೦೩.೧೨.೧೯೨೮

ಮುದ್ದೇಬಿಹಾಳ – ತಂಗಡಿಗೆ ತಾಳಿಕೋಟೆ
ನಾಲ್ವತ್ತವಾಡ – ೧೮/೨೦ ಮೈಲು ದೂರದಲ್ಲಿವೆ.
೧. ರುದ್ರಭೂಮಿ (ಉತ್ಖನವಿಲ್ಲ)
೨. ತಂಗಡಿಗೆಯ ದಕ್ಷಿಣಕ್ಕೆ ಭಸ್ಮದ ಸ್ಥಳ
೩. ರಣಸ್ತಂಭ (ಆಕಳಕಲ್ಲು)
೪. ಗೌಡರ ಸನದು

೦೪.೧೨.೧೯೨೮
ತಂಗಡಿಗೆ

. ಚಿಂತೋಪಂತ ಪೇಂಡಸೆ ಪೆನ್ಯನರ ಮಾಮಲೇದಾರ ವಾಚಮೇಕರ, ವಿಜಾಪುರ (ತಂಗಡಿಗೆಯ ಗೌಡರ ಮೊಖ್ತಿಯರರಾಗಿದ್ದರು) ಗೋಪಾಳಗಲ್ಲಿ – ಉಪ್ಪಲಿ ಬುರುಜ ಹತ್ತಿರ.

೦೭.೧೨.೧೯೨೮
ಮುದ್ದೇಬಿಹಾಳ

. ಕರ್ನಾಟಕ ಇತಿಹಾಸ ಸಂಸೋಧನದ ವ್ಯಾಖ್ಯಾನ
೨. ಶ್ರೀ ಮಾಮಲೇದಾರ ಸಾಹೇಬರ ಭೆಟ್ಟಿ ಹಾಗೂ ಅವರಿಂದ ತಂಗಡಿಗೆ ಗ್ರಾಮಸ್ಥರಿಗೆ ಹುಕುಂ ಇಸಗೊಂಡದ್ದು.
೩. ಸಬ್‌ ಜಜ್ಜರ ಭೆಟ್ಟಿ

೦೮.೧೨.೧೯೨೮
ಮುದ್ದೇಬಿಹಾಳ

ಮುದ್ದೇಬಿಹಾಳ – ಕೋಳೂರು – ರಾಯನಕೆರಿ – ತಂಗಡಿಗೆ – ಮುದ್ದೇಬಿಹಾಳ
೧. ರಾಯನಕೆರಿ ನೋಡಿದೆವು
೨. ರಾಯನ ವೀರಗಲ್ಲು ಹಾಗೂ ಶಿಲಾಲೇಖ ನೋಡಿದೆವು.
೩. ತಂಗಡಿಗಿಯ ರಣಭೂಮಿ ಹಾಗೂ ರಣಶವಗಳ ದಹನ ಭೂಮಿ ನೋಡಿದೆವು.
೪. ಬಖರದಲ್ಲಿಯ ‘ರಣರ್ಗೊಜ’, ‘ಭೀಮಾಸೀದೂವಸ್ತಿ’ ಈ ಶಬ್ದಗಳ ಸಂಶಯದ ನಿವಾರಣೆ.

೦೯.೧೨.೧೯೨೮
ಮುದ್ದೇಬಿಹಾಳ

ಮುದ್ದೇಬಿಹಾಳ – ತಂಗಡಿಗೆ – ಮುದ್ದೇಬಿಹಾಳ
೧. ರಿಬ್‌ ಎಂದರೆ ಮನುಷ್ಯನ ಪಕ್ಕೆಲುಬುಗಳು
೨. ಎಲುಬು ಸುಟ್ಟ ಬಾಗವು ಸಿಕ್ಕಿತು.
೩. ಕುದುರೆ ಮುಂತಾದ ಯುದ್ದದ ಇತರ ಪ್ರಾಣಿಗಳ ಎಲುಬುಗಳು ಸಿಕ್ಕವು
೪. ರಾಜಭೂವರರ ಚಿತಾಭೂಮಿ ಹಾಗೂ ಅದರಲ್ಲಿ ವೀರಗಲ್ಲು
೫. ರುದ್ರಭೂಮಿ
೬. ರಾಕ್ಷಸ ತಂಗಡಿಗೆಯ ನಿರ್ಣಯ.

೧೦.೧೨.೧೯೨೮
ಮುದ್ದೇಬಿಹಾಳ

ಕೋಳೂರು – ಏಳುಹಾದಿ ಹನುಮಪ್ಪನ ಗುಡಿ ೩ ಮೈಲು

ಗುಡಿ – ತಂಗಡಗಿ ೩ ಮೈಲು

ತಂಗಡಗಿ – ನಾಲತವಾಡ – ೧೫ ಮೈಲು

ಮುದ್ದೇಬಿಹಾಳ – ಕೋಳೂರು ೪ ಮೈಲು

ರಾಯನಕೇರಿ – ೩ ಮೈಲು (ಕೋಳೂರು ೪ ತೋಟ)

ವೀರಮೂರ್ತಿ ಪೂರ್ವಕ್ಕೆ ರಾಯಬಾಗ ಪೂರ್ವಕ್ಕೆ

೧೫.೧೨.೧೯೨೮
ಧಾರವಾಡ

. ಕರ್ನಾಟಕ ಹಾಯಸ್ಕೂಲಿನಲ್ಲಿ ‘ಕರ್ನಾಟಕ ಇತಿಹಾಸ ಸಂಶೋಧನ ಮತ್ತು ರಾಕ್ಷಸ ತಂಗಡಿಯ ಘಲ ಘೋರ ಸಂಗ್ರಾಮ’ ಎಂಬ ವಿಷಯವನ್ನು ಕುರಿತು ಭಾಷಣ ಮಾಡಿದೆನು.
೨. ‘ಕರ್ನಾಟಕ ಧುರೀಣ’ದಲ್ಲಿದ್ದ ಶಿರ್ಶಿ ಸಿದ್ದಾಪುರ ಬೀಳಗಿ ಐತಿಹಾಸಿಕ ಪ್ರವಾಸ ವೃತ್ತಾಂತವನ್ನು ಕಟಿಂಗ ಹಚ್ಚಿದ್ದು.
೩. ಪುಣೆಗೆ ಪೋತದಾರರಿಗೆ ಪತ್ರ

೧೬.೧೨.೧೯೨೮
ಧಾರವಾಡ

. ತಿರುಮಲೆ ತಾತಾಚಾರ ಬೆಂಗಳೂರು ಇವರಿಗೆ, ನೆಗವಾಡಿಗೆ, ಸವದತ್ತಿಗೆ ಪತ್ರ ಹಾಕಿದೆನು.

೨೪.೧೨.೧೯೨೮
ಧಾರವಾಡ

ಈ ದಿವಸ ಬೇಂದ್ರೆ (ಪುಣೆ) ಬೆಂಗಳೂರು (ಶರ್ಮಾ) ಕಲಬುರ್ಗಿ (ಕಿಶನರಾವ್‌) ತಂಗಡಗಿ (ಆ ಬಾ) ವಿಜಾಪುರ (ಮೊಹರೆ) ಇವರಿಗೆ ಪತ್ರ ಹಾಕಿದೆನು.

೧೯೩೦

೦೧.೦೧.೧೯೩೦
ಧಾರವಾಡ

ಈ ದಿವಸ ವಿಜಯನಗರದ ಇತಿಹಾಸವನ್ನು ಬರೆಯುವುದಕ್ಕೆ ಪ್ರಾರಂಭ ಮಾಡಿದೆನು.

೦೨.೦೧.೧೯೩೦
ಧಾರವಾಡ

ವಿಕ್ರಮ ಸಂವತ್‌ ಶಂಕರಾಚಾರ್ಯರು ಕಾಲನಿರ್ಣಯ ವಿದ್ಯಾರಣ್ಯರ ಜೀವನ ಮುಂತಾದವುಗಳನ್ನು ನಿಶ್ಚಿತ ಮಾಡಿದ್ದು.

೦೪.೦೧.೧೯೩೦
ಧಾರವಾಡ

ಪ್ರೌಢದೇವರಾಯನ ಮತ ನಿರ್ಣಯ ಮಾಡಿದೆನು.

೧೮.೦೧.೧೯೩೦
ಧಾರವಾಡ

‘ಮತ್ತರು’ ಶಬ್ದದ ಶೋಧ, ಬ್ರಾಹ್ಮೀ ಸ್ಥಿತಿಯ ಶೋಧ

೨೦.೦೧.೧೯೩೦
ಧಾರವಾಡ

ಕುಮಾರವ್ಯಾಸನ ಉಲ್ಲೇಖವಿದ್ದ ಶಿಲಾ ಲೇಖ ಇದೆ.

೧೪.೦೨.೧೯೩೦
ಧಾರವಾಡ

ಪೆನುಗೊಂಡೆ – ಚಂದ್ರಗಿರಿ ರಾಜಧಾನಿಗಳ ಕಾಲ ನಿರ್ಣಯವನ್ನು ಮಾಡಿದೆನು.

೨೨.೦೨.೧೯೩೦
ಧಾರವಾಡ

ಬಿಜ್ಜನಳನ ವಂಶಾವಳಿ ಬರೆದು ಕೊಟ್ಟೆನು.

೦೧.೦೩.೧೯೩೦
ಧಾರವಾಡ

ಶ್ರೀ ಮದಾನಂದ ತೀರ್ಥರ ಕಾಲನಿರ್ಣಯ

೧೨.೦೩.೧೯೩೦
ಧಾರವಾಡ

ಶ್ರೀಮಚ್ಚಾಳುಕ್ಯ ವಿಕ್ರಮ ವರುಷವೆಂಬ ಲೇಖವನ್ನು ಪೂರ್ಣವಾಗಿ ಬರೆದೆನು.

೧೪.೦೩.೧೯೩೦
ಧಾರವಾಡ

ಲೇಖವನ್ನು ಜಯಕರ್ನಾಟಕಕ್ಕೆ ಕೊಟ್ಟೆನು.

೨೦.೦೩.೧೯೩೦
ಧಾರವಾಡ

ಗದಾಯುದ್ಧ ಕಾವ್ಯದ ಕಾಲ ನಿರ್ಣಯ

೧೯.೦೫.೧೯೩೦
ಅಗಡಿ

ಮ.ರಾ.ರಾ. ಈರಪ್ಪ ಅಂಗಡಿ (ಹಂಸಭಾವಿ) ನೆಗಳೂರಲ್ಲಿ ಅಥವಾ ಗುತ್ತಲದಲ್ಲಿ (ಬಣಜಿಗರ ಕೇರಿಯಲ್ಲಿ) ಇರುತ್ತಾನೆ. ಇವನ ಬಳಿಯಲ್ಲಿ ಹಾವನೂರು ಸಂಸ್ಥಾನದ ಕಾಗದ ಪತ್ರಗಳಿವೆ.

೧೧.೦೬.೧೯೩೦
ಚಿಕ್ಕೆರೂರು – ನೆಗವಾಡಿ

ಚೌಂಡರಸ ಕವಿಯು ಪಾಂಡುರಂಗ ಕ್ಷೇತ್ರಕ್ಕೆ ಸಮೀಪದಲ್ಲಿದ್ದ ಭೀಮರಥಿ ನದಿಯನ್ನು ಕನ್ನಡಿಯನ್ನಾಗಿ ಹೇಗೆ ರೂಪಿಸಿದ್ದಾನೆಯೋ ಹಾಗೆಯೇ ಕಳಸ ಗ್ರಾಮದ ಶಾಸನದಲ್ಲಿ ಎರಡಱ ನೂಱ ನಾಡಿಗೆ ಪುಲಿಗೆರೆ ಜನಪದವನ್ನೆ ಕನ್ನಡಿಯನ್ನಾಗಿ ರೂಪಿಸಿದ್ದರಿಂದ ಎರಡ ಱ ನೂಱ ನಾಡಿಗೆ ಪುಲಿಗೆರೆ ನಾಡು ಸಮೀಪದಲ್ಲಿ ಇರುತ್ತದೆಂಬುದು ಸ್ಪಷ್ಟವಾಗುತ್ತದೆ. ವಸ್ತು ಸ್ಥಿತಿಯಾದರೂ ಹೀಗೆಯೆ ಇದೆ. ಹೇಗೆಂದರೆ ಕೊಪಣ ನಾಡಿಗೆ ಪುಲಿಗೆರೆ ನಾಡು ಸಮೀಪದಲ್ಲಿಯೇ ಇದೆ. ಇತ್ಯರ್ಥವೇನೆಂದರೆ ಎರಡ ಱ ನೂಱ ನಾಡೆಂದರೆ ಕೊಪಣ ನಾಡೆಂಬುದು ಸಿದ್ಧ.

೧೬.೦೭.೧೯೩೦
ಧಾರವಾಡ

ಕೋಶವನ್ನು ಬರೆದೆನು.

೩೧.೦೭.೧೯೩೦
ಧಾರವಾಡ

೧೧೧೪ ಶಬ್ದಗಳು ಮುಗಿದವು

೧೧.೦೯.೧೯೩೦
ಧಾರವಾಡ

ಪಟ್ಟದಕಲ್ಲು
ಬೆಳ್ವೊಲ ನಾಡು
ಕೊಪ್ಪಳ
ಪುಲಿಗೆರೆ, ಗಾವುಳಿಗುಡ, ಕಳಸನಾಡ, ಲಕ್ಷ್ಮೇಶ್ವರ

೦೫.೧೧.೧೯೩೦
ಗಾವರವಾಡ
ಧಾರವಾಡ

. ಶ್ರೀ ಮತ್ಪರಮ ಗಂಭೀರ
೨. ಶ್ರೀ ಮದ್ಭುವನೈಕಮಲ್ಲ ದೇವರ
ಶ್ರೀ ಮನ್ಮಹಾ ಮಂಡಳೇಶ್ವರ ಲಕ್ಷ್ಮರಸರು
ಬೆಳ್ವೊಲ ಮೂನು ಱು ಮಂ ಪುಲಿಗೆ ಱೆ
ಮೂನೂ ಱು ಮನ್ತೆರಡ ಱು ನೂ ಱು ಮಾ
ದುಷ್ಟ ನಿಗ್ರಹ ಶಿಷ್ಟ ಪ್ರಪಾಳನೆಯಿಂ
ಪ್ರತಿಪಾಳಿಸುತ್ತಮಿರೆ

೦೬.೧೧.೧೯೩೦
ಅಣ್ಣಿಗೇರಿ

ಶ್ರೀ ಮದ್ರಾಜಧಾನಿ – ಅಣ್ಣಗೇರಿ

೦೭.೧೧.೧೯೩೦
ಅಣ್ಣಿಗೇರಿ

ಮುಂದಿನ ಬಲಗೈ – ಗದಾ, ಎಡಗೈ – ಪದ್ಮ
ಹಿಂದಿನ ಬಲಗೈ – ಚಕ್ರ ಎಡಗೈ – ಶಂಖ (ಒಡೆದು ಹೋಗಿದೆ).
ದಶಾವತಾರಗಳಿವೆ.

ಕೊನೆಯ ಜ್ಞಾಪಕ ಪತ್ರ (Memorandum)

. ಮ್ಯಾನೇಜಿಂಗ ಕಮಿಟಿ ಇದ್ದದ್ದನ್ನೆ ಸುಳ್ಳೆಂದು ವಾದಿಸುವುದಕ್ಕೆ ತೊಡಗಿದ್ದಾರೆ.
೨. ಲೆಕ್ಕ ಪತ್ರಗಳನ್ನು ತಪಾಸ ಮಾಡುವುದಕ್ಕೆ ಪ್ರತಿಕೂಲರಾಗಿದ್ದಾರೆ. ಸ್ವಾರ್ಥಕ್ಕೋಸ್ಕರ ಸಂಸ್ಥೆಗೆ ಹಾನಿ ಮಾಡುವುದಕ್ಕೆ ತೊಡಗಿದ್ದಾರೆ. ಆದ್ದರಿಂದ ಇವರ ಮೇಲೆ ಕಾಯದೇಶೀರ ಇಲಾಜ ಮಾಡಬೇಕು.
೩. ಮೇಲೆ ಬರೆದಂತೆ ಕಾಯದೇಶೀರ ಇಲಾಜ ಮಾಡಲಿಕ್ಕೆ ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರ ಇರುತ್ತದೆ.

೧೯೩೨

೦೩.೦೪.೧೯೩೨
ಧಾರವಾಡ

ಶಕ ವರ್ಷದ ೧೧೦೦ ನೆಯ ವಿಳಂಬಿ ಸಂವತ್ಸರ ಆಶ್ವೀನ ಶುಕ್ಷ ದಶಮಿ (ತಾ. ೨೩.೦೯.೧೧೭೮) ಶನಿವಾರ

೧೧೨೧ನೆಯ ಶಕ ವರ್ಷದ ಸಿದ್ಧಾರ್ಥಿ ಸಂವತ್ಸರ ಆಶ್ವೀನ ಶುದ್ದ ದಶಮಿ ಶುಕ್ರವಾರ (ತಾ. ೧೯ನೆಯ ಅಕ್ಟೋಬರ ೧೧೯೯)

೧೪.೦೮.೧೯೩೨
ಧಾರವಾಡ

ಕೃಷ್ಣಪುರ ಮಠದಲ್ಲಿದ್ದ ಲೇಖದಲ್ಲಿ ವಿದ್ಯಾಧಿರಾಜ ತೀರ್ಥರಿಗೆ ದೇವರಾಯ ಮಹಾರಾಜನು ಶಕ ವರ್ಷ ೧೩೩೧ನೆಯ ಸರ್ವಧಾರಿ ಸಂವತ್ಸರದಲ್ಲಿ ದಾನ ಕೊಟ್ಟಿದ್ದಾನೆ.

೧೩.೦೯.೧೯೩೨
ಮಾಧವಾರ

ಶ. ವ. ೧೪೮೬ ರಕ್ತಾಕ್ಷಿ ಸಂವತ್ಸರದ ವೈಶಾಖ ಬಹುಳ ೮ ಸೋಮವಾರ ಶ್ರವಣ ನಕ್ಷತ್ರ ದಿನ ರಾಜ ಭೂವರರು ಸತ್ತರು.

೧೯೩೩

೨೭.೦೭.೧೯೩೩
ಧಾರವಾಡ

ಶ್ರೀ ಮಧ್ವಾಚಾರ್ಯರ ಚರಿತ್ರೆಯನ್ನು ಬರೆಯುವುದಕ್ಕೆ ಪ್ರಾರಂಭಿಸಿದೆನು.

೧೨.೦೮.೧೯೩೩
ಧಾರವಾಡ
ಮುಸಿಗೇರಿ

. ಅಪ್ರಶಸ್ತವಾಗಿದೆ
೨. ಅಸಮಂಜಸವಾಗಿದೆ
೩. ಸಮರ್ಪಕವಾಗಿಲ್ಲ

೨೧.೦೮.೧೯೩೩
ಧಾರವಾಡ

. ಫ್ರಾನ್ಸಕ್ಕೆ ಹೋಗಿಬಂದ ಶ್ರೀಮಾನ್‌ ಹಾಸನದ ರಾಜೇರಾಯರ ಭೆಟ್ಟಿ ಜಯಕರ್ನಾಟಕ ಕಾರ್ಯಾಲಯದಲ್ಲಿ
೨. ಶ್ರೀ ಮಧ್ವಾಚಾರ್ಯರ ಕಾಲ ನಿರ್ಣಯವು ನಿಶ್ಚಯವಾದದ್ದು.
೩. ಅನಂತೇಶ್ವರನು ಶಿವನೋ ವಿಷ್ಣುವೋ ಎಂಬ ಪ್ರಶ್ನೆಯನ್ನು ಬಿಡಿಸಿದೆನು.

೧೪.೦೯.೧೯೩೩
ಧಾರವಾಡ

ಶ್ರೀ ಮದಾಚಾರ್ಯ ಶಾಖಾ ನಿರ್ಣಯ ಲೇಖ ಬರೆದದ್ದು.

೦೪.೧೧.೧೯೩೩
ಧಾರವಾಡ

ಶ್ರೀ ಮನ್ಮಧ್ವಾಚಾರ್ಯರ ಕಾಲ ನಿರ್ಣಯ ಲೇಖ ಬರೆದದ್ದು ಮುಗಿಸಿದೆನು.

೩೦.೧೧.೧೯೩೩
ಧಾರವಾಡ

ಕುಮಾರವ್ಯಾಸನ ಲೇಖ ಬರೆದದ್ದು.

೧೯೩೪

೦೧.೦೧.೧೯೩೪
ಹುಬ್ಬಳ್ಳಿ – ಧಾರವಾಡ

ಲಾತವ್ಯನೆಂಬ ಋಜುಗಣ ಮುಖ್ಯನು ಬ್ರಾಹ್ಮಣನಾಗಿ ರುಕ್ಮಣಿಯ ಪತ್ರವನ್ನು ಒಯ್ದವನು, ಈತನೇ ಶ್ರೀ ವಾದಿರಾಜ ಸ್ವಾಮಿಗಳಾದರೆಂದು ಹೇಳುತ್ತಾರೆ.

೨೩.೦೧.೧೯೩೪
ಧಾರವಾಡ

ಪ್ರೊ ಜಹಾಗೀರದಾರರ ನಾಟಕದ ವಿಷಯವಾಗಿ ಟೀಕಾತ್ಮಕ ಸಭೆಯಾಯಿತು.

೦೫.೦೩.೧೯೩೪
ಹುಬ್ಬಳ್ಳಿ ಮಂಟೂರ

‘ಗುರು ಪರಂಪರಾ ಪ್ರಭಾವ’ ತಮಿಳು ಗ್ರಂಥ ತಿರುಚನಾಪಳ್ಳಿಯನ್ನು ಮುಸಲ್ಮಾನರು ಆಕ್ರಮಿಸಲು ಶ್ರೀರಂಗಂ ನಡುಗಡ್ಡೆಯ ರಂಗನಾಥಗುಡಿಯ ಆಧಿಕಾರಿಗಳು “ಅಳಗಿಯ ಮಣವಾಳನೇ” (ವಿಷ್ಣು) ಮೂರ್ತಿಯನ್ನು ತಿರುಪತಿಗೆ ಒಯ್ದದು. ಗೋಪಣಾರ್ಯನು ಆ ಮೂರ್ತಿಯನ್ನು ತಿರುಪತಿಯಿಂದ ಸಿಂಗಪೂರ ಶ್ರೀ ರಂಗಕ್ಕೆ ತಂದನು. ಸ್ಥಾಪಿಸಿದನು.

ಆ ಸ್ಥಾಪನೆಯ ಪ್ರಸಂಗದಲ್ಲಿ ಶ್ರೀ ವೇದಾನ್ತ ದೇಶಿಕಾಚಾರ್ಯರು ಗೋಪಣಾರ್ಯನನ್ನು ಸ್ತುತಿಸಿದರು (ಶಕ ವರ್ಷ ೧೨೯೩).

ಗೊಪ್ಪಣಾರ್ಯನ ರಾಜಧಾನಿ ಜಿಂಜಿ.
ಶ. ವ. ೪೩೭೦ = ೧೨೬೯ – ೭೦ ಕ್ರಿ. ವ. ೧೩೭೧

೦೯.೦೩.೧೯೩೪
ಹಬ್ಬಳ್ಳಿ – ಧಾರವಾಡ

ಜ್ಞಾತಾ – ಜ್ಞೇಯ – ಜ್ಞಾನ – ತ್ರಿಪುಟಿ
ಭೋಕ್ತಾ – ಭೋಗ್ಯ – ಭೋಗ – ತ್ರಿಪುಟಿ

ಇಷ್ಟು ಮಾತ್ರವೇ ಅಲ್ಲ ಅದ್ವೈತ ಸಿದ್ಧಾಂತಕ್ಕನುಸರಿಸಿ ಅರ್ಜುನನಿಗೆ ಈಶ್ವರ ಸಾಕ್ಷಾತ್ಕಾರವು ಹೇಗೆ ಭಾಸ ಮಾನವಾಗಿರುತ್ತದೆ ಎಂಬುದನ್ನು ಕುಮಾರವ್ಯಾಸನು ಹೀಗೆ ವರ್ಣಿಸಿರುತ್ತಾನೆ.

೧೦.೦೩.೧೯೩೪
ಧಾರವಾಡ

. “ಜ್ಞಾತಾ, ಜ್ಞೇಯ, ಜ್ಞಾನ” ಎಂಬ ತ್ರಿಪುಟಿಯು ರಹಿತವಾದ ಬಳಿಕ ಸ್ವಯಂ ಪ್ರಕಾಶವಾದ ಅದ್ವೈತ ರೂಪವಾದ ಹಾಗೂ ನಿರುಪಾಧಿಕವಾದ ಬ್ರಹ್ಮತತ್ವವು ಭಾಸಮಾನವಾಗುತ್ತದೆಂದು (ಆದುದರಿಂದ ಇದು ಭೂಮಾನಾಮಕ ಆನಂದವೆಂದು ಹೇಳಲ್ಪಡುತ್ತದೆಂದು) ಶ್ರೀ ವಿದ್ಯಾರಣ್ಯರು ತಮ್ಮ “ಪಂಚದಶೀ” ಎಂಬ ಗ್ರಂಥದಲ್ಲಿ ಹೀಗೆ ಹೇಳಿದ್ದಾರೆ.

ನಿರುಪಾಧಿ ಬ್ರಹ್ಮತತ್ವೇ, ಭಾಸಮಾನೇ ಸ್ವಯಂ ಪ್ರಭೇ |
ಅದ್ವೈತೇ ತ್ರಿಪುಟೀ ನಾಸ್ತಿ ಭೂಮಾನನ್ದೋ ತ ಉಚ್ಯತೇ || ೧೫ – ೩೩ ||

೨೧.೦೩.೧೯೩೪
ಧಾರವಾಡ

ಬುಕ್ಕನ ಮಗ ಕಂಪಣ್ಣನ ಆಳ್ವಿಕೆಯಲ್ಲಿ (ಕ್ರಿ. ವ ೧೩೫೩ ರಿಂದ ೧೩೭೪ರ ವರೆಗೆ) ಶ್ರೀ ವೇದಾನ್ತ ದೇಶಿಕಾರ್ಯರೂ ಗೋಪಣಾರ್ಯನೆಂಬ ಸೇನಾಪತಿಯೂ ಇದ್ದರು (ಪ್ರಪನ್ನಾಮೃತ) ಶ್ರೀ ರಂಗ ಪ್ರಾಂತದ ಮುಸಲ್ಮಾನರನ್ನು ಓಡಿಸಿ ಶ್ರೀರಂಗ ಮೂರ್ತಿಯನ್ನು ಸ್ಥಾಪಿಸಿದನು. (ಪುಟ : ೧೪೯೧ – ೯೨) (ಓ ಇ ೬ನೇ ೩೨೨ – ೩೧)

೨೭.೦೩.೧೯೩೪
ಧಾರವಾಡ

ಸಿ ಹಯವದನರಾವ ಬಿ.ಎ.ಬಿ.ಎಲ್‌. ಇವರು “ಇಷ್ಟ ಸಿದ್ಧಿ” ಗ್ರಂಥದ ಕಾಲನಿರ್ಣಯ (ಕ್ರಿ. ಪೂ. ೧೦೫೦ – ೧೧೦೦)