೦೨.೦೪.೧೯೩೪
ರಾಮದುರ್ಗ

ಈ ದಿವಸ ಗಂಗ ಅರಸನಾದ ಮಾರಸಿಂಹನ ತಾರ್ಮ ಶಾಸನವು ಸಿಕ್ಕಿತು.

೦೩.೦೪.೧೯೩೪
ರಾಮದುರ್ಗ

ಶ್ರೀ ಗೋಪಾಳಪಾರವ ದೇಶಪಾಂಡೆ ಇವರಿಂದ ರಾಮದುರ್ಗ ಸಂಸ್ಥಾನದ ಇತಿಹಾಸವನ್ನು ತಿಳಿದುಕೊಂಡೆನು.

೦೭.೦೪.೧೯೩೪
ಸೂರೇಬಾನ – ಹಂಪಿಹೊಳೆ

೧೭೩೧ ಶುಕ್ಲ ಸೂರೇಬಾನ (ಸೂರಬನ) – ಮಣಿಹಾಳ

. ೧೬೨೪ನೆಯ ಶಕದಲ್ಲಿ ರಾಮದುರ್ಗಕರ ಮೂಲ ಪುರುಷ ರಾಮರಾವ ದಾದಾಜಿ ಇವರು ರತ್ನಾಗಿರಿ ಪ್ರಾಂತದಲ್ಲಿಯ ವೇಕೋಶಿ ಗ್ರಾಮದಿಂದ ಬಂದು ಅಪ್ಪಾಜಿ ಸೂರೋ ಇವರ ಕಡೆಗೆ ತಿಗೂರಿಗೆ ಬಂದು ಇದ್ದರು. ೧೫೬೮ ಶಕದಲ್ಲಿ ಶಿವಾಜಿಯು ರಾಮದುರ್ಗ ಕಿಲ್ಲೆ ಕಟ್ಟಿಸಿ ಭುಜಬಲಗಡ ಎಂದು ಹೆಸರಿಟ್ಟರು. ನರಗುಂದ ಕಿಲ್ಲೆ ಕಟ್ಟಿಸಿ ಮಹಿಮತ್‌ ಗಡ ಎಂದು ಹೆಸರಿಟ್ಟರು. ೧೬೦೮ರಲ್ಲಿ (ಶಕ) ಔರಂಗಜೇಬನು ವಿಜಾಪುರ ರಾಜ್ಯವನ್ನು ತೆಗೆದುಕೊಂಡನು. ೧೬೧೩ನೆಯ ಶಕದಲ್ಲಿ ಮೊಗಲರು ರಾಮದುರ್ಗ ನರಗುಂದಗಳನ್ನು ತೆಗೆದುಕೊಂಡರು.

೧೬೨೯ನೆಯ ಶಕದಲ್ಲಿ ರಾಮರಾವ ದಾದಾಜಿ ಇವರು ಮೊಗಲರಿಂದ ಇವೆರಡೂ ಕಿಲ್ಲೆಗಳನ್ನು ಪುನಃ ತೆಗೆದುಕೊಂಡರು. ೧೬೩೪ನೆಯ ಶಕದಲ್ಲಿ ನರಗುಂದದಲ್ಲಿ ಶ್ರೀ ವೆಂಕಟೇಶ ದೇವಾಲಯವನ್ನು ಕಟ್ಟಿಸಿ ದೇವರ ಪ್ರತಿಷ್ಠೆಯನ್ನು ಮಾಡಿದರು.

೧೬೫೦ನೆಯ ಶಕದಲ್ಲಿ ಅಪ್ಪಾಜಿ ಸೂರೋ ಇವರು ತೀರಿಕೊಂಡರು. ೧೬೬೨ನೆಯ ಶಕದಲ್ಲಿ ರಾಮರಾವ ದಾದಾಜಿ ಇವರು ಕಾಶೀ ಯಾತ್ರೆಗೆ ಹೋಗುವ ಮಾರ್ಗದಲ್ಲಿ ತೀರಿಕೊಂಡರು.

೧೬೯೩ನೆಯ ಶಕದಲ್ಲಿ ನವಲಗುಂದ ಸಂಸ್ಥಾನವು ಪೇಶ್ವೇ ಸರಕಾರದ ಸ್ವಾಧೀನವಾಯಿತು.

೧೭೦೬ ಶಕದಲ್ಲಿ ಟೀಪುಸುಲ್ತಾನನು ರಾಮದುರ್ಗ ನವಲಗುಂದ ಇವೆರಡು ಕಿಲ್ಲೆಗಳನ್ನು ಗೆದ್ದುಕೊಂಡು ವೆಂಕಟರಾವ ಭಾಸ್ಕರ ಇವರನ್ನು… ಶ್ರೀರಂಗ ಪಟ್ಟಣಕ್ಕೆ ತೆಗೆದುಕೊಂಡು ಹೋದದ್ದು. ೧೭೦೮ರಲ್ಲಿ ಟೀಪೂಸುಲ್ತಾನನು ಪೇಶ್ವೆ ಇವರ ಸಂಗಡ ಒಪ್ಪಂದ ಆಯಿತು. ಆ ಕಾಲಕ್ಕೆ ವೆಂಕಟರಾವ ನರಗುಂದಕರ ಬಿಡುಗಡೆಯಾದರು.

೧೭೧೪ ರಾಮದುರ್ಗ, ನರಗುಂದ ಸಂಸ್ಥಾನಗಳನ್ನು ಪೇಶ್ವೆಯವರು, ಭಾವೆ ಇವರಿಗೆ ತಿರುಗಿ ಕೊಟ್ಟರು. ೧೭೩೧ರಲ್ಲಿ ರಾಮದುರ್ಗ, ನರಗುಂದ ಇವೆರಡು ಮನೆತನಗಳಲ್ಲಿ ಹಿಸ್ಸೆಯಾಯಿತು.

೧೭೩೯ ವೆಂಕಟರಾಯರು ಕಾಶಿಯಲ್ಲಿ ತೀರಿಕೊಂಡರು.
ಹುದ್ದಾ ಕರವೀರ ಸಂಸ್ಥಾನ ಅಷ್ಟ ಪ್ರಧಾನರ ಪೈಕಿ ಸಚಿವರು.

೧೩.೦೪.೧೯೩೪
ಧಾರವಾಡ

೧೪೮೬ನೆಯ ಶಕ ರಕ್ಷಾಕ್ಷಿ ಸಂವತ್ಸರ ಮಾಘ ಶುದ್ಧ ಪಂಚಮಿ ದಿವಸ ಅಳಿಯ ರಾಮರಾಯನು ತಂಗಡಿಯ ಯುದ್ಧದಲ್ಲಿ ಸತ್ತನು.

ತೊರಗಲ್ಲದಲ್ಲಿ ನಾಗರಾಜನೆಂಬವನು ಅಳಿಯ ರಾಮರಾಯನ ಆಪ್ತನಿದ್ದನು.

೧೨.೦೬.೧೯೩೪
ನೆಗವಾಡಿ

ಶಾಕ > ಕಾಖ, ಜಂಗ > ಗಂಜ
ಕೋರ > ರೋಕ + ಊಟ = ರೋಕೂಟ > ರೋಕೋಠ > ರುಕೂಥ
ಅಮಾನತ > ಅನಾಮತ, ಮಶಹೂರ > ಮಹಶೂರ
ಫತಿಲಾ > ಪಲಿತಾ, ಕೇತಕ > ಕೇಕತ
(ವರ್ಣವ್ಯತ್ಯಾಸ ಅಥವಾ ವರ್ಣವಿಪರ್ಯಾಯ)

೦೧.೦೭.೧೯೩೪
ಧಾರವಾಡ

ಕಾಣ್ವಶಾಖೆಯ ಬ್ರಾಹ್ಮಣರು ತಮ್ಮ ಕಾಣ್ವಸಂಹಿತಯನ್ನು ಅನ್ನುವ ಪೂರ್ವದಲ್ಲಿ “ಶ್ರೀ ಶುಕ್ಲಯಜುರ್ವೇದಸ್ಯ ವಾಯುಋಷಿ, ವಾಯುರ್ದೇವತಾ ತ್ರಿಷ್ಟಪ್‌ ಛನ್ದಃ, ಸಂಹಿತಾಧ್ಯಯನೇ ವಿನಿಯೋಗಃ”

ಎಂದು ಶುಕ್ಲ ಯುಜುರ್ವೇದದ ಋಷಿ, ದೇವತಾ, ಛಂದಸ್ಸು ವಿನಿಯೋಗಗಳನ್ನು ಹೇಳುತ್ತಾರೆ. ಈ ಸಂಗತಿಯನ್ನು ಕಾಣ್ವ ಶಾಖಾಧ್ಯಾಯಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಶ್ಯಾಡಂಬಿ ನಾರಾಯಣ ಶಾಸ್ತ್ರಿಗಳವರು ನನ್ನ ಜ್ಞಾಪಕಕ್ಕೆ ತಂದುಕೊಟ್ಟರು. ತದನಂತರ ನಾನು ಧಾರವಾಡಸ್ಥ ವೇದಮೂರ್ತಿ ಬ್ರಹ್ಮಶ್ರೀ ತ್ರಿಕಾಂಡ ಮಂಡನಾಚಾರ್ಯ ದಂಡವತೆ ಮಹಾದೇವ ದೀಕ್ಷೀತರವರ ಸಂಗಡಲೂ ಮತ್ತು ಕಾಣ್ವ ಶಾಖಾಧ್ಯಾಯಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಪರಮ ಪೂಜ್ಯ ಬಡ್ಲಿ ಚಿದಂಬರ ದೀಕ್ಷಿತರವರ ಸಂಗಡಲೂ ವಿಚಾರ ವಿನಿಮಯ ಮಾಡಿ ಅನೇಕ ಗ್ರಂಥಗಳನ್ನು ನೋಡಲು ಈ ಸಂಪ್ರದಾಯವು ಕಾಣ್ವ ಶಾಖೆಯ ಬ್ರಾಹ್ಮಣರಲ್ಲಿ ವೇದಕಾಲದಿಂದ ಪರಂಪರಾಗತವಾಗಿ ಬಂದಿರುತ್ತದೆಂಬುದು ಚೆನ್ನಾಗಿ ವ್ಯಕ್ತವಾಯಿತು.

ಈ ಮೂರು ಜನ ಪಂಡಿತರು ನನ್ನ ಜೊತೆಗೆ ಪರಿಶ್ರಮ ಮಾಡಿ. ಗ್ರಂಥಾವಲೋಕನವನ್ನು ಮಾಡಿದ್ದಕ್ಕೋಸ್ಕರ ಇವರಿಗೆ ನಾನು ನನ್ನ ಕೃತಜ್ಞತಾ ಪೂರ್ವಕವಾದ ವಂದನೆಗಳನ್ನು ಸಮರ್ಪಿಸುತ್ತೇನೆ.

೨೫.೦೭.೧೯೩೪
ಧಾರವಾಡ

ಕಮ್ಮೇಕುಳ ಸಂಭವ ಆತ್ರೇಯ ಗೋತ್ರ

ಮಾಧವ ಭಟ್ಟ
|
ಬಸವಷಡಂಗಿ
|
ದೇವಿರಾಜ
|
ವಾಸುದೇವ
|
ಮಹಾದೇವ ದಂಡನಾಯ

ಮಹಾ ಪ್ರಧಾನ, ಕನ್ನಡ ಸಂಧಿ ವಿಗ್ರಹಿ, ಮನೆವೆಗ್ಗಡೆ ದಂಡನಾಯಕ ಮಹಾದೇವಯ್ಯಂಗಳು

ಚಾಳುಕ್ಯ ವಿಕ್ರಮ ವರ್ಷದ ೩೭

ಇಟಗಿ (ಎಲಬುರ್ಗಿ ತಾಲೂಕು)

೧೮.೦೮.೧೯೩೪
ಧಾರವಾಡ

ಇಂಡಿಯನ್‌ ಹಿಸ್ಟಾರಿಕಲ್‌ ಕ್ವಾರ್ಟರ್ಲೀಯಲ್ಲಿಯ ಶ್ರೀ ರಮೇಶ ಬಸು ಎಂ. ಎ. ಇವರು ಬರೆದ

“ಮಧ್ಯಾಚಾರ್ಯರು ಬಂಗಾಲದಲ್ಲಿ ಸಂಚಾರ ಮಾಡಿದ್ದರೋ?” ಎಂಬ ಲೇಖನವನ್ನು ಭಾಷಾಂತರ ಮಾಡಿದೆನು.

೦೧.೧೦.೧೯೩೪
ಧಾರವಾಡ

ಸಿರಗುಪ್ಪಿ ವೆಂಕಣ್ಣಾಚಾರ್ಯರು ತಂದ “ಬಾಹುಪಲ್ಲಿ (ರಟ್ಟೀಹಳ್ಳಿ) ದೈವಜ್ಞ ಭೀಮಾಚಾರ್ಯನೆಂಬವನು ಬರೆದ ‘ಗುರುಕಥಾ ಕಲ್ಪತರು’ ಗ್ರಂಥವು ಸತ್ಯಭೋದ ಸ್ವಾಮಿಗಳ ಕಾಲಕ್ಕೆ ರಚಿಸಲ್ಪಟ್ಟಿದ್ದು. ಇದನ್ನು ಕೇವಲ ಅರ್ವಾಚೀನ ಲೇಖಕನು ಬರೆದದ್ದು. ಇದು ಪ್ರಮಾಣಕ್ಕೆ ಅರ್ಹವಾದುದಲ್ಲ. ಎಂದು ಖಂಡಿಸಿದೆನು.

೧೯೩೫

೦೪.೦೧.೧೯೩೫
ರಾಯಚೂರು

ಪ್ರಸ್ತು ಮತ್ತು ಅಪ್ರಸ್ತುತ ಎಂದರೆ ಉಪಮೇಯ ಮತ್ತು ಉಪಮಾನ ಇವುಗಳಲ್ಲಿ ಅಭೇದವಿರುತ್ತದೆಂದು ಗೃಹೀತ ತೆಗೆದುಕೊಂಡು ವಿಧಾನ ಮಾಡಿದ ಸ್ಥಳದಲ್ಲಿ ‘ರೂಪಕ’ ಅಲಂಕಾರವುಂಟಾಗುತ್ತದೆ.

‘ಉಪಮೇಯ’ ಇದು ಉಪಮಾನವೇ ಇರುತ್ತದೆ. ಉಪಮೇಯ ಮತ್ತು ಉಪಮಾನ ಇವು ಏಕರೂಪವೇ ಇರುತ್ತವೆ. ಇವುಗಳಲ್ಲಿ ಏನೂ ಭೇದವಿಲ್ಲ – ಎಂಬ ಬುದ್ಧಿಯಿಂದ ವಿಧಾನ ಮಾಡುವುದಕ್ಕೆ ‘ಆರೋಪ ಮಾಡುವುದು’ ಎಂದೆನ್ನುತ್ತಾರೆ. ಉಪಮೇಯದ ಮೇಲೆ ಉಪಮಾನತ್ವದ ಆರೋಪ ಮಾಡಿದಾಗ್ಗೆ ‘ರೂಪಕ’ವಾಗುತ್ತದೆ.

೧೨.೦೧.೧೯೩೫
ಧಾರವಾಡ

ಕಣ್ವಕುಲ ಎಂಬುದನ್ನು ನಿಶ್ಚಯಿಸಿದ್ದು.

೧೬.೦೧.೧೯೩೫

‘ಕುಲ’ ಎಂದರೆ ದೇಶ ಎಂದು ಅರ್ಥಮಾಡಿದೆನು.

೧೭.೦೧.೧೯೩೫

 1. ನಾಡಿನ ಹೆಸರಿನ ಮುಂದೆ ‘ಕುಲ’ ಎಂಬ ಶಬ್ದವಿದ್ದರೆ ಆ ಕುಲ ಶಬ್ದಕ್ಕೆ ‘ದೇಶ’ ಎಂದೇ ಅರ್ಥಮಾಡತಕ್ಕದ್ದು
  II. ವ್ಯಕ್ತಿಯ ಅಥವಾ ಸಮಾಜದ ಹೆಸರಿನ ಮುಂದೆ ಮುಂದೆ ಕುಲ ಎಂಬ ಶಬ್ದವಿದ್ದರೆ ಈ ‘ಕುಲ’ ಶಬ್ದಕ್ಕೆ ವಂಶ ಅಥವಾ ಜಾತಿಯೆಂದು ಅರ್ಥ ಮಾಡತಕ್ಕದ್ದು.

೨೭.೦೨.೧೯೩೫
ಕೊಲ್ಲಾಪುರ

ಶ್ರೀ ಬಸವೇಶ್ವರ ವಿಷಯವಾಗಿ ಜಾತಿ ನಿರ್ಣಯ ಮಾಡಬೇಕಾದರೆ, ಆರಾಧ್ಯ ಬ್ರಾಹ್ಮಣರ ಶಾಖಾ ಸೂತ್ರಗಳನ್ನು ರೀತಿನ ಡಾ. ಏಳಿಗಳನ್ನು ತಿಳಿಯಬೇಕು.

೧೦.೦೩.೧೯೩೫
ಚಿಕ್ಕೋಡಿ

ಸಂದೇಶಗಳು

. ಬಸವೇಶನ ವಿವಾಹವಾಗಿದ್ದಿಲ್ಲ ಆದ್ದರಿಂದ ಕನ್ಯೆ ಕೊಡುವವರು ದೇಶ, ಕುಲ, ಗೋತ್ರಗಳನ್ನು ಕೇಳುವುದು ಅಪರಿಹಾರ್ಯವಾಗಿದೆ.
೨. ‘ಕಮ್ಮೆಕುಳ’ ಎಂದು ಹೇಳಿಕೊಂಡವರೆಲ್ಲರೂ ವೈಶ್ಯರು ಅಥವಾ ಕ್ಷತ್ರಿಯರು
೩. ಸಮಕಾಲೀನ ಲೇಖಗಳು ಹೇಗೆ ಬಲವತ್ತರವಾದ ಪ್ರಮಾಣಗಳೋ ಹಾಗೆಯೇ ಸಮ ಸ್ಥಳದ ಐತಿಹ್ಯಗಳೂ ಬಲವತ್ತರವಾದ ಪ್ರಮಾಣಗಳು.

೦೬.೦೫.೧೯೩೫
ಧಾರವಾಡ

‘ಕಮ್ಮೆಕುಳ’ ನಿರ್ಣಯವಾಯಿತು.

೧೩.೦೫.೧೯೩೫

ಮಲಿಯಾಳ ಲಿಪಿಯನ್ನು ತಿಗುಳಾರಿ ಲಿಪಿಗೆ ಹೋಲಿಸಿ ನೋಡಿದೆನು ಸಾಮ್ಯವಿದೆ.

೧೪.೦೬.೧೯೩೫

ಕುಂದಾಪುರ ಸ್ವಾಮಿಗಳು ಮತ್ತು ಶ್ರೀ ನಿಜಗಲ್ಲ ವೆಂಕಟರಾಯರು ಆರವೇಲು ಬ್ರಾಹ್ಮಣರೆಂಬುದು ತಿಳಿಯಿತು.

೦೭.೦೭.೧೯೩೫
ಕುಂದಗೋಳ

. ಮದ್ರಕುಲ, ೨. ಗೋಪಕುಲ, ೩. ಮಿಥಿಲಾಕುಲವಾಸಿನಾಂ, ೪. ಅಂಗಕುಲ, ೫. ವಂಗಕುಲ, ೬. ಕಮ್ಮೆಕುಲ, ೭. ವಿದೇಹಕುಲ, ೮. ಕೇಕಯಕುಲ, ೯. ಪಾಂಡ್ಯಕುಲ, ೧೦. ಚೋಳಕುಲ, ೧೧. ಕರ್ನಾಟಕಕುಲ, ೧೨. ಋಷಿಕುಲ, ೧೩. ಗುರುಕುಲ, ೧೪. ಗೋಕುಲ

೧೧.೦೭.೧೯೩೫
ಧಾರವಾಡ

ತ್ಯಾಗರಾಜನು ತನ್ನ ೮೨ನೆಯ ವಯಸ್ಸಿನಲ್ಲಿ ಎಂದರೆ ಗತಕಲಿ ಪ್ರಯಾಣ ೪೯೪೮ ಪರಾಭವನಾಮ ಸಂವತ್ಸರದ ಪುಷ್ಯ ಬಹುಳ ಪಂಚಮಿ ದಿನ ಬ್ರಹ್ಮೈಕ್ಯವನ್ನು ಹೊಂದಿದನು.

೦೯.೦೮.೧೯೩೫

ಶ್ರೀ ಮನ್ಮಧ್ವಾಚಾರ್ಯರ ನಿರ್ಯಾಣ ಕಾಲ ೧೧೭೯ನೆಯ ಶಕ ವರ್ಷದ ಮಾಘ ಶುದ್ಧ ನವಮಿ ಮಂಗಳವಾರ ೧೨೫೮ನೆಯ ಇಸವಿಯ ಜನವರಿ ೧೫

೧೧.೦೮.೧೯೩೫

ಶ್ರೀ ಬಸವೇಶ್ವರನ ವಂಶಜರಿದ್ದರೆಂಬುದು ಅರ್ಜುನವಾಡದ ಶಿಲಾಲೇಖದಿಂದ ವ್ಯಕ್ತವಾಯಿತು.

೧೯೩೬

೧೪.೦೨.೧೯೩೬
ಧಾರವಾಡ

ಶ್ರೀ ವ್ಯಾಸತೀರ್ಥರು (ಚಂದ್ರಿಕಾಚಾರ್ಯರು) ೭೨ ವರ್ಷಗಳವರೆಗೆ ಪೀಠದ ಮೇಲೆ ಇದ್ದರೆಂಬುದು ತಿಳಿದು ಜಿತಾಮಿತ್ರ ತೀರ್ಥರ ಕಾಲಕ್ಕೆ ಪೋಷಕವಾಯಿತು.

೧೯.೦೨.೧೯೩೬

ಶ್ರೀ ಜಯತೀರ್ಥರ ಶಾಖಾ ನಿರ್ಣಯವನ್ನು ಮತ್ತೊಮ್ಮೆ ತಿದ್ದಿ ಬರೆದೆನು.

ಶ್ರೀ ಜಯತೀರ್ಥರ ಸ್ಥಳ ನಿರ್ಣಯದ ಬಾಬತು ಯೋಗ್ಯ ಸಂದೇಶಗಳನ್ನು ಸ್ವೀಕರಿಸಿದೆನು.

೨೦.೦೨.೧೯೩೬

ಆಲೂರು ವೆಂಕಟರಾಯರ ವಿಚಾರ ಸರಣಿಯನ್ನು ಕೇಳಿ ಇತಿಹಾಸ ಮಂಡಳದ ಪುರಸ್ಕೃತ ಗ್ರಂಥಮಾಲ ಕಲ್ಪನೆಯನ್ನು ತೆಗೆದುಹಾಕಿದೆನು.

೨೯.೦೨.೧೯೩೬

ಬಿ. ಎನ್‌. ಕೃಷ್ಣಮೂರ್ತಿಶರ್ಮಾ ಎಂ. ಎ. ಇವರು ಅನ್ನಮಲೆ ಯುನಿವ್ಹರ್ಸಿಟಿ ಜರ್ನಲ್ಲಿನಲ್ಲಿ ಶ್ರೀ ಮಧ್ವಾಚಾರ್ಯರ ಕಾಲ ನಿರ್ಣಯದ ಲೇಖವನ್ನು ನನಗೆ ಕಳಿಸಿದ್ದಾರೆ.

೩೦.೦೩.೧೯೩೬

ವಿಜಯನಗರ ಸ್ಮಾರಕೋತ್ಸವ ಮಂಡಳದ ಸಾಧಾರಣ ಸಭೆಯು ಜರುಗಿತು. ಶ್ರೀನಿವಾಸರಾವ ಕೌಜಲಗಿ, ಹಣಮಂತರಾವ ಕೌಜಲಗಿ ರಾಮರಾವ ಹುಕ್ಕೇರಿಕರ ಪ್ರಭೃತಿಯವರು ಬಂದಿದ್ದರು. ಬಹಳ ಚರ್ಚೆಯಾಗಿ ನಿರ್ಣಯವಾಯಿತು.

೨೫.೦೫.೧೯೩೬

06_280_SNSR-KUH

೨೬.೦೫.೧೯೩೬

ಶ್ರೀ ಮದ್ವಾಚಾರ್ಯರು ಶೋಭನಭಟ್ಟರೇ ಮೊದಲಾದ ನಾಲ್ವರಿಗೆ ಶ್ರೀ ಪದ್ಮನಾಭತೀರ್ಥ, ನರಹರತೀರ್ಥ, ಮಾದವತೀರ್ಥ, ಅಕ್ಷೋಭ್ಯತೀರ್ಥರೆಂಬ ಅಂಕಿತದಿಂದ ಆಶ್ರಮವನ್ನು ಕೊಟ್ಟು ಇವರು ಸಂಚಾರಿಗಳಾಗಿದ್ದು ಶ್ರೀ ಕೃಷ್ಣಮೂರ್ತಿಯ ಸೇವೆಗಾಗಿ ಉಡುಪಿಯ ಅಷ್ಟ ಮಠಗಳಿಗೆ ಸಹಾಯವನ್ನು ಒದಗಿಸುತ್ತಿರಬೇಕೆಂದು ಅಪ್ಪಣೆ ಮಾಡಿದರು. (ಪುಟ : ೭)

೦೬.೦೭.೧೯೩೬
ಬೈಲಗುಡ್ಡ

. ಸದ್ಯೋಜಾತ, ೨. ಬಡಿಗ, ೩. ತತ್ಪುರುಷ, ೪. ಅಘೋರ, ೫. ಈಶಾನ ಇವರು ಪಂಚಬ್ರಹ್ಮ ವಿಶ್ವ ಕರ್ಮನ ಪಂಚಮುಖಗಳಿಂದ ಹುಟ್ಟಿದಂಥ ಪುತ್ರರು. ಇವರಿಗೆ ರಥಕಾರ ಎಂಬ ಸಂಜ್ಞೆಯಿದೆ.

. ಅಗಸಾಲಿಗ, ೨. ಬಡಿಗ, ೩. ಕಮ್ಮಾರ, ೪. ಶಿಲ್ಪಿ, ೫. ಕಂಚಗಾರ ಇವರಿಗೆ ಪಂಚ ರಥಕಾರರು ಎಂಬ ಹೆಸರು

. ಮನು . ಮಯ, ೩. ತ್ವಷ್ಟಾ, ೪. ಶಿಲ್ಪಿ

. ತಕ್ಷಾ (ದೈವಜ್ಞ)

೧೯೩೭

ಶ್ರೀಮಧ್ವಾಚಾರ ಚರಿತ್ರೆ ಪುಸ್ತಕ ಪ್ರಕಟಣೆ ಅನಂತರ ಬಹುಶಃ ವಾದ ವಿವಾದಗಳಾಗಿರಬೇಕು.

‘ವಾದವಿವಾದ’ ಲೇಖ ಬರೆದುಕೊಟ್ಟೆನು ಎಂಬುದಾಗಿ ಹಲವಾರು ಕಡೆಗೆ ಉಲ್ಲೇಖ ಮಾಡಿದ್ದಾರೆ. ಅದು ಬಿಟ್ಟರೆ, ವಿಶೇಷ ಯಾವ ಉಲ್ಲೇಖಗಳೂ (ಗೃಹ ಕೃತ್ಯದ ಹೊರತಾಗಿ) ಈ ವರುಷ ಇಲ್ಲ.

೧೯೩೮

೩೦.೦೫.೧೯೩೮
ಗದಗ

ಪತಾಕಾ ಮತ್ತು ಪ್ರಕರೀ ಇವುಗಳ ಭರದಲ್ಲಿ ಮೂಲಕಥಾ ಭಾಗವು ಎರಡನೆಯ ಕಡೆಗೆ (ವ್ಯರ್ಥ) ಹರಿದು ಹೋಗಬಾರದೆಂದು ಅದನ್ನು ಮೂಲ ಕಥೆಯ ಕಡೆಗೆ ತಂದು ಜೋಡಿಸುವುದಕ್ಕೆ ಬಿಂದು ಎಂಬ ಹೆಸರು.

೩೧.೦೫.೧೯೩೮

ನಾಟ್ಯಶಾಸ್ತ್ರ ಪರಿಭಾಷೆಯಲ್ಲಿ ಅರ್ಥಪ್ರಕೃತಿಯ ಮೂಲ ತತ್ವಗಳು

 1. ಬೀಜವು ವೃದ್ಧಿಂಗತವಾದದು ಕಾಣಿಸುವುದು ಉದ್ಭೇದ.
  VI. ಬೀಜದ ಉಲ್ಲೇಖವು ಪುನಃ ಕಾಣಬರುವುದಕ್ಕೆ ಸಮಾಧಾನ ಎಂದು ಹೆಸರು.
  VII. ಇಚ್ಛಿತ ಸಂಗತಿಗೋಸ್ಕರ ನಿಶ್ಚಿತ ಯೋಜನೆಯನ್ನು ಮಾಡುವುದಕ್ಕೆ ಯುಕ್ತಿ ಎಂದು ಹೆಸರು.

೦೧.೦೬.೧೯೩೮

 1. ಬೀಜವು ಒಮ್ಮೆ ಕಾಣಿಸುವುದು, ಒಮ್ಮೆ ಕಾಣಿಸದೇ ಇರುವುದು ಇದಕ್ಕೆ ಪರಿಸರ್ಪ ಎಂದು ಹೆಸರು.
  II. ನಾಟಕದಲ್ಲಿಯ ಮುಖ್ಯ ಬೀಜವು ದೃಷ್ಟಿಗೋಚರವಾಗುವುದಕ್ಕೆ ಉಪಕ್ಷೇಪ ಎಂಬ ಹೆಸರು.
  III. ಬೀಜವನ್ನು ಅನೇಕ ರೀತಿಗಳಿಂದ ಬೆಳೆಸಿ ಹೇಳುವುದಕ್ಕೆ ಪರಿಕರ ಎಂಬ ಹೆಸರು.
  IV. ಬೀಜವು ಸ್ಪಷ್ಟವಾಗಿ ಕಾಣಿಸುವುದಕ್ಕೆ ಪರಿನ್ಯಾಸ ಎಂಬ ಹೆಸರು

೦೨.೦೬.೧೯೩೮

. ಪತಾಕಾ, ೨. ಪ್ರಕರೀ, ೩. ಬಿಂದು, ೪. ಬೀಜ, ೫. ಫಲ

೨೦.೦೬.೧೯೩೮
ಗದಗ – ಕೊಪ್ಪಳ

ನಾಟಕದ ಕಥಾ ಭಾಗವು ಐತಿಹಾಸಕವಿದ್ದರೂ ಸಹ ಅದನ್ನು ನಾಟಕದಲ್ಲಿ ಹಾಕುವಾಗ್ಗೆ ಇದ್ದುದಿದ್ದಂತೆ ಹಾಕದೆ ಅದರಲ್ಲಿ ತನ್ನ ಅಭಿನವ ಕಲ್ಪನೆಯಿಂದ ಏನಾದರೊಂದು ನಾವೀನ್ಯವನ್ನುಂಟು ಮಾಡಿ ಕಥಾ ಭಾಗದ ಅರ್ಥ ಪ್ರಕೃತಿಯನ್ನು ಐದು ಅಂಶಗಳನ್ನು ಏರ್ಪಡಿಸುವುದು.

೧೯೪೦

೧೧.೦೨.೧೯೪೦
ಬೆಂಗಳೂರು

ದಿವ್ಯವಾದ ದಿವಸ, ಬ್ರಾಹ್ಮೀಸ್ಥಿತಿ ಮೂಲಭೂತ ವಿಚಾರಶೈಲಿ.

೨೫.೦೨.೧೯೪೦

ಕೃಷ್ಣರಾಜನಗರ – ಕೃಷ್ಣರಾಜಸಾಗರ
ಕಣ್ವಂಪಾಡಿ = ಕನ್ನಂಬಾಡಿ
೧. ಕನ್ನಂಬಾಡಿ ಗ್ರಾಮದಲ್ಲಿ ಕಣ್ವೇಶ್ವರ ದೇವಸ್ಥಾನವಿದ್ದಿತು. ಈಗ ಅದು ಕಾವೇರಿಯಲ್ಲಿ ಮುಳುಗಿದೆ.

೧೮.೦೬.೧೯೪೦
ಮೈಸೂರು

ಅರವತ್ತೊಕ್ಕಲು ಬ್ರಾಹ್ಮಣರಲ್ಲಿ ‘ಮೂರಿಟಿಗೆ’ ಎಂಬ ಬ್ರಾಹ್ಮಣರದೊಂದು ಒಳಪಂಗಡವಿದೆ.

೦೫.೦೭.೧೯೪೦
ವಿಜಾಪುರ

. ಬ್ರಾಹ್ಮೀಸ್ಥಿತಿ + ಪ್ರಾರಬ್ಧ ಕರ್ಮ
೨. ಫಲಜ್ಯೋತಿಷ +
೩. ಜ್ಷಾನಚಕ್ಷುವಿಗೆ ಪರಮಾತ್ಮನ ಸಾಕ್ಷಾತ್ಕಾರ
೪. ಬ್ರಾಹ್ಮೀಸ್ಥಿತಿಯ ಜೀವನ

೦೬.೦೭.೧೯೪೦
ವಿಜಾಪುರ – ನಿಂಬಾಳ

ಪ್ರೊ ರಾನಡೆ ಇವರ ಸಂದರ್ಶನ

೧೯೪೧

೦೫.೦೧.೧೯೪೧
ರಾಯಚೂರು

ಶ್ರೀ ಪಂಚಮುಖಿ ಇವರಿಂದ ಇತಿಹಾಸ ಸಂಶೋಧನ ಕಾರ್ಯವನ್ನು ಸ್ವೀಕರಿಸಬೇಕೆಂದು ನನಗೆ ತಿಳಿಸಿದ ಹುಕುಂ ಈ ದಿವಸ ಮಧ್ಯಾಹ್ನ ೫ ಘಂಟೆಗೆ ತಲುಪಿತು.