Skip to content
ದೂರವಾಣಿ : | 22212487|developkanaja@gmail.com
  • ಕಣಜ ತಿಳಿಯಿರಿ
  • ಮಾಹಿತಿ ಬಳಕೆ ಸೂಚನೆ
  • ಅಬಾಧ್ಯತೆ ಘೋಷಣೆ
  • ಕಣಜವನ್ನು ಕನ್ನಡದಲ್ಲೇ ಕೇಳಿ!
  • ಕಣಜವನ್ನು ತುಂಬಿ!
  • ನಮ್ಮನ್ನು ಸಂಪರ್ಕಿಸಿ
ಕಣಜ Logo ಕಣಜ Logo
  • ಮುಖಪುಟ
  • ವ್ಯಕ್ತಿ ಪರಿಚಯ
  • ವಿಭಾಗಗಳು
    • ಅಂಕಣಗಳು
      • ಋಾ ಬಿಟ್ಟ ಮೇಲೆ ಋ ಬೇಕೇ ?
      • ಸ್ಮಾರ್ಟ್ ಕಾರ್ಡ್ ತಂತ್ರಜ್ಞಾನ
      • ವನ್ಯಜೀವಿಗಳು ಹಾಗೂ ವನ್ಯಜೀವಿ ವಿಜ್ಞಾನ
      • ಶಿಷ್ಟಭಾಷೆ ಎಂದರೆ ಯಾವುದು?
      • ಮಾಹಿತಿ ಕಳವು ತಡೆಯಲು ತಂತ್ರಜ್ಞಾನ
      • ಬ್ರಾಹ್ಮಿ- ಪ್ರಾಕೃತವನ್ನು ಹಿಮ್ಮೆಟ್ಟಿಸಿದ ಸಂಸ್ಕೃತ ಕನ್ನಡ
      • ಪಕ್ಷಿ ವೀಕ್ಷಣೆಯ ದಾಖಲೀಕರಣ
      • ಶಿಕ್ಷಣ ಮಾಧ್ಯಮವಾಗಿ ಕನ್ನಡ
    • ಲೇಖನಗಳು
      • ಉಷ್ಟ್ರಪಕ್ಷಿ ವಿದೇಶಿ ಅಲ್ಲ!
      • ದೆಹಲಿ ಕರ್ನಾಟಕ ಸಂಘ
      • ನವ ದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ
      • ಆರೋಗ್ಯ
    • ಪತ್ರಿಕೆಗಳು
      • ಮಕ್ಕಳ ಕತೆಗಳು
      • ವಿಜ್ಞಾನ
      • ನಿಯತಕಾಲಿಕೆಗಳು
  • ಶಬ್ದಕೋಶ
  • e-ಲೋಕ
    • e-ಲೋಕ

      ಜಗತ್ತು ನಾಗರಿಕತೆ ಪರಿಕಲ್ಪನೆಗಳು ಅರಳುವ ಮುನ್ನ ದಿನಗಳಿಂದಲೂ ಅಸ್ತಿತ್ವದಲ್ಲಿದ್ದೂ ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಸಂಜ್ಞೆಗಳು, ಸಂಕೇತಗಳು, ಶಿಲಾಚಿತ್ರಗಳು, ಲಿಪಿಕಂಡರಣೆಗಳು,ತಾಳೆಗರಿಗಳು, ಶಾಸನಗಳು, ಪುಸ್ತಕಗಳು ಹೀಗೆ ಬಹುಮಾಧ್ಯತಮ ಸಾಧ್ಯತೆಯಲ್ಲಿ ಸಾಗುತ್ತಾ ಬಂದ ಜ್ಞಾನ ಮತ್ತು ಮಾಹಿತಿ ಪ್ರಸಾರಕ್ಕೆ ಇತ್ತೀಚಿನ ಆಧುನಿಕ ಸ್ಪರ್ಶ ದೊರಕಿದ್ದು ತಂತ್ರಜ್ಞಾನದಿಂದ.ಆಧುನಿಕ ತಂತ್ರಜ್ಞಾನದಲ್ಲಿ ಬಹುಮಾಧ್ಯಮ ಸಾಧ್ಯತೆಯನ್ನು ಯಶಸ್ವಿಯಾಗಿ ಬಳಸುತ್ತಾ ಕನ್ನಡ ಭಾಷೆಯಲ್ಲಿ ಜ್ಞಾನವನ್ನು ಒದಗಿಸುವ ಮಹತ್ವದ ಪ್ರಯತ್ನ ಇ-ಲೋಕ.

    • e-ಲೋಕ
      • e-ದಿನ
      • e-ಪುಸ್ತಕ
      • e-ಜಗ
      • e-ದೃಶ್ಯ
      • e-ದನಿ
  • ದೃಶ್ಯಾಂಕಣ
  • ಚಿತ್ರಾಂಕಣ
  • ದಿನಮಣಿಗಳು
  • ಹುಡುಕಿ

ಸಂಪುಟ- ೬

Home/ಕನ್ನಡ/ಸಂಪುಟ- ೬
Previous Next

ಸಂಪುಟ- ೬

  • ಹಳೆಯ ಮಾತು ಹೊಸ ಅರ್ಥ
  • ಭ್ರಮೆ
  • ಕುವೆಂಪು ಅವರ ಮಲೆಗಳಲ್ಲಿ ಮದುಮಗಳು
  • ಆಕ್ಟೋಪಸ್
  • ಕೆ.ವಿ.ತಿರುಮಲೇಶ್ ಅವರ ಮುಖವಾಡಗಳು
  • ಎರಡು ಕವನಗಳು
  • ಎರಡು ಕವನಗಳು
  • ಎರಡು ಕವನಗಳು
  • ಸಂಜೆ ಐದರ ಮಳೆ
  • ಮೂರು ಕವನಗಳು
  • ತೆರೆದ ಬಾಗಿಲು
  • ಋಷ್ಯಶೃಂಗ
  • ಅಂತರಂಗ ವಿಜ್ಞಾನ
  • ಪ್ರಜಾಪ್ರಭುತ್ವದ ಜೀವಾಳ

ಹಳೆಯ ಮಾತು ಹೊಸ ಅರ್ಥ

ಎ, ವರದರಾಜ ಬಲ್ಲಾಳ

ಹಳೆಯ ಮಾತು ಹೊಸ ಅರ್ಥ

ನಾವು ಓದಿ ಮರುಳಾದ ಜನಾಂಗ, ದುಡಿದು, ಪರಿಶ್ರಮಿಸಿ, ಬಲಿಷ್ಠರಾಗಿ ಬಾಳುವ ಬದಲಾಗಿ, ನಿತ್ಯಜೀವನದ ನೂರು ನೋವುಗಳನ್ನು ಮೌನವಾಗಿ ಸ್ವೀಕರಿಸಿ ನಿರ್ದಯ ಅನುಭವಗಳನ್ನು ಬೆಳೆಸಿಕೊಂಡು ಓಜಸ್ವೀ ಚೇತನೆಯನ್ನು ಅರಳಿಸಿಕೊಳ್ಳುವ ಬದಲಾಗಿ ಹಳೆಯ ಮಾತುಗಳನ್ನು ಅವುಗಳ ಅರ್ಥಮರ್ಮವನ್ನರಿಯದೆ ಪಾರಾಯಣ ಮಾಡುತ್ತ, ಪೂಜಿಸುತ್ತ, ಭಜಿಸುತ್ತ ಮೂಢಭಕ್ತರಾಗಿ ಬಾಳುತ್ತಿರುವ ಜನಾಂಗ, ಯಾವ ವೇದವಾಕ್ಯದ ಅರ್ಥಸೂಕ್ಷವನ್ನು ನಾವು ಅರಿಯದಿದ್ದರೂ ವೇದಮಂತ್ರಗಳನ್ನು ಕೇಳುವಾಗ ನಮ್ಮ ಮನ ತುಂಬಿ ಬರುತ್ತದೆ, ಉಪನಿಷತ್ತುಗಳ ಮರ್ಮ ನಮಗೆ ತಿಳಿಯದಿದ್ದರೂ ಆ ವಾಕ್ಯಗಳನ್ನು ಕೇಳುವಾಗ ಇಳಿ ವಯಸ್ಸಿನ ಮೂಕಜ್ಜಿಯಂತೆ ನಾವು ಭಾವ ವಿಹ್ವಲರಾಗುತ್ತೇವೆ, ವೇದ-ಉಪನಿಷತ್ತುಗಳು, ಭಾರತ ರಾಮಾಯಣಗಳು, ಪುರಾಣ-ಉಪಪುರಾಣಗಳು, ವೇದಾಂತ-ಮೀಮಾಂಸೆ ಪ್ರಾಚೀನ ಸಾಹಿತ್ಯ ಈ ಅನೇಕ ಶಾಖೆಗಳನ್ನು ಸ್ಮರಿಸಿಕೊಂಡು ನಾವು ತುಂಬ ಹೆಮ್ಮೆ ಪಡುತ್ತೇವೆ, ಹಳೆಯ ಮಾತುಗಳನ್ನು ಅರ್ಥವರಿಯದೆ ಮೆಲುಕಾಡುತ್ತಿದ್ದರೆ ಸಮಾಜದಲ್ಲ ನಮಗೆ ಗೌರವಾದರಗಳು ದೊರಕುತ್ತವೆ, ೨೦ನೆಯ ಶತಮಾನಕ್ಕೆ ಒಪ್ಪುವ ಧೂರ್ತತನವನ್ನು ಚೆನ್ನಾಗಿ ಮೈಗೂಡಿಸಿಕೊಂಡು ಬಾಳುತ್ತಿರುವ ನಾವು ಯಾರನ್ನೋ ವಂಚಿಸಲಿಕ್ಕಾಗಿ ಎರಡು ಮೂರು ಸಾವಿರ ವರ್ಷದ ಹಿಂದಿನ ವಾತಾವರಣದ ಮಾತುಗಳನ್ನು ದುರ್ಬಲವಾದ ನಾಲಗೆಯಿಂದ ಹೇಳಿಕೊಳ್ಳುತ್ತ ಉಸಿರಾಡು ತಿದ್ದೇವೆ, ಹೊಸ ಯುಗದ ಸಾಮಗ್ರಿಗಳನ್ನು ಹಿತವಾದ ರೀತಿಯಲ್ಲಿ ಬಳಸಿಕೊಂಡು

ಬಲಿಷ್ಠ ಅಂತಶ್ಚೇತನೆಯನ್ನು ಬೆಳೆಸಿಕೊಳ್ಳುವ ಕಲೆ ನನ್ನ ಕೈಸೇರಿಲ್ಲ, ಆದರೆ ಪ್ರಾಚೀನ ಆರ್ಯರಿಗೆ ಅಂದಿನ ಜೀವನಸನ್ನಿವೇಶಗಳಲ್ಲಿ ಉಪಯುಕ್ತವೆಂದೆನಿಸಿದ ಹಳೆಯ ಮಾತುಗಳನ್ನು ಇಂದಿನ ಹೊಸ ಸನ್ನಿವೇಶದಲ್ಲಿ ವ್ಯರ್ಥವಾಗಿ ಸ್ಮರಿಸುವ ಜಡ ಮನೋವೃತ್ತಿ ನಮ್ಮ ಕೈ ಬಿಟ್ಟಿಲ್ಲ. ಆದುದರಿಂದಲೇ ಯಾವ ಕ್ಷುದ್ರ ಪ್ರವೃತ್ತಿಯನ್ನು ತೋರಲೂ ಅಳುಕದ ನಾವು ಆವಶ್ಯಕತೆ ಬಂದರೆ ಆರ್ಯರ ಅಂತಃಕರಣ ಸಂಸ್ಕಾರಗಳನ್ನು ಪ್ರತಿಬಿಂಬಿಸುವ ದೊಡ್ಡ ದೊಡ್ಡ ಮಾತುಗಳನ್ನೂ ನಾಚಿಕೆಯಿಲ್ಲದೆ ಹೇಳಿಕೊಳ್ಳುತ್ತಿದ್ದೇವೆ.
ಹಳೆಯ ಮಾತುಗಳನ್ನು ಏಕೆ ಪುನಃ ಪುನಃ ಸ್ಮರಿಸಿಕೊಳ್ಳಬೇಕು? ಕಣ್ಣೆದುರಿಗೆ ಕಾಣುತ್ತಿರುವ ವಿಕೃತಿಯ ವಿವಿಧರೂಪಗಳನ್ನು ನಮ್ಮ ಸ್ವಬುದ್ಧಿಯಿಂದ ನಾವೇಕೆ ಪರೀಕ್ಷಿಸಿ ನೋಡಬಾರದು ? ನಮ್ಮ ಮುಂದಿರುವ ಹೀನ ಪ್ರವೃತ್ತಿಗಳನ್ನು ಅಕಂಪಿತ ಕಣ್ಮನಗಳಿಂದ ನೋಡುತ್ತಿದ್ದರೆ ಈ ಸಮಸ್ಯೆಗಳಿಗೆ ಸ್ವಲ್ಪಮಟ್ಟಿನ ಪರಿಹಾರವಾದರೂ ನಮ್ಮ ಒಳ ವಿವೇಕದ ದನಿಯಲ್ಲಿ ಕೇಳಿಬರಬಹುದೆಂಬ ನಂಬಿಕೆ ನಮಗೇಕೆ ಇಲ್ಲ? ‘ನಿನ್ನೆ’ಯ ವಿಚಾರಗಳ ಚಿಂತನೆ ನಮ್ಮ ಇಂದಿನ ಸನ್ನಿವೇಶಗಳನ್ನು ಸರಿಪಡಿಸುತ್ತ ಸಾಗುವ ಕಾರ್ಯದಲ್ಲಿ ಒಂದು ಅನವಶ್ಯಕವಾದ ತೊಡಕೆಂಬ ವಿವೇಕ ನಮ್ಮಲ್ಲೇಕೆ ಮೂಡಿ ಬರುತ್ತಿಲ್ಲ ? ದಿನ ದಿನವೂ ನಮ್ಮ ಮುಂದೆ ಉರುಳಿ ಬರುತ್ತಿರುವ ಸನ್ನಿವೇಶಗಳನ್ನು ಚೆನ್ನಾಗಿ ನೋಡಿ, ಚೆನ್ನಾಗಿ ಅರಿತು, ಅವುಗಳನ್ನು ಸಾಧ್ಯವಿದ್ದಷ್ಟು ಸರಿ ಪಡಿಸಿಕೊಳ್ಳಲಿಕ್ಕಾಗಿ ಚೆನ್ನಾಗಿ ಶ್ರಮಿಸುವುದರಲ್ಲಿ ಬಾಳಿನ ಉಪಯೋಗ ಮತ್ತು ಸಾರ್ಥಕತೆಗಳನ್ನು ನಾವೇಕೆ ಕಾಣುತ್ತಿಲ್ಲ? ನಮ್ಮ ನಿತ್ಯಜೀವನದ ಅವಶ್ಯಕತೆಗಳನ್ನು ಸರಿಪಡಿಸಿಕೊಳ್ಳಲು ಸ್ವತಂತ್ರವಾಗಿ ಮತ್ತು ಸಂಪೂರ್ಣವಾಗಿ ನಮ್ಮ ಅಸ್ತಿತ್ವವನ್ನು ಬಳಸಿಕೊಳ್ಳುವ ಬದಲಾಗಿ ನಾವೇಕೆ ದೇಶ ವಿದೇಶದ ಮೂರ್ಖಮಹಾತ್ಮರ ಶಬ್ದಗಳಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಹುಡುಕುವ ದೌರ್ಬಲ್ಯವನ್ನು ತೋರುತ್ತಿದ್ದೇವೆ ? ಅಧ್ಯಯನ, ಅಭ್ಯಾಸ ಯಾ ಚಿಂತನದ ಕ್ಷಣಗಳಲ್ಲಿ ನಮ್ಮ ಮನಸ್ಸು ಸಾವಿರಾರು ಮೈಲು ದೂರದ ಸನ್ನಿವೇಶದಲ್ಲಿ ಅರಳಿ ಬಂದ ಯಾ ಸಾವಿರಾರು ವರ್ಷ ಹಿಂದಿನ ವಾತಾವರಣದಲ್ಲಿ ಮೂಡಿ ಬಂದ, ಸದ್ಯ ಕೊಳೆತು ನಾರುತ್ತಿರುವ ವಿಚಾರಗಳನ್ನು ವ್ಯರ್ಥವಾಗಿ ಅಂತರಂಗದಲ್ಲಿ ತುಂಬಿಕೊಂಡುದರಿಂದ ವರ್ತಮಾನಕಾಲದ ಅಮೂಲ್ಯ ಕಣಗಳು ನಮ್ಮ ಕೈಗೆ ಬಂದು ಜಾರುತ್ತಿರುವುದನ್ನು ನಾವೇಕೆ ಲಕ್ಷಿಸುತ್ತಿಲ್ಲ? ಹಳೆಯ ಮಹಾಗ್ರಂಥಗಳ ಅಧ್ಯಯನದಿಂದುಂಟಾದ ನಮ್ಮ ಚಿತ್ರವಿಕ್ಷೇಪ (diatruction) ಗಳು ಕರಗದೆ ನಮ್ಮ ಮನದೊಳಗಿನ ಪ್ರಕಾಶ ಹೇಗೆ ಬೆಳಗಬಲ್ಲುದೆಂಬುದನ್ನು ನಾವೇಕೆ. ಗಮನಿಸುತ್ತಿಲ್ಲ ? ಮನುಷ್ಯನಿಗೆ ಮಾರ್ಗದರ್ಶನ ನೀಡಬಲ್ಲ ಬೆಳಕು ಮೂರು ಸಾವಿರ ವರ್ಷ ಹಿಂದಿನ ಮಹಾತ್ಮರ ಪುಸ್ತಕದಲ್ಲಿಲ್ಲ, ಇದಕ್ಕೆ ಬದಲಾಗಿ ಈ ಕ್ಷುದ್ರ ಜೀವನ

ಕೇಂದ್ರದಲ್ಲಿ, ಬಾಳಿನ ಆಧಾರವಾಗಿ ನಿಂತಿರುವ ನನ್ನ-ನಿನ್ನ ಅಂತಶ್ಚೈತನ್ಯಗಳಲ್ಲಿ ಇದೆಯೆಂಬ ಧೈಯ್ಯ ನಮಗೇಕೆ ಇಲ್ಲ ? ಮಾರುತ್ತಿದ್ದರೆ ೨೦ನೆಯ ಶತಮಾನ ತನಗಾಗಿ ತಾನು ನಾಚಿಕೆ ಪಡಬೇಕಾಗಿರಲಿಲ್ಲ,
ಇಂದು ನಮ್ಮ ಸನ್ನಿವೇಶ ಬಹು ವಿಚಿತ್ರವಾಗಿದೆ, ಎಲ್ಲ ಮಂದಿರಗಳಲ್ಲೂ ಅರ್ಥವಾಗದ ‘ಅತೀತ’ಕ್ಕೆ ಪೂಜೆ ಸಲ್ಲುತ್ತಿದೆ, ಆದರೆ ಈ ಸೂಜೆಯ ಹಿನ್ನೆಲೆಯಲ್ಲಿ ಪ್ರಾಮಾಣಿಕ ವಾದ ನಂಬಿಕೆ-ಶ್ರದ್ಧೆಗಳ ಶಕ್ತಿಯಿಲ್ಲ, ಅರ್ಥವರಿಯದೆ ಮಾಡಲ್ಪಡುತ್ತಿರುವುದರಿಂದಲೇ ಈ ಪೂಜೆ ನನ್ನ-ನಿಮ್ಮ ಒಳಕೋಣೆಗಳನ್ನು ಬೆಳಗಿಸುತ್ತಿಲ್ಲ, ಬದಲಾಗಿ ನನ್ನ-ನಿಮ್ಮ ಜಪ-ಪೂಜೆ, ಭಜನೆ-ಭಕ್ತಿಗಳು ಇನ್ನಷ್ಟು ಜಡತೆಯ ಕತ್ತಲನ್ನು ನಮ್ಮ ಚೇತನೆಯಲ್ಲಿ ಹೆಚ್ಚಿಸುತ್ತವೆ, ಇಂಥ ಸ್ಥಿತಿ ಎಲ್ಲ ಕಡೆಯಲ್ಲ ತುಂಬಿಕೊಂಡಿರುವುದರಿಂದಲೇ ರಾಷ್ಟ್ರದ ಮಾರ್ಗದರ್ಶನ ಮಾಡತೊಡಗಿರುವ ಒಬ್ಬ ಮಹಾಪುರುಷನೂ ಸಹ ಒಬ್ಬ ಸಾಮಾನ್ಯ ಮೂರ್ಖನಂತೆಯೇ ತಿಳಿಗೇಡಿಯಾಗಿದ್ದು ಕೊಂಡು ತನ್ನ ಮಹಾಕಾರ್ಯವನ್ನು ಸಾಗಿಸುತ್ತಿದ್ದಾನೆ, ನಮ್ಮ ವಾತಾವರಣವೇ ಈ ರೀತಿ ಬದಲಾಯಿಸಿರುವುದರಿಂದಲೇ ಎಲ್ಲ ಗ್ರಂಥಗಳನ್ನೂ ತ್ಯಜಿಸಿ ಸಾಗಬಲ್ಲ, ಶಬ್ದಾತೀತವಾದ ಅಂತರ್ಜೀವನ ಪಡೆದ ವ್ಯಕ್ತಿಯ ಕರ್ತವ್ಯನಿಷ್ಠವಾದ ಬಾಳ್ವೆ ನಮಗೆ ಅರ್ಥಹೀನ ವೆಂದೆನಿಸಿದೆ. ಇಂಥ ಪರಿಸ್ಥಿತಿಯಲ್ಲಿ ಹಳೆಯ ಕಾಲದ ಒಂದು ಮಾತಿನ ಕುರಿತು ಇಲ್ಲಿ ಚರ್ಚಿಸಿ, ಸ್ವಲ್ಪಮಟ್ಟಿಗಾದರೂ ಅದರ ಅರ್ಥವನ್ನು ಸ್ಪಷ್ಟಪಡಿಸಲು ಯತ್ನಿಸಿದರೆ, ಇಂದಿನ ಫ್ಯಾಶನ್ನಿಗೆ ಅದು ಸರ್ವಥಾ ಅನುಚಿತನಾಗಲಾರದೆಂಬ ನಂಬಿಕೆಯಿಂದ ಈ ಲೇಖ ಬರೆಯಲಾಗಿದೆ.
ಬಹು ಹಿಂದಿನ ಮಾತು, ತಮ್ಮ ತಮ್ಮ ಹಕ್ಕಿನ ಅಧಿಕಾರಗಳನ್ನು ಪಡೆಯಲಿಕ್ಕಾಗಿ ಬಂಧುಗಳು ಬಣ ಕಟ್ಟಿಕೊಂಡು ವಿಕಟ ಹೋರಾಟವನ್ನೆಸಗಿದ ಕುರುಕ್ಷೇತ್ರದ ಮಾತು. ಎರಡು ಪಕ್ಷಗಳೂ ಹೊಡೆದಾಡಿಕೊಳ್ಳಲು ಸಿದ್ಧರಾಗಿ ನಿಂತು ಸೇನಾಪತಿಯ ಆಜ್ಞೆಯ ಕ್ಷಣವನ್ನು ಇದಿರು ನೋಡುತ್ತಿದ್ದ ಸಮಯದ ಮಾತು, ಪಾಂಡವರ ಆಶಾಕೇತುವಾದ ಅರ್ಜುನ ಶ್ರೀಕೃಷ್ಣನ ಸಾರಥ್ಯದ ಭಾಗ್ಯ ಪಡೆದು ರಣರಂಗದಲ್ಲಿಳಿದು ಬಂದಿದ್ದಾನೆ. ಪ್ರತಿಪಕ್ಷಿಗಳ ಸೈನ್ಯದ ಕಡೆಗೆ ದೃಷ್ಟಿ ಹರಿಸಿದ್ದಾನೆ, ಒಬ್ಬೊಬ್ಬರಾಗಿ ಅನೇಕ ಬಂಧು ಗಳು ಅವನಿಗೆ ಕಂಡುಬರುತ್ತಾರೆ : ಭೀಷ್ಮ, ದ್ರೋಣ, ಕರ್ಣ, ಅಶ್ವತ್ಥಾಮ ಇತ್ಯಾದಿ. ಒಮ್ಮೆಲೇ ಅವನ ಮನ “ಛೇ” ಅನ್ನುತ್ತದೆ. ಒಮ್ಮೆಲೇ ಮನ ಪ್ರಶ್ನಿಸುತ್ತದೆ, “ಇಷ್ಟೆಲ್ಲ ಬಂಧುಗಳ ರಕ್ತಪಾತ ಏತಕ್ಕಾಗಿ?” ಸಹೃದಯತೆ ಸೂಚಿಸುತ್ತದೆ, “ಉಂಡು ತಿಂದು ಕೂಡಿ ಬಾಳಲಿಕ್ಕಾಗಿ ಬಂಧುಗಳು, ಹೊಡೆದಾಡಲಿಕ್ಕಾಗಿ ಅಲ್ಲ.” ಮನಸ್ಸು ವಿಚಲಿತವಾದರೆ ಮೈಗೆ ಬಲವೆಲ್ಲಿಂದ ಬಂದೀತು ? ದೌರ್ಬಲ್ಯವಿದ್ದಾಗ ವೇದಾಂತಕ್ಕೇನು

ದಾರಿದ್ರ‍್ಯ? ಅರ್ಜುನ ಕೃಷ್ಣನೊಡನೆ ಏನೇನೋ ವೇದಾಂತ ಹೇಳತೊಡಗುತ್ತಾನೆ, ಯುದ್ಧ ಬೇಡವೆನ್ನುತ್ತಾನೆ.
ಇತ್ತ ಶ್ರೀಕೃಷ್ಣ ತನ್ನ ಎಂದಿನ ದುರಭ್ಯಾಸದಂತೆ ಇಂದೂ ನಗುನಗುತ್ತ ರಥಾಗ್ರದಲ್ಲಿ ಸುಮ್ಮನೆ ಕುಳಿತಿದ್ದಾನೆ, ಕುದುರೆಗಳನ್ನು ನಲಿಸುತ್ತಿದ್ದಾನೆ. ತುಂಬ ಕಡಿಮೆ ಮಾತಾಡುವ ವ್ಯಕ್ತಿ ಆತ, ಮಾತಿನ ಆವಶ್ಯಕತೆ ಬಂದಾಗಲೂ ಸಹ ಬರಿದು ನಗುವಿನಿಂದಲೇ ತನ್ನ ಮಾತು ಮುಗಿಸಿಬಿಡುವುದು ಆತನ ಅಭ್ಯಾಸ, ಆದರೆ ಇಂದು ಅರ್ಜುನನ ಮೂರ್ಖ ಬುದ್ದಿ ವೈರಾಗ್ಯ-ವೇದಾಂತಗಳ ರೂಪತಾಳಿ ಬಂದಾಗ ಅವನ ಮಂದ ಹಾಸದ ಮದ್ದು ಹೇಗೆ ಸಾಕಾದೀತು ? ಪ್ರತಿ ವ್ಯಕ್ತಿಯ ಬಾಳಿನಲ್ಲೂ ಪರಿಸ್ಥಿತಿಯ ಸಿಹಿಕಹಿ ರೂಪಗಳನ್ನು ಸ್ವೀಕರಿಸಿ ಮುನ್ನಡೆಯಲು ಅವಕಾಶವಿದೆ, ಹಿನ್ನಡೆ ಬಾಳಲ್ಲ ಎಂಬ ಮರ್ಮವನ್ನು ಈ ರಣಾಂಗಣದಲ್ಲಿ ಆತ ಅರ್ಜುನನಿಗೆ ಹೇಗೆ ತಿಳಿಸಬೇಕು ? ಅತೀತದ ಸನ್ನಿವೇಶಗಳ ಒತ್ತಡದಿಂದ ವರ್ತಮಾನಕಾಲದಲ್ಲಿ ಮೂಡಿಬರುತ್ತಿರುವ ವಾಸ್ತವಿಕತೆಯ ವಿವಿಧ ರೂಪಗಳ ಪ್ರವಾಹವು ಭವಿಷ್ಯವನ್ನು ವರ್ತಮಾನವಾಗಿಸುತ್ತ ಸಾಗಲೇ ಬೇಕು, ಇಲ್ಲಿ ಹಿನ್ನಡೆಗೆ ಅವಕಾಶವಿಲ್ಲ.. ಎಂಬ ರಹಸ್ಯವನ್ನು ಬಾಳ ಗೆಳೆಯನಾದ ಅರ್ಜುನನಿಗೆ ಹೇಗೆ ಹೇಳಬೇಕು ? ವಾಸ್ತವಿಕತೆಯ ಪ್ರವಾಹದಲ್ಲಿ ನಿರಪೇಕ್ಷನಾಗಿ ತೇಲಾಡುತ್ತಿದ್ದ ಶ್ರೀಕೃಷ್ಣ ಈ ಹೊಸ ಸನ್ನಿವೇಶದಿಂದಾಗಿ ಅರ್ಜುನನನ್ನು ಕಾಲೋಚಿತವಾದ ದಿಶೆಯಲ್ಲಿ ಮುನ್ನಡೆಸಲಿಕ್ಕಾಗಿ ತನ್ನ ಅನುಭವವನ್ನು ಹೇಳಬೇಕಾಗಿ ಬಂತು, ಇದೇ ಭಗವದ್ಗೀತೆ.
ಈ ಸಂದರ್ಭದಲ್ಲಿ ಶ್ರೀಕೃಷ್ಣನು ಮಾಡಿದ ಉಪದೇಶ ಎಲ್ಲರಿಗೂ ತಿಳಿದ ವಿಷಯ. ಶ್ರೀಕೃಷ್ಣ ಹೇಳತೊಡಗುತ್ತಾನೆ :- ಇದೆಂಥ ಅವಿವೇಕ ! ಯಾರು ಯಾರನ್ನು ಕೊಲ್ಲುತ್ತಾರೆ ? ದೇಹ ಹೇಗಾದರೂ ನಾಶ ಹೊಂದದೆ ಇರುವುದಿಲ್ಲ, ಆತ್ಮ ಏನು ಮಾಡಿದರೂ ನಷ್ಟವಾಗುವುದಿಲ್ಲ, ಇದಲ್ಲದೆ, ಕುರುಕ್ಷೇತ್ರದಲ್ಲಿ ನಡೆಯುವ ಸಂಹಾರ ಕಾರ್ಯ ನೂರಾರು ಕಾರಣಗಳಿಂದುಂಟಾದ ಸನ್ನಿವೇಶದಿಂದಾಗಿ ಅಪರಿಹಾರ್ಯವಾಗಿ ಬಂದಾಗ, ‘ತನ್ನಿಂದ ಇಂಥ ಹೇಯ ಕಾರ್ಯವಾಗಬಾರದು’ ಎಂಬ ಅರ್ಜುನನ ಮಾತಿನಲ್ಲಿ ಔಚಿತ್ಯವೇನಿದೆ ? ಪರಿಸ್ಥಿತಿಗಳ ಒತ್ತಡದಿಂದ ಆಗತಕ್ಕ ಘಟನೆಯನ್ನು “ತನ್ನಿಂದ ಹೀಗಾಗುವುದು’ ಎಂಬ ಮೂರ್ಖ ಬುದ್ಧಿಯಿಂದಾಗಿ ಅರ್ಜುನ ತನ್ನ ಮೇಲೆ ಏತಕ್ಕೆ ಹಾಕಿಕೊಳ್ಳಬೇಕು ? ಪರಿಸ್ಥಿತಿಗಳ ಶಕ್ತಿಯನ್ನೂ, ತನ್ನ ಸಾಮಾಜಿಕ ಸಂಬಂಧಗಳಿಂದುಂಟಾದ ವಿವಶತೆಗಳನ್ನೂ ಗಮನಿಸಿ ಶಬ್ದಾತೀತನಾಗಿ ನಿರ್ಲಿಪ್ತನಾಗಿ ಕರ್ತವ್ಯಮಾರ್ಗದಲ್ಲಿ ಮುನ್ನಡೆಯಲು ತನ್ನ ಮೈಮನಗಳ ಶಕ್ತಿಯನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವುದು ಹಿತವಲ್ಲವೇ ? ನಮ್ಮ ವ್ಯಕ್ತಿತ್ವದ ಆಳ ಆಳ

ಗಳಿಂದ ನಮ್ಮ ಮುಂದಿರುವ ದೂರ ದೂರದ ಪರಿಸ್ಥಿತಿಗಳ ಒತ್ತಡದಿಂದ ಈ ವ್ಯಾಪಕ ವಿಶ್ವದ ಅನಂತಪ್ರಕೃತಿ ನಮ್ಮನ್ನು ಎಲ್ಲ ದಿಶೆಗಳಿಂದಲೂ ಆವರಿಸಿ ಕುಣಿಸುತ್ತಿರುವಾಗ ಈ ಕೈಗೊಂಬೆಗಳಿಗೆ ದುರಭಿಮಾನವೇತಕ್ಕಾಗಿ ? ಅರ್ಜುನಾ, ನಮ್ಮನ್ನು ಒತ್ತುತ್ತಿರುವ ಪ್ರೇರಣೆಗಳು, ಸೆಳೆತಗಳು ಎಷ್ಟು ಸೂಕ್ಷ್ಮ ಸೂಕ್ಷ್ಮತರ ರೂಪಗಳಿಂದ ಬರುತ್ತಿವೆ ಯೆಂಬುದನ್ನು ವಿಚಾರಿಸಿ ನೋಡು, ಈ ವಿಶ್ವವನ್ನಾಳತಕ್ಕ ಶಕ್ತಿಯ ವಿಶ್ವರೂಪ ದರ್ಶನವನ್ನು ನೀನು ಪಡೆದರೆ “ನನ್ನಿಂದ ಭೀಷ್ಮಾದಿಗಳ ಹತ್ಯೆ…….” ಇತ್ಯಾದಿ ಮಾತು ಹೊರಡುವುದಿಲ್ಲ, ‘ನಾನು’ ಎಂಬ ಅಭಿಮಾನದ ಸಾರವನ್ನು ಸ್ಪಷ್ಟವಾಗಿ, ಸಂಪೂರ್ಣವಾಗಿ ನೀನು ಪರೀಕ್ಷಿಸಿ ನೋಡಿದರೆ ಈ ಬೀಜದಿಂದ ಮೊಳಕೆ ಬರುವ ಸಂಕಲ್ಪ-ವಿಕಲ್ಪ, ಇಚ್ಛೆ- ದ್ವೇಷ…… ಮೊದಲಾದ ದ್ವಂದ್ವಗಳು ತಾನಾಗಿ ಮಾಯ ವಾಗುತ್ತವೆ, ವಾಸ್ತವಿಕತೆಯ ಅದಮ್ಯ ಶಕ್ತಿಯನ್ನು ನೀನು ತಿಳಿದಷ್ಟೂ ಈ ಕಲ್ಪನೆಯ ಕೇಂದ್ರ (ನಾನು) ಬತ್ತಿಹೋಗುತ್ತದೆ. ಈ ಗಾಳಿಗೋಪುರ ಕುಸಿದು ಬೀಳುತ್ತದೆ. ಮನದೊಳಗಿನ ಕಲ್ಪನೆಗಳ ಕೋಲಾಹಲ ಮಾಯವಾದರೆ ನಿನ್ನ ಸ್ವಯಂಪ್ರಜ್ಞೆ ಸ್ಥಿರವಾಗಿ (ಸ್ಥಿತಪ್ರಜ್ಞ) ನಿಲ್ಲಬಲ್ಲುದು, ಸ್ಥಿರವಾದ ಪ್ರಜ್ಞೆ ಸನ್ನಿವೇಶಗಳ ಅದಮ್ಯ ಶಕ್ತಿಯನ್ನು ಅರಿಯಬಲ್ಲುದು, ಪರಿಸ್ಥಿತಿಯಿಂದ ಒದಗಿಬಂದ ಕರ್ತವ್ಯವನ್ನು ಪಾಲಿಸುತ್ತ ಮುನ್ನಡೆಯಬಲ್ಲದು, ಇಂಥ ವಿನೋದದ ನಿಶ್ಚಿಂತ ಬಾಳ್ವೆಯನ್ನು ಬಾಳಬೇಕು ಅರ್ಜುನಾ, ಸುಮ್ಮನೆ ವೈರಾಗ್ಯದ ವೇದಾಂತ ಹೇಳು ನಿನ್ನ ಪೊಳ್ಳು ಅಹಂಕಾರವನ್ನು ತೋರಿಸಿಕೊಳ್ಳಲು ಈ ರಣರಂಗವು ಉಚಿತ ಸ್ಥಲವೇ ?
ಇದೆಂಥ ಮಾತು ? ಒಂದೆಡೆ “ಯುದ್ಧ್ಯಸ್ವ ಭಾರತ” 1 ಎನ್ನುವ ಉತ್ತೇಜನ ಇನ್ನೊಂದೆಡೆ ಅಹಂ, ಮಮತೆಗಳಿಂದ ಅಭಿವ್ಯಕ್ತಿ ಪಡೆದು ಬಂದ ಮನದ ದೌರ್ಬಲ್ಯ ಗಳನ್ನು ಕಳೆದುಕೊಂಡು ನಿರ್ವಿಕಲ್ಪ ಪ್ರಜ್ಞೆಯ ಸ್ಥಿರತೆಯನ್ನು ಬೆಳೆಸಿಕೊಳ್ಳಲು ಆದೇಶ, ಸಂಕಲ್ಪ..ವಿಕಲ್ಪಗಳನ್ನು ಕಳೆದುಕೊಂಡ ಸ್ಥಿತಪ್ರಜ್ಞನು ಬಾಹ್ಯ ಪ್ರಪಂಚದ ಯಾವ ಕ್ರಿಯೆಗೂ ಪ್ರತಿಕ್ರಿಯೆ ತೋರದಂತಾಗಿ ಬದುಕು ಜಡಶಿಲೆಯಂತಾಗಲಾರದೇ ? ಸಂಪೂರ್ಣ ನಿಷ್ಕ್ರಿಯತೆಯ ಜಡಜೀವನಕ್ಕಾಗಿ ನಾವು ಶ್ರೀಕೃಷ್ಣನ ವೇದಾಂತವನ್ನು ಮನನ ಮಾಡಬೇಕೇ ? ನಮ್ಮ ಈ ಜೀವನದಲ್ಲಿ ವ್ಯವಹಾರದಲ್ಲಿ ತರಲಾಗದ ಮತ್ತು ವ್ಯವಹಾರದಲ್ಲಿ ತಂದುದರಿಂದ ನಮ್ಮಲ್ಲಿ ಸಂತೋಷ-ಶಾಂತಿ ಗಳನ್ನು ತುಂಬಲಾರದ ವೇದಾಂತದಿಂದ ಏನು ಪ್ರಯೋಜನ ? “ನಿಷ್ಕಾಮ ಕರ್ಮ? ಎನ್ನುವ ಗೀತೆಯ ಮಾತು ಎಷ್ಟು ಅಸಂಗತ ಮತ್ತು ಪರಸ್ಪರ ವಿರೋಧಿಯಾದ ಅರ್ಥವನ್ನು ಸ್ಪಷ್ಟ ಪಡಿಸುತ್ತಿದೆ ! ಮನುಷ್ಯನು ನಿಷ್ಕಾಮನಾದರೆ ಆತನಿಗೆ ಧರ್ಮವೇಕೆ?
1-ಗೀತಾ : ಅ, ೨, ಶ್ಲೋ, ೧೮,

ಕರ್ಮವೇಕೆ ? ಈಶ್ವರನೇಕೆ ? ಸದ್ಗತಿಯೇಕೆ ? ಇದಕ್ಕಾಗಿ ವಿವಿಧ ಸಾಧನೆಗಳೇಕೆ ? ಬಾಳ್ವೆಯೇ ಏಕೆ ?
ಆದರೆ ಶ್ರೀಕೃಷ್ಣನ ದೃಷ್ಟಿ ಇದಕ್ಕಿಂತ ತೀರ ಭಿನ್ನವಾಗಿದೆ, ನನಗೆ ನಿಷ್ಠಾನ ವ್ಯಕ್ತಿಯಲ್ಲಿ ಕರ್ಮನಿಷ್ಟೆ ಅಸಂಗತವಾಗಿ ಕಂಡುಬಂದರೆ ಶ್ರೀಕೃಷ್ಣನ ದೃಷ್ಟಿಯಲ್ಲಿ ಸಕಾಮನಾಗಿ ಸ್ವಾರ್ಥದ ಸಹಸ್ರ ಚಿಂತನಗಳಿಂದ ವಿಕ್ಷಿಪ್ತನಾದ (distracted) ವ್ಯಕ್ತಿಗೆ ಲೀಲಾಮಯವಾದ ಅನಾಯಾಸ ಜೀವನದ ಕರ್ಮಕೌಶಲವು ಅಲಭ್ಯವಾಗಿದೆ. ನಾವು ಕರ್ಮವೆಂದ ಕೂಡಲೇ ಒಂದು ಅಭಿಲಾಷೆಯ ಪ್ರಾಪ್ತಿಗಾಗಿ ದೃಢನಿರ್ಧಾರದಿಂದ ಸತತ ಪರಿಶ್ರಮದಿಂದ ಒದ್ದಾಡಿ ಮನುಷ್ಯನು ಸಾಧಿಸುವ ಕಾರ್ಯವೆಂದು ಭಾವಿಸುತ್ತೇವೆ, ಆದುದರಿಂದಲೇ ನಮ್ಮ ಕರ್ಮದಲ್ಲಿ ಕ್ಲೇಶವಿದೆ, ನೋವು ಇದೆ, ಅಂತರಂಗದ ಸಂಘರ್ಷವಿದೆ, ದಣಿವು ಇದೆ, ಮೈ ಮನಗಳ ಶಕ್ತಿಕ್ಷಯವಿದೆ, ಇದು ಯೋಗ್ಯ ಮತ್ತು ಪ್ರಾಕೃತಿಕವಾದ ಕರ್ಮವೇ ?: ಕರ್ಮದಲ್ಲಿ ಕ್ಲೇಶ-ದಣಿವುಗಳು, ಸಂಘರ್ಷ ನೋವುಗಳು ಇರಬೇಕಾದ ಅಗತ್ಯವೆಲ್ಲಿದೆ ? ಕ್ಷಣಕಾಲ ಯೋಚಿಸಿ ನೋಡಿ, ಅನಾದಿ ಕಾಲದಿಂದ ಸ್ಪಂದಿಸುತ್ತ ಬಂದಿರುವ, ಇಂದೂ ನಿಮ್ಮೆದುರಿಗೆ ನಲಿಯುತ್ತಿದ್ದು ಬದುಕಿನ ಅನಂತ ಸಂಭಾವ್ಯತೆ (possibilities) ಗಳನ್ನು ಒಂದೊಂದಾಗಿ ಅರಳಿಸಿ ತೋರಿಸುತ್ತಿರುವ ಮತ್ತು ಈ ಅನಂತ ಪರಿವರ್ತನೆಗಳಿಂದ ಎಂದೆಂದೂ ಎಳ್ಳಷ್ಟೂ ದಣಿಯದೆ ಇನ್ನೂ ಅನಂತ ಮುಖಗಳನ್ನು ತೋರಬಲ್ಲ ಈ ಅಪಾರ ವಿಶ್ವದ ಕಡೆಗೆ ದೃಷ್ಟಿ ಹರಿಸಿ ನೋಡಿ, ಈ ವಿಶ್ವ ಎಷ್ಟು ಕೋಟಿ ವರ್ಷ ಸ್ಪಂದಿಸುತ್ತಿದ್ದರೂ ಎಷ್ಟುವಿಚಿತ್ರ ವಿಚಿತ್ರವಾದ ಆಸ್ತಿತ್ವದ ರೂಪಗಳನ್ನು ತೋರುತ್ತ ಬಂದರೂ ಎಂದೂ, ಎಲ್ಲೂ ದಣಿಯುವುದಿಲ್ಲ, ಆದುದರಿಂದ ಪ್ರಕೃತಿಯ ವೇಗ (forces) ಗಳಿಗೆ ದಣಿವಿಲ್ಲ, ಯಾವ ಸಹಜ ವ್ಯಾಪಾರದಲ್ಲೂ ದಣಿವಿಲ್ಲ, ಮಾನವ ಜೀವನದಲ್ಲಿ ಪ್ರಕೃತಿಯ ವೇಗಕ್ಕೊಳಪಡದ ಯಾವ ಶಕ್ತಿಯನ್ನು ಮನುಷ್ಯನು ತನ್ನ ಸ್ವಂತ ಯೋಗ್ಯತೆಯಿಂದ ಬಳಸಿಕೊಳ್ಳು ತಿದ್ದಾನೆ ? ಒಂದು ವೇಳೆ ಮನುಷ್ಯನ ಸ್ವಂತ ಯೋಗ್ಯತೆಯು ಯಾವ ಶಕ್ತಿಯೂ ಆತನಲ್ಲಿರದಿದ್ದರೆ, ಆತನು ತನ್ನದೆಂದು ಹೇಳಿಕೊಳ್ಳುತ್ತಿರುವ ಎಲ್ಲ ವೇಗಗಳೂ ಪ್ರಕೃತಿಯವುಗಳೇ ಆಗಿದ್ದರೆ ಈ ಪ್ರಾಕೃತಿಕ ಕಾರ್ಯ (ಬದುಕು) ದಲ್ಲಿ ಆತನಿಗೆ ದಣಿವು, ನೋವುಗಳು ಏಕೆ ಕಂಡು ಬರುತ್ತಿವೆ ? ನಿಧಾನವಾಗಿ, ಮೌನವಾಗಿ ಪರೀಕ್ಷಿಸಿ ನೋಡಿ, ದಣಿವಿನ ಸಂವೇದನೆಯಿರುವುದು ಮನುಷ್ಯನ ಮನದೊಳಗೆ, ದಣಿವು, ನೋವು, ವೇದನೆ, ಸಂಘರ್ಷಗಳು ವಿಶ್ವದಲ್ಲಿ ಎಲ್ಲೂ ಇಲ್ಲ, ಮನುಷ್ಯ ಮಾತ್ರ ತನ್ನ ಅರ್ಹತೆಗೆ ಅನುರೂಪವಾಗಿ ತನ್ನ ಅವಿವೇಕವನ್ನು ಬೆಳೆಸಿಕೊಂಡು ತನ್ನ ಸುಖ-ದುಃಖ ಗಳನ್ನು ತಾನೇ ನಿರ್ಮಿಸಿ ಅದನ್ನು ತಾನೇ ಅನುಭವಿಸುತ್ತ ತಾನು ಸೃಷ್ಟಿಸಿದ ಪ್ರಪಂಚ ವನ್ನು ತಾನೇ ನೋಡುತ್ತಿದ್ದಾನೆ. ತಾನು ನಿರ್ಮಿಸಿಕೊಂಡ ನೋವುಗಳನ್ನು ತನಗೆ
ಸಹಿಸಿಕೊಳ್ಳಲಾಗದೆ ಇದ್ದಾಗ ‘ದೇವ’ ಎಂದು ಯಾರನ್ನೋ ವ್ಯರ್ಥವಾಗಿ ಕರೆಯುತ್ತಿದ್ದಾನೆ, ಈ ಶೂನ್ಯ ವಿಶ್ವದಲ್ಲಿ ಆತನ ಬೊಬ್ಬೆ ಸುಮ್ಮನೆ ಮೊಳಗಿ ಮಾಯ ವಾಗುತ್ತಿದೆ. ಈ ಬೊಬ್ಬೆ ಎಷ್ಟು ಕಾಲದವರೆಗೆ ಎಷ್ಟು ವಿವಿಧ ರೂಪದಲ್ಲಿ ಮೊಳಗು ತಿದ್ದರೂ ಎಂದೂ ಈ ಸಪ್ರಕೃತಿ ಈತನಿಗೆ ಉತ್ತರ ಕೊಡಲಿಕ್ಕಾಗಿ ತನ್ನ ಮೌನವನ್ನು ತ್ಯಜಿಸಿ ಬರುವುದಿಲ್ಲ, ಆದುದರಿಂದ, ದಣಿವು-ನೋವುಗಳು ತನ್ನ ಪ್ರಗತಿಗಾಗಿ ಹೋರಾಡುತ್ತಿರುವ ಮನುಷ್ಯನು ತನ್ನ ಸ್ವಾರ್ಥದ ಅಪರಾಧಕ್ಕಾಗಿ ಸಂಪಾದಿಸಿಕೊಂಡ ಪುರಸ್ಕಾರ, ಸ್ವಾರ್ಥದ ಭಾಷೆಯನ್ನರಿಯದ ಪ್ರಕೃತಿಯಲ್ಲಿ ಮನುಷ್ಯನ ಅಹಂಕಾರ ಹೊಸ ಭಾಷೆಯನ್ನಾಡುತ್ತಿರುವುದರಿಂದಲೇ ದಣಿವ, ಮಾನಸಿಕ ಸಂಘರ್ಷ, ರೋಗ ಮೊದಲಾದ ವಿಪತ್ತುಗಳು ಅವನಿಗೆ ಕಾಣುತ್ತಿವೆ, ರೋಗ ಪ್ರಬಲವಾದಾಗ ಡಾಕ್ಟರರು Forget all, take rest ಎಂದು ಸಲಹೆ ಕೊಡುತ್ತಾರೆ, ಈ ವಿಶ್ರಾಂತಿ ಏಕೆ ಬೇಕೆಂಬ ವಿಷಯ ಪ್ರಾಯಃ ಡಾಕ್ಟರರಿಗೂ ಗೊತ್ತಿರದಿರಬಹುದು, ಆದರೆ ನೀವು ಎಲ್ಲ ನೋವು ಗಳನ್ನು ಮರೆತು ವಿಶ್ರಾಂತಿ ಪಡೆಯುವಾಗ ಸ್ವಾರ್ಥದ ಎಲ್ಲ ಸಂಕಲ್ಪ ವಿಕಲ್ಪಗಳನ್ನೂ ಮರೆತು ಪ್ರಕೃತಿಯನ್ನು ಅನುಸರಿಸಿ, ಪ್ರಕೃತಿಯಿಂದ ಇನ್ನೂ ಕೆಲ ದಿನಗಳವರೆಗೆ ಬಾಳಲು ಬೇಕಾದ ಜೀವನ ಶಕ್ತಿಯನ್ನು ಸಂಗ್ರಹಿಸಲು ಯತ್ನಿಸುತ್ತಿದ್ದೀರಿ, ನಿಮ್ಮ ವಿವೇಕ ದಿನದಿನವೂ ನಿರ್ಮಲವಾಗುತ್ತ ಬೆಳೆದರೆ, ನೀವು ನಿಮ್ಮದೆಂದು ಹೇಳಿಕೊಳ್ಳುತ್ತಿರುವ ಎಲ್ಲ ಶಕ್ತಿಗಳೂ ಪ್ರಕೃತಿಯವು ಎಂಬುದನ್ನು ನೀವು ಚೆನ್ನಾಗಿ ಅರಿತರೆ, ಈ ಅರಿವು ಬದುಕಿನ ಮೂಲದಲ್ಲಿರುವ ನಿಮ್ಮ ಸ್ಪಂದನಗಳನ್ನೂ ಸ್ಪಷ್ಟವಾಗಿ ನೋಡಿಕೊಳ್ಳ ಬಲ್ಲುದಾದರೆ ನಿಮ್ಮ ಅಹಂಕಾರದ ಎಲ್ಲ ಒಳ ಸದ್ದು ಗದ್ದಲಗಳೂ ಮಾಯವಾಗಿ ನೀವು ಪ್ರಕೃತಿಯಂತೆಯೇ ನಿಷ್ಕಾಮ ಮನೋವೃತ್ತಿಯನ್ನು ಪಡೆಯುತ್ತೀರಿ. ಪ್ರಕೃತಿಯಂತೆಯೇ ನೀವೂ ಸಹ ಬಾಳನ್ನು ನಿರುದ್ದೇಶವಾದ ಅನಾಯಾಸ ಸ್ಪಂದನಗಳ ಗೊಂಚಲಾಗಿ ಕಾಣಬಲ್ಲಿರಿ, ಪ್ರಕೃತಿಯಂತೆಯೇ ನೀವೂ ಸಹ ಎಲ್ಲ ಸುಖ-ದುಃಖ ಗಳನ್ನು ಕಳೆದುಕೊಳ್ಳಬಲ್ಲಿರಿ, ಪ್ರಕೃತಿಯಂತೆಯೇ ನಿಮ್ಮ ಬಾಳೂ ಸಹ ಒಂದು ಲೀಲೆಯಾಗಿ ರೂಪುಗೊಳ್ಳಬಲ್ಲುದು. ಆದುದರಿಂದಲೇ ಶ್ರೀಕೃಷ್ಣನ ದೃಷ್ಟಿಯಲ್ಲಿ ಮನುಷ್ಯ ನಿಷ್ಠಾವನೂ ಕರ್ತವ್ಯನಿಷ್ಠನೂ ಆಗಬಹುದು, ನಿಜವಾದ ಕರ್ಮಮಾರ್ಗದಲ್ಲಿ ಆಯಾಸವಿಲ್ಲ, ಭೌತವಿಜ್ಞಾನದ ನಿಯಮಗಳ ಪ್ರಕಾರ ಯಾವ ಕರ್ಮಕ್ಕೂ ಸಹ ಅದಕ್ಕೆ ಯೋಗ್ಯವಾದ ನಿಶ್ಚಿತ ಶಕ್ತಿಸಂಗ್ರಹ ಅವಶ್ಯವಾಗಿದೆ, ಆದರೆ ಶ್ರೀಕೃಷ್ಣನ ದೃಷ್ಟಿಯಲ್ಲಿ ನಿಷ್ಕಾಮವಾದ ಸ್ಥಿರಚೇತನೆ ಅನಾಯಾಸವಾಗಿ ಅಪಾರ ಶಕ್ತಿಯನ್ನು ಸ್ವಯಂ ನಿರ್ಮಿಸಿಕೊಳ್ಳಬಲ್ಲ ಭೌತಿಕ ನಿಯಮಗಳನ್ನು ಮಾರಿದ ಶಕ್ತಿ, ಇಂಥ ಕರ್ಮಶಕ್ತಿಯನ್ನು ಪಡೆಯುವುದರ ಬದಲಾಗಿ ಸುಮ್ಮನೆ ಬೆವರಿಳಿಸುತ್ತ ದುಡಿಯುವುದರಲ್ಲಿ, ಜೀವ ಹಿಂಡಿ ಹೋರಾಡುವುದರಲ್ಲಿ ದೊಡ್ಡತನವೇನು ಬಂತು ? ನನ್ನ-ನಿಮ್ಮ ಕರ್ಮ ಬರಿಯ ಒದ್ದಾಟ, ಹೊಯ್ದಾಟಗಳಾದ ಮಾತ್ರಕ್ಕೆ ಶುದ್ಧ, ಪ್ರಾಕೃತಿಕ ಕರ್ಮ

ಹಾಗಿರಬೇಕಾಗಿಲ್ಲ ಎಂಬ ಮಾತು ಇದರಿಂದ ಸ್ಪಷ್ಟವಾಗಬಹುದು.
ಕೃಷ್ಣನ ದೃಷ್ಟಿಯಲ್ಲಿ ಮನುಷ್ಯನು ತನ್ನ ವಿವೇಕದ ಬಲದಿಂದ ಅನಾಯಾಸವಾದ, ನಿರುದ್ದೇಶವಾದ, ಲೀಲಾಮಯವಾದ, ಪ್ರಕೃತಿಸಹಜವಾದ ಕರ್ಮಾಚರಣೆಯ ಅರ್ಹತೆಯನ್ನು ಪಡೆಯಬೇಕು, ಇದಕ್ಕಾಗಿ ಆತ ನಿಷ್ಕಾಮನಾಗಬೇಕು, ನಿರಹಂಕಾರ ನಾಗಬೇಕು, ಸ್ಥಿತಪ್ರಜ್ಞನಾಗಬೇಕು, ಗುಣಾತೀತನಾಗಬೇಕು, ಆಗಲೇ ಮನುಷ್ಯ ಕರ್ಮಾಚರಣೆಯ ಕಲಾವಿದನಾಗುತ್ತಾನೆ, (ಯೋಗಃ ಕರ್ಮಸು ಕೌಶಲಂ), ಆದುದರಿಂದಲೇ ಅರ್ಜುನನನ್ನು ಸರಿದಾರಿಗೆ ತರಲಿಕ್ಕಾಗಿ ಮುಕ್ತಹೃದಯ ತಾಳಿ, ನಿರ್ಲಿಪ್ತನಾಗಿ ಪರಿಸ್ಥಿತಿ ಪ್ರಾಪ್ತವಾದ ಕರ್ಮವನ್ನು ಸಂಪೂರ್ಣ ಏಕಾಗ್ರತೆಯಿಂದ ಸಾಧಿಸುತ್ತ ಬದುಕಿನ ಮಾರ್ಗದಲ್ಲಿ ಮುನ್ನಡೆ-ಎಂದು ಬೋಧಿಸುತ್ತಾನೆ, (ನಿರ್ಮಮೋ ನಿರಹಂಕಾರಃ ಯುದ್ಧ್ಯಸ್ವ).
ತನ್ನ ಸಂಪೂರ್ಣ ಜೀವನವನ್ನೇ ‘ಕೃಷ್ಣಲೀಲೆ’ಯಾಗಿ ಆಡಿ ತೋರಿದ ಬಾಳ್ವೆಯ ಒಂದು ಘಟನೆಯನ್ನು ನೋಡಿ. ಕುರುಕ್ಷೇತ್ರದ ಸಂಗ್ರಾಮದ ೧೮ ದಿನಗಳಲ್ಲಿ ಅತ್ಯಂತ ಭೀಕರವಾದ ಕದನದ ದಿನ, ಇಂದು ಸಂಜೆಯೊಳಗೆ ಜಯದ್ರಥನ ತಲೆಯನ್ನು ಉರುಳಿಸಲಾರದೆ ಹೋದರೆ ತನ್ನ ಜೀವಿತವನ್ನು ತ್ಯಜಿಸಲು ಅರ್ಜುನನು ಪ್ರತಿಜ್ಞಾ ಬದ್ಧನಾಗಿದ್ದಾನೆ. ವ್ಯೂಹದೊಳಗೆ ಎಷ್ಟು ಸುತ್ತಾಡಿದರೂ, ಕುದುರೆಗಳನ್ನು ಎಷ್ಟು ಓಡಿಸಿದರೂ ಜಯದ್ರಥನ ಸುಳಿವು ಕಂಡುಬಂದಿಲ್ಲ. ಗಗನದಲ್ಲಿ ಸೂರ‍್ಯ ಕೆಳಗಿಳಿದಂತೆ ಅರ್ಜುನ ನಿರಾಶನಾಗತೊಡಗಿದ್ದಾನೆ, ಮೈಮನಗಳು ಶಿಥಿಲವಾಗತೊಡಗಿವೆ, ಕುದುರೆಗಳು ಉರಿಬಿಸಿಲಲ್ಲಿ ಓಡಿ ಓಡಿ ತುಂಬ ದಣಿದಿವೆ. ದಣಿದ ಕುದುರೆಗಳನ್ನು ಉಲ್ಲಾಸ ಗೊಳಿಸಲಿಕ್ಕಾಗಿ ಭೂಮಿಗೆ ಬಾಣ ಹೊಡೆದು ಅರ್ಜುನ ರಣರಂಗದಲ್ಲಿ ಸರೋವರ ಒಂದನ್ನು ರಚಿಸಿದ್ದಾನೆ. ನಿರಾಯುಧನಾದ ಶ್ರೀಕೃಷ್ಣ ಕುದುರೆಗಳನ್ನು ಬಿಟ್ಟು, ನೀರು ಕುಡಿಸಿ, ಕುದುರೆಗಳ ಮೈಗೆ ತಗಲಿದ ಬಾಣದ ಗಾಯಗಳನ್ನು ತಿಕ್ಕಿ, ಬೆನ್ನು ಚಪ್ಪರಿಸಿ ತನ್ನ ಎಂದಿನ ಅಭ್ಯಾಸದಂತೆ ಸುತ್ತಲೂ ಹಲ್ಲು ಕಿರಿದು ನಗುತ್ತ ನೋಡುತ್ತಿದ್ದಾನೆ. ಸುತ್ತಲೂ ಶತ್ರುಗಳು, ಕೃಷ್ಣನೊಬ್ಬನನ್ನು ಯಮಲೋಕಕ್ಕೆ ಕಳುಹಿಸಿದರೆ ನಮಗೆ ಜಯ ನಿಶ್ಚಿತವೆಂಬ ವಿಷಯ ಕೌರವ ಸೈನ್ಯದ ಪ್ರತಿಯೊಬ್ಬ ಮೂರುಕಾಸಿನ ಯೋಧ ನಿಗೂ ಗೊತ್ತಿದೆ, ಆದರೆ ಎಲ್ಲರೂ ಶ್ರೀಕೃಷ್ಣನ ಆತ್ಮವಿಶ್ವಾಸದ ನಗುವಿನ ಸೌಂದರ್ಯವನ್ನೂ ಮತ್ತು ಆ ಸೌಂದರ್ಯಕ್ಕಿಂತಲೂ ಮಿಗಿಲಾಗಿ ಆತನ ಆತ್ಮವಿಶ್ವಾಸದ ದೃಢತೆಯನ್ನೂ ಕಂಡು ಬೆರಗಾಗಿ ತಮ್ಮ ಬಿಲ್ಲು ಬಾಣಗಳನ್ನು ಮರೆತು, ತಾವು ಕುರುಕ್ಷೇತ್ರಕ್ಕೆ ಏತಕ್ಕಾಗಿ ಬಂದಿರುವೆನೆಂಬುದನ್ನೂ ಮರೆತು ನೋಡುತ್ತಿದ್ದಾರೆ. ಶ್ರೀಕೃಷ್ಣನು ತರುಣಿಯರ ಸಭೆಯಲ್ಲಿ ತನ್ನ ಮೆರುಗು ಮಾತುಗಳಿಂದ ಮನವನ್ನು

ಅಪಹರಿಸಬಲ್ಲ ಚತುರ ವಿಲಾಸಿಯಂತೆ ನಗುತ್ತಿದ್ದಾನೆ. ವ್ಯಕ್ತಿತ್ವದ ಈ ಓಜಸ್ಸಿಗೆ ಏನು ಕಾರಣ ? ವ್ಯಾಸರ ಉತ್ತರ-ಅಂತರಂಗದ ಅಪಾರ ವಿಶ್ವದಲ್ಲಿ ಶಾಶ್ವತವಾಗಿ ನೆಲೆಸಿದ ನಿರ್ಮಲತೆ, ಸುದ್ದಿ, ಪುರುಷೋತ್ತಮತ್ವ, ಇಂಥ ಶುದ್ಧಿಯಿಂದಲೇ ಮನುಷ್ಯ ಎಲ್ಲ ಕರ್ಮಾಚರಣೆಗೂ ಯೋಗ್ಯತೆಯನ್ನು ಪಡೆಯುತ್ತಾನೆ, ಇಂಥ ಅಂತಃಶುದ್ದಿಯನ್ನು ಪಡೆದು ಪರಿಸ್ಥಿತಿ ಪ್ರಾಪ್ತವಾದ ಕರ್ಮವನ್ನಾಚರಿಸಲು ಕೃಷ್ಣ ಬೋಧಿಸಿದ್ದಾನೆ.
ಕರ್ಮಾಚರಣೆಗೆ ಚೇತನೆಯ ಶುದ್ಧಿ ಆವಶ್ಯಕವಾದುದರಿಂದಲೇ ಶ್ರೀಕೃಷ್ಣನು ಗೀತೆಯಲ್ಲಿ ಇಂಥ ಶುದ್ದಿಯನ್ನು ವಿವಿಧ ರೀತಿಯಿಂದ ವಿವರಿಸಿದ್ದಾನೆ. ತ್ರೈಗುಣ್ಯವಿಷಯಾ ವೇದಾಃ ನಿಸ್ತ್ರೈಗುಣ್ಯೋ ಭವಾರ್ಜುನ, ನಿರ್ದ್ವಂದ್ವೋ ನಿತ್ಯಸತ್ವಸ್ಥೋ ನಿರ್ಯೋಗ ಕ್ಷೇಮ ಆತ್ಮವಾನ್-ಇತ್ಯಾದಿ 1 ಅನೇಕ ವಾಕ್ಯಗಳು ಮನುಷ್ಯನು ಇಂಥ ಶುದ್ಧಿಯನ್ನು ಪಡೆದು ಗುಣಾತೀತನಾಗಿ ಬಾಳುವಂತೆ ಉಪದೇಶಿಸುತ್ತವೆ, ಆದರೆ ಇಂಥ ಗುಣಾತೀತನ ವರ್ಣನೆ ಗೀತೆಯ ಈ ಶ್ಲೋಕದಲ್ಲಿ ತುಂಬ ಚೆನ್ನಾಗಿ ಕೊಡಲಾಗಿದೆ: ಪ್ರಕಾಶಂ ಚ ಪ್ರವೃತ್ತಿಂ ಚ ಮೊಹಮೇವ ಚ ಪಾಂಡವ | ನದ್ವೇಷ್ಟಿ ಸಂಪ್ರವೃತಾನಿ ನ ನಿವೃತ್ತಾನಿ ಕಾಂಕ್ಷತಿ.2 ಪ್ರಕೃತ ಈ ಶ್ಲೋಕದ ವಿವರಣೆಗಾಗಿ ಈ ಲೇಖವನ್ನು ಬರೆಯಲಾಗಿದೆ.
ಮನುಷ್ಯ ಜನ್ಮವನ್ನು ತಾಳಿಬಂದ ಪ್ರತಿ ವ್ಯಕ್ತಿಯೂ ಹೊಸ ಹೊಸ ಮನೋಧರ್ಮವನ್ನು ಪಡೆದಿರುವುದನ್ನು ದಿನ ದಿನವೂ ನಾವು ನೋಡುತ್ತಿದ್ದೇವೆ. ಇದರಿಂದ ಪ್ರತಿ ವ್ಯಕ್ತಿಯ ಭಾವಸ್ಥಿತಿಯೂ (State of being and the level of consciousness) ಅಪೂರ್ವವಾಗಿದೆ, ಇದರಿಂದಲೇ ಬಾಳಿನ ಸುಖ ದುಃಖಗಳ ಅನುಭವವು ಪ್ರತಿ ವ್ಯಕ್ತಿಯಲ್ಲೂ ವಿಚಿತ್ರ ವಿಚಿತ್ರರೂಪ ತೋರುತ್ತಿದೆ. ಈ ಮಾನವೀಯ ಪ್ರವೃತ್ತಿಗಳನ್ನು ಗುಣಗಳೆನ್ನಲಾಗಿದೆ, ತಮ್ಮ ಸೌಕರ್ಯಕ್ಕಾಗಿ ಪ್ರಾಚೀನ ಆರ್ಯರು ಈ ಗುಣಗಳನ್ನು ಮೂರು ವಿಧವಾಗಿ ವಿಂಗಡಿಸಿದ್ದಾರೆ : ಸತ್ವ, ರಜಸ್, ತಮಸ್. ಈ ತ್ರಿಗುಣಗಳಲ್ಲಿ ಮೊದಲನೆಯ ಸತ್ವವನ್ನು ಕೆಲವರು ಗೌರವಿಸುತ್ತಾರೆ, ಆದರೆ ಜೀವನದ ಶುದ್ಧ ಸ್ಥಿತಿಯಲ್ಲಿ ಸಾತ್ವಿಕ ಗುಣಕ್ಕೂ ಸಹ ಸ್ಥಾನವಿಲ್ಲ, ಶ್ರೀಕೃಷ್ಣನ ದೃಷ್ಟಿಯಲ್ಲಿ ಈ ಮೂರೂ ಗುಣಗಳು ಅಹ೦ತೆಯಿಂದ ಚಿಗುರಿ ಬಂದ ಮನದ ಮಲಗಳು, ದೋಷಗಳು, ಈ ಮೂರು ಗುಣಗಳನ್ನೂ ದಾಟಿದ ವ್ಯಕ್ತಿ ನಿರ್ಮಲ,
1. ಗೀತಾ-ಅ, ೨ ಶ್ಲೋ, ೪೫, 2…-ಗೀತಾ-ಅ. ೧೪ ಶ್ಲೋ, ೨೨,

ಗುಣಾತೀತ ಗುಣಾತ್ಯಯವೇ ಜೀವನದ ಸಹಜ, ಪ್ರಾಕೃತಿಕ, ಶುದ್ಧ ಸ್ಥಿತಿ, ಈ ಗುಣಾತ್ಯಯದಿಂದಲೇ ಮನುಷ್ಯ ನಿಜವಾದ ಕರ್ಮಾಚರಣೆಗೆ ಅರ್ಹನಾಗುತ್ತಾನೆ.
ಹಿತವಾದ ನಿದ್ರೆಯ ಸುಖವನ್ನನುಭವಿಸಿ ಎಚ್ಚೆತ್ತ ನಾವು ಉಷಃಕಾಲದ ಹೊಂಬೆಳಕು ಸುತ್ತಲೂ ಹರಡುತ್ತಿರುವ ಮಧುರ ದೃಶ್ಯವನ್ನು ತಿಳಿಗಣ್ಣಿನಿಂದ ನೋಡುತ್ತಿರುವಾಗ ಅಂತರಂಗದೊಳಗೆ ಮೌನ ಪ್ರಸನ್ನತೆಯ ಅರಿವನ್ನು ಪಡೆಯುತ್ತೇವೆ, ಸಂಧ್ಯಾಕಾಲದ ಹೊಂಬಿಸಿಲು ದೂರದ ದಿಗಂತಗಳಲ್ಲಿ ತುಂಬಿ ತೋರಿದಾಗ ಸಮುದ್ರ ತೀರದ ಹಿತ ಸುಖವಾದ ವಾಯುಸೇವನೆ ಮಾಡುತ್ತಿರುವ ನಾವು ಹೊಸತನದ ಉಲ್ಲಾಸವನ್ನು ಪಡೆಯುತ್ತೇವೆ, ಉರಿಬಿಸಿಲ ತಾಪದಿಂದ ಖೇದಗೊಂಡು ಮಹಾವೃಕ್ಷವೊಂದರ ವಿಶಾಲ ಛಾಯಯಲ್ಲಿ ನಾವು ವಿಶ್ರಾಂತಿ ಪಡೆಯಲೆತ್ನಿಸಿದಾಗ ಯಾವುದೋ ಒಂದು ಒಳ ತಂಪಿನ ಅರಿವನ್ನು ಅನುಭವಿಸುತ್ತೇವೆ, ನೆಚ್ಚಿನ ಆತ್ಮೀಯ ಬಂಧುಗಳ ಸಹವಾಸದ ಗಳಿಗೆಗಳಲ್ಲಿ ಯಾವುದೋ ಒಂದು ಮೂಕ ಸೌಖ್ಯ ನಮ್ಮ ಮನದಲ್ಲಿ ಮಿನುಗುತ್ತದೆ, ಮಹಾಪುರುಷರ ಜೀವನ ಚರಿತ್ರೆಗಳನ್ನೋದುವಾಗ ಕೆಲವೊಂದು ಕ್ಷಣಗಳಲ್ಲಿ ತೀವ್ರವಾದ ಮೆಚ್ಚಿಕೆಯ ಭಾವ ನಮ್ಮಂತರಂಗವನ್ನು ಇನ್ನಷ್ಟು ಆಳವಾಗಿಸುತ್ತದೆ. ಕೆಲವೊಂದು ಮಹಾಕವಿಗಳ ಸರಸವಾಣಿಯನ್ನು ಆಲಿಸುವಾಗ ಮಾಧುರ್ಯವು ಇಷ್ಟು ಮಧುರವಾಗಿದೆಯೇ ಎಂದು ನಮ್ಮ ಹೃದಯ ಭಾವವಿಹ್ವಲವಾಗುತ್ತದೆ, ಇಂಥ ನೂರಾರು ತೆರನಾದ ಪ್ರಸನ್ನತೆ, ಸಂತೋಷ, ಆನಂದ, ಉಲ್ಲಾಸ, ಸತ್ಕಾರ್ಯೋತ್ಸಾ ಹಾದಿಗಳ ಮನಃಸ್ಥಿತಿಯನ್ನು ಸತ್ವಗುಣವೆನ್ನಲಾಗಿದೆ.
ಅಹಂಪ್ರಜ್ಞೆ ಮನುಷ್ಯನಿಗೆ ಸಹಜವಾದುದು, ಸಾಮಾನ್ಯವಾದುದು, ಇದರಿಂದಾಗಿ ಮನುಷ್ಯ ಉತ್ಕರ್ಷವನ್ನು (exellence) ಬಯಸುತ್ತಿದ್ದಾನೆ. ಈ ಉತ್ಕರ್ಷಕ್ಕಾಗಿ ದಿನ ದಿನವೂ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿರುತ್ತಾನೆ, ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿಕ್ಕಾಗಿ ಹೆಣಗಾಡುತ್ತಾನೆ, ಹೋರಾಡುತ್ತಾನೆ. ಮನುಷ್ಯನ ಪೌರುಷ ಆತನನ್ನು ಜೀವನಸಂಗ್ರಾಮದಲ್ಲಿ ನಿಷ್ಠುರ ಸ್ಪರ್ಧಾಪ್ರವೃತ್ತಿಯನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ. ಆತನ ಮಹತ್ವಾಕಾಂಕ್ಷೆ ಬದುಕಿನಲ್ಲಿ ಅಧಿಕಾರ, ಸಂಪತ್ತು, ಸಾಮಾಜಿಕ ಪ್ರತಿಷ್ಠೆ, ಕೀರ್ತಿ-ಗೌರವಗಳಿಗಾಗಿ ಶ್ರಮಿಸುವ ಶಕ್ತಿ-ಉತ್ಸಾಹಗಳನ್ನು ಆತನಿಗೆ ಅರಳಿಸಿಕೊಡುತ್ತದೆ. ಇಂಥ ಅಹಂಕಾರ, ದರ್ಪ, ಮಹತ್ವಾಕಾಂಕ್ಷೆ, ಸ್ಪರ್ಧಾಪ್ರವತಿ ಮೊದಲಾದವುಗಳು ರಜಸ್ಸಿನ ಪರಿಣಾಮಗಳು.
ಆದರೆ ಮಹತ್ವಾಕಾಂಕ್ಷೆಯ ಮಾರ್ಗದಲ್ಲಿ ಶಾಂತಿಯಿಲ್ಲ, ಅಲ್ಲಿ ಈರ್ಷ್ಯೆಯಿದೆ, ದಾಹ ವಿದೆ, ಬಯಸಿದಂತೆ ಆಗದಿದ್ದಾಗ ಮನಸ್ಸು ಕ್ರೋಧದಿಂದ ಕಿಡಿಕಿಡಿಯಾಗುತ್ತದೆ.

ಕೆಲವೊಂದು ಸನ್ನಿವೇಶಗಳಲ್ಲಿ ಭಯ-ಸಂಶಯ-ವಿಷಾದಗಳೂ ಸಹ ನಮ್ಮನ್ನಾವರಿಸಿ ಬಿಡುತ್ತವೆ, ನಮ್ಮ ನಿರಾಶೆಯ ನೋವು ಅತ್ಯಂತ ತೀವ್ರರೂಪ ತಾಳಿದಾಗ ನಮ್ಮ ಚೇತನೆ ಆಲಸ್ಯ, ಜಡತೆ, ಪ್ರಮಾದಗಳ ಹಿಡಿತದಲ್ಲಿ ಸಿಕ್ಕಿ ಬೀಳುತ್ತದೆ, ಇಂಥ ಅನೇಕ ಭಾವಸ್ಥಿತಿಗಳನ್ನು ತಮೋಗುಣವೆನ್ನಲಾಗಿದೆ.
ಗುಣಾತ್ಯಯವನ್ನು ವಿವರಿಸುತ್ತ ಪ್ರಕೃತ ಶ್ಲೋಕದಲ್ಲಿ ಶ್ರೀಕೃಷ್ಣ ಬೋಧಿಸುತ್ತಾನೆ : ತನ್ನ ಸ್ವಯಂಪ್ರಜ್ಞೆಯ ಬಲದಿಂದ ಮನುಷ್ಯನು ಈ ತ್ರಿವಿಧ ಪ್ರವೃತ್ತಿಗಳ ವೇಗಕ್ಕೆ ಸಿಲುಕದೆ ಅಭೇದ್ಯವಾದ ನಿರ್ಲಿಪ್ತತೆಯ ಶುದ್ಧಸ್ಥಿತಿಯಲ್ಲಿ ನಿಲ್ಲಬೇಕು, ಇಂಥ ವ್ಯಕ್ತಿ ಸತ್ವಗುಣದ ಪ್ರಕಾಶವನ್ನಾಗಲೀ (ಬೆಳಕು, ಜ್ಞಾನ), ರಜೋಗುಣದ ಪ್ರವೃತ್ತಿಯನ್ನಾಗಲೀ (ಪರಿಶ್ರಮ, ಹೋರಾಟ), ತಮೋಗುಣದ ಮೋಹವನ್ನಾಗಲೀ (ಭ್ರಾಂತಿ, ಅಜ್ಞಾನ, ಭಯ), ಪರಿಸ್ಥಿತಿಯ ಒತ್ತಡದಿಂದ ನಮ್ಮ ಅಂತರಂಗದ ಭಾವ ಸ್ಥಿತಿಗಳಲ್ಲಿ ಮೂಡಿ ಬಂದಾಗ ದ್ವೇಷಿಸುವುದಿಲ್ಲ, ಅಥವಾ ಕಾಲಾಂತರದಲ್ಲಿ ಇಂಥ ಮಾನಸಿಕ ಗುಣಧರ್ಮಗಳು ಪರಿಸ್ಥಿತಿಯ ಪ್ರಭಾವಕ್ಕೊಳಪಟ್ಟು ನಮ್ಮ ಮನದ ಭಾವ ಭಿತ್ತಿಯಿಂದ ಮಾಯವಾಗಿ ದೂರ ಸರಿದಾಗ ಅವು ಇನ್ನೂ ನಮ್ಮ ಸಂಗಾತಿಗಳಾಗಿರಲೆಂದು ಹಂಬಲಿಸುವುದಿಲ್ಲ, ಪ್ರಕೃತಿಯ ಗತಿಪ್ರವಾಹದಲ್ಲಿ ಎಂಥ ಸ್ಥಿತಿ ಮೂಡಿ ಬಂದರೂ ದ್ವೇಷವಿಲ್ಲ, ಯಾವ ಸ್ಥಿತಿ ಸಿಗಲಾರದೆ ಇಳಿದು ಸರಿದರೂ ಅದರ ಅಭಿಲಾಷೆಯಿಲ್ಲ, ಗುಣಾತೀತನಾದ ವಿವೇಕಿ ನಿಯತಿಯ ಪ್ರವಾಹದಲ್ಲಿ ತೇಲಿಬಂದ ಎಂಥ ಉತ್ತಾನ-ಪತನಗಳನ್ನೂ ಅಂತರ್ಮೌನದ ಸ್ವೀಕೃತಿ (complete, unconditional acceptance of all that actually is) ಯಿಂದ ಪೂಜಿಸುತ್ತಾನೆ, ಇದು ವಾಸ್ತವಿಕತೆ (ಸತ್ಯ) ಯನ್ನು ಪೂಜಿಸುವ, ಗೌರವಿಸುವ, ಭಜಿಸುವ, ಸೇವಿಸುವ ವಿಧಾನ, ಇಂಥ ಪೂಜೆ ಮಾಡುವ ಅರ್ಹತೆ ನವ ಚೇತನೆಗೆ ಇರದಿದ್ದರೆ ನಗಾರಿ-ಜಾಘಂಟೆಗಳ ಗದ್ದಲದಿಂದ ಯಾವ ದೇವರನ್ನು ಮೋಸಗೊಳಿಸಲು ನಾವು ಸಮರ್ಥರಾದೇವು ? ಕೃಷ್ಣನ ದೃಷ್ಟಿಯಲ್ಲಿ ಅಂತರಂಗದ ಶುದ್ದಿಯೇ ಜೀವನದ ಆರಂಭ.
ಸತ್ವದ ಪ್ರಕಾಶವನ್ನು ನಾವು ಯಾವಾಗಲೂ ಬಯಸುತ್ತೇವೆ, ರಜಸ್ಸಿನ ವಿವಿಧ ಪ್ರವೃತ್ತಿಗಳು ನಮ್ಮ ನಿತ್ಯದ ವ್ಯವಹಾರದಲ್ಲಿ ತುಂಬಿಕೊಂಡಿವೆ, ತಮಸ್ಸಿನ ಮೋಹಭ್ರಾಂತಿಗಳನ್ನು ನಾವು ದ್ವೇಷಿಸುತ್ತೇವೆ, ಇದರಿಂದ ನಮ್ಮ ಅಂತಃಸ್ಥಿತಿಗಳ ಬಗೆಗೆ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳನ್ನು ನಾವು ತೋರತೊಡಗುತ್ತೇವೆ ಮತ್ತು ಅನೇಕ ಸಂಘರ್ಷಗಳನ್ನೊಳಗೊಂಡ ಆಂತರಿಕ ಏರಿಳಿತಗಳ ದುರಭ್ಯಾಸ ನಮ್ಮ ಅಂತಃಸ್ವಭಾವದ ಅಂಗವಾಗಿಬಿಡುತ್ತದೆ, ಅಂತರಂಗದ ಈ ಓಡಾಟದ ವಿಕಲತೆ ಮಾಯವಾಗದೆ ಬಾಳಿನ ಕೇಂದ್ರದಲ್ಲಿ ಸಮಾಧಾನದ (=ಸಮಾಧಿ, concentration,

cessation of all dissipations)ಸ್ಥಿತಿ ಮೂಡಿ ಬರಲಾರದು, ಅಂತರಂಗದ ಚೈತನ್ಯ ಶಕ್ತಿಗಳನ್ನು ಚದರಿಹೋಗದಂತೆ ಇರಿಸಿಕೊಳ್ಳಲಾರದೆ ಹೋದರೆ ತನ್ನ ಅಂತಃಶಕ್ತಿಗಳ ಸ್ವಾಮಿತ್ವವನ್ನು ಮನುಷ್ಯ ಪಡೆಯಲಾರ ಮತ್ತು ಈ ಶಕ್ತಿಗಳನ್ನು ತನ್ನ ಜೀವನದ ವಿವಿಧ ಕರ್ತವ್ಯಗಳ ಪಾಲನೆಗಾಗಿ ಉಪಯೋಗಿಸಿಕೊಳ್ಳಲಾರ, ಸಮಾಧಿಯನ್ನು ಪಡೆಯಲಾರದ ವ್ಯಕ್ತಿ ತನ್ನ ಚೈತನ್ಯ ಶಕ್ತಿಗಳು ವಿಕ್ಷಿಪ್ತಗೊಳ್ಳುತ್ತಿರುವ ಸ್ಥಿತಿಯಲ್ಲಿ ಕ್ಲೇಶ, ನೋವು, ಸಂಘರ್ಷ, ಸಂಕಟಗಳಿಂದ ಮುಕ್ತನಾಗುವುದು ಎಂದಿಗೂ ಸಾಧ್ಯವಿಲ್ಲ. ಗುಣತ್ರಯದ ಸಂವೇದನೆಗಳು ಬಾಲ್ಯದಿಂದ ನಮ್ಮಂತರಂಗವನ್ನು ಕದಡುತ್ತಿದ್ದುದರಿಂದಲೇ ನಾವು ವಿವಿಧ ರೀತಿಯ ಪ್ರತಿಕ್ರಿಯೆಯ ದುರಭ್ಯಾಸ ಪಡೆದು ವೈಷಮ್ಯದ ಮೂರ್ತಿಗಳಾಗಿದ್ದೇವೆ, ಈ ವಿಷಮ ಮನೋವೃತಿಯಿಂದಾಗಿ ಮೌಸ್ತವಿಕತೆಯ ಸಮುದ್ರದಲ್ಲಿ ಮೂಡಿ ಬರುತ್ತಿರುವ ವಿವಿಧ ಸಂವೇದನೆಗಳನ್ನು ನಾವು ನಿರ್ವಿಕಾರರಾಗಿ ಸ್ವೀಕರಿಸಲು ಅಸಮರ್ಥರಾಗಿದ್ದೇವೆ, ನಮ್ಮ ಅಂತರ್ಜವನದ ಸಂಸ್ಕಾರಕ್ಕಾಗಿ ನಾವು ಕೈಗೊಳ್ಳುವ ಎಲ್ಲ ಪ್ರಯತ್ನಗಳೂ ಇನ್ನಷ್ಟು ಒಳ ಸಂಘರ್ಷಗಳನ್ನುಂಟುಮಾಡುವುದರಿಂದ ನಾವು ಯತ್ನ ಪಟ್ಟಷ್ಟು ಬದುಕು ಜಟಿಲಗೊಳ್ಳುತ್ತಿದೆ, ನಮ್ಮ ಎಲ್ಲ ಪ್ರಯತ್ನಗಳೂ ಅಂತಃಶಾಂತಿಯ ಸಂಪಾದನೆಯಲ್ಲಿ ಹೀಗೇಕೆ ವಿಫಲಗೊಳ್ಳುತ್ತಿದೆಯೆಂದು ನಾವು ದಿಗ್ಭ್ರಾಂತರಾಗಿದ್ದೇವೆ, ಆದರಸೆ ಹೀಗಾಗಬೇಕಾಗಿಲ್ಲ. ಗುಣತ್ರಯದ ಎಲ್ಲ ಸಂವೇದನೆಗಳನ್ನೂ ಮೌನವಾಗಿ ಸ್ವೀಕರಿಸುತ್ತ ಬಂದರೆ, ‘ಪ್ರಕಾಶ’ದ ಯಾವ ಭವ್ಯ ಸ್ಥಿತಿಗಾಗಿಯು ಮನಸ್ಸು ಹಾತೊರೆಯದಿದ್ದರೆ, ಬದುಕಿನ ಎಲ್ಲ ಏರಿಳಿತಗಳಲ್ಲೂ ಮೌನಜಾಗೃತ ಚೈತನ್ಯವನ್ನು (silent receptivity) ಬೆಳೆಸಿಕೊಂಡು ಬಂದರೆ ಉಚಿತ ಸನ್ನಿವೇಶಗಳು ಸೇರಿ ಬಂದಾಗ ಚೇತನೆ ತಿಳಿಯಾಗಬಹುದು. ಇದಕ್ಕಾಗಿ ಶ್ರೀಕೃಷ್ಣ ಹೇಳುತ್ತಾನೆ : ನ ದ್ವೇಷ್ಟಿ ಸಂಪ್ರವೃತ್ರಾನಿ, ನ ನಿವೃತ್ರಾನಿ ಕಾಂಕೃತಿ, ತನ್ನ ಬಾಳಿನ ಪರಿಧಿಯೊಳಗೆ ಮೂಡಿ ಬಂದ ಯಾವ ಸಂವೇದನೆಯನ್ನೂ ಪ್ರಾಜ್ಞ ದ್ವೇಷಿಸುವುದಿಲ್ಲ, ತನ್ನಿಂದ ದೂರಸರಿದ ಯಾವ ಭಾವಸ್ಥಿತಿಗೂ ಆತ ಲೋಭ ಪಡುವುದಿಲ್ಲ.
ವ್ಯರ್ಥ ಸ್ಪಂದನಗಳ ಅಂತಃಕೋಲಾಹಲದಿಂದ ಮಾನವ ಚೇತನೆಯನ್ನು ಮೇಲೆತ್ತಿ ಅದರಲ್ಲಿ ಗುಣಾತ್ಯಯದ ಶುದ್ದಿ ಶಕ್ತಿಗಳನ್ನು ತುಂಬಲು ತೊಡಗಿರುವ ಶ್ರೀಕೃಷ್ಣ ಮೇಲಿನ ಮಾತುಗಳಲ್ಲಿ ತನ್ನ ಸಮತೆಯನ್ನು ಚೆನ್ನಾಗಿ ತೋರಿಸಿಕೊಟ್ಟಿದ್ದಾನೆ ನಾವು ಆತ್ರೋದ್ಧಾರದ ಹೆಸರಿನಲ್ಲಿ ಕಟ್ಟಿಕೊಂಡಿರುವ ಜ್ಞಾನ, ಭಕ್ತಿ, ಸೇವೆ, ಪುಣ್ಯ ಮುಕ್ತಿ……. ಇಂಥ ನೂರಾರು ವಿಷಯಗಳು ಸಾತ್ವಿಕ ಪ್ರಕಾಶದ ವರ್ಗಕ್ಕೆ ಸೇರಿ. ಕೊಂಡಿದ್ದರೆ, ಅಂಥ ಸಾತ್ವಿಕ ಪ್ರಕಾಶವನ್ನು ತಾಮಸ ಮೋಹ ಭ್ರಾಂತಿಗಳ ಸಾಲಲ್ಲಿ ನಿಲ್ಲಿಸಿ ಎಲ್ಲಕ್ಕೂ ಪ್ರಾಜ್ಞನ ನಿರ್ಲಿಪ್ತತೆಯ ಉತ್ತರವನ್ನು ಇಲ್ಲಿ ನೀಡಿದ್ದಾನೆ.

ನಿಜವಾದ ಪ್ರಾಜ್ಞ ಮೋಹ (ಭ್ರಾಂತಿಗಳನ್ನೂ ಬಯಸುವುದಿಲ್ಲ, ಜ್ಞಾನ-ಮುಕ್ತಿ ಗಳನ್ನೂ ಬಯಸುವುದಿಲ್ಲ, ಆತನಿಗೆ ಪ್ರಕಾಶ ಎನ್ನುವ ಶಬ್ದದಲ್ಲಿ ಆಕರ್ಷಣೆಯಿಲ್ಲ, ತಮಸ್ಸೆಂಬ ಶಬ್ದದಿಂದ ಭಯವಿಲ್ಲ.
ಬದುಕಿನ ಭಾವಸ್ಥಿತಿಗಳನ್ನು ಶ್ರೀಕೃಷ್ಣ ಈ ಶ್ಲೋಕದಲ್ಲಿ ಎರಡು ಬಾರಿ ವಿಂಗಡಿಸಿ ತೋರಿಸಿದ್ದಾನೆ. ಮೊದಲು ಸಾಂಪ್ರದಾಯಿಕವಾದ ರೀತಿಯಿಂದ ಪ್ರಕಾಶ-ಪ್ರವೃತ್ತಿಮೋಹಗಳ ಹೆಸರನ್ನು ಪ್ರಸ್ತಾಪಿಸಿ, ಈ ಮೂರನ್ನೂ ಒಂದೇ ಸಾಲಲ್ಲಿ ನಿಲ್ಲಿಸಿ ಮುಂದಿನ ‘ಸಂಪ್ರವೃತ್ತಾನಿ’ ಮತ್ತು ‘ನಿವೃತ್ತಾನಿ’ ಎಂಬ ಶಬ್ದಗಳಿಂದ ಇದೇ ಭಾವ ಸ್ಥಿತಿಗಳನ್ನು ಪುನಃ ವಿಭಾಗಿಸಿ ತೋರಿಸುತ್ತಾನೆ, ಈ ರೀತಿಯ ವಿಭಜನೆ ಮನುಷ್ಯನಿಗೆ ತುಂಬ ಅಗತ್ಯವಾದದ್ದು, ಆತ ಎರಡು ಲೋಕಗಳಲ್ಲಿ ಜೀವಿಸುವ ಪ್ರಾಣಿ, ಆತ ವಾಸ್ತವಿಕತೆಯ ಲೋಕದಲ್ಲಿ ಕಾಲೂರಿ ನಿಂತಿದ್ದಾನೆ, ಆದರೆ ಆತನ ಮನ ಕಲ್ಪನಾ ಲೋಕದಲ್ಲಿ ಓಡಾಡುತ್ತಿದೆ. ತನ್ನ ವಾಸ್ತವಿಕ ಸನ್ನಿವೇಶಗಳಿಂದ ಆತನೆಂದೂ ತೃಪ್ತಿ ಪಟ್ಟಿಲ್ಲ. ಆದುದರಿಂದಲೇ ತನ್ನ ಕಲ್ಪನಾ ಪ್ರಪಂಚದ ಛಾಯಾಚಿತ್ರಗಳೆಡೆಗೆ ಧಾವಿಸಲು ಹವಣಿಸುತ್ತಿರುತ್ತಾನೆ. ವಾಸ್ತವಿಕ ವಿದ್ಯಮಾನಗಳನ್ನು ಆತ ದ್ವೇಷಿಸುತ್ತಾನೆ, ತನಗೆ ಸಿಗಲಾಗದ ವಸ್ತುವಿಗಾಗಿ ಹಂಬಲಿಸುತ್ತಾನೆ. ಆತನಿಗೆ ಕೈ ಹಿಡಿದ ಮಡದಿಯಲ್ಲಿ ಆಕರ್ಷಣೆ ಉಳಿದಿಲ್ಲ, ಆದರೆ ಬೀದಿಯ ಬಣ್ಣದ ಹಕ್ಕಿಗಳನ್ನು ಕಂಡು ಆತ ಕವಿಹೃದಯ ಪಡೆಯುತ್ತಾನೆ, ನಮ್ಮಲ್ಲಿ ವಾಸ್ತವವಾದಿ (realists) ಗಳೆಂದು ಹೇಳಿಕೊಳ್ಳುವ ಮಹಾ ಮಹಾ ಮೂರ್ಖ ವಿದ್ವಾಂಸರು ನಿಜವಾಗಿ ವಾಸ್ತವಿಕತೆಯನ್ನು ಸ್ವೀಕರಿಸಿ ಅವಾಸ್ತವವಾದ ಭಾವಸ್ಥಿತಿಗಳಿಗಾಗಿ ಹಂಬಲಿಸದೆ ಇರುತ್ತಿದ್ದರೆ ಇಂದಿನ ಆಧುನಿಕ ನಿರಾಶಾವಾದಿಗಳ ಸಂಖ್ಯೆ ಎಷ್ಟು ಕಡಿಮೆಯಾಗುತ್ತಿತ್ತು! ನಿರಪೇಕ್ಷವಾದ ಬದುಕು ಕೊಡಲಾಗದುದನ್ನು ತಾನು ಬಯಸಿ ನಿರಾಶನಾಗುವುದ ರಲ್ಲಿ ಯಾವ ವಿವೇಕವಿದೆಯೆಂಬುದನ್ನು ನಮ್ಮಲ್ಲೆಷ್ಟು ನಿರಾಶ ವಾಸ್ತವವಾದಿಗಳು ತಿಳಿದುಕೊಂಡಿದ್ದಾರೆ ? ಪ್ರಕೃತಿಯಿಂದ ಯಾ ವಾಸ್ತವಿಕತೆಯು ಸಾಗರದಿಂದ ನಮ್ಮ ನಮ್ಮ ಪಾಲಿಗೆ ಬಂದ ನೋವು-ನಲಿವುಗಳನ್ನು ಸ್ವೀಕರಿಸಿ, ಸಿಗಲಾರದ ಯಾವ ಭಾವಸ್ಥಿತಿಗೂ ಹಂಬಲಿಸದ ವಿವೇಕ ನಮ್ಮಲ್ಲೆಷ್ಟು ಜನ ಪಡೆದಿದ್ದಾರೆ? ಶ್ರೀಕೃಷ್ಣ ಈ ಹೊಸ ವಿಭಜನೆಯಿಂದ ನಮ್ಮ ಕಣ್ಣು ತೆರೆಯಲು ಸಹಕರಿಸಿದ್ದಾನೆ. ನ ದ್ವೇಷ್ಟಿ ಸಂಪ್ರವೃತ್ತಾನಿ. ಪ್ರಾಜ್ಞನು ತನ್ನ ಜೀವನದ ಪರಿಧಿಯೊಳಗೆ ಮೂಡಿಬಂದ ವಾಸ್ತವಿಕತೆ ಹೇಗೆಯೇ ಇರಲಿ, ಅದನ್ನು ದ್ವೇಷಿಸುವುದಿಲ್ಲ, ನ ನಿವೃತ್ತಾನಿ ಕಾಂಕ್ಷತಿ. ತನ್ನ ಜೀವನದ ಪರಿಧಿಯೊಳಗೆ ತೇಲಿ ಬಾರದ ತನ್ನ ಮಟ್ಟಿಗೆ ಅವಾಸ್ತವವಾದ ಸನ್ನಿವೇಶ ಎಷ್ಟೇ ಆಕರ್ಷಕವಿರಲಿ, ಅದಕ್ಕಾಗಿ ಹಂಬಲಿಸುವುದಿಲ್ಲ.

ನಮ್ಮೆಲ್ಲರ ಮನ ಒಮ್ಮೊಮ್ಮೆ ವ್ಯಥೆಗೊಳ್ಳುತ್ತದೆ : ‘ಹೀಗಾಗಬಾರದಿತ್ತು” “ಹೀಗೆ ಆಗಿದ್ದರೆ ಎಷ್ಟು ಚೆನ್ನಾಗಿತ್ತು’, ಬದುಕಿನ ಅನೇಕ ವಾಸ್ತವಿಕತೆಗಳನ್ನು ನಾವು ದ್ವೇಷಿಸುವುದರಿಂದಲೇ ನಮಗೆ ಹೀಗಾಗಬಾರದಿತ್ತೆಂದೆನಿಸುತ್ತದೆ, ಇದರಂತೆಯೇ ಅವಾಸ್ತವವಾದ ಸುಖ ಸಂಪತ್ತಿಗಾಗಿ ನಾವು ಕಾತರರಾಗುವುದರಿಂದಲೇ ಹೀಗೆ ಆಗಿದ್ದರೆ ಎಷ್ಟು ಚೆನ್ನಾಗಿತ್ತೆಂದು ನನಗೆ ತೋರುತ್ತದೆ, ವಾಸ್ತವಿಕ ವಿದ್ಯಮಾನಗಳನ್ನು ಮೆಚ್ಚಿ ಸ್ವೀಕರಿಸಿ ಅವಾಸ್ತವದ ಕನಸು ಕಾಣುವ ಮೂರ್ಖತನ ನಮ್ಮಲ್ಲಿ ಕಡಿಮೆಯಾಗಿರುತ್ತಿದ್ದರೆ ಹೆಚ್ಚು ನೆಮ್ಮದಿ ನಮ್ಮಲ್ಲಿ ಇರುತ್ತಿರಲಿಲ್ಲವೇ ? ಯಾವುದು ನಿಜವಾಗಿಯೂ ಇದೆ, ಅದು ತನ್ನ ಅದಮ್ಯ ಪ್ರಭಾವ ಬೀರುತ್ತಿದೆ, – ಯಾವುದು ನಿಜವಾಗಿಯೂ ಇಲ್ಲ, ಅದರಿಂದ ಯಾವ ಪರಿಣಾಮವೂ ಆಗುತ್ತಿಲ್ಲ, (ನಾಸತೋ ವಿದ್ಯತೇ ಭಾವಃ ನಾಭಾವೋ ವಿದ್ಯತೇ ಸತ:) -ಎಂಬ ವಿವೇಕ ನಮಗೆ ಸ್ಪಷ್ಟವಾದಷ್ಟು ಬಾಳ್ವೆ ಸರಲವಾಗಲಾರದೇ ? ನಾವೆಲ್ಲ ನಮ್ಮ ವಾಸ್ತವಿಕ ಸನ್ನಿವೇಶಗಳನ್ನು ಎಷ್ಟೆಷ್ಟು ತೀವ್ರ ವಾಗಿ ದ್ವೇಷಿಸುತ್ತಿರುವೆವೋ, ಅವಾಸ್ತವಕ್ಕಾಗಿ ಎಷ್ಟೆಷ್ಟು ಹಂಬಲಿಸುತ್ತಿರುವೆವೋ, ಅಷ್ಟೇ ನಮ್ಮ ಜೀವನ ಜಟಿಲತರ ಸಮಸ್ಯೆಯಾಗಿ ರೂಪುಗೊಳ್ಳುತ್ತಿದೆ, ವಾಸ್ತವಿಕತೆಯನ್ನು ನಾವೆಷ್ಟು ವಿವಿಧ ರೂಪಗಳಿಂದ ದ್ವೇಷಿಸುತ್ತಿರುವೆವೆಂಬಂಶವನ್ನು ನಮ್ಮಲ್ಲಿ ಪ್ರತಿಯೊಬ್ಬನೂ ಆತ್ಮವಿಮರ್ಶನ ಮಾಡಿ ನೋಡಿದರೆ ನಮ್ಮ ನಮ್ಮ ನಿಜರೂಪ ನನಗೆ ಅರಿವಾಗುತ್ತದೆ. ನಮ್ಮ ಸುತ್ತುಮುತ್ತಲಿನ ವ್ಯಕ್ತಿಗಳು, ಅವರ ಆಚಾರವಿಚಾರಗಳು, ಅವರ ನಡೆ-ನುಡಿಗಳು, ಅವರ ಸಂಸ್ಕಾರ-ವಿಕೃತಿಗಳು, ನಮ್ಮ ಸಮಾಜದ ರೀತಿ ನೀತಿಗಳು, ನಮ್ಮ ಸಂಪ್ರದಾಯದ ಕ್ರಮ ನಿಯಮಗಳು…… ಇಂಥ ನೂರಾರು ವಿಷಯಗಳನ್ನು ನಾವು ಇಚ್ಚಾದ್ವೇಷಗಳ ಬಣ್ಣ ಬಳಿಯದೆ ನೋಡಲು ಯೋಗ್ಯರಾಗಿಲ್ಲ, ನಮ್ಮ ಚಿಂತನ, ಶೋಧನೆ, ಸಾಧನೆಗಳೆಲ್ಲಾ ಇಚ್ಚಾದ್ವೇಷಗಳ ಬಿಡಿಸಲಾಗದ ಬಲ್ಲೆಗಳು, ಇಚ್ಚಾದ್ವೇಷಗಳಿಲ್ಲದ ತಟಸ್ಥ ದೃಷ್ಟಿಯಿಂದ ನಾವು ವಿಶ್ವದ ನಿರಪೇಕ್ಷಸ್ಪಂದನಗಳನ್ನು ನೋಡುತ್ತಿಲ್ಲ, ಇದಕ್ಕಾಗಿ ಶ್ರೀಕೃಷ್ಣ ಹೊಸ ಪ್ರಜ್ಞೆ ಪಡೆಯಲು ಪ್ರೇರೇಪಿಸುತ್ತಾನೆ. ಇಚ್ಚಾದ್ವೇಷಗಳಿಲ್ಲದೆ ಬದುಕಿನ ಸನ್ನಿವೇಶಗಳನ್ನು ಸ್ವೀಕರಿಸುವ ಜಾಗೃತಪ್ರಜ್ಞೆ.
ಬಾಳಿನ ಸಾವಿರಾರು ಪ್ರವೃತ್ತಿಗಳನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸುತ್ತ ಸಾಗಿದರೆ ಅವೆಲ್ಲವುಗಳ ಮೂಲದಲ್ಲಿ ಕೇವಲ ಎರಡು ಪರಸ್ಪರ ವಿರೋಧಿಯಾದ ಪ್ರವೃತ್ತಿಗಳು ವಿವಿಧ ರೀತಿಯ ತೀವ್ರತೆಯಿಂದ ಪ್ರಭಾವ ಬೀರುತ್ತಿರುವುದನ್ನು ನಾವು ಗಮನಿಸಬಹುದು, ನಮ್ಮ ಸುತ್ತಲಿನ ಪ್ರತಿ ವ್ಯಕ್ತಿಯನ್ನೂ, ಪ್ರತಿ ಘಟನೆಯನ್ನೂ ಪ್ರತಿ ಸನ್ನಿವೇಶವನ್ನೂ “ಬೇಕು’ ‘ಬೇಡ’ ಗಳ ಬಣ್ಣದಿಂದ ಬಳಿದು ನೋಡುವ ಅಭ್ಯಾಸವನ್ನು ನಾವು ಬಾಲ್ಯದಿಂದ ಬೆಳೆಸಿಕೊಂಡು ಬಂದಿದ್ದೇವೆ, ಅನೇಕ ಸನ್ನಿವೇಶಗಳನ್ನು ಕೆಲವು

ಕಾರಣದಿಂದ ‘ಬೇಕು’ ಕೆಲವು ಕಾರಣದಿಂದ ‘ಬೇಡ’ವೆಂಬ ಪರಸ್ಪರ ವಿರೋಧಿಯಾದ ಬಣ್ಣಗಳಿಂದ ಏಕಕಾಲದಲ್ಲಿ ಬಳಿದು ನೋಡುತ್ತೇವೆ, ಒಥೆಲೊನ ಕಣ್ಣಿನಿಂದ ಉಕ್ಕಿ ಬಂದ ಪ್ರೀತಿ ದ್ವೇಷಗಳ ಕಣ್ಣೀರು (cruel tears) ಪತ್ನಿ ಡೆಸ್ಟಿ ಮೋನಾಳ ಮೇಲೆ ಅತ್ಯಂತ ತೀವ್ರ ರೀತಿಯಲ್ಲಿ ವರ್ತಿಸಿದುದನ್ನು ನಾವೆಲ್ಲ ಕೇಳಿದ್ದೇವೆ. ಮೇಲಿಂದ ಮೇಲೆ ಜಗಳಾಡುತ್ತ ಪರಸ್ಪರರನ್ನು ಪ್ರೀತಿಸುವ ದಂಪತಿಗಳನ್ನು ನಾವು ಮನೆ ಮನೆಗಳಲ್ಲ ಕಾಣಬಹುದು, ಈ ವಿರೋಧೀ ಒತ್ತಡಗಳು ಅತ್ಯಂತ ತೀವ್ರರೂಪ ತಾಳಿದಾಗ ಜನರ ವ್ಯಕ್ತಿತ್ವವೇ ಭಯಂಕರ ಸಂಕಟಕ್ಕೆ (mental crises) ಗುರಿಯಾಗುವ ಸ್ಥಿತಿ ಮನದ ರಹಸ್ಯಗಳನ್ನರಿತ ವಿದ್ವಾಂಸರಿಗೆ ಅತ್ಯಂತ ಪರಿಚಿತವಾಗಿದೆ, ಈ ‘ಬೇಕು’ ‘ಬೇಡಗಳ ಉಗಲಾಟದಿಂದಾಗಿ ವಾಸ್ತವಿಕ ಪ್ರಪಂಚದಲ್ಲಿ ಸರ್ವಥಾ ಇರದ ವಿಚಿತ್ರ ವಿಚಿತ್ರ ಸಮಸ್ಯೆಗಳು ನಮ್ಮ ಅಂತರಂಗದಲ್ಲಿ ಉದಿಸುತ್ತಿವೆ. ಈ ತಾಕಲಾಟದಿಂದ ಉಂಟಾದ ಕೇಶಕಾರ್ಪಣ್ಯಗಳು ಸ್ವತಃ ನಿರಪೇಕ್ಷವೂ, ನಿರಾಕಾರನೂ, ನಿರ್ವರ್ಣನೂ ಆದ ನಮ್ಮ. ಆತ್ಮನಿಗೆ ಹೊಸ ಆಕಾರ, ಹೊಸ ಬಂಧನ, ಹೊಸ ಬಣ್ಣಗಳನ್ನು ಕೊಡುತ್ತಿವೆ, ಈ ವಿರೋಧೀ ಪ್ರವೃತ್ತಿಯಿಂದಾಗಿ ಶುಭ್ರವರ್ಣದ ಬಾಳು ಒಮ್ಮೆ ಬಿಳಿ (ಸತ್ವ) ಯಾಗಿ, ಒಮ್ಮೆ ಕೆಂಪಾ (ರಜಸ್) ಗಿ, ಒಮ್ಮೆ ಕಪ್ಪಾ (ತಮಸ್‌) ಗಿ ರೂಪಾಂತರಗೊಳ್ಳುತ್ತಿದೆ, ಬಾಳಿನ ಅಪಾರವಾದ ಶುಭ್ರವರ್ಣವನ್ನು ನಾವು ಕಾಣಬೇಕಾದರೆ ಇಚ್ಚಾದ್ವೇಷಗಳಿಂದ ತಟಸ್ಥ ದ್ರಷ್ಟಾರರಾಗಬೇಕು.
ಹಾಗಿದ್ದರೆ ಈ ‘ಬೇಕು’ ‘ಬೇಡ’ ಗಳಿಲ್ಲದ ಗುಣಾತೀತನಾದ ವ್ಯಕ್ತಿ ಕರ್ತವ್ಯನಿಷ್ಠನಾಗುವ ಬಗೆ ಹೇಗೆ ? ತನಗೆ ಸೃಹಣೀಯವಾದ ಒಂದು ಸ್ಥಿತಿಯನ್ನು ಮನಗಂಡು, ಅದನ್ನು ಬಯಸಿ, ಅದಕ್ಕಾಗಿ ಯತ್ನಿಸಿ ದುಡಿಯುವುದು ಸಹಜವಾದ ಕ್ರಮ. (ಚಾನಾತಿ, ಇಚ್ಛತಿ, ಯತತೇ) ಬಯಕೆಯಿರದಿದ್ದರೆ ನಮ್ಮ ಯತ್ನವನ್ನು ಉತ್ತೇಜಿಸುನ ಪ್ರೇರಣೆಯಲ್ಲಿದೆ ? ಯತ್ನವಿರದ, ಶೋಧನೆಯಿರದ, ಸಾಧನೆಯಿರದ, ಪ್ರಗತಿಯಿಲ್ಲದ ಬಾಳ್ವಗೆ ಪ್ರಾಪ್ತಿ ಸಿದ್ಧಿ, ಪುರುಷಾರ್ಥಗಳು ಏನಿವೆ ? ವಿಶ್ವವೊಂದು ವ್ಯರ್ಥ ವ್ಯಾಪಾರವೇ ? ಬಾಳೊಂದು ನಿರುದ್ದೇಶವಾದ ಮೂರ್ಖ ಕತೆಯೇ ? ನಮ್ಮ ವೇದವೇದಾಂತಗಳು ನಮ್ಮೆಲ್ಲ ಶಾಬ್ಲಿಕ ಪ್ರಪಂಚಗಳು ಸಂತೆಮಾರ್ಕೆಟ್ಟಿನ ಸದ್ದು ಗದ್ದಲಗಳೇ ?
ಮೌದು, ಸೃಷ್ಟಿ ಯೊಂದು ವ್ಯರ್ಥವ್ಯಾಪಾರ, ಆದರೆ ಕ್ಷಣಕಾಲ ಯೋಚಿಸಿ ನೋಡಿ. “ವ್ಯರ್ಥವ್ಯಾಪಾರ’ ‘ಮೂರ್ಖ ಕತೆ’ ‘ಸಂತೆಮಾರ್ಕೆಟ್ಟಿನ ಸದ್ದು ಗದ್ದಲಗಳು’-ಇಂಥ ಉದ್ಯೋಗಪೂರ್ಣ ಶಬ್ದಗಳಲ್ಲಿ ಏನು ಕಾಣುತ್ತಿದೆ ? ವಿಶಾಲವಾದ ಸೃಷ್ಟಿಯಲ್ಲಿ ತನ್ನ ಅನಂತೆಗೆ ಭದ್ರವಾದ ಪುರುಷಾರ್ಥವೊಂದನ್ನು ಪಡೆಯಲಾರದೆ ವ್ಯಥೆಪಡುವ ನಮ್ಮ

ಸ್ವಾರ್ಥದ ವ್ಯರ್ಥ ಆಕ್ರೋಶ ಕಂಡುಬರುವುದಿಲ್ಲವೇ ? ಇಂಥ ಅಹಂಕಾರದ ಒಳ ಬಂಧನ ನಮಗಿರದಿದ್ದರೆ ಇದೇ ಅರ್ಥವನ್ನು ಚಂದಮಾತಿನಲ್ಲಿ ಹೇಳಬಹುದಾಗಿದೆ. ಸೃಷ್ಟಿ ನಿರಾಯಾಸವಾದ, ನಿರುದ್ದೇಶವಾದ, ಎಂದೆಂದೂ ರೂಪಾಂತರ ತಾಳುತ್ತಿದ್ದರೂ ಎಂದೆಂದೂ ನಾಶವಾಗದ ನಿರಪೇಕ್ಷ ಅಸ್ತಿತ್ವ, ಆ ಅಸ್ತಿತ್ವದ ಅನಂತಕಾಲದ ಲೀಲೆಯ ಪ್ರಕ್ರಿಯೆಯಲ್ಲಿ ಈ ಭೂಮಿ, ಈ ಮಾನವ ಸಭ್ಯತೆ, ಈ ಸಭ್ಯತೆಯ ವಿಚಿತ್ರ ವಿವಿಧ ಸೌಂದರ್ಯ ವೈಭವಗಳು ಉದಿಸಿ ಬಂದಿರಬಹುದಾಗಿದ್ದರೂ ಆ ಅಸ್ತಿತ್ವ ಈ ಸೌಂದರ್ಯ ಸೌಧದ ನಿರ್ಮಾಣ ‘ಬೇಕೆಂದು ಮಾಡಿಲ್ಲ, ಮುಂದೆ ಈ ಭೂಮಿ, ಸೂರ್ಯ ಮೊದಲಾದ ನಮ್ಮ ಸಮೀಪದ ಬಂಧುಗಳೆಲ್ಲಾ ಕಾಲಗರ್ಭದಲ್ಲಿ ಲೀನರಾಗುವಾಗ (ಯಮಂತಕೋ ಪ್ಯೇತಿ ವಿನಾಶಕಾಲೇ) 1 ಆ ಅಸ್ತಿತ್ವ ಇದು ‘ಬೇಡ’ ಎಂಬ ದ್ವೇಷದಿಂದ ಹಾಗೆ ಮಾಡುವುದಿಲ್ಲ, ನನ್ನ ನಿಮ್ಮ ಯಾವ ವ್ಯಕ್ತಿತ್ವದ ಉತ್ಕರ್ಷಕ್ಕಾಗಿಯೂ ಈ ಸತ್ತೆ ಸ್ಪಂದಿಸುತ್ತಿಲ್ಲ, ಸಂಪೂರ್ಣ ನಿರಪೇಕ್ಷತೆ ಇದರಲ್ಲಿ ತುಂಬಿರುವುದರಿಂದಲೇ ಇದು ಸಂಪೂರ್ಣ ಸ್ವತಂತ್ರವಾದ ಶಕ್ತಿಯಾಗಿದೆ, ಶಬ್ದಗಳಿಂದ ವಿವರಿಸ ಬಹುದಾದ ಯಾವ ರೀತಿ, ಕ್ರಮ, ಪದ್ಧತಿ, ಗುಣಧರ್ಮಗಳೂ ಇದರ ಶಾಶ್ವತರೂಪ ವಾಗಿರದಿರುವುದರಿಂದಲೇ, ಇಂಥ ಯಾವ ಆಕೃತಿಗಳಿಗೂ ಅಲಿಪ್ತವಾದುದರಿಂದಲೇ ಆ ಸತ್ತೆ ಸ್ವಯಂ ನಿರಾಧಾರವಾಗಿದ್ದು ಬದುಕಿನ ಎಲ್ಲ ನಾಮರೂಪಗಳ ನಾಟಕಕ್ಕೆ ಆಧಾರವಾಗಿವೆ, ಇಂದಿನ ಅಂತರಿಕ್ಷವಿಜ್ಞಾನ, ಭೌತವಿಜ್ಞಾನ ಮೊದಲಾದ ಹೊಸ ತಿಳುವಳಿಕೆಗಳ ನಿಲುಮೆಯನ್ನು ಒಮ್ಮೆ ಯೋಚಿಸಿ ನೋಡಿ, ಈ ವಿಶ್ವದಲ್ಲಿ ಶೂನ್ಯದಿಶೆ (space) ಎಷ್ಟು ? ಭೌತಿಕ ಪದಾರ್ಥವೆಷ್ಟು ? ಇವುಗಳಲ್ಲ ಜೀವನಕ್ಕೆ ಸರ್ವಥಾ ಅನುಪಯುಕ್ತವಾಗಿ ಕಾಣುವ ಪದಾರ್ಥವೆಷ್ಟು ? ಜೀವನ ನಿರ್ಮಾಣೋಪಯೋಗಿ ಯಾದ ಸರಕುಗಳೆಷ್ಟು ? ಇಂಥ ಸರಕುಗಳಲ್ಲೂ ಜಡವೆಷ್ಟು ? ಚೈತನ್ಯವೆಷ್ಟು ? ಈ ಚೈತನ್ಯದ ಒಳಲೋಕವನ್ನು ಪರೀಕ್ಷಿಸುವ ಯೋಗ್ಯತೆ ನಿಮ್ಮಲ್ಲಿದ್ದರೆ ಚೆನ್ನಾಗಿ ಪರೀಕ್ಷಿಸಿ ನೋಡಿ, ಈ ಜಡತೆಯ ರಾಶಿಯನ್ನು ಏಕೆ ಮನುಷ್ಯ ಚೇತನವೆಂದು ಈ ತನಕ ಕರೆದುಕೊಂಡು ಬಂದಿದ್ದಾನೆ ? ವಿಜ್ಞಾನಿ ಅಚ್ಚರಿಗೊಂಡಿದ್ದಾನೆ : ನಾಲ್ಕು ದಿನಗಳ ಜಡಚೈತನ್ಯಕ್ಕಾಗಿ, ಸಂಘರ್ಷ-ಸಂಕಟಗಳಿಂದ ಬೆಂದ ಚೈತನ್ಯಕ್ಕಾಗಿ ಎಷ್ಟೊಂದು ಬೃಹದಾಕಾರದ ಜಡರಾಶಿ ಕಾಲದ ಆದ್ಯಂತಗಳಿಲ್ಲದ ವ್ಯಾಪ್ತಿಗಳಲ್ಲಿ ಕೈಕಾಲು ಮುರಿದು ನಮ್ಮ ಸುತ್ತಲಿನ ಅಪಾರ ಶೂನ್ಯತೆಯಲ್ಲಿ ತೇಲಾಡುತ್ತ ಬಿದ್ದು ಕೊಂಡಿದೆ ! ಅಪಾರ ಶೂನ್ಯತೆ-ಜಡತೆಗಳ ವಿಸ್ತಾರವಾಗಿರುವ ಇಂಥ ವಿಶ್ವದ ಯಾವುದೋ ಒಂದು ದೂರದ ಮೂಲೆಯಲ್ಲಿ ಚೈತನ್ಯದ ಮಿಂಚುಹುಳ ಕೆಲಕಾಲ ಮಿನುಗಿದರೇನು? ಮಿನುಗದಿದ್ದರೇನು ? ಎಂದು ವಿಜ್ಞಾನಿ ವ್ಯಾಕುಲನಾಗಿದ್ದಾನೆ.
1–ಮಹಾಭಾರತ : ಉದ್ಯೋಗಪರ್ವ : ಆ, ೪೪ ಶ್ಲೋ , ೨೯,

ಆದರೆ ಪ್ರಕೃತಿಗೆ ಚೈತನ್ಯದಲ್ಲಿ ಪ್ರೇಮವಿಲ್ಲ, ಜಡತೆಯ ಮೇಲೆ ದ್ವೇಷವಿಲ್ಲ. ಜಡತೆಯಿಂದ ಚೈತನ್ಯ ಅರಳುತ್ತಿದೆ. ಚೈತನ್ಯದಲ್ಲೂ ಜಡನಿಯತಿಗಳೇ ತುಂಬಿಕೊಂಡಿವೆ, ಶಕ್ತಿ ವಸ್ತುಗಳು ಪರಸ್ಪರ ರೂಪಪರಿವರ್ತನೆ ಮಾಡಿಕೊಳ್ಳಬಹುದಾದಂತೆ ಚೈತನ್ಯ ಜಡದಲ್ಲಿ ಮೂಡಿಬಂದು ಪುನಃ ಜಡದಲ್ಲೇ ಮಾಯವಾಗಬಹುದು, ಈ ವಿಶಾಲ ‘ಅಸ್ತಿತ್ವ’ದ ಈ ನಿರಪೇಕ್ಷತೆಯಲ್ಲಿ ಇದರ ಸಂಪೂರ್ಣ ಶುದ್ದಿ (inpersonality) ಕಂಡು ಬರುತ್ತಿದೆ, ನಾನು-ನೀವು ಈ ಅಸ್ತಿತ್ವ (ಸತ್ಯದ ಒಂದೊಂದು ಕಿರಣಗಳು, ಅಂಶಗಳು, ನನ್ನ-ನಿಮ್ಮ ಹೊರ ರೂಪಗಳು ನಮ್ಮ ಬಾಳ ಮೂಲದ ನಿಜರೂಪಗಳಲ್ಲ. ನಮ್ಮ ಬಾಳ ಮೂಲದ ನಿಜರೂಪ ಮೇಲೆ ಹೇಳಿದ ‘ಶುದ್ಧಿ’. ಈ
ಶುದ್ಧಿಯನ್ನು ಪಡೆದಾಗ ನಾವು ಜೀವನದ ಆಳದಲ್ಲಿ ತುಂಬಿರುವ ನಮ್ಮ ಪ್ರಕೃತಿಸಮ್ಮತವಾದ ‘ನಮ್ಮತನ’ವನ್ನು ಸಂಪೂರ್ಣವಾಗಿ ಪಡೆಯುತ್ತೇವೆ, ಇದೊಂದು ಹೊಸ ಉದ್ದೇಶ ಅಥವಾ ಹೊಸ ಪ್ರಾಪ್ತಿಯಲ್ಲ, ಅವಾಸ್ತವವಾದ ಸಾವಿರ ಮುಖವಾಡಗಳು ನಮ್ಮದಲ್ಲವೆಂದು ಕಂಡುಕೊಂಡು ನಾವು ನಾವಾಗಿಯೇ ಉಳಿಯುವುದರಲ್ಲಿ ಯಾವ ಪ್ರಾಪ್ತಿಯೂ ಇಲ್ಲ, ಯಾವ ಸಿದ್ಧಿಯೂ ಇಲ್ಲ, ಅಲ್ಲಿರುವುದು ಪ್ರಕೃತಿಯಂತಹ ಅಪಾರ ಮೌನ, ಇದಕ್ಕಾಗಿ ಶ್ರೀಕೃಷ್ಣ ಇಚ್ಛಾ-ದ್ವೇಷಗಳಿರದ ಗುಣಾತ್ಯಯವನ್ನು, ಮೌನಭಾವದಿಂದ ಜೀವನವನ್ನು ಸ್ವೀಕರಿಸುವ ಯೋಗ್ಯತೆಯನ್ನು ಮೆಚ್ಚಿದ್ದಾನೆ.
ಆದರೆ ಇಚ್ಛೆಯಿಲ್ಲದೆ ಪ್ರಯತ್ನ ಪ್ರವೃತ್ತಿಗಳು ಹೇಗೆಯೆನ್ನುವ ಪ್ರಶ್ನೆಗೆ ಏನು ಪರಿಹಾರ ದೊರಕಿದಂತಾಯ್ತು ? ಶ್ರೀಕೃಷ್ಣನ ಅಭಿಪ್ರಾಯ ಹೀಗಿರಬಹುದು : ನಿರಪೇಕ್ಷನಾದ ವ್ಯಕ್ತಿಯ ಜ್ಞಾನ ನಿರಪೇಕ್ಷ ಇಚ್ಛೆ, ನಿರಪೇಕ್ಷ ಯತ್ನಗಳನ್ನು ತೋರಬಹುದು. ಜ್ಞಾನಿಯಾದ A ಯು а ಯ ಹೀನಪ್ರವೃತ್ತಿಗಳನ್ನು ಕಂಡಾಗ ಇಂಥ ಪ್ರವೃತ್ತಿಗಳು ಸಮಾಜದಲ್ಲಿ ಹಿತಕಾರಿಯಲ್ಲದುದರಿಂದಲೂ, ಈ ಹೀನಪ್ರವೃತ್ತಿಗಳು ಆ ವ್ಯಕ್ತಿಯ ಸ್ವಂತ ಹಿತಕ್ಕೆ ಘಾತಕವಾದುದರಿಂದಲೂ ಸ್ವಯಂ ವಿಚಲಿತನಾಗದೆ ತಿದ್ದಲು ಯತ್ನಿಸ ಬಹುದು, ಅಥವಾ ಅಷ್ಟೊಂದು ವಿಚಾರವಂತನಾಗಿರದ B ಯು a ಯ ಹೀನಪ್ರವೃತ್ತಿಗಳಿಂದ ಕೋಪಗೊಂಡು ಅವನಿಗೆ ಬುದ್ದಿವಾದ ಹೇಳಹೋಗಬಹುದು, ಅಥವಾ ತುಂಬ ಅವಿವೇಕಿಯಾದ C ಯು a ಯ ಹೀನಪ್ರವೃತ್ತಿಗಳಿಂದ ಸಂಕಟಪಡುತ್ತ, ಆಕ್ರೋಶಿಸುತ್ತ ಹುಚ್ಚರಂತೆ a ಮೇಲೆ ರೇಗಿಬೀಳಬಹುದು, A, B, C ಗಳನ್ನು ಕೂಡಲೇ ಡಾಕ್ಟರರ ಚಿಕಿತ್ಸೆಗೆ ಗುರಿಪಡಿಸಿದರೆ A ಸಹಜ ಸ್ಥಿತಿಯಲ್ಲಿರುವುದನ್ನೂ B ಮತ್ತು C ತಮ್ಮ ನಾಡಿಯ ಬಡಿತ, ರಕ್ತದ ಒತ್ತಡ ಮೊದಲಾದ ವಿಷಯದಲ್ಲಿ ತುಂಬ ಬದಲಾವಣೆ ಹೊಂದಿದ್ದನ್ನೂ ಕಾಣಬಹುದು, ಒಂದು ಕ್ರಿಯೆಗೆ ಸುತ್ತಲಿನ ನೂರು ಜನ ನೂರು ಪ್ರತಿಕ್ರಿಯೆಗಳನ್ನು ತೋರುತ್ತಾರೆ, ಈ ನೂರು ಪ್ರತಿಕ್ರಿಯೆಗಳು ಇವರ ಚೈತನ್ಯದ ನೂರು ರೂಪಗಳನ್ನೂ, ನೂರು ಜೀವನದೃಷ್ಟಿಗಳನ್ನೂ

ಸೂಚಿಸುತ್ತವೆ-ಆದುದರಿಂದ ಮನುಷ್ಯನ ಜೀವಯೋಗ್ಯತೆ ಅವನ ಜೀವನದೃಷ್ಟಿಯಲ್ಲಿ ಪ್ರಕಟಗೊಳ್ಳುತ್ತದೆ, ತೋರಿಕೆಗೆ ಕೆಟ್ಟವನಾಗಿ ಕಾಣುವ ವ್ಯಕ್ತಿ ವಸ್ತುತಃ ತುಂಬ ಯೋಗ್ಯನಾಗಿರಬಹುದು, ತೋರಿಕೆಗೆ ಮಹಾಯೋಗ್ಯನಾಗಿ ಕಾಣುವ ವ್ಯಕ್ತಿ ಒಳಗಿಂದ ಮಹಾಸ್ವಾರ್ಥಿಯೂ, ಕಪಟಿಯೂ ಆಗಿರಬಹುದು, ತೋರಿಕೆಗೆ ವಿವಿಧ ವೇಷಗಳನ್ನು ಧರಿಸುತ್ತಿರುವ ಶ್ರೀಕೃಷ್ಣ ಆಂತರಂಗದೊಳಗೆ ನಿರ್ವೇಷನಾಗಿರಬಹುದು. ನಾವು ಮಾಡುವ ಕರ್ಮ ಅಮುಖ್ಯ, ಅನುಪಯುಕ್ತವೆಂದು ಇದರ ಅರ್ಥವಲ್ಲ. ಕರ್ವದ ಹಿನ್ನೆಲೆಯಲ್ಲಿರುವ ನಿಲುಮೆ ಯಾ ಮನೋವೃತ್ತಿ ಕರ್ಮದ ಬೆಲೆಯ ಏರಿಳಿತಗಳಿಗೆ ಕಾರಣವಾದ ಅಂಶ, (ತಪೋ ನ ಕಲ್ಕೊsಧ್ಯಯನಂ ನ ಕಲ್ಕಃ ಸ್ವಾಭಾವಿಕೋ ವೇದ ವಿಧಿರ್ನ ಕಲ್ಕ: ಪ್ರಸಹ್ಯ ವಿತ್ರಾಹರಣಂ ನ ಕಲ್ಕಃ ತಾನೈವ ಭಾವೋಪಹತಾನಿ ಕಲ್ಕಃ 1) ಇದರಿಂದ ನಮ್ಮ ಇಚ್ಛೆ ಯತ್ನ ಕೃತಿಗಳಂತೆ ಅಹಂತೆಯ ಲೇಪವಿಲ್ಲದ ಇಚ್ಛೆ-ಯತ್ನ-ಕೃತಿಗಳ ಸಂಭಾವ್ಯತೆ ಸ್ಪಷ್ಟವಾಗಬಹುದು, ನಿಷ್ಕಾಮನಾದ ವ್ಯಕ್ತಿ ಕರ್ಮಶೀಲನಾಗಬಹುದು.
ಬದುಕಿನ ಮೂಲ ಭಾವಗಳನ್ನು ಚಿತ್ರಿಸುವ ಮಹಾಕವಿಗಳ ಮಾತು ಸರಳವಾದ ರೀತಿಯಲ್ಲಿ ಬದುಕಿನ ಅನೇಕ ಪ್ರಶ್ನೆಗಳಿಗೆ ಪರಿಹಾರವನ್ನೊದಗಿಸಬಹುದಾದ ವಿಷಯವನ್ನು ನಾವೆಲ್ಲ ಕಂಡಿದ್ದೇವೆ, ವ್ಯಾಸರ ವಾಣಿಯೂ ಸಹ ನಮ್ಮ-ನಿಮ್ಮ ಚೈತನ್ಯವು ದಾರಿತಪ್ಪಿ ಹೋಗುವ ಸನ್ನಿವೇಶದಲ್ಲೇ ತಿದ್ದಬೇಕಾದ ಅಂಶವನ್ನು ಒತ್ತಿ ಹೇಳುತ್ತದೆ, ನಮ್ಮೆಲ್ಲರಲ್ಲಿ ಇಚ್ಛೆಯೆಂಬ ವಸ್ತು ಉದಿಸಿದಾಗಲೇ ದ್ವೇಷ ಹುಟ್ಟಿಬಂದಿದೆ, ನಾವು ಬಾಳನ್ನು ಬಯಸುವುದರಿಂದಲೇ ಮೃತ್ಯು ನಮಗೆ ದ್ವೇಷವಾಗಿದೆ, ನಾವು ಜ್ಞಾನಕ್ಕಾಗಿ ಹಂಬಲಿಸುವುದರಿಂದಲೇ ಅಜ್ಞಾನದೊಡನೆ ಯುದ್ಧ ಹೂಡಲು ತೊಡಗಿದ್ದೇವೆ. ಪುಣ್ಯಲೋಭ ನಮ್ಮಲ್ಲಿರುವುದರಿಂದಲೇ ವಿವಿಧ ರೀತಿಯ ಆತ್ಮದಂಡನ, ಅಪ್ರಾಕೃತಿಕವಾದ ವಿವಿಧ ಸಂಯಮಗಳು, ಪಾಪದ ಮೇಲೆ ಜುಗುಪ್ಪೆ, ಪಾಪಿಗಳ ಮೇಲೆ ರೋಷ ಬೆಳೆದು ಬಂದಿವೆ, ಧರ್ಮದ ವ್ಯಾಮೋಹದಿಂದಾಗಿಯೇ ನಾವು ವಿಧರ್ಮಿಯರ ಮೇಲೆ ದ್ವೇಷ, ಮತ ಮತಾಂತರಗಳ ಜಗಳ ಯಾ ಅಧರ್ಮದ ಮೇಲೆ ಉಗ್ರ ಆವೇಶವನ್ನು ತಾಳುತ್ತಿದ್ದೇವೆ, ನಮ್ಮ ಸ್ವಾಭಿಪ್ರಾಯಗಳ ಮೇಲೆ ಮೋಹವಿದ್ದುದರಿಂದಲೇ ನಮಗೆ ಬೇರೆಯವರ ಅಭಿಪ್ರಾಯವು ಕ್ಷುದ್ರವಾಗಿಯೂ, ಅವಿವೇಕದ್ದಾಗಿಯೂ ತೋರಿಬರುತ್ತಿದೆ, ಮತ್ತು ಇದಕ್ಕಾಗಿಯೇ ನಾವು ಚರ್ಚೆ, ಜಗಳ, ಕಂಠಶೋಷಣೆ ಮಾಡಿಕೊಳ್ಳಬೇಕಾಗುತ್ತದೆ, ಧೋತಿಯ ಅಭ್ಯಾಸ ಪಡೆದ ವ್ಯಕ್ತಿ ಈ ಉಡುಪನ್ನೇ ಮೆಚ್ಚತೊಡಗಿದುದರಿಂದಾಗಿ ಬೇರೆ ಉಡುಪಿನ ಜನರನ್ನು ಕಂಡರೆ ಮನದೊಳಗೆ
1-ಮಹಾಭಾರತ : ಆದಿಪರ್ವ : ಅ. ೧ ಶ್ಲೋ , ೨೭೫.

ಹೇಸಿಕೆಯ ಭಾವ ತಾಳುತ್ತಾನೆ. ಕನ್ನಡ ಭಾಷೆಯ ಅಭ್ಯಾಸ ಪಡೆದ ವ್ಯಕ್ತಿಗೆ ತೆಲುಗು ಭಾಷೆಯ ಧ್ವನಿಗಳು, ಅಭಿವ್ಯಕ್ತಿಯ ಕ್ರಮಗಳು-ಎಣ್ಣೆ ಕಾಣದ ಹಳ್ಳಿಯ ಗಾಡಿಯ ಚಕ್ರದ ಸ್ವಗದಂತೆ ಒರಗಾಗಿ ತೋರಿಬರುತ್ತವೆ, ಕಪ್ಪು ಚರ್ಮದ ಆಫ್ರಿಕಾ ವಾಸಿ ಕಲ್ಲಿದ್ದಲಿನಂತೆ ಸ್ಪುರದ್ರೂಪಿಣಿಯಾದ ಸ್ವದೇಶೀ ಯುವತಿಯನ್ನು ಮೆಚ್ಚುವವನಾದುದರಿಂದ ಬಿಳಿ ಚರ್ಮದ ಲೇಡಿಯನ್ನು ಕಂಡಾಗ ಅಸಹ್ಯಪಡುತ್ತಾನ, ಕ್ಯಾಪ್ ಧರಿಸುವ ಇಂಗ್ಲೀಷರಿಗೆ ಭಾರತದ ಭಟ್ಟರ ಜುಟ್ಟನ್ನು ಕಂಡಾಗ ಅನುಕಂಪೂರ್ಣವಾದ ಎಂಥ ಜುಗುಪ್ಪೆ ಹುಟ್ಟಿತ್ತು ! ಎಷ್ಟು ಜನ ಭಾರತೀಯರು ಇಂದೂ ಸಹ ಆಧುನಿಕ ಅಮ್ಮಣ್ಣಿಗಳ ಬಾಬ್‌ಕಟ್ಟನ್ನು ಕಂಡು ಜುಗುಪ್ಪೆ ಪಡುವುದಿಲ್ಲ. ಆದರೆ ಭಾರತೀಯ ರಮಣಿಯರ ಉದ್ದವಾದ ಹಿಂಬಾಲಗಳನ್ನು ಕಂಡು ಆ ಬಾಲದ ಉದ್ಧದ ಅನುಪಾತಕ್ಕನುಗುಣವಾಗಿ ಪ್ರೇಮದ ಆವೇಶವನ್ನು ಪಡೆಯುವುದಿಲ್ಲ ! ಭಾರತೀಯ ಭಾಷೆಗಳ ಸ್ವರಪದ್ಧತಿಯ ಅಭ್ಯಾಸ ಪಡೆದ ಜನರಿಗೆ ಚೀನೀ ಭಾಷೆ ಎಂಥ ಅಪಸ್ವರವಾಗಿ ಕೇಳಿಸುತ್ತದೆ, ತರಕಾರಿ ತಿನ್ನುವವನಿಗೆ ಮಾಂಸಾಹಾರದ ಮೇಲೆ ಎಷ್ಟು ಪ್ರಾಮಾಣಿಕವಾದ ತಿರಸ್ಕಾರವಿದೆ ! ಸದಾಚಾರಿಯಾದವನಿಗೆ ವ್ಯಭಿಚಾರಿ ಎಷ್ಟು ಹೀನನಾಗಿ ಕಾಣುತ್ತಾನೆ ! ಕಳ್ಳರಿಗೆ ಸುಳ್ಳು ಹೇಳುವವರಿಗೆ ಸತ್ಯದ ಸೋಗು ಹಾಕಿರುವ ಸಭ್ಯರ ಮೇಲೆ ಎಷ್ಟು ಖಚಿತವಾದ ದ್ವೇಷವಿದೆ ! ಒಂದು ಇಚ್ಛೆಯ ಪರಿಣಾಮ ಇನ್ನೊಂದರ ಮೇಲೆ ದ್ವೇಷ, ಒಂದು ಲಿಪ್ತತೆಯ ಪರಿಣಾಮ ಇನ್ನೊಂದರ ಮೇಲೆ ಅಸಹನೆ, ಒಂದರ ಮೇಲಿನ ಒಲವು ಇನ್ನೊಂದರ ಮೇಲೆ ಉದ್ವೇಗಕ್ಕೆ ಕಾರಣ ವಾಗುತ್ತದೆ, ಲೋಭದ ಅಂತಃಸ್ಪಂದನವು ನನ್ನ ಚೇತನೆಯಲ್ಲಿ ಬಾರದೆ ಇರುತ್ತಿದ್ದರೆ ದ್ವೇಷದ ಪ್ರತಿಸ್ಪಂದನವು ಬರುತ್ತಿತ್ತೇ ? ಸಾತ್ವಿಕತೆಯ ಬಂಧನಗಳಿರದಿದ್ದರೆ ತಾಮಸಭ್ರಾಂತಿ ನಮಗೆ ಗಂಟುಬೀಳುತ್ತಿರಲಿಲ್ಲ, ಇದಕ್ಕಾಗಿ ಕೃಷ್ಣ ಹೇಳುತ್ತಾನೆ : ನ ನಿವೃತ್ತಾನಿ ಕಾಂಕ್ಷತಿ. ನಮ್ಮ ಚೈತನ್ಯ ಕೇಂದ್ರದಿಂದ ಸ್ಪುರಣಗೊಳ್ಳುತ್ತಿರುವ ಲೋಭದ ಸಹಸ್ರ ಕಂಪನಸ್ಪಂದನಗಳಿಂದಾಗಿಯೇ ನಮಗೆ ದ್ವೇಷದ ಪ್ರತಿಕಂಪನ-ಪ್ರತಿಸ್ಪಂದನಗಳು ಗಂಟು ಬಿದ್ದುದಾದರೆ ನಾವು ಬದುಕಿನ ಪ್ರತಿಕ್ಷಣದಲ್ಲೂ ವಾಸ್ತವಿಕತೆಯನ್ನು ದ್ವೇಷಿಸುತ್ತಿರುವೆವೇ ? ಹೌದು, ವಾಸ್ತವಿಕತೆ ಯಾವುದೋ ಒಂದು ರೀತಿಯಲ್ಲಿ ಉರುಳುತ್ತ ನಮ್ಮ ಕಣ್ಮುಂದೆ ಬರುವಾಗ ನಮ್ಮ ಅಭಿರುಚಿ, ನಮ್ಮ ಲಾಭ, ನಮ್ಮ ಲೋಭ, ನನ್ನ ಪುಸ್ತಕಾಧ್ಯಯನ, ಸಾಮಾಜಿಕ ಪ್ರಭಾವ ಮೊದಲಾದ ಅನೇಕ ಕಾರಣಗಳಿಂದ ನಮ್ಮ ತಲೆಯಲ್ಲಿ ತುಂಬಿದ ಭ್ರಾಂತಿಗನುಗುಣವಾಗಿ “ಹೀಗೇಕೆ’ ಎಂದು ವಾಸ್ತವಿಕತೆಯನ್ನು ಪ್ರಶ್ನಿಸುತ್ತೇನೆ. ಈ “ಹೀಗೇಕೆ’ ಎನ್ನುವ ಅಸಹನೆಯೇ ನಮಗೆ ಬದುಕಿನ ವಿವಿಧ ನೋವು ಸಂಕಟಗಳಾಗಿ ಕಂಡು ಬರುತ್ತಿದೆ, ಪ್ರಕೃತಿ ಒಂದು

ರೀತಿಯಲ್ಲಿ ಅರಳುತ್ತಿದ್ದರೆ ಅದು ಸರಿಯಲ್ಲವೆಂದು ಹೇಳುವ ಅಧಿಕಾರ ಮನುಷ್ಯನಿಗೆಲ್ಲಿದೆ? ಹೀಗೆ ಹೇಳಿದುದರಿಂದ ಏನು ಉಪಯೋಗ? ಮನುಷ್ಯನ ಅಸಹನೆ ನಿರುದ್ದೇಶವಾದ ಪ್ರಕೃತಿಯ ನಿಯತಿಯನ್ನು ಎಂದಾದರೂ ಬದಲಾವಣೆ ಮಾಡುವ ಯೋಗ್ಯತೆಯನ್ನು ಪಡೆದಿದೆಯೇ ? ಹಾಗಿದ್ದರೆ ಏಕೆ ನಾವು ವಾಸ್ತವಿಕತೆಯನ್ನು ಪ್ರತಿಕ್ಷಣವೂ ದ್ವೇಷಿಸುತ್ತಿದ್ದೇನೆ ? ೫೦ ವರ್ಷಗಳ ಅನುಭವಗಳ ಭಾರದಿಂದ ಹಣ್ಣಾದ ತಂದೆ ಉದ್ದಂಡತೆಯ ಮೋಜಿನಲ್ಲಿ ಮುಳುಗಿರುವ ತನ್ನ ತಿಳಿಗೇಡಿ ಮಗನನ್ನು ಸರಿ ದಾರಿಗೆ ತರಲೆತ್ನಿಸುವಾಗ ಸ್ವಯಂ ಉದ್ಯೋಗಪಡದೆ ಯತ್ನಿಸುವನೇ ? ಪರಿಶ್ರಮಿಯೂ ಮಿತವ್ಯಯಿಯೂ ಆದ ತಂದೆ ಸೋಮಾರಿ ಮತ್ತು ದುಂದುವೆಚ್ಚದವನಾದ ಮಗನನ್ನು ಬೋಧಿಸತೊಡಗುವಾಗ ಸ್ವಯಂ ಕೋಪಗೊಳ್ಳದೆ ಬೋಧಿಸಬಲ್ಲನೇ ? ಮಗನ ಶಿಕ್ಷಣಕ್ಕಾಗಿ ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡುವ ತಂದೆ ಪುಸ್ತಕ ಕಂಡ ಕೂಡಲೇ ಜ್ವರ ಬರುವ ಮಗನನ್ನು ಯಾವ ರೀತಿಯಲ್ಲಿ ತಿದ್ದಲೆತ್ನಿಸುತ್ತಾನೆ’ ತುಂಬ ಶಿಸ್ತು ಸಂಯಮಗಳ ಬಾಳ್ವೆಯನ್ನು ಕಾಯ್ದುಕೊಂಡ ವ್ಯಕ್ತಿ ಉಚ್ಛೃಂಖಲ ಸ್ವಭಾವದ ಜನರನ್ನು ಸಂಧಿಸುವಾಗ ಯಾವ ಪ್ರತಿಕ್ರಿಯೆ ತೋರುತ್ತಾನೆ? ಸದಾಚಾರ ಸಂಪನ್ನನಾದ ಸಾಧುವಿಗೆ ದುರಾಚಾರಿಗಳ ವಿಷಯದಲ್ಲಿ ಯಾವ ಭಾವ ಮೂಡಿ ಬರುತ್ತದೆ? ಬಾಳೆಲ್ಲ ದೈವಭಕ್ತಿಯಲ್ಲಿ ಸವೆಯಿಸಿದ ವ್ಯಕ್ತಿಗೆ ನಾಸ್ತಿಕರನ್ನು ಕಂಡಾಗ ಹೊಟ್ಟೆ ಸಂಕಟವೇಕೆ ಆಗುತ್ತದೆ ? ಒಬ್ಬ ತುಂಬ ಸಭ್ಯ ವೇಷದ ವ್ಯಕ್ತಿ ಹಳ್ಳಿಯ ಹೀನ ಹುಂಬನೊಡನೆ ವ್ಯವಹರಿಸುವಾಗ ಏಕೆ ಕಸಿವಿಸಿಗೊಳ್ಳುತ್ತಾನೆ? ಉಚ್ಚ ಜಾತಿಯ ವ್ಯಕ್ತಿ ಚಂಡಾಲನೊಡನೆ ಏಕೆ ವಿಚಿತ್ರ ರೀತಿಯಲ್ಲಿ ಮಾತಾಡುತ್ತಾನೆ? ಒಂದು ಧರ್ಮಸಂಪ್ರದಾಯದವನಿಗೆ ಬೇರೆ ಧರ್ಮ-ಸಂಪ್ರದಾಯದವನನ್ನು ಕಂಡಾಗ ಎಂಥ ಭಾವ ಉಂಟಾಗುತ್ತದೆ ? ಅನ್ನ ತಿನ್ನುವ ಜನರಿಗೆ ಹಂದಿ ತಿನ್ನುವ ಜನರನ್ನು ಕಂಡಾಗ ಏನಾಗುತ್ತದೆ ? ಈ ದೇಶದ ಜನರಿಗೆ ಬೇರೆ ದೇಶದ ಜನರ ಬಣ್ಣ, ಮಾತಿನ ರೀತಿ, ವೇಷ ಭೂಷಣಗಳು, ಚಾಳಿಗಳು, ಸಾಮಾಜಿಕ ಪದ್ಧತಿಗಳು-ಇವೆಲ್ಲ ಹೇಗೆ ಕಾಣುತ್ತಿವೆ ? ಇದೆಲ್ಲ ಏಕೆ ? ನಮ್ಮ ಸುತ್ತಲಿನ ಎಲ್ಲ ವ್ಯಕ್ತಿಗಳ ಎಲ್ಲ ಸ್ವಭಾವಗಳೂ, ಎಲ್ಲ ಚಾಳಿಗಳೂ, ಎಲ್ಲ ದೌರ್ಬಲ್ಯ ವಿಕೃತಿಗಳೂ ಶಾಶ್ವತ ಸತ್ತೆಯ ಸಹಸ್ರ ಕಿರಣಗಳು. ಈ ಸಹಸ್ರ ಮುಖಗಳ ಪ್ರತಿಯೊಂದು ರೂಪಾಂತರಕ್ಕೂ ನಮ್ಮ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ತುಂಬಿರುವ ಕಾರಣರಾಶಿಗಳಷ್ಟೇ ಪ್ರಬಲವಾದ, ಅಪರಿಹಾರವಾದ ಕಾರಣಗಳಿವೆ, ನಮ್ಮ ವ್ಯಕ್ತಿತ್ವದಂತೆ ಅವರ ವ್ಯಕ್ತಿತ್ವವೂ ಸಹ ವಾಸ್ತವಿಕತೆಯ (ಸತ್ಯದ) ಅಭೇದ್ಯ ಆಧಾರದ ಮೇಲೆ ಭದ್ರವಾಗಿ ನಿಂತಿದೆ, ತಂದೆಯ ಪ್ರೌಢ ಅನುಭವ ಎಷ್ಟು ಕಾಲೋಚಿತವಾದುದೋ ಅಷ್ಟೇ ಮಗನ ತಿಳಿಗೇಡಿತನವೂ ಕಾಲೋಚಿತವಾಗಿದೆ. ಐನ್‌ಸ್ಟೀನನಿಗೆ ವಿಶಾಲವಾದ ಭೌತಿಕ ಪ್ರಪಂಚದ ಗಂಭೀರ ಪ್ರಜ್ಞೆ ಎಷ್ಟು ಸಹಜಗತವಾಗಿತ್ತೋ ಅಷ್ಟೇ ಹಳ್ಳಿಯ ಹೆಡ್ಡನಿಗೆ ಹುಂಬತನವೂ ಸಹಜ ಸಂಗತವಾಗಿದೆ.

ಎಲ್ಲರೂ ಬಾಳ್ವೆಯ ಯಾವುದೋ ಒಂದು ಸಂಭಾವ್ಯತೆಯನ್ನು ಮೈದಳೆದು ಬಂದಿದ್ದಾರೆ, ಯಾವ ವ್ಯಕ್ತಿಯ ಯಾವುದೇ ಒಂದು ಸಣ್ಣ ದೊಡ್ಡ ದೌರ್ಬಲ್ಯ-ಸಾಮರ್ಥ್ಯಗಳ ನಿಷ್ಕಾರಣವಾಗಿ ಸಂಭವಿಸಿಲ್ಲ, ನಮ್ಮ ಸುತ್ತಲಿನ ಪ್ರಪಂಚದ ಇಂಥ ಜನರ ವಿವಿಧ ಸ್ವರೂಪ-ಸ್ವಭಾವಗಳನ್ನು ಸರಿಯಾಗಿ, ಸ್ಪಷ್ಟವಾಗಿ, ನಾವು ತಿಳಿಯಬೇಕಾದರೆ, ಇಂಥ ಜನರ ಜೀವನದ ಅಭಿವ್ಯಕ್ತಿಗಳ ಸಂಪೂರ್ಣ ಇತಿಹಾಸದ ಕೆಲವು ಎಳೆಗಳನ್ನಾದರೂ ನಾವು ಗಮನಿಸಬೇಕಾದರೆ ಇಚ್ಛಾ-ದ್ವೇಷಗಳ ಕಂಪನಕ್ಕೊಳಪಡದ ಸ್ಥಿರ ದೃಷ್ಟಿಯಿಂದ ಬಾಳನ್ನು ನೋಡುವ ಯೋಗ್ಯತೆ ನಮ್ಮದಾಗಬೇಕು, ನಮ್ಮ ಸುತ್ತಲಿನ ಎಲ್ಲ ವ್ಯಕ್ತಿಗಳೂ ನಮ್ಮಂತೆಯೇ ಬಾಳಿ ಬೆಳೆಯುವ ಪೂರ್ಣ ಅಧಿಕಾರವನ್ನು ಪಡೆದಿರುವರೆಂದು ಖಚಿತವಾಗಿ ಒಪ್ಪಿಕೊಳ್ಳುವ ಉದಾರತೆ ನಮ್ಮಲ್ಲಿ ಬರಬೇಕು, ಆದುದರಿಂದಲೇ, ಬಾಳಿನ ಅಜ್ಞಾತ ವಾಸ್ತವಿಕತೆಗಳ ಆಧಾರದಿಂದ ಮೂಡಿ ಬಂದ ಯಾವ ಅಭಿವ್ಯಕ್ತಿಯನ್ನೂ (=ಯಾವ ವ್ಯಕ್ತಿಯನ್ನೂ, ಯಾವ ಜೀವನ ಕ್ರಮವನ್ನೂ, ಯಾವ ರೀತಿ ನೀತಿಗಳನ್ನೂ…………….) ಪ್ರಾಜ್ಞ ದ್ವೇಷಿಸುವುದಿಲ್ಲ, ನ ದ್ವೇಷ್ಟಿ ಸಂಪ್ರವೃತ್ತಾನಿ
ಸಮಾಜದ ನೂರಾರು ಪ್ರಭಾವಗಳಿಗೊಳಪಟ್ಟು ದಿನ ದಿನವೂ ವಿಚಿತ್ರ ರೀತಿಯ ವಿಕೃತಿಯನ್ನೋ ಸಂಸ್ಕಾರವನ್ನೋ ತನ್ನ ಚೇತನೆಯಲ್ಲಿ ಬೆಳೆಸಿಕೊಳ್ಳುತ್ತಿರುವ ಪ್ರತಿಯೊಬ್ಬ ಮನುಷ್ಯನೂ ಸಮಾಜದ ಚಾಳಿಗಳ ಪ್ರವಾಹದಲ್ಲಿ ಹರಿದಾಡುತ್ತಿರುವ ನಿರುಪಾಯ ಜೀವಿ (helpless being) ಎಂಬ ಮಾತಿನಂತೆಯೇ ಮನುಷ್ಯನು ತನ್ನ ವಿವೇಕವನ್ನು ತಾನೇ ಬೆಳಗಿಸಿಕೊಳ್ಳಬಲ್ಲ ತನ್ನ ಭಾಗ್ಯವಿಧಾತನೆಂಬ ಮಾತನ್ನೂ ನಾವು ಹೇಳಬಹುದಾಗಿದೆ, ತನ್ನ ಸಹಜ ವಿವೇಕವನ್ನು ಬೆಳೆಸಿಕೊಂಡಂತೆಲ್ಲಾ ಬಾಳಿನ ನೋವುಗಳನ್ನು ಜೀರ್ಣಿಸಿಕೊಂಡು ಬೆಳೆಯುವ ಅರ್ಹತೆಯನ್ನು ಆತ ಪಡೆಯುತ್ತಾನೆ. ಇದರಿಂದಲೇ ಪ್ರತಿಯೊಬ್ಬನೂ ತನ್ನ ಜೀವನ ದೃಷ್ಟಿಯನ್ನು ತನ್ನದೇ ಆದ ವಿವೇಕದಿಂದ ಸ್ವಯಂ ರೂಪಿಸುತ್ತಾ, ತನ್ನ ಸುಖ ದುಃಖಗಳನ್ನೂ, ನೋವು ನಲಿವುಗಳನ್ನೂ ತಾನೇ ನಿರ್ಮಿಸುತ್ತಾ, ತನ್ನ ವ್ಯಕ್ತಿತ್ವದ ಮೂರ್ತಿಯನ್ನು ಕೆತ್ತಿ ನಡೆಯುವ ಶಿಲ್ಪಿಯೂ ಆಗಿದ್ದಾನೆ ಈ ಯೋಗ್ಯತೆಯಿಂದಾಗಿ ತನ್ನ ಬದುಕಿನ ಒಟ್ಟು ಲಾಭ ಹಾನಿಗಳಿಗೆಲ್ಲ ಮನುಷ್ಯನು ಸ್ವಯಂ ತಾನೇ ಜವಾಬ್ದಾರನಾಗಿದ್ದಾನೆ, ಪ್ರತಿ ಜೀವಿಯೂ ಈ ರೀತಿ ಆತ್ಮವಿಸ್ತರಣ ಕಾರ್ಯದಲ್ಲಿ ತೊಡಗುವುದರಿಂದಲೇ ಲೋಕದಲ್ಲಿ ಇಷ್ಟೆಲ್ಲ ಸ್ಪರ್ಧೆ ಸಂಘರ್ಷಗಳು ಕಂಡುಬರುತ್ತಿವೆ. ಇವರಲ್ಲನೇಕರು ಈ ಆತ್ಮವಿಸ್ತರಣ ಕಾರ್ಯಕ್ಕಾಗಿ ಆತ್ಮಘಾತಿಯಾದ (self defeating) ಪದ್ದತಿಯನ್ನನುಸರಿಸುವಂತೆ ಕಂಡುಬರುತಿದ್ದರೂ ತ್ಯಾಗದ ಸುಲಭ ಮಾರ್ಗದ ಪ್ರಶಸ್ತತೆಯನ್ನರಿತವರು ಸರ್ವಥಾ ಇಲ್ಲವೆನ್ನ ಲಾಗುವುದಿಲ್ಲ, ಇಂಥ ಜನ ಬದುಕಿನ ಎಲ್ಲ ವ್ಯಕ್ತಿಗಳಲ್ಲೂ ಜೀವನ ತತ್ವ ತನ್ನಂತೆಯೇ

(81)
ತುಂಬಿರುವುದನ್ನು ಸರ್ವದಾ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಆದುದರಿಂದಲೇ ಪ್ರಾಜ್ಞ ನಾದ ತಂದೆ ತಿಳಿಗೇಡಿಯಾದ ಮಗನನ್ನು ತಿದ್ದಲು ಯತ್ನಿಸುವುದು ಸಹಜವಾಗಿದ್ದರೂ ಆತನ ಪ್ರಯತ್ನದಲ್ಲಿ ಮಗನ ತಿಳಿಗೇಡಿತನವನ್ನು ದ್ವೇಷಿಸುವ ಅಭ್ಯಾಸವಿರುವುದಿಲ್ಲ. ಸ್ವಯಂ ಸ್ವತಂತ್ರ ಜೀವನದ ಅರ್ಹತೆಯನ್ನು ಪಡೆದು ಬಂದ ಮಗನ ಮೇಲೆ ತಂದೆಗೆ ‘ತನ್ನವನು’ ಎಂಬ ಬಂಧನವಿರದ ಕಾರಣ ಮಗನ ತಿಳಿಗೇಡಿತನ ತಂದೆಯ ದ್ವೇಷವನ್ನು ಕೆರಳಿಸದೆ ಆತನ ಕರ್ತವ್ಯ ಪ್ರಜ್ಞೆಯನ್ನರಳಿಸಬಹುದು, ಇಂಥ ನೂರಾರು ಸನ್ನಿವೇಶ ಗಳಲ್ಲಿ ಪ್ರಾಜ್ಞ ಸ್ವಯಂ ಉದ್ವಿಗ್ನನಾಗದೆ ಸನ್ನಿವೇಶಕ್ಕೆ ಒಪ್ಪುವಂತೆ ಕರ್ತವ್ಯ ಪಾಲನೆ ಮಾಡುತ್ತ ನಾಲ್ಕು ದಿನದ ಬಾಳ್ವೆಯನ್ನು ವಿನೋದವಾಗಿ ಬಾಳಬಲ್ಲ. ನ ದ್ವೇಷ್ಟಿ.
ಮನುಷ್ಯನು ಯಾವ ರೀತಿಯ ಸುಖ ದುಃಖಗಳನ್ನು ಎಷ್ಟು ತೀವ್ರವಾಗಿ ಅನುಭವಿಸು ತಿರುವನೆಂಬುದಕ್ಕೆ ಪ್ರಕೃತಿ ಸ್ವಯಂ ಮಾನದಂಡವಾಗಿ ನಿಂತಿದೆ. ಎರಡರೊಡನೆ ಇನ್ನೆರಡನ್ನು ಜೋಡಿಸಿದಾಗ ನಾಲ್ಕೇ ಆಗುವಂತೆ ಬಾಹ್ಯ ಸನ್ನಿವೇಶಗಳಿಗೆ ವ್ಯಕ್ತಿ ತೋರುವ ತನ್ನ ವೈಯಕ್ತಿಕ ಪ್ರತಿಕ್ರಿಯೆಗಳಿಗನುಸಾರವಾಗಿ ಆತ ಸುಖವನ್ನೊ ದುಃಖವನ್ನೋ ಅನುಭವಿಸುತ್ತಿದ್ದಾನೆ. ತನ್ನ ಅರ್ಹತೆಗೆ ಮೀರಿದ ಯಾವ ಸುಖ ದುಃಖಗಳನ್ನೂ ಮನುಷ್ಯ ಅನುಭವಿಸುತ್ತಿಲ್ಲ. ಉಂಡ ಅನ್ನದ ತುತ್ತು ಜೀರ್ಣವಾಗದೆ ನರಳುವ, ನಿದ್ರಾದೇವಿಯ ಆಹ್ವಾನದಲ್ಲೇ ರಾತ್ರಿಯ ಕಾಲಕ್ಷೇಪ ಮಾಡುವ, ತನ್ನ ಕೈ ಹಿಡಿದವಳ ವಿಷಯದಲ್ಲಿ ಜಿಗುಪ್ಪೆ ಪಡುತ್ತ ಬೀದಿಯ ಬಣ್ಣದ ನಾಯಿಗಾಗಿ ಹಾತೊರೆಯುವ ಯಾ ಇಂತಹ ಇತರ ಅನೇಕ ಸಮಸ್ಯೆಗಳಿಂದ ಕೊರಗುವ ಲಕ್ಷಾಧೀಶನಿಗೆ ಬ್ಯಾಂಕಿನ ಎಕೌಂಟ್‌ನಲ್ಲಿ ಎಷ್ಟು ಡಾಲರುಗಳಿದ್ದರೇನು ಫಲ? ಇದಕ್ಕೆ ವಿಪರೀತವಾಗಿ ದಾರಿದ್ರ, ಅಜ್ಞಾನ, ಅಂಧಶ್ರದ್ಧೆ, ಗುಲಾಮಗಿರಿ, ಜಡಸ್ವಭಾವಗಳ ಆನಂದದಲ್ಲೇ ಸುದೀರ್ಘವಾದ ಬಾಳ್ವೆಯನ್ನು ರಸನಿಮಿಷವಾಗಿ ಬಾಳತಕ್ಕ ಜನ ಸಾಕಷ್ಟು ಇಲ್ಲವೇ ? ನಮ್ಮ ನಮ್ಮ ಜೀವನ ದೃಷ್ಟಿಯ ವಿವಿಧ ಮಾದರಿಗಳಿಗೆ ಅನುಗುಣವಾಗಿ ಸುಖ ದುಃಖಗಳ ವರದಾನ ಪ್ರಕೃತಿಯ ಸಹಜಸಿದ್ಧ ಗಣಿತದಿಂದ ತಾನೇ ತಾನಾಗಿ (automatically) ನಮಗೆ ಸಿಗುತ್ತಿದೆ, ೨೦ನೆಯ ಶತಮಾನದಲ್ಲಿ ಅತೃಪ್ತಿ-ಅಶಾಂತಿಗಳು ಹೆಚ್ಚಾದುದು ಕಂಡುಬಂದರೆ ಅದು ನಮ್ಮ ಅರ್ಹತೆಗೆ ದೊರೆತ ಪುರಸ್ಕಾರ, ಆದುದರಿಂದ ನಮ್ಮ ಅರ್ಹತೆಯೇ ನಮಗೆ ಪುರಸ್ಕಾರವಾಗಿರುವ ಈ ವಿಶ್ವದಲ್ಲಿ ಎಲ್ಲವೂ ಸರಿಯಾಗಿದೆ, ಪ್ರಾಜ್ಞ ಯಾವುದನ್ನೂ ದ್ವೇಷಿಸಬೇಕಾಗಿಲ್ಲ, ನ ದ್ವೇಷ್ಟಿ ಸಂಪ್ರವೃತ್ರಾನಿ ಪ್ರತಿಯೊಬ್ಬನೂ ತನ್ನೊಳಗಿನ ಕತ್ತಲುಕೋಣೆಯೊಳಗೆ ದೃಷ್ಟಿ ಹರಿಸಿ ನೋಡಿದ

ಹೊರ ವಿಶ್ವದ ಮೌನಶಕ್ತಿಗಳ ವಿವಿಧಸ್ಪಂದನಗಳು ನಮ್ಮ ಬಯಕೆಗೆ ವಿಪರೀತವಾಗಿ ಬರುವಂತೆ ಕೆಲವೊಮ್ಮೆ ನಮಗೆ ಅನುಕೂಲವಾಗಿ ಬರುವುದನ್ನೂ ಕಾಣಬಹುದು. ಆಗ ನಾವು ಆನಂದದಿಂದ ಉಬ್ಬಿಬಿಡುತ್ತೇವೆ, ಈ ಆನಂದದ ಉಬ್ಬರದಿಂದಾಗಿ ನಮ್ಮ ಗುಪ್ತ ಅಹ೦ತೆ ಇನ್ನಷ್ಟು ಸೂಕ್ಷ್ಮವಾಗಿ, ಇನ್ನಷ್ಟು ಆಳವಾಗಿ, ಇನ್ನಷ್ಟು ಪ್ರಬಲವಾಗಿ ಕೆಲವು ಜಾತಿಯ ಸಂವೇದನೆಗಳಿಗಾಗಿ ಬಾಯಿಬಿಡುವ ತನ್ನ ಸಂಸ್ಕಾರ ರೂಪವಾದ ದೌರ್ಬಲ್ಯವನ್ನು ಹೆಚ್ಚಿಸಿಕೊಳ್ಳುತ್ತದೆ, ಇದರಿಂದ ನಮ್ಮ ಅಂತಃಸಂತೋಷ ಇನ್ನಷ್ಟು ಹೊರ ಸನ್ನಿವೇಶಗಳಿಗಾಗಿ ಹಾತೊರೆಯುವ ಪರಾಪೇಕ್ಷೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಪ್ರಕೃತಿ ನಮ್ಮ ಬಯಕೆಗಳ ಗುಲಾಮಗಿರಿಗಾಗಿ ಸ್ಪಂದಿಸಲು ಸರ್ವದಾ ಸಿದ್ಧವಾಗಿದ್ದರೆ ನಾವು ಪರಾಪೇಕ್ಷಿಗಳಾಗಿದ್ದರೂ ತೊಂದರೆಯಿರುತ್ತಿರಲಿಲ್ಲ. ಆದರೆ ಪ್ರಕೃತಿ ಹಾಗಿಲ್ಲ. ಇಂಥ ಸ್ಥಿತಿಯಲ್ಲಿ ಈ ರೀತಿ ಪರವಶನಾದ ಮೂರ್ಖನು ಅನುಭವಿಸುವ ಸುಖವೂ ಸಹ ಮುಂದಿನ ದುಃಖಕ್ಕೆ ಆಹ್ವಾನವಾಗಿದೆ, ಪೀಠಿಕೆಯಾಗಿದೆ, ಇದಕ್ಕೆ ಬದಲಾಗಿ ಪ್ರಾಜ್ಞನು ಮೌನವಾಗಿ ಹೀರಿಕೊಳ್ಳುವ ದುಃಖವೂ ಸಹ ಅಹ೦ತೆಯ ಬಂಧನಕ್ಕೊಳಪಡದುದರಿಂದ ಆತನ ಹೃದಯಶಕ್ತಿಯನ್ನು ಕುದುರಿಸುವ ಹಿತವಾದ ರಸಾನುಭವವಾಗಿದೆ, ಪ್ರಾಜ್ಞನ ಮುಂದಿರುವ ವಿಶ್ವ ನಿರೀಹಸ್ಪಂದನಗಳ ನಿರಂತರ ಪ್ರವಾಹ ಮಾತ್ರ, ಇಲ್ಲಿ ಯಾರ ಅಹಂಕಾರಕ್ಕೂ ತಿರಸ್ಕಾರ-ಪುರಸ್ಕಾರಗಳಿಲ್ಲ, ಆದುದರಿಂದ ಪ್ರಕೃತಿಗೆ ಗೊತ್ತಿರದ ಸಂಕುಚಿತ ಅಹ೦ತೆಯನ್ನು ಪ್ರಕೃತಿಯ ವ್ಯಾಪಕಸತ್ತೆಯ ಪ್ರಜ್ಞೆ ಪಡೆದ ಪ್ರಾಜ್ಞ ಹೇಗೆ ತೋರಬಲ್ಲ ? ಹೀಗಿದ್ದರೂ ಉಪಸ್ಥಿತವಾದ ಬಾಳ್ವೆ ಮತ್ತು ಅದರ ವಿವಿಧ ಕರ್ತವ್ಯಗಳನ್ನು ದ್ವೇಷಿಸಬೇಕಾದ, ತ್ಯಜಿಸಬೇಕಾದ ವಿವಶತೆ (inner Compulsion) ಆತನಲ್ಲಿಲ್ಲ, ಸತ್ತ ಹೆಣ ಎತ್ತ ಬಿದ್ದರೇನು ? ನಿರೀಹವಾದ ಆತನ ಬಾಳು ಹೇಗೆ ಸ್ಪಂದಿಸಿದರೇನು ? ಇಂಥ ಒಳ ಬಿಡುಗಡೆಯನ್ನು ಪಡೆದ ಪ್ರಾಜ್ಞ ಉಪಸ್ಥಿತವಾದ ಬಾಳ್ವೆಯನ್ನು ದ್ವೇಷಿಸದೆ, ತನ್ನ ನಿಕಟ (immediate) ಸನ್ನಿವೇಶಗಳ ಪ್ರೇರಣೆಯಂತೆ ಸುಖವಾಗಿ ಹರಿದಾಡಬಲ್ಲ, ನ ದ್ವೇಷ್ಟಿ ಸಂಪ್ರವೃತ್ತಾನಿ.
ಸಾಮಾನ್ಯವಾಗಿ ನಾವೆಲ್ಲರೂ ನಾವು ಹೊರ ಪ್ರಪಂಚದ ದ್ರಷ್ಟಾರರೆಂದು ನಂಬಿಕೊಂಡಿದ್ದೇವೆ, ಆದರೆ ಇದು ನಿಜವಲ್ಲ. ನಾವು ವಸ್ತುತಃ ಹೊರ ಪ್ರಪಂಚವನ್ನು ನೋಡುತ್ತಿಲ್ಲ. ಹೊರ ಪ್ರಪಂಚದ ಅನಂತ ಕುರುಡು ಸ್ಪಂದನಗಳ ಪ್ರವಾಹವು ಯಾವುದೋ ಒಂದು ರೀತಿಯಲ್ಲಿ ಹರಿಯುತ್ತಿದ್ದಾಗ ನಮ್ಮ ವಿಶಿಷ್ಟ ಸ್ಥಿತಿಯನ್ನು ಪಡೆದುಬಂದ ದೇಹ, ಇಂದ್ರಿಯ….ಇತ್ಯಾದಿಗಳು ನಮಗಾಗಿ, ನಮ್ಮ ಅರ್ಹತೆಗನುಗುಣವಾಗಿ ನಿರ್ಮಿಸುವ ಸಂವೇದನೆಗಳನ್ನೇ ನೋಡುತ್ತ ಇದೇ ಪ್ರಪಂಚವೆಂದು ಭಾವಿಸಿ, ನಾವು ಪಡೆದ ವೇದಾಂತವನ್ನು ವಿಸ್ತಾರವಾಗಿ ಬೋಧಿಸಲು ತೊಡಗುತ್ತೇವೆ, ಆದುದರಿಂದಲೇ ನಮ್ಮಂತರಂಗದಲ್ಲಿ ಮೂಡಿಬರುವ ಸತ್ವರಜಸ್ತಮೋರೂಪವಾದ ಭಾವದೆಶೆಗಳು ನಮ್ಮ

ಒಳ ಆಳದಿಂದ ಉಕ್ಕಿಬರುವ ಏರಿಳಿತಗಳು, ಇವು ಸುಮ್ಮನೆ ಮೂಡಿ ಬರುತ್ತಿಲ್ಲ ಅಜ್ಞಾತ ವಾಸ್ತವಿಕತೆಗಳ ಒತ್ತಡದಿಂದಲೇ ಬರುತ್ತಿವೆ. ಈ ಗುಪ್ತ ಸತ್ತೆಯ ವೇಗ ಗಳನ್ನು ಎದುರಿಸಲು ನಾವು ಮಾಡುವ ಎಲ್ಲ ಪ್ರಯತ್ನಗಳೂ ಸಹ ಬಿರುಗಾಳಿಯನ್ನು ತಡೆದು ನಿಲ್ಲಿಸಲು ಕೈಚಾಚಿದಂತೆ ವ್ಯರ್ಥಸಾಹಸಗಳು, ಈ ವಾಸ್ತವಿಕತೆಯನ್ನು ಎದುರಿಸುವುದು ಅವಿವೇಕ, ಮಣಿಯುವುದು ವಿವೇಕ, ಆದುದರಿಂದಲೇ ಪ್ರಾಜ್ಞ ಸತ್ವವನ್ನು ಬಯಸುವುದಿಲ್ಲ, ತಮಸ್ಸನ್ನು ದ್ವೇಷಿಸುವುದಿಲ್ಲ, ನಾವು ಸತ್ವದ ಶಾಂತಿ, ಪ್ರಸಾದ, ಉಲ್ಲಾಸಗಳನ್ನು ಮೆಚ್ಚಿದ ಅಪರಾಧಕ್ಕಾಗಿ ಪುಣ್ಯ ಪುರುಷಾರ್ಥಗಳ ಲೋಭವನ್ನೂ ಪಾಪ-ದುಷ್ಕೃತ್ಯಗಳ ದ್ವೇಷವನ್ನೂ ಪಡೆದು ಬಂದಿದ್ದೇವೆ, ನಿಮಗೆ ತಾಮಸ ಸ್ಥಿತಿಯ ಸಂಶಯ, ಭಯ, ಚಿತ್ತಭ್ರಮಣೆ, ಮೋಹಗಳು ಬೇಡವಾದರೆ ಮೊದಲು ನೀವು ಸಾತ್ವಿಕತೆಗೆ ತಿಲತರ್ಪಣವನ್ನೀಯಬೇಕು. ನಿಮಗೆ ಅತೃಪ್ತಿ-ಅಶಾಂತಿ ಗಳು ಬೇಡವಾದರೆ ನೀವು ತೃಪ್ತಿ ಶಾಂತಿಗಳಿಗಾಗಿ ಹುಡುಕಾಡುವುದನ್ನು ನಿಲ್ಲಿಸಬೇಕು, ನಿಮಗೆ ಬದುಕಿನಲ್ಲಿ ಯಾವ ದುಃಖವೂ ಬೇಡವಾದರೆ ಮೊದಲು ಎಲ್ಲ ಸುಖಗಳನ್ನೂ ತ್ಯಜಿಸಬೇಕು, ನೀವು ನಿಜವಾಗಿ ಸಂತೋಷದಿಂದ ಉಬ್ಬುವ ದೌರ್ಬಲ್ಯ ತಾಳದಿದ್ದರೆ ಅಳುವ ದೌರ್ಬಲ್ಯ ನಿಮಗೆ ಗಂಟು ಬೀಳುತ್ತಿರಲಿಲ್ಲ, ‘ಸುಖ ಮಾತ್ರ ಬೇಕು, ದುಃಖ ಬೇಡ’ ಎನ್ನುವ ಬುದ್ಧಿವಂತಿಕೆ ನಿಮಗಿದೆ, ನಿಜ. ಆದರೆ ಬುದ್ಧಿ ಹೀನವಾದ ಆ ಪ್ರಕೃತಿಗೆ ಈ ಜಾಣ್ಮೆ ತಿಳಿದಿಲ್ಲ. ಜೀವನದ ಆದ್ಯಂತಗಳನ್ನು ನೋಡುತ್ತ ಪ್ರಕೃತಿಯಲ್ಲಿ ಲೀನನಾದ ಪ್ರಾಜ್ಞ ಸತ್ವವಾಗಲೀ, ತಮಸ್ಸಾಗಲೀ ಸಿಗಲಾರದಾಗ ಬಯಸುವುದಿಲ್ಲ, ಸಿಕ್ಕಿದಾಗ ದ್ವೇಷಿಸುವುದಿಲ್ಲ.
ನಾವು ಶಾಂತವಾಗಿ ನಿಧಾನವಾಗಿ ಯೋಚಿಸುವುದಿಲ್ಲ. ಹಾಗೆ ಯೋಚಿಸಿ ನೋಡುತಿದ್ದರೆ ಈ ಸೃಷ್ಟಿ ಎಂಥ ಶಾಂತರೂಪ ತಾಳಿ ನಮ್ಮ ಮುಂದೆ ಅರಳುತ್ತ ಸಾಗಬಲ್ಲುದು. ನಾವು ನೋಡುವಾಗ ಪ್ರತಿಯೊಂದು ಘಟನೆಯನ್ನು, ಪ್ರತಿಯೊಂದು ಸನ್ನಿವೇಶವನ್ನೂ “ಒಳ್ಳೆಯದು-ಕೆಟ್ಟದು’ ಎಂದು ಎರಡು ಗುಂಪುಗಳಲ್ಲಿ ವರ್ಗಾಯಿಸಿ ನೋಡುತ್ತಿರು‌ತ್ತೇವೆ, ಹೀಗೆ ನೋಡುವಾಗ ಎರಡು ಗುಂಪುಗಳಲ್ಲಿ ವರ್ಗಾಯಿಸುವ ಕೋಲಾಹಲ ನಮ್ಮ ಮನದೊಳಗೆ ನಡೆಯುತ್ತಿರುತ್ತದೆ, ಹೊರ ಘಟನೆಗಳು ಸುಮ್ಮನೆ ತಮ್ಮದೇ ಆದ ಜಾಡಿನಲ್ಲಿ ಸನ್ನಿವೇಶದ ಒತ್ತಡಗಳಿಂದ ತಳ್ಳಲ್ಪಡುತ್ತ ಹರಿಯುತ್ತಿವೆ, ಈ ಅಸಹಾಯ ಹರಿದಾಟದಲ್ಲಿ ಒಳ್ಳೆಯದು’ ‘ಕೆಟ್ಟದು’ ಇಲ್ಲ, ಅಲ್ಲಿರುವುದು ನಿಯತಿಯ ವೇಗಕ್ಕೆ ಒಳಪಟ್ಟ ತರಗೆಲೆಗಳ ವಿವಶತೆಗಳು, There is nothing good or bad, but thinking makes it so: ಹೊರ ವಸ್ತುಗಳನ್ನು ನೋಡ ಹೊರಟಿರುವ ನಾವು ನಮ್ಮ
ಅಭಿರುಚಿ, ಪೂರ್ವಗ್ರಹ, ದ್ವೇಷ, ಅಸಹನೆ ಮೊದಲಾದ ಸ್ವಾರ್ಥದ ನೂರಾರು ಅಂತಃಕಂಪನಗಳೊಡನೆ ನೋಡಹೋದರೆ ಏನನ್ನು ನೋಡುತ್ತೇವೆ? ಪ್ರಪಂಚವನ್ನೇ ?

ಅಥವಾ ನಮ್ಮ ಮೂರ್ಖತೆಗಳ ಹೊಲಸು ದೃಶ್ಯಗಳನ್ನೇ ? ವಾಸ್ತವಿಕತೆಯನ್ನು ನೋಡಬೇಕಾದರೆ ಸಂಪೂರ್ಣ ಒಳಮೌನ ಬೇಕು, ಸಂಪೂರ್ಣ ಸ್ವೀಕೃತಿ ಬೇಕು,
ಜಾಗ್ರತಪ್ರಜ್ಞೆ ಬೇಕು, ನ ದ್ವೇಷ್ಟಿ……..ನ ಕಾಂಕ್ಷತಿ.
ನಮ್ಮ ಬಾಳಿನ ವಿಕಾಸದ ಆಧಾರ ನಮ್ಮ ಸಾಮಾಜಿಕ ಸಂಬಂಧಗಳು (our relationship with others), ಹೊರ ವಿಶ್ವದ ಕ್ರಿಯೆಗಳಿಗೆ ನಾವು ನಮ್ಮ ಪೂರ್ಣ ಅರ್ಹತೆಗೆ ಒಪ್ಪತಕ್ಕಂತಹ ಪ್ರತಿಕ್ರಿಯೆ (response) ತೋರುತ್ತಿದ್ದೇವೆ. ಈ ಪ್ರತಿ ಕ್ರಿಯೆಗಳೇ ನಮ್ಮ ಬಾಳನ್ನು ಸಹಜ ಮಾರ್ಗದಲ್ಲಿ ಸಾಗಿಸುವ ಯಾ ಹೀನ ಮಾರ್ಗದಲ್ಲಿ ಕೆಡಹುವ, ಸಂಸ್ಕಾರ ರೂಪದಲ್ಲಿ ನಮ್ಮ ಸಂಗಾತಿಗಳಾಗಿದ್ದು ನಮ್ಮ ಭವಿಷ್ಯದ ನಿರ್ಮಾಣದಲ್ಲಿ ಪ್ರಭಾವ ಬೀರುವ ಪ್ರವೃತ್ತಿಗಳು, ನಮ್ಮ ಈ ಪ್ರತಿಕ್ರಿಯೆಗಳು ನಮ್ಮ ದೈಹಿಕ ಸ್ಥಿತಿ, ರೋಗ ರುಜಿನಗಳು, ನಮ್ಮ ಹಿರಿಯರ ಚಾಳಿಗಳು, ಸಮಾಜದ ಕುರುಡು ಪ್ರವೃತ್ತಿಗಳು, ನೂರಾರು ವರ್ಷ ಹಿಂದಿನ ಪುಸ್ತಕ……..ಮೊದಲಾದ ಪ್ರಭಾವಗಳು-ಇವೆಲ್ಲ ಭಾರಗಳಿಂದ ಎಷ್ಟು ವಿಚಿತ್ರ ರೂಪ ತಾಳಿವೆ ? ಬಾಳಿನ ಹೇಯ ಭವ್ಯ ಸನ್ನಿವೇಶಗಳಿಗೆ ಇಚ್ಛಾ-ದ್ವೇಷದ ವಿಕೃತ ಕಂಪನಗಳಿಂದ ಸ್ಥಿರ ಪ್ರತಿಕ್ರಿಯೆ ಸರ್ವದಾ ತೋಡುತ್ತ ಸಾಗಬಲ್ಲ ಮಹಾ ಪ್ರಭಾವನಾದ ಪುರುಷೋತ್ತಮ ನಮ್ಮಲ್ಲಿ ಯಾರಿದ್ದಾನೆ? ಸ್ಥಿರಪ್ರತಿಕ್ರಿಯ ತೋರಬಲ್ಲನಾದರೆ ಆತ ಗುಣಾತೀತ.
ಹಾಗಿದ್ದರೆ, ಶ್ರೀಕೃಷ್ಣನ ಒಟ್ಟು ಸಾರಾಂಶವೇನು ?
ಕೃಷ್ಣನ ಅಭಿಪ್ರಾಯವಿಷ್ಟೇ, ಗುರುಗಳು, ಆಚಾರ್ಯರು……..ಇವರನ್ನು ನಾನು ಹೇಗೆ ಕೊಲ್ಲಲಿ ಎನ್ನುವ ಅರ್ಜುನನ ವೇದಾಂತ ಸರಿಯಲ್ಲ. ಮಧ್ಯಮ ಪಾಂಡವನಾಗಿ ಆತ ತನಗೆ ತಿಳಿಯದೆಯೇ ಹುಟ್ಟಿ ಬಂದಿದ್ದಾನೆ, ಯೋಗ್ಯತೆಯನ್ನು ಬೆಳೆಸಿಕೊಂಡಿದ್ದಾನೆ. ರಾಜ್ಯದಲ್ಲಿ ಪಾಂಡವರಿಗೆ ಸರಿಯಾದ ಹಕ್ಕಿದೆ. ಈ ಹಕ್ಕನ್ನು ದುರ್ಯೋಧನ ಆಕ್ರಮಣ ಮನೋವೃತ್ತಿಯಿಂದ ಕಸಿದುಕೊಂಡಿದ್ದಾನೆ. ಪಾಂಡವರು ದ್ರೌಪದಿ ಯೊಡನೆ ೧೩ ವರ್ಷ ವನವಾಸವನ್ನನುಭವಿಸಿ ಬಂದರೂ ದುರ್ಯೋಧನನ ಸ್ವಾರ್ಥ ತಣಿದಿಲ್ಲ. ಸಂಧಾನದ ಯತ್ನಗಳೆಲ್ಲ ವ್ಯರ್ಥವಾಗಿವೆ, ಹಕ್ಕಿಗಾಗಿ ಹೋರಾಡದೆ ಬೇರೆ ಉಪಾಯವೇ ಇಲ್ಲ.
ಈ ಹೋರಾಟದಲ್ಲಿ ದುರ್ಯೋಧನನ ಪಾಪಿ ಅನ್ನವನ್ನು ತಿಂದ ಅಪರಾಧಕ್ಕಾಗಿ ಭೀಷ್ಮದ್ರೋಣಾದಿಗಳೂ ಬಲಿಯಾಗಬೇಕಾಗಿದೆ, ಹೀಗೆ ಪರಿಸ್ಥಿತಿಪ್ರಾಪ್ತನಾದ ಯುದ್ಧ ‘ತನ್ನಿಂದಾಗುತ್ತದೆ’ ಎಂದು ಅರ್ಜುನ ಹೇಳುವುದರಲ್ಲಿ ಔಚಿತ್ಯವೇನಿದೆ ?

ದುರ್ಯೋಧನನ ಸಂಹಾರ ಅವನ ಪಾಪಕೃತ್ಯಗಳಿಂದ ಪ್ರೇರಿತವಾದ ವಿವಿಧ ಸನ್ನಿವೇಶಗಳಿಂದ ಸ್ವಯಂ ಆಗುತ್ತಿದೆ, ಇದರಲ್ಲಿ ಅರ್ಜುನ ತೋರಿಕೆಯ ಒಂದು ನಿಮಿತ್ತ ಮಾತ್ರ, ಅರ್ಜುನ ಈ ಸನ್ನಿವೇಶದಲ್ಲಿ ಯಾವ ಒಳ್ಳೆ-ಕೆಟ್ಟ ಯೋಚನೆಗಳನ್ನೂ ಮಾಡದೆ, ನಿರ್ವಿಕಲ್ಪನಾಗಿ, ಬಾಣದ ಸುರಿಮಳೆಗೈದು ಕುರುಕ್ಷೇತ್ರದ ಸಂಹಾರಕಾರ್ಯ ಮಾಡಿದರೆ ಮತ್ತು ಈ ಕಾರ್ಯದ ಹಿನ್ನೆಲೆಯಲ್ಲಿ ಬಹುಮುಖವಾಗಿ ಒತ್ತುತ್ತಿರುವ ವಾಸ್ತವಿಕತೆಯ ಪ್ರಜ್ಞೆಯನ್ನಿಟ್ಟುಕೊಂಡು, ಅದಕ್ಕೆ ಸರ್ವಸ್ವನನ್ನೂ ಅರ್ಪಿಸಿದರೆ ಆತನಿಗೆ ಪುಣ್ಯವೂ ಇಲ್ಲ, ಪಾಪವೂ ಇಲ್ಲ, ಕುರುಕ್ಷೇತ್ರದ ಕಾರ್ಯ ಹೇಗಾಗಬೇಕೋ ಹಾಗಾದಂತಾಗುತ್ತದೆ, ಇದಕ್ಕಾಗಿ ಕೃಷ್ಣ ಗುಣಾತೀತನಾಗಿ, ನಿರ್ಲಿಪ್ತನಾಗಿ ಕರ್ಮ ಮಾಡೆಂದು ಬೋಧಿಸುತ್ತಾನೆ.
ಬಾದಾಮಿ ಶಾಸನ : ಸು. ಕ್ರಿ. ಶ. ೭೦೦
ಕಪ್ಪೆ ಅರಭಟ್ಟ
ಕಪ್ಪೆ ಅರಭಟ್ಟನ್ ಶಿಷ್ಟ ಜನಪ್ರಿಯನ್
ಕಷ್ಟ ಜನವರ್ಜಿತನ್ ಕಲಿಯುಗವಿಪರೀತನ್
ವರನ್ತೇಜಸ್ವಿನೋ ಮೃತ್ಯುರ್ನಡು ಮಾನಾವಖಂಡನಮ್
ಮೃತ್ಯುಸ್ತತ್ಕ್ಷಣಿಕೋ ದುಃಖಮ್ಮಾನಭಂಗಂ ದಿನೇದಿನೇ
ಸಾಧುಗೆ ಸಾಧು ಮಾಧುರ‍್ಯಂಗೆ ಮಾಧುರ್ಯಂ
ಬಾಧಿಪ್ಪ ಕಲಿಗೆ ಕಲಿಯುಗ-ವಿಪರೀತನ್
ಮಾಧವನೀತನ್ ಪೆಱನಲ್ಲ
ಒಳ್ಳಿತ್ತ ಕೆಯ್ವೋರಾರ್ ಪೊಲ್ಲದುಮದಱಂತೆ
ಬಲ್ಲಿತ್ತು ಕಲಿಗೆ ವಿಪರೀತಾ-ಪುರಾಕೃತ
ಮಿಲ್ಲಿ ಸಂಧಿಕ್ಕುವುದು ಬಂದು
ಕಟ್ಟದ ಸಿಂಘವನ್ ಕೆಟ್ಟೋಡೆನೆಮಗೆಂದು
ಬಿಟ್ಟವೋಲ್ ಕಲಿಗೆ ವಿಪರೀತಂ-ಗಹಿತರ್ಕಳ್
ಕೆಟ್ಟರ್‌ ಮೇಣ್ಸತ್ತರವಿಚಾರಮ್

Close

ಭ್ರಮೆ

ಮಾಧವ ಕುಲಕರ್ಣಿ

ಭ್ರಮೆ

ದೂರದಲ್ಲೆಲ್ಲೋ ಬಾರಿಸುವ ಗಂಟೆಯ ಸಪ್ಪಳ ಕೇಳುತ್ತಿದೆ ಆಕೆಗೆ. ದಿನವೂ ಸಂಜೆ ಏಳು ಗಂಟೆಗೆ ಪ್ರಾರ್ಥನೆಯ ಸಮಯಕ್ಕೆ ಸರಿಯಾಗಿ ಬಂದು, ಕೂಗಿ, ‘ಬರ‍್ತೀರಾ ಹೊರಗೆ? ಎಂದು ಕೇಳುವ ಮೇರಿ, ಇವತ್ತು ಯಾಕೋ ಬರಲಿಲ್ಲ, ಮೂರು ದಿನ ಜ್ವರ ಬಂದಾಗಿನಿಂದ ಔಷಧ ತಂದು ಕೊಟ್ಟವಳು ಇವತ್ತು ಯಾಕೆ ಬರಲಿಲ್ಲವೋ ? ಮೈ ಮುಟ್ಟಿ ನೋಡಿಕೊಂಡಳು. ಇವತ್ತೇನೂ ಅಷ್ಟು ಜ್ವರವಿದ್ದ ಹಾಗಿಲ್ಲ, ಈ ಮೂರು ದಿನಗಳಲ್ಲಿ ಮೇರಿ ಎಷ್ಟು ಹತ್ತಿರದವಳೆನ್ನಿಸಿತ್ತು, ಕ್ರಿಶ್ಚಿಯನ್ನಳಾಗಿ ಲಗ್ನ ನಾಗದೇ ಮೇರಿ ಯಾವುದೋ ಒಬ್ಬ ರೇಲ್ವೆ ಡ್ರೈವರನ ಸಂಗಡ ಇರುತ್ತಾಳೆಂದು, ರೇಲ್ವೆ ಶಾಲೆಗೆ ಹೊಸದಾಗಿ ಮಾಸ್ತರತಿಯಾಗಿ ಬಂದಾಗ ಆಕೆಗೆ ಹೇಸಿಕೆ ಎನ್ನಿಸಿತ್ತು. ಲಗ್ನವಾದ ಒಂದು ವರುಷದಲ್ಲೇ ತನ್ನ ಗಂಡನನ್ನು ಕಳೆದುಕೊಂಡರೂ ಬೇರೆ ಗಂಡಸಿನ ಹಂಗಿನಲ್ಲುಳಿಯಲಿಲ್ಲವೆಂದು ಮೇರಿಯನ್ನು ಕಂಡಾಗ ಸಮಾಧಾನವೆನ್ನಿಸಿತ್ತು, ತನಗೆ ಗಂಡಸಿನ ಹಸಿವಿಲ್ಲವೆಂದಲ್ಲ; ಇದೆ, ಆದರೆ ಮೇರಿಯ ಹಾಗೆ….. ಮಲಗಿದಲ್ಲಿಯೇ ಮಲಗಿ, ನೋಡಿದ ಹೆಂಚನ್ನೇ ನೋಡಿ, ಕೆಂಪಾದ ಹೆಂಚು, ಕಪ್ಪು, ಹಸಿರು, ಹಳದಿ ಬಣ್ಣಗಳಿಗೆ ತಿರುಗಿದಂತೆ ಭಾಸ.
ಕಿಟಕಿಯಿಂದ ಹೊರಗೆ ನೋಡಿದಳು : ಮಬ್ಬುಗತ್ತಲಾಗಿತ್ತು, ಸ್ಟೇಶನ್ನಿಗೆ ಹೋಗಿ ಬರುವ ಜನ, ಸಂಜೆ ವಾಕಿಂಗ್ ಹೊರಟ ಜನ, ರೇಲ್ವೆ ಹಳಿಗಳ ಮೇಲೆ ಹಿಂದೆ

ಮುಂದೆ ಓಡಾಡುವ ಎಂಜಿನು ಆಗೀಗ ಬಿಟ್ಟ ಹೊಗೆ, ಎಂಜಿನಿನಲ್ಲಿ ಕೆಂಪಾಗಿ ಕಾಣುವ ಕಲ್ಲಿದ್ದಲುಗಳು-ಅದರಿಂದ ಅಲ್ಲಿದ್ದ ಡ್ತೈವರನಿಗಾಗುವ ಸೆಕೆಯ ಅನುಭವ-ಎಲ್ಲ ಎಲ್ಲ ಕೂಡಿ ಮಬ್ಬುಗತ್ತಲನ್ನು ಕತ್ತಲಾಗಿಸುವ ಸಂಭ್ರಮ, ಎಲ್ಲ ಕರಗಿದಾಗ ಓಡಾಡುವ ಎಂಜಿನಿನಲ್ಲಿ ಬೆಂಕಿಯ ಬೆಳಕು, ಸ್ಟೇಶನ್ ಪ್ಯಾಟಿಯ ಹಣ್ಣು ಕಾಯಿಪಲ್ಲೆ ಅಂಗಡಿ ಗಳಲ್ಲಿ ತೂಗುಬಿಟ್ಟ ಬಲ್ಬುಗಳು. ಹೊಟ್ಟೆಯಲ್ಲೇನೋ ಮುರಿದಂತೆ ಅನುಭವ. ಹೊಟ್ಟೆ ಮೇಲೊಮ್ಮೆ ಕೈಯಾಡಿಸಿ ಕೊಂಡಾಗ ‘ಹಾ’ ಎನ್ನಿಸಿತು, ಮನೆಯಲ್ಲಿ ಕತ್ತಲಾವರಿಸುವ ಅನುಭವ ಬಂದು ಎದ್ದು ಸ್ವಿಚ್ ಕಡೆ ಸಾಗಿದಾಗ, ತಲೆ ಒಜ್ಜೆಯಾದದ್ದು ಅನುಭವಕ್ಕೆ, ಎರಡು ನಿಮಿಷ ಸುತ್ತಲಿನದೆಲ್ಲ ತಿರುಗಿದಂತೆ ಭಾಸ.
ಎದ್ದು ಬಾಗಿಲಲ್ಲಾದರೂ ಕೂಡೋಣ ಎಂದು ಬಾಗಿಲಿಗೆ ಬಂದಾಗ ಮನೆಯ ಮುಂದಿರುವ ಟಾರ್ ರೋಡಿನಲ್ಲಿ ಸಾಗುವುದೆಲ್ಲ ಅಸ್ಪಷ್ಟ. ಹೊರಗಿನ ಕೋಣೆಯ ದೀಪ ಹಾಕಿ ಹೊರ ಬಾಗಿಲಿಗೆ ತಲೆ ಕೊಟ್ಟು ಕುಳಿತಾಗ ಯಾರೋ ಇಬ್ಬರು ಹೊರ ಟವರು, ಒಬ್ಬರನ್ನು ಬಿಟ್ಟು ಇನ್ನೊಬ್ಬಳು ಮನೆಯ ಕಡೆ ಬಂದಂತೆ ಭಾಸ. ಸಮೀಪ ಬಂದಾಗ ಗೊತ್ತಾಯಿತು : ಮೇರಿ— ‘ಅಮ್ಮ, ಇವತ್ತು ಬರುವದಾಗಲಿಲ್ಲ, ಇವರು ಬಂದಿದ್ದಾರೆ, ಹೊರಗೆ ಹೋಗುವುದರಲ್ಲಿ ಮರೆತುಬಿಟ್ಟಿ. ನಿಮ್ಮ ಶಾಲೆಯ ಹುಡುಗಿಯ ಹತ್ತಿರ ಹೇಳಿದ್ದೆ.’- ಮೇರಿ ಗೇಟಿನ ಹತ್ತಿರವೇ ನಿಂತಿದ್ದಾಳೆ, ಹೋಗುವ ಆತುರ ದಲ್ಲಿದ್ದಾಳೆ.
“ನನಗೀಗ ಆರಾಮವಾಗಿದೆ ಬಿಡೆ, ನೀನು ಹಾಯಾಗಿ ಹೋಗಿ ಬಾ.”
ಇಷ್ಟು ಆಕೆ ಹೇಳಿದ್ದೇ ಮೇರಿ ಅಲ್ಲಿ ನಿಲ್ಲದೇ ಅವನನ್ನು ಕೂಡಿಕೊಂಡು ಕತ್ತಲಲ್ಲಿ ಕಣ್ಮರೆಯಾದಳು.
ಮನೆಯ ಮಗ್ಗುಲಲ್ಲಿ ದೊಡ್ಡ ಬ್ರಿಡ್ಜಿಗೆ ಸಾಲಾಗಿ ಕುಳಿತ ಭಿಕ್ಷುಕರೆಲ್ಲ ಎದ್ದು, ಕೈಯಲ್ಲಿ ಕೋಲು ಹಿಡಿದು, ಸಣ್ಣ ಮಕ್ಕಳ ಕೈಹಿಡಿದು, ಕತ್ತಲೆಯಲ್ಲಿ ಕರಗಿದರು, ರಸ್ತೆಯ ಆಚೆ ಬದಿಗೆ ಸ್ಟೇಶನ್ನಿನ ಬೇಲಿ, ಅದರಾಚೆ ಬುಸುಗುಟ್ಟುತ್ತ ತೆವಳುವ ಎಂಜಿನು, ಅದರಾಚೆ ಚರ್ಚಿನ ಎತ್ತರವಾದ ಸಿಲುಬೆ, ಅದರಾಚೆ ಇನ್ನೂ ಸ್ವಲ್ಪ ಸ್ವಲ್ಪ ಕೆಂಪಾಗಿರುವ ದಿಗಂತ.
ದೂರದಿಂದ ಗಾಡಿ ಕೂಗಿದಾಗ ಮಬ್ಬು ಹರಿದು ಎಚ್ಚರವಾಯಿತು ಆಕೆಗೆ, ಅತ್ತೆ

ಇವತ್ತು ಈ ಗಾಡಿಗೇ ಬರಬಹುದು. ಇಷ್ಟೊತ್ತಿಗೆ ತನಗೆ ಜ್ವರ ಇಳಿದುಬಿಡುತ್ತದೆಂದು ಮೊದಲೇ ಅನ್ನಿಸಿಬಿಟ್ಟಿದ್ದರೆ ತಾನು ತಾರು ಕೊಡುತ್ತಲೇ ಇರಲಿಲ್ಲ, ಎರಡು ವರುಷ ವಾಯಿತಲ್ಲವೆ ಭೆಟ್ಟಿಯಾಗದೆ !
ಇಂಥದೇ ಮಬ್ಬುಗತ್ತಲೆಯ ಮುಚ್ಚು ಮೂರುಸಂಜೆಯ ಮುಂದೆ ತನ್ನ ಮಗನನ್ನು ನುಂಗಿ ನೀರು ಕುಡಿದವಳೆಂದು ಅತ್ತೆ ಹೊರಗೆ ಹಾಕಿದಾಗ, ಇದರ ಹಿಂದೆ ಮತ್ತೇನೋ ಇದೆ ಎಂದು ಆಕೆಗೆ ಅಂದೇ ಅನ್ನಿಸಿತ್ತು, ಮಗ್ಗುಲು ಮನೆಯ ನಾರಾಯಣನೊಡನೆ ಆಕೆಯ ಹೆಸರು ಜೋಡಿಸಿ ಜನರು ಮಾತಾಡುತ್ತಿದ್ದರೆಂದು ಹುಬ್ಬಳ್ಳಿಗೆ ತವರಿಗೆ ಹೋದ ಮೇಲೆ ತಿಳಿಯಿತು ಆಕೆಗೆ. ಆದರೂ ಒಂದು ವರುಷದಲ್ಲಿ ತಾನು ಆ ಮನೆಗೆ ಎಷ್ಟು ಹೊಂದಿಕೊಂಡಿದ್ದೆ, ಇವರು ತೀರಿದ ಮೂರು ತಿಂಗಳೊಳಗಾಗಿ, ಅತ್ತೆಯ ಹಣೆಯ ಮೇಲಿನ ಕುಂಕುಮ ಹೋಗಿ, ತಲೆಯೆಲ್ಲ ಬೋಳಾಗಿ, ಕೆಂಪು ಸೀರೆ ಅವರ ಮೈಗೇರಿದಾಗ ಎಷ್ಟು ಹೆದರಿದ್ದೆ ? ಎಷ್ಟು ಸಲ ಮೆಲಕು ಹಾಕಿ ಹಾಕಿ, ಆ ನೆನಪೆಲ್ಲ ಸ್ವಿಚ್ಚೊದೊಡನೆ ಹತ್ತುವ ಟ್ಯೂಬ್‌ಲೈಟ್ ಆಗಿಬಿಟ್ಟಿದೆ. ಇವರಿದ್ದಾಗಲೂ ಅತ್ತೆಯವರು ದರ್ಪ ತೋರಿದವರಲ್ಲ. ಇವರು ಹೋದ ಮೇಲೆಯೂ ಮಾತನಾಡಿದವರಲ್ಲ. ಆ ಹೊಲಸು ನಾರಾಯಣನೊಡನೆ ಆಕೆಯ ಹೆಸರು ಸೇರಿದಾಗ ಅವರ ನೆತ್ತಿಗೆ ಪಿತ್ತ ಏರಿದ್ದು.
ಮೈಮೇಲೆಲ್ಲ ಸಿಡುಬೆದ್ದು, ಮೋರೆ ಎಲ್ಲ ಕಲೆಕಲೆಯಾಗಿ, ಚಿಕ್ಕ ಚಿಕ್ಕ ನೀಲಿ ಕಣ್ಣುಗಳಿದ್ದ ಆ ನಾರಾಯಣನೊಡನೆ ಆಕೆಯ ಹೆಸರು ಜನ ಹೇಗೆ ಸೇರಿಸಿದರೋ ಆಕೆಗೆ ತಿಳಿಯಲಾರದ ಒಗಟೆ. ಏನೂ ಮಾಡದೇ ಇದ್ದವಳ ಮೇಲೆ ಇಷ್ಟು ಮಾತನಾಡಿದ ಜನ, ಇನ್ನು ಇಲ್ಲಿ ಕಮಲಾಪೂರ ಮಾಸ್ತರನೊಡನೆ ಏನಾದರೂ ಮಾಡಿದ್ದರೆ……… ಅವ್ವಾ!! ಏನೇನು ಅನರ್ಥವಾಗಿಬಿಡುತ್ತಿತ್ತೋ?
ಹೆಂಡತಿ ತೀರಿದ ಮೂರು ತಿಂಗಳಿಗೇ ಕಮಲಾಪೂರ ಮಾಸ್ತರ ಬಂದು-‘ವಿಧವೆಯಾದರೆ ಏನಾಯಿತು ? ನನ್ನೊಡನೆ ಬಂದು ಲಗ್ನನಾಗಿ ಇರಬಹುದಲ್ಲ’ ಎಂದು ಕರಕರ ಮಿಂಡೆಯರ ಹಾಗೆ ಕೇಳಿದಾಗ ಹೆದರಿದ್ದಳು. ಆ ರಾತ್ರಿ ನಿದ್ರೆಯೇ ಬರಲಿಲ್ಲ. ಎಲ್ಲಿಯಾದರೂ ಹಂಚು ಕಿತ್ತಿ ಒಳಗಿಳಿದಾನೆಂಬ ಭ್ರಮೆ.
ಲಗ್ನವಾದರೆ ತಪ್ಪೇನೆಂಬ ಪ್ರಶ್ನೆ ಬಂದಾಗಲೆಲ್ಲ ಬೇರೆ ಯಾವುದಾದರೊಂದು ವಿಷಯದ ಬಗ್ಗೆ ವಿಚಾರಿಸಿ ನಿಟ್ಟುಸಿರು ಹಾಕುವುದು….

ಯಾರೋ ಬಾಗಿಲಲ್ಲಿ ಬಂದು ನಿಂತದ್ದು ತನಗೆ ತಿಳಿಯಲೇ ಇಲ್ಲವಲ್ಲ ಎಂದು ಕಣ್ಣರಳಿಸಿ ನೋಡಿದಾಗ ಶಾಂತಾ. ‘ಬಾರೇ ಶಾಂತಾ-ಒಬ್ಬಳಿಗೇ ಕುಳಿತು ಕುಳಿತು ಬಹಳ ಬೇಜಾರು.
“ಮಧ್ಯಾಹ್ನವೇ ಹೋಗಿ ಬಾ ಅಂತ ದೊಡ್ಡವರು ಹೇಳಿದ್ದರು, ಮೇರಿಯಮ್ಮ ಮಧ್ಯಾಹ್ನವೇ ಔಷಧ ತಂದುಕೊಡು ಅಂತ ಹೇಳಿದ್ದಳು, ಮರೆತು ಬಿಟ್ಟೆ, ಟೀಚರ್”- ಅಳುವ ಧ್ವನಿಯಲ್ಲಿ ಹೇಳಿದಳು ಶಾಂತಾ.
“ಇರಲಿ ಬಾರೆ, ಅದಕ್ಕ್ಯಾಕಿಷ್ಟು ಚಿಂತೆ ? ನನಗೀಗ ಆರಾಮವಾಗಿದೆ ಬಾರೆ.’
ಶಾಂತಾ ಸಮೀಪ ಬಂದಾಗ ಬರಸೆಳೆದು ಮುತ್ತು ಕೊಟ್ಟು-ಇವತ್ತು ಗಾಡಿಗೆ ನನ್ನ ಅತ್ತೆ ಬಾರ‍್ತಾರೆ, ಆಮೇಲೆಲ್ಲ ಕಾಳಜೀನೇ ಇಲ್ಲ.’
ಮನೆಯ ಮುಂದೆ ಮನೆಗೆ ಭೂಕಂಪನದ ಶಾಖವನ್ನೊದಗಿಸುತ್ತ, ಸಂಜೆಯ ಹುಬ್ಬಳ್ಳಿಯ ಗಾಡಿ, ತನ್ನ ಕರ್ಕಶ ಧ್ವನಿಯನ್ನುಗುಳುತ್ತ, ಕಪ್ಪಾದ ದಿಗಂತ-ಹಾಗೂ ಚರ್ಚನ್ನು, ಬಾಗಿಲಲ್ಲಿ ಕುಳಿತ ಇವಳಿಗೆ ಮರೆಮಾಡುತ್ತ ತನ್ನಲ್ಲಿದ್ದ ಕಪ್ಪುಹೊಗೆಯನ್ನೆಲ್ಲ ಉಗುಳಿ ಹೋಯಿತು.
“ನಮ್ಮಪ್ಪನೂ ಇದೇ ಗಾಡಿಗೆ ಬರ‍್ತಾರೆ ಟೀಚರ್-ಹೇಳಿದಳು ಶಾಂತಾ. “ಊರಿಗೆ ಹೋಗಿದ್ದರೇನೆ ?” ‘ಇಲ್ಲ ಟೀಚರ್, ಈ ಗಾಡಿಗೆ ಇವತ್ತು ಅವರೇ ಡ್ರೈವರ್‌? “ನಿನ್ನ ತಂದೆ ಡ್ರೈವರನೆ ? ಹೇಳೇ ಇಲ್ವಲ್ಲೇ ? “ಮೇರಿಯಮ್ಮನ ಗಂಡ, ನಮ್ಮಪ್ಪ ತುಂಬಾ ದೋಸ್ತರು ಟೀಚರ್, ಅವರೂ ಇವತ್ತು ಇಲ್ಲೇ ಇದ್ದಾರೆ ನಮ್ಮಪ್ಪ ಬಂದು ಮೊದಲು ಅವರ ಮನೆಗೇ ಹೋಗೋದು.’ ಬಂದ ನಗುವನ್ನು ಮುಚ್ಚಿಕೊಳ್ಳುತ್ರ ಕೇಳಿದಳು : “ನಿನ್ನ ತಂದೆ ಅಲ್ಲಿಗ್ಯಾಕೆ ಹೋಗೋದು ?” “ನನ್ನ ತಂದೆಯೂ ಮೇರಿಯಮ್ಮನ ಗಂಡನೂ ದೋಸ್ತಿ ಟೀಚರ್‌-ದೋಸ್ತಿ ಮೇಲೆ ಒತ್ತು ಕೊಟ್ಟು ಹೇಳಿದಳು ಶಾಂತ. ಗಾಡಿಯಿಂದಿಳಿದು ಊರ ಕಡೆಗೆ ಹೋಗುವ ಜನಗಳ ಗಲಾಟೆ, ಟಾಂಗದವರ ಕೂಗು ಎಲ್ಲವೂ ಸಮೀಪ, ಸಮೀಪ

“ನನ್ನ ತಂದೆ ಮನೆಗೆ ಬಾರೆ, ನಾ ಹೋಗ್ತೇನೆ ಟೀಚರ್ “ಹೋಗು, ನಾಳೆ ಮತ್ತೆ ಬಾರೆ.’
ಶಾಂತಾ ಸ್ಟೇಶನ್ನಿನಿಂದ ಬರುತ್ತಿದ್ದ ಜನರನ್ನು ಸೀಳಿಕೊಂಡು ಕತ್ತಲಲ್ಲಿ ಕರಗಿದಳು. ರಸ್ತೆಯಲ್ಲಿಯ ದೀಪದ ಬೆಳಕಿನಲ್ಲಿ ಸ್ಟೇಶನ್ನಿನಿಂದ ಬರುವವರ ಆಕೃತಿಗಳು ಕಾಣುತಿದ್ದವು, ಯಾರೋ ಬಾಗಿಲನ್ನು ತಳ್ಳಿ ಒಳಗೆ ಬಂದಂತೆ.
ಅತ್ತೆ ಅಲ್ಲ; ಗಂಡಸು, ಓ! ಪುರುಷೋತ್ತಮ ಮಾಮಾ. ಈಗ್ಯಾಕೆ? ಅಕ್ಕ ತನ್ನ ಗಂಡನನ್ನು ಈ ಕಡೆ ಕಳುಹಿಸಿದ್ದ್ಯಾಕೆ? “ಏನು? ಈ ಕಡೆ ಬಹಳ ದಿನಗಳಾದ ಮೇಲೆ?” ಕೇಳಿ ಕೆಮ್ಮತೊಡಗಿದಳು.
ಇಲ್ಲಿ ನನಗೊಂದು ಕೆಲಸವಿತ್ತು, ನೋಡಿ ಹೋಗೋಣಾಂತ ಬಂದೆ……..ಯಾಕೆ? ಮೈಯಲ್ಲಿ ಆರಾಮ ಇದ್ಹಾಂಗಿಲ್ಲ.”
“ಹೌದು, ಮೂರು ದಿನಗಳಿಂದ ಜ್ವರ, ಈಗ ಆರಾಮ ಆಗೈದ, ಅತ್ತೆಯವರಿಗೆ ತಾರು ಕೊಟ್ಟಿದ್ದೆ. ಬರಬಹುದು.’
ಮಾಮಾ ಯಾಕೊ ಕಣ್ಣು ತಪ್ಪಿಸುತ್ತಿದ್ದಾರೆ, ತನ್ನ ಕಡೆ ನೋಡಲೂ ಕೂಡ ಆಗದೆ ನಿಂತಿದ್ದಾರೆ. ಇವರು ತೀರಿದ ನಂತರ ಇದೇ ಮೊದಲ ಸಲವಲ್ಲವೇ ಅವರು ನನ್ನನ್ನು ನೋಡುತ್ತಿರುವುದು ?
‘ಮಾಮಾ ನೀವಿಲ್ಲಿಯೇ ಕೂತಿರಿ, ನಾನು ಒಳಗೆ ಅನ್ನಕ್ಕಿಟ್ಟು ಬರ‍್ತೇನಿ, ಮೈಯಾಗ
ಆರಾಮ ಇಲ್ಲಾಂತ ಅಡಗೀನೇ ಮಾಡಿಲ್ಲ.’
‘ಇಲ್ಲ ನೀನು ತ್ರಾಸ ತಗೋಬ್ಯಾಡ, ನಾನು ಸ್ವಲ್ಪ ಹೊರಗೆ ಹೋಗಿ ಬರ‍್ತೇನಿ……… ನಾನು ಊಟ ಮಾಡಿಕೊಂಡs ಬರ‍್ತೇನಿ.” ಎಂದವರೆ ಕೈಯಲ್ಲಿದ್ದ ಚೀಲವನ್ನು ಖುರ್ಚಿಯ ಮೇಲಿಟ್ಟು ಹೊರಗೆ ನಡೆದುಬಿಟ್ಟರು.
ಮಾಮಾ ಯಾಕೋ ಬಹಳ ಸೊರಗಿಬಿಟ್ಟಿದ್ದಾರೆಂದೆನಿಸಿತು. ಅದೇ ಹೊಸದಾಗಿ ಅಕ್ಕನನ್ನು ಲಗ್ನವಾದಾಗ ಎಷ್ಟು ಚೆಂದಾಗಿ ಕಾಣುತ್ತಿದ್ದರು. ತನಗಾಗ ಹನ್ನೆರಡು ವರುಷ. ಈಗ ಅವರ ಮುಂದಿನ ಕೂದಲೆಲ್ಲ ಉದುರಿ ಹೋಗಿವೆ.

ಊರೊಳಗಿನ ತಮ್ಮ ತೋಟದ ಭಾವಿಯಲ್ಲಿ ಸೂಟಿಗೆ ಊರಿಗೆ ಹೋದಾಗ ಈಸಲಿಕ್ಕೆ ಕಲಿಸಿದ್ದು ಜ್ಞಾಪಕ ಬಂತು. ಅಲ್ಲಿಯೇ ಇದ್ದ ಆರಾಮ ಖುರ್ಚಿಯಲ್ಲಿ ಕುಳಿತಳು. ತಲೆ ಒಜ್ಜೆ ಎನ್ನಿಸುತ್ತಿತ್ತು. ತಲೆಗೆ ಕೈ ಹಚ್ಚಿದಾಗ, ಗುತ್ತಾದ ಕೂದಲಲ್ಲಿ ಮುಚ್ಚಿದ್ದ ಗಾಯದಿಂದಾದ ರೂಪಾಯಿ ಅಗಲದ ಪೆಟ್ಟಿನ ಗುರುತು ಕೈಗೆ ಹತ್ತಿತು, ಯಾಕೋ ಖುಷಿ ಎನಿಸಿ ನಗು ಬಂತು.
ಈಸು ಕಲಿಸುವಾಗ ತನ್ನ ಕಾಲು ಹಿಡಿದು ದಂಡೆಯ ನೀರಿನಲ್ಲಿ ಮಾಮಾ ತನ್ನನ್ನು ದೂಕಿಸಿದ್ದು, ಇಡೀ ಜಗತ್ತೇ ತಿರುಗಿದಂತಾದದ್ದು, ಎರಡು ಸಲ ಕೈಕಾಲು ಬಡಿದು, ಮೂಗಿನಲ್ಲಿ ಕಣ್ಣಲ್ಲಿ ನೀರು ಹೋದ ಮೇಲೆ ತಿರುಗಿ ದಂಡೆಗೆ ಬರಲು ಮೈ ಮುದುರಿ ಕೊಂಡಾಗ ಕಲ್ಲಿನ ಮೋಕು ತಲೆಗೆ ಬಡಿದು, ರಕ್ತ ಬಂದು ನೀರೆಲ್ಲ ಕೆಂಪಾದದ್ದು, ಮಾಮಾನ ಗಾಬರಿಗೊಂಡ ಮುಖ -ಎಲ್ಲ ನಿಚ್ಚಳವಾಗಿ ನೆನಪಿದೆ, ಮತ್ತೊಮ್ಮೆ ಆ ಗುರುತಿನ ಮೇಲೆ ಸಾವಕಾಶವಾಗಿ ಕೈಯಾಡಿಸಿಕೊಂಡಾಗ “ಹಾ!” ಎನ್ನಿಸಿತು.
ಮಾಮಾ ಹುಡುಗನಂತಿದ್ದವರು ಕುಡಿಮೀಸೆಯಲ್ಲಿ ನಗುತ್ತಿದ್ದವರು, ಇಂದು ಎಷ್ಟು ಹಿರಿಯರ ಹಾಗೆ ಕಾಣುತ್ತಿದ್ದಾರಲ್ಲ ! ಎರಡು ಮಕ್ಕಳ ತಂದೆಯಾದಾಗಲೂ ಮಾಯಾನನ್ನು ನೋಡಿದ್ದ ನನಗೆ, ಅವರ ಅದೇ-ಈಸು ಕಲಿಸುವಾಗಿನ ಮುಖವಷ್ಟೇ ನೆನಪಾಗುತಿದೆಯಲ್ಲ ಎಂದು ವಿಚಿತ್ರವೆನ್ನಿಸಿತು.
ಇವರು ಮಾಮಾ ಕೂಡಿ ನಿಂತಾಗ, ಇವರು ಮಾಮಾನಿಗಿಂತ ಚಿಕ್ಕವರಿದ್ದರೂ ಯಾಕೊ ಹಿರಿಯರ ಹಾಗೆ ಕಾಣುತ್ತಿದ್ದರು, ನಕ್ಕಾಗೊಮ್ಮೆ ಮಾತ್ರ ಹುಡುಗರ ಹಾಗೆ ಕಾಣುವವರು.
ಖುರ್ಚಿ ಬಿಟ್ಟು ಎದ್ದು ಹೊರಗೆ ಬಂದಾಗ, ಸ್ಟೇಶನ್ನಿನಿಂದ ಹೋಗುವ ಜನರೆಲ್ಲ ಮುಗಿದು ಖಾಲಿ ಟಾಂಗಾಗಳು, ಕುಡಿದ ಕೂಲಿಗಳು ಬಂದ ಗಾಡಿಗೆ ಹಚ್ಚ ಬೇಕಾಗಿರುವ ಹೊಸ ಎಂಜಿನಿನ ಧಡ್, ಧಡ್ ಎನ್ನುವ ಸಪ್ಪಳ, ಬ್ರಿಡ್ಜಿನ ಹಿಂದಿರುವ ಹೊಲೆಯರ ಕೇರಿಯಲ್ಲಿ ಬಾರಿಸುವ ಹಲಗೆಯ ಸಪ್ಪಳ, ಇಲ್ಲಿಗೆ ಬಂದಾಗಿನಿಂದ ಏಳು ಮಕ್ಕಳ ತಾಯಿಯ ಮರವೆಂದು ಶಾಲೆಯ ಹುಡುಗಿಯರೆಲ್ಲ ಕರೆಯುತ್ತಿದ್ದ ಬನ್ನಿಯ ಗಿಡದ ಮಬ್ಬು ಮಬ್ಬು ಆಕೃತಿ – ಇವೆಲ್ಲ ಮಧ್ಯರಾತ್ರಿಯ ನೀರವತೆಗಾಗಿ ಕಾಯುತ್ತಿದ್ದವು. ಪುರುಷೋತ್ತಮ ಮಾಮಾ ಮರಳಿ ಬಂದಾಗ ಗಂಟೆ ಒಂಭತ್ತು, ಆರಾಮ ಖುರ್ಚಿಯಲ್ಲಿ

ಮಲಗಿದ ಆಕೆಗೆ ಬಾಗಿಲ ಸದ್ದಾದಾಗಲೇ ಎಚ್ಚರ. ಬಾಗಿಲು ತೆಗೆದಾದ ಮೇಲೆ ಖುರ್ಚಿಯಲ್ಲಿ ಬಂದು ಕುಳಿತವರು ಎಷ್ಟೋ ಸಮಯದವರೆಗೆ ತಮ್ಮ ಮೌನವನ್ನು ಮುರಿಯಲೇ ಇಲ್ಲ. ಯಾಕೋ ಮನದಿಂದ ಹಿಡಿದುಬಿಟ್ಟಂತೆನಿಸಿ ಆಕೆಯ ಕೇಳಿದಳು : “ಮಾಮಾ, ಅಕ್ಕ ಹುಡುಗರೆಲ್ಲ ಹೇಗಿದ್ದಾರೆ ?? “ಎಲ್ಲರೂ ಆರಾಮ ಇದ್ದಾರೆ, ನಿಮ್ಮಕ್ಕ ನಿನ್ನ ನೋಡಿಕೊಂಡು ಬರಲು ಹೇಳಿದಳು…? ಒಂದು ನಾಟಕೀಯ ನಗೆ (ಇದು ಅವರಿಗೆ ಒಪ್ಪುವದಿಲ್ಲ’) ತಂದು ಹೇಳಿದರು. “ಆದರೆ ನಿನ್ನ ಆರೋಗ್ಯ ಕೇಳುವುದಕ್ಕೆ ನೀನೇನೂ ಉಳಿಸೇ ಇಲ್ಲ…… ಎಷ್ಟು ಸೊರಗಿ
ಕಡ್ಡಿಯಾಗಿ ಬಿಟ್ಟಿದ್ದಿ.” ಎರಡು ಹನಿಗಳು ಅವರ ಕಣ್ಣಿನಿಂದ ಉದುರಿದವು. ಈಕೆಯ ಕಣ್ಣಿನಲ್ಲಿ ಮಾಮಾ ಮೌನವಾಗಿದ್ದಾಗ ತಡೆಹಿಡಿದಿದ್ದ ಕಣ್ಣೀರಿನ ಕಟ್ಟೆ ಒಡೆಯಿತು. ಈಕೆ ಸೀರೆಯ ಸೆರಗಿನಿಂದ ಕಣ್ಣೊರಸಿಕೊಂಡಾಗಲೇ ಮಾಮಾಗೆ ತಮ್ಮ ತಪ್ಪಿನ ಅರಿವಾಯಿತು. ಕಣ್ಮರೆಸಿಕೊಂಡು, ಚೀಲದಲ್ಲಿ ಹುಡುಕಾಡಿ, ನಾಲ್ಕು ಮೋಸಂಬಿಗಳನ್ನು ತೆಗೆದು ಹೊರಗಿಟ್ಟು ತಮ್ಮ ನೈಟ್ ಪೈಜಮ ತೆಗೆದು ಹೆಗಲಿಗೆ
ಹಾಕಿಕೊಂಡರು. “ಸರೂ, ಒಂದು ಮಾತು ಹೇಳ್ತೀನಿ….ತಪ್ಪು ತಿಳಿಬ್ಯಾಡ… ತಡವರಿಸಿದರು, ‘ಸರೂ, ಒಂದು ಪ್ರಶ್ನೆ ಕೇಳತೇನಿ… ಹೀಂಗ ದುಡಿಯೋದು ಏನು ಹರಕತ್ತದ ನಿನಗ ?’ ಬಾಗಿಲ ಹೊಸ್ತಿಲ ಮೇಲೆ ತನ್ನ ಮೋರೆಯನ್ನು ತನ್ನೆರಡೂ ಕೈಗಳಲ್ಲಿ ತೆಗೆದುಕೊಂಡು ನಿದ್ದೆಗಣ್ಣಲಿದ್ದವಳಂತೆ ಹೇಳಿದಳು : ‘ಏನಾದರೂ ಮಾಡಿ ನನ್ನ ಜೀವನಕ್ಕೆ ಹಗುರಾಗೋಹಂಗ ಒಂದು ಉದ್ದೇಶ ಮಾಡಿಕೋಬೇಕಲ್ಲ, ಮಾಮಾ.’ ಮಾಮಾ ಈಕೆಯ ಮುಂದೆ ಬಂದು ನಿಂತು ಹೇಳಿದರು : “ಅದೇ ಒಂದು ಭ್ರಮಾ, ನೀ ಇನ್ನೂ ಉದ್ದೇಶ ಹುಡುಕತಾ ಇದ್ದೀ. ಅದು ನಿನಗಿನ್ನೂ ಸಿಕ್ಕಿಲ್ಲ. ಅದು ನಿನಗೆ ಸಿಗೋಹಂಗಿಲ್ಲ ಅನ್ನೋದು ನಿನಗೆ ಈಗ ಖಾತ್ರಿಯಾಗಿ ಬಿಟ್ಟದೆ. ಅದಕ್ಕ ಈ ಹಣೇಬರಹ ನಿಂದು….. ನಾಳೇ ಈ ಕೆಲಸಕ್ಕೆ ರಾಜಿನಾಮೆ ಕೊಟ್ಟು ನಡಿ ನನ್ನ ಜೋಡಿ.’ ಬ್ಯಾಡಾ ಮಾಮಾ, ಅದು ಭ್ರಮಾ ಆದರೂ ಚಿಂತಿಲ್ಲ, ನಾನು ಯಾರ ಹಂಗಿ ನಾಗೂ ಸಣ್ಣಾಕಿದ್ದಾಗಿನಿಂದ ಇಲ್ಲ, ಈಗ್ಯಾಕಿರಬೇಕು ? “ಸುಮ್ಮನೆ ವಾದ ಮಾಡಲಿಕ್ಕೆ ಮಾತಾಡಿದರೆ ಯಾವುದಕ್ಕೆ ಬಂದ್ಹಂಗಾತು ಹೇಳು….
ಇಲ್ಲಿದ್ರ ಧೈರ್ಯಮಾಡಿ ಯಾರನ್ನರ ಲಗ್ನಾಗಿಬಿಡು.’ ಮಾಮಾನ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ದಿಗಂತ, ಚರ್ಚಿನ ಸಿಲುಬೆ, ಗಾಡಿ, ಬನ್ನಿ ಗಿಡ, ರೇಲ್ವೆ ರಸ್ತೆಯ ಎಡಬದಿಗಿರುವ ಬೇಲಿ,

ಬೇಲಿಯ ಆಚೆಗಿರುವ ಹುಲ್ಲಿನ ಬಯಲು, ಬಯಲ ಕೊನೆಯಲ್ಲಿರುವ ಮೇರಿಯ ಮನೆ, ಆಕೆಯ ಮೋರೆ, ಎಲ್ಲ….ಎಲ್ಲವೂ ಒಮ್ಮೆಲೇ ಗಿಮಿ ಗಿಮಿ ತಿರುಗಿದಂತೆ ಭಾಸವಾಯಿತು ಆಕೆಗೆ. “ಅದನ್ನ ನೀವು ಹೇಳೋದಲ್ಲ ಮಾಮಾ……..ನನಗ ಬೇಕಂದ್ರ ನಾನ ಮಾಡತೇನಿ.” ಮಾಮಾ ಕಣ್ಣೀರನ್ನು ಒರಸಿಕೊಂಡು ತಮ್ಮ ಪೈಜಮ್ ಹಾಕಿಕೊಳ್ಳಹತ್ತಿದರು, ಏನೂ ಮಾತನಾಡಲಿಲ್ಲ, ಆಗ ಎದ್ದು ಒಳಗಿನ ಕೋಣೆಯಲ್ಲಿ ಅವರಿಗೆ ಹಾಸಿಗೆ ಸಿದ್ದ ಪಡಿಸಿದಳು. ಆಕೆ ಬಂದು ತನ್ನ ಹಾಸಿಗೆಯಲ್ಲಿ ಮಲಗಿ ಜೊಂಪು ಹತ್ತಿದಾಗ ಏನೋ ಕನಸು ; ಇವರು ಬಂದು ಮೈ ಸವರಿದಂತೆ ಕನವರಿಕೆ ಎಚ್ಚರಾಗಿ, ಎಲ್ಲಾ ಹಳವಂಡವೆಂದು ಮೇಲೆದ್ದು ಬಚ್ಚಲಕ್ಕೆ ಹೋಗಿ ಬರುವಾಗ ಮಾಮಾನ ಕೋಣೆಯಲ್ಲಿ ದೀಪ ಹಚ್ಚಿಡಲಿಲ್ಲವೆಂಬುದನ್ನು ನೋಡಿ ತನ್ನ ನಿದ್ದೆಯನ್ನೊಮ್ಮೆ ಶಪಿಸಿ, ಕಂದೀಲಿಗೆ ಎಣ್ಣೆ ಹಾಕಿ ಬತ್ತಿ ದೊಡ್ಡದಾಗಿಸಿ ಹಚ್ಚಿ, ಮಾಮಾನ ಕೋಣೆಯಲ್ಲಿ ಇಡ ಹೋದಾಗ ಕಾಲಿಗೇನೋ ತಾಗಿದಂತೆ ; ಕಾಟಿನ ಮೇಲಿನ ಹಾಸಿಗೆಯನ್ನು ಹಾಸಿಕೊಂಡಿದ್ದಾರೆ (ಸೆಕೆಯಾಗಿರಬೇಕು), ಕಾಲು ತಾಗಿದರೂ ಎಚ್ಚರವಿಲ್ಲ, ಕೈಯಿಂದ ಆಕೆಯ ಕಾಲನ್ನು ಹಿಡಿದು ಸವರುತ್ತಿದ್ಹಾಗೆ ಆಕೆಯ ಕೈಯಲ್ಲಿಯ ಕಂದೀಲು ಕೆಳಗೆ ಬಿತ್ತು, ಮನೆಯಲ್ಲ ಕಗ್ಗತ್ತಲು.
ಮುಂಜಾನೆ ಬೆಳಕಾದಾಗ ಚಹ ತಯಾರಾಗಿತ್ತು. ಆಕೆ ಚಹ ಕೊಟ್ಟಾಗ ಇಬ್ಬರೂ ಮಾತನಾಡಲಿಲ್ಲ. ಅವರು ತಮ್ಮ ಸಾಮಾನು ಚೀಲದಲ್ಲಿ ತುಂಬಿ ‘ಹೋಗಿ ಬರ‍್ತೇನಿ’ ಎಂದ್ದೇಳಿ ಉತ್ತರಕ್ಕಾಗಿ ಕಾಯದೇ ಹೊರಟು ಹೋದರು. ಅವರ ಗೈರು ಹಾಜರಿ, ರಾತ್ರಿ ಅನುಭವಿಸಿ ಅನನ್ಯಳಾಗಿ ಉಳಿದ ಸುಖವನ್ನು ಆಕೆಗೆ ತಂದಿತ್ತು. ಮುಂಜಾನೆಯ ಗಾಡಿಯಿಂದ ಬಂದಿಳಿದ ಜನ ಸಾಲುಗಟ್ಟಿಕೊಂಡು ತಿಳಿಬಿಸಿಲಿನಲ್ಲಿ ಹಾಯಾಗಿ ನಡೆಯುತ್ತಿದ್ದರು. ಟಾಂಗಾವಾಲಾಗಳ ಹೊಸ ಹುರುಪಿನ ಧ್ವನಿ. ಗಾಡಿಯಿಂದ ಬಂದ ಜನರನ್ನು ಸೀಳಿಕೊಂಡು ಶಾಂತಾ ಓಡೋಡಿ ಓಡೋಡಿ ಬರುತ್ತಿದ್ದಳು, ಶಾಂತಾ ಮಾತನಾಡುವ ಮೊದಲೇ ಈಕೆ ಎತ್ತಿ ಮುತ್ತಿಟ್ಟು “ನಿಮ್ಮ ತಂದೆ ಹೋದರೇನೆ ?”-ಕೇಳಿದಳು. (ಇಲ್ಲ ಟೀಚರ್….ಮೇರಿಯಮ್ಮ ಭಾವಿ ಹಾರಿಕೊಂಡಾಳೆ’-ಹೇಳಿದಳು, ಒಮ್ಮೆಲೇ ಶಾಂತಾಳನ್ನು ಕೆಳಗಿಳಿಸಿ, ಮೈಮೇಲೆ ಖಬರಿಲ್ಲದವಳಂತೆ, ಮನೆಯ ತೆರೆದ ಬಾಗಿಲು

ಹಾಕಿಬಿಟ್ಟು ಓಡಿದಳು-ರಸ್ತೆ, ರೇಲ್ವೆಯ ರಸ್ತೆ ಬದಿಯ ಬೇಲಿ, ಬೇಲಿಯಾಚೆ ಹುಲ್ಲು ಬಯಲು, ಬಯಲು ಮಗ್ಗುಲಿಗೆ ಹೊಲೆಯರ ಕೇರಿ; ಆಮೇಲೆ ಮೇರಿಯ ಮನೆ. ಆಗಲೇ ಜನ ಸೇರಿತ್ತು. ಡ್ರೈವರ್ ಅವಳನ್ನು ಲಗ್ನವಾಗುವದಕ್ಕೆ ಒಲ್ಲೆ’ ಎಂದಿದ್ದರಿಂದ ಮೇರಿ ಬಾವಿ ಹಾಕಿ
ಕೊಂಡಿದ್ದಳಂತ. ಈ ಸುದ್ದಿ ತಿಳಿದ ಮೇಲೆ ಈಕೆಗೆ ಮೇರಿಯ ಮುಖ ನೋಡುವ ಮನಸ್ಸಾಗಲಿಲ್ಲ ಮನೆಯ ಕಡೆ ನಿಧಾನವಾಗಿ ಹೆಜ್ಜೆ ಹಾಕಿ ಮನೆ ತಲುಪಿದಾಗ, ಮುಂಜಾನೆಯ ಗಾಡಿಗೆ ಬಂದು ಮನೆ ಹೊಕ್ಕ ಅತ್ತೆಯವರು ಎದುರಾದರು, ಅವರನ್ನು ಕಂಡೊಡನೆ ಈಕೆಗೆ ಯಾಕೋ ಸಂತೃಪ್ತಿಯ ಭಾವನೆ ಎಲ್ಲ ಜವಾಬುದಾರಿ ತಾನೆ ಕಳಚಿ ಬಿದ್ದಂತನಿಸಿತು. ‘ಮನಿ ಬಾಗಿಲಿಲ್ಲ ತೆರೆದು ಎಲ್ಲಿ ಹೋಗಿದ್ದೆ ನಮ್ಮವ್ವಾ…….ರಸ್ತೆ ಮ್ಯಾಲಿನ ಮನಿ’ ‘ಇಲ್ಲಿ ಯಾವುಟೋ ಮೇರಿ ಅನ್ನೋವಳು ತೀರಿದಳಂತೆ, ನೋಡಿ ಬಂದೆ, ಬಾವಿ ಹಾರಿದ್ದಾಳೆ.’ “ಮುಂಜಾನೆದ್ದು ಸತ್ತ ಸುದ್ದೀನs. ಈಗ ಹ್ಯಾಂಗದ ಪ್ರಕೃತಿ. ಎಷ್ಟು ಸೊರಗಿದೆ ನಮ್ಮನ್ವಾ? “ನಾ ಸ್ವಲ್ಪ ಸಾಲಿಗೆ ಹೋಗಿ ಬರ‍್ತೀನಿ, ನೀವು ಮೈ ತೊಳಕೊಂಡಿರಿ? “ಬಹಳ ಹೊತ್ತು ಮಾಡಬ್ಯಾಡ.’
ಶಿವಕೋಟ್ಯಾಚಾರ‍್ಯ (ಸು, ೧೦ ಸೇ ಶ) ವಡ್ಡಾರಾಧನೆಯ ಗದ್ಯಮಾದರಿ
….ಹಳಮುಖನೆಂಬ ಪಾರ್ವಂ ತನ್ನ ಮೂಡಣ ಕೆಯ್ಯನ್ ಉೞಲೆಂದು ಪೋಗಿ ಕೆಸಳಾದುದಂ ಕಂಡು ಉೞಲ್ ಪದನಲ್ತು ಎಂದು ಬೆಟ್ಟದ ಪಡುವಣ ಕೆಯ್ಯನ್ ಉಳಿಲ್ ಪೋಗುತ್ತಂ ತನ್ನ ಕೆಯ್ಯ ಸಾರೆ ಸೂರ‍್ಯ ಪ್ರತಿಮೆನಿಂದ ಭಟಾರರಂ ಕಂಡು ಇಂತೆಂದನ್‌-ಅಜ್ಜಾ, ಎನ್ನ ಹೆಂಡತಿ ಕೂಳಿನಿಲ್ಲಿಗೆ ಕೊಂಡು ಬಂದೊಡೆ ಪಡುವಣ ಕೆಯ್ಕೆಮೋದ ನೆಂದು ಪೇಳ್ದು ಅಟ್ಟಂ ಗಡಿಂ-ಎಂದು ಪಡುವಣ ಕೆಯ್ಗೆ ಮೋದನ್. ಅನ್ನೆಗಮಾತನ ಪಾರ್ವಂತಿಯುಂ ಪಗಲಪ್ಪಾಗ ಕೂಜ೦ ಕೊಂಡು ಬಂದು ಕೆಯ್ಯೋಳಗಲಂ ಅಟಸಿ

ಕಾಣದೆ ಸೂರ‍್ಯ ಪ್ರತಿಮೆನಿಂದ ಭಟಾರರೆಂ ಬೆಸಗೊಂಡಲ್-ಅಜ್ಞಾ, ಎನ್ನ ಭಟ್ಟನ್ ಈ ಕೆಯ್ಯನುಳಲ್ ಬಂದಾತನೆವೋದಂ ಪೇರಿ೦-ಎಂದು ಬೆಸಗೊಂಡೊಡೆ ಆ ಭಟಾರರ್ ಮೌನವ್ರತಂಗೊಂಡು ನುಡಿಯದೆ ಕೆಮ್ಮಗಿರ್ದೊಡೆ, ಪಿರಿದುಂ ಬೇಗಮಿರ್ದು ಬೇಸತ್ತು, ಕೂಳಂ ಮನೆಗೆ ಕೊಂಡುಪೋದಳ್. ಅನ್ನೆಗಂ ಇತ್ತ ಹಳಮುಖನುಂ ಕೆಯ್ಯಂ ಪಿರಿದು ಬೇಗಂ ಉಳ್ತು, ಸೇದೆಗೆಟ್ಟು ಹಸಿದು ನೀರಡಿಸಿ ಬಸವಳಿದು, ಕೂಳಂ ತರ್ಪುದಂ ಪಿರಿದುಂ ಬೇಗಂ ಸಾರುತ್ತಿರ್ದು, ತಾರದಿರ್ದೊಡೆ ಬೇಸತ್ತು ಮುಳಿದು, ಮನೆಗೆವೋಗಿ–ಎಲೆಗೆ, ಕೂಳಂ ತಂದೆಯಿಲ್ಲ ಎಂದು ಪೆಂಡತಿಯಂ ಸೊಪ್ಪು ನಾರಾಗಿ ಬಡಿಯೆ, ಆಕೆಯಿಂತೆಂದಳ್‌-ಏಕೆ ಬಡಿವೆಯ್‌, ಆ೦ ಕೂಳಂ ಕೊಂಡು ಪೋಗಿ ಕೆಯ್ಯೋಳರಸಿ ಪಿರಿದುಬೇಗಮಿರ್ದು ಪಾರ್ದು ನಿಮ್ಮಂ ಕಾಣದೆ ಮನೆಗೆ ಕೂಳಂ ತಂದೆನ್ ಎಂದೊಡೆ -ಏಕೆ ಅಲ್ಲಿರ್ದ ಕ್ಷಪಣಕನಂ ಬೆಸಗೊಂಡೆಯಿಲ್ಲ ಆತಂಗೆ ಆಂ ಮೂಡಣ ಕೆಯ್ದೆ ನೀಂ ಬಂದೊಡೆ ಪಡುವಣ ಕೆಯ್ಗೆ ಕೂಳಂ ಕೊಂಡು ಬರ್ಪಂತಿರೆ ಪೇಳ್ದು ಪೋದೆನ್-ಎಂದೊಡೆ, ಆಕೆಯಿಂತೆಂದಳ್ ಎನಿತಾನುಂ ಸೂಳ್‌ ಆಂ ಬೆಸಗೊಂಡೊಡಂ ಪೇಳ್ದನಿಲ್ಲ-ಎಂದೊಡೆ ಅಂತಪ್ಪೊಡೆ ನಿನಗೇನುಂ ದೋಷಮಿಲ್ಲ, ಎನ್ನನ್ ಆಶನ್ ಉಣ್ಣ ಪಡಿಸಿ ಕೊಂದನ್-ಎಂದು ಪೆಂಡತಿಯ ಮೇಗಣ ಮುಳಿಸ ನುಳಿದು ಋಷಿಯರ ಮೇಗೆ ಮುನಿಸಾಗಿ, ಭವಸಂಬಂಧಿಯಪ್ಪ ವೈರಂ ಕಾರಣವಾಗಿ ಕ್ರೋಧಾಗ್ನಿ ಪೆರ್ಚಿ -ಎನ್ನಂ ಪಸಿವಿನಿಂ ಸುಟ್ಟೊನಂ ಕಿಚ್ಚಿನಿಂ ಸುಟ್ಟಲ್ಲದೆ ಉಣ್ಣೆನ್ -ಎಂದು ಪ್ರತಿಜ್ಞೆಗೆಯ್ದು, ಪುಲ್ಲ ಬೆಂಟೆಯಂ ಪೊಸೆದು, ಕಿಚ್ಚು೦ ಎಣ್ಣೆಯ ಕೊಡನುಂ ಬೆಂಟಿಯಮಂ ಕೊಂಡು ಪೋಗಿ ಭಟಾಗರ ಮುಂದಿಟ್ಟು ಎಲವೋ ಸವಣಾ ನೀನೆನ್ನಂ ಹಸಿವಿನಿಂದ ಸುಟ್ಟೆಯ್‌, ಅಂತೆಯಾನು ನಿನ್ನಂ ಕಿಚ್ಚಿನಿಂದಂ ಸುಟ್ಟಪ್ಪೆಂ, ಕಾವೊರಾರ್ ಎಂದು ಮುಟ್ಟಿ ಮೂದಲಿಸಿದಾಗಳ್ ಭಟಾರರಿಂತೆಂದು ಬಗೆದರ್-ಈತಂಗೇನುಂ ದೋಷವಿಲ್ಲ, ಎಮ್ಮ ಮುನ್ನಿನ ಗೆಯ್ದ ಕರ್ಮದುದಯಕಾಲಂ ಬಂದಕ್ಕುಂ ಅದಮ್ಮಂ ಸುಟ್ಟಪ್ಪುದು, ಈತನೆಮ್ಮಂ ಸುಟ್ಟ ಪ್ಪೊನಲ್ಲಂ, ಸುಡುವೊಡಂ ಕಿಡುವೊಡಲನೆ ಸುಡುಗುಂ, ಎಮ್ಮ ದರ್ಶನಜ್ಞಾನಚಾರಿತ್ರಂಗಳಂ ಸುಡಲ್ ನೆರೆಯನ್, ಈತನೆನಗೆ ಕಲ್ಯಾಣಮಿತ್ರನ್-ಎಂದು ಬಗೆದು……..ಕ್ಷಮೆಯಂ ಭಾವಿಸುತ್ತಿರ್ಪನ್ನೆಗಂ, ಹಳ ಮುಖನುಂ ಬೆಂಟೆಯನೆಣ್ಣೆಯೊಳ್ ತೊಯ್ದು, ನಪಾಗ್ರದಿಂ ತೊಟ್ಟು ನೆವರೆಗಂ ಬಳಸಿಯುಂ ಮೆಯ್ಯಂ ಸುತ್ತಿ ಎಲ್ಲಾ ಎಡೆಗಳೊಳಂ ಕಿಚ್ಚಂ ತಗುಳ್ಚಿ ಎಣ್ಣೆಯಂ ತಳಿಯುತ್ತಿರಲ್ ಉರಿ ಕೊಂಡೇಕಜ್ವಾಲೆಯಾಗಿ ಸುಡೆ……..ಆ ಭಟಾರರ್…….. ಕರ್ಮದ…ಕೇಡಿನಿಂದಮನಂತಚತುಷ್ಟಯಮನೊಡೆಯರ್ ಮುಂಡಕೇವಳಿಗಳಾ ಗಿರ್ದರ್…
(ಡಿ. ಎಲ್. ಎನ್. ಸಂಪಾದಿತ ಗ್ರಂಥದಿಂದ)

Close

ಕುವೆಂಪು ಅವರ ಮಲೆಗಳಲ್ಲಿ ಮದುಮಗಳು

ಎಂ. ಜೆ. ಕೃಷ್ಣಮೂರ್ತಿ

ಕುವೆಂಪು ಅವರ ಮಲೆಗಳಲ್ಲಿ ಮದುಮಗಳು

“ಕಾನೂರು ಹೆಗ್ಗಡಿತಿ”ಯ ಬಗ್ಗೆ ಬರೆದ ಲೇಖನದಲ್ಲಿ ನಾನು ಹೂವಯ್ಯನ ಪಾತ್ರ ಮತ್ತು ಸಂವೇದನಾಶೀಲತೆಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ದಕ್ಕೆ ಮುಖ್ಯ ಕಾರಣ ಇದು: ಈ ಎರಡೂ ಕಾದಂಬರಿಯ ಬಂಧವನ್ನು ಸಡಿಲಗೊಳಿಸುತ್ತವೆ; ಜೊತೆಗೆ, ಕಾದಂಬರಿಯಾಗಲೀ, ಎಲ್ಲ ಕಲಾಕೃತಿಗಳಲ್ಲೂ ಸಂಗತಿ ಮತ್ತು ಅನುಭವಗಳನ್ನು ವಸ್ತುವಿನೆ ಬೆಳವಣಿಗೆಯ ಅಂಗಗಳನ್ನಾಗಿ ಪರಿವರ್ತಿಸುವ ಸಂವೇದನಾಶೀಲತೆಯಾಗಲೀ, ಅರಗಿಸಿ ಕೊಳ್ಳಲಾರದ ಸಮಸ್ಯೆಗಳನ್ನು ಇವು ಎತ್ತಿ ತೋರಿಸುತ್ತವೆ ಎಂಬುದು, ಇದರಿಂದಾಗಿ “ಕಾನೂರು ಹೆಗ್ಗಡಿತಿ” ಎಷ್ಟು ಮುಖ್ಯ ಕೃತಿಯಾದರೂ, ಉತ್ತಮ ಕೃತಿಯಾಗಿಲ್ಲ. ಈ ಸೋಲಿಗೂ ಕಾದಂಬರಿಯ ಪ್ರಕಾರಕ್ಕೂ ಸಂಬಂಧವಿರುವುದರಿಂದ ನಾನು ಪ್ರಕಾರದ ವಿಶ್ಲೇಷಣೆಗೆ ಪ್ರಾಮುಖ್ಯ ಕೊಟ್ಟೆ. ಅನೇಕ ಸನ್ನಿವೇಶಗಳ ನೈಜತೆ ಮತ್ತು ಅವುಗಳ ಚಿತ್ರಣದ ಬಗ್ಗೆ ವಿವರವಾಗಿ ಬರೆಯಲಿಲ್ಲ.
ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು’ ಬಗ್ಗೆ ಬರೆಯುವಾಗ ಕೂಡ ವಿಮರ್ಶಕ ಅನೇಕ ಸೂಕ್ಷ್ಮ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳಲ್ಲಿ ಮುಖ್ಯವಾದುದು ಕಾದಂಬರಿಯ ಮೊದಲಿಗೇ ಕುವೆಂಪು ಓದುಗನಿಗೆ ಹೇಳುವ ಕೆಲವು ಮಾತುಗಳಿಗೆ ಸಂಬಂಧಿಸಿದೆ: “ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ !…….. ಇಲ್ಲಿ ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ; ನೀರೆಲ್ಲ ಊ ತೀರ್ಥ!” ಅಂದರೆ, ಅನುಭವದ ಯಾವ ಮಟ್ಟವನ್ನೂ ತಿರಸ್ಕರಿಸದೆ ಅನುಭವದ ಅನೇಕ ಮಟ್ಟಗಳಿಗಿರುವ ಸಂಬಂಧವನ್ನು ಚಿತ್ರಿಸಿ ಕಾದಂಬರಿಯ ವಸ್ತುವನ್ನು ಬೆಳೆಸುವ ಪ್ರಯತ್ನ ಇದು ಎಂದಾಗುತ್ತದೆ- ಎನ್ನಿಸುತ್ತದೆ. ಈ

ಕಾದಂಬರಿಗೂ ಕಾನೂರು ಹೆಗ್ಗಡಿತಿ”ಗೂ ಇರುವ ಮುಖ್ಯ ವ್ಯತ್ಯಾಸ-ಈ ಕಾದಂಬರಿಯಲ್ಲಿ ಒಂದು ದೃಷ್ಟಿಕೋನವಿದ್ದರೂ, ಒಂದೇ ದೃಷ್ಟಿಕೋನ ಪಾತ್ರವಿಲ್ಲ, ಜೊತೆಗೆ ಹರಹು ಕಾಲ ಮತ್ತು ಅನುಭವಗಳ ದೃಷ್ಟಿಯಿಂದ ಕುವೆಂಪು ಅವರ ಎರಡು ಕಾದಂಬರಿಗಳಲ್ಲೂ ವ್ಯತ್ಯಾಸಗಳಿವೆ.
“ಮಲೆಗಳಲ್ಲಿ ಮದುಮಗಳು”ನಲ್ಲಿ ಕಾದಂಬರಿಯ ಪಾತ್ರವಾದ ಒಂದೇ ಒಂದು ಕೇಂದ್ರ ಪ್ರಜ್ಞೆ ಅನೇಕ ಅನುಭವಗಳಿಗೆ ತೋರಿಸುವ ಪ್ರತಿಕ್ರಿಯೆಗಳನ್ನೇ ಮುಂದೆ ಮಾಡದೆ ಅನೇಕ ಸನ್ನಿವೇಶಗಳು, ಅನೇಕ ಪ್ರತಿಕ್ರಿಯೆಗಳು, ಅನೇಕ ಜೀವನ ದೃಷ್ಟಿಗಳು ಮೊದಲಾದುವನ್ನು ಸಮತೂಕವಾಗಿ ನೋಡಬೇಕೆಂಬ ಆಶಯವಿದೆ, “ಕಾನೂರು ಹೆಗ್ಗಡಿತಿ” ಮತ್ತು “ಮಲೆಗಳಲ್ಲಿ ಮದುಮಗಳು”ಗಳ ತಂತ್ರವಿಧಾನಗಳಲ್ಲಿರುವ ವ್ಯತ್ಯಾಸಗಳು ಈ ಆಶಯಕ್ಕೆ ಸಂಬಂಧಿಸಿವೆ. ಆದ್ದರಿಂದ ನಾವು ವಸ್ತುವಿನ ಮಟ್ಟದಲ್ಲಿ ಈ ಅಂಶಗಳಿಗೆ ಇರುವ ಸಂಬಂಧಕ್ಕೆ ಗಮನ ಕೊಡಬೇಕು, ಕಾದಂಬರಿಯ ವಸ್ತುವಿನ ಬಗ್ಗೆ ಮಾತನಾಡುವಾಗ ನಾವು ಅತಿ ಸರಳ ಎನ್ನಿಸಬಹುದಾದ ಒಂದು ಮಾತು ಹೇಳಬೇಕಾಗುತ್ತದೆ : ಈ ಕಾದಂಬರಿಯ ಬಂಧ ಒಂದು ಬಗೆಯ ನೈತಿಕ ವಿಕಾಸದೊಂದಿಗೆ ನಿಕಟ ಸಂಬಂಧ ಹೊಂದಿದೆ.
ಈ ನೈತಿಕ ವಿಕಾಸ ಕಾದಂಬರಿಯಲ್ಲಿ ವಹಿಸುವ ಪಾತ್ರವನ್ನು ನಾವು ಇತರ ವಿಮರ್ಶಕರು ಆಗಲೇ ಗಮನಿಸಿರುವ ಒಂದು ಮುಖ್ಯ ಅಂಶದ ಸಹಾಯದಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಈ ಕಾದಂಬರಿಯಲ್ಲಿ ಗಂಡು ಹೆಣ್ಣುಗಳ ಸಂಬಂಧದ ಚಿತ್ರಣಗಳಿಗೆ ಸಾಕಷ್ಟು ಪ್ರಾಮುಖ್ಯವಿರುವುದರಿಂದ ಮತ್ತು ಕಾದಂಬರಿಯ ಕೇಂದ್ರಕ್ರಿಯೆ ಕೂಡಾ ಈ ಚಿತ್ರಣಗಳೊಂದಿಗೆ ಒಂದಲ್ಲ ಒಂದು ವಿಧವಾದ ಸಂಬಂಧ ಹೊಂದಿರುವುದರಿಂದ ನಾವು ಲೈಂಗಿಕ ಸಂಬಂಧದ ಅನೇಕ ಮುಖಗಳಿಗೆ ಗಮನ ಕೊಡಲೇಬೇಕಾಗುತ್ತದೆ. ಈ ಸಂಬಂಧದ ಚಿತ್ರಣ ಕಾದಂಬರಿಯ ವಸ್ತುವಿನ ಬೆಳವಣಿಗೆಯಲ್ಲಿ ವಹಿಸುವ ಪಾತ್ರದಿಂದಾಗಿ ಲೈಂಗಿಕ ಸಂಬಂಧದ ಅನೇಕ ಮುಖಗಳ ಚಿತ್ರಣಗಳ ಸಹಾಯದಿಂದ ಕುವೆಂಪು ಅವರು ಜೀವನದ ಸಾಧ್ಯತೆಗಳ (possibilities of life) ಬಗ್ಗೆ ಬರೆಯುತ್ತಿರಬಹುದು ಎನ್ನಿಸುತ್ತದೆ. ಆದರೆ ಕಾದಂಬರಿಯಲ್ಲಿರುವ ಅನೇಕ ಅನುಭವಗಳ ಸಾಚಾತನದಿಂದಾಗಿ ಅತಿಸರಳವಾದ ಮೇಲು-ಕೀಳುಗಳ ಕಲ್ಪನೆಯನ್ನು ಕಾದಂಬರಿಯ ಮೇಲೆ ಹೇರಲು ಸಾಧ್ಯವಿಲ್ಲ, ಈ ರೀತಿಯ ಸರಳೀಕರಣ ಅಪಾಯಕರ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಕೇವಲ ವಿಶ್ಲೇಷಣೆಯ ಅನುಕೂಲಕ್ಕಾಗಿ ನಾವು ಕಾದಂಬರಿ ಚಿತ್ರಿಸುವ ಲೈಂಗಿಕ ಸಂಬಂಧಗಳಲ್ಲಿ ಮುಖ್ಯ ವಾದುವುಗಳನ್ನು ಪಟ್ಟಿ ಹಾಕಬಹುದು : ೧. ಗುತ್ತಿ-ತಿಮ್ಮಿ, ೨. ಐತ-ಪೀಂಚಲು

೩, ದೇವಯ್ಯ, ದೇವಮ್ಮ, ಕಾವೇರಿ ಜೀವರತ್ನಯ್ಯನ ಮಗಳು, ೪, ವೆಂಕಟಪ್ಪ ನಾಯಕ-ನಿಂಗಕ್ಕ ನಾಗತ್ತೆ, ೫, ಚೀಂಕ್ರ-ಪಿಜಿಣಿ-ಅಕ್ಕಣಿ, ೬, ಅಕ್ಕಣಿ-ರಂಗಪ್ಪ ಗೌಡರು, ೬. ನಾರಾಯಣ ಭಟ್ಟ ಐತಾಳನ ಹೆಂಡತಿ, ೮, ಕಾವೇರಿ-ಸಾಬರುಗಳು ಮತ್ತು , ಮುಕುಂದಯ್ಯ ಚಿನ್ನಮ್ಮ, ಕಾದಂಬರಿಯಲ್ಲಿ ಚಿತ್ರಿತವಾಗಿರುವ ಪ್ರಾಣಿಗಳ ಲೈಂಗಿಕ ಜೀವನ ಮನುಷ್ಯರ ಲೈಂಗಿಕ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಮನುಷ್ಯರ ಲೈಂಗಿಕ ಜೀವನದ ಚಿತ್ರಣಗಳಲ್ಲಿ ಗುತ್ತಿ-ತಿಮ್ಮಿ ಮತ್ತು ಐತ-ಪೀಂಚಲು ಇವರುಗಳು ಒಂದು ಮೆಟ್ಟಿಲ ಮೇಲಿದ್ದರೆ, ಮುಕುಂದಯ್ಯ-ಚಿನ್ನಮ್ಮ ಜೀವನಸಾಧ್ಯತೆಯ ದೃಷ್ಟಿಯಿಂದ ಬೇರೊಂದು ಮೆಟ್ಟಿಲ ಮೇಲಿದ್ದಾರೆ. ಈ ಚಿತ್ರಣಗಳಿಗೆ ಹೋಲಿಸಿ ನೋಡಿದರೆ ಮಿಕ್ಕೆಲ್ಲ ಚಿತ್ರಣಗಳು ಒಂದಲ್ಲ ಒಂದು ರೀತಿಯಲ್ಲಿ ವಿಫಲ ಸಂಬಂಧದ ಚಿತ್ರಣಗಳು. ಈ ವ್ಯತ್ಯಾಸ ಬಹುಶಃ ಕಾದಂಬರಿಯ ಆಶಯದ ಮೇಲೆ ಬೆಳಕು ಚೆಲ್ಲುತ್ತದೆ.
ಕಾದಂಬರಿಯಲ್ಲಿ ನೈತಿಕ ವಿಕಾಸದ ಕಲ್ಪನೆ ಇದೆ ಎಂದಲ್ಲಿ ನಾವು ಈ ವಿಕಾಸದ ಏಣಿಯ ಬೇರೆ ಬೇರೆ ಮೆಟ್ಟಲುಗಳ ಮೇಲಿರುವ ವ್ಯಕ್ತಿಗಳ ನಡುವಣ ಸಂಬಂಧಗಳಿಗೆ ಗಮನ ಕೊಡಬೇಕಾಗುತ್ತದೆ, ಗುತ್ತಿ-ತಿಮ್ಮಿ ಮತ್ತು ಐತ-ಪೀಂಚಲು ಇವರ ಜೀವನ ದಲ್ಲಿ ಕಷ್ಟಗಳಿದ್ದರೂ ಅವರದು ಸರಳವಾದ ಜೀವನ ಎನ್ನಿಸುತ್ತದೆ. ಈ ಸರಳತೆಗೆ ಮುಖ್ಯ ಕಾರಣ ಅವರು ಅವರ ಪರಿಸರ ಪ್ರವೃತ್ತಿಗಳಿಗೆ ಹತ್ತಿರವಿರುವುದು ಮತ್ತು ಆಲೋಚನೆಯ ಮಟ್ಟಕ್ಕೇರದ ಅವರ ಸರಿ-ತಪ್ಪುಗಳ ಕಲ್ಪನೆ ಎನ್ನಬಹುದು. ಆದರೆ ಅವರಿಗೂ ಮುಕುಂದಯ್ಯ-ಚಿನ್ನಮ್ಮ ಇವರಿಗೂ ಇರುವ ಸಂಬಂಧದಿಂದ ಮತ್ತು ಅವರ ಜೀವನದ ಕೆಲವು ಕ್ರಿಯೆಗಳಿಗೂ, ಮುಕುಂದಯ್ಯ-ಚಿನ್ನಮ್ಮ ಇವರ ಜೀವನದ ಕೆಲವು ಕ್ರಿಯೆಗಳಿಗೂ ಇರುವ ಹೋಲಿಕೆಗಳಿಂದ ಈ ವಿಕಾಸದ ಏಣಿಯ ಕೆಳ ಮತ್ತು ಮೇಲಿನ ಮೆಟ್ಟಿಲುಗಳಿಗೆ ಸಂಬಂಧವೇರ್ಪಡುತ್ತದೆ. ಈ ಸಂಬಂಧ ಬಹುಶಃ ಕಾದಂಬರಿಯ ಆಶಯದ ಮೇಲೆ ಬೆಳಕು ಚೆಲ್ಲುತ್ತದೆ.
ಗುತ್ತಿ-ತಿಮ್ಮಿ ಮತ್ತು ಮುಕುಂದಯ್ಯ-ಚಿನ್ನಮ್ಮ ಇವರ ಜೀವನಗಳಲ್ಲಿ ಕತೆಯ ಮಟ್ಟದಲ್ಲೇ ಕೆಲವು ಹೋಲಿಕೆಗಳಿವೆ. ಈ ನಾಲ್ವರೂ ತಮ್ಮ ಸುತ್ತುಮುತ್ತಲಿರು ವವರು ಒಪ್ಪದ ಕೆಲವು ಆಯ್ಕೆಗಳನ್ನು ಮಾಡುತ್ತಾರೆ. ಗುತ್ತಿ ತಿಮ್ಮಿಯನ್ನು “ಹಾರಿಸಿ’ಕೊಂಡು ಹೋಗುವಂತೇ, ಮುಕುಂದಯ್ಯ ಚಿನ್ನಮ್ಮನನ್ನು “ಹಾರಿಸಿ? ಕೊಂಡು ಹೋಗುತ್ತಾನೆ. ಪ್ರೇಮಿಗಳು ಪರಿಸರದ ಒತ್ತಡದಿಂದ ತಪ್ಪಿಸಿಕೊಂಡು ಹೋಗುವ ಮರೆ ಕೂಡ ಒಂದೇ. ಈ ನಾಲ್ವರ ಆಯ್ಕೆಗೂ ಸ್ಥೈರ‍್ಯ ಮತ್ತು ಧೈರ್ಯ ಬೇಕೆಂಬುದು ನಿರ್ವಿವಾದವಾದ ವಿಷಯ. ಈ ಎರಡು ಸನ್ನಿವೇಶಗಳಲ್ಲಿರುವ

ಹೋಲಿಕೆಗಳು ಮತ್ತು ಅವುಗಳ ಸಾಂಕೇತಿಕತೆಯಲ್ಲಿರುವ ವ್ಯತ್ಯಾಸಗಳು, ಆ ಸನ್ನಿವೇಶಕ್ಕೆ ಇವರು ತೋರಿಸುವ ಪ್ರತಿಕ್ರಿಯೆಗಳು ಮತ್ತು ಆ ಸನ್ನಿವೇಶದ ನಿರೂಪಣೆ ಇವುಗಳೆಲ್ಲ ಕಾದಂಬರಿಯ ವಸ್ತುವಿನ ದೃಷ್ಟಿಯಿಂದ ಮುಖ್ಯ.
ಕಾದಂಬರಿಯ ಮೊದಲಿಗೇ ಗುತ್ತಿ ತನ್ನ ಪ್ರಯಾಣ ಆರಂಭಿಸುತ್ತಾನೆ. ಅವನ ಪ್ರಯಾಣಕ್ಕೆ ಅನೇಕ ಕಾರಣಗಳಿದ್ದರೂ ವಸ್ತುವಿನ ದೃಷ್ಟಿಯಿಂದ ತಿಮ್ಮಿಯ ಮನೆಗೆ ಹೋಗಿ ಬೇರೆಯವರಿಗೆ ತಿಳಿಯದಂತೆ ಅವಳನ್ನು ತನ್ನ ಜೊತೆ ಕರೆದುಕೊಂಡು ಹೋಗಬೇಕೆಂಬ ಬಯಕೆ ಮುಖ್ಯವಾದುದು. ಈ ಬಯಕೆಯನ್ನು “ಪ್ರೇಮ” ಎನ್ನುವುದಕ್ಕಿಂತ ಮಾನವ ಪ್ರವೃತ್ತಿಯೊಂದರ ಪ್ರಬಲ ಕರೆಗೆ ಅವನ ಪ್ರತಿಕ್ರಿಯೆ ಎಂದು ಕರೆಯುವುದು ಉತ್ತಮ ಎಂದು ಕಾಣುತ್ತದೆ. ಬಹುಶಃ ಅವನ ಜೊತೆಗೆ ಹೋಗುವ ಅವನ ನಾಯಿಯ ಚಟುವಟಿಕೆಗಳಿಗೆ, ಅದರಲ್ಲೂ ಅದರ ಲೈಂಗಿಕ ಚಟುವಟಿಕೆಗಳಿಗೆ ಗಮನ ಕೊಟ್ಟಲ್ಲಿ ಅವನಿಗೂ ಪ್ರಾಣಿಗಳಿಗೂ ಇರುವ ಹೋಲಿಕೆಗಳು ಮತ್ತು ವ್ಯತ್ಯಾಸಗಳು ಮನದಟ್ಟಾಗುತ್ತವೆ. ಗುತ್ತಿ ಮನುಷ್ಯ, ಆದರೂ ನೈಸರ್ಗಿಕ ಪ್ರವೃತ್ತಿಗಳಿಂದ ದೂರ ಹೋಗಿಲ್ಲ. ಅವುಗಳ ಕರೆಗೆ ಸುಲಭವಾಗಿ ಓ ಕೊಡಬಲ್ಲ ನಿಸರ್ಗದತ್ತ ವಾದ ಉಪಾಯಗಳನ್ನು ಉಪಯೋಗಿಸಿ ಸಂದಿಗ್ಧ ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳಬಲ್ಲ ಎಂಬುದು ತಿಳಿಯುತ್ತದೆ. ಅವನು ನಿಸರ್ಗಕ್ಕೆ ಹತ್ತಿರವಾಗಿರುವುದು ಅವನಿಗೂ ಅವನಿಗಿಂತ ಉತ್ತಮ ಸ್ಥಾನದಲ್ಲಿರುವವರಿಗೂ ಇರುವ ಸಂಬಂಧದ ಮೇಲೆ ಬೆಳಕು ಚೆಲ್ಲುತ್ತದೆ.
ಇದೇ ಸಂದರ್ಭದಲ್ಲಿ ನಾವು ಗುತ್ತಿ-ತಿಮ್ಮಿಯರು ಸನ್ನಿವೇಶಗಳಿಗೆ ತೋರಿಸುವ ಪ್ರತಿಕ್ರಿಯೆಗಳಿಗೆ ಕೊಂಚ ಗಮನ ಕೊಡಬಹುದು. ಗುತ್ತಿ ತಿಮ್ಮಿಯ ಮನಸ್ಸು ತನ್ನ ಕಡೆ ತಿರುಗಲು ಕಣ್ಣಾ ಪಂಡಿತರಿಂದ ಯಂತ್ರ ಪಡೆಯಲು ಸಿದ್ಧನಾಗಿರುವುದು ಅವನ ಆಸೆಯ ಮತ್ತು ಮನೋಧರ್ಮದ ಮೇಲೆ ಬೆಳಕು ಚೆಲ್ಲುತ್ತದೆ. ಕಾದಂಬರಿಯ ಒಂಭತ್ತನೇ ಅಧ್ಯಾಯದಲ್ಲಿ ಒಂದು ಓಡುಹುಳು ಸೆಗಣಿ ಉಂಡೆಯನ್ನು ಕಷ್ಟ ಪಟ್ಟು ನೂಕಿಕೊಂಡು ಹೋಗುವ ದೃಶ್ಯಕ್ಕೆ ಗುತ್ತಿ ತೋರಿಸುವ ಪ್ರತಿಕ್ರಿಯೆ ಅವನ ಮನೋಧರ್ಮ ಎಂಥದು ಎಂಬುದನ್ನು ವಿಶದಪಡಿಸುತ್ತದೆ. ಅನಂತರ ತಿಮ್ಮಿಯೊಡನೆ ಕಾಡಿನಲ್ಲಿ ಹೋಗುವುದು, ಸನ್ನಿವೇಶಗಳಿಗೆ ಅವನು ತೋರಿಸುವ ಪ್ರತಿಕ್ರಿಯೆಗಳು-ಇವೆಲ್ಲ ಅವನಿಗೂ ನಿಸರ್ಗಕ್ಕೂ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ.
ಗುತ್ತಿ-ತಿಮ್ಮಿಯರಿಗೂ ಮುಕುಂದಯ್ಯ-ಚಿನ್ನಮ್ಮ ಇವರಿಗೂ ಇರುವ ಮುಖ್ಯ

ವ್ಯತ್ಯಾಸವನ್ನು ಕಾದಂಬರಿಯು ೨೫೬-೨೫೭ ನೇ ಪುಟಗಳಲ್ಲಿ ವರ್ಣಿತವಾಗಿರುವ ಘಟನೆ ಪಿಶದಪಡಿಸುತ್ತದೆ. ಗುತ್ತಿ-ತಿಮ್ಮಿ ಒಟ್ಟಿಗೆ ಮಲಗಿದಾಗ ಅವರು ನೈಸರ್ಗಿಕ ಪ್ರವೃತ್ತಿಗೆ ಮಣಿಯದಿರುವುದಕ್ಕೆ ಕಾರಣ ಅವರ ನೈತಿಕ-ಪ್ರಜ್ಞೆಯಲ್ಲ, ಸನ್ನಿವೇಶ. ಆದರೆ, ಮುಕುಂದಯ್ಯ-ಚಿನ್ನಮ್ಮ ತಮ್ಮ ಮದುವೆಗೆ ಮುಂಚೆ ಅನೇಕ ದಿನಗಳು ಒಟ್ಟಿಗೆ ಇರಬೇಕಾಗಿ ಬಂದಾಗ, ಅವರ ನೈಸರ್ಗಿಕ ಪ್ರವೃತ್ತಿಗಳು ಪ್ರಬಲವಾಗಿದ್ದರೂ, ಅವರು ಸನ್ನಿವೇಶಕ್ಕೆ ತೋರಿಸುವ ಪ್ರತಿಕ್ರಿಯೆಗಳು ಗುತ್ತಿ-ತಿಮ್ಮಿಯರು ತೋರಿಸುವ ಪ್ರತಿಕ್ರಿಯೆಗಳಿಗಿಂತ ಸಂಕೀರ್ಣವಾದುವು. ಈ ಸಂಕೀರ್ಣತೆಗೆ ಮುಖ್ಯ ಕಾರಣ ಅವರ ಸಾಮಾಜಿಕ ಸ್ಥಾನಮಾನಗಳು, ಎಂ. ಎನ್‌. ಶ್ರೀನಿವಾಸ್‌ ಅವರ ಪರಿಭಾಷೆಯನ್ನು ಉಪಯೋಗಿಸಿಕೊಳ್ಳಬಹುದಾದರೆ, ಮುಕುಂದಯ್ಯ-ಚಿನ್ನಮ್ಮ ಆಗಲೇ “ಸಂಸ್ಕೃತೀಕರಣ (Sanskritisation) ದ ಪ್ರಭಾವಕ್ಕೆ ಒಳಗಾಗಿದ್ದಾರೆ. ಅವರ ಪ್ರವೃತ್ತಿಗಳಿಗೂ ಅವರ ನೀತಿಪ್ರಜ್ಞೆಗೂ ತಿಕ್ಕಾಟ ಅನಿವಾರ‍್ಯ. ಆದ್ದರಿಂದ ಅವರು ತಮ್ಮ ಜೀವನವನ್ನು ಗುತ್ತಿ-ತಿಮ್ಮಿ, ಐತ-ಪೀಂಚಲು ಇವರುಗಳು ರೂಪಿಸಿ ಕೊಳ್ಳುವ ಮಟ್ಟಕ್ಕಿಂತ ಸಂಕೀರ್ಣವಾದ ಮಟ್ಟದಲ್ಲಿ ರೂಪಿಸಿಕೊಳ್ಳಬೇಕು. ಈ ವ್ಯತ್ಯಾಸಗಳಿಂದಾಗಿ ನಾವು ವಿವಿಧ ನಿರೂಪಣೆಗಳಲ್ಲಿರುವ ವ್ಯತ್ಯಾಸಗಳಿಗೆ ಗಮನ ಕೊಟ್ಟ ಹೊರತು ಕಾದಂಬರಿಯ ಬೆಲೆ ಕಟ್ಟಲಾಗುವುದಿಲ್ಲ,
ಮುಕುಂದಯ್ಯ-ಚಿನ್ನಮ್ಮ ಮತ್ತು ಗುತ್ತಿ-ತಿಮ್ಮಿಯರ ಜೀವನದೊಂದಿಗೆ ಹೋಲಿಸಿ ನೋಡಿದಾಗ ಐತ-ಪೀಂಚಲು ಇವರ ಜೀವನದಲ್ಲಿ ಕ್ಲಿಷ್ಟ ಸಮಸ್ಯೆಗಳಿಲ್ಲ. ಒಂದು ಮಟ್ಟದಲ್ಲಿ ಅವರದು ಮಾದರಿ ಜೀವನ. ಕಾದಂಬರಿಯ ಆಶಯದ ದೃಷ್ಟಿಯಿಂದ ಐತ-ಪೀಂಚಲು ಮತ್ತು ಮುಕುಂದಯ್ಯ-ಚಿನ್ನಮ್ಮ ಇವರ ಜೀವನಗಳನ್ನು ಬೇರೆ ಬೇರೆ ಮಟ್ಟಗಳಲ್ಲಿ ಮಾದರಿ ಜೀವನಗಳೆಂದು ಗಣಿಸಬಹುದು. ಮಿಕ್ಕೆಲ್ಲ ಪಾತ್ರಗಳ ಜೀವನಗಳ ಸಫಲತೆ-ವಿಫಲತೆಗಳನ್ನು ಈ ನಾಲ್ಕು ಪಾತ್ರಗಳ ಜೀವನಗಳೊಂದಿಗೆ ಹೋಲಿಸಿ ಕಾದಂಬರಿಯ ಬೆಲೆ ಕಟ್ಟಬೇಕಾಗುತ್ತದೆ.
ಐತ ಪೀಂಚಲು ಮತ್ತು ಗುತ್ತಿ-ತಿಮ್ಮಿಯರ ಜೀವನಗಳಲ್ಲಿರುವ ಮುಖ್ಯ ಹೋಲಿಕೆ ಅವರಿಗೂ ನೈಸರ್ಗಿಕ ಪ್ರವೃತ್ತಿಗಳಿಗೂ ಇರುವ ನೇರ ಸಂಬಂಧ. ಈ ಎರಡು ಸಂಸಾರಗಳಲ್ಲೂ ವೈಯಕ್ತಿಕ ಸಂಬಂಧದ ಮಟ್ಟದಲ್ಲಿ ಹೆಚ್ಚು ಸಮಸ್ಯೆಗಳಿಲ್ಲ. ಐತ-ಪೀಂಚಲು ಎದುರಿಸಬೇಕಾಗಿ ಬರುವ ಮುಖ್ಯ ಸಮಸ್ಯೆ-ಪೀಂಚಲು ಮುಕುಂದಯ್ಯನೊಡನೆ ಕಾಮ ಸಂಬಂಧ ಹೊಂದಿರಬಹುದು ಎಂದು ಐತ ಶಂಕಿಸುವುದು-ಅವರಿಬ್ಬರನ್ನೂ ಒಂದುಗೂಡಿಸಿರುವ ಕಾಮ ಸಂಬಂಧ ಮತ್ತು ಐತನ ಶಂಕೆ ನಿವಾರಣೆಯಾಗುವುದು ಇವುಗಳಿಂದ ಪರಿಹಾರವಾಗುತ್ತದೆ. ಇದೇ ರೀತಿ ಗುತ್ತಿ-ತಿಮ್ಮಿಯು ಎದುರಿಸಬೇಕಾಗುವ

ಸಮಸ್ಯೆಗಳು ತಮಗಿಂತ ಮೇಲು ಮಟ್ಟದಲ್ಲಿರುವವರ ಇಷ್ಟಕ್ಕೆ ವಿರುದ್ಧವಾದ ಆಯ್ಕೆಗಳನ್ನು ಮಾಡುವುದರಿಂದ ಹುಟ್ಟುತ್ತವೆ. ಇದರ ಅರ್ಥ ಅವರಿಗೆ ನೇರವಾಗಿ ಸಂಬಂಧಿ ಸದ ಸಾಮಾಜಿಕ ವ್ಯವಸ್ಥೆಯ ಕಲ್ಪನೆಗಳು ಅವರ ವೈಯಕ್ತಿಕ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರಿಲ್ಲ ಎಂದಾಗಬಹುದು. ಅಥವಾ ಅವರು ಎದುರಿಸುವುದು ನೈತಿಕ ಸಮಸ್ಯೆಗಳಲ್ಲ, ಸಾಮಾಜಿಕ ಸಮಸ್ಯೆಗಳು ಎಂದೂ ಆಗಬಹುದು. ಹೀಗಾದಲ್ಲಿ ವೈಯಕ್ತಿಕ ಆಯ್ಕೆಗಳಿಂದ ಹುಟ್ಟುವ ನೈತಿಕ ಸಮಸ್ಯೆಗಳನ್ನು ಎದುರಿಸುವವರು ಐತ-ಪೀಂಚಲು, ಗುತ್ತಿ-ತಿಮ್ಮಿ ಇವರ ಮಟ್ಟದಲ್ಲಿರುವವರಲ್ಲ. ಅವರಿಗಿಂತ ಮೇಲು ಮಟ್ಟದಲ್ಲಿರುವವರು ಎಂದಂತಾಗುತ್ತದೆ. ಈ ದೃಷ್ಟಿಯಿಂದ ಪೀಂಚಲುವಿಗೆ ಸಂಬಂಧಿಸಿದ ಒಂದು ಸನ್ನಿವೇಶ ಮುಖ್ಯ ಎನ್ನಿಸುತ್ತದೆ. ಕಾದಂಬರಿಯ ಹದಿನೇಳನೆಯ
ಅಧ್ಯಾಯದಲ್ಲಿ (ಪುಟಗಳು ೧೬೭-೧೬೯) ಪೀಂಚಲುವಿನ ಸರಿ-ತಪ್ಪುಗಳ ಕಲ್ಪನೆ ಯನ್ನು ಕಾದಂಬರಿಕಾರರು ನೇರವಾಗಿ ವರ್ಣಿಸುತ್ತಾರೆ :
ಐತ ಅಪೇಕ್ಷಿಸಿದ್ದನ್ನು ಮುಕುಂದಯ್ಯ ಅಪೇಕ್ಷಿಸಿದ್ದರೆ ಅವಳು “ಇಲ್ಲ” ಎನ್ನುವ ಸ್ಥಿತಿಯಲ್ಲಿರಲಿಲ್ಲ; ಒಲ್ಲೆ ಎನ್ನುತ್ತಿರಲಿಲ್ಲ, ತನಗಿಂತಲೂ ಮಹತ್ತಾದುದಕ್ಕೆ ತನ್ನನ್ನು ಅರ್ಪಿಸಿಕೊಳ್ಳಲು ಅವಳು ಹಿಂಜರಿಯುತ್ತಿರಲಿಲ್ಲ. ತಾನು ಬಹುಪೂರ್ವದಿಂದಲೂ ಮೆಚ್ಚಿಕೊಂಡೇ ಬಂದಿರುವ ತನ್ನ ಒಡೆಯನಿಗೆ ತೋರುವ ಗೌರವವೆಂದೂ, ವಿಧೇಯತೆಯ ಅಂಗವೆಂದೂ, ಅವಳು ತನ್ನನ್ನು ಸಮರ್ಪಣಭಾವದಿಂದಲೆ, ಸಂತೋಷವಾಗಿಯೇ, ಪಾಪಭಯ ಲೇಶವಿಲ್ಲದ ಆತ್ಮನೈವೇದ್ಯರೂಪದಿಂದಲೆ ಒಪ್ಪಿಸಿಕೊಂಡುಬಿಡುತ್ತಿದ್ದಳು. ಹಾಗೆ ಒಪ್ಪಿಸಿ ಕೊಂಡೂ, ಐತನಿಗೆ, ತನ್ನ ಕೈಹಿಡಿದ ಗಂಡನಿಗೆ ವಂಚನೆ ಮಾಡುತಿದ್ದೇನೆ ಎಂಬ ಭಾವನೆ ಅವಳಲ್ಲಿ ಇನಿತೂ ಇರಲಿಲ್ಲ. ಆ ಭಾವನೆಯಿದ್ದೂ ಒಂದು ವೇಳೆ ಅವಳು ಒಪ್ಪಿಸಿಕೊಂಡಿದ್ದರೆ, ಅವಳು ಮೋಸಗಾರಿಯಾಗುತಿದ್ದಳು; ಜಾರೆಯಾಗುತ್ತಿದ್ದಳು; ಕುಟಿಲೆಯಾಗುತ್ತಿದ್ದಳು,
(ಪುಟಗಳು ೧೬೮-೧೬೯).
ಇದೇ ಸಂದರ್ಭದಲ್ಲಿ ನಾವು ಮತ್ತೊಂದು ವಿಷಯವನ್ನು ಗಮನಿಸಬೇಕು. ಗುತ್ತಿ-ತಿಮ್ಮಿ ಮತ್ತು ಮುಕುಂದಯ್ಯ-ಚಿನ್ನಮ್ಮ ತಮ್ಮ ಸುತ್ತಮುತ್ತಲಿನವರು ಒಪ್ಪದ ಆಯ್ಕೆಗಳನ್ನು ಮಾಡಿದರೂ ಪರಿಸರದ ವಿರುದ್ಧ ನಿಲ್ಲುವ ಶಕ್ತಿಯುಳ್ಳವರು ಮುಕುಂದಯ್ಯ-ಚಿನ್ನಮ್ಮ ಇಬ್ಬರೇ. ಕಾದಂಬರಿಯ ಕೊನೆಯಲ್ಲಿ ಗುತ್ತಿ ಮತ್ತು ತಿಮ್ಮಿ ಊರುಬಿಟ್ಟು ಹೋಗುವುದು ಅವರ ಅಸಹಾಯಕತೆಯನ್ನು ಸೂಚಿಸುತ್ತದೆ. ಗುತ್ತಿ-ತಿಮ್ಮಿ ಮತ್ತು ಮುಕುಂದಯ್ಯ-ಚಿನ್ನಮ್ಮ ಇವರುಗಳಿಗೆ ಸಂಬಂಧಿಸಿದ ಕೆಲವು ಘಟನೆಗಳಲ್ಲಿರುವ ಹೋಲಿಕೆ ಮತ್ತು ವೈದೃಶ್ಯಗಳು, ಒಂದು ದೃಷ್ಟಿಯಿಂದ

ಮುಕುಂದಯ್ಯ…ಚಿನ್ನಮ್ಮಗು ಗುತ್ತಿ-ತಿಮ್ಮಿಯರಿಗಿಂತ ಶಕ್ತರು ಎಂಬುದನ್ನು ಸೂಚಿಸಿದರೂ ಅವರು ತಮಗಿಂತ ಕೀಳು ಸ್ಥಾನದಲ್ಲಿರುವ ಐತ-ಪೀಂಚಲು ಮತ್ತು ಗುತ್ತಿ-ತಿಮ್ಮಿಯರ ಸಹಾಯ ಪಡೆಯುವುದು ಅವರು ಇನ್ನೊಂದು ದೃಷ್ಟಿಯಲ್ಲಿ ಅಶಕ್ತರು ಎಂಬುದನ್ನು ಸೂಚಿಸುತ್ತದೆ. ಇದರ ಅರ್ಥ ಪ್ರಾಣಿ ಜೀವನಕ್ಕೆ ಅತಿ ಸಮೀಪದಲ್ಲಿರು ವವರಿಗಿರುವ ಅನುಕೂಲಗಳು ಮುಕುಂದಯ್ಯ ಮತ್ತು ಚಿನ್ನಮ್ಮ ಇವರಿಗಿಲ್ಲ ಎಂದಿರಬಹುದು. ಈ ಎಲ್ಲ ಪಾತ್ರಗಳಿಗೂ ಕಾದಂಬರಿ ಸಂಬಂಧವನ್ನೇರ್ಪಡಿಸುವುದರಲ್ಲಿ ಕಾದಂಬರಿಕಾರರ ಆಶಯ ಅನುಭವದ ವಿವಿಧ ಮಟ್ಟಗಳಿಗಿರಬೇಕಾದ ಸಂಬಂಧವನ್ನು ಚಿತ್ರಿಸುವುದಾಗಿರಬಹುದು ಎಂದು ಸೂಚಿಸಬಹುದು.
ಕಾದಂಬರಿಯಲ್ಲಿ ಚಿತ್ರಿತವಾಗಿರುವ, ಸಮಾಜದ ನೈತಿಕ ಕಟ್ಟುಗಳನ್ನು ಮೀರುವ ಲೈಂಗಿಕ ಸಂಬಂಧಗಳ ಬಗ್ಗೆ ಹೆಚ್ಚು ಬರೆಯುವ ಅವಶ್ಯಕತೆಯಿಲ್ಲ. ಇದಕ್ಕೆ ಕಾರಣ ಆ ಸಂಬಂಧಗಳಲ್ಲಿ ಯಾವುದೂ ತೃಪ್ತಿಕರ ಎನ್ನಿಸುವುದಿಲ್ಲ. ಇದಕ್ಕೆ ಕಾರಣ ಅವು ನೈತಿಕ ಕಟ್ಟುಗಳನ್ನು ಮೀರುತ್ತವೆ ಎಂಬುದೊಂದೇ ಅಲ್ಲ; ಕಾದಂಬರಿಯ ಯಾವ ಪಾತ್ರಕ್ಕೂ ಇಂತಹ ಕಟ್ಟುಗಳನ್ನು ನಿಜಕ್ಕೂ ಮೀರಿ ನಿಲ್ಲುವ ಮತ್ತು ಅಂತಹ ಸಂಬಂಧಗಳಿಂದ ತೃಪ್ತಿ ಪಡೆಯಲು ಬೇಕಾದಂತಹ ಆಂತರಿಕ ಶಕ್ತಿಯಿಲ್ಲ. ಆದ್ದರಿಂದ ಇಂತಹ ಸಂಬಂಧಗಳೆಲ್ಲ ವೈದೃಶ್ಯಕ್ಕಾಗಿ ಉಪಯೋಗಿಸಿಕೊಂಡವು ಎಂದು ಹೇಳಬಹುದು.
ಆದ್ದರಿಂದ ಕಾದಂಬರಿಯ ವಸ್ತು “ಯಾವ ರೀತಿಯ ಜೀವನ ತೃಪ್ತಿಕರ” ಎಂಬ ಪ್ರಶ್ನೆ ಎನ್ನಬಹುದು. ಈ ಪ್ರಶ್ನೆಗೆ ಪ್ರಪಂಚದ ಮುಖ್ಯ ಲೇಖಕರೆಲ್ಲ ಒಂದಲ್ಲ ಒಂದು ರೀತಿ ಉತ್ತರ ಕೊಡಲು ಪ್ರಯತ್ನಿಸಿದ್ದಾರೆ. ಅದರಿಂದಲೇ ಏನೋ, “ಮಲೆಗಳಲ್ಲಿ ಮದು ಮಗಳು” ಓದುವಾಗ ಲೈಂಗಿಕ ಸಂಬಂಧಗಳಿಗೂ, ಮನುಷ್ಯ-ಮನುಷ್ಯರ ಸಂಬಂಧದ ಇತರ ಮುಖಗಳಿಗೂ ಒಂದೇ ಸಮಯದಲ್ಲಿ ಗಮನ ಕೊಡಬೇಕಾಗುತ್ತದೆ. ಈ ಕಾದಂಬರಿಯಲ್ಲಿ ಲೈಂಗಿಕ ಸಂಬಂಧಗಳು ಕೊಡುವ ತೃಪ್ತಿ ಅಥವಾ ಅತೃಪ್ತಿ ಕೂಡ ಲೈಂಗಿಕ ಸಂಬಂಧಗಳು ದಾಂಪತ್ಯದ ಒಳಗಿನದೇ ಹೊರಗಿನದೇ ಎಂಬ ಪ್ರಶ್ನೆಯನ್ನು ಅವಲಂಬಿಸಿದೆ. ಲೈಂಗಿಕ ಪ್ರವೃತ್ತಿ ನೀತಿ ಅನೀತಿಗಳ ಕಟ್ಟುಗಳ ಹೊರಗಿರುವ ಪ್ರವೃತ್ತಿಯಾದರೂ, ಆ ಪ್ರವೃತ್ತಿ ಸಾಮಾಜಿಕ ಕಟ್ಟು ಕಟ್ಟಲೆಗಳ ಮೇರೆ ಮೀರದಿದ್ದರೆ, ಅಥವಾ ಕಟ್ಟು ಕಟ್ಟಲೆಗಳು ಅರಗಿಸಿಕೊಳ್ಳುವಂತಹ ರೀತಿಯಲ್ಲಿ ಅಭಿವ್ಯಕ್ತಿಗೊಂಡರೆ, ಆ ಪ್ರವೃತ್ತಿ ಸಾಮಾಜಿಕ ಜೀವನಕ್ಕೆ ಮತ್ತು ವ್ಯಕ್ತಿಪ್ರಜ್ಞೆಯ ಮುಖ್ಯ ಭಾಗವಾಗಿರುವ ಸಾಮಾಜಿಕ ಪ್ರಜ್ಞೆಗೆ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ ತೃಪ್ತಿಕರವಾದ ಜೀವನಕ್ಕೆ ತಳಹದಿಯಾಗಬಲ್ಲದು ಎಂಬ ಅರಿವನ್ನು ಕಾದಂಬರಿ ಮಾಡಿಕೊಡಲು ಪ್ರಯತ್ನಿಸುವಂತಿದೆ.

ಇಷ್ಟು ಮುಖ್ಯವಾದ ಕಾದಂಬರಿ ವಸ್ತುವನ್ನು ಯಾವ ರೀತಿ ಬಳಸಿಕೊಂಡಿದೆ, ಅದನ್ನು ಯಾವ ಮಟ್ಟದಲ್ಲಿ ವಿಶ್ಲೇಷಿಸಿದೆ ಎಂಬ ಪ್ರಶ್ನೆಗಳು ವಿಮರ್ಶೆಯ ದೃಷ್ಟಿಯಿಂದ ಮುಖ್ಯವಾದುವು. ಈ ಸಮಸ್ಯೆಯನ್ನು ಕಾದಂಬರಿ ಚಿತ್ರಿಸುವ ಕೆಲವು ಸಂಬಂಧಗಳ ವಿಶ್ಲೇಷಣೆಯ ಮೂಲಕ ಪರೀಕ್ಷಿಸಬಹುದು. ಈ ಸಂಬಂಧಗಳಲ್ಲಿ ಸಾಂಕೇತಿಕತೆಯ ದೃಷ್ಟಿಯಿಂದ ಮುಖ್ಯವಾದುದು ಐತ-ಪೀಂಚಲು ಅವರದು. ಇವರಿಬ್ಬರ ಸಂಬಂಧವನ್ನು ಬೆಸೆದಿರುವುದು ಲೈಂಗಿಕ ಆಕರ್ಷಣೆ, ಮುಗ್ಧತೆ ಮತ್ತು ಸರಳತೆ. ಅವರು ದಾಂಪತ್ಯದ ಚೌಕಟ್ಟಿನಲ್ಲೇ ಪಡೆದುಕೊಳ್ಳುವ ಲೈಂಗಿಕ ತೃಪ್ತಿಯನ್ನು ಕುವೆಂಪು ನೇರವಾಗಿ ವರ್ಣಿಸಿದ್ದಾರೆ. ಇವರಿಬ್ಬರ ಸಂಬಂಧ ಸಾಂಕೇತಿಕ ಎನ್ನುವುದಕ್ಕೆ ಒಂದು ಕಾರಣ ಇವರಿಬ್ಬರ ಸಂಬಂಧಕ್ಕೂ ಅದೇ ಸಾಮಾಜಿಕ ಮಟ್ಟ ದಲ್ಲಿರುವ ಸಿಜಿಣಿ-ಅಕ್ಕಣಿ-ಚೀಂಕ್ರ ಇವರ ಸಂಬಂಧಕ್ಕೂ ಇರುವ ವೈದೃಶ್ಯ, ಐತ-ಪೀಂಚಲು ತಮ್ಮ ಜೀವನದಲ್ಲಿ ಕಂಡುಕೊಳ್ಳುವ ಸಾರ್ಥಕತೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬೇಕು ಎನ್ನುವುದಕ್ಕೆ ಕಾರಣ ಇಂತಹ ಸಾರ್ಥಕತೆ ವಸ್ತುವಿನ ಬೆಳವಣಿಗೆಯ ದೃಷ್ಟಿಯಿಂದ ಅಥವಾ ಸಾಂಕೇತಿಕ ಮಟ್ಟದಲ್ಲಿ ಜಯಗಳಿಸದಿದ್ದರೆ ಅದು ಕೇವಲ ಹಂಬ ಲನ್ನು (nostalgia) ಸೂಚಿಸಬಹುದು. ಮೊದಲೇ ಗಮನಿಸಿದಂತೆ ಐತ-ಪೀಂಚಲು ಇವರುಗಳ ಜೀವನದಲ್ಲಿ ಅವರ ಸಾಮಾಜಿಕ ಮಟ್ಟದ ಇತರರ ಜೀವನಗಳಲ್ಲಿರುವ ಕಷ್ಟಗಳಿಲ್ಲ. ಆದರೆ ಅವರ ಮಟ್ಟದಲ್ಲಿರುವ ಇತರರ ಪ್ರಜ್ಞೆ ಮತ್ತು ಮನೋಧರ್ಮಗಳಲ್ಲಿ ಹೋಲಿಕೆಗಳಿವೆ. ಇದರಿಂದಾಗಿ ಐತ-ಪೀಂಚಲು ಜೀವನದಲ್ಲಿ ಕಂಡುಕೊಳ್ಳುವ ಸಾರ್ಥಕತೆಯನ್ನು ನಾವು ಕೇವಲ ಆಕಸ್ಮಿಕವೆಂದು ಗಣಿಸಲಾಗುವುದಿಲ್ಲ.
ಐತ-ಪೀಂಚಲು ಇವರ ಜೀವನಕ್ಕೆ ನೇರ ವೈದೃಶ್ಯದಂತಿರುವುದು ಅಕ್ಕಣಿ-ಸಿಜಣರ ಜೀವನ. ಅಕ್ಕಣಿಯ ಕಷ್ಟಗಳಿಗೆ ಮತ್ತು ಆಕೆ ಚೀಂಕ್ರನಿಗೆ ತನ್ನ ದೇಹ ಒಪ್ಪಿಸಿಕೊಳ್ಳುವುದಕ್ಕೆ ಕಾರಣ ಸ್ಪಷ್ಟವಾಗಿದೆ, “ಆಕೆ ಸೇರೆಗಾರನಿಗೆ ಮನಸ್ಸು ಸೋತು ಒಡಲನ್ನು ಒಪ್ಪಿಸಿರಲಿಲ್ಲ” (ಪುಟಗಳು ೭೭೩-೭೭೪) ಆಕೆ ಕಾಲು ಜಾರುವುದಕ್ಕೆ ಕಾರಣಗಳು ಸಮಯ, ಸನ್ನಿವೇಶ ಮತ್ತು ದಾಕ್ಷಿಣ್ಯ. ಆಕೆ ರಂಗಪ್ಪಗೌಡರಿಗೆ ದೇಹ ಒಪ್ಪಿಸುವುದಕ್ಕೂ ಸನ್ನಿವೇಶವೇ ಕಾರಣವೆನ್ನಬಹುದು. ಆದರೆ ನಾವು ಆಕೆಯ ಜೀವನವನ್ನು ಕೇವಲ ಒಂದು ವೈಯಕ್ತಿಕ ಜೀವನವೆಂದು ಗಣಿಸದೆ ಕಾದಂಬರಿಯ ವಸ್ತುವಿನ ಬೆಳವಣಿಗೆಗೆ ಸಹಾಯ ಮಾಡುವ ಘಟನೆಯೆಂದು ಗಣಿಸಿದರೆ ಕೆಲವು ಮುಖ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪಿಜಣ, ಗುತ್ತಿ ಮತ್ತು ಐತರಲ್ಲಿರುವ ವ್ಯತ್ಯಾಸ

ಗಳನ್ನು ಗಮನದಲ್ಲಿಟ್ಟುಕೊಂಡರೆ, ಅಕ್ಕಣಿ ಕಾಲುಜಾರುವುದಕ್ಕೆ ಮುಖ್ಯ ಕಾರಣ ಆಕೆಯ ಗಂಡ ಸಿಜಣ. ಹೆಣ್ಣಿನ ಜೀವನದಲ್ಲಿ ಗಂಡು ವಹಿಸಬೇಕಾದ ಪಾತ್ರವನ್ನು ವಹಿಸುವ ಸ್ಥಿತಿಯಲ್ಲಿಲ್ಲದ್ದು ಎನ್ನಿಸುತ್ತದೆ. ಈ ವಿಷಯ, ಗುತ್ತಿ-ತಿಮ್ಮಿಯರು ತಮ್ಮ ಊರು ಬಿಟ್ಟು ಹೋಗಬೇಕಾಗಿ ಬರುವುದು. ನದಿ ದಾಟುವುದಕ್ಕಿಂತ ಮುಂಚೆ ತಿಮ್ಮಿಗೆ ಅವಳಿಗಿಂತ ಮೇಲುಮಟ್ಟದಲ್ಲಿರುವ ಗಂಡಸರು ತೋರಿಸುವ ಪ್ರತಿಕ್ರಿಯೆಗಳು, ಮತ್ತು ಐತ..ಪೀಂಚಲು ಇವರ ಜೀವನದಲ್ಲಿ ಅವರು ಪರಿಹರಿಸಲು ಅಸಾಧ್ಯವಾದ ಸಮಸ್ಯೆ ಏಳುವುದರಲ್ಲಿತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಆ ಮಟ್ಟದಲ್ಲಿರುವವರ ಜೀವನದ ಸಾರ್ಥಕತೆ ಎಷ್ಟು ಅಸ್ಥಿರ ಎಂಬುದು ಮನದಟ್ಟಾಗುತ್ತದೆ. ಈ ಕಾರಣಗಳಿ೦ದಾಗಿ ಐತ-ಪೀಂಚಲು ಇವರ ಜೀವನ ಸಾಂಕೇತಿಕವಾಗುತ್ತದೆ.
ಬಹುಶಃ ಈ ಸಾಂಕೇತಿಕತೆಯನ್ನು ನಾವು ಐತ-ಪೀಂಚಲು ಇವರಿಗೆ ಸಂಬಂಧಿಸಿದ ಕೆಲವು ಸನ್ನಿವೇಶಗಳ ಮತ್ತು ಲೇಖಕರ ನೇರ ವ್ಯಾಖ್ಯಾನಗಳ ಸಹಾಯದಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು. ಇದೇ ಸಂದರ್ಭದಲ್ಲಿ ನೇರ ವ್ಯಾಖ್ಯಾನಗಳಿಗೂ ಕಾದಂಬರಿ ಕ್ರಿಯೆ ನನಗೆ ತಿಳಿಸಿಕೊಡುವ ವಿಚಾರಗಳಿಗೂ ಇರುವ ಸಂಬಂಧವನ್ನು ಗಮನಿಸಬಹುದು. ವ್ಯಾಖ್ಯಾನಕ್ಕೆ ಕ್ರಿಯೆ ಪೂರಕವಾಗಿದ್ದಾಗ ಮಾತ್ರ ವ್ಯಾಖ್ಯಾನ ಓದುಗನ ಗಮನವನ್ನು ತನ್ನತ್ತ ಸೆಳೆದುಕೊಳ್ಳುವುದಿಲ್ಲ. ಆದರೆ ಕ್ರಿಯೆಗೂ ವ್ಯಾಖ್ಯಾನಕ್ಕೂ ಸಂಬಂಧವಿಲ್ಲ ಎನ್ನಿಸಿದಾಗ ವ್ಯಾಖ್ಯಾನ ಓದುಗನನ್ನು ಗೊಂದಲದಲ್ಲಿ ಕೆಡವುತ್ತದೆ. ವ್ಯಾಖ್ಯಾನದ ಸಹಾಯದಿಂದ ಕಾದಂಬರಿಕಾರರು ಕ್ರಿಯೆಯ ಮೇಲೆ ಸಾಂಕೇತಿಕತೆಯನ್ನು ಹೇರಲು ಪ್ರಯತ್ನಿಸಿದ್ದಾರೆ ಎಂಬ ಶಂಕೆ ಬರುತ್ತದೆ. ಕಾದಂಬರಿಯ ಹದಿನೇಳನೆಯ ಅಧ್ಯಾಯದಲ್ಲಿ ಬರುವ ಒಂದು ವ್ಯಾಖ್ಯಾನ ಇಂತಹ ಸಮಸ್ಯೆಯನ್ನು ಮುಂದು ಮಾಡುತ್ತದೆ :
ಮಟ್ಟಿನ ಹಿಂದೆ ಅವಿತು ಅವರನ್ನೇ (ಐತ-ಪೀಂಚಲು) ಗಮನಿಸಿ ನೋಡುತಿದ್ದ ಮುಕುಂದಯ್ಯ ಬೆರಗಾದನು : ಆ ಕಾಡಿನ ಹಿನ್ನೆಲೆಯಲ್ಲಿ, ಆ ಏಕಾಂತದಲ್ಲಿ, ಆ ವಿರಳ ವನ್ಯ ಪಕ್ಷಿಕೂಜನದ ಸಮ್ಮೋಹಕತೆಯಲ್ಲಿ ಅವರಿಬ್ಬರೂ ಗಟ್ಟದ ತಗ್ಗಿನಿಂದ ಹೊಟ್ಟೆಪಾಡಿಗಾಗಿ ದುಡಿಯಲು ಬಂದಿದ್ದ ಬಿಲ್ಲವರ ಜಾತಿಯ ತಮ್ಮ ಬಡ ಕೂಲಿಯಾಳುಗಳಂತೆ ಕಾಣಿಸುತ್ತಿರಲಿಲ್ಲ. ಆ ತರುಣ ದಂಪತಿ ಪ್ರಾಚೀನ ಕಾಲದಲ್ಲಿ ಪೌರಾಣಿಕ ಯುಗದಲ್ಲಿ ದಂಡಕಾರಣ್ಯಕ್ಕೊ, ನೈಮಿಷಾರಣ್ಯಕ್ಕೊ ಕಾರ್ಯಾರ್ಥವಾಗಿ ಅವತರಿಸಿ ಅಲೆಯುತ್ತಿದ್ದಿರಬಹುದಾದ ಬಿಲ್ಲವೇಷದ ಶಿವ-ಶಿವಾಣಿಯರಂತೆ ತೋರಿದರು ! ಐಗಳು ಅನಂತಯ್ಯನವರ ಆಶೀರ್ವಾದದಿಂದ ಮುಕುಂದಯ್ಯ

ಸಂಪಾದಿಸಿದ್ದ ಪೌರಾಣಿಕ ಕಲ್ಪನಾಶಕ್ತಿಯ ಪ್ರಭಾವವೋ ? ಅಥವಾ ಮೇಲು ಕೀಳು ಬಡವ ಬಲ್ಲಿದ ಅರಸು ತಿರುಕ ಎಂಬ ತಾರತಮ್ಯವಿಲ್ಲದೆ ಅಡವಿ ನಗರ ಮಂಚ ನೆಲ ಚಾಪೆ ಸುಪ್ಪತ್ತಿಗೆ ಎಂಬ ಭೇದವಿಲ್ಲದೆ, ಸರ್ವರಲ್ಲಿಯೂ ಸಮನಾಗಿ ಸಮಪ್ರಮಾಣದಲ್ಲಿ ಆವಿರ್ಭೂತವಾಗುವ ರತಿ-ಮನ್ಮಥ ಪ್ರೇಮಾನುಗ್ರಹದ ಪ್ರಣಯ ಪರಿವೇಷದ ಮಹಿಮೆಯೋ ? ಅಥವಾ ತನ್ನಲ್ಲಿಯ ಸಾವಿರ ಹೆಡೆಯೆತ್ತಿ ರತಿ-ಮನ್ಮಥರನ್ನೂ, ಹೆತ್ತಯ್ಯ-ಅಮ್ಮರನ್ನೂ ಹೊತ್ತು ಮೆರೆಯಲು ಅಣಿಯಾಗುತ್ತಿದ್ದ ಶೃಂಗಾರ ಶೇಷನೊಂದು ಪ್ರಸ್ಥಾನಪೂರ್ವ ವೈಭವದ ನಿಗೂಢ ಪರಿಣಾಮವೋ ? ಮುಕುಂದಯ್ಯ ತನಗೆ ತಾನೆ ಗೊಣಗಿಕೊಂಡನು “ಅಃ ಏನು ಚೆನ್ನಾಗಿದ್ದಾರೆ ಅವರಿಬ್ಬರೂ !” (ಪುಟಗಳು ೧೫೯-೧೬೦)
ಈ ವ್ಯಾಖ್ಯಾನ ಒಂದೇ ಸರಳ ಸಾಂಕೇತಿಕತೆಯನ್ನು ಸೂಚಿಸುವುದಿಲ್ಲ. ಮುಕುಂದಯ್ಯನ ಪ್ರತಿಕ್ರಿಯೆಗಳಿಗೆ ಹಲವಾರು ಕಾರಣಗಳನ್ನು ಸೂಚಿಸುತ್ತದೆ ಎಂಬುದು ನಿಜ. ಸಾಂಕೇತಿಕತೆಯಿದ್ದರೂ ಅದು ಕೇವಲ ವೈಯಕ್ತಿಕ ಸಾಂಕೇತಿಕತೆ. ಮುಕುಂದಯ್ಯ ಈ ರೀತಿಯ ಸಾಂಕೇತಿಕತೆಯನ್ನು ಕಂಡುಕೊಳ್ಳಲು ವೈಯಕ್ತಿಕ ಕಾರಣಗಳಿವೆ ಎಂಬುದನ್ನು ಈ ವ್ಯಾಖ್ಯಾನ ತಿಳಿಸುತ್ತದೆ. ಆದರೆ ಐತ-ಪೀಂಚಲು ಇವರಿಗೆ ಕಾದಂಬರಿಯಲ್ಲಿರುವ ವಿಶಿಷ್ಟ ಸ್ಥಾನದಿಂದಾಗಿ ಮುಕುಂದಯ್ಯನ ಪ್ರತಿಕ್ರಿಯೆ ಕೇವಲ ವೈಯಕ್ತಿಕವೇ, ಕ್ಷಣಿಕವೇ ? ಎಂಬ ಪ್ರಶ್ನೆ ಏಳುತ್ತದೆ. ಐತ-ಪೀಂಚಲು, ಮುಕುಂದಯ್ಯ ಅವರಲ್ಲಿ ಕಾಣುವ ಸಾಂಕೇತಿಕತೆಯನ್ನು ಹೊರಬಲ್ಲ ಪಾತ್ರಗಳಲ್ಲ. ಆದರೂ ಕಾದಂಬರಿಯ ಒಟ್ಟರ್ಥದ ದೃಷ್ಟಿಯಿಂದ ಈ ವ್ಯಾಖ್ಯಾನವನ್ನು ಮುಕುಂದಯ್ಯನ ಮನೋಭಾವದ ಇತಿಮಿತಿಗಳನ್ನು ತೋರಿಸಲು ಉಪಯೋಗಿಸಿರುವಂತಿಲ್ಲ. ಏಕೆಂದರೆ ಈ ರೀತಿಯ ಭಾಷೆ ಕಾದಂಬರಿಯ ಅನೇಕ ಸನ್ನಿವೇಶಗಳ ವರ್ಣನೆಯಲ್ಲಿ ಉಪಯೋಗವಾಗಿದೆ. ಒಂದು ಉದಾಹರಣೆ : ಐತ-ಪೀಂಚಲು ಇವರ ಲೈಂಗಿಕ ಸಂಬಂಧದ ವರ್ಣನೆ (ಪುಟಗಳು ೪೮೪-೪೮೫), ಇಂತಹ ವ್ಯಾಖ್ಯಾನಗಳಲ್ಲಿ ಉಪಯೋಗ ವಾಗಿರುವ ಭಾಷೆ, ವ್ಯಾಖ್ಯಾನಗಳು ವರ್ಣಿಸುವ ಕ್ರಿಯೆಗಳಿಗೆ ಮಹತ್ತಾದ ಸಾಂಕೇತಿಕತೆಯಿಲ್ಲದಿದ್ದಾಗ ಉಚಿತವೇ ಎಂಬ ಪ್ರಶ್ನೆಯನ್ನೂ ನಾವು ಎದುರಿಸಬೇಕು. ಇಂತಹ ಅನೇಕ ವ್ಯಾಖ್ಯಾನಗಳ ಭಾಷೆಗೂ ಕಾದಂಬರಿಯಲ್ಲಿ ಸಾರ್ಥಕವಾಗಿ ಉಪಯೋಗವಾಗಿರುವ ಕಸುವಿನ ಭಾಷೆಗೂ ಇರುವ ವ್ಯತ್ಯಾಸಗಳಿಂದಾಗಿ, ಇಂತಹ ವ್ಯಾಖ್ಯಾನಗಳಲ್ಲಿ ಒಂದು ವಿಶಿಷ್ಟ ಭಾಷೆಯನ್ನು ಅವು ವರ್ಣಿಸುವ ಕ್ರಿಯೆಗಳ ಮಹತ್ತನ್ನು ಹೆಚ್ಚಿಸಲು ಉಪಯೋಗಿಸಿರಬಹುದು ಎಂಬ ಶಂಕೆ ಬರಲು ಸಾಧ್ಯವಿದೆ. ಬಹುಶಃ ಕಾದಂಬರಿಯ ವಿವಿಧ ಭಾಗಗಳಲ್ಲಿ ಕ್ರಿಯೆಯನ್ನು ವರ್ಣಿಸಲು ಉಪಯೋಗಿ

ಸಿರುವ ಭಾ.ಜಿಗೆ ನಾವು ಸ್ವಲ್ಪ ಗಮನ ಕೊಟ್ಟರೆ ಈ ಸಮಸ್ಯೆಯ ಅರಿವಾಗಬಹುದು :
೧. ಆದರೆ ಬೆಳಗಿನ ಜಾವ ತಿಮ್ಮಗೆ ಎಚ್ಚರವಾಗಿ ಅವಳು ತಾನಿದ್ದ ಸ್ಥಿತಿಗೆ ಮೊದಲು ಅಚ್ಚರಿಪಟ್ಟು, ಆಮೇಲೆ ಸೊಗಂಬಟ್ಟು, ಕಡೆಗೆ ಗುತ್ತಿಯ ಮೈಗೆ ಮತ್ತಷ್ಟು ಬಲವಾಗಿ ಒತ್ತಿ ಹೊಕ್ಕು ಮಲಗಿದಾಗ, ಅವನಿಗೆ ಎಚ್ಚರವಾಗಿ, ಅವಳನ್ನು ಮತ್ತಷ್ಟು ಬಿಗಿಯ, ನಿದ್ರಿಸುತ್ತಿದ್ದಂತೆ ನಟಿಸಿದ್ದನು! ಸ್ವಲ್ಪ ಹೊನಲ್ಲಿಯೇ, ತನ್ನ ಮೈಸೋಂಕಿನಿಂದ ಅವಳ ಮೈಗೆ ಹೇಗೆ ಸವಿ ಏಗತೊಡಗಿತ್ತೋ, ಹಾಗೆಯೇ ಆಗತೊಡಗಿತ್ತು ಗುತ್ತಿಗೂ ! ಇಬ್ಬರಿಗೂ ಅದೇನು ಮೊತ್ತ ಮೊದಲನೆಯದೂ ಆಗಿರಲಿಲ್ಲ, ಹೊಚ್ಚ ಹೊಸದೂ ಆಗಿರಲಿಲ್ಲ. ಅಂತಹ ರಹಸ್ಯಾನುಭವ ! ಪರಸ್ಪರವಾಗಿ ಮಾತ್ರ ಹಾಗಿತ್ತು, ಅಷ್ಟೆ. …. ಆದರೆ ಅವರಿಬ್ಬರಲ್ಲಿ ಯಾರೊಬ್ಬರಿಗೂ ತಾನೇ ಮೊದಲು ಮುಂದುವರಿಯಲಾಗದ ಸಂಕೋಚವೊಂದು ಅವರನ್ನು ಪ್ರಣಯದ ಶಿಖರಕ್ಕೇರದಂತೆ ತಡೆದಿತ್ತು. ಅವಳು ಒತ್ತುತ್ತಿದ್ದ ರೀತಿ, ಅವನು ಅಪ್ಪುತ್ತಿದ್ದ ಬಿಗಿತ, ಎರಡೂ ಅವರನ್ನು ಪ್ರಣಯಗಿರಿಯ ಪ್ರತ್ಯಂತ ಭೂಮಿಯವರೆಗೂ ಕೊಂಡೊಯ್ಲಿದ್ದವು, ಹುಲಿಯ ಅಲ್ಲಿರದಿದ್ದರೆ ಇನ್ನು ಕೆಲವೇ ನಿಮಿಷಗಳಲ್ಲಿ ರತಿಮನ್ಮಥರು ಅವರನ್ನು ನಿಧುವನದ ಶಿಖರಾನುಭವಕ್ಕೂ ಒಯ್ಯುತ್ತಿದ್ದರೋ ಏನೋ ?
(ಪುಟಗಳು ೨೫೭-೨೫೮)
೨. ಪೀಂಚಲು ದೀಪ ಆರಿಸಿ, ಕತ್ತಲೆಯಲ್ಲಿಯೇ ತನ್ನ ಸೀರೆಯನ್ನು ಬಿಚ್ಚಿಟ್ಟು, ಐತನು ಹೊದೆದಿದ್ದ ಕಂಬಳಿಯಡಿ ನುಸುಳಿ, ತನ್ನ ಬತ್ತಲೆ ಮೈಯನ್ನು ಅವನ ಬತ್ತಲೆ ಮೈಗೆ ಒತ್ತಿ, ಚಾಪೆಯ ಮೇಲೆ ಹಾಸಿದ್ದ ಕಂಬಳಿಯ ಮೇಲೆ ಹಾಸಿದ್ದ ತನ್ನೊಂದು ಹರಕಲು ಸೀರೆಯನ್ನೇ ಮಗ್ಗಲು ಹಾಸಿಗೆಯನ್ನಾಗಿ ಮಾಡಿದ್ದ ಶಯ್ಯೆಯಲ್ಲಿ ಪವಡಿಸಿದಾಗ ಐತುವಿಗೆ ಅದು ಹಂಸತೂಲಿಕಾತಲ್ಪ ವಾಗಿಬಿಟ್ಟಿತ್ತು ! ತನ್ನ ಸರ್ವಸ್ವದಿಂದಲೂ ಅವಳ ಸರ್ವಸ್ವವನ್ನೂ ತಬ್ಬುವಂತೆ ತನ್ನೆರಡು ತೋಳುಗಳಲ್ಲಿ ಅವಳನ್ನು ಬಿಗಿದಪ್ಪಿ, ಕೆನ್ನೆಯ ಮೇಲೆ ಕೆನ್ನೆಯಿಟ್ಟು ಸಮಾಧಿಸ್ಥನಾಗಿ ಕರಗಿಯೆ ಹೋದಂತೆ, ಸ್ವಲ್ಪ ಹೊತ್ತು ನಿಶ್ಚಲನಾಗಿಬಿಟ್ಟನು…………… ನಾಲ್ಕು ತೊಡೆಗಳೂ ನಾಲ್ಕು ಕೈಗಳೂ ಒಂದನ್ನೊಂದು ಬಿಗಿಯುವುದರಲ್ಲಿ ಸೆಣಸುವಂತಿದ್ದವು, ಅವಳ ಮೆತ್ತನೆಯ ಕುಚಗಳು ತನ್ನ ವಕ್ಷಕ್ಕೆ ಒತ್ತಿದಂತೆಲ್ಲ ಐತನ ಎಡದಕೈ ಅವಳ ಬೆನ್ನಿನ ಮೇಲೆ ಆಡುತ್ತಾ ಆಡುತ್ತಾ ಕೆಳ ಕೆಳಗಿಳಿದು ಅವಳ ಮೃದು ಕಠಿಣ ನಿತಂಬಗಳನ್ನು ಸೊಂಕಿ, ಒತ್ತಿ, ಕೈಮುತ್ತನೊತ್ತಿ ಸೊಗಸಿದಾಗ ಅವನ

ಪ್ರಜ್ಞೆ ಜೇನುತುಪ್ಪದ ಕೆರೆಯಲ್ಲಿ ನಾಲಗೆಯಾಗಿ ಮುಳುಗಿ ಲಯವಾಗಿ ಬಿಟ್ಟಿತು. ಆ ಆನಂದಕ್ಕೆ, ಆ ರೋಮಾಂಚನಕ್ಕೆ ಪೀಂಚಲು ಅವಶಳಾಗಿ ತನ್ನ ಮಾನಸಮಸ್ತದ್ವಾರದ ರತಿಕವಾಟಗಳನ್ನು ಸಂಪೂರ್ಣವಾಗಿ ಅಗಲಿಸಿ ತೆರೆದು, ತನ್ನ ಇನಿಯನ ಮನ್ಮಥಾವಿಷ್ಟ ಪೌರುಷ ಪ್ರವೇಶನಕ್ಕೆ ಸುಗಮ ಮಾರ್ಗ ಮಾಡಿಕೊಟ್ಟು ಆತನ ಸಮಸ್ತ ಪುರುಷಕಾರವೂ ತನ್ನೊಳಗೆ ಸಂಮಗ್ನಲಗ್ನವಾಗುವಂತೆ ಸ್ವೀಕರಿಸಿದಳು. (ಪುಟಗಳು ೪೮೪-೪೮೫)
೩. ಆ ಮಬ್ಬಿನಲ್ಲಿಯೇ ಚಿನ್ನಮ್ಮನ ಮುಖದ ಮೇಲೆ ಮುದ್ರಿತವಾಗಿದ್ದ
ದುಃಖವನ್ನು ಕಂಡು ಹೃದಯ ಹಿಂಡಿದಂತಾಗಿ, ಮುಕುಂದಯ್ಯ ಪಿಟಾರಿಯಿಂದೆದ್ದನು. ಚಿನ್ನಮ್ಮನನ್ನು ಬಾಚಿ ತಬ್ಬಿಕೊಂಡು, ಮಂಚದ ಮೇಲೆ ಕುಳಿತು, ಒಂದು ಮಗುವನ್ನೆಂತೋ ಅಂತೆ ಅವಳನ್ನು ತನ್ನ ತೊಡೆಯ ಮೇಲೆಯೇ ಕೂರಿಸಿಕೊಂಡನು. ಪ್ರತಿಭಟನಾ ಶಕ್ತಿಯನ್ನೆಲ್ಲ ಸಂಪೂಗ್ಧವಾಗಿ ಕಳೆದುಕೊಂಡಂತೆ ಚಿನ್ನಮ್ಮ ತನ್ನ ಇನಿಯನ ಬಲಿಷ್ಠತೆಗೆ ಪೂರ್ಣ ಶರಣಾಗತಳಾಗಿ ಮುಕುಂದಯ್ಯನ ಗಾತ್ರವನ್ನು ತನ್ನೆರಡು ತೋಳುಗಳಿಂದಲೂ ತಬ್ಬಿ ಸೋತಳು. ಮುಕುಂದಯ್ಯ ಅವಳ ಅಶ್ರು ಆರ್ದ್ರ ಬೆಚ್ಚನೆಯ ಮೃದು ಕೆನ್ನೆಗಳಿಗೆ ತನ್ನ ತುಟಿಗಳನ್ನೊತ್ತಿ ಒತ್ತಿ ಸಂತೈಸಿದನು. ಮತ್ತೆ ಮತ್ತೆ ಅವಳ ಬೆಣ್ಣೆ ಮಿದು ಚೆಂದುಟಿಗಳಿಗೆ ತುಟಿಯೊತ್ತಿ ಒತ್ತಿ ಮುಂಡಾಡಿದನು. ಆ ಹೊಚ್ಚ ಹೊಸ ಅನುಭವದ ಸುಖಪ್ರಲಯಕ್ಕೆ ಸಿಕ್ಕಿ ಚಿನ್ನಮ್ಮನ ಚೇತನ ರಸಮೂರ್ಛೆಗದ್ದಿ ಮೈಮರೆಯಿತು. “ನನ್ನ ಮುಕುಂದ ಭಾವ ಇಷ್ಟು ಒಳ್ಳೆಯವರೆಂದು ಇದಕ್ಕೆ ಮೊದಲು ನನಗೆಂದೂ ಗೊತ್ತಾಗಿರಲಿಲ್ಲ; ಕನಸಿನಲ್ಲಿಯೂ ಊಹಿಲು ಸಾಧ್ಯವಿರಲಿಲ್ಲ !” ಎಂಬುದು ತನಗಾದ ಸುಖಕ್ಕೆ ಆ ಅನಿರ್ವಚನೀಯ ಅನುಭವಕ್ಕೆ ಅವಳ ಗ್ರಾಮ್ಯ ಭಾಷಾಪ್ರಜ್ಞೆ ಮಾಡಿದ್ದ ಮೂಕವ್ಯಾಖ್ಯಾನವಾಗಿತ್ತು !..
(ಪುಟಗಳು ೭೪೯-೭೫೦)
ಈ ಮೂರು ಕ್ರಿಯೆ ಮತ್ತು ಪ್ರತಿಕ್ರಿಯೆಗಳನ್ನು ನೇರವಾಗಿ ವರ್ಣಿಸುವ ವ್ಯಾಖ್ಯಾನಗಳು. ಆದ್ದರಿಂದ ಇಂತಹ ವ್ಯಾಖ್ಯಾನಗಳು ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಓದುಗನ ಅನುಭವಗಳಾಗಲು ಎಷ್ಟು ಮಟ್ಟಿಗೆ ಸಹಾಯ ಮಾಡುತ್ತವೆ ಎಂಬ ಪ್ರಶ್ನೆಗೆ ನಾವು ಉತ್ತರ ಹುಡುಕಬೇಕು. ಮೊದಲಿಗೆ ಮೂರು ಸನ್ನಿವೇಶಗಳಲ್ಲಿರುವ ವ್ಯತ್ಯಾಸಗಳು : ಗುತ್ತಿ-ತಿಮ್ಮಿಯರಿಗೆ ರತಿಯ ಅನುಭವ ಹೊಸತಲ್ಲ ಎಂಬುದನ್ನು ಉದ್ಧರಿಸಿದ ಸಾಲುಗಳೇ ತಿಳಿಸಿಕೊಡುತ್ತವೆ. ಐತ-ಪೀಂಚಲು ಇವರ ರತಿ ದಾಂಪತ್ಯದ

ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಅವರ ದಾಂಪತ್ಯಕ್ಕೆ ಕಾದಂಬರಿ ಕೊಡುತ್ತದೆ ಎನ್ನಿಸುವ ಸಾಂಕೇತಿಕತೆಯಿಂದಾಗಿ ರತಿ ಅವರಿಬ್ಬರಲ್ಲೂ ಇರುವ ಸಾಮರಸ್ಯವನ್ನು ಓದುಗನ ಗಮನಕ್ಕೆ ತರುವ ಸಾಧನವಾಗಿದೆ ಎನ್ನಿಸುತ್ತದೆ. ಮೂರನೆಯ ವ್ಯಾಖ್ಯಾನದಲ್ಲಿ ಓದುಗನ ಗಮನ ಸೆಳೆಯುವ ಮುಖ್ಯ ಅಂಶ ಚಿನ್ನಮ್ಮನ ಮುಗ್ಧತೆ. ಈ ಮೂರು ವ್ಯಾಖ್ಯಾನಗಳಲ್ಲೂ ಗಮನ ಸೆಳೆಯುವ ಮುಖ್ಯ ಅಂಶ ಸಂಸ್ಕೃತ ಪದಗಳ ಮತ್ತು ಪದ ಪುಂಜಗಳ ಉಪಯೋಗ, ಶೃಂಗಾರವನ್ನು ವರ್ಣಿಸುವಾಗ ನಮ್ಮ ಹಿಂದಿನ ಕವಿಗಳೆಲ್ಲ ಸಂಸ್ಕೃತ ತುಂಬಿದ ಕನ್ನಡವನ್ನು ಉಪಯೋಗಿಸುತ್ತಿದ್ದರೂ, ಆ ಉಪಯೋಗಕ್ಕೂ ಈ ಉಪಯೋಗಕ್ಕೂ ಇರುವ ವ್ಯತ್ಯಾಸಗಳನ್ನು ಮರೆಯಬಾರದು. ಹಿಂದಿನ ಕಾವ್ಯಗಳಲ್ಲಿ ಬರುವ ಶೃಂಗಾರ ವರ್ಣನೆಗಳು ಒಂದು ಕಾವ್ಯ ಪರಂಪರೆಯ ಅಂಗವಾಗಿ ಬರುತ್ತವೆ. ಕಾಲ ಮತ್ತು ಮಹತ್ತಿನ ದೃಷ್ಟಿಯಿಂದ ಅಂತಹ ಕಾವ್ಯದ ನಾಯಕ ನಾಯಿಕೆಯರು ನನ್ನ ಮಟ್ಟಕ್ಕಿಂತ ಬೇರೆ ಮಟ್ಟದಲ್ಲಿರುವವರು. ಇದಕ್ಕಿಂತ ಮುಖ್ಯವಾಗಿ ಅಂತಹ ವರ್ಣನೆಗಳ ಭಾಷೆ ಇದ್ದಕ್ಕಿದ್ದಂತೆ ಹಠಾತ್ತಾಗಿ ಬರುವುದಿಲ್ಲ. ಒಂದು ಪರಂಪರೆಯ ಮತ್ತು ಔಚಿತ್ಯ ಕಲ್ಪನೆಯ ಅಂಗವಾಗಿ ಬರುತ್ತದೆ. ಆದರೆ ಬಹುತೇಕವಾಗಿ ದಿನ ನಿತ್ಯದ ನುಡಿಕಟ್ಟನ್ನು ಉಪಯೋಗಿಸಿಕೊಳ್ಳುವ ಈ ಕಾದಂಬರಿಯಲ್ಲಿ ಇದ್ದಕ್ಕಿದ್ದಂತೆ ಕೆಲವು ಭಾವನೆಗಳು ಮತ್ತು ಸನ್ನಿವೇಶಗಳನ್ನು ವರ್ಣಿಸಲು ಉಪಯೋಗವಾಗುವ ಈ ತರಹದ ಭಾಷೆ ಹಿಂದಿನ ಕಾವ್ಯಗಳ ಸಂಸ್ಕೃತ ಭೂಯಿಷ್ಠ ಭಾಷೆ ಗಮನ ಸೆಳೆಯುವುದಕ್ಕಿಂತ ಹೆಚ್ಚಾಗಿ ನಮ್ಮ ಗಮನ ಸೆಳೆಯುತ್ತದೆ. ಜೊತೆಗೆ, ಕಾದಂಬರಿ ಕಾವ್ಯಕ್ಕಿಂತ ವಾಸ್ತವಿಕಕ್ಕೆ ಹೆಚ್ಚು ಹತ್ತಿರವಿರುವ ಪ್ರಕಾರ, ಅಂದರೆ, “ಮಲೆಗಳಲ್ಲಿ ಮದುಮಗಳು” ಅಂತಹ ಕಾದಂಬರಿ ನಮ್ಮ ಪ್ರಾಚೀನ ಕಾವ್ಯಗಳಂತೆ “ಸಾಧಾರಣೀಕರಣ” ಕ್ಕಿಂತ ಹೆಚ್ಚಾಗಿ ನೈಜ ಜೀವನದ ಚಿತ್ರಣಗಳನ್ನು ಅವಲಂಬಿಸುತ್ತದೆ. ಆದ್ದರಿಂದ ಒಂದು ಸಾಹಿತ್ಯ ಪ್ರಕಾರದಲ್ಲಿ ಸಾಧು ಎನ್ನಿಸುವ ಭಾಷೆಯ ಉಪಯೋಗ ಬೇರೊಂದು ಪ್ರಕಾರದಲ್ಲಿ ಅಸಾಧುವಾಗಬಹುದು ಇದರಿಂದಲೇ ಏನೋ ಉಪಯೋಗಿಸಿದ ಪ್ರತಿಮೆಗಳು ಮತ್ತು ಪದಪುಂಜಗಳು ಅನಿವಾರ್ಯ ಎನಿಸುವುದಿಲ್ಲ. (ಉದಾಹರಣೆ “ರತಿ…ಮನ್ಮಥರು” “ಪ್ರಜ್ಞೆ ಜೇನುತುಪ್ಪದ ಕೆರೆಯಲ್ಲಿ ನಾಲಗೆಯಾಗಿ ಮುಳುಗಿ ಲಯವಾಗಿ ಬಿಟ್ಟಿತು” “ಮುಕುಂದಯ್ಯನ ಗಾತ್ರವನ್ನು ತನ್ನೆರಡು ತೋಳುಗಳಿಂದಲೂ ತಬ್ಬಿ ಸೋತಳು”-ಇತ್ಯಾದಿ.) ಜೊತೆಗೆ ವ್ಯಾಖ್ಯಾನ ಪಾತ್ರ ವರ್ಣಿಸಲಾರದ ಅನುಭವಗಳನ್ನು ವರ್ಣಿಸುತ್ತದೆ. ಉದಾಹರಣೆಗೆ “ಚಿನ್ನಮ್ಮನ ಗ್ರಾಮೀಣ ಭಾಷಾ ಪ್ರಜ್ಞೆ”. ಅದೇ ಅನುಭವಕ್ಕೆ ಅಭಿವ್ಯಕ್ತಿ ಕೊಡುವ ರೀತಿ ಬೇರೆ ಆಗುತ್ತದೆ. ಇಂತಹ ಸಂದರ್ಭಗಳಲ್ಲಿ ನಾವು, “ಗ್ರಾಮೀಣ ಭಾಷಾಪ್ರಜ್ಞೆ” ಆ ಅನುಭವಗಳಿಗೆ ಅಭಿವ್ಯಕ್ತಿ ಕೊಡಲಾರದೇ ? ಇದೇ ಕಾದಂಬರಿಯಲ್ಲಿ ಕೊಟ್ಟಿಲ್ಲವೇ ? ಎಂಬ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಇಂತಹ ವಿಶಿಷ್ಟ ಶೈಲಿ ಆಗೊಮ್ಮೆ ಈಗೊಮ್ಮೆ ಉಪಯೋಗವಾದರೆ,

ಬಹುಶಃ ಕಾದಂಬರಿಯ ಬಂಧಕ್ಕೆ ಅದರಿಂದ ಕೆಡುಕಾಗುತ್ತದೆ ಎನ್ನಿಸುವುದಿಲ್ಲ. ಆದರೆ ಉತ್ಕಟ ಭಾವನೆಗಳು ಮತ್ತು ಅನುಭಾವಗಳನ್ನು ವರ್ಣಿಸುವಾಗಲೆಲ್ಲ ಇಂತಹ ಭಾಷೆ ಈ ಕಾದಂಬರಿಯಲ್ಲಿ ಉಪಯೋಗವಾಗಿದೆ. ಉದಾಹರಣೆಗೆ ದೇವಮ್ಮ ತನ್ನ ಮಗುವಿಗೆ ಮೊಲೆಯೂಡಿಸುವುದರ ವರ್ಣನೆ:
…….. ತನ್ನ ಜೀವನದ ಸಾರಸರ್ವಸ್ವವೇ ಬಹಿರ್ಭೂತವಾಗಿ ಮುದ್ದಿನ ಮುದ್ದೆಯಂತಿದ್ದ ತನ್ನ ಕಂದನ ಮಿದು ತುಟಿ ತನ್ನೆದೆಯ ಪೀಯೂಷ ಕಲಶದ ತೊಟ್ಟಿಗೆ ಸೋಕಿ ಅದನ್ನು ಚೀಪುತ್ತಿರುವಾಗ ಸಂಸಾರದ ಯಾವ ಕೋಟಲೆಯೂ ಅವಳ ರಸನಿದ್ರಾಸಮಾಧಿಗೆ ಭಂಗತರಲು ಸಮರ್ಥವಾಗಿರಲಿಲ್ಲ : ಸಣ್ಣ ಬೀರನ ಸಂಕಟವಾಗಲಿ, ತನ್ನ ಗಂಡನ ಬಹು ಪ್ರಣಯಾ ಶಂಕೆಯಾಗಲಿ, ತನ್ನ ಹಳೆಮನೆಯ ಅಕ್ಕಯ್ಯಗೆ ಒದಗಿದ್ದ ಮಹಾ ವಿಪತ್ತಾಗಲಿ ! ತಾಯಿ ಕೊಟ್ಟಳು; ಮಗು ಈಂಟಿತು : ಜಗತ್ತಿನ ಇತರ ಕರ್ಮಗಳೆಲ್ಲ ತತ್ಕಾಲದಲ್ಲಿ ಸ್ಥಗಿತಗೊಂಡಂತಿದ್ದವು. ವಿಶ್ವಗೌರವಭಾಜನನಾದ ಆ ಜಗದ್‌ ಭವ್ಯ ಘಟನೆಯ ಮುಂದೆ !…….. (ಪುಟ-೪೦೨)
ಈ ಪ್ಯಾರಾ ವರ್ತಮಾನಕಾಲದ ಕೋಟಲೆಗಳನ್ನು ಮರೆಯಲು ಸಹಾಯ ಮಾಡುವ ಸಂಬಂಧ ಮತ್ತು ಅನುಭವವನ್ನು ವರ್ಣಿಸಲು ಪ್ರಯತ್ನಿಸುತ್ತದೆ. ಈ ವ್ಯಾಖ್ಯಾನವನ್ನು, ಅದಕ್ಕೆ ಹಿನ್ನೆಲೆಯಂತಿರುವ ಕ್ರೌರ್ಯವನ್ನು ನೆನಪಿನಲ್ಲಿಟ್ಟುಕೊಂಡು ಓದಿದರೆ ವ್ಯಾಖ್ಯಾನ ಸೂಚಿಸಲೆಳಸುವ ಅನುಭವದ ಮಹತ್ತು ತಿಳಿಯುತ್ತದೆ. ಇಂತಹ ವ್ಯಾಖ್ಯಾನಗಳು ನೈಜದ ಅಜೆಗಿರುವ ಆದರೆ ಬಾಳಿನ ಗೂಢತೆಯನ್ನು ಹೆಚ್ಚಿಸುವ ಅನುಭವಗಳನ್ನು ಓದುಗರ ಗಮನಕ್ಕೆ ತರಬೇಕಾದರೆ ಇಂತಹ ಅನುಭವಗಳಿಗೆ ಅಭಿವ್ಯಕ್ತಿ ಕೊಡುವ ರೀತಿಯ ಬಗೆಗಾಗಲೀ, ಅವುಗಳ ಮಹತ್ತಿನ ಬಗೆಗಾಗಲೀ, ಶಂಕೆ ಬರುವಂತಿರಬಾರದು. ಅನುಭವಕ್ಕೆ ಅಭಿವ್ಯಕ್ತಿ ಕೊಡಲು ಅಥವಾ ಅದನ್ನು ವರ್ಣಿಸಲು ಉಪಯೋಗಿಸುವ ಪದಪುಂಜಗಳು ಕ್ಲೀಷೆಗಳು ಎನ್ನಿಸುವುದಕ್ಕೆ ಕಾರಣ ಉಪಯೋಗಿಸಿದ ಪದಗಳು ಹಳೆಯವು, ಸಂಸ್ಕೃತದಿಂದ ಬಂದವು ಎಂಬುದಲ್ಲ; ಇಂತಹ ಪದಪುಂಜಗಳು ಅನುಭವಕ್ಕೆ ಮತ್ತು ಭಾವಕ್ಕೆ ಅಭಿವ್ಯಕ್ತಿ ಕೊಡುವುದರಲ್ಲಿ ಸೋಲುತ್ತವೆ ಎಂಬುದು. ಅಂದರೆ, ಕಾದಂಬರಿಯ ಇಪ್ಪತ್ತಮೂರನೇ ಅಧ್ಯಾಯದಲ್ಲಿ ತಿಮ್ಮಿ ನಿಸರ್ಗಕ್ಕೆ ತೋರಿಸುವ ಪ್ರತಿಕ್ರಿಯೆಗಳನ್ನು ವರ್ಣಿಸುವ “ಗ್ರಾಮೀಣ ಭಾಷೆಯಂತೆ ಇಂತಹ ವಿಶಿಷ್ಟ ಭಾಷೆ ಸೃಷ್ಟಿಶೀಲವಾಗುವುದಿಲ್ಲ:
ತಿಮ್ಮಿ ಮಲೆಯ ಕಣಿವೆಗಳ ಕಡೆ ಕಣ್ಣು ಹಾಯಿಸಿ ಕಣ್ಣರಳಿಸಿ, ಹಿಗ್ಗಿ,

ವಿಸ್ಮಯದಿಂದ ಕೂಗಿಕೊಂಡಳು “ಅಯ್ಯೋ ಅಯ್ಯೋ ಅಯ್ಯೋ ! ಅದೇನು ಬಾವ, ಅದೂ ‘ ನೊರೆ, ನೊರೆ, ನೊರೆ, ಹಾಲು! ಕಡ್ಲು ನಿಂತ್ಹಾಂಗೆ ಅದೆಯಲ್ಲಾ?” “ಕಾವಣ ಕಣೇ, ಕಣಿವೆ ಕಾಡನೆಲ್ಲ ಮುಚ್ಚಿ ಬಿಟ್ಟಿದೆ.” “ಏನು ಚಿಂದಾಗಿ ಕಾಣದೆ, ಬಾವ! ನಾನು ನೋಡೇ ಇರ‍್ಲಿಲ್ಲ”. …………….“ಅಯ್ಯೋ ಅಯ್ಯೋ ಅಯ್ಯೋ ! ಬಾವ, ಬಾವ, ಬಾವ ! ಅಲ್ನೋಡು, ಅಲ್ನೋಡು !” ಮುಂದೆ ಮಾತು ನಿಂತು, ಕೈ ಮುಗಿದು ಕೊಂಡು ಭಾವಪರವಶಳಾಗಿ ನಿಂತುಬಿಟ್ಟಳು, (ಪುಟಗಳು ೨೬೦-೨೬೧)
ಇಲ್ಲಿ ಉಪಯೋಗಿಸುವ ಭಾಷೆಗೂ, ಅದೇ ಪುಟಗಳಲ್ಲಿ ತಿಮ್ಮಿಯ ಪ್ರತಿಕ್ರಿಯೆಗಳಿಗೆ ವ್ಯಾಖ್ಯಾನ ಒದಗಿಸುವ ಭಾಷೆಗೂ, ದೇವಮ್ಮ ಮಗುವಿಗೆ ಮೊಲೆಯೂಡಿಸುವುದನ್ನು ವರ್ಣಿಸುವ ಭಾಷೆಗೂ ಇರುವ ವ್ಯತ್ಯಾಸಗಳು ಬಹುಶಃ ಒಂದು ವಿಷಯವನ್ನು ಸಿದ್ಧಪಡಿಸುತ್ತದೆ : ವಸ್ತುಸ್ಥಿತಿಗಳಲ್ಲಿ, ದಿನನಿತ್ಯದ ಅನುಭವಗಳಲ್ಲಿ ಇರಬಹುದಾದ ಸಾಂಕೇತಿಕತೆಯನ್ನು ಸೂಚಿಸಲು ಹೊರಟಾಗ ಕಾದಂಬರಿಯ ಭಾಷೆ ಸೋಲುತ್ತದೆ.
ಕಾದಂಬರಿಯ ಭಾಷೆ ಎಲ್ಲಿ ಸೋಲುತ್ತದೆ, ಎಲ್ಲಿ ಗೆಲ್ಲುತ್ತದೆ ಎಂಬುದನ್ನು ನಾವು ಗಮನಿಸಿದಾಗ ಕಾದಂಬರಿ ತನ್ನ ಆಶಯಕ್ಕೆ ಅಭಿವ್ಯಕ್ತಿ ಕೊಡುವುದರಲ್ಲಿ ಎಷ್ಟು ಮಟ್ಟಿಗೆ ಜಯ ಗಳಿಸುತ್ತದೆ ಎಂಬುದನ್ನು ಗುರುತಿಸುವುದು ಸುಲಭವಾಗುತ್ತದೆ. ನನ್ನ ಅಭಿಪ್ರಾಯದಲ್ಲಿ ಗುತ್ತಿ-ತಿಮ್ಮಿ ಐತ-ಪೀಂಚಲು, ನಾಗಕ್ಕ-ನಾಗತ್ತೆ ಮೊದಲಾದವರ ಜೀವನವನ್ನು ನಿರೂಪಿಸುವಾಗ ಕಾದಂಬರಿಯು ಭಾಷೆ ಜಯ ಗಳಿಸುತ್ತದೆ. ಸೋಲುವ ಭಾಗಗಳೆಂದರೆ ಚಿನ್ನಮ್ಮ-ಮುಕುಂದಯ್ಯರಿಗೆ ಮತಾಂತರ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಭಾಗಗಳು. ಈ ಸೋಲುವ ಭಾಗಗಳನ್ನು ವಿಶ್ಲೇಷಿಸುವ’ ಮೊದಲಿಗೆ ಜಯ ಗಳಿಸುವ, ಆದರೆ ಕೇವಲ ಘಟನೆಯಾಗುಳಿಯುವ ನಿರೂಪಣೆಯೊಂದಕ್ಕೆ ಗಮನ ಕೊಡಬಹುದು. ಈ ಎಲ್ಲ ಘಟನೆಗಳೂ ಸುಬ್ಬಣ್ಣ ಹೆಗ್ಗಡೆಯವರಿಗೆ ಸಂಬಧಿಸಿದುವುಗಳು. ಕಾದಂಬರಿಯ ೫, ೬ ಮತ್ತು ೭ ನೇ ಅಧ್ಯಾಯಗಳು ಸುಬ್ಬಣ್ಣ ಹೆಗ್ಗಡೆಯವರ ಜೀವನ ಮತ್ತು ಮನೋಧರ್ಮವನ್ನು ಚಿತ್ರಿಸುತ್ತವೆ. ಸುಬ್ಬಣ್ಣ ಹೆಗ್ಗಡೆಯವರಿಗೂ ಅವರಿಗಿಂತ ಮಡಿವಂತರಾದ ಶಂಕರಪ್ಪ ಹೆಗ್ಗಡೆಯವರಿಗೂ ಇರುವ ವ್ಯತ್ಯಾಸಗಳಿಂದಾಗಿ ಮತ್ತು ಸುಬ್ಬಣ್ಣ ಹೆಗ್ಗಡೆಯವರಿಗೆ ಇತರ ಕೆಲವು ಪಾತ್ರಗಳು ತೋರಿಸುವ ಪ್ರತಿಕ್ರಿಯೆಗಳಿಂದಾಗಿ ಈ ಪಾತ್ರಕ್ಕೆ ಕಾದಂಬರಿಯಲ್ಲಿ ಒಂದು ವಿಶಿಷ್ಟ ಸ್ಥಾನವಿದೆ ಎನ್ನಿಸುತ್ತದೆ. ಆದ್ದರಿಂದ ತಮ್ಮ ಜೀವನದ ಕೊನೆಯ ದಿನಗಳಲ್ಲಿ

ಸುಬ್ಬಣ್ಣ ಹೆಗ್ಗಡೆಯವರು ಬೆಳೆಯುವುದನ್ನು ಸೂಚಿಸುವ ರೀತಿಗೆ ಗಮನಕೊಡಬೇಕು. ಈ ಸಂದರ್ಭದಲ್ಲಿ ನಾವು ಕೇಳಬೇಕಾದ ಮುಖ್ಯ ಪ್ರಶ್ನೆ ಸುಬ್ಬಣ್ಣ ಹೆಗ್ಗಡೆಯವರು ಈ ರೀತಿ ಬೆಳೆಯುವುದರ ಸಾಧ್ಯತೆ ಮುಂಚೆಯೇ ಸೂಚಿತವಾಗಿದೆಯೇ ? ಆ ಬೆಳವಣಿಗೆ ಸ್ವಾಭಾವಿಕ ಎನ್ನಿಸುತ್ತದೆಯೇ ? ಎಂಬುವು. ಈ ಪ್ರಶ್ನೆಗಳನ್ನು ಕೇಳುವಾಗ ನಾನು ಸುಬ್ಬಣ್ಣ ಹೆಗ್ಗಡೆಯವರ ಕೊನೆಯ ದಿನಗಳ ಭವ್ಯತೆಯನ್ನು ಗುರುತಿಸಬಲ್ಲೆ. ಅಂತಹ ಭವ್ಯತೆಯ ಬಗ್ಗೆ ನನಗೆ ಗೌರವವಿದೆ ಎಂದು ಹೇಳಲೇಬೇಕು. ಸುಬ್ಬಣ್ಣ ಹೆಗ್ಗಡೆಯವರಿಗೆ ಸಂಬಂಧಿಸಿದ ಕೆಲವು ಸನ್ನಿವೇಶಗಳು ಕಾರಂತರ ‘ಬೆಟ್ಟದ ಜೀವ”ವನ್ನು ನೆನಪಿಗೆ ತರುತ್ತವೆ. ಆದರೆ “ಮಲೆಗಳಲ್ಲಿ ಮದುಮಗಳು” ಹರಹು “ಬೆಟ್ಟದ ಜೀವ”ದ ಹರಹಿಗಿಂತ ವಿಸ್ತಾರವಾದುದು. ಆದ್ದರಿಂದ ಈ ಚಿತ್ರಣಕ್ಕೂ ಕಾದಂಬರಿಯ ಮುಖ್ಯ ಅಂಶಗಳಾದ ಇತರ ಅನೇಕ ಚಿತ್ರಣಗಳಿಗೂ ಇರುವ ಸಂಬಂಧಕ್ಕೆ ಗಮನ ಕೊಡಬೇಕಾಗುತ್ತದೆ. ಸುಬ್ಬಣ್ಣ ಹೆಗ್ಗಡೆಯವರಿಗೂ ಅವರ ಪರಿಸರದ ಇತರರಿಗೂ ಇರುವ ವೈದೃಶ್ಯಗಳಿಂದಾಗಿ ಅವರ ಜೀವನ ಒಂದು ಬಗೆಯ ಸಾಧ್ಯತೆಯನ್ನು ಸೂಚಿಸುತ್ತದೆ. ಕಾದಂಬರಿ ಅನೇಕ ಮಟ್ಟಗಳಲ್ಲಿ ಸಾಧ್ಯತೆ ಸೂಚಿಸಿದರೂ ಒಂದು ಮಟ್ಟದ ಸಾಧ್ಯತೆ ಇತರ ಸಾಧ್ಯತೆಗಳಿಗಿಂತ ಉತ್ತಮ ಎಂಬುದನ್ನು ತಿಳಿಸುವ ಆಶಯ ಹೊಂದಿದೆ ಎನ್ನಿಸುವುದರಿಂದ ಸುಬ್ಬಣ್ಣ ಹೆಗ್ಗಡೆಯವರ ಜೀವನ ಅನೇಕ ಜೀವನಗಳಂತೆ ಅವರಿಗೆ ಸಾಧ್ಯವಿರುವ ಸಾಧ್ಯತೆಗಿಂತ ಉತ್ತಮವಾದ ಸಾಧ್ಯತೆಯನ್ನು ಸೂಚಿಸಲು ಉಪಯೋಗಿಸಿಕೊಂಡಿರುವ ಒಂದು ಘಟನೆ ಎನ್ನಿಸುತ್ತದೆ. ಆದರೆ ಇಂತಹ ಘಟನೆಗಳು ಕಾದಂಬರಿಯ ವಸ್ತುವಿನ ಬೆಳವಣಿಗೆಗೆ ಮಾಡಬೇಕಾದಷ್ಟು ಸಹಾಯ ಮಾಡುತ್ತವೆ ಎನ್ನಿಸುವುದಿಲ್ಲ. ಆದ್ದರಿಂದ ಜೀವನದ ಅನುಭವಕ್ಕೂ ಸಾಹಿತ್ಯ ಕೃತಿಯ ಅನುಭವಕ್ಕೂ ವ್ಯತ್ಯಾಸಗಳಿವೆ ಎಂದುಕೊಂಡವರು ಇಂತಹ ಕಾದಂಬರಿಯನ್ನೋದುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಂದು ಸಾಹಿತ್ಯ ಕೃತಿಯನ್ನು ಶ್ರೇಷ್ಠ ಕೃತಿಯನ್ನಾಗಿ ಮಾಡುವುದು ಬರಿಯ ಅನುಭವಗಳಲ್ಲ. ಅನುಭವಗಳಿಗೆ ಸಂಬಂಧವೇರ್ಪಡಿಸುವುದರ ಮೂಲಕ ನೈಜ ಜೀವನದಲ್ಲಿ ನಮ್ಮನ್ನು ಗೊಂದಲಕ್ಕೀಡುಮಾಡಬಹುದಾದ ಸನ್ನಿವೇಶ ಮತ್ತು ಘಟನೆಗಳಿಗೆ ಅರ್ಥಕೊಡಬಲ್ಲ ಕೃತಿಯ ಬಂಧ-ಎಂದು ಕೊಂಡವರು ಇಂತಹ ಕಾದಂಬರಿ ನಮಗೆ ಮಾಡಿಸಿ ಕೊಡುವ ಜೀವನದ ಅನುಭವಗಳ ಬಗ್ಗೆ ಎಷ್ಟು ಅಭಿಮಾನ ಹೊಂದಿದ್ದರೂ ಮೂಲಭೂತ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಈ ದೃಷ್ಟಿಯಿಂದ “ಮಲೆಗಳಲ್ಲಿ ಮದುಮಗಳು’ ಅಭಿವ್ಯಕ್ತಿ ಕೊಡಲೆಳಸುವ ಅನುಭವಗಳು ಎಷ್ಟು ಸಾಚಾ ಆಗಿದ್ದರೂ, ವಿವಿಧ ಅನುಭವಗಳನ್ನು ಅರ್ಥಮಾಡಬಲ್ಲ ಚೌಕಟ್ಟು ಅಥವಾ ಬಂಧ ಕಾದಂಬರಿಯಲ್ಲಿಲ್ಲ. ಸುಬ್ಬಣ್ಣ ಹೆಗ್ಗಡೆಯವರ ಜೀವನ ಮತ್ತು ಅವರ ಬೆಳವಣಿಗೆ ಕಾದಂಬರಿಯಲ್ಲಿ ವಹಿಸಬಹುದಾಗಿದ್ದ ಪಾತ್ರವನ್ನು ವಹಿಸಿಲ್ಲ ಎನ್ನಿಸುತ್ತದೆ.

ಹರಹು, ವಸ್ತು, ಭಾಷೆಯ ಕಸುವು ಇವುಗಳಿಂದಾಗಿ ಕನ್ನಡದ ಅತಿ ಶ್ರೇಷ್ಠ ಕಾದಂಬರಿ ಯಾಗಬಹುದಾಗಿದ್ದ “ಮಲೆಗಳಲ್ಲಿ ಮದುಮಗಳು” ಏಕೆ ಸೋಲುತ್ತದೆ ಎಂಬ ಪ್ರಶ್ನೆ ಯನ್ನು ನೇರವಾಗಿ ಎದುರಿಸುವುದು ವಿಮರ್ಶಕನ ಕರ್ತವ್ಯ. ಈ ಸೋಲಿಗೆ ಮುಖ್ಯ ಕಾರಣ ಬೆರಗು ತರಿಸುವ ಸನ್ನಿವೇಶಗಳಿಗೂ ವಸ್ತುವಿಗೂ ಇರುವ ಸಂಬಂಧ ಸಡಿಲವಾಗಿರುವುದು, ನೈತಿಕ ವಿಕಾಸವಾದದ ಸಹಾಯದಿಂದ ಈ ಸನ್ನಿವೇಶಗಳಿಗೆ ಸಂಬಂಧ ಕಲ್ಪಿಸುವ ಪ್ರಯತ್ನ ಕಾದಂಬರಿಯಲ್ಲಿರುವುದರಿಂದ ಈ ವಿಕಾಸದ ಏಣಿಯ ಮೇಲು ಮೆಟ್ಟಿಲುಗಳ ಮೇಲಿರುವ ಪಾತ್ರಗಳು ಮತ್ತು ಆ ಪಾತ್ರಗಳಿಗೆ ಸಂಬಂಧಿಸಿದ ಸನ್ನಿವೇಶಗಳಿಗೆ ನಾವು ಸೂಕ್ಷಗಮನ ಕೊಡಬೇಕಾಗುತ್ತದೆ. ಚಿನ್ನಮ್ಮ ಮತ್ತು ಮುಕುಂದಯ್ಯ ಈ ಏಣಿಯ ಮೇಲು ಮೆಟ್ಟಿಲಲ್ಲಿರುವುದರಿಂದ ಇವರಿಬ್ಬರು ಮತ್ತು ಇವರಿಬ್ಬರಿಗೆ ಸಂಬಂಧಿಸಿದ ಸನ್ನಿವೇಶಗಳ ಸಾಂಕೇತಿಕತೆಯನ್ನು ಪರೀಕ್ಷಿಸುವುದರ ಮೂಲಕ ನಾವು ಕಾದಂಬರಿ ಏಕೆ ಸೋಲುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಚಿನ್ನಮ್ಮ-ಮುಕುಂದಯ್ಯ ಇವರ ಸಂಬಂಧ ಕಾದಂಬರಿಯ ಆಶಯದ ದೃಷ್ಟಿಯಿಂದ ಬಹಳ ಮುಖ್ಯವಾದುದು. ಅದು ಸಾಂಕೇತಿಕ ಎಂಬುದನ್ನು ಕಾದಂಬರಿಕಾರರ ವ್ಯಾಖ್ಯಾನವೊಂದು ತಿಳಿಸುತ್ತದೆ:
ಆದರೆ ಆ ಘಟನೆ ವಾಸ್ತವವಾಗಿ ಮುಗ್ಧವಾದದ್ದಾಗಿರಲಿಲ್ಲ. ಅಲ್ಲಿದ್ದವರ ಪ್ರಜ್ಞೆಗೆ ಅದು ಸಂಪೂರ್ಣವಾಗಿ ಅಗೋಚರವಾಗಿದ್ದರೂ ಅದ್ಭುತದ ಭೂಮಿಕೆಗೆ ಸೇರಿದುದಾಗಿತ್ತು. ಕಾಗಿನಹಳ್ಳಿ ಅಮ್ಮ “ಇಂವ ಯಾರು ? ಹೇಳು ನೋಡಾನ?” ಎಂದು ಮುದ್ದಿಗಾಗಿ ಪ್ರಶ್ನಿಸಿದಾಗ ಚಿನ್ನಮ್ಮ ಮುಕುಂದಯ್ಯನನ್ನು ನೋಡತೊಡಗಿದ್ದಳು. ಮಕ್ಕಳಿಬ್ಬರ ಕಣ್ಣುಗಳೂ ಸಂಧಿಸಿದೊಡನೆಯೇ ಆ ಒಂದು ಕ್ಷಣದಲ್ಲಿ ಬಂದು ಅತೀಂದ್ರಿಯ ವ್ಯಾಪಾರ ನಡೆದಿತ್ತು : ಚಿಕ್ಕ ಮಗು ಚಿನ್ನಮ್ಮ ಹುಡುಗ ಮುಕುಂದಯ್ಯನಲ್ಲಿ ತನ್ನ ಹಿಂದಿನ ಜನ್ಮದ ಗಂಡನನ್ನು ಕಂಡಿದ್ದಳು ! ಆ ಅನುಭವ ನೆನಪಿನ ರೂಪದ್ದಾಗಿಯೂ ಇರಲಿಲ್ಲ. ಅದೊಂದು ಕಾಣುವಿಕೆಯಾಗಿತ್ತು. ಆ ಒಂದು ಕ್ಷಣದರ್ಶನದಲ್ಲಿ ಚಿನ್ನಮ್ಮ ತಾನೂ ಮುಕುಂದಯ್ಯನೂ ತಮ್ಮ ಹಿಂದಣ ಜನ್ಮದಲ್ಲಿ ದಂಪತಿಗಳಾಗಿದ್ದುದನ್ನು “ಆಗಿ” “ಅನುಭವಿಸಿ” “ಕಂಡಿದ್ದಳು !” ಅವಳು ಆಲೋಚಿಸಿ ಹೇಳಿರಲಿಲ್ಲ; ನೆನೆದೂ ಹೇಳಿರಲಿಲ್ಲ; ಅಪರೋಕ್ಷವಾಗಿ ಆಗಿ ಕಾಣುತ್ತಿದ್ದುದನ್ನೇ `ಅವರು !” ಎಂದು ಉತ್ತರವಾಗಿ ಹೇಳಿದ್ದಳು….
ಒಂದು ಕ್ಷಣಕ್ಕೆ ಮುಂಚೆ ಸ್ಪಷ್ಟವಾಗಿ ಕಂಡದ್ದು, ಈಗ “ಕಂಡಿದ್ದೆ” ಎಂಬ ಅರಿವಾಗಲಿ ನೆನಪಾಗಲಿ ಲವಲೇಶವೂ ಉಳಿಯದಂತೆ ಅಳಿಸಿಹೋಗಿತ್ತು.

ಅದು ಎಂದೆಂದೂ ನಡೆಯದೆಯೆ ಇದ್ದಿದ್ದರೆ ಹೇಗೆ ಇರುತ್ತಿತ್ತೊ ಹಾಗೆ ಇತ್ತು. ಒಂದು ಕ್ಷಣಮಾತ್ರಕ್ಕೆ ಈ ಜನ್ಮದ ಮಾಯೆಯ ತೆರೆಯೆದ್ದು ಬಿದ್ದಂತಾಗಿತ್ತು. ಒಂದರೆಕ್ಷಣದಲ್ಲಿ ಹಿಂದಿನ ಜನ್ಮದ ಯಾವ ಚಿತ್ರವೋ ಸಂದರ್ಭವೋ ಸನ್ನಿವೇಶವೋ ಘಟನೆಯೋ ಸ್ಮತಿಯೋ ಮಿಂಚಣುಕಿ ನಿಸ್ಕೃತಿಯ ಕಗ್ಗತ್ತಲೆಯ ಪಾತಾಳ ಪ್ರವೇಶ ಮಾಡಿದಂತಾಗಿತ್ತು.
(ಪುಟಗಳು ೮೩-೮೪).
ಇಲ್ಲಿ ನಡೆಯುವುದು ಒಂದು ಅತೀಂದ್ರಿಯ ಘಟನೆ. ಇಂತಹ ಅತೀಂದ್ರಿಯ ಘಟನೆಗಳನ್ನು ಸಾಹಿತ್ಯಕೃತಿಯಲ್ಲಿ ಬಳಸಿಕೊಳ್ಳುವುದು ನಮ್ಮ ಸಾಹಿತ್ಯ ಪರಂಪರೆಗೆ ಹೊಸದೇನಲ್ಲ. ಆದ್ದರಿಂದ ಇಂತಹ ಘಟನೆಗಳು ಓದುಗನನ್ನು ತೊಡಕಿಗೆ ಈಡು ಮಾಡುವುದಕ್ಕೆ ಕಾರಣ. ಆ ಘಟನೆಗಳು ಅತೀಂದ್ರಿಯ ಎಂಬುದಲ್ಲ; ಬಹುಶಃ ಕಾದಂಬರಿಕಾರರು ಅವನ್ನು ಅರ್ಥಪೂರ್ಣವಾಗಿ ಉಪಯೋಗಿಸಲು ಶಕ್ತರಾಗಿಲ್ಲ ಎಂಬುದು, ಚಿನ್ನಮ್ಮ ಮುಕುಂದಯ್ಯನವರ ಸಂಬಂಧ ಸಾಂಕೇತಿಕವಾಗಬೇಕಾದಲ್ಲಿ ಈ ಎರಡು ಪಾತ್ರಗಳೂ ಆ ಸಾಂಕೇತಿಕತೆಯನ್ನು ಹೊರಬಲ್ಲ ಪಾತ್ರಗಳು ಎಂಬುದನ್ನು ಕಾದಂಬರಿ ಸಿದ್ದಮಾಡಿಕೊಡಬೇಕು. ಮುಕುಂದಯ್ಯನ ಪಾತ್ರ ಇಂತಹ ಸಾಂಕೇತಿಕತೆಯನ್ನು ಹೊರಬಲ್ಲುದೆ ಎಂಬ ಪ್ರಶ್ನೆಯನ್ನು ಮುಕುಂದಯ್ಯನಿಗೂ ಇತರ ಪಾತ್ರ ಗಳಿಗೂ ಇರುವ ವ್ಯತ್ಯಾಸಗಳನ್ನು ಓದುಗನಿಗೆ ತಿಳಿಸಿಕೊಡುವ ವ್ಯಾಖ್ಯಾನವೊಂದರ ವಿಶ್ಲೇಷಣೆಯ ಸಹಾಯದಿಂದ ಉತ್ತರಿಸಲು ಪ್ರಯತ್ನಿಸಬಹುದು :
ಮುಕುಂದಯ್ಯನ ಶೈಶವಪ್ರಜ್ಞೆ ಬಹಿರ್ವಸ್ತುಗಳನ್ನು ಗ್ರಹಿಸಲೂ ಗುರುತಿಸಲೂ ಕಲಿತಾಗಿನಿಂದಲೂ ಅವನ ಚಿತ್ರವನ್ನೆಲ್ಲ ಆಕ್ರಮಿಸಿ ತುಂಬಿ ಬಿಟ್ಟಿದ್ದ ಮಹದ್‌ ವಸ್ತುವೆಂದರೆ ಮಲೆ, ಕಾಡು !…………ಮುಕುಂದಯ್ಯನಿಗಂತೂ ಕಾಡು ಎಂದರೆ ದೇವರಿಗೆ ಸರಿಸಮಾನವಾಗಿತ್ತು. ಅಷ್ಟೊಂದು ಭಯ ಮಿಶ್ರಿತ ಭಕ್ತಿ ಅದರಲ್ಲಿ. ಅವನಿಗೆ ಅದರ ಮುಳ್ಳು, ಕಲ್ಲು, ಕೊರಕಲು, ಏರು, ಇಳಿತ, ಹುಲಿ, ಹಂದಿ, ಹಾವು, ಚೇಳು, ನುಸಿ, ಇಂಬಳ ಇವೆಲ್ಲದರಿಂದ ಒದಗುವ ತೊಂದರೆಯೂ ಅನುಭವವಿತ್ತು. ಹಾಗೆಯೇ ಹಕ್ಕಿ, ಹೂವು, ಹಣ್ಣು, ಚಿಟ್ಟೆ, ಜೇನು, ಬೇಟಿ ಇತ್ಯಾದಿಗಳಿಂದ ಒದಗುವ ಆನಂದದ ಅರಿವೂ ಇತ್ತು. ಮಲೆಕಾಡಿನ ಭವ್ಯತೆಯ ಅವನ ಅನುಭವವನ್ನು ಹೆದರಿಕೆ ಎಂದು ವರ್ಣಿಸಲಾಗುತ್ತಿರಲಿಲ್ಲ. ಅವನು ಚಿಕ್ಕಂದಿನಲ್ಲಿ ಐತ ಮೊದಲಾದವರೊಡನೆ ಚಿಟ್ಟು ಬಿಲ್ಲು ಹಿಡಿದು ಕಾಡಿನಲ್ಲಿ ತಿರುಗುತ್ತಿದ್ದಂತೆ, ತರುಣನಾದ ಮೇಲೆಯೂ ಕೋವಿ ಹಿಡಿದು ಒಬ್ಬನೇ ದಟ್ಟ ನಡುಗಾಡಿ

ನಲ್ಲಿಯೂ ಧೈರ್ಯದಿಂದಲೇ ಅಲೆದಾಡಿದ್ದನು ಮತ್ತು ಅಲೆದಾಡುತ್ತಲೇ ಇದ್ದನು.
(ಪುಟಗಳು ೧೪೬-೧೪೭)
ಈ ವ್ಯಾಖ್ಯಾನ ನಮಗೆ ತಿಳಿಸಿಕೊಡಲು ಯತ್ನಿಸುವುದು ಮುಕುಂದಯ್ಯ ಮತ್ತು ಕಾದಂಬರಿಯ ಇತರ ಪಾತ್ರಗಳ ಪರಿಸರ ಒಂದೇ ಆದರೂ ಅವನ ಪ್ರಜ್ಞೆ ಇತರರ ಪ್ರಜ್ಞೆಗಿಂತ ರಚ್ಚು ಹರಹು ಮತ್ತು ಆಳಗಳುಳ್ಳದ್ದು ಎಂಬುದನ್ನು, ಇಂತಹ ಆಂತರಿಕ ಸತ್ಯಗಳನ್ನು ಓದುಗರ ಅನುಭವವನ್ನಾಗಿ ಮಾಡುವ ಹೊಣೆಗಾರಿಕೆ ಮುಖ್ಯವಾಗಿ ಲೇಖಕರದ್ದು ; ಇಂತಹ ಸತ್ಯಗಳನ್ನು ಕ್ರಿಯೆ ಪ್ರತಿಮೆ ಮತ್ತು ಭಾಷೆಯ ಉಪಯೋಗ ಮೊದಲಾದ ತಂತ್ರ ವಿಧಾನಗಳ ಸಹಾಯದಿಂದ ಓದುಗರ ಅನುಭವವನ್ನಾಗಿ ಮಾಡಬೇಕಾಗುತ್ತದೆ. ಆದರೆ ಪ್ರಜ್ಞೆಯ ಮಟ್ಟದಲ್ಲಿ ಮುಕುಂದಯ್ಯನಿಗಿಂತ ಕೀಳು ಮಟ್ಟದಲ್ಲಿರುವವರ ಅನುಭವಗಳನ್ನು ಕ್ರಿಯೆಯ ಸಹಾಯದಿಂದ ಓದುಗನ ಅನುಭವವನ್ನಾಗಿ ಮಾಡುವ ಶಕ್ತಿಯುಳ್ಳ ಈ ಕಾದಂಬರಿ ಇಂತಹ ಮಟ್ಟದಲ್ಲಿ ಸೋಲುತ್ತದೆ. ಕಾರಣ ವ್ಯಾಖ್ಯಾನಕ್ಕೆ ಪೂರಕವಾಗಬಲ್ಲ ಕ್ರಿಯೆ, ಪ್ರತಿಮೆ, ಭಾಷೆ ಮೊದಲಾದುವುಗಳು ಈ ಮಟ್ಟದಲ್ಲಿ ಸೋಲುತ್ತವೆ. ಇಂತಹ ಆಂತರಿಕ ಸತ್ಯಗಳನ್ನು ನೇರವಾಗಿ ಒಪ್ಪಿ ಕೊಳ್ಳಬೇಕಾಗುತ್ತದೆ. ಮಗು ಚಲುವಯ್ಯನಿಗೆ ಇತರರು, ಅದರಲ್ಲೂ ರಂಗಮ್ಮ, ತೋರಿಸುವ ಪ್ರತಿಕ್ರಿಯೆಗಳಿಗೆ ಅಭಿವ್ಯಕ್ತಿ ಕೊಡುವ ವಿಧಾನದ ಬಗೆಗೂ ಇದೇ ಮಾತನ್ನು ಹೇಳಬೇಕಾಗುತ್ತದೆ. ಆದ್ದರಿಂದ ಕ್ಷಣ ಮಾತ್ರದಲ್ಲಿ ಆಗಿ ಹೋಗುವ ಅಸಮಾನ ಘಟನೆಗಳ ಮಹತ್ತಿಗೆ ಅಭಿವ್ಯಕ್ತಿ ಕೊಡುವುದರಲ್ಲಿ ಈ ಕಾದಂಬರಿ ಕೂಡ ಸೋಲುತ್ತದೆ ಎನ್ನಬೇಕಾಗುತ್ತದೆ.
ಮುಕುಂದಯ್ಯನ ಜೀವನದ ಮೇಲೆ ಪ್ರಭಾವ ಬೀರುವ ಒಂದು ಮುಖ್ಯ ಘಟನೆ ಅವನು ಸನ್ಯಾಸಿಯನ್ನು ಭೇಟಿಯಾಗುವುದು (೪೧ ನೇ ಅಧ್ಯಾಯ), ಮುಕುಂದಯ್ಯನ ಭಾವ ದೇವಯ್ಯನ ಮಗನಾಗಿ ಹುಟ್ಟಿದ್ದಾನೆ, ರಂಗಮ್ಮ ಮುಕುಂದಯ್ಯನ ಮಗಳಾಗಿ ಹುಟ್ಟಿ, ದೇವಯ್ಯನ ಮಗನನ್ನು ಮದುವೆಯಾಗುತ್ತಾಳೆ ಎಂದು ಭವಿಷ್ಯ ನುಡಿಯುತ್ತಾನೆ ಆತ :
“ನಾನು ಇದನ್ನೆಲ್ಲ ನಿಮಗೆ ಹೇಳುತ್ತಿರುವುದಕ್ಕೂ ಒಂದು ಕಾರಣವಿದೆ. ನಾನು ನಿಮಗೆ ಆಗ ತಿಳಿಸಿದೆನಲ್ಲಾ ಆ ಸ್ವಾಮಿ ವಿವೇಕಾನಂದರಿಂದ ಜಾಗ್ರತ ವಾಗುವ ಯುಗಧರ್ಮ ಶಕ್ತಿಗೆ ಸೇವೆ ಸಲ್ಲಿಸುವ ಚೇತನಗಳು ನಿಮ್ಮ ಸಂತಾನದಲ್ಲಿ ಮುಂದೆ ಸಂಭವಿಸಲಿವೆ ! ಒಂದು ರೀತಿಯಿಂದ ಕೆಲವಾಗಲೆ ಸಂಭವಿಸಿಯೂ ಆಗಿದೆ !”………

ಇದಕ್ಕೆಲ್ಲ ಅಷ್ಟೊಂದು ವಿಸ್ಮಯ ಏಕೆ ? ಇದೆಲ್ಲ ನಿತ್ಯವೂ ಸೂಕ್ಷ್ಮಲೋಕಗಳಲ್ಲಿ ನಡೆಯುತ್ತಿರುವ ಸಾಮಾನ್ಯ ವ್ಯಾಪಾರ…..ನಿಮ್ಮ ಜೊತೆಯಲ್ಲಿ ಬಂದಿದ್ದು ಈಗ ತಾನೆ ಹೊರಟು ಹೋದರೆಲ್ಲಾ ಅವರ ಮಗನಾಗಿ……”
(ಪುಟಗಳು ೫೨೫-೫೨೬)
ಈ ಸಂಭಾಷಣೆ ಕಾದಂಬರಿಯಲ್ಲಿ ಮುಕುಂದಯ್ಯನಿಗಿರುವ ಮುಖ್ಯ ಸ್ಥಾನವನ್ನು ಸ್ಪಷ್ಟಪಡಿಸುತ್ತದೆ. ಆದರೆ ಓದುಗನಿಗೆ ಈ ಅಲೌಕಿಕ ಅನುಭವವನ್ನು ಕಾದಂಬರಿ ಮಾಡಿಸಿಕೊಡುತ್ತದೆಯೇ ಎಂಬ ಪ್ರಶ್ನೆ ಮುಖ್ಯ. ಈ ಸಂಭಾಷಣೆಗೂ, ಸ್ವಾಮಿ ವಿವೇಕಾನಂದರ ಕಾರ್ಯವನ್ನು ನೇರವಾಗಿ ವರ್ಣಿಸುವ ನೇರ ವ್ಯಾಖ್ಯಾನಗಳಿಗೂ ಇರುವ ಸಂಬಂಧಗಳಿಂದಾಗಿ ಈ ಭವಿಷ್ಯವನ್ನು ನಾವು ಸತ್ಯವೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಹಾಗೆ ಮಾಡಲು ನಮ್ಮ ವೈಯಕ್ತಿಕ ಅನುಭವದ ಹೊರಗಿರುವ ನಂಬಿಕೆಗಳ ಮೊರೆಹೋಗಬೇಕಾಗುತ್ತದೆ. ಇಂತಹ ಸನ್ನಿವೇಶಗಳ ಬಗ್ಗೆ ಯೋಚಿಸುವಾಗ ನಾವು “ಮಲೆಗಳಲ್ಲಿ ಮದುಮಗಳು” ನೈಜದ ಚಿತ್ರಣವನ್ನು ಕೇವಲ ಸಾಹಿತ್ಯ ಪರಂಪರೆಯ ಅಂಗವಾಗಿ ಉಪಯೋಗಿಸುತ್ತಿಲ್ಲ ಎಂಬುದನ್ನು ಮರೆಯಬಾರದು. ಅಂದರೆ ಇಂತಹ ಕಾದಂಬರಿಗಳಲ್ಲಿ ಕ್ರಿಯೆ “ಸಿದ್ಧ” (stylised) ಅಲ್ಲ. ಕ್ರಿಯೆಯನ್ನು ಸಿದ್ದವಾಗಿ ಉಪಯೋಗಿಸುವ ಕೃತಿಗಳೆಲ್ಲ ಕ್ರಿಯೆ ಮತ್ತು ಭಾವ ಗಳನ್ನು ಸಾಹಿತ್ಯಕ ಪರಂಪರೆಯೊಂದರ ಚೌಕಟ್ಟಿನಲ್ಲಿ ಉಪಯೋಗಿಸಿಕೊಳ್ಳುತ್ತವೆ. ನೈಜ ಜೀವನದೊಂದಿಗೆ ನೇರ ಸಂಬಂಧ ಹೊಂದಿರುವ ಇಂತಹ ಕಾದಂಬರಿ ಬಾಹ್ಯ ಜೀವನಕ್ಕೂ ಅಂತರಿಕ ಸತ್ಯಕ್ಕೂ ಇರುವ ಸಂಬಂಧಕ್ಕೆ ಹೆಚ್ಚು ಗಮನ ಕೊಟ್ಟ ಹೊರತು ವ್ಯಾಖ್ಯಾನ ಮತ್ತು ಆಂತರಿಕ ಸತ್ಯಗಳನ್ನು ಓದುಗ ಒಪ್ಪಿಕೊಳ್ಳುವಂತೆ ಮಾಡುವ ಶಕ್ತಿ ಪಡೆಯುವುದು ಕಷ್ಟ. ಹೀಗೆಂದರೆ, ಕಾದಂಬರಿಯ ಆಶಯ ಓದುಗನಿಗೆ ತಿಳಿಯುವುದಿಲ್ಲ ಎಂದಲ್ಲ ; ಆಶಯಕ್ಕೆ ಅಭಿವ್ಯಕ್ತಿ ಕೊಡಲು ಉಪಯೋಗಿಸಿಕೊಂಡಿರುವ ಮತ್ತು ವಸ್ತುವಿನ ಬೆಳವಣಿಗೆಯ ದೃಷ್ಟಿಯಿಂದ ಮುಖ್ಯವಾದ ಅನೇಕ ಕ್ರಿಯೆ ಮತ್ತು ಪಾತ್ರಗಳ ಉಪಯೋಗದ ಬಗ್ಗೆ ಅನೇಕ ತೊಡಕುಗಳಿವೆ ಎನ್ನಿಸುತ್ತದೆ.
ಕಾದಂಬರಿ ಸೋಲುವುದು ಪಾತ್ರ ಸೃಷ್ಟಿಯ ಮಟ್ಟದಲ್ಲಲ್ಲ, ಘಟನೆಗಳಿಗೂ ವಸ್ತುವಿಗೂ ಅರ್ಥಪೂರ್ಣ ಸಂಬಂಧ ಕಲ್ಪಿಸುವ ಶಕ್ತಿಯಿಲ್ಲದ್ದರಿಂದ ಎಂಬುದು ಧರ್ಮಾಂತರದ ಸಮಸ್ಯೆಗೆ ಗಮನಕೊಟ್ಟಾಗ ತಿಳಿಯುತ್ತದೆ. ಧರ್ಮಾಂತರ ಕಾದಂಬರಿಯಲ್ಲಿ ಚಿತ್ರಿತವಾದ ಸಮಾಜದ ಸ್ವಂತಿಕೆಗೆ ಧಕ್ಕೆ ಉಂಟುಮಾಡುವಂತಹ ಸಮಸ್ಯೆ ಎಂಬುದು ನಿರ್ವಿವಾದ. ಈ ಕಾದಂಬರಿ ಹಿಂದೂ ಧರ್ಮದ ವಿಮರ್ಶೆಗಿಂತ ಹೆಚ್ಚಾಗಿ ಒಂದು

ಚಾರಿತ್ರಿಕ ಸನ್ನಿವೇಶದಲ್ಲಿ ಅಣ್ಣನ, ಸಮಾಜಕ್ಕೆ ನೈತಿಕ ಮಾರ್ಗದರ್ಶನ ಮಾಡ ಬೇಕಾದವರ ಸ್ವಾರ್ಥ ಮೊದಲಾದ ಕಾರಣಗಳಿಂದಾಗಿ ಇದೇ ಸಮಾಜವೇ ಗೊಂದಲಕ್ಕೊಳಸಿಗುವುದರ ಚಿತ್ರಣ ಎನ್ನಿಸುತ್ತದೆ. ಈ ಸಮಸ್ಯೆ ಮುಖ್ಯವಾಗಿ ದೇವಯ್ಯನಿಗೆ ಸಂಬಂಧಿಸಿದ ಕೆಲವು ಘಟನೆಗಳ ಮೂಲಕ ನಿರೂಪಿತವಾಗಿದೆ. ದೇವಯ್ಯ ಕ್ರಿಶ್ಚಿಯನ್ ಪಾದ್ರಿ ಜೀವರತ್ನಯ್ಯನ ಪ್ರಭಾವಕ್ಕೆ ಒಳಗಾಗುವುದಕ್ಕೆ ಮುಖ್ಯ ಕಾರಣಗಳು : ೧, ಬ್ರಾಹ್ಮಣರ ಸ್ವಾರ್ಥ ಮತ್ತು ಅಜ್ಞಾನಗಳಿಂದಾಗಿ ಹಿಂದೂ ಧರ್ಮದ ತತ್ವಗಳು ಆದನಂತಹವರಿಗೆ ತಿಳಿಯದಿರುವುದು, ೨, ಅಜ್ಞಾನದಿಂದ ಇಡೀ ಸಮಾಜವೇ ಕೇವಲ ನಡವಳಿಕೆಗಳನ್ನು ಧರ್ಮ ಎಂದುಕೊಳ್ಳುವುದು. ೩, ಕ್ರಿಶ್ಚಿಯನ್ ಧರ್ಮ ಮತ್ತು ಆಧುನಿಕತೆಗಳು ಒಂದೇ ಎಂಬ ಭಾವನೆ ಬೆಳೆಯುವುದು, ಮತ್ತು ೪, ದೇವಯ್ಯ ಜೀವರತ್ನಯ್ಯನ ಮಗಳೊಡನೆ ಬೆಳೆಸಿಕೊಳ್ಳುವ ಲೈಂಗಿಕ ಸಂಬಂಧ, ಕೊನೆಯ ಕಾರಣ ದೇವಯ್ಯನನ್ನು ಮತಾಂತರಗೊಳಿಸಲು ಪಾದ್ರಿ ಉಪಯೋಗಿಸಿಕೊಳ್ಳುವ ತಂತ್ರವಾದ್ದರಿಂದ ನಾವು ಮೊದಲ ಮೂರು ಕಾರಣಗಳಿಗೆ ಹೆಚ್ಚು ಗಮನ ಕೊಡಬೇಕು, ೪೦ ನೇ ಅಧ್ಯಾಯದ ಮೊದಲಿಗೇ ತನ್ನ ಮತ್ತು ಕಾಡು ಇವರ ಸಂಭಾಷಣೆಯ ಮೂಲಕ ನಮಗೆ ಬ್ರಾಹ್ಮಣರ ನಡವಳಿಕೆಗಳಿಗೆ ಬೇರೆಯವರು ತೋರಿಸುವ ಪ್ರತಿಕ್ರಿಯೆಗಳು ತಿಳಿಯುತ್ತವೆ. ಈ ಅಧ್ಯಾಯದಲ್ಲಿ ನಮ್ಮ ಗಮನ ಸೆಳೆಯುವ ಮುಖ್ಯ ಅಂಶ ಬ್ರಾಹ್ಮಣರು ತಾವು ಇತರರಿಗಿಂತ ಉತ್ತಮ ಎಂದು ಕೊಂಡಿರುವುದಕ್ಕೂ ಸತ್ಯಸ್ಥಿತಿಗೂ ಇರುವ ಅಂತರ. ಉತ್ತಮರಲ್ಲಿರಬಾರದ ಅನಾಚಾರ, ಸೋಗು ಇವೆಲ್ಲ ಕಲ್ಲಳ್ಳಿಯ ಬ್ರಾಹ್ಮಣರಲ್ಲಿವೆ ಎಂಬುದನ್ನು ಈ ಅಧ್ಯಾಯ ತಿಳಿಸಿ ಕೊಡುತ್ತದೆ. ೪೧ ನೇ ಅಧ್ಯಾಯ ಈ ಅಧ್ಯಾಯಕ್ಕೆ ವೈದೃಶ್ಯದಂತಿರುವುದರಿಂದ ಈ ಎರಡು ಅಧ್ಯಾಯಗಳ ಸಾಂಕೇತಿಕ ಅರ್ಥಕ್ಕೆ ನಾವು ಗಮನ ಕೊಡಬೇಕು. ೪೦ ನೇ ಅಧ್ಯಾಯದಲ್ಲಿ ಕಲ್ಲಳ್ಳಿಯ ಬ್ರಾಹ್ಮಣನಂತಹವರು ಕಾದಂಬರಿಯಲ್ಲಿ ಚಿತ್ರಿತವಾಗಿರುವ ಸಮಾಜಕ್ಕೆ ಮಾರ್ಗದರ್ಶನ ಮಾಡಲಾರರು ಎಂಬ ಭಾವನೆಯಿದ್ದರೆ, ೪ ನೇ ಅಧ್ಯಾಯದಲ್ಲಿ ವಿವೇಕಾನಂದರ ಪ್ರಭಾವದಿಂದ ಸಮಾಜ ಪುನರ್ ವ್ಯವಸ್ಥೆ ಗೊಳ್ಳಬಹುದು ಎಂಬ ಭಾವನೆಯಿದೆ. ಅಂದರೆ, ಒಂದು ಅಧ್ಯಾಯ ಸಮಾಜದ ದುಸ್ಥಿತಿಯ ಚಿತ್ರಣವಾದರೆ, ಇನ್ನೊಂದು ಸಾಧ್ಯತೆಯ ಚಿತ್ರಣ, ೪೦ ನೇ ಅಧ್ಯಾಯ ನಿಶ್ಚಿತ ಘಟನೆಗಳು, ಪಾತ್ರಗಳು, ಮೊದಲಾದ ತಂತ್ರಗಳ ಸಹಾಯ ಪಡೆದರೆ, ೪೧ ನೇ ಅಧ್ಯಾಯ ನೇರವಾದ ಹೇಳಿಕೆಗಳು, ವಸ್ತುಸ್ಥಿತಿಯಿಂದ ದೂರವಾದ ಸನ್ನಿವೇಶಗಳು ಇಂತಹವುಗಳ ಸಹಾಯ ಪಡೆಯುತ್ತದೆ. ಮುಕುಂದಯ್ಯ ಮುಂಬರುವ ವ್ಯವಸ್ಥೆಗೆ ಅವಶ್ಯಕವಾದ್ದರಿಂದ, ಆ ವ್ಯವಸ್ಥೆಯನ್ನು ಸೂಚಿಸುವುದರಿಂದ, ಅವನ ಪಾತ್ರದ ಸಹಾಯದಿಂದ ಕಾದಂಬರಿ ಪ್ರಜ್ಞೆಯ ಬೆಳವಣಿಗೆಯನ್ನು ಸೂಚಿಸುತ್ತಿದೆ ಎನ್ನಿಸುವುದರಿಂದ, ಅವನಿಗೂ ಇತರರಿಗೂ ಇರುವ ವ್ಯತ್ಯಾಸಗಳನ್ನು ಸೂಚಿಸುವ ಒಂದು

ವ್ಯಾಖ್ಯಾನಕ್ಕೆ ನಾವು ಗಮನ ಕೊಡಬೇಕು. ರೆವರೆಂಡ್ ಲೇಕ್ ಹಿಲ್ ಮುಕುಂದಯ್ಯನಿಗೆ ತೋರಿಸುವ ಪ್ರತಿಕ್ರಿಯೆಗಳ ವ್ಯಾಖ್ಯಾನ ಹೀಗಿದೆ:
…. (ಲೇಕ್-ಹಿಲ್) ಮುಕುಂದಯ್ಯನ ವ್ಯಕ್ತಿತ್ವದ ಸ್ವರೂಪವನ್ನು ಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರು : ಮುಕುಂದಯ್ಯ ದೇವಯ್ಯನಂತೆ ಕಾಪು ಬಿಟ್ಟಿರಲಿಲ್ಲ; ಟೋಪಿಯ ಹಿಂದೆ ಕಟ್ಟಿದ್ದ ಜುಟ್ಟು ಕಾಣಿಸುತ್ತಿತ್ತು. ಹಣೆಯ ಮೇಲೆ ನಾಮವೂ ಇತ್ತು. ಕಿವಿಯಲ್ಲಿ ಒಂಟಿಗಳೂ ಇದ್ದುವು. ಆದರೆ ಅವನ ಮುಖದಲ್ಲಿ ಅಲ್ಲಿದ್ದವರಾರಲ್ಲಿಯೂ ಇಲ್ಲದಿದ್ದ ಒಂದು ಸತ್ವ ಪೂರ್ಣ ತೇಜಸ್ಸನ್ನೂ ಸರಳ ಸುಂದರ ಪ್ರಸನ್ನತೆಯನ್ನೂ ದರ್ಶಿಸಿದ ಲೇಕ್‌ಹಿಲ್‌ರಿಗೆ ಅವನ ವಿಷಯದಲ್ಲಿ ಒಂದು ಗೌರವಪೂರ್ವಕವಾದ ವಿಶ್ವಾಸ ಹುಟ್ಟಿ, ಅವರ ಮುಖದ ಮೇಲೆಯೂ ಸುಪ್ರಸನ್ನತೆ ಸುಳಿದಾಡಿದುದನ್ನು ಕಂಡು ಜೀವರತ್ನಯ್ಯಗೆ ಬೆರಗಾಯಿತು. ತಾನು ಮುಕುಂದಯ್ಯನ ಮೇಲೆ ಹೇಳಿದ್ದುದೆಲ್ಲ ವ್ಯರ್ಥವಾಯಿತೋ ಏನೋ ಎಂದು ಕರಿ ಪಾದ್ರಿಗೆ ಮುಖ ಭಂಗವೂ ಆಯಿತು. (ಪುಟ ೮೨೯.)
ವ್ಯಾಖ್ಯಾನ ಅರ್ಥಪೂರ್ಣವಾಗಬೇಕಾದಲ್ಲಿ, ಮುಕುಂದಯ್ಯನ ಸಾಂಕೇತಿಕತೆಗೆ ಪೂರಕವಾಗಬೇಕಾದಲ್ಲಿ ಕಾದಂಬರಿ ಮುಕುಂದಯ್ಯನಿಗೂ ಇತರರಿಗೂ ಇರುವ ವ್ಯತ್ಯಾಸಗಳನ್ನು ಸ್ಪಷ್ಟ ಮಾಡಬೇಕು. ಆದರೆ ನನಗೆ ತಿಳಿಯುವ ಮಟ್ಟಿಗೆ ದೇವಯ್ಯ, ಸುಬ್ಬಣ್ಣ ಹೆಗ್ಗಡೆ, ಇಂತಹವರ ಪಾತ್ರಗಳಷ್ಟು ಸ್ಪುಟವಾಗಿ ಮುಕುಂದಯ್ಯನ ಪಾತ್ರ ಬೆಳೆಯುವುದಿಲ್ಲ. ಅವನು ಒಳ್ಳೆಯವನು, ಸಾಂಪ್ರದಾಯಿಕ ಎಂದು ಮಾತ್ರ ಓದುಗನಿಗನ್ನಿಸುತ್ತದೆ. ಮುಕುಂದಯ್ಯ ಲೇಕ್‌ಹಿಲ್ ಅವರ ಮೇಲೆ ಬೀರುವ ಪ್ರಭಾವಕ್ಕೆ ಪೂರಕವಾಗಬಲ್ಲ ಯಾವ ಮುಖ್ಯ ಕ್ರಿಯೆಯೂ ಓದುಗನ ನೆನಪಿಗೆ ಬರುವುದಿಲ್ಲ. ಆದ್ದರಿಂದ ಕಾದಂಬರಿಯಲ್ಲಿ ಎಲ್ಲೋ ಒಮ್ಮೆ ಬರುವ ಪಾತ್ರದ ಪ್ರತಿಕ್ರಿಯೆ ಮುಕುಂದಯ್ಯನ ವಿಶಿಷ್ಟತೆಯನ್ನು ಎಷ್ಟರಮಟ್ಟಿಗೆ ಸೃಷ್ಟಿಸುತ್ತದೆ ಎಂದು ಕೇಳಬೇಕಾಗುತ್ತದೆ. ಬಹುಶಃ ಈ ವ್ಯಾಖ್ಯಾನವನ್ನು ಸುಬ್ಬಣ್ಣ ಹೆಗ್ಗಡೆಯವರ ವರ್ತನೆಗೆ ಜೀವರತ್ನಯ್ಯ ತೋರಿಸುವ ಪ್ರತಿಕ್ರಿಯೆಗಳ ವ್ಯಾಖ್ಯಾನದೊಂದಿಗೆ ಹೋಲಿಸಿ ನೋಡಿದರೆ ಲೇಕ್ಹಿಲ್ ಅವರ ಪ್ರತಿಕ್ರಿಯೆಗಳನ್ನು ವರ್ಣಿಸುವ ವ್ಯಾಖ್ಯಾನದ ಸರಳತೆಯ ಅರಿವಾಗುತ್ತದೆ :
ಜೀವರತ್ನಯ್ಯಗೆ ಮುದುಕ ಹೆಗ್ಗಡೆಯ ವರ್ತನೆ ಕಂಡು ಸೋಜಿಗವೆನಿಸಿತು: ತನ್ನ ಹಿರಿಯ ಮಗ ದೊಡ್ಡಣ್ಣ ಹೆಗ್ಗಡೆಯ ಅನ್ವೇಷಣೆಗೆ ಶೋಕಕಾತರನಾಗಿ ಮನೆಯಿಂದ ಹೊರಟು, ಹತ್ತಲಾರದ ಗುಡ್ಡ ಹತ್ತಿ, ಆಯಾಸದಿಂದಲೆ

ಮೈಮರೆತು, ಅಷ್ಟೋ ಇಷ್ಟೋ ಎಂಬ ಸ್ಥಿತಿಗಿಳಿದು, ಈಗ ತಾನೆ ಚೇತರಿಸಿಕೊಂಡಿದ್ದ ಆತನು ಕಡು ಬಡತನದ ಬಾಳನವರಿಗೆ ಮಾತ್ರ ಸಹಜವಾಗುವ ಜಿಪುಣ ರೀತಿಯಲ್ಲಿ ಮೆಟ್ಟು ದೊಣ್ಣೆಗಳಂತಹ ಅಲ್ಪ ಬೆಲೆಯು ಸಾಮಾನ್ಯ ವಸ್ತುಗಳಿಗಾಗಿ ಅಷ್ಟೊಂದು ಸೋದ್ವಿಗ್ನನಾಗಿ ಗೋಗರೆಯುತ್ತಿರುವುದನ್ನು ಕಂಡು ! ಜೊತೆಗೆ ಬೆಟ್ಟಳ್ಳಿ ದೇವಯ್ಯಗೌಡರ ವರ್ತನೆಯೂ ಆಶ್ಚರ್ಯಕರವಾಗಿಯೆ ಇತ್ತು: ಸ್ಕೂಲು ಜಾಗದಿಂದ ಬರುವಾಗ ಅಂತಕ್ಕನ ಅಂಗಳ ದೊಳಕ್ಕೆ ಬೈಸಿಕಲ್ಲನ್ನು ತಂದು ನಿಲ್ಲಿಸುವ ಸಲುವಾಗಿ ಪಾದ್ರಿ ಉಣುಗೋಲಿನ ಗಳುಗಳನ್ನು ಸರಿಸಲು ಹೋದಾಗ, ಹಿಂದೆ ಬೈಸಿಕಲ್ಲನ್ನು ನೂಕಿಕೊಂಡು ಬರುತ್ತಿದ್ದ ದೇವಯ್ಯನು ಬೇಡವೆಂದು ಸನ್ನೆಮಾಡಿ, ಬೈಸಿಕಲ್ಲನ್ನು ಹೊರ ಗಡೆಯೇ ಮರೆಯಾಗಿ ನಿಲ್ಲಿಸಿ, ಇತರರಂತೆ ತಡಬೆ ಹತ್ತಿ ದಾಟಿಯೇ ಬಂದಿದ್ದನು. ಅಂಗಳದೊಳಕ್ಕೆ ಬಂದ ಮೇಲೆಯೂ, ಬೆತ್ತ ಹಿಡಿದ ಮೇಷ್ಟರನ್ನು ಎದುರುಗೊಳ್ಳಲು ಹಿಂಜರಿಯುವ, ತಪ್ಪುಮಾಡಿದ ಹುಡುಗನಂತೆ, ಸುಬ್ಬಣ್ಣ ಹೆಗ್ಗಡೆಯವರ ಸಾನ್ನಿಧ್ಯದಲ್ಲಿ ಕುಗ್ಗಿ, ಕುನುಗಿ, ಜುಣುಗುವಂತೆ ಹೆದಹೆದರಿ ನಡೆದುಕೊಳ್ಳುತ್ತಿದ್ದನು. ಶರೀರದಾರ್ಡ್ಯದಲ್ಲಿ, ಧೈರ್ಯದಲ್ಲಿ, ವ್ಯಕ್ತಿತ್ವದಲ್ಲಿ, ದಿಟ್ಟತನದಲ್ಲಿ ಇತರರೆಲ್ಲರಿಗೂ ಮೀರಿ ಎದ್ದು ಕಾಣುತ್ತಿದ್ದ ಅವನು ಇತರ ಯಾರ ಮುಂದೂ ನಡೆದುಕೊಳ್ಳದಿದ್ದ ರೀತಿಯಲ್ಲಿ ಸುಬ್ಬಣ್ಣ ಹೆಗ್ಗಡೆಯವರ ಮುಂದೆ ನಡೆದುಕೊಳ್ಳುತ್ತಿದ್ದುದನ್ನು ನೋಡಿ ಪಾದ್ರಿ ಕಕ್ಕಾಬಿಕ್ಕಿಯಾದನು. (ಪುಟಗಳು ೩೬೨-೩೬೩.)
ಲೇಕ್ಹಿಲ್ ಮುಕುಂದಯ್ಯನಿಗೆ ತೋರಿಸುವ ಪ್ರತಿಕ್ರಿಯೆಗಳ ವ್ಯಾಖ್ಯಾನಕ್ಕಿಂತ ಈ ವ್ಯಾಖ್ಯಾನ ಹೆಚ್ಚು ಜಯಗಳಿಸುವುದಕ್ಕೆ ಮುಖ್ಯ ಕಾರಣ ಸುಬ್ಬಣ್ಣ ಹೆಗ್ಗಡೆಯವರ ಪರಿಸರ ಮತ್ತು ಪಾತ್ರಗಳ ಚಿತ್ರಣದಲ್ಲಿರುವ ದಟ್ಟಣೆ, ಪಾದ್ರಿ “ಕಕ್ಕಾವಿಕ್ಕಿ”ಯಾಗುವುದಕ್ಕೆ ಕಾರಣ ಸುಬ್ಬಣ್ಣ ಹೆಗ್ಗಡೆಯವರ ಪ್ರತಿಕ್ರಿಯೆಗಳ ಸಂಕೀರ್ಣತೆ, ಮತ್ತು ದೇವಯ್ಯ ಅವರಿಗೆ ತೋರಿಸುವ ಪ್ರತಿಕ್ರಿಯೆಗಳು, ದೇವಯ್ಯನ ಮೇಲೆ ಅವನ ಪರಿಸರ ಎಷ್ಟು ಪ್ರಭಾವ ಬೀರಿದೆ, ಆ ಪರಿಸರ ಎಷ್ಟರ ಮಟ್ಟಿಗೆ ಅವನ ಪ್ರಜ್ಞೆಯ ಅಂಗವಾಗಿದೆ ಎಂಬುದರ ಅರಿವು ಜೀವರತ್ನಯ್ಯನಿಗಿಲ್ಲ. ಹಿಂದೂ ಪರಿಸರದ ಹೊರಗಿರುವವರನ್ನು ಆಡುವ ಮತ್ತು ಬಹಳ ಸಂಕೀರ್ಣವಾದ ಮನೋಭಾವ ಕೂಡ ಅವನನ್ನು “ಕಕ್ಕಾವಿಕ್ಕಿ” ಮಾಡುತ್ತದೆ. ಅಂದರೆ, ಮತಾಂತರದಲ್ಲಿ ಆಸಕ್ತಿ ಹೊಂದಿರುವವರು ಒಂದು ಮತ ಮತ್ತು ಅದರಿಂದ ಪ್ರಭಾವಿತವಾದ ಮನೋಭಾವವನ್ನು ಅರಿತುಕೊಂಡಿಲ್ಲ. ಆದ್ದರಿಂದ ತಿಳಿಯದೆ ಸಮಸ್ಯೆಗಳನ್ನು ಸರಳಗೊಳಿಸುತ್ತಿದ್ದಾರೆ ಎಂಬುದನ್ನು ಇಂತಹ ಘಟನೆಗಳು ಓದುಗನ ಗಮನಕ್ಕೆ ತರುತ್ತವೆ. ಈ ಸಮಸ್ಯೆಯ ಬಗ್ಗೆ

ಕಾದಂಬರಿಯಲ್ಲಿ ಬರುವ ಅನೇಕ ನೇರ ವ್ಯಾಖ್ಯಾನಗಳು ಸೋಲುವುದಕ್ಕೆ ಕಾರಣ ಇಂತಹ ವ್ಯಾಖ್ಯಾನಗಳಿಗೆ ಪೂರಕವಾಗಬಲ್ಲ ಸನ್ನಿವೇಶಗಳು ಇಲ್ಲದೇ ಇರುವುದೇ ಆಗಿರಬಹುದು. ಆದ್ದರಿಂದ ಎಲ್ಲ ಘಟನೆಗಳಿಗೂ ಅರ್ಥಪೂರ್ಣ ಸಂಬಂಧ ಕಲ್ಪಿಸುವುದರ ಮೂಲಕ ಕಾದಂಬರಿಯ ವಸ್ತುವಿನ ಬೆಳವಣಿಗೆಯನ್ನು ಸೂಚಿಸುವ ಶಕ್ತಿ “ಮಲೆಗಳಲ್ಲಿ ಮದುಮಗಳು”ನಲ್ಲಿಲ್ಲ ಎನ್ನಬೇಕಾಗುತ್ತದೆ. ಅದರಿಂದಲೇ ಏನೋ ವಸ್ತುಸ್ಥಿತಿಗಳ ಚಿತ್ರಣದ ಮಟ್ಟದಲ್ಲಿ ಜಯ ಗಳಿಸುವ ಈ ಕಾದಂಬರಿ, ಆ ವಸ್ತುಸ್ಥಿತಿಗಳ ಸಾಂಕೇತಿಕ ಅರ್ಥ ಸೂಚಿಸುವುದರಲ್ಲಿ ಅನುಭವದ ವಿವಿಧ ಮುಖಗಳನ್ನು ಒಂದರ್ಥದ ಚೌಕಟ್ಟಿನಲ್ಲಿ ಹಿಡಿದಿಡುವುದರಲ್ಲಿ ಸೋಲುತ್ತದೆ. ಹರಹು ಮತ್ತು ಆಶಯದ ದೃಷ್ಟಿಯಿಂದ ಟಾಲ್‌ಸ್ಟಾರ್‌ರವರ “ಆಯನ ಕೆರೆನಿನಾ” ಗಿಂತ ವಿಸ್ತಾರ ಹೊಂದಿರುವ “ಮಲೆಗಳಲ್ಲಿ ಮದುಮಗಳು” ಟಾಲ್‌ಸ್ಟಾಯ್ ಅವರ ಕಾದಂಬರಿಯೊಡನೆ ಹೋಲಿಕೆ ಕೂಡ ಸಾಧ್ಯವಲ್ಲ ಎನ್ನಿಸುವಷ್ಟು ಸೋಲುತ್ತದೆ. ಕನ್ನಡದ ಅತಿ ಶ್ರೇಷ್ಠ ಕಾದಂಬರಿಯಾಗ ಬಹುದಾಗಿದ್ದ “ಮಲೆಗಳಲ್ಲಿ ಮದುಮಗಳು” ಸೋಲುವುದಕ್ಕೆ ಕಾರಣ ಅನುಭಾವವಲ್ಲ, ಕಾದಂಬರಿಗೆ ಬಂಧವನ್ನೊದಗಿಸುವ ದೃಷ್ಟಿಕೋನದಲ್ಲೇ ಬಿರುಕಿರುವುದು ಎನ್ನಿಸುತ್ತದೆ.
ಇಂತಹ ದೊಡ್ಡ ಕಾದಂಬರಿಯ ಎಲ್ಲಾ ಘಟನೆಗಳು ಮತ್ತು ಸಂಬಂಧಗಳನ್ನು ಬೇರೆ ಬೇರೆಯಾಗಿ ವಿಶ್ಲೇಷಿಸುವುದು ಅಸಾಧ್ಯವಾದ್ದರಿಂದ ಕೇವಲ ಕೆಲವು ಮುಖ್ಯ ಅಂಶಗಳ ವಿಶ್ಲೇಷಣೆಯ ಆಧಾರದ ಮೇಲೆ ಕಾದಂಬರಿಯ ಬೆಲೆ ಕಟ್ಟಲು ಪ್ರಯತ್ನಿಸಿದ್ದೇನೆ. ಇಂತಹ ಕಾದಂಬರಿಗಳಲ್ಲಿ ವಿಮರ್ಶಕ ಎದುರಿಸಬೇಕಾದ ಮುಖ್ಯ ಸಮಸ್ಯೆ ಸಾಹಿತ್ಯ ಕೃತಿಗೂ ಜೀವನಕ್ಕೂ ಇರುವ ಸಂಬಂಧ, ನನಗೆ ತಿಳಿದ ಮಟ್ಟಿಗೆ ಜೀವನ ಸಾಹಿತ್ಯ ಕೃತಿಗೆ ಬೇಕಾದ ವಸ್ತು ಮತ್ತು ಸನ್ನಿವೇಶಗಳನ್ನು ಒದಗಿಸಿಕೊಡುತ್ತದೆ. ಆದರೆ ಕೇವಲ ವಸ್ತು ಮತ್ತು ಸನ್ನಿವೇಶಗಳ ಮಹತ್ತಿನ ಆಧಾರದ ಮೇಲೆ ನಾವು ಸಾಹಿತ್ಯ ಕೃತಿಗಳ ಮಹತ್ತು ಮತ್ತು ಶ್ರೇಷ್ಠತೆಗಳನ್ನು ಅಳೆಯುವುದು ಸಾಧ್ಯವಿಲ್ಲ. “ಮಲೆಗಳಲ್ಲಿ ಮದು ಮಗಳು” ನನಗೆ ತಿಳಿಯದಿದ್ದ ಅನೇಕ ವಿಷಯಗಳನ್ನು ತಿಳಿಸಿಕೊಟ್ಟಿದೆ. ಅದರ ಸಹಾಯದಿಂದ ನಾನು ನಮ್ಮ ಸಮಾಜವನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು ಎಂಬುದು ಸತ್ಯ. ಆದರೆ ನಾನು ಸಾಹಿತ್ಯಕೃತಿಯಿಂದ ಬಯಸುವುದು ಕೇವಲ ಜ್ಞಾನನಲ್ಲ ವಿಷಯಗಳು ಮತ್ತು ಅನುಭವಗಳನ್ನು ಅರ್ಥಪೂರ್ಣ ಬಂಧದಲ್ಲಿ ಹಿಡಿದಿಟ್ಟು “ಸತ್ಯ”ಗಳನ್ನು ಅನುಭವಗಳನ್ನಾಗಿ ಪರಿವರ್ತಿಸಬಲ್ಲ ಶಕ್ತಿ, ವಾಸ್ತವಿಕ ಚಿತ್ರಣಗಳಲ್ಲಿ ಜಯಗಳಿಸುವ ಈ ಕಾದಂಬರಿ, ವಾಸ್ತವಿಕ ಸತ್ಯದ ಹಿಂದೆ, ಅಥವಾ ಮೇಲಿರುವ “ಸತ್ಯ”ದ ಬಗ್ಗೆ ಕೇವಲ ವ್ಯಾಖ್ಯಾನಗಳನ್ನು ನೀಡುತ್ತದೆ.

ಕೊನೆಯದಾಗಿ ಕುವೆಂಪು ಅವರ ಎರಡು ಕಾದಂಬರಿಗಳ ಬಗ್ಗೆ ಒಂದು ಮಾತು ಹೇಳಬಹುದು: ಕುವೆಂಪು ಕನ್ನಡದ ಅತ್ಯುತ್ತಮ ಕಾದಂಬರಿಕಾರರಾಗಬಹುದಾಗಿತ್ತು, ಪ್ರಪಂಚದ ಉತ್ತಮ ಕಾದಂಬರಿಕಾರರ ಕೃತಿಗಳಲ್ಲಿ ನಮಗೆ ಕಾಣಬರುವ ಅನುಭವದ ಹರಹು, ಸನ್ನಿವೇಶಗಳನ್ನು ಸೃಷ್ಟಿಸುವ ಶಕ್ತಿ, ಭಾಷೆಯ ಕಸುವು, ಮೊದಲಾದವುಗಳನ್ನೆಲ್ಲಾ ಇವರ ಕೃತಿಗಳಲ್ಲಿ ಗುರುತಿಸಬಹುದು. ಆದ್ದರಿಂದ ಇಂತಹ ಸಾಹಿತಿಯ ಸೋಲು, ಆಧುನಿಕ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಆಸಕ್ತಿಯಿರುವವರೆಲ್ಲಾ ಎದುರಿಸಲೇಬೇಕಾದ, ಬಹುಶಃ ನಮ್ಮ ಸಮಾಜದ ಬೆಳವಣಿಗೆಗೆ ಸಂಬಂಧಪಟ್ಟ ಮೂಲಭೂತ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ; ಇಂತಹ ಸೋಲು ಹತ್ತೊಂಭತ್ತನೆಯ ಶತಮಾನದಲ್ಲಿ ಶುರುವಾದ ಸಾಮಾಜಿಕ ಬದಲಾವಣೆಗಳನ್ನು ನಾವಿನ್ನೂ ಅರಗಿಸಿಕೊಂಡಿಲ್ಲ ಎಂಬ ನನ್ನ ಶಂಕೆಯನ್ನು ಬಲಪಡಿಸುತ್ತದೆ.
ಪಂಪ (ಕ್ರಿ. ಶ. ೯೪೦) ಬತ್ತಲೆಗರ ಮಾತು
ಒಡಲೊಳೆ ಜೀವಮಿರ್ದು ಗಡ ಸಂಚಿಸುತಿರ್ಪುದು ಪುಣ್ಯಪಾಪವುಂ
ಗಡ, ಬಳಿಕ, ಅತ್ರ ಬೇರೆ ಪೆರತೊಂದೊಡಲೊಳ್ ಗಡ ತಾನೆ ನಿಂದು ಒಡಂ
ಬಡಿಪುದು ಧರ್ಮಕರ್ಮಫಲಮಂ ಗಡ ; ಸತ್ತನೆ ಮತ್ತೆ ಪುಟ್ಟುವಂ
ಗಡ-ಪುಸಿ ಕಾಣ, ಡಂಬವಿದು-ಖೇಚರ, ನೀನಿದನೆಂತು ನಂಬಿದೋ
ತಲೆವರಿದು, ಉಟ್ಟುದ ಇಕ್ಕಿ, ಸುಲೋಕಸುಖಂಗಳನ್ ಉಣ್ಣೆವೆಂಬ ಬ
ತ್ತಲೆಗರ ಮಾತುಗೊಳ್ಳದಿರು, ಬಾಳ್ವಿನಂ ಇಂದ್ರಿಯವರ್ಗದಿಚ್ಛೆಯಂ
ಸಲಿಸಿ, ಬಸಂತದೊಳ್ ಕಕೆಗರ್ಚಿದ ಕೋಗಿಲೆಯಂತೆ ಬಿಚ್ಚತಂ
ನಲಿವುದು, ಕಂಡರಾರ್ ಮರು ಭವಂಗಳನ್ ಇಲ್ಲಿ ವಿಯಚ್ಚರೇಶ್ವರಾ
ಪರಲೋಕಮಿಲ್ಲ, ಪರಲೋಕವಿಲ್ಲದಂದು ತಲ್ಲೋಕಸುಖಾನುಭವಾಷೇಕ್ಷೆಯಿನ್ ಐಹಿಕಸುಖವಿಮುಖನಾಗಿ ಶರೀರಾರ್ಥವ್ಯಯಂ ಮಾಡುವಾತಂ, ಕಯ್ಯದಂ ಬಿಟ್ಟು ಕಾಲದರ್ಕ್ಕೆರಗುವಾತನಂ ಪೋಲ್ಕುಂ…
(ಆ. ಪು : ೨-೮, ೯)

Close

ಆಕ್ಟೋಪಸ್

ಪಿ. ಲಂಕೇಶ್

ಆಕ್ಟೋಪಸ್

“But”, ಅಂತ ಸಂಜೀವ ಪನಾಮ ಸಿಗರೇಟ್‌ ಹಿಡಿದ ಎಡಗೈಯಿಂದಲೇ ಆದಿತಾಳ ಕುಟ್ಟುತ್ತ ಬಹಳ ಜೋಕಾಗಿ ಅಂದ, “ನರಸಯ್ಯ is an honourable man, ಆದರೂ ಗಿಟ್ಟಲಿಲ್ಲ. ಗುರು ತನ್ನ ಕೃಪೆ ತೋರಲಿಲ್ಲ. ಹೌದೋ ಆನಂದು, ಇಂಗ್ಲೆಂಡಿನಲ್ಲಿ ಒಂದು ಸಲವಾದ್ರೂ ನಿನಗೆ ಇಂಥ ಪ್ರತಿಸ್ಪರ್ಧಿ ಸಿಕ್ಕಿದ್ದನೇನೋ ? ಎಲ್ಲ ಸರಾಗವಾಗಿ ಮುಗಿಸಿಕೊಂಡು ಬಂದೆ. ಯಾವ ಪರೀಕ್ಷೆಗೆ ಕೂತರೂ ಫಸ್ಟ್ ಕ್ಲಾಸು. ಕೊನೆಗೆ ಕಷ್ಟವೆಲ್ಲ ಕೊನೆಗೊಳ್ಳೋದು ಸುಖದಲ್ಲೇ ಮರಿ. ಧೈರ್ಯ ಕಳಕೊಳ್ಳಬೇಡ. ನರಸಯ್ಯನಲ್ಲಿ ಇನ್ನೂ ಮನುಷ್ಯತ್ವ ಇದೆ…”
“ಇದೆ, ಇದೆ, ಬೇಕಾದಷ್ಟಿದೆ, ಆದರೆ ಈಗೇನು ಮಾಡಲಿ ಹೇಳು” ಅಂದ ಆನಂದು, ಕನ್ನಡದ ಹಿತಕರ ಗಾಳಿಯನ್ನು ಸವಿಯುತ್ತಾ.
“ಏನಿಲ್ಲ, ಇವತ್ತು ಹ್ಯಾಗೂ ದೊಡ್ಡಗೌಡರು ಸಿಗ್ತಾರಲ್ಲ. ಮುಂದೆ ಹ್ಯಾಗೆ ವ್ಯೂಹ ರಚಿಸೋದು ಅಂತ ಯೋಚನೆ ಮಾಡು. ಪೆದ್ದನ ಥರ ಸುಮ್ಮನಿದ್ದು ಬಿಡಬೇಡ. ವೈಸ್‌ ಛಾನ್ಸಲರ್ ದೊಡ್ಡಗೌಡರ ತಲೆ ಇಲ್ಲೀವರೆಗೆ ತೆಪ್ಪಗೆ ಇದೆ ಅಂತ ತಿಳೀಬೇಡ, ಏನನ್ನಾದರೂ ಯೋಚಿಸಿರುತ್ತೆ, ಹ್ಯಾಗೂ ನಾಳೆ ಕನ್ನಡದ ಮಹಾನುಭಾವರನ್ನು ಕುರಿತು ಸೆಮಿನಾರಿದೆ, ನಾಡಿದ್ದು ಕನ್ನಡ ಪುಸ್ತಕಗಳ ಮೆರವಣಿಗೆ ಇದೆ. ನಿನ್ನ ಭಾಷಣ ಬೇರೆ ಕಾರ್ಯಕ್ರಮದಲ್ಲಿ ಸೇರಿದೆ, ಅವಕಾಶ ಕಳೆದುಕೊಂಡೋ-ಕೆಟ್ಟೆ….”

“ಮೂರ್ಖನಯ್ಯಾ ನೀನು. ನಾನು ಕನ್ನಡದ ಮಹಾನುಭಾವರ ಬಗ್ಗೆ ಮಾತಾಡೋದು ದೊಡ್ಡ ಶಾಪ ಅನ್ನೋ ಥರ ಮಾತಾಡ್ತಿದ್ದಿ. ಕನ್ನಡದ ಬಗ್ಗೆ ನಾನು ಮಾತಾಡದೆ ಯಾರು ಮಾತಡಬೇಕು. ಇಂಗ್ಲೆಂಡಿನ ಕೈವ್, ಕೀಟಿಂಗ್ ಬಂದು ಮಾತಾಡ್ತಾರಾ? ಪ್ರೊಫೆಸರ್ ನಗಸಯ್ಯನಂಥ ಇಂಗ್ಲಿಷ್ ಪ್ರೇಮಿಗಳು, ನಿನ್ನಂಥ ಸಿನಿಕರು ಇರೋತನಕ ಕನ್ನಡದ ಯಾವ ಕೆಲಸವೂ ಆಗೋಲ್ಲ. ಬಹಳ ದೊಡ್ಡ ಮನುಷ್ಯನ ಥರ ಮಾತಾಡ್ತಿದ್ದೀ, ಹೇಳು : ನಾನು ಮಾಡಿದ ತಪ್ಪಾದ್ರೂ ಏನು ? ಕನ್ನಡ ಬೇಕು, ಇಂಗ್ಲಿಷ್‌ನ ಪ್ರಾಮುಖ್ಯ ಕಡಿಮೆ ಆಗಬೇಕು ಅಂತ ಮಾತಾಡಿದ್ದೇ ದೊಡ್ಡ ತಪ್ಪೇನು?’ ವಿಶ್ವವಿದ್ಯಾಲಯದ ಅಧ್ಯಾಪಕ ನನ್ನ ಹಾಗೆ ಸಾರ್ವಜನಿಕ ಸಭೆಯಲ್ಲಿ ಮಾತಾಡಬಾರದು ಅಂತ ನೀನು ಹೇಳಬಹುದು, ಹಾಗಾದರೆ ಈ ದೇಶದಲ್ಲಿ ವಿಚಾರಸ್ವಾತಂತ್ರ‍್ಯ ಎಲ್ಲಿದೆ ? ವಿಶ್ವವಿದ್ಯಾನಿಲಯ ಅಟಾನಮಸ್‌ ಅಂತಾರೆ-ಆದರೆ ಯಾವ ರೀತಿಯ ಅಟಾನಮಿ ಇದೆ ? ನರಸಯ್ಯ ನನ್ನಂಥ ಜನರನ್ನ ಹಾಳುಮಾಡಬೇಕು ಅಂತ ನಿರ್ಧರಿಸಿದಾನೆ….”
“ಸಿಟ್ಟಾಗಬೇಡ, ಅವನೇ ನಿನಗೆ ಫಸ್ಟ್ ಕ್ಲಾಸ್ ಕೊಟ್ಟಿದ್ದು…..”
“ಹೌದು, ಎಲ್ಲಿ ತಂಕ ನಾನು ವಿಧೇಯ ಶಿಷ್ಯ ಆಗಿದ್ದೆನೋ ಅಲ್ಲಿ ತಂಕ ಎಲ್ಲಾ ಕ್ಲಾಸನ್ನೂ ಕೊಡ್ತಿದ್ದ. ಕೊಟ್ಟ, ಈಗ ಹೆದರಿಕೆ ಅವನಿಗೆ, ತಾನು ಬೆಳೆಸಿದ ಇಂಗ್ಲಿಷ್‌ ಮಹಾಭಾಷೆ ನನ್ನಂಥ ಕನ್ನಡ ಪ್ರೇಮಿಗಳಿಂದ ನೆಗೆದುಬಿದ್ದು ಹೋಗುತ್ತೆ ಅಂತ, ಆದರೆ….” ಎಂದು ಆನಂದು ತಾನೊಂದು ಪನಾಮ ಸಿಗರೇಟ್ ಹಚ್ಚಿಕೊಂಡು ತೇಲುಗಣ್ಣು ಮಾಡುತ್ತಾ ಕೂತ.
ಸಂಜೀವ ನಿಜಕ್ಕೂ ಏನನ್ನೂ ಕೇಳುತ್ತಿರಲಿಲ್ಲ, ಆದರೆ ಕೇಳಿದವನ ಹಾಗೆ ತೋರ ಬೇಕೆಂದು ನಿರ್ಧರಿಸಿದ್ದರಿಂದ “ಮತ್ತೇನಪ್ಪಾ “ಆದರೆ ?” ಅಂದ.
“ನಾನು ಮಾಡಿದ ತಪ್ಪಾದರೂ ಏನು ? ತನಗೆ ಆಪ್ತರಾದ ವ್ಯಕ್ತಿಗಳಿಗೆ ಕೆಲಸ ಕೊಡಬೇಕು ಅಂತ ನಾನು ಇಂಟರ್‌ವ್ಯೂಗೆ ಬರಕೂಡದು ಅಂದ. ಅವನ ಮಾತು ಕೇಳದೆ ನಾನು ಹೋದೆ. ಅಷ್ಟರಲ್ಲಿ ಇಂಟರ್‌ವ್ಯೂ ಕಮಿಟಿಯ ಎಲ್ಲರಿಗೆ ನನ್ನ ಬಗ್ಗೆ ಹೇಳಿ ಅವರ ಮನಸ್ಸು ಕೆಡಿಸಲು ಯತ್ನಿಸಿದ್ದ. ಆದರೂ ಅವರು ನನ್ನನ್ನು ಮೆಚ್ಚಿದರು. ದೊಡ್ಡೇಗೌಡರು ನನ್ನ ಪರವಾಗಿ ಮಾತಾಡಿದರು….”
“ ಈಗ…..”

“ಯಾರು ನನ್ನ ಪರವಾಗಿದ್ದರೆ ಏನು ಬಂದ ಹಾಗಾಯಿತು. ನರಸಯ್ಯ ನಮ್ಮ ಡಿಪಾರ್ಟ್‌ಮೆಂಟ್‌ ಯಜಮಾನ, ಆತ ಒಪ್ಪದೆ….” “ಅವನು ಒಪ್ಪದೆ ಏನೂ ಆಗೋ ಹಾಗಿಲ್ಲ.” “ನನಗೆ ಹಣ ಮುಖ್ಯ ಅಂತ ತಿಳಿದಿದಾನೆ ಮೂರ್ಖ, ರೀಡರ್‌ ಅನ್ನೋ ಹೆಸರು ಮುಖ್ಯ ಅಂತ ತಿಳಿದಿದ್ದಾನೆ. ಇಷ್ಟು ಖದೀಮು ಕೆಲಸ ಮಾಡಿಯೂ ತಾನೊಬ್ಬ ಮಹಾ ವ್ಯಕ್ತಿ ಅಂತ ತಿಳಿದಿದಾನೆ !”
ಮಾತು ಮೀರಿದ ಸಿಟ್ಟು, ಆನಂದುವಿನ ಮುಖ ಕೆಂಪಗೆ ಮಾಡಿತು. ಸಂಜೀವ ತನ್ನ ಮಾತು ಕೇಳುತ್ತ ಇಲ್ಲವೆಂಬ ಅನುಮಾನ ಬೇರೆ ಬಂತು. ಸದ್ದಿಲಿಯಾದ ; ಸಿಗರೇಟ್ ಹೊಗೆಯನ್ನು ಕಲಾತ್ಮಕವಾಗಿ ಬಿಡುತ್ತ ಆನಂದಿಸಿದ ಇಂಗ್ಲೆಂಡಿನ ಹಿತವಾದ ಘಳಿಗೆಗಳು ಮೆಲ್ಲ ಮೆಲ್ಲನೆ ಮನಸ್ಸಿನಲ್ಲಿ ತೇಲಹತ್ತಿದವು. ಕಣ್ಣು ಕಾಣುವವರೆಗೆ ಕುಗ್ಗು, ಉಬ್ಬುಗಳ, ಹಸಿರು ಹಾಸಿದ, ಬೆಳಕು ಕಂಡೊಡನೆ ಅರಳಿ ನಿಲ್ಲುವ ದೇಶ ತನ್ನ ಯೋಚನೆಯಲ್ಲಿ ಸಂಕೇತವಿರಬಹುದೆಂದು ನೋಡಿಕೊಂಡು ಹುಸಿನಕ್ಕ.
ಹೋಟೆಲಿನ ಜಗುಲಿಯಾಚೆ, ಬಳ್ಳಿಗಳ ಗುಂಪಿನ ಮೂಲಕ ಕಾರಿನ ಸದ್ದು ತೂರಿ ಬಂತು. ಸಂಜೀವ, ಆನಂದು ಇಬ್ಬರೂ ನೋಡಿದರು : ಬಳ್ಳಿಗಳ ಮೂಲಕ ದೊಡ್ಡ ಗೌಡರ ಸ್ಟುಡಿಬೇಕರ್ ಕಾಣಿಸಿತು. ಮುಂದಿನ ಸೀಟಿನಲ್ಲೇ ಖುದ್ದು ದೊಡ್ಡಗೌಡರು ಕೂತು ಇಬ್ಬರ ಕಡೆಗೂ ಮುಗುಳ್ಳಗೆ ಕಳಿಸುತ್ತಿದ್ದರು. ಆನಂದು ಏಕ್‌ದಂ ಎದ್ದ. ಏಳುವುದನ್ನೂ ಬೀಳುವುದನ್ನೂ ನೋಡದೆ ಅವರ ಕಡೆಗೆ ನಡೆದ, ಸಂಜೀವ ಹಿಂಬಾಲಿಸಿದ. ಆದರೆ ದೊಡ್ಡಗೌಡರು ಸಂಜೀವನ ಕಡೆಗೆ ಕೊಂಚ ಮುನಿಸಿನ ನೋಟ ಬೀರಿ, “ ಆನಂದರಾವ್ ಹತ್ತಿರ ಕೊಂಚ ಮಾತಾಡಬೇಕು. ಹೀಗಂದೆ ಅಂತ ಕೋಪಿಸಿಕೋ ಬೇಡಿ” ಅಂದರು. ಸಂಜೀವನ ಮುಖ ಇಳಿಬಿತ್ತು; ನಿಂತಲ್ಲೇ ತಿರುಗಿ ಮೂಲಸ್ಥಾನಕ್ಕೆ ಹೋಗಿ ಕೂತ.
“ನೋಡಿ ಆನಂದರಾವ್, ಎಲ್ಲವೂ ತ್ವರೆಯಿಂದ ಆಗಬೇಕು, ನೀವು ಹೀಗೆ ಹೋಟೆಲ್‌ಗೆ ಬಂದು ಕೂತರೆ ಆಗೋಲ್ಲ. ನಾಡಿದ್ದು ನಾನು ಈ ವಿಶ್ವವಿದ್ಯಾಲಯದಿಂದ ಹೊರಟು ಹೋಗ್ತೇನೆ. ನಿಮಗೆ ಗೊತ್ತಲ್ಲ, ನಿಮಗೆ ಸಹಾಯ ಮಾಡಬೇಕು ಅಂತ….”
ಆನಂದು ದುಃಖ ತಡೆಯಲಾಗದೆ, “ನೀವು ಹೋದರೆ ನನ್ನಂಥವನ ಪಾಡೇನು ಸಾರ್‌? ಕನ್ನಡದ ಕೆಲಸ?

“ನಾನು ಎಲ್ಲಿದ್ದರೂ ಕನ್ನಡ ನನ್ನ ಉಸಿರು ಆನಂದರಾವ್, ‘ಎಲ್ಲಾದರು ಇರು’ ಅಂತ ಕವಿಗಳು ಹೇಳಿಲ್ಲವೆ ? ಅದಿರಲಿ, ನಿಮ್ಮ ಪ್ರತಿಭೆಗೆ ತಕ್ಕ ಪ್ರತಿಫಲ ಸಿಕ್ಕಿಲ್ಲ ಅಂತ ನನಗೆ ಬೇಸರ. ಎರಡು ಸಲದ ಸೆಲೆಕ್ಷನ್ ಕಮಿಟೀಲೂ ನಾನು ಇದ್ದೆ-ನಿಮ್ಮ ಪ್ರೊಫೆಸರ್ ನರಸಯ್ಯನ ಹಟಮಾರಿತನ ಅಡ್ಡಿ ಬಂತು-ನೀವು ಹೀಗೆ ಯಾವುದೋ ಕಾಲೇಜಲ್ಲಿ ಕೊಳೀಬೇಕಾಗಿ ಬಂತು, Past is past, ಬಿಡಿ. to err is human, ಅದಿರಲಿ. ಈಗ ಒಂದು ಕೆಲಸ ಮಾಡಿ, ನಾನು ಈಗಾಗಲೇ ನಿಮ್ಮ ನರಸಯ್ಯನ ಮುಂದೆ ಈ ವಿಷಯ ಸೂಚಿಸಿದ್ದೇನೆ. ನಿಮ್ಮನ್ನ ಅವರು ನಿರೀಕ್ಷಿಸ್ತಾ ಇರ್ತಾರೆ. ಅವರ ಹತ್ತಿರ ಹೋಗಿ; ವಿಧೇಯರಾಗಿಯೇ ಹೋಗಿ, ಒಂದು ಪರ‍್ಮಿಷನ್ ಕಾಗದ ತೆಗೆದುಕೊಂಡು ಬನ್ನಿ. ನೀವು ವಿಶ್ವವಿದ್ಯಾಲಯದಲ್ಲಿ ರೀಡರ್ ಅಂತ ಆರ‍್ಡರ್‌ ಕೊಟ್ಟು ನಾನು ಸಂತೋಷದಿಂದ ಹೋಗ್ತೇನೆ, ತಿಳೀತ ? ಇದು ಇವತ್ತೇ, ಈಗಲೇ ಆಗಬೇಕು….”
“ಸರಿ ಸಾರ್‌, ಆದರೆ…” “ಆದರೆ ಏನ್ರೀ ಬಂತು ? ಅವರು ನಿಮಗೆ ಮೇಷ್ಟರಾಗಿದ್ರು ಅಲ್ವೇನ್ರಿ ? ಕಾರ‍್ಯವಾಸಿ ಕತ್ತೆಕಾಲು ಹಿಡೀಬೇಕಪ್ಪ. ಆಯಿತೆ ? ಏನೂ ಯೋಚನೆ ಮಾಡಬೇಡಿ, ಬನ್ನಿ, ನನ್ನ ಕಾರಲ್ಲೇ ಅವರ ಮನೇಹತ್ರ ಬಿಟ್ಟು ಹೋಗ್ತೇನೆ.”
“ನಿಮಗೆ ತುಂಬ ಕೃತಜ್ಞ ಸಾರ್” ಅಂದ ಆನಂದು, ಕಾರಿನೊಳಕ್ಕೆ ಹೋಗಲು ಯತ್ನಿಸುತ್ತಾ, ಬಾಗಿಲು ತೆಗೆಯುವುದಕ್ಕೆ ಬರಲಿಲ್ಲ. ಆನಂದು ಪೆಚ್ಚಾದ, ದೊಡ್ಡಗೌಡರು ಹಸನ್ಮುಖಿಗಳಾಗಿ ಬಟನ್ ಒತ್ತಿ ಬಾಯಿ ತೆರೆದು, “ಬನ್ನಿ, ನಿಮಗೆ ಜ್ಞಾನದ ಬಾಗಿಲು ತೆರೆಯೋದು ಗೊತ್ತೇ ಹೊರತು ಈ ಕಾರುಗೀರಿಂದಲ್ಲ” ಎಂದು ಹೃತ್ಪೂರ್ವಕ ಮೆಚ್ಚುಗೆ ಸೂಚಿಸಿದರು. ಆನಂದುವಿಗೆ ಬಹಳ ಉಲ್ಲಾಸವೆನಿಸಿತು. ಕುಡಿದ ನೀರು ಅಲ್ಲಾಡದಂಥ ಭವ್ಯ ಕಾರು, ಅದನ್ನು ಸರಾಗವಾಗಿ, ಅದಕ್ಕಾಗಿ ಹುಟ್ಟಿದವರೋ ಎಂಬಂತೆ ನಡೆಸುತ್ಯ ದೊಡ್ಡಗೌಡರು. “ಕನ್ನಡಕ್ಕಾಗಿ ಮಾಡಬೇಕಾದ ಕೆಲಸ ಎಷ್ಟಿದೆ ! ಆದರೆ ಈ ಗದ್ದಲದಲ್ಲೇ ಕಾಲಹರಣ ಆಗಿಬಿಡುತ್ತೆ, ನಾನು ಬೇಡ ಅಂದ್ರೂ ನಾಳೆ ಒಂದು ಬೀಳ್ಕೊಡುಗೆ ಸಮಾರಂಭ ಇಟ್ಟುಕೊಂಡಿದ್ದಾರೆ, ವ್ಯರ್ಥ, ಎಲ್ಲ ವ್ಯರ್ಥ….”
“ಹೌದು ಸಾರ್, ನಾನೂ ಅಲ್ಲಿ ಮಾತಾಡಬೇಕು.”
“ಹೌದೆ!” ಅಂತ ತಮಗೆ ಏನೂ ಗೊತ್ತಿಲ್ಲದವರ ಹಾಗೆ ಅಂದರು, “ಏನು ಮಾತಾಡ್ತೀರಿ ?”

“ಒಂದು ವಾರದಿಂದ ಅದಕ್ಕಾಗಿ ಸಿದ್ಧವಾಗ್ತಿದೇನೆ ಸಾರ್, ನನಗನ್ನಿಸುತ್ತೆ, ಈ ಜನ ನಿಮ್ಮನ್ನ ತುಂಬ ತಪ್ಪಾಗಿ ತಿಳಿದಿದಾರೆ, ಕನ್ನಡಕ್ಕಾಗಿ ಏನಾದ್ರೂ ಕೆಲಸ ಆಗಿದ್ರೆ ಅದು ನಿಮ್ಮಿಂದ ನಿಮ್ಮ ಹತ್ರ ಇದ್ದಾಗಲೆಲ್ಲ ಒಂದು ರೀತಿಯ ಧೈರ್ಯ, ವಿಶ್ವಾಸ ಬರುತ್ತೆ, ನಿಮ್ಮ ಬರವಣಿಗೆಗಳಲ್ಲಿ ಇರುವ ನವಿರಾದ ಹಾಸ್ಯ, ನಿಷ್ಠುರತೆ, ಸರಳತೆ ಬೇರೆ ಯಾರಲ್ಲೂ ಇಲ್ಲ. ನಿಮ್ಮನ್ನು ನಮ್ಮ ಪ್ರೊಫೆಸರ್‌ ನರಸಯ್ಯನವರ ಜೊತೆಗೆ ಹೋಲಿಸಿದ್ರೆ-”
“ಛೇ, ಛೇ, ಅವರೆಲ್ಲಿ ? ನಾನೆಲ್ಲಿ ?” ಎಂದಷ್ಟೇ ಹೇಳಿ ದೊಡ್ಡಗೌಡರು ಕಾರನ್ನು ಎಡಕ್ಕೆ
ತಿರುಗಿಸಿದರು.
ಆನಂದು ಅವರು ಹೇಳಿದ್ದು ವಿನಯದ್ದೋ, ಹೆಮ್ಮೆಯದೋ ಎಂದು ಗೊತ್ತಾಗದೆ ತನ್ನ ಅಭಿಪ್ರಾಯ ಮುಂದುವರಿಸಿದ. ನರಸಯ್ಯನವರ ಮನೆ ಹತ್ತಿರ ಹತ್ತಿರ ಬರುತ್ತಿತ್ತು, ಅವರೆದುರು ಹೇಗೆ ತನ್ನ ವಾದ, ಬೇಡಿಕೆ, ಅಭಿಪ್ರಾಯ, ಇತ್ಯಾದಿ ಮಂಡಿಸುವುದೆಂದು ಯೋಚಿಸಿಕೊಳ್ಳುತ್ತಲೇ ದೊಡ್ಡಗೌಡರ ಖುಷಿಗಾಗಿ ಮಾತಾಡುತಿದ್ದ, ದೊಡ್ಡಗೌಡರು ಹೇಳಿದರು: “ಇಂಗ್ಲಿಷ್‌ ಅಭ್ಯಾಸಮಾಡಿದ ನಿಮ್ಮಂಥ ಹತ್ತಾರು ಜನ ಹೀಗೆ ಮುಂದೆ ಬಂದು ಕನ್ನಡಕ್ಕಾಗಿ ದುಡೀಬೇಕು, ನಾನು ಡೆಲ್ಲಿಯಲ್ಲಿದ್ದರೂ ಇಲ್ಲಿಯ ಮುಂದಿನ ವೈಸ್‌ಛಾನ್ಸಲರ್‌ ಚಿಕ್ಕೇಗೌಡರಿಗೆ ಎಲ್ಲ ಹೇಳಿದ್ದೇನೆ. ನಿಮಗೆ ಸಂಪೂರ್ಣ ವಿಚಾರಸ್ವಾತಂತ್ರ್ಯ ಇರುತ್ತೆ. I agree to disagree, ಒಂದು ಮುತ್ತಿನಂಥ ಮಾತು ಮುಖ್ಯವೇ ಹೊರತು ಪ್ರಿಯವಾದ ಕೊಳಕಲ್ಲ.”
“ಮುತ್ತಿನಂಥ ಮಾತು. ನನಗೆ ಲಾರೆನ್ಸ್ ಮಾತು ನೆನಪಾಗುತ್ತೆ” ಎಂದು ಯಾವ ಮಾತು ಎಂದು ಗೊತ್ತಿಲ್ಲದೆ ರಾತ್ರಿ ಓದಿದ ಯಾವುದೋ ಮಾತನ್ನು ಆನಂದು ಹೇಳಿದ. ದೊಡ್ಡಗೌಡರು ಆನಂದಪರವಶರಾದರು.
ಇತ್ತ ಪ್ರೊಫೆಸರ್ ನರಸಯ್ಯನವರು ಬೆಳಗಾಗುತ್ತಲೇ ಎದ್ದು ಸ್ನಾನ, ಜಪ ಇತ್ಯಾದಿಗಳನ್ನು ಮುಗಿಸಿ ಮಲಬದ್ಧತೆಗೆ ಔಷಧಿ ತೆಗೆದುಕೊಳ್ಳುವುದನ್ನು ಮರೆಯದೆ ಮರುದಿನದ ತಮ್ಮ ಮುಂಬಯಿ ಸಮ್ಮೇಳನಕ್ಕೆ ಸಿದ್ಧವಾಗುತ್ತಿದ್ದರು. ಭಾರತೀಯ ರೀತಿಯ ಅವರ ಹೆಂಡತಿ ಅಲಮೇಲಮ್ಮನವರು ತಮ್ಮ ಪತಿ ಏಳುವುದಕ್ಕೆ ಮುಂಚೆಯೇ ಎದ್ದು, ಅಡಿಗೆಯ ಆಳು ಇದ್ದರೂ, ತಮ್ಮ ಸ್ವಂತ ಕೈಯಿಂದಲೇ ಒಲೆ ಹತ್ತಿಸಿ ಕಾಫಿ

ತಯಾರಿಸಿದ್ದರು. ಅವರು ಕಾಫಿ, ತಂದು ಕೊಟ್ಟಾಗ ಅವರ ಹಣೆಯ ಕುಂಕುಮ ನೋಡಿ ನಗಸಯ್ಯನವರಿಗೆ ಹೆಮ್ಮೆ ಎನ್ನಿಸಿತು. ಇಂಗ್ಲೆಂಡಿನ ಯಾವ ಹೆಂಗಸಿಗೆ ಈ ರೀತಿಯ ಮುತ್ತೈದೆ ಗುಣವಿದೆ- ಎಂದು ಕೇಳಿಕೊಂಡರು. ದೆಹಲಿಯ ಪ್ರೊಫೆಸರ್ ಜೋಸರು ಬಂದಾಗ ಅವರು ತಮ್ಮ ಪತ್ನಿಯ ಬಗ್ಗೆ ಹೇಳಿದ ಮಾತು ನೆನಪಾಯಿತು. “ಅಲಮೇಲೂ, ಬೋಸರು ತಾವು ಭಾರತದ ಸ್ತ್ರೀ ಮೇಲೆ ಇಲ್ಲೇ ಬರೆದ ಕತೆ ಬಿಟ್ಟು ಹೋಗಿದ್ರಲ್ಲಾ, ಇದೆಯಾ ?” ಅಂದರು. ಅಲಮೇಲು “ಇದೆ, ನಿಮ್ಮ ಸೂಟ್‌ಕೇಸ್ ನಲ್ಲಿ ಹಾಕಿದೇನೆ. ಮುಂಬಯಿಯ ಭಾಷಣಕ್ಕೆ ಬೇಕಾಗುತ್ತೆ ಅಂದಿರಲ್ಲ ?” ಅಂದು ತಮ್ಮ ಪತಿಯ ತೇಜಃಪುಂಜ ಮುಖವನ್ನು ನೋಡುವ ಧೈರ್ಯವಿಲ್ಲದೆ ನಾಚಿಕೆಯಿಂದ ಒಳಗೆ ಹೋದರು.
ನರಸಯ್ಯನವರು ತಮ್ಮ ಆತ್ಮೀಯ ವಿದ್ಯಾರ್ಥಿ ಮತ್ತು ಹಾಲಿ ಸಹೋದ್ಯೋಗಿ ರಾಮಯ್ಯನಿಗೆ ಎಂಟು ಗಂಟೆಗೆ ಬರಲು ಹೇಳಿದ್ದರು. ನರಸಯ್ಯನವರು ಒಳಗೆ ಉಪನಿಷತ್ತಿನ ಕೆಲವು ಶ್ಲೋಕಗಳನ್ನು ಗಟ್ಟಿಯಾಗಿ ಹೇಳಿಕೊಳ್ಳುತ್ತ ಅವುಗಳ ಭಾಷೆ,
ಭಾವನೆ ಮತ್ತು ಜ್ಞಾನವನ್ನು ಸವಿಯುತ್ತಿದ್ದಾಗ ರಾಮಯ್ಯ ಜಗುಲಿಯ ಮೇಲೆ ನಿಂತು ತಮ್ಮ ಗುರುಗಳ ಕಂಠಶ್ರೀಯನ್ನು ಮೆಚ್ಚು ತಲೆದೂಗುತ್ತಿದ್ದ, ಶ್ಲೋಕಗಳ ಉಚ್ಚಾರಣೆ ನಾಳೆಯ ಹೊತ್ತಿಗೆ ಸರಿಹೋಗದಿದ್ದರೆ ಮುಂಬಯಿಯ ಇಂಗ್ಲಿಷ್ ಅಧ್ಯಾಪಕರ ಸಮ್ಮೇಳನದಲ್ಲಿ ನಿರರ್ಗಳವಾಗಿ ಹೇಳುವುದಕ್ಕೆ ತೊಂದರೆಯಾದೀತೆಂದು ನರಸಯ್ಯನವರು ಪುಸ್ತಕ ನೋಡುತ್ತ ಒಮ್ಮೆ, ಪುಸ್ತಕ ಮುಚ್ಚಿಟ್ಟು ಒಮ್ಮೆ ಹೇಳಿ ಕೊಳ್ಳುತ್ತಿದ್ದರು. ಮದರಾಸಿನಿಂದ ಬರುವ ಶೆಲ್ವಪಿಳ್ಳೆಗೆ ಈ ಸಲ ತಮ್ಮ ಸಂಸ್ಕೃತ ಜ್ಞಾನದಿಂದ ಅಸೂಯೆಯಾಗಲೇಬೇಕೆಂದು ಸಂಸ್ಕೃತದ ಕೆಲವು ವಾಕ್ಯಗಳನ್ನು ಗಟ್ಟಿಮಾಡಿ ಅವುಗಳ ರಚನೆ, ಪದಗಳ ಖಚಿತತೆ, ಸಮಾಸ ಇತ್ಯಾದಿಗಳ ಬಗ್ಗೆ ಚಿಕ್ಕ ಟಿಪ್ಪಣಿ ಮಾಡಿಕೊಂಡು ಸಮ್ಮೇಳನಕ್ಕೆ ಧರಿಸುವ’ ಕೋಟಿನ ಒಳಜೇಬಲ್ಲಿ ಭದ್ರವಾಗಿ ಇಟ್ಟುಕೊಂಡು ಹೊಂಚುಹಾಕುತ್ತಿದ್ದರು. ರಾಮಯ್ಯ ತನ್ನ ಗುರುಗಳ ದರ್ಶನಕ್ಕಾಗಿ ಆತುರಪಡುತ್ತ ಕಾಲಿಂಗ್ ಬೆಲ್ ಒತ್ತಲು ಹೋದ. ಆದರೆ ನರಸಯ್ಯನವರ ಧ್ಯಾನಕ್ಕೆ ಅಭ್ಯಾಸಕ್ಕೆ ತೊಂದರೆಯಾದೀತೆಂದು ಹಿಂಜರಿದು ನಿಂತ. ಅಷ್ಟರಲ್ಲಿ ಬೀದಿಯಲ್ಲಿ ಹೋಗುವ ಒಬ್ಬ ದಾಸಯ್ಯ ಶಂಖ ಊದುತ್ತ, ಹಾಡು ಹೇಳುತ್ತ ನರಸಯ್ಯನವರ ಜಗುಲಿಯವರೆಗೆ ಬಂದ, ಆತನ ಗಲಾಟೆಯಿಂದ ಗುರುಗಳಿಗೆ ತೊಂದರೆಯಾದೀತೆಂದು ರಾಮಯ್ಯ “ನಿಲ್ಲಿಸಯ್ಯ” ಎಂದು ಪಿಸುಗುಟ್ಟಿದ. ದಾಸಯ್ಯ ಆ ಪಿಸುಮಾತನ್ನು ಲೆಕ್ಕಿಸದೆ ಹಾಡನ್ನು ಗಟ್ಟಿಯಾಗಿ ಅರಚಿದ : “ಅಲ್ಲಿರುವುದು ನಮ್ಮ ಮನೆ-ಇಲ್ಲಿರುವುದು ಸುಮ್ಮನೆ….” ಅವನ ವಾಕ್ಯ ಮುಗಿಯುವುದಕ್ಕೆ ಮುಂಚೆಯೇ ರಾಮಯ್ಯ, “ಗಲಾಟೆ ಬೇಡ” ಎಂದು ಅರಚಿದ, ದಾಸಯ್ಯ ತನ್ನ ಹಾಡು ನಿಲ್ಲಿಸಿ ನಕ್ಕ, ಆದರೆ ಹಾಡು

ನಿಂತೊಡನೆ ಮನೆಯೊಳಗಿನ ಮೆಟ್ಟಿಲು ಧಡ್‌, ಧಡ್ ಎಂದದ್ದು ಕೇಳಿಸಿತು. ಮರುಕ್ಷಣದಲ್ಲಿ ನರಸಯ್ಯನವರು ಜಗುಲಿಯಲ್ಲಿ ಪ್ರತ್ಯಕ್ಷರಾಗಿ “ಯಾಕೆ, ಯಾಕೆ ? ಯಾರು ಹಾಡನ್ನು ನಿಲ್ಲಿಸಿದ್ದು ?” ಎಂದು ಹುಳಿಮುಖ ಮಾಡಿಕೊಂಡು ದಾಸಯ್ಯನನ್ನೂ ರಾಮಯ್ಯನನ್ನೂ ನೋಡಿದರು. ರಾಮಯ್ಯ ಕದ್ದು ಸಕ್ಕರೆ ತಿಂದು ಸಿಕ್ಕಿಹಾಕಿಕೊಂಡ ಮಗುವಿನಂತೆ ಹಲ್ಲು ಕಿರಿಯುತ್ತ “ತಮಗೆ ಗದ್ದಲವಾಗುತ್ತೆ, ತಮ್ಮ ಅಭ್ಯಾಸಕ್ಕೆ ತೊಂದರೆಯಾಗುತ್ತೆ ಅಂತ….” ಅಂದ, ನರಸಯ್ಯ ಕುಸಿತರಾದರು; ರಾಮಯ್ಯನ ಅಜ್ಞಾನಕ್ಕೆ ಪರಿತಪಿಸಿದರು “ಅಲ್ರೀ, ಪುರಂದರದಾಸರ ಹಾಡಿನಿಂದ ತೊಂದರೆಯಾಗುತ್ತೆ ಅಂತೀರಿ, ಅದೆಂಥ ಭಾರತೀಯರಿ ನೀವು ? ನಮ್ಮ ಇಂಗ್ಲಿಷ್ ಭಾಷೆ ಈ ಪ್ರಜ್ಞೆಯನ್ನು ಅರಗಿಸಿಕೊಳ್ಳಬೇಕು. ಅದು ಇಂಗ್ಲಿಷಿಗೆ ಮಾತ್ರ ಸಾಧ್ಯ. ಹಾಡಿನ ತಾಳವಾದರೂ ನಿಮಗೆ ಸೊಗಸಾಗಿ ಕಾಣಬೇಡವೇ ? ಏನೋಪ್ಪ, ನಿಮ್ಮಂಥವರ ಪರಕೀಯ ಪ್ರಜ್ಞೆ ನನಗೆ ನಾಚಿಕೆ ಹುಟ್ಟಿಸುತ್ತೆ.”
“ತಾವು ಹೇಳಿದ್ದು ಸರಿ ಸಾರ್, ಲೀವೀಸ್ ಹಾಗೇ ಹೇಳ್ತಾನೆ-ಜಾನಪದ ಭಾಷೆ, ಹಾಡುಗಳ ಶಕ್ತಿ, ಸೌಂದರ್ಯ”
“ಹ್ಹಾ ! ಹ್ಹಾ ! ಲೀವೀಸ್ ಕೂಡ ಹೇಳಿದ್ದಾರೆ, ಅಲ್ಲವೆ ? ನಾನು ಕಳೆದ ವಿಂಟರ್‌ನಲ್ಲಿ ಅವರ ಹತ್ರ ಮಾತಾಡುವಾಗ ನನ್ನ ಮಾತನ್ನ ಒಪ್ಪಿಕೊಂಡು, ನೆನಪಿದೆ.”
ಅಂದು ದಾಸಯ್ಯನಿಗೆ ತಮ್ಮ ಬಣ್ಣ ಬಣ್ಣದ ನಿಲುವಂಗಿಯ ಆಳವಾದ ಜೇಬಿನಿಂದ ಒಂದು ರೂಪಾಯಿ ನಾಣ್ಯ ತೆಗೆದು ಕೊಡುತ್ತಾ “ಹಾಡು” ಅಂದರು, ಆತ ತನ್ನ ದರಿದ್ರಕಂಠದಲ್ಲಿ ಕಿರಲಹತ್ತಿದ, ನರಸಯ್ಯ ತಲೆದೂಗುತ್ತಾ ಚಪ್ಪಾಳೆ ತಟ್ಟಿದರು ; ರಾಮಯ್ಯನ ಕಡೆಗೆ ತಿರುಗಿ, “ನೋಡಿ, ರಾಮಯ್ಯ, ‘ಅಲ್ಲಿದೆ ನಮ್ಮನೆ -ಎಷ್ಟು ಸರಳವಾದ ಭಾಷೆಯಲ್ಲಿ ಹೇಗೆ ಮುಖ್ಯ ಅನ್ನಿಸಿಕೆಯನ್ನು ದಾಸರು ಹೇಳಿದ್ದಾರೆ. ಕಾವ್ಯ ಅಂದರೆ ಅದು ಅಲ್ಲದೆ ಭಾರತೀಯರ ಮುಕ್ತಿ ಎಷ್ಟು ಸೊಗಸಾಗಿ ಬಂದಿದೆ. ಅದನ್ನು ಕೊಂಚ ಬರೆದುಕೊಳ್ಳಿ, ಮುಂಬಯಿಯಲ್ಲಿ ಕೋಟ್ ಮಾಡಬೇಕು” ಅಂತ ಆಜ್ಞೆ ಮಾಡಿದರು. ರಾಮಯ್ಯ ತನ್ನ ಪ್ಯಾಂಟಿನಿಂದ ಸೀಸದ ಕಡ್ಡಿ ಎಳೆದುಕೊಂಡು ಬರೆದುಕೊಳ್ಳ ಹತ್ತಿದ. ನರಸಯ್ಯ ಮಾತಾಡುತ್ತಿದ್ದರು; ದಾಸಯ್ಯ ಹಾಡುತ್ತಿದ್ದ. ಮುಗಿದೊಡನೆ, ತುಂಬ ಮಾನವೀಯ ಧ್ವನಿಯಲ್ಲಿ ಅವರು ದಾಸಯ್ಯನಿಗೆ, “ನಿನ್ನ ವಾಸ ಎಲ್ಲಿ” ಅಂದರು, ಆತ “ಹಿಂಗೇ ಹೋಗ್ತೀರ‍್ತೀನಿ ಸ್ವಾಮಿ, ದಾಸಯ್ಯನಿಗೆ ಮನಿ ಯಾಕೆ, ಮಠ ಯಾಕೆ ?” ಅಂದ, ನರಸಯ್ಯನವರಿಗೆ ಆಶ್ಚರ್ಯ, ಆನಂದವಾಗಿ ಉಪನಿಷತ್ತಿನ ಉರು ಹಚ್ಚಿದ ಮಾತು ಹೇಳುತ್ತ ಚಿಕ್ಕ ನೃತ್ಯ ಮಾಡಿದರು, “ಕೇಳಿದಿರಾ ರಾಮಯ್ಯ, ಇದು

ನಿಜಕ್ಕೂ ನಮ್ಮ ಜನರ ಆಟಿಟ್ಯೂಡ್ : ಮನೆ ಯಾಕೆ, ಮಠ ಯಾಕೆ-ಸರಳ ಜೀವನ, ಭಕ್ತಿಯ ಜೀವನ” ಅಂದರು, ದಾಸಯ್ಯ ಹೋದ. ಅವನ ಹಾಡು ಪಕ್ಕದ ಮನೆಯಿಂದ, ಕಾಂಪೌಂಡಿನ ಆಚೆಯಿಂದ, ಕೇಳಿಬಂತು. ನಾಯಿಯೊಂದು ಅವನನ್ನು ಬೆನ್ನಟ್ಟಿ ಹೋಯಿತು. ನರಸಯ್ಯನವರು ಬಹು ವಿಷಾದದಿಂದ ಹೇಳಿದರು, “ನನ್ನ ಚಿಕ್ಕ ಸಂಸಾರಕ್ಕೆ ಇಷ್ಟು ದೊಡ್ಡ ಮನೆ ಯಾಕೆ ಅನ್ನುತ್ತೆ ರಾಮಯ್ಯ. ನಾವಿರೋರು ಮೂವರೇ-ನಾನು, ನನ್ನ ಮಗ, ನನ್ನ ಆಕೆ. ಈ ಮನೆಯಲ್ಲಿ ವೈಯಕ್ತಿಕತೆ, ಏಕಾಂತತೆ ಇಲ್ಲ. ಇದನ್ನೇ ನಾನು ಬೋಸ್ ಅವರಿಗೆ ಹೇಳಿದೆ. ಅವರು ಆಗಲೇ ಚಿಕ್ಕ ಮನೆಗೆ ಹೋಗಿದ್ದಾರೆ. ನಮ್ಮ ಶಂಕರ, ಬುದ್ಧ, ರಾಮಕೃಷ್ಣ ಇವರನ್ನು ಓದಿದಷ್ಟೂ ನನಗೆ ಈ ಪ್ರಶ್ನೆ ಕಾಡ್ತಿದೆ. ಸದ್ಯಕ್ಕೆ ನಾವು ದಾನ, ಧರ್ಮ ಮಾಡಿ ಒಂದು ಹದಕ್ಕೆ ಬರಬೇಕು ಅಂತ ಮಾಡಿದ್ದೇವೆ. ಬಡವರಿಗೆ ತಂಗಳು ಹಾಕಬಾರದು-ಭಿಕ್ಷೆ ನಾನು ಹೇಳಿರೋದು-ಅವರ ಹೊಟ್ಟೆ ಕೆಡುತ್ತೆ ಅಂತ ಮೊನ್ನೆ ಆಸ್ಟ್ರೇಲಿಯಾಕ್ಕೆ ಹೋದಾಗ ಫ್ರಿಜ್ ತಂದೆ. ನೀವು ನೋಡಿದ್ದೀರಿ ಅಲ್ಲವಾ ? ಈ ಹಾಡುಗಳನ್ನು ರಿಕಾರ್ಡ್ ಮಾಡಿಕೊಳ್ಳೋಕೆ ಒಂದು ಟೇಪ್ ರೆಕಾರ್ಡರ್ ತಂದಿದ್ದೇನೆ. ಟೇಪ್ ಮುಗಿದಿದೆ. ಕೆಲವನ್ನ ತಗೊಂಡು ಮುಂಬಯಿಯಲ್ಲಿ ಪ್ಲೇ ಮಾಡ್ತೇನೆ…”
ತನ್ನ ಗುರುವಿನ ವಿಷಾದಯೋಗವನ್ನು ಆಲಿಸುತ್ತ ನಿಂತ ರಾಮಯ್ಯ ಅವರ ಬಗ್ಗೆ ಗೌರವ, ಅಭಿಮಾನದಿಂದ ತುಡಿಯುತ್ತಿದ್ದ, ಅವನ ಕಣ್ಣಂಚಿನಲ್ಲಿ ಆನಂದದ ಹನಿಗಳು ನಿಂತಿದ್ದವು. ನರಸಯ್ಯನವರಿಗೂ ತಮ್ಮ ಬಗ್ಗೆ ತೃಪ್ತಿಯಾಗಿ ಕಣ್ಣುಗಳಲ್ಲಿ ನೀರಿನ ತೆರೆ ನಿಂತವು. ಆಗ ಕಾಂಪೌಂಡಿನ ಹೊರಗೆ ಕಾರೊಂದು ನಿಂತು ಆನಂದುವನ್ನು ಇಳಿಸಿ ಮುಂದೆ ಹೋಯಿತು. ಅದು ದೊಡ್ಡಗೌಡರ ಕಾರೆಂದು ನರಸಯ್ಯನವರು ಗುರುತಿಸಿದರು. ವೈಸ್‌ಛಾನ್ಸಲರ್ ದೊಡ್ಡಗೌಡರ ಕಾರಿನಿಂದ ಇಳಿದ ಹೆಮ್ಮೆಯಿಂದಲೂ ಇವೊತ್ತು ನರಸಯ್ಯನವರನ್ನು ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ನಿರ್ಧಾರದಿಂದಲೂ ಆನಂದು ಗಾಂಭೀರ್ಯ ಹೂವನಗೆ ಸೂಸುತ್ತ ಗೇಟುಬಾಗಿಲು ತೆರೆದು ನರಸಯ್ಯ ನವರತ್ತ ಬರಲು ಉಪಕ್ರಮಿಸಿದ. ನರಸಯ್ಯನವರು ತಮ್ಮ ಆತ್ಮೀಯ ಶಿಷ್ಯ ಆನಂದು ಬರುತ್ತಿರುವುದನ್ನು ನೋಡಿ ಮತ್ತು ವೈಸ್‌ ಛಾನ್ಸಲರ್ ಕಾರಿನಿಂದ ಇಳಿದದ್ದನ್ನು ನೆನೆಸಿಕೊಂಡು ತೆರೆದ ಬಾಹುಗಳನ್ನು ತೆರೆದಂತೆಯೇ ಇಟ್ಟುಕೊಂಡು ಗೇಟಿನವರೆಗೆ ನಡೆಯುತ್ತಾ ಮುಖದ ತುಂಬ ವಿಶ್ವಾಸ ಹೊದ್ದು ಕೊಂಡು ಆನಂದವನ್ನು ಅಪ್ಪಿ ಸ್ವಾಗತಿಸಿದರು. ಆನಂದು ಅವರ ಬಾಹುಗಳ ಬಿಸಿಯನ್ನು ಸವಿದು “ಹೇಗಿದ್ದೀರಿ ಸಾರ್? ನಿಮ್ಮನ್ನೋಡಿದ್ದು ಸಂತೋಷ ಸಾರ್” ಅಂದ. ವರ್ಷಗಟ್ಟಲೆ ಮಗುವನ್ನು ತೊರೆದ ತಾಯಿಯಂತೆ ನರಸಯ್ಯನವರು ಆನಂದುವಿನ ಭುಜ ತಟ್ಟುತ್ತ “ಹೀಗೇ ಇದ್ದೇನೆ ಮಗು, ಆಸ್ಟ್ರೇಲಿಯಾ ಪ್ರವಾಸ ದೇವರ ದಯೆಯಿಂದ ಚೆನ್ನಾಗಿ ನಡೀತು. ಅರವಿಂದರ

ಕಾವ್ಯ ಕುರಿತು ಒಂದು ಪೇಪರ್ ಓದಿದೆ” ಅಂದರು. ಆನಂದು ರಾಮಯ್ಯನಿಗೆ ನಮಸ್ಕಾರ ಮಾಡಿದ ; ರಾಮಯ್ಯ ಇಡೀ ದೃಶ್ಯವನ್ನು ಅಸೂಯೆಯಿಂದ ನೋಡುತ್ತಿದ್ದವನು ನರಸಯ್ಯ ಆತನನ್ನು ಪ್ರೀತಿಸುವುದು ಸಹಿಸಲಾರದೆ ಆನಂದುವಿನ ನಮಸ್ಕಾರಕ್ಕೆ ಕೇವಲ ಹಲ್ಲು ಕಿರಿದು ಪ್ರತಿಕ್ರಿಯೆ ಸೂಚಿಸಿದ. ಅವನ ಕೈಯಲ್ಲಿ ಇನ್ನೂ ಪುರಂದರದಾಸರ ಹಾಡಿನ ಪ್ರತಿ ಇತ್ತು. ನರಸಯ್ಯನವರಿಗೆ ಆ ಬಗ್ಗೆ ಉತ್ಸಾಹ ಇನ್ನೂ ಮಾಸಿರಲಿಲ್ಲ. “ಏನಾಯ್ತು ಅಂತೀರಿ ಆನಂದ್-ಈಗ ತಾನೆ ಇಲ್ಲಿ ಒಬ್ಬರು ದಾಸರು ಬಂದಿದ್ದರು ಎಂಥ ಸೊಗಸಾದ ಹಾಡು ಹೇಳಿದರು !” ಅಂದು ರಾಮಯ್ಯನ ಕಡೆ ತಿರುಗಿ. “ಎಲ್ಲಿ ರಾಮಯ್ಯ, ಅದನ್ನ ಕೊಂಚ ಹಾಡಿ” ಅಂದರು. ರಾಮಯ್ಯನಿಗೆ ಹಾಡುವುದಕ್ಕೆ ಬರದಿದ್ದರೂ ತಮ್ಮ ಗುರುಗಳನ್ನು ಸಂತೋಷಪಡಿಸುವ ಗೀಳಿನಿಂದ ತನ್ನ ಕೈಲಿರುವ ಹಾಳೆಗಳನ್ನು ನೋಡುತ್ತ ಹಾಡಹತ್ತಿದ. ಆನಂದುವಿಗೆ ಅಲ್ಲಿಯ ವ್ಯಾಕರಣದೋಷ, ಅಪಸ್ವರ ಗೊತ್ತಾಗಿ ನಗೆ ಬಂದರೂ ತಾನು ನರಸಯ್ಯನವರಿಂದ ಹೇಗಾದರೂ ಮಾಡಿ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದರಿಂದ ತಲೆದೂಗಿದ. ರಾಮಯ್ಯ ಹಾಡುವ ಸಂತೋಷದಿಂದ ಬೆವತಿದ್ದ; ನರಸಯ್ಯ “ಚೆನ್ನಾಗಿ ಹಾಡ್ತೀರ‍್ರೀ-ಹ್ಯಾಗೆ ಆ ದಾಸರ ರಿಧಂ ಹಿಡಿದಿದ್ದೀರಿ ! ಆಶ್ಚರ್ಯ !” ಅಂದರು. ಆನಂದು, “ಕನ್ನಡ ಸಾಹಿತ್ಯದಲ್ಲಿ ಇಂಥ ಅನರ್ಘ್ಯ ರತ್ನಗಳು ಬೇಕಾದಷ್ಟಿವೆ ಸಾರ್. ಕೇಳೋದಕ್ಕೆ ಕಿವಿ, ಸವಿಯೋದಕ್ಕೆ ಮನಸ್ಸು ಬೇಕಷ್ಟೆ” ಅಂದ.
“ನೀವು ಇವತ್ತು ಬಂದದ್ದು ಒಳ್ಳೇದೇ ಆಯ್ತು. ನಾಳೆ ನಾನು ಮುಂಬಯಿಗೆ ಹೋಗ್ತಿದ್ದೇನೆ. ಗೊತ್ತಲ್ಲ, ಅಲ್ಲಿಗೆ ಕೇರಳದಿಂದ ಎಲ್ ಪಿ ನಾಯರ್‌ ಬರ್ತಾರೆ; ಅವರು ಮಲೆಯಾಳಿ ಸಾಹಿತ್ಯದ ತಮ್ಮ ಜ್ಞಾನದ ಬಗ್ಗೆ ಹೆಮ್ಮೆ ಇಟ್ಟುಕೊಂಡಿದ್ದಾರೆ. ಹಾಳುಮೂಳನ್ನೆಲ್ಲ ಭಾಷಾಂತರ ಮಾಡಿಕೊಂಡು ಬಂದು ಹೇಳ್ತಾರೆ. ನಾನು ಏನು ಮಾಡಬೇಕು ಅಂತ ಮಾಡಿದೇನೆ ಗೊತ್ತ- ಪುರಂದರ ದಾಸರ ಹಾಡಿನ ಭಾಷಾಂತರ ಓದಿ ವಿವರಣೆ ಕೊಡಬೇಕು ಅಂತಿದೇನೆ. ನಮ್ಮಲ್ಲಿ ಎಂಥ ಸಾಹಿತ್ಯ ಇದೆ ಅಂತ ಅವರಿಗೆ ಗೊತ್ತಾಗಲಿ. ಇವೆಲ್ಲ ಯಾರಿಗೂ ಗೊತ್ತಾಗಿಲ್ಲ-ಸುಮ್ಮನೆ ಈ ಮೂಲೆಯಲ್ಲಿ, ಕನ್ನಡದಂಥ ಭಾಷೇಲಿ ಕೊಳೆತುಬಿದ್ದಿವೆ. ನೀವು ದಯವಿಟ್ಟು, ಭಾಷಾಂತರ ಮಾಡಿ ಕೊಡಿ…. ನೀವು ಇಲ್ಲ ಅನ್ನೋಲ್ಲ ಗೊತ್ತಾ-ಕನ್ನಡಕ್ಕಾಗಿ ಏನನ್ನಾದ್ರೂ ಮಾಡ್ತೀರಿ, ಅಲ್ಲವಾ ? ಇಂಗ್ಲಿಷ್‌ಗೆ ಇಳಿದರೆ ಈ ಹಾಡುಗಳ ಖದರ್ ಹೇಗಿರುತ್ತೆ ನೋಡಿ, ರಾಜಾ ರಾಯರ ಪುಸ್ತಕ ಓದಿದ್ದೀರಲ್ಲ ? ಸಂಸ್ಕೃತ ಎಷ್ಟು ಚೆನ್ನಾಗಿ ಇಂಗ್ಲೀಷಾಗಿದೆ-ಅಲ್ಲವಾ ? The tendency is towards expansion, an inclusive consciousness.. ನಾವು ಕಣ್ಣು ಪಟ್ಟಿ ಕಟ್ಟಿಕೊಂಡು ಓಡಾಡಬಾರದು. ಪುರಂದರ ದಾಸರು ಹೇಳಿರೋ ಹಾಗೆ ಅಲ್ಲಿರೋದು ನಮ್ಮನೇ…?”

ಇಷ್ಟು ಮಾತಾಗುವ ಹೊತ್ತಿಗೆ ಮೂವರೂ ನರಸಯ್ಯನವರ ಛೇಂಬರಿನಲ್ಲಿ ಕೂತಿದ್ದರು ; ಬಣ್ಣ ಬಣ್ಣದ ಸೋಫಾಗಳು ದೊಡ್ಡ ಹಾಲಿನ ಸುತ್ತ ಮಲಗಿ ಬಹಳ ಚೆಂದಾಗಿದ್ದವು. ನಡುವೆ ಬೆತ್ತದ ಗೋಡೆಗಳು. ಅವುಗಳ ಕೆಳಗೆ ಚಿತ್ರವತ್ತಾದ ಕಂಬಳಿ-ಗೋಡೆಗಳ ಮೇಲೆ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಅರವಿಂದ, ಎಲಿಯಟ್, ಶೇಕ್ಸ್‌ಪಿಯರ್‌ ವರ್ಣಚಿತ್ರಗಳು. ಪಶ್ಚಿಮದ ಗೋಡೆಯಿಂದ ಮುಗುಳ್ನಗುವ ಗುಲಾಬಿಯಿಂದ ಅಲಂಕೃತವಾದ, ನೆಹರೂ. “ಅದನ್ನೇ ಅರವಿಂದರು ಹೇಳೋದು, ‘ಸಾವಿತ್ರಿ’ಯನ್ನು ನೀವು ಓದಿದ್ದೀರಿ ಅಲ್ವಾ ? ಭಾರತೀಯರ ಮನಸ್ಸು ಹೇಗೆ ವಿಶಾಲವಾದದ್ದು, ಅದಕ್ಕಿರುವ ಹಿನ್ನೆಲೆ ಹೇಗೆ ಮಿಲ್ಟನ್ ಮುಂತಾದವರಲ್ಲಿ ಸಿಗೋಲ್ಲ ಅನ್ನೋದು ಕುತೂಹಲಕರ. ಅದೇ ನನ್ನ ಆಸ್ಟ್ರೇಲಿಯಾ ಪ್ರಬಂಧದ ಬುನಾದಿ. ಒಂದು ಕಾಪಿ ಕೊಡ್ತೀನೆ ಓದಿ…”
“ಹೌದು ಸಾರ್, ನೀವು ಹೇಳೋದು ಸರಿ. ಒಂದು ರೀತಿ ನಿಜವಾದ ಎಪಿಕ್ ಕಾನ್‌ಷಸ್‌ನೆಸ್ ನಮ್ಮವರಲ್ಲಿರೋ ಹಾಗೆ ಹೊರಗಡೆ ಸಿಗೋಲ್ಲ. ಉದಾಹರಣೆಗೆ ನಮ್ಮ ಕುವೆಂಪು ಅವರು…” ಅಂದ ಆನಂದು.
“ಗೊತ್ರೀ. ಹೇಳಬೇಡಿ, ನನ್ನ ಹತ್ರ ರಾಜಕಾರಣ ನಡೆಯೋಲ್ಲ, ತಿಳೀತೆ ?” ಎಂದು ನರಸಯ್ಯ ಖಡಾಖಂಡಿತವಾಗಿ ಹೇಳಿ, “Petty, my dear, petty, ಎಷ್ಟೇ ಆಗಲಿ ಪೆಟ್ಟಿ. ಒಂದು ಆತ್ಮದ ವಿವರಣೆ ಅದರ ಸೌಂದರ್ಯದ ಅನುಭವ ಬೇಕಾದರೆ ನಮ್ಮ ಇಂಗ್ಲಿಷ್ ಲೇಖಕರಿಗೆ, ಸಂಸ್ಕೃತ ಲೇಖಕರಿಗೆ ಹೋಗಬೇಕು-”
“ಹೌದು ಸಾರ್?” ಅಂದು ಆನಂದು ತಾನು ಬಂದ ವಿಷಯ ಎತ್ತಲು ಹವಣಿಸಿದ : ಆದರೆ ನರಸಯ್ಯ “ಏಳಿ, ಏಳಿ, ನಮ್ಮ ಕಿಚನ್ ಗಾರ್ಡನ್ ನೋಡೀವ್ರಂತೆ, ಏಳಿ. ನಾನೇ ಕಷ್ಟಪಟ್ಟು ಮಾಡಿರೋದು, ಬನ್ನಿ” ಎಂದು ಇಬ್ಬರು ಶಿಷ್ಯರನ್ನೂ ಮನೆಯ ಹಿತ್ತಲಿಗೆ ಕರೆದುಕೊಂಡು ಹೋದರು. ಅಲ್ಲಿಯ ಬೆಂಡೆಕಾಯಿ, ಬದನೆಕಾಯಿ ಚಿಕ್ಕ ಚಿಕ್ಕ ಠಾಕೂರ್‌ ಪದ್ಯಗಳೋ ಎಂಬಂತೆ ವಿಮರ್ಶೆ ಮಾಡಿದರು ; ಆನಂದು ಅವರ ಶ್ರಮ ಜೀವನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ, “ಇವು ಯಾಕೆ ಇಷ್ಟು ಚೆನ್ನಾಗಿ ಬೆಳೆದಿವೆ ಗೊತ್ತಾ ಆನಂದು ? ಆಸ್ಟ್ರೇಲಿಯಾದಿಂದ ತಂದ ಗೊಬ್ಬರ ಬಿದ್ದಿದೆ ಅವಕ್ಕೆ, ಅಲ್ಲಿ ಜನಕ್ಕೆ ಯಾವುದಕ್ಕೆ ಏನು ಬೇಕು ಅಂತ ಗೊತ್ತು ನೋಡಿ……. ಬನ್ನಿ, ಹೀಗ್ಬನ್ನಿ. ಪ್ರೊಫೆಸರ್ ವಿಲಿಯಮ್ಸ್‌ ಕೊಟ್ಟ ಪ್ಯಾನ್ಸಿ ಇಲ್ಲಿದೆ ನೋಡಿ-ಹೂ ತುಂಬ ಚೆನ್ನಾಗಿವೆ ಅಲ್ವಾ. ನಗ್ತಾ ಇರೋ ಹಾಗೆ ಕಾಣುತ್ತೆ…poor things…”

ಆನಂದು ಹೇಗೆ ವಿಷಯಕ್ಕೆ ಬರುವುದೆಂದು ಯೋಚಿಸುತ್ತಿದ್ದ ; ಸಿಟ್ಟು ಬಂದಿತ್ತು; ದಣಿವಾಗಿತ್ತು. ಒಳಗೆ ಬರುತ್ತಲೇ ಹೇಳಿದ, “ನಾನು ಎರಡು ಸಲ ಇಂಟರ್‌ವ್ಯೂಗೆ ಬಂದೆ, ಎರಡು ಸಲವೂ ಸೆಲೆಕ್ಟ್ ಆಗಲಿಲ್ಲ. ನಿನ್ನೆ ನಿಮ್ಮ ಹತ್ರ ದೊಡ್ಡಗೌಡ್ರು ನನ್ನ ವಿಚಾರ ಮಾತಾಡಿದ್ರಂತೆ….?”
“ಹೌದು, I’am Sorry, ಹೌದು, ಮರೆತೇಬಿಟ್ಟಿದ್ದೆನಲ್ಲ, ನೀವು ಬಂದ ಕೂಡಲೇ ಆ ವಿಷಯ ಹೇಳಬೇಕಿತ್ತು. ಎಷ್ಟು ಮರೆವು ನೋಡಿ ಈ ವಯಸ್ಸಿಗೇ…ನನಗೆ ತುಂಬ ಸಂತೋಷ ತುಂಬಾ….” ಎಂದು ನರಸಯ್ಯನವರು ಆನಂದುವಿನ ಪಕ್ಕದಲ್ಲೇ ಕುರ್ಚಿಯಲ್ಲಿ ಕೂತರು.
ಆನಂದುವಿಗೆ ಸಂತೋಷವಾಯಿತು. ರಾಮಯ್ಯ ಇನ್ನಷ್ಟು ಅಸೂಯೆಯಿಂದ ಯಾವುದೋ ಪೇಪರ್ ಓದುತ್ತಾ ಕೂತ. ಆನಂದು ಹೇಳಿದ, “ತಮಗೆ ಸಂತೋಷವಾಗುತ್ತೆ ಅಂತ ನನಗೆ ಗೊತ್ತಿತ್ತು ಸಾರ್, ನಾನು ಬಡವ. ತಮ್ಮ ಕೃಪೆಯಿಂದ ಇಂಗ್ಲಿಷ್ ಸಾಹಿತ್ಯ ಕಲಿತೋನು. ಕನ್ನಡ ಅಂದರೆ ಇಷ್ಟ, ತಮಗೂ ಇಷ್ಟ ಅಂತ ನನಗೆ ಗೊತ್ತು, ಸಾರ್. ನಾನೇನಾದ್ರೂ ತಪ್ಪು ಮಾಡಿದ್ರೆ ಕ್ಷಮಿಸಿಬಿಡ್ತೀರಿ ಅಂತ ನನಗೆ ಗೊತ್ತು ಸಾರ್.”
“ಏನು ಆನಂದರಾವ್ ಹೀಗೆ ಮಾತಾಡ್ತೀರಿ ? ನನಗೆ ಯಾರು ಏನು ಅಂತ ಗೊತ್ತಿಲ್ಲವೇ ? ನಿಮಗೆ ನೆನಪಿದೆಯಾ-ನಿಮ್ಮ ಡಿಗ್ರಿ ಮುಗಿದ ಕೂಡಲೆ ತುಮಕೂರಿನ ಕಾಲೇಜಿಗೆ ಹೋಗುವಾಗ ‘most brilliant man’ ಅಂತ ಅಲ್ಲಿಯ ಪ್ರಿನ್ಸಿಪಾಲ್‌ಗೆ ಕಾಗದ ಕಳಿಸಿರಲಿಲ್ಲವೇ ? ನೀವು ಈ ಊರಲ್ಲಿ ನಿಮ್ಮ ಮನೆ ಅಂತ ಯಾವುದನ್ನ ಕರೀಬಹುದು-ನನ್ನದನ್ನ, ಈ ಊರಿನಲ್ಲಿ ಯಾರಾದ್ರೂ ಒಬ್ರು ಈ ಮನೇಲಿ ಊಟ, ನಿದ್ರೆ, ಹರಟಿ ಯಾವುದನ್ನಾದ್ರೂ ಅನುಭವಿಸಬಹುದು ಅಂತ ಇದ್ರೆ, ಅದು ನೀವು. ಈ ಮಧ್ಯೆ ಯಾವುದಕ್ಕಾಗಿಯಾದ್ರೂ ಮನಸ್ತಾಪ ಆಗಿದ್ರೆ, ಮರೀರಿ, ನನಗೊತ್ತು ಆನಂದರಾವ್_”
“ಸಾರ್, ಈ ರಾಮಯ್ಯನೋರು ಕೊಂಚ ಹೋದ್ರೆ-” ಅಂದ ಆನಂದು, ರಾಮಯ್ಯ ತಳಮಳಿಸುವುದನ್ನು ನೋಡಿ.
ಆದರೆ ನರಸಯ್ಯ ಹೇಳಿದರು, “No, no, ಆತ ನಾನೇ ಅಂತ ತಿಳ್ಕೊಳ್ಳಿ. Lovely boy, ನಮಗೇನೂ ತೊಂದರೆ ಆಗೋಲ್ಲ. ಇರಲಿ, ನಾನು ಹೇಳಿದ್ದದ್ದು -ನೀನು ಕೂಡಾ

ನನ್ನ ಹುಡುಗ, ನನಗೆ ಗೊತ್ತಿಲ್ಲವೇ ಚಿಕ್ಕವರಾಗಿದ್ದಾಗಲೇ ನನಗೆ ಅನ್ನಿಸಿರಲಿಲ್ಲವೇ ನಿಮಗೆ ದೊಡ್ಡ ಭವಿಷ್ಯ ಕಾದಿದೆ ಅಂತ ನಿಮ್ಮದೊಂದು ವಾಕ್ಯ ನೋಡಿದರೂ ಗೊತ್ತಾಗಿತ್ತು. ನಿಮ್ಮಂಥ ಹುಡುಗರು ನಮ್ಮಲ್ಲಿ ಎಷ್ಟು ಜನ ತಯಾರಾಗಿದ್ದಾರೆ ? ಬೆರಳ ಮೇಲೆ ಎಣಿಸಬಹುದು. ನಿಜ ಹೇಳೊದಾದ್ರೆ, ಈ ಕಾಮಯ್ಯನವರಿಗಿಂತ ನಿಮ್ಮನ್ನೇ ನಾನು ಹೆಚ್ಚು ಮಟ್ಟೋದು.” ಆನಂದು ಸಂತೋಷದಿಂದ ಪ್ರೊಫೆಸರ ಮುಖವನ್ನೇ ನೋಡುತ್ತಿದ್ದ. ನಸುಗಪ್ಪು ಬಣ್ಣ, ಭಾವನೆಗಳಿಂದ ಗಿಡಿದ ಮುಖ. ತಾನು ಬಂದ ಕೆಲಸ ಇಷ್ಟು ಬೇಗ ಆಗಬಹುದೆಂದು ಅವನಿಗೆ ಅನ್ನಿಸಿರಲಿಲ್ಲ. ಆನಂದದ ಜೊಲ್ಲು ಸುರಿಸುತ್ತ “ಥಾಂಕ್ಕೂ ಸಾರ್ ಥಾಂಕ್ಸ್” ಆಂದ, “ಅಷ್ಟೇ ಅಲ್ಲ ಆನಂದರಾವ್, ವೈಸ್‌ ಛಾನ್ಸಲರ್ ದೊಡ್ಡಗೌಡ್ ನಿಮ್ಮನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. He is all admiration for you, ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟನ್ನ ಸಾಧಿಸಿರೋರು ಅಪರೂಪ, ನಿಮ್ಮ ಕಥೆ ಎಷ್ಟು ಚೆನ್ನಾಗಿದೆ, ಅಲ್ಲಿಯ complexity ನಾನು ಮೆಚ್ಚೋದು- ಮತ್ತು ಅಲ್ಲಿಯ ದುರಂತ ಪ್ರಜ್ಞೆ….”
“ನಮ್ಮ ವಿಮರ್ಶಕರೂ ಅದನ್ನೇ ಹೇಳಿದಾರೆ, ಸಾರ್, ಥಾಂಕ್ಯೂ.”
“Local fellows ? ಹೌದೆ ? ಇಂಗ್ಲೀಷಿನಿಂದ ಕದ್ದೀದಾರೆ. ತಿಳೀತೆ, ಕದ್ದೀದಾರೆ. ವಿಮರ್ಶೆಯ ಮಾತನ್ನು ಕೂಡ ಕದೀತಾರೆ. ಈ ಜನಕ್ಕೆ ಏನು ಹೇಳೋದು. ಹಾಳಾಗಲಿ ಬಿಡಿ. ನಿಮ್ಮ ಕತೆಗಳಲ್ಲಿ ಲಾರೆನ್ಸ್ ತತ್ವ ಚೆನ್ನಾಗಿ ಬರುತ್ತೆ- ಪಾತ್ರ ಕೂಡ ಹಾಗೇ ಇವೆ. ಒಳ್ಳೆ ಕೆಲಸ. ಇಂಗ್ಲೀಷ್ ಸಾಹಿತ್ಯಾನ ನಮ್ಮ ವೆರ್ನಾಕ್ಯುಲರ್‌ನಲ್ಲಿ ಇಷ್ಟು ಚೆನ್ನಾಗಿ ಬೇರೆ ಯಾರು ಪರಿಚಯ ಮಾಡಿಕೊಟ್ಟಿದ್ದಾರೆ ?”
“ಬಹಳ ಕಮ್ಮಿ ಜನ ಸಾರ್,”
“ಅದಕ್ಕೇ ನಾನು ನಿಮ್ಮ ವಿಚಾರದಲ್ಲಿ ದೊಡ್ಡ risk ತಗೋತಿದೇನೆ. ನನ್ನ ಮಾತನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಿ. ನೀವು ನಮ್ಮ local ಜೀವನವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದೀರಿ. ಇಂಗ್ಲೆಂಡಿಗೆ ಹೋಗಿ ಅಭ್ಯಾಸ ಮಾಡಿ ಡಿಗ್ರಿ ಸಂಪಾದಿಸಿಕೊಂಡು ಬಂದಿದೀರಿ. ಭಾರತದಲ್ಲಿ ಯಾವ ವಿಶ್ವವಿದ್ಯಾನಿಲಯಕ್ಕೆ ನೀವು ಆಜ್ಞೆ ಮಾಡಿದರೂ ಕೆಲಸ ಸಿಕ್ಕುತ್ತೆ. ಆದರೆ ನೀವು ಇಲ್ಲೇ ಇರಬೇಕು ಅಂತೀರಿ. ಲೇಖಕ ಅಂದ್ರೆ ಹೀಗಿರಬೇಕು. ತನಗೆ ಬೇಕೆಂದದ್ದನ್ನ ಪಡೀಬೇಕು. ಆದ್ದರಿಂದಾನೇ ನಾನು ನಿಮ್ಮ ವಿಚಾರದಲ್ಲಿ ದೊಡ್ಡ

risk ತಗೊಂಡಿರೋದು. ನನ್ನ ನಿರ್ಧಾರದಿಂದ ಇಡೀ ಭಾರತದಲ್ಲಿ ಎಲ್ಲೆಲ್ಲಿ ಇಂಗ್ಲಿಷ್ ಟೀಚರ್‌ಗಳು ಸೇರ್ತಾರೋ ಅಲ್ಲಲ್ಲಿ ನನಗೆ ಕೆಟ್ಟ ಹೆಸರು ಬರುತ್ತೆ. ನನ್ನನ್ನ ಮೀನ್ ಅಂತಾರೆ, ಸ್ಟುಪಿಡ್ ಅಂತಾರೆ, ಆದ್ರೂ ಪರವಾಗಿಲ್ಲ, ನಿಮಗೆ ಒಳ್ಳೇದಾಗಬೇಕು. ನಿಮ್ಮ ಆತ್ಮ ವಿಶಾಲವಾಗಿ ಬೆಳೀಬೇಕು. ಅದಕ್ಕೇನೇ ನೀವು ಈ local ವಿಶ್ವವಿದ್ಯಾನಿಲಯಕ್ಕೆ ಸೇರಿ ಹಾಳಾಗಬಾರದು. ಆದಷ್ಟೂ ಕಡಿಮೆ ಕೆಲಸ ಇರೋ ಕಡೆ ಸ್ವತಂತ್ರವಾಗಿ ಇರಬೇಕು. ಬೇಕೆಂದಲ್ಲಿ ಬೇಕೆಂದದ್ದು ಮಾತಾಡೋಕೆ ನಿಮಗೆ ಆಗಬೇಕು….”
“ಇದೇನು ಸಾರ್” ಅಂತ ಆನಂದು ತನ್ನ ಸೀಟಿನಿಂದ ಎದ್ದು ದಿಕ್ಕು ತೋಚದೆ ನಿಂತ. ರಾಮಯ್ಯ ತನ್ನ ಮುಖಕ್ಕೆ ಪೇಪರ್‌ ಮುಚ್ಚಿಕೊಂಡು ಮುಸಿಮುಸಿ ನಕ್ಕ, “ನೀವು ಹೀಗೆಲ್ಲ ಮಾತಾಡಿ ನನ್ನನ್ನು ವಿಶ್ವವಿದ್ಯಾಲಯದಿಂದ ಹೊರಗಿಡೋಕೆ ಆಗೋಲ್ಲ.”
“ಕೋಪಿಸಬೇಡಿ, ಕೂಡ್ಕೊಳ್ಳಿ, ನಿಮಗೆ ಯಾವುದು ಒಳ್ಳೇದು, ಯಾವುದು ಕೆಟ್ಟದು ಅಂತ ಗೊತ್ತಿಲ್ಲ, ನಾನು ನಮ್ಮ ಸಾಮಾನ್ಯ ಹುಡುಗರು, ಹುಡುಗಿಯರನ್ನ ಸೇರಿ ಸ್ಕೋಂಡು ಒಂದಿಷ್ಟು ಇಂಗ್ಲಿಷ್ ಸಾಹಿತ್ಯ ಕಲಿಸ್ತಿದ್ದೇನೆ. ನಮ್ಮ ಇಲಾಖೇನ ಬೆಳಸಿದ್ದೇನೆ. ಅಲ್ಲಿಗೆ ಒಬ್ಬ ಪ್ರತಿಭಾವಂತ ನಿಮ್ಮಂಥ ಜೀನಿಯಸ್‌-ಬಂದ್ರೆ ಎಲ್ಲ ಹಾಳಾಗುತ್ತೆ, ನಾಳೆ ನಾನೇ ನಿಮ್ಮ ಪುಸ್ತಕವನ್ನ ಇಂಗ್ಲಿಷ್‌ನಲ್ಲಿ ಪಾಠ ಹೇಳಬಹುದು. ಆದರೆ ಇವತ್ತು ನೀವು ದೊಡ್ಡವರಾಗೋದು ನನಗೆ ಮುಖ್ಯ. ಇದಕ್ಕಾಗಿ ನಾನು ಎಷ್ಟು ನೋವು ಅನುಭವಿಸಿದೇನೆ ಗೊತ್ತಾ ಆನಂದರಾವ್ ? ನಿಮಗೆ ನಾನು ಅನ್ಯಾಯ ಮಾಡಬೇಕಾಗಿ ಬಂದದ್ದರಿಂದ ಅನೇಕ ರಾತ್ರಿ ನನಗೆ ನಿದ್ರೆ ಬಂದಿಲ್ಲ. ಈ ಊರಲ್ಲಿ ಯಾರಾದ್ರೂ ನಿಮ್ಮ ಹಿತಚಿಂತಕರು ಇದ್ರೆ-ನಾನು ಅನ್ನೋದನ್ನ ನೆನಪಿಟ್ಟುಕೊಳ್ಳಿ-”
“ನಿಮ್ಮ ಹಿತಚಿಂತನೆ ಗೊತ್ತಾದ ಹಾಗೆ ಆಯ್ತಲ್ಲ, ಬರ್ತೆನೆ” ಅಂತ ಆನಂದು ಬಾಗಿಲ ಕಡೆ ಹೋಗಲು ಹೆಜ್ಜೆ ಹಾಕಿದ.
“Don’t be foolish” ಎಂದು ನರಸಯ್ಯ ಗಹಗಹಿಸಿ ನಕ್ಕರು. ಆ ವಿಚಿತ್ರ ನಗೆ ಕೊಂಚ ಆಶೆ ಹುಟ್ಟಿಸಿತು, ಆನಂದು ನಿಂತ, “ಹುಚ್ಚನ ಹಾಗೆ ವರ್ತಿಸಬೇಡ, ಕೂತ್ತೋ, ಎಷ್ಟಾದರೂ ನೀನು ನಮ್ಮ ಹುಡುಗ, ನೀನು ಮಾಡಬೇಕಾದ ಕೆಲಸ ಬೇಕಾದಷ್ಟಿದೆ, ಈ ನೌಕರಿ, ಚಾಕರಿ ಎಲ್ಲ ತೀರಾ ಸಾಮಾನ್ಯ ವ್ಯಕ್ತಿಗಳಿಗೆ, ನೀನು ಮೊದಲನೆ ಸಲ ಇಂಟರ್‌ವ್ಯೂಗೆ ಬಂದಾಗಲೆ ಬೋಸ್ ಅವರಿಗೆ ನೀನು ಮಹಾವ್ಯಕ್ತಿ ಅಂತ ಗೊತ್ತಾಯ್ತು. ನಾನೂ ಅವರಿಗೆ ನಿನ್ನ ವಿಷಯ ಎಲ್ಲ ಹೇಳಿ ಎಂಥ ದೊಡ್ಡ ವ್ಯಕ್ತಿ ಅನ್ನೋದನ್ನ ತೋರಿಸಿದೆ. ಈ ಕಾರಣದಿಂದಾನೇ ನನ್ನ ಧರ್ಮಸಂಕಟ, ಈ

ಸಂಕಟ ಸಣ್ಣದು ಅಂತ ತಿಳಿಬೇಡ” ಎಂದು ಧ್ವನಿಯನ್ನು ಚಿಕ್ಕದು ಮಾಡಿ, ನೋವಿನ, ಸಂಕಟದ, ಕಂಬನಿಯ ಗಂಟಲಲ್ಲಿ ಮಾತಾಡತೊಡಗಿದರು. ಆನಂದುವಿಗೂ ಅವರ ಸಂಕಟ ಕ್ರಮೇಣ ನಿಜವೆನ್ನಿಸತೊಡಗಿತು. ನರಸಯ್ಯ ಅಳುತ್ತ ಹೇಳಿದರು, “ಯಾರು ಏನೇ ಹೇಳಲಿ, ಆನಂದು, ನೀನು ದೊಡ್ಡ ಮನುಷ್ಯ ಅಂತ ನಾ ತಿಳ್ಕೊಂಡಿದೇನೆ. ನಿನ್ನಂಥವರು ಸರಳವಾಗಿ, ಸಾಚಾ ಜೀವನ ನಡೆಸಬೇಕು, ಲಾರೆನ್ನನ್ನ ಪ್ರೊಫೆಸರ್ ಮಾಡಿದ್ರೆ ಹೇಗೆ ಹಾಸ್ಯಾಸ್ಪದವಾಗಿತ್ತು ? ವರ್ಡ್ಸ್‌ವರ್ತನನ್ನ ರೀಡರ್‌ ಮಾಡಿದ್ರೆ ಹೇಗೆ ಅನ್ಯಾಯವಾಗ್ತಿತ್ತು: ಶೇಕ್ಸ್‌ಪಿಯರನ ಲೆಕ್ಚರರ್ ಮಾಡಿದ್ರೆ ಹ್ಯಾಗೆ ಸಾಹಿತ್ಯಕ್ಕೆ ಅಪಚಾರವಾಗ್ತಿತ್ತು ಯೋಚನೆ ಮಾಡು…ದುರಂತದ ಅನುಭವ, ಮಾನವಕೋಟಿಗಾಗಿ ಯಾತನೆ, ಸ್ವಚ್ಛಂದವಾಗಿ ಅನುಭವಿಸುವ, ಹೇಳುವ ಅವಕಾಶ ಕಲಾವಿದನಿಗೆ ಬೇಕು…. ನಾನೂ ಬೆಳಗ್ಗೆ ತಾನೇ ರಾಮಯ್ಯನವರಿಗೆ ಹೇಳಿದ್ದೆ ಇದನ್ನೆಲ್ಲ ಬಿಟ್ಟು ಹೋಗಿಬಿಡೋಣ ಅಂತ ಮಾಡಿದೇನೆ….”
ಮೂವರೂ ಎದ್ದು ಛೇಂಬರಿನಿಂದ ಹೊರಗೆ ಬಂದರು. ಮೂವರ ಕಣ್ಣಲ್ಲೂ ನೀರಿತ್ತು. ಅವರನ್ನು ಅಲ್ಲಿಯೇ ಬಿಟ್ಟು ಆನಂದು ಗೇಟಿನವರೆಗೆ ಕಣ್ಣೀರೊರಸಿಕೊಳ್ಳುತ್ತಾ ಹೋದ. ಆಗ ನರಸಯ್ಯ, ರಾಮಯ್ಯ ಇಬ್ಬರೂ ಎತ್ತರದ ಜಗಲಿಯ ಮೇಲೆ ನಿಂತು ಮುಗುಳ್ನಗುತ್ತಾ “ಬೈ ಬೈ” ಹೇಳುತ್ತಿದ್ದರು. ಗೇಟು ಹಾಕಿಕೊಳ್ಳುತ್ತಾ ಅವರ ಮಂದಹಾಸಕ್ಕೆ ತನ್ನ ಮಂದಹಾಸ ಬೆರೆಸುವಾಗ ತಾನು ಮೋಸ ಹೋದದ್ದು ಆನಂದುವಿಗೆ ಗೊತ್ತಾಯಿತು. ಅಲ್ಲಿಂದಲೇ ಕಲ್ಲು ಬೀರಿ ಓಡಿಹೋಗಬೇಕೆಂದು ರೊಚ್ಚು ಬಂತು. ನಿಂತ, ನಿಂತು ಆ ಇಬ್ಬರನ್ನೂ ನೋಡಿದ, ‘ಥೂ’ ಎಂದು ನೆಲಕ್ಕಾದರೂ ಉಗಿಯಬೇಕೆಂದುಕೊಂಡ, ಆದರೆ ಅವನು ಉಗಿದದ್ದು ದೂರ ಹೋದ ಮೇಲೆ.
ದೊಡ್ಡಗೌಡರು ಆನಂದುವಿನ ಬರವನ್ನೇ ನಿರೀಕ್ಷಿಸಿ ಕೂತಿದ್ದರು. ಆದರೆ ಮುಖ ಇಳಿಬಿಟ್ಟುಕೊಂಡು ಅವನು ಬರುತ್ತಿರುವ ರೀತಿ ಅವರಲ್ಲಿ ಆಶ್ಚರ್ಯವನ್ನೇನೂ ಉಂಟು ಮಾಡಿದ ಹಾಗೆ ಕಾಣಲಿಲ್ಲ; ಅಲ್ಲದೆ ಅವರು ತಮ್ಮ ನಿರೀಕ್ಷೆ, ಕಾತರವನ್ನು ವ್ಯಕ್ತ ಪಡಿಸದೆ ಮರುದಿನದ ತಮ್ಮ ಅಭಿನಂದನಾ ಭಾಷಣವನ್ನು ತಯಾರುಮಾಡಿ ತಂದಿದ್ದ ಆತ್ಮೀಯ ವ್ಯಕ್ತಿ ಚಿಕ್ಕೇಗೌಡರೊಂದಿಗೆ ಸರಸವಾಡುತ್ತಿದ್ದರು. ಚಿಕ್ಕೇಗೌಡರು ಬಹಳ ಕಷ್ಟ ಪಟ್ಟು ಹಲವಾರು ತತ್ತ್ವಜ್ಞಾನಿಗಳ ಮಾತುಗಳನ್ನು ಸೇರಿಸಿ ಭಾಷಣ ತಯಾರಿಸಿದ್ದರು: ಸಮಸ್ತ ಹಲ್ಲುಗಳನ್ನೂ ಬಿಟ್ಟು ಉತ್ತರಿಸುತ್ತಿದ್ದರು. ಆನಂದು ಕೊಂಚ ಹೊತ್ತು ನಿಂತಿದ್ದು ವಿನಮ್ರವಾಗಿ ನಮಸ್ಕರಿಸಿ ಕೂತುಕೊಂಡು ಕೆಮ್ಮಿದ: quotation

ಗಳ ಕಾಗುಣಿತ ಸರಿಮಾಡುತ್ತ ತನ್ನ ಗೋಳು ಹೇಳಿಕೊಳ್ಳಲು ಅವಕಾಶ ಸೃಷ್ಟಿಸಿಕೊಳ್ಳಲು ಯತ್ನಿಸಿದ. ಆದರೆ ದೊಡ್ಡಗೌಡರು ಚಿಕ್ಕೇಗೌಡರಿಗೆ ಕನ್ನಡ ಭಾಷೆಯನ್ನು ಹೇಗೆ ಬಳಸುವುದೆಂಬುದರ ಬಗ್ಗೆ ಹದಿನೈದು ನಿಮಿಷಗಳ short and sweet ಉಪನ್ಯಾಸ ಕೊಟ್ಟರು. ಆನಂದು ಅವರ ಪಾಂಡಿತ್ಯವನ್ನು ಕಂಡು ಒಳಗೊಳಗೇ ನಗುತ್ತಾ, ಆದರೆ ಬಹಳ ಪ್ರಮಾಣಿಕವಾದ, ಗಂಭೀರ ಧ್ವನಿಯಲ್ಲಿ “ನರಸಯ್ಯನಿಗೆ ಇದರಲ್ಲಿ ಕಾಲು ಭಾಗ ಗೊತ್ತಿಲ್ಲ ಸಾರ್” ಎಂದು ಅವಕಾಶ ಸಿಕ್ಕಿದ್ದೇ ತಡ-ಎಲ್ಲವನ್ನೂ ನಿವೇದಿಸಿಕೊಂಡ, ದೊಡ್ಡಗೌಡರು ಉದಾರ ಸ್ವಭಾವದವರು, ಖಂಡಿತವಾದಿಗಳು ಸುಸಂಸ್ಕೃತರು. ಅವರು ಆನಂದುವಿನ ಮುಖ ದಿಟ್ಟಿಸಿ, ಅಂದರು : “ಎಷ್ಟಾದರೂ ನರಸಯ್ಯ ನಿಮ್ಮ ಮೇಷ್ಟರು, ಆನಂದರಾವ್-‘ಅವನು’ ‘ಇವನು’ ಅನ್ನಬಾರದು. ಅದೆಲ್ಲ ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು.” ಆನಂದು ಪೆಚ್ಚಾದ; ಅದನ್ನು ನುಂಗಿಕೊಂಡು ಹೇಳಿದ, “ಅಂತೂ ಅವರಿಂದ ಸರ್ಟಿಫಿಕೇಟ್ ಸಿಕ್ಕಲಿಲ್ಲ ಸಾರ್‌.”
“ಅದು ನನಗೆ ಮುಂಚೆಯೇ ಗೊತ್ತಿತ್ತು ಆನಂದರಾವ್” ಅಂದರು ದೊಡ್ಡಗೌಡರು;
ಚಿಕ್ಕೇಗೌಡರು “ತಮಗೆ ಗೊತ್ತಿಲ್ಲದ್ದೂ ಇದೆಯೇ ಸಾರ್‌” ಅಂದರು.
“ಹಾಗಾದ್ರೆ ನೀವು ನನಗೆ ಮುಂಚೇನೇ ಹೇಳಿಬಿಡಬಹುದಿತ್ತು, ನಾನು ಅವರ ಹತ್ತಿರ ಹೋಗೋ ತೊಂದರೆ ತಪ್ಪಿತ್ತು” ಅಂದ ಆನಂದು.
“ನೀವಿನ್ನೂ ತೀರಾ ಚಿಕ್ಕವರು, ರಾವ್, ಜಗತ್ತು ಗೊತ್ತಿಲ್ಲ” ಎಂದು ಗೌಡರು ಮೋಹಕ ನಗೆ ಬೀರಿದರು. ಆ ನಗೆ ತಕ್ಷಣ ಚಿಕ್ಕೇಗೌಡರ ಮುಖಕ್ಕೂ ಪ್ರಯಾಣ ಬೆಳೆಸಿ ಆನಂದುವಿನಲ್ಲಿ ಭಯವಾಗಿ ಪರಿವರ್ತಿತವಾಯಿತು. ಗೌಡರು ಗಡಿಯಾರ ನೋಡಿಕೊಂಡು ಎಲೆಯಡಿಕೆ ಹಾಕಿಕೊಳ್ಳುತ್ತ ಸಾವಕಾಶವಾಗಿ “ನಮ್ಮ ಜನಕ್ಕೆ ಈ ಅಂಗ್ರೇಜಿ ರೋಗ ಬಂದು ಸುಮಾರು ಇನ್ನೂರು ವರ್ಷ ಆಯಿತು. ಹೀಗೇ ಬಿಟ್ರೆ ಈ ಸಮಾಜವನ್ನ ಈ ರೋಗ ಕಬಳಿಸಿಬಿಡುತ್ತೆ. ದೊಡ್ಡ ಮಾತು, ಸಣ್ಣ ಕೆಲಸ…ಇದೆಲ್ಲ ನಿಮಗೆ ಸರಿಯಾಗಿ ಗೊತ್ತಾಗ್ಲಿ ಅಂತ ನಾನು ಇವತ್ತು ನಿಮ್ಮನ್ನ ಕಳಿಸಿದೆ. ಹೀಗೇ ಆದ್ರೆ ದೇಶದಲ್ಲಿ ವಿದ್ಯೆ, ಬುದ್ಧಿಗೆ ಬೆಲೆಯೇ ಉಳಿಯೋಲ್ಲ ತಿಳೀತೆ?”
“ಈಗ ಏನು ಮಾಡೋದು ಸಾರ್” ಅಂತ ಆನಂದು ಅತೀವ ವೇದನೆಯಿಂದ

ಉಸುರಿದ. ಗೌಡರು ತಕ್ಷಣ ಉತ್ತರ ಕೊಡದೆ ಪ್ರಶಾಂತ ಮುಖಮುದ್ರ ತಳೆದು ಯೋಚಿಸತೊಡಗಿದರು. ಈ ಪ್ರಶಾಂತತೆ, ಆತ್ಮವಿಶ್ವಾಸದ ಸ್ಥಿತಿ ಆನಂದುವಿನಲ್ಲಿ ಧೈರ್ಯ, ವಿಶ್ವಾಸಗಳನ್ನು ನೆಟ್ಟವು, ಐದು ನಿಮಿಷ ಧ್ಯಾನ ಮಾಡಿದ ಗೌಡರು ಅಂದರು, “ಮಾಡಬೇಕಾದ್ದು ಬೇಕಾದಷ್ಟಿದೆ. ಹತ್ತು ಜನ ಕನ್ನಡ ಕಲಿಗಳು ಕೂಡ ಮಾಡಲಾಗದಷ್ಟು ಕೆಲಸ ಇದೆ. ನನ್ನ ತರುವಾಯ ಚಿಕ್ಕೇಗೌಡರು ಮಾಡಬೇಕಾದ್ದನ್ನೆಲ್ಲ ಅವರಿಗೆ ವಿಶದವಾಗಿ ಹೇಳಿದ್ದೇನೆ. ನಿಮ್ಮಂಥವರು, ಅವರ ಬೆಂಬಲಕ್ಕೆ ನಿಲ್ಲಬೇಕು.”
“ಆಗಲಿ ಸಾರ್” ಅಂತ ಆನಂದು, ಚಿಕ್ಕೇಗೌಡರು ಇಬ್ಬರೂ ಒಟ್ಟಿಗೆ ಅಂದರು ; ಕನ್ನಡ ಎಂಬ ಮಾತಿನಲ್ಲಿ ಮಂತ್ರಶಕ್ತಿ ಇತ್ತು.
ದೊಡ್ಡಗೌಡರು ಪರಿಣಾಮಕಾರಿಯಾದ ಮೌನದ ನಾಲ್ಕು ನಿಮಿಷಗಳ ನಂತರ ಗಡಿಯಾರ ನೋಡಿಕೊಂಡು ಹೇಳಿದರು : “ಕನ್ನಡ ಭುವನೇಶ್ವರಿ ಹೆಮ್ಮೆ ಪಡುವಂತೆ ನಾವು ಕಟ್ಟಡ ಕಟ್ಟಬೇಕು. ಸಂಶೋಧನೆ ನಡೆಸಬೇಕು. ನೀವು ಬ್ರಾಹ್ಮಣ ಆನಂದ ರಾವ್, ನಾನು ಬ್ರಾಹ್ಮಣನಲ್ಲ. ನೀವು ಓದಿದ್ದು ಇಂಗ್ಲೀಷು. ನಾನು ಓದಿದ್ದು ಕನ್ನಡ. ನೀವು ಚಿಕ್ಕವರು. ನಾನು ವಯಸ್ಸಾದವ. ನಾನು ಎಂಥ ಖಂಡಿತವಾದಿ ಅಂತ ನಿಮಗೆ ಗೊತ್ತು. ನಮ್ಮನ್ನೆಲ್ಲ ಬೆಸೆದಿರೋದು ಕನ್ನಡ ಭಾಷೆ…. ಈ ಭಾಷೆಗಾಗಿ..”
ಆನಂದು ಅತ್ಯಂತ ಸಂತೋಷದಿಂದ ಈ ನಿರರ್ಗಳ ಕನ್ನಡಾಭಿಮಾನ ಕೇಳುತ್ತಿದ್ದ. ದೊಡ್ಡಗೌಡರ ಖಡಾಖಂಡಿತ ಸ್ವಭಾವ ಕಂಡು ಹೆಮ್ಮೆಪಟ್ಟ.
ಗೌಡಗು ಮುಂದುವರಿಸಿದರು : “ಈ ಭಾಷೆಗಾಗಿ ನಾವು ನಮ್ಮ ಭಿನ್ನಾಭಿಪ್ರಾಯ ಮರೀಬೇಕು. ನಾಳೆಯ ಸಮಾರಂಭವನ್ನೇ ತಗೊಳ್ಳಿ, ಎಂಥೆಂಥ ಜನ ಬರ್ತಾರೆ ನೀವು ಕನ್ನಡ ಮಹಾನುಭಾವರ ಬಗ್ಗೆ ಅಭಿಮಾನ ಉಕ್ಕೊ ಹಾಗೆ ಮಾತಾಡಬೇಕು. ಎಲ್ಲರ ಕಣ್ಣಲ್ಲಿ ಆನಂದದ ನೀರು ಸುರಿತಿರಬೇಕು. ಹೀಗೇ ಮಾತಾಡಿ, ಇಂಥದನ್ನೇ ಮಾತಾಡಿ ಅಂತ ನಾನು ಹೇಳೋಲ್ಲ, I am democratic-ಗೊತ್ತಾಯ್ತು ? ನಾನೊಬ್ಬ ಡೆಮೊಕ್ರಾಟಿಕ್ ! ಕನ್ನಡದ ಸುಪುತ್ರರಾದ ನಿಮ್ಮಂಥವರಿಗೆ ಕೆಲಸ ಸಿಕ್ಕೋದು ಕಷ್ಟವಲ್ಲ, ಕಷ್ಟವಾಗಕೂಡದು….”
“ಹೌದು ಸಾರ್” ಅಂದರು ಚಿಕ್ಕೇಗೌಡರು,

“ನಿಮಗೆ ಹಣ ಮುಖ್ಯವಲ್ಲ, ಕೆಲಸದ ಹೆಸರು ಮುಖ್ಯವಲ್ಲ, ಗೊತ್ತು. ನಿಮಗೆ ಕನ್ನಡ ಸೇವೆ ಮುಖ್ಯ. ಆಗಲೇ ಹೇಳಿದ್ದೇನೆ-ನಿಮಗಾಗಿ ಚಿಕ್ಕೇಗೌಡರ ಆಫೀಸಿನಲ್ಲಿ ಒಂದು ವೇಕೆನ್ಸಿ ಇದೆ…….ಕನ್ನಡಕ್ಕಾಗಿ ಗುಮಾಸ್ತನಾದರೇನು ಮಂತ್ರಿಯಾದರೇನು ?……..”
ಆನಂದು ಯಾವ ಮಾತನ್ನೂ ಆಡಲು ಧೈರ್ಯ ಸಾಲದೆ ಅವರ ಮಾತಿಗೆ ಮುಗ್ಧನಾಗಿ, ಅಥವಾ ಆಗಿರುವುದಾಗಿ ತಿಳಿದುಕೊಂಡು, ಗೌಡರ ಅಚ್ಚಗನ್ನಡ ಮುಖ ನೋಡುತ್ತಾ ಕೂತ.
ಪಂಪಕವಿ
ಪಾನಗೋಷ್ಠಿ
ಆಗಳ್‌ ಅರಿಕೇಸರಿ…. ಮತ್ತಮಲ್ಲಿ ಕೋಟಿ ಪೊನ್‌ಗೆ ಘಂಟೆಯಲುಗುವ ಕಿರುಕುಳ ಬೊಜಂಗರುಮಂ ಸುಣ್ಣ ದೆಲೆಯನೊತ್ತೆಯಿಟ್ಟು ಮದದಾನೆಯುಮಂ ಮಾಣಿಕಮು ಮನ್ ಒವಿಡಿಸಲಟ್ಟುವ ಚಿಕ್ಕ ಫೋರ್ಕುಳಿ ಬೊಜಂಗರುನುಂ ಕತ್ತುರಿ ಬಿಯಮಂ ಮೆರೆದು ಕತ್ತುರಿಯೊಳ್ ಪೋಳ್ದು ಕತ್ತುರಿಮಿಗದಂತಿರ್ಪ ಕತ್ತುರಿ ಬೊಜಂಗರುಮಂ ನೋಡಿ ಪೊಳಲ ಬೊಜಂಗರ ಬಿಯದಳವಿಗೆ ಮನದೊಳ್ ಮೆಚ್ಚುತ್ತುಂ ಬರ್ಪನ್ ಒಂದೆಡೆಯೊಳ್ ಪಲರುಂ ಒಳ್ವೆಂಡಿರ್….ಮೂನೂರರುವತ್ತು ಜಾತಿಯ ಕಳ್ಗಳಂ ಮುಂದಿಟ್ಟು ಮಧುಮಂತ್ರದಿಂ ಮಧುದೇವತೆಗಳನರ್ಚಿಸಿ ಪೊನ್ನ ಬೆಳ್ಳಿಯ ಪದ್ಮರಾಗದ ಪಚ್ಚೆಯ, ಗಿಳಿಯ ಕೊಗಿಲೆಯ ಕೊಂಚೆ-ಅಂಚೆಯ ಕುಂತಳಿಕೆಯ ಮಾಳ್ಕೆಯ ಸಿಪ್ಪುಗಳೊಳ್ ತೀವಿ ಮಧುಮಂತ್ರಂಗಳಿಂ ಮಂತ್ರಿಸಿ ನೆಲದೊಳೆರೆದು ತಲೆಯೊಳ್ ತಳಿದು ಕಳ್ಕೊಳ್ ಬೊಟ್ಟನಿಟ್ಟುಕೊಂಡು ಕೆಲದರ್ಗೆ ಎಲ್ಲಿಂ ಬೊಟ್ಟಿಟ್ಟು, ಕಿರಿಯರ್ ಪಿರಿಯರ್ ಅರೆದು ಪೊಡವಟ್ಟು ಧರ್ಮಗಳ್ ಕುಡಿವರ್ಗೆಲ್ಲಂ ಮೀಸಲ್ ಕಳ್ಳನೆರೆದು ಪೊನ್ನ ಬೆಳ್ಳಿಯ ಸಿಪ್ಪುಗಳೊಳ್ ಕಿರಿಕಿರಿದನ್ ಎರೆದು ಕುಡಿಬಿದಿರ ಕುಡಿಯ ಮಾವಿನ ಮಿಡಿಯ ಮಾರುದಿನ ಮೆಣಸುಗಡಲೆಯ ಪುಡಿಯೊಳ್ ಅಡಸಿದ ಅಲ್ಲವಲ್ಲಣಿ ಗೆಯ ಚಕ್ಕಣಂಗಳಂ ಸವಿಸವಿದು…. ಕುಡಿದರ್ ಕಾಮಾಂಗನುಂ ಕಾಂತೆಯರ್.
ಪಂ. ಭಾ : ೪-೮೭ ವ.

Close

ಕೆ.ವಿ.ತಿರುಮಲೇಶ್ ಅವರ ಮುಖವಾಡಗಳು

ಶಂಸ ಐತಾಳ

ಕೆ. ವಿ. ತಿರುಮಲೇಶ್ ಅವರ ಮುಖವಾಡಗಳು

“ಇಂಥ ಕೃತಿಗಳು ಯಾವುದರ ಅನುಕರಣಗಳೂ ಅಲ್ಲವಾದ್ದರಿಂದ ನಮ್ಮಲ್ಲಿ ಕುತೂಹಲವನ್ನು ಹುಟ್ಟಿಸುವುದು ಮಾತ್ರವಲ್ಲ, ಕವಿಯ ಬೆಳವಣಿಗೆಯ ಬಗ್ಗೆ ಭರವಸೆಯನ್ನೂ ಮೂಡಿಸುತ್ತವೆ. ಒಂದು ಕಾವ್ಯಮಾರ್ಗ ಸಿದ್ದವಾದೊಡನೆ ಅದನ್ನು ಅನುಕರಿಸಿ ಹೇಳಿದ್ದನ್ನೇ ಹೇಳುವ ಕಿಸುಬಾಯಿಗಳ ಕಾಲ ಮುಗಿದು ಪುನಃ ನಮ್ಮ ಕಾವ್ಯದಲ್ಲಿ ಹೊಸಹುಟ್ಟು ಆಗುತ್ತಿದೆಯೆಂಬುದಕ್ಕೆ ಒದಗಿ ಬರುತ್ತಿರುವ ಅನೇಕ ಸಾಕ್ಷಿಗಳಲ್ಲಿ ಈ “ಮುಖವಾಡಗಳು’ ಒಂದು” ಎಂದು ಕವಿಗಳ ಕವಿ ಶ್ರೀ ಗೋಪಾಲಕೃಷ್ಣ ಅಡಿಗರಿಂದ ಬೆನ್ನು ತಟ್ಟಿಸಿಕೊಂಡು ಹೊರಬಂದ ಕವಿ ತಿರುಮಲೇಶರ ಈ ಕೃತಿ ತನ್ನದೇ ಆದ ಕೆಲ ವೈಶಿಷ್ಟ್ಯಗಳಿಂದ ಕೂಡಿದ ಈ ದಶಕದ ಶ್ರೇಷ್ಠ, ಸಾರ್ಥಕ ಕವನಸಂಕಲನಗಳಲ್ಲಿ ಒಂದೆಂಬುದು ನಿರ್ವಿವಾದ, “ನಿಜವಾದ ಕವಿವೃಷ್ಟಿಯಿಂದ ಜಗತ್ತನ್ನು ನೋಡಬಲ್ಲ ಸೂಕ್ಷ್ಮ ಸಂವೇದನೆಯ ಈ ಕವಿ ತನ್ನಿ ಕವನ ಸಂಕಲನದ ಮೂಲಕ ತನ್ನ ‘ಪ್ಯಾಟರ್ನ್ ಕಂಡು ಹುಡುಕಲು ಯತ್ನಿಸಿದ್ದಾರೆ. ಸಂಕಲನದ ಹೆಚ್ಚಿನ ಕವನಗಳಲ್ಲಿ ತನ್ನ ಬದುಕಿನ ಭೂತಕಾಲದ ಘಟನೆಗಳನ್ನು ಕೆದಕುತ್ತಾ ‘ಈಗ ನಾನೇನಾಗಿದೇನೆ ? ಎಂಬ ಜಿಜ್ಞಾಸೆಯಿಂದ ಕವಿ ಚಡಪಡಿಸುತ್ತಿರುವುದನ್ನು ನಾವು ಗಮನಿಸಬಹುದು.
ಈ ಸಂಕಲನದ ಕವನಗಳನ್ನು ವಿಮರ್ಶೆಗನುಕೂಲವಾಗುವಂತೆ ಮೂರು ವಿಭಾಗಗಳನ್ನಾಗಿ ಮಾಡಬಹುದಾಗಿದೆ.
ವಸ್ತು ಪ್ರಪಂಚದ ಇದಿರು ಕವಿಯ ಹೃದಯಸ್ಪಂದನ : “ಸೈತಾನ :

ಸಮರ್ಥನೆ’ ಕವನದಲ್ಲಿ ಕವಿ ಇಂದಿನ ರಾಜಕೀಯದ ಕುರಿತು ವಿಷಾದಪಡುತ್ತಾ ಪ್ರಜಾಪ್ರಭುತ್ವ ರಾಜ್ಯದಲ್ಲಿ ನಾವು ಆರಿಸಿದ ವ್ಯಕ್ತಿಗಳೇ ಕೊನೆಗೆ ನಮಗೆ ಯಾವ ರೀತಿ ಮೋಸ ಮಾಡುತ್ತಾರೆ ಎಂದು ಅಚ್ಚರಿಪಡುತ್ತಾನೆ (‘ನಾವು ನಿಲ್ಲಿಸಿದ ಬೆರ್ಚಪ್ಪ ನನಗೇ ಹಾಕಿದ್ದಾನೆ ಪಂಗನಾಮ), ಆದರೆ ಜೊತೆಯಲ್ಲಿಯೇ ಜನತೆಗೆ ಇದು ಕೇವಲ ನಾಟಕ, ಇದಕ್ಕೂ ಕೊನೆಯ ಅಂಕವೊಂದುಂಟು’ ಎಂದು ಸಮಾಧಾನ ಹೇಳುತ್ತಾನೆ (ಆದರೂ ಹೆದರಬೇಡಿ, ಇದು ಬರೇ ರಟ್ಟಿನ ಸೆಟ್ಟು-ಸಿನಿಮಾದಲ್ಲಿ ಕಾಣುವ ಹಾಗೆ). ಆಧುನಿಕ ಪ್ರಪಂಚದ ನಗರ ಜೀವನ, ಅಂತರಾಷ್ಟ್ರೀಯ ಹೋಟೆಲುಗಳ ಬಣ್ಣನೆ “ನಗರ” ಕವನದಲ್ಲಿ ಚಿತ್ರಿತವಾಗಿದ್ದರೆ, ಇಂದಿನ ಸಮಾಜಜೀವನದ ಒಳ ‘ಹುಳುಕನ್ನು? ‘ಮುಖವಾಡಗಳು’ ಕವನದಲ್ಲಿ ನಾವು ತಿಳಿಯಬಹುದು, (ಮುಖವಿಲ್ಲದವರಿಗೆ, ಇದ್ದರೂ ಕಾಣಿಸದವರಿಗೆ ಬೇಕಲ್ಲ ಮುಖಕ್ಕೂ ಒಂದು ಕಾಚ).
ಬದುಕಿನ ಕುರಿತು ಕವಿಯ ಅಭಿಪ್ರಾಯ : ಇಲ್ಲಿನ ಹಲವು ಕವನಗಳಲ್ಲಿ ಕವಿ ಬದುಕಿನ ಪುಗ್ಗೆಯನ್ನು ಒಡೆದು ಒಳಗಿರುವ ಶೂನ್ಯವನ್ನು ಕಂಡು ಹುಡುಕಲು ಯತ್ನಿಸಿದ್ದಾನೆ.” ‘ಹಾಸಿಗ ಪದ್ಯದಲ್ಲಿ ಹೆಣ್ಣು ಗಂಡುಗಳ ಮಿಲನವನ್ನು ಕುರಿತು ‘ತಾನು ಹುಟ್ಟಿದ್ದೂ ಅಲ್ಲಿ ಸಾಯುವುದೂ ಅಲ್ಲಿ, ಆದರೆ ಬದುಕಿದ್ದು ಮಾತ್ರ ನಿನ್ನಲ್ಲಿ’ ಎಂದು ಹೇಳುವಾಗ, ಶ್ರೀಕೃಷ್ಣ ಆಲನಹಳ್ಳಿಯವರ ‘ಅಭಿಸಾರ’ದ, ‘ಜ್ವಾಲಾಗ್ನಿ ಧಾರೆಯಲ್ಲಿ ತಪತಸನೆ ತೊಯ್ದು ತತ್ತರಿಸಿ, ನಡು ನಿಲ್ಲಲಾಗದೆಂತ ಕೆಂಪು ಕತ್ತಲ ಕಣಿವೆ ಯಿಳುಕಲಲ್ಲಿ ಜಾರಿಬಿದ್ದೆ,-ನಾದರೂ ಗೆದ್ದೆ, ಬದುಕೆಟ್ಟೆ’ ಎಂಬ ಸುಗಳು ನೆನಪಿಗೆ ಬರುತ್ತವೆ. ಈ ಸಂಕಲನದಲ್ಲಿ ಅತ್ಯುತ್ತಮ ಕವನವೆಂದು ಪರಿಗಣಿಸಲ್ಪಡಬಹುದಾದ ‘ಮುಖವಾಡಗಳು’ ಕವನದಲ್ಲಿ ಕವಿ ಬದುಕಿನ ಕುರಿತು ಪ್ರಾಮಾಣಿಕವಾದ ಜಿಜ್ಞಾಸೆ ನಡೆಸಿದ್ದಾನೆ. ವ್ಯಕ್ತಿಯ ಅಂತರಂಗ ಮತ್ತು ಬಹಿರಂಗ ಬೇರೆಬೇರೆ, ಆತ ಕಾಲಕ್ಕೆ ಸರಿಯಾಗಿ ವಿವಿಧ ಮುಖವಾಡಗಳನ್ನು ಧರಿಸುತ್ತಾನೆ. ಆತನ ಒಳಗಿನ ಜೀವಿತದಲ್ಲಿ ಅವನದೇ ಮುಖವಾಡದ ನೆರಳಿರಬಹುದಾದರೂ ಹೊರಗಿನ ಜೀವಿತದಲ್ಲಿ ಅವನು ಖಂಡಿತ ಹೆರರ ಮುಖವಾಡಗಳನ್ನು ಧರಿಸಿ ನಟಿಸುತ್ತಾನೆ ಎಂದು ಮರುಗಿದ ಕವಿ ಕೊನೆಗೆ ಜಗತ್ತಿನಲ್ಲಿ ಬದುಕಿನ ಗಾಡಿ ದೂಡಲು ನಾವು ಬೇರೆ ಬೇರೆ ಮುಖವಾಡಗಳನ್ನು ಧರಿಸಲು ಅಭ್ಯಸಿಸತಕ್ಕದ್ದು ಎಂಬ ತೀರ್ಮಾನಕ್ಕೆ ಬರುತ್ತಾನೆ. ಆದರೆ ಕೊನೆಗೂ ಬದುಕು ಆತನಿಗೊಂದು ಸಮಸ್ಯೆಯಾಗಿಯೇ ಉಳಿದಿದೆ. ಹೀಗೆ ಈ ಪದ್ಯ ಮತ್ತು ಮುಖಗಳು’ ಕವನದಲ್ಲಿ ಕವಿ ತನ್ನ ಪ್ರಾಮಾಣಿಕ ಆತ್ಮಸಂಶೋಧನದ ಮೂಲಕ ಬದುಕಿನ ಮೌಲ್ಯವನ್ನು ಅನ್ವೇಷಿಸಲು ಯತ್ನಿಸಿದ್ದಾನೆ.
ಹಲವನ್ನು ಒಂದೇ ಸಲ ಹಿಡಿದುಹಾಕಲು ಹವಣಿಸಿ ಒಂದೂ ಸರಿಯಾಗಿ

ಹಿಡಿತಕ್ಕೆ ಸಿಕ್ಕದೆ ಚಡಪಡಿಸುವ ಚೇತನ : “ಸಮರ್ಥನೆ: ಗುಂಡಿಯಿಲ್ಲದ ಪ್ಯಾಂಟು ಧಗಿಸಿದವ’, ‘ಸಮರ್ಥನೆ : ಗಂಡ’, ‘ವಾಸ್ತವತೆ’, ‘ಬಾಗಿಲು’ ‘ಹಾಸಿಗೆ? ಮುಂತಾದ ಕವನಗಳಲ್ಲಿ ಹುಡುಗ ಪ್ರಾಯದ ಅತೃಪ್ತ ಅದಮ್ಯ ಕಾಮದ ತೊಳಲಾಟವನ್ನು ಗುರುತಿಸಿಬಹುದು. ಮುನ್ನುಡಿಕಾರರು ಹೇಳಿದಂತೆ ಏನೋ ಹೇಳಬೇಕೆಂಬ ಆಸೆಯಿದ್ದರೂ ಇದು ಹೇಳಬೇಕಾದುದನ್ನು ತನ್ನ ಕವನಗಳಲ್ಲಿ ಸಮರ್ಥವಾಗಿ ಪಡಿ ಮೂಡಿಸಲು ಕವಿ ಅಶಕ್ತನಾಗಿದ್ದಾನೆ. ಆದುದರಿಂದಲೇ ಈ ಮೇಲಣ ಪ್ರತಿ ಕವನವೂ ಖಂಡತುಂಡವಾದಂತೆ ಅನಿಸುತ್ತಿದೆ. ಈ ಕೆಳಗಣ ಕೆಲವು ಸಾಲುಗಳಿಂದಲೇ ಕವಿ ತನ್ನ ಅನುಭವವನ್ನು ಸ್ಪಷ್ಟವಾಗಿ ಹೇಳಲು ಅಸಮರ್ಥನೆಂದು ನಾವು ನಿರ್ಧರಿಸಬಹುದು :
‘ತುಟಿಗೆ ತುಟಿ ಸೇರಿಸಿ, ಬಂದ ವಾಸನೆಯಲ್ಲಿ ರಹಸ್ಯದ ಗರ್ಭಸ್ರಾವ ತಾಯ ಮೊಲೆಹಾಲಿನಲ್ಲಿ ಫ್ರಾಯನ ಜೀವ’ (ವಾಸ್ತವತೆ)
‘ಬೆಂಕಿಯ ಸೆಳೆಯಾಗಿ, ಸುಳಿಯಾಗಿ, ಸೊನ್ನೆಯ ಮಾಡಿ ನುಂಗು ನನ್ನನು’ (ಬಾಗಿಲು)
‘ಆಕಾರಕ್ಕೆ ಬಾರದೆ ನೆರಳಾಗಿ,
ನೆರಳೂ ಅಲ್ಲದಾಗಿ, ಅಗೋಚರವಾಗಿ, ಯಾರಿಗೂ ಏನೂ ಅಲ್ಲದೆ, ತೊಟ್ಟು ಕಳಚಿ, ಆಕಾಶದಲ್ಲಿ ತ್ರಿಶಂಕುವಾಗಿ ತೊನೆಯುತ್ತಿರುವ ಬದುಕಿ ಸತ್ತಿರುವ, ಸತ್ತು ಬದುಕಿರುವ ಸಾವು ಬದುಕಿನ ನಡುವೆ ಪ್ರೇತಾತ್ಮವಾಗಿರುವ, ಆತ್ಮವೇ ಇಲ್ಲದ-‘ ಇತ್ಯಾದಿ (ಮುಖಗಳು)
ಈ ಸಾಲುಗಳಲ್ಲಿ ಕಸ ಬೇಕೆಂದೇ ಅರ್ಥದ ಸುತ್ತ ಶಬ್ದ ಸೈನ್ಯ ರಚಿಸಲು ಯತ್ನಿಸಿದಂತೆ ಭಾಸವಾಗುತ್ತದೆ. ಹೀಗೆ ಕವಿ ಸಂಕೀರ್ಣತೆಯ ಅಕ್ಷಯ ಜಿಡ್ಡುದಾರವನ್ನು ತನ್ನ ಮೈಗೆ ಬಿಗಿದುಕೊಂಡು ತನ್ನ ಅನುಭವವನ್ನು ಅಭಿವ್ಯಕ್ತಿಗೊಳಿಸಿ ಕಾವ್ಯ ರಚಿಸಲು ಯತ್ನಿಸಿದ್ದಾನೆ.
“ನನ್ನ ಕಥೆ’, ‘ವೈಯಕ್ತಿಕತೆ’ ಮತ್ತು ‘ಸೆರಗು’ಗಳಲ್ಲಿ ಕವಿ ತಾನು ಒಬ್ಬಂಟಿಯಾಗಿ

ದ್ದೇನೆಂದು ಮರುಗಿ ತನಗೇನೋ ಆಗಿದೆ ಎಂದುಕೊಂಡು ಅಸ್ತವ್ಯಸ್ತದ ಪ್ರಾಕಾರದಲ್ಲಿ ನಿನ್ನೆ ಇಂದು ನಾಳೆಗಳನ್ನು ಮೌನವಾಗಿ ನುಂಗಿಹಾಕುತ್ತಾ ಬಂದಿರುವ ತನ್ನ ಪ್ರಜ್ಞೆಯ ಕುರಿತು ಚಡಪಡಿಸಿಕೊಂಡಿದ್ದಾನೆ.
ಕವಿಯ ಉನ್ಮಾದ, ಬೇಸರ, ಕ್ರೋಧ, ಜುಗುಪ್ಪಾಭಾವಗಳನ್ನು ಸೊಗಸಾಗಿ ಅಭಿವ್ಯಕ್ತಿಸುವ ಈ ಸಾಲುಗಳನ್ನು ನೋಡಿ
“ಹುಟ್ಟಿ ಬಂದಾಗ ಮಾತು ಕೊಟ್ಟದ್ದುಂಟೆ ?
ಪ್ಯಾಂಟ್ಟು ಹಾಕುತ್ತೇನೆ, ಬಟನ್ಸ್ ಇರಿಸುತ್ತೇನೆ’ ಎಂದೆಲ್ಲ ? (ಸಮರ್ಥನೆ: ಗುಂಡಿಯಿಲ್ಲದ
ಪ್ಯಾಂಟು ಧರಿಸಿದವ) “ತಲೆಗೂದಲು ಕಿತ್ತು, ಮುಖ ಪರಚಿ,
ಲಂಗೋಟಿ ಹರಿದು, ಬೆಂಕಿಯ ಪಂಜು ಹಚ್ಚಿ ನಗರದ ಬೀದಿ ಬೀದಿಯಲಿ ಓಡಬೇಕೆನಿಸುತ್ತದೆ. ……..ಜೇಡನ ಬಲೆಗಳನ್ನೆಲ್ಲ ಪಿಂಡನಾಡಿ ನುಂಗಬೇಕೆನಿಸುತ್ತದೆ’ (ಕೆಸರು)
ಇನ್ನುಳಿದ ಕವನಗಳಲ್ಲಿ ‘ಚದುರಂಗ ಪ್ರವೀಣೆ ರಂಗಿ’ ಜಾನಪದ ಧಾಟಿಯ ಕವನವಾಗಿದ್ದರೆ ‘ಸರ್ಕಸ್ಸು’ ಇಂದಿನ ಕಾರ್ಖಾನೆಗಳಲ್ಲಿ ಮುಂಜಾವಿನಿಂದ ಸಂಜೆಯ ತನಕ ದುಡಿಯುವ ಕೂಲಿಗಾರರ ಜೀವನದ ಕನ್ನಡಿಯಾಗಿದೆ. ‘ಕ್ರಿಸ್ತನ ನಿಷ್ಕ್ರಮಣ’ದಲ್ಲಿ ಕವಿ ಧರ್ಮದ, ಧರ್ಮಾಧಿಕಾರಿಗಳ ಕುರಿತು ವಿಡಂಬನೆ ಮಾಡಿದ್ದಷ್ಟೇ ಅಲ್ಲದೆ ಕ್ರೈಸ್ತನಿಗೆ–ನೀನಿನ್ನು ಬರಬೇಡ, ಬಂದರೆ ಈ ಜನ ರಾಜಕೀಯ ಖೈದಿಯೆಂದು ನಿನ್ನ ಮಿದುಳು ತೊಳೆದು, ಹುಚ್ಚನೆಂದು ಆಸ್ಪತ್ರೆಯಲ್ಲಿ ಹಾಕಿ ಕೊಂದಾರು ಎಂದು ಎಚ್ಚರಿಸುತ್ತಾನೆ. ‘ಸಮರ್ಥನೆ: ಗಂಡ ಪದ್ಯದ ನಾಯಕ ದಾಂಪತ್ಯ ಜೀವನದಲ್ಲಿ ವಿರಕ್ತಿ ಕಂಡುಬಂದತೆ ವರ್ತಿಸಿದರೂ ಕೊನೆಗೆ, ತನ್ನಾಕೆಗೆ ‘ಆಯ್ತು ನಿನಗಷ್ಟು ಬೇಕಿದ್ದರೆ, ಕದ ತೆರೆ, ಈಗ ಬಂದೆ’ ಎಂದು ಹೇಳುವಾಗ ಯಾವಾಗಲೋ ಓದಿದ ಶ್ರೀ ಬನ್ನಂಜೆಯವರ ಒಂದು ಕವನ ನೆನಪಿಗೆ ಬರುತ್ತದೆ, ‘ಬಾಗಿಲು’ ಕೂಡ ನಾಯಕನ ಪ್ರಣಯಭಿಜ್ಞೆಯನ್ನು ಚಿತ್ರಿಸುವ ಒಂದು ಸುಂದರ ಗೀತೆ.
ಇನ್ನು ಕವನದ ಶೈಲಿ ಅಡಿಗರೆಂದಂತೆ ಗದ್ಯದಲ್ಲೂ ಸದ್ಯದಲ್ಲೇ ಸಲ್ಲಬಲ್ಲಂಥ ಉಭಯ

ಸಮಾನ ಶೈಲಿ, ಈ ಶೈಲಿಯ ಆರಂಭ ಈಗಷ್ಟೇ ಆಗಿದ್ದು ಇದು ಸದ್ಯದಲ್ಲಿಯೇ ಇನ್ನೊಂದು ಹೊಸ ಕಾವ್ಯ ಹುಟ್ಟಬಹುದಾದ ಭರವಸೆ ನೀಡುತ್ತಿದೆ. ಈ ಕೆಳಗಣ ಸಾಲುಗಳು ಸದಾ ನೆನಪಿನಲ್ಲಿ ಉಳಿಯಬಹುದಾದಂಥವು ;
‘ದಾಸವಾಳದ ಹೂವು ಈಗ ತಾನೇ ಕೊರೆದಿಟ್ಟ ಮಾಂಸದ ಹಾಗೆ (ಸಮರ್ಥನೆ: ಸೈತಾನ)
“ನಾವೆ ನಿಲ್ಲಿಸಿದ ಬೆರ್ಚಪ್ಪ ನಮಗೆ ಹಾಕಿದ್ದಾನೆ ಪಂಗನಾಮ (ಅದೇ)
(ಆದರೂ ನನ್ನ ಸೊಂಟದ ಸುತ್ತ ಹಣಿಕಿ ಹಾಕುವ ಕುತೂಹಲ ನಿನಗೆ’ (ಸಮರ್ಥನೆ : ಗಂಡ)
“ಒಂದೆ ತಾಳಿಯಲಿ ಇಬ್ಬರಿಗೆ ಗಾಳ ನಮ್ಮ ಜೈಲಿನ ಒಳಗೆ ನಾವು ಕುಳಿತಿರುವುದಕೆ ಇದು ಲೀಗಲ್ ಪರ್ಮಿಟು’ (ಅದೇ)
“ಇವಳ ಕುದುರೆ ತೊಡೆಗಳೆಡೆಗೆ ಎಂಥ ಮಂತ್ರಿಯೂ ಬೀಳಬೇಕು’ (ಚದುರಂಗ ಪ್ರವೀಣೆ ರಂಗಿ)
“ಉದ್ದಕ್ಕೂ ಮೈಚಾಚಿ,
ಹಾವಸೆಯಾಗಿ, ನಿನ್ನ ಮರೆಯಾಗಿ ನಾ ನೆನೆಯುತ್ತೇನೆ’ (ಹಾಸಿಗೆ)
“ನನ್ನ ಚಿಪ್ಪಿನ ಒಳಗೆ ಬಂಡೆಗಲ್ಲೆತ್ತಿ ಹಾಕಿದರೂ ಒಡೆಯದಂಥ ಚಿಪ್ಪಿಗೂಡು ಹೊತ್ತು ತಿರುಗಲೇ ಬೇಕು. ಡುಬ್ಬದ ಹಾಗೆ ನನ್ನ ಮೇಲೆ ಇದೆಂಥ ಶಾಪ’ (ವೈಯಕ್ತಿಕತೆ)
ಆದರೆ, ‘ತಲೆ ಕೆಳಗೆ ಕಾಲು ಮೇಲೆ, ಶೀರ್ಷಾಸನ ಹಾಕಿರುವ ಬಾವಲಿಗಳ ಗಂಟಿ’

(ಪುಟ ಆರು) ‘ಛಾವಣಿ ಬಿದ್ದ ಹಳೆ ಮನೆಯ ಒಳಗೆ ಮುರಿದ ತೊಲೆಗಳು ತಲೆಕೆಳಗಾಗಿ ತೊನೆವ ಬಾವಲಿಗಳ ಹಾಗೆ’ (ಪುಟ ಇಪ್ಪತ್ತಮೂರು) ಹೀಗೆ, ಒಂದೇ ವಿಚಾರ ದ್ವಿರುಕ್ತವಾಗುವುದನ್ನು ತಪ್ಪಿಸಬಹುದಿತ್ತು.
ಈ ಪುಸ್ತಕದಲ್ಲಿ ಅಚ್ಚಿನ ದೋಷಗಳಿಲ್ಲದಿರುವುದು ಸಮಾಧಾನಕರ ಅಂಶ. ಆದರೆ ಕವಿ,
‘ಇದು ಮನ್ವಂತರದ ಮಾನಸಿಕ ದೌರ್ಬಲ್ಯದ ನಿಶಾನೆ-ನಾನೆ ಹುಟ್ಟಿಸಿಕೊಂಡ ಕೃತಕ ನಾಗರಿಕತೆಯ ಹಳೆ ಹೊಸ ಏಳುನೂರು ಬಂಧನದ ಏಕಾಧಿಪತ್ಯದ ಸಾಕ್ಷಿ (ಸಮರ್ಥನೆ : ಗುಂ, ಪ್ಯಾಂ, ಧರಿಸಿದವ) ಈ ರೀತಿ ಶಬ್ದಗಳನ್ನು ತುಂಡುಮಾಡುವ ಹವ್ಯಾಸಕ್ಕೆ ಏಕೆ ಅಂಟಿದರೋ ಅರ್ಥವಾಗುತ್ತಿಲ್ಲ.
ಕೊನೆಯದಾಗಿ- ಇತ್ತೀಚಿನ ಅತ್ಯಂತ ಗಮನಾರ್ಹ ಕವಿಗಳಾದ ಲಂಕೇಶ, ಅನಂತಮೂರ್ತಿ, ರಾಮಾನುಜನ್ ಮುಂತಾದವರಲ್ಲಿ ಇನ್ನಷ್ಟು ಪರಿಪಕ್ವವಾಗಿ ಕಾಣುವ ಒಂದು ನೂತನ ಲಯದ ಕಡೆ ಇಲ್ಲಿಯೂ ತುತ್ತ ನಡೆಯುತ್ತಿರುವುದಾಗಿ ಕಂಡು ಬರುತ್ತಿದೆ ಎಂದಿದ್ದಾರೆ ಶ್ರೀ ಅಡಿಗರು. ನನಗೆ ಕಾಣುವಂತೆ ಲಂಕೇಶ ಮತ್ತು ತಿರುಮಲೇಶರ ಶೈಲಿಗಳಲ್ಲಿ ಸ್ವಲ್ಪ ಮಟ್ಟಿಗೆ ಸಮಾನತೆಯಿರಬಹುದಾದರೂ ಭಿನ್ನತೆ ಯಿಲ್ಲದಿಲ್ಲ ಎಂದು ಹೇಳುವುದು ಅನಿವಾರ‍್ಯ. ಲಂಕೇಶರ ಶೈಲಿ ಸರಳವಾಗಿದೆ. ನೇರವಾಗಿದೆ. ಆದರೆ ತಿರುಮಲೇಶರ ಶೈಲಿ ಜಿಗುಟಾಗಿದೆಯಷ್ಟೇ ಅಲ್ಲದೆ ಅವರು ಹೇಳಬೇಕಾದುದನ್ನು ಹೇಳಲು ಸುತ್ತುದಾರಿ ಬಳಸುತ್ತಾರೆ. ಉದಾಹರಣೆಗೆ ಲಂಕೇಶರ ‘ಬೇಸಿಗೆ’ ‘ಬಿಚ್ಚು’ ಮತ್ತು ‘ನಾನು ಬೇಕೇ?’ ಕವನಗಳಲ್ಲಿ ತಾರುಣ್ಯದ ಗಂಡು ಹೆಣ್ಣುಗಳ ಸಹಜ ಚಿತ್ರಣವಿದ್ದರೆ ತಿರುಮಲೇಶರ ಕವನಗಳಲ್ಲಿ ಅವರು ರಹಸ್ಯವನ್ನು ಕಾದುಕೊಳ್ಳಲು ಬಯಸಿ ಅಸಫಲರಾದುದು ಗಮನಕ್ಕೆ ಬರುತ್ತದೆ. ಆದರೂ ಇವರು ಮೊದಲಿನವರಂತೆ, ‘ಅದು ಇದೂ’ ಸತ್ತದ್ದು, ಹುಟ್ಟಿದ್ದು, ಲಫಂಗ ಸುಖ ಪಟ್ಟು ಸನ್ಯಾಸಿ ಕೊಳೆತದ್ದು, ಅಂಗೈರೇಖೆ ಕ್ರಮೇಣ ಫಲಬಿಟ್ಟಿದ್ದು, ವೆಂಕಟಶಾಮಿ ದಶಕಂಠ ದುರ್ಯೊಧನ ಲಚ್ಚ ಪಾರ್ಥ ಇಂಥವರು ಸೀರೆಯ ಸುತ್ತ ಗಾಣಸುತ್ತಿದ್ದು’ ಎಲ್ಲವನ್ನೂ ಚಪಲಕ್ಕೆ ಬರೆದು ಕವಿಯೆನ್ನಿಸಿಕೊಳ್ಳಲು ಬಯಸಲಿಲ್ಲ. ಸುಲಭದ ಮಾರ್ಗ ಹುಡುಕಿಕೊಳ್ಳಲಿಲ್ಲ. ತಮ್ಮ ಕವನದ ಕಷ್ಟ ತೋಡಿಕೊಂಡರೂ ನಂತರ ತಾವು ಬರೆಯುತ್ತಿರುವುದು ಸೆಕೆಂಡ್‌ಹ್ಯಾಂಡ್ ಕಾವ್ಯ ಎಂಬ ಅರಿವನ್ನು ಮೂಡಿಸಿಕೊಂಡು ಆ ದಾರಿ ಬಿಟ್ಟು ಹೊಸ ಮಾರ್ಗದಲ್ಲಿ ಹೆಜ್ಜೆಯನ್ನು ತುಳಿದರು. ಕವಿಯೇ ಅನುಭವ

ವಾಗಿ, ಅನುಭವವೇ ಕವಿಯಾಗಿ ಅಭಿವ್ಯಕ್ತಿಯಾದಾಗ ಮಾತ್ರ ಕಾವ್ಯದ ಜನನವಾಗುತ್ತದೆ ಎಂಬ ಸತ್ಯವನ್ನರಿತು ತಮ್ಮದೇ ಆದ ‘ಪ್ಯಾಟರ್ನ್’ ಹುಡುಕಿಕೊಂಡರು. ಕವಿಯೇನೋ ಕವಿಸಹಜ ವಿನಯದಿಂದ ‘ಇದು ಕೇವಲ ಯತ್ನ’ ಎಂದಿದ್ದರೂ, ಈ ಸಂಕಲನದ ಸಾರ್ಥಕ ಕವನಗಳನ್ನು ಓದುವಾಗ ಕವಿ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅರ್ಥವಾಗದೆ ಇರದು.
ಪಂಪಕವಿ
ಸೋತ ಅಣ್ಣನಿಗೆ[ಆಗಳ್ ಬಾಹುಬಲಿ…….. ನಾನ್ಲೈ ನಿಂದ ಭರತನನೆಂದಂ-] …….. ಚಕ್ರೇಶ, ಸಿಗ್ಗನು ಮುಳಿಸಂ ನೀ ನೆಂದಿಂಗಂ ಬಿಸುಡು ಈ ತಮ್ಮಂದಿರೊಳ್ ಇಂತಿಂತು ಕಟ್ಟುನರ್ಪುದು ಪೆಂಪೇ ?…………
ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಲಂ-ಈ ಭಟಖಡ್ಗಮಂಡಲೋ ತೈಲವನವಿಭ್ರಮಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ, ಭೂ
ವಲಯಮನ್, ಅಯ್ಯನಿತ್ತುದುಮನ್, ಆ೦ ನಿನಗಿತ್ತೆನ್, ಇದೇವುದಣ್ಣ, ನೀ ನೊಲಿದ ಲತಾಂಗಿಗಂ, ಧರೆಗಂ, ಆಟಿಸಿದಂದು ನೆಗು ಮಾಸದೇ ?…………….

Close

ಎರಡು ಕವನಗಳು

ಯು. ಕೆ. ವಿ. ಆಚಾರ್ಯ

ಎರಡು ಕವನಗಳು

೧. ಗಾಂಧೀಸ್ಮೃತಿ
ಗಾಳಿ ಬೀಸಿದ ಹಾಗೆ ಬೆಳಕು ಮೂಡಿದ ಹಾಗೆ
ಲೋಕದ ಮುಖಕ್ಕೆ ಪಂಜು ಹಿಡಿದವರು
ಆಕಸ್ಮಿಕದ ಬಲಕ್ಕೆ, ಕಾಲಕ್ಕೆ, ಮುತ್ತಿ ಕಾಡುವ
ವಿಲಗ ಬಳಗಕ್ಕೆ ಭುಜಕೊಟ್ಟು-
ಬಸಿದ ರಕ್ತಕ್ಕೆ ನೆಲಕೆ ತಿಲಕದ
ಪೂರ್ಣ ಪ್ರಣಕೆ ತೆನೆಯಾಗಿ ಕಣಜವನು
ತುಂಬಿದವರು.
ವಿಶ್ವದ ಮೇಲೆ ಹೊಳೆದ ವಿಕ್ರಮದ ಸಾತ್ವಿಕ
ಹೆಜ್ಜೆ
ಪಶ್ಚಿಮಕ್ಕೆ ತೆರಳಿ, ಪೂರ್ವಕ್ಕೆ ಅರಳಿ
ದಿಕ್ಕುಗಳ ತೆಕ್ಕೆಗೆ ಬುದ್ಧನ ಸಿದ್ಧಿಗೆ
ಮಾನವತೆಯಿಂದ ಮೇಲಕ್ಕೆ
ಎತ್ತಿ ಕೊಡೆ ಹಿಡಿದವರು
ಏಳು ಚರ್ಮದ ಹೊದಿಕೆ ಆರನ್ನು ಕಳಚಿ
ಒಂದನ್ನು ನಗ್ನತೆಗೆ ಉಳಿಸಿದವರು.
ಮುಗಿಲು ಮುಟ್ಟಿದೆ ಸ್ತುತಿಶಬ್ದಕೋಶ
ನಿಮ್ಮ ಪವಾಡಕ್ಕೆ ನೀವು ಕಟ್ಟಿದ ಕಡತ-ದುಂದುವೆಚ್ಚದ
ಸ್ವಸುಖಾಯ ಗಾದಿಯ
ಮಂತ್ರೋಚ್ಚಾರ ತಿಳಿಯದಪಾರ್ಥನ ಹಾದಿಯಲಿ
ಚೆಲ್ಲಿ ಹೋಗಿದೆ ಇನ್ನು-
ಹುಡುಕಬೇಕು.

ಹದಮೀರಿದ್ದು ಹರಿದಾಗ
ಒಳಕಾಳಗದ ವೀಳೆಯಕ್ಕೆ ತೊಡೆತಟ್ಟಿ
ಅಪ್ಪನ ನೆತ್ತಿ ಚುರುಕಾಗುವಂತೆ ಹದಮುಟ್ಟಿಸಿದ
ಪಾಖಂಡತನದ ಈ ಬೇರಿನ ಕೊಂಬೆ
ತೆಕ್ಕೆಗೆ ಬಿದ್ದ ತೋಳಿನ ಪದಾಘಾತಕ್ಕೆ-
ತಣಿದು ಸೊಕ್ಕಿದ ಗತ್ತು-ಯಾವುದಿದು
ಭೂಮಿ ಆಕಾಶವಿಲ್ಲದ ಪಾತಾಳ ?
ಮೂಡಿದ ಪರಿವರ್ತನೆಯಲಿ ಯಾವ ರಕ್ತದಲಿ
ಹರಿದು ಬಂದಿತು-
ನೀರಿಗೆ ಬಿದ್ದು ಕಾಲ್ಬಡಿದು ಹುಡುಕಹೊರಟ
ಮಾಧ್ಯಮದ ತಂತು.
ತಿಕ್ಕಿ ನೋಡದೆ ಮುಟ್ಟಿ ತಿಂದದ್ದು ಕರಗದೆ
ತುರುಕಿದ ಗಾಳಿಯಾಗಿ ತಿರುಗುವ ರಭಸಕ್ಕೆ
ತೊಡೆಗಿಳಿದಾಗ ಗುಮ್ಮೆಂದು ವದ ಹೊದ್ದು ನಿಸ್ತಂತು ತಂತಿಯಲಿ ಮೇಲೇರಿ
ತಲೆ ಕಿತ್ತು-
ಕಣ್ಣಿನಲಿ ಬೆಳೆದ ಬಿಳಿಪರೆಯಾಗಿ ಸುತ್ತುವ
ಈ ತೀವ್ರತೆಯನ್ನು
ಅದ್ದಿ ತೆಗೆಯಬಲ್ಲೆನೆ ಹಾಲಿನೆರಕದಲ್ಲಿ
ಮದುಗೊಂಡ ಹೃದಯದಲ್ಲಿ
ಗಕ್ಕನೆ ಬಂದದ್ದೆಲ್ಲ ಇದರ ಮೇಲೇ ಹರಿದು
ಆವಿಯಾಗುವುದಕ್ಕೆ-
ಇದರ ಮೂಲಕವೆ ಮುಂದೆ ಹರಿದು
ಹೋಗುವುದಕ್ಕೆ ಅಥವಾ-
ಇದರ ಕಟ್ಟೊಡೆದು ಬಿಡಲೇ ಬರುವ ಅಪಾಯಕ್ಕೆ
ಕಾದುನಿಂತು ?

Close

ಎರಡು ಕವನಗಳು

ಲಕ್ಷ್ಮೀಶ ತೋಳ್ಪಾಡಿ

ಎರಡು ಕವನಗಳು

೧. ಮೊದಲನೆಯದು
ಇಲ್ಲೆ ; ಹೀಗೆ ಈ ಬೀದಿಯಲ್ಲೆ ನಾನು ನಡೆದು ಬಂದದ್ದು
ಈ ತಮಾಲದ ತಂಪು ; ಪಾರಿಜಾತದ ಗಂಧ
ಹಸುರಿನಾದರದ ಹಿತದಲ್ಲಿ
ಮೇಲೆ ಶೀತಮಾರುತ ಪ್ರಣಯದಲ್ಲೆ. ಕೈಬೀಸದೆಯೆ ನಡೆದದ್ದು ನಾನು
ಬೈಗಿನ ಹೊತ್ತು ಗುಲ್‌ಮೊಹರ್‌ ಬೀದಿಯಲಿ ಕ್ಯಾಡಿಲಾಕಿನ ಹಾಗೆ ಸಲೀಸಾಗಿ.
ನಡೆದು ಬಂದವನೆ ಹೊಕ್ಕದ್ದು ದೇವಾಯತನ.
ಅಲ್ಲಿ ಸುತ್ತೆಲ್ಲ ಅಮೃತಶಿಲೆ ; ಕಂಬ-ಗೋಡೆ ಪ್ರದಕ್ಷಿಣೆಯ ಪಥ ಎಲ್ಲ[ಶ್ವಾಸವಾಡುವವನಿಗೆ ತಾನೆ ಮೃತಿಯ ಭೀತಿ] ಒಳಗೆ ಉಪನಿಷತ್ತಿನ ಘೋಷ ‘ಅನ್ನಂ ಬ್ರಹ್ಮೇತಿ……..?
ಪ್ರಾಂಗಣದಲ್ಲಿ ಹಾಗೆ ಸುತ್ತಿ ಅಗೊ ಆ ಕಿಂಡಿಯಲ್ಲಿ ಬಾಗಿದೆ
ಬ್ರಹ್ಮೇತಿ ಸೆಟೆಯಲಾಗದೆ ಬಾಗಿದಾಗಲೇ, ಬಾಗಿಯೇ ತ್ರಿಭಂಗಿಯನ್ನು
ನೋಡಿದಾಗಲೇ
ಬಂದ ಹಾದಿ ಸರಿಯಾದ್ದು ಎಂಬ ತೀರ್ಮಾನಕ್ಕೆ ನಾನು ಬಂದದ್ದು.
ಹಾಗೆ ತೀರ್ಪಿಗೆ ಬದ್ಧನಾಗಿ ಪ್ರದಕ್ಷಿಣೆಗೆ ಹೊರಟವನು
ಸುತ್ತ ಹುಳಿ ಅನ್ನಗಳ ನಾತ ಮೂಗಿಗೆ ಬಡಿದಾಗ
ಒಳಗಿನೊಂದು ಪ್ರಸಕ್ತಿಯಲ್ಲಿ ನಾನು ಅನುರಕ್ತನಾದಾಗ
ದೇಗುಲದ ಗೋಡೆ ನಿಷೇಧ ನುಡಿದದ್ದು ಕಿವಿಗೆ ಬಿತ್ತು
‘ಇಲ್ಲಿ ಮಲಮೂತ್ರ ಮಾಡಬಾರದು’
ಕೇಳಿದವನೆ ಹೇಗೆ ಸೆಟೆದೆನೊ,
ಬಿಸಿಲ ಬೀದಿಗೆ ಚಿಮ್ಮಿ; ಬೆವರಿ ಮೈ ಮನೆಗೆ ಓಡಿದೆನಂತೆ,
ಮೈಮರೆತು ಒರಗಿದವನಿಗೆ ನನಗೆ ವಾತಪ್ರಮಿಯದೇ ಕನಸು ಬಿತ್ತಂತೆ.

೨. ಎರಡನೆಯದು
ದೇಗುಲದಿ ವೇದಾಂತಪ್ರವಚನವು ; ವಿಶ್ರಾಂತ ಜನವೆಲ್ಲ
ದಟ್ಟೈಸಿ ಸೇರಿತ್ತು ಸಭೆ. ಒರಗಿದ್ದೆ ನಾನು ಮೂಲೆಯೊಂದರಲಿ.
ಬಹುತಿಯುಳ್ಳವನ ಬಣ್ಣನೆಯ ಮಾಡಿದರು-ಅನಿಕೇತನೆಂದರು
ಅನುವೇತನೆಂದರು-ವಿಶ್ವಕುಟುಂಬಿ ಎಂದಂದು ಮುಗಿಸಿದರು.
ಮರಳಿ ಮನೆಗೆ ಬರುತಿರಲು ನಾ, ಕಾಲುದಾರಿಯಲಿ
ಆರ ಹಂಗಿಲ್ಲದೆಯೇ ಇಂಬಿಲ್ಲದೆಯೆ ಮಲಗಿದವರನು ಕಂಡೆನು.
ಬುವಿ ಬಾನುಗಳೆ ಅವರ ಮನೆ ಮಾಡು ತೊಡುವ ಬಟ್ಟೆಗಳು
ಇಂಥ ಅನುಸೇತರನು- ಅನಿಕೇತನರ ಕಂಡೆ.
ವೇದಾಂತವನೆ ಬದುಕುವಂಥವರೆಲ್ಲ ಇವರೆಲ್ಲ;
ಆದರಿವರನು ನೊಡಲೊಲ್ಲದೆಯೆ ಸಾಗಿದರು ಜನರು
ಸುಖನಿಕೇತನರವರು-ಏಕೆ ಹೀಗಿದೆ ಬದುಕು ?
ಜಗವು ? ತೇರುದಾರಿಯಲಿ ನಾಯಿಹೆಜ್ಜೆಯ ಗುರುತು.
ಎಳೆಯುತಿರುವರು ತೇರು; ಮರಮರಳಿಯುದ್ಘೋಷ
ಕೇಳಿಬರುವುದು ಹರಿಯ. ಬಹಳ ಸಿಂಗರಗೊಂಡ ರಥ ಬೀದಿಯು.
ಈ ಓಣಿ-ಆ ಗಲ್ಲಿ ಮತ್ತೆ ಸಾವಿರದ ತಿರುವುಗಳಲೆಲ್ಲ
ತೇರು ಬಾರದಲ್ಲ…ಮತ್ತಿವುಗಳೆಲ್ಲ ಸಿಂಗರಗೊಳ್ಳಲಿಲ್ಲ.
ಮರುಬೆಳಗು ಒಂದು ಹರಿದ ಮಾವಿನ ಮರವು ಕರೆಯಿತು ನನ್ನ
ಇಂತು ಕೇಳಿತು ಹರಿದುಕೊಂಡೊಯ್ದರಯ್ಯೋ ನನ್ನ ಸಂತಸವನೆಲ್ಲ
ನಿನ್ನ ಪರಿವಾರ. ಯಾರ ಇಷ್ಟಕ್ಕಂತೆ ? ಕೇಳಿಸಿರಲುಗ್ಗಡಣೆ
ದೂರದಲ್ಲಿ ; ಸೀಳಿತ್ತು ನೆರಳನ್ನು ಬಿಸಿಲುಕೋಲು.
ಹೀಗೆ ಮರಗಣ್ಣನಾಗಿರಲು ತೋರಿದನೆದುರು; ಹಿಡಿದು
ಚೂತಪತ್ರದ ಗುಚ್ಛ-ಕುಣಿವ ಬೀದಿ ಹುಚ್ಚ
ಉನ್ಮತ್ತ ನರ್ತನದ ಲೀಲಾವಿನೋದ-ಆಮೋದ ; ಈ ಇಂಥ
ವಸಂತಲೀಲೆಯ ಕಲೆಗೆ ಮರಗಣ್ಣಿ ನಲ್ಲು ಹೂವರಳಿತು.

Close

ಎರಡು ಕವನಗಳು

ವೀಚಿ

ಎರಡು ಕವನಗಳು

೧. ದಾರಿ.
ಬರಿ ಉಮೇದಿನ ಜಿಡ್ಡುದಾರಿಯಲ್ಲರುಗಾಗಿ
ಅಡ್ಡವನ್ನಾಚೆ ತಳ್ಳಿ
ದೊಡ್ಡ ಬುದ್ಧಿಯ ದಿಡ್ಡಿ ಬಾಗಿಲಲ್ಲಿಣಕಿ
ಹೊರಟಾಗ ರಾಜಮಾರ್ಗದ ಟಾರು ರಸ್ತೆಯಲಿ
ಬಾಳೆ ಹಣ್ಣಿನ ಸಿಪ್ಪೆ ಜಾರಿ ಬಿದ್ದೆ.
ಎಲ ಇದರ ಮನೆ ಕಾಯವಾಗ
ನೂರು ಕೆಟ್ಟಾ ಪತ್ತು ಬಂದಿದನು ಕೊಂಡೊಯ್ಯ
ಹಾಳು ಜನಕ್ಕೆ ಬರಬಾರದ್ದು ಬರ ಎಂದು
ತಂತು ತಂತುವಿನಲ್ಲು ಕಣ್ಣುಗಳ ತೆರಕೊಂಡು
ಸೈಕಲ್ ಸವಾರಿಯಲಿ ನಾ ಜರೂರಾಗಿರಲು
ಸದ್ದು ಮಾಡದೆ ಗುದ್ದಿ ತೊಂದು ಕರಿ ಕಾರು.
ಹುರುಳವರ ಮನೆ ಊಟ ಕರುಳು ಬಿರಿಯ ಉಂಡು
ದಾರಿ ನಡೆವಾಗೆಲ್ಲ ಅಚಲವಾಗುವ ಆಸೆ
ಹೋದ ಹಾಗೆಲ್ಲ ಬಿಡಬಾರದೆಂದೆಷ್ಟೆಷ್ಟೊ
ಕಂಡ ಸಾಸೆಲ್ಲ ವ್ಯಯವಾಗುತಿಹುದು.
ಬಹಳ ಸಲ ರಸ್ತೆಯೇ ಐಬು ಮತ್ತೆಷ್ಟೋ ಸಲ
ತಾರಾಟ ಮಾಡುವವರದೆ ಐಬು ಮಿಕ್ಕಂತೆ
ನೆಟ್ಟಗಿದ್ದರೆ ಎಲ್ಲ, ಇಕ್ಕೆಲಕು ಹಳ್ಳ.
ಎಷ್ಟು ಜನ್ಮದ ಎಚ್ಚರವ ಹೊತ್ತು ತಂದಲ್ಲಿ
ಇಲ್ಲಿ ಸಾಗೀತು ಸಜ್ಜನಿಕೆ ಪಯಣ.
ಊರ ಎದೆ ಮೇಲೆ ಎಷ್ಟೋ ದಾರಿ ಹಾಯುತಿವೆ
ಒಂದು ಮತ್ತೊಂದ ಕತ್ತರಿಸಿಕೊಂಡು;
ಇಲ್ಲವೇ ಅದನು ಬಿಟ್ಟು ಇದು ಇತ್ತ.

ನಿದ್ದೆ ನೀರುಗಣ್ಣಲ್ಲಿಯೂ ಗದ್ದಲಕೆ ಕೊನೆಯಿಲ್ಲ
ಅಪಘಾತಕ್ಕೆ ತುದಿಮೊದಲಿಲ್ಲ
ಉದ್ದಾರ ಮಾತ್ರ ಬರಿ ಚಿಣ್ಣಿದಾಂಡು
ಊರಿಗೇ ಉದ್ದಾರ ಹುಚ್ಚು ಹಿಡಿಯುವವರೆಗೆ
ಒಬ್ಬಂಟ ಕೂಟದಲ್ಲಿ
ವ್ಯಕ್ತಿಗೇ ಅವ್ಯಕ್ತ ಮಯ್ಯ ಹಾಸುವವರೆಗೆ
ಶ್ರಮವು ನಡೆದಾಟದಲ್ಲಿ.
೨. ಅನಿಸಿಕೆಗಳು
ಹಸಿವು
ಹತ್ತಾರು ಬಗೆ
ಹರಿದು ಹಂಚುತ್ತಿಹುದು
ದಂಗ ದಾವರ ದಿಕ್ಕು ದಿಕ್ಕಿನಿಂದ
ಚಿಂದಿ ಎಬ್ಬಿಸುವ ನೂರಾರು ಬಂಧ.
ಮಾತ ಕುತ್ತಿಗೆ ತಳ್ಳಿ
ಬೆಳೆದು ಕರುಳಿನ ಬಳ್ಳಿ
ಇರುಳಲ್ಲಿ
ಹಳ್ಳಿ
ಸೊಳ್ಳೆ ಸೋವಿದ ಹಾಗೆ
ಕೆಲಸ ಹುಲುಸಿನ ಕಡೆಗೆ
ಬಿಟ್ಟು ಬಿಡುಬೀಸಾಗಿ ಎರಡು ಕಣ್ಣು.
ಒಂಟಿ ಹೇಳಿಕೆ
ಜಂಟಿ ಹೇಳಿಕೆಗೆ ಹಂಬಲಿಸಿ
ತೂಕಡಿಕೆ ತಲೆ ಮಟ್ಟಿ
ಸರಿಸಮಾನರು ಎಲೆ ನಿಷೇಕ
ಪ್ರಸ್ಥವ ಮರೆಸುವಷ್ಟು ತನಿ-
ಯೆರೆಯುವರು ಸಾಕುಬೇಕೆನುವಷ್ಟು.

ಹಾದಿ ತಪ್ಪಿದ ಯುವತಿ
ಯೌವನ, ವಿಶೇಷವನು
ಯಾಯಾವ ಆಕಾರ ಕೊಟ್ಟು
ಸಾಕಾರಕಿಳಿ ಎಂದು ತಿಳಿಹೇಳಿ
ಕಳವಳನಿವಾರಣೆ ವರುಷ ವರುಷ
ಯತ್ನವ ಮಾಡುವವನೆ ಪುರುಷ.
ಒಂದು ಎರಡಾಗಿ
ಎರಡು ಹತ್ತಾರಾಗಿ
ಸುತ್ತಲೂ ಕಿರಣಗಳ ಹೊತ್ತಾರೆ ಬಣ್ಣಗಳು
ಕಣ್ಣ ಹೊಡೆಯುವ ಚಮತ್ಕಾರ
ಮುಷ್ಟಿಯ ಒಳಗೆ ಇಹಸೃಷ್ಟಿಯ ಹಿಡಿದು
ಬೆನ್ನ ತಟ್ಟುತ್ತಿರಲು
ಬರಲು ಬರಲೂ ಆರಲು
ಬಿಗಿದು ಬರುತಿದೆ ಕೊರಲು
ಕಾಲ ಕೈ ಕುಲುಕುವುದು ಪರಿಣತಿಯ ಹೊರಲು.
ಕೂಗು ಕೇಕೆಗಳು
ಮರಿ ಜೀವಗಳ ಬಾಯಲ್ಲಿ
ಕೃತಕೃತ್ಯತೆಯ ಹಾವ ಭಾವ ಎದೆತುದಿಯಲ್ಲಿ
ತಕ್ಷಣಕ್ಕಾದರೂ ಕಣ್ಣು ಬಣ್ಣದ ಮೇಳ
ನಿಲೆ ಹಾಕುವುದು ಬಹಳ.
ಒಂದಕೊಂದಕೆ ಕರಗತಕ್ಕ ಸಂದರ್ಭ
ಹಂಗೆಯಾಡುವ ಮಮತೆಯಲ್ಲಿ ಗಜಗರ್ಭ.
ಅಲ್ಲೋಲ
ಕಲ್ಲೋಲ
ಹಸಿವು ಒಡ್ಡುವ ಜಾಲ
ಹೊಕ್ಕು ಹುಡುಕುವ ಕೆಲಸ ಸಾಗದಿದ್ದರೆ ಕಷ್ಟ
ನಡೆವವಗೆ ನಡಿಗೆಯೇ ಕಳೆವುದೆಷ್ಟೊ ಅನಿಷ್ಟ.

Close

ಸಂಜೆ ಐದರ ಮಳೆ

ಕೆ. ಎಸ್. ನಿಸಾರ್ ಅಹಮದ್

ಸಂಜೆ ಐದರ ಮಳೆ

ಸಹ್ಯಾದ್ರಿ ಕಾಲೇಜಿನ
ಆಗಸ್ಟ್ ತಿಂಗಳಿನ ಒಂದೇ ಥರದ ಸಂಜೆ ಐದರ ಮಳೆ
ಕೆಮಿಸ್ಟ್ರಿ ಅಟೆಂಡರನ ಮಾಸಲು ಪೇಟ;
ಬೈಗಲ್ಲಿ ನವಿಲು ಗಿಳಿ ಮೈನ ಹೆಸರಿರದ ಕಾಡು ಹಕ್ಕಿಗಳ
ಹೊರದೂಡುವ ಪಶ್ಚಿಮ ಕ್ಷಿತಿಜದ ರಗ್ಗು ಮುಸುಕಿನ ನೋಟ.
ತೀರ್ಥಳ್ಳಿ ಗೌಡ ಭಟ್ಟರ ಅಡಿಕೆ ತೋಟಗಳ ಬೇಲಿತಡಿಕೆ
ದಾಟ ಬುಡದಡಿಯ ಮೌನದ ಮಡಿಕೆ
ಗಳ ಮಡಿಗೊಳಿಸಿ ಶಬ್ದದಿಂದ
ಕಬ್ಬು ಭತ್ತವ ಥಳಿಸಿ
ಬೆಟ್ಟಗಳನಳಿಸಿ
ಸೋಂಭೇರಿ ಬಿಸಿಲ ಹೊಡೆದಟ್ಟಿ
ಬಾನಗಲ ಬಿಡಾರಗಳ ಕಟ್ಟಿ
ಜಿಯಾಲಜಿ ಲ್ಯಾಬೊರೇಟರಿಯ ಹಿಂಬದಿಯಲ್ಲಿ ಹೆಗ್ಗಡಿತಿ
ಬಟ್ಟಗಲ ಪಟಪಟ, ಕಪ್ಪು ಭೀತಿ
ಯಾಗುವ ಗಾಳಿ
ಹರಟುತ್ತ ಸಂಬಳ ಬಡತಿ
ಕಾರಿಡಾರಿಗೆ ಬಂದ ಮೇಷ್ಟರಿಗೆ
ಇರಿಚಲಾಗಿ ತಾಗಿ
ಶಾಪಕ್ಕೆ ಭಾಗಿ.
ಹಿಟ್ಟರರ ತಮ್ಮ;
ದನಕತ್ತೆ ಎಮ್ಮೆ ಕೊಡೆ ಮಳೆಯಂಗಿ

ಸ್ಕೂಟರು ಸೈಕಲ್ಲುಗಳ ಗುಮ್ಮ;
ಬೇಗ ಊರು ಸೇರುವಾತುರದ ಹುಡುಗಿಯರ
ಕಣ್ಣಲ್ಲಿ ಭಯೋದ್ವೇಗದ ಲಂಗರೆತ್ತಿಸಿ
ಕ್ಲಾರ್ಕು ರಾಜಣ್ಣನ ಮೂಗಿಗೆ ಗೋಪಿಹೋಟಲಿನ ಒಗ್ಗರಣೆಯ ಚುರುಕು ಹೊತ್ತಿಸಿ
ಯಾರಿಗೂ ಬೇಡದ ಬಿಕನಾಶಿ.
ಹೊಸದಾಗಿ ಸ್ಕೂಲಿಗೆ ಸೇರಿಸಿದ ಹಸುಳೆಯಳುವಿನ
ಆಮೆನಡಿಗೆಯ ಬೇಸಿಗೆಯ ತುಂಗೆಗೆ
ಕನ್ಯೆ ಕಾಲಿನ ಕಸುವು ಕುದುರಿಸಿದ
ಹೀಗೇ ಹಿಡಿದರೆ ಚಂಡಾಲ
ಮಳೆ ಕಟ್ಟುವುದೆಲ್ಲಿ ಮಾರಾಯರೆ ಪೆಂಡಾಲ
ಯೂನಿಯನ್ನಿನ ಉದ್ಘಾಟನೆಗೆ ?
-ಪ್ರಿನ್ಸಿಪಾಲರಿಗೆ ನಿದ್ದೆ ಬರಿಸದ
ಚುನಾವಣೆಯ ಅನ್ಯಾಯ ಖಂಡಿಸಿ
ಆರಿಸಿ ಬಂದವನ ಉಚ್ಚಾಟನೆಗೆ
ಮುಷ್ಕರಕ್ಕೆಡೆ ಹೇಗೆ ?
-ಭಂಡ ವಿದ್ಯಾರ್ಥಿ ಮುಖಂಡ
ಹಾಲೇಶಿಯ ಕೈಕೈ ಹಿಸುಕಿಸಿದ
ತರಳೆ
ಮಳೆ

Close

ಮೂರು ಕವನಗಳು

ಚಂದ್ರಕಾಂತ ಕುಸನೂರ

ಮೂರು ಕವನಗಳು

೧. ನಾನು
ಈ ಯಶಸ್ವತಿ ಕಣಗಳಲ್ಲಿ
ತೂರ್ಯ ಬಾರಿಸುತ್ತ ಸಾಗುವ ಪ್ರಾಣಿಗಳ-
ಜಯಜಯವಂತಿ ದಾರಿಯ ಮೇಲೆ
ಹೊನ್ನಕಿರಣಗಳ ಹೊಳಪು-ಮತ್ತು
ನನ್ನೊಳಗೆ ಈ ಅತೀಂದ್ರಿಯ ಕಂಪನ ಏಕೆ?
ತಪಾಂತದ ಮೇಲೆ ಎರಡು ಪ್ರಜ್ವಲಿಸುವ-
ನೀಲರೇಖೆಗಳ ಆಲಿಂಗನದಿಂದ ದೇಹಾಸಕ್ತಿಯಿಂದ-
ಮುಕ್ತಿ ಪಡೆಯುತ್ತೇನೆ.
ಹಿಮ ಮುಸುಕಿದ ನಿರ್ಜನ ಕಣಿವೆಗಳಲ್ಲಿ
ಕಲ್ಪಾಂತದ ಗಂಟೆಗಳನ್ನು ಬಾರಿಸುವ ಅದೃಷ್ಟ ಕೈಗಳು
ಯಾಕೆ ಕಾಣಿಸುವುದಿಲ್ಲ ?
ನನ್ನ ಯಾವ ಜನ್ಮದ ಪುಣ್ಯ-!
ತರಲ ಅನುಭೂತಿಯ ಪಾವನ ಹಿಮವಂತ
ನನ್ನ ಅಂತರಂಗದಲ್ಲಿಯೇ ರೂಪ ತಾಳುತ್ತಾನೆ
ಮತ್ತು ನಾನು ಅಕಲ್ಪಿತವೇ-ಮಂತ್ರದ್ರಷ್ಟಾರರ
ಕುಲದೀಪಕನಾಗುತ್ತೇನೆ.
ಇಂಥ ಗಂಭೀರ ಶಾಂತಿಯ ಸಂಪೂರ್ಣ ಪರ್ವದಲ್ಲಿ
ನನ್ನ ಅನಾದಿ ಅಸ್ತಿತ್ವದ ನೆನಪು ಮೇಲಿಂದ ಮೇಲೆ
ಮೂಡಿಬರುತ್ತದೆ.
ಹೌದು. ನಾನು ಎಷ್ಟು ಅರ್ವಾಚೀನನೋ
ಅಷ್ಟೇ ಪ್ರಾಚೀನನಿದ್ದೇನೆ.

೨. ಆಸೆ
ಈ ಮೃಣಾಲ ಬಿಸಲಿನ ರಸವಂತಿ ಬೆಳಗು
ಮತ್ತು ಗೌರಾಂಗದೇಹದ ಅಮೃತ ಆಸೆಯೊಂದಿಗೆ-
ಸಮುದ್ರದ ವಿಶಾಲ ನೀಲಿಯಲ್ಲಿ ಇಳಿಯಬೇಕೆಂಬ-
ಹರೆಯದಾಸೆ ನನ್ನನ್ನು ಪೀಡಿಸುತ್ತಿದೆ.
ತರಲ ಆಕಾಶದ ವಿರಾಟ ಸಂಕಲ್ಪದ ವಿಸ್ತಾರದಲ್ಲಿ
ತರಂಗಗಳ ತೊಡೆಗಳಲ್ಲಿ ಚಿಪ್ಪುಗಳ ಮುಖ ತೆರೆದು
ಹೊರಗೆ ಬರುವ ಹಂಬಲದ ಮುತ್ತುಗಳನ್ನು-
ನೋಡಿ, ಮಾತಾಡಿಸಿ ಬರಬೇಕೆಂದಿದ್ದೇನೆ.
ಅಂತೆಯೇ-
ನನ್ನ ಮೇಲೆ ಅಮರತ್ವದ ಕವಚವನ್ನು ಹಾಕಿ
ನನ್ನ ಸಾಹಸವನ್ನು ಕುಳ್ಳಿಸುವ ಪ್ರಯತ್ನ ಮಾಡಬೇಡ
ನಾನಂತೂ ಸಕಲ ನಶ್ವರತೆಯಿಂದ-
ಅದರ ವೈಭವದೊಂದಿಗೆ-ಸಮುದ್ರದಲ್ಲಿ-
ಇಳಿಯ ಬೇಕೆಂದಿದ್ದೇನೆ.
೩. ಸಾಕು
ಮತ್ತೊಮ್ಮೆ-
ವಸುಮತಿ ರಾತ್ರೆಯಲ್ಲಿ-
ನಿನ್ನ ವಾಸಂತಿ ತುಟಿಗಳ ಮೇಲೆ ಕಂಪಿಸುವ
ಹಿಮದೇಹದ ಸ್ನೇಹಶಬ್ದ-ನನ್ನ ತುಟಿಗಳಮೇಲೆ-
ತೂಗಿಸುವ ಆಸೆ ನನ್ನದಿದೆ.
ಮಣ್ಣು ಗೋಡೆಗಳ ಕಂದಿರಂಗಿನ ನೆರಳಿನಲ್ಲಿ-
ನಗುವ ಹಸಿರು ಗರುಕೆಯ ಮೇಲೆ ಕುಳಿತು

ತಾಸುಗಟ್ಟಲೆ ಬಾಲತಲೆ ಇಲ್ಲದ ಮಾತು ಆಡುತ್ತಿದ್ದೆವು–ನಾವು.
ನಿನ್ನ ಹಸ್ತರೇಖೆಗಳಲ್ಲಿ ನನ್ನ ಭಾಗ್ಯವನ್ನು ನೋಡುತ್ತಿದ್ದೆ-ಆಗ.
ಆದರೆ ಈಗ ಆ ದಿನಗಳೆಲ್ಲಿವೆ?
ಈಗ ಆ ಮಣ್ಣು ಗೋಡೆಯ ದೇಹ ಕಳಚಿಬಿದ್ದಿದೆ.
ಅದರ ಕಂದಿರಂಗಿನ ನೆರಳು ಮುಕ್ಕಾಗಿದೆ
ಮತ್ತು ಹಸಿರು ಗರುಕೆಯೂ ಕೂಡ ಮಾಯವಾಗಿದೆ.
ರಾಸಿಗಟ್ಟಲೇ ದಿನಗಳ ಸಾವುಬದುಕಿನ ಮೇಲೆ-
ನೀನು ಈಗ ನಡುಜಾತ್ರೆಯಲ್ಲಿ ಕಂಡಿರುವಿ-
ಏನು ಕೇಳಲಿ ಹೇಳು ?-ನಿನ್ನಿಂದ ಹಿಮದೇಹದ ಶಬ್ದ-
ಮರಳಿ ಕೇಳಲೆ?
ಆದರೆ-ನನ್ನ ಕವಿತೆಯ ಮೊದಲು-
ನಿನ್ನ ಪ್ರಸ್ತಾವನೆಯಂತೆ–ನಾನು ‘ಹೇಗಿರುವಿನೆಂದು’
ಪ್ರಶ್ನೆ ಮಾಡಿದ ಮೇಲೆ- ನಾನೇನು ಹೇಳಬೇಕು?
ಸಾಕು.

Close

ತೆರೆದ ಬಾಗಿಲು

ಕೆ. ಎಸ್. ನರಸಿಂಹ ಸ್ವಾಮಿ

ತೆರೆದ ಬಾಗಿಲು

೧
ಸಂಜೆಯೂ ಆಯಿತು, ನೀನೂ ಬಂದೆ.-
ಬಸ್ಸು ಸಿಕ್ಕಿತೆ ನಿನಗೆ ಸಂತೆಯ ದಿನ?
ಇಷ್ಟು ಕತ್ತಲೆ ಮಾಡಿಕೊಂಡು ಬರುವುದೆ ಹೇಳು ?
ನಿನ್ನ ಮಗುವಿಗೆ ಎಂದು ನಾಮಕರಣ ?
ಇವಳು ಹೇಗಿದ್ದಾಳೆ ? ಎಂದು ಬರುವಳು ? ಗೊತ್ತು
ಬಂದೆ ಬರುವಳು; ಆದರೆಂದು ? ಈ ಹೊತ್ತಿಗೆ
ಬತ್ತ ಬಡಿದಿರಬೇಕು, ಬಂಡಿ ಸಿಕ್ಕಿರಬೇಕು,
ಎತ್ತಿಗೇ ಕ್ಷಾಮವಿರಬೇಕು, ಕಾರಣವಿಷ್ಟೆ:
ಈ ಸಲವು ತಂದೆಯವರದು ಬರುವ ಶನಿವಾರ ;
ಬತ್ತ ಬರದಿದ್ದರೂ, ಬಾಳೆಯಾದರು ಬರಲಿ !
ನೀನೀಗ ಬಂದದ್ದು ಒಳ್ಳೆಯದು ,ಒಳ್ಳೆಯದು;
ಊರ ಕಡೆ ಎಲ್ಲರೂ ಕ್ಷೇಮವಷ್ಟೆ ?
ಹಿಡಿದ ಮಳೆ ಬಿಟ್ಟಿದೆ, ಈಗ ಚಳಿ ಹುಟ್ಟಿದೆ ;
ಬಾ ಒಳಗೆ ಫ್ಲಾಸಿನಲಿ ಕಾಪಿ ಇದ್ದರೆ, ನೋಡು.
ಸಾಕೆ ಇಷ್ಟೊಂದಂಗಿ ? ಅದರ ಮೇಲೂ ಶಾಲೆ ?
ನೀನೇನು ಕೋಟೆಯೋ ಕರಡಿಯೋ ಮಹರಾಯ ?
ಮೂಲೆಗಿಡು ನಿನ್ನ ನಕ್ಷತ್ರ-ಚತ್ರಿಯ ಮುದುರಿ ;
ನಿನ್ನ ಚಪ್ಪಲಿಗಿಲ್ಲಿ ಯಾರ ಭಯವೂ ಇಲ್ಲ.
ಈ ಹಳೆಯ ಕುರ್ಚಿ, ಈ ಚಾಪೆ ಎರಡೂ ಕೊಳೆಯೆ ?
ಇಲ್ಲಿರುವುದೂ ಕೊಳೆಯೆ, ಬರುವುದೂ ಕೊಳೆಯೆ !
ನನ್ನ ಮಾತೇ ನಿನ್ನ ಕಿವಿಗೆ ಬೀಳುತ್ತಿಲ್ಲ;
ಬೀದಿಯಂಚಿಗೆ ನನ್ನ ಬಾಗಿಲಿರುವುದು ತಪ್ಪೆ?
ಬಾಗಿಲನು ತೆರೆದಿರುವುದೊಂದು ತಪ್ಪೆ ?
________________
ಸಾಕ್ಷಿ
ತೆರೆದ ಬಾಗಿಲು ನಾನು, ಸರ್ವಋತು ಬಂದರು ;
ಹೌದು, ಮಹರಾಯ, ನೀನೀಗ ಬಂದದ್ದು ಸರಿ;
ಏನಾಗದಿದ್ದರೂ ಇಬ್ಬರಾದೆವು ಈಗ.
ಹೋಟಲಿನ ಊಟ ಇನ್ನರ್ಧ ಘಂಟೆಯ ಮೇಲೆ ;
ಈಗ ಅಲ್ಲಿಯ ತನಕ ಕಥೆಯ ಹೇಳುತ್ತೇನೆ-
ಕಥೆಯೇನು ? ಈ ಬೆಳಗಿನಿಂದ ಇಲ್ಲಿಯ ತನಕ
ತೆರೆದ ಬಾಗಿಲ ಮುಂದೆ ನಾನು ಕಂಡದ್ದನ್ನೆ,
ನಾನು ಮಾಡಿದ್ದನ್ನೆ;
ಹೇಳುತ್ತೇನೆ ಕೇಳು.
ಅಯ್ಯೋ, ಎಂಥಾ ಮಾತು !
“ಮನಸು ಅತ್ತಿಯ ಹಣ್ಣೆ ಬಿಚ್ಚಿ ತೋರುವುದಕ್ಕೆ ?”
ಆತ್ಮವನು ಬಿಚ್ಚಿ ತೋರೆಂದವರು ಯಾರಯ್ಯ ?
ಅದಕೆ ಸಾಯುವ ತನಕ ಕಾಯಬೇಕಾದೀತು.
ಅಂಗಿಯನು ಬಿಚ್ಚುವುದು ನಮ್ಮ ಕೈಯೊಳಗಿಹುದು,
ಕಳೆದುಕೋ ನಿನ್ನ ಹೊರೆಯನು, ಬಿಡು ಪೊರೆಯನು.
೨
ಬೆಳಗಾಗ ಪೂರ‍್ತಿ ಎದ್ದಿರಲಿಲ್ಲ ನಾನು,
ಪತ್ರಿಕೆಯ ಹುಡುಗ ಬಂದಿದ್ದ, ನನಗೊಂದು ಸುದ್ದಿ ತಂದಿದ್ದ. ೪೦
ಮೂರನೆಯ ಪುಟದಲ್ಲಿ ಅಪಘಾತವಾಗಿತ್ತು;
ನನ್ನದೇ ಹೆಸರಿನವನೀ ಬೀದಿಯವನೊಬ್ಬ
ನಿನ್ನೆ ಲಾರಿಗೆ ಸಿಕ್ಕಿ ಸತ್ತನಂತೆ !
(ಸುದ್ದಿ ಪೂರಾ ಗದ್ಯವೆಂದು ಟೀಕಿಸಬೇಡ, ಗದ್ಯದಲ್ಲೂ ಮಂದಿ ಸಾಯಬಹುದು.)
ಅವನು ಇದ್ದದ್ದೇ ಅಷ್ಟಾಗಿ ತಿಳಿದಿರಲಿಲ್ಲ,
ಸತ್ತದ್ದು ಎಲ್ಲರಿಗೆ ಗೊತ್ತಾಯಿತು.
ನನ್ನ ಮೇಲಾಕಾಶ ಕಳಚಿಬಿತ್ತು,
ಸತ್ತವನು ನಾನಲ್ಲವೆಂದು ನನಗೂ ಗೊತ್ತು;
ಆದರೂ ಕನ್ನಡಿಯಲಿಣಿಕಿನೋಡಿ, ೫೦

ಕಾಲು ಝಾಡಿಸಿ ಮೈಯ ಮುರಿದೆ, ಎದ್ದೆ, ನಡೆದೆ,
ಹೊಸಿಲ ಮೇಲಿನ್ನೊಂದು ಮೊಳೆಯ ಹೊಡೆದೆ.
ಪಾಪ ! ಯಾರೋ ಸತ್ತು ನನ್ನ ಹೆಸರಿಗೆ ಬಂದ
ಈ ಕಳಂಕವ ತೊಡೆದು ಬಿಡುವೆನೆಂದು
ಬಿಗಿಹಿಡಿದ ಮುಷ್ಟಿಯನು ನೋಡಿಕೊಂಡೆ.
ಪಾಣಿಪಂಚೆಯನುಟ್ಟು ನೀರುಮನೆಗೋಡಿದೆ ;
ನೀರು ನಿಲ್ಲುವ ಸಮಯ ನಲ್ಲಿಯಲ್ಲಿ.
ಇದ್ದಷ್ಟೆ ನೀರಿನಲ್ಲಿ ಗಂಗಾಸ್ನಾನಮಾಡಿ
ಸತ್ಯವನಿಗಾಗಿ ತುಪ್ಪದ ದೀಪ ಹಚ್ಚಿದೆ ;
ಕದ್ದ ಹೂವಿರಿಸಿ ದೇವರಿಗೆ ಕೈಮುಗಿದೆ.
ಗೋಡೆಯಲ್ಲಿ ಹಲ್ಲಿ ದುರುಗುಟ್ಟಿ ನೋಡಿತು ನನ್ನ;
ನಾನದರ ಶಕುನಕ್ಕೆ ಕಾಯಲಿಲ್ಲ.
ಸತ್ತೆನೋ ಕೆಟ್ಟೆನೋ ನೆರೆಮನೆಗೆ ನುಗ್ಗಿದೆ ;
ಟೆಲಿಫೋನಿನಲ್ಲಿ ಸಂಪಾದಕರ ಕೊಡಿ’ ಎಂದೆ.
ಆಯಮ್ಮನಿಗೆ ಉಗ್ಗು : ‘ಇದ್ದಾರೆ, ಮಾತಾಡಿ.’
“ನಮಸ್ಕಾರ ದೇವರು, ಒಂದಲ್ಲ ಎರಡು-
ಒಂದು ಖಂಡಿತವಾಗಿ ನಿಮಗೆ, ಇನ್ನೊಂದು
ನನ್ನ ಹೆಸರಿಗೆ ನೀವು ಕಾಣಿಸಿದ ಲೋಕಕ್ಕೆ !
ನಿಮ್ಮದೇನೂ ಇಲ್ಲಿ ತಪ್ಪಿಲ್ಲ, ಅದು ನಿಜವೆ.
ಆದರೂ ಸುದ್ದಿ ಸಂದಿಗ್ಧವಾಗಿದೆ ಸ್ವಾಮಿ.
ಸೂರ‍್ಯ ಚಂದ್ರರ- (ಇನ್ನು ಬೇಡ ಚಂದ್ರನ ಸಾಕ್ಷಿ.)-
ಬರೇ ಸೂರ‍್ಯನೊಬ್ಬನಸಾಕ್ಷಿಯಾಗಿ
ನಾನು ಬದುಕಿದ್ದೇನೆ. ಕೃಪೆಮಾಡಿ ತಿದ್ದುವಿರೆ ?”
“ಹೌದೇನು ? ಕ್ಷಮಿಸಿ, ಸರಿ, ನಾಳೆಯೇ ತಿದ್ದುವ;
ನೀವು ಬದುಕಿರುವುದನ್ನು ಎಲ್ಲರಿಗೆ ತಿಳಿಸುವ.’
ಎಷ್ಟು ನಿರ್ಲಿಪ್ತತೆ ! ಎಂಥಾ ಸಮಾಧಾನ ! ರಾಮ ರಾಮ !
ಚಾಕು ಹೋಯಿತು, ಕಂದ, ಚೂರಿ ಬಂತು.
ಕಪ್ಪು ಸೀರೆಯನುಟ್ಟು, ಕಣ್ಣೀರ ಹೂಮುಡಿದ
ಸಂತಾಪ ಪತ್ರಗಳ ನೆನಪಾಯಿತು;

ವಿಪರೀತ ಭಯವಾಯಿತು.
ನೇರ ಓಡಿದೆ ಅಂಚೆಮನೆಗೆ ; ನೋಡಿದೆ ಒಳಗೆ.
ಕಾರ್ಡು ಕವರಿಗೆ ಬಿದ್ದ ಹೊಡೆತಗಳನು.
ಒಬ್ಬ ಬಂದನು ಹೊರಗೆ ನಿರಪರಾಧಿ.
ನಾನವನ ತಡೆದು ನಿಲ್ಲಿಸಿದೆ ; ವಿಷಯವ ತಿಳಿಸಿ,
“ನಾಳೆ ಸಂಜೆಯ ತನಕ ನನಗೆ ಏನೇ ಬರಲಿ,
ಬಂದದ್ದು ಬಂದಂತೆ ಇಲ್ಲಿ ಬಿದ್ದಿರಲಿ ;
ಬಳಿಕ ಬಂದೊಯ್ಯುವೆನು. ಅಷ್ಟು ಉಪಕಾರ
ಮಾಡುವುದು ಸಾಧ್ಯವಾದರೆ, ನಾನು ನನ್ನಾಕೆ
ನಮ್ಮ ಮಕ್ಕಳು ಕೂಡ ನಿಮಗೆ ಋಣಿಗಳು’ ಎಂದೆ,
ಅವನಿಗೇನಾಯಿತೋ !
“ತಲೆ ನೆಟ್ಟಗಿಲ್ಲ ನಿನಗೆಂದು ಓಡಿದನವನು
ತಲೆಯನಲ್ಲಾಡಿಸುತ ನಡುಬೀದಿಗೆ.
ಬರುವಾಗ ದಾರಿಯಲಿ ಮುಳ್ಳು ಚುಚ್ಚಿ
ರಕ್ತ ಸುರಿಯಿತು; ಇವಳ ನೆನಪಾಯಿತು.
ಇವಳು ಹಳ್ಳಿಗೆ ಹೋಗಿ ಸರಿಯಾಗಿ ತಿಂಗಳು : ಬತ್ರವೂ ಬರಲಿಲ್ಲ, ಇವಳೂ ಬರಲಿಲ್ಲ.
ತವರುಮನೆಯಿರುವ ಹೆಂಡತಿಯ ಪಾಡೇ ಹೀಗೆ;
ಎಂದಾದರೂ ಬರಲಿ ಎಂದುಕೊಂಡೆ, ಆದರೆ;
ಅರ್ಥಮಾಡಿಕೋ ಈಗ, ಮುಂದಿನ ವಿಚಾರವನು
ಈ ದಿನದ ಸಂದರ್ಭದಲ್ಲಿ, ತಿಳಿಯಿತೆ ? ಅದಕೆ.
ನಾನು ಎಲ್ಲಕು ಮೊದಲೆ ಮೊದಲ ಬಸ್ಸಿನಲೆ
ಕಾಗೆ ಕರ‍್ರೆನುವ ಹೊತ್ತಿಗೆ ನಿಂತ ಮಟ್ಟನಲಿ
ಸುಬ್ಬುವನ್ನೋಡಿಸಿದ್ದು. ಬಂದಾರವರು
ಸರಿಹೊತ್ತಿಗಾದರೂ ಎಂದುಕೊಂಡಿದ್ದೇನೆ;
ನನ್ನ ಕೈಲಾಗುವುದನೆಲ್ಲ ಮಾಡಿದ್ದೇನೆ;
ತೆರೆದ ಬಾಗಿಲ ಮುಂದೆ ಕಾದು ಕುಳಿತಿದ್ದೇನೆ.
‘ಸಪ್ತಮಂ ದೈವ ಚಿಂತನಂ.’
ನಿನಗವನು ಹಳ್ಳಿಯಲ್ಲಿ ಸಿಕ್ಕಿದೆಯೆ ಹೋದದ್ದು,

ವಿಷಯ ತಿಳಿಯದೆ ನೀನು ಇಲ್ಲಿಗೇ ಬಂದದ್ದು,
ನನಗೆ ಎರಡೂ ಬಹಳ ಒಳ್ಳೆಯದು ; ಒಳ್ಳೆಯದೆ
ನಮಗೆ ಆಗುವುದೆಲ್ಲ.
೩
ಈಗ ಎಲ್ಲಿಗೆ ಬಂತು ?
ಮಧ್ಯಾಹ್ನ ಮನೆಗೆ ಬಂದಾಗಲೇ ಉರಿಬಿಸಿಲು ;
ತಲೆಕೆಟ್ಟರೂ ನನಗೆ ತಲೆಯಿತ್ತು ; ತಲೆನೋವು.
ಹಸಿವು ಹೊಟ್ಟೆಯ ತುಂಬ. ಆಗ ನೆರೆಮನೆಯಿಂದ
ಘಮಘಮ ಇಂಗಿನೊಗ್ಗರಣೆ ; ಗಾಳಿಯ ಕರುಣೆ.
ಹೋಟಲಿನ ಅನ್ನಕ್ಕೆ ವೇಳೆಯೂ ಮೀರಿತ್ತು.
ಯಾರು ಬಂದರು ಗೊತ್ತೆ ?
ಮೂರು ಬೆಂಕಿಗಳಂತೆ ಮೂರು ಕಾಲಗಳಂತೆ
ಮೂರು ತಲೆಮಾರುಗಳ ಸುಕೃತ ಮೈವೆತ್ತಂತೆ
ಮಡಿಯುಟ್ಟ ಹಸಿದ ಮೂವರು.
ತೆರೆದ ಬಾಗಿಲು, ನೋಡು, ನೇರ ಬಂದರು ಒಳಗೆ,
ಕೆಲಸದವಳಿಗೆ ಇಂದು ವಾರದ ರಜ ; ಸರಿಯೆ,
ಇಲ್ಲಿ ಬಾಗಿಲ ಮುಂದೆ ರಂಗೋಲಿ ಇರಲಿಲ್ಲ,
ತಪ್ಪು ಕಲ್ಪನೆಯಿಂದ ಇತ್ತ ಬಂದರೇನೊ !
ಅಥವಾ ಈಗ
ಊರ ಬೀದಿಗಳನ್ನು ಚಂದಮಾಡಿದ್ದಾರೆ,
ದಾರಿಯೆರಡೂ ಕಡೆಗೆ ಸಸಿಯ ನಟ್ಟಿದ್ದಾರೆ,
ವೃತ್ತಚೌಕಗಳಲ್ಲಿ ಹೂವ ಬೆಳಸಿದ್ದಾರೆ,
ಹಳೆಯ ಬಚ್ಚಲುಗಳಿಗೆ ಹಲ್ಲು ಕಟ್ಟಿದ್ದಾರೆ;
ಗುರುತು ಸಿಕ್ಕದ ಹಾಗೆ ಮಾಡಿಬಿಟ್ಟಿದ್ದಾರೆ.
ನೆಲದ ಚರ್ಮವ ಕಿತ್ತು ನೀರ ನಳಿಗೆಯ ಹೂಳಿ
ಕೆಂಪು ಬಟ್ಟೆಯ ಕಟ್ಟ ಹೊರಟು ಹೋಗಿದ್ದಾರೆ.
ಬೀದಿ ತಪ್ಪುವುದಿಲ್ಲ ಯಾರಿಗೂ ಸುಲಭ !
ತಪ್ಪು ಬೀದಿಗೆ, ತಪ್ಪು ಮನೆಗೆ ಬಂದರೇನೋ ?

ಇವು ನನ್ನ ಚಿಂತೆ ; ಬಂದವರಿಗೂ ಅನುಮಾನ :
“ಬಂದುದೆಲ್ಲಿಗೆ ನಾವು ? ಮುಂದೆಲ್ಲಿಗೆ ?”
ಚಾಪೆಯನು ಮುಡಿದು ಗಡಿಯಾರವನ್ನು ನೋಡಿದರು ;
ಜಿಂಕೆಗೂ ಹಸಿವು, ಹುಲಿಗೂ ಹಸಿವು. ನೋಡಿದರು
ತೆರೆದ ಬಾಗಿಲ ಕಡೆಗೆ, ತಡೆದೆ ನಾನು,
ಉಭಯಕುಶಲೋಪರಿಯ ಕಾಲಹರಣದ ಬಳಿಕ
ಬಾವಿಯೊಳಗಿದ್ದದ್ದು ಬಂತು ಮೇಲೆ,
ಆ ಮನೆಯ ನಂಬರೂ ಹನ್ನೊಂದು, ಇದರಂತೆ ;
ಬೀದಿ ಮಾತ್ರ ಬೇರೆ, ಹಿಂದಿನದು ಮಹರಾಯ !
ಆ ಮನೆಯ ಕಿಟಕಿಯನ್ನು ಇಲ್ಲಿಂದ ಕಾಣಿಸಿದೆ.
ಕಿವಿಮುಟ್ಟಿ ಪ್ರವರ ಹೇಳಿದೆ, ಅಡ್ಡ ಬಿದ್ದೆ. ಶತಾಯುವಾಗೆಂದು ಅಮೃತಮಂತ್ರಗಳಿಂದ
ಹರಸಿ ಹೋದರು, ನೋಡು, ಮೂರು ಬೆಂಕಿಗಳಂತೆ
ಮೂರು ಕಾಲಗಳಂತೆ ಒದಗಿದಭ್ಯಾಗತರು.
ಐವತ್ತು ಕಳೆದರೂ ಐವತ್ತು ಉಳಿದಿತ್ತು ;
ನನ್ನ ಸಂದರ್ಭಕ್ಕೆ ಅಷ್ಟು ಸಾಕೆಂದೆದ್ದೆ.
ಶಾಂತವಾಯಿತು ಕಡಲು ; ಶಾಂತವಾಯಿತು ಗಗನ ; ಶಾಂತವಾಯಿತು ನಾನು ನಿಂತ ಭೂಮಿ.
ತೆರೆದ ಬಾಗಿಲನವರು ದಾಟಿಹೋದುದ ಕಂಡೆ ;
ನೆಲದ ಮೇಲೆಲ್ಲೆಲ್ಲು ಮಂತ್ರಾಕ್ಷತೆ.
ಶಾಂತಿಃ ಶಾಂತಿಃ ಶಾಂತಿಃ

Close

ಋಷ್ಯಶೃಂಗ

ಬನ್ನಂಜೆ ಗೋವಿಂದಾಚಾರ್ಯ

ಋಷ್ಯಶೃಂಗ

೧
ಋಷ್ಯಶೃಂಗನ ಪರ್ಣಕುಟಿಯಲಿ ಎಲ್ಲು ಇಲ್ಲದ ಸಂಭ್ರಮ
ಮುನಿವಿಭಾಂಡಕ ಎತ್ತ ಹೋದನೋ ಏಕೊ ಏನೋ ವಿಭ್ರಮ
೨
ಜಾರುಬಂಡೆಯ ತುತ್ತತುದಿಯಲಿ ಋಷ್ಯಶೃಂಗನ ಆಶ್ರಮ
ವೇದಮಂತ್ರದ ಶಾಂತಿಪಾಠದಿ ಇಲ್ಲ ಅವನಿಗೆ ವಿಶ್ರಮ
೩
ಪಾಚಿಕಟ್ಟದ ಎಲೆಯ ಮೆಟ್ಟಲು ಜಾರುಬಂಡೆಯ ಶಿಖರಕೆ
ಇಂದ್ರಚಾಪದ ಮೇಲುಕಟ್ಟಿದೆ ಮನೆಯ ಮಾಡಿನ ನೇರಕೆ
೪
ಬಂಡೆಯಡಿಯಲಿ ನಿಂತ ನೀರಲಿ ಅರಳಿಹುದು ಸೇವಂತಿಗೆ
ಇಲ್ಲಿ ಯಾರೂ ಕೊಡುವರಿಲ್ಲ ಕಾಮದೇವಗೆ ವಂತಿಗೆ
೫
ಎತ್ತಣಿಂದಲೊ ಯಾರೊ ಬಂದರು ಹೊಸತು ವೇಷsಭೂಷಣ
ಏನೊ ಕಿಲಕಿಲ ಏನೊ ಪಿಸುಪಿಸು ಹಕ್ಕಿಯಂತೆಯೇ ಭಾಷಣ
೬
ಬಣ್ಣ ಬಣ್ಣದ ಬಟ್ಟೆಬರೆಗಳು ಏನು ನಾಟಕ ನಡೆದಿದೆ
ಇಷ್ಟು ದಿನವೂ ಕೇಳದಂತಹ ಹೊಸತೆ ರಾಗವ ನುಡಿದಿದೆ
೭
ಋಷ್ಯಶೃಂಗನ ಪಂಚೆ ಕೂಡ ಲಜ್ಜೆಯಲಿ ಕೆಂಪಾಯಿತು
ಉರಿವ ಬಿಸಿಲಲಿ ಸುಡುವ ಕಾವಲಿ ಬಂಡೆಯೂ ತಂಪಾಯಿತು

೮
ಜಿಂಕೆಯೊಡಲಲಿ ಹುಟ್ಟಿ ಬಂದವ ಮಂಕು ಬಡಿದೊಲು ನಿಂತನು
ಮೀನು ಮಾರುವ ಬೆಸ್ತರವಳಿಗೆ ಕಣ್ಣು ಹೊಡೆದನೆ ಶಂತನು
೯
ಋಷ್ಯಶೃಂಗನ ಶಬ್ದಮಂಜರಿ ರಾಮಶಬ್ದಕೆ ನಿಂತಿದೆ
ಏನು ‘ರಾಮಾ’ಶಬ್ಬ ಕೂಡಾ ಬೇರೆ ಕಡೆಯಲಿ ಬಂದಿದೆ !
೧೦
ಋಷ್ಯಶೃಂಗನ ಜುಟ್ಟು ಕೂಡಾ ನೆಟ್ಟಗಾಯಿತು ನುಣ್ಣಗೆ
ನಿಂತ ನೆಲವೂ ದಿಟ್ಟತನದಲಿ ಕಾಲ ಕೊರೆಯಿತು ತಣ್ಣಗೆ
೧೧
‘ಯಾರು ಈ ಜನ ಏನು ಈ ತೆರ ನನ್ನ ತಪವೇ ಫಲಿಸಿತೆ
ವೇದರಾಶಿಯು ಈ ಪರಾತ್ ಪರ ತತ್ವವನ್ನೇ ತಿಳಿಸಿತೆ
೧೨
‘ಬ್ರಹ್ಮಸಾಕ್ಷಾತ್ಕಾರವೆಂದರೆ ಇಂಥದೇ ಇರಬೇಕಲ
ಅಲ್ಲ ತಪ್ಪಿದೆ-ಬೇರೆ ಎಂಥದು ಇದುವೆ ತಾನಿರಬೇಕಲ
೧೩
“ನಮ್ಮ ತೋಟದ ಬಳ್ಳಿಯಂತೆಯೆ ತಲೆಯ ತುಂಬs ಹೂವಿದೆ
ಕೆಳಗೆ ಹೂವಿನ ಕಂಪನರಸುತ ಕಪ್ಪು ನಾಗರ ಹಾವಿದೆ
೧೪
‘ಗಂಧ-ಅಕ್ಷತೆ ಒಂದು ಇಲ್ಲ ಹಣೆಯಲೇನೋ ಕೆಂಪಿದೆ
ಅಷ್ಟಮಿಯ ಚಂದ್ರಾರ್ಘ್ಯಸಮಯದ ಚಂದ್ರನಂತೆಯೆ ತಂಪಿದೆ
೧೫
“ಅಪ್ಪ ಪೂಜೆಗೆ ತರುವ ಹೂವಿನ ಎಸಳಿನಂತೆಯೇ ಕಣ್ಣಿದೆ
ನನ್ನ ಸಾಮುದ್ರಿಕದ ಬಲದಲಿ ಪ್ರಾಯಶಃ ಇದು ಹೆಣ್ಣಿದೆ

೧೬
‘ಈಚೆ ಕಿವಿಯಿಂದಾಚೆ ತನಕವು ಕಣ್ಣು ಕಣ್ಣೆ ಹರಿದಿದೆ
ಏಕೊ ಏನೋ ನನ್ನ ನೋಟವು ಅತ್ತ ಕಡೆಗೇ ಸರಿದಿದೆ
೧೭
“ಕಿವಿಯ ಮೇಲಣ ದಾಸವಾಳವು ತುಂಬ ಪುಣ್ಯವ ಮಾಡಿದೆ
ಹಿಂಡಿ ಕಿವಿಯನು ಹೂವ ಕೀಳಲೆ ಎಂಬ ಯೋಚನೆ ಮೂಡಿದೆ
೧೮
‘ಕಾಡುಗಿಳಿಯ ಕೊಕ್ಕೆ ಹೋಲುವ ಮಗು ಬಗೆಯನು ಕಾಡಿದೆ
ಗುಡಿಯ ದೇವರ ಮೇಲೆ ಮಡಗಿದ ಸಂಪಗೆಯ ಹೂ ಬಾಡಿದೆ
೧೯
‘ಮೊಗ್ಗೆ ತುದಿಯಲಿ ಚಿಟ್ಟೆ ಎರಗಿದೆ ಏನು ಇದು ಬಂಗಾರವೆ
ಪೇಟಿಯಲಿ ಬೆಳೆದಂಥ ಜನರಿಗೆ ಈ ತರದ ಸಿಂಗಾರವೆ
೨೦
“ಕೆಂಪು ಅಗಸೆಯ ಹೂವಿನಂದದಿ ಸೋನೆ ಜಿನುಗುವ ತುಟಿಯಿದೆ
ಒತ್ತಿ ಬಿಡಲೇ ತುಟಿಗೆ ತುಟಿಯನು ಏತಕೋ ತುಟ ಪುಟದಿದೆ
೨೧
“ನಮ್ಮ ಪೂಜೆಯ ಶಂಖಕಿಂತಲು ಈ ಕೊರಳು ನುಣುಪಾಗಿದೆ
ಪಾರದರ್ಶಕ ಚಿಗುರಿನಿಂದಲೆ ಇದನು ಮಾಡಿದ ಹಾಗಿದೆ
೨೨
“ಎದೆಯ ಮೇಲೆ ಕಾಯಿಬಿಟ್ಟ ಕಲ್ಪವೃಕ್ಷದಂತಿದೆ
ಉತ್ತರೀಯವಿರದ ಎದೆಗೆ ಜಾರ ಅಡ್ಡಿ ತಂದಿದೆ
೨೩
“ಏನು ಸೆಳೆತ ಎಂಥ ಕೊರೆತ ಪುಟವ ಚೆಂಡಿನಂತಿದೆ
ತುದಿಯ ಕಪ್ಪು ನನ್ನ ಕಡೆಗೆ ನೆಟ್ಟಗೇನೆ ನಿಂತಿದೆ

೨೪
“ಜನ್ನದಾರವೆ ಇಲ್ಲವಲ್ಲ ಎಂಥ ಜಾತಿ ಈ ಜನ
ಹಣ್ಣು ಕಿತ್ತು ಬಿಡಲೆ ಹೋಗಿ ಎಂಥ ರಸದ ಭೋಜನ
೨೫
‘ಕಿತ್ತಲೆಯ ಹಣ್ಣಿನಂತೆ ಕೆನ್ನೆ ಕೆಂಪಗಾಗಿದೆ
ಕಣ್ಣು ತುಂಬ ಏನೊ ಏನೋ ಮಾತು ಸುರಿವ ಸೋಗಿದೆ
೨೬
“ನಮ್ಮ ಕೆರೆಯ ನೀರಿನಂತೆ ಸೀರೆ ಪಾರದರ್ಶಕ
ಕೆರೆಯ ತಳದ ಮೀನಿನಂತೆ ನಾನು ರಸವಿಮರ್ಶಕ
೨೭
“ನಮ್ಮ ದಟ್ಟ ಪಂಚೆಯಲ್ಲ ಇವರು ಉಡುವ ಧಾವಳಿ
ಹೊರಗಿನಷ್ಟೆ ಒಳಗು ಸ್ಪಷ್ಟ ಏನು ಬಂತು ಹಾವಳಿ
೨೮
“ಇವರು ಉಣುವುದಿಲ್ಲವೇನೊ ನಡುವೆ ಶೂನ್ಯವಾಗಿದೆ
ಒಡಲನೆಲ್ಲ ಕಿತ್ತು ಕೊರೆದು ಎದೆಗೆ ಮೆತ್ತಲಾಗಿದೆ
೨೯
‘ತಪದ ಪುಣ್ಯಫಲನೆ ಫಲಿಸಿ ಬಾಳು ಧನ್ಯವಾಗಿದೆ
ಉಟ್ಟರೂನು ಬಟ್ಟೆ ಬರೆಯ ಊರು ಬತ್ತಲಾಗಿದೆ
೩೦
“ಸಂಜೆ ಹೊತ್ತು ಜಪದ ಸಮಯ ಸುತ್ತ ಕತ್ತಲಾಗಿದೆ
ಮಂತ್ರವೊಂದು ಹೊಳೆಯುತ್ತಿಲ್ಲ ಚಿತ್ರವೆತ್ತ ಸಾಗಿದೆ
೩೧
‘ಕಾಲಿನಿಂದ ತಲೆಯತನಕ ಮೈಗೆ ಮೈಯ ತಾಗಿಸಿ
ಕೇಳಿಬಿಡಲೆ ಕ್ಷಮೆಯ, ತಲೆಯ ಕಾಲಿನೆಡೆಗೆ ಬಾಗಿಸಿ

೩೨
‘ಮೂಸಲೇನು ಮುಟ್ಟಲೇನು ಮೈಯ ಮೂಲೆ ಮೂಲೆಯ
ಏರು-ಪೇರುಗಳನು ಅಳೆದು ಏರಲೇ ಹಿಮಾಲಯ
೩೩
‘ತೀರ ಮಸಕು ತೀರ ಹೊಸತು ಏನೋ ಒಂದು ಅನುಭವ
ಏನು ಬಣ್ಣ ಏನು ದಿಣ್ಣ ಏನು ಎಂಥ ವೈಭವ
೩೪
“ಉಟ್ಟ ಪಂಚೆ ಕೂಡ ಬಿಚ್ಚಿ ಬತ್ತಲಾಗಿ ಓಡಲೇ
ಹಕ್ಕಿಯಂತೆ ಪುಕ್ಕ ತೆರೆದು ಹಾಡನೊಂದು ಹಾಡಲೆ
೩೫
“ಬಿಟ್ಟು ನಾಚಿಕೆ ಬಿಟ್ಟ ಬಾಯಿಗೆ ಮಾಡಿಬಿಡಲೇ ಯಾಚನೆ’
ಋಷ್ಯಶೃಂಗನ ತಲೆಯ ತುಂಬಿತು ಹೇಳಲಾಗದ ಯೋಚನೆ
೩೬
ರೋಮಪಾದನ ಊರೊಳಾಗಲೆ ಗಗನ ತುಂಬ ಮೋಡವೆ
ಋಷ್ಯಶೃಂಗನ ಗುಡಿಯ ಹೂಗಳ ತುಂಬಿಗಳು ತಡಕಾಡಿವೆ
೩೭
ಋಷ್ಯಶೃಂಗನ ಪರ್ಣಕುಟಿಯಲಿ ಎಲ್ಲಿ ಇಲ್ಲದ ಸಂತಸ
ಎದೆಯ ತಂಬುರ ಶ್ರುತಿಯ ಹಿಡಿದಿದೆ ಒಳಗು ಸರಿಗಮಪದನಿಸ.

Close

ಅಂತರಂಗ ವಿಜ್ಞಾನ

ಯದುಗಿರಿ ರಂಗ

ಅಂತರಂಗ ವಿಜ್ಞಾನ

ಪಿ. ನರಸಿಂಹ ಭಟ್ಟರ ‘ಆಲಂಕಾರಿಕರ ಮೂರೂ ಪ್ರಸ್ಥಾನಗಳು : ವಿಕಾಸ ಗ್ಲಾನಿಗಳ ಸಾಹಚರ್ಯ’ ಎಂಬ ವಿಚಾರಾರ್ಹವಾದ ಲೇಖನವನ್ನು ಓದುತ್ತಿದ್ದಾಗ್ಗೆ (ಸಾಕ್ಷಿ, ಶರತ್ ಸಂಚಿಕೆ, ೬೯) ಧ್ವನಿಪ್ರಸ್ಥಾನದ ಬಗ್ಗೆ ಅವರು ಮಾಡಿರುವ ಟೀಕೆಗಳಿಗೆ ವಿಶ್ಲೇಷಣೆ ಅಗತ್ಯವೆಂದು ತೋರಿಬರುತ್ತಿದೆ.
ಧ್ವನಿಶಕ್ತಿಯ ಹೊಸ ಅಭಿವ್ಯಕ್ತಿ ಕುಸಿದಿದೆ (೧೯ ನೇ ಪುಟ, ೬ ನೇ ಸಾಲಿನಿಂದ) ಎಂದು ಹೇಳುವಲ್ಲಿ ಅನೇಕ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ: ‘ಅಲೌಕಿಕ ಅನುಭವಕ್ಕೆ ಪ್ರೇರಕವಾಗುವ ಲೌಕಿಕ ಅನುಭವದ ಅನಂತತೆ ಇವನಿಗೂ ಹೊಳೆಯುವುದಿಲ್ಲ’ ಎಂಬಲ್ಲಿ ಧ್ವನಿಯ ಅನಂತತೆಗೆ ಪ್ರಾಧಾನ್ಯ ಕುಂಠಿಸುವ ಪ್ರಯತ್ನವಿದೆ ; ಜೊತೆಗೆ ಧ್ವನಿಗೆ ಒಂದು ಕಟ್ಟುಮಸ್ತಾದ ಅಡಿಪಾಯವೂ ಇಲ್ಲ ಎಂಬ ಭಾವವಿದೆ. ಧ್ವನ್ಯಾಲೋಕಕರ್ತೃವಾಗಲೀ, ಅದರ ಆಲೋಚಕನಾಗಲೀ ಇಂತಹ ಟೀಕೆ ಮುಂದೆ ಬರಬಹುದೆಂದು ಯೋಚಿಸದೇ ಇಲ್ಲ. ಅಂತೇ, ಮೂರು ಹಂತವನ್ನು ಬಹಳ ಪರಿಣಾಮಕಾರಿಯಾಗಿ ಉಪಯೋಗಿಸಿದ್ದಾರೆ: ಭಾವ, ವಿಭಾವ, ಅನುಭಾವ, ವಿಭಾವ-ಭಾವ ಸಂಚಾರವಿಲ್ಲದೆ ಅನುಭಾವವಿಲ್ಲ ಎಂದು ಎಂದೋ ಹೇಳಿದ್ದಾರೆ. ಧ್ವನಿಯ ಅರ್ಥ ಅಕಿಕತೆಯಲ್ಲಿ ಮಾತ್ರ ತೇಲಾಡುವುದಲ್ಲ, ಲೌಕಿಕವಾದ ವಿಮಾನದ ಸಹಾಯವೇ ಮೋಡದ ಮೇಲಿನ ಇದರ ಸಂಚಾರಕ್ಕೆ ಮೂಲ.
ಅಲೌಕಿಕತೆಯ ಅನುಭವವನ್ನು ಪಡೆಯುವ ಯತ್ನವೇ ಆದಿಯಿಂದ ಮಾನವ ನಡೆದು

ಬಂದ ದಾರಿಯಲ್ಲಿ ಕಾಣಬರುವ ಹೆಜ್ಜೆ ಗುರುತುಗಳು. ಭಗವಂತನ ಸೃಷ್ಟಿ ಎಂದು ತನ್ನ ಕಣ್ಣ ಮುಂದಿರುವುದನ್ನು ಕಂಡು, ಭಗವಂತನ ಅಲೌಕಿಕತೆಗೆ ಮಾರುಹೋದ. ಜೀವನಚಕ್ರವನ್ನು ನೋಡಿ, ವಿವಿಧ ಪ್ರಾಣಿಸಮುದಾಯವನ್ನು ಕಂಡು, ಜಡ-ಚೇತನವನ್ನು ಅರಿತು, ನಿತ್ಯ-ಅನಿತ್ಯವನ್ನು ಅರಿತು, ಆದಿ-ಅನಂತದ ಮಹಾ ಸಾಗರದಲ್ಲಿ ತಾನು ಈಜಲಾರೆನೆಂದೇ ತಿಳಿದು, ಅವನು ಈ ಅಲೌಕಿಕತೆಗೆ ಮಾರುಹೋದ. ತನ್ನ ಭಾವಕ್ಕೆ ಎಷ್ಟು ನಿಲುಕಬಹುದೋ (ತಾನು ಎಷ್ಟು ದೂರ ಈ ಸಾಗರದಲ್ಲಿ ಈಜಬಹುದೋ) ಅಷ್ಟನ್ನು ತನ್ನ ಅನುಭಾವವಾಗಿ ಮಾರ್ಪಡಿಸಿಕೊಳ್ಳುವ ಚೇತನ ಅವನಲ್ಲಿ ಒಡಮೂಡಿ ಬಂದಿತು. ಸಾಹಿತ್ಯದ ಮೂಲವೇ ಇದು. ಅಂತಹ ಸಾಹಿತ್ಯದ ಶಬ್ದ ರೂಪ ವಸ್ತುವಿನಲ್ಲಿ (ಕಾವ್ಯದಲ್ಲಿ) ಅನಂತತೆಯ ಚೇತನವನ್ನು ಅಗಾಧವಾಗಿ ಕಾಣುವ ಇಚ್ಛೆಯನ್ನು ಹಿಂದಿನಿಂದ ಲಾಕ್ಷಣಿಕರು ತೋರಿದ್ದೇ ಆದರೆ ಅದಕ್ಕೆ ನಾವು ದುಃಖಪಡುವ ಅಗತ್ಯವಿಲ್ಲ.
ಹಾಗೆ ವಿಶ್ಲೇಷಿಸಿದರೆ ಶಬ್ದವನ್ನು ಆದಷ್ಟೂ ಅಲಂಕರಿಸಿ ಶ್ರಾವ್ಯ ಮಾಡುವ ಪ್ರಯತ್ನ ಭಾವಕ್ಕೆ ಘಾಸಿ ಉಂಟುಮಾಡುವುದಾದಲ್ಲಿ, ಅದನ್ನು ಖಂಡಿಸಬೇಕಾದದ್ದು ಸಮ್ಮತ. ಪ್ರಸಕ್ತ ಲೇಖಕರೂ ಈ ಮಾತಿನಲ್ಲಿ ಸಹಮತರಾಗಿದ್ದಾರೆ. ಅಲಂಕಾರ ಹಾಗೂ ರೀತಿಯ ಪ್ರಸ್ಥಾನಕಾರರು ಧ್ವನಿಯ ಬಗ್ಗೆ ಚಿಂತನೆ ಮಾಡಿಲ್ಲವೆಂದಲ್ಲ. ಧ್ವನಿ ಸರ್ವಸ್ವ ಎಂಬ ಮಟ್ಟದ ಚಿಂತನೆ ಅವರದಾಗಲಿಲ್ಲ ಎಂಬುದು ಸತ್ಯ. ಕಾವ್ಯದ ಆತ್ಮ ರಸ ಎಂಬ ನಿರ್ಧಾರಕ್ಕೆ ಅವರೂ ಬಂದರು. ಅನೇಕರು ಈ ಸತ್ಯವನ್ನರಿತು, ಜಾಗರೂಕರಾಗಿ, ತಮ್ಮ ವಾದವನ್ನು ಈ ಸತ್ಯಕ್ಕೆ ಅಪಚ್ಯುತಿ ತರದಂತೆ ನೋಡಿ ಕೊಂಡಿದ್ದಾರೆ. ಅಂತಹವರ ಹೆಸರುಗಳು ಕಾವ್ಯಮಾವಾಂಸೆಯಲ್ಲಿ ಸುವರ್ಣಾಕ್ಷರದಲ್ಲಿ ಬರೆಯಲ್ಪಟ್ಟಿವೆ.
ಆದರೆ ಅಲಂಕಾರ, ರೀತಿ ವೈಶಿಷ್ಟ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಕಾವ್ಯಕ್ಕೆ ಘಾಸಿ ಮಾಡಿದವರ ಸಂಖ್ಯೆ ಹೇರಳವಾಗಿದೆ. ಕಾವ್ಯದ ಒಟ್ಟು ಅನುಭಾವವನ್ನು ಅವರು ನಾಶಗೊಳಿಸಿದ್ದಾರೆ.
ಹಾಗೇ, ಈ ಪ್ರಸ್ಥಾನಕಾರ-‘ಸೌಂದರ್ಯಮಿಮಾಂಸಕರು ಹೇಳುವ ‘ರಸ’ ಎಂಬ ಕಲ್ಪನೆಯನ್ನು ವಿಶ್ಲೇಷಿಸದೆ ಒಪ್ಪಿಕೊಳ್ಳುತ್ತಾನೆ’-ಎಂದಿದ್ದಾರೆ. ರಸದ ಬಗ್ಗೆ ಒಂದು ಸೂಕ್ಷ್ಮ ಅಭಿಪ್ರಾಯ ಮೂಡಿರುವುದಾದರೂ, ಪ್ರಸಕ್ತ ಲೇಖಕರು ಇಂತಹ ಅಗಾಧವಾದ ಭಾವವೈಪರೀತ್ಯವನ್ನು ತೋರಿರುವುದರಿಂದ ಅದರ ಬಗ್ಗೆ ಸಹೃದಯರಾಗಿ ವಿವೇಚನೆ ಮಾಡುವುದಗತ್ಯ.

ರಸಕ್ಕೆ ಒಂಭತ್ತು ರೂಪವುಂಟು ಎಂದು ಲಾಕ್ಷಣಿಕರು ಹೇಳುವುದು ‘ಮೂಲವಸ್ತು’ಗಳ ಬಗ್ಗೆಯ ಒಂದು ಸೂಚನೆ. ಕೆಲವು ಬಾರಿ ಈ ರಸರೂಪವನ್ನು ಬೇರ್ಪಡಿಸುವುದು ಕಠಿನವಾಗುತ್ತದೆ. ಕೇವಲ ಒಂದು ಶ್ಲೋಕದಲ್ಲೇ ಅನೇಕ ಭಾವಗಳು ತೆರೆತೆರೆಯಾಗಿ ಬಂದು ವಿಧವಿಧ ರಸಜನಕವಾಗಿರಬಹುದು. ಈ ಸೂಕ್ಷ್ಮತೆಯನ್ನು ಕಂಡೋ ಏನೋ ಪ್ರಸಕ್ತ ಲೇಖಕರು ‘ಸೌಂದರ್ಯ ಮಿಮಾಂಸಕರು ರಸದ ಸಂಜ್ಞೆಯನ್ನು ಎಂಟು ಅಥವಾ ಒಂಭತ್ತರಲ್ಲಿ ನಿಲ್ಲಿಸಿಬಿಡುತ್ತಾರೆ’ ಎಂದು ಅಪಹಾಸ್ಯಕರವಾಗಿ ಹೇಳಿದ್ದಾರೆ.
ರಸಾಯನಶಾಸ್ತ್ರದಲ್ಲಿ ಕಾಣಬರುವ ಮೂಲವಸ್ತು, ಸಂಯುಕ್ತವಸ್ತು ; ಅಣು, ಪರಮಾಣು, ಇತ್ಯಾದಿಗಳ ಭಿನ್ನಭಾವ ಇಲ್ಲೂ ಸರಿಹೊಂದುತ್ತದೆ. ಕೆಲವನ್ನು ಕಂಡು ಹಿಡಿದು ತನ್ನ ಹಸ್ತದಲ್ಲಿಟ್ಟುಕೊಂಡು ರಸಾಯನಶಾಸ್ತ್ರಜ್ಞನು ಹೆಸರು ಕೊಟ್ಟು, ಕೈಗೆ ಸಿಗಲಾರದ್ದನ್ನು ಪ್ರಯೋಗಮೂಲಕ ತಿಳಿದು ಹೇಗೆ ಊಹಿಸಿ ಹೆಸರಿಸಿದ್ದಾನೋ, ಹಾಗೇ ಹಿಂದಿನ ಲಾಕ್ಷಣಿಕನೂ ಮಾಡಿದ್ದಾನೆ. ನನ್ನ ಮಟ್ಟಿಗೆ ‘ರಸ’ ಒಂದು ‘ಸಾರ’. ಸಾರವತ್ತಾದ ಭೋಜನದಲ್ಲಿ ಒಂದರ ಹೆಚ್ಚುವಿಕೆ ಒಂದರ ಕುಗ್ಗುವಿಕೆ ಹೇಗೆ ಗೊತ್ತಾಗುತ್ತದೋ, ಹಾಗೆ ರಸ ಕಾವ್ಯದ ಅಭಿವ್ಯಕ್ತಿಯಲ್ಲಿ ತನ್ನ ಪಾತ್ರವನ್ನು ವಹಿಸುತ್ತದೆ.
ಹಿಂದಿನವರು ಹೇಳಿದರು, ಅದನ್ನೇ ನಡೆಸಿಕೊಂಡು ಹೊರಟರು ಇವರು ಎಂಬ ಆಪಾದನೆ ಇದೆ. ಹಾಗೆ ಕಂಡಲ್ಲಿ, ಧ್ವನಿಪ್ರಸ್ಥಾನಕ್ಕೆ ಸಿಕ್ಕಷ್ಟು ಅಡೆತಡೆ ಪ್ರಾಯಶಃ ಕಾವ್ಯಮಿವಾಮಾಂಸೆಯ ಮತ್ತಾವ ಭಾಗಕ್ಕೂ ಸಿಕ್ಕಿಲ್ಲವೇನೋ. ಸಂತಸದ ವಿಷಯವೆಂದರೆ, ಆ ಅಡೆತಡೆಗಳನ್ನೆಲ್ಲಾ ಕಿತ್ತೊಗೆಯಬಲ್ಲ ಸಾಹಸಿಗಳು ಅಂದಿದ್ದರು. ರಸದ ವಿವೇಚನೆಯನ್ನು ಧ್ವನಿಪ್ರಸ್ಥಾನಕಾರರು ಮಾಡುವಾಗ ಕೇವಲ ಭರತನನ್ನೇ ಪೂರ್ಣ ಆಧಾರವಾಗಿ ತೆಗೆದುಕೊಳ್ಳಲಿಲ್ಲ. ನಮಗೆ ಇಂದು ದೊರಕದೇ ಹೋಗಿರುವ ಅನೇಕಾರು ಲಾಕ್ಷಣಿಕರ ಗ್ರಂಥಗಳು ಅಂದು ಅವರ ಮುಂದಿದ್ದವು. ಅದರ ನೆರಳನ್ನು ಆನಂದ ವರ್ಧನನ, ಅಭಿನವಗುಪ್ತನ ಕೃತಿಗಳಲ್ಲಿ ಕಾಣಬಹುದು. ಪ್ರಾಯಶಃ ಭರತನೂ ಆರಂಭದಲ್ಲಿ ರಸವಿವೇಚನೆಗೆ ಪ್ರಾರಂಭಿಸಿದಾಗ ವಾದ-ಪ್ರತಿವಾದಕ್ಕೆ ಸಿಕ್ಕಿ ಜಡನಾದನೇನೋ ! ವಿವೇಚನೆ ಮಾಡುವ ಶಕ್ತಿ ಇಲ್ಲದೇ ಹೋಗಿದ್ದರೆ ಹೊಸ ಪ್ರಸ್ಥಾನವನ್ನು ಆರಂಭ ಮಾಡುವ ಚೈತನ್ಯ ಎಲ್ಲಿಂದ ಬರುತ್ತಿತ್ತು?
ಒಂದುವೇಳೆ ‘ರಸ’ದ ಮೂಲವನ್ನು ‘take it for granted” ಅನ್ನುವ ಮನೋ ಭಾವನೆಯಿಂದ ತೆಗೆದುಕೊಂಡಿದ್ದಾರಾದರೆ, ಅದಕ್ಕೂ ದುಃಖಪಡುವ ಅಗತ್ಯವಿಲ್ಲ. ಕಾರಣ, ಮೂಲ ದೇವನ ಆಲಂಬನ ಪಡೆದೇ ಉತ್ಸವಮೂರ್ತಿಯ ಅಟ್ಟಹಾಸ. ಮೂಲ

ವನ್ನು ಪ್ರತಿಷ್ಠೆ ಮಾಡಿದಾಗ ಅವನ ಮೂಲವನ್ನೇ ಪ್ರಶ್ನಿಸುವ ಸಾಮರ್ಥ್ಯ ಭಕ್ತನಾದವನಲ್ಲಿ ಇರುವುದಿಲ್ಲ. ರಸ ಕವಿಯ ಮೂಲದೇವರು. ಈ ಭಕ್ತಕವಿ ಆದಿದೇವನನ್ನು ಪ್ರಶ್ನಿಸುವುದಿಲ್ಲ, ಪ್ರಶ್ನಿಸುವುದು ಚೆನ್ನಲ್ಲ. ಇದು ಪ್ರಥಮದೃಷ್ಟಿಗೆ ಮೂಢಭಾವನೆ ಎನ್ನಿಸಬಹುದು. ಆದರೆ ಪರ್ಯಾಲೋಚಿಸುತ್ತಾ ಹೋದಂತೆ ಇದರರ್ಥ ಸ್ಪಷ್ಟವಾಗುತ್ತದೆ.
ದೇವನಲ್ಲಿ ಭಕ್ತಿ ಇಡದ ‘ಭಕ್ತ’ನ ಪೂಜೆ ಎಂತಹದು ? ದೇವನಲ್ಲೇ ಅಪನಂಬಿಕೆ ಇರುವಾಗ, ಪೂಜೆ ಮಾಡುವುದಕ್ಕೆ ಕುಳಿತರೂ ಅದು ಒಂದು ಕಪಟನಾಟಕ. ಹಾಗೇ ಕವಿಗೆ ಕಾವ್ಯರಸದಲ್ಲಿ ನಿಷ್ಠೆ ಇರಬೇಕು, ಒಲವಿರಬೇಕು, ಭಕ್ತಿ ಇರಬೇಕು. ಅನೇಕಾರು ಸಂದರ್ಭಗಳಲ್ಲಿ ದೇವನ ಬಗ್ಗೆ ಪ್ರಶ್ನೆಮಾಡಿದರೆ ಅವನ ಗಾಢತೆ ಮತ್ತಷ್ಟೂ ಗಾಢವಾಗುವ ಅನುಭವವಾಗುತ್ತದೆ. ಹಾಗೇ ಕಾವ್ಯರಹಸ್ಯ ಅರಿಯುತ್ತಾ ಹೋದಂತೆ ಗಾಢವಾಗಿ ತೋರುತ್ತಾ ಹೋದರೆ ಆಶ್ಚರ‍್ಯವೇನಲ್ಲ. ಅಂತಹ ಪ್ರಸಂಗದಲ್ಲಿ ಹಿಂದಿನ ಲಾಕ್ಷಣಿಕ ‘ರಸ’ ಎನ್ನುವುದನ್ನು ಮೂಲಮಂತ್ರವಾಗಿ ಉಚ್ಚರಿಸಿದ್ದೇ ಆದರೆ, ಅದರಲ್ಲಿ ನಾವು ದೋಷವೆಣಿಸಬೇಕಾದ್ದಿಲ್ಲ.
ಬಾಹ್ಯ ಆಂತರಿಕ ತತ್ವದ ವಿಶ್ಲೇಷಣೆಯನ್ನು ಎರಡು ಸಾಲಿನಲ್ಲಿ ಮಾಡಿರುವ ರತ್ನಾಕರನ ಮಾತನ್ನು ಇಲ್ಲಿ ನೆನೆಯುವುದು ಸಾಕೆನ್ನಿಸುತ್ತದೆ :
ಛಂದೋಲಂಕಾರ ಕಾವ್ಯನಾಟಕ ಶಾಸ್ತ್ರ | ಸಂದೋಹ ಬಾಹ್ಯ ವಿಜ್ಞಾನ |
ದಂದುಗವಳಿದಾತ್ಮ ತತ್ವವನರಿವುದ ದೊಂದಂತರಂಗ ವಿಜ್ಞಾನ ||
ತಮಟಕಲ್ಲು ಶಾಸನ (ಸು. ಕ್ರಿ. ಶ. ೫೦೦)
ಪುರುಷಪ್ರವರ
ಬಿಣಮಣಿ ಅನ್ನು ಭೋಗಿ ಬಿಣದುಳ್ಳಣಿವಿಲ್ಮನದೋನ್
ರಣಮುಖದುಳ್ಳ ಕೋಲಂ ನೆರಿಯರ್ಕ್ಕುಮನಿನ್ದ್ಯಗುಣನ್
ಪ್ರಣಯಿಜನಕ್ಕೆ ಕಾಮನಸಿಡೋತ್ಪಲವಣ್ಣನವನ್
ಗುಣಮಧುರಾಂಕ್ಕ ದಿವ್ಯ ಪುರುಷಪ್ರವರನ್

Close

ಪ್ರಜಾಪ್ರಭುತ್ವದ ಜೀವಾಳ

ಗೋಪಾಲಕೃಷ್ಣ ಅಡಿಗ

ಪ್ರಜಾಪ್ರಭುತ್ವದ ಜೀವಾಳ

ಸಮಾಜವಾದದ ಸಂತೆಗದ್ದಲದಲ್ಲಿ ಇಷ್ಟು ವರ್ಷಗಳ ಕಾಲ ಹೂತು ಹೋಗಿದ್ದ ವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳು, ಪ್ರಜಾಪ್ರಭುತ್ವ ಮಾರ್ಗ ಮುಂತಾದ ಮಾತುಗಳು ಈಗ ಮತ್ತೆ ಕೇಳಿಬರುತ್ತಿರುವುದು ಕಾಂಗ್ರೆಸ್ ಪಕ್ಷದ ಬಿರುಕಿನಿಂದ ಉಂಟಾದ ಶುಭದ ಒಂದು ಲಕ್ಷಣ. ಸಮಾಜವಾದದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಮೂಲಭೂತವಾಗಿ ಯೋಚಿಸುವ ಮತ್ತೊಂದು ಅವಕಾಶ ಈಗ ದೊರಕಿದೆ. ಈ ಅವಕಾಶವನ್ನು ನಮ್ಮಲ್ಲಿರುವ ಬುದ್ಧಿವಂತರೂ ವಿದ್ಯಾವಂತರೂ ದೇಶಪ್ರೇಮಿಗಳೂ ಯಾವ ರೀತಿ ಉಪಯೋಗಿಸಿಕೊಳ್ಳಲಿದ್ದಾರೆ ಎಂಬುದರ ಮೇಲೆಯೇ ಈ ದೇಶದ ಭವಿಷ್ಯ ಅವಲಂಬಿಸಿದೆ. ಈಗ ಬಂದಿರುವುದು ನಮ್ಮ ರಾಷ್ಟ್ರಕ್ಕೆ ಅತ್ಯಂತ ಅಪಾಯಕಾರಿಯಾದ ಕಾಲ. ಈ ಕಾಲದ ಸವಾಲನ್ನು ಎದುರಿಸುವ ಚೈತನ್ಯ, ಪ್ರಾಮಾಣಿಕತೆ, ಸ್ಪಷ್ಟ ವಿಚಾರ ದೇಶದಲ್ಲಿ ಕುದುರುವಂತೆ ಮಾಡುವುದಕ್ಕಿಂತ ಹೆಚ್ಚಿನ ದೇಶಪ್ರೇಮದ ಕೆಲಸ ಬೇರೊಂದು ಕಾಣುವುದಿಲ್ಲ.
ಪ್ರಜಾತಂತ್ರದ ಜೀವಾಳ ಯಾವುದು ಎಂದು ಯೋಚಿಸುವಾಗ ಅದು ಭಿನ್ನಮತ, ಅನ್ಯಮತ, ಅಭಿಪ್ರಾಯಭೇದಗಳನ್ನು ಸಹಿಸುವುದು ಮಾತ್ರವಲ್ಲ ಗೌರವಿಸಲೂ ಸಮರ್ಥವಾದ ಒಂದು ವಿಶಿಷ್ಟ ಮನಃಸಂಸ್ಕಾರ ಎಂದು ಹೇಳಬೇಕಾಗುತ್ತದೆ. ಏಕೆಂದರೆ ಮೂಲತಃ ಅದ್ವಿತೀಯವಾದ ಪ್ರತಿಯೊಬ್ಬ ಪ್ರಜೆಯ ವ್ಯಕ್ತಿತ್ವವನ್ನು ಮನ್ನಿಸಿ ಪೋಷಿಸುವುದರ ಮೇಲೆ, ಆ ವ್ಯಕ್ತಿತ್ವದ ಅಂತರಂಗದಲ್ಲಿ ನನ್ನ ಗೌರವಕ್ಕೆ ಯೋಗ್ಯವಾದ ನಿಗೂಢ ರಹಸ್ಯವೊಂದು ಅಡಗಿದೆ ಎಂಬ ಶ್ರದ್ದೆಯ ತಳಹದಿಯ ಮೇಲೆ ಮಾತ್ರ ಪ್ರಜಾಪ್ರಭುತ್ವವನ್ನು ಸ್ಥಾಪಿಸಿ ರಕ್ಷಿಸುವುದು ಸಾಧ್ಯ. ಇಲ್ಲವಾದರೆ

ಪ್ರಕೃತಿಸಿದ್ದವೂ ತರ್ಕಬದ್ಧವೂ ಆದ ಅಸಮಾನತೆ ಎಲ್ಲ ಕಡೆಯೂ ಎದ್ದು ಕಾಣುತ್ತಿರುವಾಗ ಎಲ್ಲ ಮಾನವರೂ ಸಮಾನರು ಎಂದು ನಂಬುವುದಾದರೂ ಹೇಗೆ ? ಪ್ರತಿಯೊಬ್ಬ ಪ್ರಜೆಯಲ್ಲೂ ಸಾರ್ವಭೌಮತ್ವದ ಒಂದು ಅಂಶವನ್ನು ಕಾಣುವುದೇ ಪ್ರಜಾಪ್ರಭುತ್ವ. ಇದು ಕಾರ್ಯಸಮರ್ಥವಾಗುವುದು ಬಹುಮತದ ಆಧಾರದ ಮೇಲೆ ಎಂಬುದು ನಿಜ. ಏಕೆಂದರೆ ಅದನ್ನು ಬಿಟ್ಟು ಬೇರೆ ಯಾವ ರೀತಿಯಿಂದಲೂ ರಾಜಕೀಯ ಸಾಮಾಜಿಕ ಸಂಸ್ಥೆಗಳನ್ನು ನಡೆಸುವುದೇ ಅಸಾಧ್ಯ. ಹಾಗಿದ್ದರೂ ಬಹುಮುತವೊಂದೇ ಸಾರ್ವ ಭೌಮವಲ್ಲ, ನಿರ್ಣಾಯಕವೂ ಅಲ್ಲ. ಕೇವಲ ಬಹುಮತವೆನ್ನುವುದು ಕೇವಲ ಅರಾಜಕತೆ, ಬೀದಿಗುಂಪುಗಳ ಕೇವಲ ಅಮಾನುಷ ವ್ಯವಹಾರ. ಆದಕಾರಣ ಬಹುಮತವನ್ನು ಬಿಟ್ಟು ಬೇರೆ ದಾರಿ ಪ್ರಜಾಪ್ರಭುತ್ವಕ್ಕೆ ಇಲ್ಲವಾದರೂ ಅದರ ಅಪಾಯಗಳನ್ನು ಗುರುತಿಸಿಯೇ ಅದನ್ನು ಒಪ್ಪಬೇಕಾಗುತ್ತದೆ. ಈ ಅಪಾಯಗಳನ್ನು ಬಹುಮಟ್ಟಿಗೆ ನಿವಾರಿಸುವುದಕ್ಕಾಗಿಯೇ ರಾಜ್ಯಘಟನೆ, ಧರ್ಮ, ನೀತಿ, ನ್ಯಾಯ, ಕೋರ್ಟು, ಮೂಲಭೂತ ಹಕ್ಕುಗಳು, ಪೋಲೀಸರು, ಸೇನೆ-ಇವು ಇರುವುದು. ಪ್ರಜಾಪ್ರಭುತ್ವವೆನ್ನುವುದು ಅತ್ಯಂತ ಸೂಕ್ಷ್ಮವೂ ಜಟಿಲವೂ ಆದ ರಾಜ್ಯ ತಂತ್ರ. ಒಂದನ್ನೊಂದು ತೂಕದಲ್ಲಿಡಬಲ್ಲ ವಿರೋಧ ಪಕ್ಷಗಳು, ಸ್ವತಂತ್ರ ವೃತ್ತಪತ್ರಿಕೆಗಳು ಸಾರ್ವಜನಿಕ ಚರ್ಚಾವೇದಿಕೆಗಳು, ವಿಶ್ವವಿದ್ಯಾನಿಲಯ, ನ್ಯಾಯಾಲಯ ಮುಂತಾದ ಹತ್ತಾರು ಶಕ್ತಿಮೂಲಗಳ ಸಮತೋಲನದಿಂದ ಮಾತ್ರ ಪ್ರಜಾರಾಜ್ಯವೂ ಸುರಾಜ್ಯವಾಗಿ ನೆಲೆಗೊಳ್ಳುವುದು ಸಾಧ್ಯ. ಆದರೆ ವಸ್ತುಸ್ಥಿತಿಯನ್ನು ನೋಡಿದರೆ, ಸಂಕೀರ್ಣವಾದುದನ್ನು ಸರಳಗೊಳಿಸಿಯೇ ನೋಡುವ ಸಾಮಾನ್ಯ ಮನುಷ್ಯಗುಣಕ್ಕನುಸಾರವಾಗಿ ಪ್ರಜಾತಂತ್ರವನ್ನು ಕೇವಲ ಬಹುಮತರಾಜ್ಯ ಎಂದು ಸರಳಗೊಳಿಸಿಕೊಂಡಾಗ ಎಂಥ ಅನಾಹುತಗಳು ಸಂಭವಿಸಬಹುದು ಎಂಬುದಕ್ಕೆ ನಮ್ಮ ದೇಶದ ಸ್ವಾತಂತ್ರ್ಯ ನಂತರದ ಇತಿಹಾಸವನ್ನು ಗಮನಿಸಿದರೆ ತಿಳಿಯುತ್ತದೆ.
ಪ್ರತಿಯೊಂದು ವಿಷಯದಲ್ಲೂ ಕಾರ್ಯಕ್ಷೇತ್ರದಲ್ಲಿ ಭಿನ್ನಾಭಿಪ್ರಾಯಗಳು ಬರುವುದೂ ವಾಗ್ವಾದ ಜಗಳ ಹಣಾಹಣಿ ನಡೆಯುವುದೂ ಮನುಷ್ಯ ಸಮಾಜಕ್ಕೆ ಸಹಜವಾದುದು. ಸಹಜವಾಗಿ ಬರುವ ಭಿನ್ನಾಭಿಪ್ರಾಯಗಳನ್ನು ಹೇಗೆ ಬಗೆಹರಿಸಿಕೊಳ್ಳುವುದು ಎನ್ನುವುದೇ ಮಾನವ ಸಮಾಜದ ಮುಂದೆ ಪುರಾತನಕಾಲದಿಂದಲೂ ಇದ್ದ, ಈಗಲೂ ಇರುವ ಪ್ರಶ್ನೆ. ಈ ಪ್ರಶ್ನೆಗೆ ಮುಖ್ಯವಾಗಿ ಎರಡು ರೀತಿಗಳಲ್ಲಿ ಉತ್ತರ ಹುಡುಕುವ ಪ್ರಯತ್ನ ನಡೆದು ಬಂದಿದೆ. ಕೈಕೈ ಮಿಲಾವಣೆ ಅಥವಾ ಯುದ್ಧ ಕಾದಾಟಗಳ ಮೂಲಕ ಭಿನ್ನಾಭಿಪ್ರಾಯವನ್ನು ಒರೆಗಿಟ್ಟು ಗೆದ್ದವನು ಸೋತವನನ್ನು ಅದುಮಿ ಹಿಡಿದು ತನ್ನ ಅಭಿಪ್ರಾಯದಂತೆ ನಡೆಯುವುದು ಇದು ಒಂದು. ಅಭಿಪ್ರಾಯ ಭೇದವಿರುವವರು ಒಟ್ಟಿಗೆ ಕೂತು ವಿಚಾರವಿನಿಮಯ ನಡೆಸಿ ಪರ

ವಿರುದ್ಧ ವಾಗ್ವಾದ ನಡೆಸಿ, ಇಬ್ಬರಿಗೂ ಸಮ್ಮತವಾಗುವಂಥ ಒಂದು ತತ್ವವನ್ನು ಒರೆಗಲ್ಲಾಗಿಟ್ಟುಕೊಂಡು ಅಥವಾ ಇಬ್ಬರೂ ಸಮಾನವಾಗಿ ಮನ್ನಿಸುವ ಶಾಸ್ತ್ರ ಧರ್ಮಗ್ರಂಥಗಳ ಆಧಾರವನ್ನಿಟ್ಟುಕೊಂಡು ಅಥವಾ ಎಲ್ಲರೂ ಗೌರವಿಸುವ ವಿವೇಕಿಯೊಬ್ಬನ ತೀರ್ಮಾನಕ್ಕೆ ಕಟ್ಟು ಬಿದ್ದು, ಒಂದು ತೀರ್ಮಾನಕ್ಕೆ ಬಂದು ಎಲ್ಲರಿಗೂ ಅಥವಾ ಬಹುಜನಕ್ಕೆ ಒಗೆಯಾಗುವಂತೆ ಕಾರ್ಯಪ್ರವೃತ್ತರಾಗುವುದು-ಇದು ಎರಡನೆಯದು. ಇಂಥ ಬಹುಮತ ತೀರ‍್ಮಾನವನ್ನೂ ಒಪ್ಪಲಾರದವನಿದ್ದರೆ ಅವನನ್ನು ತೊಡೆದು ಹಾಕುವ ಪ್ರಯತ್ನ ಮಾಡದೆ ಅವನ ಮನವೊಲಿಸಲು ಪ್ರಯತ್ನಿಸುವುದು; ಅದೂ ಸಾಧ್ಯವಾಗದಿದ್ದರೆ ಅವನನ್ನು ಅವನ ಪಾಡಿಗೆ ಬಿಟ್ಟು ಬಿಡುವುದು ; ತೀರ ಅಲ್ಪ ಸಂಖ್ಯಾತರಾದವರೂ ಬಹುಮತದೊಡನೆ ಸಹಮತವಿಲ್ಲದವರೂ ಕೂಡಾ ಸಾಮಾಜಿಕವಾಗಿ ಯಾವ ದಂಡನೆಗಾಗಲೀ ಶೋಷಣೆಗಾಗಲೀ ಹಿಂಸೆಗಾಗಲೀ ಒಳಗಾಗದೆ ತಮ್ಮ ಅಲ್ಪಮತವೇ ಕ್ರಮೇಣ ಬಹುಮತವಾಗುವಂತೆ ಪ್ರಚಾರ ನಡೆಸಲೂ ಸಾಧ್ಯವಾಗುವುದು-ಇದು ಎರಡನೆಯ ದಾರಿ. ಮೊದಲನೆಯದು ಪಶುಬಲ ಪ್ರದರ್ಶನದ ಸರ್ವಾಧಿಕಾರಿ ಮಾರ್ಗ; ಎರಡನೆಯದು ಶುದ್ಧ ಪ್ರಜಾತಂತ್ರ ಮಾರ್ಗ. ಭೇದವಿದ್ದಲ್ಲಿ ಕಾದಾಟ ಅನಿವಾರ್ಯ ; ಆ ಕಾದಾಟವನ್ನು ಅಸ್ತ್ರ ಶಸ್ತ್ರಗಳ ಮೂಲಕ ಎಂದರೆ ಪಶುಬಲದ ಮಟ್ಟದಲ್ಲಿ ನಡೆಸಬೇಕೋ ಅಥವಾ ವಾದವಿವಾದಗಳ ಮಾನಸಿಕ ಮಟ್ಟದಲ್ಲೋ ಎಂಬುದೇ ಪ್ರಶ್ನೆ. ಆ ಕಾದಾಟ ಬುದ್ಧಿಯ ನೆಲೆಯಲ್ಲಿ, ನ್ಯಾಯಸಮ್ಮತವಾದ ಸಹಿಷ್ಣು ರೀತಿಯಲ್ಲೇ ನಡೆಯಬೇಕೆನ್ನುವುದು ನಾಗರಿಕತೆಯ ಮಾರ್ಗ ಹೇಗೋ ಹಾಗೆ ಪ್ರಜಾಪ್ರಭುತ್ವದ ಮಾರ್ಗವೂ ಹೌದು. ಹೆದರಿಕೆ ಬೆದರಿಕೆ ಹೊಡೆದಾಟ ಬಡಿದಾಟ ಕೊಲೆ ಸುಲಿಗೆಗಳ ಮೂಲಕ ತನ್ನ ಸಿದ್ಧಾಂತಗಳನ್ನು ಇನ್ನೊಬ್ಬರ ಮೇಲೆ ಹೇರಬೇಕೆನ್ನುವ ಪ್ರವೃತ್ತಿ ಬರ್ಬರ ವೃತ್ತಿ, ರಾಕ್ಷಸಮಾರ್ಗ.
ಚುನಾವಣೆಗಳಲ್ಲಿ ಬಹುಮತ ಗಳಿಸುವ ಪಕ್ಷಕ್ಕೆ ಮಾತ್ರ ರಾಜ್ಯವಾಳುವ ಅಧಿಕಾರ ಸಿಕ್ಕುತ್ತದೆ. ದೇಶದ ಎಲ್ಲ ಪ್ರಜೆಗಳ ಹಿತದ ದೃಷ್ಟಿಯಿಂದ ನೋಡಿದಾಗ ವಸ್ತುನಿಷ್ಠ ದೃಷ್ಟಿಯಿಂದ ಸಮಸ್ಯೆಗಳನ್ನು ಎದುರಿಸಬಲ್ಲ ಧೀಶಕ್ತಿಯುಳ್ಳವರೂ, ಸ್ವಾರ್ಥವನ್ನು ಮರೆತು ಸರ್ವಜನಹಿತಾರ್ಥವಾಗಿ ಕೆಲಸ ಮಾಡುವ ನೈತಿಕ ಬಲವುಳ್ಳವರೂ, ಅಷ್ಟೇನೂ ತಿಳಿವಳಿಕೆ ವಿಚಾರಶಕ್ತಿ ಇಲ್ಲದೆ ಇರುವ ಜನಜಂಗುಳಿಯನ್ನು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗಬಲ್ಲ ನಾಯಕತ್ವ ಶಕ್ತಿಯುಳ್ಳವರೂ ರಾಜ್ಯಭಾರ ಸಮರ್ಥರೂ ಚುನಾವಣೆಗಳಲ್ಲಿ ಆರಿಸಿ ಬರಬೇಕಾದ್ದು ಅತ್ಯಗತ್ಯ: ಹುರಿಯಾಳುಗಳನ್ನು ಈ ರೀತಿ ಚುನಾಯಿಸಬಲ್ಲ ಮತದಾರರು ನಮ್ಮ ದೇಶದಲ್ಲಿ ಅತ್ಯಲ್ಪ ಸಂಖ್ಯೆಯಲ್ಲಿದ್ದುದರಿಂದ ಮಹತ್ವಾಕಾಂಕ್ಷೆ ಅಧಿಕಾರಲಾಲಸೆಗಳಲ್ಲದೆ ಬೇರೇನೂ ಗುಣಗಳಿಲ್ಲದ, ಅಜ್ಞರನ್ನು ವಾಗಾಡಂಬರದಿಂದ ಕುಸಿಭರವಸೆಗಳಿಂದ ಮೋಸಗೊಳಿಸುವ ಕಲೆ

ಯಲ್ಲಿ ನಿಷ್ಣಾತರಾಗಿರುವ ಆಷಾಢಭೂತಿಗಳೂ ಸ್ವಾರ್ಥಪರರೂ ಅವಿವೇಕಿಗಳೂ ದೂರ ದೃಷ್ಟಿ ಇಲ್ಲದವರೂ ಜಾತಿ ಮತ ಹಣಗಳ ಬಲದಿಂದ ಇಲ್ಲಿ ಆರಿಸಿ ಬರುವುದು ಸಾಧ್ಯವಾಯಿತು. ಆದ್ದರಿಂದ ಇಲ್ಲಿ ರಾಜ್ಯಭಾರ ಕೆಟ್ಟಿತು; ಸುಸ್ಥಿತಿ ಕುಸಿಯಿತು, ಈ ವರೆಗೂ ದೇಶ ಒಡೆದು ಚೂರುಚೂರಾಗಿ ಅನಾಯಕತ್ವ ಸಂಪೂರ್ಣವಾಗಿ ಆವರಿಸಿಕೊಳ್ಳದಿರುವುದಕ್ಕೆ ಕಾರಣ ನಮ್ಮ ನೂತನ ಪ್ರಭುವರ್ಗದ ರಾಜ್ಯಭಾರದಕ್ಷತೆಯಲ್ಲ, ನಮ್ಮ ಜನದಲ್ಲಿ ರೂಢಮೂಲವಾಗಿದ್ದು, ಬಹು ನಿಧಾನವಾಗಿ ವಿಘಟಿತವಾಗುತ್ತ ಬಂದಿರುವ ಧರ್ಮಶ್ರದ್ಧೆ, ನ್ಯಾಯಪಕ್ಷಪಾತ, ನೀತಿಪ್ರಜ್ಞೆ, ಒಟ್ಟಿನಲ್ಲಿ ಇರುವ ಅಪಾರ ಸಹಿಷ್ಣುತೆ ಶಾಂತಿಪ್ರವೃತ್ತಿಗಳೇ ಸರಿ. ಹೇಗಾದರೂ ಆರಿಸಿ ಬರುವುದು ಮುಖ್ಯವಾಗಿರುವಾಗ ಅದಕ್ಕೆ ಬೇಕಾದ ತಂತ್ರಗಳನ್ನೇ ಇಲ್ಲಿ ಇಷ್ಟು ವರ್ಷಗಳ ಕಾಲ ಬಳಸಲಾಯಿತು. ಮೊದಲೇ ಖಂಡಖಂಡವಾಗಿ ನಾನಾ ಜಾತಿವರ್ಗಗಳ ಗುಂಪು ಗುಂಪುಗಳಾಗಿ ಇದ್ದೂ ಹೇಗೋ ಒಟ್ಟಿಗೆ ಬಾಳಲು ಕಲಿತು ಬಂದಿರುವ ನಮ್ಮ ಜನರಲ್ಲಿ ದೇಶಪ್ರೀತಿ, ವಸ್ತುನಿಷ್ಠೆ, ಕರ್ಮಶ್ರದ್ಧೆ ಇವು ಬೆಳೆಯುವ ಹಾಗೆ ಮಾಡಿ ಒಂದುವಳಿಕೆಯ ಸೂತ್ರವನ್ನು ಬಲಪಡಿಸುವ ಬದಲಾಗಿ ಆಗಲೇ ಇದ್ದ ಜಾತಿ ಮತ ವ್ಯತ್ಯಾಸಗಳನ್ನು ತೀಕ್ಷ್ಣಗೊಳಿಸಿ ದೊಡ್ಡದು ಮಾಡಿ ಒಂದಿಷ್ಟೂ ನಾಚಿಕೆಯಿಲ್ಲದೆ ತಮ್ಮ ತಮ್ಮ ಸ್ವಾರ್ಥಕ್ಕಾಗಿ ನಮ್ಮ ರಾಜಕಾರಣಿಗಳು ಉಪಯೋಗಿಸಿಕೊಂಡರು. ಆದರೆ ವೇದಿಕೆಗಳ ಮೇಲೆ ಮಾತ್ರ ದೊಡ್ಡ ದೊಡ್ಡ ಆದರ್ಶಗಳನ್ನು ಕುರಿತು ಉದ್ದುದ್ದ ಭಾಷಣ ಮಾಡಿ ತಾವು ನಿಜವಾದ ನಾಯಕರು, ಸರ್ವಸಮತಾಭಾವವುಳ್ಳವರು ಎಂದು ತೋರಿಸಿಕೊಳ್ಳುತ್ತ ಇಬ್ಬಗೆಯ ಬಾಳನ್ನು ಬದುಕಿ ಹಾಗೆ ಬದುಕುವುದನ್ನು ಉಳಿದವರಿಗೂ ಕಲಿಸಿದರು. ಇದರಿಂದಾಗಿ ನಿಜವಾದ ಎಂದರೆ ತತ್ವಗಳ ಮೇಲೆ, ವಾದ ವಿವಾದಗಳ ಮೇಲೆ ತಿಳುವಳಿಕೆಯ ಮೇಲೆ ಆಧರಿಸಿರುವ ಬಹುಮತ ಇಲ್ಲಿ ನೆಲೆಗೊಳ್ಳಲು ಸಾಧ್ಯವಾಗಲೇ ಇಲ್ಲ. ಹೀಗೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಪ್ರಜಾಪ್ರಭುತ್ವದ ಅನಿಷ್ಟಗಳೆಲ್ಲ ಪ್ರಕಟವಾದುವಲ್ಲದೆ ಅದರ ನಿಜವಾದ ಕಲ್ಯಾಣಕಾರಕ ಅಂಶಗಳು ಬೆಳಕಿಗೆ ಬರಲೇ ಇಲ್ಲ. ಈ ಸನ್ನಿವೇಶಕ್ಕೆ ಕಾರಣರಾದವರನ್ನು, ಇದ್ದದ್ದನ್ನು ಇದ್ದ ಹಾಗೆಯೂ ಇರಗೊಡದೆ, ಕೆಡಿಸಿ ಕೈಬಿಟ್ಟವರನ್ನು ದೇಶದ್ರೋಹಿಗಳೆಂದಲ್ಲದೆ ಬೇರೆ ರೀತಿ ಕರೆಯುವುದು ಸಾಧ್ಯವೇ ?
ಪ್ರಜಾಪ್ರಭುತ್ವವನ್ನು ಕುರಿತು ಮಾತಾಡುವಾಗ ನಾವು ಒಂದು ಬಹುಮುಖ್ಯ ವಿಷಯವನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ : ಬಡಜನರೇ ಬಹುಸಂಖ್ಯಾಕರಾಗಿರುವಾಗ, ಅವರದ್ದೇ ಬಹುಮತವಾಗದೆ ಬೇರೆ ದಾರಿಯೇ ಇಲ್ಲದಿರುವಾಗ, ಬಡ ಜನರ ಹಿತವನ್ನು ಕಡೆಗಣಿಸುವ, ಕೊನೆಯ ಪಕ್ಷ ಅವರ ಪರವಾಗಿ ಮಾತಾಡದೇ ಇರುವ ಯಾವ ಪಕ್ಷವೂ ಪ್ರಜಾತಂತ್ರರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯ

ವಾಗದು. ಆದಕಾರಣ ದಟ್ಟದಾರಿದ್ರ‍್ಯವನ್ನು ಹೋಗಲಾಡಿಸಿ, ಬಡವರ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡಿ ದೇಶದಲ್ಲಿ ಸುಭಿಕ್ಷ ನೆಲಸಲು ತಕ್ಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಆಚರಣೆಗೆ ತರಲು ಪ್ರಯತ್ನಿಸದೆ ಇರಲು ಯಾವ ರಾಜಕೀಯ ಪಕ್ಷಕ್ಕೂ ಸಾಧ್ಯವಿಲ್ಲ. ಒಟ್ಟಿನಲ್ಲಿ ದೇಶದಲ್ಲಿ ಸುಭಿಕ್ಷ, ಶಾಂತಿ ನೆಲಸುವ ರೀತಿಯಲ್ಲಿ ಬಡಜನರ ಅಭ್ಯುದಯವೂ ಆಗಬೇಕು ಎಂಬ ಬಗ್ಗೆ ಭಿನ್ನಾಭಿಪ್ರಾಯ ಇರುವುದು ಈಗ ಈ ದೇಶದಲ್ಲಿ ಅಸಾಧ್ಯ. ಆದರೆ ಬಡತನದ ನಿವಾರಣೆ ಹೇಗೆ, ಎಷ್ಟರ ಮಟ್ಟಿಗೆ, ಯಾವ ಮಟ್ಟದಲ್ಲಿ ಎಷ್ಟು ಬೇಗ ಅಥವಾ ಎಷ್ಟು ಕಾಲಾವಧಿಯ ಅನಂತರ ಸಾಧ್ಯ ಎಂಬ ಪ್ರಶ್ನೆ ಬೇರೆ; ಅಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ. ಈ ಬಗ್ಗೆ ಬೇರೆ ಬೇರೆ ಪಕ್ಷಗಳು ತಮ್ಮ ಪ್ರಚಾರ ಕಾರ‍್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದಕಾರಣ ಯಾವುದೇ ಒಂದು ಪಕ್ಷವನ್ನು ಇದು ಬಡಜನರ ವಿರೋಧಿ, ಶ್ರೀಮಂತರ ಪಕ್ಷಪಾತಿ ಎಂದು ಹೇಳುವುದು ನ್ಯಾಯವಲ್ಲ ; ಹಾಗೆ ಪ್ರಚಾರ ಮಾಡುವುದು ಪ್ರಜಾಪ್ರಭುತ್ವದ ಮೂಲತತ್ವ ವಿರೋಧ. ಆದರೆ ಈ ಬಗೆಯ ಪ್ರಚಾರ ನಡೆಯುತ್ತ ಬಂದಿರುವುದು ಎಲ್ಲರಿಗೂ ತಿಳಿದ ಸಂಗತಿ. ರಾಜಕೀಯ ಪ್ರಚಾರವನ್ನು ಎರಡು ಬಗೆಯಾಗಿ ಮಾಡಬಹುದು : ಜನರಲ್ಲಿ ವಿಚಾರ ಶಕ್ತಿ ಕುದುರುವಂತೆ ಬುದ್ದಿಯ ಮಟ್ಟದಲ್ಲಿ ಸಾಧಕ ಬಾಧಕಗಳನ್ನು ಸ್ಪಷ್ಟಗೊಳಿಸಿ ಜನಶಿಕ್ಷಣ ರೀತಿಯಲ್ಲಿ ಮಾಡುವ ಪ್ರಚಾರ ಒಂದು ಬಗೆ ; ಜನರಲ್ಲಿ ದ್ವೇಷ, ಅಸೂಯೆ, ಪ್ರತೀಕಾರದ ಆಕಾಂಕ್ಷೆ ಮುಂತಾದ ಭಾವನೆಗಳನ್ನು ಉದ್ರೇಕಿಸಿ, ಅವರಲ್ಲಿರುವ ವಿಚಾರಶಕ್ತಿಗೆ ಮಂಕುಬೂದಿಯೆರಚಿ ವಿವೇಕವನ್ನು ಕುರುಡುಗೊಳಿಸಿ ಗೊಂದಲವನ್ನೆಬ್ಬಿಸಿ ಹಿಂಸೆಯನ್ನು ಪ್ರಚೋದಿಸುವ, ಭಿನ್ನಮತವನ್ನು ಮೆಟ್ಟ ಹೊಸಕುವೆನೆಂಬ ಉನ್ಮಾದವನ್ನು ಕೆರಳಿಸುವ ಪ್ರಚಾರ ವೈಖರಿ ಇನ್ನೊಂದು. ಈ ಎರಡರಲ್ಲಿ ಮೊದಲನೆಯ ಮಾರ್ಗ ವಿದ್ಯಾಭ್ಯಾಸಕ್ರಮದಷ್ಟೇ ಕಷ್ಟವಾದದ್ದು ಹೆಚ್ಚು ಕಾಲ ತೆಗೆದು ಕೊಳ್ಳತಕ್ಕದು, ಆದರೂ ನಿಜವಾದ ಅಭ್ಯುದಯಕ್ಕೆ ಇರುವ ಒಂದೇ ಒಂದಾದ ದಾರಿ. ಎರಡನೆಯ ಮಾರ್ಗ ಬಹು ಸುಲಭವಾದದ್ದು : ಜನದಲ್ಲಿ ಆಗಲೇ ಇರುವ ಅಸಹನೆ, ಪೂರ್ವಗ್ರಹ, ಹಿಂಸಾವೃತ್ತಿ ಇವುಗಳನ್ನು ಉದ್ರೇಕಿಸುವುದು. ಮೊದಲನೆಯದು ತಿದ್ದುವ ಕೆಲಸ, ಎರಡನೆಯದು ಉದ್ರೇಕಗೊಳಿಸುವ ಕೆಲಸ, ಬಹಳ ಸರಳವಾದದ್ದು. ಆದಕಾರಣ ಈ ಎರಡನೆಯ ಮಾರ್ಗವನ್ನೇ ನಮ್ಮ ಪ್ರಭುವರ್ಗ ಅನುಸರಿಸಿಕೊಂಡು ಬಂದದ್ದು ಅವರಿಗೆ ಸಹಜ. ಈ ದಾರಿಯಿಂದ ನಮ್ಮ ಜನರ ಅಭ್ಯುದಯವೂ ಕೂಡಾ ಬಹಳ ಚೆನ್ನಾಗಿಯೇ ಸಾಗಿತು : ಕಲ್ಯಾಣರಾಜ್ಯ ಅಥವಾ ವೆಲ್‌ಫೇರ್‌ ಸ್ಟೇಟಿನಿಂದ ಸಮಾಜವಾದದ ಮಾದರಿಯು ರಾಜ್ಯಕ್ಕೆ, ಅಲ್ಲಿಂದ ಸಮಾಜವಾದಿ ಪ್ರಜಾಪ್ರಭುತ್ವಕ್ಕೆ -ಹೀಗೆ ಹಂತ ಹಂತವಾಗಿ ನಮ್ಮ ದೀನದಳಿತರ ಉದ್ಧಾರ ನಡೆಯಿತು. ಈಗ ಇನ್ನೊಂದು ಹಂತ ಕಾದುಕೊಂಡಿದೆ : ಅದು ಶುದ್ಧ ಸಮಾಜವಾದ, ‘ಬಡತನದ

ನಿವಾರಣೆ-ಅದಕ್ಕೆ ದಾರಿ ಸಮಾಜವಾದ’ ಎಂಬ ಮಂತ್ರವನ್ನು ನಮ್ಮ ಪ್ರಭುವರ್ಗ, ಆ ವರ್ಗವನ್ನು ಆಶ್ರಯಿಸಿದ ಆಸ್ಥಾನ ವಿದ್ವಾಂಸರ ತಂಡ ಸಾಮೂಹಿಕ ಭಜನೆಯಂತೆ ನಡಸುತ್ತ ಬಂದು ಅಜ್ಞ ಜನರ ಮನಸ್ಸಿನಲ್ಲಿ ಈ ಮಂತ್ರ ನಾಟಿ ನಿಲ್ಲುವಂತೆ ಮಾಡುವುದರಲ್ಲಿ ಸಫಲರಾದರು. ಇದರಿಂದ ಇಡೀ ದೇಶದಲ್ಲಿ ವಸ್ತುಸ್ಥಿತಿಗೆ ತದ್ವಿರುದ್ದವಾದ, ಹಗಲುಗನಸಿಗೆ ಮಾತ್ರ ಸಲ್ಲುವಂಥ ಕೃತಕವಾದ ಮಾನಸಿಕ ವಾತಾವರಣ ಸೃಷ್ಟಿಯಾಯಿತು. ಈ ಸಮಾಜವಾದ ಎಂದರೇನು? ಅದು ಸರ್ವರೋಗನಿವಾರಕವಾದ ಏಕ ಮೂಲಿಕೆಯೇ ? ಸರ್ವಾರ್ಥಸಿದ್ದಿ ಕವಚವೇ ? ಆ ದಾರಿಯನ್ನು ಹಿಡಿದು ಯಾವ ದೇಶ ಈ ವರೆಗೆ ನಿಜವಾದ ಸುಭಿಕ್ಷವನ್ನು ಕಂಡಿದೆ ? ಯಾವ ಜನಾಂಗ ನಿಜವಾದ ಶಾಂತಿ ಸಮಾಧಾನ ಸೃಷ್ಟಿ ಶಕ್ತಿಗಳನ್ನು ಗಳಿಸಿದೆ ? ಅಂಥ ದೇಶಗಳಲ್ಲಿ ಸಮಾಜವಾದ ಯಾವ ರೀತಿಯಲ್ಲಿ ಆಚರಣೆಗೆ ಬಂದಿದೆ ? ಈ ವಾದದ ಪರಿಮಿತಿಗಳೇನು, ವ್ಯಾಪ್ತಿಯೆಷ್ಟು, ಅದರ ಉದ್ದಿಷ್ಟ ಗುರಿ ಯಾವುದು ? ಎಂದು ಯಾರೂ ಪ್ರಶ್ನಿಸುವುದಿಲ್ಲ. ಸಮಾಜವಾದವೊಂದೇ ಕಲ್ಯಾಣಮಾರ್ಗವೇ, ಮುಕ್ತಿಸಾಧನವೇ, ಬೇರೆ ಯಾವ ದಾರಿಯೂ ಇಲ್ಲವೇ ? ಇಂಗ್ಲೆಂಡು ಅಮೇರಿಕಾ ಜರ್ಮನಿ ಜಪಾನುಗಳು ಸಮೃದ್ಧಿಯನ್ನು ಸಾಧಿಸಿದ ದಾರಿ ಇದಕ್ಕಿಂತ ಉತ್ತಮವಲ್ಲವೋ, ಅಲ್ಲದಿದ್ದರೆ ಏಕೆ ಅಲ್ಲ ? ಎಂದು ಯಾರಾದರೂ ಮೂಲಭೂತ ಪ್ರಶ್ನೆಗಳನ್ನು ಹಾಕತೊಡಗಿದರೆ ತತ್‌ಕ್ಷಣ ಅವನನ್ನು ರಿಯಾಕ್ಷನರಿ, ಬಂಡವಳುಗಾರರ ಪಕ್ಷಪಾತಿ, ಭೂತಕಾಲದ ಪ್ರೇತ ಮುಂತಾದ ಬಯ್ದುಳಿಂದಲೇ ಅವನ ಪ್ರಶ್ನೆಗಳಿಗೆ ಉತ್ತರ ಕೊಟ್ಟು, ಕೇವಲ ಗಟ್ಟಿಯಾದ ಕೂಗಿನಿಂದಲೇ ಅವನ ಬಾಯಿ ಕಟ್ಟಿಸಿ ಅವನ ವಿಚಾರ ಏನು ಎಂದು ತಿಳಿಯಲೂ ಜನ ಇಷ್ಟ ಪಡದಂಥ ದುಷ್ಟ ಸರ್ವಾಧಿಕಾರಿ ವಾತಾವರಣವನ್ನು ನಿರ್ಮಿಸುತ್ತ ಬರಲಾಗಿದೆ. ಅಂಥವರಿಗೆ ಭಿನ್ನಮತದಲ್ಲಿ ಗೌರವ, ಪ್ರಜಾತಂತ್ರದಲ್ಲಿ ಶ್ರದ್ಧೆ, ವ್ಯಕ್ತಿಸ್ವಾತಂತ್ರ್ಯದ ಬಗ್ಗೆ, ಒಟ್ಟಿನಲ್ಲಿ ಮನುಷ್ಯನ ಅಂತರಂಗಜೀವನದ ಬಗ್ಗೆ ಅದರ ಸ್ವಾತಂತ್ರ್ಯದ ಬಗ್ಗೆ ಕಾತರ ಇದೆ ಎಂದು ನಂಬುವುದು ಸಾಧ್ಯವಲ್ಲ. ಭಿನ್ನಮತವನ್ನು ಸಹಿಸಿ ಗೌರವಿಸುವುದರ ಹಿನ್ನೆಲೆಯಲ್ಲಿ ಪ್ರಜಾತಂತ್ರದ ಹೃದಯಭೂತವಾಗಿ ಇರುವ ತತ್ವ ಇದು : ಸತ್ಯದ ಗುತ್ತಿಗೆ ಯಾರಿಗೂ ಇಲ್ಲ; ಪ್ರತಿಯೊಂದು ವಾದದಲ್ಲೂ ಸತ್ಯಾಂಶ ಯಾವುದಾದರೊಂದು ಪ್ರಮಾಣದಲ್ಲಿ ಇರಲೇ ಬೇಕು ; ಜೀವನದ ವೈವಿಧ್ಯದಲ್ಲಿ ಬೇರೆ ಬೇರೆ ಮಟ್ಟಗಳಲ್ಲಿ ವ್ಯಕ್ತವಾಗುವ ನೂರಾರು ಸತ್ಯಾಂಶಗಳ ಸಹಜವೂ ನಿರ್ಭಯವೂ ಆದ ಅಭಿವ್ಯಕ್ತಿಯ ಮೂಲಕ ನಾನಾ ಪಕ್ಷ ಪಂಗಡ ಗುಂಪು ವ್ಯಕ್ತಿಗಳ ಅಭಿಪ್ರಾಯ ಆಸಕ್ತಿ ಆದರ್ಶಗಳ ನಡುವೆ ಸಮತೂಕ ಏರ್ಪಡತಕ್ಕದ್ದು. ಪ್ರಜಾತಂತ್ರದ ಮೂಲ ಸೂತ್ರವೇ ಇದು. ಎಲ್ಲಿ ಈ ಸತ್ಯವನ್ನು ಕಡೆಗಣಿಸಲಾಗುತ್ತದೋ ಅಲ್ಲಿ ಪ್ರಜಾಪ್ರಭುತ್ವ ಬೇರೂರಲಾರದು. ಸರ್ವಾಧಿಕಾರಿ ರಾಜ್ಯಕ್ಕೆ ತಕ್ಕ ವಾತಾವರಣ ಮಾತ್ರ ಸಿದ್ಧವಾಗುವುದು.

ಭಿನ್ನಮತವನ್ನು ಸಹಿಸುವುದಾಗಲೀ ಗೌರವಿಸುವುದಾಗಲೀ ಮನುಷ್ಯ ಸಮಾಜಕ್ಕೆ ಸಹಜವಾದ ಪ್ರವೃತ್ತಿಯೆಂದು ಹೇಳಲಾಗುವುದಿಲ್ಲ. ಕಷ್ಟ ಪಟ್ಟು ಕಲಿತು ಪಡೆಯಬೇಕಾದ ಸಂಸ್ಕಾರ ಅದು. ಮನುಷ್ಯ ಸಮಾಜದ ಇತಿಹಾಸವನ್ನು ಗಮನಿಸಿದರೆ ಪ್ರತಿಯೊಂದು ದೇಶದಲ್ಲೂ ಪ್ರತಿಯೊಂದು ಯುಗದಲ್ಲೂ ಸಂಪ್ರದಾಯಸಿದ್ದವಾದ ಬಹುಮತಕ್ಕೆ ವಿರುದ್ಧವಾಗಿ ತನ್ನ ಸ್ವಂತ ಅಭಿಪ್ರಾಯವನ್ನು ಪ್ರತಿಪಾದಿಸಿದವರನ್ನು ಪೀಡಿಸಿ ಶಿಕ್ಷಿಸಿ ದೇಶಭ್ರಷ್ಟರಾಗುವಂತೆ ಮಾಡಿದ, ಮರಣ ದಂಡನೆಗೆ ಗುರಿಪಡಿಸಿದ, ಜೀವಸಹಿತ ಸುಟ್ಟ ಸಂದರ್ಭಗಳು ಅನೇಕಾನೇಕ. ಸಾಹಿತ್ಯ, ತತ್ವಜ್ಞಾನ, ವಿಜ್ಞಾನ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಈ ಬಗೆಯಲ್ಲಿ ಭಿನ್ನಮತದ ದಮನ ನಡೆಯುತ್ತ ಬಂದಿರುವುದನ್ನೂ, ಈಗಲೂ ನಡೆಯುತ್ತಿರುವುದನ್ನೂ ನಾವು ಕಾಣಬಹುದು. ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗಿದ್ದ ಈ ಭಿನ್ನಮತವೇ ಕ್ರಮೇಣ ಸಮಾಜಕ್ಕೆ ಸ್ವೀಕಾರ‍್ಯವಾಗುವುದನ್ನೂ, ಅದೇ ಎಷ್ಟೋ ವೇಳೆ ಬಹುಮತವಾಗಿ ಮಾರ್ಪಡುವುದನ್ನೂ ನಾವು ಕಾಣುತ್ತೇವೆ. ಇದನ್ನೆಲ್ಲ ಗಮನಿಸಿದಾಗ ಪ್ರಜಾತಂತ್ರರಾಜ್ಯ ವ್ಯವಸ್ಥೆ ಪಾಶ್ಚಾತ್ಯ ದೇಶಗಳಲ್ಲಿ ನೆಲೆಗೊಂಡಾಗ ಅದರ ಜೊತೆಗೇ ನೆಲೆಗೊಂಡ ಈ ಪರಮತಸಹನೆ ಎಂಥ ದೊಡ್ಡ ಕ್ರಾಂತಿಕಾರಿ ಬೆಳವಣಿಗೆಯೆಂಬುದು ನಮಗೆ ಅರ್ಥವಾದೀತು. ಭಿನ್ನಮತವನ್ನೂ ಲೆಕ್ಕಕ್ಕೆ ತೆಗೆದುಕೊಂಡು ಅದಕ್ಕೆ ತಕ್ಕ ಮರ್ಯಾದೆ ಕೊಟ್ಟು ಅದು ಬೆಳೆಯಲು ತಕ್ಕ ಅವಕಾಶವನ್ನು ಕಲ್ಪಿಸಿದ್ದೇ ಪ್ರಜಾಪ್ರಭುತ್ವ ಪದ್ಧತಿಯ ಪ್ರಾಣಸ್ವರೂಪವಾದ ಅಂಶ. ಅದು ನಷ್ಟವಾದರೆ ಪ್ರಜಾಪ್ರಭುತ್ವ ಪದ್ಧತಿಯೇ ಕುಸಿದುಬಿದ್ದ ಹಾಗೆ. ತನ್ನ ಅಭಿಪ್ರಾಯ ಎಷ್ಟೇ ದೃಢವಾಗಿದ್ದರೂ ಬೇರೆಯವರ ಅಭಿಪ್ರಾಯಗಳನ್ನೂ ಚಿತ್ರವಿಟ್ಟು ಕೇಳಿ, ವಿಮರ್ಶಿಸಿ ಅದನ್ನೂ ಗಮನದಲ್ಲಿಟ್ಟು ಕೊಂಡು ಕಾರ‍್ಯಪ್ರವೃತ್ತನಾಗುವುದು ಪ್ರಜಾಪ್ರಭುತ್ವವಾದಿಗೆ ಅತ್ಯಗತ್ಯವಾದ ವಿನಯ. ಇಂಥ ವಿನಯವಿಲ್ಲದ ಕಡೆ ಕಾಣುವುದು ತಾನೇ ಸರ್ವಜ್ಞನೆಂಬ ಅಹಂಕಾರ, ತಾನು ಕಂಡ ಕುದುರೆಗೆ ಮೂರೇ ಕಾಲು ಎಂದು ಹೇಳುವ ಮೂರ್ಖವಾದ; ತನ್ನ ರಟ್ಟಿ ನೋಡು, ಹಿಡಿದ ಬಂದೂಕು ನೋಡು ಎಂದು ಹೆದರಿಸಿ ಬೆದರಿಸಿ ಪರರನ್ನು ಮೆಟ್ಟಿ ನಿಲ್ಲುವ ಸರ್ವಾಧಿಕಾರಿಯ ಪಶುಬಲ ಪ್ರದರ್ಶನ.
ಸಮಾಜವಾದಿಯಾದವನು ಪ್ರಜಾಪ್ರಭುತ್ವವಾದಿಯಾಗಿರುವುದೂ ಸಾಧ್ಯವಿರಬಹುದು. ಹಾಗೆ ಅವನು ವ್ಯಕ್ತಿಸ್ವಾತಂತ್ರನಿಷ್ಟನೂ ಆಗಿದ್ದರೆ, ಹಾಗೆ ಅವನು ಇರುವುದು ನಿಜವೇ ಆಗಿದ್ದರೆ ಆತ ಬಯಸುವುದು ಸಮಾಜವಾದದ ಮಂತ್ರವನ್ನೇ ಜಪಿಸುವ ಹತ್ತಾರು ಪಕ್ಷಗಳನ್ನಲ್ಲ, ಅದಕ್ಕೆ ತದ್ವಿರುದ್ಧವಾಗಿ ವ್ಯಕ್ತಿಸ್ವಾತಂತ್ರ್ಯವನ್ನೇ ಎತ್ತಿ ಹಿಡಿಯುವ ಪಕ್ಷವನ್ನು. ಇದು ಅತ್ಯಂತ ಸ್ವಯಂವೇದ್ಯ ಸಂಗತಿ ಎನ್ನಿಸಬಹುದಾದ ವಿಷಯವಾದರೂ ನಮ್ಮ ದೇಶದಲ್ಲಿ ಸಮಾಜವಾದಿಗಳೆಂದು ತಮ್ಮನ್ನು

ಕರೆದುಕೊಳ್ಳುವ ಎಲ್ಲ ಪಕ್ಷಗಳೂ ಪರಸ್ಪರ ಎಷ್ಟೇ ಕಚ್ಚಾಡುತ್ತಿರಲಿ, ತಮ್ಮ ಸಮಾಜವಾದಕ್ಕೆ ವಿರೋಧಿಗಳಾಗಿರುವ ಸ್ವತಂತ್ರಪಕ್ಷ ಜನಸಂಘಗಳಂಥ ಪಕ್ಷಗಳನ್ನು ದೇಶದ್ರೋಹಿಗಳು, ಬಂಡವಳುಗಾರರ ಕಡೆಯವರು, ಜಾತೀವಾದಿಗಳು ಎಂದು ಮುಂತಾಗಿ ಸಂದರ್ಭ ಸಿಕ್ಕಿದಾಗಲೆಲ್ಲ ಶಪಿಸುತ್ತ, ಬಯ್ಯುತ್ತ, ಅವುಗಳ ಅಸ್ತಿತ್ವದ ಅಗತ್ಯವನ್ನೇ ಪ್ರಶ್ನಿಸುತ್ತೆ, ಆ ಪಕ್ಷಗಳನ್ನು ಅಸ್ಪೃಶ್ಯರೆಂದೇ ಪರಿಗಣಿಸುವುದನ್ನು ಕಂಡರೆ, ಹಾಗೆ ಮಾಡುತ್ತಿರುವಾಗಲೂ ತಾವು ವ್ಯಕ್ತಿಸ್ವಾತಂತ್ರ್ಯ, ಪ್ರಜಾಪ್ರಭುತ್ವ ನಿಷ್ಠರೆಂದು ಹೇಳಿಕೊಳ್ಳುವುದನ್ನು ಕಂಡರೆ ಆಶ್ಚರ್ಯವಾಗುತ್ತದೆ. ಇದು ಕಮ್ಯುನಿಸ್ಟರು ಮತ್ತು ಅವರ ಸಹಚರರಲ್ಲಿ ಜನವಂಚನೆಯ ತಂತ್ರವಾಗಿರಬಹುದು. ಉಳಿದ ಸಮಾಜವಾದಿಗಳಲ್ಲಿ ಬಹುಶಃ ಇದು ಸರಿಯಾಗಿ ಮೂಲಭೂತವಾಗಿ ಯೋಚಿಸದೆ ಇರುವುದರ ಪರಿಣಾಮವಾಗಿರಬಹುದು. ಅಥವಾ ವ್ಯಕ್ತಿಸ್ವಾತಂತ್ರ್ಯತತ್ವ ನಮ್ಮ ದೇಶದಲ್ಲಿ ಎತ್ತಿ ಹೇಳಬೇಕಾದಷ್ಟು ದೃಢವಾಗಿದೆ ಎಂಬ ವಿಶ್ವಾಸವೂ ಕಾರಣವಾಗಿರಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಬಹುಶಃ ಸಮಾಜವಾದದ ಘೋಷಣೆಯನ್ನು ತಾರಕ ಸ್ವರದಲ್ಲಿ ಕೂಗದೆ ಹೋದರೆ ವೋಟುಗಳು ಸಿಕ್ಕಲಾರವು ಎಂಬ ಭಯವೂ ಕಾರಣವಿರಬಹುದು. ವ್ಯಕ್ತಿಸ್ವಾತಂತ್ರ್ಯವೆಂದೊಡನೆ ಅವರ ಕಣ್ಣ ಮುಂದೆ ಬಂದು ನಿಲ್ಲುವ ಚಿತ್ರ ಎಲ್ಲೋ ಅಲ್ಲಿ ಇಲ್ಲಿ ಬೆರಳೆಣಿಕೆಗೆ ಸಿಕ್ಕುವಷ್ಟು ಅಲ್ಪಸಂಖ್ಯಾತರಾಗಿರುವ ಶ್ರೀಮಂತರದಲ್ಲದೇ ತಮ್ಮ ಆತ್ಮಗೌರವವನ್ನು ಅರಿತು ಗುರುತಿಸಿಕೊಂಡು ಯುಗಯುಗದ ದೀನತನದಿಂದ ಮೇಲೆದ್ದು ನಿಂತು ತಾವೂ ಉಳಿದವರ ಜೊತೆಗೆ ಸರೀಕರಾಗಿ ಎದೆಚಾಚಿ ನಡೆಯ ಬಯಸುವ, ತಮ್ಮ ತಮ್ಮ ಸಹಜವಾದ ಎತ್ತರಕ್ಕೆ ಏರಬಯಸುವ, ಎರಡು ಹೊತ್ತು ಊಟ, ಒಂದು ಸಣ್ಣ ಮನೆ, ತನ್ನದೆಂದುಕೊಳ್ಳಲು ಒಂದು ಸಣ್ಣ ತೋಟ, ಸಾಧ್ಯವಾದರೆ ಸಣ್ಣದೊಂದು ಗದ್ದೆ ಇವುಗಳನ್ನು ಬಯಸಿ ಅವಕ್ಕಾಗಿ ಹಾತೊರೆಯುತ್ತಿರುವ ಕೋಟಿ ಕೋಟಿ ಜನ ದೀನದಳಿತರ, ಕೆಳ ಮಧ್ಯಮವರ್ಗದವರ ಚಿತ್ರವಲ್ಲ. ಸ್ವಾತಂತ್ರ್ಯ ಬೇಕಾದ್ದು ಅನುಕೂಲವುಳ್ಳವರಿಗೆ ಮಾತ್ರ, ಬಡವರಿಗೆ ಅಲ್ಲ, ಎಂಬ ವಾದ ಮನುಷ್ಯನ ವ್ಯಕ್ತಿತ್ವದ ಬಗ್ಗೆ ಈ ಜನರಿಗೆ ಇರುವ ಮೂಲ ಭೂತ ಅಗೌರವವನ್ನು ಸೂಚಿಸುತ್ತದೆ. ಸ್ವಾತಂತ್ರ್ಯ ಎನ್ನುವುದು ತನಗಾಗಿ ಮಾತ್ರವಲ್ಲ, ಎಲ್ಲರಿಗೂ ಎಂಬುದು ಪ್ರಜಾಪ್ರಭುತ್ವದ ಸೂತ್ರ ; ಅದು ತನಗೆ ಮಾತ್ರ ಉಳಿದವರಿಗಲ್ಲ ಎನ್ನುವುದು ಸರ್ವಾಧಿಕಾರದ ಸೂತ್ರ. ಇದನ್ನು ನಮ್ಮಲ್ಲಿ ಸಮಾಜವಾದಿಗಳಾಗಿರುವ ಅನೇಕ ಮಂದಿ ಸಜ್ಜನರು ಇನ್ನೂ ಗುರುತಿಸದೆ ಇರುವುದು ಬಹಳ ದುಃಖದ ಸಂಗತಿ. ಪ್ರತಿಭಾವಂತ ಎಲ್ಲಿ ಯಾವ ಕಡೆಯಿಂದ, ಯಾವ ವರ್ಗದಿಂದ ಆವಿರ್ಭವಿಸುತ್ತಾನೆ ಎಂದು ಹೇಳುವುದು ಕಷ್ಟ. ಆದಕಾರಣವೇ ಎಲ್ಲ ವರ್ಗಗಳಿಗೂ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದ ಹಾಗೆ ಸ್ವತಂತ್ರರಾಗಿರುವ ಅವಕಾಶ ಸಿಕ್ಕುವುದು ಬಹುಶಃ ಅನ್ನಬಟ್ಟಿಗಳಷ್ಟೇ ಮೂಲಭೂತವಾದ ಅದಕ್ಕಿಂತ ಹೆಚ್ಚು

ತೃಪ್ತಿ ತರುವಂಥ ಸಂಗತಿ. ನಮ್ಮ ದೇಶದ ಬಡಜನಕ್ಕೆ ಬೇಕಾಗಿರುವುದು ತಾವು ಬೆಳೆಯಲು ತಕ್ಕ ಸ್ವತಂತ್ರ ವಾತಾವರಣವಲ್ಲ, ಎಲ್ಲ ಉದ್ಯಮಗಳ, ಸಂಪನ್ಮೂಲಗಳ ಸರಕಾರೀಕರಣ ಎಂಬ ಭ್ರಮೆಗೂ ಬಹುಶಃ ಈ ಸಮಾಜವಾದಿಗಳಲ್ಲಿ ಬಹುಮಂದಿಗೆ ಅತ್ಯಂತ ಅಲ್ಪಸಂಖ್ಯಾಕರಾಗಿರುವ ಶ್ರೀಮಂತರ ಬಗ್ಗೆ, ಮಾಲಿಕರ ಬಗ್ಗೆ, ವಿದ್ಯಾವಂತರ ಬಗ್ಗೆ ಇರುವ ನಿಷ್ಕಾರಣವಾದ ಆದರೆ ವೈಯಕ್ತಿಕವೆನ್ನಿಸುವಷ್ಟು ತೀವ್ರವಾದ ದ್ವೇಷ, ಹೊಟ್ಟೆ ಕಿಚ್ಚು, ಪ್ರತೀಕಾರ ಭಾವನೆ ಇವೇ ಕಾರಣ. ನಮ್ಮ ದೇಶದ ಕೋಟಿ ಕೋಟ ಜನ ತಲೆತಲಾಂತರದಿಂದ ಉತ್ತಮ ವರ್ಗದವರು ಹೇಳಿದಂತೆ ಕೇಳಿಕೊಂಡು ಅವರ ಅಧಿಕಾರಕ್ಕೆ ತಲೆ ಬಾಗಿಸುತ್ತ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲಾಗಲೀ ತಮ್ಮ ಆತ್ಮಗೌರವವನ್ನು ಗುರುತಿಸಲಾಗಲೀ ತಕ್ಕ ಅವಕಾಶವನ್ನು ಪಡೆಯಲಿಲ್ಲ. ಅಂಥ ಅವಕಾಶ ಈಗ ಮತ್ತೆ ಪ್ರಜಾಪ್ರಭುತ್ವ ಪದ್ಧತಿಯ ಮೂಲಕ ದೊರೆತಿದೆ. ಅದನ್ನು ಅವರಿಂದ ಕಿತ್ತುಕೊಂಡು ಮತ್ತೆ ಅವರನ್ನು ಸರಕಾರಿ ನೌಕರರ ತೊತ್ತುಗಳನ್ನಾಗಿ ಮಾಡುವ ಈ ಸಮಾಜವಾದಿ ಪ್ರಯತ್ನ ಬಡವರ ಹೆಸರಿನಲ್ಲಿ ನಡೆಯುವ ಕೆಲವು ಜನರ ಮಹತ್ವಾಕಾಂಕ್ಷೆಯ ಪ್ರದರ್ಶನವೇ ಸರಿ. ಹೀಗೆ ಹೇಳುವಾಗ ಬಡವರ ಬಗ್ಗೆ ನಿಜವಾದ ಕಳಕಳಿ ಇರುವ ಸಜ್ಜನರು ಸಮಾಜವಾದಿಗಳಲ್ಲಿ ಇಲ್ಲವೆಂದಲ್ಲ ; ಆದರೆ ಸಮಾಜವಾದದ ಆನಿರ್ಭಾವವಾಗುವಾಗ ಮಾತ್ರ ಅವರು ಮೊದಲ ಹುತಾತ್ಮರಾಗುತ್ತಾರೆ ಎಂಬುದೂ ನಿಜ. ಏಕೆಂದರೆ ಸರಕಾರೀಕರಣದ ಪಂದ್ಯದಲ್ಲಿ ಕೊನೆಗೆ ವಿಜಯಿಗಳಾಗುವವರು ಸದ್ಭಾವನೆಯುಳ್ಳ, ಆದರೆ ಯೋಚನೆ ಮಾಡದ ಸಜ್ಜನರಲ್ಲ; ಅಧಿಕಾರವನ್ನು ಆರಾಧಿಸುವ ನಿಷ್ಠುರರೂ ಸ್ವಾರ್ಥಪರರೂ ಆದ ಸಮಯಸಾಧಕರೇ.
ಸಮಾಜವಾದ ವ್ಯಕ್ತಿಸ್ವಾತಂತ್ರ್ಯವಾದ ಈ ಎರಡೂ ಅತಿರೇಕಕ್ಕೆ ಹೋಗಬಹುದು, ಸಾಮಾನ್ಯವಾಗಿ ಹೋಗುತ್ತವೆ. ಈ ಎರಡು ವಾದಗಳನ್ನು ಅವಲಂಬಿಸಿರುವ ಎರಡು ಸಮರ್ಥ ರಾಜಕೀಯ ಪಕ್ಷಗಳಿದ್ದರೆ ಒಂದು ಇನ್ನೊಂದನ್ನು ಹತೋಟಿಯಲ್ಲಿಡುವ ಮೂಲಕ ಅವುಗಳಲ್ಲಿ ಯಾವುದೂ ಅತಿರೇಕಕ್ಕೆ ಹೋಗಿ ದೇಶದ ನಿಜವಾದ ಕಲ್ಯಾಣಕ್ಕೆ ಮಾರಕವಾಗದೆ ಇರುವಂಥ ಸಮಸ್ಥಿತಿ, ಸಮತೂಕ ಸಿದ್ಧಿಸುತ್ತದೆ. ಈ ರೀತಿಯಾದರೆ ಮಾತ್ರ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಫಲದಾಯಕವಾಗಿ ಬೆಳೆಯಬಲ್ಲುದು, ಪ್ರಜಾಪ್ರಭುತ್ವದಲ್ಲಿ ನಿಜವಾದ ಶ್ರದ್ಧೆ, ದೇಶದ ಪುರೋಭಿವೃದ್ಧಿಯ ಬಗ್ಗೆ ಕೃತ್ತೂರ್ವಕವಾದ ಕಾತರ-ಇವು ಇದ್ದಿದ್ದರೆ ನಮ್ಮ ರಾಜಕೀಯ ಮುಖಂಡರು ಈ ಸತ್ಯವನ್ನು ಕಂಡುಕೊಂಡು ಆ ಬಗ್ಗೆ ಕಾರ್ಯಪ್ರವೃತ್ತರಾಗದೆ ಇರುತ್ತಿರಲಿಲ್ಲ. ಇದು ನಮಗೆ ಆಧುನಿಕ ಜಗತ್ತಿನ ರಾಜಕೀಯ ಇತಿಹಾಸ ಕಲಿಸುವ ಪಾಠವಷ್ಟೇ ಅಲ್ಲ, ವಸ್ತುನಿಷ್ಠವಾಗಿ ಚಿಂತಿಸಿದರೆ ನಾವು ಮುಟ್ಟುವ ತೀರ್ಮಾನವೂ ಇದೇ. ಆದರೆ ನಮ್ಮ ನೂತನ ಪ್ರಭುವರ್ಗಕ್ಕೆ ನಿಜವಾಗಿ ಬೇಕಾಗಿದ್ದದ್ದು ಅಧಿಕಾರ, ಅಧಿಕಾರದ ವೈಭವ,

ರಾಜಭೋಗ, ನಿರಂತರ ಪ್ರಭುತ್ವ, ಅದಕ್ಕೆ ಬೇಕಾದ್ದು ಅಜ್ಞರೂ ದರಿದ್ರರೂ ಅವಿದ್ಯಾವಂತರೂ ಆದ ನಮ್ಮ ದೀನ ಜನಸ್ತೋಮದ ವೋಟು; ಅದನ್ನು ಗಳಿಸಲು ಆ ಮುಗ್ಧ ಜನರಲ್ಲಿ ಜಡ ಜಾತಿ ಭಾವನೆ, ಶ್ರೀಮಂತ ವಿದ್ಯಾವಂತರ ಬಗ್ಗೆ ದ್ವೇಷ, ಮಾತ್ಸರ್ಯ ಇವುಗಳನ್ನು ಕೆರಳಿಸುವಂಥ ಸುಲಭ ವಿಧಾನ ; ಅವರಿಗೆ ಮಂಕುಬೂದಿ ಯೆರಚುವುದಕ್ಕಾಗಿ ಸಮಾಜವಾದದ ದಿಢೀರ್‌ ಸ್ವರ್ಗವನ್ನು ನಾಳೆ ತಪ್ಪಿದರೆ ನಾಳಿದ್ದು ತಂದೇ ತೀರುತ್ತೇವೆಂಬ ಆಶ್ವಾಸನೆಯ ಘೋಷಣೆಯ ಹೆಂಡದ ನಿರಂತರವಾದ ಸರಬರಾಜು-ಇಷ್ಟನ್ನೆಲ್ಲ ತುಂಬ ಪರಿಷ್ಕಾರವಾಗಿ ನೆರವೇರಿಸಿ ಈಗ ನಮ್ಮನ್ನಾಳುವ ಪ್ರಭುಗಳು ಈ ದೇಶದಲ್ಲಿ ಕಮೂನಿಸ್ಟರ ಸ್ವಾಗತಕ್ಕೆ ತಕ್ಕ ವಾತಾವರಣವನ್ನು ಸೃಷ್ಟಿಸಿ ಅದನ್ನು ಗೊಂದಲದ ಪರಿಸ್ಥಿತಿಗೂ ಅರಾಜಕತೆಯ ಅಂಚಿಗೂ ತಂದು ಮುಟ್ಟಿಸಿದ್ದಾರೆ, ಕೃತಾರ್ಥರಾಗಿದ್ದಾರೆ. ಈ ಬಗ್ಗೆ ಇಡೀ ದೇಶವೇ ಅವರಿಗೆ ಕೃತಜ್ಞವಾಗಿರಬೇಕಾದ್ದೂ ಮತ್ತೆ ಅವರನ್ನೇ ಚುನಾಯಿಸಬೇಕಾದ್ದೂ ಅಗತ್ಯವಲ್ಲವೆ? ವ್ಯಕ್ತಿ ಸ್ವಾತಂತ್ರ್ಯದ ಕಲ್ಪನೆ, ಮೂಲಭೂತವಾದ ವಿವೇಕ ಇವೂ ಕೊನರದೆ ಇರುವ ನಮ್ಮ ದೇಶದಂಥ ದೇಶದಲ್ಲಿ ಸಮಾಜವಾದದ ಬೀದಿಕೂಗು, ಸರ್ಕಾರೀಕರಣ ಇವುಗಳಿಂದ ಎಂಥ ಅನಾಹುತವಾಗಬಹುದೆಂಬುದಕ್ಕೆ ನಮ್ಮ ಈ ಇಪ್ಪತ್ತು ವರ್ಷಗಳ ಇತಿಹಾಸವೇ ಸಾಕ್ಷಿ. ಇಂಥ ಪರಿಸ್ಥಿತಿಯಲ್ಲೂ ಅದೇ ಘೋಷಣೆಗಳನ್ನು ಮತ್ತೆ ಮತ್ತೆ ಕೂಗುತ್ತ, ಅದೇ ವಿಧಾನಗಳನ್ನು ಮುಂದುವರಿಸುತ್ತ, ಒಂದು ಹೇಳುತ್ತ ಇನ್ನೊಂದು ಮಾಡುತ್ತ ಅದೇ ಅಪರಾಧಿಗಳು ಇನ್ನೂ ಅಧಿಕಾರದಲ್ಲಿ ಮುಂದುವರಿಯುವುದು ಸಾಧ್ಯವಾಗಿರುವುದು ಮಾತ್ರ ನಮ್ಮ ಬುದ್ಧಿಗೆ ನಮ್ಮ ವಿವೇಕಕ್ಕೆ, ನಮ್ಮ ಆತ್ಮರಕ್ಷಣ ಪ್ರವೃತ್ತಿಗೇ ದೊಡ್ಡ ಸವಾಲು. ಈ ಸವಾಲನ್ನು ಎದುರಿಸುವವರೇ ಇಲ್ಲವೋ ?
ಇತ್ತೀಚೆಗೆ ನಮ್ಮ ದೇಶದಲ್ಲಿ ಕಾಂಗ್ರೆಸ್ ಪಕ್ಷದೊಳಗಡೆ ನಡೆದ ಯಾದವೀ ಕಲಹವೇ ಇಂದಿನ ನಮ್ಮ ದುಷ್ಟ ಪರಿಸ್ಥಿತಿಗೆ ತಕ್ಕ ಪ್ರತಿಮೆ. ಗೆಲ್ಲುವುದು ಮುಖ್ಯ, ಅದಕ್ಕೆ ಏನು ಬೇಕಾದರೂ ಮಾಡಬಹುದು, ಏನು ಬೇಕಾದರೂ ಹೇಳಬಹುದು, ಹೇಳಿದ್ದನ್ನು ಹೇಳಲಿಲ್ಲ ಎನ್ನಬಹುದು. ರುಜುವಾತುಪಡಿಸಲು ಸಾಧ್ಯವಾಗದ ರೀತಿಯಲ್ಲಿ ಯಾವ ದುಷ್ಕತ್ಯವನ್ನಾದರೂ ಎಸಗಬಹುದು. ಬೆನ್ನ ಹಿಂದೆ ಒಂದು ದೊಡ್ಡ ಗುಂಪನ್ನು ಸೇರಿಸಿಕೊಂಡು ಕೂಗಿದರೆ ಕೂಗಿದ್ದೇ ಸತ್ಯ, ನ್ಯಾಯ, ತನ್ನ ಸ್ವಂತ ಲಾಭಕ್ಕೆ ಯಾವುದು ಸಹಾಯಕವೋ ಅದೇ ನ್ಯಾಯ ಮಾತ್ರವಲ್ಲ, ದೇಶಕ್ಕೆ ಬೇಕಾದ್ದೂ ಅದೇ ಎಂಬ ನೂತನ ತತ್ವ. ಈ ನೂತನ ತತ್ವಗಳನ್ನು ಅಧಿಕಾರಸ್ಥರು ತಮ್ಮ ಸ್ಥಾನ ಧನ ಬಲಗಳಿಂದ ಹೇಗೆ ಸ್ಥಾಪಿಸಿದರು, ದೇಶಕ್ಕೆ ದೇಶವೇ ಪ್ರತಿಭಟಿಸದೆ ಇದನ್ನೆಲ್ಲ ಮುಕ್ತ ಮನಸ್ಸಿನಿಂದ ಹೇಗೆ ಸ್ವೀಕರಿಸಿತ್ತು, ಈ ಮೇಲ್ಪಂಕ್ತಿಯನ್ನೇ ಉಳಿದೆಲ್ಲರೂ ಅನುಸರಿಸಲು ಹೇಗೆ ಮುಂದಾದರು ಎಂಬುದನ್ನು ಕುರಿತು ಚಿಂತಿಸಿದರೆ ನಮ್ಮ ದೇಶದಲ್ಲಿ ಪ್ರಜಾ

ಪ್ರಭುತ್ವಕ್ಕೆ ಎಂಥ ಗತಿ ಬಂದಿದೆ ಎನ್ನುವುದು ತಿಳಿಯುವುದು. ಬಹುಮತಕ್ಕಾಗಿ ಪೈಪೋಟಿ, ಅದನ್ನು ಗಳಿಸಲು ನಡೆಸಿದ ಮಾರಣಹೋಮ, ಸ್ವರ್ಗಕಾಮೇಷ್ಟಿ ಇವುಗಳ ವಿಜೃಂಭಣೆಯನ್ನು ಕಂಡಾಗ ಈ ದೇಶದಲ್ಲಿ ಸಜ್ಜನಿಕೆ, ನೀತಿಪರಾಯಣತೆ, ಸ್ವಲ್ಪವಾದರೂ ನಾಚಿಕೆ ಇವು ಇನ್ನೂ ಉಳಿದಿವೆಯೇ ಎಂಬ ಪ್ರಶ್ನೆ ಹುಟ್ಟದೆ ಇರಲಾರದು. ವಿರೋಧಿಗಳನ್ನು ನಿಗ್ರಹಿಸಲು ಯಾವ ಅಸ್ತ್ರವನ್ನಾದರೂ ಉಪಯೋಗಿಸಬಹುದು; ಯಾವ ಸಮಯದಲ್ಲಾದರೂ ಕತ್ತಿಯನ್ನೆತ್ತಬಹುದು ; ನಂಬಿಸಿ ದ್ರೋಹ ಮಾಡಬಹುದು; ದೇಶದ ಹಣವನ್ನು ತನ್ನ ಬೆಂಬಲಿಗರಿಗಾಗಿ ತನ್ನ ಸ್ಥಾನ ಭದ್ರತೆಗಾಗಿ ಹೇಗೆ ಬೇಕಾದರೆ ಹಾಗೆ ಸ್ವಂತ ಆಸ್ತಿಗಿಂತಲೂ ಹೆಚ್ಚಾಗಿ ಧಾರಾಳವಾಗಿ ಖರ್ಚು ಮಾಡ ಬಹುದು; ಮುಖ್ಯವಾದದ್ದು ಅಧಿಕಾರ, ಇನ್ನಷ್ಟು ಅಧಿಕಾರ, ಸಂಪೂರ್ಣ ಸರ್ವಾಧಿಕಾರ: ಸತ್ಯ, ನ್ಯಾಯ, ಅಪವಾದ ಭೀತಿಯೂ ಕೂಡಾ ಅದಕ್ಕೆ ಅಡಿಯಾಳು. ಈ ನೂತನ ಕಾರ್ಯಸೂತ್ರ ನಮ್ಮ ಪ್ರಜಾಪ್ರಭುತ್ವದ ಮೂಲ ಸೂತ್ರವಾಗಿ ಈ ಇಪ್ಪತ್ತು ವರ್ಷಗಳ ಕಾಲವೂ ತಕ್ಕಷ್ಟು ಗುಪ್ತವಾಗಿ ಆಚರಣೆಯಲ್ಲಿದ್ದದ್ದು ಈಗ ಕಣ್ಣಿಗೆ ಹೊಡೆಯುವಷ್ಟು ಎದ್ದು ಕಾಣತೊಡಗಿದೆ-ಅಷ್ಟೆ. ಇದು ನಮ್ಮ ಅಧಃ ಪತನದ ಮಹಾ ಸಂಕೇತ. ಅಭ್ಯುದಯದ ಪಥ ಯಾವುದು ?
ಎಚ್ಚರ, ಕನಸು, ಪದರು ಪದರುಗಳುಳ್ಳ ಮನಸ್ಸು, ಭೂತಕಾಲದ ಭಾರ, ಭವಿಷ್ಯತ್ತಿನ ಮುನ್ನೋಟ- ಇವುಗಳಿಂದ ಕೂಡಿ ವಿಚಿತ್ರವೂ ಅಪರಿಚಿತವೂ ಆದ ಜಗತ್ತಿಗೆ ಬಂದು ಕೆಲವು ಕಾಲ ಇಲ್ಲಿದ್ದು ಅನಂತರ ಎತ್ತಲೋ ಮಾಯವಾಗುವ ಮನುಷ್ಯನ ವ್ಯಕ್ತಿತ್ವದ ಅನಂತ ಮುಖಗಳನ್ನೂ, ಅದರ ಅಂತಸ್ಥ ನಿಗೂಢತೆಯನ್ನೂ ಕಡೆಗಣಿಸಿ, ಅದರ ಪದರು ಪದರುಗಳ ಮಟ್ಟ ಮಟ್ಟಗಳ ಸಂಕೀರ್ಣತೆಯನ್ನೂ ಅದರಿಂದಲೇ ಹುಟ್ಟುವ ಮರ್ತ್ಯಜೀವನವನ್ನಾವರಿಸುವ ಅಜ್ಞೇಯದ ಅಜ್ಞಾತದ ಸ್ತರ ಸ್ತರಗಳನ್ನೂ ಸರಳಗೊಳಿಸುವ ಯಾವ ಪ್ರಯತ್ನವೂ ಇಲ್ಲಿ ಸಫಲವಾಗದು. ಸಮಾಜವನ್ನು ಒಂದು ಯಂತ್ರದಂತೆ, ವ್ಯಕ್ತಿಯನ್ನು ಆ ಯಂತ್ರದೊಂದು ಗೊಣಸಿನಂತೆ ಪರಿಭಾವಿಸಿ ಯೋಜಿಸುವ ಯಾವ ವ್ಯವಸ್ಥೆಯೂ ಸುಖ ತರಲಾರದು, ಸ್ಥಾಯಿ ಆಗಲಾರದು. ನಮಗೆ ತಿಳಿದದ್ದಕ್ಕಿಂತ ಹೆಚ್ಚಿನದು, ನಮ್ಮ ಅನುಭವಕ್ಕೆ ಆಚಿನದು, ನಮ್ಮ ಶ್ರದ್ಧೆಗಳಿಗಿಂತ ಭಿನ್ನವಾದದ್ದು ಇದೆ ಎಂಬ ಅರಿವನ್ನು ಬಿಟ್ಟು ಮಾಡುವ ಎಲ್ಲ ಪ್ರಯತ್ನವೂ ವ್ಯರ್ಥ. ಅಂಥ ಅರಿವಿನಿಂದ ಬರಬೇಕಾದದ್ದು ಅಪಾರವಾದ ವಿನಯ, ಆಗ್ರಹವಿಲ್ಲದ ನಿಷ್ಠೆ, ಸೇರುವ ಸ್ಥಳದಷ್ಟೇ ಹೋಗುವ ದಾರಿಯೂ ಮುಖ್ಯ ಎಂಬ ಎಚ್ಚರ-ಇವು ನಾಗರಿಕತೆಯ, ಪ್ರಜಾತಂತ್ರದ ಮೂಲಗುಣಗಳು ; ಸರ್ವಾಧಿಕಾರ ಬುದ್ಧಿಗೆ ತದ್ವಿರುದ್ಧವಾದಂಥವು. ತಮ್ಮ ದೇವರನ್ನು ನಂಬಿದರೆ, ತಮ್ಮ ಮತವನ್ನು ಸೇರಿದರೆ ಮಾತ್ರ ಮುಕ್ತಿ ಎಂಬ ಸ್ವಮತಾಂಧತೆಯಂತೆಯೇ ಸಮಾಜವಾದದಿಂದ

ಮಾತ್ರ, ಸರಕಾರೀಕರಣದಿಂದ ಮಾತ್ರ ಅಭ್ಯುದಯ ಎಂಬ ಮೂಢನಂಬಿಕೆಯೂ ಮನುಷ್ಯನ ನಿಜವಾದ ಬೆಳವಣಿಗೆಗೂ ಸಮಾಜದ ನಿಜವಾದ ಶ್ರೇಯಸ್ಸಿಗೂ, ಸುಭಿಕ್ಷಕ್ಕೂ ಮಾರಕ. ಅಪಾರವೆನ್ನಿಸುವಂಥ ಪರಮತ ಸಹಿಷ್ಣುತೆಯನ್ನು ಕಲಿತು ಬಂದ ನಮ್ಮ ದೇಶದಲ್ಲಿ ಈಗ ಕಂಡು ಬರುವ ಭಿನ್ನಮತದ ಬಗ್ಗೆ ತಾತ್ಸಾರ, ಪರ ಮತದ ಬಗ್ಗೆ ಅಸಹನೆ-ಇವು ದಿಗಿಲುಗೊಳಿಸುತ್ತವೆ. ತನಗಿಂತ ಬೇರೆಯಾಗಿ ಯೋಚಿಸುವವನನ್ನು, ತನಗಿಂತ ಭಿನ್ನವಾದ ಶ್ರದ್ಧೆಯುಳ್ಳವನನ್ನು, ತನಗಿಂತ ಬೇರೆ ರೀತಿಯಲ್ಲಿ ಬದುಕುವಂಥವನನ್ನು ತದಕಿ ಹಾಕುತ್ತೇವೆ, ಹೊಸಕಿ ಹಾಕುತ್ತೇವೆ, ನಿರ್ನಾಮ ಮಾಡುತ್ತೇವೆ ಎಂಬ ಮಾತು ಈಗ ಎಲ್ಲ ಕಡೆಗಳಲ್ಲೂ ಕೇಳಿ ಬರುತ್ತಿದೆ. ಅದಕ್ಕನುಗುಣವಾದ ಕೆಲಸವೂ ಎಷ್ಟೋ ಕಡೆ ನಡೆಯತೊಡಗಿದೆ. ಶಿವಸೇನೆ ಕಮ್ಯೂನಿಸ್ಟ್ ಸೇನೆ ನಕ್ಷಲ್‌ಬಾರಿ ಸೇನೆ ಮುಂತಾದುವು ಎಲ್ಲ ಕಡೆಗಳಲ್ಲೂ ಹುಟ್ಟಿಕೊಳ್ಳುತ್ತಿವೆ. ಇವೆಲ್ಲವುಗಳ ಕಾರಮಾರ್ಗವೆಂದರೆ ದೊಡ್ಡ ದೊಡ್ಡ ಗುಂಪು ಕಟ್ಟಿಕೊಂಡು ಶಸ್ತ್ರಾಸ್ತ್ರಗಳ ಸಮೇತ ಪಶುಬಲದ ಪ್ರದರ್ಶನ ನಡೆಸುವುದು, ಅದರ ಪ್ರಯೋಗ ಮಾಡುವುದು. ಈ ಪಶುಬಲದ ವಿರುದ್ಧವಾಗಿ ನಿಲ್ಲುವ ಯಾವ ಶಕ್ತಿಯೂ ಇಲ್ಲವಾಗಿ ನಾವೆಲ್ಲ ನಿಷ್ಕ್ರಿಯರಾಗಿ ಕುಳಿತು ಸ್ವಾತಂತ್ರ್ಯ, ಸಮಾನತೆ, ಸಮಾಜವಾದ ಇತ್ಯಾದಿ ದೊಡ್ಡ ದೊಡ್ಡ ಮಾತುಗಳನ್ನು ಉರುಳಿಸುತ್ತಿದ್ದೇವೆ. ಈ ಎಲ್ಲದರ ನಡುವೆ ನಷ್ಟವಾಗುತ್ತಿರುವುದು ಮಾನವತೆಯು ಅತ್ಯಂತ ಕೋಮಲವೂ ಸೂಕ್ಷವೂ ಅಮೂಲ್ಯವಾದ ಮೂಲಾರ್ಕವೂ ಆದ ವ್ಯಕ್ತಿಸ್ವಾತಂತ್ರ್ಯ. ಭಯದ, ಗೊಂದಲದ ಕರಾಳ ಪಶುಬಲದ ಪ್ರದರ್ಶನದ ರಾಕ್ಷಸನಾತಾವರಣದಲ್ಲಿ ಮಾನವತೆಯ ಶಾಂತ ಮಂದ್ರ ಧ್ವನಿ ಅಡಗಿ ಹೋಗುತ್ತಿದೆ. ವ್ಯಕ್ತಿತ್ವದ ವಿಕಾಸಕ್ಕೆ ಅತ್ಯಗತ್ಯವಾದ ಭಿನ್ನಮತದ ಅಭಿವ್ಯಕ್ತಿಗೆ ತಕ್ಕ ವಾತಾವರಣವನ್ನು ಮತ್ತೆ ಸೃಷ್ಟಿ ಮಾಡುವುದೇ ನಾವು ಈಗ ಕೈಗೊಳ್ಳಬೇಕಾದ ಅತಿ ಜರೂರಿನ ಕೆಲಸ. ಈ ಕೆಲಸವನ್ನು ನಾವು ತ್ರಿಕರಣಪೂರ್ವಕವಾಗಿ ಕೈಗೆತ್ತಿಕೊಳ್ಳದೆ ಹೋದರೆ ಈಗ ಇರುವ ನಮ್ಮ ಪ್ರಜಾಪ್ರಭುತ್ವದ ಹೊರಗೆರೆಯೂ ಮಾಯವಾಗಿ ದುರ್ಮದದ, ಅಧಿಕಾರಲಾಲಸೆಯ, ರಾಕ್ಷಸೀಸರ್ವಾಧಿಕಾರ ಪ್ರಭುತ್ವ ಪಟ್ಟಕ್ಕೆ ಬರಲು ಹೆಚ್ಚು ದಿನಗಳಿಲ್ಲ.

Close
By kanaja|2021-01-06T19:47:04+05:30March 14, 2018|ಕನ್ನಡ|0 Comments

ಈ ವಿಷಯವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ​!! ನಿಮ್ಮ ಉಪಕರಣವನ್ನು ಆಯ್ಕೆ ಮಾಡಿ

FacebookTwitterLinkedInRedditWhatsAppTumblrPinterestVkXingEmail

About the Author: kanaja

Related Posts

  • ಸಂಪುಟ-೩೪

    ಸಂಪುಟ-೩೪

  • ಸಂಪುಟ-೩೩

    ಸಂಪುಟ-೩೩

  • ಸಂಪುಟ-೩೨

    ಸಂಪುಟ-೩೨

  • ಸಂಪುಟ-೩೧

    ಸಂಪುಟ-೩೧

Leave A Comment Cancel reply

ವಿಭಾಗಗಳು

ಹೊಸ ಅಂಕಣಗಳು

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕನ್ನಡ ಭಾಷೆ,ಸಾಹಿತ್ಯ

  • ಸಂಪುಟ-೩೪
  • ಸಂಪುಟ-೩೩
  • ಸಂಪುಟ-೩೨
  • ಸಂಪುಟ-೩೧
  • ಸಂಪುಟ-೩೦

ಕಲೆ,ಸಂಗೀತ

  • ರಂಗ ವಿಮರ್ಶೆಯ ಬೆನ್ನು ಹತ್ತಿ..
  • ರಂಗಭೂಮಿಯೊಂದೇ ಸಮತಾವಾದದ ಪ್ರತೀಕ
  • ರಂಗಭೂಮಿಯ ನಡಿಗೆ
  • ರಂಗ ಪರದೆಗಳು : ಶಬ್ದಪಾರಮಾರ್ಗಮಶಕ್ಯಂ
  • ರಂಗ ಪರದೆಗಳು : ರಂಗ ಪರದೆಗಳ ಹಿನ್ನೆಲೆ

ವಿಜ್ಞಾನ , ತಂತ್ರಜ್ಞಾನ

  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ
  • ಮಕ್ಕಳ ಮೇಲೆ ಸೈಬರ್ ಅಪರಾಧಿಗಳ ದೌರ್ಜನ್ಯ

ಕೃಷಿ ,ರೈತರ ಅನುಭವ

  • ಅಂತಾರಾಷ್ಟ್ರೀಯ ಬೇಳೆಕಾಳು ವರ್ಷ: 2016
  • ಪದವಿನ್ಯಾಸ: ೧೨. ಸನಿಕೆ
  • ಪದವಿನ್ಯಾಸ: ೧೩. ಈಚು
  • ಪದವಿನ್ಯಾಸ: ೧೪. ಕಣಜ
  • ಪದವಿನ್ಯಾಸ: ೯. ಬೆಳೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

http://www.kannadasiri.in

ಇತ್ತೀಚಿನ ಟ್ವೀಟ್‌ಗಳು

Tweets by KannadaKanaja

ಫೇಸ್ಬುಕ್ ಅಲ್ಲಿ ನಮ್ಮನ್ನು ಸಂಪರ್ಕಿಸಿ

ಇತ್ತೀಚಿನ ಕೃತಿಗಳು

ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ:

ಕೃತಿಸ್ವಾಮ್ಯ 2012 - 2017 ಕಣಜ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕಣಜ ಯೋಜನೆಯ ಅಧಿಕೃತ ವಿಳಾಸ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇ-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - developkanaja@gmail.com

ಸರ್ಕಾರದ ಸಂಪರ್ಕ ಕೈಪಿಡಿ | ಮಹತ್ವದ ಜಾಲತಾಣಗಳು | ಇ ಆಡಳಿತ ಜಾಲತಾಣ  | ಇ-ಸೇವೆಗಳು | ಸಾಮಾನ್ಯ ಅಂಕಿ ಅಂಶ | ಸರ್ಕಾರದ ಆ್ಯಪ್ ಗಳು | ಕೇಂದ್ರ ಸರ್ಕಾರದ ಜಾಲತಾಣಗಳು | ತಾಂತ್ರಿಕ‌ ಜಾಲತಾಣಗಳು | ಕನ್ನಡ ಸಂಬಂಧಿ ಜಾಲತಾಣಗಳು | ಆಯೋಗಗಳು | ನ್ಯಾಯಾಲಯಗಳು | ಡೌನ್‌ಲೋಡ್‌ಗಳು | ಪ್ರವಾಸಿ ಜಾಲತಾಣಗಳು | ಸಾರ್ವತ್ರಿಕ ರಜೆಗಳು

FacebookTwitterInstagramPinterest
Toggle Sliding Bar Area

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Email: developkanaja@gmail.com

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

E-ದಿನ

  • ಗಾಂಧೀ ೧೫೦
  • ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ
  • ಜೀವ-ನಿರ್ಜೀವ ಲೋಕಗಳ ನಡುವಿನ ಕೊಂಡಿ – ವೈರಾಣುಗಳು
  • ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ
  • ಸೂಕ್ಷ್ಮಾಣುಜೀವಿಗಳ ಲೋಕದ ತೀವ್ರವಾದಿ – ಆರ್ಕಿಯ

ಇತ್ತೀಚಿನ ಕೃತಿಗಳು

ಮಹತ್ವದ ಜಾಲತಾಣಗಳು


  • ವೆಬ್-ಡೈರೆಕ್ಟರಿ


  • ರಾಜ್ಯಪಾಲರ ಕಚೇರಿ


  • ಮುಖ್ಯಮಂತ್ರಿ ಕಚೇರಿ


  • ವಿಧಾನಸಭೆ


  • ವಿಧಾನ ಪರಿಷತ್ತು


  • ಮುಖ್ಯ ಕಾರ್ಯದರ್ಶಿ

ಇ ಆಡಳಿತ ಜಾಲತಾಣ


  • ಸಿ.ಇ.ಜಿ


  • ವೆಬ್ ಪೋರ್ಟಲ್


  • ಆಧಾರ್


  • ಇ-ಆಫೀಸ್


  • ಇ-ಪ್ರೊಕ್ಯೂರ್ಮೆಂಟ್


  • ಎಚ್‌ಆರ್‌ಎಂಎಸ್


  • ಕೆ.ಆರ್.ಡಿ.ಎಚ್


  • ಕೆ.ಎಸ್.ವಾನ್


  • ಡಿ.ಪಿ.ಎ.ಆರ್


  • ಕೆ.ಎಸ್.ಡಿ.ಸಿ

ಇ-ಸೇವೆಗಳು


  • ಸಕಾಲ


  • ಸೇವಾ ಸಿಂಧು


  • ಇ-ಗೆಜೆಟ್


  • ಆನ್‌ಲೈನ್ ಆರ್‌ಟಿಐ


  • ಇ-ಸ್ಪಂದನ


  • ಮಾಹಿತಿ ಕಣಜ

ಸಾಮಾನ್ಯ ಅಂಕಿ ಅಂಶ


  • ಇ-ಪ್ರಗತಿ


  • ಇ-ತಾಲ್


  • ಡೇಟಾ


  • ಕರ್ನಾಟಕ ಗೆಜೆಟ್


  • ಸಿಎಂ ಡ್ಯಾಶ್‌ಬೋರ್ಡ್

ಸರ್ಕಾರದ ಆ್ಯಪ್ ಗಳು


  • ಬಿಎಂಟಿಸಿ


  • ಭೂಮಿ


  • ಇ-ಸೆವಾಯ್ ಕರ್ನಾಟಕ


  • ಡಿಶ್ಯಾಂಕ್


  • ಕೆ.ಎಸ್.ಆರ್.ಟಿ.ಸಿ.


  • ಗ್ರಾಮ ಪಂಚಾಯಿತಿ


  • ಕರ್ನಾಟಕ ರಾಜ್ಯ ಪೊಲೀಸ್


  • ಎಲ್ಲಾ ವೀಕ್ಷಿಸಿ...

ಕೇಂದ್ರ ಸರ್ಕಾರದ ಜಾಲತಾಣಗಳು


  • ಸಂಸತ್ತು


  • ರಾಷ್ಟ್ರಪತಿ ಕಚೇರಿ


  • ಪ್ರಧಾನ ಮಂತ್ರಿಗಳ ಕಚೇರಿ


  • ಪಾಸ್ಪೋರ್ಟ್ ಸೇವಾ


  • Aadhaar


  • Karnataka Bhavan

ತಾಂತ್ರಿಕ‌ ಜಾಲತಾಣಗಳು


  • ಸಿ.ಡಿ.ಎ.ಸಿ


  • ಎನ್ಐಸಿ


  • ಎಸ್.ಟಿ.ಕ್ಯೂ.ಸಿ

ಕನ್ನಡ ಸಂಬಂಧಿ ಜಾಲತಾಣಗಳು


  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ


  • ಕನ್ನಡ ಸಾಹಿತ್ಯ ಪರಿಷತ್ತು


  • ಕಣಜ


  • ಕನ್ನಡ ಅಭಿವೃದ್ಧಿ ಪ್ರಾಧಿಕಾರ


  • ಇ-ಕನ್ನಡ

ಆಯೋಗಗಳು


  • ಮಾನವ ಹಕ್ಕು ಆಯೋಗ


  • ವಿದ್ಯುತ್ ಆಯೋಗ


  • ಜ್ಞಾನ ಆಯೋಗ


  • ಚುನಾವಣಾ ಆಯೋಗ


  • ಇ-ಕನ್ನಡ


  • ಕರ್ನಾಟಕ ಕಾನೂನು ಪ್ರಾಧಿಕಾರ


  • ಮಕ್ಕಳ ಹಕ್ಕುಗಳ ಆಯೋಗ


  • ಮಹಿಳಾ ಆಯೋಗ


  • ಗ್ರಾಹಕ ವಿವಾದಗಳ ಪರಿಹಾರ ಆಯೋಗ

ನ್ಯಾಯಾಲಯಗಳು


  • ಸರ್ವೋಚ್ಚ ನ್ಯಾಯಾಲಯ


  • ಹೈಕೋರ್ಟ್


  • ಜಿಲ್ಲಾ ನ್ಯಾಯಾಲಯಗಳು


  • ಕೇಂದ್ರ ಆಡಳಿತ ನ್ಯಾಯಮಂಡಳಿ


  • ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ

ಡೌನ್‌ಲೋಡ್‌ಗಳು


  • ಪಿಡಿಎಫ್ ಡೌನ್‌ಲೋಡ್


  • ನುಡಿ


  • ಸಿಡಿಎಸಿ ಭಾಷಾಂತರಿಸಿ


  • ಇ-ಸ್ಪೀಕ್


  • ಕನ್ನಡ ಧ್ವನಿ ಟಿಪ್ಪಣಿಗಳು

Go to Top