ಕಳ್ಳಿಗಿಡವಾದ ‘ಸಗುವಾರೊ’ ಅಮೆರಿಕದ ಅರಿಜೊನಾ ರಾಜ್ಯದಲ್ಲಿ, ಅಲ್ಲಿನ ಶುಷ್ಕ ಭೂಮಿಯಲ್ಲಿ ಸ್ಮಾರಕಗಳಂತೆ 15 ಮೀಟರ್ಗೂ ಎತ್ತರಕ್ಕೆ ಬೆಳೆದು ನಿಲ್ಲುತ್ತದೆ. ಅದರ ಕಾಂಡವು ಕವಲೊಡೆಯಬೇಕಾದರೆ 75 ವರ್ಷಗಳೇ ಬೇಕು. ಶುಷ್ಕನೆಲದ ಒಂದು ಹನಿ ನೀರೂ ಬಿಡದಂತೆ ಸೆಳೆಯಲು ಒಂದು ತಾಯಿಬೇರು ಮತ್ತು ಪುಷ್ಟವಾದ ಕವಲು ಬೇರುಗಳಿರುತ್ತವೆ. ಇದಲ್ಲದೆ ಇನ್ನೂ ಚಿಕ್ಕ ಬೇರುಗಳು ಇರುತ್ತವೆ. ಇವೆಲ್ಲವೂ ಸೇರಿ ಸುಮಾರು ಸುತ್ತಲೂ 30 ಮೀ.ನಷ್ಟು ಹರಡಿಕೊಂಡು ಪ್ರತಿ ಹನಿ ನೀರನ್ನೂ ಸೆಳೆದುಕೊಳ್ಳುತ್ತವೆ. ಎಲೆಗಳೇ ಇಲ್ಲದ ಈ ಸಸ್ಯದ ಕಾಂಡವೇ ಆ ಕಾರ್ಯವನ್ನು ನಿರ್ವಹಿಸುತ್ತದೆ. ಒಂದು ಸಗುವಾರೊ 6 – 7 ಟನ್ ನೀರನ್ನು ಹಿಡಿದಿಟ್ಟುಕೊಳ್ಳಬಲ್ಲದು. ಅಂದರೆ 2 ವರ್ಷಕಾಲ ನೀರಿನ ಬರವಿದ್ದರೂ ಗಿಡ ಬದುಕಬಲ್ಲದು. ಹಲವು ಶತಮಾನಗಳು ಬದುಕುವ ಈ ಕಳ್ಳಿಗಿಡದಲ್ಲಿ ಅಪರೂಪಕ್ಕೆ ಹೂವು ಬಿಡುತ್ತದೆ. ಅದು ಆಮೇಲೆ ‘ಸೇಬು’ ಹಣ್ಣಿನಂತಹ ಹಣ್ಣಾಗಿ, 40 ಮಿಲಿಯ ಬೀಜಗಳನ್ನು ಕೊಡುತ್ತದೆ. ಆದರೆ ಅದರಲ್ಲಿ ಹದವಾಗಿ ಬಲಿತು ಮತ್ತೆ ಬೆಳೆಯಬಲ್ಲ ಬೀಜಗಳ ಸಂಖ್ಯೆ ಕೇವಲ 3 ಅಥವಾ 4!
ಸಗುವಾರೊ – ದೈತ್ಯ ಕಳ್ಳಿ ಗಿಡ
By kanaja|2011-04-03T22:56:26+05:30March 23, 2011|ಬಾಲವಿಜ್ಞಾನ ಮಾಸ ಪತ್ರಿಕೆ - ಪೆಬ್ರವರಿ ೨೦೧೧, ಬಾಲವಿಜ್ಞಾನ ಮಾಸ ಪತ್ರಿಕೆ ಕರಾವಿಪ ಪ್ರಕಟಣೆ, ಮ್ಯಾಗಜಿನ್ಗಳು, ವಿಜ್ಞಾನ|0 Comments
Leave A Comment