ಸುಂದರವಾದ ವಸ್ತು ಸದಾ ಆನಂದದಾಯಕ ಹೊಳಪು ನೀಡಿದ ಚೀನಿ ಪಿಂಗಾಣಿ ಪದಾರ್ಥ ಅಥವಾ ಡ್ರೆಸ್ಡೆನ್ ಹೂದಾನಿ (ಪುಷ್ಪಕರಂಡಕ) ವರ್ಣನಾತೀತ ಆನಂದ (ಮುದ) ನೀಡುತ್ತದೆ.

ಕಲಾಕೃತಿಗಳ ಪೈಕಿ ಹೆಚ್ಚಿನವುಗಳಲ್ಲಿ ಸರ್ವೆ ಸಾಮಾನ್ಯವಾಗಿರುವ ಏಕೈಕ ಗುಣ ಯಾವುದು ಎಂದು ಯಾರಾದರೂ ಈಗ ಪ್ರಶ್ನಿಸಬಹುದು. ಸರಿ ಸೌಂದರ್ಯವು ವೀಕ್ಷಿಸುವವರ ಮನಸ್ಸಿನಲ್ಲಿ ಅಡಗಿರುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಜನಾಂಗದಿಂದ ಜನಾಂಗಕ್ಕೆ ಸ್ಥಳದಿಂದ ಸ್ಥಳಕ್ಕೆ ಮತ್ತು ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ವ್ಯತ್ಯಯಗೊಳ್ಳುತ್ತದೆ. ಇದೇ ಮಾನವನ ಸೃಜನಾತ್ಮಕತೆಯಲ್ಲದಕ್ಕೆ ಸ್ಪೂರ್ತಿ.

ಪ್ರಕೃತಿಯ ಸೌಂದರ್ಯವಲ್ಲದೆ ಮತ್ತೇನೂ ಅಲ್ಲ. ವಿವಿಧ ರೂಪಗಳಲ್ಲಿ ಪ್ರಕಟಗೊಂಡ ಹೊಸ ಹೊಸ ಧಾರ್ಮಿಕ ಅರ್ಥೆಗಳನ್ನು ನೀಡುತ್ತ ಬಹುಮಟ್ಟಿಗೆ ಮಾನವ ಜನಾಂಗ ಅನುಸರಿಸುವಂಥ ಮೌಲ್ಯಗಳನ್ನು ನೀಡುತ್ತದೆ. ಸೌಂದರ್ಯವು “ದೇವರು” ಅಥವಾ ಧರ್ಮವಾಗುತ್ತದೆ ಕಲೆಯು ವಾಸ್ತವವಾಗಿ, ಧರ್ಮದ ಆಳಾಗುತ್ತದೆ.

ನಟರಾಜ

ನಟರಾಜ ಸರ್ವೋತ್ಕೃಷ್ಟ ಸೃಷ್ಟಿಕರ್ತ (ಸೃಷ್ಟಿಶೀಲ). ಶಿವನ ನಾಟ್ಯದ ಪ್ರಮುಖ ಅಂಶ ಮೂರು ಮುಖ (ಮುಮ್ಮುಖ)ವಾದುದು. ಮೊದಲನೆಯದಾಗಿ ವಿಶ್ವದಲ್ಲಿ ಸಕಲ ಚಲನೆಗಳ ಮೂಲವಾಗಿ ಆತನ ಲಯಬದ್ಧ ಕ್ರೀಡೆಯ ಪ್ರತಿಮೆ. ಅದು ಇದನ್ನು ವೃತ್ತಖಂಡ (ಚಾಪ)ವು ಪ್ರತಿಬಿಂಬಿಸುತ್ತದೆ. ಎರಡನೆಯದಾಗಿ ಆತನ ನರ್ತನದ ಉದ್ದೇಶ ಮನುಷ್ಯರ ಅಸಂಖ್ಯಾತ ಆತ್ಮಗಳನ್ನು ಮೋಹಜಾಲದಿಂದ ಮೋಕ್ಷಗೊಳಿಸುವುದು. ಮೂರನೆಯದಾಗಿ ನರ್ತನ (ನಾಟ್ಯ)ದ ಸ್ಥಳ ಚಿದಂಬರಂ ವಿಶ್ವದ ಕೇಂದ್ರವಾಗಿದ್ದು, ಇದು ಹೃದಯದಲ್ಲಿಯೇ ಇದೆ. ನಮ್ರವಾದುದರಿಂದ ವಾಕ್ ಅಭಿವ್ಯಕ್ತಿಯ ಶಿವನ ನಾಟ್ಯದ ಕಲ್ಪನೆಯ ಮುಖ್ಯ ಚಿಂತನೆಯ ವಿಜ್ಞಾನ ಧರ್ಮ ಮತ್ತು ಕಲೆಗಳ ಸಂಯೋಗವಾಗಿದೆ. ಜೀವನದ ಜಟಿಲ ಅಂಶಗಳಿಗೆ ಪರಿಹಾರದ ವಾಸ್ತವತೆಯ ಕಲ್ಪನೆ (ಪ್ರತಿಮೆ) ನೀಡಿದೆ. ಇದು ಕೇವಲ ಒಂದು ಜನಾಂಗ ಅಥವಾ ಗುಂಪಿಗೆ ಮಾತ್ರವೇ ಸಮಾದಾನ ನೀಡುವಂಥ ಇಲ್ಲವೇ ಒಂದು ಶತಮಾನದ ಚಿಂತಕರಿಗೆ ಸ್ವೀಕಾರಾರ್ಹವಾದುದು ಮಾತ್ರವೇ ಆಗಿರದೆ ಎಲ್ಲಾ ಕಾಲಗಳ ಎಲ್ಲಾ ಶತಮಾನಗಳ ದಾರ್ಶನಿಕರು ಪ್ರೇಮಿಗಳು ಮತ್ತು ಕಲಾಕಾರರಿಗೆ ಪ್ರಿಯವಾಗುವಂಥ ಸಾರ್ವತ್ರಿಕ ಪರಿಹಾರ ಕಲ್ಪಿಸಿದೆ. ಜೀವನದಲ್ಲಿ ತಮ್ಮ ಅಂತದೃಷ್ಟಿಯ ನವ್ಯರೂಪಗಳಿಗೆ ಅಭಿವ್ಯಕ್ತಿ ನೀಡಲು ಸತತವಾಗಿ ಶ್ರಮಿಸಿರುವವರೆಲ್ಲರಿಗೂ ಈ ನಾಟ್ಯ ಪ್ರತಿಮೆ ಶಕ್ತಿ ಮತ್ತು ಲಾವಣ್ಯಗಳಲ್ಲಿ ಎಷ್ಟೊಂದು ಮಹತ್ತರವಾದುದಾಗಿ ಕಂಡಿರ(ಗೋಚರಿಸಿರ)ಬೇಕು.

ಮಾನವ ಸತ್ಯವೇ ಪರಮೊಚ್ಛ ಸತ್ಯ. ಅದಕ್ಕಿಂತ ಉನ್ನತ ಸತ್ಯ ಇನ್ನಿಲ್ಲ. ಇದೇ ಕಲೆಗಳ ಪರಮ ದೃಷ್ಟಿ. ಏಕೆಂದರೆ ಮಾನವ ಜೀವಿತದ ದ್ವಂದ್ವ ಸಮಸ್ಯೆಗಳನ್ನು ಎದುರಿಸುತ್ತಾರೆ. ಒಂದು ತನ್ನ ಭಾವನೆಗಳಿಂದ ಉದ್ಭವಿಸುವಂತವು ಮತ್ತೊಂದು ಬಾಹ್ಯ ಪ್ರಪಂಚದ ಒತ್ತಡಗಳಿಂದ ಉಂಟಾಗುವಂಥವು “ಬಾಹ್ಯವನ್ನು ತೆರೆದ ನೇತ್ರಗಳಿಂದ ಮತ್ತು ಒಳಗಣವನ್ನು ಮುಚ್ಚಿದ ನೇತ್ರಗಳಿಂದ ವೀಕ್ಷಿಸುವನು”.

ವರ್ಣ ಚಿತ್ರಗಾರರಿಗೆ ತನ್ನದೇ ಆದ ದೃಷ್ಟಿಕೋನವಿದೆ. ವಾಸ್ತುಶಿಲ್ಪಗೆ ರಚಿಸಲು ತನ್ನದೆ ಆದ ಜ್ಯಾಮಿತೀಯ ಪರಿಕಲ್ಪನೆಯಿದೆ. ಸಂಗೀತಗಾರನಿಗೆ ತನ್ನದೇ ಆದ ಮಾಧುರ್ಯ ಮತ್ತು ಲಯಗಳಿವೆ. ನೃತ್ಯಗಾರನಿಗೆ (ನರ್ತಗಾರ್ತಿಗೆ) ತನ್ನದೆ ಆದ ಭಾವಗಳು ಮತ್ತು ಚಲನೆಗಳಿವೆ. ಕವಿಗೆ ತನ್ನದೇ ಆದ ಕಲ್ಪನಾಲಹರಿಯಿದೆ. ಕೆಲಸಗಾರನಿಗೆ ತನ್ನದೇ ಆದ ರೂಪ ವಿನ್ಯಾಸಗಳಿವೆ. ಇವೆಲ್ಲ ಸಾರ್ವತ್ರಿಕವಾದ ಕಲಾತ್ಮಕ ಭಾವನೆಯಿಂದ ನಿಯಂತ್ರಿತವಾಗಿದೆ. ಇದೇ ಸೌಂದರ್ಯದ ಸ್ತುತಿಯಾಗಿದೆ.

ರಸ ಪ್ರತಿಕ್ರಿಯೆ (ಸೌಂದರ್ಯ ಪ್ರತಿಕ್ರಿಯೆ)

ಭಾರತೀಯ ಕಲೆಯ ಮೂಲಭೂತವಾದ ಮತ್ತು ಗಾಢವಾದ ಅಂಶವೆಂದರೆ ರಸದ ಪರಿಕಲ್ಪನೆಯೇ ಆಗಿದೆ.

ಭಾರತೀಯ ನಾಟ್ಯ ಪರಂಪರೆಯಂತೆ:

ಯಥೋ ಹಸ್ತತಥೋ ದೃಷ್ಟಿ ಯಥೋ ದೃಷ್ಟಿ ತಥೋ ಮನಃ
ಯಥೋ ಮನಃ ತಥೋ ಭಾವ ಯಥೋ ಭಾವ ತಥೋ ರಸಃ

ಕೈಗಳ (ಹಸ್ತ) ಎಲ್ಲಿ ಹೋಗುತ್ತವೋ ದೃಷ್ಟಿಯೂ ಅಲ್ಲಿಯೇ ಸಾಗುತ್ತದೆ. ದೃಷ್ಟಿ ಸಾಗಿದೆಯೇ ಮನವೂ ಸಾಗುತ್ತದೆ ಅತ್ತಲೆ ಭಾವವೂ ಸಾಗುತ್ತದೆ ಅಲ್ಲಿಯೇ ರಸವೂ ಉದಯಿಸುತ್ತದೆ.

“ರಸವನ್ನು” ಸೌಂದರ್ಯಾತ್ಮಕ ಲಕ್ಷಣ (ಅಂಶ)ದಲ್ಲಿ ಅನಿಸಿಕೆ ಅಥವಾ ಭಾವನೆಯೆಂದೂ ಭಾವವನ್ನು ಭಂಗಿ ಅಂಗಾಂಗ ಚಲನೆ ಇತ್ಯಾದಿಗಳು ಸೇರಿದಂತೆ “ರಸ”ಕ್ಕೆ ಸೂಕ್ತವಾದ ಮತ್ತು ಸುಸಂಗತವಾದ ರಸವನ್ನು ಮೂಡಿಸುವಂತವೆಂದೂ ವಿವರಿಸಬಹುದು.

ನವರಸಗಳು ಮುಖ್ಯವಾದುವು: ಶೃಂಗಾರ ವೀರ ಕರುಣ ಅದ್ಭುತ ರೌದ್ರ ಹಾಸ್ಯ ಭಯಾನಕ ಭೀಬತ್ಸ ಮತ್ತು ಶಾಂತ.

ನೃತ್ಯಗಾರ್ತಿ ತನ್ನ ಪಾತ್ರದೊಡನೆ ತಾದಾತ್ಮತೆ ಪಡೆಯುವಳು. ಈ ತಾದಾತ್ಮ್ಯತೆ ಪರಿಪೂರ್ಣವಾಗುವ ಮಟ್ಟಿಗೆ ಆಕೆ ನೃತ್ಯಗಾರ್ತಿಯಾಗಿ ಯಶಸ್ಸುಗಳಿಸುವಳು ಸಮಚಿತ ಭಾವದ ಅಭಿವ್ಯಕ್ತಿಯ ಮೂಲಕ ಸೂಕ್ತ ರಸಾಭಿವ್ಯಕ್ತಿಯಲ್ಲಿ ಸಫಲಳಾಗಿರುವಳು. ನೃತ್ಯಗಾರ್ತಿಯೇ ರಸವನ್ನು ಪರಿಗ್ರಹಿಸದಿರುವವರೆವಿಗೆ ಶೋತೃ (ಪ್ರೇಕ್ಷಕರು) ರಸವನ್ನು ಪರಿಗ್ರಹಿಸಲಾರರು. ನೃತ್ಯಗಾರ್ತಿ ಅದನ್ನು ಅಭಿವ್ಯಕ್ತಿಸುವುದಿಲ್ಲ. ಅದರ ಬಗ್ಗೆ ಕೇವಲ ಸೂಚಿಸುವಳು ಆಕೆ. ತಾನೇ ಪರಿಗ್ರಹಿಸಿದ್ದರೆ ಮಾತ್ರವೇ ಆಕೆ ಅದರ ಬಗ್ಗೆ ಸೂಚಿಸಬಲ್ಲಳು.

ರಸವು ಪ್ರೇಕ್ಷಕ ಅನುಭವಿಸಿದ : ಆನಂದಿಸಿದ ಸ್ಮಾಯೀಬಾವ ಅನುಭವವಾಗುತ್ತದೆ. ಈ ಭಾವನೆಗಳು ನಾಟ್ಯದಲ್ಲಿ ಮಾತ್ರವೇ ಇದೆ. ಇವು ಪ್ರಾಪಂಚಿಕ (ಲೌಕಿಕ) ಅನುಭವದಲ್ಲಿ ಇಲ್ಲ ಎಂದಂತಾಯಿತು. ಅದು ಅಲೌಕಿಕ ಅನುಭವ ಅದು ಕಲಾಕಾರ ಕಲ್ಪಿಸಿಕೊಂಡಂಥ ಕಲ್ಪನೆಯ ವಲಯಕ್ಕೆ ಸೇರಿದುದು.

“ಪ್ರತಿಭೆ” ಅಥವಾ ಕವಿಕಲ್ಪನೆಯ ಸೌಂದರ್ಯ ಸೃಷ್ಠಿ (ರಸಸೃಷ್ಟಿ)ಯೂ ಮೂಲ ಕಾರಣ (ಪ್ರತಿಭೆ ಮತ್ತು ರಸಗಳ ನಡುವಣ ಸಂಬಂಧವನ್ನು ಸೂಚಿಸಿ) ಇದರ ಬಗ್ಗೆ ಭಾರತೀಯ ಆಲಂಕಾರಿಕರು ಅನಾದಿ ಕಾಲದಿಂದ ವಿಶೇಷ ಒತ್ತು ನೀಡಿರುವರು. ರಸ ಚಿತ್ರಣ (ನಿರೂಪಣೆಯೇ) ಸಕಲ ಕಲಾತ್ಮಕ ಸೃಷ್ಟಿಗಳ ಗುರಿ ಮತ್ತು ಸಾಧನೆ ಎಂದು ಭರತಮುನಿ ಪ್ರಕಟಿಸಿರುವನು.

ರಸವು ಕಲಾತ್ಮಕ ಸೃಷ್ಟಿಯಿಂದ ಉಂಟಾಗುತ್ತದೆ. ಆ ಸೃಷ್ಟಿಗೆ ಸೃಜನೆಗೆ “ಪ್ರತಿಭೆ” ಯೊಂದೇ ಮುಖ್ಯವಾಗಿ ಹೊಣೆ. ಕ್ರೌಂಚಪತಿಯ ಕರುಣಾಕ್ರಂದನ ಗಮನಿಸಿದ ಮೊತ್ತಮೊದಲ (ಆದಿ) ಕವಿ ವಾಲ್ಮೀಕಿಯ ಕಲ್ಪನಾತ್ಮಕ ಶಕ್ತಿಗಳಿಂದ ಅದು ಅಭಿವ್ಯಕ್ತಗೊಂಡಿದೆ. ಇದು ಆತನ ಪರಿಗ್ರಹಣದ ಅನುಭವ ಆನಂತರ ಆತ ತನ್ನ ಅನುಭವವನ್ನು ಕಲ್ಪನೆಯನ್ನಾಗಿ ಪರಿವರ್ತಿಸಿದ. ಅದು ಆತನಲ್ಲಿ ಕರುಣ ರಸದ ಮೂಲಗುಣವನ್ನು ಪ್ರಚೋದಿಸಿತು. ಅಂತಹ ತೀವ್ರ ಭಾವನಾತ್ಮಕ ಕ್ಷಣದಲ್ಲಿ ಆತ ತತ್‌ಕ್ಷಣ ಶ್ಲೋಕರೂಪ ನೀಡಲಾರಂಭಿಸಿದ. ಆನಂತರ ಆತ ತನ್ನ ರಾಮಾಯಣದಲ್ಲಿ ಕರುಣರಸ ಪ್ರತಿಪಾದಿಸಿದ ಹಾಗಾಗಿ ಪ್ರತಿಭೆ ಎಂಬುದು ಕಲಾಕಾರರು ಹಾಗೂ ಪ್ರತಿಭಪೋಷಕರಿಬ್ಬರಲ್ಲಿಯೂ ಇರುವಂತಹ ಲಕ್ಷಣವಾಗಿದೆ.

ನಮ್ಮ ಕಲಾಕಾರರ ಕರ್ತವ್ಯ (ಕಾರ್ಯ)ವೆಂದರೆ ತಮ್ಮ ಪ್ರತಿಭೆಯ ಮೂಲಕ ಹೊಸ ಪ್ರಪಂಚವೊಂದನ್ನು ಸೃಜಿಸಿ ಆನಂತರ ತನ್ನ ರಚನೆ ಶಕ್ತಿದಾಯಕವಾಗುವಂತೆ ಮಾಡುವುದಾಗುತ್ತದೆ ಎಂದರೆ ವಾಸ್ತವತೆಯ ಪ್ರಪಂಚವನ್ನು ಆದರ್ಶಮಯದ್ದನ್ನಾಗಿ ಪರಿವರ್ತಿಸುವುದು. ಈ ಪರಿವರ್ತನೆ ಸೃಜನಾತ್ಮಕ ಕಲ್ಪನೆಯಿಂದ ಸಾಧ್ಯ. ಅಂತಹ ಪರಿವರ್ತನೆ ಕಲಾಕಾರನ ವಿಶಿಷ್ಟ ಶಕ್ತಿಯಾಗುತ್ತದೆ. ಕಲಾತ್ಮಕ ನಾವೀನ್ಯತೆಗೆ ಪ್ರತಿಭೆಯೇ ಅತ್ಯಂತ ಮುಖ್ಯ ಕಾರಣ. ಇದು ರಸಾನುಭವವನ್ನು ಉಂಟು ಮಾಡುತ್ತದೆ. ಪ್ರತಿಭೆ ಮತ್ತು ರಸ ಇವುಗಳ ನಡುವಣ ಸಂಬಂಧ ಕಾರ್ಯ ಕಾರಣ ಸಂಬಂಧವಾಗಿರುತ್ತದೆ.

ನಮ್ಮ ದಾರ್ಶನಿಕರು ಅಲಂಕಾರಿಕರು ಮತ್ತು ನಾಟ್ಯಾಚಾರ್ಯರು ಏನೇ ಅಭಿವ್ಯಕ್ತಿಪಡಿಸಿರಲಿ ನಾವು ಬೇರೆ ಬೇರೆ ರೀತಿಗಳಲ್ಲಿ ಅನುಭವ ಗಳಿಸುತ್ತೇವೆ ಎಂಬುದು ದೃಢವಾದ ಅಭಿಪ್ರಾಯವೇ ಆಗಿರುತ್ತದೆ.

ನಮ್ಮ ಸಾಂಸ್ಕೃತಿಕ ಪರಂಪರೆ

ಒಂದು ರಾಷ್ಟ್ರವನ್ನು ಅದು ಜನ್ಮನೀಡುವಂಥ ಸಂಗೀತ ಚಿತ್ರಕಲೆ, ಶಿಲ್ಪಕಲೆ, ಕಾವ್ಯ ಮತ್ತಿತರ ಸೃಜನಾತ್ಮಕ ಭಾವನೆಗಳು ಮತ್ತು ವಸ್ತುಗಳಿಂದ ಗಮನಿಸಲಾಗುತ್ತದೆ. ಭಾರತ ವಿಪುಲ ವೈವಿಧ್ಯಮಯ ದೇಶ ಆದಾಗ್ಯೂ ಅತ್ಯದ್ಭುತವಾದ ಏಕತೆಯೂ ಇದೆ. ಇಲ್ಲಿ ಕಲೆಯೆಂಬುದು ಸೌಂದರ್ಯದ ಕಲ್ಪನೆಯಲ್ಲಿ ಸತ್ಯದ ಅಭಿವ್ಯಕ್ತಿಯಾಗಿದೆ. ನಮ್ಮಲ್ಲಿ ಶ್ರೀಮಂತವಾದ ಸಾಂಸ್ಕೃತಿಕ ಹಾಗೂ ಕಲಾತ್ಮಕ ಪರಂಪರೆಯೆ ಇದೆ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಸಾಹಿತ್ಯ ಸಂಗೀತ ಮತ್ತು ನಾಟ್ಯ ಇವು ಸದಾಕಾಲ ನಮ್ಮ ಸಂಸ್ಕೃತಿಯ ಸಾರಭೂತ ಲಕ್ಷಣಗಳ ಸಂಕೇತಗಳಾಗಿದ್ದವು.

ಭಾರತೀಯ ಕಲೆಗಳನ್ನು ಸಮಗ್ರವಾಗಿ ಪರಿಗಣಿಸಿದಾಗ ಅವು ತಮ್ಮ ಮೂಲ ಲಕ್ಷಣಗಳಿಂದ ವಿಚಲಿತವಾಗಿರುವ ಅಂಶವೇನು ಕಂಡು ಬರುವುದಿಲ್ಲ. ಬಾಹ್ಯ ಪ್ರಭಾವಗಳ ಒತ್ತಡವುಂಟಾಗಿರುವ ಸಂದರ್ಭಗಳಲ್ಲಿ ಅದು ತನ್ನ ಆಂತರಿಕ ಸೌಂದರ್ಯ ಮತ್ತು ಸಮಗ್ರತೆಯನ್ನು ಉಳಿಸಿಕೊಂಡಿರುವ ಸಂದರ್ಭದಲ್ಲಿಯೇ ಸ್ವಾಂಗೀಕರಣಗೊಳಿಸಿಕೊಂಡು ಅದ್ಭುತ ಸಾಮರ್ಥ್ಯವನ್ನು ಪ್ರದರ್ಶಿಸಿದೆ. (ತನ್ನ ಕ್ಷೇತ್ರಕ್ಕೆ ಅಪರಿಚಿತವಾಗಿರುವಂಥವನ್ನು ಕೂಡ ತನ್ನ ಕ್ಷೇತ್ರಕ್ಕೆ ಸೆಳೆದುಕೊಂಡು ಬಿಟ್ಟಿದೆ) ಧಾರ್ಮಿಕ ಹಾಗೂ ಪಂಥ ವೈವಿಧ್ಯಗಳ ನಡುವೆ ಬಲಿಷ್ಠ ಬಂಧಿಕಾರಕ ಶಕ್ತಿಯಾಗಿ ಕಲೆ ಕಾರ್ಯ ಪ್ರವೃತ್ತವಾಗಿದೆ. ಭಾರತೀಯ ಜೀವನದ ಮೂಲಭೂತ ಏಕತೆಯನ್ನು ಅದು ಒಳಗೊಂಡಿದೆ.

ಭಾರತದ ಕಲೆಗಳು-ಅದರಲ್ಲಿಯೂ ವಿಶೇಷವಾಗಿ ನೃತ್ಯ ಮತ್ತು ಸಂಗೀತದ ಪ್ರದರ್ಶಕ ಕಲೆಗಳು “ಗುರುಕುಲ” ಪದ್ಧತಿಯಿಂದ ಪೀಳಿಗೆಯಿಂದ ಪೀಳಿಗೆಗೆ ಸಾಗಿಬಂದಿರುವ ಕಾರಣದಿಂದಲೇ ಇಂದಿಗೂ ಉಳಿದುಕೊಂಡು ಬಂದಿವೆ. ಗತಕಾಲದ ಗುರುಶಿಷ್ಯ ಪರಂಪರೆಯನ್ನು ಪಾಲಿಸಿಕೊಂಡು ಬರಬೇಕು ಮತ್ತು ಅದನ್ನು ಮುಂದಿನ ಪೀಳಿಗೆಗಳಿಗೆ ಮುಂದುವರೆಸಿಕೊಂಡು ಹೋಗಬೇಕು.

ಇಂಗ್ಲೀಷ್ ಸಾಹಿತ್ಯದಲ್ಲಿ ವರ್ಲ್ಡ್ಸವರ್ತ್ ಶ್ರೇಷ್ಠ ಪ್ರಕೃತಿಕವಿ ರಡ್ಸ್. ಆತ ಕಲಾರಸಭಾವ ಶೂನ್ಯತೆಗೆ ಖ್ಯಾತವಾಗಿರುವ ಮಾನವನ ಬಗ್ಗೆ ಈ ರೀತಿ ಹೇಳಿದ್ದಾನೆ.

“ನದಿಯ ದಡೆಯಲ್ಲಿ ಪ್ರೀಂರೋಸ್ ಪುಷ್ಟಗಳು ತುಂಬಿವೆ

ಹಳದಿಯ ಪ್ರೀಂರೋಸ್ ಅವನಿಗೆ

ಕೇವಲ ಅಷ್ಟೇ ಆಗಿದ್ದವಲ್ಲದೆ ಮತ್ತೇನೂ ಆಗಿರಲಿಲ್ಲ”

ಇದೇ ಪರಿಪೂರ್ಣ ಕಲಾಪ್ರತಿಕ್ರಿಯೆಯ ವ್ಯಾಖ್ಯೆಯಾಗಿರುವಂತೆ ತೋರುತ್ತದೆ.

ಕಲಾತ್ಮಕ (ರಸಾವಿಜ್ಞಾನ) ಅನುಕ್ರಿಯೆ ತನಗೆ ತಾನೇ ಸಾಕು ಸದ್ಗುಣದಂತೆ ಅದಕ್ಕೆ ತನ್ನದೇ ಆದ ಪ್ರತಿಫಲವಿದೆ. ಅದು ಕಾಣ್ಕಿಯ ಒಂದು ಬಗೆ. ರಸವಿಜ್ಞಾನ ಅನುಕ್ರಿಯೆಯಲ್ಲಿ ವ್ಯಕ್ತಿ ಒಂದು ವಸ್ತುವನ್ನಷ್ಟೆ ನೋಡುವುದಿಲ್ಲ. ಅದನ್ನು ಗಮನಿಸುತ್ತಾನೆ. ಅದರ ಅಸ್ತಿತ್ವ ಪರಿಶುದ್ಧ ಆನಂದವನ್ನಲ್ಲದೆ ಮತ್ತೇನನ್ನೂ ಆತ ಅರಸುವುದಿಲ್ಲ.

ಕೀಟ್ಸ್ ಈ ಗುಣವನ್ನು ತನ್ನ “ಓಡ್ ಆಫ್ ಎ ಗ್ರೀಷಿಯನ್ ಆರ‍್ನ ನಲ್ಲಿ ಬಳಸಿದ್ದಾನೆ. ಸೌಂದರ್ಯವೊಂದೇ ವಾಸ್ತವ ಜೀವನವು ಪಡೆದಿರುವಂತ ಶಾಶ್ವಕತೆಯ ಗುಣ ಸೌಂದರ್ಯಕ್ಕಿದೆ.

ಕೀಟ್ಸ್ ಈ ಮುಂದಿನ ಮಾತುಗಳನ್ನು ಹೇಳಿದಾಗ ಅನೇಕ ಧೀಮಂತರು ಹೌದೆಂಬಂತೆ ತಲೆದೂಗಿದರು.

“ಸೌಂದರ್ಯವೇ ಸತ್ಯ ಸತ್ಯ
ಸೌಂದರ್ಯ ಇವು ನೀನು
ಈ ಜಗದಿ ಅರಿಯಬೇಕು
ಇವಿಷ್ಟೇ ನೀನು ಅರಿಯಬೇಕಾದುದು”

ನಮ್ಮ ಎಲ್ಲಾ ಕಲೆಗಳಿಗೆ ಸಂಸ್ಕಾರದ ಆಧಾರವಿದೆ. “ಗುರುಕಲ್ಪನೆ” ದೈವಿಕವಾದುದರಲ್ಲಿ ಆಶ್ಚರ್ಯವೇನಿಲ್ಲ. ಕಲೆಯ ವಿವಿಧ ಮುಖಗಳು ಸಿದ್ಧಾಂತ ಅಭ್ಯಾಸ ರಸಾಭಿಜ್ಞಾನ ಮತ್ತು ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಗಳ ಬಗ್ಗೆ ಬೋಧಿಸುವವನೇ ಆತನಾಗಿರುತ್ತಾನೆ.

ಎಲ್ಲಾ ಕಲೆಗಳು – ಅವು ದೃಶ್ಯ ಅಥವಾ ಪ್ರದರ್ಶಕವಾಗಿರಲಿ-ಸ್ಥಾಯಿಯಾಗಿಯೂ ಕಟ್ಟುನಿಟ್ಟಾಗಿ ಧಾರ್ಮಿಕವಾದುವಾಗಿಯೂ ಇರಲಾರವು. ಅವು ಇರುವ ಕ್ಷೇತ್ರಗಳಲ್ಲಿನ ಮಾರ್ಗ ಶೈಲಿಗಳು ತಂತ್ರ ಮತ್ತು ರೂಪಗಳ ವಿಶಾಲ ದೃಷ್ಟಿಯಲ್ಲಿ (ಸರ್ವವ್ಯಾಪಕತೆ) ಬದಲಾವಣೆಗೊಳ್ಳುತ್ತವೆ. ಬದಲಾವಣೆಯ ಪ್ರಚೋದನೆ: ಪ್ರೇರಣೆಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳಿಂದ ಮತ್ತು ಪೋಷಕ (ಪ್ರೋತ್ಸಾಹ) ವ್ಯವಸ್ಥೆಯಿಂದ ಉಗಮಗೊಳ್ಳುತ್ತವೆ. ಆದರೆ ನಮ್ಮ ದೇಶದಲ್ಲಿ ಅವುಗಳ ಮೂಲಾಂಶಗಳಿಂದ ಅವು ಎಂದಿಗೂ ವಿಚಲಿತವಾಗಿಲ್ಲ.

ದೇವಾಲಯ (ಆಧ್ಯಾತ್ಮಿಕ)ದಿಂದ ರಾಜರ ಆಸ್ಥಾನಕ್ಕೆ ಅಲ್ಲಿಂದ ಆಧುನಿಕ ಪ್ರೊಸೇನಿಯಂ ರಂಗ ದೂರದರ್ಶನದವರೆವಿಗೆ ಅವುಗಳ ವಿಕಾಸವೂ ಪ್ರಗತಿಪರವಾದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಶಾಸ್ತ್ರೀಯ ಪಾವಿತ್ರ ಕೆಲಮಟ್ಟಿಗೆ ಕಳೆದು ಹೋಗಿರುವುದು ಉಂಟು. ಇಲ್ಲಿ ಬಹುಮಟ್ಟಿಗೆ ಪ್ರದರ್ಶಕ ಕಲೆಯಾಗಿರುವಂಥ ಸಂಗೀತ ನಾಟ್ಯ ನಾಟಕ ಅಥವಾ ಜಾನಪದವೇ ಇರಲಿ ಈ ಎಲ್ಲಾ ಕಲೆಗಳ ಮೂಲಾಂಶಗಳನ್ನು ಭರತನ “ನಾಟ್ಯಶಾಸ್ತ್ರ” ಮತ್ತು ಸಾರಂಗದೇವನ ಸಂಗೀತ ರತ್ನಾಕರದಂತ ಪ್ರಾಚೀನ ಮಹಾನ್ ಕೃತಿಗಳಲ್ಲಿ ಗುರುತಿಸಲಾಗಿದೆ. ಹಾಗಾಗಿ ಮೂಲಗಳೆಲ್ಲ (ಬೇರು) ಒಂದೇ ಆದರೂ ಶಾಖೆಗಳು ಭಿನ್ನಭಿನ್ನವಾಗಿವೆ. ಉತ್ತಮವಾದ ಪರ್ಣರಾಶಿ ಹಾಗೂ ವೈವಿಧ್ಯಮಯ ವರ್ಣಭರಿತ ಪುಷ್ಟಗಳನ್ನು ನೀಡುತ್ತೇವೆ. ಕರ್ನಾಟಕ ಮತ್ತು ಹಿಂದೂಸ್ತಾನೀ ಹೀಗೆ ಸಂಗೀತದಲ್ಲಿ ಎರಡು ಪರಂಪರೆಗಳು (ಶಾಖೆ) ಇವೆ. ಭರತನಾಟ್ಯ ಕಥಕ್ ಮಣಿಪುರಿ ಒಡಿಸ್ಸೀ ಕಥಕ್ಕಳಿ ಕೂಚಿಪುಡಿ ಮೋಹಿನಿಆಟ್ಟಂ ಮತ್ತು ಜಾನಪದ ಪ್ರಕಾರದ ಹಲವು ನೃತ್ಯಗಳಿವೆ ಎಲ್ಲಾ ಪ್ರಾದೇಶಿಕ ವೈವಿಧ್ಯಗಳನ್ನು ಕಾಲದಿಂದಲೂ ರಾಜರುಗಳು ಹಾಗೂ ಅವರ ಬಂಧುಗಳು ಪ್ರತಿಪಾದಿಸಿದ್ದಾರೆ. ಪ್ರಸಾರ ಮಾಡಿದ್ದಾರೆ ಮತ್ತು ಪೋಷಿಸಿದ್ದಾರೆ.

ಉತ್ತರದ ಕಥಕ್ ಮಣಿಪುರಿ ಮತ್ತು ಒಡಿಸ್ಸಿಗಳನ್ನು ದಕ್ಷಿಣದ ಭರತನಾಟ್ಯ ಕೂಚಿಪುಡಿ ಮತ್ತು ಕಥಕ್ಕಳಿಗಳೊಡನೆ ಸಂಯೋಗಗೊಳಿಸುವ ಪ್ರಯತ್ನಿಗಳಿಗೆ ಯಾವುದೇ ಅರ್ಥವಿಲ್ಲ. ಇದರಿಂದ ಅಂತಹ ಪ್ರಯೋಜನವೇನೂ ಇಲ್ಲ. ಈ ಪ್ರಕಾರಗಳ ಪೈಕಿ ಪ್ರತಿಯೊಂದಕ್ಕೂ ತನ್ನದೇ ಆದ ತಂತ್ರ ಭಾವಭಂಗಿ ಮತ್ತು ಲಯಗಳ ದೃಷ್ಟಿಯಿಂದ ವೈಶಿಷ್ಟತೆ ಪ್ರತ್ಸೇಕತೆ ಇದೆ.

ಸೋಲೋ ಎಲಿಮೆಂಟ್:

ನಾಟ್ಯಾಗಾರ್ತಿಯಾಗಿ ಮತ್ತು ಒಂದೇ ಶೈಲಿಯ ಪಾವಿತ್ರವನ್ನು ಪರಿಪಾಲಿಸಿಕೊಂಡು ಬರುವುದರಲ್ಲಿ ಗಾಢವಾದ ಒಲವುಳ್ಳವಳಾಗಿ ಮತ್ತು ಅವುಗಳ ಪೈಕಿ ಪ್ರತಿಯೊಂದರಲ್ಲೂ ಜೀವಮಾನವಿಡಿ ಪಡೆಯಬಹುದಾದ ಜ್ಞಾನರಾಶಿಯಿರುವುದರಿಂದಾಗಿ ಆಕಾಂಕ್ಷಿಗಳು ವಿವಿಧ ಶೈಲಿ (ಪ್ರಕಾರ)ಗಳಿಗಾಗಿ ಹಾತೊರೆಯಬಾರದು (ದುಂಬಾಲು ಬೀಳಬಾರದು). ಹಲವು ಕಸಬುಗಳ ಕಸಬುಗಾರ ಯಾವುದರಲ್ಲೂ ಪರಿಣತಿ ಸಾಧಿಸಲಾರ ಅಲ್ಲವೆ? ಅನಾದಿಕಾಲದಿಂದಲೂ ನಿರ್ವಹಣೆ ಮತ್ತು ಮಂಡನೆ ನಮ್ಮ ಪ್ರದರ್ಶಕ ಕಲೆಗಳ) ಅದರಲ್ಲಿಯೂ ವಿಶೇಷವಾಗಿ ನಾಟ್ಯ (ನೃತ್ಯ) ಮತ್ತು ಸಂಗೀತಗಳ ವಿಶಿಷ್ಟ ಲಕ್ಷಣವೆಂದರೆ ಅದು ಸೋಲೋ ಆಗಿರುವುದು. ನೃತ್ಯ ಅಥವಾ ಸಂಗೀತ ರಚನೆಗಳಲ್ಲಿ ವೈಜ್ಞಾನಿಕ ಕ್ರಮದಲ್ಲಿ ನಿಷ್ಟುಕೃವಾಗಿಯೂ (ಕಾರ್ಯ) ನಿರ್ವಹಣೆಯಲ್ಲಿ ವಿಶೇಷವಾದುದೂ ಆಗಿರುವುದರಿಂದ ತನಿ ಕಲಾಕಾರರಾಗಿಯೇ ಪ್ರದರ್ಶಿಸುವವರು ಅತ್ಯುನ್ನತವಾದ ಕಲಾಜ್ಞಾನ್ನತ್ಯಗಳಿಗೇರುವರು. ಹಾಗಾಗಿಯೇ ಏನೇ ಆಗಲಿ ಸಕಲಗುಣಗಳ ಸಮೇತ ಪ್ರದರ್ಶಕ ಕಲೆಗಳಲ್ಲಿ “ತನಿ ಅಂಶ”ವನ್ನು ಕಾಪಾಡಿಕೊಂಡು ಬರಬೇಕೆಂಬುದು (ಸಂರಕ್ಷಿಸಬೇಕು) ಎಂಬುದು ನನ್ನ ಕಳಕಳಿಯ ಕರೆಯಾಗಿದೆ.

ನಮ್ಮನಾಟ್ಯಕಲೆ ತುಂಬ ಶೈಲೀಕೃತವಾಗಿದೆ. ತಮ್ಮಮನಸ್ಸಿಗೆ ಬಂದಂತೆ ಅದನ್ನು ಎಂದಿಗೂ ಬದಲಾಯಿಸಕೂಡದು ಮತ್ತು ಮೊಟಕುಗೊಳಿಸಬಾರದು. ಹೆಚ್ಚೆಂದರೆ ಹಳೆಯದನ್ನು ಹೊಸ ಶೀರ್ಷಿಕೆಯಡಿ ಬೇರೆ (ಹೊಸ) ರೂಪದಲ್ಲಿಯಷ್ಟೇ ಮಂಡಿಸಬೇಕು. ವಸ್ತುವಿನ ದೃಷ್ಟಿಯಿಂದ ಮತ್ತು ಶೈಲಿಯ ದೃಷ್ಟಿಯಿಂದ ಕೆಲವು ಸುಧಾರಣೆಗಳು ಮತ್ತು ನಾವೀನ್ಯತೆಗಳನ್ನು ಅಲ್ಲಲ್ಲಿ ಸೇರಿಸೋಣ ಆದರೆ ತಂತ್ರವನ್ನು ಎಂದಿಗೂ ಬದಲಾಯಿಸಕೂಡದು.

(ನೃತ್ಯ ಬಂಧುಗಳು)

ನಮ್ಮ ನೃತ್ಯಗಳು ಎಲ್ಲಾ ವಸ್ತುಗಳನ್ನು ಬಹುಮಟ್ಟಿಗೆ ಭಾರತದ ಮಹಾಕಾವ್ಯಗಳು ಮತ್ತು ಪುರಾಣಗಳಿಂದಲೇ ತೆಗೆದುಕೊಂಡಿದ್ದೇವೆ. ಶ್ರೀಕೃಷ್ಣನೇ ಕೇಂದ್ರಬಿಂದುವಾಗಿದ್ದು, ಪ್ರಚಲಿತವಿರುವ ಎಲ್ಲಾ ನೃತ್ಯ ಶೈಲಿಗಳಲ್ಲಿ ವಿವಿಧ ಭಾಷೆಗಳಲ್ಲಿ ನೃತ್ಯ ರಚನೆಗಳನ್ನು ರಚಿಸಲಾಗಿದೆ. ಶ್ರೀಕೃಷ್ಣನನ್ನು ತುಂಟ ಬಾಲಕ ಕೆಣಕುವಂತ ಯುವಕ (ಮನಮೋಹಕ ಯುವಕ) ಮಾನವ ಜನಾಂಗದ ಸಂರಕ್ಷಕ ಎಂದು ಪರಿಗಣಿಸಲಾಗಿದೆ. ಆತನ ಗುಣದ ಅಂಶಗಳನ್ನು ಕೃಷ್ಣ ಪ್ರಸಂಗಗಳನೇಕವಲ್ಲಿ ವಿಷದವಾಗಿ ಚಿತ್ರಿಸಲಾಗಿದೆ.

ಭರತನಾಟ್ಯದಲ್ಲಿ ಕೃಷ್ಣನನ್ನು “ಕೃಷ್ಣ ನೀ ಬೇಗನೆ ಬಾರೋ” ಮತ್ತು “ಜಗದೊದ್ದಾರನಾ”ಗಳಲ್ಲಿ ವಿಶೇಷವಾಗಿ ಅಭಿನಯಿಸಲಾಗುತ್ತಿದೆ. ತಮಿಳಿನಲ್ಲಿ “ತಾಯೇ ಯಶೋದಾ ಉಂದಾನ್” ತೆಲುಗಿನಲ್ಲಿ “ಮದುರಾ ನಗರಿಲು” ಮತ್ತು ಸಂಸ್ಕೃತದಲ್ಲಿ ಜಯದೇವನ ಅಷ್ಟಪದಿಯಲ್ಲಿ ತೀವ್ರ ಪ್ರೇಮಿಯಾಗುತ್ತಾನೆ. ವಿವಿಧ ಪ್ರಾಂತ್ಯಗಳ ಕಲಾಕಾರರು ಶ್ರೀಕೃಷ್ಣನ ವೈವಿಧ್ಯಮಯ ವ್ಯಕ್ತಿತ್ವವನ್ನು ಚಿತ್ರಿಸುವಲ್ಲಿ ಎಲ್ಲಾ ಭಾಷೆ ಅಡೆತಡೆಗಳು ನಾಟ್ಯತಂತ್ರಗಳು ಮತ್ತು ಶೈಲಿಗಳನ್ನು ಮೀರಿ ಸ್ಪರ್ಧಿಸುವುದು ನಿಜಕ್ಕೂ ಆಶ್ಚರ್ಯಕರವೇ. ನೃತ್ಯದಲ್ಲಿ ಕಣ್ಣುಗಳು ಮತ್ತು ಕೈಗಳು (ಹಸ್ತ ಅಭಿನಯ ಮುದ್ರೆ) ಸಾಕಷ್ಟು ವರ್ಣಿಸಬಲ್ಲವಾದರೆ ಭಾಷೆಯ ಅಗತ್ಯವಾದರೂ ಏನಿದೆ.

ಕಲೆಗಾಗಿ ಕಲೆ

ಹಿಂದಿನ ಕಾಲದಲ್ಲಿ ಕಲಾಕಾರರು ತೀವ್ರ ಶ್ರದ್ದೆ ನಿಷ್ಟೆಗಳಿಂದ ತಮ್ಮ ಕಲೆಯಲ್ಲಿ ಪರಿಪೂರ್ಣತೆಗಾಗಿ ಶ್ರಮಿಸುತ್ತಿದ್ದರು. ಅವರು ತಮ್ಮ ಕಲೆಯನ್ನು ಆರಾಧಿಸುತ್ತಿದ್ದರು. ಅದೇ ಅವರ ಧರ್ಮವಾಗಿತ್ತು. ತಮ್ಮ ಕಲಾತ್ಮಕ ಅಭಿವ್ಯಕ್ತಿಯ ಮಾಧ್ಯಮದ ಮೂಲಕ ಜ್ಞಾನೋದಯವನ್ನು ಅರಸುತ್ತಿದ್ದರು. ಇದು ಎಲ್ಲಾ ನೈಜ ಕಲೆಗಳಲ್ಲಿ ಇದು ಹಿಂದೂವಾಗಿರಲಿ, ಗ್ರೀಕ್‌ಕರದಾಗಿರಲಿ, ದೃಶ್ಯವಾಗಿರಲಿ ಇಲ್ಲವೆ ಪ್ರದರ್ಶಕ ಕಲೆಯಲ್ಲಾಗಿರಲೀ ವ್ಯಾಪಿಸಿತ್ತು.

ಈವರೆವಿಗೆ ಕೇವಲ ಗುರಿಯಾಗಿ ಪರಿಣಮಿಸಿದ ಕಲೆಯು ಈ ಮುಂದೆ ಗುರಿಗೊಂದು ಸಾಧನವಾಯಿತು. ಕಲಾಕಾರ ಸೃಜನಾತ್ಮಕತೆಯ ಕೃತ್ಯ (ಕಾರ್ಯ)ದಲ್ಲಿ ಸದಾಕಾಲ ತೊಡಗಿದ್ದು ಈಗ ನಿರಂತವಾದ ಆಂತರಿಕ ಮಾನಸಿಕ – ಸಂಘರ್ಷಕ್ಕೆ ಸಿಲುಕಿದ್ದು ಇದು ಕೇವಲ ಆನಂದದ ತನ್ನ ಬಯಕೆಗಾಗಿರಬಹುದಾಗಿದೆ. ಇಲ್ಲವೆ ಆ ಕಾಲದ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ವಿಭಿನ್ನ ಸೌಂದರ್ಯಾಭಿರುಚಿಗಳನ್ನು ಪೂರೈಸುವುದಕ್ಕಾಗಿರಬಹುದು. ಹಾಗಾಗಿ ತನ್ನ ಪೋಷಕರನ್ನು ಸಂತೃಪ್ತಿಗೊಳಿಸಲು “ಕಸುಬಿನ ತಂತ್ರ”ಗಳನ್ನು ಅಭಿವೃದ್ದಿಪಡಿಸಿಕೊಂಡ ಸನ್ಯಾಸಿಮಠದಲ್ಲಿರುವ ಸನ್ಯಾಸಿ (ವಿರಕ್ತ)ಯಿಂದ ವ್ಯಕ್ತಿತ್ವದಿಂದ ತನ್ನ ಉಳಿವಿಗಾಗಿ (ಅಸ್ತಿತ್ವ)ಕ್ಕಾಗಿಯೇ ಶ್ರೇಷ್ಠ ಪ್ರದರ್ಶಕನಾಗಿ ಪರಿವರ್ತನೆಗೊಳ್ಳಬೇಕಾಯಿತು. ಹಾಗಾಗಿ ಕಲೆ, ವಾಣಿಜ್ಯ ಕೃತಗೊಂಡಿತು. ವೃತ್ತಿಪರನಾದ ಕಲಾಕಾರ ತನ್ನ ಕ್ಷೇತ್ರದಲ್ಲಿ ಹೊಸ ಪರಿಸರದಿಂದಾಗಿ ತನ್ನ ಪ್ರದರ್ಶನ ಶೈಲಿಯನ್ನು ಬದಲಾಯಿಸಬೇಕಾಯಿತು.

ಬಹುಮಟ್ಟಿಗೆ ಪ್ರದರ್ಶಕ ಕಲಾಕಾರ ಮತ್ತು ಶ್ರೋತೃ (ಪ್ರೇಕ್ಷಕ) ನಡುವಣ ಅನುವರ್ತನೆಯ ಸಂಬಂಧವೇ ಪ್ರದರ್ಶನದ ಯಶಸ್ಸಿಗೆ ಕಾರಣವಾಗುತ್ತದೆ. ಕೆಲವರು ಜನ್ಮತಃ ಕಲಾಕಾರರು. ಮತ್ತೇ ಕೆಲವರು ಕಲಾಕಾರರಾಗುತ್ತಾರೆ. ಆದಾಗ್ಯೂ ಅವರು ಸರ್ವೋತ್ಕೃಷ್ಟತೆಗೆ ಶ್ರಮಿಸುತ್ತಾರೆ. ಅಸಮಂಜಸ ಮಿಶ್ರಣದ ಶ್ರೋತೃಗಳನ್ನು ಸಂತೃಪ್ತಿಗೊಳಿಸಲು ಶ್ರಮಿಸುತ್ತಾರೆ. ಮತ್ತೊಂದು ಕರೆ ರಸಿಕರು ಗ್ರಹಣಸಾಮರ್ಥದ ಭಾವನೆಯಿಂದ ಸಂಪೂರ್ಣವಾಗಿ ಒಲಿದುಬಿಡುತ್ತಾರೆ.

ಗಾಂಧೀಜಿ ಹೇಳಿರುವ ಈ ಮಾತು ಎಷ್ಟೊಂದು ನಿಜವಾಗಿದೆ “ನನ್ನ ಮಟ್ಟಿಗೆ ಅತ್ಯಂತ ಶ್ರೇಷ್ಠ ಕಲಾಕಾರ ಅಥವಾ ರಸಜ್ಞ (ಸಾರಜ್ಞ) ಯಾರೆಂದರೆ ಅತ್ಯುತ್ತಮ ಜೀವನವನ್ನು ನಡೆಸುವವನೇ ಆಗಿದ್ದಾನೆ”. ಜೀವನ ಮತ್ತು ಪ್ರಕೃತಿಯಲ್ಲಿನ ಎಲ್ಲಾ ಮೂಲಭೂತ ಶಕ್ತಿಗಳಂತೆ ಕಲೆಯಲ್ಲಿಯೇ ಸೃಜನಾತ್ಮಕ ಪ್ರೇರಣೆ ಒಂದೇ ಆಗಿರುತ್ತದೆ. ಚಿತ್ರಕಾರರು ವಾಸ್ತುಶಿಲ್ಪಿಗಳು ಸಂಗೀತಗಾರರೂ ನೃತ್ಯಗಾರರು ಕವಿಗಳು ಮತ್ತು ಕುಶಲಕರ್ಮಿಗಳು ತನಗೆ ಮತ್ತು ನನ್ನ ಶೈಲಿಗಳಿಗೆ ವಿಶಿಷ್ಟವಾದ ರೀತಿಯಲ್ಲಿ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಮತ್ತು ಸೃಷ್ಟಿಸುತ್ತಾರೆ. ಅವರ ವೈಯಕ್ತಿ ಜನಾಂಗದ ಪ್ರತಿಭೆ ತಾವು ಜನಿಸಿದ ಧರ್ಮದ ಪ್ರಾಂತ್ಯ ಮತ್ತು ಆ ಕಾಲದ ಸಾಂಸ್ಕೃತಿಕ ಶಕ್ತಿಗಳಿಗೆ ಅನುಗುಣವಾಗಿ ಅವರ ತಂತ್ರಗಳು ಮತ್ತು ಶೈಲಿಗಳು ವ್ಯಕ್ತಿ ವಿಶಿಷ್ಟತೆಗಳು ಮತ್ತು ಮಾಧ್ಯಮಗಳು ಬದಲಾಗಬಹುದಾದುದರಲ್ಲಿ ಸಂದೇಹವಿಲ್ಲ. ಹಾಗಾಗಿಯೇ ರೊಡೆನ್ ಮೈಖಿಲಾಂಜರೊ ಅಥವಾ ನಟರಾಜನ ಅಜ್ಞಾತ ಸೃಷ್ಟಿಕರ್ತ (ಶಿಲ್ಪಿ) ಕಾಳಿದಾಸ ಅಥವಾ ಪೇಕ್ಸ್‌ಪಿಯರನ ನಾಟಕಗಳು ವರ್ಡ್‌ವರ್ತ್ ಪೆರ್‌ಡಲ್ಲಿ ಕೀಟ್ಸ್‌ಅಥವಾ ರನ್ನ ಪಂಪರ ಹಪೀಜಾನ್ ಕಾವ್ಯಗಳು ತ್ಯಾಗರಾಜ ಮುತ್ತು ಸ್ವಾಮಿದೀಕ್ಷಿತರು ಮೊದಲಾದವರ ರಚನೆಗಳು ರಾಷ್ಟ್ರೀಯತೆಯ ಸಕಲ ಮಿತಿಗಳನ್ನು ಹಾಗೂ ಜನಾಂಗ ಬೇದಭಾವಗಳನ್ನು ಮೀರಿ ನಿಲ್ಲುತ್ತವೆ. ಸಾರ್ವತ್ರಿಕ ಮನ್ನಣೆ ಪಡೆಯುತ್ತವೆ. ಎಲ್ಲರ ಮನಗೆಲ್ಲುತ್ತವೆ.

ಇಂದಿನ ಕಲಾಕಾರರು ಹೊಸ ಹೊಸ ಮಾರ್ಗಗಳನ್ನು ಅರಸಬಲ್ಲವರು. ಮಾರ್ಗ (ತಮ್ಮ ತಮ್ಮ ಕ್ಷೇತ್ರಗಳನ್ನು) ಪ್ರವರ್ತಕರೂ ಆಗಿದ್ದಾರೆ. ಒಬ್ಬರಿಗೆ ಸುಂದರವಾಗಿರುವುದು ಮತ್ತೊಬ್ಬರಿಗೆ ಬೇಸರವುಂಟು ಮಾಡಬಹುದು. ಹಾಗಾಗಿ ಕಾಲದ ಮತ್ತು ಅಭಿರುಚಿಗಳ ಬೇಡಿಕೆಗಳನ್ನು ಪೂರೈಸಬಲ್ಲ ಆಧುನಿಕ ಹಾಗೂ ಪ್ರಾಚೀನವಾದುದನ್ನು ಒಳಗೊಂಡ ವಸ್ತುಗಳ ವ್ಯಾಪಕವಾದ ಸರಕುಗಳನ್ನೊಳಗೊಂಡಿರುವ ಕಲೆಗಳು ಮತ್ತು ಕಲಾಕಾರರ ಆಯ್ಕೆಯ ವೈವಿದ್ಯವಿದೆ. ಒಳ್ಳೆಯ ಸರಕು (ವಿಷಯ) ಮತ್ತು ಕೊರಿಯಾಗ್ರಫಿಗೆ ಪ್ರದರ್ಶಕತ್ವ ಸೇರಿ ನಮ್ಮಗಳ ನಾಟ್ಯ (ನರ್ತನ) ಕಲೆ ಸುಂದರವಾಗಿ ಪರಿಣಮಿಸಿದೆ ಮತ್ತು ಕಲಾತ್ಮಕ ಅನುಭವ ನೀಡುತ್ತದೆ.

ಕೆಲವರಲ್ಲಿ ಅಂತರ್ ದೃಷ್ಟಿಯಿದೆ. ಗುಣಗ್ರಹಣ ಪರಿಜ್ಞಾನವಿದೆ. ಮತ್ತೆ ಕೆಲವರಲ್ಲಿ ಅದನ್ನು ಅಭಿವೃದ್ಧಿಪಡಿಸಬೇಕು. ಹಾಗಾಗಿ ಸದ್ಯದ ಅಗತ್ಯ ಕಲಾಪ್ರೇಮ ಹಾಗೂ ಸದಭಿರುಚಿ ಬೆಳೆಸುವುದಾಗಿದೆ. ಇದು ಜೀವನವನ್ನು ನಿಜವಾಗಿಯೂ ಬಾಳಲು ಯೋಗ್ಯವಾಗಿಸುತ್ತದೆ.