. ಸಾಹೇಬ ಸಂಬೋಧನೆಯನ್ನುಕುರಿತು

ಭಾಷೆಯಲ್ಲಿ ಬಳಕೆಯಾಗುವ ಶಬ್ದಗಳಲ್ಲಿ ಅರ್ಥ ಅಡಗಿರುವುದಿಲ್ಲ. ಶಬ್ದಾರ್ಥಗಳ ಸಂಬಂಧ ಯಾದೃಚ್ಛಿಕವಾದುದು. ಹೊಸ ಹೊಸ ಶಬ್ದಗಳು ಭಾಷೆಗೆ ಬಂದು ಸೇರುತ್ತವೆ. ಹಳೇ ಶಬ್ದಗಳು ಹೊಸ ರೂಪವನ್ನು ಪಡೆದು ಹೊಸ ಅರ್ಥದಲ್ಲಿ ಬಳಕೆಯಾಗುತ್ತವೆ. ಹಳೆಯ ಅರ್ಥಕ್ಕೆ ಹೊಸದೊಂದು ಪದವು ಬಳಕೆಯಾದಾಗ ಅಥವಾ ಹೊಸ ಅರ್ಥದಲ್ಲಿ ಹಳೆಯ ಪದವೊಂದು ಬಳಕೆಯಾದಾಗ ಅರ್ಥವ್ಯತ್ಯಾಸವಾಗುತ್ತದೆ. ಒಂದು ಭಾಷೆಯಲ್ಲಿ ಇರದ ಶಬ್ದಗಳು ಅನ್ಯಭಾಷಾ ಸ್ವೀಕರಣದಿಂದ ಹೊಸದಾಗಿ ಸೇರ್ಪಡೆಯಾಗಿ ಸ್ವೀಕೃತ ಭಾಷೆಯ ಭಾಷಿಕರಿಗೆ ಅರ್ಥವಾಗುತ್ತವೆ. ಅಂದರೆ ಶಬ್ದಗಳು ಸಾಮಾಜಿಕ ಒಪ್ಪಂದವಾಗಿ ಬಳಕೆಯಾಗಿರುತ್ತವೆ.

ಪರ್ಸೋ ಅರೆಬಿಕ್ ಮೂಲದ ‘ಸಾಹೇಬ’ ಪದ ಮಹ್ಮದೀಯರ ಆಳಿಕೆಯ ಕಾಲದಲ್ಲಿ ಚಲಾವಣೆಗೆ ಬಂದಿತು. ಅದರರ್ಥ ಉಳ್ಳವ, ಒಡೆಯ. ಈ ರೂಪ ಇಂದು ಕನ್ನಡದಲ್ಲಿ ಹಲವು ಅರ್ಥಾಂತರಗಳನ್ನು ಹೊಂದಿದೆ. ವಿಶೇಷವಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ಅದರ ಬಳಕೆ ಹೆಚ್ಚು. ಅದರ ಬಳಕೆಯ ಸಂದರ್ಭವನ್ನು ಗಮನಿಸಿ ಹೇಳುವುದಾದರೆ ಅಧಿಕಾರಿಗಳನ್ನು ಸಂಬೋಧಿಸುವಾಗ ಗೌರವಸೂಚಕವಾಗಿ ಅದು ಬಳಕೆಯಾಗುತ್ತದೆ. ಡಿ. ಸಿ. ಸಾಹೇಬರು, ಎ. ಸಿ. ಸಾಹೇಬರು, ವಿ. ಸಿ. ಸಾಹೇಬರು, ಬಿ.ಇ.ಒ. ಸಾಹೇಬರು ಮುಂತಾದವು. ಅಧಿಕಾರದಲ್ಲಿರುವ ರಾಜಕಾರಣಿಗಳನ್ನು ಸಂಬೋಧಿಸುವಾಗಲೂ ಬಳಕೆಯಾಗುತ್ತದೆ. ಎಂ.ಎಲ್.ಎ. ಸಾಹೇಬರು, ಎಂ.ಪಿ. ಸಾಹೇಬರು, ಡ್ರೈವರ್, ಕಂಡಕ್ಟರ್‌ಗಳನ್ನು ಸಹಿತ ‘ಸಾಹೇಬ’ ಎಂದು ಸಂಬೋಧಿಸುತ್ತಾರೆ. ‘ಡ್ರೈವರ್ ಸಾಹೇಬರ್ ವೇಳೆ ಆಗಿದೆ ಗಾಡಿ ಬಿಡ್ರಿ’. ‘ಕಂಡಕ್ಟರ್ ಸಾಹೇಬರ್ ಚಿಲ್ಲರೆ ಕೊಡ್ರಿ’ ಇವುಗಳನ್ನು ಗಮನಿಸಿದಾಗ ಅಧಿಕಾರ ಕೇಂದ್ರೀಕೃತ ಇದ್ದವರಿಗೆ ಮಾತ್ರ ಸಾಹೇಬ ಎಂದು ಸಂಬೋಧಿಸುತ್ತಾರೆ.

ಈ ರೂಪವು ವ್ಯಕ್ತಿನಾಮದ ಅಥವಾ ಕುಟುಂಬನಾಮ ಕೊನೆಗೆ ಗೌರವಸೂಚಕದಂತೆ ಬಳಕೆಯಾಗುತ್ತದೆ. ದಾದಾಸಾಹೇಬ ಪಾವಟೆ, ಅಪ್ಪಾಸಾಹೇಬ ಅಡಕೆ, ನಂದೀಮಠ ಸಾಹೇಬರು, ಕಲಬುರ್ಗಿ ಸಾಹೇಬರು ಮುಂತಾದವು. ಭಾಷೆಯ ಬಳಕೆಯಲ್ಲಿ ಸಹಜವಾಗಿ ಈ ರೂಪ ಬಳಕೆಯಾಗುತ್ತದೆ. ಇದನ್ನು ಗಮನಿಸಿದಾಗ ಸಾಹೇಬ ರೂಪವು ಮುಖ್ಯಸ್ಥ, ಮಹಾಶಯದಂತೆ ಒಂದು ರೀತಿಯ ಪ್ರತಿಷ್ಠೆಯ ಸೂಚಕದಂತೆ ಬಳಕೆಯಾಗುವುದುಂಟು. ಅಧಿಕಾರಿಗಳ ಹೆಂಡಂದಿರು ತಮ್ಮ ಪತ್ನಿಯನ್ನು ಸಂಬೋಧಿಸುವಾಗ ಹಾಗೂ ಇನ್ನೊಬ್ಬರಿಗೆ ಪರಿಚಯಿಸುವಾಗ ಸಾಹೇಬ ರೂಪವನ್ನು ಬಳಸುತ್ತಾರೆ. ‘ನಮ್ಮ ಸಾಹೇಬರು ಆಫೀಸಿಗೆ ಹೋಗಿದ್ದಾರೆ’, ‘ಸಾಹೇಬರು ಬಂದರು’, ಇಂತಹ ಸಂದರ್ಭದಲ್ಲಿ ಸಾಹೇಬ ರೂಪ ಒಡೆಯ, ಯಜಮಾನ ಎಂಬರ್ಥದಲ್ಲಿಯೂ ಬಳಕೆಯಾಗುತ್ತದೆ. ಅಧಿಕಾರಿಗಳ ಹೆಂಡಂದಿರನ್ನು ‘ಸಾಹೇಬತಿ’ ಎಂದು ಕರೆಯುವ ವಾಡಿಕೆ ಇದೆ. ಆದರೆ ಇದರ ಬಳಕೆ ಸಾಹೇಬದಷ್ಟು ವ್ಯಾಪಕವಾಗಿಲ್ಲ.

ಅಧಿಕಾರೇತರರಿಗೆ ಸಾಹೇಬ ರೂಪ ಬಳಕೆಯಾಗುವುದಿಲ್ಲ. ಉಪಾಧ್ಯಾಯರನ್ನು ಸಂಬೋಧಿಸುವಾಗ ಸರ್, ಮೇಷ್ಟ್ರು ಎನ್ನುತ್ತೇವೆ ವಿನಃ ಸಾಹೇಬ ಎನ್ನುವುದಿಲ್ಲ. ಉಪಾಧ್ಯಾಯರಿಗೆ ಅಧಿಕಾರ ಇರುವುದಿಲ್ಲ ತಾನೇ! ‘ಮಾಡ್ತಸರ್ ಪಿರೇಡ್’ ಇದೆ. ‘ಸಂಬೋಧನೆಯ ವಿಭಕ್ತಿಯ ಬಗ್ಗೆ ನಮ್ಮ ಮಾಡ್ತಸರ್ ಅವರಿಗೆ ಸಂದೇಹವಿದೆ. ’ ’ನಮಸ್ಕಾರ ಸರ್’, ಇಲ್ಲೆಲ್ಲ ಸರ್ ಎಂದೇ ಸಂಬೋಧಿಸುತ್ತೇವೆ. ಅದರಂತೆ ವ್ಯಾಪಾರಸ್ಥರಿಗೂ ಸಾಹೇಬ ರೂಪ ಬಳಕೆಯಾಗುವುದಿಲ್ಲ. ಅವರ ವ್ಯಕ್ತಿನಾಮ ಅಥವಾ ಕುಟುಂಬ ನಾಮದಿಂದ ಸಂಬೋಧಿಸುತ್ತೇವೆ. ಇದನ್ನು ಗಮನಿಸಿದಾಗ ಸಾಹೇಬ ರೂಪವು ಸಾಮಾಜಿಕವಾಗಿ ನಿಯಂತ್ರಿಸಲ್ಪಟ್ಟಿದೆ ಎಂಬ ಅಂಶವು ಸ್ಪಷ್ಟವಾಗಿ ಗೋಚರಿಸುತ್ತದೆ.

ಬಹುಶಃ ಕರ್ನಾಟಕದ ಎಲ್ಲ ಪ್ರದೇಶದ ಮುಸ್ಲಿಂರನ್ನು ಸಾಹೇಬರೆಂದೇ ಕರೆಯುತ್ತಾರೆ. ಇಮಾಮ್ ಸಾಹೇಬ್, ಅಬ್ದುಲ್ ಸಾಹೇಬ್, ಮಹ್ಮದ್ ಸಾಹೇಬ್ ಅದು ಸರಿಯೇ. ಮೂಲತಃ ಅದು ಉರ್ದುರೂಪ ತಾನೆ? ಮುಸ್ಲಿಂ ಸಮುದಾಯವನ್ನೇ ‘ಸಾಬರು’ ಎನ್ನುತ್ತಾರೆ. ಇದನ್ನು ಗಮನಿಸಿದಾಗ ಸಾಹೇಬ ಎನ್ನುವುದು ಜಾತಿಸೂಚಕವಾಗಿಯೂ ಬಳಕೆಯಾಗುತ್ತದೆ. ಆದರೆ ಉರ್ದು ಭಾಷೆಯಲ್ಲಿಯೇ ‘ಸಾಹಬ್ ಲೋಗ್’ ಅಂದರೆ ಬಿಳಿಯ ಜನರು. ಅಧಿಕಾರ ಬಿಳಿಯರ ಕೈಗೆ ಹೋದುದನ್ನು ಅದು ಸೂಚಿಸುತ್ತದೆಯೇ? ಈ ಬಗ್ಗೆ ಯೋಚಿಸಬೇಕಾಗಿದೆ. ಕರಾವಳಿ ಪ್ರದೇಶದ ಕೊಂಕಣಿ ಆಡು ಮಾತಿನಲ್ಲಿ ಸಾಹೇಬ ರೂಪ ಒಂದು ರೀತಿಯಲ್ಲಿ ಸಲಿಗೆ ಮಾತಿನಂತೆ ಬಳಕೆಯಾಗುತ್ತದೆ. ಕಸಲ್ ಸಾಯ್ಬ (ಏನು ಮಾರಾಯ) ಕಿತ್ತೂರು ಕರ್ನಾಟಕದ ವ್ಯಾವಹಾರಿಕ ಕನ್ನಡದಲ್ಲಿ ಈ ರೂಪವು ದೊಡ್ಡಸ್ತಿಕೆ, ಹಿರಿತನ, ಅಧಿಕಾರ ಚಲಾವಣೆ ಎಂಬರ್ಥದಲ್ಲಿಯೂ ಬಳಕೆಯಾಗುತ್ತದೆ. ‘ನಿಮ್ಮ ಸಾಹೇಬಕಿ ಇಲ್ಲಿ ತೋರಿಸಬೇಡಿರಿ ನಿಮ್ಮ ಮನೆಯಲ್ಲಿ ತೋರಿಸಿರಿ’ ಕನ್ನಡಿಗರ ಕೌಟುಂಬಿಕ ಮತ್ತು ಸಾಮಾಜಿಕ ವಲಯದಲ್ಲಿ ಈ ರೂಪ ಪ್ರವೇಶ ಪಡೆದಿದೆ. ಹೀಗೆ ಭಾಷಿಕ ರೂಪಗಳು ಒಂದು ಭಾಷಾ ಸಮುದಾಯದ ಸಂಸ್ಕೃತಿಯನ್ನು ಸೂಚಿಸುತ್ತವೆ. ಅನ್ಯಭಾಷಾ ಮೂಲವಾದ ಸಾಹೇಬ ಪದವು ಕನ್ನಡದ ವಿಭಿನ್ನ ಭಾಷಾ ವಲಯದಲ್ಲಿ ಬಳಕೆಯಾಗಿ ವಿಭಿನ್ನ ಅರ್ಥಗಳನ್ನು ಕೊಟ್ಟಿದೆ.

 

. ದ್ರಾವಿಡಸಂಬಂಧವಾಚಕಗಳು

ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ ಭಾಷೆಗಳಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ತುಳು ಭಾಷೆಗಳು ಬಹುಮುಖ್ಯವಾಗಿವೆ. ಅವು ತಮ್ಮದೇ ಆದ ಸಾಹಿತ್ಯ ಹಾಗೂ ಲಿಪಿ ಸೌಲಭ್ಯಗಳನ್ನು ಸಂಪಾದಿಸಿಕೊಂಡಿವೆ. (ಲಿಪಿಯ ದೃಷ್ಟಿಯಿಂದ ತುಳುವನ್ನು ಹೊರತುಪಡಿಸಿ), ಈ ದ್ರಾವಿಡ ಭಾಷೆಗಳ ಬಂಧುಸೂಚಕಗಳನ್ನು ಪರಸ್ಪರ ಹೋಲಿಸಿ ಪರಿಶೀಲಿಸಿದಾಗ ಅವುಗಳ ಬಳಕೆ ಮತ್ತು ಸಂಬೋಧನೆಯಲ್ಲಿ ಸಾಮ್ಯತೆ ಕಂಡುಬರುತ್ತದೆ. ಕೆಲವು ಬಂಧುಸೂಚಕಗಳನ್ನು ಇಲ್ಲಿ ಕೊಡಲಾಗಿದೆ.

ಕೌಟುಂಬಿಕ ಸಂಬಂಧಗಳು

ಕನ್ನಡ ತಮಿಳು ಮಲಯಾಳಂ ತೆಲುಗು ತುಳು
ಅಕ್ಕ ಅಕ್ಕ ಚೇಚ್ಚಿ, ಚೇಟತ್ತಿ ಅಕ್ಕ ಅಕ್ಕೆ
ಅಣ್ಣ ಅಣ್ಣನ್ ಚೇಟ, ಜ್ಯೇಷ್ಠನ್ ಅನ್ನ ಅಣ್ಣೆ
ಅಜ್ಜ ತಾತ ಅಪ್ಪುಪ್ಪ ತಾತ ಅಜ್ಜೆ
ಅಜ್ಜಿ ಪಾಟಿ ಮುತ್ತಶ್ಶಿ / ವೆಲಿಯಮ್ಮ ಅವ್ವ ಅಜ್ಜಿ
ಅತ್ತಿಗೆ ಅಣ್ಣಿ ವದಿನ
ಅತ್ತೆ ಮಾಮಿ / ಮಾಮಿಯಾರ್ ಅಮ್ಮಾಯಿ ಅಮ್ಮ ಅತ್ತ ಮಾಮಿ
ಅಳಿಯ ಮರುಮಗನ್ / ಮಾಪ್ಲಾ ಮರುಮಗನ್ ಅಲ್ಲುಡು ಮರ್‌ಮಾಯಾ
ಗಂಡ ಕಣವ (?) ಭರ್ತಾವ್ ಮೊಗಡು ಕಂಡನಿ
ಚಿಕ್ಕಪ್ಪ ಸಿತ್ತಪ್ಪ ಎಳೆಪ್ಪ/ ಚಿಟ್ಟಪ್ಪ ಬಾಬಾಯಿ ಸಿದ್ದಮ್ಮೆ
ಚಿಕ್ಕಮ್ಮ / ಚಿಗವ್ವ ಸಿತ್ತಿ ಚಿಟ್ಟಿ, ಎಳೆಮ್ಮೆ ಪಿನ್ನಿ ಸಿದ್ದಪ್ಪೆ
ತಂಗಿ ತಂಗಚ್ಚಿ ಅನುಜತ್ತಿ ಚೆಲ್ಲಿ ಮೆಗ್‌ದಿ
ತಂದೆ ಅಪ್ಪನ್ ಅಚ್ಚನ್ ತಂಡ್ರಿ ಅಮ್ಮೆ
ತಮ್ಮ ತಂಬಿ ಅನುಜನ್ ತಮ್ಮುಡು ಮೆಗ್ಯ
ತಾಯಿ/ ಅಮ್ಮ ಅಮ್ಮ ಅಮ್ಮ ತಲ್ಲಿ/ ಅಮ್ಮ ಅಪ್ಪೆ
ದೊಡ್ಡಪ್ಪ ಮುತಪ್ಪ ಪೆದ್ದ ನಾನ್ನ ಮಲ್ಲಮ್ಮೆ
ದೊಡ್ಡಮ್ಮ / ದೊಡ್ಡವ್ವ ಮೂತಮ್ಮ ಪೆದ್ದಮ್ಮ ಮಲ್ಲಪ್ಪೆ
ನಾದುನಿ ನಾತೂನ್ ಮರದಲು ಮೈತೆದಿ
ನೆಗ್ಯಾನಿ / ಓರೆಗಿತ್ತಿ ತೋಟಿ ಕೋಡಲು    –
ಮಗ ಮಗನ್ ಮಗನ್ ಕೊಡಕು ಮಗೆ
ಮಗಳು ಮಗಳ್ ಮಗಳ್ ಕೂತುರು ಮಗಳ್
ಬಾವ ಮಾವ / ಮಾಮನಾರ್ ಅಮ್ಮಾವನ್ ಮಾಮ ಬಾವೆ/ ಮೈದುನ
ಮರಿದಿ ಮೈತ್ನೆ
ಮೊಮ್ಮಗ   ಪೌತ್ರನ್ ಮನವಡು ಪುಳ್ಳಿ
ಮೊಮ್ಮಗಳು   ಪೌತ್ರಿ ಮನವರಾಲು  
ಷಡ್ಡಕ ತೋಡಲ್ಲುಡು ಸಡ್ಡ್‌ಗೆ
ಸವತಿ ಗಂಡಾನಮ್ಮ ಸವತಿ
ಸೊಸೆ   ಮರುಮಗಳ್ /
ಮರಿಯೊಳ್
ಕೋಡಲು ಮರ್ ಮಾಳ್
ಹೆಂಡತಿ ಭಾರ್ಯಾ ಪೆಳ್ಳಾಂ ಬುಡೆದಿ
ಬಾವ ಅಳಿಯನ್ ಅಳಿಯನ್ ಬಾವ ಬಾವೆ

 

ಇತರ ಸಂಬಂಧವಾಚಕಗಳು

ಗ್ರಾಹಕ   ಪದಿವ್‌ಕಾರನ್   ಗಿರಾಕಿ
ಮಾಲೀಕ   ಭೂಉಡಮಸ್ತನ್ ಜಮೀನ್ದಾರು  
ಯಜಮಾನ   ಮೊದಲಾಳಿ /
ಉಡಮಫನ್
ಯಜಮಾನಿ  
ರೋಗಿ   ರೋಗಿ ರೋಗಿ  
ವ್ಯಾಪಾರಿ   ಕಚ್ಚವಡಕಾರನ ವ್ಯಾಪಾರಿ  
ವೈದ್ಯ   ವೈದ್ಯನ್ ವೈದ್ಯುಡು  
ಸೂಳೆ   ವೇಶ್ಯ   ಸೂಳೆ
ಸೇವಕ ಸೇವಕನ್ ಸೇವಕುಡು ಚಾಕ್ರಿದಾಯಿ
ಸ್ನೇಹಿತ ಸುನೇಗಿತನ್ /
ನನ್ಪನ್
ಸ್ನೇಹಿತನ್ ಸ್ನೇಹಿತುಡು ದೋಸ್ತಿ

ದ್ರಾವಿಡ ಭಾಷೆಗಳ ಸಂಬಂಧವಾಚಕಗಳ ತೌಲನಿಕ ಅಧ್ಯಯನ ಮಾಡುವವರಿಗೆ ಮೇಲಿನ ಬಂಧುಸೂಚಕಗಳು ನೆರವಾಗಬಹುದು.

—-
ಭಾಗವನ್ನು ಬರೆಯುವಲ್ಲಿ ತಮಿಳ್, ಮಲೆಯಾಳಂ ಹಾಗೂ ತುಳು ಭಾಷೆಯ ಬಂಧುಸೂಚಕಗಳನ್ನು ತಿಳಿಸಿದವರು ಡಾ. ಮೋಹನ್  ಕುಂಟಾರ್, ಪ್ರೊ. . ವಿ. ನಾವಡ ಹಾಗೂ ತೆಲುಗು ಭಾಷೆಯ ಬಂಧುಸೂಚಕಗಳನ್ನು ತಿಳಿಸಿದವರು ಶ್ರೀ ಸಿ. ವೆಂಕಟೇಶ, ಇವರಿಂದ ಒದಗಿರುವ ಸಹಾಯವನ್ನು ಇಲ್ಲಿ ಸಂತೋಷದಿಂದ ಸ್ಮರಿಸುತ್ತೇನೆ.

 

. ಪಾರಿಭಾಷಿಕಪದಕೋಶ

ಅಡ್ಡ ಹೆಸರು Nick Name
ಆಡು ಮಾತು Colloguial Language
ಅರ್ಥ ಭಿನ್ನತೆ Semetntic difference
ಏಕ ಭಾಷಿಕ ಸಮುದಾಯ Monolingual Community
ಒಳಬಾಂಧವ್ಯ Semi- endogamous
ಕುಲನಾಮ Surname
ಕೌಟುಂಬಿಕ ಅವಳಿ ಸಂಬಂಧಿ Family twin relation
ಗಾದೆ Proverb
ಜಾನಪದಶಾಸ್ತ್ರ Folklore
ದ್ವಿಭಾಷಿಕ ಸಮುದಾಯ Bilingual Community
ದ್ವಿಸ್ತರತೆ Diaglossia
ನಿರ್ದಿಷ್ಟ Specific
ಪರಿಚಯ ಸೂಚಕ Reference term
ಪಿತೃ ಮೂಲನಾಮ Patronymic
ಪ್ರವರ್ಗ Category
ಪ್ರಾದೇಶಿಕ ಭಾಷಾ ಪ್ರಭೇದ Regional dialect
ಬಂಧುಗಣ Kinset
ಬಂಧು ವರ್ಗ Kinclass
ಬಂಧು ಸಮೂಹ Kin group
ಬಂಧುತ್ವ ಸೋದರಿಯರು Classificatory Sisters
ಬಹುಭಾಷಿಕ ಸಮುದಾಯ Multilingual Community
ಭಾಷಾ ಆಧುನೀಕರಣ Language Modernization
ಭಾಷಾ ಒಲವು Language Attitude
ಭಾಷಾ ಪ್ರಬೇಧ Dialect
ಭಾಷಾ ಪ್ರಮಾಣೀಕರಣ Language Standardization
ಭಾಷಾ ಬದಲಾವಣೆ Language  Change
ಭಾಷಾ ಬಳಕೆ Language use
ಭಾಷಾ ವ್ಯತ್ಯಾಸ Linguistic variation
ಭಾಷಾ ಸಮುದಾಯ Speech community
ಭಾಷಾ ಕ್ರಿಯೆ Speech function
ಮಾನವಶಾಸ್ತ್ರ Anthropology
ಮಾನವ ಕುಲಶಾಸ್ತ್ರ Ethnology
ಮಾತೃ ಮೂಲನಾಮ Matronymic
ರಕ್ತ ಬಂಧು Blood relative
ರಕ್ತ ಸಂಬಂಧಿ Consanguinal
ವಂಶಾವಳಿ Pedigree
ವಾರ್ಗಿಕ Generic
ವಿವಾಹ ಸಂಬಂಧಿ Affinal
ವ್ಯಕ್ತಿನಾಮ Personal name
ವೃತ್ತಿಸೂಚಕ ಅವಳಿ ಸಂಬಂಧ Profession twin relationship
ವೈರುಧ್ಯ ಸಂಬಂಧ Inverse Correlation
ಶ್ರೇಣೀಕರಣ ತತ್ವ Hierarchial principle
ಸಂಬಂಧಸೂಚಕ Kinship term
ಸಂಬೋಧನ ಸೂಚಕ Addressing term
ಸಮಾನಾಂತರ ಸಂಬಂಧಿ Parallel Kin
ಸಮಾಜಶಾಸ್ತ್ರ Socialogy
ಸಮಾಜೀಕರಣ Socialization
ಸಮುದಾಯ ಭಾವನೆ Community sentiment
ಸಾಂದರ್ಭಿಕ ಅರ್ಥ Contextual meaning
ಸಾಮಾಜಿಕ ಅವಳಿ ಸಂಬಂಧ Social twin relationship
ಸಾಮಾಜಿಕ ಉಪಭಾಷೆ Social dilect
ಸಾಮಾಜಿಕ ಚಲನಶಾಸ್ತ್ರ Social dynamism
ಸಾಮಾಜಿಕ ನಿಯಂತ್ರಣ Sicoal Control
ಸಾಮಾಜಿಕ ಬದಲಾವಣೆ Social Change
ಸಾಮಾಜಿಕ ಭಾಷಾ ಶಾಸ್ತ್ರ Socio  linguistic
ಸಾಮಾಜಿಕ ರಚನೆ Social structure
ಸಾಮಾಜಿಕ ವರ್ಗ Social class
ಸಾಮಾಜಿಕ ಸಂಬಂಧ Social relation
ಸಾಮಾಜಿಕ ಸಮೂಹಗಳು Social group
ಸಾಮಾಜಿಕ ಸ್ತರ ವಿನ್ಯಾಸ Social stratification
ಸಾಮಾಜಿಕ ಸ್ಥಾನಮಾನ Social status
ಸ್ಥಳನಾಮ place name
ಸೋದರ ಬಂಧು Cross cousin
ಹೊರಬಾಂಧವ್ಯ Exxagamy

 

. ಗ್ರಂಥಲೇಖನಸೂಚಿ

ಕನ್ನಡ

ಅಂಗಡಿ ಎಸ್.ಎಸ್., ೧೯೯೮, ‘ಕರ್ನಾಟಕದಲ್ಲಿ ಕನ್ನಡ – ಮರಾಠಿ ದ್ವಿಭಾಷಿಕತೆ’ ಶೋಧನ ಪಾರ್ವತಮ್ಮ ಪ್ರಕಾಶ. ಯರಝರವಿ

ಅಂಗಡಿ ಎಸ್.ಎಸ್., ೧೯೯೯ – ೨೦೦೦, ಸಂಬಂಧವಾಚಕಗಳು (ಅವ್ವ, ಅಮ್ಮ, ಅಪ್ಪ, ಅತ್ತೆ, ಮಾವ, ನಾದಿನಿ), ನಮ್ಮ ಕನ್ನಡ ೩೬ – ೪೨ (ಸಂ), ಕೆ. ವಿ. ನಾರಾಯಣ ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಕಲಬುರ್ಗಿ ಎಂ.ಎಂ., ೧೯೮೯, ‘ಕನ್ನಡ ನಾಮ ವಿಜ್ಞಾನ’ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಚಿದಾನಂದಮೂರ್ತಿ ಎಂ., ೧೯೮೧, ‘ಕರ್ನಾಟಕ ವ್ಯಕ್ತಿ ನಾಮಗಳು’, ವಾಗರ್ಥ ಬಾಪ್ಕೋ ಪ್ರಕಾಶನ, ಬೆಂಗಳೂರು.

ಚಿದಾನಂದಮೂರ್ತಿ ಎಂ., ೧೯೯೩, ‘ಅಬ್ಬೆಯೆಂದತ್ತಿಗೆಯೆಂಬ ಮಾತನ್’ ಹೊಸತು ಹೊಸತು ಕನ್ನಡ ವಿಶ್ವವಿದ್ಯಾಲಯ, ಹಂಪಿ

ಚಿದಾನಂದಮೂರ್ತಿ ಎಂ., ೧೯೯೮, ‘ವಚನಕಾರರ ಕಳ್ಳಿ – ಬಳ್ಳಿ ಪರಿಕಲ್ಪನೆ’, ವಚನಶೋಧ, ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು

ಜೋಗನ್ ಶಂಕರ., ೧೯೯೫, ಗ್ರಾಮ ಸಮಾಜ ಜೀವ ಪ್ರಕಾಶನ, ಮೈಸೂರು.

ನಾರಾಯಣ ಕೆ. ವಿ. ಮತ್ತು ಇತರರು., ೨೦೦೦, ‘ಭಾಷೆ’ ವಿಶ್ವಕೋಶ – ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಪಾಂಡುರಂಗ ಬಾಬು ಡಿ., ೧೯೯೮, ‘ಣೇ ಮೀ ಲೇ’ ಕನ್ನಡ ಅಧ್ಯಯನ ಸಂ. ೫, ಸಂ – ೧ ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಪೀಟರ್ ಜೆ. ಕ್ಲಾಸ್, ೧೯೮೭ ‘ತುಳುವ ದರ್ಶನ’ ಕನ್ನಡಕ್ಕೆ : ಎ. ವಿ. ನಾವಡ ಮತ್ತು ಸುಭಾಶ್ಚಂದ್ರ ಪ್ರಾದೇಶಿಕ ವ್ಯಾಸಂಗ ಕುಂದಾಪುರ.

ಮಹಾದೇವಯ್ಯ ಪಿ., ೨೦೦೧, ‘ಕನ್ನಡದಲ್ಲಿ ಬಂಧುಸೂಚಕ ಪದಗಳು’ ನಮ್ಮ ಕನ್ನಡ ಸಂಚಿಕೆ ೫೦ (ಸಂ) , ಕೆ. ವಿ. ನಾರಾಯಣ ಕನ್ನಡ ವಿಶ್ವವಿದ್ಯಾಲಯ ಹಂಪಿ.

ಶ್ರೀಕಂಠಯ್ಯ ತೀ. ನಂ., ೧೯೮೩, (ತೃ ಆ) ‘ಏನಿ ಗಡಿಂ ರೀ’ ಸಮಾಲೋಕನ, ಶಾರದಾ ಮಂದಿರ, ಮೈಸೂರು.

ಸೇಡಿಯಾಪು ಕೃಷ್ಣಭಟ್., ೧೯೯೨, ‘ಅತ್ತಿಗೆ’ ವಿಚಾರ ಪ್ರಪಂಚ ಕರ್ನಾಟಕ ಸಂಘ, ಪುತ್ತೂರು.

ಸೋಮಶೇಖರಗೌಡ ೨೦೦೦ ‘ಭಾಷೆ ರಚನೆ ಬಳಕೆ’ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು.

ಇಂಗ್ಲಿಷ್

Balasubramanian G., 1999, ‘Language and power in the rural context of Tamil Nadu’ Indian Linguistics, Volume 601 – 4

Brown Roger W and Margurete Ford., 1966 ‘Address in American English’ Dell Hymes Education Language in culture and Society (Horper & Row, New York)

Jampt Holmes., 1992 An Introduction to Socio linguistics Longman London New York

Joseph N., 1980, Cultural Impacts in Kinship Terms Sociolinguistics and Dialectology (Edit S. Ages sthlalingom & K. Karunakaran. Annamalai University.

Firth J.R., 1966, On Socialogical Linguistics in language in culture and society.

Manuel M., 1981, ‘Some Unique Kinship terms current in a dialect of Kany Kumari, District’ IJDL – Vol – x

Misra K.S. 1977, ‘Terms of Address and second person pronominal us age in Hindi’ A Sociolinguistic study Bahri Publication Pvt. Ltd.

Peter Trudgill., 1974, ‘Sociolinguistic An introduction’ Penguin Book Ltd.

Sharma D. D., 1985, ‘Kinship terms of reference in Kumaunim’ (A Socil linguistic Apprasial) IJDL 15 : 2

Sreedhar M.V., 1980 Correlation Between Marriage Practices and Kinship Terms in some Dravidian Language ‘Sociolinguistics and Dialectology Ed – S. Agesthialingom K. Karunakarna, Annamalai University, Annamalai Nagar.