ನಾ ಶ್ರಿ ರಾಜಪುರೋಹಿತರ ಒಟ್ಟು ದೊರೆತ ೩೫ ದಿನಚರಿ ಪುಸ್ತಕಗಳಿಂದ ಆಯ್ದ ಕೆಲವು ಪುಟಗಳು. ೩೫ ದಿನಚರಿಗಳಲ್ಲಿ ೪ಕ್ಕೆ ದಿನ ನಮೂದಿಸಿಲ್ಲ.

೧೯೧೪
ಸಹಜ ಕರ್ಮವು ಯಾವುದು?

೦೧.೦೧.೧೯೧೪
ಬಡೋದೆ

ಬಡೋದೆಯಲ್ಲಿ ಸೆಂಟ್ರಲ್‌ ಲಾಯಬ್ರರಿಯಲ್ಲಿ ಓದುವುದಕ್ಕೆ ಆರಂಭಿಸಿದ್ದು. ವಾಚನವು ಚೆನ್ನಾಗಿ ಸಾಗಿದೆ.

೦೬.೦೩.೧೯೧೪
ಧಾರವಾಡ

ಇವತ್ತಿನ ದಿವಸ ಇತಿಹಾಸ ಸಂಶೋಧಕ ಮಂಡಳದ ಸಂಸ್ಥೆಯನ್ನು ತೆಗೆಯಬೇಕೋ ದಾಸರಪದ ಸಂಗ್ರಹದ ಸಂಸ್ಥೆಯನ್ನು ತೆಗೆಯಬೇಕೋ ಎಂಬ ವಿಷಯವಾಗಿ ವಿಚಾರ ನಡೆದಿದೆ. ಈ ವಿಷಯದಲ್ಲಿ ಆಲೂರು ವೆಂಕಟರಾವ, ನಾರಾಯಣರಾವ್‌ ದೇಶಪಾಂಡೆ ಇವರೂ ವಿಚಾರ ಮಾಡಹತ್ತಿದ್ದಾರೆ. ಪ್ರತಿದಿನ ತಲೆಯಲ್ಲಿ ಒಂದು ವಿಚಾರವು ಬರುತ್ತದೆ. ನಿರ್ಣಯವಾಗುತ್ತಿಲ್ಲ. ಕರ್ತವ್ಯಾನಂದ.

೦೭.೦೩.೧೯೧೪
ಧಾರವಾಡ

ಇವತ್ತಿನ ದಿವಸ ಪ್ರಾತಃಕಾಲದಲ್ಲಿ ಪುರಂದರದಾಸ, ಕನಕದಾಸದಿ ಭಗವದ್ಭಕ್ತರ ಪದ ಸಂಗ್ರಹ ಮಾಡುವದರ ಸಲುವಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸುವುದಕ್ಕಾಗಿ ಒಂದು ಹಸ್ತಪತ್ರಿಕೆಯನ್ನು ತೆಗೆದಿದ್ದೇವೆ. ಇದರಲ್ಲಿ ಯಶವು ಸಿಗುವ ಸಂಭವವು ಬಹುಶಃ ಇಲ್ಲ.

(ಕನ್ನಡ ಜನರಲ್ಲಿ ತಾರತಮ್ಯ ಬುದ್ಧಿ ವೇಳೆಯ ಸದುಪಯೋಗ ಮಾಡುವ ಬುದ್ಧಿ. ಧೃಡನಿಶ್ಚಯ, ವ್ಯವಸ್ಥಿತ ಮುಂತಾದ ಸದ್ಗುಣಗಳು ಇಲ್ಲದಿರುವುದರಿಂದ ಅತಿಶಯ ಹೀನಸ್ಥಿತಿಯಲ್ಲಿ ಇದ್ದಾರೆ.)

ನಾನು ಸನ್ಯಾಸವನ್ನು ಸ್ವೀಕರಿಸಬೇಕೋ, ಗೃಹಸ್ಥಾಶ್ರಮ ಸ್ವೀಕರಿಸಬೇಕೋ ಎಂಬ ವಿಷಯವಾಗಿ ಈ ದಿವಸ ರಾತ್ರಿ ೧೨ ಹೊಡಿಯುವ ತನಕ ವಿಚಾರಿಸಿದೆನು. ಆದರೆ ಕೊನೆಗೆ ಹೀಗೆ ನಿರ್ಣಯವಾಯಿತು. ಜ್ಯೇಷ್ಠಮಾಸದ ಅಖೇರಕ್ಕೆ (೧೯೧೪ ಜೂನ್‌ ೨೨ ತಾರೀಖಿನೊಳಗೆ) ಒಂದು ಆಶ್ರಮವನ್ನು ನಿರ್ಣಯಿಸಿ ಬಿಡುತ್ತೇನೆ.

ಇವತ್ತು ತ್ರ್ಯ.ಭಿ. ಹರ್ಡೀಕರರಿಂದ ಮನಿಯಾರ್ಡರ್‌ ಪಾವತಿ ಬಂದಿಲ್ಲಾ. ಬಿ. ಸುಬ್ಬರಾಯರಿಗೆ ಒಂದು ಪಾಕೀಟು ಹಾಕಿದೆನು. ಕಿಟ್ಟಲ್‌ ಡಿಕ್ಷನರಿಗೆ ಹೋಗಿ ತಾಪವಾಯಿತು.

ಜಯತೀರ್ಥರ ಗ್ರಂಥಗಳು
ಹಂಪಿ ಯಾತ್ರೆಯ ವಿವರಣೆಯುಂಟು.
ಸಂಸಾರ ಅಥವಾ ಸನ್ಯಾಸ?

ಮಾರ್ಚ್‌ ೧೭ ರಿಂದ ಸೆಪ್ಟೆಂಬರ್ – ಅಕ್ಟೋಬರದಿಂದ ಜನೆವರಿ, ಫೆಬ್ರವರಿಯಿಂದ – ಜೂನ್‌ವರೆಗೆ ನಂತರ ತಿಲಮಾತ್ರವೂ ವಿಚಾರ ಮಾಡದೇ ಸನ್ಯಾಸ ಸ್ವೀಕರಿಸುವೆನು.

ವಿಟ್ಟಲ ಭಕ್ತಿಯ ಇತಹಾಸ ಬರೆಯುತ್ತಿರುವೆ.

೨೬.೦೮.೧೯೧೪
ಧಾರವಾಡ

ಇವತ್ತಿನ ದಿವಸ ಉತ್ತರಾದಿ ಮಠದಿಂದ ಸಮಾಧಾನಕರ ಪತ್ರ ಬಂದಿದೆ. ನನ್ನ ಲೇಖನಕ್ಕೆ ಉತ್ತೇಜನ ದೊರೆಯಿತು.

೨೭.೦೮.೧೯೧೪
ಧಾರವಾಡ

ಇವತ್ತಿನಿಂದ ಶ್ರೀ ಸುರೇಶ್ವರಾಚಾರ್ಯರ ಚರಿತ್ರೆ ಮತ್ತು ಶ್ರೀ ಜಯತೀರ್ಥರ ಚರಿತ್ರೆ ಈ ಪುಣ್ಯ ಶ್ಲೋಕ ಚರಿತ್ರೆಗಳನ್ನು ಬರೆಯಲು ಉಪದ್ರಮಿಸಿದ್ದೇನೆ.

ಆತ್ಮ ವಿದ್ಯೆಯ ಪ್ರಸ್ತಾಪನೆಯನ್ನು ಬರೆಯುವುದು.

೨೮.೦೮.೧೯೧೪
ಧಾರವಾಡ

ದಾಸರ ಪದಗಳನ್ನು ಬರೆಯುವುದು.

೩೦.೦೮.೧೯೧೪
ಧಾರವಾಡ

. ನಿನ್ನೆದಿವಸ ಟೀಕಾಚಾರ್ಯರ ಕಾಲನಿರ್ಣಯ ಮಾಡಿದೆನು.
೨. ಇವತ್ತಿನ ದಿವಸ ಚೌಂಡರಸನ ಕಾಲನಿರ್ಣಯ ಮಾಡಿದೆನು.
ಟೀಕಾಚಾರ್ಯರ ಶಾಖಾನಿರ್ಣಯಕ್ಕಾಗಿ ಪತ್ರ ಬರೆದೆನು.

೦೯.೦೯.೧೯೧೪
ಮೈಸೂರು

ಕನ್ನಡ ಭಾಷೆಯನ್ನು ಪರಿಸ್ಥಿತಿಯನ್ನು ನಿರೀಕ್ಷಿಸುವುದು.

ಆರ್. ನರಸಿಂಹಾಚಾರ್ಯರು ಎಮ್‌. ಎ. ಎಮ್‌. ಆರ್. ಎ. ಎಸ್‌. ಇವರ ಭೆಟ್ಟೆ i) ದಶಕುಮಾರ ಚರಿತೆಯ ೮ನೇ ಆಶ್ವಾಸದ ೬೧ನೇ ಪದ್ಯದಲ್ಲಿ ಚೋಳ ಸಿಂಗಣರ ಉಲ್ಲೇಖವಿದ್ದುದರಿಂದ ಚೌಂಡರಸನು (೧೨೧೦ – ೧೨೪೭) ಇರಲಿಕ್ಕೆ ಬೇಕು. ii) ಪ್ರತಾಪರುದ್ರನ (ಓರಂಗಲ್ಲು) ಕೈಕೆಳಗೆ ದಂಡನಾಯಕನಾಗಿದ್ದ ಕಂಪಿಲರಾಯನ ಆಶ್ರಯದಲ್ಲಿ ನಂಜುಂಡನಿದ್ದನು. ಪ್ರತಾಪರುದ್ರನು ೧೨೯೨ – ೧೩೩೫ ರವರೆಗೆ ಆಳಿದನು.

ಕೃಷ್ಣಯಜುರ್ವೇದದ ೮೬ ಶಾಖೆಗಳಲ್ಲಿ ಮೂರು ಶಾಖೆಗಳು ಉಪಲಬ್ಧವಾಗಿವೆ. ೧. ಕಠಶಾಖೆ ಈ ಶಾಖೆಯವರು ಈಗ ಕಾಶ್ಮೀರದಲ್ಲಿದ್ದಾರೆ. ೨. ಕಲಾಪ ಅಥವಾ ಮೈತ್ರಾಯಣೀಯ ಈ ಶಾಖೆಯವರು ಗುಜರಾತದಲ್ಲಿ ವಿಶೇಷತಃ ಅಹಮದಾಬಾದ ಹಾಗೂ ಮೋರವಿ ಈ ಸ್ಥಳಗಳಲ್ಲಿ ಇದ್ದಾರೆ. ೩. ತೈತ್ತರೀಯ ಶಾಖೆ ಕರ್ನಾಟಕ ದಕ್ಷಿಣ ಭಾರತದಲ್ಲಿದ್ದಾರೆ.

೧೯೧೫

೨೬.೦೨.೧೯೧೫
ಮೈಸೂರು

೧೯೧೫ನೇ ಇಸ್ವಿಯಲ್ಲಿ ಮಾಡಿದ ಕಾರ್ಯ
೦೦. ಶ್ರೀ ಸುರೇಶ್ವರಾಚಾರ್ಯರ ಚರಿತ್ರೆ
೦೨. ಮುದತಿ ದಾವೆ + ಕಲ್ಲೇದೇವರ ಹೊಲಗಳ ಮಾಹಿತಿ
೦೩. ಮೋಟೆಬೆನ್ನೂರ ರೈತನ ಮಾಹಿತಿ
೦೪. ಸುಮರ ಪರಿಸ್ಥಿತಿ ಬದಲಾವಣೆ
೦೫. ವಿವಾಹ – ನೆಗವಾಡಿ ಕಾಯಂ ಕೆಲ್ಸ
೦೬. ಸದ್ಭೋಧ ಚಂದ್ರಿಕೆ + ಪಾಠಶಾಲಾ ಮದತು
೦೭. ವೈದಿಕ + ಸಾಂಸಾರಿಕ + ಜೋತಿಷ್ಯ ವಿಷಯಕ – ರೆವ್ಹಿನ್ಯೂ… ಮಾಹಿತಿ
೦೮. ನೆಗವಾಡಿ + ಕುಪಗಡ್ಡಿ + ಸೊರಬ + ಆನವಟ್ಟಿ ಇಡಗೋಡ ಹಂಚಿ ಮಾಹಿತಿ
೦೯. ದೇಶ ಕಾರ್ಯ ತ್ಯಜತೇ.
೧೦. ಕಂದಾಯ ಶಾರತಿ ಮಾಡಿದ್ದು.

೦೬.೦೩.೧೯೧೫
ನೆಗವಡಿ

ಇವತ್ತಿನ ದಿವಸ ಸೂಡಂಬಿ ನಾರಾಯಣಪ್ಪನವರು, ನೆಗವಾಡಿಯಿಂದ ಬಂದು, ಇವತ್ತೇ ತಿಂಗಳ ನಾಗೋಲಿ ಆಗುತ್ತದೆಂದು ಹೇಳಿದ್ದರಿಂದ ಈಗಲೇ ಹೊರಡುವದಾಯಿತು. ನೆಗವಾಡಿಯಲ್ಲಿ ತಿಂಗಳ ನಾಗೋಲಿ ತೀರಿಸಿಕೊಂಡು ವೇ. ತವಮಣಾಚಾರ್ಯರು ಆನವಟ್ಟಿಗೆ ಹೋದರು. ಇವತ್ತಿನ ದಿವಸ ‘I’ ಬಂದದ್ದರಿಂದ ಸವರಿಗೂ ಆನಂದವಾಗಿದೆ. ಇದು ಸ್ವಾಭಾವಿಕವಾಗಿದೆ. ವೇ. ಭೀ, ಇವರ ಮಹಾತ್ಮ್ಯವು ಸೂಡಂಬೀಕರರಿಂದ ಮೊದಲೇ ವ್ಯಕ್ತವಾದ್ದರಿಂದ ನಾನು ಆ ವಿಷಯವಾಗಿ ‘ಚ’ಕಾರ ಶಬ್ದವನ್ನು ಆಡುವ ಪ್ರಸಂಗವೇ ಬರಲಿಲ್ಲ.

೧೧.೦೩.೧೯೧೫
ನೆಗವಡಿ

. ಧ್ಯೇಯವು ನಿಶ್ಚಿತವಾಯಿತು.
೨. ಶ್ರೀ ಮಜ್ಜಗಜ್ಜನನಿಯ ಕೃಪೆಯಿಂದ ಪ್ರಾರಂಭ ಮಾರ್ಗವು ಸುರಳಿತವಾಗಿ ರಾಜ ಮಾರ್ಗವನ್ನು ಪ್ರವೇಶಿಸುವುದು.

೦೬.೦೪.೧೯೧೫
ನೆಗವಡಿ

. ಕಾಣ್ವಶಾಖಾ ಉನ್ನತಿ ಇಲ್ಲ. ೨. ಕರ್ನಾಟಕ ಉನ್ನತಿ ಇಲ್ಲ. ೩. ಹಿಂದುಸ್ಥಾನ ಉನ್ನತಿ ಇಲ್ಲ . ಏಶಿಯಾ ಉನ್ನತಿ ಇಲ್ಲ. ೫. ಮನುಷ್ಯ ಜಾತಿ ಉನ್ನತಿ ಇಲ್ಲ . ಬ್ರಾಹ್ಮೀ ಸ್ಥಿತಿ . ವ್ಯಕ್ತಿ – ೧. ಶರೀರಹಾನಿ, ೨. ಭಾಷಾಹಾನಿ, ೩. ಜ್ಞಾನಹಾನಿ (೧/೨), ೪. ಕೀರ್ತಿಹಾನಿ (೩/೪)

೨೮.೦೪.೧೯೧೫
ನೆಗವಡಿ

೧೯೦೪ ಮುಲ್ಕೀಪರೀಕ್ಷೆ ೧೯೦೫ – ಪ್ರೇವೇಶ ಪರೀಕ್ಷೆ
೧೯೦೬ ೧ನೇ ವರ್ಷ ೧೯೦೭ – ಎರಡನೇ ವರ್ಷ, ೧೯೦೮ ೩ನೇ ವರ್ಷ
೧೯೦೯, ೧೯೧೦, ೧೯೧೧, ೧೯೧೨, ೧೯೧೩, ೧೯೧೪ – ದೇಶಸೇವಾ
೧೯೧೫, ೧೯೧೬, ೧೯೧೭, ೧೯೧೮ = ೪೦೦೦ ರೋಖಿ ೬೦೦ ಉತ್ಪನ್ನದ ಸ್ವಾಸ್ತಿ.

೨೯.೦೪.೧೯೧೫
ನೆಗವಡಿ

. ದಾನ ಧರ್ಮ ಪದ್ಧತಿ, ೧೯೧೦
೨. ಮಹಾರಾಷ್ಟ್ರ ವ ಕರ್ನಾಟಕ ೧೧, ೧೨, ೧೩, ೧೪
೩. ಶ್ರೀ ಸುರೇಶ್ವರಾಚಾರ್ಯ ಚರಿತ್ರೆ ೧೫, ೧೬
೪. ವೇದಾಂತ ಜ್ಞಾನ
೫. ಧಾರ್ಮಿಕ ಜ್ಞಾನ ಪೂರ್ಣ

೩೦.೦೪.೧೯೧೫

ನೆಗವಾಡಿ ಅಗಡಿ
. ಸ್ವಂತ ಅಲ್ಲ ಹೆಂಡಿರು ಮಕ್ಕಳಿಗೆ ಅಭಾವ . ಸ್ವಂತ ಆದ್ದರಿಂದ ಹೆಂಡರು ಮಕ್ಕಳಿಗೆ ಉಂಟು
. ಪರಿಸ್ಥಿತಿ ವಾಯಿಟ . ಪರಿಸ್ಥಿತಿ ಉತ್ತಮ
.ಉತ್ಪನ್ನ ಕಡಿಮೆ . ಉತ್ಪನ್ನ ಅಲ್ಪ ಅಧಿಕ
. ಆಶ್ರಯವುಂಟು . ಆಶ್ರಯವಿಲ್ಲ

೦೪.೦೫.೧೯೧೫
ನೆಗವಡಿ

ಶೃಂಗೇರಿ ಪ್ರಯಾಣ

ತರೀಕೇರಿ ಸ್ಟೇಶನ್ನಿನಿಂದ ೨.೧೨.೦ ಕೊಟ್ಟು ಟಾಂಗದಿಂದ ಶೃಂಗೇರಿಗೆ ಹೋಗುವುದು. ಕೊಪ್ಪ, ಎಡಹಳ್ಳಯಲ್ಲಿ ಖಾನಾವಳಿಯಲ್ಲಿ ಊಟ ಮಾಡುವುದು.

೦೫.೦೬.೧೯೧೫
ನೆಗವಡಿ

ಧಾರವಾಡಾದಲ್ಲಿ ಮಳೆಯು ಚೆನ್ನಾಗಿ ಆಯಿತು.
ಮ. ರಾ. ರಾ. ವೆಂಕಟರಾಯರು ಗೀತಾ ರಹಸ್ಯವನ್ನು ಕನ್ನಡದಲ್ಲಿ ಭಾಷಾಂತರಿಸಹತ್ತಿದ್ದಾರೆ.

೧೬.೦೬.೧೯೧೫
ನೆಗವಡಿ

ಇವತ್ತಿನ ದಿವಸ ಪೂಜ್ಯರಾದ ಶ್ರೀ ಶಿವಗಂಗಾ ಮಠಾಧೀಶರಿಂದ ‘ಅರ್ಪಣ ಪತ್ರಿಕಾ’ ಅಪ್ಪಣೆಯನ್ನು ಹೊಂದಿದೆನು.

೨೫.೦೮.೧೯೧೫
ನೆಗವಡಿ

ಅಗಡಿ ಪ್ರಯಾಣದಿಂದ ಲಾಭ
೧. ಟ್ರಂಕು, ಸಾಮಾನು ಪುಸ್ತಕ ಬರುವವು
೨. ೩ನೆಯ ಅಧ್ಯಾಯ ಪ್ರೂಫು ತಿದ್ದುವುದು ಪೂರ್ಣವಾಗುವದು
೩. ಆಯಿಯ ಕೃಪೆಯಾದರೆ
ಮಂಡನಮಿಶ್ರರು ಪಂಚ ದ್ರಾವಿಡರೆಂದು ಸಿದ್ಧ ಮಾಡುವುದು
I. ಟೀ. ಕಾ. ಸಿ. ಮಾ.
II. ಸಾ. ತೀ.
III. ಸಾಮಾ. ಸಿ
IV. ಘ. ತೀ.

೧೯.೦೯.೧೯೧೫
ಹುಬ್ಬಳ್ಳಿ

ಶ್ರೀ ಶಿವಗಂಗಾ ಮಠಾಧೀಶರಲ್ಲಿ ವಿಚಾರಿಸತಕ್ಕ ಸಂಗತಿಗಳು
೧. ಶ್ರೀ ಶಂಕರಚಾರ್ಯರು ಕೃಷ್ಣಯಜುರ್ವೇದಿಗಳು (ತೈತ್ತೀರೀಯ ಶಾಖಾಧ್ಯಾಯಿಗಳು) ಆದರೆ ಬೌದ್ಧಾಯನರೊ? ಆಪಸ್ತಂಭರೋ.
೨. ಶೃಂಗೇರಿ ಸದ್ಯದ ಜಗದ್ಗುರುಗಳ ಹೆಸರು ಏನು? ಇವರ ಹಿಂದಿನ ಸ್ವಾಮಿಗಳು ಎಂದು ಸಮಾಧಿಸ್ಥರಾದರು?

೨೦.೧೦.೧೯೧೫
ಹುಬ್ಬಳ್ಳಿ

೧೪ನೇ ಸೆಪ್ಟಂಬರ್ ೧೯೧೫ ರಲ್ಲಿ
ಮಧ್ವಾಚಾರ್ಯರ ಕಾಲ ನಿರ್ಣಯ

೦೩.೧೧.೧೯೧೫
ಹುಬ್ಬಳ್ಳಿ

ಇವತ್ತು ಬೆಳಗು ಮುಂಜಾನೆ ಒಂದು ಕನಸು ಬಿದ್ದಿತು. ೧. ಸಾಂಟಕಿ ಗುರುಗಿನರು ಮೃತಪಟ್ಟದ್ದು. ಭವ್ಯವಾದ ಸ್ಮಶಾನ ಯಾತ್ರಾ . ಸಾಧುಗಳ ಬೆಟ್ಟಿ ೫೦೦.೦೦ ರೂ. ನಿಮಗೆ ದಾನಕೊಟ್ಟಿದ್ದೇನೆ ಈಗ ೫೦ ರೂ. ಕೊಟ್ಟಿದ್ದೇನೆ. ಅಂತಾ ಹೇಳಿದಂತೆ ಆಯಿತು.

೧೯೧೬

೦೬.೦೫.೧೯೧೫
ಹುಬ್ಬಳ್ಳಿ

೧೯೧೮ ಜೂನ್‌ ೧೨ನೇ ತಾರೀಖಿಗೆ ಸ್ವತಂತ್ರ ಗೃಹತ್ವವನ್ನು ಆರಂಭ ಮಾಡಿದೆನು. (ಸಾಮಾನು ತಂದ ವಿವರಗಳಿವೆ).
೧.೧೨.೧೯೧೬ ರಿಂದ ೬.೧೨.೧೯೧೬ ರವರೆಗೆ
ಕಾಲ್ಡವೆಲ್ಲನ ಪುಸ್ತಕದಿಂದ ತೆಲುಗು ಭಾಷೆಯ ಬಗ್ಗೆ ಟಿಪ್ಪಣಿ.

೨೫.೧೨.೧೯೧೬
ಹುಬ್ಬಳ್ಳಿ

ಕಾಳಯುಕ್ತಿ (ಶಕೆ ೧೮೪೦) ಸಂವತ್ಸರ ಚೈತ್ರ ಯುಗಾದಿ ದಿವಸದಲ್ಲಿ (ಧಾರವಾಡದಲ್ಲಿ) ಸ್ಥಾಪಿಸಲ್ಪಡುವ ಆಯುಷ್ಯದ ಧ್ಯೇಯಗಳು
೧. ಸ್ವತಂತ್ರ ಗೃಹತ್ವ
೨. ಮನೋಹರ ಪ್ರಿಂಟಿಂಗ ಪ್ರೆಸ್‌
. ಕಾವ್ಯಶಾಸ್ತ್ರ ವಿನೋದ ಮಾಸಿಕ ಪುಸ್ತಕ
೪. ಔದ್ಯೋಗಿಕ ವ್ಯಾಪಾರ ವಿಷಯಕ
೫. ರಾಷ್ಟ್ರ ವಿಷಯಕ – ಪರೋಪಕಾರ ವಿಷಯಕ

ಬ್ರಾಹ್ಮೀಸ್ಥಿತಿ
|
ಸಮೃದ್ಧಿ
|
ಧ್ಯೇಯಗಳು

೨೭.೧೨.೧೯೧೬ (ನಳ ಸಂವತ್ಸರ)
ಹುಬ್ಬಳ್ಳಿ

01_280_SNSR-KUH

ಕೈ – I ನೆಯ ಕೀಲಿ ಧನ (೧. ರಾಜವೈದ್ಯ, ೨. ಮಿತ್ರ ಸಹಾಯ)
II ನೆಯ ಕೀಲಿ ನೆ. ಹಂ. ವ. ಶ್ಯಾ. ಆಯಾ. ಭಾ. ಮ. ಮಾ

ಬ್ರಾಹ್ಮೀ ಸ್ಥಿತಿ – I ನೆಯ ಕೀಲಿ ಧನ (೧. ರಾಜವೈದ್ಯ, ೨. ಮಿತ್ರ ಸಹಾಯ)
II ನೆಯ ಕೀಲಿ ನೆ. ಹಂ. ವ. ಶ್ಯಾ. ಆಯಾ. ಭಾ. ಮ. ಮಾ
ಈ ಎರಡೂ ಕೀಲಿಗಳನ್ನು ತೆಗೆಯುವುದಕ್ಕೆ “ಬ್ರಾಹ್ಮೀಸ್ಥಿತಿ”ಯು ಕೈಯಾಗಿದೆ.

. ಮನೋಹರ ಪ್ರಿಂಟಿಂಗ್‌ ಪ್ರೆಸ್‌
. ಕಾವ್ಯಶಾಸ್ತ್ರ ವಿನೋದ ಮಾಸಿಕ
೩. ಔದ್ಯೋಗಿಕ ವ್ಯಾಪಾರ ವಿಷಯಕ
೪. ಸ್ವತಂತ್ರ ಗೃಹತ್ವ
೫. ಅನೇಕ ಪರೋಪಕಾರ ವಿಷಯಕ ಸಾರ್ವಜನಿಕ ಕಾರ್ಯ

. ದಶಂಬರ ತಿಂಗಳ ಅಖೈರ ಒಳಗಾಗಿ ಧ್ಯೇಯಾರ್ಥ ಪ್ರವಾಸ
೨. ಫೇಬ್ರುವರಿ ಮಾರ್ಚ್‌ ಏಪ್ರಿಲ್‌ ಮೇ ಗಳಲ್ಲಿ ಏಕ ಸತತ ಧ್ಯೇಯ ಕಾರ್ಯ
೩. ಜೂನ್‌ ೧೨ನೆಯ ತಾರೀಖಿಗೆ ಬ್ರಾಹ್ಮೀ ಸ್ಥಿತಿಯ ಅದ್ಭುತ ಪ್ರಭಾವದಿಂದ ಸ್ವತಂತ್ರ ಗೃಹತ್ವವನ್ನು ಮಾಡಿ ಪ್ರತ್ಯಕ್ಷ ಬ್ರಾಹ್ಮೀಸ್ಥಿತಿಯ ಮಹಿಮೆಯನ್ನು ನೋಡುತ್ತಿದ್ದೇನೆ.

೨೯.೧೨.೧೯೧೬
ಹುಬ್ಬಳ್ಳಿ

೧ – ೫ ಬಾಲ್ಯ – ಬ್ರಾಹ್ಮಣ್ಯ
೫ – ೧೨ ಚಾಯಿಲ್ಡ ಹುಡ್‌ – ಬ್ರಾಹ್ಮಣ್ಯ
೧೨ – ೧೮ ಕಾಲೇಜ್‌
೧೮ – ೨೧ ರಾಷ್ಟ್ರಭಕ್ತಿ ಶಿಕ್ಷಣ – ವಿಚಾರ ಶಕ್ತಿ
೨೧ – ೨೪ ರಾಷ್ಟ್ರೀಯ ಶಾಲಾಗುರು
೨೪ – ೨೭ ಇತಿಹಾಸ ಸಂಶೋಧಕ
೨೭ – ೩೦ ಜಗತ್ತಿನ ಅನುಭವ ಲೋಕರೂಢಿ
೩೦ ಆಮರಣ – ೧. ಮನೋಹರ ಪ್ರಿಂಟಿಂಗ ಪ್ರೆಸ್‌. . ಕಾವ್ಯಶಾಸ್ತ್ರ ವಿನೋದ ಮಾಸಿಕ ಪುಸ್ತಕ.

೨೨.೦೪.೧೯೧೬ ರಿಂದ ೦೪.೦೫.೧೯೧೬ ಪುಟಗಳಲ್ಲಿ “ಸಮೃದ್ಧಿಶಾಸ್ತ್ರ” ಎಂಬ ಪುಸ್ತಕದ ಪ್ರಥಮ ಅಧ್ಯಾಯ ಮತ್ತು ಅಪೂರ್ಣ ಎರಡನೆಯ ಅಧ್ಯಾಯ ಬರವಣಿಗೆ.