Skip to content
ದೂರವಾಣಿ : | 22212487|developkanaja@gmail.com
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ- ೪

Home/ಕನ್ನಡ/ಸಂಪುಟ- ೪
Previous Next

ಸಂಪುಟ- ೪

  • ಮುನ್ನುಡಿ
  • ಸಂಸ್ಕೃತ ರಂಗಭೂಮಿ
  • ಗುರು, ಲಘು, ಅಕ್ಷರ
  • ಹಳದಿ ಮೀನು-ಒಂದು ವಿವೇಚನೆ
  • ಕಪ್ಪುದೀಪ (ಕಥೆ)
  • ಸರಸಮ್ಮನ ಸಮಾಧಿ
  • ಹಂಗಿನರಮನೆಯ ಹೊರಗೆ(ಕಥೆ)
  • ಕುಂತಕನ ವಕ್ರೋಕ್ತಿ

ಮುನ್ನುಡಿ

“ಸಾಕ್ಷಿ”ಯ ಮುನ್ನೋಟ :

ನಿಯತಕಾಲಿಕವಾಗಿ ಮೈತಳೆದ ಸಾಕ್ಷಿಯ ಪ್ರಥಮ ಸಂಪುಟದ ಈ ಕೊನೆಯ ಸಂಚಿಕೆ ಬಿಡುಗಡೆಗೆ ಅಣಿಯಾಗುತ್ತಿರುವಾಗ ಒಂದು ಕೆಲಸವನ್ನು ಅರ್ಧಕ್ಕೆ ಕೈ ಬಿಡಬೇಕಾದ ಪ್ರಸಂಗ ಬರಲಿಲ್ಲವಲ್ಲ, ಚಂದಾದಾರರ ಹಣಕ್ಕೆ ಸಂಚಕಾರ ತರುವಂಥ ಯಾವ ಅಪಘಾತವೂ ನಡೆಯಲಿಲ್ಲವಲ್ಲ ಎಂಬಷ್ಟು ತೃಪ್ತಿಯಾದರೂ ‘ಸಾಕ್ಷಿ’ಯ ಬಂಟರಿಗೆ ಉಂಟು. ಅತ್ಯುತ್ತಮವಾದದ್ದನ್ನೇ ಆದರಿಸಬೇಕು, ಆಧರಿಸಬೇಕು, ಪ್ರಚುರ ಪಡಿಸಬೇಕೆಂಬ ನಮ್ಮ ಉದ್ದೇಶ ತಕ್ಕಷ್ಟು ಸಾರ್ಥಕವಾಗಿದೆಯೇ ಎಂದು ಯೋಚಿಸಿದಾಗ ಸಂದೇಹಗಳು ಉಳಿದೇ ಉಳಿಯುವುವಾದರೂ ನಾವು ಕೆಲಸ ನಡೆಸಬೇಕಾದ ಪರಿಸ್ಥಿತಿಯ ಪರಿಮಿತಿಗಳನ್ನು ಗಮನಿಸಿದಾಗ ಪೂರ್ಣತೆಯ ಆಕಾಂಕ್ಷೆಯನ್ನು ಬಿಡದೆ ಅದರ ಕಡೆಗೆ ಸದಾ ತುಯ್ಯುತ್ತಿರುವುದಕ್ಕಿಂತ ಹೆಚ್ಚಿನದೇನನ್ನೂ ಮಾಡಲು ಸಾಧ್ಯವಾಗದು ಎಂಬ ಸಮಾಧಾನವನ್ನು ತಂದುಕೊಳ್ಳಬೇಕು. ‘ಸಾಕ್ಷಿ’ ಹೀಗೆ ಒಂದು ವರ್ಷವಾದರೂ ತನ್ನ ಮೂಲಸ್ವರೂಪ ಸಂಕಲ್ಪಗಳನ್ನು ಮರೆಯದೆ ಪ್ರಕಟವಾದದ್ದಕ್ಕೆ ಸಾಗರ ಮುದ್ರಣದ ಗೆಳೆಯರ ಅದಮ್ಯ ಉತ್ಸಾಹ ಕರ್ತವ್ಯನಿಷ್ಠೆಗಳೂ ಹಾಗೆಯೇ ನನ್ನ ಹಾಗೂ ‘ಸಾಕ್ಷಿ’ಯ ಮಿತ್ರವೃಂದದಲ್ಲಿ ಕೆಲವರಾದರೂ ಅಗಾಗ್ಗೆ ನಿವೃತ್ತಿ ಮಾರ್ಗವನ್ನು ಬಿಟ್ಟು ಪ್ರವೃತ್ತಿಲೀಲೆಗೆ ಒಲಿದು ಲೇಖನಗಳನ್ನು ಬರೆದು ಕೊಟ್ಟದ್ದೂ ಕಾರಣ. ಕಷ್ಟ ಇದು : ಯಾರು ಚೆನ್ನಾಗಿ ಯೋಚನೆಮಾಡಿ ಆಳವಾಗಿ ಬರೆಯ ಬಲ್ಲರೋ ಅವರು ಸ್ವಭಾವತಃ ನಿವೃತ್ತಿ ಪರರು, ಅಥವಾ ಹುಟ್ಟು ಸೋಮಾರಿಗಳು ; ಅದರ ಜೊತೆಗೇ ಹೇಳುವುದು ಮೂಲಭೂತವಾಗಿದ್ದು ನಿಜವಾದ ಸಾರ್ಥಕತೆಯುಳ್ಳದ್ದಾಗಿರಬೇಕೆಂಬ ಶ್ರೇಷ್ಠತೆಯ ಆಕಾಂಕ್ಷೆಯುಳ್ಳವರು ; ಹೀಗಾಗಿ ಅವರು ಬರೆಯುವುದಕ್ಕೆ ಹಿಂದೇಟು ಹಾಕುತ್ತಾರೆ ; ಬರೆಯುತ್ತೇನೆನ್ನುತ್ತಾರೆ ; ಬರೆಯಲು ನಿರ್ಧರಿಸಿಯೂ ಇರುತ್ತಾರೆ ; ಬರೆಯುವುದಿಲ್ಲ. ಅಂಥವರಿಗೂ ಚುರುಕು ಮುಟ್ಟಿಸುವುದು ಹೇಗೆ ಎಂಬ ಸಂಶೋಧನೆ ನಡೆದು ಒಂದು ಕಾರ್ಯಸೂತ್ರ ತಿಳಿದರೆ ನಮಗೆಲ್ಲರಿಗೂ ಅನುಕೂಲ.
ಆಳವಾದ ಅಭ್ಯಾಸ, ನಿರಂತರ ಚಿಂತನೆ, ಮೌಲ್ಯ ವಿವೇಕ, ಪರಮ ಪುರುಷಾರ್ಥನಿಷ್ಠೆ, ಸಾರ್ಥಕತೆಯ ಅನುಸಂಧಾನ-ಇವುಗಳಿಂದ ಮಾತ್ರ ಸಾಕ್ಷಿಗೆ ಬೇಕಾದ ಲೇಖನಗಳು ದೊರೆಯಬಲ್ಲವು. ಇದು ಕೇವಲ ಪಾಂಡಿತ್ಯದ ಪ್ರಶ್ನೆಯಲ್ಲ, ಪಾಂಡಿತ್ಯದ ಜೊತೆಗೇ ಜೀವನದ ಬಗ್ಗೆ ಇರುವ ನಿಜವಾದ ಕಾತರ ಎಲ್ಲವನ್ನೂ ಹೀರಬಲ್ಲ ಸಂವೇದನೆ, ಎಲ್ಲವನ್ನೂ ಗಮನಿಸಬಲ್ಲ ಅವಧಾನ-ಇವು ಯಾರಲ್ಲಿ ಇಲ್ಲವೋ ಅವರಿಂದ ಬೆಳಕು ಬರುವುದಿಲ್ಲ, ಹರಡುವುದಿಲ್ಲ. ತಕ್ಕಷ್ಟು ಪ್ರತಿಫಲ ದೊರೆಯುತ್ತಿರುವುದರಿಂದ ಪಾಂಡಿತ್ಯದ ಕೆಲಸ ಕನ್ನಡದಲ್ಲಿ ಬೇಕಾದಷ್ಟು ಈಗ ನಡೆಯತೊಡಗಿದೆ. ಆಸ್ಥಾನ ವಿದ್ವಾಂಸರ ಪರಂಪರೆ ಇನ್ನೂ ಜೀವಂತವಾಗಿದೆ ಮಾತ್ರವಲ್ಲ, ಶಾಖೋಪಶಾಖೆಗಳಾಗಿ ಹರಡುತ್ತಲೂ ಇದೆ-ಪ್ರಭಾವರ್ಗ ವಿಸ್ತಾರಗೊಳ್ಳುತ್ತಿರುವುದರಿಂದ, ಆ ವಲಯದ ಹೊರಗೆ ನಿಂತು ಮೂಲಭೂತವಾದ ಕೆಲಸವನ್ನು ಮಾಡಬೇಕಾದರೆ ಬುದ್ಧಿ, ವಿವೇಚನೆ, ನಿರಂತರ ಚಿಂತನದ ಜೊತೆಗೇ ಸತ್ಯವನ್ನೇ ಪರಮೋಚ್ಚ ಮೌಲ್ಯವನ್ನಾಗಿ ಮಾಡಿ ಕೊಳ್ಳಬಲ್ಲ ಮೂಲಸತ್ವ, ಅದರ ಸತತ ಸಂಶೋಧನಪರಿಶೋಧನಗಳಲ್ಲಿ ಶ್ರದ್ಧೆ ಇಲ್ಲದೆ ಸಾಧ್ಯವಿಲ್ಲ. ಈ ಗುಣಗಳು ಅಪರೂಪವಾಗಿ ಅಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತವೆ ; ಇಂಥ ಗುಣಗಳುಳ್ಳವರನ್ನು ಗುಂಪು ಸೇರಿಸುವುದಾಗಲೀ ಅದರ ಮೂಲಕ ಗುಂಪುಗಾರಿಕೆಯನ್ನು ನಡೆಸುವುದಾಗಲೀ ಅಸಾಧ್ಯ. ಆದರೂ ಗುಂಪಲ್ಲದ ಈ ಗುಂಪಿಗೆ ಸೇರಿದ ಜನ ಒಬ್ಬರನ್ನೊಬ್ಬರು ಬಹು ಸುಲಭವಾಗಿ ಎಲ್ಲಿದ್ದರೆ ಅಲ್ಲಿ ಗುರುತಿಸಬಲ್ಲರು ; ಒಬ್ಬರ ಹೃದಯದ ಮಾತು ಇನ್ನೊಬ್ಬರಿಗೆ ಕೇಳಿಸುವುದು ; ಒಬ್ಬನ ಕನಸು ಇನ್ನೊಬ್ಬನಿಗೆ ಅರ್ಥವಾಗುವುದು. ಈ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಇವರೆಲ್ಲ ಆಡುವ ಭಾಷೆಯೊಂದೇ : ಶಬ್ದಗಳಿಲ್ಲದ ಮೂಕ ಭಾಷೆ ಅದು : ಮಾನವ ಭಾಷೆ. ಈ ರೀತಿ ತಾತ್ವಿಕವಾಗಿ ಒಂದಾಗಿದ್ದರೂ ಕೂಡಿ ಗುಂಪಾಗಿ ಕಲೆತು ರಾಜಕೀಯವಾಗಿ ಯಶಸ್ವಿಯಾಗಲಾರದ ಜನ ಇವರು. ಪರಸ್ಪರ ಭೌತಿಕ ಯಶಸ್ಸಿಗೋಸ್ಕರವಾಗಿ ತಮ್ಮ ವ್ಯಕ್ತಿವೈಶಿಷ್ಟವನ್ನು ಮಾರಿಕೊಳ್ಳುವುದು ಜನ್ಮತಃ ಅಸಾಧ್ಯವಾದ ಜನ ಇವರು. ಇವರಲ್ಲಿ ಕೆಲವರನ್ನು ಹಿಡಿದು ತದಕಿಹಾಕಬಹುದಾದರೂ ಈ ಪ್ರಹ್ಲಾದ ಜಾತಿಯನ್ನು ನಿರ್ಮೂಲಗೊಳಿಸುವುದು ಅಸಾಧ್ಯ: ಹಿರಣ್ಯಕಶಿಪುವಿಗೂ ಆಗಲಿಲ್ಲ ; ಹಿಟ್ಲರ್ ಸ್ಟಾಲಿನ್ನರ ಬೇಳೆಯೂ ಸಂಪೂರ್ಣವಾಗಿ ಬೇಯಲಿಲ್ಲ.
ಇಂಥವರು ಎಲ್ಲ ಕಾಲದಲ್ಲಿ ಎಲ್ಲ ಕಡೆಗಳಲ್ಲೂ ಎಲ್ಲ ಜಾತಿಗಳಲ್ಲೂ ಇರುತ್ತಾರೆ. ಅವರು ತಮ್ಮ ಪಾಡಿಗೆ ತಾವು ಇದ್ದರೇ, ಇರುವುದೇ ಶ್ರೇಷ್ಠತೆಯ ಪರಮಾಧಿಕಾರಕ್ಕೆ ಪ್ರಮಾಣ; ದಿನದಿನದ ಆಗುಹೋಗುಗಳಲ್ಲಿ ಮಗ್ನವಾದ ಅಲ್ಪ ಸಂತೃಪ್ತ ಸಮಾಜಕ್ಕೊಂದು ಸವಾಲು. ಆದ ಕಾರಣವೇ ಸಮಾಜದಿಂದ ಸಹನೆಯೊಂದನ್ನಲ್ಲದೇ ಇನ್ನೇನನ್ನೂ ಈ ಜನ ಬಯಸುವುದು ಸಾಧ್ಯವಿಲ್ಲ; ಬಯಸುವುದಿಲ್ಲ. ಇಂಥವರ ಇರವನ್ನೇ ಅಸಂಭಾವ್ಯವಾಗಿ ಮಾಡುವ ಕೆಲಸ ಸರ್ವಾಧಿಕಾರಿಬುದ್ಧಿ ಇರುವಲ್ಲೆಲ್ಲ ನಡೆಯುತ್ತ ಬಂದಿದೆ, ಈಗಲೂ ನಡೆಯುತ್ತಿದೆ. ಗಾಢಾಂಧಕಾರದಲ್ಲೇ ಹಣತೆಯ ಅಗತ್ಯ ಹೆಚ್ಚಾಗಿ ಕಂಡು ಬರುವುದು ಆಗಲೇ ಅದು ತುಂಬ ಚೆನ್ನಾಗಿ ಬೆಳಗುವುದೂ ಕೂಡ. ಅಂಥವರು ಕನ್ನಡನಾಡಿನ ಯಾವ ಮೂಲೆಯಲ್ಲೇ ಇರಲಿ, ‘ಸಾಕ್ಷಿ’ಯನ್ನು ಗುರುತಿಸಿದ್ದಾರೆ. ತಮ್ಮ ಅನಾಸಕ್ತಿಗೆ ಸಲ್ಲುವಷ್ಟು ಸಹಾಯವನ್ನು ಸಲ್ಲಿಸಿಯೂ ಇದ್ದಾರೆ. ಅಂಥವರಲ್ಲಿ ವಿನಂತಿ ಇಷ್ಟೆ : “ಸಾಕ್ಷಿ” ಯ ಅಳಿವು ಉಳಿವು ನಿಮಗೆ ಸೇರಿದ್ದು , ಮರೆಯಬೇಡಿ.
‘ಸಾಕ್ಷಿಯ ಮುಂಬರುವ ಸಂಪುಟದ ಬಗ್ಗೆ ಹೇಳಬೇಕಾದ್ದು ಬಹಳವೇನೂ ಇಲ್ಲ. ಈ ಸಂಪುಟಕ್ಕಿಂತ ಹೆಚ್ಚು ಉಪಯುಕ್ತವಾಗಿ ನಮ್ಮ ಸಾಹಿತ್ಯ ಸಂಸ್ಕೃತಿಗಳ ಪರಮಾರ್ಶೆಗೆ ತಕ್ಕ ಸಾಧನವನ್ನಾಗಿ ಮಾಡಲು ಪ್ರಯತ್ನಗಳು ನಡೆಯುತ್ತಿವೆ, ಬಹುಶಃ ಅವು ಸಫಲವಾಗಲೂಬಹುದು. ಇದು ಮೇಲ್ಮಟ್ಟಕ್ಕೆ ಸಂಬಂಧಪಟ್ಟಿದ್ದು, ನನಗೆ ಯಾಕೆ ಎಂದು ಯಾರೂ ಉಪೇಕ್ಷಿಸದೆ ಈ ಉದ್ಯಮಕ್ಕೆ ಆಸರೆಯಾಗಿ ನಿಲ್ಲುವುದು ಸಂಸ್ಕೃತಿಯ ಅಭಿವೃದ್ಧಿಯ ದೃಷ್ಟಿಯಿಂದ ಕರ್ತವ್ಯ ಎಂದು ಮಾತ್ರ ಹೇಳಬಲ್ಲೆ. ಎಷ್ಟೇ ಉತ್ತಮವಾದ ಕೆಲಸವೇ ಆಗಲಿ, ಅದು ಸಫಲವಾಗಬೇಕಾದರೆ ಯಾವುದನ್ನು ಮಧ್ಯಮ, ಸಾಮಾನ್ಯ, ಅಥವಾ ಸರಳವೆಂದು ಕರೆಯುತ್ತೇವೋ ಅದರ ಸಹಕಾರ ಅತ್ಯವಶ್ಯ. ಮಣ್ಣು, ಕಲ್ಲು ಬಂಡೆಗಳ ಸಮ್ಮಿಶ್ರಿತ ಏರುವಿಕೆಯಿಂದಲೇ ಶಿಖರ ರೂಪುಗೊಳ್ಳುವುದು. ಆದಕಾರಣ ಅರ್ಥವಾಗುವುದಿಲ್ಲ, ಈ ಮಟ್ಟ ನನಗೆ ನಿಲುಕದು ಎಂದು ಮುಂತಾಗಿ ಪ್ರಾಮಾಣಿಕವಾಗಿ ತಿಳಿಯುವಂಥವರೂ ಕೂಡಾ ‘ಸಾಕ್ಷಿ’ಯ ಜೊತೆಗೆ ಚಂದಾದಾರ ಸಂಬಂಧವನ್ನಾದರೂ ಇರಿಸಿಕೊಳ್ಳುವುದು, ಉಳಿಸಿಕೊಳ್ಳುವುದು, ಬೆಳಸಿಕೊಳ್ಳುವುದು ಅವರಿಗೆ ಹೇಗೋ ಹಾಗೆ ‘ಸಾಕ್ಷಿ’ಗೂ ಅಗತ್ಯ : ಬಹುಶಃ ನಮ್ಮ ಭಾಷೆಗೂ ಕೂಡ.
ಗೋಪಾಲಕೃಷ್ಣ ಅಡಿಗ
ಶ್ರೀ ಪೂರ್ಣಪ್ರಜ್ಞ ಕಾಲೇಜ್,
ಉಡುಪಿ
೩೧-೮-೧೯೬೮

Close

ಸಂಸ್ಕೃತ ರಂಗಭೂಮಿ

ಶ್ರೀರಂಗ

ಸಂಸ್ಕೃತ ರಂಗಭೂಮಿ

ಸ್ವಾತಂತ್ರ್ಯದ ತರುವಾಯದ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಂಸ್ಕೃತ ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಾಗಿ ಕೆಲವು ಸಂಸ್ಕೃತ ನಾಟಕಗಳನ್ನು ರಂಗಭೂಮಿಯಲ್ಲಿ ಪ್ರಯೋಗಿಸುವುದು ಒಂದಾಗಿದೆ. ಆದರೆ ಬೇರೆ ಬೇರೆ ತರದ ಪ್ರಯೋಗಗಳನ್ನು ಲಕ್ಷ್ಯದಲ್ಲಿ ತಂದುಕೊಂಡರೆ ಈ ಬಗ್ಗೆ ಚಾರಿತ್ರಿಕವಾಗಿ ಅಭ್ಯಾಸ ಮಾಡುವುದು ಅತ್ಯಂತ ಮಹತ್ವದ್ದಾಗಿದೆ ಎಂಬ ಅರಿವಿನ ಲಕ್ಷಣಗಳು ಹೆಚ್ಚಾಗಿ ಕಂಡುಬರುವುದಿಲ್ಲ. ಆಧುನಿಕ ರಂಗತಂತ್ರಕ್ಕನುಸರಿಸಿ ಕೆಲವೆಡೆ, ನೃತ್ಯ-ಸಂಗೀತಗಳನ್ನೊಳಗೊಂಡು ಇನ್ನೊಂದೆಡೆ ಈ ನಾಟಕಗಳ ಪ್ರಯೋಗ ನಡೆಯುತ್ತಿದೆ. ಮೊದಲು ಮಾಡಬೇಕಾದ ವಿಚಾರವೆಂದರೆ ಯಾವ ಕಾಲದಲ್ಲಿ ಭಾಸ-ಕಾಳಿದಾಸ, ಭವಭೂತಿ ಮೊದಲಾದವರು ತಮ್ಮ ನಾಟಕಗಳನ್ನು ಬರೆಯುತ್ತಿದ್ದರೋ ಆ ಕಾಲದಲ್ಲಿ ಅವನ್ನು ರಂಗಭೂಮಿಯ ಮೇಲೆ ಅಭಿನಯಿಸುತಿದ್ದರೆ-ಎಂಬುದು. ಈ ಬಗ್ಗೆ ನಾಟಕದ ಲಕ್ಷಣ ಗ್ರಂಥಗಳು ನಮಗೆ ಸಹಾಯಕವಾಗುವಂತಿಲ್ಲ : ಯಾಕೆಂದರೆ, ಇವು ಇತ್ತೀಚಿನವಲ್ಲದೆ ಕಲ್ಪನೆ ಮತ್ತು ವಸ್ತುಸ್ಥಿತಿಗಳ ಭೇದವನ್ನು ಕೂಡ ಎಣಿಸದೆ ಬರೆಯಲ್ಪಟ್ಟಿವೆ. ಸಂಸ್ಕೃತಸಾಹಿತ್ಯ ತಜ್ಞರು ಕೂಡ ನಾಟಕಕಾರನ ದೇಶ-ಕಾಲ (ಹೆಚ್ಚಾಗಿ ನಿಶ್ಚಿತವಿರುವುದೇ ಇಲ್ಲ), ಶೈಲಿ- ಮೂಲ ಇವನ್ನೆ ಪಠ್ಯಪುಸ್ತಕಗಳ ಪದ್ಧತಿಯಂತೆ ಪರೀಕ್ಷಿಸಿದ್ದಾರಲ್ಲದೆ ರಂಗಭೂಮಿಯ ಬಗ್ಗೆ ಶೋಧವನ್ನು ನಡೆಸಿಲ್ಲ. ಆದುದರಿಂದ ಈ ನಾಟಕಗಳಲ್ಲಿ ದೊರೆಯಬಹುದಾದ ಆಧಾರಗಳಿಂದ ಈ ವಿಷಯವನ್ನು ಪರಿಶೋಧಿಸುವುದು ಅನಿವಾರ್ಯವಾಗಿದೆ. ಅಂತಹ ಅನಿವಾರ್ಯ ಪ್ರಯತ್ನದ ಒಂದು ಮಾದರಿ ಈ ಲೇಖ.
ಮೊದಲ ಪ್ರಶ್ನವು ಮೇಲೆ ಸೂಚಿಸಿದಂತೆ ಈ ನಾಟಕಗಳನ್ನು ಆಯಾ ಕಾಲದಲ್ಲಿ ಪ್ರಯೋಗಿಸುತ್ತಿದ್ದರೆ ಎಂಬುದು. ತನ್ನ ಮಾಳವಿಕಾಗ್ನಿಮಿತ್ರ ನಾಟಕದಲ್ಲಿ ಒಂದು ಸಂದರ್ಭಾನುಸಾರವಾಗಿ ಕಾಳಿದಾಸನು ‘ಪ್ರಯೋಗಪ್ರಧಾನಂ ಹಿ ನಾಟ್ಯ, ನಾಟಕಕ್ಕೆ ಪ್ರಯೋಗ ಮುಖ್ಯ’ ಎಂದಿದ್ದಾನೆ. ಎಂದರೆ ನಾಟಕವು ಪ್ರಯೋಗಿಸಲ್ಪಡಲೇಬೇಕು ಎಂಬ ಅಭಿಪ್ರಾಯ ಆಗಲೂ ಇದ್ದಿತೆನ್ನಬಹುದು. ನಾಟಕಕ್ಕೆ ‘ದೃಶ್ಯಕಾವ್ಯ’ ಎಂಬ ಹೆಸರೂ ಈ ಅಭಿಪ್ರಾಯವನ್ನು ಸಮರ್ಥಿಸುತ್ತಿದೆ. ನಾಟಕಕ್ಕೆ ಕಣ್ಣೆದುರು ನಡೆಯುವ ಪ್ರಯೋಗ ಅಗತ್ಯ ಎಂಬ ಅಭಿಪ್ರಾಯ ಅಂದು ರೂಢಿಯಲ್ಲಿದ್ದಿತು ಎಂಬುದಕ್ಕೆ ಇನ್ನೂ ಹೇರಳವಾಗಿ ಆಧಾರಗಳನ್ನು ತೋರಿಸಬಹುದು. ಅದು ನಿರ್ವಿವಾದದ ವಿಷಯ.
ಪ್ರಯೋಗವನ್ನು ಅಂದಿನವರು ಮಾಡುತ್ತಲೂ ಇದ್ದರು ಎಂಬುದು ಸ್ಪಷ್ಟವಾಗ ಬೇಕಾದರೆ ಬೇರೆ ಅನೇಕ ವಿವರಗಳ ಬಗ್ಗೆ ಪೋಷಕ ಆಧಾರಗಳು ಅಗತ್ಯವಿದೆ. ಅಭಿನಯಿಸುವವರು ಯಾರು ? ಪ್ರಯೋಗವನ್ನು ಯಾವ ಸ್ಥಳದಲ್ಲಿ ಮಾಡುತ್ತಿದ್ದರು ? ಸಾರ್ವಜನಿಕವಾಗಿದ್ದರೆ ಪ್ರವೇಶ ಎಲ್ಲರಿಗೂ ಇದ್ದಿತೆ ? ಕೆಲವರಿಗೇ ಇದ್ದರೆ ಯಾವ ಕರಾರುಗಳ ಮೇಲೆ ಇಲ್ಲವೆ ಯಾವ ಅಧಿಕಾರ ಉಳ್ಳವರಿಗೆ ? ನಾಟಕದ ಪ್ರಯೋಗದ ಸಮಯ ಯಾವುದು ? ಬೆಳಗಿನಲ್ಲಿಯೆ ? ಮಧ್ಯಾಹ್ನದಲ್ಲಿಯೆ ? ಸಾಯಂಕಾಲದಲ್ಲಿಯೆ ? ಇಲ್ಲವೆ ರಾತ್ರಿ ಕೃತಕ ಬೆಳಕಿನಲ್ಲಿಯೆ ? ನಟರು…..ಬಣ್ಣ -ವೇಷ-ಭೂಷಣಗಳಿಂದ ಅಲಂಕೃತರಾಗಿರುತ್ತಿದ್ದರೆ ? ರಂಗಸ್ಥಲದಲ್ಲಿ ಪರದೆ-ದೃಶ್ಯಗಳು ಇರುತ್ತಿದ್ದುವೆ ? ರಂಗಸಜ್ಜಿಕೆ ಇರುತ್ತಿದ್ದಿತೆ ? ಸ್ತ್ರೀಯರ ಪಾತ್ರವನ್ನು ಪುರುಷರು ವಹಿಸುತ್ತಿದ್ದರೆ ಇಲ್ಲವೆ ಸ್ತ್ರೀಯರೆ ?
ಇನ್ನೂ ಅನೇಕ ಪ್ರಶ್ನೆಗಳನ್ನು ಕೇಳಬಹುದಾಗಿದೆ. ಅವುಗಳಿಗೆ ಉತ್ತರ ದೊರೆಯದೆ ಕೊನೆಯ ನಿರ್ಣಯ ದೊರೆಯದು. ಮೇಲೆ ಕೇಳಿದ ಎಲ್ಲ ಪ್ರಶ್ನೆಗಳಿಗೆ ಕೂಡ ಉತ್ತರ ಕೊಡುವ ಉದ್ದೇಶ ಈ ಲೇಖಕ್ಕಿಲ್ಲ. ವಿಷಯದ ಮಹತ್ತ್ವವನ್ನೂ ಅಭ್ಯಾಸದ ದಾರಿಯನ್ನೂ ಸೂಚಿಸುವುದಕ್ಕಾಗಿ ಕೆಲವೇ ಕೆಲವು ಸಂಗತಿಗಳನ್ನು ಇಲ್ಲಿ ವಿವರಿಸುತ್ತೇನೆ.
ಭಾಸನ ಪ್ರತಿಮಾ ನಾಟಕದ ಮೊದಲ ಅಂಕದಲ್ಲಿ ನಾಟಕ’ ಮತ್ತು ‘ನಾಟಕೀಯ’ ಎಂಬ ಶಬ್ದಗಳಿವೆ. ಆ ಸಂದರ್ಭದಲ್ಲಿ ಅವಕ್ಕೆ ಅನುಕ್ರಮವಾಗಿ ‘ಪ್ರಯೋಗ’ ಮತ್ತು “ನಟ’ ಎಂದೇ ಅರ್ಥವಿದೆ. ನಾಟಕಕ್ಕೆ ಸಾಮಾನ್ಯವಾದ ಶಬ್ದವೆಂದರೆ ‘ರೂಪಕ’ ; ಇದು ಬರೆದಿಟ್ಟ ನಾಟಕ. ರೂಪಕವು ದೃಶ್ಯಕಾವ್ಯವಾದಾಗ, ಎಂದರೆ ರಂಗಸ್ಥಲದ ಮೇಲೆ ಪ್ರದರ್ಶಿಸಲ್ಪಟ್ಟಾಗ ಅದಕ್ಕೆ ‘ನಾಟಕ’ ಎಂಬ ಹೆಸರು ; ಅದನ್ನು ಪ್ರದರ್ಶಿಸುವವರು ‘ನಾಟಕೀಯ’ರು, ನಾಟಕಕ್ಕೆ ಸಂಬಂಧಪಟ್ಟ ನಟರು. ಭವಭೂತಿಯು ತನ್ನ ನಾಟಕಗಳ ಪ್ರಾರಂಭದಲ್ಲಿ ತನ್ನ ಬಗ್ಗೆ ಹೇಳಿಕೊಳ್ಳುವಾಗ ಸೂತ್ರಧಾರನಿಂದ ಹೀಗೆ ಹೇಳಿಸಿದ್ದಾನೆ : ಕವಿಃ ನಿಸರ್ಗಸೌಹೃದೇನ ಭರತೇಷು ಸ್ವಕೃತಿಂ ಏವಂತ್ರಾಯುಗುಣ ಭೂಯಸೀಂ ಅಸ್ಮಾಕಂ ಆರ್ಪಿತನಾನ್, ಕವಿಯು ನಟರಿಗಾಗಿ ತನ್ನಲ್ಲಿದ್ದ ಸಹಜ ಸ್ನೇಹಕ್ಕಾಗಿ ಒಳ್ಳೆ ಗುಣಗಳುಳ್ಳ ಈ ಕೃತಿಯನ್ನು ನಮಗೆ ಕೊಟ್ಟಿದ್ದಾನೆ.’ ಇಲ್ಲಿ ನಟರಿಗೆ ‘ಭರತ’ ಎಂದು ಹೆಸರು ; ಕುಶೀಲವ, ಶೈಲೂಷ ಮೊದಲಾಗಿ ಇನ್ನೂ ಬೇರೆ ಹೆಸರುಗಳಿವೆ ನಟರಿಗೆ. ಇದರ ರಹಸ್ಯವನ್ನು ತಿಳಿದುಕೊಳ್ಳುವುದಕ್ಕೂ ಚಾರಿತ್ರಿಕ ಮಹತ್ವವಿದೆ. ಆದರೆ ಇಲ್ಲಿ ಇದನ್ನು ಉಲ್ಲೇಖಿಸಿದ್ದಕ್ಕೆ ಆಗಿನ ಕಾಲದಲ್ಲಿ ಅಭಿನಯಿಸುವವರು, ನಟರು ಇದ್ದರೆಂಬುದನ್ನು ತೋರಿಸುವುದು. ಅದರಂತೆಯೆ ಪ್ರೇಕ್ಷರಿಗೆ “ಪರಿಷತ್’ ಎಂದೂ, ‘ಸಾಮಾಜಿಕ’ ಎಂದೂ ಬೇರೆ ಬೇರೆ ಹೆಸರುಗಳಿದ್ದುವು. ಮೊದಲು ಕಾಣಿಸಿದ ಪ್ರತಿಮಾ ನಾಟಕದ ಸಂದರ್ಭದಲ್ಲಿ ‘ನಾಟಕೀಯ’ರು ಸಮಯಕ್ಕೆ ಸಮರ್ಪಕವಾದ ನಾಟಕ (ಕಾಲ ಸಂವಾದಿನಾ ನಾಟಕೇನ) ದಿಂದ ರಂಜನೆಯನ್ನು ಒದಗಿಸಲಿ ಎನ್ನುತ್ತಾನೆ ಪ್ರಯೋಗದ ಸೂತ್ರ ಸಂಚಾಲಕ. ಎಂದರೆ ನಾಟಕದ ಪ್ರಯೋಗ ಯಾವುದಾದರೊಂದು ಸಂದರ್ಭವನ್ನು ಕುರಿತೇ ನಡೆಯುತ್ತಿದ್ದಿತೆನ್ನ ಬಹುದೇ ? ಯಾಕೆಂದರೆ, ಇನ್ನು ಕೆಲವು ನಾಟಕಕಾರರು ಹೀಗೆಯೆ ಪ್ರಯೋಗಕ್ಕೆ ಯಾವುದಾದರೊಂದು ವಿಶಿಷ್ಟ ಸಂದರ್ಭವನ್ನೆ ತೋರಿಸಿದ್ದಾರೆ. ‘ಭಗವತಃ ಕಾಲಪ್ರಿಯ ನಾಥಸ್ಯ ಯಾತ್ರಾ ಪ್ರಸಂಗೇನ ನಾನಾದಿಗಂತವಾಸ್ತ್ರವೋsಯಂ ಮಹಾಜನಸಮಾಜ ಸಂನಿಪತಿತಃ, ಕಾಲಪ್ರಿಯನಾಥದೇವನ ಉತ್ಸವದ ನಿಮಿತ್ತವಾಗಿ ಬೇರೆ ಬೇರೆ ಕಡೆಗಳಿಂದ ಅನೇಕ ಜನರು ಇಲ್ಲಿ ನೆರೆದಿದ್ದಾರೆ?, ಆದುದರಿಂದ ಒಂದು ಪ್ರಯೋಗವನ್ನು ಮಾಡೋಣ ಎಂದು ಮಾಲತೀಮಾಧವ ನಾಟಕದ ಸೂತ್ರಧಾರ ಹೇಳುತ್ತಾನೆ. ಶ್ರೀಹರ್ಷನೂ ತನ್ನ ನಾಟಕಗಳಿಗೆ ವಸಂತೋತ್ಸವದ ಸಂದರ್ಭವನ್ನು ತೋರಿಸಿದ್ದಾನೆ. ಪ್ರತಿಮಾ ನಾಟಕದಲ್ಲಿ ರಾಜನ ಒಂದು ಸಂತೋಷದ ಪ್ರಸಂಗ ನಾಟಕಕ್ಕೆ ನಿಮಿತ್ತವಾಗಿದೆ. ಆದುದರಿಂದ ಯಾವುದಾದರೊಂದು ವಿಶಿಷ್ಟ ಸಂದರ್ಭ, ಜನರನ್ನು ಒಂದೆಡೆ ನೆರೆಯಿಸುವ ಸಾರ್ವಜನಿಕ ಸಮಾರಂಭ, ದೇವರ ಜಾತ್ರೆ, ರಾಜರ ಸಂತೋಷಕೂಟ ಇಂತಹ ನಿಮಿತ್ತಗಳಿಗಾಗಿಯೆ ನಾಟಕ (ಪ್ರಯೋಗ) ಗಳು ನಡೆಯುತ್ತಿದ್ದುವು ಎನ್ನಬಹುದಾಗಿದೆ. ಸಾರ್ವಜನಿಕ ಸಮಾರಂಭಗಳು ರಾಜನಿಗೆ ಇಲ್ಲವೆ ದೇವನಿಗೆ ಸಂಬಂಧಿಸಿರುವ ಆ ಕಾಲದಲ್ಲಿ ಈ ಪ್ರಯೋಗಗಳು ಅರಮನೆಯ ಇಲ್ಲವೆ ದೇವಸ್ಥಾನದ ಆವಾರಣದಲ್ಲಿ ನಡೆಯುತ್ತಿರಬಹುದಾಗಿದೆ. ಪ್ರೇಕ್ಷಕರನ್ನು ಕುರಿತು ಅಭಿರೂಪ ಭೂಯಿಷ್ಠಾ ಪರಿಷದಿಯಂ’ ಎಂದು ಕಾಳಿದಾಸನು, “ಪರಿಷದಪ್ಯೇಷ ಗುಣಗ್ರಾಹಿಣೀ? ಎಂದು ಶ್ರೀಹರ್ಷನು ಹೇಳುವುದರಿಂದ ಹೆಚ್ಚಾಗಿ ಸುಶಿಕ್ಷಿತ-ಸುಸಂಸ್ಕೃತ ಜನರ ಸಮಕ್ಷದಲ್ಲಿ ನಾಟಕಗಳ ಪ್ರದರ್ಶನವಾಗುತ್ತಿದ್ದಿತೆನ್ನಬಹುದೆ ? “ನಾನಾದಿಗಂತ ವಾಸ್ತವ್ಯ’ ಜನರೆದುರು, ಕಾಲಪ್ರಿಯ ದೇವಸ್ಥಾನದ ಆವಾರದಲ್ಲಿ ತನ್ನ ನಾಟಕಗಳನ್ನು ತೋರಿಸಿದ ಭವಭೂತಿಯ ಅನುಭವವು ಅಷ್ಟೊಂದು ಉತ್ತೇಜಕವಾಗಿಲ್ಲ. ನಾಟಕವು ಭಿನ್ನ ಭಿನ್ನ ರುಚಿಯುಳ್ಳ ಜನರಿಗಾಗಿ ಎನ್ನುವ ಕಾಳಿದಾಸನೂ ರುಚಿ ಭಿನ್ನವಾದರೂ ಗುಣಗ್ರಾಹಕತೆ ಬೇಕೇಬೇಕು ಪ್ರೇಕ್ಷಕರಲ್ಲಿ ಎಂದು ಹಟ ತೊಡುತ್ತಾನೆ ; ಮೂಢಃ ಪರಪ್ರತ್ಯಯನೇಯಬುದ್ಧಿಃ, ಇನ್ನೊಬ್ಬರ ಅಭಿಪ್ರಾಯದಂತೆ ನಡೆಯುವವನು (ಪ್ರೇಕ್ಷನಿಗೆ ಮಾತ್ರ ಸಂಬಂಧಿಸಿ ಹೇಳುವುದು) ಮೂರ್ಖನು’ ಎಂದು ಅವನ ಅಭಿಪ್ರಾಯ. ಭವಭೂತಿಯ ಉತ್ತರರಾಮಚರಿತ ನಾಟಕದ ಕೊನೆಯ ಅಂಕದಲ್ಲಿ ಗಂಗಾತೀರದ ಬಯಲಿನಲ್ಲ ಪ್ರಯೋಗ ನಡೆದಿದೆ ; ಎಂದರೆ ಪ್ರಯೋಗಕ್ಕೆ ಸ್ಥಲಕ್ಕಿಂತ ಗುಣಗ್ರಾಹಿಯಾದ, ‘ಅಭಿರೂಪಭೂಯಿಷ್ಟ ‘ರಾದ ಪ್ರೇಕ್ಷಕರು ಮುಖ್ಯ ಎಂದು ಅಂದಿನ ನಾಟಕಕಾರರ ಅಭಿಪ್ರಾಯವಾಗಿದ್ದಿತು.
ಈ ಪ್ರಯೋಗದ ಮಿಕ್ಕ ವಿವರಗಳ ಬಗ್ಗೆ ಲಿಖಿತರೂಪಕಗಳಲ್ಲಿಯಾಗಲಿ ಬೇರೆ ಗ್ರಂಥಗಳಲ್ಲಿಯೇ ಆಗಲಿ ಯಾವ ಆಧಾರಗಳೂ ದೊರಕುವುದಿಲ್ಲ. ರಂಗಸ್ಥಲವು ಎತ್ತರದ ಜಾಗವಾಗಿದ್ದಿತೆ ? ಪ್ರೇಕ್ಷಕರು ಎದುರು ಕೂಡ್ರುತ್ತಿದ್ದರೆ ಇಲ್ಲವೆ ಸುತ್ತಲು ಕೂಡ್ರುತಿದ್ದರೆ ? ಮುಂದೆ ಅನೇಕ ಶತಮಾನಗಳ ತರುವಾಯದಲ್ಲಿ ಬರೆಯಲ್ಪಟ್ಟ ಲಕ್ಷಣಗ್ರಂಥಗಳನ್ನು ಈ ಬಗ್ಗೆ ನಂಬಲಾಗದು. ಉಪಲಬ್ಧವಿದ್ದ ನಾಟಕಗಳ ಪ್ರತಿಗಳಲ್ಲಿ ಯಾವ ಸೂಚನೆಯೂ ಇಲ್ಲ. ಯಾವ ಮಾಹಿತಿಯೂ ಇಲ್ಲ. ಇಷ್ಟೇಕೆ ? ಇಂತಹ ದೃಶ್ಯ ಯಾವ ಸ್ಥಲದಲ್ಲಿ ನಡೆದಿದೆ ಎಂಬುದನ್ನು ಕೂಡ ಈ ನಾಟಕಗಳು ಸೂಚಿಸುವುದಿಲ್ಲ, ಲಿಖಿತ ನಾಟಕದಲ್ಲಿ ಅಂಕಗಳಿರುವುವು. ಆದರೆ ಪ್ರಯೋಗದಲ್ಲಿ ಒಂದು ಅಂಕ ಮುಗಿಯಿತು, ಇನ್ನೊಂದು ಪ್ರಾರಂಭವಾಯಿತು ಎಂಬುದನ್ನು ಹೇಗೆ ತೋರಿಸುತ್ತಿದ್ದರು? ಅಂಕಪರದೆ ಎಂಬುದೆ ಆಗ ಗೊತ್ತಿದ್ದಿರಲಿಲ್ಲ. ಮೊದಲಿನಿಂದ ಕೊನೆಯವರೆಗೆ ಪ್ರಯೋಗ ಅವ್ಯಾಹತವಾಗಿ, ಯಾವ ಪರದೆಯ ಏರಿಳಿತ ಇಲ್ಲದೆ ಸಾಗುತ್ತಿದ್ದಿತು. ಹೀಗಿರುವಾಗ ಪುಸ್ತಕದಲ್ಲಿ ಅಂಕಗಳನ್ನು ತೋರಿಸುವ ಉದ್ದೇಶವೇನಿದ್ದಿತು ? ಅಥವಾ ಲಿಖಿತಪ್ರತಿ ಬೇರೆ, ಪ್ರಯೋಗದ ಪ್ರತಿ ಬೇರೆ ಆಗಿರುತ್ತಿದ್ದಿತೆ ?
ಭಾಸನ ಪ್ರತಿಜ್ಞಾ ಯೌಗಂಧರಾಯಣ ನಾಟಕದಲ್ಲಿ ನಾಲ್ಕು ಅಂಕಗಳಿವೆ. ಈ ನಾಲ್ಕೂ ಅಂಕಗಳಲ್ಲಿ ಇಂತಹ ದೃಶ್ಯ ಇಂತಹ ಸನ್ನಿವೇಶದಲ್ಲಿ ಎಂದು ಒಂದು ಕಡೆಯೂ ಹೇಳಿಲ್ಲ ನಾಟಕಕಾರ. ಮೊದಲ ಅಂಕದಲ್ಲಿ, ‘ತತಃ ಪ್ರವಿಶತಿ ಯೌಗಂಧರಾಯಣಃ ಸಾಲಕೇನ ಸಹ’- ಎಂದಿದೆ, ಆದರೆ ಎಲ್ಲಿ ? ತನ್ನ ಮನೆಯಲ್ಲಿಯೇ ? ಅರಮನೆಯಲ್ಲಿಯೆ ? ಅಡವಿಯಲ್ಲಿಯೆ ? ಎರಡನೆಯ ಅಂಕದ ಮುಖ್ಯ ದೃಶ್ಯ ಹೀಗೆ ಪ್ರಾರಂಭವಾಗುವುದು, ‘ತತಃ ಪ್ರವಿಶತಿ ರಾಜಾ ಸಪರಿವಾರಃ, ಪರಿವಾರದೊಂದಿಗೆ ರಾಜನ ಪ್ರವೇಶ.? ಯಾವ ರಾಜ ? ಎಲ್ಲಿ ಬಂದಿದ್ದಾನೆ ? ನಾಟಕಕಾರ ತನ್ನ ಸೂಚನೆಯಲ್ಲಿ ಹೇಳುವುದೇ ಇಲ್ಲ. ಅದರಂತೆಯೆ, ‘ತತಃ ಪ್ರವಿಶತಿ ಡಿಂಡಿಕವೇಷೋ ವಿದೂಷಕಃ’ ಎಂದು ಮೂರನೆಯ ಅಂಕವು, ತತಃ ಪ್ರವಿಶತಿ ಭಟಃ’ ಎಂದು ನಾಲ್ಕನೆಯ ಅಂಕವು-ಬೇರೆ ಯಾವ ವಿವರದ ಮಾಹಿತಿಯೂ ಇಲ್ಲದೆ ಪ್ರಾರಂಭವಾಗುವುದು. ತಾನು ಬರೆಯುವ ದೃಶ್ಯ ಯಾವ ಸ್ಥಲದಲ್ಲಿ ನಡೆಯುವುದೆಂಬುದು ನಾಟಕಕಾರನಿಗೆ ಗೊತ್ತಿರಲಿಲ್ಲವೆಂದಲ್ಲ. ಅದರ ಮಹತ್ವವನ್ನೂ ಅವನು ಅರಿತಿರಲಿಲ್ಲವೆಂದಲ್ಲ; ಆದರೂ ಸೂಚಿಸುವುದಿಲ್ಲವೇಕೆ ? ಅದಕ್ಕೆ ಒಂದೇ ಕಾರಣ : ಸೂಚಿಸಿದರೂ ಯಾವ ಪ್ರಯೋಜನವಿದ್ದಿರಲಿಲ್ಲ. ಯಾಕೆಂದರೆ ಆಯಾ ಸನ್ನಿವೇಶಕ್ಕೆ ತಕ್ಕಂತೆ ರಂಗಸಜ್ಜಿಕೆ ಇರುತ್ತಿರಲಿಲ್ಲ. ಅದಕ್ಕಾಗಿ ನಾಟಕಕಾರನು ಪಾತ್ರಗಳ ಮಾತಿನಲ್ಲಿ ಈ ಮಾಹಿತಿಯನ್ನು ಸೇರಿಸುತ್ತಿದ್ದನು. ಪ್ರಕೃತ ನಾಟಕದಲ್ಲಿ ಪಾತ್ರಗಳ ಮುಖದಿಂದಲೆ ನಮಗೆ ತಿಳಿಯುವುದು. ಮೊದಲ ಅಂಕದಲ್ಲಿ ವತ್ಸರಾಜನ ಮತ್ತು ಎರಡನೆಯ ಅಂಕದಲ್ಲಿ ಮಹಾಸೇನ ರಾಜನ ಅರಮನೆಯಲ್ಲಿ, ಮೂರನೆಯ ಅಂಕದಲ್ಲಿ ದೇವಸ್ಥಾನದಲ್ಲಿ ಮತ್ತು ಕೊನೆಯ ಅಂಕದಲ್ಲಿ ಅರಸನ ಆಯುಧಾಗಾರ ಮತ್ತು ಸೈನಿಕರ ಪಾನಗೃಹಗಳಿದ್ದ ರಾಜಬೀದಿಯ ಮೇಲೆ ದೃಶ್ಯಗಳು ನಡೆಯುತ್ತಿವೆ ಎಂಬುದು.
ಸನ್ನಿವೇಶಕ್ಕೆ ತಕ್ಕಂತೆ ರಂಗಸಜ್ಜಿಕೆ ಇರುತ್ತಿರಲಿಲ್ಲ ಎಂದು ಮೇಲೆ ಹೇಳಿದೆಯಷ್ಟೆ ? ಆದರೆ ಪೂರ್ತಿಯಾಗಿ ರಂಗಸಜ್ಜಿಕೆಯೇ ಇರುತ್ತಿರಲಿಲ್ಲವೆಂದು ಹೇಳುವುದೇ ಸರಿ ಏನೋ ಎನ್ನಿಸುತ್ತಿದೆ. ನಾಟಕಕಾರನಿಗೆ ಅದೂ ಒಂದು ಅನುಕೂಲವೆ ಆಯಿತು. ಒಂದೇ ನಾಟಕದಲ್ಲಿ ಬೇರೆ ಬೇರೆ ದೃಶ್ಯಗಳನ್ನು ಮೇಲಿನ ದೃಷ್ಟಾಂತದಲ್ಲಿಯಂತೆ.. ಬೇರೆ ಬೇರೆ ಸ್ಥಲಗಳಲ್ಲಿ ನಡೆಯುವಂತೆ ತೋರಿಸಲು ಪಾತ್ರಗಳ ಬಾಯಿಯಿಂದ ಅದನ್ನು ಪ್ರೇಕ್ಷಕರಿಗೆ ತಿಳುಹಿಸಲು ಸುಲಭವಾಗಿದ್ದಿತು. ಯಾವ ಅಡೆ-ತಡೆ, ವಿಶ್ರಾಂತಿ ಇಲ್ಲದೆ ಮೊದಲಿನಿಂದ ಕೊನೆಯವರೆಗೆ ಅವ್ಯಾಹತವಾಗಿ ಪ್ರಯೋಗ ನಡೆಯುವಾಗ ರಂಗಸಜ್ಜಿಕೆ ಶಕ್ಯವಾದರೂ ಹೇಗೆ ? ಸೂತ್ರಧಾರನನ್ನು ಮೊದಲು ಮಾಡಿ ಕೆಲವು ‘ಮಧ್ಯಮ’ ಇಲ್ಲವೆ “ನೀಚ ಪಾತ್ರಗಳು, ಪ್ರವೇಶಕ-ವಿಷ್ಕಂಭಕ ಎಂಬ ಸಂದರ್ಭದೃಶ್ಯಗಳು ದೃಶ್ಯದ ಬಗ್ಗೆ ಅಗತ್ಯವಿದ್ದ ಎಲ್ಲ ಮಾಹಿತಿಯನ್ನು ಒದಗಿಸುತ್ತಿದ್ದುವು. ಮೇಲೆ ಹೇಳಿದ ಪ್ರತಿಜ್ಞಾಯೌಗಂಧರಾಯಣ ನಾಟಕದ ದೃಷ್ಟಾಂತವನ್ನೇ ನೋಡಬಹುದು : ಎರಡನೆಯ ಅಂಕದ ಪ್ರಾರಂಭಕ್ಕೆ ನಾಟಕಕಾರನು ಬರೀ ‘ಕಾಂಚುಕೀಯನೆ ಪ್ರವೇಶ’ ಎಂದು ಹೇಳಿದರೂ ಕಾಂಚುಕೀಯನು ತನ್ನ ಮೊದಲನೆಯ ವಾಕ್ಯದಲ್ಲಿಯೇ ಮಹಾಸೇನರಾಜನ ಅರಮನೆ ಎಂಬುದನ್ನು ಸೂಚಿಸುತ್ತಾನೆ. ಅದರಂತೆಯೆ ಮೂರನೆಯ ಅಂಕದ ಪ್ರಾರಂಭಕ್ಕೆ ವಿದೂಷಕ ತಾನೀಗ ‘ದೇವಕುಲ’ (ದೇವಸ್ಥಾನ)ಕ್ಕೆ ಬಂದಿದ್ದೇನೆಂದು ಮೊದಲ ವಾಕ್ಯದಲ್ಲಿಯೇ ಹೇಳುತ್ತಾನೆ. ಆ ಮೇಲೆ ತಾನು “ಅಗ್ನಿಗೃಹ’ಕ್ಕೆ ಹೊರಡುವೆನೆಂದು ಹೇಳುತ್ತಾನೆ ; ಎಂದರೆ ಅಲ್ಲಿಂದ ಮುಂದೆ ನಡೆಯುವುದೆಲ್ಲ ಅಗ್ನಿಗೃಹ’ದಲ್ಲಿ ಎಂದು ನಾವು ತಿಳಿಯಬೇಕು ! ಅದರಂತೆ ಕೊನೆಯ ಅಂಕದಲ್ಲಿ ‘ಸೇವಕನು ಸುರಾಪಾನ ಗೃಹಕ್ಕೆ ಹೋಗಿದ್ದೇನೆ’ ಎಂದು, ಪರಿಕ್ರಮಣ’ ಮಾಡಿ, ‘ಇದು ಸುರಾಪಾನಗೃಹ’ ಎನ್ನುತ್ತಾನೆ ಮೊದಲು ಪ್ರವೇಶಿಸಿದ ಭಟನು. ‘ಪರಿಕ್ರಮ್ಯ’, ‘ನಿರೂಷ್ಯ’, ‘ನಾಟ್ಯೇನ ನಿರೂಪ್ಯ’ ಮೊದಲಾದ ಪದಗಳಿಂದ ದೃಶ್ಯದ ಬದಲಾವಣೆಯನ್ನು ಪಾತ್ರಗಳು ಸೂಚಿಸುವುವು.
ಸಂಸ್ಕೃತನಾಟಕಗಳನ್ನು ಅಭ್ಯಾಸಮಾಡುವಾಗ ಪ್ರಯೋಗದ ದೃಷ್ಟಿಯಿಂದ ಒಂದು ಸಂಗತಿ ನಮ್ಮ ಲಕ್ಷ್ಯಕ್ಕೆ ಬಾರದಿರದು. ನಾಟಕದ ದೃಶ್ಯಗಳ ಸ್ಥಲ ನಿಯತವಾಗಿರುವುದು. ಅರಮನೆ, ಅರಮನೆಯ ಯಾವುದೆ ಭಾಗ, ಆಶ್ರಮ, ರಸ್ತೆ-ಇವುಗಳ ಹೊರತಾಗಿ ಸಾಮಾನ್ಯವಾಗಿ ಬೇರೆಲ್ಲಿಯ ದೃಶ್ಯದ ಸಂನಿವೇಶವಿರುವುದಿಲ್ಲ ; ವೇಣೀಸಂಹಾರದಲ್ಲಿ ರಣಭೂಮಿ, ನಾಗಾನಂದದಲ್ಲಿ ಸಮುದ್ರದ ತೀರ ಇವೆರಡು ಅಪವಾದಗಳು. ಆದರೆ ಯಾವ ದೃಶ್ಯವನ್ನೂ ಪ್ರೇಕ್ಷಕರ ಕಣ್ಣಿಗೆ ಸೂಚಿಸುವಂತೆ ರಂಗಸಜ್ಜಿಕೆ ಖಂಡಿತ ಇರುತ್ತಿದ್ದಿರಲಿಲ್ಲ ಎನ್ನಬಹುದು. ಪ್ರೇಕ್ಷಕರ ಅನುಕೂಲತೆಗಾಗಿ ಎನ್ನಿ ರಂಜನೆಗೆ ಎನ್ನಿ ಪಾತ್ರಗಳ ಮುಖದಿಂದ ಕಣ್ಣಿಗೆ ಕಾಣದ ದೃಶ್ಯವನ್ನು ಕಾವ್ಯಮಯವಾಗಿ ಹೃದಯಂಗಮವಾಗಿ ಬಣ್ಣಿಸುವುದು. ಅರಮನೆ ಇಲ್ಲವೆ ಉದ್ಯಾನವನ್ನು ಹೆಚ್ಚಾಗಿ ವಿದೂಷಕನೆ ಬಣ್ಣಿಸುವನು ; ಸಂಸ್ಕೃತನಾಟಕಗಳಲ್ಲಿ ವಿದೂಷಕನು ಅರಮನೆ-ಉದ್ಯಾನಗಳ ತಜ್ಞ, ಅಷ್ಟೊಂದು ಅವನ ಬಾಯಿಯಿಂದ ಇವುಗಳ ವರ್ಣನೆಯನ್ನು ಕೇಳುವೆವು. ಮೃಚ್ಛಕಟಿಕದಲ್ಲಿ ನಿಂತಲ್ಲಿಯೆ ವಸಂತಸೇನೆಯ ವಿಶಾಲ ಕೋಣೆಗಳನ್ನು ವಿದೂಷಕನು ಬಣ್ಣಿಸುವನು. ಅರಮನೆಗೆ ದ್ಯೋತಕವಾಗಿ ಒಂದು ಪೀಠ, ಉದ್ಯಾನಕ್ಕೆ ದ್ಯೋತಕವಾಗಿ ಕೆಲವು ಬಳ್ಳಿಗಳ ತುಂಡುಗಳು-ಹೆಚ್ಚೆಂದರೆ ಇದಿಷ್ಟೆ ಅಂದಿನ ರಂಗಸಲಕರಣೆಯಾಗಿರಬಹುದಾಗಿದೆ. ಮುಖ್ಯಪಾತ್ರಗಳು ರಂಗಸ್ಥಲವನ್ನು ಪ್ರವೇಶಿಸುವಾಗ ಒಂದು ಅಡ್ಡ ಪರದೆ ಇರಬಹುದಾಗಿದೆ. ಇಲ್ಲವಾದರೆ ‘ತತಃ ಪ್ರವಿಶತಿ-ಆಸನಸ್ಥೋರಾಜಾ, ಆಸನದಲ್ಲಿ ಕುಳಿತ ರಾಜನ ಪ್ರವೇಶ” ಮುಂತಾದ ಸೂಚನೆಗಳಿಗೆ ಅರ್ಥವಿಲ್ಲದಂತಾಗುವುದು.
ಇನ್ನೊಂದು ವಿಷಯವೆಂದರೆ ಅಂಕ ಇಲ್ಲವೆ ಒಂದು ಘಟನೆಯ ಕೊನೆ ; ಇನ್ನೊಂದು ಅಂಕದ ಇಲ್ಲವೆ ಘಟನೆಯ ಪ್ರಾರಂಭ. ಮೊದಲಿನಿಂದ ಕೊನೆಯವರೆಗೆ ಪ್ರಯೋಗ ಅವ್ಯಾಹತವಾಗಿ ನಡೆವಾಗ ಇದನ್ನು ಸೂಚಿಸುವುದು ಹೇಗೆ ? ಮೊದಲೇ ಹೇಳಿದಂತೆ ಅಂಕಪರದೆಯೂ ಇದ್ದಿರಲಿಲ್ಲ. ಸಂಸ್ಕೃತನಾಟಕಕಾರರು ಕ್ರಮೇಣ ಒಂದು ಸಂಪ್ರದಾಯವನ್ನು ರೂಢಿಯಲ್ಲಿ ತಂದರೆನ್ನಬಹುದು. ಅದೆಂದರೆ-ಒಂದು ಘಟನೆ, ದೃಶ್ಯ ಇಲ್ಲವೆ ಅಂಕ ಮುಗಿದಾಗ ಒಂದು ವರ್ಣನಾತ್ಮಕ ಶ್ಲೋಕವನ್ನಿಡುವುದು. ಬೆಳಗನ್ನೊ, ಮಧ್ಯಾಹ್ನವನ್ನೊ, ಸಾಯಂಕಾಲವನ್ನೊ ಅಂಕದಕೊಗೆಗೆ ವರ್ಣಿಸುವುದು ಒಂದು ಸಂಪ್ರದಾಯವಾಗಿಬಿಟ್ಟಿತು. ರಾಜರಾಣಿಯರ ಪ್ರೇಮದ ಕತೆ ಅರಮನೆಯಲ್ಲಿ ನಡೆಯುವ ಸಾಮಾನ್ಯ ವಿಷಯಗಳುಳ್ಳ ನಾಟಕಗಳಿಗೆ ಈ ಸಂಪ್ರದಾಯವನ್ನು ನಡೆಯಿಸಿಕೊಂಡು ಹೋಗುವುದು ಕಠಿಣವಾಗಿರಲಿಲ್ಲ. ಇದು ಶಕ್ಯವಾಗದ ಕೆಲವೇ ಸಂದರ್ಭಗಳಲ್ಲಿ ರಂಗಸ್ಥಲದ ಮೇಲೆ ಇಲ್ಲವೆ ನೇಪಥ್ಯ ಗೃಹದಲ್ಲಿ ಇದ್ದ ಪಾತ್ರಗಳಿಂದ ಒಂದು ಘಟನೆಯ (ಅಂಕದ) ಕೊನೆಯನ್ನು, ಇನ್ನೊಂದರ ಪ್ರಾರಂಭವನ್ನು ಸೂಚಿಸಲು ಚೂಲಿಕಾ, ಅಂಕಾಸ್ಯ, ಅಂಕಾವತಾರ ಮೊದಲಾಗಿ ಹೆಸರಿಟ್ಟು ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದರು.
ನಾಟಕವು ಲೋಕಾನುಚರಿತ, ಜೀವನದಲ್ಲಿ ನಡೆದುದನ್ನೆ ತೋರಿಸುವುದು ಎಂದು ಹಟತೊಟ್ಟರೂ ಪ್ರಯೋಗದ ಸಮಯದಲ್ಲಿ ಜೀವನದ ವಾಸ್ತವಿಕ ಸಂನಿವೇಶಗಳನ್ನು ಪ್ರತ್ಯಕ್ಷವಾಗಿ ತೋರಿಸುತ್ತಿರಲಿಲ್ಲ. ಇಷ್ಟೇಕೆ ? ಶಕ್ಯವಿದ್ದರೂ ಅದನ್ನು ಹಾಗೆ ತೋರಿಸಕೂಡದು. ಲೋಕದಲ್ಲಿ ವಾಸ್ತವಿಕವಾದುದನ್ನು ರಂಗಸ್ಥಲದಲ್ಲಿ ‘ವಿಕಾರ’ (ಎಂದರೆ ಅಪ್ರತ್ಯಕ್ಷ)ವಾಗಿ ತೋರಿಸಬೇಕು ಎಂದು ಮುಂದೆ ಲಕ್ಷಣಗ್ರಂಥಗಳೂ ಸಾರಿದುವು. ನಾಟ್ಯಶಾಸ್ತ್ರದ ಇಪ್ಪತೂರನೆಯ ಅಧ್ಯಾಯದಲ್ಲಿ ಹೇಳುವುದನ್ನು ನೋಡಿ :
ಪ್ರಾಸಾದ-ಗೃಹ-ಯಾನಾನಿ ನಾಟ್ಯೋಪಕರಣೌನಿ ಚ |
ನ ಶಕ್ಯಾನಿ ತಥಾ ಕರ್ತುಂ ಯಥೋಕ್ತಮಿಹ ಲಕ್ಷಣೈಃ ||
ಲೋಕಧರ್ಮೀ ಭವೇತ್ವನ್ಯಾ ನಾಟ್ಯಧರ್ಮೀ ತಥಾಪರಾ |
ಸ್ವಭಾವೋ ಲೋಕಧರ್ಮೀತು ನಾಟ್ಯಧರ್ಮೀ ವಿಕಾರತಃ ||
(ಶ್ಲೋಕ ೧೯೧-೧೯೩)
ವಾಸ್ತವಿಕ ರಂಗಸಜ್ಜಿಕೆ ಶ್ರಮದ ಕೆಲಸ, ಆದುದರಿಂದ ನಮಗೆ ಒಪ್ಪಿಗೆ ಇಲ್ಲ ಎಂದಿದ್ದಾನೆ ಭರತಮುನಿ ಇದರ ಮುಂಚಿನ ಶ್ಲೋಕದಲ್ಲಿ : ‘ನಾಸ್ಮಾಕಂ ಸಂಮತಾ ನಾಟ್ಯೇ ಗುರುತ್ವಾತ್ ಖೇದದಾ ಹಿ ಸಾ” ಆದರೆ ಸನ್ನಿವೇಶದ ವಿವರಗಳು ಹಿನ್ನೆಲೆಯಾಗಿ ಮಹತ್ವದ್ದಾದುದರಿಂದ ಅವನು ಅಂಗಾಭಿನಯದಿಂದ ಸೂಚಿಸಬೇಕು ಎಂದು ಹೇಳಲಾಗಿದೆ (ಅಧ್ಯಾಯ ಇಪ್ಪತ್ತಾರು, ಶ್ಲೋಕ ೨೭ ರಿಂದ)
ಸಂಸ್ಕೃತನಾಟಕಗಳ ಪ್ರಯೋಗದ ಬಗ್ಗೆ ಎಷ್ಟೊಂದು ಅಭ್ಯಾಸ ಅಗತ್ಯವಿದೆ ಎಂಬುದನ್ನು ಸೂಚಿಸಲು ಬರೆದ ಈ ಲೇಖದಲ್ಲಿ ವಿಸ್ತ್ರತವಿವೇಚನೆಗೆ ಎಡೆ ಇಲ್ಲ. ವಿವೇಚನೆ ಪೂರ್ತಿಯಾಗಿಲ್ಲ ಎಂಬುದನ್ನು ವಾಚಕರ ಲಕ್ಷ್ಯಕ್ಕೆ ತರುತ್ತೇನೆ.*
*ಇತ್ತೀಚೆಗೆ ಶ್ರೀರಂಗರ ‘Drama in Sanskrit Literature’ನ ಎರಡನೆ ಸಂಪುಟ ಪ್ರಕಟವಾಗಿದೆ.

Close

ಗುರು, ಲಘು, ಅಕ್ಷರ

ಎಚ್. ಎಸ್. ಬಿಳಿಗಿರಿ

ಗುರು, ಲಘು, ಅಕ್ಷರ

“ಒಂದು ಮಾತ್ರೆಯ ಕಾಲದ ಲಘು, ಎರಡು ಮಾತ್ರೆಯ ಕಾಲದ ಗುರು-ಇವೆರಡೇ ಕನ್ನಡ ಛಂದಸ್ಸಿನಲ್ಲಿ ಬಳಕೆಯಾಗಿದ್ದ ಅಕ್ಷರಗಳು. ಹೊಸ ಛಂದಸ್ಸಿನಲ್ಲಾದರೆ ಒಂದು ಅಕ್ಷರಕ್ಕೆ ಕೆಲವು ವೇಳೆ ಎರಡು ಮಾತ್ರೆಗಿಂತ ಹೆಚ್ಚಿನ ಬೆಲೆ ಬರುವುದುಂಟು. ಮುಖ್ಯವಾಗಿ ಮೂರು ಮಾತ್ರೆಯ ಗಣದ ಲಯದಲ್ಲಿ ಎಷ್ಟೋ ಕಡೆ ಒಂದು ಗುರುವಿಗೆ ಮೂರು ಮಾತ್ರೆಯ ಬೆಲೆ ಕೊಟ್ಟು ಅದನ್ನು ಒಂದು ಗಣವಾಗಿ ಪರಿಗಣಿಸುವುದು ರೂಢಿಗೆ ಬರುತ್ತಿದೆ. ಔಚಿತ್ಯವರಿತು ಉಪಯೋಗಿಸಿದರೆ ಇದು ವಿಶೇಷ ಫಲವನ್ನು ಕೊಡಬಲ್ಲದು :
೧ ಹಿಂದೆ ಸೆರೆಗೆ ಸಿಲುಕುತ
ಕಂಸಭಯಕೆ ನಡುಗುತ
“ಹಡೆದ ಕೂಸು ಬಾಳ್ವುದೆಂತು” ಎನುತ | ತಲ್ಲಣಿಸು | ತ ಇಲ್ಲಿ “ತ” ಎಂಬುದನ್ನು ಮರು ಮಾತ್ರೆಯ ಕಾಲಕ್ಕೆ ಎಳೆದು ಪಲುಕಿಸುವುದರಲ್ಲೇ ತಲ್ಲಣದ ನಡುಕವೂ ಸೂಚಿತವಾಗುತ್ತದೆ. ಪ್ಲುತವನ್ನು “ತs” ಎಂಬಂತೆ ಗುರುತಿಸುವುದು ಈಚೆಗೆ ರೂಢಿಯಾಗಿದೆ. (‘ಮಾತ್ರೆ, ಮುಡಿ, ಪದ್ಮಗಣ’ ಎಂಬ ಲೇಖನವನ್ನು ನೋಡಿ : ತೀ ನಂ ಶ್ರೀಕಂಠಯ್ಯನವರ ‘ಸಮಾಲೋಕನ’, ಪುಟ ೨೦೫-೨೨೧).
ಮೇಲಿನ ಉದ್ದರಣದಲ್ಲಿ ನನಗೆ ಪ್ರಕೃತವಾಗಿರುವ ವಿಷಯ, ಮೂರು ಮಾತ್ರೆಯ ಕಾಲಕ್ಕೆ ಎಳೆದು ಪಲುಕಿಸಿರುವುದು ಯಾವುದನ್ನು ಎಂಬುದೇ. ಈ ಸಾಲುಗಳನ್ನು ನಿಧಾನವಾಗಿ ಓದಿ ಗಮನವಿಟ್ಟು ಕೇಳಿದರೆ, “ತ” ಎಂಬುದನ್ನಲ್ಲ ನಾವು ಎಳೆಯುವುದು “ತಲ್” ಎಂಬ ವರ್ಣಶ್ರೇಣಿಯ “ಲ್‌” ಎಂಬುದನ್ನು ಎಳೆಯುತ್ತೇವೆ ಎಂಬುದು ಗೊತ್ತಾಗುತ್ತದೆ. ಈ ಎಳೆತದಿಂದ ಮರು ಮಾತ್ರೆಯ ಬೆಲೆ ಬರುವುದು “ತ” ಎಂಬುದಕ್ಕಲ್ಲ, “ತಲ್” ಎಂಬುದಕ್ಕೆ ಎನ್ನುವುದು ಅರಿವಾಗುತ್ತದೆ.
ಈ ವಿಷಯ ತಿ. ನಂ. ಶ್ರೀ ಯವರಿಗೆ ಗೊತ್ತಿರಲಿಲ್ಲವೆಂದಲ್ಲ. ಅವರಿಗೆ ಇದರ ಅರಿವಿತ್ತು ಎಂದು ಹೇಳಲಿಕ್ಕೆ ಅದೇ ಲೇಖನದಲ್ಲಿ (ಪುಟ ೨೦೭) ಆಧಾರವಿದೆ : “ಈ ಕೆಳಗಿನ ಚರಣಗಳನ್ನು ಪರಿಶೀಲಿಸಿ :
ಮಿಂಚು ಮಿಂಚನು ಸೆಣಸುವ ತೆರದಿ
ಸಿಡಿಲು ಸಿಡಿಲನು ಸೆಣಸುವ ತೆರದಿ.
ಇಲ್ಲಿರುವುದು ನಾಲ್ಕು ಮಾತ್ರೆಯ ನಡೆ. ಮೊದಲನೆಯ ಗಣವನ್ನು ಇದಕ್ಕೆ ಹೊಂದಿಸಿಕೊಳ್ಳಲು, “ಮಿಂ” ಎಂಬುದಕ್ಕೆ ಮೂರು ಮಾತ್ರೆಯ ಬೆಲೆ ಕೊಡಬೇಕು ; ಸ್ವರದ ಮುಂದಿನ ಅನುನಾಸಿಕವನ್ನು ಎಳೆದು ಹಾಗೆ ಮಾಡುವುದೂ ಸಾಧ್ಯ………….” ಆದುದರಿಂದ ಈ ಪ್ರಶ್ನೆಯೇಳುತ್ತದೆ : “ತಲ್ಲಣಿಸುತ” ಎಂಬ ಶಬ್ದದಲ್ಲಿ “ತ”-ಎಂಬುದನ್ನು ಗುರುವೆನ್ನಬೇಕೋ, “ತಲ್” ಎಂಬುದನ್ನೋ ? ಸ್ವನಶಾಸ್ತ್ರದ ದೃಷ್ಟಿಯಿಂದ ಹೇಳುವುದಾದರೆ “ತಲ್” ಎಂಬುದೇ ಗುರು ಎಂದು ಹೇಳಬೇಕಾಗುತ್ತದೆ.
ಸಾಧಾರಣವಾಗಿ, ಛಂದಸ್ಸಿನ ಕೈಪಿಡಿಗಳಲ್ಲಿ “ತಲ್ಲಣಿಸುತ” ಎಂಬುದರಲ್ಲಿ “ತ” ಎಂಬುದು ಗುರು, “ಲ್ಲ” ಎಂಬುದು ಲಘು ಇತ್ಯಾದಿಯಾಗಿ ಹೇಳುವುದುಂಟು. ಆದರೆ ಇದು ಸರಿಯೇ ? “ತಲ್” ಎಂಬುದು ಗುರು, “ಲ” ಎಂಬುದು ಲಘು ಎಂದಲ್ಲವೇ ಹೇಳ ಬೇಕಾದುದು ? ‘ಗುರು’ ಮತ್ತು ‘ಲಘು’ ಎಂಬ ಶಬ್ದಗಳನ್ನು ಯಾವ ರೀತಿಯ ಘಟಕಕ್ಕೆ ಅನ್ವಯಿಸಬೇಕು ? ಮುಂತಾದ ಪ್ರಶ್ನೆಗಳು ಏಳುತ್ತವೆ.
‘ತರು’ ಎಂಬ ಶಬ್ದದಲ್ಲಿ ‘ತ’ ಎಂಬುದು ಲಘು ; ‘ತಲ್ಲಣಿಸು’ ಎಂಬುದರಲ್ಲಿ ಮಾತ್ರ ‘ತ’ ಎಂಬುದು ಗುರುವೇಕಾಯಿತು ? ಒತ್ತಕ್ಷರದ ಹಿಂದಿರುವುದರಿಂದ, ಎಂದು ಹೇಳುವುದು, ಚಾಕ್ಷುಷರೂಪಗಳ ದೃಷ್ಟಿಯಿಂದ, ಲೆಕ್ಕಾಚಾರದ ದೃಷ್ಟಿಯಿಂದ, ಸರಿಹೋಗಬಹುದು. ಆದರೆ, ಸ್ವಲ್ಪ ಯೋಚಿಸಿ ನೋಡಿದರೆ, ಈ ಉತ್ತರ ಅಷ್ಟು ಸಮರ್ಪಕವಲ್ಲ ಎಂದು ಗೊತ್ತಾಗುತ್ತದೆ. ಒತ್ತಕ್ಷರದ ಹಿಂದಿನ ಅಕ್ಷರ ಹೇಗೆ ಗುರುವಾಯಿತು ಎಂದು ಕೇಳಿಕೊಂಡರೆ, ಒತ್ತಕ್ಷರದ ಮೊದಲ ವ್ಯಂಜನ ಹಿಂದಿನ ಸ್ವರದೊಡನೆ ಸೇರಿ ಒಂದು ಘಟಕವಾಗುವುದರಿಂದ ಎಂಬುದು ಹೊಳೆಯುತ್ತದೆ. ಈ ವಿಷಯ ಭಾರತದ ಪುರಾತನ ಸ್ವನಶಾಸ್ತ್ರಜ್ಞರಿಗೆ ಹೊಳೆದಿದ್ದುದು ಮಾತ್ರವಲ್ಲ, ಅವರು ಈ ವಿಷಯವಾಗಿ ವಿವರವಾಗಿಯೂ ಸ್ಪಷ್ಟವಾಗಿಯೂ ಬರೆದೂ ಇದ್ದಾರೆ.
‘ಸ್ವರ’ ಮತ್ತು ‘ಅಕ್ಷರ’ ಎಂಬ ಶಬ್ದಗಳಿಂದ ನಮ್ಮ ಶೋಧನೆಯನ್ನು ಮೊದಲು ಮಾಡೋಣ, ಅಕ್ಷರ ಎಂದರೆ syllable. ಸ್ವತಂತ್ರವಾಗಿ ಉಚ್ಚಾರಣೆಗೊಂಡು ಅಕ್ಷರವಾಗಬಲ್ಲ ಧ್ವನಿಯೇ ಸ್ವರ. ಸ್ವರದ ಪೂರ್ವದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ವ್ಯಂಜನಗಳಿದ್ದರೆ, ಅದೂ ಆ ಸ್ವರವೂ ಕೂಡಿ ಒಂದು ಅಕ್ಷರ. ಉದಾಹರಣೆಗೆ, ಅ, ಇ, ಉ ; ಆ, ಈ, ಊ : ಕ, ಕಿ, ಕು ; ಕಾ, ಕೀ, ಕೂ ; ಕ್ಷ, ಕ್ಷಿ, ಕ್ಷು; ಕ್ಷಾ, ಕ್ಷೀ, ಕ್ಷೂ- ಇವೆಲ್ಲವೂ ಅಕ್ಷರಗಳೇ. ಆದಿವ್ಯಂಜನ ಅಥವಾ ಆದಿವ್ಯಂಜನಗಳಿಂಹ ಕೂಡಿದ ಸ್ವರವೇ ಆಗಲಿ, ಕೇವಲ ಸ್ವರವೇ ಆಗಲಿ, ಪರದಲ್ಲಿ ವ್ಯಂಜನವಿದ್ದು ಆ ವ್ಯಂಜನದ ಪರದಲ್ಲಿ ಮೌನವಿದ್ದರೆ, ಆಗಲೂ ಆ ಅಂತ್ಯವ್ಯಂಜನವನ್ನೂ ಸೇರಿಸಿಕೊಂಡು ಒಂದು ಅಕ್ಷರವಾಗುತ್ತದೆ. ಉದಾಹರಣೆಗೆ ಅಪ್, ಆಪ್‌, ಕಿಪ್‌, ಕೀಪ್, ಕ್ಷುಪ್‌, ಕ್ಷೂಪ್‌ ಮುಂತಾದವುಗಳ ಅಕ್ಷರಗಳೇ. ಈ ಅಕ್ಷರಗಳನ್ನು ಕೇವಲ ಅಕ್ಷರಗಳ ದೃಷ್ಟಿಯಿಂದ ನೋಡಿರುವುದರಿಂದ, ಉದಾಹರಣೆಗಳನ್ನು ಕೊಡುವಾಗ ಅರ್ಥವಿದೆಯೇ ಇಲ್ಲವೇ ಎಂಬುದನ್ನು ಗಮನಿಸಲಿಲ್ಲ. ಅರ್ಥವತ್ತಾದ ಶಬ್ದಗಳನ್ನು ತೆಗೆದುಕೊಂಡಾಗ, ಅವುಗಳನ್ನು ಅಕ್ಷರಗಳಾಗಿ ಹೇಗೆ ಒಡೆಯುವುದು ? ಒಂದು ಶಬ್ದ ದಲ್ಲಿ ಎಷ್ಟು ಸ್ವರಗಳಿವೆಯೋ ಅಷ್ಟೇ ಅಕ್ಷರಗಳಿವೆ. ಕಷ್ಟ, ಆಪ್ತಮಿತ್ರ, ಮನೋರಂಜನೆ, ರಾಜನ್ ಮುಂತಾದ ಶಬ್ದಗಳಲ್ಲಿ ಕ್ರಮವಾಗಿ ಎರಡು, ನಾಲ್ಕು, ಐದು ಅಕ್ಷರಗಳಿವೆ. ಸಮಸ್ಯೆಯಿರುವುದು ವ್ಯಂಜನಗಳನ್ನು ಅಕ್ಷರಗಳಲ್ಲಿ ಹಂಚುವುದರಲ್ಲಿ. ಸಾಧಾರಣವಾಗಿ ಪ್ರಾತಿ ಶಾಖ್ಯೆಗಳಲ್ಲಿ ಕಂಡುಬರುವ ನಿಯಮ ಹೀಗಿದೆ : ಸ್ವರಗಳ ಮಧ್ಯದಲ್ಲಿರುವ ವ್ಯಂಜನ ಮೌನಕ್ಕೆ ಪರವಾಗಿರುವ ವ್ಯಂಜನ ಅಥವಾ ವ್ಯಂಜನಗುಚ್ಛ-ಇವೆರಡೂ ಪರದಲ್ಲಿರುವ ಸ್ವರಕ್ಕೆ ಸೇರಿ ಒಂದೇ ಅಕ್ಷರವಾಗುತ್ತವೆ. ಶಬ್ದ ಮಧ್ಯದಲ್ಲಿ ಕಂಡುಬರುವ ವ್ಯಂಜನ
ಗುಚ್ಛದ ಮೊದಲನೆಯ ವ್ಯಂಜನ, ಮೌನಕ್ಕೆ ಪೂರ್ವದಲ್ಲಿರುವ ವ್ಯಂಜನ-ಇವೆರಡೂ ಪೂರ್ವದಲ್ಲಿರುವ ಸ್ವರಕ್ಕೆ ಸೇರಿ ಒಂದೇ ಅಕ್ಷರವಾಗುತ್ತದೆ. ಇದರ ಪ್ರಕಾರ ಮೇಲೆ ಉದಾಹರಿಸಿದ ನಾಲ್ಕು ಶಬ್ದಗಳ ಅಕ್ಷರವಿಭಜನೆ ಹೀಗೆ : ಕಷ್‌-ಟ, ಆಪ್-ತ- ಮಿತ್ರ, ಮಿತ್‌-ರ,ಮ-ನೋ-ರಂ-ಜನೆ, ರಾ-ಜನ್.
ಸ್ವರವಿಲ್ಲದೆ ಅಕ್ಷರವಿಲ್ಲವಾದುದರಿಂದ, ‘ಅಕ್ಷರ’ ಎಂಬ ಶಬ್ದ ‘ಸ್ವರ’ ಎಂಬರ್ಥದಲ್ಲಿ ಪ್ರಯೋಗವಾಗತೊಡಗಿತು. ‘ವರ್ಣ’ ಎಂಬರ್ಥದಲ್ಲೂ ಪ್ರಯೋಗವಾಯಿತು. ಇಲ್ಲಿಗೇ ನಿಲ್ಲದೆ, ವರ್ಣಗಳ ಚಾಕ್ಷುಷರೂಪಗಳಾದ ಲಿಪಿಸಂಕೇತಗಳಿಗೂ ‘ಅಕ್ಷರ’ ಎಂಬ ಶಬ್ದದ ಬಳಕೆಯಾಯಿತು.
ಅಕ್ಷರ ರಚನೆಯ ದೃಷ್ಟಿಯಿಂದ ಸ್ವರಗಳ ಹ್ರಸ್ವತ್ವ ದೀರ್ಘತ್ವಗಳಿಗೆ ನಾವು ವಿಶೇಷ ಗಮನ ಕೊಡಬೇಕಾಗುತ್ತದೆ. ಪ್ರಾಚೀನ ಭಾರತದ ಸ್ವನಶಾಸ್ತ್ರ ಪ್ರವೀಣರು ಇದಕ್ಕೆ “ಮಾತ್ರೆ’ ಎಂಬ ಕಲ್ಪನೆಯನ್ನು ಉಪಾಯವಾಗಿ ಬಳಸಿದರು. ಹ್ರಸ್ವಸ್ವರಗಳಿಗೂ ದೀರ್ಘ ಸ್ವರಗಳಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಅವುಗಳ ಉಚ್ಛಾರದ ಕಾಲಮಾನ. ಈ ಕಾಲಾವಕಾಶವನ್ನು ಅಳೆಯುವ ಘಟಕವೇ ಮಾತ್ರೆ. ಹ್ರಸ್ವಸ್ವರ ಎಂದರೆ ದೀರ್ಘಸ್ವರಕ್ಕಿಂತ ಕಡಿಮೆಯ ಕೌಲ ಉಚ್ಚಾರವಾಗುವಂತಹುದು. ಹ್ರಸ್ವಕ್ಕೂ ದೀರ್ಘಕ್ಕೂ ಇರುವ ಸಂಬಂಧ ಸಾಪೇಕ್ಷವಾದದ್ದು. ಆದುದರಿಂದ ಒಂದು ಮಾತ್ರೆ ಎಂದರೆ ಇಷ್ಟು ಗಳಿಗೆಗಳು ಅಥವಾ ಇಷ್ಟು ಸೆಕೆಂಡುಗಳು ಎಂಬ “ಕೇವಲ” ವಾದ ಅರ್ಥವಿಲ್ಲ. ಮಾತ್ರೆಯೆಂಬುದನ್ನು ಕೇವಲ ಕಾಲಮಾನವಾಗಿ ಪರಿಗಣಿಸಲು ಯತ್ನ ನಡೆಯಲಿಲ್ಲವೆಂದಲ್ಲ. ಆದರೆ, ಪ್ರಾತಿಶಾಖ್ಯೆಗಳನ್ನು ಅಭ್ಯಾಸ ಮಾಡುವಾಗ ಮಾತ್ರೆ’ ಎಂಬುದಕ್ಕೆ ಸಾಪೇಕ್ಷಕ ಅರ್ಥವಿದೆಯೆಂಬುದನ್ನು ಮರೆಯಬಾರದು. ಅ ಎಂಬ ಸ್ವರದ ಉಚ್ಚಾರ ಕಾಲಾವಕಾಶವುಳ್ಳ ಸ್ವರ ಹ್ರಸ್ವ ; ಅದರ ಬೆಲೆ ಒಂದು ಮಾತ್ರೆ; ಆ ಎಂಬ ಸ್ವರದ ಎರಡರಷ್ಟು ಉಚ್ಛಾರ ಕಾಲಾವಕಾಶವುಳ್ಳ ಸ್ವರ ದೀರ್ಘ ; ಅದೇ ಸ್ವರದ ಮೂರರಷ್ಟು ಕಾಲಾವಕಾಶವುಳ್ಳ ಸ್ವರ ಪ್ಲುತ.”- ಈ ಮಾತಿನಿಂದ ಪ್ರಾಚೀನ ಭಾರತದ ಸ್ವನಶಾಸ್ತ್ರಜ್ಞರು “ಮಾತ್ರೆ’ ಎಂಬುದಕ್ಕೆ ಕೇವಲವಾದ ಅರ್ಥವನ್ನು ಕೊಟ್ಟಿರಲಿಲ್ಲ ಎಂಬುದು ಗೊತ್ತಾಗುತ್ತದೆ.
ಇಲ್ಲಿಯ ತನಕ ನಾವು ಗಟ್ಟಿ ನೆಲದ ಮೇಲೆ ನಿಂತಿದ್ದೆವು. ವ್ಯಂಜನಗಳ ಉಚ್ಚಾರ ಕಾಲಾವಕಾಶಕ್ಕೂ ‘ಮಾತ್ರ’ ಎಂಬುದನ್ನು ಅನ್ವಯಿಸಲು ಹೊರಟಾಗ ತಲೆನೋವು ಆರಂಭವಾಗುತ್ತದೆ. ಪ್ರಾತಿಶಾಖ್ಯೆಗಳ ಪ್ರಕಾರ, ವ್ಯಂಜನಕ್ಕೆ ಅರ್ಧಮಾತ್ರೆಯ ಬೆಲೆ ಇದೆ. “ಮಾತ್ರೆ’ಯ ಕಲ್ಪನೆಯನ್ನು ವ್ಯಂಜನಗಳಿಗೂ ಅನ್ವಯಿಸಿದ್ದು ಉಚಿತ ಪಾಗಲಿಲ್ಲವೇನೋ. ಆದರೆ ಆ ಕಲ್ಪನೆಯನ್ನು ಅಕ್ಷರಗಳ ಕಾಲಾವಕಾಶವನ್ನು
ಅಳೆಯಲು ಉಚಿತವಾಗಿ ಹಾಗೂ ಲಾಭದಾಯಕವಾಗಿ ಬಳಸಬಹುದಾಗಿತ್ತು. ಆದರೇಕೋ ಆ ರೀತಿಯ ಉಪಯೋಗ ಕಂಡುಬರುವುದಿಲ್ಲ.
ಹ್ರಸ್ವ-ದೀರ್ಘವೆಂಬ ಶಬ್ದಗಳಲ್ಲದೆ ಲಘು-ಗುರು ಎಂಬ ಶಬ್ದಗಳೂ ಪ್ರಾತಿಶಾಖ್ಯೆಗಳಲ್ಲಿ ಕಂಡು ಬರುತ್ತವೆ. ಲಘು-ಗುರು ಎಂಬ ಶಬ್ದಗಳು ಅಕ್ಷರಮಾಪಕಗಳು. ಹ್ರಸ್ವ-ದೀರ್ಘ ಎಂಬ ಶಬ್ದಗಳು ಸ್ವರೋಚ್ಚಾರ ಕಾಲಾವಕಾಶ ಮಾಪಕಗಳು ಲಘು-ಗುರು ಎಂಬವುಗಳು ಮುಖ್ಯವಾಗಿ ಪ್ರಯೋಗವಾಗುವುದು ಛಂದೋಬದ್ಧ ರಚನೆಯ ವಿವಕ್ಷೆಯಿದ್ದಲ್ಲಿ ಆದರೆ ಅಕ್ಷರ ಎಂಬ ಶಬ್ದ ಸ್ವರ ಎಂಬರ್ಥದಲ್ಲೂ ಪ್ರಯೋಗವಾಗುತ್ತಿದ್ದುದರಿಂದ, ಅಕ್ಷರಗಳ ವಿವಕ್ಷೆಯಿದ್ದಾಗ ಮಾತ್ರ ಉಪಯೋಗವಾಗಬೇಕಿದ್ದ ಲಘು-ಗುರು ಎಂಬ ಶಬ್ದಗಳು ಸ್ವರಗಳ ವಿಚಾರದಲ್ಲೂ ಪ್ರಯೋಗವಾಗತೊಡಗಿತು. ಲಘು-ಗುರು ಮತ್ತು ಹ್ರಸ್ವ-ದೀರ್ಘ ಎಂಬ ಶಬ್ದಗಳಿಗಿರುವ ಭೇದವನ್ನು ಕಡೆಗಣಿಸಿದ್ದರಿಂದ ಒಂದು ರೀತಿಯ ವ್ಯಾಕುಲತೆ ತಲೆದೋರಿತು. ಕಡ್ಡಿ -ಕಡಿ ಎಂಬ ಎರಡು ಪದಗಳನ್ನು ಗಮನಿಸಿ. ಎರಡರಲ್ಲೂ ಮೊದಲನೆಯ ಸ್ವರ ಹ್ರಸ್ವವೇ. ಆದರೆ ಕಡ್ಡಿ ಎಂಬುದರಲ್ಲಿ ಮೊದಲ ಅಕ್ಷರ (ಕಡ್) ಗುರು, ಕಡಿ ಎಂಬುದರಲ್ಲಿ ಮೊದಲ ಅಕ್ಷರ (ಕ) ಲಘು. ಕೇಶಿರಾಜನ ವ್ಯಾಕರಣದುದ್ದಕ್ಕೂ ಈ ನಾಲ್ಕು ಪಾರಿಭಾಷಿಕ ಶಬ್ದಗಳ ಅನುಚಿತ ಪ್ರಯೋಗಗಳು ದೊರಕುತ್ತವೆ.
“ಮಾತ್ರೆ” ಎಂಬುದರ ಬಗ್ಗೆ ಒಂದೆರಡು ಮಾತು ಬರೆಯಬೇಕು. ಛಂದೋಬದ್ಧ ರಚನೆಗಳಲ್ಲಿ ವ್ಯಂಜನಗಳಿಗೆ ವೈಯಾಕರಣಿಗಳು ಕೊಟ್ಟಿರುವ ಅರ್ಧಮಾತ್ರೆಯ ಬೆಲೆ ಲೆಕ್ಕಕ್ಕೆ ಬರುವುದಿಲ್ಲ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ‘ಕ’ ಎಂಬ ಅಕ್ಷರದಲ್ಲಿ ಎರಡು ವರ್ಣಗಳಿವೆ. ಅವುಗಳನ್ನು ಉಚ್ಚರಿಸುವ ಕಾಲ ಒಂದೂವರೆ ಮಾತ್ರೆಯಷ್ಟು ; ‘ಅ’ ಎಂಬ ಅಕ್ಷರದಲ್ಲಿ ಇರುವುದು ಒಂದೇ ವರ್ಣ ; ಅದನ್ನು ಉಚ್ಚರಿಸುವ ಕಾಲ ಒಂದು ಮಾತ್ರೆಯಷ್ಟು ; ಆದರೆ ಎರಡೂ ಲಘುಗಳೇ. “ಕಾಪ್” ಎಂಬ ಅಕ್ಷರದಲ್ಲಿ ಮೂರು ವರ್ಣಗಳಿವೆ ; ಅವುಗಳನ್ನು ಉಚ್ಚರಿಸುವ ಕಾಲ ಮೂರು ಮಾತ್ರೆಗಳಷ್ಟು ; ‘ಆ’ ಎಂಬ ಅಕ್ಷರದಲ್ಲಿ ಇರುವುದು ಒಂದೇ ವರ್ಣ ; ಅದನ್ನು ಉಚ್ಚರಿಸುವ ಕಾಲ ಎರಡು ಮಾತ್ರೆಗಳಷ್ಟು ; ಆದರೆ ಎರಡೂ ಗುರುಗಳೇ. ಈ ಅಂಶವನ್ನು ಪ್ರಾಚೀನ ಭಾರತದ ಸ್ವನಶಾಸ್ತ್ರಜ್ಞರು ಚೆನ್ನಾಗಿ ಅರಿತಿದ್ದರು. ‘ಮಾತ್ರೆ’ ಎಂಬುದನ್ನು ಅವರೆಂದೂ ಅಕ್ಷರಗಳನ್ನು ಅಳೆಯುವ ಘಟಕವನ್ನಾಗಿ ಉಪಯೋಗಿಸಲಿಲ್ಲ. ವರ್ಣಗಳ ಉಚ್ಚಾರಕಾಲಾವಕಾಶವನ್ನು ಅಳೆಯಲು ಮಾತ್ರ ಉಪಯೋಗಿಸುತ್ತಿದ್ದರು. ಆದರೆ ಕ್ರಮೇಣ ಈ ವ್ಯತ್ಯಾಸ ಮರೆಯಾಗುತ್ತಾ ಬಂದು ವ್ಯಾಕುಲತೆಗೆ ಅವಕಾಶವಾಯಿತು. ಅದೇ ಬೇರೆಯ ಕತೆ. ಈ ಲೇಖನದ ವ್ಯಾಪ್ತಿಯನ್ನು ಮಿರಿದ್ದು. ಪರಿಣಾಮವೇನಾಯಿತು ? “ಮಾತ್ರೆ” ಎಂಬ ಶಬ್ದ ಎರಡು ಅರ್ಥಗಳಲ್ಲಿ ಪ್ರಯೋಗವಾಗತೊಡಗಿತು. “ಲಘ್ವಕ್ಷರಕ್ಕೆ ಒಂದು ಮಾತ್ರೆ. ಗುರ್ವಕ್ಷರಕ್ಕೆ ಎರಡು ಮಾತ್ರೆ ಎಂಬ ಛಂದೋನಿಯಮದಲ್ಲೂ, “ಹ್ರಸ್ವಸ್ವರಕ್ಕೆ ಒಂದು ಮಾತ್ರೆ, ಧೀರ್ಘಸ್ವರಕ್ಕೆ ಎರಡು ಮಾತ್ರೆ, ಪ್ಲುತಕ್ಕೆ ಮೂರು ಮಾತ್ರೆ, ವ್ಯಂಜನಕ್ಕೆ ಅರ್ಧ ಮಾತ್ರೆ” ಎಂಬ ಸ್ವನ ಶಾಸ್ತ್ರಜ್ಞರ ನಿಯಮದಲ್ಲೂ ಕಂಡು ಬರುವ “ಮಾತ್ರೆ” ಎಂಬ ಶಬ್ದ ಬೇರೆ ಬೇರೆ ಅರ್ಥಗಳುಳ್ಳದು ಎಂಬುದು ಸ್ವಯಂ ವೇದ್ಯವಾಗುತ್ತದೆ. ನಿಕಟಸಂಬಂಧಿಗಳಾದ ಛಂದಶ್ಯಾಸ್ತ್ರ ಹಾಗೂ ಸ್ವನಶಾಸ್ತ್ರಗಳ ಪಾರಿಭಾಷಿಕ ಶಬ್ದವೊಂದರಲ್ಲಿ ಈ ರೀತಿಯ ವ್ಯಾಕುಲತೆ ತೋರಿದ್ದು ದುರ್ದೈವವೇ ಸರಿ.
ಮೇಲೆ ನೋಡಿದ ವ್ಯಾಕುಲತೆಗೆ ಮತ್ತೊಂದು ಕಾರಣವಿರಬಹುದು. ಅದು ಲಿಪಿಯ ಕೈವಾಡ. ಭಾರತದ ಬಹುತೇಕ ಭಾಷೆಗಳಿಗಿರುವ ಲಿಪಿಗಳಂತೆ ಕನ್ನಡ ಲಿಪಿಯೂ ಅಕ್ಷರಾತ್ಮಕವಾದುದು (Syllabic) ಎಂದು ಕೆಲವು ವಿದ್ವಾಂಸರ ಮತ. ಅವುಗಳೆಲ್ಲಾ ವರ್ಣನಾತ್ಮಕವಾದುದು (Phonemic) ಎಂದು ಮತ್ತೆ ಕೆಲವು ವಿದ್ವಾಂಸರ ಮತ. ಈ ಲೇಖಕನ ಅಭಿಪ್ರಾಯದಲ್ಲಿ ಎರಡನೆಯ ಮತವೇ ಸರಿ. ಅಕ್ಷರಾತ್ಮಕ ಲಿಪಿಯಲ್ಲಿ ಒಂದು ಅಕ್ಷರಕ್ಕೊಂದು ಲಿಪಿ ಸಂಕೇತವಿರುತ್ತದೆ. ಕಾ, ಕೀ, ಕೂ, ಕೇ, – ಮುಂತಾದ ಅಕ್ಷರಗಳಿಗೆ ಪ್ರತ್ಯೇಕವಾದ ಲಿಪಿಸಂಕೇತಗಳಿದ್ದು, ಅಕ್ಷರಗಳ ಭಾಗಗಳಾದ ವರ್ಣಗಳಿಗಿರಬಹುದಾದ ಏಕತೆಯನ್ನು ಸೂಚಿಸುವ ಆಂಶಿಕ ಸಾಮ್ಯವು (Partial similarity) ಲಿಪಿಗಳಲ್ಲಿ ಕಂಡುಬರುವುದಿಲ್ಲ. ಮೇಲಿನ ನಾಲ್ಕೂ ಅಕ್ಷರಗಳಲ್ಲಿ “ಕ್‌” ಎಂಬ ವರ್ಣ ವಿದೆಯಷ್ಟೆ. ಈ ಅಂಶವು ಲಿಪಿಯಲ್ಲೂ ಸಂಕೇತಿಕವಾಗಿದೆ. ಎಂದರೆ, ‘ಕೀ’ ಎಂಬ ಲಿಪಿಸಂಕೇತವನ್ನು, ‘ಕ್’ ಎಂಬುದನ್ನು ಸೂಚಿಸುವ ಅಂಶ ಇಷ್ಟು, ‘ಈ’ ಎಂಬುದನ್ನು ಸೂಚಿಸುವ ಅಂಶ ಇಷ್ಟು ಎಂದು ವಿಶ್ಲೇಷಿಸಿ ತೋರಿಸಬಹುದು. ಅಕ್ಷರಾತ್ಮಕ ಲಿಪಿಯಲ್ಲಿ ಇದು ಸಾಧ್ಯವಿಲ್ಲ.
ಆದರೆ ಮೊದಲನೆಯ ಪಕ್ಷವನ್ನು ಹಿಡಿದಿರುವ ವಿದ್ವಾಂಸರ ಮತದಲ್ಲಿ ಸತ್ಯದ ಒಂದು ಅಂಶವಿಲ್ಲದಿಲ್ಲ. “ಒತ್ತಕ್ಷರ”ಗಳನ್ನುಳಿದು (ಅನುಸ್ವಾರ, ವಿಸರ್ಗಗಳನ್ನು ವ್ಯಂಜನಗಳನ್ನಾಗಿ ಬರೆದರೆ, ಅವುಗಳ ಒತ್ತಕ್ಷರದ ಭಾಗಗಳಾಗುತ್ತವೆ.) ಇತರ ಲಿಪಿಸಂಕೇತಗಳೆಲ್ಲಾ, ಅವುಗಳನ್ನು ವಿಶ್ಲೇಷಿಸಲು ಸಾಧ್ಯವಿದ್ದರೂ, ಒಂದೇ ಅಕ್ಷರವನ್ನು ಸಂಕೇತಿಸುತ್ತವೆ. ಅಷ್ಟೇ ಅಲ್ಲ, ಪರಂಪರಾಗತವಾಗಿ ಬಂದ ಮತದ ಪ್ರಕಾರ, “ಒತ್ತಕ್ಷರ’ ಎಂಬ ಪದ ವ್ಯಂಜನಗುಚ್ಛಗಳನ್ನೇ ನಿರ್ದೆಶಿಸಿದರೂ, ಆ ಪದದ ಮೂಲಾಶಯ ಲಿಪಿಸಂಕೇತದಲ್ಲಿ ಕಂಡುಬರುವ ಒತ್ತ’ನ್ನೇ ನಿರ್ದೇಶಿಸುವುದಾಗಿದೆ. “ರಕ್ತ” ಎಂಬುದರಲ್ಲಿ ಎಷ್ಟು ಅಕ್ಷರಗಳಿವೆ” ? ಎಂದು ಕೇಳಿದರೆ, “ಎರಡು” ಎಂಬ ಉತ್ತರ ಬರುತ್ತದೆ. ಈ ಉತ್ತರ ಲಿಪಿಯ ದೃಷ್ಟಿಯಿಂದಲೂ ಸರಿ, ಸ್ವನಶಾಸ್ತ್ರದ ದೃಷ್ಟಿಯಿಂದಲೂ ಸರಿ. ಆದರೆ, ಆ ಎರಡಕ್ಷರಗಳು ಯಾವುವು? ” ಎಂಬ ಪ್ರಶ್ನೆಗೆ ಉತ್ತರಗಳು ಬೇರೆ ಬೇರೆ ಯಾಗುತ್ತವೆ. ಓದುಬರಹ ಬಲ್ಲವರು “ “ರ’ ಮತ್ತು ‘ಕ್ತ’ ” ಎಂದು ಹೇಳಿಯಾರು. ಸ್ವನಶಾಸ್ತ್ರಜ್ಞ “ “ರಕ್’ ಮತ್ತು ‘ತ” ಎಂದು ಹೇಳುತ್ತಾನೆ. ಈ ವ್ಯತ್ಯಾಸಕ್ಕೆ ಕಾರಣ ‘ಅಕ್ಷರ’ ಎಂಬ ಶಬ್ದವನ್ನು ಬೇರೆ ಬೇರೆಯಾಗಿ ಅರ್ಥಮಾಡಿಕೊಳ್ಳುವುದೇ, ಒಂದೇ ಶಬ್ಬ ಹೀಗೆ ಅನೇಕ ಅರ್ಥಗಳಲ್ಲಿ ಉಪಯೋಗವಾಗುತ್ತಿರುವುದು, ಮೊದಲನೆಯ ಮತದ ವಿದ್ವಾಂಸರಿಗೆ ಅರ್ಥಪೂರ್ಣವಾಗಿ ಕಂಡಿದ್ದರೂ ಆಶ್ಚರ್ಯವಿಲ್ಲ.
ತಮಿಳಿನಲ್ಲಿರುವಂತೆ, ಕನ್ನಡದಲ್ಲೂ ಒತ್ತಕ್ಷರಗಳನ್ನು ಬಿಡಿಸಿ ಬರೆಯುವ ರೂಢಿ ಇತ್ತೆಂದು ತಿಳಿಯೋಣ. “ತಲ್ಲಣಿಸು” ಎಂದು ಈಗ ಬರೆಯುತ್ತಿರುವುದನ್ನು “ತಲ್‌ಲಣಿಸು” ಎಂದು ಬರೆಯುತ್ತಿದ್ದೆವು. ಈ ಹೊಸ ರೀತಿಯ ಬರಹವನ್ನಾಶ್ರಯಿಸಿ “ಯಾವುದು ಗುರು ? ಯಾವುದು ಲಘು?” ಎಂದು ಕೇಳಿದರೆ ಏನು ಹೇಳುತ್ತೀರಿ? ನನ್ನ ಮಟ್ಟಿಗೆ ಹೇಳುವುದಾದರೆ, ‘ತಲ್’ ಎಂಬುದು ಗುರು, ಮಿಕ್ಕೆರಡೂ ಲಘು ಎಂಬುದೇ ಸರಿಯಾದ ಉತ್ತರ.*
* ಈ ಲೇಖನದ ಎರಡನೆಯ ಭಾಗವನ್ನು ಬರೆಯಲು, ನನಗೆ W. S. Allen ಅವರ “Phonetics in Ancient India” ಎಂಬ ಪುಸ್ತಕದಿಂದ ವಿಶೇಷ ಸಹಾಯ ದೊರಕಿದೆ. ಈ ಲೇಖನದ ಎರಡನೆಯ ಹಾಗೂ ಮೂರನೆಯ ಭಾಗಗಳು, ನಾನು ಬರೆಯುತ್ತಿರುವ ‘ಶಬ್ದಮಣಿದರ್ಪಣ’ ವ್ಯಾಖ್ಯಾನದಿಂದ ತೆಗೆದವುಗಳು.

Close

ಹಳದಿ ಮೀನು-ಒಂದು ವಿವೇಚನೆ

ಗೋವಿಂದ ಅ. ಜಾಲೀಹಾಳ.

‘ಹಳದಿ ಮೀನು’- ಒಂದು ವಿವೇಚನೆ.

“ಹಳದಿ ಮಿನು’ ಕನ್ನಡಕ್ಕೆ ಒಂದು ಹೊಸ ಬಗೆಯ ಕಾದಂಬರಿ. ಇದರ ಹೊಸತನ ರಚನಾಬಂಧದಲ್ಲಾಗಲೀ, ಬರುವ ಪಾತ್ರಗಳ ಅನಾಮಧೇಯತೆಯಲ್ಲಾಗಲೀ, ನಡೆಯುವ ಘಟನೆಗಳ ಹಿಂಬರಿಕೆಯ ಓಟದಲ್ಲಾಗಲೀ ಇಲ್ಲ, ಕನ್ನಡದ ಹಲವಾರು ಕಥೆ ಕಾದಂಬರಿಗಳಲ್ಲಿ ಇಂತಹ ವೈಚಿತ್ರ್ಯಗಳು, ಕಸರತ್ತುಗಳು, ಈಗಾಗಲೇ ಬಂದಿವೆ. ಇದರ ಹೊಸತನವಿರುವುದು ಕಥೆಯ ಮತ್ತು ಪಾತ್ರಗಳ ಪೂರ್ತಿ-ವಿಚಾರಮಯತೆ ಹಾಗೂ ಭಾವನಾ ಭೂಯಿಷ್ಠತೆ ಇವುಗಳಲ್ಲಿ. ಇದರಲ್ಲಿ ಬರುವ ಪಾತ್ರಗಳು-ಅದರಲ್ಲೂ “ಅವನು’ ಹಾಗೂ ‘ಅವಳು’ – ವೈಚಾರಿಕತೆಯ ಹಾಗೂ ಭಾವನಾಸಂಕೀರ್ಣತೆಯ ಜೀವಂತ ವೈಚಿತ್ರ್ಯಗಳು (living Wonders) ಇಷ್ಟೊಂದು ಕಡಿಮೆ ಪುಟಗಳಲ್ಲಿ (ಕಾದಂಬರಿಯ ಒಟ್ಟು ಪುಟಗಳು ೧೧೦) ಇಷ್ಟೊಂದು ಹೆಚ್ಚು ಹಾಗೂ ವೈವಿಧ್ಯಯುತವಾದ ಮತ್ತು ಸತ್ವಯುತವಾದ ವಿಚಾರಗಳನ್ನು ಮತ್ತು ಜಟಿಲವಾದ ಭಾವನಾ ಜಾಲವನ್ನು ಹಣೆದ ಉದಾಹರಣೆ ಕನ್ನಡದಲ್ಲಿ ಬಹುಶಃ ಬೇರೆಲ್ಲ ನಮಗೆ ಕಾಣಸಿಗುವುದಿಲ್ಲ. ಈ ಕಾದಂಬರಿಯುದ್ದಕ್ಕೂ ಪಡೆನುಡಿಗಳು, ಜಾಣ್ನುಡಿಗಳು, ರೂಪಕಾದಿ ಅಲಂಕಾರಗಳು, “ಸೂಕ್ಷವಾದ ಧ್ವನ್ಯರ್ಥಗಳು” (ಶ್ರೀ ಕೆ. ಡಿ. ಕುರ್ತಕೋಟಿಯವರ ಪದಪ್ರಯೋಗ), ಅರ್ಥಗರ್ಭಿತವಾದ ತಾತ್ವಿಕ ವಿಚಾರಗಳು, ತೀವ್ರವಾದ ಭಾವನೆಗಳಿಂದ ಕೂಡಿದ ಕವಿತ್ವದ ಕಾರಂಜಿಗಳು (ಗದ್ಯ ಮತ್ತು ಪದ್ಯ ಈ ಎರಡೂ ರೂಪಗಳಲ್ಲಿ),- ಇವೆಲ್ಲ ಚಲ್ಲುವರಿದಿವೆ. ಇವೆಲ್ಲವನ್ನು ನಾವು ಎಣಿಸಹೋದರೆ ತಲೆಕೂದಲುಗಳನ್ನು ಎಣಿಸಹೋದಂತಾಗುವುದು. ಯಾಕೆಂದರೆ ಇಡೀ ಕಾದಂಬರಿ ರಚಿಸಲ್ಪಟ್ಟರುವುದೇ ಅವುಗಳಲ್ಲಿ – they are the very stuff the novel is made of.
ಈ ಕೃತಿಯ ಹಿಂನುಡಿ ಎಂಬ ಮುನ್ನುಡಿ (ಯಾಕೆಂದರೆ ಈ ಹಿಂನುಡಿ ಕತೆಯ ಕೊನೆಗೆ ಬಂದಿರದೇ ಮೊದಲೆ ಬಂದಿದೆ, ಮತ್ತು ನಿಜವಾಗಿ ಹಿಂನುಡಿ ಮತ್ತು ಮುನ್ನುಡಿ ಇವೆರಡರ ಉದ್ದೇಶವನ್ನೂ ಪೂರೈಯಿಸುತ್ತದೆ) ಯಲ್ಲಿ ಬರೆಯುತ್ತ ಈ ಕೃತಿಯ ಅನುವಾದಕರಾದ ಶ್ರೀ ರಾಮಾನುಜನ್ ಅವರು, “ಇಲ್ಲಿನ ಪಾತ್ರ ವಸ್ತು-ಸಂಭವ ಯಾವುದಕ್ಕೂ ನಾಯಕನ ಮನಸ್ಸಿನಿಂದಾಚೆ ಬೇರೆ ಅಸ್ತಿತ್ವವಿಲ್ಲ, ಸಾರ್ಥಕ್ಯವಿಲ್ಲ;” ಹಾಗೂ “ಕಾರ್ಯ-ಕಾರಣ, ಕಾಲ-ಕಾಲಮಾನ ಸಂಭವ-ಸಂಗತಿಗಳು ಇಲ್ಲಿನ ಉದ್ದೇಶಕ್ಕೆ ಹೊರಗು” ಎಂಬುದಾಗಿ ಹೇಳಿದ್ದಾರೆ. ಇವುಗಳಲ್ಲಿನ ಮೊದಲಿನ ಹೇಳಿಕೆಯನ್ನು ಅದರಲ್ಲಿಯ ‘ನಾಯಕನ’ ಎಂಬ ಶಬ್ದದ ಮುಂದೆ ಮತ್ತು ನಾಯಿಕೆಯ’ ಎಂಬ ಶಬ್ದಗಳನ್ನು ಸೇರಿಸಿ ಒಪ್ಪಬಹುದಾದರೂ ಎರಡನೆಯ ಹೇಳಿಕೆಯನ್ನು ನಾವು ಶಬ್ದಶಃ ಸ್ವೀಕರಿಸುವುದು ಸಾಧ್ಯವಿಲ್ಲ. ಯಾಕೆಂದರೆ, ಕಾರ್ಯ-ಕಾರಣ, ಕಾಲ-ಕಾಲಮಾನ ಇತ್ಯಾದಿಗಳು ಇಲ್ಲಿನ ಉದ್ದೇಶಕ್ಕೆ ಹೊರಗು ಎಂಬುದನ್ನು ನಾವು ಅಕ್ಷರಶಃ ಒಪ್ಪಿಬಿಟ್ಟರೆ ಈ ಕೃತಿಯಲ್ಲಿ ನಾವು ಅರ್ಥಮಾಡಿಕೊಳ್ಳಬಹುದಾದ ಹಾಗೂ ಇತರರಿಗೆ ಅರ್ಥಹೇಳಬಹುದಾದ ಯಾವ ಮಾತೂ ನಮಗೆ ದೊರೆಯುವುದಿಲ್ಲ. ಆಗ ಈ ಇಡೀ ಕೃತಿಯು ಕಾರ್ಯ-ಕಾರಣಾತೀತವಾದ ಮತ್ತು ಕಾಲ-ಕಾಲಮಾನಾತೀತವಾದ ಒಂದು ಸಾಹಿತ್ವಕ ನಿರ್ಗುಣ ಬ್ರಹ್ಮನಾಗಿ ಓದುಗರಿಗೂ ವಿಮರ್ಶಕರಿಗೂ ಕೂಡಿಯೇ ಒಂದು ನುಂಗಲಾರದ ತುತ್ತಾಗಿ ಉಳಿಯುವದು. ಆದುದರಿಂದ ನಾವು ಈ ಎರಡನೆಯ ಹೇಳಿಕೆಯನ್ನು ಒಂದು ವಿಶಿಷ್ಟ ಅಗ್ಗದಲ್ಲಿ ಮಾತ್ರ ಗ್ರಹಿಸಬೇಕು. ಆ ವಿಶಿಷ್ಟ ಅರ್ಥ ಯಾವುದು ಎಂಬುದನ್ನು ವಿವರಿಸುವುದೇ ಈ ವಿವೇಚನೆಯ ಉದ್ದೇಶ.
ಆದರೂ ಈಗಲೇ ಅದರ ವಿವರಣೆಯನ್ನು ನಾವು ಸ್ಥೂಲವಾಗಿ ಹೀಗೆ ಕೊಡಬಹುದು: ಈ ಕೃತಿಯಲ್ಲಿ ಕಾರ್ಯ-ಕಾರಣ, ಕಾಲ-ಕಾಲಮಾನ, ಸಂಭವ-ಸಂಗತಿಗಳು ಯಾವ ದೊಂಡು ಹೊರಗಿನ ವಸ್ತು-ಸ್ಥಿತಿಗೆ ಸಂಬಂಧಿಸಿದುದಲ್ಲ- they are not objective or external. ಆದರೆ ಪಾತ್ರಗಳ ಮನೋಭೂಮಿಕೆಯಲ್ಲಿ ಆ ಪಾತ್ರಗಳ ಭಾವನೆ ಹಾಗೂ ವಿಚಾರ ತರಂಗಗಳ ಆವರ್ತ-ಪ್ರತ್ಯಾವರ್ತಗಳಲ್ಲಿ, ಅವುಗಳ ಆಶೆ-ಆಕಾಂಕ್ಷೆಗಳ ಪ್ರೀತಿ-ವಿಶ್ವಾಸ-ನಂಬಿಗೆಗಳ, ರೊಚ್ಚು-ರೋಷಗಳ, ಸಂಕಲ್ಪ-ವಿಕಲ್ಪಗಳ, ಜೀವನ.. ಮರಣ ತತ್ವಗಳ ಅನುರೋಧ-ಪ್ರತಿರೋಧಗಳಲ್ಲಿ ನಾವು ಒಂದು ವಿಧವಾದ ಆಂತರಿಕ ಕಾರ್ಯ-ಕಾರಣ ಸಂಬಂಧವನ್ನೂ, ಆಂತರಿಕ ಲಯ-ತಾಳಗಳನ್ನೂ, ಆಂತರಿಕ ಸಂಗತಿ-ಸಂಭವ-ಸುಘರ್ಷಗಳನ್ನೂ ವಿಪುಲವಾಗಿ ಕಾಣಬಹುದಾಗಿದೆ. ಇದೆ ಈ ಕೃತಿಯ ವೈಶಿಷ್ಟ್ಯ. ನಿಜ, ಇಲ್ಲಿ ಕತೆ ಹೇಳುವ ಪ್ರಯತ್ನವಿಲ್ಲ. ಆದರೆ ಅವನ? ಹಾಗೂ ‘ಅವಳ’ ಅಂತರಂಗದ ಮಾತುಗಳು, ಮಾತು-ಕತೆಗಳು, ಪೊರೆ-ಪೊರೆಯಾಗಿ ತನ್ನಷ್ಟಕ್ಕೆ ಬಿಚ್ಚಿ ಬೀಳುತ್ತವೆ ಏನೂ ಉಳಿಯದಂತೆ. ಕೊನೆಗೆ ಏನು ಉಳಿಯಬೇಕು ? ಏನೂ ಉಳಿಯಬಾರದೋ ? ಎಂಬುದು ಇಲ್ಲಿನ ಮುಖ್ಯ ಪ್ರಶ್ನೆಗಳು. ಈ ಪ್ರಶ್ನೆಗಳನ್ನು ಬಿಡಿಸುತ್ತ, ಬಿಡಿಸುತ್ತ, ‘ಅವನು’ ಕೊನೆಗೆ ಆತ್ಮಹತ್ಯೆಯೇ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವೆಂದು ಬಗೆದು ತನ್ನನ್ನು ತಾನು ಕೊಂದುಕೊಳ್ಳುತ್ತಾನೆ. “ಅವನು’ ಹೀಗೆ ತನ್ನನ್ನು ತಾನು ಕೊಂದುಕೊಂಡಿದ್ದರಿಂದಾಗಿ ‘ಅವಳು’ ತನ್ನನ್ನು ತಾನು ಸರಿಯಾಗಿ ಕಂಡುಕೊಳ್ಳುತ್ತಾಳೆ. ಇಂತು ಅರಿತುಕೊಂಡ ತನ್ನ ಸ್ವರೂಪದ ಮುಖಾಂತರ ಸತ್ಯ ‘ಅವನ’ನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾಳೆ.
ಈ ಕೃತಿ ಮತ್ತು ಇದರಲ್ಲಿನ ಪಾತ್ರಗಳೆಂದರೆ ‘ಶೌರಿ (ಗ್ರಂಥಕರ್ತರು) ಅವರು ಮನೋವಿಶ್ಲೇಷಣಾಶಾಸ್ತ್ರಕ್ಕೆ ಬರೆದ ಒಳ್ಳೇ ಕಲಾತ್ಮಕವಾದ ಭಾಷ್ಯವಿದ್ದಂತೆ. ಮನಸ್ಸಿನ ಸಿಪ್ಪೆಗಳನ್ನೆಲ್ಲ ಸುಲಿ-ಸುಲಿದು ಒಳಗಿನ ತಿರುಳನ್ನು ತಲುಪುವ ಹವ್ಯಾಸ-ಸಾಹಸಗಳು (ಅವನ’ ಮತ್ತು ‘ಅವಳ’ ಭಿನ್ನ ವ್ಯಕ್ತಿತ್ವಗಳ ಅಭಿನ್ನ ಲಕ್ಷಣಗಳು. ‘ಅವನು’ ಹಾಗೂ ‘ಅವಳು’ ಇಬ್ಬರೂ ಹಳದಿ ಮೀನುಗಳೇ. ಅರ್ಥಾತ್, ವಿಕ್ಷಿಪ್ತ ಜೀವಿಗಳೇ. ಎಂತಲೇ ಒಬ್ಬರನ್ನೊಬ್ಬರು ಪ್ರೀತಿಸಿದರೂ ಅದನ್ನು ಪೂರ್ತಿ ಒಪ್ಪದಾಗುತ್ತಾರೆ. ಒಬ್ಬರನ್ನೊಬ್ಬರು ಸೋಲಿಸಹೋಗಿ ಇಬ್ಬರೂ ತಾವೇ ಸೋಲುತ್ತಾರೆ. ‘ಅವನು’ ತನ್ನ ಕಟ್ಟ ಕಡೆಯ ಕಾಗದದಲ್ಲಿ ಕೇಳುತ್ತಾನೆ : “ನಾನು ಏರಲು ನಿನಗೊಂದು ಏಣಿ ತಂದುಕೊಟ್ಟೆ ; ನೀನೇಕೆ ಅದನ್ನೇರಿ ಬರಲಿಲ್ಲ ?” ಅವನು ಸತ್ತ ಬಳಿಕ ಅವಳು ಅನ್ನುತ್ತಾಳೆ, “ಅನಂತವನ್ನು ಅಂಗೈಯಲ್ಲಿ ಬರೆದಿಟ್ಟು ಹೋದ ಅವನು, ನಿಷ್ಕೃತಿಗೆ ದಾರಿ ತೋರಿಸಿದ. ಕಟ್ಟಕಡೆಯ ಸರಪಳಿಯ ಉಂಗುರವನ್ನು ಛಕ್ಕನೇ ಬಿಡಿಸಿದ. ನನ್ನ ಜೀವನವೆಲ್ಲ ಭಯದಲ್ಲಿ ಕಳೆದ ನಾನು ನಿರ್ಭಯಳಾದೆ”, ಅವನು ಸತ್ತು ಅವಳ ಅಹಂಕಾರವನ್ನು ಹಾಗೂ ಭಯವನ್ನು ಮುರಿಯುತ್ತಾನೆ. ಬಹುಮಟ್ಟಿಗೆ ನಮ್ಮ ಭಯಕ್ಕೆ ನಮ್ಮ ಅಹಂಕಾರವೇ ಕಾರಣ. ಅದು ಮುರಿಯದ ಹೊರತು ನಾವು ನಿಜವಾಗಿ ನಿರ್ಭಯರಾಗಲಾರೆವು. ಅವಳ ಭಯದ, ಅಹಂಕಾರದ ಸರಪಳಿಯ ಕಟ್ಟಕಡೆಯ ಕೊಂಡಿಯನ್ನು ಅವನು ತನ್ನ ಬದುಕಿನ ಮತ್ತು ಸಾವಿನ ಕತ್ತರಿಯಲಗುಗಳಿಂದ ಕತ್ತರಿಸುತ್ತಾನೆ. ಅವನ ಕೊನೆಯ ಸಂಕಲ್ಪದಿಂದ ಅವಳ ಮನಸ್ಸಿನ ಬಿಗಿತಗಳೆಲ್ಲ ಕೊನೆಗೊಮ್ಮೆ ಸಡಿಲಾಗುತ್ತವೆ. ಮೊದಮೊದಲು ಅವನ ಸಾವು ಅವಳ ಮೇಲೆ ಅಷ್ಟೇನು ತೀವ್ರವಾದ ಪರಿಣಾಮವನ್ನುಂಟುಮಾಡಿದಂತೆ ತೋರದಿದ್ದರೂ ಬರಬರುತ್ತ ಅವನ ಸಾವು, ಅವನ ಸಾವಿನ ಹಿನ್ನೆಲೆ, ಇವು ಅವಳ ಮೈ-ಮನಸ್ಸು-ಬುದ್ಧಿಗಳನ್ನು ಆವರಿಸಿ, ವ್ಯಾಪಿಸಿ, ಅವಳ ಮೈ -ಮನಗಳೆರಡರ ಸಮತೋಲವನ್ನು ತಪ್ಪಿಸಿಬಿಡುತ್ತದೆ. ಅವಳ ಬುದ್ದಿ ಮಂಕಾಗುತ್ತದೆ. ಅವಳ ತುಂಬೆಲ್ಲ ಅವನೇ-ಅವನ ಕಾವು-ಪ್ರೇಮ -ಸಂಕಲ್ಪಗಳೇ ತುಂಬಿಕೊಂಡಂತಾಗುತ್ತದೆ. ಅವಳು ಝರ್ಝರಿತಳಾಗುತ್ತಾಳೆ, ಸೋಲನೊಪ್ಪಿಕೊಳ್ಳುತ್ತಾಳೆ : “ನಾನು ಅವನನ್ನು ಕಳೆದುಕೊಂಡಾಗ ಅವನು ನನ್ನನ್ನು ಪಡೆದ, ಗೆದ್ದ. ನನ್ನ ಸುತ್ತ ನೂರೆಂಟು ಕೈಗಳು ಸುತ್ತಿಕೊಂಡಿವೆ, ನನ್ನ ಉಸಿರನ್ನು ಒತ್ತಿ-ಬತ್ತಿಸುತ್ತಿವೆ. ಅವನು ನನ್ನೊಳಗಿದ್ದಾಗ, ನನ್ನ ದೇಹ ಹರಿದುಹೋಗುತ್ತಿದೆ…………….” ಇತ್ಯಾದಿ, ಅವನ ಸಾವು ಅವಳಿಗೆ ತನ್ನ ನಿಜ ಸ್ವರೂಪವನ್ನು ತೋರಿಸುತ್ತದೆ. ಅವಳು ಅನ್ನುತ್ತಾಳೆ, “ಆಗ ತಿಳಿಯಿತು ಇಲ್ಲಿಯವರೆಗಿನ ನನ್ನ ಭಾವನೆಗಳೆಲ್ಲ ಎಷ್ಟು ಅಸತ್ಯ, ನಾಟಕೀಯ, ಸಿನಿಮದೊಳಗಿನ ಸುಳ್ಳುಕತೆ ಎಂದು… …….. ಹೊಳೆ ಕಟ್ಟೆಯೊಡೆದು ನನ್ನ ಮನೆ ಕೊಚ್ಚಿಹೋಗಿದೆ. ನನ್ನ ದಂತದ ಗೋಪುರ ಮುರಿದು ಬಿದ್ದಿದೆ. ಈಗ ನನಗೆ ಗೊತ್ತು, ಗೊತ್ತು, ಗೊತ್ತು.”
“ಹಳದಿ ಮೀನು’ ಇದು ಅದರಲ್ಲಿ ಹೇಳಿರುವಂತೆ (ಪುಟ ೪೦) ಮತ್ತು ಅದರಲ್ಲಿ ಒಂದು ವೇಳೆ ಹೀಗೆ ಸ್ಪಷ್ಟವಾಗಿ ಹೇಳಿರದಿದ್ದರೂ ಗೊತ್ತಾಗುವಂತೆ ಇರುವ ಅಸ್ತಿತ್ವವಾದದ ಜಾತಿಯ ಒಂದು ಕೃತಿ. ಈ ಅಸ್ತಿತ್ವವಾದ ತತ್ವಶಾಸ್ತ್ರ ಮತ್ತು ಸಾಹಿತ್ಯಗಳಲ್ಲಿ ಇತ್ತೀಚಿನ ಪಂಥ. ನಮ್ಮ ಕನ್ನಡಕ್ಕಂತೂ ತೀರ ಇತ್ತೀಚಿನದು. ಆ ಮಾರ್ಗದಲ್ಲಿ ಕನ್ನಡದಲ್ಲಿ ಇದೇ ಮೊದಲ ಕೃತಿ ಎಂದರೂ ಸಲ್ಲುವದು. ಆದರೂ ಒಂದು ವಿಶಾಲ ಅರ್ಥದಲ್ಲಿ ಅಸ್ತಿತ್ವವಾದ ಹೇಗೆ ಯುರೋಪಿಗೆ ಹೊಸದಲ್ಲವೋ ಹಾಗೆಯೇ ನಮ್ಮ ಭಾರತಕ್ಕೆ ಅಥವಾ ನಮ್ಮ ಕನ್ನಡನಾಡಿಗೆ ಕೂಡ ಹೊಸದಲ್ಲ. ಹೇಗೆ ಒಂದು ಅರ್ಥದಲ್ಲಿ ಸೇಂಟ್ ಆಗಸ್ಟೀನ ಮೊದಲಾದ ಕೆಲವು ಅನುಭಾವಿಗಳು ಸೋರನ್ ಕರ್ಕಗಾರ್ಡ್ (“Existentialism”ದ ಪಿತಾಮಹ) ನಿಗಿಂತ ಮೊದಲೇ ಹೆಚ್ಚು-ಕಡಿಮೆ ಅದೇ (ವ್ಯಕ್ತಿಪ್ರಜ್ಞಾನಿಷ್ಠ ಅಸ್ತಿತ್ವವಾದ ಮತ್ತು ಮೌಲ್ಯವಾದ’ (ಇದು “Existentialism” ಎಂಬುದಕ್ಕೆ ನನ್ನ ದ್ರಾವಿಡ ಪ್ರಾಣಾಯಮದ ಭಾಷಾಂತರ) ದ ಹಾದಿಯನ್ನು ತುಳಿದಿದ್ದರೋ ಹಾಗೆ ನಮ್ಮಲ್ಲಿಯ ಅನೇಕ ಅನುಭಾವಿಗಳು, ಸಂತರು, ದಾಸರು, ಶರಣರು, ತಮ್ಮ ಆಧ್ಯಾತ್ಮಮಾರ್ಗದಲ್ಲಿ ಈ ಅಸ್ತಿತ್ವವಾದದ ಕಾಲುದಾರಿಯನ್ನು ಒಮ್ಮಿಲ್ಲ ಒಮ್ಮೆ ಕ್ರಮಿಸಿಯೇ ಕ್ರಮಿಸಿದ್ದಾರೆ. ಹೌದು, ಅಸ್ತಿತ್ವವಾದ ಒಂದು ಕಾಲುದಾರಿಯಿದ್ದಂತೆ. ಅಲ್ಲಿ ವಾಹನ ಸಂಚಾರವಿಲ್ಲ, ಪ್ರತಿಯೊಬ್ಬರೂ ನಡೆದೇ ಹೋಗಬೇಕು. ಅವರವರ ಬೇಸರ, ಅವರವರ ಆಯಾಸ, ಅವರವರಿಗೆ ಕಟ್ಟಿಟ್ಟದ್ದು. ನಮ್ಮ ಅನುಭಾವಿಗಳೂ ಇದನ್ನೇ ಹೇಳಿದರು. ಆದರೆ ಅವರಲ್ಲಿ ಹೆಚ್ಚಿನವರು ಆಸ್ತಿಕರು, ದೈವವಾದಿಗಳು. ಇತ್ತೀಚಿನ ಅಸ್ತಿತ್ವವಾದಿ ಜನರಲ್ಲಿ ಹೆಚ್ಚಿನವರು ಆಸ್ತಿಕರಲ್ಲ, ದೈವವಾದಿಗಳೂ ಅಲ್ಲ. ಆದರೂ ಇವರಲ್ಲಿ ಅನನ್ಯವಾದ ವ್ಯಕ್ತಿನಿಷ್ಠೆ, ಸ್ವ-ನಿಷ್ಠೆ, ಸಂಕಲ್ಪ-ನಿಷ್ಠೆ ಹಾಗೂ ಸಾಕ್ಷಿ ಪ್ರಜ್ಞೆ ಇವೆ. ಇರಲಿ, ಈ ಉಪಾಖ್ಯಾನವನ್ನು ಇಷ್ಟಕ್ಕೇ ಮುಗಿಸಿ ಮುಖ್ಯ ವಿಷಯವನ್ನು ಮತ್ತೆ ಎತ್ತಿಕೊಳ್ಳೋಣ.
ಹೌದು, ‘ಹಳದಿ ಮೀನು’ ಅಸ್ತಿತ್ವವಾದದ ಜಾತಿಯ ಒಂದು ಕೃತಿ. ಇದರಲ್ಲಿ ಬರುವ ಅಸ್ತಿತ್ವವಾದ ಸಾರ್ತ್ರ ಮತ್ತು ಕಾಮೂ (ಅದರಲ್ಲೂ ಕಾಮೂನ) ಇವರ ಮಾದರಿಯದು. ಈ ಕಾದಂಬರಿಯಲ್ಲಿ ಎಷ್ಟೋ ಕಡೆ ಈ ಇಬ್ಬರೂ ಮೇಧಾವಿಗಳು ಸ್ವಯಂ ಬಂದು ನನಗೆ ಜಾಣತನದ ಕಿವಿಮಾತುಗಳನ್ನು ಹೇಳುತ್ತಿರುವಂತೆ ಭಾಸವಾಗುವುದು. ಇದನ್ನು ನಾವು ಈ ಕೃತಿಯ ಗುಣವೆಂದೂ ಕೆಲಮಟ್ಟಿಗೆ ಅವ-ಗುಣವೆಂದೂ ತಿಳಿಯಬಹುದು. ಹಳದಿ ಮೀನಿನ ಗ್ರಂಥಕರ್ತರು ತಮ್ಮ ವಿಚಾರಸರಣಿ, ಶೈಲಿ, ಇವೆರಡರಲ್ಲೂ ಆ ಇಬ್ಬರು ಮೇಧಾವಿಗಳ ಪ್ರಭಾವಕ್ಕೆ ಸಾಕಷ್ಟು ಒಳಗಾಗಿದ್ದಾರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಮಾತನ್ನು ಲೇಖಕರು ಅಲ್ಲಗಳೆಯಲಿಕ್ಕಿಲ್ಲವೆಂದು ಮತ್ತು ಹಾಗೆ ಅಲ್ಲಗಳೆಯುವ ಅವಶ್ಯಕತೆಯೂ ಅವರಿಗೆ ಅನಿಸಲಿಕ್ಕಿಲ್ಲವೆಂದು ನಾನು ತಿಳಿದಿದ್ದೇನೆ. ಆದರೆ ಅಂಥ ಮೇಧಾವಿಗಳ ವಿರಾಟ್‌ಪ್ರಭಾವಕ್ಕೆ ಒಳಗಾಗಿಯೂ ಈ ಗ್ರಂಥಕರ್ತರು ತಮ್ಮತನವನ್ನು ಉಳಿಸಿಕೊಂಡಿದ್ದಾರೆ ಮತ್ತು ಬೆಳೆಸಿಕೊಂಡಿದ್ದಾರೆ. ಅದೇ ಮುಖ್ಯ.
ಈ ಕಾದಂಬರಿಯಲ್ಲಿ ಕತೆ ಹೇಳುವ ಪ್ರಯತ್ನವಿಲ್ಲವೆಂದು ಶ್ರೀ ರಾಮಾನುಜನ್ ತಮ್ಮ ಹಿಂನುಡಿಯಲ್ಲಿ ನನಗೆ ಹೇಳಿಯೇ ಬಿಟ್ಟಿದ್ದಾರೆ. ಇಲ್ಲಿ ನಮಗೆ ಕಾಣುವ ಮತ್ತು ವಿವೇಚಿಸಸಿಗುವ ವಿಷಯಗಳೆಂದರೆ ಪ್ರಜ್ಞೆ-ಸುಪ್ತಪ್ರಜ್ಞೆಗಳ ಪ್ರವಾಹಗಳು, ವರ್ತುಲಗಳು ; ವ್ಯಕ್ತಿಗಳ ವ್ಯಕ್ತಿತ್ವಗಳು, ಸಂಪರ್ಕ-ಸಂಘರ್ಷಗಳು ; ವಿಚಾರ-ವಿಚಾರ ವಂತಿಕೆಗಳು ; ಗಹನವಾದ ಗೂಢವಾದ ಭಾವನಾಸ್ತರಗಳು ; ಸ್ವಾತಂತ್ರ, ಪ್ರೇಮ, ಕಾಮ, ಅಧಿಕಾರ, ಕರ್ತವ್ಯ, ತಪ್ಪು-ಒಪ್ಪು ಮುಂತಾದ ಜೀವನದ ಮೂಲತತ್ವಗಳ, ಮೌಲ್ಯಗಳ ವಿಶ್ಲೇಷಣೆ, ಅನ್ವೇಷಣೆ ಮುಂತಾದವುಗಳು. ಮೊದಲು ಈ ಕೃತಿಯಲ್ಲಿ ನಿರೂಪಿತವಾದ ಪ್ರೇಮ-ಕಾಮಗಳ ಸ್ವರೂಪವನ್ನು ನೋಡೋಣ.
“ಪ್ರೇಮ ಮತ್ತು ಕಾಮಗಳು ಒಂದೇ ಅಲ್ಲವಾದರೂ ಅವು ಒಂದೇ ವೃಕದ ಎರಡು ಟೊಂಗೆಗಳಿದ್ದಂತೆ’ ಎಂಬ ಆಧುನಿಕ ಮನೋವಿಶ್ಲೇಷಣಾಶಾಸ್ತ್ರದ ಅಭಿಪ್ರಾಯವನ್ನು ಸಮರ್ಥಿಸಿ ಅಥವಾ ಆ ವೈಜ್ಞಾನಿಕ ಅಭಿಪ್ರಾಯದಿಂದ ಸಮರ್ಥನೆ ಪಡೆದುಕೊಂಡು ನಿರೂಪಿತವಾದಂತಿದೆ ಇಲ್ಲಿನ ಪ್ರೇಮ-ಕಾಮಗಳ ಸಂಬಂಧ. ಈ ಕಾಮ ನಿರೂಪಣೆಯನ್ನು ನೋಡಿ :“ನೋಡಿಲ್ಲಿ ಇವನೇ, ನಿನ್ನ ಮುಖ ನೋಡಿದರೆ ಭಯವಾಗುತ್ತದೆ, ಒಂದು ನಿಮಿಷ ಏನೂ ತಿಳಿಯದ ಹಾಗೆ ನಗುತ್ತೀ. ಮತ್ತೊಂದು ನಿಮಿಷ ನಿನ್ನ ಮುಖದಲ್ಲಿ ಶುದ್ಧ ಕ್ರೌರ್ಯ ತಾಂಡವವಾಡುತ್ತೆ. ಆಗ ನನಗೆ ಬಹಳ ಭಯವಾಗುತ್ತದೆ. ನಿನ್ನ ಶಕ್ತಿ ನಿನಗೆ ಗೊತ್ತು. ನನಗೆ ತಿಳಿಯದ ಶಕ್ತಿ ಯಾವುದನ್ನೂ ನಾನು ಬಿಚ್ಚಿಬಿಟ್ಟ ಹಾಗೆ ಭಯವಾಗುತ್ತದೆ.” ಹಾಗೆಯೇ ಈ ಪ್ರೇಮ ನಿರೂಪಣೆಯನ್ನು ನೋಡಿ : “ಅವನ ಮುಖ ಶಾಂತವಾಯಿತು, ದೂರದ ಮರ ನೋಡಿದಳು, ಅವಳು ಕಣ್ಣು ಮುಚ್ಚಿದಾಗ ಅವಳು ಯಾರು ಎಂದು ಅವನಿಗೆ ತಿಳಿಯಿತು, ಅದರಿಂದ ತಾನು ಯಾರು ಎಂದು ತಿಳಿಯಿತು. ಮೀರಾ ಕೃಷ್ಣನನ್ನು ಪ್ರೀತಿಸಿದ ಹಾಗೆ. ಮೀರಾ ಹದಿನಾರನೇ ಶತಮಾನದಲ್ಲಿ ಅರೆಮುಚ್ಚಿದ ಕಣ್ಣು, ಕೈಗೆ ಸಿಕ್ಕಿದ ಆಸೆಯ ಪ್ರತೀಕ ಮೀರಾ. ಕವಿಯಾದಳು. ಆಸೆಯನ್ನು ಎಂದಿಗೂ ತೀರಿಸಿಕೊಳ್ಳಬಾರದು. ತೃಪ್ತಿಗೊಂಡ ಪ್ರೀತಿ, ಕೈಗೆ ಸಿಕ್ಕವಸ್ತು, ಸತ್ತ ಹೆಣ……………” ಈ ಕಾದಂಬರಿಯಲ್ಲಿ ಇವೆರಡೂ ವಿಷಯಗಳ (ಎಂದರೆ, ಪ್ರೇಮ ಮತ್ತು ಕಾಮುಗಳ) ಬಗ್ಗೆ ಹಲವಾರು ಕಡೆ ಚರ್ಚೆ ಬರುತ್ತದೆ. ಒಂದು ದೃಷ್ಟಿಯಲ್ಲಿ, ಕಾದಂಬರಿಯ ನಾಯಕನ ಮತ್ತು ನಾಯಕಿಯ ನಡುವಣ ಮುಖ್ಯ ಪ್ರಶ್ನೆ ಇವುಗಳದೇ, ಇವುಗಳ ಪರಸ್ಪರ ಸಂಬಂಧದ್ದೇ ಆಗಿದೆ. ಆಹಾ ! ಇದಾವ ಹೊಸ ವಿಷಯ ? ಎಲ್ಲ ಕಾದಂಬರಿಗಳ ನಾಯಕ-ನಾಯಕಿಯರ ಪ್ರಶ್ನೆಯೂ ಇದೇ ಇರುತ್ತದೆ” ಎಂದು ನೀವನ್ನಬಹುದು. ಆದರೆ ಇಲ್ಲಿನ ಪ್ರಶ್ನೆ ಅಂಥ ಸಾಮಾನ್ಯರಾದ ನಾಯಕ-ನಾಯಕಿಯರು ಸರ್ವೆಸಾಮಾನ್ಯವಾಗಿ ಎದುರಿಸುವಂಥ ಪ್ರಶ್ನೆಯಾಗಿಲ್ಲ.
ಸಾಮಾನ್ಯವಾಗಿ ಕಥೆ – ಕಾದಂಬರಿಗಳಲ್ಲಿ, ಸಿನೇಮಗಳಲ್ಲಿಯಂತೆ, ನಾಯಕ-ನಾಯಕಿಯರು ಯಾವ-ಯಾವುದೋ ನಿಮಿತ್ತದಲ್ಲಿ ಪರಸ್ಪರರು ಭೇಟಿಯಾಗಿ ಹೆಚ್ಚಾಗಿ ಮೊದಲ ‘ಮುಲಾಖಾತ’ದಲ್ಲಿಯೇ ಪರಸ್ಪರ ಪ್ರೇಮಪಾಶದಲ್ಲಿ ಸಿಲುಕಿಬೀಳುತ್ತಾರೆ. ತಮ್ಮ ಕೊರಳಲ್ಲಿ ಬಿದ್ದ ಆ ಪಾಶ ಪ್ರೇಮದ್ದೋ, ಕಾಮದ್ದೋ, ಇತ್ಯಾದಿ ಪ್ರಶ್ನೆಗಳನ್ನು ಬಿಡಿಸುವ ಗೊಂದಲಕ್ಕೆ ಹೆಚ್ಚಿನ ಹೀರೋ-ಹಿರೋಯಿನ್‌ಗಳು ಹೋಗದೇ ತಮ್ಮ ಏಕಮೇವ ಗುರಿಯಾದ ಮದುವೆಯ ಕಡೆಗೆ ಇಬ್ಬರೂ ಧಾವಿಸುತ್ತಾರೆ. ಆಗ ಅವರ ಮಾರ್ಗದಲ್ಲಿ ಅನೇಕ ಅಡೆ-ತಡೆಗಳು ಬಂದೇ ಬರುತ್ತವೆ. ಕೆಲವು ತಂದೆ-ತಾಯಿಗಳಿಂದ, ಕೆಲವು ಖಳನಾಯಕ ಅಥವಾ ಖಳನಾಯಿಕೆಯಿಂದ ಮತ್ತೆ ಕೆಲವು ಪಬ್ಲಿಕ್, ಯಾನೆ, ಸೊಸೈಟಿಯಿಂದ, ಇವೆಲ್ಲ ಅಡೆತಡೆಗಳನ್ನು ಹೆಚ್ಚಿನ ನಾಯಕ-ನಾಯಕಿಯರು ದೈವ ಮತ್ತು ಅಪಘಾತಗಳ ನೆರವಿನಿಂದ ತೊಡೆದು ಹಾಕಿ ತಮ್ಮ ಗುರಿಯಾದ ಮದುವೆಯನ್ನು ತಲಪುತ್ತಾರೆ. ಕಥೆ ಸುಖಾಂತವಾಗಿ ಮುಗಿಯುತ್ತದೆ. ಕೆಲವು ಸಲ ಕೆಲವು ಲೇಖಕರ ಕೈಯಲ್ಲಿ ನಾಯಕ ಮತ್ತು ನಾಯಿಕೆಗೆ ಮದುವೆಯಾಗುವದಿಲ್ಲ. ಯಾಕೆಂದರೆ ಅವರು ನಾಯಕ ಅಥವಾ ನಾಯಿಕೆಯನ್ನು ಕೊನೆಯಲ್ಲಿ ತಾವೇ ಕೊಂದು ಅದರ ಹೊಣೆಯನ್ನು ಖಳನಾಯಕ ಅಥವಾ ಖಳನಾಯಿಕೆಯ ಮೇಲೆ ಅಥವಾ ಅವರು ಸಿಗದಿದ್ದರೆ ದೇವರ, ಅಂದರೆ, ದೈವದ ಮೇಲೆ ಹಾಕಿ ಒಳ್ಳೇ ಯಶಸ್ವಿಯಾದ Tragedy’ ಯನ್ನು ಬರೆದಿರುತ್ತಾರೆ. ನಿಜ, ಈ ಕಾದಂಬರಿಯಲ್ಲೂ ನಾಯಕ-ನಾಯಕಿಯರಿದ್ದಾರೆ. ಅವರ ನಡುವೆ ಪ್ರೇಮವೂ ಇದೆ. ಇಲ್ಲಿ ಕೂಡ ಮದುವೆಯ ಮಾತು ಏಳುತ್ತದೆ. ಎಲ್ಲಕ್ಕೂ ಹೆಚ್ಚಾಗಿ ಈ ಕಥೆಯಲ್ಲಿ ಕೂಡ ನಾಯಕ ನಾಯಿಕೆಯನ್ನು ಮದುವೆಯಾಗದೇ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, “ಸಾಕು, ಇನ್ನೇನು ಬೇಕು ? ಇದೊಂದು ಒಳ್ಳೆ ಯಶಸ್ವಿಯಾದ ಹಿಂದೀ ಸಿನೇಮದ ಕಥೆಯಿದ್ದಂತೆ ಇಲ್ಲವೇ ?” ಎಂದು ನೀವನ್ನಬಹುದು. ಆದರೆ ಈ ಕಥೆಯ ನಿಜವಾದ ‘ಹಕೀಕತು’ ಹಾಗಿಲ್ಲ. ಈ ಕಾದಂಬರಿಯನ್ನು ಯಾವನಾದರೂ ಸಿನೇಪ್ರೋಡ್ಯೂಸರನು ಇದ್ದಕಿದ್ದಂತೆ ಸಿನಿಮೀಕರಿಸಿದರೆ ಅವನು ಸಿನಿಮಾದ ಪೇಟೆಯಲ್ಲಿ ದಿವಾಳಿಯೇಳುವನೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಯಾಕೆಂದರೆ ಯಾವುದೊಂದು ಯಶಸ್ವೀ ಸಿನೇಮಾಕ್ಕೆ ಬೇಕಾದ ಘಟನೆಗಳ ನಾಗಾಲೋಟವಾಗಲೀ, ಕಾಮದ ಪ್ರೇಮೀಕರಣ ಮತ್ತು ಪ್ರೇಮದ ಆದರ್ಶಿಕರಣ-ಕಂಬನೀಕರಣಗಳಾಗಲೀ, ಸದ್ಗುಣ ದುರ್ಗುಣಗಳ ನಡುವಣ ವಾಗ್ಯುದ್ಧ (ಕೋರ್ಟು ರೂಮಿನಲ್ಲಿ) ಮತ್ತು ನಾಯಕ-ಖಲನಾಯಕರ ಮಲ್ಲಯುದ್ಧಗಳಾಗಲೀ ಈ ಕಥೆಯಲ್ಲಿಲ್ಲ. ಇಲ್ಲಿ ಪ್ರೇಮದ ಬಗ್ಗೆಯಾಗಲೀ ಕಾಮದ ಬಗ್ಗೆಯಾಗಲೀ ‘ಇದಮಿತ್ಥಂ’ ಎಂದು ಸಿದ್ಧೋತ್ತರಗಳನ್ನು ಕೊಡುವ ಹುಚ್ಚು ಸಾಹಸವಾಗಲೀ ಸಂಪ್ರದಾಯ ಶರಣತೆಯಾಗಲೀ ನಮಗೆ ಕಾಣುವದಿಲ್ಲ. ಅದಕ್ಕೆ ಬದಲಾಗಿ, ಜೀವನದ ಮೂಲ ಸಮಸ್ಯೆಗಳಾದ ಪ್ರೇಮ, ಕಾಮ, ಸ್ವಾತಂತ್ರ್ಯ, ವ್ಯಕ್ತಿತ್ವ, ಹೊಣೆಗಾರಿಕೆ ಮುಂತಾದವುಗಳನ್ನು ಬಿಡಿ-ಬಿಡಿಯಾಗಿ ಹಿಂಜಿ ಹಾಗೂ ಇಡಿ-ಇಡಿಯಾಗಿ ಜೋಡಿಸಿ ಪರಿಕಿಸಿ ನೋಡುವ ವೈಜ್ಞಾನಿಕ ಮತ್ತು ತಾತ್ವಿಕ ಹವ್ಯಾಸ ಹಾಗೂ ಕಲಾತ್ಮಕ ದೃಷ್ಟಿ-ಇವುಗಳನ್ನು ನಾವು ಕಾಣುತ್ತೇವೆ.
ಇಲ್ಲಿ ನಾಯಕ-ನಾಯಿಕೆಯರನ್ನು ಕಾಡುವ ಪ್ರಶ್ನೆಗಳೆಂದರೆ ಅವರ ಪ್ರೇಮದ ಮತ್ತು ಕಾಮದ “ಬೇಕು ಬೇಡಗಳು, ಅವರಿಬ್ಬರಲ್ಲಿಯ ವ್ಯಕ್ತಿ ಸ್ವಾತಂತ್ರ್ಯದ ಉತ್ಕಟೇಚ್ಛೆ, ಅವರ ಜ್ಞಾನದಿಂದ ಬಲಿತ ಆತ್ಮ-ಪ್ರತ್ಯಯ, ತನ್ನತನವನ್ನು ಯಾವ ಸಂದರ್ಭದಲ್ಲಿಯೂ, ಯಾರಿಗಾಗಿಯೂ, ಬಿಟ್ಟುಕೊಡಲಾರೆನೆಂಬ ಅವರಿಬ್ಬರ ಹಟ, ಅಹಂಭಾವ, ಮುಂತಾದವುಗಳು. “ಪ್ರೀತಿ ಒಂದು ಸವಕಲು ನಾಣ್ಯ” ಎನ್ನುತ್ತಾಳೆ ಅವಳು. “ಏನಮ್ಮ ಹುಡುಗೀ, ಪ್ರೀತಿ ಎಂದರೇನು ಗೊತ್ತೇ ?” ಎಂದು ಮುದುಕ ನಾಯರ್ ಕೇಳಿದಾಗ, “ಇಲ್ಲ ಗೊತ್ತಿಲ್ಲ, ನನ್ನ ತಂದೆ-ತಾಯಿನ್ನ ಕೂಡ ನಾನು ಪ್ರೀತಿಸೋದಿಲ್ಲ. ಅವರನ್ನು ಕಂಡರೂ ನನಗೆ ದ್ವೇಶವೇ ಅನ್ನಿಸುತ್ತೆ. ನನ್ನ ಕಂಡರೂ ನನಗೆ ದ್ವೇಷವೇ” ಎಂದು ಅವಳು ಹೇಳಿರುತ್ತಾಳೆ, “ಪ್ರೀತಿ ಎಂದರೆ ನಮ್ಮನ್ನು ನಾವು ಕಳೆದುಕೊಳ್ಳುವದು ಕಣಮ್ಮ” ಎಂದು ನಾಯರ್ ನುಡಿದಾಗ, “ಹಾಗೇನು ? ನಾನು ಅನ್ನುವದನ್ನೇ ಅಳಿಸಿ ಬಿಡಬೇಕು” ಎಂದು ಅವಳು ಒಪ್ಪಿದರೂ ಅದನ್ನು ಮಾಡುವುದು ಅವಳಿಂದಾಗುವುದಿಲ್ಲ. ಅದನ್ನು ಅವಳು ಮಾಡಲು ಪ್ರಯತ್ನಿಸುವಷ್ಟರಲ್ಲಿಯೇ ಅವನು ಸತ್ತು ಹೋಗುತ್ತಾನೆ. ಇದೇ ಇಲ್ಲಿನ ದುರಂತ. ಅವನ’ ಮತ್ತು ‘ಅವಳ’ ಅಳಿಸಲಾಗದ
ವ್ಯಕ್ತಿತ್ವಗಳೇ ಅವರ ದುರಂತಕ್ಕೆ ಕಾರಣವಾಗುತ್ತವೆ.
ಅವನಿಗೆ ತಾನು ಕ್ರೈಸ್ತ, ಶೆಲ್ಲಿ ಮತ್ತು ಅಲೆಕ್ಸಾಂಡರರಂತೆ ಮೂವತ್ತುಮೂರು ವರ್ಷಕ್ಕೆ ಸಾಯಬೇಕೆಂಬ ಯೌವನದ ಹುಚ್ಚು, ಮೂಢನಂಬಿಕೆ. ಹಾಗೆ ಸಾಯದೇ ಉಳಿದುಕೊಂಡರೆ ಮೂವತ್ತೈದಕ್ಕೆ ತಾನೆಲ್ಲಿ ಹೇಡಿಯಾಗಿಬಿಡುವೆನೋ ಎಂಬ ಹೆದರಿಕೆ.
ಅವನು ತನ್ನ ಜೀವನವನ್ನು, ತನ್ನ ಕಾಮವನ್ನು ಮತ್ತು ಪ್ರೇಮವನ್ನು ಕಂಡು ತಾನೇ ಬೆದರುತ್ತಾನೆ, ಬೇಜಾರುಗೊಳ್ಳುತ್ತಾನೆ. ಅಂತೆಯೇ ತನ್ನ ಸಾವಿನ, ಎಂದರೆ ತನ್ನ ಸಾವಿನ ಸಮಯದ ಒಡೆಯನಾಗುವ ಹವ್ಯಾಸಕ್ಕಿಳಿಯುತ್ತಾನೆ. “ ತಿದ್ದಿ ತಿದ್ದಿ ಬದುಕುವ ಸಾಮಾನ್ಯರ ಜೀವನ” ಅವನಿಗೆ ಬೇಡವಾಗುತ್ತದೆ. ಅವನು ಅದನ್ನು “ಗದ್ಯದ ಗೊಡ್ಡು ಜೀವನ” ಎಂದು ಕರೆಯುತ್ತಾನೆ. ಅಂತೆಯೇ ಶೆಲ್ಲಿಯ ಪದ್ಯ ಜೀವನವನ್ನು ಮತ್ತು ಅಲೆಕ್ಸಾಂಡರನ ಅಥವಾ ಟೀಪು ಸುಲ್ತಾನನ ಹುಲಿ-ಜೀವನವನ್ನು ಅವನು ಬಯಸುತ್ತಾನೆ. ಹದ್ದಿನಂತೆ ನೂರು ವರುಷ ಬಾಳಲು ಬಯಸದೇ, ಮದುವೆ ಮಾಡಿಕೊಂಡು ಮಕ್ಕಳನ್ನು ಹುಟ್ಟಿಸಿ ಅವುಗಳಿಗೆ ವ್ಯಾಕರಣ, ವಾಕ್ಯರಚನೆಗಳನ್ನು ಹೇಳಿಕೊಡಲು ಇಷ್ಟಪಡದೇ, ಸ್ಥಿತಪ್ರಜ್ಞನಂತೆ ಕತ್ತಿಯನ್ನು ಹಿಡಿಯವರೆಗೂ ಶುಭ್ರವಾಗಿ ಒರಿಸಿಟ್ಟು, ಶಿಲುಬೆಗೇರಿದ ಕ್ರೈಸ್ತನಂತೆ, ಶೂನ್ಯದ ಗೋಡೆಯನ್ನೇರಿ ಹೋಗುತ್ತಾನೆ. ಇಂತಹ “ಅವನನ್ನು ನಾವು ಏನನ್ನಬೇಕು? ಪಲಾಯನವಾದಿ ಯೆಂದೋ ?. (‘ಅವಳು’ ಹಾಗೆ ಭಾವಿಸಿದ್ದಳು) ಸ್ಥಿತಪ್ರಜ್ಞನೆಂದೋ ? ಸ್ವಾತಂತ್ರ್ಯ ವಾದಿಯೆಂದೋ ? ಇಲ್ಲಿ ಕೆಲವು ಮೂಲಭೂತ ಪ್ರಶ್ನೆಗಳೇಳುತ್ತವೆ. ಸಾರಾಸಾರ ವಿಚಾರಮಾಡಿ, ಬುದ್ಧಿಪೂರ್ವಕವಾಗಿ ಸ್ಥಿತಪ್ರಜ್ಞನಂತೆ ಆತ್ಮಹತ್ಯೆ ಮಾಡಿಕೊಂಡ “ಅವನು ಸ್ವಾತಂತ್ರ್ಯವನ್ನು ಪಡೆದನೋ ಅಥವಾ ತ್ಯಜಿಸಿದನೋ ಅಥವಾ ಕಳೆದು ಕೊಂಡನೋ ?
ಸಾಮಾನ್ಯವಾಗಿ ಆತ್ಮಹತ್ಯೆ’ಯ ಅರ್ಥ ಜೀವನದಿಂದ, ಜೀವನದ ಸೆರೆಯಿಂದ ಮುಕ್ತನಾಗುವುದು, ಸ್ವತಂತ್ರನಾಗುವುದು (ಪುನರ್ಜನ್ಮ ಇದ್ದರೂ ಅಷ್ಟೇ, ಇರದಿದ್ದರೂ ಅಷ್ಟೆ) ಎಂದು. ಆದರೆ ಇಲ್ಲಿಯ ‘ಅವನಿಗೆ’ ಜೀವನ ಕೆಲವೊಂದು ಸಲ ಸೆರೆಯಂತೆ ಬಂಧನಕಾರಿ, ಬೇಸರ-ಕಾರಿ ಎಂದೆನ್ನಿಸಿದ್ದರೂ ಅವನ ಮಟ್ಟಿಗೆ ಅವನ ಜೀವನದಲ್ಲಿ ಸಾಕಷ್ಟು ಸ್ವಾತಂತ್ರ್ಯ ಇದ್ದೇ ಇತ್ತು. ನೌಕರಿಯೊಂದನ್ನು ಬಿಟ್ಟರೆ ಉಳಿದಾವ ಬಾಹ್ಯ ಲೌಕಿಕ ಬಂಧನದಲ್ಲ ಅವನು ಸಿಲುಕಿಬಿದ್ದಿರಲಿಲ್ಲ. ತನ್ನ ಜೀವನದ ಬಹುಭಾಗವನ್ನು ಅವನು ತನ್ನ ಸ್ವಾತಂತ್ರ್ಯದ ವಿವಿಧ ಅನುಷ್ಟಾನಗಳಲ್ಲಿಯೇ ಕಳೆದಿದ್ದನೆಂಬುದು ಅವನ ದಿನಚರಿಯ ಅವಲೋಕನದಿಂದ ಸ್ಪಷ್ಟವಾಗುವುದು. ಅದೇ ಸ್ವಾತಂತ್ರ್ಯಕ್ಕಾಗಿಯೇ ಅವನು ಅವಳೊಡನೆ ಮದುವೆಗೆ ಒಪ್ಪಿರಲಿಲ್ಲ. ‘ಅಂಥವನು ಮತ್ತಾವ ಲೋಕೋತ್ತರ ಸ್ವಾತಂತ್ರ್ಯಕ್ಕಾಗಿ ಈ ಲೋಕವನ್ನು ತೊರೆದ ? ಎಂಬ ಪ್ರಶ್ನೆ ಏಳುತ್ತದೆ. ಅವಳಿಂದ ಬಿಡುಗಡೆ ಹೊಂದುವುದಕ್ಕಾಗಿ ಅವನು ಪಲಾಯನವಾದಿಯಂತೆ ಆತ್ಮಹತ್ಯೆಯನ್ನು ಮಾಡಿಕೊಂಡನೇ ? ಹಾಗೇನು ತೋರುವುದಿಲ್ಲ. ಯಾಕೆಂದರೆ ಅಂತಹ ಬಿಡುಗಡೆಗಾಗಿ (ಅವಳಿಂದ ಬಿಡುಗಡೆಹೊಂಡುವುದಕ್ಕಾಗಿ) ಅವನೆಲ್ಲಿಯಾದರೂ ಬೇಡಿಕೊಂಡದ್ದನ್ನು , ಬಯಸಿದ್ದನ್ನು , ನಾವು ಕಾಣುವುದಿಲ್ಲ. ಮೇಲಾಗಿ ಅವನು ಒಂದು ವೇಳೆ ಅಂತಹ ಬಿಡುಗಡೆಯನ್ನು ಬಯಸಿದ್ದೇ ನಿಜವಿದ್ದರೆ, ಅವನು, ಅದನ್ನು , ತಾನು ಸಾಯದೇ ಈ ಜೀವನದಲ್ಲಿದ್ದುಕೊಂಡೇ ಪಡೆದುಕೊಳ್ಳಬಹುದಿತ್ತು. ಅವಳು ಅದಕ್ಕೇನು ಅಡ್ಡಿ ಮಾಡುವಂತಿರಲಿಲ್ಲ. ಈ ಎಲ್ಲ ದೃಷ್ಟಿಯಿಂದ ವಿಚಾರಮಾಡಲಾಗಿ, ಅವನು, ಕಾಮೂ ಹೇಳುವಂತೆ, ತನ್ನ ಸ್ವಾತಂತ್ರ್ಯವನ್ನು , ತನ್ನ ಆರಿಸುವಿಕೆಯನ್ನು , (his choice), ಕೊನೆಗೊಳ್ಳಿಸುವುದರ ಸಲುವಾಗಿಯೇ ಆತ್ಮಹತ್ಯೆ ಮಾಡಿಕೊಂಡ ಎಂದು ಹೇಳಬೇಕಾಗುವುದು.
ಶ್ರೀ ರಾಮಾನುಜನ್ ಅವರು ತಮ್ಮ ಹಿನ್ನುಡಿಯಲ್ಲಿ ಹೇಳಿದಂತೆ, “ಹಳದಿ ಮೀನಿ”ನ ನಾಯಕ ತನಗೆ ಮಿಕ್ಕಿದ್ದೆಲ್ಲ ಅರ್ಥಹೀನವಾಯ್ತಂದು ತನ್ನನ್ನು ತಾನು ಬಿಡಿಸಿಕೊಳ್ಳಲೆತ್ನಿಸುತ್ತಾನೆ.” ಆದರೆ ಬಂಧನದಿಂದಲ್ಲ, ಸ್ವಾತಂತ್ರ್ಯದಿಂದ, ಕಾಮೂ ಹೇಳುವಂತೆ, ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ನಿರರ್ಥಕ ಕಾರ್ಯದಲ್ಲಲ್ಲದೆ ಬೇರೆಲ್ಲ ಯಾರಿಗೂ ಸ್ವಾತಂತ್ರ್ಯವಿಲ್ಲ. ತನ್ನ ಜೀವನದುದ್ದಕ್ಕೂ ಯಾವುದೊಂದಕ್ಕೂ; ಯಾರಿಗೂ ‘commit’ ಮಾಡದೇ ನಿರರ್ಥಕ ಸ್ವಾತಂತ್ರ್ಯವನ್ನು ಅನುಭವಿಸುತ್ತ ಬಂದಿದ್ದ ಅವನು ಕೊನೆಗೊಮ್ಮೆ ಧೈರ್ಯಮಾಡಿ ತನ್ನನ್ನು ತಾನು ‘commit’ ಮಾಡುತ್ತಾನೆ “Suicide commit’ ಮಾಡುವುದರ ಮೂಲಕ. ಅವನು ಹೀಗೆ ಆತ್ಮಹತ್ಯೆಯ ಮೂಲಕ ತನ್ನ ಸ್ವಾತಂತ್ರ್ಯವನ್ನು, ತನ್ನ ‘choice’ನ್ನು ವಿಸರ್ಜಿಸಿ ತನ್ನನ್ನು ಕಾಯಾ-ವಾಚಾ-ಮನಸಾ ‘commit’ ಮಾಡಿಕೊಂಡಿದ್ದುದರಿಂದಾಗಿ ಅವಳ ಇನ್ನೂ ‘commit’ ಮಾಡದ ಸುಪ್ತಚೇತನ ಉಲ್ಬಣಗೊಳ್ಳುತ್ತದೆ ; ಕೊನೆಗೆ ತನ್ನ ಶರಣಾಗತಿಯನ್ನು ಒಪ್ಪುತ್ತದೆ. ಇದೇ ಇಲ್ಲಿ ನಿರೂಪಿತವಾದ “Polarised’ ಪ್ರೇಮ ತತ್ವ. ಅವನು ಮತ್ತು ಅವಳು ಕೊನೆಗೆ ಹೀಗೆ ತಮ್ಮನ್ನು ತಾವು ಪರಸ್ಪರರಿಗೆ ‘commit ಮಾಡಿಕೊಳ್ಳುವುದರ ಮೂಲಕ ಸಮರ್ಪಿಸಿಕೊಳ್ಳುವುದರ ಮೂಲಕ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುತ್ತಾರೆ. ಇಬ್ಬರೂ ತಮ್ಮ ಅರ್ಥವಿಲ್ಲದ ಸ್ವಾತಂತ್ರ್ಯವನ್ನು ತ್ಯಜಿಸಿ, ತಮ್ಮ ನೀರಸವಾದ ಸ್ವಂತ ವ್ಯಕ್ತಿತ್ವ – ಪೂಜೆಯನ್ನು ನಿಲ್ಲಿಸಿ ‘ಪ್ರೀತಿ’ ಎಂಬ ಪದವನ್ನು ಅರ್ಥಮಾಡಿಕೊಳ್ಳುತ್ತಾರೆ. ಅವನು ಅದನ್ನು ತುಸು ಮೊದಲು ಅರ್ಥಮಾಡಿಕೊಂಡು ಹೋಗಿಬಿಡುತ್ತಾನೆ. ಅವಳು ಅವನು ಹೋದ ನಂತರ ಮತ್ತು ಹೋದುದರಿಂದಾಗಿ ಅದನ್ನು ಅರ್ಥಮಾಡಿಕೊಳ್ಳುತ್ತಾಳೆ. ಇಲ್ಲಿಗೆ ಕಾದಂಬರಿಯ ಕಥೆ ಮುಗಿಯುತ್ತದೆ.
ಈ ಕಾದಂಬರಿಯ ನಾಯಕನ ಮನಸ್ಸಿನಲ್ಲಿಯ ಕಾಮದ ಮತ್ತು ಪ್ರೇಮದ (ಇವೆರಡನ್ನೂ ಬೇರ್ಪಡಿಸುವ ಕೃತ್ರಿಮತೆ ಅಥವಾ ಸಾಂಪ್ರದಾಯಿಕ ಮಡಿವಂತಿಕೆಯನ್ನು ಲೇಖಕರು ತೋರಿಸಿಲ್ಲ) ಬೆಳವಣಿಗೆಯು ನಿರೂಪಣೆಯು ಮನಃಶಾಸ್ತ್ರದ, ಅದರಲ್ಲೂ “Developmental Psychology’ಯ, ದೃಷ್ಟಿಯಿಂದ ಬಹಳೇ ಸಮರ್ಪಕವಾಗಿದೆ. ನಾಯಕನು ಚಿಕ್ಕವನಿದ್ದಾಗ ಅವನಲ್ಲಿ ಪ್ರೇಮವನ್ನು ಮೊದಲಬಾರಿ ಕೆರಳಿಸಿ ಅವನ ಕೈಬಿಟ್ಟ ಹೈಸ್ಕೂಲು ಹುಡುಗಿ ಲೀಲಾ ಅವನಲ್ಲಿ ಹೆಣ್ಣಿನ ಬಗ್ಗೆ, ಪ್ರೇಮದ ಬಗ್ಗೆ ಒಂದು ಬಗೆಯ ಸೇಡಿನ ಭಾವನೆಯನ್ನು ಬಿತ್ತುತ್ತಾಳೆ. ಈ ನಿರಾಶೆಯ, ಈ ಸೇಡಿನ ಭಾವನೆ ಅವನ ಸುಪ್ತಚೇತನದಲ್ಲಡಗಿ ಮತ್ತೆ ಮತ್ತೆ ಅವನ ಜಾಗೃತ ಪ್ರೇಮಕ್ಕೆ ಅಡ್ಡಿಯನ್ನುಂಟುಮಾಡುತ್ತದೆ. ಇದರಂತೆಯೇ ಅವನಿಗೆ ತನ್ನ ತಾಯಿಯ ಬಗ್ಗೆ ಬೆಳೆದು ಬಂದ ಅಪರಾಧಿ-ಪ್ರೇಮಭಾವನೆಯು (Oedipus Complex) ಅವನಲ್ಲಿ (ಅವಳ’ (ನಾಯಿಕೆಯ) ಬಗ್ಗೆ ಬೆಳೆಯುತ್ತಿದ್ದ ಪ್ರೀತಿಗೆ ಆಂತರಿಕ ಅಡ್ಡಿಯನ್ನುಂಟು ಮಾಡುತ್ತದೆ. ಫ್ರಾಯ್ಡ ಮಹಾಶಯನಿಂದ ಪ್ರತಿಪಾದಿತವಾದ ಈ ‘ಯುಡಿಪಸ್ ಕಾಂಪ್ಲೆಕ್ಸ್’ ತತ್ವವನ್ನು ಅಪಾರ್ಥಮಾಡಿಕೊಂಡವರೇ ಸಾಮಾನ್ಯವಾಗಿ ಹೆಚ್ಚಿರುವಾಗ ಇಲ್ಲಿ ಆ ತತ್ವವನ್ನು ಮತ್ತು ಆ ತತ್ವಕ್ಕೆ ತಳಹಗಿಯಾಗಿರುವ ಸುಪ್ತಮನಸ್ಸಿನ ಭಾವನೆಗಳನ್ನು ಹಾಗೂ ಆಕಾಂಕ್ಷೆಗಳನ್ನು ಯಥಾರ್ಥವಾಗಿ ಹಾಗೂ ಬಹು ಕಲಾತ್ಮಕವಾಗಿ ‘ಕೆಲವೇ ಮಾತುಗಳಲ್ಲಿ ನಿರೂಪಿಸಿದ್ದು ಈ ಲೇಖಕರ ಆಳವಾದ ವೈಜ್ಞಾನಿಕ ದೃಷ್ಟಿಯ
ಮತ್ತು ಕಲಾಪ್ರೌಢಿಮೆಯ ದ್ಯೋತಕವಾಗಿದೆ.
“ಅವನು’, “ನನ್ನನ್ನು ನನ್ನನ್ನೆಂದೂ ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ”, ಎಂದು ಹೇಳಿದಾಗ, ‘ಅವಳು’ ಹೇಳಿದ್ದಳು, “……………………ನಿನ್ನ ಕಷ್ಟ ಏನು ಗೊತ್ತೇ ? ನೀನು ನಿನ್ನ ತಾಯಿಯ ಸಂಬಂಧವನ್ನು ತಾಯಿ-ಮಗ ಎಂದು ಅರ್ಥಮಾಡಿಕೊಳ್ಳುತ್ತಾ ಇಲ್ಲ. ನಿನ್ನ ತಾಯಿ ಒಬ್ಬ ಹೆಂಗಸು, ನೀನೊಬ್ಬ ಗಂಡಸು ಎಂದು ನೋಡುತ್ತಾ ಇದ್ದೀ. ಅದರಿಂದ ಮನಸ್ಸಿಗೆ ನೋವು. ಏನೋ ಪಾಪಮಾಡಿದ ಹಾಗೆ ಅಪರಾಧ ಬುದ್ದಿ.” ನಾಯಕಿಯ ಮನಸ್ಸಿನ ಚಿತ್ರಣದಲ್ಲಿ ಅನುರಾಗದ ಈ ಬಗೆಯ Developmental ನಿರೂಪಣೆಯನ್ನು ನಾವು ಕಾಣುವುದಿಲ್ಲವಾದರೂ ಅವಳ ಮತ್ತು ಮುದುಕ ನಾಯರನ ನಡುವಿನ ಹಾರ್ದಿಕ ಸಂಬಂಧವನ್ನು ನಾವು ಮನೋವಿಶ್ಲೇಷಣಾತ್ಮಕವಾಗಿ ಪರಿಶೀಲಿಸಿದರೆ ನಾಯರ್‌ ಅವಳಿಗೆ ತಂದೆಯ ಪಿತೃವಾತ್ಸಲ್ಯದ ಪ್ರತೀಕ (Father Image) ನಾಗಿದ್ದ ಎಂದು ನನಗೆ ತೋರಬಹುದು. ಈ ದೃಷ್ಟಿಯಿಂದ ಅವಳು ತನ್ನ ಆದಿಕಾವು (Libido) ದ ‘Electra’ ಅವಸ್ಥೆಯನ್ನು ಅನುಭವಿಸಿದ್ದಳು ಎಂದು ಹೇಳಬಹುದು. ಕೆಲವರಿಗೆ ಈ ಬಗೆಯ ಮನೋವಿಶ್ಲೇಷಣಾ ಶಾಸ್ತ್ರ (Psychoanalysis) ದ ವಿಚಾರಗಳ ಮತ್ತು ಪ್ರತಿಮೆಗಳ ಅನ್ವಯ ಇಲ್ಲಿ ಅಸಂಗತವೆಂದಾಗಲೀ, ಕೃತ್ರಿಮವೆಂದಾಗಲೀ, ಅನವಶ್ಯವಾದ ಪಾಂಡಿತ್ಯ-ಪ್ರದರ್ಶನವೆಂದಾಗಲೀ ಅನಿಸಬಹುದು. ಆದರೆ ನನಗೆ ಹಾಗೆ ಅನಿಸುವದಿಲ್ಲ. ಇಲ್ಲಿನ ಸಂದರ್ಭ ಮತ್ತು ಪಾತ್ರರಚನೆಗೆ ಈ ಮನೋವೈಜ್ಞಾನಿಕ ಸೂತ್ರಗಳ ಮತ್ತು ಪ್ರತಿಮೆಗಳ ಅನ್ವಯ ಸ್ವಾಭಾವಿಕವಾಗಿದೆ, ಸುಸಂಗತವಾಗಿದೆ; ಕೃತ್ರಿಮವಾಗಿಲ್ಲ ಎಂದೇ ನನ್ನ ಅಭಿಪ್ರಾಯ. ಯಾಕೆಂದರೆ ನಾವು ಈ ವೈಜ್ಞಾನಿಕ ಸೂತ್ರಗಳ ಮತ್ತು ಪ್ರತಿಮೆಗಳ ಬೆಳಕಿನಲ್ಲಿ ಇಲ್ಲಿನ ಪಾತ್ರಗಳನ್ನು ಮತ್ತು ಅವುಗಳ ಆಂತರಿಕ ಬೆಳವಣಿಗೆಯನ್ನು ನೋಡಿದರೆ, ಪರಿಶೀಲಿಸಿದರೆ, ನನಗೆ ಅವುಗಳ ಅರ್ಥ, ಅವುಗಳ ವಿಕ್ಷಿಪ್ತತೆ, ಹೆಚ್ಚು ಸ್ಪಷ್ಟವಾಗುತ್ತವೆ. ಅದರಂತೆಯೇ ಕತೆಯ ಬೇರೆ ಬೇರೆ ಸಂದರ್ಭಗಳಲ್ಲಿ ಆಯಾ ಪಾತ್ರಗಳ ವ್ಯವಹರಣೆಯ ಉದ್ದಿಶ್ಯತೆಯ ನಿಜಸ್ವರೂಪ ನಮಗೆ ಗೊತ್ತಾಗುತ್ತದೆ.
ಕೊನೆಯದಾಗಿ, ಈ ಕಾದಂಬರಿಯ ಶೈಲಿ, ಹಾಗೂ ವಾತಾವರಣ ನಿರ್ಮಿಸುವ ಶಕ್ತಿ ಇವುಗಳ ಬಗ್ಗೆ ನಾಲ್ಕು ಮಾತುಗಳು. ಶೈಲಿಯನ್ನು ಕುರಿತು ನಾನೇನು ಹೆಚ್ಚು ಹೇಳಬೇಕಾದ ಅವಶ್ಯಕತೆಯಿಲ್ಲ. ಆ ಕೆಲಸವನ್ನು ಶ್ರೀ ‘ಕೀರ್ತಿ’ಯವರು ‘ಈ ಕೃತಿಯ ಬಗ್ಗೆ’ ಎಂಬ ಶೀರ್ಷಿಕೆಯಲ್ಲಿ ‘ಹಳದಿ ಮಿನು’ ಪುಸ್ತಕದ ರಕ್ಷಾಕವಚ (Cover) ದ ಬೆನ್ನಮೇಲೆಯೇ, “ಬೆನ್ನಿಗೆ ಭೀಮನ ರಕ್ಷೆ’ ಎಂಬಂತೆ ಬಹು ಸಮರ್ಥವಾಗಿ, ಸಮರ್ಪಕವಾಗಿ ಹಾಗೂ ಕಲಾತ್ಮಕವಾಗಿ ಮಾಡಿದ್ದಾರೆ. ಹೌದು, ಈ ಕಾದಂಬರಿಯ ಶೈಲಿ, ಶ್ರೀ ‘ಕೀರ್ತಿ’ಯವರು ಹೇಳಿದಂತೆ, “ಅಕ್ಷರಶಃ ಸ್ಪಟಿಕದ ಶಲಾಕೆ”ಯಾಗಿದೆ. ವೈಯಕ್ತಿಕ ವಿಷಯಗಳನ್ನು ನಿರೂಪಿಸುವಾಗ ಮಿತ್ರನ ಆಪ್ತವಚನದ ಆತ್ಮೀಯತೆ (ಇಲ್ಲಿ ‘ಶ್ರೀನಿವಾಸ’ರ ಸುಬ್ಬಣ್ಣನ ಪಿಟೀಲುವಾದನದ ಆತ್ಮೀಯತೆಯ ನೆನಪಾಗುತ್ತದೆ) ಯನ್ನೂ, ಸ್ನಿಗ್ಧ ಹೃದಯತೆಯನ್ನೂ, ಇನ್ನುಳಿದ ಬಾಹ್ಯವಿಷಯ-ಘಟನೆಗಳನ್ನು ನಿರೂಪಿಸುವಾಗ ನಿಷ್ಪಕ್ಷಪಾತವಾದ ಪಾರದರ್ಶಕತೆಯನ್ನೂ, ವಿಷಯ-ನಿಷ್ಠೆಯನ್ನೂ, ಅಂತರಂಗವನ್ನು ಒಳಹೊಕ್ಕು ನೋಡುವಾಗ ಮನೋವಿಜ್ಞಾನಿಯ ಕ್ಷ-ಕಿರಣದ ಸೂಕ್ಷ್ಮತೆಯನ್ನೂ ವೈಜ್ಞಾನಿಕ ನಿರ್ಭಿಡೆಯನ್ನೂ ಈ ಕಾದಂಬರಿಯ ಶೈಲಿ ಚೆನ್ನಾಗಿ ಒಳಗೊಂಡಿದೆ. ಶೈಲಿಯ ಬಗ್ಗೆ ಈ ಗ್ರಂಥದಲ್ಲೇ ಬರುವ ಒಂದು ಮಾತು ತುಂಬ ಗಮನಾರ್ಹವಾಗಿದೆ; ಮನನಾರ್ಹವಾಗಿದೆ (ಸಾಹಿತಿಗಳಿಗೆ ಬಹು ಮುಖ್ಯವಾಗಿ). “ಬಟ್ಟೆ ಹೊಲಿಸಿದೀನಿ, ಹಾಕ್ಕೊಳ್ಳೋಕೆ ಮೈಯೇ ಇಲ್ಲ” ಎಂದು ಅವನು’ ನುಡಿದಾಗ, ಅವನ ಗೆಳೆಯ ಸ್ವಾಮಿ ಅನ್ನುತ್ತಾನೆ, “ಅದು ನಿಜ, ಶೈಲಿಗೇನು ಕಡಿಮೆ ಈ ಪ್ರಪಂಚದಲ್ಲಿ, ಹೇಳೋಕ್ಕೆ ಒಂದು ಖಚಿತವಾದ ವಿಷಯ ಇಲ್ಲ.” ಇಂಥ ಖಾಲೀ ‘ಶೈಲೀಯತೆ’ಯ ಖಯಾಲಿ ಈ ಕಾದಂಬರಿಯಲ್ಲಿಲ್ಲ ಎಂದು ಬೇರೆ ಹೇಳಬೇಕಿಲ್ಲ.
ಇನ್ನು ಈ ಕಾದಂಬರಿಯ ವಾತಾವರಣ ನಿರ್ಮಿಸುವ ಶಕ್ತಿಯ ಬಗ್ಗೆ ಹೇಳಬೇಕೆಂದರೆ, ನನಗೆ ಕಳೆದ ವರುಷದ ಬೇಸಿಗೆಯಲ್ಲಿ ‘ಮನ್ವಂತರ’ ಪತ್ರಿಕೆಯ ಆಶ್ರಯದಲ್ಲಿ ನಡೆದ ಸಾಹಿತ್ಯಗೋಷ್ಠಿಯಲ್ಲಿ ಈ ಕಾದಂಬರಿಯನ್ನು ಕುರಿತು ಚರ್ಚೆ ನಡೆದಾಗ ಶ್ರೀ ಚಂದ್ರಶೇಖರ ಕಂಬಾರರು ಹೇಳಿದ ಒಂದು ಮಾತು ನೆನಪಾಗುತ್ತದೆ. ಅವರು ಹೇಳಿದರು, “Once we read this novel, it continues to haunt us* ಎಂದು. ಇದು ನನ್ನ ಮಟ್ಟಿಗಂತೂ ಅಕ್ಷರಶಃ ನಿಜ. ಈ ತರಹದ “haunting ವಾತಾವರಣವನ್ನು ಕೆಲವೇ ಲೇಖಕರು ನಿರ್ಮಿಸಬಲ್ಲರು. “ಎಡ್ಗರ್ ಅಲೆನ್ ಫೋ”ನ ಕತೆಗಳಲ್ಲಿ, ‘ಚೆಕೋವ್ಹ’ನ ಕತೆಗಳಲ್ಲಿ, ನಾವು ಈ ಬಗೆಯ ‘ಗುಂಗು’ ಹಿಡಿಸುವ
ವಾತಾವರಣವನ್ನು ಅನುಭವಿಸುತ್ತೇವೆ. ನಮ್ಮ ಜಗತ್ತನ್ನು ಮರೆಯಿಸಿ ತನ್ನ ಜಗತ್ತಿನಲ್ಲಿ ನಮ್ಮನ್ನು ಗುಂಗುಮಾಡುವ ಈ ವಾತಾವರಣ ನಿರ್ಮಿತಿಯನ್ನೇ ನಾವು ಕಲೆಯ, ಸಾಹಿತ್ಯದ, ಮಾದಕ……..ಅಲ್ಲಲ್ಲ…..ಗಾರುಡಿ ಶಕ್ತಿ ಎಂದು ಕರೆಯಬಹುದು. ನನಗೆ, ಈ ಕಾದಂಬರಿಯನ್ನು ಮೊದಲಬಾರಿ ಓದಿದಾಗ, ನಾನು ಹಿಂದಕ್ಕೆ “The cabinet of Dr. Caligouri’ ಎಂಬ ಮನೋವಿಶ್ಲೇಷಣಾತ್ಮಕ ಇಂಗ್ಲೀಷ್ ಚಲಚ್ಚಿತ್ರ ಮತ್ತು ಟಾಗೋರರ ಕಥೆಯನ್ನಾಧರಿಸಿದ ‘ಕ್ಷುದಿತ ಪಾಷಾಣ’ ಎಂಬ ಬಂಗಾಲೀ ಚಲಚ್ಚಿತ್ರಗಳನ್ನು ನೋಡಿದಾಗ ನನಗೆ ಉಂಟಾಗಿದ್ದ “haunting ಅನುಭವ ಉಂಟಾಯಿತು. ಈ ಕಾದಂಬರಿಯನ್ನು ಓದುವ ಎಲ್ಲರಿಗೂ ಇದೇ ಬಗೆಯ ಅಥವಾ ಇಷ್ಟೇ ತೀವ್ರವಾದ “haunting’ ಅನುಭವವಾಗುತ್ತದೆಂದು ನಾನು ಹೇಳುತ್ತಿಲ್ಲ. ಆ ಅನುಭವ ಅವರವರ ಹೃದಯದ ಪ್ರತಿಸ್ಪಂದನದ ದೀತಿಯನ್ನು, ಮಟ್ಟವನ್ನು, ಹಾಗೂ ಅವರವರ ಪೂರ್ವಾನುಭವ ಸ್ಮೃತಿ-ತರಂಗಗಳನ್ನು, ಅವಲಂಬಿಸಿರುತ್ತದೆ.
ಇಲ್ಲಿಗೆ ನನ್ನ ಈ ಸು (?)-ದೀರ್ಘವಾದ ವಿವೇಚನೆಯನ್ನು ಮುಗಿಸುತ್ತೇನೆ. ಕಾದಂಬರಿಯ ಎಲ್ಲ ಅಂಶಗಳನ್ನೂ ನಾನಿಲ್ಲಿ ವಿವೇಚಿಸಿಲ್ಲ. ಸಾಂಪ್ರದಾಯಿಕವಾಗಿ ವಿಮರ್ಶಕನು ಸಾಮಾನ್ಯವಾಗಿ ವಿವೇಚಿಸಬೇಕಾದಷ್ಟನ್ನು ಕೂಡ ನಾನಿಲ್ಲಿ ವಿವೇಚಿಸಿರಲಿಕ್ಕಿಲ್ಲ. ಮತ್ತೊಂದೆಂದರೆ, ನಾನಿಲ್ಲಿ ಈ ಕಾದಂಬರಿಯ ಗುಣಗಳನ್ನು ಮಾತ್ರ ವಿವೇಚಿಸಿರುವೆನು; ದೋಷಗಳ ಮತ್ತು ಕೊರತೆಗಳ ವಿವೇಚನೆ ಮಾಡಿಲ್ಲ. ಅದನ್ನು ಬೇರೆಯವರೇ ಮಾಡಲಿ ಎಂದು ಬಿಟ್ಟಿದ್ದೇನೆ. ಹೇಗೆ ಈ ಕಾದಂಬರಿಯು ಸಾಂಪ್ರದಾಯಕವಾದ ಸಾಹಿತ್ಯಕೃತಿಯಲ್ಲವೋ ಹಾಗೆಯೇ ನನ್ನ ಈ ವಿವೇಚನೆ ಕೂಡ ಸಾಂಪ್ರದಾಯಿಕವಾದ ವಿಮರ್ಶೆ ಅಲ್ಲ.

Close

ಕಪ್ಪುದೀಪ (ಕಥೆ)

ರಾಮದಾಸ್‌

ಕಪ್ಪು ದೀಪ
(ಸಣ್ಣ ಕಥೆ)

ಹಗಲು ಬಿಸಿಲ ಬಯಲಿನಲ್ಲಿ ಕಪ್ಪು ಕಿರಣದ ಮೆದೆ ಹಾಕಿದೆ
ಕಪ್ಪು ದೀಪ
ನೂರು ಹಣತೆ ಅಂಥ ಇಂಥ ನೂರು ದೀಪ
ಚಂದ್ರ ಸೂರ‍್ಯ ಬೆಳಕು
ಕಪ್ಪು ಕಿರಣ ದೀಪ ಹಿಡಿದು
ಹುಡುಕು ಬುದ್ಧಿ ಹುಡುಕು.
ಎಲ್ಲರಿಗೂ ಆದದ್ದು ನನಗಲ್ಲ. ಎಲ್ಲರೂ ಬೆಳಕೆಂದು ನಂಬಿದ್ದು ಕತ್ತಲೆಯನ್ನೇ. ಆ ಕತ್ತಲೆಯಲ್ಲೇ ಮತ್ತೆ ಮತ್ತೆ ಎಡವಿ ಬಿದ್ದು ಮುಗ್ಗರಿಸಿ ಮೇಲೆದ್ದು ನಡೆದಾಡುತ್ತ ತಾವು ಏರಿದ್ದು ಸುಖದ ಸುಪ್ಪತ್ತಿಗೆ ಎಂದು ಭ್ರಮಿಸುವ ಗೆಳತಿಯರನ್ನು ಕಂಡಾಗ ನನಗೆ ಅಯ್ಯೋ ಪಾಪ ಅನ್ನಿಸುತ್ತದೆ.
ಗೆಳತಿಯರು ಹಾಡಿದಾಗ ನರ್ತಿಸಿದಾಗ ಒಳ್ಳೆ ಪ್ರಬಂಧ ಬರೆದಾಗ ಹುಡುಗರೆಲ್ಲ ಸುತ್ತ ಮುತ್ತಿ ಹೊಗಳುತ್ತಾರೆ-Done well, Congraduations, marvellous, ತುಂಬಾ ಚೆನ್ನಾಗಿತ್ತು, ಸೊಗಸಾಗಿತ್ತು. ರಮಾ ಮಮತಾ ತಾರಾ ಸುನೀ ಎಲ್ಲರಿಗೂ ಸಂತೋಷವೇ ಸಂತೋಷ. ನನಗಂತೂ ಇದೆಲ್ಲ ಹುಡುಗಾಟವಾಗಿ ಕಾಣಿಸುತ್ತದೆ. ಹೀಗಿದ್ದರೆ ಮಾತ್ರ ಜೀವನವೆ ಎಂಬ ಸಂಶಯ ಹೀಗೆ ಬಂದು ಹಾಗೆ ಹೋಗುತ್ತದೆ. ನಾನು ಮಾಸ್ಟರ್‌ ರಾಜುವಿನತ್ತ ಧಾವಿಸುತ್ತೇನೆ.
ಮಾಸ್ಟರ್ ರಾಜು ಕಳೆದ ವರ್ಷ ತಾನೇ ನಮ್ಮ ಕಾಲೇಜಿಗೆ ಬಂದರು. ಅವರು ಕುರೂಪಿಯಲ್ಲ. ಅವರ ಪಾಠ ಕೇಳಿದ ಮೇಲಂತೂ ಅವರು ತುಂಬ ಚಂದ ಅನ್ನಿಸಿತು. ಅವರ ಪೀರಿಯಡ್ಡಿನಲ್ಲಿ ಇಂಗ್ಲೀಷ್ ಪಾಠ ಅರ್ಧ ಘಂಟೆ ಆದರೆ ಮಿಕ್ಕರ್ಧ ಘಂಟೆ ಜೀವನ ಪಾಠ. ಅವರದ್ದು ಸಾಮಾಜಿಕ ರಾಜಕೀಯ ಮಾನಸಿಕ ವಿಚಾರಗಳೆಲ್ಲದರಲ್ಲೂ ನಿಷ್ಪಕ್ಷಪಾತ ವಿಚಾರಧಾರೆ. ಅವರ ದೃಷ್ಟಿಯಲ್ಲಿ, ದೇವರಿಗೆ ಸಂಬಂಧಪಟ್ಟ ಮಾತು ಕತೆಗಳೆಲ್ಲ ನಿರುಪಯೋಗಿ. ಆದ್ದರಿಂದ ದೇವರ ವಿಷಯ ಚಕಾರ ಇಲ್ಲ. ಸೃಷ್ಟಿಯ, ದೇವರ ವಿಚಾರಗಳು ನನಗೆ ಪ್ರಮುಖ ಅನ್ನಿಸುತ್ತದೆ. ಇದನ್ನು ಚರ್ಚಿಸಬೇಕೆಂದು ಮಾಸ್ಟರು ಬಿಡುವಾಗಿದ್ದಾಗ ನಾನು ಅವರ ಕೋಣೆಗೆ ಹೋಗುತ್ತೇನೆ. ಅವರು ತಮ್ಮಷ್ಟಕ್ಕೆ ಮುಗುಳು ನಗುತ್ತಿದ್ದವರು ನನ್ನನ್ನು ಕಂಡು ಬನ್ನಿ ಬನ್ನಿ ಅನ್ನುತ್ತಾರೆ. ಕೂತು ಕೊಳ್ಳಲು ಹೇಳುತ್ತಾರೆ.
ಏನೋ ಯೋಚನೆ ಮಾಡ್ತಾ ಇದ್ದೀರಿ. ತೊಂದರೆ ಆಯಿತಾ ಸರ್ ? ಏನೂ ಇಲ್ಲ ಮೊನ್ನೆ ಮಮತಾ ಹಾಡಿದ ಹಾಡು ಜ್ಞಾಪಕಕ್ಕೆ ಬಂತು ; ಅವರು ಹೊಸಬರಾಗಿ ಹೇಳುತ್ತಾರೆ, ಮಮತಾ ಸೊಗಸಾಗಿ ಹಾಡುತ್ತಾರೆ.
ಇವರೂ ಗೋಪಾಲನ ಹಾಗೆ ಅನ್ನಿಸಿ ಅಸಹ್ಯ ಆಗಿ ಎದ್ದು ಹೊರಟು ಹೋಗೋಣ ಅನ್ನಿಸಿದರೂ ಅದು ಶಿಷ್ಟಾಚಾರ ಅಲ್ಲ ಅಂತ ಕೂತುಕೊಳ್ಳುತ್ತೇನೆ.
ನಿಮಗೆ ಹಾಡಲು ಬರೋದಿಲ್ಲವೇ ?
ಬರುತ್ತದೆ ಆದರೆ ನಾನು ಕುರಿಗಳ ಮುಂದೆ ಹಾಡುವುದಿಲ್ಲ ಎನ್ನುವ ಮಾತುಗಳು ಗಂಟಲಲ್ಲೇ ಸಿಕ್ಕಿಕೊಳ್ಳುತ್ತವೆ.
ನಾನು ಹಾಡುತ್ತೇನೆ. ಆದರೆ ಅದು ನನಗಾಗಿ. ಅಕ್ಕಪಕ್ಕದ ಮನೆಯವರೆಲ್ಲ ದೀಪ ಆರಿಸಿ ಮಲಗಿದ ಮೇಲೆ ನಾನು ನಮ್ಮ ಮನೆಯ ಹಿಂದಿನ ತೋಟಕ್ಕೆ ಹೋಗುತ್ತೇನೆ. ತೋಟದಿಂದ ಬಯಲಿನ ಕಡೆಗೆ ಇಳಿಜಾರಾದ ಪಾದೆಕಲ್ಲಿನ ಮೇಲೆ ಹಾಯಾಗಿ ಮಯ್‌
ಚೆಲ್ಲುತ್ತೇನೆ. ಬೇಸಗೆಯ ದಿನಗಳಾಗಿದ್ದರೆ ಸೀರೆ ಬಿಟ್ಟು ಬರೇ ಲಂಗ ರವಿಕೆಯಲ್ಲಿ ಮಗುವಾಗಿ ಆಕಾಶದ ಕಡೆ ನೋಡುತ್ತೇನೆ. ಅಮಾವಾಸ್ಯೆಯ ದಿನ ಆಗಿದ್ದರಂತೂ ನನ್ನ ಇಡೀ ಜೀವ ನಕ್ಷತ್ರಲೋಕದ ನಡುವೆ ನಿರಾತಂಕವಾಗಿ ಸೈಚ್ಛಾವಿಹಾರ ಮಾಡುತ್ತದೆ. ಆಗ ನನಗೆ ನನ್ನ ಕ್ಷುಲ್ಲಕ ದೇಹದ ಬಗ್ಗೆ ಅದನ್ನು ಸುತ್ತಿದ ಲಂಗ ರವಿಕೆಯ ಬಗ್ಗೆ ಹಗಲೆಲ್ಲ ಅದನ್ನು ಹರಿಹರಿದು ಮುತ್ತುವ ನೋಟಗಳ ಬಗ್ಗೆ ಕನಿಕರ ಮೂಡುತ್ತದೆ. ಈ ಭೂಮಿಯ ಪರಿವರ್ತನಶೀಲ ಮೂಲವಸ್ತುವಿನಲ್ಲಿ ನನ್ನ ಮಯ್‌ ಕರಗಿಹೋಗುತ್ತದೆ. ಸೂರ್ಯಲೋಕದಲ್ಲಿ ಭೂಮಿ ಕಾಣದಾಗುತ್ತದೆ. ತಾರಾ ಸುರುಳಿಯಲ್ಲೆಲ್ಲೋ ಸೂರ್ಯ ದಾರಿ ತಪ್ಪುತ್ತಾನೆ. ಅಸಂಖ್ಯ ಆಕಾಶಗಂಗೆಗಳ ಬೃಹತ್ ಜಾತ್ರೆಯಲ್ಲಿ ನಮ್ಮ ನಕ್ಷತ್ರಲೋಕ ಹೇಳ ಹೆಸರಿಲ್ಲದಂತಾಗುತ್ತದೆ. ಅದರಾಚೆ……..
ಅದರಾಚೆ ಏನಿದೆ ನೋಡಲು ಪ್ರಯತ್ನಿಸುತ್ತೇನೆ. ಆದರೆ ಅಲ್ಲಿ ಕತ್ತಲು. ನನ್ನ ಲಾವಣ್ಯವನ್ನು ಆ ಆಚಿಂತ್ಯವಾದ ಕತ್ತಲೊಡನೆ ಹೋಲಿಸಿ ಹೊಂದಿಸಿ ನಾನು ಹಾಡುತ್ತೇನೆ. ನನ್ನ ಹೃದಯ ಮರ ಗಿಡ ಗಾಳಿ ನಕ್ಷತ್ರಗಳೆಲ್ಲವೂ ಕುಣಿಕುಣಿದು ಮನೋಹರವಾದ ಹಿಮ್ಮೇಳ ಒದಗಿಸುತ್ತವೆ. ಯಾವುದೂ ಯಾವತ್ತೂ ಇಲ್ಲವಾಗುವುದಿಲ್ಲ ಅನ್ನಿಸಿ ನನ್ನ ಗೀತದ ನಾದ ಮಾಧುರ್ಯ ಅನಂತ ತರಂಗಿತವಾಗಿ ವಿಶ್ವವೇ ತಲೆದೂಗುತ್ತಿರಲು ನಾನು ಹಾಡುತ್ತೇನೆ.
ಬರುತ್ತೆ. ಹಾಡು ನೃತ್ಯ ಶಾಸ್ತ್ರೀಯ ಅಭ್ಯಾಸ ಆಗಿದೆ.
ಮತ್ತೆ ಯಾಕೆ ನೀವು ಹಾಡಬಾರದು ?
ಇದ್ದಕ್ಕಿದ್ದಂತೆ ವೀಣೆಯ ತಂತಿ ಕಿತ್ತು ಹೋಗುತ್ತದೆ. ಉಲ್ಕೆಯೊಂದು ದೇದೀಪ್ಯಮಾನವಾಗಿ ಉರಿದು ಬೂದಿಯಾಗುತ್ತದೆ. ರಮಾ ಹಾಡುತ್ತಾಳೆ. ಅವಳು ಹಾಡದ ಕಾಲೇಜಿನ ಸಭೆ ಇಲ್ಲ. ಗೋಪಾಲ ರಮೆಯ ಯಾವ ಹಾಡನ್ನೂ ಕೇಳಲು ತಪ್ಪಿಲ್ಲ. ಸಭೆಗೆ ಮುಂಚೆ, ಸಭೆ ಆದ ಮೇಲೆ, ಸಭೆಯಲ್ಲೂ ಕೇಳುತ್ತಾನೆ.
ಮನಸ್ಸಿಲ್ಲ.
ಮಿಸ್ ವೀಣಾ ನೀವೇನೋ ಒಂದು ಥರಾ ಬೇರೆ…..
ಹೌದು. ಇವರು ಹೇಳುವುದು ನಿಜ. ನಾನು ಬೇರೆಯವರಿಗಿಂತ ಬೇರೆಯಾಗಿದ್ದೇನೆ. ಬೇರೆಯವರಿಗೆ ಯಾವ ಪ್ರಶ್ನೆಗಳೂ ಇದ್ದಂತಿಲ್ಲ. ನನಗನ್ನಿಸುತ್ತದೆ. ನಾನು ಸಾವಿರ ಪ್ರಶ್ನೆ ಕೇಳಬೇಕು. ಉತ್ತರ ಪಡೆಯಬೇಕು. ಮತಗ್ರಂಥಗಳು ಪುರಾಣಗಳು ವಿಜ್ಞಾನ ಯಾವುದರಿಂದಲೂ ನನ್ನ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರ ದೊರೆತಿಲ್ಲ. ಜಗತ್ತಿನಲ್ಲಿ ಕೋಟ್ಯಂತರ ಜನರಿದ್ದಾರೆ. ಯಾರಿಗೂ ಇಲ್ಲ ಈ ಪ್ರಶ್ನೆ. ಕಪ್ಪೆಗೆ ಗುಂಡಿ ಮೀನಿಗೆ
ನದಿ ಹಕ್ಕಿಗೆ ಆಕಾಶ ಮನುಷ್ಯನಿಗೆ ಮನೆ ಇಷ್ಟೇ ಪ್ರಪಂಚ, ಅದರಾಚೆ ಅವರು ಹೋಗಲಾರರು.
ನಾನು ಆಕಾಶಗಂಗೆಯನ್ನೂ ಮೀರಿ ಹೋಗುತ್ತೇನೆ. ಎಲ್ಲೆಲ್ಲೂ ತುಂಬಿದ ಬೆಳಕಿನಲ್ಲಿ ನನ್ನ ಕಪ್ಪು ದೀಪ ಪ್ರಕಾಶಿಸುತ್ತದೆ. ಒಂದು ದಿನ ಈ ಕಪ್ಪು ದೀಪ ಆರಿಹೋಗಬಹುದು. ಅಷ್ಟರೊಳಗಾಗಿ ನಾನು ಈ ದೀಪದ ಕಪ್ಪು ಕಿರಣಗಳ ಮೂಲಕ ಆಕಾಶ ಗಂಗೆಗಳ ಸುತ್ತ ಮುತ್ತಿದ ಕತ್ತಲೆಯಲ್ಲಿ ಏನಿದೆ ತಿಳಿದುಕೊಳ್ಳಬೇಕು.
ಇರಬಹುದು ಸರ್. ನನ್ನ ಮನಸ್ಸಿಗೆ ಸಮಾಧಾನ ಇಲ್ಲ. ಸದಾ ಅತೃಪ್ತಿ, ಅಸಹನೆ. ನನ್ನಿಂದ ಎಲ್ಲರ ಹಾಗಿರುವುದಕ್ಕಾಗುವುದಿಲ್ಲ.
ಅವರು ಒಂದು ನಮೂನೆ ನಗುತ್ತಾರೆ.
ಮತ್ತೆ ಕತ್ತಲಾವರಿಸುತ್ತದೆ.
ಆಕಾಶಗಂಗೆಗಳನ್ನಾವರಿಸಿದ ಕತ್ತಲಿನಲ್ಲಿ ಕತ್ತಲಿನಾಚೆ ಏನಿದೆ ? ಕಾಲೇಜಿನಲ್ಲಿ ಕೊಟ್ಟ ಕಪ್ಪೆಯ ಅಂಗಾಂಗಗಳನ್ನು ವಿಂಗಡಿಸಿ ಬರೆದು ವಿವರಿಸುವ ನನಗೆ ಆ ಕತ್ತಲನ್ನೂ ಕತ್ತರಿಸಿ ಉತ್ತರ ಪಡೆಯುವ ಮನಸ್ಸಾಗುತ್ತದೆ. ನನ್ನ ಚೈತನ್ಯಚಿತ್ರ ನನ್ನ ಸುಪ್ತ ಚಿತ್ತ ಆ ಅಚಿಂತ್ಯದೊಳ ಹೊರಗೂ ಅಡ್ಡಾಡಿ ಬರಲು ಬಯಸುತ್ತದೆ.
ಅಷ್ಟರಲ್ಲೇ ಬೆನ್ನಡಿ ಬಿದ್ದ ನನ್ನ ನೀಳ ಜಡೆ ಬೆನ್ನನ್ನು ಒತ್ತುತ್ತದೆ. ಗೋಪಾಲ ನನ್ನನ್ನು ನಾಗವೇಣಿ ಎಂದು ಕರೆದ. ನಿನ್ನ ಸೌಂದರ್ಯವನ್ನು ನಾನು ಮೆಚ್ಚುತ್ತೇನೆ ಅಂದ. ಓಹ್….ನನ್ನ ದುಂಡು ಮೊಲೆ ಮೇಲೆ ಅವನ ಗಂಡುಗಯ್‌ ಹರಿದಾಡಿದರೆ… ನಾನು ಟ್ರಪ್ಪನೆ ಗುಂಡಿ ಬಿಡಿಸಿ ರವಿಕೆಯನ್ನೆಳೆದು ಸೀರೆಯ ಮೇಲಿಡುತ್ತೇನೆ.
ಕತ್ತಲಿನಾಚೆ ಏನಿದೆ ಎಂಬ ನನ್ನ ಪ್ರಶ್ನೆಗೆ ಉತ್ತರವಾಗಿ ರಮಾ ಹಾಡುತ್ತಾಳೆ ಗೋಪಾಲ ಅದನ್ನು, ಅವಳನ್ನು ಮೆಚ್ಚುತ್ತಾನೆ. ಅವಳನ್ನು ಹೊಗಳುತ್ತಾನೆ. ಅವಳು ಹಾಡುತ್ತಾಳೆ.
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ….
ಮುಚ್ಚಿದ ಬಾಗಿಲಿನಾಚೆ ಆಕಾಶಗಂಗೆಗಳನ್ನಾವರಿಸಿದ ಕತ್ತಲಿನ ಮೊತ್ತದಾಚೆ ಯಾವ ಹರಿ ಇದ್ದಾನು ! ಈ ವಿಷಯದಲ್ಲಿ ಗೋಪಾಲನೂ ಬೆಪ್ಪುತಕ್ಕಡಿ. ನನ್ನ ಜತೆ ಅವನು ದೇವರ ವಿಷಯ ಚರ್ಚಿಸುವುದಿಲ್ಲ. ನನಗೆ ಈ ಚರ್ಚೆ ಬೇಡ ಅನ್ನುತ್ತಾನೆ. ದೇವರೆ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಕಂಡು ಕಿಡಿ ಕಾರುತ್ತಾನೆ. ಆದರೂ ತಲೆ ಬಾಗಿ ತೀರ್ಥ ಪ್ರಸಾದ ಸ್ವೀಕರಿಸುತ್ತಾನೆ.
ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುದ್ದನಿಟ್ಟು ನಿಲ್ಲದೆ……
ಮಮತಾ ಮಯ್ಮರೆತು ಹಾಡುತ್ತಾಳೆ. ಕೇಳಿದವರೆಲ್ಲ ಮಂತ್ರಮುಗ್ಧರಾಗುತ್ತಾರೆ.
ಕೃಷ್ಣನ ಯೌವನ ವ್ಯಭಿಚಾರದ್ದು. ನಂದಗೋಕುಲದ ಹೆಣ್ಣುಗಳನ್ನೆಲ್ಲ ಕೆಡಿಸಿದ್ದಾನೆ. ಆದರೂ ಅವನ ಮೇಲೆ ಎಂಥ ಭಕ್ತಿ ಈ ಜನಕ್ಕೆ ! ಕೃಷ್ಣ ದೇವರಲ್ಲ. ದೇವರು ಇರಲಾರ. ಇಲ್ಲ, ಕೃಷ್ಣ ಒಬ್ಬ ಮನುಷ್ಯ. ಮೊಟ್ಟ ಮೊದಲ ಎಗ್ಸಿಸ್ಟೆನ್ಸಿಯಲಿಸ್ಟ್. ಉಮರಖಯ್ಯಾಮ ಚಾರ್ವಾಕ ಇಬ್ಬರನ್ನೂ ಮೀರಿಸಿದವನು. ರಸಿಕ, ಬುದ್ಧಿವಂತ. ಭಗವದ್ಗೀತೆ ಅವನದ್ದೇ ಕೆಲಸ ಆಗಿದ್ದರೆ ಅವನೊಬ್ಬ ಮೋಸಗಾರ. ಆದರೂ ಬಲು ಗಟ್ಟಿಗ. ತನ್ನ ಕಾಲದವರನ್ನು ಮಾತ್ರ ಅಲ್ಲ ತಾನು ಸತ್ತ ಮೇಲೂ ಅನೇಕ ಸಾವಿರ ವರ್ಷ ಅರ್ಬುದಾರ್ಬುದ ಸಂಖ್ಯಾತರನ್ನು ಮೋಸಗೊಳಿಸುತ್ತಿದ್ದಾನೆ. ಇದಕ್ಕಾಗಿ ನಾನೂ ಅವನನ್ನು ಮೆಚ್ಚುತ್ತೇನೆ.
ಒಂದು ವೇಳೆ ಈಗ ಅವನು ಇಲ್ಲಿದ್ದರೆ ಅವನೊಟ್ಟಿಗೆ ಮಲಗುತ್ತೇನೆ. ಗೋಪಾಲನೂ ಬುದ್ದಿವಂತ. ಆದರೆ ಬೆಪ್ಪುತಕ್ಕಡಿ. ಹೊಸ ಹೊಸ ಮೌಲ್ಯಗಳ ಪ್ರಜ್ಞೆ ಇರುವವ. ಜಾಣ ಅಂತಲೂ ಹೇಳಬಹುದು. ಯಾಕಂದರೆ ಅವನು ತನಗೆ ಎಲ್ಲಿಯವರೆಗೆ ಹಾನಿ ಯಾಗುವುದಿಲ್ಲವೋ ಅಲ್ಲಿಯವರೆಗೂ ಪರಂಪರೆಯನ್ನೂ ಸಂಪ್ರದಾಯವನ್ನೂ ವಿರೋಧಿಸುವುದಿಲ್ಲ. ಹಾಗೆ ವಿರೋಧಿಸುವುದರಲ್ಲಿ ಅರ್ಥವಿಲ್ಲವೆಂದು ಅವನ ನಂಬಿಕೆ.
ಕೃಷ್ಣನ ಬದಲು ಗೋಪಾಲ ಆದರೂ ಚಿಂತೆಯಿಲ್ಲ. ನಾನು ಆಗಾಗ ಕಲ್ಪಿಸಿಕೊಳ್ಳುವ ಆದರ್ಶಕ್ಕೆ ತಕ್ಕ ಹೊರ ರೂಪ ಇದೆ ಗೋಪಾಲನಿಗೆ. ಅವನ ಕೂದಲು ದಟ್ಟವಾಗಿದೆ. ಒರಟಾಗಿದೆ. ಅಚ್ಚ ಕಪ್ಪಾಗಿದೆ. ಅವನ ಹುಬ್ಬು ಗಡುಸಾಗಿದೆ. ಮೂಗು ಗಂಭೀರವಾಗಿದೆ. ಕಣ್ಣು ಸ್ಥಿರವಾಗಿವೆ. ಅವನ ತುಟಿಗಳು ಅವನ ವ್ಯಕ್ತಿತ್ವದಲ್ಲಿನ ಚಿಂತನಶೀಲತೆಯನ್ನು ವ್ಯಕ್ತಪಡಿಸುತ್ತವೆ. ಅವನ ಅಂಗಾಂಗ ಸೌಷ್ಠವದ ಬಿಗಿತ ಹಿತವಾಗಬಹುದು. ಒಮ್ಮೊಮ್ಮೆ ಅವನನ್ನು ಮುದ್ದಿಸುವ ಮನಸ್ಸಾಗುತ್ತದೆ. ಅದರಲ್ಲೂ ಅವನ ವಿಶಾಲವಾದ ಹಣೆ……..ಥತ್ತೇರಿ……..
ಆ ಹಣೆಯಲ್ಲಿ ಪ್ರಸಾದ. ಮುಖಕ್ಕೆ ಹೊಡೆಯುವಷ್ಟು ನಿಚ್ಚಳವಾಗಿ ಕಾಣಿಸುತ್ತದೆ. ಮೂರ್ಖ ಶತಮೂರ್ಖ ಸಂಪ್ರದಾಯಸ್ಥ ಗೋಪಾಲ ತಿರಸ್ಕಾರಕ್ಕೆ ಯೋಗ್ಯ.
……..ಆದರೆ ಅವನು ನಕ್ಕಾಗ….ಮಾಯೆ.
ಈ ಗಂಡೊಂದು ಮಾಯೆ. ಕತ್ತಲಿನಾಚೆ ಏನಿದೆ ಎಂದು ತಿಳಿದುಕೊಳ್ಳಬೇಕೆಂಬ ಹಂಬಲ ಕಳವಳವಾಗಿ ಬುದ್ದಿಯನ್ನು ಬಾಧಿಸುತ್ತಿರುವಾಗ ಗಂಡು ಮಾಯೆಯಾಗಿ ಕಯ್‌ ಬೀಸಿ ಕರೆಯುತ್ತದೆ.
ಸರ್ ನಿಮ್ಮ ಜತೆ ಸ್ವಲ್ಪ ಮಾತಾಡಬೇಕು.
ಮಾತಾಡಿ.
ನಂಗೆ ಈ ಲೋಕದ ಬಗ್ಗೆ, ಸೃಷ್ಟಿಯ ಬಗ್ಗೆ, ದೇವರ ಇರುವಿಕೆಯ ಬಗ್ಗೆ ತಿಳಿಯ ಬೇಕೆಂಬ ಕುತೂಹಲ………
ನಾನು ಮಾತಾಡುತ್ತಿದ್ದಂತೆ ಗಂಭೀರವಾದ ಅವರ ಮುಖದಲ್ಲಿ ನಗೆ ಮೂಡುತ್ತದೆ. ಅವರು ನಗುತ್ತ ಕೇಳುತ್ತಾರೆ.
ನಿಮಗೀಗೆಷ್ಟು ವಯಸ್ಸು ?
ನನಗೆ ಊಟ ತಿಂಡಿ ಸೇರುವುದಿಲ್ಲ. ಅಕ್ಕ ಹೇಳುತ್ತಾಳೆ. ಈ ವಯಸ್ಸಿನಲ್ಲಿ ಹಸಿವಾಗುವುದಿಲ್ಲ, ನಿಜ. ಕಾಲಕಾಲಕ್ಕೆ ಆಗಬೇಕಾದ್ದು ಆದರೆ ಎಲ್ಲ ಸರಿಯಾಗಿರುತ್ತದೆ. ನನಗೂ ನಿನ್ನ ವಯಸ್ಸಿನಲ್ಲಿ ಹಸಿವೆ ಇರಲಿಲ್ಲ. ಮದುವೆ ಆಯ್ತು ಈಗ ನೋಡು ಅರ್ಧ ಸೇರಕ್ಕಿ ಅನ್ನ ಆ ಅನ್ನುವುದರಲ್ಲಿ ಮುಗಿಸ್ತೇನೆ.
ನಾನು ಅನುಮಾನಿಸುತ್ತ ಹತ್ತೊಂಬತ್ತು ಅನ್ನುತ್ತೇನೆ.
ಸರೀ ಮತ್ತೆ…ಆದರ್ಶ ಅಶಾಂತಿಗಳ ತವರುಮನೆ. ಇಂಥ ವಯಸ್ಸಿನಲ್ಲೂ ನಿಮಗಿರೋ ಜಿಜ್ಞಾಸೆಯನ್ನು ನಾನು ಮೆಚ್ಚುತ್ತೇನೆ. ಈಗ ನಿಮಗೆ ಉಂಟಾಗಿರೋ ಆಸಕ್ತಿ ಕುತೂಹಲ ಕಂಡು ನನಗೆ ತುಂಬಾ ಹೆಮ್ಮೆ ಅನ್ನಿಸಿದೆ, ಆದರೆ….
ಆದರೆ ?
ನಾನು ನಿಮಗೇನೂ ಸಹಾಯ ಮಾಡೋಕಾಗೊಲ್ಲ. ಇವೆಲ್ಲ ಕ್ಷುಲ್ಲಕ ವಿಷಯಗಳು. ಇವುಗಳ ಬಗ್ಗೆ ಯೋಚನೆ ಮಾಡಿ ಜೀವನವನ್ನು ವ್ಯರ್ಥ ಮಾಡಿಕೋಬಾರದು. ನನಗಂತೂ ಈ ಲೋಕದ ಬದುಕು ಸುಂದರ. ಇದರಿಂದ ಸಾಧ್ಯ ಆದಷ್ಟೂ ಸುಖ ಪಡೀಬೇಕು. ನನಗೆ ಹೇಗೋ ಹಾಗೆ ಇತರರಿಗೂ ಸುಖ ಸಿಕ್ಕರೆ ಸಿಗಲಿ, ಅದು ನನ್ನ ಮನೋಧರ್ಮ.
ಆದರೆ ಈ ವಿಷಯ ನನಗೆ ಕ್ಷುಲ್ಲಕ ಅಲ್ಲ. ಬೃಹತ್ತಾಗಿದೆ. ಇದು ನನ್ನ ನಿದ್ದೆ ಹಾಳು ಮಾಡಿದೆ. ಶಾಂತಿಯನ್ನು ಲೂಟಿ ಮಾಡಿದೆ. ಕಾಲೇಜಿನ ಓದು ಕೂಡ ಮನಸ್ಸಿಗೆ ಹತ್ತುವುದಿಲ್ಲ.
ನಾನು ಮೊದಲೇ ಹೇಳಿದೆ. ನಿಮ್ಮ ಈ ಗುಣ ನಿಮ್ಮ ಬುದ್ಧಿಯ ಹರಿತವನ್ನ, ಸಂವೇದನೆಯ ಶಕ್ತಿಯನ್ನ ತೋರಿಸುತ್ತೆ. ಅದನ್ನು ನಾನು ಗೌರವಿಸುತ್ತೇನೆ. ನಿಮ್ಮ ಸಂದೇಹಗಳಿಗೆ ಮಾತ್ರ ಕಾಲವೇ ಸಮಾಧಾನ ಹೇಳಬಲ್ಲುದು.
ಸರ್, ನಿಮಗೂ ಈ ವಯಸ್ಸಿನಲ್ಲಿ ಹೀಗನ್ನಿಸುತ್ತಿತ್ತೆ ?
ಇತ್ತು…. ಇಲ್ಲ. ಅಶಾಂತಿ ಅಸಮಾಧಾನ ಅತೃಪ್ತಿಯಿಂದ ನಿದ್ದೆಗೇಡಾಗುತ್ತಿತ್ತು. ನನ್ನ ಸಹಪಾಠಿ ಒಬ್ಬಳಿದ್ದಳು…..
ಅವರು ನೆನಪು ಮಾಡಿಕೊಳ್ಳುವವರಂತೆ ಒಂದು ಕ್ಷಣ ತಡೆದು ಮತ್ತೆ ತಟ್ಟನೆ ಕೇಳುತ್ತಾರೆ.
ಅಂದ ಹಾಗೆ ನಿಮ್ಮನ್ನು ಯಾರೂ ಪ್ರೀತಿಸುವುದಿಲ್ಲವೆ ?
ನಾನು ರಾಜುವಿನ ಮುಖವನ್ನೇ ದಿಟ್ಟಿಸಿ ನೋಡುತ್ತೇನೆ. ಯಾರೂ ಇಲ್ಲ ಎನ್ನುತ್ತೇನೆ.
ಅತ್ಯಂತ ಆತ್ಮೀಯರಾದವರು ? ಸ್ನೇಹಿತರು ?
ಇಲ್ಲ. ಆ ಸಾಧ್ಯತೆಯೇ ಇಲ್ಲ. ನನಗೆ ಯಾರೊಡನೆಯೂ ಸಹನೆ ಇಲ್ಲ. ನನ್ನ ಗೌರವ ಕೇವಲ ಬುದ್ದಿಗೆ, ವಿವೇಕಕ್ಕೆ. ನಿಮ್ಮ ಬಗ್ಗೆ ನನಗೆ ಗೌರವ ಇದೆ. ನೀವು ನನ್ನ ಆದರ್ಶದ ಗಂಡು ಆಗಬಲ್ಲಿರಿ ಅನ್ನಿಸುತ್ತದೆ.
ಅವರು ಚಕಿತರಂತೆ ನನ್ನ ಮುಖ ನೋಡುತ್ತಾರೆ.
ಸರ್‌, ನನ್ನನ್ನು ನೀವು ತಪ್ಪು ತಿಳಿಯುವುದಿಲ್ಲ ಅಂತ ನನ್ನ ಭಾವನೆ. ನಾನು ತಿಳಿಯಬೇಕಾದ್ದು ತುಂಬಾ ಇದೆ. ನಾನು ಸಾಯುವ ಮುಂಚೆ ನನ್ನ ಸಂದೇಹಗಳಲ್ಲಿ ಕೆಲವಕ್ಕಾದರೂ ಸಮಾಧಾನ ಕಂಡುಕೊಳ್ಳಬೇಕಂತ ನನ್ನಾಸೆ…….
ಯಾಕೆ, ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಇದೆಯಾ ?
ಹಾಗೇನಿಲ್ಲ ಸರ್……..ನಮ್ಮಪ್ಪ ಸಣ್ಣ ವಯಸ್ಸಿನಲ್ಲೇ ಹೃದ್ರೋಗದಿಂದ ತೀರಿಕೊಂಡರು. ತಾಯಿ ಮೆದುಳ ಬಳಿಯ ರಕ್ತನಾಳ ಒಡೆದು ಸತ್ತರು. ನನಗೊಬ್ಬ ಅಕ್ಕ ಇದ್ದಾಳೆ. ಅವಳ ಶ್ವಾಸಕೋಶಗಳಿಗೆ ಕ್ಯಾನ್ಸರಾಗಿದೆ. ನನಗೆ ಸದಾ ಚಿಂತೆ. ನಾನು ಸಾವಿಗೆ ಹೆದರುವುದಿಲ್ಲ. ಆದರೆ ಸಾಯುವ ಮುಂಚೆ ಜೀವನಕ್ಕೆ ಏನಾದರೂ ಅರ್ಥ ಇದೆಯೋ ಇಲ್ಲವೋ ತಿಳಿಯಬೇಕೂ ಅನ್ನೋ ಆಸೆ.
ರಾಜು ಒಂದು ಕ್ಷಣ ಕಣ್ಣು ಮುಚ್ಚಿ ತಲೆದೂಗಿ ಹೇಳುತ್ತಾರೆ.
ನಿಮ್ಮ ಪ್ರಸಂಗ ವಿಲಕ್ಷಣವಾದದ್ದು. ಸಾಧಾರಣ ಸಮಾಧಾನಗಳಿಂದ ನಿಮಗೆ ತೃಪ್ತಿಯಾಗಲಿಕ್ಕಿಲ್ಲ. ಆದರೂ ಹೇಳುತ್ತೇನೆ. ಜೀವನಕ್ಕೆ ಅರ್ಥ ಇದೆ. ಅದನ್ನು ಹುಡುಕಲು ಹೊರಟರೆ ಮಾತ್ರ ಜೀವನ ವ್ಯರ್ಥ ಆಗುತ್ತದೆ.
ನನ್ನ ಸಹಪಾಠಿಯ ಬಗ್ಗೆ ಹೇಳ ಹೊರಟಿದ್ದೆ. ಆಕೆ ಬುದ್ಧಿವಂತೆ. ಒಳ್ಳೆಯ ಭಾಷಣಕಾರಳು. ಸಾಹಿತ್ಯ ವಿಮರ್ಶಕಳು. ಅವಳು ಬಿ. ಎ. ಯಲ್ಲಿ ಪ್ರಪ್ರಥಮವಾಗಿ ಪಾಸಾದಳು. ಆದರೂ ಆಕೆ ತನ್ನ ನಡೆ ನುಡಿಯಲ್ಲಿ ಅಚ್ಚ ಭಾರತೀಯ ಮಹಿಳೆಯಾಗಿದ್ದಳು. ನಮ್ಮ ಪರಂಪರೆಯ ಪ್ರತೀಕ ಆಗಿದ್ದಳು ಎಂಥ ಪ್ರತಿಭಾಶಾಲಿಗಾದರೂ ತಕ್ಕ ಹೆಂಡತಿಯಾಗುವ ಯೋಗ್ಯತೆ ಅವಳಿಗಿತ್ತು. ಅವಳಿಂದಾಗಿ ನಾನು ಅಶಾಂತನಾಗಿದ್ದೆ. ನಾನು ಭಾವಲಿಪ್ತತೆಯಿಂದ ಬಾಲಿಶವಾಗಿ ಅವಳನ್ನು ಪ್ರೀತಿಪೂಜೆ ಮಾಡಿದೆ.
ನಿಮಗೆ ಆ ಭಾವಲಿಪ್ತತೆ ಇಲ್ಲ. ಅದು ಮೆಚ್ಚಬೇಕಾದ ಅಂಶ. ನಿಮ್ಮ ವಿಚಾರದ ಔನ್ನತ್ಯ, ಸಂವೇದನಾ ಸಾಮರ್ಥ್ಯ, ವಿವೇಚನಾ ಶಕ್ತಿ ಎಷ್ಟಿದೆ ಅಂದರೆ……
Yes Sir !
ನೊಂದುಕೊಳ್ಳಬೇಡಿ. ನೀವು ಹೀಗೇ ಇದ್ದಲ್ಲಿ ಯಾರಿಗೂ ಎಂದೆಂದಿಗೂ ಒಳ್ಳೆ ಹೆಂಡತಿ ಆಗಲಾರಿರಿ.
ನನಗೆ ನಗು ಬರುತ್ತದೆ. ನಗುತ್ತೇನೆ.
ಸರ್ ನಿಮ್ಮನ್ನು ನಾನು ನನ್ನ ಆದರ್ಶದ ಗಂಡು ಎಂದೆ. ಅದರಲ್ಲಿ ಯಾವ ಬದಲಾವಣೆಯೂ ಇಲ್ಲ. ನಿಮ್ಮ ಹೆಂಡತಿ ಆಗಬೇಕೆಂದು ನಾನು ಆ ಮಾತಾಡಲಿಲ್ಲ. ಮದುವೆ ಅಂದರೇ ನನಗೆ ಅಸಹ್ಯ ಆಗುತ್ತದೆ. ಯಾವ ಗಂಡನ ಹೆಂಡತಿಯಾಗಿಯೂ ನಾನು ಬದುಕಲಾರೆ. ತೊಂದರೆ ಕೊಟ್ಟದ್ದಕ್ಕೆ ಕ್ಷಮಿಸಿ.
ನಾನು ಹೊರಗೆ ಹೋಗುತ್ತೇನೆ.
ಮದುವೆಯಾಗೆಂದು ಅಕ್ಕ ಒತ್ತಾಯ ಮಾಡುತ್ತಾಳೆ. ಡಾಕ್ಟರೆ, ಎಂಜಿನಿಯರೆ, ಮಿಲಿಟರಿ ಅಧಿಕಾರಿಗಳೆ, I, A. S., I. F. S; ಗಳೇ -ಯಾರು ಬೇಕು ಅವರನ್ನು ಮದುವೆಯಾಗಬಹುದು. ಎಲ್ಲ ಹೆಣ್ಣುಗಳಿಗೂ ಇರಬಹುದಾದ ಕಷ್ಟ ನನಗಿಲ್ಲ. ಅಜ್ಜಮಾಡಿಟ್ಟ ಆಸ್ತಿ ಎಷ್ಟಿದೆ ಅಂತ ಅಕ್ಕನಿಗಾಗಲೀ ಭಾವನಿಗಾಗಲೀ ಗೊತ್ತಿಲ್ಲ.
ಮದುವೆ ಗಿದುವೆ ಗಂಡ ಹೆಂಡತಿ ಯಾವುದೂ ಯಾವುದೂ ನನಗೆ ಬೇಡ. ಮನುಷ್ಯರೂಪದ ಈ ಕುರಿಗಳನ್ನು ನಾನು ಮದುವೆಯಾಗಲಾರೆ, ಪ್ರೀತಿಸಲಾರೆ.

Close

ಸರಸಮ್ಮನ ಸಮಾಧಿ

ಬಿ. ದಾಮೋದರ ರಾವ್

ಸರಸಮ್ಮನ ಸಮಾಧಿ

ಒಂದು ಹಿನ್ನೋಟ
ಕನ್ನಡ ಕಾದಂಬರಿಯಲ್ಲಿ ಕಾರಂತರ ಸಾಧನೆ ವಿಶಿಷ್ಟವಾಗಿರುವುದರಿಂದ ಅವರ ಕೃತಿಗಳ ಪ್ರತ್ಯೇಕವಾದ ಮತ್ತು ಸಮಗ್ರವಾದ ಪರಿಶೀಲನೆ ಅಗತ್ಯವಾಗಿದೆ. ಈ ಯೋಜನೆಯನ್ನು ಯಾರಾದರೂ ಕೈಗೊಂಡು ಯೋಗ್ಯ ರೀತಿಯಿಂದ ಕಾರ್ಯಗತಗೊಳಿಸಿದರೆ ಶಕ್ತಿವಂತ ಕನ್ನಡ ಸಾಹಿತಿಯೊಬ್ಬನ ಮತ್ತು ಅವನ ಸಾಹಿತ್ಯದ ನಿಷ್ಪಕ್ಷಪಾತ ವಿಮರ್ಶೆ ಹೊಣೆಗಾರಿಕೆಯಿಂದ ನಡೆದು ಅದರಿಂದ ಉಳಿದ ಲೇಖಕರಿಗೂ ಪ್ರಯೋಜನ ವಾಗಬಹುದು.
ಮೇಲೆ ಸೂಚಿಸಿದ ಕಾರ್ಯ, ಭವಿಷ್ಯಕ್ಕೆ ಮತ್ತು ಇತರರಿಗೆ ಸಂಬಂಧಿಸಿದುದು. ನನ್ನ ಈ ಲೇಖನದಲ್ಲಿ ‘ಸರಸಮ್ಮನ ಸಮಾಧಿ’ಯನ್ನು ಕುರಿತು ಬರೆಯುವ ಪ್ರಯತ್ನವನ್ನಷ್ಟೆ ಮಾಡುತ್ತೇನೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಪ್ರಕಟವಾದ ಇದರ ಮುನ್ನುಡಿಯಲ್ಲಿ ಕಾರಂತರು ‘ಕಾದಂಬರಿ’ ಎಂಬ ಶಬ್ದವನ್ನು ಬಳಸದೆ “ಈ ಬರಹ” ಎಂದು ಹೇಳಿರುವುದು ‘ಸರಸಮ್ಮನ ಸಮಾಧಿ’ಯ ಪರಿಮಿತಿಯನ್ನೂ-ಈ ಲೇಖನದ ಮಿತಿಯನ್ನೂ-ಸೂಚಿಸುತ್ತದೆ.
ಕಾರಂತರ ಸಾಹಿತ್ಯವನ್ನು ಸಮೀಕ್ಷಿಸುವಾಗ ಅವರ ಮೊದಲಿನ ಕಾದಂಬರಿಗಳಿಗೂ ಅನಂತರದ ಕೃತಿಗಳಿಗೂ ಮೂಲಭೂತವಾದ ವ್ಯತ್ಯಾಸವಿದೆಯೆಂಬುದು ಖಚಿತವಾಗುತ್ತದೆ, ‘ಮರಳಿ ಮಣ್ಣಿಗೆ’ ‘ಬೆಟ್ಟದ ಜೀವ’ಗಳನ್ನು ‘ಸಮೀಕ್ಷೆ’ ‘ಅಳಿದ ಮೇಲೆ’ ‘ಆಳ ನಿರಾಳ’ಗಳೊಂದಿಗೆ ಹೋಲಿಸಿ ನೋಡಿದಾಗ ಕಾದಂಬರಿಗಳ ಸ್ವಭಾವದಲ್ಲಿ ಪರಿವರ್ತನೆಯಾಗಿರುವುದು ನಿಚ್ಚಳವಾಗಿ ಕಂಡುಬರುತ್ತದೆ. ಸಹಜತೆ ಮತ್ತು ಅನುಭವದ ಗಟ್ಟಿತನವನ್ನು ಅವಲಂಬಿಸಿ ಕೆಲವು ಉತ್ತಮ ಕಾದಂಬರಿಗಳನ್ನು ಬರೆದ ಕಾರಂತರು ಬೌದ್ಧಿಕವಾದ ಜೀವನ ವಿಮರ್ಶೆಯನ್ನು ಮಾಡತೊಡಗಿ-ಅಂದರೆ-ಮನುಷ್ಯ ಜೀವನದ ಸಾರ್ಥಕತೆಯನ್ನು ಮುಚ್ಚುಮರೆ ಇಲ್ಲದೆ ನಿರ್ಧರಿಸಲು ಹೊರಟ ಇನ್ನೊಂದು ಜಾತಿಯ ಕೃತಿಗಳನ್ನು ಸೃಷ್ಟಿಸತೊಡಗಿ ಹಲವು ವರ್ಷಗಳಾಗಿವೆ.
“ಚೋಮನ ದುಡಿ’ಯ ಪೂರ್ವದಲ್ಲೇ ಬಂದ ‘ಸರಸಮ್ಮನ ಸಮಾಧಿ’ ಮೊದಲನೆ ಜಾತಿಗೆ ಸೇರಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಇಲ್ಲಿ ಪ್ರಕೃತಿ ಪರಿಸರಗಳು ವ್ಯಕ್ತಿಯ ಮೇಲೆ ಹೊರಿಸುವ ವಿಕಟವಾದ ಒತ್ತಡ ಮತ್ತು ಅದಕ್ಕೆ ವ್ಯಕ್ತಿ ತೋರಿಸುವ ಪ್ರತಿಕ್ರಿಯೆಗಳ ವ್ಯಂಗ್ಯ ನಿರೂಪಣೆಗೆ ಪ್ರಾಧಾನ್ಯವಿದೆ. ಈ ಬಗೆಯ ಬದುಕಿನ ನಿರ್ಮಾಣದಲ್ಲೇ ಅನುಭವಶೋಧನೆ ಅಡಕವಾಗಿದ್ದು ಸಾರ್ಥಕತೆಯ ಸಮಸ್ಯೆಯ ಬೌದ್ಧಿಕ ಚರ್ಚೆ ನಡೆಯುವುದಿಲ್ಲ. ಸಮಾಜದ ಹಲವಾರು ಜೀವಿಗಳನ್ನು ಕಾಡುತ್ತಿರುವ ಲೈಂಗಿಕ ಪ್ರಶ್ನೆ ‘ಸರಸಮ್ಮನ ಸಮಾಧಿ’ಗೆ ವಸ್ತುವನ್ನು ಒದಗಿಸಿದೆ, ನಿಜ. ಆದರೆ ಗಂಭೀರ ತರ್ಕದಲ್ಲಿ ಕಾರಂತರು ಈ ಕೃತಿಯನ್ನು ಮುಳುಗಿಸುವುದಿಲ್ಲ. ಅದರ ಬದಲಿಗೆ ಒಂದು ಕೇಂದ್ರದ ಸುತ್ತ ಸಾಮ್ಯವಿರುವ ಸನ್ನಿವೇಶಗಳನ್ನು ಸೃಜಿಸಿ ಅತೃಪ್ತಿ ಕಾಮದಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮ ತಮ್ಮ ಪರಿಸ್ಥಿತಿಗಳನ್ನು ಎದುರಿಸಲು ಮಾಡುವ ಪ್ರಯತ್ನಗಳನ್ನು ನಿರೂಪಿಸುತ್ತಾರೆ.
ನಿರೂಪಣೆಗೆ ಆಧಾರ ಕಾರಂತರ ವ್ಯಂಗ್ಯ ದರ್ಶನ. ವ್ಯಂಗ್ಯ ದರ್ಶನದಿಂದ ಒಂದು ಸಂಕೀರ್ಣ ಪರಿಸ್ಥಿತಿಯ ಒಳನೋಟ ಅವರಿಗೆ ಲಭಿಸಿದೆ: ಮನುಷ್ಯನನ್ನು ಅನಾದಿಯಿಂದಲೂ ಬೆನ್ನು ಹತ್ತಿದ ಕಾಮ ; ಮೈಸುಖದ ಹಂಬಲದಲ್ಲಿ ಗೂಳಿಯಂತೆ ಇದ್ದರೂ ಅದರೊಂದಿಗೆ ಮನಸ್ಸಿನ ಐಕ್ಯವನ್ನೂ ಬಯಸುವ ಮನುಷ್ಯಧರ್ಮ ; ದೇಹ ಮನಸ್ಸುಗಳೆರಡೂ ಕೂಡದಿದ್ದರೆ ವಿರಸವಾಗುವ ದಾಂಪತ್ಯ ; ಸಂಸಾರದ ಒಡಕಿನಿಂದ ಉತ್ಪನ್ನವಾಗುವ ಕ್ಲೇಶವನ್ನು ಗುಪ್ತವಾಗಿರಿಸಲು ಸಮಾಜ ಹೇರುವ ಒತ್ತಾಯ ; ಕೊನೆಗೆ ಇತರರ ಕಣ್ಣು ತಪ್ಪಿಸಿಯಾದರೂ ಚಿಕಿತ್ಸೆ ದೊರಕಿಸಲು ವ್ಯಕ್ತಿ ಮಾಡುವ ಅಸಫಲ ಪ್ರಯತ್ನ-ಈ ಸಂಕೀರ್ಣ ಪ್ರಜ್ಞೆಯ ತಳಹದಿಯ ಮೇಲೆ ‘ಸರಸಮ್ಮನ ಸಮಾಧಿ’ಯು ನಿರ್ಮಿತವಾಗಿದೆ.
ಮಹಾಸತಿ ಸರಸಮ್ಮ ಕಾರಂತರ ವ್ಯಂಗ್ಯ ದರ್ಶನದಿಂದ ಜನಿಸಿದ ಒಂದು ಅಪೂರ್ವ ಸಂಕೇತ. ವಿರಸ ದಾಂಪತ್ಯದಿಂದ ನೊಂದ ಜೀವಿಗಳು ಯಾರಿಗೆ ಮೊರೆಯಿಡುವರೋ ಆ ಮಾಸ್ತಿ ಸರಸಮ್ಮನೇ ಅತೃಪ್ತ ಕಾಮದಿಂದ ಜ್ವಲಿಸುತ್ತಿರುವ ಪ್ರೇತ. ಮನುಷ್ಯ ತನ್ನ ಅಸಹಾಯಕತೆಯಲ್ಲಿ ದೈವದ ಹಸ್ತಕ್ಷೇಪವನ್ನು ಯಾಚಿಸಿದರೆ, ಅನಾಥ ದೈವ ತನ್ನ ಕಾಮ ತೃಪ್ತಿಗಾಗಿ ಮನುಷ್ಯನ ಬೆನ್ನು ಹತ್ತುತ್ತದೆ. ಸರಸಿಯ ಪ್ರೇತ ತನ್ನ ಅವಸ್ಥೆಯನ್ನು ವಿವರಿಸಿ, ಚಂದ್ರಯ್ಯನಲ್ಲಿ ಪ್ರೇಮ ಭಿಕ್ಷೆಯನ್ನು ಬೇಡುತ್ತದೆ :
“ನನ್ನ ಪತಿಗೆ ನಾನು ಬೇಡವಾಗಿದ್ದೆ. ನನಗೆ ಬೇಕಾದವನೊಬ್ಬನಿದ್ದನು. ಅವನೊಂದಿಗೆ ಇರಲು ಶಾಸ್ತ್ರ, ಸಮಾಜಗಳೆರಡೂ ಅಡ್ಡವಾದವು. ತೋರಿಕೆಗೆ ಶಾಸ್ತ್ರವನ್ನು ಹಿಂಬಾಲಿಸಿ ನಾನೀ ಅವಸ್ಥೆಗೆ ಬಂದೆ. ಕೊನೆಯ ತನಕವೂ ನನ್ನ ಬಯಕೆಗಳು ಪತಿಯಿಂದ ಪೂರ್ಣವಾಗಲಿಲ್ಲ.”
“ನಿನ್ನ ಗೆಳೆತನವನ್ನು ಕೊಡುತ್ತೀಯಾ ? ನನ್ನ ಗೆಳೆತನದ ಆಸೆಯನ್ನು ಮುಗಿಸುತ್ತೀಯಾ ?”
ಪ್ರೇತದ ದಾರುಣ ಕತೆಯಿಂದ ಒಂದು ಅಂಶ ಸ್ಪಷ್ಟವಾಗುತ್ತದೆ : ಅಶಿಕ್ಷಿತ ಸಮಾಜದ ಶಾಸ್ತ್ರ, ಸಂಪ್ರದಾಯಗಳು ವಿಷಮ ದಾಂಪತ್ಯದ ಸಂರಕ್ಷಣೆಗಾಗಿ ವ್ಯಕ್ತಿಯ ವಿನಾಶವನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತವೆ.
ಪ್ರೇತದಂತೆ ಪ್ರೇತದ ಗುಡಿಯ ಅಪೂರ್ವವಾಗಿದೆ. ನೀಲಾಚಲಯ್ಯನ ಶರೀರದೊಡನೆ ಆತನ ಹೆಂಡತಿ ಬೆಳ್ಯಕ್ಕ (ಸರಸಮ್ಮ) ನನ್ನು ಊರವರು ಬಲಾತ್ಕಾರದಿಂದ ಸುಟ್ಟರು. ಕ್ರಮೇಣ ಈ ಕೃತ್ಯ ಸಮಾಜದ ಸ್ಮೃತಿಯಿಂದ ಉರುಳಿ, ಅದರ ಜಾಗದಲ್ಲಿ ಒಂದು ಕಲ್ಪನಾ ಮಂದಿರ ಸೃಷ್ಟಿಯಾಗುತ್ತದೆ. ಕಲ್ಪನೆಯಲ್ಲಿ ಸರಸಮ್ಮ ಸಾಕ್ಷಾತ್ ಸೀತಾದೇವಿಯಾಗಿ ಮಹಾಸತಿ ಪದವಿಯನ್ನು ಸ್ವೀಕರಿಸುತ್ತಾಳೆ. ಅವಳು ಹೋದ ಕೆಲವು ದಿನಗಳಲ್ಲೇ ಅಲ್ಲೊಂದು ಮಾಸ್ತಿಕಲ್ಲು ಸ್ಥಾಪನೆಯಾಯ್ತು : ಮಂದಿರ ಎನ್ನುವಷ್ಟು ದೊಡ್ಡದಿಲ್ಲವಾದರೂ ಚಿಕ್ಕದಾಗಿ, ಚೆನ್ನಾಗಿ, ಗಂಡ ಹೆಂಡಿರ ಶಯ್ಯೆಯ ಮನೆಗೆ ಸಹಜವಾದಷ್ಟು ಅನುಕೂಲವಾಗಿ, ಒಪ್ಪಾಗಿ ಒಂದು ಗುಡಿ ನಿರ್ಮಿತವಾಯಿತು.”
ಗುಡಿಯನ್ನು ಶಯ್ಯೆಯ ಮನೆಗೆ ಸಹಜವಾಗಿ ಹೋಲಿಸಿ, ಪ್ರತಿಕೂಲ ದಾಂಪತ್ಯದ ಪುತಿನಿಧಿಯಾದ ‘ಸರಸಮ್ಮ’ನ ಸಾಂಕೇತಿಕ ಕ್ಷೇತ್ರವನ್ನು ಕಾರಂತರು ವಿಸ್ತರಿಸುತ್ತಾರೆ. ಇಲ್ಲಿ ಕಾರಂತರ ವ್ಯಂಗ್ಯ ಉನ್ನತ ಮಟ್ಟದಲ್ಲಿ ಸೃಷ್ಟಿಕಾರಿಯಾಗಿ ಕೆಲಸ ಮಾಡುತ್ತಿದೆ.
ಅವರ ವ್ಯಂಗ್ಯಪ್ರಜ್ಞೆ ಲೈಂಗಿಕ ಸಮಸ್ಯೆಯ ಇನ್ನೊಂದು ಮುಖವನ್ನು ಮರೆಯುವುದಿಲ್ಲ; ಒಂದು ಸಂಸಾರ ಒಡೆದಾಗ ವೇಶ್ಯಯ ಕಿವಿ ನೆಟ್ಟಗಾಗುತ್ತದೆ. ಆಕೆ ಗಟ್ಟಿಗಿತ್ತಿಯಾದರೆ ತಕ್ಷಣ ತನ್ನ ಬಲೆಯನ್ನು ಬೀಸುತ್ತಾಳೆ. ಆದುದರಿಂದ ರೂಪದಲ್ಲಿಯೂ, ಹೆಸರಿನಲ್ಲಿಯೂ ಬೆಳ್ಯಕ್ಕ’ನ ಮತ್ತು ಊರಿನ “ಬೆಳ್ಳಮ್ಮ’ನ ನಡುವೆ ಕಾರಂತರು ಸಂಬಂಧವನ್ನು ಕಲ್ಪಿಸಿದ್ದಾರೆ. ಒಲ್ಲದ ಗಂಡನನ್ನು ಒಲಿಸಲು ಹೆಣ್ಣು ಬೆಳ್ಯಕ್ಕನ ಗುಡಿಗೆ ಗುಪ್ತವಾಗಿ ಹೋದರೆ, ಹೆಂಡತಿ ಕೈ ತಪ್ಪಿದಾಗ ಗಂಡ ಬೆಳ್ಯಕ್ಕನ ಪಾದವನ್ನೋ ಬೆಳ್ಳಮ್ಮನ ಪಾದವನ್ನೋ ಸೇರಬಹುದು. ದಾಂಪತ್ಯದ ವಿಪತ್ತಿನಿಂದ ವಿನಾಶದ ಹಾದಿಯನ್ನು ಹಿಡಿದ ಗಂಡಿಗೆ ವೇಶ್ಯಾಗೃಹವೇ ಸಮಾಧಿಯಾಗಬಹುದು.
ಬೆಳ್ಯಕ್ಕನ ಸಂಕೇತದ ವ್ಯಾಪ್ತಿ ಇಲ್ಲಿ ಕೊನೆಗೊಳ್ಳುವುದಿಲ್ಲ. ಪ್ರೇತದ ಸಂಚಾರ ಮತ್ತು ಸರಸಮ್ಮನ ಭಕ್ತವರ್ಗದ ಗುಪ್ತವಿಧಿ ರಾತ್ರಿಯಲ್ಲೇ ಆಗಬೇಕು. ಹೀಗೆ ಲೈಂಗಿಕತೆಯ ಗೌಪ್ಯದ (Privacy) ರಕ್ಷಣೆ ತಾಂತ್ರಿಕವಾಗಿಯೂ ನಡೆಯುತ್ತದೆ. “ದಾಂಪತ್ಯ ಕ್ಲೇಶ ಹೇಗೆ ಪ್ರಪಂಚಕ್ಕೆ ತಿಳಿಯದೋ ಅಥವಾ ತಿಳಿಯಬಾರದೋ ಹಾಗೇನೆ.” ಇದಲ್ಲದೆ ನೀಲಾಚಲಯ್ಯನ ಪ್ರೇತ ಸರಸಮ್ಮನನ್ನು ಅವಳ ಗುಡಿಯ ಒಳಗೆ ಸರ್ಪಗಾವಲಿನಲ್ಲಿರಿಸುವುದು ವ್ಯಂಗ್ಯಕ್ಕೆ ಹೊಸ ಆಳವನ್ನು ತರುತ್ತದೆ. ವಿರಸದ ವಿಷ, ಅಸೂಯೆ, ಭೋಗದ ಅಧಿಕಾರ-ಇವು ದೇಹವನ್ನು ಸುಡುವ ಸ್ಮಶಾನದ ಬೆಂಕಿಯಲ್ಲಿ ಭಸ್ಮವಾಗದೆ ಪ್ರೇತರಾಜ್ಯವನ್ನೂ ಸೇರುತ್ತದೆ : “ಅದು ನನ್ನ ಮನೆ, ನನ್ನ ಪತಿ, ನನ್ನನ್ನು ಈ ಅವಸ್ಥೆಗೆ ಇಳಿಸಿದವನು. ನೀಲಾಚಲಯ್ಯ ಮಲಗಿದ ಸ್ಥಳ, ಅವನ ಪ್ರೇತವು ನನ್ನನ್ನು ಅಲ್ಲಿ ಅಂಕಯಲ್ಲಿರಿಸುತ್ತದೆ. ನಾನು ಬೇಡವೆಂದು ರೋದಿಸಿದರೂ ಅವನ ರೋಗಿಷ್ಟ ಶರೀರದೊಂದಿಗೆ ನನ್ನನ್ನು ಸುಟ್ಟರು. ನರಘಾತಕರು ನನ್ನನ್ನು ಸುಟ್ಟು ಮಹಾಸತಿಯನ್ನಾಗಿ ಮಾಡಿದರು.
ಕಥಾನಾಯಕಿ ಬೆಳ್ಯಕ್ಕ ಎರಡು ರಾಜ್ಯಗಳಿಗೆ ಸೇರಿದ ಜೀವಿ. ಆದುದರಿಂದ ಆಕೆಯ ಪಾತ್ರ ಸಾಮಾನ್ಯ ವಿಶ್ಲೇಷಣೆಗೆ ಸಿಗುವುದಿಲ್ಲ. ಸರಸಿಯ ಪ್ರೇತ ಮಾನವತೆಯನ್ನು ಮೀರಿ ನಿಂತಿಲ್ಲ. ಬಹುಶಃ ನಮ್ಮ ಕಲ್ಪನೆಯ ದೆವ್ವಗಳೆಲ್ಲ ತಮ್ಮ ಇಹ ಜೀವನದಲ್ಲಿ ವೈಯಕ್ತಿಕ ದುರಂತಗಳಿಗೆ ಸಿಲುಕಿ, ಮನುಷ್ಯ ಸಹಜವಾದ ಕಾಮನೆಗಳನ್ನು ತೀರಿಸಿಕೊಳ್ಳಲಾರದೆ ದಗ್ಧರಾಗಿ ಅಲೆಯುತ್ತಿರುವ ಜೀವ ರೂಪಗಳು. ಬೆಳ್ಯಕ್ಕನೂ ಇಹದೊಂದಿಗೆ ಈ ಸಂಪರ್ಕವನ್ನು ಇರಿಸಿಕೊಂಡಿದ್ದಾಳೆ. ಆಕೆ ಶ್ವೇತಾಂಬರೆಯಾಗಿ ಅಥವಾ ಬಟ್ಟೆಯಿಲ್ಲದೆ ಕಾಮವನ್ನು ಪ್ರಚೋದಿಸುವುದರಲ್ಲಿ ಯಾವ ತರದ ಅಸಹಜತೆಯಾಗಲೀ ಅಶ್ಲೀಲವಾಗಲೀ ಇಲ್ಲ. ಆದರೆ ಮೂವತ್ತು ವರ್ಷಗಳ ಹಿಂದಿನ ಕೃತಿ ಇದು ಎಂಬುದನ್ನು ಜ್ಞಾಪಿಸಿದಾಗ ಕಾರಂತರು ‘ಧೀರ ಸಾಹಿತಿ’ ಎಂದು ಒಪ್ಪಬೇಕಾಗುತ್ತದೆ. ತಮ್ಮ ಒಳ ನೋಟದ ನೈತಿಕ ಬಲದ ಮೇಲೆ ಸಮಾಜ ಕಂಡರೂ ಕಾಣದಂತಹ ಭೀಕರ ಸತ್ಯವನ್ನು ಧೈರ್ಯದಿಂದ ಪರಿಣಾಮಕಾರಿಯಾದ ರೀತಿಯಲ್ಲಿ ಕೃತಿಯ ಘನತೆಗೆ ಧಕ್ಕೆ ಬಾರದಂತೆ ನಮ್ಮ ಮುಂದೆ ಇರಿಸುವುದು ಸಾಹಿತಿಯ ಒಂದು ಹಿರಿತನದ ಸೂಚನೆ. ಕಾರಂತರಲ್ಲಿ ದೋಷಗಳೆಷ್ಟಿದ್ದರೂ ಅವರ ಪ್ರಾಮಾಣಿಕತೆಯ ಕೆಚ್ಚನ್ನು ಪ್ರಶ್ನಿಸುವಂತಿಲ್ಲ.
“ಸರಸಮ್ಮನ ಸಮಾಧಿ’ಯ ಒಂದು ದೋಷ ಪಾತ್ರ ರಚನೆಯಲ್ಲಿ ಕಂಡುಬರುತ್ತದೆ. ಬೆಳ್ಯಕ್ಕನ ಪಾತ್ರವನ್ನು ಸಾಮಾನ್ಯ ರೀತಿಯಲ್ಲಿ ಸಮೀಕ್ಷಿಸುವುದು ಸಾಧ್ಯವಿಲ್ಲವೆಂದು ಈ ಮೊದಲೇ ಹೇಳಲಾಗಿದೆ. ಪ್ರೇತೆ-ಮಾನವ ಲೋಕಗಳೆರಡಕ್ಕೂ ಸೇರಿದ ದ್ವಂದ್ವ ಗುಣ ಮಾತ್ರವಲ್ಲದೆ ಆಕೆಗೆ ಇನ್ನೊಂದು ತರದ ಉಭಯತೆಯಿದೆ. ನಿಜವಾದ ಘಟನೆಯನ್ನು ಮರೆತ ಸಮಾಜ ತನ್ನ ಕಲ್ಪನಾ ಕಲೆಯಿಂದ ಬೆಳ್ಯಕ್ಕನಿಗೆ ದೈವಿಕತೆಯು ಮಿರುಗನ್ನೂ ಶಕ್ತಿಯನ್ನೂ ಕೊಡುವುದರಿಂದ ಸರಸಮ್ಮ ವಾಸ್ತವಿಕ ಮತ್ತು ಕಲ್ಪನಾ ಸಾಮ್ರಾಜ್ಯಗಳೆರಡಕ್ಕೂ ಸೇರುತ್ತಾಳೆ : ಕಥಾನಾಯಕಿಯ ಪಾತ್ರಕ್ಕೂ ಮಿಗಿಲಾಗಿ ಸಾಂಕೇತಿಕ ಸತ್ವವನ್ನು ಗಳಿಸುತ್ತಾಳೆ. ಆದರೆ ಹದಿನಾರಾಣೆ ಮನುಷ್ಯನಾದ ಚಂದ್ರಯ್ಯನ ಪಾತ್ರ ಸಾಮಾನ್ಯ ವಿಮರ್ಶೆಗೆ ನಿಲುಕುವಂತಹುದು. ಚಂದ್ರಯ್ಯನಿಗೆ ಪ್ರೇತದ ಸಂಪರ್ಕವಾದರೂ ಅವನ ಉಭಯತೆ ಇರುವುದು ವಾಸ್ತವಿಕ ಲೋಕದ ಪರಿಮಿತಿಯ ಒಳಗೆ : ಧರ್ಮ ವಿಜ್ಞಾನಗಳ ಉಪಾಸಕ ಈತ ; ಅವುಗಳ ಸಾಮರಸ್ಯವನ್ನು ಕಾಣಲು ಅಸಮರ್ಥನಾದುದರಿಂದ ಅವನಲ್ಲಿ ವಿಜ್ಞಾನ ಮತ್ತು ಧರ್ಮ ನಂಬಿಕೆಗಳ ಕಲಸುಮೇಲೋಗರವಾಗುತ್ತದೆ : “ಈಶ್ವರ ಭಟ್ರು ಸಿಕ್ಕಿದರೆ ಭಟ್ಟರೇ ನಿಮ್ಮ ಅದ್ವೈತಕ್ಕೂ ಎನ್‌ಸ್ಟನಿನ ರಿಲೆಟಿವಿಟ ಥಿಯರಿ ಅಂದರೆ ಅದೂ ಮಾಯವಾದವೇ-ಅದಕ್ಕೂ ಇಷ್ಟಷ್ಟು ಬಿಟ್ಟು ಕೊಡುವುದಿಲ್ಲ’ ಎನ್ನುತ್ತಾನೆ……. ಚೌತಿಯ ದಿವಸ ಬಂದಿತೆ ! ಆಳೆತ್ತರದ ಆವೆ ಮಣ್ಣಿನ ವಿನಾಯಕನನ್ನು ಮಾಡಿ ಮನೆಗೆ ಬಂದವರಿಗೆಲ್ಲಾ ಹರಳು ಪಂಚಕಜ್ಞಾಯವನ್ನು ಹಂಚುತ್ತಾನೆ. ಅವನು ಎಂಥಾ ಅಡಾಉಡಿಯಾದರೂ, “ಅಪ್ಪ ಬಿಟ್ಟುಹೋದ ಆರುನೂರು ಮುಡಿಗಳ ಹುಟ್ಟುವಳಿಯ ಆಸ್ತಿ ಇದ್ದುದರಿಂದ ನಡೆಯುತ್ತದೆ” ಎನ್ನುತ್ತಾರೆ ಊರವರು. “ಚಂದ್ರಯ್ಯನ ಮನೆಯಲ್ಲಿ ಇಲ್ಲದ ಸಾಮಗ್ರಿಯಿಲ್ಲ. ಮುತ್ತಜ್ಜನ ಕಾಲದ ನೀಲಾಂಜನ, ಹಿರಿಯಜ್ಜ ಗದ್ದೆ ಸಾಗುವಳಿಗೆ ಹೋಗುತ್ತಿದ್ದಾಗ ತೊಡುತ್ತಿದ್ದ “ಮುಟ್ಟುಹಾಳೆ’ ಇವೆರಡೂ ಇವೆ. ಅವನ್ನು ಇರಿಸುತ್ತಿದ್ದ ಕೋಣೆಯಲ್ಲಿಯೇ ಹೊಸತಾಗಿ ಬಂದ ‘ರೇಡಿಯೋ ಸೆಟ್’ ಸಹಾ ಇದೆ…. “ಓ ಹೋಮ್‌ ಭಟ್ರೆ, ಇದು ಪಿತೃಲೋಕದ ಸಂಗೀತ, ಪಾತಾಳದಿಂದಲೂ ಇಲ್ಲಿಗೆ ವರ್ತಮಾನ ಬರುತ್ತದೆ?” ಎಂದು ಬಿ. ಬಿ. ಸಿ. ಸ್ಟೇಷನಿಗೆ ನಿಲ್ಲಿಸಿ ಬಿಡುವನು.
ಅರೆಬೆಂದ ವಿಜ್ಞಾನ, ಧರ್ಮಗಳು ಹಾಸ್ಯಕಾರಕವಾದರೂ ಚಂದ್ರಯ್ಯ ದುರಂತ ಪಥದಲ್ಲಿ ಸಾಗಿ ಆತನ ಪಾತ್ರ ಘನತೆಯನ್ನು ಗಳಿಸುವುದು ಗಣನೀಯವಾದ ಅಂಶ. ಏಕೆಂದರೆ ಪರಿಚಯಾತ್ಮಕವಾಗಿ ಕಾರಂತರು ಚಂದ್ರಯ್ಯನನ್ನು ಕುರಿತು ಮಾಡುವ ಹೇಳಿಕೆಗಳಿಗೂ ಅವನ ಪಾತ್ರದ ಪ್ರಗತಿಗೂ ಎದ್ದು ಕಾಣುವ ವ್ಯತ್ಯಾಸವಿದೆ. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ :
“ಹಂಸಪಕ್ಷಿಯಿದ್ದಲ್ಲಿ ಕೆಸರೂ ಇರುತ್ತದೆ. ದೀಪವಿದ್ದಲ್ಲಿ ಕತ್ತಲೂ ಇರುತ್ತದೆ-ಎನ್ನುವ ಹಾಗೆ ನಮ್ಮ ಸರಸಮ್ಮನ ಗುಡಿ ಇರುವ ಊರಿನಲ್ಲೇ ಅಡಾಉಡಿ ಚಂದ್ರಯ್ಯನ ಮನೆ ಇರುವುದು. ಸರಸಮ್ಮ ಸ್ಕೂಲ ಕಾಯದಲ್ಲಲ್ಲ. ಸೂಕ್ಷ್ಮ ಶರೀರಿಯಾಗಿ ಮೂಡಂಬೈಲಿನ ಮೂಲೆ ಮೂಲೆಯನ್ನು ತನ್ನದಾಗಿ ಮಾಡಿಕೊಂಡಿದ್ದಾಳೆ. ಚಂದ್ರಯ್ಯನೂ ಯಾವ ಮೂಲೆಯನ್ನೂ ಬಿಟ್ಟವನಲ್ಲ ; ವಿಚಿತ್ರಪ್ರಾಣಿ. ಅವನ ಕೆಲಸವೆಲ್ಲಾ ಸ್ಕೂಲ ಶರೀರಕ್ಕೇನೆ ಸಂಬಂಧಪಟ್ಟುದು. ಊರಿನ ಯಾರನ್ನು ಕೇಳಿದರೂ ಅವನಿಗೆ ಸೂಕ್ಷ ಬುದ್ದಿಯೇ ಇಲ್ಲವೆನ್ನುತ್ತಾರೆ. ನಾವು-ಬುದ್ಧಿಯಲ್ಲಿ ಯಾವುದು ಸ್ಥೂಲ ಯಾವುದು ಸೂಕ್ಷ್ಮ ಎನ್ನುವುದನ್ನು ಗುರುತಿಸುವುದು ಕಷ್ಟವಾದರೂ ಊರವರ, ದ್ವೇಷಿಕರದ್ದಲ್ಲ, ಅವನದೇ ಹಿತೇಚ್ಛುಗಳ ಮಾತನ್ನು ನಂಬುವುದಾದರೆ, ಅವನ ಯಾವತ್ತೂ ಕೆಲಸಗಳನ್ನು ಮನಸ್ಸಿನ ರೀತಿಗಳನ್ನೂ ಸ್ಕೂಲಕ್ಕೇನೇ ಸೇರಿಸುತ್ತಾರೆ.” ಚಂದ್ರಯ್ಯನ “ಸ್ಥೂಲ’ ದ್ವೇಷಿಕರ, ಹಿತೇಚ್ಛುಗಳ ದೃಷ್ಟಿಯಲ್ಲಿ ಮಾತ್ರವಲ್ಲದೆ ಕಾರಂತರ ದೃಷ್ಟಿಯಲ್ಲೂ ಸಿದ್ಧ ಸತ್ಯ ಎಂದು ಇಲ್ಲಿ ಅನ್ನಿಸುತ್ತದೆ. ಆದರೆ ‘ಸರಸಮ್ಮನ ಸಮಾಧಿ’ಯನ್ನು ಪೂರ್ತಿಯಾಗಿ ಓದಿದಾಗ ಚಂದ್ರಯ್ಯನನ್ನು ಸ್ಥೂಲಕ್ಕೆ ಸೇರಿಸುವುದು ಬಹಳ ಕಷ್ಟವಾಗುತ್ತದೆ. ನಾವು ಕಾರಂತರ ಮೊದಲ ಮಾತುಗಳ ಆಧಾರದಮೇಲೆ ‘ಅಡಾಉಡಿ’ ಚಂದ್ರಯ್ಯ ಹಾಸ್ಯಾಸ್ಪದವಾದ ರೀತಿಯಲ್ಲಿ ವರ್ತಿಸುತ್ತಾನೆ ಎಂದು ನಿರೀಕ್ಷಿಸಿದರೆ ಆ ನಿರೀಕ್ಷೆ ಸಂಪೂರ್ಣವಾಗಿ ವಿಫಲವಾಗುತ್ತದೆ. ವಿಜ್ಞಾನ ಮತ್ತು ಪುರಾಣಗಳ ಆಭಾಸ ಅವನ ಪಾತ್ರದ ಬೆಳವಣಿಗೆಯ ಮೇಲೆ ಮಹತ್ತರವಾದ ಅಥವಾ ವಿನೋದಾತ್ಮಕವಾದ ಯಾವ ಪರಿಣಾಮವನ್ನೂ ಮಾಡುವುದಿಲ್ಲ. ದೈವದ ಶೋಧನೆಯ ಮೊದಲ ಹಂತದಲ್ಲಿ ಅವನ ವಿಜ್ಞಾನ ಅಲಂಬಾಡಿ ಭೂತದ ಘಂಟೆಗಳ ಗುಟ್ಟನ್ನು ಯಶಸ್ವಿಯಾಗಿ ಬಯಲು ಮಾಡುತ್ತದೆ. (“ಇದೇನೆ ನಿಮ್ಮ ಘಂಟೆ. ಇದೊಂದು ಜಾತಿಯ ಹುಳು. ತೀರ್ಥಳ್ಳಿ ಆಗುಂಬೆಗೆ ಹೋದರೆ ಕಾಡು ತುಂಬಾ ಮಳೆಗಾಲದಲ್ಲಿ ಇದೇ ಹುಳು.”) ಆನಂತರ ಚಂದ್ರಯ್ಯನ ಅನ್ವೇಷಣಾ ಬುದ್ಧಿ ಮೆಲ್ಲ ಮೆಲ್ಲನೆ ಬೆಳ್ಯಕ್ಕನ ಪ್ರೇತದ ದುರಂತವನ್ನು ಶೋಧಿಸುತ್ತದೆ. ಅದರೊಂದಿಗೆ ತನ್ನ ಸುತ್ತಮುತ್ತಲಿನ ಮನೆಗಳಲ್ಲಿ ಜೀವಂತವಾಗಿರುವ-ಪ್ರೇತದ ಪೂರ್ವ ಸ್ಥಿತಿಯಾದ-ವಿರಸ ದಾಂಪತ್ಯದ ಅರಿವನ್ನೂ ಮಾಡಿಕೊಳ್ಳುತ್ತದೆ. ಒಟ್ಟಿನಲ್ಲಿ ಚಂದ್ರಯ್ಯನ ಪ್ರಗತಿ ರುದ್ರ ಸತ್ಯದ ದರ್ಶನದೆಡೆಗೆ-ವಿನೋದ ಪಥವನ್ನು ಅವನ ಪಾತ್ರ ಅನುಸರಿಸುವುದಿಲ್ಲ. ಬೆಳ್ಯಕ್ಕನ ಪ್ರೇತ ಆತನ ಬೆನ್ನು ಹತ್ತಿದಾಗ ಪರಿಸ್ಥಿತಿ ಗಂಭೀರವಾಗುತ್ತದೆ. ಸಶರೀರೆಯರಾದ ಜಲಜಾಕ್ಷಿ ಮತ್ತು ಸುನಾಲಿನಿಯರಲ್ಲಿ ಅರ್ಧ ಅನುರಕ್ತನಾದ ಚಂದ್ರಯ್ಯನನ್ನು ಪ್ರೇತದ ಪ್ರೇಮ ವಿವಿಧ ಸೆಳೆತಗಳಲ್ಲಿ ಸಿಲುಕುವಂತೆ ಮಾಡುತ್ತಿದೆ. ಅವನ ಅಂತರ್ಯದಲ್ಲಿ ಆಗುವ ವೇದನೆ ಕಾರಂತರ ವ್ಯಂಗ್ಯಕ್ಕೆ ಪೋಷಕವಾಗಿ ಬರುವ ಸಹಜವಾದ ಅನುಕಂಪವನ್ನು ಸೂಚಿಸುತ್ತದೆ. ಆದುದರಿಂದಲೇ ಚಂದ್ರಯ್ಯನ ಪಾತ್ರ ವ್ಯಂಗ್ಯ ದರ್ಶನದ ಪರಿಧಿಯ ಒಳಗಿದ್ದರೂ ಒಂದು ತರದ ದುರಂತ ಘನತೆಯನ್ನು ಪಡೆದುಕೊಂಡಿದೆ. ಇದು ಆತನ ಪರಿಚಯಕ್ಕೂ ಬೆಳವಣಿಗೆಗೂ ಇರುವ ವೈಪರೀತ್ಯವನ್ನು ಎದ್ದು ತೋರುವಂತೆ ಮಾಡುತ್ತದೆ.
ಈ ವ್ಯತ್ಯಾಸವು ಕಾರಂತರಿಗೆ ಕೃತಿಯ ಮುಖ್ಯ ವ್ಯಕ್ತಿಯಾದ ಚಂದ್ರಯ್ಯನ ಮೇಲೆ ಖಚಿತವಾದ ಹಿಡಿತವಿಲ್ಲ ಎಂಬ ಅಂಶವನ್ನು ಸಿದ್ದಪಡಿಸುತ್ತದೆ. ‘ಸರಸಮ್ಮನ ಸಮಾಧಿ’ಯಲ್ಲಿ ಬರುವ ಇತರ ಯಾವ ಪಾತ್ರಗಳನ್ನೂ ಕಾರಂತರು ಸಾಕಷ್ಟು ಬೆಳೆಸಿಲ್ಲ. ಪಾತ್ರ ರಚನೆಯಲ್ಲಿ ತೋರಿ ಬರುವ ಶಿಥಿಲತೆ ಕೃತಿಯ ಅಪೂರ್ಣತೆಗೆ ಒಂದು ಕಾರಣವಾಗಿದೆ. ಉಳಿದ ವ್ಯಕ್ತಿಗಳೆಲ್ಲಾ ಗಂಡು ಹೆಣ್ಣಿನ ಬದುಕನ್ನು ಒಡೆಯುವ ಸಾಮಾಜಿಕ ಪ್ರವೃತ್ತಿಗಳ ಪ್ರತೀಕಗಳಾಗಿ ಮಾತ್ರ ಬರುತ್ತಾರೆ. ಕೈಹಿಡಿದವಳನ್ನು ಗೋಳಾಡಿಸುವ ಅಧಿಕಾರ ತನ್ನದೆಂದು ಬಲವಾಗಿ ನಂಬಿರುವ ತಿಮ್ಮಪ್ಪಯ್ಯ; ವ್ಯಾಪಾರದ ಗುಂಗಿನಲ್ಲಿ ಮಡದಿ ಮನುಷ್ಯಳೆಂಬುದನ್ನು ಮರೆತ ಅಣ್ಣಪ್ಪ ಕಮ್ತಿ; “ಅವಳಿಗೆ ಗಂಡನೇಕೆ? ನ್ಯೂಸ್ ಪೇಪರಿಲ್ಲವೇ ? ಈ ಮನೆಯಲ್ಲಿ ಏನು ಕಡಿಮೆಯಾಗಿದೆ. ಉಣ್ಣಲಿಕ್ಕಿಲ್ಲಿವೇ ? ತಿನ್ನಲಿಕ್ಕಿಲ್ಲವೇ ? ಉಡಲಿಕ್ಕಿಲ್ಲವೇ?” ಎಂದು ಮಗನ ಕಡೆಗೆ ಸೇರುವ ಕಮ್ತಿಯ ತಾಯಿ ರಾಜೀವಿ ; “ಹೌದು ಎಲ್ಲಾ ಇದೆ. ಅದು ಹಟ್ಟಿಯಲ್ಲಿರುವ ಗೋಪಿಗೂ ಇದೆ.” ಎಂದು ಮನಸ್ಸಿನ ಒಡನಾಟವಿಲ್ಲದ ದೈಹಿಕ ಸಖ್ಯ ಮೃಗಗಳಿಗೆ ಮಾತ್ರವೆಂದು ಮನಗಂಡ ದುಃಖಿ ಸುನಾಲಿನಿ ; “ಹೆಂಡತಿ ಮನೆಗೆ ಬಂದಳೆಂದು ನಾಯಿಯ ಹಿಂದಿನ ಬಾಲವಾಗುವುದಿಲ್ಲ. ಯಾವುದು ಎಲ್ಲೆಲ್ಲಿ ಇರಬೇಕೋ ಅದು ಅಲ್ಲಲ್ಲಿ ಇದ್ದರೇನೇ ಚಂದ. ಕಾಲಿನದ್ದು ಕಾಲಿಗೆ; ತಲೆಗಲ್ಲ” ಎಂದು ಮಗನಿಗೆ ಬುದ್ದಿ ಹೇಳಿಸುವ ಅತಿಲೌಕಿಕ ವೆಂಕಟ್ರಮಣಯ್ಯ ; ಇದರಿಂದ ಸಿಟ್ಟುಗೊಂಡು ತವರು ಮನೆಗೆ ಹೋಗಿ ಚಂದ್ರಯ್ಯನನ್ನು ಮೋಹಿಸುವ ಅಭಿಮಾನಿ ಭಾಗೀರಥಿ- “ಸಾಯಲಿ ಬದುಕಲಿ, ಭಾಗೀರಥಿಯೇ ಬೇಕು” ಎಂದು ಹಂಬಲಿಸುವ ಪತಿ ಹಿರಣ್ಯ-ಈ ವ್ಯಕ್ತಿಗಳ ರೂಪರೇಖೆಗಳನ್ನು ಸರಿಯಾಗಿ ಗುರುತಿಸುವಂತಿಲ್ಲ. ಅವರು ವಿವಾಹ ಜೀವನದ ಸಮಾಧಿಗೆ ಕಾರಣವಾಗುವ ಶಕ್ತಿಗಳನ್ನು, ಈ ಪಾಡಿಗೆ ತುತ್ತಾದವರ ಕಷ್ಟಗಳನ್ನು ಮಾತ್ರ ಪ್ರತಿನಿಧಿಸಿ ಸಜೀವ ಪಾತ್ರಗಳೆನಿಸುವುದಿಲ್ಲ. ‘ಸರಸಮ್ಮನ ಸಮಾಧಿ’ಯಲ್ಲಿ ಪರಿಶೀಲನೆಗೆ ಯೋಗ್ಯವಾದ ಪಾತ್ರ ಚಂದ್ರಯ್ಯನದು ಮಾತ್ರ.
ಪಾತ್ರ ರಚನೆಗೂ ಭಾಷೆಯ ಪ್ರಯೋಗಕ್ಕೂ ನಿಕಟವಾದ ಸಂಬಂಧವಿರುವುದು ಇಲ್ಲಿ ಸ್ವಾರಸ್ಯವಾದ ವಿಚಾರ. ‘ಸೂಕ್ಷ್ಮ, ‘ಸ್ಥೂಲ’ಗಳನ್ನು ಗಂಟುಹಾಕಿ ನಗೆಯನ್ನು ಹೊರಡಿಸಬೇಕೆಂಬ ಕಾರಂತರ ಇಚ್ಛೆ ಚಂದ್ರಯ್ಯನ ಮೇಲಿನ ಹಿಡಿತವನ್ನು ಸಡಿಲಗೊಳಿಸುತ್ತಿದೆ ಎಂದು ಅನಿಸುತ್ತದೆ. ಈ ಅಭಿಪ್ರಾಯದ ಸಮರ್ಥನೆಗಾಗಿ ಅದೇ ಸಂದರ್ಭದಲ್ಲಿ ಕಾರಂತರು ಭಾಷೆಯನ್ನು ಹೇಗೆ ಬಳಸುತ್ತಾರೆಂಬುದನ್ನು ಪರಿಶೀಲಿಸ ಬಹುದು :
“ಚಂದ್ರಯ್ಯನಿಗೆ ‘ಅಡಾಉಡಿ’ ಎಂಬ ಬಿರುದು ಬೇರೆ ಬಂದಿದೆ……………ಈ ಚಂದ್ರನಾಥಯ್ಯನಿಗೂ ಸೋಮನಾಥ, ಮಂಜುನಾಥಯ್ಯನವರ ಕುಟುಂಬಕ್ಕೂ ಯಾವ ಸಂಬಂಧವೂ ಇಲ್ಲ ಬರೆ ‘ನಾಥ’ ಪದದ ಸಂಬಂಧ. ಆದರೆ ಚಂದ್ರಯ್ಯನ ನಾತ ಬಲು ದೂರ ಹಬ್ಬಿದೆ.”
ತಾರುಣ್ಯದಲ್ಲಿ ಸಾಹಿತಿಗೆ ಪದಮೋಹ, ಶ್ಲೇಷಮೋಹಗಳನ್ನು ಗೆಲ್ಲುವುದು ಕಷ್ಟ. ಆದರೆ ಭಾಷೆಯ ಆಟ ಮಿತಿ ಮೀರಿದಾಗ ಕೃತಿಯ ಘನತೆಯನ್ನು ಕೆಡಿಸಬಹುದು : “ಆತನ (ಚಂದ್ರಯ್ಯನ) ಮನಸ್ಸಿನ ಓಟದ ರೀತಿಯೇ ಬೇರೆ. ಅದನ್ನು ಓಟ ಎನ್ನುವುದಕ್ಕಿಂತ ಹಾರಾಟ ಎನ್ನುವುದೇ ಲೇಸು.” ಈ ಸರಣಿಯಲ್ಲಿಯೇ ಮುಂದುವರಿದು ಕಾರಂತರು “ಸಂತಾನ ಸೋಜ” ಪಂಚಮ ಜಾರ್ಜ” ಎಂಬ ಹೆಸರುಗಳನ್ನು ಜೊತೆಯಾಗಿರಿಸಿ ಧ್ವನಿ ಎಬ್ಬಿಸಲು ಪ್ರಯತ್ನಿಸುತ್ತಾರೆ.
ಸರಸಮ್ಮನ ಸಮಾಧಿಯ ಹಿನ್ನೆಲೆಯಲ್ಲಿರುವ ಒಳನೋಟದ ಬಿಗಿಯನ್ನು ಜ್ಞಾಪಿಸಿಕೊಂಡಾಗ ಕಾರಂತರು ಶಬ್ದಗಳ ಹಿಡಿತವನ್ನೇಕೆ ಬಿಗಿದಿಲ್ಲ ಎಂದು ಆಶ್ಚರ್ಯವಾಗುತ್ತದೆ. ಈ ಕೃತಿ ಮೊದಲಿನವುಗಳಲ್ಲಿ ಒಂದು ನಿಜ. ಆದರೆ ಪ್ರಜ್ಞೆಯ ಸಂಕೀರ್ಣತೆಯಲ್ಲಿ ‘ಮರಳಿ ಮಣ್ಣಿಗೆ’ ‘ಬೆಟ್ಟದ ಜೀವ’ ಗಳಿಗಿಂತ ಉತ್ತಮವಾಗಿದೆ. ವಸ್ತುವಿನ ವಿಸ್ತಾರ, ಪಾತ್ರಗಳ ಶಿಥಿಲತೆ-ಮಿತಿ ; ಮತ್ತು ಭಾಷೆಯ ಬಳಕೆಯಲ್ಲಿ ಇದರ ಮಟ್ಟ ಕೆಳಗಿದೆ. ಉತ್ತಮ ಕೃತಿಗಳಲ್ಲಿ ಪ್ರಬುದ್ಧ ಕಾರಂತರು ಭಾಷೆಯನ್ನು ದುರುಪಯೋಗಗೊಳಿಸುವುದಿಲ್ಲ. ಈ ಅಂಶ ಕನ್ನಡ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದಲೂ ಗಮನಾರ್ಹ. ಆದರೆ ಮಾಧ್ಯಮದ ದುರುಪಯೋಗ ಮಾಡದಿರುವುದಕ್ಕೂ ಸೂಕ್ಷ್ಮ ಭಾವ, ಸಂವೇದನೆಗಳನ್ನು ಅಭಿವ್ಯಕ್ತಗೊಳಿಸುವುದಕ್ಕೆ ನಿಷ್ಠೆಯಿಂದ ಪದವನ್ನು ಬಳಸುವುದಕ್ಕೂ ವ್ಯತ್ಯಾಸವಿದೆ. ಭಾಷೆಯ ನಿಷ್ಠೆ ಈ ಪ್ರಮಾಣದಲ್ಲಿ ಕಾರಂತರಲ್ಲಿ ಇದ್ದಿದ್ದರೆ ಅವರನ್ನು ನವ್ಯ ಪಂಥಕ್ಕೆ ಸಮೀಪವರ್ತಿಯನ್ನಾಗಿ ಮಾಡುತ್ತಿತ್ತು. ಒಂದು ದೃಷ್ಟಿಯಲ್ಲಿ ಕಾರಂತರ ವ್ಯಕ್ತಿತ್ವ ಅವರನ್ನು ನವ್ಯ ಮಾರ್ಗಕ್ಕೆ ತಿರುಗಿಸಬೇಕಾಗಿತ್ತು.
ಪರಂಪರಾಗತವಾಗಿ ಬಂದ ದೈವ ಭಕ್ತಿಯ ಭದ್ರ ತಳಹದಿಯ ಮೇಲೆ ನಿಲ್ಲುವ ಜೀವನವನ್ನಾಗಲೀ, ಅಂತಹ ಜೀವನದ ಆನಂದವನ್ನು ಕೀರ್ತಿಸುವ ಸಾಹಿತ್ಯಧರ್ಮವನ್ನಾಗಲೀ ಅವರು ಒಪ್ಪಿಕೊಳ್ಳುವುದಿಲ್ಲ. ಈ ಸತ್ಯವನ್ನು ಸರಸಮ್ಮನ ಸಮಾಧಿಯ ವ್ಯಂಗ್ಯವೂ, ಕಾರಂತರ ಇತರ ಕೃತಿಗಳೂ ಸಾಧಿಸುತ್ತವೆ. ಸ್ವತಂತ್ರವಾದ ವ್ಯಕ್ತಿತ್ವವನ್ನುಳಿಸಿಕೊಂಡು ಎಲ್ಲವನ್ನೂ ಪ್ರಶ್ನಿಸಿ ಸಾರ್ಥಕತೆಯನ್ನು ಹುಡುಕುವ ಮನೋವೃತ್ತಿ ಅವರ ನವ್ಯ ದೃಷ್ಟಿಯನ್ನು ಸೂಚಿಸುತ್ತದೆ. ಆದರೆ ಅನ್ವೇಷಣೆಯ ತೀವ್ರತೆ, ಅನುಭವದ ಸಂಕೀರ್ಣತೆ, ಭಾಷೆಯ ಸಂಯಮ-ಇವುಗಳ ಪ್ರಮಾಣದಲ್ಲಿ ನವ್ಯ ಸಾಹಿತಿಗಳಿಗೂ ಕಾರಂತರಿಗೂ ನಿರ್ದಿಷ್ಟವಾದ ವ್ಯತ್ಯಾಸವಿದೆ. ಕಾರಂತರ ಕಾದಂಬರಿಗಳಲ್ಲಿ ಸಂಕೀರ್ಣ ಪಾತ್ರಗಳು ವಿರಳ. ಚಂದ್ರಯ್ಯನ ಆಂತರ್ಯದ ಆಂದೋಲನ ಮತ್ತು ಅವನ ಇಡೀ ಪರಿಸರದಲ್ಲಿ ಕಂಡುಬರುವ ಕ್ಲಿಷ್ಟತೆಗಳ ಹಿಂದಿರುವ ಸಂಕೀರ್ಣ ಪ್ರಜ್ಞೆ, ಮುಂದೆ ಕಾರಂತರಲ್ಲಿ ಬೆಳೆಯ ಬೇಕಾದಷ್ಟು ಬೆಳೆಯಲಿಲ್ಲ. ಒಟ್ಟಿನಲ್ಲಿ ಅನುಭವದ ಮತ್ತು ಭಾಷೆಯ ಸರಳತೆ ಕಾರಂತರನ್ನು ಹೊಸ ಹಾದಿಯ ಲೇಖಕರಿಂದ ಪ್ರತ್ಯೇಕಿಸುತ್ತದೆ. ಈ ಅಸಂಕೀರ್ಣತೆ ಅವರ ಸಾಹಿತ್ಯದ ಸಮಗ್ರ ಮೌಲ್ಯವನ್ನೂ ನಿಷ್ಕರ್ಷಿಸುತ್ತದೆ.
ತನ್ನ ಸಾಹಿತ್ಯ ಜೀವನದ ಪೂರ್ವಾರ್ಧದಲ್ಲಿ ಉತ್ತಮ ಕಾದಂಬರಿಗಳನ್ನು ಕೊಟ್ಟ ಕಾರಂತರು ಅಲ್ಪ ತೃಪ್ತರು. ತೀರಾ ಸಾಮಾನ್ಯವಾದ ಕಾದಂಬರಿಗಳನ್ನು ಪ್ರಕಟಿಸುವುದಕ್ಕೆ ಅವರು ಹಿಂಜರಿಯುವುದಿಲ್ಲ. ‘ಸರಸಮ್ಮನ ಸಮಾಧಿ’ಯೊಂದಿಗೆ ‘ಜಗದೋದ್ಧಾರನಾ’ದ ವಿಡಂಬನೆಯನ್ನು ಹೋಲಿಸಿದರೆ ಈ ಮಾತಿನ ಸತ್ಯ ಕೂಡಲೇ ಅರ್ಥವಾಗುತ್ತದೆ. ‘ಜಗದೋದ್ಧಾರನಾ’ದಲ್ಲಿ ವ್ಯಂಗ್ಯ ದರ್ಶನ ಮಲಿನವಾಗುತ್ತದೆ-ಏಕೆ, ದರ್ಶನವೇ ಮಾಯವಾಗುತ್ತದೆ. ವ್ಯಂಗ್ಯದ ವಿಷ ಒಂದು ಜಾತಿಯ ವ್ಯಕ್ತಿಗಳನ್ನು ಕೆಡಹುವ ಸಾಧನವಾಗುತ್ತದೆ. ಸನ್ಯಾಸಿಗಳನ್ನೂ ಮಠಾಧಿಪತಿಗಳನ್ನೂ ಉತ್ಸಾಹದಿಂದ ಬೇಟೆಯಾಡುವುದು ಕಾರಂತರ ಮೆಚ್ಚಿನ ‘ಹಾಬಿ’. ಅದು ಇಲ್ಲಿ ಔಚಿತ್ಯದ ಎಲ್ಲೆ ಮೀರಿ ಕಲೆಯನ್ನು ಕೆಡಿಸುತ್ತದೆ. ಸರಸಮ್ಮನ ಸಮಾಧಿಯಲ್ಲಿ ಪೋಷಕವಾಗಿ ಬರುವ ಅನುಕಂಪದ ಉದಾರತೆಯನ್ನು ಸನ್ಯಾಸಿಗಳಿಗೆ ಕಾರಂತರು ತೋರಿಸಲಾರರು. ಬೇಟೆಯ ಹುಮ್ಮಸ್ಸು, ವ್ಯಂಗ್ಯದ ಜಳ್ಳು ಕಾರಂತರ ಅಪೂರ್ಣ ಬೆಳವಣಿಗೆಯ ಕುರುಹಾಗಿದೆ.
‘ಸರಸಮ್ಮನ ಸಮಾಧಿ’ ಮತ್ತು ‘ಜಗದೋದ್ಧಾರನಾ’ದ ನಡುವೆ ಕಾರಂತರ ಸೃಷ್ಟಿ ಕಾರಕ ದೆಶೆ ನಡೆದು ತೀರಿಹೋಗುತ್ತದೆ. ನಿಸರ್ಗ ಮಾನವರ ಬಹುಮುಖದ ಬಾಂಧವ್ಯವನ್ನು ಪ್ರಾದೇಶಿಕ ಹಿನ್ನೆಲೆಯಲ್ಲಿ ಮೂರು ತಲೆಮಾರುಗಳಲ್ಲಿ ಚಿತ್ರಿಸುವ ಬೃಹತ್ಕಾದಂಬರಿ “ಮರಳಿ ಮಣ್ಣಿಗೆ’, ದುರಂತವನ್ನು ಮೀರಿ ಪ್ರಕೃತಿಯನ್ನು ದುಡಿಮೆಯಿಂದ ಮತ್ತು ನಲ್ಮೆಯಿಂದ ಮಣಿಸಿದ ಗೋಪಾಲಯ್ಯನ ‘ಬೆಟ್ಟದ ಜೀವ’-ಈ ಎರಡು ಶಿಖರಗಳನ್ನೇರಿದ ಕಾರಂತರ ಬೆಲೆ ಮತ್ತೆ ಇಳಿಮುಖವಾಗುತ್ತದೆ. ಮೇಲಿನ ಎರಡು ಕೃತಿಗಳಿಗೂ ‘ಸರಸಮ್ಮನ ಸಮಾಧಿ’ಗೂ ಸಂಬಂಧವಿದೆ. ಇಲ್ಲಿ ವಸ್ತು ನಿರೂಪಣೆಯಲ್ಲೇ ಮೌಲ್ಯತುಲನ ಹುದುಗಿ ಕೊಂಡಿದ್ದು, ಅದು ಸ್ವತಂತ್ರವಾಗುವುದಿಲ್ಲ. ಈ ಸಂಬಂಧವನ್ನು ಸಾಂಕೇತಿಕ ಮಟ್ಟದಲ್ಲಿ ಗುರುತಿಸಬಹುದು. ‘ಸರಸಮ್ಮನ ಸಮಾಧಿ’ಯಲ್ಲಿ ಸೀತಾರಾಮ ಮುಗ್ಧೆಯಾದ ಹಳ್ಳಿಯ ಹುಡುಗಿ ನಾಗವೇಣಿಯನ್ನು ಹನಿಮೂನಿಗೆಂದು ಎಳೆದೊಯ್ಯುತ್ತಾನೆ. ಕಡಲ ತೀರದಲ್ಲಿ ಸೀತಾರಾಮನಿಗೆ ದಾಂಪತ್ಯದ ಘೋರ ರಾತ್ರಿಯ ಅನುಭವವಾಗುತ್ತದೆ- “ಕಡಲ ಅಲೆಗಳು ಅಲ್ಲಿನ ಬಂಡೆಗಳನ್ನು ಬಡಿದು, ಸಿಡಿದು, ನೊರೆಯಾಗುವ ನೋಟವನ್ನು ಕಂಡು “ನೋಡು ಎಷ್ಟು ಚೆನ್ನಾಗಿದೆ? ಎಂದನು ಸೀತಾರಾಮ. ನಾಗವೇಣಿ ಮೌನ. “ನೀನು ಮೂಕಿಯೋ ?” ನಾಗಿ ಆಗ ಲಜ್ಜೆಯಿಂದ ಕುಸಿದಳು….ಕಡಲ ನೀರು ಕುಣಿ ಕುಣಿದು ಬಂಡೆಗೆ ಅಪ್ಪಳಿಸಿತು. “ನೋಡಿದೆಯಾ ಎಷ್ಟು ಚಂದವಾಗಿದೆ’ ಎಂದು ಸೀತಾರಾಮ ಹೇಳಿದನು. ನಾಗವೇಣಿಯ ಎದೆಯೊಳಗೆ ಏನೋ ಅಪ್ಪಳಿಸುವ ಸದ್ದು ಕೇಳುತ್ತಿತ್ತು.”
“…….ಒಮ್ಮೆಗೆ ಚೀರಿದಳು………..ತಾನು ಗಂಡನ ಹಿಡಿತದಲ್ಲಿರುವೆನೆಂದು ಅವಳಿಗೆ ನೆನವರಿಕೆಯಾಯ್ತು ಜಿಗುಪ್ಸೆ, ಕೋಪ, ವ್ಯಥೆ, ತಿರಸ್ಕಾರಗಳಿಂದ ದೂರ ಮರಳಿನಲ್ಲಿ ಹೋಗಿ ಕುಳಿತು ಅಳತೊಡಗಿದಳು. ಕಡಲ ತೆರೆಯ ಉಕ್ಕುವಿಕೆಗೆ ಮೀರುವ ದುಃಖವು
ಅವಳ ಎದೆಯಿಂದ ಉಕ್ಕುತ್ತಿತ್ತು. ಸೀತಾರಾಮನಿಗೆ ಬುದ್ಧಿ ಬಂತು.”
ಅದೇ ಕಡಲು ‘ಮರಳಿ ಮಣ್ಣಿಗೆ’ಯಲ್ಲಿ ನಾಗವೇಣಿಯ ಸಂಗೀತಕ್ಕೆ ಹಿಮ್ಮೇಳವಾಗಿ ದುರಂತದ ಆಚೆಗಿರುವ ಸಾಮರಸ್ಯದ ಶಾಂತಿಯನ್ನು ಹೆಣ್ಣಿನ ಸರಳ ಹೃದಯ ಸಾಧನೆಯಿಂದ ಕಂಡುಕೊಳ್ಳಬಹುದೆಂಬುದನ್ನು ವ್ಯಂಜಿಸುತ್ತದೆ. ‘ಬೆಟ್ಟದ ಜೀವ’ದ ‘ಕಾಟುಮೂಲೆ’ ಸಫಲ ಶ್ರಮ ಮತ್ತು ನಲ್ಮೆ; ಪ್ರಕೃತಿಯ ಸಮೃದ್ಧಿ ಮತ್ತೆ ದಾಂಪತ್ಯದ ಸರಸ-ಇವುಗಳ ದ್ಯೋತಕ. ಪರಿಸ್ಥಿತಿಯು ವಿಕಟವಾದ ಒತ್ತಡಕ್ಕೆ ಮನುಷ್ಯ ತೋರಿಸಬಹುದಾದ ಸಮರ್ಥ ಪ್ರತಿಕ್ರಿಯೆಯನ್ನು ನಿರೂಪಿಸಿ-ವಿರಸದಿಂದ ಸರಸದೆಡೆಗೆ ಕಾರಂತರ ದರ್ಶನದ ಪ್ರಗತಿಯಾಗುತ್ತದೆ.
ಇಲ್ಲಿಂದ ಮುಂದೆ ಪ್ರಾರಂಭವಾದ ಶನಿದೆಶ ಕಾರಂತರನ್ನು ಇನ್ನೂ ಬಿಟ್ಟಿಲ್ಲ. ಜೀವನದ ವಿಶಾಲತೆಯಲ್ಲಿ ಯಾವ ಅನುಭವಕ್ಕೆ ಎಷ್ಟು ಬೆಲೆ, ಸಾಹಿತ್ಯದಲ್ಲಿ ಎಷ್ಟು ಜಾತಿಯ ವ್ಯಕ್ತಿಗಳಿಗೆ ಎಷ್ಟು ಗಮನ ಉಚಿತ-ಎಂಬ ಮುಖ್ಯವಾದ ಪ್ರಶ್ನೆಯನ್ನು ಅವರು ಎದುರಿಸಿಲ್ಲ ಎಂಬುದಕ್ಕೆ ಅವರ ಕೃತಿಗಳಲ್ಲಿ ತಿರುತಿರುಗಿ ಬರುವ ‘ಜಗದೋದ್ಧಾರಕ’ರೇ ಸಾಕ್ಷಿ. ಸಮಗ್ರ ದೃಷ್ಟಿಯಿಂದ ಸಿಗುವ ನಿರ್ಲಿಪ್ತತೆ ಕಾರಂತರಲ್ಲಿ ಇಲ್ಲ. ಮೌಲ್ಯ ನಿರ್ಧಾರದ ಸಮಸ್ಯೆಗೆ ಪ್ರಧಾನತೆಯನ್ನು ಇತ್ತಿರುವ ಎರಡನೆಯ ತರದ ಕಾದಂಬರಿಗಳಲ್ಲಿ ಕಾರಂತರು ವೈಯಕ್ತಿಕ ಜೀವನದ ಸಾರ್ಥಕತೆಯು ನಿರ್ಧಾರವನ್ನು ಗಣಿತ ಭಾಷೆಯಲ್ಲಿ ಮಾಡುತ್ತಾರೆ (“ಬದುಕಿನ ಲೆಕ್ಕಾಚಾರದಲ್ಲಿ ನಾನು ಕೊಂಡದ್ದಕ್ಕಿಂತಲೂ ಕೊಟ್ಟದ್ದು ಕಡಿಮೆಯಾಗಬಾರದು ಎಂಬ ಭಾವನೆ-ಇದು ಬರಿಯ ಹಣದ ಲೆಕ್ಕಾಚಾರವಲ್ಲ. ಮಾನವ ಜೀವನದ ಲೆಕ್ಕಾಚಾರ.”) ವ್ಯಕ್ತಿಜೀವನದ ಮಟ್ಟದಲ್ಲಿ ಇದೊಂದು ಅನುಕರಣೆಗೆ ಯೋಗ್ಯವಾದ ಗುರಿ, ಮತ್ತು ಸಾರ್ಥಕತೆಯನ್ನು ಅಳೆಯುವ ಸಾಧನವಾಗಬಹುದು. ಆದರೆ ಸಮಸ್ತ ಜೀವನದ ವಿಸ್ತಾರವನ್ನು ಈ ಸೂತ್ರದೊಳಗೆ ಬಚ್ಚಿಡಲು ಸಾಧ್ಯವಿಲ್ಲ. ಮನುಷ್ಯನನ್ನು ಮಾತ್ರವಲ್ಲದೆ ಹಲವಾರು ಕೋಟಿ ಜೀವಗಳ ಸೃಷ್ಟಿ-ಲಯಗಳನ್ನು ಒಳಗೊಂಡ ಬದುಕಿನ ಅಗಮ್ಯತೆಯನ್ನು- ಈ ವಿಶ್ವ ಜೀವನದ ಸಾರ್ಥಕತೆಯ ಪ್ರಶ್ನೆಯನ್ನು -ಕಾರಂತರು ಅಲಕ್ಷಿಸುವುದರಿಂದ ಒಂದು ಸಂಕುಚಿತವಾದ ವಾಸ್ತವಿಕ ಸೂತ್ರವನ್ನೇ ತನ್ನ ಅನುಭವ ಸಂಜೀವನವೆಂದು ಹೇಳಿಕೊಳ್ಳುತ್ತಿದ್ದಾರೆ. ‘ಸರಸಮ್ಮನ ಸಮಾಧಿ’ಯಲ್ಲಿ ಸಾಮಾಜಿಕ ಜೀವನದ ಮನುಷ್ಯನ ಒಂದು ಸಂಕೀರ್ಣ ಮುಖವನ್ನು ಪರಿಣಾಮಕಾರಿಯಾಗಿ ವ್ಯಂಜಿಸಿದ ಕಾರಂತರು, ಸಮಗ್ರ ಜೀವನದ ರಹಸ್ಯವನ್ನು ಸಂಕೇತಿಸುವ ಪ್ರಯತ್ನಕ್ಕೆ ಬೇಕಾದ ಪ್ರಗತಿಯನ್ನು ಸಾಧಿಸಿಲ್ಲ.

Close

ಹಂಗಿನರಮನೆಯ ಹೊರಗೆ(ಕಥೆ)

ರಾಜಶೇಖರ ನೀರಮಾನ್ವಿ

ಹಂಗಿನರಮನೆಯ ಹೊರಗೆ

೧
ನೋವು ಹೆಚ್ಚಾಗಿ ಅದೇ ಜೊಂಪು ಹತ್ತಿದ್ದ ನನಗೆ ಎಚ್ಚರವಾಯಿತು. ಕಣ್ಣು ತೆರದು ನೋಡಿದೆ ಯಾರೂ ಇರಲಿಲ್ಲ. ಮಗ್ಗುಲಿಗೆ ಹೊರಳಿ ಕಣ್ಣು ಮುಚ್ಚಿದೆ. ಅಪ್ಪ ಹೊರಗೆ ಯಾರೊಡನೆಯೋ ಮೆಲುದನಿಯಲ್ಲಿ ಮಾತಾಡುತ್ತಿದ್ದಂತಿತ್ತು.

“ಏನನ್ನ ಅನ್ರಿ ಈ ಜಡ್ಡು ಇಷ್ಟು ಬಲಕೊಂಬೋತನಕ ಬಿಡಬಾರದಿತ್ತು” ಕೇಳುತ್ತಿದ್ದ ವ್ಯಕ್ತಿ “ನಾ ಇನ್ನ ಏನು ಮಾಡ್ಲಿರಿ. ತನ ಬ್ಯಾನಿ ತನಗ ಗೊತ್ತಾಗ್ಲಾರ್ದ ಇರುವಾತಗ ನಾವೇನು ಮಾಡಬೇಕು ? ಕಲತೋರು ನನಗಿಂತ ಶಾಣ್ಯೋರು ಅಂಬೋದೇ ತಲೆತುಂಬ ತುಂಬಿಕೊಂಡಿರೋರಿಗೆ ಏನು ಹೇಳಬಹುದು ? ಇವನ ಕಾಳಿಜ್ಯಾಗ ಇತ್ತಿತ್ಲಾಗ ನಿದ್ದಿನ ಇಲ್ಲ, ಊಟ ಇಲ್ಲ……”

ಅಪ್ಪನ ಮಾತು ಕೇಳಿ ಆತನ ಮೇಲಿನ ಮರುಕ ಇನ್ನೂ ಹೆಚ್ಚಿತು. “ಅಪ್ಪ ಈ ಪರಿಸ್ಥಿತಿಗೆ ನನ್ನನ್ನು ತಂದಾತನೇ ನೀನು” ಎಂದು ಜೋರಾಗಿ ಕೂಗಬೇಕೆನಿಸಿತು. ಯಾವಾಗಲೂ ತನ್ನ ಹಿರಿಮೆಯನ್ನೇ ಮರೆಸುವ ಅಪ್ಪ, ನನಗೆ ಜಡ್ಡಾದ ಈಗಲೂ ಅದನ್ನೇ ಮಾಡುತ್ತಿದ್ದಾನೆ. ಹುಟ್ಟಿದ ದಿನದಿಂದ ಇಲ್ಲಿಯವರೆಗೆ ನನ್ನನ್ನು ಧೂಳಿಯ ಕಣಕ್ಕಿಂತಲೂ ಕಡೆಯಾಗಿ ಕಂಡ ಅಪ್ಪ ಈಗ ಕೊನೆಯಂಕದ ಪಾತ್ರವನ್ನು ಚೆನ್ನಾಗಿ ಆಡಿ ಎಲ್ಲರಿಂದಲೂ ಶಹಬಷ್‌ಗಿರಿ ಪಡೆದುಕೊಳ್ಳಿತ್ತಿದ್ದಾನೆ.

ಯಾಕೋ ಏನೋ. ಅಪ್ಪನಿಗೂ ನನಗೂ ಮೊದಲಿನಿಂದಲೂ ಸರಿಬರಲಿಲ್ಲ. ಹುಡುಗನಿದ್ದಾಗ ಬೆತ್ತದಿಂದ ಬಡಿದು, ಕಿವಿಹಿಂಡಿ, ಮೂಲದಂಡಿಗೆಗೆಹಾಕಿ ಓನಾಮ ಕಲಿಸಿದ ಅಯ್ಯನವರ ಚಿತ್ರ ನನ್ನ ಬಗೆಗಣ್ಣಿನೆದುರು ಬದಲಾದರೂ; ಅಪ್ಪನ ಚಿತ್ರ ಮಾತ್ರ ಬದಲಾಗಲಿಲ್ಲ, ಅಕಾರಣ ಕೋಪ, ಯಾವುದು ಮಾಡಿದರೆ ಸರಿ, ಯಾವುದು ಮಾಡಿದರೆ ತಪ್ಪು ಎಂದು ಪ್ರತಿಯೊಂದು ಕೆಲಸವನ್ನು ವಿಚಾರಮಾಡಿ, ಮಾಡಿ ಮುಗಿಸಿದಮೇಲೂ ಅದರ ಪರಿಣಾಮ ಈತನ ಮೇಲೆ ಇಂತಹುದೇ ಆಗುವದೆಂದು ಹೇಳಲು ಬರುವದೇ ಇಲ್ಲ. ಕೆಲವು ಸಲ ಹೊಗಳಿಕೊಂಡಾಡಿದರೆ, ಬಹಳಸಲ ಬೈದು ಮೂದಲಿಸುತ್ತಾನೆ. ಇತ್ತೀಚೆಗೆ ಆದ ಬದಲಾವಣೆ ಎಂದರೆ ಮೊದಲು ಬಡಿಯುತ್ತಿದ್ದ, ದೊಡ್ಡವನಾಗಿರುವೆನೆಂದು ಈಗ ಬೈಯುತ್ತಾನೆ ಅಷ್ಟೆ.

ಇಂತಹ ವಿಚಾರಗಳನ್ನು ಅಪ್ಪನ ಬಗೆಗೆ ಮಾಡುವದು ಕುಲ್ಲಕತನವಲ್ಲವೇ ಅನಿಸುತ್ತದೆ. ಈಗಲ್ಲ ನನಗೆ ತಿಳುವಳಿಕೆ ಬಂದಾಗಿನಿಂದ ಈ ಕುಲ್ಲಕತನದೊಂದಿಗೆ ಹೋರಾಡುತ್ತಿದ್ದೇನೆ. ನಾನು ಗೆದ್ದಿಲ್ಲ. ಅದು ಸೋತಿಲ್ಲ. “ಅಪ್ಪ ನಿನ್ನೆ ಕನಸಿನಲ್ಲಿ ನಿನ್ನ ಹೆಣ ಕಂಡಿದ್ದೆ” ಎಂದು ಯಾರೋ ಬರೆದ ಕವನ ಓದಿದಾಗ, ಈ ರೀತಿಯ ಹೋರಾಟ ನಡೆಸಿದವನು ನಾನೊಬ್ಬನೇ ಅಲ್ಲ ಎಂದುಕೊಂಡು ಸಮಾಧಾನ ಪಟ್ಟಿದ್ದೇನೆ. ನಾನು ಬೆಳೆದಂತೆಲ್ಲಾ, ನನ್ನಲ್ಲಿಯ ನಾನು ಬೆಳೆದಂತೆಲ್ಲಾ; ಯಾವದಾದರೂ ದೊಡ್ಡದನ್ನು ತೋರಿಸಿ ನನ್ನನ್ನು, ನನ್ನಲ್ಲಿಯವನನ್ನು ಸಣ್ಣವನನ್ನಾಗಿ ಮಾಡುತ್ತಾನೆ ಅಪ್ಪ, ಅದಾವದೂ ಸಿಕ್ಕದಿದ್ದಾಗ ಯಾವದೋ ತಪ್ಪು ಹುಡುಕಿ “ಓದಿ, ಕಲಿತು ನಮಗಿಂತಲೂ ತಿಳುವಳಿಕೆ ಪಡೆದವರು ನೀವು” ಎಂದು ಮೂದಲಿಕೆ ತನಗಿಂತಲೂ ನಾನು ಹೆಚ್ಚು ಓದಿದ್ದು ತಪ್ಪೇನು ? ಇದ್ದದ್ದನ್ನು ನೋಡಿ ಸಂತೋಷ ಪಡುವದಕ್ಕಿಂತ ಇಲ್ಲದ್ದನ್ನು ಕಂಡು ಕರುಬುವದೇ ಹೆಚ್ಚಾಯಿತು……

ಜನರಲ್ ವಾರ್ಡಿನಲ್ಲಿದ್ದ ಯಾವನೋ ನೋವು ಹೆಚ್ಚಾಗಿ ಕಿರುಚಲಾರಂಭಿಸಿದ್ದ…

ನರ‍್ಸ ಬಂದು ಟೆಂಪರೇಚರ್ ನೋಡಿ ಚಾರ್ಟಿನಲ್ಲಿ ಬರೆದು ಮುಗುಳುನಕ್ಕು ಹೋದಳು. ಈ ಮುಗುಳುನಗೆಯೂ ಅವಳ ಡ್ಯೂಟಿಯ ಒಂದು ಭಾಗ.

ಅವಳ ನಗೆ ಯಾವದೋ ಒಂದು ಭಾವನೆಯನ್ನು ಬಡಿದೆಬ್ಬಿಸಿತು. ಎಲ್ಲವೂ ಒಂದು ವ್ಯಾಪಾರ, ಯಾಕೋ ತಿಳುವಳಿಕೆ ಮೂಡಿದಾಗಿನಿಂದ ದಿನಕ್ಕಿಷ್ಟು ಅಂಜುಗುಳಿತನ ಹೆಚ್ಚುತ್ತಿದೆ. ನಾನು ಇನ್ನು ಒಂದೆರಡು ಶತಮಾನ ತಡೆದು ಹುಟ್ಟಿದ್ದರಾಗುತ್ತಿತ್ತೇನೋ,

ಸ್ವಾತಂತ್ರ್ಯವಿಲ್ಲದ ಜೀವ ಬದುಕಿದ್ದರೆಷ್ಟು, ಬಿಟ್ಟರೆಷ್ಟು, ಒಂದು ವ್ಯಕ್ತಿಯ ಸುತ್ತಲೂ ಯಾಕಿಷ್ಟು ಬಂಧನ ? ತಾನು ತನ್ನದು, ತನ್ನವರು, ತನ್ನವರೆಂದುಕೊಂಡಿರುವವರು, ಒಂದೇ….ಎರಡೇ……..

ಹೊರಗೆ ಜನರ ಗದ್ದಲ ಹೆಚ್ಚಾಯಿತು, ನಾಲ್ಕು ಗಂಟೆಯಾಗಿರಬೇಕು. ಇನ್ನು ಎರಡು ತಾಸು ದಿನದ ಮಾಮೂಲು ಜಾತ್ರೆ. ಬಂದ ಜನ ತಮ್ಮ ಯೋಗ್ಯತೆಗೆ ತಕ್ಕಮಟ್ಟಿಗೆ ಕಣ್ಣೀರು ಸುರಿಸಿ, ಅನುಕಂಪ ತೋರಿಸಿ ತಮ್ಮ ಸಜ್ಜನಿಕೆಗೆ ತಾವೇ ಭೂತಕನ್ನಡಿ ಹಿಡಿದು ಸಂತೋಷಪಡುವ ಸುಯೋಗ.

ಅಮ್ಮ ತಮ್ಮನೊಡನೆ ಬಂದಳು. ತಮ್ಮ ಫ್ಲಾಸ್ಕು ಹಣ್ಣುಗಳನ್ನು ಇಟ್ಟು, ಚಾರ್ಟ್ ನೋಡಿ “ಎಲ್ಲಾ ನಾರ್ಮಲ್‌ ಐತಲ್ಲಣ್ಣ” ಮೆಚ್ಚಿಕೆಯ ಧ್ವನಿಯಲ್ಲಿ ಅಂದ. ಅವನು ಫೈನಲ್ ಎಂ.ಬಿ.ಬಿ.ಎಸ್.

ಅಮ್ಮ ಮಾಮೂಲಿನಂತೆ ಒಂದು ಬಕೀಟು ಕಣ್ಣೀರು ಸುರಿಸಿದಳು, ಅಪ್ಪ ಅದೇ ನೆಪದಿಂದ ಪ್ರತಿದಿನದಂತೆ ಒಳಗೆ ಬಂದು,-

”ಆಪರೇಷನ್‌ಗೆ ಇಷ್ಟು ಅಂಜಿಕೊಂತಾರೇನು ? ಈಗ ಹೃದಯದ ಆಪರೇಷನ್‌ಗಳೇ, ನಡೀತಾವಂತ ಇದಲ ಏನು” ಎಂದು ಹೇಳಿ ಸಮಾಧಾನ ಮಾಡಲೆತ್ನಿಸಿದ. ಆತನಲ್ಲಿ ತನ್ನ ಮಗ ಸಾಯಲಿಕ್ಕಿಲ್ಲ ಎನ್ನುವ ಭಾವನೆಯಿತ್ತು.

“ನಾಳೆ ಮುಂಜಾನೆ ಎಂಟುಗಂಟೆಗೇನಣ್ಣ ಆಪರೇಶನ್” ಎಂದ ತಮ್ಮ,
“ಹೌದೆ”ನ್ನುವಂತೆ ತಲೆಹಾಕಿದೆ.
ಅಮ್ಮನ ಕಣ್ಣಿನ ನೀರಾವರಿ ಇನ್ನು ಮುಂದುವರಿದಿತ್ತು.

ಡಾಕ್ಟರ್ ದಿನದ ಭೆಟ್ಟಿಗಾಗಿ ಒಳಗೆ ಬಂದಾಗ, ನೀರು ಹಾಕಿದ ಕೂಡಲೇ ಕಡಿಮೆಯಾಗುವ ಹಾಲಿನ ಉಕ್ಕಿನಂತೆ, ಅಮ್ಮನ ಅಳು ಕಡಿಮೆಯಾಯಿತು.
ಡಾಕ್ಟರ್ ಚಾರ್ಟ್ ನೋಡಿ, ಎದೆ, ಹೊಟ್ಟೆ, ಬೆನ್ನುಗಳ ಮೇಲಿಟ್ಟು ತಮ್ಮ ಸೈತಾ ಸ್ಕೋಪು ಚೆನ್ನಾಗಿ ಕೆಲಸ ಮಾಡುತ್ತಿದೆಯೆಂದು ಖಾತ್ರಿಮಾಡಿಕೊಂಡು,

“To-morrow by this tine you will be all right Mr……” ಎಂದು ಹೇಳಿ ಅಮ್ಮನಿಗೆ ಧೈರ್ಯಕೊಟ್ಟು ಹೊರಟುಹೋದರು.

ಅಮ್ಮನ ಅಳು ಹೆಚ್ಚಾದುದರಿಂದಲೋ, ಬಹಳ ಹೊತ್ತು ಆಸ್ಪತ್ರೆಯಲ್ಲಿದ್ದ ಬೇಸರದಿಂದಲೋ ಅಪ್ಪ ಅಮ್ಮನನ್ನು ಕರೆದುಕೊಂಡು ಮನೆಗೆ ಹೋಗುವದಾಗಿ ಹೇಳಿ, ತಮ್ಮನಿಗೆ ಅಷ್ಟು ಹೊತ್ತು ಇರಲು ಸೂಚಿಸಿ ಹೋದ.
(ಅಣ್ಣ ಅತ್ತಿಗಿ ಬಂದಾಳ” ಹೊಸ ಸುದ್ದಿ ಹೇಳುವವನಂತೆ, ತಮ್ಮ,

“ಈಗ್ಯಾಕ ಬಂದ್ದು”
“ಇದೇನಣ್ಣ ಹಿಂಗ ಕೇಳಿದ್ದೆ, ಇಂಥಾ ಹೊತ್ತಿನ್ಯಾಗ ಇಲ್ಲದಿದ್ರೆ ಮತ್ಯಾವಾಗ ಬರಬೇಕು?
“ಹೇಣ್ತಿ, ಬಂಧು, ಬಳಗ ಅಂದ್ರೆ ಸಾಯುವಾಗ ಬೆಟ್ಟ ಕೊಡೋದರ ಸಲುವಾಗಿಯೇ ಇರ‍್ತಾರೇನು ? ನಾನು ಸತ್ತದು ಖಾತ್ರಿ ಮಾಡಿಕೊಂಡು ಹೋಗಬೇಕಂತ……..”
ತಮ್ಮ ಬಾಯಿಯ ಮೇಲೆ ಕೈಯಿಟ್ಟು ಮಾತಿಗೆ ತಡೆ ಹಾಕಿದ ಅವನಿಗೂ ಹಿಂದಿನದೆಲ್ಲಾ ನೆನಪಾಗಿರಬೇಕು, ಹೊರಗೆಹೋಗಿ ಬಿಟ್ಟ.

ಯಾಕೋ ಒಂದು ರೀತಿಯ ಸಂತೋಷದ ಭಾವ ಮನಸ್ಸಿನಲ್ಲಿ ಹಾದುಹೋಯಿತು. ತಮ್ಮನ ಮನಸ್ಸನ್ನು ನೋಯಿಸಿದ್ದರೂ “ನೋಡಿದೆಯಾ ಹೇಗೆ ಸೇಡು ತೀರಿಸಿಕೊಂಡೆ” ಎನ್ನುವ ಒಂದು ರೀತಿಯ ವಿಕಟ ಸಂತೋಷವಾಗಿರಬೇಕು. ಅವಳ ಮೇಲಿನ ಸಿಟ್ಟಿನಿಂದ ತಮ್ಮನ ಮನಸ್ಸು ನೋಯಿಸಬೇಕಾಯಿತಲ್ಲಾ ಎಂದು ಒಂದು ಮನಸ್ಸು ಹೇಳಿತು.

ಹೌದು ಇದರಲ್ಲಿ ನನ್ನದೇನು ತಪ್ಪು ? ನನಗನ್ನಿಸಿದ್ದನ್ನು ಈರೀತಿ ಮುಖಕ್ಕೆ ಹೊಡೆದಂತೆ ಹೇಳಬಾರದು ಎಂದು ಎಷ್ಟು ಪ್ರಯತ್ನಿಸಿದರೂ ಅದು ಹೇಗೋ ನುಸುಳಿ ಮಾತಾಗಿ ಹೊರಬೀಳುತ್ತವೆ ನನ್ನ ಭಾವನೆಗಳು, ನಾನು ಜೀವಿಸುತ್ತಿರುವ ಪರಿಸರದಲ್ಲಿ ನನಗನಿಸಿದಂತೆ ನುಡಿಯಲು, ನಡೆಯಲು, ಬದುಕಲು ಸಾಧ್ಯವಿಲ್ಲವೆಂದು ಮನವರಿಕೆಯಾಗಿಯೇ ನಾನು ಈ ಸಮಾಜದಲ್ಲಿ, ಜಗತ್ತಿನಲ್ಲಿ ಬದುಕಲು ಅನರ್ಹ ಎನ್ನುವ ನಿರ್ಣಯಕ್ಕೆ ಬಂದದ್ದು.

ಮನಸ್ಸಿನ, ಹೃದಯದ ಅನಿಸಿಕೆಗಳಿಗೆ ಓಗೊಡದೆ ಯಾರದೋ ಬಂಧನ, ಯಾವದೋ ಭಿಡೆಗೊಳಗಾಗಿ ತನ್ನತನವನ್ನು ಅದುವಿಟ್ಟುಕೊಂಡು ; ಯಾರದೋ ನಾಲಿಗೆ ಯಾವದೋ ಕಣ್ಣು, ಎಂಥದೋ ಕಿವಿಯಾಗಿ ಮನುಷ್ಯ ತನ್ನತನವನ್ನು ಹಂಚಿಕೊಂಡು ಬಾಳುವವರ ಘಟಕವಾದ ಈ ಜಗತ್ತು, ಸಮಾಜ ನನ್ನ ಪಾಲಿಗಂತೂ ಎಂದೋ ಸತ್ತಂತಾಗಿ ಬಿಟ್ಟಿದೆ. ಅದಕ್ಕೇ ಈ ಸತ್ತ ಜನ ಜಂಗುಳಿಯಲ್ಲಿ ಬದುಕಿದವನಾಗಿರುವದಕ್ಕಿಂತ, ಮುಂದೆ ಬದುಕಿರುವ ಸಮಾಜ ನಿರ್ಮಿಸಲು ಸಾಯುವದು ಲೇಸು.

“ಅತ್ತಿಗಿ ಬಾರ‍್ತಾಳಂತೆ ಮತ್ತೆ ನನಗಂದಂಗ ಆಕೀಗೂ ಅಂದುಬಿಟ್ಟಿಯಣ್ಣಾ” ಒಳಗೆ ಬಂದು ತಮ್ಮ ಹೇಳಿದ. ಮುಗುಳ್ಳಗುತ್ತಾ ಅವನ ಮುಖ ನೋಡಿದ. ತನ್ನಣ್ಣ ಯಾವ ಪರಿಸ್ಥಿತಿಯಲ್ಲಿಯೂ ಹಾಗೆ ಮಾಡಲಾರ ಎನ್ನುವ ಭರವಸೆ ಆ ನೋಟದಿಂದ ಮತ್ತಷ್ಟು ಸ್ಥಿರಪಟ್ಟಿರಬೇಕು, ಯಾವದೋ ಔಷಧಿ ತರುವೆನೆಂದು ಹೇಳಿಹೋದ.

ನನ್ನನ್ನು ಸಾಯಹಚ್ಚುವ ಕಾರಸ್ಥಾನದಲ್ಲಿ ಈ ಹೆಂಡತಿಯೊಬ್ಬಳು ಮುಖ್ಯಪಾತ್ರಧಾರಿ. ಪ್ರೀತಿಸಿದವಳನ್ನು ಬಿಟ್ಟರೂ, ಇದ್ದವಳನ್ನಾದರೂ ಪ್ರೀತಿಸಬೇಕು ಎಂದುಕೊಂಡು ಲಗ್ನವಾದ ತರುಣದಲ್ಲಿಯೇ ನನ್ನ ಹಿಂದಿನ ಕತೆಯನ್ನು ಹೇಳಿದೆ. ಮುಂದೆ ಅದೇ ದೊಡ್ಡ ಗುಡ್ಡವಾಗಿ ನಮ್ಮಿಬ್ಬರ ನಡುವೆ ನಿಲ್ಲಬಾರದೆಂದುಕೊಂಡು. ಅಷ್ಟೇ ಸಾಕಾಯಿತವಳಿಗೆ, ಆಗ ಕೂದಲೆಳೆಗಿಂತಲೂ ಸಣ್ಣದಾಗಿ ಪ್ರಾರಂಭವಾದ ಬಿರುಕು ಬರುಬರುತ್ತಾ ದೊಡ್ಡದಾಗಿ, ದೊಡ್ಡ ಪ್ರಪಾಶವೇ ಆಗಿ ಆವಳು ಆ ದಂಡೆ ನಾನು ಈ ದಂಡೆಯಲ್ಲಿರುವಂತೆ ಮಾಡಿತ್ತು. ಈಗ ಆಸ್ಪತ್ರೆಯಲ್ಲಿ ಮಲಗಿರುವಾಗ ನನ್ನ ಮರಣದ ಛಾಯೆ ಸೇತುವೆಯಾಗಿ ಅವಳನ್ನು ಇಲ್ಲಿಗೆ ಕರೆತಂದಿದೆ. ನೋಡಬೇಕು ಇವಳು ತನ್ನ ಪಾತ್ರವನ್ನು ಹೇಗೆ ನಿರ್ವಹಿಸುವಳೊ !
ಈಗ ಅವಳಿಗೆ ಕೊನೆಯ ಸಲ ಹೇಳಿಬಿಡುತ್ತೇನೆ, ಮೊದಲು ಹೇಳಬಾರದ್ದನ್ನೇ ಹೇಳಿದ ಮೇಲೆ, ಈಗ ಹೇಳಲೇಬೇಕಾದುದನ್ನು ಹೇಳದೆಬಿಟ್ಟರೆ ಹೇಗೆ, ಕೊನೆಗೂ ಸತ್ಯ ಸಂಗತಿ ಗೊತ್ತಾಗಿ, ತನ್ನ ಕಿಮ್ಮತ್ತು ಎಷ್ಟು ಎನ್ನುವುದರ ಅರಿವು ಅವಳಿಗಾಗಲಿ.

“ಎಲೆಹೆಣ್ಣೆ ನಿನ್ನನ್ನು ಮದುವೆಯಾದದ್ದು ನಿನ್ನ ಮುಖ, ಅಂತಸ್ತು, ನೋಡಿಯಲ್ಲ. ನಿನ್ನ ಮೇಲಿನ ಪ್ರೀತಿಯಿಂದಲೂ ಅಲ್ಲ. ನೀನು ಈ ಮನೆಗೆ ಕಾಲಿಟ್ಟಿದ್ದು ಮನೆಯ ಹಿರಿಯ ಸೊಸೆಯಾಗಿಯೋ ಅಥವಾ ನನ್ನ ಹೆಂಡತಿಯಾಗಿಯೋ ನಿನ್ನ ಮಾವನನ್ನೇ ಕೇಳಿನೋಡು, ಗಂಡನಾಗಿ ನನ್ನೆಲ್ಲ ಕರ್ತವ್ಯಗಳನ್ನು ನಿರ್ವಂಚನೆಯಿಂದ ನಿರ್ವಹಿಸಿದ್ದೇನೆ. ಹಿಂದೆ ಅವಳನ್ನು ಪ್ರೀತಿಸಿದ್ದ, ಇವಳನ್ನು ಒಲಿದಿದ್ದ ಎಂದುಕೊಂಡು, ಗಂಟೆಯ ಶಬ್ದ ಕೇಳಿ ಜೊಲ್ಲು ಸುರಿಸುವ ಫಾವೋವನ ನಾಯಿಯಂತೆ ಕುಂಯುಟ್ಟ ನೀನಾಗಿಯೇ ಮೈಪರಚಿಕೊಂಡರೆ ನಾನೇನು ಮಾಡಲಿ ?…..”

ಅವಳು ಬಂದಳು. ಒಬ್ಬಳೇ ಬಂದರೆ ಮತ್ತೇನಾಗುವದೋ ಅನ್ನುವ ಅಂಜಿಕೆಯಿಂದ ಗೆಳತಿಯರ ಹಿಂಡನ್ನು ಕಟ್ಟಿಕೊಂಡು ಬಂದಿದ್ದಳು, ಅವರಲ್ಲಿ ಕೆಲವರು ನನ್ನ ಕ್ಲಾಸು ಮೇಟುಗಳೂ ಇದ್ದರು, ಯಥಾಪ್ರಕಾರ ಎಲ್ಲರೂ ತಮ್ಮ ಶಕ್ಯಾನುಸಾರ ಅನುಕಂಪ, ದುಃಖಗಳನ್ನು ಸೂಚಿಸಿ ಅವಳೊಬ್ಬಳನ್ನೇ ಬಿಟ್ಟು ಹೊರಗೆಹೋದರು, ಅವಳೂ ತನ್ನ ಕರ್ತವ್ಯ ಪೂರೈಸಲೆಂಬಂತೆ ಬದಿಯಲ್ಲಿ ಕುಳಿತು, ಹಣೆಮುಟ್ಟಿ, ಜ್ವರ ಅಳೆದಳು. ಹೊಟ್ಟೆಯಮೇಲೆ ಕೈಯಾಡಿಸುತ್ತಾ,

“ನೋವು ಭಾಳ ಐತೇನು ?” ಅಂದಳು ಬಸಿರಿಯರಿಗನ್ನುವಂತೆ.

“ಅಷ್ಟೇನಿಲ್ಲ” ನಾನೂ ಸ್ವಲ್ಪದರಲ್ಲೇ ರಸೀತಿಕೊಟ್ಟೆ.
ಮಲಗಿದ್ದ ನನ್ನ ತಲೆಗೂದಲನ್ನು ನೇವರಿಸುತ್ತಿದ್ದವಳು ಸ್ವಲ್ಪ ಹೊತ್ತಿನನಂತರ ಎದೆಯಮೇಲೆ ತಲೆಯಿಟ್ಟು ಅಳಲಾರಂಭಿಸಿದಳು, ನನಗೆ ನಗು ಬಂದಿತು.
“ಬಹಳ ಅಳಬೇಡ ಮನೆಗೆ ಹೋಗಬೇಕಾದರೆ ಮತ್ತೆ ಸ್ಫೋ, ಪೌಡರ್ ಹಚ್ಚ ಬೇಕಾದೀತು” ಎಂದು ಹೇಳಬೇಕೆನಿಸಿತು ಮುಖದತುಂಬ ಬಣ್ಣ ಬಡಿದುಕೊಂಡು ಸಿನಿಮಾದಲ್ಲಿ ಅಳುತ್ತಿರುವ ಮೀನಾಕುಮಾರಿಯ ನೆನಪಾಯಿತು,

ಈ ಅಳು ಹೆಣ್ಣಿನ ದೈವದತ್ತ ಕಲೆ, ಕೆಲವರಿಗೆ ಅದೊಂದು ಫ್ಯಾಷನ್, ಇನ್ನುಳಿದವರಿಗೆ ಅದೊಂದು ರೋಗ

ಅಮ್ಮ ಎರಡನೇ ಜಾತಿಗೆ ಸೇರಿದವಳು, ಅತ್ತೂ, ಅತ್ತೂ ಕಣ್ಣೀರಿನಲ್ಲಿಯೇ ಎಲ್ಲವನ್ನೂ ಕರಗಿಸಿ ಬಿಡುತ್ತಾಳೆ. ಕೆಲವೊಮ್ಮೆ ಅಪ್ಪನೂ ಕರಗಿ ನನ್ನನ್ನು ಶಿಕ್ಷಿಸದೆ ಬಿಟ್ಟಿದ್ದೂ ಉಂಟು. ಈ ಅಮ್ಮ ಒಂದು ಕಿರಿ ಕಿರಿ. ಯಾವುದರಲ್ಲಿಯೂ ಬಲು ಅತಿ, ಆಕೆ ನನ್ನನ್ನು ಅಷ್ಟು ಪ್ರೀತಿಸಿ, ಮುದ್ದು ಮಾಡಿ ಬೆಳೆಸಿರದಿದ್ದರೆ ನನ್ನಲ್ಲಿ ಇಷ್ಟು ಮೊಂಡುತನವೇ ಬರುತ್ತಿರಲಿಲ್ಲ. ಅಪ್ಪನ ಪ್ರೀತಿಯನ್ನು, ಅಮ್ಮನ ಪ್ರೀತಿಯನ್ನು ಕೂಡಿಸಿ ಸರಾಸರಿ ತೆಗೆದರೆ, ಒಬ್ಬ ಮನುಷ್ಯನಲ್ಲಿರಬೇಕೋ ಅದಕ್ಕಿಂತಲೂ ಹೆಚ್ಚಾಗಿಯೇ ಬರುತ್ತದೆ ಇಬ್ಬರಿಗೂ, ಆದರೆ ಅಮ್ಮ ಈ ವಿಷಯದಲ್ಲಿ ಕ್ಯಾಪಿಟಲಿಸ್ಟ್, ಆಕೆ ಎಲ್ಲವನ್ನೂ ತನ್ನ ಪಾಲಿಗೆ ತೆಗೆದುಕೊಂಡಿದ್ದರಿಂದಲೋ ಏನೋ ಅಪ್ಪ ಯಾವಾಗಲೂ ಕಮ್ಯೂನಿಷ್ಟನಂತೆ ಮನೆಯಲ್ಲಿ ಎಲ್ಲರ ವಿರುದ್ಧ ಚಳುವಳಿ ಹೂಡುತ್ತಾನೆ………

ಎದೆಯಮೇಲಿನ ತನ್ನ ಮುಖವನ್ನು ತೆಗೆದು ನನ್ನ ಎದೆಭಾರವನ್ನು ಕಡಿಮೆ ಮಾಡಿದಳು. ಅಳುವ ಸ್ಟಾಕು ಮುಗಿದಿರಬೇಕು, ವಿಚಾರಗಳ ಸುಳಿಯಲ್ಲಿ ಅವಳ ಅಸ್ತಿತ್ವ ಕೊಚ್ಚಿ ಹೋಗಿತ್ತು. ಇವಳಲ್ಲಿ ಪ್ರೇಮದ ಆಕರ್ಷಣೆ ನನ್ನ ಎಣಿಕೆಗೆ ಮೀರಿ ಕಡಿಮೆ ಇದೆ ಎಂದಾಯಿತು. ಈ ಅಳುವ ಮುಖವಾಡ ಅವಳ ವ್ಯಕ್ತಿತ್ವಕ್ಕೆ ಎಷ್ಟು ಕಳೆತಂದಿದೆಯಲ್ಲಾ ಎಂದುಕೊಂಡೆ. ಅವಳ ತಲೆಯಮೇಲೆ ಕೈಯಾಡಿಸಿ, ಕಣ್ಣೀರೊರೆಸಿದೆ.

“ಇವತ್ತೊಂದೇ ದಿನ, ನಾಳೆ ಮುಂಜಾನೆ ಆಪರೇಶನ್ ಆದ್ರೆ ಎಲ್ಲಾ ಸರಿಹೋಗ್ಯದ”. “ಈ ಎಲ್ಲದಕ್ಕೂ ನಾನೇ ಕಾರಣ, ನಾನು ಬಿಟ್ಟು ಹೋಗದಿದ್ರೆ ನಿಮಗೆ ಈ ಪರಿಸ್ಥಿತಿ `ಬರುತ್ತಿರಲಿಲ್ಲ” ಅಂದಳು ಅಳುತ್ತಾ.

ವ್ಹಾರ್‌ ಹುಡುಗಿ ! ನಿನ್ನನ್ನು ಅಷ್ಟು ಪ್ರೀತಿಸುತ್ತೇನೆನ್ನುವ ಭ್ರಮೆ ಹೇಗೆ ಹುಟ್ಟಿತು ನಿನ್ನ ತಲೆಯಲ್ಲಿ ? ಅಷ್ಟು ಪ್ರೀತಿಸಲು ಯೋಗ್ಯಳು ನೀನು ಎನ್ನುವ ಅಹಂಭಾವವಾದರೂ ಇದೆಯಲ್ಲ ನಿನ್ನಲ್ಲಿ. ಈಗ ನಿನ್ನಲ್ಲಿರುವ ಭಾವನೆಗಳೆಲ್ಲಾ ಎದೆಯೊಳಗಿಂದ ಬಂದಿರುವವೆಂದು ತಿಳಿದಿರುವಿಯೇನು? ಅದು ನಿಜವೇ ಇದ್ದರೆ, ಸಾವು ಎನ್ನುವ ಶಬ್ದ ಎಲ್ಲರನ್ನಲ್ಲದಿದ್ದರೂ ಕೆಲವರನ್ನಾದರೂ ದಾರಿಗೆ ತರುತ್ತದೆ ಅಂದಂತಾಯ್ತು. ಅಕಸ್ಮಾತ್‌ ಆಪರೇಶನ್ ಯಶಸ್ವಿಯಾಗಿ ನಾನು ಬದುಕಿ ಉಳಿದು ; ಈ ಪ್ರೀತಿ, ಈ ವಿಶ್ವಾಸ ಆಮೇಲೆಯೂ ಉಳಿಯುವಂತಿದ್ದರೆ ನಾನು ಬದುಕಲಡ್ಡಿಯಿಲ್ಲ.

ಇವೆಲ್ಲಾ ವಿಚಾರಗಳು ನನ್ನ ನಿರಾಳವಾದ ಪ್ರಾಂಜಲ ಮನಸ್ಸಿನಿಂದ ಹೊರಬಿದ್ದವೋ ಅಥವಾ “ಬದುಕಬೇಕು” ಎನ್ನುವ ಆಸೆಯುಳ್ಳ ನಾನು ದ್ವೇಶಿಸುತ್ತಿರುವ ಈ ಜಗತ್ತಿನ ಗೂಢಚಾರಿಯಾಗಿ ಕೆಲಸ ಮಾಡುತ್ತಿರುವ ನನ್ನದೇ ಮನಸ್ಸಿನ ಇನ್ನೊಂದು ಮುಖವೊ? ಎನ್ನುವ ವಿಚಾರ ತಲೆ ತಿನ್ನಹತ್ತಿತು.

“ನಿಮ್ಮನ್ನ ಬಿಟ್ಟು, ಈ ಎರಡು ವರ್ಷ ಹೆಂಗ ಕಳದೆ ಅನ್ನೋದು ಆ ದೇವರಿಗೇ ಗೊತ್ತು ನೀವು ಕರಕೊಂಡು ಹೋಗಾಕ ಬರೀರಂತ ದಾರಿ ನೋಡದ ದಿವಸವೇ ಇರ್ಲಿಲ್ಲ. ನನ್ನ ಕಷ್ಟ ಯಾವ ವೈರಿಗೂ ಬರಬಾರದು” ಅಂದಳು ಅಳುತ್ತಾ.

ಈ ಹೆಣ್ಣು ಜಾತಿಯೇ ಹೀಗೆ, ಅದರಲ್ಲೂ ಈ ಇವಳಿಗಂತೂ ತನ್ನ ಕಣ್ಣೀರಿನ ಬೆಲೆ ಚನ್ನಾಗಿ ಗೊತ್ತು, ಜಿಪುಣ ಕೋಮಟಿಗನಂತೆ ಅತಿ ಅಗತ್ಯವಿದ್ದಾಗಲಷ್ಟೆ ತನ್ನ ಕಣ್ಣೀರನ್ನು ಖರ್ಚು ಮಾಡುತ್ತಾಳೆ. ಸಂದರ್ಭಕ್ಕೆ ತಕ್ಕ ಅಭಿನಯ. ಆ ಅಭಿನಯದಲ್ಲಿ ಬರುವ ಮಾತುಗಳೆಲ್ಲವೂ ತನ್ನ ಎದೆಯಾಳದಿಂದ ಬಂದಿವೆಯೋ ಎನ್ನುವಷ್ಟು ಅಭಿನಯಪರಿಣಿತಿ. ಇದೆಲ್ಲಾ ನನಗೆ ಗೊತ್ತು.

ಆದರೂ ಇದೆಲ್ಲಕ್ಕೆ ಅಪವಾದವಾಗಿ ಒಬ್ಬಳಿದ್ದಳು. ಅಳುವ ಸರದಿ ಬಂದಾಗ ನಗುವವಳು. ಎಲ್ಲರೂ ನಗುವಾಗ ಗಂಭೀರವಾಗಿರುವವಳು. ಜೀವನದ ಒಂದು ತಿಟ್ಟಿನಲ್ಲಿ ಸಂಧಿಸಿ, ಸ್ವಲ್ಪಕಾಲ ನನ್ನ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟವಳು. ಆಗ ನನ್ನವರಿಗಾಗಿ, ನನ್ನ ಅಂತಸ್ತು ಗೌರವಗಳನ್ನು ಕಾಯ್ದುಕೊಳ್ಳಬೇಕೆನ್ನುವವರ ಒತ್ತಾಯಕ್ಕೆ ಕಟ್ಟುಬಿದ್ದು ಅವಳನ್ನು ನಡುದಾರಿಯಲ್ಲಿ ಬಿಟ್ಟು ತಲೆಮರೆಸಿಕೊಂಡವನೇ ನಾನು. ಜಗತ್ತು ಇದೊಂದು ವಿಷಯದಲ್ಲಿ ರಿಯಾಯಿತಿ ತೋರಿಸಿದ್ದಿದ್ದರೆ, ನಾನು ಎಂದೋ ಅದರ ಗುಲಾಮನಾಗಿ ಸೇವೆಮಾಡುತ್ತಿದ್ದೆ.

ತಮ್ಮ ಬಂದ, ಇಷ್ಟರವರೆಗಿನ ಅಭಿನಯದಲ್ಲಿ ಕೆಟ್ಟುಹೋಗಿದ್ದ ತನ್ನ ಮೇಕಪ್ಪನ್ನು ಅಷ್ಟರಮಟ್ಟಿಗೆ ಸರಿಪಡಿಸಿಕೊಂಡು ಅವನ ಅತ್ತಿಗೆ ಸಾವರಿಸಿಕೊಂಡು ಕುಳಿತಳು. “ಅತ್ತಿಗೆ ನಿಮ್ಮ ಗೆಳತೀರು ಕರೀತಾರ, ವಿಜಿಟಿಂಗ್ ಹೊತ್ತೂ ಮುಗೀತು, ನೀವು ಮನೆ ಕಡೆ ನಡೀರಿ ನಾನೂ ಬಡ್ತೀನಿ” ಅಂದ, ಅವಳು ಎದ್ದು –

“ಮುಂಜಾನೆ ಬರ‍್ತೀನಿ” ಎಂದು ಹೇಳಿ ಹೋದಳು.

ಅವಳು ಹೊರಟು ಹೋದಮೇಲೆ ತಮ್ಮ ಅವಳು ಈ ಎರಡು ವರ್ಷ ನನ್ನನ್ನು ಬಿಟ್ಟು ಇದ್ದ ವಿಷಯವನ್ನು ತೆಗೆದುಕೊಂಡು ಅವಳನ್ನು ಬಯ್ದ.
ಅವನು ಯಾವಾಗಲೂ ತನ್ನ ಅಣ್ಣನಿಗೆ ಯಾರಿಂದ ಅನ್ಯಾಯವಾದರೂ ಸಹಿಸುವುದಿಲ್ಲ. ತಾನೂ ಅವರ ಜಾಗೆಯಲ್ಲಿ ನಿಂತುಕೊಂಡು ವಿಚಾರಮಾಡಿ, ಅವರು ಮಾಡಿದ್ದು ತಾನಾಗಿದ್ದರೆ ಮಾಡುತ್ತಿದ್ದೆನೋ ಇಲ್ಲವೋ ಎಂದು ವಿಚಾರಿಸುವ ಗೊಡವೆಗೆ ಎಂದೂ ಹೋಗುವದಿಲ್ಲ, ಎಷ್ಟೋಸಲ ಇದರ ಬಗ್ಗೆ ತಿಳಿಹೇಳಿದಾಗ,
“ನಿನಗೇನಣ್ಣ ಸಮುದ್ರ ಇದ್ದಂಗಿದ್ದಿ. ಏನು ಎಷ್ಟು ಹಾಕಿದರೂ ಕಾಣದಂಗ ‘ಹೋಗೈತೋ ಹೊರ್ತು, ಅದರ ಸುಳಿವೂ ಹತ್ತಕೊಡೋದಿಲ್ಲ. ತಡಕಂಬೋದೂ ಅಂದ್ರೆ ಅದಕೂ ಒಂದು ಮಿತಿ ಮ್ಯಾರೆ ಇರಬೇಕು. ನನಕೈಲೆ ಇದೆಲ್ಲಾ ನೋಡಿಕೊಂತ ಸುಮ್ಮೆ ಇರೋದಾಗೋದಿಲ್ಲ ನೋಡಪ್ಪ” ಅನ್ನುತ್ತಿದ್ದ.

ನನ್ನಲ್ಲಿ ಏನು ಕಂಡಿದ್ದನೋ, ಮನೆಯಲ್ಲಿ ಅಪ್ಪನಾದಿಯಾಗಿ ಎಲ್ಲರಮೇಲೂ ಅಧಿಕಾರ ಚಲಾಯಿಸುವ ಇವನು ಮಾತ್ರ ನನ್ನೊಂದಿಗೆ ಬಲು ನಯವಾಗಿರುತ್ತಾನೆ. ತಮ್ಮನ ಮಾತು ಮುಂದುವರಿದೇ ಇತ್ತು. ವಿಷಯ ಬದಲಾಯಿಸಲೆಂದು,
“ರವಿ ಯಾವಾಗ ಬಾರ‍್ತಾನಂತ, ಇವತ್ತೂ ತಡ ಆಯ್ತಲ್ಲ”
“ಅಂದಂಗ ಹೇಳೋದೆ ಮರ‍್ತು ಬಿಟ್ಟಿದ್ದೆ, ಅವರ ಮನೆಗೆ ಯಾರೋ ಬಂದಾರಂತ ಅದಕ್ಕ ತಡ ಆಗ್ತದ ಅಂತ ಹೇಳು ಅಂದಿದ್ದ ಈ ಬಾಜಾರದಾಗ”
ರಾತ್ರಿ ನನ್ನೊಡನೆ ರವಿ ತಪ್ಪಿದರೆ ತಮ್ಮ ಇರುತ್ತಿದ್ದರು.
“ಅಣ್ಣ ಒಂದಿಷ್ಟು ಕೆಲ್ಸ ಐತೆ ಹೋಗಿ ಎಂಟು ಎಂಟೂವರೆಗೆ ಬಡ್ತೀನಿ” ಸಮ್ಮತಿ ಪಡೆದು ತಮ್ಮ ಹೊರಟು ಹೋದ.
೩
ನನ್ನ ಇಷ್ಟು ವರ್ಷದ ಬಾಳುವೆಯಲ್ಲಿ ಯಾರಾದರೂ ನನ್ನನ್ನು ಅರ್ಥಮಾಡಿಕೊಂಡು, ನನ್ನಂತರಂಗದ ಸಂಗಾತಿಗಳಾಗಿದ್ದರೆ ಅವರು ಈ ರವಿ ಮತ್ತು ಜನಕ್ಕಂಜಿ ನಾನು ತಲೆ ಮರೆಸಿಕೊಂಡು ಪರದೇಸಿಯನ್ನಾಗಿ ಮಾಡಿಬಿಟ್ಟಿದ್ದ ಆ ಇನ್ನೊಬ್ಬಳು.

ಈ ರವಿ ನನ್ನಂತೆಯೇ ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಿದವನು. ಯಾವದೋ ಮಾತಿಗಾಗಿ ಮನೆಯವರೊಡನೆ ವ್ಯತ್ಯಾಸವಾಗಿ ತುಂಬಿದ ಮನೆಯನ್ನು ಬಿಟ್ಟು ಬಂದು ನನ್ನ ಜೊತೆಯಲ್ಲಿ, ತನ್ನ ಸ್ವಂತ ಪರಿಶ್ರಮದಿಂದ ಅಭ್ಯಾಸ ಮುಗಿಸಿದ. ಈಗ ಅವನು ಕಾಲೇಜಿನಲ್ಲಿ ಲೆಕ್ಚರರ್.
ಅವನ ದುಃಖಗಳನ್ನು ಕಷ್ಟ-ನಷ್ಟಗಳನ್ನು ನೋಡಿದರೆ ನನ್ನವೆಲ್ಲ ತೃಣ ಸಮಾನ. ಆದರೆ ಅವಾವುಗಳನ್ನೂ ಅವನು ಮನಸ್ಸಿಗೆ ಹಚ್ಚಿಕೊಳ್ಳುವದಿಲ್ಲ, ಯಾವಾಗಲೂ ಪ್ರತಿಯೊಂದರ ಒಳ್ಳೆಯ ಮುಖವನ್ನೇ ಕಾಣುವನೇ ಹೊರತು, ಕೆಟ್ಟದು ಅವನ ಮನಸ್ಸಿನಲ್ಲಿಯೆ ಸುಳಿಯದು, ಜೀವನದ ಕಹಿಯನ್ನು ಸಿಹಿಯಷ್ಟೇ ತುಂಬು ಮನಸ್ಸಿನಿಂದ ಸ್ವೀಕರಿಸುತ್ತಾನೆ.

ಒಂದು ರೀತಿಯಲ್ಲಿ ಅವನು ಸುಖಿ. ಅವನ ವಿಚಾರದಂತೆ ಇಲ್ಲಿ ಸಂಭವಿಸುವ ಎಲ್ಲ ಸಂಗತಿಗಳೂ ಸಂಭವಿಸಲೇಬೇಕಾದುವಾದ್ದರಿಂದ ಅವುಗಳಿಂದ ನಮಗೆ ಬಿಡುಗಡೆಯಿಲ್ಲ. ಇಲ್ಲೇ ಬರುವದು ನಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯ.

ನಾವು ಮಾಡಿದ ಒಳ್ಳೆ-ಕೆಟ್ಟವುಗಳಿಗೆ ನಾವೇ ಹೊಣೆ. ನಮಗೆ ಸಂಬಂಧವಿಲ್ಲದ ವಿಷಯಗಳಲ್ಲಿ, ಬೇರೆಯವರು ಏನೇನನ್ನೋ ತಂದು ಹಾಕಿ ನಮಗೆ ಹೊಣೆಗಾರಿಕೆಯ ಪಟ್ಟವನ್ನೇಕೆ ಕಟ್ಟಬೇಕು ? ಎಂದು ನನ್ನ ಕೇಳಿಕೆ. ಅದಕ್ಕೆ ಏನೇನೋ ಪುರಾಣ ಹೇಳಿ ನನಗೆ ಮನಸ್ಸಿಲ್ಲದಿದ್ದರೂ ತನ್ನ ತರ್ಕವನ್ನು ಒಪ್ಪುವಂತೆ ಮಾಡಿಬಿಡುತ್ತಾನೆ.

ಜೀವನದ ಘಟನೆಗಳು ನಮ್ಮಿಬ್ಬರಲ್ಲಿ ಸಾಮ್ಯವನ್ನು ತೋರಿಸಿದ್ದರೂ, ಮಾನಸಿಕವಾಗಿ ನಾವಿಬ್ಬರೂ ಒಂದೊಂದು ಧೃವ. ಆದರೂ ಯಾವದೋ ಆಕರ್ಷಣ ಶಕ್ತಿ ನಮ್ಮಿಬ್ಬರನ್ನು ಬಂಧಿಸಿ ಬಿಟ್ಟಿದೆ. ಇವನ ದಾರಿಯೇ ಬೇರೆ, ನನ್ನ ದಾರಿಯೇ ಬೇರೆ ಎಂದು ಎಷ್ಟೋ ಸಲ ಅನ್ನಿಸಿದ್ದರೂ ; ಡಾಕ್ಟರರ ಔಷಧದಂತೆ, ನನ್ನ ಕಣಕಣದಲ್ಲಿ ತನ್ನ ಪ್ರಭಾವ ಬೀರಿ, ನನ್ನ ಒಳಗಿನ ಕೋಟೆಯನ್ನು ನನಗರಿಯದಂತೆಯೇ ತನ್ನ ವಶಪಡಿಸಿಕೊಂಡಿದ್ದಾನೆ. ಕೊನೆಗೊಂದು ದಿನ ಎಲ್ಲಿ ಅವನ ವಿಚಾರ ಪ್ರವಾಹಗಳ ಸೆಳವಿನಲ್ಲಿ ಸಿಕ್ಕು ನಾನು ಕೊಚ್ಚಿ ಹೋಗುವೆನೋ ಎಂದು ಭಯಪಡುತ್ತೇನೆ.

ಆದರೂ ಯಾಕೋ ಒಂದೊಂದು ಸಲ ಅವನಲ್ಲಿಯೂ ನಿರ್ವಿಣ್ಣತೆ ತಲೆಹಾಕುತ್ತಿರುತ್ತದೆ. ಆಗ ನಾನೇ; ಇವನೂ ನನ್ನಂತೆಯೇ ಆದರೆ ನನ್ನನ್ನು ಈ ಜಾರುಬಂಡೆಯಿಂದ ಉಳಿಸುವರಾರು ಎನ್ನುವ ಅವ್ಯಕ್ತ ಭಯದಿಂದಲೋ ಏನೋ; ಅವನಿಗೆ ಧೈರ್ಯ ತುಂಬಿ, ಅನಿವಾರ್ಯವಾದ ಈ ಜೀವನವನ್ನು ಇದ್ದಷ್ಟು ದಿನ ಸರಿಯಾಗಿ ಅಭಿನಯಿಸಿ ಮಣ್ಣು ಮರೆಯಾಗೋಣವೆಂದು ಹೇಳಿದ್ದೇನೆ ಏನೇ ಆದರೂ……..

ಹೊರಗೆ ಓಡಾಟ ಹೆಚ್ಚಾದಂತಾಯಿತು. ನನ್ನ ಕೋಣೆಯ ಮುಂದೆ ಹಾದು ಹೊರಟಿದ್ದ ನರ‍್ಸಳನ್ನು ಕರೆದು ಕೇಳಿದೆ. ಯಾರೋ ಹುಡುಗಿ Tik-20 ತೆಗೆದು ಕೊಂಡಿದ್ದಾಳೆಂದು ಹೇಳಿದಳು,
“ಯಾರು ಆ ಹುಡುಗಿ?
“ಶ್ರೀ……….ರ ಮಗಳು, ಕಾಲೇಜು ಓದ್ತಿದ್ಳಂತ”
“ಅಂಥ ಶ್ರೀಮಂತರ ಮಗಳಿಗೆ ಏನಾಗಿತ್ತೊ ಸಾಯ್ಲಿಕ್ಕೆ ?”
“ಏನಾಗಿತ್ತೇನ್ರೀ ಸಾರ್, ಈ ಕಾಲದಾಗ ಸಾಯ್ಲೂಕೂ ಯಾಕ ಕಾರಣಗಳು ಬೇಕಾಗ್ತಾವರಿ, ಅದೂ ಕಾಲೇಜಿನ್ಯಾಗ…………”
“ಸಿಸ್ಟರ್, ಡಾಕ್ಟರ್ ಕರೀತಾರ” ಚಪರಾಸಿ, ನರ‍್ಸ್‌ ಹೊರಟು ಹೋದಳು.

ಕಾಲೇಜು ಹುಡುಗಿಯರೆಂದರೆ ಮತ್ತೇನಿರುತ್ತದೆ. ಪರೀಕ್ಷೆಯಲ್ಲಿ ಫೇಲಾಗಿರಬಹುದು. ಹುಡುಗರು ಸಾಯುವದು ಹೆಚ್ಚಾಗಿದೆಯೆಂದು ವಿಶ್ವವಿದ್ಯಾಲಯದವರು ಸ್ವಲ್ಪ ಬರೆದರೂ ಪಾಸು ಮಾಡಿ ಸಾಯುವವರ ಸಂಖ್ಯೆ ಕೆಳಗಿಳಿಸಲು ಪ್ರಯತ್ನಿಸುತ್ತಿರುವ ಈ ಕಾಲದಲ್ಲಿಯೂ ಸಾಯುವವರಿದ್ದಾರೆ! ಫೇಲಾದರೂ ಏನಂತೆ, ಅಷ್ಟು ಶ್ರೀಮಂತರ ಮಗಳು ಈ ಇವಳಿಗೇನಾಗಿತ್ತು ಧಾಡಿ, ಅದೂ ಅಲ್ಲದೆ ಫೇಲುಗಳಿಗೆ ಹೊಂದಿಕೊಂಡ ಅವರೇ ಸತ್ತರೆ ?
ಇಲ್ಲದಿದ್ದರೆ ಹೀಗಿರಬೇಕು, ಇವಳು ಶ್ರೀಮಂತರ ಹುಡುಗಿ, ಅದಕ್ಕೆ ಅಪವಾದವಾಗಿ ಚೆಂದವೂ ಇರಬೇಕು, ಒಬ್ಬ ಹುಡುಗ, ಬಡವ, ಬುದ್ಧಿವಂತ, ಚುರುಕು ಬುದ್ದಿ, ಡಿಬೇಟಿಂಗ್, ನಾಟಕ, ಓದುಗಳಲ್ಲಿ ಮೊದಲಿಗ. ಇವಳ ಮದುಡು ಬುದ್ಧಿಗೆ ಅವನು ಮೆಚ್ಚಿಕೆಯಾಗಿರಬೇಕು, ಮುಂದಿನದಂತೂ ಹೇಳಬೇಕಾಗಿಯೇ ಇಲ್ಲವಲ್ಲ.
ಪ್ರೇಮ.
ಇವರಪ್ಪ ಖಳನಾಯಕ.
ಯಾವನೊಂದಿಗೋ ಇವಳ ಮದುವೆ ನಿಶ್ಚಯ.
ಆತ್ಮಹತ್ಯೆಗೆ ಇದಕ್ಕಿಂತ ಹೆಚ್ಚಿಗಿನ್ನೇನು ಬೇಕು ?
ಅಥವಾ ಇವಳೇನಾದರೂ……….,
ತಾಯಿಯಾಗಲಿದ್ದಳೋ ಏನೋ………..
ಛೇ ! ಅದೂ ಅಲ್ಲ.
ಏಕೆಂದರೆ ಇದು ಇದರ ವಿರುದ್ಧವಾದ ಪ್ರಸಂಗದಲ್ಲಿ ಸಾಧ್ಯ. ಶ್ರೀಮಂತ ಹುಡುಗ, ಬಡ ಹುಡುಗಿ ; ಇವರಿಬ್ಬರ ಪ್ರೇಮ. ಆಗ ಆ ಹುಡುಗಿ ತಾಯಿಯಾಗುತ್ತಾಳೆ. ಮದುವೆಯೇ ಇಲ್ಲ. ಆಗ ಆತ್ಮಹತ್ಯೆ, ಈಗ ಸರಿ.

ಹಾಗಾದರೆ ನಮ್ಮಿಬ್ಬರಲ್ಲಿ ಒಬ್ಬರೂ ಆ ವಿಚಾರಕ್ಕೆ ಮನಸೋಲಲಿಲ್ಲವಲ್ಲ. ನಾನು ಅವಳನ್ನು ಈ ರೀತಿ ಕೈಬಿಟ್ಟರೆ ಆತ್ಮಹತ್ಯೆ ಮಾಡಿಕೊಂಡರೇನು ಗತಿ ? ಎನ್ನುವ ವಿಚಾರ ನನಗೇಕೆ ಬರಲಿಲ್ಲ. ಆದರೆ ಅವಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ, ಆ ಮಾತು ಬೇರೆ.
ನನಗೆ ತಿಳುವಳಿಕೆ ಮೂಡಿದಂದಿನಿಂದ ಇಂಥ ನೂರಾರು ಪ್ರಸಂಗಗಳು ನನ್ನೆದುರು ಘಟಿಸಿ ಈ ಜಗತ್ತಿನ ವಿರುದ್ಧ, ಈ ಜನಜಂಗುಳಿಯ ವಿರುದ್ದ ನನ್ನನ್ನು ಎತ್ತಿಕಟ್ಟಿ ಚಳುವಳಿ ಹೂಡುವಂತೆ ಮಾಡುತ್ತವೆ. ಇಷ್ಟು ಮುಂದುವರಿದ ಜಗತ್ತಿನಲ್ಲಿ ಇನ್ನು ಶಿಲಾಯುಗದಲ್ಲಿಯಂತೆ, ಮನುಷ್ಯನ ಪ್ರತಿಯೊಂದು ಚಲನವಲನವೂ ಬೊಂಬೆಯಂತೆ ಸೂತ್ರಬದ್ಧವಾಗಿರಬೇಕೆಂದರೆ ಹೇಗೆ, ಮನುಷ್ಯ ಜೀವಿಸಲು, ಅವನು ತನ್ನ ಮನಸ್ಸಿಗೆ ತಕ್ಕಂತೆ ಬಾಳಲು ಜಗತ್ತಿನ ಯಾವ ಸಂಗತಿಯೂ ಅಡ್ಡ ಬರಬಾರದು. ಈ ರೀತಿ ಅಡ್ಡ ಬಂದು ವಿಷಗಳು ಕ್ರಿಮಿಕೀಟಕಗಳ ಮೇಲೆ ಪ್ರಯೋಗವಾಗುವದಕ್ಕಿಂತ ಹೆಚ್ಚಾಗಿ ಮನುಷ್ಯ ತನ್ನ ಮೇಲೆ ತಾನೇ ಪ್ರಯೋಗಪಡಿಸಿಕೊಳ್ಳುವಂತೆ
ಒತ್ತಾಯ ಪಡಿಸಬಾರದು.
ಇವಳು ಅವನನ್ನು ಲಗ್ನವಾದರೆ ಜೀವನವನ್ನು ಬಡತನದಲ್ಲಿಯೇ ಕಳೆಯುತ್ತಾಳೆ. ಇವನು ಅವಳನ್ನು ಮದುವೆಯಾದರೆ ನಮ್ಮ ಮನೆತನ, ಅಂತಸ್ತು, ಶ್ರೀಮಂತಿಕೆಗಳಿಗೆ ಕುಂದು, ನಮ್ಮಲ್ಲಿ ಕುಂದುಕೊರತೆಗಳು ಇವೆಯೆಂದು ನಮಗರಿವಾಗಕೊಟ್ಟರೆ ನಮ್ಮತನಕ್ಕೇ ಅವಮಾನ. ಇನ್ನೊಬ್ಬನಲ್ಲಿ ಬುದ್ದಿವಂತಿಕೆಯಿದೆಯೆಂದು ಒಪ್ಪಿಕೊಂಡರೆ ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಅಡ್ಡಿ. ಇಂತಹ ಇನ್ನೆಷ್ಟೋ ಸಾವಿರಾರು ಪೂರ್ವ ಗ್ರಹಗಳಿಂದ ದೂಷಿತವಾದ ಮನಸ್ಸು ಪ್ರತಿಯೊಂದು ವಿಷಯದಲ್ಲಿಯೂ, ಪಾವ್ಲೋವನ ನಾಯಿಯಂತೆ, ಕಂಡೀಷನ್ಡ್‌ ರಿಫ್ಲಕ್ಸ್ (Conditioned Refius) ನಲ್ಲಿ ಬದುಕುತ್ತಿದೆ.

ನಿಜವಾಗಿ ಹೇಳಬೇಕೆಂದರೆ ನನ್ನ ಚಳುವಳಿ ಇಂಥ ಪಾಮ್ಲೋನನ ನಾಯಿಗಳ ವಿರುದ್ಧವಲ್ಲದೆ ಈ ಜಗತ್ತಿನ ವಿರುದ್ಧವಲ್ಲ. ನಾನೊಬ್ಬ ಮನುಷ್ಯ. ನನಗೆ ವ್ಯಕ್ತಿತ್ವವಿದೆ. ನನ್ನನ್ನು ನನ್ನಂತೆಯೇ ಬಾಳಗೊಡಿರಿ. ನಾನು ಒಳ್ಳೆಯವನಾಗಿ ಗಾಂಧಿ, ಲಿಂಕನ್ ರಂತೆ ದೊಡ್ಡವನಾಗಬೇಕಿಲ್ಲ. ಕೆಟ್ಟವನಾಗಿ ಗೊಡ್ಸೆಯಾಗುವದೂ ಬೇಕಾಗಿಲ್ಲ. ಅವರು ಅದಾಗಿದ್ದಾರೆ, ಇವರು ಇದಾಗಿದ್ದಾರೆ. ನನಗೆ ಇದೊಂದೂ ಬೇಕಿಲ್ಲ. ನಾನು ನಾನೇ ಆಗಬೇಕಾಗಿದೆ. ಅದಕ್ಕಾಗಿ ಪೇಟೆಯಲ್ಲಿ ನನಗೆಷ್ಟು ಧಾರಣೆ ನಿಜವಾಗಿ ಬರಬೇಕಾಗಿದೆಯೋ ಅಷ್ಟು ಬೆಲೆ ಕೊಡಿ. ಅದೆಲ್ಲಾ ಬಿಟ್ಟು ನಮ್ಮ ಮಾಲೇ ಶ್ರೇಷ್ಠ ಎಂದು ನನ್ನ ಮನುಷ್ಯತ್ವವನ್ನು ಅಣಕಿಸಿ, ಘಂಟೆಯ ಶಬ್ದ ಕೇಳಿ ಜೊಲ್ಲು ಸುರಿಸುವ ನಾಯಿಗಳಾಗುವದು ನಿಮಗೆ ಸಲ್ಲದು. ಏಕೆಂದರೆ ಇಂಥ ಜಗತ್ತಿನಲ್ಲಿ ಬದುಕಲು ನನಗಿಷ್ಟವಿಲ್ಲ. ನಾನು ಮನುಷ್ಯರಿದ್ದ ಜಗತ್ತಿನಲ್ಲಿ ಬದುಕಬೇಕಾಗಿದೆ. ಅದಕ್ಕೇ ನೀವೂ ಮನುಷ್ಯರಾಗಿರಿ ಎಂದು ಹೇಳುತ್ತಿರುವದು. ಅಲ್ಲದೆ….
“ಆ ಹುಡುಗಿ ಸತ್ತುಹೋಯ್ತು ಸಾರ್, ಪಾಪ” ಆದೇ ನರ‍್ಸು.
“ಯಾಕೆ ಸಿಸ್ಟರ್‌ ಯಾಕೆ ಸತ್ತಳು, ಏನಾದರೂ ಲವ್-ಗಿವ್” ನನ್ನ ನಿರೀಕ್ಷೆ ಸುಳ್ಳಾಗದಿರಲೆಂದು ಕೇಳಿದೆ.
“ಹೌದಂತೆ ಸರ್, ಆತಗೆ ಬ್ಯಾರೆಲ್ಲೋ ಲಗ್ನ ಆಗಿಬಿಟ್ಟಿತ್ತಂತೆ ಅದಕ್ಕೆ……”
“ಯಾಕ, ಆ ಹುಡುಗ ಇವ್ರಿಗಿಂತ ಶ್ರೀಮಂತನೇನು ?”
“ಅಲ್ಲಂತ ಸರ್, ಪೂರ್ತಿ ಬಡವರಂತೆ”
“ಅದಕ್ಕೆ ಈ ಹುಡುಗಿ ಅಪ್ಪ ಲಗ್ನ ಸಾಧ್ಯವಿಲ್ಲ ಅಂದಿರಬೇಕು?
“ಅದೂ ಅಲ್ಲ ಸರ್, ಹುಡುಗಿ ಮನೆಯವ್ರ್‌ ಒಪ್ಪಿದ್ರಂತೆ?”
“ಮತ್ತೇನಂತ, ಬಂದದ್ದು ಅವ್ನಿಗಿ ?”
”ಆದ್ರೆ ಈ ವಿಷಯ ಆ ಹುಡುಗ್ಗ ಗೊತ್ತಿರ್ಲಿಲ್ಲಂತ ಸರ್. ಈಕೆ ಆತಗ ಗೊತ್ತಾಗ್ಲಾರ್ದಂಗ ಮನೆಯವರ‍್ನ ಒಪ್ಸಿದ್ಲು. ಅದನ್ನ ತಿಳಿಸುವಷ್ಟರೊಳಗ, ಆತನ ಮದಿವಿ ಆಗಿ ಹೋಗಿತ್ತು.”
“ಅಂಥಾ ಅವಸರ ಏನಿತ್ತಮ್ಮ ಆತಗ”
“ಗುಪ್ತ ಪ್ರೇಮ ಅಂತಾರಲ್ಲ ಸರ್ ಅದು ಒಬ್ರಿಗೊಬ್ರು ತಿಳಿಸೋದು ಆಗಿಲ್ಲ. ಮದಿವಿ ಆದಮ್ಯಾಲೆ ಆತ ಪತ್ರ ಬರದ. ಅದನ್ನ ನೋಡಿ ಈಕಿ ವಿಷ ತಗೊಂಡು ಬಿಟ್ಟು”
“ಹಿಂಗೈತೇನು ಸಮಾಚಾರ !”

ಮನುಷ್ಯ ಯಾವಾಗಲೂ ಭಾವನೆಗಳ ಕೈಯಲ್ಲಿ ಬುದ್ಧಿಯನ್ನು ಕೊಡಬಾರದು. ಅದರ ಪರಿಣಾಮಗಳೇ ಈ ಆತ್ಮಹತ್ಯೆಗಳು, ಯುದ್ದಗಳು. ಯಾವಾಗಲೂ ಬುದ್ದಿಯ ಹಿಡಿತದಲ್ಲಿ ಹೃದಯವಿರಬೇಕು, ಈ ಜಗತ್ತು ಕೊಟ್ಟ ಪೆಟ್ಟುಗಳನ್ನು ಸಹಿಸಿಕೊಳ್ಳುವ ವಸ್ತವಷ್ಟೆ; ಆ ಪೆಟ್ಟುಗಳನ್ನು ತಾಳಿಕೊಂಡು ಅವುಗಳಿಗೆ ಶರಣಾಗದೆ ಉಳಿಯುವದಷ್ಟೇ ಬಾಳುತ್ತದೆ. ಅದನ್ನೇ ಡಾರ್ವಿನ್ Survival of Fittest ಎಂದು ಹೇಳಿದ್ದು.
೪
ನರ‍್ಸ ಯಾವಾಗಲೋ ಲೈಟುಹಾಕಿ ಹೋಗಿದ್ದಳು.

ಬಹಳ ಹೊತ್ತು ಹಾಸಿಗೆಯಲ್ಲಿಯೇ ಬಿದ್ದು ಕೊಂಡಿದ್ದರಿಂದ ಬೇಸರ ಬಂದಿತ್ತು. ಹೊರಗೆ ನಿಂತಿದ್ದ ಚಪರಾಸಿಯನ್ನು ಕರೆದು, ಅವನ ಸಹಾಯದಿಂದ ಕಕ್ಕಸದತ್ತ ನಡೆದೆ. ರೂಮಿನಲ್ಲಿಯೇ ಕ್ಯಾನು ಇದ್ದರೂ, ಅದರಲ್ಲಿ ಮೂತ್ರ ವಿಸರ್ಜಿಸಲು ಮನಸ್ಸಾಗಲಿಲ್ಲ, ಕಕ್ಕಸದಿಂದ ತಿರುಗಿಬಂದು ಸ್ಕೂಲಿನ ಮೇಲೆ ಕುಳಿತು, ಚಪರಾಸಿಗೆ ಹೇಳಿ ಮಗ್ಗಲು ಹಾಸಿಗೆ ಬದಲಾಯಿಸಿದೆ. ಅವನು ಅಷ್ಟು ಮಾಡಿ ನನ್ನನ್ನು ಮಂಚದ ಮೇಲೆ ಕುಳ್ಳಿರಿಸಿ ಹೊರಟು ಹೋದ.

ಇಷ್ಟು ಹೊತ್ತಾದರೂ ಈ ರವಿ ಯಾಕೆ ಬರಲಿಲ್ಲ ? ಅವನ ಮನೆಗೆ ಅಂಥ ಬಂಧುಗಳು ಯಾರು ಬಂದಿರಬಹುದು ? ಯೋಚಿಸಿ, ಯೋಚಿಸಿ ತಲೆ ಬಿಸಿಯಾಗಿ ಬಿಟ್ಟಿದೆ.

ಚಪರಾಸಿ ಯಾರೊಡನೆಯೋ ಮಾತನಾಡಹತ್ತಿದ, ರವಿ ಬಂದಂತಿದೆ. ಇಲ್ಲಿಗೆ ಬರುವಷ್ಟೂ ತಾಳ್ಮೆಯಿಲ್ಲ ಅವನಲ್ಲಿ. ನನ್ನ ಆರೋಗ್ಯದ ಎಲ್ಲ ವಿವರಗಳನ್ನು ಸಂಗ್ರಹಿಸಿಕೊಂಡೇ ಇಲ್ಲಿಗೆ ಬರುತ್ತಾನೆ. ಇನ್ನೂ ಎಷ್ಟು ಹೊತ್ತು ಮಾತನಾಡುತ್ತಾ ನಿಲ್ಲುತ್ತಾನೋ ಮಹರಾಯ.

ಇವನು ಈ ಚಪರಾಸಿ ದಾರಿಯಲ್ಲೇಕೆ ನಿಲ್ಲಬೇಕಾಗಿತ್ತು.

ಮಾತು ಮುಗಿದಂತಾದವು. ಇತ್ತಲೇ ಬರುತ್ತಿದ್ದಂತಿದೆ.

“ಅಂತೂ ಬಂದೆಯಲ್ಲ, ಅವನ್ಜೋಡಿ ಮಾತಾಡಿ ಹಂಗಿಂದಂಗ ಹೋಗ್ತಿ ಅಂತಿದ್ದೆ” “ಯಾಕ ಎಂದೂ ಇಲ್ಲದ ಅಪನಂಬಿಕೆ ಇವತ್ಯಾಕ? ” ನಗುತ್ತಾ ಕೇಳಿದ.
“ಏನು ಮಾಡೋದು, ಈಗ ಕೊನಿಗೆ ನನ ಮ್ಯಾಲೇ ಇರುವ ನನ ನಂಬಿಕೆ ಎಲ್ಲಿ ಹಾರಿ ಹೋಗತೈತೋ ಅನಸ್ತದ. ಇಷ್ಟಾಕ ತಡ ? ಮನಿಗೆ ಯಾರೊ ಬಂದಾರಂತ ಹೇಳಿದ ತಮ್ಮ. ಅವರ ಸಲುವಾಗಿ ತಡ ಆದದ್ದೇನು?”
“ಅವರ ಸಲುವಾಗಿ ಅಲ್ಲ, ನಿನ್ನಸಲುವಾಗಿ”
“ನನ್ನಸಲುವಾಗಿ ಯಾಕಪ?”

ಬಂದವ್ರು ಯಾರು ಗೊತ್ತಾ? ಕಿರಣ ಬಂದ ಬರತ್ಲೇ ಇಲ್ಲಿಗೇ ಬರ‍್ತೀನಿ ಅಂತ ಕುಂತಿದ್ಲು ಆಕೆಗೆ ಅದೂ ಇದೂ ಹೇಳಿ ಒತ್ತಾಯಮಾಡಿ, ವಿಶ್ರಾಂತಿ ತಗೊಳ್ಳಲಿ ಅಂತಂದು ಬಿಟ್ಟು ಬರಬೇಕಾದ್ರೆ ಸಾಕು ಸಾಕಾಯ್ತು.”

ಅವನ ಮಾತು ಕೇಳಿ ಏನು ಹೇಳಬೇಕೋ ಗೊತ್ತಾಗಲಿಲ್ಲ. ಯಾವಳನ್ನು ಇಷ್ಟು ದಿನ ಪರದೇಸಿಯನ್ನಾಗಿಮಾಡಿ ಮರೆತು ಬಿಟ್ಟಿದ್ದೆನೋ, ಅವಳು ಈ ದಿನ ಬಂದ ಸುದ್ದಿ ಕೇಳಿ ಗರ ಹೊಡೆದಂತಾಯಿತು ನನ್ನ ಸ್ಥಿತಿ,

“ಯಾಕ ಸುಮ್ಕಾದೆಲ್ಲ ಆಕೆ ಬರಬಾರದಾಗಿತ್ತೇನು?”

“ಹಂಗಲ್ಲ ರವಿ, ಆಕೆ ಬಗ್ಗೆ ವಿಚಾರ ಮಾಡೋ ಅಧಿಕಾರವೇ ನನಗಿಲ್ಲ. ಹಿಂದಕ ನಾನು ಮಾಡಿದ್ದೇ, ಇವೊತ್ತು ನನ್ನನ್ನ ಅತಿ ನೀಚತನಕ್ಕೆ ನೂಕಿ ಕೇಕೆ ಹೊಡೆದು ನಗತ್ತಿದ್ದಂಗ ಆಗಿ ಬಿಟ್ಟದ. ಆಕೆ ನನ್ನ ಕ್ಷಮಿಸಿರಬಹುದು. ಆದರೆ ಅದಕ್ಕೆ ನಾನು ಅರ್ಹನೇ ಅಂತ ನನ್ನ ಮನಸೇ ಕೇಳಿದರೆ ನಾನೇನು ಹೇಳ್ಲಿ. ನಿನಗೆ ಗೊತ್ತೈತೆ ನನಗೆ ನಾನೆ ಅಂಜುವಷ್ಟು ಇನ್ಯಾರಿಗೂ ಅಂಟೋದಿಲ್ಲ ಅಂತ”

”ಅದರಾಗ ನೀನೊಬ್ಬಾತಂದೇ ತಪ್ಪು ಅಂತ ತಿಳಕೊಂಡದ್ದೇ ನಿನ್ನ ಅಂಜಿಕೆಗೆ ಕಾರಣ. ಯಾವಾಗಲೂ ಎಲ್ಲಾ ನಿನ್ನಿ೦ದನೇ ಆಗೈತಂತ ಯಾಕ ತಿಳಕೊಂಡಿದ್ದಿ? ಈ ಅತಿ ನಿನ್ನತನವೇ ಒಳ್ಳೇದಲ್ಲ ಅಂಬೋದು?

“ನಿನಗೂ ಗೊತ್ತೈತೆ ರವಿ, ನಾನು ಅದನ್ನ ಪಳಗಸೋದಕ್ಕೆ ಎಷ್ಟು ಪ್ರಯತ್ನ ಮಾಡ್ತಿಲ್ಲ? ಸ್ಥಿತಪ್ರಜ್ಞತೆ ಎಲ್ಲರಿಗೂ ಬರೋ ಗುಣ ಅಲ್ಲ. ಮತ್ತ ಅದನ್ನ ಪಡೆಯೋಕೆ ನನ್ನಿಂದಂತೂ ಸಾಧ್ಯವೇ ಇಲ್ಲ……………….?

ಸಂಜೆಯಿಂದ ಇಲ್ಲಿಯವರೆಗೆ ನಡೆದ ನನ್ನ ವಿಚಾರ ದ್ವಂದ್ವವನ್ನು ವಿವರಿಸಿದೆ. ಅದಕ್ಕೆ “ಜೀವನದ ಪ್ರತಿಕ್ಷಣವನ್ನು ತುಂಬು ಮನಸ್ಸಿನಿಂದ ಅನುಭವಿಸ್ಸೇಕು ಅನ್ನೋದು ನನ್ ಸಿದ್ಧಾಂತ, ನಿನ್ ಸುತ್ತ ಮುತ್ತ ಇಷ್ಟು ಜನರಿದ್ರೂ ನೀನು ಪರದೇಸಿ, ಅಸುಖ ಅಂದು ಕೊಂತೀಯಲ್ಲ: ಅಸಂಖ್ಯಾತ ಪರದೇಸಿಗಳು ಹೆಂಗ ಬದುಕ್ತಾರ ಅಂತ ವಿಚಾರ ಮಾಡಾಕ ಎಂದನ್ನ ಹೋಗಿದ್ದೇನು?”

“ನೋಡು, ಯಾವಾಗ್ಲೂ ನನ್ನಲ್ಲಿ ಇಲ್ಲದ್ದನ್ನ ಐತಿ ಅಂತ ತಿಳಕೊಳ್ಳೋ ಮೂರ್ಖತನ ಎಂದೂ ಮಾಡಿಲ್ಲ. ನೀನು ಇಷ್ಟು ಹೇಳ್ತಿದ್ದೆಲ್ಲ. ನಿಮ್ಮ ಅಪ್ಪನಲ್ಲಿಗೆ ಹೋಗಿದ್ದು ಯಾಕ ಪಿತೃಸುಖ ಅನುಭವಿಸ್ಬಾರ್ದು?”

“ನಿನಗೆ ಗೊತ್ತೈತೋ ಇಲ್ಲೋ, ಒಂದು ಕೈಯಿಂದ ಚಪ್ಪಾಳೆ ಬಾರಿಸ್ಲಿಕ್ಕೆ ಬರೋದಿಲ್ಲ ಅನ್ನೋದು. ನಾನು ಬ್ಯಾರೆ ಜಾತಿ ಹುಡಗೀನ್ನ ಮದ್ವಿ ಆದದ್ದು ಮೊದಲೇ ನನ್ನ ಮ್ಯಾಲಿದ್ದ ಅಪ್ಪನ ಸಿಟ್ಟನ್ನ ಹೆಚ್ಚಿಸಿ, ಅವ್ರು ತಮ್ಮ ಮಗ ರವಿ ಅನ್ನುವವ ಇದ್ದಾನೆ ಅನೋದೇ ಮರ್ತು ಬಿಟ್ಟಿದ್ದಾರೆ”
“ಇರ್ಲಿ ಬಿಡು ಎಷ್ಟು ಮಾತಾಡಿದರೂ ಅದೇ ಅಲ್ಲ. ಈಗ ಕಿರಣ ಎಲ್ಲಿಂದ ಬಂದ್ಲು? ಈ ನಾಲೈದು ವರ್ಷದಾಗ ಆಕಿ ಸುದ್ದೀನೇ ಕೇಳಿಲ್ಲ, ಆಕಿ ಮದ್ವಿ ಆಯ್ತು ಅನ್ನೋದು ಮಾತ್ರಗೊತ್ತು.”

ಅದಕ್ಕೆ ರವಿ ಹೇಳಿದ ಸಮಾಚಾರ ಇಷ್ಟು, ಅವಳ ಲಗ್ನವಾಗಿ ಇಲ್ಲಿಗೆ ಮೂರು ವರ್ಷವಾಯಿತು. ಗಂಡನಿಗೆ ಅವಳ ಹಿಂದಿನ ಕಥೆ ಗೊತ್ತಾಗಿ, ವಿರಸ ಹೆಚ್ಚಿ, ಈಗ ಒಂದು ವರ್ಷದಿಂದೀಚೆಗೆ ಗಂಡನನ್ನು ಬಿಟ್ಟು ಬಂದು ಯಾವದೋ ಊರಿನಲ್ಲಿ ಹೈಸ್ಕೂಲು ಮಾಸ್ತರ್ರಿಣಿಯಾಗಿದ್ದಾಳೆ. ಈಗ ನನ್ನ ಬೇನೆಯ ಸುದ್ದಿ ಕೇಳಿ ಇಲ್ಲಿಗೆ ಬಂದಿದ್ದಾಳೆ.

ತಮ್ಮ ಬಂದಿದ್ದ, ಈ ರಾತ್ರಿ ರವಿಯೇ ಇಲ್ಲಿ ಇರುವನೆಂದು ಹೇಳಿ ಅವನನ್ನು ಕಳಿಸಿ ಕೊಟ್ಟೆ.

ಕಿರಣಳನ್ನು ಕಾಣಲು ಮನಸ್ಸು ಕಾತರಿಸಿತ್ತು, ರವಿ ಮನಸ್ಸಿನಿಂಗಿತ ತಿಳಿದವನಂತೆ ಕಿರಣಳನ್ನು ಕಳಿಸುವುದಾಗಿ ಹೇಳಿ ಹೊರಟುಹೋದ.

ಈ ಕಿರಣ ಈಗಿನ ಬದಲು ಆರೆಂಟು ತಿಂಗಳು ಹಿಂದೆಯಾದರೂ ಬಂದಿದ್ದರೆ ನನ್ನಲ್ಲಿ ಬದುಕುವ ಆಸೆ ಬಲವತ್ತರವಾಗಿ ನನ್ನ ಜೀವ ಉಳಿಯುವ ಸಾಧ್ಯತೆ ಇತ್ತೇನೋ. ಆಟ ನೋಡುತ್ತಿರುವವರಂತೆ ತೆರೆಯ ಮರೆಯಲ್ಲಿದ್ದು, ಎಲ್ಲರೂ ಈಗ ಒಮ್ಮೆಗೇ ಪ್ರತ್ಯಕ್ಷವಾಗಿದ್ದಾರೆ ; ನನ್ನೆಲ್ಲ ಆಟಿಗೆ ಸಾಮಾನುಗಳನ್ನು ಕಟ್ಟಿಕೊಂಡು ಮನೆಗೆ ಹೋಗಲಣಿಯಾದಾಗ.

ಈಗ ಒಂದು ವರ್ಷದ ಹಿಂದೆಯೇ ಗೊತ್ತಾಗಿತ್ತು, ನನ್ನಲ್ಲಿಯ ರೋಗ ಪ್ರಬಲವಾಗಿ ಬಹಳಕಾಲ ಬದುಕಲಿಕ್ಕಿಲ್ಲ ಎನ್ನುವುದು. ಆಗಲೇ Radio-Therapy ಚಿಕಿತ್ಸೆ ಮಾಡಿಸಿಕೊಂಡಿದ್ದರೆ ನನ್ನ ಕರುಳುಗಳು ಕೊಳೆತು ಹೋಗುವದನ್ನು ತಪ್ಪಿಸಬಹುದಾಗಿದ್ದಿತು ಜೀವನದಿಂದ ವಿಮುಖವಾದ ಮನಸ್ಸು, ಈ ರಾಕ್ಷಸ ಹುಣ್ಣು ಬೆಳೆದು ಅದರ ಪೂರ್ಣ ಬೆಳವಣಿಗೆಯೊಡನೆ, ನನ್ನ ಜೀವನದ ಪೂರ್ಣತೆಯನ್ನು ಪಡೆಯುವಂತೆ ಪ್ರೇರೇಪಿಸಿತ್ತು.

ತನ್ನ ಗಂಡನಿಂದ ಬಿಡುಗಡೆ ಪಡೆದೊಡನೆಯೇ ಕಿರಣಳ ಸುದ್ದಿ ತಿಳಿದಿದ್ದರೆ ಯಾವ ತೊಂದರೆಯೂ ಇರಲಿಲ್ಲ. ಇತ್ತೀಚೆಗೆ ನನಗೆ ಸರಿ ತೋರಿದುದನ್ನು ಅದು ಅಕಾರ‍್ಯವೆಂದು ಅನಿಸಿದರೂ, ಸಾಧಿಸುವ ಧೈರ್ಯ ನನ್ನಲ್ಲಿ ಬೆಳೆದಿದೆಯೆಂದು ಆಗಾಗ್ಗೆ ಅನಿಸುತ್ತಿರುತ್ತದೆ. ಆಗಲೇ ಆಗದ್ದರೆ ಈ ಜಗತ್ತನ್ನು ಕಾಲ್ಚೆಂಡಿನಂತೆ ಅತ್ತ ಒದ್ದು ಅವಳೊಡನೆ ಬಾಳುವೆ ನಡೆಸುತ್ತಿದ್ದೆ.

ಬಹುಶಃ ರವಿ ಹೇಳುವದು ನಿಜವಿರಬಹುದು. ಇಲ್ಲಿ ಪ್ರತಿಯೊಂದು ಘಟನೆಯೂ ಆಳವಾದ ಬೇರುಗಳನ್ನು ಪಡೆದುಕೊಂಡೇ ಸಂಭವಿಸುತ್ತಿರಬೇಕು. ಕಿರಣಳೊಡನೆ ಸಹಬಾಳ್ವೆ ನಡೆಸುವ ಸುಯೋಗ ಒದಗಿದಾಗ, ಈ ಜಗತ್ತನ್ನೆದುರಿಸುವ ಧೈರ್ಯ ನನಗಿರಲಿಲ್ಲ. ಆ ಧೈರ್ಯ ಬಂದಾಗ ಕಿರಣಳಿರಲಿಲ್ಲ.

ಕಿರಣಳನ್ನು ಹೇಗೆ ಎದುರಿಸಲಿ? ನನ್ನಂಥವನ ಮುಖನೋಡಲು ಅವಳಿಗೆ ಮನಸ್ಸಾದರೂ ಹೇಗೆ ಬಂತೋ. ಮೋಹಿಸಿ, ಪ್ರೀತಿಸಿ, ಕನಸುಕಟ್ಟಿ ಕೊನೆಗೊಮ್ಮೆ ಆ ಕನಸಿನ ಮನೆಗೆ ಬೆಂಕಿಯಿಟ್ಟು, ಅದು ಬೂದಿಯಾಗುವಾಗ ಅವಳೊಬ್ಬಳನ್ನೇ ಬಿಟ್ಟು ಪಾರಾದ ನನಗೆ ಪ್ರಾಯಶ್ಚಿತ್ತವೆನ್ನುವದಾದರೂ ಇದೆಯೇ? ಆ ಉರಿಯಲ್ಲಿ ಅವಳ ಸೆರಗಿಗೆ ಹತ್ತಿದ ಕಪ್ಪು ಕಲೆ ಈ ರೀತಿ ಜೀವನದುದ್ದಕ್ಕೂ ಅವಳನ್ನು ಕಾಡಿ ಬಾಳುವೆಯನ್ನೇ ಹಾಳುಮಾಡಿತು.
೫
ಎಚ್ಚರವಾದಾಗ ಕಿರಣ ಮೃದುವಾಗಿ ತಲೆಯನ್ನು ನೇವರಿಸುತ್ತಿದ್ದಳು, ರವಿ ಮುಂಜಾನೆ ಬೇಗ ಬರುವುದಾಗಿ ಹೇಳಿ ಹೊರಟುಹೋದ. ಬಹಳ ಹೊತ್ತು ಯಾರೂ ಮಾತಾಡಲಿಲ್ಲ. ಕೊನೆಗೆ ಧೈರ್ಯ ವಹಿಸಿ,
“ನೀನು ಬರಬಾರದಾಗಿತ್ತು ಕಿರಣ” ಎಂದು ನಾನೇ ಮೌನಮುರಿದೆ.
“ಯಾಕ, ಈ ಜಡ್ಡಿನ್ಯಾಗ ನಿಮಗೇನನ್ನ ಆದ್ರೆ ಅದನ್ನೂ ನನ್ನ ತಲಿಮ್ಯಾಗ ಹೊರೆಸಬೇಕಂತ ಮಾಡಿದ್ರೇನು?” ನಗುತ್ತಾ ಕೇಳಿದಳು.
“ನೋಡು ಎಲ್ಲಾ ನಗುವಿನ್ಯಾಗ ತೇಲಿಸಿ ಬಿಡಬ್ಯಾಡ, ಜೀವನದಾಗ ಇಷ್ಟು ಕೆಟ್ಟದು ಮಾಡಿದ ಮ್ಯಾಗೂ ಒಬ್ಬನ್ನ ಕ್ಷಮಿಸ್ತಾರಂದ್ರೆ…” ಮುಂದೆ ಮಾತೇ ಹೊರಡಲಿಲ್ಲ.

“ಪಾರಾಗೋದು ಇದೂ ಒಂದು ರೀತಿ, ನನಕಿಂತ ಮೊದ್ಲೇ ನೀವು ನಿಮ್ಮನ್ನ ಬೈದುಕೊಂಡ್ರೆ ಪಾರಾಗತೀರಂತ ತಿಳದೀರೇನು ?” ಮತ್ತೆ ಅದೇ ನಗು.
“ನೀನು ಹಿಂಗೆಲ್ಲಾ ನಕ್ಕು ನನ್ನ ಕೊಲ್ಲಬ್ಯಾಡ, ನನ್ನ ಬೈ, ನನ ಕೂಡ ಜಗಳಾಡು, ಏನಾದ್ರೂ ಮಾಡಿ ನನ್ನ ಮ್ಯಾಲಿನ ಸಿಟ್ಟು ತೀರಿಸ್ಕೊ?
“ಅದೇ ಹುಡುಗುತನ, ಅದೇ ಮೂಗಿನ ಮ್ಯಾಲಿನ ಸಿಟ್ಟು, ಈ ನಾಲೈದು ವರ್ಷದಾಗ ಏನನ್ನ ಬದಲಾಗೀರಂತ ಮಾಡಿದ್ದೆ. ಅತಿ ಭಾವುಕತನ ಒಳ್ಳೇದಲ್ಲ. ಒಂದಿಷ್ಟು ಹಣ್ಣು ತಿಂದು ಸಮಾಧಾನ ಮಾಡಿಕೊಳ್ರಿ”
ಇವಳೂ ಅಷ್ಟೆ, ಎಷ್ಟು ವರ್ಷವಾದರೂ ಬದಲಾಗುವವಳಲ್ಲ. ಇವಳ ಮುಂದೆ ವಾದಿಸುವದು, ಒಂದು ಗುಂಡುಕಲ್ಲಿನ ಮುಂದೆ ನಿಂತು ಒದರುವದು ಒಂದೇ. ಕೇಳುವವರೆಗೆ ಕೇಳಿ ತನಗೆ ತಿಳಿದದ್ದನ್ನೇ ಮಾಡಿಯಾಳು ಕೊನೆಗೆ.

ನೋವು ಕಡಿಮೆಯಾದಂತೆನಿಸಿ ಲೋಡಿಗಾತು ಕುಳಿತೆ. ನೀರು ಮತ್ತು ತಟ್ಟೆಯೊಡನೆ ಬಂದಳು. ನೀರನ್ನು ಬಾಯಿಯಲ್ಲಿ ಮುಕ್ಕುಳಿಸಿ ಉಗುಳಿದ ಮೇಲೆ ವಸ್ತ್ರದಿಂದ ಬಾಯಿ ಒರೆಸಿದಳು. ತಾನೇ ಹಣ್ಣು ತಿನ್ನಿಸಿ, ಫ್ಲಾಸಿನಲ್ಲಿದ್ದ ಹಾಲು ಹಾಕಿಕೊಟ್ಟಳು. ಕುಡಿದೆ.

ಮೋಸ, ವಂಚನೆ, ಕುಟಿಲತೆ, ಚಂಚಲತೆ, ಅಸೂಯೆ ಇಂತಹ ಎಷ್ಟೋ ಗುಣಗಳನ್ನು ಹೆಣ್ಣಿನ ಮೇಲೆ ಆರೋಪಿಸಿದ್ದಾರೆ. ಕವಿಗಳು, ಆದರೆ ಬ್ರಹ್ಮ ಇವಳನ್ನು ಸೃಷ್ಟಿಸುವಾಗ ಹೆಣ್ಣಿನ ಆ ಮೂಲ ದ್ರವ್ಯಗಳನ್ನು ತುಂಬಲು ಮರೆತುಬಿಟ್ಟಿರಬೇಕು…
“ಹಂಗ್ಯಾಕ ದಿಟ್ಟಿಸಿ ನೋಡತೀರಿ ?”
“ಹೆಣ್ಣಿನ ನೆಲೆ, ಕುದುರೆ ನೆಲೆ ಸಿಗೋದಿಲ್ಲ ಅಂತೈತೆ ಗಾದೆ. ನಿನ್ನಲ್ಲಿ ಅದನ್ನ ಹುದುಕುತಿದ್ದೆ”
“ಸಿಕ್ಕಿತೇನು ?”
“ಅದೇನೋ ನಿನಗೇಗೊತ್ತು, ಹೊತ್ತೆಷ್ಟು ?”
“ಒಂದು ಗಂಟಿ” ಗಡಿಯಾರ ನೋಡಿ ಹೇಳಿದಳು.
“ಯಾಕೊ ಕಂದಿ ಭಾಳ ಆದಂಗ ಆಗಿ, ಉಸಿರುಗಟ್ಟಿದಂಗ ಆಗೈತೆ, ಹೊರಗೆ ಕರಕೊಂಡು ಹೋಗ್ತಿಯಾ?

“ಇಷ್ಟು ಕತ್ತಲದಾಗ ಹೊರಗೆ ಹೋಗ್ತಿರೇನು, ಅದೂ ಈ ನೋವಿನ್ಯಾಗ ?”
“ಇನ್ನು ನನಮ್ಯಾಗ ಅಪನಂಬಿಕೆ ಏನು?
“ನಿಮ್ಮ ಹುಡುಗಾಟ ಮಾಡ್ಲಿಕ್ಕೆ ಬರ‍್ತೈತಂತ ಮಾತಾಡ್ತಿರೇನು?

ಮಂಚದಿಂದ ನಿಧಾನವಾಗಿ ಎಬ್ಬಿಸಿದಳು, ಆಸರೆಗಾಗಿ ಹೆಗಲ ಮೇಲೆ ತೋಳು ಹಾಕಿ ನಿಂತುಕೊಂಡೆ. ಅಲಮಾರಿನೊಳಗಿದ್ದ ಬ್ಯಾಟ್ರಿ ತೆಗೆದುಕೊಂಡಳು. ನಿಧಾನವಾಗಿ ಬಾಗಿಲವರೆಗೆ ಬಂದೆವು. ಬ್ಯಾಟ್ರಿ ನನ್ನ ಕೈಯಲ್ಲಿ ಕೊಟ್ಟು ಬಾಗಿಲು ತೆರೆದಳು. ಕೋಣೆಯ ಹಿಂದೆ ಬಯಲು. ಬ್ಯಾಟ್ರಿ ಬೆಳಕಿನಲ್ಲಿ ಹೊರಗೆ ಅಂಗಳದಲ್ಲಿ ಬಂದು ಕುಳಿತೆವು.

ಅಮವಾಸ್ಯೆ ಹೋಗಿ ಎರಡು ಮೂರು ದಿನಗಳಾಗಿರಬೇಕು. ಎಲ್ಲೆಲ್ಲೂ ಕತ್ತಲೆಯೋ ಕತ್ತಲೆ. ಆಕಾಶದ ತುಂಬಾ ನಕ್ಷತ್ರಗಳು, ಆಕಾಶದಲ್ಲಿ ಬೆಳಕಿನ ಮೆರವಣಿಗೆ ಹೊರಟಂತ್ತಿತ್ತು……..

“ಹಾಂ”, ಎಂಥ ನೋವಿದು, ಹೊಟ್ಟೆಯಲ್ಲಿ ಅಲಗು ಆಡಿಸಿದಂತಾಗುತ್ತಿದೆ.
“ನೋವು ಹೆಚ್ಚಾಯ್ತೇನು ? ಒಂದಿಷ್ಟು ಆರಾಮಾಗಿ ಕೂಡ್ರಿ” ಎಂದು ಹೇಳಿ ಕಿರಣ ನನ್ನನ್ನು ಎದೆಗೆ ಒರಗಿಸಿಕೊಂಡಳು. ಅವಳೆದೆಯ ಮೇಲೆ ತಲೆಯಿಟ್ಟು ಹಾಗೆಯೇ ಆಕಾಶ ನೋಡುತ್ತಿದ್ದೆ.

ಹುಚ್ಚು ಹಿಡಿಸುವಷ್ಟು ನಕ್ಷತ್ರಗಳು, ಅದೋ ಪಾಂಡವರ ದಾರಿ. ಅದೇ ಇರಬೇಕು ವರ್ಡ್ಸ್‌ವರ್ಥ ಕವಿ ಕಂಡ ಮಿಲ್ಕೀವೇ (Milky Way) ಪ್ರತಿ ರಾತ್ರಿಯೂ ಎಷ್ಟೆಲ್ಲಾ ನಕ್ಷತ್ರಗಳು ಮೂಡಿ ಮುಳುಗುತ್ತವೆಯೋ ಏನೋ. ಕತ್ತಲೆಯೂ ಇಷ್ಟು ಸುಂದರವಾಗಿ ಸಿಂಗರಿಸಿಕೊಳ್ಳುವದೆಂದು ಗೊತ್ತಿರಲಿಲ್ಲ. ಜೀವನದ ಇದುವರೆಗಿನ ಎಲ್ಲಾ ರಾತ್ರಿಗಳನ್ನೂ ವ್ಯರ್ಥವಾಗಿ ಕಳೆದುಬಿಟ್ಟೆನಲ್ಲ. ನಿಜ, ರವಿಯೆಂದಂತೆ ಜೀವನದ ಪ್ರತಿ ಕ್ಷಣವನ್ನೂ ಬದುಕಲಿಲ್ಲ ನಾನು. ಪ್ರತಿಯೊಂದರ ವಿರುದ್ಧವೂ ಮಾನಸಿಕವಾಗಿ ಬಂಡು ಹೂಡುವ ದರಲ್ಲಿಯೇ ಆಯುಷ್ಯ ಕಳೆಯಿತು. ಕೋಟ್ಯಾನುಕೋಟಿ ವರ್ಷಗಳಿಂದ ಕ್ಷಣ ಕ್ಷಣಕ್ಕೆ ಒಂದೊಂದು ಹೊಸತನದಿಂದ ಬೆಳಗುತ್ತಿರುವ ಈ ನಕ್ಷತ್ರಗಳಂತೆ ನಾನು ಪ್ರತಿ ಕ್ಷಣದಲ್ಲಿಯೂ ಹೊಸತನವನ್ನು ಗುರುತಿಸಬೇಕಾಗಿತ್ತು.

“ಚುಕ್ಕಿಗಳನ್ನ ನೋಡಿದೆಯಾ ಕಿರಣ”
“ಅವನ್ನ ನೋಡ್ತಾ ಇದ್ದೆ. ಸತ್ತವ್ರು ನಕ್ಷತ್ರ ಆಗ್ತಾರಂತ ಹೇಳ್ತಿದ್ಲು ನಮ್ಮಮ್ಮ.
ಅದಕ ಈಗ ಅನಸ್ತೈತೆ ಎಷ್ಟು ಜನ ಸತ್ತು ಹೋಗ್ಯಾರಲ್ಲಾ ಅಂತ ಅಬ್ಬ ! ಎಷ್ಟು ನಕ್ಷತ್ರಗಳು ತುಂಬ್ಯಾವ”
“ನಾಳೆ ಸತ್ರೆ ನಾನೂ ಒಂದು ಚುಕ್ಕೆ ಆಗ್ತಿನಿ ಅನ್ನು…….
“ನಾನು ಅನಬ್ಯಾಡಿ, ನಾವು ಅನ್ರಿ. ನೀವು ಸತ್ರೆ ನಾನು ಉಳಿಯಾಕ ಸಾಧ್ಯ ಅಂತ ಇನ್ನೂ ಅನಸ್ತೆತೇನು ನಿಮಗ?”
“ಇಷ್ಟೆಲ್ಲಾ ಕಷ್ಟ ಕೊಟ್ಟ್ರೂ, ನನ್ನಲ್ಲಿ ಏನು ಕಂಡಿದ್ದಿ ಅಂತ ಇಷ್ಟು ಇದು ಐತೆ ನನಮಾಲೆ ?”

“ಅದೇನು ಕಂಡೀನೋ ನನಗ್ಗೂತ್ತಿಲ್ಲ. ಎಲ್ಲಾನೂ ತಳದ ತನಕ ಶೋಧಿಸಿಕೊಂತ ಹೋದ್ರೆ ಕೊನಿಗೆ ಸಿಗೋದು ಶೂನ್ಯನ.” ನನಗ ನನ ಜೀವನದಾಗ ಏನೂ ಗೊತ್ತಿಲ್ಲ, ಏನರ ಗೊತ್ತಿದ್ರೆ, ಅದು ನೀವು ಒಬ್ರೆ…”
“ಕಿರಣ”
“ಹೂಂ”.
………………
………………..
ಎಚ್ಚರವಾಗಿ ಕಣ್ಣು ಬಿಟ್ಟು ನೋಡಿದೆ, ಅವಳೆದೆಯಲ್ಲಿ ಎಷ್ಟು ಹೊತ್ತು ಮುಖವಿಟ್ಟು ಮಲಗಿದ್ದೆನೋ,
“ಚಳಿ ಸುರುವಾಗೈತೆ ಒಳಗೆ ಹೋಗೋಣ ನಡ್ರಿ” ಎಂದು ಹೇಳಿ ನನ್ನನ್ನು ನಿಧಾನವಾಗಿ ಒಳಗೆ ನಡೆಸಿಕೊಂಡು ಬಂದು ಹಾಸಿಗೆಯ ಮೇಲೆ ಕೂಡಿಸಿದಳು,
“ಹಾಸಿಗೊಂಬಾಕ ರವಿ ಹಾಸಿಗಿ ಐದಾವ ಮಲಿಕೊಂಡು ಬಿಡು”
ಉತ್ತರಿಸದೆ ನನ್ನನ್ನು ಮಲಗಿಸಿ, ಸ್ಕೂಲಿನ ಮೇಲೆ ಕುಳಿತು.
“ನಿದ್ದೆ ಬಂದ್ರೆ ಮಲಕ್ಕೊಂತೀನಿ”

ಜೀವನ ನನ್ನೊಡನೆ ಹೀಗೇಕೆ ಕಣ್ಣು ಮುಚ್ಚಾಲೆ ಮಾಡಿತು ? ಹೇಡಿತನವಾಗಿ ಕಾಡಿ ಕಿರಣಳ ಬಾಳನ್ನು ಹಾಳು ಮಾಡಿತು. ಅದೇ ಹೇಡಿತನ ಹೆಣ್ಣಾಗಿ ಬಂದು ನನ್ನ ಹೆಂಡತಿಯಾಗಿ ನನ್ನನ್ನು ಕಾಡಿತು. ಆದ ಈ ತಪ್ಪುಗಳನ್ನೆಲ್ಲಾ ತಿದ್ದಿಕೊಂಡು, ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಬರುವಂತಿದ್ದರೆ…

ಒಂದು ವೇಳೆ ನಾಳಿನ ಆಪರೇಶನ್ ಯಶಸ್ವಿಯಾಗಿ ನಾನು ಬದುಕಿ ಉಳಿದರೆ, ನನ್ನ ಮುಂದಿನ ದಾರಿ ಯಾವುದಾಗಬೇಕು ? ಕೊನೆಗೂ ಕಿರಣ ಸಿಕ್ಕಳು ಎನ್ನುವಷ್ಟರಲ್ಲಿ ಹೆಂಡತಿ ಎನ್ನುವವಳು ಹದ್ದಿನಂತೆ ಬಂದು ನನ್ನ ಜೀವನದ ಮೇಲೆರಗಿದ್ದಾಳೆ. ಇಲ್ಲ ಈ ಸಲ ಅವಳನ್ನು ಶಾಶ್ವತವಾಗಿ ಕಳಿಸಿಕೊಟ್ಟು ಬಿಡಬೇಕು. ಹೆಂಡತಿಯ ಯಾವ ಕರ್ತವ್ಯವನ್ನು ಪೂರ್ತಿಗೊಳಿಸಿದ್ದಾಳೆಂದು, ಮುಂದೆಯೂ ನಾನು ಹೆಂಡತಿಯೆಂದು ಅವಳನ್ನು ಪರಿಗಣಿಸಲಿ ?…………

ನಾನು, ಕಿರಣ ಇಬ್ಬರೇ ಹೊರಟಿದ್ದೆವು. ಎಷ್ಟು ಹೊತ್ತಿನಿಂದ ನಡೆಯುತ್ತಲಿದ್ದೆವೋ ತಿಳಿಯಲಿಲ್ಲ, ಒಂದು ಅಡವಿ ಬಂದಿತು. ಒಂದು ಹಾವು ಹೆಡೆಯೆತ್ತಿ ನನ್ನನ್ನು ಕಚ್ಚ ಬೇಕೆನ್ನುವಷ್ಟರಲ್ಲಿ ಕಿರಣ ಅದರ ಹೆಡೆಯನ್ನೇ ಹಿಡಿದಳು, ಅದು ಸೆಣಸಾಡ ತೊಡಗಿತು. ನಾನು ಅದರ ಬಾಲ ಹಿಡಿದೆ. ಬೀಸಿ ನೆಲಕ್ಕೆ ಬಡಿಯಬೇಕೆನ್ನುವಷ್ಟರಲ್ಲಿ, ನನ್ನ ಕೈಯಿಂದ ನುಸುಳಿ ಹುಲಿಯಾಗಿ ಕಿರಣಳ ಮೇಲೆರಗಿತು. ಆ ಹುಲಿಗೆ ನನ್ನ ಹೆಂಡತಿಯದೇ ಮುಖವಿದ್ದಂತೆನಿಸಿತು. ಅದರೊಡನೆ ಸೆಣಸಾಡಬೇಕೆಂದುಕೊಂಡೆ, ವಿಶ್ವಪ್ರಯತ್ನ ಮಾಡಿದರೂ ಕೈಕಾಲು ಒಂದಿಂಚೂ ಅಲುಗಾಡಲಿಲ್ಲ. ಅಸಹಾಯನಾಗಿ ಕೂಗಿದೆ.

ಒಮ್ಮೆಲೇ ಎಚ್ಚರವಾಯಿತು. ಭಯದಿಂದ ಮೈಯೆಲ್ಲಾ ಬೆವೆತು ಹೋಗಿತ್ತು. ಕಣ್ಣು ತೆರೆದು ಸುತ್ತಲೂ ನೋಡಿದೆ, ಅದೇ ಕೋಣೆ, ಸ್ಕೂಲಿನ ಮೇಲೆ ಕುಳಿತು, ಮಂಚದ ಮೇಲೆ ತಲೆಯಿಟ್ಟು ಹಾಗೆಯೇ ನಿದ್ದೆ ಹೋಗಿದ್ದಳು ಕಿರಣ. ಅವಳ ಒಂದು ಕೈ ನನ್ನ ಎದೆಯನ್ನು ಬಳಸಿತ್ತು, ಎರಡೆರಡು ಸಲ ಮುಟ್ಟಿ ನೋಡಿ ಅವಳೆ ಎಂದು ಖಾತ್ರಿ ಮಾಡಿಕೊಂಡೆ.

ದಣಿದಿದ್ದರೂ ಮುಖದಲ್ಲಿ ಪ್ರಶಾಂತತೆ ಲಾಸ್ಯವಾಡುತ್ತಿತ್ತು, ಎಷ್ಟೋ ಜನರು ನನ್ನವರೆಂದೆನಿಸಿಕೊಂಡಿದ್ದರೂ, ಜೀವನವಿಡೀ ನೀನೇ ಎಂದು ನನ್ನನ್ನು ನೆಚ್ಚಿಕೊಂಡ ಜೀವ ಇದೊಂದೇ. ನಿನ್ನಲ್ಲಿಯೂ ಮನುಷ್ಯತ್ವವಿದೆ, ನೀನೂ ಒಬ್ಬ ಮನುಷ್ಯ ಎಂದು ನನ್ನನ್ನು ನನಗೆ ಪರಿಚಯ ಮಾಡಿಸಿಕೊಟ್ಟವಳಿವಳು, ಸಮೀಪದಲ್ಲಿದ್ದಾಗ ನನ್ನ ಸುಪ್ತಚೇತನವನ್ನು ಮನದಾಳದಿಂದ ಹಿಡಿದೆತ್ತಿ, ಮನಸ್ಸಿನ ಪಾತಳಿಯಿಂದ ಆಕಾಶದತ್ತ ಹಾರಿಬಿಡುತ್ತಾಳಿವಳು ನನ್ನೊಂದಿಗೆ ನಿಂತಳೆಂದರೆ ಜಗದಗಲ, ಮುಗಿಲಗಲ, ಮಿಗೆ ಯಗಲ, ವಿಶ್ವದ ಉದ್ದಗಲಗಳನ್ನು ಅಳೆಯ ಹಚ್ಚುತ್ತಾಳೆ, ಮನಸ್ಸಿನ ವೀಣೆ ಝೇಂಕರಿಸಿ ಸಾವಿರ ರಾಗಗಳನ್ನು ಒಮ್ಮೆಗೇ ಹಾಡಹಚ್ಚುತ್ತದೆ. ನೂರು ಆಸೆಗಳ ಬುದ್ದುದಗಳನ್ನು ಸೃಷ್ಟಿಸಿ ಮನಸನುಕ್ಕಿಸುವ ಇವಳು, ವಾಸ್ತವತೆಯು ನೀರು ಹಾಕಿ ಉಕ್ಕು ಹೊರಚೆಲ್ಲದಂತೆಯೂ ಮಾಡುತ್ತಾಳೆ.
ಕಿಟಕಿಯ ಹೊರಗೆ ನೋಡಿದೆ. ಬೆಳಗಿನ ಶುಕ್ರ ಮೇಲೇರುತ್ತಿದ್ದ. ಪ್ರತಿದಿನ ಅವನು ನನ್ನಂತಹ ಎಷ್ಟು ಬಂದಿಗಳನ್ನು ನೋಡುವನೋ. ನಾಲ್ಕು ಗೋಡೆಗಳ ಬಂಧನದಿಂದ ಹೊರಗೆ ಹೋದರೆ, ಬಯಲಿನಲ್ಲಿ ಹತ್ತು ದಿಕ್ಕುಗಳ ಬಂಧನ ಕಾದಿದೆ. ಭೂಮಿಯ ಮೇಲೆ ಹುಟ್ಟಿದ ಯಾರಿಗೂ ಈ ಹಂಗಿನರಮನೆಯ ಬಂಧನ ತಪ್ಪಿದ್ದಲ್ಲ. ಈ ಹಂಗಿನರಮನೆಯ ಹೊರಗೆ ಕ್ಷಿತಿಜದಾಚೆ ಏನಿದೆ ಎಂದು ನೋಡುವ ಹಂಬಲ. ನೋಡಲಾಗದಿದ್ದರೂ ನೋಡಿದವರನ್ನಾದರೂ ಕೇಳಬೇಕೆನ್ನುವ ಆಸೆ. ಈ ಭೂಮಿಯ ಗೋರಿಯ ಮೇಲೆ ಹೊದೆಸಿದ ಆಕಾಶದ ಪರದೆಯನ್ನು ಹರಿದು ಭೂಮವಾಗಿ ಬೆಳೆದು ನಿಲ್ಲುತ್ತೇನೆ ಒಮ್ಮೊಮ್ಮೆ. ಮರುಕ್ಷಣದಲ್ಲಿ ಧೂಳಿಯ ಕಣವಾಗುತ್ತದೆ ನನ್ನ ಅಸ್ತಿತ್ವ. ಚೆನ್ನಮ್ಮನ ದಂಡೆಯನ್ನು ನನ್ನ ಈ ಇವಳ ಸಿರಿಮುಡಿಯಲ್ಲಿ ನುಡಿಸುವ ಕೈ ತೀಟೆ. ಕೈಗೆಟುಕದ ಅದನ್ನು ಕಿತ್ತುಕೊಡಲು ಸಪ್ತರ್ಷಿ ಮಂಡಲಕ್ಕೆ ಮೊರೆಯಿಡುತ್ತೇನೆ.

ಯಾಕೋ ಏನೋ ಇವಳು ತಿರುಗಿ ಬಂದಾಗಿನಿಂದ ಬದುಕಬೇಕೆನ್ನುವ ಆಸೆ ಬಲಿಯುತ್ತಿದೆಯೇನೋ ಎನ್ನುವ ಸಂಶಯ ಬರಹತ್ತಿದೆ. ಅದೇ ಗಾಂಭೀರ, ಅದೇ ನಿಷ್ಕಪಟತೆ, ಪ್ರಶಾಂತತೆ, ಅಹುದೋ ಅಲ್ಲವೋ ಎನ್ನುವಷ್ಟು ಮುಗುಳು ನಗೆಯ ಮಿಂಚು ತುಟಿಯಮೇಲೆ, ಮಮತೆಯುಕ್ಕಿ ಬಂತು, ಅವಳ ಕೈಯನ್ನು ನಿಧಾನವಾಗಿ ನನ್ನ ಎದೆಯ ಮೇಲಿನಿಂದ ತೆಗೆದು ಎದ್ದು, ಬಾಗಿ ನವಿರಾಗಿ ಚುಂಬಿಸಿದೆ.
ಎಚ್ಚರವಾಗಿ, ಸಾವರಿಸಿಕೊಂಡು ಎದ್ದಳು, ಗಡಿಯಾರ ನೋಡಿಕೊಂಡು,
“ಘಂಟೆ ಐದಾಯ್ತು ಇನ್ನೂ ನಿದ್ದೆ ಬರಲಿಲ್ಲವೇನು ನಿನಗೆ?” ಎಂದು ಹೇಳಿ ನನ್ನನ್ನು ಮಲಗಿಸಿ ಕಾವಲು ಕೂತಳು. ನನಗರಿಯದಂತೆಯೇ ನಿದ್ರೆ ನನ್ನನ್ನಾವರಿಸಿತು.

ಕಣ್ಣು ತೆರೆದು ನೋಡಿದಾಗ ಕಿಟಕಿಯಿಂದ ಬಿಸಿಲು ಬಿದ್ದಿತ್ತು. ಎದುರಿಗೆ ಕಿರಣ ನಿಂತಿದ್ದಳು. ಎಚ್ಚರಗೊಂಡದ್ದನ್ನು ನೋಡಿ ನನಗೆ, ಮುಖ ತೊಳೆಸುವ ಸಿದ್ಧತೆ ಮಾಡಿದಳು. ಹೊರಗೆ ರವಿ ತಮ್ಮನೊಡನೆ ಮಾತನಾಡುತ್ತಿದ್ದಂತಿತ್ತು. ಮುಖ ತೊಳೆದ ಸ್ವಲ್ಪ ಹೊತ್ತಿನೊಳಗಾಗಿ ಅಮ್ಮ, ಅಪ್ಪ ಮತ್ತು ನನ್ನ ಹೆಂಡತಿ ತನ್ನ ಗೆಳತಿಯರೊಡನೆ, ಹಾಜರಾದರು. ಒಬ್ಬೊಬ್ಬರಾಗಿ ಮಾತನಾಡಿಸಿದರು. ಯಾಕೋ ಇವರೆಲ್ಲರನ್ನು ಹೊಸದಾಗಿ ನೋಡಿದಂತೆನಿಸುತ್ತದೆ. ಯಾರಮೇಲೆಯೂ ಯಾವ ಭಾವನೆಗಳೂ ಮೂಡಲಿಲ್ಲ.

ಯಾವ ಭಾವನೆಗಳನ್ನು ವ್ಯಕ್ತಪಡಿಸಿಯಾದರೂ ಪ್ರಯೋಜನವೇನು? ಸತ್ತು ಹೋದರಂತೂ ನನ್ನ ಬಯಕೆ ಈಡೇರಿದಂತಾಯಿತು. ಇಲ್ಲ ಬದುಕಿದೆನೆಂದರೆ….ಇಷ್ಟೆ, ಜೀವನವನ್ನು ಇನ್ನೂ ಅರ್ಥಪೂರ್ಣವಾಗಿ ಬದುಕಬೇಕು. ಜೀವನದ ಪ್ರತಿಯೊಂದು ಕ್ಷಣವನ್ನು ಬದುಕಬೇಕು, ಅಂದರೆ ನನ್ನಲ್ಲಿ ಬದುಕಲೇಬೇಕೆನ್ನುವ ಹಠವಿಲ್ಲ. ಸಾವಿನ ವಿಷಯವಾಗಿ ಜೀವಂತವಾಗಿದ್ದ ಇಷ್ಟು ದಿನಗಳೆಲ್ಲವೂ ವಿಚಾರಮಾಡಿದೆ. ಈಗ ಉಳಿದಿರುವ ಒಂದು ಕ್ಷಣ ಬದುಕಿನ ಬಗ್ಗೆ ಯೋಚಿಸಿದರೆ ಆಗುವುದಾದರೂ ಏನು ?….

ಡಾಕ್ಟರು, ನರ‍್ಸ್‌ರೊಡನೆ ಒಂದು ನನ್ನನ್ನು ಬಂಡಿಯ ಮೇಲೆ ಮಲಗಿಸಿ, ಆಪರೇಷನ್ ಥಿಯೇಟರಿಗೆ ಒಯ್ಯುವ ವ್ಯವಸ್ಥೆ ಮಾಡಿದರು, ನನ್ನನ್ನು ಬಂಡಿಯ ಮೇಲೆ ಮಲಗಿಸಲಾಯಿತು, ಎಲ್ಲರೂ ಸಾಲಾಗಿ ನಿಂತು ನೋಡುತ್ತಿದ್ದರು. ಅಮ್ಮನ ಕಣ್ಣಿನಲ್ಲಿ ನೀರು ತುಳುಕುತ್ತಿದ್ದವು. ಅಪ್ಪ ಸಮಾಧಾನ ಪಡಿಸುತ್ತಿದ್ದಾನೆ, ಹೆಂಡತಿ ಯಾವದೋ ಭಾವನೆಗಳನ್ನು ಮುಖದಮೇಲೆ ಬಲವಂತವಾಗಿ ಎಳೆದು ತರಲು ಪ್ರಯತ್ನಿಸುತ್ತಿದ್ದಾಳೆ. ಕಿರಣ, ರವಿ, ಮತ್ತು ತಮ್ಮ ಆಪರೇಶನ್ ಥಿಯೇಟರಿನ ಬಾಗಿಲವರೆಗೂ ಬಂದರು. ಆಯಿತು ಇನ್ನೊಂದು ಕ್ಷಣದಲ್ಲಿ ಇವರೆಲ್ಲರಿಂದ ಮರೆಯಾಗಿ ಸಾವು ಬದುಕಿನ ಚಕ್ರವ್ಯೂಹದಲ್ಲಿ ಈ ಬಂಡಿ ನನ್ನನ್ನು ದೂಡುತ್ತದೆ.

Close

ಕುಂತಕನ ವಕ್ರೋಕ್ತಿ

ಕುಂತಕನ
ವಕ್ರೋಕ್ತಿ

ಎಂ. ರಾಜಗೋಪಾಲಾಚಾರ್ಯ

ಲಾಕ್ಷಣಿಕರು ಕಾವ್ಯಕ್ಕೆ ಅನೇಕ ತರದ ಲಕ್ಷಣಗಳನ್ನು ಹೇಳಿದ್ದರೂ ಕಾವ್ಯದಿಂದಾಗುವ ಅಲೌಕಿಕ ಆನಂದಾನುಭವಕ್ಕೆ ಲಕ್ಷಣಗಳ ಪರಿಚಯ ಇರಲೇಬೇಕೆಂದಿಲ್ಲ. ಆ ಲಕ್ಷಣಗಳ ಪರಿಚಯ ಮಾತ್ರದಿಂದಲೇ ಲಕ್ಷ್ಯದ ಸಮಗ್ರ ಪರಿಚಯವಾದೀತೆನ್ನುವ ಭರವಸೆಯೂ ಇಲ್ಲ. ಲಕ್ಷಣವನ್ನು ಹೇಳುವ ಮಾತಿನ ರೀತಿಯಲ್ಲಿ ಕಾವ್ಯದ ಯಥಾವತ್ತಾದ ಸ್ವರೂಪವನ್ನಾಗಲೀ ಅಂತಃಸತ್ತ್ವವನ್ನಾಗಲೀ ನಿರೂಪಿಸುವಷ್ಟು ಶಕ್ತಿಯಿಲ್ಲದುದೇ ಇದಕ್ಕೆ ಕಾರಣ. ಸಾಮಾನ್ಯವೆನ್ನಬಹುದಾದ ಅನುಭವವೊಂದು ಇಬ್ಬರು ಲಾಕ್ಷಣಿಕರಿಗಿದ್ದರೂ ಅದನ್ನು ಅಭಿವ್ಯಕ್ತಗೊಳಿಸುವ ಸಾಮಾನ್ಯವಾದ ಮಾತು ಒಬ್ಬರಿಗೂ ಇಲ್ಲದೇ ಹೋಯಿತು. ಲಾಕ್ಷಣಿಕರು ತಮ್ಮ ವಿವರಣೆಯನ್ನು ಸಮರ್ಥಿಸಲು ಇತರ ಶಾಸ್ತ್ರಗಳನ್ನೂ ಎಳೆದುತಂದರು. ಕಾವ್ಯಮೀಮಾಂಸೆ, ಬಲಿಯಿತು, ಹಿಗ್ಗಿತು. ಒಬ್ಬನು ತನ್ನದೇ ಅಂತಿಮ ನಿರ್ಣಯವೆಂದು ಸಾರಿದುದನ್ನು ಮತ್ತೊಬ್ಬನು ಖಂಡಿಸಿದ. ಅವನ ನಿರ್ಣಯದಲ್ಲಿ ಇವನಿಗೆ ದೋಷಗಳು ಕಂಡಿದ್ದರೆ ಅಚ್ಚರಿಯೇನಿಲ್ಲ. ಅದಕ್ಕಾಗಿ ಮುಂದಿನವರ ಪರಿಷ್ಕಾರ, ನೂತನ ಪ್ರಸ್ಥಾನಗಳು ತಲೆದೋರಿದುವು. ಹೀಗೆ ಹೊಸ ಪ್ರಸ್ಥಾನವನ್ನು ನಿರ್ಮಿಸಿದವರಲ್ಲಿ ಆಚಾರ್ಯ ಕುಂತಕನೂ ಒಬ್ಬ. ಅವನ ಕಾಲಕ್ಕೆ ಆಗಲೇ ಶಬ್ದಾರ್ಥಗಳ ಸಾಹಿತ್ಯ, ಅಲಂಕಾರ, ರೀತಿ, ರಸ, ಧ್ವನಿ ಮೊದಲಾದ ಪ್ರಸ್ಥಾನಗಳು ಪ್ರಚಾರದಲ್ಲಿದ್ದವು, ಇವೆಲ್ಲವುಗಳಲ್ಲಿ ಕೊರತೆಯನ್ನು ಕಂಡ ಕುಂತಕ ಕಾವ್ಯದ ಅಂತಃಸತ್ತ್ವವು ವಕ್ರೋಕ್ತಿಯೇ ಎಂದು ಮಂಡಿಸಿದ. ಇದಕ್ಕಿಂತಲೂ ಹಿಂದೆ ಭಾಮಹನು ವಕ್ರೋಕ್ತಿಯ ಅರ್ಥವನ್ನು ಅತಿಶಯೋಕ್ತಿಯ ಛಾಯೆಯವರೆಗೆ ಹಿಗ್ಗಿಸಿ, ವಕ್ರೋಕ್ತಿಯೇ ಸಕಲ ಅಲಂಕಾರಗಳಲ್ಲೂ ಸಾರಭೂತವಾದುದು. ಇದಿಲ್ಲದೆ ಅಲಂಕಾರ’ವೇ ಆಗಲಾರದೆಂದು ಹೇಳಿದ್ದ. ಕುಂತಕನು ಅಷ್ಟರಿಂದಲೇ ತೃಪ್ತನಾಗದೆ ಅದಕ್ಕೆ ಹೊಸ ಪರಿಷ್ಕಾರವನ್ನು ಮಾಡಿ ತನ್ನದೇ ಆದ ಪಾರಿಭಾಷಿಕ ಪದವನ್ನಾಗಿ ಮಾಡಿಕೊಂಡು ವಕ್ರೋಕ್ತಿಯೇ ಕಾವ್ಯದ ಜೀವಾತು. ಅದಿಲ್ಲದೆ ಕಾವ್ಯವೇ ಆಗದೆಂಬ ಹೊಸ ಮಾರ್ಗವನ್ನು ಪ್ರಚಾರಕ್ಕೆ ತಂದ. ಆದರೆ ಅವನ ಪರಿಭಾಷೆಗೆ ತಕ್ಕಷ್ಟು ಸಮರ್ಥನೆ ಸಾಲದುದರಿಂದಲೋ ಏನೋ ಅದು ಹೆಚ್ಚು ಕಾಲ ನಿಲ್ಲಲಿಲ್ಲ. ಆದರೂ ಅವನ ಅನುಭವವು ನವೀನ ಮಾರ್ಗ ಶೋಧಕರಿಗೆ ದಾರಿದೀವಿಗೆಯಾಗಬಹುದೆಂದು ಕಾಣುತ್ತದೆ.

ಕುಂತಕನು ‘ವಕ್ರೋಕ್ತಿ’ ಎಂಬ ಪದವನ್ನು ಕೊಂಕುನುಡಿಯೆಂಬ ಅರ್ಥದಲ್ಲಿ ಮಾತ್ರ ಬಳಸಲಿಲ್ಲ, ಅವನ ದೃಷ್ಟಿಯಲ್ಲಿ ಅದೊಂದು ಬರೇ ಅಲಂಕಾರವೂ ಅಲ್ಲ; ಉಕ್ತಿಯ ಅತಿಶಯವೂ ಅಲ್ಲ. ಕಾವ್ಯದ ಎಲ್ಲ ಅಂಗಗಳಿಗೂ ಅನ್ವಯಿಸುವಂತೆ “ವೈದಗ್ಧ್ಯಭಂಗೀ ಭಣಿತಿ’ ಎಂದು ಅದರ ಅರ್ಥವನ್ನು ಹಿಗ್ಗಲಿಸಿದ್ದಾನೆ. ಕಾವ್ಯದ ಶಬ್ದಾರ್ಥಗಳಲ್ಲಿ, ರೀತಿ-ಬಂಧಗಳಲ್ಲಿ, ಅಲಂಕಾರದಲ್ಲಿ, ಧ್ವನಿಯಲ್ಲಿ, ರಸದಲ್ಲಿ, ಕೊನೆಗೆ ಪ್ರಬಂಧದ ಸಮುದಾಯ ಸೌಂದರ್ಯದಲ್ಲಿ ಇದು ಹೇಗೆ ಚಮತ್ಕಾರವನ್ನುಂಟುಮಾಡಬಲ್ಲುದೆಂದು ತೋರಿಸಲು ಪ್ರಯತ್ನಿಸಿದ್ದಾನೆ.

ಮೊದಲಿಗೆ ಕುಂತಕನು ಸರಸ್ವತೀ ಸ್ತೋತ್ರದಿಂದ ಮುಂಗಲಾಚರಣೆಯನ್ನು ಮಾಡುವಾಗಲೇ ಕಾವ್ಯದ ಅಲೌಕಿಕತೆಗೆ ಅದರ ಧಾತುಶಕ್ತಿ ಯಾವುದೆಂಬುದನ್ನು ಸೂಚಿಸಿದ್ದಾನೆ:

ವಂದೇ ಕವೀಂದ್ರ ವಕ್ತ್ರೇಂದು ಲಾಸ್ಯಮಂದಿರ ನರ್ತಕೀo |
ದೇವೀಂ ಸೂಕ್ತಿಪರಿಸ್ಪಂದ ಸುಂದರಾಭಿನ ಯೋಜೃಲಾಂ ||

ಇದರಲ್ಲಿ ಸರಸ್ವತಿಯನ್ನೂ ಕವಿವಾಣಿಯನ್ನೂ ಅಭಿನ್ನವಾಗಿ ಸ್ತುತಿಸಿದಂತೆ ಇದೆ. ಮುಂದೆ ಆತನೇ ಹೇಳುವ ಶಾಬ್ದಿಕವಾದ ಕಾವ್ಯಲಕ್ಷಣವು ಇದರೆದುರಿಗೆ ಸಪ್ಪೆಯಾಗಿ ಕಾಣಿಸುತ್ತದೆ. ಈ ಪದ್ಯದಲ್ಲಿ ಬರುವ ‘ಸೂಕ್ತಿ’ ‘ಪರಿಸ್ಪಂದ’ ಅಭಿನಯ’ “ಉಜ್ವಲ’ ಇವೆಲ್ಲವೂ ಕಾವ್ಯದ ಭಾಷೆಯ ವಿಶಿಷ್ಟವಾದ ಗುಣಗಳು. ಅದರಲ್ಲೂ ಪರಿಸ್ಪಂದ ಶಬ್ದವು ತುಂಬ ಗಮನಾರ್ಹವಾದುದು. ಕುಂತಕನು ತನ್ನ ‘ವಕ್ರೋಕ್ತಿ ಜೀವಿತ’ ದಲ್ಲಿ ಪರಿಸ್ಪಂದ ಮತ್ತು ಸ್ಪಂದ ಎಂಬ ಪದಗಳನ್ನು ಒಂದು ವಿಶಿಷ್ಟವಾದ ಅರ್ಥದಲ್ಲಿ ಬಳಸುತ್ತಾನೆ. ಸ್ಪಂದ ಎಂದರೆ (ಶಕ್ತಿಯ) ಸ್ವಭಾವ, ಧರ್ಮ, ವ್ಯಾಪಾರ, ವಿಲಾಸ, ಸ್ವರೂಪ……. ರಿಂದ ಅಭಿನ್ನ, ಸ್ಫುರಿತತ್ವ ಮುಂತಾದ ಅರ್ಥಗಳಲ್ಲಿ ಬಳಸಿದ್ದಾನೆ.

ಮೇಲಿನ ಶ್ಲೋಕದಲ್ಲಿ ಇವುಗಳಲ್ಲಿ ಹೆಚ್ಚಿನವನ್ನು ಸೇರಿಸಬಹುದಾದರೂ ವಿಲಸಿತ ಎಂಬುದೇ ಅವನಿಗೆ ಅಭಿಪ್ರೇತವಾದಂತೆ ಕಾಣುತ್ತದೆ. ನಲ್ನುಡಿಗಳ ಸುತ್ತೋತ್ತಿನಿಂದ ಭಾವಾಭಿನಯಶಾಲಿಯಾಗಿ ಉಜ್ಜಲವಾಗಿರಬೇಕು ಕವಿಯ ವಾಣಿ. ಕುಶಲಳಾದ ನರ್ತಕಿಯು ಶಬ್ದಗಳಿಗೆ ನಿಲುಕದ ಭಾವವೊಂದನ್ನು ಅಂಗವಿಕ್ಷೇಪದಿಂದಲಾಗಲೀ ಪದ ವಿನ್ಯಾಸಮಾತ್ರದಿಂದಲಾಗಲೀ ಅಭಿನಯಿಸಿ ತೋರಿಸುವಂತೆ ವಿದಗ್ಧನಾದ ಕವಿಯ ವಾಣಿಯು ತನ್ನ ‘ಪದವಿನ್ಯಾಸ’ ಮಾತ್ರದಿಂದಲೇ ನವುರಾದ ಭಾವದ ಒಳಪದರಗಳನ್ನೂ ಸಮರ್ಥವಾಗಿ ಬಿಂಬಿಸಬಹುದು. ಅದು ದೇದೀಪ್ಯಮಾನವಾಗಿ ಬೆಳಗಬಹುದು. ಅಂದರೆ ಕವಿಯ ಪ್ರತಿಭೆಯ ಪ್ರಭೆಯಲ್ಲಿ ಜೀವತಳೆದ ಕಾವ್ಯದ ಶಬ್ದಾರ್ಥಗಳು ಭಾವವನ್ನು ಅಭಿನಯಿಸಿ ತೋರಿಸಿದಂತೆ ಭಾಸವಾಗುತ್ತವೆ. ಅವನ ವೈದಗ್ಧ್ಯದಿಂದ ಮಾತಿಗೆ ಭಾವಾಭಿನಯ ಚಾತುರ್ಯ ಬರುತ್ತದೆ ಎಂತಲೇ ಇದಕ್ಕೆ ‘ ವೈದಗ್ಧ್ಯ ಭಂಗೀ ಭಣಿತಿ’ ಎಂದು ಹೇಳಿದ. ಕಾವ್ಯ ವ್ಯತಿರಿಕ್ತವಾದ ಶಬ್ದಾರ್ಥಗಳಿಗೆ ಈ ವೈಶಿಷ್ಟ್ಯವಿರಲಾರದು. ಇದಕ್ಕಾಗಿ ಕವಿ ತನ್ನ ಏಕೈಕ ಮಾಧ್ಯಮವಾದ ಶಬ್ದಾರ್ಥಗಳಲ್ಲಿ ಅವಧಾನ ಪರನಾಗಿರಬೇಕಾಗುತ್ತದೆ. ಶಬ್ದ ಮತ್ತು ಅರ್ಥಗಳಲ್ಲಿ ಇತರರಿಗಿಂತ ಕವಿಗೆ ಹೊಣೆಗಾರಿಕೆಯು ಹೆಚ್ಚು. ಇದು ಒಳ್ನುಡಿಗಳ ಪರಿಸ್ಫುರಣದಿಂದ ಸುಂದರಾಭಿನಯ ಶಾಲಿಯಾಗಿ ಬೆಳಗುವ ಭಾಷೆ. ಕಾವ್ಯದ ಈ ಗುಣಧರ್ಮವು ವಕ್ರೋಕ್ತಿ ವ್ಯಾಪಾರಕ್ಕೆ ವಿಷಯವಾದುದೆಂದು ಸರಸ್ವತೀಸ್ತುತಿಯ ರೂಪದಲ್ಲಿ ಕಾವ್ಯದ ವೈಶಿಷ್ಟ್ಯವನ್ನು ಸೂಚಿಸಿ, ಮುಂದೆ ಸಾಂಪ್ರದಾಯಿಕವಾಗಿ ಕಾವ್ಯದ ಸ್ವರೂಪವನ್ನು ನಿರೂಪಿಸುತ್ತಾನೆ.

ಶಬ್ದಾರ್ಥೌ ಸಹಿತೌ ವಕ್ರಕವಿವ್ಯಾಪಾರ ಶಾಲಿನಿ |
ಬಂಧೇ ವ್ಯವಸ್ಥಿತೌ ಕಾವ್ಯಂ ತದ್ವಿದಾಹ್ಲಾದಕಾರಿಣಿ ||

ಶಬ್ದಾರ್ಥಗಳ ಸಹ ಭಾವವೇ ಕಾವ್ಯ. ಕೇವಲ ಶಬ್ದವೂ ಅಲ್ಲ, ಕೇವಲ ಅರ್ಥವೂ ಅಲ್ಲ. ಪ್ರತಿ ಎಳ್ಳಿನಲ್ಲೂ ಎಣ್ಣೆ ತುಂಬಿರುವಂತೆ ಎರಡರಲ್ಲೂ ಕಾವ್ಯದ ಸತ್ತ್ವವಿರುತ್ತದೆ. ಕವಿಯ ವಕ್ರೋಕ್ತಿ ವ್ಯಾಪಾರಕ್ಕೆ ವಿಷಯವಾದ ಶಬ್ದಾರ್ಥಗಳು ವಾಕ್ಯದಲ್ಲಿ ಗುಂಫಿತವಾಗಿ ಸಹೃದಯರಿಗೆಗೆ ಅಪೂರ್ವ ಚಮತ್ಕಾರವನ್ನುಂಟುಮಾಡುತ್ತವೆ. ಕಾವ್ಯದ ಗುಣ ಧರ್ಮ ವಕ್ರೋಕ್ತಿ. ಇತರರು ಹೇಳುವ ಗುಣ, ಅಲಂಕಾರ, ರಸ ಮೊದಲಾದುವೆಲ್ಲಾ ಇದರಲ್ಲೇ ಅಡಗಿವೆ. ಶಬ್ದಾರ್ಥಗಳೆರಡೂ ಮುಖ್ಯಾರ್ಥವನ್ನು ನಿರೂಪಿಸುವುದರಲ್ಲಿ ಪರಸ್ಪರ ಸ್ಪರ್ಧಿಗಳಾಗಿರಬೇಕು. ಕವಿಯು ಸ್ವಲ್ಪ ಮಾತ್ರ ಎಚ್ಚರ ತಪ್ಪಿದರೂ ಕಾವ್ಯದ ಭಾವವು ಹದಗೆಡಬಹುದು. ವಸ್ತುವನ್ನು ನಿರೂಪಿಸಲು ಅನೇಕ ಪದಗಳಿದ್ದರೂ ವಿವಕ್ಷಿತಾರ್ಥವನ್ನೇ ಮುಖ್ಯವಾಗಿ ಪ್ರತಿಪಾದಿಸುವ ಪದ, ಸಹೃದಯರ ಚೇತಶ್ಚಮತ್ಕಾರ ವ್ಯಾಪಾರದಲ್ಲೇ ನಿರತವಾದ ಅರ್ಥ ಇವುಗಳಲ್ಲಿ ಕವಿ ಜಾಗರೂಕನಾಗಿರಬೇಕು. ಉದಾ :
ಕಲ್ಲೋಲ ವೇಲ್ಲಿತ ದೃಷತ್ಪರುಷಪ್ರಹಾರೈಃ
ರತಾನ್ಯಮನಿ ಮಕರಾಕರ! ಮಾವಮಂಸ್ಥಾಃ|
ಕಿಂ ಕೌಸ್ತುಭೇನ ಭವತೋ ವಿಹಿತೋ ನ ನಾಮ
ಯಾಜ್ಞಾ ಪ್ರಸಾರಿತಕರಃ ಪುರುಷೋತ್ತಮೋಪಿ||

ಸಮುದ್ರವೇ ! ಅಲೆಗಳಿಂದ ಚಲಿಸುವ ಕಲ್ಲುಗಳಿಂದ ಹೊಡೆದು ನಿನ್ನ ಈ ರತ್ನಗಳನ್ನು ಅವಮಾನಗೊಳಿಸದಿರು, ಆ ಒಂದು ಕೌಸ್ತುಭ ರತ್ನಕ್ಕಾಗಿ ಪುರುಷೋತ್ತಮ ನಿನ್ನ ಮುಂದೆ ಕೈ ಚಾಚಲಿಲ್ಲವೆ !

ಈ ಪದ್ಯದಲ್ಲಿ ‘ನಿನ್ನಲ್ಲಿರುವ ಒಂದು ಸಾಮಾನ್ಯ ರತ್ನಕ್ಕಾಗಿ’ (ಏಕೇನ ಕಿಂ ನ ವಿಹಿತೋ ಭವತಃ ಸ ನಾಮ) ಎಂದು ಹೇಳಿದ್ದರೆ ಶಬ್ದಾರ್ಥಗಳೆರಡೂ ಉದ್ದಿಷ್ಟ ಭಾವವನ್ನು ತಟ್ಟನೆ ಬೆಳಗುತ್ತಿದ್ದವು. ರತ್ನಸಾಮಾನ್ಯವನ್ನು ಹೇಳುವ ಬದಲು ರತ್ನವಿಶೇಷವನ್ನು ಹೇಳಿದುದರಿಂದ ಕವಿಯ ಅವಧಾನಪರನಾಗಲಿಲ್ಲವೆಂದು ಹೇಳಬೇಕಾಗುತ್ತದೆ.

ಅರ್ಥವು ತನ್ನಂತೆಯೇ ಅರಳುತ್ತಾ ಒಮ್ಮೆಲೇ ಮುಖ್ಯಗುರಿಯನ್ನು ಸಾಧಿಸುವ ರೀತಿಗೆ ಮೇಘದೂತದ ಒಂದು ಪದ್ಯವನ್ನು ನೋಡಬಹುದು.

ಭರ್ತುರ್ಮಿತ್ರಂ ಪ್ರಿಯಮವಿಧವೇ ವಿದ್ಧಿ ಮಾಮಂಬುವಾಹಂ
ತತ್ಸಂದೇಶಾತ್ ಹೃದಯ ನಿಹಿತಾದಾಗತಂ ತ್ವತ್ಸಮೀಪಂ |
ಯೋ ವೃಂದಾನಿ ತ್ವರಯತಿ ಪಥಿ ಶ್ರಾವ್ಯತಾಂ ಪೋಷಿತಾನಾಂ |
ಮಂದ್ರಸ್ನಿಗ್ಧರ್ಧ್ವನಿಭಾರಬಲಾವೇಣಿ ಮೊಕ್ಷೇತುಕಾನಿ!

‘ಎಲೆ ಸುಮಂಗಲಿ ! ನಾನು ನಿನ್ನ ನಲ್ಲನ ಪ್ರಿಯ ಸಖ, ಮೇಘ. ಅವನ ಸಂದೇಶವನ್ನು ಎದೆಯಲ್ಲಿಟ್ಟುಕೊಂಡು ನಿನ್ನ ಬಳಿಗೆ ಬಂದಿದ್ದೇನೆ, ಪ್ರೇಯಸಿಯರನ್ನು ಅಗಲಿ ಹೋದ ಪ್ರಿಯರು ಮಧ್ಯದಾರಿಯಲ್ಲಿ ತೊಳಲುವಾಗ ಮೆಲ್ಲನೆ ಗುಡುಗಿ ಅವರನ್ನು ಪ್ರೇಯಸಿಯರ ಬಳಿಗೆ ಕಳುಹಿಸುವ ಪರೋಪಕಾರಿ ನಾನು ಎಂದು ಭಾವಿಸು”

ಮೇಘದೂತದ ಮೇಘ ಕಾಲ್ಪನಿಕ ವ್ಯಕ್ತಿ. ಅಂದರೆ ಜಡಪದಾರ್ಥವಾದ ಮೇಘಕ್ಕೆ ಒಮ್ಮೆ ಕಾಳಿದಾಸ ಚೇತನವಿದೆಯೆಂದು ಕಲ್ಪನೆಯಿಂದ ಒಪ್ಪಿದ ಬಳಿಕ ಕೊನೆಯವರೆಗೂ ಅದರ ಚೇತನ ಧರ್ಮವನ್ನು ಕಾಯ್ದುಕೊಳ್ಳುತ್ತಾನೆ. ಮೇಘವನ್ನು ದೌತ್ಯಕ್ಕಾಗಿ ನಿಯೋಜಿಸುವಾಗಲೂ ಅದರ ಯಥಾರ್ಥಸ್ವರೂಪವು ಅವನ ಬುದ್ಧಿಯಿಂದ ಜಾರಲಿಲ್ಲ. ಮೇಘವನ್ನು ಜಡವೆಂದೂ, ಚೇತನವೆಂದೂ ಏಕಕಾಲದಲ್ಲಿ ಚಿತ್ರಿಸಿಕೊಂಡು ಹೋಗುತ್ತಾನೆ. ಅದಕ್ಕನುಗುಣವಾಗಿ ಇಲ್ಲಿನ ಪ್ರತಿಯೊಂದು ಮಾತೂ ಅವನ ಭಾವ-ಬುದ್ಧಿಗಳನ್ನು ಅರಳಿಸುವಂತಿವೆ. ಮೊದಲಿಗೆ ನಿನ್ನ ಪತಿಯು ಬದುಕಿರುವನು ಎನ್ನುವಂತ ಸಂಶೋಧನೆ, ಪತಿಯ ಮಿತ್ರನಾದುದರಿಂದ ತಾನು ವಿಶ್ವಾಸ ಪಾತ್ರ, ರಹಸ್ಯ ವಿಷಯಗಳನ್ನು ಬಲ್ಲವನು ಎಂದು ಯಕ್ಷಿಯನ್ನು ಮುಖವೆತ್ತುವಂತೆ ಮಾಡಿ ಅವನ ಸಂದೇಶವನ್ನು ಹೊತ್ತುಕೊಂಡೇ ನಿನ್ನ ಬಳಿಗೆ ಬಂದಿದ್ದೇನೆ ಎಂಬ ಪ್ರಕೃತ ವಿಷಯವನ್ನು ತಿಳಿಸುತ್ತದೆ ಮೇಘ. ಸಂದೇಶ ಬಹಳ ರಹಸ್ಯವಾದುದು, ಅದನ್ನು ಯಾರಿಗೂ ಹೇಳದೆ ಅಂತರಂಗದಲ್ಲೇ ಅಡಗಿಸಿಟ್ಟುಕೊಂಡಿದ್ದೇನೆ. ಸಂತಪ್ತರಾದವರಿಗೆ ತಂಪನ್ನುಂಟುಮಾಡುವ ‘ಅಂಬವಾಹ’ ನಾನು. ಯಾರು ಹೇಳದಿದ್ದರೂ ಪ್ರೋಷಿತರಾದ ಫಾಂಥರನ್ನು ತಕ್ಕ ವೇಳೆಗೆ ಅವರ ಮನದನ್ನೆಯರ ಬಳಿಗೆ ಕಳುಹಿಸುವ ನನ್ನ ಹೆಂಗರುಳನ್ನು ತಿಳಿದೇ ನಿನ್ನ ಪ್ರಿಯ ನನ್ನೊಡನೆ ನಿನಗೆ ಸಂದೇಶವನ್ನು ಕಳುಹಿಸಿರುವನು. ಇನಿದನಿಗೈಯುವ ನನ್ನ ಹೊರತು ಆತನಿಗೆ ಆ ನಿರ್ಜನ ಪ್ರದೇಶದಲ್ಲಿ ಬೇರೆ ಯಾರು ಆಪ್ತರು ದೊರೆಯುವರು ? ಅದರಲ್ಲೂ ಅಬಲೆಯರಿಗಾಗಿ ಮರುಗುವವನು ನಾನು. ವಿರಹದಿಂದ ಬಿಳಿಚಿಹೋಗಿ ವೇಣೀಧರರಾಗಿದ್ದ ಅವರ ಅವಸ್ಥೆಯನ್ನು ನೋಡಲಾರದೆ ದಾರಿಯಲ್ಲಿರುವ ಅವರ ಪ್ರಿಯರನ್ನು ಚಾಟೂಕ್ತಿಯಂತಹ ಗುಡುಗಿನ ದನಿಯಿಂದ ಪ್ರೇರಿಸಿ ಮನೆಗೆ ಕಳುಹಿಸಿ, ಅವರಿಗೆ ಪ್ರಿಯ ಸಮಾಗಮವನ್ನುಂಟು ಮಾಡುವವನು. ಯಾರಿಗಾದರೂ ಮನಕರಗುವವನು ನನ್ನ ಮಿತ್ರನಿಗಾಗಿ ಸಂದೇಶವನ್ನೂ ತರಲಾರೆನೆ ! ಆದುದರಿಂದ ನನ್ನನ್ನು ನಂಬು ಎಂದು ಯಕ್ಷನಲ್ಲಿ ಅಭಿನ್ನನಾದ ಕವಿ ತನ್ನನ್ನು ನಿವೇದಿಸಿಕೊಳ್ಳುವ ಭಂಗಿಯಿದು.

ಜಡವಸ್ತುವಾದ ಮುಗಿಲು ಇಲ್ಲಿ ಸಚೇತನವಾಗಿ ನಿರೂಪಿತವಾಗಿದೆ. ಅಂದಬಳಿಕ ಕವಿ ಎಷ್ಟು ಎಚ್ಚರವಿದ್ದರೂ ಸಾಲದು. ಜಡಕ್ಕೆ ಚೇತನ ಧರ್ಮವನ್ನು ಅರೋಪಿಸಿದ ಮೇಲೆ ಅದನ್ನು ಚೇತನವೆಂಬಂತೆಯೇ ಕೊನೆಯವರೆಗೂ ನಿರೂಪಿಸಬೇಕಾಗುತ್ತದೆ. ಒಡನೊಡನೆಯೇ ಅದು ನಿಜವಾಗಿ ಜಡ ಎಂಬ ವಸ್ತುಸ್ಥಿತಿಯೂ ಅವನ ಬುದ್ಧಿಯಿಂದ ಅಳಿಸಿ ಹೋಗಬಾರದು. ಇಲ್ಲಿ ಪ್ರತಿಯೊಂದು ಮಾತೂ ಆಯಾ ಭಾವಗಳನ್ನು ಸಜೀವವಾಗಿ ಚಿತ್ರಿಸುವುದರಿಂದ ಕವಿಯ ನಿರೂಪಣೆಯಲ್ಲಿರುವ ಪದಾರ್ಥ ಪರಿಸ್ಪಂದವು ಮೇಘದೂತದ ವಸ್ತುವಿಗೆ ಪ್ರಾಣಭೂತವಾಗಿದೆ. ಅದರಿಂದಲೇ ಮೇಘವನ್ನು ಜಡವೆಂದು ಭಾವಿಸದೆ ಇಲ್ಲಿನ ವಾತಾವರಣವು ಕಲ್ಪಿಸುವ ಭಾವದಿಂದ ಸಹೃದಯರು ಚಮತ್ಕೃತರಾಗುತ್ತಾರೆ. ಮೇಘದೂತವು ಒಂದು ಭಾವಗೀತೆ. ಕಾಳಿದಾಸ ತನ್ನ ಕಾಲಕ್ಕೆ ಹೊಸದೆಂದು ಕಾಣುವ ಒಂದು ಕಾವ್ಯದ ಪ್ರಕಾರವನ್ನು ಶೋಧಿಸಿ ಇದನ್ನು ಬರೆದಿದ್ದರೂ ಹಳೆಯದರ ತಳಹದಿಯ ಮೇಲೆ ಹೊಸದನ್ನು ನಿರ್ಮಿಸಿದ್ದಾನೆ. ಅಲ್ಲದೆ ಅವನಿಗೆ ಭಾಷೆಯ ತೊಡಕೂ ಇರಲಿಲ್ಲ. ಭಾವನೆಯನ್ನೂ ವಿಚಾರವನ್ನೂ ಏಕಕಾಲದಲ್ಲಿ ಅಭಿವ್ಯಕ್ತಗೊಳಿಸುವ ಸಾಮರ್ಥ್ಯ ಅವನಿಗಿತ್ತು. ಎಷ್ಟು ಜಟಿಲವಾದ ಸಂಕೀರ್ಣವಾದ ಅನುಭವವೂ ಅವನ ಭಾಷೆಯಲ್ಲಿ ಮೂರ್ತ ಸ್ವರೂಪವನ್ನು ಸುಲಭವಾಗಿ ಪಡೆಯುತ್ತದೆ.

ಆದುದರಿಂದ ಕವಿಯು ತನ್ನ ಕಾವ್ಯವಸ್ತುವಿನೊಂದಿಗೆ ಒಂದಾಗಿ ಬೆರೆತಂತೆ ಕಾಣುತ್ತದೆ. ಕಾಳಿದಾಸನು ತನ್ನ ಮನೋಭಾವನೆಗಳ ಹೊರಗೆ ನಿಂತು ಅವನ್ನು ಪರಿಶೀಲಿಸುವಂತೆ ಕಾಣುವುದಿಲ್ಲ. ಅವುಗಳನ್ನು ತನ್ನದಾಗಿಸಿಕೊಂಡು ಹದವರಿತು ಕಾವ್ಯದ ಅಂಗಗಳಿಗೆ ಜೀವ ತುಂಬಿಸಿದಂತೆ ಕಾಣುತ್ತದೆ. ಪ್ರತಿ ಮಾತಿನಲ್ಲೂ ಕವಿಯ ಅಂತರಂಗದ ಭಾವಸ್ಪಂದನವನ್ನಿಲ್ಲಿ ಕಾಣಬಹುದು. ಕವಿಯ ಭಾವುಕತೆಯೂ ಅವಧಾನ ಪರತೆಯೂ ಇಲ್ಲಿ ಅಭಿನ್ನಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತವೆ.

ಕವಿಯ ಎಲ್ಲ ಭಾವನೆಗಳೂ ಶಬ್ದಾರ್ಥಗಳ ಮೂಲಕವಾಗಿಯೇ ಬರಬೇಕಾದುದರಿಂದ ಶಬ್ದಾರ್ಥಗಳ ಸಹಭಾವವೇ ಕಾವ್ಯ. ಅದರ ಶೋಭೆಯನ್ನು ಹೆಚ್ಚಿಸುವ ಅಲಂಕಾರಗಳೆಲ್ಲವೂ ವಕ್ರೋಕ್ತಿ ಮೂಲವಾದವು. ಭಾವವನ್ನು ಏಕಮುಖವಾಗಿ ಸಶಕ್ತವಾಗಿ ನಿರೂಪಿಸಲು ಶಬ್ದಾರ್ಥಗಳ ಯೋಜನೆಯಲ್ಲಿ ಒಂದು ವೈಶಿಷ್ಟ್ಯವಿರಬೇಕು. ಅಂದರೆ ಅವು ನಮ್ಮ ನಿರೀಕ್ಷೆಗಿಂತ ಭಿನ್ನವಾಗಿ ಸ್ವಲ್ಪ ವಕ್ರವಾಗಿರುತ್ತವೆ. ಇದರಿಂದಲೇ ಭಾವವು ಅಲೌಕಿಕತೆಯನ್ನು ಪಡೆಯುತ್ತದೆ. ಇದಕ್ಕೆ ‘ವೈದಗ್ಧ್ಯ ಭಂಗೀ ಭಣಿತಿ’ಯೆಂದು ಹೆಸರು. ಕಾವ್ಯಶೋಭಾದಾಯಕವಾದ ಎಲ್ಲ ವಿಚ್ಛತ್ತಿವಿಶೇಷಗಳೂ ವಕ್ರೋಕ್ತಿ ಮೂಲಗಳೇ ಸರಿ. ಈ ಪಂಥದಲ್ಲಿ ಸ್ವಭಾವೋಕ್ತಿಯು ಮಾತ್ರ ಅಲಂಕಾರವೆನಿಸುವುದಿಲ್ಲ. ಯಾವುದೇ ವಸ್ತುವನ್ನು ಸ್ವಭಾವ ರಹಿತವಾಗಿ ಚಿತ್ರಿಸಲಾಗುವುದಿಲ್ಲ. ವಸ್ತುವಿನ ಸ್ವಭಾವ ಚಿತ್ರಣವೇ ಕಾವ್ಯ. ಅದನ್ನು ಅಲಂಕಾರವೆನ್ನುವುದಾದರೆ ಅಲಂಕಾರ್ಯ (ಕಾವ್ಯ) ಯಾವುದು ? ಸ್ವಭಾವ ವ್ಯತಿರಿಕ್ತವಾದ ವಸ್ತುವನ್ನು ಚಿತ್ರಿಸುವುದಾದರೂ ಹೇಗೆ ಎಂಬುದು ಕುಂತಕನ ಆಶಯ.

ಶಬ್ದ ಮತ್ತು ಅರ್ಥಗಳು ಪ್ರತಿಪಾದ್ಯ ವಿಷಯವನ್ನು ಏಕಮುಖವಾಗಿ ನಿರೂಪಿಸುವುದರಲ್ಲಿ ಪರಸ್ಪರ ಸ್ಪರ್ಧಿಗಳಾಗಿರಬೇಕು. ಆಗ ಶರೀರವು ಪ್ರಾಣದಿಂದಲೂ, ಪ್ರಾಣವು ಸ್ಫುರಿತದಿಂದಲೂ ಕಂಗೊಳಿಸುವ ಹಾಗೆ ಕಾವ್ಯದ ವಸ್ತುವು ಹೊಸ ಜೀವ ತುಂಬಿ ಕಂಗೊಳಿಸುತ್ತದೆ. ಶಬ್ದಾರ್ಥಗಳು ಸ್ವಚ್ಛಂದ ಸುಂದರಗಳಾಗದಿದ್ದಲ್ಲಿ ಕಾವ್ಯವು ನಿರ್ಜೀವವಾಗುತ್ತದೆ. ಕಾವ್ಯಕ್ಕೆ ಜೀವ ತುಂಬುವುದು ವಕ್ರೋಕ್ತಿ, ಈ ವಕ್ರೋಕ್ತಿ ಪರಿಸ್ಪಂದ ಸುಂದರವಾದ ಕಾವ್ಯವು ಮಾತ್ರ ಸಹೃದಯರಿಗೆ ಅಪೂರ್ವ ಸೌಭಾಗ್ಯವನ್ನು ತರುವುದು. ಕಾವ್ಯದ ಜೀವನಾಡಿಯಂತಿರುವ ಈ ವಕ್ರೋಕ್ತಿಯ ವ್ಯಾಪಾರಗಳು ಮುಖ್ಯವಾಗಿ ಆರು ವಿಧವಾಗಿವೆ.

(1) ವರ್ಣವಿನ್ಯಾಸ ವಕ್ರತಾ
(2) ಪದಪೂರ್ವಾರ್ಧ ವಕ್ರತಾ
(3) ಪ್ರತ್ಯಯಾಶ್ರಯ ವಕ್ರತಾ
(4) ವಾಕ್ಯ ವಕ್ರತಾ
(5) ಪ್ರಕರಣ ವಕ್ರತಾ
(6) ಪ್ರಬಂಧ ವಕ್ರತಾ
ಮೊದಲನೆಯ ಪ್ರಭೇದದಲ್ಲಿ ಪ್ರತ್ಯೇಕ ವರ್ಣಕ್ಕೆ ಇರುವ ಭಾವಾಭಿವ್ಯಂಜನ ಶಕ್ತಿಯನ್ನು ಹೇಳಿದೆ. ಇದು ವರ್ಣಗಳು ಹದವಾಗಿ ಅಳವಟ್ಟಿದ್ದರೆ ಅದರಿಂದ ಸುಕುಮಾರ ಭಾವವೂ, ಕಟುವರ್ಣಗಳಿಂದ ಕಠೋರ ಭಾವವೂ ವ್ಯಕ್ತವಾಗುತ್ತದೆ. ಭಾವಾನುಗುಣ ವಾದ ಉಚಿತ ವರ್ಣವಿನ್ಯಾಸದಲ್ಲಿ ಕವಿಯ ವೈದಗ್ಧ್ಯವು ಕಂಡುಬರುವುದೆ ವಕ್ರತೆ. ಪ್ರಾಚೀನ ಆಲಂಕಾರಿಕರು ಹೇಳಿದ ವರ್ಣಾನುಪ್ರಾಸ, ಯಮಕ ಮೊದಲಾದ ಶಬ್ಧಾಲಂಕಾರಗಳು ಸ್ವಲ್ಪ ಹೆಚ್ಚು ಕಡಿಮೆ ಈ ಪ್ರಭೇದದಲ್ಲೇ ಬರುತ್ತವೆ. ಅದನ್ನು ಶಬ್ದಾಲಂಕಾರವೆಂದು ವಿಭಾಗಿಸದೆ ಅದು ಕವಿಯ ವಕ್ರೋಕ್ತಿಯಿಂದ ಸಿದ್ಧವಾದುವೆಂದು ಕುಂತಕ ಅವನ್ನೆಲ್ಲಾ ಮೊದಲಿನದರಲ್ಲೇ ಸೇರಿಸಿದ್ದಾನೆ.

ಪ್ರಾತಿಪದಿಕೆ ಮತ್ತು ಧಾತು (ಆಖ್ಯಾತ) ಗಳನ್ನು ಒಂದು ವಿಶಿಷ್ಟ ಭಾವಸ್ಪಂದನಕ್ಕಾಗಿ ವಕ್ರತೆಯಿಂದ ಪ್ರಯೋಗಿಸಿದರೆ ಅದು ಪದಪೂರ್ವಾರ್ಧ ವಕ್ರತೆ. ರೂಢವಾಗಿರುವ ಒಂದು ಪದವು ಪ್ರಸ್ತಾವಕ್ಕನುಗುಣವಾಗಿ ವಿಶೇಷವಾದ ಅರ್ಥವನ್ನು ವ್ಯಂಜಿಸಬಹುದು. ಉದಾ :
“ರಾಮೋಸ್ಮಿ ಸರ್ವಂ ಸಹೇ’ (ನಾನು ರಾಮ, ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ). ಇಲ್ಲಿ ರಾಮ ಎಂಬ ಪದಕ್ಕೆ ದಶರಥನಮಗ ಎಂಬಷ್ಟೆ ಅರ್ಥವಲ್ಲ ಇದಕ್ಕೂ ಹೆಚ್ಚಿನ ದುಃಖವನ್ನು ಅನುಭವಿಸಿ ಮನಸ್ಸನ್ನು ಕಲ್ಲಾಗಿಸಿಕೊಂಡವನು. ದುಃಖವನ್ನು ಸಹಿಸಿಕೊಳ್ಳಲು ಸಮರ್ಥ ಎಂಬ ಅರ್ಥದಲ್ಲಿ ಕವಿಯ ವಕ್ರವ್ಯಾಪಾರವು ಕಾಣುತ್ತದೆ. ಪರ್ಯಾಯಪದ (Synonyms) ಗಳಿದ್ದರೂ ವಿಶಿಷ್ಟವಾದ ಪದವನ್ನೇ ಪ್ರಯೋಗಿಸುವುದರಿಂದ ಭಾವವನ್ನು ಥಟ್ಟನೆ ಹೊಳೆಯುವಂತೆ ಮಾಡಬಹುದು.

ರಘುವಂಶದಲ್ಲಿ ಸಿಂಹವು ದಿಲೀಪನನ್ನು ಕುರಿತು ಹೇಳುವ ಮಾತಿದು.

ಆಲಂ ಮಹೀಪಾಲ! ತವಶ್ರಮೇಣ ಪ್ರಯುಕ್ತಮಪ್ಯಸ್ತ್ರ ಮಿತೋವೃಥಾಸ್ಯಾತ್|
ನಪಾದಹೋನ್ಮಲನಶಕ್ತಿರಂಹಃ ಶೀಲೋಚ್ಚಯೇ ಮೂರ್ಚ್ಛತಿಮಾರುತಸ್ಯ ||

ಮಹೀಮಾ | ನಿನ್ನ ಶ್ರಮವನ್ನು ಸಾಕುಮಾಡು, ನೀನು ನನಗೆ ಹೊಡೆದ ಅಸ್ತ್ರವೂ
ವ್ಯರ್ಥವಾದೀತು. ಮರವನ್ನು ಬೇರುಸಹಿತ ಕಿತ್ತುಹಾಕಬಲ್ಲ ಬಿರುಗಾಳಿಯ ಆ ವೇಗವು ಪರ್ವತದ ಮೇಲೆ ಏನೂ ನಡೆಯಲಾರದಷ್ಟೆ !
ಸಕಲ ಭೂಮಂಡಲವನ್ನು ರಕ್ಷಿಸುವ ಬಾಹುಬಲವುಳ್ಳ ರಾಜನಿಗೆ ಗುರುವಿನ ಗೋವಿನ ಜೀವವೊಂದನ್ನು ರಕ್ಷಿಸುವುದರಲ್ಲಿ ಅಸಾಮರ್ಥ್ಯವು ಕನಸಿನಲ್ಲೂ ಅಸಂಭವ, ಅದಕ್ಕೂ ಪಾತ್ರವಾಗಿದ್ದಾನೆ ಈಗ ರಾಜ, ಎಂಬ ಉಪಹಾಸವು ಇಲ್ಲಿ ‘ಮಹೀಪಾಲ’ ಎಂಬ ಸುಬುದ್ಧಿಯಿಂದಲೇ ಧ್ವನಿತವಾಗುತ್ತದೆ. ಈ ಪ್ರಸ್ತಾವದಲ್ಲಿ ‘ಮಹೀಪಾಲ’ ಎಂಬ ಪದವು ‘ರಾಜ’ ಎಂಬುದಕ್ಕಿಂತ ಹೆಚ್ಚಾಗಿ ತನ್ನ ಅರ್ಥವನ್ನು ಹಿಗ್ಗಿಸಿಕೊಂಡು ಉಪಹಾಸವನ್ನು ಗರ್ಭಿಸಿಕೊಂಡಿರುವುದು ವಕ್ರೋಕ್ತಿಯಿಂದಾಗಿ.

ದ್ರವರೂಪದ ವಸ್ತುವಿನ ಧರ್ಮವನ್ನು ಮೂರ್ತವಸ್ತುವಿಗೂ, ಮೂರ್ತದ ಧರ್ಮವನ್ನು ದ್ರವರೂಪದ ವಸ್ತುವಿನಲ್ಲಿ ಆರೋಪಿಸುವುದು ವಿಶೇಷಣ ಪದಗಳಲ್ಲಿ ವಕ್ರತೆಯನ್ನು ತರುವುದು ಮೊದಲಾದುವು ಈ ಪ್ರಭೇದದಲ್ಲಿ ಬರುತ್ತವೆ. ಲಕ್ಷಣಾವ್ಯಾಪಾರ ಅರ್ಥಾಂತರ ಸಂಕ್ರಮಿತವಾಚ್ಯಧ್ವನಿ ಮೊದಲಾದುವು ಈ ವಿಧದ ವಕ್ರೋಕ್ತಿಗೆ ವಿಷಯವಾಗುತ್ತದೆಯೆಂದು ತಿಳಿಯಬಹುದು. ಒಂದು ಕ್ರಿಯಾಪದವನ್ನು ಸಾಭಿಪ್ರಾಯವಾಗಿ ಪ್ರಯೋಗಿಸಿದರೂ ಅದರಿಂದ ಬೇರೊಂದು ಭಾವವು ಹೊಳೆಯುವುದು.

ಮಾರನೆಯದು ಪ್ರತ್ಯಯಾಶ್ರಯವಾದ ವಕ್ರತೆ. ಇದರಲ್ಲಿ ಸಂಖ್ಯಾ, ಪುರುಷಕಾರಕ ಮೊದಲಾದುವುಗಳೂ ಸೇರುತ್ತವೆ.

“ಸೀತೆಯು ರಾಮನ ಪತ್ನಿ’ ಎನ್ನಬೇಕಾದರೆ ‘ಮೈಥಿಲೀ ತಸ್ಯ ದಾರಾಃ? ಎನ್ನುವುದು, ಆಕೆಯ ಕಣ್ಣು ನೈದಿಲೆಯಂತೆಯೂ ಕೈಗಳು ತಾವರೆಗಳಂತೆಯೂ ಇವೆ ಎನ್ನುವಲ್ಲಿ ‘ಫುಲ್ಲೋಂದೀವರಕಾನನಾಗಿ ನಯನೇ ಪಾಣೀ ಸರೋಜಾ ಕರಾಃ’ ಎನ್ನುವುದು ಇಂತಹ ಉಕ್ತಿವೈಚಿತ್ರ‍್ಯಗಳಲ್ಲಿರುವ ವಕ್ರತೆಯ ಕಾವ್ಯಶೋಭೆಯನ್ನು ಹೆಚ್ಚಿಸುತ್ತದೆ.

“ನನಗೆ ಕೇಳಲು ಇಚ್ಛೆಯಿದೆ’ ಎನ್ನಲು ‘ಅಯಂಜನಃ ಪ್ರಷ್ಟುಮನಾಃ” ಎನ್ನುವುದು (ಇದರಿಂದ ತಾನು ತಟಸ್ಥ ಎಂಬುದು ಧ್ವನಿ) ಇಂತಹವು ಸರ್ವನಾಮದ ಪುರುಷಗಳಲ್ಲಿ ಕಾಣುವ ವಕ್ರತೆಗಳು. ನಿನ್ನೊಡನೆ ಸ್ಪರ್ಧಿಸಲು ನನಗೆ ಲಜ್ಜೆಯಾಗುತ್ತದೆ. ಎನ್ನಬೇಕಾದರೆ “ಬದ್ಧ ಸ್ಪರ್ಧಸ್ತವ ಪರಶುನಾಲಜ್ಜತೇ ಚಂದ್ರಹಾಸಃ’ ಎನ್ನುವುದು ಮುಂತಾದವು ಕಾರಕ ವಕ್ರತೆಗೆ ಉದಾಹರಣೆಗಳು.

ನಾಲ್ಕನೆಯದು ವಾಕ್ಯ ವಕ್ರತೆ. ಅರ್ಥಾಲಂಕಾರ ವರ್ಗವು ಇದರಲ್ಲೇ ಅಂತರ್ಭೂತವಾಗುವುದರಿಂದ ಇದರ ಪ್ರಬೇಧಗಳು ಹೇರಳವಾಗಿವೆ. ಅಲಂಕಾರದ ಜೀವವೇ ಚಮತ್ಕಾರ, ಚಮತ್ಕಾರಕ್ಕೆ ಕಾರಣ ವಕ್ರೋಕ್ತಿ ಎಂಬುದರಿಂದ ಯಾವುದೇ ಚಮತ್ಕಾರ ವಿಶಿಷ್ಟವಾದ ವಾಕ್ಯವೂ ಇದರಲ್ಲಿ ಅಂತರ್ಭೂತವಾಗುತ್ತೆ. ಇದರಲ್ಲಿ ವಕ್ರತೆಯು ಇಡೀ ವಾಕ್ಯದಲ್ಲೇ ಇರುತ್ತದೆ. ಇದಕ್ಕೆ ರಘುವಂಶದಲ್ಲಿ ರಾಮನ ಆಜ್ಞೆಯಂತೆ ಲಕ್ಷಣನು ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹಿಂದಕ್ಕೆ ಬರುವಾಗ ಅವಳು ರಾಮನಿಗೆ ಕಳುಹಿಸಿದ ಸಂದೇಶದ ಪದ್ಯವೊಂದನ್ನು ಉದಾಹರಣೆಯಾಗಿ ಕೊಡಬಹುದು.

ನಿಷ್ಕಾರಣವಾಗಿ, ರಾಮಚಂದ್ರ ತನ್ನನ್ನು ಮನೆಯಿಂದ ಹೊರಗೆ ಅಟ್ಟಿದುದರಿಂದ ಆಕೆಗೆ ಮನಸ್ಸಿನಲ್ಲಿ ಹೇಳಲಾರದ ಸಂಕಟ. ಉಕ್ಕಿಬರುವ ಕಂಬನಿಯನ್ನು ತಡೆದು ಸಂದೇಶದ ಒಂದೆರಡು ಮಾತನ್ನು ಹೇಳಿಕಳುಹಿಸುತ್ತಾಳೆ :

ಉಪಸ್ಥಿತಾಂ ಪೂರ್ವನಪಾನ್ಯ ಲಕ್ಷ್ಮೀ ವನಂ ಮಯಾ ಸಾರ್ಧಮಸಿ ಪ್ರಸನ್ನಃ |
ತ್ವಾಮಾಶ್ರಯಂ ಪ್ರಾಪ್ಯ ತಯಾನು ಕೋಪಾತ್ ಸೋಡಾಸ್ಮಿ ನ ತದ್ಬವನೇ ವಸಂತೀ ||

“ರಾಜ್ಯಲಕ್ಷ್ಮಿಯು ಮೊದಲು ತಾನಾಗಿ ಬಯಸಿ ನಿನ್ನನ್ನು ಸೇರಲಿಚ್ಚಿಸಿದಾಗ ಆಕೆಯನ್ನು ಕಡೆಗಣಿಸಿ ನನ್ನನ್ನು ಕಟ್ಟಿಕೊಂಡು ಕಾಡಿಗೆ ಹೊರಟು ಬಂದಿರುವಿ, ಈಗ ನೀನು ಈ ಕೆಲಸಮಾಡಿದಿಯೆಂದರೆ ನಂಬುವುದಾದರೂ ಹೇಗೆ ? ಬಹುಶಃ ನಿನ್ನನ್ನು ಸೇರಿದ ರಾಜ್ಯ ಲಕ್ಷ್ಮಿಯು ಈಗ ಮತ್ಸರದಿಂದ ನಾನು ನಿನ್ನ ಮನೆಯಲ್ಲಿರುವುದನ್ನು ಸಹಿಸಲಾರದೇ ಹೋದಳೆಂದು ಕಾಣುತ್ತದೆ. ಅದರಿಂದಲೇ ಆಕೆ ನನ್ನನ್ನು ಹೊರಗೆ ಕಳುಹಿಸುವಂತೆ ಮಾಡಿದಳೆಂದು ಭಾವಿಸುತ್ತೇನೆ.” ಇದರಲ್ಲಿ ಉತ್ಪ್ರೇಕ್ಷಾಲಂಕಾರದ ಧ್ವನಿಯಿದೆ. ಅದು ಮಾತಿನಲ್ಲಿರುವ ಕೋಂಕಿನಿಂದ ಸೂಚಿತವಾಗುತ್ತದೆ. ಇಲ್ಲಿ ಕಾಣುವ ಮಾತಿನ ಕೊಂಕು ಪ್ರತ್ಯೇಕ ಪದ-ಪದೈಕದೇಶದಲ್ಲಿ ಅಲ್ಲ. ವಾಕ್ಯದಲ್ಲೇ ಇದೆ. ಇದರಿಂದ ಕಾಡಿಗೆ ಹೊರಡಬೇಕಾದ ಕಷ್ಟಕಾಲದಲೂ ನನ್ನಲ್ಲಿ ಪ್ರಸನ್ನನಾಗಿದ್ದ ನೀನು ಈಗ ಸಾಮಾಜ್ಯ ಪಡೆದಮೇಲೆ ನನ್ನನ್ನು ಕಡೆಗಣಿಸಿ ನಿಷ್ಕಾರಣವಾಗಿ ಮನೆಯಿಂದ ಹೊರಗೆ ಹಾಕಿದುದು ಉಚಿತವೇ ಎಂಬುದನ್ನು ವ್ಯವಹಾರ ಕುಶಲನಾದ ನೀನೇ ಯೋಚಿಸಿ ನೋಡು ಎಂಬ ಮಾತಿನ ಮೊನೆಯು ಹದವಾಗಿ ರಾಮನ ಮರ್ಮಕ್ಕೆ ನಾಟುವಂತಿದೆ. ಕಷ್ಟ ಕಾಲದಲ್ಲಿ ನಾನು ಬೇಕಾಯಿತು. ಸುಖಕ್ಕೆ ಮಾತ್ರ ನಾನು ಬೇಡವಾದೆ ಎಂಬ ನೋವೂ ಕಾಣಿಸುತ್ತದೆ. ಮಾತಿಗೆ ಈ ಕೊಂಕು ಬಂದುದರಿಂದ ಸೀತೆಯ ಸಂಕಟ, ರಾಮನ ನಿಷ್ಕಾರ್ಯ, ಅದಕ್ಕಾಗಿ ಅವಳು ಸೂಚ್ಯವಾಗಿ ಮಾಡುವ ಅವಹೇಳನ ಇವೆಲ್ಲವೂ ಒಟ್ಟಿಗೇ ಮೂಡುತ್ತವೆ. ಉದಾತ್ತ ಚರಿತೆಯಾದ ಸೀತೆ ರಾಮನ ಅಕಾರ್ಯಕ್ಕಾಗಿ ನಿಂದಿಸುವಂತಿಲ್ಲ. ಹಾಗೆಂದು ಅವಳಿಗೆ ನೋವಿಲ್ಲವೇ ? ಅದೂ ತುಂಬಿದ ಬಸಿರಿ. ಎಂತಹ ವಿಪತ್ತಿನಲ್ಲಿ ಸಿಲುಕಿದ್ದಾಳೆ. ಇಲ್ಲಿ ಸೀತೆಯ ಕೊಂಕುನುಡಿಯು ಅವಳ ಮಾತಿನ ಔಚಿತ್ಯವನ್ನು ಕಾಪಾಡಿಕೊಂಡು ಭಾವಸಂಕೀರ್ಣತೆಯನ್ನು ಚಿತ್ರಿಸುತ್ತದೆ.

ವಸ್ತು ವಿನ್ಯಾಸದಲ್ಲಿ ಕೆಲವು ಮಾರ್ಪಾಟನ್ನು ಮಾಡುವುದು ಅನಿವಾರ್ಯವಾಗುತ್ತದೆ. ಪ್ರಬಂಧದ ಕೆಲವು ಅಂಶಗಳಲ್ಲಿ ಮೂಲವಸ್ತುವನ್ನು ಸ್ವಲ್ಪಮಟ್ಟಿಗೆ ಬದಲಿಸಬೇಕಾಗುತ್ತದೆ. ಇದು ಪ್ರಕರಣ ವಕ್ರತೆ. ಪ್ರಬಂಧದ ಪರಿಣಾಮಕ್ಕೆ ಅನುಕೂಲವಾಗುವಂತೆ, ಅದಕ್ಕೆ ಪೋಷಕವಾಗಿ ಇತರ ಘಟನೆಗಳೂ ಇಲ್ಲದಿದ್ದಲ್ಲಿ ಕವಿಯ ಉದ್ದೇಶ ಸಫಲವಾಗುವುದಿಲ್ಲ. ಮುಖ್ಯ ವಸ್ತುವಿನ ಒಂದು ಘಟನೆಯನ್ನು ಸ್ವಲ್ಪ ತಿರುವು ಮುರುವು ಮಾಡಿದಾಗ ಅದು ಅಲ್ಲಿ ಹೊಂದಿಕೊಳ್ಳುವಂತೆ ಕಂಡರೆ ಕವಿಯು ಆ ಮಟ್ಟಿಗೆ ಸ್ವತಂತ್ರವಾಗಿ ಅದನ್ನು ಬದಲಿಸಿ ಹೊಸ ಮೆರಗು ಕೊಡಬಹುದು, ಕಥೆ ಅಥವಾ ವಸ್ತು ಮಾತ್ರ ಕಾವ್ಯದ ಸಿದ್ಧಿಯಲ್ಲವಷ್ಟೆ. ಉದಾ :

ಮಾಯಾಮೃಗವನ್ನು ಬೆನ್ನಟ್ಟಿದ ಶ್ರೀರಾಮಚಂದ್ರ ಬಹುದೂರ ಹೋಗಬೇಕಾಯಿತು. ಕೊನೆಗೂ ರಾಮು ಮಾರೀಚನನ್ನು ಕೊಂದಾಗ ಅವನು, ಲಕ್ಷ್ಮಣಾ, ಸೀತೇ ಎಂದು ನುಡಿದು ಮಡಿದ. ಆ ಕರುಣಾಕ್ರಂದನವನ್ನು ಕೇಳಿದ ಸೀತೆ ಗಾಬರಿಗೊಂಡು ಹಿಂದುಮುಂದು ನೋಡದೆ ಚುಚ್ಚುನುಡಿಗಳಿಂದ ಲಕ್ಷಣನನ್ನು ಬೈದು ರಾಮನ ಪ್ರಾಣರಕ್ಷಣೆಗಾಗಿ ಅವನನ್ನು ಕಳುಹಿಸಿದಳು ಎಂದು ರಾಮಾಯಣದಲ್ಲಿದೆ. ಲಕ್ಷ್ಮಣನನ್ನು ಹೊರಡಿಸಲು ಸೀತೆಯ ಬಳಿ ಇದ್ದ ಕೊನೆಯ ಅಸ್ತ್ರ ಇದೇ ಇರಬಹುದೇನೋ!

ಉದಾತ್ತರಾಘವನಲ್ಲಿ ಕವಿಗೆ ಇದು ಸರಿಯೆನಿಸದೆ ಇದನ್ನು ಬದಲು ಮಾಡಿದ. ಮಾಯಾಮೃಗವನ್ನು ಕೊಲ್ಲಲು ಹೋದುದು ಲಕ್ಷ್ಮಣ. ಅವನ ರಕ್ಷಣೆಗಾಗಿ ಹೆದರಿದ ಸೀತೆ ರಾಮನನ್ನೇ ಕಳುಹಿಸಿ ತಾನು ಅಸಹಾಯಳಾಗಿರುತ್ತಾಳೆ ಎಂದು ಪ್ರಕರಣವನ್ನೇ ಬದಲು ಮಾಡಿದ. ಸೀತೆ ಅಸಹಾಯಳಾಗಿ ಇರಬೇಕಾದ ಪ್ರಸಂಗ ಎರಡೂ ಕಡೆಯಲ್ಲಿ ಒಂದೇ ಆದರೂ ಕವಿಗೆ ಇದರಲ್ಲಿ ಔಚಿತ್ಯ ಕಂಡಿರಬೇಕು.ಮೊದಲಿನದರಲ್ಲಿ : ಅನುಚರನಾದ ತಮ್ಮನಿರುವಾಗ ಮೃಗವನ್ನು ಹಿಡಿಯಲು ರಾಮನೇ ಹೋದುದೇಕೆ ? ಅದರಲ್ಲೂ ಮಾಯಾಮೃಗವೆಂದು ತಿಳಿದೂ ಆತ ಹೋದನಲ್ಲವೆ ? ರಾಮಚಂದ್ರ ತ್ರಿಲೋಕೈಕವೀರ, ಬಿಲ್ಗಾರ, ಅಂತಹನಿಗೆ ಎಡರಡಸುವುದೆಂದರೇನು ? ಅದರಲ್ಲೂ ಅವನಿಗೆ ಲಕ್ಷಣನ ಸಹಾಯಬೇಕಾಗುವುದು ಅತ್ಯಂತ ಅಸಮೀಚೀನವಾದುದೆಂದು ಕವಿಯು ಇಲ್ಲಿ ಘಟನೆಯನ್ನು ಬದಲಿಸಿ ಅದಕ್ಕೆ ಬೇರೆ ತಿರುವನ್ನು ಕೊಟ್ಟುದರಿಂದ ಈ ಪ್ರಕರಣದ ರಸಪುಷ್ಟಿಯು ಸಮರ್ಪಕವಾಗಿದೆ. ಹೀಗೆ ಸಣ್ಣ ಪುಟ್ಟ ಘಟನೆಗಳನ್ನು ಬದಲಿಸಿ, ಬೇರೆ ಬಣ್ಣ ಕೊಡುವುದು ಪ್ರಕರಣ ವಕ್ರತೆ. ಶಾಕುಂತಲದಲ್ಲಿ ದುರ್ವಾಸರ ಪ್ರಸಂಗ ಮತ್ತು ಉಂಗುರದ ಕತೆ, ಉತ್ತರರಾಮಚರಿತದಲ್ಲಿ ಚಿತ್ರದರ್ಶನ ಮೊದಲಾದುವು ಇದಕ್ಕೆ ಉದಾಹರಣೆಗಳು.

ಪ್ರಬಂಧ ವಕ್ರತೆಯು ಕಾವ್ಯದ ಸಮುದಾಯ ಸೌಂದರ್ಯಕ್ಕೆ ಸಂಬಂಧಪಟ್ಟುದು. ರಾಮಾಯಣ ಮಹಾಭಾರತಗಳು ಪ್ರಸಿದ್ಧ ಕಾವ್ಯೇತಿಹಾಸಗಳಾದರೂ ಮುಂದಿನ ಕವಿಗಳು ಅವುಗಳಿಂದ ವಸ್ತುವನ್ನಾಯ್ದುಕೊಳ್ಳುವಾಗ ತಮ್ಮ ಪ್ರಬಂಧದ ಪಾಠ್ಯಂತಿಕ ರಸಕ್ಕನುಗುಣವಾಗುವಂತೆ ಅವಕ್ಕೆ ಹೊಸ ರೂಪವನ್ನೇ ಕೊಟ್ಟಿದ್ದಾರೆ. ಭವಭೂತಿಯ ಉತ್ತರರಾಮಚರಿತೆ, ಮತ್ತು ಭಟ್ಟನಾರಾಯಣನ ವೇಣೀಸಂಹಾರ, ಈ ನಾಟಕಗಳು ಕ್ರಮವಾಗಿ ರಾಮಾಯಣ – ಮಹಾಭಾರತಗಳನ್ನೇ ಅವಲಂಭಿಸಿವೆಯಾದರೂ ಅವುಗಳ ರಚನೆ – ಪರಿಣಾಮಗಳಲ್ಲಿ ಭೇದವಿದೆ. ಉತ್ತರರಾಮಚರಿತದಲ್ಲಿ ಕರುಣರಸ ಇದ್ದೂ ನಾಟಕ ಸುಖಾಂತವಾಗಿದೆ. ವೇಣೀಸಂಹಾರದಲ್ಲಿ ವೀರರಸ ನೊರೆಗಟ್ಟಿ ಹರಿಯುತ್ತದೆ. ಇದಕ್ಕೆ ಆ ಕವಿಗಳು ವಸ್ತುವನ್ನು ತಮ್ಮ ಉದ್ದೇಶಕ್ಕೆ ಒಗ್ಗಿಸಿಕೊಂಡು ನಾಟಕ ಹೆಣೆದುದೇ ಕಾರಣ. ಇಂತಹ ಮಹತ್ವದ ಮಾರ್ಪಾಡುಗಳು ಪ್ರಬಂಧ ವಕ್ರತೆಯ ಉದಾಹರಣೆಗಳು.

ಕಥೋನ್ಮೇಷ ಸಮಾನೇಪಿ ವಪುಷಿವ ನಿಜೈರ್ಗುಣೈಃ |
ಪ್ರಬಂಧಾಪ್ರಾಣಿನ ಇವ ಪ್ರಭಾಸಂತೇ ಪೃಥಕ್ ಪೃಥಕ್ ||

ಪ್ರಾಣಿಗಳು ತಮ್ಮ ಆಕಾರ-ಗುಣಗಳಿಂದ ಹೇಗೆ ವಿಭಿನ್ನವಾಗಿವೆಯೋ ಹಾಗೆ ಬೇರೆ ಬೇರೆ ಕವಿಗಳ ಪ್ರಬಂಧಗಳು ಒಂದೇ ವಸ್ತುವನ್ನಾಧರಿಸಿದ್ದರೂ ಅವರ ವೈಯಕ್ತಿಕ ಸಂಸ್ಕಾರಗಳಿಗನುಗುಣವಾಗಿ ವಿಭಿನ್ನ ಚಾರುತಾವಿಶಿಷ್ಟಗಳಾಗಿ ಕಾಣುತ್ತವೆ. ವಸ್ತುವನ್ನು ತಿಳಿಯಲು ಕಾವ್ಯವಲ್ಲ. ಅದರಲ್ಲಿ ಕವಿಯ ಪ್ರತಿಭಾವಿಲಸಿತವೇ ಉಪಾದೇಯವಾದ ಅಂಶ. ರಾಮಾಯಣ ಮಹಾಭಾರತಗಳಿದ್ದರೂ ಮುಂದಿನ ಕವಿಗಳು ಅದರಿಂದಲೇ ವಸ್ತುವನ್ನಾಯ್ದು ಕಾವ್ಯರಚನೆ ಮಾಡಿದರು. ಜನರೂ ಅದರಿಂದ ಪ್ರಯೋಜನವನ್ನು ಪಡೆದರು. ಇಂದಿಗೂ ಬೇರೆ ಬೇರೆ ಭಾಷೆಗಳಲ್ಲಿ ಸಾಹಿತ್ಯದ ಕೃಷಿ, ವಿಮರ್ಶೆ, ಸಂಶೋಧನೆ ನಡೆಯುತ್ತಲೇ ಇದೆ. ಜನರೂ ಅದರಿಂದ ಸಂಸ್ಕಾರವನ್ನು ಪಡೆಯುತಿದ್ದಾರೆ. ಹೊಸದನ್ನು ತಿಳಿಯುವ ಪ್ರಯತ್ನ ಮಾಡುತ್ತಾರೆ. ಜನರ ಅಭಿರುಚಿ ಸಂಸ್ಕಾರಗಳಿಗೆ ತಕ್ಕಂತೆ ಕಾವ್ಯವನ್ನು ರಚಿಸುವುದು ಒಂದು ಕಡೆ. ಅವರ ರುಚಿ, ಸಂಸ್ಕಾರಗಳು ಕೆಡದಂತೆ ಅವನ್ನು ಕಾಪಾಡಿಕೊಳ್ಳುವುದು ಇನ್ನೊಂದು ಕಡೆ. ಇವೆರಡು ಹೊಣೆಗಾರಿಕೆಗಳು ಕವಿಯ ಪಾಲಿಗಿವೆ.

ಕಾವ್ಯದ ಪ್ರತ್ಯೇಕವಾದ ಅಂಶಗಳಲ್ಲಿ ವಕ್ರೋಕ್ತಿಯನ್ನು ಗುರುತಿಸಿದ ಮೇಲೆ, ಕಾವ್ಯದ ಅಖಂಡ ಸೌಂದರ್ಯದಲ್ಲಿ ಇದರ ಸ್ವರೂಪವೆಂತಹುದು ಎಂಬ ವಿಚಾರವು ತಲೆದೋರುತ್ತದೆ. ಕವಿಯ ಪ್ರತಿಭೆಯಲ್ಲಿ ಅವನ ಅಂತರಂಗದ ಸಂಸ್ಕಾರವು ಪಡಿಮೂಡು ವುದರಿಂದ ಕೃತಿಯ ಸಮಗ್ರತೆಯಲ್ಲಿ, ಅದರ ಬಂಧದಲ್ಲಿ, ಸಂಹತಿಯಲ್ಲಿ (texture) ವೈಶಿಷ್ಟ್ಯವು ಕಾಣಿಸದಿರದು. ಪ್ರಾಚೀನರು, ಸ್ಫೂಲವಾಗಿ ಇದನ್ನು ವೈದರ್ಭೀ, ಗೌಡೀ, ಪಾಂಚಾಲೀ ಎಂದು ಮೂರಾಗಿ ವಿಭಾಗಿಸಿದ್ದರು. ದೇಶ ವಿಶೇಷವನ್ನು ಸೂಚಿಸುವ ಈ ಕ್ರಮವು ಕುತಂಕನಿಗೆ ಹಿತವೆನಿಸಲಿಲ್ಲ.

ಎಲ್ಲ ದೇಶಗಳಲ್ಲಿ, ಕಾಲಗಳಲ್ಲಿ ಕವಿಗಳ ಸಂಪ್ರದಾಯ ಮತ್ತು ಶೈಲಿಗಳಲ್ಲಿ ನೂರಾರು ಪ್ರಭೇದಗಳು ಸಂಭವನೀಯ. ಆದುದರಿಂದ ಒಂದೊಂದು ದೇಶಕ್ಕೆ ಮಾತ್ರ ಮೀಸಲಾಗಿರುವಂತೆ ಶೈಲಿಯನ್ನು ಹಂಚಿಹಾಕುವುದರಲ್ಲಿ ಅರ್ಥವಿಲ್ಲ. ಅದಕ್ಕಾಗಿ ಅದನ್ನೇ ಮೂರು ತರದ ಕಾವ್ಯಬಂಧಗಳು ಅಥವಾ ಮಾರ್ಗಗಳು ಎಂದು ಕುಂತುಕ ನಿರೂಪಿಸುತ್ತಾನೆ. ಸುಕುಮಾರ, ವಿಚಿತ್ರ, ಮಧ್ಯಮ (ಉಭಯಾತ್ಮಕ) ಎಂದು ಕಾವ್ಯದ ರಚನೆಯಲ್ಲಿ ಸ್ಥೂಲವಾಗಿ ಮೂರು ಬಂಧವಿಶೇಷಗಳು. ಕವಿಯ ಪ್ರತಿಭೆಯಲ್ಲಿ ವಕ್ರೋಕ್ತಿಯು ರೂಪುಗೊಂಡ ಪ್ರಕಾರಗಳಿಂದ ಈ ಬಂಧಗಳನ್ನು ಗುರುತಿಸಬಹುದು.

ಸುಕುಮಾರಮಾರ್ಗ ಎಂದರೆ ದೀರ್ಘಸಮಾಸಗಳಿಲ್ಲದೆ, ಅರ್ಥವೈಮಲ್ಯವಿದ್ದು, ಮಧುರವಾಗಿರುವ ಶೈಲಿ, ಇದರಲ್ಲಿ ಒಂದು ನಯ, ಹಗುರು, ನವುರು ಇರುತ್ತದೆ. ಹೂವಿನ ಕಾನನದಲ್ಲಿ ದುಂಬಿಗಳು ಸಾಲಿಟ್ಟಂತೆ ಕಾಳಿದಾಸಾದಿ ಸತ್ಕವಿಗಳು ಸುಕುಮಾರ ಮಾರ್ಗದಲ್ಲಿ ನಡೆದವರು.
ಸಮಸ್ತ ಪದಗಳು, ಶ್ಲೇಷ, ಅರ್ಥವೈಚಿತ್ರ‍್ಯ, ಭೂಯಿಷ್ಠವಾದುದು ವಿಚಿತ್ರಮಾರ್ಗ, ಇದರಲ್ಲಿ ಒಂದು ಪ್ರೌಢಿ, ಬಿಗು ಇರುತ್ತದೆ. ಸುಭಟರ ಮನೋರಥಗಳು ಖಡ್ಗಧಾರೆಯ ದಾರಿಯಲ್ಲಿ ಸಾಗಿದಂತೆ ವಿದಗ್ಧ ಕವಿಗಳು ಈ ಮಾರ್ಗದಲ್ಲಿ ಅಡಿಯಿಟ್ಟಿದ್ದಾರೆ, ಬಾಣ, ಭವಭೂತಿ ಮೊದಲಾದವರು ಈ ಮಾರ್ಗದವರು.

ಮಧ್ಯಮಮಾರ್ಗದಲ್ಲಿ ಮೇಲಿನ ಎರಡು ಮಾರ್ಗಗಳ ಗುಣದ ಮೇಳವಿರುತ್ತದೆ. ನಾಗರಿಕರು ವಿದಗ್ಧ ವೇಷಭೂಷಣಗಳಿಗೆ ಮರುಳಾಗುವಂತೆ ಆರೋಚಕಿಗಳಾದ ಕೆಲವರು ಈ ಮಿಶ್ರಶೈಲಿಯನ್ನೇ ಮೆಚ್ಚುವರು.

ಈ ಮೂರು ವಿಧದ ಬಂಧಗಳೂ ಕಾವ್ಯದ ಅಖಂಡ ಸ್ವರೂಪಕ್ಕೆ ಅದರ ತಂತ್ರಕ್ಕೆ ಸಂಬಂಧಿಸಿದುವು. ಕವಿಯು ಲೌಕಿಕವಾದ ಅನುಭವವನ್ನು ಕಾವ್ಯದಲ್ಲಿ ಪಡಿಮೂಡಿಸುವಾಗ ಅವನ ಪ್ರತಿಭೆಯಿಂದ ಅದು ಅಲೌಕಿಕತೆಯನ್ನು ಪಡೆಯುತ್ತದೆ. ಬದುಕಿನ ವಿವಿಧ ಮುಖಗಳನ್ನು ಭಾವನೆಯ ಸೂಕ್ಷ್ಮವಾದ ಪದರಗಳನ್ನು ಪದಬಂಧಗಳಲ್ಲಿ ರೂಪಿಸುವಾಗ ಕವಿ ಹೊಸ ತರದ ಪ್ರತಿಮೆಗಳನ್ನು ನಿರ್ಮಿಸಲೇಬೇಕಾಗುತ್ತದೆ. ಅದರಲ್ಲಿ ಒಂದು ಅಪೂರ್ವತೆಯನ್ನು ತರಬೇಕಾಗುತ್ತದೆ. ಇದು ವಕ್ರೋಕ್ತಿಯ ವ್ಯಾಪಾರದಿಂದ ಸಾಧ್ಯವಾಗುತ್ತದೆಯೆಂಬುದು ಕುಂತಕನ ಮತ, ವಕ್ರೋಕ್ತಿ ಎಂಬುದನ್ನು ಸ್ವಲ್ಪ ವಿಶಾಲವಾದ ಅರ್ಥದಲ್ಲಿ ತೆಗೆದುಕೊಳ್ಳಬೇಕು ಪದ, ಪದೈಕದೇಶ, ವಾಕ್ಯ ಮೊದಲಾದುವುಗಳಲ್ಲಿ ಹೇಳಿದ ವಕ್ರೋಕ್ತಿಯನ್ನು ಅಲ್ಲಗಳೆಯುವಂತಿಲ್ಲ. ಕಾವ್ಯದ ಪ್ರತ್ಯೇಕವಾದ ಅಂಶಗಳಿಂದಲೇ ಅದಕ್ಕೊಂದು ಅಖಂಡ ಸ್ವರೂಪ ಬರಬೇಕು. ಕವಿಯು ಪ್ರಯೋಗಿಸುವ ಶಬ್ದ, ಅದರ ಅರ್ಥವ್ಯಾಪ್ತಿ ಭಾವಕೋಶ, ಅವನು ಸೃಷ್ಟಿಸುವ ಪ್ರತಿಮೆಗಳು, ಅವು ಕಾವ್ಯದಲ್ಲಿ ಮಾಡುವ ಕಾರ್ಯಗಳ ನೆಲೆ, ಅನುಭವವನ್ನು ಸಮರ್ಥವಾಗಿ ಅಭಿವ್ಯಕ್ತಿಗೊಳಿಸಬಲ್ಲ ವಾಗ್ವಿಲಾಸ, ಇವೆಲ್ಲವುಗಳಿಂದ ಆಗುವ ಪಾರ್ಯಂತಿಕ ಪರಿಣಾಮ ಈ ಎಲ್ಲ ಹಂತಗಳಲ್ಲೂ ಅವನು ಜಾಗರೂಕನಾಗಿರಬೇಕಾದುದರಿಂದ ಅವನ ವಕ್ರೋಕ್ತಿಯಲ್ಲಿ ಯಾವುದನ್ನೂ ಅಲ್ಲಗಳೆಯುವಂತಿಲ್ಲ. ಆದರೆ ಇವೆಲ್ಲಾ ಔಚಿತ್ಯದ ಪರಿಧಿಯಲ್ಲೇ ಇರಬೇಕಾಗುತ್ತದೆ.

ವಕ್ರೋಕ್ತಿಯನ್ನು ಕಾವ್ಯದ ಜೀವಿತವೆಂದು ಕುಂತಕನು ಪ್ರತಿಪಾದಿಸಿದರೂ ಇದರ ಪರಿಧಿಯಿಂದ ಆಚೆಗೂ ಚಾಚಿರುವ, ಆಸ್ವಾದ ಯೋಗ್ಯವಾದ ರಸ-ಧ್ವನಿಗಳಿಗೆ ತಕ್ಕ ಸ್ಥಾನವು ಈ ಪ್ರಸ್ಥಾನದಲ್ಲಿ ದೊರೆಯುವುದು ಕಷ್ಟವೆಂಬುದು ಮೇಲಿನ ವಿವರಣೆಯಿಂದ ಸ್ಪಷ್ಟವಾಗುತ್ತದೆ. ವಕ್ರೋಕ್ತಿಯು ಕಾವ್ಯದ ಚಮತ್ಕಾರಕ್ಕೆ ಕಾರಣವಾದರೂ ಚಮತ್ಕಾರನೇ ವಕ್ರೋಕ್ತಿಯಲ್ಲ. ವ್ಯಂಜಕವನ್ನೇ ವ್ಯಂಗ್ಯವೆನ್ನುವ ಹಾಗೆ ಕಾರ್ಯಕಾರಣಗಳಿಗೆ ಅಭೇದೋಪಚಾರದಿಂದ ವಕ್ರೋಕ್ತಿಯನ್ನೇ ಜೀವಿತವೆಂದು ಹೇಳಿದೆಯೆಂದರೂ ದ್ರಾವಿಡ ಪ್ರಾಣಾಯಾಮವಾಗುತ್ತದೆ. ಕಾವ್ಯಾನುಭೂತಿಯ ಅಲೌಕಿಕಾನಂದದಲ್ಲಿ ವಿಸ್ಮಯದ ತತ್ತ್ವವನ್ನು ಕಡೆಗಣಿಸುವಂತಿಲ್ಲ. ಇದೇ ಕಾವ್ಯದ ಸರ್ವಸ್ವ. ವಕ್ರೋಕ್ತಿಯಿಂದ ಇದನ್ನು ಸಾಧಿಸಬಹುದೆಂದಾಯಿತು. ಅಲ್ಲದೆ ಇದಕ್ಕೂ ವಕ್ರೋಕ್ತಿಗೂ ಅಭೇದವನ್ನು ಹೇಳುವುದು ಹೇಗೆ ಎಂಬ ಕಾರಣದಿಂದಲೋ ಏನೋ ಈ ವಕ್ರೋಕ್ತಿ ಪ್ರಸ್ಥಾನವು ಹೆಚ್ಚು ಕಾಲ ನಿಲ್ಲಲಿಲ್ಲ. ಧ್ವನಿಯ ಪ್ರಸ್ಥಾನಕ್ಕೆ ಸಿಕ್ಕಿರುವ ಮನ್ನಣೆ ಇದಕ್ಕೆ ಸಿಗಲಿಲ್ಲ. ಆದರೆ ಕವಿಯ ಕೃತಿಯೊಂದನ್ನು ವಿಶ್ಲೇಷಿಸಿ, ಅದರ ಅಂಶಗಳ ವಿಶೇಷತೆಯನ್ನು ಗುರುತಿಸುವುದರಲ್ಲಿ ಈ ಹೊತ್ತಿಗೂ ವಕ್ರೋಕ್ತಿಯು ಬಹುಮಟ್ಟಿಗೆ ಸಹಾಯವಾಗಬಹುದು.

ಕನ್ನಡದಲ್ಲಿ ರಮ್ಯಕವಿತೆ ಅಥವಾ ರೊಮ್ಯಾಂಟಿಕ್ ಸಂಪ್ರದಾಯವು ಹಿಂದೆ ಬಿದ್ದು ಅದಕ್ಕೆ ಭಿನ್ನವಾದ ಬೇರೊಂದು ಸಂಪ್ರದಾಯವು ಈಗ ತಲೆಯೆತ್ತುತ್ತಿದೆ. ಸಂಪ್ರದಾಯ ಬದಲಾದ ಮಾತ್ರಕ್ಕೆ ಅದರ ಜೀವಸತ್ತ್ವ ಬದಲಾಗಬೇಕಾಗಿಲ್ಲ. ಈ ಸಂಪ್ರದಾಯದಲ್ಲೂ ಪ್ರತಿಭೆಯೇ ಹೊಸ ಸೃಷ್ಟಿಗೆ ಜೀವಾತುಭೂತವಾದುದು. ಕಾವ್ಯವೆಂದರೆ ಬರೇ ಬೌದ್ಧಿಕ ವ್ಯಾಯಾಮವೂ ಅಲ್ಲ, ಹಗಲುಗನಸುಗಳ ರೋಮಂಥವೂ ಅಲ್ಲ. ಇದೊಂದು ಲೋಕೋತ್ತರವಾದ ಸೃಷ್ಟಿ. ಇದಕ್ಕೆ ಕವಿಯಲ್ಲಿ ಕಲ್ಪನಾಶಕ್ತಿಯ ಪ್ರತಿಭೆಯೂ ಇರಬೇಕೆಂಬ ತತ್ತ್ವವನ್ನು ಈಗಲೂ ಕೈಬಿಡುವಂತಿಲ್ಲ. ಆಧುನಿಕ ಕವಿಗಳ ಉತ್ತಮ ಕೃತಿಗಳನ್ನು ಪರಿಶೀಲಿಸಿದರೆ ಅವುಗಳಲ್ಲಿ ಕುಂತಕನು ಹೇಳಿದ ವಕ್ರೋಕ್ತಿಯ ಹಾದಿಯ ಜಾಡನ್ನು ಗುರುತಿಸಬಹುದು. ಹಳೆಯ ಸಂಪ್ರದಾಯಗಳನ್ನು ತಾತ್ಕಾಲಿಕವಾಗಿ ಬದಿಗಿರಿಸಿ, ಅದೇ ಭಾಷೆ, ಅದೇ ಸನ್ನಿವೇಶಗಳನ್ನು ಅನುಭವದ ತಳಹದಿಯಲ್ಲಿ ಪರಿಶೀಲಿಸಿ ವಿನೂತನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವಾಗ ಕವಿಯ ವ್ಯಾಪಾರವು ವಕ್ರತೆಯನ್ನು ಪಡೆದುದನ್ನು ಕಾಣಬಹುದು. ವ್ಯವಹಾರದ ಭಾಷೆಯಂತಲ್ಲದೆ ಅವನ ಭಾಷೆಯಲ್ಲಿ ಕೊಂಕುನುಡಿಯ ಬಿಂಕವಿರುತ್ತದೆ. ನಿರೂಪಣೆಯಲ್ಲಿ ವಕ್ರತೆಯಿರುತ್ತದೆ. ಪ್ರಾಸಕ್ಕಾಗಿ, ಅರ್ಥಭಾರವಿಲ್ಲದ ಪದವಾದರೂ ಒಂದು ಬರಲೇಬೇಕೆಂಬ ಶ್ರಾದ್ಧ ನಿಯಮವಿಲ್ಲದಿದ್ದರೂ, ಭಾವಕ್ಕೆ ಕಾವು ಕೊಡಬೇಕಾದಾಗ ಪ್ರಾಸಗಳು ಅಲ್ಲಲ್ಲಿ ಸಹಜವಾಗಿ (ಕೆಲವೊಮ್ಮೆ ಕೃತ್ರಿಮವಾಗಿ) ಕಾಣಿಸುವುದರಲ್ಲೂ ಒಂದು ವೈಶಿಷ್ಟವಿರುತ್ತದೆ. ಛಂದಸ್ಸಿನ ಚೌಕಟ್ಟಿನಲ್ಲೇ ಭಾಷೆಯು ಸಾಗದಿದ್ದರೂ ಭಾವವನ್ನು ಮಿಡಿಯುವ ಮಾತಿನಲ್ಲಿ ಒಂದು ಲಯ, ಧಾಟಿಯಿರುತ್ತದೆ. ಕೆಲವೆಡೆ ಭಾವವೇ ಲಯವನ್ನು ಸೃಷ್ಟಿಮಾಡಿಕೊಳ್ಳುವುದೂ ಉಂಟು. ಇಲ್ಲಿ ವಕ್ರತೆಯಿಲ್ಲವೆನ್ನುವುದು ಹೇಗೆ ? ಪ್ರಕರಣಗಳ ವಕ್ರತೆಗಂತೂ ಮಿತಿಯೇ ಇಲ್ಲ, ಪ್ರಬಂಧವನ್ನು ಸಮಷ್ಟಿಯಾಗಿ ಪರಿಶೀಲಿಸುವಾಗ ಪ್ರತ್ಯೇಕ ಕವಿಗಳ ಕಾವ್ಯಗಳು ವಸ್ತುಗಳು ವಕ್ರೋಕ್ತಿಯಿಂದ ರಂಜಿಸುವುದನ್ನು ಕಾಣುತ್ತೇವೆ. ಆದುದರಿಂದ ಕುಂತಕನ ವಕ್ರೋಕ್ತಿಯ ದೂರದರ್ಶಕದಿಂದ ಆಧುನಿಕ ಕಾವ್ಯವನ್ನು ಕಂಡರೆ ಅದಕ್ಕೊಂದು ಹೊಸಮುಖವು ಮೂಡಿರುವಂತೆ ಭಾಸವಾಗಬಹುದು.

ಬೌದ್ಧಿಕ ವಿಚಾರಗಳಿಗೂ ಐಂದ್ರಿಯಕ ಸಂವೇದನೆಗಳಿಗೂ ಸಂಘರ್ಷವುಂಟಾದಾಗ ಅಭಿವ್ಯಕ್ತಿಯು ನೇರವಾಗಿರುವುದಾದರೂ ಹೇಗೆ ? ಅನುಭವವು ಅದಮ್ಯವಾದಾಗ ಸಂವೇದನೆಯು ತೀವ್ರವಾಗಿ ಕ್ರಿಯಾಶೀಲವಾಗುತ್ತದೆ. ಕವಿಯು ಆಗ ಸರ್ಜನ ವ್ಯಾಪಾರದಲ್ಲಿ ತೊಡಗಿದರೆ ಅವನ ಭಾಷೆ, ಅಭಿವ್ಯಕ್ತಿ ಪ್ರತಿಮೆಗಳೆಲ್ಲವೂ ವಕ್ರತಾ ರಂಜಿತವಾಗಿ ಆವಿರ್ಭವಿಸುತ್ತವೆ. ಪ್ರತಿ ಕವಿಯಲ್ಲೂ ಇದು ವೈಯಕ್ತಿಕವಾದುದು. ಒಬ್ಬನ ಕೊಂಕು ಮತ್ತೊಬ್ಬನಿಗಿರಲಾರದು. ಆದರೆ ಕವಿ ಬರೇ ವಕ್ರೋಕ್ತಿಯಿಂದಲೇ ಕೃತಾರ್ಥನಾಗಲಾರ, ಅದನ್ನು ಬಳಸುವ ಹದವು ಸುಲಭವಲ್ಲ. ಬದುಕನ್ನು ಬೆದಕಿ ನೋಡಿ ತನ್ನ ವೈಯಕ್ತಿಕ ಅನುಭವವನ್ನು ಅಭಿವ್ಯಕ್ತಗೊಳಿಸುವಾಗ ಅದರಲ್ಲಿ ಸಹಜತೆ ಮತ್ತು ಆಕರ್ಷಕತೆಗಳೆರಡನ್ನೂ ಉಳಿಸಿಕೊಳ್ಳುವುದು ಪ್ರಯಾಕರ. ಕವಿಯ ವ್ಯಾಪಾರವು ವಕ್ರತೆಯ ಔಚಿತ್ಯದ ಪರಿಧಿಯನ್ನು ಮೀರಿದಾಗ ಕ್ಲಿಷ್ಟತೆಯು ಕಾಣಿಸಿಕೊಳ್ಳುತ್ತದೆ. ಆಗ ಕವಿಯ ಮಾತು ಅರ್ಥವಾಗುವುದಿಲ್ಲ. ಭಾಷೆಯ ತೊಡಕಿನಿಂದಾಗಿ ಕವಿಯ ಪ್ರಯತ್ನ ಯಶಸ್ವಿಯಾಗದಿರುವ ಸಂಭವವಿದೆ. ಇದಕ್ಕೆ ಕಾರಣ ಕವಿಯು ಭಾವನೆಗಳ ಅತಿರೇಕಕ್ಕೆ ಎಡೆಗೊಡುವುದು ಅಥವಾ ವಿಚಾರಗಳ ಸಂಕೀರ್ಣತೆಯಲ್ಲಿ ಸಿಕ್ಕಿಕೊಳ್ಳುವುದು. ಕವಿಯು ಋಷಿಯ ಹಾಗೆ, ಎಲ್ಲ ವಿಷಯದಲ್ಲೂ ಅವನಿಗೆ ಸಂಯಮವೇ ಹೊರತು ಸ್ವೈರತೆಯು ಒಳಿತಲ್ಲ. ಭಾವನೆಯನ್ನೂ ವೈಚಾರಿಕತೆಯನ್ನೂ ನಿರೂಪಿಸಬಲ್ಲ ಕವಿಯ ವ್ಯಾಪಾರದಲ್ಲಿ ವಕ್ರತೆಯು ಔಚಿತ್ಯವನ್ನು ಮೀರಿದಾಗ ಅದು ರಸಿಕರ ಮನಸ್ಸನ್ನು ತಟ್ಟುವ ಬದಲು ಗೊಂದಲವೆಬ್ಬಿಸಿ ಅವನ ಪ್ರಯತ್ನ ವಿಫಲವಾಗುವ ಸಂಭವವೂ ಇದೆ. ಆದುದರಿಂದ ಹೊಸಮಾರ್ಗವನ್ನು ತುಳಿಯುವಾಗ ಸಂಪ್ರದಾಯದ ಹಿನ್ನೆಲೆಯನ್ನು ಸಂಪೂರ್ಣವಾಗಿ ಕೈಬಿಡುವುದು ಸಾಧ್ಯವಿಲ್ಲ. ಎಷ್ಟರಮಟ್ಟಿಗೆ, ಯಾವಾಗ ಬಿಡಬಹುದೆಂಬುದನ್ನು ಔಚಿತ್ಯದಿಂದಲೇ ನಿರ್ಧರಿಸಬೇಕು.

ಒಟ್ಟಿನಲ್ಲಿ ವಕ್ರೋಕ್ತಿಯನ್ನು ತಾತ್ವಿಕವಾಗಿ ಕಾವ್ಯದ ಪ್ರತಿ ಅಂಗಗಳಿಗೆ ಅನ್ವಯಿಸಿಕೊಳ್ಳಲು ಸಾಧ್ಯವೇ ಹೊರತು ಅದನ್ನೇ ಕಾವ್ಯದ ಜೀವಿತವೆನ್ನುವುದು ವ್ಯಾಮೋಹದ ಮಾತು, ಅವಿಚಾರಿತ ರಮಣೀಯ. ಅದರ ಕಾರ್ಯವು ರಸ ಆಥವಾ ಪಾರ್ಯಂತಿಕ ಪರಿಣಾಮದಲ್ಲಿ ಮಹತ್ತಾದುದೆಂದು ಒಪ್ಪಬಹುದು. ಆದರೂ ವಕ್ರೋಕ್ತಿಯ ಅರ್ಥ ವ್ಯಾಪ್ತಿ ಮತ್ತು ಪ್ರಕ್ರಿಯೆಯನ್ನು ಅರಿತುಕೊಳ್ಳುವುದರಿಂದ ಕವಿಗೆ ಲಾಭವಿದೆ ಎನ್ನುವುದು ಕುಂತಕನ ವಿಮರ್ಶೆಯನ್ನು ನೋಡಿದರೆ ಅರಿವಾಗುತ್ತದೆ.

Close
By kanaja|2021-01-06T19:52:07+05:30March 2, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೧

    ಸಂಪುಟ-೩೧

Leave A Comment Cancel reply

Recent Posts

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

Categories

  • 1. ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ
  • e-ದಿನ
  • QR-ಕಣಜ
  • ಅಂಕಣಗಳು
  • ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ)
  • ಅಡ್ಡೂರು ಕೃಷ್ಣರಾವ್‌
  • ಅನುಸೂಯ ಶರ್ಮ
  • ಅನ್ನ ಕೊಡುವ ಅನನ್ಯ ತೋಟ ತದ್ರೂಪಿ ಕಾಡು
  • ಅಭಿವೃದ್ಧಿ ರಥದ ಚಕ್ರದಡಿ ಸಿಕ್ಕಿಬಿದ್ದವರು
  • ಅಮೆರಿಕಾ
  • ಅಮೆರಿಕಾ ಚರಿತ್ರೆಯ ವಿವಿಧ ಆಯಾಮಗಳು
  • ಅರಣ್ಯ
  • ಅರುಣ್ ಜೋಳದಕೂಡ್ಲಿಗಿ ಅಂಕಣ
  • ಅರ್ಥಶಾಸ್ತ್ರ
  • ಆಧುನಿಕ ತಂತ್ರಜ್ಞಾನ
  • ಆನಂದ ದೇಶಪಾಂಡೆ
  • ಆಫ್ರಿಕಾ
  • ಆಫ್ರಿಕಾ ಚರಿತ್ರೆಯ ವಿವಿಧ ಆಯಾಮಗಳು
  • ಆರೂರ್ ಮಂಜುನಾಥ್ ರಾವ್
  • ಆರೋಗ್ಯ
  • ಆರೋಗ್ಯ – ಆರೈಕೆ ನಿಮ್ಮ ಕೈಯಲ್ಲಿ
  • ಆರೋಗ್ಯ ಮತ್ತು ಅನಾರೋಗ್ಯದಲ್ಲಿ ಮಿದುಳಿನ ರಚನೆ ಮತ್ತು ಕಾರ್ಯ ವಿಧಾನ
  • ಆರೋಗ್ಯ ವಿಜ್ಞಾನ
  • ಆರೋಗ್ಯ ವಿಜ್ಞಾನ (ಹೆಲ್ತ್ ಸೈನ್ಸ್)
  • ಆರ್ಥಿಕ ಅಭಿವೃದ್ದಿ
  • ಆಹಾರ ವಿಜ್ಞಾನ
  • ಇಂಧನಗಳು
  • ಇತಿಹಾಸ
  • ಇತಿಹಾಸ
  • ಇತಿಹಾಸ
  • ಇತಿಹಾಸ-ಪ್ರಾಕ್ತನಶಾಸ್ತ್ರ
  • ಈರಯ್ಯ ಕಿಲ್ಲೇದಾರ
  • ಈರಯ್ಯ ಕಿಲ್ಲೇದಾರ ಅಂಕಣ
  • ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳು
  • ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು
  • ಉದಯ ಶಂಕರ ಪುರಾಣಿಕ ಅಂಕಣ
  • ಉನ್ನತ ಶಿಕ್ಷಣ
  • ಉಪನ್ಯಾಸ ಗ್ರಂಥಮಾಲೆ – ೪೮೨
  • ಎ. ಓ. ಆವಲ ಮೂರ್ತಿ
  • ಎ.ವಿ. ಗೋವಿಂದ ರಾವ್
  • ಎಸ್. ಎಂ. ಪೆಜತ್ತಾಯ
  • ಏಷ್ಯಾ
  • ಏಷ್ಯಾ ಚರಿತ್ರೆಯ ವಿವಿಧ ಆಯಾಮಗಳು
  • ಔಷಧೀಯ ಸಸ್ಯಗಳು
  • ಕಂಪ್ಯೂಟರ್ ಊಟ, ಅಡವಿ ಮಾರಾಟ
  • ಕಟ್ಟೆ ಪ್ರಕಾಶನ
  • ಕಥಾ ಕೀರ್ತನೆ
  • ಕನ್ನಡ
  • ಕನ್ನಡ ಕಲಿಯಿರಿ
  • ಕನ್ನಡ ಕಲಿಯಿರಿ
  • ಕನ್ನಡ ನಾಡಿನ ಶಾಸನಗಳ  ಅಧ್ಯಯನ: ಕೆಲವು ಗ್ರಹಿಕೆಗಳು
  • ಕನ್ನಡ ಭಾಷೆ – ಸಾಹಿತ್ಯಗಳ ಸಂಶೋಧನೆ – ಒಂದು ದಶಕದ (೨೦೦೧ – ೨೦೧೧) ಕಿರುನೋಟ
  • ಕನ್ನಡ ವ್ಯಾಕರಣ ದರ್ಪಣ
  • ಕನ್ನಡ ಸಂಘ ಕಾಂತಾವರ
  • ಕನ್ನಡ ಸಾಹಿತ್ಯ
  • ಕನ್ನಡದ ಸಾಹಿತಿಗಳು
  • ಕಬ್ಬು
  • ಕಮರಾಕ್ಷಿ
  • ಕರ್ಣಾಟಕ ಕಾದಂಬರಿ
  • ಕರ್ಣಾಟಕ ಪಂಚತಂತ್ರಂ
  • ಕರ್ನಾಟಕ ಇತಿಹಾಸ
  • ಕರ್ನಾಟಕ ಗ್ಯಾಸೆಟಿಯರ್
  • ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
  • ಕರ್ನಾಟಕ ಸಂಗೀತ
  • ಕರ್ನಾಟಕದ ಇತಿಹಾಸ
  • ಕರ್ನಾಟಕದ ಪ್ರವಾಸಿ ತಾಣಗಳು
  • ಕರ್ನಾಟಕದ ಸಮಕಾಲೀನ ಇತಿಹಾಸ
  • ಕಲೆ
  • ಕಲೆ
  • ಕಲೆ ಮತ್ತು ಮನರಂಜನೆ
  • ಕವಿರಾಜಮಾರ್ಗ
  • ಕಾಗದದ ದೋಣಿ
  • ಕಾದಂಬರಿ – ಕಥಾಸಾಹಿತ್ಯ
  • ಕಾವ್ಯ – ವಚನ
  • ಕಾವ್ಯ-ಕಥಾಸಾಹಿತ್ಯ
  • ಕಾವ್ಯಾರ್ಥ ಚಿಂತನ (ತೌಲನಿಕ ಕಾವ್ಯಮೀಮಾಂಸೆಯ ಕೆಲವು ವಿಚಾರಗಳು)
  • ಕಿಶನರಾವ್ ಕುಲಕರ್ಣಿ
  • ಕಿಶನ್ ರಾವ್ ಕುಲಕರ್ಣಿ ಅಂಕಣ
  • ಕುಂದನಾಡಿನ ಜಾನಪದ ಹಾಡುಗಳು
  • ಕುಮಾರವ್ಯಾಸ ಭಾರತ
  • ಕುಮಾರ್ ಪೆರ್ನಾಜೆ
  • ಕುರಿ ಸಾಕಾಣಿಕೆ
  • ಕುರುವ ಬಸವರಾಜ್ ಅಂಕಣ
  • ಕುವೆಂಪು
  • ಕುವೆಂಪು: ಪುನರಾಲೋಕನ
  • ಕೃಷಿ
  • ಕೃಷಿ ಅನುಭವ
  • ಕೃಷಿ ಋಷಿ ಡಾ. ಎಲ್.ಸಿ. ಸೋನ್ಸ್
  • ಕೃಷಿ ಕಾನೂನು
  • ಕೃಷಿ ಚಟುವಟಿಕೆಗಳು
  • ಕೃಷಿ ಶಿಕ್ಷಣ
  • ಕೃಷಿ ಸಂಬಂಧಿ ಚಟುವಟಿಕೆಗಳು
  • ಕೃಷಿ ಸಂರಕ್ಷಣೆ
  • ಕೃಷಿ ಸಂಸ್ಕೃತಿ
  • ಕೃಷಿಗಾಗಿ ನೀರು ಹಂಚಿಕೆ ವಿಧಾನಗಳು
  • ಕೃಷಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಸಾಂಪ್ರದಾಯಿಕ ಜ್ಞಾನ
  • ಕೆ ಟಿ ಗಟ್ಟಿ ಅಂಕಣ
  • ಕೆ.ಎಸ್. ನವೀನ್
  • ಕೆ.ಎಸ್. ಪ್ರಭು ಅಂಕಣ
  • ಕೇರಳ ಕಥನ
  • ಕೇಶವ ಕುಡ್ಲ
  • ಕೈಗಾರಿಕೆಗಳು ಮತ್ತು ಉದ್ಯೋಗ
  • ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳು
  • ಕೊಳಲು
  • ಕೊಳ್ಳೇಗಾಲ ಶರ್ಮ
  • ಕೋಲಾರ ಜಿಲ್ಲೆಯ ಪ್ರವಾಸಿ ತಾಣಗಳು
  • ಕ್ರೀಡೆ
  • ಕ್ರೀಡೆ
  • ಕ್ಷಮಾ ವಿ. ಭಾನುಪ್ರಕಾಶ್
  • ಖಗೋಳ ವಿಜ್ಞಾನ
  • ಗಣಿತವಿಜ್ಞಾನ
  • ಗಣೇಶ ಭಟ್
  • ಗದಗ ಜಿಲ್ಲೆಯ ಪ್ರವಾಸಿ ತಾಣಗಳು
  • ಗಮಕ
  • ಗಾಣಧಾಳು ಶ್ರೀಕಂಠ
  • ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಯ ಪ್ರವಾಸಿ ತಾಣಗಳು
  • ಗೊಂಡರ ರಾಮಾಯಣ
  • ಗೋಬರ್ ಅನಿಲ ಸ್ಥಾವರ
  • ಗ್ರಹಣ
  • ಗ್ರಾಮೀಣ ಅಭಿವೃದ್ಧಿ
  • ಗ್ರಾಮೀಣ ಅಭಿವೃದ್ಧಿ
  • ಗ್ರಾಮೀಣ ಅಭಿವೃದ್ಧಿ
  • ಘಟಂ
  • ಘಟವಾದನ
  • ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳು
  • ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳು
  • ಚಿತ್ರಕಲೆ
  • ಚಿತ್ರಕಲೆ
  • ಚಿತ್ರದುರ್ಗ ಜಿಲ್ಲೆಯ ಪ್ರವಾಸಿ ತಾಣಗಳು
  • ಚಿದಂಬರ ಬೈಕಂಪಾಡಿ
  • ಚೇರ್ಕಾಡಿ ಗಾಂಧಿ ರಾಮಚಂದ್ರ ರಾಯರು
  • ಜನಜೀವನದಲ್ಲಿ ವಿಜ್ಞಾನ
  • ಜನಪದ
  • ಜನಪದ
  • ಜನಪದ
  • ಜನಪದ
  • ಜನಪದ ಕಲೆ
  • ಜನಪದ ಕೃಷಿ
  • ಜನಪದ ದೈವಗಳು
  • ಜನಪದ ಮತ್ತು ಪ್ರದರ್ಶನ ಕಲೆ
  • ಜನಪದ ಮಹಾಕಾವ್ಯಗಳು
  • ಜನಪದ ವಿಜ್ಞಾನ
  • ಜನಪದ ಸಾಹಿತ್ಯ
  • ಜಯಪ್ರಸಾದ ಬಳ್ಳೇಕೆರೆ
  • ಜಯಪ್ರಸಾದ್ ಬಳ್ಳೇಕೆರೆ ಅಂಕಣ
  • ಜಲಕೊಯ್ಲು
  • ಜಾನಪದ
  • ಜಾನಪದ ಸಾಹಿತ್ಯ
  • ಜಾನಪದ ಸಾಹಿತ್ಯ ದರ್ಶನ – ೨೪
  • ಜಾನಪದ ಹಬ್ಬಗಳು
  • ಜಿ ವಿ ಗಣೇಶಯ್ಯ ಅಂಕಣ
  • ಜಿ.ಕೃಷ್ಣಪ್ರಸಾದ
  • ಜಿ.ವಿ. ನಿರ್ಮಲ
  • ಜಿತೇಂದ್ರ ಕುಂದೇಶ್ವರ
  • ಜೀವ ವಿಜ್ಞಾನ
  • ಜೀವಲೋಕದ ವಿಸ್ಮಯಕಾರಿ ಪ್ರಾಣಿಗಳು ಹಾವುಗಳು
  • ಜೀವವಿಜ್ಞಾನ
  • ಜೀವಶಾಸ್ತ್ರ (ಬಯಾಲಜಿ)
  • ಜೀವಿ ಸಂರಕ್ಷಣೆ
  • ಜೇನು ಕೃಷಿ
  • ಜೈಮಿನಿ ಭಾರತ
  • ಜೈವಿಕ ಇಂಧನ
  • ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ
  • ಟಿ. ಎಸ್. ಗೋಪಾಲ್
  • ಟಿ. ಜಿ. ಶ್ರೀನಿಧಿ
  • ಡಾ. ಅರುಣ್ ಜೋಳದಕೂಡ್ಲಿಗಿ
  • ಡಾ. ಆರ್. ತಾರಿಣಿ ಶುಭದಾಯಿನಿ
  • ಡಾ. ಎಚ್.ಎಸ್. ನಿರಂಜನ ಆರಾಧ್ಯ
  • ಡಾ. ಚಂದ್ರಶೇಖರ ಕಂಬಾರ
  • ಡಾ. ಮೀರಾಸಾಬಿಹಳ್ಳಿ ಶಿವಣ್ಣ
  • ಡಾ. ಯು.ಆರ್. ಅನಂತಮೂರ್ತಿ
  • ಡಾ. ರಾಮಲಿಂಗಪ್ಪ ಟಿ. ಬೇಗೂರು
  • ಡಾ. ಶಾಲಿನಿ ರಘುನಾಥ್ ಅಂಕಣ
  • ಡಾ. ಸಿ ಆರ್ ಚಂದ್ರಶೇಖರ್
  • ಡಾ|| ಕೆ. ಮಂಜಪ್ಪ
  • ಡಾ|| ಜಿ ಎಸ್ ಶಿವರುದ್ರಪ್ಪ
  • ತಂತ್ರಜ್ಞಾನ
  • ತಂತ್ರಜ್ಞಾನ
  • ತತ್ವಪದಗಳು
  • ತತ್ವಶಾಸ್ತ್ರ
  • ತಬಲ
  • ತರಕಾರಿಗಳು
  • ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು
  • ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು
  • ದತ್ತಾಂಶಗಳು
  • ದಾಟ್‌ಸಾಲು ಊರ ಗುಡ್ಡಗಳಲ್ಲಿ ಕಾಡು ನೀರಿನ ಕಲಿಕೆ
  • ದಾವಣಗೆರೆ ಜಿಲ್ಲೆಯ ಪ್ರವಾಸಿ ತಾಣಗಳು
  • ದೈಹಿಕ ಸಮಸ್ಯೆಗಳು
  • ಧರ್ಮ
  • ಧಾರವಾಡ ಜಿಲ್ಲೆಯ ಪ್ರವಾಸಿ ತಾಣಗಳು
  • ಧಾರ್ಮಿಕ
  • ಧ್ವನಿ – ಚಿತ್ರ
  • ನಗರಾಭಿವೃದ್ಧಿ
  • ನದಿಗಳು
  • ನಮ್ಮ ಮನೆಯ ಮಲ್ಲಿಗೆ
  • ನಾ ಕಾರಂತ ಪೆರಾಜೆ ಅಂಕಣ
  • ನಾ ಡಿಸೋಜಾ ಅಂಕಣ
  • ನಾ. ಕಾರ೦ತ ಪೆರಾಜೆ
  • ನಾಗೇಶ ಹೆಗಡೆ
  • ನಾಟಕ-ರಂಗಭೂಮಿ
  • ನಾಟಕಗಳು
  • ನಾಟಿ ಬೆಳೆಗಳು
  • ನಾಡಿಗೆ ನಮಸ್ಕಾರ ಪುಸ್ತಕ ಸರಣಿ
  • ನಾದ ಲಹರಿ (ಹಿಂದುಸ್ತಾನಿ ಸಂಗೀತ ಲೇಖನಗಳು)
  • ನಿಸರ್ಗ
  • ನೃತ್ಯ
  • ನೃತ್ಯ
  • ನೇಕಾರ ಸಮಾಜ, ಸಂಸ್ಕೃತಿ ಆರ್ಥಿಕ ಸ್ಥಿತಿಗತಿ
  • ನೇಯ್ಗೆ ಮತ್ತು ಕಸೂತಿ
  • ನೈಸರ್ಗಿಕ ವಿಜ್ಞಾನ
  • ನ್ಯಾಯ ನಿಷ್ಠುರದ ನ್ಯಾಯವಾದಿ ಕೌಡೂರು ಸದಾನಂದ ಹೆಗ್ಡೆ
  • ಪಂಪಮಹಾಕವಿ ವಿರಚಿತ ಪಂಪಭಾರತಂ
  • ಪಕ್ಷಿ ಪ್ರಪಂಚ
  • ಪಕ್ಷಿ ಪ್ರಪಂಚ
  • ಪಕ್ಷಿಗಳ ಪರಿಚಯ
  • ಪತ್ರಿಕೆಗಳು
  • ಪತ್ರಿಕೋದ್ಯಮ
  • ಪದ್ಯ ಸಾಹಿತ್ಯ ಪ್ರಕಾರ – ೧ಎ
  • ಪದ್ಯ ಸಾಹಿತ್ಯ ಪ್ರಕಾರ – ೧೪
  • ಪದ್ಯ ಸಾಹಿತ್ಯ ಪ್ರಕಾರ – ೧೫
  • ಪದ್ಯ ಸಾಹಿತ್ಯ ಪ್ರಕಾರ – ೧೫ಅ
  • ಪದ್ಯ ಸಾಹಿತ್ಯ ಪ್ರಕಾರ – ೧೭
  • ಪದ್ಯ ಸಾಹಿತ್ಯ ಪ್ರಕಾರ – ೧೮
  • ಪದ್ಯ ಸಾಹಿತ್ಯ ಪ್ರಕಾರ – ೧೯
  • ಪದ್ಯ ಸಾಹಿತ್ಯ ಪ್ರಕಾರ – ೨೦
  • ಪದ್ಯ ಸಾಹಿತ್ಯ ಪ್ರಕಾರ ೮
  • ಪರಂಪರೆ
  • ಪರಂಪರೆ
  • ಪರಿಸರ
  • ಪರಿಸರ ಸಂಸ್ಕೃತಿ
  • ಪಾರಂಪರಿಕ ಜ್ಞಾನ
  • ಪಾಲಹಳ್ಳಿ ವಿಶ್ವನಾಥ್
  • ಪಾಲಹಳ್ಳಿ ವಿಶ್ವನಾಥ್ ಅಂಕಣ
  • ಪಿಟೀಲು
  • ಪುರಾತತ್ವ ಶಾಸ್ತ್ರ
  • ಪುರಾತತ್ವ ಶಾಸ್ತ್ರ
  • ಪುಸ್ತಕಗಳಿಂದ
  • ಪೂರ್ಣಪ್ರಜ್ಞ ಬೇಳೂರು ಅಂಕಣ
  • ಪೂರ್ಣಪ್ರಜ್ಞ, ಬೇಳೂರು
  • ಪ್ರವಾಸ ಸಾಹಿತ್ಯ
  • ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ
  • ಪ್ರವಾಸಿ ಸಾಹಿತ್ಯ ಮತ್ತು ಸ್ಥಳ ಸಾಹಿತ್ಯ
  • ಪ್ರಾಚೀನ ಕೃತಿಗಳು
  • ಪ್ರಾಣಿ ಪ್ರಪಂಚ
  • ಪ್ರಾಥಮಿಕ – ಮಾಧ್ಯಮಿಕ ಶಿಕ್ಷಣ
  • ಪ್ರಾಥಮಿಕ ಶಿಕ್ಷಣ
  • ಪ್ರೊ. ಸಿ. ಡಿ. ಪಾಟೀಲ್ ಅಂಕಣ
  • ಬದುಕು
  • ಬದುಕು
  • ಬರಲಿದೆಯೇ ಭೀಕರ ವಾಯುಗುಣ ಬದಲಾವಣೆ ?
  • ಬಳ್ಳಾರಿ ಜಿಲ್ಲೆಯ ಪ್ರವಾಸಿ ತಾಣಗಳು
  • ಬಳ್ಳಿ ಮತ್ತು ಸೊಪ್ಪು ತರಕಾರಿಗಳು
  • ಬಸವೇಶ್ವರ
  • ಬಾಗಲಕೋಟೆ ಜಿಲ್ಲೆಯ ಪ್ರವಾಸಿ ತಾಣಗಳು
  • ಬಾದಾಮಿ ಚಾಲುಕ್ಯರು
  • ಬಾಲವಿಜ್ಞಾನ ಮಾಸ ಪತ್ರಿಕೆ – ಆಗಸ್ಟ್ ೨೦೧೦
  • ಬಾಲವಿಜ್ಞಾನ ಮಾಸ ಪತ್ರಿಕೆ – ಜುಲೈ ೨೦೧೦
  • ಬಾಲವಿಜ್ಞಾನ ಮಾಸ ಪತ್ರಿಕೆ – ಡಿಸೆಂಬರ ೨೦೦೯
  • ಬಾಲವಿಜ್ಞಾನ ಮಾಸ ಪತ್ರಿಕೆ – ನವೆಂಬರ್ ೨೦೧೦
  • ಬಾಲವಿಜ್ಞಾನ ಮಾಸ ಪತ್ರಿಕೆ – ಪೆಬ್ರವರಿ ೨೦೧೧
  • ಬಾಲವಿಜ್ಞಾನ ಮಾಸ ಪತ್ರಿಕೆ – ಸೆಪ್ಟೆಂಬರ್ ೨೦೧೦
  • ಬಾಲವಿಜ್ಞಾನ ಮಾಸ ಪತ್ರಿಕೆ – ಸೆಪ್ಟೆಂಬರ್ ೨೦೧೧
  • ಬಾಲವಿಜ್ಞಾನ ಮಾಸ ಪತ್ರಿಕೆ ಕರಾವಿಪ ಪ್ರಕಟಣೆ
  • ಬಾಲವಿಜ್ಞಾನ ಮಾಸ ಪತ್ರಿಕೆ – ಜೂನ್ ೨೦೧೦
  • ಬಾಲವಿಜ್ಞಾನ ಮಾಸ ಪತ್ರಿಕೆ – ಮೇ ೨೦೧೦
  • ಬಿ ಎಸ್ ಶೈಲಜಾ
  • ಬಿ ಎಸ್ ಶೈಲಜಾ, ಬಿ ಎ ಶಾರದ ಅಂಕಣ
  • ಬಿ.ಎಂ. ರೋಹಿಣಿ
  • ಬಿ.ಟಿ.ಗೆ ಒತ್ತು – ಬದನೆಗೆ ಕುತ್ತು ನಾಟಿ ಬದನೆಗೆ ಒದಗಿದ ಕಂಟಕ..!
  • ಬಿಜಾಪುರ ಜಿಲ್ಲೆಯ ಪ್ರವಾಸಿ ತಾಣಗಳು
  • ಬೀದರ್ ಜಿಲ್ಲೆಯ ಪ್ರವಾಸಿ ತಾಣಗಳು
  • ಬುಡಕಟ್ಟು ಮಹಾಕಾವ್ಯಗಳು
  • ಬುಡಕಟ್ಟುಗಳು
  • ಬುಡಕಟ್ಟುಗಳು
  • ಬೆಂಗಳೂರು ಜಿಲ್ಲೆಯ ಪ್ರವಾಸಿ ತಾಣಗಳು
  • ಬೆಟ್ಟದ ನೆಲ್ಲಿ
  • ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣಗಳು
  • ಬೆಳೆ ವೈವಿಧ್ಯ
  • ಬೆಳ್ಳಿ ಹಬ್ಬದ ಪ್ರಯುಕ್ತ ಸನ್ಮಾನಿತರ ಕಿರುಪರಿಚಯ
  • ಬೈಜಿಕ ಭೌತವಿಜ್ಞಾನ
  • ಬ್ಯಾಂಕಿಂಗ್
  • ಭರತನಾಟ್ಯ
  • ಭಾರತದ ಇತಿಹಾಸ
  • ಭಾಷಾ ಸಾಹಿತ್ಯ ಮತ್ತು ವ್ಯಾಕರಣ
  • ಭಾಷಾತಂತ್ರಜ್ಞಾನ
  • ಭಾಷೆ
  • ಭೂತದೈವಗಳ ಆರಾಧನೆ
  • ಭೂಮಿ
  • ಭೂವಿಜ್ಞಾನ
  • ಭೌತ ವಿಜ್ಞಾನ
  • ಭೌತಶಾಸ್ತ್ರ (ಫಿಸಿಕ್ಸ)
  • ಮಂಜುನಾಥ ಎಚ್ ಅಂಕಣ
  • ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳು
  • ಮಕ್ಕಳ ಕತೆಗಳು
  • ಮಕ್ಕಳ ಕವನ ಸಂಕಲನ
  • ಮಕ್ಕಳ ಗಣಿತ
  • ಮಕ್ಕಳ ನಾಟಕ
  • ಮಕ್ಕಳ ವಿಜ್ಞಾನ
  • ಮಕ್ಕಳ ವಿಜ್ಞಾನ
  • ಮಕ್ಕಳ ಸಾಹಿತ್ಯ
  • ಮಕ್ಕಳ ಸಾಹಿತ್ಯ
  • ಮನೋಲೋಕ
  • ಮನೋವಿಜ್ಞಾನ
  • ಮನೋವೈಜ್ಞಾನಿಕ ಸಮಸ್ಯೆಗಳು
  • ಮರಗಳ ಪರಿಚಯ ಒಂದು ಕೈಪಿಡಿ – ಭಾಗ ೨
  • ಮಲ್ಲಿಕಾರ್ಜುನ ಹೊಸಪಾಳ್ಯ ಅಂಕಣ
  • ಮಹಾತ್ಮಾ ಗಾಂಧೀಜಿ
  • ಮಾಧ್ಯಮ
  • ಮಾನವಶಾಸ್ತ್ರ
  • ಮಾನವಶಾಸ್ತ್ರ
  • ಮಾನಸಿಕ ಕಾಯಿಲೆಗಳ ಪರಿಚಯ ನಿಮಗಿರಲಿ
  • ಮಾಹಿತಿ ತಂತ್ರಜ್ಞಾನ
  • ಮಾಹಿತಿ ತಂತ್ರಜ್ಞಾನ
  • ಮುದ್ರಾಡಿ ನಿಟ್ಟೆ
  • ಮೂಡಲಪಾಯ ಯಕ್ಷಗಾನ ಸಂಪುಟ – ೩
  • ಮೂಡಲಪಾಯ ಯಕ್ಷಗಾನ ಸಂಪುಟ-1
  • ಮೂಡಲಪಾಯ ಯಕ್ಷಗಾನ ಸಂಪುಟ-೨
  • ಮೃದಂಗ
  • ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳು
  • ಮ್ಯಾಗಜಿನ್‌ಗಳು
  • ಯಕ್ಷಗಾನ ಸಾಹಿತ್ಯ ಸಂಪುಟ – ೧ಉ
  • ಯಕ್ಷಗಾನ-ಬಯಲಾಟ
  • ಯಾದಗಿರಿ ಜಿಲ್ಲೆಯ ಪ್ರವಾಸಿ ತಾಣಗಳು
  • ಯುರೋಪ್
  • ಯುರೋಪ್ ಚರಿತ್ರೆಯ ವಿವಿಧ ಆಯಾಮಗಳು
  • ರಂಗಭೂಮಿ
  • ರಂಗಭೂಮಿ ಸಾಹಿತ್ಯ ಪ್ರಕಾರ – 2ಆ
  • ರಂಗಭೂಮಿ ಸಾಹಿತ್ಯ ಪ್ರಕಾರ – ೧ಅ
  • ರಂಗಭೂಮಿ ಸಾಹಿತ್ಯ ಪ್ರಕಾರ – ೧ಆ
  • ರಂಗಭೂಮಿ ಸಾಹಿತ್ಯ ಪ್ರಕಾರ – ೧ಈ
  • ರಂಗಭೂಮಿ ಸಾಹಿತ್ಯ ಪ್ರಕಾರ – ೨
  • ರಂಗಭೂಮಿ ಸಾಹಿತ್ಯ ಪ್ರಕಾರ – ೨ಅ
  • ರಂಗಭೂಮಿ ಸಾಹಿತ್ಯ ಪ್ರಕಾರ ೧
  • ರಂಗಭೂಮಿ ಸಾಹಿತ್ಯ ಪ್ರಕಾರ ೧ಇ
  • ರಂಗಭೂಮಿ ಸಾಹಿತ್ಯ ಪ್ರಕಾರ ೪
  • ರಂಗಭೂಮಿ ಸಾಹಿತ್ಯ ಪ್ರಕಾರ – ೧ಎ
  • ರಂಗಭೂಮಿ ಸಾಹಿತ್ಯ ಪ್ರಕಾರ-೧ಋ
  • ರಂಗಸ್ವಾಮಿ ಮೂಕನಹಳ್ಳಿ
  • ರಮಾ ಎಸ್. ಅರಕಲಗೂಡು
  • ರಸಾಯನಶಾಸ್ತ್ರ (ಕೆಮಿಸ್ಟ್ರಿ)
  • ರಾ. ಶ್ರೀನಾಗೇಶ್
  • ರಾಘವೇಂದ್ರ ಮಹಾಬಲೇಶ್ವರ
  • ರಾಜನೀತಿಯ ಅಪರಂಜಿ ಡಾ. ಅಡ್ಡೂರು ಸುಬ್ಬರಾವ್
  • ರಾಜ್ಯಶಾಸ್ತ್ರ
  • ರಾಜ್ಯಶಾಸ್ತ್ರ
  • ರಾಯಚೂರು ಜಿಲ್ಲೆಯ ಪ್ರವಾಸಿ ತಾಣಗಳು
  • ರಾಷ್ಟ್ರಕವಿ ಕೃತಿ ಸಂಚಯ
  • ಲಿಂಗ ಸಂಬಂಧಿ ಅಭಿವೃದ್ಧಿ  ಅಧ್ಯಯನ ಪ್ರಬಂಧಗಳು
  • ಲೇಖನ ಸಂಗ್ರಹ
  • ಲೇಖನಗಳಿಂದ
  • ಲೇಖನಗಳು
  • ಲೈಂಗಿಕ ಆರೋಗ್ಯ
  • ವಚನಕಾರರು
  • ವಡ್ಡಾರಾಧನೆ
  • ವನ್ಯಜೀವಿ ಸಂದೇಶದ ಶುಭಾಶಯ ಪತ್ರಗಳು
  • ವರದಾ ನದಿಯ ಅಕ್ಕಪಕ್ಕ
  • ವರ್ಣಚಿತ್ರ ಕಲಾವಿದ ಪಾವಂಜೆ ಗೋಪಾಲಕೃಷ್ಣಯ್ಯ
  • ವಸಾಹತುಕಾಲೀನ ಬಳ್ಳಾರಿ ಜಿಲ್ಲೆ (ಬಳ್ಳಾರಿ ಜಿಲ್ಲೆಯಲ್ಲಿ ಬ್ರಿಟಿಷರ ಆಳ್ವಿಕೆ)
  • ವಸುಂಧರಾ ಭೂಪತಿ
  • ವಾಣಿಜ್ಯ ಬೆಳೆಗಳು (ಕಮರ್ಶಿಯಲ್ ಕ್ರಾಪ್ಸ್)
  • ವಾಣಿಜ್ಯ-ಕನ್ನಡ
  • ವಾಲ್ಮೀಕಿ ಸಮುದಾಯ
  • ವಾಸ್ತುಶಿಲ್ಪಶಾಸ್ತ್ರ
  • ವಿ ಜಿ ಪೂಜಾರ್ ಅಂಕಣ
  • ವಿ.ಎನ್. ಲಕ್ಷ್ಮೀನಾರಾಯಣ
  • ವಿ.ಎನ್. ವೆಂಕಟಲಕ್ಷ್ಮಿ
  • ವಿಕಾಸ : ಜೀವನ-ಕೌಶಲ ಪಠ್ಯ
  • ವಿಕ್ರಮ್
  • ವಿಜಯ ನಗರ
  • ವಿಜಯನಗರ
  • ವಿಜಯನಗರ
  • ವಿಜ್ಞಾನ
  • ವಿಜ್ಞಾನ
  • ವಿಜ್ಞಾನ – ಗಣಿತ
  • ವಿಜ್ಞಾನದ ಇತಿಹಾಸ
  • ವಿಜ್ಞಾನಿಗಳು
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ಲೇಷಣೆ ಮತ್ತು ಸಂಶೋಧನೆ
  • ವಿಶ್ವ ಇತಿಹಾಸ
  • ವೀಣೆ
  • ವೈಯಕ್ತಿಕ ಬ್ಲಾಗ್
  • ವೈಜ್ಞಾನಿಕ ಇತಿಹಾಸ
  • ವೈದ್ಯಕೀಯ ಕೃಷಿ
  • ವೈದ್ಯಕೀಯ ವಿಜ್ಞಾನ
  • ವೈದ್ಯಶಾಸ್ತ್ರ
  • ವ್ಯಂಗ್ಯಚಿತ್ರ
  • ವ್ಯಕ್ತಿ ಪರಿಚಯ
  • ವ್ಯಕ್ತಿಚಿತ್ರ
  • ವ್ಯಕ್ತಿಚಿತ್ರ
  • ವ್ಯಕ್ತಿಚಿತ್ರ
  • ವ್ಯಕ್ತಿತ್ವ ವಿಕಸನ
  • ವ್ಯಕ್ತಿಸಾಹಿತ್ಯ
  • ವ್ಯಾಕರಣ
  • ಶಾಲಾ ಪಠ್ಯ ಪುಸ್ತಕಗಳು
  • ಶಾಸನಗಳು
  • ಶಿಕ್ಷಣ
  • ಶಿಕ್ಷಣ
  • ಶಿಲ್ಪಕಲೆ
  • ಶಿಲ್ಪಕಲೆ
  • ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳು
  • ಶಿವಾನಂದ ಕಳವೆ
  • ಶಿವಾನಂದ ಕಳವೆ ಪುಸ್ತಕ
  • ಶೈಕ್ಷಣಿಕ ಅಭಿವೃದ್ಧಿ
  • ಸ ರಘುನಾಥ ಅಂಕಣ
  • ಸಂಗೀತ
  • ಸಂಗೀತ
  • ಸಂಬಂಧಿತ ವಿಜ್ಞಾನ
  • ಸಂಸ್ಕೃತಿ
  • ಸಂಸ್ಕೃತಿ
  • ಸಂಸ್ಕೃತಿ
  • ಸಂಸ್ಕೃತಿ
  • ಸಂಸ್ಕೃತಿ – ಪರಂಪರೆ
  • ಸಂಸ್ಕೃತಿ ಮಹಿಳಾ ಮಾಲಿಕೆ -1
  • ಸಂಸ್ಕೃತಿ ಮಹಿಳಾ ಮಾಲಿಕೆ -2
  • ಸಂಸ್ಕೃತಿ ಮಹಿಳಾ ಮಾಲಿಕೆ -3
  • ಸಂಸ್ಕೃತಿ ಮಹಿಳಾ ಮಾಲಿಕೆ -4
  • ಸಂಸ್ಕೃತಿ ಮಹಿಳಾ ಮಾಲಿಕೆ -5
  • ಸಂಸ್ಕೃತಿ ಮಹಿಳಾ ಮಾಲಿಕೆ -6
  • ಸಂಸ್ಕೃತಿ ಮಹಿಳಾ ಮಾಲಿಕೆ -7
  • ಸಂಸ್ಕೃತಿ ಸಮುದಾಯ
  • ಸಂಸ್ಕೃತಿ-ಪರಂಪರೆ
  • ಸಂಸ್ಕೃತಿ-ಸಮುದಾಯ
  • ಸದ್ಯೋಜಾತ ಭಟ್
  • ಸಮಕಾಲೀನ ಕನ್ನಡ
  • ಸಮಕಾಲೀನ ಕರ್ನಾಟಕ
  • ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು (ಸಂಪಾದಿತ)
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೨
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೪
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೬
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೦
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೧
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೬
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೭
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೨೮
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೦
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೧
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೭
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೩೮
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೮
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ -೧೫
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೩
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ – ೧೭
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ-೧೯
  • ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯಮಾಲೆ-೩೨
  • ಸಮಗ್ರ ಕನ್ನಡ ಜನಪದ, ಯಕ್ಷಗಾನ ಸಾಹಿತ್ಯಮಾಲೆ – ೩೬
  • ಸಮಗ್ರ ಕನ್ನಡ ಸಾಹಿತ್ಯಮಾಲೆ – ೨೯
  • ಸಮಗ್ರ ಕಲೆಗಳು
  • ಸಮಗ್ರ ಕಾವ್ಯ
  • ಸಮಗ್ರ ಕ್ರೀಡೆ
  • ಸಮಗ್ರ ಗದ್ಯ 1
  • ಸಮಗ್ರ ಗದ್ಯ 2
  • ಸಮಗ್ರ ಗದ್ಯ 3
  • ಸಮಗ್ರ ಗದ್ಯ 4
  • ಸಮಗ್ರ ಗದ್ಯ 5
  • ಸಮಗ್ರ ಸಾಹಿತ್ಯ
  • ಸಮಾಜ ಕಲ್ಯಾಣ
  • ಸಮಾಜ ಕಲ್ಯಾಣ ಮತ್ತು ಸಮಾಜ ಸುಧಾರಣೆ
  • ಸಮಾಜ ಮತ್ತು ಅಭಿವೃದ್ಧಿ
  • ಸಮಾಜ ಶಾಸ್ತ್ರ
  • ಸಮಾಜ ಶಾಸ್ತ್ರ
  • ಸಮಾಜ ಶಾಸ್ತ್ರ
  • ಸಮಾಜ ಶಾಸ್ತ್ರ
  • ಸಮಾಜ ಸುಧಾರಣೆ
  • ಸಮುದಾಯ ಸಾಹಿತ್ಯ
  • ಸಮುದಾಯಗಳು
  • ಸರೋಜಾ ಪ್ರಕಾಶ
  • ಸರೋದ್‌
  • ಸಸ್ಯವಿಜ್ಞಾನ
  • ಸಹಜ ಸಮೃದ್ಧ ಪ್ರಕಾಶನ
  • ಸಾಮಾಜಿಕ ಚಳುವಳಿಗಳು
  • ಸಾಮಾನ್ಯ ಆರೋಗ್ಯ
  • ಸಾಮಾನ್ಯ ಗಣಿತ
  • ಸಾಮಾನ್ಯ ವಿಜ್ಞಾನ (ಜನರಲ್ ಸೈನ್ಸ್)
  • ಸಾಹಿತ್ಯ
  • ಸಾಹಿತ್ಯ ವಿಮರ್ಶೆ
  • ಸಾಹಿತ್ಯ ವಿಮರ್ಶೆ
  • ಸಿ. ಡಿ. ಪಾಟೀಲ
  • ಸಿ.ಎಸ್. ಸುರೇಶ್
  • ಸಿದ್ದಿಕ್ ನೀರಾಜೆ
  • ಸಿದ್ಧರಾಮ ಹಿರೇಮಠ
  • ಸುಗಮ ಸಂಗೀತ
  • ಸುಧೀಂದ್ರ ದೇಶಪಾಂಡೆ
  • ಸೂಕ್ಷ್ಮಜೀವಿಗಳು
  • ಸೌಂದರ್ಯ ಸಮೀಕ್ಷೆ
  • ಸ್ತ್ರೀ ವಾದ
  • ಸ್ತ್ರೀವಾದ
  • ಹಣ್ಣುಗಳು
  • ಹದಿಹರೆಯ
  • ಹವಾಮಾನ ಪರಿಣಾಮ
  • ಹಸಿರು ಹಾದಿ : ಸಾವಯವದಿಂದ ಜೀವವೈವಿಧ್ಯದವರೆಗೆ :
  • ಹಾವೇರಿ ಜಿಲ್ಲೆಯ ಪ್ರವಾಸಿ ತಾಣಗಳು
  • ಹಾಸನ ಜಿಲ್ಲೆಯ ಪ್ರವಾಸಿ ತಾಣಗಳು
  • ಹಿಂದುಸ್ತಾನಿ ಸಂಗೀತ
  • ಹಿತ್ತಿಲು ಕೃಷಿ
  • ಹೈನುಗಾರಿಕೆ
  • ೨. ಅಮೆರಿಕಾದಲ್ಲಿ ಕನ್ನಡಿಗ ೧೨೭ – ೨೬೧
  • ೩. ಇಂಗ್ಲೆಂಡಿನಲ್ಲಿ ಚತುರ್ಮಾಸ ೨೬೫ – ೪೦೬
  • ೪. ಗಂಗೆಯ ಶಿಖರಗಳಲ್ಲಿ ೪೦೯ – ೫೧೭

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2017 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - developkanaja@gmail.com

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top