ನಾಸಿಕ್ಸಮ್ಮೇಳನದ ಮುಖ್ಯ ಚರ್ಚೆ ಮತ್ತು ತೀರ್ಮಾನಗಳು ಏನಾಗಿದ್ದವು?

ಇವರು ಪವರ್‌ ಹಂಗರ್ಸ್‌ ಅಂತಾಗಿತ್ತಲ್ಲ.

ಯಾರು?

ಕಾಂಗ್ರೆಸ್‌ನ ಮುಂದೆ ಇದ್ರಲ್ಲ ಅವ್ರು. ಅಧಿಕಾರ ಲಾಲಸಿಗಳು ಅಂತಾ ಆಯ್ತು. ನಮಗೆ ಅಧಿಕಾರ ಬೇಡ ನಮಗೆ ಹೋರಾಟ ಬೇಕು ಅಂತಾ. ಫಂಡಮೆಂಟಲ್‌ ಡಿಫರೆನ್ಸ್‌ ಅಲ್ಲಿ ಬಂತು. ವಿ ಹ್ಯಾವ್‌ ಟು ವರ್ಕ್‌ ಫಾರ್‌ ದಿ ಡೌನ್‌ ಟ್ರೋಡನ್‌. ಇವ್ರು ಡೌನ್‌ ಟ್ರೋಡನ್‌ ಹೆಸರಿನಲ್ಲಿ ತಮ್ಮ ಬಂಡವಾಳ ಮಾಡ್ತಾ ಹೋಗ್ತಾ ಇದ್ದಾರೆ ಕಾಂಗ್ರೆಸ್‌ನವ್ರು. ಅದೂ ಜೆ.ಪಿ. ಕಾಂಗ್ರೆಸ್‌ನವರನ್ನು ಎಷ್ಟು ಟೀಕೆ ಮಾಡಿದ್ರು ಅಂದ್ರೆ. ಒಂದ್ಸಲ ಗಾಂಧೀ ಟೋಪಿ ಬೀಸಾಡಿ, ಕೆಂಪು ಟೋಪಿ ಹಾಕ್ಲಿಕ್ಕೆ ಶುರು ಮಾಡಿದ್ರು. ಈಗ ನಮ್ಮ ಬಂಗಾರಪ್ಪ ಹಾಕ್ತಾ ಇದ್ದಾರಲ್ಲ ಅಂಥಾದ್ದು (ನಗು)

ಜೆ.ಪಿ. ಗಾಂಧಿ ಟೋಪಿ ಕಿತ್ತು ಹಾಕಿದ್ದು ತುಂಬಾ ತೀಕ್ಷ್ಣ ಪ್ರತಿರೋಧ ಅನಿಸಲ್ವಾ?

ಹೌದು. ಕಿತ್ತು ಹಾಕಿದ್ರು. ಒಂದು ಸಭೆಯಲ್ಲಿ ಜನಿವಾರ ಕಿತ್ತು ಹಾಕಿದ್ದಾರೆ. ಜೆ.ಪಿ. , ಬ್ರಾಹ್ಮಣಿಸಂನ ವಿರೋಧಿಸಿ. ಇವೆಲ್ಲ ನಮಗೆ ಆ ಕಾಲದಲ್ಲಿ ಹೆಚ್ಚು ಪ್ರಭಾವ ಬೀರ್ತಿದ್ವು ನಮಗೆ.

ಅಂಥಾ ಸಂದರ್ಭ ಏನು ಬಂದಿತ್ತು ಜೆ.ಪಿ. ಜನಿವಾರ ಕಿತ್ತು ಹಾಕೋಕೆ?

ಅಲ್ಲ, ಆಗಿನ ಕಾಲದ ಮೂವ್‌ಮೆಂಟ್‌ ಹಾಗಿತ್ತು. ಬಿಹಾರದಲ್ಲಿ ಕಿಸಾನ್‌ ಪರಿಸ್ಥಿತಿ ಹಾಗೆ ಇತ್ತು. ಅದನ್ನ ಲಲ್ಲೂ ಪ್ರಸಾದ್‌ ಈಗ ಬ್ಯಾಂಕ್‌ ಮಾಡ್ಕೋಳ್ತಿದ್ದಾರೆ ಜೆ.ಪಿ.ಗೆ ಅದನ್ನು ನೋಡಿ ಸಹಿಸೋಕ್ಕೆ ಆಗಿರ್ಲಿಲ್ಲ.

ಅಂದ್ರೆ ಬಿಹಾರದಲ್ಲಿ ಬ್ರಾಹ್ಮಣಶಾಹಿ ಕಿಸಾನರ ಪಾಲಿಗೆ ಶೋಷಕ ಶಕ್ತಿಯಾಗಿದೆ ಅಂತಾ ಜೆ.ಪಿ. ಭಾವಿಸಿದ್ರಾ ಅಂತಾ?

ಹ್ಞಾಂ. ಆಗ್ತಿದೆ ಅಂತಾ ಅವರು ಮನಗಂಡಿದ್ರು. ದಟ್ ವಾಸ್‌ ಜೆ.ಪಿ. ಹಾಗೆ ಆ ಕಾಲದಲ್ಲಿ ಅವ್ರು. ನಮ್ಮ ಬನಾರಸ್‌ ವಿಶ್ವವಿದ್ಯಾಲಯಕ್ಕೆ ಉಪಕುಲಪತಿ ಆಗಿದ್ರಲ್ಲ ನಮ್ಮ ಸಮಾಜವಾದಿ ಅವರ ಹೆಸರು ಮರೆತು ಹೋಯ್ತು. ಹಿ ವಾಸ್‌ ನಮಗೆ ಐಡಿಯಾಲಜಿಕಲ್‌… ಈವನ್‌ ಜೆ.ಪಿ.ಕೂಡ ನಮಗೆ ಬಹಳ ಪ್ರಭಾವ ಬೀರಿದ್ರು. ಸೋ ನಾಸಿಕ್‌ ಅಧಿವೇಶನದಲ್ಲಿ ನಾವು ಬೇರೆ ಆದ್ವಿ. ಕಾರಂತರೂ ಅಲ್ಲಿಗೆ ಹೋಗಿದ್ರು. ಸಮಾಜವಾದಿಗಳಿಗೆ ಅದೊಂದು ಮುಖ್ಯ ಘಟನೆ, ೧೯೪೮. ಕಾಂಗ್ರೆಸ್ಸನ್ನು ಬಿಟ್ಟು ಬಂದಿದ್ದು, ನಾಸಿಕ್‌ ಅಧಿವೇಶನ ಮೊದ್ಲು. ಕಾಂಗ್ರೆಸ್‌ ಸೋಷಲಿಸ್ಟ್‌ ಪಾರ್ಟಿ ಇತ್ತಲ್ಲ. ನಂತರ ಬರೇ ಸೋಷಲಿಸ್ಟ್‌ ಪಾರ್ಟಿ ಆಯ್ತು ನಮಗೆ. ಆ ಅಧಿವೇಶನ ಮುಗಿಸಿ ಹಾಗೆ ಮುಂಬೈಗೆ ಬಂದೆ ನಾನು. ಆಮೇಲೆ ಮಾಧ್ಯಮ ಸೇರ್ಬೇಕು ಅಂತ ಪ್ರಯತ್ನಪಟ್ಟೆ. ಆವಾಗ ನಮಗೆ ಮಾಧ್ಯಮ ಸೇರ್ಲಿಕ್ಕೆ ಅಷ್ಟು ಅನುಕೂಲ ಆಗ್ಲಿಲ್ಲ. ನಮ್ಮ ಹೆಚ್‌. ವೈ.ಶಾರದಾ ಪ್ರಸಾದ್‌ ಗ್ರೇಟ್‌ ಜರ್ನಲಿಸ್ಟ್‌. ನಂತರ, ಸೋಷಲಿಸ್ಟ್‌ ಮೂವ್‌ಮೆಂಟ್‌ ದಿನಕರ ದೇಸಾಯಿ. ಈ ಭಾಗದಲ್ಲಿ ಅವರ ನಾಯಕತ್ವದಲ್ಲಿ ಸಂಘಟನೆಗೊಂಡಿತು.

ದಿನಕರ ದೇಸಾಯಿಯವರದು ಯಾವುದೇ ಪಕ್ಷ ಸಂಘಟನೆಗಿಂತ ಇಂಡ್ಯುವಿಶ್ಯುಲ್ಲೀಡರ್ಶಿಪ್ಆಗಿತ್ತು ಅನಿಸಲ್ವಾ?

ಡೆಫಿನೇಟ್ಲೀ. ಎ ಲೀಡರ್‌ ಈಸ್‌ ವೆರೀ ಇಂಪಾರ್ಟೆಂಟ್‌ ಟು ಎನೀ ಮೂವ್‌ಮೆಂಟ್‌ ಆ ಮೇಲೆ ಮಾಧ್ಯಮ ಸೇರ್ಬೇಕು ಅಂತ ಪ್ರಯತ್ನ ಪಟ್ಟೆ. ಅವಗ ನಮಗೆ ಮಾಧ್ಯಮ ಸೇರ್ಲಿಕ್ಕೆ ಅಷ್ಟು ಅನುಕೂಲ ಆಗ್ಲಿಲ್ಲ. ನಮ್ಮ ಹೆಚ್‌.ವೈ.ಶಾರದಾ ಪ್ರಸಾದ್‌ ಅವ್ರು ನಾವು ಫ್ರೆಂಡ್ಸ್‌. ಖಾದ್ರಿ ಶಾಮಣ್ಣನ ಗೆಳೆಯರು. ಅವರೆಲ್ಲ. ಖಾದ್ರಿ ಶಾಮಣ್ಣ ನನಗೆ ಲೆಟರ್‌ ಕೊಟ್ಟಿದ್ರು ಅವರನ್ನ ಭೆಟ್ಟಿ ಆಗ್ರಿ ಅಂತ್ಹೇಳಿ. ಅವರನ್ನ ಭೇಟಿಯಾದೆವು, ಅದೆಲ್ಲಾ ಆಯ್ತು. ಸುದ್ದಿ ಬಂತು ನಮ್ಮ ಊರಲ್ಲಿ ನಮ್ಮ ಕಸಿನ್ಸ್‌ ಹಳ್ಳಿಗೋಗಿದ್ರು, ಅಂತ ಹೇಳಿದದ್ನಲ್ಲ, ಹಳ್ಳಿಯಲ್ಲಿ ನನ್ನ ತಮ್ಮ ಇದ್ದ. ಅವನೂ ಮನೆ ಬಿಟ್ಟು ಹೋದ. ಈಗ ಅಲ್ಲೆಲ್ಲ ತೊಂದ್ರೆ ಆಗಿದೆ ಅಂದಕೂಡ್ಲೆ ನಾನು ಮರಳಿ ಹಳ್ಳಿಗೆ ಹೋಗಬೇಕಾಯ್ತು. ಇಟ್‌ ವಾಸ್‌ ಇನ್‌ ೧೯೫೨ – ೫೩ ಐ ಥಿಂಕ್‌. ಅಂಡ್‌ ಅವಾಗ ಆಕ್ಚ್ಯುವಲಿ ಐ ಬಿಕೇಮ್‌ ಎ ಅಗ್ರಿಕಲ್ಚರಿಸ್ಟ್‌ ಒನ್‌ ಇಯರ್‌.

ಎಲ್ಲಿ ಅಮ್ಮೆಂಬಳದಲ್ಲಿ?

ಹೂಂ. ನಮ್ಮ ತಂದೆ ಸಂಗಡ. ಕೊನೆಗೆ ಅನ್ನಿಸ್ತು ಎಷ್ಟು ಓದಿದ್ದೆ ಮತ್ತೆ ಹಳ್ಳಿಯಲ್ಲಿ ಇರಬೇಕಾಯ್ತು ಅಂತಾ. ಸಪ್ಲಿಮೆಂಟ್‌ ಮಾಡ್ಲಿಕ್ಕೆ ಉತ್ಪನ್ನ ಬೇಕಲ್ಲ. ಅದಕ್ಕೆ ಅಗೇನ್‌ ಜಾಬ್‌ ಹುಡುಕ್ಬೇಕಾಯ್ತು. ಲಕ್ಕಿಲೀ ಐಗಾಟ್‌ ಎ ಜಾಬ್‌ ಇನ್‌ ಹೈಸ್ಕೂಲ್‌, ಡೀಸೆಂಟ್‌ ನ್ಯಾಷನಲ್‌ ಗರ್ಲ್ಸ್‌ ಹೈಸ್ಕೂಲ್‌

ಎಲ್ಲಿ?

ಮಂಗ್ಳೂರಲ್ಲಿ. ಒಂದು ವರ್ಷ ಅಲ್ಲಿ ಟೆಂಪರರಿ ಪೋಸ್ಟ್‌ ಮೇಲೆ ಕೆಲ್ಸ ಮಾಡಿದೆ. ಅನಂತರ ಐ ಜಾಯಿನ್ಡ್‌ ‘ನವಭಾರತ’. ಡೇಲಿ, ಮಂಗ್ಳೂರಲ್ಲಿ. ನಾನು ರೆಫರ್‌ ಮಾಡ್ದೆನಲ್ಲ ಕುಡುವ ಅವರದು ಸಿ.ಪಿ.ಸಿ. ಅಂದ್ರೆ ಕೆನರಾ ಪಬ್ಲಿಕ್‌ ಕನ್‌ವೇಯಿನ್ಸ್‌ ಅಂತ್ಹೇಳಿ. ಓನರ್ಸ್‌ ಅವ್ರು. ಬಸ್ಸಸ್ಸ್‌ ನಡೆಸ್ತಿದ್ರು. ಸೈಡ್‌ ಬೈ ಸೈಡ್‌ ಹಿ ವಾಸ್‌ ರನ್ನಿಂಗ್‌ ಎ ಡೈಲೀ ‘ನವಭಾರತ’. ಹಿವಾಸ್‌ ಗ್ರೇಟ್‌ ಸ್ಟಾಲ್‌ ವಾರ್ಟ್‌. ಅವರ ಡೈಲೀನಲ್ಲಿ ವರ್ಕ್‌ ಮಾಡಿದೆ. ಎರಡು ವರ್ಷ, ಅವಾಗ್ಲೇ ನಾವು ಮದುವೆ ಮಾಡ್ಕೊಂಡ್ವಿ. ಮದುವೆ ಆದ ವರ್ಷವೇ ದಿನಕರ ದೇಸಾಯಿ ಅಲ್ಲಿ ಬಂದಿದ್ರು.

ಎಲ್ಲಿಗೆ?

ಸೌತ್ ಕೆನರಾಕ್ಕೆ. ಅವರನ್ನ ಡಾ. ನಾಗಪ್ಪ ಆಳ್ವ, ಕೋಟ ರಾಮಕೃಷ್ಣ ಕಾರಂತ, ನೀವು ಹೇಳಿದ್ರಲ್ಲ ಪ್ರಜಾ ಸೋಷಲಿಸ್ಟ್‌ ಪಾರ್ಟಿ ಅವರು ಕಳಿಸಿದ್ರು, ಒಂದು ಸಮ್ಮೇಳನ ಡಿಸ್ಟ್ರಿಕ್ಟ್‌ ರೈತರ ಸಮ್ಮೇಳನ ಕುಂಬ್ಳೇಯಲ್ಲಾತದು. ಅದೀಗ ಕೇರಳದಲ್ಲಿದೆ. ಅದರ ಇನ್ಯಾಗುರೇಷನ್‌ಗೆ ದೇಸಾಯರು ಬಂದಿದ್ರು. ಹಿ ವಾಸ್‌ ಟೇಕನ್‌ ರೌಂಡ್‌ ದ ಡಿಸ್ಟ್ರಿಕ್ಟ್‌. ಅಂಡ್‌ ದೆ ಅರೇಂಜ್ಸ್‌ ಸ್ಪೆಷಲ್‌ ಪಬ್ಲಿಕ್‌ ಮೀಟಿಂಗ್‌ ಇನ್‌ ಮಂಗಳೂರ್‌ ಆಲ್ಸೋ, ಫಾರ್‌ ದಿನಕರ ದೇಸಾಯಿ. ದೇಸಾಯಿ ವೆರೀ ಪವರ್‌ ಫುಲ್‌ ಸ್ಪೀಕರ್‌ ಅವರು. ಅದು ಮಾಡೋ ಹೊತ್ತಿಗೆ ಐವಾಸ್‌ ಇನ್‌ ‘ನವಭಾರತ’, ವರದಿ ಮಾಡಿದೆ. ಮರುದಿನ ಪತ್ರಿಕೆಯಲ್ಲಿ ಪ್ರಕಟವಾಯ್ತು. ಅವರು ಓದಿದ್ರು. ಆ ದಿವ್ಸ ನೈಟ್‌ ಸಿ.ಪಿ.ಸಿ. ಗೆಸ್ಟ್‌ ಹೌಸಿನಲ್ಲಿ ದೇಸಾಯಿಯರ ಮೀಟಿಂಗ್‌ ನಮ್ಮ ಸಮಾಜವಾದಿ ಕಾರ್ಯಕರ್ತರದ್ದು. ಕೆನರಾ ವೆಲ್‌ಫೇರ್‌ ಟ್ರಸ್ಟ್‌ ಜಸ್ಟ್‌ ಸ್ಥಾಪನೆಯಾಗಿತ್ತು. ಹಿಸ್ಪೈಟ್‌ ಔಟ್‌ ದ ಪ್ಯೂಚರ್‌ ಪ್ರೊಗ್ರಾಂ, ಆಫ್‌ ಹಿಸ್‌ ಟ್ರಸ್ಟ್‌. ಇಮ್ಮಿಡಿಯಟ್ಲೀ ಐಯಾಮ್‌ ಗೋಯಿಂಗ್‌ ಟು ಸೆಟ್‌ ಅಪ್‌ ಎ ಪ್ರೆಸ್‌ ಅಂಡ್‌ ಎ ಪೇಪರ್‌. ನನಗೊಂದು ಜನಬೇಕು ಪೇಪರ್‌ ನಡೆಸೋಕ್ಕೆ ಅಂತ ಹೇಳಿದ್ರು. ಅವಾಗೆಲ್ಲ ಫ್ರೆಂಡ್ಸ್‌ ನನ್ನ ಹೆಸರು ಸೂಚನೆ ಮಾಡಿದ್ರು. ‘ನವಭಾರತ’ ಇತ್ತಲ್ಲ ಆ ಬ್ಯಾಕ್‌ ಗ್ರೌಂಡ್‌ ಮೇಲೆ. ಎಲ್ಲ ಮೀಟಿಂಗ್‌ ಆದ್ಮೇಲೆ ಹಿ ಕಾಲ್ಡ್‌ ಮೀ. ‘ಬರ್ತೀರೇನೋ’ ಅಂತಾ ಕೇಳಿದ್ರು. ‘ಯಾವಾಗ ಬರ್ಬೇಕು ಹೇಳಿ’ ಅಂದೆ. ‘ಇಲ್ಲ’, ಇಮ್ಮಿಡಿಯಟ್‌ ಅಲ್ಲ. ಇನ್ನೂ ಪ್ರೆಸ್‌ ಖರೀದಿ ಆಗಿದೆ. ಸೆಟ್‌ ಮಾಡ್ಬೇಕು. ಬಹುಶಃ ನೆಕ್ಟ್ಸ್ ಅಕ್ಟೋಬರ್‌ ನವಂಬರ್‌ದಾಗ ಆಗ್ಬಹ್ದು. ನೋಡಿ ವಿಚಾರ ಮಾಡಿ ಬರೀರಿ’ ಅಂತಂದ್ರು. ಹಿ ವೆಂಟ್‌ ಟು ಬಾಂಬೆ ಆಯಸ್‌ ಹಿ ಸೆಡ್‌ ಇನ್‌ ಅಕ್ಟೋಬರ್‌. ಅವರೇ ಲೆಟರ್‌ ಬರೆದ್ರು. ದಿಸ್‌ ಮೆ ಬಿ ಅಬೌಟ್‌ ಮಾರ್ಚ್‌ – ಏಪ್ರಿಲ್‌. ಪ್ರೆಸ್‌ ಬಂದು ಮುಟ್ಟಿದೆ. ನೀವು ಹೇಳಿದ ಹಾಗೆ ಬರ್ತೀರೇನು. ಬರ್ತೀರಾದ್ರೆ ಬರುವ ಪೂರ್ವದಲ್ಲಿ ನಿಮ್ಮ ಕೆಲವು ರೈಟಿಂಗ್ಸ್‌ ಈವರೆಗೂ ಬರ್ದಿದ್ದು ಇದ್ರೆ ಕಳಿಸ್ಕೊಡಬೇಕು. ಕಳಿಸ್ಕೊಟ್ಟೆ. ಅದೆಲ್ಲ ನೋಡಿದ ಮೇಲೆ ಮತ್ತೊಂದು ಲೆಟರ್‌ ಬಂತು. “ಎಸ್‌, ಪ್ಲೀಸ್‌ ಟೆಲ್‌ ಮೀ ವೆನ್‌ ಯು ಆರ್‌ ಗೋಯಿಂಗ್‌ ಟು ಜಾಯಿನ್‌” ಆ ಹೊತ್ತಿಗೆ ಮದುವೆ ಆಗಿದ್ದೆ ನಾನು. ಅಂಡ್‌ ಶಿ ಈಸ್‌ ಎ ನರ್ಸ್‌ ಅಂಡ್‌ ಲೈಕ್‌ ದಟ್‌ ಅಂತಾ. ಇನ್ನೊಂದು ಲೆಟರ್‌ ಬಂತು. ಎಸ್‌ ವೆರಿಗುಡ್‌ ಬೋಥ್‌ ಯೂ ಹ್ಯಾವ್‌ ಜಾಬ್‌ ಇನ್‌ ಅವರ್‌ ಟ್ರಸ್ಟ್‌. ಪ್ಲೀಸ್‌ ಕಮ್‌. ಲೈಕ್‌ ದಟ್‌… ವೆನ್‌ ಐ ವಾಸ್‌ ಇನ್ ಹುಬ್ಳಿ. ಆ ಕಾಲದಲ್ಲಿ, ದಿನಕರ ದೇಸಾಯಿಯವರಿಗೆ ಅಂಕೋಲಾಕ್ಕೆ ಬರ್ಬೇಕಂದ್ರೆ ಹುಬ್ಳಿ ಈಸ್‌ ದಿ ಔಟ್‌ಲೆಟ್‌. ಟ್ರೇನ್‌ಗೆ ಬಂದು, ಪ್ರವೇಟ್‌ ಬಸ್‌ ಹಿಡ್ಕೊಂಡು ಅಂಕೋಲಕ್ಕೆ ಬರ್ಬೇಕು ಅವರು. ಅವಾಗ ನಮ್ದು ಒಂದು ರಿಚ್ಯುವಲ್‌. ಯಾರೇ ಬರ್ಲೀ ಸೋಷಲಿಸ್ಟ್‌ ಲೀಡರ್ಸ್‌ ಅವರನ್ನ ರೀಸೀವ್‌ ಮಾಡೋದು, ನಮ್ಮ ವರ್ಕರ್ಸ್‌ನೆಲ್ಲ ಕರ್ಕಂಡೋಗಿ ಭೆಟ್ಟಿ ಮಾಡ್ಸೋದು, ಅವರ ಕೆಲ ಅಡ್ಟೈಸ್‌ ತಗೊಳ್ಳೋದು ಹೀಗೆ. ಆ ಪೈಕಿ ದಿನಕರ ದೇಸಾಯಿ ಕೂಡ ಹಾಗೆ. ಆಗ್ಲೇ ನನ್ಗೆ ಪರಿಚಯ ಆಗಿತ್ತು.

ಮಂಗಳೂರಿಗೆ ಬಂದಾಗ ಐ ಜಸ್ಟ್‌ ರಿಮೈಂಡೆಡ್‌ ಹಿಮ್‌. ನೆಕ್ವ್ಸ್ ಡೇ ಅರ್ಲೀ ಮಾರ್ನಿಂಗ್‌ ಟುಕ್‌ ಎ ಸ್ಟೀಮರ್‌ ಫ್ರಂ ಮಂಗಳೂರು ಟು ಕಾರವಾರ್‌. ಕಾರವಾದಿಂದ ಅಂಕೋಲಕ್ಕೆ ಬರುವುದು ಅರ್ಲೀ ಮಾರ್ನಿಂಗ್‌, ಬೀಳ್ಕೋಡೋದಕ್ಕೆ ಹೋಗಿದ್ವಿ. ಬಾಳಪ್ಪ ಕೂಡ ಇದ್ರು ಅವಾಗ. ಅಲ್ಲಿ ಪುನಃ ನೆನಪು ಮಾಡಿದ್ರು. “ಐ ಯಾಮ್‌ ರೈಟಿಂಗ್‌ ಟು ಯೂ” ಅಂತ ನೆನಪ್ಮಾಡಿ ಹೋದ್ರು ಅವ್ರು. ಅಂಡ್‌ ಐ ಜಾಯಿನ್ಡ್‌ ಹಿಸ್‌ ಪ್ರೆಸ್‌ ಇನ್ ೧೯೫೪. ಅಂಡ್‌ ಐ ರೀಚ್ಡ್‌ ಅಂಕೋಲ ೧೯೫೪. ಡಿಸೆಂಬರ್ ೬. ಜನವರಿ ೨೬ ಸ್ಟಾರ್ಟೆಡ್ ವೀಕ್ಲೀ, ‘ಜನಸೇವಕ’ ಇಮ್ಮಿಡಿಯಟ್ಲಿ. ಹದಿನೇಳುವರೆ ವರ್ಷ ನಡೀತು. ೯೧೩ ಇಶ್ಯೂಸ್‌. ಅವೆಲ್ಲ ವಿಷ್ಣು (ನಾಯ್ಕ) ಹತ್ತಿರ ಇವೆ. ಅಲ್ಲಿಯ ಮೂವ್‌ಮೆಂಟ್‌ಗೆ, ಜನಪರ ಮೂವ್‌ಮೆಂಟ್‌ಗೆ, ಜನಸೇವಕ ಒಳ್ಳೇ ಕಾಂಟ್ರಿಬ್ಯೂಶನ್‌. ಐಡಿಯಾಲಜಿಕಲ್‌ ಯ್ಯಾಜ್‌ ವೆಲ್‌ ಆಯಜ್‌ ಹೋರಾಟಮಯ.

ಪತ್ರಿಕೆಯ ಮೂಲಕ ಜನತೆಯ ನಡುವೆ ನಿಮ್ಮ ತಾತ್ವಿಕತೆಯನ್ನು ಪ್ರಸಾರ ಮಾಡ್ಲಿಕ್ಕೆ ಸಾಧ್ಯವಾಯ್ತಾ?

ಆಗಿದೆ. ಸಾಕಷ್ಟು ಆಗಿದೆ.

ಮುಖ್ಯ ಬರಹಗಾರರು ಯಾರಾಗಿದ್ರು ಅದ್ರಲ್ಲಿ?

ಬರಹಗಾರರಂತೂ, ನಾನು ಅಲ್ಲೇ ಇದ್ದೆ, ಎಂಟು ಪೇಜಸ್‌ ಇದ್ವು. ಆರಂಭದಲ್ಲಿ ಒಂದು ಏಳು ತಿಂಗಳು ನಾನೇ ಬರ್ದೇ ಎಲ್ಲ. ದೇಸಾಯಿ ಡಿಡ್‌ ನಾಟ್‌ ರೈಟ್‌. ನಾನು ಅಲ್ಲಿ ಇಲ್ಲಿ ಸಂಗ್ರಹ ಮಾಡಿ ಕೆಲವು ಅವರೇ ಕ್ಲಿಪಿಂಗ್‌ ಕಳಿಸ್ಕೊಡ್ತಿದ್ರು. ಸಂಪಾದಕೀಯ ಎಲ್ಲಾನೂ ನಾನೇ ಮಾಡ್ತಿದ್ದೆ. ಲೇಟರ್‌ ಆನ್‌ ಅವ್ರಿಗೆ ದೂರದೃಷ್ಟಿಯಿತ್ತು. ಪೊಲಿಟಿಕಲ್‌ ದೃಷ್ಟಿಕೋನ ಇತ್ತು. ಇನ್ನೊಬ್ರು ಕೈಯಲ್ಲಿ ಕೊಟ್ರೆ ನನ್ನಂತೆ ಹೋಗ್ಲಿಕ್ಕಿಲ್ಲ ಅಂತ ಒಂದು ಭಾವನೆ ಬಂತೋ ಏನೋ ದೆನ್‌ ಹಿ ಕೇಮ್‌ ಟು ರೈಟಿಂಗ್.

ತಾವೇ ಬರೀಲಿಕ್ಕೆ ಶುರು ಮಾಡಿದ್ರು?

ಹಾಂ ತಾವೇ ಬರೀಲಿಕ್ಕೆ ಶುರು ಮಾಡಿದ್ರು. ಹದಿನೇಳುವರೆ ವರ್ಷ ಆಯ್ತಲ್ಲ. ಅದ್ರಲ್ಲಿ ಆಲ್‌ಮೋಸ್ಟ್‌ ೧೫ ಇಯರ್ಸ್ ಅವ್ರು ಬರ್ದಿದ್ದಾರೆ. ಉಳಿದ ಎರಡೂವರೆ ವರ್ಷ ಅವರ ಆಬ್ಸೆನ್ಸಿಯಲ್ಲಿ ಅಥವಾ ಅವರ ಅನಾನುಕೂಲತೆಯಿದ್ದಾಗ ನಾನು ಮ್ಯಾನೇಜ್‌ ಮಾಡ್ತಿದ್ದೆ. ನಮ್ಗೆ ಬಲ್ಕ್ ಕಾಂಟ್ರಿಬ್ಯೂಷನ್‌ ಫ್ರಮ್‌ ಗೌರೀಶ ಕಾಯ್ಕಿಣಿ. ಗೌರೀಶ್‌ ಕಾಯ್ಕಿಣಿ ಆಲ್‌ ಇನ್‌ ಆಲ್‌. ಹಿ ವಾಸ್‌ ಎ ಕ್ರಿಟಿಕ್ ಆಫ್‌ ಇನ್‌ ದೋಸ್‌ ಡೇಸ್‌. ಅವ್ರಿಗೆ ಇನ್ನೊಂದು ಪತ್ರಿಕೆ ಆಫರ್‌ ಮಾಡಿ ಸಂಪಾದಕರು ಕೂಡ ಆದ್ರು. ನಾಗರಿಕ ಅಂತ್ಹೇಳಿ. ಅದನ್ನೂ ಲೇಟರ್ ಪಾಂಡೇಶ್ವರ್‌ ತಗೊಂಡ್ರು. ಹೋಯ್ತು ಬಿಡಿ ಅದು. ನಾಗರಿಕ ಇದ್ದಾಗ ಅವ್ರನ್ನ ದಿನಕರ ದೇಸಾಯಿ ಕರ್ದುರು. ನಮ್ಗೆ ಬರೀಬಾರ್ದು ಅಂತ್ಹೇಳಿ… ಜನ ಓದ್ತಾರೆ. ನೀವು ಬರೀರಿ ಅಂದ್ರು. ಅಂಡ ಹಿ ರೋಟ್‌. ಆಲ್‌ ಮೋಸ್ಟ್‌ ಔಟ್‌ ಆಫ್‌ ಎಯ್ಟ್‌ ಪೇಜಸ್‌, ಸಮ್‌ ಟೈಮ್ಸ್‌ ಇಟ್‌ ಈಜ್‌ ಟು ಪೇಜಸ್‌ ಅವರದ್ದು. ಕೆಲವೊಮ್ಮೆ ನಾವೇ ಕಟ್‌ ಮಾಡ್ತಿದ್ವಿ.

ಪತ್ರಿಕೆಯಲ್ಲಿಸರ್ವೆಂಟ್ಸ್ಆಫ್ಇಂಡಿಯಾ ವಿಚಾರಗಳನ್ನು ಹೆಚ್ಚು ಬಿಂಬಿಸ್ತಿದ್ರೋ ಅಥವಾ ಸಮಾಜವಾದಿ ವಿಚಾರಗಳನ್ನೋ?

ಸಮಾಜವಾದಿ ವಿಚಾರಗಳನ್ನೆ. ಆದ್ರೆ ‘ಸರ್ವೆಂಟ್ಸ್‌ ಆಫ್‌ ಇಂಡಿಯಾ’ ಚಟುವಟಿಕೆಗಳನ್ನು ಹೆಚ್ಚು ಪ್ರೊಜೆಕ್ಟ್‌ ಮಾಡ್ತಿದ್ವಿ. ಎ ಹಾಸ್ಟೆಲ್‌, ಅಂಡ್‌ ನರ್ಸಿಂಗ್ ಸೆಂಟರ್ಸ್‌, ಸ್ಟಾರ್ಟಿಂಗ್ ಆಫ್‌ ಸ್ಕೂಲ್ಸ್‌ ಅಂಡ್‌ ಹಿ ಸ್ಟಾರ್ಟೆಂಡ್‌ ಕೆಲವು ಬಾವಿಗಳನ್ನು ತೋಡಿದ್ರು. ರೈತರಿಗೆ ಉಪಯೋಗ ಆಗ್ಲಿ ಅಂತ್ಹೇಳಿ. ಅಂಡ್‌ ಹಿ ನೇಮ್ಡ್ ಆಫ್ಟರ್ ಆಲ್‌ ದ ಸೋಷಲಿಸ್ಟ್‌ ಆಕ್ವಿವಿಟೀಸ್‌ ಹಿ ನೇಮ್ಡ್ ಇಟ್‌ ಥಕ್ಕರ್‌ ಬಾಪ. ಥಕ್ಕರ್‌ ಬಾಪ ವಾಸ್‌ ಗ್ರೆಟ್‌ ಗಾಂಧಿಯನ್ ಅಂಡ್‌ ಹಿವಾಜ್‌ದ ವೈಸ್‌ ಪ್ರೆಸಿಡೆಂಟ್‌ ಆಫ್ ಸರ್ವಂಟ್ಸ್‌ ಸೊಸೈಟಿ. ಇವ್ರಿದ್ದಾಗ ಕುಂಜ್ರು ಇದ್ರು. ಅವರು ಥಕ್ಕರ್‌ ಬಾಪ ಇದ್ದಿಲ್ಲ. ಯೂ ಸೀ ಫಾರ್‌ ಎಕ್ಸಾಂಪಲ್‌ ಹಿ ನೇಮ್ಡ್ ದ ಕಾಲೇಜ್‌ ಆಫ್ಟರ್‌ ಗೋಖಲೆ ಸೆಂಟಿನರಿ, ಗೋಖಲೆ ಸೆಂಟಿನರಿ ಕಾಲೇಜ್‌ ಅಂತಾ. ಮೊದ್ಲು ರೂರಲ್‌ ಇಂಡಿಯಾ ಕಾಲೇಜ್‌ ಅಂತ ಬ್ರೋಚರ್‌ ಮಾಡಿ ಇಟ್ಟಿದ್ರು. ಆಲ್‌ ಆಫ್‌ ಎ ಸಡನ್‌ ವಿಚಾರ ಬಂತು ಅವ್ರಿಗೆ. ನೋ ಇಲ್ಲ. ಆನಂದ, ಔಟ್ ದಟ್‌ ಬ್ರೋಚರ್‌, ಐಯ್ಯಾಮ್‌ ಸೆಂಡಿಂಗ್ ಎ ಸೆಪರೇಟ್ ಒನ್‌. ವಿ ಆರ್‌ ನೇಮಿಂಗ್ ಇಟ್‌ ಆಫ್ಟರ್ ಅಂಡ್ ಗೋಖಲೆ ಕಾಲೇಜ್‌ ಸ್ಟಾರ್ಟ್ ಆಗುವಾಗ ಅದಕ್ಕೆ ಇನಾಗುರೇಷನ್‌ಗೆ ಫಂಕ್ಷನ್ ಮಾಡ್ಬೇಕು. ನಾನು ಬರೋದಿಲ್ಲ. ಕಾಲೇಜ್ ಶುರು ಮಾಡಿ ನನಗೆ ಲೆಟರ್ ಬರೀರಿ ಅಂದ್ರು. ಏನ್ಮಾಡ್ಬೇಕು. ಪಾರ್ಮಲ್ ಅಂದ್ರೆ ಫಾರ್ಮಲ್. ಯಾರಾದ್ರೂ ಒಳ್ಳೇ ಗೆಸ್ಟ್‌ ತಂದು ಮಾಡ್ರೀ… ಲಕ್ಕೀಲಿ ನಮ್ಮ ಹೆಚ್‌.ಕೆ. ರಂಗನಾಥ. ಆಕಾಶವಾಣಿಯಲ್ಲಿ ಇದ್ರು ಅವ್ರು. ನನಗೆ ನಮ್ಮ ಇದ್ರಲ್ಲಿ ಭಾವನ್ಸ್‌ ಕೇಂದ್ರದಲ್ಲಿ ಇದ್ರು ಅವ್ರು. ಹಿ ಡೈಡ್‌. ಹಿ ವಾಸ್‌ ಸನ್‌ ಇನ್‌ ಲಾ ಆಫ್‌ ಅಂಕೋಲ, ಹಿಸ್ ಮಿಸ್ಟ್ರೆಸ್‌ ಫ್ರಂ ಅಂಕೋಲ. ಐ ಕಾಟ್‌ ಹೋಲ್ಡ್‌ ಆಫ್‌ ಹಿಮ್‌. ರಂಗನಾಥ. ನೀವು ಒಂದು ಕೆಲ್ಸ ಮಾಡಬೇಕು. ವಿಥ್‌ ಪ್ಲೆಸರ್‌ ಹಿ ಅಗ್ರೀಡ್‌ ಅಂಡ್‌ ನಮ್ಮ ಪೀಪಲ್ಸ್‌ ಹೈಸ್ಕೂಲ್‌ ಹಾಲ್‌ನಲ್ಲಿ ಗೋಖಲೆಯವರ ಫೋಟೋ ಇಟ್ಟು, ಒಂದು ಫಾರ್ಮಲ್ ಇನಾಗ್ಯುರೇಷನ್ ಮಾಡಿದ್ವಿ. ಲೈಕ್ ದಟ್‌ ಕಾಲೇಜ್‌ ಸ್ಟಾರ್ಟೆಂಡ್‌ ಅಂಡ್‌ ಇಟ್‌ ಪ್ರೊವ್ಡ್ ಟು ಬಿಎಂ ವೆರೀ ಗುಡ್‌ ಕಾಲೇಜ್‌… ಒನ್‌ ಆಫ್ ದಿ ಐಡಿಯಲ್‌ ಇನ್‌ ದ ಯೂನಿವರ್ಸಿಟಿ. ಟಿಲ್‌ ದಟ್‌ ಕೆ.ಜಿ. ನಾಯಕ್‌ ವಾಸ್‌ ಪ್ರಿನ್ಸಿಪಾಲ್‌.

ಪೀಪಲ್ಸ್ಎಜುಕೇಶನ್ ಸೊಸೈಟಿಯಲ್ಲಿಭೂಮಾಲಕಹಿತಾಸಕ್ತಿ ಶೇಷಗಿರಿ ಪಿಕಳೆಯವರನ್ನ ಹೊರಗ್ಹಾಕ್ತಲ್ಲ?

ಆದಕಾರಣ ಈ ಟ್ರಸ್ಟ್‌ ಸ್ಥಾಪೆನಯಾಯ್ತು. ಲಕ್ಕೀಲಿ ಅವ್ರಿಗೆ ರೈತರೆಲ್ಲ ಟುಕ್‌ ಎ ಚಾಲೆಂಜ್‌. ಗಿರಿ ಮಾಸ್ತರರಿಗೆ ನಾವೇ ಒಂದು ಶಾಲೆ ಕಟ್ಟಿಸ್ಕೊಡ್ತೇವೆ ಅಂತ್ಹೇಳಿ. ಸೋ ದೇ ಲೇಬರ್ಡ್ ಥ್ರೀ ಮಂತ್ಸ್‌. ಅಂಡ್‌ ಬಿಲ್ಡ್‌ ಎ ಬಿಲ್ಡಿಂಗ್‌ ಅಂಡ್‌ ಕಾಂಟ್ರಿಬ್ಯೂಟೆಡ್‌ ರೂಪೀಸ್‌ ೬,೦೦೦ ಫ್ರಂ ಟ್ರಸ್ಟ್‌, ದಟ್ಸ್‌ ಹೌ ಟ್ರಸ್ಟ್‌ ಕಮ್‌ ಔಟ್‌.

ದೇಸಾಯಿಯವರು ಹೋರಾಟಕ್ಕೆ ನಾಡವರ ಬೆಂಬಲ ಇರ್ಲಿಲ್ಲ ಅಂತ ಜೆ.ಹೆಚ್‌. ನಾಯಕರು ಹೇಳ್ತಾರೆ?

ಇದ್ದಿಲ್ಲ. ಬಿಕಾಸ್ ದೆ ವರ್‌ ಆಲ್‌ ಕಾಂಗ್ರೆಸ್‌. ಅವ್ರು ಗಾಂಧಿಯನ್ನ ದೇವ್ರು ಅಂತ ನಂಬಿದ್ದ ಜನ ಅವಾಗ. ಇವ್ರೆಲ್ಲ ಗಾಂಧಿಗೆ ವಿರುದ್ಧ ಮಾಡ್ತಾರೆ. ಕಾಂಗ್ರೆಸ್‌ಗೆ ವಿರುದ್ಧ ಮಾಡ್ತಾರೆ, ದಿನಕರ ದೇಸಾಯಿ ಕಾಂಗ್ರೆಸ್‌ನ ಸಿಕ್ಕ ಹಾಗೆ ಬೈತಾನೆ…ಅಂತೆಲ್ಲ ಕಾರಣವಿತ್ತು.

ರೈತರು ಹೆಚ್ಚಾಗಿ ಗೇಣಿ ಮಾಡ್ತಾ ಇದ್ದದ್ದು ಯಾರ ಹೊಲಗಳಲ್ಲಿ?

ಕೊಂಕಣಿ ಬ್ರಾಹ್ಮಣರು, ಕರಾವಳಿಯ ಬ್ರಾಹ್ಮಣರು, ನಾಡವರು ಕೆಲವರು ಇದ್ರು ಶ್ರೀಮಂತರು.

ಅವ್ರೆಲ್ಲ ಯಾರಿಗೆ ಸಪೋರ್ಟ್ಮಾಡ್ತಾ ಇದ್ರು?

ಕಾಂಗ್ರೆಸ್ ಕಡೆ ಇದ್ರು… ದಿನಕರ ದೇಸಾಯಿಯವರು ಎಜುಕೇಶನ್‌ ಇನ್ ಸ್ಟಿಟ್ಯೂಟ್‌ ಶುರು ಮಾಡಿದ್ರಲ್ಲ. ಅವಾಗ ಅವರ ಮಕ್ಕಳಿಗೆ ಎಜುಕೇಶನ್‌ ಬೇಕಿತ್ತು. ಆ ಕಾರಣಕ್ಕೆ ಅವ್ರು ದೇಸಾಯಿಯವರನ್ನ ಒಪ್ಕೊಂಡ್ರು.

ಶಿಕ್ಷಣದ ಹಿತಾಸಕ್ತಿ ಮಾತ್ರ ಇದೆ. ಆದ್ರೆ ರೈತರ ಹೋರಾಟ ಯಶಸ್ವಿಯಾದ್ರೆ ಅವ್ರು ಭೂಮಿ ಕಳ್ಕೋ ಬೇಕಿತ್ತಲ್ಲ, ಎಚ್ಚರ ಅವರಿಗೆ ಇದ್ದಿರಬೇಕಲ್ಲ?

ದೆ ವರ್‌ ರೆಡೀ. ಕಳ್ಕೊಂಡೋರು ಭಾಳ ಕಡಿಮೆ ಅಲ್ಲಿ. ಹವ್ಯಕರು ಯಾಕಂದ್ರೆ ಅವ್ರು ಸ್ವಂತ ಭೂಮಿ ಮಾಡ್ತಿದ್ರು ನೋಡ್ರಿ. ದಿನಕರ ದೇಸಾಯಿ ಶಬ್ದವುಂಟು. ‘ಇವ್ರೆಲ್ಲಾ ಗಂಜಿ ತಿಳಿಯ ಒಡೆಯ’ ಅಂತ. ಆ ಒಡೆಯರ ವಿರುದ್ಧ ನಮ್ಮ ಹೋರಾಟ ಇದು. ದೊಡ್ಡ ಶ್ರೀಮಂತರು ಇಲ್ಲ ನಮ್ಮ ಜಿಲ್ಲೆಯಲ್ಲಿ ರೈತರಿಗೆ ಭೂಮಿ ಕೊಡ್ಬೇಕಾದ್ರೆ ಭೂಮಿ ಕಳೆದು ಕೊಂಡವರಿಗೆ ಸರ್ಕಾರ ಸಾಕಷ್ಟು ಕೊಡ್ಬೇಕು. ಆ ಪರಿಹಾರ ಹಣವನ್ನು ಅವ್ರು ಇಲ್ಲಿ ವಿನಿಯೋಗ ಮಾಡ್ಬೇಕು. ಅವರ ಮಕ್ಕಳು ಮರಿ ಉದ್ದಾರ ಆಗ್ಬೇಕು. ಶಿಕ್ಷಣ ಪಡೀಬೇಕು. ಅಂತಾ ದೇಸಾಯಿ ಹೇಳ್ತಿದ್ರು.

ಮಧ್ಯಮ ವರ್ಗದ ಹಿಡುವಳಿದರಾರು ಯಾರಾಗಿದ್ರು ಇದಕ್ಕೆ ಅವರ ಪ್ರತಿಕ್ರಿಯೆ ಯಾವ ರೀತಿ ಇತ್ತು?

ಕೆಲವು ಕಡೆ ವಿರೋದ ಮಾಡ್ತಿದ್ರು. ಮೆರಣಿಗೆ ತಗೀಲಿಕ್ಕೆ ಕೊಡ್ತಾಯಿದ್ದಿಲ್ಲ. ಕೊನೆಕೊನೆಗೆ ಅದು ರೂಢಿಯಾಯ್ತು. ದಿನಕರ ದೇಸಾಯಿ ಬಂದು ಮೀಟಿಂಗ್‌ ಮಾಡ್ಬೇಕಂದ್ರೆ ನಮಗೆ, ನಾನು ಬರ್ತೀದ್ದೇನೆ ಈಗ ಒಂದು ವಾರ ಅಥವಾ ಒಂದು ತಿಂಗಳು ಇರ್ತೀನೆ. ಇಂತಿಂಥ ಕಡೆ ೩ – ೪ ಸಭೆಗಳಾಗಬೇಕು. ಸಮಸ್ಯೆಗಳು ಇಂತಿಂಥವು ಇವೆ. ಅಂತಾ ಸೂಚನೆ ಕೊಡ್ತಿದ್ರು. ಅವರು ಆ ಪ್ರೋಗ್ರಾಂ ಇಟ್ಕೊಂಡೇ ಬರ್ತಿದ್ರು. ಅವಾಗ ನಾವೇನ್ಮಾಡ್ತಿದ್ವಿ, ಇಲ್ಲಿ ಒಂದು ದಿನಕರ ದೇಸಾಯಿಯವರ ಮೀಟಿಂಗ್‌ ಆಗ್ಬೇಕಾದ್ರೆ ಕನಿಷ್ಠ ೧೦ ವಿಲೇಜ್‌ ಮೀಟಿಂಗ್‌ ನಡೆಸ್ತಿದ್ವಿ.

ರೈತ ಕೂಟದ ಮುಖ್ಯ ಬೇಡಿಕೆ, ಭೂಮಿ ಪಡೆಯೋದೇ ಆಗಿತ್ತಾ?

ಹೌದು.

ಗೇಣಿ ಮಾಡ್ತಾ ಇರೋ ಭೂಮಿನ್ನ ಪಡೆಯೋ ಬೇಡಿಕೆ ಈಡೇರ್ತಾ?

ಆಯ್ತು, ದೇವರಾಜ ಅರಸು ಬಂದ್ಮೇಲೆ.

ಮುರಾರ್ಜಿ ಗೌರ್ನಮೆಂಟ್ ವಾಸ್‌ ರೆಡ್ಯುಸ್‌ ಟು ರೆಂಟಲ್‌ ಗುಂಟಗೆ ಎಂಟಾಣೆ. ಗುಂಟೆ ಅಂದ್ರೆ ಎರಡೂವರೆ ಸೆಂಟ್ಸ್. ಅದನ್ನೂ ಬಿಟ್ಟು ಎಕರೆಗೆ ಐದು ರೂಪಾಯಿ ಗೇಣಿ ಫಿಕ್ಸ್‌ ಮಾಡಿದ್ರು. ಇದಕ್ಕೆಲ್ಲ ಕಾರಣ ದಿನಕರ ದೇಸಾಯಿ ಮೂವ್‌ಮೆಂಟ್‌… ನಮ್ದೆಲ್ಲಾ ಹೋಯ್ತು. ಅದಕ್ಕೆ ಇವರು ಕಾರಣ ಅಂತ ಪಿಕಳೆಯವರನ್ನ ಹೊರಗ್ಹಾಹಿದ್ದು.

ಮುರಾರ್ಜಿ ದೇಸಾಯಿ ಕಡಿಮೆ ಮಾಡಿದ್ರಾ ಗೇಣಿನ್ನ?

ಹಾಂ. ಹಿ ವಾಸ್‌ ರಿಯಲಿ.

ನಿಮ್ಮ ಚಳವಳಿಯ ಒತ್ತಡ ಮುರಾರ್ಜಿಯವರ ಸರಕಾರದ ಮೇಲಾಗಿತ್ತಾ?

ಹಾಂ. ಅಲ್ಲಿ ಮಹಾರಾಷ್ಟ್ರದಲ್ಲಿ ಗೋದಾವರಿ ಪರುಳೇಕರ್‌ ನೇತೃತ್ವದಲ್ಲಿ ಕಮ್ಯುನಿಷ್ಠರ ಪ್ರಭಾವವಿತ್ತು. ಗೇಣಿ ರೈತರ ಬಗ್ಗೆ, ಗೇಣಿ ಕಡಿಮೆಗಾಗಿ ಆಯ್ತು. ಆದ್ರೆ ಭೂರಹಿತ ರೈತರ ಬಗ್ಗೆ, ಅವೆಲ್ಲ ಮುರಾರ್ಜಿ ದೇಸಾಯಿಯವರ ಸರಕಾರದ ಮೇಲೆ ಒತ್ತಡ ಸೃಷ್ಟಿಸಿದ್ದವು.

ಗೇಣಿಗೂ ಭೂಮಿ ಸಿಗದ, ಭೂರಹಿತ ಸಮುದಾಯವೆಂದರೆ ದಲಿತರು. ಇಂತಹ ಭೂರಹಿತರಿಗೆ ಭೂಮಿ ಕೊಡಿಸುವುದಕ್ಕಾಗಿ ಹೋರಾಟಗಳಾಗಿವೆಯೇ?

ಕೆಲವು ಲ್ಯಾಂಡನ್ನ ಸರಕಾರ ಖರೀದಿ ಮಾಡಿ ಈ ಜನರಿಗೆ ಹಂಚಿ ಕೊಡಬೇಕು. ಬರೀ ಭೂಮಿ ಅಷ್ಟೇ ಹಂಚಿ ಕೊಡೋದಲ್ಲ. ಭೂಮಿಗೆ ಬೇಕಾಗುವಂತಹ ಪರಿಕರಗಳು, ಎತ್ತು, ನೇಗಿಲು, ದುಡ್ಡು ಕೊಡಬೇಕು. ಭೂಮಿಯ ಪುನರ್ ಹಂಚಿಕೆ ಆಗಬೇಕು ಅಂತೆಲ್ಲಾ ಆಗಿದೆ.

ಆಗಿದೆ ವರ್ಗ ದೂರವೇ ಉಳೀತು ಅಂತಾ ಮಾತಿದೆ?

ದೂರ ಅಂದ್ರೆ ಅವ್ರಿಗೆ ಲ್ಯಾಂಡ್‌ ಶಿಪ್‌ ಇದ್ದಿಲ್ಲ. ನಾವು ಅವರನ್ನ ನಮ್ಮ ಟ್ರಸ್ಟ್ ನಿಂದ ಒಂದು ಕಾಲನಿ ಕೂಡ ಮಾಡಿಕೊಟ್ವಿ. ಅದು ಕಾಲನಿ ಈಗ್ಲೂ ಇದೆ. ಹರಿಜನ ಕಾಲೋನಿ ಅಂತ್ಹೇಳಿ. ಒಬ್ಬ ಹುಡುಗನನ್ನ ಅಡಾಪ್ಟ್‌ ಮಾಡಿ ಶಿಕ್ಷಣ ಕೂಡಾ ಕೊಟ್ರು.

ಕಾಂಗ್ರೆಸ್ರಾಮನಾಯಕರುಕೂಡ ಉಳುವವನಿಗೆ ಭೂಮಿ ಸಿಗ್ಬೇಕು ಅಂತಾ ತುಂಬಾ ಪ್ರಯತ್ನ ಮಾಡಿದ್ರಂತೆ?

ದೇಸಾಯಿ ಸಂಗಡ ಇದ್ರು. ಭಾವಿ ‘ರಾಮನಾಯಕ’ ಅಂತ್ಹೇಳಿ. ದೇಸಾಯಿಯವರು ಗಡಿಪಾರು ಆಗಿದ್ರು, ೫ ವರ್ಷ, ವಾಪಾಸು ಅಂಕೋಲಕ್ಕೆ ಬಂದಾಗ (ಇಟ್‌ ವಾಸ್‌ ಇನ್‌ ೧೯೪೫). ರಾಮನಾಯಕ ಅವರನ್ನ ಸ್ವಾಗತ ಮಾಡ್ಲಿಕ್ಕೆ ದೊಡ್ಡ ಒಂದು ಸಮಾರಂಭ ಮಾಡಿದ್ರು. ಅವ್ರೂ ರೈತರ ಪರವಾಗಿ ತುಂಬಾನೆ ಕೆಲ್ಸ ಮಾಡಿದ್ದಾರೆ. ಅವ್ರು ಒಂದು ವಿಧಾಯಕ ಕೆಲ್ಸ ಮಾಡಿದ್ದಾರೆ. ಮುರಾರ್ಜಿ ಗೌರ್ನಮೆಂಟ್ ಇತ್ತಲ್ಲ. ಲ್ಯಾಂಡ್ಸ್ ತಗೊಂಡು ಕಾಲೋನಿ ಮಾಡ್ಸಿದ್ರು. ಅಲ್ಲಿ ಸೆಟ್ಲ್ ಮಾಡ್ಸಿದ್ರು, ರೈತರ್ನೆಲ್ಲ, ಭೂಮಿ ಇಲ್ಲದವರನ್ನ. ಅದು ಪ್ರೀ ಇಂಡಿಪೆಂಡೆನ್ಸ್‌.

ಸಮಾಜವಾದಿ ಯುವ ಜನಸಭಾ ಅಂತಾ ಶುರು ಮಾಡಿದ್ದು ಮೊದಲು ನಾವೇ, ಹುಬ್ಬಳ್ಳಿಯಲ್ಲಿ ಹಬ್ಬು ಅವರೆಲ್ಲ ಯುವ ಜನ ಸಭಾ ಕಾರ್ಯಕರ್ತರಾಗಿದ್ರು. ವಿಷ್ಣು ನಾಯ್ಕರು ಅದನ್ನು ಅಂಕೋಲೆಯಲ್ಲಿ ಮುಂದುವರೆಸಿದ್ರು. ವಿಷ್ಣು ನಾಯ್ಕರು ಅದನ್ನು ಅಂಕೋಲೆಯಲ್ಲಿ ಮುಂದುವರೆಸಿದ್ರು. ಚಿಟುಗುಪ್ಪ, ದೇಸಾಯಿ, ಹೀಗೆ ೮ – ೧೦ ಜನ ಇದ್ದರು. ಹುಬ್ಬಳ್ಳಿಯಲ್ಲಿ ಸ್ಟಡೀ ಸರ್ಕಲ್‌ ಅಭ್ಯಾಸವರ್ಗ ಮಾಡಿದೆವು ವೈಚಾರಿಕವಾಗಿ ಬೆಳೆಸೋಕ್ಕೆ.

ದಲಿತ ಸಮುದಾಯಗಳ ಬಗ್ಗೆ ಬಾಳಪ್ಪನವರು ಭಾಗದಲ್ಲಿ ಮಾಡಿದ ಕೆಲಸಗಳೇನು?

ದಲಿತರ ಬಗ್ಗೆ ತುಂಬಾ ಕೆಲಸ ಮಾಡಿದ್ದಾರೆ. ೧೯೭೪ರಲ್ಲಿ ಭೂಸುಧಾರಣೆ ಜಾರಿಯಾದಾಗ ದಲಿತರಿಗೆ ಭೂಮಿ ಕೊಡಿಸೋದಿಕ್ಕೆ ತುಂಬಾ ಪ್ರಯತ್ನ ಮಾಡಿದ್ದಾರೆ. ಡಿಕ್ಲರೇಷನ್‌ ಕೊಡೋಕೆ ದಲಿತರಿಗೆ ಧೈರ್ಯವಿರ್ತಿರಲಿಲ್ಲ. ಸರ್ವೇನಂಬರ್‌ ಕೊಡಬೇಕಿತ್ತು. ಸರ್ವೇನಂಬರ್‌ ಕೇಳೋಕೆ ವಿಲೇಜ್‌ ಅಕೌಂಟೆಂಟ್‌ ಹತ್ತಿರ ಹೋದ್ರೆ ಮರ್ಯಾದೇನಾ ಕೋಡ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಬಾಳಪ್ಪ ಅವರಿಗೆ ಭಾಳಾ ಹೆಲ್ಪ್ ಮಾಡಿದ್ದಾರೆ. ದಲಿತರು ಮನೆ ಒಳಕ್ಕೆ ಬರ್ತೀರಲಿಲ್ಲ. ಹಾಗಿದ್ದಾಗ ಒಳಗೆ ಕರ್ದು. ಚಹಾ ಕುಡಿಸಿ, ಕೆಲಸ ಮಾಡಿಸಿ ಕಳಿಸಿ ಕೊಡ್ತಾ ಇದ್ರು.

ಅವರ ಹೋರಾಟದ ಪ್ರಮುಖ ಕ್ಷೇತ್ರ ಯಾವುದಾಗಿತ್ತು?

ಅವರ ಹೋರಾಟ ಕೃಷಿಕೂಲಿ ಮತ್ತು ಕಾರ್ಮಿಕ ಸಂಘ ಎರಡೂ ಆಗಿತ್ತು. ದಕ್ಷಿಣ ಕನ್ನಡದಲ್ಲಿ ಎರಡೂವರೆ ಲಕ್ಷ ಕುಲಾಲರಿದ್ದಾರೆ. ಅದು ಕೃಷಿ ಕೂಲಿ ಜನಾಂಗ. ಕೆಲವರು ಗೇಣಿಗಳು. ಅವರನ್ನು ಸಂಘಟಿಸಿದ್ದಾರೆ. ಪ್ರಮುಖವಾಗಿ ತೊಡಗಿಸಿಕೊಂಡಿದ್ದು ಕಾರ್ಮಿಕರ ಸಂಘಟನೆಗಾಗಿ ೧೯೪೯ – ೫೦ರ ಸುಮಾರಿಗೆ, ಮಂಗಳೂರಿನಲ್ಲಿ ಹೋಟೆಲ್‌ ಕಾರ್ಮಿಕರು, ಬಸ್‌ ಕಾರ್ಮಿಕರ ಹೀಗೆ. ನೇರ ಮಾರ್ಗದಲ್ಲಿ ಹೋರಾಟ ಮಾಡಿದ್ದರಿಂದ ಅವರು ಭೂಮಾಲಿಕರಿಂದ ಪೆಟ್ಟು ತಿಂದಿದ್ದಾರೆ. ಆರ್ಥಿಕವಾಗಿ ದುರ್ಬಲರಾದ್ದರಿಂದ ಅವರಿಗೆ ಅವಕಾಶಗಳು ದೊರೆಯಲಿಲ್ಲ. ಭೂಮಾಲಿಕರ ವಿಪರೀತ ಪ್ರಭಾವವಿದ್ದ ಆ ದಿನಗಳಲ್ಲಿ, ದಲಿತರ ಗೌರವ ಸ್ಥಾನಕ್ಕಾಗಿ, ಆರ್ಥಿಕ ಸ್ವಾವಲಂಬನೆಗಾಗಿ ಅವರು ಮಾಡಿದ ಹೋರಾಟಗಳಿಂದಾಗಿ ಅವರು ಬಹಳ ಮುಖ್ಯರಾಗ್ತಾರೆ.

ಶಾಮಣ್ಣವರ ಖರ್ಚಿನ ಬಗ್ಗೆ ಪಕ್ಷ ಪ್ರಶ್ನಿಸಲಿಲ್ವಾ?

ಎಲ್ಲಾ ಆಯ್ತು. ಆದ್ರೂ ಹೋಯ್ತು ದುಡ್ಡು, ಮತ್ತೊಮ್ಮೆ ಕೂಡಿಸ್ಕೊಳ್ಳಿ, ಇಲ್ಲ ನಾವ್‌ ಕೂಡಿಸಿ ಕೊಡ್ತೇವೆ, ಪತ್ರಿಕೆ ಸ್ಟಾಪ್‌ ಆಗೋದು ಬೇಡ ಅಂತೆಲ್ಲ ಹೇಳಿದ್ವಿ. ಬಟ್‌ ಕೆ.ಡಿ. (ಕಮಲಾದೇವಿ) ವಾಸ್‌ ನಾಟ್‌ ರೆಡಿ. ‘ನಾನಿಂತ ಪರಿಸ್ಥಿತಿಯನ್ನ ಇಷ್ಟಪಡೋದಿಲ್ಲ. ನಾನು ಕರ್ನಾಟಕವನ್ನೇ ಬಿಟ್‌ಹೋಗ್ತೀನಿ. ಮೂವ್‌ಮೆಂಟ್‌ನಿಂದ ಹೊರಗಿದ್ದೇ ಸಮಾಜವಾದಿ ಯಾಗಿರ್ತೀನಿ. ಇನ್‌ ಆಕ್ಟಿವ್‌ ಆಗ್ತೀನಿ.’ ಅಂದ್ರು. ಪೂಜಾರ್‌, ಪದಕಿ, ಗುಂಡಪ್ಪ ನರಿಬೋಳಿ ಹೀಗೆ ಧಾರವಾಡ ಒಂದು ಗುಂಪೇ ಇತ್ತು. ಆ ಗುಂಪು ಕಾರಂತರಿಗೆ ಸಪೋರ್ಟ್‌ ಮಾಡ್ತು.

ಕಮಾಲದೇವಿಯಂತಹ ಹಿರಿಯ ನಾಯಕರಿಗೆ ಅಷ್ಟೊಂದು ಬೇಸರ ಮೂಡಿಸುವಷ್ಟು ಗಂಭೀರತೆ ಪಡೆದಿತ್ತಾ ಪ್ರಕರಣ?

ಹೌದು ಅಷ್ಟು ಚರ್ಚೆಯಾಗಿತ್ತು. ಹೊಸಪೇಟೆ ಅಧಿವೇಶನದಲ್ಲಿ, ೫೧ – ೫೨ರಲ್ಲಿ.

ಶಾಮಣ್ಣನವರು ಏನೆಂದು ಉತ್ತರಿಸಿದ್ರು?

ಅವರ ಡೈರೆಕ್ಟ್ ಇನ್‌ವಾಲ್ವ್‌ ವೇ ಇರಲಿಲ್ಲ ಸಭೆಗಳಲ್ಲಿ. ಅವ್ರು ಹೊರಗೇ ಇದ್ರು. ಪಾರ್ಟಿ ಬೆಳವಣಿಗೆಯ ಹಂತದಲ್ಲಿದ್ದಾಗ ಹೊಸಪೇಟೆ ಅಧಿವೇಶನದಲ್ಲಿ ದೊಡ್ಡ ಹಿನ್ನಡೆಯಾಯ್ತು. ಶಿವಮೊಗ್ಗಾದ ತಂಡ ಆಗಷ್ಟೇ ಬೆಳೆದು ಬರ್ತಿತ್ತು. ಆದರೆ ಬಂಗಾರಪ್ಪನವರ ಮೂಲಕ ಅದೂ ಒಡೆದು ಹೋಯ್ತು.

೫೧ರಲ್ಲಿ ಕರ್ನಾಟಕದಲ್ಲಿ ಲೋಹಿಯಾ ಪ್ರವಾಸ ಕಾರ್ಯಕ್ರಮಗಳ ಪ್ರಭಾವವೇನಾಯ್ತು?

ಪ್ರವಾಸ ಕಾರ್ಯಕ್ರಮಗಳಾದ್ವು. ಆದ್ರೆ ಹುಬ್ಬಳ್ಳಿಯಲ್ಲಿ ಒಂದು ಇಂಟಲೆಕ್ಚುವಲ್ಸ್‌ ಮೀಟಿಂಗ್ ಮಾಡಿದ್ವಿ. ಲೋಹಿಯಾರವರಿಗೆ ಒಂದು ಟಿಫಿನ್‌ ಕೊಡಸಿದ್ವಿ. ಹಾಂ, ವಿಶೇಷ ಏನಂದ್ರೆ ಆ ಮನೆಯಾರ್ದು ಅಂದ್ರೆ ವೃತ್ತಿಪರ ವೇಶ್ಯೆಯದು, ದೇಶಪಾಂಡೆ ನಗರದಲ್ಲಿ. ಗಂಗೂಬಾಯಿ ಹಾನಗಲ್ ಅವರ ಮನೆ ಹತ್ತಿರ. ಕಾರವಾರ ಜಿಲ್ಲೆಯ ಫ್ಯಾಮಿಲಿಯವರು.

ಅವರು ಪಕ್ಷದ ಕಾರ್ಯಕರ್ತರಾಗಿದ್ರಾ?

ಅಲ್ಲ, ಅವರ ಮನೆಯ ನೇಬರ್ ಗುರುರಾಜ ಹಬ್ಬು, ನಮ್ಮ ಪಕ್ಷದ ಕಾರ್ಯಕರ್ತರಾಗಿದ್ರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಖ್ಯವಾಗಿ ನೀವು ಯಾವ ಹೋರಾಟಗಳನ್ನು ಮಾಡಿದಿರಿ?

ಕೈಗಾ ಅಣುಸ್ಥಾವರ ವಿರೋಧಿಸಿ ಕಪ್ಪು ದಿನಾಚರಣೆ ಅಂತ ಮಾಡಿದ್ದೇವೆ. ಆ ಹೋರಾಟದಿಂದ ಕೈಗಾ ಸ್ಥಾವರ ನಿರ್ಮಾಣ ತಡೆಯೋಕೆ ಆಗದೇ ಇದ್ರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಈಗಲ್ಲಿ ಕೈಗೊಳ್ಳಲಾಗಿದೆ. ನಾವು ಮಾಡಿದ ಇನ್ನೊಂದು ಕೆಲಸ, ಸಾರಾಯಿ ವಿರೋಧಿ ಆಂದೋಲನ. ಕುಸುಮಾ ಸೊರಬ, ವಿಷ್ಣು ನಾಯ್ಕ, ಇವರೆಲ್ಲ ಇದರ ಮುಂಚೂಣಿಯಲ್ಲಿದ್ದವರು. ಸಾಕ್ಷರತಾ ಆಂದೋಲನದಲ್ಲಿ ಕೆಲಸ ಮಾಡಿದ್ದೇವೆ. ಮುಖ್ಯವಾಗಿ ಪರಿಸರಕ್ಕೆ ಸಂಬಂಧಿಸಿ, ಸೇವ್‌ ದಿ ಫಾರೆಸ್ಟ್ ಅಂತಾ ಮಾಡಿದ್ದೇವೆ. ಓಪನ್‌ ಲೆಟರ್‌ ಟು ಎಂ. ಪೀಸ್‌ ಅಂಡ್‌ ಎಂ.ಎಲ್‌.ಏಸ್‌… ಬರ್ದಿದ್ದೇವೆ. ಸಾರಾಯಿ ವಿರೋಧಿ ಹೋರಾಟದಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಬಂದರು. ಹೀಗೆ ಯಾವ ವರ್ಗಕ್ಕೆ ಸಮಸ್ಯೆ ಇರ್ತಿದೋ ಅಲ್ಲಿ ಹೋದರೆ ಜನ ಬರ್ತಾರೆ. ಚಳವಳಿಯಿಂದ ದೂರ ಸರಿಯಬಾರದು ಅಷ್ಟೇ.

ಮಹಿಳೆಯರು ಈಗಸ್ತ್ರೀಶಕ್ತಿಸ್ವಸಹಾಯ ಗುಂಪುಗಳಲ್ಲಿ ಸಂಘಟಿತರಾಗ್ತಿದ್ದಾರೆ. ಸ್ವಾವಲಂಬಿಗಳಾಗ್ತಿದ್ದಾರೆ. ಒಬ್ಬ ಸಮಾಜವಾದಿಯಾಗಿ ಮಹಿಳೆಯರ ಸ್ವಾವಲಂಬಿ ಯೋಜನೆಯನ್ನು ಹೇಗೆ ನೋಡ್ತೀರಿ?

ಟು ಸಮ್‌ ಎಕ್ಸ್‌ ಟೆಂಟ್‌ ಒಳ್ಳೇ ಕೆಲಸ ಅನ್ನಬೇಕು. ಆದರೆ ಇದಕ್ಕೆ ಹೆಚ್ಚು ಉತ್ತೇಜನ ಸಿಗ್ತದೆ ಅಂತಾ ಅನಿಸ್ತಿಲ್ಲ. ಧರ್ಮಸ್ಥಳದವರು ಒಂದಿಷ್ಟು ಪ್ರೊಡಕ್ಟ್ ಮಾಡ್ತಿದ್ದಾರೆ. ಆದರೆ ಸ್ತ್ರೀಶಕ್ತಿಯ ಆ ಪ್ರೊಡಕ್ಟ್ ಮಾರ್ಕೆಟ್‌ನಲ್ಲಿ ದೊಡ್ಡ ಕಂಪನಿ ಜೊತೆ ಕಾಂಪಿಟ್‌ ಮಾಡಿ ಉಳೀತದೆ ಅನ್ನೋದು ಅನುಮಾನ. ಸರಕಾರ ಸ್ಮಾಲ್ ಸ್ಕೇಲ್‌ ಅಂಡ್‌ ಹೋಂ ಇಂಡಸ್ಟ್ರೀಜ್ ಅನ್ನೇ ಮುಖ್ಯವಾಗಿಟ್ಟು ಪ್ರೊಡಕ್ಷನ್ ಮತ್ತು ಮಾರ್ಕೆಟಿಂಗ್‌ ಬಗ್ಗೆ ಯೋಜನೆ ರೂಪಿಸಿದ್ರೆ ಅದು ಲೋಹಿಯಾ ಹೇಳಿದ ಹಾಗೆ ಒಂದು ಪರ್ಯಾಯ ಎಕಾನಮಿ ಆಗ್ತಿತ್ತು. ಆದರೆ ಸರ್ಕಾರಕ್ಕೆ ಅಂತಹ ದೃಷ್ಟಿಕೋನ ಇಲ್ಲ. ಸ್ತ್ರೀಶಕ್ತಿ ಸಂಘಗಳನ್ನು ಮನಿ ಟ್ರ್ಯಾನ್ಸ್ ಫರಿಂಗ್‌ ಗ್ರೂಫ್ಸ್ ಥರಾ ಮಾಡಿದ್ದಾರೆ ಅಷ್ಟೇ. ಇಂಥಾ ಪ್ಲ್ಯಾನ್‌ಗಳು ಕ್ಯಾಪಿಟಲ್‌ ಓರಿಯೆಂಟೆಂಡ್‌ ಹೊರತು, ಪ್ರೊಡಕ್ಷನ್‌ ಓರಿಯಂಟೆಡ್‌ ಅಲ್ಲ.

ಸಮಾಜವಾದಿ ಚಳವಳಿಯ ಬೆಳವಣಿಗೆಯ ಜೊತೆಗಿದ್ದ ನಿಮಗೆ ಈವತ್ತಿನ ಸ್ವರೂಪದ ಬಗ್ಗೆ ಏನನ್ನಿಸ್ತದೆ?

ಇವತ್ತು ಚಳವಳಿಯಿಲ್ಲ. ಸಮಾಜವಾದ ಮಾತ್ರ ಇದೆ. ಅದು ಇದ್ದೇ ಇರ್ತದೆ ಬಿಡಿ. ಒಂದು ಸಿದ್ಧಾಂತವಾಗಿ ಆದರೆ ಜೀವ ತುಂಬುವ ಕೆಲಸ ಆಗಬೇಕಲ್ಲ. ಹೋರಾಟಗಳು ಜಾರಿಯಲ್ಲಿದ್ದರೆ ಚಳವಳಿಗೆ ಜೀವ ಬರ್ತದೆ.

ಹಿನ್ನಡೆಯಾಕಾಯ್ತು. ಸಮಸ್ಯೆ ಎಲ್ಲಿದೆ ಅನ್ನಿಸ್ತದೆ ನಿಮಗೆ. ಬದಲಾದ ಜಾಗತಿಕ ಸಂದರ್ಭದ ಹಿನ್ನೆಲೆಯಲ್ಲಿ ಸಿದ್ಧಾಂತವನ್ನ ಮರು ವಿಶ್ಲೇಷಣೆಗೊಳಪಡಿಸ್ಬೇಕು, ಸಮಕಾಲೀನಗೊಳಿಸಬೇಕು ಅಂತಾ ಅನಿಸುತ್ತಿದೆಯಾ?

ಸಿದ್ಧಾಂತದಲ್ಲೇನೋ ದೋಷವಿಲ್ಲ. ಚಳವಳಿ ಯಶಸ್ವಿಯಾಗದೇ ಇರೋದು ಸೈದ್ಧಾಂತಿಕ ವಿಫಲತೆಯಲ್ಲ. ಆದರೆ ಸಮಸ್ಯೆ ಇರೋದು ಅದನ್ನ ಅನುಷ್ಠಾನಗೊಳಿಸೋದರಲ್ಲಿ. ನೀವೇನೇ ಮರುವಿಶ್ಲೇಷಣೆಗೊಳಪಡಿಸಿದ್ರು ಇವತ್ತಿನ ಜಾಗತಿಕ ಸಂದರ್ಭದಲ್ಲೂ ಸಮಾಜವಾದ ಸರಿಯಾದ ಸಿದ್ಧಾಂತ ಅನಿಸ್ತದೆ. ಜಾಗತೀಕರಣಕ್ಕೆ ಉತ್ತರ ಇದೆ ಇದರಲ್ಲಿ.

ಮತ್ತ್ಯಾಕೆ ಚಳವಳಿಯಾಗಿ ಸಮಾಜವಾದ ಯಶಸ್ವಿಯಾಗ್ಲಿಲ್ಲ?

ಹೇಳಿದೆನಲ್ಲ. ಆಗಿನಂತಹ ಅರ್ಪಣಾ ಮನೋಭಾವದ, ಸ್ಪೂರ್ತಿ ನೀಡುವಂತಹ ಲೀಡರ್ಸ್‌ ಈಗಿಲ್ಲ. ಲೀಡರ್‌ ಶಿಪ್ಪಿನ ಕೊರತೆ ಇದೆ ಇವತ್ತು. ಒಂದು ಕಾಲಕ್ಕೆ ಲೀಡರ್ಸ್‌ ಇದ್ರು. ಆದ್ರೆ ನಂತರ ಬಂದವರು ರಾಜಕೀಯ ಅಧಿಕಾರ ಪಡೆದು ಇಂಪ್ಲಿಮೆಂಟ್ ಮಾಡಲು ಹಿಂಜರಿದರು. ಇದು ಹಿನ್ನಡೆಗೆ ಮುಖ್ಯ ಕಾರಣ. ಜನ ಈಗ್ಲೂ ಇದ್ದಾರೆ, ಚಳವಳಿಗೆ ಸಿದ್ಧವಾಗ್ತಾರೆ. ಆದ್ರೆ ಈಗಿರೋ ನಾಯಕರಿಗೆ ಆ ಶಕ್ತಿ ಇಲ್ಲ. ಜನಾನೂ ನಂಬಲ್ಲ. ಹೊಸ ಡೈನಮಿಕ್ ಲೀಡರ್ ಶಿಪ್‌ ಬರ್ಬೇಕು. ಆಗ ಚಳವಳಿ ಮತ್ತೆ ಮೊದಲಿನಂಗೆ ಬರ್ಬಹ್ದು. ಥಿಯರಿ ಇದೆ. ಅದನ್ನ ಅಪ್‌ಡೇಟ್‌ ಮಾಡ್ಬೇಕು ಬೈ ಆಕ್ಷನ್.

ಹೊತ್ತು ಜಾಗತಿಕ ಬಂಡವಾಳ ದೇಶದ ಆರ್ಥಿಕತೆಯನ್ನ ನಿಯಂತ್ರಿಸ್ತಾ ಇದೆ. ಇಂತಹ ಹೊತ್ತಿನಲ್ಲಿ ಹೋರಾಟಗಳ ವಿಷಯ ಏನಾಗಿರ್ಬೇಕು? ಮತ್ತು ಸ್ವರೂಪ ಹೇಗಿರ್ಬೇಕು ಅಂತೀರಿ?

ವಿಪ್ರೋ, ಇನ್‌ಪೋಸಿಸ್, ನಿಲೇಕಣಿ – ನಾರಾಯಣಮೂರ್ತಿ ಬೆಳೀತಿದ್ದಾರೆ. ಅದಿರು ವಿದೇಶಗಳಿಗೆ ಹೋಗ್ತಿದೆ. ನಮ್ಮ ಮಕ್ಕಳೂ ಹೋಗ್ತಿದ್ದಾರೆ. ಇದಕ್ಕೆ ನಿರ್ಬಂಧ ಹೇರಬೇಕು. ನೈಸರ್ಗಿಕ ಗಣಿ ಸಂಪತ್ತು ರಫ್ತಾಗೋದಕ್ಕೆ ಮಿತಿ ನಿಗದಿಪಡಿಸಬೇಕು. ಮತ್ತೆ ಇದೇನಾಗ್ತಿದೆಯಲ್ಲ. ಪ್ರತಿಭಾ ಪಲಾಯನ ಇದೂ ನಿಲ್ಲಬೇಕು. ಈಗ ಮಲ್ಟಿ ನ್ಯಾಷನಲ್ಸ್‌ ಕಂಪನಿ ಹಾಕಿ, ನಮ್ಮ ಯುವಕರನ್ನ ಯುವತಿಯರನ್ನ ಹೆಚ್ಚು ದುಡಿಸಿಕೊಳ್ತಾ ಇವೆ. ಇದಕ್ಕೆ ಒಳ್ಳೇ ಸಂಬಳವನ್ನೂ ಕೊಡ್ತಾ ಇದ್ದಾರೆ, ಇಲ್ಲ ಎನ್ನೋಕಾಗಲ್ಲ. ಆದರೆ ಅಲ್ಲಿನೂ ಶೋಷಣೇ ನಡೀತಿದೆ. ಇವುಗಳ ಬಗ್ಗೆ ಈಗ ಹೋರಾಟ ನಡೀಬೇಕು. ಈಗ ನೋಡಿ ಮಲೆನಾಡಿನಲ್ಲಿ ಈ ರೈಲ್ವೇ ಟ್ರ್ಯಾಕ್‌ ಬಂದು ಎಷ್ಟೊಂದು ಕಾಡು ಹಾಳಾಯ್ತು. ಕೈಗಾಕ್ಕೆ, ಮತ್ತು ವಿದ್ಯುತ್ ಕಂಬಗಳಿಗಂತಾನೂ ಕಾಡು ಹಾಳಾಯ್ತು. ಇಂತಹ ಅಭಿವೃದ್ಧಿಗಿಂತ ಲೋಹಿಯಾ ಹೇಳುವ ಸಣ್ಣಯಂತ್ರಗಳ ಬಳಕೆ ಈಗ್ಲೂ ಸರಿ ಅಂತಾ ಅನ್ನಿಸ್ತದೆ. ಆದರೆ ಇದೆಲ್ಲ ಜಾಗೃತಿ ಮೂಡಿಸೋರು ಯಾರು ಇದ್ದಾರೆ? ನಮಗೂ ಪ್ರಶ್ನೇನೆ. ಆದರೆ ಒಂದು ಸಾಧ್ಯವಿದೆ. ನಮ್ಮ ಕಾನೂನಿನ ಮೂಲಕವೇ ದೈನಂದಿನ ಉಪಯೋಗಿ ವಸ್ತುಗಳನ್ನು ಬೃಹತ್ ಕೈಗಾರಿಕೆಗಳು ಉತ್ಪಾದಿಸಬಾರದು. ಇದಕ್ಕೆ ಸರಕಾರ ನಿರ್ಬಂಧ ಹೇರಬೇಕು.

ಗ್ಯಾಟ್ ಅಂತಾ ಆಯ್ತಲ್ಲ. ಭಾರತ ಅದಕ್ಕೆ ಸಹಿ ಹಾಕಬಾರದಿತ್ತು. ಆ ಕರಾರಿಗೆ ಸಹಿ ಹಾಕಿ ಹಗ್ಗಕೊಟ್ಟು ಕೈಕಟ್ಟಿಸಿಕೊಳ್ಳಲಾಗಿದೆ. ಪ್ರೆಸ್‌ ಮಿಡಿಯಾಕ್ಕೂ ಫಾರೆನ್ ಇನ್‌ವೆಸ್ಟ್‌ ಮೆಂಟ್‌ ಬಂದ್ರೆ ಇನ್ನೇನು? ಮಾಧ್ಯಮಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದವು. ಹೀಗಾದಾಗ ಅಲ್ಲೀನೂ ಸ್ಪರ್ಧೆಯಾಗಿ ಲಾಭದ ಉದ್ದೇಶ ಮುಖ್ಯ ಆಗ್ತದೆ.

ಇದಕ್ಕೆಲ್ಲ ಪರಿಹಾರವಿಲ್ಲವೇ?

ಎರಡನೇ ಸ್ವಾತಂತ್ರ್ಯ ಚಳವಳಿ ನಡೆಯಬೇಕಿದೆ. ಅದೇ ಪರಿಹಾರ. ಮಲ್ಟಿನ್ಯಾಷನಲ್ಸ್ ಗೆ ಪ್ರತಿರೋಧ ಒಡ್ಡುವ ಚಳವಳಿ ಆಗ್ಬೇಕು. ದೆ ಶುಡ್‌ ಬ್ಯಾನ್‌.