Skip to content
ದೂರವಾಣಿ : | 22212487|kanaja@karnataka.gov.in
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ-೩೧

Home/ಕನ್ನಡ/ಸಂಪುಟ-೩೧
Previous Next

ಸಂಪುಟ-೩೧

  • ಕರ್ನಾಟಕದ ಕಾಫೀ ತೋಟದ ಕಾರ್ಮಿಕರು
  • ಮಹಾರಾಜರ ಕ(ವಿ)ತೆಗಳು
  • ವಸ್ತು. ಶೈಲಿ ಮತ್ತು ಭಾಷೆ
  • ಎರಡು ಕವನಗಳು
  • ಹೆದ್ದಾರಿ
  • ಕಾಲ ಮತ್ತು ಸ್ಥಿತಿಸ್ಥಾಪಕತ್ವ
  • ಕಾವ್ಯೋದ್ಯೋಗ
  • ಆತ; ಆಫೀಸು; ಆಫೀಸು ಸಮಯ…, ಇತ್ಯಾದಿ
  • ಹತ್ಯಾಕಾಂಡ
  • ಎರಡು ತೆಂಗಿನ ಮರದುದ್ದದ ಮನುಷ್ಯ
  • ಎರಡು ಕವನಗಳು
  • ಅಸ್ತಿತ್ವವಾದಿ ಮನೋವಿಶ್ಲೇಷಣೆ
  • ಎರಡು ಕವನಗಳು
  • ಚೋಮನ ದುಡಿ(ಚಿತ್ರದ ವಿಮರ್ಶೆ)
  • ನೆರಳಿಲ್ಲದವರು
  • ಛಸನಾಲಾ ಆಕ್ರಂದನ
  • ಹಿಂಡನಗಲಿದ ಚಿಗರಿ
  • ಎರಡು ಕವನಗಳು
  • ಚಸ್ನಾಲ-೧೯೭೫

ಕರ್ನಾಟಕದ ಕಾಫೀ ತೋಟದ ಕಾರ್ಮಿಕರು

ಕರ್ನಾಟಕದ ಕಾಫಿ ತೋಟಗಳ ಕಾರ್ಮಿಕರು :
ಒಂದು ವಿವರಣೆ

ಜಿ ಆರ್

ಸಾಕ್ಷಿ ೨೯ ರಲ್ಲಿ ಪ್ರಕಟವಾಗಿರುವ ನನ್ನ “ದ. ಕ. ಜಿಲ್ಲೆಯಲ್ಲಿ ಭೂಮಿಯ ಪ್ರಶ್ನೆ” ಲೇಖನದಲ್ಲಿ ದ. ಕ. ಜಿಲ್ಲೆಯ ಭೂಹೀನ ಕೃಷಿ ಕಾರ್ಮಿಕರನ್ನು, ಕರ್ನಾಟಕದ ಕಾಫೀ ತೋಟಗಳ ಕಾರ್ಮಿಕರ ಜೊತೆ ಹೋಲಿಸುತ್ತ, ಈ ಕೆಳಗಿನ ಮಾತುಗಳನ್ನು ಬರೆದಿದ್ದೆ ; “ಫ್ಯಾಕ್ಟರಿ ಕಾರ್ಮಿಕರ ಬದುಕಿನ ಅನೇಕ ಲಕ್ಷಣಗಳನ್ನು ಹೊಂದಿರುವ ಕಾಫಿ ತೋಟ ಗಳ ಕಾರ್ಮಿಕರೂ ಸ್ವಲ್ಪ ಮಟ್ಟಿಗೆ ಟ್ರೇಡ್ ಯೂನಿಯನ್ನು ಗಳಲ್ಲಿ ಸಂಘಟಿತರಾಗಿರುವುದರಿಂದ ಕಾರ್ಮಿಕ ಕಾಯಿದೆಗಳ ಅನೇಕ ಪ್ರಯೋಜನಗಳನ್ನು ಪಡೆಯುವುದೂ ಇವರಿಗೆ ಸಾಧ್ಯವಾಗಿದೆ. ಎಲ್ಲ ತೋಟಗಳ ಕಾರ್ಮಿಕರಿಗೂ ಈ ಸೌಲಭ್ಯಗಳು ದೊರಕುತ್ತಿಲ್ಲ, ಸಂಘಟನೆ ಇಲ್ಲದೆಡೆಗಳಲ್ಲಿ ತೋಟಗಳ ಮಾಲಿಕರು ಕಾರ್ಮಿಕರಿಗೆ ಇವನ್ನು ವಂಚಿಸುವುದು ಸಾಮಾನ್ಯ, ಅಲ್ಲದೆ ಈ ತೋಟಗಳಲ್ಲಿಯೂ ಹಳ್ಳಿಗಳ ಭೂಹೀನ ಕೃಷಿ ಕಾರ್ಮಿಕರು ಚೆಂಗೂಲಿ (ದಿನಗೂಲಿ), contract labour ಗಳ ಮೇಲೆ ಇರುವ ಕೂಲಿಗಳೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇವರಿಗೂ ಈ ಸೌಲಭ್ಯಗಳು ದೊರೆಯುವುದಿಲ್ಲ, ಆದರೆ ತೋಟ ಕಾರ್ಮಿಕರ ಒಂದು ಗಣನೀಯ ವಿಭಾಗ ಈ ಸೌಲಭ್ಯಗಳನ್ನು ಪಡೆಯುತ್ತಿದೆ. (ಪುಟ 18). ಚಿಕ್ಕಮಗಳೂರು ಜಿಲ್ಲೆಯ ಕಾಫೀ ತೋಟಗಳ ಕಾರ್ಮಿಕರನ್ನು ಸಂಘಟಿಸಿದ ಸುದೀರ್ಘ ಅನುಭವವಿರುವ ಒಬ್ಬ ಟ್ರೇಡ್ ಯೂನಿಯನ್ ಕಾರ್ಯಕರ್ತರು, ನನ್ನ ಮೇಲಿನ ಮಾತುಗಳ ಧ್ವನ್ಯರ್ಥ ಮತ್ತು ಅಭಿಪ್ರಾಯದ ಧೋರಣೆಗಳು ಸುಳ್ಳು ಮತ್ತು ಬೇಜವಾಬ್ದಾರಿತನದ್ದು ಎಂದು ಸಾಧಾರವಾಗಿ ತೋರಿಸಿದ್ದಾರೆ. ಈ ಕೆಳಗಿನ ವಿವರಣೆ ಅವರು ನೀಡಿದ ಮಾಹಿತಿಯನ್ನು ಬಳಸಿಕೊಂಡಿದೆ. ಮೇಲಿನ, ನನ್ನ ಎಚ್ಚರ ತಪ್ಪಿದ ಭೋಳೆತನದ ಮಾತುಗಳಿಗೆ ವಿಷಾದಿಸುತ್ತೇನೆ.

ಕೇಂದ್ರ ಸರಕಾರದ Plantation Labour Act (1951), ೨೫ ಎಕ್ರೆಗಳಿಗೆ ಮೀರಿದ ಭೂಮಿಯಲ್ಲಿ ೩೦ ಜನರಿಗಿಂತ ಜಾಸ್ತಿ ಕೆಲಸಗಾರರನ್ನು ನೇಮಿಸಿಕೊಂಡು ಬೆಳೆ ಆಗುವ ಎಲ್ಲ ಕಾಫೀ, ಟೀ, ರಬ್ಬರ್, ಸಿಂಕೋನ, ಏಲಕ್ಕಿ ತೋಟಗಳಿಗೆ ಅನ್ವಯವಾಗುತ್ತದೆ. (ಸದ್ಯದಲ್ಲಿಯೇ ಈ ಶಾಸನ ಅಡಿಕೆ ಮತ್ತಿತರ ತೋಟಗಾರಿಕೆಯ ಬೆಳೆಗಳಿಗೂ ಅನ್ವಯವಾಗಲಿದೆ), ಕರ್ನಾಟಕದಲ್ಲಿ ಈ ಶಾಸನದ ವ್ಯಾಪ್ತಿಯಲ್ಲಿ ಬರುವ ತೋಟಗಳ ಸಂಖ್ಯೆ ೪೮೬, (೭೧-೭೨ ರಲ್ಲಿ), ಪ್ಲಾಂಟರುಗಳು ಎಂದರೆ, ಮೋಜಿನ ಜೀವನ ನಡೆಸುವ ಭಾರೀ ತೋಟಗಳ ಶ್ರೀಮಂತ ಮಾಲಿಕರು ಎನ್ನುವುದೇ ಪ್ರಚಲಿತವಾಗಿರುವ ಭಾವನೆ. ಇದು ಸ್ವಲ್ಪ ಮಟ್ಟಿಗೆ ಸತ್ಯ ; ಸ್ವಲ್ಪ ಮಟ್ಟಿಗೆ ಮಾತ್ರ, ಭೂ ಮಾಲಕರಲ್ಲಿ ವಿವಿಧ ಹಂತಗಳಿರುವಂತೆ ಈ ತೋಟಗಳ ಮಾಲಿಕರಲ್ಲೂ ೧ ಎಕ್ರೆಯಿಂದ ೨೫ ಎಕ್ರೆ ವರೆಗಿನ ವಿಸ್ತೀರ್ಣದ ತೋಟಗಳನ್ನು ಹೊಂದಿ, ಈ ತೋಟಗಳ ಉತ್ಪತ್ತಿಯಿಂದ ಕುಟುಂಬದ . ಜೀವನ ನಿರ್ವಹಣೆಯ ಕಷ್ಟಸಾಧ್ಯವಾಗಿ ಒದ್ದಾಡುವ ಮಾಲಿಕರೂ ಇದ್ದಾರೆ. ಕರ್ನಾಟಕದಲ್ಲಿ Plantation Labour Act ನ ವ್ಯಾಪ್ತಿಯೊಳಗೆ ಬರಲಾರದ ಇಂತಹ ತೋಟಗಳ ಸಂಖ್ಯೆ ಸುಮಾರು ೧೦,೦೦೦. ಇವುಗಳಲ್ಲಿ ಮಾಲಕರ ಕುಟುಂಬದವರ ಸ್ವಂತ ದುಡಿಮೆಯೇ ಅಲ್ಲದೆ, ಸಂಬಳದ ಕೂಲಿಗಳನ್ನೂ ಅವಲಂಬಿಸಿಕೊಂಡು ದುಡಿಮೆಯಾಗುತ್ತಿರುವ ತೋಟಗಳ ಸಂಖ್ಯೆ ಸುಮಾರು ೪,೦೦೦. ಈ ಸಣ್ಣ ಮತ್ತು ಮಧ್ಯಮ ಬೆಳೆಗಾರರು ಸಂಖ್ಯೆಯಲ್ಲಿ ಭಾರೀ ತೋಟ ಮಾಲಕರಿಗಿಂತ ಜಾಸ್ತಿಯಿದ್ದರೂ ಅವರಷ್ಟು ಪ್ರಭಾವಶಾಲಿಗಳಲ್ಲ, ಕಾಫಿ ಬೆಳೆ ಭೂಮಿಯ ಮೇಲೆ ನಿಗಾ ಇಟ್ಟುಕೊಳ್ಳುವ, ಬೆಳೆದ ಕಾಫಿಯನ್ನು ಕೊಳ್ಳುವ, ದೇಶೀಯ ಮತ್ತು ರಫ್ತು ಮಾರುಕಟ್ಟೆಗೆ ಅದನ್ನು ವಿತರಣೆ ಮಾಡುವ, ಕಾಫೀ ಉತ್ಪನ್ನ ಮತ್ತು ಮಾರಾಟಕ್ಕೆ ಸಂಬಂಧಿಸಿದ ಎಲ್ಲ ಧೋರಣೆಗಳನ್ನು ರೂಪಿಸುವ ಏಕಸ್ವಾಮ್ಯ ಸ್ವಾಯತ್ತ ಸಂಸ್ಥೆ ‘ಕಾಫೀ ಬೋರ್ಡ್’ ಹೆಚ್ಚು ಕಡಿಮ, ದೊಡ್ಡ ಮಾಲಿಕರ ತಾಳಕ್ಕೆ ಸರಿಯಾಗಿ ಕುಣಿಯುವ ಸಂಸ್ಥೆ, ಸಣ್ಣ, ಮಧ್ಯಮ ಬೆಳೆ ಗಾರರ ಮಾತಿಗೆ ಅಲ್ಲಿ ಹೆಚ್ಚು ಬೆಲೆಯಿಲ್ಲ, ಕಾಫಿ ಬೆಳೆಗಾರರಿಗೆ ಕಾಫೀ ಬೋರ್ಡ್; ಸಹಕಾರ ಸಂಸ್ಥೆಗಳು, ಖಾಸಗಿ, ರಾಷ್ಟ್ರೀಕೃತ ಬ್ಯಾಂಕುಗಳು ಮತ್ತಿತರ ಮೂಲಗಳಿಂದ ದೊರಕುವ ಸಾಲಸೌಲಭ್ಯಗಳೂ ದೊಡ್ಡ ಬೆಳೆಗಾರರಿಗೆ ಸಿಗುವಷ್ಟು ಸುಲಭದಲ್ಲಿ ಇವರಿಗೆ ದೊರೆಯುವುದಿಲ್ಲ. ತೋಟ ಮಾಲಿಕರ ಸಂಘಟನೆಗಳಾದ U.P.A.S.I. (United Planters Association of South India) ಮತ್ತು ಅಖಿಲ ಭಾರತ ಪ್ಲಾಂಟರುಗಳ ಸಂಘಟನೆಗಳೂ ಭಾರೀ ತೋಟಗಳ ಮಾಲಿಕರ ಸಂಘಟನೆಗಳೇ ಆಗಿವೆ. ಭಾರೀ ತೋಟ ಮಾಲಿಕರ ಜೊತೆಗೆ ತಮ್ಮನ್ನು identify ಮಾಡಿಕೊಂಡರೆ ತಮ್ಮ ಹಿತದ ರಕ್ಷಣೆ ಆಗಲಾರದೆಂದು ಅರಿತಿರುವ ಈ ಸಣ್ಣ ಮಧ್ಯಮ ಬೆಳೆಗಾರರು ಈಚೆಗೆ ತಮ್ಮದೇ ಆದ ಪ್ರತ್ಯೇಕ ಸಂಘಟನೆಗಳನ್ನು ಕಟ್ಟಿಕೊಳ್ಳಲೂ ಪ್ರಯತ್ನಿಸುತ್ತಿದ್ದಾರೆ. ಆಹಾರ ಧಾನ್ಯಗಳ ಕೃಷಿ ಭೂಮಿಯ ಸಣ್ಣ ಹಿಡುವಳಿದಾರನಂತೆ, ಇವರಿಗೂ ಇವರದ್ದೇ ಆದ ಕಷ್ಟನಿಷ್ಠುರಗಳಿದ್ದು, ತೋಟ ಮಾಲಿಕರು ಎಂದರೆ ಸುಖಜೀವಿಗಳು ಎಂಬ ನಮ್ಮ stock reaction ಮೂರ್ಖತನದ್ದಾಗುತ್ತದೆ.

ಕರ್ನಾಟಕದ ತೋಟಗಳಲ್ಲಿ ಎಷ್ಟು ಜನ ಕೂಲಿಗಳಿದ್ದಾರೆಂದು ನಿಖರವಾಗಿ ಯಾರಿಗೂ ಗೊತ್ತಿಲ್ಲ, Plantation Labour Act ನ ಮೊದಲು ತಿಳಿಸಿದ ಸೂತ್ರಕ್ಕೆ ಅನುಗುಣ ವಾಗಿ, ಯಾವುದೇ ಒಂದು ದಿನದಲ್ಲಿ ಕರ್ನಾಟಕದ ತೋಟಗಳಲ್ಲಿ ದುಡಿಯುವವರ (average daily employment in Estates) ಸಂಖ್ಯೆ ಕಾಫೀ, ಬೋರ್ಡ್‌ನ ಅಂದಾಜಿನ ಪ್ರಕಾರ ೧,೭೦,೦೦೦. ಆದರೆ ಈ ಅಂದಾಜಿನ ಗಣನೆಗೆ ಬಾರದ, ಚೆಂಗೂಲಿಗಳು, ಕಾಂಟ್ರಾಕ್ಟ್ ಕೂಲಿಗಳು ಮತ್ತು Plantation Labour Act ನ ವ್ಯಾಪ್ತಿಯ ಹೊರಗುಳಿದ ತೋಟಗಳ ಕೂಲಿಗಳು ಸೇರಿದರೆ, ಈ ಸಂಖ್ಯೆ ಸುಮಾರು ೨,೫೦,೦೦೦ ದಷ್ಟಾಗುವುದು.

“ಕಾಫಿ ತೋಟಗಳ ಕಾರ್ಮಿಕರೂ ಸ್ವಲ್ಪ ಮಟ್ಟಿಗೆ ಸಂಘಟಿತರಾಗಿರುವುದರಿಂದ ಕಾರ್ಮಿಕ ಕಾಯಿದೆಗಳ ಅನೇಕ ಪ್ರಯೋಜನಗಳನ್ನು ಪಡೆಯುವುದು ಇವರಿಗೆ ಸಾಧ್ಯವಾಗಿದೆ” ಎಂದು ಬರೆದಿದ್ದೆ, ಆದರೆ ಈ ಕಾರ್ಮಿಕರು ಎಷ್ಟರ ಮಟ್ಟಿಗೆ ಸಂಘಟಿತರಾಗಿದ್ದಾರೆಂದು ನಿಖರವಾಗಿ ಹೇಳದೆ ಇದ್ದುದರಿಂದ ಈ ಮಾತು ಅಪಾರ್ಥಕ್ಕೆಡೆ ಕೊಡಬಹುದಾಗಿದೆ. ಕರ್ನಾಟಕದಲ್ಲಿ ಎರಡೂವರೆ ಲಕ್ಷದಷ್ಟಿರುವ ತೋಟ ಕಾರ್ಮಿಕರ ಎಲ್ಲ ಯೂನಿಯನ್ನುಗಳ ಒಟ್ಟು ಸದಸ್ಯರ ಸಂಖ್ಯೆ ೧೪,೦೦೦ ವನ್ನೂ ಮೀರುವುದಿಲ್ಲ: ಈ ಸಂಖ್ಯೆ ಕೂಡ ವಾಸ್ತವದ ನಿಜ ಚಿತ್ರವನ್ನು ಕೊಡಲಾರದು; ಯಾಕೆಂದರೆ ಈ ಸಂಘಟನೆಗಳಲ್ಲಿ ಭಾರೀ ತೋಟ ಮಾಲಿಕರ ಆಶೀರ್ವಾದವನ್ನು ಪಡೆದಿರುವ, ಅವರ ಹಿತರಕ್ಷಣೆ ಗೋಸ್ಕರವೇ ಇರುವ ಯೂನಿಯನ್ನುಗಳು, ಕಾರ್ಮಿಕರಲ್ಲಿ ಪ್ರಾಂತೀಯ ಮತ್ತು ಭಾಷಾ ದುರಭಿಮಾನಗಳನ್ನು ಕೆರಳಿಸುವ D.M.K. ಯಂತಹ ಪಕ್ಷಗಳ ನೇತೃತ್ವದ ಯೂನಿಯನುಗಳು, ಆಳುವ ಸರಕಾರದ ಪಕ್ಷದ ನಾಯಕತ್ವದ I.N.T.U.C.ಗೆ ಸೇರಿದ, ಎಲ್ಲದಕ್ಕೂ ಹೆಬೈಟ್ಗೊತ್ತುವ ಯೂನಿಯನ್ನುಗಳೂ ಸೇರುತ್ತವೆ. ಈ ರಾಜ್ಯದ ಇತರ ಕೃಷಿ ಕಾರ್ಮಿಕರಲ್ಲಿ ಕೂಡಾ ಹೇಳಿಕೊಳ್ಳುವ ಯಾವುದೇ ಸಂಘಟನೆಗೆ ಇಲ್ಲವೆಂದು ಗಮನದಲ್ಲಿ ಇಟ್ಟುಕೊಂಡಾಗ ಮಾತ್ರ ಈ ಸಂಖ್ಯೆ ಮುಖ್ಯವಾಗುತ್ತದೆ, ಹೆಸರಿಗೆ ಮಾತ್ರ ಇರುವ ವಿವಿಧ ರಾಜಕೀಯ ಪಕ್ಷಗಳ ರೈತ ಸಂಘಗಳ ತೀರ ಸಣ್ಣ ಸಂಖ್ಯೆಯ ಸದಸ್ಯರೂ ಸಣ್ಣ ಹಿಡುವಳಿದಾರರು ಮತ್ತು ಗೇಣಿ ಒಕ್ಕಲುಗಳೇ ಹೊರತು ಭೂಹೀನ ಕೃಷಿ ಕಾರ್ಮಿಕರಲ್ಲ. ಹೀಗಾಗಿ ತಮ್ಮ ಹಿತರಕ್ಷಣೆಗೋಸ್ಕರ ಒಗ್ಗಟ್ಟಿನಿಂದ ಹೋರಾಟ ನಡೆಸುವ ಸಂಘಟನೆಯ ದೃಷ್ಟಿಯಿಂದ ಕೃಷಿ ಕಾರ್ಮಿಕರು ಮತ್ತು ತೋಟ ಕಾರ್ಮಿಕರ ನಡುವೆ ವಿಶೇಷವಾದ ಯಾವ ವ್ಯತ್ಯಾಸವೂ ಇಲ್ಲ. ಆದರೆ ಈ ರಾಜ್ಯದಲ್ಲಿ ಕಾರ್ಮಿಕ ಸಂಘಟನೆಯ ತೀವ್ರ ಕೊರತೆ ಕೇವಲ ಕೃಷಿ ಕಾರ್ಮಿಕರು ಮತ್ತು ತೋಟ ಕಾರ್ಮಿಕರಿಗೇ ಸೀಮಿತವಾದದ್ದಲ್ಲ. ವೃತ್ತ ಪತ್ರಿಕೆಗಳನ್ನು ಓದಿದರೆ, ಕಾರ್ಮಿಕ ಸಂಘಟನೆಗಳು ಒಟ್ಟು ಸಮಾಜಕ್ಕೆ ಅಪಾಯ ಕಾರಿಯಾಗುವಷ್ಟು ಬೆಳೆಯುತ್ತಿವೆ ಎಂಬ ಭಾವನೆ ಬರುತ್ತದೆ. ದುಡಿಯುವವರು, ಕಾರ್ಮಿಕರು–ಇವರನ್ನು ಬಿಟ್ಟು ಒಂದು ಸಮಾಜ ಇರಬಲ್ಲದು ಎಂಬ, ಶಬ್ದಗಳ ಜಾಣತನದ ಜೋಡಣೆಯಲ್ಲೂ, ಅಂತರ್ಗತವಾಗಿರುವ ರಾಜಕೀಯ ಅಪಪ್ರಚಾರವನ್ನು ನಾವು ಒಂದು ವೇಳೆ ಒಪ್ಪಿಕೊಂಡರೂ ಸಂಘಟನೆಯ ತೀವ್ರ ಕೊರತೆ ಈ ನಾಡಿನ ಒಟ್ಟು ದುಡಿಯುವ ಜನ ಸಮೂಹವೇ ಎದುರಿಸುತ್ತಿರುವ ಸಮಸ್ಯೆ ಎಂಬುದನ್ನು ಗಮನಿಸಲೇ ಬೇಕು. ದೈಹಿಕ ಶ್ರಮ ಜೀವಿಗಳ ಸಂಘಟನೆಯ ಮಾತಿರಲಿ; ಶೈಕ್ಷಣಿಕವಾಗಿ ಮತ್ತು ರಾಜಕೀಯ ತಿಳುವಳಿಕೆಯಲ್ಲಿ ಇವರಿಗಿಂತ ಎಷ್ಟೋ ಮೇಲಿರುವ, ಆದರೆ ಶೋಷಣೆಗೊಳಗಾಗಿರುವ ಶಾಲಾ ಶಿಕ್ಷಕರು ಮತ್ತು ಕೆಳ ಮಧ್ಯಮ ವರ್ಗದ ಖಾಸಗಿ ನೌಕರರ ಶಕ್ತಿ ಶಾಲಾ ಸಂಘಟನೆಗಳು ಕೂಡಾ ಈ ರಾಜ್ಯದಲ್ಲಿ ಇಲ್ಲ.

ಹೀಗೆ, ತಮ್ಮ ಹಿತಕ್ಕೋಸ್ಕರ ಹೋರಾಡಬಲ್ಲ ಶಕ್ತಿಯುತ ಸಂಘಟನೆ ಇಲ್ಲವಾದ್ದರಿಂದ ಕಾಫೀ ತೋಟಗಳ ಕಾರ್ಮಿಕರ ಬಹು ದೊಡ್ಡ ವಿಭಾಗವೊಂದು Plantation Labour Act, ಕಾರ್ಮಿಕರಿಗೆ ಒದಗಿಸುವ ಹೆಚ್ಚಿನ ಸವಲತ್ತುಗಳಿಂದ ವಂಚಿತವಾಗಿದೆ. ಮೇಲೆ ಹೇಳಿದ ಕಾರ್ಯಕರ್ತರ ಅಂದಾಜಿನ ಪ್ರಕಾರ ಹದಿನೈದರಿಂದ ಇಪ್ಪತ್ತು ಸಾವಿರದಷ್ಟು ತೋಟ ಕೆಲಸಗಾರರಿಗೆ ಮಾತ್ರ ಈ ಸೌಲಭ್ಯಗಳಲ್ಲಿ ಹೆಚ್ಚಿನವು ಇಂದು ದೊರೆಯುತ್ತಿವೆ.
ಈ ಪರಿಸ್ಥಿತಿಯಲ್ಲಿ ತೋಟ ಕಾರ್ಮಿಕರ ಒಂದು ಗಣನೀಯ ವಿಭಾಗಕ್ಕೆ ಈ ಸೌಲಭ್ಯಗಳು ದೊರೆಯುತ್ತಿವೆ ಎನ್ನುವ ಮಾತು ಸುಳ್ಳಾಗುತ್ತದೆ. ಯಾಕೆಂದರೆ ಗಣ ನೀಯವಾಗುವುದು ಈ ಸೌಲಭ್ಯಗಳನ್ನು ಪಡೆಯುತ್ತಿರುವವರ ಸಂಖ್ಯೆಯಲ್ಲಿ: ನಮ್ಮ ಗಣನೆಗೆ ಬರಬೇಕಾಗಿರುವುದು, ಈ ಸೌಲಭ್ಯಗಳಿಂದ ಹೊರಗುಳಿದವರ ಸಂಖ್ಯೆ,

ಕೇಂದ್ರ ಸರಕಾರದ Plantation Labour Act ನ್ನು ಮಾದರಿಯಾಗಿ ಇಟ್ಟುಕೊಂಡು ಈ ರಾಜ್ಯದ ಸರಕಾರ ರೂಪಿಸಿದ ತೋಟ ಕಾರ್ಮಿಕರ ಕಾನೂನು, ಕಾರ್ಮಿಕರಿಗೆ ಕೊಡುವ ಕೆಲವು ಸೌಲಭ್ಯಗಳು ಇವು : ೧) ಪ್ರತಿಯೊಬ್ಬ ಕಾರ್ಮಿಕನಿಗೆ ವರುಷಕ್ಕೆ ೨೦ ಸಂಬಳ ಸಹಿತ ರಜಾದಿನಗಳು ಅಥವಾ ಕಾರ್ಮಿಕ ಹಾಗೆ ಬಯಸಿದರೆ ರಜಕ್ಕೆ ಬದಲು ಅಷ್ಟು ಸಂಬಳ, ೨) ರಾಷ್ಟ್ರೀಯ ರಜಾದಿನಗಳ ಮತ್ತು ಹಬ್ಬಗಳ ೭ ದಿನಗಳ ಸಂಬಳ ಸಹಿತ ರಜ, ೩) ಪ್ರತಿಯೊಬ್ಬ ಕಾರ್ಮಿಕನಿಗೆ ವರುಷಕ್ಕೆ ೨ ಕಂಬಳಿಗಳು, ೪) ಕಾರ್ಮಿಕ ವರ್ಷಕ್ಕೊಮ್ಮೆ ತನ್ನ ಊರಿಗೆ ಹೋಗಿ ಬರಲು ತಗಲುವ ಸಾರಿಗೆ ವೆಚ್ಚದ ಅರ್ಧದಷ್ಟು ಪಾವತಿ, ೫) ಕಾರ್ಮಿಕರ ಪ್ರಾವಿಡೆಂಟ್ ಫಂಡಿಗೆ ಮಾಲಕರ ಪಾವತಿ, ೬) ಕಾರ್ಮಿಕನ ಒಟ್ಟು ವಾರ್ಷಿಕ ವೇತನದ ೧೧% ದಷ್ಟು ಬೋನಸ್, ೭) ವೈದ್ಯಕೀಯ ವೆಚ್ಚದ ಪಾವತಿ, ೮) ಕಾರ್ಮಿಕರ ಕುಟುಂಬಗಳಿಗೆ ವಸತಿ ಸೌಕರ್ಯ ಮತ್ತು ಹೆಂಗಸರ ತೋಟಗಳಲ್ಲಿ ದುಡಿಯುವುದರಿಂದ ಮಕ್ಕಳನ್ನು ನೋಡಿಕೊಳ್ಳಲು ಬಾಲವಾಡಿ (treches)ಗಳು. ೯) ದೊಡ್ಡ ತೋಟಗಳಲ್ಲಿ ಗಾರ್ಡನ್ ಆಸ್ಪತ್ರೆಗಳು ಮತ್ತು ೭೫೦೦ ತೋಟ ಕೆಲಸಗಾರರಿಗೆ ಒಂದರಂತೆ ಗ್ರೂಪ್ ಆಸ್ಪತ್ರೆಗಳ ಸ್ಥಾಪನೆ, ಇದು ತೋಟಗಳ ಮಾಲಿಕರು ಸಂಯುಕ್ತವಾಗಿ ಸ್ಥಾಪಿಸಬೇಕಾದ್ದು, (The Mysore Plantation Labour Rules -1956-Labour Manual vol.II, Dept of Labour, Govt. of Mysore
ಪುಟ ೨೬೪ ರಿಂದ ೨೯೪).

ಕಾರ್ಮಿಕ ಸಂಘಟನೆ ಇಲ್ಲದ ತೋಟಗಳಲ್ಲಿ ಮಾಲಕರು ಈ ಸೌಲಭ್ಯಗಳಲ್ಲಿ ಹೆಚ್ಚಿನವನ್ನು ಇಂದಿಗೂ ಕಾರ್ಮಿಕರಿಗೆ ಕೊಡುತ್ತಿಲ್ಲ, ಪ್ರತಿಭಟನೆಯ ಭಯ ಇಲ್ಲದಿರುವುದರಿಂದ, ಲೇಬರ್ ಡಿರ್ಪಾರ್ಟ್‌ಮೆಂಟಿನ ಅಧಿಕಾರಿಗಳೂ, ಈ ಸೌಲಭ್ಯಗಳು ಜಾರಿಗೆ ಬಂದಿವೆಯೆ ಎಂದು ಪರಿಶೀಲಿಸುವ ತಮ್ಮ ಇಲಾಖೆಯ ಕರ್ತವ್ಯವನ್ನು ನಿರ್ವಹಿಸುವುದೂ ಇಲ್ಲ; ತಮ್ಮ ಗಮನಕ್ಕೆ ಬಂದರೂ, ಸೌಲಭ್ಯಗಳನ್ನು ಒದಗಿಸದ ಮಾಲಕರ ಮೇಲೆ ಕಾನೂನಿನ ಕ್ರಮಗಳನ್ನು ತೆಗೆದುಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಈ ಸೌಲಭ್ಯಗಳ ಮಾತು ಇರಲಿ, ಮಾಲಕ ತನ್ನಿಷ್ಟ ಬಂದಂತೆ ಕಾರ್ಮಿಕರನ್ನು ವಜಾಗೊಳಿಸಿದಾಗಲೂ ಕಾರ್ಮಿಕರಿಗೆ ಈ ಅಧಿಕಾರಿಗಳಾಗಲೀ, ಪೋಲಿಸರಾಗಲೀ ರಕ್ಷಣೆ ಕೊಡುವುದಿಲ್ಲ. ಬದಲು, ಇಂತಹ ತೋಟಗಳ ಮಾಲಿಕರೊಡನೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮತ್ತು ಪೋಲಿಸರು ಕಾರ್ಮಿಕರ ವಿರುದ್ಧ ಷಾಮೀಲಾಗಿರುವುದೂ ಸಾಮಾನ್ಯ, ಎಷ್ಟೋ. ತೋಟಗಳಲ್ಲಿ ಇಂದಿಗೂ ಕಾರ್ಮಿಕ ಸಂಘಟನೆಯ ಕಾರ್ಯಕರ್ತರಾಗಲೀ, ಕಾರ್ಮಿಕ ಇಲಾಖೆಯ ಅಧಿಕಾರಿಗಳಾಗಲೀ, ಪ್ರವೇಶಿಸಲಾರದ ಭಯದ ವಾತಾವರಣವನ್ನು ತೋಟಗಳ ಮಾಲಕರು ನಿರ್ಮಿಸಿದ್ದಾರೆ. ಈ ತೋಟ ಮಾಲಕರು ಮತ್ತು ಇವರ ಕೂಲಿಯಾಳು ಗಳ ನಡುವಿನ ಸಂಬಂಧ ಇವತ್ತಿಗೂ ಪಾಳೆಯಗಾರೀ ಸ್ವರೂಪದ್ದೇ ಆಗಿದ್ದು ಕಾರ್ಮಿಕರ ಎಲ್ಲ ಹಕ್ಕುಗಳೂ ಬಲತ್ಕಾರದಲ್ಲಿ ನಿರಾಕರಿಸಲ್ಪಟ್ಟಿವೆ.

ತೋಟ ಕಾರ್ಮಿಕರ ದಿನಗೂಲಿ, ಕಾರ್ಮಿಕರ ಪ್ರತಿನಿಧಿಗಳು, ತೋಟಗಳ ಮಾಲಕರ ಪ್ರತಿನಿಧಿಗಳು ಮತ್ತು ಸರಕಾರ ಇವುಗಳ ನಡುವೆ ಕಾಲದಿಂದ ಕಾಲಕ್ಕೆ ಆಗುವ ತ್ರಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ನಿರ್ಧರಿಸಲ್ಪಡುತ್ತದೆ. ಕರ್ನಾಟಕದ ಮಟ್ಟಿಗೆ ತೋಟ ಕಾರ್ಮಿಕರ ಸಂಘಟನೆ ಏನೇನೂ ಇಲ್ಲದಿದ್ದರೂ ಭಾರೀ ತೋಟಗಳೆ ಮಾಲಕರ ಒಗ್ಗಟ್ಟು ಮಾತ್ರ ಬಲವಾಗಿರುವುದರಿಂದ, ಮತ್ತು ಈ ಮಾಲಿಕರಲ್ಲಿ ಹೆಚ್ಚಿನವರು ರಾಜಕೀಯದಲ್ಲಿ ಪ್ರಭಾವಶಾಲೀ ವ್ಯಕ್ತಿಗಳಾಗಿರುವುದರಿಂದ, ಈ ತ್ರಿಪಕ್ಷೀಯ ಒಪ್ಪಂದ, ವಾಸ್ತವದಲ್ಲಿ ತೋಟ ಮಾಲಿಕರು ಮತ್ತು ಸರಕಾರ ಒಟ್ಟಾಗಿ ಕಾರ್ಮಿಕರ ಮೇಲೆ ಹೇರುವ ಏಕಪಕ್ಷೀಯ ಒಪ್ಪಂದ, ಈಗ ಜಾರಿಯಲ್ಲಿರುವ, ತಾ. ೧೫-೬-೭೫ ರಲ್ಲಿ ಸಹಿಬಿದ್ದ ವೇತನ ಒಪ್ಪಂದದ ಪ್ರಕಾರ ನಿರ್ಧರಿತವಾದ ದಿನಗೂಲಿ ಗಂಡಸರಿಗೆ ರೂ. ೪-೮೦ (ಮೊದಲು ಇದ್ದ ಕೂಲಿ
ರೂ. ೪-೨೦), ಹೆಂಗಸರಿಗೆ ರೂ. ೩-೨೦ (ಮೊದಲು ಇದ್ದ ಕೂಲಿ ರೂ. ೩-೬೦), ಸಮಾನ ಕೆಲಸಕ್ಕೆ ಗಂಡಾಳು ಮತ್ತು ಹೆಣ್ಣಾಳುಗಳಿಗೆ ಸಮಾನ ವೇತನ ದೊರೆಯಬೇಕೆಂಬುದು ಕಾರ್ಮಿಕ ಸಂಘಟನೆಗಳ ಬಹು ದೀರ್ಘಕಾಲದ ಬೇಡಿಕೆಯಾಗಿತ್ತು, ಇತ್ತೀಚೆಗೆ ಹೊರಬಂದ ರಾಷ್ಟ್ರಪತಿಗಳ ಸುಗ್ರೀ ವಾಜ್ಞೆ ದೇಶಾದ್ಯಂತ ಈ ಅಂತರವನ್ನು ತೊಡೆದುಹಾಕಿದ, ಯೋನಿಯನ್ನುಗಳು ಪ್ರಬಲವಾಗಿರುವ ತೋಟಗಳಲ್ಲಾದರೂ ಈ ಸುಗ್ರೀವಾಜ್ಞೆ ಜಾರಿಗೆ ಬಂದೀತೋ ಎಂಬುದು ಕಾದುನೋಡಬೇಕಾದ ವಿಷಯ. ಯಾಕೆಂದರೆ ಈಗಾಗಲೇ ಅನೇಕ ತೋಟಗಳ ಮಾಲಿಕರು muster roll ಗಳಲ್ಲಿ male ಮತ್ತು female ಎಂಬ ವಿಭಜನೆಗಳನ್ನು ತೆಗೆದು ಹಾಕಿ ಅದರ ಬದಲಿಗೆ Grade I ಮತ್ತು Grade II ಕಾರ್ಮಿಕರೆಂದು ವಿಭಾಗಿಸಿ, ಹೆಣ್ಣಾಳುಗಳನ್ನೆಲ್ಲ Grade II ನಲ್ಲಿ ಸೇರಿಸಿ, ಅವರಿಗೆ ಕಡಿಮೆ ಸಂಬಳ ಕೊಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ; ಮತ್ತು ಇದನ್ನು ಕಾಯಿದೆ ಮನ್ನಿಸಿದೆ.

ಈ ಹೊಸ ದಿನಗೂಲಿಯ ದರಗಳು ಸಹಜವಾಗಿಯೇ ಕಾರ್ಮಿಕರಲ್ಲಿ ತೀವ್ರ ಅಸಮಾಧಾನವನ್ನು ಕೆರಳಿಸಿದೆ. ಒಪ್ಪಂದಕ್ಕೆ ಸಹಿ ಹಾಕಿದ ಯೂನಿಯನ್‌ ಒಂದರ ಕಾರ್ಯಕರ್ತ ನನ್ನು ಆ ಯನಿಯನ್ನಿನ ಸದಸ್ಯರೇ ಛೀಮಾರಿ ಹಾಕಿ ಥಳಿಸಿದ ಪ್ರಸಂಗವೂ ಚಿಕ್ಕಮಗಳೂರು ಜಿಲ್ಲೆಯ ಕಾಫೀ ತೋಟವೊಂದರಲ್ಲಿ ನಡೆದಿದೆ. ತಾವು ಕೇಳಿದಷ್ಟಲ್ಲವಾದರೂ ಕಡೆಯ ಪಕ್ಷ ಕೇರಳದ ತೋಟಗಳಲ್ಲಿ ಗಂಡಸರಿಗಿರುವ ದಿನಗೂಲಿ ರೂ. ೬.೯೦ ಮತ್ತು
ಹೆಂಗಸರಿಗಿರುವ ರೂ, ೪.೬೦ ರಷ್ಟು ಕೂಲಿಯನ್ನಾದರೂ ಕರ್ನಾಟಕದಲ್ಲಿ ಕೊಡ ಬೇಕೆಂಬುದು ಕಾರ್ಮಿಕ ಸಂಘಟನೆಗಳ ಬೇಡಿಕೆಯಾಗಿತ್ತು, ತಮಿಳುನಾಡಿನ ತೋಟಗಳಲ್ಲಿಯೂ ಈ ದರ ಕರ್ನಾಟಕದ ದರಗಳಿಗಿಂತ ಜಾಸ್ತಿ ಇದೆ (ರೂ, ಜೂ.೯೫ ಮತ್ತು ೪.೦೦) ತೋಟ ಮಾಲಿಕರು ತಾವು ಬೆಳೆದ ಕಾಫಿ ಫಸಲನ್ನೆಲ್ಲ ಕಾಫೀ ಬೋರ್ಡಿಗೇ ಮಾರಬೇಕಾಗಿರುವುದರಿಂದ ಮತ್ತು ಕಾಫಿ ಬೋರ್ಡ್‌ನ ಕೊಳ್ಳುವ ದರಗಳು ಎಲ್ಲ ಸ್ಥಳಗಳಲ್ಲಿ ಒಂದೇ ಇರುವುದರಿಂದ ಕೇರಳ ತಮೀಳುನಾಡುಗಳ ತೋಟ ಮಾಲಿಕರಿಗೆ ಆ ದರಗಳ ದಿನಗೂಲಿಯನ್ನು ಕೊಡುವುದು ಸಾಧ್ಯವಾದರೆ ಕರ್ನಾಟಕದ ಮಾಲಕರಿಗೆ ಅದು ಏಕೆ ಪೂರೈಸುವುದಿಲ್ಲ ಎಂಬುದು ಸಂಘಟನೆಗಳ ವಾದವಾಗಿತ್ತು, ಆದರೆ ತೋಟ ಮಾಲಕರೊಡನೆ ಷಾಮೀಲಾಗಿ ನಿಂತ ಸರಕಾರ ಕಾರ್ಮಿಕ ಸಂಘಟನೆಗಳ ವಾದವನ್ನು ಸಂಪೂರ್ಣವಾಗಿ ಉಪೇಕ್ಷಿಸಿ, (ತುರ್ತು ಪರಿಸ್ಥಿತಿಯ ಸನ್ನಿವೇಶವನ್ನೂ ಉಪಯೋಗಿಸಿ ಕೊಂಡು) ಈ ವೇತನ ದರಗಳನ್ನು ಕಾರ್ಮಿಕರ ಮೇಲೆ ಹೇರಿಬಿಟ್ಟಿತು. (ಒಂದು ಮುಖ್ಯ ತೋಟ ಕಾರ್ಮಿಕರ ಯೂನಿಯನ್ ಈ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿತು) ಆದರ ಮಾರನೆಯ ದಿನ ಈ ‘ತ್ರಿಪಕ್ಷೀಯ ಒಪ್ಪಂದ’ ದ ವರದಿಗಳು ಯಥಾ ಪ್ರಕಾರ ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾದುವು ಎಂಬುದನ್ನು ಬೇರೆ ಹೇಳಬೇಕಾಗಿಲ್ಲವಷ್ಟೆ.

Plantation Labour Act ಪ್ರಕಾರ, ಒಂದು ತೋಟದಲ್ಲಿ ೬ ರಿಂದ ೧೨ ವರುಷಗಳ ವರೆಗಿನ ಪ್ರಾಯದ ಮಕ್ಕಳ ಸಂಖ್ಯೆ ೨೫ ನ್ನು ಮೀರಿದರೆ ತೋಟ ಮಾಲಿಕರು ಒಂದು ಪ್ರಾಥಮಿಕ ಶಾಲೆಯನ್ನು ತೆರೆಯಬೇಕು; ಇದು ಸಾಧ್ಯವಿಲ್ಲದಿದ್ದರೆ, ತೋಟ ಮಾಲಿಕರು ಸರಕಾರಕ್ಕೆ ಈ ಬಗ್ಗೆ ಒಂದು ನಿರ್ದಿಷ್ಟ ಪ್ರಮಾಣದ cess ಕಟ್ಟಬೇಕು, ಹೆಚ್ಚಿನ ತೋಟ ಮಾಲಿಕರು ಸರಕಾರವೇ ನೀಡಿದ ಈ ಅವಕಾಶವನ್ನು ಬಳಸಿಕೊಂಡು ಶಾಲೆ ತೆರೆಯುವ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದ್ದಾರೆ. ಉದಾಹರಣೆಗೆ ಇದೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ತೋಟಿ ಮಾಲಿಕರೇ ಪ್ರಾರಂಭಿಸಿರುವ ಪ್ರಾಥಮಿಕ ಪಾಠಶಾಲೆಗಳ ಸಂಖ್ಯೆ ಕೇವಲ ೩, ಈ ಬಗ್ಗೆ ತೋಟ ಮಾಲಿಕರಿಂದ cess ಮತ್ತು ಇತರ ತೆರಿಗೆಗಳನ್ನು ವಸೂಲು ಮಾಡುವ ಸರಕಾರವೂ ತನ್ನ ಕರ್ತವ್ಯವನ್ನು ನಿರ್ವಹಿಸಿಲ್ಲ, ಹೆಚ್ಚಿನ ತೋಟಗಳ ಕಾರ್ಮಿಕರ ಮಕ್ಕಳಿಗೆ ಹೋಗಿಬರಲು ಅನುಕೂಲವಾಗುವಷ್ಟು ಸಾಮಿಪ್ಯದಲ್ಲಿ ಪ್ರಾಥಮಿಕ ಶಾಲೆಗಳೇ ಇಲ್ಲ, ಪರಿಣಾಮದಲ್ಲಿ ಕಾಫಿ ತೋಟಗಳ ಕಾರ್ಮಿಕರ ಮಕ್ಕಳಲ್ಲಿ ೯೦% ರಷ್ಟು ಮಕ್ಕಳು ಪ್ರಾಥಮಿಕ ಅಕ್ಷರಾಭ್ಯಾಸವನ್ನೂ ಪಡೆದಿಲ್ಲ. ತಮ್ಮ ಜೀವಮಾನವೆಲ್ಲ ನಿರಕ್ಷರಸ್ಥರಾಗಿಯೇ ಉಳಿಯಬೇಕಾದ ಪಾಡು ಇವರದ್ದು. ತೋಟಕಾರ್ಮಿಕರ ಮಕ್ಕಳಿಗೆ ಪ್ರಾಥಮಿಕ ವಿದ್ಯಾಭ್ಯಾಸ ಮಾತ್ರ ಸಾಕು ಎಂಬುದನ್ನು ನಾವು ಒಪ್ಪಿಕೊಂಡರೂ ಬಹುತೇಕ ಮಕ್ಕಳಿಗೆ ಇಷ್ಟೂ ಇಲ್ಲ ಎಂಬುದನ್ನೂ ಗಮನಿಸಬೇಕಾಗುತ್ತದೆ. ಉಳಿದ ಶೇಕಡಾ ಹತ್ತರಷ್ಟು ಮಕ್ಕಳಲ್ಲಿಯೂ ಹೆಚ್ಚಿನವರು ಪ್ರಾಥಮಿಕ ವಿದ್ಯಾಭ್ಯಾಸವನ್ನೂ ಮುಗಿಸದೆ ಮಧ್ಯದಲ್ಲಿಯೇ ನಿಲ್ಲಿಸುವ drop-outs ಆಗುವುದರಿಂದ ಈ ಹುಡುಗರ ಅಕ್ಷರಜ್ಞಾನವೂ ತಮ್ಮ ರುಜು ಬರೆಯುವುದನ್ನು ಬಿಟ್ಟು ಬೇರೆ ಯಾವ ಸಂಸ್ಕಾರವನ್ನೂ ಇವರಿಗೆ ನೀಡುವುದಿಲ್ಲ. ಈ ನಾಡಿನ ಎಲ್ಲ ದೈಹಿಕ ಶ್ರಮಪ್ರಧಾನ ಕಾರ್ಮಿಕರ ಮಕ್ಕಳೂ ಸಾಮಾನ್ಯವಾಗಿ ಸಂಪೂರ್ಣ ನಿರಕ್ಷರಸ್ಥರಾಗಿ ಉಳಿಯುತ್ತಾರೆ; ಅಥವಾ ಶಿಕ್ಷಣದ ತೀರ ಪ್ರಾಥಮಿಕ ಹಂತಗಳಲ್ಲಿಯೇ drop-outs ಆಗುತ್ತಾರೆ, ನಮ್ಮ ಶಿಕ್ಷಣ ವ್ಯವಸ್ಥೆಯ ಈ ವೈಷಮ್ಯದಿಂದ ಕಾಫೀ ತೋಟದ ಕಾರ್ಮಿಕರ ಮಕ್ಕಳೂ ಹೊರತಲ್ಲ. ೧೪ ವರುಷಕ್ಕೆ ಮೇಲ್ಪಟ್ಟ ಯಾರೂ ಕಾನೂನು ಪ್ರಕಾರವೇ ತೋಟಗಳಲ್ಲಿ ದುಡಿಯಬಹುದಾದ್ದರಿಂದ ಬಹಳಷ್ಟು ಮಕ್ಕಳು ೧೦-೧೨ ವರುಷದ ಪ್ರಾಯದಲ್ಲಿಯೇ muster-roll ನಲ್ಲಿ ೧೪ ವರುಷ ಎಂದು ಬರೆಸಿ ದುಡಿಮೆಗಿಳಿಯುತ್ತಾರೆ, ಕುಟುಂಬದ ಜೀವನ ನಿರ್ವಹಣೆಗೆ ಇವರ ದುಡಿಮೆಯ ಆದಾಯವೂ ಅಗತ್ಯವಾಗಿರುವುದರಿಂದ ಆಟಪಾಠಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರಬೇಕಾದ ಹಸಿ ವಯಸ್ಸಿನ ಮಕ್ಕಳು ದೈಹಿಕ ದುಡಿಮೆಗಿಳಿಯುವುದು ಅನಿವಾರ್ಯ ವಾಗುತ್ತದೆ, ಇವರನ್ನು ತಮ್ಮ ಜೀವಮಾನವೆಲ್ಲ ಬೇರೆ ರೀತಿಯ ಬದುಕಿನ ಬಗ್ಗೆ ಆಸೆ, ಕನಸುಗಳನ್ನು ಇಟ್ಟುಕೊಳ್ಳ ಲಾರದ ಒಂದು ಸ್ಥಿತಿಗೆ ಈ ವ್ಯವಸ್ಥೆ ಇಳಿಸುತ್ತದೆ. ಈ ವಿಷಮತೆ ಕೂಡಾ ಕಾರ್ಮಿಕ ವರ್ಗಕ್ಕೆ ಇಲ್ಲಿ ಹುಟ್ಟಿನಿಂದಲೇ ಅಂಟಿಕೊಂಡು ಬಂದದ್ದು, ಇದಕ್ಕೆ ತೋಟ ಕಾರ್ಮಿಕರೊಂದು ವಿಶೇಷವಲ್ಲ. “ಸಮಾನತೆ ಎಂದರೆ ಎಲ್ಲರನ್ನೂ ಸಾಮಾನ್ಯರ ಮಟ್ಟಕ್ಕೆ ಇಳಿಸುವುದಲ್ಲ ; ಬದಲು ಸಾಮಾನ್ಯರ ಮೇಲೇರುವಂತೆ ಸಮಾನ ಅವಕಾಶಗಳನ್ನು ಕಲ್ಪಿಸುವುದು” ಇತ್ಯಾದಿ ಮಾತುಗಳನ್ನು-ಬೋಳಿಸಿಕೊಂಡವನಿಗೆ ಗೊತ್ತೇ ಆಗದಷ್ಟು ನುಣ್ಣಗೆ ತಲೆ ಬೋಳಿಸುವ ನಾಜೂಕಿನ ಮಾತುಗಳನ್ನು ಪತ್ರಿಕೆಗಳಲ್ಲೂ, ಸೆಮಿನಾರುಗಳಲ್ಲಿ ಉದುರಿಸಿ ನಮ್ಮ ಪಂಡಿತರು ಸಾಮಾನ್ಯನ ಉದ್ಧಾರ ಮಾಡುವುದುಂಟು, ಈ ಸಾಮಾನ್ಯರ, ಈ ತೋಟಕಾರ್ಮಿಕರು ಮತ್ತಿತರ ಶ್ರಮಜೀವಿಗಳ ದುಡಿಮೆ ಇಲ್ಲದೆ ನಮ್ಮಲ್ಲಿ ಯಾರ ಸಂಭಾವಿತ ಬದುಕೂ ಒಂದು ದಿನವೂ ಸುಸೂತ್ರವಾಗಿ ನಡೆಯದಾದರೂ, ಹುಟ್ಟಿನಿಂದ ಸಾವಿನವರೆಗೆ ಈ ವರ್ಗ ಈ ವ್ಯವಸ್ಥೆಯಲ್ಲಿ ಎದುರಿಸಬೇಕಾಗಿರುವ ಅಡೆತಡೆಗಳ ಬಗ್ಗೆ ನಮಗಿರುವ ಅಪಾರವಾದ ಅಜ್ಞಾನ ಹೇಸಿಗೆ ಹುಟ್ಟಿಸುವಂತಹದ್ದು, ಈಗಾಗಲೇ ಮೇಲೆ ಇರುವವರು ಕೆಳಗಿರುವವರನ್ನು ಕೈಕೊಟ್ಟು ಮೇಲಕ್ಕೆತ್ತುವುದು, ಸಮಾನ ಅವಕಾಶಗಳನ್ನು ಕಲ್ಪಿಸುವುದು, ವಿವಿಧ ಸ್ವಾತಂತ್ರ್ಯಗಳನ್ನು ಔದಾರ್ಯದಲ್ಲಿ ದಯಪಾಲಿಸುವುದು ಇತ್ಯಾದಿ ಮುತ್ತಿನಂತಹ ವಿಚಾರಗಳ ಮೂಲದಲ್ಲಿ ಇರುವುದೂ ಈ ಅಜ್ಞಾನವೇ, ನಮ್ಮ ಅಜ್ಞಾನವೇ ನಮ್ಮ ಕೆಟ್ಟ ರಾಜಕೀಯ ಆಯ್ಕೆಗಳಿಗೂ ಕಾರಣವಾಗಿರುವುದರಿಂದ ಇದು ಅತ್ಯಂತ ಅಪಾಯಕಾರಿ ಕೂಡ.

ಚಿಕ್ಕಮಗಳೂರಿನ ಕೆಲವು ಕಾಫೀ ತೋಟಗಳಲ್ಲಿ ಅಲೆದಾಡಿದ ಅನುಭವ ಮತ್ತು ಇತ್ತೀಚೆಗೆ (೫-೧-೭೫) ಕಾಫಿ ತೋಟದ ಕಾರ್ಮಿಕರ ಸಂಬಳದ ಬಗ್ಗೆ ಆದ ಒಪ್ಪಂದದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಆಧಾರದ ಮೇಲೆ ನಾನು ಮೊದಲಿನ ಮಾತುಗಳನ್ನು ಬರೆದಿದ್ದೆ, ಇಂತಹ ವಿಷಯಗಳಲ್ಲಿ ಒಬ್ಬನ ಅನುಭವಕ್ಕೆ ಇರುವ ಮಿತಿ, ಮತ್ತು ಇಂತಹ ಸೀಮಿತ ಅನುಭವದಿಂದ ಹುಟ್ಟುವ ಅಭಿಪ್ರಾಯ ಹೇಗೆ ಸುಳ್ಳಾಗಿ ಬಿಡಬಹುದು ಎಂಬುದು ಈಗ ನನಗೆ ಅರ್ಥವಾಗಿದೆ : ವೃತ್ತಪತ್ರಿಕೆಗಳನ್ನು, ಅದರಲ್ಲಿಯೂ ಕನ್ನಡದ ವೃತ್ತಪತ್ರಿಕೆಗಳನ್ನು, ಇಂತಹ ವಿಷಯಗಳಲ್ಲಿ ಎಷ್ಟಕ್ಕೂ ನಂಬ ಕೂಡದು ಎಂದೂ ಚೆನ್ನಾಗಿ ಪಾಠವಾಗಿದೆ. ಸುಳ್ಳುಗಳನ್ನೇ ಹೇಳುವುದು, ಅರ್ಧ ಸತ್ಯಗಳನ್ನು ಮಾತ್ರ ಹೇಳುವುದು, ಮುಖ್ಯವಾದ ವಿಷಯಗಳನ್ನು ಮರೆ ಮಾಡಿ ಚಿಲ್ಲರೆ ವಿಷಯಗಳತ್ತ ಗಮನ ಸೆಳೆಯುವುದು-ಈ ತಂತ್ರಗಳ ಜೊತೆಗೆ ಜನತೆಗೆ ತಿಳಿಸಲೇ ಬೇಕಾದದ್ದರ ಬಗ್ಗೆ ಮೌನವಾಗಿರುವುದೂ ಕೂಡ ಪತ್ರಿಕೆಗಳ ರಾಜಕೀಯ ಅಪಪ್ರಚಾರದ ವರಸೆಗಳು, ನಮ್ಮ ಪ್ರಚಾರ ಮಾಧ್ಯಮ ಮೊದಲಿನಿಂದಲೂ ನಮ್ಮನ್ನು ಆಳುವವರ ಅಡಿಯಾಳಾಗಿಯೇ ಇಟ್ಟುದರಿಂದ ಇದು ಸಹಜವೇ, ಮೊದಲಿಗಿಂತ ಈಗ ಇದು ಹೆಚ್ಚು ಸ್ಪಷ್ಟವಾಗಿ ಎಲ್ಲರಿಗೂ ಗೊತ್ತಾಗುತ್ತಿದೆ ಅಷ್ಟೆ, ಬೆಕೆಟ್‌ನ Waiting For Godot ನಾಟಕದಲ್ಲಿ ಯಜಮಾನ ಪೊಝೋನ ಸರಪಳಿಯಲ್ಲಿರುವ, ಹಾಡೆಂದರೆ ಹಾಡುವ, ಕುಣಿ ಎಂದರೆ ಕುಣಿಯುವ, “ಯೋಚಿಸು” ಎಂದು ಆಜ್ಞಾಪಿಸಿದರೆ ಶಬ್ದಗಳನ್ನು ಒಂದಕ್ಕೊಂದು ಸಂಬಂಧವಿಲ್ಲದಂತೆ ಅಸಂಬದ್ಧವಾಗಿ ಹೇಳುತ್ತ ಹೋಗುವ ಲಕ್ಕಿ ನಮ್ಮ ಪ್ರಚಾರ ಮಾಧ್ಯಮಕ್ಕೆ ಮತ್ತು ಅದರಿಂದ ಸ್ವಲ್ಪಮಟ್ಟಿಗಾದರೂ ಪ್ರಭಾವಿತವಾಗುವ ನಮ್ಮ ಯೋಚನೆಗೆ ಒಳ್ಳೆಯ ಪ್ರತೀಕವಾಗಬಹುದು, ಅಪಪ್ರಚಾರಕ್ಕೆ ಪಕ್ಕಾಗದಂತೆ ಬುದ್ಧಿ ಹೃದಯಗಳನ್ನು ಎಚ್ಚರದಲ್ಲಿಟ್ಟುಕೊಳ್ಳುವುದು, ಸಾಧ್ಯವಿರುವಷ್ಟು ಮಟ್ಟಿಗೆ ಯೋಚನೆಯಲ್ಲಿ ಲಕ್ಕಿಗಳಾಗಿಬಿಡದಂತೆ ನಿಗಾವಹಿಸುವುದು ಈಗ ಎಷ್ಟು ಕಷ್ಟ
ಎನ್ನುವುದೂ ಗೊತ್ತಾಗಿದೆ.

Close

ಮಹಾರಾಜರ ಕ(ವಿ)ತೆಗಳು

ಮಹಾರಾಜರ ಕ(ವಿ)ತೆಗಳು

ಮಲೆಯಾಳದಲ್ಲಿ : ಡಾ| ಕೆ ಅಯ್ಯಪ್ಪ ಪಣಿಕ್ಕರ್
– ಕನ್ನಡಕ್ಕೆ : ವೇಣುಗೋಪಾಲ ಕಾಸರಗೋಡು

[ಡಾ| ಕೆ. ಅಯ್ಯಪ್ಪ ಪಣಿಕ್ಕರ್, M.A, A.M., Phd. ಇವರು ಮಲೆಯಾಳದ ಸುಪ್ರಸಿದ್ಧ ಕವಿಗಳಲ್ಲೊಬ್ಬರು, ಹೆಸರಾಂತ ವಿಮರ್ಶಕರೂ ಕೂಡಾ . ಇವರ ಅನೇಕ ಕವಿತೆಗಳು ಇಂಗ್ಲಿಷ್ ತಮಿಳು, ಕನ್ನಡ ಭಾಷೆಗಳಿಗೆ ಅನುವಾದಗೊಂಡಿವೆ, ಇವರು ಮಲೆಯಾಳದಲ್ಲಿ ಸೃಜನ ಹಾಗೂ ವಿಮರ್ಶಾ ಸಾಹಿತ್ಯಗಳಿಗೇ ಮೀಸಲಾದ ಪ್ರಪ್ರಥಮ ನಿಯತ ಕಾಲಿಕವಾದ “ಕೇರಳ ಕವಿತ”ದ ಸ್ಥಾಪಕರೂ ಸಂಪಾದಕರೂ ಆಗಿದ್ದಾರೆ, ಆಧುನಿಕ ಮಲೆಯಾಳ ಬರಹಗಾರರಲ್ಲಿ ಹೊಸ ಪ್ರಜ್ಞೆಯನ್ನು ಮೂಡಿಸಿದ ಶ್ರೀಯುತರು ಕೇರಳದ ಆಧುನಿಕ ರಂಗಭೂಮಿಯ ನಿರ್ಮಾಣ ಪ್ರಚಾರಗಳಲ್ಲಿ ವಹಿಸಿದ ಪಾತ್ರ ಸ್ಮರಣಾರ್ಹ, ೧೯೬೦ ರಲ್ಲಿ ಇವರು ಪ್ರಕಟಿಸಿದ “ಕುರುಕ್ಷೇತ್ರಂ” ನೀಳ್ಗವನ ಮಲೆಯಾಳ ಸಾಹಿತ್ಯ ಚರಿತ್ರೆಗೆ ಹೊಸ ಆಯಾಮವನ್ನು ನೀಡಿತು ಮಾತ್ರವಲ್ಲ “ಆಧುನಿಕ ಸಾಹಿತ್ಯ” ಪ್ರಸ್ಥಾನಕ್ಕೆ ನಾಂದಿ ಹಾಡಿತು ಕನ್ನಡ ಸಾಹಿತ್ಯದಲ್ಲಿ ಅಡಿಗರಿಗಿರುವ ಸ್ಥಾನ ಮಲೆಯಾಳದಲ್ಲಿ ಪಣಿಕ್ಕರ್‌ ಅವರಿಗಿದೆ.

೧೯೩೦ ರಲ್ಲಿ ಜನಿಸಿದ ಡಾ! ಅಯ್ಯಪ್ಪ ಪಣಿಕ್ಕರ್ ಕಲ್ಲಿಕೋಟೆ, ತಿರುವನಂತಪುರ, ಹೈದರಾಬಾದು, ಇಂಡಿಯಾನಾ, ಬ್ಲೂಮಿಂಗ್ಟನ್‌ಗಳಲ್ಲಿ ವಿದ್ಯಾಭ್ಯಾಸ ಪಡೆದು ಪ್ರಸ್ತುತ ಕೇರಳ ವಿಶ್ವ ವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರೊಫೆಸರರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಮುಖ್ಯವಾಗಿ ರಾಜಕೀಯದಲ್ಲಿ ನೈತಿಕತೆಯನ್ನು ಪ್ರತಿಪಾದಿಸುವ ಇವರ ಕವಿತೆಗಳಲ್ಲಿ ಹರಿತವಾದ ವ್ಯಂಗ್ಯ ಮತ್ತು ತೀವ್ರ ಸಾಮಾಜಿಕ ಕಳಕಳಿ ಕಂಡು ಬರುತ್ತವೆ. ಮುನ್ನೂರಕ್ಕೂ ಮಿಕ್ಕಿದ ಕವನಗಳುಳ್ಳ ಅವರ ಕವನ ಸಂಕಲನವೊಂದು ಇತ್ತೀಚೆಗೆ ಪ್ರಕಟವಾಗಿದೆ.]

ಮಹಾರಾಜನೂ ಮರಗಪ್ಪೆಯೂ

ಬೆಳಗ್ಗಿನೂಟ ತೀರಿಸಿ ಸುಮಾರು ಎರಡು ಗಳಿಗೆ ಕಳೆದಿರಬಹುದು.

ನಸುಕು ಹರಿದಾಗ ಎಡದ ಅಂಗೈಯಲ್ಲಿ ಉಬ್ಬಿ ಬಂದ ಬಿಳಿಯ ಬೊಕ್ಕೆ
ಗಳನ್ನು ಬಲಗೈಯ ಹೆಬ್ಬೆರಳ ಉಗುರಿನಿಂದ ಚುಚ್ಚಿ ಸಿಡಿಸುವ
ಮಹತ್ವದ ಶ್ರಮದಲ್ಲಿ ಪ್ರವೃತ್ತರಾಗಿದ್ದರು ಮಾನ್ಯ ಮಹಾರಾಜರು
ಅಷ್ಟರಲ್ಲಿ ಕಂಬದ ಮೇಲೆ ಕುಳಿತಿದ್ದ ಮರಗಪ್ಪೆ ರಾಜ
ಕಿರೀಟದ ಮೇಲೆ ಕುಪ್ಪಳಿಸಿತು.
ಅದನ್ನು ಗಮನಿಸ ಬೇಕೇ, ಬೇಡವೇ, ಅಂತ ಸ್ವಲ್ಪ ಆಲೋಚಿಸಿದ
ಬಳಿಕ ಮಹಾರಾಜರು ಖಚಿತ ತೀರ್ಮಾನಕ್ಕೆ ಬಂದರು.

“ಯಾರಲ್ಲಿ ?”

ಕಾಲಲ್ಲಿ ನಿನದಿಸುವ ಗೆಜ್ಜೆಯೂ, ಕೈಯಲ್ಲಿ ಬೆಳ್ಳಿ ಕಟ್ಟಿನ ಯಷ್ಟಿಯೂ
ಇರುವ ಹರಿಕಾರ ಒಳಬಂದ.

“ಪರಾಕು”

ಇನ್ನೊಂದು ಬೊಕ್ಕೆಯನ್ನೂ ಒಡೆದ ನಂತರ ಮಹಾರಾಜರು ಹರಿಕಾರ
ನಿಗೆ ಆಜ್ಞೆ ನೀಡಿದರು.

“ಮಂತ್ರಿಯನ್ನು ಬರಹೇಳು”

ಹರಿಕಾರ ಗೆಜ್ಜೆ ಕುಣಿಸುತ್ತ ಯಷ್ಟಿಯನ್ನ ಉಗಿಸಿದ.

“ಅಪ್ಪಣೆ”

ಹರಿಕಾರ ಮರೆಯಾದೊಡನೆ ಮಂತ್ರಿ ಬಂದ.

“ಮಹಾಪ್ರಭುಗಳಿಗೆ ಜಯವಾಗಲಿ”

ಮಹಾರಾಜರು ಮತ್ತೊಂದು ಬೊಕ್ಕೆಯನ್ನೊಡೆದರು :
“ಮಂತ್ರಿ ಪುಂಗವಾ, ನಮ್ಮ ಕಿರೀಟದ ಮೇಲೆ ಈಗೊಂದು ಮರ
ಗಷ್ಟೆ ಕುಳಿತಿರುವ ವಿಷಯ ನಾವು ತಿಳಿದಿದ್ದೇವೆ.
ಅದು ನಮ್ಮ ಶಿರಸ್ಸನ್ನು ಪ್ರವೇಶಿಸುವ ಮೊದಲು ಅದನ್ನ
ಧ್ವಂಸಗೊಳಿಸುವುದಕ್ಕಾಗಿ ಸೇನಾಧಿಪತಿಗೂ ಅಕ್ಷೌಹಿಣೀ ಬಲಕ್ಕೂ
ಕೂಡಲೇ ಸಜ್ಜಾಗುವಂತೆ ಹೇಳು”

“ಪ್ರಭು ಚಿತ್ತ”

ಮಂತ್ರಿ ಹೋದೊಡನೆ ಸೇನಾಧಿಪತಿಯೂ ಆಕ್ಷೌಹಿಣೀ ಸೈನ್ಯವೂ
ಪ್ರವೇಶಿಸಿ ಶೂಲ, ಗದೆ, ಬಡಿಗೆ ಮುಂತಾದ ಅತ್ಯಾಧುನಿಕ ಶಸ್ತ್ರಾಸ್ತ್ರ
ಗಳನ್ನು ಅತಿ ಸಮರ್ಥವಾಗಿ ಉಪಯೋಗಿಸಿದಾಗ.ರಾಜ
ಕಿರೀಟವೂ ಅದರಲ್ಲಿ ಸುಖಾಸೀನನಾದ ಕಪ್ಪೆ ಶ್ರೇಷ್ಠನೂ ಅವು
ಗಳನ್ನು ಧರಿಸಿದ್ದ ರಾಜ ಶಿರಸ್ಸೂ ಛಿದ್ರ ವಿಚ್ಛಿದ್ರವಾಗಿ ಕೆಳಗೆ
ಉರುಳಿದುವು.

ಕೋರಳಿನಿಂದ ತಲೆ ಅತಿ ಮನೋಹರವಾಗಿ ಕಳಚಿ ಬಿದ್ದಾಗ
ಮಹಾರಾಜರು ಒತ್ತಿ ಹೇಳಿದರು ;
“ಮಹಾರಾಜರೊಂದಿಗೆ ಮರಗಪ್ಪೆ ಸರಸವಾಡಿದರೆ
ಹೀಗಾದೀತು ಜೋಕೆ !”

ಮಹಾರಾಜನಿಂದ ಜೇಡ ಕಲಿತ ಪಾಠ

ಎಂಟನೇ ಬಾರಿಯೂ ರಾಜ್ಯ ಭ್ರಷ್ಟರಾದ ಮಹಾರಾಜರು
ಕುರ್ಚಿಯ ಬಲಗೈಗೆ ಒರಗಿ ಕುಳಿತರು.
ಪುನಃ ಪುನಃ ಮುನಿದು ಕೊಂಡರು.
ಅಲ್ಪ ಸ್ವಲ್ಪ ಬೇಸರಿಸಿದರು ;
ಮಾತ್ರವಲ್ಲ ಒಂದಿಷ್ಟು ಚಿಂತಿಸಿದರು ಕೂಡಾ,
ತಾನು ಎತ್ತಿ ಮುದ್ದಾಡಿ ಬೆಳೆಸಿದ ಪ್ರಜೆಗಳಿಗೆ ಹೇಗೆತಾನೇ ತೋರಿಬಿಟ್ಟಿತು

ತನ್ನನ್ನು ಅಧಿಕಾರದಿಂದ ತಳ್ಳಿ ಹಾಕುವುದಕ್ಕೆ ಎಂದು.
ಎಷ್ಟು ಆಲೋಚಿಸಿದರೂ ಮಹಾರಾಜರಿಗೆ ಹೊಳೆಯಲಿಲ್ಲ.
ಸಿಂಹಾಸನದ ಬದಲು

ಕಾಲು ಮುರಿದ, ಮರದ ಕುರ್ಚಿಯಲ್ಲಿ ಕೂರಬೇಕಾದ ದುರದೃಷ್ಟಕ್ಕೆ
ಕಾರಣ ಕಂಡು ಹುಡುಕಲು ಮಂತ್ರಿಗೆ ಆಜ್ಞಾಪಿಸಿದರು.
ಆದರೆ ಮಂತ್ರಿ ತನ್ನ ಆಜ್ಞೆಯನ್ನೀಗ ಅನುಸರಿಸಬೇಕಾಗಿಲ್ಲವಲ್ಲ
ಎಂದು ಆಮೇಲೆ ನೆನಪಾಗಿ

“ಅಪ್ಪಣೆ” ಎಂದು ತನ್ನಲ್ಲೇ ಗೊಣಗುಟ್ಟಿದ ಮೇಲೆ
ಬಗ್ಗಿ ನಿಂತು ಚಿಂತಾಕುಲ ಮಸ್ತಿಷ್ಕದಲ್ಲಿ
ವರ್ಣರಂಜಿತ ಚಿತ್ರ ಹೆಣೆದುಕೊಂಡರು.

ಆ ರಾತ್ರೆಯಲ್ಲಿ ಅವು ಮಳೆಬಿಲ್ಲಾಗಿಯೂ ಮಿಂಚುಹುಳವಾಗಿಯೂ
ಸೂರ್ಯನಾಗಿಯೂ ಚಂದ್ರನಾಗಿಯೂ ಒಮ್ಮೆಲೆ
ಶೋಭಿಸಿದುವು.
ಆ ಮೇಲೆ ಬೆಳಕು ಮೂಡಿತು,
ತುಷಾರಬಿಂದುಗಳ ಕಂಪಿನಲ್ಲಿ ಉತ್ಸಾಹಗೊಂಡ ಮಹಾರಾಜರು
ಒಂಭತ್ತನೇ ಬಾರಿಯೂ
ಅಧಿಕಾರ ಕಸಿದುಕೊಳ್ಳಲು ಪ್ರಯತ್ನಿಸತೊಡಗಿದರು.

ಇದನ್ನು ಕಂಡ ಜೇಡ ಮಹಾರಾಜರನ್ನು ಶ್ಲಾಘಿಸಿತು.
ತುಂಡಾದ ತನ್ನ ಬಲೆ ಹೆಣೆಯುವುದಕ್ಕೆ ವಂರಳಿ ಯತ್ನಿಸುವ ಬದಲು
ಕುರ್ಚಿಯ ಕಾಲುಗಳೆಡೆಯಲ್ಲಿ ಶೋಕಿಸುತ್ತಿದ್ದ ಜೇಡ
ಮಹಾರಾಜರಿಂದಲೇ
ಅನಂತ ಯತ್ನದ ರಾಜಕೀಯ ಪಾಠ ಕಲಿಯಿತು.
“ಜೇಡನೇ
ಎರಡು ಕಾಲಿರುವ ನಾನು ಮೂರು ಕಾಲಿರುವ ಈ ಕುರ್ಚಿಯೂ
ದುಃಖಿಸುವುದಿಲ್ಲ.
ಹೀಗಿರಲು, ಎಂಟು ಕಾಲುಗಳುಳ್ಳ ನೀನಾದರೂ ಯಾಕೆ ವ್ಯಾಕುಲಿಸಬೇಕು
ಅಂಟಿದ್ದರೆ ಯಾವುದನ್ನೂ ಅಂಟಿಸಬಹುದು
ಎಂಬ ಸತ್ಯದರ್ಶನವನ್ನು ಮರೆಯದಿರು
ಶುಭ ಸಮಯ ನಮಗೂ ಬಂದೀತು, ನಂಬು”,

ರಾಜಕುಮಾರನ ಜಾಲ

ಅತಿ ಪುರಾತನವೂ ಪರಮ ಪಾವನವೂ ಆದ ಈ ಅರಮನೆಯಲ್ಲಿ
ಇಂಥಾ ಒಂದು ಪ್ರಾರಬ್ದ ಹೇಗೆ ಹುಟ್ಟಿತು? ಏನು ಕಾರಣ………….
ಎಂದಿತ್ಯಾದಿ ಚಿಂತಿಸಿ ಚಿಂತಿಸಿ ಮಹಾರಾಜ ರಾಜ ಪರಮೇಶ್ವರರು ಅಸ್ವಸ್ಥರಾದರು
ಮಂತ್ರಿ, ಪರಮೇಷ್ಠಿ ಊರೂರು ಸುತ್ತಿ ಏನೇನೊ ಗೊಣಗಿ ಕೊನೆಗೆ
ಅರಮನೆಯ ಪರಿಸರಕ್ಕೆ ಬಂದ.
ರಾಜಕೀಯವಾದ ಈ ಅಸ್ವಾಸ್ಥ್ಯ ಅಷ್ಟರಲ್ಲೇ
ಮಹಾರಾಣಿಗೂ ಹಬ್ಬಿಬಿಟ್ಟಿತ್ತು.
ಮೂಗು ಒಂದಿಷ್ಟು ಜಜ್ಜಿ ಹೋಗಿದ್ದರೆ
ಪ್ಲಾಸ್ಟಿಕ್‌ ಸರ್ಜರಿಯಿಂದ ಸರಿಪಡಿಸಬಹುದಿತ್ತಲ್ಲಾ ಎಂದವರು ಪರಿತಪಿಸಿದರು
ಮೇಲ್ದುಟಿ ಸೀಳಿಹೋಗಿದ್ದಲ್ಲಿ
ಹೊಲಿದು ಸೇರಿಸಿ ಮುಗುಳ್ಳಗೆಯನ್ನರಳಿಸಬಹುದಾಗಿತ್ತಲ್ಲಾ –
ಎಂದವರು ಹಪಹಪಿಸಿದರು.
ಶಿರಸ್ಸು ರೋಮರಹಿತವೂ, ಬೋಳಾಗಿಯೂ ಇದ್ದಲ್ಲಿ
ಕಿರೀಟವೇರಿಸಿ ಅದನ್ನು ಮರೆಯಾಗಿಸಬಹುದಿತ್ತಲ್ಲಾ ಎಂದವರು –
ದುಃಖಿಸಿದರು.
ಮಹಾರಾಣಿಯ ದುಃಖ ಕಾರಣ ಅದೊಂದೂ ಆಗಿರಲಿಲ್ಲ.
ಸೂಲಗಿತ್ತಿಯರು ಸ್ನಾನ ಮಾಡಿಸಿ ತಂದಾಗ ಕಂಡದ್ದು
ರಾಜಕುಮಾರನ ಒಂದಿಂಚು ನೀಳದ ಮೊಂಡುಬಾಲದ ದರ್ಶನವನ್ನು
ಮತ್ತೆ ಅತ್ತ ನೋಡುವ ಧೈರ್ಯ ಅವರಿಗಿರಲಿಲ್ಲ, ಅಂತೂ
ವಿಕಾಸವಾದದ ಚಿಂತೆಯಲ್ಲಿ ಮಹಾರಾಜರು ಮುಳುಗಿದರು ಎಂದರೆ
ಮುಗಿಯಲಾರದಲ್ಲಾ ಕ(ವಿ)ತೆ.
ಇದಕ್ಕೆಲ್ಲಾ ಪರಿಹಾರ ಕಂಡ ಅಮಾತ್ಯ ಪ್ರಮುಖ ರಾಜಕುಮಾರ
ನನ್ನು ಸಂತೈಸಲು ಸ್ವಯಂ
ಮೊಂಡುಬಾಲವನ್ನು ಕಟ್ಟಿಕೊಂಡ.
ಹೊಸದೊಂದು ಬಾಲ ನೃತ್ಯವನ್ನೇ ಶೋಧಿಸಿ ಪ್ರಸರಿಸಿದರು
ಊರಿಡೀ ಬಾಲಾರಾಧನೆಯನ್ನು ಬಳಕೆಗೆ ತಂದರು,
ಬಾಲಪೂಜೆಯ ವಿಧಿ ವಿಧಾನಗಳ ಕುರಿತು ವಿದ್ವಾಂಸರ
ಸೆಮಿನಾರುಗಳು ನಡೆಯತೊಡಗಿದುವು. ಉದ್ದವಾಗುತ್ತಿರುವ ಬಾಲಕ್ಕಿಂತಲೂ ತುಂಡುಬಾಲ ಎಷ್ಟೊಂದು ಸುಂದರ
________________
ಸಾಕ್ಷಿ / ಗಿಣಿ
ಎಂದವರು ಸೋದಾಹರಣ ಪೂರ್ವಕ ಸಮರ್ಥಿಸಿದರು.
ಸೇನಾಧಿಪತಿಯಿಂದ ಸೇವಕನವರೆಗೆ ವಿವಿಧ ವರ್ಗಕ್ಕಾಗಿ
ಬಾಲ ನಿರ್ಮಿಸುವ ಫ್ಯಾಕ್ಟರಿಗಳು ಹುಟ್ಟಿಕೊಂಡವು.
ಮೊಂಡುಬಾಲದಲ್ಲಿ ಕುಕ್ಕರಿಸುವ ಸುಖದ ಕುರಿತು
ಈಜುಕೊಳದಲ್ಲೇ ಬಿದ್ದಿರುವ ಷೋಡಶಿಯರು ಸ್ವಪ್ನ ಕಂಡರು
ಬಾಲ ಪ್ರದರ್ಶನ ಸ್ಪರ್ಧೆಗಳಲ್ಲಿ ಅವರು ಪ್ರಶಸ್ತಿಯನ್ನೂ ಗಳಿಸಿದರು,
ಚರಿತ್ರೆಯ ಯಾವುದೋ ಕೆಟ್ಟಗಳಿಗೆಯಲ್ಲಿ ಮನುಷ್ಯನ ಬಾಲ
ನಷ್ಟವಾಗಿರುವ ಕತೆ ಯಾರೋ ಬೇಕೆಂದೇ ಬರೆದು ಸೇರಿಸಿದರೂ
ಇದೀಗ ಆ ಅಪ್ರಿಯ ಘಟ್ಟ ಮುಗಿದು ಹೋಯಿತು ಎಂಬ
ಅಶರೀರವಾಣಿಯನ್ನು ಪ್ರವಾದಿಗಳು ಕೇಳಿ
ಆನಂದಿಸಿ ಪ್ರಚುರ ಪಡಿಸಿದರು.
ಊರಿಡೀ ಮತ್ತೆ ಆನಂದ ಮೂರ್ಛಯಲ್ಲಿ ಮುಳುಗಿತು,
ಮಹಾರಾಜನೂ ಮಹಾರಾಣಿಯೂ ಸಮಾಧಾನಗೊಂಡರು,
ಒಬ್ಬನಿಗೆ ಮಾತ್ರ ಆ ರಾಜ್ಯದಲ್ಲಿ ದುಃಖ ಉಳಿದುಬಿಟ್ಟಿತ್ತು
ಯುವರಾಜ್ಯಾಭಿಷೇಕಕ್ಕಾಗಿ ಅತ್ಯಾಡಂಬರ
ಪೂರ್ವಕ ಮೆರವಣಿಗೆಬಂದ ರಾಜಕುಮಾರನಿಗೆ ಮಾತ್ರ
ಒಂದಿಂಚು ನೀಳದ ಆ ಒಂದು ಕಿರುಕುಳ
ಮರೆಯಲಾಗಿರಲಿಲ್ಲ
ಆ ದೊಡ್ಡ ರಾಜ್ಯದಲ್ಲಿ ಅವನೊಬ್ಬ ಮಾತ್ರ
ಏಕಾಂತದಲ್ಲಿ ದುಃಖಿಸಿದ.

ಮಹಾರಾಜನೂ ಭೇದಿಯೂ

ಮಹಾರಾಜರಿಗೆ ಭೇದಿ ತೊಡಗಿದಾಗ
ರಾಜ್ಯವಿಡೀ ಅಸ್ವಾಸ್ಥ್ಯವನ್ನನುಭವಿಸಿತು
ತಕ್ಕೆ ಕ್ರಮಕೈಗೊಳ್ಳುವಂತೆ ಮಂತ್ರಿ ಪುಂಗವನಿಗೆ ನಿರೂಪ ಬಂತು.
ಮಂತ್ರಿಯಿಂದ
ಹರಿಕಾರನಿಗೆ
ಅವನಿಂದ ಸೇನಾಧಿಪತಿಗೆ.
ಸೇನಾಧಿಪತಿಯ ಮುಖಾಂತರ
ಸೈನಿಕರಿಗೂ ಅವರಿಂದ
ಊರೂರು ತಿರುಗುವ ದತನಿಗೂ
ಇದು ಮುಟ್ಟಿತು.
ದೂತ ಧನ್ವಂತರಿಯನ್ನು ಕಂಡ ಕೂಡಲೇ
ರೋಗಿಯನ್ನೊಮ್ಮೆ ಪರೀಕ್ಷಿಸಿ ಬಿಡುವ, ಏನು ? ಅಂದ ಧನ್ವಂತರಿ,
ಆರೋಗಣೆಗೆ ಭಂಗವುಂಟಾಗಕೂಡದು ಎಂಬುದಕ್ಕಾಗಿ
ಮಹಾರಾಜರು ಖುದ್ದು ಬರುವುದಿಲ್ಲವೆಂದೂ
ಬದಲು
ಅವರ ಉಪ್ಪುಂಡು ಬಳೆದ ದೂತನನ್ನು
ಪರಾಂಬರಿಸಿ ಮತ್ತು ನಿರ್ಧರಿಸಬೇಕೆಂದೂ
ಅರಮನೆಯಿಂದ ರಾಜಾಜ್ಞೆ ಬಂತು.
ಧನ್ವಂತರಿ ದೂತಪರೀಕ್ಷೆಯಿಂದಲೇ ರೋಗ ಗುರುತಿಸಿದ.
ಮಹಾರಾಜರಿಗೆ ಬೆಲೆಬಾಳುವ ಮದ್ದೇ ಆಗಬೇಕೆಂದು
ಮಂತ್ರಿ ಪ್ರತ್ಯೇಕ ಸೂಚಿಸಿದ.
ಕೊನೆಗೂ ಮದ್ದಿನಂದಿಗೆ ದೂತ ಅರವಾನೆಗೆ ಬಂದ.
ಸೈನಿಕರು ಮದ್ದನ್ನು ಸೇನಾಧಿಪತಿಗೊಪ್ಪಿಸಿದರು
ಸೇನಾಧಿಪತಿ ಮಂತ್ರಿಗೊಪ್ಪಿಸಿದ.
ರಾಜಾಂಗಣದಲ್ಲಿ ಎಲ್ಲರೂ ಕಾದು ಕುಳಿತರು.
ಅಸ್ವಾಸ್ಥವಾದ್ದರಿಂದಲೂ, ಆರೋಗಣೆಯಿದ್ದುದರಿಂದಲೂ
ಒಡ್ಡೋಲಗಕ್ಕೆ ಚಿತ್ತೈಸಲಸಾಧ್ಯ ಮಹಾರಾಜರಿಗೆ
ಎಂಬ ವಿಷಯವನ್ನು ಮಂತ್ರಿ ಬೆಳಕಿಗೆ ತಂದ.
ಅವರ ಬದಲು
ಅವರಿಗಾಗಿ
ನಂಬಿಗಸ್ಥನಾದ ವ೦ಂತ್ರಿಯೇ ಮದ್ದು ಕುಡಿದ.
ರಾಜಸಭೆಯಿಡೀ ಆಹಾ ! ಆಹಾ!
ಎಂದು ರೋಮಾಂಚ ಪುಳಕ ಸಂತೋಷ.
ಅಷ್ಟರಲ್ಲೇ ಮಾನ್ಯ ಮಹಾರಾಜರು
ಆರೋಗಣೆಯಿಂದ ಅವರರಾಗಿ ಬಿಟ್ಟಿದ್ದರು……

-ಎಂಬಲ್ಲಿಗೆ ಮಹಾರಾಜರ ಕ(ವಿ)ತೆಗಳು ಎಂಬ ಪರಮ ಪಾವನ ಪುಣ್ಯ ವೃತ್ತಾಂತಗಳು
ಪರಿಸಮಾಪ್ತಿಗೊಳ್ಳುವುವು, ಓಂ ಸ್ವಸ್ತಿ,

Close

ವಸ್ತು. ಶೈಲಿ ಮತ್ತು ಭಾಷೆ

ವಸ್ತು, ಶೈಲಿ ಮತ್ತು ಭಾಷೆ

-ಜಿ ಎನ್ ರಂಗನಾಥರಾವ್

ಸಾಹಿತ್ಯದಲ್ಲಿ ಸಾಮಾಜಿಕ ರೆಲವೆನ್ಸ್‌ ಕುರಿತ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ
ರಾಮಚಂದ್ರ ದೇವ ಅವರ ಲೇಖನದ (ಸಾಕ್ಷಿ-೩೦) ಆಶಯ ಒಳ್ಳೆಯದಾದರೂ ಫಲಿ
ತಾಂಶದಲ್ಲಿ ಹಾದಿ ತಪ್ಪಿದೆ ಅನಿಸುತ್ತದೆ. ಇದಕ್ಕೆ ಕಾರಣ ರಾಮಚಂದ್ರ ದೇವ ಅವರ
ಯೋಚನಾ ಕ್ರಮದಲ್ಲಿನ ಗೊಂದಲ ಮತ್ತು ವಿರೋಧಾಭಾಸಗಳು.

ಅವರ ಲೇಖನದಲ್ಲಿ ಎದ್ದು ಕಾಣುವ ವಿರೋಧಾಭಾಸಗಳು ಈ ಎರಡು ಅಂಶಗಳಿಗೆ ಸಂಬಂಧಿಸಿದ್ದು :

ಅ) ಬಾಹ್ಯ ಪ್ರಪಂಚವನ್ನು ವಿವರಿಸುತ್ತಾ
ಹೋಗುವಾಗಿನ ಲೇಖಕನ ಶೈಲಿ
ಮತ್ತು ಕೃತಿಯ ಅಂತಃಸತ್ತ್ವವಾದ
ವಸ್ತುವಿನ ನಡುವಣ ಸಂಬಂಧ

ಆ) ಮಧ್ಯಮ ವರ್ಗದ ಆಸೆ, ನಿರಾಸೆ,
ದುಃಖ, ದುರಂತಗಳನ್ನು ಚಿತ್ರಿಸುವ
ನವ್ಯ ಸಾಹಿತ್ಯ ಮತ್ತು ಅದರ ಮಿತಿ,

ಸಾಮಾಜಿಕ ಸಮಸ್ಯೆಗಳನ್ನು ಅಥವಾ ಹೊರಗಿನ ಯಾವುದೇ ಒಂದನ್ನು ವಿವರಿಸುತ್ತಾ ಹೋಗುವುದು ಮತ್ತು ಅವುಗಳನ್ನು ಮಾನವೀಯ ಪರಿಭಾಷೆಗಳಲ್ಲಿ ಅರ್ಥವಿಸುವುದು ಒಬ್ಬ ಲೇಖಕನ ಶೈಲಿಯನ್ನು ನಿರೂಪಿಸುತ್ತದೆ. ಎನ್ನುವ ರಾಮಚಂದ್ರದೇವ ತಮ್ಮ ಈ ಮಾತಿಗೆ ನಿದರ್ಶನವಾಗಿ ಜಾರ್ಜ್ ಲುಕಾಪ್ಸನ ಎರಡು ಉದಾಹರಣೆಗಳನ್ನು ನೀಡುತ್ತಾರೆ. ಅವು : ಎಮಿಲಿಜೋಲಾನ ‘ನಾನಾ’ ಕಾದಂಬರಿ ಮತ್ತು ಟಾಲ್‌ಸ್ಟಾಯನ ‘ಅನ್ನಾ ಕೆರೆ ನಿನಾ’ ಕಾದಂಬರಿಗಳಲ್ಲಿ ಬರುವ ಕುದುರೆ ಜೂಜಿಗೆ ಸಂಬಂಧಿಸಿದ್ದು.

ಜೋಲಾ ತನ್ನ ಕಾದಂಬರಿಯಲ್ಲಿ ಕುದುರೆ ಪಂದ್ಯದ ಸಮಸ್ತ ವಿವರಗಳನ್ನೂ ತಂದು ತುರುಕುತ್ತಾನೆ; ಆದರೆ ಟಾಲ್‌ಸ್ಟಾಯ್ ಕುದುರೆ ಪಂದ್ಯದ ಬಗ್ಗೆ ಕೆಲವೇ ಮಾತುಗಳಲ್ಲಿ ಹೇಳುತ್ತಾನೆ. ಕುದುರೆ ಪಂದ್ಯ, ಇಲ್ಲಿ, ಇಡೀ ಕಾದಂಬರಿಯ ವ್ಯಕ್ತಿಗಳ ಜೀವನದೊಂದಿಗೆ ಸಂಬಂಧ ಹೊಂದಿದೆ. ಇಲ್ಲಿ, ಟಾಲ್‌ಸ್ಟಾಯ್ ಕುದುರೆ ಜೂಜನ್ನು ಅದಕ್ಕೆ ಸಂಬಂಧಪಟ್ಟ ಪಾತ್ರಗಳ ಜೀವನದೊಂದಿಗೆ–ತನ್ಮೂಲಕ ಇಡಿಯ ಕಾದಂಬರಿಯೊಂದಿಗೆ ತಳುಕು ಹಾಕುತ್ತಾ ನಿರೂಪಿಸುತ್ತಾನೆ. ಕುದುರೆ ಪಂದ್ಯ ಕಾದಂಬರಿಯ ಕೇಂದ್ರದ ಪೋಷಣೆಗೆ ಎಷ್ಟು ಅಗತ್ಯವೋ ಅಷ್ಟನ್ನು ಕೊಡುತ್ತದೆ. ಬಳಿಕ ಅದರ ಬಗ್ಗೆ ಚಕಾರ ಎತ್ತುವ ಅನಿವಾರ್ಯತೆ ಟಾಲ್‌ಸ್ಟಾಯಿಗಿಲ್ಲ, (ಇರಬಾರದು ಎಂಬುದನ್ನು ರಾಮಚಂದ್ರದೇವ ಅವರೂ ಒಪ್ಪುತ್ತಾರೆ.) ಆದರೆ ಜೋಲಾ, ಟಾಲ್‌ಸ್ಟಾಯ್ ಅಲ್ಲ, ಅವನು ವಾಚಾಳಿ. ಕುದುರೆ ಪಂದ್ಯಕ್ಕೂ ತನ್ನ ಕಾದಂಬರಿಯ ಮೂಲವಸ್ತು ಅಥವಾ ಕೇಂದ್ರಕ್ಕೂ ಇರಬಹುದಾದ ಸಂಬಂಧವನ್ನು ಮರೆತು ಬೇಕು, ಬೇಡವಾದ್ದನ್ನೆಲ್ಲ ವಿವರಿಸುತ್ತಾ ಹೋಗುತ್ತಾನೆ. ಟಾಲ್‌ಸ್ಟಾಯ್ ತನ್ನ ವ್ಯಕ್ತಿಗಳ ಅವಸ್ಥೆ (State of affairs) ಅವರ ಜೀವನಕ್ಕೆ ಸಂಬಂಧಿಸಿದಂತೆ ಎಷ್ಟು ಬೇಕೋ ಅಷ್ಟನ್ನು ಆಯ್ದುಕೊಂಡರೆ ಜೋಲಾನಲ್ಲಿ ಇಂಥ ಆಯ್ಕೆ ಇಲ್ಲ, ಎಲ್ಲ ವಿವರಗಳನ್ನೂ ದಾಖಲು ಮಾಡುತ್ತಾನೆ. ಇದರಿಂದಾಗಿ ಜೋಲಾರ ಕಾದಂಬರಿಯ ಮೂಲವಸ್ತುವಿಗೂ ಅವನು ಕೊಡುವ ಜೂಜಿನ ವಿವರಗಳಿಗೂ ಅವಿನಾ ಭಾವ ಸಂಬಂಧ ಹೊಂದದೇ ವಿವರಗಳೆಲ್ಲ ದಾಖಲೆಯಾಗಿ-ರಾಮಚಂದ್ರದೇವ ಹೇಳುವಂತೆ ಶಾನುಭೋಗರ ದಾಖಲೆಯಾಗಿ-ಉಳಿಯುತ್ತದೆ.

ಸೃಜನಶೀಲ ಬರಹಗಾರ ಕೃತಿಯ ಮೂಲದ್ರವ್ಯವಾದ ವಸ್ತು ಮತ್ತು ಅದರ ಕೇಂದ್ರಬಿಂದು, ದೃಷ್ಟಿ, ಧೋರಣೆಗಳನ್ನು ಮರೆತು ಹಸಿರು ಕಂಡಲ್ಲಿ ಬಾಯಿ ಹಾಕುವ ತೊಂಡು ದನದಂತೆ ತನ್ನ ಸಂವೇದನಾಶೀಲತೆಯನ್ನು ಹರಿಯಬಿಟ್ಟಲ್ಲಿ ಅವನು ಒಂದು ಕ್ಯಾಮೆರಾ ಮಾಡುವಂಥ ಕೆಲಸವನ್ನು ಮಾತ್ರ ಮಾಡುತ್ತಾನೆ ಎಂಬ ಮಾತಿಗೆ ಎರಡನೇ ತಕರಾರಿಲ್ಲ. ಜೀವನವನ್ನು ಅರ್ಥವಿಸುವಾಗ ಸೃಜನಶೀಲ ಬರಹಗಾರ ತನ್ನ ಕೃತಿಯ ಫ್ರೆಂ ಮರೆ ತರೆ ಅವನ ಶೈಲಿ ವಾಚಾಳಿಯಾಗುತ್ತದೆ. ಮೇಲೆ ಹೇಳಿದಂತೆ, ತಾವಾಗಿ ಒದಗಿಸಿರುವ
ಎರಡು ನಿದರ್ಶನಗಳ ಮೂಲಕ ಈ ಮಾತನ್ನು ಒಪ್ಪುವ ರಾಮಚಂದ್ರ ದೇವ ಲೇಖನದ ಕೊನೆ ವೇಳೆಗೆ ತಾವು ಆರಂಭದಲ್ಲಿ ಯಾವುದನ್ನು ಬೇಡ ಎನ್ನುತ್ತಾರೋ ಅದನ್ನೇ ಸ್ವೀಕರಿಸಿ ಬಿಡುತ್ತಾರೆ. ‘ಸಂಸ್ಕಾರ’ ಹಾಗೂ ಇತರ ನವ್ಯ ಕೃತಿಗಳನ್ನು ಕುರಿತು ಅವರು ತಾಳಿರುವ ನಿಲುವನ್ನು ಗಮನಿಸಿದರೆ ಈ ಮಾತು ಸ್ಪಷ್ಟವಾಗುತ್ತದೆ.

‘ಭಾರತೀಪುರ’ ಪ್ರಕಟವಾದ ನಂತರ ‘ಸಂಸ್ಕಾರ’ ಕಾದಂಬರಿಯನ್ನು ಮತ್ತೆ ಓದಿದಾಗ ತಮಗೆ ರೇಗಿತು ಎಂದು ರಾಮಚಂದ್ರ ದೇವ ಬರೆದಿದ್ದಾರೆ. ಇದಕ್ಕೆ ಕಾರಣ : ‘ಸಂಸ್ಕಾರ’ ಆಶಿಸುವ ಹೊಸ ಹುಟ್ಟನ್ನು ಪಡೆಯುವ ಸ್ವಾತಂತ್ರ್ಯ-ಅಂದರೆ ಪರಂಪರಾನುಗತವಾಗಿ ಬಂದಿರುವ ಜಡ ಸಮಾಜ, ಅದರ ಟೊಳ್ಳು ಮೌಲ್ಯಗಳು ಮತ್ತು ಒಟ್ಟು ಜೀವನ ವಿಧಾನದಿಂದ ಬಿಡುಗಡೆ ಹೊಂದಿ ಹೊಸ ಮೌಲ್ಯಗಳನ್ನು ಕಂಡುಕೊಳ್ಳುವ ಕ್ರಿಯೆ ಪ್ರಾಣೇಶಾಚಾರ್ಯ, ನಾರಣಪ್ಪ ಮೊದಲಾದ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಮೀಸಲಾಗಿದೆ. ಅನಂತಮೂರ್ತಿಯವರು ಈ ಮಿತಿ ದಾಟಿ-ತಾವೇ ಹಾಕಿಕೊಂಡ ಗೆರೆ-ಬ್ರಾಹ್ಮಣ ಸಮುದಾಯದ ಮರುಹುಟ್ಟಿಗೆ (ಅಂದರೆ ಪುನರ್‌ ಜನ್ಮವಲ್ಲ- ಮತ್ತೆ, ಮನುಷ್ಯರಾಗಲು) ಜೀವಧಾತು ಎರೆಯುವ ಚಂದ್ರಿ, ಪದ್ಮಾವತಿಯರನ್ನು ತಲುಪುವುದಿಲ್ಲ, ಅವರ ಮನಸ್ಸು, ಜೀವನ, ಅದರ ಹಿನ್ನೆಲೆ ಮೊದಲಾದವುಗಳನ್ನು ಕುರಿತು ಚಿಂತಿಸುವುದಿಲ್ಲ ಎಂದು.

ರಾಮಚಂದ್ರ ದೇವ ‘ಸಂಸ್ಕಾರ’ದಲ್ಲಿ ಇರಬೇಕಿತ್ತು ಎಂದು ನಿರೀಕ್ಷಿಸುವುದೇನನ್ನು ? ಪದ್ಮಾವತಿ, ಚಂದ್ರಿ, ಮೊದಲಾದವರ ಆರ್ಥಿಕ ಜೀವನ, ಸಾಮಾಜಿಕ ಅಂತಸ್ತು, ಅವರು ಅನುಭವಿಸಬೇಕಾಗಿ ಬಂದ ದೇವದಾಸಿ ಪದ್ಧತಿ, ಅದರ ಹಿಂದಿನ ಕ್ರೌರ್ಯ, ಅಮಾನುಷತೆ, ಇನ್ನೂ ಒಂದನ್ನು ನಾನು ಸೇರಿಸಬಹುದಾದರೆ ಮಾಲೇರ ಪುಟ್ಟನ ಬಗ್ಗೆ, ತೋಟ ಮಾಡುವ ಅವನ ಆಸೆ, ಆಕಾಂಕ್ಷೆಗಳು-ಇವುಗಳ ಬಗ್ಗೆ ಅನಂತಮೂರ್ತಿ ವಿವರವಾಗಿ ಬರೆಯಬೇಕಿತ್ತು, ಜೀವನದ “ಅನಾದಿ-ಅನಂತ” ಹರಹೇ ಕಾದಂಬರಿಯ ಬಂಧ ಎಂದು ಒಪ್ಪಿಕೊಂಡಾಗ; ಇಡೀ ಮಾನವ ಸಮಾಜ ಕಾದಂಬರಿಯ ವಸ್ತುವಾದಾಗ ರಾಮಚಂದ್ರ ದೇವ ಅವರ ಈ ನಿರೀಕ್ಷೆ, ಅಪೇಕ್ಷೆಗಳು ಅನ್ಯಾಯವೇನಲ್ಲ. ಆದರೆ, ಸಂಸ್ಕಾರದ ಫ್ರೇಮಿನಲ್ಲಿ ಅವು ಎಷ್ಟರಮಟ್ಟಿಗೆ ಸರಿ ಎಂಬುದನ್ನು ನೋಡಬೇಕಾಗುತ್ತದೆ. ಬದುಕು ನಮ್ಮ ತೋಳ ಬೀಸಿಗೆ ಮೀರಿ ಅಗಾಧವಾದದ್ದು ಎಂಬುದನ್ನೂ ಲೇಖಕನ ಅನುಭವ ಮಿತಿಯನ್ನೂ ನಾವು ಮರೆಯುವಂತಿಲ್ಲ,

‘ಸಂಸ್ಕಾರ’ ಹೇಳಿ, ಕೇಳಿ ಅಬ್ಬಬ್ಬಾ ಎಂದರೆ-ಒಂದು ಸಮುದಾಯವನ್ನು ಪ್ರತಿ ನಿಧಿಸುವ (ಈ ಮಾತೂ ಉತ್ಪ್ರೇಕ್ಷೆಯಾದೀತೇನೋ) ವ್ಯಕ್ತಿತ್ವ ಪ್ರಧಾನವಾದ ಕೃತಿ.

ಇದರಲ್ಲಿ ಇಡೀ ಭಾರತೀಯ ಸಮಾಜ ಮತ್ತು ಅದು ಆಧರಿಸಿರುವ ಜೀವನ ಮೌಲ್ಯಗಳು ಒಳಗಾಗುವುದಿಲ್ಲ. ಪರಂಪರಾನುಗತವಾಗಿ ಬಂದ ಪೊಳ್ಳು ಮೌಲ್ಯಗಳನ್ನು ನಂಬಿ, ಅರ್ಥವಿಲ್ಲದ ನೀತಿ-ನಡಾವಳಿಕೆಗಳಲ್ಲಿ ಸಿಕ್ಕಿ ಗೊಡ್ಡು ಜೀವನ ನಡೆಸುತ್ತಿದ್ದೇನೆ ಎಂಬುದು ಮೊದಲಿಗೆ ನಾರಣಪ್ಪನೊಬ್ಬನಿಗೆ ಗೊತ್ತು, ಇದರ ವಿರುದ್ಧ ನಿಲ್ಲುವ ನಾರಣಪ್ಪನ ಕ್ರಿಯೆ ಉಳಿದ ಬ್ರಾಹ್ಮಣರನ್ನು ತಮ್ಮ ಬದುಕಿನ ರೀತಿ-ನೀತಿಗಳ ಅರ್ಥ ಶೋಧಕ್ಕೆ ತೊಡಗಿಸುವುದಿಲ್ಲ, ನಾರಣಪ್ಪನ ಬಂಡಾಯದಿಂದ ಕಣ್ ತೆರೆಯುವ ಏಕೈಕ ವ್ಯಕ್ತಿಯೆಂದರೆ ಪ್ರಾಣೇಶಾಚಾರ್ಯರು, ನಾರಣಪ್ಪನ ಸವಾಲಿನಿಂದ ಪ್ರಾಣೇಶಾಚಾರ್ಯರ ನಂಬಿಕೆಗಳು ಅಲುಗಾಡಿ, ತಾವು ನಂಬಿದ ಮೌಲ್ಯಗಳು, ಆರಾಧಿಸಿದ ದೈವ ಸುಳ್ಳು; ಸತ್ಯ ಬೇರೊಂದಿದೆ ಎಂಬುದು ಮನದಟ್ಟಾಗುತ್ತದೆ. ಮತ್ತೆ ಹಸಿಯಾಗಲು, ಹೊಸ ಹುಟ್ಟು ಪಡೆದು ಮಾನವ ಜೀವನದ ಪದರು ಸತ್ಯ-ಸ್ವಾತಂತ್ರಗಳನ್ನು ಕಂಡುಕೊಳ್ಳಲು ಅವರು ನಿರ್ಧರಿಸುತ್ತಾರೆ. ನಾರಣಪ್ಪನ ಸವಾಲಿನ ಮುಂದೆ ಆದ ಪ್ರಾಣೇಶಾಚಾರ್ಯರ ಸೋಲು ಇಡೀ ಬ್ರಾಹ್ಮಣ ವರ್ಗದ ಕಣ್ ತೆರೆಸುವ ಸಂಗತಿ. ಆದರೆ ಹಾಗಾಗುವುದಿಲ್ಲ; ಪ್ರಾಣೇಶಾಚಾರ್ಯರ ನಿರ್ಗಮನದೊಂದಿಗೆ ಇಡೀ ಅಗ್ರಹಾರ ಪ್ಲೇಗಿನಿಂದ ನಾಶವಾದ ಸೂಚನೆ ಇದೆ. ಆದರೆ ಈ ಸಾವು ಭೌತಿಕ ಸಾವೇ ಹೊರತು, ನೈತಿಕ ಸಾವಲ್ಲ. ನಂಬಿದ ಮೌಲ್ಯಗಳು ಬದುಕಿಗೆ ಗತಿ ಕಾಣಿಸದೇ ಆಗುವ ಸಾವಲ್ಲ.

ಮೊದಲಿನಿಂದಲೂ ಅಗ್ರಹಾರದ ಬ್ರಾಹ್ಮಣರು, ಪ್ರಾಣೇಶಾಚಾರ್ಯರಂತೆ ಪರಂಪರಾನುಗತವಾಗಿ ಬಂದ ಮೌಲ್ಯಗಳನ್ನು ಜೀವನ ಮೌಲ್ಯಗಳಾಗಿ ಅಂಗೀಕರಿಸಿ, ಅನುಷ್ಠಾನಕ್ಕೆ ತಂದವರಲ್ಲ, ಹಳೆಯ ಮೌಲ್ಯಗಳೇನಿದ್ದರೂ ಅವರ ಪಾಲಿಗೆ ದಕ್ಷಿಣೆ ತಂದು ಕೊಡುವ, ಮಠದ ಸಂತರ್ಪಣೆಗೆ ಆಮಂತ್ರಣ ತಂದು ಕೊಡುವ ಸಂಪ್ರದಾಯಗಳಷ್ಟೆ, Rituals ಅಷ್ಟೇ, ಇನ್ನು ಶಾಸ್ತ್ರಗ್ರಂಥಗಳೂ, ವೇದೋಪನಿಷತ್ತುಗಳೂ, ಭಾರತ-ಭಾಗವತಗಳೂ ಕಾಲ ಕಳೆಯಲು ಸಾಧನವಷ್ಟೇ. ನಾರಣಪ್ಪನ ಸಾವು, ಅದರಿಂದಾಗಿ ಉದ್ಭವಿಸುವ ಸಮ ಸ್ಯಗಳು, ಧರ್ಮಗ್ರಂಥಗಳಲ್ಲಿ ಪರಿಹಾರವಿಲ್ಲದಿರುವುದು, ಮಾರುತಿಯಿಂದ ವರ ಪಡೆಯುವುದರಲ್ಲಿ ಆಚಾರ್ಯರು ಸೋಲುವುದು-ಇವೆಲ್ಲವುಗಳಿಂದಲೂ ಅಗ್ರಹಾರದ ಬ್ರಾಹ್ಮಣರಿಗೆ ಇಷ್ಟು ದಿನ ತಾವೆಂಥ ಟೊಳ್ಳು ನೆಲದ ಮೇಲೆ ನಿಂತಿದ್ದೇವೆ ಎಂಬುದರ ಅರಿವಾಗುವುದಿಲ್ಲ, ಅವರಿಗೆ Shock ಆಗುವುದಿಲ್ಲ, ಅವರ ಚಿಂತೆಯೊಂದೇ: ಶವಸಂಸ್ಕಾರವಾಗದೇ ಊಟವಾಗುವಂತಿಲ್ಲ. ಜೊತೆಗೆ ಚಂದ್ರಿ ತೋರಿಸುವ ಒಡವೆಗಳ ಆಮಿಷ ಹೀಗಾಗಿ, ‘ಸಂಸ್ಕಾರ’ ದ ಕ್ರಿಯೆ ಸಮಾಜದ ಒಂದು ವರ್ಗವನ್ನೂ (ಬ್ರಾಹ್ಮಣ ಸಮುದಾಯ) ಏಕಕಾಲದಲ್ಲಿ ತನ್ನಲ್ಲಿ ತೊಡಗಿಸಿಕೊಳ್ಳುವುದಿಲ್ಲ, ಇಲ್ಲಿ ಕ್ರಿಯೆ ನಡೆಯುವುದು ಈ Order ನಲ್ಲಿ ನಾರಣಪ್ಪ- ಪ್ರಾಣೇಶಾಚಾರ್ಯ -ಅಗ್ರಹಾರದ ಬ್ರಾಹ್ಮಣರು, ನಾರಣಪ್ಪನಿಂದ ಪ್ರಾಣೇಶಾಚಾರ್ಯರಿಗೆ, ಅವರಿಂದ ಆಗ್ರಹಾರದ ಬ್ರಾಹ್ಮಣರಿಗೆ-ಹೀಗೆ ವ್ಯಕ್ತಿಹಂಥದಲ್ಲಿ ನಡೆಯುವ ಕ್ರಿಯೆ ‘ಸಂಸ್ಕಾರ’ ಆದ್ದರಿಂದ ವ್ಯಕ್ತಿಗಳ Order ನಲ್ಲಿ ನಡೆಯುವ ‘ಸಂಸ್ಕಾರ’ ದ ಕೇಂದ್ರ ವ್ಯಕ್ತಿಜೀವನವೇ ಹೊರತು ಇಡೀ ಸಮಾಜ ಜೀವನವಲ್ಲ: ಬ್ರಾಹ್ಮಣ ಸಮುದಾಯವೂ ಅಲ್ಲ, ಮೌಲ್ಯಜಾಗೃತಿ ಉಂಟಾಗುವುದೂ ನಾರಣಪ್ಪ, ಪ್ರಾಣೇಶಾಚಾರ್ಯರಲ್ಲೇ ಹೊರತು ಸಮುದಾಯ ಜೀವನದಲ್ಲಿ ಅಲ್ಲ, ವ್ಯಕ್ತಿಗತ ಜೀವನದ ಪಾತಳಿಯ ಮೇಲೆ ನಡೆಯುವ ಸಂಸ್ಕಾರದ ಮೇಲೆ ಬೀಳುವ ಹೊರಗಿನ ಪ್ರಭಾವ ಅಂದರೆ ಸಮಾಜದ ಇತರ ವರ್ಗಗಳು–ಏನಿದ್ದರೂ ಪೂರಕವೇ ಹೊರತು ಪ್ರಾತಿನಿಧಿಕವಾದುದಲ್ಲ. ಈ ಹೊರಗಿನ 1 ಪ್ರಭಾವ ಹೇಗೆ, ಎಷ್ಟರಮಟ್ಟಿಗೆ ಪೂರಕವಾದದ್ದು ?

ಬ್ರಾಹ್ಮಣ್ಯದ ಹಿಪಾಕ್ರಸಿ ವಿರುದ್ಧ ಬಂಡೆದ್ದ ನಾರಣಪ್ಪನಿಗೆ ಜೀವಂತಿಕೆ ತೋರಿಸಿ ಕೊಟ್ಟವಳು ಬ್ರಾಹ್ಮಣ ಸಮುದಾಯ ದೂರವಿರಿಸಿದ ಚಂದ್ರಿ, ನಂಬಿದ ದೇವರು, ಧರ್ಮ, ಶಾಸ್ತ್ರಗ್ರಂಥಗಳು ಹೇಳುವ ಮೌಲ್ಯಗಳು ಎಲ್ಲ ಕೈಕೊಟ್ಟು ನಿಂತ ನೆಲ ಕುಸಿದಾಗ ಪ್ರಾಣೇಶಾಚಾರ್ಯರಿಗೆ ತನ್ನ ಮಡಿಲಲ್ಲಿ ಆಸರೆ ಕೊಟ್ಟು ಜೀವನದ ಬೇರೆ ಸಾಧ್ಯತೆಗಳನ್ನು ತೋರಿಸಿಕೊಟ್ಟವಳು ಚಂದ್ರಿ, ವೇದವ್ಯಾಸರನ್ನು ಪುಳುಕಿತಗೊಳಿಸಿದ “ಸ್ನಾನಮಾಡಿ ಶುಭ್ರಳಾದ ಪುಷ್ಪವತಿಯ ತೊಡೆಗಳ” ಜೀವನ ಸೌಂದರ್ಯವನ್ನು, ಸಾರ್ಥಕತೆಯನ್ನು ಬರಡು ಬಿದ್ದ ಶ್ರೀಪತಿಯ ಜೀವನದಲ್ಲಿ ಆಗುಮಾಡಿಕೊಟ್ಟವಳು ಹೊರ ಜಗತ್ತಿನ ಬೆಳ್ಳಿ, ಇಲ್ಲಿ ಒಂದು ಅಂಶವನ್ನು ನಾವು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅಗತ್ಯ, ಅದು : ಸಂಸ್ಕಾರದ ಪ್ರಪಂಚ, ಅರ್ಥವಿಲ್ಲದ ಸಂಪ್ರದಾಯಗಳಲ್ಲಿ. ನಿಗೂಢ ಶಬ್ದಗಳಾದ ವೇದಮಂತ್ರಗಳ ಡಾಂಭಿಕತೆಯಲ್ಲಿ, ಅಜ್ಞಾನಗಳಲ್ಲಿ, ನಿಷೇಧಗಳಲ್ಲಿ, ಬೇಳೆ ಹುಳಿಯ ವಾಸನೆಗಳಲ್ಲಿ stink ಆಗಿರುವ ಜೀವನ. ಇದು ಪ್ರಾಣೇಶಾಚಾರ್ಯರ ಯಜ್ಞಭೂಮಿಯೇ ಹೊರತು ಜೀವಸೆಲೆ ಚಿಮ್ಮುವ ಫಲವಂತಿಕೆಯ ನೆಲವಲ್ಲ. ಇದು ಕರ್ಮಭೂಮಿ ಹೊರತು ಕ್ರಿಯಾಶೀಲವಲ್ಲ. ಈ ಜಗತ್ತಿಗೆ ಪ್ರತಿಯಾದದ್ದು (counter part) ಒಂದಿದೆ.
ಈ ಹೊರ ಜಗತ್ತು ನಿಷೇಧಗಳಿಂದ ಮುಕ್ತವಾದ, ನಿಸರ್ಗದತ್ತವಾದ ಜೀವ ಚೈತನ್ಯಗಳಿಂದ ತುಂಬಿ ತುಳುಕುವ, ನಿರ್ಭಿಡೆಯಿಂದ ಜೀವನದ ಸಂತೋಷ-ಸೌಂದರ್ಯಗಳಿಗೆ ತೆರೆದುಕೊಳ್ಳುವ, “ಬಿದ್ದ ಮಳೆಗೆ ಮೃದುವಾಗಿ, ಒತ್ತಿದ ಮಣ್ಣಿಗೆ ಪುಳಕಿತವಾಗಿ ಓಟೆ ಒಡೆದು ಸಸಿ” ಚಿಗುರಿಸುವ ಹಸಿಮಣ್ಣಿನ ಜೀವಂತ ನೆಲ, ಮೈತವಾದ ಬ್ರಾಹ್ಮಣ ಸಮುದಾಯಕ್ಕೆ ಈ ಹೊರಜಗತ್ತಿ

ಶೂದ್ರರನ್ನು ದೂರವಿಡುವ ಬ್ರಾಹ್ಮಣ್ಯದ ಆಚಾರವನ್ನು ಒಪ್ಪಿ ಈ ಪ್ರಯೋಗ ಬಳಸಿದ್ದೇನೆ ಎಂದು ತಪ್ಪು ಅರ್ಥ ಮಾಡಬಾರದು, ಸಂಸ್ಕಾರದ ಸೀಮಿತ ಪ್ರಪಂಚದಲ್ಲಿನ ಸಾಮಾಜಿಕ ಸಂಬಂಧವನ್ನು, ಬ್ರಾಹ್ಮಣ ಸಮುದಾಯದ ಈ ಜಗತ್ತಿನಲ್ಲಿ ಉಳಿದವರ ಸ್ಥಾನ ಸೂಚಿಸಲು “ಹೊರಗಿನವರು” ಎಂದು ಕರೆದಿದ್ದೇನೆ.

ನಿಂದ ದೋಹದವಾಗಬೇಕಾಗಿದೆ, ಹೊರಜಗತ್ತು ಈ ಸತ್ಯ ಬದುಕಿನಲ್ಲಿ ಪ್ರಾಣ ಸಂಚಾರ ಮಾಡಿಸಿ ಹೊಸ ಹುಟ್ಟನ್ನು ಕೊಡಬೇಕಾಗಿದೆ. ಈ ಹೊಸ ಹುಟ್ಟನ್ನು ಕೊಡುವ ಜೀವಶಕ್ತಿ, ‘ಸಂಸ್ಕಾರ’ದ ಪ್ರಪಂಚದಲ್ಲಿ ಪ್ರಾಣೇಶಾಚಾರ್ಯರಾದಿಯಾಗಿ ಯಾರಿಗೂ ಇಲ್ಲ. ಆದ್ದರಿಂದ ಕಾದಂಬರಿಯ ಆಶಯ ಪೂರೈಸಲು ಹೊರಜಗತ್ತಿನ ಜೀವಶಕ್ತಿಯ ಪ್ರವೇಶ ಅನಿವಾರ್ಯವಾಗುತ್ತದೆ. ಸೋತು, ಕೈಚೆಲ್ಲಿ ಕುಳಿತಾಗ. ಪ್ರಾಣೇಶಾಚಾರ್ಯರು ಚಂದ್ರಿಯಿಂದ ಹೊಸಹುಟ್ಟನ್ನು ಪಡೆಯುತ್ತಾರೆ. ಚಂದ್ರಿಯಿಂದ ಪಡೆಯುವ ಹೊಸಹುಟ್ಟು, ಸತ್ಯದ ಅನುಭವ, ಆಗಿನ ನೋವು, ತೊಳಲಾಟ ಅರಿವೆ ಬದಲಾಯಿಸಿದಂತೆ ಪಡೆದ ಹೊಸ ರೂಪು-ಈ ಅನುಭವ ಸತ್ಯಗಳನ್ನು ಕ್ರಿಯೆಯಲ್ಲಿ ತೊಡಗುವ ಮೂಲಕವೇ ಪರೀಕ್ಷಿಸಿ, ಶೋಧಿಸಿ, ಗಟ್ಟಿ ಮಾಡಿಕೊಂಡು ಒಂದು ಜೀವನ ಮೌಲ್ಯವಾಗಿ ಅಂಗೀಕರಿಸಲು ಪದ್ಮಾವತಿಯ ಕರೆ, ಮಾಲೇರ ಪುಟ್ಟನ ಸಹವಾಸ ಪ್ರಾಣೇಶಾಚಾರ್ಯರಿಗೆ ಸಹಾಯಕವಾಗುತ್ತದೆ. ಇದರಿಂದ ಚಂದ್ರಿ, ಪದ್ಮಾವತಿಯರ ಪಾತ್ರಗಳ ಸೃಷ್ಟಿಯ ಹಿಂದಿನ ಉದ್ದೇಶ ಸ್ಪಷ್ಟವಾಗುತ್ತದೆ. ಚಂದ್ರಿ ಮತ್ತು ಪದ್ಮಾವತಿ ಕತೆಗೆ ಪೂರಕವಾಗಿ ಬರುವವರಷ್ಟೇ, ಕಾದಂಬರಿಯ ಆಶಯದ ಗೆಲುವಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಅವರಿಂದ ಅನಂತವರೂರ್ತಿ ಪಡೆದುಕೊಳ್ಳುತ್ತಾರೆ. ಆ ಮಿತಿಯಲ್ಲಿ ಈ ಎರಡು ಪಾತ್ರಗಳನ್ನು ದುಡಿಸಿಕೊಳ್ಳುತ್ತಾರೆ, “ಟಾಲ್‌ಸ್ಟಾಯ್ ತನ್ನ ವ್ಯಕ್ತಿಗಳ ಅವಸ್ಥೆಗೆ ಎಷ್ಟು ಬೇಕೋ ಅಷ್ಟು ವಿವರಗಳನ್ನು” (ಸಾಕ್ಷಿ-೩೦, ಪುಟ ೧೦೬) ಕುದುರೆ ಪಂದ್ಯದಿಂದ ಪಡೆಯುವಂತೆ ಅನಂತಮೂರ್ತಿ `ಸಂಸ್ಕಾರ’ದಲ್ಲಿ ಚಂದ್ರಿ, ಪದ್ಮಾವತಿ ಮಾಲೇರ ಪುಟ್ಟ ಅವರುಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಬದಲು, ಅನಂತಮೂರ‍್ತಿ, ಇವರೆಲ್ಲರ ಜೀವನ ಹಿನ್ನೆಲೆಯನ್ನು, ಅವರು ಪ್ರತಿನಿಧಿಸುವ ಸಮುದಾಯದ ನೋವನ್ನು, ದೇವದಾಸಿ ಪದ್ಧತಿ, ಜೀತ ಪದ್ಧತಿ ಮೊದಲಾದವುಗಳನ್ನು ವಿವರಿಸಿದ್ದಿದ್ದರೆ ರಾಮಚಂದ್ರದೇವ ಅವರೇ ಹೇಳುವಂತೆ ಅದು ಶ್ಯಾನುಭೋಗರ, ದಾಖಲೆಯಾಗುತ್ತಿರಲಿಲ್ಲವೆ ? ಟಾಲ್‌ಸ್ಟಾಯ್ ಬಗ್ಗೆ ಸರಿ ಎನಿಸಿದ್ದನ್ನು ಒಪ್ಪಿಕೊಳ್ಳುವ ರಾಮಚಂದ್ರ ದೇವ ಅನಂತ ಮೂರ್ತಿಯವರ ಬಗ್ಗೆ ಏಕೆ ಒಪ್ಪುವುದಿಲ್ಲ ?

“ಸಂಸ್ಕಾರ” ಒಂದು ಸಾಂಕೇತಿಕ ಕಾದಂಬರಿ, ಅಲ್ಲಿ ಬರುವ ಶೂದ್ರರನ್ನು ಸಂಕೇತಗಳೆಂದಷ್ಟೆ ತೆಗೆದುಕೊಳ್ಳಬೇಕು” (ಸಾಕ್ಷಿ-೩೦, ಪುಟ ೧೧೬) ಎಂಬ ಪ್ರತಿಕ್ರಿಯೆ ನಿರೀಕ್ಷಿಸುವ ರಾಮಚಂದ್ರ ದೇವ “ಸಂಸ್ಕಾರದ ಬರವಣಿಗೆ ಸಾಂಕೇತಿಕ ಅಲ್ಲ; ಅಲ್ಲದೇ ಇಡಿಯ ಕಾದಂಬರಿ ಬ್ರಾಹ್ಮಣ ಸಮಾಜದ ಸಾಮಾಜಿಕ ಸಮಸ್ಯೆಗಳನ್ನು ಎತ್ತುತ್ತದೆ. ಇದೇ ದೃಷ್ಟಿಕೋನವನ್ನು ಮತ್ತು ಬರವಣಿಗೆಯ ದೃಷ್ಟಿಯನ್ನು ಲೇಖಕರು ಶೂದ್ರ ಲೋಕದ ಬಗ್ಗೆಯೂ ಹೊಂದಿರಬೇಕು” ಎಂಬ ಮಾತುಗಳು ತುಸು ವಿಚಿತ್ರವಾಗಿ ಕಾಣುತ್ತದೆ. ಈ ಮಾತುಗಳ ಹಿಂದಿರುವ ಶೂದ್ರರ ಬಗೆಗಿನ ಕಳಕಳಿ ಮೆಚ್ಚುವಂಥಾದ್ದಾದರೂ “ಸಂಸ್ಕಾರ”

ಇಡೀ ಭಾರತೀಯ ಸಮಾಜದ ದಾಖಲೆಯೆಂಬಂತೆ ಭಾವಿಸಿ ಅದರ ತಲೆಯ ಮೇಲೆ ಗೂಬೆ ಕೂರಿಸುವುದನ್ನು ಒಪ್ಪಲಾಗದು. ಹೊರಗಿನ ಜೀವಶಕ್ತಿಯಿಂದ ಹೊಸ ಹುಟ್ಟು ಪಡೆಯುವುದಕ್ಕೆ ಪೂರಕವಾದ ಚಂದ್ರಿಯಂಥವರಿಗಿರಬಹುದಾದ ನೋವನ್ನು ಅನಂತ ಮೂರ್ತಿ ಮರೆಯುತ್ತಾರೆ, ಪದ್ಮಾವತಿಯಂಥವರನ್ನು ಸಾಧ್ಯ ಮಾಡಿದ ದೇವದಾಸಿ ಪದ್ಧತಿಯನ್ನು ಎತ್ತಿ ಹಿಡಿಯುತ್ತಾರೆ ಎಂದುಹೇಳುವುದು ಕೃತಿಯ ಮಿತಿ, ಅಶಯ, ಅದರ ಅನುಭವದ ಫ್ರೇಮನ್ನು ಮರೆತು ನಮ್ಮ ಮನಸ್ಸಿನಂತೆ ನಡೆಯುವುದಿಲ್ಲವಲ್ಲ ಎಂಬ ಕಾರಣಕ್ಕಾಗಿ ಆಡುವ ಮಾತಾಗುತ್ತದೆ.

“ಮೌಲ್ಯಗಳ ನಿಕಷ ಒಂದು ವರ್ಗ ಮಾತ್ರವೇ ಆಗಿದ್ದಾಗ ಕೃತಿ ಪ್ರತಿಪಾದಿಸುವ ರೀತಿಯಲ್ಲಿ ಆ ಮೌಲ್ಯವನ್ನು ಒಪ್ಪುವುದು ಸಾಧ್ಯವಾಗುವುದಿಲ್ಲ, ಸಂಸ್ಕಾರ ಅರ್ಥಪೂರ್ಣ ಕೃತಿ ಅಲ್ಲದಿರುವುದಕ್ಕೆ ಕಾರಣ ಇದು” (ಸಾಕ್ಷಿ ೩೦, ಪು ೧೧೭) ಎನ್ನುತ್ತಾರೆ ರಾಮಚಂದ್ರ ದೇವ, ಲೇಖಕನ ಅನುಭವ, ಕೃತಿಯ ವಸ್ತು ಒಂದು ವರ್ಗಕ್ಕೇ ಸೀಮಿತಗೊಂಡಾಗ ? ಅಂಥ ಕೃತಿಯನ್ನು ಪೂರ್ತಿಯಾಗಿ ತಿರಸ್ಕರಿಸಬೇಕು ಇಲ್ಲ ಸಮಾಜ ದ್ರೋಹಿ ಎಂದು ಕರೆಯಬೇಕೆ ? ಕೃತಿಯ ಉದ್ದೇಶ, ಅದರ ಹಿಂದೆ ಕೆಲಸ ಮಾಡುವ ಅನುಭವ ಸೀಮಿತವಾದಾಗ ಅದನ್ನು ಒಟ್ಟು ಸಮಾಜದ ವ್ಯಾಪಕ ನೆಲೆಗೆ ಒಯುವುದು, ಅನಿಕಷದಲ್ಲಿ ಒರೆಗೆ ಹಚ್ಚುವುದು ತಪ್ಪಾಗುತ್ತದೆ ಎಂದು ನನ್ನ ಮತ, ಚೋಮನ ದುಡಿಯಲ್ಲಿ ಇಡೀ ಸಮಾಜವೇ ಕೃತಿಯ ಅಂತರಂಗವಾಗಿರುವುದರಿಂದ ಅಲ್ಲಿ ಕಾಣುವ ಸ್ವಾತಂತ್ರ್ಯದ ಕಲ್ಪನೆ, ಅದರ ವ್ಯಾಪಕತೆ ಸಹಜವಾಗಿಯೇ ಬೇರೆಯಾಗಿದೆ. ಮಾನವೀಯತೆ ಮತ್ತು ಅದು ಬಯಸುವ ಸ್ವಾತಂತ್ರ್ಯದ ಕಲ್ಪನೆ ಇಡೀ ಮನುಕುಲವನ್ನು ಬಳಸುವಷ್ಟು ವಿಸ್ತ್ರತವಾದದ್ದು, ‘ಸಂಸ್ಕಾರ’ದಲ್ಲಿ ಈ ಸ್ವಾತಂತ್ರದ ಅರ್ಥ ಒಂದು ವರ್ಗದ ಜನರಿಂದ ಆ ವರ್ಗ ನಂಬಿದ ವಾಸ್ತವಿಕದಲ್ಲಿ ಅರ್ಥಹೀನವಾಗುವ ಮೌಲ್ಯಗಳ ಕೋಟೆಯಿಂದ ಹೊರ ಬರುವುದೇ ಆಗಿದೆ, ಈ ಹೊರಬರುವಿಕೆಯ ಹೋರಾಟದಿಂದ ಸಮಾಜದ ಇತರ ವರ್ಗಗಳ ಮೇಲೆ ಆಗುವ ಪರಿಣಾಮ, ಇದರಲ್ಲಿ ಆ ವರ್ಗಗಳ ಸಂಬಂಧ ರಾಮಚಂದ್ರ ದೇವ ಅಪೇಕ್ಷಿಸುವಷ್ಟು ವ್ಯಾಪಕವಾದುದಲ್ಲ, ಆದ್ದರಿಂದ ಇಲ್ಲಿ ವ್ಯಕ್ತಿಮಟ್ಟದ ಸ್ವಾತಂತ್ರ್ಯವಷ್ಟೇ ಕಾದಂಬರಿಯ ಕೇಂದ್ರ ಕಾಳಜಿ. ಹೀಗಾಗಿ, ಸಂಸ್ಕಾರದ ಮಿತಿಗಳಿಂದಾಗಿ ಅದು ಪ್ರತಿಪಾದಿಸುವ ಸ್ವಾತಂತ್ರ್ಯದ ಮೌಲ್ಯ ಅರ್ಥಹೀನ ಎನ್ನುವುದು, ಇನ್ನೊಂದು ವರ್ಗಕ್ಕೆ ನ್ಯಾಯ ದೊರಕಿಲ್ಲ ಎನ್ನುವುದು ಸರಿಯಲ್ಲವೆನಿಸುತ್ತದೆ. ‘ಸಂಸ್ಕಾರ’ ದ ಹಿಂದಿರುವ ಅನುಭವದ ಮಿತಿ: ಮೃತಪ್ರಾಯವಾದ ಬದುಕಿಗೆ ಹೊಸ ಜೀವನ ಯಾವ ಕಡೆಯಿಂದ, ಹೇಗೆ ಸಾಧ್ಯವೆಂಬ ಬೌದ್ದಿಕ ತುಡಿತ ಇವುಗಳು ಮಧ್ಯಮ ವರ್ಗದ ಚೌಕಟ್ಟಿನಲ್ಲೇ ಸ್ವಾತಂತ್ರ್ಯದ ಅರ್ಥ ಹುಡುಕುವ ಅವರ ಪ್ರಯತ್ನಕ್ಕೆ ಕಾರಣವಿರಬಹುದು. ಆದರೆ, ನಾನು ಇದನ್ನು ಒಂದು ದೋಷ ಎಂದು ಪರಿಗಣಿಸಲಿಚ್ಛಿಸುವುದಿಲ್ಲ, ತಮ್ಮ ಅನುಭವದ ಕಕ್ಷೆಯೊಳಗೆ ಇಲ್ಲದ ಬದುಕಿನ ವಿವರಗಳನ್ನು ಒದಗಿಸಿದ್ದಿದ್ದರೆ ಅದು Statistics ತುರುಕುವ ಬೌದ್ಧಿಕ ಕಸರತ್ತಾಗುತ್ತಿತ್ತಷ್ಟೇ, ಕೃತಿಯ ಕಲಾತ್ಮಕತೆಗೆ ಊನ ಉಂಟಾಗುತ್ತಿತ್ತು, ರಾಮಚಂದ್ರ ದೇವ ಅವರ ಮಾತನ್ನು ಒಪ್ಪಬೇಕಾದರೆ ಸಾಹಿತ್ಯವನ್ನು ಒಂದು Art form ಎಂಬುದನ್ನು ಮರೆತು ನಾವು ಈ ವಿಚಾರ ಯೋಚಿಸಬೇಕಾಗುತ್ತದಷ್ಟೇ,

ಆದ್ದರಿಂದ ವಿಮರ್ಶಕ ‘ಸಂಸ್ಕಾರ’ ವನ್ನು ಅದರ ಮಿತಿಯೊಳಗೇ ನೋಡಬೇಕು, ಅದರಲ್ಲಿ ಪ್ರತಿಪಾದಿಸುವ ಸ್ವಾತಂತ್ರ‍್ಯವನ್ನು ಅದು ಬೇರೆಯವರಿಗೆ ನಿರಾಕರಿಸುತ್ತದೆ. ಆ ವರ್ಗವನ್ನು ದಾಸ್ಯದಲೇ, ಕೌರ್ಯದಲ್ಲೇ ಇರಿಸುತ್ತದೆ ಎಂಬುದು ಅನ್ಯಾಯದ ಮಾತು, ಒಂದು ಫಕ್ಷ ಅನಂತಮೂರ್ತಿಯವರ ಜೀವನದೃಷ್ಟಿ, ಧೋರಣೆ ಇದೇ ಅನ್ನುವುದಾದರೆ ಅಂಥ ನಿರ್ಧಾರಕ್ಕೆ ‘ಸಂಸ್ಕಾರ’ ಒಂದೇ ಅಳತೆಗೋಲಾಗದು: ಅನಂತ ಮೂರ್ತಿಯವರ ಎಲ್ಲ ಕೃತಿಗಳನ್ನೂ ಅದರ ಹಿಂದೆ ಕೆಲಸ ಮಾಡುವ ಬುದ್ಧಿ, ಮನಸ್ಸು, ಅನುಭವಗಳನ್ನು ಆಳವಾಗಿ ಪರಿಶೀಲಿಸಬೇಕಾಗುತ್ತದೆ.

೨

“ನವ್ಯ ಸಾಹಿತ್ಯದ ಅರ್ಥಪೂರ್ಣ ಕೃತಿಗಳು ಪಾಶ್ಚಾತ್ಯರ ಅನುಕರಣೆ ಎಂಬುದನ್ನು ಒಪ್ಪುವುದು ನನಗೆ ಸಾಧ್ಯವಿಲ್ಲ” (ಸಾಕ್ಷಿ ೩೦, ಪು. ೧೧೩) ಎನ್ನುವ ರಾಮಚಂದ್ರ ದೇವ ‘ಗತಿ, ಸ್ಥಿತಿ’, ‘ಬಿರುಕು’ ಕಾದಂಬರಿಗಳ ಪರಕೀಯತೆ ಬಗ್ಗೆ ಹೇಳುತ್ತಾ “ಮಧ್ಯಮ ವರ್ಗದ ಪರಿಮಿತಿಯ ಕಾರಣವಾಗಿ ಪರಕೀಯತೆಯೆಂದರೆ ಪ್ರಜ್ಞಾವಂತನ ಅನಿಸಿಕೆಯಾ ಯಿತ್ತು, ಹೊಟ್ಟೆಗಿಲ್ಲದೆ ಸಾಯುವ ಸಾವಿರಾರು ಜನರ, ಮಲಗುವುದೂ ಯಾಂತ್ರಿಕವಾದ ಕೂಲಿಕಾರರ, ಜೀತದವರ ಪರಕೀಯತೆ, ಮೃತ್ಯುಪ್ರಜ್ಞೆ ಇವರ ನಿದ್ದೆಗೆಡಿಸಲಿಲ್ಲ” ಎಂದು ಬರೆಯುತ್ತಾರೆ, ತಾತ್ಪರ್ಯದಲ್ಲಿ, ನವ್ಯ ಕೃತಿಗಳ ಬಗ್ಗೆ ಕೇಳಿಬರುವ ನವ್ಯ ಕಾದಂಬರಿಗಳು ಭಾರತೀಯವಲ್ಲ ಎಂಬ ಆಪಾದನೆಯನ್ನೇ ರಾಮಚಂದ್ರದೇವ ಆಡಿದ್ದಾರೆ. ಮೊದಲು ಒಪ್ಪಿಕೊಂಡು ಅದಿಲ್ಲ-ಇದಿಲ್ಲ ಎನ್ನುವ ಈ ವಿರೋಧಾಭಾಸ ಅರ್ಥವಾಗುವುದಿಲ್ಲ, ಪ್ರಜ್ಞಾವಂತನೊಬ್ಬನ ಪರಕೀಯ ಸ್ಥಿತಿ, ಸಂವೇದನೆಗಳೂ ಒಂದು ಸಮಾಜದ ವ್ಯಾಖ್ಯೆ ಆಗುವುದಿಲ್ಲವೇ ? ‘ಗತಿ, ಸ್ಥಿತಿ’ಯ ಬದುಕು, ಒಂದು ಸಮಾಜದ, ಒಂದು ರಾಜಕೀಯ ವ್ಯವಸ್ಥೆಯಲ್ಲಿನ ಅನೀತಿ, ಭ್ರಷ್ಟಾಚಾರ, ಅಪ್ರಮಾಣಿಕತೆ, ಅಧಿಕಾರ ಷಾಹಿಯ ಹಿಪಾಕ್ರಸಿಗಳ ಮೇಲೆ ಬರೆದ ಕಾಮೆಂಟ್‌ ಅಲ್ಲವೆ ?

‘ಗತಿ ಸ್ಥಿತಿ’, ‘ಬಿರುಕು’ ಕಾದಂಬರಿಗಳಲ್ಲಿನ ಮಧ್ಯಮ ವರ್ಗದ ಪರಕೀಯತೆ ಬಗ್ಗೆ ಬರೆಯುತ್ತಾ “ಇವರ ನಿದ್ದೆಗೆಡಿಸಲಿಲ್ಲವೆ” ಎನ್ನುವ ರಾಮಚಂದ್ರದೇವ ಜಿ.ಎಸ್. ಸದಾಶಿವ ಅವರ ಕತೆಗಳ ವಿಕ್ಷಿಪ್ತ ನಾಯಕರುಗಳನ್ನೂ ವೈಕುಂಠರಾಜು ಅವರ “ಅಂತ್ಯ”, “ಆಕ್ರಮಣ”ಗಳನ್ನೂ ಒಪ್ಪಿಕೊಳ್ಳುತ್ತಾರೆ, ‘ಗತಿ, ಸ್ಥಿತಿ’, ‘ಬಿರುಕು’ಗಳಂತೆ “ಅಂತ್ಯ”, “ಆಕ್ರಮಣ”ಗಳೂ ಬದುಕಿನ ಕೆಲವು ಮಜಲುಗಳಿಗಷ್ಟೇ, ಕೆಲವು ಅನುಭವಗಳಿಗಷ್ಟೇ ಸೀಮಿತವಾದವು, ಆ ಕೃತಿಗಳಲ್ಲೂ ಆ ಮಿತಿಯಲ್ಲಿ ಕಂಡುಕೊಳ್ಳುವ ಸತ್ಯವಷ್ಟೇ ಮುಖ್ಯವಾಗುತ್ತದೆ. ನವ್ಯ ಕಾದಂಬರಿಗಳನ್ನು ಒಪ್ಪಿಕೊಳ್ಳುವಾಗ, ಬಿಡುವಾಗ ರಾಮಚಂದ್ರ ದೇವ ಅವರ ಮನಸ್ಸು ಚಂಚಲವಾಗುತ್ತದೆ ಅನಿಸುತ್ತದೆ. ಅವರ ಮನಸ್ಸು ತೀವ್ರ ಸುಧಾರಣೆಗೆ ತುಡಿದಾಗ, ತನಗೆ ಬೇಕಾದ್ದನ್ನು ಮಾತ್ರ ಹುಡುಕುತ್ತದೆ. ಸುಧಾರಣಾ ಕಾಂಕ್ಷಿ ಮನಸ್ಸಿಗೆ `ಭಾರತೀಪುರ’ದ ಮುಂದೆ ‘ಸಂಸ್ಕಾರ’ ಸಣ್ಣದಾಗುತ್ತದೆ, ಅಸಹನೀಯವಾಗುತ್ತದೆ, ವಿಮರ್ಶಕ ಮನಸ್ಸು ಮಿಡಿಯುವ ಇಂಥ ಮಮಕಾರಗಳನ್ನು ಗೆಲ್ಲುವುದು, ಅಂದರೆ ತನಗೆ ಬೇಕಾದ್ದನ್ನು ಹುಡುಕುವ ಚಪಲ ಮೀರಿ ನಿಲ್ಲುವುದು ಆರೋಗ್ಯಕರ ಅಲ್ಲವೆ ?

೩

ಭಾಷೆ ಬಗ್ಗೆ ರಾಮಚಂದ್ರ ದೇವ ಹೀಗೆ ಬರೆಯುತ್ತಾರೆ :

“ಆಧುನಿಕ ಸಂವೇದನೆಯನ್ನು ಕಚ್ಚಾ ಜಾನಪದ ಭಾಷೆಯಲ್ಲಿ ಪಡಿಮೂಡಿಸುವುದಾದರೂ ಹೇಗೆ ? ಜಾನಪದ ಭಾಷೆಯನ್ನು ಕಚ್ಚಾ ಆಗಿ ಬಳಸಿದಾಗ ಆ ಭಾಷೆಯನ್ನು ಹಾಗೆ ರೂಪಿಸಿದ ಪ್ಯೂಡಲ್ ಸಮಾಜವನ್ನು ಇವರು ಒಪ್ಪುವುದಿಲ್ಲವೆ ?
……………………………………………………………

ಈ ಭಾಷೆಯನ್ನು ಕಚ್ಚಾ ಆಗಿ ಬಳಸಿ ನಾನೊಂದು ಕತೆ ಬರೆದರೆ ನಾನು ಆ ಭಾಷೆಯನ್ನು ಎತ್ತಿ ಹಿಡಿಯಬೇಕಾಗುತ್ತದೆ, ಪ್ರತಿಯೊಂದು ಉಪಭಾಷೆ ಹಿಂದೆಯ ಅದನ್ನು ರೂಪಿಸಿದ ಸಾಮಾಜಿಕ ವ್ಯವಸ್ಥೆ ಅದರ ಮೌಲ್ಯಗಳು ಇದ್ದೇ ಇವೆ. ಆದ್ದರಿಂದ ಮನುಷ್ಯನ ವಿಧಿಯ ಬಗ್ಗೆ ಆಸಕ್ತಿ ಇರುವವನು ಈ ರೀತಿ ಕಚ್ಛಾ ಭಾಷೆಗಳನ್ನು ಬಳಸಲಾರ. ಅಲ್ಲದೆ ಕಚ್ಚಾ ಆಗಿ ಬಳಸುವುದೆಂದರೆ ಯಥಾರ್ಥ ವಾದವನ್ನು ಒಪ್ಪಿಕೊಳ್ಳುವುದೂ ಕೂಡ, ಅಂದರೆ ಈ ಅಸಂಗತ ಪ್ರಪಂಚವನ್ನು ಸಾಹಿತಿಯಾಗಿ ತನ್ನ ಕೃತಿಯ ಇರುವಿಕೆಯ ಸ್ಥಿತಿಯಲ್ಲಿಯೇ ಪ್ರತಿಭಟಿಸುವ ಆವ ಕಾಶವನ್ನು ಕಳೆದುಕೊಳ್ಳುವುದು”.
(ಸಾಕ್ಷಿ-೩೦, ಪು ೧೨೨)

ಭಾಷೆಯ ಬಳಕೆ ಬಗ್ಗೆ ಈ ಆಖೈರು ತೀರ್ಮಾನಕ್ಕೆ ಬರುವುದು ತಪ್ಪಾಗುತ್ತದೆ ಎಂದು ನನ್ನ ಭಾವನೆ, ಜಾನಪದ ಭಾಷೆಯನ್ನು ಕಚ್ಚಾ ಆಗಿ ಬಳಸಿದಾಗ ಆ ಭಾಷೆಯನ್ನು ರೂಪಿಸಿದ ಪ್ಯೂಡಲ್ ಸಮಾಜ ವ್ಯವಸ್ಥೆಯನ್ನು ಒಪ್ಪಿಕೊಂಡಂತೆ ಆಯಿತು ಎನ್ನುವುದಾದಲ್ಲಿ ಶಿಷ್ಟ ಭಾಷೆಯನ್ನು ರೂಪಿಸಿದ Sophisticated, Mediocre ಅಥವಾ ಇನ್ನೆಂಥದೋ ಸಮಾಜವನ್ನು ಒಪ್ಪುವ ಸಾಧ್ಯತೆ ಇಲ್ಲವೆ ? (ಒಪ್ಪುವ ಎನ್ನುವುದಕ್ಕಿಂತ ಅಂಗೀಕರಿಸುವ ಎನ್ನುವುದು ಹೆಚ್ಚು ಸರಿಹೋದೀತು) ಕಚ್ಚಾ ಭಾಷೆಯಿಂದ ಆಗಬಹುದಾದ ಅಪಾಯ ಶಿಷ್ಟ ಭಾಷೆಯಿಂದಲೂ ಆಗುವ ಸಾಧ್ಯತೆ ಇದೆ. ಆದ್ದರಿಂದ, ಭಾಷೆಯ ಬಳಕೆಯ ಬಗ್ಗೆ ಯೋಚಿಸುವಾಗ ಭಾಷೆಯನ್ನು ತನ್ನ ಅಭಿವ್ಯಕ್ತಿ ಸಾಧನವಾಗಿ ಮಾಡಿಕೊಳ್ಳುವ ಮನಸ್ಸು ಮುಖ್ಯವಾಗುತ್ತದೆ.

ಆಯಿತು, ವಾದದ ಸಲುವಾಗಿ ರಾಮಚಂದ್ರ ದೇವ ಅವರ ಮಾತು ಖರೇ ಎಂದು ಒಪ್ಪಿಕೊಳ್ಳೋಣ, ಜಾನಪದ ಅಥವಾ ಕಚ್ಚಾಭಾಷೆಯಿಂದ ಅದನ್ನು ರೂಪಿಸಿದ ಪ್ಯೂಡಲ್ ಸಮಾಜ ವ್ಯವಸ್ಥೆಯನ್ನು ಅಂಗೀಕರಿಸಿದಂತಾಗುತ್ತದೆ, ಅದು ಬೇಡ. ಹಾಗಾದಲ್ಲಿ ಲೇಖಕ ಇನ್ನಾವ ಭಾಷೆಯಲ್ಲಿ ಬರೆಯಬೇಕು ? ಇಂಗ್ಲೀಷಿನಲ್ಲೇ, ಲ್ಯಾಟಿನ್ ಭಾಷೆಯಲ್ಲೇ ? ಉದಾಹರಣೆಗೆ ನೋಡೋಣ, ಒಬ್ಬ ಸೃಜನಶೀಲ ಲೇಖಕ, ಆವನ ಅನುಭವದ ನೆಲೆ ಹಳೆಯ ಮೈಸೂರು-ಮಂಡ್ಯ, ಹೆಗ್ಗಡದೇವನಕೋಟೆ-ಇಲ್ಲವೇ ದಕ್ಷಿಣ ಕನ್ನಡ. ಅವನ ಕತೆಯ ಬದುಕು ಸಾಗುವುದು ಮಂಡ್ಯದ ಹಳ್ಳಿಯೊಂದರಲ್ಲಿ ಅಥವಾ ದಕ್ಷಿಣ ಕನ್ನಡದ ಹಳ್ಳಿಯೊಂದರಲ್ಲಿ, ಆ ಕತೆಯಲ್ಲಿ ಬರುವ ಪಾತ್ರಗಳು ಯಾವ ಭಾಷೆಯನ್ನು ಮಾತನಾಡ ಬೇಕು ? ತಾವು ಬದುಕುವ ಭಾಷೆಯನ್ನೇ ಅಥವಾ ವಿದೇಶಿ ಭಾಷೆಯನ್ನೇ ? (ಇವರಿಗೆ ಶಿಷ್ಟ ಕನ್ನಡವೂ ವಿದೇಶಿಯದೇ ಅಲ್ಲವೆ ?) ಲೇಖಕನ ಪಾತ್ರ ಬಂದಾಗ ಅವನು ಶಿಷ್ಟ ಭಾಷೆಯನ್ನೇ ಬಳಸಬಹುದು, ಆದರೆ ಪಾತ್ರಗಳು ?

ಭಾಷೆ ಬಗ್ಗೆ ಇಂಥ ನಿಲುವು ತಾಳಿದಾಗ ನಾವು ಫ್ಯೂಡಲ್ ಸಮಾಜ ವ್ಯವಸ್ಥೆ ರೂಪಿಸಿದ -ಅಂದರೆ ಜಮೀನ್ದಾರರು, ಅಧಿಕಾರಷಾಹಿ ಇತ್ಯಾದಿ-ಭಾಷೆಯನ್ನು ಬಿಡಬೇಕಾಗುತ್ತದೆ. ಅವರ ಬದುಕಿನ ಬಗ್ಗೆ – ಫ್ಯೂಡಲ್ ಸಮಾಜ ಮತ್ತು ಅದರಲ್ಲಿ ಭಾಗಿಯಾದವರ ಬಗ್ಗೆ – ಬರೆಯುವುದನ್ನು ಬಿಡಬೇಕಾಗುತ್ತದೆ. ಬಿಟ್ಟು ಬಿಡೋಣ, ಆಗ ಸೃಜನಶೀಲ ಲೇಖಕ ಇಲ್ಲಿ ಗುಡ್ಡಗಾಡು ಜನರು, ಹರಿಜನರ ಬಗ್ಗೆ, ನಗರದ ಮಧ್ಯಮ ವರ್ಗದ ಅನಾಥರ ಬಗ್ಗೆ ಬರೆಯಬೇಕಾಗುತ್ತದೆ. ಆಗ ಏನಾಗುತ್ತದೆ? ಅದನ್ನೂ ರಾಮಚಂದ್ರ ದೇವ ಅವರೇ ಹೀಗೆ ಹೇಳುತ್ತಾರೆ:

” ಅಂದರೆ ಪ್ರಮಾಣಗಳಿಲ್ಲದೆ ಬರಿಯೆ ವಿವರಿಸುವುದರಿಂದ, ಪಾತ್ರಗಳನ್ನು ಪುಂಖಾ
ನುಪುಂಖವಾಗಿ ಸೃಷ್ಟಿಸುತ್ತಾ ಅವುಗಳ ಬಗ್ಗೆ ಗಾಡಿ ಬಿಡುತ್ತಾ ಹೋಗುವುದ
ರಿಂದ ಸಾಹಿತ್ಯದಲ್ಲಿ ಅರ್ಥಪೂರ್ಣವಾದುದನ್ನು ಸಾಧಿಸಲಾಗುವುದಿಲ್ಲ; ಮಾತ್ರ.
ವಲ್ಲ, ಇದು ಅಮಾನುಷ, ಯಾಕೆಂದರೆ, ಈ ರೀತಿಯ ಲೇಖಕರಿಗೆ ಮನುಷ್ಯ
ಒಂದು ವಸ್ತು ಮಾತ್ರ; ಅಂತರ್ ನಾಟಕದಲ್ಲಿ ಆಸಕ್ತಿಯಿಲ್ಲದ ಈ ಬಗೆಯ
ಲೇಖಕರಿಗೆ ಮನುಷ್ಯ ವಿವರಿಸಬೇಕಾದ ಒಂದು ಸಾಧನ ಮಾತ್ರ ; ತಿಳಿದುಕೊಳ್ಳ
ಬೇಕಾದ ಸಂಕೀರ್ಣ ಅಲ್ಲ.

ಈ ಬಗೆಯ ಕೃತಿಗಳು-ಬೆಂಗಳೂರಿನ ಮಧ್ಯಮ ವರ್ಗವನ್ನು ರಂಜಿಸುವುದ
ಕ್ಕಾಗಿ ಬರೆದ ಕೃತಿಗಳು ಗಂಭೀರ ಸಾಹಿತ್ಯವೆಂದು ಬಚಾವಾಗುತ್ತಿವೆ, ಆಧುನಿಕ
ಸಂವೇದನೆಯನ್ನು ಜಾನಪದ ಭಾಷೆಯಲ್ಲಿ ಒಡಮೂಡಿಸುತ್ತೇವೆನ್ನುವವರು,
ಹರಿಜನರ, ಕೂಲಿಗಳ ಸಮಸ್ಯೆಯನ್ನು ರಂಜನೀಯವಾಗಿ ಬರೆಯುವ ಅನೇಕರು
ಇಂಥಾ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ, ಮಧ್ಯಮವರ್ಗವನ್ನು
ರಂಜಿಸಿ, ಹೊಸತು ಎನಸಿಕೊಂಡು ಚಪ್ಪಾಳೆ ಗಿಟ್ಟಿಸುವ ಪ್ರಯತ್ನ ಇವರಲ್ಲಿ
(ಅಪ್ರಜ್ಞಾಪೂರ್ವಕವಾಗಿಯೇ ಇರಬಹುದು ; ಆದರೆ ಲೇಖಕನೊಬ್ಬ ಅಪ್ರಜ್ಞಾ
ಪೂರ್ವಕವಾಗಿ ತನ್ನ ಮನಸ್ಸಿನಲ್ಲಿ ನಡೆಯುವುದರ ಬಗ್ಗೆ ಪ್ರಜ್ಞಾಪೂರ್ವಕವಾಗಿರು
ತ್ತಾನೆಂದು ನಾನು ನಂಬುತ್ತೇನೆ) ಮೊದಲಿನಿಂದಲೂ ಕೆಲಸ ಮಾಡುತ್ತಾ ಬಂದಿದೆ.
(ಸಾಕ್ಷಿ-೩೦, ಪುಟ ೧೧೨)

ನೋಡಿದಿರಾ, ಗೊತ್ತಿರುವ ಬದುಕು, ಅನುಭವಗಳ ಬಗ್ಗೆ ಆ ಭಾಷೆಯಲ್ಲಿ ಬರೆದಿರೋ? ಅದು ಪ್ಯೂಡಲ್ ಸಮಾಜವ್ಯವಸ್ಥೆಯನ್ನು ಎತ್ತಿಹಿಡಿದಂತಾಗುತ್ತದೆ. ಬೇರೆಯವರ ಬಗ್ಗೆ ಬರೆದಿರೋ ಅದು ಹಲವರನ್ನು ರಂಜಿಸುವ ಫ್ಯಾಶನ್ ಆಗುತ್ತದೆ.

ಕಚ್ಚಾ ಭಾಷೆಯನ್ನು ಬಳಸಿದಾಕ್ಷಣ ಅದು ಪ್ರತಿನಿಧಿಸುವ ಪ್ಯೂಡಲ್ ಮೌಲ್ಯಗಳನ್ನು ಅಂಗೀಕರಿಸಿದಂತೆಯೇ, ಎತ್ತಿಹಿಡಿದಂತೆಯೇ ಎಂದು ಹೇಳುವುದಕ್ಕಾಗುವುದಿಲ್ಲ. ಈ ಮಾತಿಗೆ ನಿದರ್ಶನವಾಗಿ ನಮ್ಮಲ್ಲಿ ಅನೇಕ ಕೃತಿಗಳಿವೆ. ಉದಾಹರಣೆಗೆ `ಸಂಸ್ಕಾರ’ವನ್ನೇ ತೆಗೆದುಕೊಳ್ಳಿ, ಇದು, ಶಿಷ್ಟ ಹಾಗೂ ಬ್ರಾಹ್ಮಣ ವರ್ಗಕ್ಕೆ ಮೀಸಲಾದದ್ದೆನ್ನಲಾದ, ವೈದಿಕ ಮೌಲ್ಯಗಳ, ಸಂಸ್ಕೃತದ ಶಿಸ್ತಿನ ಭಾಷೆ, ಆದರೆ ಅನಂತಮೂರ್ತಿಯವರು ಈ ಭಾಷೆಯನ್ನು ಬಳಸಿಯೂ ಅದು ಪ್ರತಿನಿಧಿಸುವ ಮೌಲ್ಯಗಳ ವಿರುದ್ಧ ಬಂಡೇಳುತ್ತದೆ. ಇದೇ ಮಾತನ್ನು ಗೋಪಾಲಕೃಷ್ಣ ಅಡಿಗರ ಕವನಗಳು ಆಡುವ ಭಾಷೆಗೂ ಹೇಳಬಹುದು, ಅನಂತಮೂರ್ತಿಯವರ ಕಾದಂಬರಿಯಲ್ಲಿನ ಬಂಡಾಯಕ್ಕೆ ಕಾರಣವಾಗು ವುದು, ಮಾತಿಗೆ ಮೀರಿದ ಸಾವು ಮತ್ತು ಕಾಮ ಅದೇ ವೇದಭಾಷೆಯನ್ನು ಅನಂತಮೂರ್ತಿಯವರು ಒಂದು ಸಾವು, ಒಂದು ಅನುಭವದ ಮೂಲಕ ಆ ಭಾಷೆ ಪ್ರತಿನಿಧಿಸುವ ಮೌಲ್ಯಗಳ ವಿರುದ್ಧ ಎತ್ತಿಕಟ್ಟಿಲ್ಲವೆ ?

ರಾಜಕೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಮೌಡ್ಯಗಳನ್ನು ಗೇಲಿ ಮಾಡುವ, ವೈಚಾರಿಕ ಹರಿತ ಕೊಡುವ ಶ್ರೀರಂಗರ ಉತ್ತರ ಕರ್ನಾಟಕದ ದೇಸಿ ಮಿಶ್ರಿತ ಶಿಷ್ಟಭಾಷೆಯನ್ನು ಗಮನಿಸಿ, ಅನಾಗರಿಕ ಪ್ರಪಂಚವಾದ ಗ್ರಾಮೀಣ ಬದುಕಿನ ಕಥೆ ಹೇಳುವ ಕೃಷ್ಣ ಆಲನಹಳ್ಳಿಯವರ ಎರಡೂ ಕಾದಂಬರಿಗಳಲ್ಲಿನ ಕಚ್ಛಾ ಭಾಷೆ ಕೊನೆಗೆ ನಾಗರಿಕತೆಗೆ ಬಿತ್ತನೆಯ ಭೂಮಿಯಾಗುತ್ತದೆ, ಜಿ.ಬಿ. ಜೋಶಿಯವರ ‘ಕದಡಿದ ನೀರು” ನಾಟಕದ ಬಗ್ಗೆಯೂ ಇದೇ ಮಾತನ್ನು ಹೇಳಬಹುದು, ಚಂದ್ರಶೇಖರ ಕಂಬಾರರ “ಜೋಕುಮಾರ ಸ್ವಾಮಿ”, ಜೈಸಿದ ನಾಯಕ” ನಾಟಕಗಳಲ್ಲೂ ಜಾನಪದ ಭಾಷೆ, ಜಾನಪದ ರಂಗ ಭೂಮಿಯ ತಂತ್ರಗಳನ್ನು ಕಾಣಬಹುದು. ಒಟ್ಟು ಗುರಿಯಲ್ಲಿ ಈ ನಾಟಕಗಳು ಬದಲಾವಣೆ, ವ್ಯವಸ್ಥೆ ವಿರುದ್ಧ ಪ್ರತಿಭಟನೆ, ಕ್ರಾಂತಿಗಳಾಗಿಯೇ ಬಂದಿವೆ ಆದರೆ, ನಾಟಕ ಮಾಧ್ಯಮದಲ್ಲಿ ಭಾಷೆ ಒಂದು ತೊಡಕನ್ನು ಎದುರಿಸಬೇಕಾಗುತ್ತದೆ. ದೃಶ್ಯಮಾಧ್ಯಮವಾದ ನಾಟಕ ರಂಗಕ್ಕೆ ಬಂದಾಗ ನಾಟಕೀಯತೆ, ಸಂಗೀತ ನೃತ್ಯ ಮೊದಲಾದ ವೈಭವಗಳಿಂದಾಗಿ ಭಾಷೆಯ ಧ್ವನಿ ಅಡಗಿ ಹೋಗುತ್ತದೆ, ನಿರ್ದೇಶಕನಿಗೆ ನಾಟಕದ ಸಾಹಿತ್ಯಕ ಮಹತಿ ಅರ್ಥವಾಗದೇ ಹೋದಾಗ ನಾಟಕ ಹಾಡು, ಕುಣಿತಗಳ ಉತ್ಸವವಾಗಿ ಬಿಡಬಹುದು. ಈ ಅಪಾಯದಿಂದಾಗಿ ಜಾನಪದ ನಾಟಕಗಳು ತಪ್ಪು ಅಭಿಪ್ರಾಯಕ್ಕೆ ಈಡಾಗಿವೆ ಎಂದೆನಿಸುತ್ತದೆ. ಕೃತಿಯ ವಸ್ತು, ಅಲ್ಲಿ ಬರುವ ಜನಜೀವನ, ಅಲ್ಲಿನ ವಾತಾವರಣ, ಆ ಜನ ಆಡುವ ಭಾಷೆ ಎಲ್ಲವನ್ನೂ ಮರೆತು ಕೇವಲ ಶೋಕಿಗಾಗಿ ಜಾನಪದ ಭಾಷೆ ಬಳಸಿದಾಗ ರಾಮಚಂದ್ರ ದೇವ ಹೇಳುವ ಮಾತು ನಿಜವಾಗುತ್ತದೆ.

ಒಟ್ಟಿನಲ್ಲಿ, ನನಗನ್ನಿಸುತ್ತದೆ, ಭಾಷೆ ಬಳಕೆಯ ಹಿಂದಿನ ಜೀವನದೃಷ್ಟಿ ಧೋರಣೆಗಳು – ಮುಖ್ಯವಾಗುತ್ತವೆ. ಜಾನಪದ, ಕಚ್ಚಾ ಭಾಷೆಗಳನ್ನು ವ್ಯಂಗ್ಯವಾಗಿ, ಮಾರ್ಮಿಕವಾಗಿ ಒಪ್ಪಿತ ಮೌಲ್ಯಗಳ ಉಲ್ಲಂಘನ ಸಾಧನವಾಗಿ, Establishmentಗೆ ಅರ್ಥವಾಗುವ ಭಾಷೆಯಾಗಿ, ಒಂದು ಅಸ್ತ್ರವಾಗಿ ಬಳಸುವುದು ಸಾಧ್ಯವಿದೆ.

Close

ಎರಡು ಕವನಗಳು

ಎರಡು ಕವನಗಳು

ಸುಬ್ರಾಯ ಚೊಕ್ಕಾಡಿ

೧ ಬೊಮ್ಮನಹಳ್ಳಿಯ ವೃತ್ತಾಂತ

ಬೊಮ್ಮನ ಹಳ್ಳಿಯಲ್ಲಿ ಇಲಿಗಳೇ ಇಲ್ಲ
ಇಲಿಗಳೇ ಇಲ್ಲ.
ಸಣ್ಣಿಲಿ ದೊಡ್ಡಿಲಿ ಮೂಗಿಲಿ ಸೊಂಡಿಲಿ
ಅಣ್ಣಿಲಿ ತಮ್ಮಿಲಿ ಅವ್ವಿಲಿ ಅಪ್ಪಿಲಿ
ಮಾವಿಲಿ ಭಾವಿಲಿ ಅಕ್ಕಿಲಿ ತಂಗಿಲಿ
ಗಂಡಿಲಿ ಹೆಣ್ಣಿಲಿ ಮುದುಕಿಲಿ ಹುಡುಗಿಲಿ….
ಬೊಮ್ಮನ ಹಳ್ಳಿಯಲ್ಲೀಗ ಇಲಿಗಳೇ ಇಲ್ಲ
ಅಲ್ಲಿನ ಪ್ರಯೋಗ ಶಾಲೆಗಳಲ್ಲೂ
ಇಲಿಗಳೇ ಇಲ್ಲ.

ಭೃಂಗಾಮಲಕದ ತೈಲವ ಹಚ್ಚಿದ ಫಣಿವೇಣಿಯರು
ಜನಿವಾರದವರು ಶಿವದಾರದವರು
ಟೋಪಿಗಳವರು ಬೂಟೂಗಳವರು ಸೂಟೂಗಳವರು
ನಿರೀಕ್ಷಿಸುತ್ತಲೇ ಇದ್ದಾರೆ
ಕಚಗಳಿಗಾಗಿ ಕಾಯುತ್ತಲೇ ಇದ್ದಾರೆ
ಬಿಸುಸುಯ್ಯುತ್ತಲೇ ಇದ್ದಾರೆ

ಮಾದರಿಗಾಗಿ ಫ್ರಿಜ್ಜಿನಲ್ಲಿಟ್ಟ ಮುದಿಇಲಿಯ ಹೆಣವನ್ನು ನೋಡುತ್ತಲೇ
ಇದ್ದಾರೆ
ಕಾಲಕಳೆಯುತ್ತಾ ಕಳೆಯುತ್ತಾ
ಮುದಿಯಾಗಿಯೇ ಹೋಗಿದ್ದಾರೆ.
ಆದರೂ ಇಲ್ಲಿ
ಚಿಲಿಪಿಲಿಗುಟ್ಟುವ ಇಲಿಗಳೇ ಇಲ್ಲ
ಇಲ್ಲಿ ಕಿಂದರಿ ಜೋಗಿಯೂ ಇಲ್ಲ.

೨

ಬೊಮ್ಮನ ಹಳ್ಳಿಯಲ್ಲೀಗ ಕುಂಟ ಹುಡುಗರೇ ಎಲ್ಲ.
ದೃಷ್ಟಿಹರಿದಲ್ಲೆಲ್ಲ ಕುಂಟುತ್ತಾ ಹೋಗುವ ಹುಡುಗರು
ಕುಂಟರನ್ನೇ ಹಡೆದು ಕುಂಟರಾದ ಮುದಿಯರು
ಕುಂಟರನ್ನು ನೋಡುತ್ತಾ ಬಿಸುಸುಯ್ಯುತ್ತಾರೆ

ಕನಸುಗಣ್ಣಲ್ಲಿ ಕುಂಟರು ಕಿಂದರಿ ನಾದ ನಿರೀಕ್ಷಿಸುತ್ತಾ
ದಂಟೆಕುಟ್ಟತ್ತಾ ಹೋಗುತ್ತಾರೆ
ನದೀ ತೀರದವರೆಗೆ ಬೆಟ್ಟದ
ಬಾಗಿಲವರೆಗೆ

ನದಿಯುಬ್ಬಿ ಮೊರೆಯುವುದೇ ಇಲ್ಲ
ಬೆಟ್ಟ ಬಾಯ್ದೆರೆಯುವುದೇ ಇಲ್ಲ
ಮಂತ್ರವನ್ನೂ ತಂತ್ರವನ್ನೂ ಮರೆತ ಇವರು
ಕುಂಟುತ್ತಾ ಹಿಂದಿರುಗುತ್ತಾರೆ

ಕುಂಟರಿಗೆ ಮದುವೆಯಿಲ್ಲ
ಕುಂಟರಿಗೆ ಮಕ್ಕಳಿಲ್ಲ
ಕುಂಟರೇ ತುಂಬಿದ ಈ ಊರಲ್ಲಿ ಮಕ್ಕಳ ಸದ್ದಿಲ್ಲದೆ
ದಂಟೆಯ ಸದ್ದೇ ಸದಾ ಮೊರೆಯುತ್ತಿದೆ
ನಿರೀಕ್ಷೆಯ ಕಣ್ಣುಗಳು
ಬೇಯುವ ಕಣ್ಣುಗಳು

ಮುಚ್ಚದ ಈ ಕಣ್ಣುಗಳಿಗೆ ನಿದ್ದೆಯೂ ಇಲ್ಲ
ಇಲ್ಲಿ ಕಿಂದರಿ ಜೋಗಿಯೂ ಇಲ್ಲ.

೩

ಇಲ್ಲಿ ಲಂಗೋಟಿ ಕಡಿಯುವ ಇಲಿಗಳಿಲ್ಲ
ಹಾಗಾಗಿ ಇಲ್ಲಿ ಬೆಕ್ಕುಗಳಿಲ್ಲ
ಹಾಗಾಗಿ ಇಲ್ಲಿ ಕರೆಯುವ ಹಸುಗಳಿಲ್ಲ
ಹಾಗಾಗಿ ಇಲ್ಲಿ ಋಷಿಪತ್ನಿಯರಿಲ್ಲ

ಇಲ್ಲಿ ಜಿಗಿಯುವ ಮಕ್ಕಳಿಲ್ಲ
ಇಲ್ಲಿ ಹುಟ್ಟೂ ಇಲ್ಲ ಇಲ್ಲಿ ಸಾವೂ ಇಲ್ಲ
ಇಲ್ಲಿ ಜೀವನವೂ ಇಲ್ಲ.

ಮದುವೆಯಿಲ್ಲ ಈ ಕುಂಟರ ಊರಲ್ಲಿ
ಇಲಿಗಳೂ ಇಲ್ಲ
ಕಿಂದರಿ ಜೋಗಿಯ ಇಲ್ಲ.

೪

ಎಲ್ಲಿದ್ದಾವೆ ಚಿಲಿಪಿಲಿ ಇಲಿಗಳು
ಎಲ್ಲಿದ್ದಾನೆ?
ಎಲ್ಲಿದ್ದಾವೆ ಪುಟ್ಟ ಮಕ್ಕಳು
ಎಲ್ಲಿದ್ದಾವೆ ?
ಎಲ್ಲಿದ್ದಾನೆ ಕಿಂದರಿಜೋಗಿ
ಎಲ್ಲಿದ್ದಾನೆ ?

೨ ದೇಶಕ್ಕೆ ನನ್ನ ಮಾತು

ಘನವಾದ ಎದೆಹೊತ್ತ ಯೌವನ ಪ್ರಮತ್ತೆಯರು ಸಂಚರಿಸುತ್ತಾರೆ |
ಮಹಾರಾಣಿಯ ಹಾಗೆ
ಕಾರು, ಸ್ಕೂಟರು, ಆಟೋ ಬಿರಿದ ಬೀದಿಗಳಲ್ಲಿ
ಸಲ್ಲಪಿಸುತ್ತಾರೆ ಉನ್ಮತ್ತ ಗಂಡುಗಳೊಡನೆ

ಪಾಪ್ ಹೋಟೆಲುಗಳಲ್ಲಿ ಏರ್‌ಕಲ್ಸ್ ಬಾರುಗಳಲ್ಲಿ
ನೋಟು ಚೆಲ್ಲುತ್ತಾ ಸಾಗುತ್ತಾರೆ
ಪಾಪಿಂಗ್ ಸೆಂಟರಿನ ಉನ್ಮಾದಕ ಟೊಳ್ಳುಗಳಲ್ಲಿ.

ಬಖಿಯಾ ಮಸ್ತಾನಾರಂಥ ಸಹಸ್ರ ಬೆಂಬಲದಲ್ಲಿ
ಫೈಲುಗಳು ಚಲಿಸುತ್ತವೆ ಮಹಲುಗಳು ಏಳುತ್ತವೆ
ಕುರ್ಚಿಗೆ ಜೋತು ಬಿದ್ದ ಕೋಟು ಟೋಪಿಗಳು ಆಕಾಶಕ್ಕೆ ನೆಗೆಯುತ್ತ
ಮಯ ನಿರ್ವಿತ ಜಗತ್ತು ಬಿಚ್ಚಿಕೊಳ್ಳುತ್ತದೆ
ಸೂಟು ಸೀರೆಯ ಜಾಲ ಬೆಸೆಯುತ್ತ ಮುಗಿಲಲ್ಲಿ ತೇಲುತ್ತದೆ.

ಕೆಳಕ್ಕೆ, ತೀರ ಕೆಳಕ್ಕೆ ಈ ದೇಶದ ತಾಜಾ ವಣ್ಣ ಧೂಳಲ್ಲಿ
-ಹೊರಗಿನೆಲ್ಲದರ ಅರಿವೇ ಇರವೇ ಇರದಂತೆ
ಒಣಕಲು ಮೊಲೆಯ ನನ್ನೂರ ಹರಿದ ಸೀರೆಗಳು
ಮಹಿಳಾ ವರ್ಷದಲ್ಲ ಸೆಗಣಿ ಬಾಚುತ್ತವೆ; ಕಾಡುಗಳಲ್ಲಿ
ಗೆಡ್ಡೆ ಕೀಳುತ್ತವೆ; ಗೊಬ್ಬರ ಹೆರು ಹೊರುತ್ತಲೇ
ಗೊಬ್ಬರವೇ ಆಗುತ್ತವೆ.
ಬೆವರಿಂದ ತೊಯ್ದು ಇಲ್ಲಿನ ಹರುಕು ಪಂಚೆಗಳು
ಟೊಳ್ಳು ನರಗಳು ಸುಕ್ಕಾಗಿ ಜೋತ ತೊಗಲುಗಳು
ದಿನವಿಡೀ ಗೋದೂ ಹಿಡಿ ಅಕ್ಕಿ, ಎಣ್ಣೆಗಾಗಿ ಸುತ್ತುತ್ತಾವೆ ಅಂಗಡಿಗಳ
ಬದುಕುವುದಕ್ಕಾಗಿ ಮಾರುತ್ತಾವೆ ಬದುಕುಗಳ

ಈ ಗೊಬ್ಬರ ಅಲ್ಲಿ ಚಿಗುರಾಯಿತೇ ?
ಈ ಬೆವರು ಅಲ್ಲಿ ಬಿಯರಾಯಿತೇ ?
ಈ ಟೊಳ್ಳು ನರ ಅಲ್ಲಿ ಹೀರು ಕೊಳವೆಯಾಯಿತೇ ?
ಈ ಹಿಡಿ ಅಕ್ಕಿ ಅಲ್ಲಿ ಬಿರಿಯಾನಿಯಾಯಿತೇ ?

ಬೇಸಿಗೆಯಲ್ಲಿ ಹಿಮ ಕರಗಿ ಮಳೆಗಾಲದಲ್ಲಿ ನೆರೆಯಾಗಿ
ಅಂತೂ ಮಧ್ಯೆ ಸದಾ ಸಮುದ್ರ ಸೇತುವೆ
ಕಟ್ಟಬೇಕಾದ ಜಾಗದಲ್ಲೆದ್ದಿದೆ ಆಡಳಿತ ಕಛೇರಿ
ವರ್ಲ್ಡ್ ಟ್ರೇಡ್ ಸೆಂಟರಿಗೆ ಸವಾಲೆಸೆದು, ತುದಿಯ ಪತಾಕೆ
ಉಲಿಯುತ್ತಿದೆ ಪ್ರಪಂಚಕ್ಕೆ ಶಾಂತಿಯ ಮಂತ್ರ

ಸಹನೌಭುನಕ್ತು ತಂತ್ರ, ಅಭೇದ್ಯ
ಹವಾ ನಿಯಂತ್ರಿತ ಕೋಣೆಯಿಂದ ಬಿತ್ತುತ್ತಾರೆ ಕೆಳಗೆ

ಸುಖದ ಸುಳ್ಳುಗಳನ್ನು ಆಶ್ವಾಸನೆಗಳ ಮೃತವಾಣಿಗಳನ್ನು
ಹೊಟ್ಟೆ ಬಿರಿಯುವ ಹಾಗೆ.

ಇಳಿಯಲು ಕೆಳಗೆ ಲಿಸ್ಟ್‌ಗಳಿಲ್ಲ. ಇಲ್ಲಿಂದ
ನೋಡಲು ಕೆಳಗೆ ಕಣ್ಣುಗಳಿಲ್ಲ, ಕಿವಿಯಿಂದ
ಕೇಳಲೂ ಅಸಾಧ್ಯ ಕೆಳಗಿನಾಕ್ರಂದ.
ನಿರ್ಯಾತವಿಲ್ಲ ಬರಿಯ ಆಯಾತವಷ್ಟೇ ಇಲ್ಲಿ
ಜನಮತಗಳೆಲ್ಲ ಧೃವೀಕೃತವಾಗಿ ಬೇರು ಬಿಟ್ಟಿವೆ ಗಟ್ಟಿ
ಮಹಲು ಒಡೆಯುತ್ತಿದೆ.
ಕುಣಿತ ಮೊರೆಯುತ್ತಿದೆ.

ಸುಸ್ತಾಗಿದೆ ನನಗೆ, ಸಂಪರ್ಕ ಕಡಿದೇಹೋದ
ಈ ಮೂರೂ ಮುಖ ನಿನ್ನದೇ ? ನಿನ್ನ
ನಾಲ್ಕನೆಯ ಮುಖವನ್ನೂ ಕಾಣಬೇಕೇ-ನಾನು ?
ಏನಾಗಿದೆ ನಿನಗೆ, ನನ್ನ ಬಡ ಭಾರತವೇ
ಉಕ್ಕು ಹರೆಯವೂ ನಿನಗೆ ಶಾಪವೇ ? ಪೆರಾಲಿಸಿಸ್ಸೇ?
ಥಾರ್ ಮರುಭೂಮಿ ನಿನ್ನುದ್ದಕ್ಕೂ ವಿಸ್ತರಿಸಿದೆಯೇ ?
ಆರ್ಯಭಟದಲ್ಲಿ ಆತ್ಮಕ್ಕೆ ಗಡೀಪಾರೇ ?

ಕಣ್ಣಿದ್ದಲ್ಲಿ ನೋಡು ಇಲ್ಲಿನ ಎಲುಬು ಗೂಡುಗಳ
ಕುಕ್ಕುವ ರಣಹದ್ದುಗಳ ಬಾಲಬಿಚ್ಚಿದ ನರಿತೋಳಗಳ
ಕಿತ್ತು ತಂದ ಗೆಡ್ಡೆ ಚೂರುಗಳ ಅಕ್ಕಿಯಲ್ಲಿ ಸಿಕ್ಕ ಆತ್ಮಲಿಂಗಗಳ

ಇನ್ನೂ ಸಿಡಿದೇಳದ ನಿಸ್ತೇಜ ಭಾರತವೇ ಹೇಳು~
ಅಮೆರಿಕದ ವಿಯೆಟ್ನಾಂ ನೀತಿಯ ಹಾಗೆ
ಇದು ನಿನಗೆ ಪ್ರೀತಿಯೇ ?

Close

ಹೆದ್ದಾರಿ

ಹೆದ್ದಾರಿ

-ಶ್ರೀಕಂಠ ಕೂಡಿಗೆ

ನನ್ನೂರ ಹೆದ್ದಾರಿ ಹುಡಿಮಣ್ಣಿನ ಕಣಕಣದಲ್ಲೂ
ಪರಂಪರೆಯ ಸಾಲು ಹೆಜ್ಜೆಗುರುತು
ಮೂಡಿ ಮಾಸಿದ್ದಿರಬೇಕು
ನಿನ್ನೆಯದು ಅಥವಾ ಅರೆಗಳಿಗೆ ಹಿಂದೆ ಆದದ್ದು
ಧೂಳೊದೆದು ಬಂದವರ ಪಾದಾಘಾತಕ್ಕೆ ಅಸ್ತವ್ಯಸ್ತ
ಇಟ್ಟ ಒಂದೊಂದು ಹೆಜ್ಜೆ ಇಂದಿಗದು ನವ್ಯ
ನಾಳೆ ನವೋದಯ ನಾಡಿದ್ದು ರಮ್ಯ
ಕೊನೆಗದು ಐತಿಹ್ಯ.
ಹೀಗೆ ನಾನು-ನನ್ನಪ್ಪ-ಅಜ್ಜಪಿಜ್ಜರ ಪದಗುರ್ತುಗಳ
ನುಂಗುತ್ತಾ ಮತ್ತೆ ಮತ್ತೆ ಮೂಡಿಸಿಕೊಳ್ಳುವ
ಹೆದ್ದಾರಿಯ ದೇಹದ ಮೇಲೆ ನಡೆಯಲಿಕ್ಕೆ ಮುಜುಗರ
ಬಿತ್ತು
ಮತ್ತೊಂದು ಒಳದಾರಿ ಮಾರ್ಗ ಬದಲಾಯಿಸಿದ್ದಕ್ಕೆ
ದಿನ ಕಳೆದ ವರ್ಷಗಳಲ್ಲಿ ಅಂಥದೇ ಬೇರೊಂದು ಹೆದ್ದಾರಿ
ಹೀ
ಗೆ.
ಹೀ ಗೆ
ಗತಿಸಿದ ಮೇಲೆ ಅದೂ ಬೇಜಾರು.
ರಾತ್ರಿ ಭೋರೆಂದು ಸುರಿದ ಮಳೆಗೆ
ಗುರುತೆಲ್ಲಾ ನಾಪತ್ತೆ
ನೀರು ಕುಡಿದು ತಣ್ಣಗಾದ ಹೆದ್ದಾರಿಯ ಮೇಲೆ
ಮತ್ತೆ
ಹೆಜ್ಜೆ-ಹುಟ್ಟು, ಸಾವು, ದಾರಿ ಬದಲು
ಅದು ಎಂದೆಂದೂ ಮುಗಿಯದ ಕಥೆ.

Close

ಕಾಲ ಮತ್ತು ಸ್ಥಿತಿಸ್ಥಾಪಕತ್ವ

ಕಾಲ ಮತ್ತು ಸ್ಥಿತಿಸ್ಥಾಪಕತ್ವ 7

ಇಂಗ್ಲಿಷ್ ಮೂಲ : ಜಿ ವೆಂಕಟನಾರಾಯಣ

ಕನ್ನಡಕ್ಕೆ : ಕೆ ಎಂ ನಾಗರಾಜ

ಮೊದಲಿಗೆ ಎಲ್ಲೆಲ್ಲೂ ನೀರವ. ಈ ಸ್ಥಿತಿ ಅಲ್ಪ ಮತ್ತು ದೀರ್ಘ ಕಾಲಗಳ ನಡುವಣದು. ಗಮನಕ್ಕೆ ಬರುವಷ್ಟು ಅಂತರದ್ದು. ನಾವು ನೀರವತೆಯನ್ನು ಗಮನಿಸಿದೆವು. ಈಗ ಅನತಿ ದೂರದಲ್ಲಿ ರೈಲಿನ ಕರ್ಕಶ ಶಬ್ದ ಕೇಳಿಬರುತ್ತಿದೆ. ಕಾರೊಂದು ಸಾಗಿಹೋಯಿತು ರಸ್ತೆ ಪುನಃ ನಿರ್ಜನವಾಯಿತು, ಕಾರು ತಿರುಗಿತು. ತಿರುಗುವಾಗ ಅದರ ಹಾರ್ನ್ ಕೇಳಿಸಿತು. ಅದು ಯಾರಿಗೋ ಬಡಿದಂತೆ ನಮಗೆ ಭಾಸವಾಯಿತು. ಕಿರುಚಾಟ, ಗದ್ದಲ ಕೇಳಿ ಬಂತು. ಯಾರಿಗೊ ಏಟು ಬಿದ್ದಿದೆ. ಏಟು ಜೋರಾಗಿ ಬಿದ್ದಿರಬಹುದು. ಕಾರು ಪುನಃ ಚಲಿಸಿ ಮರೆಯಾಯಿತು. ಶಬ್ದ ಮಾತ್ರ ಕೇಳಿಸುತ್ತಿದೆ. ನಮ್ಮ ದೃಷ್ಟಿಗೆ ಮರೆಯಾಗಿ ಅಲ್ಲಿ ಒಬ್ಬ ವ್ಯಕ್ತಿ ಬಿದ್ದಿರಬಹುದೆಂದು, ನಾವು ಊಹಿಸುತ್ತೇವೆ. ಕಾರು ಹೊರಟು ಹೋಯಿತು. ಅದರ ಇರುವಿಕೆಯ ಗುರುತು ಅಳಿಯಿತು. ಕಾರು ಪಕ್ಕಕ್ಕೆ ತಿರುಗಿ ಮರೆಯಾದ ದರದ ಮೂಲೆಯಲ್ಲಿ ವ್ಯಕ್ತಿಯೊಬ್ಬ ಕಂಡುಬಂದ.

ಅವನು ನಮ್ಮ ಕಡೆ ಬರುತ್ತಿದ್ದಾನೆ. ಅವನು ತನ್ನಷ್ಟಕ್ಕೆ ಹಾಡಿಕೊಳ್ಳುವುದು ನಮಗೆ ಕೇಳಿಸಿತು. ಅವನ ಧ್ವನಿ ಸಾಕಷ್ಟು ದೂರದಲ್ಲಿ ಕೇಳಿಬರುತ್ತಿದ್ದರೂ ಅವನು ಅನುಭವಿಸಿ. ಹಾಡುತ್ತಿರುವುದನ್ನೂ ಮತ್ತು ಅದರಿಂದ ನಿಜವಾಗಿಯೂ ಖುಷಿಪಡುತ್ತಿರುವುದನ್ನೂ ಕಾಣಬಹುದು. ಇದುವರೆಗೂ ಅವನು ನಮಗೆ ಭುಜದವರೆಗೆ ಮಾತ್ರ ಕಂಡುಬಂದ. ಈಗ ಅವನು ಡಬ್ಬಿಗಳನ್ನು ಹೊತ್ತು ತರುತ್ತಿರುವುದು ಕಂಡುಬರುತ್ತಿದೆ. ಆ ಡಬ್ಬಿಗಳಲ್ಲಿ ಹಾಲಿರಬಹುದೆಂದು ಊಹಿಸುತ್ತೇವೆ, ನಮ್ಮ ಮನುಷ್ಯ ಹಾಡುವುದನ್ನು ನಿಲ್ಲಿಸಿ, ಒಂದು ನಿಮಿಷ ನಿಂತು ಹಾಲಿನ ಡಬ್ಬವನ್ನು ನೆಲದ ಮೇಲೆ ಇಳಿಸಿದ, ನಾವು ಡಬ್ಬದ ಕಡೆ ನೋಡಿದೆವು, ನಮ್ಮ ಊಹೆ ಸರಿಯಾಗೇ ಇತ್ತು. ಸ್ವಲ್ಪ ಮಟ್ಟಿಗೆ ನಿಜವಾಗಿತ್ತು. ಏಕೆ ಹೀಗೆ ಹೇಳಬೇಕಾಗಿದೆಯೆಂದರೆ ಒಂದು ಡಬ್ಬದಲ್ಲಿ ಮಾತ್ರ ಹಾಲಿತ್ತು, ಮತ್ತೊಂದು ಖಾಲಿಯಾಗಿತ್ತು, ಅವನ ಬೆರಳುಗಳು ಜೇಬಿನಲ್ಲಿ ತಡಕಾಡಿದ ಸದ್ದು ನಮಗೆ ಕೇಳಿಸಿತು. ಎರಡು ಡಬ್ಬಗಳೂ ಅವನ ಪಕ್ಕದಲ್ಲಿದ್ದವು, ಈಗ ಅವನು ಬಾಯಲ್ಲಿ ಬೀಡಿ ಕಚ್ಚಿಕೊಂಡಿದ್ದ. ಕಡ್ಡಿ ಗೀರಿ ಬೀಡಿಯ ತುದಿಗೆ ಹಚ್ಚಿದ ಸದ್ದು ಕೇಳಿಸಿತು. ಇದ್ದಕ್ಕಿದ್ದಂತೆ ಬೆಳಕು ಹೆಚ್ಚಿತು, ಆರಿದ ಕಡ್ಡಿ ದೂರ ಬಿಸಾಡಿದ, ಮತ್ತೆ ಅವನು ತಾನೇ ಡಬ್ಬಗಳನ್ನು ಹೊತ್ತು ಬಂದ ದಾರಿಗೆ ವಿರುದ್ಧ ದಿಕ್ಕಿನಲ್ಲಿ ನೇರವಾಗಿ ಹೊರಟ. ಈ ಅವಧಿಯಲ್ಲಿ ಮೂಲೆಯಲ್ಲಿ ಏಟು ತಿಂದು ಗಾಯಗೊಂಡು ಬಿದ್ದಿರುವ ವ್ಯಕ್ತಿಯ ಅರಿವು ನಮಗೆ ಇದ್ದಿತು. ಹಾಲು ತುಂಬಿದ ಮತ್ತು ಖಾಲಿಯಿದ್ದ ಎರಡು ಡಬ್ಬಗಳ ವ್ಯಕ್ತಿ ಮತ್ತೆ ಬಂದ. ನಿಜವಾಗಿಯೂ ಅವನೇನೋ ಮರೆತಿದ್ದ ನಮ್ಮ ದೃಷ್ಟಿ ಒಂದು ನಲ್ಲಿಯ ಕಡೆ ಹರಿಯಿತು. ನಲ್ಲಿಯನ್ನು ತಿರುಗಿಸಿ ಖಾಲಿ ಡಬ್ಬಕ್ಕೆ ನಲ್ಲಿಯಿಂದ ನೇರವಾಗಿ ನೀರು ತುಂಬಲಾಯಿತು. ಹರಿದ ನೀರಿನ ಶಬ್ದ ನಮ್ಮನ್ನು ಕಾಡುತ್ತಿದ್ದ ನೀರವತೆಗೆ ಪರಿಹಾರ ದೊರಕಿಸಿತು. ಅದು ನಿಂತಮೇಲೆ ಪುನಃ ನೀರವ ಲೋಕಕ್ಕೆ ಮರಳಿದೆವು. ಬೆರಸುವ ಶಬ್ದ ನಮಗೆ ಕೇಳಿಸಿತು – ನಲ್ಲಿ ನೀರು ಮತ್ತು ಹಾಲು ಒಂದಾಯಿತು. ಆಗಾಗ ವ್ಯಕ್ತಿ ಡಬ್ಬದಲ್ಲಿ ಬೆರಳಿಡುತ್ತಿದ್ದ. ಕೊನೆಗೆ ಅವನ ಮುಖ ತೃಪ್ತಿಯ ಕಳೆ ಸೂಸಿತು. ಅವನು ಡಬ್ಬಗಳನ್ನು ಮೇಲೆತ್ತುತ್ತಿರುವಾಗ ಬೀಡಿ ಆರಿತು, ಅವನು ಕೆಳಕ್ಕೆ ಬಿಟ್ಟ ಬೀಡಿ ಈ ಮುಂಚೆ ಖಾಲಿಯಾಗಿದ್ದ ಡಬ್ಬದೊಳಕ್ಕೆ ಬಿತ್ತು. ಅದರಲ್ಲಿ ಕೈಯಿಟ್ಟು ಆ ಬೀಡಿ ತುಂಡನ್ನು ಅವನು ಹೊರಕ್ಕೆ ತೆಗೆದದ್ದನ್ನು ನಾವು ಕಂಡೆವು. ಸ್ವಲ್ಪ ದೂರದಿಂದ ಅವನ ಹಾಡು ಮತ್ತೆ ಕೇಳಿ ಬಂತು. ಅಂತಿಮವಾಗಿ ಅವನ ಇರುವಿಕೆ ಉಗಿತದೊಂದಿಗೆ ಮರೆಯಾಯಿತು.

ಮೊದಲಿಗೆ ಕತ್ತಲಿದ್ದದ್ದನ್ನು ನಾವು ನೆನಪಿಸಿ ಈಗ ಸೂರ್ಯೋದಯವಾಗುವುದನ್ನು ತಿಳಿಸುತ್ತೇವೆ. ಎಚ್ಚರಗೊಂಡ ಜನ ಫ್ಲಾಟ್‌ಫಾರಂ ಮೇಲೆ, ನಿಲ್ದಾಣದ ಹೊರಗೆ ಅಂಗಡಿ ಬಳಿ ರೈಲುಗಳ ಒಳಗೆ ಗುಂಪುಗೂಡಿರುವುದನ್ನು ನಾವು ಕಾಣುತ್ತೇವೆ. ಒಟ್ಟಿಗೆ ಅಷ್ಟೊಂದು ಜನ. ನಾವು ಅಪಘಾತದ ವಿಚಾರ ಮರೆತೆವು, ನಾವು ಶಬ್ದ ಕೇಳುತ್ತಿದ್ದೇವೆ. ಬದುಕಿನ ಶಬ್ದ, ಬೆಳಗಿನ ಪತ್ರಿಕೆಯ ಚರಪರ ಸದ್ದು, ಕಾಫಿ ಹೀರುವ ಸದ್ದು, ಫೋರ್ಟರುಗಳ ಕೂಗು ಮಕ್ಕಳ, ಹೆಂಗಸರ ಕೀರಲು ಧ್ವನಿ, ರೇಡಿಯೋದಲ್ಲಿ ಹೊಮ್ಮಿ ಬರುತ್ತಿರುವ ಹಾಡಿನ ಪಲುಕು ಅಥವಾ ಬೆಳಗಿನ ವಾರ್ತೆ, ಆತ್ಮನಿಂದಕ ತಿರುಕರ ಮನವಿ ಮುಂತಾದುವುಗಳು. ಈ ಶಬ್ದಗಳು ಒಂದಾದ ಮೇಲೊಂದರಂತೆ ಕೇಳಿ ಬರುತ್ತಿಲ್ಲ. ಒಮ್ಮೆಗೆ ಯಾವುದೋ ಒಂದೇ ಪ್ರಾಣಿಯಿಂದ ಉಂಟಾದಂತೆ ಕೇಳಿ ಬರುತ್ತಿದೆ, ಹಸುವೊಂದು ರೈಲ್ವೆ ಹಳಿಗಳ ಮೇಲೆ ಹಾದು ಹೋಗುತ್ತಿದೆ. ರೈಲು ಹಸುವನ್ನು ಸಮೀಪಿಸುತ್ತಿದೆ. ಜಸ ಹಸುವನ್ನು ಪಕ್ಕಕ್ಕೆ ಓಡಿಸುವ ಸಲುವಾಗಿ ಕೂಗುತ್ತಿದ್ದಾರೆ. ಹಸು ವಿಚಲಿತಗೊಳ್ಳದೆ ತನ್ನ ಮೂಗಿನಿಂದ ಕಬ್ಬಿಣದ ಅಂಗುಲಂಗುಲವನ್ನೂ ಮೂಸುತ್ತಿದೆ. ರೈಲು ತನ್ನ ದಾರಿಯಲ್ಲಿ ಹಸುವನ್ನು ಸಮೀಪಿಸಿತ್ತು, ಜನ ಹಸುವನ್ನು ಅಲ್ಲಿಂದ ಓಡಿಸುವಲ್ಲಿ ವಿಫಲರಾಗಿದ್ದಾರೆ. ಇವುಗಳ ಹಿನ್ನೆಲೆಯಲ್ಲಿ ದೂರದಿಂದ ಮಗುವೊಂದರ ಅಳುವಿನ ಧ್ವನಿ ಕೇಳಿ ಬಂತು. ಜನರೆಲ್ಲಾ ಒಟ್ಟಿಗೆ ಕೂಗುತ್ತಿರುವುದು ಕೇಳಿಸಿತು. ಮಗುವನ್ನು ಉಳಿಸಲೇಬೇಕು, ಮಗು; ಮತ್ತೊಂದು ರೈಲು ಹಳಿ ಮೇಲಿದೆ. ರೈಲು ಸುಮಾರು ದೂರದಲ್ಲಿ ಬರುತ್ತಿದೆ. ಅದು ಯಾವ ಹಳಿಯ ಮೇಲೆ ಬರುವುದೋ ಗೊತ್ತಿಲ್ಲ. ಹಸುವಿನದೊ? ಅಥವಾ ಮಗುವಿನದೊ? ಜನ ಎಲ್ಲೆಲ್ಲೂ ಇದ್ದಾರೆ. ಹಸು ಕಣ್ಮರೆಯಾಯಿತು, ನಾವದನ್ನು ಪುನಃ ನೋಡಲೇ ಇಲ್ಲ. ಮಗುವಿನ ಹಿಂಭಾಗ ಮಾತ್ರ ಕಾಣಿಸುತ್ತಿದೆ. ಸಮಾಧಾನದ ಉಪಚಾರದ ಮಾತುಗಳು ಕೇಳಿ ಬರುತ್ತಿವೆ. ಮಗುವಿಗೆ ಅದು ಬಯಸಿದ್ದನ್ನು ಕೊಟ್ಟಿರಬಹುದು, ಬಹುಶಃ ಐಸ್ ಕ್ರೀಂ, ನಾವು ಊಹಿಸುತ್ತಿದ್ದೇವಷ್ಟೆ, ಏಕೆಂದರೆ ಮಗು ಬಲಗೈಯನ್ನು ಆಗಾಗ ಬಾಯಿಯ ಬಳಿಗೆ ತೆಗೆದುಕೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಈಗ ನಾವು ಸೈನ್ಯದ ಸಮವಸ್ತ್ರಧಾರಿಯನ್ನು ನೋಡುತ್ತಿದ್ದೇವೆ. ನಮ್ಮ ದೃಷ್ಟಿಯಿಂದ ಮಗು ಸಂಪೂರ್ಣವಾಗಿ ಮರೆಯಾಗಿದೆ. ಸೈನಿಕನ ಪೊದೆಯಂಥ ಮೀಸೆಯ ಮೇಲೆ ನೊಣವೊಂದು ಕುಳಿತುಕೊಂಡಿತು. ಅವನ ಮೀಸೆ ಕುಣಿದು ನೊಣ ಹಾರಿತು. ಮತ್ತೆ ಎರಡು ನೊಣಗಳು. ಮೀಸೆಯ ಮೇಲೆ ಕೂರಲು ಬಂದವು. ಕಾಫೀ ಅಥವಾ ಟೀ ಮೀಸೆಗೆ ಮೆತ್ತಿಕೊಂಡು ನೊಣವನ್ನು ಆಕರ್ಷಿಸುತ್ತಿರಬಹುದು. ಅವನು ಒಂದು ದೊಡ್ಡ ಪೆಟ್ಟಿಗೆಯ ಮೇಲೆ ಕುಳಿತಿರುವುದು ಈಗ ನಮ್ಮ ಅರಿವಿಗೆ ಬಂತು. ಅವನ ‍‍‍ಷೂಗಳನ್ನು ಪಾಲಿಷ್ ಮಾಡಿ ಬಹಳ ಹೊತ್ತಾಗಿಲ್ಲ, ಅದು ಹೊಳೆಯುತ್ತಿದೆ. ಒಬ್ಬ ಬೂಟ್ ಪಾಲಿಷ್ ಮಾಡುವ ಹುಡುಗ ಅವನ ಷೂ ಫಾಲಿಷ್ ಮಾಡಲು ಬೇಡುತ್ತಿರುವುದನ್ನು ನಾವು ಕಾಣಬಹುದು. ಅವನು ಪತ್ರಿಕೆ ಓದುವಂತೆ ನಟಿಸುತ್ತಿದ್ದವನು ನೋಟ ಹೊರಕ್ಕೆ ಬೀರಿದ ಆ ನೋಟದಲ್ಲಿ ನಾವು ಮಾತ್ಸರ್ಯ ಮತ್ತು ತಾತ್ಸಾರಗಳನ್ನು ಓದಬಹುದು. ಅವನು ತನ್ನ ಪತ್ರಿಕೆಯನ್ನು ಸುತ್ತುತ್ತಿರುವಂತೆ ಅದರಲ್ಲಿ ತನಗೆ ಏಟು ಬಿದ್ದೀತೆಂಬ ಭಯದಿಂದ ಹುಡುಗ ಓಡಿಹೋದ. ಸೈನಿಕ ಎದ್ದು ದೇಹ ನೇರ ಮಾಡಿಕೊಂಡು ನೃತ್ಯಾಕಾರದಲ್ಲಿ ನಡೆದು ಕೈಗಳನ್ನು ಚಾಚಿ ಮೈಮುರಿದು ನೆಟ್ಟಿಗೆ ತೆಗೆದ. ಅವನು ತನ್ನ ಕೈಗಳಿಂದ ತಲೆ ಹಿಡಿದು ಕೊಂಡ-ಕೆನ್ನೆಯನ್ನು ಬಲಗೈಯಿಂದ, ತಲೆಯ ತುದಿಭಾಗವನ್ನು ಎಡಗೈಯಿಂದ ಹಿಡಿದು ಕೊಂಡು ನೆಟ್ಟಿಗೆ ತೆಗೆದ. ಕುತ್ತಿಗೆಯ ಮೂಳೆಗಳು ಮಾಡಿದ ಶಬ್ದವನ್ನು ನಾವು ಕೇಳಿಸಿ ಕೊಂಡೆವು. ಈಗ ಅವನು ಕುಳಿತ ಜಾಗದಿಂದ ಎದ್ದು ಬಂದದ್ದರಿಂದ ನಮಗೆ ಮಗು ಮತ್ತೆ ಕಾಣಿಸಿತು. ಮಗು ಗಾಬರಿಗೊಳಿಸುವ ಅಳುವನ್ನು ಪ್ರಾರಂಭಿಸಿತು. ಕೋತಿಯೊಂದು ಮೇಲಕ್ಕೆ ನೆಗೆಯಿತು. ಈಗ ಅದು ಅಂಗಡಿಯೊಂದರ ಮೇಲೆ ಹತ್ತಿ ಕುಳಿತಿತು. ಜನರ ಗಮನ ಕೋತಿಯ ಕಡೆ ತಿರುಗಿತು. ಮಗು ತಿನ್ನುತ್ತಿದ್ದುದು ಬಾಳೆಹಣ್ಣೆಂದು ಈಗ ನಮಗೆ ಗೊತ್ತಾಯಿತು. ಮತ್ತೊಮ್ಮೆ ಸಮಾಧಾನದ ಉಪಚಾರದ ಮಾತುಗಳು ಕೇಳಿಬಂದವು. ರೈಲು ಬ೦ದಿತು. ಜನರೆಲ್ಲಾ ಗೊಂದಲದಿಂದ ಚಲಿಸತೊಡಗಿದರು. ಜನರೆಲ್ಲಾ ಒಂದೇ ರೈಲಿನಲ್ಲಿ ಒಂದೇ ಡಬ್ಬಿಯಲ್ಲಿ ಪ್ರಯಾಣ ಮಾಡಲು ಬಯಸಿದಂತಿದೆ. ಪೋರ್ಟರನೊಬ್ಬ ಸೈನಿಕನ ಪೆಟ್ಟಿಗೆಯನ್ನು ಸಾಗಿಸುವುದರಲ್ಲಿ ಸಫಲನಾದ. ಜನರ ನಡುವೆ ದಾರಿಗಾಗಿ ಅವನು ಕಿರಚುತ್ತಿರುವುದರಿಂದ ಅವನ ಬಾಯಿ ಆಡುವುದನ್ನು ಕಾಣಬಹುದು. ಬೆಲ್ಲದ ಕಣಕ್ಕೆ ಅಸಂಖ್ಯಾತ ಇರುವೆಗಳು ಮುತ್ತಿದಂತೆ ಜನ ಕಂಡುಬರುತ್ತಿದ್ದಾರೆ. ಜನರಿಗೆ ಜಾಗಬೇಕಾಗಿದೆ. ಪೋರ್ಟರ್ ಅಷ್ಟೇ ದೃಢಚಿತ್ರದಿಂದ ಮುನ್ನುಗ್ಗುತ್ತಿದ್ದಾನೆ. ರೈಲು ಬಹಳ ಉದ್ದವಾಗಿದೆ. ನಮ್ಮ ಕಣ್ಣಿಗೆ ಕತ್ತಲಿಟ್ಟಿತು. ನಿಧಾನವಾಗಿ ಗಮನಿಸಿದಾಗ ಡಬ್ಬಿಯೊಂದರ ಒಳಭಾಗವನ್ನು ನೋಡಲು ಸಾಧ್ಯವಾಯಿತು. ಅಂತೂ ಹೇಗೋ ಜನ ರೈಲುಡಬ್ಬಿಗಳಲ್ಲಿ ಸೇರಿಕೊಂಡರು. ಉಲ್ಲನ್‌ ಸೂಟಿನ ವ್ಯಕ್ತಿಯೊಬ್ಬ ಕುಳಿತಿದ್ದ. ಅವನಿಗೆ ತನ್ನ ಟೈ ಬಿಚ್ಚಬೇಕೆನಿಸಿತು. ಆದರೆ ಕೈ ಅಲುಗಿಸಲಾಗುತ್ತಿಲ್ಲ. ಅವನು ಪ್ರಯತ್ನಿಸಬೇಕು. ಅವನ ಯತ್ನ ಸಾಗಿತು. ಅವನ ಪಕ್ಕದವನಿಗೆ ಸಂಶಯ ಬಂದು ತನ್ನ ಷರಾಯಿಯ ಹಿಂದಿನ ಜೇಬನ್ನು ಮುಟ್ಟಿ ನೋಡಿಕೊಂಡ ಸೂಟಿನವನು ನಗಲು ಯತ್ನಿಸಿದ. ಅವನ ತುಟಿಗಳ ಸುತ್ತಾ ಬೆವರಿನ ಹನಿ ಕಂಡುಬರುತ್ತಿದೆ. ಇನ್ನೂ ಒಬ್ಬ ಹೇಗೊ ಅದೇ ಡಬ್ಬಿಗೆ ಹತ್ತಿದ. ತಾನು ಕರೆತಂದ ಪೋರ್ಟರನಿಗೆ ಹಣಕೊಟ್ಟ. ಫೋರ್ಟರನು ಅವನನ್ನು ನಿಜವಾಗಿಯೂ ಒಳಕ್ಕೆ ತುರುಕಿದ್ದ. ಪೋರ್ಟರನಿರದಿದ್ದರೆ ಅವನು ರೈಲನ್ನು ಪ್ರವೇಶಿಸಲಾಗುತ್ತಿರಲಿಲ್ಲ. ಇನ್ನೂ ಅನೇಕರು ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದಾರೆ. ಒಳಗಿನವರ ಚಟುವಟಿಕೆಗಳಿಂದ ಅವರು ಡಬ್ಬಿಗಳನ್ನ ಬದಲಿಸಬೇಕಾಗಿದೆ. ಪ್ರತಿಯೊಬ್ಬರ ಬಳಿಯೂ ಲಗ್ಗೇಜಿದೆ ತಣ್ಣನೆಯ ಬೆವರನ್ನು ಹರಿಸುತ್ತಿದ್ದಾರೆ. ಒಬ್ಬ ತನ್ನ ಸೂಟ್ ಕೇಸ್ ಮೇಲೆ ಕೂರಲು ಪ್ರಯತ್ನಿಸುತ್ತಿದ್ದಾನೆ. ಆದರೆ ಈಗಾಗಲೇ ಅಲ್ಲಿ ಒಬ್ಬ ನಿಂತಿದ್ದಾನೆ. ಅವನ ತುಳಿತದಿಂದ ಒಂದು ಚರ್ಮದ ಚೀಲ ತನ್ನ ಆಕಾರ ಕಳೆದುಕೊಂಡಿದೆ. ಅದರ ಯಜಮಾನನಿಗೆ ತನ್ನ ಸೂಟ್‌ಕೇಸಿನ ಚರ್ಮದ ಚೀಲ ಹಾಳಾದ ಬಗ್ಗೆ ಕೋಪ ಬಂದರೂ, ರೈಲಿನಲ್ಲಿ ಜಾಗ ಸಿಕ್ಕಿದ್ದರಿಂದ ಸಮಾಧಾನದಿಂದಿದ್ದಾನೆ. ಈಗ ಹೊರಗೆ ಪ್ಲಾಟ್‌ಫಾರಂ ಮೇಲೆ ಮಹಿಳೆಯೊಬ್ಬಳು ರೈಲು ಹತ್ತಲು ಅವಸರದಿಂದ ಹೋಗುತ್ತಿರುವುದನ್ನು ನಾವು ನೋಡಬಹುದು. ಅವಳ ಹಿಂದೆ ಬೇರೊಬ್ಬ ಪೋರ್ಟರನು ಅವಳ ಲಗ್ಗೇಜನ್ನು ಹೊತ್ತು ನಡೆಯುತ್ತಿದ್ದಾನೆ. ಆಕೆ ಅಷ್ಟೇನು ಆಕರ್ಷಕವಾಗಿಲ್ಲ. ಹಾಗಾದರೂ ಅವಳ ಎದೆ ದುಂಡಗೆ ದೃಢವಾಗಿದೆ. ಅವಳ ಬ್ಲೌಸ್‌ಗೆ ತೋಳುಗಳಿಲ್ಲ. ತನ್ನ ಕಂಕುಳಿನ ಕೂದಲನ್ನು ಆಕೆ ತೆಗೆದಿಲ್ಲವಾದ್ದರಿಂದ ವಕ್ರವಾಗಿ ಕಾಣುತ್ತಿದೆ. ಅವಳ ಎದೆಯ ಆಕಾರದಿಂದಷ್ಟೇ ನಾವು ತೃಪ್ತಿಪಡಬೇಕಾಗಿದೆ. ಅವಳ ಹಿಂಭಾಗ ಜೋಲಾಡುತ್ತಿದೆ. ಉಬ್ಬಿರಬೇಕಾಗಿದ್ದ ಅದು ಚಪ್ಪಟೆಯಾಗಿದೆ. ಅವಳ ಎದೆ ಮತ್ತೊಮ್ಮೆ ನಮ್ಮ .ದೃಷ್ಟಿಗೆ ಬರುತ್ತದೆ. ಅವಳಿಗೆ ತೆಳ್ಳನೆಯ ಮೀಸೆ ಸಹ ಇದೆ. ಜನ ಅವಳಿಗೆ ದಾರಿ ಬಿಟ್ಟರು. ಅವಳು ಹೆಂಗಸು, ಅವಳನ್ನು ಗೌರವಿಸಲೇಬೇಕು. ಅವಳು ಮಹಿಳೆಯರ ಡಬ್ಬಿಗೆ ಹತ್ತಿದಳು. ಈಗಾಗಲೇ ಅಲ್ಲಿ ಅನೇಕರು ಸೇರಿದ್ದಾರೆ. ಕೆಲ ನಿಮಿಷಗಳ ಹಿಂದೆ ತನ್ನ ಬಾಳೆಹಣ್ಣನ್ನು ಕಳೆದುಕೊಂಡ ಮಗುವನ್ನು ಅಲ್ಲಿ ನಾವು ಗುರುತಿಸಬಹುದು. ಮಗುವಿಗೆ ನಿದ್ರೆ ಬರುತ್ತಿದೆ. ಅದರ ಕಣ್ಣುಗಳು ಚುರುಕಾಗಿಲ್ಲ, ಮಂಕಾಗಿದೆ. ಅಸಂಖ್ಯಾತ ನೊಣಗಳು, ಮಗುವಿನ ತಾಯಿ ತನ್ನ ಮಗು ಮಲಗಲು ಜಾಗ ಮಾಡಿ ಕೊಡಲು ಪ್ರಯತ್ನಿಸುತ್ತಿದ್ದಾಳೆ. ಅಲ್ಲಿ ಜಾಗವಿಲ್ಲ. ಅಲ್ಲಿ ಅನೇಕ ತಾಯಂದಿರಿದ್ದಾರೆ. ಅನೇಕ ಮಕ್ಕಳುಗಳಿವೆ. ಆದರೆ ಜಾಗ ಮಾತ್ರ ಚಿಕ್ಕದು.

ಪ್ರಸ್ತುತ ನಾವು, ಒಬ್ಬ ಮುದುಕ ತೆರೆದ ನಲ್ಲಿಯ ಕೆಳಗೆ ಕುಳಿತಿರುವುದನ್ನು ನೋಡಬಹುದು. ಓಡಾಡುವ ಜನರ ಭಾವನೆಗಳನ್ನು ಲಕ್ಷಿಸದೆ ಅವನು ಸ್ನಾನ ಮಾಡುತ್ತಿದ್ದಾನೆ. ಪುಸ್ತಕದ ಅಂಗಡಿಯ ಬಳಿ ಒಬ್ಬನನ್ನು ನಾವು ಕಂಡೆವು. ಈಗ ತಾನೆ ಅವನು ಒಂದು ಪತ್ರಿಕೆಯನ್ನು ಕೊಂಡುಕೊಂಡ. ಅವನ ಗಮನ ನಲ್ಲಿಯ ಕೆಳಗೆ ಸ್ನಾನ ಮಾಡುತ್ತಿದ್ದ ಮುದುಕನ ಕಡೆಯ ಹರಿಯಿತು. ಅವನು ಸೋಪು ಹಚ್ಚಿಕೊಂಡ, ಸ್ನಾನ ಮಾಡುತ್ತಿರುವ ಮುದುಕನಿಗೆ ಕೆಟ್ಟ ಚಟಗಳಿವೆ, ಸ್ನಾನ ಮಾಡುತ್ತಾ ಅವನು ಉಚ್ಚೆ ಹೊಯ್ಯುತ್ತಿದ್ದಾನೆ. ಜನ ಗಮನಿಸುವುದು ಗೊತ್ತಾದಾಗ ಉಚ್ಚೆ ನಿಂತಿತು. ಸೋಪು ಹಚ್ಚುವುದು ಮುಂದುವರೆಯಿತು. ನಮ್ಮ ಸೈನಿಕ ಹತ್ತಿದ ಡಬ್ಬಿಯನ್ನು ನಾವೀಗ ನೋಡುತ್ತಿದ್ದೇವೆ. ಸೈನ್ಯದಿಂದ ಬಂದ ಇನ್ನೂ ಅನೇಕರು ಅಲ್ಲಿದ್ದಾರೆ. ದೇಶದ ರಕ್ಷಣೆಯಲ್ಲಿ ನಿರತರಾದ ಜನ, ಪೊದೆ ಮೀಸೆಯ ನಮ್ಮ ಸೈನಿಕ ಕ್ಷೌರ ಮಾಡಿಕೊಳ್ಳುತ್ತಿದ್ದಾನೆ. ಅವನಿಗೆ ಗೆಳೆಯರು ಇದ್ದಾರೆ. ಒಬ್ಬ ಅವನಿಗಾಗಿ ಕನ್ನಡಿ ಹಿಡಿದಿದ್ದಾನೆ. ಅದರಲ್ಲಿ ಅವನ ದಟ್ಟ ಮೀಸೆ ಪ್ರತಿ ಬಿಂಬಿಸುತ್ತಿದೆ. ಅವನು ಕ್ಷೌರ ಮಾಡಿಕೊಳ್ಳುತ್ತಾ ಸಿಗರೇಟು ಸೇದಿದ ಕನ್ನಡಿ ಮಂಕಾಗಿ ಪ್ರತಿಬಿಂಬ ಕಾಣಿಸದಾಯ್ತು. ಹೊಗೆಯ ಅನೇಕ ತೆರೆಗಳು ಇನ್ನೂ ಕನ್ನಡಿಯ ಮುಂದೆ ದಟ್ಟವಾಗಿದೆ. ಸೈನ್ಯದ ಜನ ಯುದ್ದದ ಅಥವಾ ಯುದ್ಧದ ಚಲನಚಿತ್ರದ ಸೂಚನೆಯಂತಿದ್ದಾರೆ. ಕ್ಷೌರ ಮುಗಿಯಿತು. ಹಸಿರು ಬಟ್ಟಲಿನಲ್ಲಿದ್ದ ಸೋಪಿನ ನೀರಿಗೆ ರೇಜರನ್ನು ಅದ್ದಲಾಯಿತು. ಕೈ ಕಿಟಕಿಯಿಂದ ಹೊರಬಂದು ಆ ನೀರನ್ನು ಹೊರಚೆಲ್ಲಿತ್ತು. ಪ್ಲಾಟ್ ಫಾರಂ ಮೇಲಿದ್ದವನೊಬ್ಬನ ಮುಖದ ಮೇಲೆ ಕೊಳೆ ನೀರು ಬಿದ್ದಿತು. ಅವನು ಗದರಿಸಲು ಬಯಸಿದ ಆದರೆ ಹಾಗೆ ಮಾಡದಿರಲು ತೀರ್ಮಾನಿಸಿದ. ಅವನು ಭಯಂಕರವಾದ ದೃಶ್ಯವೊಂದನ್ನು ಕಂಡ. ಅನೇಕ ಸೈನಿಕರ ಬಂದೂಕಿನ ಗುರಿ ಅವನತ್ತ ನೆಟ್ಟಿತ್ತು. ಎಲ್ಲ ಕಡೆಯ ಎಲ್ಲರ ನಗು, ಟೈ ತೆಗೆಯಲು ಹೋರಾಡುತ್ತಿದ್ದವನು ಕೊನೆಗೂ ಯಶಸ್ಸು ಗಳಿಸಿದ. ಆದರಿಂದ ಅವನಿಗೇನು ಸಂತೋಷವಾದಂತೆ ಕಂಡು ಬರಲಿಲ್ಲ, ಟೈ ಬಿಚ್ಚಿದ್ದಷ್ಟೇ ಸಾಲದೆ ಅವನು ತನ್ನ ಕೋಟು, ಷರ್ಟ್‌, ಷರಾಯಿ ಮತ್ತು ಚಡ್ಡಿ ಎಲ್ಲವನ್ನು ಬಿಚ್ಚಿ ಬಯಸುತ್ತಾನೆ. ಅವನಿಗೆ ಬತ್ತಲಾಗಬೇಕೆನಿಸಿದೆ, ಅದು ನಿಜ. ಈಗ ತಾನೆ ಹುಟ್ಟಿದ ಮಗುವಿನಂತೆ ಬತ್ತಲಾಗಬೇಕೆಂಬ ಬಯಕೆ, ಅನಂತರ ಅವನು ವಿಶ್ರಮಿಸಬಹುದು. ಎಲ್ಲಕಡೆಯೂ ಅನೇಕ ಮಕ್ಕಳಿದ್ದಾರೆ. ಒಂದು ಮಗು ಬಟ್ಟೆ ಬಿಚ್ಚಲು ಬಿಡುತ್ತಿಲ್ಲ. ಅದರ ತಾಯಿ ಒತ್ತಾಯಿಸುತ್ತಿದ್ದಾಳೆ. ಮಗು ಇದ್ದಕ್ಕಿದ್ದಂತೆ ದೊಡ್ಡದಾಯಿತು. ಯುವತಿಯಾಯಿತು. ಅವಳು ಬಟ್ಟೆ ಬಿಚ್ಚುವುದರ ವಿರುದ್ಧ ಪ್ರತಿಭಟಿಸುತ್ತಿದ್ದಾಳೆ.

ರೈಲು ಚಲಿಸಲೇ ಇಲ್ಲ. ಜನರು ಬೆವರು ಸುರಿಸುತ್ತಿದ್ದಾರೆ. ಮತ್ತೊಮ್ಮೆ ರೈಲಿನಲ್ಲಿರುವ ಜನರ ಗುಂಪಿನಿಂದ ನಾವು ಪ್ರಭಾವಿತರಾಗಿದ್ದೇವೆ. ಅನೇಕರು ರೈಲನ್ನು ಹತ್ತಿದ್ದಾರೆ. ಅನೇಕರು ಅದನ್ನು ಹತ್ತಲು ಹಲುಬುತ್ತಿದ್ದಾರೆ. ಈ ಜನರಿಗೆಲ್ಲಾ ಪ್ರವಾಸ ಮಾಡುವ, ಅದೂ ಅದೇ ರೈಲಿನಲ್ಲಿ ಪ್ರವಾಸ ಮಾಡುವ ಒಂದೇ ಒಂದು ಅಪೇಕ್ಷೆ ಇದ್ದಂತೆ ಕಂಡು ಬರುತ್ತಿದೆ. ನಲ್ಲಿ ಕೆಳಗಿನ ಮುದುಕ ತನ್ನ ಸ್ನಾನ ಮುಗಿಸಿದ. ಅವನಿಗೆ ನಾಚಿಕೆಯ ಭಾವನೆಯೇ ಇಲ್ಲ. ಅವನು ತನ್ನ ಬಟ್ಟೆ ಬದಲಿಸಿದ, ಅದೇ ಹಳೆಯ ಷರ್ಟನ್ನು ಪುನಃ ಧರಿಸಿದ. ಅವನು ತನ್ನ ತಲೆ ಬಾಚಿದ, ಬಾಚಣಿಗೆಯಿಂದ ನೀರಿನ ತುಂತುರು ಹಾರಿತು. ಅವನು ನೆಲ್ಲಿಯನ್ನು ನಿಲ್ಲಿಸಲಿಲ್ಲ. ಈಗ ಹೆಂಗಸೊಬ್ಬಳು ಅಲ್ಲಿ ಬಟ್ಟೆ ಒಗೆಯುತ್ತಿದ್ದಾಳೆ. ಅದನ್ನು ಯಾರೂ ಗಮನಿಸುತ್ತಿಲ್ಲ. ರೈಲು ಚಲಿಸುವುದಿಲ್ಲ. ಈ ವಯಸ್ಸಿನಲ್ಲಿ ಅವನಿಗೆ ತನ್ನ ಕೂದಲಿನ ಬಗ್ಗೆ ಇಷ್ಟು ಕಾಳಜಿ ಇರಬೇಕಾಗಿರಲಿಲ್ಲ. ಅವನಿಗೆ ತಲೆ ಹೊಟ್ಟಿನ ಸಮಸ್ಯೆಯಿಲ್ಲ. ಇಪ್ಪತ್ತರ ತರುಣರು ಬಕ್ಕ ತಲೆಯವರಾಗಿದ್ದಾರೆ. ಚಪ್ಪಟೆ ಹಿಂಭಾಗದ, ತೆಳು ಮೀಸೆಯ, ಆಕರ್ಷಕ ಎದೆಯ ಹೆಂಗಸು ತನ್ನ ಬೆವರನ್ನು ಸೀರೆಯ ಅಂಚಿನಿಂದ ಒರೆಸಿ ಕೊಂಡಳು. ಕ್ಷೌರ ಮಾಡಿಕೊಳ್ಳದ ತನ್ನ ಕಂಕುಳಿನ ಬಗ್ಗೆ ಅವಳು ಮುಚ್ಚುಮರೆ ಮಾಡುತ್ತಿಲ್ಲ. ನೊಣಗಳ ಚರ್ಮದ ಮೇಲೆ ಕೂರುತ್ತವೆ. ಅವು ಕಚ್ಚುವುದಿಲ್ಲ. ಕಾಲಿನಿ೦ದ ಕೆರೆಯುತ್ತವಷ್ಟೆ. ಅವು ಸೋಮಾರಿಗಳು. ಜನರ ಮೇಲೆ ವಿಶ್ರಮಿಸಲು ಬಯಸುತ್ತವೆ. ಮನುಷ್ಯರು ನೊಣಗಳನ್ನು ದ್ವೇಷಿಸುತ್ತಾರೆ. ಅವುಗಳ ಹಾರಾಟಕ್ಕೆ ಅಡ್ಡಿಯನ್ನುಂಟು ಮಾಡಲು ಕೈ ಬೀಸುತ್ತಾರೆ. ಅವು ಹಾರಿ ಗಾಳಿಯಲ್ಲಿ ಸುತ್ತಿ ಬೇರೆಯವರ ಮೇಲೆ ಹೋಗಿ ಕೂರುತ್ತವೆ. ಇದು ನಿರಂತರ ಸಾಗುತ್ತದೆ.

ನಾವು ಮುಖಗಳನ್ನು ಕಾಣುತ್ತೇವೆ. ನಿರಾಶೆಯ ಬಣ್ಣ ಬಳಿದ ಮುಖಗಳು. ಜನರೆಲ್ಲ ಬೇಸರಗೊಂಡಿದ್ದಾರೆ. ಅದು ಅವರ ಮುಖದ ಮೇಲೆ ಬರೆದಿದೆ. ಈ ನಿರಾಶೆಯ ಮುಖ ಹಸಿದ ಕಣ್ಣನ್ನೂ, ಬಾಯಾರಿದ ತುಟಿಯನ್ನೂ ಹೊಂದಿದೆ. ಎಲ್ಲರೂ ಸೋತಿದ್ದಾರೆ. ಈ ಜನರು ತಮ್ಮಿಂದ ತಾವೇ ಪ್ರಭಾವಿತರಾಗಲಾರದಷ್ಟು ಸೋತಿದ್ದಾರೆ. ಅವರು ತಮಗೆ ತಾವೇ ಒಳ್ಳೆಯದನ್ನು ಮಾಡಬೇಕಾಗಿತ್ತು ಎಂದು ಹೇಳಿಕೊಳ್ಳುತ್ತಿರುವಂತಿದೆ. ತಮ್ಮ ಭರವಸೆಗಳನ್ನೆಲ್ಲಾ ಕೇಂದ್ರೀಕರಿಸಿರುವ ಮಕ್ಕಳ ಮೇಲೆ ಅವರ ಕಣ್ಣು ಬೀಳುತ್ತೆ. ತಾವು ತಮ್ಮ ತಂದೆ ತಾಯಿಗಳನ್ನು ನಿರಾಶೆಗೊಳಿಸಿದಂತೆ ನಮ್ಮನ್ನು ನಮ್ಮ ಮಕ್ಕಳು ನಿರಾಶೆಗೊಳಿಸಬಹುದೆಂಬ ಭಯ ಅವರನ್ನಾವರಿಸಿದೆ. ಕೋತಿಗಳು ಅಪರೂಪವಲ್ಲ. ಮನುಷ್ಯನ ಬಾಯಿ ಸೇರಲಿರುವ ತಿಂಡಿಯನ್ನು ಅಪಹರಿಸುವ ಕಲೆ ಅವಕ್ಕೆ ಚೆನ್ನಾಗಿ ಕರಗತವಾಗಿದೆ. ಕಳೆದುಕೊಂಡವನು ಮಾತ್ರ ಪೇಚಾಟಕ್ಕೆ ಸಿಕ್ಕಿ ಬೀಳುತ್ತಾನೆ, ಇತರರರ ಕೋತಿಯ ಚಮತ್ಕಾರದ ಬಗ್ಗೆ ಆಶ್ಚರ್ಯಪಡುತ್ತಾರೆ. ಪೇಚಾಟಕ್ಕೆ ಸಿಲುಕಿದವನು ಜನರನ್ನು ದ್ವೇಷಿಸುತ್ತಾನೆ, ಕೋತಿಗಳನ್ನು ದ್ವೇಷಿಸುತ್ತಾನೆ. ಕೋತಿಯ ತಂತ್ರವನ್ನು ಕುರಿತು ನಗುವವರು, ಬಯ್ಯುವವರೂ ಕೂಡ ಅವನಿಗೆ ಕೋತಿಗಳೇ. ಅವನು ಇನ್ನು ಮೇಲೆ ಎಂದೂ ಸಾರ್ವಜನಿಕವಾಗಿ ಎಲ್ಲರೆದುರಿಗೆ ತಿನ್ನುವುದಿಲ್ಲವೆಂದು ತೀರ್ಮಾನಿಸುತ್ತಾನೆ. ಕೋತಿಯ ಸಣ್ಣ ಮುಷ್ಟಿಯನ್ನು ನಾವು ನೋಡಬಹುದು.

ರೈಲು ಚಲಿಸುವುದಿಲ್ಲ, ಎರಡನೇ ತರಗತಿ ವಿರಾಮ ಗೃಹದಲ್ಲಿ ಕೆಲವರಿದ್ದಾರೆ. ತೀರ ಮುದುಕನೊಬ್ಬನ ಮೇಲೆ ನಮ್ಮ ಕಣ್ಣು ಬೀಳುತ್ತೆ. ಅವನಿಗೆ ತೊಂಬತ್ತೆಂಟಕ್ಕೂ ಹೆಚ್ಚು ವಯಸ್ಸಾಗಿರಬಹುದು, ಇನ್ನೊಂದು ನಿಮಿಷದಲ್ಲಿ ಜೀವ ಅವನಿಂದ ತಪ್ಪಿಸಿಕೊಳ್ಳಬಹುದು, ಅಥವಾ ಅವನೇ ಜೀವದಿಂದ ತಪ್ಪಿಸಿಕೊಳ್ಳಬಹುದು, ಅವನಿಗೆ ಎಲ್ಲಾ
ಒಂದೆ. ಅವನು ನಮ್ಮ ಅರಿವಿಗೆ ತಂದ ಮನುಷ್ಯತ್ವದ ಪರಿಮಿತಿ ಸಹ ಅವನ ಮೇಲೆ ಯಾವ ಪರಿಣಾಮವನ್ನೂ ಬೀರುತ್ತಿಲ್ಲ. ಅವನ ಕೆನ್ನೆಗಳೆರಡೂ ದೊಡ್ಡ ಹಳ್ಳಗಳು, ಅವನ ಎಲ್ಲ ಹಲ್ಲುಗಳು ಬಿದ್ದಿವೆ. ಕೊನೆಯ ಹಲ್ಲು ಬಿದ್ದು ಸುಮಾರು ಇಪ್ಪತ್ತು ವರ್ಷಗಳಾಗಿರಬಹುದು. ಒಂದಾನೊಂದು ಕಾಲದಲ್ಲಿ ಅವನೊಂದು ಮಗುವಾಗಿದ್ದ. ಅವನು ತನ್ನ ತಂದೆ ತಾಯಿಗಳ ಬಗ್ಗೆ, ಹೆಂಡತಿ ಮತ್ತು ಮಕ್ಕಳ ಬಗ್ಗೆ ಯೋಚಿಸುವುದನ್ನು ಬಿಟ್ಟಿದ್ದಾನೆ. ಇನ್ನೂ ಸ್ವಲ್ಪ ಸಮಯವಾದ ಮೇಲೆ ಅವನು ತನ್ನನ್ನೇ ಮರೆತುಬಿಡಬಹುದು. ರೈಲು ಚಲಿಸುವುದಿಲ್ಲ. ಅವಳೇಕೆ ಬಟ್ಟೆ ಬಿಚ್ಚಬಾರದು? ಅವಳು ಲಂಚ ಬಯಸುತ್ತಾಳೆ-ನಾಯಿ, ನಾಚಿಕೆಯಿಲ್ಲದೆ ಅವಳು ಭಕ್ಸಿಸ್ ಕೇಳುತ್ತಾಳೆ. ನೀವು ಕಾಲೇಜ್ ಹುಡುಗಿಯ ಪಕ್ಕ ಮಲಗ ಬಯಸಿದರೆ ತಲೆಹಿಡುಕನೊಬ್ಬ ಹಣ ಕೇಳುತ್ತಾನೆ. ಈ ಮುಂಚೆ ಅನೇಕ ಸಲ ಮಲಗಿದ್ದ ಭಿಕ್ಷುಕಿಯೇ ಅವಳಾಗಿರುತ್ತಾಳೆ. ಆದರೆ ಎಲ್ಲಿ ಎಂಬುದು ಜ್ಞಾಪಕಕ್ಕೆ ಬರುವುದಿಲ್ಲ. ಅವಳು ಬೇರೆ ರೀತಿಯ ಭಿಕ್ಷುಕಿ. ಅವಳು ಹಣಕ್ಕೆ ಒತ್ತಾಯಿಸುತ್ತಾಳೆ. ತಿಂಡಿಯನ್ನು ಎಂದೂ ಒಪ್ಪುವುದಿಲ್ಲ. ಹಣದ ಮೂಲಕ ಮಾತ್ರ ವ್ಯವಹರಿಸುತ್ತಾಳೆ.

ಬೀದಿನಲ್ಲಿಯಲ್ಲಿ ಸ್ನಾನ ಮಾಡಿದ ಮುದುಕ ತಲೆ ಬಾಚಿದ್ದು ಮುಗಿಯಿತು. ಅವನು ದಿನವನ್ನೆದುರಿಸಲು ಸಿದ್ದವಾಗಿದ್ದಾನೆ. ಅವನು ಬೆಂಚೊಂದರ ಮೇಲೆ ಕುಳಿತು ಜನರನ್ನು ಗಮನಿಸುತ್ತಾನೆ. ಜನ ಅವನನ್ನು ಗಮನಿಸುತ್ತಾರೆ. ಅವನ ಬುದ್ದಿ ಪರಿಣಾಮಗಳನ್ನು ಗಮನಿಸುತ್ತೆ, ಜನರ ಬುದ್ದಿಯೂ ಕೂಡ. ಜನ ಸಾಲಾಗಿ ನಿಂತಿದ್ದಾರೆ. ಸಾಲು ಸಾಕಷ್ಟು ಉದ್ದವಾಗಿದೆ. ಅವರಲ್ಲಿ ಶಿಸ್ತು ಬೆಳೆದಿದೆ. ಮೂತ್ರಿಗಳಿಗಿಂತ ಜನ ಹೆಚ್ಚಾಗಿರುವುದರಿಂದ ಈ ಶಿಸ್ತನ್ನು ಬೆಳೆಸಿಕೊಳ್ಳಲೇಬೇಕಾಯಿತು. ಒಬ್ಬ ಮುದುಕ-ಸಕ್ಕರೆ ರೋಗಿಯಿರಬೇಕು, ಮಧ್ಯೆ ನುಗ್ಗಿ ಕೆಲಸ ಮುಗಿಸಿಕೊಂಡ. ಅವನು ಆಟದ ನಿಯಮವನ್ನು ಪಾಲಿಸಿಲ್ಲ. ಸದಾ ಬೆಳೆಯುವ ಸಾಲಿನ ಕೊನೆಯಲ್ಲಿ ಅವನು ನಿಂತುಕೊಳ್ಳಬೇಕಾಗಿತ್ತು. ಹೊರಗೆ ಬಂದ ಸಕ್ಕರೆ ರೋಗಿ ಜನರ ಕಡೆ ದುರ್ಬಲ ನಗೆ ಬೀರಿದ, ತಾನು ಕ್ಷಮಾರ್ಹನೆಂಬುದನ್ನು ತನ್ನ ನಗೆ ವಿವರಿಸಬಲ್ಲದೆಂದು ಅವನು ಭಾವಿಸುತ್ತಾನೆ. ರೈಲು ಚಲಿಸಲಿಲ್ಲ, ಸೈನಿಕರು ಇಸ್ಪೀಟ್ ಆಡುತ್ತಿದ್ದಾರೆ. ಅವರಲ್ಲೊಬ್ಬನಿಗೆ ಜಾಕಿ ಮತ್ತು ಕಿಂಗ್‌ಗಳಲ್ಲಿ ಯಾರು ದೊಡ್ಡವರೆಂಬುದನ್ನು ತಿಳಿಯಬೇಕೆಂಬ ಅಪೇಕ್ಷೆಯಾಗಿದೆ. ಅದು ಆಟದ ನಿಯಮಗಳಿಗನುಗುಣವಾಗಿ ನಿರ್ಧರಿತವಾಗುತ್ತೆ. ಟೈಯನ್ನು ಬಿಚ್ಚಿದಾತ ತನ್ನ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿಸಿಕೊಂಡಿದ್ದಾನೆ. ಈಗ ಅವನು ತನ್ನ ಕೋಟನ್ನು ಬಿಚ್ಚಿದ್ದಾನೆ. ರೈಲು ಚಲಿಸಿಲ್ಲ ಮತ್ತು ಅದು ಚಲಿಸುವುದೂ ಇಲ್ಲ.

Close

ಕಾವ್ಯೋದ್ಯೋಗ

ಕಾವ್ಯೋದ್ಯೋಗ

-ಗಂಗಾಧರ ಚಿತ್ತಾಲ

ಕೊಂಕು ಮಾತು, ಕಿಲಾಡಿ ನುಡಿ,
ನಾಲಗೆಯ-ತುರಿಕೆ ತೀರಿಸಲೆಂದೆ
ಪುಟದುದ್ದ ಚತುರೋಕ್ತಿ ಚಾಕಚಕ್ಯ,
ಹೆಜ್ಜೆ ಹೆಜ್ಜೆಗು ಅಣಕ, ಮೂದಲಿಕೆ, ತುಂಟತನ,
ಹಗಲಿಡೀ ಬಾಯ್ತುಂಬ ಬರಿಯ ವ್ಯಂಗ್ಯ.

ಈ ಇಷ್ಟೆ ಬಂಡವಲ ಮೇಲೆ ಹೂಡಿದೆ, ಗೆಳೆಯ,
ನಿನ್ನ ಕಾವೋದ್ಯೋಗ; ಯಾವುದಕ್ಕೂ ಸಲ್ಲ;
ಒಳ್ಳೆ ಚುರುಕಾಗಿ ಚಲಾಖ್ಖಾಗೆ ಬರಿ ಮಾತುಗಳ
ಉರುಳಿಸಿದರೇ ಮಹತ್ಕೃತಿಯು ಅಲ್ಲ.

ಬೇಕು ಒಳಹೊರಗೆ ಕೇಂದ್ರದಲ್ಲಿ ಹಿಡಿಯುವ ಕಣ್ಣು,
ಇಡಿಯಾಗಿ ಬದುಕನೀಕ್ಷಿಸುವ ನೋಟ

ನೆಲಬಾನ ಎಳೆತ-ಸೆಳೆತಗಳ ತುಮುಲ ದ್ವಂದ್ವ
ರೂಪಿಸುವ ಜೀವಿತದ ಆಟ-ಓಟ

ನಿರೂಪಿಸಲು ಬೇಕು ಬೇರೆ ಥರ ತಾಖತ್ತು
ಬೇರೆಥರ ತಾಲೀಮು ಪಡೆವ ಉಸಿರು

ದಿನನಿತ್ಯ ಧ್ಯಾನಧಾರಣೆಯು ನೀಡುವ ತಾಣ,
ಸೂಕ್ಷ್ಮಾತಿಸೂಕ್ಷ್ಮ ಬಿಡಿಸಿರುವ ಕುಸುರು,

ಬೇಕು ನಾಲ್ಕದೆಸೆಗೆ ತೆರೆದುಕೊಂಡಿಹ ಮನಸ್ಸು
ಜೀವಜಾತಗಳ ನಾಡಿ ಸ್ಪಂದನ

ಪಡಿಮೂಡಿಸಲು ಬೇಕು ತಕ್ಕ ಪ್ರಾಣದ ಹಿಡಿತ-
ಮಿಡಿತ-ತುಡಿತದ ತೀವ್ರ ಸಂವೇದನ.

ಯಥಾರ್ಥ ಮಾತುಗಳ ಪರಿಪಾಠವೇ ಬೇಕು
ಕೃತಾರ್ಥವೆನೆ ಅಂತರಂಗವ ನುಡಿಸಲು.

ಬರಿಯ ಆರ್ಭಟ, ಅಟಾಟೋಪ, ಆಕ್ರೋಶಗಳ
ದುಂದುಗಾರಿಕೆ ಶುದ್ಧ ಗೌಜು-ಗುಲ್ಲು,

ಔಚಿತ್ಯಪೂರ್ಣ ಪದ-ಪಂಕ್ತಿಗಳೆ ಮೊಳಗಿಸಲಿ
ಜೀವದಾಳದ ಕನಸು-ನೆನಸಿಕೆಗಳ,

ನಿಮಿಷವೂ ಬಿಡದೆ ನಮ್ಮನಿಲ್ಲಿ ತೊಡಗಿಸಿದ ಈ
ಬದುಕ ಗೂಢಗಳ, ಭೀಕರತೆ-ರಮ್ಯತೆಗಳ,

Close

ಆತ; ಆಫೀಸು; ಆಫೀಸು ಸಮಯ..., ಇತ್ಯಾದಿ

ಆತ ; ಆಫೀಸು ; ಆಫೀಸು ಸಮಯ……….. ಇತ್ಯಾದಿ

ಎಂ ರಾಜಗೋಪಾಲ

ಹತ್ತು ಹೊಡೆಯಲು ಇನ್ನೂ ಎರಡು ನಿಮಿಷಗಳಿರುವಾಗಲೇ ಆತ ಹಾಜರಿ ಪುಸ್ತಕವನ್ನು ತಲುಪಿದ್ದ ; ಲೇಟ್‌ಮಾರ್ಕ್ ತಪ್ಪಿದ ಬಗ್ಗೆ ಖುಷಿಪಟ್ಟ.
(ಸುಡುಗಾಡು, ನನ್ನ ವಾಚಿಗೆ ಏನು ಸೀಕೋ ; ದಿನಾ ಕಡಿಮೆ ಎಂದರೂ ಕಾಲು ಗಂಟೆಗಳ ವ್ಯತ್ಯಾಸ. ಮುಂದಿದ್ದರೂ ಚಿಂತಿಲ್ಲ, ಈ ಪರಿಸ್ಥಿತಿಯಲ್ಲಿ ಹಿಂದೆ ಬಿದ್ದರೇ ತೊಂದರೆ. “ನಿಮಗ್ಯಾಕ್ರೀ, ಅಷ್ಟೂ ಅಟ್ಯಾಚ್‌ಮೆಂಟೂ, ಈ ದರಿದ್ರ ವಾಚಿನ ಮೇಲೆ ; ಮುಂಡೇದು, ಸಮಯ ಹೇಳಿದ್ರೂ ಪರವಾ ಇಲ್ಲ, ಷೋ ಆದ್ರೂ
ಬೇಡ್ವೇ ?”.)
ಆತ ನಕ್ಕ. “ಹಲೋ, ಹಲೋ”, “ನಮಸ್ತೆ, ನಮಸ್ಕಾರ”, “ಮೋರ್ನಿಂಗ್ ದನಿಯಾ”, “ಮೋರ್ನಿಂಗ್ ಗುರೂಜೀ”, “ಅರೇ, ರಜಾ ಮುಗೀತೇ ಯಾರ್, ಟ್ರಿಪ್ ಹ್ಯಾಂಗಿತ್ರೀ”ಗಳ ನಡುವೆಯೂ, ತನ್ನ ಮೇಜಿನ ಡ್ರಾವರ್ ಎಳೆದು ಕೊಳಕು ಕರವಸ್ತ್ರ ತೆಗೆದು ; ಕುರ್ಚಿ ಒರಸಿದ. ಮೇಜಿನ ಧೂಳು ಝಾಡಿಸಿದ ; ಫೈಲುಗಳನ್ನು, ಟ್ರೇಯನ್ನು ಅತ್ತಿತ್ತ ಸರಿಸಿ ಒದರಿದ. “ಏನು ಧೂಳು, ಮಾರಾಯ್ರೇ…ಒಂದೇ ದಿನ್‌ದಲ್ಲಿ”.
ಸೈರನ್‌ನ ಆರ್ಭಟ……
(ಹ್ಞಾ, ಹ್ಞಾ…ಹತ್ತಾಯಿತು.)
ಆಫೀಸರ, ಹಾಜರಿ ಪುಸ್ತಕ ಎಳೆದು ಸರಸರ, ಕೆಂಪು ಶಾಯಿಯ ಗುರುತುಗಳನ್ನೆಳೆಯಲಾರಂಭಿಸಿದ ; ತಪ್ಪಿತು ; ಪೆನ್ನು ನೀಲಿ ಶಾಯಿಯದಿರಬೇಕು. ಇಲ್ಲವೇ ಇಂಕು ಮುಗಿದಿರಬೇಕು. ಬೇರಾರಾದರೂ ಬಂದು ಹಾಜರಿ ಹಾಕಬಹುದೆಂಬ ಭಯ. ಬೇರೆ ಬೂತು ಹಿಡಿದೇ, ಪೆನ್ನಿಗೆ ಶಾಯಿ ತುಂಬಿಸಲು ಅಟೆಂಡರನಲ್ಲಿ ಹೇಳಿದ. ನಡುವೆ ಬಂದವರು, ತಮ್ಮ ತಮ್ಮ ಪೆನ್ನುಗಳ ಮುಚ್ಚಳ ತೆಗೆದು ಸಾಲಾಗಿ ನಿಂತರು. ಮುಖದಲ್ಲಿ ಕಳವಳವಿದೆ, ಸಿಟ್ಟಿದೆ, ಅಸಹಾಯಕತೆಯಿದೆ; ತಮ್ಮ ಬಗ್ಗೆಯೇ ಕನಿಕರವಿದೆ.
ಆತ ತನ್ನ ಹಿಂದಿನ ದಿನದ ಕೆಲಸದ ಬಗ್ಗೆ ಸ್ಟೇಟ್‌ಮೆಂಟ್ ಗೀಚಿದ. ಕಡಿಮೆಯೆಂದು ತೋರಿತು. ಕೊನೆಗೆ “plus posting Work” ಅಂದು ಸೇರಿಸಿದ; ರಿಜಿಸ್ಟರದ ನಡುವೆ ಇಟ್ಟು ಬೆವರೊರಸಿದ:
(ತಾನು “ಬಂದಿದ್ದೇನೆ”-ಎಂದು ತೋರಿಸುವ ವಿಧದ ಎರಡು ಅತೀ ಮುಖ್ಯ ಕೆಲಸಗಳು ಮುಗಿದುವು. ಇನ್ನು…ಇದೆಯಲ್ಲ ; ನಿತ್ಯ ಬ್ರಾಹ್ಮಣದ-ಭೋಜನ-ತಯಾರಿ, ಊಟ, ಮಂದಹಾಸ, ಸೆಡವು : ನಿಮಿಷಗಳು, ಗಂಟೆಗಳು ;- ತಿರುಗಿ ಗಂಟೆಗಳು ; ನಿಮಿಷಗಳು ಗಳ – “ಆಯಿತು”, “ಇನ್ನೂ ಇದೆ”ಗಳಲ್ಲಿ ಕುತೂಹಲ ಹುಟ್ಟಿಸಿಕೊಳ್ಳುವುದು, ಸಾಯಿಸುವುದು)
ಹಿಂದಿನ ದಿನವೇ, ಫೈಲಿಗೆ ಲಗತ್ತೀಕರಿಸಿದ್ದ, ಪತ್ರವನ್ನು ಮೇಲ್ಮುಖವಾಗಿಸಿದ. ಓದಲು ಬ್ರಹ್ಮನ ಅಪ್ಪ ಬರಬೇಕು. ಫೈಲಿನ ನಂಬರ ಮತ್ತು ಪತ್ರದಲ್ಲಿ ನಮೂದಿಸಿದ ನಂಬರ ಸರಿಯಿದೆಯೋ, ಒಂದಕ್ಕೊಂದು ತಾಳೆ ಬೀಳುತ್ತದೋ ; ಎಂದು ನೋಡಿದ.
(ಇಲ್ಲದಿದ್ದರೆ – ‘ನಂಬರ ತಿಳಿಸಿ, ದಯವಿಟ್ಟು’ ಆವರೆಗೂ ಏನೂ ಮಾಡಲಾಗುವುದಿಲ್ಲ. ಕ್ಷಮಿಸಿ ; ನಿಮ್ಮ “ಬೇಕು”ಗಳನ್ನು – ಚುಟುಕಾಗಿ, ನಿಖರವಾಗಿ, ಬರೆಯಿರಿ. ಎಂದಿಗೂ ನಿಮ್ಮ ಸೇವಾಕಾಂಕ್ಷಿಗಳು, ನಿಮ್ಮ ಹಿತೈಷಿಗಳು. -ಬರೆದು ಬಿಟ್ಟರೆ ಮುಗಿಯಿತು, ಸುಲಭದಲ್ಲಿ ಒಂದು Disposal.)
ಆತ-‘ಹೌದು’-ಎಂದು ತನ್ನ ವಾಚನ್ನು ಆಫೀಸಿನ ಸಮಯಕ್ಕೆ ಹೊಂದಿಸಿಟ್ಟ. “ಮರೆತಿದೆಯೋ, ಏನೋ” -ಎಂದು ಕೀಕೊಟ್ಟ.
(ಇಂದು ಮಳೆ ಬರಬಹುದೇ ? ಗ್ರಹಚಾರ, ನಾನು ಕೊಡೆಯೂ ತಂದಿಲ್ಲ. ಈ ವರ್ಷ ಎಲ್ಲೆಲ್ಲೂ ಮಳೆ ಮತ್ತು ಶಿಸ್ತುಗಳ ಧಾರಾಳತನ. ಉರಿ, ಸೆಕೆ, ಶರಾವತಿಯಲ್ಲೇನೋ ನೀರು ತುಂಬಿದೆ. ಕರೆಂಟ್ ಕಟ್ ಇನ್ನೂ ಮುಗಿದಿಲ್ಲ. ಇದ್ದರೂ ಏನು ಸುಖ. “ಛಳಿಯಾದಾಗ ಫೇನು, ಸೂರ್ಯ ಕಣ್ಣು ಕುಕ್ಕುತ್ತಿರುವಾಗ ಲೈಟು” -ಬೇಕಾದ-ವಹಾನುಭಾವರೇ ಸುತ್ತ ಮುತ್ತ.)
ಯಾಕೋ.. ತಾನು ಏಳಬೇಕು ಎಂದುಕೊಂಡ. ಆಫೀಸರ ನೋಡುತ್ತಿರಬಹುದೆಂದು ಅರ್ಧ ಎದ್ದವನೂ… ಪುನಃ ಸುಮ್ಮನೆ ಕುಳಿತ. ಮೇಜಿನ ಮೂರೂ ಡ್ರಾವರುಗಳನ್ನು ಒಂದೊಂದಾಗಿ ಎಳೆದ. ಪುನಃ ಮುಚ್ಚಿದ.
(ನಿನ್ನೆ ನಾನು ಇಟ್ಟಿದ್ದ ರಶೀದಿ ಎಲ್ಲಿ ಹೋಯಿತು ?…….ಹ್ಞಾ ಹ್ಞಾ ಪಾರ್ಟಿ-ಬಂದಿದ್ದವನ ಕೈಯಲ್ಲೇ ಕೊಟ್ಟಿದ್ದೆನಲ್ಲವೇ ? ದಸ್ಕತ್ತು ತೆಗೆದುಕೊಳ್ಳಲು ಮರೆತು ಹೋಯಿತೋ, ಏನು ; ಗ್ರಹಚಾರ. ರಿಜಿಸ್ಟರ ನಂಬರವೂ ನೆನಪಿಲ್ಲವಲ್ಲ.)
ದಿನದ ಕೆಲಸದ ಸ್ಟೇಟ್‌ಮೆಂಟಿನಲ್ಲಿ ಹುಡುಕಿದ. ಸಿಕ್ಕಾಗ, ಸಂತಸಪಟ್ಟ. ದಸ್ಕತ್ತೂ ಆಗಿದೆ. ಎಲ್ಲಾ ಆಗಿದೆ. ಅಂತೂ ಬಚಾವ್.
(ನಾನು ನಿಧಾನವಾಗಿ ಕುದಿಯುತ್ತಿದ್ದೇನೆ. ಮತ್ತೆ ಹಬೆಯಾಗುತ್ತೇನೆ ; ಮೇಲಕ್ಕೇರುತ್ತೇನೆ. ಗಾಳಿ ಬೀಸಿದತ್ತ ಚಲಿಸುತ್ತೇನೆ. ಆದರೂ ಈ ಫೇನಿನ ವರ್ತುಲದಿಂದ ಹೊರಚಿಮ್ಮುವುದೇ ಕಷ್ಟ. ಅದು ಕೇವಲ ಸುಳಿ ; ಗುರುತ್ವಾಕರ್ಷಣದಂತೆ, ಅದರ ಸುತ್ತು ತಿರುಗುವುದು, Centripetalಲ್ಲೋ, Centrifugalಲ್ಲೋ….. ಏನೋ ಒಂದು. ಸ್ವತಂತ್ರ ಅಸ್ತಿತ್ವವಿಲ್ಲ. ಬಿಟ್ಟುಹೋಗುವಂತಿಲ್ಲ. ಅದು ತಿರುಗುವಷ್ಟೂ ಕಾಲ ಅಲ್ಲೇ ತಿರುಗಿ, ಸ್ತಬ್ಧವಾಗುವುದನ್ನೇ ಕಾಯಬೇಕು ; ಮತ್ತೆ ಒಮ್ಮೆಲೇ ಜಿಗಿದು ಕಿಟಕಿಯ ಹೊರ ಧುಮುಕಬೇಕು ; ರೆಕ್ಕೆ ಬಿಚ್ಚಿ ಎತ್ತರ, ಎತ್ತರ…ದೂರ…ಹಾರಬೇಕು, ನಕ್ಷತ್ರವಾಗಬೇಕು, ಚಂದ್ರನಾಗಬೇಕು, ಸೂರ್ಯನಾಗಬೇಕು ; ಇಬ್ಬನಿಯಾಗಬೇಕು, ಕಣ್ಣೀರಿನ ಮುತ್ತಾಗಬೇಕು, ಸ್ವೇದ ಬಿಂದುವಾಗಬೇಕು, ಮಗುವಿನ ಉಚ್ಚೆಯಾಗಬೇಕು…..)
ಆತ, ಫೈಲಿನ, ಒಳ ಕೈ ಹಾಕಿ, ತಿರುಳನ್ನು ಎಳೆದ. ಪತ್ರವ್ಯವಹಾರಗಳ ಪುಟ ತಿರುಗಿಸುತ್ತಿದ್ದಂತೆಯೇ ಇಂತಹದೇ ಕೈಬರಹದ ಕೆಲ ರಿಜಿಸ್ಟರ್, ಕಾರ್ಡ್ ಮತ್ತು ಇನ್‌ಲೇಂಡ್ ಲೆಟರ್‌ಗಳನ್ನೂ ಕಾಣಬಹುದಾಗಿತ್ತು. ಓದಬಹುದಾದ ಮತ್ತು ಓದುತ್ತಾ ಸಮಯ ಕಳೆಯಬಹುದಾದ ಖುಷಿಗೆ, ಕೆಳತುಟಿ ಕಡಿದ ; ತಲೆದೂಗಿದ.
೧೮-೬-೬…. ಜ್ಯುನ್ ಧಮಪ್ಪ ಸಾಹೆಬರ ಸನ್ನಿದನಕೆ… ತಾಲೋಕ.., ಹೋಬಳಿ ಹುಚ್ಚಪ ಮುರಳಪ್ಪನು ಬರೆದಕುಳ್ಳವದು… ಇತಿಂ… ಎನೆಂದರೆ…
ಗೌರಿ ಹಬದ ಪರಸಾದ ಲಗೂ ಕಳಸೇನಿ. ಮುರು ಪತ್ರಾ ಬರೆದ. ಒಂದ ಕವರ, ಮತೊಂದ ಕಾಡ್ರು, ಮೂರನೆದು ರಿಜಿಸ್ಟಿರ್ ಮಾಡಿ ಬರೆದ. ಖಾವಂದರು ಇನೂಲೊನ್ ಚೆಕ್ ಕಳ್ಸಿಲ್ಲ. ನಮ್ಮ ಅಪ್ಪ ನಿಮ್ಮ ಬ್ಯಾಂಕ್ ಕಚೆರಿಗೆ ಹೋದಾಗ- ‘ಇಲಿ ಆಗೊಲ್ರಿ… ಹೆಡ್ಡ ಆಪಿಸಿಗೆ ಬರೀರಿ’ ಅಂದ್ರು. ನಮ ಮಗಳ ಮದುವಿ ಗೊತಾಗೇದು ಹುಡುಗ ಲಕ್ಷಣ ಅಧಾನೆ. ಪತ್ರಿಕ ಕಳಿಸೀನಿ. ಬಡವನ್‌ ಮೇಲೆ ಖಾವಂದರು ದಯಾ ಇಡ್ಬೇಕು. ಲಗ್ನ ಇದೆ ಇಪತಾರಕ. ಖೋಡಿ ಖೋಡಿ ಹಣ ಕಳ್ಸಿದ್ರೆ ಸಮಾ ಆತು. ಇಲಿದಿರ್ದೆ ನಾನು ಮುಳಗೆ ಹೋಗಿನ್ತಿ……. ಎಡ್ರಾಸು……ಹುಚ್ಚಪ ಮುರುಳಪ S/o Late Sthri, ಮರಳಪ್ಪ… ಹೋಬಳಿ… ತಾಲೊಕ.
ಸಾಬ್ರಾ, ಇದ ಕೋನೀ ಪರ್ತಾ. ಇನ್ನೂ ಹಣ ಕಳ್ಸಿದೆ ಇರ್ದೆ, ನಾಲಕ್ ಲಾರಿ ಜನ ಮಾಡಿ ಬಂದು ನಿಮ್ಮ ಮಂಡಿ ಒಡಿತಿನಿ. ಏನತ ತಿಳದ್ರೀ. ನಮ ಮಂದಿ ದಿಲಕುಷ್ ಇದ್ದಂಗೆ ಸಿಧಾ ಅಧಾರೆ ; ಖರೆ ಮಂದಿ, ಖಂಬರ ಅಧಾರೆ. ಆಗೊಲ್ಲಾಂದೇ ಖತಂ… ನಿಮೆ ಕಾರು, ಜೇಪ, ಇಲ್ಲಿ ಹಾಂಗೆ ಬರತೊ ನೊಡ್ತಿನಿ.
(ಇದಕ್ಕೆ ಉತ್ತರ ಹೇಗೆ ಬರೆದಿರಬಹುದು ?)
ಜ-ಬರೇ ಫೈಲ್ ಮಾಡಿದ್ದಾರೆ. “ಸಾಲ ಮಂಜೂರಾತಿ ಮಾಡಲಾಗದು”-ನೋಟ್ ಇದೆ. ಬಹುಶಃ ಈ ಹತ್ತು ಹನ್ನೆರಡು ವರ್ಷಗಳಲ್ಲಿ ಯಾರ “ಮಂಡಿ”ಯೂ ಒಡೆದಂತಿಲ್ಲ. ಆತನ ಸತ್ತ ಅಪ್ಪ ಮತ್ತೆ ಆಫೀಸಿನಲ್ಲಿ ಪ್ರತ್ಯಕ್ಷನಾದ ಬಗ್ಗೆ ಪುರಾವೆಯೂ ಇದ್ದಂತಿಲ್ಲ. ಫೈಲು ತಿರುಗಿಸುತ್ತಾ ಹೋದಂತೆ, ಇಂತಹದೇ ಪತ್ರಗಳನ್ನು ಕಂಡು ಅವುಗಳ ತರ್ಕ ಸರಣಿಗೆ ಆನಂದಪಟ್ಟ.
ಗಂಟೆ ಹನ್ನೊಂದುವರೆ ಆತ ಪೆನ್ನು ಕೆಳಗಿಟ್ಟ. ಫೈಲು ಅಂತೆಯೇ ತೆರೆದಿಟ್ಟು, ಮೇಲೊಂದು ಪೇಪರ್ ವೈಟನ್ನು ಹೇರಿಸಿದ. urinalsನತ್ತ, ಸೀದಾ ನಡೆದ. ಅಲ್ಲಿ ಜನವೋ ಜನ ; ಕ್ಯೂ. ತನ್ನ ಸರದಿ ಬರುವವರೆಗೂ “
ಹಲೋಸರ್”, “ಹ್ಯಾಂಗಿದೀರ”; “ಆರಾಮಾ”ನಗಳಿಗೆ ಉತ್ತರವಿತ್ತ, ಪ್ರಶ್ನಿಸಿದ. ದೇಶದ ಭವಿಷ್ಯದ ಬಗ್ಗೆ ಹೇಳುತ್ತಿರುವಾಗ “The future of India is in your hand” ನ ಹಳೇ ಜೋಕ್, ನೆನಪಾಗಿ ನಕ್ಕ : ಇತರರನ್ನೂ ನಗಿಸಿದ. ಬೇಸಿನ್‌ನಲ್ಲಿ ಮುಖ ತೊಳೆದು, ಟವಲ್ಲಿನಿಂದ ಮುಖ ಕೈ ಒರಸುತ್ತಾ ತನ್ನ ಸ್ಥಳಕ್ಕೆ ಹಿಂದಿರುಗಿದ.
ಆಫೀಸರ, ಸಮಯ ನೋಡಿಕೊಂಡ, ಆತನ ಹೆಸರಿನೆದುರು ಸಮಯ ಮಾರ್ಕ್ ಮಾಡಿಕೊಂಡಿರಬೇಕು.
(ಬೇಡನಂತೆ ತಾನೂ ಬದ್ಧ. ಹಕ್ಕಿ ಬಲೆಯಲ್ಲಿ ಬಂಧಿಸಲ್ಪಟ್ಟಿದೆಯಾದರೆ, ಅದನ್ನು ನಿರೀಕ್ಷಿಸುತ್ತಾ ತಾನೂ ತನ್ನ ಸ್ಥಳದಲ್ಲೇ ಬದ್ಧ.)
ಆತ ಪುನಃ ಅದೇ ಫೈಲು ತಿರುಗಿಸಿದ.
(ಅತೇ ; ನನ್ನದು, ಇನ್ನೂ ಒಂದು Disposal-ಲ್ಲೂ ಆಗಿಲ್ಲವಲ್ಲ ;. ಕತೆ ಫಜೀತಿ.)
ಪತ್ರವನ್ನು ಸರಸರನೆ ಅರ್ಥವಾದಷ್ಟು ಓದಿದ. ಲೆಜ್ಜರಿನತ್ತ ನಡೆದು ಆತನ ಹಳೇ ಸಾಲದ ಮಾಹಿತಿ ಬರೆದುಕೊಂಡ. “ಈ ವರೆಗೂ ಬಡ್ಡಿ ಕೊಟ್ಟೇ ಇಲ್ಲ….ಬಡ್ಡೀ ಮಗ….. ಇನ್ನೇನು ಹೊಸ ಸಾಲ ಸಿಗುತ್ತೆ”-ಅಂದು ಗೊಣಗುತ್ತಾ ತನ್ನ ಚೇರಿಗೆ ಹಿಂದಿರುಗಿದ. ಯಾಂತ್ರಿಕವಾಗಿ ಚಕ್ರಬಡ್ಡಿಯಲ್ಲಿ ಮೊತ್ತ ಲೆಕ್ಕ ಹಾಕಿದ.
(ನಾನಂದಂತೆಯೇ ಸರಿ. ಅವಶ್ಯಕವಾದ ಲೆಕ್ಕಾಚಾರ)
ಪತ್ರದ ಪೇಡ್ ಎಳೆದ ; ಕಾರ್ಬನ್‌ ಪೇಪರ್‌ ಸರಿ ಇದೆಯೋ ಎಂದು ನೋಡಿದ. ವಿಳಾಸ ಬರೆದ, ರಿಜಿಸ್ಟರ್ ನಂಬರ್ ಬರೆದ, ಬಿಟ್ಟ ಶಬ್ದಗಳನ್ನು ತುಂಬಿಸುತ್ತಾ ಹೋದ; ಮೊದಲೇ ಅಚ್ಚಾಗಿ ಇರುವುದರ ಬಗ್ಗೆ ಗಮನವೇ-ಆಗತ್ಯವಿಲ್ಲದಂತೆ…’ಪತ್ರ…..ತಾ….., ನಮ್ಮ ಬ್ರಾಂಚ್‌ಗೆ…ರ ಮೊದಲು…’ ಬಡ್ಡಿ ಬರೆದ, ಚಕ್ರಬಡ್ಡಿ ಸೇರಿಸಿ ಮೊತ್ತ ಗೀಚಿದ. ಖಾಲಿ ಸ್ಥಳದಲ್ಲಿ, ‘ಮೇಲೆ ತಿಳಿಸಿದಂತೆ ತಾ…..ರ ಮೊದಲು, ಮೇಲ್ಕಾಣಿಸಿದ ಮೊಬಲಗನ್ನು ದಯವಿಟ್ಟು ನಮ್ಮ…ಬ್ರಾಂಚ್ ಆಫೀಸಿನಲ್ಲಿ ತುಂಬಿರಿ. ನಿಮ್ಮದೇ ಹಿತದೃಷ್ಟಿಯಿಂದ ನಾವಿದನ್ನು ಬರೆಯುತ್ತಿದ್ದೇವೆ. ಇಲ್ಲವಾದರೆ ಸೂಕ್ತಕ್ರಮವನ್ನು ಕೈಗೊಳ್ಳಲಾದೀತು. ಎಂದಿಗೂ ತಮ್ಮ ಸೇವಾಕಾಂಕ್ಷಿಗಳು. ತಮ್ಮ ಹಿತೈಷಿ…ರ ಪರವಾಗಿ… ಎರಡನೇ ಕಾಪಿಯಲ್ಲಿ ಬ್ರಾಂಚ್ ಆಫೀಸಿಗೆ ಅವಗಾಹನೆಗೆ…ಎಂದು ಸೇರಿಸಿ, ಪೇಡಿನಿಂದ ಮೂರೂ ಕಾಗದಗಳನ್ನು ಹರಿದು. ಫೈಲಿಗೆ ಲಗತ್ತೀಕರಿಸಿದ. ಕಾರ್ಬನ್ ಪೇಪರುಗಳನ್ನು ಮುಂದಿನ ಕ್ರಮಸಂಖ್ಯೆಗೆ ಹೊಂದಿಸಿಟ್ಟ.
(ಅಬ್ಬಾ, ಒಂದಾಯ್ತು. ಇಲ್ಲಿ, ಈ, ಓಬೀರಾಯನ ಕಾಲದ ಕಟ್ಟಡ, ಯಾರ ಕಾಲದಲ್ಲೋ ಸುಣ್ಣದ ಮುಖ ಕಂಡ ಗೋಡೆಗಳು, ಹೊಗೆ ಹಿಡಿದ ಮಾಡುಗಳು, ಅಡ್ಡೆಗಳು; ಹೊಂಡಬಿದ್ದ ವಿಶಾಲ ಹಜಾರ, ಮಳೆಗಾಲದಲ್ಲಿ ಚಿಗುರಿ ಸಾಯುವ ಮಾಡಿನ ಹುಲ್ಲುಗಳು, ಆ ಕಡೆ ಡಿನ್ನರ್‌ನಲ್ಲಿ ತಿಂದು ಬಿಟ್ಟ ಎಲೆಗಳು, ಹಳಸಿದ ಅನ್ನದ ಗಬ್ಬು ವಾಸನೆ…ವೈಟ್‌ವಾಶ್ ಮಾಡಿಸಿದರೆ ಗೋಡೆಯ ಶ್ರದ್ಧಾಚಿತ್ರಗಳು ಅಳಿದುಹೋಗುವ, ಕಲೆಯ ಮೇಲಿನ ಉತ್ಕಟ ಅಭಿಮಾನ…ಆಫೀಸಿನ ಇಮೇಜ್ ಹಾಳಾಗಬಹುದಾದ ಭಯ…ಹ ಹಾಂ, ಗ್ಲೊರಿಯ ಗೋರಿಯಾಗಿದೆ-ಈ ತಪೋವನ. “ಕರ್ಮಣ್ಯೇವಾಧಿಕಾರಸ್ತೇ, ಮಾಫಲೇಷು ಕದಾಚನ’ ಎಂದು ಮೇಲೆ ಕುಳಿತವ, ಸಾಕಷ್ಟು ಭೋಗಿಸಿದ, ಹುಟ್ಟಬಹುದಾದವುಗಳ ಬಗ್ಗೆ ಅಧಿಕಾರವೇ ಇಲ್ಲದವನಂತೆ…ನಿಯತ್ತಂತೆ…ನಿಯತ್ತು; ಇವನಿಗೆಂತಹ ನಿಯತ್ತು. ತನ್ನ “ಹೂ” ಕಾರದಿಂದಲೇ, ಯಂತ್ರದ ‘ಮೈನ್ ಸ್ವಿಚ್ ನಾನೇ’-ಎಂದು ತೋರ್ಪಡಿಸುವ “ಪಟ್ಟಭದ್ರ”-ತನ. ಯಾಂತ್ರೀಕತೆಯ ನಡುವೆಯೂ ಮಾನವತೆಯ ಶಾಂತ ಮಂದ್ರಧ್ವನಿ ಇರುವುದಾದರೆ ಕೇಳಬೇಕು. ಅನುಭವಿಸಬೇಕು: ಆನಂದಿಸಬೇಕು; ಸಪ್ತವರ್ಣದ ಹಾದಿಯಲ್ಲಿ ಶಿವನ ತಲೆ ಹುಡುಕಬೇಕು ಆದರೆ…ಅಂತಹ ನಾನಾರು…?
ನಾನು ಲಜ್ಜೆ: ನಾನು ಮಜ್ಜೆ; ನಾನು ಭಕ್ತ, ನಾನು ಭಕ್ತನ ದಾಸ, ನಾನು ಬಿಂದುವಿನ ಬಿಂದು, ನಾನು ಅಣು, ನಾನು ಪರಮಾಣು, ಅಣುಕೇಂದ್ರ, ಹೊರಗೆಳೆಯುವ, ಒಳಸೆಳೆಯುವ ಅಯಸ್ಕಾಂತ; ನಾನು ಜೀನ್, ಮೊಟ್ಟೆಚಿಪ್ಪಿನೊಳಗಿರುವಷ್ಟು ಕಾಲವೂ ಗಂಡು ಹೆಣ್ಣಿನಾಟಕ್ಕೆ ಎಡೆಯಿಲ್ಲದ ಜೀನ್, ಎಳೆಯುವ ಜೀನ್, ಸೆಳೆಯುವ ಜೀನ್, ಕಳೆಯುವ ಜೀನ್, ಸತ್ತ ಜೀನ್, ಸತ್ತೂ ಸಾಯದಿರಬಹುದಾದ ಜೀನ್; ನಾನು ಭೂತದ ಅಸ್ಥಿಪಂಜರ; ನಾನು ಅದೃಶ್ಯದ ವಾಣಿ, ನಾನು ತಲೆ ಬುರುಡೆಯ ಮಾತು; ನಾನು ಬೆಳಕು, ನಾನು ಗಾಳಿ, ನಾನು ವೇಗ, ನಾನು ವೇಗೋತ್ಕರ್ಷ; …ಅಹಂ ಬ್ರಹ್ಮಾಸ್ಮಿ.)
ಏನ್ರೀ, ವರಾಹಧ್ಯಾನ ಮಾಡ್ತಿದೀರಾ.
(ಅರೇ-ಹಾ ಹಾ, ಅಚಾತುರ್ಯವಾಯಿತು, ಭೂಲ್ ಹುಯೇ; ಎದುರು ಒಂದು ಫೈಲನ್ನು ಇಟ್ಟುಕೊಳ್ಳಬೇಕಿತ್ತು, ಪೆನ್ನು ತೆರೆದಿಡಬೇಕಿತ್ತು; ಏನಾದರೂ ಗೀಚುತ್ತಿರಬೇಕಿತ್ತು; ಏನೂ ಯೋಚಿಸಬಹುದಿತ್ತು; ಏನೂ ಅಳಲಬಹುದು. ಅರ್ಥವಿಲ್ಲದ್ದರಲ್ಲಿ ಅರ್ಥ ಹುಡುಕಬಹುದು. ಅರ್ಥವಾದುದನ್ನು ಅಲ್ಲಗಳೆಯಬಹುದು.)
ಆತ ಅಂಕೆಗಳನ್ನು ಬರೆದ, ಗುಣಿಸಿದ, ಕೂಡಿಸಿದ, ಮಾನಸಿಕವಾಗಿ ಈವರೆಗಿನ ಅಸಲು, ಬಡ್ಡಿಗಳ ಲೆಕ್ಕಾಚಾರ ಮಾಡಿದ. ‘ತಪ್ಪಿದರೆ’-ಎಂದು ಒಂದಂಕೆಯ ಸಂಖ್ಯೆಗಳನ್ನೂ ಬರೆದೇ ಕೂಡಿಸಿದ. ಚಿಂತನೆಗಳನ್ನು ಯಾಂತ್ರೀಕರಿಸುತ್ತಾ, ಎಲ್ಲೋ ತಪ್ಪಿದ. “ಥತ್”-ಎಂದರೂ “ಪುನಃ ಪೂಜಾಂಕರಿಷ್ಯೇ” ಗೆ ಒಗ್ಗಿಕೊಂಡ. “ಈ ದಿನದ ಮೊದಲು ಇಷ್ಟು ಹಣ ಪಾವತಿ ಮಾಡಿದಲ್ಲಿ ನಿಮ್ಮ ಅಸಲು, ಬಡ್ಡಿ -ಎಲ್ಲ ಬಂದಂತಾಗುವುದು. ಲೆಕ್ಕಪತ್ರ ಮುಗಿಸಿ ಬಾಂಡನ್ನು ಕಾಟು ಹೊಡೆದು ತಕ್ಷಣ ನಿಮಗೆ ಕಳುಹಿಸುತ್ತೇವೆ. ಶೀಘ್ರದಲ್ಲೇ ತಮ್ಮ ಉತ್ತರವನ್ನು ನಿರೀಕ್ಷಿಸುವ…ಪರಮ ವಿಶ್ವಾಸಿ….
(ಮುಗಿಯಿತು ; ಸತ್ತಿತು. ಇದೀಗ ಓಲಾಡುತ್ತಿದ್ದ ಜೀವಕಣ ಸತ್ತೇ ಹೋಯಿತು ಬೀಕರಿನ ದ್ರವದ ಎಲ್ಲಾ ಅಣುಗಳಲ್ಲಿ ಪರಸ್ಪರ ಹೊಂದಾಣಿಕೆ ಇದೆ ; ಸ್ಥಳ ಆಕ್ರಮಿಸಲು ಗುದ್ದಾಡುವುದೂ ಇದೆ. ಜೀವವಿದೆ, ಘರ್ಷಣೆ ಇದೆ; ಸಾವು ಇದೆ; ಅಳು ಇದೆ, ಅಂತೆಯೇ ಪುನಃ ಸೃಷ್ಟಿ ಇದೆ, Yeast ನ ಸರಪಣಿ ಕ್ರಿಯೆ ಇದೆ. ಕೊಂಡಿ ಜಾರುವುದೂ ಇದೆ. ಕೊಂಡಿ ಜಾರಿಸುವುದು ಇದೆ. ಕೊಂಡಿ ತುಂಡಾಗುವುದೂ ಇದೆ. ಅಂದರೆ..ಹಾಗಂದರೆ…..ನಾನು ? ಹ ಹಾ ಗೊತ್ತಿಲ್ಲೇನು; ನನಪಿಸು….
ನಾನು ಯಮ, ನಾನು ನಿಯಮ, ನಾನು ರೇತಸ್ಸು, ನಾನು ಅವಿನಾಶಿ, ನಾನು ಮಿಂಚು, ನಾನು ಪ್ರದ್ಯೋತನ, ನಾನು ಜ್ಯೋತಿ, ನಾನು ಬೆಂಕಿ, ನಾನು ಉಷ್ಣ, ನಾನು ಬಿಸಿ, ನಾನು ಗುಡುಗು, ನಾನು ಗಡಿಗೆ, ನಾನು ಆಕಾಶ, ನಾನು ಒನಕೆ, ನಾನು ಪೆಟ್ಟು, ನಾನು ಮಡಕೆಯ ಪುಡಿ, ನಾನು ಶಿಲಾಲೇಖ, ನಾನು ಸ್ತೂಪ, ನಾನು ಗೋರಿ, ನಾನು ಭವ್ಯ ಕಟ್ಟಡ, ನಾನು ಗತವೈಭವದ ಅವಶೇಷ, ನಾನು ಇತಿಹಾಸ, ನಾನು ಕೊಲೆಗಾರ, ನಾನು ಪೋಲೀಸ, ನಾನು ನ್ಯಾಯಾಲಯ ನಾನು ನ್ಯಾಯಗ್ರಂಥ, ನಾನೇ ನ್ಯಾಯಾಧೀಶ, ನಾನು ಸಮುದ್ರದ ಮೊರೆತ, ನಾನು ತಾಳೆಗರಿಯ ಮರ್ಮರ, ನಾನು ಹಕ್ಕಿಗಳ ಇಂಚರ, ನಾನು ನಲ್ಲೆಯ ಮೆಲುಧ್ವನಿ, ನಾನು ಕಳ್ಳನ ಪಿಸು ಮಾತು, ನಾನು ಮೋಟಾರಿನ ಹಾರ್ನ. ರೈಲು ಇಂಜಿನಿನ ಸಿಳ್ಳು, ಗ್ಯಾರೇಜಿನ ಕಠೋರ ಸ್ವರ, ನಾನು ರೋಗಿಯ ಆಕ್ರಂದನ, ಚರ್ಚಾಕೂಟದ ಬಿಸಿ ಮಾತು,….. …… ……ದೇಭರ ಭಾಷಣ : ನಾನು ಪಿಕ್ಕಾಸಿನ ಗೋರಿಯಗೆತದ ಧ್ವನಿ, ನಾನು ಶಬ್ದ ಪ್ರಭೇದ, ನಾನು ಅಥ್ಯಾಹಾರ. ಆನೋ ಭದ್ರಾ ಕೃತವೋ ಯಾಂತು ವಿಶ್ವತಃ. ಒಳ್ಳೆಯ ವಿಚಾರಗಳು ಜಗತ್ತಿನ ಎಲ್ಲಾ ಮೂಲೆಗಳಿಂದಲೂ ಬರಲಿ. ನಾನು ಪ್ರಣವ….ಓಂ, ಓಂ, ಓಂ….. ……)
ಸೈರನ್ನಿನ ಧ್ವನಿಗೆ ಆತ ಬೆಚ್ಚಿದ.
(ಗಂಟೆ ಒಂದು. ಅರೇ ಸಮಯ ಹೋದದ್ದೇ ತಿಳೀಲಿಲ್ಲ. ಹತ್ತಾದರೂ Disposal ಆಗಬೇಕಲ್ಲ. ಮಧ್ಯಾಹ್ನ ಬೇಗ ಕೆಲಸದತ್ತ ತಲೆ ಹಾಯಿಸಬೇಕು.)
ಎರಡು ಗಂಟೆಗೆ ಇನ್ನೂ ಹತ್ತು ನಿಮಿಷಗಳಿರುವಾಗಲೇ ಆತ ಕೆಲಸಕ್ಕಾರಂಭಿಸಿದ್ದ.
(ಕೊರಮ, ಆದಾಯ ಹತ್ತು ಸಾವಿರವಂತೆ…ಹಂಹಂ, ದಿನದ್ದೋ, ಗಂಟೆದ್ದೊ….ಎಲ್ಲಾ ಟ್ಯಾಕ್ಸ್ ತಪ್ಪಿಸುವ ನಿಯತ್ತು. ಭಾರ ೬೦ ಕಿಲೋವಂತೆ. ಆತನ ಹೊಟ್ಟೆಯದ್ದೋ, ಒಂದೊಂದು ತೊಡೆಗಳದ್ದೋ, ಡಾಕ್ಟರನೂ ಅಂತೆಯೇ ಬರೆದಿದ್ದಾನೆ. ಬುದ್ಧಿ ಕಲಿಸಬೇಕು. ಡಾಕ್ಟರನಲ್ಲಿ ಕಳಿಸಿ, ಒಮ್ಮೆ, ಚಂದನೋಡಬೇಕು.
‘ಸ್ವಾಮೀ, ತಮ್ಮ ವಿಶ್ವಾಸಕ್ಕೆ ವಂದನೆಗಳು. ದಯವಿಟ್ಟು “V” ಗುರುತು ಹಾಕಿದ ವಿಚಾರದಂತೆ ಮಾಡಿರಿ. V= ತಮ್ಮ ವೈಯಕ್ತಿಕ ಹೇಳಿಕೆಗಳಲ್ಲಿ ಕಳೆದ ಸಲಕ್ಕೂ ಈ ಸಲಕ್ಕೂ ಹೆಚ್ಚಿನ ವ್ಯತ್ಯಾಸ ಕಂಡುಬಂದುದರಿಂದ, ದಯವಿಟ್ಟು ಡಾಕ್ಟರವರನ್ನು ಶೀಘ್ರದಲ್ಲೇ ಭೇಟಿಯಾಗಿರಿ. ಶುಭಾಶಯಗಳೊಂದಿಗೆ…. ….. ….. ನಕಲು- ಡಾಕ್ಟರವರಿಗೆ……. ದಯವಿಟ್ಟು ಮೇಲೆ ತಿಳಿಸಿದ ವ್ಯಕ್ತಿಯ ತೂಕ, ಎದೆ, ಹೊಟ್ಟೆಗಳ ಸುತ್ತಳತೆ ಮತ್ತಿತರ “ಆರೋಗ್ಯ”ದ ಬಗ್ಗೆ ಮಾಹಿತಿ ಕೊಡಿರಿ….”
ಹಾಂ. ಇದು ನಮ್ಮ ಡಿಪಾರ್ಟ್‌ಮೆಂಟಿನದ್ದಲ್ಲ, ಇದೂ ಅಲ್ಲ……ಒಳ್ಳೆಯದಾಯ್ತು ಬಿಡಿ, ಸುಲಭದಲ್ಲಿ ಎರಡು Disposal.
ಆತ ಬೆಲ್ ಹೊಡೆದು, ಆಟೆಂಡರನನ್ನು ಕರೆದ. ಅವರೆಡನ್ನೂ …..ಡಿಪಾರ್ಟ್‌ಮೆಂಟಿಗೆ ಕೊಡ ಹೇಳಿದ. ತನ್ನ ರಿಜಿಸ್ಟರದಲ್ಲಿ ಗುರುತು ಹಾಕಿಕೊಂಡ.
(ಮೂರೂವರೆ ಜನಗಳ ಜಾಗತಿಕ ಸಮ್ಮೇಳನ. ಒಬ್ಬ ಬೊಗಳುವವ, ಇನ್ನೊಬ್ಬ ಅನುವಾದಕ. ಶ್ರೋತೃವರ್ಗದಲ್ಲಿ – ಅರ್ಧಟಿಕಿಟ್ಟಿನ ಪಿಳ್ಳೆ ಒಂದು, ಅಂಗಡಿ ಬಲುದೂರದ ಮುದಿ ಅಜ್ಜ ಇನ್ನೊಂದು. ಕಬೀರನಂದಂತೆ-ಆ ಭಗವಂತನನ್ನು ಇವರೆಲ್ಲ, ಕಿವುಡು ಎಂದೇ ತಿಳಿದಿರಬೇಕು. ನೀರು ಟಾಂಕಿ ತುಂಬಿ ಹರಿಯುತ್ತಿದೆ. ಅಷ್ಟು ದೂರ ತುಂತುರು ಚಿಮ್ಮಿ ಬಿಸಿಲಿನ ಕಿರಣಗಳೆಡೆ, ಪುಟ್ಟ ಕಾಮನಬಿಲ್ಲುಗಳು ಎದ್ದಿವೆ. ಕೆಳಗೆ ? ವಿರಾಗಿಗಳಂತೆ ಕುಳಿತಿರುವ ಪೈಪ್‌ಗಳು, ಬೋಳುಮರ, ಸುಡುವ ಮಣ್ಣು… ….. ….. ….
ಮತ್ತು ನಏನು ? ನಾನು ಬುದ್ಧ, ನಾನು ಸಿದ್ಧ, ನಾನು ಜನ, ನಾನು ಗಾಂಧಿ, ನಾನು ಋಷಿ, ಉಲಿಯುವುದು ಛಂದಸ್ಸು ; ಸೊಲ್ಲು-ದೃಷ್ಟಾರರ ಉಕ್ತಿಗಳು ; ವೇದ, ಉಪನಿಷತ್ತುಗಳು, ನಾನು ಕುರಾನ್, ನಾನು ಬೈಬಲ್, ನಾನು ಗೀತೆ, ನಾನು ರಾಮಾಯಣ, ನಾನು ಮಹಾಭಾರತ, ನಾನು ಮ್ಲೇಂಛ, ನಾನು ಪ್ರಾಸ್ಟ, ನಾನು ಕಾಮೂ, ನಾನು ಸಾರ್ತ್ರೆ, ನಾನು ಜೆ. ಕೆ., ನಾನು ರಸ್ಸೆಲ್; ನಾನು ಗಣ, ನಾನು ರವಿಶಂಕರ, ನಾನು ನಾದ, ನಾನು ಅಕ್ಷರ, ನಾನು ಶಬ್ದ, ನಾನು ವಾಕ್ಯ, ಓಮಿತ್ಯೇಕಾಕ್ಷರಂ ಬ್ರಹ್ಮ….ಹಾಂ ಹಾಂ… ನಾನು ಬ್ರಹ್ಮ… ನಾನೇ ಬ್ರಹ್ಮ…….ನಾನು ಬ್ರಹ್ಮ ? ನಾನೂ ಬ್ರಹ್ಮ ?
ಮಗುವಿನ ತೊದಲು ನುಡಿಗೆ, ಕೇಕೆಗೆ ; ಯಾರೂಂತ ಕೇಳಿದ್ದೀರಿ….ನಾನೇ ಸರಿ, ಮಗುವಿನ ಪುಟ್ಟ ದಿಟ್ಟ ಹೆಜ್ಜೆಗಳಿಗೆ ಯಾರೆಂದು ಬಲ್ಲಿರಾ…ನಾನೇ ಸರಿ, ನಾನೇ ಸರಿ.
ಮಗುವಿನ ಆರಣ್ಯರೋದನಕ್ಕೆ ಕಾರಣರಾರು ? ….ಇನ್ನಾರು ?
ಮಗುವನ್ನು ಚಿವುಟುತ್ತಾ ಜೋಗುಳ ಹಾಡಿದವರಾರು ?….ಮತ್ತಾರು ?
ನಿಧಾನವಾಗಿ ಸಯನೈಡ್ ತಿನ್ನಿಸಿ, ಬಾಂಬ್ ಸಿಡಿಸಿ ಆ “ದೊಡ್ಡ” ಮಗುವನ್ನು ಕೊಂದವರಾರು ?
ಗೋರಿಗೆಸೆದವರಾರು ?….. ……ನಾನೇ ಸರಿ….
ಯಾರಿಗೆ ಬೇಕು ? ಏನು ?
ಇದು ?….. ಅಂದರೆ ?
ಇದೇ …… ಇದೇ…)

ಮೂರಕ್ಕೆ ಇನ್ನೂ ಎಂಟು ನಿಮಿಷಗಳಿವೆ. ಆತ ಎದ್ದ. ಪೆನ್ನು ಕಿಸೆಗೆ ಇಳಿಬಿಟ್ಟ. ಕಾಲಿಗೆ ಷೂ ಸಿಕ್ಕಿಸಿದ. ಬಾತ್ ರೂಮಿನತ್ತ ನಡೆದ. ಆ ಅಪರ-ಸಮಯದಲ್ಲಿ ಯಾರೂ ಇಲ್ಲದ್ದನ್ನ ನೋಡಿ ಖುಷಿಪಟ್ಟ. ಬಟನ್ ಸಿಕ್ಕಿಸುತ್ತಿದ್ದಂತೆಯೇ ವಾಶ್‌ಬೇಸಿನ್‌ನ ಕನ್ನಡಿ ಎದುರು ನಿಂತ, ಮುಖ ತೊಳೆದ. ಲಕ್ಷಣವಾಗಿ ತಲೆ ಬಾಚಿದ ;
(ಬೆಳಗ್ಗಿನಿಂದಲೂ ನಾನಿಂದು ತಲೆ ಬಾಚಲೇ ಇಲ್ಲ. ಎಲ್ಲಾ ಅಸ್ತವ್ಯಸ್ತ)
ಮುಖ ಒರೆಸಿದ ; ಕೈ ಒರೆಸುತ್ತಿದ್ದಂತೆಯೇ ಹೊರ ಬಂದ. ಮಾತನಾಡಲು ಯಾರೂ ಸಿಗದ್ದರಿಂದ, ಸೀದಾ ತನ್ನ ಸೀಟಿಗೆ ಹೋದ.
(ಓಹೋ ಮದುವಿ ಆಗಿ ಒಂದು ತಿಂಗಳೂ ಆಗಿಲ್ಲ…..ಮಗ…ಇನ್ನೂ ಹನಿಮೂನು ಮುಗಿಸಿದ್ದಾನೋ ಇಲ್ಲವೋ… ಅವನ, ಅನಂತರ ಹಣ ಮಡದಿಗೆ ಹೋಗಬೇಕು ಎಂದು ಪತ್ರ ಬರೆದಿದ್ದಾನೆ.
ಹಿಡಿವ ಮೊಲೆ, ಸಿಕ್ಕಾಗ ಕುಡಿದ ಮೊಲೆ ಮರೆತೇ ಹೋಗುತ್ತದೆ. ಅದೇ ಮೊಲೆ, ಅದೇ ಪ್ರೇಮ,….
ರಕ್ಕಸಿಯ ಪರ್ವತ ಕುಚಗಳು ? ವಿಷ ತುಂಬಿದವನೂ ನಾನೇ, ಹೀರಿ ಕಟ್ಟೆ ಬಾಯಿಯಿಂದ, ಇತ್ಯ ಹರಿಯ ಬಿಡುತ್ತಾ, ಕೊಂದವನೂ ನಾನೇ, ಅಮ್ಮನ ಮೊಲೆ ಹಾಲು ಕುಡಿದ ಅದೇ ನಾನು ಬೆಳೆದು….ಛಪ್ಪನ್ನೈವತ್ತಾರು ದೇಶಗಳಿಗೆ ರಸಿಕಾಗ್ರೇಸರ ಯಾರೂಂತ ಕೇಳಬಲ್ಲಿರಾ ? ಹಾಗೆಂದುಕೊಳ್ಳಬಹುದು, ಹಾಗೆಂದುಕೊಳ್ಳಬಹುದು.
I have flowered with all the beautiful ladies, of all the time.
ನಿಷ್ಕಲ್ಮಶ ಉತ್ಕಟತೆಗಳಿಂದ, ಉಜ್ವಲವಾಗಿ, ಭಾವನಾತ್ಮಕವಾಗಿ ಮತ್ತು ಬೌದ್ಧಿಕವಾಗಿ -ಚಿಂತನೆಗಳ ಅತ್ಯಂತ ಸೂಕ್ಷ್ಮವಾದ ಮತ್ತು ಆಳವಾದ ನಾಡಿ ಸ್ಪಂದನವೂ ನಾನೇ. ನನ್ನ ಬೆಳವಣಿಗೆ, ವಿಶೇಷ ಪರಿಸ್ಥಿತಿಯ ಮೊದಲೂ ನಡೆಯಬಹುದು, ಅನಂತರವೂ ನಡೆಯಬಹುದು, ಯುರೋಪದಲ್ಲೂ ಪುಟಿಯಬಹುದು, ಇಂಡಿಯಾದಲ್ಲೂ ಎದ್ದೇಳಬಹುದು. ಸರಿಯಾದ ಪರಿಸರವಿದ್ದಲ್ಲಿ, ಸಂಬಂಧ ಮತ್ತು ಜವಾಬ್ದಾರಿಗಳನ್ನು ಪ್ರಶ್ನಿಸಲು ತಾ ಕ ತ್ತಿ ರು ವ ನನ್ನಿಂದಲೂ ನಡೆಯಬಹುದು ; ತತ್ವಮಸಿಯಿಂದಲೂ ಆಗಬಹುದು. Nationalismನ ಅತ್ಯಂತ ಉನ್ನತ ಸ್ಥಿತಿಯಲ್ಲಿ, ನನ್ನ ತಲೆಯನ್ನು ತುಂಡರಿಸಿ, ಸಮಷ್ಟಿಗೆ ಅರ್ಪಿಸಿಕೊಳ್ಳಲೂ ಬಹುದು ; ಉತ್ಕಟ ಚಿಂತಕನಾಗಿ, ಬೌದ್ಧಿಕ ಮಟ್ಟದ climax ನಲ್ಲಿ ಹಾಗೆ ಕತ್ತರಿಸಿಕೊಳ್ಳಲೂಬಹುದು. ಧಾರಾಳತನದಿಂದ ನನ್ನ ದೇಹದ ಒಂದೊಂದೇ ಅವಯವಗಳನ್ನು ಬೇಕೆಂದವರಿಗೆ “ಸರಿ”-ಎಂದು ಕೊಡಲೂ ಬಹುದು. ಪರಿಸರದೊಂದಿಗೆ ಹೋರಾಡುವುದು ತೀರಾ ಅನವಶ್ಯಕವೆಂದು ತನ್ನನ್ನೇ ಅರ್ಪಿಸಿಕೊಳ್ಳಲೂಬಹುದು.
ಕತ್ತಿಯೂ ನಾನೇ, ದೇಹವೂ ನಾನೇ, ಹರಿವಾಣವೂ ನಾನೇ, ಅರೆತೆರೆದ ಕಣ್ಣುಗಳು, ಮುಚ್ಚಿದ ತುಟಿಗಳ ಮುಗುಳುನಗು, ಸಡಿಲಿದ ಹುಬ್ಬುಗಳು, ಕೆದರಿದ ಕೂದಲು, ಇನ್ನೂ ಹರಿಯುತ್ತಿರುವ ಬಿಸಿ ನೆತ್ತರ ಧಾರೆ…ಕೆಂಪು….ಕಣ ಕಣದ ಕೇಂದ್ರ…ನಾನೇ…..ನನ್ನ ತಿರುಳನ್ನು ಅರ್ಥಮಾಡದೆ, ಗದ್ಯ ವೈಖರಿಯನ್ನು ಮೆಚ್ಚದೆ… inability ಯನ್ನು mask ನೊಳಗೆ ಇರಿಸಬಯಸುವ ವಿಮರ್ಶಕನೂ ನಾನೇ…ನನ್ನ ವೈಯಕ್ತಿಕ ಕಾಳಜಿಗಳೊಂದಿಗೆ ಹೋರಾಡುತ್ತಾ, ಅದನ್ನೇ ಸಾರ್ವಕಾಲಿಕ, ಸಾರ್ವತ್ರಿಕಗೊಳಿಸುವವನೂ ನಾನೇ…..ಪ್ರಜ್ಞೆಯ ಮಟ್ಟದಲ್ಲಿ ನೈಜತೆಯನ್ನು, ಸಮಗ್ರತೆಯನ್ನು, ನಿಷ್ಠುರ ಸತ್ಯವನ್ನು ತತ್ಕಾಲೀನ ಮೌಲ್ಯಗಳೊಂದಿಗೆ, ಘರ್ಷಿಸುವವನೂ ನಾನೇ..ನಾನೇ…ಅಹಂ ಬ್ರಹ್ಮಾಸ್ಮಿ.
ಅರೇ….ಇನ್ನೂ ಐದು Disposal ಆದರೂ ಆಗಬೇಕಲ್ಲ. ಗಂಟೆ ಮೂರೂವರೆ, ಆದರೂ ಇಂದು ಕೆಲಸ ಸಾಗುತ್ತಿಲ್ಲ.)
ಆತ ಹುಡುಕಿ ಫೈಲಿಗಿರುವ ಮೂರು ಕವರುಗಳನ್ನು ಹೊರ ತೆಗೆದ. ಒಂದನ್ನು ಬ್ರಾಂಚ್‌ನವರು ಉತ್ತರಿಸಿದ್ದರು. ಅವಗಾಹನೆಗೆ… ಎಂದು ಬರೇ ನಕಲು ಮಾತ್ರ ಇಲ್ಲಿಗೆ ರವಾನಿಸಿದ್ದರಿಂದ ಪಿನ್ ಮಾಡಿದರಾಯಿತು. ಎರಡನೆಯದ್ದನ್ನು ತೆರೆದು ಓದಿದ.
(ಮೇಲೆ ಹೋಗಿ ರೆಕಾರ‍್ಡ್‌‌ದಲ್ಲಿ ಒಂದು ಗೀಟು ಬರೆಯಲಿದೆ.)
ಅಟ್ಟ ಹತ್ತಿದ ; ಸಮಾನಾಂತರಗಳಲ್ಲಿ ಇಟ್ಟಿದ್ದ ಲೆಜ್ಜರುಗಳ ರಾಶಿಯಲ್ಲಿ ತನಗೆ ಬೇಕಾದ ನಂಬರ್ ಹುಡುಕಿದ.
(ಅರೇ ಇದೆಲ್ಲಿ ಸತ್ತಿದೆ ?…ನನಗೆ ಬೇಕಾದ್ದು ಬಿಟ್ಟು ಬಾಕಿ ಎಲ್ಲಾ ಇದೆ. ಹ್ಞಾ …ರಾಯರೇ, ನಿಮ್ಮಲ್ಲಿದೆಯೇನು ? ಒಂದು ನಿಮಿಷ, ಚಿಂತಿಲ್ಲ….ಬೇಡ, ಬಿಡಿ ಹಾಂ.)
ಹಣ ಬಂದದ್ದರ ಮಾಹಿತಿ ಅದರಲ್ಲಿ ಬರೆದು, ತನ್ನ ಚಿಕ್ಕ ದಸ್ಕತ್ತು ಜಡಿದ ; ಮತ್ತು ಕೆಳಗಿಳಿದ.
ಇನ್ನೊಂದನ್ನು ಸರಿ ನಂಬರದ ಫೈಲಿಗೆ ಸೇರಿಸಿದ.
(ಮೀನಿನ ಮಾರ್ಕೇಟಿನ ಬಳಿಯ ಗಟಾರವೊಂದರಲ್ಲಿ ಇಳಿದು, ಹುಳು ಹುಪ್ಪಟೆ, ಕೊಳಕುಗಳ-ನಿಂತ ನೀರನ್ನು “ಸರಸರ” ಎಂದು ಕುಡಿದವನೂ ನಾನೇ. ಅಲ್ಲಿಂದಲೇ ಕೊಳೆತ ಮುಸುಂಬಿಯೊಂದನ್ನು ಹೆಕ್ಕಿ “ಕಚಕಚ” ಜಗಿದವನೂ ನಾನೇ. ಗಡ್ಡಕ್ಕೆ ಕೈ ಒರೆಸಿಕೊಳುತ್ತಾ ಧುಡುಮ್ಮನೆ ಮೇಲಕ್ಕೆ ಜಿಗಿದು, ಮೂತ್ರಿಸುತ್ತಿದ್ದವನನ್ನು ಗೇಲಿ ಮಾಡಿದವನೂ ನಾನೇ ;….ಹ್ಞಾ ಹ್ಞಾ …ನಾನೇ ಕೊಚ್ಚಿ, ನಾನೇ ಮಂತ್ರಿಸಿದ ಜನ, ನಾನೇ ಸ್ವಮೇದ ಹೀರಿದ ವ್ಯಕ್ತಿ…ಆದರೂ…ಆದರೂ… ಕಾಲ್ತೆರೆದು ಬತ್ತಲೆ ಮಲಗಿದ್ದ, ತಾನೇ ದಿನಾ ಹಿಂಬಾಲಿಸುತ್ತಿದ್ದ, ಆ ದ್ವಿತೀಯ ವ್ಯಕ್ತಿಯನ್ನು…ಮುಟ್ಟದೆ…ಬಿಟ್ಟವನೂ ನಾನೇ..)
ಮಳೆ ಬರುವ ಸೂಚನೆಯಿದ್ದು …ಗಾಳಿ, ಧೂಳು ಮುಕ್ಕಿಸುತ್ತಾ ಮೋಡವನ್ನೆಲ್ಲೋ ಒಯ್ದಿತು.
(ಅನೈತಿಕ ಸಂಬಂಧ ? ಹಾಗಂದರೇನು ಸ್ವಾಮಿ ? ತಂಗಿಯೊಂದಿಗಿನ ಸಂಬಂಧವನ್ನು “ಅರ್ಥವಿಲ್ಲದ್ದು” ಎಂದಿರಾ? incest ಅಂದಿರಾ?
ನಾನು ಕಾಮ, ನಾನು ಲಿಂಗ, ನಾನು ವೀರ್ಯ, ನಾನು ವೀರ್ಯಾಣು; ನಾನು ಋತುಚಕ್ರ, ನಾನು ಯೋನಿ, ನಾನು ರಜಸ್ಸು, ನಾನು ಅಂಡ…ನಾನು ಸಂಭೋಗ, ನಾನು ಸೃಷ್ಟಿ…..ನಾನು ಶ್ರಾವಣ, ನಾನು ಮೋಡ, ನಾನು ಮಳೆ, ನಾನು ನರೆ…..ತಂಗಿ ಸತ್ತಾಗ ಅಳದಿರುವವ ನಾನೇ…..ಮಡದಿಯನ್ನು ಹೊಡೆದವ ನಾನೇ…. ಕುಡಿದವ, ನಾನೇ, ಜುಗಾರಿಯಾಡಿದವ ನಾನೇ..ಪರಿಸರದ ಕಾರಣವಿದ್ದೂ ಎಲ್ಲದರ ಹೊಣೆ ಹೊತ್ತವ ನಾನೇ ; ರಕ್ತಕಾರಿ ಆಸ್ಪತ್ರೆ ಸೇರಿದವನೂ ನಾನೇ••••..ನಾನೇ ಕುಡಿತ, ನಾನೇ ಜೂಜು, ನಾನೇ ರತಿ, ಸೀರೆ ಸುತ್ತಿದ ಕೋಲನ್ನು ಅಪ್ಪಿಕೊಂಡ ಮನ್ಮಥ, ನಾನೇ ಸಿರ‍್ಹಾಸಿಸ್ ಆಫ್ ಲಿವರ್……
ಬ್ರಹ್ಮಾರ್ಪಣಂ ಬ್ರಹ್ಮಹವಿರ್ಬ್ರಹ್ಮಾಗ್ನೌ ಬ್ರಹ್ಮಣಾಹತು |
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮ ಸಮಾಧಿನಾ 1 (ಗೀ-೪/೨೪)
-ಅಹಂ ಬ್ರಹ್ಮಾಸ್ಮಿ.
ನನಗೆ ಇಂದು ಏನೋ ಆಗಿದೆ, ನಿನ್ನೆ ಇಡೀ ರಾತ್ರೆ ಯಕ್ಷಗಾನಕ್ಕೆ ಹೋಗಿ ನಿದ್ರೆ ಬಿಟ್ಟಿದ್ದರ ಪರಿಣಾಮವಿರಬೇಕು; ಇನ್ನಾದರೂ ಬರೆಯಬೇಕು.)
ಆತ ಇನ್ನೊಂದು ಫೈಲನ್ನು ತೆರೆದ. ಬಾಂಡು ಕಳುಹಿಸುವ ಕೆಲಸ ಮನಸ್ಸು ಸ್ಥಿಮಿತದಲ್ಲಿಲ್ಲದಾಗ ಯಾರ‍್ಯಾರಿಗೆ ಕಳುಹಿಸಬಾರದಲ್ಲ !
(ನಾಳೆ ನೋಡೋಣ)
ಮತ್ತೊಂದು ಫೈಲು. ಟ್ರಾನ್ಸ್‌ಫರ್. ಸರಿ…. ಬಿಳಿ ಹಾಳೆಯೊಂದರಲ್ಲಿ, ಫೈಲಿನ ಪತ್ರವೊಂದರ, ನಕಲು ಮಾಡಿದ. ‘ನಕಲು…….ರ ಪರವಾಗಿ…” ಎಂದು ಬರೆದು ಸರಿಸಿದ.
(ಅರೇ ಇನ್ನು ಕಾಲು ಗಂಟೆಯ ಉಳಿದಿಲ್ಲ, ಒಂದಾದರ ಎಟೆಂಡ್ ಮಾಡಲೇಬೇಕು.)
ಬಡ್ಡಿ ಪಾವತಿ ರಶೀದಿ ಪುಸ್ತಕವನ್ನೆಳೆದ. ಇಂತಹವರಿಂದ, ಇಷ್ಟು ಸಾಲಕ್ಕೆ….ಇಲ್ಲಿಂದ ಇಲ್ಲಿವರೆಗೆ, ಇಷ್ಟು ಬಡ್ಡಿ ಕೃತಜ್ಞತಾಪೂರ್ವಕವಾಗಿ ಬಂದಿದೆ. ವಿ. ಸೂ:- ಈ ರಶೀದಿಯು, ಚಕ್‌ನ ಹಣವು ಕೇಶ್‌ನ ರೂಪದಲ್ಲಿ ಪರಿವರ್ತಿತವಾದಾಗ ಮಾತ್ರ ಪರಿಗಣಿಸಲ್ಪಡುತ್ತದೆ.
ಮೇಜಿನ ಬಾಗಿಲುಗಳನ್ನು ದೂಡಿದ. ಪೇನಾ ಕಿಸೆಗೆ ಸೇರಿಸಿ ಹೊರಡಲು ತಯಾರಾದ. ಸೈರನ್ ಕೇಳುತ್ತಿರಬೇಕಾದರೆ…ಮೆಟ್ಟಲಿಳಿಯುತ್ತಿದ್ದ ಅತೀ ಮೊದಲಿಗರಲ್ಲಿ ಸೇರಿಕೊಂಡ. ಧಡಧಡ ಅನ್ನುತ್ತಾ ಜಿಗಿದು ಕಚೇರಿಯ ಹೊರ ಆವರಣಕ್ಕೆ ಬಂದ.
(ಅಬ್ಬಾ, ಇಂದಿಗೆ ಬಿಡುಗಡೆದೊರಕಿತು, ಇನ್ನಾದರೂ ಬದುಕಬೇಕು.)
ಮನೆಗೆ ತಲುಪಿದಾಗ ಆಕೆ ಎಲ್ಲೋ ಹೋಗಿದ್ದಳು. ಮುಗುಮ್ಮಾಗಿ ತನ್ನಲ್ಲಿದ್ದ `ಕೀ’ ಯಿಂದ ಬಾಗಿಲು ತೆರೆದ.
(ಥತ್, ಸಂಜೆಯಾದರೂ ಆರಾಮಾಗಿರೋಣ, ನಾಲ್ಕು ಮಾತು “ಅದು-ಇದು ಆಡೋಣ’-ಅಂದರೆ ಇವಳೆಲ್ಲಿ ಸಿಗುತ್ತಾಳೆ.)
ಫೇನು ತಿರುಗಿಸಿದ. ಬೂಟಿನ್ ಲೇಸ್ ಬಿಚ್ಚಿ-ಅತ್ತ ಎಸೆದ. ಸಾಕ್ಸ್ ಎಳೆಯುತ್ತಿದ್ದಂತೆ -ಕಾಲು ತುಂಬಾ ಹಗುರವೆನಿಸಿತು. ಡ್ರೆಸ್ ಕಳಚಿದ. ಬತ್ತಲೆ ಇರುವ ಮನಸ್ಸಾಯಿತು. ಹೋಗಿ ಮುಂಬಾಗಿಲು ದೂಡಿ, ಚಿಲಕ ಸಿಕ್ಕಿಸಿದ, ವಿವಸ್ತ್ರವಾದ ; ಕೈಹೊಸೆದ, ಕಣ್ಣು ಮಸೆದ, “ಹೂಂ” ಅಂದ, ಓಡಿದ, ಧಿಂಗಣ ಹೊಡೆದ….ಸುಸ್ತಾದಾಗ ಬಾತ್‌ರೂಮಿಗೆ ಹೋಗಿ ಮೈಮೇಲಷ್ಟು ನೀರೆರೆದುಕೊಂಡ, ಅರ್ಧರ್ಧ ಮೈ ಒರಸಿ, ಹಜಾರಕ್ಕೆ ಬಂದ.
ಸಡಿಲಾಗಿ ಲುಂಗಿ ಉಟ್ಟುಕೊಂಡ ; ನೀರು ತೊಟ್ಟಿಕ್ಕುತ್ತಿದ್ದ ತಲೆಕೂದಲನ್ನು ಬಾಚುತ್ತಾ, ನೀರು ಕೊಣೆ ತುಂಬಾ ಸಿಂಪಡಿಸಿದ.
ಹಸಿವೆಯ ನೆನಪಾಯಿತು. ಅಡುಗೆಮನೆ ಸೇರಿ, ತಣ್ಣಗಾಗಿದ್ದ ಕಾಫಿ ಹೀರಿದ ಉಪ್ಪಿಟ್ಟು ತಿಂದ.
(ಮಣು ತಿಂದು ನೀರು ಕುಡಿದಂತೆ ; ಒಂದು ರುಚಿಯೂ ಇಲ್ಲ ; ಬಿಸಿ ಆ ಮೊದಲೇ ಇಲ್ಲ.)
ಕೈ ತೊಳೆದು, ಹಜಾರಕ್ಕೆ ಬಂದು, ಚೇರಿನಲ್ಲಿ ಮಂಡಿಸಿದ ; ಕತ್ತಲಾಗದಿದ್ದರೂ ಲೈಟು ಹಾಕಿದ.
(ಆಫೀಸು ಅಲ್ಲಿಯ ಜೀವವಿರುವವರನ್ನು ಯಾಂತ್ರೀಕೃತಗೊಳಿಸಿ, ಮನಸ್ಸನ್ನೇ ಕಮರಿಸಿಬಿಡುತ್ತದೆ. ಬಿಟ್ಟ ಶಬ್ದಗಳನ್ನು ತುಂಬಿಸಲು, ಈ ಕಾಲೇಜು ವಿದ್ಯಾಭ್ಯಾಸ ಈ ಯುನಿವರ್ಸಿಟಿಯ ಮಸ್ಕಾ ಹೊಡೆತ ; ಪೋಸ್ಟ್ ಗ್ರಾಜುಯೇಶನ್ ಡಿಗ್ರಿ, ಇವೆಲ್ಲ ಅಗತ್ಯವಿತ್ತೇ ? ಎಂಟನೇ ಕ್ಲಾಸ್ ಕಲಿತ ಯಾವ ಕಮಂಗಿಯೂ ಮಾಡಬಹುದಾದ ಈ ಕೆಲಸಕ್ಕೆ ಬಂದು ನಾನು ಸತ್ತೆ. ಪಗಾರ, Dignity, ಮಡದಿ, ಮನೆ, “ನಾಳೆ”-ಇಲ್ಲದಿದ್ದರೆ; ಎಂದೋ ಎಲ್ಲಾದರೂ ಓಡಿಹೋಗುತ್ತಿದ್ದೆ….ಕೆಲಸ ಸಿಕ್ಕಿದೆ, ವ್ಯವಸ್ಥೆ ಸತ್ತಿದೆ, ನಿಜವಾದ ಆಸ್ಥೆ ಸತ್ತಿದೆ. ಪ್ರತಿಕ್ಷಣವನ್ನೂ ಕೊರೆಯುತ್ತಿರುವ Boredom ಮಾತ್ರ ಉಸಿರಾಡುತ್ತಿದೆ. ಒಂದೋ ಹೊಡೆದಾಡುವ ಗೂಂಡಾಗಳ ಸಾಲು ಸೇರಬೇಕು ; ಇಲ್ಲವೇ, ಚಂಚಾಗಳ ಸರತಿಯಲ್ಲೊಂದು ವ್ಯಕ್ತಿಯಾಗಬೇಕು. ಇದೇ ಆಫೀಸರ ; ನೀಟಾಗಿ ಮೇಜಿನಡಿ ಟೆಕ್ಸ್ಟ್‌, ನೋಟ್ಸ್ ಓದಿ, ಪಾಸಾದವ ; ಗಡದ್ದಾಗಿ, ರಂಗುರಂಗಾಗಿ “Yes Sir, “Salute’ ಹೊಡೆದು, ಈಗ ಬೆನ್ನಹುರಿ ನೇರ ನಿಲ್ಲಿಸಿದ್ದಾನೆ……
ಅಯ್ಯೋ ದೇವರೇ- ಛೇಛೇ-ಆ ಪಾರ್ಟಿ ಮೊನ್ನೆಯೇ ಬಂದು ಹೇಳಿದ್ದನಲ್ಲವೇ ‘ಟೆಲಿಗ್ರಾಂ’ ಬೇರೆ ಬಿಟ್ಟಿದ್ದ. ಇಂದು ಖಂಡಿತ ಮಾಡಿ ಕಳುಹಿಸುತ್ತೇನೆ ಎಂದಿದ್ದೆ. ಮರೆತೇ ಹೋಯಿತಲ್ಲ….. ಇದೇ ಅವಸ್ಥೆ, ಮೊದ-ಮೊದಲು ಮೇಜರಿ ಸದಾ ಖಾಲಿ ಇರಬೇಕೆಂದು “ಅರ್ಜೆಂಟ್”ಎಂದೊಡನೆ ”ಸರ್ಪ ಸರ್ಪ” ಅಂದು ಒಮ್ಮೊಮ್ಮೆ “ಏಣಿಲು” ಬೆಳೆಗೆ ಸುಗ್ಗಿಯನ್ನು ಬಿತ್ತುತ್ತಿದ್ದ ನಾನೇ, ಇದೀಗ ಎದುರು ಆಳೆತ್ತರ ಫೈಲು ರಾಶಿ ಬಿದ್ದರೂ ಟ್ರಿಮ್ಮಾಗಿ ನಿದ್ದೆ ತೂಗಬಲ್ಲೆ…. ಎದುರು ನಿಂತ… …..
ಬಾಗಿಲು ಬಡಿತದ ಶಬ್ದಕ್ಕೆ “ಬಂದೆ” -ಅಂದ. ಅತ್ತ ಸರಿದು, ಚಿಲಕ ತೆಗೆದ. ಬಾಗಿಲು ದೂಡಿ ಒಳಬಂದ, ಆಕೆ ಯಾವ ಭಾವನೆಗಳೂ ಇಲ್ಲದವಳಂತೆ “ಆಗಲೇ ಬಂದಿರೇನು ?”
-ಅಂದಳು. ಆತ ತಟಕ್ ಪಿಟಕ್ ಎನ್ನದೆ, ಪುನಃ ತನ್ನ ಚೇರಿನ ದಾರಿ ಹಿಡಿದ.
(…ನಮಗೆ ಸ್ವಾತಂತ್ರ್ಯ ಸಿಗುವ ಎಷ್ಟೋ ಮೊದಲು ರಚಿತವಾದ ನಿಯಮಗಳು ಏಕ್ಟ್‌ಗಳು ಅಂತೆಯೇ ಇವೆ. ಬರೇ Static., ಒಂದಿಷ್ಟೂ ಚಲನೆಯಿಲ್ಲ. ಸಂಸ್ಥೆಗೇನೋ ಲಾಭವಿದೆ ನಿಜ. ಆದರೆ ಎಲ್ಲವನ್ನೂ ಒಪ್ಪಿಕೊಳ್ಳುವ “ಅ, ಆ, ಇ” ಯನ್ನೇ ಕಲಿತಿರುವ, ಸೋಣುಬೇರಿ-“ಜನತೆ” ಅದರ ನಿಜವಾದ ಹಕ್ಕುದಾರರಲ್ಲವೇ, ಶರತ್ತು, ನಿಯತ್ತುಗಳನ್ನು, ನಿರೂಪಿಸುವ ಈ ಇವರಿಗೂ ಕಳ್ಳ ಬಸಿರನ್ನ ಹೊತ ಕಸಿವಿಸಿ ; ಪ್ರಜ್ಞೆ ಮೂಡಬೇಡವೇ ….
ಅಡುಗೆ ಕೆಲಸ ಮುಗಿಸಿ, ಆಕೆ ಹೊರ ಬಂದಾಗ, ಆತ ನಿದ್ದೆ ಹೋಗಿದ್ದ. ಒಮ್ಮೆ ಮುಗುಳಕ್ಕು, “ಏಳೀಂದ್ರೆ”-ಅಂದು ಮೈ ಕುಲುಕಿಸಿದಳು. “ಹಾಂ ಹೂಂ”- “ಏನೂಂದ್ರೆ.” -ಈ ಅವಸ್ಥೆಗೊಂದು…” “ಯಾವ ಅವಸ್ಥೆ ?” ಆತ ಅವಾಕ್ಕಾಗಿ ಕಣ್ಣು ಪಿಳಿ ಪಿಳಿ ಬಿಟ್ಟು ಸುಮ್ಮನೆ ಕುಳಿತ. “ಊಟಕ್ಕೇಳೀಂದ್ರೆ”.
(ಎಲಾ ನನಗೆ ನಿದ್ದೆ ಬುದಿತ್ತೇನು ? ನಿನ್ನೆಯೂ ನಿದ್ದೆ ಇಲ್ಲ.)
ಜೋಲಿ ಹೊಡೆಯುತ್ತಾ ಬಾತ್‌ರೂಮಿಗೆ ಹೋಗಿ ಮುಖಕ್ಕೆ ನೀರು ಚಿಮುಕಿಸಿಕೊಂಡ. ಪುನಃ ಊಟದ ಮನೆ ಸೇರಿ, ಬಡಿಸಿದ್ದಷ್ಟನ್ನು ಗಬಗಬನೆ ತಿಂದು, ಕೈತೊಳೆದು, ತನ್ನ ಹಾಸಿಗೆ ಬಿಡಿಸಿದ. ಒರಗಿ, ಕಣ್ಣು ಮುಚ್ಚಿದ.
ನಡುರಾತ್ರೆ ಏನೋ ಬಡಬಡಿಸಿ ಎದ್ದು ಕುಳಿತ. ಆಕೆ, ‘ಸುಮ್ನೇ ಮಲಗೀಂದ್ರೆ ಏನೇನೋ ಯೋಚಿಸ್ತಾ ಮಲಗಿದ್ರೆ ಕನಸು….ರಾಮ, ರಾಮಾ ಅನ್ನಿ” ಅಂದ ಮೇಲೆ ಪುನಃ ಮಲಗಿದ.
(ಆದರೂ, ರಂಗಸ್ಥಳದ ಹಿಂದೆ ಬೆಂಚಿನಲ್ಲಿ ದೇವತೆಗಳೂ, ರಾಕ್ಷಸರೂ ಪಟ್ಟಾಂಗ ಹೊಡೆಯುತ್ತಾ ವಿರಾಜಮಾನರಾಗಿದ್ದಾರೆ. ಭಾಗವತರು ತಾಳದಲ್ಲಿ ಗುಂಯ್‌ಗುಟ್ಟುತ್ತಿದ್ದಾರೆ. ಚೆಂಡೆ ಹೊಡೆಯುವವರು, ತಮ್ಮ ಸರದಿ ಬಂದಿತೆಂದು ಚೆಂಡೆ -ಕೋಲಗಳ ಪೆಟ್ಟಿನಲ್ಲಿ ವಿಜೃಂಭಿತರಾಗಿದ್ದಾರೆ. ಮದ್ದಳೆಯವರೂ ತಲೆದೂಗಿ ಬಡಿತದ ಶಬ್ದ ಸರಿದೂಗಿಸಲು ವೃಥಾ ಹೆಣಗುತ್ತಿದ್ದಾರೆ. ವಿದೂಷಕ, ಶಕ ಪುರುಷನಂತೆ, ರಂಗಮಂದಿರದ ‘ಒಳ ಹೊರಗು’ ನುಂಗಿದ್ದಾನೆ. ಯುದ್ಧ….)
ಆಫೀಸಿಗೆ ತಲುಪಿದಾಗ ಹೆಚ್ಚಿನ ಯಾರೂ ಬಂದಿರಲಿಲ್ಲ.
(ಬಂದದ್ದು ತುಂಬಾ ಬೇಗವಾಯ್ತು. ಇನ್ನೂ ಹದಿನೈದು ನಿಮಿಷಗಳಿವೆ.)
ಹಾಜರಿ ಪುಸ್ತಕದಲ್ಲಿ ದಸ್ಕತ್ತು ಹಾಕಿ, ತನ್ನ ಸೀಟಿನತ್ತ ತಿರುಗುವೆನೆಂದಾಗಲೇ ಪ್ರತ್ಯಕ್ಷನಾದ ಆಫೀಸರ “ಒಂದ್ನಿಮಿಷ, ಮಿಸ್ಟರ್, ಸೀನಿಯರ್ ಆಫೀಸರ್ ಕರೀತಾರೆ.’
(ಎಲಾ ಗ್ರಹಚಾರವೇ, ಇವತ್ತೇನು ಬಂತಪ್ಪ…)
ಬಾಗಿಲು ಸರಿಸಿ, ಛೇಂಬರಿನ ಒಳನುಗ್ಗುತ್ತಿದ್ದಂತೆ ಸೀನಿಯರ ಆಫೀಸರ “ಬನ್ನಿ, ಬನ್ನಿ ಕುಳಿತುಕೊಳ್ಳಿ” ಅಂದ. ಆತ “Yes Sir” ಅಂದು ಕುಳಿತ. “ಇಂದು ಹವಾ ಚೆನ್ನಾಗಿದೆ, ಅಲ್ರೀ”-“ಹೌದು ಸರ್”, “ನಿಮ್ದು-Law Certificate ಬಂತೇನ್ರಿ”-“ಇಲ್ಲಾ ಸಾರ್”. “ಇಷ್ಟು ಕ್ಯಾಲಿಫಿಕೇಶನ್ ಇರೋ ನೀವು ನಮ್ಮ ಡಿಪಾರ್ಟ್‌ಮೆಂಟಿಗೆ ಒಂದು Asset ರೀ” “…”. ಮರಿ ಆಫೀಸರ “yes sir, ನಿಜವಾಗ್ಲೂ ಸರ್” -ಎಂದು ಅಂಗೈ ತಿಕ್ಕತೊಡಗಿದ. “ಅಲ್ದೇ, ನೀವು ಒಳ್ಳೇ Workerರೂ, we are all proud of you” “ಥ್ಯಾಂಕ್ಸ್ ಸರ್”. “ಮುಂದಕ್ಕೇನು ಕಲೀತೀರಾ”-ಡಿಸೈಡ್ ಮಾಡಿಲ್ಲಾ ಸಾರ್”.
(ಹೇಳಲಿರುವುದನ್ನು ಬೇಗ ಬೊಗಳು.)
“ನೋಡಿ, ಮಿಸ್ಟರ್…ಇವ್ರೇ, ನಿಮ್ ಹೆಸರು…ಸರಿ.” ಆಫೀಸರ ಕೆಮ್ಮಿದ. ಆತ ಕಿವಿ ನಿಮಿರಿಸಿ ಕುಳಿತ. “ಈ ಲೆಟರ್ ತೆಗೊಳ್ರಿ. ನಿಧಾನವಾಗಿ ಓದಿ; ನಿಮ್ಮ ಅಭಿಪ್ರಾಯ ತಿಳ್ಸಿ”. ಆಫೀಸರ ಪೇಪರ್ ವೈಟ್‌ನ ಅಡಿಯಲ್ಲಿದ್ದ ಪತ್ರ ತೆಗೆದ.
ಆತ ಬೆದರಿದ, ಆದರೂ ತೋರಗೊಡದೆ ಎದ್ದು ನಿಂತು ಸ್ವೀಕರಿಸಿದ. ನಿಧಾನವಾಗಿ ಓದಿದ. ಮತ್ತೆ…ಮತ್ತೆ ಮುಖ ಕೆಂಪಾಗಿ ಬೇಗ ಬೇಗ ಓದತೊಡಗಿದ.
“ನೀವು ನಿನ್ನೆ ದಿನ ಆಫೀಸಿನಲ್ಲಿ (I) ಗಂ. 10 ರಿಂದ 10-35 (II) 10-50 ರಿಂದ 11-12 (III) 11-31 ರಿಂದ 11-39 (Iv) 11-55 ರಿಂದ 12-05 (v) 12-15 ರಿಂದ 1 (VI) 2-20 ರಿಂದ 2-55 (VII) 2-58 ರಿಂದ 3-10 (VII} 3-12 ರಿಂದ 3-33 (IX) 3-30 ರಿಂದ 4-15 (X) 4-35 ರಿಂದ 5 (XI) S-05 ರಿಂದ 5-15-ಸಮಯಗಳಲ್ಲಿ ಸೀಟಿನಲ್ಲಿರಲಿಲ್ಲ.”
ಸಂಜೆ 6-15 ರಿಂದ 7-10 ರ ವರೆಗೆ ಯಾರ ಅಪ್ಪಣೆಯೂ ಇಲ್ಲದೆ, ಲೈಟ್ ಫೇನುಗಳನ್ನು ಹಾಕಿ ನಿಮ್ಮ ಸೀಟಿನಲ್ಲಿ ಕುಳಿತಿದ್ದಿರಿ. ರಾತ್ರೆ 2 ರಿಂದ 2-35ರ ವರೆಗೆ ಮೇಲಧಿಕಾರಿಗಳ ಅನುಮತಿ ಇಲ್ಲದೆ, ಲೈಟೂ ಹಾಕದೆ ನಿಮ್ಮ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಿರಿ …..ಆದರೂ Tangible ಆಗಿ ಏನೂ ಮಾಡಿಲ್ಲ.
ಆಫೀಸಿನ-ಮತ್ತು ಆಫೀಸಿನ ಇತರ ಜನರ ವಿಚಾರದಲ್ಲಿ ಅವಹೇಳನವಾಗುವಂತೆ ಲೇಖನಗಳನ್ನು ಬರೆದು ಪ್ರಕಟಿಸಿದ್ದೀರಿ. ಆದ್ದರಿಂದ-
I) ಆಫೀಸಿನ ಸಮಯದಲ್ಲಿ ಸೀಟಿನಲ್ಲಿಲ್ಲದ್ದಕ್ಕಾಗಿ,
11) ಇತರ ಸಮಯದಲ್ಲಿ ಅನುಮತಿ ಇಲ್ಲದೆ ಆಫೀಸಿನ ವಠಾರವನ್ನು ಪ್ರವೇಶಿಸಿದುದಕ್ಕಾಗಿ,
III) ಅಫೀಸಿನ ವಿಚಾರ, ಜನರಲ್ಲಿ ಕೆಟ್ಟ ಅಭಿಪ್ರಾಯ ಬರುವಂತೆ ಬರೆದುದಕ್ಕಾಗಿ,
– ನಿಮ್ಮ ಮೇಲೆ ಶಿಸ್ತಿನ ಕ್ರಮವನ್ನು ಏಕೆ ಕೈಗೊಳ್ಳಬಾರದು? ಈ ಪತ್ರಕ್ಕೆ 24 ಘಂಟೆಗಳ ಅವಧಿಯಲ್ಲಿ ಸೂಕ್ತ ಉತ್ತರವನ್ನೀಯದಿದ್ದರೆ; ಸರಿಕಂಡ ರೀತಿಯಲ್ಲಿ ವರುಂದುವರಿಯಲಾಗುವುದು…ವಿಶ್ವಾಸಿ…” -“ಓದಿದರೇನು ?”–ಆಫೀಸರ ಗಂಭೀರವಾಗಿ ಉಸುರಿದ.
ಆತ ಅವಡು ಕಚ್ಚಿದ ; ತೆರೆದ.
(ಮಗ, ಇದಕ್ಕೇ ಬರಹೇಳಿದ್ದು, ಅಲ್ಲವೇ)
“ನೀವು…ನೀವು ನೋಡುತ್ತಿರುವುದು ನನ್ನನ್ನಲ್ಲ, ಮಾತನಾಡುತ್ತಿರುವುದು ನನ್ನಲ್ಲಲ್ಲ” ಆಫೀಸರಿಬ್ಬರೂ ಹೌಹಾರಿದರು ;
(“ಮತ್ತೆ”)
ಆತ ಎದ್ದು ನಿಂತು ಸಾರಿದ ‘ನೀವು ಮಾತನಾಡುತ್ತಿರುವುದು ನನ್ನ ದೆವ್ವದ ಬಳಿ; ಎದುರ ನಿಂತಿರುವುದು ನನ್ನ ಭೂತ ಮತ್ತು…ಜೂನಿಯರ್ ತನ್ನ ಯಜ್ಯೋಪವೀತ ತಡವುತ್ತಿದ್ದಂತೆ
ಸೈರನ್ ಗಂಟೆ ಹತ್ತಾಯ್ತೆಂದು ಕಿರುಚುತ್ತಿತ್ತು.

Close

ಹತ್ಯಾಕಾಂಡ

ಹತ್ಯಾಕಾಂಡ

ಚೆನ್ನಣ್ಣ ವಾಲೀಕಾರ

೧
ಇತಿಹಾಸಕೆ ಕಾಮಾಗಳಿರಬಹುದು ಸೆಮಿಕೋಲನಗಳಿರಬಹುದು
ಪುಲಸ್ಟಾಪ್‌ಗಳಿರುವುದಿಲ್ಲವೆಂಬು
ದು ಪ್ರತಿಕ್ಷಣ ಬರೆಯಲಾಗುವದುದು ನಿಂತಲ್ಲಿ ನಿಲ್ಲುವದಿಲ್ಲವೆಂಬುದು
ಧರ್ಮದ ಸ್ಥಾನ ಧರ್ಮಕ್ಕೆ ಅರ್ಥದ ಸ್ಥಾನ ಅರ್ಥಕ್ಕೆ ಕಾಮದ ಸ್ಥಾನ ಕಾಮಕ್ಕೆ
ಮೋಕ್ಷದ ಸ್ಥಾನ ಮೋಕ್ಷಕ್ಕೆ
ಒಂದಕ್ಕೊಂದು ತಳಕು ಹಾಕುವಂತಿಲ್ಲವೆಂಬುದು
ರಾಜಕೀಯದಲ್ಲಿವೆಲ್ಲವನು ಬೆರಸಲಾಗವುದಿಲ್ಲವೆಂಬುದು
ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರವೆಲ್ಲ ಹೊಟ್ಟೆ ತಿಪ್ಪಲಿನವುಗಳೆಲ್ಲ

ಶಕ್ತಿ ಇದ್ದವನೆದ್ದ ಇಲ್ಲದವ ಬಿದ್ದ ಜಾತಿಜಾಡನು ಹಿಡಿದು ಹೊರಟವನಿಗೆ
ಹುದಲು ಸಿದ್ಧ
ಹೊತ್ತು ಬಂದಂತೆಲ್ಲ ಕೊಡೆಹಿಡಿದವ ಗೆದ್ದ ಆದಿ ಅಂತ್ಯಗಳಿಲ್ಲದ ಈಕ್ಷೇತ್ರ ಬಹುರೂಪಿ
ಸಿದ್ಧನೆಂಬುದು ಅರಿಸ್ಟಾಟಲನ ಮಾತಿನಂತೆ ಗಹನವಾದದ್ದು.

ಹುಟ್ಟಿನೊಳು ಹುಟ್ಟಿ ಬಾಲ್ಯದೊಳು ಬೆಳೆದು ಯೌವನದೊಳು ಗಟ್ಟಿಗೊಂಡು ಪ್ರೌಢಕ್ಕೆ
ಹೆಮ್ಮರವಾಗಿ ಬುಡದವರ ಸಾವ್‌ ನೆರಳಾಗಿ ಇಲ್ಲಸಲ್ಲದ ತಂಟೆ ತರಲೆಗಳಿಗಾಗಿ
ಮಾಡಬಾರದ ಮೋಸ ವಂಚನೆಗಳಿಗಾಗಿ ಕಾಮ ಕ್ರೋಧ ಮದ ಲೋಭ ಮೋಹ ಮತ್ಸರ
ಗಳ ಮೊಸಳೆಗಳಾಗಿ ಬೆಳೆಯುತ್ತದೆ ಬೆಳೆಯುತ್ತದೆ ಹೀಗೆ ಬೆಳೆಯುತ್ತದೆ
ರಾಜಕೀಯ :
ಕೀರ್ತಿವೈಭವ ಘನತೆ ಆರ್ಭಟ ಆಡಂಬರದ ಸೊಕ್ಕು ಸೆಡವುಗಳ ಜೋರು
ಜುಲ್ಮಾನೆಗಳ ಬೆನ್ನು ಹತ್ತಿಕೊಂಡು ಸೊಕ್ಕೇರಿ ಸಾವು ಹೀಗೆ ಬರುತ್ತದೆ
ಹೀಗೆ ಬರುತ್ತದೆ ರಾಜಕೀಯ
ಮುಂದನರಿಯದವ ಸುಖಿ ಪ್ರತಿನಿಮಿಷಕೂ ಸಾವ್‌ನೋವು ಬಾವುಗಳು ಕೈಯಲ್ಲಿರುವ
ಗೆರೆ ಜೋತಿಷ್ಯ ರೇಖೆಗಳು ಹೊಟ್ಟೆ ತಿಪ್ಪಲ ದಾರಿಗಳು ತನದನ್ನು ಸಾಧಿಸಿಕೊಳುವದಷ್ಟೇ ಗೊತ್ತು ರಾಜಕೀಯಕೆ ಅದಕೆ ಕೈಕಾಲು ಕಿವಿಕಣ್ಣು ಮಗುಮೋರೆ ತಲೆಹೃದಯ
ಇದ್ದಿದ್ದರೆ ಇದ್ದಿದ್ದರೆ……………..

ಇದೊಂದು ಕಾರ್ಖಾನೆ ಅಳುವ ಸಾವವರಿಗಾಗಿ ಸಾಯುವವರಿಲ್ಲಿಲ್ಲ ಸ್ವಾಮಿ.
ಒಬ್ಬವ ಬೀಳು
ತ್ತಲೆ ಮಗದೊಬ್ಬವ ಬರುತ್ತಲೇ ನಗುವರ ಜೊತೆಗೆ ನಗುವವರೇ ಬಹಳಿಲ್ಲಿ ಸ್ವಾಮಿ
ತನ್ನ ಗುಟ್ಟನು ಬಿಡದೆ ಸಮಯ ಸಾಧಕನಾಗಿ ಪಾಪಪುಣ್ಯ ಹಿತಅಹಿತ ಒಳಿತುಕೆಡಕುಗಳ
ವಿಚಾರ ತಲೆಗೆ ಹೈಕೊಳ್ಳದಲೆ ನಡೆದದ್ದೆ ಹಾದಿ ಇದು ನುಡಿದದ್ದೆ ವೇದಾಗಿ ಬ್ರಹ್ಮಶಕ್ತಿಗೂ
ಸಡಿಲು ಮಾಡುವಾ ಬಲವಾಗಿ ಬಂದಿಹುದಿವತ್ತಿಗೂ.

ಸದಾ ರಾಕ್ಷಸೀ ಶಕ್ತಿ ಆಳುತ್ತದಲವಾ ….. …. …. ….

ತತ್ವಗಳು ಹೇಳೋಕೆ ಶಾಸ್ತ್ರಗಳು ಕೇಳೋಕೆ ಕಥೆಕಾವ್ಯ ರಮಿಸೋಕೆ ಮಠಮಂದಿರ
ಸುಖಿಸೋಕೆ ಜನಜಂಗುಳಿ ಕುಣಿಸೋಕೆ ಬಲುಸಂದ ಅಲವಾ…. …. …. ….

ನೀವ್ಮಾಡಿದ್ದು ತಪ್ಪಂಥ ಕನಸಿನಲಿ ಬಪ್ಪಂಥ ಬೋಧಿವೃಕ್ಷದಲಿ ಇಪ್ಪಂಥ ಕಾಗದದಲಿ
ಒಪ್ಪಂಥ ವಿಚಾರ-ಆಚಾರ ಮಾಡಲಿಕೆ ಬರಲಾರದಕೆ ನೀವುರುಳಿದ್ದುದಲವಾ…. ….
ಇದೆಂಥದ್ದು ನಿಮ್ಮ ಜನತೆಯು ತಳೆದಂಥ ನಿಲವಾ…. ….. …..
ಬೂಟುಗಾಲಿನ ಏಟು ಬಂಧುಮುಕ್ತಗೊಳಿಸಿದ್ದು ತಮ್ಮ ನೆಲ ತಮ್ಮ ಜಲ ಹವೆಬೆಳಕು
ಭಾಷೆಬದುಕು ತಮ್ಮತನ ತಮ್ಮಮನ ತಮಗಿರಲಿ ಎಂದದ್ದು ಅಜ್ಞಾತದೊಳಿದ್ದಂದು
ಕುರುಕ್ಷೇತ್ರದಲಿ ಗೆದ್ದಂದು ಹೊಗಳಿದ್ದೇ ಹೊಗಳಿದ್ದು ನಿಮ್ಮವರೇ ಅಲವಾ…. …..
ಯಾವಾಗಲೂ ಹಾಳಾಗುವದು ಒಳಜಗಳಗಳ ಫಲವಾ…. ……

ಕೋಳಿಗೆ ಕಾಳಿನಾಸೆ, ಕಾಗಿಗೆ ಅಗಳಿನಾಸೆ, ಹಂದಿಗೆ ಹೇಲಿನಾಸೆ ಇದ್ದಂತೆ ಇಲ್ಲುಂಟು
ಗಾದಿಗೆಗೆ ಗದ್ದುಗೆಗೆ ಹೀಗೆಲ್ಲ ಗಡಿಬಿಡಿಯು ರಾತ್ರಿ ಏರುತ ಬಂತು ಬೆಳಚಿಕ್ಕಿಗಾಗಿ
ನಿಷಾಂತಾಗುವ ಮೊದಲೆ ಇರುತ್ತಾರೆ ಇರುತ್ತಾರೆ ಜಗತ್ತಿನೆಲ್ಲಾ ಕಡೆಗೆ ಚಿವುಟಿ
ಹಾಕುವ ಮಂದಿ ತಿಂದು ಹಾಕುವ ಹಂದಿ.
ತಮ್ಮ ಜಾತಿಗೆ ಮೀಸಲೆಂದು ಕುಂತದಕಾಯು ಮಾಡ್ವ ತಪ್ಪನು ಬಯಲಿಗೆಳೆದು
ಬಿಟ್ಟುದಕಾಯ್ತು ಹಗಲುರಾಜ್ಯವ ನಡೆಸುವದಕ್ಕೆ ಕಾಡಿಕೆಯಾಯ್ತು
ತಮ್ಮವರೆ ಬಂದವರೆ ಜೈ ಎಂದು ಅಂದವರೆ ಗಿಟ್ಟದಿರೆ ನಿಂದವರೆ ವೈರಿಗಳು
ಆದವರೆ ಗೋರಿ ತಯ್ಯಾರಿಸುತ್ತಾರೆ ಅದಕ್ಕೆ ಹೇಳುವದಯ್ಯ:

ನಮ್ಮವರೆ ಆತ್ಮೀಯರೆ ಮುಂದು ಮುಗುಳ್ನಗೆ ಬೀರಿ ಹಿಂದೆ ಚೂರಿಯು ಇರಿವ
ಮಾತು ಎಲ್ಲಾ ಕಡೆಗೆ ಸುತ್ತಲಿನ ವಾತ್ಸದ್ದಿತನ ಇರದಕ್ಕೆ ಹೀಗಾಯ್ತು
ಕವಿಯಂತೆ ಇದ್ದುದಕೆ ರಾಜಕೀಯ ಹಾಳಾಯ್ತು ವಿಶ್ವಶಕ್ತಿಯದೆಷ್ಟು ಇದ್ದಲ್ಲೂ
ಅದರೊಳಗಿರುವ ದುರ್ಬಲ ಗುಣವ ಹಿಡಿದು ಅಗಿದು ಹೂಳುವದೊಂದೇ ಬೇಗ
ಮುಗಿಸುವದೊಂದೇ ರಾಜಕೀಯ ಅದಕ್ಕೆಂದೆ ಉರುಳಿದ್ದು ನೀವು ಕೇಳಯ್ಯ

೩
ಏನ್ಹೋಗಿ ಏನಾಯ್ತು
ನಿನದಯ್ಯ ಮುಜಿಬುರ್
ಸತ್ಯ ರಕ್ಷಿಸ ಹೋಗಿ
ಸತ್ತದ್ದು ಮುಜಿಬುರ್

ಯಾರು ಬಂದರೂ ಅಷ್ಟೆ
ಈ ಜಗಕೆ ಮುಜಿಬುರ್
ನಾಯಿ ಬಾಲವು ನೇರ
ಆಗದೈ ಮುಜಿಬುರ್

ಯಾವ ಕಾಲಕು ಜಾತಿ
ಕೊಂದಿಹುದು ಮುಜಿಬುರ್
ಈ ದಿನದ ರಾಜಕೀಯ
ಪಾಯ್ಖಾನೆ ಮುಜಿಬುರ್

ಮಸ್ತಿಜೊತೆ ಸೈತಾನ್
ಇರುವುದೈ ಮುಜಿಬುರ್
ಯಾವ ಕಾಲಕು ರಾತ್ರಿ
ಆಳಿಕೆಯು ಮುಜಿಬುರ್

ಗಾಂಧಿಯಂತೆಯೇ ನೀನು
ಇದ್ದಲ್ಲಿ ಮುಜಿಬುರ್
ಹೀಗಾಗುತಿರಲಿಲೇನೊ
ನಿನದಯ್ಯ ಮುಜಿಬುರ್

ಹೊತ್ತವನ ಮೇಲೆ ಹೆಣ
ಗೈದಂತೆ ಮುಜಿಬುರ್
ಬಂಗಾಲ ಮಾಡಿತೈ
ನಿನಗೀಗ ಮುಜಿಬುರ್
.

Close

ಎರಡು ತೆಂಗಿನ ಮರದುದ್ದದ ಮನುಷ್ಯ

ಎರಡು ತೆಂಗಿನ ಮರದುದ್ದದ ಮನುಷ್ಯ

ಎಂ ಎಸ್ ಕೆ ಪ್ರಭು

ಒಂದು ದಿನ ಬೆಳಗಿನ ಸುಮಾರು ಐದು ಗಂಟೆಯ ಸಮಯದಲ್ಲಿ ಅವನ ತಾಯಿ ಅದೇ ತಾನೆ ಹೊಳೆಯಲ್ಲಿ ಸ್ನಾನ ಮಾಡಿ ಚಳಿಯಲ್ಲಿ ನಡುಗುತ್ತಾ ಒದ್ದೆ ಬಟ್ಟೆಯುಟ್ಟು ನೀರಿ ನಲ್ಲಿ ತೊಯ್ದು ತೊಟ್ಟಿಕ್ಕುತ್ತಿದ್ದ ಉದ್ದವಾದ ಕೂದಲನ್ನು ಬೆನ್ನ ಮೇಲೆ ಹರಡಿಕೊಂಡು ಮನೆಗೆ ಬಂದು ಬಟ್ಟೆ ಬದಲಾಯಿಸಿ ಕಾಫಿ ಕುಡಿದು, ಅವಲಕ್ಕಿ ತಿಂದು ಎಲೆಯಡಿಕೆ ಅಗಿಯುತ್ತಾ ಅವನು ಮಲಗಿದ್ದ ಚಿಕ್ಕ ಮನೆಗೆ ಬಂದು ದೀಪ ಹಾಕಿದಾಗ ಅವನಿಗೆ ಎಚ್ಚರವಾಯಿತು. ಅವನು ಅಗಲವಾಗಿ ಕಣ್ಣು ಬಿಟ್ಟು ಹೊದಿಕೆಯನ್ನು ರಾಡಿಸಿ ಒದ್ದೆ ಒಂದೇ ಉಸಿರಿಗೆ ಜಿಗಿದು ಅವನ ಅಮ್ಮನ ಕೊರಳನ್ನು ತನ್ನ ತೋಳುಗಳಿಂದ ಬಿಗಿದಪ್ಪಿ ಅವಳ ಬೆನ್ನ ಮೇಲೆ ವಿಶಾಲವಾಗಿ ಹರಡಿದ್ದ ಒದ್ದೆ ಕೂದಲನ್ನು ತನ್ನ ಬೆರಳುಗಳಿಂದ ಹಿಂಡುತ್ತಾ “ಅಮ್ಮಾ ಹೆಂಗಸರೇಕೆ ಮುಟ್ಟಾಗುತ್ತಾರೆ ?” ಎಂದು ಕೇಳಿದಾಗ ಅವನ ಅಮ್ಮ ಅವನನ್ನು ಹಾಸಿಗೆಯ ಮೇಲೆ ದೂಡಿ ‘ಥ ಮುಂಡೇಗಂಡ, ಏನೇನೋ ಮಾತಾಡ್ತಾನೆ !” ಎಂದಾಗ ಅವನಿಗೆ ಆಶ್ಚರಕ್ಕಿಂತ ಹೆಚ್ಚಾಗಿ ಅವಮಾನವಾಗಿತ್ತು ಅವನಿಗೆ ಇದುವರೆಗೂ ಯಾವ ಪ್ರಶ್ನೆಗೂ ಸಮರ್ಪಕವಾದ ಉತ್ತರ ದೊರಕಿದ್ದಿಲ್ಲ. ತಿಳಿದವರೆಂದುಕೊಂಡವರನ್ನು ಕೇಳಿದಾಗ ಅವರಿಂದ ತೀರ ಅಸಮಾಧಾನಕರವಾದ ಉತ್ತರಗಳು ಮಾತ್ರ ಸಿಕ್ಕಿತ್ತು.
ಮತ್ತೊಮ್ಮೆ ಅವನ ಮೈ ಕೈಗೆಲ್ಲಾ ಕಜ್ಜಿ ಹತ್ತಿ, ಬೆರಳುಗಳ ಸಂದಿ, ತೊಡೆಸಂದಿಯೆಲ್ಲಾ ಹುಚ್ಚು ಹಿಡಿಸುವಷ್ಟು ಕಡಿತ ಆದಾಗ, ಡಾಕ್ಟರು ಕೊಟ್ಟ ಗಂಧಕದ ಮುಲಾಮ

ಪ್ರಯೋಜನವಾಗಲಿಲ್ಲವೆಂದು ಅವನ ತಂದೆ ನಾಟಿ ಔಷಧ ಪ್ರಯೋಗ ಮಾಡಲು ಊರಿನ ಸುಪ್ರಸಿದ್ಧ ನಾಟಿವೈದ್ಯ ಪ್ರವೀಣೆ ಕಾಳಿ ಎಂಬುವಳನ್ನು ಕೇಳಿಕೊಂಡಾಗ ಅವಳು ತೊಂಡೆಸೊಪ್ಪಿನ ರಸದ ಜೊತೆಗೆ ಮತ್ತೇನೇನೋ ಗಿಡಮೂಲಿಕೆಗಳ ರಸ ಬೆರೆಸಿ, ನೋಡಿದರೇ ವಾಂತಿ ಬರುವಂತಹ ಒಂದು ಬಗೆಯ ಹಸಿರು ದ್ರಾವಕವನ್ನು ಒಂದು ಕರಟ ದಲ್ಲಿ ತಂದು ಅವನನ್ನು ಹಿತ್ತಲಿಗೆ ಕರೆದುಕೊಂಡುಹೋಗಿ ಅಂಗಿ ಚೆಡ್ಡಿ ಬಿಚ್ಚಿಸಿ ಬುಂಡಗೆ ತುಳಸಿ ಕಟ್ಟೆಯ ಹತ್ತಿರ ಬಿಸಿಲಿನಲ್ಲಿ ನಿಲ್ಲಿಸಿ ಒಂದು ಕಾಗೆಗರಿಯಿಂದ ರಸವನ್ನು ಅವನ ಕಜ್ಜಿಯ ಮೇಲೆ ಹಚ್ಚುತ್ತಿದ್ದಾಗ ಉರಿ ಉರಿ ಎಂದು ಅವನು ತಕತಕನ ಕುಣಿಯ ಹತ್ತಿದಾಗ, ಕಾಳಿ ಅವನ ಬೆನ್ನು ಸವರಿ, ತಲೆಗೂದಲನ್ನು ನೇವರಿಸಿ ಅವನನ್ನು ಸಮಾ ಧಾನಗೊಳಿಸಿ ಕಾಗೆಗರಿಯನ್ನು ಮತ್ತೊಮ್ಮೆ ಕರಟದಲ್ಲಿ ಅದ್ದಿ ಅವನ ತೊಡೆಯ ಸಂದು ಗಳಿಗೆ ಸವರುವಾಗ ಅವನು ಹಿತವಾದ ನೇವರಿಕೆಯ ಅನುಭವದಿಂದ ಪುಳಕಿತನಾಗಿ, ಕಾಳಿಯ ತಲೆಯ ಮಧ್ಯದಲ್ಲಿ ಹರಿದಿದ್ದ ಬೈತಲೆಯ ಮೇಲೇ ದೃಷ್ಟಿ ನೆಟ್ಟು ಅವಳ ಕುತ್ತಿಗೆಯ ಮೇಲೆ ಕುಳಿತಿದ್ದ ಕೂದಲ ಗಂಟನ್ನು ಬಿಗಿಯಾಗಿ ಹಿಡಿದುಕೊಂಡಾಗ ಅವನ ಪ್ರಜ್ಞೆಯ ಪರಿಧಿಯಿಂದ ಹೊರಗಿದ್ದ ಅವನ ಗುಪ್ಯಾಂಗ ನಿಮಿರಿದಾಗ “ಇದೇಕೆ ಹೀಗಾ ಗುತ್ತೆ ?” ಎಂದು ಕಾಳಿಯನ್ನು ಕೇಳಿದಾಗ ಅವಳು ನಾಚಿಕೊಂಡು ಉತ್ತರ ಕೊಡದೆ ಅವನಿಗೆ ಮಾಡುತ್ತಿದ್ದ ಇಲಾಜನ್ನು ಅರ್ಧದಲ್ಲೇ ಕೈಬಿಟ್ಟು ಮನೆಗೆ ಹೊರಟು ಹೋಗಿ ದ್ದಳು. ಆಗ ಅವನಿಗೆ ಸುಮಾರು ಹದಿನಾಲ್ಕು ವರ್ಷ,
ಹಕ್ಕಿಗಳು ಆಕಾಶದಲ್ಲಿ ಹಾರಾಡುವಾಗ ಕೆಳಕ್ಕೆ ಏಕೆ ಬಿದ್ದು ಬಿಡುವುದಿಲ್ಲ ? ಹೊಟ್ಟೆ ಹಸಿ ದಾಗ ಏಕೆ ಅಸಾಧ್ಯ ಸಂಕಟವಾಗುತ್ತದೆ? ಮಕ್ಕಳು ಹೇಗೆ ಹುಟ್ಟುತ್ತಾರೆ ? ರಬ್ಬರ್ ಚೆಂಡನ್ನು ಗೋಡೆಗೆ ಎಸೆದಾಗ ಅದೇಕೆ ವಾಪಸು ಬರುತ್ತದೆ ? ಗುಂಡಗಿರುವ ಭೂಮಿಗೆ ಅಂಟಿಕೊಂಡಿರುವ ಸವಲುದ್ರದ ಮತ್ತು ನದಿ ಕೆರೆಗಳ ನೀರೇಕೆ ಕೆಳಕ್ಕೆ ಚೆಲ್ಲಿ ಹೋಗುವು ದಿಲ್ಲ ? -ಇತ್ಯಾದಿ ಹಲವಾರು ಪ್ರಶ್ನೆಗಳು ಅವನ ಬಾಲ್ಯಕಾಲದ ಬಿಡಿಸಲಾಗದ ಒಗಟು ಗಳಾಗಿದ್ದವು.
ವಯಸ್ಸಾದಂತೆ ಅವನು ಯುವಕನಾದ.
ಅವನ ಪ್ರಶ್ನೆಗಳ ಸ್ವರೂಪವೂ ಗಂಭೀರವಾದವು. ಗಹನವಾದ ತಾತ್ವಿಕ ಸಮಸ್ಯೆಗಳ ಬಗ್ಗೆ ಚಿಂತನೆ ಶುರು ಮಾಡಿದ, ಸೃಷ್ಟಿಯ ಪ್ರತಿಯೊಂದು ವಸ್ತುವೂ ಅವನಿಗೆ ಬಿಡಿಸಲಾಗದ ಒಗಟಾಯಿತು. ಯಾವುದರ ಸ್ವರೂಪವೂ ಸ್ವಭಾವವೂ ಅವನಿಗೆ ಅರ್ಥವಾಗದೆ, ಹಗಲು, ಸಂಜೆ, ರಾತ್ರಿ ಪ್ರಕೃತಿಯ ಚರಾಚರ ವಸ್ತುಗಳೆಲ್ಲದರ ಬಗ್ಗೆಯೂ ಅವನು ತನ್ನ ಸಂದೇಹ ಗಳನ್ನು ವ್ಯಕ್ತಪಡಿಸುವ ಪ್ರಶ್ನೆಗಳನ್ನು ಕೇಳತೊಡಗಿದ. ಒಮ್ಮೆ ಆ ಊರಿಗೆ ಬಂದ ಹರಿ

ಕಥೆ ದಾಸರೊಬ್ಬರು ಊರ ಜನರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಯಾವುದೋ ಭಗ ವನ್ನಾವು-ಸಂಕೀರ್ತನೆ ಮಾಡುತ್ತಿದ್ದಾಗ ನಮ್ಮ ಇವನು ಎದ್ದು ನಿಂತು, `ಆತ್ಮ ಎಂದ ರೇನು ?” ಎಂದು ಕಂಚಿನ ಗಂಟೆ ಹೊಡೆದಂತೆ ಪ್ರಶ್ನೆ ಕೇಳಿ ಇಡೀ ಭಕ್ತಸ್ತೋಮಕ್ಕೆ ಕ್ಷಣಕಾಲ ದಂಗುಬಡಿಸಿದ. ಅವನ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡಲಾರದೆ ದಾಸರು ಕ್ಷಣಕಾಲ ಪೆಚ್ಚಾಗಿ, ಮತ್ತೆ ಚೇತರಿಸಿಕೊಂಡು ತಮ್ಮ ವೃತ್ತಿಯ ಅನುಭವ ದಿಂದ ಪರಿಸ್ಥಿತಿಯನ್ನು ಗೆಲ್ಲಲು ಭಕ್ತ ನಚಿಕೇತ, ಭಕ್ತ ಪ್ರಹ್ಲಾದರ ಕತೆಗಳನ್ನು ಚುಟಕ ದಲ್ಲಿ ಹೇಳಿ ಮುಗಿಸಿ, ಅಂತಹ ಪ್ರಶ್ನೆಗಳನ್ನು ಕೇಳುವ ಅರ್ಹತೆ ನಮ್ಮಂತಹ ಕೀಳು ಮಾನವರಿಗಿಲ್ಲ ಎಂದು ಅಪ್ಪಣೆ ಕೊಡಿಸಿದಾಗ ಅವನು ದಾಸರ ಮುಂದಿನ ಕತೆಯನ್ನು ಕೇಳಲು ಇಷ್ಟವಿಲ್ಲದೆ ಮನೆಗೆ ವಾಪಸಾಗಿ, ಸೃಷ್ಟಿಯ ಬಗ್ಗೆ, ದೇವರ ಬಗ್ಗೆ, ಮನಸ್ಸಿನ ಬಗ್ಗೆ, ಚೇತನದ ಬಗ್ಗೆ, ಹುಟ್ಟಿನ ಬಗ್ಗೆ, ಸಾವಿನ ಬಗ್ಗೆ, ಕನಸಿನ ಬಗ್ಗೆ, ಸ್ವಭಾವದ ಬಗ್ಗೆ, ವಾತಾವರಣದ ಬಗ್ಗೆ, ಮುಟ್ಟಿನ ಬಗ್ಗೆ, ಅಮ್ಮನ ಬಗ್ಗೆ, ಕಾಳಿಯ ಬಗ್ಗೆ, ಕಜ್ಜಿಯ ಬಗ್ಗೆ ಹೊಸ ಹೊಸ ಸಂದೇಹಗಳನ್ನು ವ್ಯಕ್ತಪಡಿಸುವ ಹೊಸ ಹೊಸ ಮಲ ಪ್ರಶ್ನೆಗಳನ್ನು ಹೊಸೆಯುತ್ತಾ ಬೆಳಕು ಹರಿಯುವವರೆಗೂ ಅಗಲವಾಗಿ ಕಣ್ಣು ಬಿಟ್ಟುಕೊಂಡು ಹಾಸಿ ಗೆಯ ಮೇಲೆ ಮಲಗಿದ್ದ.
ಅವನ ಜಿಜ್ಞಾಸೆಗಳೆಲ್ಲಾ ಕೊನೆಗೆ ಒಂದು ಸೂತ್ರರೂಪದ ಪ್ರಶ್ನೆಯಾಗುತ್ತಿತ್ತು, ಇಂತಹ ಸಾವಿರಾರು ಲಕ್ಷಾಂತರ ಕೋಟ್ಯಾಂತರ ಪ್ರಶ್ನೆಗಳು ಅವನನ್ನು ಕಾಡಿ ತಿನ್ನುತ್ತಿತ್ತು. ಒಂದು ದಿನ ಈ ಎಲ್ಲಾ ಪ್ರಶ್ನೆಗಳನ್ನೂ ಅವನು ಕೂತುಕೊಂಡು ಪಟ್ಟಿ ಮಾಡಿದ. ಅವುಗಳಲ್ಲಿ ಕೆಲವು ಪ್ರಶ್ನೆಗಳು ವಿಧಿ ಇಲ್ಲದೆ ಪುನಃ ಪುನಃ ಬರುತ್ತಿರುವುದನ್ನು ಕಂಡು ಅವನು ಮತ್ತೂ ಶ್ರಮವಹಿಸಿ ಅಂತಹ ಪ್ರಶ್ನೆಗಳನ್ನು ಕ್ರೋಢೀಕರಿಸಿ ಒಂದೇ ಪ್ರಶ್ನೆಯನ್ನಾಗಿ ಪರಿವರ್ತಿಸಿ ತನ್ನ ಸಂದೇಹವನ್ನು ಸ್ಥಿರಪಡಿಸಿಕೊಂಡ. ಆದರೂ ಅವನ ಪ್ರಶ್ನೆಗಳ ಪಟ್ಟಿಯ ಉದ್ದವೇನೂ ಕಡಿಮೆಯಾಗಲಿಲ್ಲ. ನೂರಾರು ದಸ್ತು ಕಾಗದವನ್ನು ತಿಂದು ಹಾಕಿತ್ತು, ಅವನು ಧೈರ್ಯಗುಂದಲಿಲ್ಲ. ಕಾಡುವ ಪ್ರಶ್ನೆಗಳಿಗೆ ಉತ್ತರ ಸಿಗದ ಅತೃಪ್ತಿಯ ಜತೆಗೇ ಹೊಸ ಹೊಸ ಪ್ರಶ್ನೆಗಳು ಮಳೆಗಾಲದ ನಾಯಿಕೊಡೆಗಳಂತೆ ಕ್ಷಣ ಕ್ಷಣಕ್ಕೂ ಉದ್ಭವಿಸಿ ಅವನ ಪಟ್ಟಿಯನ್ನು ಹನುಮಂತನ ಬಾಲವನ್ನಾಗಿ ಮಾಡಿತ್ತು.
ಮತ್ತೊಂದು ದಿನ ಅವನಿಗೆ ಇದ್ದಕ್ಕಿದ್ದಂತೆಯೇ ತನ್ನ ಎಲ್ಲಾ ಕೋಟ್ಯಾಂತರ ಸಮಸ್ಯೆ ಗಳು ಮೂಲತಃ ಒಂದೇ ಸಮಸ್ಯೆಯಲ್ಲವೆ ಎಂಬ ಕ್ರಾಂತಿಕಾರಕ ಆಲೋಚನೆ ಹೊಳೆಯಿತು. ಮತ್ತೊಮ್ಮೆ ಎಲ್ಲಾ ಪ್ರಶ್ನೆಗಳನ್ನು ಓದಿ ಪ್ರತಿಯೊಂದು ಪ್ರತ್ಯೇಕ ಪ್ರಶ್ನೆಯ ಸಾರಾಂಶವೂ ಒಂದೇ ಆಗಿರುವುದೆಂಬ ರಹಸ್ಯವನ್ನು ಕಂಡುಹಿಡಿದುಕೊಂಡು ತನ್ನ ವಿಚಾರಪಥದಲ್ಲಾದ ಪ್ರಗತಿಯ ಮತ್ತಿನಲ್ಲಿ ಅನೇಕ ದಿನಗಳವರೆಗೆ ಬೆರಗಾಗಿದ್ದ, ಆ ಸಾರಾಂಶವನ್ನೆಲ್ಲಾ

ಕ್ರೋಢೀಕರಿಸಿ ಒಂದು ಅತ್ಯಂತ ಮುಖ್ಯವಾದ, ಅತ್ಯಂತ ಗಹನವಾದ, ಅತ್ಯಂತ ಅರ್ಥ ಪೂರ್ಣವಾದ, ಅತ್ಯಂತ ಸಾರ್ವತ್ರಿಕವಾದ, ಸಾರ್ವಲೌಕಿಕವಾದ, ಸರ್ವವ್ಯಾಪಿಯಾದ, ಸರ್ವೆಕ್ಯವಾದ ಸ್ಥಳ, ಕಾಲ, ಕ್ರಿಯೆಕ್ಯವಾದ, ಅಖಂಡವಾದ ಒಂದು ನಿಶ್ಚಿಷ್ಟವಾದ ಬೀಜ ಪ್ರಶ್ನೆಯನ್ನು ರೂಪಿಸಲು ಅನೇಕ ಹಗಲು ರಾತ್ರಿಗಳ ದುಡಿಮೆಯನ್ನು ವ್ಯಯಮಾಡಿದ.
ಎಷ್ಟೋ ವರ್ಷಗಳ ನಂತರ ಅಂತಹ ಒಂದು ಬೀಜಪ್ರಶ್ನೆ ಸಿದ್ಧವಾಯಿತು. ಅದನ್ನು ಕಾಗದದ ಮೇಲೆ ಬರೆದು ಖಚಿತಪಡಿಸಿಕೊಳ್ಳಲು ಅನೇಕ ದಿನಗಳನ್ನೇ ಮುಡಿಪಾಗಿಡ ಬೇಕಾಯಿತು. ಕಡೆಗೊಂದು ದಿನ ಆ ಪ್ರಶ್ನೆ ಭಾಷೆಯಲ್ಲಿ ವ್ಯಕ್ತಗೊಂಡು ಕರಿ ಮಸಿಯಿಂದ ಬಿಳಿ ಕಾಗದದ ಮೇಲೆ ಮೂಡಿಬಂತು, ಆ ಪ್ರಶ್ನೆ ಎಷ್ಟು ಉದ್ದವಿತ್ತೆಂದರೆ ಅದನ್ನು ಬರೆಯಲು ನೂರಾರು ಟನ್ ಕಾಗದ ಬೇಕಾಯಿತು. ಅದೆಷ್ಟೋ ಕಿಲೋ ಲೀಟರ್ ತಾಯಿ ಬೇಕಾಯಿತು. ಅದೆಷ್ಟೋ ಹಾರ್ಸ್ ಪವರ್ ಶ್ರಮ ವಹಿಸಬೇಕಾಯಿತು, ” ಅವನು,
ತನ್ನ ಮೂಲಭೂತ ಪ್ರಶ್ನೆಯನ್ನು ಕಂಡುಕಂಡವರಿಗೆಲ್ಲಾ ವಿವರಿಸಿ ಹೇಳುವ ಚಟ ಹತ್ತಿತು, ಬಹುಶಃ ಯಾರಾದರೂ ಅವನ ಪ್ರಶ್ನೆಗೆ ಸಮರ್ಪಕವಾದ ಉತ್ತರ ಕೊಡ ಬಹುದೆಂಬ ಆಸೆ ಅವನನ್ನು ಬಿಡದೆ ಕಾಡುತ್ತಿತ್ತು, ಆದರೆ ಅವನು ಪ್ರಶ್ನೆಯನ್ನು
ಯಾರೆದುರಿಗೂ ಪೂರ್ತಿ ಓದಿ ಹೇಳುವ ಮೊದಲೇ ಅವರು ಅಲ್ಲಿಂದ ಕಾಲುಕೀಳು ತಿದ್ದರು. ಯಾಕೆಂದರೆ, ಆ ಪ್ರಶ್ನೆ ಎಷ್ಟು ದೊಡ್ಡದಿತ್ತೆಂದರೆ, ಅದನ್ನು ಒಮ್ಮೆ ಶುರು ಮಾಡಿ ಒಂದೇ ಉಸಿರಿಗೆ ಓದುತ್ತಾ ಹೋದರೂ, ಪ್ರಶ್ನಾರ್ಥಕ ಚಿಹ್ನೆ ಬರುವ ವೇಳೆಗೆ ಅನೇಕ ತಿಂಗಳು, ಬಹುಶಃ ವರ್ಷಗಳೇ ಬೇಕಾಗುತ್ತಿತ್ತು, ಆದರೆ ಈ ಅವಧಿಯನ್ನು ಖಚಿತವಾಗಿ ಹೇಳಲು ಬರುವಂತಿಲ್ಲ. ಯಾಕೆಂದರೆ ಅವನು ಎಂದೂ ಯಾರ ಮುಂದ ಅವನ ಬೀಜಪ್ರಶ್ನೆಯನ್ನು ಪೂರ್ತಿ ಇರಲಿ, ನೂರನೇ ಒಂದು ಭಾಗ, ಅಥವಾ ಸಾವಿ ರದ ಒಂದು ಭಾಗ ಕೂಡ ಓದಲು ಸಾಧ್ಯವಾಗಿದ್ದಿಲ್ಲ. ಅವನು ಓದಲು ಶುರುಮಾಡಿದ ನಂತರ ಅವನ ಮಾತನ್ನು ಹತ್ತು ನಿಮಿಷ ಕೇಳಿದವರೇ ಹೆಚ್ಚು ಮಂದಿ. ಹದಿನೈದು ನಿಮಿಷ ಕೇಳಿದವರು ಸುಮಾರು ನೂರನೇ ಒಂದು ಭಾಗ, ಇಪ್ಪತ್ತು ನಿಮಿಷ ಕೇಳಿ ದವರು ಸಾವಿರದ ಒಂದು ಭಾಗ, ಅದಕ್ಕೂ ಹೆಚ್ಚು ಕಾಲ ಕೇಳಿದವರು-ಎಂದರೆ ಸುಮಾರು ಅರ್ಧಗಂಟೆ ಅವನು ಪ್ರಶ್ನೆ ಓದುವುದನ್ನು ಕೇಳಿದವರು -ಒಬ್ಬನೋ ಅಥವಾ ಇಬ್ಬರೋ, ಎಂದರೆ ಸುಮಾರು, ಕೋಟಿಯ ಒಂದು ಭಾಗ.
ಹೀಗಾಗಿ ಅವನಿಗೆ ತನ್ನ ಪ್ರಶ್ನೆಗೆ ಉತ್ತರ ಸಿಕ್ಕುವುದಿರಲಿ, ಪ್ರಶ್ನೆಯನ್ನು ಅರ್ಥಮಾಡಿ ಕೊಳ್ಳುವವರೇ ಗತಿ ಇಲ್ಲದಂತಾಯಿತ್ತು,

ಅವನು ಚಿಕ್ಕಂದಿನಲ್ಲಿ ಕೇಳಿದ್ದ ಒಂದು ಸಣ್ಣ ಕತೆ ಅವನಿಗೆ ಒಂದು ರಾತ್ರಿ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದಾಗ ನೆನಪಿಗೆ ಬಂತು. ಮಾರ೮ ಕ್ಲಾಸಿನಲ್ಲಿ ಮೇಷ್ಟರು ಹೇಳಿದ್ದ ಸಾಕ್ರಟೀಸನ ಕತೆ, ಸಾಕ್ರಟೀಸನಿಗೆ ಒಬ್ಬ ದೇವತೆ ಕನಸಿನಲ್ಲಿ ಬಂದು ನಿನಗೇನು ವರ ಬೇಕೆಂದು ಕೇಳಿದಾಗ ಅವನು ಅಷ್ಟೆಶ್ವರ ಶತಾಯಸ್ಸು ಆರೋಗ್ಯಭಾಗ್ಯಗಳನ್ನು ಕೇಳಿಕೊಳ್ಳದೆ, ಸೃಷ್ಟಿಯಲ್ಲಿನ ಪ್ರತಿಯೊಂದು ಚರಾಚರ ವಸ್ತುಗಳ ನಿಜವಾದ ಅರಿವಿ ಗಾಗಿ ದೇವತೆಯನ್ನು ಪ್ರಾರ್ಥಿಸಿದನಂತೆ, ಆಗ ಆ ಕನಸಿನ ದೇವತೆ ಅವನ ಜ್ಞಾನ ದಾಹಕ್ಕೆ ಮೆಚ್ಚಿ, ಪ್ರಪಂಚದಲ್ಲಿನ ಇತರರೆಲ್ಲರಿಗಿಂತಲೂ ನೀನು ಹೆಚ್ಚು ಬುದ್ದಿವಂತ ನಾಗರಿ, ಪ್ರತಿಯೊಂದು ವಸ್ತುವಿನ ಗುಣ ಸ್ವಭಾವಗಳು ನಿನಗೆ ಸರಿಯಾಗಿ ಅರ್ಥವಾಗಲಿ ಎಂದು ಹರಸಿದಳಂತೆ, ಅದರಂತೆ ಅವನು ಮನುಷ್ಯರಲ್ಲೆಲ್ಲಾ ಅದ್ವಿತೀಯ ಮೇಧಾವಿ ಯಾದನಂತೆ. ಈ ಕತೆ ಎಷ್ಟರ ಮಟ್ಟಿಗೆ ಸತ್ಯವೋ ಅವನಿಗೆ ತಿಳಿಯಲಿಲ್ಲ. ಆದರೆ ಬಾಲ್ಯ ದಲ್ಲಿ ಕೇಳಿದ್ದ ಕತೆ ಈಗ ಒಮ್ಮೆಲೇ ಜ್ಞಾಪಕಕ್ಕೆ ಬಂದು ತಾನು ಕೂಡ ಸಾಕ್ರಟೀಸ್‌ನಂತೆ ಮೇಧಾವಿತನವನ್ನು ಪಡೆದರೆ ತನ್ನನ್ನು ಕಿತ್ತು ತಿನ್ನುತ್ತಿರುವ ಪ್ರಶ್ನೆಗೆ ಪರಿಹಾರ ಸಿಗ ಬಹುದೆಂಬ ಯೋಚನೆ ಹುಟ್ಟಿತು.
ಈ ಆಲೋಚನೆ ತಲೆಯಲ್ಲಿ ಸುಳಿದ ತಕ್ಷಣವೇ ಹಾಸಿಗೆಯಿಂದ ಎದ್ದು ತನ್ನ ಪ್ರಶ್ನೆಯ ಅಗಾಧವಾದ ಹೊರೆಯನ್ನು ತಲೆಯ ಮೇಲಿಟ್ಟುಕೊಂಡು ಕತ್ತಲಲ್ಲಿ ಮನೆಯನ್ನು ಬಿಟ್ಟು ತನ್ನನ್ನು ಕಾಪಾಡುವ ಜ್ಞಾನದೇವತೆಯನ್ನರಸುತ್ತಾ ವಿಶಾಲ ಪ್ರಪಂಚದಲ್ಲಿ ಕರಗಿ ಲೀನವಾದ, ಅವನನ್ನು ಆ ರಾತ್ರಿಯ ಕತ್ತಲಿನಲ್ಲಿ ಯಾರಾದರೂ ನೋಡಿದ್ದರೆ ಅವನು ಎರಡು ತೆಂಗಿನ ಮರದುದ್ದ ಕಾಣಿಸುತ್ತಿದ್ದ, ಯಾಕೆಂದರೆ ಅವನ ತಲೆಯ ಮೇಲಿನ ಕಡತ ಅಷ್ಟೊಂದು ದೊಡ್ಡದಾಗಿತ್ತು.
ಎಷ್ಟೋ ವರ್ಷಗಳು ಅವನು ಪತ್ತೆ ಇಲ್ಲದಂತೆ ತಪ್ಪಿಸಿಕೊಂಡಿದ್ದ. ಊರಿನ ಜನರೆಲ್ಲಾ ಅವನನ್ನು ಸುಲಭವಾಗಿ ಮರೆತರು. ಅವನು ಹೋದ ಮೇಲೆ ಕೆಲವು ದಿನಗಳು ಮಾತ್ರ ಜನ ಅವನ ಗೈರುಹಾಜರಿಯ ಬಗ್ಗೆ ಕೊಂಕು ಮಾತನಾಡಿ ಹಾಸ್ಯ ಮಾಡಿಕೊಂಡು ನಗು ತಿದ್ದರು. ಅವನ ಮನೆಯವರು ಕೂಡ ಅವನ ಬಗ್ಗೆ ಸ್ವಲ್ಪ ದಿನ ಚಿಂತಿಸಿದರೂ ಅವನು ಎಲ್ಲಿಗೆ ಹೋಗಿದ್ದಾನೆ ಎಂಬ ಬಗ್ಗೆ, ಯಾಕೆ ಹೋದ ಎಂಬ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಳ್ಳದೆ ಸುಮ್ಮನಾಗಿ ಬಿಟ್ಟರು. ಶಾಸ್ತ್ರಕ್ಕೆ ಕೂಡ ಪೋಲಿಸ್ ಕಂಪ್ಲೇಂಟ್ ಕೊಡಲಿಲ್ಲ. ಏನೇನೋ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ಅರ್ಥವಾಗದ ಮಾತುಗಳನ್ನಾಡಿ ಬೋರ್ ಮಾಡುವ ಒಬ್ಬ ಆಸಾಮಿ ತಮ್ಮ ವಂಧ್ಯದಲ್ಲಿ ಇಲ್ಲ ಎಂಬ ಸಂಗತಿ ಮನೆಯವರಿಗೆ ತೀರಾ ನೆಮ್ಮದಿಯ ಮಾತಾಗಿತ್ತೆಂಬುದನ್ನು ಅವರು ಸಾಮಾಜಿಕ ಶಿಷ್ಟಾಚಾರದ ಕಾರಣ ಗಳಿಂದಾಗಿ ಬಹಿರಂಗವಾಗಿ ವ್ಯಕ್ತಮಾಡುತ್ತಿರಲಿಲ್ಲ, ಅಷ್ಟೆ. ತಮ್ಮ ದೈನಂದಿನ ಆಗ

ಹೋಗುಗಳಲ್ಲಿ, ಲಾಭನಷ್ಟಗಳಲ್ಲಿ, ಸಮಷ್ಟಿ ಯ ವ್ಯವಹಾರಗಳಲ್ಲಿ ಪಾಲುಗೊಳ್ಳದೆ ಯಾವಾಗಲೂ ಕೊಳೆ ಪಂಚೆಯುಟ್ಟು ಕೈಬೆರಳುಗಳ ಸಂದಿನ ಕಜ್ಜಿ ಯನ್ನು ತುರಿಸಿ ಕೊಳ್ಳುತ್ತಾ, ಮಣ್ಣಿನಲ್ಲಿ, ನೀರಿನಲ್ಲಿ, ಆಕಾಶದಲ್ಲಿ, ಮನೆಯಲ್ಲಿ, ಹುಟ್ಟಿನಲ್ಲಿ, ಸ್ಮಶಾನ ದಲ್ಲಿ, ಹಸಿವಿನಲ್ಲಿ, ಬೀದಿಯಲ್ಲಿ, ಗುಡಿಯಲ್ಲಿ ಎಲ್ಲೆಂದರಲ್ಲಿ ಪ್ರಶ್ನೆಗಳನ್ನು ಕೆದಕುತ್ತಾ, ಯಾರಿಗೂ ಅರ್ಥವಾಗದಂತೆ ಮಾತಾಡುವ ಸಮಾಜದ ಒಬ್ಬ ಸದಸ್ಯ ಕಣ್ಮರೆಯಾಗಿ ಧುದನ್ನು ಜನ ಬಹುಬೇಗ ಮರೆತರು, ನೆಮ್ಮದಿಯಿಂದ ಬದುಕುತ್ತಾ ಇದ್ದರು ತಮ್ಮ ಕಷ್ಟ, ನೋವು, ಅವಮಾನ, ನಷ್ಟಗಳ ಮಧ್ಯ ಸುಖ, ನಲಿವು, ಸಂತೋಷ, ಜಂಭ, ಲಾಭಗಳನ್ನು ಶ್ರಮವಹಿಸಿ ಗುರುತಿಸಿ, ಒಟ್ಟಿನಲ್ಲಿ ತಮ್ಮ ನೆಮ್ಮದಿಯನ್ನು ಕಾಪಾಡಿಕೊಂಡು ಬರುತ್ತಿದ್ದರು.
ಒಂದು ದಿನ ಅವನು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ. ಎರಡು ತೆಂಗಿನ ಮರದ ಎತ್ತರದ ವ್ಯಕ್ತಿ ಬರುತ್ತಿರುವುದನ್ನು ಜನ ದೂರದಿಂದಲೇ ಗುರುತಿಸಿದರು. ಆಶ್ಚರದ ಸುದ್ದಿ ಒಬ್ಬರಿಂದೊಬ್ಬರಿಗೆ ಹರಡಿ ಊರಿಗೆ ಊರೇ ಅವನನ್ನು ನೋಡಲು ಘೋರಾಯಿಸಿತು, ತಲೆಯ ಮೇಲಿನ ಕಾಗದದ ಭಾರವನ್ನು ಮುಖದ ಮೇಲೆ ಸ್ವಲ್ಪವೂ ತೋರಿಸದೆ ಅವನು ಎರಡೂ ಕೈಗಳನ್ನು ಬೀಸಿಕೊಂಡು ಸಲೀಸಾಗಿ ನಡೆದು ಬರುತ್ತಿದ್ದ. ಅವನ ಹತ್ತಿರ ಬಂದಂತೆ, ಆಳಿನ ಉದ್ದ ಕೇವಲ ಐದೂವರೆ ಅಡಿ, ಮಿಕ್ಕ ಮೇಲಿನ ಎತ್ತರ ಅವನ ಪ್ರಶ್ನೆಯನ್ನು ದಾಖಲಿಸಿದ್ದ ಕಡತದ್ದೆಂದು ಊಹಿಸಲು ಜನರಿಗೆ ತುಂಬಾ ಕಾಲ ‘ಹಿಡಿಯಲಿಲ್ಲ.
ಜನರ ಕುತೂಹಲವನ್ನು ತಣಿಸಲು ಅವನು ಒಂದು ಸಭೆ ಸೇರಿಸಿದ ಸಭೆ ಊರ ಮಧ್ಯದ ಆಂಜನೇಯನ ದೇವಸ್ಥಾನದ ಮುಂದಿನ ಬಯಲಿನಲ್ಲಿ ನಡೆಯಿತು. ಯಾಕೆಂದರೆ ಅವನು ಯಾವ ಮನೆಯ ಒಳಗೂ ಬರುವಂತಿರಲಿಲ್ಲ. ಅವನ ತಲೆಯ ಮೇಲಿನ ಸರಕು ಊರಿನ ಯಾವುದೇ ಮನೆಯ ಬಾಗಿಲಿಗಿಂತಲೂ ಎತ್ತರವಾಗಿತ್ತು, ಮತ್ತು ಅವನು ಅದನ್ನು ಕೆಳ ಕ್ಕಿಳಿಸದೆ ಪೇಟದಂತೆ ಯಾವಾಗಲೂ ಧರಿಸಿರುತ್ತಿದ್ದ. ಜನ ಸಮೂಹದ ಮಧ್ಯೆ ಅವನು ಕತುಕೊಂಡು ಮಾತಾಡುವಾಗ ಎಲ್ಲರೂ ಅವನನ್ನು ನೋಡಬಹುದಾಗಿತ್ತು ಎಂದರೆ, ಕಡೇಪಕ್ಷ ಅವನ ಪೇಟದ ಹೊರೆಯನ್ನಾದರೂ ನೋಡಬಹುದಾಗಿತ್ತು. ಅದನ್ನು ನೋಡಿದರೂ ಅವನನ್ನೇ ನೋಡಿದ ಭಾವನೆ ಜನರಲ್ಲುಂಟಾಗುತ್ತಿದ್ದರಿಂದ, ಯಾರಿಗೂ
ಅವನನ್ನು ನೋಡಲಾಗಲಿಲ್ಲ ಎಂಬ ನಿರಾಶೆಯಾಗಲಿಲ್ಲ. ಅವನ ಮಾತುಗಳೆಲ್ಲಾ ಅದನ್ನು ಕೇಳುತ್ತಿದ್ದವರಿಗೆ ಅವನು ಕಾಣಿಸಿಕೊಳ್ಳುತ್ತಿದ್ದ ಅವನ ದೇಹದ, ಪೇಟದ ವಿವಿಧ ಭಾಗ ಗಳಿಂದ ಬರುತ್ತಿರುವಂತೆ ಭಾಸವಾಗುತ್ತಿತ್ತು. ಹೀಗಾಗಿ ಅವನ ಪಕ್ಕದಲ್ಲಿ ಕುಳಿತು ಅವನ ಕಿವಿಯನ್ನು ಮಾತ್ರ ನೋಡುತ್ತಿದ್ದವರಿಗೆ ಮಾತುಗಳು ಅವನ ಕಿವಿಯಿಂದ ಬರುತ್ತಿರಃ

ವಂತೆ ತೋರುತ್ತಿತ್ತು. ತುಂಬಾ ದೂರ ಕುಳಿತು ಕಾಗದದ ಕಂತೆಯ ಪೇಟದ ಶಿಖರವನ್ನು ನೋಡುತ್ತಿದ್ದವರಿಗೆ ಅವನ ಮಾತುಗಳು ಎತ್ತರದ ಲೌಡ್ ಸ್ಪೀಕರ್‌ನಿಂದ ಬರುತ್ತಿರು
ವಂತೆ ಕೇಳಿಬರುತ್ತಿತ್ತು,
ಅವನು ಹೇಳಿದ: “ನಾನು ನೂರಾರು ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿ ಬಂದಿದ್ದೇನೆ. ಹಿಮಾಲಯ, ಕಾರಾಕೊರವಮ್, ಆಂಡೀಸ್, ಆಲ್ಫ್, ಒಲಿಂಪಸ್, ಪಿರಸ್ ಮುಂತಾದ ಪ್ರಪಂಚದ ಎಲ್ಲಾ ಪರ್ವತಗಳ ತಪ್ಪಲಿನಲ್ಲಿ ನಿರ್ದಿಷ್ಟಕಾಲ ಸಾಧನೆ ತಪಸ್ಸುಗಳನ್ನು ಆಚರಿಸಿ, ಜಗತ್ತಿನ ಸೃಷ್ಟಿಯ ಮೂಲ ರಹಸ್ಯದ ಅರಿವಿಗಾಗಿ ಪ್ರಾಣ ತೆತ್ತಿದ್ದೇನೆ, ನೀವು ನನ್ನ ತಲೆಯ ಮೇಲೆ ನೋಡುತ್ತಿರುವುದು ಪೇಟ ಅಲ್ಲ. ನಾನು ಅದನ್ನು ಅಲಂಕಾರಕ್ಕಾಗಿ ಧರಿಸಿಲ್ಲ. ಅದು ನನ್ನ ಬೀಜಪ್ರಶ್ನೆ, ಆ ಪ್ರಶ್ನೆಯನ್ನೇ ಚಿಂತಿಸುತ್ತಾ, ಅದಕ್ಕೆ ಉತ್ತರ ಹುಡುಕುತ್ತಾ ಇಷ್ಟು ದಿನ ಕಾಲ ಕಳೆದಿದ್ದೇನೆ. ಹೀಗಾಗಿ ನಾನೇ ಆ ಪ್ರಶ್ನೆಯಾಗಿದ್ದೇನೆ. ನನ್ನ ತಲೆಯ ಮೇಲಿರುವ ಪ್ರಶ್ನೆಯ ಉದ್ಧವೇ ನನ್ನ ಎತ್ತರ, ಇದನ್ನು ನಾನು ಕೆಳಕ್ಕೆ ಇಳಿಸಲಾರೆ, ಯಾಕೆಂದರೆ ಈ ಪ್ರಶ್ನೆಯ ಬುಡ ನನ್ನ ತಲೆಗೆ ಬೆಸುಗೆ ಹೊಂದಿದೆ. ಮತ್ತೊಂದು ಮುಖ್ಯ ವಿಚಾರವೆಂದರೆ, ನಾನು ನನ್ನ ಪ್ರಶ್ನೆಗೆ ಉತ್ತರ ಕಂಡುಹಿಡಿದುಕೊಳ್ಳುವ ಅತಿ ಮುಖ್ಯ ಘಟ್ಟದಲ್ಲಿದ್ದೇನೆ. ಇಷ್ಟೊಂದು ವರ್ಷಗಳ ತಪಸ್ಸಿನ ಫಲವಾಗಿ ನನಗೆ ಉತ್ತರ ಎಲ್ಲಿ ದೊರಕುತ್ತದೆಂಬ ಬಗ್ಗೆ ಮಾಹಿತಿ ದೊರೆತಿದೆ. ನಾನು ನನ್ನ ಪ್ರಶ್ನೆಯನ್ನು ಬರೆದು ಅಲ್ಲಿಗೆ ಕಳಿಸಿದರೆ ಸಾಕು, ಉತ್ತರ ಖಂಡಿತಾ ದೊರಕುತ್ತದೆ. ನಾನು ನನ್ನ ಬದುಕನ್ನು ವ್ಯರ್ಥ ಮಾಡಿಕೊಂಡಿಲ್ಲವೆಂಬ ತೃಪ್ತಿಯ ಅನುಭವ ಸಿಗುವುದು ನನಗಾಗಲೇ ಕಾಣಿಸುತ್ತಿದೆ.”
ಯಾರೋ ಒಬ್ಬ ದೂರದಿಂದಕೂಗಿ ಕೇಳಿದ: “ನಿಮ್ಮ ಪ್ರಶ್ನೆಗೆ ಉತ್ತರ ಎಲ್ಲಿ ದೊರ ಕು?” ಅವನು ತನ್ನ ಶರಟಿನ ಜೇಬಿಗೆ ಕೈಹಾಕಿ ಮಡಿಸಿದ್ದ ಒಂದು ಚೂರು ಕಾಗದ ವನ್ನು ತೆಗೆದು ಮೇಲೆತ್ತಿ ಹಿಡಿದು ಎಲ್ಲರಿಗೂ ತೋರಿಸಿದ. “ಇಗೋ ಇಲ್ಲಿದೆ ನೋಡಿ ನನ್ನ ತಪಸ್ಸಿನ ಫಲ !”
ಎಲ್ಲರೂ ಬೆರಗಾದರು, ಅವನ ಸಾಧನೆಯ ಬಗ್ಗೆ ವೆಂಚ್ಚುಗೆ ವ್ಯಕ್ತಪಡಿಸಿದರು, ಶಾಭಾಸ್ ಎಂದರು. ಭಲೇ ಎಂದರು. ಮನೆಗಳಿಗೆ ಹಿಂದಿರುಗಿದರು.
ಅವನು ಅದೇ ಬಯಲಿನಲ್ಲಿ ಕುಳಿತು ತನ್ನ ಪ್ರಶ್ನೆಯನ್ನು ವಂಂದು ಪ್ರತಿ ಮಾಡಿ ಕೆಲವು ದಿನಗಳ ನಂತರ ತಾನು ತಪಸ್ಸಿನ ಫಲವಾಗಿ ಪಡೆದಿದ್ದ ವಿಳಾಸಕ್ಕೆ ಅಂಚೆ ಮೂಲಕ ಕಳಿಸಿದ, ಅಂಚೆ ಕಚೇರಿಯಲ್ಲಿ ಆ ವಿಳಾಸವನ್ನು ನೋಡಿ ಗುಮಾಸ್ತ್ರ ಅದನ್ನು ಕಳಿಸುವ

ಹೊಣೆಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಇಂತಹ ವಿಳಾಸ ಇಲ್ಲವೇ ಇಲ್ಲವೆಂದು ವಾದಿಸಿದ. ಆದರೆ ಅದಕ್ಕೆ ತಗಲುವ ಅಂಚೆವೆಚ್ಚವನ್ನು ಸಲ್ಲಿಸಿ ಸ್ಟಾಂಪುಗಳನ್ನು ಕಾಗದದ ಕಟ್ಟಿನ ಮೇಲೆ, ವಿಳಾಸವನ್ನು ಬರೆದಿರುವ ಜಾಗವನ್ನು ಬಿಟ್ಟು ಬೇರೆಲ್ಲಾ ಕಡೆ ಅಂಟಿಸಿ ದುದರಿಂದ ಕಡೆಗೆ ಅವನು ಒಪ್ಪಿಕೊಳ್ಳಲೇ ಬೇಕಾಯಿತು. ಅಂತೂ ಅದು ಅವನ ಕೈ ಬಿಟ್ಟು ಹೋಯಿತು, ವಂಂಂದೇನಾದರೆ ತನಗೇನಂತೆ, ಅದು ವಿಳಾಸಕ್ಕೆ ತಲಪಲಿಲ್ಲ ಎಂಬ ದೂರು ಮಾತ್ರ ಕೊಡಬೇಡಿ, ಎಂದು ಎಚ್ಚರಿಕೆ ಕೊಟ್ಟ, ಅಂಚೆ ಗುಮಾಸ್ತ್ರ,
ತನ್ನ ಪತ್ರಕ್ಕೆ ಉತ್ತರ ನಿರೀಕ್ಷಿಸುತ್ತಾ ಎರಡು ತೆಂಗಿನ ಮರದುದ್ದದ ಅವನು ಕಾದರಿ ಕುಳಿತ. ದಿನಾ ಬೆಳಿಗ್ಗೆ ಅಂಚೆರೈಲು ಬಂದ ತಕ್ಷಣ ರೈಲು ನಿಲ್ದಾಣಕ್ಕೆ ಅಂಚೆ ಗುಮಾಸ್ತನ ಜೊತೆ ಹೋಗಿ ಅವನು ತರುವ ಚೀಲವನ್ನೇ ನೋಡುತ್ತಾ ಅಂಚೆಕಚೇರಿಗೆ ಬರುತ್ತಿದ್ದ, ಅಲ್ಲಿ ಗುಮಾಸ್ತ್ರ ಚೀಲದ ಅರಗಿನ ಮುದ್ರೆಯನ್ನು ಒಡೆದು ಒಳಗಿದ್ದ ಕಾಗದಗಳನ್ನೆಲ್ಲಾ ತನ್ನ ಮೇಜಿನ ಮೇಲೆ ಸುರಿದು ಅವುಗಳ ಮೇಲೆ ಟಪ್ ಟಪ್ ಎಂದು ತಾರೀಕಿನ ಮಿಯನ್ನೂ, ಪ್ರತಿಯೊಂದೂ ಕಾಗದದ ಮೇಲಿದ್ದ ವಿಳಾಸವನ್ನು ಗಟ್ಟಿಯಾಗಿ ಓದುತ್ತಿದ್ಧ. ಅವನ ಹೆಸರು ಕೂಗಿದ ಕೂಡಲೇ ಆಯಾ ಕಾಗದದ ವಾರಸುದಾರರು ಮುಂದೆ ಬಂದು ತಮ್ಮ ತಮ್ಮ ಕಾಗದಗಳನ್ನು ಪಡೆದು ಓದುತ್ತಾ ಹಿಂದಿರುಗಿ ಹೋಗು ತಿದ್ದರು. ಈ ಪ್ರಕಾರ ರೈಲು ನಿಲ್ದಾಣದಿಂದ ಅಂಚೆ ಕಚೇರಿಗೆ ಓಡಾಡಿ, ಗುಮಾಸ್ತ್ರ
ಯಾವ ಕ್ಷಣದಲ್ಲಿ ತನ್ನನ್ನು ಕರೆದಾನೋ ಎಂಬ ಕಾತುರದಿಂದ ನಿರೀಕ್ಷಿಸುತ್ತಿದ್ದರೂ ಎರಡು ತೆಂಗಿನ ವಂರದುದ್ದದ ಮನುಷ್ಯನಿಗೆ ಹಲವಾರು ವರ್ಷಗಳಾದರೂ ಯಾವ ಕಾಗದವೂ ಬರಲಿಲ್ಲವೆಂಬ ವಿಷಾದನೀಯ ಸಂಗತಿ ಊರಿನಲ್ಲಿ ಮನೆಮಾತಾಗಿತ್ತು. ಎಲ್ಲರ ಬಾಯಲ್ಲೂ
ಬೆಳಗ್ಗಿನ “ಈ ದಿನ ಕೂಡ ಇಲ್ಲ” ಅಥವಾ “ಇವತ್ತೂ ಬರಲಿಲ್ಲ” ಎಂಬ ಮಾತುಗಳು ಎರಡು ತೆಂಗಿನ ಮರದುದ್ಧದ ಮನುಷ್ಯ ನಿರೀಕ್ಷಿಸುತ್ತಿದ್ದ ಪತ್ರಕ್ಕೆ ಸಂಬಂಧಿಸಿದ ದಾಗಿತ್ತು. ತಮಗೆ ಬರಬೇಕಾದ ಅಥವಾ ಬಂದ ಖಾಸಗೀ ಪತ್ರಗಳಿಗಿಂತ ಇವನಿಗೆ ಬಾರ ದಿದ್ದ ಪತ್ರದ ವಿಚಾರ ಪ್ರಾಮುಖ್ಯತೆ ಹೊಂದಿತ್ತು.
ಅನೇಕ ವರ್ಷಗಳು ಹೀಗೆ ಕಳೆದರೂ ಅವನು ನಿರಾಶನಾಗಲಿಲ್ಲ. ಒಂದು ರಾತ್ರಿ ಅವನು ಆಂಜನೇಯನ ಗುಡಿಯ ಮುಂದಿನ ಬಯಲಿನಲ್ಲಿ ಕೂತು ತೂಕಡಿಸುತ್ತಿದ್ದಾಗ ಅಂಚೆ ಗುಮಾಸ್ತ್ರ ಬಂದು ಅವನನ್ನು ಎಚ್ಚರಿಸಿದ, ಅವನ ಒಂದು ಕೈಲಿ ಲಾಂದ್ರ ಮತ್ತು ಮತ್ತೊಂದು ಕೈಲಿ ಎರಡೂವರೆ ಮಾರುದ್ದದ ಒಂದು ಲಕೋಟೆ ಇತ್ತು. ಅದನ್ನು ಕಂಡ ತಕ್ಷಣ ಅವನಿಗೆ ತನ್ನ ಪ್ರಶ್ನೆಗೆ ಉತ್ತರ ಬಂದಿದೆ ಎಂದು ಗೊತ್ತಾಯಿತು, ಲಕೋಟೆ ಯನ್ನು ತೆಗೆದುಕೊಂಡು ಮೇಲಿನ ವಿಳಾಸವನ್ನು ಓದಿನೋಡಿ ತನಗೇ ಬಂದಿದೆಯೆಂದು ಖಚಿತಪಡಿಸಿಕೊಂಡ. ಆದರೆ ಈ ನಡುರಾತ್ರಿ, ಯಾವ ರೈಲೂ ಬಂದಿಲ್ಲವಾದರೂ ಈ

ಪತ್ರ ಇಲ್ಲಿಗೆ ಹೇಗೆ ತಲುಪಿತು ಎಂಬ ಪ್ರಶ್ನೆ ಅವನಿಗೆ ಅಪ್ರಸ್ತುತವಾಗಿತ್ತು. ಆತುರದಿಂದ ಲಕೋಟೆಯ ಬಾಯನ್ನು ಒಡೆದು ಒಳಗಿದ್ದ ಎರಡೂವರೆ ಮಾರುದ್ದದ ಒಂದು ಮೊಳ ಅಗಲದ ಕಾಗದವನ್ನು ಹೊರಕ್ಕೆ ಎಳೆಯತೊಡಗಿದ. ಹೊರಕ್ಕೆ ಬಂದ ತುದಿ ನೆಲದ ಮೇಲೆ ಬೀಳದಿರಲೆಂಬ ಉದ್ದೇಶದಿಂದ ಅಂಚೆ ಗುಮಾಸ್ತ ಕಾಗದ ಹೊರಕ್ಕೆ ಬಂದ ಹಾಗೆ ಅದನ್ನು ಹಿಡಿದುಕೊಂಡು ದೂರ ದೂರ ಹೋಗುತ್ತಿದ್ದ. ಕೊನೆಗೊಮ್ಮೆ ಇವನು ಎಳೆಯುವುದು ನಿಂತು ಪೂರ್ತಿ ಕಾಗದ ಹೊರಕ್ಕೆ ಬಂತು. ಅದನ್ನು ಅಲ್ಲೇ ನೆಲದ ಮೇಲೆ ಹರಡಿಕೊಂಡು ಅಂಚೆ ಗುಮಾಸ್ತನ ಲಾಂದ್ರದ ಬೆಳಕಿನಲ್ಲಿ ಓದಲು ತವಕದಿಂದ ಶುರು ಮಾಡಿದ. ಅವನ ಎದೆ ಡಬ ಡಬ ಬಡಿದುಕೊಳ್ಳುತ್ತಿತ್ತು. ಅಂತೂ ಕೊನೆಗೊಮ್ಮೆ ತನ್ನ ತಪಸ್ಸು ಫಲಿಸಿತೆಂಬ ತೃಪ್ತಿಯು ಮೂಡತೊಡಗಿತು, ಲಾಂದ್ರದ ಬೆಳಕು ಕಾಗದದ ಮೇಲೆ ಬಿದ್ದು ಅವನು ಮೊದಲನೇ ಸಾಲಿನ ಮೊದಲನೇ ಅಕ್ಷರದ ಮೇಲೆ ಬೆರಳಿಟ್ಟು ಸರಸರನೆ ಓದಿಬಿಡಲು ಅಣಿಯಾದ. ಆದರೆ ಅವನ ಬೆರಳು ಮೊದಲನೇ ಸಾಲಿನ ಮೊದಲನೇ ಅಕ್ಷರದಿಂದ ಮುಂದಕ್ಕೆ ಓಡಲೇ ಇಲ್ಲ. ಯಾಕೆಂದರೆ ಅವನಿಗೆ ಓದಲು ಸಾಧ್ಯವಾಗಲಿಲ್ಲ. ಲಾಂದ್ರದ ಬತ್ತಿಯನ್ನು ಉದ್ದ ಮಾಡಿದೆ. ಹೆಚ್ಚು ಬೆಳಕು ಬಿತ್ತು, ಆದರೂ ಓದಲು ಸಾಧ್ಯವಾಗಲಿಲ್ಲ. ಕಣ್ಣುಜ್ಜಿಕೊಂಡು ದೃಷ್ಟಿಯಲ್ಲಿದ್ದ ಮಂಜನ್ನು ಕಳೆದುಕೊಂಡು ಓದಲು ಪ್ರಯತ್ನಪಟ್ಟ, ಆಗಲೂ ಸಾಧ್ಯವಾಗಲಿಲ್ಲ. ಕಾಗದದ ಮೇಲೆಲ್ಲಾ ಕಣ್ಣಾಡಿಸಿದ. ಎಲ್ಲಾ ಅಪರಿಚಿತ ಅಕ್ಷರಗಳು. ಒಂದೇ ಒಂದು ಅಕ್ಷರ ಕೂಡ ಅವನಿಗೆ ತಿಳಿದುದಾಗಿರಲಿಲ್ಲ. ಲಾಂದ್ರದ ಬತ್ತಿಯನ್ನು ಮತ್ತಷ್ಟು ದೊಡ್ಡದು ಮಾಡಿದ. ಅದು ಕಪ್ಪು ಹೊಗೆ ಕಾರಲು ಶುರುಮಾಡಿತು, ಗಾಜಿನ ಚಿಮಣಿ ಗೆಲ್ಲಾ ಹೊಗೆ ಹತ್ತಿ ಮತ್ತೆ ಲಾಂದ್ರ, ಮಂಕಾಯಿತು. ಅಂಚೆ ಗುಮಾಸ್ತ್ರ ಅದನ್ನು ಕಂಡು ಅವನ ಕೈಯಿಂದ ಲಾಂದ್ರವನ್ನು ಕಿತ್ತುಕೊಂಡು ಹೋದ. ರಾತ್ರಿ ಕತ್ತಲಿನಲ್ಲಿ ಅಪರಿಚಿತ ಭಾಷೆಯಲ್ಲಿ ಬರೆದ ಕಾಗದವನ್ನು ಓದುವುದು ಮತ್ತೂ ಕಷ್ಟವಾಯಿತು. ಇದನ್ನು ಓದಬಲ್ಲೆನೆಂಬ ಹುಚ್ಚು ವಿಶ್ವಾಸದೊಡನೆ ಬೇಗ ಬೆಳಗಾದರೆ ಸಾಕಲ್ಲಪ್ಪಾ ಎಂದು ಪರಿತಪಿಸಿದ ಕಾಗದವನ್ನು ಕತ್ತಲಿನಲ್ಲೇ ಕಣಣ್ಣ ಮುಂದೆ ಹಿಡಿದುಕೊಂಡು ನೋಡಿದ ; ಮೂಸಿ ನೋಡಿದ ; ಎದೆಗೊತ್ತಿಕೊಂಡ. ಆದರೂ ಅವನಿಗೇನೂ ಅರ್ಥ ವಾಗಲಿಲ್ಲ. ಏನಾದರೂ ಮಾಡಿ ಆದಷ್ಟೂ ಬೇಗ ಅದನ್ನು ಓದಲೇ ಬೇಕೆಂದು ನಿರ್ಧರಿಸಿ ಕತ್ತಲಲ್ಲಿ ಪೂರ್ವ ದಿಕ್ಕಿಗೆ ಓಡತೊಡಗಿದ. ಓಡಿ ಓಡಿ ಸುಸ್ತಾಗಿ ಒಂದು ಕಡೆ ಏದುಸಿರು ಬಿಡುತ್ತಾ ನಿಂತಾಗ ದಿಗಂತದಲ್ಲಿ ಬೆಳಕು ಮೂಡುವುದು ಕಾಣಿಸಿ ಅವನಿಗೆ ತುಂಬಾ ಸಂತೋಷವಾಯಿತು. ಅಲ್ಲೇ ಕೂತು ಪುನಃ ಕಾಗದವನ್ನು ನೆಲದ ಮೇಲೆ ಹರಡಿಕೊಂಡು ನೋಡತೊಡಗಿದ. ಅದೆಷ್ಟು ಹೊತ್ತು ಹಾಗೇ ನೋಡುತ್ತಿದ್ದನೋ. ಸೂರ ನೆತ್ತಿಯ ಮೇಲೆ ಬಂದಾಗ ಕೂಡ ನೋಡುತ್ತಲೇ ಇದ್ದ.

ಇದ್ದಕ್ಕಿದಂತೆ ಅವನಿಗೆ ತನ್ನ ಕನ್ನಡಕದ ನೆನಪಾಯಿತು. ಬಹುಶಃ ಕನ್ನಡಕವಿಲ್ಲದೆ ಅದನ್ನು ಓದಲು ಅಸಾಧ್ಯ ಎನಿಸಿತು. ಕನ್ನಡಕಕ್ಕಾಗಿ ಜೇಬುಗಳಲ್ಲಿ ತಡಕಾಡಿದ, ಸಿಕ್ಕಲಿಲ್ಲ. ಕನ್ನಡಕ ಎಲ್ಲೋ ಇರಲೇಬೇಕೆಂಬ ಧೈಯ್ಯದಿಂದ ಊರಿಗೆ ಓಡಿಬಂದು ಬೀದಿ ಬದಿ ಗಲ್ಲಿ ಗಲ್ಲಿಗಳ ಲ್ಲೆಲ್ಲಾ ಹುಡುಕಾಡಿದ, ಕಂಡ ಕಂಡವರನ್ನೆಲ್ಲಾ ತನ್ನ ಕನ್ನಡಕಕ್ಕಾಗಿ ಬೇಡಿಕೊಂಡ, ಆದರೆ ಅವನಿಗೆ ಎಲ್ಲಾ ಕನ್ನಡಕ ಸಿಕ್ಕಲೇ ಇಲ್ಲ. ಎಲ್ಲಾ ಮನೆಗಳಲ್ಲಿ, ಎಲ್ಲಾ ಅಂಗಡಿ ಗಳಲ್ಲಿ ವಿಚಾರಿಸಿದ ರೈಲು ನಿಲ್ದಾಣದ ಪ್ಲಾಟ್‌ಫಾರ್ಮಿನಲ್ಲಿ, ಅಂಚಕಚೇರಿಯಲ್ಲಿ ಹುಡುಕಾಡಿದ, ಅಂದಿನ ಅಂಚೆ ಚೀಲದಲ್ಲಿ ತನ್ನ ಕನ್ನಡಕವೇನಾದರೂ ಬಂದಿದೆಯೇ ಎಂದು ವಿಚಾರಿಸಿದ, ಆದರೆ ಏನೂ ಲಾಭವಾಗಲಿಲ್ಲ. ಕೊನೆಗೊಮ್ಮೆ, ತಾನು ಕನ್ನಡಕ ಉಪಯೋಗಿಸುತ್ತಲೇ ಇರಲಿಲ್ಲವೇನೋ ಎಂದು ಅರ್ಧ ಸಮಾಧಾನ ತಂದುಕೊಂಡ. ಮತ್ತೊಮ್ಮೆ ಬರಿಗಣ್ಣಿನಲ್ಲಿ ಓದಲು ಪ್ರಯತ್ನಪಟ್ಟ.
ಸಾಯಂಕಾಲವಾಗಿ ಕತ್ತಲು ಕವಿಯುವ ವೇಳೆಗೆ ಅವನಿಗೆ ಅರ್ಥವಾಗದ ಭಾಷೆಯಲ್ಲಿ ಕಾಗದ ಬರೆಯಲ್ಪಟ್ಟಿದೆ ಎಂಬ ಅರಿವಾಗಿ, ಅದನ್ನು ತಿಳಿದವರಿಂದ ಓದಿಸಬೇಕೆಂದು ಮನಸ್ಸು ಮಾಡಿದ.
ಆ ಕಾಗದದ ಸಾವಿರಾರು ನಕಲುಗಳನ್ನು ತುಂಬಾ ಶ್ರಮವಹಿಸಿ ಜಾಗರೂಕತೆಯಿಂದ ಶ್ರದ್ದೆಯಿಂದ ತಯಾರುಮಾಡಿ, ಪ್ರಪಂಚದ ಎಲ್ಲಾ ಭಾಷಾಶಾಸ್ತ್ರಜ್ಞರಿಗೂ, ವಿಶ್ವ ವಿದ್ಯಾನಿಲಯಗಳಿಗೂ, ಅಕಾಡೆಮಿಂಗಳಿಗೂ ಕಳಿಸಿ ಅದರ ಭಾಷಾಂತರವನ್ನು ದಯವಿಟ್ಟು ಕಳಿಸಬೇಕೆಂಬ ಮನವಿಯನ್ನು ಮಾಡಿಕೊಂಡ, ಆ ದಿನಗಳಲ್ಲಿ ಅಂಚೆ ಗುಮಾಸ್ತನಿಗೆ ಅಂಡು ಕೆರೆದುಕೊಳ್ಳಲು ಪುರುಸೊತ್ತಿಲ್ಲದಷ್ಟು ಕೆಲಸ.
ಅಂಚೆ ರೈಲು ಬರುವ ವೇಳೆ ಅಂಚೆ ಗುಮಾಸ್ತನೊಂದಿಗೆ ರೈಲು ನಿಲ್ದಾಣಕ್ಕೆ ಅಲ್ಲಿಂದ ಅಂಚೆ ಕಚೇರಿಗೆ ವಂತ್ತೊಮ್ಮೆ ದಿನಾಗಲೂ ಅವನ ಓಡಾಟ ಶುರುವಾಯಿತು. ಆದರೆ ಈ ಬಾರಿ ಅವನಿಗೆ ಬೇಗ ಬೇಗ ಉತ್ತರಗಳು ಬರಲು ಶುರುವಾಯಿತು. ದಿನಾಗಲಾ ಒಂದಲ್ಲೊಂದು ಕಾಗದ ಇದ್ದೇ ಇರುತ್ತಿತ್ತು. ಬಹಳ ದಿನಗಳು ಇಪ್ಪತ್ತು ಮೂವತ್ತು, ನೂರಾರು, ಸಾವಿರಾರು ಬರುತ್ತಿತ್ತು. ಆದರೆ ಅವೆಲ್ಲವುಗಳ ಸಾರಾಂಶ ಒಂದೇ : ಈ ಭಾಷೆ ಯಾವುದೋ ನವಂಗೆ ಗೊತ್ತಿಲ್ಲ. ಪ್ರಪಂಚದಲ್ಲಿ ಇಂತಹ ಭಾಷೆ ಇದೆ ಎಂಬ ಸಂಗತಿ ನಮಗೆ ಈಗಲೇ ತಿಳಿದದ್ದು. ಇದನ್ನು ಓದಲು ನಮಗೆ ಸಾಧ್ಯವಾಗಿಲ್ಲ ಎಂದು ತಿಳಿಸಲು ವಿಷಾದ, ಅವನಿಗೆ ಬಂದ ಇಂತಹ ನಿರಾಶಾದಾಯಕ ಕಾಗದಗಳು ಊರಿನ ಬೀದಿ ಬೀದಿ ಯಲ್ಲೆಲ್ಲಾ ಬಿದ್ದಿರುತ್ತಿತ್ತು. ಯಾಕೆಂದರೆ ಅವನು ಅವನ್ನು ಓದಿ ಎಲ್ಲೆಂದರಲ್ಲೇ ಬಿಸಾಡು ತಿದ್ದ. ಅವನ್ನೆಲ್ಲಾ ಓರಣವಾಗಿ ಫೈಲ್ ಮಾಡಿ ಇಟ್ಟುಕೊಳ್ಳುತ್ತಿರಲಿಲ್ಲ. ಗಾಳಿ ಬಂದಾಗ

ಎಂಜಲು ಹಾಳೆಗಳಂತೆ ಹಾರಾಡುತ್ತಿದ್ದ ಆ ಕಾಗದಗಳನ್ನು ನೋಡಿ ಊರಿನ ಜನರೆಲ್ಲಾ ಬೇಸತ್ತಿದ್ದರು. ರಘಾಡವಾಲಿಗಳು ಎಷ್ಟು ಗುಡಿಸಿ ಸುಟ್ಟು ಹಾಕುತ್ತಿದ್ದರೂ ಅವು ಹಾರಾಡುತ್ತಲೇ ಇದ್ದವು, ನಡೆಯುವಾಗ ಪ್ರತಿಯೊಬ್ಬರ ಕಾಲಿಗೂ ಸಿಕ್ಕೇ ಸಿಗುತ್ತಿದ್ದವು, ಒಟ್ಟಿನಲ್ಲಿ ಊರಿನ ವಾತಾವರಣ ಈ ವಿಷಾದಕರ ಕಾಗದಗಳಿಂದ ತುಂಬಿಹೋಗಿತ್ತು; ಅನೇಕ ವರ್ಷಗಳು ಹೀಗೇ ಉರುಳಿ ಹೋದವು.
ಪರಿಸ್ಥಿತಿ ಹೀಗಿರುವಾಗ, ಎಂದಿನಂತೆ ಒಂದುದಿನ ಬೆಳಿಗ್ಗೆ, ಅಂಚೆ ಗುಮಾಸ್ತ್ರ ಅಂದಿನ ಟಪಾಲು ಚೀಲದ ಅರಗಿನ ಎಂದ್ರೆಯನ್ನು ಒಡೆದಾಗ ಅದರೊಳಗೆ ಒಂದೇ ಒಂದು ಕಾಗದ ಇದ್ದುದು ಕಂಡು ಬಂತು. ಆ ಕಾಗದ ಎರಡು ತೆಂಗಿನ ಮರದುದ್ದದ ಮನುಷ್ಯ ನಿಗೇ ಬಂದಿತ್ತೆಂಬುದನ್ನು ಎಂತಹ ಸಣ್ಣ ಮಗುವಾದರೂ ಊಹಿಸಬಹುದಾಗಿತ್ತು. ಅವನು ಆ ಕಾಗದವನ್ನು ತೆಗೆದುಕೊಂಡು ಓದಿದ : ನೀವು ಕಳಿಸಿದ ವಿಚಿತ್ರ ಭಾಷೆಯ ಸಾಹಿತ್ಯ ತಲುಪಿದೆ. ನಾವು ಈ ಬಗ್ಗೆ ಅತ್ಯಂತ ಶ್ರದ್ಧೆವಹಿಸಿ ಸಂಶೋಧನೆ ನಡೆಸಿ ದೈವೆಂದು ತಿಳಿಸಲು ಹರ್ಷಿಸುತ್ತೇವೆ. ನಮ್ಮ ಅಮೂಲ್ಯ ಸಂಶೋಧನೆಯ ಫಲವೇ ನೆಂದರೆ, ನೀವು ಕಳಿಸಿದ ಕಾಗದ ಒಂದು ಅಪೂರ್ವವಾದ, ತೀರ ಅಂದರೆ ತೀರಾ ಅಪ ರೂಪವಾದ ಭಾಷೆಯಲ್ಲಿ ಬರೆಯಲಾಗಿದೆ. ನಿಜ ಹೇಳಬೇಕೆಂದರೆ ಈ ಭಾಷೆಯ ಉಪ ಯೋಗ ಪ್ರಪಂಚದಲ್ಲಿ ಎಲ್ಲೂ ಇಲ್ಲ. ಹಿಂದೆ ಎಲ್ಲಾದರೂ ಇತ್ತೆಂದು ಯಾರೂ ಹೇಳಲಿಶ ಸಾಧ್ಯವಿಲ್ಲ. ಆದರೆ, ಈ ಭಾಷೆಯ ಬಗ್ಗೆ ಒಂದು ಮಾತನ್ನು ನಮ್ಮ ಸಂಶೋಧನೆಯ ಫಲವಾಗಿ ಖಂಡಿತವಾಗಿ ಹೇಳಬಹುದು-ಈ ಭಾಷೆಗೆ ಲಿಪಿ ಇಲ್ಲ.

Close

ಎರಡು ಕವನಗಳು

ಎರಡು ಕವನಗಳು

ಅರವಿಂದ ನಾಡಕರ್ಣಿ

೧ ಸಖ
ಜನ ಜನ ಜನ
ಬಂದರೆಷ್ಟೋ ಜನ ಹೋದರೆಷ್ಟೋ ಜನ
ಚರ್ಮಕ್ಕೆ ಚರ್ಮ ತಿಕ್ಕಿ ತಿವಿದಡ್ಡಾದ ಜನ
ಗುರ್ತು ಸಿಕ್ತಾ ಎಂದು ನುಡಿಯುಗುಳಿಹೋದ ಜನ
ನೋಡುವಾ ಎಂದು ಎಂದಿಗೂ ನೋಡದ ಜನ
ಬಾಯ್‌‌ ಬಾಯ್ ಎಂದು ನಿರಂತರ ಬಾಯ್ಮುಚ್ಚಿದ ಜನ
ಎಲ್ಲೋ ನೋಡಿದಂತಿದೆ ಎಂದು
ಎಲ್ಲೂ ನೋಡದೇ ಹೋದ ಜನ
ಬರಿದೆ ಅಪ್ಪಳಿಸಿ ತಿರುಗಿದಪ್ಪಂತ ಜನ
ಅವರಿವರು ಹೆಸರಿಲ್ಲದವರು ಹೆಸರೂ ಹೇಳದವರು
ಬ್ರೆಡ್ಡು ಪೇಪರನ್ನೊಗೆದವರು ಹಾಲಸುರಿದವರು
ಎಲ್ಲಿಂದಲೋ ಬಂದು ಕದತಟ್ಟಿ ಹೋದವರು
ಬಿಲ್ ಕೊಟ್ಟು ಕಾದವರು
ಲಕ್ಷ ಲಕ್ಷ ಲಕ್ಷ ಜನ
ಎದುರೆದುರು ಬರುತ್ತಾರೆ ಚೆದರಿಹೋಗುತ್ತಾರೆ

ನೂಕು ಗುದ್ದು ಒದೆ ಜಗ್ಗು
ಎಂದು ಮೈಯೆಲ್ಲ ಪಚಡಿಮಾಡುತ್ತಾರೆ.
ನಗದೆ ನಗಿಸದೆ ಕಚಕುಳಿಯಿಡದೆ
ಅವನಾರೊ ಇವನಾರೊ
ಯಾವ ಬಾದರಾಯಣ ಸಂಬಂಧವೋ
ಕ್ರಯವಿಕ್ರಯದ ಸರಭರಾಟದಿ
ಹಿಂತಿರುಗಿ ನೋಡದೇ ನಡೆಯುತ್ತಾರೆ
ಎಲ್ಲೆಲ್ಲೋ ಮಾಯವಾಗುತ್ತಾರೆ.

ನೂರು ನಿಲ್ದಾಣ ಊರೂರ ಸಂತೆ ಮೈದಾನ
ಸೇರುತ್ತ ಸರಿಯುತ್ತ ಕೂಡಿ ಅಗಲುತ್ತ
ತಂಡದಲ್ಲೊಬ್ಬ ಎಂದಾಗ ಎಲ್ಲರಿಗನ್ಯ
ಅನ್ಯನೋ ಅನ್ಯ
ಯಾವ ಮೋರೆಯಲೊಂದು ಮೆಲುನಗೆಯ ಗೆರೆ
ಕಾಣಲಿ ಎಂದು ಕಾದು ನಿಂತಾಗ
ಜನಶೂನ್ಯ ಮನೆಶೂನ್ಯ ಜಗಶೂನ್ಯ
ಜೀವ ವಿಚ್ಛಿನ್ನ
ದಿಗಂತ ಮೊರೆಯುವದೊಂದೇ ಸದ್ದು
ಕೊಳ್ಳಿ ಕೋಡಿ ಕೊಳ್ಳಿ ಕೊಡಿ
ಒಂದೇ ದರ ಕೊಡಿ ಬಿಡಿ……

ಬಂದುಹೋದವೆಷ್ಟೋ ಭೇಟಿಕೂಟಗಳು
ಪಾರ್ಟಿಟ್ರಿಪ್ಪುಗಳು ಪಯಣ ಜಾತ್ರೆಗಳು
ಖೋಜಾಗಿರಿ ರಾತ್ರೆಗಳು
ದಿನಚರಿತ್ರದ ಕಾರ್ಬನ್‌ಕಾಪಿ ವರುಷಗಳು
ಅರ್ಥವಾಗದ ಕರ್ಮಕರ್ತವ್ಯಗಳು
ನಿಲ್ಲದ ಬಂಧಬಾಂಧವ್ಯಗಳು……

ಬಟ್ಟಬಯಲ ಬಂಜರಿನಲ್ಲಿ
ನಿಂತು ನೋಡುತ್ತೇನೆ
ಎಲ್ಲೂ ಕಾಣದವನ ಹಲ್ಲೋ ನಗುಮುಖ

ಬಂದಾನೋ ಪ್ರಿಯಸಖ
ಸುಧಾವನೆಡೆ ಬಂದಂತೆ ?

೨ ನನ್ನ ಹಾಡು

ಹುಟ್ಟಿದ್ದೇ ಹರಸಿ ಶುಭನಾಮ ಸಮೇತ
ಉಡುವ ಬುಶ್‌ಕೋಟು ಮೆರೆವ ಕ್ರಾಪು
ವಿದ್ಯೆ ಉದ್ಯೋಗದ ವೃದ್ಧಿಗ್ರಾಫು
ಕಾಲಿಡುವ ಹಾದಿಬೀದಿ ಗಲ್ಲಿ ರೇಖಾಚಿತ್ರ
ಹಂತ ಹಂತಕ್ಕೇರುವ ಮೆಟ್ಟಿಲುಗಳೆತ್ತರ
ಎಲ್ಲ ಎಲ್ಲ ನಿರ್ಧರಿಸಿ
ಸಲೀಸು ಮಾಡಿದ್ದರು ಬದುಕು.
ಬೆಳೆದಂತೆ ಅವರಿವರ ಶಾಸ್ತ್ರಪಾರಂಗತರ
ಹಿತೋಕ್ತಿ ಪ್ರವಚನ ಗೀತೋಪದೇಶ
ಲಕ್ಷನಾಲಗೆ ವ್ಯಾಖ್ಯಾನಿಸಿ ಪಿಚಕ್ಕನುಗುಳಿದ
ಲೋಕಾನುಭವ ನುಡಿಮುತ್ತೆ ವಿಶ್ವಕೋಶ
ಮಾಡಿ ಧೀಮಂತನಾದೆ.
ಕೈಹಿಡಿದು ಸತ್ಪಥಕೆ ಸೇರಿಸಬಂದ ಸರ್ವಜ್ಞರಿಟ್ಟ
ಸಾವಿರಡಿಗಳಚ್ಚಿನಲ್ಲೇ ಕಣ್ಮುಚ್ಚಿ ಮುಚ್ಚಿ
ಈ ಪುಟ್ಟಪಾದವನ್ನಿಟ್ಟು ಪಿತಾಮಹನಾದೆ.
ಆಹ ತುಳಿವ ಹಾದಿ ಶತರಂಜಿಯೆಂದುಬ್ಬಿದೆ
ಅದೃಷ್ಟವಶಾತ್‌ ಜಾರಿದರೆ ರಾಮಾ ಎಂದೆ
ಬಿದ್ದರೆ ಗೋವಿಂದಾ ಎಂದೆ
ಬಂದೇ ಬರುತ್ತಾರೆ ಯುಗಯುಗಕೆ ಬಂದಂತೆ
ರಾಮಕೃಷ್ಣ ಗೋವಿಂದ
ಅಷ್ಟದಿಶೆಗಳ ಮೋಡಮುಗಿಲು ನಾಕ
ನರಕಗಳ ಸಂದುಗೊಂದಿನಿಂದ
ಮುರುಟಿದಾತ್ಮದ ಮೊಗ್ಗೆ ಅರಳಿ ಘಮ್ಮೆನುವಂತೆ
ಬತ್ತಿದರಿವಿನ ಬುಗ್ಗೆ ಛಿಲ್ಲನೆ ಚಿಮ್ಮುವಂತೆ
ಹಿಗ್ಗಿ ಕಥಕ್ಕಳಿ ಕುಣಿದೆ.

ಅಪ್ಪ ಅಜ್ಜಂದಿರ ತಲೆಮಾರು ಕೋಟು
ಭುಜದ ಗೂಟಕ್ಕೇರಿಸಿ ಮೆರೆದೆ
ವಿಶ್ವಪುರಸ್ಕೃತ ಮೊಡೆಲ್ಲು
ಮಾತಾಡೋ ರಾಮಪ್ಪ ಗಿಳಿಯ ಗೋಣಿಗೆ
ಥಳಥಳಿಸುವ ಮೆಡಲ್ಲು.
ಕುರುಕ್ಷೇತ್ರದ ತುಂಬ ಹರಿವ ಕೋಟಿ
ನೆರಳುಗಳ ನೆರಳಾದೆ.
ಕೌರವನಿರಲಿ ಕೀಚಕನಿರಲಿ ಗದೆಯೆತ್ತಿ
ಆಣೆ ಘೋಷಿಸುವ ಕಾಳಜಿಯಿಲ್ಲ
ಚಕ್ರವ್ಯೂಹಗಳ ಸೀಳುವ ಭಾರ ಹೊತ್ತಿಲ್ಲ.
ಹಿಡಿದು ನಡಿಸುವ ದಿವ್ಯಹಸ್ತಕ್ಕಂಟಿ
ವಿಶ್ವಕೋಶದ ಜೋಳಿಗೆ ಹಿಡಿದು
ಭವಯಾತ್ರೆ ಮುಗಿಸಿದ್ದೆ ಕರ್ಮಸಿದ್ಧಿ
ಅದುವೆ ಮೋಕ್ಷ ಅದೇ ನಿರ್ವಾಣ.

ವಿಶ್ವಚೇತನದನಂತ ಪತ್ರ
ಮೇಲೆ ಮೆಲ್ಲನೊತ್ತಿತೆ ಕಾಲ ರಬ್ಬರಿನಚ್ಚು
ನರಪುಂಗವನ ಕೆಚ್ಚು ?
ಬದುಕು ಮಸಿ.
“ತತ್ವಮಸಿ” “ತತ್ವಮಸಿ”
ಯಾರೆನ್ನುತ್ತಾರೆ ಘಂಟಾಘೋಷ ಇದು ಹುಸಿ ?

ಸ್ವಾಮೀ,
ಇಗೋ ಕೊಟ್ಟೆ ಈ ವೀರನ ಪುಟ್ಟ ಜಾತಕ
ಮತ್ತೆ ಕುಲಗೋತ್ರಾದಿ ಕೇಳುವದು ಮಹಾ ಪಾತಕ.

Close

ಅಸ್ತಿತ್ವವಾದಿ ಮನೋವಿಶ್ಲೇಷಣೆ

ಅಸ್ತಿತ್ವವಾದಿ ಮನೋವಿಶ್ಲೇಷಣೆ

ಮೂಲ : ಮೀರಾ ಚಕ್ರವರ್ತಿ
ಅನು : ಬಿ ವೈ ಲಲಿತಾಂಬ

“ಇಪ್ಪತ್ತನೆಯ ಶತಮಾನದ ಪ್ರಥಮಾರ್ಧದಲ್ಲಿ ಸಾಹಿತ್ಯ ಹಾಗೂ ತತ್ವಜ್ಞಾನದ ಮೇಲೆ ಅತಿ ಶಕ್ತಿಯುತ ಪ್ರಭಾವ ಬೀರಿದವ ಯಾವ ಸಾಹಿತಿಯಾಗಲೀ ತತ್ವಚಿಂತಕನಾಗಲೀ ಅಲ್ಲ. ಮನೋವೈಜ್ಞಾನಿಕ ಫ್ರಾಯಿಡ್. ಈಗ ಸಾಹಿತ್ಯ ಹಾಗೂ ತತ್ವಚಿಂತನೆ, ಸಾರ್ತ್ರ “ಅಸ್ತಿತ್ವವಾದಿ ಮನೋವಿಶ್ಲೇಷಣೆ’ ಎಂದು ಕರೆಯುವ ಮನೋವಿಶ್ಲೇಷಣೆಯನ್ನು ರೂಪಿಸುವುದರ ಮೂಲಕ ಆ ಉಪಕಾರ ತೀರಿಸುತ್ತಿವೆ.”1 ಸಾಹಿತಿ ಹಾಗೂ ತತ್ವಚಿಂತಕ ಸಾರ್ತ್ರ, ಈ ಅಸ್ತಿತ್ವವಾದೀ ಮನೋವಿಶ್ಲೇಷಣೆಯ ಬುನಾದಿ ಹಾಕಿದ್ದಾನೆ. ನಿಜವಾಗಿಯೂ ನೋಡಿದರೆ ಅಸ್ತಿತ್ವವಾದಿ ಮನೋವಿಶ್ಲೇಷಣೆಯನ್ನೇ “ಅಸ್ತಿತ್ವವಾದ’ ಎನ್ನುತ್ತಾರೆ. ಎಲ್ಲರೂ ಭಾವಿಸುವಂತೆ ಅಸ್ತಿತ್ವವಾದಿ ಚಿಂತನೆಯನ್ನಲ್ಲ ; ಅಸ್ತಿತ್ವವಾದಿ ಮನೋವಿಶ್ಲೇಷಣೆ ಎಂದರೆ ಫಿನಾಮಿನಾಲಜಿ ಹಾಗೂ ಅಸ್ತಿತ್ವವಾದಿ ತತ್ವಚಿಂತನೆಯನ್ನು ಅನ್ವಯಿಸಲಾದ ಮನೋವಿಶ್ಲೇಷಣೆ.
“ಮಾನವನ ಸತ್ಯ ಒಂದು ವೇಳೆ……..ತಾನು ಅರಸುವ ಗುರಿಗಳ ಮೂಲಕ ತನ್ನನ್ನು ಪರಿಭಾಷಿಸಿಕೊಳ್ಳುವುದಾದಲ್ಲಿ, ಆ ಗುರಿಗಳ ವರ್ಗಿಕರಣ ಹಾಗೂ ವಿಚಾರಣೆ ಅನಿವಾರ್ಯವಾಗುತ್ತದೆ.” 2 ಈ ವಿಚಾರಣೆಯ ಹಾಗೂ ವರ್ಗಿಕರಣದ ಕಾರ್ಯವನ್ನು ಅಸ್ತಿತ್ವವಾದಿ ಮನೋವಿಶ್ಲೇಷಣೆ ವಹಿಸಿಕೊಳ್ಳುತ್ತದೆ. ಸಾಹಿತಿ ಫ್ಲಾಬರನ ಮನಃಸ್ಥಿತಿಯನ್ನು
ವಿಶ್ಲೇಷಿಸಲು ಪ್ರಯತ್ನಿಸುವ ಅನುಭವವಾದೀ (Empirical) ಮನೋವಿಶ್ಲೇಷಣೆಯ ಒಂದು ಪ್ರಯತ್ನವನ್ನು ಉದಾಹರಿಸುತ್ತ ಸಾರ್ತ್ರ ಅನುಭವವಾದೀ ಮನೋವಿಶ್ಲೇಷಣೆ ಏನನ್ನೂ ಸಿದ್ಧಪಡಿಸುವುದಿಲ್ಲ ಎಂದು ತೋರಿಸುತ್ತಾನೆ. ಒಂದು ವೈಯಕ್ತಿಕ ಸತ್ಯ ಅಮೂರ್ತ ಮತ್ತು ಸರ್ವ ಸಾಮಾನ್ಯ ವಿಧಾನಗಳ ಪರಸ್ಪರ ಸಂಬಂಧದಿಂದ ಉತ್ಪತ್ತಿಯಾಗುತ್ತದೆ ಎಂಬುದು ಇಂತಹ ಮನೋವಿಶ್ಲೇಷಣೆಯ ಮೂಲ ಆಧಾರವಾದುದರಿಂದ ಫ್ಲಾಬರನ ಸಾಹಿತ್ಯದಲ್ಲಿಯ ಅಭಿರುಚಿಯ ಸತ್ಯ, ಹಲವು ಅಮೂರ್ತ ಸಾಂಕೇತಿಕ ಇಚ್ಚೆಗಳ ಸಮೀಕರಣ ಮಾತ್ರವಾಗುತ್ತದೆ. ಆದುದರಿಂದ ಈ ಮನೋವಿಶ್ಲೇಷಣೆಯಲ್ಲಿ ಮೂರ್ತಕ್ಕಿಂತ ಅಮೂರ್ತವೇ ಮೊದಲು. ಆದರೆ ಅಸ್ತಿತ್ವವಾದದಲ್ಲಿ ಅಮರ್ತಕ್ಕಿಂತ ಮೂರ್ತ ಮೊದಲು. ಚಿತ್ರಕಲೆ ಅಥವಾ ಸಂಗೀತ ಬಿಟ್ಟು ಸಾಹಿತ್ಯದ ಕಡೆಗೇ ಫ್ಲಾಬರ ಏಕೆ ವಾಲುತ್ತಾನೆ” ಎಂಬ ಪ್ರಶ್ನೆಗೆ ಅನುಭವವಾದೀ ಮನೋವಿಶ್ಲೇಷಣೆಯಲ್ಲಿ ಉತ್ತರವಿಲ್ಲ. ‘ಆದರೂ ಇದನ್ನು ಮನೋವಿಶ್ಲೇಷಣೆ ಎನ್ನಲಾಗುತ್ತದೆ’ ಎಂದು ಮೂದಲಿಸುತ್ತಾನೆ ಸಾರ್ತ್ರ.
ಸಾರ್ತ್ರ ಅನುಭವವಾದೀ ಮನೋವಿಶ್ಲೇಷಣೆಯ ಎರಡು ಅಪಾಯಕರ ಸ್ಥಿತಿಗಳ ಬಗ್ಗೆ ಎಚ್ಚರಿಕೆ ಕೊಡುತ್ತಾನೆ. “ಮೊದಲನೆಯದಾಗಿ, ಅನುಭವವಾದೀ ಮನೋವಿಶ್ಲೇಷಕ ಮಾನವನನ್ನು ಅವನ ಇಚ್ಚಿಗಳ ಆಧಾರದ ಮೇಲೆ ಪರಿಭಾಷಿಸುವಾಗ ಮೂರ್ತ ಪದಾರ್ಥದ (substance) ಮರೀಚಿಕೆಗೆ ಬಲಿಯಾಗುತ್ತಾನೆ. ಅವನು, ಮಾನವನಲ್ಲಿ ಇಚ್ಛೆ ಪ್ರಜ್ಞೆಯ ‘ವಸ್ತು’ವಾಗಿ ಇರುತ್ತದೆ ಎಂದು ಭಾವಿಸುತ್ತಾನೆ. 2 ಅನುಭವವಾದೀ ಮನೋವಿಶ್ಲೇಷಣೆಯ ಈ ಮೂಲ ಕಲ್ಪನೆಯನ್ನು ಸಾರ್ತ್ರ ತಿರಸ್ಕರಿಸುತ್ತಾನೆ. ಏಕೆಂದರೆ ಪ್ರಜ್ಞೆ ಯಾವಾಗಲೂ ‘ಯಾವುದಾದರೂ’ ವಸ್ತುವಿನ ಪ್ರಜ್ಞೆಯೇ (conscious ness of something) ಆಗಿರುವುದರಿಂದ ಪ್ರಜ್ಞೆಯ ವಸ್ತು (content of consciousness) ಎಂಬುದು ಇರಲು ಸಾಧ್ಯವಿಲ್ಲ. ಆದುದರಿಂದ ಸಾರ್ತ್ರ ಕೇಳುತ್ತಾನೆ : “ನಾನು ಒಂದು ಮನೆಯನ್ನು ಅಥವಾ ಒಂದು ಲೋಟ ನೀರನ್ನು ಅಥವಾ ಒಬ್ಬ ಹೆಂಗಸಿನ ಶರೀರವನ್ನು ಬಯಸಿದರೆ, ಈ ಶರೀರ, ಲೋಟ, ಮನೆ, ನನ್ನ ‘ಬಯಕೆ’ಯಲ್ಲಿ ಇರಲು ಹೇಗೆ ಸಾಧ್ಯ ಹಾಗೂ ನನ್ನ ಬಯಕೆ ಈ ವಸ್ತುಗಳ “ಬಯಸಲು ಯೋಗ್ಯ’ವೆಂಬ ಪ್ರಜ್ಞೆಯ ಹೊರತು ಇನ್ನೇನಾಗಲು ಸಾಧ್ಯ ? 2 ಎರಡನೆಯದಾಗಿ ಬಯಕೆಗಳ ಒಂದು ಮೂರ್ತ ಗುಂಪನ್ನು ತಲುಪಿದಾಗ ಈ ವಿಶ್ಲೇಷಣೆ ನಿಂತು ಹೋಗುತ್ತದೆ. ಹೀಗಾಗಿ ಮಾನವನನ್ನು “ಅನುಭವವಾದೀ ಅವಲೋಕನದಿಂದ ಸಿದ್ಧಪಡಿಸಲು ಸಾಧ್ಯವಾದ ಬಯಕೆಗಳ ಅಥವಾ ಪ್ರವೃತ್ತಿಗಳ ಗುಂಪು” 2 ಎಂದು ಅದು ಪರಿಭಾಷಿಸುತ್ತದೆ. ಆದರೆ ಅಸ್ತಿತ್ವವಾದ ಮಾನವನನ್ನು ಒಂದು ‘ಅಸ್ತಿತ್ವ’ ವೆಂದು ಪರಿಭಾಷಿಸುವುದರಿಂದ ಅನುಭವವಾದೀ ಮನೋವಿಶ್ಲೇಷಣೆ ಅಸ್ತಿತ್ವವಾದದ ಬೇಡಿಕೆಯನ್ನು ಪೂರ್ಣಗೊಳಿಸುವುದಿಲ್ಲ.
“ಬರಿ ಪ್ರವೃತ್ತಿಗಳ, ಮನೋಭಾವಗಳ, ವರ್ತನೆಗಳ, ಮಾದರಿಗಳ ಸೂಚಿಯೊಂದನ್ನು ತಯಾರಿಸುವುದರಿಂದ ಪ್ರಯೋಜನವಿಲ್ಲ. ಅವುಗಳನ್ನು, ಅವುಗಳ ಒಳಗುಟ್ಟನ್ನು ಅರ್ಥ ಮಾಡಿಕೊಳ್ಳಬೇಕು”, 3 ಈ ಪ್ರವೃತ್ತಿಗಳ, ವುನೋಭಾವಗಳ, ವರ್ತನೆಯ ಮಾದರಿಗಳ ಒಳಗುಟ್ಟನ್ನು ಅರ್ಥ ಮಾಡಿಕೊಳ್ಳುವುದೇ ಅಸ್ತಿತ್ವವಾದೀ ಮನೋವಿಶ್ಲೇಷಣೆಯ ಗುರಿ. “ಮಾನವ ತನ್ನನ್ನು ಮಾನವನನ್ನಾಗಿ ಮಾಡಿಕೊಳ್ಳಲು ಆಧಾರವನ್ನಾಗಿ ಮಾಡುವ ವ್ಯಕ್ತಿಗತ ಆಯ್ಕೆಗಳನ್ನು ವಸ್ತುಗತವಾಗಿ ಪ್ರಕಟಪಡಿಸುವ ಇದು ಒಂದು ವಿಧಾನ”. 4 ಹಾಗೂ ಈ ಮನೋವಿಶ್ಲೇಷಣೆಯ ಪರಿಮಿತಿಗೆ “ಬರಿ ಕನಸುಗಳು, ಜುಗುಪ್ಪೆ, ತೀವ್ರ ಆಸಕ್ತಿ ಹಾಗೂ ನರಗಳ ಅಸ್ವಸ್ಥತೆ ಮಾತ್ರವಲ್ಲದೇ ಹಾಗೂ ವಿಶೇಷವಾಗಿ, ಜಾಗ್ರತ ಸ್ಥಿತಿಯಲ್ಲಿಯ ವಿಚಾರಗಳು, ಸಫಲವಾದ ಹೊಂದಾಣಿಕೆಗಳೂ ಮುಂತಾದವೂ ಸೇರಿರುತ್ತವೆ.”5
‘ಅನುಭವ’ ಅಸ್ತಿತ್ವವಾದಿ ತತ್ವಚಿಂತನೆಯ ಪ್ರಾರಂಭ ಬಿಂದು. ಹಾಗೆಯೇ ಅದು ಅಸ್ತಿತ್ವವಾದೀ ಮನೋವಿಶ್ಲೇಷಣೆಯ ಪ್ರಾರಂಭಬಿಂದು ಕೂಡ. “ಆದರ ಮೂಲ ಆಧಾರಸ್ತಂಭ ಮಾನವನ ಮೂಲಭೂತ, ಮೂಲತತ್ವ–ಪೂರ್ವದ (Pre-ontological-) ಮಾನವನ ವ್ಯಕ್ತಿತ್ವದ ಗ್ರಹಿಕೆ.” 3 ಅತಿ ಮಹತ್ವವಿಲ್ಲದಂತೆ ಕಾಣುವ ಶಬ್ದಗಳು, ಸನ್ನೆಗಳು ಮೊದಲಾದವುಗಳ ವ್ಯಕ್ತಿತ್ವ ಪ್ರಕಟಗೊಳಿಸುವ ಶಕ್ತಿಯ ಅನುಭವ ಪೂರ್ವದ (a priori) ಒಂದು ಅರ್ಥವನ್ನು ಮಾನವ ಹೊಂದಿರುತ್ತಾನೆ ಹಾಗೂ ಅವುಗಳ ವ್ಯಾಖ್ಯೆಯನ್ನು ಆತ ಮಾಡಬಲ್ಲ. ಅದು ಮಾನವನನ್ನು ಒಂದು ಸಮಗ್ರತೆ (totality) ಎಂದು ಭಾವಿಸುತ್ತದೆ ; ಸಮಷ್ಟಿ (collection) ಎಂದಲ್ಲ ಹಾಗೂ ಈ ಸಮಗ್ರತೆಯನ್ನು ಮಹತ್ವವಿಲ್ಲದಂತಿರುವ ಅವನ ನಡತೆಯಲ್ಲಿಯೂ ಗ್ರಹಿಸಬಹುದು. ಮಾನವನ ಬೇರೆ ಬೇರೆ ನಡತೆಗಳನ್ನು ತುಲನೆ ಮಾಡುವುದರ ಮೂಲಕ ಅವನ ಸಮಗ್ರತೆಯನ್ನು ಗ್ರಹಿಸುವ ಪ್ರಾಯಿಡ್ ಹಾಗೂ ಅವನ ಅನುಯಾಯಿಗಳು ರೂಪಿಸಿದ ಈ ತುಲನಾತ್ಮಕ ರೀತಿಯನ್ನೇ ಸಾರ್ತ್ರ ತನ್ನ ಈ ಅಸ್ತಿತ್ವವಾದೀ ಮನೋವಿಶ್ಲೇಷಣೆಯಲ್ಲಿ ಅನುಸರಿಸುತ್ತಾನೆ. ಅಸ್ತಿತ್ವವಾದೀ ಮನೋವಿಶ್ಲೇಷಣೆಯ ಪ್ರಥವು ಮೂಲಭೂತ ಹಾಗೂ ಪ್ರತ್ಯೇಕ ತತ್ವವೆಂದರೆ ಮಾನವ ಮುಕ್ತ ಎನ್ನುವುದು. ಅದು ಅನುವಂಶಿಕತೆ, ಮಾನವನ ಚಾರಿತ್ರ್ಯ ಮೊದಲಾದ ಅನುಭವಪೂರ್ವ ವಿಚಾರಗಳನ್ನು ನಿರಾಕರಿಸುತ್ತದೆ. ಅದು ಅಸ್ತಿತ್ವಕ್ಕಿಂತ ಮೊದಲು ಇನ್ನಾವುದೂ ಇಲ್ಲ ಎಂದು ಭಾವಿಸುತ್ತದೆ. ಮಾನವ ಮುಕ್ತ ಹಾಗೂ ಅವನ ಆಯ್ಕೆಗಳೆಲ್ಲ ಆಧಾರರಹಿತವಾದುದರಿಂದ ಪರಿಸರ ಯಾಂತ್ರಿಕವಾಗಿ ಅವನ ಮೇಲೆ ಪ್ರಭಾವ ಬೀರುತ್ತದೆ ಎನ್ನಲಾಗದು. ಆದರೂ ಅವನು ಪರಿಸರವನ್ನು ಗ್ರಹಿಸಿ ಅದನ್ನು ಸಾರ್ತ್ರ ‘ಸನ್ನಿವೇಶ’ ಎನ್ನುವ ಸ್ಥಿತಿಯಲ್ಲಿ ಪರಿವರ್ತಿಸುತ್ತಾನೆ ಹಾಗೂ ಅಷ್ಟರ ಮಟ್ಟಿಗೆ ಅದರಿಂದ ಪ್ರಭಾವಿತನಾಗುತ್ತಾನೆ. ಹಾಗಿದ್ದರೂ ಸಹ ಅಸ್ತಿತ್ವವಾದೀ ಮನೋವಿಶ್ಲೇಷಣೆಯಲ್ಲಿ ಪರಿಸರದ ವಸ್ತುನಿಷ್ಠ ವಿವರಣೆಯ ಪ್ರಯೋಜನವಿಲ್ಲ. ಮಾನವನ ರೂಪುಗೊಳ್ಳುವ ಸಾಧ್ಯತೆಯನ್ನು ಇತಿಹಾಸಕ್ಕಿಂತ ಮೊದಲಿನ ರೂಪುಗೊಳ್ಳದ ಅರಗು ಎನ್ನುವಾಗ ಅನುಭವವಾದೀ ಮನೋವಿಶ್ಲೇಷಣೆಯ ಅಸ್ತಿತ್ವವಾದೀ ಮನೋವಿಶ್ಲೇಷಣೆಯ ಇದೇ ವಿಚಾರಕ್ಕೆ ಬಹಳ ಹತ್ತಿರ ಬರುತ್ತದೆ. ಆದರೆ ಇದರ ಅರ್ಥ ಅಸ್ತಿತ್ವವಾದೀ ಮನೋವಿಶ್ಲೇಷಣೆ ಮಾನವನನ್ನು ಅವನ ಪರಿಸರದ ಹೊರತಾಗಿ ಭಾವಿಸುತ್ತದೆ ಎಂದಲ್ಲ. ಸಮಗ್ರ ಪರಿಸರವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮಾನವನನ್ನು ಅರ್ಥ ಮಾಡಿಕೊಳ್ಳಬೇಕು.
ಆಯ್ಕೆ ಆಧಾರ ರಹಿತವಾದದ್ದು ಎನ್ನಲಾಗುತ್ತದೆ ; ಅಂದರೆ ಆಯ್ಕೆಗೆ ಆಧಾರ ಎನ್ನುವಂತಹದು ಯಾವುದಾದರೂ ಇದ್ದರೆ, ಅದೂ ಮಾನವನಿಂದ ಆಯ್ಕೆ ಮಾಡಲಾಗಿದ್ದೇ. ಯಾವುದಾದರೂ ‘ಸನ್ನಿವೇಶ’ ಆಯ್ಕೆಯ ಆಧಾರಕ್ಕೆ ಸಹಾಯವಾಗಿದ್ದರೆ ಅಂತಹ ಸನ್ನಿವೇಶ” ಸಹ ಅವನಿಂದ ಆಯ್ಕೆ ಮಾಡಲಾದದ್ದೇ. ಈ ರೀತಿ ವಿಚಾರಮಾಡುತ್ತ ಹೋದರೆ ನಾವು ಯಾವುದೇ ಆಧಾರವೂ ಇಲ್ಲದ ಮೂಲಭೂತ ಅಂದರೆ ಮುಕ್ತ ಆಯ್ಕೆಗೆ ಬಂದು ತಲುಪುತ್ತೇವೆ. ಈ ಮೂಲಭೂತ ಆಯ್ಕೆ (Original choice) ಎಲ್ಲ ತರ್ಕಕ್ಕೂ ಪೂರ್ವದ್ದು ಹಾಗೂ ಅಸ್ತಿತ್ವವಾದೀ ಮನೋವಿಶ್ಲೇಷಣೆ ಇದೇ ಮೂಲಭೂತ ಆಯ್ಕೆಯನ್ನು ನಿರ್ದಿಷ್ಟ ಪಡಿಸಲು ಪ್ರಯತ್ನಿಸುತ್ತದೆ. ಅನುಭವವಾದೀ ಮನೋವಿಶ್ಲೇಷಣೆ ನಿರ್ದಿಷ್ಟ ಪಡಿಸಲು ಪ್ರಯತ್ನಪಡುವ ಮನೋಗ್ರಂಥಿ (Complex)ಯೂ ಸಹ ತರ್ಕ ಪೂರ್ವದ್ದಾದುದರಿಂದ ಅಷ್ಟರ ಮಟ್ಟಿಗೆ ಇವೆರಡೂ ಮನೋವಿಶ್ಲೇಷಣೆಗಳು ಸದೃಶವೆನ್ನಬಹುದು.
ಆಸ್ತಿತ್ವವಾದೀ ಮನೋವಿಶ್ಲೇಷಣೆಯ ಎರಡನೆಯ ಮೂಲಭೂತ ಹಾಗೂ ಪ್ರತ್ಯೇಕ ತತ್ವವೆಂದರೆ ಸುಪ್ತಚೇತನವನ್ನು (unconscious) ಅಲ್ಲಗಳೆಯುವುದು. ಇದಕ್ಕೆ ತದ್ವಿರುದ್ಧವಾಗಿ, ಅನುಭವವಾದೀ ಮನೋವಿಶ್ಲೇಷಣೆ ಸುಪ್ತ ಚೇತನದ ಕಾಲ್ಪನಿಕ ಅಸ್ತಿತ್ವದ ಮೇಲೆಯೇ ಆಧಾರಿತವಾಗಿದೆ. ಈ ಸುಪ್ತಚೇತನವು ಮಾನವನ ಪ್ರಜ್ಞಾಯುತ ಕಾರ್ಯಗಳನ್ನು ಪೂರ್ವನಿಶ್ಚಿತಪಡಿಸುವುದರಿಂದ ಅದು ಅಸ್ತಿತ್ವವಾದದ ಸತ್ವಕ್ಕಿಂತ ಅಸ್ತಿತ್ವ ಮೊದಲು ಎನ್ನುವ ಮೂಲ ತತ್ವಕ್ಕೆ ತದ್ವಿರುದ್ದ ತತ್ವವಾಗುತ್ತದೆ. ಸಾರ್ತ್ರ ಇಲ್ಲಿ ಪ್ರಶ್ನೆಗಳ ಸುರಿಮಳೆ ಮಾಡುತ್ತಾನೆ. “ಮನೋಗ್ರಂಥಿ (Complex) ಒಂದು ವೇಳೆ ನಿಜವಾಗಿಯೂ ಸುಪ್ತಚೇತನದಲ್ಲಿಯೇ (unconscious) ಇರುವುದಾದರೆ ಅಂದರೆ ಸಂಕೇತವನ್ನು ಹಾಗೂ ಸಂಕೇತದ ವಸ್ತುವನ್ನು (object signified) ಬೇರ್ಪಡಿಸುವ ಗೋಡೆ ಒಂದು ಇದ್ದಲ್ಲಿ-ಪ್ರಜ್ಞೆ ಅದನ್ನು ಹೇಗೆ ಗುರುತಿಸಲು ಸಾಧ್ಯ ? ಸುಪ್ತಚೇತನ ಮನೋಗ್ರಂಥಿ ತನ್ನನ್ನು ತಾನೇ ಗುರುತಿಸಿಕೊಳ್ಳುವುದೇ ? ಆದರೆ ಅದಕ್ಕೆ ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲವೆಂದು ಹೇಳಲಾಗುವುದಿಲ್ಲವೇ? ಆದರೆ ಸಂಕೇತಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ ಎಂದು ಒಂದು ವೇಳೆ ಭಾವಿಸಿದ್ದೇ ಆದರೆ ಅದನ್ನು ಸುಪ್ತ ಚೇತನ ಪ್ರಜ್ಞೆಯನ್ನಾಗಿ (Conscious unconsciousness) ಮಾಡಿದಂತಾಗುವುದಿಲ್ಲವೇ ?” 6 ಇದಕ್ಕೂ ಹೆಚ್ಚಾಗಿ ಸುಪ್ತಚೇತನ ಎನ್ನುವುದು ಇರುವುದಾದರೂ ಹೇಗೆ ಸಾಧ್ಯ? ಪ್ರಾಯ್ಡ್‌ ದಮನ (repression) ಹಾಗೂ ರೋಧಕ ಗ್ರಂಥಿ (censor) ಎಂದು ಕರೆಯುವ ಮಾನಸಿಕ ಸ್ಥಿತಿಗಳನ್ನು ಸಾರ್ತ್ರ ಪೂರ್ತಿ ಅಲ್ಲಗಳೆಯುತ್ತಾನೆ: ರೋಧಕ ಗ್ರಂಥಿ ಹಲವು ಮಾನಸಿಕ ಪ್ರವೃತ್ತಿಗಳನ್ನು ಪ್ರಜ್ಞಾಯುತವಾಗಲು ಬಿಡುತ್ತದೆ ; ಹಾಗೂ ಬೇರೆ ಹಲವು ಪ್ರವೃತ್ತಿಗಳನ್ನು ಹಾಗಾಗಲು ಬಿಡುವುದಿಲ್ಲ ಎಂದು ಹೇಳಿದರೆ ಒಗಟುಗಳಲ್ಲಿ ಮಾತನಾಡಿದ ಹಾಗಾಗುತ್ತದೆ. ದವನ ಕಾರ್ಯದ ಹಾಗೂ ದವನ ಮಾಡಲ್ಪಡುವ ಪ್ರವೃತ್ತಿಯ ಪ್ರಜ್ಞೆ ಇಲ್ಲದೆಯೇ ರೋಧಕ ಗ್ರಂಥಿ ಹೇಗೆ ಪ್ರವೃತ್ತಿಗಳನ್ನು ಆ ಕಾರ್ಯಕ್ಕಾಗಿ ಆಯ್ದುಕೊಳ್ಳಲು ಸಾಧ್ಯ ? ಆದುದರಿಂದ ಸಾರ್ತ್ರನಿಗೆ ರೋಧಕ ಶಕ್ತಿ ಎಂಬುದು ಒಂದು ಕೆಟ್ಟ ನಂಬಿಕೆ (Bad faith) ಮಾತ್ರ. ನಮಗೆ ದಮನಕಾರ್ಯದ ಹಾಗೂ ದಮನ ಮಾಡಲಾದ ಪ್ರವೃತ್ತಿಗಳ ಪ್ರಜ್ಞೆ ಇದ್ದೇ ಇರುತ್ತದೆ ಆದರೂ ನಾವು ಅವು ಸುಪ್ತಚೇತನೆಯಲ್ಲಿ ಇರುತ್ತವೆ ಎಂದು ಹೇಳುತ್ತೇವೆ. ಹೀಗಾಗಿ ಮೋಸ ಮಾಡುವವರೂ ನಾವೇ ಹಾಗೂ ಮೊಸ ಹೋಗುವವರೂ ನಾವೇ. ಈ ಕಾರಣಗಳಿಂದಾಗಿ ಅಸ್ತಿತ್ವವಾದೀ ಮನೋವಿಶ್ಲೇಷಣೆ ಸುಪ್ತಚೇತನೆಯ ಕಲ್ಪನೆಯನ್ನೇ ನಿರಾಕರಿಸುತ್ತದೆ. “ಅದು ಮಾನಸಿಕ ಕೃತಿಯನ್ನು ಪ್ರಜ್ಞೆಯೊಂದಿಗೆ ಸಹ ಅಸ್ತಿತ್ವವುಳ್ಳದ್ದನ್ನಾಗಿ ಮಾಡುತ್ತದೆ”. 7
ಆದರೆ ಫ್ರಾಯ್‌‌ಡ್‌ನ ಈಡಿಪಸ್ ಕಾಂಪ್ಲೆಕ್ಸನ್ನಾಗಲೀ, ಆಡ್ಲರನ ಕೀಳರಿಮೆ ಮನೋಗ್ರಂಥಿ (inferiority complex) ಅಥವಾ ನೀತ್ಸೆಯ ಅಧಿಕಾರೀ ಸಂಕಲ್ಪ (will to power) ವನ್ನಾಗಲೀ ಸಾರ್ತ್ರ ಪೂರ್ತಿಯಾಗಿ ಅಲ್ಲಗಳೆಯುವುದಿಲ್ಲ. ಅವುಗಳನ್ನು ಇನ್ನೂ ಮೂಲಭೂತ ಪ್ರವೃತ್ತಿಗಳಲ್ಲಿ ವಿಭಜಿಸಲು ಅಸಾಧ್ಯ ಎಂಬ ಭಾವನೆಯನ್ನು ಮಾತ್ರ ಅಲ್ಲಗಳೆಯುತ್ತಾನೆ. ಹಾಗೆ ನೋಡಿದರೆ ಸಾರ್ತ್ರನೇ ಎಕ್ಟಿಯನ್* ಹಾಗೂ ಜೋನಾಹ** ಎಂಬೆರಡು ಮನೋಗ್ರಂಥಿಗಳನ್ನು ಮನೋಗ್ರಂಥಿಗಳ ಸೂಜಿಗೆ ಸೇರಿಸಿದ್ದಾನೆ ಎನ್ನಲಾಗುತ್ತದೆ. ಯಾವುದೇ ಮನುಷ್ಯ ಕೀಳುತನದ ಮನೋಭಾವನೆಯಿಂದ ವ್ಯಥೆ ಪಡುತ್ತಿದ್ದರೆ ಅದೂ ಅವನ ಆಯ್ಕೆಯೇ. ತನ್ನ ಆಯ್ಕೆಯ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಮನುಷ್ಯ ಕೀಳುತನದ ಭಾವನೆಯನ್ನು ಅಪ್ಪುತ್ತಾನೆ ಎನ್ನುತ್ತಾನೆ ಸಾರ್ತ್ರ. ಹೀಗಾಗಿ ಆ ಮನುಷ್ಯ ಕೆಟ್ಟ ನಂಬಿಕೆಯ (Bad faith) ಜೀವನ ನಡೆಸುತ್ತಾನೆ. ಫ್ರಾಯ್ಡ್‌ ಹೇಳುವ ಕಾಮ ವಾಂಛೆ (libido) ಅಥವಾ ಕೀಳುತನದ ಭಾವನೆಗಳು ಮೂಲಭೂತ ಪ್ರವೃತ್ತಿಗಳಾಗಿದ್ದು, ಮನುಷ್ಯ ಬಾಲ್ಯದಲ್ಲಿಯೇ ಅವುಗಳಿಗೆ ಅಂಟಿಕೊಳ್ಳುವುದಾದರೆ ಅವನ ಭವಿಷ್ಯ ಪೂರ್ವನಿಶ್ಚಿತವಾಗಿಬಿಡುತ್ತದೆ. ಆದುದರಿಂದ ಈ ಮನೋಗ್ರಂಥಿಗಳು ಅಸ್ತಿತ್ವವಾದೀ ಮನೋವಿಶ್ಲೇಷಣೆ ನಿರ್ದಿಷ್ಟಪಡಿಸಬೇಕೆನ್ನುವ ಮೂಲಭೂತ ಆಯ್ಕೆ ಅಥವಾ ಮೂಲಭೂತ ಯೋಜನೆಗಳಾಗುವುದಿಲ್ಲ. ‘ಕಾವು ವಾಂಛೆ ಅಥವಾ ಅಧಿಕಾರೀ ಸಂಕಲ್ಪ ವಾಸ್ತವವಾಗಿ ಅಸ್ಪಷ್ಟ ಹಾಗೂ ವಿಚಾರಣೆಯ ‘ಅವಿಭಾಜ್ಯ ಅಂತ್ಯ’ದ ಪೂರ್ವದ ಅಸ್ತಿತ್ವದಂತೆಯೂ ಅನಿಸುವುದಿಲ್ಲ.7
ಮಾನವ ಶರೀರದಲ್ಲಿರುವ ರಂಧ್ರಗಳ ಬಗ್ಗೆ ಮಕ್ಕಳಿಗೆ ಇರುವ ಆಸಕ್ತಿಯನ್ನು ಅನುಭವವಾದೀ ಮನೋವಿಜ್ಞಾನ ಅವುಗಳ ಯೋನಾಸಕ್ತಿ ಎಂದು ವಿವರಿಸುತ್ತದೆ. ಮಕ್ಕಳ ಯೊನಾಸಕ್ತಿಯಲ್ಲಿ ಪ್ರಥಮಾವಸ್ಥೆ ಬಾಯಿಗೆ ಸಂಬಂಧಿಸಿದ್ದು ಹಾಗೂ ದ್ವಿತೀಯಾವಸ್ಥೆ ಗುದದ್ವಾರಕ್ಕೆ ಸಂಬಂಧಿಸಿದ್ದು ಎಂದು ಪ್ರಾಯ್ಡ್ ಹೇಳುತ್ತಾನೆ. ಆದರೆ ಸೆಕ್ಸ್ ಬಗ್ಗೆ ಸಾರ್ತ್ರನ ವಿಚಾರಗಳೇ ಬೇರೆ. ನಮಗೆ ಗುಹ್ಯ ಅಂಗಗಳಿರುವುದರಿಂದ ನಾವು ಯೋನಾ ಸಕ್ತಿ ಪಡೆದಿರುವುದಿಲ್ಲ: ನಮಗೆ ಯೊನಾಸಕ್ತಿ ಇರುವುದರಿಂದ ನಮಗೆ ಗುಹ್ಯಾಂಗಗಳು ಇರುತ್ತವೆ ಎನ್ನುತ್ತಾನೆ ಸಾರ್ತ್ರ. ಆದುದರಿಂದ ಯೊನಾಸಕ್ತಿ ಮಾನವನಲ್ಲಿ ಪ್ರಾಥಮಿಕವಾದುದು. ಆದುದರಿಂದಲೇ ಹೆಂಗಸರಲ್ಲಿ ಋತುಬಂಧವಾದ ನಂತರವೂ ಯೊನಾಸಕ್ತಿ ಇದ್ದೇ ಇರುತ್ತದೆ. ಮಗು ಮೊದಲು ‘ಇದ್ದು’ ನಂತರ ‘ಆಗು’ವುದರಿಂದ ಸ್ವಂತ ಅನುಭವಕ್ಕಿಂತ ಮೊದಲು ಆ ಮಗುವಿಗೆ ತಂದೆ ತಾಯಿಗಳ ಅನುಭವದ ಪರಿಣಾಮದಿಂದಾಗಿ ‘ಪಿತ್ರಾರ್ಜಿತ’ದಂತೆ ಯೊನಾಸಕ್ತಿ ಬರುವುದಿಲ್ಲ. ಆದುದರಿಂದ ಸಾರ್ತ್ರನ ಪ್ರಕಾರ ಮಗು ತನ್ನ ಶರೀರದಲ್ಲಿರುವ ರಂಧ್ರಗಳಲ್ಲಿ ಶೂನ್ಯತೆಯನ್ನು ಅನುಭವಿಸುವುದರಿಂದ ಅವುಗಳಲ್ಲಿ ಆಸಕ್ತಿ ಹೊಂದುತ್ತದೆ.
ಮನೋವಿಶ್ಲೇಷಣೆಯ ಉದ್ದೇಶ ಸುಪ್ತಚೇತನದಲ್ಲಿ ಅಡಗಿದ, ದವನ ಮಾಡಲಾದ, ಅವರೋಧಿಸಲಾದ ಪ್ರವೃತ್ತಿಗಳನ್ನು ಪ್ರಜ್ಞಾಸ್ಥಿತಿಗೆ ತರುವುದು, ಆದುದರಿಂದ ಅಸ್ತಿತ್ವವಾದೀ ಮನೋವಿಶ್ಲೇಷಣೆ ಸುಪ್ತಚೇತನೆಯನ್ನು ಅಲ್ಲಗಳೆಯುವುದಾದರೆ, ಅಂತಹ ಮನೋವಿಶ್ಲೇಷಣೆಯ ಉದ್ದೇಶವಾದರೂ ಏನು ಎಂದು ಅನುಭವವಾದೀ ಮನೋವಿಶ್ಲೇಷಕರು ಪ್ರಶ್ನಿಸುತ್ತಾರೆ.
ಪ್ರಜ್ಞೆ ಹಾಗೂ ಜ್ಞಾನ consciousness and cognition) ಗಳ ನಡುವೆ ಭೇಧ ಕಲ್ಪಿಸುವುದರ ಮೂಲಕ ಸಾರ್ತ್ರ ಈ ಪ್ರಶ್ನೆಗೆ ಉತ್ತರಿಸುತ್ತಾನೆ. ಡೆಕಾರ್ಟನ ‘ಪ್ರಜ್ಞೆ’ (cogito) ಪರ‍್ಯಾಲೋಚಿಸುತ್ತಿರುವ (reflecting) ಪ್ರಜ್ಞೆ. ಆದುದರಿಂದ ಡೆಕಾರ್ಟನಲ್ಲಿ ಜ್ಞಾನ ಪ್ರಾಥಮಿಕ, ಆದರೆ ಸಾರ್ತ್ರನ ‘ಪ್ರಜ್ಞೆ’ ಪರ್ಯಾಲೋಚನಾ ಪೂರ್ವದ್ದು (prereflexive). ಆದದರಿಂದ ಇಲ್ಲಿ ಪ್ರಜ್ಞೆ ಪ್ರಾಥಮಿಕ. ಆದುದರಿಂದ ಒಬ್ಬ ಮನುಷ್ಯ ತನ್ನ ಜೀವನದ ಮೂಲಭೂತ ಯೋಜನೆಯನ್ನು ಪ್ರಜ್ಞಾಪೂರ್ವಕವಾಗಿ ಜೀವಿಸಿದರೂ ಅದರ ಅರ್ಥ ಅವನು ಅದನ್ನು ಜ್ಞಾನಪೂರ್ವಕ (knowingly) ವಾಗಿ ನಿರ್ವಹಿಸುತ್ತಾನೆ ಎಂದೇನಲ್ಲ.
ಅಸ್ತಿತ್ವವಾದೀ ಮನೋವಿಶ್ಲೇಷಣೆ ಅಸ್ತಿತ್ವವಾದೀ ತತ್ವಚಿಂತನೆಯಂತೆ ಇನ್ನೂ ಪೂರ್ಣ ವಿಜ್ಞಾನವಾಗಿ ರೂಪುಗೊಂಡಿಲ್ಲ. ಅದಿನ್ನೂ ವಿಕಾಸ ಹೊಂದುತ್ತಿದೆ. ಸಾರ್ತ್ರನೂ ಸಹ ಅದಕ್ಕೆ ಮೂಲ ನೆಲೆಗಟ್ಟನ್ನು ಒದಗಿಸದೇ ಅದರ ರೇಖಾಚಿತ್ರವನ್ನು ಮಾತ್ರ ಒದಗಿಸುತ್ತಾನೆ. ಅದರೂ ಈ ಮನೋವಿಶ್ಲೇಷಣೆಗೆ ಭವಿಷ್ಯ ಇದೆಯೆಂದು ಸಾರ್ತ್ರನಿಗೆ ಗೊತ್ತು. ಆದುದರಿಂದ ಆತ ಹೇಳುತ್ತಾನೆ, “ಈ ಮನೋವಿಶ್ಲೇಷಣೆ ಇನ್ನೂ ತನ್ನ ಫ್ರಾಯ್ಡ್‌ನನ್ನು ಪಡೆದಿಲ್ಲ. ಬಹಳೆಂದರೆ ಹಲವು ಸಾರ್ಥಕ ಜೀವನ ಚರಿತ್ರೆಗಳಲ್ಲಿ ಅದರ ಪೂರ್ವರೂಪವನ್ನು ಮಾತ್ರ ಕಾಣಬಹುದು. ಬೇರೆ ಕಡೆಗೆ ನಾನು ಫ್ಲಾಬರ್‌ ಹಾಗೂ ದೋಸ್ತೋವ್‌ಸ್ಕಿಯವರ ಜೀವನ ಚರಿತ್ರೆಗಳ ಮೂಲಕ ಇದರ ಪ್ರಯತ್ನ ಮಾಡಬೇಕೆಂದಿದ್ದೇನೆ. ಆದರೆ ಇದು ಈಗ ಅಸ್ತಿತ್ವದಲ್ಲಿದೆ ಅಥವಾ ಇಲ್ಲ ಅನ್ನುವುದು ನಮಗೆ ಮುಖ್ಯವಲ್ಲ. ಈ ಮನೋವಿಶ್ಲೇಷಣೆಯೂ ಸಾಧ್ಯ ಎನ್ನುವುದು ಮುಖ್ಯ”. 9 ವಿಜ್ಞಾನದಲ್ಲಿ, ತಾತ್ವಿಕವಾಗಿ ಸಾಧ್ಯವಾದುದು ಅಸ್ತಿತ್ವದಲ್ಲೂ ಇರುತ್ತದೆ ಎಂಬುದು ವಿದಿತ ಸತ್ಯ.
.
ಟಿಪ್ಪಣಿ :
1 ಸಾರ್ತ್ರ- ಆಲ್ಫ್ಮಡ್ ಸ್ಟರ್ನ, ಪುಟ 3
2 ಬೀಯಿಂಗ್ ಎಂಡ್ ನಥಿಂಗ್‌ನೆಸ್‌, ಪುಟ 557
3 ” ಪುಟ 568
4 ” ಪುಟ 574
5 ” ಪುಟ 575
6 ” ಪುಟ 573
7 ” ಪುಟ 570
8 ” ಪುಟ 571
9 ” ಪುಟ 575

* ಎಕ್ಸಿಯನ್ ಕಾಂಪ್ಲೆಕ್ಸ್ ; ಯೊನ ಜಿಜ್ಞಾಸೆಯ ಛಾಯೆ ಇರುವ ಹಾಗೂ ಸ್ವಪ್ರಯೋಜನಕ್ಕಾಗಿ ಮಾಡುವ ಅತಿಕ್ರಮಣ ‘ಜ್ಞಾನ ಹೊಂದುವುದು’ ಎನ್ನುವುದರ ಒಂದು ರೂಪ ಎಂದು ತೋರಿಸುವ ಪ್ರತೀಕಗಳ ಸಮಗ್ರತೆ.
** ಜೊನಾಕ್ ಕಾಂಪ್ಲೆಕ್ಸ್ : ಜ್ಞಾನದ ವಸ್ತುವನ್ನು ಅಥವಾ ತನ್ನ ಪ್ರಿಯನ(ಳ)ನ್ನು ತನ್ನೊಂದಿಗೆ ಸಮೀಕರಿಸುವ – ಆ ವಸ್ತುವಿನ ‘ಬಾಹ್ಯ ವಸ್ತು’ ಎನ್ನುವ ಗುಣಕ್ಕೆ ಧಕ್ಕೆ ಬರದ ಹಾಗೆ-ಅವೈಚಾರಿಕ ಆಸೆ.

Close

ಎರಡು ಕವನಗಳು

ಎರಡು ಕವನಗಳು

-ಎಸ್ ದಿವಾಕರ್

೧ ಪೊಲೀಸರು ಮತ್ತು ಕಳ್ಳರು
ಯಾವಾಗಲೂ
ಕೆಲವರು ಪೊಲೀಸರು
ಇತರರು ಕಳ್ಳರು
ಚಂದ್ರನನ್ನೇ ಕದ್ದು ಬಚ್ಚಿಡುತ್ತಾರೆ ಕಳ್ಳರು,
ಕಳ್ಳರಿಗಾಗಿ ಚಂದ್ರನಿಗಾಗಿ
ಬೇಟೆಯಾಡುತ್ತಾರೆ ಪೋಲೀಸರು ;
ಕಳ್ಳರನ್ನು ಹಿಡಿದು ಚಂದ್ರನನ್ನು
ಸಿಕ್ಕಿಸುತ್ತಾರೆ ಮತ್ತೆ ಆಕಾಶದಲ್ಲಿ.

ಹುಡುಗಿಯೊಬ್ಬಳ ಹೃದಯವನ್ನು ಕಡಿಯುತ್ತಾರೆ ಕಳ್ಳರು,
ಕಳ್ಳರಿಗಾಗಿ ಹೃದಯಕ್ಕಾಗಿ
ಬೇಟೆಯಾಡುತ್ತಾರೆ ಪೋಲೀಸರು ;
ಕಳ್ಳರನ್ನು ಹಿಡಿದು ಹೃದಯವನ್ನು
ತಂದು-ತೋರಿಸುತ್ತಾರೆ ಆ ಹುಡುಗಿಗೆ.
ಹುಡುಗಿ ಕಿರಿಚುತ್ತಾಳೆ : “ನನಗೇಕೆ ಹೃದಯ ?”

ಅವಳ ಗಂಟಲಿನಲ್ಲಿ ಹೃದಯವನ್ನು ತುರುಕಿ ಹೇಳುತ್ತಾರೆ
“ಇದು ನಮ್ಮ ಕೆಲಸ !”

ಅಲೆಯಲೆಯ ಕಿಡಿಗಳನ್ನು ಕದ್ದು ಹೋಗುತ್ತಾರೆ ಕಳ್ಳರು
ಬಚ್ಚಿಟ್ಟುಕೊಳ್ಳುತ್ತಾರೆ ತಂತಮ್ಮ ಹೃದಯದಲ್ಲಿ ;
ಕಳ್ಳರನ್ನು ಹಿಡಿದು ಅವರ ಹೃದಯಗಳ ಬಡಿದು
ಮತ್ತೆ ಅಲೆಗಳ ಮೇಲೆ ಎರಚುವರು ಕಿಡಿಗಳನ್ನು ಪೋಲೀಸರು.
ಕಿಡಿ ಆರಿಹೋಗುವುವು
ಪೋಲೀಸರೆನ್ನುವರು:
“ಅದು ಹಾಗೆಯೇ. ನಮ್ಮದೇನಿದೆ ತಪ್ಪು ?
ಮಾಡಿಬಿಟ್ಟಿದ್ದೇವೆ ನಮ್ಮ ಕರ್ತವ್ಯ.”

ಕೈಗೆ ಸಿಕ್ಕಿದ್ದೆಲ್ಲ ಕದ್ದುಬಿಡುತ್ತಾರೆ ಕಳ್ಳರು :
ಒಣಗಿದೆಲೆಗಳು, ಕಾಮನಬಿಲ್ಲ ದಾರಗಳು
ಮುಗುಳ್ನಗೆಯ ಚೂರುಗಳು, ಋತುಗಳ ಪಿಸುಮಾತುಗಳು
ನೀರಮೇಲಿನ ಹೆಜ್ಜೆಗುರುತುಗಳು……….
ಕೈಗೆ ಸಿಕ್ಕಿದ್ದೆಲ್ಲ ಕದ್ದುಬಿಡುತ್ತಾರೆ ಕಳ್ಳರು.

ಪೋಲೀಸರಂತು ಅಟ್ಟಿಸಿಕೊಂಡು ಹೋಗುತ್ತಾರೆ ಕಳ್ಳರನ್ನು ;
ಕೆಲವೊಮ್ಮೆ ಹಿಡಿದಾರು, ಕೆಲವು ಸಲ ಇಲ್ಲ.
ಹಿಡಿಯಲಾಗದ ಸಮಯದಲ್ಲಿ ಕೂತುಕೊಂಡು
ಹೊಳಪು ಮಾಡುತ್ತಾರೆ ತಮ್ಮ ಬೂಟುಗಳನ್ನು
ಭ್ರಮೆಯಿಂದ ಎಲ್ಲ ಕಡೆ ಹಂಚಿ ಹೋಗುತ್ತಾರೆ
“ಕದಿಯುವುದು ಕೆಟ್ಟದ್ದು” ಎಂಬ ಪತ್ರಗಳನ್ನು ;
ಆದರೂ ಪೋಲೀಸರಿಗೆ ತಿಳಿಯುವುದಿಲ್ಲ
ಕಳ್ಳರು ಕದಿಯುವುದೆಲ್ಲ
ಅಷ್ಟೇ ಸಹಜವಾಗಿ ಮತ್ತೆ ಹುಟ್ಟುವುವೆಂದು,
ಕಳ್ಳರಿಂದ ವಾಪಸು ತಂದದ್ದೆಲ್ಲ
ಅವುಗಳ ಮೂಲಸ್ಥಳದಲ್ಲಿ ಹೊಂದಿಕೊಳ್ಳುವುದಿಲ್ಲವೆಂದು.
ಈ ಸುದ್ದಿ ಕೇಳಿದ ತಕ್ಷಣವೆ ಕಳ್ಳನಾಗುತ್ತಾನೆ
ಬೇಸತ್ತ ಕೆಲವರು ಕಳ್ಳರು

ಪೊಲೀಸರಾಗುವ ಹಾಗೆ !

ಎಂದೆಂದಿಗೂ
ಕೆಲವರು ಮಾತ್ರ ಪೊಲೀಸರು
ಕೆಲವರು ಮಾತ್ರ ಕಳ್ಳರು.

೨ ಕ್ರಿಯಾಪದಗಳು
ಮೌನವಾಗಿದ್ದಾಗ ಮುತ್ತಿಕೊಳ್ಳುತ್ತವೆ ನನ್ನ
ಕ್ರಿಯಾಪದಗಳು
ಅಪರಿಚಿತ ಮೋರೆಗಳ ಹಾಗೆ,
ಕ್ರಿಯಾಪದಗಳು
ಬತ್ತಲೆಯ ಕ್ರಿಯಾಪದಗಳು, ಅತ್ಯವಶ್ಯ ಕ್ರಿಯಾಪದಗಳು
ಕ್ಷಾಮಪೀಡಿತ ಕ್ರಿಯಾಪದಗಳು, ಕಿವುಡು ಕ್ರಿಯಾಪದಗಳು
ಹೆಸರಿರದ ಬರೀ ಕ್ರಿಯಾಪದಗಳು,
ಆಗೀಗ ಬದಲಾಗುವ ಆಶಾವಾದದ ಕೆಳಗೆ
ಗುಹೆಗಳಲ್ಲಿ ವಾಸಿಸುವ
ಗುಹೆಗಳಲ್ಲಿ ಮಾತಾಡುವ ಕ್ರಿಯಾಪದಗಳು.

ಹೋಗುತ್ತವೆ ಕೆಲಸಕ್ಕೆ ಪ್ರತಿದಿನ ಬೆಳಗ್ಗೆ ;
ಕಲಸುತ್ತವೆ ಸಿಮೆಂಟು, ಗಾರೆ, ಕಲ್ಲುಗಳ ಹೊರುತ್ತವೆ
ಪಟ್ಟಣವ ಕಟ್ಟುತ್ತವೆ….ಅಲ್ಲ, ನಿಲ್ಲಿಸುತ್ತವೆ
ತಮ್ಮದೇ ಆದ ಏಕಾಂತಕ್ಕೆ ಸ್ಮಾರಕವ
ಯಾರದೋ ನೆನಪಿನಿಂದ ನಾವು ಮರೆಯಾಗುವ ಹಾಗೆ
ದೂರ ಸರಿಯುತ್ತವೆ
ಶಬ್ದಗಳ ಬದಿ ಸರಿಸಮನಾಗಿ ನಡೆಯುತ್ತವೆ
ಸಾಲುನಡೆಯುವ ತಮ್ಮ ಮೂರು “ಕಾಲ’ಗಳೊಡನೆ
ಕ್ರಿಯಾಪದಗಳು ಗೋಲ್ಗೊಥಾ ಗಿರಿಯು ಹತ್ತುತ್ತವೆ.

ಆಕಾಶವಿದೆ ಮೇಲೆ
ಸ್ಮಶಾನದಲ್ಲಿ ಹಾರುವ ಹಕ್ಕಿಯ ಹಾಗೆ
ಮುಚ್ಚಿದ ಬಾಗಿಲ ಮುಂದೆ ನಿಲ್ಲುವ ಹಾಗೆ
ನಿಲ್ಲುತ್ತವೆ ನೆಟ್ಟಗೆ.
ಯಾರೋ ಒಬ್ಬ ತೋಳೆತ್ತಿ ಮೊಳೆ ಹೊಡೆಯುತ್ತಾನೆ
ಭೂತದೊಳಕ್ಕೆ
ವರ್ತಮಾನದೊಳಕ್ಕೆ
ಭವಿಷ್ಯತ್ತಿನೊಳಕ್ಕೆ

ಯಾರೊಬ್ಬರೂ ಎಂದಿಗೂ ಬರುವುದಿಲ್ಲ ಸಾಕ್ಷಿ ನೀಡುವುದಕ್ಕೆ
ಸುತ್ತಿಗೆಯ ಹೊಡೆತಗಳೆ
ಶಾಶ್ವತ ಲಯ
ಕ್ರಿಯಾಪದಗಳ ಕೆಳಗೆ ಭೂಮಿಯೇ ಉತ್ಪ್ರೇಕ್ಷೆ
ಆಕಾಶವೇ ರೂಪಕ.

Close

ಚೋಮನ ದುಡಿ(ಚಿತ್ರದ ವಿಮರ್ಶೆ)

ಚೋಮನದುಡಿ
(ಚಿತ್ರದ ವಿಮರ್ಶೆ)

ಇಂಗ್ಲಿಷ್ ಮೂಲ : ಟಿ ಜಿ ವೈದ್ಯನಾಥನ್
ಅನು : ಬಿ ಚಂದ್ರಶೇಖರ

ಸಾಹಿತ್ಯದ ನಾಯಕ ವ್ಯಕ್ತಿಗಳ ಆಧಾರದ ಮೇಲೆ ಸಿನಿಮಾ ಮಾಡುವುದನ್ನು ಜನ ನಿಲ್ಲಿಸಬೇಕು. ಸಾಹಿತ್ಯಕ್ಕೆ ಉನ್ನತ ಮನ್ನಣೆ ಇರುವ ಕರ್ನಾಟಕದ ವಿಚಾರದಲ್ಲಂತೂ ಇದು ವಿಶಿಷ್ಟ ಸತ್ಯ. ಇಲ್ಲಿಯ ಲೇಖಕರು ತಮ್ಮ ಸಾಹಿತ್ಯಕ ಪೂರ್ವಗ್ರಹಗಳನ್ನು ಕಳಚಿ ಹಾಕದೆ ರಾತ್ರೋರಾತ್ರಿ ಸಿನಿಮಾ ನಿರ್ದೇಶಕರಾಗಿ ರೂಪಾಂತರಗೊಳ್ಳುತ್ತಾರೆ. “ಸಂಸ್ಕಾರ” (ಆಧಾರ : ಯು. ಆರ್. ಅನಂತಮೂರ್ತಿಯವರ ಕಾದಂಬರಿ) ಯೂರೋಪೇ ಮೂಲ ಸ್ಥಾನವಾದ ಸಂಕೇತಗಳಿಂದ ತುಂಬಿ ತುಳುಕುತ್ತಿತ್ತು. ಹೋದ ವರ್ಷ ‘ಸಂಕೇತ” ‘ಅರ್ಥ’ಗಳ ನಿಧಿಯಾದ ಅಸಹ್ಯವಾದ ‘ಕಾಡು” (ಮತ್ತೆ ಕಾದಂಬರಿ) ಚಿತ್ರವನ್ನು ಮುಂದಿಟ್ಟರು. ಈಗ ಕನ್ನಡ ಕಾದಂಬರಿಗಾರರಲ್ಲಿ ಅಗ್ರಮಾನ್ಯರಾದ ಡಾ. ಶಿವರಾಮ ಕಾರಂತರ ೧೯೩೦ ನೇ ದಶಕದ ಶ್ರೇಷ್ಠ ಕಾದಂಬರಿ “ಚೋಮನ ದುಡಿ”-ಕಂಠಪೂರ್ತಿ ಅರ್ಥ ಸಂಕೇತಗಳಿಂದ ತುಂಬಿ ನಮ್ಮ ತಲೆ ತಗ್ಗುತ್ತದೆ.
“ಚೋಮನ ದುಡಿ”ಯ ತೊಂದರೆ ಚೋಮನಲ್ಲ. ಹುರಿ ಮಾಡಿದ ತೆಳು ಮೈಕಟ್ಟಿನ ವಾಸುದೇವರಾಯರು ಈ ಪಾತ್ರವನ್ನು ಚೆನ್ನಾಗಿ ಮಾಡಿದ್ದಾರೆ. ಇರುವ ತೊಂದರೆ ದುಡಿಯಲ್ಲಿ. ಇದು ಸಲ ಸಲಕ್ಕೂ ಅಡ್ಡಿ ಬಂದು, ಚೋಮನೇ ಒಂದು ನಿರರ್ಥಕ ಅನವಶ್ಯಕ ಜೋಡಣೆಯಂತೆ ತೋರುತ್ತಾನೆ. ನನಗೆ ವಿಶ್ವಾಸಾರ್ಹವಾಗಿ ತಿಳಿದು ಬಂದಿರುವಂತೆ, ಕಾರಂತರ ಕಾದಂಬರಿಯಲ್ಲಿ ಈ ದುಡಿ ಎಷ್ಟು ಮುಖ್ಯವೆಂದರೆ ಅದು ಕಾದಂಬರಿಯ ಆದಿಯಲ್ಲಿಯೇ ಗೋಚರಿಸಿಕೊಳ್ಳುತ್ತದೆ. ಅದರ ಧ್ವನಿ ಕತ್ತಲೆಯನ್ನು ತುಂಬುತ್ತದೆ. ಒಂದು ಕ್ಷಣ ಅದು ವಾಯುವನ್ನು ಆವರಿಸಿ, ಇನ್ನೊಂದು ಕ್ಷಣ ಮೆಲ್ಲಗಾಗುತ್ತದೆ. ಒಳ್ಳೆಯದು. ಅದರ ಹಿಂದೆ ಒಂದು ಜೀವಂತ ಶಕ್ತಿ ಇರುವಂತೆ ತೋರುತ್ತದೆ ಇತ್ಯಾದಿ. ತುಂಬ ಒಳ್ಳೆಯದು. ಆದರೆ ಇದನ್ನು ಸಿನಿಮಾಕ್ಕೆ ಪರಿವರ್ತಿಸುವ ಪ್ರಯತ್ನದ ಪರಿಣಾಮ ಸ್ವಲ್ಪವೂ ಹಿತಕರವಾಗಿಲ್ಲ. ಪಂಜುಗಳನ್ನು ಹೊತ್ತು ನಮ್ಮ ಕಡೆಗೆ ಬರುವ ಹಳ್ಳಿಗರ ದೃಶ್ಯದ ಆರಂಭದ ಚೌಕಟ್ಟುಗಳು ಸರಾಗವಾಗಿ ಹರಿಯುತ್ತವೆ. ಆದರೆ ಚೋಮು ದುಡಿಯನ್ನೂ ಬಾರಿಸುವುದು ಬಂದಾಗ ನಮಗೆ ಸ್ವಲ್ಪ ಕೈಕೊಟ್ಟಹಾಗಾಗುತ್ತದೆ. ಇದೇನು ಅಷ್ಟು ಮುಖ್ಯವಲ್ಲ, ಬರೀ ದಿನನಿತ್ಯದ ಮನೆಮಟ್ಟಿನ ರಂಜನೆ, ಎನ್ನಿಸುತ್ತದೆ. ಕಾದಂಬರಿಯಲ್ಲಿ ಚೋಮ ಜಾತ್ರೆಯಿಂದ ಹೊತ್ತಿಗೆ ಮುಂಚೆ ಹಿಂದಿರುಗುತ್ತಾನೆ. ಉಣ್ಣುವದಕ್ಕೇನೂ
ಮನೆಯಲ್ಲಿಲ್ಲ ; ಗೋಳು ಕರೆಯುವ ಮಕ್ಕಳನ್ನು ಸದೆಬಡಿಯುತ್ತಾನೆ ; ದುಡಿಯ ಬಳಿ ತಿರುಗುತ್ತಾನೆ. ಹಾಡುತ್ತಿದ್ದ ಬೆಳ್ಳಿ ಮಲಗುತ್ತಾಳೆ. ಚೋಮ ಮಾತ್ರ ದುಡಿಯನ್ನು ಬಡಿಯುತ್ತಿರುತ್ತಾನೆ. ಏತಕ್ಕಾಗಿ ಚೋಮ ದುಡಿಯನ್ನು ನುಡಿಸುತ್ತಿದ್ದಾನೆ ಎನ್ನುವುದು ಚಿತ್ರದಲ್ಲಿ ಬಹಳ ಹೊತ್ತಿನವರೆಗೆ ತಿಳಿಯುವುದಿಲ್ಲ. ತನ್ನ ಸಂತೋಷ, ದುಃಖ ಮತ್ತು ಇತರ ಭಾವಗಳನ್ನು ವ್ಯಕ್ತಪಡಿಸುವುದಕ್ಕಾಗಿ ಎಂದು ಲಕ್ಷಣವಾಗಿ ಮುದ್ರಿತವಾದ ಹಸ್ತಪತ್ರಿಕೆಯಿಂದ ತಿಳಿಯುತ್ತದೆ. ಇರಬಹುದು. ಆದರೆ ದುಡಿ ನುಡಿಸುವುದು ಸ್ವಭಾವತಃ ಭಾವಪ್ರಚೋದಕವಲ್ಲದ ಚಿತ್ರ. ಚಡಪಡಿಸುವ ಕುದುರೆಯಂತೆ ಜೋಮ ದುಡಿ ಬಾರಿಸುವಾಗ ಕುಪ್ಪಳಿಸುವುದನ್ನು ತೋರಿಸುವುದರಿಂದ ಕೆಲಸ ಉತ್ತಮವಾಗುವುದಿಲ್ಲ. ಚಿತ್ರದಲ್ಲಿ ಒಂದೇ ಒಂದು ಸಲ ದುಡಿ ನುಡಿಸುವುದು ವಿಲಕ್ಷಣವಾಗಿ ಪರಿಣಾಮಕಾರಿಯಾಗಿದೆ.- ತೋಟದ ಮಾಲಿಕ ವಿಂಗೇಲನಿಂದ ಚೋಮನ ಮಗಳು ಬೆಳ್ಳಿಯ ಶೀಲಭಂಗವಾದಾಗ ವಿವೇಚನೆಯಿಂದ ತಗ್ಗಿಸಿ ಮಿತವಾಗಿ ಆಡಿರುವ ಈ ದೃಶ್ಯವಾದ ಕೂಡಲೆ ಚೋಮ ಒಂಟಿಯಾಗಿ ದುಡಿ ನುಡಿಸುವ ಮಿಡ್‌ಶಾಟ್ ಬರುತ್ತದೆ. ನಿಷ್ಕರುಣೆಯಿಂದ ಸುತ್ತುವ ಫ್ಯಾನ್‌ ಚಿತ್ರಣ, ಅವನ ಜೀವನ ಎಷ್ಟು ಬರಡು, ಭಯಂಕರ ಎಂಬ ಭಾವನೆಗೆ ಒತ್ತಾಸೆಯನ್ನು ಕೊಡುತ್ತದೆ.
ಚೋಮನ ದುಡಿಯನ್ನು ಬಿಟ್ಟು, ಚಿತ್ರದ ಹೆಚ್ಚು ಮಾನವೀಯ ಭಾಗದಲ್ಲಿ ನಾವು ಕಾಣುವುದು ಚೊಮ ವತ್ತು ಅವನ ಐದು ಮಕ್ಕಳ (೪ ಗಂಡು, ೧ ಹೆಣ್ಣು) ಸಂಸಾರ. ಅವರಲ್ಲಿ ಇಬ್ಬರು ಗಂಡುಮಕ್ಕಳನ್ನು ಸಾವಿಗೆ ಒಪ್ಪಿಸಿದ್ದಾಗಿದೆ. ಅಸಹ್ಯ ಕ್ರಿಶ್ಚಿಯನ್ನರನ್ನು ಮದುವೆಯಾದ ಇನ್ನೊಬ್ಬನನ್ನು ಹೀಗೆ ಕಳೆದುಕೊಳ್ಳಲಾಗಿದೆ. ಪ್ರೀತಿಯ ಬೆಳ್ಳಿ ಸ್ವಂತ ಮನೆಯಲ್ಲೆ ತೋಟದ ಗುಮಾಸ್ತೆ ಮನ್ವೇಲನ ಕೂಡ ರತಿಕ್ರೀಡೆಯಾಡಿ ಶ್ರೇಷ್ಠ ಧರ್ಮವನ್ನು ತೊರೆದಿದ್ದಾಳೆ. ಇಲ್ಲಿ “ನಿರ್ಮಾಲ್ಯಂ” ಚಿತ್ರದ ಸ್ಪರ್ಶ ಇರುವುದನ್ನು ನೋಡಿ ! ಆದರೆ ಅಲ್ಲಿ ಬಡತನದಲ್ಲಿ ಅರೆದುಹೋದ ವಲಿಚಪಾಡ್ ಹೆಂಡತಿಯ ಲೈಂಗಿಕ ಶರಣಾಗತಿ ದುರಂತವಾದರೂ ಆಂತರ್ಯದ ಆವಶ್ಯಕತೆ ಇತ್ತು. ಆದರೆ ಇಲ್ಲಿ – ಚೋಮನ ದುಡಿ”ಯಲ್ಲಿ ಅದು ನಿಷ್ಕಾರಣ, ಬಿಟ್ಟೆ, ಮಾತ್ರ. ಬೆಳ್ಳಿಯ ಚಾರಿತ್ರದಲ್ಲಾಗಲಿ, ಚೋಮನ ಜೀವನದಲ್ಲಾಗಲಿ ನಮ್ಮನ್ನು ಈ ಘಟನೆಗೆ ತಯಾರು ಮಾಡುವ ಯಾವುದೂ ಇಲ್ಲ. ತನ್ನ ತಂದೆಯ ಕಣ್ಣಾಲಿ ಎಂಬಂತೆ, ಸಂಸಾರದ ಆಧಾರಸ್ತಂಭ ಎಂಬಂತೆ, ಒಟ್ಟು ಕಟ್ಟಡವನ್ನು ಬಿಗಿಹಿಡಿದಿರುವ ವಜ್ರಗಾರೆ ಎಂಬಂತೆ, ಬೆಳ್ಳಿಯನ್ನು ಚಿತ್ರದ ಉದ್ದಕ್ಕೂ ತೋರಿಸಿದೆ. ಅವಳು ತೋಟಕ್ಕೆ ಹೋಗುವ ಮುಂಚೆ, ಮನ್ವೇಲ ಅವಳ ಮನೆಗೆ ಬೇರೆ ಬೇರೆ ನಾಲ್ಕು ಸಲ ಬಂದಾಗ ಕೂಡ, ಅವಳು ಆಕರ್ಷಿತಳಾಗಿದ್ದಾಳೆ ಎಂಬ ಸೂಚನೆಯ ಛಾಯೆ ಕೂಡ ಖಂಡಿತವಾಗಿಯೂ ಇಲ್ಲ. ಬಸ್ಸಿನಲ್ಲಿ ತೋಟಕ್ಕೆ ಪ್ರಯಾಣ ಮಾಡುವಾಗ ಅವನ ಕಡೆ ಮಾಸಲು ಕಿರುನಗೆ ಬೀರುತ್ತಾಳೆ ನಿಜ. ಆದರೆ ಇದು ಸಾಮಾಜಿಕ ಕಟ್ಟಳೆಯ ರೀತಿಯಲ್ಲದೆ ಬೇರೇನೂ ಅಲ್ಲ. ರೋಗಗ್ರಸ್ತನಾದ ನೀಲನಿಗೆ ಮನ್ವೇಲ ಔಷಧೋಪಚಾರ ಮಾಡುವಾಗ ಸಹ ಅವಳು ಸೋಲುತ್ತಿದ್ದಾಳೆ ಎಂಬ ಸೂಚನೆ ಇಲ್ಲ. ಸಾಕ್ಷಾತ್ ಭ್ರಷ್ಟೆಯಾಗುವ ದೃಶ್ಯದಲ್ಲಿ ಮಾತ್ರ ಅವಳು ತನ್ನ ಪ್ರಣಯಾಸಕ್ತಿಯ ಚಿನ್ಹೆಗಳನ್ನು ತೋರ್ಪಡಿಸುತ್ತಾಳೆ. ಇಲ್ಲಿಯೂ ಕೂಡ, ಅವನು ಸೀರೆಯನ್ನು ಉಡುಗೊರೆಯಾಗಿ ಕೊಟ್ಟಾಗ ಮಾತ್ರ ಅವಳು ಲಜ್ಜೆಯಿಂದ ಒಲವು ತೋರುತ್ತಾಳೆ. (ಅವಳಿಗೋಸ್ಕರ ಚಿಕ್ಕಮಗಳೂರಿನಿಂದ ಸೀರೆ ತಂದೆ ಎಂದು ಹೇಳುತ್ತಾನೆ. ರವಿಕೆ ಕಣ ಏನಾಯಿತು ?) ಕಥೆಯ ನಿರ್ಣಾಯಕ ಘಟ್ಟಗಳಲ್ಲಿ ಒಂದಾದ ಇಲ್ಲಿ, ಅವಳ ತಂದೆಯ ಸಾಲವೆಲ್ಲ ತೀರಿತು ಎಂಬ ಮನ್ವೇಲನ ಹೇಳಿಕೆ ಅವಳು (ಸ್ವಪ್ರಯೋಜನವನ್ನು ಸ್ವಲ್ಪ ಅಭ್ಯಾಸ ಮಾಡಿದವಳಂತೆ) ವಶವಾಗುವುದನ್ನು ಸ್ಫೋಟಿಸುತ್ತದೆ. ಎಂದು ವ್ಯಾಖ್ಯಾನ ಮಾಡಬಹುದು. ಮನ್ವೇಲ ಅವಳನ್ನು (ಅದೇ ರಾತ್ರಿ ? ಒಡೆದಿಲ್ಲದ ಸೌಂಡ್ ಟ್ರಾಕ್ ಹಾಗೆಂದು ಸೂಚಿಸುತ್ತದೆ) ಮಂಗೇಲನ ಬಳಿಗೆ ಕರೆದುಕೊಂಡು ಹೋದಾಗ ಅವಳಿಗೆ ತನ್ನ ಪ್ರಿಯತಮನ ಮೇಲೆ ಇನ್ನೇನಿಲ್ಲದಿದ್ದರೂ ಸ್ವಲ್ಪ ಸಿಟ್ಟು ಬರಬೇಕಾಗಿತ್ತು. ಅವಳಂತೂ ಅದೇ ರಾತ್ರಿ ಮುನಿಸಿಕೊಂಡು ತೋಟದಿಂದ ಹೊರಡುತ್ತಾಳೆ. (ಕಾದಂಬರಿಯಲ್ಲಿ ಮನ್ವೇಲ ಅವಳನ್ನು ನಿಷ್ಪ್ರಯೋಜಕವಾಗಿ ಕೇಳಿಕೊಳ್ಳುವುದರ ಜತೆಗೆ ಸ್ವಲ್ಪ ಹಣವನ್ನೂ ಕೊಡುವುದರ ಮೂಲಕ ಚಿತ್ರದ ಕಾಗದದ ಖಳನಾಯಕನಂತಲ್ಲದೆ ತೀರ ಇನ್ನೊಂದು ವಿಧವಾದ ಪಾತ್ರವಾಗಿದ್ದಾನೆ.)
ಈ ಕಾರಣಗಳಿಂದಾಗಿ, ಅವಳು ತನ್ನ ಮನೆಯಲ್ಲಿ ಏಕೆ ಮನ್ವೇಲನಿಗೆ ಒಪ್ಪಿಸಿಕೊಂಡಳು ಎನ್ನುವುದನ್ನು ತಿಳಿಯುವುದು ಕಷ್ಟ. ಹಾಗೆ ಮಾಡುವುದಕ್ಕೆ ಮುಂಚೆ ಅವಳು ಒಂದು ಸ್ವರ್ಗೀಯ ನಿರಪರಾಧಿತ್ವದ ಭಂಗಿಯಲ್ಲಿ ತಂದೆಯ ದುಡಿಯ ಮೇಲೆ ತನ್ನ ತಲೆಯನ್ನು ಒಂದು ಕ್ಷಣ ಇಡುತ್ತಾಳೆ. ಕಾದಂಬರಿಯಲ್ಲಿ ಬೆಳ್ಳಿಯೇನೂ ಪಾವಿತ್ರ್ಯದ ಆದರ್ಶವಲ್ಲ.
ಅವಳು ವಶವಾಗುವುದು ನಂಬುವುದಕ್ಕಾಗದಿದ್ದರೂ ಕಠಿಣವಾದ ಯಾವ ಸಮಸ್ಯೆಯನ್ನೂ ಹುಟ್ಟಿಸುವುದಿಲ್ಲ. ಆದರೆ ಚಿತ್ರದಲ್ಲಿ ಅವಳು ತಂದೆಯ ಸಂಸಾರದ ನೈತಿಕ ಅವಲಂಬ ಎಂದು ತೋರಿಸಿದೆ. ಆದ್ದರಿಂದ ಅವಳ ಪತನ ತೀರ ನಂಬುವುದಕ್ಕಾಗದ್ದು. “ನಿರ್ಮಾಲ್ಯಂ” ಶೈಲಿಯಲ್ಲಿ ಈ ದೃಶ್ಯವನ್ನು ಚಿತ್ರದ ಅವರೋಹಣದ ಸಾಧನವನ್ನಾಗಿ ಅಂಟಿಸಲಾಗಿದೆ. ಇದರಿಂದಾಗಿ ಚೊಮನ ಆತ್ಮಹತ್ಯೆ ದುರಂತವಾಗುವುದರ ಬದಲು ಬರೀ ಕರುಣಾಜನಕವಾಗಿದೆ. ಹೀಗೆ ಏಕೈಕ ವ್ಯಕ್ತಿಯ ಸ್ಥಿತಿಯನ್ನು ಮಾತ್ರ ಚಿತ್ರ ನಿರೂಪಿಸುತ್ತದೆ. ಶೋಷಿತ ಜನಾಂಗದ ಸ್ಥಿತಿಯನ್ನಲ್ಲ. ಚೋಮನಿಗೆ ದುಡಿಯನ್ನು ಬಳುವಳಿಯಾಗಿ ಕೊಡುವ ಮೂಲಕ ಸಾರ್ವತ್ರಿಕತೆಯನ್ನು ರೂಪಿಸುವ ಮಿಥ್ಯಪ್ರಯತ್ನ ನಡೆದಿದ್ದರೂ ಕೂಡ ಇದು ಸತ್ಯ. ಚೋಮ ತನ್ನ ದುಡಿಯೊಂದಿಗೆ ಎಂದೂ ಒಂದಾಗುವುದಿಲ್ಲ. ಅದರಿಂದ ಪ್ರತ್ಯೇಕವಾಗಿಯೇ ಇರುತ್ತಾನೆ. ಚಿತ್ರದ ಕೊನೆಗೆ ನಮ್ಮೊಂದಿಗೆ ಉಳಿಯುವುದು, ಈ ಮಾನವೀಯಸತ್ವವಿವರ್ಜಿತವಾದ ದುಡಿ ಮಾತ್ರ.
ಕೇಂದ್ರ ಪಾತ್ರದ ನ್ಯೂನತೆಗಿಂತಲೂ ದೊಡ್ಡದಾದ, ಹೆಚ್ಚು ನಿರ್ಣಾಯಕವಾದ ನ್ಯೂನತೆಯೊಂದು ಚಿತ್ರದಲ್ಲಿದೆ. ಉಳುವವನಿಗೇ ಭೂಮಿ ಎಂಬ ನವವಾಮ ಪಂಥೀಯ ನಿರೀ.ಕ್ಷಣೆಯನ್ನು ಹುಟ್ಟಿಸಿದರೂ ಚಿತ್ರ ಅದಕ್ಕೆ ತಕ್ಕಂತೆ ಉಳಿಯುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಮತಾಚಾರದ ಪೀಡೆ. ಮತಾಚಾರಕ್ಕೆ ಅನಾವಶ್ಯಕವಾದ ಪ್ರಾಮುಖ್ಯತೆಯನ್ನು ಕಾದಂಬರಿಯಲ್ಲಿ ಕೊಟ್ಟಿಲ್ಲ. ನೀಲ ನೀರಿನಲ್ಲಿ ಮುಳುಗಿಹೋಗುವ ಪ್ರಸಂಗದಲ್ಲಿ ಮಾತ್ರ ಮತಾಚಾರ ಬಿರುಸಾದ ಬಾಣಪ್ರಹಾರಕ್ಕೆ ಗುರಿಯಾಗಿದೆ. ನೀಲ ಮುಳುಗುತ್ತಿರುವಾಗ ಬ್ರಾಹ್ಮಣರು ನಿಂತು ನೋಡುತ್ತಿರುತ್ತಾರೆ. ಚೋಮ ಕೂಗಿಕೊಂಡಾಗ ಮಾತ್ರ ಅವರಲ್ಲೊಬ್ಬ ಧುಮುಕಿ ನೀಲನ ದೇಹವನ್ನು (ಸಪ್ಪೆ ಮೋರೆ ಹಾಕಿಕೊಂಡು) ಮೇಲಕ್ಕೆ ತರುತ್ತಾನೆ. ಚಿತ್ರದಲ್ಲಿ ಈ ದೃಶ್ಯವನ್ನು ಕೂಡ ಸ್ವಲ್ಪ ಮೆದುವು ಮಾಡಿ, ಬ್ರಾಹ್ಮಣರು ಪ್ರಯತ್ನ ಮಾಡಿದರೂ ನೀಲ ಮುಳುಗಿದ ಎಂಬ ಭಾವನೆಯನ್ನು ಮೂಡಿಸಲಾಗಿದೆ. ದಡದಲ್ಲಿರುವ ಕೆಲವರು ಬ್ರಾಹ್ಮಣರು ರಕ್ಷಣೆಯನ್ನು ತಡೆಯುವುದಕ್ಕೆ ಪ್ರಯತ್ನಿಸುವುದರಿಂದ ಮಾಲಿನ್ಯದ ನಿಷಿದ್ಧಗಳಿಂದ ಕೂಡಿದ ಬ್ರಾಹ್ಮಣಿಕೆಯೂ ಸ್ವಲ್ಪ ಮೃದು ಟೀಕೆಗೆ ಗುರಿಯಾಗುತ್ತದೆ. ಆದರೆ, ನಿಜವಾದ ದೌಷ್ಟ್ಯ- ಬ್ರಾಹ್ಮಣ ಜಮೀನುದಾರಿ-ಶಿಕ್ಷೆಯಿಂದ ಪೂರ್ತಿ ತಪ್ಪಿಸಿಕೊಂಡಿದೆ. ಉದಾಹರಣೆಗೆ, ಸಂಕಪ್ಪಯ್ಯನನ್ನೂ ಅವನ ಹೆಂಡತಿಯನ್ನೂ ತುಂಬ ಅನುಕಂಪದಿಂದ ಚಿತ್ರಿಸಲಾಗಿದೆ. ತನ್ನ ತಾಯಿಗೆ ಮಣಿದು ಮಾತ್ರ ಸಂಕಪ್ಪಯ್ಯ ಚೋಮನಿಗೆ ಜಮೀನು ಕೊಡುವುದಿಲ್ಲ ಎಂಬ ಭಾವನೆ ನಮ್ಮಲ್ಲಿ ಉಂಟಾಗುತ್ತದೆ. ಚೋಮ ಕೇಳುತ್ತಿರುವಂತೆ ಸಂಕಪ್ಪಯ್ಯ ಈ ವಿಷಯವಾಗಿ ತನ್ನ ತಾಯಿಯನ್ನು ವಿಚಾರಿಸುತ್ತಾನೆ. ಆದ್ದರಿಂದ ಸಂಕಪ್ಪಯ್ಯನ ಈ ವಾದ ಬರೀ ಒಂದು ಉಪಾಯ ಎಂದು ಪರಿಗಣಿಸಲಾಗದು. ಪಾದ್ರಿಯನ್ನು ಸಂದರ್ಶಿಸಿ ಬಂದ ಮೇಲೆ ಶುದ್ಧಿ ಮಾಡಿಕೊಳ್ಳುವುದಕ್ಕಾಗಿ ನದಿಯಲ್ಲಿ ಮುಳುಗು ಹಾಕುವುದನ್ನು ನೋಡಿದರೆ ಚೋಮನಲ್ಲೇ ಗಣನೀಯವಾಗಿ ಬ್ರಾಹ್ಮಣಿಕೆ ಇದೆ ಎನ್ನಿಸುತ್ತದೆ. ಚೋಮನೂ ಅವನ ನಿರ್ದೇಶಕರು ಹಿಂದೂ ಮತದ ವಿಚಾರವಾಗಿ ವಿಪರೀತ ತೊಂದರೆ ತೆಗೆದುಕೊಂಡು, ಚೋಮನಿಗೆ ಒಂದು ಚೂರು ಭೂಮಿಯ ವಿಚಾರವಾಗಿ ತೊಂದರೆಪಟ್ಟಿಲ್ಲ. ಚಿತ್ರದ ಎಡಿಟಿಂಗ್ ಮತ್ತು ಸ್ಕ್ರೀನಿಂಗ್ ಇದನ್ನು ಸ್ಪಷ್ಟಪಡಿಸುತ್ತವೆ. ಚಿತ್ರದ ಮುಖ್ಯ ತಿರುವುಗಳಲ್ಲಿ ಮುನ್ನೆಲೆಯಲ್ಲಿರುವುದು ಈ ಮತಾಚಾರ.
ಉದಾಹರಣೆಗೆ : ಗುರುವ ಒಂದು ದೃಶ್ಯದಲ್ಲಿ, ಪಕ್ಕದ ಮನೆಯಲ್ಲಿ ಮೇರಿ ಹಾಡುತ್ತಿರುವುದನ್ನು ಪ್ರಣಯಾಸಕ್ತಿಯಿಂದ ಕೇಳುತ್ತಾನೆ. ಇದಾದ ತಕ್ಷಣ ಬರುವ ದೃಶ್ಯ ಮತಾಂತರ ಹೊಂದಿದ ಜಾರ್ದು ಚೋಮನಿಗೆ ಮದ್ಯವನ್ನು ಬಲವಂತದಿಂದ ಕುಡಿಸುವುದು. ಚೋಮನು ಪಾದ್ರಿಯನ್ನು ಭೇಟಿ ಮಾಡಿದ ದೃಶ್ಯದ ತಕ್ಷಣ (ದೂರಾಲೋಚನೆಯಿಲ್ಲದಿಲ್ಲದ) ಮೇರಿ ಗುರುವನಿಗೆ ಆರೈಕೆ ಮಾಡುತ್ತಿರುವ ದೃಶ್ಯ. ಜತೆಗೆ, ಸಿನಿಮಾ ಕಥೆ (ಕಾದಂಬರಿಕಾರರೆ ಇದನ್ನೂ ಬರೆದವರು) ಗುರುವ ಮೇರಿಯ ಬಾಂಧವ್ಯದ ಬೆಳವಣಿಗೆಯನ್ನು ಪೂರ್ಣವಾಗಿ ಚನಿಯನ ದೃಷ್ಟಿಯಲ್ಲಿ ನೋಡುತ್ತದೆ. ತನ್ನ ತಂದೆಯಂತೆಯೇ ಚನಿಯನಿಗೂ ಕ್ರಿಸ್ತಮತದ ವಿಚಾರವಾಗಿ ವೈರದ ನಿಲುವು. ಈ ಯಾವ ಛಾಯೆಯೂ ಮೂಲ ಕಾದಂಬರಿಯಲ್ಲಿಲ್ಲ. ಅಲ್ಲಿ ಗುರುವ ಮೇರಿಯರ ಪ್ರಸಂಗವನ್ನು ಎಷ್ಟು ಹಗುರವಾಗಿ ಕಂಡಿದೆಯೆಂದರೆ ಮೇರಿ ಕ್ರಿಶ್ಚಿಯನ್ ಎನ್ನುವುದು ಕೂಡ ಗುರುವನಿಗೆ ಮನದಟ್ಟಾಗಿಲ್ಲ. ಮತ್ತೆ, ಕೊನೆಗೆ ಗುರುವ ಮೇರಿಯರನ್ನು ಪಾದ್ರಿ ಭೇಟಿ ಮಾಡುತ್ತಾನೆ. ಚೋಮನ ಆಶಾಭಂಗಕ್ಕಾಗಿಯೇ ವಿಶೇಷವಾಗಿ ನಿರ್ಮಿಸಲಾಗಿದೆ ಎನ್ನುವಷ್ಟು ವಿಚಿತ್ರವಾಗಿದೆ ಈ ದೃಶ್ಯ. ಆಗ ಚೋಮನು ಕಂಡಕಂಡ ಕ್ರಿಶ್ಚಿಯನ್ನರನ್ನೆಲ್ಲ ಶಪಿಸಿ, ಮೇರಿಯ ಮೇಲೆ ವಿಶೇಷವಾಗಿ ವಿಷ ಕರೆಯುತ್ತಾನೆ. ಕಟ್ಟಕಡೆಯಲ್ಲಿ ಕೂಡ, ನೀಲ ಸತ್ತಮೇಲೆ ಕ್ರಿಸ್ತಮತಕ್ಕೆ ಶರಣಾಗುವುದನ್ನುಳಿದು ಗತ್ಯಂತರವಿಲ್ಲ ಎನ್ನಿಸುವಾಗ, ಬೆಳ್ಳಿ ಮತ್ತು ಚೋಮ ಇಬ್ಬರಿಗೂ ಹಾಗೆ ಭಾಸವಾದಾಗ, ಚೋಮನು ಕಕ್ಕಡದ ದಾರಿ ಹಿಡಿದು ಹೊರಟಾಗ, ಅವನಲ್ಲಿ ಹಠಾತ್ತನೆ ಹೃದಯಪರಿವರ್ತನೆಯಾಗುತ್ತದೆ. ಮನೆದೇವರ ಮುಂದೆ ನಿಂತು, ಪಶ್ಚಾತ್ತಾಪ ಪಡುತ್ತ, ನಡುಗುತ್ತ, ಪಿತೃಗಳ ಧರ್ಮವನ್ನು ತ್ಯಜಿಸುವುದಿಲ್ಲ ಎಂದು ಶಪಥ ಮಾಡುತ್ತಾನೆ. (ಈ ಪ್ರಸಂಗವನ್ನು ಕಾದಂಬರಿಯಿಂದ ಹಾಗೆ ತೆಗೆದುಕೊಂಡಿದೆ.) ಅಲ್ಲಿಂದ ಹಿಂದಿರುಗಿದಾಗ ಚೋಮನು ಅಪಕೃತ್ಯದಲ್ಲಿ ತೊಡಗಿರುವ ಬೆಳ್ಳಿ ಮತ್ತು ಮನ್ವೇಲ (ಇನ್ನೊಬ್ಬ ಕ್ರಿಶ್ಚಿಯನ್) ರನ್ನು ನೋಡುತ್ತಾನೆ. ಮೊದಲು ಗುರುವನ ಚ್ಯುತಿ, ಮಾರನೆಯ ಕ್ಷಣ ಚನಿಯನ ನೈತಿಕಪತನ, ರೋಗ, ಸಾವು, ಆಮೇಲೆ ಪ್ರೀತಿಯ ಬೆಳ್ಳಿ-ಹೀಗೆ ಚೋಮನ ಸಂಸಾರದ ವಿನಾಶವನ್ನು ನೇರವಾಗಿ ಕ್ರಿಸ್ತ ಮತದ್ದು ಎಂದು ಗುರುತಿಸಲಾಗಿದೆ, ಕ್ರಿಶ್ಚಿಯನ್ ಮತ್ತು ಹಿಂದೂ ಜಮೀನುದಾರರ ದುರಾಶೆಗಲ್ಲ, ಸಂಕಪ್ಪಯ್ಯನ ಬ್ರಾಹ್ಮಣಿಕೆ ಯಾವ ಛತ್ರದ ನೆರಳನ್ನು ಆಶ್ರಯಿಸಿದೆಯೋ ಅದನ್ನೆ ಚೋಮನ ಕುಲವ್ಯವಸ್ಥೆ ಕೂಡ ಆಶ್ರಯಿಸಿದೆ. ಹಿಂದೂಮತದ ಕಟ್ಟುಪಾಡಿನ ಅಸ್ಪೃಶ್ಯತೆಯ ಅಸಹ್ಯತೆಯನ್ನು ಮಾತ್ರ ಟೀಕಿಸಲಾಗಿದೆ. ಪ್ರೇಕ್ಷಕವರ್ಗದಲ್ಲಿರುವ ಜನಸಂಘದವರಿಗೆ ಇದು ಮೆಚ್ಚಿಗೆಯಾಗಬಹುದು. ಆದರೆ, ಇದಕ್ಕೂ ಜಾತಿ ಶೋಷಣೆಗೂ ಏನು ಸಂಬಂಧ ? ತೋಟದ ಮಾಲಿಕ ಮಿಂಗೇಲನನ್ನಾಗಲಿ, ಬ್ರಾಹ್ಮಣ ಜಮೀನುದಾರ ಸಂಕಪ್ಪಯ್ಯನನ್ನಾಗಲಿ ಜಾತಿಯ ದೃಷ್ಟಿಯಿಂದ ನೋಡಿಲ್ಲ. ಮಿಂಗೇಲನಿಂದಾದ ಲೈಂಗಿಕ ಮತ್ತು ಆರ್ಥಿಕ ಶೋಷಣೆಗೆ ಮನ್ವೇಲ ಪಾಪ ಬಲಿಯಾಗುತ್ತಾನೆ. ಸಂಕಪ್ಪಯ್ಯನ ಮುದಿತಾಯಿ ಅವನಿಗೆ ನೆಪವಾಗುತ್ತಾಳೆ. ತಾನು ಯಾವುದರ ಸಂಕೇತವೂ, ಅದಕ್ಕಾಗಿ ಮಿಂಗೇಲನನ್ನಾಗಲಿ ಸಂಕಪ್ಪಯ್ಯನನ್ನಾಗಲಿ ವಿಚಾರಣೆಗೆ ಗುರಿಪಡಿಸಿಲ್ಲ. ಚೋಮನ ದುರಾದೃಷ್ಟಕ್ಕೆ ಕ್ರಿಸ್ತ ಮತವನ್ನು ಹೊಣೆಮಾಡಲಾಗಿದೆ. ಅಂತೆಯೇ ಅವನು ರಾಜಕೀಯ ದಬ್ಬಾಳಿಕೆಗೆ ಸಿಕ್ಕಿದ ಹರಿಜನ ವರ್ಗಕ್ಕಾಗಿಯಲ್ಲ, ಪವಿತ್ರ ಹಿಂದೂಧರ್ಮಕ್ಕಾಗಿ ಬಲಿಯಾಗುತ್ತಾನೆ. ಜೀವಂತ ಭೂಮಾಲಿಕ ಕ್ರಿಶ್ಚಿಯನ್‌ಗಿಂತಲೂ ಸತ್ತ ಭೂ ರಹಿತ ಹಿಂದೂ ಉತ್ತಮ ಎನ್ನುವುದು ಚಿತ್ರದ ಸಂದೇಶ ಎನ್ನಿಸುತ್ತದೆ.
ಚಿತ್ರದ ನಟವರ್ಗದ ಆಯ್ಕೆಯೂ ಅಸಮವಾಗಿದೆ. ಬೆಳ್ಳಿಯ ಪಾತ್ರದಲ್ಲಿ ಪದ್ಮ ಕುಮಟಾರ ಮಾತಿನ ರೀತಿ ಅತಿಯಾಗಿ ಮಧ್ಯಮವರ್ಗದ ಬ್ರಾಹ್ಮಣರದಾಗಿದ್ದು ಹರಿಜನ ಹೆಣ್ಣೆಂದು ನಂಬುವುದು ಅಸಾಧ್ಯ. ಆದರೂ ಮನ್ವೇಲನ ಜತೆ ಅವರ ಮಾತಿಲ್ಲದ ಪ್ರಸಂಗಗಳು ಹದ್ದುಮೀರದೆ ಚೆನ್ನಾಗಿವೆ. ಚೆನಿಯನಾಗಿ ಜಯರಾಜನ್ ಉಳಿದು, ಚೋಮನ ಗಂಡುಮಕ್ಕಳು ಒಂದೇ ಸಮನೆ ಅಸಾಧ್ಯವಾಗಿದ್ದಾರೆ. ಚೆನಿಯನಿಗೆ ರೋಗ ಬಂದು ಸಾಯುವ ದೃಶ್ಯ ಮನಕರಗಿಸುತ್ತದೆ. ಹುಚ್ಚು ಹಿಡಿದವನಂತೆ ತನ್ನ ಎತ್ತುಗಳನ್ನು ಮುಚ್ಚಂಜೆಗೆ ಕಟ್ಟಿದ ಚೋಮ ಗದ್ದೆಯಲ್ಲಿ ಕುಸಿಯುವ ದೃಶ್ಯ, ಹಾಗೆ ಅವನು ಬಿದ್ದಿರುವಾಗ ಲಾಂಗ್‌ಷಾಟ್‌ನಲ್ಲಿ ನಾವು ಕಾಣುವುದು ದಾರಿದ್ರ ಮತ್ತು ಸಂದರ್ಭಕ್ಕೆ ಸಿಕ್ಕಿ ತುಂಡು ತುಂಡಾಗಿ ಕೊಚ್ಚಿದ ಮಾನವನ ಚಿತ್ರ. ಮೂಲ ಕಲ್ಪನೆಯಲ್ಲಿ ಕೆಲವು ದೌರ್ಬಲ್ಯಗಳಿದ್ದರೂ ಹೊನ್ನಯ್ಯನ ಮನ್ವೇಲ ನನಗೆ ರುಚಿಸಿತು-ಒಂದು ಖಚಿತವಾದ, ಕಠಿಣ ಕಾಮುಕ, ಆದರೂ ಮಾನವೀಯ, ಲಂಪಟತನ ಹೊರಹೊಮ್ಮುತ್ತದೆ. ನಟರ ಆಯ್ಕೆಯಲ್ಲಿ, ವೇಷಾಲಂಕಾರದಲ್ಲಿ ತುಂಬ ಭೇಷಾದ ತಪ್ಪು (ನಾಗಾಭರಣ ಜ್ಞಾಪಕದಲ್ಲಿಡಲಿ) ಲೀನಾ ಗೋವಿಯರನ್ನು ಮೇರಿಯ ಪಾತ್ರದಲ್ಲಿ ಇಟ್ಟಿರುವುದು. ಪ್ಯಾಂಟ್, ಬ್ರಾಗಳನ್ನು ಧರಿಸಿ ಫ್ಯಾಷನ್ ಮಾಡೆಲ್‌ನಂತೆ ಆಕೆ ನಡೆದಾಗ, ತೋಟದಲ್ಲಿ ಕೂಲಿಗಳು ತಮ್ಮ ದಾರಿ ಹಿಡಿದು ಹೋಗುವಾಗ ಭೂಜನಿತವಾದ ಅದೃಶ್ಯ ಕಂಪಿನಂತೆ ಏಳುವ, ತುಂಬಿದ ಗಂಭೀರ ಕಂಠದ, ಮಲೆಯಲ್ಲಿ ಮಿಂದ, ಜಾನಪದ ಗೀತೆ ಕುಲಗೆಡುತ್ತದೆ. ಚಿತ್ರದಲ್ಲಿ ಆಕೆ ಒಂದು ಅನರ್ಥ. ಚಿತ್ರದಲ್ಲಿ ಪ್ಯಾಂಟ್ ಧರಿಸಿರುವ ಹುಡುಗಿ ಮೇರಿ ಒಬ್ಬಳು ಮಾತ್ರವಲ್ಲ, ನೆನಪಿರಲಿ. ನಮ್ಮ ನಿರ್ದೆಶಕರು ಜೀವನದ ಮೇಲ್ಮೈಯನ್ನು ಮಾತ್ರ ಯಥಾವತ್ತಾಗಿ ಚಿತ್ರಿಸಬಾರದು ಗುಪ್ತಾಂತರಾಳವನ್ನು ಹಾಗೇ ಚಿತ್ರಿಸಬೇಕು.
ಮುಂದಿನ ಸಾಲಿನ ರಾಷ್ಟ್ರೀಯ ಬಹುಮಾನಗಳಲ್ಲಿ “ಚೋಮನ ದುಡಿ” ಹಿರಿಯ ಪಾತ್ರ ವಹಿಸುತ್ತದೆಂದು ನನಗನ್ನಿಸುತ್ತದೆ. ಅನೇಕ ಅನೇಕ ತಪ್ಪುಗಳಿದ್ದರೂ ನಿರ್ದೆಶನದ ಪ್ರಾಮಾಣಿಕತೆ ಮತ್ತು ಚೋಮನ ಪಾತ್ರದಲ್ಲಿ ಸೆರೆಬಿಗಿಯುವ ಮರುಕ ಹೊಳೆಯುತ್ತವೆ. ಬಿ. ವಿ. ಕಾರಂತರು ಇನ್ನೂ ಅನೇಕ ಮತ್ತು ಇದಕ್ಕೂ ಉತ್ತಮವಾದ ಚಿತ್ರಗಳನ್ನು ಮಾಡುತ್ತಾರೆ.

Close

ನೆರಳಿಲ್ಲದವರು

ನೆರಳಿಲ್ಲದವರು
(ನಾಟಕ)

ಮಲ್ಹಾರಿ ದೀಕ್ಷಿತ್

[ಒಂದು ಸಿಟಿ ಬಸ್ ಸ್ಟಾಪ್, ಮಟ ಮಟ ಮಧ್ಯಾಹ್ನ, ಒಬ್ಬ ಕೆದರಿದ ತಲೆಯ ಅಸ್ತವ್ಯಸ್ತ ವೇಷದ ‘ಹಿಪ್ಪಿ’ ಮಾದರಿಯ ತರುಣ ನಿಂತಿದ್ದಾನೆ. ಅವನೇ ‘ನ’, ಸಿಗರೇಟು ಬಿಟ್ಟೂ ಬಿಡದೆ ಸೇದುತ್ತಿರುತ್ತಾನೆ. ನಾಟಕ ಮುಗಿಯುವವರೆಗೂ ಈ ಸೇದುವಿಕೆ ಅವ್ಯಾಹತ.

ಅತ್ತಲಿಂದ ಅವಸರವಸರವಾಗಿ ರಿಟಾಯರ್ಡ ಮನುಷ್ಯನಂತೆ ತೋರುವ ‘ಹ’, ಕೋಟು, ಕಮಟು ಟೊಪ್ಪಿಗೆ, ದೊಗಲೆ ಪ್ಯಾಂಟಿನಲ್ಲಿ ಬರುತ್ತಾನೆ. ಅವಸರವಸರವಾಗಿ, ಅತ್ತ ಇತ್ತ ನೋಡಿ ಯಾವ ಬಸ್ಸೂ ಕಾಣದ್ದರಿಂದ ಒಂದು ಕ್ಷಣ ಸಮಾಧಾನಗೊಂಡವನಾಗಿ, ಮರುಗಳಿಗೆ ವಾಚು ನೋಡಿಕೊಂಡು, ಆ ತರುಣನೆಡೆಗೆ ನೋಡುತ್ತಾನೆ. ಆತ ತಿರುಗಲಿ ಎಂಬಂತೆ ಒಂದೆರಡುಗಳಿಗೆ ಅವನನ್ನು ಆಕರ್ಷಿಸ ಲೆತ್ನಿಸುತ್ತಾನೆ:

ಆ ಮೇಲೆ ಜೋರಾಗಿ ಕೆಮ್ಮಿ

ಹ : ಅಲ್ರಿs ಇವ್ರs…..
ನ : (ಅವಿಚಲಿತನಾಗಿ ಹೊಗೆಯುಗುಳುತ್ತ ಟಾರ್ ರಸ್ತೆ ನೋಡುತ್ತ ನಿಂತಿದ್ದಾನೆ)
ಹ : ಅಲ್ಲಾ, ಇವ್ರ ; ರಿ ಮಿಸ್ಟರ್‌.
ನ : (ಏನು ಎನ್ನುವಂತೆ ಪ್ರಶ್ನಾರ್ಥಕವಾಗಿ ತಿರುಗುತ್ತಾನೆ)
ಹ : ಏನೂ ಇಲ್ಲಾ……..ಮತ್ತ ಹs.
ನ : ಏನೂ ಇಲ್ಲಾ? ಏನೂ ಇಲ್ದಿದ್ರ ಯಾಕ್ ಮಾತಾಡಿಸಿದ್ರಿ ?
ಹ : ಛೆ. ಛೆ. ಹಾಂಗಲ್ಲ. ಏನಪಾಂತಂದ್ರ ಮಾತಾಡೂ ಮುಂದ ಅದೂ ಒಂದು ಚಾಳಿ,
ಏನೂ ಇಲ್ಲ ಅನ್ನೋದು ……ಹೆಹೆ……..ಅಷ್ಟs
ನ : ಏನೂ ಇರೋದೆ ಇಲ್ಲ. ಅಂದ ಮ್ಯಾಲ…….
ಹ : ಅದೇನೋ ಖರೇನs ಅನ್ರಿ. ಅಲ್ಲ, ನಾ ಏನ್ ಕೇಳಬೇಕಂತ ಮಾಡಿದ್ದೆ ?
ನ : ಅದು ಗೊತ್ತಿದ್ರ ನಾ ಯಾಕ ಇಷ್ಟೆಲ್ಲಾ ಬೋರ್ ಹೊಡಿಸಿಕೋತಿದ್ದೆ ?
ಹ : (ಅತ್ತ ಲಕ್ಷ್ಯವಿಲ್ಲದೆ) ಅಂದ್ಹಾಂಗs ಮಿಸ್ಟರ್….ಬಸ್ಸು ಮ್ಯಾಲೆ ಹೋಗೇದನ್ರಿ?
ನ : ಬಸ್ಸು ? ಮ್ಯಾಲೆ ?…….!
ಹ : ಹಾಂ, ಹಾಂ, ಸಿಟಿ ಬಸ್ಸು……
ನ : (ಅಚ್ಚರಿಯಿಂದ ನೋಡುತ್ತಿರುತ್ತಾನೆ)
ಹ : ಅಂದ್ರ ಮ್ಯಾಲೆ ಒಂದ್ ವ್ಯಾಳ್ಯಾ ಹೋಗಿದ್ರ ಬರೂ ಟೈಮಾಗೇದನ್ರಪಾ.
ಐದ ಮಿನಿಟಿನಾಗ ಬರತಾನ.
ನೆ : ಬಸ್ಸು…ಬರತಾನ……..ಏನ್ರಿ ಇದು ಅಭಾಸ ? ಬಸ್ಸೇನರ ಪುಲ್ಲಿಂಗನು ?
ಹ : ಬಸ್ಸು ಪುಲ್ಲಿಂಗಲ್ರೀ ಇವರ, ಅದರಾಗಿರೋ ಡ್ರೈವರು.
ನ : ಹಂಗಂತೀರಾ ?
ಹ : ಬಸ್ಸು ಬರೋ ಹೊತ್ತಾಗೇದನು ಅಂತ ಕೇಳಬೇಕೆಂದೆ. ಮ್ಯಾಲ ಜರ್ ಹೋಗಿದ್ರ
ನ : ಮ್ಯಾಲ ಹೋಗಿದ್ರ (ಆಕಾಶ ನೋಡಿ) ಬರೋ ಬಗಿ ಹ್ಯಾಂಗ ?
ಹ : ಏನ್ ಒಂದೈದ ಹತ್‌ ನಿಮಿಷದಾಗ ಬರತಾನ…… ಅಲ್ಲಲ್ಲ ಬರತsದ.
ನ : ಮ್ಯಾಲಿಂದ ಬರ‍್ಲಿಕ್ಕೆ ಅಷ್ಟೇ ಸಾಕಂತೀರಾ ?
ಹ : ಇಲ್ಲಾಂದ್ರೆ ಒಂದ್ ಹದಿನೈದ…ಇಪ್ಪತ್ತು ಮಿನಿಟಿನಾಗ ಬಂದಾನು, ಅರ್ಧಾ
ತಾಸಿನಾಗಂತ ಬಂದs ತೀರತಾನ, ಏನಂತೀರಿ ?
ಹೆ : ಏನೋರೆಪಾ, ನಿಮ್ಮ ಧೈರ್ಯ ನನಗಿಲ್ಲ. ಬರಬಹುದು ಅಥವಾ ಬರಲಿಕ್ಕೇ ಇಲ್ಲಾ……..
ಹ : ಅದ್ಯಾಂಗ್ರಿ ಬರೂದಿಲ್ಲ? ಅವರಿಗೇನು ಹೇಳೋವ್ರು, ಕೇಳೋವ್ರು, ಯಾರೂ ಇಲ್ಲನು ? (ವಾಚು ನೋಡಿ) ಈಗ ಬರೂ ಟೈಂ ಆತು, ಈಗ ಬಂದs ತೀರಬೇಕು.
ನ : (ಸುಮ್ಮನೆ ಪಿಳಿಪಿಳಿ ನೋಡುತ್ತಾನೆ).
ಹ : ಈ ಸರಕಾರಿ ಬಸ್ಸೂ ಅಂದ್ರ, ಇದs ಹಣೆಬರಾ, ಟೈಂಸೀರ್ ಬರೂದs ಕ್ವಚಿತ,
ಹೇಳವ್ರಿಲ್ಲ, ಕೇಳವ್ರಿಲ್ಲ. ಅಂಧೇರಿ ದರ್ಬಾರ ಆಗಿ ಹೋಗೇದ, ಆಂ, ಏನಂತೀರಿ?
ನ : (ಮಿಕಿ ಮಿಕಿ ನೋಡುತ್ತಾನೆ.)
ಹ : (ಒಂದಷ್ಟು ಹೊತ್ತು ಮೌನದ ನಂತರ ‘ಹ’ ಕಿಸೆಯಿಂದ ಕರವಸ್ತ್ರ ತೆಗೆದು ತಲೆ
ಕುತ್ತಿಗೆ ಮುಖ ಒರೆಸಿಕೊಂಡು ಟೊಪ್ಪಿಗೆ ಮತ್ತೆ ತಲೆಗೆ ಸಿಕ್ಕಿಸಿಕೊಳ್ಳುತ್ತಾನೆ).
ಛೇ, ಛೇ, ಏನ್ ಸೆಕಿರೆಪಾ ಇದು ಅಸಾಧ್ಯ.
ನೆ : (ಮೌನ)
ಹ : ಒಂದ್ ಚೂರು ನೆಳ್ಳಿಲ್ಲ ಈ ಸಿಟಿ ಬಸ್ ಸ್ಟಾಪ್ ಅನ್ನೊ ಸ್ಟಾಪಿನಾಗ,
ನ : ನೆಳ್ಳಿಲ್ಲ ಅಂದ್ರಾ?
ಹ : ಹೂಂ, ಮತ್ತ ನೋಡ್ರಿಲ್ಲೆ ಗಂಡು ಜೋಗಮ್ಮನ ಹಾಂಗ ಹ್ಯಾಂಗ್ ನಿಂತದ ಈ ಸಿಮಿಂಟು ಗ್ವಾಡಿ, ಉದ್ದಕ……. ನ : ಎಷ್ಟs ಇಲ್ಲಂದ್ರೂ ಒಂದ್ ಚೂರರ ಇರತsದ್ರಿ,
ಹ : ಎಲ್ಲೆದರಿ, ಒಂದಿಷ್ಟೂ ಕಾಣೋದಿಲ್ಲ ?
(ಹುಡುಕುವವನಂತೆ ಸುತ್ತು ತಿರುಗುತ್ತಾನೆ)
ನ : ಹಾಂಗ್ ಹುಡುಕಿದರ ಸಿಗೂದಿಲ್ರಿ, ಅದು.
ಹ : ಅದು ಇದ್ರ ಸಿಗಲೇಬೇಕಲ್ಲರಿ, ಎಲ್ಲಿ ಹೋಗ್ತದ ?
ಸ : ಅದು ಇದ್ರು ಸಿಗೂದಿಲ್ಲ ಅಂದೆ.
ಹ : ಹಂಗಾದ್ರ ಅದು ಇಲ್ಲೇ ಇಲ್ಲ ಅಂದ್ಹಾಂಗಾತು.
ನ : ಅಲ್ಲೇ ಇರೋದು ಮಜಾ
ಹ : ಮಜಾ?
ನ : ಇದ್ದೂ ಇಲ್ಲಂಗಿರೂದ್ರಾಗs…. ಮಜಾ ಇರೋದು.
ಹ : ಇದ್ದೂ ಇಲ್ದಂಗಿರೂದು ಹ್ಯಾಂಗಾಗ್ತದ್ರಿ? ಇದ್ದರ ಇದ್ದೇ ತೀರಬೇಕು; ಇಲ್ಲಿದ್ರ ಇಲ್ಲೇ ಇಲ್ಲ.
ನ : (ಮೌನ)
ಹ : ಅದೇನು ದೇವರs ಇದ್ದೂ ಇಲ್ದಂಗಿರಲಿಕ್ಕೆ ?
ನ : ದೇವರು !
ಹ : ಅಲ್ಲಾ, ಉದಾಹರಣೆ ಕೊಟ್ಟೆ ಅಷ್ಟೇ. ಇದೂ ಇಲ್ದಂಗಿರೋ ಕೆಲವು ವಸ್ತು ಅವ ನಮ್ಮಲ್ಲಿ.
ನ : ನೋಡೀರೇನು ನೀವು ಅವನ್ನ.? ಕಡೀಗೆ ಒಂದರ……?
ಹ : (ಯೋಚಿಸಿ) ನೋಡಿರೇನು ಅಂದ್ರ‍್ಯಾ ?
ನ : (ಮೌನ)
ಹ : ಇಲ್ಲ ಬಿಡ್ರಿ : ಅವು ಎಲ್ಲ ಅವ ಅಂದ್ರ ಅವ, ಇಲ್ಲ ಅಂದ್ರು ಇಲ್ಲ. ಈ ಸಿಟಿ ಬಸ್‌ಸ್ಟಾಪಿನ ನೆಳ್ಳು ಇದ್ಹಾಂಗ,
ನ : ಆದ್ರ ಸಿಟಿ ಬಸ್‌ಸ್ಟ್ಯಾಂಡಿಗೆ ನೆಳ್ಳು ಇಲ್ಲ ಅಂದ್ರೆಲ್ಲ ಅದಕ್ಕೆ……
ಹ : (ಬೆವರು ಒರೆಸುತ್ತ) ಇಲ್ಲs ಇಲ್ಲಾ ಅಂದೆ.
ನ : ತೋರಿಸಬೇಕಂತೀರೇನು ?
ಹ : ತೋರಿಸಿದರ ಹೋಗಿ ತಣ್ಣಗ ನೆಳ್ಳಾಗ ನಿಂತರನಿಂತೇಗ್ರೆಪಾ. (ವ್ಯಂಗ್ಯ)
ನ : ಆದ್ರೆ ಅದು ನಿಲ್ಲು ಹಾಂಗಿಲ್ರಿ ! ಅದು ಮನಸ್ಯಾರಿಗೆ ಉಪಯೋಗಕ್ಕೆ ಬರೂ ನೆಳ್ಳಲ್ಲ.
ಹ : (ಅಚ್ಚರಿಗೊಂಡು ನಿಲ್ಲುವನು)
ನ : ಅದು ಮುನಸಿಪಾಲಿಟಿ ಗಟಾರಕ್ಕ ಮಾತ್ರ ಉಪಯೋಗ,
ಹ: (ಮೌನ).
ನ : ಇಕಾ ನೋಡ್ರಿ ಇಲ್ಲಿ, ಹಿಂದಗಡಿ ಸ್ವಲ್ಪ ಗಟಾರದ ಮ್ಯಾಲ………….
(ಸ್ಟೇಜಿನ ಹಿಂಭಾಗವನ್ನು ತೋರಿಸುತ್ತಾನೆ.)
ಹ : (ಬಗ್ಗಿ ನೋಡಿ ಮತ್ತೆ ಮಧ್ಯಭಾಗಕ್ಕೆ ಬರುತ್ತ) ನಾಯಿ ಮಲ್ಯಾನ ಹಾಲು ಇದ್ಹಾಂಗ.
ನ : ಗಟಾರದ ನೀರು ಇದ್ಹಾಂಗ…………..
ಹ : ಗಟಾರನs ಅದ ಅಂದಮ್ಯಾಲೆ ? ಇರೋ ಒಂದ್ ತಟಗು ನೆಳ್ಳು ಸೈತ ಈ ಗಟಾರದ ಪಾಲs.
ನ : (ಮನ)
ಹ : ಅಲ್ಪಾ, ಈ ಮುನಸಿಪಾಲಿಟಿಯವರು ಈ ಗಟಾರಾನ ಹಿಂಗs ಯಾಕ ಬಿಟ್ ಬಿಟ್ಟಾರ ? (ಗಹನವಾಗಿ ಯೋಚಿಸುವಂತೆ ಹುಬ್ಬುಗಂಟಿಕ್ಕುವನು).
ನ : (ತಟ್ಟನೆ) ಉಚ್ಚೆ ಹೊಯ್ಯಲಿಕ್ಕೆ.
ಹ : ಉಚ್ಚೆ ಹೊಯ್ಯಲಿಕ್ಕೆ ?
ನ : ಹೂಂ, ಹೋಗೋ ಬರೋವ್ರೆಲ್ಲ ಈ ಬಸ್‌ಸ್ಟಾಪಿನ ನೆಳ್ಳಾಗ ನಿಂತೋ,
ಕೂತೋ ಹಾಯಾಗಿ ಉಚ್ಚೆ ಹೊಯ್ಯಲಿ ಅಂತ ಬಿಟ್ಟಾರ.
ಹ : ಈ ಬಿಸಿಲಾಗ ಹೊತ್ದೇನೆಂದ್ರೂ ಬರೂದಿಲ್ಲ.
ನ : ಹೊಯ್ಯೊ ನೆವಾ ಮಾಡಿ ಅಲ್ಲಿ ನೆಳ್ಳಾಗ ನಿಂತು ಬಿಡ್ರೆಲ್ಲ ಪ್ಯಾಂಟಿನ ಗುಂಡಿ
ಬಿಚಿಗೊಂಡು…..
ಹ : ಥೂ, ಥೂ, ಏsನ ಅಸಹ್ಯ ಇದ್ದೀರೆಪಾ ನೀವು……
ನ : ಅಸಹ್ಯ ಏsನ ಬಂತ್ರಿ, ಅದರಾಗ ?
ಹ : ಏsನ ವರ್ಣನಾ, ಏsನ ಕತಿ ? ಅಂ, ಕತಿ ಬರೀರಿ ನೀವು ಕತಿ.
ನ : ಉಚ್ಚಿ ಹೊಯ್ಯೋದರ ಮ್ಯಾಲ ?
ಹ : ಅದ್ನೂ ಬರಿಯವ್ರs ನೀವು ಈಗಿನವರು.
ನ : ಬರದರೇನು ತಪ್ಪಾತು ಬಿಡ್ರಿ,
ಹೆ : ಛಲೋ ಆಗ್ತದ್ರೆಪಾ ಬರದರ, ಹುಡುಗೂರು-ಹುಪ್ಪಡಿ, ಹೆಣ್ಮಕ್ಕಳು ಓದಿ
ಸಂತೋಷರ ಪಡತಾರ. ಬರೀರಿ, ಬರೀರಿ.
ನ : ಯಾಕ ? ಹುಡುಗೂರು,-ಹುಪ್ಪಡಿ, ಹೆಣ್‌ಮಕ್ಕಳು ಉಚ್ಚಿ ಹೊಯ್ಯೋದಿಲ್ಲನು?
ಹೆ : (ಅಸಹ್ಯದಿಂದ ಮುಖ ಕಿವಿಚಿ ಮೌನವಾಗಿರುವನು)
ನ : ನೈಸರ್ಗಿಕ ಕ್ರಿಯಾ ಅಂದಮ್ಯಾಲ ಮಾರಿ ಸೊಟ್ಟಮಾಡಿದರ…?
ಹ : (ಮತ್ತೂ ಮೌನ)
(ಒಂದಷ್ಟು ಹೊತ್ತು ಬಿಟ್ಟು)
ಹ : ಭಾರಿ ಬಿಸಿಲು……….ಛೆ. ಛೆ, ಎಲ್ಲಿ ಸತ್ತರೋ ಏನೋ ಈ ಬಸ್ಸಿನ ಸೂಳೆಮಕ್ಕಳು,
(ಅಷ್ಟರಲ್ಲಿ ಬಸ್ ಸ್ಟಾಪಿನೆಡೆಗೆ ಒಂದು ತುಂಡು ಸ್ಕರ್ಟಿನ ಹುಡುಗಿ ಕೆಂಪು ಬಣ್ಣದ
ಛತ್ರಿ ಹಿಡಿದು ಬರುತ್ತಾಳೆ, ‘ನ’ ನನ್ನ ನೋಡಿ ಮುಗುಳ್ಳಗುತ್ತಾಳೆ).
ಹ : (ಒಮ್ಮೆಲೆ ನೆನಪಾಗಿ) ಛೆ, ನನ್ನ ಕೊಡಿಯರs ಇದ್ದಿದ್ರ ಒಂದಿಷ್ಟು ನೆಳ್ಳಾಗತಿತ್ತು,
ನ : ಕೊಡಿ ?
ಹ : ಹೂಂ, ಕೊಡಿ, ಛತ್ರಿ, ಅಂಬ್ರೆಲಾ………….UMBRELLA…
(ಒಂದೊಂದೇ ಅಕ್ಷರಗಳನ್ನು ವಿಂಗಡಿಸಿ ಹೇಳುತ್ತಾನೆ ಅಸಹನೆಯಿಂದ)
ನ : (ಮತ್ತೆ) ಕೊಡೀನs?
ಹ : ಸುಡುಗಾಡು ಸೂಳೆಮಗ ಯಾವನೋ ಅದಕ್ಕೂ ಸಂಚಕಾರ ತಂದ
ನ : ಅವತ್ತು ಸಿಟಿ ಬಸ್ಸಿನಾಗ…
ಹ : ಹೂಂ, ಹಂ, ಸಿಟಿ ಬಸ್ಸಿನಾಗ
ನ : ಮುಂದ ನಿಂತವ್ರನ್ನೆಲ್ಲ ತಿವಕೋತ ಹತ್ತಿದ್ರೆಲ್ಲ-
ಹ : ಕೈಯಾಗಿನ ಸಾಮಾನು ಗದ್ದಲದಾಗ ಬಡಿಯೂದs.
ನ : ಹೇಳಿದ್ರೂನೂ ಮತ್ತs ತಿವಿದ್ರೆಲ್ಲ.
ಹ : ಅದೂ ಹೇಳ್ತೀನಲ್ರಿ, ಗದ್ದಲದಾಗ……ಅಂತ
ನ : ಛತ್ರಿ ಕಸ್ತು ಕಿಡಿಕಿ ಹೊರಗೆ ಬಿಸಾಕಿ…..
ಹ : (ಅಕ್ಕಸದಿಂದ) ತಲಿಮ್ಯಾಲಿನ ನೆಳ್ಳ ಕಳದು ಪುಣ್ಯಾ ಕಟಿಗೊಂಡ ಮಹರಾಯಾ
ಯಾವನೋ ಅವನು,
ನ : ನನ್ನಂಥವನs ಅನ್ರೆಲ್ಲ ,
ಹ : ಹೂಂ, ನಿನ್ಮುಂದ………ಅಲ್ಲ ನಿಮ್ಮಂಥವ್ನs…
ನ : ನಾನs ಅನ್ರೆಲ್ಲ.
ಹ : ನೀವs…ನೀವs……?
ನ : ನಾನs ಅದನ್ನ ಕಸ್ತು ಒಗದಾವ,
ಹ : ಭಾಳಾ ಪುಣ್ಯಾ ಕಟಿಗೊಂಡ್ರ, ಭಾಳಾ ಪುಣ್ಯಾ….
ನ: ಪುಣ್ಯಾ ? ಅಂದ್ರೇನು ?
ಹ : ಅಂದ್ರs….ಪುಣ್ಯಾ ಅಂದ್ರs….ಪುಣ್ಯಾ !
ನ : ಅಂದ್ರ ಇದ್ದೂ ಇಲ್ಲಂಗಿರೂದು ಅನ್ರೆಲ್ಲ,
ಹ : ಇರ‍್ತದರಿ. ಇರದ ಎಲ್ಲಿ ಹೋಗ್ತವ ? ನಂ ಹಿಂದನs ಇರತsದ.
ನ : ನೋಡಿರೇನು ?
ಹೆ : ನೋಡಬೇಕ್ಯಾಕರಿ ? ತಿಳಿಯೂದಿಲ್ಲ ?
ನ : ಅಂದ್ರ, ಇದ್ರೂ ಇಲ್ದಂಗಿರೂದು ಅಂತ ಅರ್ಥ.
ಹ : ಹಂಗs ತಿಳಕೊಳ್ರಿ
ನ : ಇಲ್ದನೂ ಇದ್ಹಂಗಿರೂದು ಅಂತ ಅರ್ಥ.
ಹ : (ಗೊಂದಲಗೊಂಡು) ಏs ನ ರs ಅನಕೋಳ್ರಿ (ಸ್ವಲ್ಪ ತಡೆದು) ಆಂತೂ ಒಟ್ಟಿನ
ಮ್ಯಾಲ ನನಗ ನೆಳ್ಳಿಲ್ದ್ಹಾಂಗಾತು.
ನ : ನನಗೂ ಇಲ್ಲ ಬಿಡ್ರಿ.
ಹೆ : ನಿಮಗೆ ಇಲ್ಲಿದ್ರೂ ತಡಕೊಳ್ಳೋ ಶಕ್ತಿ ಅದsರಿ.
ನ : ತಡಕೊಳ್ಳೇ ಬೇಕು, ಇಲ್ದಿದ್ರ ಯಾರಪ್ಪನ ಮನಿ ಗಂಟು ?
ಹ : ಅಂತೂ ಇಬ್ರೂ ನೆಳ್ಳಿಲ್ದವ್ರs ಅಂದಂಗಾತು.
ನ : ನೆಲ್ಲ ಅನಬ್ಯಾಡ್ರಿ,
ಹ : ಎಲ್ಯದ ? ಅದು ಇದ್ದರ‍್ಯಾಕ ಇಲ್ಲನಬಕು ?
ನ : ನಿಮ್ಮ ಕಾಲ ಕೆಳಗೆ ನೋಡಿಕೋರಿ.
ಹ : (ಹುಡುಕುವವನಂತೆ) ಎಲ್ಲೆ……ಎಲ್ಲಿ ?
ನ : ಅಲ್ಲೇ ನಿಮ್ಮ ನೆಳ್ಳಿನ ಮ್ಯಾಲೇ ನಿಂತೀರಿ.
ಹ : (ನಿರಾಶೆಯಿಂದ) ಯಾತಕ್ಕೆ ಬಂತು ಇದು ?
ನ : ಅಂತೂ ಆದ, ಇಷ್ಟು ಮಾತ್ರ ಖರೆ, ಇದ್ದೂ ಇಲ್ಲದಂಗದ, ನೀವು ನಿಮ್ಮ
ನೆಳ್ಳಮ್ಯಾಲೆ ನಿಂತುಕೊಂಡೀರಿ, ನಾನು ನನ್ನ ನೆಳ್ಳಮ್ಯಾಲೆ ನಿಂತುಕೊಂಡೀನಿ.
ಎಲ್ಲಾರೂ ಅಷ್ಟs ತಂ ತಂ ನೆಳ್ಳಮ್ಯಾಲ ತಾವ ತಾವs ನಿಂತ ಬಿಡತಾರ,
ಹ : ಏನೋರೇಪಾ ಒಗಟಾ ಹಾಕಿ ಮಾತಾಡ್ತೀರಲ್ಲ.
ನ : ಒಗಟಿಲ್ಲ ಏನಿಲ್ಲ…ನಂ ನೆಳ್ಳು ದೊಡ್ಡದಾಗಿದ್ರೆ, ಇನ್ನೊಬ್ಬರಿಗಾದ್ರೂ
ಉಪಯೋಗ ಸಿಗತ್ತಿತ್ತು, ಈಗೇನದ ತಾಳಿಮರದ್ಹಂಗ ಉದ್ದಕ ನಿಲ್ತೀವಿ.
ನೆಳ್ಳಲ್ದ.
ಹ : ನಮಗೆಲ್ಲ ಹಂಗಾರ ನೆಳ್ಳಿಲೇ ಇಲ್ಲ ಅಂದ್ರೇನು ?
ನ : ಇನ್ನು ಅನುಮಾನದs ಏನು ನಿಮಗ ? ನಾವೆಲ್ಲ ಟ್ಯೂಬ್‌ಲೈಟ್ ಇದ್ಹಾಂಗ,
ನೆಳ್ಳs ಬೀಳೂದಿಲ್ಲ. ಬಿದ್ರೂ ಅಷ್ಟಿಷ್ಟ, ಇದ್ದೂ ಇಲ್ದ್ಹಂಗ.
ಹೆ : ನಾಯಿ ಮಲ್ಯಾನ ಹಾಲಿದ್ಭಾಂಗ……
ನ : ಗಟಾರದ ನೀರಿದ್ದಾಂಗ…
ಹೆ : ಆಡಿನ ಕೊಳ್ಳಾಗಿನ ಮಲಿ ಇದ್ಹಾಂಗ……
ನ : ಸುಡುಗಾಡಿನಾಗಿನ ಹೂ ಇದ್ದಾಂಗ….
ಹ : ಅಂತೂ ಇದ್ದೂ ಇಲ್ದ್ಹಂಗ……,
ನ : ಇಲ್ಲನೂ ಇದ್ಹಂಗ……
(ಮತ್ತೆ ಒಂದಷ್ಟು ಹೊತ್ತು ಮೌನ)
(ಅಷ್ಟರಲ್ಲಿ ಇದುವರೆವಿಗೂ ಇವರಿಬ್ಬರ ಮಾತಿಗೂ ಮೂಕ ಸಾಕ್ಷಿಯಾಗಿ
ನಿಂತ ಆ ತುಂಡುಲಂಗದ ಹುಡುಗಿ……..’ರಿಕ್ಷಾ…..ಏಯ್ ರಿಕ್ಷಾ’
ಎನ್ನುತ್ಯ, ಖಾಲಿ ರಿಕ್ಷಾವೊಂದನ್ನು ನಿಲ್ಲಿಸುತ್ತ ಛತ್ರಿ ಮಡಿಚಿಕೊಂಡು
ಹೋಗಿಬಿಡುತ್ತಾಳೆ).
ಹೆ : ಹುಡುಗೀರು ಪುಣೆವಂತರು.
ನ : ಅವರಿಗೆ ತಿಗಾ ಮುಚ್ಚದಿದ್ರೂ ತಲಿ ಮುಚ್ಚೋವಷ್ಟಾದ್ರೂ ನೆಳ್ಳ ಸಿಗತsದ.
ಹ : (ಮತ್ತೆ ನೆನೆಸಿಕೊಂಡವನಂತೆ) ಇವನವ್ವನ-ಈ ಬಸ್ಸಿನ್ನೂ ಬರ‍್ಲಿಲ್ಲಲ್ರಿ. ಏsನ್
ಎಲ್ಲೆರ ಕೆಟ್‌ಗಿಟ್ಟು ಹೋತೋ ಏನ್ ಸುಡುಗಾಡೋ ?
ನ : ಅಲ್ರಿ, ಯಜಮಾನ್ರೆ ಮ್ಯಾಲೆ ಹೋಗೇದಂತೀರಿ, ಬರೂದರ ಹ್ಯಾಂಗ್ರಿ?
ಹ : ಮ್ಯಾಲೆ ಹೋಗೇದೋ ಇಲ್ಲೋ ?
ನ : (ಮೌನ)
ಹೆ : ನೀವು ಬಂದಮ್ಯಾಲೆ-ಮ್ಯಾಲೆ ಹೋಗೇದನು ?
ನ : ನನಗೇನು ಹೋದಂಗ ಕಾಣೂದಿಲ್ಲ ಬಿಡ್ರಿ,
ಹ : ಹೋಗೇ ಇಲ್ಲ ?
ನ : (ಮೌನ)
ಹ: ಬೆಸ್ಕಾತು ಬಿಡ್ರಿ, ಹೋಗೇದ ಹೋಗದs ತನs ನಿಂತಿವಿ. ಛೇ, ಎಂಥಾ
ಕೆಲಸಾತು.
ನ : (ನಿಧಾನವಾಗಿ ಸಿಗರೇಟು ಬೀಸಾಡಿ ಎರಡೂ ಕಿಸೆಯಲ್ಲಿ ಕೈಸೇರಿಸಿ ಹೊರಡುತ್ತಾನೆ)
ಹ : ಅರೆ ಹೊಂಟ್ರೆಲ್ಲ ?
ನ : ಹೂಂ ..
ಹ : ಬಸ್ಸು ಬರೂತನಕ ಕಾಯೋದಿಲ್ಲೇನು ?
ನ : ನಾ ಬಸ್ಸಿಗೆ ನಿಂತಿಲ್ಲ.
ಹ : ಅರೆ. ಮತ್ಯಾಕ ಸಾಯ್ಲಿಕ್ಕೆ ನಿಂತ್ರಿ ಇಷ್ಟೊತ್ತನಕ, ಈ ಕೆಟ್ಟ ಬಿಸಿಲಾಗ ?
ವಿಚಿತ್ರ ಇದ್ದೀರೆಪಾ ನೀವೂ, ಆಂ!
ನ : (ಸಾವಕಾಶವಾಗಿ ಮರೆಯಾಗಿಬಿಡುತ್ತಾನೆ)
ಹ : ಎಂಥಾ ವಿಚಿತ್ರ ಜನಾ ಅಂತೀನಿ. ತಾಸಗಟ್ಟಲೆ ಬಿಸಿಲಾಗ ವ್ಯರ್ಥ ನಿಲ್ಲತಾರ,
ಮಾರಿ ಒಣ್‌ಗಿಸಿಕೋತ, ಬಕ್ಕ ನೆತ್ತೀಲೆ. ಅಲ್ಲ ಇವ್ರಿಗೇನು ಬಿಸಿಲು-ಗಿಸಿಲು
ಹತ್ತತ್ಯದನಬೇಕೋ ಏsನ ಇಲ್ಲನಬೇಕೊ ? ಅವಂಗs ಗೊತ್ತಾಗಬೇಕು,
(ಎಂದು ಮೇಲೆ ಕೈಮಾಡುತ್ತಾನೆ)
(ಹಾಗೆಯೇ ಆತ ಮೇಲೆ ನೋಡುತ್ತ ನಿಂತಿರುವಾಗಲೇ ತೆರೆ ಬೀಳುತ್ತದೆ).

Close

ಛಸನಾಲಾ ಆಕ್ರಂದನ

ಛಸನಾಲಾ ಆಕ್ರಂದನ

-ಸತೀಶ ಕುಲಕರ್ಣಿ

ನಮ್ಮನ್ನು ಬೇಗ ಎತ್ತಿರೊ, ಬೇಗ ಎತ್ತಿರೊ,
ಈ ಹೂತ ಕೂಪದಿಂದ ಬೇಗ –
ಮುಕ್ತ ಮಾಡಿರೋ.

ಕಣ್ಣು ಕಟ್ಟಿ, ಜೀವ ಕುದಿಸಿ,
ಸಾವು ಮಸೆಯುತ್ತಿರುವ -ಧೃತರಾಷ್ಟ್ರ
ಅಪ್ಪುಗೆಯಿಂದ ಬೇಗ ಬಿಡಿಸಿರೋ, ಬೇಗ ಬಿಡಿಸಿರೊ.

ದಾಡಿ ಮೂಡದ ಮುಗ್ಧ ಮುಖದಲ್ಲಿ
ತಮ್ಮನ ಕಣ್ಣೀರು ಪುಟಿದು ಹರಿದಿರಬಹುದು,
ಲಂಗ ಚಿಮುವ ತುಂಟ ತಂಗಿಯ
ಗುಲಾಬಿ ತುಟಿಗಳು ಕಟ ಕಟ ಕಚ್ಚಿರಬಹುದು,

ನನ್ನಮ್ಮನ-
ಕರಳು ಕುಡಿಗೆ ಬೆಂಕಿ ಬಿದ್ದು.
ಎದೆ ಗುಂಡಿ ಧಡಲೆಂದು ಹಾರಬಹುದು,
ಬೇಗ ಎತ್ತಿರೊ, ಬೇಗ ಎತ್ತಿರೊ.

Close

ಹಿಂಡನಗಲಿದ ಚಿಗರಿ

ಹಿಂಡನಗಲಿದ ಚಿಗರಿ

-ಕೆ ನ ಶಿವತೀರ್ಥನ್

ಗರುಕೆಮೆಯ್ಯದೆ ಗಬ್ಬಗಟ್ಟಿದ ಚಿಗರೆ ನಿಂತಲ್ಲಿಯೆ ನಿಂತು
ತಳಮಳದಲ್ಲಿ ಸುರಿಸಿತು ಕಣ್ಣೀರು, ಒಳಗೊಳಗೆ ಒದ್ದಾಡಿ
ಮೀನು ಅಲ್ಲಾಡಿತು ಕೊಳದಲ್ಲಿ ಕಮಲ, ಮೂಕ ವಿಸ್ಮಿತ
ಜಗ ಗದ್ಗದ ಕಂಠ, ಋಷಿಯ ಇಳಿ ಬಿದ್ದ ಗಡ್ಡದಲ್ಲಿ
ಜುಳುಗಿದಳು ಗಂಗೆ ತಲೆ ಬಾಗಿ ಶಕುಂತಲೆ ಕೀಳಲಾರದ
ಹೆಜ್ಜೆಕಿತ್ತು ಸಾಗಿದಳು ಸಾಗರದತ್ತ ಹೊರಟಂತೆ
ತುಂಬು ಹೊಳೆ ; ಸಾಗರದಲೆ ಬಡಿದು ಹೊಳೆ ಮತಮತ್ತೆ
ಹೆರಳಿ ಹಿಂದಕ್ಕೆ ದಿಕ್ಕಾಪಾಲು ! ಕಣ್ವರಾಡಿದ
ಮಾತೆ ಹೃದಯ ತುಂಬಿ ಹಾಸು ಹೊಕ್ಕಾಗಿರಲು
ದಾರಿ ಸಾಗಿತು.

ಜೀವ ಓಡಾಡಲು ಕಾಡು ಕತ್ತಲೆಯನ್ನೆ ಬೆಳಕ
ಬೀಡಾಗಿಸಿ ಧೃತಿಗೆಡದೆ ಹಡೆದ ಒಡಲ ಕಂದನ್ನ
ಸಲುಹುತ್ತಿದ್ದಳು ಶಕುಂತಲೆ-ಸಲಹಿದಂತೆ
ಹಿಂಡನಗಲಿದ ಚಿಗರಿ ತನ್ನ ಮರಿಯ.

Close

ಎರಡು ಕವನಗಳು

ಎರಡು ಕವನಗಳು

ನಾ ಮೊಗಸಾಲೆ

೧ ಒಂದು ಜಾಹೀರಾತು
ಸ್ವಾಮಿ
ಇದೊಂದು ಜಾಹೀರಾತೆಂದು ಕಡೆಗಣಿಸಬೇಡಿ
ದಯವಿಟ್ಟು ಗಮನಿಸಿ
ಕಳೆದು ಹೋಗಿದೆ ಕೇಳಿ ನನ್ನ ಬಾಯಿ
ತಬ್ಬಲಿ
ಬಾಯಿ ಇಲ್ಲದ ನನ್ನ ಸ್ವಂತ ಬಾಯಿ

ಈ ಬಾಯಿ ಸದಾ ಬಾಯಿಬಿಟ್ಟು ಕೂರುವ ನಿಮ್ಮ
ಬಾಯಿಯಲ್ಲ ರಾಯರೇ
ರುಚಿ ರುಚಿಯಾದ ತಿಂಡಿಗಳನ್ನು ಮೆಲ್ಲುತ್ತಾ
ಸಂಗ್ಯಬಾಳ್ಯನ ಕತೆ ಹೇಳುತ್ತ
ಸುಶ್ರಾವ್ಯವಾಗಿ ಕವನಗಳನ್ನು ಹಾಡುತ್ತಾ
ಆಕಾಶಕ್ಕೆ ಏಣಿ ಇಟ್ಟು ಹತ್ತೋಣ ಬನ್ನಿ ಎಂದು ನೀವು
ಅಪರೂಪದಲ್ಲಿ ಕರೆದರೆ
ನಾನದಕ್ಕೆ ಓಗೊಡಲು ಬಾಯಿಬಿಟ್ಟರೆ
ಗಬಕ್ಕನೆ ಒಳಗಿಳಿದು ಗಂಟಲೊತ್ತಿ ಹಿಡಿಯುವ
ನೀವು ಕೊಡುವ ಸಿಹಿಯನ್ನು ಉಪ್ಪೆಂದು ತಿರಸ್ಕರಿಸುವ
ಈಗಿನ ಕ್ರುದ್ದ ಯುವಕ ಹಿಪ್ಪಿ ಕೂದಲಿನವನಾದರೂ
ಕಾಣೆಯಾದಾಗ
ಸಾಕಿದವನಿಗೆ ಹೇಗನ್ನಿಸಬೇಡ, ಹೇಳಿ ?

ಇಷ್ಟೇ ಅಲ್ಲ ಸ್ವಾಮಿ
ಯಾವುದೇ ವಸ್ತುವನ್ನು ಇಲ್ಲಿ ಹೀಗೆ ಅಂತ ಹೇಳುವುದು ಕಷ್ಟ
ನನ್ನ ಬಾಯೊಂದನು ಬಿಟ್ಟು
ಇಲ್ಲಿ ಸಾಯುತ್ತಿರುವ ಶಬ್ದಗಳು ನಮ್ಮ ಹಾಗೆ ಕೈಯಿಂದ ಜಾರಿ
ನಿಜವಾದ ಅರ್ಥವನ್ನು ಕೊಡದೇ ಹೋಗಬಹುದು
ಉದಾಹರಣೆಗೆ
ನಾನು.
ನಮ್ಮ ದೇಶ
ಪ್ರಜಾಪ್ರಭುತ್ವ ಇತ್ಯಾದಿ
ಆದರೆ ಬಾಯಿ ಕಲ್ಲಿನ ಹಾಗೆ
“ಕರಾರುವಾಕ್ಕಾಗಿ ತುಂಬಿದ್ದು
ತನ್ನ ಹರಳುಗಳಿಂದ ಅರ್ಥದಿಂದ”

ವಿಶೇಷ ಸೂಚನೆ :
ಯಾರೇ ಆಗಲಿ ಈ ಜಾಹೀರಾತು ಓದಿದವರು
ನನ್ನ ಬಾಯಿ ನಿಮ್ಮೆದುರು ಸಿಕ್ಕಿದ ಸುಳಿವು ಕೊಟ್ಟರೆ
(ದಯವಿಟ್ಟು ಪೋಲೀಸು ಠಾಣೆಗೆ ತಿಳಿಸಬೇಡಿ.) .
ಸ್ವಾತಂತ್ರ್ಯವೊಂದನ್ನು ಬಿಟ್ಟು
ಏನನ್ನಾದರೂ ಕೇಳಿ, ಖಂಡಿತ ಕೊಡುತ್ತೇನೆ.
ಷರಾ :
(ತವರಿಗೆ ಹೋದ ನನ್ನ ಹೆಂಡತಿಗೆ-)
ಲೇ, ಚೆನ್ನಾಗಿದ್ದೇನೆ ಕಣೇ, ಬಾಯಿ ಇಲ್ಲದಿದ್ದರೂ
ಉಣ್ಣಲು ತಿನ್ನಲು ಕೊರತೆ ಇಲ್ಲ
ಆರೋಗ್ಯವಾಗಿದ್ದೇನೆ, ಬೆಳಗ್ಗಿನ ಶೀರ್ಷಾಸನ ವ್ಯಾಯಾಮ
ತಪ್ಪಿಸಿಲ್ಲ ; ವಿಶೇಷವೆಂದರೆ
ಮೂಗಿನಲ್ಲಿ ಮಾತನಾಡಲು ಕಲಿಯುತ್ತಿದ್ದೇನೆ ಗಾಬರಿಬೇಡ.

೨ ಹುಮ್ಮ ಹಕ್ಕಿ

ಹುಮ್ಮ ಎಂಬ ಒಂದು ವಿಚಿತ್ರ ಬಗೆಯ ಪಕ್ಷಿ
ವೇದ ಕಾಲದಲ್ಲಿ ಆಕಾಶತುಂಬ ಸಂಚರಿಸುತ್ತ
ಇತ್ತೆಂಬ ಉಲ್ಲೇಖ ಅಪೌರುಷೇಯವಾದ ವೇದದಲ್ಲಿದೆಯೆಂದು
ಹೇಳುತ್ತಾರೆ,

ಇರಲಿ, ಬಿಡಲಿ ; ಇದ್ದದ್ದೆ ನಿಜವಾದರೆ ಅದರ ಸ್ವರೂಪ ಹೇಗೆಂದು
ವೇದವೋದಿದರೆ ಈ ಹಕ್ಕಿಗಳು
ನಾವು ದಿನಾ ನೋಡುವ ಹಕ್ಕಿಪಕ್ಕಿಗಳ ಹಾಗಲ್ಲ
ಬದಲು ಇವು ಮರದಲ್ಲಿ ಕೂಡೋದೇ ಇಲ್ಲ; ಗಾಳಿಯೇ ಇವಕ್ಕೆ ಮರವೂ
ನೆಲವೂ

ಆಹಾರವಾಗಿ ಅನ್ನ ನೀರೂ ಬೇಕಿಲ್ಲ
ಸದಾ ರೆಕ್ಕೆ ಬಿಡಿಸಿ ಹಾರುತ್ತಲೇ ಇರುವುದರಿಂದ
ಪ್ರಾಯಶಃ ಇದಕ್ಕೆ ಕಾಲಿಲ್ಲ
ತಿನ್ನುಣ್ಣುವುದಿಲ್ಲದ್ದರಿಂದ ಮಲಮೂತ್ರ ವಿಸರ್ಜನೆಯಿಲ್ಲ
ಕತ್ತಲನ್ನು ನೋಡಿಯೇ ಗೊತ್ತಿಲ್ಲದ್ದರಿಂದ ನಮ್ಮಂಥ ಕಣ್ಣಿಲ್ಲ
ಚಂಚು ಇತ್ತೊ ಇಲ್ಲವೊ ಇದ್ದರೂ ಉದ್ದವೂ ಗಿಡ್ಡವೊ
ಎಂಬುದಕ್ಕೆ ವೇದ ಪುರುಷರು ಹೆಚ್ಚು ನಿಗಾ ಹರಿಸಿಲ್ಲ
ಎಂಬುದನ್ನೆಲ್ಲ ಒಂದೊಂದೆ ಕಲೆ ಹಾಕುತ್ತ
-ಕೇಳಿದ್ದಕ್ಕೆ ಇರಬಹುದಾದ ಸ್ವರೂಪ ಕೊಡುತ್ತಾ ಬಂದೆ.

ಇಷ್ಟಕ್ಕೆ ನಿಲ್ಲಲಿಲ್ಲ ; ಇನ್ನೂ ಮುಂದೆ ಹೋಗಿ
ಇದು ಪಕ್ಷಿಯೊ-ಪಕ್ಷಿಗುಣವಿಲ್ಲದ್ದರಿಂದ ಹೇಗೆ ಪಕ್ಷಿ
ಪ್ರಾಣಿಯೊ-ಪ್ರಾಣವುಳ್ಳದ್ದರಿಂದ ಮಾತ್ರ ಪ್ರಾಣಿ
ಆದರೆ ನಿಜವಾಗಿಯೂ ಇವು ಇದ್ದೂ ಸತ್ತಂತೆ, ಸತ್ತರೂ ಸಾಯದಂತೆ
ಹೀಗಿದ್ದೂ ಇವಕ್ಕೆ ವೇದದಲ್ಲಿ ಯಾಕಿಷ್ಟು ಪ್ರಾಶಸ್ತ್ಯ
ಎಂದು ಕುತರ್ಕಿಸುತ್ತ
ನನ್ನ ವಠಾರದಲ್ಲಿ ಹಾರಾಡುವ ಕಾಗೆ ಗುಬ್ಬಿ ಕೋಳಿ ಗಿಳಿಗಳ ಜೀವನಾಭ್ಯಾಸ
ವನ್ನು
ಅಭ್ಯಸಿಸುತ್ತ
ನಾನೂ ಪಕ್ಷಿ ಶಾಸ್ತ್ರಜ್ಞನಾಗಬೇಕೆನ್ನುವ ಬಯಕೆ
ಹುಮ್ಮ ಹಕ್ಕಿಯಾಗಿ ಬೆಳೆಯಿತು.

ಈಚೆಗೆ ಅಂತಾರಾಷ್ಟ್ರೀಯ ಖ್ಯಾತಿಯ-ನನ್ನ ಲಂಗೋಟಿಮಿತ್ರ-
ಪಕ್ಷಿಶಾಸ್ತ್ರಜ್ಞ
ಅಮೇರಿಕೆಯಿಂದ ಊರಿಗೆ ಬಂದಿದ್ದಾಗ
“ಹೌದಯ್ಯ ಹುಮ್ಮ ಹಕ್ಕಿಯ ತಳಿ ಈಗೆಲ್ಲಾದರೂ ಇದೆಯೇ ?”
ಎಂಬ ದಡ್ಡ ಪ್ರಶ್ನೆ ಹಾಕಿದೆ.
ಆತ ನಗಲಿಲ್ಲ “ಮಣ್ಣಿನ ಸಂಪರ್ಕಕ್ಕೆ ಬಾರದ ಅವುಗಳ ತಳಿ
ಈ ಭೂಮಂಡಲದಲ್ಲಿ ಹೇಗಿರಬೇಕಯ್ಯಾ ?”ಎಂದವನೆ
“ನೋಡು, ಆದರೂ ಅವಕ್ಕೆ ಸಂತಾನಾಪೇಕ್ಷೆ ಇದೆ
ಅವು ಆಕಾಶದಲ್ಲೇ ಸಂಭೋಗಿಸಿ ಇಟ್ಟ ಮೊಟ್ಟೆ
ನಮ್ಮ ಪ್ಯಾರಾಚೂಟಿನ ಹಾಗೆ ಕೆಳಕೆಳಗೆ ಇಳಿಯುತ್ತ
ಆಕಾಶ ಮತ್ತು ಭೂಮಿಯ ಗುರುತ್ವಾಕರ್ಷಣೆಯ ಕೇಂದ್ರಬಿಂದುವಿಗೆ
ಬಂದಾಗ
ಒಡೆದು ಮರಿಗಳಾಗುವ ಪರಿ
ನಿಜಕ್ಕೂ ಟಿ. ವಿ. ಯಲ್ಲಿ ಪ್ರದರ್ಶಿಸಬೇಕಾದ ದೃಶ್ಯ…..”
ಎಂದು ವರ್ಣಿಸುತ್ತಾ ಹೋದ.

ನೋಡದೆಯೂ ನೋಡಿದ ಹಾಗೆ ಹೇಳುವ ಇವನ ಗತ್ತು
ನನ್ನ ಹಾಗೆ ಮಿತ್ರನೂ ಹುಮ್ಮ ಹಕ್ಕಿಯ ಬಗ್ಗೆ ಕಾಣುವ ಕನಸು
ಮನುಷ್ಯನ ಮಹತ್ವಾಕಾಂಕ್ಷೆಯಾಗಿಯೇ ಉಳಿಯಿತು.

ಆದರೆ ಅಮೆರಿಕಕ್ಕೆ ಹೋದವನೆ ನನ್ನ ಮಿತ್ರ
ನೆನಪಿನಲ್ಲಿ ನನಗೊಂದು ಕಾಗದ ಬರೆದ
ಜೊತೆಗೆ ಅಲ್ಲಿನ ಖ್ಯಾತ ಕಲಾವಿದನೊಬ್ಬನ ಕಲ್ಪನೆಯಲ್ಲಿ ಮೂಡಿದ
ಹುಮ್ಮ ಹಕ್ಕಿಯ ಭಾವ ಚಿತ್ರ:

ಮನುಷ್ಯ ಮುಖಕ್ಕೆ-ಪಕ್ಷಿದೇಹ.

ಚಸ್‌ನಾಲ ೧೯೭೫ –

ವೇಣುಗೋಪಾಲ ಸೊರಬ

ಗಣಿಯಾಳದಲ್ಲಿ ಉಸಿರಾಡಿದಂತೆ
ಪಿಕಾಸೆ ಹಾರೆ
ಕೊರೆದು ಅಗೆದು
ತನ್ನದೇ ಬದುಕು ಸಾಗಿಸುತ್ತಿರುವಾಗ
ಮೇಲಿನ ಸರೋವರ
ತನ್ನ ಸಾರ್ವಭೌಮಿಕೆಯಲ್ಲಿ
ಹೀಗೆ ಕವುಚಿಕೊಳ್ಳುವುದೆ ? ನೂರಾರು ಜನರ ಜಲಸಮಾಧಿಯಲ್ಲಿ
ಯಾವುದೇ ಆಶಾಕಿರಣ
ಉಸಿರಾಡೀತೆ ?
ಆ ಕ್ಷಣದ ಉಮ್ಮಳ
ಗಾಳಿಕುಳಿಗಳ ಹುಡುಕುವ ತಳಮಳ
ಕ್ಕಿರಬಹುದೆ ದಾರಿ ಉದಾರಿ ?

ಕಬ್ಬಿಣದ ಮೊಳೆ ಹೊಡೆದು
ಜಾಗತಿಕ ಸಮಸ್ಯೆಗಳ
ಅಳತೆಗೆ ತಕ್ಕಂತೆ ಕತ್ತರಿಸಿ ತೆಗೆವ
ಮಾಡುವ ವರೆಗೆ
ಅಸ್ತಿತ್ವದ ಬಗೆಗೆ ಸಹಾನುಭೂತಿ ಮಾತು
ನೊಂದ ಸಂತ್ರಸ್ತರಿಗೆ ಕವಡೆ ತೂತು

೨

ಡಿಸೆಂಬರ್ ಇಪ್ಪತ್ತೇಳರ ಅಪರಾಹ್ನ ಒಂದು ಗಂಟೆ
ಭಯಂಕರವಾದ ಸ್ಫೋಟದ ಶಬ್ದಕ್ಕೆ
ಅನುಭವಿಸಿ ಬಿಟ್ಟಗಣಿ ನಿರ್ಮಿಸಿದ ಕೆರೆ
ಬಿರಿದು ತಳ
ಒಳ ಜಿನುಗುತ್ತಿದ್ದ ನೀರು
ರೋರರ್ ರಾಕೆಟ್
ಸಶಬ್ದವಾಗಿ ಕವುಚಿದ ಮಣ್ಣು ಎಷ್ಟೊಂದು ಬಾಯಿಗೆ ನೀರು ?
ಮಣ್ಣು ?
ಆಕಸ್ಮಿಕಕ್ಕೆ ಉಂಟೇನು ಹೊರ ಗೆರೆ ?
ಮೊದಲಿನ ಕ್ಷಿತಿಜ
ಎರಡನೆಯ ಕ್ಷಿತಿಜ

ಅಳಿಸಿ ಹೋಯಿತು ಜೀವ
ಬರಿಯ ವಿಕಾರ ಸಂಭವ
ಕತ್ತಲು ಕೊಚ್ಚೆ ಅರೆಕೊರೆ ಜೀವ
ತೊಟ್ಟ ಲ್ಯಾಂಪಿನ ನಂಬರಿಗೆ ಸಮಾಧಿ

೩

ಈ ಗಣಿಯೊಳಗಿಳಿಯುವುದೆಂದರೇ
ಸಾಯುವುದು
ನನಗಿನ್ನು ಬೇಡ ಸಾಕು
ಕಾಗದ ತಲಪುವ ಮುನ್ನ ಗುರಿ
ಜೀವ ಪಕ್ಷಿಯ ರೆಕ್ಕೆ ಗರಿಮುರಿ

ತುಪ್ಪಳ ಕೊಚ್ಚಿ ಕೊಚ್ಚಿ
ನೂರಾರು ಆಸೆ ಆಕಾಂಕ್ಷೆಗಳ ಹೊತ್ತ ಎದೆ
ಕುಸಿದು
ಭೂಮಿಯ ಬಸಿರಿನಲ್ಲಿ ಮಣ್ಣಿಗೆ ಮರಳಿ
ಜನ ಜಂಗುಳಿ

೪

ಸತ್ತು ಕೆಟ್ಟವರು ದಿಕ್ಕೆಟ್ಟವರು
ಗೋಳಾಡಲಿಕ್ಕೆ ಗಡುವುಂಟೆ ?
ಎಲ್ಲೆಲ್ಲೂ
ಕಳಕೊಂಡವರು
ಗಂಡಂದಿರನ್ನ, ಮಕ್ಕಳನ್ನ

ಪರಿಹಾರಕ್ಕಾಗಿ
ಸಾಲುಗಟ್ಟಿರುವವರಲ್ಲಿ
ಈ ವುದುಕಿ
ಎದೆಗವಚಿಕೊಂಡಿರುವ ಮಗು
ಅನಾಥೆ
ಭೂಮಿ ಬಸಿರಿಗೆ ಎಷ್ಟು ಕೊಟ್ಟರೆ ಸಾಕು ?
ಒಡಲ ಬೇಗೆಗೆ ಎಷ್ಟು ಸುರಿದಿರೆ ಸಾಕು ?

ಅನಾಥ ಮಗುವಿಗೆ ದಿಕ್ಕು ?
ದಿಕ್ಕೆಟ್ಟವರ ಸತ್ತು ಕೆಟ್ಟವರ
ಅನುಕಂಪವೆ ? ಮೂದಲೆಯೆ ? ಭಿಕ್ಷೆಯೆ ?
ಮಧ್ಯಸ್ಥಗಾರರ ಮಣೆಯೆ ? ದಲ್ಲಾಳಿಗಳ ದಯೆಯೆ ?
ಮಗುವಿನಂತೆ ಮುದುಕಿಯೂ ಅನಾಥೆ ಅಲ್ಲ ?

೫

ನೀರು ತೆಗೆಯುವ ಕೆಲಸ
ಎಷ್ಟು ಪಂಪಿಗೆ ಸಾಧ್ಯ ?
ನೀರೆ ?
ಕೊಳೆತ ಹೆಣಗಳ ದುರ್ವಾಸನೆಯೆ ?
ಸುರಿಯುತ್ತ ಹೋದಂತೆ ನೀರು
ಸೋರುತ್ತ ಹೋಗುವುದು ಧೈರ್ಯ
ಅಪನಂಬಿಕೆಗೆ ಭಯಭೀತಿಗೆ
ಸವಾಲನೊಡ್ಡುವ ತರ್ಕವಿತರ್ಕಗಳ
ಘೋಷಣೆ ಶೋಷಣೆ
ಸ್ಪಂದನವೆ ಇಲ್ಲದ ಅಸ್ಥಿ
ಪಂಜರದಲ್ಲಿ ಸಿಕ್ಕಿಬಿದ್ದ
ವಿಷಯ ಮಾತು
ಬರಿ ಸೊನ್ನೆ

೬

ಇಲ್ಲಿ ನಮ್ಮ ಕಾಲಡಿಯಲ್ಲೆ
ನಮ್ಮೊಂದಿಗೆ ಸಹಬಾಳ್ವೆ ನಡೆಸಿದ ಮಂದಿ
ಜಲಸಮಾಧಿಯನ್ನಪ್ಪಿದ್ದು
ಯಾವ ಗಂಗೆಗೆ ಪುಣ್ಯ ?
ನಮ್ಮ ಗುಡಿಗಳ ಪಾಯ
ಕಂದಕದ ಮೇಲಿನ ತೇಲುವೆಲೆ

ಈ ಸಮಾಧಿಸ್ಥ ಜನಗಳ
ಮೂಳೆಗಳನೂ ಬಿಟ್ಟುಕೊಡದ
ಈ ಬಸಿರು ಬೆಂಕಿಗೆ
ಕಾಡು ಕಾಡುಗಳನ್ನೆ
ನಿರ್ವಾತ ಸ್ಥಿತಿಯಲ್ಲಿ ಭುಂಜಿಸಿ
ಕಲ್ಲಿದ್ದಿಲಿಗೆ ಅನುವದಿಸಿ

ಗರ್ಭಿಕರಿಸಿದ್ದಕ್ಕೆ
ಉಂಟೆ ಸಾಟಿ ? ಸಂಯವು ?

ನೀರೆತ್ತುವ
ಮೂಳೆಗಳನ್ನು ವಿಂಗಡಿಸುವ
ತಲೆಬುರುಡೆಗಳಲ್ಲಿ
ಲಾಂದ್ರ ಸಂಖ್ಯೆಗಳನ್ನು
ಹುಡುಕುವ ಪಳೆಯುಳಿಕೆಗಳನ್ನು
ಸ್ವಪ್ಪಿಸುವ
ಕೊಳೆಯುವ
ಕ್ರಿಯೆಗಿಲ್ಲ ಅಂತ್ಯ
ಎಲ್ಲೆಲ್ಲೂ ಹರಡಿರುವುದೊಂದೆ ಪ್ರಾಂತ್ಯ

Close

ಚಸ್ನಾಲ-೧೯೭೫

ಚಸ್‌ನಾಲ ೧೯೭೫ –

ವೇಣುಗೋಪಾಲ ಸೊರಬ

ಗಣಿಯಾಳದಲ್ಲಿ ಉಸಿರಾಡಿದಂತೆ
ಪಿಕಾಸೆ ಹಾರೆ
ಕೊರೆದು ಅಗೆದು
ತನ್ನದೇ ಬದುಕು ಸಾಗಿಸುತ್ತಿರುವಾಗ ಮೇಲಿನ ಸರೋವರ
ತನ್ನ ಸಾರ್ವಭೌಮಿಕೆಲ್ಲಿ
ಹೀಗೆ ಕವುಚಿಕೊಳ್ಳುವುದೆ ?
ನೂರಾರು ಜನರ ಜಲಸಮಾಧಿಯಲ್ಲಿ
ಯಾವುದೇ ಆಶಾಕಿರಣ
ಉಸಿರಾಡೀತೆ ?
ಆ ಕ್ಷಣದ ಉಮ್ಮಳ
ಗಾಳಿಕಳಿಗಳ ಹುಡುಕುವ ತಳಮಳೆ ಕ್ಕಿರಬಹುದೆ ದಾರಿ ಉದಾರಿ ?

ಕಬ್ಬಿಣದ ಮೊಳೆ ಹೊಡೆದು
ಜಾಗತಿಕ ಸಮಸ್ಯೆಗಳ
ಅಳತೆಗೆ ತಕ್ಕಂತೆ ಕತ್ತರಿಸಿ ತೆಗೆವ ಮಾಡುವ ವರೆಗೆ

ಅಸ್ತಿತ್ವದ ಬಗೆಗೆ ಸಹಾನುಭೂತಿ ಮಾತು
ನೊಂದ ಸಂತ್ರಸ್ತರಿಗೆ ಕವಡೆ ತೂತು

ಡಿಸೆಂಬರ್ ಇಪ್ಪತ್ತೇಳರ ಅಪರಾಹ್ನ ಒಂದು ಗಂಟೆ
ಭಯಂಕರವಾದ ಸ್ಫೋಟದ ಶಬ್ ಕ್ಕೆ
ಅನುಭವಿಸಿ ಬಿಟ್ಟಗಣಿ
ನಿರ್ಮಿಸಿದ ಕೆರೆ
ಬಿರಿದು ತಳ
ಒಳ ಜಿನುಗುತ್ತಿದ್ದ ನೀರು
ರೋರರ್ ರಾಕೆಟ್
ಸಶಬ್ದವಾಗಿ ಕವುಚಿದ ಮಣ್ಣು
ಎಷ್ಟೊಂದು ಬಾಯಿಗೆ ನೀರು ?
ಮಣ್ಣು ?
ಆಕಸ್ಮಿಕಕ್ಕೆ ಉಂಟೇನು ಹೊರ ಗೆರೆ ?
ಮೊದಲಿನ ಕ್ಷಿತಿಜ
ಎರಡನೆಯ ಕ್ಷಿತಿಜ
ಆಳಿಸಿ ಹೋಯಿತು ಜೀವ
ಬರಿಯ ವಿಕಾರ ಸಂಭವ
ಕತ್ತಲು ಕೊಚ್ಚೆ ಅರೆಕೊರೆ ಜೀವ ತೊಟ್ಟ ಲ್ಯಾಂಪಿನ ನಂಬರಿಗೆ ಸಮಾಧಿ

ಈ ಗಣಿಯೊಳಗಿಳಿಯುವುದೆಂದರೇ ಸಾಯುವುದು
ನನಗಿನ್ನು ಬೇಡ ಸಾಕು
ಕಾಗದ ತಲಪುವ ಮುನ್ನ ಗುರಿ
ಜೀವ ಪಕ್ಷಿಯ ರೆಕ್ಕೆ ಗರಿಮುರಿ

ತುಪ್ಪಳ ಕೊಚ್ಚಿ ಕೊಚ್ಚಿ
ನೂರಾರು ಆಸೆ ಆಕಾಂಕ್ಷೆಗಳ ಹೊತ್ತ ಎದೆ
ಕುಸಿದು
ಭೂಮಿಯ ಬಸಿರಿನಲ್ಲಿ ಮಣ್ಣಿಗೆ ಮರಳಿ
ಜನ ಜಂಗುಳಿ
ಸತ್ತು ಕೆಟ್ಟವರು ದಿಕ್ಕೆಟ್ಟವರು
ಗೋಳಾಡಲಿಕ್ಕೆ ಗಡುವುಂಟೆ ?
ಎಲ್ಲೆಲ್ಲಿ
ಕಳಕೊಂಡವರು
ಗಂಡಂದಿರನ್ನ, ಮಕ್ಕಳನ್ನ
ಪರಿಹಾರಕ್ಕಾಗಿ
ಸಾಲುಗಟ್ಟಿರುವವರಲ್ಲಿ
ಈ ವುದುಕಿ
ಎದೆಗವಚಿಕೊಂಡಿರುವ ಮಗು
ಅನಾಥೆ
ಭೂಮಿ ಬಸಿರಿಗೆ ಎಷ್ಟು ಕೊಟ್ಟರೆ ಸಾಕು ?
ಒಡಲ ಬೇಗೆಗೆ ಎಷ್ಟು ಸುರಿದಿರೆ ಸಾಕು ?
ಅನಾಥ ಮಗುವಿಗೆ ದಿಕ್ಕು ?
ದಿಕ್ಕೆಟ್ಟವರ ಸತ್ತು ಕೆಟ್ಟವರ
ಅನುಕಂಪವೆ ? ಮೂದಲೆಯ ? ಭಿಕ್ಷೆಯೆ ? ಮಧ್ಯಸ್ಥಗಾರರ ಮಣೆಯೆ ?
ದಲ್ಲಾಳಿಗಳ ದಯೆಯೆ ?
ಮಗುವಿನಂತೆ ಮುದುಕಿಯೂ ಅನಾಥೆ ಅಲ್ಲ ?

ನೀರು ತೆಗೆಯುವ ಕೆಲಸ
ಎಷ್ಟು ಪಂಪಿಗೆ ಸಾಧ್ಯ ?
ನೀರೆ ?
ಕೊಳೆತ ಹೆಣಗಳ ದುರ್ವಾಸನೆಯೆ ?
ಸುರಿಯುತ್ತ ಹೋದಂತೆ ನೀರು
ಸೋರುತ್ತ ಹೋಗುವುದು ಧೈರ್ಯ
ಅಪನಂಬಿಕೆಗೆ ಭಯಭೀತಿಗೆ
ಸವಾಲನೊಡ್ಡುವ ತರ್ಕವಿತರ್ಕಗಳ
ಘೋಷಣೆ ಶೋಷಣೆ
ಸ್ಪಂದನವೆ ಇಲ್ಲದ ಅಸ್ಥಿ
ಪಂಜರದಲ್ಲಿ ಸಿಕ್ಕಿಬಿದ್ದ
ವಿಷಯ ಮಾತು
ಬರಿ ಸೊನ್ನೆ

ಇಲ್ಲಿ ನಮ್ಮ ಕಾಲಡಿಯಲ್ಲಿ
ನಮ್ಮೊಂದಿಗೆ ಸಹಬಾಳ್ವೆ ನಡೆಸಿದ ಮಂದಿ
ಜಲಸಮಾಧಿಯನ್ನಪ್ಪಿದ್ದು
ಯಾವ ಗಂಗೆಗೆ ಪುಣ್ಯ ?
ನಮ್ಮ ಗುಡಿಗಳ ಪಾಯ
ಕಂದಕದ ಮೇಲಿನ ತೇಲುವೆಲೆ
ಈ ಸಮಾಧಿಸ್ಥ ಜನಗಳ
ಮೂಳೆಗಳನ್ನೂ ಬಿಟ್ಟುಕೊಡದ
ಈ ಬಸಿರು ಬೆಂಕಿಗೆ
ಕಾಡು ಕಾಡುಗಳನ್ನೆ
ನಿರ್ವಾತ ಸ್ಥಿತಿಯಲ್ಲಿ ಭುಂಜಿಸಿ
ಕಲ್ಲಿದ್ದಿಲಿಗೆ ಅನುವದಿಸಿ

ಗರ್ಭಿಕರಿಸಿದ್ದ ಕ್ಕೆ
ಉಂಟೆ ಸಾಟಿ ? ಸಂಯವು ?
ನೀರೆತ್ತುವ
ಮೂಳೆಗಳನ್ನು ವಿಂಗಡಿಸುವ
ತಲೆಬುರುಡೆಗಳಲ್ಲಿ
ಲಾಂದ್ರ ಸಂಖ್ಯೆಗಳನ್ನು
ಹುಡುಕುವ
ಪಳೆಯುಳಿಕೆಗಳನ್ನು
ಸ್ವಪ್ಪಿಸುವ
ಕೊಳೆಯುವ
ಕ್ರಿಯೆಗಿಲ್ಲ ಅಂತ್ಯ
ಎಲ್ಲೆಲ್ಲೂ ಹರಡಿರುವುದೊಂದೆ ಪ್ರಾಂತ್ಯ

Close
By kanaja|2021-01-06T19:14:16+05:30May 17, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೦

    ಸಂಪುಟ-೩೦

Leave A Comment Cancel reply

ವಿಭಾಗಗಳು

ಹೊಸ ಅಂಕಣಗಳು

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕನ್ನಡ ಭಾಷೆ,ಸಾಹಿತ್ಯ

  • ಸಂಪುಟ-೩೪
  • ಸಂಪುಟ-೩೩
  • ಸಂಪುಟ-೩೨
  • ಸಂಪುಟ-೩೧
  • ಸಂಪುಟ-೩೦

ಕಲೆ,ಸಂಗೀತ

  • ರಂಗ ವಿಮರ್ಶೆಯ ಬೆನ್ನು ಹತ್ತಿ..
  • ರಂಗಭೂಮಿಯೊಂದೇ ಸಮತಾವಾದದ ಪ್ರತೀಕ
  • ರಂಗಭೂಮಿಯ ನಡಿಗೆ
  • ರಂಗ ಪರದೆಗಳು : ಶಬ್ದಪಾರಮಾರ್ಗಮಶಕ್ಯಂ
  • ರಂಗ ಪರದೆಗಳು : ರಂಗ ಪರದೆಗಳ ಹಿನ್ನೆಲೆ

ವಿಜ್ಞಾನ , ತಂತ್ರಜ್ಞಾನ

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕೃಷಿ ,ರೈತರ ಅನುಭವ

  • ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016
  • ಪದವಿನ್ಯಾಸ: ೧೨. ಸನಿಕೆ
  • ಪದವಿನ್ಯಾಸ: ೧೩. ಈಚು
  • ಪದವಿನ್ಯಾಸ: ೧೪. ಕಣಜ
  • ಪದವಿನ್ಯಾಸ: ೯. ಬೆಳೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2020 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕೃತ ಜಾಲತಾಣ
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - kanaja@karnataka.gov.in

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top

ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ
ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ.