Categories
ಬಯಲಾಟ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಸಕ್ರವ್ವ ಯಲ್ಲವ್ವ ಪಾತ್ರೋಟ

ಅಜ್ಜಿ ಗಂಗವ್ವ ಹಾಗೂ ತಾಯಿ ಯಲ್ಲಪ್ಪಾ ಪಾತ್ರೋಟ ಇವರಿಂದ ಬಯಲಾಟ, ಸಣ್ಣಾಟ ಕಲೆಯನ್ನು ಕಲಿತು ನೈಪುಣ್ಯತೆಯನ್ನು ಸಾಧಿಸಿದ ಕಲಾವಿದೆ ಸಕ್ರವ್ವ ಯಲ್ಲವ್ವ ಪಾತ್ರೋಟ ಅವರು.
ಬೆಳಗಾವಿಯಲ್ಲಿ ತಮ್ಮದೇ ಆದ ಸ್ವಂತ ತಂಡ ಕಟ್ಟಿಕೊಂಡು ನಾಡಿನುದ್ದಕ್ಕೂ ಈ ಕಲೆಯನ್ನು ಮುಂದುವರಿಸುತ್ತಿರುವ ಇವರು ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ, ಜಾನಪದ ಸಂಶೋಧನಾ ಕೇಂದ್ರದಿಂದ ದೊಡ್ಡಾಟ ಉತ್ಸವದಲ್ಲಿ ಗೌರವ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನಿಂದ ಜಾನಪದ ಲೋಕ ಪ್ರಶಸ್ತಿಗಳು ಇವರಿಗೆ ಸಂದಿವೆ. ಇವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.