೧೯೨೬

೦೯.೦೨.೧೯೨೬
ಚಿತ್ರದುರ್ಗ

ಕರ್ನಾಟಕ ಕಾಲೇಜಿನಲ್ಲಿ ಬ್ರಾಹ್ಮಣ ಕವಿಗಳು ಎಂಬ ವಿಷಯವನ್ನು ಕುರಿತು ಭಾಷಣ ಮಾಡಿದೆನು.

೧೮.೦೯.೧೯೨೬
ಚಿತ್ರದುರ್ಗ

ಕರ್ನಾಟಕ ಇತಿಹಾಸ ಮಂಡಳ ಸಂಸ್ಥೆಯ ಪ್ರಚಾರಕ ಕೆಲಸವನ್ನು ಕೈಕೊಂಡನು.

೩೧.೧೦.೧೯೨೬
ಚಿತ್ರದುರ್ಗ

04_280_SNSR-KUH

ಕಾಲಿಂಜರ ಪುರವರಾಧೀಶ್ವರ ಕ್ರಿ. ಶ. ೧೧೬೭ ಇದು ಬಿಜ್ಜಳನ ಮೃತ್ಯು. ವಂಟಿಮುರಿ
೧. ವಿಜಯನಗರದ ಕೃಷ್ಣರಾಯ
೨. ವಿಜಯನಗರದ ಹರಿಹರ
೩. ವಿಜಯನಗರದ ದೇವರಾಯ
೪. ಗಜಪತಿ ಸ್ಯಾಗೋಡ

೦೭.೧೨.೧೯೨೬
ಜಮಖಂಡಿ, ಮದರಖಂಡಿ

ಜಮಖಂಡಿ – ಹುನುರ – ೩೬೦ ಭಾವಿಗಳು
ಜಮಖಂಡಿ – ಜಳಾದ – ಜಳಾರ್ಣವ
ಮುಂಜಲ – ಮುದಿಯಹಳ್ಳಿ

ಶ್ರೀ ಟೀಕಾಚಾರ್ಯ

ನಾಡಗೌಡ ಮನೆತನ

ದೇಶಪಾಂಡೆ ಹಾಗೂ ಕುಲಕರ್ಣಿ ಮನೆತನಗಳು ವಿಶ್ವಾಮಿತ್ರ ಗೋತ್ರ ಶಾಕಲ ಶಾಖಾ.

ಕೊನೆಗೆ

05_280_SNSR-KUH

೦೮.೧೨.೧೯೨೬
ಜಮಖಂಡಿ

ಜಮಖಂಡಿ ಬನಹಟ್ಟಿ ಬೆಳುಗರೆ ನಾಡಿನಲ್ಲಿರುವ ಬೆಳುಗಲಿ ಐನೂರಲ್ಲಿಯ ಜಂಬುಖಂಡಿ ಎಪ್ಪತ್ತಾರು ಶ್ರೇಷ್ಠವಾದ ಮುದುವೊಳಲಲ್ಲಿ.

ಕ್ರಿ. ಶ. ೧೭೭೫ರಲ್ಲಿ ಭಾಸ್ಕರಪಂತ, ನಾನಾಸಖದೇವ ಈತನನ್ನು ಈ ಪ್ರಾಂತಕ್ಕೆ ಅಧಿಕಾರಿಯನ್ನಾಗಿ ನೇಮಿಸಿದನು.

ಕಾಡಪ್ಪದೇಸಾಯಿ ಇವರನ್ನು ಸೋಲಿಸಿ ಜಮಖಂಡಿಯನ್ನು ಹಸ್ತಗತ ಮಾಡಿಕೊಂಡನು. ಕಾಡಪ್ಪನು ಸತ್ತ ಮೇಲೆ ಆತನ ತಮ್ಮನಾದ ಗದಿಗೆಪ್ಪನು ಆತನ ಕಾರಕೂನ, ನರಸೋಕೃಷ್ಣ ಈತನೂ ಹೋರಾಡಿ ಜಗದಾಳ ಮುಂತಾದ ಗ್ರಾಮಗಳನ್ನು ತೆಗೆದುಕೊಂಡರು (೧೭೯೯)

೧೯೨೭

೨೨.೦೧.೧೯೨೭
ಸಂಕೇಶ್ವರ

೦೧. ಶ್ರೀ ಸುರೇಶ್ವರಾಚಾರ್ಯರ ಅವತಾರ ಕಾರ್ಯ
೦೨. ಸ್ವಧರ್ಮೆ ನಿಧನಂ ಶ್ರೇಯಃ
೦೩. ಕರ್ಮಣ್ಯೇ ವಾಧಿಕಾರಸ್ತೆ
೦೪. ಸದ್ಯ ಸ್ಥಿತಿ ಬ್ರಾಹ್ಮಣರ ಕರ್ತವ್ಯ
೦೫. ಬ್ರಾಹ್ಮಣ ಪರಿಷತ್ತು
೦೬. ಕೀರ್ತನದಿಂದಾಗುವ ಧರ್ಮ ಜಾಗೃತಿ
೦೭. ಕರ್ಮಾಚರಣೆ
೦೮. ಮಹಾಭಾಗತ ಉತ್ಸವದ ಅವಶ್ಯಕತೆ
೦೯. ಗುರುಭಕ್ತಿ
೧೦. ಅಹಂ ಬ್ರಹ್ಮಾಸ್ಮಿ

ಕರ್ನಾಟಕ ಇತಿಹಾಸ ಮಂಡಳ ಧಾರವಾಡ ೨೩.೦೮.೧೯೨೭ನೇ ದಿವಸ ದ. ರಾ. ಬೇಂದ್ರೆ ಇವರು ಮೈಸೂರ ಆರ್ಕಿಯಾಲಜಿಕಲ್‌ ರೆಪೋರ್ಟ್‌ ಒಯ್ದಿದ್ದಾರೆ.

ಗತಕಲಿ ಪ್ರಮಾಣ ೫೦೨೮, ಗತಕಲಿ ಪ್ರಮಾಣ ೪೩೦೦

೧೧೯೯ ಜನ್ಮ

೧೨೭೯ ನಿರ್ಯಾಣ

ಭವಭೂತಿ – ಕವಿ

ಶ್ರೀ ಹರ್ಷಕವಿ ಖಂಡನ

ಘಂಟಾಲ – ತಾಂಡವಾಲಿ ಬರೆಯುವ ಲೆಕ್ಕಣಿಕೆ

ಪೂಗ – ಮಸಿ ತುಂಬುವ ಅಡಕಿ

ಭಟ್ಟೋಜಿ ದೀಕ್ಷಿತರ ಅಣಂದಿರು ರಂಗೋಜಿ ಭಟ್ಟರು, ದೀಕ್ಷಿತರು

ಪ್ರಮೇಯ ದೀಪಿಕಾ ಋಗ್ಭಾಷ್ಯಟೀಕಾ ಏ ಭಜಂತೀ

ನಿಜಾಮನ ರಾಜ್ಯ ೧೭೨೪

ಹೈದರಾಲಿ ೧೭೬೧

ಪೇಶ್ವೆ ೧೭೧೪ – ೧೭೯೫ – ೧೮೧೮

ಪೇಶ್ವೆಯವರ ರಾಜ್ಯ ಬ್ರಾಹ್ಮಣೀರಾಜ್ಯ

ಪೇಶ್ವೆಯವರ ನಿಜಾಮ ಮೈಸೂರು ಹೈದರ

ವಿಜಯ ದಾಸರು – ೧೬೮೭ – ೧೭೫೫

ಭಾಗಣ್ಣದಾಸರು ೧೭೬೫

ಸುಬ್ಬಣ್ಣದಾಸರು ೧೮೦೦ – ೧೮೨೦

ಕ್ರಿ. ಶ. ೧೭೧೪ರಲ್ಲಿ ಬಾಳಾಜಿ ವಿಶ್ವನಾಥ ಪೇಶ್ವೆ ಮುಖ್ಯಮಂತ್ರಿಯ ಕೈಯಲ್ಲಿ ಸರ್ವರಾಜ್ಯಕಾರಭಾರವು ಬಂದಿತು. ೧೭೨೦ – ೧೭೪೦

೧೮ನೆಯ ಶತಮಾನ ೧೭೦೦ – ೧೮೦೦

ಎರಡು ಕಥೆಗಳು ರಚಿಸಲ್ಪಟ್ಟವು.

. ಧೋಂಡೋರಘುನಾಥ ದೇಶಪಾಂಡೆ, ಮಂಗಳ ವೇಢೆ
೨. ವೇದಾಂತ ದೇಶಿಕಾಚಾರ್ಯರು ಅಕ್ಷೋಭ್ಯ ತೀರ್ಥರಿಗೂ ವಿದ್ಯಾರಣ್ಯರಿಗೂ – ಅಧ್ಯಕ್ಷರಿಂದ ಕಥೆ.

ದೊಡ್ಡ ದೇವರಾಜ ೧೬೫೯ – ೧೬೭೨

ಚಿಕ್ಕದೇವರಾಜ ೧೬೨೭ – ೧೭೦೪

ತಿರುಮಲಾರ್ಯ ೧೬೪೫ – ೧೭೦೬

. ವಾಚಸ್ಪತಿ . ವಿವರಣಕಾರರು . ಖಂಡನಕಾರರು ಶ್ರೀಹರ್ಷ – ನ್ಯಾವಿವರಣ, ಅಣುಭಾಷ್ಯ, ಬ್ರಹ್ಮಸೂತ್ರ ಉಪನಿದ್ಭಾಷ್ಯ.

ಪ್ರಮಾಣ ಪದ್ಥತಿ ವಾದಾವಳಿ, ಪದ್ಯಮಾಲ, ಸ್ವತಂತ್ರ

ನರಹರಿತೀರ್ಥ ಖಂಡನ, ಪದ್ಮನಾಭ ತೀರ್ಥ ಆದರ

ನಾಮಲಿಂಗನು ಶಾಸನ ಉಲ್ಲೇಖ ಅಮರಸಿಂಹ

ವಿಜಯಧ್ವಜತೀರ್ಥ, ಭಾಗವತ ತಾತ್ಪರ್ಯ

ಹರಿಪ್ರಸಾದ ಭಾಗೀರಥಿಜೀ ಪ್ರಾಚೀನ ಸಂಸ್ಕೃತ ಬುಕ್‌ ಡಿಪೋ ಕಾಲಬಾದೇವಿ ರೋಡ್‌, ಮುಂಬಯಿ

ಭೀಮಾ ನದಿಯು ಇಂಡಿ ಸಿಂದಗಿ ತಾಲೂಕುಗಳ ಉತ್ತರ ಮೇರೆಯಾಗಿ ಹರಿದು ಕಲಬುರ್ಗಿ ಜಿಲ್ಲೆಯಲ್ಲಿ ಪ್ರವೇಶ ಮಾಡಿ ಸಾದಿ ನಾಡಿನಲ್ಲಿ ಹರಿದು ರಾಯಚೂರ ಜಿಲ್ಲೆಯಲ್ಲಿ ಕೃಷ್ಣೆಗೆ ಕೂಡುತ್ತದೆ.

ಕೃಷ್ಣಾ ಭೀಮಾ ಕೂಡಿದ ಸ್ಥಳ ಸಂಗಮ ಕಡ್ಲೂರ ಕೃಷ್ಣಸ್ಟೇಶನ್‌

ಸನ್ನತಿ ಅಥವಾ ಸಂತಿ ಚಂದಲಾ ಪರಮೇಶ್ವರಿ, ಚಂದಮ್ಮಾ ನಾರಾಯಣಿ ಬ್ರಾಹ್ಮಣರು ಈ ದೇವಿಯನ್ನು ಕುಲದೇವತೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ಕ್ಷೇತ್ರವು ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾಗಿದೆ. ಈ ಚಂದಲಾಪರಮೇಶ್ವರಿ ದೇವಿ ಎಂದರೆ ದುರ್ಗಾದೇವಿ ಎಂದು ಹೇಳಬಹುದು.

ಇತಿಹಾಸ ಸಂಶೋಧನ ಕಾರ್ಯ I. ೧) ಯಾದಬಿರಿ, ೨) ಸುರಪುರ, ೩) ರಾಯಚೂರು, ೪) ಲಿಂಗಸೂರು

  1. ೧) ಯರಗೋಳ, ೨) ಸನ್ನತಿ, ೩) ಸಾದಿಪುರ, ೪) ನಾಗಾವಿ, ೫) ಮಳಖೇಡ, ೬) ಗುಂಡಗುರ್ತಿ, ೭) ಹುಣಶೀಹೊಳಿ, ೮) ಮಾನವಿ, ೯) ಚಿಪ್ಪಲಿ, ೧೦) ಶಹಾಬಾದ

. ವ್ಯಾಸತೀರ್ಥಯತಿ ಕೃತ ೩೪ ಶ್ಲೋಕಗಳು

೧೯೨೮

೧೯.೦೩.೧೯೨೮
ನಂದಗಡ

ವಿರಕ್ತಮಠದಲ್ಲಿ ಶ್ರೀ ಹನುಮಂತ ನಾಯಕರ ಅಧ್ಯಕ್ಷತೆಯಲ್ಲಿ ಭಾಷಣ ಮಾಡಿದೆನು. ‘ಕರ್ನಾಟಕ ಇತಿಹಾಸ ಸಂಶೋಧನೆ’

೨೧.೦೩.೧೯೨೮
ಖಾನಾಪುರ

ಆಶ್ವೀನ ಶುದ್ದ ಏಕಾದಶಿಯ ದಿವಸ (ವಿಜಯ ದಶಮಿಯ ಮರುದಿನ) ಅಂತ್ಯಜರನ್ನು ನೃಸಿಂಹ ದೇವರ ದರ್ಶನಕ್ಕೆ ಒಳಗೆ ಸಭಾಮಂಟಪದ ವರೆಗೆ ಬಿಡುತ್ತಾರೆ. (ಶ್ರೀ ರಾಮಾನುಜಾಚಾರ್ಯರ ಸಂಪ್ರದಾಯ).

೨೨.೦೩.೧೯೨೮
ಖಾನಾಪುರ ಪಾರಿಶ್ವಾಡ

೧೫ ಇಂಚು ಉದ್ದವಾದ, ಬಲಗೈ ಹಿಂದಿನಕೈ ಪಾಶಾಂಕುಶ

ಬಲಗೈ ಮುಂದಿನ ಕೈ ಶಂಖ ಎಡಗೈ ಹಿಂದಿನ ಕೈ ಎಡಗೈಯ ಮುಂದಿನ ಕೈ…

ನಾಗಕುಕ್ಕುಟ – ಸರ್ಪನ ಹೆಡಿ

ಈ ದಿವಸ ವ್ಯಾಖ್ಯಾನವಾಯಿತು.

೦೫.೦೪.೧೯೨೮
ಬಡ್ಲಿ

ಈ ದಿವಸ ‘ಅಖಿಲ ಕರ್ನಾಟಕ ಕಾಣ್ವ, ಶಾಖಾ ಬ್ರಾಹ್ಮಣ ಪರಿಷತ್ತಿನ ಅವಶ್ಯಕತೆ’ ಎಂಬ ವಿಷಯದ ಮೇಲೆ ಭಾಷಣ ಮಾಡಿದೆನು.

೦೭.೦೪.೧೯೨೮
ಬಡ್ಲಿ ಗುರ್ಲಹೊಸೂರ ಬಡ್ಲಿ

ಈ ದಿವಸ ರಾತ್ರಿ ಛಳಿಜ್ವರ ಬಂದವು.

೦೮.೦೪.೧೯೨೮
ಬಡ್ಲಿ ಗುರ್ಲಹೊಸೂರ ಬಡ್ಲಿ

ಬಡ್ಲಿಯಲ್ಲಿ ಶ್ರೀ ಜನಾರ್ಧನ ದೇವಾಲಯದ ಶಿಲಾಲೇಖನವನ್ನು ತೆಗೆದುಕೊಂಡನು.

೦೯.೦೪.೧೯೨೮
ಸವದತ್ತಿ ಎಲ್ಲಮ್ಮನ ಗುಡ್ಡ

ಈ ದಿವಸ ಕನ್ನಡ ಶಾಲೆಯಲ್ಲಿ ಇತಿಹಾಸ ಸಂಶೋಧನೆಯ ಬಗ್ಗೆ ವ್ಯಾಖ್ಯಾನ ಕೊಟ್ಟೆನು. ಈ ದಿವಸ ರಾತ್ರಿ ಛಳಿಜ್ವರ ಬಂದವು.

೨೮.೦೫.೧೯೨೮
ಧಾರವಾಡ

ಏಕೀಕರಣ ಪರಿಷತ್ತಿನಲ್ಲಿ ಭಾಗ ತೆಗೆದುಕೊಂಡುದ್ದು

. ಸಾಹಿತ್ಯ ಪರಿಷತ್ತು I ಪ್ರಚಾರ II ಕಲಬುರ್ಗಿ
೨. ಶ್ರೀ ಜಯತೀರ್ಥರ ಸ್ಥಳ
೩. ಇತಿಹಾಸ ಸಂಶೋಧನ
೪. ಸ್ವಾಮಿಗಳ, ಮಠದ ದರ್ಶನ
೫. ಶ್ರೀ… ಸು… ಉ. ಪ್ರೋತ್ಸಾಹನ

೦೭.೦೬.೧೯೨೮
ನಾಲ್ವಾರ – ಯರಗೋಳ – ಚಿತಾಪುರ

ಯರಗೋಳ – ರಾಮಚಂದ್ರ ತೀರ್ಥರ ಗಚ್ಚಿನ ವೃಂದಾವನ.
ಯರಗೋಳ – ವಿದ್ಯಾನಿಧಿ ತೀರ್ಥರ ಕಲ್ಲಿನ ವೃಂದಾವನ
ಯರಗೋಳ – ಟೀಕಾರಾಯರ ಗುಹೆ

ಗ್ರಂಥಗಳಲ್ಲಿ, ಯಾತಗಿರಿಯಲ್ಲಿರುವ ಆತಕೂರ ಮಠಾಧೀಕಾರಿ ಗೋಪಾಳಾಚಾರ್ಯರಲ್ಲಿ.

೦೯.೦೬.೧೯೨೮
ಯಾತಗಿರಿ

ಮೈಲಾಪುರ ಮಾಲತೀಶನ ಕ್ಷೇತ್ರ.

೧೦.೦೬.೧೯೨೮
ಯಾತಗಿರಿ

ಚಿಂಚೋಳ್ಳಿ – ತಾಂಡೂರು ತಾಲೂಕು ಗುಲಬರ್ಗಾ ಜಿಲ್ಲಾ ‘ಇತವಾರಪೂರ’ ಬೇಚಿರಾಕ್‌ ಗ್ರಾಮದಲ್ಲಿ ಶಿಲಾಲೇಖಗಳುಂಟು.

೧೪.೦೬.೧೯೨೮
ಕೊಲ್ಲೂರು – ಸನ್ನತಿ ಕ್ಷೇತ್ರ

. ಹುರಸಗುಂಡಗಿ (ನಾಡಗೌಡ ಶಿವರಾಮ ಸಂತ) ಭಾರಧ್ವಾಜ . ಶಿರವಾಳ (ಭೀಮಸೇನರಾವ ಕುಲಕರ್ಣಿ) ೩. ಸಾದಿಪುರ

ಸಾದಿಪುರ – ಶಾಹಾಪುರ

ಶಾಹಾಪುರದಲ್ಲಿ ಈ ದಿವಸ ಕರ್ನಾಟಕ ಇತಿಹಾಸ ಸಂಶೋಧನದ ವಿಷಯವಾಗಿ ಭಾಷಣ ಮಾಡಿದೆನು.

೦೧.೦೭.೧೯೨೮
ಬಳ್ಳಾರಿ

. ಎಲ್ಲ ಮುಖಂಡರ ಭೆಟ್ಟಿಯಾಯಿತು. ೨. ಕ್ಷೌರ. ೩. ಶಿಲಾಲೇಖಗಳ ಪರಿಭಾಷೆಯ ಟಿಪ್ಪಣಿಯು . ಮಲೆಬೆನ್ನೂರ ಇವರ ಸಂಗಡ ಸಂಭಾಷಣೆಯು

೦೨.೦೭.೧೯೨೮
ಬಳ್ಳಾರಿ

ಬಳ್ಳಾರಿ, ಅನಂತಪುರ, ಸೇಲಂ, ಕೋಯಿಮತ್ತೂರ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ಕನ್ನಡ + ತೆಲುಗು + ತಮಿಳು ಶಿಲಾಲೇಖಗಳ (ಪ್ರಮಾಣ ಸಂಖ್ಯೆಯನ್ನು) ಬರೆದುಕೊಂಡೆನು.

೦೩.೦೭.೧೯೨೮
ಬಳ್ಳಾರಿ

ಈ ದಿವಸ ಕರ್ನಾಟಕ ಇತಿಹಾಸ ಸಂಶೊಧನದ ಮಹತ್ವ ಎಂಬ ವಿಷಯವನ್ನು ಕುರಿತು ಶ್ರೀ ಅರ್ಕಾಟ ಭೀಮಾಚಾರ್ಯರು ಎಂ. ಎ. ಎಲ್‌. ಎಲ್‌. ಟಿ ಇವರ ಅಧ್ಯಕ್ಷತೆಯಲ್ಲಿ ಭಾಷಣ ಮಾಡಿದೆನು.

೦೭.೦೭.೧೯೨೮
ಹರಪನಹಳ್ಳಿ – ಹೊಸಪೇಟೆ

ಶ್ರೀ ಜಯತೀರ್ಥರು ರಾಜ್ಯತ್ಯಾಗವನ್ನು ಮಾಡಿದ್ದರಿಂದ ಇವರು ಪೂರ್ವಾಶ್ರಮದಲ್ಲಿ ‘ಸಾದಿಭೂಪ’ ಎಂದರೆ ಹಿರೆಯರಾವುತ ಅಥವಾ ಘನ ರಾಹುತ್ತಿನಲ್ಲ, ಆದರೆ ಸಾದಿ ನಾಡಿನ ರಾಜ ಅಂದರೆ, ನಾಡಗಾವುಂಡ ಪಾಳೆಯಗಾರ ಜಹಗೀರದಾರ – ಚಿಕ್ಕ ಸಂಸ್ಥಾನಿಕ.

೦೪.೦೯.೧೯೨೮
ಧಾರವಾಡ

  ವ – ತಿಂ – ದಿ
. ಶ್ರೀ ಮದಾನಂದಥೀರ್ಥರು ೦೨೯ – ೦೬ – ೨೦
. ಪದ್ಮನಾಭತೀರ್ಥರು ೦೦೬ – ೦೯ – ೨೦
. ನರಹರಿ ತೀರ್ಥರು ೦೦೯ – ೦೧ – ೨೩
. ಮಾಧವ ತೀರ್ಥರು ೦೧೬ – ೦೮ – ೦೮
. ಅಘೋಭ್ಯ ತೀರ್ಥರು ೦೨೫ – ೦೨ – ೨೦
. ಜಯತೀರ್ಥರು ೦೨೨ – ೦೭ – ೦೦
  ೧೨೭ – ೦೪ – ೧೧
೧೧೨೧ – ೦ – ೦೦
೦೧೨೭ – ೪ – ೧೧
 
೧೨೪೮ – ೪ – ೧೧
೦೦೭೮
 
೧೩೨೬ – ೪ – ೦೦
೦೦೧೧
 
೧೩೩೭ – ೪ ೦ ೧೧  

೧೭.೧೧.೧೯೨೮
ಧಾರವಾಡ

. ಪಂಪಕವಿಯ ಉತ್ಸವ
೨. ಶಾಸನಗಳ ಸಂಪ್ರದಾಯದ ಅಭ್ಯಾಸ
೩. ಪ್ರಚಾರ ಕಾರ್ಯದ ಲೇಖನ ಪ್ರಾರಂಭ
೪. ಪಾದ

೧೮.೧೧.೧೯೨೮
ಧಾರವಾಡ

. ಇತಿಹಾಸ ಮಂಡಳದ ಪುಸ್ತಕಾಲಯದ ಸುಧಾರಣೆ
೨. ಮುದ್ದೇಬಿಹಾಳ / ಹಾವೇರಿಗಳ ತಯಾರಿ
೩. ಶಾಸನ ಪದ್ಯ ಮಂಜರಿಯ, ನ.ಚಿ. ಕೇಳಕರರ ಉಪನ್ಯಾಸ ಇವುಗಳ ವಾಚನ

೨೩.೧೧.೧೯೨೮

ಧಾರವಾಡ – ಅಲಮಟ್ಟಿ – ಮುದ್ದೇಬಿಹಾಳ
ನಾಲತ್ವಾಡ – ಶಾಹಾದುರ್ಗ ೮ ಮೈಲು
ಶಹಾದುರ್ಗ – ಜಮಾಲಪುರ ೬ ಮೈಲು