ಪಲ್ಲವಿ : ಸನಕ ಸನಂದರ ಶಾಪವ ಪೊಂದಿದ
ಜಯ ವಿಜಯರನು ಪೊರೆದೆ ಗೋವಿಂದಾ

ಚರಣ :  ರಿಪುಸಂಹಾರಕ ಸುರ ಸಂರಕ್ಷಕ
ದೀನವತ್ಸಲ ಹರೇ ಮುಕುಂದ

ಗಂಧರ್ವ ಗಾನಕೆ ಒಲಿದ ಶ್ರೀಹರೇ
ನವಭಕ್ತಿವಶನೇ ಶ್ರೀಕೃಷ್ಣ

ಮಂದಾರ ಪುಷ್ಪ ಸುಪ್ರೀತನೇ ಮಾಧೌ
ಮನ ಸಂಚಾರನೆ ನಾರಾಯಣ

ಪರಮ ಪುರುಷ ಪರಂಧಾಮನೇ ಹರಿಯೇ
ಪುರುಷೋತ್ತಮನೇ ಶ್ರೀರಾಮ

ದಧಿಸಾರ ಪ್ರೀತನೇ ಮನಗಳ ಸಂಚಾರಿ
ಗೋಪಾಲ ಕೃಷ್ಣನೇ ಮುದ್ದುಕೃಷ್ಣ

ನಿರುಪಮ ಶೂರನೇ ನಿನ್ನನು ಭಜಿಪೆನು
ನಿಜವನು ತೋರೋ ಜಯ ಶ್ರೀಕೃಷ್ಣ