ಶ್ರೀ ಜಗದ್ಗುರು ಸಂಸ್ಥಾನ
ಶೃಂಗೇರಿ ಶ್ರೀ ಮಠದ ಅಧಿಕಾರ ಸ್ಥಾನದಿಂದ

ಮ | ರಾ || ನಾರಾಯಣ ಶ್ರೀನಿವಾಸರಾವ್‌ ರಾಜಪುರೋಹಿತ ಇವರಿಗೆ – ಉತ್ತರ

ಶಕ ೧೮೪೪ನೇ ದುಂದುಭಿನಾಮ ಸಂ | ಆಶ್ವಯುಜ ಶುಕ್ಲ ದಶಮಿಯ ನಿಮ್ಮ ವಿನಂತಿ ಪತ್ರದೊಂದಿಗೆ ನಮ್ಮಲ್ಲಿಗೆ ಕಳುಹಿಸಿದ ಶ್ರೀ ಮತ್ಸುರೇಶ್ವರಾಚಾರ್ಯರವರ ಚರಿತ್ರದ ಮುದ್ರಿತ ಪ್ರತಿಯೊಂದೂ, ಈ ಗ್ರಂಥವನ್ನು ಶ್ರೀ ಶ್ರೀ ಜಗದ್ಗುರು ಸ್ವಾಮಿಗಳವರ ಸನ್ನಿಧಿಯಲ್ಲಿ ಉಪಹಾರವನ್ನಾಗಿ ಸಮರ್ಪಿಸುವ ಸಂಕಲ್ಪದಿಂದ ಸಿದ್ಧಪಡಿಸಿರುವ ಸಮರ್ಪಣ ಪತ್ರಿಕೆಯ ರೀತಿ ಭೋಧಕ ಪತ್ರವೊಂದೂ ಹಸ್ತಗತವಾಗಿ ನಿಮ್ಮ ಕೋರಿಕೆಯಂತೆ ಶ್ರೀ ಶ್ರೀ ಜಗದ್ಗುರು ಸ್ವಾಮಿಗಳವರ ಸನ್ನಿಧಿಯಲ್ಲಿ ಶೃತಪಡಿಸಿದ್ದಾಯಿತು.

ಕರ್ಮಭೂಮಿಯನ್ನುದ್ಧರಿಸಿದ ಮಹನೀಯರಲ್ಲೊಬ್ಬರೆನಿಸಿ ಪ್ರಸಿದ್ಧರಾಗಿದ್ದ ಶ್ರೀ ಮತ್ಸುರೇಶ್ವರಾಚಾರ್ಯರವರ ಚರಿತ್ರೆಯನ್ನು ಸರ್ವಜ್ಞ ವಿದ್ಯಾರಣ್ಯ ಕೃತಿ ಎಂದು ಸರ್ವದೇಶ ವಿಖ್ಯಾತಮಾದ ಶಂಕರ ವಿಜಯ ಗ್ರಂಥವನ್ನನುಸರಿಸಿ ಬಹುಶಃ ಬರೆಯಲ್ಪಟ್ಟಿರುವುದರಿಂದ ಈ ಗ್ರಂಥವು ಬಹುಜನೋಪಕಾರವಾಗುವುದೆಂದೂ ತನ್ಮೂಲಕ ನಿಮ್ಮ ಸತ್‌ ಪ್ರಯತ್ನವು ಪಲವತ್ತಾಗಿ ನೀವು ಅಭ್ಯುದಯ ಭಾಜನರಾಗುವಿರೆಂದೂ ಶ್ರೀ ಶ್ರೀ ಜಗದ್ಗುರು ಸ್ವಾಮಿಗಳವರು ಅನುಶಾಸನ ಮಾಡಿರುವರು.

ಭಕ್ತಿಭಾವದಿಂದ ಸಂಕಲ್ಪಸಿರುವ ನಿಮ್ಮ ಅಭಿಪ್ರಾಯದಂತೆ ಮೇಲಿನ ಗ್ರಂಥವನ್ನು ಶ್ರೀ ಶ್ರೀಗಳವರ ಸನ್ನಿಧಿಯಲ್ಲಿ ಸಮರ್ಪಿಸತಕ್ಕ ವಿಷಯದಲ್ಲಿ ಶ್ರೀ ಶ್ರೀಗಳವರು ಅಮಂದಾನಂದ ಭರಿತಾಂತಃಕರಣದಿಂದ ಸ್ವೀಕರಿಸಲು ಅನುಮತಿಯನ್ನಿತ್ತುಯಿರುವರೆಂಬ ಅಂಶವನ್ನು ಈ ಮೂಲಕ ಸೂಚಿಸೋಣವಾಗಿಯಿದೆ.

ಯೇಜಂಟ್ಶೃಂಗೇರಿ ಮಠ
ದುಂದುಭಿ ಸಂ. ಆಶ್ವಯುಜ
ಬ. ೧೧. ಸೋಮವಾರ
ದಲ್ಲಿ ಮೊಕ್ಕಾಂ ಶೃಂಗೇರಿ.

ಶೃಂಗೇರಿ ಶ್ರೀ ಮಠದ ಪತ್ರ (೧೯೨೨)

ಶೃಂಗೇರಿ ಶ್ರೀ ಮಠದ ಪತ್ರ (೧೯೨೨)