೩೪೩
ಅಪರಿಮಿತವಿದ್ಯರೆನಿಸಿರ್ದ,
ಪುರಾಣಕವೀಂದ್ರ
ಆಖಿಲ ಕಾವ್ಯಂಗಳ
ಗೂಢಪದಪ್ರಯೋಗಮಂ,
ನೆರಪಿಪದಾರ್ಥಂಗಳ ಅಣಂ
ಮನಂಬುಗೆ ಪೇೞ್ವೆಂ

ಪೂರ್ವ ಸೂರಿಗಳ ಕಾವ್ಯಗಳಲ್ಲಿಯ ಗೂಢ ಪದ ಪ್ರಯೋಗಗಳನ್ನು ಆರಿಸಿ ಅವುಗಳಿಗೆ ಅರ್ಥ ಕೊಟ್ಟಿದ್ದೇನೆ.

೧. ಅಗುಂದಲೆಯೆಂದು ಪಿರಿದು

೨. ಅಜ್ಜೆಂದು ಪೊಸವಾಸಿ (ಸಾವಾಸಿ)

೩. ಅಡಿವಣಿಗೆಯೆಂದು ಕೆಸಱೊಳಾದ ಪಜ್ಜೆ

೪. ಅಡುವಳನೆಂದು ಬಾಣಸಿಗಂ

೫. ಅಣಿಯರಮೆಂದು ಪಿರಿದು

೬. ಅತ್ತಪರಮೆಂದು ಕಾಳೆಗವಲಗೆ

೭. ಅರ್ತುದೆಂದು ಅಱತುದು

೮. ಅದುವದು – ವಿಚಾರಿಸುಹಂ

೯. ಅರ್ಬಿಯೆಂದು ನಿರ್ಝರಂ

೧೦. ಅಮ್ಮಂಗೊಡಲಿಯೆಂದು ಹೆಗ್ಗಟ್ಟವತ್ತಿಗೆ

೧೧. ಅಱಿಲೆಂದು ನಕ್ಷತ್ರಂ

೧೨. ಅಲರ್ವಕ್ಕಿಯೆಂದು ತುಂಬಿ

೧೩. ಅಲ್ಲಣಿ (ಗೆ) ಯೆಂದು ಮೇಳಂ

೧೪. ಅವುತೆ (ಅವುತಿ, ಅವುಸೆ)ಯೆಂದು ಕವಚಂ

೧೫. ಅಸಕೞಿಹಮೆಂದು ಕೈಮೀಱುಹಂ

೧೬. ಅಸಿದನೆಂದು ಈಡಾಡಿದಂ

೧೭. ಅೞ್ಕರ್ತನೆಂದು ಪ್ರೀತಿವಟ್ಟಂ

೧೮. ಅಳಕಮೆಂದು ಆಲೇಖಂ

೧೯. ಅಳಸೆಂದು ಸುರತಧ್ವನಿ

೨೦. ಅಳ್ಕೆಂದು ಭಯಂ

೨೧. ಆಱಡಿಯೆಂದು ತುಂಬಿ

೨೨. ಆವೆಯೆಂದೋಡಮೆಂದಾರಾದೊಡ ಮೆಂಬರ್ಥಂ

೨೩. ಆಸುವೆಂದು ಶೀಘ್ರಂ

೨೪. ಇಂಗೋಲ್ವಿಲ್ಲನೆಂದು ಕಾಮಂ

೨೫. ಇಱಿಸಿಲೆಂದು ಮಿಗಮಂ ಕೆಡಪುವಗುೞ

೨೬. ಇಱುವೆ(ಇಱಮೆ)ಂದು ಸಂದಣಿ

೨೭. ಉಕ್ಕೆವಮೆಂದು ಠಕ್ಕು

೨೮. ಉಗಿಪದಮೆಂದು ಸುಲಿಹಂ

೨೯. ಉರ್ಗಿವಳೆದೆಣ್ಣೆಯೆಂದು ಉರಿವೆಣ್ಣೆ

೩೦. ಉಣ್ಣವಳಿಯೆಂದು ಪಿರಿದು

೩೧. ಉಬ್ಬಡಿಗಂ (ಉಬ್ಬದಿಗಂ) ಎಂದು ಪಿರಿದು

೩೨. ಉರ್ವಿ(ರ್ಬಿ)ನಮೆಂದು ಪಿರಿದು

೩೩. ಉಮ್ಮಳಿಸಿತೆಂದು ಊಷ್ಮೆ ತೋಱಿದುದು

೩೪. ಉೞ(ಉಗ್ಗಿ)ಯೆಂದೊಂದು ನೋಂಪಿ

೩೫. ಉೞುಗಿದನೆಂದು ಕೂರ್ತಂ

೩೬. ಎನತಂದೆನ್ನ ವರ್ತನಂ

೩೭. ಎಂಬುಕೆಯ್ದನೆಂದೆಂದುದಂ ಮಾಡಿದಂ

೩೮. ಎವುೞಿಂದು ಎಂಜಲ್

೩೯. ಏರ್ಪೂತುದೆಂದು ತಡಂಬೊಯ್ದುದು

೪೦. ಒಡಂಬಿಯೆಂದು ಶರೀರಂ

೪೧. ಒಱಲ್ದನೆಂದು ಕೂರ್ತಂ

೪೨. ಕಚ್ಚೞಿಯೆಂದು ಬಿರುದಿನ ಬಳೆ

೪೩. ಕಣ್ಣಲೆದುದೆಂದು ಪೊಡಕರಿಸಿತು

೪೪. ಕುತ್ತುಪೆನಮೆಂದು ಜಗಳಂ

೪೫. ಕನ್ನಡವಕ್ಕಿಯೆಂದು ಗಿಳಿ

೪೬. ಕಮ್ಮಂಗಣೆಯನೆಂದು ಕಾಮಂ

೪೭. ಕಯ್ಕೋಲ್ ಎಂದು ಕಡೆಗೋಲ್

೪೯. ಕರಿಯೆಂದಾನೆ

೫೦. ಕರೆದನೆಂದಡಂಗಿದಂ

೫೧. ಕಸವರಮೆಂದು ಮಿಸುನಿಯ ಪೊನ್

೫೨. ಕಾದಲ್ಮೆಯೆಂದು ನೇಹಂ

೫೩. ಕಾಮಕರಮೆಂದು ಗರ್ವಂ (ತಾಂಮಸಗೆ ತಾಗಿದಸುರನ ಕಾಮಕರಂಕರ ಮಡಂಗಿನುರ್ಗಪಿನೆಗಂ)

೫೪. ಕಿರ್ಗಿಯೆಂದು ಒಱಪು

೫೫. ಕಿತ್ತಡಿಯೆಂದು ವ್ರತಿ

೫೬. ಕಿಸುಗಣ್ಚಿದನೆಂದು ಕೋಪಿಸಿದಂ

೫೭. ಕುಂಗರೆಂದು ಬೆಸದವರ್

೫೮. ಕುಯಕಮೆಂದು ಕುಹ(ವ)ಕಂ

೫೯. ಕುಱಿಯೆಂದು ಕುಱುಪು

೬೦. ಕೆಕ್ಕೆಯೆಂದು ಗಲ್ಲಂ (ಕೆನ್ನೆ)

೬೧. ಕೆಂಗಣ್ಣಲರ್ವಕ್ಕಿಯೆಂದು ಕೋಗಿಲೆ

೬೨. ಕೆಲಚೆಂದು ಸಹಾಯಂ

೬೩. ಕೆಸಱಂಕರೆಂದು ಮಲ್ಲರ್

೬೪. ಕೇೞಿಯೆಂದು ಪಂಕ್ತಿ

೬೫. ಕೈದವಮೆಂದು ಕೈತವಂ

೬೬. ಕೊಟ್ಟಜಮೆಂದು ಕಪ್ಪಂ

೬೭. ಕೊತ್ತಳಿ(ಣಿ)ಯೆಂದು ಕಾಗೆಗಳ ಮೊತ್ತಂ

೬೮. ಕೊಂಬೆಂದು ಸಂಕೇತಸ್ಥಳಂ

೬೯. ಕೊಱಿದುದೆಂದು ಗರವಟಿಸಿಡುವುದು

೭೦. ಕೊಳಮೆಂದು ಸಂಕೇತಸ್ಥಳಂ

೭೧. ಕೊಳವೇರೆಂದು ಲಾಮಂಚಂ

೭೨. ಕೋಮಳೆಯೆಂದು ನೆಯ್ದಿಲ್

೭೩. ಕೋವರೆಂದು ಕುಂಬಱರ್ (ಕುಱುಂಬರ್)

೭೪. ಕೌವರೆಯೆಂದು ಸಂಭ್ರಮಂ

೭೫. ಗರವಸಗೊಂಡುದೆಂದು ಗರವಟಿ ಸಿಡುವುದು

೭೬. ಗಱಿವೂವೆಂದು ಕೇದಗೆ

೭೭. ಗಾಱ(ರ)ಣಮೆಂದು ದೂಱು

೭೮. ಗಾಳಿವಾತೆಂದು ಬೈಗುಳ್

೭೯. ಗುಂಡೆಂದು ನೆರವಿ

೮೦. ಗುಣಕಱುಗೊಂಡನೆಂದು ಪ್ರೀತಿವಟ್ಟಂ

೮೧. ಗೊಂಕೆಯೆಂದು ಗೋಣ್

೮೨. ಚಣಕಮೆಂದು ಚಲ್ಲಣಂ

೮೩. ಚತ್ತಾಣಮೆಂದೊಂದು ಕಾವ್ಯಂ

೮೪. ಚಲ್ಲವೊತ್ತರೆಂದು ನಂಬಿಸಿ ತಿಂಬವರ್

೮೫. ಚೆನ್ನಪೊಂಗನೆಂದು ವೀರಂ

೮೬. ಚೆ(ಬೆ)ಲಂಕಿದನೆಂದು ಈಡಾಡಿದಂ

೮೭. ಚಱುಚೆಂದು ವ್ಯರ್ಥಾಲಾಪಂ

೮೮. ಜೀವರಕ್ಕೆಯೆಂದು ಕವಚಂ

೮೯. ಜೋಡನೆಂದು ಸಿತಗಂ ಪಾಣ್ಬನು ಮಕ್ಕುಂ

೯೦. ಜೋಡೆಯೆಂದು ಸಿತಗೆಯುಂ ಪಾಣ್ಬೆಯುಮಕ್ಕುಂ

೯೧. ಡವಕೆಯೆಂದು ಕಾಳಾಂಜಿ

೯೨. ಡಾಣೆಯೆಂದು ರಕ್ಕಸಿಯ ಕತ್ತಿಗೆ

೯೩. ತಗರ್ದುದೆಂದು ತಗೆದುದು

೯೪. ತಟ್ಟಿಮೆಡಱಿದನೆಂದು ತಟ್ಟಿ ವೆಣೆದಂ

೯೫. ತಡಗುಂಡಿ(ಗುೞಿ)ಯೆಂದು ಜಳ ಪ್ರತ್ಯಯಂ

೯೬. ತಡಮಾಡಿದನೆಂದು ತಳ್ಳಂಕಗೊಳಿಸಿದಂ

೯೭. ತಮ್ಮಡಮೆಂದು ತಡೆದುದು

೯೮. ತಱಿಸಲವೆಂದು ನಿರ್ಣಯಂ

೯೯. ತಳಮಳಗೆಂದು ಬೆಱಗಾಗುಹಂ

೧೦೦. ತಾರಗೆವಟ್ಟಿಯೆಂದು ಆಗಸಂ

೧೦೧. ತಿಟ್ಟೆಂದು ಬೈಗುಳ್

೧೦೨. ತಿಬ್ಬಮೆಂದು ತೀವ್ರಂ

೧೦೩. ತಿಱಿಕೊಱಯೆಂದು ಅಯ್ಕುಳಿ

೧೦೪. ತಿಪ್ಪುೞಿಂದು ಗಱ

೧೦೫. ತುೞಲೆಂದು ವೀರಮುಂ ಪೊಡವಡಕೆಯುಮುಕ್ಕುಂ

೧೦೬. ತೆಗಲೆಯೆಂದು ಪೆಗಲ್

೧೦೭. ತೆಂಗುಹಮೆಂದು ಪಕ್ಕಿಯೆಱಗುಹಂ

೧೦೮. ತೆಪ್ಪರ್ತನೆಂದು ಮೂರ್ಛೆ ತಿಳಿದಂ

೧೦೯. ತೇಱಿಪೊಡೆಯೆಂದಡಿಕಿಲ್

೧೧೦. ತೆಲ್ಲಂಟಿಯೆಂದು ನಿಬ್ಬಣಂ

೧೧೧. ತೇನತೇನಮೆಂದು ಮೇಲೆ ಮೇಲೆ

೧೧೨. ತೊದಳೆಂದು ಪುಸಿಯ ಭೇದಂ

೧೧೩. ತೋರ್ಪೆಂದು ತೋರ್ಕೆ

೧೧೪. ದಡ್ಡಸಮೆಂದು ಡೊಂಬವಱ

೧೧೫. ದಡ್ರುಂಚೆಯೆಂದು ಸಿತಗೆ

೧೧೬. ದಳಮೆಂದು ಪತ್ರಂ

೧೧೭. ದೊಡ್ಡ ಮಾರ್ಗವೆಂದು ಆನೆ ಕುದುರೆಗಳೊಳಾದ ಕಿಱುದೊಡೆಯ ಜಡ್ಡು, (ದಡ್ಡು, ಜಿಡ್ಡು)

೧೧೮. ನನಸೆಂದು ದಿಟಂ

೧೧೯. ನವಿರೆಂದು ಕೂದಲ್

೧೨೦. ನಾಗಹಮೆಂದು ಗೋದಾವರಿ ಯೊಳೊಂದು ಮಡು

೧೨೧. ನಾೞಿಯೆಂದು ನಾಡಿಯೆಂಬರ್ಥಂ

೧೨೨. ನಿಕ್ಕುವಮೆಂದು ನಿಶ್ಚಯಂ

೧೨೩. ನಿಗ್ಗವಮೆಂದು ಗಜದಂತಂ

೧೨೪. ನಿಗುಂಬಿತೆಂದು ಕುಪ್ಪಳಿಸಿತ್ತು

೧೨೫. ನಿರ್ನೆರ್, ನಿರ್ನೆರಮೆಂದು ನಿರ್ನಿಮಿತ್ತಂ

೧೨೬. ನಿರದನೆಂದು ಕೊಂದಂ

೧೨೭. ನಿಱಿಗನೆಂದೊಂದು ಮಾವು

೧೨೮. ನಿಲುಂಬಿತೆಂದು ಕುಪ್ಪಳಿಸಿತ್ತು

೧೨೯. ನಿಸ್ಸಂಕೆಯೆಂದವಜ್ಞಾ

೧೩೦. ನೂಳದೆಂದು ಪಿರಿದು

೧೩೧. ನೆಲಕಲನೆಂದು ಲೋಭಿ

೧೩೨. ನೇರ್ದನೆಂದು ಅರಿದಂ

೧೩೩. ನೋಳ್ದಿದನೆಂದಿದಿರ್ಚಿ ನಡೆದಂ

೧೩೪. ಪಂಚಪಲ್ಲವದ ವಾಜಿಗಳೆಂದು ರಾಜವಾಹನಂಗಳ್

೧೩೫. ಪಚ್ಚವಡಿತಿಯೆಂದು ಹಚ್ಚಡಿಸುವಾಕೆ

೧೩೬. ಪಚ್ಚಾಯ್ಲನೆಂದು ಪಚ್ಚಕಾಱಂ

೧೩೭. ಪಂಚಮೆಂದಪೂರ್ವಂ

೧೩೮. ಪಡಿಯಱವಕ್ಕಿಯೆಂದು ಕೋಗಿಲೆ

೧೩೯. ಪಂಡಿತವಕ್ಕಿಯೆಂದು ಗಿಳಿ

೧೪೦. ಪನ್ನತಿಕೆಯೆಂದು ಪರಾಕ್ರಮಂ

೧೪೧. ಪನಮೆಂದು ಸಂಕೇತಸ್ಥಳಂ

೧೪೨. ಪಪ್ಪರಿಕೆಯೆಂದು ಕರ್ಕಶತೆ

೧೪೩. ಪರಕಮೆಂದು ಪರೋಕ್ಷಂ

೧೪೪. ಪಱಮೆಯೆಂದು ತುಂಬಿ

೧೪೫. ಪಲ್ಲಮಱಿಯೆಂದು ಆನೆಯ ಮಱಿ

೧೪೬. ಪವಿತ್ರಮೆಂದೊಂದು ಕಿವಿದುಡುಗೆ

೧೪೭. ಪಳಾಳಮೆಂದು ಠಕ್ಕು

೧೪೮. ಪಳುಂಕಿದ (ಪಳಕಿದ)ನೆಂದು ನೂಂಕಿದಂ

೧೪೯. ಪಾಗಲೆಂದು ಪ್ರಾಕಾರಂ

೧೫೦. ಪಾಱಿಂದು ಬಹಿತ್ರಭೇದಂ

೧೫೧. ಪಾಱಿಯೆಂದು ಸಿತಗೆ

೧೫೨. ಪಾೞಿಯೆಂದು ಪಂಕ್ತಿ

೧೫೩. ಪಿಱಿತಿನಿಯೆಂದು ಮರುಳ್

೧೫೪. ಪುಗ್ಗಾಯ್ಲನೆಂದು ಗರ್ವಿತಂ

೧೫೫. ಪುಚ್ಚೞಿಯೆಂದು ಕೇಡು

೧೫೬. ಪುಚ್ಚವಣವೆಂದು ಪರೀಕ್ಷೆಯು ಮಣ್ಮುಮಕ್ಕುಂ

೧೫೭. ಪೂಜಗಜಮೆಂದು ಪಟ್ಟವರ‍್ದನಂ

೧೫೮. ಪೆೞಸೆಂದು ಎಡೆಯಂ (ಸಡೆಯಂ, ಸೆಡೆಯಂ ಪಱಿಯಂ)

೧೫೯. ಪೆೞಕೆಂದು ಜಗಳಂ (ಬೆಳಗಂ)

೧೬೦. ಪೋರ್ಕುಳಿವಕ್ಕಿಯೆಂದು ಕೋಗಿಲೆ

೧೬೧. ಪೊಚ್ಚಱಿಸಿತೆಂದು ಪೊಡಕರಿಸಿತು

೧೬೨. ಪೊಚ್ಚಮೆಂದು ಪೊೞಿ

೧೬೩. ಪೊಪ್ಪುಕಮೆಂದು ಸೊಪ್ಪು ಗುಟ್ಟುಹಂ

೧೬೪. ಪೊಱಮಾಱಿಂದು ಬೆನ್ನೀಹಂ

೧೬೫. ಬಂಡಣಮೆಂದು ಕಾಳೆಗಂ

೧೬೬. ಬದಸೆಂ (ಬದೆಗೆ)ಂದು ಕೌಟಿಲ್ಯಂ

೧೬೭. ಬದ್ದವಣಮೆಂದು ಮಂಗಳವಱ

೧೬೮. ಬದ್ದಮೆಂದು ಗಾಢಂ

೧೬೯. ಬದ್ದಿಸಂ (ಬಡ್ಡಿಸಂ) ಎಂದು ಅವುಂಕುಹಂ

೧೭೦. ಬರ್ದೆಂದು ಪ್ರೌಢಿ

೧೭೧. ಬರ್ದುಗೆಯೆಂದು ಸಾವು

೧೭೨. ಬವಸೆಂದು ವ್ಯವಸಾಯಂ

೧೭೩. ಬಳೆಂದು ಕುದುರೆಯವಳಯಂ

೧೭೪. ಬಳಮರ್ದೆಂದಂಕದೌಷಧಂ

೧೭೫. ಬಾಗುಳೆಂದು ವ್ಯಾಕುಲಂ

೧೭೬. ಬಾನೆಂದು ಗಗನಂ

೧೭೭. ಬಾಂಬನೆಂದು ಕಱುಂಬಂ

೧೭೮. ಬಿಜ್ಜಲಬಿಟ್ಟೇಱಿಂದು ಹಿರಿಯ ಬಿಟ್ಟೇಱು

೧೭೯. ಬಿತ್ತಗನೆಂದು ತುತ್ತಿದಂ

೧೮೦. ಬಿತ್ತೆಗನೆಂದು ಪ್ರೌಢಂ

೧೮೧. ಬಿಸವಂದಮೆಂದು ಕೌತುಕಂ

೧೮೨. ಬಿಸುಗೆಯೆಂದು ಡೆಂಚೆಯಂ

೧೮೩. ಬೆಗಡೆಂದು ಭಯಂ

೧೮೪. ಬೆಜ್ಜೆಂದು ವೈದ್ಯಂ

೧೮೫. ಬೆ(ಬಿ)ಜ್ಜೆಯೆಂದು ಚಪ್ಪರಣೆ

೧೮೬. ಬೆದಂಡೆಯೆಂದು ವೈದಂಡಿಕಂ

೧೮೭. ಬೆಪ್ಪಳಮೆಂದು ಸಂಚಳಂ

೧೮೮. ಬೆಳ್ಳಡಿಯೆಂದು ಗೊರವಂ

೧೮೯. ಬೆಳ್ಪೆಂದು ನಿರ್ಮಳಿಕೆ

೧೯೦. ಬೆಂಟೆಯೆಂದು ಸರವಿ; ಮೞಲ ಬೆಂಟೆಯಂ ಮಾಡಿದವೊಲ್

೧೯೧. ಬೊಂದಿಯೆಂದು ಶರೀರಂ

೧೯೨. ಮಗಳ್ಮಾಯೆಂದು ಗಂಡನಂ ಪತ್ತಿ ಬಿಡದಾಕೆ

೧೯೩. ಮರ್ಚೆಂದು ನೊಳವು

೧೯೪. ಮರಾಳ (ಮಳಾರ)ಮೆಂದು ಕುದುರೆಯ ಪಟ್ಟಿ

೧೯೫. ಮುಱುಗಿದನೆಂದು ಕೂರ್ತಂ

೧೯೬. ಮಾಳ್ಮುಕಿಯೆಂದು ಗಂಡನಂ ಪತ್ತಿ ಬಿಡದಾಕೆ

೧೯೭. ಮಾಂದಡೆಯೆಂದು ಮಾಣದಂ

೧೯೮. ಮಾರ್ಮರೆಂದು ಮಲೆವರ್

೧೯೯. ಮೀನೆಂದು ನಕ್ಷತ್ರಂ

೨೦೦. ಮುಕ್ಕುಱಿಂದು ಮುಸುಱುಹಂ

೨೦೧. ಮುಚ್ಚುತ್ತನೆಂದು ಮೂರ್ಛೆವೋದಂ

೨೦೨. ಮುನ್ನೀರೆಂದು ಸಮುದ್ರಂ

೨೦೩. ಮುಯ್ಯಿರಡಿಯೆಂದು ತುಂಬಿ

೨೦೪. ಮುಮ್ಮುರಿಯೆಂದು ಕಾಸಿದ ಮೞಲ್

೨೦೫. ಮೂಡಿಯೆಂದುದಯಂ

೨೦೬. ಮೆಚ್ಚವಣಿಗೆಯೆಂದು ಮೆಚ್ಚನುಳ್ಳದು

೨೦೭. ಮೆೞಡೆಯೆಂದು ಮರುಳ್ತನಂ

೨೦೮. ಮೆಳಂಬಮೆಂದು ತುಂಬಿ

೨೦೯. ಮೊನೆಯೆಂದು ಕಾಳೆಗಂ

೨೧೦. ರಾಜವರ್ತಮೆಂದು ಎಳನೀಲಂ

೨೧೧. ಱೊಬ್ಬೆ (ಱಣಜ್ಜೆ)ಯೆಂದು ಹಳುಕು

೨೧೨. ವಸುವೆಂದು ಪೊನ್

೨೧೩. ವಂಚಮೆಂದು ವಂಶಂ

೨೧೪. ವಾಳೆ(ಲಾಳೆ)ಂದು ಲಿಂಗವತ್ತಿಗೆ

೨೧೫. ಸಬ್ಬವಮೆಂದು ಮೇಳಂ

೨೧೬. ಸಲಮೆಂದು ಪ್ರವೇಶಂ

೨೧೭. ಸಲಂಡುಗೊಂಡುದೆಂದು ಆಕ್ರಮಿಸಿಕೊಂಡುದು

೨೧೮. ಸಾರಿಯೆಂದು ಡೆಂಚೆಯಂ

೨೧೯. ಸಿತಗೆಯೆಂದು ಪಾಣ್ಬೆ

೨೨೦. ಸಿರಿವಂತಿಗೆಯೆಂದು ಹುರಿಯೋಡು

೨೨೧. ಸುತ್ತಿಯೆಂದು ಶುಕ್ತಿ

೨೨೨. ಸುನ್ನಮೆಂದು ಶೂನ್ಯಂ

೨೨೩. ಸುಸಿಲೆಂದು ಸಂಭೋಗಮುಂ ಪ್ರಭಾತಕಾಲಮುಮಕ್ಕುಂ

೨೨೪. ಸೈದರೆಂದು ನೇರಿದರ್

೨೨೫. ಸೈಪೆಂದು ಪುಣ್ಯಂ

೨೨೬. ಸೊಡಬಲಿಯೆಂದು ಮಸಣವಟ್ಟಿಗೆ

೨೨೭. ಸೊಂದಿಯೆಂದು ಸಿತಗಂ

೨೨೮. ಸೋಡಂಬಾಡಮೆಂದು ಪಿರಿದು

೨೨೯. ಸೌಸವಮೆಂದು ಕಂಪು

೨೩೦. ಹರಳಿಗನೆಂದು ಜರಂ

೨೩೧. ಹರಿಮೇಖಲೆಯೆಂದು ಇಂದ್ರಜಲಂ

೨೩೨. ಹೇದೆಯೆಂದು ಭೂತಂ

೨೩೩. ಹೇರಿಗನೆಂದು ಬೇಹಿನವಂ