ನೆನಿ – ಒದ್ದೆಯಾಗು
ನೆರಿ – ಸೇರು, ಕೂಡು
ನೆರೆ – ಸಂಬೋಗಿಸು, ಮಲಗು
ನೆಲಕ್ – ಮುಟ್ಟು, ತಟ್ಟು
ನೆಳ್ – ಪೇಚಾಡು
ಪತ್ತು – ಮುಟ್ಟು
ಪವಡ್ಸ – ಮಲಗು
ಪುಟಿ ಮಾಡು – (ಬೆಂಕಿ) ಹೊತ್ತಿಸು
ಪುಲುಮು – (ಕೊಳೆಯಾದ
ಬಟ್ಟೆಗಳನ್ನು) ಮಡಚು
ಫೀ – (ಮಕ್ಕಳ ಭಾಷೆಯಲ್ಲಿ) ಮಾತು ಬಿಡುವುದು
ಬಗಿಹರಿ – ತೀರು, ಮುಗಿ
ಬಯ್ – ಮುಚ್ಚಿಡು
ಬರ್ತು – ಒಣಗು, ಆರಿಹೋಗು
ಬಾಸಣಿಸು – ಮುಚ್ಚು
ಬಸ್ – ಸಾಕು
ಬಸಾ – ಕೂಡ್ರು (ಮರಾಠಿ ಸ್ವೀಕರಣ)
ಬಳಕೊ – ಮಾಡು, ಗಳಿಸು
ಬೆಳಗು – ತಿಕ್ಕು
ಬಾಜಿ – (ಮಕ್ಕಳ ಭಾಷೆಯಲ್ಲಿ) ಮಲಗು
ಬಿಗಿ – ೧ ಕಟ್ಟು, ೨ ಹೊಡೆ
ಬಿರಕ್ – ಸೀಳು
ಬಿಸಾಟು – (ಬೀಸಿ) ಒಗೆ
ಬೀರು – ಚೆಲ್ಲು
ಬೀಸಾತಿ – (ಎಳೆದು) ಬಿಡು
ಬೀಳ್ – (ಬೆಳೆಗೆ ಜಿಗುಟು ರೋಗ) ತಗುಲುವುದು
ಬುಗುಲ್ – ಹೆದರಿಕೆ
ಬೆಚ್ – ಇಡು
ಬೆಟ್ಚು – ಚುಚ್ಚು
ಬೆದೆ – ಒತ್ತು
ಬೆಸಸು – ತಿಳಿಸು
ಬೆಸು – (ಬೇಸುಗೆ) ಹಾಕು
ಬೈಟ್ – ಕೂಡ್ರು (ಮರಾಠಿ ಸ್ವೀಕರಣ)
ಬೊರ್ಯಾಡು – ಹವಣಿಸು
ಬೊಳ್ಸ – ತಗೆ
ಭುಂಜಿಸು – ಉಣ್ಣು
ಮಟಗರಿ – ಹರಿದಾಡು
ಮಣಗು – ಬಗ್ಗು
ಮರಿ – ಬಚ್ಚಿಡು
ಮಲಚು – (ಗಂಟು) ಹಾಕು
ಮಾಚು – ಮರೆಮಾಡು
ಮಾಲು – ಬಾಗು
ಮಿಜ್ಜು – ತಿಕ್ಕು
ಮಿಸುಕು – ಹೊರ ಕಾಣಿಸು
ಮುಗುಚ್ – ತಿರುವಿ ಹಾಕು
ಮುಣ್ಸ – ಮುಳುಗು
ಮೆದ್ದು – ಕೊಳೆಯಾದ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ಹಾಕಿಡುವುದು
ಮೊಗೆ – ಹೊಯ್ಯ
ಯಡು – ಬೀಳು, ಕಾಲಿನಿಂದ ಮುಗ್ಗರಿಸು
ಯತ್ – ಎತ್ತು (ಮೇಲಕ್ಕೆತ್ತು)
ಯಬ್ – ಎತ್ತು (ಮೇಲಕ್ಕೆತ್ತು)
ಯಳ್ಸ – ಜಗ್ಗು, ಕೊಡಬೇಕಾದ ಹಣವನ್ನು ವಿಳಂಬ ಮಾಡುವುದು
ರಾಚು – ಅಪ್ಪಿಕೊಳ್ಳು
ರಿಕ್ – ಭದ್ರ ಮಾಡು
ರಿಪಿ – ನಿರಂತರವಾಗಿ ಆಳುವುದು
ರೈಟ್ – ನಡೆ
ಲಗಾಸ್ – ಹೊಡೆ (ಅರ್ಯಾಬಿಕ್ ಸ್ವೀಕರಣ)
ಲಾಪ – ಮಾತು
ವಂಚು – ಮುಗುಚು (ತೆಲುಗು ಸ್ವೀಕರಣ)
ವಚ್ (ಚ್ಚು) – ಮುಚ್ಚು
ವಟ್ – (ರಾಶಿ) ಹಾಕು
ವಡಾಸ್ – ಬೆಳೆ
ವಡಿ – ಸೀಳು, (ಹೊಳು) ಮಾಡು
ವತ್ – ನೂಕು
ವರಿ – ೧.ತಿಪ್ಪೆಯನ್ನು ತೆಗೆ, ೨.ತಿಕ್ಕು
ವಳಿ – ನರ ತೊಡಕು
ವಿಲಸು – ಅರಳು
ಶೆಲ್ಲು – ಚೆಲ್ಲು
ಸೆದೆ – ಹೊಡಿ
ಸಮೆ – ೧.ಕಳೆ, ೨.ಮಾಡು
ಸರಿ – (ಕಾಯಿ) ಸುರಿ
ಸಿಂಬಿ – ಮುದುಡು
ಸಿಗುಳು – ಸೀಳು
ಸೀಟು – ಒರಸು
ಸೀಯು – ಚೆನ್ನಾಗಿ ಸುಡು, ಬೇಯಿಸು
ಸೂಡು – ಮುದುಡಿಕೊಳ್ಳು
ಸೂರು – (ನೀರನ್ನು) ಹಾಕು
ಸೆಟಗೊ – ಮುನಿಸು
ಸೆಡು – ಹೊಲಿ
ಸೇದ್ – ಸವೆ
ಸೇದು – ೧ ಎಳೆ, ೨ ಸೆಟೆ
ಸೊಪ್ಪು – (ಜೋತು) ಬೀಳು
ಸೊಲಿ – ಸುಲಿ
ಸೊಸು – ಮಾಡು
ಹಚ್ಕೊಡ್ – ಕಳುಹಿಸಿ ಕೊಡು
ಹಚಗೊ – ಪ್ರೀತಿಯಿಂದ ಕಾಣು
ಹಡ್ – ಅಗೆ
ಹಣೆವ್ – (ಹಠ ಮಾಡಿ) ಹೋಗು
ಹತ್ತಾ – (ಮಕ್ಕಳ ಭಾಷೆಯಲ್ಲಿ) ಹೊಡೆ
ಹಬ್ – ಬೆಳೆ
ಹವಣಿಸು – ಸಿದ್ದ ಮಾಡು
ಹ್ವಸಿ – ಸರಿ, (ಹಗ್ಗ)
ತಿಕ್ಕು; ರಚಿಸು
ಹಾನ್ – ಗೋಲಿ ಆಟದಲ್ಲಿ ಗೋಲಿಯನ್ನು ಕುಣಿಯಲ್ಲಿ ಒಗೆಯುವುದು
ಹಾಸ್ – ೧.ಒದಗು, ೨.ಓಡು, ೩.ಈಡು
ಹಾಸ್ಹೊಯ್ -(ಕೆಲಸಕ್ಕೆ) ಅಣಿಗೊಳಿಸುವುದು
ಹಿಂಗು – ಮರೆಯಾಗು
ಹಿಗ್ಗು – ಕುಡಿ
ಹಿಂಚು – (ಹಿಂದೆ) ಸರಿ
ಹಿಗ್ಸ – ಅಗಲವಾಗುವಂತೆ ಮಾಡು
ಹಿಡಿ – ಮುರಿ (ತೆನಿ ಹಿಡಿ)
ಹಿರಿ – ಬೆಳೆಬರು (ಹೊಡಿಹಿರಿ)
ಹಿರಿಯು – ಮುಗಿ, ಕೊನೆಗೊಳ್ಳು
ಹಿರ್ಸ – ಮುಗಿಸು
ಹುಯ್ – (ನೀರು) ಹಾಕು
ಹೆಣಿ – ರಚಿಸು
ಹೆಣ್ಸ – ಮೊನಚುಮಾಡು
ಹರಕು – ಕೂಡಿಸು
ಹೆರಗು – ಎರಚು
ಹೆರಿ – ತಿಕ್ಕು
ಹೆರೆ – ಕೆತ್ತು, ಒರೆದುಹಾಕು
ಹೆಸರ್ – (ಅಡಿಗೆ ಮಾಡುವಾಗ) ನೀರು ಕುದಿಯುವುದು.
ಹೇರು – ಹೊರಿಸು, ಭಾರಹಾಕು
ಹೊಕೊ – (ದುಃಖವಾದಾಗ) ಬಾಯಿ ಬಡಿದುಕೊಳ್ಳುವುದು.
ಹೊಡಗ್ – (ಕಸ) ಗೂಡಿಸು
ಹೊದಲು – ಅರಳು
ಹೊರಗಾಗು – ಮುಟ್ಟಾಗು
ಹೊಸಕು – ಒದ್ದಾಡು
ಹೊಸಿ – ೧.ಮುಂದೆ ಸರಿ, ೨.(ಶ್ಯಾವಿಗೆ) ತಯಾರಿಸು
ಹೊಳಕು – ಕಾಣಿಸಿಕೊಳ್ಳು
ಹೊಳ್ಳು – ಕೂಗು
Leave A Comment