ಅನೇಕ ಸಂದರ್ಭಗಳಲ್ಲಿ ಪರಸ್ಪರ ವಿಚಾರವಿನಿಮಯ ಮಾಡಿಕೊಳ್ಳುವಂತೆ ಪರಸ್ಪರ ಭಾವನೆಗಳನ್ನೂ ಅನೂಭವಿಸುತ್ತರೆ. ಆರಂಭದ ದಿನಗಳಲ್ಲಿ ಸಾಂಘಿಕ ಜೀವನವು ಅತ್ಯವಶ್ಯವಾಗಿತ್ತು. ಧಾರ್ಮಿಕ ಆಚರಣೆಯಲ್ಲಿ ವಿಶೇಷ ಪರಿಜ್ಞಾನವನ್ನು ಹೊಂದಿದ ವ್ಯಕ್ತಿಯೊಬ್ಬನನ್ನು ಕೇಂದ್ರವನ್ನಾಗಿಟ್ಟುಕೊಂಡು ಅಥವಾ ದೇವರ ಪ್ರತಿರೂಪವೆಂದು ತಿಳಿದು ಹಬ್ಬವನ್ನು ಆಚರಿಸುತ್ತಿದ್ದರು. ಇಲ್ಲಿ ಸಮುದಾಯದ ಧರ್ಮಿಕ ನೃತ್ಯಗಳ ಉಗಮವನ್ನು ಕಾಣಬಹುದು. ಇದಕ್ಕೂ ಮೊದಲು ಧಮಕ್ಕೂ ಸಮಾಜಕ್ಕೂ ಇರುವ ಸಂಬಂಧವನ್ನು ತಿಳಿಯುವುದು ಅವಶ್ಯ. ಅನೇಕ ವಿದ್ವಾಂಸರು ಧರ್ಮದ ಉಗಮವನ್ನು ಸರ್ವ ಚೇತನ, ಮಂತ್ರ ಮಾಟಗಳಲ್ಲಿ ಕಾಣಲು ಯತ್ನಿಸಿದ್ದಾರೆ. ಇದರಿಂದ ಸಮಸ್ಯೆಯು ಬಗೆಹರಿಯುವುದರ ಬದಲಾಗಿ ಕ್ಲಿಷ್ಟವಾಗುತ್ತ ಸಾಗಿದೆಯೆಂದು ಸ್ಮಿಲ್ :  “ಧರ್ಮದ ಉಗಮ ಮತ್ತು ಬೆಳವಣಿಗೆ” ಎಂಬ ಗ್ರಂಥದಲ್ಲಿ ಹೇಳಿದ್ದಾರೆ. ಧರ್ಮದ ಇರುವಿಕೆಯನ್ನು ತರ್ಕ ರಹಿತ ಸಮಾಜದಲ್ಲಷ್ಟೇ ಅಲ್ಲದೆ ತರ್ಕಬದ್ಧವಾಗಿ ಯೋಚಿಸುವ ಸುಸಂಸ್ಕೃತ ಸಮಾಜದಲ್ಲಿಯೂ ಕಾಣಬಹುದು. ಗುಂಪಿನಲ್ಲಿ ಇರುವಾಗ ಮಾಡಿದ ಧಾರ್ಮಿಕ ಭಾವನೆಯ ವಾಸನೆಯು ಕ್ಷಣಿಕವಾದರೂ ಅದರ ಪರಿಣಾಮವು ಮನಸ್ಸಿನ ಮೇಲೆ ತೀವ್ರವಾಗಿ ಆಗುತ್ತದೆ. ಒಂದೇ ತರದ ಭಾವನೆಯನ್ನು ತಳೆದ ಜನತೆ ಒಂದು ಗುಂಪಿನವರಾಗುತ್ತಾರೆ. ತಮ್ಮ ಭಾವನೆಗೆ ಕೇಂದ್ರವಾದ ದೇವರು ವ್ಯಕ್ತಿಯನ್ನು ಗೌರವದಿಂದ ಭಕ್ತಿಯಿಂದ ಕಾಣುತ್ತಾರೆ. ಧಾರ್ಮಿಕ ಪರಂಪರೆ ಮತ್ತು ಸಂಪ್ರದಾಯಗಳು, ಧಾರ್ಮಿಕ ಹುಟ್ಟುಗುಣದ ಮತ್ತು ಕ್ರಿಯ ಪ್ರವೃತ್ತಿಯ ಕುರುಹುಗಳಾಗಿವೆ. ಧಾರ್ಮಿಕ ಭಾವನೆ, ದಂತಕತೆ ಪುರಾಣ ವೇದಾಂತಗಳಲ್ಲಿ ನಿರೂಪಿಸಿದ ತತ್ವಗಳೇ ಧಾರ್ಮಿಕ ಪರಂಪರೆಯನ್ನು ರೂಪಿಸುತ್ತವೆ. ಇದು ಹಿಂದೂ ವಿಚಾರ ರೀತಿ; ಧರ್ಮ ನಿಷ್ಟೆ ಮತ್ತು ನೀತಿ ತತ್ವಗಳು ಧಾರ್ಮಿಕ ಮತ್ತು ಸಾಮಾಜಿಕ ಸಂಪ್ರದಾಯಗಳನ್ನು ರೂಪಿಸುತ್ತವೆ. ಇದು ಹಿಂದು ಆಚಾರ ಸಮಾಜದಲ್ಲಿ ಧಾರ್ಮಿಕ ನಂಬುಗೆಯನ್ನು ಎಲ್ಲರೂ ಒಟ್ಟಗಿ ಸೇರಿ ಬೆಳೆಸಿಕೊಳ್ಳಬೇಕು. ಧರ್ಮ ಸಂಸ್ಕಾರವನ್ನು ಆಚರಿಸಬೇಕು-ಇದು ನನ್ನ ಹೊಣೆಯೆಂದು ಪ್ರತಿಯೊಬ್ಬನು ತಿಳಿಯುತ್ತಾನೆ. ಈ ಹೊಣೆಗಾರಿಕೆಯನ್ನು ನಿರ್ವಹಿಸುವ ಉತ್ತಮ ಅವಕಾಶವೆಂದರೆ ಹಬ್ಬ-ಹರಿದಿನಗಳು. ಇದರಿಂದ ಒಂದು ನಂಬಿಕೆಯುಲ್ಲ ಸಂಪ್ರದಾಯವನ್ನು ಕಟ್ಟಲು ಸಾಧ್ಯವಾಗುತ್ತದೆ. ಧಾರ್ಮಿಕ ಮನೋಭಾವವು ಒಂದು ನಿರ್ದಿಷ್ಟ ಸಾಕಾರ ರೂಪದತ್ತ ಕೇಂದ್ರೀಕೃತವಾಗಲು ಪ್ರಾರಂಭಿಸುವುದು. ಈ ರೀತಿಯಿಂದ ರೂಪಗೊಂಡು ಮನೋಭಾವವನ್ನು ತೋರಿಸುವ ಅವಕಾಶ ಮತ್ತು ಇತರರನ್ನು ಅನುಕರಿಸುವ ಗುಣ ಇವು ಸಮಾಜದ ಸಂಪ್ರದಾಯಗಳ ಉಗಮದ ಮೂಲ ರೂಢಿಯನ್ನು ಮುಂದುವರಿಸುವುದಕ್ಕಾಗಿ ಇಂತಹ ಧಾರ್ಮಿಕ ನಡುವಳಿಕೆ ಹಬ್ಬ ಹರಿದಿನಗಳ ಆಚರಣೆ ಅವಶ್ಯ.

ಪರಂಪರೆ ಮತ್ತು ಸಂಪ್ರದಾಯಗಳು ವ್ಯವಸ್ಥಿತ ಸಮಾಜದ ಅಧ್ಯಾತ್ಮಿಕ ನಿಲುವನ್ನು ರೂಪಿಸುತ್ತವೆ. ಇದು ವಂಶಪರಂಪರ್ಯವಾಗಿ ಸಾಗುತ್ತದೆ. ಇದರಿಂದ ಸಾಮಾಜಿಕ, ಅಧ್ಯಾತ್ಮಿಕ ಪರಂಪರೆ ಬೆಳೆಯುತ್ತದೆ. ಧಾರ್ಮಿಕ ಸಮಾಜದಲ್ಲಿ ಪರಸ್ಪರರನ್ನು ಬಂಧಿಸುವ ಎಳೆಗಳು ಧಾರ್ಮಿಕ ಪ್ರವೃತ್ತಿ. ಇದು ಸದಸ್ಯರ ಮನಸ್ಸನ್ನು ಮತ್ತು ನಡತೆಯನ್ನು ರೂಪಿಸುವಲ್ಲಿ ಅತೀ ಪ್ರಮುಖವಾದ ಪಾತ್ರ ವಹಿಸುತ್ತದೆ. ಸಮುದಾಯವು ಇದರಿಂದ ಸಂಸ್ಕೃತಿಯ ಅವಿಭಾಜ್ಯ ಘಟಕಗಳನ್ನು ಸ್ವೀಕರಿಸುತ್ತದೆ. ವ್ಯಕ್ತಿಯು ಅದರಿಂದ ಪ್ರಭಾವಿತನಾಗುತ್ತಾನೆ.

ಇದರಿಂದ ಬಹುತರವಾಗಿ ನಡತೆ, ರೀತಿನೀತಿಗಳು, ಪೂಜೆಯ ವಿಧಾನಗಳು ರೂಪುಗೊಂಡು ಪರಂಪರೆಯಾಗಿ ಸಾಗುತ್ತವೆ. ಒಟ್ಟಿನಲ್ಲಿ ಸಮುದಾಯದ ಆವರಣದಲ್ಲಿ ಸಂಪ್ರದಾಯ ಮತ್ತು ಪರಂಪರೆಗಳು ಧಾರ್ಮಿಕ ತಳಹದಿಯ ಮೇಲೆಯೇ ರೂಪಿತವಾಗಿವೆ.ಸಾಮಾಜಿಕ ನಡತೆಯೆನ್ನುವುದು ಈ ಪರಂಪರೆ ಮತ್ತು ಸಂಪ್ರದಾಯದ ರೂಢಿಗಳಿಂದಾಗಿದೆ. ಸಮಾಜವೂ ವ್ಯವಸ್ಥಿತರೂಪವನ್ನು ಹೊಂದಿದಾಗ ಇವುಗಳನ್ನು ವ್ಯಕ್ತಿಗಳ ಮೇಲೆ ಹೇರುವಷ್ಟು ಸಾಮರ್ಥ್ಯವನ್ನು ಪಡೆಯುತ್ತದೆ.

ಕುಟುಂಬವು ಸಮಾಜದ ಅವಿಭಾಜ್ಯ ಘಟಕ. ಕುಟುಂಬ ಮತ್ತು ಮದುವೆಗಳು ಪುರಾತನದಿಂದ ಸಾಗಿಬಂದವುಗಳು. ಇವು ಇಲ್ಲದ ಸಮಾಜವೇ ಇಲ್ಲ. ಧಾರ್ಮಿಕ ನಡತೆಯ ಅಂತ್ಯವೂ ಒಂದು ವಿಶೇಷವಾದ ಸ್ಥಿತಿಯನ್ನು ಹೊಂದುತ್ತದೆ. ಧ್ಯಾನಸ್ಥನಾಗಿ ‘ಸಮಾಧಿ’ ಹೊಂದುವ ಪೂರ್ವದ ಸ್ಥಿತಿಯಿದು.

ಮಾನಸಶಾಸ್ತ್ರಜ್ಞರು ಬಾಹ್ಯ ಲಕ್ಷಣಗಳಿಂದ ಇದನ್ನು ವಿವರಿಸಬಲ್ಲರೇ ವಿನಾ ಅದಕ್ಕೂ ಆಳವಾದ ವಿವರಣೆ, ಅರ್ಥ ನಿರೂಪಣೆ ಅವರಿಂದ ಸಾಧ್ಯವಿಲ್ಲ. ದೈವಿಕ ಅನುಭವವು ತೃಪ್ತಿಯಿಂದ ಕೂಡಿ ಮನಸ್ಸಿಗೆ ಹೆಚ್ಚಿನ ಬಲವನ್ನು ಕೊಡುತ್ತದೆ. ಚೈತನ್ಯದಾಯಿಯಾಗುತ್ತದೆ.

ಸಮಾಜದಲ್ಲಿ ಧಾರ್ಮಿಕ ಪರಂಪರೆ ಉಗಮ, ಪರಿಣಾಮವನ್ನು ತಿಳಿದಲ್ಲಿ ಮಾತ್ರ ಸಮುದಾಯದ ನೃತ್ಯಗಳು ಮೊದಲು ಏಕೆ ಜನಪ್ರಿಯವಾಗಿದ್ದವು ಮತ್ತು ಅವುಗಳಿಗಿದ್ದ ಸಾಮಾಜಿಕ ಅರ್ಥವು ತಿಳಿದು ಬರುತ್ತದೆ.

ಸಾಮಾನ್ಯವಾಗಿ ನೃತ್ಯಗಳು ಅದಿವಾಸಿ ಜನತೆಯಲ್ಲಿಯೂ ಜನಪ್ರಿಯವಾಗಿದ್ದವು. ದಪ್ಪ, ಕೊಳಲುಗಳ, ಸಂಗೀತಕ್ಕೆ ಹಿಮ್ಮೇಳವಾಗಿರುವುದನ್ನು ನೃತ್ಯಗಳಲ್ಲಿ ಕಾಣಬಹುದು, ಈ ಸಂಪ್ರದಾಯವು ಪ್ರಾಚೀನ ಸಾಮಾಜಿಕ ಜೀವನವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದವು. ಎಂಬುದು ಮೇಲಿನ ವಿವರಣೆಯಿಂದ ತಿಳಿದು ಬರುತ್ತದೆ. ಪ್ರಾಚೀನ ಸಮಾಜದಗಲಲ್ಲಿ ನೃಯಗಳನ್ನು ನೋಡಿ ಯುವಕ ಯುವತಿಯರು ಸಂತಸಪಡುತ್ತಿದ್ದರು. ಅಲ್ಲದೆ ಕೆಲವು ಸಲ ಜೀವನ ಸಂಗಾತಿಗಳ ಆಯ್ಕೆಗೂ ಪರಸ್ಪರ ಸುಖದುಃಖಗಳ ವಿನಿಮಯಕ್ಕೂ ಕಾರಣವಾಗಿತ್ತು. ಈ ನೃತ್ಯಗಳು ಬೇಟೆಯಾಡುವ, ಬೇಸಾಯ ಚಟುವಟಿಕೆಯ ಅನುಕರಣಗಳನ್ನು ಪ್ರಾರಂಭದಲ್ಲಿ ಹೊಂದಿದ್ದವು. ಬಣ್ಣ ಬಳಿದ ಮುಖವಾಡಗಳನ್ನು ಧರಿಸಿ ಓಣಿಗಳಲ್ಲಿ ಹರ್ಷಾತಿರೇಕದಿಂದ ಕುಣಿಯುತ್ತಿದ್ದರು. ದಕ್ಷಿಣ ಭಾರತದ ‘ಕೀಲು ಬೊಂಬೆ’, ‘ಕೀಲು ಕುದುರೆ’ ಕುಣಿತವು ಈ ಸಂಪ್ರದಾಯದ ಅವಶೇಷವಾಗಿರಬೇಕು.

ಇಂದು ಹಳ್ಳಿಗಳಲ್ಲಿ ಹಬ್ಬಗಳಲ್ಲಿ ಕುಣಿತಗಳು ಕಂಡುಬಂದರೂ ಅವುಗಳಲ್ಲಿ ಅಂದಿನ ಒಗ್ಗಟ್ಟು ಸಾಮಾಜಿಕ ಮೌಲ್ಯ ಇಲ್ಲವೆನ್ನುವಷ್ಟು ನಶಿಸಿಹೋಗಿವೆ ಎನ್ನಬಹುದು. ಓಕಳಿಯಾಡುವುದು ಹನುಮ ಜಯಂತಿಯಂದು. ಉತ್ತರ ಭಾರತದಲ್ಲಿ ಗೋಕುಲಾಷ್ಟಮಿಯಂದು ಆಚರಣೆಯಲ್ಲಿದ್ದು ಈ ಸಂಪ್ರದಾಯದ ಕುರುಹುಗಳಾಗಿವೆ. ನಗರಗಳ ಸಂಪರ್ಕ ಹೆಚ್ಚಿದಂತೆ, ದೇಶಿಕಲೆಗಳಲ್ಲಿ, ಸಮಾಜಗಳಲ್ಲಿ ಹೆಚ್ಚಿನ ಬದಲಾವಣೆಯು ಕಂಡು ಬಂದಿತು. ಸಂಪ್ರದಾಯದ ಧಾರ್ಮಿಕ ನೃತ್ಯಗಳನ್ನು ಇಂದು ಕಾಣುವುದು ಅಪರೂಪವಾಗಿವೆ. ಇಂದು ನೃತ್ಯದ ಹೆಸರಿನಲ್ಲಿ ಸ್ತ್ರೀಯರ ಹಾವಭಾವ, ವಿಲಾಸ, ಅಂಗಾಂಗಗಳ ಪ್ರದರ್ಶನ ಮಾತ್ರ ಎನ್ನುವ ನಿರ್ಧಾರಕ್ಕೆ ಬರುವಂತಹ ಪರಿಸ್ಥಿತಿ ಮುಟ್ಟಿದೆ ಇದರ ಉದ್ದಾರವೂ ದೇಶಿ ನೃತ್ಯಗಳಿಗೆ ಅವಿಸ್ವಾರವಾಗಿ ಅವು ಬೇಡನಾರಹಿತ ಸ್ಥಿತಿಯಿಂದ ಎಚ್ಚರವಾಗುವಂತೆ ಮಾಡುವುದೇ ಆಗಿದೆ. ಇದು ಪ್ರವಾಹದ ಎದುರಿಗೆ ಈಜುವ ಕಾರ್ಯದಂತೆ ಕಷ್ಟದಾಯಕವಾದುದಲ್ಲವೆ ?