Skip to content
ದೂರವಾಣಿ : | 22212487|developkanaja@gmail.com
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ- ೩

Home/ಕನ್ನಡ/ಸಂಪುಟ- ೩
Previous Next

ಸಂಪುಟ- ೩

  • ಭಾಷೆ ಸಂಸ್ಕೃತಿ ಭಾವೈಕ್ಯ
  • ಕನ್ನಡ ಧಾತುಗಳ ರಚನಾ ವೈಶಿಷ್ಟ್ಯ
  • ಹೊರತು
  • ಸೃಷ್ಟಿಕ್ರಿಯೆ: ಅದರ ಮನೋವಿಜ್ಞಾನ
  • ಛಲ
  • ಪಿ.ಲಂಕೇಶರ ಬಿರುಕು
  • ಮಾಸ್ತಿಯವರ ಸಣ್ಣ ಕತೆಗಳು

ಭಾಷೆ ಸಂಸ್ಕೃತಿ ಭಾವೈಕ್ಯ

ರಾಮದಾಸ್

ಭಾಷೆ ಸಂಸ್ಕೃತಿ ಭಾವೈಕ್ಯ

ಉನ್ನತ ವಿದ್ಯಾಭ್ಯಾಸದ ಶಿಕ್ಷಣ ಮಾಧ್ಯಮದ ಬಗೆಗೆ ಚರ್ಚೆ ನಡೆಸಿದ ಭಾರತೀಯ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಲ್ಲಿ ಎಲ್ಲರೂ ಆಯಾ ಪ್ರಾಂತೀಯ ಭಾಷೆಗಳ ಮೂಲಕವೇ ಶಿಕ್ಷಣವನ್ನೀಯಬೇಕೆಂಬ ಸಲಹೆಯನ್ನು ತತ್ವಶಃ ಅಂಗೀಕರಿಸಿದರು. ಬೊಂಬಾಯಿ ವಿಶ್ವವಿದ್ಯಾನಿಲಯದ ಉಪಕುಲಪತಿ ಶ್ರೀ ಗಜೇಂದ್ರಗಡ್ಕರ್ ಅವರು ಮಾತ್ರ ಪ್ರಾಂತೀಯ ಭಾಷಾ ಶಿಕ್ಷಣ ಮಾಧ್ಯಮವನ್ನು ವಿರೋಧಿಸಿದರು. ಪಂಜಾಬು ವಿಶ್ವವಿದ್ಯಾನಿಲಯದ ಉಪಕುಲಪತಿಗಳು, ಇಂಗ್ಲೀಷಿನ ಗುಣಾವಗುಣಗಳೇನೇ ಇರಲಿ ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನೆಚ್ಚರಿಸಿ ಅವರನ್ನು ಸಂಘಟಿತರನ್ನಾಗಿ ಮಾಡಿದ ಶ್ರೇಯಸ್ಸು ಇಂಗ್ಲೀಷು ಭಾಷೆಯದೆಂದೂ ಭಾರತದ ಐಕ್ಯದ ದೃಷ್ಟಿಯಿಂದ ಭಾರತದಲ್ಲೆಲ್ಲ ಉನ್ನತ ವಿದ್ಯಾಭ್ಯಾಸದ ಶಿಕ್ಷಣ ಮಾಧ್ಯಮ ಒಂದೇ ಆಗಿರಬೇಕೆಂದೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಇಂಗ್ಲೀಷರು ಒಡೆದು ಆಳುವ ನೀತಿಯನ್ನು ಅನುಸರಿಸಿದರು. ನಿಜ. ಆದರೆ ಇಂಗ್ಲೀಷರು ಬರುವುದಕ್ಕೆ ಮುಂಚೆ ಭಾರತೀಯರು ಏನುಮಾಡುತ್ತಿದ್ದರು ಎಂಬುದನ್ನು ನಾವು ಮರೆಯಬಾರದು. ಅಂತಃಕಲಹದಿಂದ ಕಲುಷಿತಗೊಂಡಿದ್ದ ಪ್ರಕ್ಷುಬ್ಬವಾಗಿದ್ದ ಭಾರತೀಯ ಆಡಳಿತಗಾರರ ದುರ್ಬಲ ಪರಿಸ್ಥಿತಿಯನ್ನು ತಮಗೆ ಬೇಕಾದಂತೆ ಉಪಯೋಗಿಸಿದ ಇಂಗ್ಲೀಷರು ಅದರ ಪೂರ್ಣ ಲಾಭ ಪಡೆದುಕೊಂಡರು ಅಷ್ಟೆ. ಭಾರತ ಇಂಗ್ಲೀಷರ ಅಧೀನವಾದ ಬಳಿಕ ಅದನ್ನೊಂದು ಇಡೀ ರಾಜ್ಯವನ್ನಾಗಿ ಪರಿಗಣಿಸಿದರು ಇಂಗ್ಲೀಷರು. ರಾಜಾರಾಮ ಮೋಹನರಾಯರಂಥವರ ಸತತ ಪ್ರಯತ್ನದಿಂದಾಗಿ ಭಾರತದಲ್ಲಿ ಆಧುನಿಕ ಶಿಕ್ಷಣ ಪದ್ಧತಿಯನ್ನು ಅವರು ಜಾರಿಗೆ ತಂದರು. ಆದರೆ ಅವರು ಪ್ರಾಂತೀಯ ಭಾಷೆಗಳನ್ನು ಪ್ರೋತ್ಸಾಹಿಸಿ ಅವುಗಳನ್ನು ಶಿಕ್ಷಣ ಮಾಧ್ಯಮಗಳನ್ನಾಗಿ ಬಳಸಲಿಲ್ಲ. ಒಂದು ವೇಳೆ ಹಾಗೆ ಮಾಡಿದ್ದರೆ ಗಾಂಧಿ, ಪಟೇಲ, ನೆಹರೂ ಅವರಂಥ ರಾಷ್ಟ್ರನಾಯಕರ ಪರಿಚಯವಾಗಲೀ, ಪ್ರಭಾವವಾಗಲೀ ಇಷ್ಟು ಪ್ರಖರವಾಗಿ ಆಗುತ್ತಿರಲಿಲ್ಲ. ಅಷ್ಟೇ ಏಕೆ, ಬಹುಶಃ ಸಾವಿರದ ಒಂಭೈನೂರ ಅರವತ್ತೇಳರಲ್ಲ ನಮ್ಮ ಭಾರತ ಸ್ವಾತಂತ್ರ್ಯವನ್ನು ಗಳಿಸುತ್ತಿರಲಿಲ್ಲ. ಸ್ವಾತಂತ್ರಾರ್ಜನೆಗಾಗಿ ಭಾರತೀಯರನ್ನು ಒಂದುಗೂಡಿಸಿದ್ದು ವೇದ ಉಪನಿಷತ್ತುಗಳಲ್ಲ. ಹಿಂದೀ ಭಾಷೆಯಂತೂ ಅಲ್ಲವೇ ಅಲ್ಲ ; ಅದು ಇಂಗ್ಲೀಷಿನ ಅಭ್ಯಾಸ ಹಾಗೂ ಆಧುನಿಕ ವಿದ್ಯಾಭ್ಯಾಸ.
ನುಡಿಯಲ್ಲಿ ವೈವಿಧ್ಯ, ನಡೆಯಲ್ಲಿ ವೈವಿಧ್ಯ, ಉಡುಗೆಯಲ್ಲಿ ವೈವಿಧ್ಯ, ತೊಡುಗೆಯಲ್ಲಿ ವೈವಿಧ್ಯ, ಆಚಾರ ವಿಚಾರಗಳಲ್ಲಿ ಹಬ್ಬ-ಹರಿದಿನಗಳಲ್ಲಿ ವೈವಿಧ್ಯ ! ಭಾರತೀಯರ ಈ ಎಲ್ಲ ವೈವಿಧ್ಯದ ನಡುವೆಯೂ ಏಕತೆ ಉಂಟೆಂದು ನಾವು ವಾದಿಸುತ್ತೇವೆ. ಭಾರತೀಯರಿಗೆಲ್ಲ ಒಂದಾದ ಸಂಸ್ಕೃತಿ ಉಂಟೆಂದು ಬೊಬ್ಬಿಡುತ್ತೇವೆ. ಹೆಮ್ಮೆಯಿಂದ ಬೀಗುತ್ತೇವೆ. ಪ್ರತ್ಯೇಕವಾಗಿ ಗುರುತಿಸಬಹುದಾದ “ಭಾರತೀಯ ಸಂಸ್ಕೃತಿ” ಉಂಟೆಂದು ಸಿದ್ಧಪಡಿಸಬೇಕಾದಾಗ ನಾವು ಅನಿವಾರ‍್ಯವಾಗಿ ಸಂಸ್ಕೃತಭಾಷೆಯ ಮೊರೆ ಹೋಗುತ್ತೇವೆ. ಈಗಿನ ಎಲ್ಲ ವೈವಿಧ್ಯದ ಅಂತರಾಳದಲ್ಲಿ ಸಂಸ್ಕೃತದ ಸಂಸ್ಕೃತಿಯಾದ ವೇದೋಪನಿಷತ್ತುಗಳೂ, ಪುರಾಣ ಇತಿಹಾಸಗಳೂ, ಬ್ರಾಹ್ಮಣಗಳೂ ಬೇರು ಬಿಟ್ಟಿವೆ. ಆ ಪರಂಪರೆ ಇಂದಿನವರೆಗೂ ಭಿನ್ನ ಭಾಷೆಗಳಲ್ಲಿ, ಜನಾಂಗಗಳಲ್ಲಿ, ಅವರ ಆಚಾರ ವಿಚಾರಗಳಲ್ಲಿ ಬೆಳೆದು ಉಳಿದು ಬಂದಿದೆ. ಭಾರತೀಯ ಸಂಸ್ಕೃತಿಯ ಬೆನ್ನೆಲುಬು ಈ ಪರಂಪರೆ.
ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸಂಸ್ಕೃತಭಾಷೆ ಹಾಗೂ ಈಗ ನಾವು ಭಾರತೀಯ ಎನ್ನುವ ಸಂಸ್ಕೃತಿಯ ಒತ್ತಡ ಎಷ್ಟೆ ಪ್ರಬಲವಾಗಿದ್ದರೂ, ಸಾವಿರಾರು ವರ್ಷಗಳ ದೀರ್ಘ ಕಾಲಾವಧಿಯದಾಗಿದ್ದರೂ ದಕ್ಷಿಣದಲ್ಲಿ ‘ದ್ರಾವಿಡ’ ಎಂದು ಗುರುತಿಸಬಹುದಾದ ಸಂಸ್ಕೃತಿಯ ಪಳೆಯುಳಿಕೆಗಳು ಈಗಲೂ ಉಳಿದುಕೊಂಡಿವೆ. ದ್ರಾವಿಡ ಭಾಷೆಗಳು ಬೆಳೆದು ಅವುಗಳಲ್ಲಿ ಸಾಹಿತ್ಯೋದಯ ಆಗುವ ವೇಳೆಗಾಗಲೇ ಸಂಸ್ಕೃತದ ಸಂಸ್ಕೃತಿಯ ಪರಿಣಾಮ ಅವುಗಳ ಮೇಲೆ ತೀವ್ರವಾಗಿತ್ತು. “ಭಾರತೀಯತ್ವ” ತಲೆದೋರಿತ್ತು. ಭಾರತದ ಯಾವುದೇ ಪ್ರಾಂತೀಯ ಭಾಷೆಯಲ್ಲಿ ಸಾಹಿತ್ಯ ಅಥವಾ ಶಾಸ್ತ್ರಗ್ರಂಥ ರಚಿಸಿದ ವ್ಯಕ್ತಿ ನಿರ್ವಿವಾದವಾಗಿ, ನಿಸ್ಸಂದೇಹವಾಗಿ ಸಂಸ್ಕೃತ ಭಾಷಾಜ್ಞಾನವನ್ನು ಪಡೆದಿದ್ದ. ಸಂಸ್ಕೃತ ಭಾಷೆ ವಿಚಾರವಂತರ ವಿಜ್ಞಾನಿಗಳ ಶಾಸ್ತ್ರವೇತ್ತರ ಸಾಹಿತಿಗಳ ಭಾಷೆ ಆಗಿತ್ತು. ಭಾರತೀಯರಿಗೆಲ್ಲ ಜ್ಞಾನಾರ್ಜನೆಯ ಮಾಧ್ಯಮ ಸಂಸ್ಕೃತ ಆಗಿತ್ತು. ಸಂಸ್ಕೃತದ ಸಂಸ್ಕೃತಿಯನ್ನುಳ್ಳ “ಭಾರತೀಯ” ಎನ್ನುವ ರಾಷ್ಟ್ರೀಯ ಪ್ರಜ್ಞೆ ಮೂಡಿದ್ದು ಭಾರತದಲ್ಲೆಲ್ಲ ಜ್ಞಾನಾರ್ಜನೆಗಾಗಿ ಇದ್ದ ಏಕೈಕ ಸಂಸ್ಕೃತ ಮಾಧ್ಯಮದಿಂದ, ವಿದ್ಯಾವಂತರಾಗಬೇಕಾದವರು ಸಂಸ್ಕೃತದಲ್ಲಿ ಇದ್ದದ್ದನ್ನು ಕಲಿತರು. ಕೇವಲ ತಮ್ಮ ‘ಪ್ರಾಂತೀಯ? ಅಲ್ಲದ, ‘ರಾಷ್ಟ್ರೀಯ’ ಆದ ಸಂಸ್ಕೃತವನ್ನು ಭಾರತದಲ್ಲೆಲ್ಲ ಎಲ್ಲಿಯವರೆಗೆ ಕಲಿತರೋ ಅಲ್ಲಿಯವರೆಗೂ ಸಂಸ್ಕೃತದಲ್ಲಿ ಸಾಹಿತ್ಯ ಮತ್ತು ಶಾಸ್ತ್ರಗಳು ಬೆಳೆದುವು. ಸಂಸ್ಕೃತ ಭಾಷೆಯ ಸಂಸ್ಕೃತಿ ವಿದ್ಯಾವಂತರಾದ ದ್ರಾವಿಡರಲ್ಲೂ ರಕ್ತಗತವಾಯಿತು. ಎಲ್ಲರ ಗುರಿ ಸಾಹಿತ್ಯ, ಶಾಸ್ತ್ರ, ವಿಜ್ಞಾನಗಳ ಪಾಂಡಿತ್ಯ ಆಗಿತ್ತು. ಅದನ್ನು ಸಾಧಿಸಲು ಸಂಸ್ಕೃತ ಮಾಧ್ಯಮ ಅಥವಾ ಸಾಧನ ಆಗಿತ್ತು. ಆ ಗುರಿ ಈ ಮಾಧ್ಯಮದ ಮೂಲಕ ಸಾಧಿತವಾದಾಗ ಉಪವಸ್ತುವಿನಂತೆ “ಭಾರತೀಯತ್ವ”ದ ಜನನವಾಯಿತು. ಕಲಿತ ವಿದ್ವಾಂಸನಿಗೆ ಯಾವುದೇ ಒಂದು ಪ್ರಾಂತದ ಬಂಧನವಿರಲಿಲ್ಲ. ಪ್ರಾಂತೀಯ ರಾಜರುಗಳಿಗಿಂತ ವಿದ್ವಾಂಸ ಮೇಲೆನಿಸಿದ್ದ. ರಾಜನಾದವನಿಗೆ ತನ್ನ ರಾಜ್ಯದಲ್ಲಿ ಮಾತ್ರ ಗೌರವವಾದರೆ ವಿದ್ವಾಂಸನಾದವನಿಗೆ ಎಲ್ಲ ರಾಜ್ಯಗಳಲ್ಲೂ ಗೌರವವಿತ್ತು.
ಬೌದ್ಧ ಜೈನ ಮತಧರ‍್ಮಗಳ ಪ್ರಸಾರದ ಉದ್ದೇಶ ಪ್ರಮುಖ ಆದಾಗ ಜನಸಾಮಾನ್ಯರಲ್ಲಿ ರೂಢವಾಗಿದ್ದ ಪ್ರಾಂತಭಾಷಾ ಮಾಧ್ಯಮ ಬೇಕಾಯ್ತು. ಕ್ರಮೇಣ, ಈಗ ಹೇಗೆ ಇಂಗ್ಲೀಷಿನಿಂದ ಬೆರಳೆಣಿಕೆಯ ಪುಸ್ತಕಗಳನ್ನು ಪ್ರಾಂತೀಯ ಭಾಷೆಗಳಿಗೆ ಅನುವಾದ ಮಾಡಿ, ಪಠ್ಯಪುಸ್ತಕಗಳ ಸಮಸ್ಯೆಯನ್ನು ಬಗೆಹರಿಸಿ, ಅವುಗಳನ್ನು ಶಿಕ್ಷಣಮಾಧ್ಯಮವನ್ನಾಗಿ ಬಳಸಬೇಕೆನ್ನುತ್ತಿದ್ದಾರೋ ಹಾಗೆಯೇ ಸಂಸ್ಕೃತದಿಂದ ಸಾಹಿತ್ಯ, ಶಾಸ್ತ್ರ ಗ್ರಂಥಗಳ ಅನುವಾದಕಾರ‍್ಯ ಆರಂಭವಾಯ್ತು. ನಮ್ಮ ಕನ್ನಡವನ್ನೇ ತೆಗೆದುಕೊಳ್ಳಿ ಹಿಂದೆ ಆಗಿಹೋದ ನಮ್ಮ ಮಹಾಕವಿಗಳೂ, ಕವಿಚಕ್ರವರ್ತಿಗಳೂ, ಕಾವ್ಯಲಕ್ಷಣ ಕಾರರೂ ಸಂಸ್ಕೃತ, ಪಾಕೃತ ಹಾಗೂ ಪ್ರಾಂತೀಯ ಭಾಷೆಗಳಲ್ಲಿ ವಿದ್ವಾಂಸರು’ ಅವರೆಲ್ಲರೂ ಅತ್ಯಂತ ಸಾಮರ್ಥ್ಯಶಾಲಿಗಳಾದ, ಸೊಪಜ್ಞ ಪ್ರತಿಭಾವಂತರಾದ, ಅನುವಾದಕರು ಕಾವ್ಯವೇಕೆ, ಕಾವ್ಯಮೀಮಾಂಸೆ, ಅಲಂಕಾರ, ರಸ, ವ್ಯಾಕರಣ, ವೈದ್ಯ, ತತ್ವ, ಜ್ಯೋತಿಷ, ಗಜಾಶ್ವಶಾಸ್ತ್ರಾದಿ ಗ್ರಂಥಗಳೆಲ್ಲ ಸಂಸ್ಕೃತದಿಂದ ಅನುವಾದಗೊಂಡವು. ಬಹುಶಃ ದಾಕ್ಷಿಣಾತ್ಯನಾಗಿದ್ದ ಭಾಸ ನಾಟಕಗಳನ್ನೂ, ದಂಡಿ ಕಾವ್ಯಾದರ್ಶವನ್ನೂ ಸಂಸ್ಕೃತದಲ್ಲೇ ಬರೆದದ್ದು. ಬಹುಶಃ ವಚನ ಸಾಹಿತ್ಯವನ್ನು ಬಿಟ್ಟರೆ ಕನ್ನಡದ ‘ಸ್ವಂತಿಕೆ ಎಲ್ಲಿದೆ ? ಯಾರದ್ದಿದೆ ? ಏನಿದೆ ? ಎಷ್ಟಿದೆ ? ಎಂದು ಕೇಳುವದು ಧಾರ್ಷ್ಟ್ಯವಾಗಲಾರದು.
ಕನ್ನಡದ ರನ್ನನನ್ನೂ, ಪಂಪನನ್ನೂ ಸ್ಮರಿಸುವಾಗೆಲ್ಲ ಸಂಸ್ಕೃತದ ಜಿನಸೇನಾಚಾರ‍್ಯನ್ನ, ವ್ಯಾಸರನ್ನ , ಭಟ್ಟನಾರಾಯಣನನ್ನ, ಭವಭೂತಿಯನ್ನ , ಭಾಸನನ್ನ ಸ್ಮರಿಸದೆ ಇದ್ದಲ್ಲಿ ಅದು ಆತ್ಮದ್ರೋಹ ಆಗದಿದ್ದೀತೆ ? ಹಾಗೆನ್ನುವಾಗ ಪಂಪ ರನ್ನರ ಸ್ವೋಪಜ್ಞ ಪ್ರತಿಭೆಯನ್ನು ನಾನು ಪ್ರಶ್ನಿಸುತ್ತಿಲ್ಲ. ವಜ್ರಸನ್ನಿಭವಾದ ಅವರ ಪ್ರತಿಭೆಯನ್ನು ಭೂ ಗರ್ಭದಿಂದ ಹೊರತೆಗೆದು ಹೊಳಪು ಕೊಟ್ಟದ್ದು ಮಾತ್ರ ನಿರ್ವಿವಾದವಾಗಿ ಅವರ ಸಂಸ್ಕೃತ ಪಾಂಡಿತ್ಯ ಎಂದಷ್ಟೇ ನನ್ನ ವಾದ.
ಭಾರತದಾದ್ಯಂತ ಸಂಸ್ಕೃತ ಮಾಧ್ಯಮ ಕ್ಷೀಣಿಸಿ ಪ್ರಾಂತೀಯ ಭಾಷಾಮಾಧ್ಯಮಗಳು ಬಂದುವಲ್ಲ, ಹಾಗಾದ ಮೇಲೆ ನಮ್ಮಲ್ಲಿ ಶಾಸ್ತ್ರಗಳು ಎಷ್ಟು ಬೆಳೆಯಿತು ? ಭರತ, ಭಾಸ, ಕಾಲಿದಾಸ, ಆನಂದವರ್ಧನ, ಕೌಟಿಲ್ಯ, ಶುಕ್ರ, ಮನು ಮೊದಲಾದವರ ಸಾಲಿನಲ್ಲಿ ಸೇರಿಸಬಹುದಾದ ಹೆಸರುಗಳೆಷ್ಟಿವೆ ? ಒಂದು ವೇಳೆ ಸಂಸ್ಕೃತ ಮಾಧ್ಯಮವೇ ಮುಂದುವರಿದಿದ್ದರೆ ಬಹುಶಃ ಶತಮಾನ ಹದಿನೇಳು ಹದಿನೆಂಟರಲ್ಲೇ ರಸೆಲ್, ಸಾತರ್, ಫ್ರಾಯ್ಡ್‌‌, ಐನ್‌ಸ್ಟೀನ್‌, ಎಲಿಯಟ್ಟರು ಭಾರತದಲ್ಲಿ ಕಾಣಿಸಿಕೊಳ್ಳುತ್ತಿದ್ದಿಲ್ಲವೇ ?
ಬರ್ನಾಡ್‌ಷಾನ ಕಟುಮಾತು ಕಂಡವರು ನಮ್ಮಲ್ಲಿ ಅಂಥದು ಬೆಳೆದು ಬರಲಿಲ್ಲ, ನಮ್ಮಿಂದ ಅದು ಸಾಧ್ಯವಿಲ್ಲ ಎಂದಾರು. ಆದರೆ ಅದು ಸುಳ್ಳು, ಭಾರತೀಯ ತತ್ವ, ತರ್ಕ, ಧರ್ಮ, ಮೀಮಾಂಸಾ ಶಾಸ್ತ್ರಗಳಲ್ಲಿ ಬರುವ ಖಂಡನ ಮಂಡನೆಗಳೇ ಸಾಕ್ಷಿ ನಮ್ಮವರ ವಿಚಾರಶೀಲತೆಗೆ, ಪ್ರಾಂತೀಯ ಭಾಷೆಗಳ ಪ್ರವೇಶ ಆಗಿ ಸಂಸ್ಕೃತ ಹಿಂದೆ ಬಿತ್ತು. ಜಾಗತಿಕ ರಂಗದಲ್ಲಿ ಭಾರತೀಯರು ಹಿಂದೆ ಬಿದ್ದರು. ಸಂಸ್ಕೃತ ಕಾವ್ಯ ಮೀಮಾಂಸೆಯಲ್ಲಿ ಅಲಂಕಾರ, ರಸ, ಧ್ವನಿ ಮೊದಲಾದ ವಿಚಾರಗಳ ಪ್ರತಿಪಾದನೆ ಆಗಿ ಎಂಟುಹತ್ತು ಶತಮಾನಗಳು ಆಗಿಹೋಗಿವೆ. ಇಂಗ್ಲೀಷಿನಲ್ಲಿ ಅದು ಇನ್ನೂ ಅಂಬೆಗಾಲಿಡುವ ಹಸುಗೂಸು. ಒಂದೇ ಒಂದು ಶತಮಾನ ಕೂಡ ಕಳೆದಿಲ್ಲ, ಆದರೂ ಸಂಸ್ಕೃತ ಭಾಷೆಯ ಪ್ರಾಧಾನ್ಯ ಹೋಗಿ ಇನ್ನೂ ಮುಂದುವರಿಯಬಹುದಾಗಿದ್ದ ಶಾಸ್ತ್ರ ಜ್ಞಾನ ಹಿಂದುಳಿಯಿತಲ್ಲ ಅದು ಸತ್ಯ. ಅದು ಭಾರತಕ್ಕೆ ಆದ ದೊಡ್ಡ ನಷ್ಟ.
ಭಾರತದಲ್ಲಿ ಸಂಸ್ಕೃತದ ಮಹತ್ವದ ಹಿರಿಯ ಅಧ್ಯಾಯ ಈಗ ಮರೆತುಹೋದ ಬುದ್ದಿ ಜೀವಿಗಳು ಮರೆಯಲಾಗದ ಮರೆಯಬಾರದ ಚರಿತ್ರೆ. ಚರಿತ್ರೆ ಪುನರಾವರ್ತನೆಗೊಳ್ಳುತ್ತದೆ ಎನ್ನುತ್ತಾರೆ. ಭಾರತದ ಭಾಷಾನೀತಿಯನ್ನು ಅವಲೋಕಿಸಿದಾಗ “ಅದು ಸುಳ್ಳಲ್ಲ ಎನಿಸುತ್ತದೆ.
ಇಂದಿನವರೆಗೆ ಭಾರತದಲ್ಲಿ ಇಂಗ್ಲೀಷು ಏಕಮೇವ ಶಿಕ್ಷಣಮಾಧ್ಯಮವಾಗಿತ್ತು. ಇನ್ನು ಬದಲಾವಣೆಗಳಾಗಬಹುದು. ಇಂಗ್ಲೀಷಿನ ಪರಿಚಯದಿಂದ ಡಾll ಸಿ. ವಿ. ರಾಮನ್, ಜಗದೀಶಚಂದ್ರ ಬೋಸ್, ಡಾ|| ಹೋಮಿ ಬಾಬಾರಂಥ ಶ್ರೇಷ್ಠ ಜಾಗತಿಕ ವಿಜ್ಞಾನಿಗಳ ಪ್ರತಿಭೆ ಬೆಳಗಲು ಬೆಳೆಯಲು ಸಹಾಯವಾಯಿತು. ಕನ್ನಡ ಸಾಹಿತ್ಯದಲ್ಲಿ ಷಡಕ್ಷರಿ, ಕೆಂಪುನಾರಾಯಣರ ಬಳಿಕ ಯಾರ ಹೆಸರು ಹೇಳಬೇಕು ? ಬಸವಪ್ಪಶಾಸ್ತ್ರಿ, ಬೇಂದ್ರೆ ಶ್ರೀನಿವಾಸ, ಬಿ. ಎಂ. ಶ್ರೀ, ಗೋವಿಂದ ಪೈ, ಶಿವರಾಮ ಕಾರಂತ, ಕುವೆಂಪು, ಅಡಿಗ, ಪು, ತಿ, ನ, ಹೀಗೇ ಈಗ ಹತ್ತಾರು ಜನರ ಹೆಸರು ಸೇರಿಸಬಹುದು. ಈಗ ಕನ್ನಡ ಸಾಹಿತ್ಯಕ್ಕೆ ವೈವಿಧ್ಯ ಬಂದಿದೆ. ಜೀವಂತ ಲಾವಣ್ಯ ಬಂದಿದೆ ; ಆದರೆ ಎಲ್ಲಿಂದ ? ಇಂಗ್ಲೀಷಿನಿಂದ.
ಅಮೃತವನ್ನು ಕುಡಿದು ಅಮರತ್ವವನ್ನು ಪಡೆದ ಮೇಲೆ ಬೇರೊಬ್ಬ ಆ ಅಮೃತಕ್ಕೆ ಕೈ ನೀಡಿದಾಗ, ಅಥವಾ ಕೈನೀಡದಿದ್ದರೂ, ಅಧಿಕಾರವುಳ್ಳವರು ಕೊಡುವಾಗ ಅದೇ ಅಮೃತವನ್ನು ಪೂತನಿಯ ಹಾಲೆಂದು ಜರಿಯುವುದು ಸುಲಭ. ಆದರೆ ಅದು ನಿಷ್ಕಾರಣ ಸ್ವಾರ್ಥ.
ಜಡವಾಗಿ ಮಲಗಿದ್ದ ಭಾರತೀಯರನ್ನು ಹೊಡೆದೆಬ್ಬಿಸಿದ್ದು ಇಂಗ್ಲೀಷು. ಸಾಹಿತಿಗಳು, ಕವಿಗಳು, ವಿಜ್ಞಾನಿಗಳು, ದೇಶಭಕ್ತರು, ಹೊರ ಹೊಮ್ಮಿದ್ದು, ಸತ್ವಶಾಲಿಗಳಾದದ್ದು, ಪ್ರಕಟವಾಗಿ ಕಾಣಿಸಿಕೊಂಡದ್ದು ಆ ಮಾಧ್ಯಮದ ಮೂಲಕ ಪಡೆದ ಜ್ಞಾನದಿಂದ.
ಭಾರತೀಯರಲ್ಲಿ ಸಂಸ್ಕೃತ ಒಂದು ಸಂಸ್ಕೃತಿಯನ್ನು ಹರಡಿದ್ದು ಸತ್ಯವಾದರೆ ಇಂಗ್ಲೀಷ್ ನಮ್ಮಲ್ಲಿ ಒಂದು ಸಂಸ್ಕೃತಿಯನ್ನು ಹರಡಿದ್ದೂ, ಹರಡುತ್ತಿರುವುದೂ ಒಂದು ಸತ್ಯ. ಪೂರ್ಣಕುಂಭ ಗೌರವದಿಂದ ಕಳಶಕನ್ನಡಿ ಸಹಿತ ಆಹ್ವಾನಿತ ವಿದ್ವಾಂಸರನ್ನು ಸ್ವಾಗತಿಸಿ, ಅರ್ಘ್ಯ ಪಾದ್ಯಾದಿಗಳಿಂದ ಸತ್ಕರಿಸುವ ಸಂಪ್ರದಾಯ ಸಂಸ್ಕೃತದ ಸಂಸ್ಕೃತಿಯದ್ದು. ಅದು ಈಗ ಕೃತಕ ಆಗುತ್ತಿದೆ. ಹಾರ ತುರಾಯಿಗಳಿಂದ ಸ್ವಾಗತಿಸಿ, ಕೈಕುಲುಕಿ ಕರೆದೊಯ್ದು, ಹೋಟೆಲಿನವರು ಅಂದವಾಗಿ ಜೋಡಿಸಿಟ್ಟ ಖಾದ್ಯಪೇಯಗಳನ್ನರ್ಪಿಸುವುದು ಇಂದಿನ ಸಂಪ್ರದಾಯ : ಸಂಸ್ಕೃತದ ಪರಂಪರೆಯದಲ್ಲ. ಇಂಗ್ಲೀಷಿನ ಸಂಸ್ಕಾರದ್ದು. ಹಾಗೆಯೇ ವ್ಯವಹಾರದಲ್ಲಿ ಜೀವಂತವಾಗಿರುವ ‘ಗುಡ್ ಮಾರ್ನಿಂಗ್, ‘ಗುಡ್ ಇವಿನಿಂಗ್, ಕಂಗ್ರಾಜುಲೇಷನ್ಸ್, ಥಾಂಕ್ಸ್’ ಮೊದಲಾದ ಸಂಪ್ರದಾಯಗಳು (ನಲ್ ಬೆಳಗು, ನಲ್ಲಿರುಳು, ಶುಭಾಶಯ, ಧನ್ಯವಾದಗಳೆಂದು ಕೃತಕವಾಗಿ, ಪುಸ್ತಕೀಯವಾಗಿ ಅನುವಾದವಾಗಿದ್ದರೂ) ವಿದ್ಯಾವಂತ ಭಾರತೀಯರ ಸಂಸ್ಕೃತಿಯಲ್ಲಿ ಬೆರೆತುಹೋಗಿದೆ.
ಇಂಗ್ಲೀಷರು ಬರುವುದಕ್ಕಿಂತ ಮುಂಚೆ ಭಾರತೀಯರಲ್ಲಿ ಉಡುಗೆಯ ವೈವಿಧ್ಯ ಇತ್ತು. ವ್ಯಕ್ತಿ ಉಟ್ಟ ಬಟ್ಟೆ, ನೋಡಿ ಆತ ಪಂಜಾಬಿ, ಕನ್ನಡಿಗ, ತಮಿಳ, ಮಲೆಯಾಳಿ, ರಾಜಸ್ಥಾನಿ, ಕಾಶ್ಮೀರಿ ಎಂದು ಹೇಳಬಹುದಿತ್ತು. ಆದರೆ ಈಗ ವಿದ್ಯಾವಂತರಲ್ಲಿ ಈ ವೈವಿಧ್ಯ ಕಾಣುವುದಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರಗೂ ಇದೆ ಶರಟು, ಪ್ಯಾಂಟು, ಕೋಟು, ಟೈ, ಇಂದಿನ ಭಾರತೀಯ ಸಂಸ್ಕೃತಿಯಲ್ಲಿ ಇದೂ ಒಂದು ಅಭಿನ್ನ ಅಂಗ.

ಹಿಂದೆ ಜ್ಞಾನದ ಗುರಿಮುಟ್ಟಲು ಸಂಸ್ಕೃತ ಸಾಧನ ಆಗಿತ್ತು. ಅದನ್ನು ಕೈಬಿಟ್ಟೆವು. ಮೃತಭಾಷೆ ಅಥವಾ ಪುಸ್ತಕ ಭಂಡಾರದ ಭಾಷೆಯನ್ನಾಗಿ ಮಾಡಿದೆವು. ಈಗ ಅದೇ ಗುರಿಯನ್ನು ಮುಟ್ಟಲು ಇಂಗ್ಲೀಷು ಸಾಧನವಾಗಿದೆ. ಕೇಂದ್ರ ವಿದ್ಯಾಮಂತ್ರಿ ಡಾ. ತ್ರಿಗುಣ ಸೇನ್ ಹೇಳುತ್ತಾರೆ, ಭಾರತದಲ್ಲಿ ಇಂಗ್ಲೀಷು ಪುಸ್ತಕ ಭಂಡಾರದ ಭಾಷೆಯಾಗಿ ಉಳಿಯಲಿ ಎಂದು.
ಅಧಿಕಾರ ಕೈಯಲ್ಲಿದೆ, ಕಂಡ ಕನಸು ನನಸಾಗುತ್ತದೆ.
ಸದ್ಯದಲ್ಲೇ ಪ್ರಾಂತೀಯ ಭಾಷಾ ಮಾಧ್ಯಮಗಳು ರೂಢಿಗೆ ಬರುತ್ತವೆ. ಭಾರತೀಯರಲ್ಲಿ ಪ್ರತ್ಯೇಕತಾ ಭಾವನೆ ಬೆಳೆಯುತ್ತದೆ. ಭಾವೈಕ್ಯಕ್ಕೆ ಇದರಿಂದ ಧಕ್ಕೆ ಒದಗುತ್ತದೆ. ಭಾಷಾ ಭೇದದ ಮೇಲೆ ಪ್ರಾಂತಗಳ ರಚನೆ ಆದಾಗಲೇ ಭಾರತೀಯತ್ವ ಶಿಥಿಲಗೊಳ್ಳಲು ಆರಂಭವಾಯಿತು. ರಾಷ್ಟ್ರ ದಿನೇ ದಿನೇ ದುರ್ಬಲವಾಗುತ್ತಿದೆ. ಅದು ಇನ್ನೂ ತೀವ್ರವಾಗುತ್ತದೆ.
ಭಿನ್ನ ಭಾಷೆಗಳ ಉತ್ಸವಮೂರ್ತಿಗಳ ಹಿಂದೆ ಪ್ರತಿಷ್ಠಿತ ಮೂರ್ತಿ, ಸಂಸ್ಕೃತ ಹಾಗೂ ಇಂಗ್ಲೀಷು ಭಾಷಾ ಸಂಸ್ಕೃತಿ ಇದೆ. ಇದು ಇಂದಿನ ಭಾರತೀಯ ಸಂಸ್ಕೃತಿ ಉತ್ಸವ ಮೂರ್ತಿಗಳ ಪ್ರಾಬಲ್ಯ, ಪ್ರಭಾವ ಅಧಿಕವಾದರೆ ಪ್ರತಿಷ್ಠಿತ ಮೂರ್ತಿ ಅಲಕ್ಷಕ್ಕೆ ಈಡಾಗುತ್ತದೆ, ಭಾರತೀಯ ಎನ್ನಬಹುದಾದ ಸಂಸ್ಕೃತಿ ಮೂಲೆಗುಂಪಾಗುತ್ತದೆ.
ಸುಲಭವಾಗಿ ಭಾವೋದ್ರೇಕಕ್ಕೆ ತುತ್ತಾಗುವ ಸಾಮಾನ್ಯ ಜನರಲ್ಲಿ ಪ್ರಾಂತೀಯ ಭಾಷಾಭಿಮಾನ ಅತಿರೇಕವಾಗದಿರಲು ಸಾಧ್ಯವೇ ಇಲ್ಲ. ಶಿವಸೇನೆಯನ್ನು ಮೀರಿಸುವಂಥ ಸೇನೆಗಳು ರಾಷ್ಟ್ರದಲ್ಲೆಲ್ಲ ಹುಟ್ಟಿಕೊಳ್ಳುತ್ತವೆ. (ಕನ್ನಡನಾಡಿನಲ್ಲಿ ಕನ್ನಡಿಗರಿಗೇ ಪ್ರಾಶಸ್ತ್ಯ ಎನ್ನುವ ಘೋಷಣೆ ಮಾಡುವುದಕ್ಕಿಂತ ಮೊದಲು ದೆಹಲಿಯಲ್ಲಿ, ಬೊಂಬಾಯಿಯಲ್ಲಿ, ಆಗ್ರಾದಲ್ಲಿ, ಭೂಪಾಲಿನಲ್ಲಿ, ಮದ್ರಾಸಿನಲ್ಲಿ ನೆಲ್ವೇಲಿಯಲ್ಲಿ ಇರುವ ಕನ್ನಡ ಸಂಘಗಳಿಂದ ಅಭಿಪ್ರಾಯ ಸಂಗ್ರಹ ಮಾಡಿನೋಡಲಿ ; ಆಗ ತಿಳಿದೀತು. ಶಿವಸೇನೆ ಹುಟ್ಟಿದ್ದು ಬೊಂಬಾಯಿಯಲ್ಲಿ ಅಲ್ಲ ; ಕನ್ನಡನಾಡಿನ ಶ್ವಾಸಕೋಶ ಬೆಂಗಳೂರಲ್ಲಿ ! ಕನ್ನಡ ಚಳುವಳಿಗಾರರ ಸ್ಲೋಗನುಗಳಲ್ಲಿ ! ಈ ಮಾತು ಕೋಪ ಹುಟ್ಟಿಸಿದರೆ, “ನಮ್ಮ ಬೆನ್ನು ನಮಗೆ ಕಾಣುವುದಿಲ್ಲ” ಎಂಬ ಮಾತು ಸತ್ಯವೆಂದು ಸಮರ್ಥಿತವಾಗುತ್ತದೆ. ಅಷ್ಟೆ.) ಪ್ರಾಂತೀಯ ಭಾಷಾಭೇದಗಳ ಗಣನೆಯಿಲ್ಲದೆ ಭಾರತದಲ್ಲೆಲ್ಲ ಹರಡಿಹೋಗಿರುವ ಬುದ್ಧಿಜೀವಿಗಳು ಪೀಡೆಗೆ ಒಳಗಾಗುತ್ತಾರೆ. ಎಲ್ಲಿ ಹೋದರೂ ವಿದ್ವಾಂಸನಿಗೆ ಗೌರವವಿದೆ ಎಂಬ ನಾಣ್ನುಡಿಗೆ ಅಪವಾದಗಳು ಭಾರತದಲ್ಲಿಲ್ಲ ಕಾಣಿಸಿಕೊಳ್ಳುತ್ತವೆ.
ಒಂದು ರೀತಿಯಲ್ಲಿ ನಿಧಾನದ್ರೋಹ’ ಆದರೂ ಕೇಂದ್ರ ಸರ್ಕಾರದ ಧೋರಣೆ ಈ ಸಮಸ್ಯೆಗಳನ್ನು ಪರಿಹರಿಸಬಹುದು. ಸದ್ಯಕ್ಕೆ ಪ್ರಾಂತೀಯ ಭಾಷಾ ಮಾಧ್ಯಮ ರೂಢಿಗೆ
ಬಂದು ಆಯಾ ಪ್ರಾಂತ ಭಾಷಾಭಿಮಾನಿಗಳಿಗೆ ಸಂತೋಷವಾದರೂ ಇನ್ನು ಇಪ್ಪತ್ತೈದೇ ವರ್ಷಗಳಲ್ಲಿ ಭಾರತದಲ್ಲೆಲ್ಲ ಹಿಂದೀ ಮಾಧ್ಯಮ ಬಂದೇ ಬರುತ್ತದೆ ಅಥವಾ ಅದರ ವಿರುದ್ಧ ಕ್ರಾಂತಿಯಾಗುತ್ತದೆ.
ಪ್ರಾಂತಗಳಲ್ಲಿ ಹಿಂದೀ ಮಾಧ್ಯಮದ ಅವತಾರ ಬಲವಂತ ಮಾಘಸ್ನಾನವಂತೂ ಖಂಡಿತ ಅಲ್ಲ. ನಾವಾಗಿಯೇ ಆ ಮಾಧ್ಯಮವನ್ನು ಬೇಡಿ ಬಯಸಿ ಹೋಗಬೇಕಾಗುವಂಥ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಉಂಟುಮಾಡುತ್ತದೆ.
ಕೇಂದ್ರವು ಬೇರೆ ಬೇರೆ ಪ್ರಾಂತಗಳಲ್ಲಿ ಹಿಂದೀ ಮಾಧ್ಯಮ ಕಾಲೇಜುಗಳು ಆರಂಭವಾದರೆ ಶೇಕಡಾ ನೂರರಷ್ಟು ಗ್ರಾಂಟ್ ಕೊಡಲು ತಯಾರಿದೆ ಎಂದು ಕೇಂದ್ರ ವಿದ್ಯಾಖಾತೆಯ ಸಚಿವರಾದ ಡಾ|| ಷೇರ್‌ಸಿಂಗ್ ಬೆಂಗಳೂರಲ್ಲಿ ಹೇಳಿದರು. ಪ್ರಲೋಭಲೆ ಬಲವತ್ತರವಾಗಿದ್ದರೂ ಈಗ ಪ್ರಾಂತೀಯ ವಿಶ್ವವಿದ್ಯಾಲಯಗಳಾಗಲೀ, ಸರ್ಕಾರಗಳಾಗಲೀ ಅದಕ್ಕೆ ಒಳಗಾಗಿಲ್ಲ. ರಾಷ್ಟ್ರೀಯ ವಿಶ್ವವಿದ್ಯಾಲಯ ಪ್ರಶ್ನೆ ಇತ್ಯರ್ಥವಾದ ಬಳಿಕ ಪ್ರಾಂತೀಯ ಹಿಂದೀ ಮಾಧ್ಯಮ ಕಾಲೇಜುಗಳ ಬಗ್ಗೆ ಅಂತಿಮ ತೀರ್ಮಾನ ಆಗುತ್ತದೆ ಎಂದಿದ್ದಾರೆ. ಪ್ರತಿಯೊಂದು ಪ್ರಾಂತದಲ್ಲಿ ನೋಡಲು ಒಂದೊಂದು ಹಿಂದೀ ಮೀಡಿಯಂ ಕಾಲೇಜು, ಆಮೇಲೆ ವಿಶ್ವವಿದ್ಯಾಲಯ ಆರಂಭವಾಗುತ್ತದೆ. ಎಲ್ಲ ಖರ್ಚನ್ನೂ ಕೇಂದ್ರಸರ್ಕಾರ ನಿರ್ವಹಿಸುತ್ತದೆ. ಅಷ್ಟೆ ಅಲ್ಲ, ಬಹುಶಃ ಹಿಂದೀ ಮೂಲಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನೂ ನೀಡಬಹುದು. ಪ್ರಾಂತಭಾಷೆಗೆ ಬದಲಾಗಿ ದ್ವಿತೀಯ ಭಾಷೆಯಾಗಿ ಹಿಂದಿ ಕಲಿತರೆ ವಿದ್ಯಾರ್ಥಿವೇತನ (ಇಂಥದಕ್ಕೆ ಅವಕಾಶ ಕೊಡುವುದಿಲ್ಲವೆಂದು ಗಾಂಧಿ ಆಶ್ವಾಸನೆ ಕೊಟ್ಟಿದ್ದರು). ಹಿಂದೀ ಮಾಧ್ಯಮದಲ್ಲಿ ಕಲಿತರೆ ಶುಲ್ಕ ವಿನಾಯಿತಿ ! ಅಷ್ಟೇ ಏಕೆ, ಪುಕ್ಕಟೆ ಪಠ್ಯಪುಸ್ತಕ ವಿತರಣೆ ಮಾಡಿದರೂ ಮಾಡಿಯಾರು !
ಇಂಥ ಪ್ರಲೋಭನೆಗಳಿಗೆ ಮರುಳಾಗದವರು ಯಾರು? ಮೈಸೂರು ಸರ್ಕಾರವಂತೂ ಹೌದಪ್ಪನ ಸರ್ಕಾರ. ಹಿಂದೀ ಪ್ರಾಂತಗಳಲ್ಲಿ ಹಿಂದೀ ಮಾಧ್ಯಮ ಬರುವುದಕ್ಕಿಂತ ಮುಂಚೆ ಮೈಸೂರಲ್ಲಿ ಹಿಂದೀ ಮಾಧ್ಯಮದ ಕಾಲೇಜೊಂದು ಆರಂಭವಾದರೆ ಆಶ್ಚರವಿಲ್ಲ. ಈಗ ಕನ್ನಡ ಮಾಧ್ಯಮಕ್ಕಾಗಿ ಹೊಡೆದಾಡುತ್ತಿರುವ ವಿಚಾರವಂತರಿಗೆ ಕೇಂದ್ರದ ನಿಧಾನದ್ರೋಹ ಆರ್ಥವಾಗುವ ವೇಳೆಗೆ ಸಮಸ್ಯೆ ಕೈಮೀರಿ ಹೋಗಿರುತ್ತದೆ. ಆ ಮೇಲೆ ಅಕ್ಕಿ ಹೋಗಿ ಗಂಜಿ ಆದಮೇಲೆ ಕಲ್ಲು ಆರಿಸುವ ಕೆಲಸ ಮೊದಲಾಗುತ್ತದೆ. ಶತ್ರು ಸೈನ್ಯ ಮುತ್ತಿಗೆಹಾಕಿ ಲೂಟಿಮಾಡಿ ಹೋದ ಬಳಿಕ ಭದ್ರವಾದ ಕೋಟೆಗಾಗಿ ಅಡಿಪಾಯ ಅಗೆಯತೊಡಗುತ್ತಾರೆ.
ಇದನ್ನೀಗ ಕನ್ನಡ ವಿಚಾರವಂತರು, ಬುದ್ಧಿಜೀವಿಗಳು ದೂರಾಲೋಚನೆಯಿಂದ ಪರಿಶೀಲಿಸಬೇಕು. ಈಗ ಸ್ಪರ್ಧೆ ಇರುವುದು ಇಂಗ್ಲೀಷು ಕನ್ನಡಗಳಿಗೆ ಅಲ್ಲ. ಅದು ಹಿಂದಿ ಮತ್ತು ಇಂಗ್ಲೀಷಿಗೆ. ಇಂಗ್ಲೀಷು ಬೇಡವೆಂದು ಹೊರದೂಡಿದರೆ ನಾಳೆ ಹಿಂದಿ ನಮ್ಮ ಕುತ್ತಿಗೆಯನ್ನು ಹತ್ತಿ ಸವಾರಿ ಮಾಡುವುದು ಸತ್ಯಸ್ಯ ಸತ್ಯ.
ರಾಷ್ಟ್ರೀಯ ಐಕ್ಯದ ದೃಷ್ಟಿಯಿಂದ ; ವಿದ್ವಾಂಸರ ಪರಸ್ಪರ ಮಿಲನ, ಚರ್ಚೆಗಳ ದೃಷ್ಟಿ ಯಿಂದ ರಾಷ್ಟ್ರೀಯ ಕೈಗಾರಿಕಾ, ಔದ್ಯೋಗಿಕ, ವೈಜ್ಞಾನಿಕ, ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಯಾವುದಾದರೂ ಒಂದು ಭಾಷೆ ಎಲ್ಲ ಕಡೆ ಶಿಕ್ಷಣ ಮಾಧ್ಯಮವಾಗಬೇಕು. ಅದು ಕನ್ನಡ ಆದೀತು ಎಂಬುದು ಸುಖಸ್ವಪ್ನ. ಧಾರ್ಷ್ಟ್ಯ ಮಾತು. ಹಿಂದಿ ಆಗಬಲ್ಲದು ಎನ್ನುತ್ತಾರೆ ಔತ್ತರೇಯರು. ಒಂದು ಭಾಷೆ ಬೇಕಾಗಿರುವುದು ರಾಷ್ಟ್ರೀಯ ಐಕ್ಯ ಮತ್ತು ಜ್ಞಾನಾರ್ಜನೆಯ ಎರಡು ಗುರಿಗಳನ್ನು ಮುಟ್ಟಲು. ಈ ಗುರಿಗಳು ನಮಗೆ ಮುಖ್ಯವಾದರೆ ಇಂಗ್ಲೀಷು ಭಾಷೆಯಂಥ ಸುಲಭ ಸಾಧನ, ಮಾಧ್ಯಮ ಬೇರೊಂದಿಲ್ಲ. ಅದು ಪ್ರಚಲಿತ ಆಗಿರುವುದರಿಂದ ಹೊಸತಾಗಿ ಪ್ರಯತ್ನ ಬೇಕಿಲ್ಲ. ಅದರಿಂದ ರಾಷ್ಟ್ರದಲ್ಲಿ ಅಂತಃಕಲಹಗಳಾಗಲೀ, ಹೊಸ ಸಮಸ್ಯೆಗಳಾಗಲೀ ಉದ್ಭವಿಸುವುದಿಲ್ಲ.
ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಬೇಕೆಂಬುದು ಮೂಲ ತತ್ವ. ಆದರೆ ಈಗ ರೂಢಿಗೆ ಬರುತ್ತಿರುವುದು ಪ್ರಾಂತಭಾಷಾ ಮಾಧ್ಯಮ, ಭಾರತದಲ್ಲಿ ೮೨೬ ಭಾಷೆಗಳಿವೆ. ಮೊದಲು ಹದಿನಾಲ್ಕು ಭಾಷೆಗಳು ಮಾನ್ಯತೆ ಪಡೆದವು. ಇತ್ತೀಚೆಗೆ ಹೊಡೆದಾಡಿ ಸಿಂಧಿ ಭಾಷೆ ಮಾನ್ಯತೆ ಪಡೆಯಿತು. ಉತ್ತರದಲ್ಲಿ ರಾಜಾಸ್ಥಾನಿ, ಮೈಥಿಲಿ, ಭಾಷೆಗಳು ಅದಕ್ಕಾಗಿ ಪ್ರಯತ್ನಿಸುತ್ತಿವೆ. ದಕ್ಷಿಣದಲ್ಲಿ ಕೊಂಕಣಿ ಭಾಷಾ ಪರಿಷತ್ತು ಅದಕ್ಕಾಗಿ ಕೆಲಸ ಮಾಡುತ್ತಿದೆ. ಸದ್ಯದಲ್ಲೇ ತುಳುವರು ದನಿ ತೆಗೆಯುತ್ತಾರೆ. ಆಮೇಲೆ ಕೊಡಗರು ಯಾಕಾದರೂ ಸುಮ್ಮನಿದ್ದಾರು ! ನಮ್ಮ ಭಾಷೆಯನ್ನು ಮಾನ್ಯ ಮಾಡಿ ಎಂಬ ಬೇಡಿಕೆ ಮೊದಲು. ಆ ಮೇಲೆ ಕೂಗು, ಮತ್ತೆ ಕ್ರಾಂತಿ, ಲೂಟಿ ; ಕಡೆಗೆ ಮಾನ್ಯತೆ. ಒಂದಾದ ಮೇಲೊಂದು ಪುಂಖಾನುಪುಂಖ ಸಮಸ್ಯೆಗಳ ಸರಮಾಲೆ.
ರಾಷ್ಟ್ರದ ಅಸ್ತಿತ್ವವನ್ನೇ ಅಲುಗಾಡಿಸುತ್ತಿರುವ ಪ್ರಬಲ ಸಮಸ್ಯೆಗಳನ್ನು ಪರಿಹರಿಸಲು ಆಗದ ಸರ್ಕಾರ ಜನತೆಯ ಲಕ್ಷ್ಯವನ್ನು ಬೇರೆಯ ಕಡೆ ಸೆಳೆಯಲು ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಭಾರತದಲ್ಲಿರುವುದು ಶಿಕ್ಷಣ ಮಾಧ್ಯಮದ ಸಮಸ್ಯೆ ಅಲ್ಲಿ, ಶಿಕ್ಷಣ ವಿಧಾನದ್ದು.
ರಾಷ್ಟ್ರಭಾಷೆಯೊಂದು ಇರಬೇಕೆಂದು ಕೆಲವರ ವಾದ. ಮಾನ್ಯತೆ ಪಡೆದ ಭಾಷೆಗಳೆಲ್ಲ ರಾಷ್ಟ್ರಭಾಷೆಗಳೇ ಎಂದು ಕೆಲವರ ಪ್ರತಿವಾದ. ಶ್ರೀ ಅರವಿಂದಘೋಷ್‌ ಮೊದಲಾದವರು ಹೊರದೇಶಗಳಿಗೆ ಹೋದಾಗ ಭಾರತೀಯರು ಪರಸ್ಪರ ಕಲೆತಾಗ ಇಂಗ್ಲೀಷಿನಲ್ಲಿ ವ್ಯವಹರಿಸುವುದನ್ನು ಕಂಡ ಆ ಜನ “ನಿಮಗೊಂದು ಪ್ರತ್ಯೇಕ ದೇಶಭಾಷೆ ಇಲ್ಲವೇ ??? ಎಂದು ಪ್ರಶ್ನಿಸಿದರಂತೆ ಆಗ ಅವರಿಗೆ ನಾಚಿಕೆ ಆಯಿತಂತೆ.
ಯಾಕಾಗಬೇಕು ನಾಚಿಕೆ ?
ಭಾರತದ ವೈವಿಧ್ಯದಲ್ಲಿ ಏಕತೆ ಇದೆ ಎಂದು ತಾನೇ ನಮ್ಮ ವಾದ ? ಅದು ತಾನೇ ನಮ್ಮ ಸಂಸ್ಕೃತಿ ?
ಯಾರಾದರೂ ಕೇಳಿದಾಗ, “ಭಾರತದಲ್ಲಿ ೮೨೬ ಭಾಷೆಗಳಿವೆ. ಭಾರತೀಯರು ಪರಸ್ಪರ ಕಲೆತಾಗ ವ್ಯವಹರಿಸಲು ಒಂದು ಸಂಪರ್ಕ ಭಾಷೆ, “ಸೇವಕಭಾಷೆ” ಬೇಕು, ಅದು ಇಂಗ್ಲೀಷು, ಭಾರತೀಯವಾದ ಇಂಗ್ಲೀಷು,” ಎಂದು ಹೇಳಬಾರದೆ ?
ಮೂವರು ಮಕ್ಕಳಲ್ಲಿ ಒಬ್ಬ ಬಿಳಿ, ಒಬ್ಬ ಕಪ್ಪು, ಒಬ್ಬ ಕೆಂಪು ಆದಾಗ ಸಹಜವಾದ ಕುತೂಹಲದಿಂದ ಯಾರಾದರೂ ಕೇಳಬಹುದು “ಯಾಕೆ ಹೀಗೆ ?” ಎಂದು “ಯಾಕೋ ಒಟ್ಟಿನಲ್ಲಿ ಹಾಗಾಗಿದ್ದಾರೆ. ಅದು ಸತ್ಯ” ಎನ್ನಬೇಕೋ. ನಾಚಿಕೆಯಿಂದ ತಲೆ ತಗ್ಗಿಸಬೇಕೋ ? ಸಾಮಾನ್ಯ ಜನರ ಭಾವುಕತೆಯನ್ನು ಕೆರಳಿಸಲು ಇಂಥ ಕತೆಗಳು ತುಂಬ ಪ್ರಚಾರದಲ್ಲಿವೆ. ಅವಕ್ಕೆ ಕಿಲುಬು ಕಾಸಿನ ಬೆಲೆಯೂ ಇಲ್ಲ.
ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ|! ವಿ. ಕೆ. ಗೋಕಾಕರು ಅಧಿಕಾರ ವಹಿಸಿಕೊಂಡ ತರುಣದಲ್ಲಿ ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಬೆಲೆ ಕೊಡುವವರಂತೆ ಶಿಕ್ಷಣ ಭಾಷಾಮಾಧ್ಯಮದ ಬಗ್ಗೆ ಬೆಂಗಳೂರಲ್ಲಿ ಅಭಿಪ್ರಾಯ ಸಂಗ್ರಹ ನಡೆಸಿದರು. ಕನ್ನಡ ಮಾಧ್ಯಮ ಯಾರೂ ಬೇಕೆನ್ನಲಿಲ್ಲ. ಆದರೂ ಬಂತು ಕನ್ನಡ ಮಾಧ್ಯಮ.
ಮದರಾಸಿನ ಕಾಲೇಜೊಂದರಲ್ಲಿ ತಮಿಳು ಮಾಧ್ಯಮ ತೆರೆದರು. ಮೂರು ಸಾವಿರ ಅರ್ಜಿಗಳಲ್ಲಿ ಮೂವರಿಗೆ ಮಾತ್ರ ತಮಿಳು ಮಾಧ್ಯಮ ಬೇಕಾಗಿತ್ತು. ಯಾಕೆ ? ಉದ್ಯೋಗ ಮೊದಲಾದ ಅವಕಾಶಗಳ ವೈಪುಲ್ಯ.
ಇನ್ನು ಇಪ್ಪತ್ತೈದು ವರ್ಷಗಳ ಬಳಿಕ ಕನ್ನಡ ಮಾಧ್ಯಮಕ್ಕೆ ಇಂದಿನ ಗತಿಯೇ ಕಾದಿರಿಸಿದ್ದು. ಈಗ ಇಂಗ್ಲಿಷು ಬಯಸುವ ಜನ ಆಗ ಹಿಂದಿ ಬಯಸುತ್ತಾರೆ. ಹಿಂದೀ ಮಾಧ್ಯಮದ ಮೂಲಕ ಹೊರಬಂದರೆ ಆಗ ಅವಕಾಶ ವೈಪುಲ್ಯ.
ಹೋಗಲಿ ಇಂಗ್ಲೀಷು, ಬರಲಿ ಕನ್ನಡ, ಬಂದೇ ಬರುತ್ತದೆ ಹಿಂದಿ.
2*
ಭಾರತೀಯ ಎನ್ನಬಹುದಾದ ಸಂಸ್ಕೃತಿಯಲ್ಲಿ ಹಿಂದಿಯ ಮೂರನೇ ಬಣ್ಣ ಬೆರೆತು ಕೊಳ್ಳುತ್ತದೆ.
ರಾಷ್ಟ್ರೀಯ ಭಾವೈಕ್ಯ ಎರಡು ಮೂರು ದಶಕಗಳ ಕಾಲ ಒಡೆಯುತ್ತ ಸಾಗಿ, ಕೂಡಿದರೂ ಮತ್ತೊಮ್ಮೆ ಕೂಡಬಹುದು.
ಇದರಲ್ಲಿ ಭಾಷೆ ಮುಖ್ಯಪಾತ್ರ ವಹಿಸುತ್ತದೆ.
ಚರಿತ್ರೆ ಪುನರಾವರ್ತನೆಯಾಗುತ್ತದೆ.
ಸಂಸ್ಕೃತದಲ್ಲಿ ಏನೆಲ್ಲ ಶಾಸ್ತ್ರಗ್ರಂಥಗಳಿದ್ದವು ಎಂಬುದನ್ನು ನಾವು ಮರೆತಿದ್ದೇವೆ.
ಇಂಗ್ಲೀಷಿನಲ್ಲಿ ಏನೆಲ್ಲ ಇದೆ ಎಂಬುದನ್ನು ಮರೆಯುತ್ತೇವೆ.
ಹಿಂದಿಯ ಮೂಲಕ ಮತ್ತೆ ಅಷ್ಟೋ ಇಷ್ಟೋ ಪಡೆಯುತ್ತೇವೆ.
ಆದರೆ ನಷ್ಟ ಇಡೀ ರಾಷ್ಟ್ರಕ್ಕೆ ನಿರಂತರವಾಗಿರುತ್ತದೆ.

Close

ಕನ್ನಡ ಧಾತುಗಳ ರಚನಾ ವೈಶಿಷ್ಟ್ಯ

ಡಿ. ಎನ್. ಶಂಕರಭಟ್ಟ

ಕನ್ನಡ ಧಾತುಗಳ ರಚನಾ ವೈಶಿಷ್ಟ್ಯ

ಹೊಸಗನ್ನಡದಲ್ಲಿಂದು ಬಳಕೆಯಲ್ಲಿರುವಂತಹ ಕ್ರಿಯಾಧಾತುಗಳ ಹಿಂದೆ ಚಮತ್ಕಾರಿಕವಾದೊಂದು ನಿಯಮಾವಳಿ ಅಡಗಿದೆ. ಕ್ರಿಯಾಧಾತುಗಳಲ್ಲಿ ಮತ್ತು ಅವುಗಳ ಮುಂದೆ ಬರುವ ಪ್ರತ್ಯಯಗಳಲ್ಲಿ ತೋರಿ ಬರುವ ಬದಲಾವಣೆಗಳನ್ನು ಈ ನಿಯಮಾವಳಿಗಳ ಅರಿವಿಲ್ಲದವರಿಗೆ ಸ್ಪಷ್ಟವಾಗಿ ಊಹಿಸಲು ಮತ್ತು ಪ್ರತಿಪಾದಿಸಲು ಸಾಧ್ಯವಾಗದು. ಕನ್ನಡದಲ್ಲಿ ಬಳಕೆಯಲ್ಲಿರುವಂತಹ ವ್ಯಾಕರಣಗಳಾವುವೂ ಈ ನಿಯಮಾವಳಿಯನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲವೆಂಬುದು ಈ ದೃಷ್ಟಿಯಿಂದ ಬಹಳ ಚಿಂತಾಜನಕ ಏಷಯವಾಗಿದೆ.
ಕನ್ನಡದಲ್ಲಿ ಮೂರು ರೀತಿಯ ಧಾತುಗಳಿವೆ: ಉಕಾರದಲ್ಲಿ ಕೊನೆಗೊಳ್ಳುವವು, ಎಕಾರದಲ್ಲಿ ಕೊನೆಗೊಳ್ಳುವವು ಮತ್ತು ಇಕಾರದಲ್ಲಿ ಕೊನೆಗೊಳ್ಳುವವು. ಎಕಾರ ಮುತ್ತು, ಇಕಾರದಲ್ಲಿ ಕೊನೆಗೊಳ್ಳುವ ಧಾತುಗಳೆಲ್ಲ ಬರಿಯ ಎರಡು ಲಘು ಅಕ್ಷರಗಳಿಂದ ಕೂಡಿದವುಗಳು. ಎಂದರೆ, ಅವುಗಳಲ್ಲಿ ಅನುಸ್ವಾರವಿಲ್ಲ. ಒತ್ತಕ್ಷರ (ಇಲ್ಲವೇ ಸಂಯುಕ್ತಾಕ್ಷರ)ವಿಲ್ಲ ಮತ್ತು ದೀರ್ಘಸ್ವರವಿಲ್ಲ. ಉದಾ : ನಡೆ, ಬರೆ, ಅಗಿ, ಕಡಿ, ಇತ್ಯಾದಿ. ಉಕಾರಾಂತ ಧಾತುಗಳು ಐದುತರ : (1) ಎರಡು ಲಘು ಅಕ್ಷರಗಳುಳ್ಳವು (ಬಿಡು, ಬರು ಇತ್ಯಾದಿ). (2) ಒಂದು ಅನುಸ್ವಾರ ಉಳ್ಳವು (ತುಂಬು, ಹಂಚು ಇತ್ಯಾದಿ) (3) ಒಂದು ಒತ್ತಕ್ಷರ ಉಳ್ಳವು (ಕಟ್ಟು, ಸಿಕ್ಕು, ಗೆಯ್ಯು ಇತ್ಯಾದಿ). (4) ಒಂದು ದೀರ್ಘಾಕ್ಷರಉಳ್ಳವು (ಓಡು, ತೇಲು, ನೇಯು ಇತ್ಯಾದಿ) ಮತ್ತು (5) ಮೂರು ಲಘು ಅಕ್ಷರಗಳುಳ್ಳವು (ತಿರುಗು, ಗುಡುಗು, ಹೂಗಳು ಇತ್ಯಾದಿ.).
ಹೊಸಗನ್ನಡದ ಧಾತುಗಳನ್ನೆಲ್ಲ ಈ ಏಳು ಗುಂಪುಗಳೊಳಗೇನೇ ಸೇರಿಸಿಕೊಳ್ಳಲು ಸಾಧ್ಯವಿದೆಯೆಂಬುದನ್ನು ಗಮನಿಸಬೇಕು. ಧಾತುವೊಂದರಲ್ಲಿ ಮೂರು ಅಕ್ಷರಗಳಿವೆಯಾದರೆ ಅವು ಮೂರೂ ಲಘು ಅಕ್ಷರಗಳಾಗಿಯೇ ಇರಬೇಕು ಮತ್ತು ಧಾತುವಿನ ಕೊನೆಯ ಸ್ವರ ಉಕಾರವಾಗಿರಬೇಕು ; ಎರಡಕ್ಷರಗಳಿದ್ದು ಕೊನೆಯ ಸ್ವರ ಉಕಾರವಾಗಿದ್ದರೆ, ಆ ಅಕ್ಷರಗಳ ನಡುವೆ ಅನುಸ್ವಾರವಿರಬಹುದು. ಆದರೆ ಹಾಗೆ ಅನುಸ್ವಾರ ನಡುವೆ ಇದ್ದಲ್ಲಿ ದೀರ್ಘಸ್ವರ ಇಲ್ಲವೇ ಒತ್ತಕ್ಷರವಿರಲಾರದು ; ಒತ್ತಕ್ಷರವಿದ್ದಲ್ಲಿ ಅನುಸ್ವಾರ ಇಲ್ಲವೇ ದೀರ್ಘಸ್ವರವಿರಲಾರದು ಮತ್ತು ದೀರ್ಘಸ್ವರವಿದ್ದಲ್ಲಿ ಒತ್ತಕ್ಷರ ಇಲ್ಲವೇ ಅನುಸ್ವಾರವಿರಲಾರದು ; ಎಕಾರಾಂತ, ಇಕಾರಾಂತ ಧಾತುಗಳಲ್ಲಿ ಇವು ಮೂರೂ ಇರಲಾರವು ಎಂಬುದೆಲ್ಲ ಹೊಸಗನ್ನಡದ ಧಾತುಗಳ ಸ್ವರೂಪವನ್ನು ತಿಳಿಸುವ ಅತಿ ಪ್ರಾಮುಖ್ಯವಾದ ನಿಯಮಗಳು.
ಇವಲ್ಲದೆ ಇನ್ನೂ ಹಲವು ಗಮನೀಯವಾದ ವಿಷಯಗಳು ಕನ್ನಡ ಧಾತುಗಳ ಅಭ್ಯಾಸದಿಂದ ಎದ್ದು ಕಾಣಿಸುತ್ತವೆ. ಎರಡು ಲಘು ಅಕ್ಷರಗಳುಳ್ಳ ಧಾತುಗಳಲ್ಲಿ ಎರಡನೆಯ ವ್ಯಂಜನ ವರ್ಗ ಪ್ರಥಮಾಕ್ಷರ (ಕ, ಚ, ಟ, ತ, ಪ) ವಾಗಲಾರದೆಂಬುದು ಇವುಗಳಲ್ಲೊಂದು. ಧಾತುವಿನಲ್ಲಿ ದೀರ್ಘಸ್ವರವಿದ್ದರೆ ಅದಕ್ಕೆ ಮುಂದೆ ಪ, ಬ, ಮ, ವಗಳು ಬರಲಾರವೆಂಬುದು ಇನ್ನೊಂದು ಮೂರು ಅಕ್ಷರಗಳುಳ್ಳ ಧಾತುಗಳಲ್ಲಿ ಎರಡನೆಯ ಸ್ವರವಾಗಿ ಅ, ಇ, ಉ ಗಳು ಮಾತ್ರ ಬರಬಲ್ಲವೆಂಬುದು ಮಗುದೊಂದು. ಇಂತಹ ಇನ್ನೂ ಹಲವಾರು ನಿಯಮಗಳನ್ನು ಕಂಡು ಹಿಡಿಯ ಬಹುದು.
ಕನ್ನಡದ ವೈಯಾಕರಣಿಗಳು ಹೇಳುವಂತೆ ಭೂತಕಾಲದ ಪ್ರತ್ಯಯ “ದ” ಎಂಬುದು. ಆದರೆ, ಇದು ಎಲ್ಲಾ ಧಾತುಗಳೆದುರೂ “ದ” ಎಂದೇ ಉಳಿಯುವುದಿಲ್ಲ. ಕೆಲವೆಡೆ “ಟ” ಆಗುತ್ತದೆ, ಕೆಲವೆಡೆ “ಕ” ಆಗುತ್ತದೆ, ಕೆಲವೆಡೆ “ಇದ” ಆಗುತ್ತದೆ. ಪ್ರತ್ಯಯದಲ್ಲಿ ಉಂಟಾಗುವ ಈ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಯಾರೂ ವಿವೇಚಿಸಿಲ್ಲ. ಇವನ್ನೆಲ್ಲ ಭಾಷಾರೂಢಿಯಿಂದ ತಿಳಿದುಕೊಳ್ಳಬೇಕೆಂದು ಸುಲಭದಲ್ಲಿ ಹಾರಿಸಿಬಿಡುವವರೇ ಹೆಚ್ಚು.
ಮೇಲೆ ವಿವರಿಸಿದಂತೆ ಧಾತುಗಳ ಸ್ವರೂಪವನ್ನು ನಾವು ಸರಿಯಾಗಿ ತಿಳಿದುಕೊಂಡೆವಾದರೆ, ಪ್ರತ್ಯಯಗಳಲ್ಲಿ ಬರುವ ಹೆಚ್ಚಿನ ವ್ಯತ್ಯಾಸಗಳನ್ನೂ ಕೂಡ ಸ್ಪಷ್ಟವಾಗಿ ವಿವೇಚಿಸಲು ಸಾಧ್ಯವಿದೆ. ಉದಾಹರಣೆಗಾಗಿ ಎಕಾರಾಂತ ಮತ್ತು ಇಕಾರಾಂತ ಧಾತುಗಳ ಮುಂದೆಲ್ಲ ಭೂತಕಾಲದ ಪ್ರತ್ಯಯ “ದ” ಎಂದೇ ಇರುತ್ತದೆ ; ಬರೆದನು, ಕುಡಿದನು ಇತ್ಯಾದಿ. ಇದಕ್ಕೆ ಕೆಲವೇ ಕೆಲವು ಅಪವಾದಗಳಿವೆ. ಅವನ್ನು ಮಾತ್ರ ಪಟ್ಟಿ ಮಾಡಿಕೊಳ್ಳುವುದವಶ್ಯ. ಉದಾ : ಕಲಿತನು, ಮರೆತನು. ನಪುಂಸಕ ಏಕವಚನದ “ತು” ಪ್ರತ್ಯಯ ಸೇರಿದಾಗ ಮಾತ್ರ ಎಕಾರಾಂತ, ಇಕಾರಾಂತ ಧಾತುಗಳೆದುರು ಭೂತಪ್ರತ್ಯಯಕ್ಕೆ “ಯಿ” ಎಂಬ ರೂಪವಿದೆ : ಕುಡಿಯಿತು, ನಡೆಯಿತು ಇತ್ಯಾದಿ.
ಉಕಾರಾಂತ ಧಾತುಗಳಲ್ಲಿ ಎರಡು ಲಘು ಅಕ್ಷರಗಳಿರುವ ಧಾತುಗಳಿಗೂ ಉಳಿದುವಕ್ಕೂ ವ್ಯತ್ಯಾಸವಿದೆ. ಭೂತಕಾಲದ ಪ್ರತ್ಯಯದೆದುರು ಎರಡು ಅಕ್ಷರಗಳುಳ್ಳ ಉಕಾರಾಂತ ಧಾತುಗಳೆಲ್ಲ ತಮ್ಮ ಕೊನೆಯ ಸ್ವರವನ್ನು ಕಳಕೊಳ್ಳುತ್ತವೆ ಮತ್ತು ಅವುಗಳ ಕೊನೆಯ ಅಕ್ಷರ ಡು ಇದ್ದಲ್ಲಿ ಟ್ ಆಗುತ್ತದೆ, ಗು ಇದ್ದಲ್ಲಿ ಕ್ ಆಗುತ್ತದೆ, ಳು ಇಲ್ಲವೇ ರು ಇದ್ದಲ್ಲಿ ತ್ ಆಗುತ್ತದೆ. (ಬರು, ಇರು ಮತ್ತು ತರು ಇದಕ್ಕೆ ಅಪವಾದಗಳು). ಹಾಗೂ, ಭೂತಪ್ರತ್ಯಯ ಟ್ ದ ಮುಂದೆ ಟ ಆಗುತ್ತದೆ. ಉದಾ : ಕೊಟ್ಟನು, ನಕ್ಕನು, ಅತ್ತನು, ಹೊತ್ತನು ಇತ್ಯಾದಿ.
ಮೊದಲಿನ ಅಕ್ಷರ ಗುರುವಾಗಿರುವ ಧಾತುಗಳು ಇಲ್ಲವೇ ಮೂರು ಅಕ್ಷರಗಳುಳ್ಳ ಧಾತುಗಳೆಲ್ಲ ಭೂತ ಪ್ರತ್ಯಯದೆದುರು ತಮ್ಮ ಕೊನೆಯ ಉಕಾರವನ್ನು ಕಳಕೊಳ್ಳುತ್ತವೆ ಮತ್ತು ಭೂತ ಪ್ರತ್ಯಯ ಅವುಗಳೆದುರು “ಇದ” ಆಗಿರುತ್ತದೆ. (ನಪುಂಸಕ ಏಕವಚನ ಪ್ರತ್ಯಯದೆದುರು “ಇ” ಮಾತ್ರ.) ಉದಾ : ಮಾಡಿದನು ಅಂಜಿದನು, ಕಟ್ಟಿದನು, ಹೊಗಳಿದನು ಇತ್ಯಾದಿ. ಇಲ್ಲೂ ಕಂಡನು, ಹೊರಟನು, ಆದನು ಇತ್ಯಾದಿ ಕೆಲವು ಅಪವಾದಗಳಿವೆ. ವ್ಯಾಕರಣ ಪುಸ್ತಕದಲ್ಲಿ ಅಂತಹ ಧಾತುಗಳ ಪಟ್ಟಿಯೊಂದನ್ನು ಕೊಡುವುದವಶ್ಯ.
ಹೇಳಿ, ಅತ್ತು ಕೊಟ್ಟು, ಹೊಡೆದು ಮೊದಲಾದ ಸಾಪೇಕ್ಷ ಕ್ರಿಯಾಪದಗಳಲ್ಲಿ ಭೂತಕಾಲವನ್ನು ಸೂಚಿಸುವ ಪ್ರತ್ಯಯ ಕೆಲವೆಡೆ “ಇ” ಎಂದಿದೆ, ಕೆಲವೆಡೆ “ದು” ಎಂದಿದೆ, ಕೆಲವೆಡೆ “ಟು” ಎಂದಿದೆ. ಧಾತುಗಳ ಸ್ವರೂಪವನ್ನು ಸರಿಯಾಗಿ ಅರಿತು ಕೊಂಡೆವಾದರೆ, ಈ ಪ್ರತ್ಯಯದ ಸ್ವರೂಪವನ್ನೂ ಕೂಡ ಸ್ಪಷ್ಟವಾಗಿ ವಿವೇಚಿಸಲು ಸಾಧ್ಯವಿದೆ. ಉದಾಹರಣೆಗಾಗಿ ಎಕಾರಾಂತ ಮತ್ತು ಇಕಾರಾಂತ ಧಾತುಗಳ ಮುಂದೆಲ್ಲ ಈ ಪ್ರತ್ಯಯ “ದು” ಎಂದೇ ಇರುತ್ತದೆ. ಉದಾ : ಬರೆದು, ನಡೆದು, ಕುಡಿದು ಇತ್ಯಾದಿ. ಉಕಾರಾಂತ ಧಾತುಗಳಲ್ಲಿ ಎರಡು ಲಘು ಅಕ್ಷರಗಳುಳ್ಳವಾದರೆ, ಮೇಲೆಯೇ ಹೇಳಿದಂತೆ ಅವುಗಳ ಕೊನೆಯ ಅಕ್ಷರಗಳು ಬ್, ಕ್ ಮತ್ತು ತ್ ಗಳಾಗಿ ಪರಿವರ್ತಿಸುವ ಮತ್ತು ಭೂತ ಪ್ರತ್ಯಯ ಅವುಗಳೆದುರು “ಟು”, “ಕು” ಮತ್ತು “ತು” ಆಗಿರುತ್ತದೆ. ಉಳಿದ ಉಕಾರಾಂತ ಧಾತುಗಳ ಮುಂದೆಲ್ಲ ಈ ಪ್ರತ್ಯಯವು “ಇ” ಎಂದೇ ಇರುತ್ತದೆ. (ಹೇಳಿ, ಅಂಜಿ, ಕಟ್ಟಿ, ಹೊಗಳಿ ಇತ್ಯಾದಿ). ಇಲ್ಲ ಹಲಕೆಲವು ಅಪವಾದಗಳಿರುವುದು ನಿಜ. ಆದರೆ ಅವುಗಳ ಸಂಖ್ಯೆ ಜಾಸ್ತಿ ಇರಲಾರದಾದ್ದರಿಂದ, ಅಪವಾದಗಳ ಪಟ್ಟಿಯೊಂದನ್ನು ಕೊಡಲು ವೈಯಾಕರಣಿಗೆ ಕಷ್ಟವಾಗದು.
ಕ್ರಿಯಾ ಧಾತುಗಳಲ್ಲಿರುವಂತೆ ನಾಮಧಾತುಗಳಲ್ಲೂ ಕೂಡ ಅವುಗಳ ರಚನೆಯನ್ನು ಬಿಂಬಿಸುವಂತಹ ನಿಯಮಗಳು ಕೆಲವಿವೆ. ಅವುಗಳನ್ನು ಸರಿಯಾಗಿ ಅರಿತುಕೊಳ್ಳದೆ ನಿಷ್ಕೃಷ್ಟವಾದ ವ್ಯಾಕರಣವನ್ನು ಬರೆಯಲು ಸಾಧ್ಯವಾಗದು. ಉದಾಹರಣೆಗಾಗಿ, ಉಕಾರಾಂತ ನಾಮಪದಗಳಿಗೆ ಷಷ್ಠಿ ವಿಭಕ್ತಿಯಲ್ಲಿ “ಇನ” ಎಂಬ ಪ್ರತ್ಯಯ ಬರುತ್ತದೆ ಯಷ್ಟೆ ? ಈ ಪ್ರತ್ಯಯ ಬಂದಾಗ ಹೆಚ್ಚಿನ ನಾಮಪದಗಳೂ ತಮ್ಮ ಕೊನೆಯ ಉಕಾರಗಳನ್ನು ಕಳೆಕೊಳ್ಳುತ್ತವೆ. ಉದಾ : ಕಾಡಿನ ಕಲ್ಲಿನ, ಹಗಲಿನ ಇತ್ಯಾದಿ. ಆದರೆ ಕೆಲವು ಪದಗಳು ಮಾತ್ರ ತಮ್ಮ ಉಕಾರವನ್ನು ಕಳೆದುಕೊಳ್ಳುವುದಿಲ್ಲ ಮತ್ತು ಅವುಗಳೆದುರು ಷಷ್ಠೀ ವಿಭಕ್ತಿಯ ಪ್ರತ್ಯಯ “ವಿನ” ಎಂದಿರುತ್ತದೆ (ಮಗುವಿನ, ಗುರುವಿನ) ಈ ಪದಗಳ ಸ್ವರೂಪದಲ್ಲಿ ವೈಶಿಷ್ಟ್ಯವೇನಾದರೂ ಇದೆಯೇ ಎಂಬುದನ್ನು ಮಾತ್ರ ಯಾರೂ ವಿವೇಚಿಸಿದಂತಿಲ್ಲ. ಹೆಚ್ಚಿನವರೂ ಕೂಡ ಇಲ್ಲಿ ವಕಾರ ವಿಕಲ್ಪವಾಗಿ ಬರುವುದೆಂದೂ ಅಂತಹ ವಿಕಾರ ಬರುವ ಸಂದರ್ಭಗಳನ್ನು ಭಾಷಾರೂಢಿಯಿಂದ ತಿಳಿದುಕೊಳ್ಳಬೇಕೆಂದೂ ಹೇಳಿ ತಮ್ಮ ಅಜ್ಞಾನವನ್ನು ತೋರಿಸಿಕೊಂಡಿದ್ದಾರೆ.
ನಿಜಕ್ಕೂ ಈ ವಕಾರ ಬರುವ ಮತ್ತು ಉಕಾರ ಲೋಪವಾಗದ ಸನ್ನಿವೇಶಗಳಲ್ಲೆಲ್ಲ ಎರಡು ಲಘು ಆಕ್ಷರಗಳನ್ನುಳ್ಳ ಉಕಾರಾಂತ ನಾಮಪದಗಳೇ ಕಾಣಸಿಗುತ್ತವೆ. ಉದಾ: ಗುರು, ನಗು, ವಧು ಇತ್ಯಾದಿ. ನಾಮಪದಗಳ ಸ್ವರೂಪವನ್ನು ಸರಿಯಾಗಿ ಅರಿತುಕೊಳ್ಳಬೇಕಾದರೆ ಇಂತಹ ಇನ್ನೂ ಹಲವಾರು ರಚನಾ ವೈಶಿಷ್ಟ್ಯಗಳನ್ನು ಕಂಡು ಹಿಡಿದುಕೊಳ್ಳುವ ಅವಶ್ಯಕತೆಯಿದೆ. ಇವನ್ನು ಪ್ರತಿಪಾದಿಸುವುದು ಮಾತ್ರವಲ್ಲ, ಈ ದಿಕ್ಕಿನಲ್ಲಿ ಹೆಚ್ಚಿನ ಸಂಶೋಧನೆಯನ್ನು ಕೈಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರೇರೇಪಣೆ ಕೊಡುವುದೂ ಕೂಡ ನಮ್ಮ ಶಾಲಾ ವ್ಯಾಕರಣಗಳ ಉದ್ದೇಶವಾಗಿರಬೇಕು.

Close

ಹೊರತು

ಜಿ. ಎಸ್. ಸದಾಶಿವ

ಹೊರತು
(ಸಣ್ಣ ಕತೆ)

ಕಾಲಿಗೆ ಪ್ರದಕ್ಷಿಣೆ ಹಾಕಿ ಪಾದವನ್ನು ಕಚ್ಚಿ ಪ್ಯಾಂಟಿನೊಳಗೆ ತೂರಲು ನೋಡಿದ ಜಿರಳೆಯನ್ನು ಗೋವಿಂದ ಕಾಲಿನಲ್ಲೇ ಕೊಡವಿದ. ಮತ್ತೆ ಹುಚ್ಚು ಹಿಡಿದಂತೆ ಗರ ಗರ ತಿರುಗುವ ಅಸಹ್ಯವನ್ನು ಬೆನ್ನುಮೇಲಾಗಿಸಿದ. ಅಸಹಾಯಕ ಸ್ಥಿತಿಯಲ್ಲಿ ಬೆನ್ನು ಚಿಪ್ಪಿನ ಮೇಲೂ ತಿರುಗಲು, ಮೇಲೇಳಲು ಪ್ರಯತ್ನಿಸಿದ ಜಿರಳೆಯ ಮೇಲೆ, ಅಲ್ಲಿ ಇಲ್ಲಿ ಹರಿದಾಡುವ ಒಂದೆರಡು ಹುಳುಗಳು ಆಕ್ರಮಣ ನಡೆಸಿದವು. ಹುಳು ಮುಟ್ಟದ ಜಿರಳೆ ತನ್ನ ಕಡ್ಡಿ ಕಾಲನ್ನು ಪಟಪಟ ಬಡಿದು, ಹುಳುವಿನಿಂದ ದೂರವಾಗಲು ಯತ್ನಿಸಿತು. ಗೋವಿಂದ ಸಮಾಧಾನದ ಧ್ವನಿ ಹೊರಡಿಸಿ, ಕತ್ತಲು ಕಬಳಿಸಿದ ಬೀದಿ, ಅದರಾಚೆ ಮನೆಗಳ ಸಾಲು, ಅದಕ್ಕೂ ಹಿಂದೆ ಆಕಾಶದ ಅಂಚು ನೋಡಿದ.
ಅಷ್ಟು ಹೊತ್ತಿನಿಂದ ಇಲ್ಲೇ ಕೂತಿದ್ದೇನೆ ಎಂದುಕೊಂಡು ಸಿಗರೇಟು ತೆಗೆದು ಹೊತ್ತಿಸಿದ. ಗೋವಿಂದ ಕೂತ ಕುರ್ಚಿಯ ಪಕ್ಕದಲ್ಲೇ ಹಾಸಿಗೆಯಲ್ಲಿ ಮಲಗಿದ ಶಾರದ ನರಳಿದಳು”
ಅದು ಸ್ಪಷ್ಟ ಸೂಚನೆ. ಸಿಗರೇಟಿನ ವಾಸನೆ ಬಂದರೆ ನರಳುತ್ತಾಳೆ, ಮೂಗು ಹಿಂಡುತ್ತಾಳೆ, ಆದರೆ ನನಗಾಗುವುದಿಲ್ಲ ಎನ್ನುವುದಿಲ್ಲ. ಸಲೀಸಾಗಿ ಓಡಾಡುವ ಹಾಗಿದ್ದಿದ್ದರೆ ಎದ್ದು ಜಾಗ ಬಿಡುತ್ತಿದ್ದಳು. ಅವಳ ಕಡ್ಡಿಯಾದ ದೇಹ ದಿನ ದಿನಕ್ಕೆ ಕ್ಷಯಿಸುತ್ತಾ ಹೋಗುವುದನ್ನು ಬಹುಶಃ ಅವಳು ಕ್ಷಣ ಕ್ಷಣಕ್ಕೆ ಸಾಯುತ್ತಿರುವುದನ್ನು ಆಫೀಸು ಬಿಟ್ಟು ಬಂದಮೇಲೆ ಗಂಟೆಗಟ್ಟಲೇ ಇಲ್ಲೇ ನೋಡುತ್ತ ಕೂರುತ್ತೇನಲ್ಲ ಎಂದುಕೊಂಡು ಎದ್ದ.
ಜಿರಳೆಯನ್ನು ಪೊರಕೆಯಲ್ಲಿ ಹೊರಗೆ ಹಾಕಲೇ, ಹುಳುವಿಗೆ ಗ್ರಾಸವಾಗಿ ಬಿಟ್ಟು ಬಿಡಲೆ, ಬೆನ್ನು ಮೇಲಾದರೆ, ಕಡ್ಡಿ ಕಾಲಿಗೆ ತ್ರಾಸು ಬಂದರೆ ಮತ್ತೆ ಹಾಸಿಗೆ ಸೇರಬಹುದು. ನಿಧಾನವಾಗಿ ಮಲಗುವ ಕೋಣೆಯಿಂದ ವೆರಾಂಡಕ್ಕೆ ಬಂದು, ಅಲ್ಲಿಂದ ಅಡಿಗೆ ಮನೆಗೆ ಹೋಗಿ ಸ್ಟೂಲ್ ಎಳೆದುಕೊಂಡು ಕೂತು ಸಿಗರೇಟು ದಮ್ಮು ಎಳೆದು ಕೆಮ್ಮಿದ.
ಕಿಟಕಿ ಬಾಗಿಲು ಮುಚ್ಚಿ ಅಡಿಗೆ ಮನೆಯಲ್ಲಿ ದಟ್ಟವಾಗಿ ಹರಡಿದ ಎಲ್ಲ ತರದ ವಾಸನೆಯ ಮಿಶ್ರಣ, ಹಸಿ ತರಕಾರಿ, ಹೆಚ್ಚಿದ ಈರುಳ್ಳಿ, ಡಬ್ಬಗಳಲ್ಲಿರುವ ಸಾಂಬಾರ ಪದಾರ್ಥಗಳು, ಅರೆತೆರೆದ ನಸ್‌ಕಾಫೆ ಡಬ್ಬಗಳು, ಮಧ್ಯಾಹ್ನ ಶಾರದೆಗೆ ಮಾಡಿ ಉಳಿದ ಗಂಜಿ, ನೆಲ ಒರೆಸಿದ ಒದ್ದೆ ಬಟ್ಟೆ. “ಬೀಟ್ಸ್’ ಪುಟ ತೆಗೆಯುತ್ತ ಮಲಗುವ ಕೋಣೆಯ ವಾಸನೆಗಿಂತ ಇದು ಹಿತವೇ, ಅಹಿತವೇ ಎಂದು ಯೋಚಿಸಿದ.
ಟಾನಿಕ್ಕು, ಮಾತ್ರೆ, ಪೌಡರ್‌, ಸ್ನಾನಮಾಡದ ಬೆವರಿನ ಕಾಹಿಲೆಯ ದೇಹ, ಎಷ್ಟೋ ದಿನಗಳಿಂದ ಬದಲಾಯಿಸದ ಹಾಸಿಗೆ ಬಟ್ಟೆ, ಉಪಯೋಗಿಸದೆ ಬಿಟ್ಟ ಕೊಳೆತ ಹಣ್ಣು.
ಹಿತ, ಅಹಿತವೆನ್ನುವ ಭೇದವನ್ನು ಗುರುತಿಸುವುದಕ್ಕೆ ಬದಲು ಸುಮ್ಮನೆ ಮನಸ್ಸಿನಲ್ಲಿ ಹೋಲಿಸಿದ. ಮಣ್ಣು ಬೆರೆತ ಗಾಳಿ ಬೇಕಾದರೆ ವೆರಾಂಡದಲ್ಲಿ ಹೊರಗಿನ ಬಾಗಿಲು ತೆರೆದು ಆರಾಮ ಕುರ್ಚಿಯಲ್ಲಿ ಒರಗಬೇಕು. ಆದರೆ, ತನಗೆ ಪೇಪರ್ ಓದಲು, ಕಾದಂಬರಿ ಓದಲು, ಅಥವಾ ಏನಾದರೂ ಬರೆಯಬೇಕಾದರೆ ಅಡಿಗೆ ಮನೆಯೇ ಸರಿ. ಆಫೀಸು ಮುಗಿಸಿ ಮನೆಗೆ ಬರುವಾಗ ಹಣ್ಣು, ಟಾನಿಕ್ಕು, ಮಾತ್ರೆ, ಹತ್ತಿ ಉಂಡೆ ಯಾವುದನ್ನೂ ಮರೆಯದೆ ತಂದು ಶಾರದೆಯ ಹಾಸಿಗೆ ಪಕ್ಕದಲ್ಲಿ ತಲೆದಿಂಬಿನ ಬಳಿ ಒಂದೊಂದೊಂದಾಗಿ ಚೀಲದಿಂದ ತೆಗೆದಿಟ್ಟರಾಯಿತು. ಮಲಗಿದಲ್ಲೇ ಕತ್ತು ಹೊರಳಿಸಿ, ಒಂದೊಂದು ವಸ್ತುವನ್ನೂ ನೋಡಿ, ತನ್ನ ಮುಖ ನೋಡಿ ಮತ್ತೆ ಗೋಡೆಯ ಕಡೆ ಮಗ್ಗುಲಾದಾಗ ಮುಖ ಕಿವಿಚಿಕೊಳ್ಳುತ್ತದೆ. “ದೈಹಿಕ ಕಾಹಿಲೆ ಏನೂ ಇಲ್ಲ ಅಂತಾರೆ, ಡಾಕ್ಟ್ರು” ಎಂದರೆ ನಿಸ್ತೇಜವಾದ ಕಣ್ಣಿನಲ್ಲಿ ರೋಷ ಉಕ್ಕುತ್ತದೆ. ಅದು ನನಗೆ ಗೊತ್ತು ಎನ್ನುತ್ತದೆ. ದೀರ್ಘಕಾಲ ಹಾಸಿಗೆಯಲ್ಲೇ ಮಲಗಿ ಮುರುಟಿದ ದೇಹ ಒಂದು ಗಳಿಗೆ ಸೆಟೆದುಕೊಂಡು, ಉಸಿರಿನ ರಭಸಕ್ಕೆ ಮೂಗಿನ ಹೊಳ್ಳೆ ಅದುರುತ್ತದೆ. ‘ಮತ್ತೆ ಯಾಕೆ ಈ ಔಷಧ, ಹಣ್ಣು ಅಂತ ಖರ್ಚು’ ಎನ್ನುತ್ತಾಳೆ. ಸೋತ ಧ್ವನಿಯಲ್ಲಿ, ‘ಆದರೂ… ಔಷಧ ತರೋದು ನನ್ನ ಕರ್ತವ್ಯ. ಹುಷಾರಾಗಬೇಡವಾ ನೀನು?” ಆಸೆಯಿಂದ ಕಣ್ಣು ಬಾಡುತ್ತದೆ, ಮುಚ್ಚಿ ತೆರೆಯುತ್ತದೆ. ‘ಹಾಗೆ ನಿಮ್ಮ ಇಷ್ಟವಾ ?’-ಕಾಯಿಲೆಯ ಧ್ವನಿ ಮತ್ತೆ. ‘ನನ್ನ ಇಷ್ಟ ಅನಿಷ್ಟದ ಪ್ರಶ್ನೆ ಅಲ್ಲ. ನಿನಗೆ ಹಾಗಂತ ಅನಿಸುವುದಿಲ್ಲವಾ ?’ ಒಂದು ಗಳಿಗೆ, ಸೋತ ಕೈಯನ್ನು ಚೆಲ್ಲಿದಳು. ಗೊಗ್ಗರು ಧ್ವನಿಯಲ್ಲಿ ‘ನಂಗೊತ್ತಿಲ್ಲ. ಇಲ್ಲ. ನನಗೇನೂ ಆಸೆ ಇಲ್ಲ.
ಉಳಿದಿಲ್ಲ, ನನಗಾಗಿಯೂ ಅಲ್ಲ, ಬೇರೆಯವರಿಗಾಗಿಯೂ ಅಲ್ಲ, ನನಗೆ ಏನೂ ಅರ್ಥ ಆಗೋದಿಲ್ಲ’ ಎಂದು ಬಡಬಡಿಸುತ್ತಾಳೆ. ಅವಳು ಸನ್ನಿ ಹತ್ತಿದವರಂತೆ ಮಾತು ಶುರು ಮಾಡಿದಾಗ ಗೊತ್ತು: ತನ್ನ ಪುಂಗಿ ನಿಲ್ಲಿಸಬೇಕೆಂದು. ‘ಮೊನ್ನೆ ನಿನ್ನ ಅಣ್ಣ ಬಂದಿದ್ದನಲ್ಲ. ಇನ್ನೊಂದೆರಡು ದಿನ ಇದ್ದು ಹೋಗು ಎನ್ನಬೇಕಾಗಿತ್ತು’ ಎಂದರೆ ಹಿಸ್ಟೆರಿಕ್ ಆಗುತ್ತಾಳೆ. “ಅಣ್ಣನೂ ಬೇಡ, ಗಂಡನೂ ಬೇಡ, ಯಾರೂ ಬೇಡ, ದಯವಿಟ್ಟು ನೀವು ಸುಮ್ಮನೇ ಇರಿ. ನಿಮಗೆ ನನ್ನ ಉಸಾಬರಿ ಬೇಡ, ನಿಮ್ಮ ಟಾನಿಕ್ಕೂ ಬೇಡ” ಎಂದು ಅರಚಿ, ಅರ್ಧ ಹಾಸಿಗೆ ಬಿಟ್ಟು ಎದ್ದು ಮತ್ತೆ ದೊಪ್ಪನೆ ಬೀಳುತ್ತಾಳೆ.
ಅಡಿಗೆ ಮನೆ ಹೊಕ್ಕು ಸ್ಟೂಲ್ ಎಳೆದು ಕೂತರಾಯಿತು.
ರಾತ್ರಿ ಬರುವುದು ತಡವಾಗುತ್ತದೆ ಎಂದು ಹೊರಬಾಗಿಲಿಗೆ ಬೀಗ ಹಾಕಿ, ಜಗ್ಗಿ ನೋಡಿ ಬೀಗದ ಕೈಯನ್ನು ಪ್ಯಾಂಟಿನ ಜೇಬಿಗೆ ಇಳಿಬಿಟ್ಟ.
ಮರದ ಮೆಟ್ಟಿಲುಗಳನ್ನೇರಿ ಮಹಡಿಯ ಮೇಲಿನ ಹಾಲಿನಲ್ಲಿ ಕಾಲಿಟ್ಟು ಒಂದು ನಿಮಿಷ ತಡೆದ. ಎತ್ತರದ ಸ್ಟೂಲಿನ ಮೇಲೆ ಒಬ್ಬಿಬ್ಬರು. ಬೀರು ತುಂಬಿದ ಮಗ್ಗನ್ನು ಮೆಲ್ಲಗೆ ಕೆಳಗಿಟ್ಟು ಕತ್ತು ತಿರುಗಿಸಿ ಬಂದವರು ಯಾರು ಎಂದು ನೋಡಿದರು. ಆಸಕ್ತಿಯಿಂದ ಕಣ್ಣು ಕಿರಿದುಗೊಳಿಸಿ, ಅನಾಸಕ್ತಿಯಿಂದ ಸಿಮೆಂಟ್ ಕೌಂಟರಿನ ಆಚೆ ಮುಖ ತಿರುಗಿಸಿದರು. ಎಂದೋ ಬಣ್ಣ ಕಳೆದುಕೊಂಡ, ಅಲ್ಲಲ್ಲಿ ಬೆತ್ತ ಮುರಿದು ಕೂತರೆ ಅಂಡಿಗೆ, ಮೊಣಕೈಗೆ ಚುಚ್ಚುವ ಬೆತ್ತದ ಕುರ್ಚಿಗಳು ಕಾಲು ಏರುಪೇರಾದ ಮೇಜು, ಕಿಮಟು ಹತ್ತಿದ ಪ್ಲಾಸ್ಟಿಕ್ ಕ್ಲಾತ್, ಛಾವಣಿಗೆ ಹತ್ತಿದ ಸಿಗರೇಟಿನ ಹೊಗೆ, ನೆಲಕ್ಕೆ ಹಾಸಿದ ಸಿಗರೇಟು ತುಂಡುಗಳು, ಕೌಂಟರಿಗೆ ದೂರದಲ್ಲಿ ಒಂದು ಟೇಬಲ್ಲಿನ ಸುತ್ತ ತಾನು ಆಗಾಗ್ಗೆ ನೋಡಿದ ಮೂವರು. ಎಲ್ಲಿ ಕೂರಬೇಕೆಂದು ಯೋಚಿಸುವಾಗ ‘ಹಲೊ’ ಎಂದ ಟೇಬಲ್ಲಿನ ಒಬ್ಬ. ಆಗಲೇ ಅಷ್ಟು ಬೀರು ಬಿದ್ದು ಮನಸ್ಸು ಉದಾರ, ಸ್ನೇಹಾಕಾಂಕ್ಷಿ ‘Join us’ ಎಂದ, ಇನ್ನೊಬ್ಬ. ಖಾಲಿ ಕುರ್ಚಿಯಲ್ಲಿ ಕೂತಾಗ ಒಂದು ಕಣ್ಣಿನ ಬೇರರ್ ಪ್ರತ್ಯಕ್ಷನಾದ. ‘ನೀವು ಯಾವಾಗಲೂ ವಿ…………….ವಿ………….ವಿಸ್ಕಿ ಕುಡಿ……ಡಿ……..ತೀತೀರಲ್ಲ’ ಎಂದು ಇನ್ನೊಬ್ಬ. ಕುಡಿದ ಬಿಕ್ಕೊ, ಸಹಜವೋ ಎಂದು ಗೋವಿಂದ ಯೋಚಿಸಿ ‘ಹೌದು’ ಎಂದ. ಬಿಕ್ಕನಿಗೆ ಒಂದು ರಹಸ್ಯವನ್ನು ಭೇದಿಸಿದಷ್ಟು ಸಂತೋಷವಾಯಿತು. ಇದ್ದಕ್ಕಿದ್ದ ಹಾಗೆ ಈ ಸತ್ಕಾರ ಏಕೆ ಎನ್ನುವುದು ಅರ್ಥವಾಗಲಿಲ್ಲ. ಅರ್ಥಮಾಡಿಕೊಳ್ಳುವ ಗೋಜಿಗೂ ಹೋಗಲಿಲ್ಲ. ‘ವಿಸ್ಕಿ’ ಹೇಳಿ ತಿರುಗಿದಾಗ ಒಬ್ಬ ಭಾವಪರವಶತೆಯಲ್ಲಿದ್ದ. ‘ಬಾಗಿಲು ತೆಗೆದ. ಸ್ವಿಚ್ ಆನ್ ಆಗಿದ್ದು ಗೊತ್ತಿರಲಿಲ್ಲ. ಒಳಗೆ ಕೈ ಹಾಕಿದ್ದೇ ಸರಿ- ಅಯ್ಯಬ್ಬ,
3*
ಸುಯ್ಯ – ಅಂತ ಜೀವ ಹೋಯಿತು ಅಂತ ಇದ್ದೆ. ‘ಹೌದು – ಹೌದು, ಆ ಥರ ಕೈ ಹಾಕೋದು ಭಾರೀ ಅಪಾಯ. ಫ್ರೀಜ್‌ನಲ್ಲಿ ನೀನು ಫ್ರೀಜ್ ಆಗಿಬಿಡಬಹುದು? ಎಂದ ಜಿರಳೆಯಂತೆ ಕಾಣುವ ವ್ಯಕ್ತಿ, ಆಕಳಿಕೆಯನ್ನು ನುಂಗುತ್ತ. ಷಾಕ್ ಮುಟ್ಟಿಸಿ ಕೊಂಡವನು ಜಿರಳೆಯ ಮುಖ ನೋಡಿದ. ಅವನ ಸಹಾನುಭೂತಿ ನಾಲಗೆಯ ತುದಿಯದೆಂದು ಗೊತ್ತಾಗಿ ನೊಂದುಕೊಂಡ. ಮೈಯೆಲ್ಲ ಭಾವನೆಯಾಗಿ ಮಾತಾಡುವ ಅವನು, ಅಷ್ಟೆ ನಿರುತ್ಸಾಹದ ಜಿರಳೆಯ ಸಹಾನುಭೂತಿ, ಅನುಭವವನ್ನು ಭಾಷೆಗೆ ಒಗ್ಗಿಸಬೇಕೆಂಬ ಬಿಕ್ಕನ ಪರದಾಟ. ಬೇರೆ ಟೇಬಲ್ಲಿಗೆ ಹೋಗಿದ್ದರೆ ಚೆನ್ನಾಗಿತ್ತು ಎಂದುಕೊಂಡ ಗೋವಿಂದ. ಐಸ್ ಕರಗಿದ ತಣ್ಣಗಿನ ವಿಸ್ಕಿ ಗಂಟಲಲ್ಲಿ ಇಳಿದು ಹೊಟ್ಟೆಯಲ್ಲಿ ಬೆಚ್ಚಗಾಗುವುದನ್ನು ಅನುಭವಿಸುತ್ತ ಬಿಕ್ಕನ ಕಡೆ ನೋಡಿದ. “ನಿಮಗೆ ತೀವ್ರವಾದ ಅನುಭವ ಯಾವುದು ?” ಎಂದ ಜಿರಳೆ. “ನನಗೆ ಇಂದು ಬೆಳಿಗ್ಗೆ ಆಯಿತಲ್ಲ, – ಆ ಥರದ್ದು’ ಎಂದ ಷಾಕ್ ಮುಟ್ಟಿಸಿಕೊಂಡವ.
ರಣರಣ ಬಿಸಿಲು, ಮಹಾತ್ಮಾಗಾಂಧಿ ರಸ್ತೆಯಿಂದ ಜಯನಗರದ ತುದಿಯವರೆಗೆ ಬಸ್ಸಿಗೆ ನಾಲ್ಕಾಣೆಯ ಇಲ್ಲದೆ ನಡೆದೂ ನಡೆದೂ, ಲಾಲ್‌ಬಾಗಿನ ಹತ್ತಿರ – ಕುಕ್ಕರಿಸುವಂತೆ ಆದ್ದು. ಮತ್ತೆ ಎದ್ದಾಗ ಕಾಲು ಅತ್ತ ಇತ್ತ ಎಳೆಯುವಂತೆ ಆದ್ದು. ಬೇಗೆಗೆ ಬೆಂದ ದೇಹಕ್ಕೆ ಬೆವರಿನ ಸ್ನಾನ. ತಲೆ ಅಂಟುಗಟ್ಟಿತ್ತು. ಒಳಗಿನ ಬನಿಯನ್ ತೊಯ್ದು ಮೈಯ್ಗೆ ಅಂಟಿಕೊಂಡಿತ್ತು. ಕಾಚ ಕೂಡಾ ಒದ್ದೆಯಾಗಿ ನಡೆದಾಗ ತೊಡೆಯ ಸಂದುಗಳಲ್ಲಿ ವಿಚಿತ್ರ ಅನುಭವ. ಮನೆಯ ಬಾಗಿಲಿಗೆ ತಲುಪಿದಾಗ ಕುಸಿದು ಬೀಳುತ್ತೇನೆನ್ನುವಂತೆ, ಹತ್ತು ನಿಮಿಷ ಸತಾಯಿಸಿ ಬಾಗಿಲು ತೆಗೆದಾಗ ಒಳಗಿನ ತಂಪು ಕಣ್ಣು ಕತ್ತಲುಗಟ್ಟಿಸಿ, ಎದೆಯಲ್ಲಿ ಏನೋ ಉಂಡೆ ಉಂಡೆಯಾಗಿ, ಒತ್ತಿ ಬಂದು, ಕೈ ಬೀಸಿ ರಪ್ಪನೆ ಶಾರದೆಯ ಕೆನ್ನೆಗೆ ಬೀಸಿ ಬಡಿದದ್ದು. ಒಂದು ಕ್ಷಣದ ದಿಗ್ಭ್ರಮೆಯ ನಂತರ ತುಟಿಯ ಕೊಂಕಿನಲ್ಲಿ ವಕ್ರವಾಗಿ ನಕ್ಕು ಬೆರಳು ಮೂಡಿದ ಕೆನ್ನೆಯ ಮೇಲೆ ಮೃದುವಾಗಿ ಕೈ ಆಡಿಸಿಕೊಂಡಿದ್ದು.
“ಪ್ರತಿಯೊಬ್ಬನಿಗೂ ಏನಾದರೂ ಒಂದು ಇದ್ದೇ ಇದೆ. ನಿಮಗೆ ಇಲ್ಲ ಅಂದರೆ ನೀವು ಆಟೋಮೇರ್ಷ ಅಂತ ಲೆಕ್ಕ. ನನಗೆ ಕುಡಿದಾಗ ದುಃಖ ಆಗ್ತದೆ (ಬಿಕ್ಕ ಕುಡಿದು ಬಿಕ್ಕಿದ.) ನಾನು ಮದುವೆಯಾಗಬೇಕೆಂದಿದ್ದ ಹುಡುಗಿಯ ನೆನಪಾಗ್ತದೆ. ಲಾಲ್‌ಬಾಗ್‌ನಲ್ಲಿ ತೊಡೆಗೆ ತೊಡೆ ಸೇರಿಸಿ ಕಳೆದ ಸಂಜೆಯ ನೆನಪಾಗಿ, ಸಿನೆಮಾದ ಕತ್ತಲೆಯಲ್ಲಿ ಅವಳ ಎದೆ ಅಮುಕಿದ ನೆನಪಾಗಿ, ಪೆಪ್ಪರ್‌ಮಿಂಟನ ಅವಳ ನಗು ನೆನಪಾಗಿ….”
ಬಿಕ್ಕ ಬೀರು ಗ್ಲಾಸೆತ್ತಿ ‘ಸ…ಸ…..ಸಾಕು’ ಎಂದ. ‘ರೀ….ಮೀ….ಮಿ….ಸ್ಟರ್, ನೀವು ಏನು ಅನುಭವಿಸಿದ್ದೀರಿ. ಬೀ….ಬೀ….ರ್ ಯಾಕೆ ಕು….ಕುಡಿಯೋಲ್ಲ’ ಎಂದ. ಅವನ ಅಧಿಕಾರವಾಣಿಯಿಂದ ಗೋವಿಂದ ತಳಮಳಗೊಂಡ.
`ಬಿಸಿಲಿನ ಝಳ, ಬೀಸಿ ಬಿಗಿದ ಕೈಯಿ. ಅದಕ್ಕೂ ಹಿಂದೆ ಜ್ವರದ ಕಾವಿನಲ್ಲಿ ಬಡಬಡಿಸಿದ್ದು. ಹಳ್ಳಿಯ ಮನೆಯ ಅಂಗಳದಲ್ಲಿ ಕಾಯಿ ತುಂಬಿ ನಿಂತ ಹಲಸು, ಫಣತದ ಮನೆಯಲ್ಲಿ ಬಿಚ್ಚಿದ ಹಣ್ಣಿನ ವಾಸನೆ. ಬೆಳಗಿನ ಜಾವ ಜ್ವರ ಇಳಿದು ಡಿಸೆಂಟ್ರಿಗೆ ತಿರುಗಿದ್ದು. ಹೊತ್ತು ಮೂಡಿದ ಮೇಲೆ ದೂರದ ಗುಡಿಕಲ್ಲಿನ ಮೇಲೆ ಬಿಸಿಲು ಬೆಚ್ಚಗೆ ಹರಡಿಕೊಂಡಿದೆಯೆಂದು ಮನಸ್ಸಿನಲ್ಲಿ ಕಲ್ಪಿಸಿಕೊಂಡು ‘ಆಹ್’ ಎಂದು ನರಳಿದ್ದು,
‘ಸ….ಸ….ಸಾವಿನ ಅನುಭವ ನಿನಗಿಲ್ಲವೆ ?” ಎಂದ ಬಿಕ್ಕ, ಅವನು ಟೈಟ್ ಆಗಿದ್ದಾನೆಂದುಕೊಂಡ ಗೋವಿಂದ. ತನಗೂ ನಿಧಾನಕ್ಕೆ ಏರುತ್ತಿದೆ. ಆದರೆ ಎಂದೂ ನಾಲಗೆ ಸಡಿಲಗೊಂಡಿಲ್ಲ. ನಾನು ಮದುವೆಯಾಗಬೇಕೆಂಬ ಹುಡುಗಿಯ ನೆನಪಾಗಿಲ್ಲ ಎಂದುಕೊಂಡು ನಕ್ಕ.
‘ಸಾಯ್ತಾ ಇರೋರನ್ನ ನೋಡಿದ ಅನುಭವ ಇಲ್ವೆ ?’ ಎಂದ ಜಿರಳೆ. ‘ಷಟ್ ಅಪ್’ ಎಂದ ಗೋವಿಂದ. ‘ಮಿಸ್ಟರ್, ನಿಮ್ಮಿಂದ ಬಂತು, ತಣ್ಣಗೆ ಹಾಲಿನಂತೆ ಅಂದುಕೊಂಡಿದ್ದೆವು. ಸಾಯ್ತಾ ಇರೋರನ್ನ ನಾನು ನೋಡಿಲ್ಲ. Must be a terrible thing to watch some one dying,’ ಗೋವಿಂದ ಮತ್ತೊಂದು ದೊಡ್ಡ ಗುಟುಕು ವಿಸ್ಕಿ ಕುಡಿದು ಹಿಂದಿನ ಶಾಂತ ಸ್ಥಿತಿಗೆ ಬಂದ. ‘Certainly’ ಎಂದು ಕಾಲು ಕತ್ತರಿ ಹಾಕಿ ಕುರ್ಚಿಯ ಬೆನ್ನಿಗೆ ತಲೆಯೆತ್ತಿದ.
ಇದ್ದಕ್ಕಿದ್ದ ಹಾಗೆ ಬಿಕ್ಕ ಉಕ್ಕಿ ಉಕ್ಕಿ ವಾಂತಿ ಮಾಡಿಕೊಳ್ಳಲಾರಂಭಿಸಿದ. ಜಿರಳೆ ಹೊಟ್ಟಿ ಹಿಡಿದುಕೊಂಡು ನಕ್ಕ. ಬಿಕ್ಕ ಇನ್ನೂ ವಾಂತಿ ಮಾಡಿದ. ಷಾಕ್ ಮುಟ್ಟಿಸಿಕೊಂಡದ ಮತ್ತೊಮ್ಮೆ ಷಾಕ್ ಹೊಡೆದಂತೆ ಜಗ್ರನೆ ಕುರ್ಚಿ ಹಿಂದಕ್ಕೆಳೆದುಕೊಂಡ.
ಕೌಂಟರಿನ ಹಿಂದಿದ್ದ ಕಪ್ಪನೆಯ, ಎತ್ತರದ, ಕಣ್ಣು ಕೆಂಪಾದ ಯಜಮಾನ ತಲೆಯೆತ್ತಿ ನೋಡಿದ. ತಲೆತಗ್ಗಿಸಿ, ಅಸಹಾಯಕತೆಯಿಂದ ಹೊಟ್ಟೆಯಲ್ಲಿದ್ದುದನ್ನೆಲ್ಲ ಕಾರಿಕೊಂಡ. ಪಕ್ಕದ ಇಸ್ಟೇಟ್‌ ಕ್ಲಬ್ಬಿನಲ್ಲಿದ್ದವನಾರೋ ತುಂಟತನಕ್ಕೆ ಮೈನ್ ಸ್ವಿಚ್ ಆಫ್ ಮಾಡಿದ. ಕತ್ತಲು ರಾಚಿದ ಹಾಲಿನಲ್ಲಿ ‘Bastards’ ಎಂದು ಯಜಮಾನ ಅರಚುತ್ತ ಇದ್ದ. ಎತ್ತರದ ಸ್ಟೂಲಿನ ಮೇಲೆ ಕೂತಿದ್ದವರು ಯಾರೋ ಇಳಿಯಲು ಯತ್ನಿಸಿದಾಗ ಸಿಮೆಂಟಿನ ನೆಲದ ಮೇಲೆ ಜಾರಿಬಿದ್ದು, ಬೀರ್ ಗ್ಲಾಸ್ ‘ತಳ್’ ಎಂದು ಒಡೆದ ಶಬ್ದ.
ದೀಪ ಬಂದಾಗ ಗೋವಿಂದ ತನ್ನ ಪ್ಯಾಂಟಿನ ಕಿಸೆಯಲ್ಲಿದ್ದ ಪೋಸ್ಟ್ ಕವರ್ ತೆಗೆದು ಕೈಯಲ್ಲಿ ಹಿಡಿದಿದ್ದ. ಪ್ಯಾಂಟಿನ ಮೇಲೆ ಸಿಡಿದ ವಾಂತಿಯ ಹನಿಗಳನ್ನು ಕೊಡವಿಕೊಂಡು ಬಿಕ್ಕನ ಕಡೆ ನೋಡಿದ. ಅದೇ ತರ ತಲೆ ತಗ್ಗಿಸಿ ಕೂತಿದ್ದ. ಯಾರೋ ಸಲಹೆ ಮಾಡಿದರು ‘ಲೈಮ್ ಜೂಸ್ ಕೊಡಿ’ ಎಂದು. ಇನ್ನೊಬ್ಬರು ‘ಟೊಮ್ಯಾಟೋ ತಿನ್ನು’ ಎಂದರು. ಥಟ್ಟನೆ ಸೆಟೆದುಕೊಂಡು ‘No No, I…I . I wa…wa…want Whi…Whi…Whiskey’ ಎಂದ ಬಿಕ್ಕ. ಸೂರು ಹಾರಿಹೋಗುವಂತೆ ಅವನು ಕಿರುಚಿದಾಗ ಜಿರಳೆ ಮತ್ತೆ ನಕ್ಕ.
ವಾಂತಿಯನ್ನು ತೊಳೆಯಲು ಹುಡುಗ ಬಕೆಟ್ಟಿನಲ್ಲಿ ನೀರು, ಫೆನಾಯಲ್ ಹಿಡಿದು ಬಂದಾಗ ಗೋವಿಂದ ಬೇರೆ ಟೇಬಲ್ಲಿಗೆ ಹೋದ. ಬಿಕ್ಕನನ್ನು ಹಾಗೆಯೇ ಬಿಟ್ಟು ಇನ್ನಿಬ್ಬರು ಬೇರೆ ಕಡೆ ಹೋದರು. “ಛೇ, ಛಿ’ ಎಂದುಕೊಂಡು ಬಿಕ್ಕ ಅಲ್ಲಿನ ಸ್ಥಿತಿಗೆ ಹೊಂದಿಕೊಳ್ಳಲಾಗದೆ, ತನ್ನ ನೆರವಿಗೆ ಒಬ್ಬರೂ ಬರದೇ ಇದ್ದುದನ್ನು ಗಮನಿಸಿ, ಆ ಅಸಂಬದ್ಧತೆಗೆ ರೋಸಿ ಬಾಗಿಲಿನತ್ತ ಹೆಜ್ಜೆ ಹಾಕಿದ. ‘ಏಯಮ್, ಬಿಲ್ಲುಕೊಡ ಬೇಕೊ’ ಎಂದ ಜಿರಳೆ. ‘ನಿಮ್ಮಪ್ಪ ಕೊ….ಕೊ…ಕೊಡ್ತಾನೆ’ ಎಂದು ದಪ್ಪ ದೇಹವನ್ನು ಹೊರಸಾಗಿಸಿದ.
ಮಲಗುವ ಕೋಣೆಯ ವಾಸನೆ, ಅಡಿಗೆಮನೆಯ ವಾಸನೆ, ಬಿಚ್ಚಿದ ಹಲಸಿನ ಹಣ್ಣು, ಬಿಕ್ಕ ಬಿಕ್ಕಿದ ಮಾತು, ವಾಂತಿ, ತೊಳೆದ ಮೇಲೆ ಹಾಕಿದ ಫೆನಾಯಲ್‌, ಬಾತ್ ರೂಮಿನಿಂದ ಬರುವ ಮೂತ್ರದ ವಾಸನೆ.
ಒಂದಕ್ಕೊಂದು ಕೊಂಡಿಹಾಕುವ, ಹಾಕಿದಂತೆ ಕಳಚಿಕೊಳ್ಳುವ, ಹೊರತಾಗುವ, ಹೊರತಾಗಿರುವ ಬೇಡುವ, ಬೇಡಿಲ್ಲವೆನ್ನುವ, ಚಡಪಡಿಕೆ ಇಲ್ಲದ, ಉದ್ರೇಕವಿಲ್ಲದ, ಅಸಂಬದ್ಧತೆಗೆ ಅಸಮಾಧಾನ ತಾಳದ ತಳಮಳಗೊಳ್ಳದ
ಬಾಗಿಲಿನ ಬೀಗ ತೆಗೆದು ಒಳಗೆ ಸರಿದಾಗ ಗವ್ವೆಂದು ಮುಖಕ್ಕೆ ರಾಚಿದ ಕತ್ತಲಿನಲ್ಲಿ ಒಂದು ಕ್ಷಣ ತಬ್ಬಿಬ್ಬು. ಶಾರದೆ ದೀಪ ಹಾಕಿಯೇ ಇಲ್ಲ ಎಂದು ಸ್ವಿಚ್ಚಿಗೆ ಕೈಯೊತ್ತಿದ. ಕತ್ತಲೆಯಷ್ಟೇ ಬೆಳಕೂ ತಬ್ಬಿಬ್ಬು. ಕಣ್ಣು ಮಿಟುಕಿಸಿ ಹಣೆಗೆ ಕೈಯುಜ್ಜಿದ.
ತಾನು ಬಿಟ್ಟಾಗ ಹೇಗೋ ಹಾಗೇ ಮಲಗಿದ್ದಳು ಶಾರದೆ. ಗಂಜಿ ಹಾಸಿಗೆಯ ಪಕ್ಕದಲ್ಲಿ ಹಾಗೇ ಇದೆ. ಲೋಟದ ಅಂಚಿನಲ್ಲಿ ನಿಂತ ಜಿರಳೆ ಒಳಗೆ ಬಗ್ಗಿ ಗಂಜಿಯಲ್ಲಿ ತನ್ನ ಮೀಸೆ ಮುಳುಗಿಸಿತ್ತು. ಸಂಜೆ ತಾನು ಆಟ ಆಡಿಸಿದ ಜಿರಳೆಯೆಲ್ಲಿ ಎಂದು ನೋಡಿದ. ಆದನ್ನು ಹುಳುಗಳು ಅರ್ಧ ಮುಗಿಸಿದ್ದವು. ಶಾರದೆಯ ಹಾಸಿಗೆಯ ಹತ್ತಿರ ಬೆತ್ತದ ಕುರ್ಚಿ ಎಳೆದುಕೊಂಡು, ಕೂತು, ಸಿಗರೇಟು ಹೊತ್ತಿಸಿದ. ಶಾರದೆ ಮುಲುಕಲಿಲ್ಲ, ಹೊರಳಲಿಲ್ಲ. ನಿದ್ದೆ ಇರಬಹುದು ; ಮಂಪರು ಇರಬಹುದು. ಶಾರದ ಎಂದು ಕರೆದ. ತನ್ನ ಧ್ವನಿ ತನಗೆ ದಿಗಿಲು. ನಿಧಾನವಾಗಿ ಸಿಗರೇಟು ಮುಗಿಸಿ, ಕಾಲಿನಡಿಯಲ್ಲಿ ಅದನ್ನು ಹೊಸಗಿ ಹಾಕಿ ಶಾರದೆಯ ತೋಳು ಹಿಡಿದು, ಗೋಡೆಯ ಕಡೆ ಇದ್ದ ಮುಖವನ್ನು ತನ್ನತ್ತ ತಿರುಗಿಸಿದ ಕಣ್ಣು ಮುಚ್ಚಿ ನಿದ್ದೆ ಹೋದಂತೆ. ಮೂಗಿಗೆ ಬೆರಳು ಹಿಡಿದು ನೋಡಿದ, ಹೊದಕಲನ್ನು ಸರಿಸಿ ಕೈ, ಕಾಲು, ಹಣೆ, ಕುತ್ತಿಗೆ, ಎದೆಯ ಬಳಿ ಕೈಯಿಟ್ಟು ನೋಡಿದ.
ನಾಲಗೆ ಒಣಗಿ, ಅಂಗೈ ಬೆವತು ಸತ್ತುಹೋಗಿದ್ದಾಳೆ ಎಂದುಕೊಂಡು ಬೆಳಿಗ್ಗೆಯಿಂದ ಜೇಬಿನಲ್ಲಿಟ್ಟುಕೊಂಡೇ ತಿರುಗುತ್ತಿದ್ದ, ಬಾರಿನಲ್ಲಿ ಒಮ್ಮೆ ಒಡೆಯಲು ಯತ್ನಿಸಿದ ಕವರನ್ನು ತೆಗೆದ.
ಶಾರದೆ ಖಂಡಿತ ಬದುಕುವುದಿಲ್ಲ. ನೀನೊಬ್ಬ ಭಾವನೆ ಸತ್ತವನು. ಅವಳು ಸತ್ತರೆ ಅದು ಸಾವಲ್ಲ. ಅವಳಿಗೆ ರೋಗ ಎಂದು ನೀನು ಭಾವಿಸಿರಬಹುದು. ರೋಗ ನಿನಗೆ.
ಶಾರದೆಯ ಅಣ್ಣ ಊರಿಗೆ ಹೋದವನು ಬರೆದ ಪತ್ರ. ತಲೆ ಚಿನು ಚಿಮು ಎನ್ನುತ್ತಿದೆ ಎಂದುಕೊಂಡ.
ವಿಸ್ಕಿಯ ಪ್ರಭಾವ ಈಗ ಏರುತ್ತಿದೆ ಎಂದು ಯೋಚಿಸಿದ ಗೋವಿಂದ. ಕುರ್ಚಿಯಲ್ಲಿ ಬೆನ್ನು ಒರಗಿಸಿ, ಕಣ್ಣು ಮುಚ್ಚಿದರೆ ತಲೆ ಗಿರಗಿರ ಎಂದು ಎಡಕ್ಕೆ, ಬಲಕ್ಕೆ ಪಾತಾಳದಿಂದ ನೆಲಕ್ಕೆ, ನೆಲದಿಂದ ಆ ಗೋಡೆಗೆ ಈ ಗೋಡೆಗೆ ತಿರುಗಿ ತಿರುಗಿ, ಬೆಳಕಿನ ಹುಳುಗಳ ಉಳಿದೆಲ್ಲ ಕತ್ತಲೆಯ, ನೀಲಿಯ ತೆರೆಯಲ್ಲಿ ಕಿಟಕಿ, ಕಕ್ಕಸು, ಅಡಿಗೆ ಕೋಣೆಯ
ಬಾಗಿಲು, ವೆಂಟಿಲೇಟರಿನ ಗಾಜು ಬಡಬಡ ಬಡಿದಂತಾಗಿ, ಕೋಣೆಯೆಲ್ಲ ಖಾಲಿಯಾದಂತಾಗಿ, ಉಸಿರು ಕಟ್ಟಿದಂತಾಗಿ ಗಕ್ಕನೆ ಕಣ್ಣು ತೆರೆದ. ಗಾಳಿ ಸೊಯ್ಯನೆ ಬೀಸಿ ಹಸಿ ತರಕಾರಿಯ ವಾಸನೆಯನ್ನು ಎರಚಿದಂತೆ. ಟಾನಿಕ್ಕು, ಮಾತ್ರೆ ಅಣಕಿಸಿದಂತೆ. ಕಣ್ಣು ಬಿಚ್ಚಿದರೆ ಚುಚ್ಚಿದಂತೆ, ಜಗಳವಾಡಿದರೆ ಮಂಜಿಗಿಂತಲೂ ತಣ್ಣಗಾಗಿ ಇದ್ದುಬಿಡುವಂತೆ. ನೀವು ಎಂದಂತೆ.
ವಿಸ್ಕಿ ಹೆಚ್ಚಾಯಿತೋ ಏನೋ, ಹೊಟ್ಟೆ ತೊಳಸಿದಂತಾಗುತ್ತಿದೆ ಎಂದುಕೊಂಡ. ಬಿಕ್ಕನ ಹಾಗೆ ವಾಂತಿಯಾಗಿಬಿಡಬಹುದು. ಕೂತಲ್ಲಿಂದ ಏಳದೆ, ಕಣ್ಣು ಮುಚ್ಚಿ, ಬಿಚ್ಚಿ, ಮುಚ್ಚಿ, ಬಿಚ್ಚಿ-ಸಾಯಲಿಲ್ಲ ಎಂದುಕೊಂಡ. ಸತ್ತರೂ ಸತ್ಯ. ಅರ್ಥವಾಗದ ಅವಳು ಸತ್ತು ಬದುಕಿದಳೆ, ಬದುಕಿದ್ದಾಗ ಸತ್ತಳೆ, ಗೊಂದಲದಲ್ಲಿ ಮುಚ್ಚಿ ರೊಯ್ಯನೆ ತಲೆ ಬೀಸಿದಾಗ–ಬಿಚ್ಚಿ, ಇನ್ನೊಂದು ಕ್ಷಣಕ್ಕೆ ತಾನು ನೆಲದ ಮೇಲೆ ಬೋರಲಾಗಿ ಬೀಳಬಹುದು ಎಂದು ಯೋಚಿಸಿದ.
ಮೈತುಂಬ ಹೊದಕಲು ಹೊದೆಸಲು ಬಗ್ಗಿದಾಗ ಗಾಳಿಗೆ ಅವಳ ತಲೆಕೂದಲು ಹಾರಾಡಿತು. ಥಟ್ಟನೆ ಕುರ್ಚಿಯಲ್ಲಿ ನೇರವಾಗಿ ಕೂತ, ಉಸಿರು ಹತೋಟಿ ತಪ್ಪಿದಂತಾಗಿತ್ತು.
ಮೊದಲ ಬಾರಿಗೆ ಕಾಣಿಸಿದ ಭೀತಿಯ ಅರಿವಿನಲ್ಲಿ, ಈ ಮನೆ ಬರಿ ಹಸೀ ತರಕಾರಿ ಸಾಂಬಾರು ಪದಾರ್ಥ, ಟಾನಿಕ್ಕು ವಾಸನೆ ಎನ್ನುವ ಅನಿಸಿಕೆಯಲ್ಲಿ ಶಾರದ ಮೊದಲಿನಂತೆಯೇ ಈ ಎಲ್ಲ ವಾಸನೆಯ ಒಟ್ಟು ಮೊತ್ತ ಎಂಬ ಯೋಚನೆಯಲ್ಲಿ, ಹೆಪ್ಪುಗಟ್ಟಿದ ಮನಸ್ಸಿನಾಳದಲ್ಲಿ ಬೆಂಕಿಯುಂಡೆಯಾಗುತ್ತಿದ್ದಾಳೆನ್ನುವ ಅನ್ನಿಸಿಕೆಯಲ್ಲಿ ಅವನು ಸಣ್ಣಗೆ ನಡುಗಿದ.
ಕಿವಿಯ ಹತ್ತಿರ ಎಲ್ಲೋ ಎದ್ದು, ಹನಿ ಹನಿಯಾಗಿ ಕುತ್ತಿಗೆಗೆ ಇಳಿಯುವ ಬೆವರು. ಕುರ್ಚಿಯಿಂದ ಮಿಸುಕಲಾಗದೆ ದೇಹ ಅಪಾರ ಭಾರ. ಶಾರದೆಯ ಜತೆ ಸಂವಾದ, ಸಂಭೋಗ, ಕೂಡಿಕೊಳ್ಳುವ ಕಡಿದುಕೊಳ್ಳುವ ಕ್ರಿಯೆ.
ತುಂಬಿದ ದೇಹ ವಸ್ತ್ರ, ಬಿಚ್ಚಿಕೊಂಡಂತೆ ಬತ್ತಲೆಯ ಮೊಲೆಯ ಮೇಲೆ ಮೃದುವಾಗಿ ಉಗುರಿನಿಂದ ಉಂಗುರ ಬರೆದು, ಬೆನ್ನಿನಿಂದ ಬೆನ್ನು ಹುರಿಯ ಕೆಳಮಣಿಯವರೆಗೂ
ಬೆರಳಾಡಿಸಿ, ನವಿರು ನವಿರೆಬ್ಬಿಸಿ, ಉಸಿರು ಕಟ್ಟುವ ಹಿತದ ವೇದನೆಯಲ್ಲಿ ಉಬ್ಬಿದ ಗರ್ವವನ್ನು ತನ್ನಲ್ಲಿ ಅಡಗಿಸಿಕೊಂಡ ಕ್ಷಣದಲ್ಲೇ ತಟ್ಟನೆ ಕಳಚಿಕೊಂಡು, ದಿಂಬಿನಲ್ಲಿ ಮುಖ ಹುಗಿದು ಬಿಕ್ಕಿ ಬಿಕ್ಕಿ ಅಳು. ಅತೃಪ್ತಿ, ಅಸಮಾಧಾನದ ಕಿಡಿ ಸಿಡಿಯುವ ಮೊದಲೇ ಆರಿ ತಣ್ಣಗಾದ. ರಕ್ತ ಮತ್ತೆ ನಿಧಾನವಾಗಿ ಹರಿಯಿತು.
ಯಾಕೆ ? ಎಂದಳು. ನಾನು ಯೋಚಿಸಿದ್ದು ಈ ತರ ಅಲ್ಲ ಎಂದಳು. ಎಷ್ಟು ದೂರ, ದೂರ ಎಂದಳು. ನನಗೆ ಅರ್ಥವಾಗುವುದಿಲ್ಲ ಎಂದಳು. ಕಳಚಿಬಿದ್ದ ಬಟ್ಟೆಯ ಗೋಜಿಗೂ ಹೋಗದೆ, ಮುಖ ತಿರುಗಿಸಿ
ಗಾಢನಿದ್ದೆ.
ಗಾಢನಿದ್ದೆ.

Close

ಸೃಷ್ಟಿಕ್ರಿಯೆ: ಅದರ ಮನೋವಿಜ್ಞಾನ

ಗಿರಿ

ಸೃಷ್ಟಿಕ್ರಿಯೆ : ಅದರ ಮನೋವಿಜ್ಞಾನ

ಅಭ್ಯಾಸದ ಮುಖ್ಯ ವಿಧಾನ ; ಸೃಷ್ಟಿಶೀಲರು ವಿ. ಸೃಷ್ಟಿಶೀಲರಲ್ಲದವರು

ಆಧುನಿಕ ಮನೋವಿಜ್ಞಾನ ಏನೆಲ್ಲವನ್ನು ಅಭ್ಯಾಸಕ್ಕೆ ಸಮಸ್ಯೆ ಎಂದು ಎತ್ತಿಕೊಂಡಿದೆಯೋ ಅದೆಲ್ಲವನ್ನೂ ಒಂದಲ್ಲ ಒಂದು ರೀತಿಯಲ್ಲಿ ಅಳೆಯಲು ಪ್ರಯತ್ನಿಸಿದೆ. ಹಾಗೆ ಅಳೆಯಲು, ವಸ್ತುನಿಷ್ಠವಾಗಿ ಪರೀಕ್ಷಿಸಲು ಅದು ಯಾವ ಸಮಸ್ಯೆಯೇ ಆಗಿರಲಿ ಸಾಧ್ಯವಾಗಲೇಬೇಕೆಂಬುದು ಇಲ್ಲಿಯ ಮುಖ್ಯ ನಂಬಿಗೆ. ಮನುಷ್ಯ ವರ್ತನೆಯ ಅಂಶಗಳನ್ನು ಅಳೆದು ಪರೀಕ್ಷಿಸಿ ಅದನ್ನು ಸಾಂಖಿತಗೊಳಿಸುವುದರಿಂದ ಕಲ್ಪನೆಗಳು ಸ್ಪಷ್ಟವಾಗಿ, ಅನುಮಾನಗಳನ್ನು ವೈಜ್ಞಾನಿಕ ಪದ್ಧತಿಗನುಗುಣವಾಗಿ ಪರೀಕ್ಷಿಸುವುದು ಸುಲಭವಾಗುತ್ತದೆ. ಪರೀಕ್ಷೆಗಳನ್ನು ಅನುಮಾನಗಳು ಗೆದ್ದರೆ ಸರಿಯೆಂದು ಒಪ್ಪಿಕೊಳ್ಳುವುದು, ಇಲ್ಲದಿದ್ದಲ್ಲಿ ಅವನ್ನು ತಿರಸ್ಕರಿಸುವುದು ಸಾಧ್ಯವಾಗುತ್ತದೆ. ಅಲ್ಲದೆ ಅನುಮಾನಗಳನ್ನು ಪರೀಕ್ಷಿಸುವ ಪದ್ಧತಿಗಳು ನಿರ್ದಿಷ್ಟವೂ, ಸಾರ್ವತ್ರಿಕವೂ ಆದ್ದರಿಂದ ಇಷ್ಟ ಪಟ್ಟವರು ಇನ್ನೊಬ್ಬನ ತೀರ್ಮಾನಗಳನ್ನು ಅದೇ ರೀತಿ ಪರೀಕ್ಷಿಸಿ ಖಚಿತಪಡಿಸಿಕೊಳ್ಳಬಹುದು. ಒಂದು ಸಮಸ್ಯೆಯ ಮೇಲೆ ನಿರ್ದಿಷ್ಟಪಡಿಸಿದ ಪದ್ಧತಿಗಳ ಮೂಲಕ ಮುಂದುವರಿದರೆ, ಎಲ್ಲ ವಿಜ್ಞಾನಿಗಳ ಕೊನೆಯ ತೀರ್ಪೂ ಒಂದೇ ಆಗಿರಬೇಕೆಂಬುದು ವೈಜ್ಞಾನಿಕ ಪದ್ಧತಿಯ ಗುರಿಗಳಲ್ಲೊಂದು.
ಈ ಶತಮಾನದ ಪ್ರಾರಂಭದಲ್ಲಿ ಫ್ರಾನ್ಸ್, ಅಮೆರಿಕಾ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಬುದ್ಧಿಶಕ್ತಿಯನ್ನು ಅಳೆಯುವ ಪರೀಕ್ಷೆಗಳನ್ನು ರಚಿಸಿ ಅದನ್ನು ಸಂಖ್ಯಾರೂಪದಲ್ಲಿ ವ್ಯಕ್ತಪಡಿಸಲು ಸಾಧ್ಯವಾಯಿತು. ಇದು ಮನುಷ್ಯನ ವರ್ತನೆಯ ಕೆಲವು ಅಮೂರ್ತ ಅಂಶಗಳನ್ನು ಅಂಕೆಗಳ ಮೂಲಕ ವ್ಯಕ್ತಪಡಿಸುವ ಸಾಧ್ಯತೆಯನ್ನು ಬಹಳಷ್ಟು ಹೆಚ್ಚಿಸಿತು. ಹಾಗೆಯೇ ಮುಂದೆ ವ್ಯಕ್ತಿತ್ವದ ಅಂಶಗಳನ್ನೂ ಅಳೆಯಲು ಪ್ರಶ್ನಾವಳಿಗಳನ್ನು ರಚಿಸಿ ವ್ಯಕ್ತಿಗಳನ್ನು ಕೆಲವು ಮಾದರಿಗಳಾಗಿ ವರ್ಗೀಕರಿಸುವುದು ಮತ್ತು ಮಾನಸಿಕ ಅಸ್ವಾಸ್ಥ್ಯದ ಚಿಹ್ನೆಗಳಿರುವವರನ್ನು ಬೇರ್ಪಡಿಸುವುದು ಸಾಧ್ಯವಾದಾಗ ಈ ದಿಸೆಯಲ್ಲಿ ಹೇಳಿಕೊಳ್ಳುವಂತಹ ಪ್ರಗತಿ ಕಂಡು ಬಂದಿತು. ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಔದ್ಯಮಿಕ ಕೆಲಸಗಳ ಅಭ್ಯರ್ಥಿಗಳ ಮತ್ತು ಸೇನಾಪಡೆಗಳಿಗೆ ಅಧಿಕಾರಿಗಳ ಆಯ್ಕೆಯಲ್ಲಿ ಬುದ್ಧಿ ಮತ್ತು ವ್ಯಕ್ತಿತ್ವದ ಪರೀಕ್ಷೆಗಳನ್ನೂ ಉಪಯೋಗಿಸುವುದು ಸಾಮಾನ್ಯವಾಯಿತು.
ಬುದ್ಧಿ ಶಕ್ತಿಯ ಪರೀಕ್ಷೆಗಳು ವ್ಯಕ್ತಿಗೆ ಮೂಲಭೂತವಾಗಿ ಕಲಿಯುವ ಶಕ್ತಿ ಎಷ್ಟಿದೆ ಎಂಬುದರ ಸೂಚಿಯಾಯಿತು. ಹಾಗಾಗಿ ಶಾಲೆ ಕಾಲೇಜುಗಳಲ್ಲಿ, ಸಾಂಪ್ರದಾಯಿಕವಾದ ಅರ್ಥದಲ್ಲಿ ಬುದ್ಧಿಶಕ್ತಿಯನ್ನು ಇವು ಅಳೆದರೂ ಕೆಲವು ವಿಶೇಷತರದ ಸಾಮರ್ಥ್ಯಗಳನ್ನು ಇವು ಚೆನ್ನಾಗಿ ಅಳೆಯುವುದಿಲ್ಲವೆಂಬುದು ಕ್ರಮೇಣ ಸ್ಪಷ್ಟವಾಯಿತು. ಮುಖ್ಯವಾಗಿ ನಾವು ಯಾವುದನ್ನು ಸೃಷ್ಟಿಕ್ರಿಯೆ ಎಂದು ಕರೆಯುತ್ತೇವೋ ಅದನ್ನು ಪರೀಕ್ಷಿಸಲು ಇವು ಒಳ್ಳೆಯ ಸಾಧನಗಳಲ್ಲವೆಂಬುದೂ ವಿದಿತವಾಯಿತು. ಹಾಗಾಗಿ ಸೃಜನಶೀಲತೆ, (ಸೃಷ್ಟಿಕ್ರಿಯೆ), ಅಪೂರ್ವತೆ, ಕುಶಾಗ್ರತೆ, ಕಟ್ಟುಪಾಡುಗಳನ್ನು ಮೀರಿ ಯೋಚಿಸುವಿಕೆ-ಇವುಗಳನ್ನು ಅಳೆಯಲು ಬೇರೆಯೇ ತರಹದ ಪರೀಕ್ಷೆಗಳನ್ನು ರಚಿಸಬೇಕಾಯಿತು. ಇಂತಹ ಆಸಕ್ತಿ ಮನೋವಿಜ್ಞಾನಿಗಳಲ್ಲೂ ಸ್ವಲ್ಪ ಇತ್ತೀಚಿನದೆಂದೇ ಹೇಳಬೇಕು. ಸೃಷ್ಟಿಶೀಲತೆಯ ಬಗ್ಗೆ ನಿಜವಾದ ವೈಜ್ಞಾನಿಕ ಅಭ್ಯಾಸ ಪ್ರಾರಂಭವಾದದ್ದು ಎರಡನೇ ಪ್ರಪಂಚ ಯುದ್ಧದಿಂದೀಚೆಗೇ ಸರಿ.
ಹೀಗೆ ಸೃಷ್ಟಿಕ್ರಿಯೆಯ ಅಭ್ಯಾಸಕ್ಕಾಗಿ ವಿಶೇಷ ರೀತಿಯ ಪರೀಕ್ಷೆಗಳು ಬಂದ ಹಾಗೆ ವ್ಯಕ್ತಿತ್ವವನ್ನು ಅಳೆಯುವ ಪರೀಕ್ಷೆಗಳೂ ಹೆಚ್ಚು ಸೂಕ್ಷ್ಮವಾಗಿ ಅನೇಕ ವ್ಯಕ್ತಿಗಳು ತೋರಿಸುವ ಸಾಮಾನ್ಯ ಅಂಶಗಳ ಆಧಾರದ ಮೇಲೆ ಅವರನ್ನು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪನ್ನು ಇನ್ನೊಂದು ಗುಂಪಿನೊಡನೆ ಹೋಲಿಸುವುದೂ ಸಾಮಾನ್ಯವಾಯಿತು. ಜೊತೆಗೆ ವಿಶೇಷ ಆಸಕ್ತಿ-ಅಭಿರುಚಿಗಳ ಪರೀಕ್ಷೆಗಳೂ ರಚಿತವಾಗಿ ಕಲೆ, ವಿಜ್ಞಾನ, ತಾಂತ್ರಿಕತೆ, ವೈದ್ಯಕೀಯ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಸಾಮಾನ್ಯ ವರ್ತನೆಗಳು ನಿರ್ದಿಷ್ಟವಾಗಿ, ಒಂದೊಂದೂ ಗುಂಪಿನ ಗುಣಗಳೂ ಬೆಳಕಿಗೆ ಬಂದವು.
ಸೃಜನಕ್ರಿಯೆಯ ಮತ್ತು ಸೃಜನಶೀಲರ ಅಭ್ಯಾಸದಲ್ಲಿ ಆಧುನಿಕ ಮನೋವಿಜ್ಞಾನ ಬಳಸುತ್ತಿರುವ ವಿಧಾನ ಮುಖ್ಯವಾಗಿ ಇದೇ. ಅಂದರೆ ಸೃಜನಶೀಲರು ಸೃಜನಶೀಲರಲ್ಲದವರಿಗಿಂತ ಯಾವ ಥರದಲ್ಲಿ ಬೇರೆ? ಸೃಜನಶೀಲರು ಹಾಗಲ್ಲದವರಿಗಿಂತ ಹೆಚ್ಚು ಬುದ್ಧಿವಂತರೆ? ಅವರ ವ್ಯಕ್ತಿತ್ವ ವಾಸ್ತವಿಕವಾಗಿ ಬೇರೆಯೆ? ಮಹಾಜನತೆಯಲ್ಲಿ ಕಾಣದ ಯಾವ ವಿಶೇಷ ಗುಣಗಳನ್ನು ಅವರಲ್ಲಿ ನಾವು ಕಾಣುತ್ತೇವೆ? ಆ ಎಲ್ಲ ವಿಶೇಷ ಗುಣಗಳ ಪೈಕಿ ಯಾವುದು ಮುಖ್ಯವಾಗಿ ಕ್ರಿಯೆಗೆ ಸಂಬಂಧವುಳ್ಳದ್ದು? ಎಂಬ ಇತ್ಯಾದಿ ಪ್ರಶ್ನೆಗಳನ್ನು ಉತ್ತರಿಸಲು ಮನೋವಿಜ್ಞಾನ ಪ್ರಯತ್ನಿಸಿದೆ. ಅಲ್ಲದೆ ಸೃಷ್ಟಿಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಅಂತಹ ಕೆಲಸ ಮಾಡುವವರನ್ನೇ ನೇರವಾಗಿ ಅಭ್ಯಾಸಮಾಡಬೇಕು-ಎಂಬುದೂ ಈ ವಿಧಾನದ ಮುಖ್ಯ ಲಕ್ಷಣ. ಹಾಗಾಗಿ ಇಂದಿನ ಮನೋವಿಜ್ಞಾನಿಗಳು ಬೇರೆ ಬೇರೆ ಕ್ಷೇತ್ರದಲ್ಲಿ ಅಪೂರ್ವ ಕೆಲಸ ಮಾಡಿದವರನ್ನು ತಮ್ಮ ಸಂಶೋಧನಾ ಕೇಂದ್ರಗಳಿಗೆ ಆಹ್ವಾನಿಸಿ ಅಥವಾ ಅವರಿದ್ದಲ್ಲಿಗೇ ಹೋಗಿ ಅಥವಾ ಪ್ರಶ್ನಾವಳಿಗಳನ್ನು ಅವರಿಗೇ ಕಳಿಸಿ ಅವರನ್ನು ಅಭ್ಯಸಿಸುತ್ತಿದ್ದಾರೆ. ಆದ್ದರಿಂದ ಇಂದು ನಮಗೆ ಸೃಜನಶೀಲರು ಹಾಗಲ್ಲದವರಿಗಿಂತ ಬುದ್ಧಿಶಕ್ತಿಯಲ್ಲಿ ಆಲೋಚನೆಯ ಕ್ರಮದಲ್ಲಿ, ಅನುಭವ ವೇದನ, ಗ್ರಹಣ, ತುಲನದಲ್ಲಿ, ವ್ಯಕ್ತಿತ್ವದಲ್ಲಿ ಭಾವಾವೇಶಗಳಲ್ಲಿ, ಮಾನಸಿಕ ಆರೋಗ್ಯದ ವಿಷಯದಲ್ಲಿ ಯಾವ ರೀತಿಯಲ್ಲಿ ಬೇರೆ ಎಂಬ ಬಗ್ಗೆ ಸಾಕಷ್ಟು ಗೊತ್ತಿದೆ. ಇವುಗಳಲ್ಲಿ ಕೆಲವೊಂದು ಮಹತ್ವದ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.
ಸೌಂದರ್ಯ ಪ್ರಜ್ಞೆ
ಸೌಂದರ್ಯ ಪ್ರಜ್ಞೆ ಸೃಜನಶೀಲರಲ್ಲಿ ಅವಶ್ಯಕವಾಗಿ ಕಾಣುವ ಗುಣವೆಂದು ಸಾಮಾನ್ಯ ತಿಳುವಳಿಕೆ. ಆದರೆ ಈ ಸೌಂದರ್ಯ ಪ್ರಜ್ಞೆಯ ಮುಖ್ಯ ಸ್ವರೂಪವೇನು? ಈ ಸೌಂದರ್ಯ ಪ್ರಜ್ಞೆಯನ್ನು ಕೆರಳಿಸುವಂತಹ ಪ್ರಚೋದನೆಗಳನ್ನು ಸೃಷ್ಟಿಶೀಲರಿಗೂ ಅಲ್ಲದವರಿಗೂ ಒದಗಿಸಿ ಅವರ ಪ್ರತಿಕ್ರಿಯೆಗಳಲ್ಲಿ ಕಂಡು ಬರುವ ವ್ಯತ್ಯಾಸವನ್ನು ನಂತರ ಅಂತಹ ವ್ಯತ್ಯಾಸಕ್ಕೆ ಕಾರಣವಾದ ಪ್ರಚೋದನೆಯ ಗುಣಲಕ್ಷಣಗಳನ್ನು ಅಭ್ಯಾಸ ಮಾಡಿದರು. ವಿಧವಿಧವಾದ ರೇಖಾ ಚಿತ್ರಗಳ ಸಂಕಲನ ಒಂದನ್ನು ತಯಾರಿಸಿ ಸೃಜನಶೀಲರಿಗೂ ಉಳಿದೆಲ್ಲ ವಿಷಯಗಳಲ್ಲಿ (ಅಂದರೆ ವಿದ್ಯೆ, ಬುದ್ಧಿ, ಸಾಮಾಜಿಕ ಪರಿಸ್ಥಿತಿ ಮೊದಲಾದುವುಗಳಲ್ಲಿ) ಅವರಂತೆಯೇ ಇನ್ನೂ ಸೃಷ್ಟಿ ಶೀಲರಲ್ಲದವರಿಗೆ ಅವುಗಳನ್ನು ತೋರಿಸಿ ನೀವು ಯಾವ ಚಿತ್ರಗಳನ್ನು ಇಷ್ಟಪಡುತ್ತೀರಿ ಯಾವುದನ್ನು ಇಲ್ಲ – ಎಂದು ಕೇಳಲಾಯಿತು. ಈ ಸರಳ ವಿಧಾನ ಕೆಲವು ಸ್ವಾರಸ್ಯವಾದ
ವಿಷಯಗಳನ್ನು ಹೊರಗೆಡವಿತು. ಚಿತ್ರಗಳ ಆಯ್ಕೆಯಲ್ಲಿ ಈ ಎರಡೂ ಗುಂಪು ಒಂದಕ್ಕೊಂದು ವಿರುದ್ಧವಾದವು. ಸೃಷ್ಟಿಶೀಲರು ತಿರಸ್ಕರಿಸಿದ ಚಿತ್ರಗಳನ್ನು ಸೃಷ್ಟಿ ಶೀಲರಲ್ಲವರು ಆರಿಸಿದ್ದರು. ಹಾಗೆಯೇ, ಅದರ ತದ್ವಿರುದ್ಧ ಕೂಡ. ಈ ಎರಡು ಗುಂಪು ಆರಿಸಿದ ಚಿತ್ರಗಳ ಲಕ್ಷಣಗಳು ಒಂದಕ್ಕೊಂದು ವಿರುದ್ಧವಾಗಿದ್ದವು. ಮಹಾಜನತೆ ಇಷ್ಟಪಟ್ಟ ಚಿತ್ರಗಳು ತುಂಬಾ ಸುಸಂಬದ್ಧವಾಗಿ, ಸಮತೋಲವಾಗಿ, ಭೂಮಿತಿಯ ಸರಳ ತತ್ವಗಳಿಗೆ ಬದ್ಧವಾಗಿದ್ದವು. ಅವು ತುಂಬಾ ಮುದ್ದಾಗಿ, ಚೊಕ್ಕವಾಗಿ, ಸರಳವಾಗಿದ್ದವು. ಸೃಜನಶೀಲರು ಆರಿಸಿದ ಚಿತ್ರಗಳು ಅಸಂಬದ್ಧವಾಗಿ, ಸುಲಭ ತತ್ವಗಳನ್ನೆಲ್ಲ ಧಿಕ್ಕರಿಸಿ, ಸಮತೋಲರಹಿತವಾಗಿ, ವೈಯಕ್ತಿಕ ಚಟದ-ಪ್ರತೀಕವಾಗಿದ್ದವು. ಅವು ತುಂಬಾ ಸಂಕೀರ್ಣವಾಗಿ, ರಾಡಿ ಕೂಡ ಆಗಿ, ಗೊಂದಲಗೆಟ್ಟ ಚಿತ್ರಗಳಾಗಿದ್ದವು. ಆ ಮೇಲೆ ಪ್ರಶ್ನಾವಳಿಗಳ ಮೂಲಕ ಈ ಎರಡೂ ಗುಂಪಿನವರ ವ್ಯಕ್ತಿತ್ವವನ್ನು ಪರೀಕ್ಷಿಸಿದಾಗ ಸರಳ-ಸಮತೋಲ-ಸುಂದರ ಚಿತ್ರಗಳನ್ನು ಆರಿಸಿದವರು ಸಂಪ್ರದಾಯಬದ್ಧರು, ಸುವ್ಯವಸ್ಥಿತರು, ಆಚಾರಪರರು, ಸಾಂಪ್ರದಾಯಿಕ ಸದ್ಗುಣಗಳಲ್ಲಿ ನಂಬಿಕೆ ಉಳ್ಳವರು, ಎಂದೆಂದೂ ಬದಲಾಗದ ಎರಕಹೊಯ್ದ ಗಟ್ಟಿಗಳಾಗಿ ಕಂಡುಬಂದರು. ಅದರ ವಿರುದ್ಧವಾಗಿ ಸಂಕೀರ್ಣ – ಅಸಮತೋಲ – ಗೊಂದಲಮಯ ಚಿತ್ರಗಳನ್ನು ಆರಿಸಿದವರು ಆಚಾರ ವಿರೋಧಿಗಳೂ, ಅಪೂರ್ವತೆಯುಳ್ಳವರೂ, ಸಂಪ್ರದಾಯ ವಿರೋಧಿಗಳೂ, ತೀವ್ರಗಾಮಿಗಳೂ, ತಿರುಗಿ ಬಿದ್ದವರೂ ಆಗಿದ್ದರು. ಎಲ್ಲ ಶ್ರೇಷ್ಠ ಸಾಹಿತಿಗಳು, ಕವಿಗಳು, ಕಲಾವಿದರು ಹಾಗೂ ವಿಜ್ಞಾನಿಗಳು ಸಂಕೀರ್ಣ-ಅಸಮತೋಲ ಚಿತ್ರಗಳನ್ನೇ ಇಷ್ಟಪಟ್ಟಿದ್ದರು. ಒಬ್ಬ ವ್ಯಕ್ತಿಯ ಬಗ್ಗೆ ಏನೊಂದೂ ಗೊತ್ತಿಲ್ಲದಿದ್ದರೂ ಈ ಪರೀಕ್ಷೆಯಲ್ಲಿ ಅವನ ಆಯ್ಕೆಯೊಂದರ ಆಧಾರದ ಮೇಲೆ ಆತ ಸೃಷ್ಟಿ ಶೀಲನೋ ಅಲ್ಲವೋ ಎಂದು ಹೇಳುವುದು ಸಾಧ್ಯವಾಗುವಷ್ಟರ ಮಟ್ಟಿಗೆ ಈ ಪರೀಕ್ಷೆ ಖರೆಯಾಗಿತ್ತು. ಆ ಮೇಲಿನ ಅಭ್ಯಾಸಗಳು ಸಂಕೀರ್ಣ ಸೌಂದಯ್ಯ ಪ್ರಜ್ಞೆಯುಳ್ಳವರು ಶೀಘ್ರಮನಸ್ಕರೂ, ಕೊಂಚ ದುಡುಕು ಪ್ರವೃತ್ತಿಯವರೂ, ಭಾಷೆಯ ಮೇಲೆ ಒಳ್ಳೆಯ ಹಿಡಿತವುಳ್ಳವರೂ, ಅನೇಕ ವಿಷಯಗಳಲ್ಲಿ ಆಸಕ್ತಿ ತೋರಿಸಬಲ್ಲವರೂ- ಎಂಬುದನ್ನು ಸ್ಪಷ್ಟಪಡಿಸಿವೆ.
ವಿಚಾರ ವಿಶಿಷ್ಟತೆ, ಅಪೂರ್ವತೆ
ಹಲವು ಬಾರಿ ಸೃಷ್ಟಿಶೀಲರ ವಿಚಾರ ವೈಶಿಷ್ಟ್ಯ ವ್ಯಕ್ತವಾಗುವುದು ಅವರು ಸಾಮಾಜಿಕ ಒತ್ತಡಗಳಿಂದ ತಪ್ಪಿಸಿಕೊಳ್ಳುವ ರೀತಿಯಲ್ಲಿ. ಅವರ ವಿಚಾರಧಾರೆ ಸಾಮಾನ್ಯವಾಗಿ ಬಹುಜನಾಭಿಪ್ರಾಯಕ್ಕೆ ವಿರೋಧವಾಗಿರುತ್ತದೆ. ಸಾಮಾಜಿಕ ಅಭಿಪ್ರಾಯಗಳು
ಒಮ್ಮತವಾಗಿರುವಾಗಲೂ ಇವರು ಭಿನ್ನವಾಗಿ ಯೋಚಿಸುತ್ತಾರೆ. ಸೃಷ್ಟಿಶೀಲರು ಮುಖ್ಯವಾಗಿ ದೇಶ, ಶಿಸ್ತು, ಅಧಿಕಾರ, ರಾಜಕೀಯ ಸಮಸ್ಯೆಗಳ ಮೇಲೆ ಅಸಾಮಾನ್ಯ ಶಿಚಾರಗಳನ್ನು ಹೊಂದಿರುವುದು ಕಂಡುಬಂದಿದೆ. ಕೆಲವೊಂದು ಪ್ರಾಯೋಗಿಕ ಸನ್ನಿವೇಶಗಳನ್ನು ರಚಿಸಿ ಸೃಷ್ಟಿಶೀಲರು ಕೆಲವರನ್ನು ಬಹುಜನರ ಮಧ್ಯೆ ಬಿಟ್ಟು ನೋಡಿದರು. ಈ ಬಹುಜನರು ಬೇಕೆಂದೇ ಕೆಲವು ಸಮಸ್ಯೆಗಳಿಗೆ ಒಮ್ಮತವಾದ ಉತ್ತರವನ್ನು ಕೊಡುವುದರ ಮೂಲಕ ಸೃಷ್ಟಿಶೀಲರ ಮೇಲೆ ಸಾಮಾಜಿಕ ಒತ್ತಡವನ್ನು ಹೇರಲು ಪ್ರಯತ್ನಿಸಿದರು. ಅಂತಹ ಸನ್ನಿವೇಶಗಳಲ್ಲಿ ಕೂಡ ಸುತ್ತಮುತ್ತಲಿನವರೆಲ್ಲ ಒಂದೇ ದನಿಯಲ್ಲಿ (ಹಲವು ಬಾರಿ ತಪ್ಪು)ಉತ್ತರ ಕೊಡುತ್ತಿರುವಾಗಲೂ ಸೃಜನಶೀಲರು (ಹಲವು ಬಾರಿ ಸರಿಯಾದ)ಉತ್ತರ ಕೊಡುವಷ್ಟರ ಮಟ್ಟಿಗೆ ವಿಚಾರ ವಿಶಿಷ್ಟತೆಯನ್ನು ಪ್ರದರ್ಶಿಸಬಲ್ಲವರಾಗಿದ್ದರು.
ಸೃಷ್ಟಿಶೀಲರು ಹೀಗೆ ಸಾಮಾಜಿಕ ಧೋರಣೆಗಳ ಒತ್ತಡದಿಂದ ತಪ್ಪಿಸಿಕೊಂಡು ಬಲು ಅಪೂರ್ವವಾದ ರೀತಿಯಲ್ಲಿ ವರ್ತಿಸುವುದು ಸೃಷ್ಟಿಶೀಲರ ಮತ್ತು ಅವರ ಸುತ್ತಲಿನ ಸಮೂಹ-ಸಮಾಜದ ಸಂಬಂಧ ಸರಳವಾದದ್ದಲ್ಲವೆಂಬುದನ್ನು ತೋರಿಸುತ್ತದೆ. ಪ್ರಮುಖವಾದ ಸಮಸ್ಯೆಗಳ ಬಗ್ಗೆ ಕೂಡ ಸೃಷ್ಟಿಶೀಲರು ಸಮಾಜಾಭಿಪ್ರಾಯಕ್ಕೆ ಸಂಸ್ಕೃತಿಯ ಧೋರಣೆಗಳಿಗೆ ವಿರುದ್ಧ ಹೋಗುವುದು ಬೌದ್ಧಿಕ ವಿಶಿಷ್ಟತೆಯ ಜೊತೆಗೆ ಅವರಿಗೂ ಸಮಾಜಕ್ಕೂ ಸದಾ ಇರಬಹುದಾದ ಘರ್ಷಣೆಯನ್ನು ಸೂಚಿಸುತ್ತದೆ. ಇವರು ಅನೇಕ ಪರಿಸ್ಥಿತಿಗಳಲ್ಲಿ ಸಾಮಾನ್ಯ ಜನರ ಆಸೆ-ಆಕಾಂಕ್ಷೆ, ಆಚಾರ-ವಿಚಾರ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ತಿರಸ್ಕರಿಸುವಂತಹ ಸೂಚನೆಗಳನ್ನು ತೋರುತ್ತಾರೆ. ಶ್ರೇಷ್ಠ ಸೃಷ್ಟಿಶೀಲರನೇಕರು ತಮ್ಮ ಸಮಾಜವನ್ನು, ಹಲವೊಮ್ಮೆ ಅದರ ಮೂಲಭೂತ ತತ್ವಗಳನ್ನು ಕೂಡ ಕಟುವಾಗಿ ವಿಮರ್ಶಿಸುವುದನ್ನು ನಾವು ಗಮನಿಸಬಹುದು. ಸರಿಯಾದ ವ್ಯಕ್ತಿಯಲ್ಲಿ ಇದು ಒಬ್ಬ ಸಂಪ್ರದಾಯ, ಬಹುಮತವಾದಿಗಿರುವ ಸಾಮಾಜಿಕ-ಸಾಂಸ್ಕೃತಿಕ ಅರಿವು, ತಿಳುವಳಿಕೆಗಿಂತ ಸೂಕ್ಷ್ಮವಾದ ಜ್ಞಾನವನ್ನು ಸೂಚಿಸುತ್ತದೆ.
ಈ ವಿಶಿಷ್ಟತೆ ಮತ್ತು ಅಪೂರ್ವತೆಗೆ ಬಲು ಮುಖ್ಯ ಪರಿಸ್ಥಿತಿ ಎಲ್ಲ ತರದ ಆದರೆ ಮುಖ್ಯವಾಗಿ ಸಾಮಾಜಿಕ ಹಾಗೂ ಹಲವೊಮ್ಮೆ ಮತೀಯ ಕಟ್ಟುಪಾಡುಗಳಿಂದ ಸ್ವಾತಂತ್ರ್ಯ ಪಡೆಯುವುದೇ ಮಾನಸಿಕ ಸ್ವಾತಂತ್ರ ಸೃಷ್ಟಿಶೀಲರಲ್ಲಿ ಸಾರ್ಥಕವಾದಷ್ಟು ಬಹುಶಃ ಇನ್ನೂ ಯಾವ ವರ್ಗದಲ್ಲೂ ಆಗಿರುವುದು ಕಂಡುಬಂದಿಲ್ಲ. ಒಂದು ಸಂಸ್ಕೃತಿಯ ಅತ್ಯುನ್ನತ ಕಟ್ಟುಪಾಡುಗಳು ಕೂಡ ಸೃಷ್ಟಿಶೀಲರಿಗೆ ಅರ್ಥಹೀನವಾಗಿ ಕಾಣುವ ಸಂಭವವುಂಟು.

ಸೃಷ್ಟಿಶೀಲರ ವ್ಯಕ್ತಿತ್ವ

ಸೃಷ್ಟಿಶೀಲರನ್ನು ಅಭ್ಯಾಸಮಾಡುವ ವಿಧಾನಗಳಲ್ಲಿ ಮೂರು ಮುಖ್ಯವಾದವು. ಮೊದಲಿನ ಅಭ್ಯಾಸಗಳು ಹಿಂದಿನ ವಿಜ್ಞಾನಿಗಳ, ಕಲಾವಿದರ ಜೀವನ ಚರಿತ್ರೆಯನ್ನು ಓದಿ, ಅವರು ಯಾವ ತರದ ವ್ಯಕ್ತಿಗಳಾಗಿದ್ದರೆಂದು ತೀರ್ಮಾನಿಸಿರುವುದು ಒಂದು. ಎರಡನೆಯದು, ಸಂಸ್ಥೆಯೊಂದಕ್ಕೆ ಸೃಷ್ಟಿಶೀಲರನ್ನು ಆಹ್ವಾನಿಸಿ ಅಲ್ಲಿ ಮೂರು ದಿವಸ ಅವರು ಇರುವಂತೆ ಕೇಳಿಕೊಂಡು, ಅವರ ವರ್ತನೆಯನ್ನು ಅನುಭವಸ್ಥ ಮನೋವಿಜ್ಞಾನಿಗಳು ಅವಲೋಕಿಸಿ ಸೃಷ್ಟಿಶೀಲರ ವ್ಯಕ್ತಿತ್ವವನ್ನು ವದ್ಧಿಸಲು ಪ್ರಯತ್ನಿಸಿರುವುದು. ಮೂರನೆಯದು, ಬುದ್ಧಿಶಕ್ತಿಯ ಮತ್ತು ವ್ಯಕ್ತಿತ್ವದ ಪರೀಕ್ಷೆಗಳನ್ನು ಅವರಿಗೆ ಕೊಟ್ಟು
ವಸ್ತುನಿಷ್ಠ ಅಂಶಗಳನ್ನು ಪಡೆದು ವ್ಯಕ್ತಿತ್ವವನ್ನು ವರ್ಣಿಸುವುದು. ಈ ಮೂರು ಮುಖ್ಯ ವಿಧಾನದಿಂದ ಗೊತ್ತಾಗಿರುವಂತೆ ಸೃಷ್ಟಿಶೀಲರ ವ್ಯಕ್ತಿತ್ವವನ್ನು ಕೆಲವು ಶಬ್ದಗಳಲ್ಲಿ ವರ್ಣಿಸಬಹುದು.
ಕಲೆ, ಸಾಹಿತ್ಯ, ವಿಜ್ಞಾನ ಎಲ್ಲ ಕ್ಷೇತ್ರಗಳಲ್ಲೂ ಅಪೂರ್ವ ಕೆಲಸ ಮಾಡಿದವರು ಮೂಲತಃ ಅಂತರ್ಮುಖಿಗಳು. ಅಂದರೆ ಅವರು ಹೆಚ್ಚಾಗಿ ಏಕಾಂತವನ್ನು ಬಯಸುವವರು. ಸುಲಭವಾಗಿ ಏನನ್ನೂ ನಂಬದವರು. ಆಂತರಿಕವಾಗಿ ನಿಮಗ್ನರು, ವಿಮರ್ಶಾತ್ಮಕರು. ಈ ಅಂತರ್ಮುಖತೆಯ ಅರ್ಥ ಸಾಮಾಜಿಕ ಕಾಳಜಿಗಳಿಂದ ದೂರವಿರುವುದೆಂದಲ್ಲ. ಅಂತರ್ಮುಖಿಗಳು ಒಳ್ಳೆಯ ವ್ಯಾಪಾರಿಗಳು, ವ್ಯಾಪಾರೀ ಏಜಂಟರಾಗಲಾರರೇ ಹೊರತು ಸಾಮಾಜಿಕ ಚಟುವಟಿಕೆಗಳಲ್ಲಿ ಹಿಂದೆಗೆಯುತ್ತಾರೆಂದೇನೂ ಇಲ್ಲ. ಇಷ್ಟಪಟ್ಟರೆ ಇವರು ಮುಂದಾಳುಗಳು ಕೂಡ ಆಗಬಲ್ಲರು. ವಾಸ್ತವವಾಗಿ ಸೃಷ್ಟಿಶೀಲರು ವೈಯ್ಯಕ್ತಿಕ ಮತ್ತು ಸಾಮಾಜಿಕ ವ್ಯವಹಾರಗಳಲ್ಲಿ ಬಲು ಪ್ರಧಾನ ಪಾತ್ರವಹಿಸುವವರೇ ಸರಿ. ಸೃಷ್ಟಿಶೀಲರ ಅಂತರ‍್ಮುಖತೆ ಮಾನಸಿಕ ಉದ್ದೀಪನತೆಯನ್ನು ಸೂಚಿಸುತ್ತದೆ. ಬಹಿರ್ಮುಖ ವ್ಯಕ್ತಿಗಿಂತ ಅಂತರ್ಮುಖ ವ್ಯಕ್ತಿ ಮನಸ್ಸನ್ನು ಸಮಸ್ಯೆಗಳ ಮೇಲೆ ತೀಕ್ಷ್ಣವಾಗಿ ಉಪಯೋಗಿಸಬಲ್ಲ ; ಬಹುದೀರ್ಘಕಾಲದ ವರೆಗೆ ಮಾನಸಿಕ ಉದ್ದೀಪನತೆಯನ್ನು ಉಳಿಸಿಕೊಳ್ಳಬಲ್ಲ.
ಸೃಷ್ಟಿಶೀಲರು ಹೆಚ್ಚು ಸ್ವಾವಲಂಬಿಗಳು. ವಾತಾವರಣದ ಮೇಲಾಗಲಿ, ಇತರ ವ್ಯಕ್ತಿದ ಮೇಲಾಗಲಿ ಯಾವ ಕಾರಣಕ್ಕಾಗಿಯೂ ಇವರು ಹೆಚ್ಚು ಅವಲಂಬಿಗಳಾಗಿರಲು ಇಷ್ಟ ಪಡುವುದಿಲ್ಲ. ವರ್ತನೆಯಲ್ಲಿ ಅಪಾರವಾದ ಹತೋಟಿ, ಹಿಡಿತವನ್ನು ತೋರುವವರಾದರೂ ಭಾವಗಳನ್ನು ನುಂಗಿ ಹತ್ತಿಕ್ಕಿಕೊಳ್ಳುವುದನ್ನು ಇಷ್ಟ ಪಡುವುದಿಲ್ಲ.
ಸೃಷ್ಟಿಶೀಲರು ಬೌದ್ಧಿಕ ಹಾಗೂ ವೈಚಾರಿಕ ಮೌಲ್ಯಗಳ ಬಗ್ಗೆ ಹೆಚ್ಚು ಕಾಳಜಿ ವ್ಯಕ್ತಪಡಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಸ್ವಂತದ ಸ್ವಾತಂತ್ರಕ್ಕೆ, ವೈಯಕ್ತಿಕತೆಗೆ ಬೆಲೆ ಕೊಡುತ್ತಾರೆ. ಈ ಸ್ವಂತದ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದರೆ ತುಂಬಾ ಬೇಗ ತಿರುಗಿ ಬೀಳುತ್ತಾರೆ.
ಇವರು ಅತಿ ಮೇಲ್ದರ್ಜೆಯ ಬೌದ್ಧಿಕ ಶಕ್ತಿಯನ್ನು ಪ್ರದರ್ಶಿಸುತ್ತಾರೆ. ಒಳ್ಳೆಯ ಭಾಷಾಶಕ್ತಿ ಇದ್ದು ಮಾತಿನಲ್ಲಿ ಚುರುಕಾಗಿ, ತಮ್ಮ ವಿಚಾರಗಳನ್ನು ಗೋಜಿಲ್ಲದೆ ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ಸೌಂದರ್ಯ ಪ್ರಜ್ಞೆ ತೀಕ್ಷ್ಮವಾಗಿ ಆ ದೃಷ್ಟಿಯಿಂದ ಪ್ರತಿಕ್ರಿಯೆಯನ್ನು ಪದೇ ಪದೇ ವ್ಯಕ್ತಪಡಿಸುತ್ತಾರೆ. ಸೃಷ್ಟಿಶೀಲರು ತಾತ್ವಿಕ ಮೌಲ್ಯಗಳಲ್ಲಿ ಆಸಕ್ತರು-ಜೀವನದ ಅಸ್ತಿತ್ವ, ಮೌಲ್ಯ, ಅರ್ಥ, ಸಾರ್ಥಕತೆ ಇತ್ಯಾದಿ ಮತ್ತು ಇಂತಹ ಪ್ರಶ್ನೆಗಳ ಬಗ್ಗೆ ಚಿಂತಕರು. ಆದರೆ ವಿಚಿತ್ರವೆಂದರೆ, ಹಾಗಿದ್ದೂ ಕೂಡ ಜೀವನದಲ್ಲಿ ಉನ್ನತವಾದ ಆಕಾಂಕ್ಷೆಗಳುಳ್ಳವರು ; ಬಲು ಸ್ಪಷ್ಟವಾದ ಲೌಕಿಕ ಉದ್ದೇಶಗಳನ್ನಿಟ್ಟುಕೊಳ್ಳುವವರು ; ಬಲು ತೀವ್ರವಾದ ಆಸೆ, ಒತ್ತರ, ಘರ್ಷಣೆಗಳಿಂದ ಕೂಡಿರುವವರು. ಜೊತೆಗೆ ಅಂತಹ ಒತ್ತರಗಳಿಗೆ ತಕ್ಕ ಮನಃಶಕ್ತಿಯನ್ನು ಕೂಡ ಪ್ರದರ್ಶಿಸುವವರು. ಈ ತೀವ್ರ ಹಾಗೂ ಉನ್ನತ ಆಕಾಂಕ್ಷೆಗಳ ದೆಸೆಯಿಂದ ಮಹಾ ಜನತೆಗಿಂತ ಹೆಚ್ಚು ಉದ್ವೇಗ ಮತ್ತು ಮಾನಸಿಕ ಘರ್ಷಣೆಗಳಿಂದ ಕೂಡಿರುವವರು.
ಸೃಷ್ಟಿಶೀಲರು ಅನೇಕ ವಿಷಯಗಳ ಬಗ್ಗೆ ಒಳ್ಳೆಯ ಆಸಕ್ತಿ, ಅಭಿರುಚಿ ತೋರಿಸಬಲ್ಲರು. ಸಾಮಾನ್ಯವಾಗಿ ಒಟ್ಟಿಗೆ ಹೋಗದ ವಿಚಾರಗಳನ್ನು ಜೊತೆಗೂಡಿಸುತ್ತಾ, ಸಂಪ್ರದಾಯಕ್ಕೆ ವಿರುದ್ಧವಾದ ರೀತಿಯಲ್ಲಿ ಯೋಚಿಸಬಲ್ಲರು. ಈ ಸೃಷ್ಟಿಶೀಲರು ನೋಡಿದರೆ ಥಟ್ಟನೆ ಒಂದಲ್ಲ ಒಂದು ರೀತಿಯಲ್ಲಿ ಗಮನ ಸೆಳೆಯುವ ವ್ಯಕ್ತಿಗಳು. ನೇರವಾಗಿ, ಫಟ್ಟನೆ ಚುರುಕಾಗಿ ಮಾತನಾಡಬಲ್ಲವರು ; ಆದ್ದರಿಂದ ಹೆಚ್ಚು ಪಾಲು ಪ್ರಾಮಾಣಿಕರು ; ಅಂತೆಯೇ ಕೊಂಚ ದುಡುಕು ಪ್ರವೃತ್ತಿಯವರು ; ಭಾವವನ್ನು
ಹತ್ತಿಕ್ಕಿಕೊಳ್ಳಲಾರದವರು ; ಇದಕ್ಕೆಲ್ಲ ಶಿಖರಪ್ರಾಯವಾಗಿ ಸೃಷ್ಟಿಶೀಲರು ಹಾಗಲ್ಲದವರಿಗಿಂತ ಹೆಚ್ಚು ಭಾವುಕರು !
ಇನ್ನೊಬ್ಬರಿಂದ ಕೆಲಸ ತೆಗೆಯುವುದರಲ್ಲೂ ಸೃಷ್ಟಿಶೀಲರು ಗಟ್ಟಿಗರೇ. ಬೇರೆಯವರೆದುರು ಇವರು ತುಂಬಾ ದೃಢವಾಗಿ ವರ್ತಿಸುವವರು ; ಸುಲಭವಾಗಿ ಯಾರೊಬ್ಬರ ಅನುಯಾಯಿಗಳೂ ಆಗದವರು ; ಕಷ್ಟ ಪಟ್ಟರೆ ತಾನೇ ಮುಂದಾಳಾಗ ಬಲ್ಲರು. ಇವರು ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳ ಮೇಲೆ ಬಲು ಖಚಿತವಾದ ಅಭಿಪ್ರಾಯ ಹೊಂದಿರುವವರು ಹಾಗಿಟ್ಟುಕೊಂಡ ಅಭಿಪ್ರಾಯಗಳನ್ನು ಅಷ್ಟೇ ಸ್ಪಷ್ಟವಾಗಿ ಹೇಳಿಕೊಳ್ಳುವವರು ಕೂಡಾ ಹೌದು. ಹೆಚ್ಚು ಕಡಿಮೆ ಎಲ್ಲ ಕಡೆ ತಮ್ಮನ್ನು ತಾವು ಗಟ್ಟಿಯಾಗಿ ಸಮರ್ಥಿಸಿಕೊಳ್ಳುವವರು ; ಕೆಲವು ವೇಳೆ ಇದು ಸ್ವಪ್ರದರ್ಶನದ ಮಟ್ಟಕ್ಕೂ
ಹೋಗಬಹುದು. ಏಕೆಂದರೆ ಸೃಷ್ಟಿಶೀಲರು ಎಂದೂ ಅಲಕ್ಷ್ಯಕ್ಕೆ ಗುರಿಯಾಗಲಾರರು. ಹತ್ತು ಜನರ ದೃಷ್ಟಿ ಕೇಂದ್ರವಾಗಲು ಸಾಕಷ್ಟು ಪ್ರಯತ್ನಿಸುವುದು ಸಾಮಾನ್ಯ (ನಟನ ವೃತ್ತಿಯನ್ನು ಸೃಷ್ಟಿಶೀಲರು ತುಂಬಾ ಇಷ್ಟ ಪಡುತ್ತಾರೆ.) ತಮ್ಮ ವೈಶಿಷ್ಟ್ಯದ ಬಗ್ಗೆ ತುಂಬಾ ಜಾಗೃತರು. ಅಭಿಮಾನಿಗಳು, ಅನೇಕ ವೇಳೆ ಸ್ವ-ಕೇಂದ್ರೀಕೃತರು. ತಮ್ಮ ಸಾಮರ್ಥ್ಯದ ಬಗ್ಗೆ ತುಂಬಾ ಯೋಚಿಸುವವರು ; ಬಲು ಸಾರಿ “ತಮ್ಮದೇ ಆದ ವಿಚಾರಗಳಲ್ಲಿ ಮುಳುಗಿ ಹೋಗುವವರು. ತಾವು ಸರಿಯೆಂದು ಸಮರ್ಥಿಸಿಕೊಳ್ಳುವ ಅವಶ್ಯಕತೆಯನ್ನು ಹೆಚ್ಚಾಗಿ ಅನುಭವಿಸುವವರು. ಅದೇ ವೇಳೆಗೆ, ಅಷ್ಟೇ ಮಟ್ಟಿಗೆ, ಸೃಷ್ಟಿಶೀಲರು ತಮ್ಮ ಅನೇಕ ದೌರ್ಬಲ್ಯಗಳ ಬಗ್ಗೆ ಕಷ್ಟ ತಾಪತ್ರಯಗಳ ಬಗ್ಗೆ ಗುಟ್ಟು ಸಂಕೋಚವಿಲ್ಲದೆ ಬಿಚ್ಚುಮನಸ್ಸಿನಿಂದ ಮಾತನಾಡುವವರು ; ಯಾವಾಗಲೂ ತಾವು ಸತ್ಯವನ್ನೇ ಹೇಳುವುದಿಲ್ಲವೆಂಬುದನ್ನು ಒದ್ದಾಡದೇ ಒಪ್ಪಿಕೊಳ್ಳುವವರು ! ತಮ್ಮ ದೌರ್ಬಲ್ಯಗಳ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸಬಲ್ಲವರು ; ಆತ್ಮ ವಿಮರ್ಶೆಯುಳ್ಳವರು.
ಇದಿಷ್ಟು ಸೃಷ್ಟಿಶೀಲರು ಯಾವ ಥರ ಎಂದಾಯಿತು. ಅವರು ಯಾವ ಥರ ಅಲ್ಲ? “ಪ್ರತಿಯೊಂದು ಕೆಲಸ ಮಾಡಲೂ ಒಂದೊಂದು ಕ್ರಮವಿದೆ” ಎಂಬುದನ್ನು ಸೃಷ್ಟಿ ಶೀಲರು ಒಪ್ಪಿಕೊಳ್ಳುವುದಿಲ್ಲ. ಜನಪ್ರಿಯತೆ ಮತ್ತು ಸಾಮಾಜಿಕ ಒತ್ತಡಗಳು ಇವರಿಗೆ ಹೆಚ್ಚು ಅರ್ಥಪೂರ್ಣವಲ್ಲ. ಇದಕ್ಕಿಂತ ಮುಖ್ಯವಾಗಿ, ನಿಜವಾದ ಸೃಷ್ಟಿಶೀಲರನ್ನು ತೀರ ಸಾಂಪ್ರದಾಯಿಕ ಅರ್ಥದಲ್ಲಿ ನೈತಿಕರೆಂದು ಕರೆಯುವುದು ಸಾಧ್ಯವಿಲ್ಲ. ಅಂದರೆ ಸೃಷ್ಟಿಶೀಲರು ಸರಿತಪ್ಪು, ನೈತಿಕ, ಅನೈತಿಕವೆಂದು ವರ್ಗೀಕರಿಸುವುದು ಜನ ಸಾಮಾನ್ಯರ ಕಲ್ಪನೆಗಳಿಗೆ ವಿರೋಧವಾಗಿರುವುದು ಸಾಧ್ಯವಿದೆ.(ಉದಾ : ಕುಡಿತಕ್ಕಿಂತ ಹೇಡಿತನ ಅನೈತಿಕ ವರ್ತನೆ ಎಂದು ಸೃಷ್ಟಿಶೀಲರು ಭಾವಿಸಬಹುದು.) ತಮ್ಮ ಸಂಸ್ಕೃತಿಯ ಎಲ್ಲ ಅಂಶಗಳನ್ನೂ ಕಷ್ಟಪಟ್ಟು ಉಳಿಸಿಕೊಳ್ಳಲೇಬೇಕೆಂಬ ಸ್ಪಷ್ಟ ಧೋರಣೆಯನ್ನೇನೂ ಇವರು ತಳೆಯುವುದಿಲ್ಲ. ತೀವ್ರವಾದ ಬದಲಾವಣೆಗಳನ್ನು ಇಷ್ಟಪಡುತ್ತಾರೆ.
ಸೃಷ್ಟಿಶೀಲರು ತೀರ ಸಾಮಾನ್ಯವಾದ ಕೊರಕಲುಬಿದ್ದ ಸದ್ಗುಣಗಳ ಬಗ್ಗೆ ತುಂಬಾ ಉತ್ಸಾಹಿಗಳಲ್ಲ; ಅವುಗಳಲ್ಲಿ ಅವರಿಗೆ ಹೆಚ್ಚು ನಂಬಿಕೆ ಇಲ್ಲ. ಇವರು ಯಾವಾಗಲೂ ಸಹಾನುಭೂತಿಯಿಂದ, ಕರುಣೆಯಿಂದ ವರ್ತಿಸುವುದಿಲ್ಲ. ಹೇಳಿಕೊಳ್ಳುವಂತಹ ವಿನಯಶೀಲ ರಾಜೀ ಭಾವನೆಯೂ ಇವರಲ್ಲಿ ಸಾಮಾನ್ಯವಲ್ಲ. ಅನೇಕ ವಿಷಯಗಳಲ್ಲಿ ಬಲು ಜವಾಬ್ದಾರಿಯಿಂದ ವರ್ತಿಸುವ ಇವರು ಕೆಲವು ಸಾರಿ ವಿಚಿತ್ರವೆನ್ನಿಸುವಷ್ಟರ ಮಟ್ಟಿಗೆ ಬೇಜವಾಬ್ದಾರಿಯಿಂದ ವರ್ತಿಸಬಲ್ಲರು ! ಸೃಷ್ಟಿಶೀಲರನ್ನು ಅವಲಂಬಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಅವರ ನಾಳಿನ ವರ್ತನೆ ನಿರ್ದಿಷ್ಟಪಡಿಸುವುದು ಸಾಧ್ಯವಿಲ್ಲ. ಅವರು ಮಹಾ ತಾಳ್ಮೆಗೇನೂ ಹೆಸರುವಾಸಿಗಳಲ್ಲ.

ಸೃಷ್ಟಿಶೀಲರು ತುಂಬಾ ಖುಷಿಯಾಗಿ, ನಿರಾಳವಾಗಿ, ಆರಾಮವಾಗಿ ಇರುವುದು ಸ್ವಲ್ಪ ಅಪರೂಪವೇ (ಅದು ಹೇಗೋ ಎಲ್ಲರಿಗೂ ಗೊತ್ತು; ಕವಿಯಾಗ ‘ಬಯಸು’ ವವನ ಕರುಣಾಜನಕ ಮುಖ!) ಅದರ ಬದಲು ಅನೇಕ ಕ್ಷೇತ್ರಗಳಲ್ಲಿ ನಿಜವಾಗಿ ಸೃಷ್ಟಿಶೀಲರು ಆಗಿಲ್ಲದೆ ಬೇಕಷ್ಟು ಕೆಲಸ ಮಾಡಿದವರು (ಉದಾ: ಹೆಚ್ಚು ಬರೆದವರು, ಬರೀ ಸಂಖ್ಯೆಯ ದೃಷ್ಟಿಯಿಂದ) ಖುಷಿಯಾಗಿ, ಆರಾಮವಾಗಿ ಹೆಚ್ಚು ನಗುನಗುತ್ತಾ ಇರಬಲ್ಲರೆಂಬುದು ನಿಶ್ಚಿತವಾಗಿದೆ. ಈ ಕರ್ಮ ಯೋಗಿಗಳು ಹೆಚ್ಚು ಸಹಾನುಭೂತಿಪರರು; ಸಾಂಪ್ರದಾಯಿಕಸ್ಥ : ನೀತಿ ವಾದಿಗಳು ; ವಾಸ್ತವಿಕರು ; ಕರುಣಾರ್ದ್ರರು ; ಹೆಚ್ಚು ಶಿಸ್ತುಳ್ಳವರು ; ಇನ್ನೊಬ್ಬರಿಗೆ ಸಹಾಯ ಮಾಡುವವರು ; ತಾಳ್ಮೆಯುಳ್ಳವರು.
ಸೃಷ್ಟಿಶೀಲರು ಹಾಗಲ್ಲದವರಿಗಿಂತ ಇನ್ನೊಂದು ಬಲು ಮುಖ್ಯವಾದ ರೀತಿಯಲ್ಲಿ ಬೇರೆಯಾಗಿರುತ್ತಾರೆ. ಅದೆಂದರೆ ಸೃಷ್ಟಿಶೀಲರು ಅನುಭವಗಳನ್ನು , ಸಂವೇದನೆಗಳನ್ನು ಹೆಚ್ಚು ಬಿಚ್ಚು ಮನಸ್ಸಿನಿಂದ ತೆಗೆದುಕೊಳ್ಳುವುದೇ. ಇಲ್ಲಿರುವ ವ್ಯತ್ಯಾಸವನ್ನು ಈ ರೀತಿ ವಿವರಿಸಬಲ್ಲದು : ಯಾರೇ ಆಗಲಿ, ಯಾವ ಕ್ಷಣದಲ್ಲೂ ತನ್ನ ಮನಸ್ಸನ್ನು ಉಪಯೋಗಿಸಿದರೆಂದರೆ ಅವನು ಎರಡು ಕೆಲಸವನ್ನು ಮಾಡುತ್ತಾನೆ. ಒಂದು, ಯಾವುದೋ ಒಂದು ಪ್ರಚೋದನೆಯ ಬಗ್ಗೆ, ವಿಷಯದ ಬಗ್ಗೆ ಅರಿವಿಗೆ ಬರುತ್ತಾನೆ, ಪ್ರಜ್ಞಾಪರನಾಗುತ್ತಾನೆ, ಗ್ರಹಿಸುತ್ತಾನೆ. ಎರಡು ಆತ, ಆ ವಿಷಯ-ಪ್ರಚೋದನೆಯ ಬಗ್ಗೆ ಒಂದು ತಿರ್ಮಾನಕ್ಕೆ ಬರುತ್ತಾನೆ. ಆದರೆ ಈ ಎರಡೂ ಕ್ರಿಯೆ ಎಲ್ಲರಲ್ಲೂ ಒಂದೇ ಮಟ್ಟದಲ್ಲಿ ನಡೆಯುವುದಿಲ್ಲ. ಹಲವರಲ್ಲಿ ಒಂದಲ್ಲ ಒಂದು ಕ್ರಿಯೆ ಪ್ರಧಾನವಾಗಿರುತ್ತದೆ ; ಅಭ್ಯಾಸವಾಗಿರುತ್ತದೆ. ಸೃಷ್ಟಿಶೀಲರಲ್ಲದವರು ಸಂವೇದನೆಗಳು ಬರಲು ತೊಡಗುತ್ತಿರುವಾಗಲೇ ಶೀಘ್ರವಾಗಿ ಅದರ ಬಗ್ಗೆ ‘ತೀರ್ಮಾನ’ಕ್ಕೆ ಬರಲು ಪ್ರಾರಂಭಿಸುತ್ತಾರೆ. ಸೃಷ್ಟಿಹೀಲರು ಮಾಡುವುದು, ಪ್ರಧಾನವಾಗಿ ಅರಿವಿಗೆ ಬರುವುದು, ವಿಷಯದ ಬಗ್ಗೆ ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಪ್ರಜ್ಞಾಪರರಾಗಲು ಪ್ರಯತ್ನಿಸುವುದು. ಒಂದು ವಿಷಯದ ಬಗ್ಗೆ ಹೆಚ್ಚು ಹೆಚ್ಚನ್ನು ಗ್ರಹಿಸುವುದು ಅವರಿಗೆ ಮುಖ್ಯವಾಗಿ ಕಾಣುತ್ತದೆ. ತೀರ್ಪಿಗೆ ಬರಲೇ ಬೇಕಾದರೆ ಬಹಳ ತಡೆದು ಬರುತ್ತಾರೆ, ಅವರು ತಮ್ಮ ಸಂವೇದನೆಗಳಿಗೆ ಕೂಡಲೇ ಹಣೆಪಟ್ಟಿ ಹಚ್ಚಿ ಹಳೆಯ ಅನುಭವಗಳ ಅರ್ಥದ ನೆರಳಿಗೆ ನೂಕುವುದಿಲ್ಲ. ಶಿಘ್ರವಾಗಿ ತೀರ್ಪಿಗೆ ಬರುವ ವ್ಯಕ್ತಿ ಹಳೆಯ ಅನುಭವದ ಚೌಕಟ್ಟಿಗೆ ಹೊಸ ಸಂವೇದಗಳನ್ನು ಹೊಂದಿಸಬೇಕಾಗುತ್ತದೆ. ಹಾಗಾಗಿ ಹೊಸದು ಅಂತಹ ಪರಿಣಾಮವನ್ನೇ ಮಾಡದೆ ಹೋಗುತ್ತದೆ ಮತ್ತು ಶೀಘ್ರವಾಗಿ ತೀರ್ಪಿಗೆ ಬರುವವರು ಅವಶ್ಯವಾಗಿ ಸದನೆಗಳನ್ನು, ಸಮಸ್ಯೆಗಳನ್ನು ಸರಳ ಗೊಳಿಸಬೇಕಾಗುತ್ತದೆ. ಸೃಷ್ಟಿಶೀಲರು ಇವೆಡನ್ನೂ ಹೆಚ್ಚಾಗಿ ಮಾಡುವುದಿಲ್ಲ.
ಕೂಡಲೇ ತೀರ್ಮಾನಕ್ಕೆ ಬರುವ ನಡತೆಯಿಂದ ವ್ಯಕ್ತಿ, ಸಂಕೀರ್ಣತೆ, ಕ್ಲಿಷ್ಟತೆಯಿಂದ ತಪ್ಪಿಸಿಕೊಂಡು, ಸುವ್ಯವಸ್ಥಿತವಾದ, ಒಳ್ಳೆಯ ಹತೋಟಿಗೊಳಪಟ್ಟ, ಬಲು ಶಿಸ್ತಿನ ಮತ್ತು ಜಾಗರೂಕತೆಯಿಂದ ಯೋಚಿಸಿದ ಜೀವನವನ್ನು ನಡೆಸುತ್ತಾನೆ. ಅನುಭವವನ್ನು ಒಂದೇ ನಿರ್ದಿಷ್ಟ ದಿಕ್ಕಿನಲ್ಲಿ ಹೋಗಗೊಡುವುದರಿಂದ ತಾಪತ್ರಯವಿಲ್ಲದೆ ಸೂಕ್ಷ ದ್ವಂದ್ವಗಳಿಂದ ತಪ್ಪಿಸಿಕೊಳ್ಳುತ್ತಾನೆ. ಅದರ ವಿರುದ್ಧವಾಗಿ ಸುಮ್ಮನೇ ಸಂವೇದನೆಗಳ ಬಗ್ಗೆ ಅರಿವಿಗೆ ಬರುವ ಹೆಚ್ಚು ಪ್ರಜ್ಞಾಪರನಾಗಬಲ್ಲ ವ್ಯಕ್ತಿ ಹೊಸ, ಭಿನ್ನ, ಕ್ಲಿಷ್ಟ ಅನುಭವಗಳಿಗೆ ತೆರೆದ ಮನಸ್ಸಿನವನಾಗುತ್ತಾನೆ. ಅವನಲ್ಲಿ ಸ್ಫೂರ್ತಿಯನ್ನು , ಹೊಸದನ್ನು ಹಿಸುಕಿ ಹಾಕುವ ಮೊಂಡು ಒರಟುತನವಿರುವುದಿಲ್ಲ.
ಸೃಷ್ಟಿಶೀಲತೆ ಮತ್ತು ಮಾನಸಿಕ ಸ್ವಾಸ್ಥ್ಯ
ಸೃಷ್ಟಿಶೀಲರು ಎಷ್ಟರ ಮಟ್ಟಿಗೆ ಮಾನಸಿಕವಾಗಿ ಆರೋಗ್ಯವಂತರು? ಎಂಬ ಪ್ರಶ್ನೆಯ ಮೇಲೆ ಎಲ್ಲ ತರದ ವ್ಯಕ್ತಿಗಳೂ ಚರ್ಚಿಸಿದ್ದಾರೆ. ಕಲಾವಿದರೆಲ್ಲ ಸ್ವಲ್ಪ ಹುಚ್ಚರೇ, ಅವರ ತಲೆ ಹನ್ನೆರಡಾಣೆಯೇ ಎಂಬುದು ಎಲ್ಲ ಸಮಾಜದಲ್ಲೂ ಸಾಮಾನ್ಯ ತಿಳುವಳಿಕೆ. ಸ್ವಲ್ಪ ಕಡಿಮೆ ಎಂದರೆ, ಕಲಾವಿದರು ಪಿರ್ಕಿಗಳು, ತಿಕ್ಕಲು ಎಂಬುದಂತೂ ಸರ್ವವಿದಿತ. ಸೃಷ್ಟಿಶೀಲರು ಕೂಡ ಜನರ ಈ ತಿಳುವಳಿಕೆಯಿಂದ ಬೇಸರಪಟ್ಟು ಕೊಳ್ಳುವುದರ ಬದಲು ಅದನ್ನೇ ಉಪಯೋಗಿಸಿಕೊಳ್ಳುವುದು (ಚಿತ್ರವಿಚಿತ್ರವಾಗಿರಲು ಹೆಣಗುತ್ತಾ) ಅಂತಹ ಅಪರೂಪವಲ್ಲ. ಫ್ರಾಯ್ಡನ ಮನೋವಿಶ್ಲೇಷಣ ಸಿದ್ಧಾಂತಗಳು ಈಡಿಪಸ್ ಕಾಂಪ್ಲೆಕ್ಸ್ ಅಂತಹ ಆಸ್ವಾಸ್ಥ್ಯತೆ ಸೃಷ್ಟಿಶೀಲತೆಗೆ ಅತ್ಯಾವಶ್ಯಕ ಎಂಬ ಅಭಿಪ್ರಾಯ ಬೇರೂರಲು ಸಹಕರಿಸಿದವು. ಈ ಸಮಸ್ಯೆಯ ಮೇಲೆ ಆಧುನಿಕ ಮನೋವಿಜ್ಞಾನ ಸಂಗ್ರಹಿಸಿದ ವಿಷಯಗಳು ಸ್ವಾರಸ್ಯವಾಗಿವೆ. ಸೃಷ್ಟಿಶೀಲರು ಮಾನಸಿಕವಾಗಿ ಅಸ್ವಾಸ್ಥ್ಯರೆ? ಉತ್ತರ- ಹೌದು ಮತ್ತು ಇಲ್ಲ, ಹೌದು ಏಕೆಂದರೆ ಸೃಷ್ಟಿಶೀಲರು ಜನಸಾಮಾನ್ಯರಿಗಿಂತ ಅತಿ ಹೆಚ್ಚು ಮಾನಸಿಕ ಕ್ಷೇಶಗಳನ್ನು ಪ್ರದರ್ಶಿಸುವುದು ನಿಜವೇ. ಮಾನಸಿಕ ವಿಷಮತೆಯನ್ನು ಅಳೆಯುವ ಪ್ರಶ್ನಾವಳಿಗಳಿಂದ ಕಲಾವಿದರು, ಬರಹಗಾರರು ಮತ್ತು ವಿಜ್ಞಾನಿಗಳು- ಇವರೆಲ್ಲರನ್ನೂ ಪರೀಕ್ಷಿಸಿದಾಗ, ಎಲ್ಲ ತರದ ವಿಷಮತೆಯಲ್ಲೂ ಇವರು ಜನಸಾಮಾನ್ಯರಿಗಿಂತ ಹೆಚ್ಚು ಅಂಕಗಳನ್ನು ತಿಳಿಸಿದರು.
ಆದರೆ ಇಲ್ಲಿ ಸ್ವಾರಸ್ಯಕರವಾದ ಅಂಶವೆಂದರೆ ಸೃಷ್ಟಿಶೀಲರಲ್ಲಿ ಕಂಡುಬರುವ ಮಾನಸಿಕ ಅಸ್ವಾಸ್ಥ್ಯತೆಗೂ ಸಾಮಾನ್ಯರ ಮಾನಸಿಕ ಅಸ್ವಾಸ್ಥ್ಯತೆಗೂ ಇರುವ ಒಂದು ಪ್ರಮುಖ ವ್ಯತ್ಯಾಸ. ಮಾನಸಿಕ ಅಸ್ವಾಸ್ಥ್ಯತೆಗೂ ಅಹಂ ಶಕ್ತಿಗೂ ಖಚಿತವಾದ ಋಣ ಸಂಬಂಧವಿದೆ. ಜನಸಾಮಾನ್ಯರಲ್ಲಿ ಈ ಅಸ್ವಾಸ್ಥ್ಯತೆ ಕಂಡುಬರುವುದು ಅಹಂ ಶಕ್ತಿ ಕುಂದುತ್ತಾ, ದುರ್ಬಲವಾಗುತ್ತಾ ಹೋದ ಹಾಗೆ ಮಾತ್ರ ಸಾಧ್ಯ. ಅಹಂ ಶಕ್ತಿಯೆಂದರೆ (ತುಂಬಾ ಸರಳವಾದ ಅರ್ಥದಲ್ಲಿ) ತನ್ನ ಸಂವೇದನೆಗಳನ್ನು, ಅನುಭವಗಳನ್ನು ಒಟ್ಟಾಗಿ ಹಿಡಿದಿಟ್ಟುಕೊಂಡು ವ್ಯಕ್ತಿ ತಾನೊಂದು ಗಟ್ಟಿ ಘಟಕವಾಗಿ ಉಳಿಯುವ ಒಂದು ಕ್ರಿಯಾಶಕ್ತಿ ಪರಿಸರ. ಈ ಅಹಂಶಕ್ತಿ ಅನುಭವಗಳೆಲ್ಲವಕ್ಕೆ ಒಂದು ಪ್ರಜ್ಞೆಯ ಕೇಂದ್ರವನ್ನು ಒದಗಿಸಿ ವ್ಯಕ್ತಿತ್ವ ಒಂದು ವಿಶಿಷ್ಟ ಸತ್ವವಾಗಿ ಉಳಿಯುವಂತೆ ಮಾಡುತ್ತದೆ. ವಿಪರೀತ ಕಠಿಣ ಪರಿಸ್ಥಿತಿಗಳಲ್ಲಿ ವ್ಯಕ್ತಿತ್ವ ಹೋಳಾಗದಂತೆ ತನ್ನನ್ನು ತಾನು ನಿರ್ವಹಿಸಿ ಉಳಿಸಿಕೊಳ್ಳುವವನು ತನ್ನ ಅಹಂಶಕ್ತಿಯನ್ನು ಪ್ರದರ್ಶಿಸುತ್ತಾನೆನ್ನಬಹುದು. ಅನುಭವಕ್ಕೆ ನಿರ್ದಿಷ್ಟ ಕೇಂದ್ರವನ್ನು ಕೊಡುವ ಈ ಶಕ್ತಿ ಕ್ಷೀಣಿಸಿದಂತೆ ಸಂವೇದನೆಗಳು ಒತ್ತರಗಳು, ಇನ್ನೆಲ್ಲ ಅನುಭವಗಳ ಒಂದು ಸಮತೋಲನಕ್ಕೆ ಬರದೆ, ಒಂದು ಅರ್ಥಪೂರ್ಣ ವ್ಯವಸ್ಥೆಗೆ ಒಗ್ಗದೆ, ವ್ಯಕ್ತಿತ್ವದ ಅಂಶ ಅಂಶಗಳು ಬೇರ್ಪಟ್ಟು……..ಮಾನಸಿಕ ಅಸ್ವಾಸ್ಥ್ಯದ ಪ್ರಾರಂಭ. ಪೂರ್ಣವಾಗಿ ಅಸ್ವಸ್ಥನಾದ ವ್ಯಕ್ತಿಯಲ್ಲಿ ಅಹಂಶಕ್ತಿ ಹೆಚ್ಚು ಕಡಿಮೆ ಪೂರ್ತಿ ನಾಶವಾಗಿರುತ್ತದೆ. ಇದು ಎಷ್ಟು ಖಚಿತವಾಗಿತ್ತೆಂದರೆ, ಯಾರಲ್ಲಿಯೂ ಅಸ್ವಾಸ್ಥ್ಯದ ಚಿಹ್ನೆಗಳು ಮತ್ತು ಅಹಂಶಕ್ತಿ ಒಟ್ಟಿಗೆ ಇರುವುದು ಸಾಧ್ಯವೇ ಇಲ್ಲವೆಂದಾಗಿತ್ತು. ಆದರೆ ಸೃಷ್ಟಿಶೀಲರನ್ನು ಪರೀಕ್ಷಿಸಿದಾಗ ಮಾತ್ರ ಈ ವಿಚಿತ್ರ ಹಾಗೂ ಅಸಂಬದ್ಧ ಸಮ್ಮೇಳನ ಬಲು ಸ್ಪಷ್ಟವಾಗಿ ವ್ಯಕ್ತವಾಯಿತು ! ಸೃಷ್ಟಿಶೀಲರು ಮಹಾಜನರಿಗಿಂತ ಹೆಚ್ಚು ಘರ್ಷಣೆಯನ್ನು ವ್ಯಕ್ತಪಡಿಸುವುದರ ಜೊತೆಗೆ ಅವರಿಗಿಂತ ಹೆಚ್ಚು ಅಹಂಶಕ್ತಿಯನ್ನೂ ಪ್ರದರ್ಶಿಸಿದ್ದರು.
ಈ ಸಂಶೋಧನೆಗಳು ಸಾಮಾನ್ಯವಾದ ಅರ್ಥದ ಮಾನಸಿಕ ಅಸ್ವಾಸ್ಥ್ಯವನ್ನೂ ಸೃಷ್ಟಿ ಕ್ರಿಯೆಯನ್ನೂ ಒಂದುಗೂಡಿಸುವುದು ತಪ್ಪೆಂದು ತೋರಿಸಿ ಕೊಟ್ಟಿವೆ. ಸೃಷ್ಟಿ ಶೀಲರು ಜನಸಾಮಾನ್ಯರಿಗಿಂತ ಹೆಚ್ಚು ಉದ್ವೇಗ, ಕಳವಳ, ಕಾತರಪರರು , ಖಿನ್ನ ಮನಸ್ಕರು ; ಹಲವು ವಿಧವಾದ ಚಿಂತೆಯಿಂದ ಕೂಡಿರುವವರು ; ಸಂಶಯಗ್ರಸ್ತರು ; ಯಾರನ್ನೂ ಸುಲಭವಾಗಿ ನಂಬದವರು ; ಒಂದಲ್ಲ ಒಂದು ವಿಧವಾದ ಮನೋ-ದೈಹಿಕ ತೊಂದರೆಗಳುಳ್ಳವರು ಎಂಬುದೆಲ್ಲ ನಿಜವೇ. ಇದರ ಅರ್ಥ ಬಹುಶಃ ಸೃಷ್ಟಿಶೀಲರು ತಮ್ಮ ಸೂಕ್ಷ್ಮ ಸಂವೇದನೆಗಳಿಂದ ಮಾನಸಿಕವಾಗಿ ಹೆಚ್ಚು ತೊಂದರೆಗೆ, ಘರ್ಷಣೆಗೆ ಒಳಗಾದವರು ; ಹಾಗೆಯೇ ಅಂತಹ ಘರ್ಷಣೆಗಳನ್ನು ನಿಭಾಯಿಸಿಕೊಳ್ಳಲು ಬೇಕಾದ ಅತಿ ಹೆಚ್ಚಿನ ಅಹಂಶಕ್ತಿಯನ್ನೂ ಪಡೆದಿರುವವರು ಎಂದು ಊಹಿಸಬೇಕಾಗುತ್ತದೆ. ಈ ರೀತಿ ಮಾನಸಿಕ ತೊಂದರೆಗಳಿದ್ದೂ ಸೃಷ್ಟಿಶೀಲರು ರೋಗಿಗಳಂತೆ ವಿಕೃತವಾಗಿ, ಹಾನಿಕರವಾಗಿ, ತಮ್ಮನ್ನೇ ತಾವು ತಿರಸ್ಕರಿಸಿಕೊಳ್ಳುವ ರೀತಿಯಲ್ಲಿ ವರ್ತಿಸುವುದಿಲ್ಲ. ಸಾಮಾಜಿಕ ಹಾಗೂ ವೈಯ್ಯಕ್ತಿಕ ಸನ್ನಿವೇಶಗಳಲ್ಲಿ ಪರಿಣಾಮಕಾರಿಯಾಗಿ, ಅಭಿಮಾನಶೀಲರಾಗಿ, ವಿಶಿಷ್ಟತೆಯಿಂದ ವರ್ತಿಸುವುದು ತಮ್ಮಲ್ಲಿರುವ ಘರ್ಷಣೆಗಳನ್ನು ಎಂತಹ ಹಿಡಿತದಲ್ಲಿ ಇಟ್ಟುಕೊಳ್ಳಬಲ್ಲರೆಂಬುದಕ್ಕೆ ಸಾಕ್ಷಿಯಾಗುತ್ತದೆ. ಮೊದ
4*

ಮೊದಲಿನ ಅಭ್ಯಾಸಿಗಳು ಸೃಷ್ಟಿಶೀಲರಲ್ಲಿ ಕಂಡುಬರುವ ಈ ಘರ್ಷಣೆಯ ಚಿಹ್ನೆಗಳನ್ನು ಮಾತ್ರ ಕಂಡು ಅದರ ಅರ್ಥವನ್ನು ತಪ್ಪಾಗಿ ಗ್ರಹಿಸಿದರು. ಮಾನಸಿಕ ಆರೋಗ್ಯವೆಂದರೆ ಯಾವ ವಿಧವಾದ ಕ್ಷೇಶ, ಘರ್ಷಣೆ, ಸಂದಿಗ್ಧತೆ ಇಲ್ಲದೇ ಇರುವುದು ಎಂಬ ಕಲ್ಪನೆ ಅಷ್ಟು ಸಮರ್ಪಕವಲ್ಲ. ಅಂತಹ ಸಮತೋಲ ಪರಿಸ್ಥಿತಿಯಂತಹ ಬಂಜೆತನ ಬೇರೆ ಇರಲಿಕ್ಕಿಲ್ಲ. ಬದಲು, ವ್ಯಕ್ತಿ ತನ್ನ ಸಮತೋಲವನ್ನು ಕೆಡಿಸುವಷ್ಟು ತೀವ್ರವಾದ, ಒಂದಕ್ಕೊಂದು ವಿರುದ್ಧವಾದ ಸಂವೇದನೆ-ಅನುಭವಗಳನ್ನು ಎಷ್ಟರ ಮಟ್ಟಿಗೆ ನಿರ್ವಹಿಸಿಕೊಳ್ಳುತ್ತಾನೆ-ಎಂಬುದೇ ಮಾನಸಿಕ ಸ್ವಾಸ್ಥ್ಯದ ಚಿಹ್ನೆ ಕೆಲವರಲ್ಲಾದರೂ ಆಗಬಹುದು. ಸೃಷ್ಟಿಶೀಲರು ಬಹುಶಃ ಈ ಕೆಲವರು. ಇನ್ನೊಂದು ಗಮನಾರ್ಹವಾದ ಅಂಶವೆಂದರೆ ನಿಜವಾದ ಸೃಷ್ಟಿಕ್ರಿಯೆ ಸಾಧ್ಯವಿಲ್ಲದೇ ಬೇಕಷ್ಟು ಬರೆದವರು, ಕೆಲಸ ಮಾಡಿದವರು ಮೇಲೆ ವಿವರಿಸಿದಂತಹ ಸಮತೋಲತೆಯನ್ನು ವ್ಯಕ್ತಪಡಿಸಿದ್ದು ! ಈ “ಪ್ರಾತಿನಿಧಿಕ” ಬರಹಗಾರರು, ಚಿತ್ರಕಾರರು, ವಿಜ್ಞಾನಿಗಳು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಮಹಾಜನತೆಗೆ ಹತ್ತಿರವಾಗಿದ್ದರು. (ಹಾಗೆಯೇ, ಸೃಷ್ಟಿಕ್ರಿಯೆಯ ದೃಷ್ಟಿಯಿಂದಲೂ ಹತ್ತಿರವಾಗಿದ್ದರು ! )
ಒಟ್ಟಿನಲ್ಲಿ ಸೃಷ್ಟಿಶೀಲರ ವ್ಯಕ್ತಿತ್ವವನ್ನು ಗಮನಿಸಿದರೆ ಎದ್ದು ಕಾಣುವ ಒಂದು ಲಕ್ಷಣವೆಂದರೆ ಜನಸಾಮಾನ್ಯರಲ್ಲಿ ಒಂದೇ ಸಮಯಕ್ಕೆ ಒಟ್ಟಿಗಿರಲು ಸಾಧ್ಯವಿಲ್ಲದಂತಹ ವಿರುದ್ಧ ಪ್ರವೃತ್ತಿಗಳ ಸಂಯೋಜನೆ. ಅವರು ತುಂಬಾ ಜವಾಬ್ದಾರಿಯುತರು ; ಅದೇ ವೇಳೆ ಬೇಜವಾಬ್ದಾರಿಯಿಂದಲೂ ವರ್ತಿಸುವವರು. ಅನುಭವಗಳ ತುಲನೆಯಲ್ಲಿ ಯಾವ ದುಡುಕನ್ನೂ ತೋರಿಸದೆ ಅಸಾಧ್ಯ ತಾಳ್ಮೆ ತೋರಿಸುವ ಇವರು ಅನೇಕ ಬಾರಿ ದುಡುಕು, ಅಸಹನೆ, ಸಿಡಿಮಿಡಿತನಕ್ಕೆ ಹೆಸರುವಾಸಿ. ಚಿಂತನಶೀಲರಾದರೂ ಲೌಕಿಕವಾಗಿ ಮಹಾ ಆಕಾಂಕ್ಷಿಗಳು, ಸಂಸ್ಕೃತಿಯನ್ನು ಶ್ರೀಮಂತವಾಗಿಸುವ ಕಾರ್ಯದಲ್ಲಿ ಸೃಷ್ಟಿಶೀಲರಷ್ಟು ಇನ್ನು ಯಾರೂ ದುಡಿಯದಿದ್ದರೂ, ಆ ಸಂಸ್ಕೃತಿಯ, ಪರಂಪರೆಯ, ಸಂಪ್ರದಾಯದ ವಿರುದ್ಧ ಹೋರಾಡಲು ಹಿಂಜರಿಯದವರು ಸಾಂಪ್ರದಾಯಿಕ ಸದ್ಗುಣಗಳನ್ನು ತಿರಸ್ಕರಿಸುವವರು. ತುಂಬಾ ಸ್ವಾಭಿಮಾನಿಗಳು, ಜೊತೆಗೆ ತಮ್ಮ ಕುಂದುಕೊರತೆಗಳ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡುವವರು. ಸಮಾಜದ ಬಗ್ಗೆ ಅಸಾಧಾರಣ ಕಳಕಳಿ ಇನ್ನೂ ಹಲವು ಬಾರಿ ಸಮಾಜವನ್ನು ತಿರಸ್ಕರಿಸುವವರು. ಹೀಗೆ ಇನ್ನೂ ಅನೇಕ ತರದಲ್ಲಿ ಒಂದಕ್ಕೊಂದು ವಿರುದ್ಧವಾದ ಪ್ರವೃತ್ತಿಯನ್ನು ಪ್ರದರ್ಶಿಸುತ್ತಾರೆ. ಈ ಮಾನಸಿಕ ಘರ್ಷಣೆಯ ನಿಜವಾದ ಅರ್ಥ (ಸೃಷ್ಟಿಕ್ರಿಯೆಯ ದೃಷ್ಟಿಯಿಂದ) ಸ್ಪಷ್ಟವಾಗಿಲ್ಲವಾದರೂ, ಇದು ವಾಸ್ತವಿಕ ಅಂಶ ಎಂಬುದರಲ್ಲಿ ಸಂದೇಹವಿಲ್ಲ.
ಸೃಷ್ಟಿಕ್ರಿಯೆ ಮತ್ತು ಬುದ್ಧಿಶಕ್ತಿ
ಮನುಷ್ಯನ ಎಲ್ಲಾ ಚಟುವಟಿಕೆಯಲ್ಲೂ ಬುದ್ಧಿಶಕ್ತಿಯ ಪಾತ್ರ ಗಣನೀಯವಾಗಿರುವುದರಿಂದ ಸೃಷ್ಟಿಕ್ರಿಯೆಯಲ್ಲಿ ಇದರ ಪಾತ್ರವೇನೆಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಮನೋವಿಜ್ಞಾನಿಗಳು ಉಪಯೋಗಿಸಿದ ಅಭ್ಯಾಸದ ಮುಖ್ಯ ವಿಧಾನವೆಂದರೆ ಪ್ರಮಾಣಿತ ಪರೀಕ್ಷೆಗಳಿಂದ ಬುದ್ಧಿಶಕ್ತಿಯನ್ನು ಅಳೆದು ಅದನ್ನು ಒಂದು ಅಂಕಯ ರೂಪದಲ್ಲಿ ವ್ಯಕ್ತಪಡಿಸುವುದು. ಬುದ್ಧಿಶಕ್ತಿಯ ಈ ಪರೀಕ್ಷೆಗಳ ಪ್ರಕಾರ ಯಾವುದೇ ಸಮಾಜದ ಎಲ್ಲ ಜನರನ್ನೂ ಪರೀಕ್ಷಿಸಿದರೆ ಬಹುಪಾಲು ಜನರು (ಸುಮಾರು ಶೇಕಡಾ 67 ರಷ್ಟು) ಹೆಚ್ಚು ಕಡಿಮೆ ಒಂದೇ ಮಟ್ಟದ ಬುದ್ಧಿಶಕ್ತಿಯನ್ನು ಪ್ರದರ್ಶಿಸುತ್ತಾರೆ. ಪ್ರತಿ ಸಮಾಜಕ್ಕೂ ಸಾಮಾನ್ಯವೂ ಸಹಜವೂ ಆದ ಈ ಮಟ್ಟದ ಅಂಕೆ ಸೂಚಿ 100 ಎಂದು ಇಟ್ಟುಕೊಂಡರೆ, ಉಳಿದ ಶೇಕಡಾ 33 ರಷ್ಟು ಜನರಲ್ಲಿ ಅರ್ಧದಷ್ಟು ಜನರ ಬುದ್ಧಿ ಸೂಚಿ 100 ಕ್ಕಿಂತ ಹೆಚ್ಚಾಗಿಯೂ ಇನ್ನರ್ಧ ಜನರ ಬುದ್ಧಿ ಸೂಚಿ 100 ಕ್ಕಿಂತ ಕಡಿಮೆಯಾಗಿಯೂ ಇರುತ್ತದೆ. ಈ ತರದ ಪರೀಕ್ಷೆಗಳನ್ನು ಸೃಷ್ಟಿಶೀಲರಿಗೆ ಕೊಟ್ಟಾಗ ಅವರ ಬುದ್ಧಿಶಕ್ತಿ 150 ಕ್ಕಿಂತ ಮೇಲೆ 170 ರವರೆಗೂ ಹೋಗಬಹುದೆಂಬುದು ವ್ಯಕ್ತವಾಗಿದೆ. ಕೆಲವರ ಪ್ರಕಾರ ವಿಜ್ಞಾನಿಗಳ ಬುದ್ಧಿಶಕ್ತಿ ಇನ್ನೂ ಹೆಚ್ಚೆಂದೂ, ಇನ್ನು ಕೆಲವರ ಪ್ರಕಾರ ವಿಜ್ಞಾನಿಗಳು ಕಲಾವಿದರು ಎಲ್ಲ ಹೆಚ್ಚು ಕಡಿಮೆ ಒಂದೇ ಮಟ್ಟದ ಬುದ್ಧಿಶಕ್ತಿಯವರೆಂದೂ ಗೊತ್ತಾಗಿದೆ. ಒಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳ ಸೃಷ್ಟಿಶೀಲರ ಬುದ್ಧಿ ಸೂಚಿ ಕನಿಷ್ಠ 130 ಕ್ಕಿಂತ ಕಡಿಮೆ ಇರಲು ಸಾಧ್ಯವೇ ಇಲ್ಲವೆಂಬುದು ಸಿದ್ಧವಾಗಿದೆ.
ಮೇಲಿನ ಅಂಕಿಅಂಶಗಳು ಬುದ್ಧಿಶಕ್ತಿಯ ಸಾಮಾನ್ಯ ಮಟ್ಟವನ್ನು ಸೂಚಿಸುತ್ತವೆ. ಆದರೆ ಬುದ್ಧಿಶಕ್ತಿ ಒಂದು ಏಕ ಘಟಕವಲ್ಲ. ಅದು ಅನೇಕ ಬೇರೆ ಬೇರೆ ಶಕ್ತಿ ಸಾಮರ್ಥ್ಯಗಳ ಒಕ್ಕೂಟ, ಕೆಲವರಲ್ಲಿ ಕೆಲವು ತರದ ಸಾಮರ್ಥ್ಯಗಳು ಹೆಚ್ಚಾಗಿದ್ದು ಇತರ ಸಾಮರ್ಥ್ಯಗಳು ಕ್ಷೀಣವಾಗಿರುವುದು ಸಾಧ್ಯವಿದೆ. ಈ ದೃಷ್ಟಿಯಿಂದ ಪರಿಶೀಲಿಸಿದಾಗ ಸೃಷ್ಟಿಶೀಲರ ಬುದ್ಧಿಶಕ್ತಿ ಕೆಲವೊಂದು ವಿಶಿಷ್ಟ ಲಕ್ಷಣಗಳಿಂದ ಕೂಡಿರುವುದೆಂಬುದು ಕಂಡುಬಂದಿದೆ. ಸೃಷ್ಟಿಶೀಲರೆಲ್ಲ ಭಾಷೆಯನ್ನು ಸಾಂಕೇತಿಕವಾಗಿ, ಅಮೂರ್ತವಾಗಿ ಬಳಸುವ ಸಾಮರ್ಥ್ಯದಲ್ಲಿ ಇತರರಿಗಿಂತ ಮುಂದೆಂಬುದು ವ್ಯಕ್ತವಾಯಿತು. ಸಾಮಾನ್ಯವಾಗಿ ಸೃಷ್ಟಿಶೀಲರೆಲ್ಲ ಭಾಷೆಯ ಮೇಲೆ ಒಳ್ಳೆಯ ಹಿಡಿತವನ್ನು ಪಡೆದಿರುವರಲ್ಲದೆ ಅದನ್ನು ತಮ್ಮ ಕೈಯೊಳಗಿನ ಸಾಧನವಾಗಿ ಪರಿಣಾಮಕರವಾದ ರೀತಿಯಲ್ಲಿ ಉಪಯೋಗಿಸಬಲ್ಲರು.
ಮೊಟ್ಟಮೊದಲು, ಸೃಷ್ಟಿಶೀಲರೆಲ್ಲ ತುಂಬಾ ಬುದ್ಧಿವಂತರೆಂಬುದು ವ್ಯಕ್ತವಾದಾಗ ಅತಿ ಬುದ್ಧಿವಂತರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸೃಷ್ಟಿಶೀಲರಿರಬಹುದೆಂಬ ಕಲ್ಪನೆಗೆ

ಎಡೆಗೊಟ್ಟಿತು. ಆದರೆ ಕ್ರಮೇಣ ಇದು ತಪ್ಪೆಂಬುದು ಸಿದ್ಧವಾಗಿದೆ. ಬುದ್ಧಿ ಸೂಚಿ 150 ಕ್ಕಿಂತ ಹೆಚ್ಚಿದ್ದೂ ಯಾವ ಒಂದು ಕ್ಷೇತ್ರದಲ್ಲೂ ಏನೊಂದೂ ಹೊಸತನಕ್ಕೆ ಜನ್ಮ ಕೊಡದಿದ್ದವರು ಕ್ರಮೇಣ ಬೆಳಕಿಗೆ ಬಂದದ್ದೇ ಇದಕ್ಕೆ ಕಾರಣ. ಅಂದರೆ ಸೃಷ್ಟಿ ಶೀಲತೆ ಮತ್ತು ಅಸಾಮಾನ್ಯವಾದ ಬುದ್ಧಿಶಕ್ತಿ ಇವೆರಡಕ್ಕೂ ಸಂಬಂಧ ಉಂಟೇ ಹೊರತು ಅವೆರಡೂ ಒಂದೇ ಅಲ್ಲ, ಆಗ ಬುದ್ಧಿಶಕ್ತಿಯ ಯಾವ ಯಾವ ವಿಶೇಷ ಅಂಶಗಳು ಅಥವಾ ಕ್ರಿಯಾ ವಿಶೇಷಗಳು ಸೃಷ್ಟಿಕ್ರಿಯೆಗೆ ಹೆಚ್ಚಿನ ಸಂಬಂಧ ಪಡೆದಿವೆ ಎಂಬ ಪ್ರಶ್ನೆ ಎದ್ದಿತು.
ಬುದ್ಧಿಶಕ್ತಿಯು ಬೇರೆ ಬೇರೆ ಕ್ರಿಯಾ ಪರಿಸರಗಳಲ್ಲಿ ಆಲೋಚನೆಯ ಕ್ರಮಗಳು ಮುಖ್ಯವಾದವು. ಇಲ್ಲಿ ಮುಖ್ಯವಾಗಿ ಎರಡು ವಿಧವಾದ ಆಲೋಚನಾ ಕ್ರಮಗಳನ್ನು ಗುರುತಿಸಬಹುದು. ಈ ಕ್ರಮಗಳು ಯಾವ ಸಮಸ್ಯೆಯ ಮೇಲೆ ವ್ಯಕ್ತಿ ಯೋಚಿಸುತ್ತಿದ್ದಾನೆ- ಎಂಬುದನ್ನು ಅವಲಂಬಿಸಿವೆ. ವ್ಯಕ್ತಿಯ ಮುಂದಿರುವ ಪ್ರಶ್ನೆಗೆ ಒಂದು, ಒಂದೇ ಒಂದು ಸರಿಯಾದ, ಬದಲಾಗಲು ಸಾಧ್ಯವೇ ಇಲ್ಲದಷ್ಟು ಖಚಿತವಾದ ಉತ್ತರವಿದ್ದು ಅದನ್ನು ಪಡೆಯಲು ಪ್ರಯತ್ನಿಸುತ್ತಿರುವುದಾದರೆ ಆತನ ಆಲೋಚನೆಯು ಏಕಮುಖವಾಗಿರಬೇಕು ; ಒಂದೇ ನೇರ ದಿಕ್ಕಿನಲ್ಲಿ ಯೋಚನೆ ಹರಿದು ಹಂತ ಹಂತವಾಗಿ ಏರಿ ಉತ್ತರದಲ್ಲಿ ಸಮಾವೇಶಗೊಳ್ಳಬೇಕು. ಸರಳವಾದ ಉದಾಹರಣೆ: “ಮೇಲೆ? ಎಂಬ ಶಬ್ದದ ವಿರುದ್ದ ಶಬ್ದ ಯಾವುದು ? ಈ ಪ್ರಶ್ನೆಗೆ ಸರಿಯಾದ ಉತ್ತರ ಖಚಿತವಾಗಿರುವುದರಿಂದ ಮತ್ತು ಒಂದೇ ಆಗಿರುವುದರಿಂದ ಅದನ್ನು ಪಡೆಯಲು ಯೋಚನೆ ಒಂದೇ ದಿಕ್ಕಿನಲ್ಲಿ ಹರಿಯಬೇಕು. ಇದರ ಬದಲು ವ್ಯಕ್ತಿಯ ಮುಂದಿರುವ ಸಮಸ್ಯೆಗೆ ಸಮರ್ಪಕವೆನ್ನಿಸಬಹುದಾದ ಉತ್ತರಗಳು ಹಲವಾರು ಇದ್ದು ವ್ಯಕ್ತಿ ಸಾಧ್ಯವಾದಷ್ಟೂ ಹೆಚ್ಚು ಉತ್ತರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ, ಅವನ ಯೋಚನೆಯ ಕ್ರಮ ಮೊದಲನೆಯದರ ವಿರುದ್ಧವಾಗಿರುತ್ತದೆ ; ಹತ್ತಾರು ಉತ್ತರಗಳನ್ನು ಪಡೆಯಲು ಯೋಚನೆ ಹತ್ತಾರು ದಿಕ್ಕುಗಳಲ್ಲಿ ಧಾವಿಸಬೇಕು. ಇದನ್ನು ಬಹುಮುಖ ಯೋಚನಾಕ್ರಮ ಎಂದು ಕರೆಯಬಹುದು. (ಉದಾ: “ಕೀಳು” ಎಂಬ ಅರ್ಥ ಬರುವ ಎಷ್ಟು ಶಬ್ದ ಗಳಿವೆ ?) ಇಲ್ಲಿ ವ್ಯಕ್ತಿ ಅತಿ ಕಡಿಮೆ ಹೊತ್ತಿನಲ್ಲಿ ಯೋಚನೆಯನ್ನು ಹಲವು ಬೇರೆ ಬೇರೆ ದಿಕ್ಕಿನಲ್ಲಿ ಓಡಿಸಲು ಅಸಮರ್ಥನಾದರೆ ಆತನಿಗೆ ಹೆಚ್ಚು ಉತ್ತರಗಳನ್ನು ಕೊಡಲು ಸಾಧ್ಯವಾಗುವುದಿಲ್ಲ.
ಈ ಬಹುಮುಖ ಆಲೋಚನಾ ಕ್ರಮವನ್ನೇ ಅಭ್ಯಾಸ ಮಾಡಿದಾಗ ಅದು ಕೆಲವು ಒಂದಕ್ಕೊಂದು ಸಂಬಂಧಿಸಿದ ಆದರೆ ಸ್ವಲ್ಪ ಬೇರೆ ಬೇರೆಯಾದ ಕ್ರಿಯಾ ಪರಿಸರಗಳನ್ನು ಅವಲಂಬಿಸಿದೆ ಎಂಬುದು ವ್ಯಕ್ತವಾಯಿತು. ಮೊದಲನೆಯದು ನಿರರ್ಗಳತೆ. ಮಾತಿನ ನಿರರ್ಗಳತೆಗೊಂದೇ ಅಲ್ಲದೆ ಈ ಶಬ್ದವನ್ನು ಇಲ್ಲಿ ಯಾವ ಎಡೆತಡೆಯೂ ಇಲ್ಲದೆ
ರಭಸದಿಂದ, ಸುಲಭಸಾಧ್ಯತೆಯಿಂದ ಸಾಗುವ ಮಾನಸಿಕ ಕ್ರಿಯಾ ಪರಿಸರಗಳನ್ನು ಸೂಚಿಸಲು ಬಳಸಲಾಗಿದೆ ; ಮುಖ್ಯವಾಗಿ ಇದು ಎಡೆತಡೆಯಿಲ್ಲದೆ ಸಾಗುವ ಯೋಚನೆಯನ್ನು ಸೂಚಿಸುತ್ತದೆ. ಈ ನಿರರ್ಗಳ ಯೋಚನೆ ಶಬ್ದಗಳ ವಿಚಾರಗಳ ಸಂಯೋಜನೆಗಳ, ಮತ್ತು ಅಭಿವ್ಯಕ್ತಿಯ ನಿರರ್ಗಳತೆಯನ್ನು ಅವಲಂಬಿಸಿದೆ. ಬಲು ಶೀಘ್ರವಾಗಿ ಶಬ್ದಗಳು ಹೊಸ ಹೊಸ ಪುಂಜಗಳಾಗುವುದು, ವಿಚಾರಗಳು ಹೊಸ ಹೊಸ ಸಂಯೋಜನೆಗೊಳಗಾಗುವುದು ಮುಖ್ಯ ಲಕ್ಷಣ. ಬಹುಮುಖ ಆಲೋಚನೆಯ ಎರಡನೆಯ ಲಕ್ಷಣವೆಂದರೆ ಬೇಗ ಬೇಗ ಬೇರೆ ಬೇರೆ ಸನ್ನಿವೇಶ-ಸಮಸ್ಯೆಗಳಿಗೆ ಹೊಂದುವಂತಹ ವಿಧಾನದಲ್ಲಿ ಆಲೋಚಿಸುವ ಶಕ್ತಿ. ಅಂದರೆ ಯೋಚನೆಯ ಶಕ್ತಿ ಮತ್ತು ವಿಧಾನ ಯಾವಾಗಲೂ ಒಂದೇ ತುಳಿದ ಹಾದಿಯಲ್ಲಿ ಸೆಟೆದು ಸಾಗದೆ ತರತರವಾಗಿ ಬಗ್ಗುವ, ಒಗ್ಗುವ, ಬೇರೆ ಬೇರೆ ಜಾಡನ್ನು ಹಿಡಿಯುವ ಸನ್ನಿವೇಶ-ಸಮಸ್ಯೆಗೆ ಸುಲಭವಾಗಿ ಹೊಂದಿಕೊಳ್ಳುವ “ಮಿದು’ತನ. ಈ “ಮಿದು”ತನವಿಲ್ಲದವರು ಜಡ್ಡುಗಟ್ಟಿದ ಜಾಡಿನಲ್ಲಿ ಮಾತ್ರ ಯೋಚಿಸಬಲ್ಲವರಾಗಿದ್ದು ಹೊಸ ಸನ್ನಿವೇಶಗಳಲ್ಲಿ ಸೋಲುತ್ತಾರೆ. ಬಹುಮುಖ ಆಲೋಚನೆಯ ಮೂರನೆಯ ಆದರೆ ಹೆಚ್ಚು ಮುಖ್ಯವಾದ ಲಕ್ಷಣವೆಂದರೆ ಅಪೂರ್ವತೆ, ನ್ಯಾಯವಾಗಿ ಸೃಷ್ಟಿಕ್ರಿಯೆಯ ಬಲು ಮುಖ್ಯ ಪ್ರಮಾಣಗಳಲ್ಲಿ ಇದು ಒಂದು. ಅಪೂರ್ವತೆಯನ್ನು ಯಾವ ರೀತಿಯಲ್ಲಿ ವಸ್ತುನಿಷ್ಠವಾಗಿ ನಿರ್ಧರಿಸಬೇಕೆಂಬ ಪ್ರಶ್ನೆ ಕಠಿಣವಾದದ್ದಾದರೂ ಸಂಖ್ಯಾರೂಪದ ಒಂದು ಪ್ರಮಾಣವೆಂದರೆ, ಒಬ್ಬ ವ್ಯಕ್ತಿಯ ಪ್ರತಿಕ್ರಿಯೆ ಅವನ ಸಮಾಜದಲ್ಲಿ ಬಹಳ ಅಪರೂಪದ್ದಾಗಿದ್ದರೆ, ಅದನ್ನು ಅಪೂರ್ವತೆಯ ಚಿಹ್ನೆಯೆಂದು ಪರಿಗಣಿಸುವುದು. ಅಪರೂಪತೆ ಅಥವಾ ಅ-ಸಾಮಾನ್ಯತೆ ಪರಿಪೂರ್ಣ ಪ್ರಮಾಣವಾಗಲು ಸಾಧ್ಯವಿಲ್ಲದೇ ಒಂದು ಮಟ್ಟದಲ್ಲಿ ಪ್ರತಿಕ್ರಿಯೆಯ ಇತರ ಗುಣ ಲಕ್ಷಣಗಳು ಮುಖ್ಯವಾಗುವುದಾದರೂ ಇದು ಒಂದು ಸುಲಭ ಕ್ರಮವನ್ನು (ಅಪೂರ್ವತೆಯನ್ನಳೆಯಲು) ಒದಗಿಸಿಕೊಟ್ಟಿದೆ. ಬಹುಮುಖವಾಗಿ ಯೋಚಿಸಬಲ್ಲವರು ಮುಖ್ಯವಾಗಿ ಈ ಅಪೂರ್ವತೆಯನ್ನು ಪ್ರದರ್ಶಿಸುತ್ತಾರೆ.
ಬಹುಮುಖ ಆಲೋಚನೆಯ ಇನ್ನೂ ಒಂದು ಲಕ್ಷಣವೆಂದರೆ ಸಮಸ್ಯೆಯೊಂದನ್ನು ಎದುರಿಸಿದಾಗ ಆ ಸಮಸ್ಯೆ ಬಂದ ರೂಪದಲ್ಲೇ ಅದನ್ನು ಪರಿಶೀಲನೆಗೆ ಎತ್ತಿಕೊಳ್ಳದೇ ಅದನ್ನು ಕೂಡಲೇ ಬೇರೊಂದು ರೀತಿಯಲ್ಲಿ ನಿರೂಪಿಸುವುದು ; ಇದುವರೆಗೆ ಆ ಸಮಸ್ಯೆಯನ್ನು ನೋಡಿರದ ದೃಷ್ಟಿಕೋನದಿಂದ ನೋಡುವುದು; ಸಮಸ್ಯೆಯ ಅಪ್ರಮುಖ ಅಂಶಗಳ ಕಡೆ ಗಮನಕೊಡುವುದು ಇತ್ಯಾದಿ. ಇವಿಷ್ಟು ಬಹುಮುಖ ಆಲೋಚನೆಯ ಕೆಲವು ಮುಖ್ಯ ಲಕ್ಷಣಗಳು. ಈ ರೀತಿ ಆಲೋಚನೆಯ ಕ್ರಮಗಳನ್ನೇ ಅಳೆಯುವ ಪರೀಕ್ಷೆಗಳನ್ನು ರಚಿಸಿ ಸೃಷ್ಟಿ ಶೀಲರನ್ನೂ, ಅಲ್ಲದವರನ್ನೂ ಪರೀಕ್ಷಿಸಿದಾಗ ಸಾಂಪ್ರದಾಯಿಕವಾದ ಬುದ್ಧಿಶಕ್ತಿ ಪರೀಕ್ಷೆಗಳಿಗಿಂತ ಹೆಚ್ಚು ಖಚಿತವಾಗಿ ಇವು ಈ ಎರಡೂ ಗುಂಪುಗಳನ್ನು ಬೇರ್ಪಡಿಸಿದವು. ನಿಜವಾದ ಸೃಷ್ಟಿಶೀಲರ ಬುದ್ಧಿಶಕ್ತಿಯ ಮುಖ್ಯ ಲಕ್ಷಣ ಬಹುಮುಖ ಯೋಚನಾಶಕ್ತಿಯೇ ಆಗಿತ್ತು. ಒಂದು ಸಮಸ್ಯೆ ಅಥವಾ ಅನುಭವದ ಮೇಲೆ ಸೃಷ್ಟಿಶೀಲರು ಯೋಚಿಸತೊಡಗಿದರೆ ಅವರ ಯೋಚನೆಗಳು ತೀರ ಕಡಿಮೆ ಅವಧಿಯಲ್ಲಿ ಹಲವು ದಿಕ್ಕುಗಳಲ್ಲಿ ಕುಪ್ಪಳಿಸುವುದು ವ್ಯಕ್ತವಾಯಿತು. ಸೃಷ್ಟಿಶೀಲರು ಬೌದ್ಧಿಕವಾಗಿ ಸಂಖ್ಯೆಯಲ್ಲೂ, ಗುಣದಲ್ಲೂ ಹೆಚ್ಚು ಹೆಚ್ಚು ಕೆಲಸ ಮಾಡುವ ಸಾಧ್ಯತೆ ಈ ಬಹುಮುಖ ಯೋಚನಾಶಕ್ತಿಯಿಂದ ಸಾಧ್ಯವಾಗುತ್ತದೆ. ಹಾಗೆಯೇ ತುಂಬಾ ವಿಶೇಷವಾಗಿ ಬುದ್ಧಿವಂತನಾಗಿದ್ದೂ ಈ ಶಕ್ತಿ ಇಲ್ಲದೇ ಹೋದರೆ ಒಬ್ಬನು ಸೃಷ್ಟಿಶೀಲನಾಗುವುದು ಸಾಧ್ಯವಿಲ್ಲ.
ಇನ್ನೂ ಒಂದು ರೀತಿಯಲ್ಲಿ ಸೃಷ್ಟಿಶೀಲರ ಬುದ್ಧಿಶಕ್ತಿ ಬೇರೆಯಾಗಿರುತ್ತದೆ. ಅದೆಂದರೆ, ಸೃಷ್ಟಿಶೀಲರು ಅನಿರ್ದಿಷ್ಟವಾಗಿ, ಸಂದಿಗ್ಧವಾಗಿ, ವಿರೋಧಾಭಾಸಗಳಿಂದ ಕೂಡಿ ಒಟ್ಟಿನಲ್ಲಿ ಅಸ್ಪಷ್ಟವಾದ ಗ್ರಹಿಕೆ-ವೇದನೆಗಳನ್ನು ತಾಳಿಕೊಳ್ಳಬಲ್ಲರು. ಎಲ್ಲರಿಗೂ “ಅದೂ ಆಗಬಹುದು ಇದೂ ಆಗಬಹುದು” ಎಂಬ ಸಂವೇದನೆಗಳನ್ನು ಹಾಗೆಯೇ ಹಿಡಿದಿಟ್ಟು ಕೊಳ್ಳಲು ಸಾಧ್ಯವಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅದರ ಅರ್ಥ ಖಚಿತವಾಗಿಬಿಡಬೇಕು. ಸಂಕೀರ್ಣ ಹಾಗೂ ಸಂದಿಗ್ಧ ಅನುಭವಗಳನ್ನು (ಅರ್ಥ ಅಸ್ಪಷ್ಟ ಆಗುವುದರಿಂದ) ಆ ಒಂದು ವಿಶೇಷ ಸಾಮರ್ಥವಿಲ್ಲದ ಸಾಮಾನ್ಯರು ವಿರಳಗೊಳಿಸಿ ತಮ್ಮ ಪೂರ್ವನಿಶ್ಚಿತ ವಿಚಾರಗಳಿಗೆ ಹೇಗೋ ಒಗ್ಗಿಸಿಕೊಂಡು ಅಂತಹ ಅನುಭವಗಳಿಗೊಂದು ಸುಳ್ಳು ಸ್ಪಷ್ಟತೆಯನ್ನೂ ಅದರ ಮೂಲಕ ಕೊರಕಲು ಬಿದ್ದ ಅರ್ಥವನ್ನು ಕೊಟ್ಟುಕೊಂಡು ಸಮಾಧಾನ ತಳೆದುಬಿಡುತ್ತಾರೆ. ಏಕೆಂದರೆ ಬೌದ್ಧಿಕ ದೃಷ್ಟಿಯಿಂದ ಅಸಂಬದ್ಧವಾಗಿ ಹಳೆಯ ಅನುಭವಗಳ ತಿರುಳನ್ನು ಚುಚ್ಚಿ ತಿಕ್ಕುವ ಮತ್ತು ಇದರ ಅಗ್ಗವೇನೆಂದು ಗೊಂದಲಗೆಡಿಸುವ ವಿಚಾರಾನುಭವಗಳನ್ನು ತಲೆಯಲ್ಲಿಟ್ಟುಕೊಳ್ಳುವುದು ಬಲು ಕಷ್ಟವಾಗಿ ಮನಸ್ಸು ಚಡಪಡಿಸಬಹುದು. ಈ ಕಷ್ಟದ ಬೌದ್ಧಿಕ ಕೆಲಸವನ್ನು ಸೃಷ್ಟಿಶೀಲರು ಮಾತ್ರ ಸಾಧಿಸಬಲ್ಲವರಾದ್ದರಿಂದ ಅನುಭವಗಳ ವಿಷಯದಲ್ಲಿ ವಿಶಿಷ್ಟ ಪ್ರಾಮಾಣಿಕತೆಯನ್ನವರು ತೋರಿಸಬಲ್ಲರು.
ಕಲಾತ್ಮಕ ಮತ್ತು ವೈಜ್ಞಾನಿಕ ಸೃಷ್ಟಿ

ಈ ತಲೆ ಬರಹ ಸೂಚಿಸುವಂತೆ ಕಲಾತ್ಮಕ ಮತ್ತು ವೈಜ್ಞಾನಿಕ ಸೃಷ್ಟಿ ಮೂಲಭೂತವಾಗಿ ಬೇರೆ ಬೇರೆಯಾದ ಕೆಲಸವೇ? ಎಂಬ ಪ್ರಶ್ನೆ ಏಳುವುದು ಸಹಜವಾಗಿದೆ. ವಿಜ್ಞಾನಿಗಳು ಮತ್ತು ಕಲಾವಿದರು ಬೇರೆ ಬೇರೆ ತರದ ವ್ಯಕ್ತಿಗಳೆಂಬುದು ಸಾಮಾನ್ಯ ಕಲ್ಪನೆಯಾಗಿದೆ. ಸೃಷ್ಟಿಶಕ್ತಿ ಇರುವ ಒಬ್ಬ ವ್ಯಕ್ತಿ, ಕವಿಯಾಗುತ್ತಾನೋ ಅಥವಾ ಭೌತವಿಜ್ಞಾನಿಯಾಗುತ್ತಾನೋ ಎನ್ನುವುದನ್ನು ನಿರ್ಧರಿಸುವ ಕೆಲವು ಅಂಶಗಳು ಇರಬೇಕೆನ್ನಿಸುವುದು ಸಹಜ. ಈ ಪ್ರಶ್ನೆಗೆ ಆಧುನಿಕ ಮನೋವಿಜ್ಞಾನದಲ್ಲಿ ತಕ್ಕ ಉತ್ತರ ದೊರೆಯುವುದಿಲ್ಲ. ಕಲಾವಿದರಿಗೂ (ಸಾಹಿತಿ, ಕವಿ, ಚಿತ್ರಕಾರ, ಶಿಲ್ಪಕಾರ) ಮತ್ತು ವಿಜ್ಞಾನಿಗಳಿಗೂ ಇರುವ ವ್ಯತ್ಯಾಸಗಳು ಕೆಲವು ಸೂಚನೆಗಳನ್ನು ಕೊಡಬಹುದೆಂದು ಪರೀಕ್ಷಿಸಲಾಯಿತು. ಆದರೆ ನಿರೀಕ್ಷಿಸಿದಂತೆ ಈ ಎರಡು ಬಗೆಯ ಸೃಷ್ಟಿ ಶೀಲರಲ್ಲಿ ಕಂಡುಬರುವ ವ್ಯತ್ಯಾಸಗಳಿಗಿಂತ ಹೋಲಿಕೆಗಳೇ ಹೆಚ್ಚು ! ವ್ಯತ್ಯಾಸವೆಂದರೆ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳಿಗಿಂತ ಹೆಚ್ಚು ಸೌಂದರ್ಯ ಪ್ರಜ್ಞೆಯುಳ್ಳವರು ; ಸೂಕ್ಷ್ಮಭಾವುಕರು ; ಹೆಚ್ಚು ಉದ್ವೇಗಪರರು ; ತಮ್ಮ ವಿಚಾರ ಮತ್ತು ಕ್ರಿಯೆಗಳನ್ನು ತರ್ಕಬದ್ಧವಾಗಿಸಲು ಅಷ್ಟಾಗಿ ಶ್ರಮಿಸದವರು. ಇಂತಹ ಕೆಲವು ವ್ಯತ್ಯಾಸಗಳನ್ನು ಬಿಟ್ಟರೆ ಕಲಾವಿದರ ಮತ್ತು ವಿಜ್ಞಾನಿಗಳ ವ್ಯಕ್ತಿತ್ವ ಚಿತ್ರಗಳು ಒಂದೇ ಆಗಿದೆ. ಎಲ್ಲಾ ಕ್ಷೇತ್ರಗಳ ಸೃಷ್ಟಿಶೀಲರು ಸಾಮಾಜಿಕ (ಸಮಸ್ಯೆಗಳಿಂದಲ್ಲ) ಗಡಿಬಿಡಿಗಳಿಂದ ದೂರಸರಿದ ಅಂತರ್ಮುಖಿಗಳು ; ಅತಿ ಹೆಚ್ಚು ಬುದ್ಧಿವಂತರು. ಬಹುಮುಖ ಯೋಚನಾಶಕ್ತಿಯುಳ್ಳವರು; ಚಿಂತಕರು; ತಾತ್ವಿಕರು; ಆಕಾಂಕ್ಷಿಗಳು; ಸಂಪ್ರದಾಯ
ವಿರೋಧಿಗಳು, ಬದಲಾವಣೆಯನ್ನು ಇಷ್ಟಪಡುವವರು; ತೀವ್ರಗಾಮಿಗಳು; ಸ್ವಯಂ ಪೂರ್ಣರು. ಹೀಗೆ ಅತಿ ಶ್ರೇಷ್ಠ ಕವಿ ಮತ್ತು ವಿಜ್ಞಾನಿಗಳಿಬ್ಬರ ವ್ಯಕ್ತಿತ್ವವನ್ನು ವರ್ಣಿಸಿದರೆ ಯಾರು ಯಾರೆಂದು ಹೇಳುವುದು ಸುಲಭವಲ್ಲ. ಇದರಿಂದ ಸೃಷ್ಟಿಕ್ರಿಯೆ, ಯಾವ ಕ್ಷೇತ್ರದಲ್ಲೇ ಅಭಿವ್ಯಕ್ತವಾಗಲಿ, ಮೂಲತಃ ಒಂದೇ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ಆದರೆ ಈ ಒಂದು ಸಮಸ್ಯೆಯ ಮೇಲೆ ಇನ್ನೂ ಹೆಚ್ಚು ಸಂಶೋಧನೆಗಳು ನಡೆಯಬೇಕಾಗಿದೆ. ಆದ್ದರಿಂದ ಇವು ತೀರ ತಾತ್ಕಾಲಿಕ ತೀರ್ಮಾನಗಳು.

ಈ ಲೇಖನದ ಪರಿಮಿತಿ
ಕಾರಣಾಂತರಗಳಿಂದ ಇನ್ನೂ ಅನೇಕ ಅಮುಖ್ಯವಲ್ಲದ ವಿಷಯಗಳ ಬಗ್ಗೆ ಈ ಲೇಖನದಲ್ಲಿ ಹೇಳಿಲ್ಲ. ಸೃಷ್ಟಿಶೀಲರ ವ್ಯಕ್ತಿತ್ವ ಮತ್ತು ಬುದ್ಧಿಶಕ್ತಿಯ ಬಗ್ಗೆ ಮಾತ್ರ ಹೆಚ್ಚು ಗಮನ ಕೊಡಲಾಗಿದೆ. ಬಿಟ್ಟಿರುವ ಬಲು ಮುಖ್ಯ ಸಮಸ್ಯೆಯೆಂದರೆ ಸೃಷ್ಟಿಕ್ರಿಯಾಪರಿಸರ. ಹಾಗೆ ನೋಡಿದರೆ ಮನೋವಿಜ್ಞಾನಿಗಳು ಸೃಷ್ಟಿಶೀಲರ ವ್ಯಕ್ತಿತ್ವ, ಸಂವೇದನೆಗಳು, ಬುದ್ಧಿಶಕ್ತಿ, ವರ್ತನೆ ಇವುಗಳನ್ನು ಅಭ್ಯಸಿಸಿದ ಮಟ್ಟಿಗೆ ಸೃಷ್ಟಿಕ್ರಿಯೆಯನ್ನೇ ಅಭ್ಯಾಸ ಮಾಡಿಲ್ಲ. ಒಂದು ಕಾರಣ, ಸೃಷ್ಟಿಕ್ರಿಯಾಪರಿಸರವನ್ನು ಅಳೆದು ಅಂಕಿಅಂಶಗಳ ರೂಪಕ್ಕಿಳಿಸುವುದು ಕಷ್ಟದ ಕೆಲಸವಾಗಿರುವುದು. ಆದರೂ ಅನೇಕ ಪ್ರಯತ್ನಗಳು ನಡೆದಿವೆ, ನಡೆಯುತ್ತಿವೆ. ಸೃಷ್ಟಿಶೀಲತೆಗೂ ವಾತಾವರಣಕ್ಕೂ, ಆನುವಂಶಿಕತೆಗೂ ಇರುವ ಸಂಬಂಧ, ಸೃಷ್ಟಿಶೀಲತೆ ಮತ್ತು ಶಿಕ್ಷಣ, ಪರಿಷ್ಕರಣ, ಸೃಷ್ಟಿಶೀಲತೆ ಮತ್ತು ಮನೋರೇಚಕ ರಾಸಾಯನಿಕ ದ್ರವ್ಯಗಳು (LSD ಇತ್ಯಾದಿ) ಇವೆಲ್ಲವುಗಳ ಬಗ್ಗೆ ಇಲ್ಲಿ ಏನನ್ನೂ ಹೇಳಲು ಸಾಧ್ಯವಾಗಿಲ್ಲ.
ವಿಮರ್ಶೆ, ಮುಕ್ತಾಯ

ಈ ಲೇಖನದಲ್ಲಿ ಹೇಳಿದ ಎಲ್ಲ ವಿಷಯಗಳೂ ವೈಜ್ಞಾನಿಕ ಪದ್ಧತಿಯಿಂದಲೇ ಸಂಗ್ರಹಿಸಿದವು. ವೈಜ್ಞಾನಿಕ ಪದ್ಧತಿ ಕೆಲವೊಂದು ಕ್ರಮಗಳನ್ನು ಮಾತ್ರ ವಿಧಿಸುವುದರಿಂದ ಇಲ್ಲಿಯ ಕುಂದುಕೊರತೆಗಳು ಕೆಲವು ಅನಿವಾರ್ಯವಾದವು. ಆದ್ದರಿಂದ ಸೃಷ್ಟಿಕ್ರಿಯೆಯ ಮತ್ತು ವ್ಯಕ್ತಿತ್ವದ ಯಾವ ಯಾವ ಅಂಶಗಳನ್ನು ಅಳತೆಗೊಳಪಡಿಸಬಹುದೋ ಆ ಎಲ್ಲ ಅಂಶಗಳ ಮೇಲೆ ಮಾತ್ರ ನಮಗಿಂದು ಗೊತ್ತಿರುವುದು. ಈ ರೀತಿ ಪರೀಕ್ಷೆಗೊಳಗಾಗದ ಅನೇಕ ಅಂಶಗಳ ಮೇಲೆ ವಿಷಯ ಸಂಗ್ರಹಣೆ ಮಾಡುವಲ್ಲಿ ಈ ಪದ್ಧತಿ ಸೋಲುತ್ತದೆ. ಅಲ್ಲದೆ ಒಂದು ಸಮಸ್ಯೆಯ ಸರಳವಾದ ಅಂಶಗಳು -ಅಳತೆ-ಪರೀಕ್ಷೆಗೆ ಶೀಘ್ರವಾಗಿ ಒಳಗಾಗಿ ಪ್ರಮುಖ ಮತ್ತು ಹೆಚ್ಚು ಅಮೂರ್ತವಾದ ಅಂಶಗಳು ಹೊರತಾಗುವುದರಿಂದ ಯಾವುದೇ ಸಮಸ್ಯೆಯ ಮೊದಮೊದಲಿನ ಅಭ್ಯಾಸಗಳು ಸ್ವಲ್ಪ ಸಾಮಾನ್ಯವಾದ ಅಂಶಗಳನ್ನು ಕೊಡುತ್ತಾ ಹೋಗುತ್ತವೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕ್ರಮೇಣ ಆ ಸಮಸ್ಯೆಯ ಮೇಲೆ ಹೆಚ್ಚು ಹೆಚ್ಚು ತಿಳುವಳಿಕೆ ಉಂಟಾದಂತೆ ಹೆಚ್ಚು ಸೂಕ್ಷ್ಮವಾದ ಅಳತೆಯ ವಿಧಾನಗಳನ್ನು ರಚಿಸುವುದು ಸಾಧ್ಯವಾಗಿ ಅದುವರೆಗೂ ಅಳತೆಗೊಳಪಟ್ಟಿರದ ಕ್ರಿಯಾಪರಿಸರಗಳನ್ನು ಅಳೆಯಬಹುದು. ಒಂದು ಕಾಲದಲ್ಲಿ ಬುದ್ಧಿಶಕ್ತಿಯು ಮಾಪನ ಅಸಾಧ್ಯವೆಂದು ತೋರಿತ್ತು. ಅದು ಸಾಧ್ಯವಾದ ಮೇಲೂ ಬಹಳಕಾಲ ಯೋಚನಾ ವಿಧಾನಗಳನ್ನು ಅಳೆಯುವ ಪರೀಕ್ಷೆಗಳು ಇರಲಿಲ್ಲ. ಕ್ರಮೇಣ ಇಂತಹ ಸೂಕ್ಷ್ಮ ಪರೀಕ್ಷೆಗಳ ರಚನೆ ಸಾಧ್ಯವಾಗಿದೆ. ಅದೇ ರೀತಿ ಇದುವರೆಗೂ ಅಳೆಯಲ್ಪಡದ ಸೃಷ್ಟಿಕ್ರಿಯಾ ಪರಿಸರಗಳನ್ನು ಅಳೆಯಲು ಸಾಧ್ಯವೇ ಇಲ್ಲ ಎಂಬ ನಂಬಿಕೆಗೆ ಆಧಾರವಿಲ್ಲ. ಮೊದಲೇ ಹೇಳಿದಂತೆ, ಸೃಷ್ಟಿಕ್ರಿಯೆಯ ವೈಜ್ಞಾನಿಕ ಅಭ್ಯಾಸ ಸ್ವಲ್ಪ ಇತ್ತೀಚಿನದೇ.
ಎರಡನೆಯದಾಗಿ ತೀರ ಸಾಮಾನ್ಯವಾದ ತಿಳುವಳಿಕೆಯನ್ನೂ ವೈಜ್ಞಾನಿಕ ಪದ್ದತಿಗೆ ಒಳಪಡಿಸಬೇಕಾದ ಅವಶ್ಯಕತೆ ಇದೆ. ಸೃಷ್ಟಿಶೀಲರೆಲ್ಲ ಹೆಚ್ಚು ಅಂತರ್ಮುಖಿಗಳು ಎಂದು ಬಹಳ ಜನರು ಅಂದುಕೊಂಡಿರಬಹುದು. ಆದರೆ ಇದು ನಿಜವಾಗಿ, ವಸ್ತು ನಿಷ್ಠವಾಗಿ ಸತ್ಯವೇ ? ಎಂಬ ಪ್ರಶ್ನೆ ಉಳಿದೇ ಉಳಿಯುತ್ತದೆ. ವೈಜ್ಞಾನಿಕ ಪದ್ಧತಿಯಿಂದ ಮಾತ್ರ ಈ ತಿಳುವಳಿಕೆ ಸರಿಯೇ, ತಪ್ಪೇ-ಎಂದು ನಿರ್ಧರಿಸಬಹುದು. ಆದ್ದರಿಂದ ವೈಜ್ಞಾನಿಕ ಅಭ್ಯಾಸಗಳು ಗೊತ್ತಿದ್ದದ್ದನ್ನೇ ಹೇಳಿದರೂ ಅದರಲ್ಲೊಂದು ದೊಡ್ಡ ವ್ಯತ್ಯಾಸವಿದೆ.
ಮೂರನೆಯದಾಗಿ ಮನೋವಿಜ್ಞಾನಿಗಳು ಸೃಷ್ಟಿಕ್ರಿಯೆಯನ್ನು ಇಷ್ಟರ ಮಟ್ಟಿಗೆ ಅಭ್ಯಾಸ ಮಾಡಿದರೂ ಅದರ ಬಗ್ಗೆ ಒಂದು ಅಂತಿಮ “ಸಿದ್ಧಾಂತವನ್ನು ಮಂಡಿಸಿದ್ದೇವೆಂದು ಯಾರೂ ನಟಿಸುವುದಿಲ್ಲ. ಈ ಲೇಖನದಲ್ಲಿ ಆದ್ದರಿಂದ ಸೃಷ್ಟಿ ಕ್ರಿಯೆಯ ಬಗ್ಗೆ ಸಿದ್ಧಾಂತಗಳೇನೂ ಇಲ್ಲ ; ವಸ್ತುನಿಷ್ಠವಾಗಿ ಸರಿ ಎಂದು ಕಂಡುಬಂದ ಕೆಲವು ಅಂಶಗಳು ಮಾತ್ರ ಇವೆ. ಅಂದರೆ ವೈಜ್ಞಾನಿಕ ಪದ್ಧತಿಯನ್ನು ಉಪಯೋಗಿಸುತ್ತಿರುವ ಇವರು ಸದಾ ಅದರ ಕೊರತೆಗಳ ಬಗ್ಗೆ ಜಾಗ್ರತರಾಗಿದ್ದು ಅವುಗಳನ್ನು ಮುಂದುವರಿದಂತೆಲ್ಲ ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದ್ದರಿಂದಲೇ ವೈಜ್ಞಾನಿಕ ಪದ್ಧತಿ ಹಂತ ಹಂತಗಳಲ್ಲಿ ತನ್ನನ್ನು ತಾನೇ ತಿದ್ದಿ ಸುಧಾರಿಸಿಕೊಳ್ಳುವ ಪದ್ಧತಿ ಎನ್ನುವುದು. ಇಲ್ಲಿ ಒಬ್ಬ ವಿಜ್ಞಾನಿ ಅಕಸ್ಮಾತ್ ತಪ್ಪು ತೀರ್ಮಾನಗಳಿಗೆ ಬಂದರೂ ಇನ್ನೊಬ್ಬ ಇನ್ನೂ ಹೆಚ್ಚಿನ ವಸ್ತುನಿಷ್ಠ ಕ್ರಮದಿಂದ ಅದನ್ನು ತಿದ್ದುವುದು ಸಾಧ್ಯ.
ಕೊನೆಯದಾಗಿ, ಇಲ್ಲಿನ ಹೇಳಿಕೆಗಳು ಸೃಷ್ಟಿಕ್ರಿಯೆಯನ್ನು ತೃಪ್ತಿಕರವಾಗಿ ವಿವರಿಸುವುದಿಲ್ಲವೆನ್ನಿಸುವುದು ಸಹಜ. ಆದರೆ ಅಂತಹ ಅತೃಪ್ತಿಯನ್ನು ಅದರ ಮೇಲೆ ಕೆಲಸಮಾಡುತ್ತಿರುವ ಮನೋವಿಜ್ಞಾನಿಗಳು ಬಹುಶಃ ಹೆಚ್ಚು ತೀವ್ರವಾಗಿ ಅನುಭವಿಸುವುದರಿಂದ ಅವರೇ ಸೃಷ್ಟಿಕ್ರಿಯೆಯ ಬಗ್ಗೆ ಇನ್ನೂ ಗಾಢವಾದ, ಸೂಕ್ಷವಾದ, ಪ್ರಮುಖವಾದ ಹೇಳಿಕೆಗಳನ್ನು ಮಾಡಲು ಸಮರ್ಥರಾಗಬಲ್ಲರೆಂದು ನಿರೀಕ್ಷಿಸಬಹುದು.

ಆಧಾರ ಗ್ರಂಥಗಳು.

ಈ ಲೇಖನದ ವಿಷಯಗಳನ್ನು ಹಲವು ಪುಸ್ತಕಗಳು ಮತ್ತು ನಿಯತಕಾಲಿಕಗಳಲ್ಲಿ ಪ್ರಕಟವಾದ ಸಂಶೋಧನ ಲೇಖನಗಳಿಂದ ಸಂಗ್ರಹಿಸಲಾಗಿದೆ. ಆದರೆ ಹೆಚ್ಚು ವಿಷಯಗಳನ್ನು ಈ ಕೆಳಗಿನ ಪುಸ್ತಕ, ಲೇಖನಗಳಿಂದ ಪಡೆಯಲಾಗಿದೆ.
Frank Barron : “Psychology of Creativity” in New Directions in psychology, II. Holt, Rinehart and Winston Inc, Newyork, 1965.
5*
2. Guilford, J.P.: “Creative abilities in the Arts”. Psychological Review, LXIV, 1957.
3.—”Traits of Creativity in H. H. Anderson (Ed.) Creativity and its cultivation. New York: Harper 1959.
4. Taylor, C.W. and Frank Barron : Scientific creativity. New York: John Wiley and Sons, Inc, 1966.

Close

ಛಲ

ಯಶವಂತ ಚಿತ್ತಾಲ

ಛಲ [ಸಣ್ಣ ಕತೆ]

ಈಗಾಗಲೇ ಅದೆಲ್ಲವನ್ನು ನೂರು ಸಲ ನೆನಸಿದ್ದೇನೆ. ನೆನಸಿದಷ್ಟು ಸಲ ಕಂಡದ್ದೆಲ್ಲ ನಿಜವೋ ಬರಿ ನನ್ನ ಭ್ರಮೆಯೋ ಎಂದುಕೊಂಡು ತಲೆಯನ್ನು ಗಲಗಲ ಅಲ್ಲಾಡಿಸಿ ನೋಡಿದ್ದೇನೆ. ಬರಿ ಭ್ರಮೆಯಲ್ಲವೆಂದು ಗೊತ್ತಾದಾಗಲೆಲ್ಲ ಇದೆಲ್ಲದರ ಅರ್ಥವೇನೆಂದು ದಿಗ್ಭ್ರಮೆಗೊಂಡಿದ್ದೇನೆ.
ಹತ್ತು ದಿನಗಳ ಹಿಂದೆ ಅಪ್ಪ ತೀರಿಕೊಂಡರು. ಅವರ ಉತ್ತರಕ್ರಿಯೆಗೆಂದು ಗೋಕರ್ಣಕ್ಕೆ ಬಂದಿದ್ದೆವು : ಧಾರವಾಡದಿಂದ ನಾನು, ನನ್ನ ಅಣ್ಣ ತಮ್ಮಂದಿರು. ಪುರೋಹಿತ ಭಟ್ಟರ ಮನೆಯ ಕೆಳಜಗಲಿಯ ಮೇಲೆ ವಿರಾಮ ಖುರ್ಚಿಯಲ್ಲಿ ಒರಗಿದ್ದೆ. ಏನನ್ನೋ ಕರಿದ ಹಾಗೆ ಒಗ್ಗರಣೆ ಇಟ್ಟ ಹಾಗೆ ವಾಸನೆ ಅಡುಗೆ ಮನೆಯಿಂದ ಜಗಲಿಗೂ ಇಡುಗಿತ್ತು. ಕೋಟಿತೀರ್ಥದ ದಡದಲ್ಲಿ ಹತ್ತನೆಯ ದಿನದ ಪಿಂಡಗಳನ್ನರ್ಪಿಸಿ ಬಂದ ನಂತರ ಭಟ್ಟರೆ ಪಂಕ್ತಿಯಲ್ಲಿ ಶ್ರಾದ್ಧದ ಊಟವಿತ್ತು. ಅಂಗಳದಲ್ಲಿ ಹಬ್ಬಿದ ಅರಿಸಿಣ ಬಣ್ಣದ ಬಿಸಿಲು; ನೀರ ಹಲಸಿನ ಮರದ ದಟ್ಟ ಎಲೆಗಳ ಮರೆಯಲ್ಲಿಯ ಒಂಟಿ ಕಾಗೆಯ ಕೂಗು ; ಬಾವಿಕಟ್ಟೆಯ ಬಳಿಯಲ್ಲಿಯ ಅರಿವೆ ಒಗೆವ ಸದ್ದು ನೆನಹುಗಳ ಬೇರುಗಳನ್ನೇ ಕೆದಕುತ್ತಿದ್ದುವು. ಸ್ನಾನಕ್ಕೆಂದು ಬಚ್ಚಲಿಗೆ ಹೋದ ಅಣ್ಣ ಇನ್ನೂ ತಿರುಗಿ ಬಂದಿರಲಿಲ್ಲ. ಬದಿಯ ಖುರ್ಚಿಯಲ್ಲಿ ಒರಗಿದ ತಮ್ಮನ ಬಾಡಿದ ಮೋರೆಯನ್ನು ನೋಡಲಾಗಲಿಲ್ಲ.
ಮೇಲ್ಟ ಗಲಿಯ ಮೇಲೆ ಶ್ರಾದ್ಧ ಕರ್ಮದ ಸಲಕರಣೆಗಳನ್ನು ಅಣಿಗೊಳಿಸುತ್ತಾ ಇದ್ದ ಪುರೋಹಿತರ ಲಕ್ಷವೆಲ್ಲ ನನ್ನತ್ತವೇ. ಕತ್ತಲು ಕತ್ತಲಾದ ನಡುಮನೆಯಲ್ಲಿ ಯಾರೋ ಮಡಿಸೀರೆ ಉಡುತ್ತಿದ್ದುದರ ಅಸ್ಪಷ್ಟ ಚಿತ್ರದಲ್ಲಿ ಚಿಕ್ಕಂದಿನ ನೆನಪು: ಪುರುಷೋತ್ತಮನ ಚಹದಂಗಡಿಯ ಇದಿರಿನ ಅರ್ಧಕ್ಕೆ ಹುಲ್ಲು ಅರ್ಧಕ್ಕೆ ಹಂಚು ಹೊದಿಸಿದ್ದ ಮನೆಯ ಕತ್ತಲೆ ತುಂಬಿದ ಕೋಣೆಯಲ್ಲಿ ಸಾಯಲು ಬಿದ್ದಿದ್ದ ದುರ್ಗಸೆಟ್ಟಿಯ ಅರ್ಧನಗ್ನದೇಹ ಕಂಡಂತೆ.
ಜಳಕ ಮುಗಿಸಿ ಭಟ್ಟರು ಕೊಟ್ಟ ಒಗೆದ ಪಂಜಿಯನ್ನುಟ್ಟು ಹೊರಗೆ ಬಂದ ಅಣ್ಣನ ಕಣ್ಣು ಕೆಂಪಾಗಿದ್ದುವು. ನೀನು ಬೇಗ ಬೇಗ ಜಳಕ ಮುಗಿಸಿ ಬಾ ; ಬಿಸಿಲು ಕಾಯುವ ಮೊದಲೇ ಹೊರಡುವಾ ಎಂದು ಭಟ್ಟರು ಹೇಳಿದಾಗ ತಮ್ಮನು ಖುರ್ಚಿಯಿಂದ ಎದ್ದ. ಅವನ ಕಣ್ಣುಗಳೂ ಕೆಂಪಾಗಿದ್ದುವು. ಧರ್ಮದ ದೃಷ್ಟಿಯಿಂದ, ಸತ್ಯ ಅಪ್ಪನಿಗೆ ಪಿಂಡಗಳನ್ನರ್ಪಿಸುವ ಅಧಿಕಾರ ಹಿರಿಯ ಹಾಗೂ ಕಿರಿಯ ಮಕ್ಕಳಿಗೆ ಇದ್ದಷ್ಟು ನಡುವಿನವನಾದ ನನಗಿಲ್ಲವಂತೆ. ಎಂತಲೇ ಈ ಎಲ್ಲ ವಿಧಿಕಾಂಡಗಳಲ್ಲಿ ನನ್ನ ಸ್ಥಾನ ಗೌಣ. ಅಪ್ಪನ ಬದುಕಿನಲ್ಲಿ ಕೂಡಾ ಹಾಗೇ. ಅವರು ಸಾಯುವಾಗ ನಾನು ಅವರ ಬದಿಯಲ್ಲಿ ಇದ್ದಿರಲಿಲ್ಲ. ಮುಂಬಯಿಗೆ ಸುದ್ದಿ ಮುಟ್ಟಿ ನಾನು ಧಾರವಾಡ ತಲುಪಿದಾಗ ನೋಡ ಸಿಕ್ಕದ್ದು ಊದಿನ ಕಡ್ಡಿ ಹಚ್ಚಿ ಇಟ್ಟ ಅವರ ಕೋಣೆಯಲ್ಲಿಯ ಖಾಲಿ ಮಂಚ ಮಾತ್ರ. ಹಾಗೆಂದೋ ಏನೋ ಅವರ ಸಾವು ಅಣ್ಣ ತಮ್ಮಂದಿರ ಮೇಲೆ ಮಾಡಿದಷ್ಟು ತೀವ್ರ ಪರಿಣಾಮ ನನ್ನ ಮೇಲೆ ಆ ಕ್ಷಣದ ಮಟ್ಟಿಗಂತೂ ಮಾಡಿದಂತಿರಲಿಲ್ಲ. ಆದರೂ ಜೀವದ ಆಳದಲ್ಲಿ ಏನೋ ದ್ರವಿಸಹತ್ತಿದ ಅನಿಸಿಕೆ.
ಭಟ್ಟರ ಇದಿರಿಗೆ ಮಣೆಯ ಮೇಲೆ ಕುಳಿತು ಅಂಗೈಯಲ್ಲಿ ಗೋಪೀಚಂದನ ತೇದು ಎಂದೋ ಮರೆತು ಹೋದ ನಾಮ ಮುದ್ರೆಗನ್ನೆಳೆಯುತ್ತಿದ್ದ ಅಣ್ಣನ ಕಣ್ಣುಗಳು ನನ್ನ ದೃಷ್ಟಿಯನ್ನು ತಪ್ಪಿಸುತ್ತಿದ್ದುವು. ನಿನ್ನೆ ಕೂಡ ಕೋಟಿತೀರ್ಥದ ಕಟ್ಟೆಯ ಮೇಲೆ ಹೀಗೇ ಶ್ರಾದ್ಧ ವಿಧಿಗಳು ನಡೆದ ಹೊತ್ತಿಗೆ ಕರಿಯ ಕಲ್ಲುಗುಂಡಿಗೆ ದರ‍್ಬೆಯ ಪವಿತ್ರದಿಂದ ಕರಿ ಎಳ್ಳು ನೀರು ಸಿಂಪಡಿಸುತ್ತ ‘ಶಂಕರ ಶರ್ಮಣಃ ಪ್ರೇತಸ್ಯ’ ಎಂದಾಗ ಜೀವ ಜುಮ್ ಎಂದಿತ್ತು. ಅಣ್ಣನ ಬರಿ ಮೈಮೇಲೆ ಮುಳ್ಳು ನಿಂತದ್ದು ಸ್ಪಷ್ಟವಾಗಿ ಕಂಡಿತ್ತು. ಮೊನ್ನೆ ಮೊನ್ನೆಯ ತನಕ ಪ್ರೀತಿಯ ಅಪ್ಪನಾದವನು ಈಗ ಪ್ರೇತವಾಗಿದ್ದನ್ನು ಮನಸ್ಸು ಒಪ್ಪಲು ಸಿದ್ಧವಾಗಿರಲಿಲ್ಲ. ಭಟ್ಟರ ಮಂತ್ರಗಳ ಉದ್ದೇಶ ಮಾತ್ರ ಇದನ್ನು ಒಪ್ಪಿಸುವುದೇ ಆದಂತಿತ್ತು. ಇಷ್ಟೇ ಅಲ್ಲ, ಹೋಮಕ್ಕೆಂದು ಕಟ್ಟಿಗೆ ಒಟ್ಟಿಸಿ ಬೆಂಕಿ ಇಡುತ್ತಿದ್ದಂತೆ “ಎಂತೆಂತಹ ಜನ ಇರ್ತಾರೆ ನೋಡಿ,” ಎಂದರು. “ನಿಮಗೆಲ್ಲ ಇದರಲ್ಲಿ ನಂಬಿಕೆ ಇರಲಿಕ್ಕಿಲ್ಲರಯ್ಯ. ಆದರೆ ನಂಬಿಕೆ ಇಲ್ಲದ್ದನ್ನು ಬಾಯಿಂದ ಆಡಿತೋರಿಸಲು ಒಂದು ರೀತಿಯೆಂಬುದಿರಬೇಡವೇ ? ಹಿಂದೆ, ಇದೇ ಕೋಟಿತೀರ್ಥದಲ್ಲಲ್ಲವೇ ನಿಮ್ಮ ವಾಮನ ಮಾಮ ಜೀವ ಕೊಟ್ಟದ್ದು ?…..”
ನನಗೆ ಕರಳು ಝಲ್ ಎಂದು ಮೈತುಂಬ ನವಿರೆದ್ದು ಸಾವಿರ ನೆನಪುಗಳು : ಹಾವಸೆ ಗಟ್ಟಿದ ಹಸಿರು ನೀರಿನ ಮಧ್ಯದಲ್ಲಿ ಎಲುಬುಗೂಡಿನಂತಹ ಕಲ್ಲುಮಂಟಪ. ಕಟ್ಟೆಯ ಮೇಲೆ ತಗಡಿನ ಮಾಡುಗಳ ಕಾದ ನೆರಳಲ್ಲಿ ಶ್ರಾದ್ಧ ಕರ್ಮಗಳಲ್ಲಿ ತೊಡಗಿದ ಭಟ್ಟರ ಮಂತ್ರದ ಗಲಾಟೆ. ಸುತ್ತಲಿನ ಬ್ರಾಹ್ಮಣ ಕೇರಿಗಳಲ್ಲಿ ಹಳೆಕಾಲದ ಜೀರ್ಣ ಮನೆಗಳು: ಕಪ್ಪು ಡಾಂಬರಿನಲ್ಲಿ ದಮ್ಮಿನ ರೋಗಕ್ಕೆ, ವೀರ್ಯನಾಶಕ್ಕೆ ಔಷಧಿಗಳ ಜಾಹೀರಾತುಗಳನ್ನು ಹೊತ್ತ ಕೆಂಪು ಧೂಳಿ ಮೆತ್ತಿದ ಮುರುಕಲು ಗೋಡೆಗಳು. ಗರಿ ಬೀಸುವ ತೆಂಗು, ಅಡಿಕೆ ಗಿಡಗಳು: ತೀರ್ಥದ ನೀರಿನಲ್ಲಿ ನಡುಗುವ ಹಸಿರು ನೆರಳುಗಳು. ತೇಲುವ ಬಾಳೆ ಎಲೆ, ತೆಂಗಿನಕಾಯಿ, ಕುಂಕುಮ ಹಚ್ಚಿದ ಅಕ್ಕಿ ಕಾಳು, ಪಿಂಡದ ಅಗಳು ; ಕಾಗೆಗಳ ಕಲರವ ; ಈಜುವ ಕಚ್ಚೆ ಉಟ್ಟ ಹುಡುಗರ ತಂಡ ; ಬೆತ್ತಲೆ ತೊಡೆ ತೋರಿಸುತ್ತ ಅರಿವೆ ಒಗೆವ ಒಕ್ಕಲಗಿತ್ತಿಯರು. ಭಟ್ಟರ ಹೆಂಗಸರು, ಕೆಂಪು ಸೀರೆಯ ಬೋಳಿಗಳು ; ಹಿಂದೆ ಎಂದೋ ಒಮ್ಮೆ ತಳದ ಅರ್ಲುಮಣ್ಣು ತೆಗೆಯಲು ಪಂಪು ಹಚ್ಚಿ ತೀರ್ಥದ ನೀರನ್ನು ಬತ್ತಿಸಿದಾಗ ಹೊಟ್ಟೆ ಮೇಲಾಗಿ ಬಿದ್ದ ಕಪ್ಪೆಗಳು, ಸತ್ತು ಬಿದ್ದೂ ತಕಪಳನೆ ಹೊಳೆವ ಮೀನುಗಳು; ತೀರ್ಥದ ನೀರಿನ ಸೆಲೆಗಳಾದ ಸಾವಿರ ಕುಂಡಗಳು : ಸಾವಿರ ನೆನಪುಗಳಲ್ಲಿ ಮೂಡಿ ಬಂದದ್ದು ವಾಮನ ಮಾಮನ ಹೊಟ್ಟೆ ಕೆಳಗಾಗಿ ತೇಲುತ್ತಿದ್ದ ಹೆಣ !
“ಅಂತ್ಯಕ್ರಿಯೆಗಾಗಿ ಮುಂಬಯಿಯಿಂದ ಬಂದಿದ್ದನಲ್ಲ ಏಕಮಾತ್ರ ಪುತ್ರರತ್ನ,” ಭಟ್ಟರು ಮುಂದುವರಿದಿದ್ದರು. “ಬಿಝಿನೆಸ್‌ಮನ್ನನಂತೆ, ಆಗಿರಬಹುದಯ್ಯಾ. ಹಣ ಗಳಿಸಿದರಾಯಿತೆ ? ನಮ್ಮ ಕೆಳಗಿನ ಕೇರಿಯ ಸೂಳೆ ಗಳಿಸುವುದಿಲ್ಲವೇ ಹಣವನ್ನು ? ಇದೇ ಕಟ್ಟೆಯ ಮೇಲೆ ಶ್ರಾದ್ಧಕ್ಕೆ ಕೂತಾಗ ಏನೆಂದ ಗೊತ್ತೇ-ಸ್ವತಃ ತನ್ನನ್ನು ಹೆತ್ತು ಸಲಹಿದ ಅಪ್ಪನನ್ನು ಕುರಿತು ? ಇದರಲೆಲ್ಲ ನನಗೆ ವಿಶ್ವಾಸವಿದೆಯೆಂದು ತಿಳಿಯಬೇಡಿ ಭಟ್ಟರೇ, ರಾತ್ರಿ ನಿದ್ದೆ ಬೀಳದ ಬೇಸರಕ್ಕಲ್ಲವೇ ಅಪ್ಪ ಹುಟ್ಟಿಸಿದ್ದು ನಮ್ಮನ್ನು ? ಇದನ್ನೆಲ್ಲ ಮಾಡುವದು ಬರೀ ಅಮ್ಮನ ಸಮಾಧಾನಕ್ಕೆ, ನಿಮ್ಮ ಸಮಾಧಾನಕ್ಕೆ ಎಂದನಲ್ಲ.” ಅಣ್ಣ ಒಮ್ಮಿಗಲೇ ಎದ್ದು ನಿಂತಿದ್ದ. ಅವನ ಅಸ್ವಸ್ಥತೆಯನ್ನು ಅರಿತವರ ಹಾಗೆ ಭಟ್ಟರು, “ಓ ಹೌದೌದು ಈ ಬೆಂಕಿ ಹೊತ್ತುವ ತನಕ ನೀನು ಇನ್ನೊಮ್ಮೆ ನೀರಿನಲ್ಲಿ ಮುಳುಗು ಹಾಕಿ ಬಾ,” ಎಂದಿದ್ದರು…….
ಬಾವಿಯ ಗಡಗಡೆ ಹಗ್ಗದ ಭಾರದ ಕೆಳಗೆ ಕಿರುಚಿತು. ಆ ಸದ್ದಿನ ಹಿಂದೆಯೇ ಬಂದ ಕಂಚಿನ ಕಂಠದ ಹೆಣ್ಣು ದನಿ, ‘ಬಂದವರೆಲ್ಲ ಕೋಟಿತೀರ್ಥಕ್ಕೆ ಹೋಗಿಯಾಯಿತೋ ನೋಡ್ತೆ,’ ಎನ್ನುತ್ತ ಹೊರಗಿನ ಪೂರ್ವಾಹ್ನದ ಎಳೆ ಬಿಸಿಲಲ್ಲಿ ನೆನಪುಗಳ ತೆರೆಗಳನ್ನೆಬ್ಬಿಸಹತ್ತಿತು. “ಅದು ಯಾರೆಂದು ತಿಳಿಯಿತೇ ?” ಎಂದು ಕೇಳಿ ಹುಬ್ಬೇರಿಸಿದ ಭಟ್ಟರು ತಾವೇ ಉತ್ತರಿಸಿದರು, “ನಿನ್ನ ವಾಮನ ಮಾಮನ ಹೆಂಡತಿ, ಪದ್ದಕ್ಕ.”
ನನಗೆ ದಿಗಿಲು : ಇದೀಗ ನಾನು ಯೋಚಿಸುತ್ತಿದ್ದದ್ದು ಅವಳ ಬಗ್ಗೆ ಆಗಿತ್ತು : ಗಂಡ ಸತ್ತ ಮೇಲೆ ಅವಳು ಹೊಸ ಮನೆಯೊಂದನ್ನು ಕಟ್ಟಿಸಿದ್ದಾಳಂತೆ. ಮಗನಿಗೆ ಗೃಹಪ್ರವೇಶಕ್ಕೆ ಬರಲಾಗದ್ದರಿಂದ ಗೃಹಪ್ರವೇಶವಾಗಿರದ ಮನೆಯಲ್ಲೇ ನಿಲ್ಲಲು ಬಂದಾಳಂತೆ. ಹನೇಹಳ್ಳಿಯ ತನ್ನ ಹಳೆಮನೆಯನ್ನು ಒಬ್ಬ ಮುಸಲ್ಮಾನನಿಗೆ ಮಾರಿದ್ದಾಳಂತೆ. ಹದಿನೈದು ಇಪ್ಪತ್ತು ಜನಕ್ಕೆ ಸಾಲುವಷ್ಟು ದೊಡ್ಡ ಮನೆಯಲ್ಲಿ ಒಬ್ಬಳೇ ಇರುತ್ತಾಳಂತೆ. ಹಿತ್ತಲ ಬಾವಿಗೆ ಮಾತ್ರ ನೀರಿಲ್ಲದ್ದರಿಂದ ಭಟ್ಟರ ಹಿತ್ತಲಿಗೇ ನೀರಿಗೆ ಬರುತ್ತಾಳಂತೆ.
“ಇಂದು ಮಧ್ಯಾಹ್ನ ನಿನ್ನನ್ನು ನೋಡಲು ಬಂದರೂ ಬಂದಳೇ,” ಭಟ್ಟರು ಅಂದರು. “ನೀವೆಲ್ಲ ನಾಳೆಗೇ ಧಾರವಾಡಕ್ಕೆ ಹೋಗುತ್ತೀರಿ, ವೈಕುಂಠಸಮಾರಾಧನೆ ಉಳಿದ ವಿಧಿಗಳನ್ನು ಅಲ್ಲೇ ಮಾಡುತ್ತೀರಿ ಎಂದು ತಿಳಿದಾಗಲೇ ನನ್ನ ಹತ್ತಿರ ಅಂದಿದ್ದಳು. ನಿನ್ನ ಅಣ್ಣ ತಮ್ಮಂದಿರಲ್ಲಿ ನೀನೊಬ್ಬನು ಅವಳ ಮನೆಯನ್ನು ನೋಡಿಲ್ಲವಲ್ಲ !” ತಮ್ಮನೂ ಸ್ನಾನ ಮುಗಿಸಿ ಬಂದ, “ಕೋಟಿತೀರ್ಥಕ್ಕೆ ಹೊರಡುವ ಮೊದಲು ಇವರಿಬ್ಬರದೂ ಇಲ್ಲಿ ತುಸು ಕೆಲಸವಿದೆ. ಅಷ್ಟರಲ್ಲಿ ನೀನು ಸ್ನಾನ ಮುಗಿಸಿ ಬಾ. ನಾಮ ಮುದ್ರೆಗಳನ್ನು ಬೇಕಾದರೆ ಕೋಟಿತೀರ್ಥದ ಮೇಲೇ ಮುಗಿಸುವಿಯಂತೆ,” ಎಂದು ಭಟ್ಟರು ಹೇಳಿದಾಗ ಸ್ನಾನಕ್ಕೆ ಹೊರಟೆ. ಬಚ್ಚಲ ಮನೆಯಲ್ಲಿ ಕತ್ತಲೆ, ಒಲೆಯಲ್ಲಿ ನಿಗಿ ನಿಗಿ ಉರಿಯುವ ಕೆಂಡದ ರಾಶಿ : ಕನಸಿನ ನೆನಪು, ಹಂಡೆಯೊಳಗಿನ ಬೆಚ್ಚಗಿನ ನೀರನ್ನು ತಂಬಿಗೆಯಿಂದೆತ್ತಿ ಮೈಮೇಲೆ ಎರೆದುಕೊಳ್ಳುತ್ತಿದ್ದಂತೆ ಹಾಯೆನಿಸಿದ ನರಗಳೊಳಗಿಂದಲೇ ಎದ್ದು ಬಂದಿತೆಂಬಂತೆ ಎಂದೋ ಕಳಕೊಂಡ ತಾಯ ನೆನಪು ಒಮ್ಮಿಗಲೇ ಮುತ್ತಿನಿಂತು ಸುಖಕೊಟ್ಟಿತು. ಮರುಗಳಿಗೆ ಪದ್ಧಕ್ಕನ ನೆನಪು :
ವರುಷಗಳ ಹಿಂದೆ ಅವಳ ಜತೆಯಲ್ಲಿ ಗೋಕರ್ಣದಿಂದ ಹನೇಹಳ್ಳಿಗೆ ದಾರಿಸಾಗಿದ ಆ ಸಂಜೆ. ಹಾದಿಯ ತುಂಬ ಬೆಂಕಿಯ ಬಣ್ಣದ ಬಿಸಿಲು ; ಪದ್ಧಕನ ಮನೆಯಿಂದ ಸುಮಾರು ಅರ್ಧ ಫರ್ಲಾಂಗಿನಲ್ಲಿದ್ದ ಮುಸಲರ ಗೋರಿಯನ್ನು ದಾಟುತ್ತಿದ್ದಾಗ ಬಲಗಡೆಯ ಬೇಲಿಯಲ್ಲಿಯ ಸುರಗೀಮರದ ಹೊದರಿನಿಂದ ಹೊರಗೆ ಬಂದು ಹೆಡೆ ಎತ್ತಿ ತೂಗಿದ ಹಾವು : ಎದೆ ಧಸ್ ಎಂದು ನಡುಗಿದಾಗ ಹೆದರಬೇಡ ಎಂದು ನನ್ನ ಕೈ ರಟ್ಟೆ ಹಿಡಿದಾಗ, ಇವಳು ತುಂಬ ಧೈರ್ಯದ ಹೆಂಗಸು ಎನ್ನಿಸಿದ ಪದ್ದಕ್ಕನ ಕೈಯ ಸ್ಪರ್ಶ ; ಹಾವು ತನ್ನ ಮಾರುದ್ದದ ಮೈಯನ್ನು ಬಿಸಿಲಲ್ಲಿ ಮಿರಮಿರನೆ ಮಿಂಚಿಸಿ ಬೇಲಿಯಲ್ಲಿ ಮರೆಯಾದದ್ದು-ಎಲ್ಲವನ್ನೂ ನೆನಸುತ್ತಿದ್ದಂತೆಯೇ ಪದ್ದಕ್ಕನ ಆಗಿನ ರೂಪ ಕಣ್ಣ ಮುಂದೆ ಕಟ್ಟಿ ನಿಂತಿತು : ಕೆಂಪು ದಡಿ ಕೆಂಪು ಸೆರಗಿನ ಹಸಿರು ಬಣ್ಣದ ಇಳಕಲ್ ಸೀರೆ. ಹಸಿರು ಬಣ್ಣದ ಖಣದ ರವಕಿ. ಮುಡಿ ಕಟ್ಟಿದ ಕೂದಲ ಮೇಲೆ ತಲೆತುಂಬ ಅಬ್ಬಲಿಗೆ, ಸೇವಂತಿಗೆಯ ಜಡೆ : ನಾಲವತ್ತು ದಾಟಿದ ಹೆಣ್ಣು ಮದುವಣಿಗಿತ್ತಿಯ ಹಾಗೆ ;
ತುರುಬಿನ ತುದಿಯಲ್ಲಿ ಲಕಲಕಿಸುವ ಬಂಗಾರದ ಹೂವು ; ಕೊರಳಲ್ಲಿ ಬಂಗಾರದ ದೊಡ್ಡ ದೊಡ್ಡ ಮಣಿಗಳುಳ್ಳ ಕರಿಮಣಿಯ ಸರ ; ಕೈಗೆ ಹಸಿರು, ಕೆಂಪು ಬಣ್ಣದ ಗಾಜಿನ ಬಳೆಗಳ ಜತೆ ಎರಡೆರಡು ಬಂಗಾರದ ಬಳೆಗಳು ; ಉಳಿದವರ ಬಾಯಿ ಮುಚ್ಚಿಸಲು ತುಟಿಗಳ ಮೇಲೆ ಇಟ್ಟ ಬೆರಳಿನಂತೆ ತೋರುವ ಬಂಗಾರದ ಮೂಗುತಿ ಎರಡೂ ತುಟಗಳನ್ನು ಏರಿ ಕೆಳಗಿಳಿದು ಇವಳು ಬಹಳ ಮಾತನಾಡುವವಳಲ್ಲ ಎಂದು ಸಾರುತ್ತಿದ್ದಂತಿತ್ತು. ಗಟ್ಟಿ ಮನಸ್ಸಿನ ಹೆಣ್ಣು. ಉಮೇದು ಉತ್ಸಾಹದ ಹೆಣ್ಣು…. ಕೈಯಲ್ಲಿಯ ತಂಬಿಗೆ ಹಂಡೆಗೆ ಅಪ್ಪಳಿಸಿದಾಗ ಎಚ್ಚರ ಬಂದು ಹೊರಗೆ ನಾನು ಸ್ನಾನ ಮುಗಿಸುವುದರದೇ ಹಾದಿ ಕಾಯುತ್ತಿದ್ದವರ ನೆನಪಾಗಿ ದಡಬಡಿಸಿದೆ. ಬೇಗ ಬೇಗ ಮೈ ಒರಸಿ ಮಡಿ ಪಂಜಿಯನ್ನುಟ್ಟು ಹೊರಗೆ ಬಂದೆ. ಅಣ್ಣ, ತಮ್ಮ ಹಾಗೂ ಪುರೋಹಿತರು ಇನ್ನಿಬ್ಬರು ಭಟ್ಟರೊಂದಿಗೆ ಕೋಟಿತೀರ್ಥಕ್ಕೆ ಹೊರಡಲು ಸಿದ್ಧವಾಗಿ ನಿಂತಿದ್ದರು.
ಕೋಟಿತೀರ್ಥದಿಂದ ಹಿಂತಿರುಗಿ ಬಂದು, ಊಟ ಮುಗಿದು, ಭಟ್ಟರಿಂದ ಮಂತ್ರಾಕ್ಷತೆ ಪಡೆದು ವಿರಮಿಸುವ ಹೊತ್ತಿಗೆ ಮಧ್ಯಾನದ ಮೂರು ಗಂಟೆ. ಅಣ್ಣ ತುಸು ಅಡ್ಡವಾಗಲೆಂದು ಅಟ್ಟವನ್ನು ಸೇರಿದ. ಗೆಳೆಯನೊಬ್ಬನನ್ನು ನೋಡಿ ಬರುತ್ತೇನೆಂದು ಹೇಳಿ ತಮ್ಮ ಹೊರಗೆ ನಡೆದ. ನಾನು ಆಗಿನದೇ ವಿರಾಮ ಖುರ್ಚಿಯಲ್ಲೊರಗಿದೆ. ಜಗಲಿಯ ಮೇಲೆ ಪುರೋಹಿತರು ಊಟಕ್ಕೆ ಬಂದ ಇತರ ಭಟ್ಟರೊಂದಿಗೆ ಲೆಕ್ಕಾಚಾರದ ಮಾತನ್ನು ಆಡುತ್ತಿದ್ದರು. ಅಟ್ಟಕ್ಕೆ ಹೋಗುವ ನಿಚ್ಚಣಿಕೆ ಇದ್ದ ಮೂಲೆಯಲ್ಲಿ ಭಟ್ಟರ ತಾಯಿ, ಕೆಂಪು ಸೀರೆ ಉಟ್ಟ ಮುದುಕಿ ಕುಟ್ಟೊರಳಿನಲ್ಲಿ ಕವಳದ ಸಾಮಾನು ಕುಟ್ಟುತ್ತ
ನನ್ನನ್ನೇ ಪಿಳಿಪಿಳಿ ನೋಡುತ್ತಿದ್ದಳು. ಹಿತ್ತಲ ಮೂಲೆಯಲ್ಲೆಲ್ಲೋ ನಾಯಿ ಕಾಗೆಗಳ ಗುಲ್ಲೋ ಗುಲ್ಲು : ಎಂಜಲೆಲೆಗಳ ಮೇಲೆ ದಾಳಿ ನಡೆದಿರಬೇಕು. ಊಟದ ಭಾರ ; ಕಳೆದ ಹತ್ತು ದಿನಗಳಿಂದಲೂ ಮನಸ್ಸನ್ನಾವರಿಸಿದ ಸೂತಕದ ಭಾವನೆ ; ಒಂದು ಬಗೆಯ ಹಳ ಹಳಿ? ; ಎಂದೋ ಕಳಕೊಂಡ ಹಿರಿಯ ಅಣ್ಣ-ಅಮ್ಮಂದಿರ ನೆನಪು. ಜೊಂಪು, ಎಚ್ಚರ. ಜೊಂಪು : ಪದ್ದಕ್ಕ, ಹನೇಹಳ್ಳಿಯ ಮನೆ. ಹಿತ್ತಿಲು, ಹೂವು, ಹಸಿರಿನ ಗುಲ್ಲು. ಬೇಲಿಯಲ್ಲಿ, ಬಾವಿಯ ಸುತ್ತಲೂ, ತುಳಸೀಕಟ್ಟೆಯ ಹತ್ತಿರ : ಜಾಗ ಸಿಕ್ಕಲ್ಲೆಲ್ಲ ಹೂವೇ ಹೂವು : ಬಣ್ಣ ಬಣ್ಣದ ಗೋಟಕೀ, ಕರ್ಪೂರಗೊಂಡೆ, ರಾಜಗೊಂಡೆ, ವಿಲಾಯತೀ ಗೊಂಡೆ ನಿತ್ಯಪುಷ್ಪ, ಸದಾನಂದ, ಕರವೀರ, ಸಬದೂಲಿ, ದಾಸಾಳ, ಮಲ್ಲಿಗೆ ಒಂದೇ ಎರಡೆ ?- ಪದ್ದಕ್ಕನ ಉಮೇದು ಉತ್ಸಾಹಗಳಂತೆ ; ಯಾವ ಹಂಗಾಮಿನಲ್ಲೂ ಆ ಹಂಗಾಮಿಗೆ ತಕ್ಕಂತೆ : ಮನೆಯ ದೇವರಿಗೆಂದು ; ಮಠಕ್ಕೆ, ಊರ ದೇವತೆಗಳಾದ ದೇವತೀ, ಮುರ್ಕುಂಡೀ ದೇವಾಲಯಗಳಿಗೆಂದು ; ಚಕ್ರಖಂಡೇಶ್ವರ ಮಹಾಬಲೇಶ್ವರರಿಗೆಂದು…. ಬಾಳೆ, ತೆಂಗು, ಅಡಿಕೆ ಗಿಡಗಳಿಂದಾಗಿ ಹಿತ್ತಿಲು ತುಂಬ ಹಸಿರು ನೆರಳು: ಕೆಸುವಿನ ಓಳಿಗಳು ; ಸುವರ್ಣಗಡ್ಡೆಯ ಹಿಂಡುಗಳು; ಬಸಲೆ, ಕೆಂಪು ಹರಗಿ ; ಮಳೆಗಾಲದಲ್ಲಿ ಅಂಗಳದಲ್ಲೇ ಸವತೆ, ಹೀರೇಕಾಯಿ, ಪೆಟ್ಲ ಕಾಯ ಓಳಿಗಳು ; ಮನೆಯ ದನಗಳ ಕೊಟ್ಟಿಗೆಯ ಮಾಡುಗಳ ಮೇಲೂ ಸೋರೆಕಾಯಿ, ಕರಿ ಕುಂಬಳ, ಹಾಲುಗುಂಬಳ ಬಳ್ಳಿಗಳು… ಚರ್‌’ಮುರ್…. ಚರ್ ಮುರ್‌‌… ಯಾರ ಮೆಟ್ಟಿನ ಸದ್ದು ?…. ಯಾವ ಈ ದಾರಿ ?…. ಹಾವು ಕಂಡು ಹೆದರಿದ ದಾರಿಯ ಕೊನೆ ಅಲ್ಲವೇ ? : ನೀರಿನಲ್ಲಿ ಕೊಳೆ ಹಾಕಿದ ತೊಗಲಿನ ವಾಸನೆ ಗುಮ್ ಎಂದು ಮೂಗಿಗೆ ಹೊಡೆದು ನಾವು ಸಮಗಾರರ ಕೇರಿಯನ್ನು ಸಮೀಪಿಸಿದ್ದನ್ನು ಸಾರಿತು. ಮಣ್ಣಿನ ಗುನ್ನದ ಏರಿಯಲ್ಲಿ ಗೇರು ಮರಗಳ ನೆರಳಲ್ಲಿ ನಿಂತ ಹುಲ್ಲು ಹೊದಿಸಿದ ಗುಡಿಸಲಿನ ಮಾರಗಲದ ಅಂಗಳದಲ್ಲಿ ತುಳಸೀಕಟ್ಟೆಯ ಇದಿರಿಗೆ, ಕಾಲ ಉಗುರಿನಿಂದ ಕಿವಿ ಕೆದರಿಕೊಳ್ಳುತ್ತಿದ್ದ ಕಂದು ಬಣ್ಣದ ನಾಯ ಮಗ್ಗಲಲ್ಲಿ ಕುಳಿತು ಮೆಟ್ಟನ್ನು ಹೊಲಿಯುತ್ತಿದ್ದ ವೋಮೂ (ಮೆಟ್ಟನ್ನು ನೋಡಿ ರಾಯರೇ : ಒಂದೊಂದು ಮಿಷ್ಟೇಕು ಇಲ್ಲ. ಗಂಡು ಎತ್ತಿನದೇ ಚರ್ಮ, ಇಡೀ ಚರ್ಮದ್ದೇ ಮತ್ತೆ : ಒಂದೂ ಚೂರು ಹಾಕಿಲ್ಲ. ಕಾಲಲ್ಲಿ ಹಾಕಿಕೊಂಡರೆ ಕಣ್ಣಲ್ಲಿ ನಿದ್ದೆ ಬರಬೇಕು ನೋಡಿ. ಒಮ್ಮೆ ಮೆಟ್ಟಿ ನೋಡಿ……..). ಕಪ್ಪು ಪಾಷಾಣದ ನುಣುಪಾದ ಸಾಣೆಯ ಮೇಲೆ ಚರ್ಮಕೊಯ್ಯುವ ಉಳಿಯನ್ನು ಚಕಮ್ ಕಚಮ್ ಎಂದು ಮಸೆಯುತ್ತ ಪದ್ದಕ್ಕನನ್ನೊಮ್ಮೆ ಕಣ್ಣೆತ್ತಿ ನೋಡಿ, “ನಿಮ್ಮ ಮನೆಗೆ ನೆಂಟರ ಹಿಂಡೇ ಬಂದಿತಲ್ಲ,” ಎಂದ. ಪದ್ದಕ್ಕ ಕೂಡಲೇ ತಡೆದು, “ನಮ್ಮ ಮನೆಗೋ ?” ಎಂದು ಆಶ್ಚರ್ಯ ವ್ಯಕ್ತಪಡಿಸಿದಳು. ವೋಮೂ, “ಗೋಕರ್ಣದ ಸಾವುಕಾರರೂ ಇದ್ದರು. ಇದೀಗ ಹೊರಟುಹೋದರು. ನಿಮಗೆ ಹಾದಿಯಲ್ಲಿ ಸಿಗಲಿಲ್ಲ ಎಂದ ಮೇಲೆ ಅವರು ಸೀದ ಗೋಕರ್ಣಕ್ಕೆ ಹೋಗಿರಲಿಕ್ಕಿಲ್ಲ. ಬಂಕಿಕೋಡ್ಲಕ್ಕೆ ಹೋದರೋ ಏನೋ,” ಎಂದುದನ್ನು ಪೂರ್ತಿಯಾಗಿ ಕೇಳಿಕೊಳ್ಳಲು ನಿಲ್ಲದೇ, ಪದ್ದಕ್ಕೆ ಮನೆಯತ್ತ ತುರುತುರು ಹೆಜ್ಜೆ ಇಟ್ಟಳು. ಮನೆಯ ರಸ್ತೆಯ ಬದಿಯ ಮಗ್ಗುಲನ್ನೇ ಸಣ್ಣ ಕಿರಾಣಿ ಅಂಗಡಿಯನ್ನಾಗಿ ಮಾಡಿದ್ದರು. ಹಿರಿಯ ಮಗ ಪದ್ಮನಾಭ ಅಂಗಡಿ ನಡೆಸುತ್ತಿದ್ದ. ನಾವು ಮನೆ ಸಮೀಪಿಸುತ್ತಿದ್ದಾಗ ಅಂಗಡಿಯ ಅಂಗಳದಲ್ಲಿ ಕೆಮ್ಮುತ್ತ ನಿಂತ ಬಡಕಲು ಮೈಯ ಪದ್ಮನಾಭ ನನ್ನನ್ನು ನೋಡಿ ಪೆದ್ದು ನಗೆ ನಕ್ಕ. ಮರುಗಳಿಗೆ ತಾಯ ಮೋರೆ ನೋಡಿ ಕುಂಡೆಯಲ್ಲಿ ಬಾಲ ಸಿಕ್ಕಿಸಿದವನ ಹಾಗೆ ಅಂಗಡಿ ಹೊಕ್ಕ. ಪದ್ದಕ್ಕ ದಣಪೆ ದಾಟಿ ಅಂಗಳ ಹೊಕ್ಕು ಯಾರಿಗೋ ತಾನು ಬಂದು ತಲುಪಿದ್ದರ ಇಷಾರೆ ಕೊಡುವವಳಂತೆ ಸಣ್ಣಗೆ ಕೆಮ್ಮಿ ಗಂಟಲು ಸರಿಪಡಿಸಿಕೊಂಡು ಜಗಲಿಯ ಮೆಟ್ಟಲುಗಳನ್ನು ಏರಿದ್ದೇ ಒಳಕೋಣೆಗೆ ಹೋಗುವ ಬಾಗಿಲ ಬಳಿ ಕುಳಿತುಕೊಂಡ ಗಂಡನ ಇದಿರು ಕೆರಳಿದ ಹೆಣ್ಣು ಹುಲಿಯ ಹಾಗೆ ಸೆಟೆದು ನಿಂತು ಬಿಟ್ಟಳು. ಮುಂದೆ ನಡೆಯಲಿದ್ದುದನ್ನು ಎಳ್ಳಷ್ಟೂ ಊಹಿಸಿರದ ನಾನು ಪದ್ದಕ್ಕನ ಹಿಂದೆಯೇ ಜಗಲಿ ಸೇರಿಯಾಗಿತ್ತು. ವಾಮನ ಮಾಮ ಕೂತ ರೀತಿ, ಪದ್ದಕ್ಕ ಅವನಿಗೆ ಇದಿರಾಗಿ ನಿಂತ ರೀತಿ ನೋಡಿ ಗೊಂದಲಿಸಿ ಏನು ಮಾಡಲೂ ತೋಚದೇ ಜಗಲಿಯ ಬಲಗಡೆಯ ತುದಿಯಲ್ಲಿದ್ದ ಮಂಚದ ಮೇಲೆ ಹೋಗಿ ಕುಳಿತುಕೊಂಡೆ. ವಾಮನ ಮಾಮ ಗೋಡೆಗೆ ಬೆನ್ನು ಒರಗಿಸಿ ಕುಕ್ಕುರು ಕಾಲಲ್ಲಿ ಕುಳಿತಿದ್ದರು. ಪಂಜಿಯ ತುಂಡೊಂದನ್ನು ಹಗ್ಗದಂತೆ ತಿರುಪಿ ಸೊಂಟ ಮೊಣಕಾಲುಗಳ ಸುತ್ತಲೂ ಸುತ್ತಿ ಕಟ್ಟಿಕೊಂಡಿದ್ದರು. ಮೊಳಕ್ಕೆ ಎರಡನ್ನೂ ಮೊಣಗಂಟುಗಳ ಮೇಲೆ ಊರಿ ಹಿಂದಕ್ಕೆ ಮುಂದಕ್ಕೆ ತೂಗುತ್ತಿದ್ದರು. ಹೆಂಡತಿ ತಮ್ಮ ಮುಂದೆ ಬಂದು ನಿಂತು, “ಗೋಕರ್ಣದವರು ಬಂದಿದ್ದರಲ್ಲವೇ ?” ಎಂದು ಸಿಟ್ಟಿನಿಂದ ಒದರಿ ಕೇಳಿದಾಗಲೂ ತೂಗುತ್ತಲೇ ಉಳಿದರು. “ಗೋಕರ್ಣದ ಜಾಗ ಮಾರಿದಿರಲ್ಲವೇ ?” ಎಂದು ಪದ್ದಕ್ಕ ಚೀರಿದಾಗ ತೂಗುವುದನ್ನು ಗಪಕ್ಕನೆ ನಿಲ್ಲಿಸಿದರು. “ಹೆಂಡತಿಯ ಮಾತು ಬರೀ ಕಸಕ್ಕೆ ಸರಿಯಾಯಿತಲ್ಲವೆ ? ಹಿರಿಯರಿಂದ ಬಂದ ಅಂತಹ ಪವಿತ್ರ ನೆಲವನ್ನು ಈ ಕೃತಘ್ನ ದಾಯಾದಿಗಳಿಗೆ ಮಾರಿದಿರಲ್ಲವೇ ? ಹೆಂಡತಿ ಬೇಡ ಬೇಡವೆಂದರೂ ?… ನಿಮ್ಮ ಹೆಂಡತಿಗೆ ಬೇಡಾದವರಿಗೇ ?…. ಅದನ್ನು ಮಾರಿದರೆ ಈ ಮನೆಯ ಅನ್ನ ಸೇವಿಸಲಾರೆನೆಂದು ಆಣೆ ಹಾಕಿಕೊಂಡಾಗಲೂ ?…… ಹೆಂಡತಿಯ ಮಾತನ್ನು ಸುಳ್ಳು ಮಾಡಲು ಪಣ ತೊಟ್ಟವರಿಗೇ ಮಾರಿದಿರಲ್ಲವೆ ?…. ಯಾಕೆ ಮಾರಿದಿರಿ ?” ಪದ್ದಕ್ಕನಿಗೆ ಉಬ್ಬಸಹತ್ತಿತು.
“ಆ ನೆಲ ನಮಗೆ ಉಪಯೋಗದಲ್ಲ ಪದ್ಮಾವತಿ.”
“ಯಾಕೆ ಉಪಯೋಗದಲ್ಲ ?” ಪದ್ದಕ್ಕ ಭಾರ ಬಂದವಳಂತೆ ನಡುಗಹತ್ತಿದಳು. “ಉಪಯೋಗದಲ್ಲ, ಉಪಯೋಗದಲ್ಲ. ಸಾರಿ ಸಾರಿ ಹೇಳಿದಾಗಲೂ ಅದೇ ರಾಗ. ಅದೇ ಅಳುಬುರುಕರ ಹಾಡು ನಿಮ್ಮ ಅಜ್ಜ ಮುತ್ತಜ್ಜರಿಂದ ಬಂದ ನೆಲ ಎಂಬ ಅಭಿಮಾನ ಎಳ್ಳಷ್ಟೂ ಬೇಡವೇ? ನಿಮ್ಮಂತಹ ಅಭಿಮಾನವಿಲ್ಲದ ಮನುಷ್ಯನನ್ನು ನಾ ಜನ್ಮದಲ್ಲಿ ಕಂಡಿಲ್ಲ. ಮಕ್ಕಳಿಗೆ ಹೇಳುವ ಹಾಗೆ, ಗಿಳಿಗೆ ಹೇಳುವ ಹಾಗೆ ಹೇಳಿದೆ. ಪಿತ್ರಾರ್ಜಿತ ನೆಲದ ಋಣಾನುಬಂಧವನ್ನು ಹೀಗೆ ಕಳಕೊಳ್ಳಬೇಡಿ ಎಂದೆ. ಅವರಿಗಾದರೂ ಈ ನೆಲದ ಗರಜು ಅಷ್ಟೊಂದಿತ್ತೇ ? ನಮಗೂ ಆ ಜಾಗದಲ್ಲಿ ಮನೆ ಕಟ್ಟುವುದಿದೆ ಎಂದ ನನ್ನ ಮಾತನ್ನು ಸುಳ್ಳು ಮಾಡಲೆಂದೇ ಆ ಮೂವರು ಚೌಡಿಗಳು ಗಂಡಸರ ತಲೆ ಕೆಡಿಸಿ ಅವರನ್ನು ಈ ಉಪದ್ವ್ಯಾಸಕ್ಕೆ ಹಚ್ಚಿದ್ದಾರೆ……..”
“ಹಾಗೆ ಯಾಕೆ ಅನ್ನುತ್ತೀ ಪದ್ಮಾವತಿ, ಮೂವರೂ ಅಣ್ಣ ತಮ್ಮಂದಿರಿಗೆ ಕೂಡಿ ಇರಲು ಕಟ್ಟಬೇಕಾದ ಮನೆಗೆ ಅವರ ಪಾಲಿಗೆ ಬಂದ ನೆಲ……..”
6*
“ಸಣ್ಣದಾಗುತ್ತಿತ್ತಲ್ಲವೇ ? ಅದಕ್ಕೇ ನಮ್ಮ ಪಾಲಿಗೆ ಬಂದ ನೆಲವೇ ಬೇಕಾಯಿತಲ್ಲವೇ ? ಇನ್ನೊಂದು ಮಗ್ಗಲಿಗಿದ್ದ ಶೇಷ ಪೈ ಅವರ ಜಾಗ ಸಾಲುತ್ತಿರಲಿಲ್ಲ ಅಲ್ಲವೇ ? ನೀವು ಕೇಳಿದ್ದರಕ್ಕಿಂತ ಐದು ನೂರು ರೂಪಾಯಿ ಕಡಿಮೆ ಹಣಕ್ಕೇ ಮಾರಲು ಸಿದ್ಧರಿದ್ದಾಗಲೂ ನಮ್ಮ ಆಸ್ತಿಯೇ ಬೇಕಾಯಿತಲ್ಲವೇ ?”
ಪದ್ದಕ್ಕನ ಮೋರೆಯ ವಿಕಾರವನ್ನು ನೋಡಲಾಗದೇ ನಾನು ಅಂಗಳದತ್ತ ಮೋರೆ ತಿರುವಿದೆ.
“ನನಗೂ ಹಣದ ಗರಜು ಇತ್ತು ಎಂದಿದ್ದೆನಲ್ಲ.” ವಾಮನ ಮಾವನ ದನಿ ಮನುಷ್ಯರದಂತೆ ಕೇಳಿಸಲಿಲ್ಲ.
“ನಿಮಗೂ ಹಣದ ಗರಜಿತ್ತೇ ? ಯಾಕೆ ? ಅವರ ಸಾಲವನ್ನೇ ತೀರಿಸಲಲ್ಲ ? ಎಲ್ಲಿ ಸಾಲ ಮುಳುಗಿಸುವರೋ ಎಂಬ ಭಯಕ್ಕೇ ಈ ಅವಸರ : ಸಾಲದ ಹಣವೂ ಬಂದ ಹಾಗಾಯಿತು, ಪಿತ್ರಾರ್ಜಿತ ಆಸ್ತಿಯನ್ನೂ ನುಂಗಿದ ಹಾಗಾಯಿತು ಎಂದು. ಗರಜು ಬಿದ್ದರೆ ನನ್ನ ಬಂಗಾರ ಮಾರಲು ಹೇಳಿರಲಿಲ್ಲವೇ ?….ಎಷ್ಟಕ್ಕೆ ಮಾರಿದಿರಿ ?”
ಸರಕ್ಕನೊಮ್ಮೆ ಪದ್ದಕ್ಕನತ್ತ ನೋಡಿದಾಗ ಬಾಯ ಮೂಲೆಯಲ್ಲಿ ಬುರುಗಿನಂತಹದೇನೋ ಕಂಡಂತಾಗಿ ಹೇಸಿದೆ. ಪದ್ದಕ್ಕನ ಪ್ರಶ್ನೆಗೆ ವಾಮನಮಾಮ ಉತ್ತರ ಕೊಡಲಿಲ್ಲ. ಅವಳು ಇನ್ನೊಮ್ಮೆ ಒದರಿ ಕೇಳಿದಾಗ ‘ಮೂರ ಸಾವಿರ’ ಎಂದರು. “ಮೊದಲು ಹೇಳಿದ್ದಕ್ಕಿಂತ ಇನ್ನೂರೈವತ್ತು ಹೆಚ್ಚೇ ಕೊಟ್ಟಿದ್ದಾರೆ. ಸಾಲದ ಹಣಕ್ಕಿಂತ ಹೆಚ್ಚೇ ಕೊಟ್ಟಿದ್ದಾರೆ. ನಿಮ್ಮ ತಲೆಯನ್ನು ಸರಿಯಾಗಿ ಬೋಳಿಸಿದ್ದಾರೆ. ಅದಕ್ಕಿಷ್ಟು ಬೆಣ್ಣೆ ಹಾಕಿ ತಕ ತಕಾ ತಿಕ್ಕಿಕೊಳ್ಳಿ, ಹಾಳು ಬಿದ್ದಿತು ನಿಮ್ಮ ಜನ್ಮಕ್ಕೆ, ಅಬ್ಬಾ ಅದೆಂತಹ ಗಂಡಸರೇ ನೀವು ! ಅಭಿಮಾನವಿಲ್ಲದವರು, ನೀರಿಲ್ಲದವರು, ಷಂಡರು.” ಗಡಗಡ ನಡುಗುತ್ತ ಪದ್ದಕ್ಕ ಅಡುಗೆಮನೆಯತ್ತ ನಡೆದಳು. ಒಳಗೆ ಹೋದ ಕೆಲ ಹೊತ್ತಿನಲ್ಲೇ “ಯಾರಲ್ಲಿ ಜಗಲಿಯ ಮೇಲಿದ್ದ ಗಂಡಸರೂss. ಗಂಡಸರಾದರೆ ಬನ್ನಿ ಇಲ್ಲೀ,” ಎಂದು ವಿಕಾರವಾಗಿ ಒದರಿದಳು. ವಾಮನಮಾಮ ದಿಗ್ಭ್ರಾಂತರ ಹಾಗೆ ಕಾಲುಗಳಿಗೆ ಕಟ್ಟಿಕೊಂಡ ಪಂಜಿಯ ತುಂಡನ್ನು ಬಿಡಿಸಿ ಧಡಕ್ಕನೆ ಎದ್ದು ನಿಂತು ನನ್ನ ಕಡೆಗೊಮ್ಮೆ ನೋಡಿ ಒಳಗೆ ಧಾವಿಸಿದರು. ಅಂಗಡಿಯಿಂದ ಪದ್ಮನಾಭನೂ ಓಡಿಬಂದ. ನಾವೂ ವಾಮನ ಮಾಮನ ಹಿಂದೆಯೇ ಅಡುಗೆಮನೆ ಸೇರಿದೆವು. ಒಲೆಯಲ್ಲಿಯ ಕಟ್ಟಿಗೆಗೆ ಚಿಮಣಿಎಣ್ಣೆ ಸುರುವಿ ಕಡ್ಡಿ ಗೀರಿ ಬೆಂಕಿ ಮಾಡಿರಬೇಕು: ಚಿಮಣಿ ಎಣ್ಣೆಯ ವಾಸನೆ ಮೂಗಿಗೆ ಹೊಡೆಯುತ್ತಿತ್ತು. ಉರಿಯುತ್ತಿರುವ ಬೆಂಕಿಯ ಮೇಲೆ ಎರಡೂ ಹಸ್ತಗಳನ್ನು ಹಿಡಿದು “ಇದೋ ಈ ಬೆಂಕಿಯ ಸಾಕ್ಷಿಯಾಗಿ ಹೇಳುತ್ತೇನೆ ಕೇಳಿ : ನೀವು ಈಗ ಮಾರಿದ ನೆಲವನ್ನು ತಿರುಗಿ ಕೊಂಡು ; ಅದು ಸಾಧ್ಯವಾಗದಿದ್ದಲ್ಲಿ ಅದರ ಮಗ್ಗಲಲ್ಲಿಯ ಜಾಗ ಕೊಂಡು ನಮ್ಮದೇ ಆದ ಮನೆ ಕಟ್ಟುವ ತನಕ ಈ ಬೆಂಕಿಯ ಮೇಲೆ ಬೇಯಿಸಿದ ಅನ್ನ ಉಣ್ಣಲಾರೇ,” ಎಂದವಳೇ ‘ಕೀಂ’ ಎಂದು ಕಿರುಚಿ ಮೂರ್ಛಾರೋಗ ಹತ್ತಿದವಳ ಹಾಗೆ ಕಟ್ಟಿಗೆಯಂತೆ ಸೆಟೆದು ಧಡಾರ್ ಎಂದು ನೆಲಕ್ಕೆ ಅಪ್ಪಳಿಸಿದಳು….
ಪದ್ದಕ್ಕೆ ಸಾಧಿಸ ಹೊರಟ ಈ ವೈರ ಬರಿಯೇ ಈ ಜನ್ಮದಲ್ಲ ಎಂಬ ಅರಿವಿನಿಂದ ಕುರ್ಚಿಯಲ್ಲಿ ಒರಗಿದಲ್ಲೇ ಮೈ ನಡುಗಿ ; ಭಡಕ್ಕನೆ ಎಚ್ಚರಗೊಂಡು ; ಕಣ್ತೆರೆದು ; ಕಣ್ಮುಚ್ಚಿ-ಕಣ್ಮುಚ್ಚುವ ಮೊದಲಷ್ಟೇ ಇದಿರಿಗೆ ಕಂಡದ್ದು ನೆನಸೋ ಕೆಂಗನಸೋ ಎಂದು ಬೆಚ್ಚಿ ; ತಿರುಗಿ ಕಣ್ತೆರೆಯಲೂ ಅಂಜುತ್ತ ಅಂಜುತ್ತ ಕೊನೆಗೊಮ್ಮೆ ತೆರೆದಾಗ ಕಣ್ಣ ಮುಂದೆ ಪ್ರಕಟವಾಗಿರುವ ಈ ರೂಪ ಯಾವ ಲೋಕದ್ದು ? ಯಾವ ಜನ್ಮದಲ್ಲಿ ಕಂಡದ್ದು ? ಎಂದು ದಿಗ್ಭ್ರಾಂತನಂತೆ ನೆನಸುತ್ತಿದ್ದಾಗ, “ಗುರುತು ಹತ್ತಿತೇನೋ ?” ಎಂದು ಕೇಳಿದ ದನಿ ಪರಿಚಯದ್ದೆಂದು ಹೊಳೆದು ಪೂರ್ತಿ ಎಚ್ಚರಗೊಂಡು ಕುಳಿತಾಗ ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ಗುರುತು ಹತ್ತಿತೇ ಎಂದು ಕೇಳಿದಳಲ್ಲ. ತಲೆತುಂಬ ಹೂ ಮುಡಿದು ಹಣೆತುಂಬ ಕುಂಕುಮ ಇಟ್ಟುಕೊಂಡು ಮದುವಣಗಿತ್ತಿಯ ಹಾಗಿದ್ದ ಪದ್ದಕ್ಕೆ ಎಲ್ಲಿ ಈ ಕೆಂಪು ಸೀರೆಯ…“ಏನೋ ಇನ್ನೂ ಗುರುತು ಸಿಗಲಿಲ್ಲ ವೇನೋ?”, ತನ್ನ ದೇಹವನ್ನು ಪ್ರಶ್ನಾರ್ಥಕ ಚಿಹ್ನೆಮಾಡಿ, ತಲೆಯ ಮೇಲೆ ಕೆಂಪು ಸೆರಗನ್ನು ಹೊದ್ದು, ಮೋರೆಯ ಮೇಲೆ ವಿಚಿತ್ರವಾದ (ಭಯಾನಕವಾದ) ಮುಗುಳು ನಗೆ ಮೂಡಿಸಿ, ಜಗಲಿಯ ಕಂಬಕ್ಕಾನಿಸಿ ನಿಂತು (ನರಸಿಂಹ ಪ್ರಕಟವಾದ ಕಂಬದಂತಿದ್ದ ಆ ಕಂಬ ನನ್ನ ಗಮನಕ್ಕೆ ಬಂದದ್ದೂ ಇದೇ ಪ್ರಥಮ ಬಾರಿ) ನನ್ನನ್ನೇ ನಿಟ್ಟಿಸಿ ನೋಡುತ್ತಿದ್ದಾಗ, “ಸಿಗದೇ ಏನು ?” ಎಂದಾಗಿನ ನನ್ನ ದನಿಗೆ ನಾನೇ ಬೆಚ್ಚಿದೆ. “ಯಾಕೆ ? ನನ್ನಲ್ಲೇನೂ ಬದಲಾಗಿಲ್ಲ ?” ಎಂದು ಕೇಳಿದಳು. ಅಂತಹದೇನೂ ಇಲ್ಲವೆಂಬಂತೆ ನಾನು ಗೋಣು ಹಾಕಿರಬೇಕು, ಅವಳಲ್ಲಿ ‘ಏಕೃತಿ’ ಎನ್ನುವಷ್ಟರ ಮಟ್ಟಿಗಾದ ಬದಲನ್ನು ನನಗೆ ನಾನೇ ಒಪ್ಪಿಕೊಳ್ಳಲೂ ಆದ ಅನುಮಾನವೋ, ಇಲ್ಲ ಇಷ್ಟಾದರೂ ಅವಳ ಆರೋಗ್ಯ ಮಾತ್ರ ಮೊದಲಿನ ಹಾಗೇ ಎಂಬ ಆಳದ ಅನಿಸಿಕೆಯೋ ನನ್ನನ್ನು ಹಾಗೆ ಮಾಡಲು ಹಚ್ಚಿರಬೇಕು. “ಯಾಕೆ ಹಾಗೆ ಅನ್ನುತ್ತೀಯಾ ? ನೀನು ಈ ಮೊದಲು ನನ್ನನ್ನು ಕಂಡಾಗ ತಲೆತುಂಬ ಕೂದಲಿತ್ತು. ಇಲ್ಲಿಯವರೆಗೆ ಹೂವು ಮುಡಿದುಕೊಳ್ಳುತ್ತಿದೆ. ಇಲ್ಲಿ ಇಷ್ಟು ದೊಡ್ಡ ಕುಂಕುಮದ ಬಟ್ಟು ಇತ್ತು. ಈಗ ಹೀಗೆ ಬೋಳಿಸಿಕೊಂಡು ಕೆಂಪುಸೀರೆಯ ಬೋಳಿಯಾದ ಮೇಲೂ ಏನೂ ಬದಲಾಗಿಲ್ಲ ಅನ್ನುತ್ತೀಯಾ ?…” ಎಂದು ಕೇಳಿದಳು. ಯಾವ ವರ್ಣನೆಯನ್ನು ನಾನು ಮನಸ್ಸಿನಲ್ಲಿ ತರಲೂ ಹೆದರುತ್ತಿದ್ದೆನೋ ಅದನ್ನವಳು ಅತ್ಯಂತ ಸಹಜವಾಗಿ ಹಾವ ಭಾವಗಳಿಂದ ಮಾಡಿದಾಗ: ತಲೆಯನ್ನು ಬೋಳಿಸಿಕೊಂಡಿದ್ದೇನೆ ಎನ್ನುವುದನ್ನು ಹಜಾಮನ ಕತ್ತಿಯ ವೈಖರಿಯಲ್ಲಿ ಕೈಬೆರಳನ್ನು ತಲೆಯ ಮೇಲೆ ಆಡಿ ತೋರಿಸಿದಾಗ ನನಗೆ ಬಾಯಿ ಬತ್ತಿ ಬಂದಂತೆನಿಸಿ ನೆಲದತ್ತ ಕಣ್ಣೂರಿ ಕುಳಿತುಬಿಟ್ಟೆ. ತಿರುಗಿ ಕಣ್ಣೆತ್ತಿ ಅವಳತ್ತ ನೋಡಿದಾಗ ವಿಚಿತ್ರವಾಗಿ ಗಂಭೀರವಾಗಿದ್ದಳು. “ನಾಳೆಗೇ ಧಾರವಾಡಕ್ಕೆ ಹೋಗುತ್ತೀರಂತಲ್ಲವೇ ? ಹೋಗುವ ಮೊದಲು ನನ್ನ ಮನೆಯತ್ತ ಬಂದು ಹೋಗುತ್ತೀಯಲ್ಲವೇ ?” ಎಂದಳು. ನಾನು ‘ಹೂಂ’ ಎಂದೆ, “ಯಾವಾಗ, ಈಗ ಬರುತ್ತೀಯಾ ?” ಎಂದಳು. “ಸಂಜೆಯ ಕಡೆ ಬರುತ್ತೇನೆ,” ಎಂದೆ. “ಹಾದಿ ನೋಡುತ್ತೇನೆ” ಎಂದವಳೇ ಅಲ್ಲಿಂದ ಹೊರಟುಹೋದಳು.
ನಿರ್ಜನವಾದ ಜಗಲಿಯಲ್ಲಿ ಖುರ್ಚಿಯಲ್ಲಿ ಒರಗಿದಲ್ಲೇ ದಣಿವು ಬಂದಂತೆನಿಸಿತು. ತಿರುಗಿ ಕಣ್ಣು ಮುಚ್ಚಿದಾಗ ಮನಸ್ಸಿನಲ್ಲಿ ಮೂಡಿದ್ದು ವಾಮನಮಾವನನ್ನು ಕೊನೆಯ ಸಲ ಕಂಡದ್ದರ ಚಿತ್ರ : ಪದ್ದಕ್ಕನು ಆಣೆ ಮಾಡಿದ ಮೂರು-ನಾಲ್ಕು ತಿಂಗಳಲ್ಲೇ ಇರಬೇಕು, ವಾಮನಮಾಮ ಅಪ್ಪನನ್ನು ಕಾಣಲು ಓಡೋಡಿ ಧಾರವಾಡಕ್ಕೆ ಬಂದದ್ದು. ಆಗ ನಾನದೇ ಕಾಲೇಜು ಸೇರಿದ್ದೆ, ವಾಮನಮಾಮನ ಸ್ಥಿತಿ ನೋಡಿ ಅಪ್ಪ ಬಹಳ ಕಳವಳ ಪಟ್ಟರು. ಬರಿಯೇ ಮೂರು ತಿಂಗಳ ಕಾಲೊಪ್ಪತ್ತಿನಲ್ಲಿ ಮುಂದಿನ ಹತ್ತು ವರ್ಷಗಳ ಮುಪ್ಪನ್ನು ತಂದುಕೊಂಡು ಬಿಟ್ಟಿದ್ದರು. ಹೆಂಡತಿಯ ಜತೆ ಇವರೂ ಅನ್ನ ಬಿಟ್ಟಂತೆ ಇತ್ತು. ಅಪ್ಪನನ್ನು ಮಾತನಾಡಿಸುತ್ತ ಮಗುವಿನ ಹಾಗೆ ಅತ್ತುಬಿಟ್ಟರು : “ಪರಿಸ್ಥಿತಿ ಈ ವಿಕೋಪಕ್ಕೆ ಹೋದೀತೆಂದು ತಿಳಿದಿರಲಿಲ್ಲ ಶಂಕರಾ. ಇವಳಿಗೆ ಆ ನೆಲದ ತುಂಡಿನ ಬಗ್ಗೆ ಇಷ್ಟೊಂದು ಮೋಹವಿತ್ತೆಂದು ಗೊತ್ತಿದ್ದರೆ ಈ ಭಾನಗಡಿಗೇ ಬೀಳುತ್ತಿರಲಿಲ್ಲ ನೋಡು……ಹನೇಹಳ್ಳಿಯಲ್ಲಿ ಹೇಗಾದರೂ ನಮ್ಮದೇ ಆದ ಮನೆ ಇದೆ. ಇನ್ನು ಗೋಕರ್ಣದ ಆ ಜಾಗದಲ್ಲಿ ಬೇರೆ ನಾವು ಮನೆ ಕಟ್ಟುವದಿದೆಯೇ. ಈಗ ಹಟ ಹಿಡಿದರೂ ನಾಳೆ ತಾನೇ ಸಮಾಧಾನಕ್ಕೆ ಬಂದಾಳು ಎಂಬ ಭರವಸೆಯ ಮೇಲೆ ಮಾರಿದೆ ನೋಡು, ಶ್ರೀನಿವಾಸ ಅಣ್ಣ ಅದನ್ನು ಕೊಂಡದ್ದಕ್ಕೆ ಇವಳು ವಿಪರೀತ ಆರ್ಥ ಮಾಡಿದಂತಿದೆ. ಜಾಗ ಮಾರಿದ ದಿನ ನಮ್ಮ ಮನೆಯಲ್ಲಾದ ರಾದ್ಧಾಂತ ನಿನ್ನ ಮಗ ತಿಳಿಸಿರಬೇಕು. ಆ ದಿನವೇ ಅವನು ನಮ್ಮ ಮನೆಗೆ ಬಂದಿದ್ದ. ಇವಳು ಅನ್ನದ ವಿಷಯದಲ್ಲಿ ಮಾಡಿದ ಆಣೆಗೆ ಕಂಗಾಲಾಗಿ ಶ್ರೀನಿವಾಸ ಅಣ್ಣನನ್ನು ಹೋಗಿ ಕಂಡೆ : ಅವನು ಬರಿ ನಕ್ಕು ಬಿಟ್ಟ. “ಇಂತಹ ಆಣೆ ಭಾಷೆಗೆಲ್ಲ ಹೆದರಬೇಕೆಂದಿಲ್ಲ” ಎಂದ. “ಇವಳು ಎಷ್ಟು ಜಿದ್ದು ಮಾಡಿದರೇನು ? ಹೊಟ್ಟೆ ಕೇಳಬೇಕಲ್ಲ. ಮಾಡಿ ಮಾಡಿ ನಾಲ್ಕು ದಿನ ಉಪವಾಸ ಮಾಡಿಯಾಳು. ಆ ಮೇಲೆ ಬೇಡವೆಂದರೂ ಸರಿಯಾದ ನೆಲೆಗೆ ಬರುತ್ತಾಳೆ” ಎಂದ. ನಾನೂ ಅದನ್ನೇ ನಂಬಿದೆ. ಆದರೆ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತ ನಡೆಯಿತು. ನನಗೆ ಪದ್ಮನಾಭನಿಗೆ ಅನ್ನ ಬೇಯಿಸಿ ಹಾಕುತ್ತಾಳೇ ಹೊರತು ತಾನು ಮಾತ್ರ ಒಲೆಯ ಮೇಲೆ ಬೇಯಿಸಿದ್ದನ್ನು ಏನನ್ನೂ ತಿನ್ನಲಾರಳು. ಅವಲಕ್ಕಿ, ಅರಳು, ಹಣ್ಣು, ನೀರುಗಳ ಮೇಲೆ ಇರುತ್ತಾಳೆ. ಇವಳ ಅನ್ನಕ್ಕೆ ಕಂಟಕನಾದೆನಲ್ಲ ಎಂದು ಕಳವಳ ಪಟ್ಟು ತಿರುಗಿ ಶ್ರೀನಿವಾಸ ಅಣ್ಣನ ಕಾಲು ಹಿಡಿದೆ. ಅವನು “ಹಾಗೆಲ್ಲ ಒಮ್ಮೆ ಮಾರಿದ ಜಾಗ ತಿರುಗಿ ಕೊಡಲು ಆಗುವುದಿಲ್ಲ. ಇದೆಂತಹ ಹುಡುಗಾಡಿಕೆ ಎಂದ.” ಎಂತಲೇ ವಾಮನಮಾವ ಅಪ್ಪನ ಹತ್ತಿರ ಧಾವಿಸಿ ಬಂದಿದ್ದರು. ಮುಂದೆ ಅಪ್ಪನ ಪ್ರಯತ್ನವೂ ನಡೆದಂತೆ ತೋರಲಿಲ್ಲ. ಮುಖ್ಯವಾಗಿ ಗೋಕರ್ಣದವರಿಗೆ ಇವಳ ಆಣೆ ಭಾಷೆಯಲ್ಲೇ ನಂಬಿಕೆ ಇದ್ದಂತಿರಲಿಲ್ಲ. ತನ್ನ ಉಪವಾಸ ವ್ರತಕ್ಕೆ ಅವರಿಂದಾದ ಅಪಹಾಸ್ಯದ ಪ್ರತಿಕ್ರಿಯೆಯಿಂದಂತೂ ಇನ್ನಷ್ಟು ಕನಲಿದಳು. ಮುಂದೆ ದಾಯಾದಿಗಳ ಹೊಸಮನೆಯ ನೆಲಗಟ್ಟು ಏರಿದ್ದನ್ನು ಕಂಡಾಗ ಹುಚ್ಚಿಯಂತಾದಳು. ವಾಮನಮಾವನಿಗೆ ಜೀವಂತ ನರಕ ಕಾಣುವ ಹಾಗಾಯಿತು. ಮುಂದೆ ಸುಮಾರು ಒಂದು ವರ್ಷದಲ್ಲೇ ಪದ್ಮನಾಭ ಟೀಬೀಯಿಂದ ಸತ್ತ. ಆಗ ತಾಯಿ ಮನೆಯಲ್ಲಿ ಇದ್ದಿರಲಿಲ್ಲವಂತೆ : ಇನ್ನೊಬ್ಬ ಮಗನನ್ನು ಕಾಣಲು ಮುಂಬಯಿಗೆ ಹೋಗಿದ್ದಳಂತೆ. ಮುಂದಿನ ಕೆಲ ದಿನಗಳಲ್ಲೇ ವಾಮನಮಾಮನ ಆತ್ಮಘಾತ…….
ಅಣ್ಣ ಅಟ್ಟದಿಂದ ಇಳಿದು ಬಂದು ಮೋರೆ ತೊಳೆಯಲು ಬಚ್ಚಲುಮನೆಯ ಕಡೆ ನಡೆದ. ಪದ್ದಕ್ಕ ಜಗಲಿಗೆ ಬಂದದ್ದನ್ನು ನೋಡಿಯೇ ಅಲ್ಲಿಂದ ಕಣ್ಮರೆಯಾದಂತಿದ್ದ ಪುರೋಹಿತರು, ಅವರ ತಾಯಿ ಒಬ್ಬೊಬ್ಬರೇ ಅನುಮಾನಿಸುತ್ತ ಹೊರಗೆ ಬಂದರು. ಅವರ ಹಿಂದೆಯೇ ಚಹದ ಸರಂಜಾಮನ್ನು ತರುತ್ತ ‘ನಿನ್ನ ಅಣ್ಣ ತಮ್ಮಂದಿರೆಲ್ಲಿ ?’ ಎಂದು ಭಟ್ಟರ ಹೆಂಡತಿ ಕೇಳಿದಳು. ಚಹದ ಹೊತ್ತಿಗೆ, “ಹೆಚ್ಚಿನ ಮಾತುಕತೆಯಿಲ್ಲದೇ ಸಂದರ್ಶನ ಮುಗಿದುಬಿಟ್ಟಿತಲ್ಲಾ. ಮುಂಬಯಿಯ ಮಗನ ಪುರಾಣವನ್ನೆಲ್ಲ ಬಿಚ್ಚುತಾಳೋ ಎಂದು ತಿಳಿದು ನಾವೇ ಒಳಗೆ ಹೋದೆವು” ಎಂದರು ಭಟ್ಟರು. ನನ್ನನ್ನೇ ತನ್ನ ಮನೆಗೆ ಕರೆದಿದ್ದಾಳೆ ಎನ್ನುತ್ತ ಅಣ್ಣನತ್ತ ನೋಡಿದೆ. ಅವನು ಮಾತನಾಡಲಿಲ್ಲ. ಭಟ್ಟರು, “ನಾನಾಗ ಅಂದಿರಲಿಲ್ಲವೇ ?” ಅಂದರು. “ಅಂತಿಂತಹ ಹೆಂಗಸಲ್ಲ ಅವಳು.” ಎಂದರು. ಭಟ್ಟರ ಹೆಂಡತಿ, “ಬೇಗ ಹೊತ್ತು ಮುಳುಗುವ ಮೊದಲೇ ಹೋಗಿ ಬಾ. ಸುಮಾರಿನ ಜನ ಅಲ್ಲಿ ಹೋಗಲೂ ಹೆದರುತ್ತಾರೆ.” ನಾನು ಸುಮ್ಮಗುಳಿದೆ. “ನೀನು ಹೋಗಲೇಬೇಕೇ?” ಎಂದು ಕೇಳಿದ ಅಣ್ಣ. ನಾನು ‘ಹೂಂ’ ಎಂದೆ. “ಹೋಗಿಬರಲಲ್ಲ. ಬಾ ಎಂದು ಹೇಳಲಿಕ್ಕೇ ಆಗ ಬಂದಿರಬೇಕು. ‘ಹೆದರುವಂತಹದೇನಿದೆ ಅದರಲ್ಲಿ ? ದೊಡ್ಡ ಮನೆ, ಒಬ್ಬಳೇ ಇರುತ್ತಾಳೆ. ಸ್ವಲ್ಪ ಭಣ ಭಣ ಅನಿಸುತ್ತದೆ ಅಷ್ಟೇ. ಕೆಳಗೆ ಮೇಲೆ ಕೂಡ ಎಂಟು ಹತ್ತು ಕೋಣೆಗಳಾದರೂ ಇರಬೇಕು. ದಾಯಾದಿಗಳು ಕಟ್ಟಿಸಿದ ಮನೆಗಿಂತ ದೊಡ್ಡ ಮನೆ ಕಟ್ಟಿಸಬೇಕು ಎಂಬ ಹಟ ಮಾತ್ರ ಕೊನೆಗೂ ಬಿಟ್ಟು ಕೊಡಲಿಲ್ಲ ನೋಡು. ಓ! ತುಂಬ ಜಿದ್ದಿನ ಹೆಣ್ಣು. ಅವಳು ಅನ್ನದ ಬಗ್ಗೆ ಮಾಡಿದ ಶಪಥವೋ : ಈ ವರೆಗೂ ನಡೆಸಿಕೊಂಡು ಬಂದಿದ್ದಾಳೆ ನೋಡು. ಮನೆ ಕಟ್ಟಿಸಿಯಾದ ಮೇಲೂ ಬೇಯಿಸಿದ್ದನ್ನು ಏನನ್ನೂ ತಿನ್ನುವುದಿಲ್ಲ. ಒಮ್ಮೊಮ್ಮೆ, ಬರಿಯೇ ದೇವರ ತೀರ್ಥ ಕುಡಿದು ದಿನ ಕಳೆದದ್ದನ್ನು ನಾನೇ ಕಂಡಿದ್ದೇವೆ. ಮೊದ ಮೊದಲು ಅಪಹಾಸ್ಯ ಮಾಡಿ ನಕ್ಕ ದಾಯಾದಿಗಳೂ ಈಗ ಚಕಿತರಾಗಿದ್ದಾರೆ. ಎಲ್ಲಿಂದ ಹೇಗೆ ಇಷ್ಟೊಂದು ಹಟ ಅವಳಲ್ಲಿ ಬಂದು ಸೇರಿದೆಯೋ ದೇವನೊಬ್ಬ ಬಲ್ಲ. ಅಡ್ಡಿಯಿಲ್ಲ. ಮುಂಬಯಿಯ ಮಗ ಮಾತ್ರ ಅವಳ ಹಟ ಸುಳ್ಳಾಗಲು ಬಿಡಲಿಲ್ಲ. ಏಳೆಂಟು ವರುಷಗಳೇ ಹಿಡಿದಿರಲಿ : ಮನೆ ಕಟ್ಟಿಸುವಂತೆ ಮಾಡಿದನಲ್ಲ. ಥೇಟು ತಾಯಿಯದೇ ಅವತಾರ. ಅಣ್ಣ ಸತ್ತಾಗ, ಅಪ್ಪ ಸತ್ತಾಗ ಕೂಡ ಹನಿ ಕಣ್ಣೀರು ಸುರಿಸಿರಲಿಕ್ಕಿಲ್ಲ. ಆದರೆ ಅಪ್ಪನ ಶ್ರಾದ್ಧಕ್ಕೆ ಬಂದಾಗ ಮಾತ್ರ ನೀರಿನಂತೆ ಹಣ ಖರ್ಚು ಮಾಡಿದ” ಎಂದರು ಭಟ್ಟರು. ಭಟ್ಟರ ಹೆಂಡತಿ, “ತಾಯಿ ಆ ಮನೆಯ ಬಗ್ಗೆ ಎಷ್ಟೊಂದು ಒದ್ದಾಡಿದರೇನು ? ಅವನು ಬಂದು ಇಲ್ಲಿ ನಿಲ್ಲುವದಿದೆಯೇ ? ದಾಯಾದಿಗಳ ಕಣ್ಣು ಕುಕ್ಕಿಸಬೇಕು ಎಂಬುದು ತಾಯ ಹಟವಾದರೆ ಊರವರ ಕಣ್ಣಲ್ಲಿ ತನ್ನ ಮುಂಬಯಿಯ ವೈಭವ ಮೆರೆಯಿಸಬೇಕು ಎಂಬುದು ಮಗನ ಖಟಪಟಿ. ನೀನು ಅಲ್ಲಿ ಹೋದಾಗಲೆ ನೋಡುವಿಯಂತೆ, ಆ ಮನೆಯ ವೈಭವವನ್ನು. ದೇವರ ಕೋಣೆಯಂತೂ ವೆಂಕಟರಮಣ ದೇವಸ್ಥಾನದ ಗರ್ಭಗುಡಿಯನ್ನು ಹಿಂದೆ ಹಾಕುತ್ತದೆ. ದಿನವೂ ಸಂಜೆ ಕೇರಿಯ ಮಕ್ಕಳನ್ನು ಕೂಡಿಸಿ ಭಜನೆ ಮಾಡುತ್ತಾಳೆ. ತಾನೊಬ್ಬಳೇ ಮಧ್ಯರಾತ್ರಿಯತನಕವೂ ದೇವರ ಪದ ಹಾಡಿಕೊಳ್ಳುತ್ತಾಳೆ” ಎಂದಳು. “ಈಗ ಬೇರೆಯೇ ಒಂದು ಹುಚ್ಚು ತಲೆ ಹೊಕ್ಕಿದೆ. ಮನೆಯ ದೇವರ ಇದಿರಿಗೆ ಬೆಳ್ಳಿಯ ಗಂಟಿ ತೂಗಿಸಬೇಕು ಎಂದು ಮಗನಿಗೆ ದುಂಬಾಲು ಬಿದ್ದಿದ್ದಾಳೆ. ಇವಳ ಈ ಕಟಕಟೆಗೆ ಬೇಜಾರು ಪಟ್ರೆ ಏನೋ ಮಗ ಊರಿನ ಕಡೆಗೇ ಬಂದಿಲ್ಲ, ಗೃಹಪ್ರವೇಶಕ್ಕೆ ಕೂಡ” ಎಂದರು ಭಟ್ಟರು. “ಈ ಹೆಂಗಸೂ ಎಂತಹಳು. ಗೃಹಪ್ರವೇಶವಾಗಿರದ ಮನೆಯಲ್ಲೇ ನಿಲ್ಲಲು ಬಂದಳಲ್ಲ” ಎಂದರು. ಆಗಿನಿಂದಲೂ ಸುಮ್ಮನುಳಿದ ಭಟ್ಟರ ತಾಯಿ, “ಚೌಡಿ ! ಚೌಡಿಯದೇ ಅವತಾರ, ಅವಳ ದೇವರ ಭಕ್ತಿಯೇ ! ಮಗ ಸಾಯಲು ಬಿದ್ದಾಗ ಮನೆಯಲ್ಲಿದ್ದಳೇ ? ಗಂಡ ಪಾಪ ಇವಳ ಕೃತ್ಯಗಳಿಗೆ ವಿಲಿವಿಲಿ ಒದ್ದಾಡಿ ನೀರಿನ ತಳ ಕಾಣಲಿಲ್ಲವೇ ? ಅದೆಂತಹ ಪಾಷಾಣದಂತಹ ಮನಸ್ಸಪ್ಪಾ. ಗಂಡ ಸತ್ತು ವರ್ಷವೂ ಕಳೆದಿರಲಿಕ್ಕಿಲ್ಲ, ಮೈಮೇಲಿನ ಬಂಗಾರ ಮಾರಿ ಈಗ ಮನೆ ಕಟ್ಟಿದ ಜಾಗ ಕೊಂಡಳಲ್ಲ. ಮಗನನ್ನು ಕಾಡಿ ಬೇಡಿ ಕುಂಟುತ್ತ ತಡವುತ್ತಲಾದರೂ ಗಂಡಸಿನ ಧೈರ್ಯದಿಂದ ತಾನೇ ಎಲ್ಲ ದೇಖರೇಖಿ ನಡೆಸಿ ಮನೆ ಕಟ್ಟಿಸಿದಳಲ್ಲ !”
“ಈಗ ಹೊಸ ಬಾತ್ಮಿಯೊಂದು ಊರ ಕೆಲವರ ಕಿವಿಗೆ ಬಂದಿದೆಯಪ್ಪಾ. ಈ ಮನೆ ಕಟ್ಟಲು ಮಗನ ಕೈಯಲ್ಲಿ ಇಷ್ಟೆಲ್ಲ ಹಣ……” ಏನೋ ಹೇಳ ಹೊರಟ ಭಟ್ಟರು ಹೆಂಡತಿಯ ಮೋರೆಯನ್ನು ನೋಡಿದ್ದೇ ‘ಗಪಕ್’ ಆದರು. ಅಣ್ಣ ಅಸ್ವಸ್ಥನಾದ. ನನಗೂ ಹೇಗೋ ಆಯಿತು. ಭಟ್ಟರು “ಹೌದಲ್ಲಾ, ಆ ಮಾತು ಈಗ ಯಾಕೆ” ಎಂದು ಸಮಾಧಾನ ಹೇಳಿ ಸುಮ್ಮನಾದರು.

* * * *
ಕೊನೆಗೂ ಪದ್ದಕ್ಕನ ಮನೆಯನ್ನೊಮ್ಮೆ ನೋಡಿಬಂದೆ. ಮನಸ್ಸಿನ ಮೇಲೆ ಅಚ್ಚೊತಿ ನಿಂತಂತಿದ್ದ ಕೆಲವೇ ಸಂಗತಿಗಳು ಉಳಿದೆಲ್ಲ ವಿವರಗಳನ್ನು ಮಸುಕುಗೊಳಿಸಿವೆ : ಅಂಗಳದಲ್ಲಿಯ ಹೂಬಿಸಿಲಲ್ಲಿ ಕರ‍್ರಗೆ ಮೈಚಾಚಿದ್ದ ಬೇಲಿಯ ವಿಚಿತ್ರ ನೆರಳು ; ಸುತ್ತಲಿನ ಮನೆಗಳ ಹೆಂಗಸರು ಮಕ್ಕಳು ಬಾಗಿಲು ಕಿಡಕಿಗಳಿಂದ ಕದ್ದು ಕದ್ದು ನೋಡಿದ್ದು ; ದೇವಸ್ಥಾನದ ಗರ್ಭಗುಡಿಯ ಹಾಗೆ ಅಲಂಕರಿಸಿದ ದೇವರ ಕೋಣೆಯಲ್ಲಿ ಹರಡಿ ನಿಂತ ಊದಬತ್ತಿಯ ಉಗ್ರವಾಸನೆ ಧಾರವಾಡದಲ್ಲಿ ಅಪ್ಪ ಸತ್ತ ಕೋಣೆಯಲ್ಲಿ ಕೂಡ ಇಂತಹದೇ ವಾಸನೆ ಇದ್ದುದರ ನೆನಪು ತಂದು ಮೈಮೇಲೆ ಮುಳ್ಳು ನಿಂತದ್ದು ; ಈ ವರೆಗೂ ಬೆಂಕಿ ಮಾಡಿರದ ಒಣ ಒಲೆಗಳನ್ನು ನೋಡುತ್ತಿದ್ದಾಗ ಪದ್ದಕ್ಕನ ಬಾಯಿಂದ ಸಂಸ್ಕಾರ ಹೊರಟಂತೆ ಕೇಳಿಸಿದ್ದು ; ಆ ಕೋಣೆ, ಈ ಕೋಣೆ, ಅದರಾಚೆಯ ಕೋಣೆ ಎಂದು ಮನೆ ತೋರಿಸುತ್ತಿದ್ದ ಪದ್ದಕ್ಕನ ಹಿಂದೆಯೇ ಓಡಾಡುತ್ತಿರುವಾಗ ಹೊತ್ತು ಹೋದ ಹಾಗೆ ಭಣಗುಟ್ಟುವ ಆ ಮನೆ ಯಾರೋ ಕೆಟ್ಟ ವೇಳೆಯಲ್ಲಿ ಸತ್ತದ್ದರಿಂದ ‘ಬಿಟ್ಟ’ ಮನೆ, ಅದರಲ್ಲಿ ನಾನೊಬ್ಬನೆ ಹೇಗೋ ಬಂದು ಸಿಕ್ಕಿಕೊಂಡಿದ್ದೇನೆ ಎಂಬಂತಹ ಭಾಸವಾಗಿ ; ಕೆಳಗಿನ ಕೋಣೆಗಳೆಲ್ಲವನ್ನೂ ಸುತ್ತಾಡಿ ಮಾಳಿಗೆಯ ಮೇಲಿನ ಕೋಣೆಗಳನ್ನು ತೋರಿಸಲೆಂದು ನಿಚ್ಚಣಿಕೆಯ ಮೆಟ್ಟಿಲುಗಳನ್ನು ಹತ್ತುತ್ತಿದ್ದ ಪದ್ದಕ್ಕನನ್ನು ಹಿಂಬಾಲಿಸುವಾಗ ಅರ್ಧ ಕ್ಷಣದ ಮಟ್ಟಿಗೆ ನಾನು ಹಿಂಬಾಲಿಸುತ್ತಿದ್ದದ್ದು ಜೀವಂತ ವ್ಯಕ್ತಿಯನ್ನಲ್ಲ ಎಂಬ ಅನಿಸಿಕೆಯಿಂದ ಕರುಳಿನಲ್ಲಿ ‘ಕಲ್’ ಅನಿಸಿ ಕಾಲಡಿಯ ಮೆಟ್ಟಿಲ ಮೇಲೆ ನನ್ನ ತೋಲ ತಪ್ಪದಂತೆ ಸಾವರಿಸಿಕೊಂಡು ಅಟ್ಟ ಸೇರುವ ಹೊತ್ತಿಗೆ ಮನೆ ನೋಡಲು ಮೊದಲಿನಿಂದಲೂ ಅಷ್ಟೊಂದು ಇಲ್ಲದ ಉತ್ಸಾಹ ಸಂಪೂರ್ಣ ನಶಿಸಿತ್ತು. ಆಗಿನಿಂದಲೂ ವಟವಟ ಮಾತನಾಡುತ್ತಿದ್ದ ಪದ್ದಕ್ಕ ಅಟ್ಟದ ಮೇಲಿನ ದೊಡ್ಡ ಹಾಲಿಗೆ ಬಂದದ್ದೇ ಮೌನ ತಳೆದಿದ್ದಳು. ನಾನು ಇನ್ನಷ್ಟು ಹೆದರಿದೆ. ತುಸು ಹೊತ್ತಿನ ಮೇಲೆ, ಈ ಮೊದಲೇ ಸಿದ್ಧಗೊಳಿಸಿಟ್ಟಂತಿದ್ದ ಚಾಪೆಯ ಮೇಲೆ ನನಗೆ ಕೂಡ್ರಲು ಹೇಳಿ ತಾನೂ ಚಾಪೆಯ ಅಂಚಿನಲ್ಲಿ ಬರಿ ನೆಲದ ಮೇಲೆ ಕುಳಿತುಕೊಂಡಳು. ಗೋಡೆಯ ಕಡೆಗೆ ಇಟ್ಟ ತಲೆದಿಂಬಿಗೆ ಒರಗಿ ಕುಳಿತುಕೊಳ್ಳುವಾಗ ಬರಲಿದ್ದುದರ ಪೂರ್ವ ಪ್ರಜ್ಞೆಯಿಂದೆಂಬಂತೆ ಕೈ ಕಾಲು ಸೋತು ಬಂದವು : ನನ್ನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತ ಕುಳಿತುಬಿಟ್ಟ ಅವಳನ್ನು ಇದಿರಿಸಲಾಗದೇ ನಾನು ಮಾಡಿನತ್ತ ಕಣ್ಣೆತ್ತಿದೆ. ಇನ್ನೂ ಹೊಚ್ಚ ಹೊಸವಾಗಿರುವ ಹಂಚುಗಳಿಂದಲೋ, ಗಿಲಾಯಿ ಮಾಡಿಸಿರುವ ಗೋಡೆಗಳಿಂದಲೋ ಸುಣ್ಣದ ಗಬ್ಬು ವಾಸನೆ. ಪಶ್ಚಿಮದ ಕಿಡಕಿಯೊಂದರಿಂದ ಒಳಗೆ ಬಂದ ಸೂರ್ಯನ ಕೊನೆಯ ಕಿರಣಗಳು ನೆಲದ ಮೇಲೆ ಬಿಡಿಸಿದ ಸರಳುಗಳ ಗಿಡ್ಡವಾಗುತ್ತ ನಡೆದ ರೇಖಾಚಿತ್ರ, ಮಗ್ಗಲು ಮನೆಗಳಲ್ಲಿ ಮಕ್ಕಳ ಗುಲ್ಲು, ಯಾವುದೋ ಹಿತ್ತಲಲ್ಲಿ ಮುದಿನಾಯಿಯೊಂದು ಪಿತೃ ಪಕ್ಷದಲ್ಲಿಯಂತೆ “ಕುಯ್ಯೋ” ಎಂದು ಒದರಿತು: ನನಗೆ ಪದ್ದಕ್ಕನ ಮೌನದಡಿಯಲ್ಲಿ ಹೊಗೆಯಾಡುತ್ತಿದ್ದ ಜ್ವಾಲಾಮುಖಿಯ ಅರಿವು ತೀವ್ರವಾಗುತ್ತ ಅಸಹ್ಯವಾಗಹತ್ತಿತು. ಕೊನೆಗೊಮ್ಮೆ ಪದ್ದಕ್ಕ ಬಾಯಿ ಬಿಟ್ಟಳು ;
“ನಿನಗೆ ಮುಂಬಯಿಯಲ್ಲಿ ನಮ್ಮ ತ್ರಿವಿಕ್ರಮ ಭೆಟ್ಟಿಯಾಗುತ್ತಾನಲ್ಲವೇ? ನಿನ್ನ ಚಿಕ್ಕಂದಿನ ಗೆಳೆಯನವ. ಬರುವಾಗ ಸಿಕ್ಕಿದ್ದನೇ ?” ನಾನು ‘ಇಲ್ಲ’ವೆಂದು ಸುಳ್ಳು ಹೇಳಿದೆ. ಹೊರಡುವ ದಿನವೇ ತ್ರಿವಿಕ್ರಮ ಬಂದು ತಾಯಿ ಮಾತನಾಡಬಹುದಾದ್ದರ ಬಗ್ಗೆ ಇಷಾರೆ ಕೊಟ್ಟಿದ್ದ. “ಸುಳ್ಳು ಹೇಳುತ್ತೀಯಾ” ಎಂದಳು. ನನಗೆ ಮೈಮೇಲೆ ತಣ್ಣೀರು ಸುರಿಸಿದ ಅನುಭವವಾಯಿತು. “ನನಗೆಲ್ಲ ಗೊತ್ತಾಗಿದೆ. ಗೊತ್ತಾಗಿದೇ ಎಂದೆ. ಮುಂಬಯಿಯಲ್ಲಿ ತ್ರಿವಿಕ್ರಮನ ಧಂದೆಯೇನು?”
ನಾನು ಉತ್ತರ ಕೊಡಲಿಲ್ಲ.
“ನನ್ನ ದಾಯಾದಿಯ ಮಗನಲ್ಲೇ ಕೆಲಸವಂತೆ. (ಶ್ರೀನಿವಾಸ ಬಾಪ್ಪಾನನ್ನು ಕುರಿತು ಅಂದ ಈ ‘ದಾಯಾದಿ’ಯಲ್ಲಿ ‘ವೈರಿ’ ಎಂಬ ಧ್ವನಿ ಸ್ಪಷ್ಟವಾಗಿತ್ತು) ಹೌದೇ? ನನಗೇಕೆ ಇಷ್ಟು ದಿನ ತಿಳಿಸಲಿಲ್ಲ ? ತನ್ನ ಅಪ್ಪ ನಮಗೆ ಮಾಡಿದ ಅನ್ಯಾಯದ ಬಗ್ಗೆ ಈ ಅಪ್ಪಂತನಿಗೆ ಈಗ ಪಶ್ಚಾತ್ತಾಪವಾಗಿದೆಯಂತೆ. ಮನೆ ಕಟ್ಟಿಸಲು ತ್ರಿವಿಕ್ರಮ ಕಳಿಸಿದ ಹಣದಲ್ಲಿ ಅರ್ಧ ಇವನದಂತೆ. ಬೆಳ್ಳಿಯ ಗಂಟೆಗೆಂದು ಮೊನ್ನೆ ಕಳಿಸಿದ ಹಣ ಕೂಡ ಇವನದೇ ಆಗಿರಬಹುದು ಅಲ್ಲವೇ?”
ನಾನು ಈಗಲೂ ಉತ್ತರ ಕೊಡಲಿಲ್ಲ, ಇದನ್ನೆಲ್ಲ ಇವಳ ಕಿವಿಯ ಮೇಲೆ ಯಾರು ಹಾಕಿದರಪ್ಪಾ ಎಂದು ದುಗುಡಪಟ್ಟೆ. ಆಗ ಚಹದ ಹೊತ್ತಿಗೆ ಭಟ್ಟರು ಏನೋ ಹೇಳ ಹೊರಟು ಅರ್ಧಕ್ಕೇ ತಡೆದದ್ದರ ಅರ್ಥ ಈಗ ಹೊಳೆಯಿತು. ನನ್ನ ಮೌನದಿಂದಲೇ ಇನ್ನಷ್ಟು ಕೆರಳಿದವಳ ಹಾಗೆ ಒಮ್ಮಿಗೆಲೇ ದನಿ ಏರಿಸಿ, ನಾಲ್ಕು ಕೇರಿ ಒಂದು ಮಾಡುವ ಹಾಗೆ ಒದರಾಡಿದಳು :
“ನೀನು ಮುಂಬಯಿಗೆ ಹೋದ ಮೇಲೆ ತ್ರಿವಿಕ್ರಮನಿಗೆ ಹೇಳು, ನಾನೇ ಹೇಳಿದ್ದೇನೆಂದು ಹೇಳು : ಈ ಬಿಕನಾಸಿಗಳ ಪಶ್ಚಾತ್ತಾಪದ ಹಣದ ಗರಜು ನಮಗಿಲ್ಲಾ ಎಂದು ಹೇಳು. ಈ ದರವೇಸಿಗಳ ಬಿಟ್ಟೀ ಹಣದಿಂದ ಮನೆ ಕಟ್ಟುವುದರ ಸಲುವಾಗಿ ನಾನು ನನ್ನ ಮಗನನ್ನು ಸಾಯುವಾಗ ಕಾಣದೇ ಇದ್ದದ್ದಲ್ಲ. ಗಂಡನನ್ನು ನೀರಿಗೆ ದೂಡಿ ಬೋಳಿಯಾದದ್ದಲ್ಲ. ಇವರಿಗೆಲ್ಲ ಈಗ ಪಶ್ಚಾತ್ತಾಪ ಹುಟ್ಟಿತೇ… ಇಷ್ಟೆಲ್ಲ ಆದ ಮೇಲೆ ? ಬೆಂಕಿ ಬೀಳಲಿ ಈ ದರಿದ್ರರ ಔದಾರ್ಯಕ್ಕೆ. ಮುಂದಿನ ತಿಂಗಳು ನಾನೇ ಖುದ್ದಾಗಿ ಮುಂಬಯಿಗೆ ಬರುತ್ತೇನೆಂದು ಹೇಳು ತ್ರಿವಿಕ್ರಮನಿಗೆ. ಕಿವಿ ಹಿಂಡಿ ಹೇಳುತ್ತೇನೆ. ಕೇಳಲಿಲ್ಲವೋ, ಅವನ ಕಾಲ ಬುಡಕ್ಕೆ ಮೂಗು ಜಜ್ಜಿಕೊಂಡು ಹೇಳುತ್ತೇನೆ: ಎಂತಹ ಮೋಸ ಮಾಡಲು ಹೊರಟಿದ್ದೀಯೋ ಅಪಾ ತಮ್ಮಾ. ನಿನ್ನ ಅಪ್ಪ ಅಣ್ಣ ಸದ್ಗತಿ ಕಾಣದೇ ದೆವ್ವಭೂತಗಳಾಗೇ ಅಲೆಯುತ್ತಿರಬೇಕುss ಎನ್ನುವ ಇಚ್ಛೆ ಇದ್ದರೆ ತಾಯಿಯ ಮಾತು ಮುರಿ. ಇಲ್ಲ, ಕೇಳು : ನೀನು ಅವನಿಂದ ಪಡೆದ ಹಣ ಬರಿ ಸಾಲಾ ಎಂದು ತಿಳಿಯಬೇಕು. ನೀನೇ ನಿನ್ನ ಬೆವರಿನಿಂದ ಗಳಿಸಿದ ಹಣದಿಂದ ಅದನ್ನೆಲ್ಲಾ ಒಂದು ಪೈಸೆ ಬಿಡದಂತೆ ತೀರಿಸಬೇಕು. ಅಭಿಮಾನ ಬಿಡಬೇಡವೋ. ನೀರಿಲ್ಲದವನಾಗಬೇಡವೋ. ಎಂದು ಹೇಳುತ್ತೇನೆ. ಯಾರಲ್ಲಿ ಕೆಲಸ ಮಾಡುತ್ತಾನೆ ಎಂಥ ಕೆಲಸ ಮಾಡುತ್ತಾನೆ : ಅದು ಅವನಿಗೆ ಬಿಟ್ಟದ್ದು. ಆದರೆ ಸಾಕಿದ ನಾಯಿಯಾಗಬೇಡವೋ ಅನ್ನುತ್ತೇನೆ. ಕೇಳಿದನೇ ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದಕ್ಕೆ ಸಾರ್ಥಕ ಎಂದು ಕೊಳ್ಳುತ್ತೇನೆ : ಅವನ ಸಾಲ ತೀರುವತನಕ ಈ ಮನೆಗೆ ‘ಗೃಹ ಪ್ರವೇಶ’ ಬೇಡ. ಇಲ್ಲಿ ಒಲೆ ಹೂಡುವುದು ಬೇಡ. ಇಷ್ಟು ದಿನ ಕಳೆದಂತೆ ಅವಲಕ್ಕಿ ಮುಕ್ಕಿ ನೀರು ಕುಡಿದು ಕಳೆಯುತ್ತೇನೆ. ಕೇಳಲಿಲ್ಲವೋ, ಆ ದಾಯಾದಿಗಳ ಕಾಲ ಧೂಳಿ ನೆಕ್ಕುವದೇ ತನಗೆ ಪ್ರಿಯವೆಂದನೋ, ಇದೋ ! ಸರಿಯಾಗಿ ಕಿವಿಗೊಟ್ಟು ಕೇಳು : ಯಾವುದರ ಮೇಲೆ ಅಟ್ಟ ಅನ್ನಕ್ಕೆ ನಾನು ಈ ವರೆಗೆ ಎರವಾದೆನೋ ಅದೇ ಬೆಂಕಿಯಲ್ಲಿ ಈ ಮನೆಯನ್ನು ಸುಡುತ್ತ ನನ್ನನ್ನೂ ಸುಟ್ಟುಕೊಳ್ಳುತ್ತೇನೆ: ನನ್ನ ಹೆಣ ಸುಡುವ ಅಧಿಕಾರ ಸಹ ಅವನಿಗಿಲ್ಲ.”
ಮುಂದೇನಾಯಿತೋ ನನಗೆ ಗೊತ್ತಾಗಲೇ ಇಲ್ಲ. ಆ ಮನೆಯ ಅಟ್ಟದಿಂದ ಯಾವಾಗ ಹೇಗೆ ಇಳಿದುಬಂದೆ ; ನಡುವಿನ ಆ ಸೀರಾದ ಓಣಿಯನ್ನು ಕಳೆದು ಹೇಗೆ ಭಟ್ಟರ ಮನೆ ಸೇರಿದೆ ? ಯಾವುದೂ ಸರಿಯಾಗಿ ನೆನಪಿಲ್ಲ : ಎಲ್ಲವೂ ಅರನಿದ್ದೆಯ ಹಾಗೆ. ಕನಸಿನ ಹಾಗೆ. ಸರಿಯಾಗಿ ಎಚ್ಚರಗೊಂಡು ನೆನಪಾಗುವ ಹೊತ್ತಿಗೆ ಭಟ್ಟರ ಮನೆಯ ಅಟ್ಟದ ಮೇಲೆ ಅಣ್ಣತಮ್ಮಂದಿರ ನಡುವಿನ ಹಾಸಿಗೆಯಲ್ಲಿ ಮಲಗಿದ್ದು ತಿಳಿಯಿತು. ತಲೆ ಮಾಡುವ ಬದಿಯ ಕಿಡಕಿಯ ದಡಿಯಲ್ಲಿಟ್ಟ ಕಂದೀಲಿನ ದೀಪವನ್ನು ದೊಡ್ಡದು ಮಾಡಿ ಅಣ್ಣ, “ಸಂಜೆ ಏನೂ ತಿನ್ನಲಿಲ್ಲ ಸ್ವಲ್ಪ ಹಾಲು ಕುಡಿಯುತ್ತೀಯಾ” ಎಂದು ಕೇಳಿದ. ನಾನು (ಇಲ್ಲವೆಂದೆ. ಸಂಜೆ ನಡೆದದ್ದರ ನೆನಪು ಮಾಡಿಕೊಡುವ ಮನಸ್ಸಿಲ್ಲದವನಂತೆ ಅಣ್ಣ “ಈಗ ಸ್ವಸ್ಥ ಮಲಗು, ಬೆಳಿಗ್ಗೆ ಧಾರವಾಡಕ್ಕೆ ಹೊರಡಬೇಕಲ್ಲ” ಎನ್ನುತ್ತ ದೀಪವನ್ನು ತಿರುಗಿ ಸಣ್ಣದು ಮಾಡಹೊರಟಾಗ ಅದು ‘ಫಕ್’ ಎಂದು ಅರಿಯೇ ಹೋಯಿತು. ಮನೆ ತುಂಬ ಕತ್ತಲು, ರಾತ್ರಿ ಎಷ್ಟಾಗಿದೆಯೋ ತಿಳಿಯಲಿಲ್ಲ. ಭಟ್ಟರ ಮನೆಯವರೆಲ್ಲ ನಿದ್ದೆ ಹೋಗಿರಬೇಕು. ಸುತ್ತಲಿನ ಕೇರಿಯಲ್ಲೂ ಎಲ್ಲೆಡೆ ಮೌನ. ಹಿತ್ತಿಲ ಬೇಲಿಯಲ್ಲಿ ಆಚೆಯ ಓಣಿಯಲ್ಲಿ ರಾತ್ರೆ ಹುಳಗಳ ಜಿಣಿಕ್ ಜಿಣಿಕ್ ಕಿರ್‌ ಕೀರ್ ಹಠಾತ್ತನೆ ಸಂಜೆಯಿಂದಲೂ ಮರೆಯಲೆತ್ನಿಸುತ್ತಿದ್ದದ್ದು ಕತ್ತಲೆಯಲ್ಲಿ ಮೂಡಿ ಬಂದಂತಾಗಿ ಬೆನ್ನಹುರಿಯಲ್ಲೇ ತಣ್ಣಗಿನದೇನೋ ಹರಿಯುತ್ತಿರುವ ಅನುಭವವಾಗಿ ಮಲಗಿದಲ್ಲೇ ನಡುಗಿದೆ. ಮೈಮೇಲೆ ಬಂದವಳ ಹಾಗೆ ಗಡಗಡ ನಡುಗುತ್ತ ‘ನನ್ನ ಹೆಣ ಸುಡುವ ಅಧಿಕಾರ ಸಹ ಅವನಿಗಿಲ್ಲ’ ಎಂದು ಕಿರುಚಿದ್ದೇ ಪದ್ದಕ್ಕ ಕುಳಿತಲ್ಲೆ ಕಟ್ಟಿಗೆಯಾದಂತೆ ಕುಳಿತುಬಿಟ್ಟಿದ್ದಳು. ಮಾತನಾಡಿದ ರಭಸಕ್ಕೆ ತಲೆಯ ಮೇಲಿನ ಸೆರಗು ಕೆಳಗೆ ಜಾರಿತ್ತು. ಹೊತ್ತು ಹೋದ ಹಾಗೆ ಅಟ್ಟದ ಮೇಲೆ ಹಬ್ಬಿಕೊಂಡ
7*
ಮಬ್ಬುಗತ್ತಲೆಯಲ್ಲಿ ಒಮ್ಮಿಗಲೇ ಮಾತು ನಿಲ್ಲಿಸಿದ ಪದ್ದಕ್ಕನ ಮೋರೆಯ ಛಾಯೆ, ಸಣ್ಣಗೆ ಕೂದಲು ಬೆಳೆದ ಅವಳ ಬೋಳುತಲೆ ಹೇಗೋ ಕಂಡು ; ವಾಮನಮಾವ ನೆನಪಿಗೆ ಬಂದು … ಮುಂದೆ ಕುಳಿತವಳು ಪದ್ದಕ್ಕನು ಅಲ್ಲವೇ ಅಲ್ಲ ಎಂಬ ಭ್ರಮೆಯಾಗಿ ಅಲ್ಲಿಂದ ಓಟಕಿತ್ತಿದ್ದೆ… ಅವಳನ್ನು ಹಾಗೇ ಬಿಟ್ಟು ಓಡಿ ಬಂದದ್ದಕ್ಕೆ ಈಗ ಕಳವಳ ಪಡುತ್ತ ಹೆದರುತ್ತ ಹೆದರುತ್ತ ಕಣ್ಣು ಮುಚ್ಚಿದೆ….
……..ಕೋಟಿತೀರ್ಥದ ನೀರು ಒಮ್ಮಿಗಲೆ ಗಿರಗಿರನೆ ಸುತ್ತಹತ್ತಿ ಸುಳಿಯಾದ ಹಾಗೆ ; ಹನೇಹಳ್ಳಿಯ ಹಿತ್ತಿಲಲ್ಲಿಯ ಹೂವು ಹಸಿರು ಹುರಪಳಿಸಿ ಹೋದ ಹಾಗೆ ; ಪದ್ದಕ್ಕನ ಮನೆಯ ಅಟ್ಟದ ಮಾಡಿನಿಂದ ಕಪ್ಪು ಉರುಳಿನಂತಹದೇನೊ ಕೆಳಗಿಳಿಯುತ್ತ ಬಂದ ಹಾಗೆ ; ಪದ್ದಕ್ಕೆ ಸತ್ತು ಹೋದ ಹಾಗೆ ಕನಸಾಗಿ ಅಳು ಬಂದಂತಾಗಿ `ಅಣ್ಣಾ’ ಎಂದೆ. ಅಣ್ಣ ತಮ್ಮ ಇಬ್ಬರೂ ದಡಬಡಿಸಿ ಎದ್ದು ಕುಳಿತು ಏನಾಯಿತು ?” ಎಂದರು. ದೂರ ಶೂದ್ರರ ಕೇರಿಯಲ್ಲೆಲ್ಲೋ ಬೆಳಗುಜಾವದ ಕೋಳಿ ಕೂಗಿತು.
© ಯಶವಂತ ಚಿತ್ತಾಲ, ೧೯೬೮

Close

ಪಿ.ಲಂಕೇಶರ ಬಿರುಕು

ಶಾಂತಿನಾಥ ದೇಸಾಯಿ

ಪಿ. ಲಂಕೇಶರ ‘ಬಿರುಕು’
[ಪುಸ್ತಕ ವಿಮರ್ಶೆ]

ಸಣ್ಣ ಕತೆಯ ನಂತರ ನಾಟಕದ ಕ್ಷೇತ್ರದಲ್ಲಿ, ಜೊತೆಗೆ ಕಾವ್ಯ ಕ್ಷೇತ್ರದಲ್ಲಿ, ಯಶಸ್ವಿಯಾದ, ಮುಖ್ಯವಾಗಿ ಅತ್ಯಂತ ಉತ್ತೇಜಕವಾದ, ಪ್ರಯೋಗಗಳನ್ನು ಮಾಡಿದ ಲಂಕೇಶರು ಕನ್ನಡ ನವ್ಯ ಸಾಹಿತ್ಯದ ಕೇಂದ್ರ ವ್ಯಕ್ತಿಗಳಲ್ಲೊಬ್ಬರಾಗಿದ್ದಾರೆ. ಹೊಸ ಹೊಸ ಕ್ಷೇತ್ರಗಳಲ್ಲಿ ಹೊಸ ಹೊಸ ರೀತಿಯಲ್ಲಿ ಕೆಲಸ ಮಾಡಬೇಕೆಂಬ ಹಟ, ಹಟದ ಜೊತೆಗೆ ಧೈರ್ಯ, ಧೈರ್ಯದ ಜೊತೆಗೆ ಶಕ್ತಿಯುಳ್ಳಂಥ ಲಂಕೇಶರ ನಿಷ್ಠುರ ಪ್ರತಿಭೆ ಈಗ ಕಾದಂಬರಿಯ ವಿಸ್ತೃತ ಸಾಹಿತ್ಯಪ್ರಕಾರದಲ್ಲಿ ಅಭಿವ್ಯಕ್ತಗೊಳ್ಳಲು ಹವಣಿಸಿದ್ದು ಅನಪೇಕ್ಷಿತವೇನಲ್ಲ. ಅವರ ವೈಶಿಷ್ಟ್ಯಪೂರ್ಣವಾದ ಪ್ರತಿಭೆಗೆ ಅನುಗುಣವಾಗಿ, ಬಿರುಕು ಅತ್ಯಂತ ನವೀನವಾದ ವಸ್ತುವನ್ನು ಅತ್ಯಂತ ನವೀನವಾದ ರೀತಿಯಲ್ಲಿ ರೂಪಿಸುವ ಕಾದಂಬರಿಯಾದ್ದರಿಂದ, ಅದರ ವಿಮರ್ಶೆಯೆಂದರೆ ಸದ್ಯ ಅದನ್ನು ತಿಳಿದುಕೊಳ್ಳುವ ಒಂದು ಪ್ರಯತ್ನ ಮಾತ್ರ ಎಂದು ಮೊದಲೇ ಹೇಳಿಬಿಡುವೆ.
ಕಾದಂಬರಿ ಓದುವಾಗ, ಓದಿಯಾದನಂತರ, ನಮ್ಮ ಮನಸ್ಸನ್ನು ಪೀಡಿಸುವ ಮುಖ್ಯ ಪ್ರಶ್ನೆ : ಈ ಕತೆಯಲ್ಲಿ ನನಸೆಷ್ಟು ಕನಸೆಷ್ಟು ? ಲಂಕೇಶರು ‘ಅರಿಕೆ’ಯಲ್ಲಿ ಈ ವಿಷಯವನ್ನೇ ಮೊದಲು ಎತ್ತಿದ್ದಾರೆ : “ಅದನ್ನು ಓದಿದ ಗೆಳೆಯರು ಅದು ಕನಸೇ, ವಾಸ್ತವವೇ; ಸತ್ಯ-ಅಸತ್ಯಗಳಿಗೆ, ಸುಳ್ಳು-ನಿಜಗಳಿಗೆ ಕೊಟ್ಟ ಒಂದು ವ್ಯಂಗರೂಪವೇ ಅಂದೆಲ್ಲಾ ಕೇಳಿದರು. ಇವೆಲ್ಲವೂ ಇರಬಹುದೆಂದು ನಾನು ಉತ್ತರಿಸಿದೆ….” ಲಂಕೇಶರ
ಮಾತಿನಲ್ಲಿಯ (‘ಬಹುದು’) ಸಂದಿಗ್ಧತೆ ನಮಗೆ ಪೀಡಿಸುವ ಪ್ರಶ್ನೆಯನ್ನು ಇನ್ನಿಷ್ಟು ಜಟಿಲಗೊಳಿಸುವದೇ ವಿನಾ ಅದನ್ನು ಬಿಡಿಸುವದರಲ್ಲಿ ಸಹಾಯ ಮಾಡುವದಿಲ್ಲ. ಆದುದರಿಂದ ನಾವು ನಮ್ಮ ಪ್ರಶ್ನೆಗೆ ಉತ್ತರವನ್ನು ಕಾದಂಬರಿಯಲ್ಲಿಯೇ ಶೋಧಿಸಬೇಕಾದದ್ದು ಅನಿವಾರ್ಯ. ಈ ಕಾದಂಬರಿಯ ತಂತ್ರದ ಒಂದು ಮುಖ್ಯ ಅಂಶವೆಂದರೆ ಉತ್ತಮ ಪುರುಷದಲ್ಲಿ ಹೇಳಲ್ಪಟ್ಟ ಕತೆ ಸಂಪೂರ್ಣವಾಗಿ ಕಥಾನಾಯಕನ ಮನಸ್ಸಿನ ಪಾತಳಿಯ ಮೇಲೆ ನಡೆಯುತ್ತದೆಯೆಂಬುದು. ಹೀಗಿದ್ದಾಗ, ಆ ಪಾತಳಿಯ ಮೇಲೆ, ಕತೆಯಲ್ಲಿ ನಡೆಯುವದೆಲ್ಲ-ಅಂದರೆ ಕಥಾನಾಯಕನ ಅನುಭವವೆಲ್ಲ-‘ಸತ್ಯ’ವೆಂಬುದು ನಿಜವಾದರೂ, ನಮಗೆ ಪೀಡಿಸುವ ಪ್ರಶ್ನೆಯೆಂದರೆ ಅಲ್ಲಿ ಬರುವ ಘಟನೆಗಳಿಗೆ “ಬಾಹ್ಯ” ಜಗತ್ತಿನಲ್ಲಿ ಅಸ್ತಿತ್ವ ಎಷ್ಟರ ಮಟ್ಟಿಗಿದೆ ಎಂಬುದು. ಇನ್ನು, ಪು. ೫೭ ರ ವರೆಗೆ ಘಟನೆಗಳ ವಸ್ತುನಿಷ್ಠ ಅಸ್ತಿತ್ವದ ಬಗ್ಗೆ ಓದುಗನ ಮನಸ್ಸಿನಲ್ಲಿ ಗೊಂದಲವೇಳುವದಿಲ್ಲ. ಗೊಂದಲವೇಳುವದು ಪು. ೫೭ರ ನಂತರ : ಅಲ್ಲಿ ಬರುವ ಸ್ವಪ್ನ ಸದೃಶವಾದ ಜಗತ್ತಿನಲ್ಲಿ ವಾಸ್ತವಿಕ ಸತ್ಯವೆಷ್ಟು, ಕಥಾನಾಯಕನ ಮನಸ್ಸಿನಲ್ಲಿಯ ಕಲ್ಪನೆಯ ಅಂಶವೆಷ್ಟು ಅಥವಾ ಅದೇನು ಸಂಪೂರ್ಣವಾಗಿ ಕಥಾನಾಯಕನ ‘ಹುಚ್ಚ’ ಮನಸ್ಸಿನ ಭ್ರಮೆಯೇ ಎಂಬ ಪ್ರಶ್ನೆ ಏಳುತ್ತದೆ. ಈ ಪ್ರಶ್ನೆಗೆ ಸಮರ್ಪಕವಾದ ಉತ್ತರ ಕೊಡಲು ಬರುವುದಿಲ್ಲವಾದ್ದರಿಂದ, ಅದು ಕಥಾನಾಯಕನ ಮನಸ್ಸಿಗೆ ಸೀಮಿತವಾದ ಸತ್ಯ-ಭ್ರಾಂತಿಗಳ ವಿಶ್ರಣವಾದ ಒಂದು ವಿಶಿಷ್ಟ ವಿಶ್ವವೆಂದು ಭಾವಿಸಿ ಆ ಪ್ರಶ್ನೆಯನ್ನು ಅಲ್ಲಿಗೇ ಬಿಡಬೇಕು. ಇದಕ್ಕೆ ಲೇಖಕರು ಇನ್ನೊಂದು ಪರಿಸರ’ ಎಂದು ಕರೆದು ಅಲ್ಲಿ ಕಥಾ ನಾಯಕನು (‘ತಲೆತಪ್ಪಿಸಿ’ ಕೊಳ್ಳುತ್ತಾನೆ ಎಂದಿದ್ದಾರೆ. ಇನ್ನು ಓದುಗನ ದೃಷ್ಟಿಯಿಂದ ಮುಖ್ಯ ಪ್ರಶ್ನೆಯೆಂದರೆ-ಈ ‘ಇನ್ನೊಂದು ಪರಿಸರ’ದ, ಅಂದರೆ ಕಲ್ಪನಾಜನ್ಯ ಸ್ವಪ್ನ ಸದೃಶವಾದ ಪರಿಸರದ, ಅರ್ಥವೇನು ಹಾಗೂ ಅದಕ್ಕೂ ನಾಯಕನ ವಾಸ್ತವಿಕ ಪರಿಸರಕ್ಕೂ ಸಂಬಂಧವೇನು ? ಕಾದಂಬರಿಯ ಅರ್ಥವೆಲ್ಲ ಈ ಪ್ರಶ್ನೆಯ ಉತ್ತರದಲ್ಲಿದೆ.
ಮೊದಲು ಪು. ೧ ರಿಂದ ಪು. ೫೭ ರ ವರೆಗಿನ ಕತೆ ತೆಗೆದುಕೊಳ್ಳೋಣ. ಬೆಂಗಳೂರಿನಲ್ಲಿ ರಿಸರ್ಚ ವಿದ್ಯಾರ್ಥಿಯಾದ ಬಸವರಾಜ ಚಳಿಗಾಲದ ಒಂದು ಮುಂಜಾನೆ ಎದ್ದು, ಮನೆಯ ಮಾಲೀಕ ಕಂತ್ರಿ ಗಂಗಪ್ಪನ ಜೊತೆ ಬಾಡಿಗೆಯ ಬಗ್ಗೆ ಸ್ವಲ್ಪ ವಾದ-ವಿವಾದವಾದ ನಂತರ, ರೂಮು ಬಿಡಬೇಕು ಇಲ್ಲವೆ ಗಂಗಪ್ಪನ ಮೋಟು ಜಡೆಯ ಇಜ್ಜಲಿನ ತುಣುಕಿನಂಥ ಕುಮಾರಿಗೆ ಪಾಠ ಹೇಳಬೇಕು ಎಂಬ ದ್ವಂದ್ವಕ್ಕೆ ಸಿಕ್ಕಿಕೊಂಡು, ಅಲ್ಲಿಂದ ತನ್ನ ಪ್ರೊಫೆಸರ ರಂಗಯ್ಯನ ಮನೆಗೆ ಪಲಾಯನ ಮಾಡುತ್ತಾನೆ. ಪ್ರೊ. ರಂಗಯ್ಯನ ಜೊತೆ ಮಾತು-ಕತೆ, ಪಾಠ ಹೇಳಿಸಿಕೊಳ್ಳಲು ಬಂದ ಎಂ.ಎ., ವಿದ್ಯಾರ್ಥಿಗಳ ಕೂಡ ಪಾರ್ಟಿಗೇಮ್ಸ್‌ಗಳಾದ ನಂತರ, ಪ್ರೊ. ರಂಗಯ್ಯನ ಮಗಳು ಶಾಂತಾ ಬಸವರಾಜನನ್ನು ಸಿನೇಮಾಕ್ಕೆ ಕರೆಯುತ್ತಾಳೆ. ಟ್ಯಾಕ್ಸಿಯಲ್ಲಿ ಆತ ಶಾಂತಾ ಹಾಗೂ ಅವಳ ತಾಯಿಯ ಜೊತೆ ಹೋಗುವಾಗ ನಡುವೆಯೇ ಶಾಂತಾ ಟ್ಯಾಕ್ಸಿಯಿಂದ ಇಳಿದು ತನ್ನ ಮಿತ್ರ ವಸಂತ (ರೆವಿನ್ಯೂ ಮಂತ್ರಿಯ ಮಗ) ನ ಜೊತೆ ಹೋಗಿಬಿಡುತ್ತಾಳೆ. ಶಾಂತಾಳ ತಾಯಿ, ‘ತಿಮಿಂಗಿಲ’ (ರಾಜ ಅವಳಿಗೆ ಕೊಟ್ಟ ಹೆಸರು), ತನ್ನ ಗೆಳತಿ, ಸುವರ್ಣಳಿಗೆ ರಾಜನ ಪರಿಚಯ ಮಾಡಿಕೊಡುತ್ತಾಳೆ. ತನ್ನ ಮಗಳಿಗೆ ರಾಜ ತಕ್ಕ ವರನಾಗಬಹುದೇ ಎಂದು ಸುವರ್ಣ ರಾಜನನ್ನು ಪರೀಕ್ಷಿಸುತ್ತಾಳೆ. ಅಷ್ಟರಲ್ಲಿ ಸುವರ್ಣಳಿಗೆ ಬೇಕಾದ ಸಿಗರೇಟು ತರುವ ಅವಕಾಶ ದೊರಕುತ್ತಲೆ ರಾಜ ಅವಳು ಕೊಟ್ಟ ಐದು ರೂಪಾಯಿಗಳೊಂದಿಗೆ ಅವರಿಬ್ಬರನ್ನೂ ಬಿಟ್ಟು ಪಲಾಯನ ಮಾಡುತ್ತಾನೆ. ತನ್ನ ಸಂಬಳದ ಬಗ್ಗೆ ವಿಚಾರಿಸಲೆಂದು ರಾಜ ಕಾಲೇಜಿಗೆ ಹೋದಾಗ ಅಲ್ಲಿ ವಸಂತ, ಶಾಂತಾ, ಪ್ರೊಫೆಸರ್ ಬುಳ್ಳಪ್ಪ ಇವರುಗಳ ಭೆಟ್ಟಿಯಾಗುತ್ತದೆ. ಆಫೀಸಿನಲ್ಲಿ ರೆವಿನ್ಯೂ ಮಂತ್ರಿಗಳು ಕಳಿಸಿದ್ದಾರೆ ಎಂದು ಸುಳ್ಳು ಹೇಳಿ ತನ್ನ ಕೆಲಸ ಮಾಡಿಕೊಳ್ಳಲು ಯತ್ನಿಸಿ, ಕೊನೆಗೆ ಮುಖ್ಯಾಧಿಕಾರಿ ಚಂದ್ರಕಾಂತರನ್ನು ಕಾಣುತ್ತಾನೆ. ಅವರೊಡನೆ ಸಾಹಿತ್ಯದ ಬಗ್ಗೆ ಚರ್ಚೆಯಾದ ನಂತರ, ತನ್ನ ಸಂಬಳದ ಬಗ್ಗೆ ಕೇಳುವದನ್ನೇ ಮರೆತು ರಾಜ ಹೊರಗೆ ಬರುತ್ತಾನೆ. ಅಲ್ಲಿ ತನ್ನ ಗೆಳೆಯರಾದ ಅನಂದು ಪರಮರನ್ನು ಸಂಧಿಸುತ್ತಾನೆ. ಆನಂದು ರಾಜನ ಬೆನ್ನು ಹತ್ತಿ ಅವನ ರೂಮಿಗೆ ಹೋಗಿ, ಗಂಗಪ್ಪನ ಮೇಲೆ ಪ್ರಭಾವ ಬೀರಿ, ರಾಜನ ಬದಲಾಗಿ ತಾನೇ ಗಂಗಪ್ಪನ ಮಗಳಿಗೆ ಟ್ಯೂಶನ್ ಕೊಡಲು ಸುರು ಮಾಡುತ್ತಾನೆ. ಪ್ರೊ. ರಂಗಯ್ಯ ಲೋಕೋಪಯೋಗಿ ಮಂತ್ರಿಗಳ ಮಿತ್ರರೆಂದು ತಿಳಿದಾಕ್ಷಣ ಗಂಗಪ್ಪ ರಾಜನನ್ನು ಪ್ರೊ. ರಂಗಯ್ಯನಿಗೆ ಫೋನ್‌ ಮಾಡಲು ಒತ್ತಾಯ ಪಡಿಸುತ್ತಾನೆ. ಅಷ್ಟರಲ್ಲಿ ಕೈಲಾಸಪಂಡಿತರಾದ ಶ್ರೀನಿವಾಸರಾವ್ ಬಂದು ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಮಾತನಾಡಿ ‘ಬಂಡ್ವಾಳಿಲ್ಲದ ಬಡಾಯಿ’ಯನ್ನೋದಿ ಗಂಗಪ್ಪನಿಂದ ೫೦ ರೂಪಾಯಿ ಗಿಟ್ಟಿಸಿ ಹೋಗುತ್ತಾನೆ. ರಾಜ ಪ್ರೊ. ರಂಗಯ್ಯನವರಿಗೆ ಫೋನ್ ಮಾಡಬೇಕಾಗುತ್ತದೆ. ಆದರೆ ಫೋನಿನಲ್ಲಿ ಶಾಂತಾಳ ಜೊತೆ ಮಾತನಾಡುತ್ತಾನೆ. ರಾಜ ಕಾಯಿಲೆಬಿದ್ದ ತನ್ನ ತಾಯಿಯನ್ನು ನೋಡಲಿಕ್ಕೆಂದು ಊರಿಗೆ ಹೊರಡುತ್ತಾನೆ. ಗಂಗಪ್ಪನ ಜೊತೆ ಬಾಡಿಗೆಯ ಬಗ್ಗೆ ಜಗಳವಾಗಿ, ರಾಜ ಹುಚ್ಚನಂತೆ ಏನೇನೋ ಬಡಬಡಿಸಿ ಸಾಮಾನು ತೆಗೆದುಕೊಂಡು ಹೊರಟುಬಿಡುತ್ತಾನೆ. ತನ್ನ ಜೊತೆ ಬರುತ್ತಿದ್ದ ಆನಂದುವನ್ನು ಶಬ್ದಗಳಿಂದ ಚನ್ನಾಗಿ ಥಳಿಸಿ, ಒಂಟಿಯಾಗಿ ನಡೆದು ಬಿಡುತ್ತಾನೆ ; “ರಾಜ ಭವನ್’ ಎಂಬ ಹೋಟೇಲನ್ನು ಪ್ರವೇಶಿಸಿ ಮಹಡಿ ಹತ್ತಿ ಒಂದು ದೊಡ್ಡ
ಹಾಲಿನಲ್ಲಿ ಬೆವರೊರೆಸುತ್ತ ನಿಂತುಕೊಳ್ಳುತ್ತಾನೆ.
ಇಲ್ಲಿಯವರೆಗೆ ಕತೆ ಸರಾಗವಾಗಿ, ವಿಡಂಬನೆಯ ಪಾತಳಿಯ ಮೇಲೆ ಸಾಗುತ್ತದೆ : ಸಮಾಜದ ಗೀಳು ಹಿಡಿದ ಬೇರೆ ಬೇರೆ ಮುಖಗಳು ಘಟನೆ, ಪಾತ್ರಗಳ ಮುಖಾಂತರ, ಜೊತೆಗೆ ರಾಜುವಿನ ಟೀಕಾತ್ಮಕ ಪ್ರತಿಕ್ರಿಯೆಗಳ ಮುಖಾಂತರ, ಇಲ್ಲಿ ಚಿತ್ರಿಸಲ್ಪಟ್ಟಿವೆ. ಉದಾಹರಣೆಗಾಗಿ, ಗಂಗಪ್ಪ ಹೊಸದಾಗಿ ಏನಕೇನ ಪ್ರಕಾರೇಣ ಶ್ರೀಮಂತರಾಗಿ, ಸಂಸ್ಕೃತಿಯ ಲೇಪನಕ್ಕಾಗಿ ಪ್ರತಿಷ್ಠೆಗಾಗಿ ಹೆಣಗಾಡುತ್ತಿರುವ ಒಂದು ವರ್ಗದ ಸಂಕೇತವಾಗಿದ್ದಾನೆ. “ಹೊಟ್ಟೆ ತುಂಬಿದರೆ ಮಿಕ್ಕದ್ದೆಲ್ಲ ಸರಿಹೋಗುತ್ತೆ” ಎಂಬುದು ಅವನ ಧರ್ಮಸೂತ್ರ. ಶೇಕ್ಸಪಿಯರ್, ಎಲಿಯಟ್, ಕೈಲಾಸಂ ಅಂತ ಮಾತನಾಡುವಾಗಲೂ ಅವನ ಲಕ್ಷವೆಲ್ಲ ಬಿಲ್ಲುಗಳನ್ನು ಹೇಗೆ, ಯಾರ ಯಾರ ವಶೀಲೆ ಹಚ್ಚಿ ಯಾರು ಯಾರಿಗೆ ಹೇಳಿಸಿ, ಮುಂದಕ್ಕೆ ಹಾಕಿಸಬೇಕು ಎಂಬುದರ ಕಡೆಗೇ ಇರುತ್ತದೆ. ಇತ್ತ ಮನೆಯಲ್ಲಿ ದೇವರ ಪೂಜೆ ಬೇಕು, ತಮ್ಮ ಸಂಸ್ಕೃತಿ ಧರ್ಮಗಳ ಅಭಿಮಾನ ಬೇಕು, ಅತ್ತ ಮಕ್ಕಳನ್ನು ವೆಸ್ಟ್ ಎಂಡ್ ಸ್ಕೂಲಿಗೆ ಕಳಿಸಿ ಅವರ ಇಂಗ್ಲಿಷ್ ಪ್ರವೀಣತೆಯನ್ನು ಪ್ರದರ್ಶಿಸಬೇಕು. ಮುಖ್ಯವಾಗಿ ಜೀವನಕ್ಕೆ ಹಣದ ಭದ್ರವಾದ ಬುನಾದಿ ಬೇಕು ಎಂಬ ಸತ್ಯವನ್ನು ಮನಗಂಡು ಅದರಂತೆ ಆಚರಿಸುವವ. ಆ ಒಂದು ಗುರಿಗೆ ಅಡ್ಡ ಬಂದುದೆಲ್ಲವನ್ನೂ ಸಹಾಯವಾಗದಿದ್ದುದೆಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ತೊಡೆದುಹಾಕಬೇಕೆಂಬ ನಿರ್ಧಾರದ ಮನುಷ್ಯನಾತ. ಅದೇ ರೀತಿ, ಪ್ರೊ. ರಂಗಯ್ಯ, ಶಿಕ್ಷಣವೆಂದರೆ ಚೇಷ್ಟೆಯ ವಿಷಯವಾದ ಈಗಿನ ಕಾಲದಲ್ಲಿ ಸ್ವಂತ ವ್ಯಕ್ತಿತ್ವವನ್ನೇ ಕಳೆದುಕೊಂಡು ಜೀವನದ ಬಗ್ಗೆ ಒಂದು ಬಗೆಯ ಅನಾಸ್ಥೆ, ಸಿನಿಕತೆ ಬೆಳೆದು, ಅರ್ಥಹೀನವಾಗಿ, ಸಮಯಸಾಧಕನಾಗಿ ಜೀವನ ಸಾಗಿಸುವ ‘ಸುಶಿಕ್ಷಿತ-ಸುಸಂಸ್ಕೃತ’ ಬುದ್ಧಿಜೀವಿಗಳ ಪ್ರತೀಕವಾಗಿದ್ದಾನೆ. ಮಂತ್ರಿಯ ಮಗನಾಗುವದೇ ಒಂದು ದೊಡ್ಡಸ್ತನವೆಂದು ತೋರಿಸುವ, ಬೀಟ್ಳ ಸಾಂಗ್ಸ ಹಾಡುತ್ತ, ಹುಡುಗಿಯರ ಜೊತೆ ತಿರುಗಾಡುವ, ಅವನು ಏನು ಮಾಡಿದರೂ ಎಲ್ಲರಿಗೂ ಬೇಕಾಗುವ, ವಸಂತ ಪ್ರತಿಷ್ಠೆ -ಅಧಿಕಾರಗಳ ಪ್ರಭಾವದ ಪ್ರತೀಕವಾಗಿದ್ದಾನೆ. ಇವರಲ್ಲದೆ, ಸಾಹಿತ್ಯದಲ್ಲಿ ಪೊಳ್ಳು ಅಭಿಮಾನ ತೋರಿಸಿ, ಅಧಿಕಾರದ ಬಲದ ಮೇಲೆಯೇ ಸಾಹಿತಿಯೆಂದು ಮರೆಯಲೆತ್ನಿಸುವ ಅಧಿಕಾರಿ ಚಂದ್ರಕಾಂತ ಚೆಂದಾಗಿ ದೊಡ್ಡದೊಡ್ಡ ಮಾತುಗಳನ್ನಾಡುವ, ಮಾತಿನ ಬಲದಿಂದಲೇ ಜನರ ಮೇಲೆ ಪ್ರಭಾವ ಬೀರುವ, ಯಾವುದರಲ್ಲಿಯೂ ನಿಜವಾದ ಶ್ರದ್ದೆಯಿಲ್ಲದೆ ಎಲ್ಲ ವಿಷಯಗಳ ಬಗ್ಗೆ ಉತ್ಸಾಹ ತೋರಿಸುವ ಸಮಯಸಾಧಕ ಆನಂದು ; ಎಲ್ಲರ ಬಗ್ಗೆ ಎಲ್ಲದರ ಬಗ್ಗೆ ಕೊಂಕು ಮಾತುಗಳನ್ನಾಡುವ ನಿಷ್ಕ್ರಿಯ ಸಿನಿಕ್ ಪರಮ; ಜನರ “ಉಪಯೋಗ’ ಹೇಗೆ ಮಾಡಿಕೊಳ್ಳಬೇಕೆಂದು ಗೊತ್ತಿದ್ದ ಪ್ರೊ. ಬುಳ್ಳಪ್ಪ- ಹೀಗೆ ಇಲ್ಲಿ ಬರುವ ಎಲ್ಲರೂ ವ್ಯಾಧಿಗ್ರಸ್ತ ಸಮಾಜದ ಬೇರೆ ಬೇರೆ ಮುಖಗಳು. ಇಂಥ ಪರಿಸರದಲ್ಲಿ ರಾಜುವಿನಂಥ ಸೂಕ್ಷ್ಮ ಮನಸ್ಸಿನ, ತನ್ನ ನೈಜತೆಯನ್ನು (genuineness) ಇರಿಸಿಕೊಳ್ಳಲು ಹೆಣಗಾಡುವ ಮನುಷ್ಯ ಸುಖವಾಗಿ ಬಾಳಲಾರ ಹಾಗೂ ಅವನ ಬಂಡಾಯವೆಲ್ಲ ಅವನ ತಲೆಯಲ್ಲಿಯ ಸಿಟ್ಟಾಗಿಯೇ ಉಳಿದು ಅವನ ತಲೆ ಕೆಡಿಸುವ ವಿಪರೀತ ಶಕ್ತಿಯಾಗಿಬಿಡಬಹುದು-ಆಗ ಅವನಿಗೆ ಈ ಪರಿಸರದಿಂದ ಓಡಿಹೋಗಿ ಬೇರೊಂದು ಪರಿಸರದಲ್ಲಿ ತಲೆತಪ್ಪಿಸಿಕೊಳ್ಳದೇ ಗತ್ಯಂತರವಿಲ್ಲ, ಇಲ್ಲಿ ಲಂಕೇಶರು ಒಂದು ಅತ್ಯಂತ ಮಹತ್ವದ ವಿಚಾರವನ್ನು ನಾಟ್ಯೀಕರಿಸಿದ್ದಾರೆ: ಸಮಾಜ ವಿಪರೀತವಾಗಿ ನೆಮ್ಮದಿಗೆಟ್ಟಾಗ ಅದಕ್ಕೆ ಹೊಂದಿಕೊಂಡು ಹೋಗುವುದೆಂದರೇನೇ ಸತ್ವಹೀನವಾಗುವುದು, ಜೊಳ್ಳಾಗುವುದು, ಪೊಳ್ಳಾಗುವುದು, ‘ಫೋನಿ’ಯಾಗುವದು, ಕೃತಕವಾಗುವುದು; ಹಾಗೂ ಅವರ ವಿರುದ್ಧ
ಒಂದಿಲ್ಲೊಂದು ರೀತಿಯಲ್ಲಿ ಪ್ರತಿಕ್ರಿಯೆ ತೋರಿಸುವುದೆಂದರೇನೇ ಮನುಷ್ಯ ತನ್ನ ತನ್ನತನವನ್ನು ತನ್ನ ಅಂತಃಸತ್ವವನ್ನು ಕಾಯ್ದುಕೊಂಡಂತೆ. ಅಂತಃಸತ್ವವನ್ನು ಕಾಯ್ದುಕೊಳ್ಳುವ ಹೋರಾಟದಲ್ಲಿ ಉಂಟಾಗಬಹುದಾದ neurosis, ಮನಸ್ಸಿನಲ್ಲಿಯ ‘ಬಿರುಕು’, ಮಾನವೀಯ ಮೂಲ್ಯಗಳ ದೃಷ್ಟಿಯಿಂದ, ಮನಸ್ಸಿನ ಆಂತರಿಕ ಆರೋಗ್ಯವನ್ನೇ ಸೂಚಿಸುತ್ತದೆ. ಈ ಸಂದರ್ಭದಲ್ಲಿ Eric Fromm ತನ್ನ The Fear of Freedom ದಲ್ಲಿ ಹೇಳಿದ ಮಾತನ್ನು ಇಲ್ಲಿ ಉದ್ದರಿಸುವದು ಅಗತ್ಯವೆಂದೆನಿಸುವದು :
“If we differentiate the two concepts of normal and neurotic, we come to the following conclusion : the person who is normal in terms of being well adapted is often less healthy than the neurotic person in terms of human values. Often he is well adapted only at the expense of having given up his self in order to become more or less the person he believes he is expected to be. All genuine individuality and spontaneity may have been lost. On the other hand, the neurotic person can be characterized as somebody who was not ready to surrender completely in the battle for his self. To be sure, his attempt to save his individual self was not successful and instead of expressing his self productively he sought salvation through neurotic symptoms and by withdrawing into a phantasy life. Nevertheless, from the standpoint of human values, he is less crippled than the kind of normal person who has lost his individuality altogether,”
ಬಸವರಾಜ ತನ್ನ ಅಂತಃಸತ್ವವನ್ನು, ತನ್ನ ಮೂಲ್ಯಗಳನ್ನು ಕಾಯ್ದುಕೊಳ್ಳಬೇಕು ಎಂದು ಹೋರಾಡುತ್ತಾನೆ’: ಹಾಗೆ “ಹೋರಾಡುವಾಗ’ ಎಷ್ಟೋ ಸಲ ಆತ ಸಮಾಜದ ಸುಳ್ಳುಗಳಿಗೆ ಬಲಿಯಾಗುತ್ತಾನೆ. ಎಷ್ಟೋ ಸಲ ಪರಿಸ್ಥಿತಿ ಆತನನ್ನು ಅಪ್ರಾಮಾಣಿಕನಾಗಲು ಹಚ್ಚುತ್ತದೆ. ಆದರೆ ಆತ ಹಾಗೆ ತನ್ನ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ವರ್ತಿಸಿದಾಗಲೆಲ್ಲ ಆತನಲ್ಲಿ ತೀವ್ರವಾದ ಅಪರಾಧಭಾವ ಉಂಟಾಗುತ್ತದೆ. ಈ ಅಪರಾಧ ಭಾವವೇ ಕೊನೆಗೆ ಕ್ರೋಢಿಕರಿಸಿದ್ದರಿಂದ, ಆ ದಿನ ಸಂಜೆಗೆ ಕಂತ್ರಿ ಗಂಗಪ್ಪನ ಮಾತಿನಂತೆ ಪ್ರೊ. ರಂಗಯ್ಯನ ಕೂಡ ಫೋನಿನಲ್ಲಿ ಗಂಗಪ್ಪನ ವಿಷಯ ಮಾತಾಡಲು ಒಪ್ಪದೆ ಮನೆ ಬಿಟ್ಟು ಹೊರಟುಬಿಡುತ್ತಾನೆ ಹಾಗೂ ಆ ಇಡೀ ದಿನ ಹತ್ತಿಕ್ಕಿ ಇಟ್ಟ ಸಿಟ್ಟನ್ನೆಲ್ಲ ಆನಂದುವಿನ ಮೇಲೆ ಕಾರಿಬಿಡುತ್ತಾನೆ (ಪು, ೫೫). ಈ ಸಮಾಜವೆಂದರೆ ಒಂದು ಕಾಡು (ಹಣ, ಪ್ರಭಾವ, ಸಾಂಸ್ಕೃತಿಕ ಚಟುವಟಿಕೆಗಳು, ಸಾಹಿತ್ಯ ಪ್ರಕಾಶನ, ಸಾಮಾಜಿಕ ಪ್ರತಿಷ್ಠೆ ….ನಾನು ನುಗ್ಗಲಾರದ ಕಾಡು’ – ಪು, ೫೩) ಇಲ್ಲಿ ತನ್ನಂಥವರಿಗೆ ಸ್ಥಾನವಿಲ್ಲ ಹಾಗೂ ಈ ಸಮಾಜದ ಜೊತೆ ಗುದ್ದಾಡಲು ತನಗೆ ಶಕ್ತಿಯಿಲ್ಲ ಎಂದು ತೀವ್ರವಾಗಿ ಅನಿಸಿದ್ದರಿಂದ ಆತ ಅಲ್ಲಿಂದ ಪಲಾಯನ ಮಾಡುತ್ತಾನೆ. ಆದರೆ ಪಲಾಯನ ಮಾಡಿ ಎಲ್ಲಿಗೆ ಹೋಗಲು ಸಾಧ್ಯ ? ಹೆಚ್ಚೆಂದರೆ ಕನಸಿನೂರಿಗೆ– ಬಿರುಕಿನ ಭ್ರಾಂತಿಪುರಕ್ಕೆ.
ಆದರೆ ಈ ಕನಸಿನೂರಿನಲ್ಲಾದರೂ ಬಸವರಾಜನಿಗೆ ಸೌಖ್ಯವಿದೆಯೇ, ಸ್ವಾಸ್ಥ್ಯವಿದೆಯೇ, ಸ್ವಾತಂತ್ರವಿದೆಯೇ? ಈ ಕನಸಿನೂರು ಕೂಡ ವಾಸ್ತವ ಜಗತ್ತಿನ ಇನ್ನೊಂದು, ವಿಕಟವಾಗಿ ಅಂಕುಡೊಂಕಾಗಿ ಬೃಹತ್ಕರಿಸಲ್ಪಟ್ಟ ಭಯಂಕರ ರೂಪವೇ ಹೊರತು ಮತ್ತೊಂದಲ್ಲ. ಲಂಕೇಶರು ಅರ್ಪಣೆಯ ಪುಟದ ಹಿಂದಿನ ಬದಿಗೆ ಉದ್ಧರಿಸಿದ ಎಜ್ರಾ ಪೌಂಡನ ಎರಡು ಪಂಕ್ತಿಗಳು ಬಿರುಕಿನ ಎರಡನೆಯ ಭಾಗವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ :
The age demanded an image
of its accelerated grimace
ಪು, ೫೭ ರ ನಂತರ ಬರುವ ಸ್ವಪ್ನಪುರವೆಂದರೆ ಪು. ೧ ರಿಂದ ಪು. ೫೭ರವರೆಗಿನ ವಾಸ್ತವ ಜಗತ್ತಿನ ‘accelerated grimace’ ಎಂದು ತೆಗೆದುಕೊಳ್ಳಬೇಕು. ಮೊದಲು ಆ ಕನಸಿನೂರಿನಲ್ಲಿ ಏನೇನಾಗುವದೆಂಬುದನ್ನು ಸ್ವಲ್ಪದರಲ್ಲಿ ನೋಡೋಣ.
ಬಸವರಾಜ ಕೂತ “ಹಾಟೇಲಿ’ನಲ್ಲಿ ಒಬ್ಬ ನಾಯಕ ತನ್ನ ಗ್ಯಾಂಗಿನ ಹತ್ತು ಜನ ಅನುಚರರನ್ನು ಕರೆದುಕೊಂಡು ಬಂದು ತನ್ನ ದಬ್ಬಾಳಿಕೆ ಸುರುಮಾಡುತ್ತಾನೆ. ಬಸವರಾಜ ಕಂಡೊಡನೆ ನಾಯಕ ಆತನನ್ನು ಪರಾಮರ್ಶಿಸುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಶಾಂತಾಳಂತೆ ಕಾಣುವ, ಹೆಣ್ಣೊಂದನ್ನು ಒದ್ದು ಹಿಂಸಿಸುತ್ತಾನೆ. ನಾಯಕನ ಆಜ್ಞೆಯ ಮೇರೆಗೆ ಸಬ್‌ಇನ್‌ಸ್ಪೆಕ್ಟರ ಮುತ್ತಣ್ಣ ರಾಜನನ್ನೂ ಆ ಹುಡುಗಿಯನ್ನೂ ಒಂದು ರೂಮಿನಲ್ಲಿ ಬಂಧಿಸಿಡುತ್ತಾನೆ. ಇದೆಲ್ಲ ಒಂದು ಬಗೆಯ ನ್ಯಾಯಲಯ-ಸೆರೆಮನೆ ಎಂದು ರಾಜನಿಗೆ ಅನಿಸುತ್ತದೆ. ಬಸವರಾಜ ಶಾಂತಳನ್ನು ಬಿಡಿಸುವ ಪ್ರತಿಜ್ಞೆ ಮಾಡುತ್ತಾನೆ. ನಂತರ ಆ ಕಟ್ಟಡದ ಉಪ್ಪರಿಗೆಯಲ್ಲಿ ನಾಯಕನನ್ನು ಸಂಧಿಸುತ್ತಾನೆ. ನಾಯಕ ಆತನಿಗೆ ತನ್ನ ಜೊತೆ ಇರಲು ಒತ್ತಾಯ ಮಾಡುತ್ತಾನೆ. ನಾಯಕನಿಂದ ಕೊಸರಿಕೊಂಡು ಓಡಿ ಹೋಗುವಾಗ ಅವನ ಅಂಗಿ ನಾಯಕನ ಕೈಯಲ್ಲುಳಿದು ಆತ ಅರೆಬತ್ತಲೆ ಪಲಾಯನ ಮಾಡುತ್ತಾನೆ ; ಓಡುತ್ತ ಚಂದ್ರಕಾಂತರ ಬಂಗಲೆ ತಲುಪುತ್ತಾನೆ. ಅಲ್ಲಿ ಒಂದು ಪಾರ್ಟಿ ನಡೆದಿರುತ್ತದೆ. ಬಸವರಾಜ ಕಂಪೌಂಡ ಜಿಗಿದು ಒಳಗೆ ಹೋಗಿ ಚಂದ್ರಕಾಂತರಿಂದ ಒಂದು ಸ್ಟಾಕ್ ದೊರಕಿಸಿ ಹಾಕಿಕೊಂಡು ಆ ಪಾರ್ಟಿಯಲ್ಲಿ (ಅಲ್ಲಿ ಸುವರ್ಣಳೂ ಇರುತ್ತಾಳೆ) ಚಂದ್ರಕಾಂತರ ಪದ್ಯ ಓದುತ್ತಾನೆ. ಭಾಷಣಮಾಡುತ್ತಾನೆ. ಭಾಷಣ ವ್ಯಂಗ್ಯಕ್ಕೆ ತಿರುಗಿ ಬೈಗಳವಾಗಿ ಪರಿವರ್ತನವಾಗುತ್ತದೆ.
ಬಸವರಾಜ ಅಲ್ಲಿಂದ ಹೊರಟು ಆನಂದು-ಪರಮರ ರೂಮಿಗೆ ಹೋಗುತ್ತಾನೆ. ಅವರ ಕೂಡ ಏನೇನೋ ಒರಟು-ಒರಟು ಚರ್ಚೆಮಾಡುತ್ತಾನೆ. ವಾದಿಸುತ್ತಾನೆ. ಕೊನೆಗೆ ಎಲ್ಲರೂ ಕೂಡಿ ಇಸ್ಪೇಟ ಆಡುತ್ತಾರೆ. ಅಷ್ಟರಲ್ಲಿ ಸಬ್‌ ಇನ್‌ಸ್ಪೆಕ್ಟರ ಮುತ್ತಣ್ಣನ ಥರ ಕಾಣುವ ಒಬ್ಬ ಪೋಲೀಸ ಬಂದು ಬಸವರಾಜನನ್ನು ಪ್ರಶ್ನಿಸಿ ಹೋಗುತ್ತಾನೆ. ಆನಂದು-ಪರಮ ನಿದ್ದೆ ಹೋಗುತ್ತಾರೆ. ರಾಜ ನಡುರಾತ್ರಿ ಎದ್ದು ತರಕಾರಿ ಬುಟ್ಟಿ ಯಲ್ಲಿಯ ಒಂದು ಚೂರಿ ತೆಗೆದುಕೊಂಡು, ಪರಮನ ಕೋಟುಹಾಕಿಕೊಂಡು, ಹೊರಗೆ ಹೋಗುತ್ತಾನೆ. ಬೆಳಕು ಹರಿದ ನಂತರ ಒಂದು ಕಡೆ ಕೈಲಾಸಂ ಪಂಡಿತರ ಬೆಟ್ಟಿಆಗುತ್ತದೆ. ನಂತರ ಪ್ರೊ. ರಂಗಯ್ಯನ ಮನೆಗೆ ಬಂದು ರಾಜ ಬಾಗಿಲು ತಟ್ಟುತ್ತಾನೆ. ಒಳಗೆ ಹೋಗಿ ಕುಡಿಯುತ್ತ ಕುಳಿತ ರಂಗಯ್ಯನ ಜೊತೆ ಮಾತನಾಡುತ್ತಾನೆ. ಅಲ್ಲಿಂದ ಜಾರಿಕೊಂಡು ಶಾಂತಾಳ ಜೊತೆ ಹೊರಗೆ ತಿರುಗಾಡಲು ಹೋಗುತ್ತಾನೆ. ಲಾಲ್‌ಬಾಗಿನಲ್ಲಿ ಅವರಿಬ್ಬರ ಸಹವಾಸ ತೀರ ನಿಕಟವಾದಾಗ, ರಾಜ “ನಿಮ್ಮನ್ನು ಕಂಡಾಗೆಲ್ಲ ತಂಗಿ ಅನ್ನೋ ಭಾವನೆ ಬರುತ್ತೆ” ಎಂದು ಹೇಳಿ ಅವಳ ತೋಳುಗಳಿಂದ ಜಾರಿಕೊಳ್ಳುತ್ತಾನೆ. ಇಬ್ಬರೂ ಮನೆಗೆ ಹೋಗುತ್ತಾರೆ. ಅಲ್ಲಿ ‘ತಿಮಿಂಗಲು’ ಇವರ ಹಾದಿಯನ್ನೇ ಕಾಯುತ್ತಿರುತ್ತಾಳೆ. ಅವಳು ರಾಜನನ್ನು ನೋಡಿದ ಕೂಡಲೆ ಅವನ ಪರೀಕ್ಷೆಗೆ ಸುರುಮಾಡುತ್ತಾಳೆ. ಆತನ ಮೇಲೆ ಏನೇನೋ ಆಪಾದನೆ ಹೊರಿಸುತ್ತಾಳೆ. ಒಳಗೆ ಮುತ್ತಣ್ಣ ರಂಗಯ್ಯನ ಜೊತೆ ಆತ್ಮೀಯತೆಯಿಂದ ಮಾತನಾಡುತ್ತ ಕೂತಿರುತ್ತಾನೆ. ರಾಜ ಅವರ ಕೂಡ ದೇಶದ ಘನತೆ-ಗೌರವಗಳ ಬಗ್ಗೆ ಚರ್ಚೆ ಮಾಡುತ್ತಾನೆ. ಮುತ್ತಣ್ಣ ‘ನೀವು ಹೇಳಿದ ನಿಮ್ಮ ಊರೇ ಸಿಕ್ಕಲಿಲ್ಲ’ ಎಂದು ಹೇಳಿ ನಂತರ ಹೊರಗೆ ಹೋಗುತ್ತಾನೆ. ತಿಮಿಂಗಿಲ ರಾಜನ ಮೇಲೆ ಒಂದು ರೀತಿಯ ಬಲಾತ್ಕಾರ ಮಾಡತೊಡಗುತ್ತಾಳೆ. ಹೊರಗೆ ಬಾಗಿಲು ತಟ್ಟಿದ ಸದ್ದಾಗುತ್ತಲೆ ರಾಜ ಚೂರಿಯಿಂದ ಕನ್ನಡಿಯನ್ನು ಚೂರು ಚೂರಾಗಿಸಿ, ತಿಮಿಂಗಿಲಳ ಮುಖಕ್ಕೆ ಉಗುಳಿ, ಹೊರಗೆ ಓಡುತ್ತಾನೆ. ‘ಏನನ್ನೋ ಕಳೆದುಕೊಂಡು ಎಂಥದನ್ನೋ ಗೆದ್ದಂತೆ’ ಆತನಿಗೆ ಅನುಭವವಾಗಿ ಎಲ್ಲದರ ಅರ್ಥಕ್ಕಾಗಿ ತಡಕಾಡುತ್ತಾನೆ. ಕೊನೆಗೆ ಶಾಂತಾ ಕಣ್ಣಲ್ಲಿ ನಗೆ ತುಂಬಿಕೊಂಡು ಅವನಿದ್ದಲ್ಲಿ ಬರುತ್ತಾಳೆ.
ಕಾದಂಬರಿಯ ಎರಡನೆಯ ಭಾಗದಲ್ಲಿ ಬರುವ ಈ ಜಗತ್ತು ಕ್ರೂರ, ವಿಕೃತ, ಕೃತಕ, ಅಸಂಬದ್ಧ, ಭಯಾನಕ. ಆದರೆ, ಈ ಜಗತ್ತಿಗೂ ಮೊದಲನೆಯ ಭಾಗದಲ್ಲಿಯ ಸಮಾಜದ ಚಿತ್ರಕ್ಕೂ ತೀರ ನಿಕಟವಾದ ಸಂಬಂಧವಿದೆ ಎಂಬ ಮಾತನ್ನು ನಾವು ಗಮನಿಸಬೇಕು. ಮೊದಲನೆಯ ಭಾಗದಲ್ಲಿಯ ವಾಸ್ತವಿಕ ಪಾತಳಿಯ ಮೇಲಿನ ಸಮಾಜ ಹಾಗೂ ಅದರ ಕೆಲವು ಮುಖ್ಯ ಪ್ರವೃತ್ತಿಗಳನ್ನೇ ಎರಡನೆಯ ಭಾಗದಲ್ಲಿ ಕಥಾನಾಯಕನ ‘ಹುಚ್ಚು’ ಮನಸ್ಸಿನ ಅಂಕುಡೊಂಕಾದ ರಾವುಗನ್ನಡಿಯಲ್ಲಿ ನಾವು ಕಾಣುತ್ತೇವೆ. ಮೊದಲನೆಯ ಭಾಗದಲ್ಲಿ ಅಷ್ಟೊಂದು ಅಪಾಯಕಾರಿಯಾಗಿ ತೋರದ
8*
ವಿಷಯಗಳು ರಾವುಗನ್ನಡಿಯ ಜಗತ್ತಿನಲ್ಲಿ ತಮ್ಮ ಎಲ್ಲ ಮುಖವಾಡಗಳನ್ನು ಕಳಚಿ ತಮ್ಮ ಒಳಗಿನ ಶಕ್ತಿ-ವಿಕೃತಿಗಳನ್ನು ಪ್ರಕಟಗೊಳಿಸುತ್ತವೆ. ಉದಾಹರಣೆಗಾಗಿ, ಸದ್ಯದ ಸಮಾಜವನ್ನು ಸರ್ವಸಾಮಾನ್ಯವಾಗಿ ಆಳುವ ಶಕ್ತಿಯೇ ಪುಂಡರ ನಾಯಕನ ಪಾತ್ರದಲ್ಲಿ ಮೂರ್ತಿಸ್ವರೂಪ ಪಡೆಯುತ್ತದೆ. ಈ ನಾಯಕ ಎಲ್ಲರನ್ನೂ (ಜನತೆಯನ್ನು ಪುಂಡರಿಂದ ಸಂರಕ್ಷಿಸಲೆಂದು ಇದ್ದಂಥ ಪೋಲೀಸರನ್ನು ಕೂಡ) ವಶಪಡಿಸಿಕೊಂಡು, ಎಲ್ಲರ ಮೇಲೂ ದಬ್ಬಾಳಿಕೆ ಮಾಡುತ್ತಾನೆ. ಬಸವರಾಜನಿಗೆ ವಾಸ್ತವಿಕ ಪರಿಸರದಲ್ಲಿ ಯಾವ ಶಕ್ತಿಯ ಅರಿವು ಸದಾ ಆಗುತ್ತದೆಯೋ ಅದು ಅವನ ಕನಸಿನ ಪರಿಸರದಲ್ಲಿ ಪ್ರತೀಕಾತ್ಮಕವಾದ ವ್ಯಕ್ತಿಯಾಗಿ ಪರಿಣಮಿಸಿದ್ದು ಅತ್ಯಂತ ಯೋಗ್ಯವೂ ಕಲಾ ದೃಷ್ಟಿಯಿಂದ ಸಫಲವೂ ಆಗಿದೆ. ಚಂದ್ರಕಾಂತ, ಅನಂದು, ಪರಮ, ಪ್ರೊ. ರಂಗಯ್ಯ, ತಿಮಿಂಗಿಲ ಇವರೆಲ್ಲ ಮೊದಲಿದ್ದ ವ್ಯಕ್ತಿಗಳಾದರೂ ಇಲ್ಲಿ ಅವರು ತಮ್ಮ ತಮ್ಮ ಆಂತರಿಕ ವ್ಯಕ್ತಿತ್ವವನ್ನು ಹೆಚ್ಚು ಸ್ಪಷ್ಟವಾಗಿ ಬಿಚ್ಚಿ ತೋರಿಸುತ್ತಾರೆ. ಚಂದ್ರಕಾಂತ ತನ್ನ ಸಾಹಿತ್ಯವನ್ನು ಹೊಗಳಲು ಬಸವರಾಜನಿಗೆ ಒತ್ತಾಯ ಮಾಡುತ್ತಾನೆ; ಆನಂದು ಪರವರು ಹೆಚ್ಚು ಸ್ಪಷ್ಟವಾಗಿ ತಮ್ಮ ವಿಚಾರಗಳನ್ನು ವ್ಯಕ್ತಮಾಡುತ್ತಾರೆ; ಪ್ರೊ. ರಂಗಯ್ಯ ಕೂಡ ಮುಚ್ಚುಮರೆಯಿಲ್ಲದೆ ತನ್ನ ಬುದ್ಧಿವಾದ ನಡೆಸುತ್ತಾನೆ ಹಾಗೂ ಬಸವರಾಜನನ್ನು ಮಾನಸಿಕವಾಗಿ ಹಿಂಸಿಸುತ್ತಾನೆ; ಕೊನೆಗೆ ತಿಮಿಂಗಿಲ ಆತನನ್ನು ದೈಹಿಕವಾಗಿ ಹಿಂಸಿಸುತ್ತಾಳೆ. ನಾವು ಮುಖ್ಯ ಗಮನಿಸಬೇಕಾದ ವಿಷಯವೆಂದರೆ ಈ ಕನಸಿನೂರಿನಲ್ಲಿಯೂ ರಾಜನಿಗೆ ಬಿಡುಗಡೆಯೆಂಬುದಿಲ್ಲ; ಆತ ಹೋದಲ್ಲೆಲ್ಲ ತೊಂದರೆ, ಅನ್ಯಾಯ, ಜುಲುಮೆ, ಹಿಂಸೆ ; ಆತನನ್ನು ಸದಾ ಕಾಡುವ ಭಾವನೆಗಳೆಂದರೆ ಭೀತಿ, ಜುಗುಪ್ಪೆ, ನಿರಾಶೆ, ಅಪರಾಧಭಾವ, ಪಲಾಯನಬುದ್ಧಿ, ಅಸಹಾಯತೆ, ದೀನತೆ, ಸಿಟ್ಟು, ರೊಚ್ಚು, ಬಂಡಾಯ…. ಬಿರುಕಿನ ಈ ಕತೆ ತನ್ನ ಎರಡೂ ಭಾಗಗಳಲ್ಲಿ ಮನುಷ್ಯನ ವ್ಯಕ್ತಿತ್ವವನ್ನು ನಮ್ಮ ಸಾಮಾಜಿಕ ವಾತಾವರಣ ಹೇಗೆ ಹಿಂಸಿಸುತ್ತದೆ. ಹೇಗೆ ನಿರ್ವೀರ್ಯಗೊಳಿಸುತ್ತದೆ ಎಂಬುದನ್ನು ಅತ್ಯಂತ ಪ್ರಭಾವಿಯಾಗಿ, ತೀಕ್ಷ್ಣವಾಗಿ ರೂಪಿಸುತ್ತದೆ. ಈ ಕತೆಯಲ್ಲಿ ಬರುವ ಎಲ್ಲ ಪಾತ್ರಗಳೂ ಸಾಮಾಜಿಕ ಪ್ರವೃತ್ತಿಗಳ ಪ್ರತೀಕಗಳು ಹಾಗೂ ಬಸವರಾಜ ನಮ್ಮ ಸಮಾಜದಲ್ಲಿ ಅತ್ಯಂತ ತೀಕ್ಷ್ಣವಾಗಿ ಬೆಳೆಯುತ್ತಿರುವ ‘ಅನಾಥ’ ಪ್ರಜ್ಞೆಯ ಪ್ರತೀಕ. ಈ ಅನಾಥ ಪ್ರಜ್ಞೆಯ ಇಷ್ಟೊಂದು ಹರಿತವಾದ, ಸ್ಪಷ್ಟವಾದ, ಪ್ರಭಾವಿಯಾದ ಅಭಿವ್ಯಕ್ತಿ ಕನ್ನಡದಲ್ಲಿ ಇದೇ ಮೊದಲು ಎಂದು ಹೇಳಬಹುದು. ನೈತಿಕ ದೃಷ್ಟಿಯಿಂದ ಅರ್ಥಪೂರ್ಣವಾದ ಸಾಮಾಜಿಕ ಪರಿಶೀಲನೆ ಹಾಗೂ ಅನಾಥ ಪ್ರಜ್ಞೆಯ ಅಭಿವ್ಯಕ್ತಿ ಇವು ಬಿರುಕನ್ನು ಕನ್ನಡದ ಒಂದು ಅತ್ಯಂತ ಮಹತ್ವದ ಕಾದಂಬರಿಯನ್ನಾಗಿಸಿವೆ.
ಇಷ್ಟೆಲ್ಲ ಸರಿಯಾಗಿದ್ದರೂ ಕಾದಂಬರಿಯ ಕೊನೆಯ ಬಗ್ಗೆ ಮಾತ್ರ ಯಾಕೋ ಅನುಮಾನ. ಲಂಕೇಶರು ‘ಅರಿಕೆ’ಯಲ್ಲಿ, ಒಂದು ಪರಿಸರದಿಂದ ಇನ್ನೊಂದಕ್ಕೆ ತಲೆ ತಪ್ಪಿಸಿಕೊಂಡಾತ ತನ್ನಿಂದ ತಾನು ತಪ್ಪಿಸಿಕೊಳ್ಳುಲು ಯತ್ನಿಸಿ ಕೊನೆಗೆ ತನ್ನನ್ನು ತಾನು ಒಪ್ಪಿಕೊಳ್ಳುವ ಕತೆ.’ ಎಂದು ವಿವರಿಸಿದ್ದಾರೆ.
ಈ “ಒಪ್ಪಿಕೊಳ್ಳುವ’ ವಿಷಯ ಅಥವಾ ಜಾಕೇಟನ ಹಿಂಬದಿಗೆ ಹೇಳಿದಂತೆ ‘ತನ್ನಲ್ಲೇ ಅರ್ಥವನ್ನು ಕಂಡುಕೊಳ್ಳು’ವ ವಿಷಯ, ಕಾದಂಬರಿಯ ಕೊನೆಯಲ್ಲಿ ಅಷ್ಟೊಂದು ಸ್ಫುಟವಾಗಿ ಕಂಡುಬರುವದಿಲ್ಲ. ಕನಸು ಎಲ್ಲಿ ಮುಗಿದು ಸತ್ಯ ಎಲ್ಲಿ ಸುರು ಎಂಬುದನ್ನು ಹೇಳಲಿಕ್ಕಾಗುವದಿಲ್ಲವಾದ್ದರಿಂದ ಈ ವಿಷಯ ಸ್ವಲ್ಪ ಸಂದಿಗ್ಧವಾಗಿಯೇ ಉಳಿಯುತ್ತದೆಯೇನೋ. ಕೊನೆಯ ಪುಟದಲ್ಲಿ “ಎಂಥದನ್ನೂ ಗೆದ್ದಂತೆ’ ಅನುಭವವಾಗುವದರ ಜೊತೆಗೆ ಶಾಂತಳ ಜೊತೆ ಒಂದು ರೀತಿಯ ಸಾಮರಸ್ಯವಾದ ಸೂಚನೆಯಿದೆ. ಆದರೆ ಅದು ಯಾವ ಜಗತ್ತಿನಲ್ಲಿ ? ವಾಸ್ತವ ಜಗತ್ತಿನಲ್ಲಿಯೋ ಅಥವಾ ಕನಸಿನ ಜಗತ್ತಿನಲ್ಲಿಯೋ ?
ಬಿರುಕಿನ ಒಂದು ಅತ್ಯಂತ ಮಹತ್ವದ ಸಿದ್ಧಿಯೆಂದರೆ ಅದರ ಭಾಷೆ, ಕನ್ನಡದಲ್ಲಿ ಕಾವ್ಯದ ಭಾಷೆ ಹಾಗೂ ಗದ್ಯಸಾಹಿತ್ಯದಲ್ಲಿ ಬರುವ ಕಾವ್ಯಾತ್ಮಕ ಭಾಷೆ ಸಾಕಷ್ಟು ಸೂಕ್ಷ್ಮತೆಯನ್ನೂ ಸೂಚಕತೆಯನ್ನೂ ಪಡೆದದ್ದಾಗಿದೆ. ಆದರೆ ಗದ್ಯದ ಭಾಷೆ, ಗದ್ಯದ ಪಾತಳಿಯ ಮೇಲೆಯೇ, ಈ ಬಗೆಯ ಸೂಕ್ಷ್ಮತೆಯನ್ನೂ, ಸೂಚಕತೆಯನ್ನೂ, ತೀಕ್ಷ್ಮತೆಯನ್ನೂ, ಹರಿತವನ್ನೂ ಪಡೆದದ್ದನ್ನು ನಾವು ಬಿರುಕಿನಲ್ಲಿ ನೋಡಬಹುದು. ಉದಾಹರಣೆಗಾಗಿ ಕೆಳಗಿನ ವಾಕ್ಯಗಳನ್ನು ತೆಗೆದುಕೊಳ್ಳಬಹುದು.
“ವಾದಕ್ಕೆ ಇಳಿಯುವದು ಸರಿ ಕಾಣಲಿಲ್ಲ. ಹೇಳಬಹುದಿತ್ತು-ಅದೆಲ್ಲ ಸೋಮಾರಿಗಳು ಕೂತು ಹಾಕುವ ಲೆಕ್ಕ, ಬೆಳಕಿದ್ದ ಕಡೆ ಚಿಟ್ಟೆ ಸೇರುತ್ತವೆ, ಮೈ ಬಗ್ಗಿಸಿ ದುಡಿದರೆ ದೇವರ ಕಲ್ಪನೆಯೇ ಬದಲಾಗುತ್ತೆ-ಇತ್ಯಾದಿ ಇತ್ಯಾದಿ. ಆದರೆ ವ್ಯಕ್ತಿ ಒಳ್ಳೆಯ ಮನಸ್ಥಿತಿಯಲ್ಲಿದ್ದ. ದಟ್ಟಿ ಪಂಚೆ ಉಟ್ಟು ಬನೀನು ತೊಟ್ಟು ತನ್ನ ಕಪ್ಪನೆಯ ದೇಹದ ಕಾಲುಭಾಗ ನನಗೆ ತೋರುತ್ತಾ ಕೂತಿದ್ದ. ಅದೇಕೋ ಆತನ ಮೊಣಕಾಲಿನಿಂದ ಅವನ ಪಂಚೆ ಜಾರುತ್ತಿತ್ತು. ನನಗೆ ಅಸಹ್ಯವಾಗುತ್ತಿತ್ತು, ಕನಿಕರವಾಗುತ್ತಿತ್ತು. ಈ ರೀತಿ ನಾನೆಂದುಕೊಳ್ಳುತ್ತಿದ್ದಾಗ ಅವನ ಕಾಯಿಲೆ ನೆನಪಾಯಿತು. ಈ ಅನ್ನೋನ್ಯತೆಯಲ್ಲೇ ನನ್ನ ತಪ್ಪಿಗೆ ಕ್ಷಮೆ ಕೇಳಿಕೊಳ್ಳಬೇಕೆನ್ನಿಸಿತು. ಇಷ್ಟು ಹೊತ್ತು, ಮನಸ್ಸಿಗೆ ಸ್ಪಷ್ಟವಾಗಿ ಬರದಿದ್ದ ಆ ತಪ್ಪು ತೀರ ಒತ್ತಾಯಪಡಿಸತೊಡಗಿತು.” (ಪು. ೭)
ಇಲ್ಲಿಯ ಭಾಷೆಗೆ ಸಂಕೀರ್ಣವಾದ ವಿಷಯವನ್ನು ಅತ್ಯಂತ ಸುಲಭವಾಗಿ, ಭಾವನಾಮಯತೆಗೆ ಎಳ್ಳಷ್ಟೂ ಎಡೆಗೊಡದೆ, ಹಿಡಿದಿಡುವ ಶಕ್ತಿಯಿದೆ. ಭಾಷೆಯ ಈ ಸಹಜ ಶಕ್ತಿಯ ಮೂಲಕ ಕಾದಂಬರಿಯಲ್ಲಿಯ ಗಹನತೆ ಪ್ರಾಮಾಣಿಕವಾಗಿದೆ. ಸ್ವಯಂಸ್ಫೂರ್ತವಾಗಿದೆ ಎಂಬ ಮಾತು ಮನದಟ್ಟಾಗುತ್ತದೆ. ಇಲ್ಲಿಯ ಕತೆಗಾರಿಕೆಯ ಇನ್ನೊಂದು ವೈಶಿಷ್ಟ್ಯಪೂರ್ಣವಾದ ಗುಣವೆಂದರೆ ಒಂದು ಬಗೆಯ ಬಿಗಿಯಾದ ತಾಟಸ್ಥ್ಯ :
ಈ ತಾಟಸ್ಥ್ಯದ ಮೂಲಕ ಮೊದಲನೆಯ ಭಾಗದ ವಿಡಂಬನೆಗೂ, ಎರಡನೆಯ ಭಾಗದ ಸ್ವಪ್ನ ಕಥನಕ್ಕೂ ಒಂದು ರೀತಿಯ ವಿಲಕ್ಷಣ ವಸ್ತುನಿಷ್ಠತೆ ಬಂದಿದೆ. ಕಾದಂಬರಿ ತನ್ನ ಪ್ರಚೋದಕ ಶಕ್ತಿಯನ್ನು ಗಳಿಸಿಕೊಂಡದ್ದೂ ಈ ಗುಣದಿಂದಲೇ.
ಒಟ್ಟಿನ ಮೇಲೆ, ಲಂಕೇಶರ ಬಿರುಕು ಉದ್ದೇಶಪೂರ್ಣವಾದ ಕಾದಂಬರಿಯಾದರೂ ತುಂಬ ಅರ್ಥಪೂರ್ಣವಾಗಿದೆ. ಕನಸು-ನನಸುಗಳ ಒಂದು ವೈಶಿಷ್ಟ್ಯಪೂರ್ಣವಾದ ಜಗತ್ತನ್ನು ನಿರ್ಮಾಣ ಮಾಡುವ ಲಂಕೇಶರ ಪ್ರಯೋಗ ಯಶಸ್ವಿಯಾಗಿದೆ. ಆದರೆ ಕಾದಂಬರಿಯ ಕೊನೆಯ ಬಗ್ಗೆ ಸಂದಿಗ್ಧತೆ ಉಳಿದು, ಕಾದಂಬರಿ ಕೊಡುವ ಅನುಭವಕ್ಕೆ ಕಲಾತ್ಮಕ ಪೂರ್ಣತೆ ಹಾಗೂ ಐಕ್ಯ ಬರದೆ ಕೊನೆಗೆ ಸ್ವಲ್ಪ ಅತೃಪ್ತಿ ಉಳಿಯುತ್ತದೆ. ಸದ್ಯ ಈ ವಿಷಯ ಗೌಣ. ಯಾಕಂದರೆ ಕಾದಂಬರಿಯ ಅರ್ಥ ಪೂರ್ಣತೆ, ನಮ್ಮ ಮನಸ್ಸನ್ನು ಪ್ರಾಮುಖ್ಯವಾಗಿ ಸೆಳೆದು ನಿಲ್ಲಿಸುತ್ತದೆ. ಸಮಾಜ-ವ್ಯಕ್ತಿ ಇವುಗಳ ಸಂಬಂಧವನ್ನು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿ, ಜೀವಂತ ಸಮಸ್ಯೆಯೊಂದನ್ನು ಅತ್ಯಂತ ನಿರ್ದಾಕ್ಷಿಣ್ಯವಾಗಿ, ತೀಕ್ಷ್ಯವಾಗಿ, ‘ಪಕ್ಕಾ ಆಗಿ’ ವಿಶ್ಲೇಷಿಸಿ, ನಮ್ಮನ್ನು ನಾವು ಹೆಚ್ಚು ಸ್ಪಷ್ಟವಾಗಿ ತಿಳಿದುಕೊಳ್ಳುವಂತೆ ಮಾಡುವ ಈ ನವ್ಯ ಕಾದಂಬರಿ ಸ್ವಾಗತಾರ್ಹವಷ್ಟೇ ಅಲ್ಲದೆ ಪ್ರಶಂಸಾರ್ಹವೂ ಆಗಿದೆ.

Close

ಮಾಸ್ತಿಯವರ ಸಣ್ಣ ಕತೆಗಳು

ಎಂ. ಜಿ. ಕೃಷ್ಣಮೂರ್ತಿ

“ಮಾಸ್ತಿಯವರ ಸಣ್ಣ ಕತೆಗಳು”

ಹೊಸಗನ್ನಡ ಸಾಹಿತ್ಯದಲ್ಲಿ ಮಾಸ್ತಿಯವರ ಸಣ್ಣ ಕತೆಗಳಿಗಿರುವ ಸ್ಥಾನದ ಬಗ್ಗೆ ಬಹುಶಃ ಹೆಚ್ಚು ವಿವಾದಕ್ಕೆ ಆಸ್ಪದವಿಲ್ಲ. ಮಾಸ್ತಿಯವರು ಕನ್ನಡದಲ್ಲಿ ಸಣ್ಣ ಕತೆಗೆ ರೂಪು ಕೊಟ್ಟ ಹಿರಿಯರು ; ಸಣ್ಣ ಕತೆಗಳಲ್ಲಿ ಆಸಕ್ತಿಯಿರುವವರು ಅವರ ಸಣ್ಣ ಕತೆಗಳನ್ನು ತಳ್ಳಿಹಾಕುವುದಿಲ್ಲ;-ಇವು ನಿರ್ವಿವಾದವಾದ ವಿಷಯಗಳು. ಆದರೆ ನಮ್ಮ ಸಾಹಿತ್ಯದಲ್ಲಿ ಚಾರಿತ್ರಿಕ ಮತ್ತು ಸಾಹಿತ್ಯಕ ಮಹತ್ವವುಳ್ಳ ಇಂತಹ ಹಿರಿಯರ ಕೃತಿಗಳ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಕೇಳುವುದರ ಮೂಲಕ, ಅವರ ಕೃತಿಗಳ, ಅವರ ಸಂವೇದನಾಶೀಲತೆಯ ಬಗ್ಗೆ ನಿರ್ವಿಕಾರ ಮನೋಭಾವದಿಂದ ಯೋಚಿಸುವುದರ ಮೂಲಕ, ಸಾಹಿತಿ ಮಾಸ್ತಿಯವರಿಗೆ ನಾವು ಕೊಡುವ ಗೌರವ ಅವರು ಬರೆದದ್ದೆಲ್ಲ ಹೊನ್ನು ಎಂದು ಹೇಳಿ ಅವರನ್ನು ಗರ್ಭಗುಡಿಗೆ ನೂಕುವುದಕ್ಕಿಂತ, ನಾವು ಗೌರವಿಸುವ ಹಿರಿಯ ಸಾಹಿತಿಗಳ ಕೃತಿಗಳನ್ನು ವಿಮರ್ಶೆಯ ಆಚೆಗಿಡುವ ಮನೋಭಾವ ಬೆಳೆಸಿಕೊಳ್ಳುವುದಕ್ಕಿಂತ ಹೆಚ್ಚು ಮುಖ್ಯ. ಉತ್ತಮ ಸಾಹಿತ್ಯಕೃತಿ ಯಾವುದೇ ರೀತಿಯು ವಿಮರ್ಶೆಯಿಂದ ನಾಶವಾಗುವುದಿಲ್ಲ. ಅನೇಕ ವೇಳೆ ಆ ಕೃತಿಯ ಗುಣ ಹೆಚ್ಚು ಗಮನಕ್ಕೆ ಬರುತ್ತದೆ.
ಎರಡು ಸಂಪುಟಗಳಲ್ಲಿ ಪ್ರಕಟವಾಗಿರುವ ಮಾಸ್ತಿಯವರ ಕತೆಗಳಲ್ಲಿ ಕೆಲವು ಸಫಲವಾಗಿವೆ, ಕೆಲವು ಆಗಿಲ್ಲ. ಈ ಲೇಖನದ ಉದ್ದೇಶ ಇದಕ್ಕೆ ಕಾರಣಗಳನ್ನು ಸಾಧಾರವಾಗಿ ಕೊಡಲು ಪ್ರಯತ್ನಿಸುವುದು, ಸಾಹಿತಿ ಮಾಸ್ತಿಯವರ ಸಂವೇದನಾಶೀಲತೆಯ ಇತಿ ಮಿತಿಗಳ ಬಗ್ಗೆ ಆಲೋಚಿಸುವುದು.
ಎಲ್ಲಕ್ಕೂ ಮೊದಲಿಗೆ ಒಂದು ಮಾತು : ಮಾಸ್ತಿಯವರ ಪ್ರಜ್ಞೆ ಸಾಂಪ್ರದಾಯಿಕ ನಮ್ಮ ಸಂಪ್ರದಾಯಗಳಲ್ಲಿ ಮತ್ತು ಸಂಸ್ಕೃತಿಯಲ್ಲಿ ಅವರಿಗಿರುವ ಅಗಾಢ ನಂಬಿಕೆಯನ್ನು ಅವರ ಕೃತಿಗಳಿಂದಲೇ ತಿಳಿದುಕೊಳ್ಳಬಹುದು. ಸಣ್ಣ ಕತೆ ನಮಗೆ ಹೊರಗಿನಿಂದ ಆಮದಾಗಿ ಬಂದುದಾದರೂ, ಮಾಸ್ತಿಯವರ ಸಫಲ ಕತೆಗಳಲ್ಲಿ ನನಗೆ ಮೊದಲಿಗೆ ಕಾಣಬರುವುದು ಅವರ ಸಾಂಪ್ರದಾಯಿಕ ಪ್ರಜ್ಞೆಗೂ, ಅವರ ಕಥೆಗಳಿಗೂ ಇರುವ ನಿಕಟಸಂಬಂಧ. ಈ ಸಂಬಂಧ ಅವರು ಆಯ್ದುಕೊಂಡ ವಿಷಯಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ವಿಷಯಕ್ಕೆ, ಅನುಭವಕ್ಕೆ, ರೂಪುಕೊಡುವ ಸಂವೇದನೆ, ಆ ಸಂವೇದನೆಗೆ ರೂಪುಕೊಟ್ಟ ಮೌಲ್ಯಗಳು-ಇವೆಲ್ಲಕ್ಕೂ ಇರುವ ಸಂಬಂಧ. ಮಾಸ್ತಿಯವರ ಸಾರ್ಥಕ ಕತೆಗಳ “ಶಕ್ತಿ” (Power) ಸಂಪ್ರದಾಯದ “ಶಕ್ತಿ”ಯಿಂದ ಬಂದುದು. ಅದರಿಂದಲೇ ಏನೋ ಸಂಪ್ರದಾಯದ ಚೌಕಟ್ಟಿನಲ್ಲಿ ಬಗೆಹರಿಸಲಾರದ ಸಮಸ್ಯೆಗಳನ್ನು ಮತ್ತು ಅನುಭವಗಳನ್ನು ಕತೆಯ ವಿಷಯವನ್ನಾಗಿ ಮಾಡಿಕೊಂಡಾಗ ಕತೆ ಸಫಲವಾಗುವುದಿಲ್ಲ.
ಸಣ್ಣ ಕತೆ ಹೊಸದಾದರೂ ಮಾಸ್ತಿಯವರು ಅದಕ್ಕೆ ತಂದ ದೃಷ್ಟಿ ಹೊಸದಲ್ಲ. ವಿಷಯ ಏನೇ ಆದರೂ ಉದ್ರೇಕಗೊಳ್ಳದೆ ಕತೆ ಹೇಳುವುದು ಮಾಸ್ತಿಯವರ ವೈಯಕ್ತಿಕ ಸಂಸ್ಕೃತಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅವರ ಮೇಲೆ ನಮ್ಮ ಪ್ರಾಚೀನ ಸಾಹಿತ್ಯ ಬೀರಿರುವ ಪ್ರಭಾವವೂ ಒಂದು ಕಾರಣವಿರಬಹುದು. ಅದರಲ್ಲೂ, ಕತೆಗೂ ನೈಜ ಜೀವನದ ಅನುಭವಗಳಿಗೂ ಮಾಸ್ತಿಯವರು ನೇರ ಸಂಬಂಧವೇರ್ಪಡಿಸದೆ ಇರುವುದರಲ್ಲಿ. ನಮ್ಮ ಪ್ರಾಚೀನ ಸಾಹಿತ್ಯದ ಪ್ರಭಾವವಿರುವುದು ಹೆಚ್ಚು ಸಾಧ್ಯ. ಕತೆ ಮತ್ತು ನೈಜ ಜೀವನದ ಅನುಭವಗಳಿಗೆ “ದೂರ” (distance) ವೇರ್ಪಡಿಸುವುದಕ್ಕಾಗಿ ಮಾಸ್ತಿಯವರು ಕೆಲವು ತಂತ್ರಗಳನ್ನು ಉಪಯೋಗಿಸುತ್ತಾರೆ. ಅವುಗಳಲ್ಲಿ ಮುಖ್ಯವಾದುವು : (೧) ಕತೆ “ನಡೆದ” ಕಾಲ ಮತ್ತು ಕತೆ ಹೇಳುವ ಕಾಲಗಳನ್ನು ದೂರ ದೂರವಿಡುವುದು. (೨) ಕತೆ ಹೇಳುವ ಪಾತ್ರ ಮತ್ತು ಕತೆಯಲ್ಲಿ ಮುಖ್ಯ ಪಾತ್ರ ವಹಿಸುವ ಪಾತ್ರಗಳ ಜಾತಿ, ವರ್ಗ ಮತ್ತು ವಯಸ್ಸುಗಳಲ್ಲಿರುವ ವ್ಯತ್ಯಾಸಗಳನ್ನು ಓದುಗರ ಗಮನಕ್ಕೆ ತರುವುದು, (೩) ಜೀವನದಲ್ಲಿರುವ ನೋವಿನ ಗೂಢತೆಯನ್ನು (mystery) ಒಪ್ಪಿಕೊಳ್ಳುವುದು ಮತ್ತು ಓದುಗ ಒಪ್ಪಿಕೊಳ್ಳುವಂತೆ ಮಾಡುವುದು ಮತ್ತು (೪) ದೃಷ್ಟಿಯನ್ನು ನೋವಿನ ಮೇಲೆ ಕೇಂದ್ರೀಕರಿಸದೆ, ನೋವನ್ನು ಕೊಂಚಮಟ್ಟಿಗಾದರೂ ಅರ್ಥಮಾಡಿಕೊಳ್ಳಲು ಮತ್ತು ಒಪ್ಪಿಕೊಳ್ಳಲು ಸಹಾಯ ಮಾಡುವ ಸಾಂಸ್ಕೃತಿಕ ಮೌಲ್ಯಗಳ ಮೇಲೆ ಕೇಂದ್ರೀಕರಿಸುವುದು. ಇವುಗಳಲ್ಲಿ ಮೊದಲನೆಯ ಎರಡು ತಂತ್ರಕ್ಕೆ ಸಂಬಂಧಿಸಿದುವಾದರೆ, ಕೊನೆಯ ಎರಡು ಮಾಸ್ತಿಯವರ ಸಂವೇದನಾಶೀಲತೆಗೆ ಸಂಬಂಧಿಸಿದುವಾಗಿವೆ. ಅಲ್ಲದೆ, ತಂತ್ರಕ್ಕೂ ಮತ್ತು ಸಂವೇದನಾಶೀಲತೆಗೂ ನಿಕಟ ಸಂಬಂಧವಿದ್ದಾಗ ಮಾತ್ರ ಕತೆ ಸಫಲವಾಗುತ್ತದೆ.
ಮತ್ತೊಂದು ಮಾತು : ಮಾಸ್ತಿಯವರ ಕತೆಗಳ ವಿಷಯಗಳಿಗೂ ಈ ಶತಮಾನದ ಮೊದಲ ಮೂರುನಾಲ್ಕು ದಶಕಗಳ ಕತೆಗಾರರಿಗೆ ಪ್ರಿಯವಾಗಿದ್ದ “ವಸ್ತು”(subject) ಗಳಿಗೂ ಹೆಚ್ಚು ವ್ಯತ್ಯಾಸಗಳಿಲ್ಲ. ಆ ವಸ್ತುಗಳಲ್ಲಿ ಮುಖ್ಯವಾದುವು : (೧) “ಪೂರ್ವ ಪಶ್ಚಿಮ”ಗಳ ಭೇಟ (East-West encounter), (೨) ಸಾಮಾಜಿಕ ಅನ್ಯಾಯಗಳು ಮತ್ತು ಅವುಗಳಿಂದುಂಟಾಗುವ ನೋವು ಮತ್ತು (೩) ಸಾಮಾಜಿಕ ಮತ್ತು ವೈಯಕ್ತಿಕ ಜೀವನದಲ್ಲಿ ಸುಬದ್ದತೆಯ (order) ಸಮಸ್ಯೆ. ಆದರೆ ಬೇರೆ ಅನೇಕ ಕತೆಗಾರರು ಈ ವಿಷಯಗಳನ್ನು ಉಪಯೋಗಿಸಿಕೊಳ್ಳುವುದರಲ್ಲಿ ಇರುವ ವ್ಯತ್ಯಾಸಗಳು, ಧ್ವನಿ (tone) ಯಲ್ಲಿರುವ ವ್ಯತ್ಯಾಸಗಳು ಮತ್ತು ಅನುಭವವನ್ನು ಕೆದಕುವ (explore) ಮತ್ತು ಅದಕ್ಕೆ ರೂಪುಕೊಡುವ ಸಂವೇದನಾಶೀಲತೆಯಲ್ಲಿರುವ ವ್ಯತ್ಯಾಸಗಳು, ಕನ್ನಡ ಸಾಹಿತ್ಯ ಮತ್ತು ಕನ್ನಡ ಸಂಸ್ಕೃತಿಯಲ್ಲಿ ಆಸಕ್ತಿಯಿರುವವರೆಲ್ಲರ ಗಮನ ಸೆಳೆಯಬೇಕಾದದ್ದು ಅವಶ್ಯಕ.
ನಮ್ಮ ಚಾರಿತ್ರಿಕ ಹಿನ್ನಲೆಯಿಂದಾಗಿ ‘ಪೂರ್ವ-ಪಶ್ಚಿಮ’ಗಳ ಭೇಟಿಯನ್ನು ವಸ್ತುವಾಗಿ ಉಪಯೋಗಿಸಿಕೊಂಡ ಬರಹಗಾರರಲ್ಲಿ ಅನೇಕರು ಆ ಭೇಟಿಯ ರಾಜಕೀಯ ಕೋನವನ್ನೋ ಅಥವಾ ಇಂಗ್ಲಿಷ್ ಕಲಿತ ಭಾರತೀಯರು ಎದುರಿಸುವ ಸಮಸ್ಯೆಗಳನ್ನೋ ಒತ್ತಿ ಹೇಳುವುದು ಹೆಚ್ಚು. ದೃಷ್ಟಿಕೋನ ರಾಜಕೀಯವಾದಾಗ ಸಿಟ್ಟು ಮತ್ತು ಕರುಣೆ ಕತೆಯ ಮತ್ತು ಅದರ ಧ್ವನಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ ಅಥವಾ ಕತೆಗಾರ, ಇಂಗ್ಲಿಷ್ ಕಲಿತು ತನ್ನ ಸಮಾಜದ ಮೌಲ್ಯಗಳ ಚೌಕಟ್ಟಿನಿಂದ ದೂರವಾದ ಭಾರತೀಯನ ಸಮಸ್ಯೆಯನ್ನು ವಸ್ತುವಾಗಿ ಉಪಯೋಗಿಸಿಕೊಂಡಾಗ ಪ್ರಾಮುಖ್ಯ ದೊರಕುವುದು ಇಂತಹ ದೂರವಾದುದರ ಫಲವಾದ ಅಸಹಾಯಕತೆ ಮತ್ತು ಹಾನಿಗಳಿಗೆ. ಎರಡು ತರಹ ಕತೆಗಳಲ್ಲೂ ಬರಹಗಾರನ ಮತ್ತು ಓದುಗನ ಸಮಾಜಕ್ಕಿಂತ ಹೆಚ್ಚಾಗಿ ಬರಹಗಾರನ ಅಥವಾ ಕತೆಯ ಮುಖ್ಯ ಪಾತ್ರಗಳ ಸಂವೇದನಾಶೀಲತೆಗೆ ಹೆಚ್ಚು ಪ್ರಾಮುಖ್ಯ ದೊರಕುತ್ತದೆ. ಆದ್ದರಿಂದ ಅನೇಕ ವೇಳೆ ಅನುಭವಕ್ಕೆ ಬೆಲೆ ಕಟ್ಟಲು ನೇರವಾಗಿಯೋ ಅಥವಾ ಹಿಂಬಾಗಿಲಿನಿಂದಲೋ ಕತೆಗಾರ ಉಪಯೋಗಿಸಿಕೊಳ್ಳುವ ಮೌಲ್ಯಗಳ ಚೌಕಟ್ಟು ಕೇವಲ ತಾತ್ವಿಕವಾಗುತ್ತದೆ. ಅಂದರೆ, ಬಹುಕಾಲದಿಂದ ಜೀವನದೊಂದಿಗೆ ಹಾಸುಹೊಕ್ಕಾಗಿ ಬೆರೆತ ಮೌಲ್ಯಗಳ ಚೌಕಟ್ಟು ಕುಸಿದು ಹೋಗಿದೆ ಎಂಬ ಭಾವದಿಂದಲೋ ಅಥವಾ ಇಂದಿನ ಸನ್ನಿವೇಶದಲ್ಲಿ ಆ ಚೌಕಟ್ಟು ಅಷ್ಟು ಮುಖ್ಯವಲ್ಲ ಎಂಬ ಭಾವದಿಂದಲೋ ಕತೆಗಾರನ ನ್ಯಾಯ-ಅನ್ಯಾಯಗಳ ಕಲ್ಪನೆ ಅತಿ ತಾತ್ವಿಕವಾಗುತ್ತದೆ. ಹೀಗೆಂದಾಗ ನಮ್ಮ ಸಾಂಪ್ರದಾಯಿಕ ಬರಹಗಾರರಿಗೆ ನ್ಯಾಯಾನ್ಯಾಯಗಳ ಕಲ್ಪನೆಯೇ ಇರಲಿಲ್ಲ ಎಂದು ಅರ್ಥವಲ್ಲ. ನಮ್ಮ ಹಿಂದಿನ ಬರಹಗಾರರಾದ, ಆದರೆ ಚಾರಿತ್ರಿಕ ದೃಷ್ಟಿಯಿಂದ ಈಚಿನವರಾದ ಎಂ.ಎಸ್, ಪುಟ್ಟಣ್ಣನವರಂತಹ ಬರಹಗಾರರ ಕೃತಿಗಳಲ್ಲಿ ನ್ಯಾಯಾ-ನ್ಯಾಯಗಳ ಕಲ್ಪನೆಗೂ, ಕೇವಲ ತಾತ್ವಿಕ ಮತ್ತು ಲೌಕಿಕವಲ್ಲದ ಧರ್ಮಕ್ಕೂ ಅತಿ ನಿಕಟ ಸಂಬಂಧವಿತ್ತು. ಈ ಧರ್ಮದ ಕಲ್ಪನೆಯ ಪ್ರಭಾವದಿಂದಾಗಿ ವೈಯಕ್ತಿಕ ನ್ಯಾಯಾ-ನ್ಯಾಯಗಳ ಕಲ್ಪನೆ ಒಂದು ಇಡೀ ಸಮಾಜವೇ ಒಪ್ಪಿಕೊಂಡ ನ್ಯಾಯಾನ್ಯಾಯಗಳ ಕಲ್ಪನೆಯಿಂದ ಬೇರಾಗಿ ಇರಲಿಲ್ಲ. ಆದರೆ ಧರ್ಮದ ಕಲ್ಪನೆ ಹೆಚ್ಚು ಹೆಚ್ಚು ಲೌಕಿಕವಾದಂತೆ, ಧರ್ಮಕ್ಕೂ ನ್ಯಾಯಕ್ಕೂ ಇರಬೇಕಾದ ಮುಖ್ಯ ವ್ಯತ್ಯಾಸ ಕಮ್ಮಿಯಾದಂತೆ, ಒಂದು ವಿಶಿಷ್ಟ ಸಂವೇದನಾಶೀಲತೆಗೆ ಬಾಹ್ಯರೂಪು ಕೊಡಬಲ್ಲ ಪ್ರಕಾರಗಳನ್ನು (forms) ಕಲೆಗಾರ ಹುಡುಕಲೇಬೇಕಾಯಿತು. ಬಹುಶಃ ಸಾಹಿತಿಯ ಮತ್ತು ಸಮಾಜದ ನಂಬಿಕೆಗಳ ನಡುವೆ ಬಿರುಕುಂಟಾದುದು ಇದಕ್ಕೆ ಕಾರಣವಿರಬಹುದು.
ಕಾರಣ ಏನೇ ಆದರೂ ಮಾಸ್ತಿಯವರ ಸಣ್ಣ ಕತೆಗಳಿಗೂ ಈಚಿನ ಬರಹಗಾರರ ಸಾರ್ಥಕ ಸಣ್ಣ ಕತೆಗಳಿಗೂ ಸ್ಪಷ್ಟ ವ್ಯತ್ಯಾಸಗಳಿವೆ. ಮಾಸ್ತಿಯವರ ಸಂವೇದನಾಶೀಲತೆ ಇಂದಿನ ಬರಹಗಾರರಿಗೆ ಸಿಗದ ಒಂದು ಸಾಮಾಜಿಕ ಚೌಕಟ್ಟಿನಲ್ಲಿ ಬೆಳೆದು ಬಂದುದು. ೧೯೨೦ ರಿಂದ ೧೯೫೭ರ ವರೆಗೂ ಪ್ರಕಟವಾದ ಅವರ ಕತೆಗಳನ್ನು ಒಂದಾದ ಮೇಲೆ ಒಂದರಂತೆ ಓದಿಗಾಗ ಈ ಶತಮಾನದ ಎರಡನೆಯ ದಶಕದಲ್ಲಿ ಮಾಸ್ತಿಯವರು ಬರೆದ ಮತ್ತು ಐದನೆಯ ದಶಕದಲ್ಲಿ ಅವರು ಬರೆದ ಕತೆಗಳು ವ್ಯಕ್ತ ಮಾಡುವ ಸಂವೇದನಾಶೀಲತೆ ಒಂದೇ ಎನ್ನಿಸುತ್ತದೆ. ಇದರ ಅರ್ಥ ಸಾಂಪ್ರದಾಯಿಕ ಸಾಮಾಜಿಕ ಚೌಕಟ್ಟಿನಲ್ಲಿ ಬೆಳೆದ ಮಾಸ್ತಿಯವರ ಸಂವೇದನಾಶೀಲತೆ ಸಮಾಜದ ಚೌಕಟ್ಟು ಬದಲಾದರೂ ಬದಲಾಗಲಿಲ್ಲ ಎಂದೇ?, ಅವರ ಸಂವೇದನಾಶೀಲತೆಯಲ್ಲಿ ಬೆಳವಣಿಗೆಯೇ ಇಲ್ಲ ಎಂದೇ ? ಅಥವಾ ವಿಷಯ ಯಾವುದಾದರೂ ಅದನ್ನು ತಮ್ಮ ಸಂವೇದನಾಶೀಲತೆಗೆ ಒಗ್ಗುವ ರೀತಿಯಲ್ಲಿ ಉಪಯೋಗಿಕೊಳ್ಳುವ ಕಲೆಗಾರರು ಮಾಸ್ತಿಯವರು ಎಂದೇ ?
ಈ ಪ್ರಶ್ನೆಗಳಿಗೆ ಸಾಹಿತ್ಯ ವಿಮರ್ಶೆಯೊಂದೇ ಉತ್ತರ ಕೊಡಬಲ್ಲದು. ಎಲ್ಲಕ್ಕೂ ಮೊದಲಿಗೆ ನಮ್ಮ ಗಮನ ಸೆಳೆಯುವ ಸಂಗತಿಯೆಂದರೆ ನಮ್ಮಲ್ಲಿ “ರೊಮ್ಯಾಂಟಿಕ್” ಸಾಹಿತ್ಯ ಬೆಳೆಯುತ್ತಿದ್ದಾಗಲೂ ಮಾಸ್ತಿಯವರು ತಮ್ಮದೇ ಬೇರೆ ರೀತಿಯ ಸಾಹಿತ್ಯ ಬೆಳೆಸುತ್ತಿದ್ದುದು. ೧೯೨೦ರಲ್ಲಿ ಪ್ರಕಟವಾದ ಅವರ ಕೆಲವು ಸಣ್ಣ ಕತೆಗಳು ಎಂಬ ಸಂಗ್ರಹದಲ್ಲಿರುವ “ರಂಗನ ಮದುವೆ,” “ರಂಗಪ್ಪನ ದೀಪಾವಳಿ,” “ರಂಗಪ್ಪನ ಕೋರ್ಟ್‌ಶಿಪ್” ಮತ್ತು “ರಂಗಸಾಮಿಯ ಅವಿವೇಕ”-ಈ ಕತೆಗಳಿಗೂ, ಕೆಲವು ವರ್ಷಗಳ ನಂತರ ಬೇರೆಯವರು ಬರೆದ ಪ್ರೇಮವನ್ನೇ ಮುಖ್ಯ ವಸ್ತುವಾಗುಳ್ಳ ಕತೆ ಕವನಗಳಿಗೂ ಇರುವ ವ್ಯತ್ಯಾಸ ಮಾಸ್ತಿಯವರ ಸಂವೇದನಾಶೀಲತೆಯ ಮೇಲೆ ಬೆಳಕು ಚೆಲ್ಲುತ್ತದೆ. ರೋಮಾಂಟಿಕ್ ಬರಹಗಾರರಿಗೆ ಅನೇಕ ವೇಳೆ ಕಲೆಯೇ ಜೀವನವಾದಲ್ಲಿ, ಈ ನಾಲ್ಕು ಕತೆಗಳು ಕಲೆಗೂ ಜೀವನಕ್ಕೂ ಇರಬೇಕಾದ ಸಂಬಂಧದ ಬಗ್ಗೆ ಕೆಲವು ಪ್ರಶ್ನೆಗಳನ್ನು ಓದುಗನ ಗಮನಕ್ಕೆ ತರುತ್ತವೆ. ತಾನೇ ಮೆಚ್ಚಿ ಮದುವೆ ಮಾಡಿಕೊಳ್ಳಬೇಕು ಎಂದು ಹೇಳುವ ರಂಗನ ಬೆಳವಣಿಗೆ “ಗಂಗನ ಮದುವೆ”, “ರಂಗನ ದೀಪಾವಳಿ” ಮತ್ತು “ರಂಗಪ್ಪನ ಕೋರ್ಟ್‌ಶಿಪ್’ಗಳ ವಿಷಯ., ಮೊದಲ ಕತೆಯಲ್ಲಿಯೇ ಕತೆ “ನಡೆದ ಕಾಲಕ್ಕೂ, ಕತೆ ಹೇಳುವ ಕಾಲಕ್ಕೂ ಹತ್ತು ವರ್ಷಗಳ ಅಂತರವಿದೆ ಎಂಬ ಮಾತು ಬರುತ್ತದೆ; “ಆಗ ನಮ್ಮ ಊರಿನಲ್ಲಿ ಇಂಗ್ಲಿಷ್ ಓದವರು ಬಹುಜನ ಇರಲಿಲ್ಲ” ಎಂದು ಕತೆ ಹೇಳುವವ ಹೇಳುವುದು ಹೊಸ ಹಳ್ಳಿಯ ಸ್ಥಿತಿಯನ್ನು ವರ್ಣಿಸುವುದರ ಜೊತೆಗೇ ರಂಗನ ಅಭಿಪ್ರಾಯಗಳಿಗೂ ತನ್ನವರೇ ಆದ ಹಳ್ಳಿಯ ಜನರ ಅಭಿಪ್ರಾಯಗಳಿಗೂ ಏನೇನೂ ಸಂಬಂಧವಿಲ್ಲ
ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸುತ್ತಿ ಸುತ್ತಿ ಕತೆ ಹೇಳುವ ರೀತಿ, ಹೇಳುವುದಕ್ಕಾಗಿ ಉಪಯೋಗಿಸಿದ ಲಘು ಧ್ವನಿ ಸನ್ನಿವೇಶವನ್ನು ಸೃಷ್ಟಿಸುವುದರ ಜೊತೆಗೆ ರಂಗನ ಅಭಿಪ್ರಾಯಗಳಿಗೂ ಬೆಲೆ ಕಟ್ಟುತ್ತವೆ. “ರಂಗನ ಮದುವೆಯಲ್ಲಿ ಕತೆ ಹೇಳುವವ ರಂಗನಿಗೆ ಸಾಂಪ್ರದಾಯಿಕ ಮದುವೆ ಮಾಡಿಸುವುದರಲ್ಲಿ ಜಯಗಳಿಸುತ್ತಾನೆ. “ರಂಗಪ್ಪನ ದೀಪಾವಳಿ”ಯಲ್ಲಿ ರಂಗ ತನ್ನ ಮಾವನ ಮನೆಗೆ ಹೋಗಿ ನೈಜ ಸನ್ನಿವೇಶಗಳನ್ನು ಎದುರಿಸುವುದರ ಮೂಲಕ ತನ್ನ ಸಾಮಾಜಿಕ ಮೌಲ್ಯಗಳಿಗೆ ಕೊಂಚ ಹತ್ತಿರ ಬರುತ್ತಾನೆ. ಮದುವೆಯ ದಿನ “ನಾವು ಏನನ್ನು ಹೇಳುವುದು ? ಈ ಹುಡುಗಿಯರಿಗೆ? ನಿಮಗೆ ಮೊದಲೇ ಹೇಳಿದ್ದೆನಲ್ಲವೆ? ನಾವು ಏನಾದರೂ ಹೇಳಿದರೆ, ಅವರಿಗೆ ತಿಳಿಯುವ ಬಗೆ ಹೇಗೆ ?”2 ಎಂದಿದ್ದ ರಂಗ, ದೀಪಾವಳಿಗೆ ಮಾವನ ಮನೆಗೆ ಹೋದಾಗ “ಬೆಳಗ್ಗೆ ಮನೆಗೆ ಬಂದವರು ನನ್ನ ಕೂಡ ಮಾತನಾಡುವುದಕ್ಕೆ ಈಗಲೇ ಬರುವುದು ?”3 ಎಂದು ಹೆಂಡತಿ ಕೇಳಿದಾಗ ಉತ್ತರ ಕೊಡಲಾರದೇ ಹೋಗುತ್ತಾನೆ. ಅಂದರೆ, ತನ್ನ ಹೆಂಡತಿ ಒಂದು ಕಲ್ಪನೆಯಲ್ಲ, ಒಬ್ಬ ವ್ಯಕ್ತಿ ಎಂಬುದನ್ನು ಅರಿತುಕೊಳ್ಳುತ್ತಾನೆ. “ರಂಗಪ್ಪನ ಕೋರ್ಟ್‌ಶಿಪ್‌”ನಲ್ಲಿ ರಂಗಸ್ಸ ತನ್ನ ಹೆಂಡತಿಗೆ ಪ್ರೇಮಪತ್ರಗಳನ್ನು ಬರೆಯಲು ಕಲಿಸಿಕೊಡುವ ಪ್ರಯತ್ನದಲ್ಲಿ ವಿಫಲನಾಗುತ್ತಾನೆ. ಈ ಮೂರು ಕತೆಗಳ ವಸ್ತು ಒಂದು ದೃಷ್ಟಿಯಲ್ಲಿ ರಂಗ ತನ್ನ ಸಮಾಜಕ್ಕೆ ಹೊಂದದ ಅಭಿಪ್ರಾಯಗಳ ನಿರರ್ಥಕತೆಯನ್ನು ಮತ್ತು ಸಮಾಜದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯನ್ನು ಅರಿತು ಕೊಳ್ಳುವುದು. ಅದಕ್ಕಾಗಿಯೇ ಏನೋ ಮೂರು ಕತೆಗಳನ್ನು ಹೇಳುವವನು ರಂಗನಿಗಿಂತ ಹೆಚ್ಚು ವಯಸ್ಸಾದವನು ಮತ್ತು ತಾನು ಮತ್ತು ರಂಗನಿಗಿರುವ ಸಮಾಜ ವ್ಯವಸ್ಥೆ ಸರಿಯಾದುದು ಎಂದು ನಂಬಿದವನು. ಆದ್ದರಿಂದಲೇ ರಂಗನ ಅಭಿಪ್ರಾಯಗಳು ಸಮಾಜದ ಸರಿ ಒಪ್ಪುಗಳ ಕಲ್ಪನೆಯನ್ನು ಬಿಟ್ಟು ಅಡ್ಡ ಹರಿದಂಥವು (deviations) ಎಂಬ ನಂಬಿಕೆ ಕತೆಗಳ ಬೆನ್ನುಮೂಳೆಯಾಗಲು ಸಾಧ್ಯ.
“ರಂಗಸಾಮಿಯ ಅವಿವೇಕ” ದಲ್ಲಿ “ಅವಿವೇಕ” ರಂಗಸಾಮಿ ತಾನು ಓದಿದ ಚಾರಿತ್ರಿಕ ಕಾದಂಬರಿಗಳ ಕ್ಷತ್ರಿಯ ರಮಣಿಯರಿಗೂ ತನ್ನ ಸುತ್ತಮುತ್ತಲಿರುವ “ರಮಣಿ”
9*
ಯರಿಗೂ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳದಿರುವುದು. ತಾನು ಓದುವ ಸಾಹಿತ್ಯಕ್ಕೂ ತನ್ನ ಸುತ್ತಮುತ್ತಲಿನ ಜೀವನಕ್ಕೂ ಇರುವ ವ್ಯತ್ಯಾಸಗಳನ್ನು ತಿಳಿಯದ ರಂಗಸಾಮಿ ತನ್ನ ಹೆಂಡತಿ ಕ್ಷತ್ರಿಯ ರಮಣಿಯರಂತಲ್ಲ ಎಂದು ಕೊರಗುವುದು ಸ್ವಾಭಾವಿಕ. ಏಕೆಂದರೆ ಅವನ ಸಂವೇದನಾಶೀಲತೆ ಕೇವಲ ಸಾಹಿತ್ಯಕ. ಇದು ನೇರ ಹೇಳಿಕೆಯಾಗಿ ಬರದೆ ರಂಗಸಾಮಿ ಇಂದಿರಾದೇವಿಯನ್ನು ನೋಡುವ ದೃಷ್ಟಿಯ ವರ್ಣನೆಯ ಮೂಲಕವಾಗಿಯೇ ಬರುತ್ತದೆ. 4 ಆ ವರ್ಣನೆಯನ್ನು ಈ ದೃಷ್ಟಿಯಿಂದ ನೋಡಿದಾಗ ಆ ವರ್ಣನೆಯ ಭಾಷೆಗೂ, ಕನ್ನಡ ಚಾರಿತ್ರಿಕ ಕಾದಂಬರಿಗಳ ಕ್ಷತ್ರಿಯ ರಮಣಿಯರ ವರ್ಣನೆಗಳ ಭಾಷೆಗೂ ಇರುವ ನೇರ ಸಂಬಂಧ ಅತಿ ಮಹತ್ವವುಳ್ಳದ್ದು ಎನ್ನಿಸುತ್ತದೆ. ರಂಗಸಾಮಿ ಸಂಗೀತ ಕಲಿತುಕೊಳ್ಳುವುದು, ಕೂದಲನ್ನು ಉದ್ದವಾಗಿ ಬೆಳಸಿಕೊಳ್ಳುವುದು, ಮೊದಲಾದ “ಅವಿವೇಕ”ಗಳೆಲ್ಲ ಅವನ ಮೂಲ ಅವಿವೇಕಕ್ಕೆ ಸಂಬಂಧಿಸಿವೆ. ಆದರೆ ಕತೆಯ ಕೊನೆಯಲ್ಲಿ ಓದುಗನಿಗೆ ಆಗುವ’ ಅರಿವು ರಂಗಸಾಮಿಯ ಕಲ್ಪನೆ ತಪ್ಪು ಎನ್ನುವುದು ಮಾತ್ರವಲ್ಲ; ಕತೆ ರಂಗಸಾಮಿಯ ಕಲ್ಪನೆಗಳ ಅಪರಿಪೂರ್ಣತೆ, ಅಂದರೆ ಅವನ “ರೋಮಾಂಟಿಕ್” ಕಲ್ಪನೆಗಳ ಅಪರಿಪೂರ್ಣತೆಯನ್ನು ಕೂಡ ಓದುಗನಿಗೆ ತಂದುಕೊಡುತ್ತದೆ. ಏಕೆಂದರೆ ಚಾರಿತ್ರಿಕ ಕಾದಂಬರಿಗಳನ್ನು ಓದಿದ ರಂಗಸಾಮಿ ಅಂತಹ ಕಾದಂಬರಿಗಳ ನಾಯಿಕೆಯರ ಸಾಧಾರಣ ಗುಣಗಳಾದ ಪಾತಿವ್ರತ್ಯ ಮತ್ತು ಸಿಟ್ಟಿಗೆ ಸಾಕಷ್ಟು ಗಮನ ಕೊಟ್ಟಿರಲಿಲ್ಲ. ಇದರಿಂದಾಗಿ ಕತೆಯ ಹಿಂದೆ ಒಬ್ಬ ವ್ಯಕ್ತಿಯ ಅವಿವೇಕವಲ್ಲದೆ, ಒಂದು ದೃಷ್ಟಿಕೋನದ ಅವಿವೇಕ, ಸಾಹಿತ್ಯಕ್ಕೂ ಜೀವನಕ್ಕೂ ಇರುವ ಸಂಬಂಧವನ್ನು ಅರಿತುಕೊಳ್ಳಲು ಬೇಕಾದ ಪೂರ್ಣದೃಷ್ಟಿ ಇವುಗಳ ಬಗೆಗೂ ಚಿಂತನೆಯಿದೆ ಎನ್ನಿಸುತ್ತದೆ.
ಈ ನಾಲ್ಕು ಸಫಲ ಕತೆಗಳನ್ನು ಅವು ಪ್ರಕಟವಾದ ಸಂಪುಟದಲ್ಲಿ ಪ್ರಕಟವಾದ “ಬೀದಿಯಲ್ಲಿ ಹೋಗುವ ನಾರಿ”ಯೊಂದಿಗೆ ಹೋಲಿಸಿದರೆ ಮಾಸ್ತಿಯವರ ಸಂವೇದನಾಶೀಲತೆಯ ಇತಿಮಿತಿಗಳ ಪರಿಚಯ ನನಗಾಗುತ್ತದೆ. ಕತೆ ಸುಂದರವಾದ, ಜೊತೆಯಲ್ಲಿ ಯಾರೂ ಇಲ್ಲದ ಹೆಣ್ಣಿನ ಮತ್ತು ಆಕೆಯ ಹಾವಭಾವಗಳ ವರ್ಣನೆ ಮತ್ತು ಆಕೆಯನ್ನು ಸುತ್ತುವರೆಯುವ ಗಂಡುಗಳ ವರ್ತನೆಯ ವರ್ಣನೆಗಳಿಂದ ಪ್ರಾರಂಭವಾಗುತ್ತದೆ. ಈ ವರ್ಣನೆಗಳಿಂದ ಮತ್ತು ಕತೆ ಬೆಳೆದಂತೆ ಆ ಹೆಣ್ಣು ಒಬ್ಬ ಸೂಳೆ ಎಂಬ ಅರಿವು ಓದುಗನಿಗಾಗುತ್ತದೆ. ಆದರೆ “ಎಳೆಯ ಮನಸ್ಸಿನ” ಶ್ರೀನಿವಾಸಯ್ಯನಿಗೆ ಆ ಅರಿವು – ಆಗುವುದು ಓದುಗನಿಗಾದ ಬಹಳ ಕಾಲದ ನಂತರ. ಒಂದು ದೃಷ್ಟಿಯಿಂದ ಈ ಕತೆಯ ವಸ್ತು ಒಂದು ಉತ್ತಮ ಹಾಸ್ಯಕತೆಯದು. ಆದರೆ ಶ್ರೀನಿವಾಸಯ್ಯನ “ಎಳೆಯ ಮನಸ್ಸಿನ” ಬಗೆಗೆ ಕತೆಗಾರರಿಗಿರುವ ಭಾವನೆ ಕತೆ ಹಾಸ್ಯಕತೆಯಾಗಿ ಬೆಳೆಯಲು ಬಿಡುವುದಿಲ್ಲ; ಕತೆ ಬಹು ಭಾವುಕ (Sentimental) ವಾಗುತ್ತದೆ. ಕತೆಯಲ್ಲಿ ಸೃಷ್ಟಿಯಾದ ಸನ್ನಿವೇಶವೆಂದರೆ ರೈಲ್ವೆ ಸ್ಟೇಷನ್ನಿನಲ್ಲಿ ನಡೆಯುವ ಸನ್ನಿವೇಶವೊಂದೇ.
ಆ ದೃಶ್ಯಕ್ಕೂ ಶ್ರೀನಿವಾಸಯ್ಯನಿಗೂ ಸಂಬಂಧ ಬಹಳ ಕಡಿಮೆ. ಆದ್ದರಿಂದ ಶ್ರೀನಿವಾಸಯ್ಯನ ಸುಗುಣಕ್ಕೂ ಕತೆಯಲ್ಲಿ ಸೃಷ್ಟಿಯಾದ ಒಂದೇ ಒಂದು ಸನ್ನಿವೇಶಕ್ಕೂ ಇರಬೇಕಾದ ಸಂಬಂಧ ಇಲ್ಲವಾಗುತ್ತದೆ. ಈ ಕಾರಣದಿಂದಾಗಿ ಅವನ ಸುಗುಣದ ಕಲ್ಪನೆ ಕೂಡ ತಾತ್ವಿಕವಾಗುತ್ತದೆ. ಈ ಕತೆಯ ಸೋಲಿಗೆ ಕಾರಣ ಮಾಸ್ತಿಯವರ ಸಂವೇದನಾಶೀಲತೆಗೆ ಈ ಕತೆಯಲ್ಲಿ ತಾತ್ವಿಕ ಕಲ್ಪನೆಗಳಿಗೂ ಇಂದಿನ ಜೀವನದ ಬಿಡಿ ಎಳೆಗಳಿಗೂ ಸಂಬಂಧ ಕಲ್ಪಿಸುವ ಶಕ್ತಿಯಿಲ್ಲದಿರುವುದು (ಕತೆಯ ವಿಷಯ ಹಿಂದೆ, ಪುರಾಣ ಯುಗದಲ್ಲೋ ಅಥವಾ ನೂರಾರು ವರ್ಷಗಳ ಹಿಂದೋ “ನಡೆ”ದದ್ದಾದರೆ ಮಾತು ಬೇರೆ : ಉದಾಹರಣೆಗೆ “ಆಚಾರ್ಯರ ಪತ್ನಿ” ಎಂಬ ಕತೆಯನ್ನು ನೋಡಿ). ಈ ಕಾರಣದಿಂದಲೇ (“ವಸುಮತ್ತಿ” ಯಂತಹ ಕತೆ ಸೋಲುತ್ತದೆ. ತಮ್ಮ ಕತೆಗಳಲ್ಲಿ ಬೇರೆ ಸಮಾಜದಲ್ಲಿ ಹುಟ್ಟಿ ಬೆಳೆದ ವ್ಯಕ್ತಿಗಳಿಗೆ ಮುಖ್ಯ ಪಾತ್ರ ಕೊಡಲು ಮಾಸ್ತಿಯವರು ಪ್ರಯತ್ನಿಸಿದಾಗ ಕತೆಗಳು ಸೋಲುತ್ತವೆ. “ವಸುಮತ್ತಿ”ಯ ಮೊದಲು ಕೆಲವು ಪುಟಗಳಲ್ಲಿರುವ “ಬಿಗಿತ”ಕ್ಕೂ ಕತೆಯ ಕೊನೆಯ ಕೆಲವು ಪುಟಗಳ ಅತಿಭಾವುಕತೆಗೂ ಸಂಬಂಧವೇನು? ಎಂಬ ಪ್ರಶ್ನೆ ಮುಖ್ಯ, ಕತೆಯಲ್ಲಿ ಅತಿ ಮುಖ್ಯವಾದ ಭಾವನೆ ಮನುಷ್ಯ ಜೀವ ಪುನರ್ಜನ್ಮ ಪಡೆಯುವಂತೆಯೇ ಒಂದು ಸಂಸ್ಕೃತಿ ಕೂಡ ಪುನರ್ಜನ್ಮ ಪಡೆಯಬಹುದು ಎಂಬುದು ಈ ಭಾವನೆಯ ಮುಖ್ಯತೆಯನ್ನು ಕತೆಗಾರರು ಮಸುಮತ್ತಿಯನ್ನು ವರ್ಣಿಸುವ ರೀತಿಯಲ್ಲಿಯೇ ಓದುಗನ ಗಮನಕ್ಕೆ ತರುತ್ತಾರೆ. ವರ್ಣನೆಯಲ್ಲಿ ನೈಜತೆ (reality) ಮತ್ತು ಪುರಾಣ (myth) ಒಂದಕ್ಕೊಂದಕ್ಕೆ ವ್ಯತ್ಯಾಸವೇ ಇಲ್ಲವೇನೋ ಎನ್ನುವಷ್ಟು ನಿಕಟವಾಗಿವೆ. ನೈಜತೆಗೂ ಪುರಾಣಕ್ಕೂ ಈ ಕತೆಯಲ್ಲಿರುವ ನಿಕಟ ಸಂಬಂಧ ಕೇವಲ ತಾತ್ವಿಕವಲ್ಲ. ಅದು ಮಸುಮತ್ತಿಯ ಜನ ಜೀವನದ ಮೇಲೆ ಅಗಾಧ ಪರಿಣಾಮ ಉಂಟುಮಾಡಿದೆ ಎಂಬ ಭಾವನೆ ಮುದುಕನೊಂದಿಗೆ ಕೋಟ್ನೇಸಾಹೇಬ, ಫರ‍್ಕುವರ ಮತ್ತು ಎಮಿಲಿ ಮಾತಾಡಿದಾಗ ಓದುಗನಿಗೆ ಉಂಟಾಗುತ್ತದೆ. ಆದರೆ ಕತೆ ಬೆಳೆದಂತೆ, ಎಮಿಲಿ ಕತೆಯಲ್ಲಿ ಮುಖ್ಯ ಪಾತ್ರ ವಹಿಸಿದಂತೆ, ಕತೆ ಅತಿಭಾವುಕವಾಗುತ್ತದೆ. ಕತೆಯ ಕೊನೆಯ ಮೂರು ಪುಟಗಳು ಸಹಿಸಲಾರದಷ್ಟು ಅತಿಭಾವುಕವಾಗುತ್ತವೆ.
ನಸುಮತ್ತಿಯನ್ನು ವರ್ಣಿಸುವ ಭಾಗದಲ್ಲಿ ಭಾವನೆ ಸೃಷ್ಟಿಯಾದ ಒಂದು ಸಾಮಾಜಿಕ ಮತ್ತು ಮೌಲ್ಯದ ಚೌಕಟ್ಟಿನಿಂದ ಹುಟ್ಟುತ್ತದೆ. ಆದರೆ ಎಮಿಲಿಯ ಉದಾತ್ತತೆಗೆ ದೇಹ ಕೊಡಬಲ್ಲ ಕತೆಯಲ್ಲಿ ಸೃಷ್ಟಿಯಾದ, ಸಾಮಾಜಿಕ ಮತ್ತು ಮೌಲ್ಯದ ಚೌಕಟ್ಟಿಲ್ಲ. ಅಂದರೆ, ಮುದುಕನಿಗೂ ಅವನು ಹುಟ್ಟಿ ಬೆಳೆದ ಸಮಾಜಕ್ಕೂ ಇರುವ ಸಂಬಂಧ ಎಮಿಲಿಗೂ, ಆಕೆ ಹುಟ್ಟಿ ಬೆಳೆದ ಸಮಾಜಕ್ಕೂ ಇಲ್ಲ. ಅದರಿಂದ ಎಮಿಲಿ ಕೆಲವು ಉದಾತ್ತ ಭಾವನೆಗಳ ಧ್ವನಿ (voice) ಯಾಗುತ್ತಾಳೆ ; ಒಂದು ಸಮಾಜದ ಮೌಲ್ಯಗಳಿಗೆ ಸಂಬಂಧಿಸಿದ ಉದಾತ್ತಭಾವನೆಗಳ ಮೂರ್ತೀಕರಣ (Symbolization) ವಾಗುವುದಿಲ್ಲ. ಇದೇ ಕತೆಯಲ್ಲಿ ಮುದುಕನಿಗೂ ಎಮಿಲಿಗೂ ಇರುವ ಮುಖ್ಯ ವ್ಯತ್ಯಾಸ. ಈ ವ್ಯತ್ಯಾಸದಿಂದಲೋ ಏನೋ, ಮುದುಕನ ಭಾಷೆಗೂ ಎಮಿಲಿಯ ಭಾಷೆಗೂ ಅಗಾಧ ವ್ಯತ್ಯಾಸವಿದೆ. ಮುದುಕನ ಭಾಷೆಯ ಬೆನ್ನ ಹಿಂದೇ ಒಂದು ಸಂಸ್ಕೃತಿಯ ಧ್ವನಿ ಕೇಳಿಸಿದರೆ, ಎಮಿಲಿಯ ಭಾಷೆ ಅತಿ ಸರಳವಾದ ಮತ್ತು ಕೇವಲ ಸಾಹಿತ್ಯಕವಾದ ಭಾವುಕ ಭಾಷೆಯಾಗುತ್ತದೆ.
ಬೇರೆ ದೇಶದ ಪಾತ್ರಗಳಿಗೆ ಕೊಂಚವಾದರೂ ಪ್ರಾಮುಖ್ಯ ಕೊಡುವ “ಸೋರಲೀ ಪ್ರಸಂಗ” ಕೂಡ ಈ ದೃಷ್ಟಿಯಿಂದ ಆಸಕ್ತಿ ಹುಟ್ಟಿಸುತ್ತದೆ: ತಮ್ಮ ದೇಶದಿಂದ ಭಾರತಕ್ಕೆ ಬಂದು, ಇಲ್ಲಿ ತಮ್ಮದಲ್ಲದ ಸಂಸ್ಕೃತಿಯಲ್ಲಿ ತಮ್ಮತನ ಉಳಿಸಿಕೊಳ್ಳಲು ಪ್ಲಾಂಟರುಗಳು ಮಾಡುವ ಪ್ರಯತ್ನವೇ ಅವರನ್ನು ಒರಟಾಗಿ (Coarse) ಮಾಡಿದೆ. ಆದರೆ ತನ್ನ ಜನಾಂಗದ ಗಂಡಸರು ಅನೇಕ ವರ್ಷಗಳಲ್ಲಿ ಮಾಡಲಾರದುದನ್ನು ಆರಾಬೆಲ್ಲಾ ಕೆಲವು ತಿಂಗಳುಗಳಲ್ಲಿ ಮಾಡುತ್ತಾಳೆ ; ತನ್ನ ಸುತ್ತಮುತ್ತಲಿರುವ ಭಾರತೀಯರನ್ನು ಅರಿತುಕೊಳ್ಳುತ್ತಾಳೆ. ಓದುಗ ಕೇಳಬೇಕಾದ ಪ್ರಶ್ನೆ ತನ್ನ ಜನಾಂಗದ ಗಂಡಸರಿಗೆ ಸಾಧ್ಯವಾಗದುದು ಆರಾಬೆಲ್ಲಾಳಿಗೆ ಹೇಗೆ ಸಾಧ್ಯವಾಗುತ್ತದೆ ? ಎಂಬುದು. ಆರಾಬೆಲ್ಲಾ ಗೌಡರಿಗೆ “ನನಗೆ ಬಿಳಿಯ ಜನ ನಮ್ಮವರು, ನೀವು ಹೆರವರು ಎಂಬ ತಿಳುವಳಿಕೆಯಿಲ್ಲ. ನಾನು ಥಿಯಾಸಫಿ ಬಲ್ಲೆ. ಚಾರ್ಲಿ ಇಲ್ಲಿಗೆ ಬಂದ ಕಾಲಕ್ಕೆ ನಾನು ಇಲ್ಲಿ ಬರಬೇಕಾದೀತು ಎಂಬ ಕಾರಣದಿಂದ ನಿಮ್ಮ ದೇಶದ ರೀತಿ ನೀತಿ ತಿಳಿಯುವಂತೆ ಗ್ರಂಥಗಳನ್ನು ಓದಿಕೊಂಡೆ. ನಿಮ್ಮ ಸಂಪ್ರದಾಯವೆಂದರೆ ನನಗೆ ಗೌರವವಿದೆ. ನಾನು ಹಿಂದು ಜನರನ್ನು ಅಲ್ಲಗಳೆಯುವುದಿಲ್ಲ”5 ಎಂದು ಹೇಳುತ್ತಾಳೆ. ಆದರೆ ಕೇವಲ ಥಿಯಾಸಫಿಯನ್ನು ತಿಳಿದುಕೊಳ್ಳುವುದರಿಂದ, ಗ್ರಂಥಗಳನ್ನು ಓದುವುದರಿಂದ, ಅವಳಿಗೆ ಬರುವಂತಹ ಅರಿವು ಬರುವುದು ಸಾಧ್ಯವೇ? ಇದಕ್ಕಿಂತಲೂ ಮುಖ್ಯವಾಗಿ ಇಂಗ್ಲೆಂಡಿನ ಗಂಡಸರು ತಿಳಿದುಕೊಳ್ಳಲಾರದುದನ್ನು ಅಲ್ಲಿನ ಹೆಂಗಸರು ತಿಳಿದುಕೊಳ್ಳುವಂತೆ ಮಾಡುವ ಶಕ್ತಿ ಯಾವುದು ? ಈ ಪ್ರಶ್ನೆಗೆ ಕತೆಗಳಲ್ಲೇ ಉತ್ತರ ಸಿಗುವುದಿಲ್ಲ. ಬಹುಶಃ ಕೆಲವು ವಿಷಯಗಳನ್ನು ಹೆಂಗಸರು ಗಂಡಸರಿಗಿಂತ ಬೇಗ ತಿಳಿದುಕೊಳ್ಳುತ್ತಾರೆ ಎಂಬ ತಾತ್ವಿಕ ನಂಬಿಕೆ ಇದಕ್ಕೆ ಕಾರಣವಿರಬಹುದು. ಆದರೆ ಈ ನಂಬಿಕೆಗೆ ಕತೆಯ ಅನುಭವವೇ ತಳಹದಿಯಾದ ಹೊರತು ಅದನ್ನು ಒಪ್ಪಿಕೊಳ್ಳುವುದು ಓದುಗನಿಗೆ ಸಾಧ್ಯವಿಲ್ಲ ; ತಮ್ಮ ವೈಯಕ್ತಿಕ ನಂಬಿಕೆಯನ್ನು, ಆಧಾರ ಕೊಡದೆ ಕತೆಗಾರರು ಕತೆಯ ಮೇಲೆ ಹೇರಿದ್ದಾರೆ ಎಂದು ಓದುಗನಿಗೆ ಅನ್ನಿಸುತ್ತದೆ.
ಆದರೆ ಬೇರೆ ದೇಶದವ ಕೇವಲ ಕತೆ ಹೇಳುವವನಾದಾಗ ಇಂತಹ ಪ್ರಶ್ನೆಗಳು ಹುಟ್ಟುವುದಿಲ್ಲ. ಇದಕ್ಕೆ “ಇಲ್ಲಿಯ ತೀರ್ಪು” ಮತ್ತು “ರಂಗನ ಹಳ್ಳಿಯ ರಾಮ” ಉದಾಹರಣೆಗಳು. ಎರಡು ಕತೆಗಳನ್ನು ಹೇಳುವವನು ಕೊಟ್ನೇ ಸಾಹೇಬ. ಆದರೆ ಕತೆಗಳಲ್ಲಿ ಅವನದು ಮುಖ್ಯ ಪಾತ್ರವಲ್ಲ; ಮುಖ್ಯ ಪಾತ್ರ ವಹಿಸುವವರು ಹಿಂದೂ ಸಮಾಜಕ್ಕೆ ಸೇರಿದವರು. ಇಲ್ಲಿಯ “ತೀರ್ಪು” ಕತೆಯಲ್ಲಿ ಕೋಟ್ನೇ ಸಾಹೇಬನ ಅರಿವು ವಿಸ್ತಾರವಾದರೂ, ಆ ವಿಸ್ತರೀಕರಣ ಎಮಿಲಿಯಾದಂತದಲ್ಲ ; ಇಲ್ಲಿ ಕೊಡುವ ತೀರ್ಪಿಗೂ ದೇವರ ತೀರ್ಪಿಗೂ ವ್ಯತ್ಯಾಸವಿರಬಹುದು ಎಂಬ ಅರಿವು ಕೋಟ್ನೇ ಸಾಹೇಬನ ಧರ್ಮಕ್ಕೆ ಹೊರತಾದುದಲ್ಲ. ಆದ್ದರಿಂದಲೇ ಆ ಅರಿವು ಕತೆಗೆ ಹೊರೆ ಆಗದೆ, ಕತೆ ಓದುಗನಿಗೆ ತರುವ ಅನೇಕ ವಿಷಯಗಳ ಒಂದು ಅಂಶವಾಗಿ ಬರುತ್ತದೆ. ಜೊತೆಗೆ ಕತೆ ಸಂಭಾಷಣೆ ಮೂಲಕ ಬೆಳೆದು ಧರ್ಮಾಂತರದ ಸಮಸ್ಯೆಯ ಪದರು ಪದರುಗಳನ್ನು ಓದುಗನ ಗಮನಕ್ಕೆ ತರುವುದರಿಂದ, ಓದುಗ ಕೂಡ ಕೋಟ್ನೇ ಸಾಹೇಬನಂತೆ ಕತೆಯ ಅನುಭವದಲ್ಲಿ ಭಾಗವಹಿಸುತ್ತಾನೆ. ಆದರೆ “ವಸುಮತಿ” ಯಲ್ಲಿ ಎಮಿಲಿಯ ಭಾಗ ಮುಖ್ಯವಾದಂತೆ ಓದುಗ ಕತೆಯ ಒಟ್ಟು ಅನುಭವದಿಂದ ದೂರಾಗುತ್ತಾನೆ.
“ರಂಗನ ಹಳ್ಳಿಯ ರಾಮ”ನಲ್ಲಿ ಫರ್ಕುವರನಿಗೆ ಒಂದು ನಿಶ್ಚಿತ ಸ್ಥಾನವಿದೆ. ಮಣ್ಣಿನಲ್ಲಿ ಮುಚ್ಚಿಹೋದ ರಾಮದೇವರ ಗುಡಿಯ ಅರಿವು ಜಾನಪದ ಕವನದ ಮೂಲಕ ಉಳಿದು ಬಂದಿದೆ. ಆದರೆ ಆ ಜಾನಪದ ಕವನ ಹಳ್ಳಿಗರ ಮೂಢ ನಂಬಿಕೆಗಳೊಂದಿಗೆ ಹಾಸುಹೊಕ್ಕಾಗಿ ಬೆರೆತುಹೋಗಿರುವುದರಿಂದ, ಆ ಕವನದ ಸಾಂಕೇತಿಕ ಅರ್ಥ ತಿಳಿದುಕೊಳ್ಳುವುದು ರಂಗನ ಹಳ್ಳಿಯ ಸಮಾಜದ ಹೊರಗಿರುವ, ಆದರೆ ಆಸಕ್ತಿಯುಳ್ಳ, ಫರ್ಕುವರನಿಗೆ ಹೆಚ್ಚು ಸಾಧ್ಯ. ಸುಲ್ತಾನರ ಕಾಲದಲ್ಲಿ ರಾಮದೇವರನ್ನು ಬಚ್ಚಿಟ್ಟು ರಂಗನಾಥ ದೇವರನ್ನು ಮಾಡಿಸಿದರು ಎಂಬುದು ಗುಡಿಯ ಅರ್ಚಕನಿಗೆ ತಿಳಿದಿದ್ದರೂ ಅದನ್ನು ಬೇರೆಯವರಿಗೆ ಹೇಳಿದರೆ ರಂಗನಾಥ ದೇವರಲ್ಲಿ ಭಕ್ತಿ ಕಡಿಮೆಯಾದೀತು ಎಂಬ ಭಯದಿಂದ ಅವನು ಗುಟ್ಟನ್ನು ರಟ್ಟು ಮಾಡಲಾರ. ಜೊತೆಗೆ ರಾಮದೇವರ ಗುಡಿ ಹೂತುಹೋಗಿರುವ ತಿಟ್ಟು ತಿಟ್ಟೀದೇವರ ದೇಹದಂತೆ ಪಾವನ, ಅದರ ಮೇಲೆ ಹೆಜ್ಜೆ ಯಿಟ್ಟವನಿಗೆ ರೌರವನರಕ ಎಂಬ ಹೆದರಿಕೆ, ತಿಟ್ಟನ್ನು ಏರಲೇಬೇಕಾಗಿ ಬಂದಾಗ ಮಡಿಬಟ್ಟೆ ಸುತ್ತಿಕೊಂಡು ಮಂಡಿಯೂರಿಯೇ ತಿಟ್ಟನ್ನು ಏರುವ ಅರ್ಚಕ-ಇವು ಹಳ್ಳಿಯ ಜನ ತಾವಾಗಿಯೇ ಅಗೆದು ದೇವರ ಗುಡಿಯನ್ನು ಕಂಡುಹಿಡಿಯುವುದು ಸಾಧ್ಯವಿಲ್ಲ ಎಂಬುದನ್ನು ತಿಳಿಸಿಕೊಡುತ್ತವೆ. ಆದ್ದರಿಂದ ಫರ್ಕುವರ ಕತೆಗೆ ಬೇಕು ; ಆತ ಭಾವನೆಯೊಂದರ ಪ್ರತಿನಿಧಿ ಅಥವಾ ಧ್ವನಿಯಾಗದೆ ಬೌದ್ಧಿಕ (intellectual) ಮನೋಭಾವದ ಪ್ರತಿನಿಧಿ ಮತ್ತು ಕತೆ ಹೇಳುವವ ಮಾತ್ರ ಆಗುತ್ತಾನೆ. ಅಂದರೆ ಕತೆಯ ವಸ್ತು ಫರ್ಕುವರನ ಭಾವನೆಯನ್ನು ಅವಲಂಬಿಸದೆ ರಂಗನಹಳ್ಳಿಯ ಜನರ ನಂಬಿಕೆಗಳು ಮತ್ತು ಸಂಸ್ಕಾರಗಳನ್ನು ಅವಲಂಬಿಸುತ್ತದೆ. ಅಂತೆಯೇ ಕತೆಗೂ ಒಂದು ಸಮಾಜಕ್ಕೂ ನಿಕಟ ಸಂಬಂಧ ಉಳಿದು ಕತೆ ಸಫಲವಾಗಿದೆ.
ಮಾಸ್ತಿಯವರ ಸಫಲ ಕತೆಗಳಿಗೂ ಒಂದು ಸ್ವಯಂಪೂರ್ಣ ಸಂಸ್ಕೃತಿಗೂ ಸಂಬಂಧವಿರುವುದರಿಂದ ಇಂತಹ, ತಮ್ಮ ಅನುಭವದ ಅಂಗವಾದ ಸ್ವಯಂಪೂರ್ಣ ಸಂಸ್ಕೃತಿಯ ಚೌಕಟ್ಟಿನಲ್ಲಿ ಏಳುವ ಸಮಸ್ಯೆಗಳನ್ನು ಎದುರಿಸುವ ಕತೆಗಳೂ ಕೂಡ ಸಫಲವಾಗುತ್ತವೆ. ಇಲ್ಲಿ ಕೂಡ ಸನ್ನಿವೇಶಗಳನ್ನು ಇಂತಹ ಸಂಸ್ಕೃತಿಯ ಚೌಕಟ್ಟಿನಲ್ಲಿ ಅರಿತುಕೊಳ್ಳುವುದು ಸಾಧ್ಯವಾದಾಗ ಮಾತ್ರ ಕತೆಗಳು ಪೂರ್ಣವಾಗಿ ಸಫಲವಾಗುತ್ತವೆ. ಇದಕ್ಕೆ “ಕೃಷ್ಣಮೂರ್ತಿಯ ಹೆಂಡತಿ” ಮತ್ತು “ಮೇಲೂರಿನ ಲಕ್ಷಮ್ಮ” ಸ್ಪಷ್ಟ ಉದಾಹರಣೆಗಳು. ಈ ಎರಡು ಕತೆಗಳಲ್ಲೂ ಹುಚ್ಚು ಮತ್ತು ಹುಚ್ಚಿನಿಂದ ಉಂಟಾಗುವ ನೋವು ಕೇಂದ್ರ ಸ್ಥಾನದಲ್ಲಿವೆ. “ಕೃಷ್ಣಮೂರ್ತಿಯ ಹೆಂಡತಿ”ಯ ವಸ್ತು ಬ್ರಾಹ್ಮಣ ಸಮಾಜದ ಒಂದು ಮುಖ್ಯ ಸಮಸ್ಯೆಯಾದ ಬಾಲವಿಧವಾಸಮಸ್ಯೆ, ತನ್ನ ತಾಯಿ ಮತ್ತು ಕತೆ ಹೇಳುವವನ ಸಂಭಾಷಣೆಯನ್ನು ಅವರಿಗರಿವಿಲ್ಲದಂತೆ ಕೇಳಿದ ಹುಡುಗಿ ತನ್ನ ಗಂಡ ಸತ್ತಿದ್ದಾನೆ. ತಾಯಿ ತನ್ನಿಂದ ಆ ವಿಷಯವನ್ನು ಮುಚ್ಚಿಟ್ಟಿದ್ದಾಳೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಕತೆಯಲ್ಲಿ ಕೃಷ್ಣಮೂರ್ತಿಯ ಹೆಂಡತಿಯ ಪಾತ್ರದಷ್ಟೇ ಆಕೆಯ ತಾಯಿಯ ಪಾತ್ರ ಕೂಡ ಮುಖ್ಯ. ಮಗಳಂತೆಯೇ ತಾಯಿಯೂ ತನ್ನ ಗಂಡನನ್ನು ಕಳೆದುಕೊಂಡಿದ್ದಾಳೆ ; ಎರಡು ಸಾವುಗಳ ಹೊರೆ ಹೊತ್ತವಳು ಮಗಳ ಸಾವಿನ ಹೊರೆಯನ್ನೂ ಹೊರಬೇಕಾಗುತ್ತದೆ. ಕತೆಯ ಕೊನೆಯಲ್ಲಿ ಆಕೆ ನಿಜವಾಗಿಯೂ ಏಕಾಂಗಿನಿ, ಆಕೆ ಹುಟ್ಟಿ ಬೆಳೆದ ಸಮಾಜದಲ್ಲಿ ಒಬ್ಬಂಟಿ ಹೆಣ್ಣಿನ ನಿಸ್ಸಹಾಯಕತೆಯನ್ನೂ ನೆನಪಿನಲ್ಲಿಟ್ಟುಕೊಂಡಲ್ಲಿ ಆಕೆಯ ಸ್ಥಿತಿಯ ಪೂರ್ಣ ಅರಿವು ನಮಗಾಗುತ್ತದೆ. ಆದರೆ ಕತೆ ಇಂತಹ ನೋವಿನ ಕಾರಣಗಳನ್ನು ಹುಡುಕಲು ಹೊರಡದೆ, ಆಕೆ ಹುಟ್ಟಿ ಬೆಳೆದ ಸಮಾಜದ ಮೇಲೆ ಓದುಗನನ್ನು ರೊಚ್ಚೆಬ್ಬಿಸದೆ, ಸತ್ತ ಹುಡುಗಿಯ ಮತ್ತು ಆಕೆಯ ತಾಯಿಯ ಬಗ್ಗೆ ಕೇವಲ ಅನುಕಂಪ ಹುಟ್ಟಿಸದೆ, ಒಬ್ಬಂಟಿ ಹೆಂಗಸು ತನ್ನ ಒಂಟಿತನವನ್ನು ಕಳೆದುಕೊಳ್ಳುವುದನ್ನು ವ‌ರ್ಣಿಸುತ್ತದೆ. ಕತೆಯ ಮುಖ್ಯ ಕಾರ‍್ಯ (main action) ನಡೆದ ಕೆಲವು ಗಂಟೆಗಳ ನಂತರ ನಡೆಯುವ ಕಾರ‍್ಯವನ್ನು ವರ್ಣಿಸುವ ಕತೆಯ ಕೊನೆಯ ಪ್ಯಾರಾ ಈ ದೃಷ್ಟಿಯಿಂದ ಗಮನಾರ್ಹ : “ನಮ್ಮ ಮನೆಯವರು ಇಂದು ಬಂದರು. ನನ್ನ ಲಕ್ಷ್ಮಿ ಆಕೆಯನ್ನು ನಮ್ಮ ಮನೆಗೆ ಕರೆದುಕೊಂಡು ಬರಬೇಕೆಂದಳು. ಆಕೆ ನಿನ್ನೆ ಸಾಯಂಕಾಲಕ್ಕೆ ಈಗ್ಗೆ ಇಪ್ಪತ್ತು ವರ್ಷದಷ್ಟು ಮುದುಕಿಯಾಗಿ ಹೋಗಿದ್ದಾರೆ. ನನ್ನ ಲಕ್ಷ್ಮಿಯನ್ನು ‘ಅಮ್ಮ ನೀನೇ ನನಗೆ ಗತಿ. ನಿನ್ನ ಗಂಡ, ಮಕ್ಕಳು, ನೀನು ಎಲ್ಲರೂ ಸುಖವಾಗಿರಿ, ತಾಯಿ, ನನಗಿನ್ಯಾರೂ ಇಲ್ಲವಮ್ಮ, ನೀನೇ ನನ್ನ ಲಕ್ಷ್ಮಿ ಎಂದರು.”6
ಈ ಪ್ಯಾರಾ ನೋವಿನಿಂದಾಚೆಗೆ ನಮ್ಮನ್ನು ತೆಗೆದುಕೊಂಡು ಹೋಗುವುದಲ್ಲದೆ ಒಂದು ಹೊಸ ಸಂಬಂಧವನ್ನು ಸೃಷ್ಟಿಸುತ್ತದೆ ; ಒಂದು ಸಂಸ್ಕೃತಿ ಹೇಗೆ ಸಾವುನೋವನ್ನು ಎದುರಿಸುವ, ಒಪ್ಪಿಕೊಳ್ಳುವ ಶಕ್ತಿಯನ್ನು ತಂದುಕೊಡುತ್ತದೆ ಎಂಬುದನ್ನು ಓದುಗನ ಗಮನಕ್ಕೆ ತರುತ್ತದೆ.
“ಮೇಲೂರಿನ ಲಕ್ಷಮ್ಮ”ನಲ್ಲಿ ನೋವನ್ನು ಒಪ್ಪಿಕೊಳ್ಳುವ ಶಕ್ತಿಕೊಡುವುದು ಹಿಂದೂ ಸಂಸಾರ ಮತ್ತು ಆ ಕಲ್ಪನೆಯ ಅಂಗವಾದ ನಿಯಮಿತ ಹೊಣೆಗಾರಿಕೆಯ (limited responsibility) ಕಲ್ಪನೆ, ಕತೆ ಹೇಳುವವ ಲಕ್ಷ್ಮಮ್ಮನನ್ನು ತನ್ನ ಮನೆಗೆ ಕರೆದುಕೊಂಡು ಹೋದರೂ, ಆಕೆಯನ್ನು ನೋಡಿಕೊಳ್ಳುವ ಹೊಣೆ ಆಕೆಯ ಅಣ್ಣನದು. ಆದ್ದರಿಂದಲೇ ಅಣ್ಣ ಹಳ್ಳಿಯಿಂದ ಬಂದು ತಂಗಿಯನ್ನು ಕರೆದುಕೊಂಡು ಹೋದ ಕೂಡಲೇ ಕತೆ ಹೇಳುವವನ ಹೊಣೆಗಾರಿಕೆ ಮುಗಿಯುತ್ತದೆ. ಅದರಿಂದಲೋ ಏನೋ ಕತೆ ಹೇಳುವವನಿಗೆ ನೋವಿನ ಕಾರಣ ಮತ್ತು ಹೊಣೆಗಾರಿಕೆ ಹುಡುಕದೆ ಜೀವನದಲ್ಲಿ ಇರುವ ನೋವನ್ನು ಒಪ್ಪಿಕೊಳ್ಳುವುದು ಸಾಧ್ಯವಾಗುತ್ತದೆ. ಹೊಣೆಗಾರಿಕೆಯ ಹಂತಗಳ (gradations of responsibility) ಅರಿವು ಇರುವುದರಿಂದಲೇ ಕತೆ ಹೇಳುವವ ಲಕ್ಷ್ಮಮ್ಮನ ನೆರವಿನೊಂದಿಗೆ ತಾದಾತ್ಮ ಹೊಂದುವುದಿಲ್ಲ. ಕತೆ ಹೇಳುವವನ ಹೆಂಡತಿ ಹಣೆಯ ಬರಹ ನಮ್ಮ ನಮ್ಮ ನೋವುಗಳಿಗೆ ಕಾರಣವೆಂದರೂ, ಆ ಸಿದ್ಧಾಂತವನ್ನೊಪ್ಪಿಕೊಳ್ಳದೆ, ಕತೆ ಹೇಳುವವ ನೋವಿನೊಂದಿಗೆ ರಾಜಿಮಾಡಿಕೊಳ್ಳುತ್ತಾನೆ. ಆದರೆ ಕತೆ ಹೇಳುವವನ ಅಪನಂಬಿಕೆ (Skepticism) ಕೂಡ ಅವನ ಹೆಂಡತಿಯ (“ಇದೆಲ್ಲ ವೇದಾಂತವೆಂದು ನಮ್ಮ ಮನೆಯವರ ಅಭಿಪ್ರಾಯ”7) ಅಭಿಪ್ರಾಯದಿಂದಾಗಿ, ಆಕೆ ತನ್ನ ಗಂಡನ ಅಭಿಪ್ರಾಯಕ್ಕೆ ಗಮನ ಕೊಡದೆ ಹೋಗುವುದರಿಂದಾಗಿ, ಸಿದ್ದಾಂತವಾಗದೆ ಜೀವನದಲ್ಲಿ ನೋವಿರುವುದನ್ನು ಒಪ್ಪಿಕೊಂಡವ ತನ್ನ ಒಪ್ಪಿಗೆಗೆ ಕೊಡುವ ಅಸಂಪೂರ್ಣ ಬೌದ್ಧಿಕ ಕಾರಣವಾಗಿ ಉಳಿಯುತ್ತದೆ ; ಕಾರಣಕ್ಕಿಂತ ಹೆಚ್ಚಾಗಿ ನೋವಿನ ಅರಿವು, ಅದನ್ನು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ.
ನೋವಿನ ಗೂಢತೆಯನ್ನು ಒಪ್ಪಿಕೊಳ್ಳುವುದು ಮತ್ತು ಅದಕ್ಕೆ ಒಂದು ಸಾಂಕೇತಿಕತೆಯನ್ನು ಆರೋಪಿಸದಿರುವುದು ಸಮಾಜದ ಸರಿ ಒಪ್ಪುಗಳ ಕಲ್ಪನೆಯನ್ನು ಮೀರಿ ಹೋಗುವುದನ್ನೇ ವಸ್ತುವಾಗುಳ್ಳ ಕತೆಗಳ ಮೇಲೂ ಪ್ರಭಾವ ಬೀರುತ್ತದೆ. ಇದನ್ನು “ವೆಂಕಟಶಾಮಿಯ ಪ್ರಣಯ”, “ಜಕ್ಕವ್ವ” ಇಂತಹ ಕತೆಗಳಲ್ಲಿ ನೋಡಬಹುದು. “ವೆಂಕಟಶಾಮಿಯ ಪ್ರಣಯ” ನಡೆಯುವ ಸಾಮಾಜಿಕ ಆವರಣದಲ್ಲಿ ಕತೆ ವೆಂಕಟಶಾವಿಯ ಸಾವಿನಿಂದ ಕೊನೆಗೊಂಡ ಹೊರತೂ ಕತೆಯ ಧ್ವನಿಯಲ್ಲಿ ಅದು ಅರಗಿಸಿಕೊಳ್ಳಲಾರದ ಬದಲಾವಣೆಗಳಾಗದಿರಲು ಸಾಧ್ಯವಿಲ್ಲ. ಆದರೆ ಕತೆಯನ್ನು ಓದುವಾಗ ಕತೆಗಾರರು ತಾವು ನಿರ್ವಹಿಸಲಾರದ ಸಮಸ್ಯೆಯನ್ನೆತ್ತಿಕೊಂಡು, ಸಮಸ್ಯೆಗೆ ತಕ್ಕ ಉತ್ತರ ಕೊಡಲಾರದೆ ವೆಂಕಟಶಾಮಿಯನ್ನು ಸಾಯಿಸಿ ಪಾರಾಗಿದ್ದಾರೆ ಎನ್ನಿಸುವುದಿಲ್ಲ. ಕತೆಯನ್ನು ಎಷ್ಟು ಸಲ ಓದಿದರೂ ಹಾಗನ್ನಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಕತೆಯ ವಸ್ತು ವೆಂಕಟಶಾಮಿಯ ಪ್ರಣಯವಾದರೂ, ಕೇವಲ ಪ್ರಣಯವೇ ಕಡೆಯಲ್ಲಿ ಮುಖ್ಯಪಾತ್ರ ವಹಿಸದೆ, ಇಬ್ಬರು ಪ್ರಣಯಿಗಳು ಹುಟ್ಟಿ ಬೆಳೆದ ಇಡೀ ಸಮಾಜದ ನಂಬಿಕೆಗಳ ಮೌಲ್ಯಗಳ, ಚೌಕಟ್ಟೂ ಮುಖ್ಯ ಪಾತ್ರ ವಹಿಸುತ್ತದೆ. ಇಂತಹ ಘಟನೆಗಳು ನಡೆದ ಸಾಮಾಜಿಕ ಚೌಕಟ್ಟಿನ ಪೂರ್ಣ ಅರಿವು ಕತೆ ಹೇಳುವವನಿಗೆ ಆಗುವುದು ಕತೆಯ ಮೂರನೆಯ ಭಾಗದಲ್ಲಿ. ಕತೆಯ ವಿಷಯ ಓದುಗನಲ್ಲಿ ಉಂಟುಮಾಡಬಹುದಾದ ಅತಿಭಾವುಕತೆಗೆ ಕತೆಯ ಮೂರನೆಯ ಮತ್ತು ಕೊನೆಯ ಭಾಗ ತಡೆಗಟ್ಟುತ್ತದೆ. ಉದಾಹರಣೆಗೆ : ಕತೆಹೇಳುವವ ತನ್ನ ಸ್ನೇಹಿತ ರಾಮಸ್ವಾಮಿಯನ್ನು (ಆ ದೊಂಬರ ಹುಡುಗಿ ಏನಾಯಿತು ?” ಎಂದು ಕೇಳಿದಾಗ ರಾಮಸ್ವಾಮಿ ಹೇಳುವುದು
“…….ಈಗಾಗಿದ್ದರೆ ತೋರಿಸಬಹುದಾಗಿತ್ತು ಅಥವಾ ನನಗೆ ತೋರದೇ ಇದ್ದರೂ ನೀನು ಕತೆ ಬರೆಯುವ ದೊಡ್ಡ ಮನುಷ್ಯ, ನಿನಗೋಸ್ಕರ ವಿಚಾರಿಸಬಹುದಾಗಿತ್ತು; ಆಗ ನನಗದೆಲ್ಲಾ ಬೇಕಾಗಿರಲಿಲ್ಲ’ 8 ಎಂದು. ಕತೆ ಹೇಳುವವನ ಆಸಕ್ತಿಗೂ ಹಳ್ಳಿಯವರ ಆಸಕ್ತಿಗೂ ಇರುವ ವ್ಯತ್ಯಾಸ ಕತೆ ಹೇಳುವವ ವಯಸ್ಸಾದ ಗೌಡನ ಜೊತೆ ಮಾತಾಡಿದಾಗ ಸ್ಪಷ್ಟವಾಗುತ್ತದೆ. ಕತೆಹೇಳುವವ “ಪಾಪ ಅವನು ಬದುಕಿದ್ದರೆ ಇನ್ನೂ ಏನು ಸುಖಪಡಬಹುದಾಗಿತ್ತೋ ? ಚಿಕ್ಕಂದಿನಲ್ಲೇ ಹೋದ, ನಿನಗೆ ಯಾರು ಕೆಲಸ ಮಾಡಿದರೆ ಏನು” ಎಂದಾಗ ಗೌಡ “ಅದೆಲ್ಲ ಬೆಂಗಳೂರ ಮಾತು ಸ್ವಾಮಿ. ಹಳ್ಳಿಜನ ಹಂಗನ್ನೋಕಾಗ್ತದೆಯೇ, ನಮ್ಮೂರಿನ ಮಿರಾಸಿಗೆ ಬೇರೆ ಊರಿನೋರು ಹಚ್ಚಡ ಹಚ್ಚೊ ಹಂಗಾಯಿತು. ನಮ್ಮ ನಾಯಿಂದನಾದ್ರೆ ಯಾಕೋ ಎನ್ನಬಹುದು. ಈ ಬೇರೆ ಊರೋರ ಮಾತಾಡ್ಸಾಕಿಲ್ಲ’9 ಎನ್ನುತ್ತಾನೆ. ಕತೆಗಾರ ಅನ್ನುತ್ತಾನೆ: “ನನಗೆ ವೆಂಕಟಶಾಮಿಯ ಕತೆ, ರಾಮಸ್ವಾಮಿಯ ಔದಾಸೀನ್ಯ, ಗೌಡನ ಗ್ರಾಮ ಪ್ರೇಮ, ಮನಸ್ಸಿನಲ್ಲಿ ಸುರುಳಿಸುತ್ತಿದವು.” ಆದರೆ ರಾಮಸ್ವಾಮಿಯ “ಔದಾಸೀನ್ಯ10 ಮತ್ತು ಗೌಡನ “ಗ್ರಾಮ ಪ್ರೇಮ”ಗಳಿಗೆ ಅವರ ಪರಿಮಿತ ಅರಿವು (limited awareness) ಕಾರಣವಲ್ಲ. ನಿಜವಾಗಿಯೂ ಅವು ಒಂದು ನಿಷ್ಠುರ ಜೀವನ ಕಲ್ಪನೆಯಿಂದ ಬಂದುವು. ರಾಮಸ್ವಾಮಿಗೂ, ಗೌಡನಿಗೂ, ಕತೆ ಹೇಳುವವನಿಗೂ ಇರುವ ವ್ಯತ್ಯಾಸಗಳೇ ಅವರ ಜೀವನದ ಕಲ್ಪನೆಗಳತ್ತ ನಮ್ಮ ಗಮನ ಸೆಳೆಯುತ್ತವೆ. (“ಜಕ್ಕವ್ವ” ಅತಿ ಭಾವುಕ ಕತೆಯಾಗದಿರುವುದರ ಕಾರಣ ಕೂಡ ಕತೆ “ನಡೆದ” ಕಾಲವನ್ನು ಕತೆ ಹೇಳುವ ಕಾಲದಿಂದ ದೂರ ಮಾಡುವುದು ಮತ್ತು ಕತೆಯಲ್ಲಿ ವರ್ಣಿಸಿರುವ ದುಃಖ ಮತ್ತು ನೋವಿನ ಗೂಢತೆಯನ್ನು ಒಪ್ಪಿಕೊಳ್ಳುವ ಸಂವೇದನಾಶೀಲತೆ.)
ಭಾವನೆಗಳಿಗೂ ನೀತಿಯ ಕಟ್ಟುಗಳಿಗೂ ಹೋರಾಟ ನಡೆಯುವಂತಹ ವಸ್ತು ಮತ್ತು ಸನ್ನಿವೇಶಗಳನ್ನು ಮಾಸ್ತಿಯವರು ಆಯ್ದುಕೊಂಡಾಗಲೂ ಕೂಡ ಆ ಹೋರಾಟ ಕೇವಲ ಹೋರಾಟವಾಗಿ ಉಳಿಯದೆ, ಕತೆ ದುರಂತವಾಗದೆ, ಕೊನೆಯಾಗುವಂತೆ ಮಾಡುತ್ತಾರೆ. ಇದಕ್ಕೆ ಆಂಗ್ಲ ನೌಕಾ ಕ್ಯಾಪ್ಟನ್” ಮತ್ತು “ವೆಂಕಟಗನ ಹೆಂಡತಿ” ಉದಾಹರಣೆಗಳು. ಈ ಎರಡು ಕತೆಗಳಲ್ಲಿ “ವೆಂಕಟಿಗನ ಹೆಂಡತಿ” ಸಫಲವಾದುದು ಇದಕ್ಕೆ ಕಾರಣ ಮಾಸ್ತಿಯವರ ಮಿಕ್ಕು ಸಾರ್ಥಕ ಕತೆಗಳಂತೆ ಇಲ್ಲಿಯ ಒಂದು
ಸಮಾಜಕ್ಕೂ ವೆಂಕಟಗ ಮತ್ತು ಅವನ ಹೆಂಡತಿಗೂ ಇರುವ ನಿಕಟ ಸಂಬಂಧ. ಈ ಎರಡೂ ಕತೆಗಳಲ್ಲೂ ಆಸಕ್ತಿ ಹುಟ್ಟಿಸುವ ಸಂಗತಿಯೆಂದರೆ ಗಂಡನನ್ನು ಬಿಟ್ಟ ಅಥವಾ ನೀತಿ ಕಟ್ಟಲೆಗಳನ್ನು ಮುರಿದ ಹೆಣ್ಣು, ಆಕೆಯನ್ನು ಪುನಃ ಒಪ್ಪಿ ಹಿಂತೆಗೆದುಕೊಳ್ಳುವ ಗಂಡು ಕತೆ ಹೇಳುವವನು ಸೇರಿದ ಬ್ರಾಹ್ಮಣ ಸಮಾಜಕ್ಕಿಂತ ಕಮ್ಮಿ ನಿಷ್ಠುರವಾದ ಸಮಾಜಕ್ಕೆ ಸೇರಿರುವುದು. ಇದರಿಂದಾಗಿ ವಸ್ತು ಮತ್ತು ಸನ್ನಿವೇಶ ಉದ್ರೇಕಕ್ಕೆ ಅವಕಾಶ ಕೊಡುವುದಿಲ್ಲ. ಈ ಎರಡು ಕತೆಗಳಿಗೆ ಇರುವ ಮುಖ್ಯ ವ್ಯತ್ಯಾಸ-ಇಂಗ್ಲಿಷ್ ಕ್ಯಾಪ್ಟನ್ ಮತ್ತು ವೆಂಕಟಿಗ ತಂತಮ್ಮ ಹೆಂಡಿರನ್ನು ಹಿಂತೆಗೆದುಕೊಳ್ಳುವುದರಲ್ಲಿ ಕತೆ ಹೇಳುವವ ವಹಿಸುವ ಪಾತ್ರ-ಮಾಸ್ತಿಯವರಿಗೆ ಸಾಮಾಜಿಕ ಚೌಕಟ್ಟಿನ ಸ್ಥಾನದ ಬಗ್ಗೆ ಇರುವ ನಂಬಿಕೆಯ ಮೇಲೆ ಬೆಳಕು ಚೆಲ್ಲುತ್ತದೆ. ಇಂಗ್ಲಿಷ್ ಕ್ಯಾಪ್ಟನ್ ಮತ್ತು ಕತೆ ಹೇಳುವವನು ಹೆಚ್ಚು ಕಡಿಮೆ ಒಂದೇ ಅಂತಸ್ಟಿಗೆ ಸೇರಿದವರು ; ಒಬ್ಬರೊಡನೊಬ್ಬರು ಮಾತಾಡುವ ರೀತಿ ಈ ವಿಷಯವನ್ನು ಸ್ಪಷ್ಟಪಡಿಸುತ್ತದೆ. ಹೀಗಿದ್ದರೂ ಇಂಗ್ಲಿಷ್ ಕ್ಯಾಪ್ಟನ್ ತನ್ನ ಹೆಂಡತಿಯನ್ನು ಹಿಂತೆಗೆದುಕೊಳ್ಳುವುದರಲ್ಲಿ ಕತೆ ಹೇಳುವವನ ಪಾತ್ರ ಮುಖ್ಯವಾಗಿದೆ. ಆದರೆ ಕತೆ ಹೇಳುವವನಿಗಿಂತ ಕೀಳು ಅಂತಸ್ತಿನಲ್ಲಿರುವ ವೆಂಕಟಗ ಕತೆ ಹೇಳುವವನ ಸಹಾಯವಿಲ್ಲದೆ ಹಿಂತಿರುಗಿ ಬಂದ ತನ್ನ ಹೆಂಡತಿಯನ್ನು ಒಪ್ಪಿಕೊಳ್ಳುತ್ತಾನೆ. ಬಹುಶಃ ಇದರ ಅರ್ಥ ಈ ಎರಡು ಪಾತ್ರಗಳ ಕಲ್ಪನೆಯಲ್ಲೇ ಇರಬಹುದು. ಇಂಗ್ಲಿಷ್ ಕ್ಯಾಪ್ಟನ್ ಮತ್ತು ಅವನ ಸಮಾಜಕ್ಕಿರುವ ಸಂಬಂಧಕ್ಕಿಂತ ವೆಂಕಟಗ ಮತ್ತು ಅವನ ಸಮಾಜಕ್ಕೆ ಹೆಚ್ಚು ಸಂಬಂಧವಿದೆ. ಎರಡು ಕತೆಗಳನ್ನೂ ಒಂದಾದ ಮೇಲೊಂದರಂತೆ ಓದಿದಾಗ ಸಮಾಜದ ಚೌಕಟ್ಟಿನೊಂದಿಗೆ ನಿಕಟ ಸಂಬಂಧ ಹೊಂದಿದಾತ ಅಂತಹ ಸಂಬಂಧವಿಲ್ಲದವನಿಗಿಂತ ಒಂದು ವಿಧದಲ್ಲಿ ಹೆಚ್ಚು ಸ್ವತಂತ್ರ ಎಂಬ ಭಾವನೆ ಕತೆಗಳ ಹಿಂದಿರಬಹುದು ಎನ್ನಿಸುತ್ತದೆ. ಅಂತಹ ಮನುಷ್ಯನಿಗೆ ತನ್ನ ಸಾಮಾಜಿಕ ಚೌಕಟ್ಟಿಗೂ ತನ್ನ ವೈಯಕ್ತಿಕ ಜೀವನಕ್ಕೂ ಇರುವ ನಿಕಟ ಸಂಬಂಧದಿಂದಾಗಿ ಬಹುಶಃ ವ್ಯತೀತವಾದ ಒಂದು ಸರಿತಪ್ಪುಗಳ ಕಲ್ಪನೆಯಿರುತ್ತದೆ ಎಂಬ ಭಾವನೆ ಕತೆಗಳ ಹಿಂದಿರಬಹುದು ಅಥವಾ ಕತೆಯ ಮೂಲಕ ಮಾಸ್ತಿಯವರು ಸ್ಥಳವಂತ (settled) ಸಮಾಜಕ್ಕೆ ಸರ‍್ವಸಮ್ಮತವಾದ ಕಟ್ಟಲೆಗಳ (norms) ಅತಿರೇಕಗಳನ್ನು ಅರಗಿಸಿಕೊಳ್ಳುವ ಮತ್ತು ಆ ಅತಿರೇಕಗಳನ್ನು ಅರಗಿಸಿಕೊಂಡು ಮತ್ತೆ ಸಮತೂಕ ಸ್ಥಾಪಿಸಿಕೊಳ್ಳುವ ಶಕ್ತಿಯಿದೆ ಎಂದು ಹೇಳುತ್ತಿರಬಹುದು.
ಒಂದು ಸಮಾಜದಲ್ಲಿ ಸಮತೂಕ ಸ್ಥಾಪಿತವಾಗುವುದನ್ನೇ ವಸ್ತುವಾಗುಳ್ಳ ಮತ್ತೆ ಕೆಲವು ಕತೆಗಳನ್ನು ನೋಡಬಹುದು. “ಬೈಚೇಗೌಡ” ಇಂತಹ ಒಂದು ಕತೆ. ಶಾನುಭೋಗ ತನ್ನ ಹಳ್ಳಿಯವರಿಗೆ ದ್ರೋಹ ಬಗೆಯುವುದು ಮಾಸ್ತಿಯವರು ಈ ಕತೆಯಲ್ಲಿ ಚಿತ್ರಿಸುವ ಮತ್ತು ಸುಮಾರು ೨೦-೨೫ ವರ್ಷಗಳವರೆಗೂ ಅಸ್ತಿತ್ವದಲ್ಲಿದ್ದ ಸಮಾಜದಲ್ಲಿ ಬೇಲಿ ಎದ್ದು ಹೊಲ ಮೇದಂತೆ, ಅವನಿಗೆ ಸಹಾಯ ಮಾಡಲು ಹೋಗಿ
10*
ಬೈಚೇಗೌಡ ಪೇಚಿಗೆ ಸಿಕ್ಕಿಕೊಳ್ಳುತ್ತಾನೆ. ಆದರೆ ಕತೆ ದುರಂತವಾಗದುದಕ್ಕೆ ಕಾರಣ ಶಾನುಭೋಗನ ಹೆಂಡತಿಗಿರುವ ಮತ್ತು ಅವಳು ಮತ್ತು ಬೈಚೇಗೌಡ ಸೇರಿದ ಸಮಾಜ ಒಪ್ಪುವ ಸರಿತಪ್ಪುಗಳ ಕಲ್ಪನೆ. ತನ್ನ ಕೆಲಸ ಬಿಡಲು ಸಂಕಲ್ಪಿಸಿದ ಬೈಚೇಗೌಡ ಶಾನುಭೋಗನಿಗೆ ಕೊಡುವ ಕಾರಣ ಅವನ ಸಮಾಜದ ಸರಿ ತಪ್ಪುಗಳ ಕಲ್ಪನೆಯ ಇತಿಮಿತಿಗಳನ್ನು ತೋರಿಸುತ್ತದೆ: “ನೋಡಪ್ಪ, ಈಸು ದಿನ ಸತ್ಯಮಂತಾ ಅಂತ ಇದ್ದಿನಿ. ಆ ಮೊಗ ನಿನ್ನ ನೋಡಲೀ ಅಂತ ತಪ್ಪು ಮಾಡಿದಿನಿ…….. ನಿಮ್ಮಪ್ಪ ಇದ್ದನಲ್ಲ ಆ ನನ್ನಪ್ಪ ಇಂತಾ ಮಾತಿಗೆ ಒಪ್ಪುತ್ತಿರಲಿಲ್ಲ, ಅನ್ಯಾಯ ಮಾಡಬೇಕು ಅಂತನ್ನೋ ತಾವಿನಿಂದ ಹನ್ನೆರಡು ಗಾವುದ ದೂರ ಓಡಿಹೋಗಿ ನಿಂತುಕೋ ಅನ್ನೋನು. ಹನ್ನೆರಡು ಗಾವುದ ಹೋಗಲಿಲ್ಲ, ಹನ್ನೆರಡು ಪರ್ಲಾ೦ಗಾದರೂ ಹೋಗತೀನಿ, ಜೇಲ್ ಕೆಲಸ ಬಿಟ್ಟನಿ ಅಷ್ಟೆ. ಬೆಂಗಳೂರಾಗೆ ಇರತೀನಿ. ಯಾವಾಗಲಾದರೂ ಕಾಣತೀನಿ. ನೀ ಜಾಣನಾಗಿರು.”11 ಈ ಮಾತುಗಳಿಂದ ವ್ಯಕ್ತವಾಗುವುದು ಬೈಚೇಗೌಡನ ಸರಿ ತಪ್ಪುಗಳ ಕಲ್ಪನೆ ಮತ್ತು ಅಸಹಾಯಕತೆ. ಎರಡು ಕರ್ತವ್ಯಗಳಲ್ಲಿ ಯಾವುದು ಹೆಚ್ಚು ಮುಖ್ಯ ಎಂದು ತೀರ್ಮಾನಿಸಬೇಕಾಗಿ ಬಂದಾಗ, ಅಂತಹ ತೀರ್ಮಾನ ಮಾಡಬೇಕಾಗಿ ಬರುವಂತಹ ಸನ್ನಿವೇಶದಿಂದ ದೂರ ಹೋಗಿ “ಆಯ್ಕೆ” (choice) ಯ ಅವಶ್ಯಕತೆಯಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಈ “ಅಸಹಾಯಕತೆ” ಕತೆಯ ವಸ್ತುವಾಗದೆ ಅದರ ಒಂದು ಭಾಗವಾಗಿ ಬರುವುದರಿಂದ ಕತೆ ಬೈಚೇಗೌಡನ ಸಮಾಜದ ಮೌಲ್ಯಗಳ ವಿಶ್ಲೇಷಣೆಯಾಗದೆ, ಆದರೆ ಆ ಮೌಲ್ಯಗಳ ಚೌಕಟ್ಟಿನ ಇತಿಮಿತಿಗಳನ್ನು ಓದುಗನಿಂದ ಮರೆಮಾಡದೆ, ಸಫಲವಾಗುತ್ತದೆ. ಅಂದರೆ ಸಾಂಪ್ರದಾಯಿಕ ಮೌಲ್ಯಗಳ ಚೌಕಟ್ಟನ್ನು ಬಿಡಲಾರದ ಕತೆಗಾರರ ಸಂವೇದನಾಶೀಲತೆ ಇತಿಮಿತಿಗಳನ್ನೇ ಕತೆಯ ಕೇಂದ್ರ ವಸ್ತುವನ್ನಾಗಿ ಮಾಡದುದರಿಂದಾಗಿ ಕತೆ ಸಫಲವಾಗುತ್ತದೆ.
ಇದೇ ರೀತಿ “ಜೋಗೋರ ಅಂಜಪ್ಪನ ಕೋಳೀಕತೆ” ಕೂಡ ಓದುಗನ ಲಕ್ಷ್ಯವನ್ನು ಅನ್ಯಾಯಕ್ಕಿಂತ ಸನ್ನಿವೇಶದ ಜಟಿಲತೆ (Complexity) ಯ ಮೇಲೆ ಕೇಂದ್ರೀಕರಿಸುವುದರಿಂದಾಗಿ ಸಫಲವಾಗುತ್ತದೆ. ವಿನಾಕಾರಣ ಜುಲ್ಮಾನೆ ತೆತ್ತ ಅಂಜಪ್ಪನ ಕತೆ ನ್ಯಾಯವಿತರಣೆಯ ಬಗ್ಗೆ ತಾತ್ವಿಕ ಪ್ರಶ್ನೆಗಳಿಗಿಂತ, ಅನ್ಯಾಯಕ್ಕಿಂತ, ಜೀವನದ ಅನುಭವ ಅಂಜಪ್ಪನಿಗೆ ತಂದುಕೊಡುವ ವಿವೇಕ ಮುಖ್ಯವಾಗಿ ಮಾಸ್ತಿಯವರ ಸಂವೇದನಾಶೀಲತೆ ಬಹುಶಃ ಅರಗಿಸಿಕೊಳ್ಳಲಾರದ ತಾತ್ವಿಕ ಪ್ರಶ್ನೆಗಳು ಕತೆಯ ಧ್ವನಿಯನ್ನು ಬದಲಾಯಿಸುವುದಿಲ್ಲ.
ಕೊನೆಯದಾಗಿ, ತಾವು ಹುಟ್ಟಿ ಬೆಳೆದ ಸಮಾಜದ ಸರಿ ತಪ್ಪುಗಳ ಕಲ್ಪನೆಯಲ್ಲಿ ಮಾಸ್ತಿಯವರಿಗಿರುವ ನಂಬಿಕೆ ಮತ್ತು ಆ ಕಲ್ಪನೆಗಳು ಉಳಿಯುವಂತಹವುಗಳು ಎಂಬ ಅವರ ನಂಬಿಕೆ ಅವರ ಸಾರ್ಥಕ ಕಥೆಗಳ ವಿಶಿಷ್ಟತೆಗೆ ಕಾರಣ. ಈ ನಂಬಿಕೆಗಳೇ
ಅವರ “ಬುದ್ದಿಗೆ” (Intelligence) ಒಂದು ಆವರಣವಾಗುತ್ತದೆ. ಮತ್ತೊಂದು ಮಾತು : ಪುರಾಣ ಮತ್ತು ಚರಿತ್ರೆಗಳನ್ನು ಉಪಯೋಗಿಸಿಕೊಳ್ಳುವ ಕತೆಗಳಲ್ಲಿ ಹಿಂದೂ ಪುರಾಣಗಳು, ಸ್ಥಳೀಯ ಪುರಾಣಗಳು ಮತ್ತು ಸ್ಥಳೀಯ ಚರಿತ್ರೆಗಳನ್ನು ಉಪಯೋಗಿಸಿಕೊಳ್ಳುವ ಕತೆಗಳು ಮಾತ್ರ ಸಾರ್ಥಕವಾಗಿವೆ. ಬೇರೆ ಬೇರೆ ದೇಶಗಳ ಚರಿತ್ರೆ ಮತ್ತು ಪುರಾಣಗಳನ್ನು ಉಪಯೋಗಿಸಿಕೊಂಡು ಮಾಸ್ತಿಯವರು ಬರೆದಿರುವ ಕತೆಗಳು ಕೇವಲ ನೀತಿಬೋಧಕವಾಗುವುದಕ್ಕೆ ಮುತ್ತು ಅವರು ನಂಬಿರುವ ಮೌಲ್ಯಗಳ ಸರಳ ಉದಾಹರಣೆಗಳಾಗುವುದಕ್ಕೆ ಕಾರಣ ಮೌಲ್ಯಗಳನ್ನು ಸಂವೇದನೆಯಾಗಿ ಪರಿವರ್ತಿಸಬಲ್ಲ ಸೃಷ್ಟಿತ ಆವರಣ ಇಂತಹ ಕತೆಗಳಲ್ಲಿ ಇಲ್ಲದಿರುವುದು. ಮಾಸ್ತಿಯವರ ಸರಳ ತಂತ್ರ ಅವರ ಸಂವೇದನಾಶೀಲತೆಗೂ ಮತ್ತು ಅವರು ಹುಟ್ಟಿ ಬೆಳೆದ ಸಮಾಜಕ್ಕೂ ಇರುವ ನಿಕಟ ಸಂಬಂಧದಿಂದಾಗಿ ಕತೆಗಳನ್ನು ಸರಳ ಮಾಡುವುದಿಲ್ಲ. ಮಾಸ್ತಿಯವರು ಹೊಸ ಮೌಲ್ಯಗಳ ಅನ್ವೇಷಕರಲ್ಲ ; ಅವರ ಸಫಲ ಕತೆಗಳು ಅವರ ಸಮಾಜದ ಮೌಲ್ಯಗಳನ್ನು “ನಾಟಕೀಕರಣ” (Dramatization) ಮಾಡುವುದರ ಮೂಲಕ ಸಫಲ ಕಲಾಕೃತಿಗಳಾಗಿವೆ. ಆದರೆ ಮಾಸ್ತಿಯವರು ತಮ್ಮ ಸಫಲ ಕತೆಗಳಲ್ಲಿ ಸೃಷ್ಟಿಸುವ ಸಮಾಜ ಇಂದು ಸಫಲ ಕತೆಗಳನ್ನು ಬರೆಯುತ್ತಿರುವ ಕತೆಗಾರರು ಜೀವಿಸುತ್ತಿರುವ ಅನುಭವಿಸುತ್ತಿರುವ, ಸಮಾಜವಲ್ಲ. ಅದರಿಂದಲೋ ಏನೋ ಇಂದಿನ ಸಮರ್ಥ ಬರಹಗಾರರ ಮೇಲೆ ಮಾಸ್ತಿಯವರ ಕತೆಗಳ ಪ್ರಭಾವ ಕಾಣಬರುವುದಿಲ್ಲ. ನಮ್ಮ ಚರಿತ್ರೆಯ ಒಂದು ಘಟ್ಟದಲ್ಲಿ ಅಸ್ತಿತ್ವದಲ್ಲಿದ್ದ ಸಾಮಾಜಿಕ ಚೌಕಟ್ಟಿಗೂ, ಕತೆಗಳಲ್ಲಿ ಸೃಷ್ಟಿಯಾಗುವ ಸಾಮಾಜಿಕ ಚೌಕಟ್ಟಿಗೂ, ಮಾಸ್ತಿಯವರ ಸಂವೇದನಾಶೀಲತೆಗೂ ಇರುವ ಅತಿ ನಿಕಟ ಸಂಬಂಧದಿಂದಾಗಿ ನಮ್ಮ ಸಂವೇದನಾಶೀಲತೆ ಬದಲಾದಂತೆ ಈ ಪ್ರಭಾವ ಕಡಿಮೆಯಾಗುವುದಲ್ಲದೆ ಹೆಚ್ಚಾಗುವುದು ಸಾಧ್ಯವಿಲ್ಲ.

ಟಿಪ್ಪಣಿಗಳು :

1 ಕೆಲವು ಸಣ್ಣ ಕತೆಗಳು (ಬೆಂಗಳೂರು, 1920), ಪುಟ 3
2 ಅದೇ ” 17
3 ಅದೇ ” 23
4 ಅದೇ ” 98-99
5 ಸಣ್ಣಕತೆಗಳು, 2 (ಬೆಂಗಳೂರು, 1947), ” 63
6 ಸಣ್ಣ ಕತೆಗಳು, (ಬೆಂಗಳೂಳು, 1924), ” 63
7 ಸಣ್ಣ ಕತೆಗಳು, 4 (ಬೆಂಗಳೂರು, 1934), ” 12
8 ಅದೇ ” 41
9 ಅದೇ ” 42
10 ಅದೇ ” 42
11 ಸಣ್ಣ ಕತೆಗಳು, ೯(ಬೆಂಗಳೂರು, 1949). ” 54

Close
By kanaja|2021-01-06T19:53:35+05:30March 2, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೧

    ಸಂಪುಟ-೩೧

Leave A Comment Cancel reply

ವಿಭಾಗಗಳು

ಹೊಸ ಅಂಕಣಗಳು

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕನ್ನಡ ಭಾಷೆ,ಸಾಹಿತ್ಯ

  • ಸಂಪುಟ-೩೪
  • ಸಂಪುಟ-೩೩
  • ಸಂಪುಟ-೩೨
  • ಸಂಪುಟ-೩೧
  • ಸಂಪುಟ-೩೦

ಕಲೆ,ಸಂಗೀತ

  • ರಂಗ ವಿಮರ್ಶೆಯ ಬೆನ್ನು ಹತ್ತಿ..
  • ರಂಗಭೂಮಿಯೊಂದೇ ಸಮತಾವಾದದ ಪ್ರತೀಕ
  • ರಂಗಭೂಮಿಯ ನಡಿಗೆ
  • ರಂಗ ಪರದೆಗಳು : ಶಬ್ದಪಾರಮಾರ್ಗಮಶಕ್ಯಂ
  • ರಂಗ ಪರದೆಗಳು : ರಂಗ ಪರದೆಗಳ ಹಿನ್ನೆಲೆ

ವಿಜ್ಞಾನ , ತಂತ್ರಜ್ಞಾನ

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕೃಷಿ ,ರೈತರ ಅನುಭವ

  • ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016
  • ಪದವಿನ್ಯಾಸ: ೧೨. ಸನಿಕೆ
  • ಪದವಿನ್ಯಾಸ: ೧೩. ಈಚು
  • ಪದವಿನ್ಯಾಸ: ೧೪. ಕಣಜ
  • ಪದವಿನ್ಯಾಸ: ೯. ಬೆಳೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2017 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - developkanaja@gmail.com

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top