ಕೀರ್ತಿಶೇಷ ಡಿ.ವಿ. ಗುಂಡಪ್ಪನವರು ತಮ್ಮ ‘ಸಾಹಿತ್ಯ ಶಕ್ತಿ’ ಎನ್ನುವ ಗ್ರಂಥದ ಧ್ಯೇಯ ವಾಕ್ಯವಾಗಿ –

“Who sighs for beauty is a poet;
Who strives for it is a Statesman”

ಎಂಬ ಆಂಗ್ಲ ಕವಿತಾರ್ಧವನ್ನು ಉದ್ಧರಿಸಿದ್ದಾರೆ. ಒಂದೇ ವ್ಯಕ್ತಿ ಏಕಕಾಲಕ್ಕೆ ಕವಿಯೂ(Poet) ರಾಷ್ಟ್ರಕನೂ (Statesman) ಆಗಿರಬಲ್ಲ ಎಂಬುದಕ್ಕೆ ಪಂಡಿತ ಜವಾಹಾರಲಾಲ ನೆಹರೂ ಉತ್ತಮ ಉದಾಹರಣೆ. ಪೂರ್ವೋಕ್ತ ‘ಸಾಹಿತ್ಯ ಶಕ್ತಿ’ಯಲ್ಲೇ ಇನ್ನೊಂದು ಕಡೆ ಡಿ.ವಿ.ಜಿ ಯವರು “ಜೀವನೋತ್ಕರ್ಷವನ್ನು ಕಾಲ್ಪನಿಕ ಪ್ರಪಂಚದಲ್ಲಿ ತೋರುವವನು ಕವಿ, ವಾಸ್ತವಿಕ ಪ್ರಪಂದಲ್ಲಿ ತೋರಬಲ್ಲವನು ರಾಜ್ಯಕರ್ಮಿ” ಎಂದು ಹೇಳಿರುವುದಲ್ಲದೆ, “ಕಾವ್ಯ ಸಂಸ್ಕಾರವಿಲ್ಲದವನು ಮಾಡುವ ರಾಜ್ಯ ಶಾಸನವು ಕುರುಡನು ಹಿಡಿದ ತುಪಾಕಿ; ಸಾಹಿತ್ಯವಿಲ್ಲದ ಸಾರ್ವಜನಿಕ ಸೇವೆ ಕತ್ತಲು ಕೋಣೆಯಲ್ಲಿ ಮೂಗನು ಬಡಿಸಿದ ಭೋಜನ” ಎಂದೂ ಸಾರಿದ್ದಾರೆ. ಕಾವ್ಯ (ಅಥವಾ ಸಾಹಿತ್ಯ) ಸಂಸ್ಕಾರ ಮತ್ತು ರಾಜ್ಯಕರ್ಮ ಇವೆರಡರ ಸುಂದರ ಸಮನ್ವಯವಾಗಿ ಬಾಳಿದವರೇ ಪಂಡಿತ ಜವಾಹರಲಾಲ ನೆಹರು!

ಪಂಡಿತ ನೆಹರೂ ಜನಿಸಿ ಒಂದು ಶತಮಾನಕ್ಕಿಂತ ಹೆಚ್ಚಾಗಿದೆ. ಅವರು ಕಣ್ಮರೆಯಾಗಿ ನಾಲ್ಕು ದಶಕಗಳು ಸಂದಿವೆ. ಭಾರತ ಪರತಂತ್ರವಾಗಿದ್ದಾಗಲೂ ಅದು ಸ್ವತಂತ್ರವಾದ ಮೇಲೂ ಲೋಕನಾಯಕನಾಗಿ ನವಜೀವನದ ‘ಋತುರಾಜ’ನಾಗಿ ಮೆರೆದ ಪಂ.ನೆಹರೂ ಅವರು ಮರೆಯಾಗಿದ್ದರೂ ಜನಮನದ ಸ್ವರ್ಣವಿಷ್ಟರದಲ್ಲಿ ಇನ್ನೂ ಆರೂಢರಾಗಿಯೇ ಇದ್ದಾರೆ. ನೆಹರೂ ಅವರದು ಗಂಡ ಭೇರುಂಡನಂತಹ ವ್ಯಕ್ತಿತ್ವ. ಸುಮಾರು ಮೂವತ್ತೈದು ವರ್ಷಗಳ ಕಾಲ ಅದರ ರಾಜಕೀಯ ದುರಂಧರನಾಗಿ ಹದಿನೆಂಟು ವರ್ಷ ದೇಶದ ಪ್ರಶ್ನಾತೀತ ಪ್ರಧಾನಿ; ಲೇಖನಿವೀರನಾಗಿ ಜಗತ್ತಿನ ಸಾಹಿತ್ಯರಂಗದಲ್ಲಿ ಉನ್ನತಪೀಠಾರೋಢ. ಪಿ.ಇ. ದಸ್ತೂರ್ ಎಂಬ ಮಹನೀಯರು, ನೆಹರೂ ಅವರನ್ನು “He is a man of affairs who is also a man of books. He is a patriot with a pen” ಎಂದು ವಿಶ್ಲೇಷಿಸಿರುವುದು ಯಥಾಥವೇ ಆಗಿದೆ.

ನೆಹರೂ ಅವರ ಬದುಕು ದೊಡ್ಡದು, ಬರೆಹವೂ ಅಷ್ಟೇ ದೊಡ್ಡದು. ಬದುಕು-ಬರೆಹಗಳ ಸಂಬಂಧವು ಎಲ್ಲರಲ್ಲೂ, ಎಲ್ಲ ಕಾಲಗಳಲ್ಲೂ ಅನ್ಯೋನ್ಯವಾಗಿರುತ್ತದೆ ಎಂದು ಹೇಳಲಾಗದು. ಆದರೂ ಒಮ್ಮೊಮ್ಮೆ ಒಬ್ಬೊಬ್ಬರಲ್ಲಾದರೂ ಅವು ಒಂದೇ ಮಟ್ಟದಲ್ಲಿರುವುದನ್ನು ಕಾಣಬಹುದು. ಪಂ. ನೆಹರೂ ಆ ಮಟ್ಟದವರು. ಆದುದರಿಂದಲೇ ಅವರ ಬದುಕಿನಲ್ಲೂ ಬರಹದಲ್ಲೂ ಯಾವುದು ಮಿಗಿಲು. ಯಾವುದನ್ನು ಆರಿಸಿ ಮೆಚ್ಚೋಣ ಎಂದು ಹಲವರು ಸಂಶಯಗ್ರಸ್ತರಾಗುವುದೂ ಇದೆ. ನೆಹರೂ ಅವರನ್ನು ಉನ್ನತ ರಾಜ ನೀತಿಜ್ಞ ಎನ್ನುವುದಕ್ಕಿಂತ ಶ್ರೇಷ್ಠ ಲೇಖಕನೆನ್ನುವುದೇ ಉಚಿತ ಎಂದು ಅಭಿಪ್ರಾಯ ಪಡುವ ವಿಮರ್ಶಕರೂ ಇದ್ದಾರೆ. ನೆಹರೂಜಿಯ ಲೇಖನ ವ್ಯವಸಾಯ ಹೆಚ್ಚಾಗಿ ನಡೆದದ್ದು ಸೆರೆಮನೆಯ ಕತ್ತಲಲ್ಲಿ, ನಾಲ್ಕು ಗೋಡೆಗಳ ನಡುವಿನಲ್ಲಿ, ಸೆರೆಮನೆ ಸೇರಿದವರು ತಮ್ಮ ದುರ್ವಿಧಿಗಾಗಿ ಕೊರಗುತ್ತ ದಿನಗಳನ್ನು ದೂಡುವರಾದರೆ ನೆಹರೂಜಿಗೆ ಸೆರೆಮನೆಯೇ ಗುರುಮನೆಯಾಯಿತು. ಒಂದು ಹೊಸ ಆವಿಷ್ಕಾರಕ್ಕೆ, ಆತ್ಮಶೋಧನಕ್ಕೆ ಸ್ಫೂರ್ತಿ ಕೇಂದ್ರವಾಯಿತು. ಕಾರಾಗಾರದ ಕತ್ತಲಲ್ಲೇ ಶ್ರೀ ಕೃಷ್ಣ ಜನನವಾದಂತೆ ನೆಹರೂಜಿಯ ಉದ್ಘ ಕೃತಿಗಳಲ್ಲಿ ಹೆಚ್ಚಿನವು ಅಲ್ಲೇ ಹುಟ್ಟಿ ಬಂದವು. ಸಾಹಿತ್ಯಾಸಕ್ತರೂ ಶಕ್ತರೂ ಆದ ಅನೇಕ ಭಾರತೀಯ ರಾಜನೀತಿಜ್ಞರು ಗ್ರಂಥಗಳು ಅವತರಿಸಿದುದು ಅವರ ತುರಂಗವಾಸದ ಅವಧಿಯಲ್ಲೇ ಎಂಬುದು ಸೋಜಿಗ!

ನೆಹರೂಜಿಯ ಕೃತಿಗಳಾದರೂ ಎಂತಹವು? ಒಂದೊಂದರದೂ ಉನ್ನತ ಗಾತ್ರ, ಉತ್ತಮ ಸತ್ವ. ಪುಟಗಳ ಸಂಖ್ಯೆ, ವಿಷಯದ ವಿಸ್ತಾರ, ವಸ್ತುವಿನ ವೈವಿಧ್ಯ ಎಲ್ಲದರಲ್ಲೂ ಅವು ದೊಡ್ಡವು. ನೆಹರೂ ವಾಙ್ಮಯ ಬೃಹತ್ ಅಷ್ಟೇ ಅಲ್ಲ ಅಸಾಮಾನ್ಯ. ಅವಶ್ಯಕವಾದ ಆಕರ ಗ್ರಂಥಗಳೂ ಲೇಖನ ಸೌಲಭ್ಯಗಳೂ ಅತಿ ವಿರಳವಾಗಿದ್ದ ಸೆರೆಮನೆಯ ಕತ್ತಲಲ್ಲಿ ಕುಳಿತು ನೆಹರೂ ಜಗತ್ತಿನ ಇತಿಹಾಸವನ್ನೂ ಮಾನವ ಚರಿತ್ರೆಯನ್ನೂ ಪುನಾರಚಿಸಿದರು, ಭಾರತೀಯ ಸಂಸ್ಕೃತಿಯ ಸಾರ ಸೌಂದರ್ಯಗಳ ಸಮ್ಯಕ್‌ದರ್ಶನ ಮಾಡಿಕೊಂಡರು. ಇದು ಹೇಗೆ ಸಾಧ್ಯವಾಯಿತು? -ಅವರಲ್ಲಿ ಸಹಜವಾಗಿದ್ದ ಸೌಂದರ್ಯೋಪಾಸನೆ, ಸಂವೇದನಶೀಲತೆಗಳಿಂದಲೇ ಆಯಿತು. ಕವೀಂದ್ರ ರವೀಂದ್ರರು ನೆಹರೂಜಿಯನ್ನು ’ಋತು ರಾಜ’ ಎಂದು ವರ್ಣಿಸಲು ಅದೇ ಕಾರಣ. ಅಮಿತ ಚೈತನ್ಯ, ಆದಮ್ಯ ಉತ್ಸಾಹ, ಅಪಾರ ದೇಶಭಕ್ತಿ ಮತ್ತು ಸ್ವಾತಂತ್ಯ್ರ ಪ್ರೇಮಗಳೇ ನೆಹರೂಜಿಯನ್ನು ಕಾರಾಗೃಹದಲ್ಲೂ ಕಾರ್ಯಪಟುವಾಗಿರುವಂತೆ ಪ್ರೇರಿಸಿದವು. ಅದರ ಫಲವೇ The Glimpses of World History. The Autobiography, The Discovery of Indiaದಂತಹ ಉದ್ಗ್ರಂಥಗಳು.

ದೇಶವು ಸ್ವತಂತ್ರವಾಗಿ, ನೆಹರೂಜಿಯವರು ಪ್ರಧಾನಿಯಾದ ಅನಂತರ ಅವರು ಬರೆದದ್ದು ಕಡಮೆ. ಗ್ರಂಥಗಳ ಪುನರ್ಮುದ್ರಣವೋ ಭಾಷಣ ಲೇಖನಗಳ ಸಂಗ್ರಹಣವೋ ಆ ಮೇಲೆ ನಡೆದಿರಬಹುದಾದರೂ ಸ್ವತಂತ್ರ ರಚನೆ – ಅದರಲ್ಲೂ ಗ್ರಂಥ ವಿರಚನೆ ವಿರಳವೆಂದೇ ಹೇಳಬಹುದು. ದಿನದ ಇಪ್ಪತ್ತನಾಲ್ಕು ತಾಸೂ ದೇಶ ವಿದೇಶಗಳ ರಾಜಕೀಯ ವ್ಯವಹಾರಗಳೇ ಅವರ ತಲೆಯನ್ನು ತುಂಬಿ ಲೇಖನಿಯನ್ನು ತಡೆದದ್ದು ಒಂದು ಸಾಹಿತ್ತಿಕ ದುರ್ದೈವ ಎನ್ನದೆ ವಿಧಿಯಿಲ್ಲ. ನೆಹರೂಜಿಯ ಸೋದರಿ ಶ್ರೀಮತಿ ಕೃಷ್ಣಾ ಹಥೀಸಿಂಗ್, “….ಮೊದಲು ನಾವೆಲ್ಲ ಆನಂದ ಭವನದ ಅಣ್ಣನನ್ನು ಕಾಣಬಹುದಿತ್ತು; ಈಗ ದೇಶದ ಪ್ರಧಾನಿಯನ್ನಷ್ಟೇ ನೋಡುತ್ತಿದ್ದೇವೆ” ಎಂಬುದಾಗಿ ಒಂದುಕಡೆ ಬರೆದದ್ದು ಎಷ್ಟೊಂದು ಮಾರ್ಮಿಕ! ರಾಜಕಾರಣದ ಉರಿಬಿಸಿಲು ಅವರೊಳಗಿನ ಸೌಂದರ್ಯ ಸಂವೇದನೆಗಳ ರಸದೊರತೆಗಳನ್ನು ಇಂಗಿಸಿಬಿಟ್ಟವು.

ನೆಹರೂ ಬರವಣಿಗೆಯಲ್ಲಿ ಹೆಚ್ಚಿನವು ೧೯೨೮ ರಿಂದ ೧೯೪೬ರ ಅವಧಿಯೊಳಗಿನವು. ಅವೆಲ್ಲ ಸೆರೆಮನೆಯ ಬರವಣಿಗೆ ಎಂದು ಮತ್ತೆ ಹೇಳಬೇಕಿಲ್ಲ. ಅವರ ವಾಙ್ಮಯದಲ್ಲಿ ಬಹುಭಾಗ ಇಂಗ್ಲಿಷಿನಲ್ಲಿದೆ. ನೆಹರೂಜಿಯ ಶಿಕ್ಷಣವೆಲ್ಲ ಇಂಗ್ಲಿಷ ಶಾಲೆಯಲ್ಲಿ, ಕ್ಯಾಂಬ್ರಿಡ್ಜ್‌ನಲ್ಲಿ ನಡೆದುದೇ ಅದಕ್ಕೆ ಮೂಖ್ಯ ಕಾರಣ. ಒಂದು ಕಾಲದಲ್ಲಿ ಭಾರತೀಯ ಆಂಗ್ಲ ಲೇಖಕರಿಗೆ ಪ್ರತ್ಯೇಕ ಪಂಕ್ತಿ ಅಡ್ಡ-ಪಂಕ್ತಿಯೆಂದರೂ ಸರಿ-ಹಾಕುವ ಕ್ರಮವಿತ್ತು. ಆದರೆ ನೆಹರೂಜಿಯ ಇಂಗ್ಲಿಷ್ ಭಾಷೆಯಾದರೂ ಯಾವ ಬಗೆಯದು? ಶುದ್ಧ ಸುಂದರ ಇಂಗ್ಲಿಷನ್ನು The king’s English ಎನ್ನುವುದುಂಟು. ನೆಹರೂ ಇಂಗ್ಲಿಷ್ ಹಾಗೆ ರಾಜ ಯೋಗ್ಯ, ರಾಜಭಾಷೆ! ಮೆಡಾಂ ಚಿಯಾಂಗ ಕೈ ಶೇಖ್ ಅವರು, “Nehru is admittedly one of the very few oriental writers who are able to use the English language with a facility and falicity that many to whom English is the mother tongue render homage” ಎಂದು ನೆಹರೂ ಇಂಗ್ಲಿಷನ್ನು ಶ್ಲಾಘಿಸಿದ್ದರು. ಅವರು ಮುಂದುವರಿದು, “Long after the noise and canfusion of political battle have deid away and become a memory of the past, literary fame will continue and it is not foolhardy to prophecy that Nehru will continue to shine as a star in the firmament of English literature long as the English language lasts” ಎಂದು ಸಾರಿದ್ದರು. ಈ ಭವಿಷ್ಯವಾಣಿಯನ್ನು ಅವರು ಹೇಳಿದ್ದು ಸುಮಾರು ನಲ್ವತ್ತೈದು ವರ್ಷಗಳ ಹಿಂದೆ; ಈಗ ಅದು ಸ್ಥಾಪಿತ ಸತ್ಯ.

ಪಂ. ನೆಹರು ಅವರ ನಾಲ್ಕು ಮುಖ್ಯ ಕೃತಿಗಳ ಕಾಲಾನುಕ್ರಮಣಿಕೆ ಹೀಗಿದೆ : Letters from a Father to his Daughter (ಸುಮಾರು ೧೯೨೮) The Glimpses of World History (೧೯೩೪). An Autobiography (೧೯೩೬) ಮತ್ತು Discovery of India (೧೯೪೬) ಇವುಗಳ ಜತೆಗೆ  Recent Essays and Writings; Whither India; A window in Prison and Prison-land; Soviet Russia; India and the World; Eighteen Months in India: Where are we?, China-Spain and the war ಮುಂತಾದವುಗಳೂ ಇವೆ. ಕಾಲಾಂತರದಲ್ಲಿ ಭಿನ್ನ ಭಿನ್ನ ಸಂಪುಟಗಳಲ್ಲಿ ಪ್ರಕಟವಾದ ನೆಹರೂ ಭಾಷಣ ಮತ್ತು ಲೇಖನಗಳೂ ಹಲವಾರಿವೆ. ಅವರ ಉದ್ಗ್ರಂಥಗಳಲ್ಲಿ ಕೆಲವಾದರೂ ವಿವಿಧ ಭಾಷೆಗಳಿಗೆ ಅನುವಾದಿತವಾಗಿವೆ; ಕೆಲವು ಕನ್ನಡಕ್ಕೂ ಬಂದಿವೆ.

ನೆಹರೂ ಗ್ರಂಥಗಳಲ್ಲಿ ಅವರ An Auto biography – ಆತ್ಮಕಥನ ಅತ್ಯುತ್ಕೃಷ್ಟವೆಂದು ಸರ್ವಜನ ಮಾನ್ಯವಾಗಿದೆ. ಕೇವಲ ಎಂಟು ತಿಂಗಳಲ್ಲಿ (ಜೂನ್ ೧೯೩೪-ಫೆಬ್ರವರಿ ೧೯೩೫) ಸೆರೆಮನೆಯಲ್ಲಿ ಪಾಕಗೊಂಡ ಹೆಬ್ಬೊತ್ತಗೆ ಇದು. ಸ್ವಕಥನ, ವಿದೇಶ ವ್ಯವಹಾರ ಇವುಗಳ ಹದವಾದ, ಹಸನಾದ ಮುಪ್ಪುರಿಯನ್ನು ಈ ಗ್ರಂಥದಲ್ಲಿ ಕಾಣುತ್ತೇವೆ. ನೆಹರೂ ಮತ್ತು ಆಧುನಿಕ ಭಾರತ ಬೇರೆ ಬೇರೆಯಲ್ಲ; ಒಂದು ಇನ್ನೊಂದರ ಜತೆ ಬೆರೆತಿದೆ, ಬೆಳೆದಿದೆ. ಅದನ್ನು An Autobiography ಯಲ್ಲಿ ಕಾಣುತ್ತೇವೆ. “It is the authentic account of the unusual development and growth of a life that is still growing” ಎಂದು ಹೇಳಿದ್ದಾರೆ. ಮಹದೇವ ದೇಸಾಯಿ, ‘ನೆಹರೂಜಿಯ ಮಾತಾಪಿತೃ ಭಕ್ತಿ, ದೇಶಪ್ರೇಮ, ವೀರಾವೇಶ, ಅವರ ಹಾಸ್ಯ ಪ್ರಜ್ಞೆ, ಅವರ ಕರುಣೆ, ಆರ್ದ್ರತೆ ಇಂತಹ ಹತ್ತು ಹಲವು ಅಮೂಲ್ಯ ಮಾನವೀಯ ಗುಣಗಳು ಗ್ರಂಥದ ಪುಟ ಪುಟಗಳಲ್ಲಿ ಹರಳುಗಳಾಗಿ ಹೊಳೆಯುವುದನ್ನು ಕಾಣುತ್ತೇವೆ. ನೆಹರೂಜಿಯ ಬರವಣಿಗೆಯ ಸೊಗಸಿಗೆ, ಚಿತ್ರಗಾರಿಕೆಯ ಕುಶಲತೆ ಒಂದು ಉದಾಹರಣೆಯನ್ನು ನೋಡಿ :

And yet. India with all her poverty and degradation had enough of nobility and greatness about her and though she was overburdened with ancient tradition and present misery, and her eyelids were a little weary she had, “a beauty wrought out from within upon the flesh, the deposit little cell by cell, of stray thoughts and fantastic reveries and exqiusite passions”. Behind and within her battered body one could still glimpse a majesty of soul. Through long ages she had travelled and gathered much wisdom on the way and trafficked with strangers and added them to her own big family and witnessed days of glory and of decay and suffered humiliation and terrible sorrow, and seen many a strange sight; but throughout her journey she had clung to her immemorial culture, drawn strength and vitality from it, and shared it with other lands. Like a pendulum she had swung up and down; she had ventured with the daring of he thought to reach up to the heavens and unravel their majstery and she had also had bitter experience of the pit of hell. Dispite the woeful accumulations of superstition and degrading custom that had clung to her and borne her down, she had never wholly forgotten the inspiration of the wisest of her children at the dawn of history, had given her in the Upnaishads. their keen minds, ever restless and ever striving and exploring, had not sought refuge in blind dogma or grown complacent in the observance of dead forms or ritual and creed. they had demanded not a personal relief from suffering in the present or a place in a paradise to come, but light and understanding “Lead me from the unreal  to the real, lead me from darkness to light, lead me from death to immortality”. In the most famous of the prayers recited daily even today millions, the Gayathri mantra, the call is for knowledge, for enlightenment”.

ನೆಹರೂಜಿಯವರ An Autobiographyಯಲ್ಲಿ ಗಾಂಧೀಜಿಯ ಖಂಡನೆ ಇದೆ  ಎಂಬುದಾಗಿ ಕೆಲವರು ಆಕ್ಷೇಪಿಸಿದ್ದಾರೆ. ಗಾಂಧೀಜಿಗೆ ಪ್ರಿಯವಾದ ಖಾದಿ, ಅಸಹಕಾರ, ಧರ್ಮದರ್ಶಿತ್ವ, ದೇವರು ಇಂತಹ ಕೆಲವು ವಿಷಯಗಳಲ್ಲಿ ನೆಹರೂಜಿಯದು ಭಿನ್ನ ಸ್ವರ. ಕೆಲವು ಸಂದರ್ಭಗಳಲ್ಲಿ ಅವರು ಗಾಂಧೀಜಿಯ ತತ್ವ ವಿಚಾರಗಳನ್ನು ಕುರಿತು ಅಸಹನೆಯ ಮಾತುಗಳ್ನು ಆಡಿದುದೂ ಇಲ್ಲವೆಂದಲ್ಲ. ಹಾಗಿದ್ದರೂ ಗಾಂಧೀ ನೆಹರೂ ಸಂಬಂಧ ಅತಿನಿಕಟ, ಅನ್ಯಾದೃಶ, ವಿವೇಚನಾರಹಿತ ಪರಿಗ್ರಹಣಕ್ಕಿಂತ ವಿವೇಕಯುತ ಪ್ರತಿಭಟನೆಯೇ ಲೇಸು ಎಂದು ಗಾಂಧೀಜಿಯೇ ಹೇಳಿದ್ದಾರೆ. ಭಿನ್ನಾಭಿಪ್ರಾಯಗಳು ಎಷ್ಟೇ ಇದ್ದರೂ ಗಾಂಧೀಜಿಯ ಆದ್ವೀತಿಯ ಶೋಧನೆಯೆಂದರೆ ‘ನೆಹರೂ’ ಎಂದೂ ಹೇಳುವುದುಂಟು! ನೆಹರೂರವರು ಗಾಂಧೀಜಿಯನ್ನು ಕುರಿತು ಆಡಿರುವ ಈ ಮಾತನ್ನು ಕೇಳಿ : “He is above the usual standards, we cannot measure him or judge him as we would others”. ಮಾಥ್ಯೂ ಅರ್ನಾಲ್ಡ್ ಶೇಕ್ಸ್‌ಪೀಯರನ ಬಗ್ಗೆ ‘Others abids our question, thou art free’ ಎಂದು ಉದ್ಗರಿಸಿದಂತೆಯೇ ಇದೆ ನೆಹರೂ ವಾಕ್ಯ. ಅದು ‘ಹತ್ತು ಕಟ್ಟುವಲ್ಲಿ ಮುತ್ತು ಕಟ್ಟು’ವಂತಹ ಮಾತು!

ನೆಹರೂಜಿಯ ಆತ್ಮ ಚರಿತ್ರೆಯ ಮಟ್ಟವನ್ನೇ ಮುಟ್ಟಿರುವ ಇನ್ನೊಂದು ಗ್ರಂಥವೆಂದರೆ Glimpses of World History. ಇದಕ್ಕೆ ಪುರ್ವಭಾವಿಯೆಂಬಂತೆ, ೧೯೨೮ರ ಸುಮಾರಿಗೆ ಅವರು ತಮ್ಮ ಏಕ ಮಾತ್ರ ಪುತ್ರಿ (ಇಂದಿರಾ ಪ್ರಿಯದರ್ಶಿನಿ)ಗೆ ಬರೆದ ಪತ್ರ ಗುಚ್ಛವೊಂದನ್ನು Latters from a father to his Daughter ಎಂಬುದಾಗಿ ಪ್ರಕಟಿಸಿದ್ದರು. ಅದಕ್ಕೆ ಮಹಾಜನರು ತೋರಿದ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ನೆಹರೂ, ಮಗಳಿಗೆ ಹುಟ್ಟು ಹಬ್ಬದ ಹರಕೆಯ ನೆಪದಲ್ಲಿ ಮುಂದಿನ ಅವಧಿಯಲ್ಲಿ ಮತ್ತಷ್ಟು ಪತ್ರಗಳನ್ನು ಬರೆದರು. ೧೯೩೧ರ ಜನವರಿ ಒಂದರಿಂದ ತೊಡಗಿ ೧೯೩೩ರ ಆಗೋಸ್ತು ೯ರ ವರೆಗಿನ ಅವಧಿಯಲ್ಲಿ ಒಟ್ಟು ೯೬ ಪತ್ರಗಳನ್ನು ಬರೆದರು. ಎಲ್ಲಕ್ಕೂ ಒಟ್ಟಾಗಿ Glimpses of World History ಎಂಬ ಶೀರ್ಷಿಕೆ ಕೊಟ್ಟರು. ಆ ಪತ್ರ ಸ್ವರೂಪವಾದೂ ಎಂತಹದ್ದು? ಮನು ಕುಲದ ಸಂಕ್ಷಿಪ್ತ ಇತಿಹಾಸ ಕಥನವೇ ಅಲ್ಲಿದೆ. ಅದರ ರಚನೆಯಲ್ಲಿ ಪಂ. ನೆಹರೂ ಎಚ್.ಜಿ. ವೆಲ್ಸರ The Outlines of World Historyಯಿಂದ ಪ್ರೇರಿತರಾಗಿದ್ದರೂ, ಅದೊಂದು ಸ್ವತಂತ್ರ, ಸ್ವಯಂಪೂರ್ಣವೆಂದೇ ತೋರುವ ಸತ್ವಯುತ ಗ್ರಂಥ. ನೆಹರೂಜಿಗೆ ಸೆರೆಮನೆಯ ಕರಿಗೋಡೆಯೇ ಬೆಳ್ಳಿ ಪರದೆಯಾಯಿತು. ಅದರಲ್ಲಿ ಅನಾದಿಯಿಂದ ಆಧುನಿಕ ಕಾಲದವರೆಗಿನ ಘಟನಾವಳಿಯ ಪುನಃ ಸೃಷ್ಟಿಯಾಯಿತು; ಎಲ್ಲವೂ ನೆನಪಿನ ಬಿಂಬಗ್ರಾಹಕದಲ್ಲಿ ಅಚ್ಚೊತ್ತೊ ನಿಂತವು; ಲೇಖನಿಯ ಕೊನೆಯಲ್ಲಿ ಚಿಮ್ಮಿ, ಬಿಳಿ ಹಾಳೆಯ ಮೇಲೆ ನೀಲಿ ಶಾಯಿಯಲ್ಲಿ ಎದ್ದು ಬಂದವು; ಇತಿಹಾಸ ಗರ್ಭಸ್ಥವಾದ ಸುಂದರ ಸಾಹಿತ್ಯ ಸೃಷ್ಟಿಯಾಯಿತು! “In the Glimpses the pageant of the past is painted in bold touches on a broad canvas” ಎಂದಿದ್ದಾರೆ. ಪ್ರೊ. ಹುಮಾಯನ್ ಕಬೀರ್. ಇತಿಹಾಸವನ್ನು ಪುನರಾರಚಿಸಿದ ನೆಹರೂ ತಮ್ಮ ಗ್ರಂಥದ ಉಪಸಂಹಾರ ಮಾಡುವ ರೀತಿ ಹೀಗಿದೆ :

“The river of life is never still. It flows on and sometimes, as now, it rushes forward, pitilessly, with a demon energy ignoring our little wills and desires, making cruel mockery of our petty selves, and tossing us about like straws on its turbulent waters, rushing on and on no one knows wither-to a great precipice which will shatter it into a thousand bits or to the vast and inscrutable stately and calm, love changing yet changeless sea”.

“ಜಗತ್ ಕಥಾ ವಲ್ಲರಿ” (Glimpses of World History)ಗೆ ಪೂರಕವಾದ ಕೃತಿ ‘ಭಾರತ ದರ್ಶನ’ (Discovery of India) ಅದು ಕೇವಲ ಐದು ತಿಂಗಳ ಅಲ್ಪಾವಧಿಯಲ್ಲಿ ಸೆರೆಮನೆಯಲ್ಲಿ ಅರಳಿದ ಕಮಲ. ಮಿಕ್ಕ ಕೃತಿಗಳಂತೆ ಅದರಲ್ಲೂ ದೇಶ ವಿಚಾರ ಸ್ವಕೀಯ ಪ್ರಸಕ್ತಿ ಇವೆರಡರ ಸುಂದರ ಸಾಮರಸ್ಯವನ್ನು ಕಾಣುತ್ತೇವೆ. ಹಾಗೆಯೇ ಭಾವಿಕತೆ, ವಿಚಾರ ಪರತೆ ಎರಡೂ ಸಮ ಪ್ರಮಾಣದಲ್ಲಿ ಮೇಳೈಸಿರುವದನ್ನೂ ಕಂಡು, ಕೊಂಡಾಡುತ್ತೇವೆ. ಪ್ರೊ. ಕಬೀರರು, The Discovery reveals the same quality of relating the personal with the universal. In discovering India, Nehru in fact discovers him self ಎಂದಿರುವುದು ಉಚಿತವಾಗಿದೆ. ಪುಸ್ತಕದ ಪುಟಗಳನ್ನು ತಿರುವುತ್ತಿರುವಂತೆ, ಇತಿಹಾಸವೆಂದರೆ ಸಂದು ಹೋದ ಘಟನೆಗಳಲ್ಲ, ಕಣ್ಣ ಮುಂದಿನ ವಿದ್ಯಮಾನಗಳು ಎಂಬಷ್ಟು ಸಹಜವಾದ, ಸಜೀವವಾದ ಚಿತ್ರಣಗಳು ಒಂದರ ಹಿಂದೆ ಒಂರಂತೆ ಎದ್ದು ಬರುತ್ತವೆ. ಉದಾಹರಣೆಗೆ ಗೌತಮ ಬುದ್ಧನ ಈಯೊಂದು ಚಿತ್ರವನ್ನು ನೋಡಿರಿ :

“The Conception of the Buddha to which innumerable loving hands have given shape in carved stone and marble and bronze, seems to symbolise the whole spirit of Indian thought, or at one vital aspect of it. Seated on the lotus flower, calm and impassive, above passion and desire, beyond the storm and strife of this world, so far away, he seems out of reach, unattainable. Yet again we look and behind those still unmoving features there is a passion and an emotion, strange and more powerful than passions and emotions we known. His eyes are closed, but some power of the spirit looks out of them and a vital energy fills the frame. The ages roll by and the Buddha seems not so far away after all, his voice whispers in our ears and tells us not to run away from the struggle but calm eyed, to face it, and to see in life ever greater opportunities for growth and advancement.”

ನೆಹರೂಜಿಯವರದು ಇತಿಹಾಸಕಾರನ ವಸ್ತುನಿಷ್ಠತೆ, ವಿಜ್ಞಾನಿಯ ರಸವಿಮುಖತೆ, ರಾಜಕಾರಣಿಯ ಉದ್ವೇಗಪರತೆಗಳಲ್ಲ; ಅವರದು ಕಲಾಕಾರನ ಸಂವೇನದೆ ಮತ್ತು ರಸನಿರ್ಭರತೆ. ಭೂಗೋಳವಿರಲಿ, ಖಗೋಳವೇ ಆಗಿರಲಿ, ಅವರ ಲೇಖನಿ ಕೇವಲ ಪಂಚಭೂತಗಳ, ಸೂರ್ಯ ಚಂದ್ರರ ವಿಭಜನೆ ವಿಶ್ಲೇಷಣೆಗಳಿಗಷ್ಟೆ ಮಿತವಾಗಿಲ್ಲ; ಅದು ಜಡವಾದವುಗಳಲ್ಲಿ ರಕ್ತ ಮಾಂಸ ಮಜ್ಜೆಗಳನ್ನು ತುಂಬುತ್ತದೆ. ನದಿ ನದಗಳಲ್ಲಿ, ಉನ್ನತ ಗಿರಿ ಶಿಖರಗಳಲ್ಲಿ, ವಿಶಾಲ ಧರಿತ್ರಿಯ ವರ್ಣಮಯತೆಯಲ್ಲಿ, ವರ್ಷಾಘಾತದಲ್ಲಿ, ಸಮುದ್ರ ಜಲರಾಶಿಯಲ್ಲಿ, ಸೂರ್ಯ ಚಂದ್ರರ ಉದಯಾಸ್ತಗಳಲ್ಲಿ, ನೀಲ ನೀರವ ಆಕಾಶದಲ್ಲಿ, ನಕ್ಷತ್ರಗಳ ಅಗಣಿತತೆಯಲ್ಲಿ ನೆಹರೂ ಜೀವ ವಹರಿಸುತ್ತದೆ, ರಸ ರೋಮಾಂಚನಗೊಳ್ಳುತ್ತದೆ. ಜಾಗತಿಕ ಇತಿಹಾಸವಿರಲಿ, ಭಾರತೀಯ ಚರಿತ್ರೆಯಾಗಲಿ ಯಾವುದೂ ಭೂತಕಾಲದ ತಿಮಿರ ಗರ್ಭದ ಅಮೂರ್ತ ವಿಷಯಗಳಾಗಿ ಉಳಿಯುವುದಿಲ್ಲ:- ಅವರ ಸರಸ ಲೇಖನಿಯ ಸಂಜೀವನೀ ಸ್ಪರ್ಶದಿಂದ ಜೀವಂತವಾಗುತ್ತದೆ, ಜ್ವಲಂತವಾಗುತ್ತದೆ. ಎಷ್ಟೋ ಕಡೆಗಳಲ್ಲಿ ನೆಹರೂ ಗದ್ಯ ಪದ್ಯ ಗಂಧಿಯಾಗಿ ಚಿಮ್ಮುತ್ತದೆ; ಅವರೊಬ್ಬ ವರ್ಣ ಶಿಲ್ಪಿಯಾಗುತ್ತಾರೆ “Indian had gained in Nehru a great political leader at cost of a still greater poet and artist” ಎಂದು ಸಹೃದಯಿಯೊಬ್ಬರು ಉದ್ಗರಿಸಿದುದು ಸತ್ಯ ದೂರವೇನೂ ಅಲ್ಲ.

ನೆಹರೂಜಿಯ ಬರವಣಿಗೆಗಳ ಹಿರಿಮೆಯೆಂದರೆ ಅವುಗಳ ಆಳದಲ್ಲಿ ಕಂಡುಬರುವ ಸರಳತೆ, ಪ್ರಾಂಜಲತೆ. Iam not a man of letters. Iam something of a Journalist ಎನ್ನುತ್ತಾರೆ ಅವರು. ಈ ಮಾತು ಡಿ.ವಿ.ಜಿ ಯವರ “ಕವಿಯಲ್ಲ ವಿಜ್ಞಾನಿಯಲ್ಲ, ಬರಿ ತಾರಾಡಿ” ಎಂಬ ಉದ್ಗಾರವನ್ನು ನೆನಪಿಗೆ ತರುವಂತಿದೆ. ಆದರೆ ಬರವಣಿಗೆಯ ಸಂಖ್ಯೆ ಮತ್ತು ಸತ್ವಗಳು ಈ ಮಾತು ಬರಿಯ ನಿರಹಂಕಾರತೆ ಎಂಬುದನ್ನು ಧೃಡಪಡಿಸುತ್ತವೆ.

ನವೆಂಬರ್ ೧೪, ನೆಹರೂ ಜಯಂತಿ, ಮಕ್ಕಳ ದಿನ. ನೆಹರೂಜಿಯವರು ತಮ್ಮ “Glimpses…”ನ ಆರಂಭದಲ್ಲೂ ಅಂತ್ಯದಲ್ಲೂ ಮಗಳು ಇಂದಿರಾ ಪ್ರಿಯದರ್ಶಿನಿನ್ನು ಕುರಿತು ಆಡಿದ ಮಾತುಗಳು ಎಲ್ಲ ಮಕ್ಕಳಿಗೂ ಮಕ್ಕಳೊಂದಿಗೆ ಅವರ ಹೆತ್ತವರಿಗೂ ಸ್ಮರಣೀಯವೂ ಅನುಸರಣೀಯವೂ ಆಗಿವೆ :

“To read History is good, but even more interesting is to help in making history……

People avoid action often because they are afraid of the consequences. For action means risk and danger… Many people go up the high mountains and  risk life and limb for the joy of the climb and the exhilaration that comes from a difficulty surmounted, a danger overcome…..

All of us have their choice of living in the valleys below with unhealthy mists and fogs but giving a measure of bodily security or of climbing the high mountains with risk and danger for companious to breathe the pure air above and take joy in the distant views and welcome the rising sun……..

ಪಂ. ನೆಹರೂ ತಮ್ಮಿ ಸುದೀರ್ಘ ಪತ್ರ ಮಾಲೆಯನ್ನೂ ಕವಿವರ್ಯ ಠಾಕೂರರ Where the mind is without fear…..ಎಂಬ ಪ್ರಾರ್ಥನೆಯೊಂದಿಗೆ ಮುಗಿಸಿದ್ದಾರೆ. ನಮಗಾದರೂ ಇದಕ್ಕಿಮತ ಉತ್ತಮವಾದ ಪ್ರಾರ್ಥನೆ ಮತ್ತಾವುದಿದೆ?.