ಅಮ್ಮೆಂಬಳ ಆನಂದ ಅವರೊಂದಿಗೆ ಚರ್ಚೆಗೆ ಕೂತರೆ ಗೆಳೆಯನೊಬ್ಬನ ಜೊತೆ ಮಾತಿಗೆ ಕೂತಂತೆ, ಹರೆಯದ ದಿನಗಳನ್ನು ಪಕ್ಷದ ಕಛೇರಿ ಕಾರ್ಯದರ್ಶಿಯಾಗಿ ಹುಬ್ಬಳ್ಳಿಯಲ್ಲಿ ಕಳೆದು, ಸೈದ್ಧಾಂತಿಕ ತೀವ್ರತೆಯ ಕಾಲಕ್ಕೆ ವಿಧವಾ ಯುವತಿಯನ್ನು ಮದುವೆಯಾಗಿ ತುಂಬು ಸಂಸಾರ ನಡೆಸಿ, ವೃದ್ಧಾಪ್ಯದ ದಿನಗಳಲ್ಲೂ ಆನಂದದ ಬಾಳ್ವೆ ಸಾಗಿಸುತ್ತಿರುವ ಆನಂದ ಅವರು ಹಸನ್ಮುಖಿ, ಖಚಿತಮತಿ, ತತ್ವನಿಷ್ಠ ಸಮಾಜವಾದಿ.

ದಿನಕರ ದೇಸಾಯಿಯವರ ರೈತ ಚಳವಳಿಯನ್ನು ಅದರ ಭಾಗವಾಗಿದ್ದೇ ಅದನ್ನು ‘ಒಂಟಿ ಕಂಬದ ಡೇರೆ’ ಎಂಬ ರೂಪಕದಲ್ಲಿ ವಿಮರ್ಶಿಸುವ ಆನಂದ ಅವರು ತಾವು ದೇಸಾಯಿಯವರ ಕೈಯ ಬುಗುರಿಯಂತಿದ್ದೆ ಎಂದು ಸ್ವಮಿಮರ್ಶೆಯನ್ನೂ ಮಾಡಿಕೊಳ್ಳುತ್ತಾರೆ. ಕರ್ನಾಟಕದ ಸಮಾಜವಾದಿ ಚಳವಳಿಯ ಆರಂಭದಿಂದ ಈವರೆಗಿನ ಎಲ್ಲ ಘಟನೆ ವಿದ್ಯಮಾನಗಳನ್ನು ಅವಲೋಕಿಸುತ್ತಾರೆ. ಸಮಾಜದ ಕಣ್ಣೋಟದಲ್ಲೇ ಮಾವೋವಾದವನ್ನೂ ಗಮನಿಸಿ ಹಳೆರಕ್ತ ಹೋದರೆ ಹೊಸ ರಕ್ತ ಬರುತ್ತದೆ ಎಂಬ ಸೈದ್ಧಾಂತಿಕ ಅಂಚನ್ನು ತಲುಪಿ ಬಿಡುತ್ತಾರೆ.

ಅಮ್ಮೆಂಬಳ ಆನಂದ ಬರುತ್ತದೆ ಎಂಬ ಸೈದ್ಧಾಂತಿಕ ೧೯೨೭ರಂದು, ಬಂಟ್ವಾಳದ ಕುಲಾಲ/ಕುಂಬಾರ ಸಮುದಾಯದ, ರೈತ ಕುಟುಂಬದಲ್ಲಿ. ಗೆಳೆಯ ಜಾರ್ಜ್‌ ಫರ್ನಾಂಡೀಸ್ ಜೊತೆ ಪ್ರಾಥಮಿಕ ಶಿಕ್ಷಣ ಮುಗಿಸಿ, ೧೯೪೬ರಲ್ಲಿ ಎಸ್‌.ಎಸ್‌.ಎಲ್‌.ಸಿ. ಪೂರ್ಣಗೊಳ್ಳುತ್ತಲೇ ಸಮಾಜವಾದಿ ಚಳವಳಿ ಪ್ರವೇಶಿಸಿದರು. ಹುಬ್ಬಳ್ಳಿಯ ಕಾಂಗ್ರೆಸ್ ಸೋಷಲಿಸ್ಟ್ ಪಾರ್ಟಿಯ ಪಕ್ಷದ ಕಛೇರಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಗಾಂಧೀ ಕೊಲೆಯಾದಾಗ ಶಾಂತಿ ರಕ್ಷಣೆಗೆಂದು ಸ್ವಯಂ ಸೇವಕರಾಗಿ ಓಡಾಡಿದರು. ಹುಬ್ಬಳ್ಳಿಯದ್ದು ಕಾರ್ಮಿಕರನ್ನೂ ಸಂಘಟಿಸಿದರು.

೧೯೫೨ರಲ್ಲಿ ಮಂಗಳೂರಿನ ‘ನವಯುಗ’ ಪತ್ರಿಕೆಯ ಉಪಸಂಪಾದಕರಾಗಿ ಅನುಭವಗಳಿಸಿ, ೧೯೫೫ರಲ್ಲಿ ದಿನಕರ ದೇಸಾಯಿಯವರ ಮಾರ್ಗದರ್ಶನದಲ್ಲಿ ‘ಜನಸೇವಕ’ ಆರಂಭಿಸಿ ಸಂಪಾದಕಾಗಿ ೧೭ ವರ್ಷ ನಿರಂತರವಾಗಿ ಪತ್ರಿಕೆ ನಡೆಸಿದರು. ಅಂಕೋಲದಲ್ಲಿ ದೀರ್ಘಕಾಲವಿದ್ದು ರೈತ ಹೋರಾಟಗಳಲ್ಲೂ ತೊಡಗಿಸಿಕೊಂಡರು. ೧೯೫೦ರಲ್ಲಿ ಸಮಾಜವಾದಿ ಯುವಜನ ಸಭಾವನ್ನು ಸಂಘಟಿಸಿದ್ದ ಆನಂದ, ಅವರು ನಂತರದಲ್ಲಿ ‘ಕೆನರಾ ವೆಲ್‌ಫೇರ್ ಟ್ರಸ್ಟ್’ನ ಭಾಗವಾದರು.

೧೯೭೨ರಲ್ಲಿ ‘ಜನಸೇವಕ’ ಸ್ಥಗಿತಗೊಳ್ಳುತ್ತಲೆ, ಅಂಕೋಲೆಯ ಗೊಖಲೆ ಸೆಂಟಿನರಿ ಕಾಲೇಜಿನಲ್ಲಿ ನೌಕರಿ ಸೇರಿ, ೮೨ರಲ್ಲಿ ನಿವೃತ್ತರಾದರು. ಅಂಕೋಲ ಕರ್ನಾಟಕ ಸಂಘ, ಪರಿಸರ ಕೂಟ, ಮಧ್ಯಪಾನ ವಿರೋಧಿ ಚಳವಳಿಗಳಲ್ಲಿ ಸಾಕ್ಷರತಾ ಆಂದೋಲನಗಳ ಮೂಲಕ ಸಾಮೂಹಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾದರು. ೧೯೮೩-೮೫ರ ಅವಧಿಗೆ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದರು. ದಾಮೋದರ ಚಿತ್ತಾಲ ಹಾಗೂ ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನಗಳ ಅಧ್ಯಕ್ಷ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.

ಕರ್ನಾಟಕ ಪತ್ರಿಕಾ ಅಕಾಡೆಮಿಯಿಂದ ೧೯೮೭ರಲ್ಲಿ ಪ್ರಶಸ್ತಿ ಪಡೆದ ಆನಂದರು ೧೯೯೪ರಲ್ಲಿ ಖಾದ್ರಿ ಶಾಮಣ್ಣ ಪ್ರಶಸ್ತಿಯನ್ನೂ ಪಡೆದರು. ತಮ್ಮ ಜೀವಿತಾವಧಿಯ ಸುದೀರ್ಘಕಾಲ ಅಂಕೋಲದಲ್ಲಿ ಕಳೆದ ಅಮ್ಮೇಂಬಳ ಆನಂದ, ೨೦೦೩ರಿಂದ ಮಣಿಪಾಲದಲ್ಲಿ ತಮ್ಮ ಮಗಳ ಮನೆಯಲ್ಲಿ ಪತ್ನಿ-ಮೊಮ್ಮಕ್ಕಳೊಂದಿಗೆ ಚೆಂದದ ಜೀವನ ನಡೆಸುತ್ತಿದ್ದಾರೆ.

*

ನಿಮ್ಮ ಗೆಳೆಯ-ಸಹಪಾಠಿ ಜಾರ್ಜ್ ಫರ್ನಾಂಡೀಸ್ ಎನ್.ಡಿ.ಎ. ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ರು. ನಿಮಗೆಲ್ಲಾ ಏನ್ ಅನ್ಸಿತ್ತು ಆವಾಗ?

ನಮಗೆಲ್ಲಾ ಒಂಥರಾ ಹೇಸಿಗೆ ಆಗಿತ್ತು. ಈಗಲೂ ಇದೆ ಹೇಸಿಗೆ. ಆ ದೃಷ್ಟಿಯಲ್ಲಿ ನಮಗೆ ತಿರಸ್ಕಾರ ಅಳಿಯೋದಿಲ್ಲ. ನಾವು ಬೆಳೆದ ರೀತಿಯೇ ಹಾಗೆ.

ಸ್ವಾತಂತ್ರ್ಯ ಚಳವಳಿಯಲ್ಲಿ ನೀವು ಭಾಗವಹಿಸಲು ನಿಮಗೆ ಪ್ರೇರಣೆ ದೊರೆತದ್ದು ಎಲ್ಲಿಂದ?

ನಮ್ಮ ಮೇಲೆ ಹೆಚ್ಚು ಪ್ರೇರಣೆ ಬೀರಿದ್ದು ಆಗಿನ ರಾಷ್ಟ್ರ ಸೇವಾದಳ. ಆರ್.ಎಸ್.ಡಿ. ಅದರ ನಾಯಕರೆಲ್ಲಾ ಮಹಾರಾಷ್ಟ್ರದವ್ರು. ಎಸ್‌.ಎಂ. ಜೋಷಿ, ಮೃಣಾಲ್ ಗೋರೆ, ಇಂಥವರೆಲ್ಲಾ. ಸಾಮಾನ್ಯವಾಗಿ ನಮ್ಮ ಲೀಡರ್ಸ್ ಏನಿದ್ದಾರೆ ಅವರು ಸೇವಾದಳ ಮೂವ್‌ಮೆಂಟಿನಿಂದ ಬಂದೋರು. ಸಾನೆ ಗುರೂಜಿಯವರ ಹೆಚ್ಚು ಪ್ರಭಾವ ಅವರಿಗೆ. ವಿಧಾಯಕ ಚಟುವಟಿಕೆಗಳನ್ನು ಮಾಡಬೇಕು, ಅನ್ನೋದು. ಹಳ್ಳಿಗಳಿಗೆ ಹೋಗಿ ಕೆಲಸ ಮಾಡಬೇಕು ಅಂತಾ ಸಾನೆ ಗುರೂಜಿ ಹೇಳ್ತಿದ್ರು. ಸಾನೆ ಗುರೂಜಿ ಅವರ ಪ್ರಭಾವ ನಮಗೆ ಹೆಚ್ಚು. ಸೇವಾದಳ ಸುಮ್ಮೆ ಸೇವಾದಳ ಅಲ್ಲ. ಬರೀ ಕವಾಯತು ಮಾಡೋದಲ್ಲ. ಮೊದ್ಲು ಒಂದು ತಿಂಗಳು ಟ್ರೈನಿಂಗ್ ಕೊಡ್ತಿದ್ರು. ಹಾಗೆ ಟ್ರೈನಿಂಗ್‌ ಪಡೆದವರ ಪೈಕಿ ನಾನೂ ಒಬ್ಬ. ಆ ಒಂದು ತಿಂಗಳಲ್ಲಿ ಬೌದ್ಧಿಕವಾಗಿ ಬಹಳಷ್ಟು ವಿಚಾರಗಳು ಅಲ್ಲಿ ಬರ್ತಿದ್ವು.

ಯಾವ ಯಾವ ವಿಚಾರಗಳನ್ನು ಅಲ್ಲಿ ಚರ್ಚಿಸಲಾಗ್ತಿತ್ತು?

ಎಲ್ಲ ಬರ್ತಿದ್ವು. ನ್ಯಾಷನಲ್ ಮೂವ್‌ಮೆಂಟ್‌ನಿಂದ ಲೆಫ್ಟಿಸ್ಟ್ ಮೂವ್‌ಮೆಂಟ್‌ವರೆಗೂ ಬರ್ತಿದ್ವು. ಲೆಫ್ಟಿಸ್ಟು ಲೇಟೆಸ್ಟ್ ಅಕ್ವೆಂಟ್‌ ಅದು. ಅವಾಗ ಫ್ರೀಡಂ ಫೈಟ್‌ ನಡೀತಿತ್ತಲ್ಲ. ಪ್ರೀ ಇಂಡಿಪೆಂಡೆನ್ಸ್ ನಾನು ಹೇಳ್ತಿರೋದು. ಅವಾಗ ನಾವೆಲ್ಲ ಸೇವಾದಳ. ಒಂದು ಹಂತದಲ್ಲಿ ನಮಗೊಬ್ಬ ಒಳ್ಳೆ ಸ್ನೇಹಿತ ಗೋಪಾಲ ಕೃಷ್ಣ ಅಂತ. ಬ್ರಿಲಿಯಂಟ್‌ ಸ್ಟುಡೆಂಟ್‌ ಅವಾಗ ಅವ್ರು. ಪ್ರಿನ್ಸಿಪಾಲ್‌ ಆಗಿ ರಿಟೈರ್‌ ಆದ್ರು. ನಾನು ಬ್ರಿಲಿಯಂಟ್‌ ಅಲ್ಲ. ಥರ್ಡ್‌ರ್ಯಂಕ್‌ ನಂದು. ಅವರೇ ನಮಗೆ ಹೆಚ್ಚು. ಅವರು ನಮಗೆ ಒತ್ತಾಯ ಮಾಡಿ ಆರೆಸ್ಸೆಸ್‌ಗೆ ಕರ್ಕೊಂಡು ಹೋದ್ರು. ಒಂದುವಾರ, ಹದಿನೈದು ದಿವಸ ನೋಡೋಣ ಅಂತಾ ಇದ್ದೆ. ಇಪ್ಪತ್ತು ದಿನಗಳ ನಂತರ ನಮಗೆ ತಿರಸ್ಕಾರ ಶುರು ಆಯ್ತು. ಅದೊಂದು ಥರಾ ಮೊನಾಟನಿ ಅನ್ನಿಸ್ತು. ಬರೇ ‘ಹಿಂದೂ’…. ಹಾಗೇ… ಅಂತ. ಕುದುರೆ ಕಣ್ಣಿಗೆ ಕಟ್ತಾರಲ್ಲ, ಹಾಗೆ. ಆಗ ಗೋಪಾಲ ಕೃಷ್ಣಗೆ ಹೇಳಿದ್ವಿ. ನಾವು ಬರೋದಿಲ್ಲ ಅಂತ. ಹಾಗೆ ನಾವು ಹೊರಗೆ ಬಂದೋರು. ಈ ವಿಚಾರಗಳು ನಮಗೆ ಒಗ್ಗೋದಿಲ್ಲ ಅಂತ. ಆಮೇಲೆ ಆರೆಸ್ಸೆಸ್‌ ಮತ್ತು ಆರ್.ಎಸ್‌.ಡಿ ರೈವಲರಿ ಪೋರ್ಸ್‌ಗಳು ಆದವು ಪ್ರಬಲವಾದ ಪೋರ್ಸ್‌ಗಳು.

ಆರ್‌.ಎಸ್‌.ಎಸ್‌. ಮತ್ತು ಆರ್‌.ಎಸ್‌.ಡಿ ಗಳ ನಡುವೆ ರೈವಲರಿ ತೀವ್ರವಾದ ವರ್ಷ ಯಾವುದು?

೧೯೪೫ – ೪೬ ನಾವವಾಗ ಎಸ್‌.ಎಸ್‌.ಎಲ್‌.ಸಿ. ಆರ್.ಎಸ್‌.ಡಿ. ನಲ್ಲಿ ದ್ದೋರೆಲ್ಲ ಗ್ರ್ಯಾಜುವೆಲಿ ಸೋಷಲಿಸ್ಟ್‌ ಆದ್ರು. ಕಾಂಗ್ರೆಸ್‌ ಸೋಷಲಿಸ್ಟ್‌ ಪಾರ್ಟಿ, ೧೯೩೪ರಲ್ಲಿ ಸ್ಥಾಪನೆ ಯಾಗಿತ್ತಲ್ಲ. ನಾವೆಲ್ಲ ಅದಕ್ಕೆ ಹೆಚ್ಚು ಒಲವು ಕೊಟ್ಟೆವು. ಆವಾಗ ಕಾಂಗ್ರೆಸ್‌ನಲ್ಲಿ ಎರಡು ಬಣ ಆಗಿತ್ತು. ೪೨ರಲ್ಲಿ ಮಿಲಿಟೆಂಟ್‌ ಗ್ರೂಪ್‌ ಬೇರೆ ಇತ್ತು. ಇನ್ನೊಂದು ಈಸೀಛೇರ್‌ ಪೊಲಿಟಿಶಿಯನ್ಸ್‌ ಏನಿದ್ರು ಅವರ್ದು ಒಂದು ಗ್ರೂಪ್‌ ಬೇರೇನೇ ಆಯ್ತು. ೪೨ ಆಗಸ್ಟ್‌ ಮೂವ್‌ಮೆಂಟ್‌ನಲ್ಲಿ ಗಾಂಧೀದು ಅರೆಸ್ಟ್‌ ಆಯ್ತಲ್ಲ. ಅವಾಗ ಮಂಗಳೂರು ಒಂದು ತಿಂಗಳು ಆದ್ರೂ ಪ್ರತಿಭಟನೆ ಇಲ್ಲ. ಅವಾಗ ಅಮ್ಮೆಂಬಳ ಬಾಳಪ್ಪ ಅಂಥವರೆಲ್ಲ ದೆ ಟುಕ್‌ ಲೀಡ್‌.

ಬಾಳಪ್ಪ ಆಗ ರಾಷ್ಟ್ರ ಸೇವಾದಳದಿಂದ ಮುನ್ನಡೆಸಿದರಾ?

ಹೌದು.ನಾವು ಮೊದಲು ಕಾಂಗ್ರೆಸ್‌ನಲ್ಲಿದ್ದು ಯೂಥ್‌ ಕಾಂಗ್ರೆಸ್‌ ಮಾಡಿದ್ವಿ. ಯುವ ಜನ ಕಾಂಗ್ರೆಸ್‌. ಅವಾಗ ಅದಕ್ಕೆ ಲೀಡರ್ರು ಕೆ.ಕೆ. ಶೆಟ್ಟಿ ಮಾಜಿ ಎಂ.ಪಿ. ಕರ್ನಾಟಕ ಅಸೆಂಬ್ಲಿಯಲ್ಲಿ ಸ್ವೀಕರ್‌ ಕೂಡ ಆಗಿದ್ರು. ಅವರು ಬಹಳ ಕ್ರಾಂತಿಕಾರಿಗಳು. ಒಳ್ಳೇ ನಾಟಕಕಾರ. ‘ವ್ಯಭಿಚಾರಿಣಿ ಯಾರು’ ಅಂತ ಆ ಕಾಲದಲ್ಲಿ ಒಂದು ನಾಟಕ ಬರೆದು ಕ್ರಾಂತೀನೇ ಮಾಡಿದ್ರು. ಈ ಸೋಷಿಯಲ್‌ ರಿಫಾರ್ಮ್‌ ಬಗ್ಗೆ, ವೇಶ್ಯಾ ಸಮಸ್ಯೆ ಬಗ್ಗೆ ಅವರು ಲೀಡರ್‌ಶಿಪ್‌ನಲ್ಲಿ ಯುವಜನ ಕಾಂಗ್ರೆಸ್‌ ಮಾಡಿದ್ವಿ.

ಸಮಾಜವಾದಿ ಪಕ್ಷ ಸಂಘಟನೆಯ ಆರಂಭದ ಪ್ರಯತನ್ನಗಳೇನು? ಹೊತ್ತಿನ ಚಟುವಟಿಕೆಗಳ ಬಗ್ಗೆ ಹೇಳಿ

ಆ ಹೊತ್ತಿನಲ್ಲಿ ಕರ್ನಾಟಕದಲ್ಲಿ ಸಮಾಜವಾದಿಪಕ್ಷ ಕಟ್ಲಿಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯರಿಗೆ ಜವಾಬ್ದಾರಿ ಕೊಟ್ಟಿದ್ರು. ಸ್ವಾತಂತ್ರ್ಯಕ್ಕಿಂತ ಒಂದು ವರ್ಷ ಮೊದಲು. ಕರ್ನಾಟಕದಲ್ಲಿ ಸಮಾಜವಾದಿ ಪಕ್ಷ ಸಂಘಟನೆಗೊಳ್ಳೋದಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಬಂದರು. ಅವರ ಬಗ್ಗೆ ಕೆ.ಎಸ್‌. ಕಾರಂತ ಅವರು ಒಂದು ಲೇಖನ ಬರ್ದಿದ್ದರು. ಕಾರಂತ ಅವರನ್ನ ಇಟ್ಟುಕೊಂಡು ಹುಬ್ಬಳ್ಳಿಯಲ್ಲಿ ಒಂದು ಆಫೀಸ್‌ ಓಪನ್‌ ಮಾಡಿದ್ವಿ. ಕಾಂಗ್ರೆಸ್‌ ಸೋಷಲಿಸ್ಟ್‌ ಪಾರ್ಟೀದು. ಸಿ.ಎಸ್‌.ಪಿ. ಅಂತಾ. ಆವಾಗ ಕರ್ನಾಟಕದ ರಾಜಕೀಯ ಪಕ್ಷಗಳ ಹೆಡ್‌ ಕ್ವಾರ್ಟರ್‌ ಹುಬ್ಬಳ್ಳಿ. ಈವನ್‌ ಕೆ.ಪಿ.ಸಿ.ಸಿ ಕೂಡ. ಈಗ ಬೆಂಗಳೂರಿಗೆ ಹೋಗಿದೆ. ಕಮಲಾದೇವಿ ಚಟ್ಟೋಪಾಧ್ಯಾಯ ಅದಕ್ಕೂ ಮುಂಚೆ ಗದಗ್‌ನಲ್ಲಿ ಶಿ ಆರ್ಗನೈಸ್ಡ್‌ ಎ ಲೆಫ್ಟಿಸ್ಟ್‌ ಕಾನ್ಫರೆನ್ಸ್‌. ಅದಕ್ಕೆ ಎನ್‌.ಬಿ. ಪೂಜಾರ್‌ ಹೀ ವಾಸ್‌ ಒನ್‌ ಆಫ್‌ ದಿ ಆರ್ಗನೈಜರ್‌. ನೀಲಗಂಗಯ್ಯ ಪೂಜಾರ್‌ ಮತ್ತು ಸದಾಶಿವ ಕಾರಂತ ಕ್ಲಾಸ್‌ಮೆಟ್ಸ್‌ ಕಾಲೇಜಿನಲ್ಲಿ. ಈ ಲೆಫ್ಟಿಸ್ಟು ಕಾನ್ಫರೆನ್ಸು ಕರ್ನಾಟಕದಲ್ಲಿ ಸಮಾಜವಾದಿಗಳ ಮೂವ್‌ಮೆಂಟ್‌ಗೆ ತಳಹದಿಯನ್ನು ಹಾಕಿಕೊಡ್ತು. ಅದರ ಬಗ್ಗೆ ಡೀಟೇಲ್ಸ್‌ ನೀಲಗಂಗಯ್ಯ ಪೂಜಾರ್‌ ಅವರಿಗೆ ಗೊತ್ತು.

ಅವಾಗ ಕೆ.ಎಸ್‌. ಕಾರಂತರು ಎಲ್ಲಿದ್ದರು?

ಅವರು ಕುಂದಾಪುರದಲ್ಲಿದ್ರು. ಕ್ವಿಟ್‌ ಇಂಡಿಯಾ ಮೂವ್‌ಮೆಂಟ್‌ ಟೈಮ್‌ನಲ್ಲಿ. ಹಿ ವಾಸ್‌ ಸ್ಟುಡೆಂಟ್‌ ಇನ್ ಮಂಗಳೂರು. ಕೋಣೆ ಅಂತ ಒಂದು ಸಣ್ಣ ಹಳ್ಳಿ ಇದೆ. ಕುಂದಾಪುರದ ಹತ್ರ ಆ ಊರಿನವರು. ಅವಾಗ ಅವರೆಲ್ಲ ಓದ್ಲಿಕ್ಕೆ ಅಂತಾ ಧಾರವಾಡಕ್ಕೆ ಬರ್ಬೇಕಿತ್ತು. ಕರ್ನಾಟಕ ಯೂನಿವರ್ಸಿಟಿಯಲ್ಲಿ ಸ್ಟೂಡೆಂಡ್‌ ಕಾಂಗ್ರೆಸ್‌ ಮಾಡಿದ್ದಾಗ ಇವರೆಲ್ಲ ಸಂಘಟಕರು. ಕಾರಂತರು ಲೆಫ್ಟಿಸ್ಟ್‌ ಕಾನ್ಫರೆನ್ಸ್‌ ಮಾಡುವಾಗ ಕಮಲಾದೇವಿ ಆಗ್ಲೆ ಅವರನ್ನು ಗುರ್ತಿಸಿದ್ದರು. ಸೋ ಹಿ ಟುಕ್‌ ಕಾರಂತ್‌ ಟು ಹುಬ್ಬಳ್ಳಿ. ನೀವು ಜವಾಬ್ದಾರಿ ತಗೋಬೇಕು ಅಂತಾ. ಮತ್ತು ಅವರನ್ನ ಸೆಕ್ರೆಟರಿ ಆಫ್‌ ದಿ ಕರ್ನಾಟಕ ಯೂನಿಟ್‌ ಅಂತಾ ಮಾಡಿದ್ರು. ಅದೊಂದು ಎರಡು ವರ್ಷ ನಡೆದು ಹೋಯ್ತು.

ದಿನಕರ ದೇಸಾಯಿಯವರು ಸಮಾಜವಾದಿ ಪಕ್ಷದಲ್ಲಿ ಇರಲಿಲ್ಲ ಅಲ್ವಾ?

ಹೇಳಿಕೊಳ್ಲಿಲ್ಲಾ. ಟೆಕ್ನಿಕಲಿ ಇರ್ಲಿಲ್ಲ. ಬಟ್‌ ಜನ ಅವರನ್ನ ಸೋಷಲಿಸ್ಟ್‌ ಲೀಡ್ರು ಅಂತಾನೆ ಹೇಳ್ತಿದ್ರು. ನಾವೆಲ್ಲಾ ಅವರನ್ನ ಹಾಗೇನೇ ಭಾವಿಸಿಕೊಂಡಿದ್ದೇವೆ.

ವ್ಯಕ್ತಿತ್ವದ ಪ್ರಭಾವವೇ ಹೆಚ್ಚಾಗಿ ಪಕ್ಷದ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರ್ಲಿಲ್ಲ ಅದು? ಅಂದ್ರೆ ಮೂವ್ಮೆಂಟ್ಅಂದ್ರೆ ದೇಸಾಯಿಯವರು ಅವರಿಲ್ಲ ಅಂದ್ರೆ ಪಾರ್ಟಿ ಇಲ್ಲ ಅನ್ನೋ ಹಾಗೆ?

ಅದಿರ್ತದೆ. ಒಂಥರಾ ‘ಒಂದು ಕಂಬದ ಡೇರೆ’ ಯಾಗಿರ್ತವೆ ಕೆಲವು ಪಾರ್ಟಿಗಳು. ತಕ್ಕಮಟ್ಟಿಗೆ ನಾರ್ತ್‌ ಕೆನರದ ಮೂವ್‌ಮೆಂಟ್‌ ಕೂಡಾ ಹಾಗೇ ಆಗಿದೆ ಈಗ. ಈಗಿನ ಸ್ಥಿತಿ ನೋಡಿದ್ರೆ ಅದನ್ನ ಫಾಲೋ ಅಪ್‌ ಮಾಡ್ಲಿಕ್ಕೆ ಅಂತ ಇಶ್ಯೂಸ್‌ ಕೂಡಾ ಇಲ್ಲ. ನನ್ನ ಅಭಿಪ್ರಾಯ ಹೇಳ್ತೇನೆ. ಅಲಾಂಗ್‌ ವಿತ್‌ ಟ್ರಸ್ಟ್‌ ಆಕ್ಟಿವಿಟೀಸ್‌ ಐ ವಾಸ್‌, ಕಾಲೇಜ್‌ನಲ್ಲಿ ಕೆಲ್ಸ ಮಾಡ್ತಿದ್ದಾಗನೂ ನಾಲ್ಕು ಡೇಲಿ ಪೇಪರ್ಸ್‌ಗೆ ರಿಪೋರ್ಟು ಮಾಡ್ತಿದ್ದೆ. ಬಟ್‌ ನನ್ನ ಮೋರ್‌ಸ್ಟ್ರೆಸ್‌ ಫಾರ್‌ ದಿಸ್‌ ಮೂವ್‌ಮೆಂಟ್‌. ಕೆಲವೊಂದು ಪ್ರಸಂಗದಲ್ಲಿ ನಾನೇ ಇಶ್ಯೂಸ್‌ ಕ್ರಿಯೇಟ್‌ ಮಾಡಿದ್ದೂ ಉಂಟು.

ಮೂವ್ಮೆಂಟ್ಬೆಳೀಲಿ ಅನ್ನೋ ಕಾರಣಕ್ಕೆ?

ಹ್ಞಾಂ. ಬೇಳಿಲಿ ಅನ್ನೋ ಕಾರಣಕ್ಕೆ. ನಮ್ಮ ಪತ್ರಿಕೋದ್ಯಮದಲ್ಲಿ ೪ ಥರಾ ಇರ್ತದೆ. ಸುದ್ದಿಯನ್ನು ಯಥಾವ್‌ ಪ್ರಕಟ ಮಾಡೋದು ಒಂದು. ಇನ್ನೊಂದು ಡಿಗ್‌ ಮಾಡಿ ತೆಗೆಯೋದು. ಇನ್ನೊಂದು ದೃಷ್ಟಿಕೋನ, ಯಾವುದೋ ಒಂದು ಧ್ಯೇಯ, ಗುರಿ ಇಟ್ಕೊಂಡು ಅದರ ಬೆನ್ನು ಹತ್ಲಿಕ್ಕೆ ಕ್ಯಾಂಪೇನ್‌ ನ್ಯೂಸ್‌. ಆ ಕ್ಯಾಂಪೇನ್‌ ನ್ಯೂಸನ್ನು ನನ್ನ ಕಾಲ್ದಲ್ಲಿ ನಾನು ಹೆಚ್ಗೆ ಮಾಡಿದ್ದೇನೆ. ಜನ್ರಿಗೆ ಗೋತ್ತಾಗೋದಿಲ್ಲ ಅದು. ನಮ್ಮ ವಿರೋಧಿಗಳು ಕಾಂಗ್ರೆಸ್‌… ನಾನು ಇಲ್ಲಾ ಅಂತಾ ಹೇಳೋದಿಲ್ಲ. ಆದ್ರೆ ಕೆಲವೊಂದು ವಿಷಯದಲ್ಲಿ ಮಾಡ್ಬೇಕಾಗ್ತದೆ. ನಮ್ಮದು ಅಂತಿಮ ಗುರಿ ಜನ ಕಲ್ಯಾಣ. ಅಲ್ಲಿ ಮುಟ್ಟೋತನಕ ನಾವು ಸುದ್ದಿಯನ್ನು ಕೂಡ ಸಾಧನ ಮಾಡ್ಬೇಕಾಗ್ತದೆ. ಅದಕ್ಕೆ ಬಣ್ಣ ಕೊಡ್ಬೇಕು. ಬಣ್ಣ ಅಂದ್ರೆ ಮಿಸ್‌ ಇಂಟರ್‌ಪ್ರಿಟ್‌ ಮಾಡೋದಲ್ಲ. ಯಥವತ್ತಾಗಿ ನಾವು ಜನ್ರಿಗೆ ಕೊಡ್ಬೇಕು. ಆ ದೃಷ್ಟಿಯಲ್ಲಿ ನನ್ನ ವೈಯಕ್ತಿಕವಾಗಿ ನಾನು ನನ್ನ ಮಾಧ್ಯಮ ಸೇವೆಯನ್ನು ಬಳಸಿಕೊಂಡಿದ್ದೇನೆ. ಅಂತ ನನಗೆ ಅನ್ನಿಸ್ತಾಯಿದೆ. ಪೀಪಲ್‌ ಮೆ ಡಿಸ್‌ಅಗ್ರೀ. ಐ ಡಿಡ್‌ ಇಟ್‌ ಬಿಕಾಸ್‌ ಐಯಾಮ್‌ ಎ ಸೋಷಲಿಸ್ಟ್‌.

ಸೋಮೂರು ಹೇಳಿದ್ರೀ ಇನ್ನೊಂದು?

ಫೀಚರ್‌ ಆರ್ಟಿಕಲ್ಸ್‌.

ಇಷ್ಟಾದ್ರೂ ಯಾಕೆ ಜನಸೇವಕ ಪಕ್ಷದ ಮುಖವಾಣಿ ಆಗ್ಲಿಲ್ಲಾ?

ನಾವು ಮಾಡ್ಲಿಲ್ಲ. ವಿ ಹ್ಯಾವ್‌ ನಾಟ್‌ ಡನ್‌ಇಟ್‌ ಪರ್ಪಸ್‌ಲೀ. ಎನೀ ವೇ ವೀ ಹ್ಯಾವ್‌ ನಾಟ್‌ ಡಿಕ್ಲೇರ್ಡ್‌. ಹಾಗೆ ಮಾಡಿದ ಕೂಡ್ಲೇ ಉಳಿದವರು ಅದನ್ನ ಓದೋದಿಲ್ಲ. ಮತ್ತು ಪತ್ರಿಕೋದ್ಯಮ ಯಾವಾಗ್ಲೂ ಹಾಗಾಗ್ಬಾರ್ದು.

ಈವನ್ ಸೋಷಲಿಸ್ಟ್ಮೂವ್ಮೆಂಟ್ಗೆ ವ್ಯತಿರಿಕ್ತವಾದ ಘಟನೆಗಳು ಏನಾದ್ರೂ ನಡ್ದಿದ್ರೆ ಅದನ್ನ ಪ್ರಕಟಿಸ್ತಿದ್ರಾ?

ಮಾಡೀದೀವಿ. ಸಾಕಷ್ಟು ಮಾಡಿದೀವಿ. ಫ್ಯೂಡಲ್ಸ್‌ ಆಕ್ವಿವಿಟೀಸ್‌, ಕಾಂಗ್ರೆಸ್‌ನ ಚಟುವಟಿಕೆಗಳು ನಡೀತಾ ಇದ್ರೆ ಮಾಡಿದ್ದೇವೆ. ಉದಾ. ದಿನಕರ ದೇಸಾಯಿ ಹಿ ಫಸ್ಟ್‌ ಆರ್ಗನೈಜಡ್‌ ನಾರ್ಥ್‌ ಕೆನರಾ ಡಿಸ್ಟ್ರಿಕ್ಟ್‌ ವಿದ್ಯಾರ್ಥಿ ಸಮ್ಮೇಳನ. ಕಾರಂತರ ಹೋಲ್‌ಡೇ ಕ್ಲಾಸಸ್, ಅಫ್‌ಕೋರ್ಸ್‌ ಇಟ್‌ ವಾಸ್‌ ಎ ಐಡಿಯಾ, ಬಟ್‌ ಸಂಘಟನೆ ನಂದು. ಅದು ಬಿಫೋರ್‌ ೧೯೬೦ – ೬೧ ಇರ್ಬೇಕು. ಆ ನಂತರ ರೈತರ ಸಮ್ಮೇಳನ ಅದು ನಡೀತಿತ್ತು ಬಿಡ್ರೀ. ಸಿದ್ಧಿ ಜನರ ಬಗ್ಗೆ ಲಕ್ಷ್ಯ ಸೆಳೀಲಿಕ್ಕೆ ದ ಫಸ್ಟ್‌ ಕಾನ್‌ಫರೆನ್ಸ್‌ ಆಫ್‌ದ ಡಿಸ್ಟ್ರಿಕ್ಟ್‌ ಸಿದ್ದೀಸ್‌, ಇಟ್‌ ವಾಸ್‌ ಹೆಲ್ಡ್‌ ಇನ್‌ ರಾಮನಗುಡಿ.

ಹಾಗೆ ನೋಡಿದ್ರೆ ದೇಸಾಯಿಯವರು ಹಾಲಕ್ಕಿಗಳ ಕಡೆ ಕೊಟ್ಟ ಗಮನ ತುಂಬಾ ಹೆಚ್ಚಾಗಿತ್ತು ಸಿದ್ಧಿಗಳಿಗಿಂತ?

ಸಿದ್ಧಿಗಳ ಬಗ್ಗೆ ಲಕ್ಷ್ಯ ಸೆಳೆದಿದ್ದೇ ನಾವು. ದೇಸಾಯಿ ಸಮ್ಮೇಳನ ಮಾಡಿ, ಸರ್ಕಾರಕ್ಕೆ ಒಂದು ಠರಾವು ಮಾಡಕಾಲಕ್ಕೆ ಅವ್ರು ಏನೇನಾಗ್ಬೇಕು ಅಂತ ಹೇಳಿದ್ರು. ಜನಸೇವಕ ಮುಖಪುಟಕ್ಕೆ ಬಂದಿದೆ ಅದು.

ಯಾವ ವರ್ಷ ಅದು?

ಬಿಫೋರ್‌ ೧೯೬೪.

ಸಮ್ಮೇಳನ ನಂತರ ಮತ್ತೇನು ಮಾಡ್ಲಿಕ್ಕೆ ಸಾಧ್ಯವಾಯ್ತು?

ನಂತರ ಸಿದ್ಧಿಗಳನ್ನು ವಿನೋಬ ಭಾವೆ ಬಂದಾಗ ನಾವೆಲ್ಲ ಇಡೀ ಜಿಲ್ಲೆಯ ಸಿದ್ಧಿಗಳನ್ನು ಕರ್ಸಿ ರಾಮನಗುಡಿಯಲ್ಲಿ ಫಾರೆಸ್ಟ್‌ ಬಂಗ್ಲೆಯಲ್ಲಿ ಕೂಡ್ಸಿ ಅವರ ಬಗ್ಗೆ ಎಲ್ಲಾ ಮಾಹಿತಿ ಕೊಟ್ಟೆವು, ವಿನೋಬಾ ಭಾವೆಗೆ. ದಟ್‌ ಈಸ್‌ ೧೯೬೨. ಆ ನಂತ್ರ ನಾವೇ ರಾಜೇಂದ್ರ ಪ್ರಸಾದ್ ಟೂರ್‌ ತಗೊಂಡಾಗ ನಾವು ಸಿದ್ಧಿಗಳನ್ನ ಕರ್ಸಿ ಪ್ರಸೆಂಟ್‌ ಮಾಡಿ ತೋರಿಸಿದೆವು. ಅದೂ ಸೇಮ್‌ ಇಯರ್‌.

ಮುಖ್ಯ ಬೇಡಿಕೆಗಳೇನಾಗಿದ್ದವು?

ಭೂಮಿ ಕೊಡ್ಬೇಕು ಅಂತಾ.

ಸಿದ್ಧಿಗಳಿಗೆ, ಅರಣ್ಯ ಭೂಮಿ?

ಹ್ಞಾಂ. ಭೂಮಿ ಕೊಡ್ಬೇಕು ಮತ್ತೆ ಅವ್ರಿಗೆ ಎಸ್‌.ಟಿ. ಅಂತಾ ಮಾಡ್ಭೇಕು. ಅವ್ರಿಗೆ ರೆಸಿಡೆನ್ಷಿಯಲ್‌ ಸ್ಕೂಲ್‌ ಕೊಡ್ಬೇಕು.

ಬೇಡಿಕೆ ಈಡೇರಿದವಾ?

ಕೆಲಮಟ್ಟಿಗೆ ಆಗಿದೆ. ಈಗ ಸಿದ್ಧಿ ಬಾಯ್ಸ್‌ ಫಾರ್‌ ಸ್ಟೋರ್ಟ್‌, ಈ ಥರವೆಲ್ಲ ಮಾಡ್ತಾ ಇದಾರೆ. ಸಿದ್ದಿ ಹಾಸ್ಟೆಲ್‌ ಆಗಿದೆ, ಯಲ್ಲಾಪುರದಲ್ಲಿ. ಈಗ ಎಲ್ಲ ಪಾರ್ಟಿಯವರೂ ಅವರನ್ನ ಉಪಯೋಗ ಮಾಡ್ಕೋಳ್ತಿದ್ದಾರೆ ಬಿಡಿ.

ಕಾಗೋಡು ಸತ್ಯಾಗ್ರಹ ಸಂಬಂಧಿಸಿದಂತೆ ನಿಮ್ ಅನುಭವ ಏನು?

ನಾನಾವಾಗ ಹುಬ್ಬಳ್ಳಿಯಲ್ಲಿದ್ದೆ. ಸೋಷಲಿಸ್ಟ್‌ ಪಾರ್ಟಿ ಆಫೀಸಿನಲ್ಲಿ. ಸತ್ಯಾಗ್ರಹಕ್ಕೆ ಬಂದೋರೆಲ್ಲ ನಮ್ಮಲ್ಲಿ ರಾತ್ರಿ ಕಳೆದು ಹೋಗುವವರಿದ್ರು. ಮತ್ತೆ ಮೈಸೂರು ಇಂಡಿಪೆಂಡನ್ಸ್‌ ಮೂವ್‌ಮೆಂಟ್‌ ಅದಕ್ಕೂ ಹಾಗೆ ಆಫೀಸ್‌ನಲ್ಲೇ ರಾತ್ರಿ ಕಳ್ದು ಅಲ್ಲಿ ಹೋಗಾರು. ಗೋವಾ ಮೂವ್‌ಮೆಂಟ್‌ ಕೂಡಾ ಹಾಗೇ. ಹುಬ್ಬಳ್ಳಿ ಆಫೀಸ್‌ ಅದು ಆಫೀಸ್‌ ಕಮ್‌ ಮನೆ ಇದ್ಹಾಗಿತ್ತು. ಹಾಗಾಗಿ ನನ್ಗೆ ಎಲ್ಲಾರ ಸಂಪರ್ಕ ಆಯ್ತು.

ನೀವು ಕಾಗೋಡು ಸತ್ಯಾಗ್ರಹಕ್ಕೆ ಹೋಗಿರ್ಲಿಲ್ಲವಾ?

ಇಲ್ಲ. ನನ್ಗೆ ಹೋಗೋಕಾಗ್ಲಿಲ್ಲ. ದಿನಕರ ದೇಸಾಯಿಯವರು ಹೋಗಿದ್ರು. ಒಂದು ಭಾಷಣ ಮಾಡಿದಾರೆ…ಅವ್ರು.

ಪಾರ್ಟಿಯಲ್ಲಿ ಏನು ಚರ್ಚೆ ಆಗ್ತಾ ಇತ್ತು ಇದರ ಬಗ್ಗೆ?

ಪಾರ್ಟಿ ಡಿಸ್ಕಷನ್‌ ಇಟ್‌ ವಾಸ್‌. ಅದು ಲೋಹಿಯಾ ವಾದದ ಮೇಲೆ. ಲೋಹಿಯಾ ಅಲ್ಲಿಗೆ ಬಂದ್ಮೇಲೆ ಇಟ್‌ ಬಿಕೇಮ್‌ ಎ ಆಲ್‌ ಇಂಡಿಯಾ ಇಶ್ಯೂ. ಐ ಥಿಂಕ್‌ ಆಲ್ ಮೋಸ್ಟ್‌ ಆಲ್‌ ಲೀಡರ್ಸ್‌ ಈಗಿನ ಉಡುಪಿಯ ಎಂ.ಪಿ. ಇದ್ದಾರಲ್ಲ ಮನೋರಮ, ಅವರ ಗಂಡ ಮಧ್ವರಾಜ್‌ ಉಡುಪಿಗೆ ಕಾರ್ಯದರ್ಶಿ ೧೯೫೨ರಲ್ಲಿ. ಅವಾಗ ನಮ್ಮ ಕ್ಯಾಂಡಿಡೇಟ್‌ ನಂದಳಿಕೆ ವಿಠ್ಠಲದಾಸ್‌ ಅಂತ್ಹೇಳಿ. ಟಿ.ಎ ಪೈ ವಿರುದ್ಧ ಕಂಟೆಸ್ಟ್‌ ಮಾಡದ್ವಿ ನಾವು. ನಾನು ಹುಬ್ಬಳ್ಳಿಯಿಂದ ಮಂಗಳೂರಿಗೆ ಬಂದು ಹದಿನೈದು ದಿವ್ಸ ಇದ್ದೆ. ನಮ್ಮೂರು ಮಂಗಳೂರು. ಅಲ್ಲಿಂದ ಬಂದು ಒಂದು ವಾರ ಮಧ್ವರಾಜ್‌ ಸಂಗಡ ಸಂಘಟನೆಯಲ್ಲಿ ನಾ ಎಲ್ಲಾ ಹೆಲ್ಪ್‌ ಮಾಡಿದೆ. ನಮಗೆ ಮತ್ತು ಟಿ.ಎ.ಪೈ ಅವರಿಗೆ ಫಸ್ಟ್‌ ಭೇಟಿ ಆಗೇನೇ. ಪ್ರಿಟಿಂಗ್‌ ಪ್ರೆಸ್‌ನಲ್ಲಿ ಅವ್ರು ತಮ್ಮ ದೇನೋ ಕೊಡೋಕೆ ಬಂದಿದ್ರು. ನಾವು ವಿಠ್ಠಲದಾಸರ ಬಗ್ಗೆ ಹೋಗಿದ್ವಿ. ಅಲ್ಲಿ ನಮ್ಮ ಕನ್‌ಪ್ರಂಟೇಶನ್‌ ಆಯ್ತು. ಬಟ್‌ ದಟ್‌ ಕನ್‌ಫ್ರಂಟೇಶನ್‌ ರಿಜಲ್ಟಡ್‌ ಇನ್‌ ಫ್ರೆಂಡ್‌ಶಿಪ್‌. ನನ್ನನ್ನ ಭಾಳಾ ಹಚ್ಚೊಂಡಿದ್ರು. ಎಂಟೈರ್‌ ಪೈ ಫ್ಯಾಮಿಲಿ. ಕೆ.ಕೆ. ಪೈ ಈಗ ನಮಗೆ ಭಾಳ ಬೇಕಾದವರು. ನೌ ದ ಪ್ರೆಸೆಂಟ್‌ ಯಜಮಾನ ಆಫ್‌ ಮಣಿಪಾಲ.

ಕಾಗೋಡು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚಳವಳಿಯ ಚಟುವಟಿಕೆಗಳು ನಡೆಯುವಾಗ ಜಾಜ್ಫರ್ನಾಂಡೀಸರ ತೊಡಿಗಿಸಿಕೊಳ್ಳುವಿಕೆ ಯಾವ ರೀತಿ ಇತ್ತು?

ಫರ್ನಾಂಡೀಸ್‌ ಅವರನ್ನ ಕೆಲವು ಸಲ ಸೌತ್‌ ಕೆನರಾಕ್ಕೆ ಕರೆಸ್ಕೊಂಡಿದ್ದೇನೆ. ನಾವು ನಾತ್‌ ಕೆನರಾಕ್ಕೆ ಕರಿಸ್ಕೊಳ್ಲಿಕ್ಕೆ ಆಗಿಲ್ಲ. ಬಟ್‌ ಹಿ ವಾಸ್‌ ವೆರಿ ಮಚ್‌ ಬ್ಯುಸಿ ಇನ್‌ ಬಾಂಬೆ. ನನ್ನ ಲೇಖನ ದಟ್‌ ಐ ವಿಲ್‌ ಗಿವ್‌ ಯು. ಐಯಾಮ್‌ ರೆಸ್ಟಾನ್ಸಿಬಲ್‌ ಫಾರ್‌ ಸೆಂಡ್‌ ಹಿಮ್‌ ಟು ಬಾಂಬೆ.

ದಕ್ಷಿಣ ಕನ್ನಡಕ್ಕೆ ಬರುತ್ತಿದ್ದ ಜಾರ್ಜ್ಉತ್ತರ ಕನ್ನಡಕ್ಕೆ ಬರೋಕೆ ಯಾಕೆ ಸಾಧ್ಯ ವಾಗ್ತಿರಲಿಲ್ಲ?

ನಾ ಹೇಳಿದ್ನೆಲ್ಲ. ದಿನಕರ ದೇಸಾಯಿಯವರು ಇದ್ಮೇಲೆ ಬೇರೆ ಲೀಡರ್ಸ್‌ ಬೇಕಾಗಿರ್ಲಿಲ್ಲ.

ಈವನ್ಲೋಹಿಯಾ ಅವರೂ ಬೇಕಾಗಿರ್ಲಿಲ್ಲ?

ಯಾರೂ ಬೇಕಾಗಿರ್ಲಿಲ್ಲ. ಸೋ ವಿ ನೆವರ್‌ ಫೆಲ್ಟ್‌ ದ ನೀಡ್‌ ಆಫ್‌ ಎನಿ ಅದರ್‌ ಲೀಡರ್ಸ್.

ಸೋ. ಅದು ಆಲದ ಮರ?

(ನಗು…) ಎಕ್ಸ್ಯಾಕ್ವ್‌ ಲೀ

ತಮಾಷೆಗೆ ಹೇಳೋದಾದ್ರೆ ಆಲದ ಮರದ ಕೆಳಗೆ ಏನೂ ಹಟ್ಟೋದಿಲ್ಲ?

ಇಲ್ಲ, ಕರಿಕೆ ಹುಲ್ಲು ಆಲದ ಮರದ ಕೆಳಗೂ ಹುಟ್ತದೆ, ವಿಷ್ಣು ನಾಯ್ಕನಂಥವರು.

ನಂತರದ ತಲೆಮಾರಿನ ಬಗ್ಗೆ ಹೇಳೋದಾದ್ರೇ ವಿಷ್ಣುನಾಯ್ಕ ನಂತರದ ತಲೆಮಾರು ಸಮಾಜವಾದದ ಕಡೆ ಒಲವೇ ಇಲ್ಲದ ಹಾಗಾಯ್ತಲ್ಲ. ಯಾಕೆ ಹೀಗಾಯ್ತು ಅಂತ. ಇಷ್ಟೆಲ್ಲಾ ಶ್ರಮ ಹಾಕಿದ್ದೀರಿ?

ಅದು ನಮಗೆಲ್ಲಾ ನೋವು ಕೊಡ್ತಾಯಿದೆ. ವಿ ಫೀಲ್‌ ಫಾರ್‌ ಇಟ್‌.

ಇತಿಹಾಸವನ್ನು ವಿಶ್ಲೇಷಣೆ ಮಾಡಿ ನೀವೇ ಹೇಳ್ಬೇಕು ಎಲ್ಲಿ ತಪ್ಪಾಗಿದೆ ಅಂತ?

ಅದೇ, ನೀವು ಹೇಳಿದ ಹಾಗೆ ಎರಡನೇ ತಲೆಮಾರನ್ನು ತಯಾರು ಮಾಡುವುದರಲ್ಲಿ.

ಟಾಪ್‌ ಲೀಡರ್‌ ದಿನಕರ ದೇಸಾಯಿ ಲಕ್ಷ್ಯ ಕೊಡಲಿಲ್ಲ. ಆಲದ ಮರಗಳು ಒಂದೇ ಅಲ್ಲ. ಊರಿಗೊಂದು ಆಲದ ಮರಗಳಿದ್ದವು. ಕ್ಷ್ಯ ಕೊಟ್ಟವರ ಪೈಕಿ ಲೋಹಿಯಾ ಒಬ್ರು. ಮತ್ತು ಜೆ.ಪಿ. ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಕೆಲವರು ಪ್ರಯತ್ನ ಪಟ್ರು ಫೇಲ್‌ ಆದ್ರು. ಕಮಲಾದೇವಿ ಕುಡ್‌ ನಾಟ್‌ ಸಕ್ಸೀಡ್‌. ಷೀ ರಿಟೈರ್‌ ಫ್ರಮ್‌ ಪಾಲಿಟಿಕ್ಸ್‌ ಆಲ್ಸೋ ಕೊನೆಗೆ, ಹೊಸಪೇಟೆ ಘಟನೆಗಳು ಇವೆಲ್ಲ ಅವರಿಗೆ ನೋವು ಕೊಟ್ಟವು.

ತಾತ್ವಿಕತೆಗೆ ಬದ್ಧರಾಗಿದ್ದ ನಿಮ್ಮಂಥ ಸಮಾಜವಾದಿಗಳು ಹೋರಾಟ ಮಾಡಿ ಹಿಂದಕ್ಕೆ ಸರಿದ್ರೀ. ಆದ್ರೆ ಕಾಂಪ್ರಮೈಸ್ಮಾಡ್ಕೊಂಡು ಬಂದವರು ಪವರ್ಪಾಲಿಟಿಕ್ಸ್ಗೆ ಬಂದು, ಅವ್ರು ಸಮಾಜವಾದಿಗಳು ಅಂತಾನೆ ಹೆಸರು ತಗೊಂಡ್ರು. ಇದು ವೈರುಧ್ಯ ಅಲ್ವ?

ವೈರುಧ್ಯ ಇದೆ. ಅದು, ಪರ್ಸನಲ್‌ ಕಲ್ಟ್‌. ವೈಯಕ್ತಿಕ ಪ್ರತಿಷ್ಠೆ ಉಂಟಲ್ಲ…

ರಾಜ್ಯದಲ್ಲಿ ಹೊರಾಟ ಮಾಡಿದ ಮತ್ತು ರಾಜಕಾರಣದಲ್ಲಿ ಉನ್ನತ ಮಟ್ಟಕ್ಕೇರಿದ ಸಮಾಜವಾದಿಗಳೆಂದು ಯಾರನ್ನು ಕರೀತಿರಿ?

ಜೆ.ಹೆಚ್‌. ಪಟೇಲರು. ನಮ್ಮಲ್ಲೇ ಬರ್ತಿದ್ರು ಅವ್ರು ವಿಜಯ ಕರಮರ್‌ಕರ್‌ ಬಂದಾಗೆಲ್ಲ ನಮ್ಮ ಜೊತೆಗೇ ಇರ್ತಿದ್ರು. ನಾವು ಕರ್ಸಿದೀವಿ, ಜಿಲ್ಲೆಗೆ ಬಂದಿದ್ರು ಅವ್ರು. ವೆಂಕಟರಾಮನ್‌ ಅಂತಾ ಕೇಳಿರ್ಬೇಕು ನೀವು. ಟಿ. ಕಣ್ಣನ್‌ ಎಂ.ಎಲ್‌.ಸಿ ಆಗಿದ್ರು. ಅವ್ರು ಬೆಂಗಳೂರಿನಲ್ಲಿ ಲೇಬರ್‌ ಲೀಡರ್‌ ಆಗಿದ್ರು. ಮಿಲ್‌ ಲೇಬರ್ಸ್‌ ಕೂಲಿ ಕಾಮಗಾರರ ಲೀಡರಾಗಿದ್ರು. ಮತ್ತು ಮೈಸೂರಿನಲ್ಲಿ ಕರ್ನಾಟಕ ಏಕೀಕರಣಕ್ಕೆ ಕೆಲಸ ಮಾಡಿದ್ರು. ಅಖಂಡ ಕರ್ನಾಟಕ ಏಕೀಕರಣ ಪರಿಷತ್‌ ಸಂಘಟನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ ಬಿ. ಶ್ರೀಕಂಠಪ್ಪ. ಬಹುಶಃ ಅವ್ರು ಈಗ ಇರ್ಲಿಕ್ಕಿಲ್ಲ. ಮೈಸೂರಿನವರು. ಅವರ್ಜೊತೆ ಒಂದು ದೊಡ್ಡ ಬಳಗಾನೇ ಇತ್ತು. ಅವರ ಜೊತೆ ಇನ್ನೊಬ್ರು ಕಾಳಯ್ಯ ಅಂತ್ಹೇಳಿ…ಇವ್ರೆಲ್ಲ ಪಟೇಲ್ರಿಗಿಂತ ಸೀನಿಯರ್ಸ್‌.

ರಾಷ್ಟ್ರಮಟ್ಟದಲ್ಲಿ ಸಮಾಜವಾದಿ ಚಳವಳಿಗೆ ತೀವ್ರವಾಗಿ ಪೆಟ್ಟು ನೀಡಿದ ರಾಜಕೀಯ ಸಂದರ್ಭ ಯಾವುದು ಅಂತೀರಿ?

ಇಂದಿರಾ ಗಾಂಧಿ, ಶೀ ಹ್ಯಾಡ್‌ ಗಿವನ್‌ ಎ ಟೆರಿಬಲ್‌ ಬ್ಲೋ.

ಸಮಾಜವಾದಿ ಪಕ್ಷವನ್ನು ಒಡೀಬೇಕು ಅಂತಾ ಅವರಿಗೆ ಉದ್ದೇಶ ಇತ್ತು ಅಂತೀರಾ?

ಇತ್ತು. ಸೋಷಲಿಸ್ಟ್‌ ಗವರ್ನ್‌ಮೆಂಟು ಮೊದ್ಲು ಕೇರಳದಲ್ಲಾಗಿತ್ತು. ಪಟ್ಟಂಥಾನ್‌ ಪಿಳ್ಳೆ ಸಿ.ಎಂ. ಆಗಿದ್ದಾಗ ಅಲ್ಲಿ ನಮ್ಮ ‘ರಿಸರ್ವೆಶನ್‌’ ತರಹ ವಿದ್ಯಾರ್ಥಿಗಳ ಆಂದೋಲನ ಶುರುವಾಯ್ತು. ಅದನ್ನೇ ಒಂದು ಬಂಡವಾಳ ಇಟ್ಕೊಂಡು ನೆಹರೂ ಇಂದಿರಾ ಗಾಂಧಿಯನ್ನು ಇಲ್ಲಿಗೆ ಕಳ್ಸಿದ್ರು, ಕೇರಳಕ್ಕೆ ಅವಳು ಬಂದು ಅಪ್ಪನಿಗೆ ಕಿವಿಯೂದಿದಳು. ದಟ್‌ ಮಿನಿಸ್ಟರ್‌ ವಾಜ್‌ ಡಿಸ್‌ಮಿಸ್ಡ್‌. ಅವಳಿಗೆ ಈ ಸೋಷಲಿಸ್ಟ್‌ ಪಾರ್ಟಿ ಮೇಲೆ ಅವಾಗಿಂದ ಸಿಟ್ಟಿತ್ತು. ಅದಕ್ಕೆ ಮೂಲ ಕಾರಣ ಅಂದ್ರೆ ಲೋಹಿಯಾ. ಲೋಹಿಯಾ ಪಾರ್ಲಿಮೆಂಟಿನಲ್ಲಿ ತೀಕ್ಷ್ಣವಾಗಿ ಅಪ್ಪನಿಗೂ ಹೌದು, ಮಗಳನ್ನೂ ಹೌದು, ತರಾಟೆಗೆ ತಗೊಳ್ತಿದ್ರು. ಅದಕ್ಕೆ ನಾನು ಪರ್ಸನಾಲಿಟಿ ಕಂಟೆಂಟ್‌ ಅಂದಿದ್ದು. ಆದ್ರೆ ಏನಾಗ್ತದೆ ನಮ್ಮ ಜನ ಇನ್ನೊ ರಾಜಕೀಯವನ್ನು ಅರ್ಥ ಮಾಡ್ಕೋಳ್ಳಿಕ್ಕೆ ಆಗಿಲ್ಲ. ಜನ ಹಾಗೆ ಯೋಚ್ನೇ ಮಾಡೋಕೆ ನಾವು ಅವಕಾಶವನ್ನೂ ಕೊಡೋದಿಲ್ಲ. ಪಾರ್ಟಿಯಲ್ಲಿ ಕೂಡ ಒಂದು ಸೀರಿಯಸ್‌ ಆಗಿ ಇಶ್ಯೂಸ್‌ ತಗಂಡು ಸ್ಟಡೀ ಮಾಡೋವಂತಹ ಪರಿಸರ ಇಲ್ಲ. ಮೊದ್ಲು ಉದಾ. ನಾನೇ ಸೋಷಲಿಸ್ಟ್‌ ಆಗ್ಬೇಕಾದ್ರೆ ನನಗೆ ಪುಸ್ತಕಗಳನ್ನು ಓದ್ಲಿಕ್ಕೆ ಹಚ್ಚಿದ್ರು ಕೆ.ಎಸ್‌. ಕಾರಂತರು ಅವರೆಲ್ಲ. ಕಮ್ಯುನಿಸ್ಟ್‌ ಪಾರ್ಟಿ ಬಗ್ಗೆ ಓದಿದೆವು. ರಷ್ಯನ್‌ ರೆವಲ್ಯೂಷನ್‌ ಓದಿದೆವು. ಲೆನಿನ್‌, ಸ್ಟಾಲಿನ್‌ ಇವ್ರನ್ನೆಲ್ಲಾ ಓದಿದೆವು. ಜೊತೆಗೇನೇ ನೆಹರೂನ ಓದಿದೆವು. ಆಟೋಬಯೋಗ್ರಫಿ, ಡಿಸ್ಕವರಿ ಆಫ್ ಇಂಡಿಯಾನಂತರ ಬಂತು ಅದು. ಇಂತಹವು ಓದುವುದಕ್ಕೆ ಕ್ಯಾಂಪ್‌ ನಡೀತಾ ಇತ್ತು. ವರ್ಕರ್ಸಗೆ ಅವಾಗೆಲ್ಲ. ನಾನು ಹುಬ್ಬಳ್ಳಿದ್ದಾಗ ಯಂಗ್‌ ಸೋಷಲಿಸ್ಟ್‌ ಲೀಗ್‌ ಮಾಡಿದೆವು. ಇಟ್‌ ವಾಸ್‌ ಇನ್‌ ೫೨ – ೫೩ ಆವಾಗ ಇದೇ ನಮ್ಮ ಕೆಲಸ, ಟು ಗಿವ್‌ ಪೊಲಿಟಿಕಲ್‌ ಎಜುಕೇಷನ್‌ ಟು ಯಂಗ್‌. ಅವಾಗ ನಾವು ಮೇಡ್‌ ಯೂಸ್‌ ಆಫ್ ಎವೆರಿಬಡಿ, ಇನ್‌ಕ್ಲೂಡಿಂಗ್‌ ಕುಳಕುಂದ ಶಿವರಾವ್‌. ವಾರಗಟ್ಟಲೆ ಕ್ಯಾಂಪ್‌ ಮಾಡ್ಬೇಕಾದ್ರೇ ಒಬ್ಬೊಬ್ರನ್ನೇ ಕರ್ಸಿ ನಾವು ಲೆಕ್ಚರ್‌ ಕೂಡಿಸ್ತಿದ್ದೆವು.

ಕುಳಕಂದ ಶಿವಾರಾವ್ಕಮ್ಯುನಿಸ್ಟ್ರು ಅಲ್ವಾ? ಅವರನ್ನೂ ಕರೆಸ್ತಿದ್ರಾ?

ಹ್ಞಾಂ. ಎರಡೂ ತಿಳ್ಕೋಬೇಕು.

ಮಾಡಿದೆವು ನಾವು, ನಾಲೆಡ್ಜ್‌ ಈಸ್‌ ಓಪನ್‌, ಇಟ್ಸ್‌ ಜಸ್ಟ್‌ ಲೈಕ್‌ ವಿಂಡ್‌. ಹಿರೇಮಠರನ್ನು ಕರೆಸಿಕೊಂಡಿದ್ದೇವೆ ನಾವು. ಕುಳಕುಂದ ಶಿವರಾಜ್‌ ಒಂದು ತಾಸು ನಮ್ಮ ಪಕ್ಷದ ಬಗ್ಗೆ ಹೇಳಿದ್ರು, ಥೇರಿ ಬಗ್ಗೆ ಹೇಳಿದ್ರು, ನಮ್ಮ ತರುಣರು ಬಿಡ್ಲಿಲ್ಲ ಸಾಕಷ್ಟು ಪ್ರಶ್ನೆಗಳನ್ನು ಹಾಕಿದ್ರು ಅವ್ರಿಗೆ. ಸೋ ಅಂತಹ ಮಂಥನ ನಡೀವಂಥ ಪ್ರಮೇಯ ಅಥವಾ ಪದ್ಧತಿ ಈಗ ಯಾರೂ ಅನುಸರಿಸ್ತಿಲ್ಲ. ಯಾವ ಪಕ್ಷಯೂ ಮಾಡ್ತಿಲ್ಲ. ಅದು ವೇಸ್ಟ್‌ ಅಂತ ಅವರ ದೃಷ್ಟಿಯಲ್ಲಿ. ಈಗ ನಮ್ಮ ಲಕ್ಷ್ಯ ಅಂದ್ರೆ ಬರೀ ಮುಂದಿನ ಚುನಾವಣೆ ಅಷ್ಟೇ. ಬಟ್‌ ದಟ್‌ ಈಸ್‌ ನಾಟ್‌ ಪಾಲಿಟಿಕ್ಸ್‌.

ಲೆಫ್ಟ್‌ ಪಾರ್ಟಿಗಳಲ್ಲಿ ಸ್ವಲ್ಪ ಇದೆ. ನಕ್ಸಲೈಟರು ಆ ಕೆಲಸ ಮಾಡ್ತಾ ಇದ್ದಾರೆ. ನಕ್ಸ್‌ಲೈಟ್ಸ್‌ ಅವರ ಜೊತೆ ನಮ್ಮ ಡಿಫರೆನ್ಸ್‌ ಏನು ಅವರು ಹಿಂಸೆ ಹಿಡಿದಿದ್ದೇ ನಮ್ಮ ಡಿಫರೆನ್ಸ್‌.

ಅದಿಷ್ಟುನ್ನು ಬಿಟ್ರೆ ಅವ್ರನ್ನ ಒಪ್ಪಿಕೊಳ್ತೀರಾ?

ಸೀ, ನಮ್ಮ ಫಂಡಮೆಂಟಲ್‌ರೈಟ್ಸ್‌ನಲ್ಲಿ ಈಕ್ವಾಲಿಟಿ ಈಸ್‌ ಒನ್‌…ನಮ್ಮ ದೇಶದಲ್ಲಿ ಈಕ್ವಾಲಿಟಿ ಎಲ್ಲಿ ಬಂದಿದೆ. ಸಣ್ಣ ಶಬ್ದ ಅದು. ನಮ್ಮ ದೇಶದಲ್ಲಿ ಸಾಮಾಜಿಕವಾಗಿ ಈಕ್ವಾಲಿಟಿ ಇಲ್ಲ. ಈಗಂತೂ ಡಿಫರೆನ್ಸ್‌ ಹೆಚ್ಚಾಗ್ತಿದೆ. ಶ್ರೀಮಂತರು ಮತ್ತು ಬಡವರ ನಡುವೆ ಅಂತರ ಬೆಳೀತಾ ಇದೆ.

ಬಗೆಯ ಆರ್ಥಿಕ ಅಸಮಾನತೆಗೆ ನಮ್ಮ ಸರಕಾರಗಳು ತೆಗೆದುಕೊಂಡ ಯಾವ ನೀತಿಗಳು ಕಾರಣವಾದವು? ಎಲ್ಲಿ ತಪ್ಪಾಯ್ತು?

ಈ ಮಲ್ಟಿನ್ಯಾಷನಲ್‌ ಬಗ್ಗೆ ಉದಾರ ಅವಕಾಶ ನೀಡಿದ್ದು, ಅಡ್ವಾನ್ಸ್‌, ಟೆಕ್ನಾಲಜಿ ಅಂತಾ ಹೋಗಿದ್ದು ಇವೆಲ್ಲ ಅಂತರ ಬೆಳಿಸ್ತಾ ಇವೆ. ಜೊತೆಗೆ ಅಭಿವೃದ್ಧಿ. ನನಗೆ. ಎಂ.ವಿ.ಕಾಮತ್‌ ಅವರ ಬಗ್ಗೆ ದ್ವೇಷವಿತ್ತು. ವೈಯಕ್ತಿಕವಾಗಿ ಅಂದ್ರೆ ಅವರ ಲೇಖನಗಳನ್ನು ಓದಿ ಓದಿ ಬೇಜಾರು ಬರ್ತಿತ್ತು. ಟುಡೇ ಐ ಲೈಕ್‌ ಹಿಮ್‌. ಹಿ ಹ್ಯಾಸ್‌ ಗಿವನ್‌ ಫಿಗರ್ಸ ಆಫ್‌ ಆಲ್‌ ಸ್ಟೇಟ್ಸ್‌ ಅಭಿವೃದ್ಧಿ ಹೆಸರಿನಲ್ಲಿ ಎಷ್ಟು ಜನಗಳಿಗೆ ಗುಳೆ ಕಳ್ಸಿದೀರಿ ಅಂತಾ ಲೆಕ್ಕ ಕೊಟ್ಟಿದ್ದಾರ. ಅವರ ಲೆಕ್ಕದ ಪ್ರಕಾರ ನಮ್ಮಲ್ಲಿ ಏಳು ಕೋಟಿ ಜನ ಇವತ್ತು ನಿರಾಶ್ರಿರಾಗಿದ್ದಾರೆ. ೧೦೦ ಕೋಟಿ ಜನರಲ್ಲಿ ೭ ಕೋಟಿ ಸಣ್ಣದು ಹೌದು. ಆದ್ರೆ ಅದರ ಇಂಪ್ಯಾಕ್ಟ್‌ ಅದನ್ನೇ ನಕ್ಸಲೈಟ್ರು ಉಪಯೋಗ ಮಾಡ್ಕೋತಾರೆ ಈಗ. ನಕ್ಸಲಿಸಂ ಈಸ್‌ ನಥಿಂಗ್‌ ಬಟ್‌ ಕಮ್ಯುನಿಸ್ಟ್‌ ಮೂವ್‌ಮೆಂಟ್‌. ಅದು ನಕ್ಸಲ್‌ ಅನ್ನೋದು ಹೆಸರಷ್ಟೇ. ಬಿಕಾಸ್‌ ಇಟ್‌ ಬಾರ್ನ್‌ ಇನ್‌ ಎ ವಿಲೇಜ್‌ ಇನ್‌ ಬೆಂಗಾಲ್‌.

ಮಾವೋವಾದಿಗಳು ಅಲ್ವಾ?

ಎಸ್‌. ಮಾವೋ ಐಡಿಯಾಲಜಿ. ದೋಸ್‌ ಬಾಯ್ಸ್‌ ಕೇಮ್‌ ಫಸ್ಟ್‌ಟು ಅಂಕೋಲ ಆಲ್ಸೋ.

ನಿಮ್ಮಲ್ಲಿಗಾ?

ಬಂದಿದ್ರು, ದೆ ಕೇಮ್‌ ಇನ್‌ ಎ ಡಿಫರೆಂಟ್‌…ಆಮೇಲೆ ನನಗೆ ಮತ್ತು ಬಿ.ಜೆ.ಪಿ. ಆರ್‌.ಎಸ್‌.ಎಸ್‌.ಗೆ ಘರ್ಷಣೆ ಶುರು ಆಯ್ತು. ಪಾಪ ಆ ಮಕ್ಕಳಿಗೆ ಅವ್ರು ಓಡಿಸಿದ್ರು.

ಯಾರನ್ನ?

ಅದೇ ಪ್ರಗತಿಪರ ವಿದ್ಯಾರ್ಥಿ ಕೇಂದ್ರದವರನ್ನ. ಐ ಗೇವ್‌ ದೆಮ್‌ ಶೆಲ್ಟರ್‌ ಅಂಕೋಲದಲ್ಲಿ. ಶೆಲ್ಟರ್‌ ಇನ್‌ದ ಸೆನ್ಸ್ ಐ ಎನ್‌ಕರೇಜ್‌ ದೆಮ್‌ ಟು ಹ್ಯಾಮ್‌ ಸಮ್‌…ಒಂದು ಟಾರ್ಚ್‌ ಪ್ರೊಸೆಷನ್‌ ಮಾಡಿದೆವು.

ನೀವು ಅವರ ಜೊತೆ ಏನನ್ನು ಚರ್ಚಿಸಿದ್ರೀ? ಯಾಕೆ ಅವರನ್ನ ಭಾಗದಲ್ಲಿ ಬೆಂಬಲಿಸಬೇಕು ಅನ್ನಿಸ್ತು?

ಈ ಭಾಗದ ಬಡತನದ ಬಗ್ಗೆ ಚರ್ಚಿಸಿದ್ವಿ. ಅವರು ಇಲ್ಲಿನ ಬಡತನಕ್ಕೆ ಕಾರಣಗಳನ್ನು ಚರ್ಚಿಸಿದ್ರು. ಮೀನುಗಾರರ, ಒಕ್ಕಲುಗಳ ಸಮಸ್ಯೆಗಳ ಬಗ್ಗೆ ಅವರು ಕೆಲಸ ಮಾಡಿದ್ರು. ಉತ್ತರ ಕನ್ನಡದ ಸಮಸ್ಯೆಗಳನ್ನು ತಗೊಂಡ್ರು ಅವ್ರು. ದೆ ವೆಂಟ್‌ ವಿಲೇಜ್‌ ಅಂಡ್‌ ಸ್ಟಡೀಡ್‌. ದೆ ಸ್ಟೇಯ್ಡ್‌ ದೇರ್. ಸುದ್ದಿ ಗೌರ್ನಮೆಂಟ್‌ಗೆ ಗೊತ್ತಾಯ. ಐಯಾಮ್‌ ಸಪೋಟಿಂಗ್‌ ದೆಮ್‌ ಅಂತ್ಹೇಳಿ. ಸಿ.ಐ.ಡಿ. ಬಂದಿದ್ದ ನನ್ಮನೆಗೆ. ಆತ ಬ್ರಾಂಡ್‌ ಮಾಡಿದ ನನಗೆ (ನಗು) ಈಗ್ಲೂ ನನ್ನ ಹೆಸರು ಬಿದ್ದಿದೆ ಅಲ್ಲಿ. ಪೋಲೀಸ್‌ ರೆಕಾರ್ಡ್‌ನಲ್ಲಿ ತಾಸ್‌ಗಟ್ಟಿ ಚರ್ಚೆಮಾಡಿದ.