ವರ್ತಮಾನದಲ್ಲಿ ಸುದ್ಧಿಯಲ್ಲಿರುವ ಅಭಿವೃದ್ಧಿಯ ಮತ್ತೊಂದು ಮಾದರಿ ಸಹಭಾಗಿತ್ವ ಅಥವಾ ಜನರ ಪಾಲುಗೊಳ್ಳವಿಕೆ ಆಧಾರಿತ ಅಭಿವೃದ್ಧಿ. ದಿನ ನಿತ್ಯದ ಮಾಧ್ಯಮಗಳಲ್ಲಿ ಒಂದಲ್ಲ ಒಂದು ಕ್ಷೇತ್ರದಲ್ಲಿ ಜನರ ಸಹಭಾಗಿತ್ವದಿಂದ ಆದ ಮತ್ತು ಆಗುತ್ತಿರುವ ಕ್ರಾಂತಿಕಾರಕ ಬದಲಾವಣೆಗಳು ಸುದ್ಧಿ ಬರುತ್ತಲೇ ಇದೆ. ಶಿಕ್ಷಣದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ, ನೀರಾವರಿ ನಿರ್ವಹಣೆಯಲ್ಲಿ, ಅರಣ್ಯ ಸರಂಕ್ಷಣೆಯಲ್ಲಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಜನರ ಪಾಲ್ಗೊಳ್ಳುವಿಕೆಯ ಕುರಿತು ಪ್ರಚಾರವಿದೆ. ಸಹಭಾಗಿತ್ವ ಮಾದರಿ ಅಭಿವೃದ್ಧಿ ಎಂದರೇನು? ಇದು ತುಂಬ ಸರಳ ವಿಚಾರ. ಜನರ ಬೇಕು ಬೇಡಗಳ ಕುರಿತು ಅವರೇ ನಿರ್ಧಾರ ತೆಗೆದುಕೊಂಡು ಅದರ ಪೂರೈಕೆಗೆ ಅಗತ್ಯವಿರುವ ಯೋಜನೆಗಳನ್ನು ಅವರೇ ಮಾಡಿ ಅದನ್ನು ಕಾರ್ಯರೂಪಕ್ಕೆ ತರುವ ಅಭಿವೃದ್ಧಿಯ ಹೊಸ ಪರಿಕಲ್ಪನೆಯೇ ಸಹಭಾಗಿತ್ವ ಅಥವಾ ಜನರ ಪಾಲುಗೊಳ್ಳುವಿಕೆಯಿಂದ ಸಾಧ್ಯವಾಗುವ ಅಭಿವೃದ್ಧಿ. ಇದು ಹೊಸ ಪರಿಕಲ್ಪನೆಯಾದರೆ ಈಗಾಗಲೇ ಇರುವ ಅಭಿವೃದ್ಧಿಯ ಪರಿಕಲ್ಪನೆಯೇನು? ಈಗ ಅಭಿವೃದ್ಧಿ ಆಗುವವರು ಮತ್ತು ಅಭಿವೃದ್ಧಿ ಮಾಡುವವರು ಎಂಬ ಎರಡು ವರ್ಗವಿದೆ. ಅಭಿವೃದ್ಧಿ ಅಂದರೇನು? ಅದನ್ನು ಹೇಗೆ ಸಾಧಿಸಬಹುದು? ಯಾವ ಯೋಜನೆಗಳು ಯಾಗಿಗೆ ಸೂಕ್ತ? ಆ ಯೋಜನೆಗಳಲ್ಲಿ ವಿನಿಯೋಜಿಸಬೇಕಾದ ಸಂಪನ್ಮೂಲವೆಷ್ಟು? ಇತ್ಯಾದಿ ಕುರಿತ ನಿರ್ಧಾರವನ್ನು ಅಭಿವೃದ್ಧಿ ಮಾಡುವವರು ಅಭಿವೃದ್ಧಿ ಆಗಬೇಕಾದವರ ಪರವಾಗಿ ತೆಗೆದು ಕೊಳ್ಳುತ್ತಾರೆ. ಇಲ್ಲಿ ಅಭಿವೃದ್ಧಿ ಆಗುವವರು ಒಂದು ಟಾರ್ಗೆಟ್ ಗುಂಪಾಗಿ ಪರಿಗಣಿಸಲ್ಪಡುತ್ತಾರೆ. ಅವರ ಅವಶ್ಯಕತೆಗಳೇನು ಅಥವಾ ಅವರ ಪ್ರಯೋರಿಟಿಗಳೇನು? ಎಂದು ಕೇಳುವ ಗೋಜಿಗೆ ಹೋಗುವುದಿಲ್ಲ. ಅವುಗಳನ್ನು ಅಭಿವೃದ್ಧಿ ಮಾಡುವವರು ನಿರ್ಧರಿಸಿ ಯೋಜನೆ ಗಳನ್ನು ಜಾರಿ ತರುತ್ತಾರೆ. ಬಡವರ ಕಲ್ಯಾಣಕ್ಕಾಗಿರುವ ಬಹುತೇಕ ಕಾರ್ಯಕ್ರಮಗಳು ಇದೇ ಕ್ರಮದಲ್ಲಿ ರೂಪುಗೊಳ್ಳುತ್ತವೆ ಮತ್ತು ಜಾರಿಗೊಳ್ಳುತ್ತವೆ. ಆದರೆ ಸಹಭಾಗಿತ್ವದ ತಾತ್ವಿಕತೆಗೆ ಅನುಸಾರ ನಡೆಯುವ ಅಭಿವೃದ್ಧಿಯಲ್ಲಿ ಈ ಸಮಸ್ಯೆ ಇಲ್ಲ. ಜನರು ಅವರ ಆದ್ಯತೆಗಳನ್ನು ಅವರೇ ಗುರುತಿಸುತ್ತಾರೆ. ಜತೆಗೆ ಅವುಗಳ ಈಡೇರಿಕೆಗೆ ಪೂರಕವಾದ ಯೋಜನೆಗಳನ್ನು ಕನ್‌ಸೀವ್ ಮಾಡಿ ಕಾರ್ಯರೂಪಕ್ಕೆ ತರುವುದು ಕೂಡ ಅವರ ಸಹಭಾಗಿತ್ವದ ಅಂಗವಾಗಿರುತ್ತದೆ. ಈ ಅಧ್ಯಾಯದಲ್ಲಿ ಸಹಭಾಗಿತ್ವ ಅಭಿವೃದ್ಧಿಯ ತಾತ್ವಿಕ ಹಿನ್ನೆಲೆಯನ್ನು ಪರಿಚಯಿಸುವ ಪ್ರಯತ್ನವನ್ನು ಮಾಡಿದ್ದೇನೆ. ಹಿಂದೆ ಯಾವ ಯಾವ ಅಂಶಗಳು ಅಭಿವೃದ್ಧಿಯ ಮಿಸ್ಸಿಂಗ್ ಲಿಂಕ್ ಎಗಿ ಕೆಲಸ ಮಾಡಿವೆ? ಸೋಶಿಯಲ್ ಕ್ಯಾಪಿಟಲ್ ಇಂದು ಹೇಗೆ? ಮತ್ತು ಯಾಕೆ? ಹೊಸ ಮಿಸ್ಸಿಂಗ್ ಲಿಂಕ್ ಆಗಿದೆ, ಸೋಶಿಯಲ್ ಕ್ಯಾಪಿಟಲ್‌ನ್ನು ಹೇಗೆ ಸಹಭಾಗಿತ್ವದ ಅಡಿಪಾಯವೆಂದು ಮುಂಚೂಣಿಗೆ ತರಲಾಗುತ್ತಿದೆ? ಸಮುದಾಯವಾದ ಮತ್ತು ಪರಿಸರವಾದ ಹೇಗೆ ಸಹಭಾಗಿತ್ವ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸಿದೆ? ನಮ್ಮಂತಹ ಬಡದೇಶದಲ್ಲಿ ಸೋಶಿಯಲ್ ಕ್ಯಾಪಿಟಲ್‌ನ ಅನ್ವಯಿಕೆ ಹೇಗಿರಬಹುದು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಈ ಅಧ್ಯಾಯದಲ್ಲಿ ಪ್ರಯತ್ನಿಸಿದ್ದೇನೆ

ಅಭಿವೃದ್ಧಿಯ ಮಿಸ್ಸಿಂಗ್ ಲಿಂಕ್

ಸಹಭಾಗಿತ್ವ ಅಭಿವೃದ್ಧಿ ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಇಷ್ಟೊಂದು ಪ್ರಚಾರ ಪಡೆಯಲು ಕಾರಣವೇನು? ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅಭಿವೃದ್ಧಿಯ ಮಿಸ್ಸಿಂಗ್ ಲಿಂಕ್‌ಗಳ ಚರ್ಚೆಯ ಕಿರು ಪರಿಚಯ ಅಗತ್ಯವಿದೆ. ಆರಂಭದಲ್ಲಿ ಬಂಡವಾಳ ಮತ್ತು ತಂತ್ರಜ್ಞಾನದ ಕೊರತೆ ಅಭಿವೃದ್ಧಿಯ ಮುಖ್ಯ ಮಿಸ್ಸಿಂಗ್ ಲಿಂಕ್ ಆಗಿತ್ತು (ಹರ್ಶ್‌‌ಮನ್ ೧೯೫೮). ಹಾಗೆಂದು ಸಹಾಯ ಧನ ಮತ್ತು ಸಾಲದ ರೂಪದಲ್ಲಿ ಒಂದು ಕಡೆಯಿಂದ ಪರದೇಶಿ ಬಂಡವಾಳ ಬಂತು. ಹಾಗೆ ಬಂದ ಬಂಡವಾಳದಲ್ಲಿ ಸ್ವಲ್ಪ ಭಾಗ ಪಶ್ಚಿಮದ ತಂತ್ರಜ್ಞಾನವನ್ನು ಖರೀದಿಗಾಗಿ ಎಲ್ಲಿಂದ ಬಂತೋ ಅಲ್ಲಿಗೆ ಸೇರಿದ ಉದಾಹರಣೆಗಳೂ ಇವೆ. ಅದರ ಮಧ್ಯೆ ಕೂಡ ಹಳ್ಳಿಯನ್ನು ತಾಲ್ಲೂಕು ಕೇಂದ್ರಕ್ಕೆ ತಾಲ್ಲೂಕನ್ನು ಜಿಲ್ಲಾ ಕೇಂದ್ರಕ್ಕೆ, ಜಿಲ್ಲೆಯನ್ನು ರಾಜ್ಯ ಕೇಂದ್ರಕ್ಕೆ ಮತ್ತು ರಾಜ್ಯವನ್ನು ದೇಶದ ಕೇಂದ್ರಕ್ಕೆ ಜೋಡಿಸುವ ವ್ಯವಸ್ಥೆ ಸಾಧ್ಯವಾಯಿತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆಧುನೀಕರಣಕ್ಕೆ ಅಥವಾ ಬಂಡವಾಳದ ವಿಸ್ತರಣೆಗೆ ಅಗತ್ಯವಿರುವ ಮೇಟರಿಯಲ್ ಹಾಗೂ ಇನ್‌ಸ್ಟಿಟ್ಯುಶನಲ್ ಇನ್‌ಫ್ರಸ್ಟ್ರಕ್ಷರ್‌ಗಳನ್ನು ರೂಪಿಸಲು ಅದು ನೆರವಾಯಿತು. ಈ ಪ್ರಕ್ರಿಯೆ ಹಲವಾರು ದಶಖಗಳವರೆಗೆ ನಡೆಯಿತು. ಆದರೂ ಬಡದೇಶಗಳ ಕೆಳ ವರ್ಗದವರ ಸ್ಥಿತಿ ವಿಶೇಷ ಸುಧಾರಣೆಯಾಗಲಿಲ್ಲ. ಆದುದರಿಂದ ಅಭಿವೃದ್ಧಿಯ ಹೊಸ ಮಿಸ್ಸಿಂಗ್ ಲಿಂಕ್‌ಗೆ ಹುಡುಕಾಟ ಶುರುವಾಯಿತು. ಹಾಗೆ ಎಪ್ಪತ್ತರ ದಶಕದಲ್ಲಿ ಬಂಡವಾಳ ಮತ್ತು ತಂತ್ರಜ್ಞಾನದ ಬದಲು ಉದ್ಯಮಶೀಲತೆ ಅಭಿವೃದ್ಧಿಯ ಹೊಸ ಮಿಸ್ಸಿಂಗ್ ಲಿಂಕ್ ಆಯಿತು (ಶಂಪೀಟರ್ ೧೯೩೪).ಹೊಸ ಥಿಸಿಸ್ ಪ್ರಕಾರ ಬಡದೇಶಗಳಲ್ಲಿ ಮುಖ್ಯ ಕೊರತೆಯೆಂದರೆ ಬಂಡವಾಳ ಮತ್ತು ತಂತ್ರಜ್ಞಾನ. ಆದರೆ ಒಂದು ವಿಚಾರದಲ್ಲಿ ಮಾತ್ರ ಬಡದೇಶಗಳು ಶ್ರೀಮಂತವಾಗಿವೆ. ಅದೇನೆಂದರೆ ಅವರಲ್ಲಿನ ಮಾನವ ಸಂಪತ್ತು. ಬಡದೇಶಗಳಲ್ಲಿ ಧಾರಾಳವಾಗಿ ಇರುವುದೆಂದರೆ ಜನಸಂ‌ಖ್ಯೆ. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಅಭಿವೃದ್ಧಿ ಸಾಧ್ಯ ಎಂಬ ಹೊಸ ಥಿಯರಿಗಳು ಬರಲು ಆರಂಭವಾದವು. ಅವುಗಳಲ್ಲಿ ಉದ್ಯಮಶೀಲತೆಗೆ ಸಂಬಂಧಿಸಿದ ಥಿಯರಿಗಳು ಮುಖ್ಯ ಉದಾಹರಣೆಗೆ ಮೆಕ್‌ಲೇಂಡ್‌ನ ಎಚೀವ್‌ಮೆಂಟ್ ಥಿಯರಿ (ಮೆಕ್‌ಲೇಂಡ್ ೧೯೬೧). ಇದರ ಪ್ರಕಾರ ಉದ್ಯಮಶೀಲತೆ ಹೆಚ್ಚು ಇರುವ ದೇಶಗಳು ಅಭಿವೃದ್ಧಿ ಹೊಂದಿವೆ; ಕಡಿಮೆ ಇರುವ ದೇಶಗಳು ಬಡದೇಶಗಳಾಗಿಯೇ ಉಳಿದಿವೆ. ಹಾಗೆಂದು ಬಡದೇಶಗಳು ನಿರಾಶರಾಗುವ ಅಗತ್ಯವಿಲ್ಲ. ಯಾಕೆಂದರೆ ಉದ್ಯಮಶೀಲತೆಯ ಗುಣಗಳನ್ನು ಪಟ್ಟಿ ಮಾಡಬಹುದು. ಜತಗೆ ಆ ಗುಣಗಳು ಹುಟ್ಟಿನಿಂದ ಬರಬೇಕಾಗಿಲ್ಲ. ಸರಿಯಾದ ತರಬೇತಿ ನೀಡುವ ಮೂಲಕ ಯಾರಲ್ಲೂ ಬೇಕಾದರೂ ಅವುಗಳನ್ನು ಬೆಳೆಸಬಹುದು. ಹಾಗೆ ತರಬೇತಿ ಪಡೆದ ಉದ್ಯಮಿಗಳು ಸಣ್ಣ ಉದ್ದಿಮೆಗಳನ್ನು ಆರಂಭಿಸುತ್ತಾರೆ. ಇಂತಹ ಸಣ್ಣ ಉದ್ದಿಮೆಗಳು ದೊಡ್ಡ ಉದ್ದಿಮೆದಾರರನ್ನು ಸೃಷ್ಟಿಸುವ ತರಬೇತಿ ಕೇಂದ್ರಗಳಾಗಿರುತ್ತವೆ. ಹೀಗೆ ಎಂತಹ ಬಡ ದೇಶ ಕೂಡ ಶ್ರೀಮಂವಾಗಬಹುದೆಂಬ ವಾದ ಇತ್ತ. ಅದನ್ನೂ ಬಡದೇಶಗಳು ಆದರದಿಂದ ಸ್ವಾಗತಿಸದವು. ಪಾಪ ಅವರಿಗೆ ಬೇರೆ ದಾರಿಯೇ ಇರಲಿಲ್ಲ. ಅವರ ಮುಖ್ಯ ಸಂಪತ್ತೇ ಜನಸಂಖ್ಯೆ ಅದನ್ನು ಬಳಸಿಕೊಂಡು ಅಭಿವೃದ್ಧಿ ಸಾಧ್ಯ ಎನ್ನುವ ಥಿಯರಿ ಅವರಿಗೆ ಅಪ್ಯಾಯಮಾನವಾಯಿತು.

ಆ ನೀತಿಯಿಂದ ಏನೂ ಆಗಲಿಲ್ಲವೆಂದು ಹೇಳುವುದು ಸರಿಯಲ್ಲ. ಅದು ಕೂಡ ನಮ್ಮ ದೇಶದ ಆರ್ಥಿಕ ಸ್ಥಿತಿಯನ್ನು ಸ್ವಲ್ಪ ಬದಲಾಯಿಸಲು ಸಹಕರಿಸಿದೆ. ಸಣ್ಣ ಉದ್ದಿಮೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತು. ಅದರಲ್ಲಿ ದುಡಿಯುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿತು. ರಾಷ್ಟ್ರೀಯ ಉತ್ಪನ್ನದಲ್ಲಿ ಸಣ್ಣ ಉದ್ದಿಮೆಯ ಪಾಲು ಹೆಚ್ಚಿತು. ಆದರೆ ಉದ್ಯಮಶೀಲತೆಯ ಥಿಯರಿಗಳು ಊಹಿಸಿದ ಒಂದು ಬದಲಾವಣೆ ಆಗಲೇ ಇಲ್ಲ. ಅದೇನಂದರೆ ಸಮಾಜದ ಥಿಯರಿಗಳು ಉಹಿಸಿದ ಒಂದು ಬದಲಾವಣೆ ಆಗಲೇ ಇಲ್ಲ. ಅದೇನಂದರೆ ಸಮಾಜದ ಎಲ್ಲ ವರ್ಗಗಳಿಂದ ಉದ್ಯಮಿಗಳು ಬರಲೇ ಇಲ್ಲ. ಅದೇನಂದರೆ ಸಮಾಜದ ಎಲ್ಲ ವರ್ಗಗಳಿಂದ ಉದ್ಯಮಿಗಳು ಬರಲೇ ಇಲ್ಲ. ಅದೇನಂದರೆ ಸಮಾಜದ ಎಲ್ಲ ವರ್ಗಗಳಿಂದ ಉದ್ಯಮಿಗಳು ಇರಲೇ ಇಲ್ಲ. ಸಣ್ಣ ಉದ್ಯಮಗಳನ್ನು ಪ್ರಾರಂಭಿಸಿದವರಲ್ಲಿ ಬಹುತೇಕರು ವ್ಯಾಪಾರಿ ಕುಟುಂಬದಿಂದ ಬಂದವರು. ಮತ್ತೂ ಮುಂದೆ ಹೋದರೆ ಆಯಾಯ ಪ್ರದೇಶದ ಬಲಿಷ್ಠ ರೈತ ಸಮುದಾಯಗಳು ತಮ್ಮ ಕೃಷಿಯಲ್ಲಿ ಬಂದ ಮಿಗತೆ ಆದಾಯವನ್ನು ಬಳಸಿಕೊಂಡ ಸಣ್ಣ ಉದ್ಯಮ ಆರಂಭಿಸಿದರು (ನಫೀಜರ್ ೧೯೭೮). ಹೀಗೆ ಉದ್ಯಮಶೀಲತೆಯ ಥಿಯರಿ ಬಡದೇಶಗಳ ಕೆಳವರ್ಗದ ಸಮಸ್ಯೆ ಪರಿಹರಿಸಲು ವಿಶೇಷ ಸಹಕಾರಿಯಾಗಲಿಲ್ಲ. ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲದ ಥಿಯರಿನ್ನು ವಿಶೇಷ ಸಹಕಾರಿಯಾಗಲಿಲ್ಲ. ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲದ ಥಿಯರಿಯನ್ನು ಇನ್ನೂ ಸ್ವಲ್ಪ ವಿಸ್ತರಿಸಲಾಯಿತು. ಇದರ ಹೊಸ ರೂಪದಲ್ಲಿ ಮಾನವ ಸಂಪನ್ಮೂಲವನ್ನು ಕೇವಲ ಉದ್ಯಮಶೀಲತೆಗೆ ಸೀಮಿತಗೊಳಿಸಿ ನೋಡುವುದು ಸರಿಯಲ್ಲ. ಸಮಾಜದ ಎಲ್ಲ ವರ್ಗಗಳ ಅದರಲ್ಲೂ ಕೆಲ ವರ್ಗದಲ್ಲಿನ ಮಾನವ ಸಂಪನ್ಮೂಲ ಬಳಕೆ ಕುರಿತಂತೆ ಚಿಂತನೆಗಳು ನಡೆಯಬೇಕೆಂದಾಯಿತು (ಕೀತ್ ಗ್ರಿಫಿನ್ ಅಂಡ್ ಜಾನ್ ನೈಟ್, ೧೯೯೦). ಅದರಂತೆ ಮಾನವ ಸಂಪನ್ಮೂಲ ಅಭಿವೃದ್ಧಿಯ ಥಿಯರಿಗಳು ಬಂದವು. ಇಲ್ಲಿ ಇಡೀ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನವಿಲ್ಲ. ವ್ಯಕ್ತಿಯ ಪರಿವರ್ತನೆಗೆ ಮಹತ್ವ. ಉತ್ತಮ ಆರೋಗ್ಯ, ಶಿಕ್ಷಣ ಮತ್ತು ಯಾವುದಾದರೂ ಒಂದು ಕೆಲಸದಲ್ಲಿ ಪರಿಣಿತಿ ನೀಡಿದರೆ ವ್ಯಕ್ತಿಯೊಬ್ಬರ ಬದುಕುವ ಸಾಧ್ಯತೆಯೇ ಸಕಾರಾತ್ಮಕವಾಗಿ ಬದಲಾಗಬಹುದೆನ್ನುವ ಗ್ರಹಿತ ಇಲ್ಲಿದೆ. ಆರೋಗ್ಯ, ಶಿಕ್ಷಣ ಮತ್ತು ಇತರ ಸವಲತ್ತುಗಳ ಮೂಲಕ ವ್ಯಕ್ತಿಯೊಬ್ಬನ ಸಂಪನ್ಮೂಲ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸುವುದಕ್ಕೆ ಈ ಮಾದರಿಯ ಪ್ರಾಮುಖ್ಯತೆ. ಉತ್ತಮ ಆರೋಗ್ಯ ಮತ್ತು ಶಿಕ್ಷಣದಿಂದ ಆಧುನಿಕ ಕಸುಬಿಗೆ ಅಗತ್ಯವಾದ ಪರಿಣಿತಿ ಹೊಂದಿ ಹೊಸದಾಗಿ ರೂಪುಗೊಳ್ಳುವ ಶ್ರಮ ಮಾರುಕಟ್ಟೆಯಲ್ಲಿ ಪಾಲುಗೊಳ್ಳಲು ಅನುಕೂಲ. ಆ ಮೂಲಕ ತನ್ನ ಮತ್ತು ಕುಟುಂಬದ ಆದಾಯವನ್ನು ಸುಧಾರಿಸಿಕೊಳ್ಳಬಹುದೆಂಬ ಗ್ರಹಿತವಿದೆ (ಥಿಯೊಡರ್ ಶಲ್ಜ್ ೧೯೭೧).

ಸಹಭಾಗಿತ್ವ ಮತ್ತು ಸೋಶಿಯಲ್ ಕ್ಯಾಪಿಟಲ್

ಇಷ್ಟರವರೆಗಿನ ಅಭಿವೃದ್ಧಿಯ ಕಲ್ಪನೆಯಲ್ಲಿ ವ್ಯಕ್ತಿ ಮತ್ತು ಆತನ ಅಭಿವೃದ್ಧಿ ಕುಟುಂಬ ಮತ್ತು ಸಮುದಾಯದ ಅಭಿವೃದ್ಧಿಗೆ ದಾರಿ ಎನ್ನುವ ನಿಲುವಿತ್ತು. ಆದರೆ ಬರ ಬರುತ್ತಾ ಆ ನಿಲುವು ಮಹತ್ವ ಕಳಕೊಳ್ಳುತ್ತಾ ಬಂತು. ಸಮುದಾಯದಿಂದ ವ್ಯಕ್ತಿ ಮತ್ತು ಕುಟುಂಬದ ಕಡೆಗೆ ಅಭಿವೃದ್ಧಿ ಹರಿಯಬೇಕೆಂಬ ನಿಲುವು ಬಲಗೊಳ್ಳುತ್ತಿದೆ. ಆ ಕಾರಣದಿಂದಲೇ ವರ್ತಮಾನದಲ್ಲಿ ಅಭಿವೃದ್ಧಿಯ ಹೊಸ ಮಿಸ್ಸಿಂಗ್ ಲಿಂಕ್ – ಸೋಶಿಯಲ್ ಕ್ಯಾಪಿಟಲ್ ತುಂಬಾ ಪ್ರಚಾರದಲ್ಲಿದೆ. ಹಾಗೆ ನೋಡಿದರೆ ಸೋಶಿಯಲ್ ಕ್ಯಾಪಿಟಲ್‌ನ ಪರಿಕಲ್ಪನೆ ಹೊಸದೇನಲ್ಲ. ಸಮಾಜ ಶಾಸ್ತ್ರಜ್ಞರಿಗೆ ಇದು ತುಂಬಾ ಹಳೆಯ ಪದ. ನಮ್ಮ ಜಾತಿ ಪದ್ಧತಿಯ ಚರ್ಚೆಯಲ್ಲಿ ಇದರ ಸರಳೀಕೃತ ರೂಪವನ್ನು ಕೇಳಿರಬಹುದು. ಬೇರೆ ಬೇರೆ ಜಾತಿಗೆ ಸೇರಿದ ಬಡವರೆಲ್ಲ ಒಂದೇ ಅಲ್ಲ ಎನ್ನುವ ಚರ್ಚೆ ಒಂದು ವಿಧದಲ್ಲಿ ಸೋಶಿಯಲ್ ಕ್ಯಾಪಿಟಲ್‌ನ ಚರ್ಚೆಗೆ ಸಂಬಂಧಿಸಿದೆ. ದಲಿತ ಬಡವನನ್ನು ಬ್ರಾಹ್ಮಣ ಅಥವಾ ಇತರ ಮೇಲು ಜಾತಿಯ ಬಡವನಿಗೆ ಹೋಲಿಸುವ ಸಾಧ್ಯವಿಲ್ಲ. ಅವರಿಬ್ಬರ ಆರ್ಥಿಕ ಸ್ಥಿತಿ ಒಂದೇ ಇದ್ದರೂ ಅವರ ಸಾಮಾಜಿಕ ಸ್ಥಾನಮಾನ ಬೇರೆ ಬೇರೆ ಇದೆ. ಮೇಲು ಜಾತಿಗೆ ಸೇರಿದ ವ್ಯಕ್ತಿಯೊಬ್ಬನಿಗೆ ಆತನ ಸಾಮಾಜಿಕ ಸಂಬಂಧಗಳ ಕಾರಣದಿಂದ ವಿಶೇಷ ಪ್ರಯತ್ನವಿಲ್ಲದೇ ಹಲವಾರು ಉನ್ನತ ಸ್ಥಾನಮಾನವಿರುವ ವ್ಯಕ್ತಿಗಳ ಸಂಪರ್ಕ ಸಾಧ್ಯವಾಗುತ್ತದೆ. ಬದುಕಿನ ಹಲವಾರು ಸಾಧ್ಯತೆಗಳ ಬಗ್ಗೆ ಅರಿವು ಸಾಧ್ಯವಾಗುತ್ತದೆ. ಉದ್ಯೋಗದ, ಮತ್ತು ಇತರ ಹೊಸ ಅವಕಾಶಗಳ ಬಗ್ಗೆ ಮಾಹಿತಿ ಸಿಗುತ್ತದೆ. ಕೆಲವು ಸಂದರ್ಭಗಳಲ್ಲಿ ದೂರದ ಸಂಬಂಧಿಕ ಅಥವಾ ಜಾತಿ ಬಾಂಧವ ಎನ್ನುವ ಕಾರಣಕ್ಕಾಗಿ ಪ್ರೋತ್ಸಾಹ ದೊರೆಯುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ ಸಾಮಾಜಿಕ ಸಂಬಂಧಗಳು ಬದುಕಿನ ಸಾಧ್ಯತೆಗಳನ್ನು ವೃದ್ಧಿಗೊಳಿಸುವ ಆರ್ಥಿಕ ಅಥವಾ ರಾಜಕೀಯ ಅವಕಾಶಗಳಾಗಿ ಮಾರ್ಪಡುತ್ತವೆ.

ಉದ್ಯಮಶೀಲತೆಯ ಚರ್ಚೆಯಿಲ್ಲಂತೂ ಸೋಶಿಯಲ್ ಕ್ಯಾಪಿಟಲ್‌ನ ಪರಿಕಲ್ಪನೆ ಬಹು ಹಿಂದಿನಿಂದಲೇ ಚಾಲ್ತಿಯಲ್ಲಿತ್ತು (ಜೇಮ್ಸ್ ಎಸ್ ಕೊಲಮೆನ್ ೧೯೮೮). ನಮ್ಮಲ್ಲಿನ ಹಲವಾರು ವ್ಯಾಪಾರಿ ಸಮುದಾಯಗಳು ಆಧುನೀಕರಣದೊಂದಿಗೆ ತಮ್ಮ ಸಾಂಪ್ರದಾಯಿಕ ಸಂಬಂಧಗಳನ್ನು ಕಳಚಿಕೊಳ್ಳಲಿಲ್ಲ (ಕೆಲ್ಲಿ ಜೊನಾಥೆನ್, ೧೯೭೮). ಬದಲಿಗೆ ಆ ಸಂಬಂಧಗಳನ್ನು ಬಳಸಿಕೊಂಡೆ ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಂಡರು. ವ್ಯಾಪಾರಸ್ಥರ ಮಕ್ಕಳಿಗೆ ವ್ಯಾಪಾರದ ಮೂಲಭೂತ ಪಾಠ ಕುಟುಂಬದ ಅಂಗಡಿಯಲ್ಲಿ ಅಥವಾ ಉದ್ಯಮದಲ್ಲಿ ಚಿಕ್ಕಂದಿನಿಂದಲೇ ಆರಂಭವಾಗುತ್ತದೆ. ಶಾಲೆ ಅಥವಾ ಕಾಲೇಜು ಓದುತ್ತಿರುವಾಗ ಇತರರ ಮಕ್ಕಳು ಆಟ ಇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ವ್ಯಾಪಾರಿಯ ಮಗ ತಂದೆಯ ಅಂಗಡಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ತನ್ನ ಓದು ಮುಗಿಸಿದ ನಂತರ ಉದ್ಯೋಗ ಹುಡುಕುವ ಪ್ರಶ್ನೆ ಕಡಿಮೆ. ಕುಟುಂಬದ ವ್ಯಾಪಾರವನ್ನು ಮುಂದುವರಿಸುವುದು ಅಥವಾ ಹೊಸ ವ್ಯಾಪಾರ ಶುರು ಮಾಡುವುದು ಸಾಮಾನ್ಯ. ಇಲ್ಲಿ ಕೇವಲ ಸೋಶಿಯಲ್ ಕ್ಯಾಪಿಟಲ್ ಮಾತ್ರ ವರ್ಗಾವಣೆಯಾಗುವುದಿಲ್ಲ; ಭೌತಿಕ ಕ್ಯಾಪಿಟಲ್ ಕೂಡ ವರ್ಗಾವಣೆಯಾಗುತ್ತದೆ. ಇದು ಈಗಾಗಲೇ ವ್ಯಾಪಾರ ಇರುವ ಕುಟುಂಬದ ಕತೆಯಾದರೆ ಇನ್ನು ಯಾವುದೇ ವ್ಯಾಪಾರವಿಲ್ಲದ ಕುಟುಂಬದ ವ್ಯಕ್ತಿ ಚಿಂತಿತನಾಗುವ ಅಗತ್ಯವಿಲ್ಲ. ತನ್ನ ವ್ಯಾಪಾರದ ಬಗ್ಗೆ ಸಮುದಾಯದ ನಾಯಕರಲ್ಲಿ ತೋಡಿಕೊಂಡರೆ ಅಗತ್ಯವಿಲ್ಲ. ತನ್ನ ವ್ಯಾಪಾರದ ಬಗ್ಗೆ ಸಮುದಾಯದ ನಾಯಕರಲ್ಲಿ ತೋಡಿಕೊಂಡರೆ ಆತನಿಗೆ ವ್ಯಾಪಾರ ಮಾತ್ರವಲ್ಲ. ಅವರದ್ದೇ ಸಮುದಾಯದ ಇತರ ವ್ಯಾಪಾರಿಗಳು ಹೆಚ್ಚು ಕಾಲಾವಕಾಶವಿರುವ ಉದ್ದರಿ ಕೊಟ್ಟು ಸರಕು ಒದಗಿಸುತ್ತಾರೆ. ಕಡಿಮೆ ಬಡ್ಡಿಗೆ ಸಾಲ ಕೊಡಿಸುತ್ತಾರೆ. ಆತನ ಸರಕನ್ನು ಮಾರಲು ಕೊಂಡಿಯಾಗಿ ಸಹಕರಿಸುತ್ತಾರೆ. ಹೀಗೆ ಸಮುದಾಯ ಆತ ಮುಂದೆ ಬರಲು ಸಹಕರಿಸುತ್ತದೆ. ಅಂದರೆ ಆಧುನೀಕರಣಕ್ಕೆ ಅಥವಾ ಅಭಿವೃದ್ಧಿಗೆ ಸಾಂಪ್ರದಾಯಿಕ ಸಂಬಂಧಗಳು ಅಡ್ಡಿಯಲ್ಲ ಎಂದಂತಾಯಿತು.

ಇದೆಲ್ಲ ಸಾಧ್ಯವಾಗುವುದು ಅಸಮಾನ ಸಾಮಾಜಿಕ ವ್ಯವಸ್ಥೆಯಿಂದ. ಸಮಾನತೆ ಇದ್ದರೆ ಈ ಸೋಶಿಯಲ್ ಕ್ಯಾಪಿಟಲ್‌ನ ಪರಿಕಲ್ಪನೆ ಅವಾಸ್ತವಾಗುತ್ತದೆ ಎನ್ನುವ ವಾದವು ಇದೆ. ಆದರೆ ಕೆಲವು ಸಮಾಜವಾದಿ ದೇಶಗಳ ಅನುಭವ ಈ ವಾದವನ್ನು ಸಮರ್ಥಿಸುತ್ತಿಲ್ಲ. ಆದರೆ ಕೆಲವು ಸಮಾಜವಾದಿ ದೇಶಗಳ ಅನುಭವ ಈ ವಾದವನ್ನು ಸಮರ್ಥಿಸುತ್ತಿಲ್ಲ. ಚೀನಾದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಿದವರು ಅಲ್ಲೂ ಸೋಶಿಯಲ್ ಕ್ಯಾಪಿಟಲ್ ಕೆಲಸ ಮಾಡುವುದರ ಕುರಿತು ಚರ್ಚಿಸಿದ್ದಾರೆ (ಜೂಲಿಯ ಕ್ವಾಂಗ್, ೧೯೮೩). ಅಲ್ಲಿ ಉನ್ನತ ಶಿಕ್ಷಣ ಪುಕ್ಸಟ್ಟೆಯಾಗಿ ಬರುತ್ತದೆ. ಆದರೆ ಉನ್ನತ ಶಿಕ್ಷಣದ ಸೀಟು ಮಾಡುವವರಲ್ಲಿ ಕಾರ್ಖಾನೆ ಕೆಲಸಗಾರರ ಮಕ್ಕಳಿಗೆ ಹೋಲಿಸಿದರೆ ಕಾಲೇಜು ಅಥವಾ ವಿಶ್ವವಿದ್ಯಾಲಯದ ಶಿಕ್ಷಕರ ಮಕ್ಕಳ ಸಂಖ್ಯೆ ಜಾಸ್ತಿ ಇದೆ. ಇದಕ್ಕೆ ಕಾರಣ ಅವರು ತಮ್ಮ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುವುದು. ತಮ್ಮ ಜ್ಞಾನ ಮತ್ತು ಅನುಭವಗಳನ್ನು ಮಕ್ಕಳಿಗೆ ವರ್ಗಾಯಿಸುವುದರ ಮೂಲಕ ಮಕ್ಕಳು ಉನ್ನತ ಶಿಕ್ಷಣದ ಅವಕಾಶ ಗಿಟ್ಟಿಸಲು ಸಹಕರಿಸುತ್ತಾರೆ. ಉನ್ನತ ಶಿಕ್ಷಣವೆಂದರೆ ಉನ್ನತ ಹುದ್ದೆ ಮತ್ತು ಉನ್ನತ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನ.

ಪ್ರೆಂಚ್ ಮಾನವ ಶಾಸ್ತ್ರಜ್ಞ ಪಾರಿ ಬಾರ್ಡಿ ಎನ್ನುವವ ಈ ಕುರಿತು ಚರ್ಚಿಸಿದ್ದಾನೆ (ಪಾರಿ ಬಾರ್ಡಿ ೧೯೯೩). ಆತನ ವಿವರಣೆಯನ್ನು ಒಂದು ಉದಾಹರಣೆಯೊಂದಿಗೆ ವಿವರಿಸುತ್ತೇನೆ. ನಗರದ ಎಲ್ಲ ಕಡೆಗಳಲ್ಲಿ ರೊಟರಿ ಕ್ಲಬ್‌ಗಳಿರುತ್ತವೆ. ಅಂತಹ ಕ್ಲಬ್‌ಗಳಿಗೆ ಸದಸ್ಯನಾಗಬೇಕಾದರೆ ಕೆಲವು ಶರತ್ತುಗಳು ಇರುತ್ತವೆ. ಅವೆಲ್ಲ ಬಹುತೇಕ ಸಂದರ್ಭಗಳಲ್ಲಿ ಸಮಾಜದ ಕೆಳವರ್ಗವನ್ನು ದೂರ ಇಡುವ ದೃಷ್ಟಿಯಿಂದಲೇ ಇರುತ್ತವೆ. ಅಂದರೆ ಕೇವಲ ಪ್ರತಿಷ್ಠಿತರು ಮಾತ್ರ ಕ್ಲಬ್ಬಿನ ಸದಸ್ಯರಾಗಲು ಸಾಧ್ಯ. ಅಂತಹ ಕಬ್ಲಿನ ಸದಸ್ಯನಾದರೆ ಆತ ನೇರವಾಗಿ ಆ ನಗರದ ಪ್ರತಿಷ್ಠಿತ ವರ್ಗದ ಸಂಬಂಧಕ್ಕೆ ಬರುತ್ತಾನೆ. ಆ ಕ್ಲಬ್‌ಗಳು ಮೀಟಿಂಗ್‌ಗಳಲ್ಲಿ ಸದಸ್ಯನೊಬ್ಬ ಸ್ಥಳೀಯ ಅಧಿಕಾರಿಗಳ ಜತೆ ಸಂಬಂಧ ಬೆಳೆಸಿಕೊಳ್ಳಬಹುದು. ಸಣ್ಣ ಉದ್ಯಮಿಯೊಬ್ಬ ಅಂತಹ ಕ್ಲಬ್‌ನ ಸದಸ್ಯನಾದರೆ ಆತ ಕ್ಬಬ್‌ಗೆ ಬರುವ ಬ್ಯಾಂಕ್ ಮೇನೆಜರ್ ಅಥವಾ ಇತರ ಅಧಿಕಾರಿ ಜತೆ ಸಂಬಂಧ ಬೆಳೆಸಬಹುದು. ಬ್ಯಾಂಕ್ ಮ್ಯಾನೇಜರ್ ಜತೆ ತನ್ನ ಆರ್ಥಿಕ ಬೇಕು ಬೇಡಗಳನ್ನು ವಿವರಿಸಿ ತನಗೆ ಅಗತ್ಯವಿರುವ ಸಾಲದ ಬಗ್ಗೆ ಪೀಠಿಕೆ ಹಾಕಬಹುದು. ಹೀಗೆ ಸಾಮಾಜಿಕ ಸಂಬಂಧವನ್ನು ಹಣಕಾಸಿನ ಸಂಬಂಧವನ್ನಾಗಿ ಪರಿವರ್ತಿಸಬಹುದು.

ಸೋಶಿಯಲ್ ಕ್ಯಾಪಿಟಲ್ ಬಗ್ಗೆ ಇಷ್ಟೆಲ್ಲಾ ಕೆಲಸಗಳು ಬಹು ಹಿಂದೆಯೇ ನಡೆದಿದ್ದರೂ ಇತ್ತೀಚಿನ ದಿನಗಳಲ್ಲಿ ಅದು ನಾಟಕೀಯ ಪರಿವರ್ತನೆ ಕಂಡಿದೆ. ಅಮೇರಿಕದ ರಾಜಕೀಯ ಶಾಸ್ತ್ರಜ್ಞ ರಾಬರ್ಟ್‌ ಪುನಮ್ ಅದಕ್ಕೆ ಹೊಸ ಅವತಾರ ಕೊಟ್ಟವ (ರಾಬರ್ಟ್‌‌ ಪುನಮ್, ೧೯೯೩). ಆತ ತನ್ನ ಮೇಕಿಂಗ್ ಡೆಮಾಕ್ರಸಿ ವರ್ಕ್‌ ಎನ್ನುವ ಪುಸ್ತಕದಲ್ಲಿ ಅದಕ್ಕೆ ಹೊಸ ರೂಪಕೊಟ್ಟಿದ್ದಾನೆ. ಇಷ್ಟರವರೆಗೆ ಸೋಶಿಯಲ್ ಕ್ಯಾಪಿಟಲ್ ಕುಟುಂಬದ ಸಾಮಾಜಿಕ ಸಂಬಂಧ ಆರ್ಥಿಕ ರಾಜಕೀಯ ಬಂಡವಾಳವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಬಗ್ಗೆ ನೋಡಿದ್ದೇವೆ. ಹೆಚ್ಚೆಂದರೆ ಒಂದು ಸಮುದಾಯ ತನ್ನ ಸಾಮಾಜಿಕ ಸಂಬಂಧಗಳನ್ನು ಬಂಡವಾಳವಾಗಿ ಪರಿವರ್ತಿಸಿಕೊಳ್ಳುವುದನ್ನು ವಿವರಿಸಲಾಗಿದೆ. ಬಹುತೇಕ ಉದಾಹರಣೆಗಳು ವ್ಯಾಪಾರಿ ಮತ್ತು ಮೇಲ್ ವರ್ಗದ ಕುರಿತೆ ಇದೆ. ಅಂದರೆ ಸೋಶಿಯಲ್ ಕ್ಯಾಪಿಟಲ್ ಕುಟುಂಬಕ್ಕೆ ಅಥವಾ ಮೇಲ್ ವರ್ಗಕ್ಕೆ ಸೀಮಿತಗೊಂಡಂತೆ ಬಳಕೆಯಾಗುತ್ತಿತ್ತು. ಈ ದೃಷ್ಟಿಯಿಂದ ಅದಕ್ಕೆ ಒಂದು ಸೀಮಿತತೆ ಇತ್ತು. ಅದರ ಸೀಮಿತ ಅನ್ವಯಿಕೆಯನ್ನು ಇಟಲಿಯ ಅಭಿವೃದ್ಧಿಯನ್ನು ಅಧ್ಯಯನ ಮಾಡುತ್ತ ಉತ್ತರ ಮತ್ತು ದಕ್ಷಿಣ ಇಟಲಿ ಮಧ್ಯೆ ಇರುವ ವ್ಯತ್ಯಾಸವನ್ನು ಗುರುತಿಸಿದ್ದಾನೆ. ಅದೊಂದು ರೀತಿ ನಮ್ಮ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಕತೆಯೇ. ವ್ಯತ್ಯಾಸವೆಂದರೆ ನಮ್ಮ ಸ್ಥಿತಿಗಿಂತ ಭಿನ್ನವಾಗಿ ಅಲ್ಲಿ ಉತ್ತರ ಇಟಲಿ ಅಭಿವೃದ್ಧಿ ಹೊಂದಿ ದಕ್ಷಿಣ ಇಟಲಿ ಹಿಂದುಳಿದಿತ್ತು. ಅದಕ್ಕೆ ಉತ್ತರ ಇಟಲಿ ಮುಂದುವರಿಯಲು ಮತ್ತು ದಕ್ಷಿಣ ಇಟಲಿ ಹಿಂದುಳಿಯಲು ಕಾರಣವನ್ನು ಆತ ನಾಗರಿಕ ಸಂಘಟನೆಗಳಲ್ಲಿ ಕಂಡುಕೊಳ್ಳುತ್ತಾನೆ. ಆತನ ಪ್ರಕಾರ ಉತ್ತರ ಇಟಲಿಯಲ್ಲಿ ಹಲವಾರು ಸಿವಿಲ್ ಸಂಘಟನೆಗಳು ಸಕ್ರಿಯವಾಗಿ ಸಾರ್ವಜನಿಕ ಕೆಸಲಗಳಲ್ಲಿ ತೊಡಗಿಸಿಕೊಂಡಿವೆ. ಅದಕ್ಕೆ ಹೋಲಿಸಿದರೆ ದಕ್ಷಿಣ ಇಟಲಿಯಲ್ಲಿ ಸಿವಿಲ್ ಸಂಘಟನೆಗಳು ಕಡಿಮೆ ಇವೆ. ಸಿವಿಲ್ ಸಂಘಟನೆಗಳನ್ನು ಆತ ಸರಕಾರ ಮತ್ತು ವ್ಯಕ್ತಿ ಮಧ್ಯೆ ಇರುವ ಕೊಂಡಿ ಎಂದು ವ್ಯಾಖ್ಯಾನಿಸುತ್ತಾನೆ. ಇದು ಕೇವಲ ಕೊಂಡಿಯಾಗಿ ಮಾತ್ರ ಕೆಲಸ ಮಾಡುವುದಲ್ಲ. ಸಂಘಟನೆಗಳಲ್ಲಿ ಪಾಲುಗೊಳ್ಳುವವರಿಗೆ ಪ್ರಜಾಪ್ರಭುತ್ವದ ಮೂಲಭೂತ ಪಾಠ ಹೇಳಿಕೊಡುತ್ತದೆ. ಸಂಘಟನೆಯಲ್ಲಿ ಪಾಳುಗೊಳ್ಳುವ ಸದಸ್ಯರ ನಡುವೆ ನಂಬಿಕೆ, ಇತರ ಸದಸ್ಯರ ಸುಖ ದುಃಖಗಳಲ್ಲಿ ಭಾಗಿಯಾಗುವುದು ಮತ್ತು ಸಂಘದ ನೀತಿ ನಿಯಮಕ್ಕೆ ಅನುಗುಣವಾಗಿ ನಡೆಯುವುದು ಇತ್ಯಾದಿಗಳೂ ಸಿವಿಲ್ ಸಂಘಟನೆಯಿಂದ ಸಿಗುವ ಪಾಠಗಳು. ಇಂತಹ ಸಂಘಟನೆಗಳು ಉತ್ತರದಲ್ಲಿ ಹೆಚ್ಚು ಇವೆ ಆದುದರಿಂದ ಅದು ಹೆಚ್ಚು ಅಭಿವೃದ್ಧಿ ಹೊಂದಿದೆ ಎಂಬ ತೀರ್ಮಾನಕ್ಕೆ ಆತ ಬರುತ್ತಾನೆ.

ಸಂಘಟಿತ ಬದುಕು ಅಥವಾ ಸಿವಿಲ್ ಸೊಸೈಟಿ ಮತ್ತು ಪ್ರಜಾಪ್ರಭುತ್ವ ನಡುವೆ ಸಂಬಂಧ ಹಣಿಯುವ ಬರಹಗಳು ಹಿಂದೆಯೂ ಇದ್ದವು. ಅವುಗಳಲ್ಲಿ ಅಲೆಕ್ಸಡಿ ತೊವಿಲ್ಲೆ (೧೯೬೯), ಜೇಮ್ಸ ಎಸ್ ಕೊಲ್‌ಮೆನ್ (೧೯೯೦) ಬರಹಗಳನ್ನು ಗುರುತಿಸಬಹುದು. ಅವರು ಅಮೇರಿಕದ ಪ್ರಜಾಪ್ರಭುತ್ವದಲ್ಲಿ ಸಿವಿಲ್ ಸೊಸೈಟಿಯ ಪಾತ್ರ ಕುರಿತು ಚರ್ಚಿಸಿದ್ದಾರೆ. ಇವರ ಥಿಯರಿಗಳು ಸಿವಿಲ್ ಸೊಸೈಟಿ ಮತ್ತು ಒಳ್ಳೆಯ ಆಡಳಿತ ಕುರಿತು ಚರ್ಚಿಸಿದ್ದಾರೆ. ಇವರ ಥಿಯರಿಗಳು ಸಿವಿಲ್ ಸೊಸೈಟಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಸಮಸ್ಯೆ ಪರಿಹಾರದ ಮೂಲಭೂತ ಪಾಠವನ್ನು ಹೇಳಿ ಕೊಡುತ್ತದೆ ಎಂದು ಇವರು ಅಭಿಪ್ರಾಯ ಪಡುತ್ತಾರೆ. ಹೀಗೆ ಅಭಿವೃದ್ಧಿ ಮತ್ತು ಸಿವಿಲ್ ಸೊಸೈಟಿ ನಡುವಿನ ಸಂಬಂಧವನ್ನು ಪರೋಕ್ಷವಾಗಿ ಗುರುತಿಸಿದ್ದಾರೆ. ರಾಬರ್ಟ್‌ ಪುನಮ್ ಒಂದು ಹೆಜ್ಜೆ ಮುಂದೆ ಹೋಗಿ ಅಂತಹ ಸಂಘಟನೆಗಳ ಇರುವಿಕೆ ಮತ್ತು ಅಭಿವೃದ್ಧಿ ನಡುವೆ ನೇರ ಸಂಬಂಧ ನೇಯುತ್ತಾನೆ. ನೆರೆಕರೆಯವರ ಸುಖ ದುಃಖಗಳಲ್ಲಿ ಭಾಗಿಯಾಗಲು ತರಬೇತಿಯನ್ನು ಈ ಸಣ್ಣ ಪುಟ್ಟ ಸಂಘಟನೆಗಳು ನೀಡುತ್ತವೆ. ಅದೇ ರೀತಿಯಲ್ಲಿ ಪರಸ್ಪರದಲ್ಲಿ ನಂಬಿಕೆ ಮತ್ತು ಎಲ್ಲರು ಸೇರಿ ರೂಪಿಸಿಕೊಳ್ಳುವ ನೀತಿ ನಿಯಮಗಳಿಗೆ ಅನುಗುಣವಾಗಿ ವ್ಯವಹರಿಸುವ ತರಬೇತಿಯನ್ನು ಇಂತಹ ಸಂಘಟನೆಗಳಲ್ಲಿ ಕಲಿಯಬಹುದಾಗಿದೆ ಎಂದು ಈ ಥಿಯರಿಗಳು ಹೇಳುತ್ತವೆ. ಸಂಘಟಿತ ಬದುಕಿನ ಇಂತಹ ಸಣ್ಣ ಸಣ್ಣ ಹನಿಗಳೂ ಸೇರಿ ಆರೋಗ್ಯಕರ ಸಮಾಜ ರೂಪುಗೊಳ್ಳುತ್ತದೆ ಎಂದು ಮೇಲಿನ ಥಿಯರಿಗಳು ವಾದಿಸುತ್ತವೆ. ಇವರ ಥಿಯರಿಗಳು ಸಿವಿಲ್ ಸೊಸೈಟಿ ಮತ್ತು ಒಳ್ಳೆಯ ಆಡಳಿತ ಮತ್ತು ಅದರಿಂದ ಸಾಧ್ಯವಾಗುವ ಅಭಿವೃದ್ಧಿ ಕುರಿತು ವಿವರಿಸುತ್ತವೆ.

ಹೀಗೆ ಜನರ ಸಹಭಾಗಿತ್ವದ ಚರ್ಚೆ ಇಂದು ಬಲಗೊಳ್ಳುವುದರ ಹಿಂದೆ ಅಭಿವೃದ್ಧಿಯ ಮಿಸ್ಸಿಂಗ್ ಲಿಂಕ್‌ನ ಹುಡುಕಾಟದ ಪಾತ್ರ ಇದೆ. ಇದು ಆಧುನೀಕರಣ ಥಿಯರಿಯನ್ನು ಬಲವಾಗಿ ಪ್ರಭಾವಿಸಿದೆ. ಒಂದು ಕಾಲದಲ್ಲಿ ಬಂಡವಾಳದ ವಿಸ್ತರಣೆ (ಆಧುನೀಕರಣ) ಮತ್ತು ಸಾಂಪ್ರದಾಯಿಕ ಸಮುದಾಯ ಬದುಕು ಪರಸ್ಪರ ವಿರುದ್ಧ ಎನ್ನುವ ವಿವರಣೆ ಚಾಲ್ತಿಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ, ಮುಖ್ಯವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ನಡೆದ ಆಧುನೀಕರಣದಲ್ಲಿ ಆಧಾರಿಸಿ ಬಂಡವಾಳ ಮತ್ತು ಸಮುದಾಯ ಬದುಕಿನ ಬಗ್ಗೆ ಹೊಸ ಥಿಯರಿಗಳು ಬಂದವು. ಅವುಗಳ ಪ್ರಕಾರ ಬಂಡವಾಳದ ವಿಸ್ತರಣೆ ಮತ್ತು ಸಾಂಪ್ರದಾಯಿಕ ಸಮುದಾಯ ಬದುಕು ಪರಸ್ಪರ ವಿರುದ್ಧ ಆಗಬೇಕಿಲ್ಲ; ಪೂರಕವೂ ಆಗಬಹುದು ಎನ್ನುವ ನಂಬಿಕೆ ಬಲಗೊಳ್ಳುತ್ತ ಬಂತು. ಈ ಬದಲಾವಣೆ ಎರಡು ರೀತಿಯ ಬೆಳವಣಿಗೆಗಳನ್ನು ಆಧರಿಸಿದೆ. ಒಂದು, ಆಧುನೀಕರಣದ ನಡುವೆಯೂ ಸಾಂಪ್ರದಾಯಿಕ ಸಮುದಾಯಗಳು ಸಣ್ಣ ಪುಟ್ಟ ಪರಿವರ್ತನೆಗಳನ್ನು ಮಾಡಿಕೊಂಡು ಜೀವಂತ ಉಳಿದಿರುವುದು. ಮಾತ್ರವಲ್ಲ ಕೆಲವು ವಿಚಾರಗಳಲ್ಲಿ ಹಿಂದಿಗಿಂತಲೂ ಹೆಚ್ಚು ಪ್ರಬಲವಾಗಿ ವ್ಯಕ್ತವಾದವು. ನಮ್ಮ ದೇಶದ ಉದಾಹರಣೆ ತೆಗೆದುಕೊಳ್ಳುವುದಾದರೆ ಆಧುನೀಕರಣದೊಂದಿಗೆ ನಮ್ಮ ಜಾತಿ, ಧರ್ಮ ಮತ್ತು ಕುಟುಂಬ ವ್ಯವಸ್ಥೆ ಮೂಲಭೂತವಾಗಿ ಬದಲಾಗಬೇಕಿತ್ತು. ಆದರೆ ಅವೆಲ್ಲ ಸಣ್ಣ ಪುಟ್ಟ ಬದಲಾವಣೆಯೊಂದಿಗೆ ಬಲಯುತಗೊಂಡವು. ಎರಡನೇ ಅಂಶ-ಹಲವಾರು ವ್ಯಾಪಾರಿ ಸಮುದಾಯಗಳು ತಮ್ಮ ಸಮುದಾಯ ಬದುಕನ್ನು ಬಂಡವಾಳದ ವೃದ್ಧಿಗೆ ಪರಿಣಾಮಕಾರಿಯಾಗಿ ಬಳಸಿಕೊಂಡವು. ಇದು ಕೇವಲ ಭಾರತದ ಮಾರ್ವಾಡಿ ಅಥವಾ ಜೈನ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುವುದಲ್ಲ. ಪ್ರಪಂಚದ ಎಲ್ಲ ಕಡೆ ಇಂತಹ ವ್ಯಾಪಾರಿ ಸಮುದಾಯಗಳು ಇವೆ ಮತ್ತು ಅವು ತಮ್ಮ ಸಾಂಪ್ರದಾಯಿಕ ಸಂಬಂಧಗಳನ್ನು ಬಂಡವಾಳದ ವೃದ್ಧಿಗೆ ಪರಿಣಾಮಕಾರಿಯಾಗಿ ಬಳಸಿಕೊಂಡಿವೆ.

ಇದರ ಜತೆ ಹಲವಾರು ಬಡ ದೇಶಗಳಲ್ಲಿ ಆಧುನಿಕ ಸಂಸ್ಥೆಗಳು ಮಾಡಲು ಸಾಧ್ಯವಿಲ್ಲದ್ದನ್ನು ಸಾಂಪ್ರದಾಯಿಕ ಸಂಸ್ಥೆಗಳು ಸಾಧಿಸಿದವು. ಉದಾಹರಣೆಗೆ ಸಣ್ಣ ಮಟ್ಟದ ಸಾಲ ವ್ಯವಸ್ಥೆ. ಆಧುನಿಕ ಬ್ಯಾಂಕ್‌ಗಳು ಬಡ ವರ್ಗಕ್ಕೆ ಸಾಲ ಕೊಡಲು ಹಿಂದೆ ಮುಂದೆ ನೋಡುತ್ತವೆ. ಅದಕ್ಕೆ ಕಾರಣ ಸಾಲ ಮರು ಪಾವತಿ ಕುರಿತು ಬ್ಯಾಂಕಿನವರಿಗೆ ಇರುವ ಶಂಕೆ. ಒಂದು ವೇಳೆ ಸಾಲ ಮರು ಪಾವತಿಯಾಗದಿದ್ದರೆ ಸಾಲಗಾರನ ಚರ ಅಥವಾ ಸ್ಥಿರ ಆಸ್ತಿಯನ್ನು ಏಲಂ ಮಾಡಿ ಬ್ಯಾಂಕ್ ತನ್ನ ಬಾಕಿಯನ್ನು ಹಿಂದಕ್ಕೆ ಪಡಿಯವುದು ಕ್ರಮ. ಆದರೆ ಚರ ಅಥವಾ ಸ್ಥಿರ ಆಸ್ತಿಯೇ ಇಲ್ಲದ ಬಡವರಿಗೆ ಸಾಲ ಕೊಟ್ಟರೆ ಅವರಿಂದ ಹಿಂದಕ್ಕೆ ಪಡೆಯುವುದಾದರೂ ಹೇಗೆ? ಈ ಸಮಸ್ಯೆಯಿಂದ ಹೊರ ಬರುವ ಉಪಾಯವನ್ನು ಬಾಂಗ್ಲ ದೇಶದ ಬಡ ಸಮುದಾಯಗಳು ತೋರಿಸಿಕೊಟ್ಟಿವೆ (ಮಹಮ್ಮದ್ ಮೊಹಿದ್ದೀನ್ ಅಬ್ದುಲ್ಲ, ೧೯೭೯). ಸಾಲ ಪಡೆಯಲು ಇಚ್ಚಿಸುವವರು ಒಂದು ಗುಂಪು ಮಾಡಿಕೊಳ್ಳುತ್ತಾರೆ. ಆ ಗುಂಪಿನಲ್ಲಿ ಒಬ್ಬರಿಗೆ ಅಥವಾ ಕೆಲವರಿಗೆ ಉಳಿದ ಸದಸ್ಯರ ಜಾಮೀನಿನ ಆಧಾರದಲ್ಲಿ ಸಾಲ ಕೊಡುತ್ತಾರೆ. ಸಾಲ ಪಡಕೊಂಡವರು ಕಟ್ಟಿದ ನಂತರ ಗುಂಪಿನ ಇತರ ಸದಸ್ಯರಿಗೆ ಸಾಲ ಪಡೆಯುವ ಹಕ್ಕು ಬರುತ್ತದೆ. ಈ ವ್ಯವಸ್ಥೆ ಸಾಲ ಪಡೆದವರನ್ನು ಕಾಲಕ್ಕೆ ಸರಿಯಾಗಿ ಸಂದಾಯ ಮಾಡುವಂತೆ ಇತರರು ಒತ್ತಾಯಿಸುವಂತೆ ಮಾಡುತ್ತದೆ. ಇದೇ ಸಂದರ್ಭದಲ್ಲಿ ಸಂಘಟಿತ ಕುರಿತ ಬರಹಗಳು ಸಹಭಾಗಿತ್ವದ ಕಲ್ಪನೆಯನ್ನು ಇನ್ನೂ ಬಲಗೊಳಿಸಿದವು. ಸಂಘಟಿತ ಬದುಕಿನ ಇಂತಹ ಸಣ್ಣ ಸಣ್ಣ ಹನಿಗಳು ಸೇರಿ ಆರೋಗ್ಯಕರ ಸಮಾಜ ರೂಪುಗೊಳ್ಳುತ್ತದೆ ಎಂದು ಮೇಲಿನ ಥಿಯರಿಗಳು ವಾದಿಸುತ್ತವೆ. ಕೋಟಿಗಟ್ಟಲೆ ದುಡ್ಡನ್ನು ಬಡ ದೇಶಗಳಲ್ಲಿ ವಿನಿಯೋಜಿಸುವ ವಿಶ್ವ ಬ್ಯಾಂಕಿಗೆ ಈ ಥಿಯರಿಗಳು ವರದಾನವಾದವು. ಯಾಕೆಂದರೆ ಶ್ರೀಮಂತ ದೇಶಗಳು ಕೊಡಮಾಡುವ ಅಭಿವೃದ್ಧಿ ಮಾದರಿಗಳನ್ನು ಯಥಾ ರೂಪದಲ್ಲಿ ಅನುಸರಿಸಿದರೂ ಬಡ ದೇಶಗಳು ಉದ್ಧಾರವಾಗುವ ಲಕ್ಷಣ ಕಾಣುತ್ತಿಲ್ಲ. ಅಂತಹ ಸಂದರ್ಭದಲ್ಲಿ ನೀವು ಪುನಃ ಬಂಡವಾಳ ಹೂಡಿ ಎಂದು ಬಡ ದೇಶಗಳಿಗೆ ಸಾಲ ಕೊಡುವುದಾದರೂ ಹೇಗೆ? ಇಂತಹ ಸಂದಿಗ್ಧ ಸಂದರ್ಭದಲ್ಲಿ ಅಭಿವೃದ್ಧಿ ಮತ್ತು ಸಿವಿಲ್ ಸೊಸೈಟಿ ಮದ್ಯೆ ಸಂಬಂಧ ಬೆಸೆಯುವ ಈ ಥಿಯರಿಗಳು ವಿಶ್ವ ಬ್ಯಾಂಕಿನವರಿಗೆ ಪ್ರಿಯವಾದವು (ಜೋನ್ ಹೇರಿಸ್, ೨೦೦೧). ಇಂದು ಪ್ರಪಂಚದ ಮೂಲೆ ಮೂಲೆಯಲ್ಲೂ ವರ್ಲ್ಡ್‌ ಬ್ಯಾಂಕ್ ಸಹಕಾರದೊಂದಿಗೆ ನಡೆಯುವ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ಇವೆ. ಕೆರೆ ನೀರಾವರಿಗೂ ವರ್ಲ್ಡ್‌‌ಧ ಬ್ಯಾಂಕ ನೆರವು ಇದೆ. ಇಲ್ಲೂ ಕೂಡ ಅವರು ಜನರ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೊಳಿಸಲು ಸೂಚಿಸಿದ್ದಾರೆ. ಈ ರೀತಿಯಲ್ಲಿ ಬಾಹ್ಯ ಕಾರಣದಿಂದ ಜನರ ಸಹಭಾಗಿತ್ವ ಇಂದು ನಮ್ಮ ಯೋಜನೆಗಳ ಭಾಗವಾಗಿದೆ.