ಆತ ನಿಮ್ಜೊತೆ ಯಾವ ಅಂಶಗಳನ್ನು ಚರ್ಚಿಸಿದ?
ಅಂದ, ನನ್ನ ಆರ್ಗುಮೆಂಟ್ ಹಿಡ್ಕಂಡು ಎಸ್ ಸರ್, ಯು ಆರ್ ಕರೆಕ್ಟ್ ಅಂದ. ನಮ್ಮ ರಾಜಕಾರಣಿಗಳೇ ಇದಕ್ಕೆಲ್ಲ ಕಾರಣ ಅಂತ ಒಪ್ಕೊಂಡ ಅಂವ. ಅಂಡ್ ಹಿ ಕೇಮ್ ಟು ಕಾಶ್ಮೀರ್ ಇಶ್ಯೂ. ಕಾಶ್ಮೀರದಲ್ಲಿ ನಾ ಇದ್ದೆ ಸಾರ್ ಎಷ್ಟೋ ವರ್ಷ, ಅದು ಟೆರರಿಸಂ ಅಲ್ಲ. ಇಟ್ ಈಸ್ ಎ ಪ್ರಾಬ್ಲಂ ಆಫ್ ಪೀಪಲ್ ದೇರ್ ಮತ್ತು ಅದು ನಾವು ಸೃಷ್ಟಿಸಿದ ಸಮಸ್ಯೆ ಅದು ಅಂದ. ನಾವು ಅಂದ್ರೆ ಗೌರ್ನ್ಮೆಂಟ್ ಅಂಡ್ ಮಿಲಿಟರಿ. ಓಪನ್ಲೀ ಮಾತಾಡಿದ್ರು. ನಾನು ನನ್ನ ಕೆಲ್ಸ ಮಾಡ್ಲೇಬೇಕು ಸಾರ್. ಡೋಂಟ್ ಮಿಸ್ಟೇಕ್ ಮೀ ಅಂತ್ಹೇಳಿದ. ಒಳ್ಳೇ ಅಭ್ಯಾಸ ಮಾಡಿದ್ದ ಅಂವ ನಕ್ಸಲೈಟರ ಬಗ್ಗೆ. ಆದ್ರೆ ಆತನ ಕೆಲಸ ಆತ ಮಾಡ್ಲೇಬೇಕಲ್ಲ ಪಾಪ. (ನಗು) ಅದೇನಾಗ್ತದೆ… ಕೆಲವರು ಪೋಲೀಸ್ ಮಾಹಿತಿದಾರರಿರ್ತಾರೆ. ಅವರು ಇಲಾಖೆಗೆ ವಿಷಯ ತಿಳಿಸಿಬಿಡ್ತಾರೆ. ಇವರ ಚಟುವಟಿಕೆ ಬಗ್ಗೆ ನಾನು ಅಧಿಕಾರಿಗಳು ಬರ್ತಾರೆ. ಇಲ್ಲಿ ಫಸ್ಟ್ ಒಂದು ಹುಡುಗೀದು ಸಾವಾಗಿದ್ದು ಹಾಗೇ ಅಂತೀನಿ ನಾನು. ಥ್ರೀ ಇಯರ್ಸ್ ಬ್ಯಾಕ್ ಇಲ್ಲಿ ಕಾರ್ಕಳದ ಹತ್ತಿರ, ಅವ್ರು ಎಲ್ಲೋ ಮನೇಲಿದ್ರು ಪಾಪ. ನಿನ್ನೆ ರಾತ್ರಿ ಬಂದಿದ್ಲಂತೆ ಅವ್ಳು. ಹೇ ಬಂದಾರೆ ಅಂತ ಸುದ್ದಿ ಬಂತು ಇವರಿಗೆ. ಪೋಲೀಸರಿಗೆ ಅವಳು ಹೊರಗೆ ಬರುವಾಗ ಇವ್ರು ಅಟ್ಯಾಕ್ ಮಾಡಿರಬೇಕು. ಇವ್ರು ಅವ್ರನ್ನ ಅರೆಸ್ಟ್ ಮಾಡಿ ಒಳಗೆ ತಂದು ಇಟ್ಕೊಬೇಕಿತ್ತು. ಅವರ್ಹತ್ರ ಶಸ್ತ್ರ ಉಂಟು. ಅಂತ್ಹೇಳಿ, ನಾನು ಜಸ್ಟ್ ಇಲ್ಲಿಗೆ ಬಂದಿದ್ದೆ ಅವಾಗ. ಐ ಲೈಕಡ್ ದೆಮ್. ಅದರ್ಬಗ್ಗೆ ಪ್ರತಿ ಕ್ರಿಯೆಗಳು, ಉಡುಪಿಯಲ್ಲಿ ಸುತ್ತಮುತ್ತ ನಮ್ಮ ಲೈಕ್ ಮೈಂಡೆಡ್ ನಮ್ಮಂತೆ ವಿಚಾರ ಮಾಡುವವರು ಹೆಲ್ತಿಯಾಗಿ ಚರ್ಚೆ ಮಾಡಿದ್ರು. ಈಗ್ಲೂ ಅವರು ದೇಶದ್ರೋಹಿಗಳು ಅಂತ ಹೇಳ್ಬೇಡಿ ಅಂತ ಕುಮಾರಸ್ವಾಮಿ ಅಸೆಂಬ್ಲಿಯಲ್ಲಿ ಹೇಳಿದ್ರು. ಇಟ್ ಈಸ್ ಎ ಸೋಶಿಯಲ್ ಪ್ರಾಬ್ಲಂ ಅಂತ. ಅವರ ಆಫೀಸರ್ ಚಿರಂಜೀವಿ ಸಿಂಗ್ ಹೀ ಆಲ್ಸೋ ಸೆಡ್, ದಿಸ್ ಈಸ್ ಸೋಶಿಯಲ್ ಪ್ರಾಬ್ಲಂ ಅಂತ. ಬಟ್ ಇಟ್ ಮೆಬಿ ಇನ್ ಡಿಫರೆಂಟ್ ಪಾರ್ಮ್, ನೇಮ್ಸ್, ಬ್ರಾಂಡ್ಸ್, ಬ್ರಾಂಡ್ ಈಸ್ ನಾಟ್ ಇಂಪಾರ್ಟೆಂಟ್. ಬಟ್ ಇಶ್ಯೂಸ್ ಅಲ್ಲಿ ನಾರ್ತ್ ಕೆನರಾದಲ್ಲಿ ಇದ್ದಾಗ ನಾನು ಸೋಶಿಯಲ್ ಮೂವ್ಮೆಂಟ್ ಅಂತಾ ಜನರ ನಡುವೆ ಹೋಗ್ಬೇಕು ಅಂತಾ ಸಾಕ್ಷರತಾ ಆಂದೋಲನದಲ್ಲಿ ಹೋದ್ವಿ. ಆ ಆಂದೋಲನಕ್ಕೊಂದು ಹಲ್ಲು ಮೂಡಿಸೋ ಪ್ರಯತ್ನ ಮಾಡಿದ್ವಿ. ಸಾಕ್ಷರತಾ ಆಂದೋಲನ ಬರೀ ಒಂದು ‘ರಿಚ್ಯುವೆಲ್’ ಆಗ್ಬಾರ್ದು ಅಂತಾ. ಅಂಡ್ ಇಟ್ವಾಸ್ ವರ್ಕ್ಡ್ ಔಟ್. ಅಂಡ್ ಇನ್ ಎ ವೇ ಸಕ್ಸಸ್ ಫುಲ್. ನಮ್ಮಲ್ಲಿ ಕುಸುಮಾ ಸೊರಬಾ ಇದ್ರು. ಶಿ ಈಸ್ ಮೇಧಾ ಪಾಟ್ಕರ್ ಆಫ್ನಾರ್ಥ್ ಕೆನರಾ. ಪಾಪ ಹೆಣ್ಮಗಳು ತೀರ್ಕೊಂಡ್ಲು ಆಕ್ಸಿಡೆಂಟ್ನಲ್ಲಿ. ಇಟ್ ಈಸ್ ಗ್ರೇಟ್ ಲಾಸ್.
ಏನೋ ಅನುಮಾನ ಇದೆಯಲ್ಲ ಅವರ ಸಾವಿನ ಬಗ್ಗೆ?
ಅನುಮಾನ ನಮಗೂ ಇದೆ. ಆದ್ರೆ ಅದನ್ನ ಯಾರೂ ಬಗೆಹರಿಸೋಕೆ ಆಗಿಲ್ಲ. ಯಾಕೆಂದ್ರೆ ಪಾಪ ಅವ್ರಿಗೆ ಯಾರೂ ಇಲ್ಲ. ಮಕ್ಕಳಾಗಿಲ್ಲ. ಮದುವೆ ಇಲ್ಲ, ಬೆನ್ಹತ್ತುವವರು ಯಾರೂ ಸಿಗ್ಲಿಲ್ಲ. ಮುಚ್ಚಿ ಹೋಯ್ತು ಬಿಡಿ ಅದು.
ಈ ನಕ್ಸಲ್ ಚಳವಳಿಯ ಕೈ ಮೇಲಾದ್ರೆ ಇಂಡಿಯಾದಲ್ಲಿ ಪರಿಣಾಮ ಏನಾಗ್ಬಹ್ದು?
ಕ್ರಾಂತಿ ಆಗಬಹ್ದು. ರಷಿಯನ್ ರೆವಲ್ಯುಷನ್ ಆಗ್ಲಿಲ್ವ, ಫ್ರೆಂಚ್ ರೆವಲ್ಯುಷನ್ ಆಗಿಲ್ವ. ಆಗ್ಬೇಕಂತೀನಿ ನಾನು.
ರಕ್ತ ಹರೀತದಲ್ಲ?
ಹೋಗ್ಲೀ, ಕೆಲವರ ರಕ್ತ ಹೋಗ್ತದೆ, ಕೆಲವು ರಕ್ತ ಬರ್ತದೆ (ನಗು) ಅಲ್ಲ, ಅಷ್ಟರ ಮಟ್ಟಿಗೆ ಆಗಲ್ಲ. ನಮ್ಮ ಡೆಮಾಕ್ರಸಿ ಈಸ್ ವೆರೀ ಸೌಂಡ್. ನಮ್ಮ ಕಾನ್ಸ್ಟಿಟ್ಯೂಶನ್ ಅಂಡ್ ಡೆಮಾಕ್ರಸಿ ಈಸ್ ವೆರೀ ಸೌಂಡ್. ಅದಕ್ಕೆ ಅವಕಾಶ ಕೊಡೋದಿಲ್ಲ.
ದಿನಕರ ದೇಸಾಯಿಯವರು, ಸಮಾಜವಾದಿಗಳು, ಪ್ರಭಾವ ಬೀರಿದ ಉತ್ತರಕನ್ನಡ ಜಿಲ್ಲೆಯಲ್ಲಿ ಇವತ್ತು ರಾಜಕೀಯವಾಗಿ ಬಿಜೆಪಿ. ಬಲಿಷ್ಠವಾಗಿದೆ. ಹೆಚ್ಚು ಶಾಸಕರಿದ್ದಾರೆ. ಈ ಸಾಮರ್ಥ್ಯ ಅವರಿಗೆ ಬಂದದ್ದು ಹೇಗೆ?
ಇಟ್ ಈಸ್ ಅವರ್ ಮಿಸ್ಟೇಕ್
ಹ್ಯಾಗೆ?
ನೀವು ಅವಾಗೊಂದು ಪ್ರಶ್ನೆ ಕೇಳಿದ್ರಿ. ಆಲದ ಮರ ಅಂತಂದು ಉದಾಹರಣೆ ಕೊಟ್ರೀ. ದಿನಕರ ದೇಸಾಯಿಯವರ ಸೋಲು ಉಂಟಾದ ಕೂಡ್ಲೇ ನಾವೆಲ್ಲ ಕೈಬಿಟ್ವಿ. ರಾಜಕಾರಣ ಬಿಟ್ವಿ. ಇದ್ರಲ್ಲಿ ಅರ್ಥ ಇಲ್ಲ ಅಂತ್ಹೇಳಿ ಅದು ಈಯಮ್ಮ ಇಂದಿರಾಗಾಂಧೀ ಬಂದ್ಮೇಲೆ, ಅದರ ಲಾಭವನ್ನು ಇವ್ರು ಪಡಕೊಂಡ್ರು.
ಇಷ್ಟೇನಾ, ಬೇರೆ ಕಾರಣಗಳೂ ಇದ್ದಾವ?
ಬೇರೆ ಕಾರಣ ಇದೆ, ಧರ್ಮ, ಜಾತಿ ಅವರ ಬಂಡವಾಳ ಇದ್ದೇ ಇದೆಯಲ್ಲ. ಒಂಥರಾ ವ್ಯಾಕ್ಯೂಮ್ ಆದಾಗ ವಿಷಗಾಳಿ ಬಂದಬಿಡ್ತದೆ. ಐ ಸೇ ವಿಷಗಾಳಿ.
ವಿಷಗಾಳಿ ಅಂತಾ ಗುರ್ತಿಸಿದ್ದೀರಿ ಅಂದ್ರೆ ಒಳ್ಳೇ ಗಾಳಿ ಬರೋದು ಹ್ಯಾಗೆ?
ಅದೆಲ್ಲಾ ಜನ ನೋಡ್ಕೋತಾರೆ, ಬಿಡಿ.
ಅಲ್ಲ ನೀವು ಸೂಚಿಸುವ ಪರಿಹಾರಗಳೇನು ಅಂತಾ?
ನಾವು ವೈಚಾರಿಕವಾಗಿ ನಾವು ಬಹಳಷ್ಟು ಪ್ರಯತ್ನ ಪಟ್ಟೆವು. ವಿಷ್ಣುನಾಯ್ಕ ಆಗಲಿ, ನಾವಾಗಲಿ, ನಾವು ಜನಸೇವೆ ಮಾಡಿದ್ವಿ. ಅವರು ‘ಸಕಾಲಿಕ’ ಮಾಡಿದ್ರು. ಇನ್ ಎವೇ ನೀವು ಸೆಕೆಂಡ್ ರ್ಯಾಂಕ್ ಬಿಲ್ಡಪ್ ಮಾಡಿ ಅಂತ್ಹೇಳಿ ನಮ್ಮ ಸೆಕೆಂಡ್ ರ್ಯಾಂಕ್ನಲ್ಲಿ ವಿಷ್ಣುನಾಯ್ಕ ಒಬ್ಬರು. ಆ ರೀತಿ ಅವರು ಸಾಹಿತ್ಯಕವಾಗಿ ಅವರು ಮಾಡ್ತಿದ್ದಾರೆ. ರಾಜಕೀಯವಾಗಿ ಮಾಡ್ಲಿಕ್ಕೆ ಅವರು ಯೋಗ್ಯನೋ, ಸಾರ್ಥಕನೋ ಅಂತಾ ಅವರಿಗೆ ಅನುಮಾನ ಇದೆ. ಆ ಅನುಮಾನ ಇರೋದು ಸಹಜ. ಯಾಕಂದ್ರೆ ಅವರು ಆ ಜಿಲ್ಲೆಯವರು. ಆ ಜಿಲ್ಲೆಯಲ್ಲಿ ಉಳೀತಾರೆ ಆದ್ರೆ ನಾನು ಅಂಗಡಿ ತಗಂಡು ಅಲ್ಲಿ ಹೋಗಿದ್ದೆ. ಅಂಗಡಿ ತಗಂಡು ಇಲ್ಲಿಗೆ ಬಂದೆ. ಬಟ್ ನಾನೇ ಅಲ್ಲಿ ಉಳಿದಿದ್ರೆ ಅಂತಹ ಅವಕಾಶ ಸಿಕ್ಕಿದ್ರೆ ಅದರ ಲಾಭ ಮಾಡ್ಕೋಳ್ತಿದ್ದೆ ಏನೋ. ಆದ್ರೆ ಅಂತಹ ಅವಕಾಶ ನನಗೆ ಸಿಗೋ ಸಂಭವ ಇದ್ದಿಲ್ಲ. ಒಂದು ಹಂತದಲ್ಲಿ ನನ್ನ ಗೆಳೆಯರೆಲ್ಲ ಕೂಡಿ ನನ್ನನ್ನು ಎಂ.ಎಲ್.ಸಿ. ಮಾಡ್ಲಿಕ್ಕೆ ಪ್ರಯತ್ನ ಮಾಡಿದ್ರು. ಟಿಕೆಟ್ ಕೊಟ್ಟು ಕಂಟೆಸ್ಟ್ ಮಾಡಿ ಅಂತಾ ದೇಸಾಯಿಯವರಿಗೆ ಕೇಳಿದೆ ನಾನು. ಆಫರ್ ಬಂದ್ರೆ ಏನ್ಮಾಡುವ ಅಂತ್ಹೇಳಿ. ಇಲ್ಲ ನನಗೆ ಸಾಧ್ಯ ಆಗ್ಲಿಕ್ಕಿಲ್ಲ ಸೋಲ್ತೀ ಅಂತ ಹೇಳಿದ್ರು.
ನಿಮಗೆ ಇಚ್ಛೆ ಇತ್ತಾ ಎಂ.ಎಲ್.ಸಿ ಆಗೋಕೆ?
ಇಚ್ಛೆ ಇತ್ತು, ಯಾಕಂದ್ರೆ ನಮ್ಮ ಆಂದೋಲನಕ್ಕೆ ಶಕ್ತಿ ಬರ್ಲೀ ಅಂತ. ಮತ್ತು ನಮ್ಮ ‘ಜನಸೇವಕ’ ಪತ್ರಿಕೆಗೆ ಕರ್ನಾಟಕದಾದ್ಯಂತ ಪ್ರಸಾರ ಮಾಡೋಣ ಅಂತ. ನಾನು ಎಂ.ಎಲ್.ಸಿ. ಆದ್ರೆ ‘ಜನಸೇವಕ’ ಅಂಕೋಲ ಪತ್ರಿಕೆ ಅಲ್ಲ. ರಾಜ್ಯಪತ್ರಿಕೆ ಮಾಡ್ತೀನಿ ಅಂತ ದೇಸಾಯಿಯವರಿಗೆ ಹೇಳಿದ್ದೆ ನಾನು.
ನಿಮ್ಮನ್ನ ಎಂ.ಎಲ್.ಸಿ. ಮಾಡೋದಿಕ್ಕೆ ಯಾರು ಹೆಚ್ಚು ಕಾಳಜಿ ತೋರ್ಸಿದ್ದು?
ಟಿ.ಕೆ. ಮೆಹಮೂದ್
ಯಾಕೆ ಆ ಪ್ರಯತ್ನ ಯಶಸ್ವಿ ಆಗ್ಲಿಲ್ಲ ಅದು?
ದೇಸಾಯಿಯವ್ರೇ ಬ್ಯಾಡ ಅಂತಂದ್ರಲ್ಲ. ಬಟ್ ಆಗುವುದು ಕಷ್ಟ ಇದ್ದಿಲ್ಲ. ದೇಸಾಯಿಯವರು ಸಪೋರ್ಟ್ ಮಾಡಿದ್ರೆ ಕಷ್ಟ ಇದ್ದಿಲ್ಲ. ಫ್ರೆಂಡ್ಸ್ ಇದ್ರು ನನಗೆ, ಈಗ್ಲೂ ಇದ್ದಾರೆ. ದೇಸಾಯಿಯವರು ಎಸ್ ಹೇಳಿಬಿಟ್ಟಿದ್ರೆ ಆಲ್ ಒವರ್ ಕರ್ನಾಟಕ ಬ್ಯಾಂಕ್ ಮಾಡಿಕೊಳ್ತಿದ್ದೆ ನಾನು. ಅಂಥಾ ಗುಡ್ವಿಲ್, ಫ್ರೆಂಡ್ಸ್ ಇದ್ರು.
ಯಾವ ವರ್ಷ ಸಾರ್ ಅದು?
ಭಾಳ ಹಿಂದೆ ಅದು. ಇನ್ ಬಿಟಿವೀನ್ ೬೭ ಟು ೭೦ ಅದು ಬಿಡಿ ಅದೇನೋ ಆಯ್ತು. ಒಂದು ಛಾನ್ಸ್ ಅಂತಾ ಇದು ಮಾಡಿದ್ದೆ. ಎಸ್ ಹೇಳಿದ್ರೆ ನಾನು ಮಹಮ್ಮದ್ಗೆ. ಆದ್ರೆ ಆಗ್ಲಿಲ್ಲ.
ದೇಸಾಯಿಯವ್ರು ಬ್ಯಾಡ ಅಂತ ಹೇಳದ್ಮೇಲೆ ಏನಾದ್ರೂ ಬೇಸರ ಆಯ್ತಾ?
ಇಲ್ಲ ನನಗೆ ಅಂಥಾದ್ದೆಲ್ಲ ಇಲ್ಲ. ನಾನು ಜಸ್ಟ್ ಲೈಕ್ ಎ ಬುಗುರಿ
ತದಡಿ ಉಷ್ಣ ಸ್ಥಾವರವನ್ನ ನೀವು ವಿರೋಧಿಸಿದ್ದು ಯಾಕೆ?
ಎಂಟೈರ್ ನಮ್ಮ ಸೌತ್ ಅಂಡ್ ನಾರ್ತ್ ಕೆನರಾ ಡಿಸ್ಟ್ರಿಕ್ಟ್ ಒಂಥರಾ ನಮ್ಮದು ಚಿನ್ನದ ಗಣಿ ಇದ್ದ ಹಾಗೆ. ಕಬ್ಬಿಣದ ಅದಿರು ತಗ್ದ ಹಾಗೆ ಇದಲ್ಲ. ಎಲ್ಲ ರೀತಿಯಿಂದ್ಲೂ ಮಾಡ್ತಾ ಹೋದ್ರೆ ನಾವು ಚಿನ್ನದ ಮೊಟ್ಟೆ ಇಡೋ ಕೋಳಿಯನ್ನೇ ಕೊಯ್ದ ಹಾಗಾಗ್ತದೆ. ಆಗ ನಮ್ಮ ದೇಶಪಾಂಡೆಯವರು ಮಿನಿಸ್ಟರ್ ಫಾರ್ ಇಂಡಸ್ಟ್ರಿ ಏನೋ ಇದ್ರು. ನಮ್ಮ ಉಸ್ತುವಾರಿ ಸಚಿವರು ಕೂಡ ನಾವು ಅವರ್ನ ಎದಿರು ಹಾಕ್ಕೊಂಡೀವಿ ನಮ್ದು ಉತ್ತರ ಕನ್ನಡ ಜಿಲ್ಲೆ ಪರಿಸರ ಸಂರಕ್ಷಣೆ ಅಂತಾ ಒಂದು ಯೂನಿಟಿ ಇತ್ತು.
ಕೈಗಾವನ್ನೂ ನೀವು ವಿರೋಧಿಸಿದಿರಿ ಅಲ್ಲವಾ?
ಹೌದು. ಆದ್ರೆ ಅದು ಯಶಸ್ವಿ ಆಗ್ಲಿಲ್ಲ. ಬಟ್ ಅದರ ಪರಿಣಾಮ ಏನಾಯ್ತು. ನಮ್ಮ ಮೂವ್ಮೆಂಟ್ನಿಂದ ಅದರಿಂದ ಆಗುವಂತಹ ಹಾನಿಯ ಬಗ್ಗೆ ಮುಂಜಾಗ್ರತೆ ತಗೊಳ್ಳಿಕ್ಕೆ ಅವ್ರನ್ನ ಎಚ್ಚರ ಹುಟ್ಟಿಸಿದಂತಾತು. ಆ ಮಟ್ಟಿಗೆ ನಾವು ಯಶಸ್ವಿ ಆಗಿದ್ದೇವೆ. ಮುಂದೆ ಅಲ್ಲಿ ಚರ್ನೋಬಿಲ್ ನಂತಹ ಘಟನೆ ಆಗಿಬಿಟ್ರೆ ನಮ್ಮ ಜಿಲ್ಲೆ ಉಳಿಯೋದಿಲ್ಲ. ಜಿಲ್ಲೆಯಷ್ಟೇ ಅಲ್ಲ ಇಡೀ ಸೌತ್ ಕರ್ನಾಟಕ ಹೋಗ್ಬೇಡ್ತದೆ. ಹಾಗೆ ಆಗೋದಿಲ್ಲ ಅಂತಾ ಭರವಸೆ ಕೊಟ್ಟಿದ್ದಾರೆ. ವಿಜ್ಞಾನಿಗಳ ಭರವಸೆ ಇದು ಹೇಳ್ಲಿಕ್ಕಾಗೋದಿಲ್ಲ. ಟುಥ್ ಅಂಡ್ ನೇಲ್ ವಿರೋಧ ಮಾಡಿದೇವೆ ನಾವದನ್ನ. ಇಷ್ಟೇ ಅಲ್ಲ ಬಹುಶಃ ಐದು ವರ್ಷದ ಹಿಂದೆ ಮೊದಲ ಸ್ಥಾವರ ಕೆಲಸ ಆರಂಭಿಸಿದಾಗ ವಿ ಸೆಲೆಬ್ರೇಟೆಡ್ ನವಂಬರ್ ೧, ರಾಜ್ಯೋತ್ಸವ, ಬ್ಲ್ಯಾಕ್ ಡೇ ಅಂತಾ. ಆಲ್ ಓವರ್ ಕರ್ನಾಟಕ ಸುಮಾರು ೩೦೦ – ೪೦೦ ಜನ ಕಾರ್ಯಕರ್ತರು ಅಲ್ಲಿಗೆ ಬಂದಿದ್ರು. ಕೈಗಾ ಗೇಟ್ನಲ್ಲಿ ಬೆಳಿಗ್ಗೆಯಿಂದ ಸಾಯಂಕಾಲ ತನಕ ಧರಣಿ ಮಾಡಿ ಅಲ್ಲಿ ಮೀಟಿಂಗ್ ಮಾಡಿ ತೀರ್ಮಾನ ತಗೊಂಡಿದ್ವಿ. ಅಲ್ಲಿ ನಾವು ಮೂರ್ತಿಂಗ್ಳು ವರ್ಕ್ಔಟ್ ಮಾಡಿದ ಮೇಲೆ ಅದು ಯಶಸ್ವಿ ಆಯ್ತು. ಇಟ್ ಈಸ್ ಒನ್ ವೇ ಆಫ್ ಎಜುಕೇಟಿಂಗ್ ದ ಪಬ್ಲಿಕ್, ಇಟ್ವಾಸ್ ಮೈ ಮೂವ್ಮೆಂಟ್.
ಜಿಲ್ಲೆಯಲ್ಲಿ ‘ಸೀಬರ್ಡ್’ ನಂತಹ ದೊಡ್ಡ ಯೋಜನೆಯೊಂದಿದೆ?
ಸೀಬರ್ಡ್ ಕೂಡಾ ಹಾಗೇ. ಸೀಬರ್ಡ್ ಅಷ್ಟೇ ಅಲ್ಲ, ಕೊಂಕಣ ರೈಲ್ವೇ ಬಂದಾಗ ಕೂಡ ನಾವು ಕುಸುಮ ಸೊರಬ ಅದನ್ನು ವಿರೋಧಿಸಿದ್ವಿ.
ಸೀಬರ್ಡ್ ವಿಷಯದಲ್ಲಿ ಆಗ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫರ್ನಾಂಡೀಸ್ ನಿಮ್ಮ ವಿರೋಧಕ್ಕೆ ಹೇಗೆ ಪ್ರತಿಕ್ರಿಯಿಸಿದ್ರು?
ಅನ್ ಎಂಪ್ಲಾಯ್ಡ್ ಯೂತ್ಸ್ ಅನ್ನ ನಮ್ಮ ವಿರುದ್ಧ ಎತ್ತಿಕಟ್ಟಿದ್ರು. ಉತ್ತರ ಕನ್ನಡ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿಯವರು ನಮ್ಮನ್ನು ವಿರೋಧ ಮಾಡ್ತಾರೆ ಅಂತೆಲ್ಲಾ ಹೇಳಿದ್ರು. ನಾವು ಅವರನ್ನ ಎದಿರು ಹಾಕಿಕೊಂಡ್ವಿ ಆಗ. ದೋ ವಿವರ್ ಕ್ಲಾಸ್ ಮೇಟ್ಸ್, ಫ್ರೆಂಡ್ಸ್. ಸೀಬರ್ಡ್ ಅದು ಹೇಗೆ ಬಂತೋ ಬಂದೇ ಬಿಡ್ತು. ಕಾರವಾರ ತಾಲೂಕು ಇಲ್ಲ ಈಗ. ಇನ್ನೊಂದು ಐದಾರು ವರ್ಷ ಹೋದ್ರೆ ನೀವು ಸಮುದ್ರವನ್ನ ನೋಡಲಾರಿರಿ. ಬರೀ ಸೈನಿಕರ ಓಡಾಟ. ಯುದ್ಧ ಹಡಗುಗಳ ಹರಿದಾಟ, ವಿಮಾನಗಳ ಹಾರಾಟ ಬಿಟ್ರೆ ನೀವು ಸಮುದ್ರ ನೋಡೋಕಾಗಲ್ಲ. ಇನ್ನೇನು ಆಕಡೆ ದೇವಬಾಗ ಅಂತಾ ಮಾಡಿದ್ದಾರೆ, ಟೂರಿಸಂ ಡಿಪಾರ್ಟ್ಮೆಂಟ್ನವರು ಅಲ್ಲಿಗೆ ಹೋಗಬೇಕಾಗ್ತದೆ. ಸಮುದ್ರ ನೋಡೋಕೆ.
ಅಂಕೋಲ ಯಾಕೆ ಬಿಟ್ರಿ. ಸುಮಾರು ಅರ್ಧ ಶತಮಾನ ಅಲ್ಲಿದ್ದೋರು ನೀವು. ಅಲ್ಲಿಂದ ಇಲ್ಲಿಗೆ ಮಣಿಪಾಲಕ್ಕೆ ಬರೋಕೆ ಏನು ಕಾರಣ?
ನಮ್ಮ ಮನೆಯವರ ಆರೋಗ್ಯ. ಶೀ ವಾಸ್ ವೆರಿ ಆಕ್ಟಿವ್ ವಿದ್ ಅಸ್ ಇನ್ ಆಲ್ ಮೂವ್ಮೆಂಟ್ಸ್. ನಮ್ಮ ಮಗಳು ಇಲ್ಲಿದ್ಲು. ಇದು ನಮ್ಮ ಮಗಳ ಮನೆ. ಭಾರತಿ ಅಂತ್ಹೇಳಿ, ಹಿರೇ ಮಗಳು. ಅವಳು ಕಟ್ಟಿದ್ದು. ಆಕೆ ಕೆ.ಎಂ.ಸಿ. ಹಾಸ್ಟಿಟಲ್ನಲ್ಲಿ ಸ್ಟ್ಯಾಫ್. ಗಂಡ ವಿಜಯ ಬ್ಯಾಂಕ್ನಲ್ಲಿ ಆಫೀಸರ್ ಆಗಿದ್ರು. ಬೈದಿ ಟೈಮ್ ನಮ್ಮ ಅಳಿಯ ತೀರಿಕೊಂಡ್ರು, ಹಾರ್ಟ್ ಅಟ್ಯಾಕ್ ಆಗಿ. ಅಲ್ಲಿಂದ ನಮ್ಮ ಸ್ಥಿತ್ಯಂತರಗಳು ಶುರು ಆದವು. ಇಂತಹ ಕೌಟುಂಬಿಕ ಸ್ಥಿತ್ಯಂತರಗಳೂ ನಾವು ಅಂಕೋಲ ಬಿಟ್ಟು ಬರೋದಕ್ಕೆ ಕಾರಣ. ಕೌಟುಂಬಿಕ ಕಾರಣ. ನಮ್ಗೆ ಅಲ್ಲಿ ಸಣ್ಣ ಪ್ರಾಪರ್ಟಿ ಇತ್ತು. ಅಂಕೋಲದಲ್ಲಿ. ನಾನೇ ಎಲ್ಲ ಪ್ರಯತ್ನಪಟ್ಟು ಆ ಬಗ್ಗೆ ಏನೇನೋ, ಯಾರ್ಯಾರ್ನೇಲ್ಲ ಎದುರು ಹಾಕಿಕೊಂಡು ಬಾಳಷ್ಟು ಕಷ್ಟ ಪಟ್ವಿ ನಾವು. ಸಣ್ಣ ದುಪ್ಪಡಿ ಬೇಕಂದ್ರೆ ಸಾಧ್ಯ ಆಗ್ಲಿಲ್ಲ ಅಲ್ಲಿ. ಆ ಕಾಲ್ದಲ್ಲಿ ಒಂದು ಏನಾದ್ರೂ ಮಾಡುವ ಅಂತ ತಗೊಂಡೆ ಮನೆಯೆಲ್ಲ ಹಳೆ ಮನೆ ಇತ್ತು. ದುರಸ್ತಿ ಮಾಡಿ ಅಲ್ಲಿ ಉಳೀಬೇಕು ಅಂತ್ಹೇಳಿ, ಮಾಡಿದ್ದೆ. ನಂತರ ಮತ್ತೆ ನಮ್ಮ ಮನೆಯವರ ಆರೋಗ್ಯ ಕೆಟ್ಟು ಹೋಯ್ತು. ಇಲ್ಲೇ ಕೆ.ಎಂ.ಸಿ ಹತ್ತಿರ ಆಗ್ತದಲ್ಲ. ನಮ್ಮ ಮಗಳೂ ಇಲ್ಲೇ ಇದ್ದಳು. ಶಿ ಈಸ್ ನಾಟ್ ಹಿಯರ್. ಶಿ ಈಸ್ ಇನ್ ಧಾರವಾಡ. ಮಕ್ಕಳೆಲ್ಲ ಬೆಂಗಳೂರಿನಲ್ಲಿ ಸೆಟಲ್ ಆದ್ರು. ಶಿ ಈಸ್ ವರ್ಕಿಂಗ್ ಇನ್ ಧಾರವಾಡ ಎಸ್.ಡಿ.ಎಂ. ಹಾಸ್ಪಿಟಲ್.
ಸಾರ್ ನಿಮ್ಮ ಕುಟುಂಬದ ಹಿನ್ನೆಲೆ, ಏನು?
ಐ ಬಿಲಾಂಗ್ ಟು ಬ್ಯಾಕ್ವರ್ಡ್ ಕಮ್ಯುನಿಟಿ, ವಾಟ್ ಯ ಕಾಲ್ ನಮ್ಮ ಕುಂ. ವೀರಭದ್ರಪ್ಪ ಇದ್ದಾರಲ್ಲ. ಕುಂಬಾರ ಜನಾಂಗಕ್ಕೆ ಸೇರಿದವರು ನಾವು. ಅಗ್ರಿಕಲ್ಚರಿಸ್ಟ್, ಪಾಟರಿ ಮಾಡುವುದಿಲ್ಲ. ಅಂಡ್ ಐ ಬಿಲಾಂಗ್ಸ್ ಟು ಅಮ್ಮೆಂಬಳ. ಅಮ್ಮೆಂಬಳ ಈಸ್ ಅವರ್ ನೇಟಿವ್ ಪ್ಲೇಸ್. ಅಮ್ಮೆಂಬಳ ಬಾಳಪ್ಪ, ನಾವೆಲ್ಲ ಒಂದೇ ಮನೆತನದವರು. ಅಗ್ರಿಕಲ್ಚರಿಸ್ಟ್ ಫ್ಯಾಮಿಲಿ. ಜಾಯಿಂಟ್ ಫ್ಯಾಮಿಲಿಯಲ್ಲಿ. ನಮ್ದು ಅಳಿಯ ಕಟ್ಟು. ಸೌತ್ ಕೆನರಾ ಎಲ್ಲಾ ಅಳಿಯ ಕಟ್ಟು. ಫ್ಯಾಮಿಲಿ ಬೆಳೇದಾ ಹಾಗೆ ಅದು ಒಡೀತಾ ಒಡೀತಾ ಹೋಗ್ತದೆ. ಮತ್ತೆ ನಮ್ಮ ಪರ್ಸನಲ್ ಪ್ರಾಪರ್ಟಿ ಹಿರೇರು ಮಾಡಿದ್ದು ಆಸ್ತಿ ಸುಮಾರು ೨೫ – ೩೦ ಎಕರೆ ಇತ್ತು. ಬೆಟ್ಟ, ಗದ್ದೆ, ಗಿದ್ದೆ ಎಲ್ಲ. ಜಾಯಿಂಟ್ ಫ್ಯಾಮಿಲಿ. ಜಾಯಿಂಟ್ ಫ್ಯಾಮಿಲಿ ಉಳಿಯೋದಿಲ್ಲ ಕೊನೆ ಕೊನೆಗೆ. ಅದೇ ರೀತಿಯ ನಮ್ಮ ತಂದೆಯವರೂ ಹಾಗೆ. ಫ್ರಮ್ ಸುರತ್ಕಲ್. ಹಿ ಆಲ್ಸೋ ಬಿಲಾಂಗ್ಸ್ ಟು ಎ ಜಾಯಿಂಟ್ ಫ್ಯಾಮಿಲಿ. ನಂತರ ಅಣ್ಣಂದಿರಿಂದ ಬೇರೆ ಆದ್ರು. ಸಣ್ಣ ಮಕ್ಕಳನ್ನು ತಗೊಂಡು ಬಂದ್ರು. ನಾನು, ನನ್ನ ತಮ್ಮಂದಿರನ್ನ ತಗಂಡು ಮಂಗಳೂರಿಗೆ ಬಂದ್ರು. ನೆನಪದೆ. ಜಸ್ಟ್ ಯಾವ ರೀತಿ ಬಂದು ಸೆಟ್ಲ್ ಆಗಿದೀವಿ ಮಂಗಳೂರಿಗೆ ಬಂದು ಅಂತ. ಅಂಡ್, ದೆ ವರ್ಕ್ ಜಸ್ಟ್ ಲೈಕ್ ಎ ಲೇಬರ್. ಟೈಲ್ಸ್ ಫ್ಯಾಕ್ಟ್ರೀ ಮಣ್ಣು ಹೊರಲಿಕ್ಕೆ ಹೋಗೋರು. ನಮ್ತಾಯಿ ಬೀಸ್ಲಿಕ್ಕೆ ಹೋಗ್ತಿದ್ರು. ಆದ್ರೂ ನಮ್ಮನ್ನು ಓದಿಸ್ಲಿಕ್ಕೆ ಪ್ರಯತ್ನ ಪಟ್ರು ಅವ್ರು. ಸೋ ನಾವು ಐದಾರು ಕ್ಲಾಸ್ ತನಕ ಒಟ್ಟಿಗೇ ಇದ್ದೆವು. ಐದನೇ ಕ್ಲಾಸ್ ತನಕ.
ಜಾರ್ಜ್ ಫರ್ನಾಂಡೀಸ್ ಮತ್ತು ನೀವು ಆಗ್ಲೇನಾ ಕ್ಲಾಸ್ಮೇಟ್ಸ್ ಆದದ್ದು?
ಹೌದು, ಮಂಗ್ಳೂರಿನಲ್ಲಿ. ಕೊನೆಗೆ ಅವರು ಹೈಯರ್ ಪ್ರೈಮರಿಗೆ ಹೋದ್ರು. ಬೇರೆ ಕಡೆ ಹೋದ್ರು. ನಾನು ಮತ್ತೊಂದು ಹೈಸ್ಕೂಲ್ಗೆ ಹೋದೆ. ಜನರಲ್ ಸ್ಕೂಲ್ಗೆ ಹೋದೆ. ಅವಾಗ ನಮ್ಮ ತಾಯಿಗೆ ಒಬ್ಬೇ ಹೆಣ್ಣು ಮಗಳು. ನಮ್ಮಲ್ಲಿ ಹೆಣ್ಣಿಗೆ ಹೆಚ್ಚು ಅಧಿಕಾರ, ಅಳಿಯ ಸಂತಾನದಲ್ಲಿ. ಪ್ರಾಪರ್ಟಿ ಬರೋದು ಹೆಣ್ಣಿಗೆ. ಒಬ್ಳೇ ಮಗಳು ನಮ್ತಾಯಿ. ಸೋ, ಅವರ ಮಾವ, ಸೋದರ ಮಾವ ಈ ಬಾಳಪ್ಪನವರ ತಂದೆ ಅವರ ಹಿರಿಯ ಅಣ್ಣನ ವಿರುದ್ಧ ಆದ್ರು. ಪ್ರಾಪರ್ಟಿ ಎಲ್ಲಾ ಪಾಲಮಾಡಿ ಇಟ್ಟಿದ್ದಾರೆ. ನೀನು ಬಾ ಅಂತ ಅಣ್ಣನಲ್ಲಿ ಸೋ ದೇ ವೆಂಟ್ ಅಂಡ್ ಮ್ಯಾನೇಜ್ ದ ಪ್ರಾಪರ್ಟಿ ಅಟ್ ದ ಗ್ರೇಟ್ ಡಿಫಿಕಲ್ಟೀ. ಅವಾಗ್ಲೇ ಸಾಕಷ್ಟು ಸಾಲಗಳಿದ್ದವು. ತೀರಿಸ್ಲಿಕ್ಕೇ ಆಗ್ಲಿಲ್ಲ. ಅವಾಗ ನಾನು ಓದ್ತಿದ್ದೆ ಹೈಸ್ಕೂಲ್ನಲ್ಲಿ.
ಮಂಗಳೂರಲ್ಲಿ. ಹೈಸ್ಕೂಲ್ ಓದ್ಲಿಕ್ಕೆ ಎಲ್ಲ ಸಹಕಾರ ಮಾಡಿದ್ರು. ಹೈಸ್ಕೂಲ್ ಓದುವಾಗ ನನಗೆ ಸೇವಾದಳ ಮೂವ್ಮೆಂಟ್ ಹೆಚ್ಚು ಪ್ರಭಾವ ಕೊಡ್ತು. ಅವಾಗ ೧೯೪೨ ಕ್ವಿಟ್ ಇಂಡಿಯಾ ಮೂವ್ಮೆಂಟ್. ನಾನು ಓದಿದ ಮೊದಲ ರಾಜಕೀಯ ಸಾಹಿತ್ಯ, ಜೆ.ಪಿ.ಯವರ ‘ಲೆಟರ್ಸ್ ಟು ದಿ ಫ್ರೀಡಂ ಫೈಟರ್ಸ್’ ಅವರು ಅಂಡರ್ ಗ್ರೌಂಡ್ನಿಂದ ಲೆಟರ್ ಬರೆದಿದ್ರು. ಆ ಪತ್ರ ನಮಗೆ ಸಿಕ್ಕಿತ್ತು. ನಾವದನ್ನ ಹೆಚ್ಚು ಪ್ರಚಾರ ಮಾಡಿದ್ವಿ.
ಅಮ್ಮೆಂಬಳ ಬಾಳಪ್ಪನವರು ನಮ್ಮಲ್ಲಿ ಭೂಗತರಾಗಿದ್ರು. ನಮ್ಮ ಮನೆಯಲ್ಲೇ. ಅವರ ಮೇಲೆ ಸಾಕಷ್ಟು ಚಾರ್ಜ್ಗಳು ಇದ್ವು. ಕೋರ್ಟ್ಗೆ ಬೆಂಕಿ ಹಾಕಿದ್ದು. ಸಂಕ ಸ್ಫೋಟಿಸಲು ಹೋಗಿದ್ದು. ಕಡೆಗೆ ಪ್ರೂವ್ ಆಗ್ಲಿಲ್ಲ. ಸಾಕಷ್ಟು ಟಾರ್ಚರ್ ತಿಂದಿದ್ದಾರೆ ಅವ್ರು. ಸೋ ಹಾಗೆ ಅವರ ಪ್ರಭಾವ ನನ್ನ ಮೇಲಾಯ್ತು. ೧೯೪೨ ಅದು. ೪೫ರ ತನಕ ಎಸ್.ಎಸ್.ಎಲ್.ಸಿ. ಮಾಡಿದೆ ಹೇಗಾದ್ರೂ ಮಾಡಿ. ಅನ್ ಎಂಪ್ಲಾಯ್ಮೆಂಟ್ ವಾಸ್ ಪ್ರಾಬ್ಲಂ. ಸೋ ಬಿಕಾಸ್ ಐ ವಾಸ್ ಎ ವೆರೀ ಆಕ್ಟಿವ್ ವಾಲಂಟಿಯರ್ ಇನ್ ದಿ ಆರ್.ಎಸ್.ಡಿ.
ನೀವು ಸಿ.ಎಸ್.ಪಿ. ಕಛೇರಿಯ ಕಾರ್ಯದರ್ಶಿಯಾಗಿ ಹುಬ್ಬಳ್ಳಿಗೆ ಬಂದ ಹಿನ್ನೆಲೆಯ ಬಗ್ಗೆ ಹೇಳಿ?
೧೯೪೨ರಲ್ಲಿ ಕಮಲಾದೇವಿ ಬಂದ್ರು. ಇಲ್ಲಿ ಸೌತ್ ಕೆನರಾಕ್ಕೆ ಕಮಲಾದೇವಿ ಬಂದು ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿ ಆಫೀಸ್, ಹುಬ್ಬಳ್ಳಿಯಲ್ಲಿ ಸ್ಟಾರ್ಟ್ ಮಾಡಿ ಕಾರಂತರನ್ನು ಇಟ್ಟಿದ್ರು. ಅವರು ಒಂದಿನ ರಾತ್ರಿ ವರ್ಕರ್ಸ್ನ್ನೆಲ್ಲ ಮೀಟಿಂಗ್ ಕರ್ದಿದ್ರು. ಸಿ.ಪಿ.ಇ.ಸಿ ಗೆಸ್ಟ್ ಹೌಸ್, ದೊಡ್ಡ ಬಂಡವಾಳಶಾಹಿ ಕುಡುವ ಅವರ ಗೆಸ್ಟ್ ಹೌಸ್ನಲ್ಲಿ. ಹಿ ವಾಸ್ ವೆರೀ ಲಿಬರಲ್ ಟು ಬಿಕಾಸ್ ಆಫ್ ಕಮಲಾದೇವಿ. ಶೀ ವಾಸ್ ನ್ಯಾಷನಲ್ ಲೀಡರ್. ಸೋ ನಾವೆಲ್ಲ ಅಲ್ಲಿ ಕೂತು ರಾತ್ರಿ ೯ – ೧೦ ಗಂಟೆ ತನಕ ಮೀಟಿಂಗ್ ನಡೀತು.
ಅಲ್ಲಿ ಒಂದು ಆಫರ್ ಕೊಟ್ಟಿದ್ರು ಒಂದು, ನಮಗೆ ಹುಬ್ಬಳ್ಳಿಯಲ್ಲಿ ಕೆಲ್ಸ ಮಾಡ್ಲಿಕ್ಕೆ ಒಬ್ಬ ಕಾರ್ಯಕರ್ತ ಬೇಕು. ನಿಮ್ಮ ಪೈಕಿ ಯಾರನ್ನಾದ್ರೂ ಕಳಿಸ್ಕೊಡಿರಿ, ಕಾರಂತರು ಒಬ್ರೇ ಇದಾರೆ. ಅವರಿಗೆ ಹೆಲ್ಫ್ ಮಾಡ್ಲಿಕ್ಕೆ ಬೇಕು. ಸೋ ಇಮಿಡಿಯಟಲೀ ಬಾಳಪ್ಪ. ಫ್ರೆಂಡ್ಸ್ ಎಲ್ಲ ಕೂಡಿ ನನ್ನ ಹೆಸರು ಸೂಚಿಸಿದ್ರು. ಆಗಿನ ಒಕ್ವಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರದವರು. ಹೀಗೆ ಬಹಳಷ್ಟು ಜನ ಇದ್ರು ಸೋಷಲಿಸ್ಟ್ ಫ್ರೆಂಡ್ಸ್ ಎಲ್ಲ ಕೂಡಿ ನನ್ನ ಹೆಸರು ಸೂಚಿಸಿದ್ರು.
ಆಗಿನ ಒಕ್ವಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರದವರು. ಹೀಗೆ ಬಹಳಷ್ಟು ಜನ ಇದ್ರು ಸೋಷಲಿಸ್ಟ್ ಫ್ರೆಂಡ್ಸ್ ಎಲ್ಲ ಕೂಡಿ ನನ್ನ ಹೆಸರು ಸೂಚಿಸಿದ್ರು. ಸೋ, ಕಮಲಾದೇವಿ ಜಸ್ಟ್ “ಆನಂದ್ ಬರ್ತೀರೇನು” ಅಂತಾ ಕೇಳಿದ್ರು.
“ಆಯ್ತಮ್ಮ ಬರ್ತೀನಿ ಜಾಬ್ ಇಲ್ಲ, ಏನೂ ಇಲ್ಲ. ಜೀವನ ಸಾಗ್ಬೇಕಲ್ಲಾ”, ಐ ಸೆಡ್ ಎಸ್.
“ಇಲ್ಲ, ನೀವು ನಾಳೆ ಹೊರಡ್ಬೇಕು ಬೆಳಿಗ್ಗೆ ೫ ಗಂಟೆಗೆ ನೀವು ಮಂಗಳೂರು ಬಸ್ ಸ್ಟ್ಯಾಂಡ್ಗೆ ಬರ್ಬೇಕು.” ಅವಾಗ ನಮ್ಗೆ ಬಸ್ಸಸ್ಸೆಲ್ಲಾ ಕಡೂರಿಗೆ ಹೋಗಿ ಕಡೂರಿಂದ ಟ್ರೇನ್ ಹತ್ಬೇಕು. “ಕಡೂರಿಗೆ ಹೋಗಿ ನೀವು ಹುಬ್ಬಳ್ಳಿಗೆ ಹೋಗ್ಬೇಕು. ಹೋಗೋ ಖರ್ಚಿಗೆ ನಾನು ವ್ಯವಸ್ಥೆ ಮಾಡ್ತೀನಿ. ನೀವು ಬಸ್ಸ್ಟ್ಯಾಂಡಿನಲ್ಲಿ ಸಿಗ್ರೀ.” ಬಾಳಪ್ಪನವರಿಗೆ ನಾ ಹೇಳಿದೆ, ನಮ್ಮ ಮನೆಯಲ್ಲಿ ಹೇಳ್ಲಿಲ್ಲ. ನಮ್ಮ ತಾಯಿ ತಂದೆಗೆ ಹೇಳ್ಲಿಲ್ಲ. ಹಿ ಟುಕ್ ರೆಸ್ಬಾನ್ಸಿಬಿಲಿಟಿ. ನಾ ಇನ್ಫಾರ್ಮ್ ಮಾಡ್ತೀನಿ ಅಂತ.
ಸೋ ಲೈಕ್ ದಟ್ ಐ ಕೇಮ್ ಟು ಹುಬ್ಬಿ. ಮಧ್ಯೆ ಸಾಕಷ್ಟು ಬೇರೆ ಘಟನೆಗಳು ಇದೆ. ಹುಬ್ಬಳ್ಳಿ ಬಂದ ಕೂಡ್ಲೇ ಧೆನ್ ಇಮಿಡಿಯಟ್ಲೀ ಕೊಪ್ಪೀಕರ್ ರೋಡ್, ‘ಸಂಯುಕ್ತ ಕರ್ನಾಟಕ’ ಆಫೀಸಿನಲ್ಲಿ ಉಮಾಬಾಯಿ ಕುಂದಾಪುರ ಅಂತ್ಹೇಳಿ (ಕಾಂಗ್ರೆಸ್) ಅಲ್ಲಿ ಕಸ್ತೂರಿ ಬಾ ಸ್ಮಾರಕ ನಿಧಿಯ ಇನ್ಚಾರ್ಜ್ ಆಗಿದ್ರು. ಅವರು ಮತ್ತು ಕಮಲಾದೇವಿ ಫ್ರೆಂಡ್ಸ್. ಅವ್ರೂ ಮಂಗ್ಳೂರಿಗೆ ಬಂದಿದ್ರು. ಸೋ ಐ ಮೆಟ್ ಹರ್ ಆಲ್ಸೋ. ಅವರು ಮೈಸೂರಿಗೆ ಹೊರಟಿದ್ರು. ಅವ್ರು ಹೇಳಿದ್ರು ನೀವು ಹೋಗೋದು ಉಮಾಬಾಯಿ ಕುಂದಾಪುರ ಅವರ ಮನೆಗೆ. ಅವರ್ತಮ್ಮ ಇರ್ತಾನಲ್ಲಿ ಈ ಪತ್ರ ತಗೊಳ್ಳಿ ಅಂತ ಎಲ್ಲ ಕೊಟ್ಟಿದ್ರು ಬಿಡಿ. ನವಳಿ ಬಿಲ್ಡಿಂಗ್ನಲ್ಲಿ ಪಾರ್ಟಿ ಆಫೀಸ್ ಮಾಡಿದ್ವಿ. ಅಲ್ಲಿ ಕೆ.ಎಸ್. ಕಾರಂತರು ಇರ್ತಿದ್ರು. ನೆಕ್ಟ್ಸ್ ಮಾರ್ನಿಂಗ್ ಐ ವೆಂಟ್ ಟು ಕಾರಂತ. ಅವರು ಎಲ್ಲೋ ಹೋಗಿದ್ರು ಹೊರಗೆ. ನಂತರ ಬಂದ್ರು ಐ ವೇಟೆಡ್ ಫಾರ್ ಹಿಮ್. ಪತ್ರ ನೋಡಿದ್ರು. ಲೈಕ್ದಟ್ ವಿ ಬಿ ಕೇಮ್ ಬ್ರದರ್ಸ್ ಆಲ್ ಮೋಸ್ಟ್. ಕಾರಂತ ಆನಂದ ಅಂದ್ರೆ ಅಣ್ಣ ತಮ್ಮ ಅಂತಾ ಹೇಳ್ತಿದ್ರು. ಸೋಷಲಿಸ್ಟ್ ಕಾರಂತ, ಸೋಷಲಿಸ್ಟ್ ಆನಂದ ಅಂತಿದ್ರು ಹುಬ್ಬಿಯಲ್ಲಿ.
ಯಾವಾಗಿನಿಂದ ನೀವು ಹುಬ್ಬಳ್ಳಿಯಲ್ಲಿದ್ದು ಕೆಲ್ಸ ಮಾಡ್ತಿದ್ದುದ್ದು?
೪೨ರಿಂದ ಬಿಪೋರ್ ಇಂಡಿಪೆಂಡೆನ್ಸ್. ಗಾಂಧೀಜಿ ತೀರಿಕೊಂಡಿದ್ದು ನಾನು ಹುಬ್ಬಳ್ಳಿಲಿದ್ದಾಗ್ಲೇ. ಅವಾಗ ಮೌನ ಮೆರವಣಿಗೆಯನ್ನು ನಾನೇ ಸಂಘಟಿಸಿದೆ. ಮತ್ತೆ ಅಲ್ಲೆಲ್ಲ ಕಮ್ಯೂನಲ್ ರಾಯಟ್ಸ್ ಆಗದಂತೆ ಪೋಲೀಸರ ಸಂಗಡ ಹೋಗಿ ಕೆಲಸ ಮಾಡಿದೆವು.
ಆ ಘಟನೆಗಳನ್ನು ಸ್ವಲ್ಪ ವಿವರಿಸಿ?
ಅದು ಇಮ್ಮಿಡಿಯಟ್ ಸುದ್ದಿ ಸ್ಪ್ರೆಡ್ ಆಯ್ತಲ್ಲ ಗಾಂಧಿ ಕೊಲೆ ಆಯ್ತು ಅಂತ್ಹೇಳಿ, ಕೆಲವು ಕಡೆ ಹಾಲು ಕುಡ್ದದ್ದು, ಸ್ಟೀಟ್ಸ್ ಹಂಚಿಸೋದು ಶುರುವಾಯ್ತು. ಅವ್ರು ಹೋಗಿ ಮುಸ್ಸಿಂ ಏರಿಯಾದಲ್ಲಿ ಹೋಗಿ ಗಲಾಟೆ ಮಾಡೋದು. ಅವಾಗ ನಾವು, ಪೋಲೀಸ್ರು ವಾಲಂಟಿಯರ್ಸ್ ಹೋಗಿ ಅಲ್ಲಿ ನಿಂತು ಶಾಂತಿ ಪ್ರಚಾರ ಮಾಡ್ತಿದ್ವಿ. ಗಾಂಧಿ ಸತ್ತಿದ್ದಕ್ಕೆ ಖುಷಿಯಾಗಿ ಹಾಲ್ಕುಡಿದ, ಸ್ಟೀಟ್ ಹಂಚಿದ ಘಟನೆಗಳು, ಆರ್.ಎಸ್.ಎಸ್. ನಿಂದ ಆಗಿದ್ವು. ಅವರು ಭಾಳ ಖುಷಿ ಪಟ್ಟಿದ್ದಾರೆ. ಈಗವರು ಇಲ್ಲ ಅಂತಾರೆ ಬಿಡಿ. ಗಾಂಧಿ ವಾಸ್ ಫಸ್ಟ್ ಎನಮಿ ಅವ್ರಿಗೆ. ಈಗ ಹಿ ಬಿಕೇಮ್ ಮಹಾತ್ಮ. ಸತ್ಮೇಲೆ ಎಲ್ಲಾ ಗ್ರೇಟ್ ಬಿಡಿ. ಬಟ್ ಅಕಾಲದಲ್ಲಿ ಹಾಗೆ ಆಗಿತ್ತು.
ಸೈಡ್ ಬೈ ಸೈಡ್ ಐ ವಾಸ್ ವರ್ಕಿಂಗ್ ಎಂ.ಎಸ್.ಎಂ. ರೈಲ್ವೆ ಎಂಪ್ಲಾಯ್ ಯೂನಿಯನ್ದಲ್ಲಿ. ನನ್ನನ್ನ ಸೇರಿಸ್ಕಂಡ್ರು. ಈ ಮಧ್ಯದಲ್ಲಿ ನಿಮ್ಮ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಒಂದು ಸಮ್ಮೇಳನ ನಡೀತು. ನಮ್ಮ ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿ ಸ್ಥಾಪನೆಯಾದ ೪ ನೇ ವರ್ಷದ ಕರ್ನಾಟಕದ ಎಲ್ಲ ಕಾರ್ಯಕರ್ತರ ಸಮ್ಮೇಳನ.
ಈ ಸಮ್ಮೇಳನವನ್ನು ಸಂಘಟಿಸಿದ ಪಕ್ಷದ ಸ್ಥಳೀಯರು ಯಾರು ಅಲ್ಲಿ ಯಾರಿದ್ದರು ಆಗ?
ಅಲ್ಲಿ ಅವ್ರು ಇದ್ದಾರೋ ಇಲ್ವೋ ಗೊತ್ತಿಲ್ಲ. ಇವಾಗ. ಅಸುಂಡಿ ತಿರುಮಲರಾಯರು ಅಂತಾ. ಅವ್ರು ಜವಾಬ್ದಾರಿ ತಗೊಂಡಿದ್ರು. ಆಮೇಲೆ ಹೊಸಪೇಟೆ ಆರ್. ವಿ.ದೇಸಾಯಿ ಅಂತಾ ರಿಪೋರ್ಟರ್ ಇದ್ರು. ಅವರು ಮತ್ತು ಬಳ್ಳಾರಿಯಲ್ಲಿ ಇಮ್ಮಡಿ ಬಸವರಾಜ ಅಂತಾ. ಅಲ್ಲಿ ಒಂದು ಘಟನೆಯಾಯ್ತು.
ಏನು ಆ ಘಟನೆ.. ಏನಾಯ್ತು ಹೇಳಿ?
ಏನಾಯ್ತು ಅಂದ್ರೆ ಕೆ.ಎಸ್. ಕಾರಂತರಿಗೆ ದುಡ್ಡು ಕೂಡಿಸಿ ಕೊಟ್ಟಿದ್ರು. ಅದನ್ನು ಹೇಗೆ ಬಳಸಬೇಕು ಅನ್ನೋ ವಿಷಯದಲ್ಲಿ ಭಿನ್ನಾಭಿಪ್ರಾಯ ಬಂತು. ಇಡೀ ಕರ್ನಾಟಕದಲ್ಲಿ ಸಂಚಾರ ಮಾಡಿ, ಹಮ್ಮಿಣಿ ಸಂಗ್ರಹ ಮಾಡಿ ಅದನ್ನ ಕಮಲಾದೇವಿಯವರಿಗೆ ಕೊಟ್ಟು, ಕಮಲಾದೇವಿಯವರು ಅದನ್ನು ಕಾರಂತರಿಗೆ ಕೊಟ್ಟರು, ಕರ್ನಾಟಕಕ್ಕೆ ಪಾರ್ಟಿಗೆ ಬಳಸೋದಕ್ಕೆ ಅಂತ. ಆ ನಡುವೆ ಕಾರಂತರಿಗೆ ಆರೋಗ್ಯ ಸರಿ ಇಲ್ಲಾಂತ ಊರಿಗೆ ಬಂದ್ರು ಅರೇಳು ತಿಂಗಳು. ಆ ಅವಧಿಯಲ್ಲಿ ದುರ್ವ್ಯವಹಾರ ಆಯ್ತು. ಅದರ ಬಗ್ಗೇನೇ ಹೆಚ್ಚು ತಿಕ್ಕಾಟವಾಗಿ ಕಾರಂತರು ಚಾಲೆಂಜ್ ಆಗಿ ಹೇಳಿದ್ರು. ನಾನು ಹೇಳಿದ ಪ್ರಕಾರ ಕೆಲಸ ಮಾಡೋದಾದ್ರೆ ಐ ವಿಲ್ ಕಂಟಿನ್ಯೂ ಆಯಸ್ ಎ ಸೆಕ್ರೆಟರಿ. ಅದರ್ ವೈಸ್ ಐ ಯ್ಯಾಮ್ ಔಟ್ ಆಫ್ ದಿಸ್…ಫ್ರಂದಿ ಪಾರ್ಟಿ. ಬಟ್ ವಿ ಹ್ಯಾವ್ ಥಿಂಕಡ್ ಅದರವೈಸ್. ಅಲ್ಲಿ ನಾವು, ಕಾರಂತರು ಮೀಟಿಂಗ್ ಮಾಡಿದ್ವಿ. ಕಾರಂತರು ಮತ್ತು ಅವರ ಫಾಲೋಯರ್ಸ್ ಸೇರಿ ಅವರಲ್ಲಿ ನಾನೂ ಒಬ್ಬ. ಸೋ ನಾವಂದು ೫೦ – ೬೦ ಜನ. ವಿ ಡಿಸೈಡೆಡ್ ಟು ಬಿ ನ್ಯೂಟ್ರಲ್. ಪಕ್ಷ ಬಿಡೋದು ಬೇಡ. ನಾವು ನಮ್ಮ ನಮ್ಮ ಸ್ಥಾನದಲ್ಲಿ ಹಾಗೇ ಇರೋಣ. ಇವ್ರು ಹ್ಯಾಗೆ ಮಾಡ್ತಾರೋ ನೋಡೋಣ ಅಂತಾ. ಆ ಪೈಕಿ ನಾನೂ ಹೌದು, ಬಾಳಪ್ಪನವರೂ ಹೌದು.
ಆ ಇನ್ನೊಂದು ಗುಂಪು ಅಂದ್ರೆ ಯಾರ್ಯಾರು?
ಇನ್ನೊಂದು ಗುಂಪು ಬೆಂಗಳೂರಿನ ಲೀಡರ್ ಶಿಪ್ನಲ್ಲಿತ್ತು. ಬಾ.ಸು ಕೃಷ್ಣಮೂರ್ತಿ, ಖಾದ್ರಿ ಶಾಮಣ್ಣ, ಶಿವಮೊಗ್ಗಾದ ಇನ್ನು ಕೆಲ ಫ್ರೆಂಡ್ಸ್ ಅವರೂ ಇದ್ರು. ಖಾದ್ರಿ ಶಾಮಣ್ಣರಿಗೆ ಜವಾಬ್ದಾರಿ ಕೊಟ್ಟಿತ್ತು. ‘ಜಾಗೃತಿ’ ಅಂತಾ ವೀಕ್ಲಿ ಮಾಡೋಕೆ. ಆ ‘ಜಾಗೃತಿ’ ತರೋಕ್ಕೆ ನಾವು ಕಲೆಕ್ಟ್ ಮಾಡಿದ ಹಣ ೧೦೦ಕ್ಕೆ ೫೦ರಷ್ಟು ಹೋಯ್ತು. ಅದೂ ನಮಗೆ ಸ್ವಲ್ಪ ಬೇಜಾರಾಯ್ತು. ಸೋ ವೈಯಕ್ತಿಕವಾಗಿ ದ್ವೇಷ ಕೂಡ ಆಯ್ತು ಬಿಡಿ. ಇವ್ರದ್ದು ದರ್ಬಾರ್ ಹೆಚ್ಚಾಯ್ತು ಅಂತ್ಹೇಳಿ, ಇವ್ರು ಸಮಾಜವಾದಿಗಳಲ್ಲ, ಐಷಾರಾಮಿ ಪೊಲಿಟಿಶಿಯನ್ಸ್ ಇವ್ರೆಲ್ಲಾ ಅಂತಾ. ದೇ ಡೊಂಟ್ ಮೀನ್ ವಾಟ್ ಮೂವ್ಮೆಂಟ್ ಈಸ್ ಅಂತಾ. ಹೀಗೆಲ್ಲಾ ಆಯ್ತು. ಸೋ ಕಾರಂತ ಸೆಡ್… ನಾವು ಹುಬ್ಬಳ್ಳಿಯಲ್ಲಿ ಇದ್ವಿ. ಅವ್ರು ಪ್ರಾಂತೀಯ ಕಾರ್ಯದರ್ಶಿ. ನಾನು ಆಫೀಸ್ ಸೆಕ್ರೆಟರಿ ಸೋ ಆಫೀಸ್ ಸೆಕ್ರಟರಿ ಆಗಿದ್ದಾಗ ನನಗೆ ಇವರ್ದೆಲ್ಲ ಸಂಪರ್ಕ. ದೇಸಾಯಿ ಹೌದು, ಬಸವರಾಜು, ತಿರುಮಲರಾವ್ ಹೀಗೆ ಅನೇಕ… ಬೆಂಗಳೂರಿನಿಂದ ಕೂಡ. ಆಮೇಲೆ ಕೆಲವರು ಎಂ.ಎಲ್.ಎ.ಗಳು ಆದ್ರು ನೋಡಿ ಕಣ್ಣನ್ ಆದ್ರೂ, ಎ. ಹೆಚ್. ಶಿವಾನಂದ ಸ್ವಾಮಿ ಆದ್ರು ದಾವಣಗೆರೆಯವ್ರು ನಂತರ ಎಂ.ಎಲ್.ಸಿ. ಆಗಿದ್ರು ನೋಡಿ. ಅವ್ರು ಮತ್ತೆ ಬೀದರಿನಲ್ಲಿ ಆರ್.ವಿ. ಬೀದರ್….
ಕಾಶಿನಾಥ್ ಬೇಲೂರೆ….ಇರ್ಬೇಕು?
ಅವ್ರು ನಂತರ ಬಂದಿರ್ಬೇಕು. ನಮ್ಮ ಸಂಪರ್ಕ ಆ ಕಾಲಕ್ಕೆ ಇರಲಿಲ್ಲ. ನಂತರ ಬೆಳಗಾವಿಯಲ್ಲಿ ಕರಮರಕರ್, ನಾಥಪೈ, ಚಿಕ್ಕೋಡಿಯಲ್ಲಿ ಎಂ.ವಿ. ಶೆಟ್ಟಿ ಅವರೊಂದ್ಸಲ ಎಂ.ಎಲ್.ಎ ಕೂಡ ಆಗಿದ್ರು ಹೀಗೆ ಅವರೆಲ್ಲ. ನಾರ್ಥ್ ಕೆನರದಲ್ಲಿ ಎಸ್.ಐ.ಕೆ. ಪೈ, ಮ.ಗಾ. ಶೆಟ್ಟಿ… ಇವರಿಗೆಲ್ಲ ನಾನೊಂದು ಥರಾ ಕೋಆರ್ಡಿನೇಟ್ ಮಾಡೋಥರಾ ಇದ್ದೆ ಅವಾಗ.
ನಿಮ್ಮಲ್ಲಿ ಭಿನ್ನಾಪ್ರಾಯ ಬಂದ ವರ್ಷ ಯಾವುದು?
೧೯೪೮ – ೪೯
ಅದರ ಪರಿಣಾಮ ಏನಾಯ್ತು ಮುಂದೆ?
ಸೋ ಒಂದು ಸೆಟ್ ಬ್ಯಾಕ್ ಬಂತು ಮೂವ್ಮೆಂಟ್ಗೆ. ಯಾರ ಫೋರ್ ಫ್ರಂಟ್ನಲ್ಲಿದ್ರು ಯಾರು ಟ್ರೇಡ್ ಯೂನಿಯನ್ಗಳಲ್ಲಿ ಲೇಬರ್ ಲೀಡರ್ಸು, ಕಿಸಾನ್ ಲೀಡರ್ ಅವರೆಲ್ಲ ತಟಸ್ಥವಾಗಿ ಉಳಿದ ಕೂಡ್ಲೆ ನ್ಯಾಚುರಲಿ ಸಮಾಜವಾದಿ ಪಕ್ಷಕ್ಕೆ ಪೆಟ್ಟು ಬಿತ್ತು ನೋಡಿ. ಅಂಥಾ ಪೆಟ್ಟುಗಳು ಸತತವಾಗಿ ಹತ್ತು ವರ್ಷಕ್ಕೊಮ್ಮೆ ಸಮಾಜವಾದಿ ಪಕ್ಷಕ್ಕೆ ಬಿದ್ದವು ಅಂತಾ ನನ್ನ ಭಾವನೆ, ಕರ್ನಾಟಕದಲ್ಲಿ ಅದೇ ಓಘದಲ್ಲಿ ಮುಂದೆ ಹೋಗಿದ್ರೆ ಇವತ್ತು ಸ್ಟೇಟ್ನಲ್ಲಿ ಅನ್ಕ್ಪಶ್ಚನಬಲ್ ಪಾರ್ಟಿ ಆಗಿರ್ತಿತ್ತು.
ಕರ್ನಾಟಕಕ್ಕೆ ಈ ಸೋಷಲಿಸ್ಟ್ ಚಿಂತನೆ ಬಂದಿದ್ದು ಲೋಹಿಯಾ ಅವರ ಮೂಲಕವೋ ಅಥವಾ ಬೇರೆ ಪ್ರಯತ್ನಗಳಾಗಿದ್ದವೋ?
ಏನು ಲೆಫ್ಟಿಸ್ಟ್ ಅಂತ ಹೇಳಿದ್ನೆಲ್ಲ. ವೈಬ್ರೆಂಟ್ ಆಗಿದ್ದವರಿಗೆಲ್ಲ ಲೋಹಿಯಾ ಪ್ರಭಾವನೇ. ಪಾಪ, ಜೇಪಿನೂ ಡಿಸ್ಗಸ್ಟ್ ಆಗಿ ಸರ್ವೋದಯ ಮೂವ್ಮೆಂಟ್ಗೆ ಹೋದ್ರು. ಸೋ ಅದು ಕೂಡ ಸೆಟ್ ಬ್ಯಾಕ್ಗೆ ಕಾರಣವಾಯ್ತು ಮೂವ್ಮೆಂಟ್ಗೆ.
ಲೆಫ್ವಿಸ್ಟ್ ಕಾನ್ಫರೆನ್ಸ್ ಅಂದ್ರಲ್ಲ… ಅದ್ರಲ್ಲಿ ಕಮ್ಯುನಿಸ್ಟರೂ ಇದ್ರಾ?
ಇಲ್ಲ, ಅವರದು ಬೇರೇನೇ ಇತ್ತಲ್ಲ. ಕಮ್ಯುನಿಸ್ಟ್ ಪಾರ್ಟಿ ಅಂತಾ ಕುಳಕುಂದ ಶಿವರಾಯರು ಇದ್ರು. ಅವ್ರು, ನಾವು ಪ್ಯಾರಲಲ್ ಇದ್ದಹಾಗೆ ಇದ್ವಿ. ಹುಬ್ಬಳ್ಳಿಯಲ್ಲಿ ಅವರದು ‘ಜನಶಕ್ತಿ’, ನಮ್ಮದು ‘ಜಾಗೃತಿ’ ಪತ್ರಿಕೆಗಳು. ಅವರು ‘ಜನಶಕ್ತಿ’ ರಸ್ತೇಲಿ ಹಿಡಿದು ಮಾರಾಟ ಮಾಡ್ತಿದ್ರು. ನಾವೂ ‘ಜಾಗೃತಿ’ ಹಿಡಿದು ರಸ್ತೇಲಿ ಮಾರ್ತಿದ್ವಿ. ಆಥರಾ ಇದ್ವಿ ನಾವು.
ಅವರ ಚಟುವಟಿಕೆಗಳು ಏನಿದ್ದವು?
ಅವರದು ಲೇಬರ್ ಮೂವ್ಮೆಂಟ್, ರೈಲ್ವೇ, ಗಿರಣಿ ಕಾಮಗಾರ್, ರೈಲ್ವೆ ಅವರಿಗೆ ಹೆಚ್ಚು ಇದು ಮಾಡ್ಲಿಕ್ಕಾಗ್ಲಿಲ್ಲ. ಅಲ್ಲಿ ನಾವು ಹೊಕ್ಕು ಬಿಟ್ಟೆವು. ಐ ವಾಸ್ ಮೇಡ್ ಆಯಸ್ದ ಆರ್ಗನೈಸರ್ ಆಫ್ದ ಎಂ.ಎಸ್.ಎಂ. ರೈಲ್ವೇ ಎಂಪ್ಲಾಯಿಸ್ ಯೂನಿಯನ್. ಆಗಿನ ಆಫೀಸ್ ಬೇರರ್ಸ್ ನನ್ನನ್ನ ಆರ್ಗನೈಸಿಂಗ್ ಸೆಕ್ರಟರಿ ಮಾಡಿದ್ರು ಅಲ್ಲಿ. ಸೋ ನ್ಯಾಚುರಲಿ ನಾವು ಹೊಕ್ಕು ಬಿಟ್ವಿದ್ವಿ. ಸೋ ನಮ್ಮ ಸ್ಥಾನದಲ್ಲಿ ಅವರಲ್ಲಿ ಎನ್.ಕೆ. ಉಪಾಧ್ಯಾಯ ಅಂತಿದ್ರ್ಝು ಈಗವರು ಬಿಜಾಪುರದಲ್ಲಿರಬೇಕು.
ಇಲ್ಲ್ಫ ತೀರಿಕೊಂಡ್ರು?
ಅವರಣ್ಣ ಎನ್.ಎಲ್. ಉಪಾಧ್ಯಾಯ ತೀರಿಕೊಂಡಿರ್ಬೆಕು.
ಇಲ್ಲ, ಇಬ್ರೂ ಹೋಗಿ ಬಿಟ್ರು?
ಹೌದಾ, ನಮಗದು ಗೊತ್ತೇ ಆಗೋದಿಲ್ಲ ಆ ಕಡೇದು. ನನಗೂ ಮುಂಚೆ ಎನ್.ಕೆ. ಉಪಾಧ್ಯಾಯ ಆರ್ಗನೈಸಿಂಗ್ ಸೆಕ್ರೆಟರಿ ಆಗಿದ್ರು. ಅವ್ರು ಯಾವ್ದೋ ಒಂದ್ರಲ್ಲಿ ಸಿಕ್ಕಿ ಹಾಕ್ಕೊಂಡು ಅವರನ್ನು ಹೊರಗೆ ಹಾಕಿದ್ರು. ಆ ಸ್ಥಾನದಲ್ಲಿ ನಾನು ತುಂಬ್ಕೊಂಡೆ. ನಂತರ ನಾನು ಸಂಘಟನೆ ಮಾಡ್ತಾ ಬಂದೆ. ಸೈಡ್ ಬೈಸೈಡ್ ಹೋಟೆಲ್ ಯೂನಿಯನ್ನೂ ಮಾಡೀವಿ ನಾವು. ಹೋಟೆಲ್ ವರ್ಕರ್ಸ್ ಯೂನಿಯನ್ ನಂತರ ಗಿರಣಿ ಕಾರ್ಮಿಕರ ಯೂನಿಯನ್ ಮಾಡಿದ್ವಿ. ಅವರಲ್ಲಿ ಹೆಚ್ಚಿನ ಪ್ರಭಾವ ರಾಯಿಸ್ಟರದ್ದು ಇತ್ತು.
ಎಂ. ಎನ್. ರಾಯ್?
ಹ್ಞಾಂ!
ರಾಯ್ ವಾದಿಗಳು ಯಾರ್ಯಾರಿದ್ರು ಧಾರವಾಡ ಹುಬ್ಬಳ್ಳಿಗಳಲ್ಲಿ?
ಎನ್.ಬಿ. ಹಿರೇಮಠ ಅಂತಿದ್ರು. ಒಳ್ಳೇ ಲೀಡರ್ರು. ಈಗ ತೀರ್ಕೊಂಡಿರಬೇಕು. ಹೀಗೆ ಲೆಫ್ಟಿಸ್ಟ್ ಮೂರು ಬಣಗಳಿದ್ದವು. ಒಂದು ಕಮ್ಯೂನಿಸ್ಟ್, ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿ, ಇನ್ನೊಂದು ರಾಯಿಸ್ಟ್ ರಾಯಿಸ್ಟ್ ರಲ್ಲಿ ಅವರ ಬಣದಲ್ಲಿ ನಮ್ಮ ಕೆಲವರು ನಾರ್ಥ್ ಕೆನರಾದ ಜನ ಸೇರ್ಕೋಂಡ್ರು. ಉದಾಹರಣೆಗೆ ನಮ್ಮ ಗೌರೀಶ್ ಕಾಯ್ಕಿಣಿಯವರು ಇದ್ರು. ಡಿ.ವಿ. ಚಿತ್ತಾಲರು ಹೌದು. ಎಸ್.ಆರ್. ಬೊಮ್ಮಾಯಿ ಹೌದು. ಅವರು ‘ಬೆಳಕು’ ಅಂತಾ ಪತ್ರಿಕೆ ಮಾಡ್ತಿದ್ರು. ಇಟ್ ವಾಸ್ ಇನ್ ೫೧ ರಿಂದ ೫೩. ೫೨ ಕ್ಕೆ ನಾನು ಹುಬ್ಬಳ್ಳಿ ಬಿಟ್ಟೆ. ನನಗೆ ಅಲ್ಲಿ ಸೆಟ್ ಆಗೋದು ಕಷ್ಟ ಆಯ್ತು. ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿ ಇದ್ರೂ ಕೂಡ ನಾವು ೧೯೪೮ನಲ್ಲಿ ಕಾಂಗ್ರೆಸ್ ಅಂತಾ ಬಿಟ್ಟೆವಲ್ಲ ನಾಸಿಕ್ ಅಧಿವೇಶನದಲ್ಲಿ. ಆ ಅಧಿವೇಶನದಲ್ಲಿ ನಾನೂ ಭಾಗವಹಿಸಿದ್ದೆ ಹುಬ್ಬಳ್ಳಿ ಪ್ರತಿನಿಧಿಯಾಗಿ.
Leave A Comment