ಸದಾ ಎನ್ನ ಹೃದಯದಲ್ಲಿ ನೆಲಸಿ ನಿಂತು ರಕ್ಷಿಸು
ಸತ್ಯಸಾಯಿ ನಿನ್ನ ಪಾದ ಮೋದದಿಂದ ಭಜಿಸುವೆ ಸದಾ ||

ಧ್ಯಾನವೆಂಬ ಶುದ್ಧರತ್ನ ಮಂಟಪದಾ ಮಧ್ಯದಲ್ಲಿ
ಗಾನಲೋಲ ನಿನ್ನ ಮೂರುತಿ ನಿಲಿಸಿ ನುಡಿಸುವೇ ಸದಾ ||

ಭಕ್ತಿರಸದ ತೈಲತುಂಬಿ ಭಾವದೀಪ ಬೆಳಗಿಸೆ
ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೆ ಸದಾ ||

ನಿನ್ನ ನಾಮ ಎನಗೆ ಶರಣ ನೀನೆ ತಾಯಿ-ತಂದೆಯು
ಅನ್ನದಾತ ಭತ್ರಾತ ವರವನಿತ್ತು ರಕ್ಷಿಸು ಸದಾ ||