ದಿನಚರಿಯಲ್ಲದ ನೋಟ ಬುಕ್ಕಿನಲ್ಲಿ ಬರೆದದ್ದು
(ಬಹುಶಃ ೧೯೧೭ ಮತ್ತು ೧೯೨೩ರ ಮಧ್ಯೆ ಈ ದಿನಚರಿಗಳನ್ನು ಬರೆದಿರಬಹುದು)

ಶ್ರೀ
ನಾರಾಯಣ ಶ್ರೀನಿವಾಸ ರಾಜಪುರೋಹಿತ
ಸಹಕಾರೀ ಸಂಪಾದಕ “ಲೋಕ ಬಂಧು” ಧಾರವಾಡ

ಸನ್‌ ೧೯೨೦ನೆಯ ಅಗಸ್ಟ್‌ ೨೬ನೆಯ ತಾರೀಖು ಗುರುವಾರ ದಿವಸ ಲೋಕಬಂಧು ವೃತ್ತ ಪತ್ರದ ಸಹಕಾರೀ ಸಂಪಾಕತ್ವವನ್ನು ಸ್ವೀಕರಿಸಿದ್ದೇನೆ.

ಸನ್‌ ೧೯೨೦ನೆಯ ಅಗಸ್ಟ್‌ ೨೯ನೆಯ ತಾರೀಖು ರವಿವಾರ ದಿವಸ “ಜಯ ಕರ್ನಾಟಕ” ಎಂಬ ಮಾಸ ಪತ್ರಿಕೆಯನ್ನು ೧೯೨೧ನೆಯ ಜನವರಿ ೧ನೆಯ ತಾರೀಖಿಗೆ ನಾನು ಹಾಗೂ ಶ್ರೀಯುತ ವೆಂಕಟರಾವ ಆಲೂರ ನಾವಿಬ್ಬರು ಸೇರಿ ಹೊರಡಿಸುವ ನಿಶ್ಚಯ ಮಾಡಿದೆವು.

ಪೆನ್ಸಿಲ್ಲಿನಲ್ಲಿ

. ಬೇಂದ್ರೆ . ಗುತ್ತಲ . ಕುಂಭ ಕೋಣಂ . ನೀರ್ಲಗಿ . ಹುಕ್ಳೇರಿಕರ . ದಿವಾಕರ . …

. ಧಾರವಾಡ ಕರ್ನಾಟಕದ ಕೇಂದ್ರವಾಗಬೇಕು
೨. ಮೆಲ್ಲ ಮೆಲ್ಲನೆ ಶಬ್ದದಿಂದ ಘಾಟ
೩. ಕನ್ನಡ ಮರಾಠಿ ವಾದ
೪. ಆಯರ್ಲಂಡದ ಹೋಮರೂಲ
ಕರ್ಮ
ದೇಶ ಕಾಲ ಕಾರಣ
ಬ್ರಹ್ಮನು ಸಾಕ್ಷಿ ಅನುಮಂತಾ ಭೋಕ್ತಾ ಭರ್ತಾ ಇದ್ದಾನೆ
ಸ್ವಭಾವ ಧರ್ಮಗಳು
ವಿರೋಧಿ
ಬಿಡದಿರು ಅಡ್ಡಕಟ್ಟು ಮರಕಳಿಸು
ಅನುರೋಧಿ
ಕ್ರಮೇಣ ಸಂಕ್ಷಿಪ್ತ ಪ್ರಗತಿ ಗರ್ಭಿತ ಪ್ತಗತಿ
ಮೆಲ್ಲಗೆ ಹಾರಿಕೆಯಿಂದ ಏಕ ಸಮಯ ವಿಚ್ಛೇದ
ಬ್ರಾಹ್ಮೀಸ್ಥಿತಿಯ ಪ್ರಾಪ್ತಿಯ ನಿಯಮಗಳು

. ಪ್ರಯತ್ನ ತ್ಯಾಗವೇ ಭ್ರಷ್ಟತೆಯು, ಅಸಿದ್ಧಿಯು ಭ್ರಷ್ಟತೆಯಲ್ಲಿ
೨. ವಿಧಿ ನಿಷೇಧಾತ್ಮಕ ಕಾರ್ಯ ಪರಂಪರೆಯೇ ಸಾಧನವು
೩. ಭಾವ ಸಮಾಧಿಯನ್ನು ಮಾಡಿಕೊಂಡರೆ, ಸಾಧನವು ಸುಲಭವೂ ಸುಕರವೂ ಆಗುವುದು.

) ವಿಚಾರ ಶಕ್ತಿಯ ಪ್ರಭಾವ – ಸಾಧ್ಯ
ಆ) ಬ್ರಾಹ್ಮೀ ಸ್ಥಿತಿಯ ಪ್ರಭಾವ – ಸಾಧ್ಯ
ಇ) ದೃಢ ನಿಶ್ಚಯ ನಿರ್ಧಾರ ಮಾಡುವುದು – ಅಸಾಧ್ಯ
ಈ) ಜೀವನ ಕ್ರಮದಲ್ಲಿ ದೈವಿಕ ಶಕ್ತಿಯನ್ನು ಕ್ಷಣ ಕ್ಷಣಕ್ಕೆ ಸುದೈವ ಪ್ರಕಟ ಮಾಡುವುದು – ಅಸಾಧ್ಯ

ಬ್ರಾಹ್ಮಿ ಸ್ಥಿತಿ

. ಸಾಕ್ಷೀ ಭೂತ (ಋಷಿ)
೨. ರಾಮ ಹೀಗೆ ಅನ್ನುತ್ತಾನೆ (ಸ್ವಾಮಿ ರಾಮತೀರ್ಥ)
೩. ದೇವರು ಬಡಕೊಳ್ಳಬೇಕು (ಅರವಿಂದ ಘೋಷ)
೪. ಕಾಯಿಯು ಹಣ್ಣಾದ ಕೂಡಲೆ ಗಿಡವನ್ನು ಬಿಡುತ್ತದೆ.
೫. ಫಾಲ್ಗುಣ ಶುದ್ಧ ೮ (ಶಕೆ ೧೮೪೭) ಬುಧವಾರ ಪ್ರಾತಃಕಾಲ ಶ್ರೀ ಪರಮಾತ್ಮನಿಂದ ಸಹಜಜ್ಞಾನವು ಪ್ರಾಪ್ತವಾಯಿತು.
೬. ಭಾಷಾಂತರಕಾರ – ಅರವಿಂದ ಘೋಷ
೭. ಶಿವಾಜಿಯ ಪೂರ್ವಜರು ಉತ್ತರದೇಶದಿಂದ ಬಂದವರು ಎಂದು ವೈದ್ಯರು ಒಪ್ಪಿದ್ದಾರೆ.
೮. ರಾಜವಾಡೆ ಕರಣ + ನಟ ಕ್ಷತ್ರಿಯಾಂಚೆ ರಾಜ್ಯ – ಕರ್ನಾಟಕ

ಮಧ್ಯಯುಗೀನ ಭಾರತ

. ದ್ರಾವಿಡ ಬ್ರಹ್ಮಣರೆಂದೆನಿಸಿಕೊಳ್ಳುವುದರಲ್ಲಿಯೇ ಭೂಷಣ
೨. ಬಾದಾಮಿಯು ಕರ್ನಾಟಕದ (ಗೋದಾವರಿ – ಕಾವೇರಿಗಳ) ನಡುವಿನ ಪ್ರದೇಶದ ಮಧ್ಯ ಭಾಗದಲ್ಲಿರುತ್ತದೆ.
೩. ಮೂರು ಮಹಾರಾಷ್ಟ್ರಗಳನ್ನು (ದೊಡ್ಡ ರಾಷ್ಟ್ರಗಳನ್ನು) ಆಳುತ್ತಿದ್ದನು.
೪. ‘ಮರಾಠಾ’ ಶಬ್ದ ರೂಪ ಶಿಪಾಯಿಯನ್ನು ಪುಲಕೇಶಿಯ ಸಂರಕ್ಷಣಾರ್ಥವಾಗಿ ಎಲ್ಲಾ ಕಡೆಗೂ ಬೆನ್ನ ಹಿಂದೆ ಇಟ್ಟಿದ್ದಾರೆ.
೫. ಶಬ್ದ ಸಾದೃಶ್ಯದ ಮೋಹ

೧೧೦೦೦ ಗ್ರಾಮ – ೧ ರಾಷ್ಟ್ರ
೩೩೦೦೦ ಗ್ರಾಮ – ೧ ಮಹಾರಾಷ್ಟ್ರ
೯೯೦೦೦ ಗ್ರಾಮ – ಮಹಾಲೋಕ

ಮಹಾರಾಷ್ಟ್ರ – ವ – ಕರ್ನಾಟಕ
ಚಾಳುಕ್ಯ – ಚುಳಕೆ
ರಟ್ಟ – ಲಠ್ಠೆ
ನಲ – ನಲವಡೆ
ಕಲಚೂರಿ – ಕಚೂರಿ
ಯಾದವ – ಚಾಧವ – ಯಾದವ
ಪಲ್ಲವ – ಪಾಲವೆ
ಶಿಲಾಹಾರ – ಶೇಲಾರ – ಸಾಳೇರ
ಕದಂಬ – ಕದಮ
ರಾಷ್ಟ್ರಕೂಟ – ರಾಠೋಡ
ಸೇಂದ್ರಕ – ಸಿಂಧೆ
ಭೋಜ – ಭೋಸಲೆ
ಮೌರ್ಯ – ಮೋರೆ – ಮೊಹರೆ

. ರವಿವಾರ ೨೮.೦೮.೧೯೨೧ನೆಯ ದಿವಸದಿಂದ ಬ್ರಾಹ್ಮೀಸ್ಥಿತಿಯ ಆಚರಣೆ ಪ್ರಾರಂಭ ೨೯.೦೮.೧೯೨೧ ಈ ವಿಷಯವು ಪ್ರಸಿದ್ದ ಮಾಡಲ್ಪಟ್ಟಿತು.
೨. ಬ್ರಾಹ್ಮೀ ಸ್ಥಿತಿಯ ಶುದ್ಧ ಸ್ವರೂಪವು ಸನ್‌ ೧೯೨೧ನೆಯ ಇಸ್ವಿ ಸಪ್ಟಂಬರ್ ೧೫ನೆಯ ತಾರೀಖಿನಿಂದ (ಭಾದ್ರ ಪದ ಶುದ್ಧ ೧೩ ಗುರುವಾರ) ಪ್ರಾರಂಭವಾಯಿತು.

೧೯೨೩

೦೧.೦೧.೧೯೨೩
ಧಾರವಾಡ

ಈ ದಿವಸದಿಂದ ಬ್ರಾ. ಸ್ಥಿ. ಶುದ್ಧವಾರ ಹಾಗೂ ಪೂರ್ಣವಾದ ಆಚರಣೆಯು ಪ್ರಾರಂಭವಾಯಿತು.

ಮ. ರಾ. ರಾ. ಚಿಮ್ಮಲಗಿಕರ ಅಂಗಡಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಘಾಣೆಕರ, ಗೋಪಾಳರಾವ ಲಕ್ಕಲಗೇರಿ ಡಾ. ಕಿರ್ಲೋಸ್ಕರ ಇವರ ಕಡೆಗೆ ಹೋದೆವು.

ಘಾಣೇಕರ ಇವರು ಸಿನೇಮಾ ಧಾರವಾಡದಲ್ಲಿ ಹೇಗೆ ನಡೆದಿದೆ ಈ ಬಗ್ಗೆ ತಿಳಿಸಿರಿ ಎಂದು ಹೇಳಿದವರು.

ಗೋಪಾಳರಾಯರ ಭೆಟ್ಟಿಯಾಗಲಿಲ್ಲ., ಡಾಕ್ಟರರು ಮಹಿಳಾ ವಿದ್ಯಾಲಯಕ್ಕೋಸ್ಕರ ೫.೦೦ ರೂ ಹಾಲಿ ಕೊಟ್ಟರು. ಆ ಬಳಿಕೆ ಭೋಜನ ಮಾಡಿಕೊಂಡು ಸರ್ವರನ್ನೂ, ಜಿಮ್ಮಲನಿಕರರನ್ನು ಭೆಟ್ಟಿಯಾಗಿ ಪಲ್ಲವ, ಬ್ರಷ್‌, ಶಿಲಾಲೇಖ ಇಸಕೊಂಡು ಬಂದದ್ದಲ್ಲದೆ, ಚಿತಾಪೂರಕ್ಕೆ ಟಿಕೇಟು ತೆಗೆದುಕೊಂಡು ಮನೆಗೆ ಬಂದೆನು. ಆಲೂರರರವರಿಗೆ ಪತ್ರ ಬರೆದೆನು. ಇತಿಹಾಸ ಮಂಡಲಕ್ಕೆ ಸೂ ೧೦, ಹಾಲಿ ೪೧.

೦೨.೦೧.೧೯೨೩
ಹೈದರಾಬಾದ

ಚಿತಾಪೂರ ಹೈದರಾಬಾದದಲ್ಲಿ ಕಾಲೇಜ ವಿದ್ಯಾರ್ಥಿಗಳ ಆದರಾತಿಥ್ಯವನ್ನು ಸ್ವೀಕರಿಸುತ್ತ ೧೧ ದಿನ ಅಲ್ಲಿ ಇದ್ದು “ಕರ್ನಾಟಕ ಇತಿಹಾಸ ವಾಙ್ಮಯ” ಮತ್ತು ಆರ್ಯ ಸಂಸ್ಕೃತಿಗನುಸರಿಸಿ “ಸ್ತ್ರೀ ಶಿಕ್ಷಣ” ಎಂಬ ವಿಷಯಗಳನ್ನು ಕುರಿತು ೩ ಉಪನ್ಯಾಸಗಳನ್ನು ಹೇಳಿದೆ. ನಿನ್ನೆ ರಾತ್ರಿ ಇಲ್ಲಿಗೆ ಬಂದೆನು. ಈ ದಿವಸ ಪ್ರಾರ್ತರ್ವಿಧಿಯನ್ನು ತೀರಿಸಿಕೊಂಡು ಶ್ರೀಮಾನ್‌ ಲಚ್ಚಪ್ಪನಾಯಕರು, ನರಸಿಂಗರಾಯರು, ಭೀಮರಾವ ಜಾನೀಬ, ವೆಂಕಟ ರಾವ್‌ ದೇಶಪಾಂಡೆ ಇವರನ್ನು ಭೆಟ್ಟಿಯಾಗಿ ಶ್ರೀ ಸುರೇಶ್ವರಾಚಾರ್ಯರ ಪುಣ್ಯ ತಿಥಿಯ ಉತ್ಸವದ ವಿಷಯವಾಗಿ ಫಂಡಿನ ವಿಷಯ ಸೂಚಿಸಿದೆನು. ನಿನ್ನೆ ಡಾಯರಿ ಬರೆದು ಸುಧಾರಣ ಓದಿದೆನು. ಸಾಯಂಕಾಲ ೪ ಘಂಟೆಗೆ ಊಟವಾಯಿತು. ಬಳಿಕ ಜತ್ತ ಸಂಸ್ಥಾನದ ‘ಪ್ರಭು’ ಜಾತಿಯ ಕೀರ್ತನಕಾರರ ಕೀರ್ತನ ಕೇಳಿಕೊಂಡು ಬರುತ್ತಿರಲು ವೆಂಕಟರಾವ್‌ ದೇಶಪಾಂಡೆ ೧ ರೂ ಫಂಡಿಗೆ ಕೊಟ್ಟರು. ಈ ದಿನ ಕಲಬುರ್ಗಿಗೆ ಹೋಗುವದಾಗಲಿಲ್ಲ.

೦೩.೦೧.೧೯೨೩
ಚಿತಾಪುರ

ಈ ದಿವಸ ಪ್ರಾತಃಕಾಲ ಭೀಮರಾವ ಜಾನೀಬ, ನರಸಿಂಗರಾವ ಶಿಗ್ಗಾವಕರ ಇವರ ಬೆಟ್ಟಿ ತೆಗೆದುಕೊಂಡು ಬಂದೆನು. ನಂತರ ಸುಧಾರಣಾ ಹಾಗೂ ಪ್ರಗತಿ ಓದುತ್ತ ಕುಳಿತೆನು. ಸ್ನಾನ, ಭೋಜನ ನಂತರ ಬಜಾರದಲ್ಲಿ ದತ್ತೋಪಂತ ಸರಾಫ ಇವರ ಅಂಗಡಿಗೆ ಹೋಗಿ ೧೨ ರೂ ಹಾಲಿಗಳಿಗೆ ನೋಟು ೧೦ ರೂ ಮಾಡಿಸಿಕೊಂಡು ಬಂದೆನು ಇದಾದ ಮೇಲೆ ನರಸಿಂಗರಾಯರ ಮನೆಗೆ ಹೋಗುವಷ್ಟರಲ್ಲೂ ಅವರ ಹೊಲಕ್ಕೆ ಶೀತನಿ ತಿನ್ನುವದಕ್ಕೆ ಬನ್ನಿರೆಂದು ಆಗ್ರಹಪೂರ್ವವಾಕ ಕರೆದಿದ್ದರಿಂದ ಅಲ್ಲಿಗೆ ಶ್ರೀ ಲಚ್ಚನಾಯಕರು ಮಂಡಳಿ ಸಹಿತ ಹೋಗಿ ಬರುವಾಗ ರಂಗರಾಯರು ಫಂಡ ವಸೂಲಮಾಡಿಕೊಂಡು ಬಂದರು.

೦೪.೦೧.೧೯೨೩
ಗುಲಬರ್ಗಾ

ನಿನ್ನೆ ರಾತ್ರಿ ಚಿತಾಪುರದಿಂದ ಹೊರಟು ಇಲ್ಲಿಗೆ ರಾತ್ರಿ ೧ ಗಂಟೆಗೆ ಬಂದೆನು ಲಕ್ಷ್ಮೀಶಕವಿಯ ಜೈಮಿನಿ ಭಾರತದ ೨ ಪ್ರತಿಗಳನ್ನು ಸಾಹಿತ್ಯ ಪರಿಷತ್ಪತ್ರಿಕೆಯ ೨ – ೩ ಸಂಚಿಕೆಯನ್ನು ಓದುವರಲ್ಲಿಯೂ ಶ್ರೀ ಕಿಶರಾವ ಕಪಟರಾಳ ವಕೀಲ ಇವರಿಂದ ಇಲ್ಲಿಯ ಮಾಹಿತಿ ದೊರಕಿಸುವದರಲ್ಲಿಯೇ ವೇಳೆ ಹೋಯಿತು. ಶಿಲಾಲಿಪಿಗಳನ್ನು ನೋಡಿಕೊಂಡು ಬಂದೆವು.

೦೫.೦೧.೧೯೨೩
ಗುಲಬರ್ಗಾ

ಈ ದಿವಸ ಪ್ರಾತಃಕಾಲದಲ್ಲಿ ೮ ಗಂಟೆಯಿಮದ ೧೨ ಗಂಟೆಯವರೆಗೆ ಶಿಲಾಲಿಪಿ ತೆಗೆದವು, ನಂತರ ಭೋಜನಮಾಡಿ ಶಿಲಾಲಿಪಿ ಓದುವದರಲ್ಲಿ.

೦೬.೦೧.೧೯೨೩
ಗುಲಬರ್ಗಾ

ಜೈಮಿನಿ ಓದಿ ವಾಕ್‌ ಸಂಪ್ರದಾಯಗಳನ್ನು ತೆಗೆದೆನು.

ನೂತನ ವಿದ್ಯಾಲಯದಲ್ಲಿ “ಕರ್ನಾಟಕ ಪ್ರಾಚೀನ ವಾಙ್ಮಯ ಹಾಗೂ ಇತಿಹಾಸ” ಉಪನ್ಯಾಸ ಮಾಡಿದೆನು ಶ್ರೀಮಾನ ಗಿರಿರಾವ್‌ ಅಣ್ಣಾಜಿ ಜಹಗೀರದಾರ ಸ್ತುತಿಪೂರ್ವಕ ಪುಷ್ಪಹಾರ ಸಮರ್ಪಿಸಿದರು.

೦೭.೦೧.೧೯೨೩
ಗುಲಬರ್ಗಾ

ಜೈಮಿನಿ ಓದಲಾರಂಭಿಸಿದೆ. ಅದರಲ್ಲಿ ‘ದೇವಪುರ ದೊರೆಯ ಲಕ್ಷ್ಮೀರಮಣ ದೇವಪುರದೊಡೆಯ ಲಕ್ಷ್ಮೀಶ’ ಎಂದು ಸ್ತುತಿಸಿರುವದನ್ನು ನೋಡಿ ದೇವಪುರದ ಅರಸನನ್ನು ಅಂದರೆ ತನ್ನ ಪೋಷಕವನ್ನು ಶ್ಲೇಷದಿಂದ ಸ್ತುತಿಸಿದ್ದಾನೆಂದು ಅಂತಃಸ್ಪೂರ್ತಿಯಿಂದ ತಿಳಿಯಿತು ಕೂಡಲೆ ಶ್ರೀ ಕೃಷ್ಣರಾಯರಿಂದ ಸುರಪುರದ ಇತಿಹಾಸವನ್ನು ತೆಗೆಯಿಸಿ ದೇವಪುರದ ಅರಸನ ಕಾಲವನ್ನು ನಿರ್ಣಯಿಸಿದೆನು.

೦೪.೧೧.೧೯೨೩
ಗುಲಬರ್ಗಾ

. ಕನ್ನಡ ಮರಾಠಿವಾದ
೨. ಮಹಿಳಾ ವಿದ್ಯಾಲಯ ಸ್ಥಾಪನೆ
೩. ಲೋಕಬಂಧು ಸಂಪಾದಕತ್ವ
೪. ಭಾಷಾವಾರು ಪ್ರಾಂತರಚನಾ
೫. ಸಾಹಿತ್ಯ ಪರಿಷತ್ತಿನ ದರ್ಶನ

) ಮಹಾಪುರಷರ ದರ್ಶನ
ಆ) ಕವಿರಾಜಮಾರ್ಗದ ಕತೃವು ಯಾರು
ಇ) ರಾಷ್ಟ್ರೀಯ ಕಾಲ
ಈ) ಕನ್ನಡ ಪತ್ರಿಕೆಗಳ ದರ್ಶನ

೨೧.೧೧.೧೯೨೩
ವಿಜಾಪುರ

ಪರಲೋಕವಾಸಿಯಾದಂಥ ಆಧುನಿಕ ಕಾಲದಲ್ಲಿಯ ಸುಪ್ರಸಿದ್ದರಾದ ಕನ್ನಡ ಕವಿಗಳು, ಗ್ರಂಥಕಾರರು ಹಾಗೂ ಪತ್ರಿಕೆಗಳ ಸಂಪಾದಕರು ಇವರ ಸಂಕ್ಷಿಪ್ತ ಚರಿತ್ರೆಗಳನ್ನು ಬರೆಯಿಸಿ ಪ್ರಸಿದ್ಧ ಮಾಡುವುದು. ಮತ್ತು ಅವರ ಲೇಖನಗಳನ್ನು ಸಮಗ್ರವಾಗಿ ಅಥವಾ ಸಂಕ್ಷಿಪ್ತವಾಗಿ ಪುನಃ ಮುದ್ರಿಸುವರು.

ಬಸವಪ್ಪ ಶಾಸ್ತ್ರಿಗಳು ನಂಜುಂಡಯ್ಯನವರು, ಶಾಂತ ಕವಿಗಳು

೦೧.೧೨.೧೯೨೩
ವಿಜಾಪುರ

ಈ ದಿವಸ ಬ್ರಾಹ್ಮೀ ಸ್ಥಿತಿಯನ್ನು ಸಂಪೂರ್ಣವಾಗಿ ಪಡೆದಿರುವೆನು.

೦೪.೧೨.೧೯೨೩
ವಿಜಾಪುರ

ರಾಘೋಬಾ ನಂತರ ೭ – ೮ ವರ್ಷಗಳಲ್ಲಿ ಸುರಪುರ ಬೇಡರ ಹಾವಳಿ

೧೬.೧೨.೧೯೨೩
ವಿಜಾಪುರ

ವಿಜಯಾಪುರದ ನಾರಸಿಂಹ ದೇವಂಗೆ

೧೭.೧೨.೧೯೨೩
ವಿಜಾಪುರ

ಜಗದೇಕಮಲ್ಲ ದೇವನ
ಚಾಳುಕ್ಯ ತ್ರಿಭುವನ ಮಲ್ಲ ದೇವರ ವರುಷ (೫) ನೆಯ ಸಂವತ್ಸರದ ಮಾಘ ಶುದ್ಧ ರಾಂದಶಮಿ ಸೋಮವಾರ

೧೮.೧೨.೧೯೨೩
ವಿಜಾಪುರ

ಶ್ರೀರಾಮಚಂದ್ರ ದೇವ ಶಕವರುಷ ೧೨೧೭ನೆಯ ಕ್ರೋಧಿ ಸಂವತ್ಸರ ಚೈತ್ರ ಶುದ್ಧ ೧೧ ಬುಧವಾರ.

೧೯೨೪

೦೯.೦೧.೧೯೨೪
ಧಾರವಾಡ

ಬ್ರಾಹ್ಮೀಸ್ಥಿತಿಯೇ ಸತ್ಯ ಪಥ್ಯ ಸನಾತನವೆಂಬುದು ಸಿದ್ಧವಾಯಿತು.

೧೦.೦೧.೧೯೨೪
ಧಾರವಾಡ

ಈ ದಿವಸ ಬ್ರಾಹ್ಮೀಸ್ಥಿತಿಯೇ ಅತಿಶಯ ಸರ್ವೋತ್ತಮವಾದ ಮಾರ್ಗವೆಂದು ತಿಳಿದು ಬಂದಿತು.

೧೭.೦೧.೧೯೨೪
ಧಾರವಾಡ

ನಿನ್ನಿನ ದಿವಸ ೧೫.೦೨.೦ ಪಗಾರವು ಬಂದಿತು. ನವಂಬರ, ಡಿಸೆಂಬರ ತಿಂಗಳ ಬಾಡಿಗೆ (೮.೦೦ ರೂ) ಕೊಡಬೇಕು. ಖಾನಾವಳಿ ಜನವರಿ ಬಾಬತು ೭ ರೂ ಕೊಡಬೇಕು. ಪೈರಣ (೨) ಹೊಲಿಸಬೇಕು.

೨೨.೦೧.೧೯೨೪
ಧಾರವಾಡ

ಇಂದು ಕಿಂಚಿತ್‌ ತಪೋಭಂಗವಾಯಿತು. ಇನ್ನು ಮುಂದೆ ಹೀಗೆ ಆಗಗೊಡುವುದಿಲ್ಲ.

೨೫.೦೧.೧೯೨೪
ಧಾರವಾಡ

ಬ್ರಾಹ್ಮೀಸ್ಥಿತಿಯ ಸೂಕ್ಷ್ಮ ಅಧ್ಯಾಯನವು ಪ್ರಾರಂಭವಾಯಿತು.

೨೬.೦೧.೧೯೨೪
ಧಾರವಾಡ

ಬ್ರಾಹ್ಮೀಸ್ಥಿತಿ ಈ ದಿವಸ ಸಂಪೂರ್ಣವಾಗಿ ಪ್ರಾರಂಭವಾಗಿದೆ. ಇಂದು ಜೀವತ ಸಾಫಲ್ಯವುಂಟಾಯಿತು.

೨೦.೦೨.೧೯೨೪
ಅಗಡಿ

ಈ ದಿವಸ ವ್ಯರ್ಥ ವೇಳೆಯು ಬಹಳ ಹೋಯಿತು.

೧೫.೦೪.೧೯೨೪
ಹಾವೇರಿ – ಹಾನಗಲ್ಲ – ಗೊಂದಿ

ಈ ದಿವಸ ರಾತ್ರಿ ೪ ಗಂಟೆಗೆ ಎಂದರೆ ನಾಳೆ ಬುಧವಾರ ದ್ವಾದಶಿ ಬೆಳಗಿನ ೪ ಗಂಟೆಗೆ ಕುಂ. ಸೌಭಾಗ್ಯವತಿಯು ಗಂಡು ಮಗುವನ್ನು ಹಡೆದಳು ಶ್ರೀ ಸುರೇಶ್ವರಾಚಾರ್ಯರು ಅವತರಿಸಿದರು.

೨೭.೦೪.೧೯೨೪
ನೆಗವಾಡಿ

ತೊಟ್ಟಿಲಲ್ಲಿ ಹಾಕುವ ಉತ್ಸವ ಸುರೇಶ್ವರಾಚಾರ್ಯ ಎಂಬ ಹೆಸರನ್ನು ಇಟ್ಟೆನು.

೧೭.೦೬.೧೯೨೪
ಹಾವೇರಿ

ಈ ದಿವಸ ಮಧ್ಯಾಹ್ನ ನಾಲ್ಕು ಗಂಟೆಗೆ ನಮ್ಮ ಅಗಡಿ ರಾಜಪುರೋಹಿತ ಮನೆತನದ ವಾಟಣೀ ಪತ್ರವು ಹಾವೇರಿ ತಲ್ಲೂಕ ಸಬ್‌ ರಿಜಿಸ್ಟಾರ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟಿತು.

೩೦.೦೬.೧೯೨೪
ಧಾರವಾಡ

೦೧. ಹೊಸಮನೆ ಪ್ರಾಪ್ತಿ
೦೨. ಕೇಸರಿ, ಪ್ರ ಕರ್ನಾಟಕ
೦೩. ಚೌಂಡರಸ ಕವಿ ಲೇಖನ
೦೪. ಮಹಿಳಾ ವಿದ್ಯಾಲಯ ಪರಿಚಯ
೦೫. ಉಪನ್ಯಾಸ ಕ. ವಿ. ಸಂಘ
೦೬. ಬ್ರಾಹ್ಮೀ ಸ್ಥಿತಿ ಪ್ರಾಪ್ತಿ
೦೭. ಇ. ಅಧ್ಯಯನ
೦೮. ಪತ್ರವ್ಯಹಾರ ಎಲ್ಲ ಕಡೆಗೂ
೦೯. ಪೈರನು ೨
೧೦. ಹೆಳವನ ಕಟ್ಟೆ ಗಿರಿಯಮ್ಮ
೧೧. ಸಧ್ಯಃ ಸ್ಥಿತಿಯ ಜ್ಞಾನ.

೦೧.೦೭.೧೯೨೪
ಧಾರವಾಡ

ಜಾವೂರ ಕೃಷ್ಟಪ್ಪನ ಮನೆಯನ್ನು ಬಾಡಿಗೆ ಹಿಡಿದು ಈ ದಿವಸ ಬಂದೆನು.

೧೩.೦೮.೧೯೨೪
ಬ್ಯಾಡಗಿ

ಈ ದಿವಸ ಮಠದಲ್ಲಿ ಸ್ತ್ರೀ ಶಿಕ್ಷಣ ವಿಷಯವಾಗಿ ಭಾಷಣ ಮಾಡಿದೆನು.

೨೫.೦೮.೧೯೨೪
ಚಿತ್ರದುರ್ಗ

ಈ ದಿವಸ ಸಾಯಂಕಾಲ ೬ ಗಂಟೆಗೆ ಏ. ವಿ. ಸ್ಕೂಲಿನಲ್ಲಿ “ಆರ್ಯ ಸಂಸ್ಕೃತಿಗನುಸರಿಸಿ ಸ್ತ್ರೀ ಶಿಕ್ಷಣ” ಎಂಬ ವಿಷಯವಾಗಿ ಉಪನ್ಯಾಸ ಮಾಡಿದೆನು.

೩೦.೦೮.೧೯೨೪
ಚಿತ್ರದುರ್ಗ

  • ಹೆಳವನಕಟ್ಟಿ ಗಿರಿಯಮ್ಮನ ಮಾಹಿತಿ
  • ಬ್ಯಾಡಗಿ, ರಾಣಿಬೆನ್ನೂರು, ಚಿತ್ರದುರ್ಗ ಹೊಸ ಪರಿಚಯ
  • ಇತಿಹಾಸ ಸಂಶೋಧನ ಉಪನ್ಯಾಸ
  • ಲಕ್ಷ್ಮೀಶ ಕವಿಯ ಲೇಖನ ವಿಷಯವಾಗಿ ಲೋಕಮತ ನಿರೀಕ್ಷಣ

೨೪.೧೧.೧೯೨೪

02_280_SNSR-KUH

೦೫.೧೨.೧೯೨೪

03_280_SNSR-KUH