ಶ್ರೀ ಕೆ. ಕೆ. ಪೈಯವರಂತಹ ವ್ಯಕ್ತಿ ಸಿಂಡಿಕೇಟ್ ಬೇಂಕಿನಲ್ಲಿರುವುದು ಅತ್ಯಂತ ಅಭಿಮಾನದ ಸಂಗತಿ. ಅವರೊಬ್ಬ ಪ್ರತಿಭಾವಂತ ವ್ಯಕ್ಯಿ. ಸದ್ಗುಣವಂತ ವ್ಯಕ್ತಿ, ಶಕ್ತಿಶಾಲಿ ವ್ಯಕ್ತಿ, ಬುದ್ಧಿವಂತ ವ್ಯಕ್ತಿ, ಉಕ್ಕಿನಂತಹ ವ್ಯಕ್ತಿ, ಮಾತ್ರವಲ್ಲದೆ ಒಳ್ಳೆಯ ವ್ಯಕ್ತಿ ಕೂಡ. ಅವರ ವ್ಯಕ್ತಿತ್ವದಲ್ಲಿ ಮಾನವನಲ್ಲಿರತಕ್ಕ ಎಲ್ಲ ಸದ್ಗುಣಗಳೂ, ಜಾಣ್ಮೆಯೂ ಸರಿಸಮನಾಗಿ ಸಮಾವೇಶಗೊಂಡಿವೆ. ಮಾತ್ರವಲ್ಲದೆ ನಾವು ಓರ್ವ ಬೇಂಕ್ ಅಧಿಕಾರಿಯಿಂದ ಏನನ್ನು ನಿರೀಕ್ಷಿಸಬಹುದೋ ಅವೆಲ್ಲವೂ ಅವರಲ್ಲಿ ಮನೆ ಮಾಡಿಕೊಂಡಿವೆ.
– ಮಣಿಪಾಲದ ಬ್ರಹ್ಮ, ಪದ್ಮಶ್ರೀ ದಿ ಡಾ. ಟಿ. ಮಾಧವ ಪೈ

ಹಸಿದವನಿಗೆ ಮೀನು ಕೊಡುವುದಕ್ಕಿಂತ ಮೀನು ಹಿಡಿಯಲು ಆತನಿಗೆ ಕಲಿಸುವುದು ಆತನಿಗೊಂದು ಬದುಕು ನೀಡಿದಂತೆ ಎಂಬುದು ಚೀನಿ ಗಾದೆ ಮಾತು. ಪೈಗಳು ಮಾಡಿದ್ದು ಇದನ್ನೇ.
– ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಶ್ರೀಕ್ಷೇತ್ರ ಧರ್ಮಸ್ಥಳ

On his 78th birthday I send him my affectionate greetings and wish him long useful and healthy life. May God grant him many more years to serve the people.
– M.V.Kamath, Journalist

ಪೈಗಳ ನೆನಪಿನ ಶಕ್ತಿ ಅಗಾಧ. ಹಳೆಯ ನೆನಪುಗಳನ್ನು ಅವರು ಎಳೆಎಳೆಯಾಗಿ ಬಿಚ್ಚಿಡುವ ಪರಿ ಅನನ್ಯ. ಅವರನ್ನು ಬಣ್ಣಿಸಲು ಸ್ವತಃ ಲೇಖಕ ಮತ್ತು ಕವಿಯಾದ ನನ್ನ ಬಳಿ ಶಬ್ದಗಳೇ ಇಲ್ಲ.
– ಡಾ.ನಾ. ಮೊಗಸಾಲೆ, ಕಾರ್ಯಾಧ್ಯಕ್ಷ, ಕಾಂತಾವರ ಕನ್ನಡ ಸಂಘ

ಪೈಗಳು ಜಿ.ಎಸ್. ಬಿ. ಸಮಾಜದ ಒಂದು ಅನರ್ಘ್ಯ ರತ್ನ. ಉಡುಪಿ ಪರಿಸರದ ಮಕ್ಕಳಿಗೆ ಅವರು ಬ್ಯಾಂಕಿನಲ್ಲಿ ಕೆಲಸ ಕೊಡಿಸದೇ ಇರುತ್ತಿದ್ದರೆ ನಮ್ಮ ಮಕ್ಕಳೆಲ್ಲ ಹೋಟೇಲು ಮಾಣಿಗಳಾಗಿರಬೇಕಾಗಿತ್ತು.
– ಮುಕುಂದ ಕಾಮತ್, ನಿವೃತ್ತ ಪೋಸ್ಟ್ಮಾಸ್ಟರ್

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕರಾವಳಿ ಜಿಲ್ಲೆಯ ಬ್ಯಾಂಕುಗಳ ಕೊಡುಗೆ ಅನನ್ಯ. ಪೈಗಳು ಕೂಡಾ ಕರಾವಳಿ ಜಿಲ್ಲೆಯ ಆರ್ಥಿಕ ಚಿತ್ರಣ ಬದಲಿಸುವಲ್ಲಿ ಒಬ್ಬ ಕಾರಣ ಕರ್ತರು. ಅವರೊಬ್ಬ ಮಹಾನ್ ಆದರ್ಶ ಮತ್ತು ಆಶಾವಾದ ಹೊಂದಿದ ವ್ಯಕ್ತಿ. ಅವರ ಜೀವನ ಚರಿತ್ರೆ ಮೊದಲೇ ಬರಬೇಕಿತ್ತು.
– ದಾಮೋದರ ಐತಾಳ, ಬಳಕೆದಾರರ ವೇದಿಕೆ, ಉಡುಪಿ

Kalsanka Kamalaksha Pai is a legend in this part of Konkan Coast and is personification of an educated man himself. May God add years to his life to serve the society.
– Prof. B. M. Hegde

Mr. K.K. Pai has at his finger tips the knowledge of track record of every one in the bank. As a rare administrator he was extremely careful in the selection of staff.
– K.G. Malya

It was my privilege to have been in syndicate bank as Mr. K.K.Pai’s colleague.
– H.N. Rao

With FICCI Award (1974) ASSOCHEM AWARD (1975) IMC AWARD (1976) NAYE AWARD (1976) FICCI AWARD (1977) for best industrial relations to his credit, the life and achivements of Sri. K.K.Pai was synonymous with progress and achivements of Syndicate Bank. He developed men around him as Committed Rural Bankers. Like his illustrious predecessor Dr.T.M.A Pai and T.A. Pai, K.K.Pai carved  for himself a place of pride among banking fraternity.
– K.M. Udupa, Bharathiya Vikas Trust

Mr. K.K. Pai has a photographic memory of names, places and events he has come across. He is a good listener and therefore has a reservoir of information stored in his computerized brain.
– V.R. Kamath

ಪೈಗಳ ಕುರಿತಾಗಿ ಅಭಿಮಾನಿಗಳ ಪ್ರೀತಿ ಅಳೆಯಲು ಸಾಧ್ಯವೇ ಇಲ್ಲ. ಅದನ್ನೆಲ್ಲ ದಾಖಲಿಸಿದರೆ ಪುಟಗಳೇ ಸಾಕಾಗುವುದಿಲ್ಲ. ಆದರೆ ಇವರ ಅಭಿಮಾನಿಗಳ ಪ್ರೀತ್ಯಾಭಿಮಾನ ಗಳನ್ನು ನೋಡಿದಾಗ ಯಾರೂ ಮೂಕ ವಿಸ್ಮಿತರಾಗುವುದು ಸಹಜವೇ. ಇದನ್ನೆಲ್ಲ ಗಮನಿಸಿದಾಗ ಮಾತುಗಳೂ ಮೌನವಾಗುತ್ತವೆ. ಪೈಗಳ ಈ ಎಲ್ಲ ಅಭಿಮಾನಿಗಳು ಪೈಗಳ ಕುರಿತಾಗಿ ಅಭಿಮಾನ ವ್ಯಕ್ತಪಡಿಸಿದ್ದು ನೋಡಿಯೇ ಲೇಖಕಿಯ ಲೇಖನಿಯಿಂದ ಮೂಡಿಬಂದ ಪುಟ್ಟ ಕವಿತೆಯಿದು ಪೈಗಳ ನೆನಪಿಗಾಗಿ, ಪೈಗಳ ಅಭಿಮಾನಿಗಳ ಪರವಾಗಿ:

You kindled in us
The flame of excellence
Motivated us to deliver
Beyond performance
Inspired us to chart
New paths with confidence
As we strived to attain
Your vision of a sustainable
World of abundance
We all salute thee sir
With utmost reverence

ಪೈಗಳ ಸಾಮೀಪ್ಯದ ನೆನಪೇ ಅವರ ನಿಕಟವರ್ತಿಗಳಿಗೆ ಒಂದು ಒಳ್ಳೆಯ ಅನುಭವ. ಉಡುಪಿಯ ಪ್ರಮುಖ ಘಟನೆಗಳ ಕುರಿತಾಗಿ ಸಕ್ರಿಯವಾಗಿ ಸ್ಪಂದಿಸುತ್ತಾ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ಪೈಗಳು ಎಲ್ಲರೂ ನೋಡುತ್ತಿರುವಂತೆ ದಿನಾಂಕ 14-01-09 ಮಕರ ಸಂಕ್ರಾಂತಿ ದಿನದಂದೇ ತನ್ನ ಇಹಲೋಕದ ಯಾತ್ರೆಯನ್ನು ಮುಗಿಸಿಬಿಟ್ಟರು. ಉಡುಪಿ ಪರಿಸರದ ಜನತೆ ಅವರಿಗೆ ತಮ್ಮ ಅಂತಿಮ ಶ್ರದ್ಧಾಂಜಲಿ ಅರ್ಪಿಸಿತು. ಅವರ ಅಂತಿಮ ದರ್ಶನ ಪಡೆಯಲು ಹರಿದು ಬಂದ ಜನಸಾಗರವೇ ಅವರ ಜನಪ್ರಿಯತೆಯನ್ನು ಸಾಬೀತುಪಡಿಸಿತು. ಅಂಥ ಪೈಗಳು ಈಗ ನಮ್ಮ ಮಧ್ಯೆ ಇಲ್ಲ ಅನ್ನುವುದೇ ಒಂದು ಮಿಥ್ಯೆ ಅನಿಸುತ್ತಿದೆ. ಆತ್ಮಕ್ಕೆ ಸಾವಿಲ್ಲ ಎನ್ನುತ್ತಾರೆ. ಗೀತೆಯ ಸಾಂಖ್ಯಯೋಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವ ಉಪದೇಶವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು :

ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ॥

(ಈ ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು. ಇದನ್ನು ಬೆಂಕಿ ಸುಡಲಾರದು. ನೀರೂ ನೆನೆಯಿಸಲಾರದು ಮತ್ತು ವಾಯು ಕೂಡಾ ಒಣಗಿಸಲಾರದು.) ಇದು ಪೈಗಳಿಗೂ ಅನ್ವಯವಾಗುತ್ತದಲ್ಲವೇ?