ನೀವು ಒಂದ್ಸಲ ಚೈನಾಕ್ಕ ಹೋಗಿದ್ರಲ್ಲ, ಅದರ ಹಿನ್ನೆಲೆ ಏನು?

ಇಂಡೋ ಚೀನಾ ಫ್ರೆಂಡ್‌ಶಿಪ್‌ ಅಸೋಷಿಯೇಷನ್‌ಗೆ ಹೋಗಿದ್ದೆ. ಚೈನದಾಗ ಒಂತಿಂಗಳಿದ್ದೆ. ಹೋಗಿ ನಾ ಎಲ್ಲ ಪುಸ್ತಕ ತಂದೆ.

ಯಾವಾಗ ಸಾರ್ಅದು?

೮೩ದಾಗ.

ಏನ್‌ಸ್ಟಡೀ ಮಾಡಿದ್ರಿ ಅಲ್ಲಿ?

ಅದೇ ಆ ಜನ್ರು ಹ್ಯಾಂಗಿರ್ತಾರ..ಅದೆಲ್ಲ.

ಆದರೆ ಅಲ್ಲಿಯ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಅಧ್ಯಯನ ಮಾಡಾಕ ಸಾಧ್ಯ ಆಯ್ತಾ?

ನೋಡಿದೆವು. ಆದ್ರೆ ಅವರು ಕೆಲ ಲಿಮಿಟೆಡ್‌ ಇದು ಇಡ್ತಾರ ಅವ್ರು. ಲೈಫ್‌ ಲಿಮಿಟೆಡ್‌ ಇದರೊಲಗೆ ಇಟ್ಟಾರ ಅವ್ರು. ಒಬ್ಬ ಮಜ್ದೂರ್‌ ಹಾನಂದ್ರ ಅವನಿಗೆ ಏನು ಲಿಮಿಟೆಡ್‌ ನೆಸೆಸಿಟೀಸ್‌ ಅದಾವ, ಅಷ್ಟು ಅವರು ಪೂರ್ತಿ ಮಾಡ್ತಾರು. ಅನ್‌ಲಿಮಿಟೆಡ್‌ ಇಲ್ಲ. ಅನ್‌ಲಿಮಿಟೆಡ್‌ ಹೋಗಿನ್ಮ್ಯಾಕ ಪ್ರಶ್ನೆ ಬರಾದಿಲ್ಲ.

ನೀವು ಯಾವುದಾದ್ರೂ ವರ್ಕಿಂಗ್ಸೆಕ್ಷನ್ನನ್ನು ಭೇಟಿ ಆದ್ರಾ?

ಹೋಗಿದ್ದೇವ್‌. ಪೇಸೆಂಟ್ರಿ ಸೆಕ್ಷನ್ನನ್ನು. ಟೀಗಾರ್ಡನ್‌ದಾಗ, ಕೆಲ್ಸ ಮಾಡೋರ್ನ ಹೋಗಿ ಭೆಟ್ಟಿ ಆಗಿದ್ದೇವ್‌. ಕೋಲ್ಡ್‌ ಮಂತ್‌. ಅಂದ್ರೆ ಅವರು ರಗ್ಗು, ಒಂದು ಹೊಚ್ಕೊಳ್ಳಾಕ, ಉನ್‌ಬಟ್ಟಿ, ಇಷ್ಟು ತಂದು ಕೊಡ್ತಾ ಇದ್ರು. ಕೆಲಸಗಾರರಿಗೆ ವರ್ಷಕ್ಕ ಬಟ್ಟೀತಂದು ಕೊಡ್ತಾರ. ಸರ್ಕಾರನಾ ಕೊಡ್ತದೆ. ಅಲ್ಲಿ ಬೆಗ್ಗರಿ ನೋಡ್ಲಿಲ್ಲ. ಯಾರೂ ಭಿಕ್ಷುಕ ಬರ್ಲಿಲ್ಲ. ಕರಪ್ಷನ್‌ ನೋಡಿಲ್ಲ.

ಹೈದ್ರಾಬಾದ್ನಿಂದ ಕಡೀಗೆ ಬಂದಿದ್ದು ಯಾವಾಗ ಸಾರ್‌?

ಬಿ.ಎ. ಮುಗಿಸ್ಕೊಂಡು ಬಂದೆ.

ಕಾಲೇಜ್ದಿನಗಳಲ್ಲಿ ಏನಾದ್ರೂ ಚಟುವಟಿಕೆ ಮಾಡಿದ್ರಾ?

ಅದೇ ಹೋಯ್ತಿವ್‌. ಆಕಡೆ ಈ ಕಡೆ ಎಲ್ಲೆಲ್ಲಿ ಮೂವ್‌ಮೆಂಟ್‌ ನಡೀತಾ ಇದ್ವು. ಅಲ್ಲಿ ಹೋಗ್ತಿದ್ದೆವ್‌. ಕಮ್ಯುನಿಸ್ಟ್‌ ಮೂವ್‌ಮೆಂಟ್‌ ಎಲ್ಲೆಲ್ಲಿ ನಡೀತಾ ಇದ್ವು ಅಲ್ಲೆಲ್ಲ ಹೋಗ್ತಾಯಿದ್ವು, ವಿಲೇಜ್‌ಗಳಿಗೆಲ್ಲ ಹೋಯ್ತಿದ್ವು. ಯೂನಿಟಿ ಇರ್ತಾ ಇತ್ತು.

ಅವರು ಪ್ರಮುಖ ಹೋರಾಟಗಳು ಏನಾದ್ರೂ ಮಾಡಿದ್ರಾ?

ನಾವೇನೂ ಹೋಗಿಲ್ಲ ಅಲ್ಲಿ. ಓರಂಗಲ್ಲು, ಥೋಡೆ ಇತ್ತು ಅಲ್ಲಿ. ಇಲ್ಲಿ ಮತ್ತೆ ಮೂವ್‌ಮೆಂಟ್‌ ಮಾಡೋದು ಅಲ್ಲಿ ಜನ, ಆಕ್ಯ್ಟಿವ್‌ ಆಗಿ ಇರ್ತಿದ್ರು. ಆರ್ಮ್‌ ಸ್ಟ್ರಗಲ್‌ ತಗೋಬೇಕು ಅಂತಿರು. ದೆವರ್ಕ್ಡ್‌ ಟು ಟೇಕ್‌ ಆರ್ಮ್‌ ಸ್ಟ್ರಗಲ್‌.

ನೀವು ಬೀದರ್ಗೆ ಬಂದ ತಕ್ಷಣ ಕೈಗೆತ್ತಿಕೊಂಡ ಚಟುವಟಿಕೆಗಳೇನು?

ಅನ್‌ಟಚಬಲಿಟೀ ಮೂಮೆಂಟ್‌ ಕೈಗೆತ್ತಿಕೊಂಡೆ. ದಿಸ್‌ ಈಸ್‌ ಟೂ ಮಚ್‌ ಅಂಡ್‌ ವೆರೀ ಸಿವಿಯರ್‌ ಹಿಯರ್‌. ಅದು ತಗೊಂಡು ಸ್ಟ್ರಗಲ್‌ ಮಾಡದೆವ್‌. ಹಳ್ಳಿಗಳಿಗೆ ಹೋಗಿದ್ವೀ ಕೆಲಸ ಮಾಡಿದೆವ್‌ ಇವತ್ತಿಗೂ ಅಸ್ಪೃಶ್ಯತಾ ಅದಾರೀ.

ಒಂದು ಮೂವ್‌ಮೆಂಟ್‌ ತಗೊಂಡು ಫ್ರಂ ಬೀದರ್‌ ಟು ಬೆಂಗಳೂರು ನಾ ಪಾದಯಾತ್ರೆ ಮಾಡ್ಡೆ. ಔರಾದ್‌ನಿಂದ ಒಂದು ಹಳ್ಳಿ ಅದ. ಆ ಹಳ್ಳಿಲಿಂದ ಶುರು ಮಾಡ್ದೆ, ೨೬ ಜನವರಿ ೧೯೮೩. ಮಾಡಿ ದೀಡ್‌ ತಿಂಗಳ ನಡ್ದೆ ನಾನು. ಒನ್‌ ಅಂಡ್‌ ಹಾಫ್‌ ಮಂತ್‌.

ಯಾವ ಬೇಡಿಕೆಯನ್ನ ಇಟ್ಕೊಂಡು?

ಅದಾ ನಾವು ವಿಷಮತ ಮುಕ್ತಿ ಆಂದೋಲನಕ್ಕ ನಾವು ಮೂಮೆಂಟ್‌ ಮಾಡಿದೆವ್‌. ಅನ್‌ ಈಕ್ವಾಲಿಟಿ ಇದೆ ಅದು ಹೋಗ್ಬೇಕು. ಅದು ತಗಂಡ್ಹೋಗಿ ಮೂಮೆಂಟ್‌ ಮಾಡಿ, ಹೆಗಡೆ ಗೌರ್ಮೆಂಟು ಇವ್ರೆಲ್ಲಾ ಸಿಂಧ್ಯಾ…ಎಲ್ಲಾ ಇದ್ರು. ಅವ್ರೆಲ್ಲ ಸರ್ಕಾರದಾಗ ಇದ್ರು, ನಮ್ಮ ಸ್ಟ್ರೆಂಥ್ ೧೫ ಜನ ಇದ್ದೇವ್. ಅಂದ್ರ ಹುಡುಗರಿಗೆ ತಗೊಂಡಿದ್ದೇವ್‌. ಅವರಿಗೆಲ್ಲ ತಗಂಡ್ಹೋಗಿ ಮೂಮೆಂಟ್‌ ಮಾಡಿ ಸ್ಲೋಗನ್‌ ಕೊಡ್ತಾ ಇದ್ದೇವ್‌. ಡೇಲಿ ನಾವು ೩೦ ಮೈಲಿ ನಡೀತಿದ್ದೇವ್ ಈ ಎಲ್ಲಾ ಕ್ಯಾಂಪ್‌ ಮಾಡ್ತಾ ಹೋಗಿದ್ದೇವ್‌. ಬೀದರ್‌ದಿಂದು ಹುಮ್ನಾಬಾದಕ್ಕ ಮಾಡಿದೆವ್‌, ಹುಮ್ನಾಬಾದ್‌ದಿಂದು ಗುಲ್ಬರ್ಗಕ್ಕ ಮಾಡಿದೆವ್‌, ಗುಲ್ಬರ್ಗದಾಗ ಇವ್ರೆಲ್ಲ ವೈಜನಾಥ ಪಾಟೀಲ ಇವ್ರೆಲ್ಲ ಸಭೆ ಮಾಡಿದೆವ್‌ ಅಲ್ಲಿ. ಸುರಪುರ, ಶಹಪುರ, ಹಂಗಾ ಮಾಡಿಕೋತ ಹೋಗಿದೇವ್‌. ಆ ಟೈಮ್‌ ನ್ಯಾಗ ನಂಗೆ ಭಾಳ ಅನುಭವ ಆತು. ಇದು ಯಾನದೆ ಟು ನೋ ದಿ ಕಂಟ್ರೀಯ ಯು ಮಸ್ಟ್‌ ಟೇಕ್‌ದ ಪಾದಯಾತ್ರ. ಸೋ ಆ ಇದ್ರಿಂದ ಇನ್‌ಫ್ಲೋಯೆನ್ಸ್‌ ಆಗಿದ್ದು ನಾವೆಲ್ಲ. ಎಲ್ಲಕ್ಕಿಂತ ಹೆಚ್ಗೆ ನಮ್ಗೆ ತ್ರಾಸಂದ್ರೆ ಬೆಂಗಳೂರಿಗೆ ಹೋಗಿದ್ಮ್ಯಾಕೆ ಆಯ್ತು.

ಅದ್ಹೆಂಗೆ?

ಅಲ್ಲಿ ನೀರು ಸಿಗಾದಿಲ್ಲ. ಯಾರೂ ನೀರು ಕೊಡಾದಿಲ್ಲ. ಎಲ್ಲೂ ನಳ್ಳೀಗೆ ಹೋಗಿ. ಸ್ನಾನ ಮಾಡ್ಕಂಬಾದು ಎಲ್ಲ ಆಯ್ತಲ್ಲ. ಇಲ್ಲಿ ಭೀ ಭಾರೀ ಇತ್ತು. ಸ್ನಾನ ಮಾಡ್ಕೋಂತಿದ್ವು, ಹೋಯ್ತಿದ್ವ್‌.ಈಗಲ್ಲಿ ಯಾರ್‌ ಕೊಡೋರ್‌, ಬೆಂಗ್ಳೂರ್ದು ಏರಿಯಾದಾಗ ಹೋಗಿಂದ್ಮ್ಯಾಕೆ ನೀರಿಂದು ತ್ರಾಸ್‌ ಬಂತು. ಹದಿನೈದು ಜನ್ರನ್ನೂ ಒಯ್ಯಾದು, ಮೈ ತೊಳ್ಸೋದು ಎಲ್ಲ ತ್ರಾಸಾಯ್ತು, ಮುಂದೆ ಸಿಟಿ ಮಾರ್ಕೆಟ್ ಬಲ್ಲಿ, ಥೋಡೆ ದಿವ್ಸ, ಬಸ್‌ಸ್ಟ್ಯಾಂಡ್‌ ಬಲ್ಲಿ ಥೋಡೆ ದಿವ್ಸ ಮುಕ್ಕಾಂ ಮಾಡಿದೆವ್‌.

ಮತ್ತೆ ಯಾವ್ಯಾದ ಬೇಡಿಕೆ ಇಟ್ಕೊಂಡಿದ್ರೀ ಸಾರ್ ಆಂದೋಲನಕ್ಕ?

ಡಿಮ್ಯಾಂಡ್ಸ್‌ ಇವೇ, ವಿಷಮತ ಮುಕ್ತಿ ಆಂದೋಲನ.ಈ ಯೂನಿಟಿ ಮಾಡ್ರೀ, ಸಮಾಜದಾಗ, ಶಿಕ್ಷಣದಾಗ ಏನದ ಫ್ರೀ ಶಿಕ್ಷಣ ಮಾಡ್ರೀ, ಜಮೀನು ಇದೆಲ್ಲ ಅಂದೆವು. ಖರೆ ಏನಾಗ್ಲಿಲ್ಲ. ಮತ್ತೊಂದದ ಈ ದೇಶದಾಗ ಎಲ್ಲ ನಾವ್‌ ಮಾತಾಡ್ತೇವ್‌ ಖರೆ ಭೂಮಿ ಹಂಚ್ಕಿದಾಗ ಬಂತು, ಭೂಮಿ ಹಂಚ್ಕಿ ಮಾಡ್ಲಿಲ್ಲ.

ಮುಖ್ಯ ಅಂದ್ರೆ ಭೂಮಿ ಹಂಚ್ಕಿ ಆಗ್ಬೇಕು ಅಂತೀರಾ?

ಆಗ್ಬೇಕು. ಮಾಡಲ್ಯಾರು. ಸುಮ್ಕೆ ಹೇಳ್ತಾರ, ಮಾತ್ಹೇಳ್ತಾರ. ಈ ಮೂವ್‌ಮೆಂಟ್‌ ಬಂತು, ಆ ಮೂವ್‌ಮೆಂಟ್‌ ಬಂತು, ರಿಫಾರ್ಮ್‌ ಮಾಡಿದೆವ್‌ ಅಂತಾ ಹೇಳ್ತಾರೆ. ಭೂಮಿ ಹಂಚ್ಚೋಡ್ಲಾಕ ಯಾರೂ ತಯಾರಿಲ್ಲ.

ಆಗ ಯಾರೇ ಒಬ್ರು ಹಿಡ್ಕೊಂಡಾಗ, ಸಾವಿರ ವರ್ಷ ಆದ್ರೂ ಅವರೇ ಕಬ್ಜೀದಾರ ಅದಿಕ್ಕೆ. ಎಲ್ಲಿ ಛೇಂಜ್‌ ಆಗುತ್ತೆ ಅಗಲ್ಲ. ಅದು ಆದ್ರೆ ಸುಧಾರಿಸ್ತೆ, ಇಲ್ದಿದ್ರೆ ಇಲ್ಲ.ಈಗ ಅಸ್ಪೃಶ್ಯತಾ ಏನ್‌ ಹೋಯ್ತೂ? ಏನ್‌ ಹೋಗಲ್ಲ. ಈಗ್ಲೂ ಅಸ್ಪೃಶ್ಯತಾ ಅದಾ. ಹಳ್ಳಿಗೆ ಹೋಗ್ರಿ ಇವರ ಓಣಿ ಬಾಜೂಕದ, ಅವರ ಓಣಿ ಬಾಜೂಕದ. ಇಲ್ಲಿ ಔರಾದ್‌ ತಾಲೂಕಿಂದು ನಾ ಮೂಮೆಂಟ್‌ ತಗೊಂಡ್ವಿ. ತಗೊಂಡಿ ಹಿಪ್ಪಳಗಾಂವ್‌ ಅಂತಾ ಊರದ. ಆ ಹಿಪ್ಪಳ ಗಾಂವ್‌ದು ಊರಾಗ ಎಲ್ಲ ಮಂದೀನೂ ಇದ್ರು. ಅಲ್ಲಿ ಹನುಮಾನ್‌ ಟೆಂಪಲ್ ಇತ್ತು. ಹನುಮಾನ್ ಟೆಂಪಲ್‌ ಮ್ಯಾಲೆ ನಾ ಏರಿ ಭಾಷಣ ಮಾಡಾದು, ಇದು ಮಾಡಾದು. ಅಲ್ಲಿ ಏನಾಯ್ತು ಆ ಊರಾಗ ಎಸ್ಸೀ ಮನ್ಪ್ಯಾಗ, ಒಬ್ಬ, ಹುಡ್ಗುಗಾ ನೌಕರಿ ಕೊಡ್ಸಿದ್ದೆ. ಅಂವ ಬಂದು ಕುಂತ ಪುನಃ ಅಲ್ಲಿ ಗೌಡ ಬಂದು ಆಬ್ಜೆಕ್ಷನ್‌ ಮಾಡ್ದ. ಅಂವ ಎಸ್ಸೀ ಮನ್ಪ್ಯಾ, ಅಂವ ಹೆಂಗ ಬಂದು ಕುಂತ ಅಂತ. ಟೆಂಪಲ್‌ ಮ್ಯಾಲೆ ಹೆಂಗ ಬಂದುಕುಂತ ಅಂತ ತಕಾರಾರು ಎತ್ತಿರು. ಇಂತಾವೆಲ್ಲ ಘಟನಾಗಳು ನಾ ನೋಡೀನಿ. ಇವತ್ತಿಗೂ ಅಲ್ಲಿ ಭಜನಿ ಮಾಡಾಂವ ಅವೆಲ್ಲ.

ಮುಂದೇನಾತ್ರಿ ಅದು?

ತಕರಾರೆತ್ತಿದ್ರು. ನಾಮುಂದುಕ್ಹೊಂಟೋದ್ವಿ, ಅಂವ ಬಿಟ್ಬಿಟ್ಟ. ಅಂವ ಬ್ಯಾಡ ಅಂದ ಬಿಟ್ಬಿಟ್ಟೆವು.

ನಿಮ್ಮ ಇಂಥ ಚುಟುವಟಿಕೆಗಳಿಗೆ ಹಳ್ಳೀ ಜನ ಹ್ಯಾಗೆ ಪ್ರತಿಕ್ರಿಯಿಸ್ತಿದ್ರು?

ಹಳ್ಳೀದಾಗ ಇವ್ರು ನಮ್ಮ ಲಿಂಗಾಯಿತ ಜನ ಎಷ್ಟು ಇರ್ತೀದ್ರು, ಅಷ್ಟು ಪ್ರೋಗೆಸ್ಸಿವ್‌ ಇರ್ತಾ ಇದ್ವು. ಅವ್ರು ಅಷ್ಟು ಜನ ಇದ್ದಿದ್ದಿಲ್ರೀ. ಆದ್ರೆ ಈ ಮರಾಠ ಜನ ಏನದಾರ, ಹೆಚ್ಗೀ ಕನ್ಸರ್‌ವೇಟಿವ್‌. ಲ್ಯಾಂಡೆಡ್‌ ಪೆಸೆಂಟ್ರೀ ಏನದ ಅವರ್ದು. ಅಷ್ಟು ಪ್ರೋಗ್ರೆಸ್ಸಿವ್‌ ಇಲ್ಲ. ಶಿಕ್ಷಣಾನೂ ಇಲ್ಲ, ಇದೂನ್ನೂ ಇಲ್ಲ, ಅವ್ರಿಗೆ, ಈ ನಮ್ಮ ಏರಿಯಾದಾಗ ಎಲ್ಡೂ ಪ್ರಕಾರದ ಹಳ್ಳಿಗಳು, ಮರಾಠರ ಹಳ್ಳಿಗಳ್ನೂ, ಲಿಂಗಾಯಿತರ ಹಳ್ಳಿಗಳ್ನೂ ಇದಾವು. ಎಲ್ಲಕ್ಕೂ ನಾವು ಇದನ್ಮಾಡ್ಕೊಂಡು ಹೋಯ್ತಿದ್ದೇವ್‌.

ಲಿಂಗಾಯಿತ್ರೂ ನಿಮಗೆ ವಿರೋಧ ಮಾಡ್ಲಿಲ್ಲ?

ಇಲ್ಲ, ಇಲ್ಲ. ಅವ್ರು ಲಿಂಗಾಯಿತ ಧರ್ಮದಾಗ ಇಷ್ಟೇ ಬಂದು ಕೂಡ್ಲಾಕ, ಮಾಡ್ಲಾಕ ಅದ. ಖರೆ, “ರೋಟಿ ಬೇಟಿ” ಎಲ್ಲಿ ಕೊಡ್ತಾರ. ಖರೇ ಇದು ಏನೂ ಇಲ್ಲ ಅಲ್ಲಿ. ಇದ್ದಿದ ಪರಸ್ಥಿತಿ ಹಂಗೇ ನಡ್ದದ ಅಲ್ಲಿ. ಶೇಕಡೋಂ ವರ್ಷದಿಂದ ಅದು ಹಂಗೇ ನಡ್ದದ. ಮನೀನೂ ಹಂಗೇ ನಡ್ದದ. ಯಾರೂ ಶ್ರೀಮಂತ ಅದಾನ, ಅವನು ಶ್ರೀಮಂತರಗಾ ಕೊಡ್ತಾನ. ಲಿಂಗಾಯಿತ ಮನ್ಷ್ಯಾ ಲಿಂಗಾಯಿತ್ರ ಮನ್ಷ್ಯಾಗ ಕೊಡ್ತಾನ. ಜಮೀನ್‌ ಯಾರ್ದದ ಅಲ್ಲೀನ ಕೊಡ್ತಾನ. ಇಲ್ದೇ ಹೋದ್ರೆ ಯಾವನೋ ನೆಂಟಸ್ತನ ಮಾಡ್ತಾರ, ಎಂಗೇಜ್‌ಮೆಟ್‌ ಮಾಡ್ತಾರ, ಯಾರಬಲ್ಲಿ ಎಷ್ಟು ಭೂಮಿ ಅದ ಅಂತ ಕೇಳ್ತಾರ, ಅಲ್ಲಿ ಕೊಡ್ತಾರ.

ಇಂಟರ್ಕ್ಯಾಸ್ಟ್ ನಿಂದ ವ್ಯವಸ್ಥೇನಾ ಬದಲಿಸಬಹುದು ಅನ್ನಿಸ್ತದ ನಿಮ್ಗ?

ಇಂಟರ್‌ಕ್ಯಾಸ್ಟ್ ಸಿಸ್ಟಂ ಇಟ್‌ ಈಸ್‌ ಸಲ್ಯೂಷನ್‌ ಖರೆ. ಎಷ್ಟು ಮಂದೀ ಕೊಡ್ತಾರ? ಎಲ್ಲಿ ಆಗ್ತದ ಇಂಟರ್‌ಕ್ಯಾಸ್ಟ್‌ ಮ್ಯಾರೇಜು. ಮಾಡ್ಬೇಕು ಖರೆ. ಆಗಲ್ಲ ಅದು. ಅದು ಆಗೇದಂದ್ರೂ ಈ ಭೂಮಿ ಯಾರ ಕೊಡ್ತಾರ? ಇವತ್ತು ಏನದ, ಬಿಹಾರ ಪ್ರಶ್ನೇಭೀ ಅದೇ ಅದ. ನಿಮ್ಮ ಆಂದ್ರಾ ಪ್ರಶ್ನೆಭೀ ಅದೇ ಅದ. ಜಮೀನ್‌ ಬಾಟೋ, ಅವ್ರು ಅದೇ ಅಂತಾರ. ಭೂಮಿ ಹಂಚ್ಕೇ ಆಗ್ಬೇಕು.

ಕಬ್ಬು ಬೆಳೆ ಹೋರಾಟ ಮಾಡಿದ್ರಲ್ಲ ಅದರ ಸ್ವಲ್ಪ ವಿವರ ಹೇಳ್ರೀ?

ಅದೂನೂ ಭಾಳಾ ಇದು ಅದ. ಒಂತಿಗ್ಳು ಜನ್ರು ಎಲ್ಲ ಜನ್ರು ಪ್ರತಿಯೊಬ್ರು ಇದು ಆಗ್ಬೇಕಂತಾರ, ಕಟಿಂಗ್‌ ಆರ್ಡರ್ದು ಭಾಳಾ ಪ್ರಾಬ್ಲಂ ಇತ್ತು ಆಗ. ಕಟಿಂಗ್‌ ಆಡ್ರು ಸಿಗ್ದೇ ಹೋದ್ರೆ ಅವನ ಕಬ್ಜೇ ಹೊಂಟೋಯ್ತಿತ್ತು. ಅವನ ಮನೀನೆ.

ಮುಖ್ಯ ಬೇಡಿಕೆ ಏನಾಗಿದ್ವು?

ಬೇಡಿಕೆ ಅಂತಂದ್ರೆ ಪೂರ್ಣ ಕಬ್ಬು ತಗೋಬೇಕು. ಫ್ಯಾಕ್ಟ್ರಿದವ್ರು. ಏನು ಭಾವ್‌ ಅದ… ದೋನ್‌ (ಎರಡು) ಹಜಾರ್‌ ರೂಪಾಯಿ ಟನ್‌, ಏನ್‌ ಭಾವ್‌ ಅದಾ ಫಿಕ್ಸ್‌ ಮಾಡ್ಬೇಕು. ಟ್ರಾನ್ಸ್‌ ಪೋರ್ಟ್‌ದಾಗ ಆಟೋಮೆಟಿಕ್‌ ಮೆಷಿನ್‌ ತಂದುಕೂಡ್ಸಿ ಅಂತಿದ್ದೇವ್‌. ಹಳೇ ಮಷಿನ್‌ ಕೂಡ್ಸಿ ಅದರ ಮೇಲೆ ತೂಕ ಮಾಡ್ತಿರು. ಅದ್ರಾಗ ಮನಸ್ಸಿಗೆ ಬಂದಂಗ ಒಬ್ರಿಗೆ ಹೆಚ್ಚಿಗೆ ಮಾಡೋರು, ಒಬ್ರಿಗೆ ಕಮ್ಮಿ ಮಾಡೋರು.

ಹೋರಾಟದ ಪರಿಣಾಮ ಏನಾತು?

ಹೋರಾಟದ ಪರಿಣಾಮ ಫ್ಯಾಕ್ಟರೀಗಳಾದ್ವು. ಜನ್ರಿಗೆ ಸುಖ ಆಯ್ತು. ಈಗೇನ್‌ ಕಷ್ಟಾ ನಿಂತಿಲ್ಲ. ಅದು ಕಬ್ಬಿಂದು ಕೂಡ ಪ್ರಾಬ್ಲಂ ಇತ್ತು. ಅದು ಪರಿಹಾರ ಮಾಡಿದೆವ್‌. ಈಗ ಕಬ್ಬಿಂದು ಅಂತ ಇಲ್ಲ. ಈಗ ಯಾನದೆ ಬೆಲೆ ಅದಕ್ಕೆ ಎಷ್ಟದೆ ತೇರಾಸೆ (೧೩೦೦) ಚೌರಾಸೆ (೧೪೦೦) ಪಂದ್ರಾಸೆ (೧೫೦೦) ಕೊಡ್ಲಿಕತ್ತಾರ. ಹಂಗಾ ಅವ್ರಿಗೆ ಭಾವ್‌ ಸಿಗ್ಬೇಕು.

ನಿಮ್ಗೆ ಕಾಗೋಡು ಸತ್ಯಾಗ್ರಹದ್ದು ಚೆನ್ನಾಗಿ ನೆನಪಿದೆಯಲ್ಲವಾ?

ಆಗಿದೆ ಖರೆ, ನಾ ಅವಾಗೇನು ಹೋಗಿಲ್ಲ. ಅವರು ಇನ್‌ವೈಟ್‌ ಮಾಡ್ಲಿಲ್ಲ. ನಾವೂ ಹೋಗ್ಲಿಲ್ಲ. ಇಲ್ಲೇ ಹೈದ್ರಾಬಾದ್‌ ಕರ್ನಾಟಕದಾಗೇ ಉಳಕೊಂಡ್ವಿ.

ಅದಾದ ನಂತರ ನೀವು ಸೀರಿಯಸ್ಸ್ಎಂಟ್ರೀ ತಗೊಂಡಿದ್ದು ಸಂಡೂರು ಹೋರಾಟಕ್ಕ, ಅದರ ಅನುಭವಗಳನ್ನು ಹೇಳ್ರಿ?

ಹಾಂ ಸಂಡೂರು ಹೋರಾಟಕ್ಕ. ಹಾಂ, ಸಂಡೂರಿಗೆ ನಾವು ಹೋಗಿದ್ದೇವ್‌. ಒಂದು ತಿಂಗಳೂ ಇದ್ದೇವು, ಹೋಯ್ತಾ, ಬರ್ತಾ ಇದ್ದೇವ್‌. ಗುಲ್ಬರ್ಗಾಕ್ಕೆ ಹೋಯ್ತಿದ್ದೆವ್‌. ಅಲ್ಲಿಂದ ಲಾರಿ ಹಿಡಿತಿದ್ದೇವ್‌. ಮುಂಜಾಲೆ ಮುಂಜಾಲೇನೆ ಅಲ್ಲಿ ಬಳ್ಳಾರಿಗೆ ಇಳೀತಿದ್ದೇವ್‌. ಅಲ್ಲಿಂದ ಬಸ್ಸಿಗೆ ಹೋಯ್ತಿದ್ದೇವ್‌. ನಾವು ೮, ೧೦ರತನ ಅಲ್ಲಿ ಹೋದಾಗ ಮೂಮೆಂಟ್‌ ಮಾಡಿ ಬರ್ತಿದ್ದೆವ್‌. ಇಷ್ಟು ಸ್ಟ್ರಗಲ್‌ ಮಾಡಿದೆವ್‌.

ಸಾರ್ ಅನುಭವ ಹೇಳ್ರೀನಿಮ್ಮ ನೆನಪ್ನ್ಯಾಗ ಇರಾದೆಲ್ಲ?

ಸಂಡೂರು ಮೂಮೆಂಟ್‌ ಘೋರ್ಪಡೆನಾ ವಿರುದ್ಧ ನಮ್ಮ ಸ್ಟ್ರಗಲ್‌ ಇತ್ತು. ಹಿ ವಾಸ್‌ ಎ ಜಮೀನ್ದಾರ್‌, ಇನಾಂದಾರ್‌, ಅಂಡ್‌ ಕಿಂಗ್ ಆಫ್‌ ದ ಏರಿಯಾ. ಸಂಡೂರು ಪೂರಾ ಅವನ ಆಸ್ತಿ ಇತ್ತು. ತಿಮ್ಮಪ್ಪ ಅಂತಾ ಇದ್ದ. ಅಂವ ಅವನಿಗೆ ವಿರುದ್ಧ ಇದ್ದ. ಅವನಿಗೆ ತಗೊಂಡು ನಾವು ಸ್ಟ್ರಗಲ್‌ ಮಾಡಿದೇವ್‌. ಸಂಡೂರ್ದು ಅಲ್ಲಿ ಕಾರ್ತಿಕ್‌ ಸ್ವಾಮಿ ದೇವಸ್ಥಾನ ಇತ್ತು. ಅಲ್ಲಿ ಹೋಯ್ತಾ ಬರ್ತಾ ಇದ್ದೇವ್‌. ಅಲ್ಲೆಲ್ಲ ಪೂರಾ ಅವನಿಗೆ ಪ್ರಾಪರ್ಟಿ ಇತ್ತು. ಅಲ್ಲಿ ನಾವು ಸ್ಟ್ರಗಲ್‌ ಮಾಡಿದೆವ್‌. ಅಲ್ಲಿ ಸತ್ಯಾಗ್ರಹ ಮಾಡಿದೆವ್‌. ಐ ವಾಸ್ ಫಸ್ಟ್‌ ಸತ್ಯಾಗ್ರಹಿ ಆಫ್‌ ಕಾರ್ತಿಕಸ್ವಾಮಿ ದೇವಸ್ಥಾನ. ನಾಲ್ಕು ಮೈಲಿ ನಡ್ಕೊಂಡು ಬಂದೇವ್‌. ಇಲ್ಲಿ ಸಂಡೂರು ಹತ್ರ ಅರೆಸ್ಟ್‌ ಮಾಡಿದ್ರು, ತಹಸೀಲ್‌ ಮುಂದೆ ಮಾಡಿ ಬಿಟ್ಟಿಟ್ರು. ಅದು ನಾನೇ ಮಾಡಿರೋದು ಪೈಲೆ. ಅಲ್ಲಿಂದ ಪುನಃ ಮಹೇಶ್ವರಪ್ಪ ಅವರು ಮಾಡಿದರು.

ಅವ್ರು ಸ್ಟೇಟ್ಪ್ರಸಿಡೆಂಟ್ಇದ್ರು ಅವಾಗ?

ಹಾಂ.

ನೀವು ಪಾರ್ಟಿಯೊಳಗೆ ಏನಾದ್ರೂ ಸ್ಥಾನ ತಗೊಂಡಿದ್ರಾ?

ಹಾಂ, ಇದ್ನೆಲ್ಲ, ನಾನು ಪಾರ್ಟಿ ಒಂದ್‌ ಮಾಡಿದೆವ್‌ ನಾವು. ಇದು ಸಮಾಜವಾದಿ ಪಾರ್ಟೀ…ಸೇರ್ಸಿ ಮಾಡ್ವೆಲ್ಲ. ಅವಾಗ ಸ್ಟೇಟ್‌ ಪ್ರಸಿಡೆಂಟ್‌ ಆಫ್‌ ದಿ ಪಾರ್ಟಿ. ಅವಾಗ ನಾ ಹೋಗಿದ್ಮ್ಯಾಕ ಕಾಗೋಡು ತಿಮ್ಮಪ್ಪ ನಂಜೋಡಿ ಮಾತಾಡ್ದ. ನೋಡಿ ಬೇಲೂರೆ ನೀವು ತಪ್‌ ಮಾಡ್ಲಾಕತ್ತೀರಿ. ಈ ಎಲ್ಲಾ ಪಕ್ಷಗಳಿಗೆ ಸಮಾಪ್ತಿ ಮಾಡಿ ಒಂಡು ಮಾಡ್ಲಾಕತ್ತೀರಿ. ತಪ್ಪು ಮಾಡ್ಲಾಕತ್ತೀರಿ. ಇದು ಆಗದಿಲ್ಲ ಅಂತಂದ. ಕರೆಕ್ಟ ಅಂದ ಅಂವ. ಆದ್ರೂ ಥೋಡೆ ದೇವೇಗೌಡ್ನಂತೋರು, ಹೆಗೆಡೆಯಂತೋರು ಚೀಫ್‌ ಮಿನಿಸ್ಟ್ರು ಆದ್ರು. ಒಂದ್ಮಾಡಿ, ಕೂಡ್ಸಿ, ಸಮಾಜವಾದಿ ಪಕ್ಷ, ಆ ಪಕ್ಷ ಈ ಪಕ್ಷ ಒಂದ್ಮಾಡಿ ಈವನ್‌ ಸಮಾಜವಾದಿ ಪಕ್ಷಾನೂ ಸಮಾಪ್ತಿ ಮಾಡಿ ಹಾಕಿ ಜನತಾಪಕ್ಷ ಮಾಡಿದೆವ್‌. ಅಲ್ಲಿಂದ ಜನತಾ ಪಕ್ಷ ಫಸ್ಟ್‌ ಮಾಡಿ ಪಾಟೀಲ್‌ನ ಅಧ್ಯಕ್ಷ ಮಾಡಿದೆವ್.

ನೀವೇನಾಗಿದ್ರಿ ಅದಕ್ಕ?

ನಾವೇ ನಿದ್ದಿಲ್ಲ. ಸೋಷಿಯಲ್‌ ಪಾರ್ಟಿಗೆ ಅಧ್ಯಕ್ಷ ಇದ್ದೆ. ಹಾಂ, ಜನತಾ ಪಕ್ಷ ಆಗಿಂದೆ ನನ್ನ ಸೆಕ್ರೆಟರಿ ಮಾಡಿತು. ಡಿಸಿಪ್ಲೇನರೀ ಎಕ್ಸಿಕ್ಯುಟಿವ್‌ ಕಮಿಟಿಗೆ ಚೇರಮನ್‌ ಮಾಡಿರು, ಮೀಟಿಂಗ್‌ನೂ ಆಯ್ತಿತ್ತು. ಪಂದ್ರ ದಿನಕ್ಕೆ, ಇಪ್ಪತ್ತು ದಿನಕ್ಕೆ. ಮುಂದೆ ಹೋಗಿ ಏನೂ ಆಗ್ಲಿಲ್ಲ. ಅದೇ ಮತ್ತೆ ಎಲ್ಲ ಪುನಃ ಒಂದೇ ಆದ್ರು. ಎಲ್ಲ ಕೆಳಗ ಮ್ಯಾಗ ಮಾಡಿ ಮುಗಿಸೇ ಬಿಟ್ರು.ನ

ನಂತರ ಹೆಗಡೆ ಮುಖ್ಯಮಂತ್ರಿ ಆದ್ರಲ್ಲ. ಅವರ ಬಗ್ಗೆ, ಆಡಳಿತದ ಬಗ್ಗೆ ಏನನ್ನಿಸ್ತದೆ ನಿಮಗೆ?

ಹೆಗಡೆ ಹಿ ವಾಸ್ ಪ್ಯೂರ್‌ ಮ್ಯಾನ್‌ ಅಂಡ್‌ ಹಿಸ್‌ ಅಡ್ಮಿನಿಸ್ಟ್ರೇಷನ್‌ ವಾಸ್ ಫ್ರೀ ಅಂಡ್‌ ಫ್ರ್ಯಾಂಕ್‌. ಮತ್ತು ಯಾವ ಪ್ರಕಾರ್ದು ಲಂಚ, ಗಿಂಚ ಅಂವ ಇಟ್ಟಿಲ್ಲ. ಕರೆಕ್ಟ ಇದ್ದ ಮನುಷ್ಯ. ಅವನ ಸುತ್ತ ಬ್ರಾಹ್ಮಣರು ಇದ್ರೂ ಎಲ್ಲಾ. ಎಲ್ಲ ಸೇರ್ಕೊಂಡು.

ಬಂಗಾರಪ್ಪರ ಆಡಳಿತದ ಬಗ್ಗೆ ಏನನ್ನಿಸ್ತದ ಅವ್ರೂ ಸೋಷಲಿಸ್ಟರಲ್ಲ?

ರೊಕ್ಕ ಮಾಡಾದು ಅದ್ರಿಂದ್ಲೆ ಹಾಳಾದ ಅಂವ. ಯಾವುದ್ನೋಡಿದ್ರೂ ರೊಕ್ಕದ್ದೇ ಮಾತು. ಅವನೇನೂ ಮಾಡ್ಲಿಲ್ಲ.

ಅವರು ಮಾಡಿದ ಅಕ್ಷಯ, ಆಶ್ರಯ ಯೋಜನೆಗಳು ಬಗ್ಗೆ ಏನೇಳ್ತೀರಿ?

ಮಾಡಿದ್ರು, ಜನರ ಬಗ್ಗೆ ಭಾಳಾ ಇದು ಇತ್ತು. ಅವರೇನು ಡೈನಾಮಿಕ್‌ ಛೇಂಜ್‌ ಮಾಡ್ಲಿಲ್ಲ. ಥೋಡೆ ಬಹುತ್‌ ಛೇಂಜ್‌ ಮಾಡ್ಯಾನಂದ್ರೆ ದೇವರಾಜ ಅರಸ್‌ ಮಾಡ್ಯಾನ.

ಗೋಪಾಲಗೌಡರ ಜೊತೆಗೆ ನಿಮ್ಮ ಸಂಪರ್ಕ ಇತ್ತಾ?

ಹಾಂ, ಇತ್ತು. ಒಂದ್ವರ್ಷ, ಎರಡ್ವರ್ಷ ಅಲ್ಲಿಂದ ಅವರ ಹೆಲ್ತು ಇದೂ ಆತು.

ಅವರೇನಾದ್ರೂ ಬಂದಿದ್ರಾ ಕಡೆಗೆ?

ಈ ಕಡೆ ಬಂದಿರ್ಲಿಲ್ಲ. ಟೂರ್‌ ಹಾಕ್ಕೊಂಡಿರು, ಒಂದ್ಸಲ ಏನೋ ಈ ಕಡೆ ಬಂದೀರು ಗುಲ್ಬರ್ಗಕ್ಕ.

ನಂಜುಂಡ ಸ್ವಾಮಿ ಅವ್ರೂ ಸೋಷಲಿಸ್ಟಾ ಇದ್ರಲ್ಲ. ಅವ್ರು ರಾಜ್ಯ ರೈತ ಸಂಘ ಕಟ್ಟಿದ್ರಲ್ಲ ಅದರ ಬಗ್ಗೆ ಏನ್ಹೇಳ್ತೀರಿ?

ಹಾಂ, ಇದ್ದೆ. ನಾ ಅವರ ಸಂಘದಾಗ ಮೂಮೆಂಟ್‌ ಮಾಡಿದೆವು ಇಲ್ಲಿ. ಆದ್ರ ಅದು ಏನರಾ ಎಲೈಟು. ಕಾಮನ್‌ ಮನುಷ್ಯಾರಾಗ ಹೋಗಿಲ್ಲ ಅವ್ರು. ಓನ್ಲೀ ಎಜುಕೇಟೆಡ್‌ ಪೀಪಲ್‌ ಹಿಡಿದ್ರು. ಆ ಹುಡುಗರಿಗೆ ತಗೊಂಡ್ರು. ಅದೇ ಅಲ್ಲಿ ಮೂಮೆಂಟ್‌ ಮಾಡ್ತಿದ್ರು. ಕಾಮನ್‌ ಮನುಷ್ಯಾಬಲ್ಲಿ ಇದು ಆಗಿಲ್ಲ.

ಆದ್ರವರು ಶ್ರೀಮಂತ ರೈತನೇ, ಅವನೂ ಕಷ್ಟದಲ್ಲಿದ್ದಾನೆ ಅಂತಿದ್ರು?

ಎಷ್ಟೊಂದು ಬಡ ರೈತರ್ದು ಭೂಮಿ ತಿಂದು ಹಾಕ್ಯಾರ ಅವರು, ಶ್ರೀಮಂತ ರೈತರು…ಖರೇ…ತೆಲಂಗಾಣ, ಶ್ರೀ ಕಾಕುಳಂ ಇವಕ್ಕೆ ಪೊಲಿಟಿಕಲ್‌ ಟೋನ್‌ ಇತ್ತದಕ್ಕೆ. ಪೊಲಿಟಿಕಲ್‌ ಟೋನ್‌ ಇಲ್ದೇ ಯಾವುದೇ ಮೂವ್‌ಮೆಂಟ್‌ಗೆ ಸ್ಟ್ರೆಂತ್‌ ಬರಾದೇ ಇಲ್ಲ.

ನಿಮ್ಮ ನ್ಯಾಷನಲ್ ಲೀಡರ್ಸ್ಜೊತೆಗೆ ನಿಮಗೆ ಸಂಪರ್ಕ ಇತ್ತಾ?

ಹಾಂ, ಎಲ್ಲರ ಜೊತೆಗೆ.

ಯಾರ ಜೊತೆಗೆ?

ನ್ಯಾಷನಲ್‌ ಲೀಡರ್ಸ್‌ ಅಂದ್ರೆ ಮೊದ್ಲು ಜಾರ್ಜ್‌ ಫರ್ನಾಂಡೀಸ್‌ ಜೊತಿಗೆ ಇತ್ತು. ಭಾಳಾ ಗೊತ್ತ ಹಿಡೀತಾರ ನನಗೆ. ಇಲ್ಲಿ ಬಂದ ಮ್ಯಾಗ ಕೇಳ್ತಾನ. ಓಥೇ ವಕೀಲ್‌, ಓ ಕಹಾಂ ಹೈ (ಆ ವಕೀಲ್ರು ಇದ್ದರಲ್ಲ, ಅವರೆಲ್ಲ ಇದ್ದಾರೆ) ಅಂತಾನ.

ಫರ್ನಾಂಡೀಸ್ ಕೇಂದ್ರದ ಮಂತ್ರಿ ಆಗಿದ್ರಲ್ಲ?

ಹಾಂ, ಆದ್ರು ಆದ್ರು, ಬಿ.ಜೆ.ಪಿ ಸಂಗಟ ಹೋದ್ರು, ನಾ ವಿರೋಧ ಇದ್ದೆ. ಬಿ.ಜೆ.ಪಿ ಹೋಗೋಣಿದ್ದಿಲ್ಲ. ವಿರೋಧ ಮಾಡ್ದೆ.

ಅವ್ರೂ ಬಿ.ಜೆ.ಪಿ. ಗೇನೂ ಹೋಗ್ಲಿಲ್ಲ. ತಮ್ಮ ಪಕ್ಷದಾಗ ಇದ್ದು ಹೊಂದಾಣಿಕೆ ಮಾಡ್ಕಂಡ್ರು?

ಹೊಂದಾಣಿಕೆ ದೃಷ್ಟಿಯಿಂದ ನಮ್ದು, ಅವರ್ದೂ ಭಾಳಾ ಇದು ಆಯ್ತು. ನಾನು ಪುನಃ ಅವರ ಕಡೆ ಹೋಗಿಲ್ಲ.

ಒಂದು ಕಾಲಕ್ಕೆ ಕಾಂಗ್ರೆಸ್ತುರ್ತು ಪರಿಸ್ಥಿತಿ ಹೇರಿದ ಪಕ್ಷ ಅದನ್ನು ಸೋಲಿಸಲಿಕ್ಕಾಗಿ ಬಿ.ಜೆ.ಪಿ ಕಡೆ ಹೋದ್ರೆ ತಪ್ಪೇನಿಲ್ಲ ಅಂತ ಅವರ ವಾದ?

ಯಾನ್ಮಾಡಿದ್ರೂ ಯಾನ್‌ ತಪ್ಪೇ, ನೀವು ನಿಮಗ ಬೇಕಾದ್ರೆ ಯಾನರ ನೆವ ಹೇಳ್ಬಹ್ದು. ಶಾಸ್ತ್ರ ಹೇಳ್ಬಹ್ದು, ಒಂದು ವಿಷ ಅದು.ಅದ ಬೆಳಿಸ್ರು ಅಂದ್ರೆ ವಿಷಾನೇ ಬೆಳೀತದ. ಎನ್‌.ಡಿ.ಎ. ಪಾಯಿಸನ್‌ ಅದಾ. ನೀವು ಪಾಯಿಸನ್‌ ಬೆಳೆಸಿದ್ರೀ. ವಿಷ ವೃಕ್ಷ. ಅದ್ನೇಸೇ ನಾವ್‌ ಇದು ಮಾಡಿದೆವ್‌.

ಹಾಗಂತ ಏನಾದ್ರೂ ನಿಮ್ಮ ಅಭಿಪ್ರಾಯ ತಿಳಿಸಿದಿರಾ ಫರ್ನಾಂಡೀಸ್ರಿಗೆ?

ಹೇಳಿದ್ನಲ್ಲ. ಒರಿಸ್ಸಾದೊಳಗ, ಭುವನೇಶ್ವರದಾಗ ಹೇಳಿದೆ ನಾ. ಆಲ್‌ ಇಂಡಿಯಾ ಕಾನ್ಪರೆನ್ಸು ಇತ್ತಲ್ಲ ನಮ್ದು. ಅಲ್ಲಿ. ವಿ.ಪಿ.ಸಿಂಗ್‌ ಇದ್ರು. ವಿ.ಪಿ.ಸಿಂಗ್‌ ಹೇಳಿದ್ದು ಕೇಳಿದೇವ್. “ಬಿಲ್ಡಿಂಗ್‌ ಮೆ ರಹನೇವಾಲೇ ಘರ್‌ ನಹೀ ಬನಾಸಕ್ತೀ, ಗರೀಬಿನಹೀ ಹಟಾಸಕ್ತೆ”. ದೊಡ್ಡ ದೊಡ್ಡ ಬಿಲ್ಡಿಂಗ್ನ್ಯಾಗ ಇರೋರು ಗರೀಬರಿಗೆ ಮನಿ ಕಟ್ಟಾಕ ಆಗಲ್ಲ. “ಕಾರ್ ಮೆ ಫಿರ್‌ನೇ ವಾಲೇ ಗರೀಬೀಕೋ ಹಟಾ ನಹೀ ಸಕ್ತೇ” ಅಂದ್ರು. ಈಗ ಕರೆಕ್ಟ್‌ ಅದು. ಸುರೇಂದ್ರ ಮೋಹನ ಅದಾನ ಐಡಿಯಾಲಜಿಕಲ್‌ಗೆ. ಸುರೇಂದ್ರ ಮೋಹನ ಭಾಳಾ ಬರೀತಾನ. ಅವರದು ಇಲ್ಲೇ (ಹೈದರಾಬಾದ್‌) ಇರ್ತಾನ. ರೂಂ. ನಂ. ಪಂದ್ರಾ (೧೫)ದಾಗ, ಮೀಟ್‌ ಮಾಡ್ರೀ ಅಂತಾನ.

ಹೋಗಿ ಬರ್ತಿರ್ತೀರೇನು?

ಹಾಂ, ಈಗ್ಲೂ ಅಲ್ಲೇ ಇರ್ತಾನ. ನಮ್ಮ ಪಾರ್ಟೀದು, ವಿಮರ್ಶೆ ಬರೀತಾನ, ಕೇಳ್ತಾನ ಬೇಲೂರೆ ಸಾಬ್‌ ಕೈಸೆ ಹೈ, ಕ್ಯಾ ಚಲ್‌ ರಹಾ ಹೈ, ಕ್ಯಾ ನಹೀ.

ಇವತ್ತಿನ ಪರಿಸ್ಥಿತಿ ನೋಡಿದ್ರೆ ಏನ್ಅನ್ನಿಸತೈತಿ ನಿಮಗ, ಸಮಾಜವಾದಿ ಚಳವಳೀನಾ ಕಟ್ಟಿದ್ರೀ, ಬೆಳೆಸಿದ್ರೀಈಗಿಂದು ಏನನ್ನಿಸ್ತೈತಿ?

ಏನೈತಿ, ಬಡುವ್ರೆಲ್ಲ ಸತ್ತು ಹೋಯ್ತಾರ. ಅವರು ಶ್ರೀಮಂತ ಆಯ್ತಾರ. ಎಲ್ಲ ಶ್ರೀಮಂತ ಆಗಿ ಕಾರ್ದಾಗ ಕುಂತು ತಿರುಗ್ತಾರ. ಅವ್ರು ಮುಂದ ಹೋಯ್ತಾರ, ಬಡವರ್‌ ಮಂದೀ ಕೂಲಿ ಮಜ್ದೂರಿ ಮಾಡ್ತಾ ಹೊಯ್ತಾರ ಏನಿಲ್ಲ. ಅವ್ರು ರೊಕ್ಕ ಬಿಟ್ಟು ಮಾತೇ ಆಡಲ್ಲ ಹಂಗದೆ.

ಅಲ್ಲ, ಮುಂದೇ ಒಳ್ಳೇ ದಿನಗಳು ಬರಬಹ್ದಾ?

ಒಳ್ಳೆ ದಿನ ಅಂದ್ರೆ ಯಾರ್ಬಲ್ಲೀ ರೊಕ್ಕ ಅದಾವು ಅವರಿಗೆ ಬರ್ತಾವು. ನಮ್ಗ ನಿಮ್ಗೆ ಬರಲ್ಲ. ಒಳ್ಳೇ ದಿನ ರೊಕ್ಕ ಇದ್ದವರಿಗೆ ಅಷ್ಟೇ. ರೊಕ್ಕ ಇದ್ದವರಿಗೆ ಕರೀತಾನ, ದೇವಬರ್ಲೀ ಯಾರ ಬರ್ಲೀ. ರೊಕ್ಕ ಇದ್ದವ್ರಿಗೇ ಕರೀತಾನ ಆ ಪೂಜಾರೀನೂ. ನಮ್ಮ ದಲಿತ ಕಾರ್ಯಕರ್ತ ನಿದಾನ ಅಂವ ದಲಿತನಾಗೇ ಉಳ್ದಾನ.

ದಲಿತರ ಬಗ್ಗೆ ನೀವು ಏನಾದ್ರೂ ಹೋರಾಟ, ಸತ್ಯಾಗ್ರಹ ಮಾಡಿದ್ರಾ?

ಹಾಂ, ಮೂಮೆಂಟ್ ಮಾಡಿದೆವ್‌, ಸತ್ಯಾಗ್ರಹ ಮಾಡಿದೆವ್‌. ಅಸ್ಪೃಶ್ಯತಾ ನಿವಾರಣಾ… ಮಾಡಿದೇವ್‌, ಮಾಡಿಲ್ಲಂತಲ್ಲ. ಪ್ರಿನ್ಸಿಪಾಲ್‌ ಮಾಡೀವ್‌ ನಾವ್‌… ಸಿಂಧ್ಯಾ ಅಂತ ಇದಾರ.

ಜಾತಿ ವ್ಯವಸ್ಥೇಲಿ ನೀವೂ ಒಂದು ಜಾತಿಯನ್ನು ಪ್ರತಿನಿಧಿಸ್ತೀರಿ?

ಈಗ ನಿಮಗೆ ಒಂದು ಮಾತೇಳ್ಲೀ. ನಾ ಜಾತೀದು ವಿರುದ್ಧ ಇದ್ದ ಮನುಷ್ಯಾ. ಆದ್ರೂ ಲಿಂಗಾಯಿತ ಅಂತಾ ಗುರ್ತಿಸ್ತಾರ. ಲಿಂಗಾಯಿತನ್ನೂ ಅಂಬಲ್ಲ. ಅಂಬೋರು ಅಂಬ್ತಾರ, ನಂಗೆ ಬ್ರಾಹ್ಮ ಣಾನೂ ಅಂಬಲ್ಲ. ಯಾರೂನೂ ನಂಬಲ್ಲ. ಬೇಕಾರ್‌ ಮನುಷ್ಯಾ ಅಂತ.

ನೀವು ಲಿಂಗಾಯಿತ ಧರ್ಮದ ಒಳಗೇ ಸಂಘರ್ಷ ಮಾಡೋ ಸಂದರ್ಭ ಏನಾದ್ರೂ ಬಂತಾ?

ಸಂಘರ್ಷ ಮಾಡೋದೇನದ. ಅದರ ಪೂಜೆ ಮಾಡಲ್ಲ, ಅವರಿಗೆ ದಕ್ಷಿಣ ಕೊಡಲ್ಲ, ಅವರ ಸಂಗಟ ಹೋಗಲ್ಲ. ಈಬತ್ತಿ ಹಚ್ಚಲ್ಲ, ಲಿಂಗ ಪೂಜೆ ಮಾಡಲ್ಲ. ಯಾತಕ್ಕ ವಿಶ್ವಾಸ ಮಾಡ್ತಾರು. ಲಿಂಗ ಕಟ್ಕೊಂಡು, ಪೌಡ್ರು ನೆತ್ತೀ ಮ್ಯಾಲ ಹಾಕ್ಕೊಂಡು ಪೂಜೆ ಮಾಡಿದ್ರೆ ಲಿಂಗಾಯಿತ. ಇಲ್ದಿದ್ರೆ ಯಾವ ಲಿಂಗಾಯಿತ. ನಂದು ಅದ್ರಾಗ ಎಂತಾನೂ ವಿಶ್ವಾಸ ಇಲ್ಲ.

ಏನೈತಿ ಎಲ್ಲನೂ ಈ ಪ್ರಕಾರ ಆಗ್ಯದೆ. ಹ್ಯಾಂಗ ಜನ ಬರ್ತಾರ…ನಮ್ಮ ಸಂಗಟ. ರೊಕ್ಕ ಇದ್ರೆ ಬರ್ತಾವು. ರೊಕ್ಕ ಇರ್ಬೇಕಾದ್ರೆ…ಶುರು ಮಾಡ್ಬೇಕಾಯ್ತದೆ. ಪ್ರಾಕ್ಟಿಕಲ್‌ ಲೈಫೇ ಬದ್ಲಿ ಅದೆ. ಅಂವ ಲೆನಿನ್‌ ಅಂತಾ, “ಥೇರಿ ಈಸ್‌ ಗ್ರೀನ್ ಬಟ್‌ ಎವರ್‌ಗ್ರೀನ್‌ ಈಸ್‌ ಲೈಫ್‌” ಜೀವ್‌ನ್ಕಾ ಏನ್ಮಾಡ್ದ ಅದೇ ಖರೆ. ಅದ್ರೊಳಗೆ ಎಲ್ಲ ಬರ್ತದೆ. ನಾವ್‌ ಥೇರಿ ಆಡ್ತೇವ್‌, ಶಾಸ್ತ್ರ ಹೇಳ್ತೇವ್‌, ಎಲ್ಲ ಹೇಳ್ತೇವ್‌. ಖರೇ ಅದಾ, ಮುಂದ. ನಡಕ್ಲ ಏನ್‌ ವ್ಯವಸ್ಥೆ ಅದಾ ಅದೇನು ಉಪಯೋಗವಿಲ್ಲ.

ಶಿಕ್ಷಣ ಸಂಸ್ಥೆ ಚಾಲು ಮಾಡ್ಬೇಕು ಅಂತ ಯಾಕನ್ನಿಸ್ತು ನಿಮಗ?

ಯಾಕಂದ್ರ ಯಾರಿಗೂ ಎಜುಕೇಶನ್‌ ಇದ್ದಿಲ್ಲ. ಜನ್ರನ್ನ ಎಜುಕೇಟ್‌ ಮಾಡ್ಬೇಕಂತ ಮಾಡಿವ್‌.

ಅಂದ್ರೆ ಸಮಾಜ ಸೇವಾ?

ಹಾಂ, ಸಮಾಜ ಸೇವಾ ಆಗ್ಲಿ ಅಂತ ಮಾಡೇವ್‌. ಭಾಳ ಇತ್ತು. ಜನ್ರಿಗೆ ಜಾಗೃತಿ ಮಾಡ್ಬೇಕು, ಎಲ್ಲಾ ಇತ್ತು. ಆ ದೃಷ್ಟಿಯಿಂದ ಮಾಡಿದೇವ್. ಆದ್ರೆ ಮುಂದ ಹೋಗಿ ಅಲ್ಲೀನೂ ಅಲ್ಲಿನೂ ನಮ್ಮ ಎಂ.ಎಲ್‌.ಸಿ. ಇದ್ರು ಔರಾದ್‌ಕ ಅವರಿಗೆ ಸ್ಕೂಲ್‌ ತಗದುಕೊಟ್ಟೆ. ಪುಂಡಲೀಕರಾವ್‌. ಈ ಥರದ ಬಾಳಾ ಮಾಡೇವ್‌.

ಮೆಡಿಕಲ್‌, ಎಂಜಿನಿಯರಿಂಗ್ಸಿಕ್ರೆ ಮಾಡ್ರೀರ?

ಹಾಂ ಮಾಡ್ತೇವ್‌. ಬೊಮ್ಮಾಯಿ ಮೊದ್ಲೇ ಯಾಕೆ ಕೇಳಿಲ್ರೀ, ಈಗ ಕೇಳ್ತೀರಿ ಅಂತಂದ್ರು. ಮೊದ್ಲೇನೆ ಒಮ್ಮೆಗೆ ನಾವ್‌ ಬೆಳ್ಸಿ ದೊಡ್ಡದಕ್ಕ ಹೋಗ್ಬೇಕು ಅಂತಂದೆವು.

ನೀವು ಮೆಡಿಕಲ್‌, ಇಂಜಿನಿಯರಿಂಗ್ ಮಾಡಿದ್ರೆ ಬಡ ಮಕ್ಕಳಿಗೆ ಸೀಟೇ ಸಿಗಲಾರದಂತಹ ಪರಿಸ್ಥಿತಿ ಐತಲ್ಲ. ಮ್ಯಾನೆಜ್ಮೆಂಟ್ಅಂತಂದ್ರೆ ಲಕ್ಷಾಂತರ ರೂ. ತಗಂಡು, ಶೋಷಣಾ ಮಾಡ್ಲೇಬೇಕು ಅನ್ನುವಂತ ಪರಿಸ್ಥಿತಿ ಅದ. ನಿಮ್ಮ ಸಂಸ್ಥೆ ಕೂಡ ಹಾಗೇ ಆಗ್ತದೆ ನಾಳೆ”?

ಆಗೇ ಆಗೆದ. ಹಂಗೇ ಆಗ್ಯದ.

ಅವರು ಯಾರೋ ಬಂದಿ, ೫ ಲಕ್ಷ ೬ ಲಕ್ಷ ತಗೊಂಡು ಬೇರೆಯವರಿಗೆ ಕೊಡ್ತಾರ.

ಹಂಗಾಗಿದೆ ಅನ್ನೋ ಕಾರಣಕ್ಕೆ ನೀವು ಹೊರಗ ಬಂದ್ರೇನು?

ಹಾಂ. ಅದೇ ಇವರು ನಮಗೆ ರೊಕ್ಕ ತಿಂದ್ಲೊಡಲ್ಲ. ಇದು ಮಾಡಲ್ಲ ಅಂತಾ ಇದು ಮಾಡಿದು.

ಸಂಸ್ಥಾ ಕಟ್ಟಿದವರು ನೀವಾ ಅಲ್ಲೇನು?

ಕಟ್ಟಿದೇವ್‌, ಜಾಗ ತಗೊಂಡೇವ್‌, ಬಿಲ್ಡಿಂಗ್‌ ತಗೊಂಡೇವ್‌, ಎಲ್ಲಾ ಮಾಡಿದೇವ್‌. ಮುಂದೆ ಮುಂದೆ ಹೋಗಿ ಅವರು ನಮಿಗೆ ಇದು ಮಾಡಿರು.

ನಿಮ್ಮಂತವರು ಥೇರಿಗೆ ಬದ್ಧರಾಗಿ ಐಡಿಯಲ್ಆಗಿ ಉಳಿದುಬಿಡ್ತೀರಿ. ಹೊಂದಾಣಿಕೆ ಮಾಡ್ಕಂಡು, ಅಧಿಕಾರ ತಗಂಡು ಆಮ್ಯಾಲೆ ವ್ಯವಸ್ಥಾ ಬದಲಿಸಬಹುದು ಅಂತಾ ಅನ್ನಿಸಲ್ಲೇನು ನಿಮಗ?

ಆಗಲ್ಲ ಅದು. ಆಗಲ್ಲ ಆಗಲ್ಲ. ನೀವು ಹೇಳಕ್ಹೋದ್ರೆ ನೀನೇ ಮಾಡಿದೆಲ್ಲ ಅಂತಾರ. ಅವರೆಲ್ಲ ಬಂದು ಕೂಡ್ತಾರ. ಹಿಂಗೆಲ್ಲಾ ಇದು ಮಾಡಿದಿ, ಎಲ್ಲಾ ಕೊಡು ಅಂತಾರ. ನೀನೇ ಮಾಡಿದಿಈ, ಯಾ ನಮಗೆ ಕೊಡಲ್ಲ ಅಂತಾರ. ನಾವು ಒಂದು ತಪ್ಪು ಮಾಡಿದ್ಮ್ಯಾನಕೆ ಎಲ್ಲ ಮಾಡೇ ಬೇಕಾಯ್ತದೆ. ಈಗ ನಮ್ದು ಥೇರಿ ಅದೇ.

ಸಾರ್‌, ನಾನು ಕಂಡ್ಕಂಡಂಗೆ ನಿಮ್ಮಂತವರು ಸಮಾಜವಾದಿ ಪಾರ್ಟಿಯಲ್ಲಿ ಅಲ್ಲಲ್ಲಿ ವ್ಯಕ್ತಿಗಳಾಗಿ ಉಳಿದ್ರೀ. ಪಾರ್ಟೀ ಡೆವಲಪ್ಆಗ್ಲಿಲ್ಲ, ಯಾಕಿಂಗಾತು?

ಹಾಂ, ನಾವೂ ಭೀ ಪವರ್‌ ತಗಂಡಿಲ್ಲ.

ಪವರ್ನೂ ತಗಳ್ಳಿಲ್ಲ. ಸೆಕೆಂಡ್ಲೈನ್ಲೀಡರ್ಶಿಪ್ನೂ ಬರ್ಲಿಲ್ಲ. ಯಾಕ ಹಿಂಗಾತು. ಇಂಡ್ಯುವಿಶುಲ್ಆಗಿ ನಾನು ಸಮಾಜವಾದಿ ಪಾರ್ಟಿ ಅಂತಾ ಉಳ್ಕಂಡೀರಿ. ಆದ್ರ ಪಾರ್ಟಿ ಕಟ್ಟಿ ಬೆಳಸ್ಬೇಕು ಅಂತಾ ಯಾಕ ಅಂದ್ಕೊಳ್ಳಿಲ್ಲ?

ಏನ್‌, ಚುನಾವ್‌ ಬರ್ತಿದ್ವು, ಅದ್ರಿಂದ ಎಲ್ಲಾ ಹಾಳಾಗೋಯ್ತು. ಅಲ್ಲಿಂದು..ರೊಕ್ಕ ಬರ್ತಿತ್ತು. ಅದ್ರೊಳಗ ನಾವು ಚುನಾವ್‌ ಕಂಟೆಸ್ಟ್‌ ಮಾಡ್ಲಿಕ್ಕೆ ಹೋಗಿ ಥೋಡೆ ಖರ್ಚನ್ನು ಮಾಡ್ಕೋತಿದ್ದೇವ್‌. ಈಗ ಚುನಾವ್‌ ಅಂದ್ರ ಏನದ ಜಾತಿವಾದಿ ಆಗ್ಯದ. ಲಿಂಗಾಯಿತ್‌ ಜನ ಲಿಂಗಾಯಿತನಿಗೆ ಓಟ್‌ ಕೊಡ್ರೀ ಮತ್ತೊಬ್ಬ ಮರಾಠನ, ಮರಾಠ ಜನ ಅವನಿಗೆ ಓಟ್‌ ಕೊಡ್ರೀ…ಅವನು ಮತ್ತೊಬ್ಬ ಎಸ್‌.ಸಿ. ಅನ, ಅವನಿಗೆ ಓಟ್‌ ಕೊಡ್ರೀ ಇದೇ ಚುನಾವ್‌ ಅದ. ಚುನಾವ್‌ದಾಗ ಥೇರಿ, ಐಡಿಯಾಲಜಿ, ತತ್ವ ಇದೇನಿಲ್ಲ. ಆದ್ರಿಂದ್ಲೇ ಹಾಳಾಯ್ತು ನಮ್ದು ಎಲ್ಲ.

ಹಂಗಂದ್ರೇ….ಚುನಾವಣಾ ವ್ಯವಸ್ಥೆನೇ ಬದಲಾಗಬೇಕು ಅನಿಸೋದಿಲ್ಲೇನು?

ಚುನಾವ್‌ ವ್ಯವಸ್ಥೆ ಬದ್ಲೀ ಮಾಡ್ರೀ ಅಂತಾ ನಾವಂತೀವಿ. ಈ ಸಿಸ್ಟಂ ಏನದೆ, ವ್ಯಕ್ತಿ ಹೆಸರು ಕೊಟ್ಟೇಕೇಸೆ ಚುನಾವ್‌ ಆಗ್ಬಾರ್ದು. ಆ ಪಕ್ಷಕ್ಕೆ ಓಟ್‌ ಕೊಡ್ರೀ ಹಂಗಾಗ್ಬೇಕು.

ನೀವ್ವಿಧಾನ ಸಭಾ ಎಲೆಕ್ಷನ್ಗೆ ನಿಂತಿದ್ರಲ್ಲ ಸ್ವಲ್ಪ ಅದರ ಬಗ್ಗೆ ಹೇಳ್ತೀರಾ?

ಮೊದಲನೇ ಸಲ ನಿಂತಿದ್ದು ಯಾವಾಗಾ?

ಸೆವೆಂಟಿ ಏಟ್‌ದಾಗ. ಆಫ್ಟರ್‌ ಎಮರ್ಜೆನ್ಸಿ.

ಆವಾಗ ಯಾಕ ಸೋತಿರಿ ನೀವು?

ರೊಕ್ಕದ್ದಾ. ಫಂಡ್‌ ಕಡ್ಮೀ, ಎಲ್ಲ ರೊಕ್ಕ ಅಂತಾ ಬರೋರು. ಯಾರಿಗೆಂತ, ಕೋಡೋನು ರೊಕ್ಕ ಇಲ್ಲದ್ಬಳಿಕ.

ನಿಮ್ಮ ಪಾರ್ಟಿ ಪರಿಸ್ಥಿತಿ ಎಲ್ಲಾ ಹೆಂಗಿತ್ತು?

ಸಮಾಜವಾದಿ ಪಕ್ಷದಿಂದ ಟಿಕೇಟ್‌ ಕೊಟ್ಟೀರು. ಮಾಡಿದೆವ್‌, ಇನ್ನು ಎರಡ್ಡಿನ ಅದೆ ಅಂದಾಗ ಪಚ್ಚೀಸ್‌ ಹಜಾರ್‌ (೨೫ ಸಾವಿರ) ರೂಪಾಯಿ ಕೊಟ್ರು. ಯಾರೂ… ನಮ್ಮ ವೆಂಕಟರಾಮ್‌ ಅಂತಾ ಇದ್ರು. ಎಸ್‌.ಎನ್‌.ಜೋಷಿ ಅಂತಾ ಇದ್ದ, ಅಂವ.

ನೀವು ಎಲೆಕ್ಷನ್ಗೆ ನಿಂತು ಗೆಲ್ಲುವಷ್ಟು ಪಾರ್ಟಿ ಬಲವಾಗಿತ್ತಾ ಬೀದರ್ನಲ್ಲಿ?

ಅಷ್ಟು ಭೀ ಎಲ್ಲಿ ಅದೆ. ಯಾರು ಸಮಾಜವಾದಿ ಇದು ಮಾಡ್ಕೊಂಡ್ರು. ಲಿಂಗಾಯಿತ ಅಂದ್ರೆ ನಮ್ಮ ವಿರುದ್ಧ ನಿಂತ ಲಿಂಗಾಯಿತ್ರು ಸ್ಟ್ರಾಂಗ್‌ ಇದ್ರು ಜನ. ಲಿಂಗಾಯಿತ್ರು ಅವನಿಗ್ಯಾಕೆ ಓಟ್‌ ಕೊಡ್ಬೇಕು. ಇವನಿಗ್ಯಾಕೆ ಕೊಡಬಾರ್ದು ಅಂಬ ಜನಾನೆ ಇತ್ತು.

ಲಿಂಗಾಯಿತ ಅಂತಾ ನೋಡಿದ್ರು?

ಹಾಂ,

ಅವ್ರು ಯಾವ ಪಕ್ಷದವ್ರು, ಗೆದ್ದವರು?

ಕಾಂಗ್ರೆಸ್‌ದಾಗ ಇದ್ದ.

ನೀವು ಗೆಲ್ಲೋವಷ್ಟು ಪಾರ್ಟಿಯನ್ನು ಕಟ್ಟೋಕೆ ಯಾಕೆ ಆಗ್ಲಿಲ್ಲ ಅಂತಾ. ಅದೇ ನನ್ನ ಮುಖ್ಯ ಪ್ರಶ್ನೆ?

ಕಾರ್ಯತರ್ಕರು ತಯಾರಿಗ್ಲಿಲ್ಲ. ನಾವು ಬೆಳ್ಸೀನೂ ಅವರು ತಯಾರಾಗ್ಲಿಲ್ಲ. ಈ ಪ್ರಕಾರ ಆಗಿನೂ ಆಯ್ತು. ಈಗ ಸುಗರ್‌ ಫ್ಯಾಕ್ಟ್ರೀ ಚುನಾವ್‌ ಬಂತು… ಅವರಿಗೇ ನೋಡಿ ಓಟು ಕೊಡೋರು.

ಫಸ್ಟ್ಟೈಂ ಎಷ್ಟು ಓಟ್ತಗೊಂಡ್ರಿ ಸಾರ್ನೀವು?

ಏನೋ ಒಂದು ಹಜಾರ್‌, ದೀಡ್‌ ಹಜಾರ್‌ ಓಟ್‌ದಲ್ಲಿ ಸೋತೀನಿ.

ಬಹುಶಃ ಒಳ್ಳೇ ಕಾರ್ಯಕರ್ತರಿದ್ದಿದ್ರರೆ ಗೆಲ್ತಿದ್ರೇನೋ?

ಇರ್ಬಹ್ದು. ಅವ್ರು ಪ್ರತಿಯೊಂದು ಓಟಿಗೂ ಎಲ್ಡೆಲ್ಡು ನೂರು ರೂಪಾಯಿ ಕೊಟ್ಟು ಖರೀದಿ ಮಾಡ್ಯಾರ. ಕಾಂಗ್ರೆಸ್‌ದು ರೊಕ್ಕ ಬಂತು.

ನಿಮಿಗೆ ಪಾರ್ಟಿ ಫಂಡ್ಬರ್ಲಿಲ್ಲ?

ಆಗ್ಲೆ ಹೇಳಿದ್ನೆಲ್ಲ. ಪಂಚೀಸ್‌ ಹಜಾರ್ (೨೫ ಸಾವಿರ) ರೂಪಾಯಿ ಕೊಟ್ರು. ಅದು ಎಲ್ಲರಿಗೆ ಹಜಾರ್‌ ಬೇಕು, ಪಾಂಸೆ (೫೦೦) ಬೇಕು, ಚಾರಸೇ (೪೦೦) ಬೇಕಂತ ಬೂತ್‌ಬಲ್ಲಿ ಒಯ್ತಾ ಇದ್ರು.

ಎರಡನೇ ಸಾರಿ ನಿಂತಾಗೆಷ್ಟು ಓಟ್ತಗೊಂಡ್ರೀ?

ಆವಾಗ ಭಾಳಾ ಕಡಿಮೀ ಬಿದ್ವು. ಔರಾದಕ್ನ ಹೋಗಿನಿಂತೆ. ಎಲ್ಲೀ ನಿಂತ್ರೂ ಮಿನಿಸ್ಟ್ರೇ ಬರ್ಬೇಕು..ಅಲ್ಲಿ ಅಕ್ಕಿನೇ ಕೊಟ್ಟ, ಊಟ ಮಾಡಿ ಓಟ್‌ ಕೊಡ್ತಾರ, ಹಿಂಗಾಯ್ತು.

ಸರ್‌. ದೇಶದಾಗ ಕಮ್ಯುನಿಸ್ಟ್ಪಕ್ಷಗಳು ಕೆಲ್ಸ ಮಾಡ್ತಿರೋದು ಹೆಂಗನಿಸ್ತದ?

ಅನ್ನಿಸೆ. ಭಾಳ ಮಾಡ್ಯಾರ ಅವರು. ನೇಪಾಳದಾಗ ಏನಾಯ್ತು. ಅವರು ಮಾಡಿದಂತೆ ನೇಪಾಳ ಛೇಂಜ್‌ ಆಯ್ತು. ಮಾಡ್ಯಾರ. ಈ ಕಡಿ ಕೇರಳದಾಗ ಮಾಡಿರು. ಬೇರೆ ಬೇರೆ ಕಡಿ ಮಾಡ್ಯಾರ, ಮಾಡಿಲ್ಲಂತಿಲ್ಲ. ಬಿ.ಎಸ್‌.ಪಿ.ಯವರಿದ್ದಾರೆ.ಈಕಿ ಮಾಯಾವತಿ ಮಾಡ್ಲಕ್ಕತ್ಯಾಳ. ಹೆಣ್ಮಗ್ಳು ಇದ್ದಾಳ ಅವಳು.

ಏನನ್ನಿಸ್ತೈತಿ ನಿಮಗೆ ಮಾಯಾವತಿ ಧೋರಣೆ?

ಮಾಯಾವತಿ ಸ್ಟ್ಯಾಂಡ್‌ ಕರೆಕ್ಟ್‌ ಅದ. ಖರೇ ಆಕಿ ಫೈಟ್ ಕೂಡ್ಲಿಕ್ಕತ್ತಾಳ.

ಸಂದರ್ಭ ಬಂದ್ರೆ ಬಿ.ಜೆ.ಪಿ. ಜೊತೀಗೆ ಹೋಗೋಣಾ ಅನ್ಲಿಕ್ಕತ್ಯಾರಲ್ಲ?

ಹೋಗ್ಯಾಳಲ್ಲ. ಆಗೇ ಆಕಿ ಹಾಳಾಗಾದು. ಅಷ್ಟು ತಾಳಲಾಕ ಶಕ್ತಿ ಇರಲ್ಲ ಅವರ ಬಲ್ಲಿ.

ಅದು ತಪ್ಪು ಅಂತೀರಿ ನೀವು?

ಹಾಂ, ಹೋಗಿದ್‌ ತಪ್ಪು, ಹೋಗದಂಗ್‌ ಇದ್ದಿದ್ರೆ ಆಕೀದು ಇಮೇಜ್‌ ಜನರದೊಳಗ ಸ್ಟ್ರಾಂಗ್‌ ಇರ್ತಿತ್ತು. ವೀಕ್‌ ಆತು.

ಸಾರ್‌, ಜಾಗತೀಕರಣದ ಬಗ್ಗೆ ಏನಂತೀರಿ?

ಭಾಳಾ ಪರಿಣಾಮ ಆಗಿದೆ. ಅದ್ರಿಂದು. ಮಂದೀದು ಎಕಾನಮಿ ಮೇಲೇನೂ ಭಾಳಾ ಪರಿಣಾಮ ಆಗ್ತದೆ. ಸ್ಮಾಲ್‌ ಹೋಲ್ಡರ್‌, ಸ್ಮಾಲ್‌ ಬ್ಯುಸಿನೆಸ್‌ ಮ್ಯಾನ್‌, ಇವ್ರೆಲ್ಲಕ್ಕೂನೂ ಒಂದೇ ಇದ್ರೊಳಗ ನಡ್ಡದ.

ಅದಕ್ಕೇನು ಮಾಡ್ಬೇಕು ಹೊರಾಗ ಬರಾಮ, ಹೋರಾಟ ಮಾಡಾದು?

ಈಗದು ಮಾಡ್ಬೇಕಂದ್ರ ಏನೂ ಇಲ್ಲ. ಎಲ್ಲ ಬುಷ್‌ ಕೈದಾಗ ಹೊಕ್ಕಂಬಿಟ್ಟದ. ಎಲ್ಲರೂ ಬುಷ್‌ ಅಂತಾರ. ಆ ಬುಷ್‌ ಹೆಂಗಂತಾನ ಹಂಗ ಕೇಳ್ತಾರ. ಹೊರಗ್ಬರ್ಬೇಕಾದ್ರೆ ಪುನಃ ಮತ್ತೊಂದು ಇದು ಕಟ್ಬೇಕು.

ಏನು?

ಸ್ಟ್ರಗಲ್‌ ಮಾಡ್ಬೇಕು.

ನೀವಂದುಕೊಂಡಂಗೆ ಸಮಾಜದ ಬದಲಾವಣೆಗೆ, ಜಾಗತೀಕರಣ ವಿರುದ್ಧ ಎಲ್ಲಾ ಯಾವ ತತ್ವದಾಗ ಹೋರಾಟ ಸಾಧ್ಯ ಅಂತೀರಿ?

ಸಮಾಜವಾದ, ಕಮ್ಯುನಿಸ್ಟರು, ನಕ್ಸಲೈಟರು, ದಲಿತವಾದ, ಇವೆಲ್ಲ ಅದಾವು ಇವ್ರು ದಲಿತ, ಸಮಾಜವಾದಿಗಳೆಲ್ಲ ಒಂದೇ ಲೈನ್‌ ಮ್ಯಾಲೆ ಇದಾರ. ಸ್ವಲ್ಪ.ಎಲ್ಲರ ಉದ್ದೇಶ ಒಂದೇ ಅದ ಸೋಷಲಿಸ್ಟರದು, ಮಾರ್ಕ್ಸ್ ವಾದಿಗಳದ್ದು. ಆದ್ರೆ ಬಿ.ಜೆ.ಪಿ. ಅಂತಾ ಹೋದ್ರೆ ಆಗಲ್ಲ. ಎಲ್ಲಾರೂ ಕೂಡಿ ಸ್ಟ್ರಗಲ್‌ ಮಾಡ್ಬೇಕು.