ಎ.ಆರ್. ಶಿವನಾಗಪ್ಪರೊಂದಿಗಿನ ಕರಾರು ಪತ್ರ ಕರ್ನಾಟಕ ಇತಿಹಾಸ ಬರೆದು ಕೊಡಲು ದಿ. ೦೮.೦೫.೧೯೨೯

11_280_SNSR-KUH

ಶ್ರಿ ರಾ ರಾ ನಾರಾಯಣ ಶ್ರೀನಿವಾಸ ಪುರೋಹಿತ ಧಾರವಾಡ

ಇವರಿಗೆ

ಶಿವಲಿಂಗಪ್ಪ, ರುದ್ರಪ್ಪ, ಅಬ್ಬಿಗೇರಿ ಮಾಲ್ಕ ವಾಗ್ವಿಲಾಸ ಬುಕ್‌ ಡಿಪೋ ಹುಬ್ಬಳ್ಳಿ ಬರಕೊಟ್ಟ ಕರಾರುಪತ್ರ ಏನೆಂದರೆ ಶಾಲೋಪಯೋಗಿ ಪೂರ್ತ ಬರೆದ ಇತಿಹಾಸವನ್ನು ನಿಮ್ಮ ಕಡೆಯಿಂದ ಬರೆಸಿದ್ದು. ಸದರು ಪುಸ್ತಕದ ಬಾಬತ ನಿಮಗೆ ಈ ಹೊತ್ತಿನ ವರೆಗೆ ಎರಡನೂರ ಎಂಬತ್ತು ರೂಪಾಯಿಗಳನ್ನು ನಿಮಗೆ ಕೊಟ್ಟಿರುತ್ತೇನೆ. ಸದರು ಪುಸ್ತಕ ಸರ್ಕಾರದಿಂದ ಟೆಕ್ಸ್‌ಟ ಮಂಜೂರು ಆದ ನಂತರ ಒಂದುನೂರ ಇಪ್ಪತ್ತು ರೂಪಾಯಿಗಳನ್ನು ನಿಮಗೆ ಕೊಡುತ್ತೇನೆ. ಮಂಜೂರಾಗದಿದ್ದರೆ ಸದರಮೇಲೆ… ನೂರ ಇಪ್ಪತ್ತು ರೂಪಾಯಿಗಳನ್ನು ಕೊಡತಕ್ಕದಾಗಿರಲಿಲ್ಲ. ಸದರ ಪುಸ್ತಕವನ್ನು … ತಿದ್ದುವದು. ವಾ ಜಾಸ್ತ ಕಮ್ಮಿಮಾಡವದು … ನಿಮ್ಮಿಂದಲೇ ಮಾಡಿಸುತ್ತೇನೆ. ಅದಕ್ಕೆ ತಕ್ಕ ಪ್ರತಿಫಲವನ್ನು ಕೊಡುತ್ತೇನೆ. ಮತ್ತು ಈ ಪುಸ್ತಕದಲ್ಲಿ ನಿಮ್ಮ ಹೆಸರನ್ನು ದರ ಮುದ್ರಣದ ಮೇಲೆ ಹಾಕಿಸುತ್ತೇನೆ ಅಂತ ಬರಕೊಟ್ಟ ಕರಾರು. ದಸ್ತೂರು ತಮ್ಮಣ್ಣರಾವ, ಬೋಧರಾವ್‌, ಬುಕ್ಕೇಖಾನೆ.

ತಾರೀಕು ೮ ಮಾಹೆ ಮೇ ೧೯೨೯

ಸಹಿ
ಶಿವನಾಗಪ್ಪ ರುದ್ರಪ್ಪ ಅಬ್ಬಿಗೇರಿ