ಕೆರೆ ನೀರಾವರಿ ನಿರ್ವಹಣೆಯಲ್ಲಿ ಜನರ ಸಹಭಾಗಿತ್ವ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಮತ್ತು ಇತಿಹಾಸ ವೇದಿಕೆ, ಶಿವಮೊಗ್ಗ ಜಂಟಿಯಾಗಿ ಸಂಯೋಜಿಸಿದ್ದವು. ಆ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ತರಲಾಗಿದೆ. ವಿಚಾರ ಸಂಕಿರಣವನ್ನು ಸಂಯೋಜಿಸಲು ಮತ್ತು ಈ ಪುಸ್ತಕವನ್ನು ಪ್ರಕಟಿಸಲು ಎಲ್ಲ ರೀತಿಯಿಂದಲೂ ಪ್ರೋತ್ಸಾಹಿಸಿದ ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡ ಮತ್ತು ಕುಲಸಚಿವರಾದ ಡಾ. ಕೆ.ವಿ. ನಾರಾಯಣ ಅವರಿಗೆ ಕೃತಜ್ಞತೆಗಳು. ಇಲ್ಲಿನ ಲೇಖನಗಳ ಭಾಷೆಯನ್ನು ತಿದ್ದಿ ಸಹಕರಿಸಿದ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಟಿ.ಆರ್.ಚಂದ್ರಶೇಖರ್ ಮತ್ತು ಸಹದ್ಯೋಗಿ ಜನಾರ್ದನ ಅವರಿಗೆ ಕೃತಜ್ಞತೆಗಳು. ಪುಟವಿನ್ಯಾಸ ಮಾಡಿದ ಸುಜ್ಞಾನಮೂರ್ತಿ, ಮುಖಪುಟವನ್ನು ರಚಿಸಿದ ಶ್ರೀ ಕೆ.ಕೆ. ಮಕಾಳಿ ಹಾಗೂ ಅಕ್ಷರ ಸಂಯೋಜಿಸಿದ ಸಂಧ್ಯಾ ಕಂಪ್ಯೂಟರ್ಸ್ ಅವರಿಗೆ ಕೃತಜ್ಞತೆಗಳು.

ಎಂ. ಚಂದ್ರ ಪೂಜಾರಿ