಹೆಚ್ಚು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವೆಂದು ನನ್ನ ನನ್ನಂತಹವರ ಅನುಭವದಿಂದ ಹೇಳುತ್ತಿದ್ದೇನೆ. ಕನ್ನಡದಲ್ಲಿ ಪದದಾರಿದ್ರವಿದೆಯೆಂದು ನಾನು ಬಲ್ಲೆ. ಆದರೆ ಈ ಪದದಾರಿದ್ರತೆ ಪ್ರಪಂಚದ ಎಲ್ಲಾ ಭಾಷೆಗಳೂ ‘ಹೊಸತು’ ಯಾವ ವಿಭಾಗದಿಂದಲೇ ಬರಲಿ, ಅನುಭವಿಸುವಂತಹುದು. ಆದರೆ ಹೊಸದನ್ನು ಸ್ವೀಕರಿಸುವಾಗ, ಪದಗಳನ್ನೂ ನಾವು ಸ್ವೀಕರಿಸುತ್ತೇವೆ. ಒಂದು ಭಾಷೆಯ ಪದಸಂಪತ್ತಿ ಬೆಳೆಯುತ್ತ ಹೋದಂತೆ ಬದಲಾಯಿಸುತ್ತಲೂ ಹೋಗುತ್ತದೆ (ಮೂಲ ಪದ ಸಂಪತ್ತಿಯನ್ನು ಬಿಟ್ಟರೆ); ಹೊಸ ಪದಗಳನ್ನು ಸೃಷ್ಟಿಸುತ್ತೇವೆ ; ಎರವಲು ಪಡೆದು ನಮ್ಮದಾಗಿಸಿಕೊಳ್ಳುತ್ತೇವೆ ; ಇರುವ ಪದಗಳ ಅರ್ಥವನ್ನು ಮಾರ್ಪಡಿಸಿಕೊಳ್ಳುತ್ತೇವೆ. ಈಚೆಗೆ ಇಂಗ್ಲಿಷ್ ಭಾಷಾ ಶಿಕ್ಷಕನಾಗಿರುವ ನಾನು ಇಲ್ಲಿ ಒಂದು ಮಾತು ಹೇಳುವುದು ಅಪ್ರಕೃತವಲ್ಲವೆಂದು ತಿಳಿಯುತ್ತೇನೆ : ಇಂಗ್ಲಿಷ್ ಸಾಹಿತ್ಯವನ್ನು ಇಂಗ್ಲಿಷ್ ಭಾಷೆಯಲ್ಲಿಯೇ ನಮ್ಮ ವಿದ್ಯಾರ್ಥಿಗಳಿಗೆ ಬೋಧಿಸಲು ಪ್ರಯತ್ನಪಟ್ಟು ಹತಾಶನಾಗಿ, ಈಗ ಕನ್ನಡದಲ್ಲಿಯೇ ತಿಳಿಯಹೇಳುವುದು ಸಾಧ್ಯ ಎಂದು ಕಂಡುಕೊಂಡಿದ್ದೇನೆ; ಅಲ್ಲದೆ ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿ ಬೆಳೆದಿದೆ. ನಮ್ಮ ವಿಶ್ವವಿದ್ಯಾನಿಲಯಗಳು ಈ ದಿಸೆಯಲ್ಲಿ ದಿಟ್ಟಿ ಹರಿಸುವುದು ಅಗತ್ಯ. ಐಚ್ಛಿಕ ವಿಷಯಗಳನ್ನಲ್ಲದೆ (ಈಗಾಗಲೆ ಮೈಸೂರು ವಿಶ್ವವಿದ್ಯಾನಿಲಯ ಇವುಗಳನ್ನು ಕನ್ನಡದಲ್ಲಿ ಉತ್ತರಿಸಲು ಅವಕಾಶ ಕೊಟ್ಟಿದೆ) ಇಂಗ್ಲಿಷ್ ಸಾಹಿತ್ಯದ ಮೇಲಿನ ಪ್ರಶ್ನೆಪತ್ರಿಕೆಯನ್ನೂ ಕನ್ನಡದಲ್ಲಿ ಉತ್ತರಿಸಲು ಅವಕಾಶ ಕೊಡುವುದರಿಂದ ಯಾವ ರೀತಿಯ ನಷ್ಟವೂ ಇಲ್ಲ; ಬದಲಾಗಿ ವಿದ್ಯಾರ್ಥಿಯ ತಿಳಿವಳಿಕೆ ಹೆಚ್ಚುತ್ತದೆ; ಅಲ್ಲದೆ ವಿಚಾರಶೀಲತೆಯೂ ಕೂಡ. ಇಂಗ್ಲಿಷ್ ಕೇವಲ ಜ್ಞಾನ ಸಾಧನೆಗಾಗಿ ಮಾತ್ರ; ಅಭಿವ್ಯಕ್ತಿಗೆ ಅಲ್ಲ ಎಂಬುದನ್ನು ನಮ್ಮ ಧುರೀಣರು ಎಷ್ಟು ಬೇಗ ಸ್ಪಷ್ಟವಾಗಿ ಅರಿತರೆ ಅಷ್ಟೂ ಒಳ್ಳೆಯದು.
ಕನ್ನಡದ ಅಥವಾ ದಕ್ಷಿಣದ ಭಾಷೆಗಳ ಸರ್ವಾಂಗೀಣ ಉನ್ನತಿ ಸಾಧ್ಯವಾಗಬೇಕಾದರೆ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಶಿಕ್ಷಣ ಮಾಧ್ಯಮ ಆಯಾ ದೇಶಭಾಷೆಯಾಗಿ, ಇಂಗ್ಲಿಷನ್ನು ಕೇವಲ ಜ್ಞಾನವಾಹಿನಿಯಾಗಿ ಕಲಿತರಷ್ಟೇ ಸಾಲದು ; ಸರ್ಕಾರದ ಎಲ್ಲಾ ಒಳಾಡಳಿತವೂ ದೇಶಭಾಷೆಯಲ್ಲಿಯೇ ನಡೆಯಬೇಕು. ಇದು ಸಾಧ್ಯವಾಗಲು ರಾಷ್ಟ್ರದಲ್ಲಿ ಈಗಿರುವುದಕ್ಕಿಂಕ ಹೆಚ್ಚಿನ ಅಧಿಕಾರ ವಿಕೇಂದ್ರೀಕರಣವಾಗಬೇಕು. ಅಂದರೆ ಪ್ರತಿಯೊಂದು ದೇಶ ಅಥವಾ ಪ್ರಾಂತ್ಯವೂ ಸ್ವಯಮಾಡಳಿತ ಕೇಂದ್ರಗಳಾಗಬೇಕು.
ಯಾವ ಭಾಷೆಯೂ ತನ್ನ ಸುತ್ತ ಕೋಟೆಯನ್ನು ಕಟ್ಟಿಕೊಂಡು ಬಾಳಲಾರದು ; ಕೋಟೆ ಕಟ್ಟಿಕೊಂಡ ಭಾಷೆಗಳು ಯಾವುವೂ ಉಳಿಯುವುದಿಲ್ಲ. ಒಂದು ಭಾಷೆಗೆ ಪರಭಾಷೆಗಳ ಸಂಪರ್ಕ ಅತಿಮುಖ್ಯ. ಹೀಗಾಗಿ ಕನ್ನಡಿಗನಿಗೆ ತನ್ನ ಭಾಷೆಯ ಬಗ್ಗೆ, ತನ್ನ ಬಗ್ಗೆ ಅಭಿಮಾನವಿದ್ದರೆ, ಆತ ಉತ್ತಮ ಜ್ಞಾನ ಸಂಪತ್ತಿನ ವಾಹನವಾಗಿರುವ ಪರಭಾಷೆಯ ಸಂಪರ್ಕವನ್ನು ಹೊಂದಿರಲೇಬೇಕು ; ತನ್ನ ಭಾಷೆಗೆ ಜೀವರಸ ವಿವಿಧ ಮೂಲಗಳಿಂದ ಬರುತ್ತದೆಂದು ಎಚ್ಚರವಿಟ್ಟುಕೊಂಡಿರಬೇಕು.
ಎಲ್ಲಿಯವರೆಗೆ ಒಂದು ಭಾಷೆಗೆ ವ್ಯಾವಹಾರಿಕ ಮೌಲ್ಯವಿರುತ್ತದೋ ಅಲ್ಲಿಯವರೆಗೆ ಆ ಭಾಷೆ ಬದುಕಿರುತ್ತದೆ; ಆ ಮೌಲ್ಯ ಹೊದೊಡನೆ ಆ ಭಾಷೆ ಸಾಯುತ್ತದೆ (ಈ ದೃಷ್ಟಿಯಿಂದ ದಕ್ಷಿಣದ ಭಾಷೆಗಳಲ್ಲಿ ತಮಿಳಿಗೆ ಇರುವ ವ್ಯಾವಹಾರಿಕ ಮೌಲ್ಯ ಉಳಿದ ಭಾಷೆಗಳಿಗೆ ಇಲ್ಲ). ಆದುದರಿಂದ ಒಂದು ಭಾಷೆಯನ್ನಾಡುವ ಜನ ಜಾಗೃತರಾಗಿಲ್ಲದಿದ್ದರೆ, ತಮ್ಮ ಭಾಷೆಯ ಬಗ್ಗೆ ಅಭಿಮಾನಿಗಳಾಗಿ ಇಲ್ಲದಿದ್ದರೆ ಆ ಭಾಷೆ ನಶಿಸಿ ಹೋಗುವ ಸಂಭವ ಹೆಚ್ಚು. (ಆದುದರಿಂದಲೇ ಅತಿರೇಕವಾಗಿದ್ದರೂ ಜನಸಾಮಾನ್ಯರ ಕನ್ನಡ ಚಳುವಳಿಯ ಆವಶ್ಯಕತೆ.) ಮುಖ್ಯವಾಗಿ ಸರ್ಕಾರವೇ ಆಗಲಿ, ಬೇರೆ ಒಂದು ಜನಾಂಗದವರೇ ಆಗಲಿ ನಮ್ಮ ಮೇಲೆ ಹೇರುವ ಭಾಷೆಯ ಬಗ್ಗೆ ನಾವು ಸದಾ ಜಾಗೃತರಾಗಿರಬೇಕು. ಒಂದು ರಾಷ್ಟ್ರದ ಸರ್ಕಾರ ವಿವಿಧ ಪ್ರಲೋಭನೆಗಳಿಂದ ಒಂದು ಭಾಷೆಯ ವ್ಯಾವಹಾರಿಕ ಮೌಲ್ಯವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
ಭಾರತೀಯರ ಮೇಲಾದ ಇಂಗ್ಲಿಷ್ ಪ್ರಲೋಭನೆಯನ್ನು ಇಲ್ಲಿ ನೆನೆಸುತ್ತಿದ್ದೇನೆ. ಭಾರತದ ಭಾಷೆಗಳು ಇಪ್ಪತ್ತನೇ ಶತಮಾನದ ಆದಿಯವರೆಗೆ ನಶಿಸಿ, ಅಳಿಯುವ ಸ್ಥಿತಿಯಲ್ಲಿದ್ದುವು. ನಮ್ಮಲ್ಲಿ ಸ್ವಾತಂತ್ರದ ಬಗ್ಗೆ ಜ್ಞಾನ ಹೆಚ್ಚಾದಂತೆ ಭಾಷೆಯ
*11
ಬಗ್ಗೆಯೂ ಕಾಳಜಿ ಬೆಳೆದು ನಾವು ಬುದ್ಧಿವಂತರಾದೆವು. ಈಚೆಗೆ ಕನ್ನಡದಲ್ಲಿ ಅತ್ಯುತ್ತಮವಾದುದೇನಾದರೂ ಇದ್ದರೆ, ಸೃಷ್ಟಿಯಾಗಿದ್ದರೆ ಅದು ಇಂಗ್ಲಿಷ್‌ಭಾಷಾ ಸಂಪರ್ಕದಿಂದ ಮಾತ್ರ ಸಾಧ್ಯವಾದುದು ಎಂಬುದು ಗಮನಾರ್ಹ.
ನಮ್ಮಲ್ಲಿ ಸ್ವಾತಂತ್ರ,ಭಿಲಾಷೆ ಬೆಳೆದಿರದಿದ್ದರೆ ನಮ್ಮ ಭಾಷೆ ಉಳಿಯುತ್ತಿರಲಿಲ್ಲ. ನಾವು ಇಂಗ್ಲಿಷರ ಗುಲಾಮರಾಗಿಯೇ ದೈಹಿಕವಾಗಿಯೂ ಬೌದ್ಧಿಕವಾಗಿಯೂ ಉಳಿಯುತ್ತಿದ್ದೆವು. ಈಗ ನಮಗೆ ಅರ್ಥವಾಗಿದೆ : ಇಂಗ್ಲಿಷ್ ಎಂತಹ ಮೇಧಾವಿಗೂ ಹೊರೆ. ಆದುದರಿಂದಲೇ ನಮ್ಮ ಇಂಗ್ಲಿಷ್‌ ವ್ಯಾಮೋಹ ಹೋಗಿ, ಈಗ ನಾವು ಆ ಭಾಷೆಯ ಮೂಲಕ ನಮ್ಮ ಸರ್ವಮುಖ ಉನ್ನತಿಗೆ ಬೇಕಾಗುವ ಎಲ್ಲ ಸಾರವನ್ನೂ ಹೀರುತ್ತಿದ್ದೇವೆ; ಬೆಳೆಯುತ್ತಿದ್ದೇವೆ. ಇನ್ನೆಂದೂ ಇಂಗ್ಲಿಷ್‌ ವ್ಯಾಮೋಹ ನಮ್ಮ ದೇಶಭಾಷೆಯನ್ನು ಕೊಲ್ಲಲಾರದು ; ಅಥವಾ ಇಂಗ್ಲಿಷ್‌ ವ್ಯಾಮೋಹಕ್ಕೆ ಸಿಕ್ಕಿ ನಮ್ಮ ಭಾಷೆಯನ್ನು ಕೊಲ್ಲಲಾರೆವು. ಕಾರಣ ಅದರ ಆರ್ಥಿಕ ಪ್ರಲೋಭನೆ ಇನ್ನಿಲ್ಲ.
ಒಂದು ದೇಶದ ಸರ್ಕಾರ, ಮತ್ತೊಂದು ಜನಾಂಗ ವಿವಿಧ ರೀತಿಯ ಪ್ರಲೋಭನೆಗಳಿಂದ ಒಂದು ಭಾಷೆಯು ನಶಿಸುವಂತೆ ಮಾಡಬಹುದೆಂದು ಹಿಂದೆ ಹೇಳಿದ್ದೇನೆ, ಈಗ ಇಂಗ್ಲಿಷಿನ ಪ್ರಲೋಭನೆಯಿಂದ ನಾವು ಎಚ್ಚತ್ತುಕೊಳ್ಳುವ ವೇಳೆಗೆ ಮತ್ತೊಂದು ಭಾಷೆಯ ಪ್ರಲೋಭನೆ ಬರುತ್ತಿದೆ. ಯಾವ ಪ್ರಲೋಭನೆಯೇ ಆಗಲಿ ವಾಮನನಾಗಿ, ಏನೂ ಅರಿವುಕೊಡದೆ ಬಂದು, ತ್ರಿವಿಕ್ರಮನಂತೆ ಮೆಟ್ಟಿ ನಿಲ್ಲುತ್ತದೆ.
ರಾಷ್ಟ್ರದಲ್ಲಿ ಈಗ ಸಂಪರ್ಕ ಭಾಷೆ ಯಾವುದಾಗಬೇಕೆಂಬ ಗೊಂದಲವೆದ್ದಿದೆ. ಉತ್ತರದ ಹಿಂದಿಯೆನ್ನುತ್ತಾರೆ; ಇಂಗ್ಲಿಷೆ ಇರಲಿ ಎನ್ನುತ್ತಾರೆ; ಭಾರತದ ಹದಿನಾಲ್ಕೂ ಭಾಷೆಗಳಾಗಲಿ ಎನ್ನುವ ಕ್ಷೀಣಧ್ವನಿಯೂ ಇದೆ. ಮೊನ್ನಿನ ರಾಜ್ಯಾಂಗ ತಿದ್ದುಪಡಿ ಈ ಎಲ್ಲ ಗೊಂದಲಕ್ಕೆ ಎಡೆಕೊಟ್ಟಿದೆ.
ಇಂಗ್ಲಿಷ್ ಹಿಂದೆ ಹೇಳಿದಂತೆ ತನ್ನ ಗಾರುಡಿಗ ಶಕ್ತಿಯನ್ನು ಕಳೆದುಕೊಂಡಿದೆ. ಜ್ಞಾನ ತೃಷ್ಟಿಯನ್ನು ನೀಗಿಸುವ ಸಾಧನವಾಗಿ ಮಾತ್ರ ಉಪಯೋಗವಾಗುತ್ತಿದೆ. ಅಲ್ಲದೆ ಈ ಭಾಷೆಯಲ್ಲಿ ಜ್ಞಾನದ ಅಭಿವ್ಯಕ್ತಿ ಅತ್ಯುನ್ನತ ಮಟ್ಟವನ್ನು ಮುಟ್ಟಿರುವುದರಿಂದ, ಈ ಭಾಷೆಯ ಸಂಪರ್ಕವಿಲ್ಲದೆ ನಾವು ಸರ್ವತೋಮುಖವಾಗಿ ಬೆಳೆಯಲಾರೆವು. ಸಾಮಾನ್ಯನಿಗೆ ತಿಳಿವಳಿಕಸ್ಥನ ಸಂಪರ್ಕದಂತೆಯೇ ಭಾಷೆಗೆ ಮತ್ತೊಂದು ಜ್ಞಾನವಾಹಿನೀ ಭಾಷೆಯ ಸಂಪರ್ಕ ಆವಶ್ಯಕ. ಇಂತಹ ಜ್ಞಾನವಾಹಿನಿ ಅಧಿಕಾರ ವಿಕೇಂದ್ರಿಕೃತ ರಾಷ್ಟ್ರ ದಲ್ಲಿ ಯಾವ ರೀತಿಯ ಪ್ರಲೋಭನೆಯನ್ನೂ ಸಂಪರ್ಕ ಭಾಷೆಯಾಗಿ ಒಡ್ಡಲಾರದು.
ಭಾರತದ ಸೋಷಲಿಸ್ಟರು ಅನ್ನುತ್ತಾರೆ : ಇಂಗ್ಲಿಷ್ ನಮ್ಮಲ್ಲಿ ಎರಡು ವರ್ಗದ ಜನರನ್ನು ಬೆಳೆಸುತ್ತದೆ: ಮೇಲಿನ ಇಂಗ್ಲಿಷ್ ಬಲ್ಲ ವರ್ಗದ ತುಳಿತಕ್ಕೆ ಕೆಳಗಿನ ವರ್ಗದವರು ಸಿಕ್ಕಿ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ, ಇಂಗ್ಲಿಷಿಗೆ ಸ್ನಾಬ್‌ಮೌಲ್ಯ (SnobValue) ಇದೆ. ಆದರೆ ಈ ವರ್ಗಪ್ರಭೇದ ಒಂದಲ್ಲ ಒಂದು ರೀತಿಯಲ್ಲಿ ಎಲ್ಲಾ ಕಾಲದಲ್ಲಿಯೂ, ಎಲ್ಲಾ ಸ್ಥಳದಲ್ಲಿಯೂ ಇರುವಂತಹುದು. ಇಂಗ್ಲಿಷ್ ಬಲ್ಲವರನ್ನು ಬಿಟ್ಟರೆ, ಹಿಂದಿ ಬಲ್ಲವರು ಆ ಸ್ಥಳವನ್ನು ಆಕ್ರಮಿಸುತ್ತಾರೆ. ಕಾರಿಟ್ಟವನು ಸೈಕಲ್ಲಿನವನ ಬಗ್ಗೆ, ಸರಕಾರಿ ಕೆಲಸದಲ್ಲಿರುವವನು ಸರಕಾರಿ ಕೆಲಸದಲ್ಲಿ ಇಲ್ಲದವನ ಬಗ್ಗೆ, ಕೇಂದ್ರ ಸರಕಾರದ ನೌಕರ ಪ್ರಾಂತ ಸರಕಾರದ ನೌಕರನ ಬಗ್ಗೆ, ಟೆರಿಲಿನ್ ಧರಿಸಿದವನು ಹತ್ತಿಯ ಬಟ್ಟೆ ಹಾಕುವವನ ಬಗ್ಗೆ, ಪಟ್ಟಣದ ಭಾಷೆ ಮಾತಾಡುವವನು ಹಳ್ಳಿಯ ಭಾಷೆ ಮಾತಾಡುವವನ ಬಗ್ಗೆ, ಉಪಾಧ್ಯಾಯ ವಿದ್ಯಾರ್ಥಿಯ ಬಗ್ಗೆ, ಸೋಷಲಿಸ್ಟ್ ಸೋಷಲಿಸ್ಟ್ ಅಲ್ಲದವನ ಬಗ್ಗೆ ಸುಂದರಿ ಕುರೂಪಿಯ ಬಗ್ಗೆ, ಎರಡನೆ ಇಯತ್ತೆಯವನು ಒಂದನೆಯ ಇಯತ್ತೆಯವನ ಬಗ್ಗೆ ತಾಳುವ ಮನೋಭಾವ ಇಂಥದು. ಇದರ ಉಗಮ ವ್ಯಕ್ತಿಯ ಸ್ವಂತಿಕೆಯ ಉಗಮದಲ್ಲಿ ಎಂಬುದನ್ನು ಮರೆಯಬಾರದು.
ಹಿಂದಿ ಭಾಷೆಯ ಬೆಳವಣಿಗೆ ಅಥವಾ ಉದ್ದಾರವೆನ್ನೋಣವೇ – ಸರಕಾರವೇ ಕೈಕೊಂಡಿದೆ. ಭಾಷೆ ವಿವಿಧ ಪ್ರಲೋಭನೆಗಳನ್ನು ದಾಕ್ಷಿಣಾತ್ಯರಿಗೆ ಒಡ್ಡುತ್ತಿದೆ : ಒಂದು ರಾಷ್ಟ್ರವೆಂದ ಮೇಲೆ ರಾಷ್ಟ್ರಭಾಷೆ ಆವಶ್ಯಕ, (ರಾಷ್ಟ್ರಪಕ್ಷಿಯಂತೆ) ಎಂದು ನಮ್ಮ ಭಾವಲೋಕದ ಸೂಕ್ಷ್ಮ ತಂತುಗಳನ್ನು ಮಿಡಿಯುತ್ತಾರೆ; ಇದು ಭಾರತದ ಭಾಷೆಯೇ ಆದ್ದರಿಂದ ಪರಭಾಷಾ ಗುಲಾಮಗಿರಿಯಲ್ಲ ಎನ್ನುತ್ತಾರೆ; ರಾಷ್ಟ್ರದ ಹೆಚ್ಚು ಜನ ಮಾತಾಡುವ ಭಾಷೆ ಎಂದು ಲೆಕ್ಕ ಹಾಕುತ್ತಾರೆ; ಕಲಿಯಲು ಅತಿ ಸುಲಭ ಎನ್ನುತ್ತಾರೆ.
ಹಿಂದಿ, ಇಂಗ್ಲಿಷಿನಂತೆಯೇ ಇಂಡೋಯುರೋಪಿಯನ್ ಭಾಷೆಗಳ ಗುಂಪಿಗೆ ಸೇರಿದುದು, ಅಂದರ ದ್ರಾವಿಡ ಭಾಷೆಗಳನ್ನು ಮಾತಾಡುವ ಜನಕ್ಕೆ ಹಿಂದಿ ಕಲಿಯುವುದು ಇಂಗ್ಲಿಷಿನಷ್ಟೇ ಕಷ್ಟ ಇಗ್ಲಿಷ್ ನಮ್ಮ ಸ್ವಂತ ಭಾಷೆ ಆಗಲು ಸಾಧ್ಯವಿಲ್ಲ ಎಂದುಕೊಂಡಿರುವ ಜನರಿಗೆ ಹಿಂದಿಯೂ ಆಗಲಾರದು ಎಂದು ತಿಳಿಯಲು ಹೆಚ್ಚು ಕಷ್ಟವಿಲ್ಲ. (ದ್ರಾವಿಡ ಭಾಷೆಯೊಂದನ್ನು ಮಾತಾಡುವವನಿಗೆ ಮತ್ತೊಂದು ದ್ರಾವಿಡ ಭಾಷೆ ಕಲಿಯುವುದು ಹೆಚ್ಚು ಸುಲಭ.)
ಕೆಲವರು ಹೇಳುತ್ತಾರೆ : ಹಿಂದಿಯ ಅಕ್ಷರಗಳು ಇಂಗ್ಲಿಷಿನಂತಲ್ಲ, ಉಳಿದ ಭಾರತೀಯ ಭಾಷೆಗಳಂತೆ, ಉಚ್ಛಾರಣೆಯಲ್ಲಿ ಸಾಮ್ಯ ಕಂಡು ಬಂದರೂ ಒಂದು ಭಾಷೆಯ ಧ್ವನಿಮಾ, (phonemes) ಮತ್ತೊಂದು ಭಾಷೆಯ ಧ್ವನಿಮಾಗಳಿಗಿಂತ ತೀರ ಭಿನ್ನವಾದುದು ಅಲ್ಲದೆ ಧ್ವನಿಮಾ ಎಂಬುದು ಒಂದೇ ತರಹದ ಶಬ್ದಗಳ ಒಂದು ಗುಂಪಿಗೆ ಕೊಟ್ಟ ಹೆಸರು, ಹಿಂದಿಯ ಉಪಧ್ವನಿಗಳು (allophones) ಕನ್ನಡದ ಉಪಧ್ವನಿಗಳಿಗಿಂತ ತೀರಭಿನ್ನ. ಆದುದರಿಂದ ಹಿಂದಿ ಕಲಿತ ದಾಕ್ಷಿಣಾತ್ಯವನ್ನು ಸುಲಭದಲ್ಲಿ ಆಶನ ಉಚ್ಚಾರಣೆಯ ರೀತಿಯಲ್ಲಿ ಈತ ಬೇರೆ ದೇಶಭಾಷೆಯವನು ಎಂದು ಕಂಡುಹಿಡಿದು ಬಿಡಬಹುದು. ಇದು ತರುವ ಕೀಳರಿಮೆ ನಮಗೇ ಅರಿವಾಗದಂತೆ ನಮ್ಮನ್ನು ಕಾಡುವಂತಹುದು : ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಕಲಿತ ಭಾರತೀಯನೊಡನೆ, ಭಾರತದಲ್ಲಿ ಇಂಗ್ಲಿಷ್ ಕಲಿತ ಭಾರತೀಯ ಸಂಪರ್ಕ ಬೆಳೆಸಿದಾಗ ಬರುವಂತಹ ಕೀಳರಿಮೆ ಇದು.
ಒಂದು ರಾಷ್ಟ್ರವೆಂದಮೇಲೆ ಒಂದು ಭಾರತೀಯ ಭಾಷೆಯೇ ರಾಷ್ಟ್ರಭಾಷೆಯಾಗಬೇಕು ಎನ್ನುವ ಒಂದು ಭಾವಾತಿರೇಕ ಮೌಲ್ಯ ಬಿಟ್ಟರ ಹಿಂದಿಗೆ ದಕ್ಷಿಣದಲ್ಲಿ ಯಾವುದೇ ಮೌಲ್ಯವಾಗಲೀ, ಸ್ಥಾನಮಾನವಾಗಲಿ ಇಲ್ಲ; ಸರಕಾರ ಕೊಡಲು ಪ್ರಯತ್ನಿಸುತ್ತಿದೆ.
ಹಿಂದಿ ಭಾರತದ ಸಂಪರ್ಕ ಭಾಷೆಯಾಗಿ ಒಡ್ಡುವ ಪ್ರಲೋಭನೆ ಮುಖ್ಯವಾಗಿ ಆರ್ಥಿಕ ಕ್ಷೇತ್ರದಲ್ಲಿ. ಹಿಂದೆ ಇಂಗ್ಲಿಷ್ ಮಾಡಿದ್ದು ಇದನ್ನೇ, (ಇಂಗ್ಲಿಷಿಗಾದರೇ ಜ್ಞಾನಕ್ಕೆ ಸೇತುವೆ ಹಾಕುವ ಶಕ್ತಿಯಾದರೂ ಇತ್ತು.) ಹೀಗಾಗಿ ಭದ್ರತೆಯನ್ನು ಆಶಿಸುವ ಮನುಷ್ಯ ತನಗೆ ಯಾವುದು ಆರ್ಥಿಕ ಭದ್ರತೆಯನ್ನು ಕೊಡುತ್ತದೋ ಅದಕ್ಕೆ ತನಗೆ ತಿಳಿಯದಂತೆಯೇ ಅಥವಾ ತಿಳಿದೂ- ತೀರ ಬುದ್ದಿಜೀವಿಗಳನ್ನು ಬಿಟ್ಟರೆ, ಆದರೆ ಅವರು ಒಂದು ಭಾಷೆಯನ್ನು ಉಳಿಸಲು ಅಸಮರ್ಥರು- ಮಾರು ಹೋಗುತ್ತಾನೆ; ಅದನ್ನು ಕಷ್ಟಪಟ್ಟು ಕಲಿಯುತ್ತಾನೆ. ಹಿಂದಿಯ ವ್ಯಾವಹಾರಿಕ ಮೌಲ್ಯ ಆರ್ಥಿಕ ಪ್ರಲೋಭನೆಯಿಂದಾಗಿ ಉಳಿದ ದೇಶಭಾಷೆಗಳಿಗಿಂತ ಹೆಚ್ಚಾಗುವುದರಿಂದ ಆ ಭಾಷೆಯನ್ನು ಕಲಿಯುವ, ಉಪಯೋಗಿಸುವ ಶ್ರದ್ಧೆ ದೇಶಭಾಷೆಗಳ ಬಗ್ಗೆ ಬರುವುದಿಲ್ಲ; ಉಪೇಕ್ಷಾಭಾವನೆ ಬೆಳೆಯುತ್ತದೆ. ದೇಶಭಾಷೆ ತನ್ನ ವ್ಯಾವಹಾರಿಕ ಮೌಲ್ಯವನ್ನು ಕಳೆದುಕೊಂಡು ಕ್ರಮೇಣ ನಾಶವಾಗಿಹೋಗುತ್ತದೆ. ಹಾಗಾಗಲು ಅಡ್ಡಿಯಿಲ್ಲ, ಕನ್ನಡ ಮತ್ತಿತರ ದಕ್ಷಿಣದ ದೇಶಭಾಷೆಗಳು ಸಾಯಲಿ ಎನ್ನುವ ದೃಷ್ಟಿಯಿದ್ದರೆ ಕನ್ನಡಿಗರು ಮತ್ತಿತರ ದಾಕ್ಷಿಣಾತ್ಯರು ಹಿಂದಿಗೆ ಒಡನೆ ಸುಖಾಗಮನ ಖಂಡಿತವಾಗಿ ಬಯಸಬೇಕು. ಅಂಥವರು ಮುಂದೆ ತಮ್ಮ ಬದುಕು ಎಲ್ಲಿಯೂ ಬೇರಿರದ ಸತ್ವಹೀನ ಬದುಕಾಗುತ್ತದೆಂಬುದನ್ನು ಮನಸ್ಸಿನಲ್ಲಿಡುವುದು ಒಳ್ಳೆಯದು ಅಥವಾ ಇದು ಉತ್ಪ್ರೇಕ್ಷೆ ಎಂದು ಹೇಳಿ ಸಮಸ್ಯೆಯನ್ನೇ ತಳ್ಳಿಹಾಕುವ ಅಪ್ರಾಮಾಣಿಕತೆಯಿಲ್ಲದಿದ್ದರೂ ಸರಿ.
ಅಂಥ ಕೆಲವು ಬುದ್ಧಿವಂತರು ಹೇಳುತ್ತಾರೆ : ಹಿಂದಿ ಬರಲಿ, ಅದು ದೇಶಭಾಷೆಯ ಮೇಲೆ ದಬ್ಬಾಳಿಕೆ ನಡೆಸದಂತೆ ನೋಡಿಕೊಳ್ಳುತ್ತವೆ. (ಇದೇ ಜನ ಬೆಂಗಳೂರಿನಲ್ಲಿ ಕನ್ನಡ ವ್ಯಾವಹಾರಿಕತೆಯನ್ನು ಕಳೆದುಕೊಂಡು ಸಾಯುತ್ತಿದ್ದಾಗ, ಬೆಕ್ಕು ಹಾಲು ಕುಡಿಯುವ ಧರ್ಮ ಪಾಲಿಸುತ್ತಿದ್ದವರು; ತಾನು ಇಂಗ್ಲಿಷಿನಿಂದ ಪಡೆದ ಪಡೆಯುತ್ತಿರುವ ಉಪಯೋಗ ಮುಂದಿನ ಪೀಳಿಗೆಗೆ ಬೇಡ ಎನ್ನುವ ವಂಚಕರು; ಇಂಗ್ಲಿಷ್ ಹಠಾವೋ ಎಂಬ ಎರಡು ಪದ ಕಲಿತಿರುವವರು, ಇರಲಿ), ಮುಖ್ಯವಾಗಿ ಒಂದು ಭಾಷೆಯ ಉಳಿವು ಇಂಥ ಕೆಲವರ ಮೇಲೆ ನಿಂತಿಲ್ಲ, ಅದರ ವ್ಯಾವಹಾರಿಕ ಮೌಲ್ಯದ ಮೇಲೆ ಅಂದರೆ ಜನ ಸಾಮಾನ್ಯರ ಮೇಲೆ ನಿಂತಿದೆ. ಕುತ್ತಿಗೆ ಹಿಚುಕಿ ಕೊಂದರೆ ಮಾತ್ರ ಕೊಲೆಯಾಯಿತೆಂದು ತಕ್ಷಣವೇ ಅರ್ಥಮಾಡಿಕೊಳ್ಳುವ ಜನ ಇವರು. ನಿಧಾನವಾಗಿ ದಿನದಿನವೂ ದೇಹದಲ್ಲಿನ ಕೆಲವೇ ಜೀವಕಣಗಳನ್ನು ಕೊಲ್ಲುತ್ತ ಬರುವವರ ಪ್ರವೃತ್ತಿ, ಬುದ್ಧಿಶಕ್ತಿ ತೀಕ್ಷ್ಣವಾಗಿದ್ದ ಹೊರತೂ ಅಪಾಯದ ಅರಿವನ್ನು ತರುವುದಿಲ್ಲ. ಇಂಗ್ಲಿಷ್ ಒಡ್ಡಿದ ಈ ಅಪಾಯದಿಂದ ದೇಶಭಾಷೆಗಳು ಪಾರಾಗಿವೆ. ಇಪ್ಪತ್ತನೆಯ ಶತಮಾನದ ಭಾರತೀಯ ಭಾಷೆಗಳಲ್ಲಿನ ಸಾಹಿತ್ಯದ ಬೆಳವಣಿಗೆಯೇ ಸಾಕ್ಷಿ, ಇದೇ ಚಾರಿತ್ರಿಕ ಸೂತ್ರ ಹಿಂದಿಯ ಬಗ್ಗೆಯೂ ನಿಜವಾಗುತ್ತದೆ ಎನ್ನುವುದು ವಿತಂಡವಾದ. ದೈಹಿಕ ದಾಸ್ಯದ ಅರಿವು ನಮ್ಮಲ್ಲಿ ಬೇಗನೆ ಮೂಡುತ್ತದೆ ಅಲ್ಲದೆ ಹಿಂದಿಯ ವಿಷಯದಲ್ಲಿ ದೈಹಿಕ ಮತ್ತು ಬೌದ್ಧಿಕ ದಾಸ್ಯದ ಪ್ರಶ್ನೆ ಬರುವುದಿಲ್ಲ, ಏಕೆಂದರೆ ಬೌದ್ಧಿಕವಾಗಿ ಹಿಂದಿಯಿಂದ ನಾವು ಏನನ್ನೂ ಪಡೆಯಲಾರವು; ಇದು ಕೇವಲ ಆರ್ಥಿಕ ಗುಲಾಮಗಿರಿಯ ಪ್ರಶ್ನೆಯಾಗುತ್ತದೆ.
ಒಂಟೆ ಮತ್ತು ಸವಾರನ ಕತೆ ಒಂದು ಉತ್ತಮ ದೃಷ್ಟಾಂತ, ಮಳೆ ಬರುತ್ತಿದ್ದಾಗ ಒಂಟಿ ಕೇಳಿದ್ದು, ನೆನೆಯುತ್ತಿದ್ದೇನೆ, ಡೇರೆಯಲ್ಲಿ ತಲೆಮಾತ್ರವಿಡಲು ಅವಕಾಶಕೊಡು, ಎಂದು. ಮಾರನೆಯ ದಿನ ಡೇರಯಿದ್ದುದು ಒಂಟೆಯ ತಲೆಯ ಮೇಲೆ, ಆರ್ಥಿಕ ಪ್ರಲೋಭನೆಯೊಡ್ಡುವ ಭಾಷೆಗಳ ಬಗ್ಗೆಯೂ ಈ ಮಾತು ನಿಜ; ನಿಮಗೆ ಇಂಗ್ಲಿಷ್ ಬೇಕೆ? ಸರಿ, ಉತ್ತರದವರಿಗೆ, ಅವರಲ್ಲಿ ಹೆಚ್ಚಿನ ಜನರ ಮಾತೃಭಾಷೆಯಾದ ಹಿಂದಿ ಬೇಕು, ಇಂಗ್ಲಿಷ್ ಮತ್ತು ಹಿಂದಿ ಎರಡನ್ನೂ ಉಪಯೋಗಿಸೋಣ, ಉತ್ತರದವರಿಗೆ ಹಿಂದಿಯಷ್ಟೇ ಆದರೆ ಸಾಕು ಎನ್ನುತ್ತದೆ ಸರಕಾರ, ನಂತರ ಕೇಂದ್ರ ಸರಕಾರದ ಒಂದೆರಡು ಸಣ್ಣಪುಟ್ಟ ಕೆಲಸ ಬೇಕಾದರೆ ಹಿಂದಿ ಕಲಿತರೆ ಉತ್ತಮ ಎನ್ನುವ ಪ್ರಲೋಭನೆ, ಸರಕಾರಿ ಕೆಲಸದಲ್ಲಿರುವವರು ಹಿಂದಿ ತಿಳಿದುಕೊಳ್ಳುವುದು ಒಳ್ಳೆಯದು ಎನ್ನುವ ಸೂಚನಾ ಪತ್ರಗಳು; ನಂತರ ಇದು ಕಡ್ಡಾಯವಾಗುತ್ತದೆ; ಈಗಾಗಲೇ ಸರಕಾರ ಹೇಳಿಲ್ಲವೇ- ಗಗನಸಖಿಯರ ಕೆಲಸಕ್ಕೆ ಇಂಗ್ಲಿಷ್ ಮತ್ತು ಹಿಂದಿ ಎರಡೂ ತಿಳಿದಿರಬೇಕೆಂದು, ಕೊನೆಗೆ ಎರಡು ಭಾಷೆ ಕಲಿಯುವುದಕ್ಕಿಂತ ಒಂದು ಭಾಷೆ ಕಲಿತರೆ ಚೆನ್ನಲ್ಲವೇ, ಉತ್ತರದವರು ನೋಡಿ, ಒಂದೇ ಭಾಷೆ ಕಲಿಯುತ್ತಿದ್ದಾರೆ, ನಿಮ್ಮ ಶಕ್ತಿಯ ದುರುಪಯೋಗವಾಗುತ್ತಿದೆ ಎನ್ನುತ್ತಾರೆ. ನಮಗೂ ಆ ವೇಳೆಗೆ ಹೌದೆನಿಸಿರುತ್ತದೆ. ಜ್ಞಾನಾರ್ಜನೆಯ ಉತ್ತಮ ಸಾಧನವನ್ನು ಆರ್ಥಿಕ ಪ್ರಲೋಭನೆಯಿಂದಾಗಿ ಹೆಚ್ಚಿನ ಸಂಬಳ, ಹೆಚ್ಚಿನ ತುಟ್ಟಿಭತ್ಯ- ಸೇಟ್‌ಗೋವಿಂದದಾಸ್ ಹೇಳಿದಂತೆ) ಪಕ್ಕಕ್ಕೆ ತಳ್ಳುತ್ತೇವೆ.
ದಕ್ಷಿಣದಲ್ಲೊಂದು ಹಿಂದಿ ವಿಶ್ವವಿದ್ಯಾನಿಲಯ ಎನ್ನುತ್ತಾರೆ; ಉತ್ತೇಜನಕ್ಕಾಗಿ ಮಾಸಾಶನ ಕೊಡುತ್ತಾರೆ; ಕೆಲಸ ಬೇಗ ಸಿಗುತ್ತದೆ ಎನ್ನುವ ಆಶ್ವಾಸನೆ ಕೂಡಾ. ಇನ್ನೇನು ಬೇಕು, ಕನ್ನಡ ಕಲಿತು ಕಡಿಮೆ ಸಂಬಳಕ್ಕೆ ದುಡಿಯುವುದಕ್ಕಿಂತ, ಹಿಂದಿ ಕಲಿತು ಹೆಚ್ಚು ಸಂಪಾದಿಸುವುದು ಒಳ್ಳೆಯದಲ್ಲವೇ? (ಹಣ ಹೆಚ್ಚಾದಾಗಮನರುಜನೆಯ ತುಡಿತವೂ ಹೆಚ್ಚು; ಸರಕಾರ ಹೆಚ್ಚು ಕಚ್ಚಾಫಿಲ್ಮ ಹಿಂದಿ ಸಿನಿಮಾಗಳಿಗಾಗಿ ಒದಗಿಸಿ ಬಿಟ್ಟರೆ ಮತ್ತೂ ಸರಿ; ಸರಕಾರದ ಕೆಲಸವನ್ನು ಹಿಂದಿ ಸಿನಿಮಾಗಳೇ ಮಾಡಿಬಿಡುತ್ತವೆ).
ಉಳಿದ ಭಾಷೆಗಳ ಬಗ್ಗೆ ಸರಕಾರದ ಆಸಕ್ತಿ ಕಡಿಮೆಯಾದಂತೆ ನಮ್ಮ ಆಸಕ್ತಿಯೂ ಕಡಿಮೆಯಾಗುತ್ತದೆ. ಈಗಾಗಲೇ ನಾವು ದ್ರಾವಿಡ ಭಾಷೆಗಳಲ್ಲಿ ಅಚ್ಚಾಗುತ್ತಿದ್ದ ಮನಿಯಾರ್ಡರು ಫಾರ್ಮುಗಳು ಸರಕಾರದಿಂದ ನಿಲ್ಲಿಸಲ್ಪಟ್ಟಿದ್ದರ ಬಗ್ಗೆ ಅಂಗೀಕಾರ ಸೂಚಕ ಮೌನ ಧರಿಸಿಲ್ಲವೇ? ಅಲ್ಲದೇ ಸರಕಾರ ಈಗ ದಕ್ಷಿಣದವರ ತೃಪ್ತಿಗಾಗಿ ಇವನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಅಚ್ಚು ಹಾಕಿಸುತ್ತಿದೆ; ಮುಂದೆ ನಿಧಾನವಾಗಿ ಹಿಂದಿ ಫಾರ್ಮುಗಳ ವಿತರಣೆ ಹೆಚ್ಚುತ್ತದೆ.; ಸ್ವಲ್ಪ ತಿಂಗಳಲ್ಲಿಯೇ ಇಂಗ್ಲಿಷ್ ಫಾರ್ಮುಗಳು ತೀರ ವಿರಳವಾಗುತ್ತದೆ. ನಮಗೆ ಅರಿವು ಮೂಡುವ ವೇಳೆಗೆ ಇಂಗ್ಲಿಷು ಫಾರ್ಮುಗಳ ಚಲಾವಣೆ ನಿಂತು ನಾಲ್ಕಾರು ವರ್ಷಗಳಾಗಿರುತ್ತವೆ.
ಹೀಗಾಗಿ ನಾವು ಎಚ್ಚೆತ್ತುಕೊಳ್ಳುವ ವೇಳೆಗೆ ಬಲೆ ನಮ್ಮ ಸುತ್ತ ಬಿದ್ದಿರುತ್ತದೆ. ಉಪೇಕ್ಷೆ ಮಾಡಿದ ದೇಶಭಾಷೆಯ ಬಗ್ಗೆ ಕಾಳಜಿ ಮತ್ತೆ ಬರಬೇಕಾದರೆ ಸ್ವಾತಂತ್ರದ ಅರಿವು ಮೂಡಬೇಕಾಗುತ್ತದೆ, ಆದರೆ ಆಗ ಯಾರಿಂದ ಸ್ವತಂತ್ರರಾಗಬೇಕು ನಾವು? ಉತ್ತರದವರಿಂದಲೇ? ಆಗ ಭಾರತ ಒಂದು ರಾಷ್ಟವಲ್ಲವೆ ಹಿಂದಿರಾಷ್ಟ್ರಭಾಷೆಯಲ್ಲವೇ, ರಾಷ್ಟ್ರದ್ರೋಹಿ ವರ್ತನೆ ಸಲ್ಲ ಅಂಥ ತಿಳಿಯ ಹೇಳುವವರಿಗೆ ಏನು ಉತ್ತರ ಹೇಳಲು ಬಂದೀತು? ವ್ಯಾವಹಾರಿಕ ಮೌಲ್ಯವನ್ನು ಕಳೆದುಕೊಂಡ ಭಾಷೆಯ ಉಳಿವಿನ ಬಗ್ಗೆ ದಕ್ಷಿಣದವರಲ್ಲಿ ಯಾವ ರೀತಿಯ ಕಾಳಜಿ ಬಂದೀತು ?

Close
By kanaja|2021-01-06T19:53:50+05:30March 2, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೧

    ಸಂಪುಟ-೩೧

Leave A Comment Cancel reply

ವಿಭಾಗಗಳು

ಹೊಸ ಅಂಕಣಗಳು

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕನ್ನಡ ಭಾಷೆ,ಸಾಹಿತ್ಯ

  • ಸಂಪುಟ-೩೪
  • ಸಂಪುಟ-೩೩
  • ಸಂಪುಟ-೩೨
  • ಸಂಪುಟ-೩೧
  • ಸಂಪುಟ-೩೦

ಕಲೆ,ಸಂಗೀತ

  • ರಂಗ ವಿಮರ್ಶೆಯ ಬೆನ್ನು ಹತ್ತಿ..
  • ರಂಗಭೂಮಿಯೊಂದೇ ಸಮತಾವಾದದ ಪ್ರತೀಕ
  • ರಂಗಭೂಮಿಯ ನಡಿಗೆ
  • ರಂಗ ಪರದೆಗಳು : ಶಬ್ದಪಾರಮಾರ್ಗಮಶಕ್ಯಂ
  • ರಂಗ ಪರದೆಗಳು : ರಂಗ ಪರದೆಗಳ ಹಿನ್ನೆಲೆ

ವಿಜ್ಞಾನ , ತಂತ್ರಜ್ಞಾನ

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕೃಷಿ ,ರೈತರ ಅನುಭವ

  • ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016
  • ಪದವಿನ್ಯಾಸ: ೧೨. ಸನಿಕೆ
  • ಪದವಿನ್ಯಾಸ: ೧೩. ಈಚು
  • ಪದವಿನ್ಯಾಸ: ೧೪. ಕಣಜ
  • ಪದವಿನ್ಯಾಸ: ೯. ಬೆಳೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2017 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - developkanaja@gmail.com

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top