ಕೆರೆ ಪದ್ಧತಿ ರಕ್ಷಣೆ ಯೋಜನೆ: ಮಾದರಿ ಬಜೆಟ್

ಕ್ರ. ಸಂ. ಚಟುವಟಿಕೆ ಘಟಕ ಒಟ್ಟು ಅಂದಾಜು ವೆಚ್ಚ ಹಣ ರೂ.ಗಳಲ್ಲಿ
೧. ಕೆರೆ ಹೂಳೆತ್ತುವುದು (ಹೂಳು ತೆಗೆದು ಹೂಳನ್ನು ಜಮೀನುಗಳಿಗೆ ಸಾಗಿಸುವುದು) ೩೦೦೦೦ಸಿಎಂಟಿ ಹೂಳನ್ನು ತೆಗೆದು ಸಾಗಿಸುವುದು ಪ್ರತಿ ಸಿಎಂಟಿಗೆ ರೂ.೫೦ರಂತೆ. ೧೫,೦೦,೦೦೦
ಭೂಮಿಯ ಸಂರಕ್ಷಣೆ ಪ್ರತಿ ಎಕರೆಗೆ ರೂ. ೫೦೦ರಂತೆ ೨೫೦ ಎಕರೆಗೆ ೧,೨೫,೦೦೦
ಅಣೆಕಟ್ಟೆಯನ್ನು ಭದ್ರಗೊಳಿಸುವುದು ೨೯೦೦ ಮಾನವ ದಿನಗಳು ಪ್ರತಿ ಮಾನವ ದಿನಕ್ಕೆ ರೂ.೩೫೦ರಂತೆ ೧,೦೧,೫೦೦
೪. ಮಣ್ಣಿನ ಕೊರೆತ ತಪ್ಪಿಸಲು ಅಡ್ಡಕಟ್ಟೆ ಹಾಗೂ ಬಿರುಕುಗಳನ್ನು ಮುಚ್ಚುವುದು ೪ ಘಟಕಗಳು ಪ್ರತಿಯೊಂದಕ್ಕೆ ರೂ.೭೫,೦೦೦ರಂತೆ ೧,೨೫,೦೦೦
೫. ಕೃಷಿ ಅರಣ್ಯೀಕರಣ ೧೨,೫೦೦ ಸಸಿಗಳನ್ನು ಅಚ್ಚುಕಟ್ಟು ಪ್ರದೇಶದಲ್ಲಿ ನೆಡುವುದು ಸಸಿಗೆ ರೂ.೧೦ರಂತೆ  
೬. ಮೇವು ಅಭಿವೃದ್ಧಿ(ಮರಗಳಿಂದ) ೨೫೦೦ ಸಸಿ ರೂ.೧೦ ರಂತೆ ೨೫,೦೦೦
೭. ನಿರುಪಯುಕ್ತ ಅಡ್ಡಕಟ್ಟೆಗಳ ಕಾಲುವೆ ರಿಪೇರಿ ೨೯೦೦ ಮಾನವದಿನ ರೂ.೩೫ರಂತೆ ೨೫,೦೦೦
೮. ಅಚ್ಚುಕಟ್ಟು ಪ್ರದೇಶದಲ್ಲಿ ನಾಲೆಗಳ ದುರಸ್ತಿ
೯. ಮೀನುಗಾರಿಕೆ ಮೀನು ಮಾರಿ/ಬಲೆ/ಆಹಾರ/ಭದ್ರತೆ ೨೫,೦೦೦
ಒಟ್ಟು ೨೩,೫೦,೦೦೦

೨. ನೀರಿನ ಹರಹು ೨೨ ಎಕರೆ ೩೦.೧೫ ಎಕರೆ ಅಚ್ಚುಕಟ್ಟು ಪ್ರದೇಶ. ೨೫೦ ಎಕರೆ ಜಲಾನಯನ ಪ್ರದೇಶ. ೧೩ ಕೆರೆಗಳ ಭಾಗಶಃ ಹೂಳೆತ್ತುವ ಗ್ರಾಮವಿಕಾಸದ ಅನುಭವ ಆಧಾರದ ಮೇಲೆ ಜೊತೆಗೆ ಮುಳಬಾಗಿಲು ತಾಲೂಕಿನ ಒಂದು ಸಾಮಾನ್ಯ ಮಟ್ಟದ ಕೆರೆಯ ಹೂಳೆತ್ತಿದ ಅನುಭವ.

೩. ಒಂದೇ ಒಂದು ಕೆರೆಯಲ್ಲಿ ಮಾತ್ರ ಮೀನು ಅಭಿವೃದ್ಧಿ ಪಡಿಸಿರುವುದರಿಂದ ವಿವರ ಲೆಕ್ಕ ಹಾಕಿಲ್ಲ.

೪. ಆಡಳಿತ/ಹೆಚ್ಚುವರಿ ಖರ್ಚು/ಜಾರಿ ಖರ್ಚು ಶೇಕಡ ೧೫ ಇದರಲ್ಲಿ ಸೇರಿಲ್ಲ.

ಕೆರೆ ಹೂಳೆತ್ತುವ ಕಾರ್ಯದಲ್ಲಿ ಎತ್ತಿನ ಬಂಡಿಗಳ ಬಳಕೆ

ಗ್ರಾಮವಿಕಾಸ ತನ್ನ ಕೆರೆ ಹೂಳೆತ್ತುವ ಕಾರ್ಯಕ್ರಮದಲ್ಲಿ ಯಂತ್ರಗಳನ್ನು ಬಳಸದಿರುವ ನಿರ್ಧಾರ ತೆಗೆದುಕೊಂಡಿತು. ಕೆರೆಗಳ ಹೂಳನ್ನು ಸಾಗಿಸಲು ಯಂತ್ರಗಳನ್ನು ಬಳಸದೆ ಬೇರೆ ಮೂಲಗಳನ್ನು ಬಳಸಿಕೊಳ್ಳಲಾಯಿತು. ಪರಿಸರ ಸ್ನೇಹಿ ಮಾರ್ಗವನ್ನು ಅನುಸರಿಸಿ ಎತ್ತಿನ ಬಂಡಿಗಳನ್ನು ಹೂಳು ಸಾಗಿಸುವ ಕಾರ್ಯಕ್ಕೆ ಬಳಸಲಾಯಿತು. ಟ್ರಾಕ್ಟರುಗಳು ಡೀಸೆಲ್ ಸುಡುತ್ತದೆ. ಪರಿಸರ ಮಾಲಿನ್ಯ ಮಾಡುತ್ತವೆ. ಆದರೆ ಎತ್ತಿನ ಗಾಡಿಗಳು ಪರಿಸರ ನೈರ್ಮಲ್ಯ ಹಾಳು ಮಾಡುವುದಿಲ್ಲ. ಎತ್ತುಗಳು ಕೃಷಿಗೆ ಬೇಕಾದ ಪರಿಸರ ಸ್ನೇಹಿ ಗೊಬ್ಬರವನ್ನು ಒದಗಿಸುತ್ತವೆ.

ಸರ್ಕಾರಗಳ ನೀತಿಗಳು ಎತ್ತಿನ ಗಾಡಿಗಳು ಬಳಕೆಯನ್ನು ವ್ಯವಸ್ಥಿತವಾಗಿ ನಾಶಮಾಡಿವೆ. ಸರ್ಕಾರ ಹಾಗೂ ಆರ್ಥಿಕ ನೆರವು ಸಂಸ್ಥೆಗಳು ಟ್ರಾಕ್ಟರ್ ಬಳಕೆಯನ್ನೇ ಪ್ರೋತ್ಸಾಹಿಸುತ್ತಾ ಬಂದಿವೆ. ಟ್ರಾಕ್ಟರ್ ಕೊಳ್ಳುವವರಿಗೆ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಎತ್ತಿನ ಗಾಡಿಗಳ ಅವಸಾನದ ದಾರಿಯ ನೇತೃತ್ವವನ್ನು ಟ್ರಾಕ್ಟರುಗಳು ವಹಿಸಿವೆ. ಆದ್ದರಿಂದಲೇ ಗ್ರಾಮವಿಕಾಸ ತನ್ನ ಯೋಜನೆಯಲ್ಲಿ ಪರಿಸರ ಪ್ರೇಮಿ ಎತ್ತಿನ ಗಾಡಿಗಳನ್ನು ಬಳಸಿಕೊಳ್ಳುತ್ತ ಬಂದಿದೆ.

ಕೋಲಾರ ಜಿಲ್ಲೆಯ ಒಂದು ಗ್ರಾಮೀಣ ಬ್ಯಾಂಕಿನ ಶಾಖೆಯನ್ನು ನಿದರ್ಶನವಾಗಿ ನೋಡಬಹುದು. ಈ ಬ್ಯಾಂಕಿ ಎತ್ತಿನ ಗಾಡಿಕೊಳ್ಳಲು ಸಾಲವನ್ನು ಹಲವು ವರ್ಷಗಳ ಹಿಂದೆ ಕೊಟ್ಟಿತ್ತು. ಆದರೆ ಕಳೆದ ೩ ವರ್ಷಗಳಲ್ಲಿ (೧೯೯೮ ರಿಂದ ೨೦೦೧) ತನ್ನ ವಿವಿಧ ಶಾಖೆಗಳ ಮೂಲಕ ೩೧,೯೯,೦೦೦ರೂ. ಗಳನ್ನು ಟ್ರಾಕ್ಟರ್ ಕೊಳ್ಳಲು ಸಾಲವಾಗಿ ನೀಡಿದೆ. ಆದರೆ ಎತ್ತಿನ ಗಾಡಿಯನ್ನು ಕೊಳ್ಳಲು ಒಂದು ರೂಪಾಯಿಯನ್ನೂ ಸಾಲವಾಗಿ ನೀಡಿಲ್ಲ. ಯಾವುದೇ ಕೆರೆ ಹೂಳೆತ್ತುವ ಯೋಜನೆ ಶ್ರಮಿಕ ಆಧಾರಿತವಾಗಿರಬೇಕೆ ಹೊರತು ತಂತ್ರಜ್ಞಾನ ಆಧಾರಿತವಾಗಿರಬಾರದು. ಒಂದು ರೀತಿಯಲ್ಲಿ ಕಾರ್ಮಿಕರು, ಎತ್ತಿನ ಗಾಡಿಗಳು, ಟ್ರಾಕ್ಟರುಗಳಂಥ ಯಂತ್ರಗಳನ್ನು ಎಲ್ಲಿ ಬೇಕೊ ಅಲ್ಲಿ ಬಳಸಬೇಕು. ಹೂಳು ಸಾಗಿಸಲು ಗರಿಷ್ಠ ಮಟ್ಟದಲ್ಲಿ ಎತ್ತಿನ ಗಾಡಿಗಳನ್ನು ಬಳಸಬೇಕು. ಗ್ರಾಮವಿಕಾಸ ತನ್ನ ಯೋಜನೆಯಲ್ಲಿ ಎತ್ತಿನ ಗಾಡಿಗಳನ್ನು ಯಶಸ್ವಿಯಾಗಿ ಬಳಸಿದೆ. ಎತ್ತಿನ ಗಾಡಿಗಳನ್ನು ಕೊಳ್ಳಲು ರೈತರಿಗೆ ಸಾಲ ನೀಡಿದೆ. ಹೂಳು ತೆಗೆಯುವ ಕಾರ್ಯ ಮುಗಿಯುವ ಮೊದಲೇ ಸಾಲ ಪಡೆದ ಬಹುಪಾಲು ಜನರು ಸಾಲವನ್ನು ಪೂರ್ಣವಾಗಿ ಹಿಂತಿರುಗಿಸಿದ ನಿದರ್ಶನಗಳಿವೆ. ಇದರಿಂದಾಗಿ ಎಷ್ಟೋ ಮಂದಿ ರೈತರ ಬಳಿ ತಮ್ಮದೇ ಸ್ವಂತ ಎತ್ತಿನ ಬಂಡಿಗಳಿವೆ. ಕೆರೆ ಹೂಳೆತ್ತುವ ಕಾರ್ಯಕ್ಕೆ ೧೬ ಮಂದಿ ರೈತರಿಗೆ ಎತ್ತಿನಗಾಡಿ ಕೊಳ್ಳಲು ಗ್ರಾಮವಿಕಾಸ ನೆರವು ನೀಡಿತ್ತು. ಎತ್ತಿನ ಗಾಡಿಗಳು ಸಣ್ಣರೈತನನ್ನು ಬಲಪಡಿಸುತ್ತವೆ. ಟ್ರಾಕ್ಟರ್ ಬಳಸುವುದರಿಂದ ಶ್ರೀಮಂತರಿಗೆ ಮಾತ್ರ ಅನುಕೂಲವಾಗುತ್ತದೆ. ಎತ್ತಿನ ಗಾಡಿಗಳಿಗೆ ಬದಲು ಈಗ ಟ್ರಾಕ್ಟರುಗಳೂ ಬಳಕೆಯಾಗುತ್ತಿರುವುದರಿಂದ ಸಣ್ಣ ರೈತರು ಟ್ರಾಕ್ಟರುಗಳು ಇರುವ ದೊಡ್ಡ ರೈತರನ್ನು ತಮ್ಮ ಕೃಷಿ ಚಟುವಟಿಕೆಗಳಿಗೆ ಅವಲಂಬಿಸಬೇಕಾಗಿ ಬಂದಿದೆ. ಎತ್ತಿನ ಗಾಡಿಗಳು ಈ ಅವಲಂಬನೆಯನ್ನು ಕಡಿಮೆ ಮಾಡುತ್ತವಲ್ಲದೆ ಉತ್ತಮ ಗೊಬ್ಬರವನ್ನು ರೈತನಿಗೆ ದೊರಕುವಂತೆ ಮಾಡುತ್ತವೆ. ರಸಗೊಬ್ಬರ ಕೊಳ್ಳಲು ಬಳಸುತ್ತಿದ್ದ ಹಣ ಉಳಿತಾಯವಾಗುತ್ತದೆ. ಸರ್ಕಾರದ ಯೋಜನೆಗಳ ಜಾರಿಯಲ್ಲಿ ಪರಿಸರ ಪ್ರೇಮಿ ವಿಧಾನ ಅನುಸರಿಸುವುದು ಕಾಣುವುದಿಲ್ಲ. ಟ್ರಾಕ್ಟರುಗಳ ಮೂಲಕ ವೇಗವಾಗಿ ಕೆಲಸ ಆಗಬಹುದು. ಆದರೆ ಪರಿಸರ ನೈರ್ಮಲ್ಯ ಹಾಳು ಮಾಡುತ್ತವೆ. ಕೆರೆ ಹೂಳೆತ್ತುವ ಮುಖ್ಯ ಉದ್ದೇಶವನ್ನೇ ಅವು ವಿಫಲಗೊಳಿಸುತ್ತವೆ. ಕೆರೆಗಳ ಹೂಳೆತ್ತುವ ಯೋಜನೆಗಳು ಪರಿಸರವನ್ನು ಸುಧಾರಿಸಬೇಕು.

ಜನರ ಪಾತ್ರಒಂದು ಅಧ್ಯಯನ
ಮಿಣಿಜೇನಹಳ್ಳಿ

ಈ ಗ್ರಾಮ ಮುಳಬಾಗಲು ತಾಲ್ಲೂಕಿನ ಒಳ ಭಾಗದಲ್ಲಿದೆ. ಗ್ರಾಮದಲ್ಲಿ ಸುಮಾರು ೪೪೦ ಜನರಿದ್ದಾರೆ. ೮೫ ಕುಟುಂಬಗಳು ಅಲ್ಲಿವೆ. ಈ ಪೈಕಿ ೫೯ ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿದವು. ೭ ಕುಟುಂಬಗಳು ಪರಿಶಿಷ್ಟ ವರ್ಗಕ್ಕೆ ಸೇರಿದವು. ೧೦ ಕುಟುಂಬ ಹಿಂದುಳಿದ ವರ್ಗಕ್ಕೆ ಸೇರಿವೆ. ೯ ಕುಟುಂಬ ಮೇಲ್ವರ್ಗಗಳಿಗೆ ಸೇರಿವೆ. ಈ ಗ್ರಾಮ ಎರಡು ಕೆರೆಗಳನ್ನು-ಮಾವಿನಕೆರೆ, ಬಡವನಕೆರೆ – ಒಳಗೊಂಡಿದೆ. ಮಾವಿನಕೆರೆಯ ವ್ಯಾಪ್ತಿಯಲ್ಲಿ ಮಿಣಿಜೇನಹಳ್ಳಿಯ ೩೫ ಕುಟುಂಬಗಳ ಜಮೀನಿದೆ. ೪ ಕುಟುಂಬಗಳನ್ನು ಹೊರತು ಪಡಿಸಿ ಉಳಿದೆಲ್ಲ ಕುಟುಂಬಗಳೂ ಪರಿಶಿಷ್ಟ ಜಾತಿಗೆ ಸೇರಿದ್ದು ಈ ಜಮೀನುಗಳ ಮಾಲಿಕರು ಅವರೇ ಆಗಿದ್ದಾರೆ. ಈ ಕೆರೆ ತನ್ನ ಹೆಸರಿಗೆ ತಕ್ಕಂತೆಯೇ ಇದೆ.

ಈ ಕೆರೆಯ ನೀರಿಯ ಹರಹು ೧೬.೩೭ ಎಕರೆ. ಒತ್ತುವರಿಯಿಂದಾಗಿ ಈಗ ೧೨ ಎಕರೆಯ ಪ್ರದೇಶದ ವ್ಯಾಪ್ತಿಯಲ್ಲಿ ಮಾತ್ರ ನೀರಿದೆ. ಐದು ಅಡಿಗಳಷ್ಟು ಹೂಳು ಕೆರೆಯಲ್ಲಿದೆ. ಈ ಊರಿನ ಸಾಂಪ್ರದಾಯಿಕ ಕೃಷಿ ಪ್ರದೇಶದಲ್ಲಿ ರಾಗಿ ಬೆಳೆಯುತ್ತಾರೆ. ಒಂದು ದಶಕದ ಹಿಂದೆ ಈ ಕೆರೆಯ ನೀರಿನಿಂದ ರೈತರು ಎರಡು ಬೆಳೆ ತೆಗೆಯುತ್ತಿದ್ದರು. ಖಾರಿಫ್ ಮತ್ತು ರಬಿ. ಕಳೆದ ಆರು ವರ್ಷಗಳ ಹಿಂದಿನವರೆಗೆ ಈ ಕೆರೆ ಒಂದು ಮೊದಲ ಬೆಳೆ ಮತ್ತು ಅರ್ಧ ಎರಡನೆಯ ಬೆಳೆಗೆ ನೀರು ಉಣಿಸುತ್ತಿತ್ತು. ಕಳೆದ ನಾಲ್ಕು ವರ್ಷದಿಂದ ಈಚೆಗೆ ಕೆರೆಯ ನೀರು ಒಂದು ಬೆಳೆಗೂ ಸಾಕಾಗುತ್ತಿಲ್ಲ. ಇದು ಭಾಗಶಃ ಹೂಳಿನಿಂದ, ಭಾಗಶಃ ಒತ್ತುವರಿಯಿಂದ. ಎಂಟು ವರ್ಷಗಳ ಹಿಂದೆ ೧೦ ಅಡಿಗಳಷ್ಟಿದ್ದ ನೀರಿನ ಮಟ್ಟ ಈಗ ೫೦೦ ಅಡಿಗಳಷ್ಟು ಭೂಮಿಯ ಕೆಳಕ್ಕೆ ಇಳಿದಿದೆ. ಕೊಳವೆ ಬಾವಿಗಳು ನೀರನ್ನು ಎಳೆದುಕೊಂಡು ಅಂತರ್ಜಲ ಕುಂಠಿತವಾಗಿದೆ. ತೆರೆದ ಬಾವಿಗಳಲ್ಲಿ ಆರು ವರ್ಷಗಳ ಹಿಂದೆಯೇ ನೀರು ಬತ್ತಿಹೋಗಿವೆ. ಊರಿನಲ್ಲಿರುವ ಹಲವು ಕೊಳವೆ ಬಾವಿಗಳೂ ಬತ್ತಿವೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಗ್ರಾಮಸ್ಥರು ೧೯೯೫ರಲ್ಲಿ ಗ್ರಾಮವಿಕಾಸದ ಜೊತೆ ಚರ್ಚಿಸಿದರು. ಬಡವನ ಕೆರೆಯ ಹೂಳು ತೆಗೆಯಬೇಕೆಂದು ಸರ್ವಾನುಮತದಿಂದ ಅಭಿಪ್ರಾಯ ಪಟ್ಟರು. ಇದಕ್ಕಾಗಿ ಗ್ರಾಮವಿಕಾಸದ ನೆರವು ಕೋರಿದರು. ಆದರೆ ತಮ್ಮ ಬಳಿ ಹಣ ಇಲ್ಲವೆಂದು ಗ್ರಾಮವಿಕಾಸದವರು ರೈತರಿಗೆ ತಿಳಿಸಿದರು. ಸ್ಥಳೀಯವಾಗಿಯೇ ಹಣವನ್ನು ಸಂಗ್ರಹಿಸಿ ಇಂಥ ಕೆಲಸ ಮಾಡಬೇಕಾದ ಅಗತ್ಯವನ್ನು ಗ್ರಾಮವಿಕಾಸದ ಪ್ರತಿನಿಧಿಗಳು ಗ್ರಾಮಸ್ಥರಿಗೆ ತಿಳಿಸಿದರು. ಬ್ಯಾಂಕಿನಿಂದ ಸಾಲ ಪಡೆದು ಕರೆ ಹೂಳೆತ್ತಲು ಪ್ರಯತ್ನಿಸಬಹುದೆಂದು ಅವರು ಸಲಹೆ ನೀಡಿದರು.

ಗ್ರಾಮದ ಬಹುಪಾಲು ಜನರು ಇದಕ್ಕೆ ಒಪ್ಪಿದರು. ಕೆಲವರು ಈ ಸಲಹೆಗೆ ಒಪ್ಪಲಿಲ್ಲ. ಸರ್ಕಾರದ ನೆರವು ಕೇಳುವುದಾಗಿ ಅವರು ಹೇಳಿದರು. ಗ್ರಾಮವಿಕಾಸದ ಪ್ರತಿನಿಧಿಗಳು ಮತ್ತು ಗ್ರಾಮಸ್ಥರು ಅವರ ಸಲಹೆಗೆ ಒಪ್ಪಿದರು.

ಈ ಪ್ರಕಾರ ನಾಲ್ವರು ಸ್ವ-ಸಹಾಯ ಗುಂಪಿನವರು ಕೆರೆಯ ಹೂಳೆತ್ತಬೇಕೆಂದು ಜಿಲ್ಲಾಪಂಚಾಯ್ತಿಗೆ ಕಾಗದ ಬರೆದರು. ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷರು, ತಾಂತ್ರಿಕ ವಿಭಾಗದ ಅಧಿಕಾರಿಗಳನ್ನು ಭೇಟಿಮಾಡಿ ಚರ್ಚಿಸಿದರು. ಜಿಲ್ಲಾ ಪಂಚಾಯ್ತಿಯಲ್ಲಿ ಕೆರೆ ಹೂಳೆತ್ತಲು ಈ ವರ್ಷ ಹಣವಿಲ್ಲ ಮುಂದಿನ ವರ್ಷ ಹಣ ಒದಗಿಸುವುದಾಗಿ ಭರವಸೆ ನೀಡಿದರು.

೧೯೯೯ರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಜಿಲ್ಲಾ ಪಂಚಾಯ್ತಿ ಚುನಾವಣೆಗಳು ನಡೆದು ಹೊಸ ಸದಸ್ಯರು ಅಧಿಕಾರಕ್ಕೆ ಬಂದರು. ಕೆರೆ ಹೂಳೆತ್ತಲು ಮತ್ತೆ ಜಿಲ್ಲಾ ಪಂಚಾಯ್ತಿಯನ್ನು ಕೇಳಲಾಯಿತು. ಗ್ರಾಮೀಣ ಮಹಿಳಾ ಒಕ್ಕೂಟ ಕೂಡ ಈ ವಿಚಾರವನ್ನು (ಗ್ರಾಮವಿಕಾಸ ಯೋಜನಾ ಪ್ರದೇಶದ ಸ್ವ-ಸಹಾಯ ಗುಂಪುಗಳ ಅಂಗ ಸಂಸ್ಥೆ) ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಜೊತೆ ಚರ್ಚಿಸಿತ್ತು. ಕೆರೆ ಹೂಳೆತ್ತುವ ಕಾರ್ಯಕ್ಕೆ ಜಿಲ್ಲಾ ಪಂಚಾಯ್ತಿ ೨,೦೫,೦೦೦ ರೂ.ಗಳನ್ನು ಮಂಜೂರು ಮಾಡಿ ಪತ್ರ ನೀಡಿತು. ಆದರೆ ಹಣ ಬಿಡುಗಡೆಯಾಗಲಿಲ್ಲ. ಜಿಲ್ಲಾ ಪಂಚಾಯ್ತಿ ಬಜೆಟ್ ಹಣವಾಗಿರುವುದರಿಂದ ಮುಂದಿನ ವರ್ಷ ಹಣ ಮಂಜೂರಾಗಿ ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಬಡವನ ಕೆರೆಗೆ ಮಂಜೂರಾಗಿದ್ದ ಹಣವನ್ನು ನಂತರ ಬೇರೆ ಕರೆಗೆ ಮಂಜೂರು ಮಾಡಲಾಯಿತು.

೨೦೦೧ರಲ್ಲಿ ಸ್ಥಳೀಯ ಶಾಸಕರನ್ನು ಸಂಪರ್ಕಿಸಲಾಯಿತು. ಅವರು ವಿಧಾನ ಸಭೆಯಲ್ಲಿ ಸ್ಪೀಕರ್ ಕೂಡ ಆಗಿದ್ದು ಹಣ ಬಿಡುಗಡೆ ಮಾಡುವಂತೆ ಜಿಲ್ಲಾ ಪಂಚಾಯ್ತಿಗೆ ಸೂಚಿಸಿದರು. ಆದರೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಡುವೆ ಭಿನ್ನಾಭಿಪ್ರಾಯದಿಂದಾಗಿ ಮತ್ತೆ ಹಣ ಬಿಡುಗಡೆಯಾಗಲಿಲ್ಲ. ಅಂತಿಮವಾಗಿ ಮಿಣಿಜೇನಹಳ್ಳಿಯ ೭೦ ಹೆಂಗಸರು, ಮಕ್ಕಳು ಮತ್ತು ಇತರರು ಒಂದು ಟೆಂಪೊದಲ್ಲಿ ಕೋಲಾರಕ್ಕೆ ಬಂದು ಜಿಲ್ಲಾ ಪಂಚಾಯ್ತಿ ಕಚೇರಿ ಮುಂದೆ ಧರಣಿ ಕುಳಿತರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬೇರೊಂದು ಊರಿಗೆ ಹೋಗಿದ್ದುದರಿಂದ ಪ್ರತಿಭಟನಾಕಾರರು ಅವರನ್ನು ಭೇಟಿ ಮಾಡಲಾಗಲಿಲ್ಲ. ಮಾರನೆಯ ದಿನ ಸಂಸತ್ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ನಡುವೆ ಸಭೆಯೊಂದು ನಿಗದಿಯಾಗಿತ್ತು. ಊರಿನ ಜನರು ಮಾರನೆ ಬೆಳಿಗ್ಗೆ ಮತ್ತೆ ಜಿಲ್ಲಾ ಪಂಚಾಯ್ತಿ ಕಚೇರಿಗೆ ಬಂದರು. ಜಿಲ್ಲಾ ಪಂಚಾಯ್ತಿ ಕಚೇರಿಯ ಗೇಟುಗಳಿಗೆ ಬೀಗ ಹಾಕಿದರು. ಯಾವುದೇ ಗಣ್ಯರು ಜಿಲ್ಲಾ ಪಂಚಾಯ್ತಿ ಕಚೇರಿಯ ಒಳಕ್ಕೆ ಹೋಗಲು ಅವಕಾಶ ನೀಡಲಿಲ್ಲ. ಸಂಸತ್ ಸದಸ್ಯ ಕೆ.ಹೆಚ್. ಮುನಿಯಪ್ಪ ಅವರು ಪ್ರತಿಭಟನಕಾರರ ಮನವೊಲಿಸಲು ನಡೆಸಿದ ಪ್ರಯತ್ನ ಫಲಿಸಲಿಲ್ಲ. ಕೆರೆ ಹೂಳೆತ್ತಲು ಹಣ ಮಂಜೂರು ಮಾಡಿದ ನಂತರವೇ ತಾವು ಅಲ್ಲಿಂದ ಹೊರ ಸರಿಯುವುದು ಎಂದು ಹಟ ಹಿಡಿದರು. ಅಂತಿಮವಾಗಿ ಸಂಸತ್ ಸದಸ್ಯರ ನಿಧಿಯಿಂದ ಹಣ ಬಿಡುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮುನಿಯಪ್ಪ ಪತ್ರ ಬರೆದುಕೊಟ್ಟರು. ಮಾಧ್ಯಮಗಳು ಈ ಘಟನೆಯನ್ನು ವಿವರವಾಗಿ ವರದಿಮಾಡದೆ. ಅಂತಿಮವಾಗಿ ಜಿಲ್ಲಾ ಪಂಚಾಯ್ತಿಯೇ ಹಣ ಬಿಡುಗಡೆ ಮಾಡಿತು. ಈ ಪ್ರಕರಣ ಇಲ್ಲಿಗೇ ಮುಕ್ತಾಯವಾಗಲಿಲ್ಲ.

ಜಿಲ್ಲಾ ಪಂಚಾಯ್ತಿ ತಾಂತ್ರಿಕ ವಿಭಾಗದ ಇಂಜಿನಿಯರುಗಳು ಗ್ರಾಮಕ್ಕೆ ಭೇಟಿ ನೀಡಿದರು. ಕೆರೆಯ ಸಮೀಕ್ಷೆ ನಡೆಸಿದರು. ಅಳತೆ ಮಾಡಿದರು. ಕೆರೆ ಹೂಳೆತ್ತುವ ಕಾರ್ಯವನ್ನು ಯಂತ್ರೋಪಕರಣಗಳ ನೆರವಿನಿಂದ ಮಾಡಲಾಗುವುದೆಂದು ಅವರು ತಿಳಿಸಿದರು. ಇದು ಬರಗಾಲವಾದ್ದರಿಂದ ಕೆಲವರಿಗಾದರೂ ಉದ್ಯೋಗ ಸಿಗುತ್ತದೆಂದು ಭಾವಿಸಿದ್ದವರಿಗೆ ಆಘಾತವೇ ಆಯಿತು. ಕೆರೆ ಹೂಳೆತ್ತುವ ಕಾರ್ಯಕ್ಕೆ ಯಂತ್ರಗಳನ್ನು ಬಳಸುವುದನ್ನು ವಿರೋಧಿಸುವುದಾಗಿ ಜನರು ಜಿಲ್ಲಾ ಪಂಚಾಯ್ತಿ ಇಂಜಿನಿಯರುಗಳಿಗೆ ತಿಳಿಸಿದರು. ಶ್ರಮಿಕರಿಗೆ ಉದ್ಯೋಗ ನೀಡುವ ಮೂಲಕ ಜಿಲ್ಲಾ ಪಂಚಾಯ್ತಿ ಹಣದಿಂದ ತಾವೇ ಕೆರೆಯ ಹೂಳೆತ್ತುವುದಾಗಿ ತಿಳಿಸಿದರು. ಊರಿನ ಜನರ ಮನೋಭಿಲಾಷೆಯನ್ನು ಅರ್ಥಮಾಡಿಕೊಂಡು ಅದಕ್ಕೆ ಜಿಲ್ಲಾ ಪಂಚಾಯ್ತಿ ಇಂಜಿನಿಯರುಗಳೂ ಒಪ್ಪಿಗೆ ನೀಡಿದರು.

೬.೬.೨೦೦೧ರಲ್ಲಿ ಕೆರೆ ಹೂಳೆತ್ತುವ ಕೆಲಸ ಆರಂಭವಾಯಿತು. ಮಳೆಯಿಂದಾಗಿ ಸ್ವಲ್ಪ ದಿನ ಈ ಕಾರ್ಯ ನಿಂತಿತ್ತು. ಮತ್ತೆ ಆ ಕಾರ್ಯ ಪುನರಾರಂಭವಾಗಿದೆ. ಬರಗಾಲವಾದ್ದರಿಂದ ಉದ್ಯೋಗ ಅರಸಿ ಬೇರೆ ಕಡೆ ಹೋಗುವ ಸ್ಥಿತಿಯಲ್ಲಿದ್ದ ೩೦ ಕುಟುಂಬಗಳು ಈ ಕಾಮಾಗಾರಿಯಿಂದಾಗಿ ಊರಿನಲ್ಲಿಯೇ ಉಳಿದಿವೆ.

ಮಿಣಿಜೇನಹಳ್ಳಿಯ ಮಹಿಳಾ ಸ್ವ-ಸಹಾಯ ಗುಂಪುಗಳು ಒಟ್ಟಾಗಿ ಜಿಲ್ಲಾ ಪಂಚಾಯ್ತಿಯಿಂದ ಹಣ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಸಫಲವಾದವು. ಅಷ್ಟೇ ಅಲ್ಲ ಯಂತ್ರಗಳ ಮೂಲಕ ಹೂಳೆತ್ತುವ ಅಧಿಕಾರಿಗಳ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಅವು ಸಫಲವಾಗಿವೆ.

ಕೆರೆ ಸಂರಕ್ಷಣೆ ಕಾರ್ಯದಲ್ಲಿ ಜನರು ಭಾಗವಹಿಸುವಂತೆ ಮಾಡುವುದುಸಮಸ್ಯೆಯ ವಿಶ್ಲೇಷಣೆ, ಕಾರಣಗಳು, ಪರಿಣಾಮಗಳು, ಪರಿಹಾರ ತಂತ್ರಗಳುಗ್ರಾಮವಿಕಾಸ ಅನುಸರಿಸಿದ ಕ್ರಮಗಳು

ಸಮಸ್ಯೆ: ಕೆರೆ ರಕ್ಷಣೆ ಹಾಗೂ ನಿರ್ವಹಣೆಯಲ್ಲಿ ಜನರು ನಿರೀಕ್ಷಿಸಿದಷ್ಟು ಭಾಗವಹಿಸದೆ ಇರುವುದು.

ಕಾರಣಗಳು ಪರಿಣಾಮಗಳು ಗ್ರಾಮವಿಕಾಸ ಅನುಸರಿಸಿದ ಕಾರ್ಯತಂತ್ರಗಳು ಅನುಸರಿಸಬೇಕಾದ ಪದ್ಧತಿಗಳು
ಕೆರೆಗಳ ಮೇಲಿನ ಸರ್ಕಾರದ ನಿಯಂತ್ರಣ ಹಾಗೂ ಅದರ ಗ್ರಾಮೀಣಾಭಿವೃದ್ಧಿ ನೀತಿಗಳು. ಕೆರೆಗಳಲ್ಲಿ ತಮ್ಮ ಪಾಲುದಾರಿಕೆ ಏನೂ ಇಲ್ಲ ಎಂದು ಜನರು ತಿಳಿಯುವಂತಾಗುತ್ತದೆ. ಇದರಿಂದಾಗಿ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ರೈತರಲ್ಲಿ ನಿರಾಸಕ್ತಿ ಮೂಡಲು ಕಾರಣವಾಗಿದೆ. ಕೆರೆಗಳಲ್ಲಿ ಜನರ ಪಾಲುದಾರಿಕೆ ಇದೆ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು. ಕೆರೆಗಳು ಸರ್ಕಾರದ ಆಸ್ತಿಯಲ್ಲ. ಸಮುದಾಯದ ಆಸ್ತಿ.

ಕೋಲಾರ ಜಿಲ್ಲೆಯ ೪೦೦ ಗ್ರಾಮಗಳಲ್ಲಿ ಗ್ರಾಮೀಣ ಮಹಿಳಾ ಒಕ್ಕೂಟದ ನಾಯಕರು ಎರಡು ಸುತ್ತು ಪರಿಸರ ರಕ್ಷಣೆ ಕುರಿತು ಪ್ರಚಾರ ನಡೆಸಿದ್ದಾರೆ. ಕೆರೆಗಳು ಜನರಲ್ಲಿ ಪುನರಾಸಕ್ತಿ ಮೂಡುವಂತೆ ಮಾಡುವುದೇ ಈ ಪ್ರಚಾರದ ಉದ್ದೇಶ.

ಸ್ವ-ಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡಿ ಸ್ಥಳೀಯ ಕೆರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು

ನೀರಾವರಿ ಸಮಸ್ಯೆಗಳು, ಮುಖ್ಯವಾಗಿ ಕೆರೆಗಳ ಬಗ್ಗೆ ಚರ್ಚೆ ಗ್ರಾಮೀಣ ಹಂತದಲ್ಲಿ ಸಂಘಟಿಸಬೇಕು.

ಸಮುದಾಯದಲ್ಲಿ ಅರಿವು ಮೂಡಿಸುವುದು ಮಹಿಳೆಯರನ್ನು ಒಳಗೊಂಡಂತೆ ಪರಿಸರ ಚಳುವಳಿ ಸಂಘಟಿಸುವುದು.

ಗ್ರಾಮದ ಪ್ರತಿನಿಧಿಗಳ ಜೊತೆ ಚರ್ಚಿಸುವುದು.

ಕೆರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸ್ವ-ಸೇವಾ ಗುಂಪುಗಳನ್ನು ಪ್ರೋತ್ಸಾಹಿಸುವುದು.

ಪತ್ರ ಬರೆಯುವ ಮೂಲಕ ಚಳವಳಿ.

ಕೆರೆಗಳ ಮೇಲಿನ ಸರ್ಕಾರದ ನಿಯಂತ್ರಣ ಮತ್ತು ಸರ್ಕಾರದ ಗ್ರಾಮೀಣ ಅಭಿವೃದ್ಧಿ ನೀತಿಗಳು. ಹೂಳು ಸಂಗ್ರಹವಾಗುತ್ತದೆ ನಂತರ ಹೂಳೆತ್ತುವುದು ಬಹಳ ದುಬಾರಿ ಎಂದು ಜನರಿಗೆ ಮನವರಿಕೆ ಮಾಡಿಕೊಡುವುದು. ಕೆರೆಗಳ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಮತ್ತು ಅವುಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುವ ದಿಸೆಯಲ್ಲಿ ೧೦೪ ಸ್ವ-ಸಹಾಯ ಗುಂಪುಗಳು ಪ್ರತಿ ತಿಂಗಳು ಎಂ.ಎಲ್.ಎ.,ಜಿಲ್ಲಾಧಿಕಾರಿ, ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕರಿಗೆ ಪತ್ರ ಬರೆಯಬೇಕು.

ಗ್ರಾಮವಿಕಾಸ ಜನರ ಅಗತ್ಯ ವಿಶ್ಲೇಷಣೆಯನ್ನು ಎಲ್ಲ ಹಳ್ಳಿಗಳಲ್ಲಿ ನಡೆಸಿತು. ಕೆರೆ ಹೂಳೆತ್ತುವುದರಿಂದ ಆಗಬಹುದಾದ ಲಾಭಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಉತ್ಪಾದನೆ ಹೆಚ್ಚಾಗುವುದರಿಂದ ಹೆಚ್ಚು ಲಾಭ ಬರುತ್ತದೆ. ಎಂಬುದನ್ನು ಜನರಿಗೆ ಹೇಳಬೇಕು.

ಹಣವನ್ನು ತೊಡಗಿಸುವ ಮೂಲಕ ಕೆರೆ ಹೂಳೆತ್ತುವ ಕಾರ್ಯದಲ್ಲಿ ಸಮುದಾಯಗಳು ಭಾಗವಹಿಸುವಂತಾಗಲು ಗ್ರಾಮವಿಕಾಸ ಸಮುದಾಯವನ್ನು ಪ್ರೋತ್ಸಾಹಿಸುತ್ತಿದೆ.

ಸ್ವ-ಸಹಾಯ ಗುಂಪುಗಳ ನೇತೃತ್ವದಲ್ಲಿರುವ ಕೆರೆಗಳ ವಿಶ್ಲೇಷಣೆ ಅಗತ್ಯವಿದೆ.

ಹೊರಗಿನವರಿಂದ ಹೂಳು ತೆಗೆಸುವುದು ಇದರಿಂದ ಸ್ಥಳೀಯರಿಗೆ ಪ್ರಚೋದನೆ ದೊರೆತಂತಾಗುತ್ತದೆ.

ಜನರು ಭಾಗವಹಿಸುವಂತೆ ಮಾಡಲು ಸ್ವ-ಸಹಾಯ ಗುಂಪುಗಳನ್ನು ಬಳಸಿಕೊಳ್ಳಬೇಕು. ಸಾಲ ಹಿಂತಿರುಗಿಸುವ ಶಕ್ತಿ ಆಧಾರದ ಮೇಲೆ ಸಾಲ ಪಡೆಯಲು ಸ್ವ-ಸಹಾಯ ಗುಂಪುಗಳಿಗೆ ಒತ್ತಾಯಿಸಲಾಯಿತು.

ಕೆರೆಗಳ ಮೇಲಿನ ಸರ್ಕಾರದ ನಿಯಂತ್ರಣ ಮತ್ತು ಸರ್ಕಾರದ ಗ್ರಾಮೀಣ ಅಭಿವೃದ್ಧಿ ನೀತಿಗಳು. ಕೃಷಿಯಲ್ಲಿ ಬಳಸುವ ಟ್ರಾಕ್ಟರ್ ಮಣ್ಣು ಎತ್ತುವ ಯಂತ್ರಗಳ ಬಳಕೆಗೆ ಪ್ರೋತ್ಸಾಹ. ಯಂತ್ರೀಕರಣ ದಕ್ಷತೆಗೂ ದೈಹಿಕ ಶ್ರಮ ವ್ಯಯವನ್ನು ಅದಕ್ಕೆ ಹೋಲಿಕೆ ಮಾಡಲಾಗಿದೆ.

ಯಂತ್ರೀಕರಣದಿಂದ ಮಾನವ ಶ್ರಮಕ್ಕೆ ಇದ್ದ ಗೌರವ, ಸಮುದಾಯದಲ್ಲಿದ್ದ ಆತ್ಮವಿಶ್ವಾಸ ಕಳೆದುಕೊಂಡಿತು.

ಗ್ರಾಮವಿಕಾಸಕ್ಕೆ ಸಂಸ್ಥೆ ೧೩ ಕೆರೆಗಳ ಭಾಗಶ: ಹೂಳೆತ್ತುವ ಕಾಯಾ ಮಾಡಿತು. ಸರ್ಕರದ ಮೇಲೆ ಅವಲಂಬನೆ ಕಡಿಮೆ ಮಾಡಲು ಹಾಗೂ ಈ ದಿಸೆಯಲ್ಲಿ ಸ್ವ-ಸಹಾಯ ಗುಂಪುಗಳನ್ನು ಪ್ರೋತ್ಸಾಹಿಸಬೇಕು.

ಸಮುದಾಯದ ನಾಯಕತ್ವದ ಅಭಾವ ಇರುವ ಕಡೆ ಸ್ವ-ಸಹಾಯ ಗುಂಪುಗಳು ಅಂಥ ಕೆಲಸ ಮಾಡಲು ಸಜ್ಜಾಗುವಂತೆ ಕ್ರಮ ತೆಗೆದುಕೊಳ್ಳಲಾಯಿತು ಹೂಳೆತ್ತುವ ವಿವಿಧ ಉಪಯೋಗಗಳ ಬಗ್ಗೆ ಸ್ವ-ಸಹಾಯ ಗುಂಪುಗಳು ಜನರಿಗೆ ನೆರವಾಗಬೇಕು.

ಕೆರೆಗಳ ಹೂಳೆತ್ತಲು ಬ್ಯಾಂಕುಗಳಿಂದ ಸಾಲ ಪಡೆಯಲು ಗ್ರಾಮವಿಕಾಸ ಸ್ವ-ಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡಿದೆ.

ಮಾನವ ಶ್ರಮದ ಮೂಲಕ ಕೆರೆ ಹೂಳೆತ್ತುವದರಿಂದ ಆಗುವ ಅನುಕೂಲದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು.

ಕೆರೆ ಹೂಳೆತ್ತುವ ಕಾರ್ಯವನ್ನು ಸಮುದಾಯದ ಕಲಿಕೆ ಭಾಗವಾಗಿ ಮಾಡುವುದು

ಶ್ರಮದ ಮೂಲಕ ಕೆರೆ ಹೂಳೆತ್ತುವುದನ್ನು ಕಡ್ಡಾಯ ಮಾಡುವುದು.

ಸಮುದಾಯದ ಎಲ್ಲರೂ ಈ ಕಾರ್ಯದಲ್ಲಿ ಭಾಗವಹಿಸುವಂತೆ ಮಾಡಬೇಕು. ಕೂಲಿಗಾಗಿ ಕಾಳು ಕಾರ್ಯಕ್ರಮವನ್ನು ಈ ಯೋಜನೆ ಜಾರಿಯಲ್ಲಿ ಬಳಸಬೇಕು.

ಕೆರೆಗಳ ಮೇಲಿನ ಸರ್ಕಾರದ ನಿಯಂತ್ರಣ ಮತ್ತು ಸರ್ಕಾರದ ಗ್ರಾಮೀಣ ಅಭಿವೃದ್ಧಿ ನೀತಿಗಳು. ಕೊಳವೆ ಬಾವಿ ನೀರಾವರಿಯನ್ನು ಪ್ರೋತ್ಸಾಹಿಸುವುದು.

ವಾಣಿಜ್ಯ ಬೆಳಗಳನ್ನು ಬೆಳೆಯಲು ದೊಡ್ಡ ರೈತರಿಗೆ ಪ್ರೋತ್ಸಾಹ.

ಕೆರೆಗಳ ಸಂರಕ್ಷಣೆ ಬಗ್ಗೆ ನಿರ್ಲಕ್ಷ.

ಮಾನವ ಶ್ರಮ ಬಳಕೆಯ ಮೂಕ ಕೆರೆ ಹೂಳೆತ್ತುವ ಅಗತ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು. ಉದ್ಯೋಗಗಳು ದೊರಕದ ಕಾಲದಲ್ಲಿ ಮತ್ತು ಕೃಷಿ ಚಟುವಟಿಕೆ ಇಲ್ಲದ ಕಾಲದಲ್ಲಿ ಇದರಿಂದ ಉದ್ಯೋಗಗಳು ದೊರಕುವುದೆಂದು ಮನವರಿಕೆ ಮಾಡಿಕೊಡಲಾಯಿತು.

ಮಾವನ ಶ್ರಮ ಬಳಕೆಯ ಉಪಯೋಗಗಳನ್ನು ವಿವರಿಸಲು ಗ್ರಾಮವಿಕಾಸ ಮಾದರಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಲಾಯಿತು. ಇದೊಂದು ರೀತಿಯಲ್ಲಿ ಕಲಿಕೆಯ ಅಭ್ಯಾಸವಾಗಿತ್ತು.

ಮಾನವ ಶ್ರಮ ಬಳಸಿ ಕೆರೆ ಹೂಳೆತ್ತುವ ಕಾರ್ಯವನ್ನು ಕೈಗೆತ್ತಿಕೊಂಡರೆ ಭಾಗಶ: ತಾನು ನೆರವು ನೀಡುವುದಾಗಿ ಗ್ರಾಮವಿಕಾಸ ಜನರಿಗೆ ತಿಳಿಸಿತು.

ಹೂಳು ಸಾಗಿಸಲು ಎತ್ತಿನ ಗಾಡಿಗಳನ್ನೇ ಬಳಸಬೇಕು. ಸಾಕಷ್ಟು ಸಂಖ್ಯೆಯಲ್ಲಿ ಎತ್ತಿನ ಗಾಡಿಗಳು ಲಭ್ಯವಿಲ್ಲದಿದ್ದರೆ ಅವುಗಳನ್ನು ಕೊಳ್ಳಲು ಸಾಲ ಹಾಗೂ ಬೆಂಬಲ ನೀಡಬೇಕು.

ಕೆರೆಗಳನ್ನು ನೀರಿನ ಮೂಲಗಳಾಗಿ ಪರಿಗಣಿಸಬೇಕಾದ ಅಗತ್ಯದ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸುವುದು.

ಅಂತರ್ ಜಲ ಮೂಲಗಳು ಬತ್ತಿ ಹೋಗುತ್ತಿರುವ ಬಗ್ಗೆ ಜನರಿಗೆ ಅರಿವು ಮೂಡಿಸುವುದು.

ಅಂತರ್ ಜಲ ಮಟ್ಟ ಸುಧಾರಿಸುವಲ್ಲಿ ಕೆರೆಗಳ ಪಾತ್ರ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವುದು.

ಕೆರೆಗಳ ಮೇಲಿನ ಸರ್ಕಾರದ ನಿಯಂತ್ರಣ ಮತ್ತು ಸರ್ಕಾರದ ಗ್ರಾಮೀಣ ಅಭಿವೃದ್ಧಿ ನೀತಿಗಳು. ಕೆರೆಗಳ ಸಂರಕ್ಷಣೆ/ನಿರ್ವಹಣೆ ಕಾರ್ಯಕೈಗೆತ್ತಿಕೊಳ್ಳುವಲ್ಲಿ ಸಂಬಂಧಿಸಿದ ವಿಭಾಗ/ಪಂಚಾಯತ್ ಗಳಿಂದ ಅನುಮತಿ ಪಡೆಯುವಲ್ಲಿ ಇರುವ ಅಡ್ಡಿ ಆತಂಕಗಳು, ಅಧಿಕಾರಶಾಹಿ ವಿಳಂಬನೀತಿ ಸೇರಿ ಸಮುದಾಯ ಪಾತ್ರ ವಹಿಸಲು ಅವಕಾಶ ನೀಡಿದರೆ ಎಲ್ಲವೂ ಪಾರದರ್ಶಕವಾಗಿರಬೇಕಾಗುತ್ತದೆ. ನೀತಿ ಹಾಗೂ ಯೋಜನೆ ಜಾರಿಯಲ್ಲಿ ಪಟ್ಟಭದ್ರ ಹಿತಾಸಕ್ತಿ ಬೆಳೆದಿದೆ. ಕೂಲಿಗೆ ಹಣ ನೀಡುವ ಬದಲು ರಾಗಿ, ಅಕ್ಕಿ, ಗೋಧಿ, ಮುಂತಾದವನ್ನು ನೀಡಲಾಯಿತು. ಹಣ ಕೊಟ್ಟರೆ ಮದ್ಯದ ಮೇಲೆ ಕೂಲಿಗಾರರು ವ್ಯಯಮಾಡುವ ಸಾಧ್ಯತೆ ಇರುವುದರಿಂದ ಹೀಗೆ ಮಾಡಲಾಯಿತು. ಈ ವಿಧಾನ ಮಹಿಳೆಯರ ಮೆಚ್ಚುಗೆಗೆ ಪಾತ್ರವಾಯಿತು.

ಕೆರೆ ಹೂಳೆತ್ತುವುದನ್ನು ಮಾನವ ಶ್ರಮದ ಮೂಲಕ ಮಾಡಬೇಕೆಂದು ಗ್ರಾಮವಿಕಾಸ ನಿಗದಿ ಮಾಡಿದ್ದರಿಂದ ಗ್ರಾಮವಿಕಾಸ ಎತ್ತಿನ ಬಂಡಿಗಳನ್ನು ಕೊಳ್ಳಲು ಧನ ನೆರವು ನೀಡಿತು. ಟ್ರಾಕ್ಟರುಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿ ನೈಸರ್ಗಿಕ ಕೃಷಿಯನ್ನು ಪ್ರೋತ್ಸಾಯಿಸಲಾಯಿತು. ರೈತರಿಗೆ ಎತ್ತಿನ ಗಾಡಿಗಳು ಆಸ್ತಿಯಂತಾದವು.

ಒಣ ಕೃಷಿ ಪ್ರದೇಶದಲ್ಲಿ ಕುಡಿಯುವ ನೀರು ಹಾಗು ನೀರಾವರಿಯ ಮುಖ್ಯ ಮೂಲ ಕೆರೆಗಳು. ಆದ್ದರಿಂದ ಅವುಗಳ ಅನಿವಾರ್ಯ. ಈ ಬಗ್ಗೆ ಗ್ರಾಮವಿಕಾಸ ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯ ಆರಂಭಿಸಿದೆ.

ಅಂತರ್ ಜಲದ ಮಟ್ಟ ಕುರಿತು ಮಾಹಿತಿ ಸಂಗ್ರಹಿಸಲು ಸ್ವ-ಸಹಾಯ ಗುಂಪುಗಳಿಗೆ ಉತ್ತೇಜನ ನೀಡುವುದು.

ಕೊಳವೆ ಬಾವಿಗಳಿಂದ ನೀರಾವರಿ ಮಾಡುವುದರ ವಿರುದ್ಧ ರೈತರಲ್ಲಿ ಅರಿವು ಮೂಡಿಸುವುದು.
ಕೆರೆಗಳು ಸಮುದಾಯದ ಸಂಪನ್ಮೂಲಗಳು ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು.

ಕೆರೆಗಳ ಸಂರಕ್ಷಣೆ ಅವರ ಹಕ್ಕು ಎಂಬ ಅಂಶವನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಮತ್ತು ಆ ಬಗ್ಗೆ ಸಂಬಂಧಿಸಿದವರನ್ನು ಸಂಪರ್ಕಿಸುವುದು.

ಕೆರೆಗಳ ಮೇಲಿನ ಸರ್ಕಾರದ ನಿಯಂತ್ರಣ ಮತ್ತು ಸರ್ಕಾರದ ಗ್ರಾಮೀಣ ಅಭಿವೃದ್ಧಿ ನೀತಿಗಳು. ಪಾರದರ್ಶಕತೆ ಇರಬೇಕಾಗಿರುವುದರಿಂದಲೇ ಸಮುದಾಯದ ಪಾತ್ರವಹಿಸುವುದನ್ನು ಪ್ರೋತ್ಸಾಹಿಸುತ್ತಿಲ್ಲ. ಅಂತರ್ ಜಲ ಬತ್ತಿ ಹೋಗುತ್ತಿರುವ ಬಗ್ಗೆ ಮತ್ತು ಅದರಿಂದ ಪರಿಸರಕ್ಕೆ ಆಗುವ ಅಪಾಯದ ಬಗ್ಗೆ ಸಮುದಾಯಕ್ಕೆ ಗ್ರಾಮವಿಕಾಶ ಅರಿವು ಮೂಡಿಸಿತು.

ಕೆರೆಗಳ ಪುನರುಜ್ಜೀವನದಿಂದ ಆಗಬಹುದಾದ ಅನುಕೂಲಗಳು ಹಾಗೂ ಜಲ ಜೀವರಾಶಿಗೂ ಕೆರೆಗಳಿಗೂ ಇರುವ ಸಂಬಂಧಗಳ ಬಗ್ಗೆ ಗ್ರಾಮವಿಕಾಶ ಸಮುದಾಯದಲ್ಲಿ ಅರಿವು ಮೂಡಿಸಿತು.

ತನ್ನ ಯೋಜನಾ ಪ್ರದೇಶದಲ್ಲಿ ಅಂತರ್ ಜಲದ ನೀರಿನ ಮಟ್ಟ ಒಣಗಿದ ತೆರೆದ ಬಾವಿಗಳು, ನೀರು ಸಿಗದ ಕೊಳವೆ ಬಾವಿಗಳು, ನೀರಿನ ಗುಣಮಟ್ಟ ಮುಂತಾದ ಮಾಹಿತಿಯನ್ನು ಗ್ರಾಮವಿಕಾಸ, ಸ್ವ-ಸಹಾಯ ಗುಂಪುಗಳ ಮೂಲಕ ಸಂಗ್ರಹಿಸಿತು.

ಯೋಜನೆಯ ಹಣವನ್ನು ಕೊಳವೆ ಬಾವಿ ಆಧಾರಿತ ನೀರಾವರಿ ಕೃಷಿ ಆರಂಭಿಸುವ ವಿರುದ್ಧ ರೈತರಲ್ಲಿ ಅರಿವು ಮೂಡಿಸಲಾಯಿತು.

ಯಾಂತ್ರೀಕೃತ ಹೂಳೆತ್ತುವ ವಿರುದ್ಧ ಸ್ವ-ಸಹಾಯ ಗುಂಪುಗಳಲ್ಲಿ ಅರಿವು ಮೂಡಿಸುವುದು.
ಕೆರೆಗಳ ಮೇಲಿನ ಸರ್ಕಾರದ ನಿಯಂತ್ರಣ ಮತ್ತು ಸರ್ಕಾರದ ಗ್ರಾಮೀಣ ಅಭಿವೃದ್ಧಿ ನೀತಿಗಳು.   ಕೆರೆಗಳು ಜನರ ಆಸ್ತಿ ಎಂಬುದನ್ನು ಗ್ರಾಮವಿಕಾಸ ಮನವರಿಕೆ ಮಾಡಿದೆ (ಕೆರೆ ಹೂಳೆತ್ತುವ ಸಂದರ್ಭದಲ್ಲಿ ಹೊನ್ನಶೆಟ್ಟಿಹಳ್ಳಿಯ ಜನರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಯೊಬ್ಬರನ್ನು ಬೆನ್ನಟ್ಟಿ ಹೊರಗೆ ಕಳುಹಿಸಿದರು)

ಕೆರೆಗಳ ಬಗ್ಗೆ ಮಾಧ್ಯಮ ಮತ್ತು ಆಡಳಿತಗಾರರ ಗಮನ ಸೆಳೆಯಲು ಆ ವಿಷಯ ಕುರಿತು ಸಮಾವೇಶ ಸಂಘಟಿಸುವುದು.

ಕೆರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸ್ವ-ಸಹಾಯ ಗುಂಪುಗಳನ್ನು ಗ್ರಾಮವಿಕಾಸ ಪ್ರೋತ್ಸಾಹಿಸಿದೆ.

ಜಿಲ್ಲಾ ಪಂಚಾಯ್ತಿ ಬಜೆಟ್ ಕಾಪಿಗಳನ್ನು ಸಂಗ್ರಹಿಸಲು ಗ್ರಾಮವಿಕಾಸ ಸ್ವಸಹಾಯ ಗುಂಪುಗಳಿಗೆ ಮತ್ತು ಅವುಗಳ ಒಕ್ಕೂಟಕ್ಕೆ ಪ್ರೋತ್ಸಾಹ ನೀಡಿದೆ. ಕೆರೆಗಳ ಸಂರಕ್ಷಣೆ ನಿಗದಿ ಮಾಡಿರುವ ಹಣದ ವಿವರ ತಿಳಿದು ಆ ಕಾರ್ಯಕ್ರಮ ಸರಿಯಾಗಿ ಜಾರಿಯಾಗುವಂತೆ ಮಾಡಲು ಗ್ರಾಮವಿಕಾಸ ಪ್ರೋತ್ಸಾಹ ನೀಡಿತು.

ಕೆರೆ ಹೂಳೆತ್ತುವ ಕಾರ್ಯವನ್ನು ಯಂತ್ರೀಕರಣಗೊಳಿಸಲು ಅಧಿಕಾರಶಾಹಿ ಯತ್ನಿಸಿದ ಸಂದರ್ಭದಲ್ಲಿ ಅದನ್ನು ಪ್ರತಿರೋಧಿಸಲು ಗ್ರಾಮವಿಕಾಸ ಸ್ವ-ಸಹಾಯ ಗುಂಪುಗಳನ್ನು ಹಾಗೂ ಸಮುದಾಯದಲ್ಲಿ ಅರಿವು ಮೂಡಿಸಿತು. (ಮಿಣಿಜೇನಹಳ್ಳಿ ೨೦೦೧)

ಕೆರೆಗಳ ಸಂರಕ್ಷಣೆಯ ಅಗತ್ಯದ ಬಗ್ಗೆ ಮಾಧ್ಯಮ ಹಾಗೂ ಆಡಳಿತದ ಗಮನ ಸೆಳೆಯಲು ಆ ವಿಷಯಕ್ಕೆ ಸಂಬಂಧಿಸಿದ ಸಮ್ಮೇಳವನ್ನು ಗ್ರಾಮವಿಕಾಸ ಸಂಘಟಿಸಿತ್ತು.

ಕೆರೆಗಳ ಸಂರಕ್ಷಣೆಯ ಅಗತ್ಯದ ಬಗ್ಗೆ ಮಾಧ್ಯಮ ಹಾಗೂ ಆಡಳಿತದ ಗಮನ ಸೆಳೆಯಲು ಆ ವಿಷಯಕ್ಕೆ ಸಂಬಂಧಿಸಿದ ಸಮ್ಮೇಳನವನ್ನು ಗ್ರಾಮವಿಕಾಸ ಸಂಘಟಿಸಿತ್ತು.