ಎಮರ್ಜೆನ್ಸಿ ಟೈಮಲ್ಲಿ ನೀವು ಪ್ರೊಟೆಸ್ಟ್ ಮಾಡಿದ್ರಾ?

ಮಾಡಿದ್ದೆವಲ್ಲ, ಇಲ್ಲೆಲ್ಲಾ. ಈ ಜನಸಂಘದವರು ತಾವೆಲ್ಲ ಅರೆಸ್ಟ್ ಆಗಿದ್ದು ಹಾಗೆ ಹೀಗೆ ಅಂತೆಲ್ಲ ಹೇಳ್ತಾರಲ್ಲ. ಅವ್ರು ಅರೆಸ್ಟ್ ಆಗಿದ್ರು ಎಮರ್ಜೆನ್ಸಿಗಲ್ಲ. ಇದು ಎಂಥಾದ್ದೋ ಕದ್ದು ವ್ಯಾಪಾರಾ ಮಾಡ್ತಿದ್ರಲ್ಲ ಅಷ್ಟೊತ್ತಿಗೆ ಎಲ್ಲಾ ಶುರು ಆಗಿತ್ತು. ಆವಾಗ ಅದೇನೋ ಇತ್ತು ಕಳ್ಳ ವ್ಯಾಪಾರ. ಆ ಇದ್ರೊಳಗೆ ಅರೆಸ್ಟ್ ಆಗಿದ್ದು ಇವರೆಲ್ಲ. ನಮ್ಮಲ್ಲಿ ಭಾಳಾ ಪ್ರಾಮಾಣಿಕರು ಇವರು! ಅದು ದುಡ್ಡು ಕಟ್ಟಬೇಕಾಗಿತ್ತು. ಅದಕ್ಕೆ ಅದನ್ನ ಕನ್ ವರ್ಟ್ ಮಾಡ್ಕಂಡ್ರು ಇದನ್ನ, ಎಮರ್ಜೆನ್ಸಿ ಕಾರಣಕ್ಕೆ ಅರೆಸ್ಟ್ ಆಗಿದ್ದು ಅಂತಾ. ಅವಾಗ್ಲೂ ದುಡ್ಡು ತಿಂದು ಮಾಡೋರು ಇದ್ರು. ಅವರ ಮನೆ ಮಕ್ಳು ಡಿ.ವಿ.ಎಸ್. ನಲ್ಲಿ ಓದುತ್ತಿದ್ದೋರು ೪ ಜನ ಸೇರ್ಕೊಂಡು ಅರೆಸ್ಟ್ ಆಗಿ ಬಿಟ್ರು. ಚಾರ್ಜ್ ಹಾಕಿದ್ರು. ಸ್ಕೂಲಿನವರೇನು ಮಾಡಿದ್ರು ಇವರನ್ನ ಡಿಬಾರ್ ಮಾಡಬೇಕು ಅಂತಾ ಶುರು ಆತು. ಡಿಬಾರ್ ಮಾಡಿದ್ರೆ ಓದ್ ಹಾಳಾಗ್ತಿತ್ತು. ಅದ್ರಲ್ಲಿ ಒಂದು ಹುಡುಗೀಗೇ ತಂದೆ ತಾಯಿ ಇರ್ಲಿಲ್ಲ. ಅವಾಗ ಹೀಗಾಗಿದೆ ಏನ್ಮಾಡೋದು ಅಂತಾ. ನಾನು ಕರ್ದು ಕೇಳ್ತೆ. ಏನಾತು ಅಂತ. ಆವಾಗ ಹೇಳಿದ್ರು ಹಿಂಗೆಲ್ಲಾ ಆಗಿದೆ ಜಾಮೀನು ಕೊಟ್ರೆ ಕ್ಯಾನ್ಸಲ್ ಆಗಬಹುದು ಅಂದ್ರು. ಅವಾಗ ನಾನು ಜಾಮೀನು ನೀಡಿ ಬರ‍್ಕೊಟ್ಟು ಬಿಡಿಸ್ಕೊಂಡು ಬಂದೆ.

ಸೋಷಿಯಲಿಸ್ಟ್ ಪಾರ್ಟಿಯ ಆರಂಭದ ಚಟುವಟಿಕೆಗಳೇನು?

ಈ ವ್ಯಾಪಾರಗಳು ಎಜುಕೇಷನ್ ಪಾಲಿಸಿ, ಎಂಪ್ಲಾಯ್ ಮೆಂಟ್ ಪಾಲಿಸಿ, ಫಾರೆನ್ ಕಾನ್ಫ್ ರೆನ್ಸ್ ಗಳ ಒಪ್ಪಂದಗಳಿಗೆ ಅಗೆನಸ್ಟು…… ನಮಗೇನು ಬೇಕಿತ್ತಂದ್ರೆ ಸೆವೆನ್ ಇಯರ್ಸ್ ಇಚ್ ಅಂತಾ ಇತ್ತು ಡಾಕ್ಟರ್ ದು. ನೀನಾಸಂಗೆ ಕೊಟ್ಟೆ ಆ ಪುಸ್ತಕಾನಾ ಬ್ಯಾಕ್ ವರ್ಡ್ ಕ್ಯಾಸ್ಟ್ ಗಳಿಗೆ ಎಲ್ಲಾ ಫೆಸಿಲಿಟೀಸ್ ಕೊಡಿ, ದೇಶಾದ್ಯಂತ ಒಂದು ಕುಟುಂಬಕ್ಕೆ ಒಂದು ಕಡ್ಡಾಯ ಉದ್ಯೋಗ ಕೊಡಿ, ಅವರಿಗೆ ಸಂಬಳ ನಾಟ್ ಮೋರ್ ದ್ಯಾನ್ ಫೈವ್ ಥೌಸೆಂಡ್, ನಾಟ್ ಲೆಸ್ ದ್ಯಾನ್ ಥೌಸಂಡ್. ಅವತ್ತಿನ ಬೆಲೆ ಹಾಗಿತ್ತು. ಅಂದ್ಕೊಳ್ಳಿ. ಹೀಗೆ ಕಡ್ಡಾಯವಾಗಿ ೫ ವರ್ಷ. ಅದಾದ ಮೇಲೆ ಎಲ್ರೂ ಒಂದು ಲೆವೆಲ್ ಗೆ ಬಂದಾಗ ಎಲ್ಲರನ್ನೂ ಕ್ಯಾನ್ಸ ಲ್ ಎಲ್ಲರೂ ಸಮಾನ ಆಗ್ತಾರೆ. ಇದನ್ನು ಸೆವೆನ್ ಇಯರ್ಸ್ ಇಚ್ ಅಂದ್ರು. ಅದಕ್ಕೆ ಅವಕಾಶ ಕೊಡ್ಲೇ ಇಲ್ಲ. ಹೈದ್ರಾಬಾದ್ ಕಾನ್ಫ್ ರೆನ್ಸ್ ನಲ್ಲಿ ಅದನ್ನು ನಾವು ತೀರ್ಮಾನ ತಗೊಂಡ್ವಿ.

ಗಾಂಧೀಜಿ ಕೊಲೆ ಆದ ದಿನ ನಾನು ಅಲ್ಲಿ ಇದ್ದಿದ್ರೆ…. ಅಂತಾ ನೀವು ಒಂದು ಕಡೆ ಮಾತು ನಿಲ್ಲಿಸಿದ್ದೀರಿ, ಇದ್ದಿದ್ರೆ ಏನ್ಮಾಡ್ತೀದ್ರೀ?

ಅದೇ ಹೈದ್ರಾಬಾದ್ ಕಾನ್ಫರೆನ್ಸ್ ಅಂದ್ನೆಲ್ಲಾ ಅದಾದ ಸೆಕೆಂಡ್ ಮಂಥ್. ಐ ವಾಸ್ ಇನ್ ಅರಸೀಕೆರೆ. ಒಂಥರಾ ನ್ಯೂಸ್ ಕೇಳಿದ ತಕ್ಷಣ ಧುಮ್ಮಂತ ಎಲ್ಲಾ ಬ್ಲಾಕೆಂಡ್. ತೀರಾ ಗಾಂಧೀಜಿಗೆ ಹೋಗಿ ಒಬ್ಬ ಶೂಟ್ ಮಾಡಿದ್ದು ಅಂದ್ರೇನು? ಯಾರಿಗೆ ಏನು ದ್ರೋಹ ಮಾಡಿದ್ರು ಅವ್ರು? ನೀವು ಬರೀ ಈ ಥರಾ ಭ್ರಮೆ ಇಟ್ಕೊಂಡು, ಇವತ್ತೂ ಅವ್ರು ಹೇಳ್ತಾರೆ. ಆರ್. ಎಸ್. ಎಸ್. ನೋರು ತಾವು ಅಲ್ಲೇ ಅಲ್ಲ ಮಾಡಿದ್ದು ಅಂತಾ. ಅವತ್ತು ಅವ್ನು ನಾನು ಆರ್. ಎಸ್.ಎಸ್. ನವ್ನು ಅಂತಾ ಡಿಕ್ಲರೇಷನ್ ಕೊಟ್ಟ ನಾಥೂರಾಂ. ನೀವು ಅದ್ಹೆಂಗೆ ಇವತ್ತು ಅಲ್ಲ ಅಂತೀರಾ…. ಇಲ್ಲ ಯಾವನೋ ಒಬ್ಬ ಹಂಗೆ ಮಾಡಿದ್ದು ಅಂತೀರಿ. ಯಾವನೇ ಆಗಿರ್ಲಿ, ಹೀ ಬಿಲಾಂಗ್ಸ್ ಟು ಯು ಹೌದೋ ಅಲ್ವೋ. ಹೋಗ್ಲಿ ಸ್ವಲ್ಪ ರಿಗ್ರೆಟ್ ಕೂಡ ಎಕ್ಸ್ ಪ್ರೆಸ್ ಮಾಡೋದು ಬೇಡ್ವಾ? ಹೌದು ನಮ್ಮಿಂದ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಅಂದಿದ್ರೆ? ಮೇಲೆ ಮೇಲೆ ಎಲ್ಲರ್ನೂ ಶೂಟ್ ಮಾಡ್ತಾ ಬಂದ್ರು….

ಅವರ (ಜನಸಂಘ) ಜೊತೆಗೆ ತಾತ್ವಿಕ ಚರ್ಚೆ ಸಾಧ್ಯವಾಗ್ತಿತ್ತಾ?

ಏನು ಮಾಡಿದ್ರು ಗೊತ್ತಾ ಬಂದು ಸೇರಿದ್ರಲ್ಲಾ ಆಗ್ಲೇ ಅವರದ್ದು ತೋರಿಸಿದ್ರು. ಫಾರ್ಚುನೇಟ್ಲಿ ಆರ್ ಅನ್ ಫಾರ್ಚುನೇಟ್ಲಿ ದೆನ್ ಐ ವಾಸ್ ಒನ್ ಆಫ್ ದಿ ಮೆಂಬರ್ ಇನ್ ಕಮಿಟಿ.

ಯಾವ ಕಮಿಟಿಗೆ?

ಸೋಷಲಿಸ್ಟ್ ಪಾರ್ಟಿಯಿಂದ ರೆಪ್ರೆಸೆಂಟೇಶನ್ ಹೋದಾಗ. ಅಂದ್ರೆ ಜಾಯಿಂಟ್ ವರ್ಕಿಂಗ್ ಕಮಿಟಿಯಾಯ್ತಲ್ಲ…. ಅದಕ್ಕೆ.

ಕರ್ನಾಟಕ ರಾಜ್ಯದಿಂದನಾ?

ಹ್ಞಾಂ. ಕಾಗೋಡು ತಿಮ್ಮಪ್ಪ, ಜೆ, ಹೆಚ್. ಪಟೇಲ್, ಆಮೇಲೆ…. ಸದಾಶಿವರಾಯರು ಇರ್ಲಿಲ್ಲ. ಅವ್ರು ರೆಫ್ಯೂಸ್ ಮಾಡಿದ್ರು. ಆಮೇಲೆ ಮುಲ್ಕಾಗೋವಿಂದ ರೆಡ್ಡಿ ನಂದು ಒಂದು ಪ್ರಶ್ನೆ ಇತ್ತು. ನಮ್ಮನ್ನು ಕೇಳ್ದೇ ನೀವು ಜೈಲಿನಲ್ಲೇ ಕುಂತು ನೀವು ಹ್ಯಾಗೆ ಒಪ್ಗೆ ಕೊಟ್ರೀ ಅಂತಾ.

ಯಾವುದಕ್ಕೆ?

ಈ ಎರಡೂ ಪಾರ್ಟಿ ಸೇರಿ ಕಮಿಟಿ ಮಾಡ್ಬೇಕು ಅಂತಾ ಆಗಿತ್ತಲ್ಲ ಅದಕ್ಕೆ. ಇವರೆಲ್ಲಾ ಜೈಲಿನಲ್ಲಿದ್ರು. ಒಂದೇ ಜೈಲಿನಲ್ಲಿ. ಎಮರ್ಜೆನ್ಸಿ ಟೈಮ್ನಲ್ಲಿ ಒಂದೇ ಕಡೆ ಕುತ್ಕೊಂಡು ಮಾತಾಡಿದ್ರು, ಆಯ್ತು ಮಾಡಿ ಬಿಡೋಣ ಎಂದ್ರು. ಡಾಕ್ಟ್ರು ಒಪ್ಕೊಂಡು ಬಿಟ್ರು. ಅದಕ್ಕೆ ನನ್ನ ಪ್ರಶ್ನೆ ಇದ್ದದ್ದು, ಆಯ್ತು ನಾವು ಎಲ್ಲಿ ಹೋಗಿದ್ದಿ. ನೀವು ನಮ್ಮನ್ನು ಕೂಡಿಸಿಕೊಂಡು ಕೇಳಿ ಮೀಟಿಂಗ್ ಮಾಡ್ಬೇಕಿತ್ತು. ಫಸ್ಟ್ ಮೀಟಿಂಗ್ ಅದು. ಸೋಷಲಿಸ್ಟ್ ರದು ಲಾಸ್ಟ್ ಮೀಟಿಂಗ್. ಅವಾಗ ನಾನು ಕೇಳ್ದೆ. “ಅಲ್ಲಿ ಎಲ್ಲ ನಿಮ್ಮಂಗೆ ಇರ್ಲಿಲ್ವಲ್ಲ” ಅಂದ್ರು. “ಹೌದು ನನ್ನಂಗೆ ಇರ್ಲಿಲ್ಲ. ನನಗೆ ಅರ್ಥ ಆಗುತ್ತೆ. ನಿಮಗೆ ಯಾರಾದ್ರೂ ಊಟ ಮಾಡಿಸ್ತಾ ಇದ್ರೆ ಊಟ ಮಾಡ್ಕೋತ ಇರ್ತೀರಿ. ನಿಮಗೆ ಯಾರಾದ್ರೂ ಊಟ ಮಾಡಿಸ್ತಾ ಇದ್ರೆ ಊಟ ಮಾಡ್ಕೋತ ಇರ್ತೀರಿ. ನಿಮಗೆ ಅದು ಅಭ್ಯಾಸ ಆಗಿದೆ. ಆದರೆ ನಾನು ಹಾಗಲ್ಲ. ಆ ಊಟದಲ್ಲಿ ಏನು ಹಾಕಿದ್ದಾರೆ, ಏನಿಲ್ಲ ಅಂತಾ ನೋಡ್ಕಂಡು ತಿಂತೀನಿ” ಅಂದೆ ಪಟೇಲ್ಗೆ. ಅಲ್ಲಾ…. ಅಂದ. ಅಲ್ಲಾ ಅಲ್ಲ ಬೆಲ್ಲ ಅಲ್ಲ. ಇವತ್ತು ಕಮಿಟಿ ಫಾರ್ಮೇಷನ್ ಆಗ್ತಾ ಇದೆ. ಸೋಷಲಿಸ್ಟರನ್ನು ಮೆಂಬರ್ಸ್ ಮಾಡ್ಸಿದೀರಾ? ನಮ್ಮನ್ನೆಲ್ಲಾ ಎನ್ರೋಲ್ ಮಾಡಿದ್ದೀರಾ? ಎನ್ರೋಲ್ ಮೆಂಟ್ ಬುಕ್ಸ್ ಕೊಟ್ಟಿದ್ದೀರಾ? ಏನ್ ಮಾಡ್ತಿದ್ದೀರಾ ಹೇಳಿ ಎಂದೆ. ಆಗ ಪೇಚಾಡಿಬಿಟ್ರು.

ಸೋಷಲಿಸ್ಟ್ ಪಾರ್ಟಿಗೆ ಮೆಂಬರ್ ಶಿಪ್, ಎನ್ರೋಲ್ ಪ್ರೊಸೆಸ್ ಇರ್ಲಿಲ್ವಾ?

ಸೋಷಲಿಸ್ಟ್ ಪಾರ್ಟಿಗೆ ಇತ್ತು. ಅದ್ರೆ ಈ ಜನತಾ ಪಕ್ಷ ಆಯ್ತಲ್ಲ. ಅದಕ್ಕೆ ಅವಾಗ ನಮ್ಮನ್ನೆಲ್ಲಾ ಹೊಸ ಪಕ್ಷದ ಸದಸ್ಯತ್ವ ಮಾಡಿಸಬೇಕಿತ್ತಲ್ಲ. ಪುಸ್ತಕಾನೇ ಕೊಡ್ಲಿಲ್ಲ ಜನಸಂಘದವರು, ಗೊತ್ತಾ? ಎಲ್ಲಾ ಅದನ್ನ ತೆಗೆದಿಟ್ಟುಕೊಂಡು ಬಿಟ್ರು. ಆ ಮೇಲೆ ನಾನೇನು ಮಾಡ್ದೆ. ನಾನಿದನ್ನ ಒಪ್ಪೋಕಾಗಲ್ಲ. ಐ ವಾಂಟ್ ಟು ಬಿ ಯ್ಯಾನ್ ಅಫಿಷಿಯಲ್ ಮೆಂಬರ್ ಆಫ್ ದಿ ಪಾರ್ಟಿ. ಇಲ್ದಿದ್ರೆ ಯಾವನೋ ಬರ್ತಾನೆ, ಏನೋ ಆಗ್ತಾನೆ, ಹೋಗ್ತಾನೆ ವ್ಹೇರ್ ಈಸ್ ದಿ ನೆಸೆಸಿಟಿ. ಆಮೇಲೆ ತೀರ್ಥಹಳ್ಳಿ ಜನ ಬಂದಿದ್ರು. ನೀವದನ್ನೆಲ್ಲ ನಂಬಲ್ಲ. ಬಿಳೀ ಹಾಳೆ ಹರಿದು ಅದರ ಮೇಲೆ ಬರ್ದು ಸೈನು ಮಾಡಿಕೊಟ್ಟು ಮೆಂಬರ್ ಆಗಿದೀವಿ ಅಂತಾ ಬರ‍್ಕೊಟ್ಟು ಅದನ್ನ ರಿಜಿಸ್ಟರ್ ಮಾಡಿಸ್ದೆ. ಹ್ಞುಂ. ನಾವು ಬೇಡವಾಗಿತ್ತು ಅವರಿಗೆ. ಆದರೆ ನಾವು ಸಂಪಾದನೆ ಮಾಡಿದ್ದೆಲ್ಲ ಬೇಕಿತ್ತು ಅವರಿಗೆ. ಅಂಥಾ ಕೆಟ್ಟ ಬುದ್ದಿಯವ್ರು, ಜನಸಂಘದೋರು. ಇದೆಲ್ಲ ಹೇಳಿದ್ರೆ ನಮ್ಮ ಪಟೇಲ್ ಗೆ, ಅವ್ರಿಗೆ ಇದು ಅರ್ಥ ಆಗ್ಲಿಲ್ಲ. ಆಮೇಲೆ ನಮ್ಮ ಲೀಡರ್ಸುಗಳೆಲ್ಲಾ ಬಂದ್ರು. ಅವ್ರು ಬಂದಾಗ ಇವ್ರೆಲ್ಲಾ ಅವರನ್ನ ಸುತ್ತುವರೆದು ಬಿಡೋರು. ನಮ್ಮನ್ನು ರ್ತಅವರ್ಹತ್ರ ಮಾತಾಡೋಕೇ ಬಿಡ್ತಾ ಇರಲಿಲ್ಲ….

ಸರೀ….. ಆದ್ರೆ ಜನಸಂಘದವರ ಜೊತೆಗೆ ನಿಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನಿದ್ವು?

ಒಂದು ಜಾತಿವಾದ. ಇನ್ನೊಂದು ಜಮೀನ್ದಾರಿಕೆ. ಅದನ್ನು ಬಿಟ್ಟುಕೊಡೋಕೇ ಅವ್ರು ತಯಾರಿರ್ಲಿಲ್ಲ. ಆ ಮೇಲೆ ರಿಸ್ಟ್ರಕ್ಷನ್ಸ್, ಇವ್ರೇ ಬರ್ಬೇಕುಮ, ಅವ್ರೇ ಹೋಗ್ಬೇಕು ಎಲ್ಲಾ ಪವರ್ರೂ ಅವರ ಕೈಯಲ್ಲೇ ಇರ್ಬೇಕು. ದೇ ವರ್ ನಾಟ್ ವಿಲ್ಲಿಂಗ್ ಟು ಶೇರ್ ಎನಿಥಿಂಗ್. ಆಮೇಲೆ ಅವರ ಜಾತಿವಾದ ಇದೆಯಲ್ಲ, ಹೊಲಸು ಅದು. ನಮ್ಮಗಳಿಗಷ್ಟು ಅದು ಸರಿಬರಲ್ಲ. ನಮ್ಮ ಪಾರ್ಟಿಯಲ್ಲಿ ಹಳ್ಳಿಜನ… ಪಾಪ, ಕೆಳಜಾತಿಯವರು ಅವರೇ ಜಾಸ್ತಿ ನಮಗೆ. ಅವರಿಗೆ ವ್ಯಾಪಾರಿ ಪರಿವಾರ. ಅಲ್ಲಿ ಏನ್ ಬಂದ್ಬಿಡುತ್ತೆ, ಅಲ್ಲಿ ಓನರ್ ಶಿಪ್ ಪ್ರವೃತ್ತಿ ಬಂದ್ಬಿಡುತ್ತೆ. ಅದು ನಮಗೆ ಟಾಲ್ ರೇಟ್ ಮಾಡೋಕ್ಕಾಗ್ಲಿಲ್ಲ. ಹೇಗೋ…. ಬಾರೋ…. ಅಂತಾ.

ಇಷ್ಟೆಲ್ಲಾ ಇದ್ದು ಹೊಂದಿಕೊಂಡು ಹೋಗಲು ಹೇಗೆ ಸಾಧ್ಯವಾಯ್ತು? ಅಥವಾ ತಾಕಲಾಟಗಳು ಇದ್ವಾ?

ಇತ್ತು. ಅದಾದ ಮೇಲೆ ಏನಾಯ್ತು. ಹೈದ್ರಾಬಾದ್ ಕಾನ್ ಫರೆನ್ಸ್ ಮಾಡಿದ್ವಿ. ದೇ ಬ್ರೋಕ್ ಅಪ್ ವೇ. ನಾವು ಪಾರ್ಟ್ ಆಫ್ ಅಸ್ ಕಮ್ ಔಟ್ ಇಟ್. ಸಂಯುಕ್ತ ಸೋಷಲಿಸ್ಟ್ ಪಾರ್ಟಿ ಅಂತಾ ಆಯ್ತು. ಡಾ. ಲೋಹಿಯಾ ಅಧ್ಯಕ್ಷರಾಗಬೇಕು ಅದಕ್ಕೆ ಅಂತಾ ಆಯ್ತು ಗೊತ್ತಾ ಅದು.

ಎರಡು ವರ್ಷ ಆಗಿತ್ತೇನಪ್ಪಾ, ಜನತಾ ಪಕ್ಷ ಆಗಿ. ಆವಾಗ ಸಂಯುಕ್ತ ಸೋಷಲಿಸ್ಟ್ ಪಕ್ಷಾ ಅಂತಾ ಬ್ರೇಕ್ ಅಪ್ ಆದ್ವಿ. ಆವಾಗ ಹೈದ್ರಾಬಾದ್ ನಲ್ಲಿ ಅಫೀಸು ನಮ್ಮ ತೆಲುಗು ದೇಶಂನವರೆಲ್ಲಾ ಇದ್ರು. ಪ್ರಜಾಪಾರ್ಟಿ ಅಂತೇನೋ ಇತ್ತು. ಅವ್ರು ಸೋಷಲಿಸ್ಟರ ಜೊತೆ ಸೇರ್ಕಂಡಾಗ ಪ್ರಜಾ ಸೋಶಲಿಸ್ಟ್ ಪಾರ್ಟಿ ಆಯ್ತು. ಈ ಮುಲ್ಕಾ ಗೋವಿಂದ ರೆಡ್ಡಿ ಅವರೆಲ್ಲ ಬಂದಿದ್ದು ಅದ್ರಿಂದ.

ಪ್ರಜಾ ಪಾರ್ಟಿಯಿಂದ?

ಪ್ರಜಾಪಾರ್ಟಿಯಿಂದ ಆಮೇಲೆ ಜನಸಂಘದ ಇದು ಆದ ಮೇಲೆ ಸಂಯುಕ್ತ ಸೋಷಲಿಸ್ಟ್ ಪಾರ್ಟಿ ಅಂತಾ ಬ್ರೇಕ್ ಅಪ್ ಆಯ್ತು. ಆವಾಗ ಈ ವೆಸ್ಟ್ ಬೆಂಗಾಲ್ ಅಲ್ಲಿಂದೆಲ್ಲಾ ಬಂದ ಜನ ಎಲ್ಲ ಸೇರಿದ್ರು. ಇವತ್ತಿಗೂ ಪಾರ್ಟಿ ಹೈದ್ರಾಬಾದ್ ನಲ್ಲಿದೆ. ತುಂಬಾ ಚೆನ್ನಾಗಿತ್ತು. ಪಿ.ಯು.ಜಿ. ರಾಜು ಅವ್ರೆಲ್ಲಾ ಅದಕ್ಕೆ ಬಂದ್ರು. ಆಮೇಲೆ ನಾವು ಬ್ರೇಕ್ ಅಪ್ ಆದ್ವಿ. ಜನಸಂಘ ನಮಗೆ ಸರಿಬರಲ್ಲ ಅಂತಾ. ನಾವೊಂದು ೬೮ ಜನ ಹೊರಗಡೆ ಬಂದ್ವಿ. ಬಂದು ಹೈದ್ರಾಬಾದ್ ನಲ್ಲಿ ಕಾನ್ಫರೆನ್ಸ್ ಮಾಡಿದ್ವಿ. ಅವಾಗ ಲೋಹಿಯಾರವರು ಅದಕ್ಕೆ ಪ್ರೆಸಿಡೆಂಟ್ ಆಗಬೇಕೆಂತಾಯ್ತು. ಅದಕ್ಕೆ ನಾನೇ ಈ ಆಪೋಸ್ ಮಾಡ್ದೆ. ಪಾರ್ಟಿ ಅಧ್ಯಕ್ಷ ಆದ್ರೆ ಕೆಲವೊಂದು ಕಟ್ಟುಪಾಡುಗಳಿರ್ತವೆ. ಇಂಡಿಪೆಂಡೆಂಟ್ ಆಗಿ, ಥಿಂಕ್ ಮಾಡಿ ಇಂಥಾದ್ದು ಮಾಡೋಣ ಅಂತಾ ಹೇಳ್ಬೇಕಾದ್ರೆ ಡಾಕ್ಟ್ರೇ ಪ್ರೆಸಿಡೆಂಟ್ ಆಗ್ಬಾರ್ದು. ಶುಲ್ಡ್ ಬಿ ಒನ್ ಆಫ್ ಅಸ್. ಅಲ್ಲಿ ಅಪೋಸ್ ಮಾಡಿದ್ರು ನಮ್ಮನ್ನು. ನಾವು ೬೮ ಜನ ಒಂದ್ಕಡೆ. ಡಾಕ್ಟ್ರು ನಮ್ಮಡೆ. ಅಲ್ಲಿ ಸೋಷಲಿಸ್ಟ್ ಪಾರ್ಟಿ ಆದ್ಮೇಲೆ ಡಾಕ್ಟ್ರು ಅಧ್ಯಕ್ಷ ಆಗಿ ಓಡಾಡಿದ್ರು. ಒಮ್ಮೆ ಅವ್ರು ಟ್ರಾವೆಂಕೂರ್ ಹೋಗಿದ್ರು. ಅಲ್ಲಿ ಶೂಟ್ ಆಗಿತ್ತು. ಆಗ ಸೋಶಲಿಸ್ಟ್ ಪಾರ್ಟಿ ವಾಸ್ ರೂಲಿಂಗ್. ನಮ್ಮವರೇ ಆಗ ಅಧಿಕಾರದಲ್ಲಿದ್ದರು. ಅವರು ಜನರ ಮೇಲೆ ಶೂಟ್ ಮಾಡಿಸಿದ್ರು.

ಯಾವ ಇಶ್ಯೂಗೆ ಅದು?

ಅದೇನೋ ಇಳಿಸ್ತಾರಲ್ಲ ಅವಾಗ ಲೋಹಿಯಾ ನಾವೇ ನಮ್ಮ ಜನರ ಮೇಲೆ ಶೂಟ್ ಮಾಡಿಸೋದು ಅಂದ್ರೇನು ಅಂತಾ ಬೇಜಾರಾಗಿ ರಾಜಿನಾಮೆ ಕೊಟ್ರು. ಅಧ್ಯಕ್ಷ ಸ್ಥಾನಕ್ಕೆ ಅದಾದ ಸ್ವಲ್ಪ ದಿನಕ್ಕೇ ಹಿ ಫೆಲ್ ಇಲ್ ಅಂಡ್ ಡೈಡ್.

ಪಕ್ಷದಲ್ಲಿ ನಿಮಗಿದ್ದ ಸ್ಥಾನವೇನು?

ದಕ್ಷಿಣ ಭಾರತ ಪಾರ್ಟಿಗೆ ಮಹಿಳಾ ಸೋಷಲಿಸ್ಟ್ ವಿಂಗ್ ಗೆ ನನ್ನನ್ನು ಸಂಚಾಲಕಿ ಅಂತಾ ಮಾಡಿದ್ರು.

ಯಾವಾಗ ಅದು?

ಹೈದ್ರಾಬ್ರಾದ್ ಕಾನ್ಫರೆನ್ಸ್ ಆಗ್ತಿದ್ದಾಗ್ಲೇ ಇದೆಲ್ಲ. ಅಷ್ಟೊತ್ತಿಗಾಗ್ಲೆ ಕೆಲವು ಕಡೆ ಚೆನ್ನಾಗಿ ಬೆಳಕೊಂಡು ಬಂದಿತ್ತು. ಸೋಷಲಿಸ್ಟ್ ಪಾರ್ಟಿ. ಆವಾಗ ನನ್ನನ್ನು ದಕ್ಷಿಣ ಭಾರತ ಸಂಚಾಲಕಿ ಅಂತಾ ಮಾಡಿ ತಿಂಗಳಿಗೆ ಇನ್ನೂರು ರೂಪಾಯಿ ಟ್ರಾವೆಲಿಂಗ್ ಚಾರ್ಜ್‌ಗೆ ಅಂತಾ ಹೈದ್ರಾಬಾದ್ ನಿಂದ ಬರೋದು, ಯಾವ ಮಟ್ಟಕ್ಕೆ ನಾವು ಬೆಳ್ದಿದ್ವಿ. ಅದೇ ಹಾನೆಸ್ಟಿ ನಮ್ಹತ್ರ ಇದ್ದಿದ್ರೆ ಇವ್ರಿಗಿಂತ ಮುಂಚೆ ನಾವು ಆಳ್ತಿದ್ವಿ. ಪಟ್ಟಾಭೀನೂ ಹೋಗಿ ಆಯ್ತು…. (ದೀರ್ಘ ಮೌನ, ಕಣ್ಣು ಒದ್ದೆಯಾದವು)

ಕರ್ನಾಟಕದಲ್ಲಿ ಒಂದು ಕಾಲಕ್ಕೆ ಸಮಾಜವಾದಿ ಪಕ್ಷದಲ್ಲಿ ನಾಯಕತ್ವದ ಪಡೆಯೇ ಬಂತು ಅದು ಸಾಧ್ಯವಾಗಿದ್ದುದು ಹೇಗೆ?

ಬಂತು. ಅದೊಂದು ಫೋರ್ಸ್ ಇತ್ತಲ್ಲ. ಡಾಕ್ಟ್ರು ಪರ್ಸನಲ್ ಆಗಿ ಎರಡು ಮೂರು ಸರ್ತಿ ಬಂದು ಹೋದ್ರಲ್ಲ ಅದರ ಎಫೆಕ್ಟು. ಆಮೇಲೆ ನಮ್ಮಲ್ಲಿ ಆ ಉತ್ಸಾಹ ಇಲ್ಲ. ಗುದ್ದಾಟ, ನನಗೇ ಎಲ್ಲಾ ಬೇಕು ಅನ್ನೋದು ಅದೆಲ್ಲಾ. ಹಂಚ್ಕೊಳ್ತಿದ್ವಿ. ಹಳಬರೆಲ್ಲಾ ಪವರ‍್ರು. ಐಡಿಯಾಸು ಎಲ್ಲಾ ಹಂಚ್ ತಿದ್ರು, ಅದ್ರಿಂದ ಪಾರ್ಟಿ ಬೆಳೀತು. ಇಲ್ಲಿ ಶಿವಮೊಗ್ಗಾದಲ್ಲಿ ಕಾಂಗ್ರೆಸ್ ಗೆ ಸರಿಸಮಾನವಾಗಿ ಹೊಡೆದಾಡಿದ ದಿವ್ಸ ಇದೆ.

ಶಕ್ತಿ ಕ್ರಮೇಣ ಕುಗ್ಗಲು ಕಾರಣವೇನು?

ಅದೇ ಕ್ರಮೇಣ ಬೆಳೀಲಿಲ್ಲ. ಎಲ್ಲಿ ತಪ್ಪಾಯ್ತಂದ್ರೆ ಜನಸಂಘದ ಜತೆ ಸೇರ್ಕಂಡು ಜನತಾ ಪಕ್ಷ ಆಗಿದ್ದೇ ದೊಡ್ಡ ತಪ್ಪಾಗಿದ್ದುದು. ಯಾಕೆ ಅಂದ್ರೆ ಅಲ್ಲಿ ಸೆಲ್ಫಲೆಸ್ ಇಲ್ಲ, ಸೆಲ್ಫಿಷ್, ನಮ್ಮನ್ನು ಉಪಯೋಗಿಸ್ಕೊಂಡು ತಾವೆಲ್ಲ ಬೆಳೆಯೋಕೆ, ದುಡ್ಮಾಡೋಕೆ ಶುರುವಾತು.

ಉಪಯೋಗಿಸಿಕೊಂಡವರು ಅಂದ್ರೆ ಯಾರು?

ಯಾರು ಅಂತಲ್ಲ, ಜನಸಂಘದೋರು. ಅದನ್ನೇ ಹೇಳಿದ್ನಲ್ಲ. ಅವರ್ದು ಅಂತ ಅವ್ರು ಎಲ್ಲಾ ಇಟ್ಕಂಡಿದ್ರು. ಗಾಂಧಿ ಮಂದಿರದ ಹತ್ತಿರ ಅವರ ಆಫೀಸ್. ಒಂದು ತುಂಡು ಪೇಪರ್ ಕೂಡ ಅವ್ರು ಇಲ್ಲಿಗೆ ಶಿಫ್ಟ್ ಮಾಡ್ಲಿಲ್ಲ. ನಾವು ಧಡ್ರು, ಸೋಷಲಿಸ್ಟ್ ಪಾರ್ಟಿಯವ್ರು. ಕನ್ಯಕಾ ಪರಮೇಶ್ವರಿ ದೇವಸ್ಥಾನದ ಹತ್ರ ನಮ್ಮ ಆಫೀಸು. ಅಲ್ಲಿಂದ ಎಲ್ಲಾ ಗಾಡೀಲಿ ತುಂಬ್ಕೊಂಡು ತಳ್ಕೊಂಡು ಬಂದು ಎಲ್ಲಾ ಇಟ್ಟಿ ಇಲ್ಲಿ, ತಗೊಳ್ರಪ್ಪಾ ಅಂತಾ.

ಅದನ್ನೇ ನಾನು ಹೇಳಾದು. ನಮ್ಮದೊಂದು ಮೆಂಬರ್ ಶಿಪ್ ಅಂತಾ ಮಾಡ್ಬೇಕಾದ್ರೆ ಬಿಳೀ ಪೇಪರ್ ಕತ್ತರಿಸಿ, ನಮ್ಮ ಹೆಸರೆಲ್ಲ ಬರ್ಸಿ, ಹಳಬರು ಎಷ್ಟು ಜನ ಇದ್ರೋ ಅಷ್ಟು ಜನರ ಹೆಸರು ಬರ್ಸಿ ಸೀಲ್ ಹಾಕಿಸಿದ್ವಿ. ಇವತ್ತು ನಮಗೆ ಅವರ್ನ ಕಂಡ್ರೆ ಮರ್ಯಾದೆ ಕೊಡ್ಬೇಕು ಅಂತಾ ಹೆಂಗನ್ಸುತ್ತೆ.

ಸೋಷಲಿಸ್ಟ್ ಪಾರ್ಟಿಯ ಅಗ್ರ ನಾಯಕತ್ವ ಕಾಂಗ್ರೆಸ್ ಪಾರ್ಟಿಗೆ ಹೋಗೋ ಪರಂಪರೆ ಶಿವಮೊಗ್ಗ ಜಿಲ್ಲೆಯಲ್ಲಿಯೇ ಶುರುವಾದದ್ದು ಅಥವಾ ಹೆಚ್ಚಿನ ಪ್ರಮಾಣದ್ದು, ಯಾಕಾಗಿರಬಹುದು?

ಅಲ್ಲೇನಾಗುತ್ತೆ ಗೊತ್ತಾ, ನೀವ್ಯಾರೆ ಏನೇ ಹೇಳಿದ್ರೂ ಅದೊಂಥರಾ ಮೂಲಭೂತವಾಗಿ ಐಡಿಯಾಲಜಿ ಏನಿತ್ತು ಕಾಂಗ್ರೆಸ್ ಪಾರ್ಟೀದು, ಸೋಷಲಿಸ್ಟ್ ಪಾರ್ಟೀದೂ ಒಂದೆ. ಅದನ್ನ ಕಾರ್ಯರೂಪಕ್ಕೆ ತರೋವಾಗ ಹೆಚ್ಚು ಕಮ್ಮಿಯಾಗಿದೆ. ಇವತ್ತಿಗೂ ನಾನು ಕಾಂಗ್ರೆಸ್ ನವರ್ನ ನಂಬ್ತೀನಿ. ಆದ್ರೆ ಇವರಿಗೆ ಬಿ.ಜೆ,ಪಿ. ಆ ಐಡಿಯಾಲಜಿ ಅಂತೇನೂ ಗೊತ್ತಿಲ್ಲ. ಇವತ್ತು ಬೇಕಂದ್ರೆ ಮುಂದೆ ಯಡಿಯೂರಪ್ಪನವ್ರು ಎಲ್ಲ ದೇವ್ರಿಗೆ, ಎಲ್ಲ ಸ್ವಾಮಿಗಳ ಕಾಲಿಗೆ ಬಿದ್ದು ಬರ್ತಾರೆ. ಇದೇ ಯಡಿಯೂರಪ್ಪನವರು ಮೊದ್ಲು ಯಾವ ಸ್ವಾಮಿಗೂ ಕೇರ್ ಮಾಡ್ತಿರಲಿಲ್ಲ. ಯಾಕೋ ಆವಾಗ ಇದ್ದಿದ್ದೇ ಎರಡು ಸ್ವಾಮಿಗಳಯ, ಶಿಕಾರಿಪುರದಲ್ಲಿ. ಇವತ್ತು ಹಳ್ಳಿಹಳ್ಳಿಗೂ ನೀವು ಸ್ವಾಮಿಗಳನ್ನ ಹುಟ್ಟು ಹಾಕಿದ್ದೀರಲ್ಲ?

ಅಧಿಕಾರ ರಾಜಕಾರಣ ಧಾರ್ಮಿಕ ನಾಯಕರನ್ನ ಹುಟ್ಟು ಹಾಕಿದೆ ಅಂತೀರಾ?

ಹೂಂ ಅಷ್ಟೇ. ಇವತ್ತು ಸ್ವಾಮಿಗಳು ನಿಂತ್ಕೋಂಬಿಟ್ರೆ ಎಲ್ಲರೂ ಕಾಲಿಗೆ ಬೀಳ್ತಾರೆ. ಅದನ್ನ ಯೂಸ್ ಮಾಡ್ಕೋಬೇಕು ಅವ್ರಿಗೆ. ಹೆಸರೇ ಕೇಳಿಲ್ರೀ ನಾನು. ಶಿಕಾರಿಪುರ, ಸಾಗರ, ಸೊರಬ, ಹೊಸನಗರ, ಪಾರ್ಟ್ ಆಫ್ ತೀರ್ಥಹಳ್ಳಿ ತಾಲ್ಲೂಕು ಇಲ್ಲೆಲ್ಲಾ ನಡ್ಕಂಡು ಸುತ್ತಿರೋಳು ನಾನು. ಎಲ್ಲಿದ್ರು ಸ್ವಾಮಿಗಳು. ಎರಡೇ ಸ್ವಾಮಿಗಳು ಇದ್ದದ್ದು.

ರೀತಿ ಧರ್ಮ ಮತ್ತು ರಾಜಕಾರಣ ಧೃವೀಕರಣದ ಸಾಮಾಜಿಕ ಸಂದರ್ಭವನ್ನು ಹೇಗೆ ವಿಶ್ಲೇಷಿಸ್ತೀರಿ?

ಇವತ್ತು ಪಾಲಿಟಿಕ್ಸ್ ಗೆ ಬಂದಿರೋ ಜನ ಈವನ್ ದಿ ಕಾಮನ್ ಮ್ಯಾನ್ ಈಸ್ ಡ್ಯೂಪ್ ಡ್. ಒಂದು ಥರಾ ವಾಂಟ್ ಆಫ್ ಥಿಂಕ್ಸ್, ಆಮೇಲೆ, ಗೈಡೆನ್ಸೇ ಇಲ್ದೇ ಇರೋದು. ಪ್ರಾಪರ್ ಗೈಡೆನ್ಸ್ ಈಸ್ ನಾಟ್ ದೇರ್. ಸೆಲ್ಫಿಷ್ ನೆಸ್. ಹೇಗಾದ್ರೂ ನಾನು ಜೀವನ ನಡೆಸ್ಬೇಕು. ಯಾವನು ಹಾಳಾದ್ರೂ ಹಾಳಾಗ್ಲೀ ಲೆಟ್ ಮಿ ಬಿ ಆಲ್ ರೈಟ್, ಆ ಮನಸ್ಥಿತಿ ಬಂದಾಗ ಅಲ್ಲಿ ಅನಿಮಲ್ ಬಿಹೇವಿಯರ್ ಶುರು ಆಗುತ್ತೆ. ಇಲ್ದಿದ್ರೆ ಒಬ್ಬ ಚೀಫ್ ಮಿನಿಸ್ಟ್ರು ಆಗೋನು ೧೬೦೦ ಕ್ರೋರ್ಸ್ ಕಲೆಕ್ಟ್ ಮಾಡಿ ಬದುಕ್ಬೇಕಾದ ಅವಶ್ಯಕತೆ ಏನ್ರಿ ಇತ್ತು? ಇವತ್ತು ಹೋಗಿ ಖಾಯಿಲೆ ಬಿದ್ದಿದ್ದಾನೆ. ತಗೊಂಡು ಏನ್ಮಾಡ್ತೀರಿ ದುಡ್ಡು? ಇವತ್ತು ಯಡಿಯೂರಪ್ಪನವರನ್ನೇ ತಗೊಳ್ರೀ ನನಗೆ ಗೊತ್ತಿರೋ ಹಂಗೆ, ಫಸ್ಟ್ ಅಟ್ರ‍್ಯಾಕ್ಟೆಡ್ ಸೋಷಲಿಸ್ಟ್ ಪಾರ್ಟಿಗೆ ಶಿಕಾರಿಪುರದಲ್ಲಿ, ಶಿರಾಳಕೊಪ್ಪದಲ್ಲಿ ಐ ಹ್ಯಾವ್ ಸೀನ್ ಹಿಮ್ ಫಸ್ಟ್. ಶಿಕಾರಿಪುರದಲ್ಲಿ ನಾವ್ ಮೂವ್ ಮೆಂಟ್ ಗೆ ಹೋಗಿರ್ತಿದ್ವಿ. ನನ್ನೆದುರಿಗೇ ಹುಡುಗ ನಿಂತ್ಕೋಂಡಿರ್ತಿದ್ದ. ಏನೂ ಇರ್ಲಿಲ್ಲ. ಏನೂ ಅಂದ್ರೆ ಏನೂ ಇರ್ಲಿಲ್ಲ. ಇವತ್ತು….? ಎಲ್ಲಿಂದ ಬಂತು ನಿಮ್ಗೆ? ಆಮೇಲೆ ಇಲ್ಲಿ ಒಂದು ಸೊಸೈಟಿ ಮಾಡಿದ್ದಾರೆ. ಇಟ್ ಈಸ್ ಎ ಫ್ಯಾಮಿಲಿ ಸೊಸೈಟಿ. ಯಾಕೆ? ಬೇರೆ ಜನ ಇರ್ಲಿಲ್ವ. ನಿಮ್ಮ ಹಂಗೇ ಬಡವರು ಇರ್ಲಿಲ್ವ. ಎಲ್ಲರ್ನೂ ಸೇರಿಸ್ಕೊಂಡು ಸೊಸೈಟಿ ಮಾಡಿದ್ರೆ ಇನ್ನೂ ೧೫ ಫ್ಯಾಮಿಲೀಸು ಮುಂದಕ್ಕೆ ಬರ್ತಿದ್ದು. ಯಾಕೆ ಮಾಡ್ಲಿಲ್ಲ? ಇವತ್ತು ಖಜಾನೆನಲ್ಲಿ ದುಡ್ಡೇ ಇಲ್ಲ. ಕೇಳೋರಿಲ್ಲ, ಹೇಳೋರಿಲ್ಲ. ಇಂಥದ್ರಲ್ಲಿ ೩೪ ಸಾವಿರ ಸೈಕಲ್ ಕೊಡ್ತೀನಿ ಅಂದ್ರೆ ಅರ್ಥ ಏನು. ಫ್ರೀ ಸೈಕಲ್ಸ್, ಹೂ ವಾಂಟೆಡ್ ಇಟ್. ಯಾತಕ್ಕೆ ಕೊಡ್ಬೇಕು ನೀವದನ್ನ ಅವ್ರು ಸಂಪಾದನೆ ಮಾಡಿ ತಗೊಳ್ಳಲಿ. ಏನು, ಹೆಣ್ಮಕ್ಳೇನು ಅಷ್ಟೊಂದು ಗತಿಗೆಟ್ಟು ಹೋದ್ರೇ. ನೀವು ಕರೆದು ಸೈಕಲ್ ಕೊಡಿಸೋವಷ್ಟು. ಯಾಕೆ ಈ ಥರಾನೆಲ್ಲ ಮೋಸ ಮಾಡ್ತೀರಿ ಜನಕ್ಕೆ.

ಸೆಲ್ಫಲೆಸ್ ಆಗಿರಬೇಕಾಗಿದ್ದವರನ್ನ ಯಾತಕ್ಕೂ ಬರ್ದೆ ಇರೋಹಂಗೆ ಮಾಡಿ, ನಾಳೆ ಅವನು ಉಸಿರೆತ್ತೋಹಂಗೆ ಇಲ್ಲ. ನಾಳೆ, ನನ್ನ ಮಗಳಿಗೆ ಸೈಕಲ್ ಕೊಟ್ಟಿದ್ದಾನೆ ಕಣಪ್ಪಾ…. ಸೋ ಬಾಯಿ ಮುಚ್ಕೊಂಡು ಬಿದ್ದಿರ್ಬೇಕಾ? ಅವನೇನು ಮಾಡಿದ್ರೂ. ಸ್ವಾಭಿಮಾನ ಅಳಿಸಿ, ಅವರಿಗೆ ಒಂಥರಾ ಮಾರಲ್ ಬೈಂಡಿಂಗ್. ಸರ್ಕಾರ ಸೈಕಲ್ ಕೊಡಿಸಿದೆ, ಹಂಗಾಗಿ ನಾವು ಸ್ಕೂಲ್ ಗೆ ಹೋಗ್ತೀವಿ ಅಂತಾ. ನೀವು ರೋಡೇ ಮಾಡಿಲ್ಲ. ಸೈಕಲ್ ಯೋಚ್ನೆ ಎಲ್ಲಿಂದ? ಆ ಹೆಣ್ಮಕ್ಳಿಗೆ ಇರೋಕೆ ಮನೆಗಳೇ ಇಲ್ಲ ಪಾಪ. ಸೈಕಲ್ ಹಂಗಿಟ್ರೇ ಉಳಿಯುತ್ತಾ ಒಂಥರಾ…. ಪ್ರೆಸೆಂಟು, ಪ್ಯೂಚರು ಹ್ಯಾಗೆ ಅಂತಾ ಯೋಚ್ನೆ ಮಾಡಿದ್ರೆ ಇವತ್ತಿನಿಂದ ಹುಟ್ಟಿದ ಹೆಣ್ಮಕ್ಳಿಗೆಲ್ಲಾ ಹಣಾ ಹಾಕ್ತೀರಿ. ಯಾಕೆ ಹಾಕ್ತಾ ಇದ್ದೀರಿ. ಹತ್ತು ಸಾವಿರ ನೀವಿಡ್ತೀರಿ. ೧೮ನೇ ವರ್ಷಕ್ಕೆ ಅದನ್ನು ಯೂಸ್ ಮಾಡೋ ಹಕ್ಕು ಬರುತ್ತೆ. ಅಲ್ಲೀವರೆಗೂ ಅದರ ಬಡ್ಡೀ ಬೆಳೀತಾ ಇರ್ಬೇಕು ತಾನೆ? ನೀವು ಹೆಸರಿಗೆ ಕೊಟ್ಟಂಗಾತು, ಹಣ ಅವರಿಗೆ ಖರ್ಚು ಮಾಡೋಕೆ ಸಿಗಲ್ಲ. ಆ ೧೮ ವರ್ಷ ಮುಗಿದು ಅದನ್ನು ಉಪಯೋಗಿಸೋ ಹಕ್ಕುದಾರಿಕೆ ಬರೋದ್ರೊಳಗೆ ಅವ್ರು ಬೇಕಾದಷ್ಟು ಸಾಲಗಾರರು ಆಗಿರ್ತಾರೆ.

ನಿಮ್ಮ ಶರಹದ ನಿಷ್ಠುರದ ನುಡಿಗಳಿಂದಾಗೀನೇ ನೀವು ಒಂಟಿತನ ಅನುಭವಿಸ್ಬೇಕಾತು ಅನಿಸಲ್ವಾ?

ನಾನಾಗೇ ಬಿಟ್ಟಿದ್ದು ಅಲ್ವಾ. ಈಗ ನೋಡಿ ಸೆಂಟ್ರಲ್ ಸೋಷಿಯಲ್ ಬೋರ್ಡ್‌ನಲ್ಲಿ ಒತ್ತಾಯ ಮಾಡಿ ಕರೆದ್ರು. ಐ ಸೆಡ್ ಐ ಹ್ಯಾವ್ ಮೈ ಒನ್ ಸ್ಟೇಟ್ ಟು ಲುಕ್ ಆಫ್ಟರ್. ಐ ಹ್ಯಾವ್ ಮೈ ಓನ್ ಪೀಪಲ್ ಹಿಯರ್. ನೀವು ಬನ್ನೀ ಅಂತಾ, ನಾವು ಬಂದು ಕುಂತುಬಿಟ್ರೆ ನೀವ್ನು ಕೆಲವೊಂದಷ್ಟು ಕಾಯಿದೆಗಳನ್ನು ಹಾಕ್ತೀರಿ, ಆಮೇಲೆ ನನ್ನ ಪಾರ್ಟಿಯವರೇ ನನ್ನನ್ನು ಅಸೆಂಬ್ಲಿ ಮೆಂಬರ್ ಆಗು, ಅದಾಗು, ಇದಾಗು ಅಂತ ಡಾಕ್ಟ್ರೇ ಹೇಳಿದ್ರು ವೈ ಡೋಂಟ್ ಯು ಕಂಟೆಸ್ಟ್ ಅಂತಾ. ಅದಕ್ಕೆ ನಾನಂದೆ ‘ಐ ಡೋಂಟ್ ವಾಂಟ್ ಟು ಬಿ ಬೌಂಡ್ ವಿತ್ ಆಲ್ ದೀಸ್ ರೂಲ್ಸ್ ಅಂಡ್ ರೆಗ್ಯುಲೇಷನ್ಸ್ ಡಾಕ್ಟರ್. ಐ ವಾಂಟ್ ಟು ಬಿ ಫ್ರೀ, ಟು ಚೂಸ್ ಮೈ ಓನ್ ವೇ ಟು ಡು ಎವೆರಿಥಿಂಗ್ ಡಾಕ್ಟರ್. “ಓ ಹೋ…” ಅಂದು ಹೋಗಿ ಮಲಗಿಬಿಟ್ರು. ಆ ಇದು ಇತ್ತಲ್ಲ ಅವರ್ಹತ್ರ, ಬೇರೆಯವರ ಅಭಿಪ್ರಾಯವನ್ನು ಗೌರವಿಸೋದು…. ದಟ್ ಈಸ್ ವಂಡರ್ ಫುಲ್.

ಶಾಸನಸಭೆಗಳಲ್ಲಿ ನಿಮ್ಮಂಥವರು ಇದ್ರೆ ಜನಪರವಾಗಿ ಯೋಜನೆ ನೀತಿಗಳನ್ನು ಮಾಡೋಕೆ ಸಾಧ್ಯವಾಗ್ತಿತ್ತು ಅನ್ನಿಸಲ್ವಾ?

ಏನಾಗಿತ್ತು ಗೊತ್ತಾ, ನಾನು ಒಬ್ಳೇ ಆಗ್ತಿದ್ದೆ.

ಅಭಿಪ್ರಾಯವನ್ನ ರೂಪಿಸೋ ಅವಕಾಶಗಳೂ ಇರರ್ತಿದ್ಳು?

ಅಷ್ಟು ಸುಲಭ ಅಲ್ಲ. ಇವತ್ತಿನ ಪಾಲಿಟೆಕ್ಸ್ ಆಗ್ಲೇ ಶುರುವಾಗಿಬಿಟ್ಟಿತ್ತು. ನಮ್ಮವರೇ, ತಿಮ್ಮಪ್ಪ, ಪಟೇಲ್, ಇವರೆಲ್ಲ, ನಮ್ಮ ಜೊತೆಯವರೇ. ಇವರ ಒಪಿನಿಯನ್ನೇ ಛೇಂಜ್ ಆಗ್ತಿತ್ತು.

ಎಲ್ಲಿ ಢಿಫರೆನ್ಸ್ ಬಂತು ಗೊತ್ತೇನು? ಜಾರ್ಜ್ ಬಂದಾಗ. ಈ ಜನಸಂಘದವರು ಅವರನ್ನ ಗುಂಪು ಕಟ್ಟಿಕೊಂಡು ಬಿಟ್ರು. ಇವತ್ತು ಜಾರ್ಜವಾಟ್ ಈಸ್ ಹೀ? ಎಷ್ಟು ಆತ ಸ್ಯಾಕ್ರಿಫೈಸ್ ಮಾಡಿದ್ದಾನೆ ಅಂತಂದ್ರೆ ಈವನ್ ಹಿಸ್ ಓನ್ ಲೈಫ್. ಅವತ್ತು ಹೋಗಬೇಕಾದ್ರೆ ನೋಡಬೇಕಾಗಿತ್ತು. ಕೈಗೆ ಕೋಳ ಹಾಕ್ಕೊಂಡು, ಕಾಲಿಗೆ ಕೋಳ ಹಾಕ್ಕೊಂಡು ಬೀದೀಲಿ ನಡೆಸಿದ್ರಲ್ಲ, ಅವತ್ತು ಇವ್ರೆಲ್ಲಾ ಇದ್ರಾ?

ತುರ್ತುಪರಿಸ್ಥಿತಿಯಲ್ಲಿನಾ?

ಹೌದು, ಡೆಲ್ಲಿನಲ್ಲಿ, ರಸ್ತೆಗಳಲ್ಲಿ ನಡೆಸ್ಕೊಂಡು ಹೋದ್ಲು ಅವ್ಳು ಕೋರ್ಟಿಗೆ, ಇಂದಿರಾ ಗಾಂಧಿ. ಬಾಯಿ ಕೈ ಮುಚ್ಚಿಕೊಂಡು ಇವ್ರು ಹೇಳಿದ್ದಕ್ಕೆಲ್ಲಾ ಎಸ್. ಎಸ್. ಅನ್ನೋಕೆ…. ಆ ಪಾತ್ರ ನಮಗೆ ಬೇಡ.

ತುರ್ತುಸ್ಥಿತಿ ಹೇರಿದ ಕಾಂಗ್ರೆಸ್ಸನ್ನು ವಿರೋಧಿಸಿ, ಜಾರ್ಜ ಎನ್. ಎಇ. . ಯನ್ನು ಆಯ್ಕೆ ಮಾಡಿಕೊಂಡಿದ್ದು ಸರಿಯಾದ ಕ್ರಮ ಅಂತೀರಾ?

ಅದೇನೇ, ಅಲ್ಲಿ ತಾನು ಏನೋ ಮಾಡ್ತೇನೆ ಅಂತಾ ಮಾಡೋಕ್ಕೆ ಹೋಗಿದ್ದು. ಟುಡೇ ಹೀ ಈಸ್ ನೋಬಡಿ. ನಾನು ಒಪ್ಪಲ್ಲ ಅದನ್ನು, ಅದನ್ನ ಒಪ್ಪೋದಾದ್ರೆ ನಾನೇ ಹೋಗಿ ಸೇರ್ಕೊಂಡು ಬಿಡ್ತಿದ್ದೆ. (ನಗು) ಅಲ್ವಾ. ಅವತ್ತೂ ಒಪ್ಪಿಲ್ಲ. ಇವತ್ತೂ ಒಪ್ಪಲ್ಲ. ಯಾಕಂದ್ರೆ ಅವ್ರು ಅಂತಾ ಜನ. ಅವರು ಯಾರನ್ನ ಬೇಕಾದ್ರೂ ಹಾಳುಮಾಡಿ ತಾವು ಮುಂದಕ್ಕೆ ಬರ್ತಾರೆ. ಅವ್ರ ಸ್ವಭಾವನೇ ಅಂಥಾದ್ದು.

ಜಾರ್ಜ್ ನಿಮ್ಮ ಜೊತೆ ಈಗ್ಲೂ ಸಂಪರ್ಕದಲ್ಲಿ ಇದ್ದಾರಾ?

ಕಡೇವರೆಗೂ ಇತ್ತು. ಆದ್ರೆ ನಾನು ಯಾರಿಗೂ ಕಾಗದ ಬರೆಯೋಲ್ಲ. ಪೊಸಿಶನ್ನು ಕಷ್ಟ ಆಗುತ್ತೆ. ಪತ್ರಗಳಿಗೆ ಆ ಪೋಸ್ಟೇಜು ಅದೆಲ್ಲಾ ಎಲ್ಲಿಂದ ತರೋದು? ಮನೆಯವರಿಗೆ ದುಡ್ಡು ಕೊಡು ಅಂತಾ ಕೇಳ್ಬೇಕಾಗುತ್ತೆ. ನಾನು ನಿಮ್ಮ ಸ್ವಾತಂತ್ರ್ಯ ಹೋರಾಟಗಾರರ ಸಂಭಾವನೆ, ಅದೂ ಇದೂ ಏನನ್ನೂ ತಗೊಂಡಿಲ್ಲ. ಸಂಪರ್ಕ ಇಟ್ಕೊಂಡಿದ್ದಾರೆ. ಈವನ್ ರಬಿರಾಯ್ ಕೂಡ. ರಬಿರಾಯ್ ಒಂದ್ಸಲ ಬಂದಾಗ ಆ ಗಾಂಧಿ ಭವನದ ಹತ್ರ… ಹತ್ರ ಬರೋಕೆ ಬಿಡವಲ್ರು. ಆ ಮೇಲೆ ಕೂಗಿದೆ ನಾನು. ಈ ಕಡೆ ರಸ್ತೆಯಿಂದ ಆ ಕಡೆಗೆ ‘ರಬೀ… ಇಫ್ ಯು ಆರ್ ದೇರ್, ಇನ್ ಪರ್ಸನ್ ಆಲೈವ್, ಕಮ್ ಔಟ್ ಹಿಯರ್ ವಿಥ್ ಔಟ್ ಆಲ್ ದೀಸ್ ಪರ್ಸನ್ಸ್’ ಅಂತಾ. ‘ಏ ಪೊನ್ನಮ್ಮ ವ್ಹೇರ್ ಯೂ ಆರ್ ಅಂತಾ….’ ಬಾ ನೀನು ಇಲ್ಲಿಗೆ. ನಾನು ಅಲ್ಲೆಲ್ಲ ಬರಲ್ಲ. ಮಾತಾಡ್ಬೇಕು ಅನ್ನಂಗಿದ್ರೆ ಬಾ ಅಂದೆ, ಬಂದ ಆತ.

ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಅವರೆಲ್ಲಾ ಸಮಾಜವಾದಿ ಪಾರ್ಟಿಯಿಂದ ಬೇರೆ ಕಡೆ ಹೋಗಿ ಮಾಡಿದ ಕೆಲಸಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನಾನೀಗ ಬಂಗಾರಪ್ಪನ್ನೂ, ತಿಮ್ಮಪ್ಪನ್ನೂಒಂದೇ ತಕ್ಕಡೀಲಿ ಇಡಲ್ಲ. ಸೀ… ಬಂಗಾರಪ್ಪ ಈಸ್ ಎ ವೆರೀ ಡಿಫರೆಂಟ್ ಪರ್ಸನ್. ಅವನೇನೇ ಮಾಡಿರ್ಲಿ ಬೇರೆ ವಿಷಯದಲ್ಲಿ, ಬಟ್, ಸೋಷಿಯಲ್ ಲೈಫ್ ನಲ್ಲಿ ಅವನು ಕುಡಿಯಲ್ಲ, ಸಿಗರೇಟು ಸೇದಲ್ಲ, ಎಲೆ ಅಡಿಕೆ ಹಾಕಲ್ಲ, ನಶ್ಯ ಹಾಕಲ್ಲ, ಏನಂದ್ರೆ ಅವನು ಬೆಳಿಗ್ಗೆ ಅಚ್ಚುಕಟ್ಟಾಗಿ ಎಕ್ಸಸೈಜ್ ಮಾಡ್ಕಂಬರ್ತಾನೆ. ಸ್ಟಿಮ್ಮಿಂಗ್ ಮಾಡ್ತಾನೆ. ಆಟ ಆಡ್ತಾನೆ. ಟೈಮಿಗೆ ಕರೆಕ್ಟ್ ಆಗಿ ಊಟ ಮಾಡ್ತಾನೆ. ಆಮೇಲೆ ಅವ್ನು ಬೇರೆ ಏನೇ ಇರ‍್ಲೀ ಮರ್ಯಾದೆ ಕೊಟ್ಟು ಮಾತಾಡಿಸ್ತಾನೆ. ನಾನಿಷ್ಟು ವರ್ಷ ಇದ್ರಲ್ಲಿ ನಮ್ಮ ಜನಕ್ಕೆ ಅಂತಾ ಏನಾದ್ರೂ ಕೇಳಿ ಮಾಡಿಸ್ಕೊಂಡಿದ್ರೆ ಅವನು ಚೀಫ್ ಮಿನಿಸ್ಟ್ರು ಆಗಿದ್ದಾಗ.

ನಮ್ಮ ಶಿಶುವಿಹಾರದ ಮೇಡಂಗಳಿಗೆ ಪೆನ್ಷನ್ ಸ್ಕೀಮ್ ಇರ್ಲಿಲ್ಲ. ಅವ್ರು ಸೇವೆ ಮಾಡಿದಷ್ಟು ದಿನ ಗ್ರ‍್ಯಾಂಟ್ ಅಂತಾ ಕೊಡೋರು. ಆಮೇಲೆ ನಿಲ್ಲಿಸಿ ಬಿಡೋರು. ‘ಬೇರ್ ಹೆಡ್ಡೆಡ್’ ಪಾಪ. ಆಮೇಲೆ ಏನೂ ಇರ್ತಿರಲಿಲ್ಲ ಅವರಿಗೆ. ಇದೇನು ಹೀಗಾಯ್ತಲ್ಲ. ೨೦.೨೫ ವರ್ಷ ಸರ್ವೀಸ್ ಮಾಡಿ ಬರೀ ಕೈಲಿ ಹೋಗ್ಬಿಟ್ರಲ್ಲ ಅಂತಾ ಕಡೆಗೊಮ್ಮೆ ಯೋಚ್ನೆಮಾಡಿ ಅವಾಗ ಇವ್ನು ಚೀಫ್ ಮಿನಿಸ್ಟ್ರು. ಅದೇ ಚೌಧರಿ ಅವಾಗ ಡೈರೆಕ್ಟ್ರಿದ್ರು. ರಾಚಯ್ಯನವರು ಎಜುಕೇಷನ್ ಮಿನಿಸ್ಟ್ರು. ಆಗ ರಾಚಯ್ಯನವರಿಗೆ ಹೇಳ್ದೆ. ಈ ಥರಾ ಒಂದು ಡಿಫರೆನ್ಸ್ ಇದೆ. ಇದನ್ನೇನಾದ್ರೂ ಮಾಡಿ ಸರಿಮಾಡ್ರೀ ಅಂತಾ. ಒಂದು ಪ್ರಪೋಸಲ್ ಕೊಡಮ್ಮಾ ಅಂದ್ರು ಕೊಟ್ಟಿದ್ದೆ. ಆಮೇಲೆ ನಾನು ಆವಾಗ್ಲೆ ಬ್ರಿಗೇಡ್ ರೋಡ್ ನಲ್ಲಿ ಹೊರಟಿದ್ದೆ. ನಾನು, ಡಿ. ಬಿ. ಗಂಗಮ್ಮ ನಡ್ಕಂಡು ಹೋಗ್ತಿದ್ದಿ. ಇದಕ್ಕಿದ್ದಂಗೆ ಇವರ ಇದು ಇದೆಯಲ್ಲ (ನಗು) ಕ್ಯಾರವಾನ್… ನಿಂತು ಬಿಟ್ತು. ನಾವು ಯಾಕೆ ಹಿಂಗೆ ಇದ್ದಕ್ಕಿದ್ದಂಗೆ ಆಗಿ ಬಿಡ್ತು ಅಂತಾ ತಿರುಗ್ತೀವಿ… ಅವಾಗ ಇವ್ನು. ಚೀಫ್ ಮಿನಿಸ್ಟ್ರು! ಇಳೀದು ಬರ್ತಿದಾನೆ. ನಮಸ್ಕಾರ ಪೊನ್ನಮ್ಮ ಅಂದಾ. ಏ ಬುದ್ಧಿ ಇದೆ ಏನೋ ನಿಂಗೆ. ಚೀಫ್ ಮಿನಿಸ್ಟ್ರು ಕಣೋ ನೀನು ಇವತ್ತು. ಆಮೇಲೆ ಬಂದು ಮಾತಾಡ್ತಾ ಇದ್ದೆ ನಿನ್ನನ್ನ. ನೋಡಲ್ಲಿ. ಹೇಗೆ ನಿಲ್ಲಿಸಿದ್ದೀಯಾ ಇದೆಲ್ಲಾ ಜನಕ್ಕೆ ಅವಮಾನ ಮಾಡಿದಂಗೆ ಅಲ್ವೇನೋ… ಹೇಗೋ… ನಾಳೆ ‘ಕೃಷ್ಣಾ’ಗೆ ಬಂದು ಕಾಣ್ತೀನಿ ಅಂದೆ.

ಆಮೇಲೆ… ಬೆಳಿಗ್ಗೆ ನಾನು ಕಂಡು, ಈ ಶಿಶುವಿಹಾರದ ಮೇಡಂಗಳಿಗೆ ಪೆನ್ಷನ್ ಸ್ಕೀಮ್ ಹಾಕು ಅಂದೆ. ಸರಿ ಬಿಡು ಮಾಡೋಣ ಅಂದು, ಮೂರೇ ದಿವ್ಸಾರೀ, ಥರ್ಡ್ ಡೇ, ಐ ವಾಸ್ ಕಾಲ್ಡ್ ಫ್ರಂದಿ ಸಿ.ಎಂ.ಸ್ ಆಫೀಸ್. ನೋಡಿ ಈ ಥರಾ ಫ್ರೇಂ ಮಾಡಿದೀವಿ ಆಗಬಹುದಾ ಎಂದ. ಆಮೇಲೆ ವಿಶ್ವನಾಥ್ ಗೆ ಕರ್ದು. ಇದನ್ನ ಫೈನಲ್ ಮಾಡಿ ಪೊನ್ನಮ್ಮಗೆ ಒಂದು ಕಾಪಿ ಕಳಿಸ್ಕೊಟ್ಟು ಆರ್ಡ್‌ರ್ ಹಾಕಿಬಿಡಿ ಅಂದ. ಯಾರ್ ಮಾಡ್ತಾರ‍್ರೀ. ಹಾಗೆ ಯಾರೂ ಮಾಡಲ್ಲ. ನಾನು, ಅವನು ಕಾಂಗ್ರೆಸ್ ಸೇರಿದ ಅಂತಾ ಎರಡು ವರ್ಷ ಮಾತಾಡಿಸಿರ್ಲಿಲ್ಲ ಅವನ ಹತ್ರ. ಅಂಥವನು ಅಷ್ಟು ಮಾಡ್ತಾ. ಇವತ್ತು ಥ್ರೂ ದಿ ಬ್ಯಾಂಕ್ಸ್ ಅವ್ರೆಲ್ಲರಿಗೂ (ಶಿಶುವಿಹಾರದ ಶಿಕ್ಷಕಿಯರು) ಹಣ ಬರುತ್ತೆ.

ಆದ್ರೆ…. ಸಮಾಜವಾದಿ ಆಶಯಗಳನ್ನ, ಇವ್ರು ಅಧಿಕಾರದಲ್ಲಿದ್ದು ಜಾರಿ ಮಾಡೋಕೆ ಆಯ್ತಾ?

ಆವತ್ತು ಆಗ್ತಿರಲಿಲ್ಲ. ಬಿಕಾಸ್ ಮೆಜಾರಿಟಿ ವಾಸ್ ನಾಟ್ ವಿಥ್ ದೆಮ್. ಆಗುತ್ತೇನೋ ಅಂತಾ ಭಾವನೇಲಿ ಇವ್ರೆಲ್ಲ ಬೀರೂರಿಗೆ ಹೋಗಿ ಕಾಂಗ್ರೆಸ್ ಸೇರ್ಕಂಡ್ರು. ನಮ್ಮ ಸೀತಾರಾಂ ಅಯ್ಯಂಗಾರ್, ಇವ್ನು…. ಇವ್ರೆಲ್ಲ…

ಮೈಸೂರು ಪ್ರಜಾಸರ್ಕಾರಕ್ಕಾಗಿ ಮಾಡಿದ ಹೋರಾಟದಲ್ಲಿ ನಿಮ್ಮ ಅನುಭವಗಳೇನು?

ನಾವು ಊರಿಗೆ ಮುಂಚೇ ಜೈಲಿನಲ್ಲಿ ಕುಂತಿದ್ದೇ ನಮ್ಮ ಅನುಭವ. (ನಗು). ಪ್ರಜಾಸರ್ಕಾರ ನಮಗೆ ಬೇಕು ಅಂತ್ಲೇ ನಿಯರ್ಲೀ ಥ್ರೀಮಂತ್ಸ್….. ಜೈಲಿನಲ್ಲಿ ಇದ್ದದ್ದು ಆವಾಗ.

ಹೋರಾಟದ ಸ್ವರೂಪ ಹೇಗಿತ್ತು?

ನಾವು ಶುರೂನಲ್ಲೇ ಹೋಗ್ಬಿಟ್ಟಿದ್ದೆವಲ್ಲ. ಹಾಗಾಗಿ ಅದರ ಕಷ್ಟ ಅಷ್ಟು ಗೊತ್ತಾಗ್ಲಿಲ್ಲ. ಯಾಕಂದ್ರೆ, ಫಸ್ಟ್ ಬ್ಯಾಚ್ ಆಫ್ ದಿ ವುಮೆನ್ ನಾವು ಹೋಗಿದ್ದು. ಅಷ್ಟೊತ್ತಿಗೆ ನಾಯಕರು ಅಂತ್ಹೇಳಿ ಎಂ. ಆರ್. ಲಕ್ಷ್ಮಮ್ಮ ಅವರನ್ನೂ ಸೇರ್ಸಿ ಏಳು ಜನರನ್ನ ಅರೆಸ್ಟ್ ಮಾಡಿಬಿಟ್ಟಿದ್ರು. ಯಾರ್ಯಾರೆಂದ್ರೆ ಎಂ. ಆರ್. ಲಕ್ಷ್ಮಮ್ಮ, ಸುಬ್ಬಮ್ಮ, ಸಾವಿತ್ರಮ್ಮ…. ಅಂತ್ಹೇಳಿ ಐದು ಜನರನ್ನು ಮೊದ್ಲೇ ಅರೆಸ್ಟ್ ಮಾಡಿಬಿಟ್ರು. ಫ್ರಿಕಾಶನೆರಿ ಮೆಸರ್ಸ್ ಅಂತ. ರತ್ನಮ್ಮ ಮಧುರಾವ್ ನಮ್ಮ ಜೊತೆಗೆ ಬಂದಿದ್ರು. ಇಲ್ಲಿ ಡಿ. ಸಿ. ಆಫೀಸ್ ಇದೆಯಲ್ಲ, ಹಳೇದು ಅಲ್ಲಿ. ನಮ್ಮನ್ನು ಒಳಗೆ ಬಿಡಿದೇನೆನೇ ಬ್ಲಾಕ್ ಮಾಡಿದ್ರು. ಅವಾಗ ನಾವು ಪ್ರತಿಭಟಿಸಿದ್ವಿ. ಮುನ್ಸಿಫ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ನಮ್ಮ ಮೇಲೆ ಕೇಸ್ ಇತ್ತದು. ಪೋಲಿಸ್ನೋರನ್ನ ದಬ್ಬೀ…. ಎಲ್ಲ ಮಾಡಿದ್ವಿ. ನಾವು ಒಂದು ಹನ್ನೊಂದು ಜನ ಒಟ್ಟಿಗೇ ಅರೆಸ್ಟ್ ಆಗಿದ್ವಿ. ನಮ್ಮ ಜೊತೆಗೆ ರತ್ನಮ್ಮ ಮಾಧವರಾವ್ ಇದ್ರು. ಹೊಸನಗರದಿಂದ ಇಬ್ರು ಇದ್ರು. ಪದ್ಮಾವತಿ, ಪದ್ಮಾ….. ಅಂತಾ… ಎಂಥದೋ ಜಯತೀರ್ಥಚಾರ್ ಲಾಯರ್ ಅವರ ಮಕ್ಳು ಇಬ್ರು ನಮ್ಜೊತೆ ಇದ್ರು.

ಆರಂಭದಲ್ಲಿ ಹತ್ತಿ ದಿವಸ ಮೆಗ್ಗಾನ್ ಆಸ್ಪತ್ರೆಯ ಕೆಲ ವಾರ್ಡ್‌ಗಳನ್ನು ಜೈಲಾಗಿ ಕನ್ ವರ್ಟ್‌ಮಾಡಿ, ಡಿಸ್ಟ್ರಿಕ್ಟ್ ಮೆಡಿಕಲ್ ಆಫೀಸರ್ ಇದ್ರಲ್ಲ ಅವ್ರೇ ಜೈಲಿನ ಸೂಪರಿಂಟೆಂಡೆಂಟ್ ಆಗ.

ಭೂಪಾಳಂ ಚಂದ್ರಶೇಖರಯ್ಯನವರನ್ನ ನೀವು ತುಂಬ ಗೌರವಿಸ್ತಿದ್ರೀ, ಅವರೂ ನಿಮ್ಮ ಮೇಲೆ ಅಷ್ಟೇ ಅಭಿಮಾನ ಇಟ್ಕೊಂಡಿದ್ರು ಅಂತಾ ಕೇಳಿದ್ದೇನೆ. ನೀವಾಗ ತಾನೇ ಸಮಾಜವಾದಿಗಳಾಗಿ ಉತ್ಸಾಹದಿಂದ ಚಟುವಟಿಕೆ ಮಾಡ್ತಿರೋ ಕಾಲಕ್ಕೆ ಚಂದ್ರಶೇಖರಯ್ಯನವರು ಶಿವಮೊಗ್ಗಕ್ಕೆ ಸಾವರ್ಕರ್ ರನ್ನ ಕರೆಸಿದ್ರು. ಸಮಾಜವಾದಿಗಳ ಯೋಜನೆಯ ನೀವೆಲ್ಲ ಹಿಂದೂ ಮಹಾಸಭಾ ಸಮ್ಮೇಳನದಲ್ಲಿ ಕಾರ್ಯಕರ್ತರಾಗಿ ಕೆಲಸ ಮಾಡಿದ್ದು, ..ಸಿ.ಸಿ. ಸದಸ್ಯರಾಗಿದ್ದ, ಭೂಪಾಳಂ ಸಾವರ್ಕರ್ ಗೆ ಕರೆಸಿದ್ದು ಇವೆಲ್ಲವೈರುಧ್ಯತೆಗಳನ್ನು ಹೇಗೆ ವಿಶ್ಲೇಷಿಸ್ತೀರಿ?

ಸಮಾಜವಾದಿ ಪಾರ್ಟಿ ಆಗತಾನೇ ಹುಟ್ಕೊಳ್ತಾ ಇತ್ತು. ವೈರುಧ್ಯತೆಗಳನ್ನು ಗುರುತಿಸೋದಕ್ಕಿಂತ ಹೆಚ್ಚಾಗಿ, ನಮಗೇನಾಗಿತ್ತು ಅಂದ್ರೆ…. ನಮ್ಮೂರಿನಲ್ಲಿ ಒಂದು ದೊಡ್ಡ ಕಾನ್ಫರೆನ್ಸ್ ನಡಿಯುತ್ತೆ. ಅದಕ್ಕೆ ಸ್ವಯಂ ಸೇವಕರು ಬೇಕಿತ್ತು. ನಿಮಗೆ ಆಶ್ಚರ್ಯ ಆಗ್ಬಹ್ದು, ನಾವು ಅಡಿಗೆ ಪಾತ್ರೆಗಳನ್ನು ತಗೊಂಡೋಗಿ ಉಜ್ಜಿ, ತೊಳೆದು ತಂದುಕೊಡ್ತಾ ಇದ್ವಿ. ಆ ಸ್ವಯಂ ಸೇವಕರು ನಾವು. (ನಗು) ನಾವು ಎನ್ಜಾಯ್ ಮಾಡಿದ್ವಿ ಅದನ್ನ, ಇಡೀ ದಿನ ಅವರಿಗೆ ಬಡಿಸೋದು, ಓಡಾಡೋದು ಎಲ್ಲ. ಅವರಾಗ ಇನ್ನೂ ಆ ‘ವಾದಿ’ಗಳು ಹೀಗೆಲ್ಲಾ ಗುರ್ತಿಸಿ ಕೊಂಡಿರಲಿಲ್ಲ. ಚಂದ್ರಶೇಖರಯ್ಯ, ಹಿವಾಸ್ ಎ ಗಾಂಧಿವಾದೀ. ಅದನ್ನೇ ಅರ್ಥ ಮಾಡ್ಕೋಬೇಕು ನೀವದನ್ನ ಅವತ್ತು ಆಲ್ ಇಂಡಿಯಾ ಸ್ಪಿನ್ನರ್ಸ್ ಅಸೋಷಿಯೇಷನ್ ಅಂತಾ. ಅದ್ರಲ್ಲಿ ತಯಾರಾದವರು ಅವರೆಲ್ಲ. ನಮ್ಮ ತಂದೆ ಅದನ್ನು ಇಲ್ಲಿ ಸ್ಥಾಪನೆ ಮಾಡಿದವರು. ಆಮೇಲೇನಾಯ್ತು ಸಾವರ್ಕರ್ ಬಂದು ಹಿಂದೂ ಮಹಾಸಭಾದ ಕಾನ್ಫರೆನ್ಸ್ ಆದ್ಮೇಲೆ ಇದ್ದಕ್ಕಿದ್ದಂಗೆ ಇವರೆಲ್ಲ ಹಿಂದೂವಾದಿಗಳಾದರು. (ನಗು). ಏಕೆಂದ್ರೆ ದೇ ವಾಟೆಂಡ್ ದ ಪಬ್ಲಿಸಿಟಿ…. (ನಗು). ನಾವವಾಗ ಇನ್ನೂ ಚಿಕ್ಕವರಲ್ಲ, ನಾರಾಯಣ ಮಹಾರಾಜ ಅಂತ್ಹೇಳಿ ಅವ್ರು ಬಂದಿದ್ರು. ಅವ್ರು ಒಂದು ವಾರ ಪ್ರತಿನಿತ್ಯ ಸತ್ಯನಾರಾಯಣ ಪೂಜಾ ಮಾಡಿಸಿದ್ರು. ಅಲ್ಲಿ ನಾವು ಫಸ್ಟು ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದು, ಇನ್ ಫ್ಯಾಕ್ಟು ನಾನು ಬೆಂಗಳೂರಿಗೆ ಶಿಫ್ಟ್ ಆಗಿ ನನ್ನ ಎಜುಕೇಷನ್ ಮಾಡಿದ್ದು, ಅವತ್ತು ನನಗವರು ಕೊಟ್ಟರಲ್ಲ ಬಳುವಳಿ ಅದ್ರಲ್ಲಿ.