ಸನತ್ಕುಮಾರಚಕ್ರವರ್ತಿಯ ಕಥೆಯಂ ಪೇೞ್ವೆಂ :

ಗಾಹೆ || ಕಚ್ಚು ಜರಖಾಸ ಸೋಸೋ ಭತ್ತಚ್ಛದಿ ಅಚ್ಛಿ ಕುಚ್ಛಿ ದುಕ್ಷಾಣಿ
ಅಯಾಸಿ ದಾಣಿ ಸಮ್ಮಂ ಸಣಂಕುಮಾರೇಣ ವಾಸಸದಂ ||

*ಕಚ್ಚು – ಕೆರಕುಂ, ಜರ – ನರೆಯುಂ, ಖಾಸ – ಕೆಮ್ಮುಂ, ಸೋಸೋ – ಬಾಯ್ ಬತ್ತುವುದುಂ, ಭತ್ತಚ್ಚದಿ – ಛರ್ದಿಯುಂ, ಅಚ್ಛಿಕುಚ್ಛಿ ದುಕ್ಖಾನಿ – ಕಣ್ಣಬಸಿಱ ಬೇನೆಗಳುಮೆಂದಿವು ಮೊದಲಾಗೊಡೆಯ, ಅಯಾಸಿದಾಣಿ – ಸೈರಿಸೆಪಟ್ಟವು. ಸಮ್ಮಂ – ಒಳ್ಳಿತ್ತಾಗಿ ಸಣಂಕುಮಾರೇಣ – ಸನತ್ಕುಮಾರ ಚಕ್ರವರ್ತಿ ರಿಸಿಯಿಂದಂ, ವಾಸಸದಂ – ನೂಱುವರುಷಂ*

ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಕುರುಜಾಂಗಣಮೆಂಬುದು ನಾಡಲ್ಲಿ ಹಸ್ತಿನಾಪುರಮೆಂಬುದು ಪೊೞಲದನಾಳ್ವೊಂ ವಿಶ್ವಸೇನಮಹಾರಾಜನೆಂಬರಸನಾತನ ಮಹಾದೇವಿ ಸಹದೇವಿಯೆಂಬೊಳಾಯಿರ್ವ್ವರ್ಗ್ಗಂ ಸನತ್ಕುಮಾರನೆಂಬೊಂ ಪುಟ್ಟಿದೊನಾತಂ ಸರ್ವಲಕ್ಷಣಸಂಪೂರ್ಣಂ ಸಕಳಕಳಾಪಾರಗಂ ಚೆಲ್ವಿನಿಂ ದೇವಾಸುರರ್ಕ್ಕಳಂ ಗೆಲ್ವ ರೂಪನೊಡೆಯನಾತಂಗೆ ಕೆಳೆಯಂ ಸಿಂಹವಿಕ್ರಮನೆಂಬ ಸಾಮಂತನ ಮಗಂ ಮಹೇಂದ್ರಸಿಂಹನೆಂಬೊನಂತವರ್ಗ್ಗನ್ಯೋನ್ಯಪ್ರೀತಿಯಿಂದಂ ಕಾಲಂ ಸಲೆ ಮತ್ತೊಂದು ದಿವಸಂ ಏಕಚಕ್ರಪುರಾಶಂ ಭೂರಾಮನಾಮಧೇಯನಪ್ಪ ಶತ್ರುಂದಮಂ ವಿಶ್ವಸೇನಮಹಾರಾಜಂಗೆ ಪಾಗುಡಮನಟ್ಟೆ ಪಟ್ಟವಾರಮರಗಮೆಂಬ ದುಷ್ಪಾಶ್ವಮಂ ಕುಮಾರನೇಱ ಲಕ್ಷ್ಮೀಗೃಹಮೆಂಬುದ್ಯಾನವನದ ಮಧ್ಯಸಮಪ್ಪ ಸ್ಥಲದೊಳ್ ಸಲ್ವನಾ ದುಷ್ಪಾಶ್ವಮಂ ಕೊಸೆಗೊಳೆ ಗಾಳಿಯಿಂದಂ ಬೇಗಮಾಗಿ ವಾರಿತಪೂರಿತಂ ಪರಿದು ಕುಮಾರನಂ ಕೊಂಡು ಮಹಾಟವಿಯಂ

ಸನತ್ಕುಮಾರ ಚಕ್ರವರ್ತಿಯ ಕಥೆಯನ್ನು ಹೇಳುವೆನು. : *ಸನತ್ಕುಮಾರ ಚಕ್ರವರ್ತಿ ಋಷಿಯು ತುರಿ (ಚರ್ಮರೋಗ), ನರೆ, ಕೆಮ್ಮು, ಬಾಯಾರಿಕೆ, ಭೇ, ಕಣ್ಣುನೋವು, ಹೊಟ್ಟೆನೋವು ಎಂದು ಇವೇ ಮೊದಲಾಗಿ ಉಳ್ಳವನ್ನು ನೂರುವರ್ಷ ಚೆನ್ನಾಗಿ ಸೈರಿಸಿಕೊಂಡನು). ಅದು ಹೇಗೆಂದರೆ : ಈ ಜಂಬೂದ್ವೀಪದ ಭರತ ಲಿತ್ರದಲ್ಲಿ ಕುರುಜಾಂಗಣ ಎಂಬ ಒಂದು ನಾಡಿದೆ. ಅಲ್ಲಿ ಹಸ್ತಿನಾಪುರ ಎಂಬ ಪಟ್ಟಣವಿದೆ. ಅದನ್ನು ವಿಶ್ವಸೇನಮಹಾರಾಜ ಎಂಬ ಅರಸನು ಆಳುತ್ತಿದ್ದನು. ಅವನ ಪಟ್ಟದ ರಾಣಿ ಸಹದೇವಿಯೆಂಬವಳು. ಆ ದಂಪತಿಗಳಿಗೆ ಸನತ್ಕುಮಾ*ಲನೆಂಬ ಮಗನು ಹುಟ್ಟಿದನು. ಅವನು ಎಲ್ಲ ಲಕ್ಷಣಗಳಿಂದ ತುಂಬಿದವನು, ಎಲ್ಲ ಕಲೆಗಳನ್ನೂ ಪೂರ್ಣವಾಗಿ ತಿಳಿದವನು. ದೇವತೆಗಳನ್ನೂ ದೇವತೆಗಳಲ್ಲದವರನ್ನೂ ಸೊಬಗಿನಿಂದ ಗೆಲ್ಲುವ ರೂಪುಳ್ಳವನು. ಅವನಿಗೆ ಸಿಂಹವಿಕ್ರಮನೆಂಬ ಸಾಮಂತನ ಮಗನಾದ ಮಹೇಂದ್ರಸಿಂಹನೆಂಬುವನು ಸ್ನೇಹಿತನಾಗಿದ್ದನು. ಅಂತು ಅವರಿಬ್ಬರು ಪರಸ್ಪರವಾಗಿ ಪ್ರೀತಿಯಿಂದಿದ್ದು ಹೀಗೆಯೇ ಕಾಲ ಕಳೆಯುತ್ತಿತ್ತು. ಆಲಿಲೆ ಒಂದು ದಿವಸ ಏಕಚಕ್ರವೆಂಬ ಪಟ್ಟಣದ ಒಡೆಯನೂ ಶತ್ರುಗಳನ್ನು ದಮನ ಮಾಡತಕ್ಕವನೂ ಆದ ಭೂರಾಮನೆಂಬ ಹೆಸರು*ಲ್ಷ ರಾಜನು ವಿಶ್ವಸೇನ ಮಹಾರಾಜನಿಗೆ ಪಟ್ಟವಾರಮರಗ ಎಂಬ ಕೆಟ್ಟ ಕುದುರೆನ್ನು ಕಾಣಿಕೆಯಾಗಿ ಕಳುಹಿಸಿಕೊಟ್ಟನು. ಆ

ಪೊಕ್ಕೊಡಿತ್ತ ವಿಶ್ವಸೇನಮಹಾರಾಜನ ಮಹಾ ಸಾಮಂತರ್ಕ್ಕಳುಂ ಪರಿವಾರಮುಮೆಲ್ಲಂ ಕುದುರೆವಡಿಜ್ಜೆಯಂ ನೋಡಿ ನಾಡೆಗೆಂಟುವೋಗಿ ಮೂಱನೆಯ ದಿವಸದಂದಂ ಅಡಿವಜ್ಜೆ ಕೆಟ್ಟೊಡೆ ಪೋದ ದೆಸೆಯನಱಯದೆ ಹಾ ಪುತ್ರಾ ಎಂದು ಮಹಾ ದುಃಖಾಕ್ರಾಂತನಾಗಿ ಪ್ರಲಾಪಂಗೆಯ್ದ ವೃಪತಿಯಂ ಮಹೇಂದ್ರಸಿಂಹಂ ಸಂತಯಿಸಿ ಇಂತೆಂದು ನುಡಿದಂ ಕುಮಾರನಂ ಪಾತಾಳಮಂ ಪೊಕ್ಕನಪ್ಪೊಡಮಱಸಿಕೊಂಡು ಬರ್ಪೆಂ ನಿಮ್ಮಡಿ ನೀಮುಬ್ಬೆಗಂಬಡದೆ ಮಗುೞಮೆಂದರಸನಂ ಮಗುೞ ಪರಿವಾರಂಬೆರಸು ಮಹಾಟವಿಯಂ ಪೊಕ್ಕು ತೊೞಲ್ದು ನೋೞನಂ ಪರಿಜನಂಗಳ್ ಕುಮಾರನನಱಸಿ ಕಾಣದೆ ಬೇಸತ್ತು ಮಹೇಂದ್ರಸಿಂಹನಂ ಬಿಸುಟು ಪೊೞಲ್ಗೆವೋದರ್ ಇತ್ತ ಮಹೇಂದ್ರಸಿಂಹನೊರ್ವನೆ ನಾನಾವಿಧ ಗಿರಿಗಹನ ವಿಷಯ ವಿಷಯ ಪ್ರದೇಶಂಗಳುಮಂ ವ್ಯಾಧನಿವಾಸಂಗಳುಮಂ ಯಥಾ ಕ್ರಮದಿಂದಂ ಕೞೆದು ಪೋಗಿ ಪ್ರಿಯಂಗುಪಂಡಮೆಂಬ ವನಮನೆಯ್ದಿ ತದ್ವನಮಧ್ಯಸ್ಥ ಗೃಹದೊಳಿರುತಿರ್ದ್ದು ಮಿತ್ರನ ವಿಯೋಗದೊಳಪ್ಪ ದುಃಖದಿಂದಂ ಕಾರುಣ್ಯಮಾಗೆ ಪ್ರಳಾಪಂಗೆಯ್ದೞ್ತು ದೇವತೆಯ ಮುಂದೆ ನಿದ್ರೆಗೆಯ್ದೊಂ ಮನೋಹರಿಯೆಂಬ ಜಾವದಾಗಳ್ ಕರಿಣೀಶತಂಗಳಿಂ ಪರಿವೇಷ್ಟಿತನಾಗಿ ತಿಳಿನೀರ ಕೊಳದೊಳಗೆ ಕ್ರೀಡಿಸುವ ಸೊರ್ಕಾನೆಯುಮಂ ಫಲಭರಿತಮಾದ ಮಾವಿನ ಮರನುಮಂ ಕನಸಿನೊಳ್

ಕುದುರೆಯನ್ನು ಸನತ್ಕುಮಾರನು ಲಕ್ಷ್ಮೀಗೃಹವೆಂಬ ಇದ್ಯಾನದ ಮಧ್ಯಸ್ಥಳದಲ್ಲಿ ಏರಿದಾಗ ಅದು ವಾರಿತ – ಪೂರಿತ ಎಂಬ ಅಶ್ವಗತಿಗಳಲ್ಲಿ ಓಡಿತು. ಸನತ್ಕುಮಾರನನ್ನು ಏರಿಸಿಕೊಂಡು ದೊಡ್ಡ ಕಾಡಿನೊಳಗೆ ಹೊಕ್ಕಿತು. ಇತ್ತ ವಿಶ್ವಸೇನಮಹಾರಾಜನ ದೊಡ್ಡಸಾಮಂತರೂ ಪರಿವಾರವೂ ಎಲ್ಲರೂ ಕುದುರೆಯ ಕಾಲಿನ ಹೆಜ್ಜೆಯನ್ನು ನೋಡಿಕೊಳ್ಳುತ್ತ ಬಹಳ ದೂರದವರೆಗೆ ಹೋದರು. ಮೂರನೆಯ ದಿವಸದಂದು ಕುದುರೆಯ ಅಡಿ ಹೆಜ್ಜೆಯ ಗುರುತೂ ಸಿಕ್ಕದಾಯಿತು. ಆಗ ವಿಶ್ವಸೇನರಾಜನು ತನ್ನ ಮಗನು ಹೋದ ದಿಕ್ಕನ್ನು ತಿಳಿಯದೆ “ಹಾ ಮಗನೇ!* ಎಂದು ಬಹಳ ವ್ಯಸನದಿಂದ ಗೋಳಾಡಿದನು. ಅವನನ್ನು ಮಹೇಂದ್ರಸಿಂಹನು ಸಮಾಧಾನಪಡಿಸಿ, ಹೀಗೆ ಹೇಳಿದನು. “ಎಲೈ ಪ್ರಭುವೇ, ಸನತ್ಕುಮಾರನು ಪಾತಾಳವನ್ನು ಹೊಕ್ಕಿದ್ದರೆ ಕೂಡಾ ಅವನನ್ನು ಹುಡುಕಿ ಕರೆದುಕೊಂಡು ಬರುವೆನು. ನೀವು ವ್ಯಸನವನ್ನು ತಾಳದಿರಿ. ಹಿಂದಕ್ಕೆ ತೆರಳಿರಿ* – ಎಂದು ರಾಜನ್ನು ಹಿಂದಿರುಗಿಸಿದನು. ಆ ಮೇಲೆ ಮಹೇಂದ್ರಸಿಂಹನು ಪರಿವಾರವನ್ನು ಕೂಡಿಕೊಂಡು ದೊಡ್ಡ ಕಾಡನ್ನು ಹೊಕ್ಕು ಸುತ್ತಾಡಿ ನೋಡುತ್ತಿರಲು ಪರಿಜತಿಲರು ಕುಮಾರನನ್ನು ಹುಡುಕಿ ಕಾಣದೆ ಬೇಸರಗೊಂಡು ಮಹೇಂದ್ರಸಿಂಹನನ್ನು ಬಿಟ್ಟು ಪಟ್ಟಣಕ್ಕೆ ಹೋದರು. ಇತ್ತ ಮಹೇಂದ್ರಸಿಂಹನೊಬ್ಬನೆ ಹಲವಾರು ಬೆಟ್ಟ, ಕಾಡುಗಳನ್ನೂ ಕಠಿನಕರವಾದ ಪ್ರದೇಶಗಳನ್ನೂ ಬೇಡರ ವಾಸಸ್ತಾನಗಳನ್ನೂ ಯಥಾರೀತಿಯಿಂದ ದಾi ಹೋಗಿ ‘ಪ್ರಿಯಂಗು ಷಂಡ’ ಎಂಬ ಕಾಡಿಗೆ ಹೊದರು. ಆ ಕಾಡಿನ ನಡುವೆ ಇದ್ದ ದೇವಾಲಯದಲ್ಲಿದ್ದು, ತನ್ನ ಗೆಳೆಯನ ಆಗಲಿಕೆಯಿಂದುಟಾದ ವ್ಯಸನದಿಂದ ದೇವತೆಯ ಮುಂದೆ ಪ್ರಲಾಪಿಸುತ್ತ, ಅತ್ತು ನಿದ್ದೆ ಮಾಡಿದನು. ಸೊಗಸಾದ ಬೆಳಗಿನ ಜಾವದ ವೇಳೆಗೆ ಒಂದು ಕನಸನ್ನು ಕಂಡನು. ಅದರಲ್ಲಿ ನೂರಾರು ಹೆಣ್ಣಾನೆಗಳಿಂದ ಆವರಿಸಿಕೊಂಡು ತಿಳಿಯಾದ ನೀರಿನ ಕೊಳದಲ್ಲಿ ಆಡುವ ಮದ್ದಾನೆಯನ್ನೂ ಹಣ್ಣಿನಿಂದ ತುಂಬಿದ ಮಾವಿನ ಮರವನ್ನು ಕಂಡು ಇಷ್ಷೇರ್ಥ ಕೈಗೂಡಿತೆಂದು ಸಂತೋಷಪಟ್ಟು ಪುನಃ ನಿu ಮಾಡಿದನು. ಅವನನ್ನು

ಕಂಡು ಮನೋರಥಸಿದ್ಧಿಯಾಯ್ತೆಂದು ಒಸೆದು ಮಗುೞ್ದು ನಿದ್ರಾವಶಗತನಾದೊನಂ ಕಂಡು ಕರುಣಿಸಿ ಭೂತಾಂಬರನೆಂಬ ವೃಂತರದೇವನೆತ್ತಿಕೊಂಡು ಪೋಗಿ ವಿಜಯಾರ್ಧಪರ್ವತಕ್ಕಾಸನ್ನಮಪ್ಪ ಭೂತರಮಣಮೆಂಬ ವನದ ನಡುವಿನೊಳಿರ್ದ್ದ ಕ್ಷುಲ್ಲಕಮಾನಸಮೆಂಬ ಸರೋವರದ ತಡಿಯೊಳಿಕ್ಕಿ ಪೋದನ್ ಆಗಳಾತನುಂ ನೇಸರ್ಮೂಡುವಾಗಳ್ ತೂಂಕಡುಗೆಟ್ಟು ದೆಸೆಗಳಂ ನೋೞ್ಪಂ ಸಮುದ್ರದೊಳೋರಂತಪ್ಪ ಕೋಕನದ ಕುಮುದ ಕುವಲಯ ಕಲ್ಪಾರೇಂದೀವರಾದಿಗಳಿಂದಂ ಹಂಸ ಚಕ್ರವಾಕ ಬಳಾಕ ವಿಪಕ್ಷಿಗಣಂಗಳ್ ನೀರೊಳಗಾಡುತ್ತುಂ ಮುೞುಗುತ್ತುಂ ನಾನಾಪ್ರಕಾರದಿಂದಂ ಮಾಱುಲಿದ ದನಿಗಳಿಂದಮತಿ ರಮಣೀಯಮಪ್ಪ ಕೊಳನಂ ಕಂಡಾದಮಾನುಂ ವಿಸ್ಮಯಚಿತ್ತನಾಗಿ ಆ ಭೂತರಮಣಮೆಂಬ ವನದೊಳಶೋಕ ಪುನ್ನಾಗ ವಕುಲ ಚಂಪಕ ಸಹಕಾರ ಲವಂಗ ಕ್ರಮುಕ ನಾಳಿಕೇರ ನಾಗವಲ್ಲೀ ಪಿನದ್ಧ ದ್ರುಮಷಂಡ ಮಂಡಿತಮನಿಂದ್ರವನದೋಳೋರಂತಪ್ಪುದಂ ನೋಡುತ್ತುಂ ತೊೞಲ್ವೊಂ ತನಗನುಕೂಲಮಪ್ಪ ಶಕುನನಿಮಿತ್ತಂಗಳುಮಂ ಕಂಡಿಂದಮೋಘಮೆನ್ನ ಸ್ವಾಮಿಯಂ ಕಾಣ್ಬೆನೆಂದು ಸಂತುಷ್ಟಚಿತ್ತನಾಗಿಯೂ ಬನದ ನಡುವೆ ತೊೞಲ್ವೊಂ ಮೃದು ಮಧುರ ಗಂಭೀರ ಧ್ವನಿಯೊಳ್ ಕೂಡಿದ ಮೃದಂಗ ವಂಶ ತಾಳಾದಿಗಳ ಧ್ವನಿಗಳುಮಂ ಮಂದ್ರ ತಾರ ಲಯಾನ್ವಿತಮಾಗೆ ಕಿವಿಗಂ ಮನಕ್ಕಂ ಸೊಗಯಿಸುವಂತಪ್ಪ ಪಾಟಮುಮಂ ಕೇಳ್ದು ಹರಿಚಂದನ ಕಾಳಾಗರು ಮಲಯಜ ತುರುಷ್ಕಾದಿಗಳ ಕಂಪು ಬಂದು ತೀಡಿದೊಡಿದು ದೇವನಿವಾಸಮಕ್ಕುಮೆಂದು ಬಗೆದು ಭಯಾಶ್ಚರ್ಯದಿಂದಂ

ಭೂತಾಂಬರನೆಂಬ ಪಿಶಾಚದೇವನು ಕಂಡು ದಯೆಗೊಂಡು, ಎತ್ತಿಕೊಂಡು ಒಯ್ದು ವಿಜಯಾರ್ಧಪರ್ವತಕ್ಕೆ ಸಮೀಪದಲ್ಲಿರುವ ‘ಭೂತರಮಣ’ ಎಂಬ ಕಾಡಿನ ನಡುವಿನಲ್ಲಿದ್ದ ಕ್ಷುಲ್ಲಕ ಮಾನಸವೆಂಬ ಸರೋವರದ ತೀರದಲ್ಲಿ ಬಿಟ್ಟು ತೆರಳಿದನು. ಮಹೇಂದ್ರಸಿಂಹನಿಗೆ ಸೂರ್ಯೋದಯವಾಗುವ ವೇಳೆಗೆ ನಿದ್ದೆ ಬಿಟ್ಟಿತು. ದಿಕ್ಕುಗಳ ಕಡೆಗೆ ನೋಡಿದನು. ಆಗ ಕುವಲಯ, ಕನ್ನೈದಿಲೆ, ನೀಲೋತ್ಪಲ ಮುಂತಾದ ಹೂವುಗಳಿಂದ ಕೂಡಿಯೂ ಹಂಸ, ಚಕ್ರವಾಕ, ಕೊಕ್ಕರೆ ಮುಂತಾದ ವಿಶೇಷ ರೀತಿಯ ಹಕ್ಕಿ ಬಳಗಗಳು ನೀರಿನಲ್ಲಿ ಆಡುತ್ತ ಮುಳುಗುತ್ತ ಹಲವಾರು ರೀತಿಯಲ್ಲಿ ಪ್ರತಿಶಬ್ದಗಳನ್ನು ಮಾಡತಕ್ಕ ಧ್ವನಿಗಳಿಂದ ಕೂಡಿಯೂ ಬಹಳ ಮನೋಹರವಾಗಿದ್ದಿತು. ಮಹೇಂದ್ರಸಿಂಹನು ಆ ಕೊಳವನ್ನು ಕಂಡು ಮನಸ್ಸಿನಲ್ಲಿ ಬಹಳ ಆಶ್ಚರ್ಯಪಟ್ಟನು. ಆ ಭೂತರಮಣವೆಂಬ ಕಾಡಿನಲ್ಲಿ ಅಶೋಕ, ಪುನ್ನಾಗ, ಬಕುಳ (ರೆಂಜಿ), ಸಂಪಗೆ, ಮಾವು, ಲವಂಗ, ಅಡಕೆ ಮರ, ತೆಂಗಿನ ಮರ, ವೀಳ್ಯದೆಲೆ ಬಳ್ಳಿಗಳಿಂದ ಕೂಡಿದ ಮರಗಳ ಸಮೂಹದಿಂದ ಅಲಂಕೃತವಾಗಿದ್ದು ದೇವೇಂದ್ರನ ನಂದನವನದಂತಿದ್ದ ಆ ಕಾಡನ್ನು ನೋಡುತ್ತ ಸುತ್ತಾಡುತ್ತಿದ್ದನು. ತನಗೆ ಅನುಕೂಲವಾದ ಶಕುನಗಳನ್ನು ಕಂಡು, ‘ಇಂದು ನಿಶ್ಚಯವಾಗಿಯೂ ನನ್ನ ಪ್ರಭುವನ್ನು ಕಾಣುವೆನು’ ಎಂದುಕೊಂಡು ಮಹೇಂದ್ರ ಸಿಂಹನು ಮನಸ್ಸಿನಲ್ಲಿ ಸಂತೋಷಗೊಂಡು ಆ ಕಾಡಿನ ನಡುವೆ ಸಂಚರಿಸುತ್ತಿದ್ದನು. ಆಗ ಅವನು ಮೃದುವೂ ಮಧುರವೂ ಉದಾತ್ತವೂ ಆದ ನಾದದಿಂದ ಕೂಡಿದ ಮೃದಂಗ, ಕೊಳಲು, ತಾಳಾದಿಗಳ ಧ್ವನಿಗಳನ್ನೂ ಮಂದ್ರ – ತಾರ ಸ್ವರಗಳಿಂದ ಲಯಬದ್ಧವಾಗಿ ಕಿವಿಗೂ ಮನಸ್ಸಿಗೂ ಸುಖವನ್ನ್ನುಂಟುಮಾಡುವ ಹಾಡನ್ನು ಕೇಳಿದನು. ಶ್ರೀಗಂಧ, ಕಪ್ಪು ಅಗರು, ಗಂಧ ಲೋಬಾನ ಮುಂತಾದವುಗಳ ಸುವಾಸನೆ

ವ್ಯಾಕುಳಿತಮನದೊನಾಗಿ ಇನ್ನಿದನಮೋಘಂ ನೋೞ್ಪೆನೆಂದಾ ದೆಸೆಗಾಗಿ ಸಲ್ವೊನ್ ಕನತ್ಕನಕವಿನಿರ್ಮಿತಮಂ ನಾನಾ ಮಣಿಗಣ ಪಿನದ್ದಮಂ ಚಳತ್ಕೇತುಪತಾಕಾದ್ಯಮಂ ವಿದ್ಯಾಧರಯುವತೀಜನ ಕ್ರೀಡನಾರ್ಥಮಪ್ಪ ಪ್ರಾಸಾದಮಂ ಕಂಡು ವಿಸ್ಮಯಚಿತ್ತನಾಗಿಯದಱ ಸಮೀಪಕ್ಕೆ ಸಾರ್ದೊಂದು ಮರನಂ ಮೆಱೆಗೊಂಡು ನೋೞ್ಪೊಂ ತತ್ಪುರಃಸ್ಥಿತಮಪ್ಪ ಮಣಿಮಂಟಪದೊಳ್ ದಿವ್ಯಸ್ತ್ರೀಜನಂಗಳ್ ವಿಲಾಸದಿಂ ಚಾಮರಮಿಕ್ಕೆ ದಿವ್ಯಶಯ್ಯಾತಳದ ಮೇಗಿರ್ದು ನಾಟಕಮಂ ನೋೞ್ಪ ಕುಮಾರನಂ ಕಂಡು ಹರ್ಷಚಿತ್ತದಿಂದಂ ಕುಸುಮಿತ ಕದಂಬವೃಕ್ಷಂಬೊಲ್ ಕಂಟಕಿತ ರೋಮಾಂಚಿತಗಾತ್ರನಾಗಿ ಪರಿದುವರ್ಪೊನಂ ಕಂಡಿದಿರೆಯ್ದೆ ಯಾತನುಂ ಕುಮಾರನ ಚರಣಾರವಿಂದಂಗಳ್ಗೆಱಗಿ ಬಿರ್ದು ಮೂರ್ಛಾಗತನಾದೊಡಾಗಳ್ ಶೀತಳಕ್ರಿಯೆಗಳಿಂದೆೞ್ಚುತ್ತದಿಂಗಳಿಂ ಕಂಡೆಂ ಸ್ವಾಮಿ ನಿನ್ನಂ ನಂಬಿರ್ದೆ ನಾನೆಂದು ಮಹಾ ದುಃಖದಿಂದೞ್ವನಂ ಸಂತಯಿಸಿ ವಿಪುಳಶ್ರೀಯೆಂಬ ವಿದ್ಯಾಧರವಿಳಾಸಿನಿಯಂ ಕರೆದಿಂತೆಂದು ಪೇೞ್ಪನೆನ್ನ ಸಹೋದರನೆಂತುಂ ಶ್ರಮಮ ನೀಗಿ ಸುಖದಿಂ ತಣಿದೊನಕ್ಕುಮಂತಾಗೆ ಸ್ನಾನಪಾನ ಭೋಜನಾದಿ ಕ್ರಿಯೆಗಳಂ ಬೇಗಂ ಮಾಡೆಂದು ಪೇೞ್ದೊಡಾಕೆಯುಮಂತೆಗೆಯ್ದೆನೆಂದಾತನಂ ಮಹಾವಿಭೂತಿಯಿಂದಂ ವಿದ್ಯಾಧರ ವಿಲಾಸಿನಿ ಮಜ್ಜನಂಬುಗಿಸಿ ದಿವ್ಯಾಹಾರಮನೂಡಿ ವಸ್ತ್ರಾಭರಣ ಗಂಧಮಾಲ್ಯಾದಿ ತಾಂಬೂಲಾದಿಗಳಿಂ

ಬಂದು ಅವನನ್ನು ಸೋಕಿತು. ಆಗ ಇದು ದೇವಾಲಯವಾಗಿರಬೇಕೆಂದು ಭಾವಿಸಿದನು. ಭಯದಿಂದಲೂ ಆಶ್ಚರ್ಯದಿಂದಲೂ ಕದಡಿದ ಮನಸ್ಸುಳ್ಳವನಾಗಿ ನಿಶ್ಚಯವಾಗಿಯೂ ನಾನಿದನ್ನು ನೋಡುವೆನು – ಎಂದು ಅದೇ ಕಡೆಗಾಗಿ ತೆರಳಿದನು. ಅಲ್ಲಿ ಹೊಳೆವ ಚಿನ್ನದಿಂದ ಮಾಡಿದ್ದೂ ಹಲವಾರು ರತ್ನಗಳನ್ನು ಕೆತ್ತಿಸಿದ್ದೂ ಚಲಿಸುವ ಧ್ವಜ ಬಾವುಟಗಳುಳ್ಳುದೂ ವಿದ್ಯಾಧರತರುಣಿಯರಿಗೆ ಆಡಲು ಉಪಯುಕ್ತವೂ ಆದ ಮಹಾಭಾವನವನ್ನು ಕಂಡು ಆಶ್ಚರ್ಯಪಟ್ಟನು. ಅದರ ಬಳಿಗೆ ಹೋಗಿ ಒಂದು ಮರದ ಮರೆಯಲ್ಲಿದ್ದು ನೋಡಿದನು. ಆ ಭವನದ ಎದುರುಗಡೆ ಇದ್ದ ರತ್ನಮಂಟಪದಲ್ಲಿ ದೇವತಾಸ್ತ್ರೀಯರು ಸೊಗಸಾಗಿ ಚಾಮರವನ್ನು ಬೀಸುತ್ತಿರಲು ದಿವ್ಯವಾದ ಹಾಸಿಗೆಯ ಮೇಲೆ ಕುಳಿತು ನಾಟಕವನ್ನು ನೋಡುವ ಸನತ್ಕುಮಾರನನ್ನು ಕಂಡು ಸಂತುಷ್ಟ ಮನಸ್ಕನಾದನು. ಹೂಬಿಟ್ಟ ಕಡವೆ ಮರದಂತೆ ರೋಮಾಂಚಗೊಂಡ ದೇಹವುಳ್ಳವನಾಗಿ ನಡೆದು ಬರುವವರನ್ನು ಕುಮಾರನು ಕಂಡು ಎದುರಿಗೆ ಬಂದನು. ಅವನು ಕುಮಾರನ ಪಾದಕಮಲಗಳಿಗೆ ವಂದಿಸಿ ಬಿದ್ದು ಮೂರ್ಛೆ ಹೋದನು. ಆಗ ಶೀತಳಕ್ರಿಯೆಗಳಿಂದ ಎಚ್ಚರಗೊಂಡು “ಪ್ರಭುವೇ, ನಿನ್ನನ್ನು ಆರು ತಿಂಗಳನಂತರ ಇದೀಗ ಕಂಡೆನು. ನಾನು ನಿನ್ನನ್ನು ನಂಬಿದ್ದೇನೆ* ಎಂದು ಮಹಾವ್ಯಸನದಿಂದ ಅತ್ತನು. ಸನತ್ಕುಮಾರನು ಅವನನ್ನು ಸಮಾಧಾನಪಡಿಸಿ ವಿಪುಳಶ್ರೀ ಎಂಬ ವಿದ್ಯಾಧರ ಸ್ತ್ರಿಯನ್ನು ಕರೆದು ಹೀಗೆಂದನು – “ನನ್ನ ಸಹೋದರನಾದ ಇವನು ಹೇಗಾದರೂ ಆಯಾಸವನ್ನು ಕಳೆದು ಸುಖದಿಂದ ತೃಪ್ತಿಗೊಳ್ಳುವ ಹಾಗೆ ಅವನಿಗೆ ಸ್ನಾನ – ಪಾನ – ಭೋಜನ ಮುಂತಾದುವನ್ನು ಬೇಗನೆ ನೆರವೇರಿಸು. * ಹೀಗೆ ಹೇಳಲು, “ಹಾಗೆಯೇ ಮಾಡುವೆನು* ಎಂದು ಆ ವಿದ್ಯಾಧರ ಸ್ತ್ರೀಯು ಮಹೇಂದ್ರ ಸಿಂಹನಿಗೆ ಮಹಾವೈಭವದಿಂದ ಸ್ನಾನವನ್ನು ಮಾಡಿಸಿ ದಿವ್ಯವಾದ ಆಹಾರವನ್ನು ಕೊಟ್ಟು ಉಡಿಗೆ, ತೊಡಿಗೆ, ಗಂಧ, ಹೂಮಾಲೆ, ಎಲೆಯಡಕೆ –

ತಣಿಪಿದಾಗಳಾತನುಂ ಮುನ್ನಿನ ದುಃಖಮೆಲ್ಲಮಂ ಮಱದಂ ಮುನ್ಮ ಕ್ನಶಭಾಗಿಯಪ್ಪ ಪುರುಷಂ ಸ್ವರ್ಗಮನೆಯ್ದಿ ಮಾಱಪ್ಪವೊಲೆ ಆಯ್ತಾಗಳಲ್ಲಿಂ ಬಂದು ಕುಮಾರನೋರಾಸನದೊಳಿರ್ದು ಸರ್ವಾಭರಣಭೂ ತನಾಗಿ ನೇತ್ರಮನೋಹರಿಯೆಂಬ ದಿವ್ಯಸಭೆಯಂ ನೋಡಿ ವಿಸ್ಮಯಚಿತ್ತನಾಗಿ ಇಂತೆಂದು ಸ್ವಾಮಿ ವ್ರತ ಶೀಲೋಪವಾಸ ತಪಶ್ಚರಣ ಸಂನ್ಯಸನಾದಿ ಶುಭಾನುಷ್ಠಾನಕ್ರಿಯೆಗಳಿಂ ಸತ್ಪುರುಷಂ ಮಱುಭವದೊಳ್ ದೇವಾಂಗನೆಯರ್ಕ್ಕಳೆಱೆಯನಕ್ಕುಂ ನೀಮೀ ಭವದಿಂದಿಂತಪ್ಪ ವಿಭವಮನೆಯ್ದಿದಿರಿದೆನಗೆ ಮಹಾವಿಸ್ಮಯಮೆನೆ ಕುಮಾರನಿಂತೆಂದನಿವರ್ಗ್ಗಳ್ ದೇವಕನ್ನೆಯರಲ್ಲರ್ ವಿದ್ಯಾಧರಿಯರ್ಕ್ಕಳೆನೆ ಇವರ್ಗ್ಗಳಂ ನೀಮೆಂತು ಪೆತ್ತಿರೆಲ್ಲಿ ಮೇಣಾವ ಸ್ವರೂಪದಿಂ ಬಂದಿರಿದನೆನಗೆ ತಿಳಿಯೆ ಪೇೞಮೆನೆ ಕುಮಾರನಿರುಳೆಲ್ಲಮತಿರಂಜನೆಯೆಂಬ ನಾಟಕಮಂ ನೋಡಿ ನಿದ್ರಾಸುಖಮಂ ಪೆಱದೊನಾ ಕಮಳಮತಿಯೆಂಬ ವಿದ್ಯಾಧರ ವಿಳಾಸಿನಿಯಂ ವಿದಗ್ಧೆಯಂ ಕರೆದೆನ್ನ ಸಂಬಂಯಪ್ಪ ಕಥೆಯೆಲ್ಲಮಂ ಮಹೇಂದ್ರಸಿಂಹಂಗೆ ಪೇೞೆಂದು ನಿದ್ರಾವಶಗತನಾಗಿ ವಾಸಗೃಹಮಂ ಪೊಕ್ಕನಿತ್ತಾಕೆಯುಮಾತಂಗಿಂತೆಂದು ಪೇೞಲ್ ತಗುಳ್ದಳ್ ಕುಮಾರನಿಂದಾರೂಢಮಪ್ಪ ದುಷ್ಪಾಶ್ವಂ ಕುಮಾರನಂ ಕೊಂಡು ಮನೋವೇಗದಿಂ ಗಿರಿ ವನ ದರಿ ನದೀಪ್ರದೇಶಂಗಳೊಳ್ ಮೂಱುದಿವಸ ಮಿರುಳುಂ ಪಗಲುಂ ಪರಿಯುತ್ತಿರ್ದುದು ಕರುಳ್ ಪಱದು ತೆಗಲೆಯೊಡೆದು ಕಾಲಂಗೆಯ್ದತ್ತಾ ಗಳ್ ಕುಮಾರನುಂ ಪಸಿವುಂ ನೀರೞ್ಕೆಯಿಂದಮಾನುಂ ಬಾಸೆಪಟ್ಟು ಬಸಮೞದು ಪಿರಿದೊಂದಾ

ಮುಂತಾದವುಗಳಿಂದ ತೃಪ್ತಿಪಡಿಸಿದಳು. ಅವನು ಆಗ ಹಿಂದಿನ ದುಃಖವೆಲ್ಲವನ್ನೂ ಮರೆತನು. ಹಿಂದೆ ಕಷ್ಟಗಳನ್ನು ಅನುಭವಿಸಿದವನು ಸ್ವರ್ಗಕ್ಕೆ ಹೋಗಿ ತನ್ನ ಹಿಂದಿನ ಕಷ್ಟಕ್ಕೆ ಸುಖವನ್ನು ವಿನಿಮಯ ಮಾಡಿಕೊಳ್ಳುವಂತೆಯೇ ಆಗ ಅವನಿಗಾಯಿತು. ಅಲ್ಲಿಂದ ಬಂದು ಸನತ್ಕುಮಾರನೊಂದಿಗೆ ಒಂದೇ ಪೀಠದಲ್ಲಿ ಕುಳಿತುಕೊಂಡು ಎಲ್ಲಾ ಆಭರಣಗಳಿಂದ ಅಲಂಕೃತನಾಗಿ ನೇತ್ರಮನೋಹರವಾದ ದಿವ್ಯ ಸಭೆಯನ್ನು ನೋಡಿ ಮನದಲ್ಲಿ ಆಶ್ಚರ್ಯಪಟ್ಟು ಹೀಗೆಂದನು – “ಪ್ರಭುವೇ, ವ್ರತ, ಶೀಲ, ಉಪವಾಸ, ತಪಸ್ಸು, ಸಂನ್ಯಾಸ – ಮುಂತಾದ ಶುಭಕರ ಆಚರಣೆಗಳಿಂದ ಸತ್ಪುರುಷನು ಮುಂದಿನ ಜನ್ಮದಲ್ಲಿಯೇ ದೇವತಾಸ್ತ್ರೀಯರಿಗೆ ಒಡೆಯನಾಗುವನು. ನೀವು ಈ ಜನ್ಮದಲ್ಲಿಯೇ ಇಂತಹ ವೈಭವವನ್ನು ಹೋದಿದ್ದೀರಿ! ಇದು ನನಗೆ ಮಹದಾಶ್ಚರ್ಯ !. * ಆಗ ಕುಮಾರನು ಹೀಗೆಂದನು – “ಇವರು ಸುರಕನ್ಯೆಯರಲ್ಲ ವಿಧ್ಯಾಧರಿಯರು*. ಅದಕ್ಕೆ ಮಹೇಂದ್ರಸಿಂಹನು – “ಇವರನ್ನು ನೀವು ಎಲ್ಲಿ ಪಡೆದಿರಿ ? ಅಲ್ಲದೆ ಯಾವ ರೀತಿಯಲ್ಲಿ ಇಲ್ಲಿಗೆ ಬಂದಿರಿ? ಇದನ್ನು ನನಗೆ ತಿಳಿಸಿರಿ* ಎಂದನು, ಕುಮಾರನು ರಾತ್ರಿಯೆಲ್ಲ ‘ಅತಿರಂಜನೆ’ ಎಂಬ ನಾಟಕ ನೋಡಿನಿದ್ದೆ ಗೆಟ್ಟಿದ್ದುದರಿಂದ ಕಮಳಮತಿ ಎಂಬ ವಿದ್ಯಾಧರೆ ವಿದಗ್ದೆಯಾದ ಸ್ತ್ರೀಯನ್ನು ಕರೆದು “ನನ್ನ ಸಂಬಂಧವಾದ ಎಲ್ಲ ಕಥೆಯನ್ನೂ ಮಹೇಂದ್ರಸಿಂಹನಿಗೆ ಹೇಳು* ಎಂದು ನುಡಿದು ನಿದ್ರೆಗೆ ವಶನಾಗಿ ಮಲಗುವ ಮನೆಯನ್ನು ಹೊಕ್ಕನು. ಇತ್ತ ಕಮಳಮತಿ ಮಹೇಂದ್ರಸಿಂಹನಿಗೆ ಈ ರೀತಿಯಾಗಿ ಹೇಳತೊಡಗಿದಳು . – ಕುಮಾರನು ಕುಳಿತು ಪಟ್ಟದ ಕುದುರೆ ಕುಮಾರನನ್ನು ತೆಗೆದುಕೊಂಡು ಮನೋವೇಗದಿಂದ ಬೆಟ್ಟ, ಕಾಡು, ತಪ್ಪಲು, ಹೊಳೆಗಳ ಸ್ಥಳಗಳಲ್ಲಿ ಮೂರು ದಿವಸ ಇರುಳೂ ಹಗಲೂ ಓಡುತ್ತಿದ್ದು ಕರುಳು ತುಂಡಾಗಿ ಎದೆ ಒಡೆದು ಸತ್ತುಹೋಯಿತು. ಆಗ ಸನತ್ಕುಮಾರನು ಬಹಳವಾಗಿ ಹಸಿವು

ಲದ ಮರದ ಕೆೞಗೆ ಶಿಲಾತಳದ ಮೇಗೆ ಪಟ್ಟಿರ್ದ್ದನಾಗಳಲ್ಲಿಯಾ ವಟವೃಕ್ಷವಾಸಿಯಪ್ಪ ಮನೋಹರನೆಂಬ ಯಕ್ಷಂ ಕಂಡೀ ಪುರುಷಂ ಸಕಲಚಕ್ರವರ್ತಿಯಪ್ಪನೆಂದಱದು ಗಂಧೋದಕಮಂ ಮೇಲೆ ತಳಿದು ತಣ್ಣಾಳಿಯಂ ವಿಗುರ್ವಿಸಿ ದೇಹಕ್ಕಾಪ್ಯಾಯನಂ ಮಾಡಿ ಸ್ವರ್ಣಭಾಜನದಿಂದಾಮೋದಸುಗಂಧಮಪ್ಪ ಕೋಡುವ ನೀರನಾತಂಗೆ ಕುಡಿಯಲೆಱೆದನಾಗಳ್ ಕುಮಾರಂ ನೀನಾರ್ಗ್ಗೀ ನೀರನೆಲ್ಲಿಂ ತಂದಯ್ ಪೇೞೆಂದು ಬೆಸಗೊಂಡೊಂಡಾತನಿಂತೆಂದನಾನೀ ವಟವೃಕ್ಷನಿವಾಸಿಯೆನ್ ಮನೋಹರನೆಂಬ ಯಕ್ಷನೆನ್ ಕ್ಷುಲ್ಲಕಮಾನಸಮೆಂಬ ಸರೋವರದಿಂ ತಂದೆನೀ ನೀರನೆನೆ ಅಂತಪ್ಪೊಡೆ ನೀನೆನ್ನನಾ ಕೊಳಕ್ಕೊಡಗೊಂಡು ಪೋಗಲ್ಲಿಯಾ ನೀರಂ ಮಿಂದು ಕುಡಿದೊಡಲ್ಲದೆನಗೆ ನೀರೞ್ಕೆ ಕಿಡದೆಂದು ಪೇೞ್ದೊಡೆ ಕುಮಾರನನೆತ್ತಿಕೊಂಡು ಪೋಗಿ ಯಕ್ಷನಾ ಸರೋವರದ ತಡಿಯೊಳಿೞಪಿ ಪೋದನ್ ಆ ಅವಸರದೊಳ್ ಸಿತಯಕ್ಷನೆಂಬ ವ್ಯಂತರದೇವಂ ಕುಮಾರನ ಪೂರ್ವವೈರಿ ಭೌಮವಿಹಾರಕ್ಕೆ ಬಂದು ಕುಮಾರನಂ ಕಂಡು ಕ್ರೋಧಾಗ್ನಿ ಪೆರ್ಚ್ಚಿ ಭೈರವರೂಪಧಾರಿಯಾಗಿ ಕಳಕಳಧ್ವನಿಯಿಂದಂ ಗರ್ಜಿಸಿ ಬರ್ಪೊನಂ ಕಂಡಾಗಳ್ ಸಿಂಹಾನಾದಂಗೆಯ್ದು ಖೞ್ಗಸನ್ನಿಭಮಪ್ಪ ಮಹಾಶಿಲೆಯಂ ಕಿೞತ್ತಿಕೊಂಡು ಪ್ರತಿರಾಕ್ಷಸಂಬೊಲ್ ನಿಂದ ಕುಮಾರನಂ ನೋಡಿ ವ್ಯಂತರದೇವಂ ನಾಗಪಾಶದಿಂದಂ ವೇಷ್ಟಿಸಿದೊಡೆ ಕುಮಾರನದಂ

ಬಾಯಾರಿಕೆಗಳಿಂದ ಬಾತನಾಗಿ ಶಕ್ತಿಗುಂದಿದ್ದನು. ಅವನು ದೊಡ್ಡದಾದ ಒಂದು ಆಲದ ಮರದ ಕೆಳಗಿನ ಕಲ್ಲಿನ ತಳದ ಮೇಲೆ ಮಲಗಿದ್ದನು. ಆಗ ಅಲ್ಲಿ ಆ ಆಲದ ಮರದಲ್ಲಿ ವಾಸವಾಗಿದ್ದ ಮನೋಹರನೆಂಬ ಯಕ್ಷನು ಅವನನ್ನು ಕಂಡನು. “ಈ ಪುರುಷನು ಭರತಕ್ಷೇತ್ರದ ಆರು ಖಂಡಗಳಿಗೂ ಆರಾಜನಾಗುವನು* ಎಂದು ತಿಳಿದುಕೊಂಡನು. ಕುಮಾರನು ಮೇಲೆ ಗಂಧದ ನೀರನ್ನು ಸೇಚಿಸಿದನು. ತಂಗಾಳಿಯನ್ನು ಮಾಯೆಯಿಂದ ಸೃಷ್ಟಿಸಿ ಅವನ ದೇಹಕ್ಕೆ ಹಿತವನ್ನುಂಟುಮಾಡಿ, ಚಿನ್ನದ ಪಾತ್ರೆಯಿಂದ ಸಂತೋಷಕರವೂ ಸುಗಂಧಯುಕ್ತವೂ ಅದ ತಣ್ಣೀರನ್ನೂ ಅವನಿಗೆ ಕುಡಿಯುವುದಕ್ಕಾಗಿ ಹೊಯ್ದನು. ಆಗ ಕುಮಾರನು “ನೀನು ಯಾರು ? ಈ ನೀರನ್ನು ಎಲ್ಲಿಂದ ತಂದೆ ? ಹೇಳು* ಎಂದು ಕೇಳಿದನು. ಅದಕ್ಕೆ ಅವನು – “ನಾನು ಈ ಆಲದ ಮರದಲ್ಲಿ ವಾಸಿಸುತ್ತಿರುವ ಮನೋಹರನೆಂಬ ಯಕ್ಷನಾಗಿರುವೆನು. ಈ ನೀರನ್ನು ಕ್ಷುಲ್ಲಕಮಾನಸವೆಂಬ ಕೊಳದಿಂದ ತಂದಿರುವೆನು* ಎಂದು ಹೇಳಿದನು. ಕುಮಾರನು ಅವನೊಡನೆ “ಹಾಗಾದರೆ ನೀನು ನನ್ನನ್ನು ಆ ಕೊಳಕ್ಕೆ ಕರೆದುಕೊಂಡು ಹೊಗು. ಅಲ್ಲಿ ಅ ನೀರಿನಲ್ಲಿ ಸ್ನಾನಮಾಡಿ ಜಲಪಾನ ಮಾಡಿದಲ್ಲದೆ ನನಗೆ ಬಾಯಾರಿಕೆ ಪರಿಹಾರವಾಗದು* ಎಂದು ಹೇಳಲು, ಯಕ್ಷನು ಕುಮಾರನನ್ನು ಎತ್ತಿಕೊಂಡು ಹೋಗಿ ಆ ಸರೋವರದ ದಡದಲ್ಲಿ ಇಳಿಸಿ ಹೋದನು. ಆ ಸಂದರ್ಭದಲ್ಲಿ ಸನತ್ಕುಮಾರನು ಪೂರ್ವಜನ್ಮದ ಶತ್ರುವಾದ ಸಿತಯಕ್ಷನೆಂಬ ವ್ಯಂತರದೇವನು ಭೂಮಿಯಲ್ಲಿ ಸಂಚರಿಸುವುದಕ್ಕಾಗಿ ಬಂದು, ಕುಮಾರನನ್ನು ಕಂಡನು. ಆಗ ಸಿಟ್ಟೆಂಬ ಬೆಂಕಿ ಹೆಚ್ಚಾಗಿ ಭೈರವರೂಪವನ್ನು ಧರಿಸಿ ಗರ್ಜಿಸುತ್ತ ಬಂದನು. ಅವನನ್ನು ಕುಮಾರನು ಕಂಡು ಸಿಂಹಗರ್ಜವೆ ಮಾಡಿ ಖಡ್ಗವನ್ನು ಹೋಲುವ ದೊಡ್ಡ ಕಲ್ಲನ್ನು ಕಿತ್ತು ಎತ್ತಿಕೊಂಡು ಎದುರಾಗಿ ರಾಕ್ಷಸನೇ ಬಂದ ಹಾಗೆ ನಿಂತನು. ವ್ಯಂತರದೇವನು ಕುಮಾರನನ್ನು ನೋಡಿ ನಾಗಪಾಶದಿಂದ ಅವನನ್ನು ಸುತ್ತುವರಿಯಲು (ಬಂಸಲು) ಕುಮಾರನು ಅದನ್ನು ತನ್ನ

ಹಸ್ತತಳದಿಂ ಪಱಯೆ ಪೊಯ್ದನಾಗಳಾ ದೇವಂ ನಾನಾ ವಿಧ ಮಾಯಾಯುದ್ಧಂಗಳಿಂ ಕಾದೆ ಕುಮಾರನಂ ಯಷ್ಟಿಮುಷ್ಟಿ ಪ್ರಹಾರಾದಿಗಳಿಂ ಗೆಲ್ದಿರ್ದೊನನೆತ್ತಿಕೊಂಡು ಸಮುದ್ರದ ಬಡವಾಮುಖದೊಳಿಕ್ಕಿ ಕೊಲ್ವೆನಮೋಘಮೆಂದು ನೆಲದಿಂದುರ್ಬಿ ಬಂದಾಕಾಶಕ್ಕೆ ನೆಗಪಿದೊನ ಸ್ಕಂಧಮಂ ತಿವಿದೊಂ ಕುಮಾರನ ಅವೃಷ್ಟಿವಜ್ರಘಾತಂಬೊಲಪ್ಪ ಮುಷ್ಟಿಯಿಂ ದಿವ್ಯಪುರುಷನ ಹಸ್ತಪ್ರಹಾರಮೆಂಬ ಮುದ್ರಾಪೀಡೆಯಿಂ ತ್ರಸ್ತಾಭಿಭೂತನಾಗಿ ಬೆನ್ನಿತ್ತೋಡಿದನಾಗಳ್ ತನ್ನಿವಾಸಿಗಳಪ್ಪ ಯಕ್ಷಕಿನ್ನರಾದಿಗಳ್ ಮಸ್ತಕದೊಳ್ ನೃಸ್ತಹಸ್ತರ್ಕ್ಕಳಾಗಿ ಜಯಜಯಶಬ್ದಂಗಳಿಂದಂ ಪುಷ್ಪಾದಿಗಳಿಂ ಕುಮಾರನಂ ಪೂಜಿಸಿದರ್ ಆ ಅವಸರದೊಳಿಂದ್ರಪ್ರಭನೆಂಬ ವಿದ್ಯಾಧರಂ ಬಂದು ಕುಮಾರನ ಚರಣಾರವಿಂ ದಂಗಳ್ಗೆಱಗಿ ಪೊಡೆವಟ್ಟಿಂತೆಂದನ್ ಸ್ವಾಮಿ ಮೂವತ್ತಾಱುವರುಷಂ ನಿನ್ನ ಬರವನಾನೆನ್ನರಸನ ಬೆಸದಿಂ ಪಾರುತ್ತಿರ್ದ್ದೆಂ ನೀನೆನ್ನ ಭಾಗ್ಯದಿನಿಲ್ಲಿಗೆ ಬಂದಯ್ ಏಱು ವಿಮಾನಮನೆನೆ ಅಂತೆಗೆಯ್ವೆನೆನ್ನ ಬಯಕೆಯಂ ತೀರ್ಚಿದ ಬೞಕ್ಕೇಱುವೆನೆಂದು ಕೊಳನಂ ಪೊಕ್ಕು ಸ್ವೇಚ್ಛೆಯಿಂ ಕ್ರೀಡಿಸಿ ಪೊಱಮಟ್ಟನನಾ ಖೇಚರಂ ಕೊಂಡು ಪೋಗಿ ತದ್ವನದೊಳತಿ ರಮಣೀಯಮಪ್ಪ ಪ್ರದೇಶದೊಳಾಡುತ್ತಿರ್ದ್ದ ವಿದ್ಯಾಧರ ಕನ್ನೆಯರ್ಕಳ ಪಕ್ಕದಿರಿಸಿ ಪೋದನ್ ಎತ್ತ ಖೇಚರ ಕನ್ನೆಯರ್ಕಳ ಕಣ್ಗಳೆಂಬ ಮೀಂಗಳ್ ಕುಮಾರನ ರೂಪೆಂಬ ಗಾಳದಿಂ ತೆಗೆಯೆಪಟ್ಟು ತಪನ ತಾಪನ ದಹನ ವಿಮೋಹನ ಮರಣ ಸ್ವರೂಪದ

ಅಂಗೈಯಿಂದ ಹೊಡೆದು ತುಂಡುಮಾಡಿದನು. ಆಗ ಸಿತಯಕ್ಷನು ಹಲವಾರು ರೀತಿಯ ಮಾಯೆಯ ಯುದ್ದಗಳಿಂದ ಹೋರಾಡಲು ಕುಮಾರನು ದೊಣ್ಣೆ ಮುಷ್ಟಿಗಳ ಹೊಡೆತಗಳಿಂದ ಗೆದ್ದನು. ವ್ಯಂತರನು ಕುಮಾರನನ್ನು ಎತ್ತಿಕೊಂಡು, ಸಮುದ್ರದ ವಡಬಾಗ್ನಿಯ ಬಾಯಿಗೆ ಹಾಕಿ ಕೊಲ್ಲುವೆನು, ಈ ಕಾರ್ಯ ವ್ಯರ್ಥವಾಗದು – ಎಂದು ನೆಲದಿಂದ ಹಿಗ್ಗಿ ಬಂದು ಆಕಾಶಕ್ಕೆ ಎತ್ತಲು ಕುಮಾರನು ಅವನ ಹೆಗಲಿಗೆ ತಿವಿದನು. ಅವನ ವರಸಿಡಿಲಿನ ಹೊಡೆತದಂತಹ ಮುಷ್ಟಿಯ ಹೊಡೆತದ ಹಿಂಸೆಯಿಂದ ಹೆದರಿದವನೂ ಹೊಡೆಯಲ್ಪಟ್ಟವನೂ ಆಗಿ ಬೆನ್ನುಕೊಟ್ಟು ಓಡಿಹೋದನು. ಆಗ ಅಲ್ಲಿ ವಾಸಮಾಡುತ್ತಿದ್ದ ಯಕ್ಷರು ಕಿನ್ನರರು ಮುಂತಾದವರು ತಲೆಯ ಮೇಲೆ ಕೈಯಿಟ್ಟವರಾಗಿ ಜಯ ಜಯ ಎಂಬ ಶಬ್ದಗಳಿಂದಲೂ ಹೂ ಮುಂತಾದವುಗಳಿಂದಲೂ ಸನತ್ಕುಮಾರನನ್ನು ಪೂಜಿಸಿದರು. ಆ ಸಂದರ್ಭದಲ್ಲಿ ಇಂದ್ರಪ್ರಭನೆಂಬ ವಿದ್ಯಾಧರನು ಬಂದು ಕುಮಾರನ ಪಾದಕಮಲಗಳಿಗೆ ಬಿದ್ದು ಸಾಷ್ಟಾಂಗ ನಮಸ್ಕಾಗಳನ್ನು ಮಾಡಿ ಹೀಗೆ ಹೇಳಿದನು – ಸ್ವಾಮೀ, ನಾನು ನನ್ನ ಅರಸನ ಆಜ್ಞೆಯ ಪ್ರಕಾರ ಮೂವತ್ತಾರು ವರ್ಷಗಳಿಂದ ನಿನ್ನ ಆಗಮನವನ್ನು ಎದುರು ನೋಡುತ್ತ ಇದ್ದೆನು. ನೀನು ನನ್ನ ಪುಣ್ಯದಿಂದ ಇಲ್ಲಿಗೆ ಬಂದಿರುತ್ತೀ. ಇಗೋ ವಿಮಾನ ಹತ್ತು ಹತ್ತು. * ಹೀಗೆನ್ನಲು, “ಹಾಗೆಯೇ ಮಾಡುವೆನು ; ನನ್ನ ಬಯಕೆಯನ್ನು ತೀರಿಸಿ ಆದಮೇಲೆ ಹತ್ತುವೆನು* ಎಂದು ನುಡಿದು ಕುಮಾರನು ಸರೋವರವನ್ನು ಹೊಕ್ಕನು. ಅಲ್ಲಿ ತನ್ನ ಇಚ್ಚೆಗೆ ಬಂದಂತೆ ಜಲಕೇಳಿಯಾಡಿ ಹೊರಟನು. ಹೊರಟ ಅವನನ್ನು ವಿದ್ಯಾಧರನು ಎತ್ತಿಕೊಂಡು ಹೋಗಿ, ಆ ಕಾಡಿನಲ್ಲಿ ಅತ್ಯಂತ ಮನೋಹರವಾದ ಸ್ಥಳದಲ್ಲಿ ಆಡುತ್ತಿದ್ದ ಕನ್ಯೆಯರ ಬಳಿಯಲ್ಲಿರಿಸಿ ತೆರಳಿದನು. ಇತ್ತ ವಿದ್ಯಾಧರ ಕನ್ಯೆಯರ ಕಣ್ಣುಗಳೆಂಬ ಮೀನುಗಳು ಕುಮಾರನ ರೂಪವೆಂಬ ಗಾಳದಿಂದ ಹಿಡಿಯಲ್ಪಟ್ಟವು. ತಪನ, ತಾಪನ, ದಹನ, ವಿಮೋಹನ (ವಿಶೇಷವಾಗಿ ಮೋಹಗೊಳಿಸುವುದು), ಮರಣ – ಎಂಬ