ಚಳವಳಿ ಕೆಲ್ಸ ಮಾಡೋಕೆ ಅಮ್ಮ ಒಪ್ತಿದ್ರಾ?

ನನಗೆ ಯಾರೂ ಆಬ್ಜೆಕ್ಷನ್ ಮಾಡ್ಲಿಲ್ಲಪ್ಪಾ. ಯಾವುದಕ್ಕೂ ಅಮ್ಮಾನೇ ಪಾಪ ಅಡಿಗೆ ಮಾಡಿಟ್ಟುಕೊಂಡು ಕಾಯ್ತಾ ಕೂತಿರೋರು. ಒಂದು ದಿವ್ಸಾನೂ ಎಲ್ಲಿಗೆ ಹೋಗಿದ್ದೆ. ಯಾಕೆ ಹೋಗಿದ್ದೆ. ಅಂತಾ ಕೇಳಿದವರಲ್ಲ. ಆ ಮನೋಬಲ ಆ ನಂಬಿಕೆ ಇದೆಯಲ್ಲ ಅವರು ಬಹಳ ದೊಡ್ಡದು. ಒಂದು ದಿವಸ ಅದೇನು ಮಗಳನ್ನ ಹಿಂಗೆ ಫ್ರೀ ಬಿಟ್ಟಿದ್ದೀರಲ್ಲಾ ಏನ್ ಬಸವೀ ಬಿಡ್ತೀರಾ ಅಂತಾ ಕೇಳಿಬಿಟ್ಟಿದ್ದಾರೆ. ಆವಾಗ ಅಮ್ಮ ಏನು ಹೀಗೆ ಕೇಳ್ತಿದ್ದಾರೆ ಅಂತಾ ಬಂದ್ಬಿಟ್ಟಿದ್ದಾರೆ. ನಿಜ ಅಂದ್ರೆ ನೀವು ನಂಬ್ತೀರೋ ಬಿಡ್ತೀರೋ ನಮಗೆ “ಬಸವಿ ಬಿಡೋದು” ಅಂದ್ರೇನು ಗೊತ್ತಿರ್ಲಿಲ್ಲ. ಹಂಗದ್ರೇನು ಅಪ್ಪಾ ಅಂತಾ ಅಪ್ಪಂಗೆ ಕೇಳಿದ್ದೆ. “ಏ…. ಸುಮ್ನೆ ಹೋಗಮ್ಮ ತಲೆ ಕೆಟ್ಟೋರು ಏನೋ ಕೇಳಿದ್ರು ಅಂದ್ರೆ ಅದನ್ನ ಬಂದು ಕೇಳ್ತೀಯಾ” ಅಂದ್ರು. ಆಮೇಲೆ ಮಾನಪ್ಪಂಗೆ ಬಂದು ಕೇಳ್ದೆ. ಆವಾಗ ಅವ್ರು ಏಕ್ಸ್ ಪ್ಲೇನ್ ಮಾಡಿದ್ರು, ಈ ಥರಾ ಅದೊಂದು ಪದ್ಧತಿ ಇದೆ ಅಂತಾ. ಅವಾಗ ನಾನು ಮತ್ತದನ್ನೂ ಪ್ರಶ್ನೆ ಮಾಡಿದೆ. ಅದ್ಯಾಕೆ ಹಂಗಿರ್ಬೇಕು ಅಂತಾ… (ನಗು) ರಿಯಲಿ ವಿ ಹ್ಯಾವ್ ವೆರಿಗುಡ್ ಪಬ್ಲಿಕ್ ಸಪೋರ್ಟ್ ಯಾವತ್ತೂ ನಮ್ಮನ್ನು ಮಿಸ್ ಅಂಡರ್ ಸ್ಟ್ಯಾಂಡ್ ಮಾಡ್ಕಳ್ಳಿಲ್ಲ.

ಆಮೇಲೆ?

ಆಮೇಲೆ ಏನ್ಮಾಡಿದೆ ಅಂದ್ರೆ ಮಿಲಿಟರಿ ಸೇರ್ದೆ ಎರಡು ವರ್ಷ. ರಿನ್ ಅಂತಾ ( ) ಅದ್ರಲ್ಲಿ ವಿಮೆನ್ಸ್ ವಿಂಗ್ ಗೆ.

ಬ್ರಿಟೀಶ್ ಮಿಲಿಟರಿ ಅಲ್ವಾ ಅದು?

ಬ್ರಿಟೀಶ್ ಅಲ್ಲಾ, ರಾಯಲ್ ಇಂಡಿಯನ್ಸ್ ನೇವಿ ಅಂತಾ.

ಇಡೀ ರಾಜ್ಯಾಡಳಿತವೇ ಅವ್ರುದು ಆಗಿತ್ತಲ್ಲ. ಬಟ್ ವಿಂಗ್ ಇಂಡಿಯನ್ ನೇವಿ. ಇಂಡಿಯನ್ ನೇವಿ, ಇಂಡಿಯನ್ ಆರ್ಮಿ, ಇಂಡಿಯನ್ ಏರ್ ಪೋರ್ಸ್….. ಹೀಗೆ. ನಮ್ಮ ತಂದೆ ಬಳಗ, ಸೋದರತ್ತೆ ಮಗ ಒಬ್ರು ತುಂಬಾ ಹೈಪೋಸ್ಟ್ ನೇವಿಯಲ್ಲಿ. ಅವ್ರು ಸುಮ್ನೆ ತಮಾಷೆಯಾಗಿ ಯಾಕೆ ಸುಮ್ನೆ ಅದೂ ಇದೂ ಮಾಡ್ಕಂಡು ಅಲೆದಾಡ್ತೀರಾ ಅಲ್ಲಾದ್ರೂ ಸೇರ್ಯೋ ಅಂದ್ರು. ಕಾಲ್ ಫಾರ್ ಆಯ್ತು. ಅಪ್ಲಿಕೇಷನ್ ಹಾಕ್ಕೊಂಡೆ. ಸೆಲೆಕ್ಟ್ ಆಯ್ತು. ನಾ ಹೋಗ್ತೀನಿ ಅಂದೆ. ಆಗ್ಲೇ ನಮ್ಮ ತಂದೆಯವರ ಫೈನಾನ್ಷಿಯಲ್ ಪೊಜಿಶನ್ ವಾಸ್ ವೆರೀ ಬ್ಯಾಡ್. ತಮ್ಮ ತಂಗೀರು ಇಬ್ರು ಓದಬೇಕಿತ್ತು. ಅಲ್ಲಿ ಸೇರಿದ ಮೇಲೆ ಪೂನಾ, ಅಹಮದಾಬಾದ್, ಬಾಂಬೆ, ಆಗ್ರಾ, ಅಲ್ಲೆಲ್ಲಾ ಸರ್ವೀಸ್ ಕಂಪ್ಲೀಟ್ ಆಯ್ತು. ಅಷ್ಟೊತ್ತಿಗೆ ನಾನಿದ್ದ ಸೆಕ್ಷನ್ ಕ್ಲೋಸ್ ಆಯ್ತು. ಆ ಸೆಕ್ಷನ್ ಗೆ ಪೂನಾದಲ್ಲಿ ಟ್ರೈನಿಂಗ್ ಕೊಟ್ಟಿದ್ರು. ಟ್ರೈನಿಂಗು, ಶಾರ್ಟ್ ಹ್ಯಾಂಡು, ಅದೆಲ್ಲಾ ಐ ವಾಸ್ ರಿಯಲಿ ಲಕ್ಕೀ ಇನ್ ಸರ್ಟನ್ ಥಿಂಕ್ಸ್ (ನಗು) ಚೆನ್ನಾಗಿತ್ತು.

ಆ ಮೇಲೆ ಬಾಂಬೆನಲ್ಲಿ ರಿಕ್ರೂಟ್ ಮೆಂಟ್ ಆಗಿತ್ತು ಆಗ್ರಾದಲ್ಲಿ ಟು ಇಯರ್ಸ್ ಕಂಪ್ಲೀಟ್ ಆಗಿ ಕ್ಲೋಸ್ ಆಯ್ತು. ಆವಾಗ ಏನ್ಮಾಡೋದು, ಅಷ್ಟೊತ್ತಿಗೆ ಡೆಲ್ಲಿನಲ್ಲಿ ಕರ್ ಮಣ್ ಕರ್, ದಿವಾಕರ್, ಅವರೆಲ್ಲಾ ಬರ್ತಾ ಇದ್ರಲ್ಲ. ಅಮ್ಮು ಸ್ವಾಮಿನಾಥನ್ ಅವರೆಲ್ಲಾ ಕ್ಲೋಸ್ ಫ್ಯಾಮಿಲಿ ಫ್ರೆಂಡ್ಸ್ ಇದ್ದಂಗೆ ಇರೋರು. ನನ್ನನ್ನು ವಿಚಾರಿಸ್ಕೋಳ್ಳೋರು.

ಬ್ರಿಟೀಷ್ ಮಿಲಿಟರಿಯಲ್ಲಿ ಇದ್ದೇ ಸ್ವಾತಂತ್ರ್ಯ ಹೋರಾಟಗಾರರ ಜೊತೆ ಸಂಪರ್ಕ ಉಳಿಸಿಕೊಳ್ಳೋಕೆ ಸಾಧ್ಯವಾಗ್ತಿತ್ತಾ?

ಆಗ್ತಿತ್ತು. ನಾನು ಸಂಪರ್ಕ ಉಳಿಸಿಕೊಂಡಿದ್ದೆ. ರಾಯಲ್ ಇಂಡಿಯನ್ ನೇವಿಯಲ್ಲಿ ಮಿಸೆಸ್ ಮಾರ್ಟಿಸ್ ಹೆಡ್ ಅಂತಾ ಸ್ಕಾಟ್ ಲೆಂಡಿನವರು. ಆಕೆ ಭಾಳಾ ಒಳ್ಳೆಯವರಿದ್ಲು. ಅಲ್ಲಾ…. ಫಾರೆನ್ನರ್ಸು ನಾಟ್ ವೆರಿಬ್ಯಾಡ್, ಏನಂದ್ರೆ ಅವರು ಸ್ಟ್ರಿಕ್ಟ್ ಆಗಿ ಇರೋರು. ನನ್ನ ರಿಕ್ರೂಟ್ ಮಾಡೋವಾಗ ಬೆಂಗಳೂರಿನಲ್ಲಿ. ನೀವು ಇದಕ್ಕೆ ಬಂದು ಸೇರ್ತಾ ಇದ್ದೀರಲ್ಲ. “ಯೂಫಾಟ್ ಅಗೆನಸ್ಟ್ ಬ್ರಿಟೀಷ್ ಎಂಪೈರ್ ಆರ್ ಯು ಟೇಕಿಂಗ್ ಸ್ಯಾಲರಿ ಫ್ರಂದೇರ್” ಅಂತಾ. ಯುವರ್ ಸ್ಯಾಲರಿ ಅಂತಾ ಯಾಕಂತೀರಾ ಅಂತಾ ಜಗಳಾಡ್ದೆ. “ಇಟ್ ಈಸ್ ಇಂಡಿಯನ್ ಮನಿ. ಯು ಆರ್ ಟೇಕಿಂಗ್ ಅವೇ ಫ್ರಂ ಹಿಯರ್. ಔಟ್ ಆಫ್ ದಟ್ ಮನಿಯು ಆರ್ ಗಿವಿಂಗ್ ದಿ ಸ್ಯಾಲರಿ” ಅಂತಾ ಜಗಳಾಡ್ದೆ. “ಇಟ್ ಈಸ್ ಎ ಅವರ್ ಮನಿ ಯು ವರ್ ಮೇಕಿಂಗ್ ದಿಸ್” ಅಂತಾ. “ಯು ಸೀಮ್ ಟುಬಿ ವೆರೀ ಹಾರ್ಡ್ ಹಿಟ್ಟಿಂಗ್” ಅಂತಾ ಅಂದ್ರು. “ವೈ. ವೈ ನಾಟ್ ಶುಡ್ಂಟುಬಿ…. ಬಿಕಾಸ್ ಯು ವರ್ ಟೇಕಿಂಗ್ ದಿ ಅಡ್ವಂಟೇಜ್ ಆಫ್ ಅವರ್ ವರ್ಕ್…” ಅಂತಾ. ಫೈಲ್ ನಲ್ಲಿ ನಾನು ರೆಡ್ ಲೆಟರ್ ನಲ್ಲಿದ್ದೆ. ಡೇಂಜರಸ್ ಅಂತಾ ಅಂದ್ರೆ ಪಾಪ ಅವರೇನೂ ಮಾಡ್ಲಿಲ್ಲ. ತುಂಬಾ ಚೆನ್ನಾಗಿ ನೋಡ್ಕಂಡ್ರು. ೬೦ ಜನರಲ್ಲಿ ಮಲೆಯಾಳೀಸು, ಬೆಂಗಾಳೀಸೂ, ನಾನು.

ರಿನ್ಅನ್ನ ಯಾಕೆ ಬಿಟ್ರೀ?

ಆಫೀಸ್ ಕ್ಲೋಸ್ ಆತು ಅದಕ್ಕೆ ಬಿಟ್ಟೆ. ಇಲ್ದಿದ್ರೆ ಕಂಟಿನ್ಯೂ ಆಗ್ತಿದ್ದೆನೇನೋ. ಅಷ್ಟೋತ್ತಿಗೆ ಬ್ರಿಟಿಷಸ್ ವರ್ ವಾಕಿಂಗ್ ಔಟ್. ಸೆಕೆಂಡ್ ವರ್ಲ್ಡ್ ವಾರ್ ಕ್ಲೋಸ್ ಆಯ್ತಲ್ಲ. ಅದು ಮುಗಿದ ಮೇಲೆ ಈ ಆಫೀಸ್ ಗಳೆಲ್ಲ ಬೇಡವಾಗಿತ್ತು ಅವ್ರಿಗೆ.

ಅಂದ್ರೆ ‘ರಿನ್’ ಸೆಕೆಂಡ್ ವರ್ಲ್ಡ್ ವಾರ್ ನ ಭಾಗವಾಗಿತ್ತು ಅಲ್ವಾ?

ಹೌದು.

ಮೇಡಂ ನೀವು ಗಾಂಧೀಜಿಯವರ ತೊಡೆ ಮೇಲೆ ಕುಳಿತವರು ಅಂತಾ ಕೇಳಿದ್ದೇನೆ?

ಅದೇ ಗಾಂಧೀಜಿ ಫಸ್ಟ್ ಇಲ್ಲಿಗೆ ಬಂದು ಇಳಿದಾಗ. ಬೆಂಗಳೂರಿನಲ್ಲಿ ಫಸ್ಟ್ ಮೀಟ್ ಆಗಿದ್ದು. ಅವ್ರು ಇಳ್ಕಂಡಿದ್ದ ಮನೆಗೆ ನಾನು ನನ್ನ ತಂದೆ ಜೊತೆಗೆ ಹೋದಾಗ ಬೆಂಗಳೂರಿನಲ್ಲಿ ಅವರು ಕರ್ದು ತೊಡೆಯಮೇಲೆ ಕೂರಿಸ್ಕೊಂಡಿದ್ರು. ಆ ಮೇಲೆ ಗಾಂಧೀಜಿ ಇಲ್ಲಿಗೆ ಬಂದಾಗ ಆವರಿಗೆ ನೂಲೋದಿಕ್ಕೆ, ಮಲಗೋದಿಕ್ಕೆ ಎಲ್ಲಾ ಖಾದಿ ಬೇಕಿತ್ತು. ಹಾಸಿಗೆ, ಹೊದಿಕೆ ಎಲ್ಲಾ ವ್ಯವಸ್ಥೆ ನಾನು ನೋಡ್ಕೋತಿದ್ದೆ. ಆ ಹಾಸಿಗೆ ಅವ್ರು ಹೋಗೋವಾಗ ನನಗೇ ಕೊಟ್ರು. ಆಮೇ ಚರಕಕೊಟ್ರು, ಸುದರ್ಶನ ಚರಕ. ಈ ಚರಕ ಅಲ್ಲ, ಸುದರ್ಶನ ಚರಕ ಅದು. ತುಂಬಾ ವರ್ಷ ಇತ್ತು. ಈಗೆರಡು ವರ್ಷದ ಹಿಂದೆ ಧರ್ಮಸ್ಥಳದ ಮ್ಯೂಸಿಯಂಗೆ ಕೊಟ್ಟೆ. ಮನೇಲಿ ಇಟ್ಕೊಂಡು ಏನು ಮಾಡೋದು ಅದನ್ನ ಅಲ್ಲಾದ್ರೆ ಬಂದೋರು, ಹೋಗೋರು ಎಲ್ಲಾ ನೋಡ್ತಾರೆ ಅದನ್ನ. ೧೯೨೮ರಲ್ಲಿ ಅದು, ಅವ್ರು ಬಂದಿದ್ದು. ಆವಾಗ್ಲೆ ಅವ್ರು ಎರಡು ತೆಂಗಿನ ಮರಗಳನ್ನು ನೆಟ್ರು. ಬೃಂದಾವನ ಹೋಟೆಲ್ ಈಗಿದೆಯಲ್ಲಾ ಅದರ ಮುಂದುಗಡೆ ಕಸ್ತೂರಬಾ ಒಂದು, ಗಾಂಧೀಜಿ ಒಂದು.

ರಿನ್ಮುಗಿದ ಮೇಲೆ ಎನ್ ಮಾಡಿದ್ರಿ?

ಆ ಮೇಲೆ ಡೆಲ್ಲಿಗೆ ಹೋಗಿದ್ದೆ ಅಮ್ಮು ಸ್ವಾಮಿನಾಥನ್ ಇದ್ರು. ಸೋಶಿಯಲ್ ಸರ್ವೀಸ್ ನಲ್ಲಿ (ಕೇಂದ್ರ ಸರ್ಕಾರದ ಒಂದು ಇಲಾಖೆ) ಸೆಕ್ರೆಟರಿ ಥರಾ ಕೆಲ್ಸ ಮಾಡ್ತಿದ್ದೆ. ಅವರ ಮಗಳೇನೇ ಸುಭಾಷ್ ಚಂದ್ರ ಭೋಸ್ ಅವರ ಜೊತೆಗೆ ವರ್ಕ್ ಮಾಡಿದ್ದು. ಅವಳ ತಂಗಿ ಇದ್ಲು ಒಬ್ಳು. ಸ್ವಾಮಿನಾಥನ್ ಅವರು ಅಯ್ಯರ್ಸ್, ಇವ್ರು ಇಲ್ಲಾ ಮಲಿಯಾಳೀಸು. ರಿಫಾರ್ ಮರ್ಸ್ ಅವ್ರೆಲ್ಲ. ಕರಮಣಕರ್ ಅವ್ರು ನನ್ನ ಸ್ವಾಮಿನಾಥನ್ ಹತ್ರ ಕಳಿಸಿದ್ರು. ಆವಾಗ ಜಗಜೀವನರಾಮ್ ಮಿನಿಸ್ಟ್ರಿಯಲ್ಲಿ (ಲೇಬರ್ ಮಿನಿಸ್ಟ್ರಿ) ಸಿಂಗನೇನಿನಲ್ಲಿ ಅವರ ಆಫೀಸ್ ನಲ್ಲಿ ಕೆಲಸ ಮಾಡಿದ್ದೀನಿ. ಆಫ್ಟರ್ ಇಂಡಿಪೆಂಡೆನ್ಸ್ ಅದು. ತುಂಬಾ ಒಳ್ಳೇ ಮನುಷ್ಯಾ ಏನೂ ಗೊತ್ತಿಲ್ಲ. ತುಂಬಾ ಸಂಭಾವಿತ.

ಕ್ವಿಟ್ ಇಂಡಿಯಾ ಮೂವ್ ಮೆಂಟ್ ನಲ್ಲಿ ಸೀರಿಯಸ್ಸಾಗಿದ್ದ ಹೊತ್ತಿಗೇರಿನ್ಗೆ ಹೋಗ್ಬೇಕನಿಸಿದ್ದು?

ಅಲ್ಲ, ಅಷ್ಟೋತ್ತಿಗೆ ಮೂವ್ ಮೆಂಟ್ ಆಗ್ಲೇ ಒಂಥರಾ ತಣ್ಣಗಾಗಿತ್ತು. ೪೪ ಎಂಡ್ ಗೆ ನಾನು ರಿನ್ ಗೆ ಹೋಗಿದ್ದು.

ಅಷ್ಟೊತ್ತಿಗೆ ಅಂದ್ರೆ ೪೪ರ ನಂತರ ಚಳವಳಿಯ ತೀವ್ರತೆಯ ದಿನಗಳು ಅಲ್ವಾ?

ಅಷ್ಟೊತ್ತಿಗಾಗ್ಲೆ ಗಾಂಧೀಜಿ ವಾಸ್ ಬೀಯಿಂಗ್ ಡೌಟೆಡ್ ಬೈ ಜವಹರಲಾಲ್ ನೆಹರು ಅಂಡ್ ಅದರ್ಸ್, ಅಂದ್ರೆ ನಿಮಗೆ ಅದು ಹಿಸ್ಟರಿ ಗೊತ್ತಿರಬೇಕಲ್ಲ.

ಅಲ್ಲಿ ಪಟೇಲ್ ಅಂಡ್ ನೆಹರು ಡ್ಯೂಪಡ್ ಗಾಂಧೀಜಿ. ಅಷ್ಟೊತ್ತಿಗೆ ಗಾಂಧೀಜೀನಾ ಮೂಲೆಗುಂಪು ಮಾಡೋಕೆ ಶುರು ಆಗಿತ್ತು. ನೆಹರೂ ಈಸ್ ದ ಕಾಸ್ ಆಫ್ ದೀಸ್ ಫೇಲೂರ್ಸ್, ನಿಮ್ಗೆ ಅದು ಅರ್ಥಾ ಆಗ್ಬೇಕಂದ್ರೆ ನೀವು ಆ ಹಿಸ್ಟರೀನಾ ಡೀಪ್ ಆಗಿ ಸ್ಟಡೀ ಮಾಡ್ಬೇಕು. ಮ್ಯಾನ್ ಹು ಸ್ಟ್ರಗಲ್ ಫಾರ್ ದಿ ಹೋಲ್ ಥಿಂಗ್, ಆತನ ಬೆಂಬಲದಿಂದ ನಾವಿಷ್ಟು ಜನ ಮೇಲಕ್ಕೆ ಬಂದ್ವಿ ಅಂತಾ ಯೋಚನೆ ಇರ್ಬೇಕಾಗಿತ್ತು. ಆ ಮೇಲೆ ಸ್ಯಾಕ್ರಿಫೈಸ್ ಏನು ಸಾಮಾನ್ಯ ಸ್ಯಾಕ್ರಿಫೈಸ್ ಮಾಡಿದ್ರಾ. ಅಂಥಾ ಮನುಷ್ಯಾನಿಗೆ ಕೇಳದಾನೇನೆ ನೀವು ಆಯ್ತು ಒಪ್ಕೋತೀವಿ ನಾವು ಅಂತಾ ಹೇಳ್ಬೇಕಾದ್ರೆ ಸ್ವಾತಂತ್ರ್ಯ. ಸ್ವಾತಂತ್ರ್ಯ ಅಲ್ಲ ಅದು. ಆವತ್ತು ಬಂದಿದ್ದು. ಅವರ ಗೈಡೆನ್ಸ್ ನಲ್ಲಿ ನಾವು ಒಪ್ಕಂಡಂಗೆ. ಏನೋ ದಾನ ಕೊಟ್ಟಂಗೆ ಅವ್ನು. ಕ್ಯಾನ್ ಯು ಇಮ್ಯಾಜಿನ್ ಇಟ್? ಇವತ್ತು ನಾವು ಹೋಲ್ ಹಾರ್ಟೆಡ್. ಆ ಮನುಷ್ಯನಿಗೆ ಹೇಗಾಗಿರ್ಬೇಕು? ಆ ಮನುಷ್ಯಾ ಆವಾಗ ಯರವಾಡ ಜೈಲಿನಲ್ಲಿದ್ರು. ಇವ್ರು ಅಗ್ರಿಮೆಂಟ್ ಗೆ ಸೈನ್ ಹಾಕಿದಾಗ. ಆ ಹೊತ್ತು ಒಂದು ಮಾತು ಗಾಂಧೀಜಿಯವರನ್ನು ಕೇಳಬೇಕಿತ್ತೋ ಇಲ್ಲೋ, ಏನ್ಬೇಕು, ಏನ್ಬೇಡ ಅಂತ?

ಅಂದ್ರೆ ಗಾಂಧೀಜಿಯವರ ಗಮನಕ್ಕೆ ತಾರದೇ ಸ್ವಾತಂತ್ರ್ಯ ಘೋಷಣೆಗೆ ಸಹಿ ಮಾಡಿದ್ರು ಅಂತೀರಾ?

ಇಗ್ನೋರ್ ಮಾಡಿದ್ರು, ಅದು ಇಟ್ಸ್ ಹಿಮ್. ಆಫ್ಟರ್ ಆಲ್ ಐ ವಾಸ್ ಯೂಸ್ಡ್ ಕಾಯಿನ್ ಅಂತಾ ಎಕ್ಸ್ ಪ್ರೆಸ್ ಮಾಡೋವಷ್ಟು ಗಾಂಧೀಜಿನ ಡಿಸಪಾಯಿಂಟ್ ಮಾಡಿದ್ರು. ನೆಹರು, ಎ ಮ್ಯಾನ್ ಆಫ್ ಫ್ಯಾಶನಬಲ್ ಸ್ಟೈಲ್ ಆಂಡ್ ಅದರ್ ಥಿಂಗ್ಸ್ ಅದೇನಾಗ್ಬಿಡ್ತು ಅದು ಇವರನ್ನ ಉಬ್ಬಿಸಿಬಿಟ್ರು. ಉಬ್ಬಿಸಿದ್ರು ಅಂತಾ ಹೋಗಿ ಸೈನ್ ಹಾಕಿ ಬಂದು ಬಿಡೋದಾ?

ಅಂದ್ರೆ ನೆಹರು ಸಹಿ ಹಾಕಿದ್ದು ವ್ಯಕ್ತಿಗತವಾಗಿ ತೆಗೆದುಕೊಂಡ ತೀರ್ಮಾನ ಅಂತೀರಾ?

ಆಲ್ ಮೋಸ್ಟ್ ಇಟ್ ವಾಸ್ ಯ್ಯಾನ್ ಇಂಡ್ಯುವಿಶುಯಲ್ ಒಪೀನಿಯನ್. ಆವಾಗ ಗಾಂಧೀಜಿಯ ಪರಮಶಿಷ್ಯ ನೆಹರು. ಬಟ್ ಪಟೇಲ್ ವಾಸ್ ಮೋಸ್ಟ್ ಔಟ್ ಸ್ಪೋಕನ್. ಸೀದಾ ಸೀಸಾ. ಈವನ್ ಡಾಕ್ಟರ್ ಲೋಹಿಯಾ ವಾಸ್ ವೆರಿಮಚ್ ಅಪ್ ಸೆಟ್. ಬಿಕಾಸ್ ನೆಹರು ಡಿಡ್ ದಿಸ್. ಹೇಳೋರು ಡಾಕ್ಟ್ರು. “ಎ ಮ್ಯಾನ್ ಹು ಸ್ಪಾಯಿಲ್ ಎವೆರಿಥಿಂಗ್” ಅನ್ನೋ ಥರಾನೇ ಮಾತಾಡೋರು ಒಂದೊಂದ್ಸರ್ತಿ. ಇವರು ನಡಕೊಂಡಿದ್ದೂ ಹಾಗೇನೇ. ಯಾರನ್ನೂ ಕೇಳದೇ ಓವರ್ ನೈಟ್ ಸಿಗ್ನೇಚರ್ ಹಾಕಿ ಬಂದ್ಬಿಟ್ರಿ. ಆಮೇಲೆ ಗಾಂಧೀಜಿಯವರನ್ನ ಪತ್ರಕರ್ತರು ಕೇಳಿದಾಗ ‘ಆಫ್ಟರ್ ಆಲ್ ಐ ವಾಸ್ ಯೂಸ್ಟ್ ಕಾಯಿನ್ ಟುಡೇ’ ಅಂದ್ರು.

ಓಪನ್ ಆಗಿ ಗಾಂಧಿ ಎಕ್ಸ್ ಪ್ರೆಸ್ ಮಾಡಿದ್ದಾರೆ. ದಟ್ ವಾಸ್ ರೆಕಾರ್ಡೆಡ್. ಭಾಳಾ ಬೇಜಾರಾಗ್ತದೆ, ಒಂದೊಂದ್ಸಲ ನೆನಸ್ಕೊಂಡ್ರೆ. ನನಗೆ ಅನ್ನಿಸ್ತದೆ ಒಂದೊಂದ್ಸಲ ಬೇಸಿಕ್ ಆಗಿ ನಾವು ಒಂಟೀ ಕಾಲಲ್ಲಿ ನಿಂತಂಗೆ. ಈ ಕಡೆ ಫುಲ್ ಫ್ರೀಡಮ್ಯೂ ಅಲ್ಲ, ಫುಲ್ ಇದೂ ಅಲ್ಲ…. ಅದಕ್ಕೆ ಕಾರಣ ನೆಹರು. ಆಮೇಲೆಲ್ಲಾ ಭಾಷಣ ಮಾಡಿದ್ರು ಎಲ್ಲಾ ಮಾಡಿದ್ರು.

ಲೋಹಿಯಾ ಹೇಗೆ ಪ್ರತಿಕ್ರಿಯಿಸಿದ್ರು?

ಲೋಹಿಯಾ ಗಾಂಧೀಜಿಯವರ ಶಿಷ್ಯರು ತಾನೇ? ಹಿ ವಾಸ್ ವಿಥ್ ಗಾಂಧೀಜಿ. ಡಾ. ಲೋಹಿಯಾ ಇವ್ರೆಲ್ಲಾ ಮೆಂಬರ್ಸ್ ಆದ್ರಲ್ಲ. (ಪಾರ್ಲಿಮಂಟ್ ಗೆ) ಆವಾಗ ಒಂದು ಇನ್ಸಿಡೆಂಟ. ಚೀನಾದ ಆರ್ಮಿ ತ್ರಿಪುರಾ ಕಡೆ ೧೪೫ ಚದರ ಮೈಲಿ ಉದ್ದಕ್ಕೆ ಬಂದು ಇಳೀತಿದೆ. ಅದು ಫ್ಲೈ ಮಾಡ್ತಾ ಇದ್ರೆ ಇವರು ಯಾರೂ ಗಮನಿಸಲಿಲ್ಲ. ಸೋಶಲಿಸ್ಟ್ರು ಆಗ್ಲೇ ಫಾರ್ಮ್ ಆಗಿದ್ರು ಆವಾಗ. ಅದನ್ನ ನಾವೇ ನೋಡೊದೀವಿ ನೀವು ಆಯಕ್ಷನ್ ತಗೋತಿಲ್ಲ, ಅಂದ್ರೆ ಪಾರ್ಲಿಮೆಂಟಿನಲ್ಲಿ “ಯು ಆರ್ ಎ ಫೂಲ್, ಸಿಟ್ ಡೌನ್” ಅಂದ್ರು. ಅವೆಲ್ಲ ದಾಖಲೆ ಆಗಿದೆ. ಆಮೇಲೆ ಗಾಂಧೀಜಿಗೂ ಯಾವಾಗ ಗೌರವ ಕೊಡಲಿಲ್ಲೋ ಆಮೇಲೆ ಲೋಹಿಯಾ ಅವರಿಂದ ಸೆಪರೇಟ್ ಅದ್ರು. ಫಸ್ಟ್ ಸೌತ್ ಈಸ್ಟ್ ಏಶಿಯನ್ ಕಾನ್ಪರೆನ್ಸ್ ಅಂತಾ ಒಂದು. ಸಮ್ಮೇಳನ ನಡೀತು. ದಟ್ ವಾಸ್ ದ ಲಾಸ್ಟ್ ಟೈಂ ಐ ಸಾ ಗಾಂಧೀಜಿ. ನಾನಲ್ಲಿದ್ದೆ ಆವಾಗ. ಅಟೆಂಡ್ ಮಾಡಿದ್ದೆ. ಸರೋಜಿನಿ ನಾಯ್ಡು ಆವಾಗ ಅರೆಸ್ಟ್ ಆಗಿದ್ರು. ಪಾಕಿಸ್ತಾನ ನೆಪರೇಶನ್ ಆಯ್ತಲ್ಲ. ಅದು ಇವರಿಗೆ ಹರ್ಟ್ ಆಗಿತ್ತು. ಆವಾಗ ಗಾಂಧೀಜಿ ನಕ್ಸಲ್ ಬರಿಗೆ ಹೋಗಿದ್ರು. ಅಲ್ಲಿ ಜನ ಎಲ್ಲಾ ಸಾಯ್ತಾ ಇದ್ರು. ಕೊಲೆಗಳು ಆಗ್ತಾ ಇದ್ವು. ಅಲ್ಲಿ ಪಾರ್ಟೇಶನ್ ವಿರುದ್ಧ ಉಪವಾಸ ಮಾಡಿದ್ರು. ನನ್ನ ತಪ್ಪನ್ನ ನಾನು ತಿದ್ದಿಕೊಳ್ಳೋಕೆ ಅಂತ.

ಅಂದ್ರೆ ವಿಭಜನೆಗೆ ತಾವು ಒಪ್ಪಿಗೆ ಕೊಟ್ಟಿದ್ದು ತಪ್ಪು ಅಂತಾ ಗಾಂಧೀಜಿಗೆ ಅನ್ತಿತ್ತು ಅಂತೀರಾ?

ಹೌದು. ಗಾಂಧೀಜಿಗೆ ಎಲ್ಲೋ ನಾನ್ ತಪ್ ಮಾಡಿಬಿಟ್ಟೆ ಅನ್ನಿಸಿ ಅದರ ರಿಯಲೈಸೇಶನ್ ಗೆ ಅಂತ, ಜನ ನನ್ನನ್ನು ಮನ್ನಿಸಬೇಕು ಅಂತಾ ಉಪವಾಸ ಕೂತಿದ್ರು. ಆಮೇಲೆ ನಕ್ಸಲ್ ಬರಿಗೆ ಹೋಗಿ ವಾಪಾಸು ಬಂದ್ರು. ನೀವೆಲ್ಲಾ ನಂಬಲ್ಲ ಹೇಳಿದ್ರೆ, ಅವರ ತೊಡೆ ಇಷ್ಟು ದಪ್ಪಾ (ತಮ್ಮ ಮುಂಗೈ ತೋರಿಸಿ) ಆಗಿದ್ದು.

ಒಣಕ್ಕಂಡು ಬಂದಿದ್ರು. ನಾನು ಕಾನ್ ಫರೆನ್ಸ್ ಗೆ ಹೋದಾಗ ಖುದ್ ಕಂಡಿದ್ದು. ಒಣಗಿ, ಕರ್ರಗೆ ಆಗಿ, ವಾಯ್ಸೂ ಇರ್ಲಿಲ್ಲ. ಸರೋಜಿನಿ ನಾಯ್ಡು ಪೆರೋಲ್ ಮೇಲೆ ಬಂದ್ರು ಗಾಂಧೀಜೀನಾ ನೋಡೋಕ್ಕೆ. ಶಿ ಪ್ರಿಸೈಡೆಡ್ ಓವರ್ ಇಟ್. ೪೮ರಲ್ಲಿ. ಆ ಪುಸ್ ಪುಸ್ ಅಂತಾ ಮಾತು ಗಾಂಧಿಯವರದ್ದು. ಅದನ್ನು ಸರೋಜಿನಿ ನಾಯ್ಡು ರಿಪೀಟ್ ಮಾಡೋರು, ಇವರು ಹೇಳಿದ್ದನ್ನ. ಅಷ್ಟೊಂದು ಉಸಿರು ಹೋಗಿಬಿಟ್ಟಿತ್ತು. ಮನಸ್ಸಿನಲ್ಲಿ ಭಾರ ಇತ್ತಲ್ಲ ದುಃಖದ್ದು ಅದು ಎದ್ದು ಕಾಣೋದು. ಆಕಡೆ ಈಕಡೆ ಇಬ್ರು ಹಿಡ್ಕೋಬೇಕು, ಎಬ್ಬಿಸ್ಬೇಕು ಹಾಗಾಗಿತ್ತು. ಹಿಡಿದು ನಡೆಸ್ಕೊಂಡು ಬರೋರು. ೪೭ ಎಂಡ್ ಅದು. ಅದು ಆದ ೨ ತಿಂಗಳಿಗೇ ಹೋಗೇ ಬಿಟ್ರಲ್ಲ. ನಾನ್ ಆವಾಗ ವಾಪಸ್ಸು ಬಂದಿದ್ದೆ ಇವರ ಗವರ್ನ್‌ಮೆಂಟ್ ನಲ್ಲಿ ನಾನ್ಯಾಕೆ ಇರೋದು ಅಂತಾ.

ನಿಮಗೆ ಹಾಗನ್ನಿಸಿದ್ದಕ್ಕೇ ಬಂದ್ರಾ?

ಹೌದು, ಹಾಗನ್ನಿಸಿತ್ತು. ಯಾರ ಮಾತು ಲಕ್ಷ್ಯಾ ಇಲ್ಲ. ನಾನು ಸರ್ವಾಧಿಕಾರಿ. ನಾನೇನು ಹೇಳಿದ್ರೂ ಆಗ್ಬೇಕು ಅಂತಾ…. ಒಟ್ಟಾರೆ ವಾತಾವರಣಾನೇ ಚೆನ್ನಾಗಿರ್ಲಿಲ್ಲ. ಒಂಥರಾ ಅಧಿಕಾರದಾಹಿಗಳು. ನಾನು ಹರ್ಡೇಕರ್ ಗೆ ಅದನ್ನೇ ಹೇಳ್ದೆ. ಆಗಲ್ಲಪ್ಪ ನನ್ನ ಕೈಲಿ ಇರೋದು ನಮಗೆ ಫ್ರೀಡಂ ಇಲ್ಲ, ಯಾವುದಕ್ಕೂನೂ ಹೋಗಿ ಬೀಡ್ತೀವಿ ಎಂದರು.

ಆಗಲೇ ಅಧಿಕಾರಶಾಹಿ ಲಕ್ಷಣ ಬಂದಿತ್ತಾ?

ಅಯ್ಯೋ….. ಬರೀ ಹೋಗಳುಭಟ್ರು,

ಪಾರ್ಲಿಮೆಂಟ್ ನಲ್ಲಿ?

ಎಲ್ಲಾ ಕಡೆನೂ. ಈವನ್ ಆಫೀಸರ್ಸ್. ಅಲ್ಲಿ ಒಳಗೂ ಗುದ್ದಾಟ ಇದ್ವು. ಒರಿಸ್ಸಾ ಜನ, ಬಂಗಾಳದ ಜನರ, ಹೀಗೆಲ್ಲಾ ಕಿತ್ತಾಟ. ಅವರವರ ನಡುವೇನೇ ಕಿತ್ತಾಡ್ತಾ ಇದ್ರು. ಅವರ ನಡುವೆ ನಮ್ಮಂಥೋರು ಸಿಕ್ಕಿ ಹಾಕಿಕೊಂಡಂತಾಗಿತ್ತು. ವರ್ಕೇನು ನಂದು ತುಂಬಾ ಒಳ್ಳೇ ವರ್ಕು. ಅಂದ್ರೆ ಮೈನಿಂಗ್ ಇರೋ ಕಡೆ ಸೋಶಿಯಲ್ ವರ್ಕ್‌ಮಾಡಿ ಆ ಜನಕ್ಕೆ ಹೇಗೆ ಹೆಲ್ಫ್ ಮಾಡಬೇಕು ಅನ್ನೋದು. ಒನ್ ಆಫ್ ಅವರ್ ಮದ್ರಾಸಿ ಲೇಡೀ ಆಕೆ ಅದಕ್ಕೆ ಹೆಡ್. ಜಗಜೀವನರಾಂ ಹೇಳಿದ್ದಾರೆ ನೀವು ಸಿಂಗನೇನಿ ಹೋಗಿ ಅಂದ್ರು. ನಾನು ಸಿಂಗನೇನಿ ಹೋಗೋದಿಲ್ಲ, ಒರಿಸ್ಸಾ ಕಡೆ ಯಾವುದಾದ್ರೂ ಅವಕಾಶ ಇದ್ರೆ ಹೋಗ್ತೀನಿ ಅಂದೆ. ಅಷ್ಟೊತ್ತಿಗೆ ನನ್ನ ತಾಯಿಗೆ ತುಂಬಾ ಹುಷಾರಿರ್ಲಿಲ್ಲ. ಅಪರೇಷನ್ ಆಗ್ಬೇಕಿತ್ತು. ಎರಡು ತಿಂಗಳು ರಜೆ ಕೇಳ್ದೆ. ರಜೆ ಕೊಡಲಿಲ್ಲ. ನಿಮ್ಮ ಕೆಲಸಾನೇ ಬೇಡ ಅಂತಾ ರಾಜೀನಾಮೆ ಕೊಟ್ಟು ಈ ಕಡೆ ಬಂದು ಬಿಟ್ಟೆ. ಒಂದು ಇನ್ಸಿಡೆಂಟ್ ಹೇಳ್ತೀನಿ, ಅದೇ ಹಳೇದು ಖಾದಿ ಮಾರಾಟ ಮಾಡೋವಾಗಿನದು. ಅವಾಗೆಲ್ಲ ಮಾರಾಟ ಮಾಡ್ತಿದ್ದೆವಲ್ಲ ಆಗ ಎರಡಾಣೆ ಕರ್ಚೀಫ್ ಕೂಡ ಕೊಳ್ಳಲಾರದವು. ಅವತ್ತು ಏನೂ ಅಲ್ಲ ಆತ. ಆಮೇಲೆ ಕರ್ನಾಟಕದಲ್ಲಿ, ಮೈಸೂರು ಗೌರ್ನಮೆಂಟ್ ನಲ್ಲಿ ಮಿನಿಸ್ಟ್ರು ಅದ್ರು! ಎರಡಾಣೆ ಖಾದೀದು ಕರ್ಚೀಪು ಕೊಂಡುಕೊಂಡಿರ್ಲಿಲ್ಲ.

ಯಾರು ಮೇಡಂ?

ಹೆಸರು ಬೇಡ. ರೆವಿನ್ಯೂ ಮಿನಿಸ್ಟ್ರು. ಎರಡು ಆಣೆ ರೀ ಕರ್ಚೀಫ್ ಗೆ ತಗೊಳ್ಳಿ ಅಂದ್ರೆ ಅದ್ಯಾಕೆ ಅಂತಿದ್ರು. ಮತ್ತೆ ಅವರ ಹೆಸರಿನಲ್ಲಿ ಇವತ್ತು ಒಂದು ರಸ್ತೇನೇ ಇದೆ…. (ಮೌನ) ನಾನು ಅಂತವ್ನೆಲ್ಲಾ ಮುಚ್ಚಿಟ್ಟುಕೊಂಡು ನಡೀತೀನಿ. ಭೈರಪ್ಪ ಅಂತಾ ನಮ್ಮಲ್ಲಿ ಒಬ್ರು ಖಾದಿ ಭಂಡಾರ ನಡೆಸ್ಕೊಂಡು ಬಂದವ್ರು. ಅವರ ಮೊದಲ ಸತ್ಯಾಗ್ರಹಿ. ಶೆಟ್ಟರಲ್ಲ. ಆದ್ರೆ ಅವರ ಹೆಸರು ಮೂಲೆಗುಂಪು ಆಯ್ತು. ಈಗ ಶೆಟ್ಟರೆಲ್ಲ ತಾವೇ ಸತ್ಯಾಗ್ರಹಿಗಳು ಅಂತಾ ಜೈ ಅಂತಾರಿವತ್ತು. ಅವನಿಗೇನು ಮಕ್ಕಳಿರಲಿಲ್ಲ. ಅವನು ಜೈಲಿನಿಂದ ಬಂದಾಗ, ಆತ ಇಟ್ಕೊಂಡಿದ್ದ ಲಾಂಡ್ರಿ ಎಲ್ಲಾ ಛಿದ್ರ ಆಗಿತ್ತು. ಇವನು ಎಲ್. ಎಸ್. ಎಲ್. ಸಿ. ಆಗಿದ್ದಾನೆ. ಇವನು ಫಸ್ಟ್ ಸತ್ಯಾಗ್ರಹಿ, ಇವನಿಗೆ ಟೀಚರ್ ಪೋಸ್ಟ್ ಕೊಡಿ ಅಂತಾ ನಮ್ಮ ತಂದೆ ಹೇಳಿ ಕಳಿಸಿದ್ರು, ಹೌದಾ, ಇವನಿಗೆ ಇನ್ನೇನೋ ಪಾಸಾಗಿಲ್ವಲ್ಲ ಅಂತಾ ಇನ್ನೇನೋ…. ಅಂತಾ ಅಂದ್ರು. ಇದೇ ಸಿದ್ದಯ್ಯನವರು. ಆಯ್ತು ನೀ ಏನೂ ಯೋಚ್ನೆ ಮಾಡ್ಬೇಡ ಅಂತ ಹೇಳಿ ನಮ್ಮವ್ರೇ ಒಬ್ರು ಐ.ಓ.ಎಸ್.ಗೆ ಹೇಳಿ ಇಮ್ಮಡಿಯೇಟ್ ಆಗಿ ಆ ಅಗಸರ ಭೈರಪ್ಪನಿಗೆ ಟೀಚರ್ ಪೋಸ್ಟ್ ಕೊಡಿಸಿದ್ರು. ಅವನೂ ಆ ಥರಾ ಟೀಚ್ ಮಾಡ್ದಾ. ಅವನಿಗೆ ಜೈಲಿಗೆ ಹೋಗಿ ಬಂದ ಸ್ವಾತಂತ್ರ್ಯ ಯೋಧರಿಗೆ ಸಿಗೋ ಎರಡು ಎಕರೆ ಸಿಗ್ತು. ಅವನು ತನಗೆ ಬಂದ ಎರಡೆಕರೆಯನ್ನು ಸರ್ವೋದಯಕ್ಕೆ ಕೊಟ್ಟ. ಇವ್ರು…..? (ಮೌನ)

ಕಾಗೋಡು ರೈತ ಹೋರಾಟದಲ್ಲಿ ನೀವು ಹೆಗೆ ತೊಡಗಿಸಿಕೊಂಡ್ರೀ?

ನಾವು ರೈತರ ಪರಪ್ಪಾ. ಕೆ. ಜಿ. ಒಡೆಯರ್ ನಮ್ಮ ತಂದೆ ಫ್ರೆಂಡು. ಅವರು ಎಲೆಕ್ಷನ್ನಿಗೆ ನಿಂತಿದ್ರು. ನಮ್ಮನೆಗೆ ಬಂದಿದ್ರು. ನೀನು ಬರ್ಬೇಕಮ್ಮ ಎಲೆಕ್ಷನ್ ಕ್ಯಾಂಪೇನ್ ಗೆ ಅಂತಾ ಕರೆದ್ರು. ಯಾಕ್ರೀ ನಿಮ್ಮನೇರು ಇಲ್ವಾ ಅಲ್ಲಿ. ನಿಮ್ಮನೆಯವರನ್ನ ಕಳ್ಸಿ, ಕಂಡವರು ದುಡಿದದ್ದನ್ನೆಲ್ಲಾ ತಿಂದ್ಕೊಂಡು ಕುತ್ಕೊಂಡು ಎಲೆಕ್ಷನ್ ಕ್ಯಾಂಪೇನ್ ಗೆ ಕರೀತೀರಾ. ಯಾವ ಮುಖ ಇಟ್ಕೊಂಡು ಬರೋಣ. ಅದನ್ನೆಲ್ಲಾ ಬಿಟ್ಕೊಟ್ಟು ಬಿಡಿ. ಆಮೇಲೆ ಬರ್ತೀನಿ, ಅಂದ್ರೆ. ಅದನ್ನು ಚೆನ್ನಾಗೇ ತೆಗೆದುಕೊಂಡ್ರು. ಕೋಪ ಏನು ಮಾಡ್ಕೊಳ್ಳಿಲ್ಲ. ಹಾಗೆ, ನಮ್ಮ ಪಾತ್ರ ಅಲ್ಲಿ ಸೀರಿಯಸ್ಸಾಗಿ ಏನ್ ಇರ್ಲಿಲ್ಲ.

ಗಣಪತಿಯಪ್ಪನವರ ಜೊತೆಗೆಲ್ಲಾ ನೀವು ಇರಲಿಲ್ಲಾ?

ಅವರೆಲ್ಲಾ ಪ್ರಮುಖರು. ನಮಗೆ ಯಾವಾಗ ಬಂತು ಅಂದ್ರೆ ತಿಮ್ಮಪ್ಪನ ಮನೆಯವರ ಕಡೆಯಿಂದ.

ಕಾಗೋಡು ತಿಮ್ಮಪ್ಪನವರು?

ತಿಮ್ಮಪ್ಪ ಅಲ್ಲ, ಅವರ ಮನೆಯವರ ಕಡೆಯಿಂದ, ನಮಗೆ ಕ್ಲೋಸ್ ಕಾಂಟ್ಯಾಕ್ಟ್ ಬಂತು ಆ ಮೂವ್ ಮೆಂಟ್ ಗೆ.

ಇಲ್ಲಿಗೆ ಲೋಹಿಯಾ ಬಂದಿದ್ರಲ್ಲ, ಆವಾಗ ನೀವು ಅವರ ಜೊತೆ ಇರ್ಲಿಲ್ವಾ?

ಅವರು ಅರೆಸ್ಟಾಗಿದ್ದರಲ್ಲ.

ಅವರ ಜೊತೆ ಸತ್ಯಾಗ್ರಹದಲ್ಲಿ ನೀವಿರ್ಲಿಲ್ಲ?

ನಾನಿಲ್ಲೇ ಇದ್ದೆನಲ್ಲ

ಎಲ್ಲಿ?

ನಮ್ಮ ಮನೆ ಮುಂದೇ ಲೋಹಿಯಾ ಬಿಡುಗಡೆ ಆಗಿ ಜೈಲಿನಿಂದ ಇಲ್ಲಿಂದಾನೇ ಹೋಗಿದ್ದು. ಲೋಹಿಯಾ ಕಾಗೋಡು ಮೂವ್ ಮೆಂಟನ್ನು ಸೀರಿಯಸ್ಸಾಗಿ ತಗೊಂಡ್ರು.

ಅಂದ್ರೆ ನೀವು ಸತ್ಯಾಗ್ರಹಿಗಳಾಗಿ ಅದ್ರಲ್ಲಿ ಇರ್ಲಿಲ್ಲ?

ಆಕ್ಚುವಲಿ ಐ ವಾಸ್ ಪಾರ್ಟ್ ಟು ಇಟ್. ಬೇರೆ ಬೇರೆ ಕೆಲಸ ಎಲ್ಲಾ…. ಪೇಪರ್ಸ್ ತಗೊಂಡು ಹೋಗೋದು, ಡಿಸ್ಟ್ರಿಬ್ಯೂಟ್ ಮಾಡೋದು…. ಅಂಥವ್ನೆಲ್ಲ ಮಾಡ್ತಿದ್ದೆ ಅಷ್ಟೇ.

ಅದೇ ಸತ್ಯಾಗ್ರಹಕ್ಕೆ ಕೂಡ್ಲಿಲ್ಲ?

ಇಲ್ಲ.

ಒಟ್ಟಾರೆ ನಿಮ್ಮ ಕೆಲಸದ ಸ್ವರೂಪ ಏನು ಕಾಗೋಡು ಹೋರಾಟದಲ್ಲಿ?

ಹೋರಾಟಕ್ಕೆ ಸಂಬಂಧಿಸಿದಂಗೆ ಡಿಸ್ಟ್ರಿಬ್ಯೂಶನ್ ಆಫ್ ಪಾಂಪ್ಲೆಂಟ್ಸು, ರೌಂಡ್ ಅಬೌಟ್ ಆಫ್ ಕಾಗೋಡು ಕೆಲ್ಸ, ಅದೂ ಇದೂ ಹಾಗೆ.

ಕೆ. ಜಿ. ಒಡೆಯರ್ ಅವರ ಜೊತೆಗೆ ನಿಮ್ಮ ತಂದೆಯವರ ಸಂಬಂಧ ಹೇಗಿತ್ತು?

ಅವ್ರು ಎಲ್ಲರ ಜೊತೆಗೆ ಫ್ರೆಂಡ್ಲಿಯಾಗೇ ಇದ್ರು.

ಅಲ್ಲ ಹೋರಾಟಕ್ಕೆ ಸಂಬಂಧಿಸಿದಂತೆ?

ರೈತರ ಪರವಾಗಿದ್ರು. ‘ಹಿಂದೂ’ ಪತ್ರಿಕೆ ಕರೆಸ್ಟಾಂಡೆಂಟ್ ಆಗಿದ್ರಲ್ಲ. ಪೇಪರ್ನಲ್ಲಿ ಬರೆಯೋರು.

ಜಯಪ್ರಕಾಶ ನಾರಾಯಣ ಬಂದಾಗ ನೀವು ಜೊತೆ ಇದ್ರಾ?

ನನಗೇನು ಅಷ್ಟು ಇಂಪ್ರೆಸಿವ್ ಆಗಿ ಕಾಣ್ಲಿಲ್ಲಪ್ಪ. ಅವ್ರು ಲೋಹಿಯಾರಷ್ಟು ಸಿಂಪಲ್ ಆಗಿ ಮೂವ್ ಮಾಡೋದು ಅದೆಲ್ಲಾ ಇರ್ಲಿಲ್ಲ. ಜೆ. ಪಿ. ಗಿಂತ ಅಶೋಕ್ ಮೆಹ್ತಾನೇ ಸ್ಟಿಫ್. ಅವರೇ ಸೋಷಲಿಸ್ಟ್ ಪಾರ್ಟೀನಾ ಫಸ್ಟ್ ಬಿಟ್ಟಿದ್ದು. ಲೋಹಿಯಾ ಯಾರನ್ನೂ ತಮಗಿಂತ ಕೆಳದರ್ಜೆ ಯವರು ಅಂತಾ ಕಾಣ್ಲಿಲ್ಲ. ಆ ಕ್ಲೋಸ್ ರಿಲೇಷನ್ ಶಿಪ್ ಇತ್ತಲ್ಲಾ. ಅದು ಜನರನ್ನ ಅಟ್ರ್ಯಾಕ್ಟ್ ಮಾಡೋದು. ಒಂದು ಇನ್ಸಿಡೆಂಟ್ ನಿಮಗೆ ಹೇಳ್ತೀನಿ.

ಅನಂತಕೃಷ್ಣ ಅಂತಾ ಒಬ್ರು ನಮ್ಮ ಪಾರ್ಟಿಯವರು ಮೇಯರ್ ಆಗಿದ್ರು. ಅವರ ಮನೆಗೆ ಡಾಕ್ಟ್ರು ಬಂದಿದ್ರು. ಹೇಳಿ ಕಳ್ಸಿದ್ರು. ನಾನು ಬರ್ತಾ ಇದ್ದೀನಿ ಬಂದು ಹೋಗಿ ಅಂತಾ. ನಾನು ಮುಂಚೇನೇ ಹೋಗಿ ಬಿಟ್ಟಿದ್ದೆ. ಡಾಕ್ಟರರ ಜೊತೆಗೆ ಮಾರ್ವಾಡಿ ಒಬ್ಬರು ಬಂದಿದ್ರು. ನಾನು ಅನಂತಕೃಷ್ಣ ಅವರ ಅಸಿಸ್ಟಂಟ್ ಅವರ ಜೊತೆ ಮಾತಾಡ್ತಾನೆ ಇದ್ದೀನಿ. ನನಗೆ ಡಾಕ್ಟರ್ ಬಂದಿದ್ದೇ ಗೊತ್ತಾಗಿಲ್ಲ. ಆ ಮೇಲೆ ಹಿಂದುಗಡೆ ನಿಂತಿದ್ದಾನೆ. ಪೊನ್ನಮ್ಮ ಕುತ್ಕೊಳ್ರಿ ಅಂದ್ರು. ಕೊನೆಗೆ ನಾನು ಕೂಡೋವರೆಗೂ ಅವರು ಕೂಡಲಿಲ್ಲ. ಅಂದ್ರೆ ಆ ಮಟ್ಟಕ್ಕೆ ಅವರು ಗೌರವಿಸೋರು. ಯಾವ್ದೇ ಸಂದರ್ಭದಲ್ಲಿ ಅವರು ಸಹಜವಾಗಿ ತೋರಿಸಿದ್ರಲ್ಲ. ಅದರಲ್ಲಿ ಬೂಟಾಟಿಕೆ ಇರಲಿಲ್ಲ. ಅದೇ ಆ ಗುಣ ಅಶೋಕ ಮೆಹ್ತಾ, ಮತ್ತು ಜಯಪ್ರಕಾಶ್ ನಾರಾಯಣ ಅವರ ಹತ್ರ ಇರ್ಲಿಲ್ಲ. ಅವರ್ದು ದರ್ಬಾರ್. ಒಂದ್ಸಲ ನಾನು ಅಶೋಕ್ ಮೆಹ್ತಾರಿಗೆ ಹೇಳಿದ್ದೆ “ಒನ್ ಗ್ರೇಟೆಸ್ಟ್ ಡಿಫರೆನ್ಸ್ ಬಿಟ್ವೀನ್ ಡಾಕ್ಟರ್ ಅಂಡ್ ಯೂ ಹಿ ಗಿವ್ಸ್ ದ ರೆಸ್ಟೆಕ್ಟ್ ಟು ಎವೆರಿಒನ್, ವ್ಹೇರ್ ಯ್ಯಾಸ್ ಯೂ ಎಕ್ಸ ಪೆಕ್ಟ್ ರೆಸ್ಟೆಕ್ಟ್ ಫ್ರಮ್ ಅದರ್ಸ್ ಅಂದಿದ್ದೆ.”

ನೀವು ಒಂದ್ಸಲ ಸ್ವಾತಂತ್ರ ಹೋರಾಟ ಸಂದರ್ಭಕ್ಕೆ ಅರೆಸ್ಟ್ ಆಗಿದ್ರಲ್ಲ?

ಹೌದು

ಎಷ್ಟು ದಿನ ಜೈಲಿನಲ್ಲಿದ್ರಿ?

ಟೂ ಮಂಥ್ಸ್

ಯಾವಾಗದು?

೪೩ರಲ್ಲಿ

ನಂತರ ಮತ್ತ್ವಾವಾಗ ಅರೆಸ್ಟ್ರ ಆದ್ರಿ?

ನಮ್ಮ ಸೋಷಲಿಸ್ಟ್ ಪಾರ್ಟಿ ಮೂವ್ ಮೆಂಟ್ ಆಯ್ತು, ಜಯಚಾಮರಾಜೇಂದ್ರ ಒಡೆಯರ್ ಬಂದಾಗ. ಅಗನೆಸ್ಟ್ ಆಗಿ ಬ್ಲ್ಯಾಕ್ ಫ್ಯಾಗು ಡಮಾನ್ ಸ್ಟ್ರೇಷನ್ನು ಅಂತಾ ಎಲ್ಲ ತಯಾರಿ ಮಾಡ್ಕಂಡಾಗ ಊರಿಗಿಂತ ಮುಂಚೇ ನಮ್ಮನ್ನ ಅರೆಸ್ಟ್ ಮಾಡಿ ಒಳಗೆ ಕೂಡಿಸಿದ್ರು. ಜೆ. ಹೆಚ್. ಪಟೇಲ್, ಶಂಕರ ನಾರಾಯಣ ಮತ್ತು ನಾನು. ನಾವು ಮೂವರೇ.

ಆಮೇಲೆ, ರೈತರ ಹಕ್ಕುದಾರಿಕೆ ಬಗ್ಗೆ ಟೂ ಅಂಡ್ ಹಾಫ್ ಮಂಥ್ಸ್ ಇದ್ದೆ ಸೆಂಟ್ರಲ್ ಜೈಲಿನಲ್ಲಿ.

ಗೇಣಿ ರೈತರ ಮೂವ್ ಮೆಂಟ್?

ಆಫ್ಟರ್ ಕಾಗೋಡ್ ಒಂದು ವಾರ ಮೆಗ್ಗಾನ್ ಆಸ್ಪತ್ರೆಯಲ್ಲಿಟ್ಟು ಆಮೇಲೆ ಸೆಂಟ್ರಲ್ ಜೈಲಿಗೆ ಕಳಿಸಿದ್ರು. ಆಗ ನಮ್ಮ ಜೊತೆ ಟಿ. ಟಿ. ಶರ್ಮಾ, ಅವರೆಲ್ಲಾ ಇದ್ರು.

ಸೋಷಲಿಸ್ಟ್ ಪಾರ್ಟಿಯ ಆರಂಭದ ದಿನಗಳು ಹೇಗಿದ್ದವು?

ಚೆನ್ನಾಗಿತ್ತು. ಆಲ್ ಮೋಸ್ಟ್ ಸ್ಟೂಡೆಂಟ್ಸ್ ನಾಗಭೂಷಣ ಅಂತಾ ಮೈಸೂರು ಹುಡುಗ ಒಬ್ರು. ಹಿವಾಸ್ ಹೂ ಸ್ಟಾರ್ಟೆಡ್ ದಿಸ್ ಮೂವ್ ಮೆಂಟ್, ಇನ್ ಕರ್ನಾಟಕ. ಅವನು ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಹಿಸ್ಟರಿ ಸ್ಟಡೀ ಮಾಡಿದ್ದ. ಅವನು ಕಡೆಗೆ ಹುಚ್ಚ ಆಗಿ ಸತ್ತಾ. ಮೂವ್ ಮೆಂಟ್ ಗಾಗೇ ಹುಚ್ಚ ಆಗಿ ಸತ್ತಾ. ಕೆರೆ ಇದೆಯಲ್ಲ ಮೈಸೂರಲ್ಲಿ ಅದಕ್ಕೆ ಎಲ್ಲರ ಹೆಸರು ಹೇಳಿ ಹೇಳಿ ಕಲ್ಲು ಎಸೀತಿದ್ದ. ಅಷ್ಟು ಡಿಸಪಾಯಿಂಟ್ ಆಗಿದ್ದ. ಅಷ್ಟು ಹುಚ್ಚ ಆಗಿದ್ದ.

ಅದಾದ ಮೇಲೆ ಕೆ. ಕಣ್ಣನ್ ಅಂತಾ, ಲೇಬರ್ ಲೀಡರ್ ವೆಂಕಟರಾಮ್, ಸದಾಶಿವ ರಾಯರು, ಖಾದ್ರಿ ಶಾಮಣ್ಣ, ಬಾ. ಸು. ಕೃಷ್ಣಮೂರ್ತಿ, ಸಿ.ಜಿ.ಕೆ. ರೆಡ್ಡಿ, ಈ ಗ್ರೂಪ್ ಬಂತು. ಅವರ ಜೊತೆಗೆ ನಮ್ಮ ಕಡೆಯಿಂದ ವೈ. ಆರ್. ಪರಮೇಶ್ವರಪ್ಪ, ಗೋಪಾಲಗೌಡ್ರು, ಚಂದ್ರಶೇಖರ್ ಅಂತಾ, ಆಮೇಲೆ ಸಾಗರದ ಹುಡುಗ್ರು ದೀಸ್ ಆರ್ ದಿ ಪೀಪಲ್ ಹೂ ಬಿಲ್ಡ್ ಇ ಸೋಷಲಿಸ್ಟ್ ಪಾರ್ಟಿ ಇನ್ ಕರ್ನಾಟಕ. ಅಂದ್ರೆ ನಾವು ಬೆಳೆಸಿಬಿಟ್ಟಿರೋ ಜನ ಒಂದಿಷ್ಟು ಹ್ಯಾಂಡ್ ಫುಲ್. ಅಂದ್ರೆ ಈಗ ಚಂದ್ರಶೇಖರ್, ವೈ. ಆರ್. ಪರಮೇಶ್ವರಪ್ಪ, ಎ. ವಿ. ಶ್ರೀನಿವಾಸ ಇವರೆಲ್ಲ ಬೆಳೆಸಿದಂಗೆ ಪಾರ್ಟೀನಾ ಅವರಿಗೆಲ್ಲಾ ಬೆಳೆಸೋಕೆ ಆಗ್ತಿರಲಿಲ್ಲ. ಇವ್ರೆಲ್ಲಾ ಏನಂದ್ರೆ ಒಂಥರಾ ಬ್ಯಾಕ್ ಗ್ರೌಂಡ್ ನಲ್ಲಿ ಇದ್ಕೊಂಡು ಪಾರ್ಟಿಗೆ ಬೆಂಬಲ, ಒಂಥರಾ ಬೇಸ್. ಅಣ್ಣಯ್ಯ ಬಂದ್ರೆ ನಮಗೆ ಏನೋ ಒಂಥರಾ ಅನುಕಂಪ, ಒಂಥರಾ ಭ್ರಮೆ, ಅಣ್ಣಯ್ಯ ಅಂದ್ರೆ ವೈ. ಆರ್. ಪರಮೇಶ್ವರಪ್ಪ. ನಮ್ಮ ಭರಮಪ್ಪ ಯಂಗೆಸ್ಟ್ ಆಫ್ ಆಲ್ ಆಫ್ ಅಸ್ ಅವ್ರು. ಭರಮಪ್ಪ ಬಂದ ಅಂದ್ರೆ ಓ… ಹೋ ಅವ್ನು ಬಂದ್ರೆ ಸಾವಿರಾರು ಜನ ಅವನ ಹಿಂದೆ ಬರೋರು. ಅವ್ನು ಫಸ್ಟ್ ಮುನ್ಸಿಪಲ್ ಕೌನ್ಸಿಲರ್ ಆಗಿದ್ದು. ಹೆಚ್ಚು ಮಾತಾಡ್ತಿರಲಿಲ್ಲ. ಹೆಚ್ಚು ಕೆಲ್ಸ ಮಾಡ್ತಿದ್ದ. ಅಷ್ಟು ಸಿನ್ಸಿಯಾರಿಟಿ ಏನಿದೆ… ಅದು ಅವನ ಅಟ್ರ‍್ಯಾಕ್ಷನ್. ಅವನು ಮಾಡೋ ಕೆಲ್ಸದಲ್ಲಿ ಸಿನ್ಸಿಯಾರಿಟಿ ಇತ್ತು. ಅವನು ಸತ್ತಾಗ ನೀವು ನೋಡ್ಬೇಕಿತ್ತು. ಇಡೀ ನೆಹರೂ ರೋಡ್ ಟೈಟ್ ಲೀ ಪ್ಯಾಕ್ಟ್, ಅವನ ಹೆಣ ಎತ್ತೋವಾಗ ಅಷ್ಟೇ, ಜನ ಅವನ ಬಗ್ಗೆ ಅನುಕಂಪ. ಅವನ್ನ ಡ್ಯೂಪ್ ಮಾಡಿದವರು ನಮ್ಮಲ್ಲಿದ್ದಾರೆ. ಇವರೆಲ್ಲಾ ಹಾರಾಡ್ಕೊಂಡು ತಿರುಗ್ತಾರೆ. ಒಂದೊಂದ್ಸಲ ಅನ್ಸುತ್ತೆ ಹಿಡಿದು ನಿಲ್ಲಿಸಿ ‘ನೀವೆಲ್ಲಾ ಮಾಡಿದ್ದು ಏನ್ರೋ ಅವತ್ತು ಅಂತಾ ಕೇಳೋಣ’ ಅಂತಾ. ಬಿಕಾಸ್ ಆಫ್ ದೀಸ್ ಪೀಪಲ್… ಕುಡುಕ ಆದ ಅವ್ನು. ಆಮೇಲೆ ಅವನ ಮೇಲೆ ಒಂಥರಾ ಒತ್ತೆ ತಂದು ಕುಡಿಯೋದು ಬಿಡಿಸಿದ್ವಿ. ಒಂದು ವರ್ಷ ಅವನು ಕುಡೀತಾ ಇರ್ಲಿಲ್ಲಾರೀ.

ಆಮೇಲೆ ಜನಸಂಘದವರು ನಮ್ಮ ಜೊತೆಗೆ ಸೇರಿದರಲ್ಲ. ಈ ಜನಸಂಘದವರು ಇವರು ತಮ್ಮದೇನನ್ನೂ ಬಿಟ್ಟು ಕೊಡಲಿಲ್ಲ. ಇವತ್ತು ನಾನು ಹೇಳ್ತಾ ಇದ್ದೀನಿ, ಎಷ್ಟು ಸಂಕಟ ಆಗ್ತದೆ ಇವರನ್ನೆಲ್ಲ ನೆನಸ್ಕೊಂಡ್ರೆ ಅಂದ್ರೆ… ಏನನ್ನೂ ಬಿಟ್ಟುಕೊಡಲಿಲ್ಲ. ಅವರ ಆಫೀಸ್ ಹಾಗೇ ಉಳಿಸ್ಕಂಡ್ರು. ಅವರ ರಿಕಾರ್ಡ್ಸ ಎಲ್ಲಾ ಮುಚ್ಚಿಟ್ರು. ಅವರ ಪ್ರಾಪರ್ಟಿ ಎಲ್ಲಾ ಬಂದೋಬಸ್ತ್ ಮಾಡ್ಕಂಡ್ರು, ಜನಸಂಘದವರು, ಇವತ್ತು ಮೆರೀತಾರಲ್ಲ ಭಾಳಾ ದೊಡ್ಡದಾಗಿ ಆದ್ರೆ ನಮ್ಮ ಸೋಷಲಿಸ್ಟ್ ಪಾರ್ಟಿಯವರು ಎಲ್ಲಾ ತಂದು ಆಫೀಸ್ ನಲ್ಲಿಟ್ರು. ಇದನ್ನ ನಾನು ‘ನೀವು ಯಾಕೆ ಒಪ್ಕೊಂಡ್ರೀ’ ಅಂತಾ ಐ ವಾಸ್ ಅಗನೆಸ್ಟ್ ಇಟ್. ಆದ್ರೆ ಡಾಕ್ಟ್ರು ಇದ್ದಾರಲ್ಲ. ಇಲ್ಲ ಹಾಗೆಲ್ಲ ಮಾಡೋಕ್ಕಾಗಲ್ಲ, ಅವರು ಮಿಸ್ ಗೈಡೆಡ್ ಇರಬಹ್ದು ಅವರಲ್ಲಿ ಇರೋ ಒಳ್ಳೆದನ್ನೆಲ್ಲ ತಗೊಂಡು ನಾವೂ ಸೇರ್ಕಂಡು ವಿ ಬಿಲ್ಡ್ ಅಪ್ ಎ ಸಿಂಗಲ್ ಪಾರ್ಟಿ. ದಟ್ ವಾಸ್ ಹಿಸ್ ಐಡಿಯಾ. ಅವರು ಬದುಕಿದ್ದಿದ್ರೆ. ಅವರ ಕೈಲಿ ಏನಾದ್ರೂ ಮಾಡ್ಲಿ ಕ್ಕಾಗ್ತಿತ್ತೋ ಏನೋ… ಆದ್ರೆ ಅದೇನು ನಮ್ಮ ಅದೃಷ್ಟವೋ ದುರದೃಷ್ಟವೋ ಹಿ ವಾಸ್ ಮೇಕ್ ಟು ಡೈ. ಅವರಿಗೆ ಆಪರೇಷನ್ ಮಾಡಿದ್ರಲ್ಲ ಅವಾಗ ನಮ್ಮ ಸಿ.ಜಿ.ಕೆ. ರೆಡ್ಡಿ ಎಲ್ಲಾ ಹೋಗಿದ್ರು. ಅಪರೇಷನ್ ಮಾಡಿದ ಮೇಲೆ ಬ್ಯಾಂಡೇಜೇ ಮಾಡಿರ್ಲಿಲ್ಲ. ಯಾಕ್ಹೀಗೆ ಅಂತ ಕೇಳಿದ್ರೆ. ‘ವಿಲ್ ಯೂ ಪ್ಲೀಸ್ ಫೈಂಡ್ ಔಟ್ ವ್ಹೆದರ್ ದ ವೂಂಡ್ ಈಸ್ ಪ್ಲೋಸ್ ಆರ್ ನಾಟ್. ಜರ್ಮನಿ ಡಾಕ್ಟ್ರು ಹೇಳ್ತಾನೆ ಹಾಗೆ. ಕಾಂಟ್ಯಾಕ್ಟ್ ಆಗಿದ್ದಕ್ಕೆ. ಅಷ್ಟೊತ್ತಿಗಾಗಲೇ ಮೂರು ದಿನ ಅಗಿ ಹೋಗಿದೆ. ಓಪನ್ ವೂಂಡ್, ದೆ ಕಿಲ್ಡ್ ಹಿಮ್ ಇಂಟೆನ್ಷ್ ನಲಿ. ಇದು ಇಂದಿರಾ ಗಾಂಧಿಯವರ ಪವಿತ್ರತೆ. ನಿಜವಾಗ್ಲೂ ಒಮ್ಮೊಮ್ಮೆ ಇದನ್ನೆಲ್ಲ ನೆನಪಿಸ್ಕೊಂಡ್ರೆ…. ಭಾಳಾ ನೋವಾಗುತ್ತೆ.