ಅಂಗೀಕಾರ – ಒಪ್ಪಿಗೆ ಸಮ್ಮತಿ

ಅಂತಿಂತು – ಪಲ್ಲಟವಾಗಿ

ಅಂತು – ಹಾಗೆ ೨ ತಾಳ್ದು

ಅಂತೆ – ಹಾಂಗೆ > ಹಾಗೆ

ಅಕ್ಕರ – ಅಕ್ಷರ

ಅಕ್ಕರಿಗರ್ – ಅಕ್ಷರ ತಜ್ಞರು

ಅಕ್ಕುಂ – ಆಗುವುದು; ಅಪ್ಪುವುದು

ಅಗ್ರ – ಮುಂದೆ

ಅಜತಂ – ಹುಟ್ಟದು

ಅಡಕಿಲ್ವೊಂದಿರೆ- (ಅಡಕಿಲುಗಡಗಿಯಂತೆ) ಒಂದರಮೇಲೊಂದು

ಅಡಿಯೊಳ್ – ಕೆಳಗೆ

ಅತಿಪೀಡನದಿ – ರೇಫೆ ಹುಟ್ಟುವ ಸ್ಥಾನವನ್ನು ಒತ್ತಿ ಉಚ್ಚರಿಸುವುದು

ಅನೃತ – ಸುಳ್ಳು

ಅನಾದೇಶ – ಆದೇಶವಲ್ಲದ

ಅನ್ವಿತರ್ – ವಿದ್ವಾಂಸರು

ಅನುಕರಿಪು – ಅಂಗೀಕರಿಸುವ

ಅನುಕೃತಿಪದಂ – ಅನುಕರಣ ಪದಗಳು

ಅಪಭ್ರಂಶ – ತದ್ಭವ

ಅಭಿದೇಯ – ವಾಚ್ಯಾರ್ಥ

ಅಭಿರೂಪ – ಅಭಿವ್ಯಕ್ತವಾದ ರೂಪ

ಅಭಿಕ್ಷಣ – ಅಭಿಮುಖವಾಗಿ

ನೋಡುವುದು

ಅಮರ – ನಿರ್ಮಲ

ಅಮಳಿನಮಾಗಿ – ನಿರ್ದೋಷವಾಗಿ

ಅಯತ್ನ – ಪ್ರಯತ್ನವಿಲ್ಲದೆ

ಅರಮೆ – ಕೆಲವೆಡೆ

ಅರೆಬರ್ – ಕೆಲವರು

ಅರೋಚಿಗಳ್ – ಹೇಯವುಳ್ಳವರು

ಅವತರಿಸು – ಹುಟ್ಟು

ಅವಧಾರಣೆ – ನಿರ್ಧಾರಣೆಯ ‘ಎ’ ಕಾರ

ಅವಿಕೃತಿಗಳ್ – ನಿರ್ವಿಕಾರಿಗಳಾದ

ಅಸಂಭೂತ – ಉಂಟಾಗಲು ಶಕ್ಯವಿಲ್ಲದ

ಅಱಿ – ತಿಳಿ

ಅಱಿವುಳ್ಳರ್ – ವಿಚಾರವುಳ್ಳವರು

ಅಱೆದು – ಲೋಪಿಸಿ

ಆರ್ಣವ – ಸಮುದ್ರದಿಂದ

ಆದಂದು – ಆದಕಾಲದಲ್ಲಿ

ಆದ್ಯರ – ಪೂರ್ವಕವಿಗಳು

ಆದಾನ – ಸ್ವೀಕಾರ, ತೆಗೆದುಕೊಳ್ಳುವುದು

ಆದಿ – ಮೊದಲು

ಆದಿಯೊಳ್ – ಮೊದಲಲ್ಲಿ

ಆದೊಡೆ – ಆದರೆ

ಆನಿಪರ್ – ಸಂಬಂಧಿಸುವರು

ಆಮಂತ್ರಣ – ಆಹ್ವಾನ, ಕರೆ

ಆರಯೆ – ವಿಚಾರಿಸು

ಆಳ್ಗು – ತಾಳು

ಇಂತು – ಹೀಂಗೆ > ಹೀಗೆ

ಇದಿರಾಗೆ – ಮುಂದಾಗೆ

ಇರದೆ – ನಿಲ್ಲದೆ

ಈಗು – ಕೊಡು

ಈಕ್ಷಿಸಿ – ನೋಡಿ

ಈರ್ಷ್ಯೆ – ಕೋಪ

ಉಕ್ತ – ಹೇಳಿದ

ಉಚಿತಜ್ಞರ್ – ಇಂಗಿತಜ್ಞರು, ವಿದ್ವಾಂಸರು

ಉಚ್ಚರಿಪರ್ – ಹೇಳುವವರು

ಉಚ್ಚರಿಸು – ಓದು, ಹೇಳು

ಉಜ್ವಳಂ – ಪ್ರಕಾಶಿಸು

ಉಣ್ಬುದು – ತಿಂಬುದು

ಉತ್ಕರಮೆ – ಹೆಚ್ಚಿಗೆಯ

ಉದಯಿಪತಾಣಂ – ಹುಟ್ಟುವ ಸ್ಥಾನಗಳು

ಉದಯಿಸು – ಹುಟ್ಟು

ಉದ್ಬವ – ಹುಟ್ಟು

ಉದ್ಭಾವಿಪ – ಅಭಿವ್ಯಕ್ತವಾಗು

ಉದಿತ – ಉಂಟಾದ, ಹುಟ್ಟುವ

ಉಪೇತ – ತಮ್ಮಲ್ಲಿ ಕೂಡಿದ

ಉಭಯಮಾತ್ರ – ಎರಡು ಮಾತ್ರೆಯುಳ್ಳದ್ದು

ಉರವಣೆಯಿಂ – ಶೀಘ್ರದಿಂದ

ಉರು – ವಿಶೇಷವಾಗಿ

ಉಲಿವ – ಹೇಳುವ

ಉಸಿರ್ – ಹೇಳು

ಉೞದೆಡೆ – ಮಿಕ್ಕೆಡೆ

ಉೞದು – ಬಿಟ್ಟು ಎಂಬರ್ – ಪೇಳ್ವರ್ > ಹೇಳುವರು

ಎಡೆಗೆ – ಸ್ಥಾನಕ್ಕೆ

ಎಡೆಯೊಳ್ – ೧. ಕೆಲವೆಡೆಯಲ್ಲಿ, ೨. ಕಿರಿದಡೆಯಲ್ಲಿ

ಎನಿಕ್ಕು – ಎನಿಸುವುದು

ಎನಿಸುಗುಂ – ಎನಿಸುವುವು

ಎಯ್ದೆ – ಚೆನ್ನಾಗಿ

ಎಸೆವ – ಒಪ್ಪುವ

ಒಂದಿದ – ಕೂಡಿದ

ಒಂದಿರೆ – ಕೂಡಿರವಾಗಿ

ಒಂದೆ – ಕೂಡೆ

ಒಗೆಗುಂ – ಹುಟ್ಟು, ಉತ್ಪತ್ತಿಯಾದ

ಒದವಿದ – ಪ್ರಾಪ್ತಿಸಿದ

ಒದವಿರೆ – ಬಂದಿರೆ

ಒದವು – ಪ್ರಾಪ್ತಿ

ಒದವೆ – ಪ್ರಾಪ್ತಿ

ಒರೆ – ಹೇಳು

ಒಲ್ದಂತೆ – ಪಲ್ಲಟವಾಗಿ, ಇಚ್ಛೆ ಬಂದಂತೆ

ಒಳವು – ಉಂಟು

ಕಟಕ – ಸಮೂಹ

ಕವಿಗಳ್ – ವಿದ್ವಾಂಸರು

ಕವಿಲದೆ – ಕೆಡದೆಬರುವುದು

ಕಾರ್ಯಂ – ಪ್ರಯೋಜನಂ

ಕಿಡದವೊಲ್ – ಕೆಡದ ಹಾಗೆ

ಕ್ರಿಯಾಶೂನ್ಯ – ಕ್ರಿಯೆ ಇಲ್ಲದುದು

ಕೂಡೆ – ಒಡನೆ

ಕ್ರಮದಿಂ – ತರುವಾಯದಿಂದ

ಕ್ರಮದೆ – ತರುವಾಯದಿಂದ

ಕೃತ – ಮಾಡಲ್ಪಟ್ಟ

ಕೃತಿಮಾರ್ಗ – ಕಾವ್ಯಮಾರ್ಗ

ಕ್ಷಿತಿಜ – ಭೂಮಿ

ಖೇದ – ದುಃಖ

ಗಡಣಂ – ಸಮೂಹ

ಗತ – ಎಯ್ದಲ್ಪಟ್ಟ

ಗ್ರಾಮ್ಯ – ಗ್ರಾಮೀಣರು

ಘನ – ಮೇಘ

ಘನತರು – ದೊಡ್ಡದಾದ

ಘನವಾಗಿ – ವೆಗ್ಗಳವಾಗಿ

ಚರಮಂ – ಅಂತ್ಯ

ಚರಮಾಕ್ಷರ – ಅಂತ್ಯಕ್ಷರ

ಜೀವನ – ಜೀವಾತ್ಮನ

ಚಾಕ್ಷುಷ – ಕಣ್ಣಿಗೆ ಕಾಣುವುದು

ಜೀವಿತವಾಗಿ – ಬಾಳ್ವೆಯಾಗಿ

ತತ್ – ಅದು

ತನು – ಶರೀರ

ತರದಿಂ – ತರುವಾಯದಿಂದ, ಕ್ರಮದಿಂದ

ತರಳಾರ್ಥ – ‘ಎಳ’ ಎಂಬರ್ಥ

ತಳೆದು – ಧರಿಸಿ

ತಳ್ತು – ಕೂಡಿ

ತಱದಿಂ – ರೀತಿಯಿಂದ

ತಱಿಸಂದು – ಚೆನ್ನಾಗಿಸಂದು

ತಾಳ್ದು – ಧರಿಸಿ

ತೆಗೞ್ – ನಿಂದೆ

ತೋಱು – ಕಾಣು

ತ್ರಿಮಾತ್ರೆಕಂ – ಮೂರು

ಮಾತ್ರೆಯನ್ನುಳ್ಳದು

ದಡ್ಡಕ್ಕರ – ಒತ್ತಕ್ಷರ

ದೀರ್ಘ – ದೀರ್ಘಾಕ್ಷರ

ದೌಹಿತ್ರ – ಮಗಳಮಗ (ಮೊಮ್ಮಗ)

ದೊರೆವಡೆದೆ – ಪ್ರಸಿದ್ದಿ ಪಡೆದ

ಧಾತ್ರಿ – ಭೂಮಿ

ಧೀರರ್ – ವಿದ್ವಾಂಸರು

ನಾಮ – ನೆಲೆಗೊಂಡು

ನಿಜ – ತನ್ನ

ನಿಜದಿಂ – ೧.ಸ್ವಭಾವದಿಂದ ೨.ಸಹಜದಿಂದ

ನಿರ್ಬಂಧಂ – ಬಲಾತ್ಕಾರ, ಒತ್ತಾಯ

ನಿಯತ – ನಿಶ್ಚಿತವಾದ

ನಿಯತಂ – ಕಟ್ಟಾಗಿ

ನಿರಾಕುಳಂ – ಸಂಕಟವಿಲ್ಲದ

ನಿರುತಂ – ನಿಶ್ಚಯವಾಗಿ

ನಿಮಿರ್ಚುವರ್ – ನಿರ್ಮಿಸುವರು

ನಿಲೆ – ನೆಲಸೆ, ನೆಲೆಗೊಳ್ಳು

ನುಡಿ – ಹೇಳು

ನುತ – ಕೊಂಡಾಡು

ನೆಗೞ್ಗುಂ – ಪ್ರಸಿದ್ದಿ ಪಡೆಯುದು

ನೆಗೞ್ತೆ – ಪ್ರಸಿದ್ಧ

ನೆಟ್ಟನೆ – ವ್ಯಕ್ತವಾಗಿ

ನೆಲೆ – ಸ್ಥಾನ

ನೆಱ – ಚೆನ್ನಾಗಿ

ಪರಪದ – ಮುಂದಣಪದ

ಪದಮಧ್ಯ – ಸಮಾಸ ಮಧ್ಯ

ಪದಯುಗ – ಜೋಡಿ ಪದ

ಪರ – ಮುಂದಣ

ಪರಿಭಾವಿಸೆ – ವಿಚಾರಿಸೆ

ಪರದೊಳ್ – ಮುಂದುಗಡೆ

ಪವಣ – ಪ್ರಮಾಣವಾಚಕ

ಪಾಠಕ್ರಮ – ಓದುವ ಕ್ರಮ

ಪಿಂಗಿದ – ತೊಲಗಿದ

ಪಿಂತು – ಹಿಂದು

ಪಿರಿದು – ವಿಶೇಷವಾಗಿ

ಪಿರಿಯರ್ – ವಿದ್ವಾಂಸರು

ಪೀನಂ – ವಿಶೇಷವಾಗಿ, ವೆಗ್ಗಳವಾಗಿ

ಪುಗು – ಪ್ರವೇಶ

ಪುಗೆ – ಪ್ರವೇಶಿಸು

ಪುದಿಗು – ಪ್ರವೇಶಿಸು

ಪುದಿಯೆ – ಪ್ರವೇಶಮಾಗೆ

ಪುನರರ್ಥ – ಆಮೇಲೆ ಎಂಬರ್ಥ

ಪುರಾತನ ಮತದಿಂದ – ಪೂರ್ವ ಕವಿಗಳ ಮತದಿಂದ

ಪ್ಲುತ – ಮೂರು

ಮಾತ್ರೆಯುಳ್ಳ ಅಕ್ಷರ

ಪೂರ್ವ – ಆದಿ, ಆರಂಭ

ಪೆಱಗೆ – ಪಿಂದೆ > ಹಿಂದೆ

ಪೇಳು – ಹೇಳು

ಪೌವನೆ – ಹೌವನೆ

ಪೊಕ್ಕು – ಪ್ರವೇಶವಾಗು

ಪ್ರಕಟ – ಪ್ರಸಿದ್ಧವಾದ

ಪ್ರಗತ – ವಿಶೇಷವಾಗಿ ಎಯ್ದಲ್ಪಟ್ಟ

ಪ್ರಚುರತೆಯಿಂ – ಪ್ರಸಿದ್ದಿಯಿಂದ

ಪ್ರಪೂರ್ವ – ಆದಿಯಾದ

ಪ್ರವಿದಿತ – ಪ್ರಸಿದ್ಧವಾದ

ಪ್ರಶಸ್ತ – ಪ್ರಸಿದ್ಧವಾದ

ಬಗೆ – ವಿಚಾರಿಸದೆ

ಬಗೆವುಗೆ – ಮನಸ್ಸು ತುಂಬುವ

ಹಾಗೆ

ಬಗೆಯದೆ – ವಿಚಾರಿಸದೆ

ಬಲ್ಲವರ್ – ವಿದ್ವಾಂಸರು

ಬಹುತ್ವ – ಬಹುವಚನ

ಬಱಿದೆ – ಸುಮ್ಮನೆ

ಬಿತ್ತೆಗರ್ – ಬಲ್ಲವರ್, ವಿದ್ವಾಂಸರು

ಬುಧಚಯಂ – ವಿದ್ವತ್ಸಮೂಹ

ಬುಧರ್ – ವಿದ್ವಾಂಸರು

ಬೆಚ್ಚರದೆ – ಶೀಘ್ರದಿಂದ

ಬೆರಕೆ – ಸಂಯೋಗ

ಬೆಸಸೆ – ನಿರೂಪಿಸೆ

ಬೇಱಿ – ಅನ್ಯವಾಗಿ

ಮತ್ತಂ – ೧.ಅದಲ್ಲದೆ, ೨.ಬಱಕಂ, ೩.ಬಳಿಕಂ

ಮತ್ತೆ – ೧.ಬಳಿಕ, ೨.ಅದಲ್ಲದೆ

ಮಮಿಂಕೆಯದದೊಳ್ – ಮ್.ಅಮ್. ಇಮ್.ಕೆ.ಅತ್. ಅದ್, ಒಳ್

ಮಹಚ್ಛಬ್ಧ – ಮಹತ್ ಎಂಬ ಶಬ್ದ

ಮಾರ್ಗವಿದರ್ – ವೈಯಾಕರಣರು ವಿದ್ವಾಂಸರು

ಮಿಕ್ಕ – ಉಳಿದ

ಮುಂತೆ – ಮುಂದೆ

ಮೇಣ್ – ೧.ಅದಲ್ಲದೆ, ೨.ವಿಕಲ್ಪ

ಮೊಕ್ಕಳಂ – ವೆಗ್ಗಳವಾಗಿ

ಯುಗಲತೆ – ಎರಡೆರಡಾಗಿ

ಲೋಕರೂಢಿ – ಲೋಕಪ್ರಸಿದ್ದಿ

ವಲಂ – ನಿಶ್ಚಯಂ

ವ್ಯವಹರಣ – ವ್ಯವಹಾರದಲ್ಲಿ

ವಾಗ್ದೇವಿ – ಸರಸ್ವತಿ

ವ್ಯಾಕುಳ – ಸಂದೇಹ

ವಾಗ್ವಿದರ್ – ವಿದ್ವಾಂಸರು

ವಿಕಲ್ಪವಿಧಿ – ವಿಕಲ್ಪ ವಿಧಾನ

ವಿತತ – ನಾನಾ ಪ್ರಕಾರದ

ವಿದಗ್ಧರ್ – ವಿದ್ವಾಂಸರು

ವಿದಗಿತಂ – ಪ್ರಸಿದ್ಧ

ವಿನುತ – ಕೊಂಡಾಡಲ್ಪಟ್ಟ

ವಿಬುಧರ್ – ವಿದ್ವಾಂಸರು

ವಿಲೋಮಕ್ರಿಯೆ – ಪ್ರತಿಷೇಧ ಕ್ರಿಯೆ

ವಿವಿಧಾಕಾರ – ನಾನಾಪ್ರಕಾರ

ವಿಷಯಮಂ – ಶಬ್ದ, ಸ್ಪರ್ಶ, ರೂಪ,

ರಸ, ಗಂಧ ಗಳೆಂಬ

ಸಮಸ್ತ ವಿಷಯಗಳು

ವಿಹಿತ – ಕೊಡಲ್ಪಟ್ಟ

ವಿಳಸತ್ – ಒಪ್ಪಲ್ಪಟ್ಟ

ಶಬ್ದಶಾಸ್ತ್ರ – ವ್ಯಾಕರಣಶಾಸ್ತ್ರ

ಶಾಬ್ಧಿಕ – ಶಬ್ದಜ್ಞ

ಶ್ರಾವಣ – ಕೇಳುವಿಕೆ

ಶ್ರುತಿ ಕಷ್ಟ – ಕರ್ಣ ಕಠೋರ

ಶ್ವೇತಂ – ಧವಳವರ್ಣ

ಸಂಗಡಿಸಿ – ಒಂದಾಗಿ

ಸಂಜನಿಯಿಪು – ಹುಟ್ಟು

ಸಂಪ್ರತಿ – ವರ್ತಮಾನಕ್ರಿಯೆ

ಸಂಬಂಧ – ಪ್ರಕೃತಿ-ಪ್ರತ್ಯಯ ಸಂಬಂಧ, ಲಕ್ಷ್ಯ-ಲಕ್ಷಣ  ಸಂಬಂಧ, ವಿಶೇಷ-ವಿಶೇಷಣ ಸಂಬಂಧ, ಕರ್ತೃ-ಕರ್ಮ- ಕ್ರಿಯಾಸಂಬಂಧ

ಸಂಭವಿಕು – ಹುಟ್ಟುವುದು

ಸಂಹಿತೆ – ಸಂಧಿ

ಸಕ್ಕದ – ಸಂಸ್ಕೃತ

ಸಗ್ಗ – ಸ್ವರ್ಗ

ಸತ್ – ಲೇಸಾದ

ಸತೃಣ – ತೃಣದೊಡನೆ ಕೂಡಿದ

ಸನ್ನಿದಂ – ಸಂಬಂಧಂ

ಸಮಂತು – ಹಾಂಗೆ > ಹಾಗೆ

ಸಮಸಂದ – ಸಮಾನವಾಗಿ ಸಲ್ಲುವ ರೂಪ

ಸಮಸ್ತ – ಬಹುಳವಾದ

ಸಮುಚಿತ – ಉಚಿತವಾದ

ಸರೇಫ ಪದಂಗಳ್- ರೇಫೆಯೊಡನೆ ಕೂಡಿದ ಪದಗಳು

ಸಲೆ – ಚೆನ್ನಾಗಿ

ಸಲ್ಲದ – ಪ್ರಾಪ್ತಿಸಿದ

ಸವನಿಸಿದ – ಪ್ರಸ್ತಾಪಿಸಿದ

ಸವರ್ಣ ವಿಧಾನಂ- ಸವರ್ಣ

ಅಕ್ಷರಗಳ ವಿಧಾನ

ಸಹಾರ್ಥ – ಸಂಗಡವೆಂಬರ್ಥ

ಸ್ವನ – ಧ್ವನಿ

ಸುಮಾರ್ಗ – ಲೇಸಾದ ಕಾವ್ಯಮಾರ್ಗ.

ಸುತ್ತೇಂ – ಭ್ರಮೆಯೇಂ

ಸೂರಿಗಳ್ – ವಿದ್ವಾಂಸರು

ಸ್ಫುರತ್ – ಪ್ರಕಾಶಿಸು

ಸೊಲ್ಲು – ೧.ವಾಕ್ಯ ೨.ಮಾತು

ಹೇತು – ಕಾರಣ