ಶ್ರೀ ಗುರುವರ ಪೂರೆವುದು ಭವರೋಗ ದೂರ ಭಕ್ತವರದ ಶ್ರೀ || ೧ || ಆಗಮಧ್ಯಾಯನೆ ತವಪದಕಾಗಿ ಶಿರವಬಾಗಿಹೆವೈ || ೨ || ಪರಮಪುರುಷ ಪಾರಮಹಿಮ ದುರಿತಾಹರ ಕರುಣಾಕರ ನಿರುತದಿ ನಿನ್ನನು ಸ್ಮರಿಸುವೆ ಭಜಕರ ಪೊರೆಯುವ ಬಿರುದನು ಧರಿಸಿ ಮೆರೆಯುವ ಪರಮಪುರುಷ | ಕರುಣದಿಂ ಈಕ್ಷಿಸಿ ಯಮ್ಮನು ಹರುಷದಲಿ ಹರಸುತಲಿ | ವರಸುಮತಿಯಂ ಕರುಣಿಸುತ ಪೊರೆವುದಯ್ಯ ನೆರೆನಂಬಿದವರ ರಂಭಾಪುರ ನಿಲಯ ಶ್ರೀಗುರುವರ ಪೊರೆವುದು ||
|| ಭಾಮಿನಿ ಷಟ್ಪದಿ ||
ಸರಸಿರುಹ ಭವವಿಷ್ಣು ರುದ್ರೇಶ್ವರ | ಸದಾಶಿವ ರಾವಳೊಬ್ಬಳ ಚರಣ ಪೀಠದ ಕೆಳಗೆ ಕರಗಳ ಮುಗಿದುಕೊಂಡಿಹರೊ || ೧ || ಹರರೇ ತಚ್ಛುಕ್ತ್ಯಾವ ನಂಘ್ರಿಗೆ ಶಿರವ ಬಾಗಿಹಳಾ ಮಹಾತ್ಮನ ನರಕುರಿಗಳೆಂತರಿವರೈ | ಗುರುವರ್ಯ ನಂಘ್ರಿಗಳ | ನಗುರೋರಧಿಕಂ | ನಗುರೋರಧಿಕಂ | ನಗುರೋರಧಿಕಂ ||
ಓಂ ಶಾಂತಿಃ ! ಶಾಂತಿಃ !! ಶಾಂತಿಃ !!!
ಗುರುವೇ ಬ್ರಹ್ಮವು, ಗುರುವೇ ವಿಷ್ಣವು, ಗುರುವೇ ಗೌರೀನಾಥನಲ್ಲದೆ ಗುರುವೇ ಸಾಕ್ಷಾತ್ ಸಚ್ಚಿದಾನಂದೈಕ್ಯರ ಸವತ್ತು, ಗುರುವಿಗಿಂ ಸಮವಿಲ್ಲ, ಗುರುವಿಗಿಮ್ಮಿಗಿಲಿಲ್ಲ || ಗುರುವಿಗಿಂತಧಿಕಮಾಗಿಹ ವಸ್ತುವಿಲ್ಲೆಂದು ಹರಿಹರ ವಿರಂಚಿಗಳುಸುರಿರುವರಾದಕಾರಣದಿ ಎಲೆ ಮನವೆ | ನೀನಿರುತ ಗುರುವಿನ ಮಲ ಬಾದವನುರೆನಂಬಿ ಭಜಿಸಿದೊಡೆ ನಿನಗಹುದು ನಿಜಮುಕ್ತಿ ಸಾಮ್ರಾಜ್ಯಂ ||
Leave A Comment